Categories
asia

ಇರಾಕ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಸೌದಿ ಅರೇಬಿಯ, ಇರಾನ್, ಜೋರ್ಡಾನ್, ಟರ್ಕಿ, ಸಿರಿಯಾ ಮತ್ತು ಕುವೈತ್ ಗಳಿಂದ ಸುತ್ತುವರಿದಿರುವ ದೇಶ ರಿಪಬ್ಲಿಕ್ ಆಫ್ ಇರಾಕ್. ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಮೆಸೊಪೊಟಮಿಯ ಸಂಸ್ಕೃತಿ ಅರಳಿದ ನೆಲ. ಮೊಸೊಪೊಟಮಿಯ ಎಂದರೆ ಎರಡು ನದಿಗಳ ನಡುವೆ ಇರುವ ನೆಲ ಎಂದು ಅರ್ಥ.ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳು ಈ ದೇಶದ ಪ್ರಮುಖ ನದಿಗಳು. ಇವುಗಳಿಗೆ ಅನೇಕ ಉಪನದಿಗಳಿವೆ. ಈ ಎರಡೂ ನದಿಗಳು ಅಲ್ ಖುರ್ನಾದಲ್ಲಿ ಸಂಗಮವಾಗಿ ‘ಷಟ್ ಅಲ್ ಅರಬ್’ ಎನ್ನುವ ಹೆಸರಲ್ಲಿ ಹರಿದು, ಪರ್ಶಿಯನ್ ಖಾರಿಯನ್ನು ಸೇರಿಕೊಳ್ಳುತ್ತದೆ.

ಪಶ್ಚಿಮ ಏಷಿಯಾ ದೇಶವಾಗಿರುವ ಈ ದೇಶದ ರಾಜಧಾನಿ ಬಾಗ್ದಾದ್. ಇಲ್ಲಿನ ಕರೆನ್ಸಿ ಇರಾಕಿ ದಿನಾರ್. ಅಧಿಕೃತ ಧರ್ಮ ಇಸ್ಲಾಂ. ಆಡಳಿತ ಭಾಷೆ ಅರೇಬಿಕ್ ಮತ್ತು ಖುರ್ದಿಶ್. ಭೂ ವಿಸ್ತೀರ್ಣ 4,35,052 ಚ.ಕಿ. 2016ರ ಅಂದಾಜು ಜನಸಂಖ್ಯೆ 3,75,48,000. ಜನಸಾಂದ್ರತೆ ಪ್ರತಿ ಕಿ.ಮೀ.ಗೆ 86.5.

       

ಈ ದೇಶದ ಭೂಮಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿ ನಡುವಿನ ಉತ್ತರದ ಎತ್ತರ ಪ್ರದೇಶ, ದೇಶದ ಮಧ್ಯ ಮತ್ತು ಮಧ್ಯಪೂರ್ವ ಭಾಗದಲ್ಲಿ ಮೆಕ್ಕಲು ಮಣ್ಣಿನ ಬಯಲು ಪ್ರದೇಶ, ಪಶ್ಚಿಮ ಮತ್ತು ದಕ್ಷಿಣದ ಮರುಭೂಮಿ ಹಾಗೂ ಈಶಾನ್ಯದ ಪರ್ವತ ಪ್ರದೇಶ. ಕೇವಲ ಹನ್ನೆರಡು ಕಿಲೋಮೀಟರ್ ಪರ್ಶಿಯನ್ ಗಲ್ಫ್ ತೀರವನ್ನು ಕೂಡ ಇದು ಹೊಂದಿದೆ.ಇಲ್ಲಿನ ಶಾನಿಡರ್ ಗುಹೆಗಳಲ್ಲಿ ಉತ್ಖನನ ನಡೆಸಿದಾಗ ದೊರೆತಿರುವ ಅಸ್ಥಿಪಂಜರಗಳು ಸುಮಾರು 50 ಸಾವಿರ ವರ್ಷಗಳಿಗೂ ಹಿಂದಿನದು ಎಂದು ಅಂದಾಜು ಮಾಡಲಾಗಿದೆ.

