ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ | ಡಾ. ಚಂದ್ರಕಾಂತ ಬಿ. ಪಾಟೀಲ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 76 |
ಸಾಮಾನ್ಯವಾಗಿ ಹೃದಯವು ಪ್ರೇಮ, ಪ್ರೀತಿ, ವಿಶ್ವಾಸ, ಭಾವನೆಗಳ ಕುರುಹಾಗಿದೆ. ಆದರೆ ವಾಸ್ತವವಾಗಿ ಹೃದಯವು ರಕ್ತವನ್ನು ದೇಹಕ್ಕೆ ಪೂರೈಸುವ ಒಂದು ಅದ್ಭುತವಾದ ಯಂತ್ರವಾಗಿದೆ. ಹೃದಯವು ನಮ್ಮ ಎದೆ ಗೂಡಿನ ಮಧ್ಯ ಹಾಗೂ ಎಡಭಾಗದಲ್ಲಿದ್ದು, ನಮ್ಮ ಕೈ ಮುಷ್ಠಿಯಷ್ಟುಗಾತ್ರದ್ದಾಗಿದೆ. ಅದರ ತೂಕವು ಸುಮಾರು 250-300 ಗ್ರಾಂಗಳಷ್ಟು. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳಿದ್ದು, ಅದರ ಹಿಂದೆ ಬೆನ್ನು ಮೂಳೆಗಳಿದ್ದು, ಮುಂದೆ ಎದೆಗೂಡಿನ ಮೂಳೆಗಳಿರುತ್ತವೆ. |