Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಅಂಕಣ ಬರಹ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಅಂಕಣ ಬರಹ ನಾಡೋಜ ಡಾ. ಮನು ಬಳಿಗಾರ್, ಡಾ. ಅಣ್ಣಮ್ಮ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 286

Download  View

Ebook  |   Text

ಪ್ರಾಚೀನ ಭಾರತದಲ್ಲಿ ʼನೀತಿʼಗೆ ಪ್ರಾಮುಖ್ಯವಾದ ಸ್ಥಾನವಿತ್ತು. ಅದು ಜನಜೀವನಕ್ಕೂ ರಾಜ್ಯಧರ್ಮಕ್ಕೂ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ನೀತಿಯು ಹೇರುವ ಕ್ರಮವಾಗಿರಲಿಲ್ಲ. ಅದು ಸಹಜ ಪ್ರಕ್ರಿಯೆಯಾಗಿತ್ತು. ಜನರ ಬದುಕಿನಲ್ಲಿ ನೀತಿಗೊಂದು ಪ್ರಾಧಾನ್ಯವಿತ್ತು. ಇದಕ್ಕೆ ಮತವಾಗಲಿ, ಜಾತಿಯಾಗಲಿ, ಕುಲವಾಗಲಿ ಹೊರತಾಗಿರಲಿಲ್ಲ. ಇದಕ್ಕೆ ಹೆಣ್ಣು, ಗಂಡು ಎಂಬ ಭೇದವೂ ಇರಲಿಲ್ಲ. ಇಷ್ಟು ಮಾತ್ರವಲ್ಲ ಬಡವ – ಶ್ರೀಮಂತ ಎಂಬ ಭಿನ್ನತೆಗೂ ಅವಕಾಶ ಇರಲಿಲ್ಲ.