ಇಲ್ಲಿನ ಮೆಸಪೊಟಮಿಯ ಸಂಸ್ಕೃತಿ ಮಾನವ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದ್ದು, ಲಿಪಿ, ಗಣಿತ, ಖಗೋಳ ಮತ್ತು ಕೃಷಿಯಲ್ಲಿ ಅಪಾರ ಸಾಧನೆ ಕಂಡಿತ್ತು. ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಮೆಸೊಪೊಟಮಿಯ ಸಂಸ್ಕೃತಿಯಲ್ಲಿ, ಚಕ್ರದ ಪರಿಕಲ್ಪನೆ ಹುಟ್ಟಿಕೊಂಡಿತು. ತುಂಬ ಹಿಂದೆಯೇ ವ್ಯವಸಾಯ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಸುಮೇರಿಯನ್, ಅಕ್ಕಡಿಯನ್, ಬ್ಯಾಬಿಲೋನಿಯನ್ ಮತ್ತು ಅಸ್ಸಿರಿಯನ್ ಸಾಮ್ರಾಜ್ಯಗಳು ಆಳಿ, ತನ್ನದೇ ಕೊಡುಗೆ ನೀಡಿವೆ.

ಈಜಿಪ್ಟ ನಲ್ಲಿ ಪಿರಮಿಡ್ ಗಳಿದ್ದಂತೆ ಇರಾಕ್ ನಲ್ಲಿ ಮೆಸೊಪೊಟಮಿಯ ಕಾಲದ ಝಿಗ್ಗುರಟ್ ಗಳಿವೆ. ಇವು ಪ್ರಾಚೀನ ಜನರ ದೇವಸ್ಥಾನಗಳು. ಉರ್ ಬಳಿ ನಿರ್ಮಿಸಿದ್ದ ಕ್ರಿ.ಪೂ.2100ರಲ್ಲಿ ಚಂದ್ರ ದೇವತೆ ‘ನನ್ನ’ ಸಲುವಾಗಿ ರಾಜಾ ‘ನಮ್ಮು’ ನಿರ್ಮಿಸಿದ ಎನ್ನಲಾಗಿದೆ.ಕ್ರಿ.ಪೂ.4800ರ ಹೊತ್ತಿಗೆ ಇರಾಕ್ ನಲ್ಲಿ ಮೆಸೊಪೊಟಮಿಯ ನಾಗರಿಕತೆ ಅರಳಿಕೊಂಡು, ಸುಮೇರಿಯನ್ ಸಾಮ್ರಾಜ್ಯ ತಲೆ ಎತ್ತಿ ನಿಂತಿತು. ಅನೇಕ ಆನ್ವೇಷಣೆಗಳಿಗೆ ಸುಮೇರಿಯನ್ ಸಾಮ್ರಾಜ್ಯ ಕಾರಣವಾಯಿತು. 60 ಅಂಕಿಗಳ ಆಧಾರದ ಮೇಲೆ ಅಂಕಗಣಿತ ಪದ್ಧತಿ ವಿಕಸನ ಹೊಂದಿದ್ದೂ ಸುಮೇರಿಯನ್ನರ ಕಾಲದಲ್ಲಿಯೇ.

ಕ್ರಿ.ಪೂ.2340ರಲ್ಲಿ ಸುಮೇರಿಯನ್ ನಗರ ರಾಜ್ಯಗಳನ್ನು ಅಕ್ಕಡ್ ಸಾಮ್ರಾಜ್ಯ ವಶಪಡಿಸಿಕೊಂಡು, ಅಧಿಪತ್ಯ ಸ್ಥಾಪಿಸಿತು. ಅದು ಬಹಳ ವರ್ಷ ಬದುಕಲಿಲ್ಲ. ಕ್ರಿ.ಪೂ.2125ರ ಹೊತ್ತಿಗೆ ಉತ್ತರ ಭಾಗ ಅಸ್ಸಿರಿಯನ್ನರ ಸಾಮ್ರಾಜ್ಯಕ್ಕೆ ಮತ್ತು ದಕ್ಷಿಣ ಭಾಗ ಬ್ಯಾಬಿಲೋನಿಯನ್ನರ ಆಡಳಿತಕ್ಕೆ ಒಳಪಟ್ಟವು.ಕ್ರಿ.ಪೂ.1792-1750ರ ವರೆಗೆ ಬ್ಯಾಬಿಲೋನಿಯನ್ ರಾಜ ಹಮ್ಮುರಬಿಯ ಆಡಳಿತ ನಡೆಯಿತು. ಅಸ್ಸಿರಿಯನ್ನರು ಯುದ್ಧಪರಿಣತರು ಮತ್ತು ‘ನಿನವೇ ಮತ್ತು ಕಲಾಖ’ ನಗರಗಳನ್ನು ನಿರ್ಮಾಣ ಮಾಡಿದ್ದರು. ಕ್ರಿ.ಪೂ.626ರಲ್ಲಿ ಬ್ಯಾಬಿಲೋನಿಯದ ರಾಜ ನಬೋಪೊಲಾಸ್ಸರ್, ಅಸ್ಸಿರಿಯನ್ನರನ್ನು ಸೋಲಿಸಿ, ಇಡೀ ಪ್ರದೇಶಕ್ಕೆ ಬ್ಯಾಬಿಲೋನ್ ನಗರವೇ ರಾಜಧಾನಿ ಎಂದು ಘೋಷಿಸಿದ. ಕ್ರಿ.ಪೂ.539ರಲ್ಲಿ ಆರ್ಕಿಮೆನಿಡ್ ರಾಜ ಸೈರಸ್ ಬ್ಯಾಬಿಲೋನ್ ನಗರವನ್ನು ವಶಪಡಿಸಿಕೊಂಡ. ಆನಂತರ ದಾಳಿಗಳು ಪದೇ ಪದೇ ನಡೆದವು.

