Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಮಾನವಿಕ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಮಾನವಿಕ  ನಾಡೋಜ ಡಾ. ಮನು ಬಳಿಗಾರ್, ಡಾ. ಅರ್ಜುನ ಗೊಳಸಂಗಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 260

Download  View

Ebook  |   Text

ಮನಃಶಾಸ್ತ್ರಜ್ಞರ ಪ್ರಕಾರ ಮನುಷ್ಯನಿಗೆ ಹುಟ್ಟಿನಿಂದಲೇ ಬರುವ ಮತ್ತು ಸದಾಕಾಲ ಇರುವ ಪ್ರಮುಖ ಹಾಗೂ ಆಧಿಕ್ಯ ಪ್ರಜ್ಞೆ ಎಂದರೆ “ನಾನು” ಎನ್ನುವುದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಈ “ನಾನು” ಎಂಬುದು ಜಾಗೃತವಾಗಿರುತ್ತದೆ. ಅದನ್ನೇ “ಅಹಂ” ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಈ ಅಹಮ್ಮಿಗೆ ಸ್ವಲ್ಪ ಪೆಟ್ಟಾದರೂ ಸರಿ ಮನುಷ್ಯ ವಿಚಲಿತಗೊಳ್ಳುತ್ತಾನೆ. ಇದನ್ನೇ ಸ್ವಾಭಿಮಾನ, ಆತ್ಮಗೌರವ ಎಂದು ಹೇಳುವುದು. ಹಿಂದೂ ಧರ್ಮದಲ್ಲಿ ಮನುಷ್ಯರಿಗೆ ಆತ್ಮಗೌರವವನ್ನು ಶ್ರೇಣೀಕರಣಗೊಳಿಸಲಾಗಿದೆ.