ಕ್ರಿ.ಪೂ. 331ರಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್, ರೋಮ್ ನ ಟ್ರಾಜನ್, ಮತ್ತು ಪಾರ್ಥಿಯನ್ ಸಾಮ್ರಾಜ್ಯಗಳು ಆಳಿದವು. ಕ್ರಿ.ಶ.636ರಲ್ಲಿ ಅದರ ಮೇಲೆ ಅರಬ್ ಪ್ರಭಾವ ಹೆಚ್ಚಾಯಿತು.ಈ ದೇಶದ ಪರಿಕಲ್ಪನೆ ತಂದು, ಇರಾಕ್ (ಅರೇಬಿಕ್ ಭಾಷೆಯಲ್ಲಿ ಫಲವತ್ತು ಜಮೀನು ಎಂದರ್ಥ) ಎಂದು ನಾಮಕರಣ ಮಾಡಿದ ಶ್ರೇಯಸ್ಸು ಅರಬ್ಬರಿಗೆ ಸಲ್ಲುತ್ತದೆ. ಎಂಟನೇ ಶತಮಾನದಲ್ಲಿ ಅಬ್ಬಾಸಿದ್ ಸಂತತಿಯ ಖಲೀಫ ಅಬು ಜಫಾರ್ ಅಲ್ ಮನ್ಸೂರ್ ಬಾಗ್ದಾದ್ ನಗರವನ್ನು ನಿರ್ಮಿಸಿ ರಾಜಧಾನಿ ಮಾಡಿಕೊಂಡ. ಎಂಟನೇ ಶತಮಾನದ ಮಧ್ಯಭಾಗದಿಂದ 13ನೇ ಶತಮಾನದಲ್ಲಿ ಮಂಗೋಲರ ದಾಳಿ ನಡೆಯುವವರೆಗೆ ಅಬ್ಬಾಸಿದ್ ಖಲೀಫರ ಆಡಳಿತ ನಡೆಯಿತು. 1258ರಲ್ಲಿ ಮಂಗೋಲರು ಬಾಗ್ದಾದ್ ನಗರವನ್ನು ವಶಪಡಿಸಿಕೊಂಡು, ಧ್ವಂಸಗೊಳಿಸಿದರು. ಈ ಸಮಯದಲ್ಲಿ ಸುಮೇರಿಯನ್ ಕಾಲದ ಅನೇಕ ಸ್ಮಾರಕಗಳು ನಾಶವಾದವು. ಅವರು ಅಬ್ಬಾಸಿದ್ ಕುಟುಂಬದ ಎಲ್ಲ ಸದಸ್ಯರ ಕೊಂದು ಹಾಕಿದರು. ನಂತರ 14 ಮತ್ತು 15ನೇ ಶತಮಾನದಲ್ಲಿ ಆಟ್ಟೋಮನ್ ಟರ್ಕರ ಆಡಳಿತಕ್ಕೆ ಇರಾಕ್ ಸಿಕ್ಕಿಹಾಕಿಕೊಂಡಿತು.

ಆಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಇರಾಕ್ ನ್ನು ಬ್ರಿಟಿಷರು ವಶಪಡಿಸಿಕೊಂಡರು. ಮೊದಲನೇ ವಿಶ್ವ ಸಮರ ಸಮಯದಲ್ಲಿ ಬದಲಾದ ಪರಿಸ್ಥಿತಿಗಳಿಂದಾಗಿ 1932ರಲ್ಲಿ ಸ್ವತಂತ್ರ ದೇಶವಾಗಿ ಘೋಷಣೆಯಾಯಿತು. ಆ ದೇಶವನ್ನು 1958ರಲ್ಲಿ ಗಣರಾಜ್ಯ ಎಂದು ಘೋಷಿಸಲಾಯಿತಾದರೂ, 2003ರವರೆಗೆ ಸರ್ವಾಧಿಕಾರಿಗಳ ಹಿಡಿತಕ್ಕೆ ಸಿಲುಕಿತು. ಈ ಪೈಕಿ ಸದ್ದಾಂ ಹುಸೇನ್ ಅವಧಿಯೇ ದೀರ್ಘಕಾಲದ್ದು. ಸದ್ದಾಂ ಹುಸೇನ್ ಅವಧಿಯಲ್ಲಿ ಎರಡು ಯುದ್ಧಗಳನ್ನು ಮಾಡಿತು, ಮೊದಲನೆಯದು ಗಡಿ ವಿವಾದದಿಂದಾಗಿ 1980ರಿಂದ 88ರವರೆಗೆ ಇರಾನ್ ಜೊತೆ ಯುದ್ಧಕ್ಕಿಳಿದರೆ, ಎರಡನೆಯದು 1990ರಲ್ಲಿ, ಗಲ್ಫ್ ವಾರ್ ಎಂದು ಕರೆಯಲಾಗುವ ಕುವೈತ್ ಆಕ್ರಮಣ. ತೈಲ ಸಮೃದ್ಧ ಕುವೈತನ್ನು ಆಕ್ರಮಿಸುಕೊಳ್ಳುವಲ್ಲಿ ಇರಾಕ್ ಯಶಸ್ವಿಯಾದರೂ, 1991ರಲ್ಲಿ ವಿಶ್ವಸಂಸ್ಥೆ ಮಿತ್ರಪಡೆಗಳು ಕುವೈತ್ ನೆರವಿಗೆ ಬಂದ, ಆಕ್ರಮಣದಿಂದ ಮುಕ್ತವಾಗಲು ನೆರವು ನೀಡಿದವು. 1991ರಲ್ಲಿ ಕುವೈತಿನಿಂದ ಇರಾಕ್ ಸೇನೆ ನಿರ್ಗಮಿಸಿತು. ಇದಾದ ಕೂಡಲೇ, ಎಲ್ಲ ಸಮೂಹನಾಶಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ನಾಶಪಡಿಸಬೇಕು, ಅಷ್ಟೇ ಅಲ್ಲದೆ, ಶಸ್ತ್ರಾಸ್ತ್ರಗಳ ಪರೀಕ್ಷೆಗೆ ವಿಶ್ವಸಂಸ್ಥೆಗೆ ಅವಕಾಶ ಮಾಡಿಕೊಡಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇರಾಕ್ ಗೆ ತಿಳಿಸಿತು. ಇದನ್ನು ನಿರಾಕರಿಸಿ 12 ವರ್ಷಗಳ ಕಾಲ ಸದ್ದಾಂ ಹುಸೇನ್ ಆಡಳಿತ ನಡೆಸಿದ. ಹೀಗಾಗಿ ಇರಾಕ್ ನಿರ್ಬಂಧಗಳಿಗೆ ಗುರಿಯಾಯಿತು. ನಂತರ ಅಮೇರಿಕ ನೇತೃತ್ವದ ಮಿತ್ರಪಡೆಗಳು ದಾಳಿ ನಡೆಸಿ, 2003ರಲ್ಲಿ ಸದ್ದಾಂ ಹುಸೇನ್ ನನ್ನು ಕೆಳಗಿಳಿಸಿತು.

ಯುದ್ಧ ಅವಧಿ ಮುಗಿದ ನಂತರ ದೇಶದ ಜಿಡಿಪಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. 2005ರಲ್ಲಿ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 36,268 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014ರಲ್ಲಿ 2,25,422 ದಶಲಕ್ಷ ಅಮೇರಿಕನ್ ಡಾಲರ್ ತಲುಪಿದೆ. 2005ರಲ್ಲಿ ತಲಾ ಜಿಡಿಪಿ 1342.4 ಅಮೇರಿಕನ್ ಡಾಲರ್ ಹೊಂದಿದ್ದು, 2014ರ ಹೊತ್ತಿಗೆ ಅದು 6,390.7 ಅಮೇರಿಕನ್ ಡಾಲರ್ ಗೆ ಏರಿದೆ. ಆರ್ಥಿಕತೆಯಲ್ಲಿ ನಿವ್ವಳ ಮೌಲ್ಯವರ್ಧನೆ (ಜಿವಿಎ) ಕೃಷಿಯದು ಶೇ.4.2, ಕೈಗಾರಿಕೆ ಶೇ.59 ಮತ್ತು ಸೇವಾ ವಲಯ ಶೇ.36,9ರಷ್ಟಿದೆ. 2014ರಲ್ಲಿ ನಿರುದ್ಯೋಗ ಪ್ರಮಾಣ ಕಾರ್ಮಿಕ ಬಲದ ಶೇ.16ರಷ್ಟಿತ್ತು. ಪ್ರತಿ 100 ಪುರುಷರಿಗೆ 69.3 ಕಾರ್ಮಿಕ ಬಲವಾಗಿದ್ದರೆ, ಪ್ರತಿ 100 ಸ್ತ್ರೀಯರ ಪೈಕಿ ಕೇವಲ 15ರಷ್ಟು ಮಾತ್ರ ಕಾರ್ಮಿಕ ಬಲವಾಗಿದ್ದಾರೆ.

2015ರ ಅಂದಾಜಿನಂತೆ ದೇಶದ ಶೇ.69.5ರಷ್ಟು ನಗರವಾಸಿಗಳು. ಸಂಸತ್ತಿನಲ್ಲಿ ಮಹಿಳಾ ಪ್ರತಿನಿಧಿಗಳ ಪ್ರಮಾಣ ಶೇ.26.5ರಷ್ಟಿದೆ.2014ರ ಅಂದಾಜಿನಂತೆ ಶೇ.11.3ರಷ್ಟು ಜನ ಮಾತ್ರ ಇಂಟರ್ನೆಟ್ ಬಳಕೆದಾರರಾಗಿದ್ದಯ, ಮೊಬೈಲ್ ಹೊಂದಿರುವವರ ಪ್ರಮಾಣ ಶೇ.94ರಷ್ಟಿದೆ.ಅಪಾರ ಸಂಪನ್ಮೂಲ ಹೊಂದಿದ್ದರೂ ಮೂಲಭೂತವಾದ ದೇಶವನ್ನು ಕಾಡುತ್ತಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಇಸ್ರೇಲ್ (ಐಸಿಸ್)ನ ಉಗಮ ಸ್ಥಾನ ಕೂಡ ಇದೇ ದೇಶ. ಈ ದೇಶದಲ್ಲಿ ಮತ್ತೆ ಖಲೀಫನ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆನ್ನುವುದು ಅವರ ಉದ್ದೇಶ. ದೇಶದ ಕೆಲವು ಭಾಗಗಳು ಉಗ್ರರ ಹಿಡಿತದಲ್ಲಿದ್ದು, ಅವರ ವಿರುದ್ಧದ ಹೋರಾಟದಲ್ಲಿ ಮತ್ತೆ ತೊಡಗಿಕೊಂಡಿದೆ ಇರಾಕ್. ರಷ್ಯಾ ಮತ್ತು ಅಮೇರಿಕದ ಮಿತ್ರಪಡೆಗಳೂ ಕೂಡ ಐಸಿಸ್ ಉಗ್ರರ ಮೇಲೆ ದಾಳಿ ನಡೆಸಿ, ಬಹುತೇಕ ಪ್ರದೇಶಗಳ ಉಗ್ರ ಕಬಂಧಬಾಹುವಿನಿಂದ ಮುಕ್ತಗೊಳಿಸಿದೆ.ಇಂಥ ವಿಚಿತ್ರ ಪರಿಸ್ಥಿತಿಯಲ್ಲಿ ಬಹಳಷ್ಟು ಜನ ವಲಸೆಗಾರರಾಗಿ ಹೊರದೇಶಗಳತ್ತ ಮುಖ ಮಾಡಿದ್ದಾರೆ. ಈ ಸಮಸ್ಯೆ ನಿವಾರಿಸಿಕೊಳ್ಳಬೇಕಾಗಿರುವುದೇ ಇರಾಕ್ ಮುಂದಿರುವ ಸವಾಲು.

[/fusion_text][/fusion_builder_column][/fusion_builder_row][/fusion_builder_container]