Categories
asia

ಇರಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಆರ್ಯರ ನಾಡು ಎನ್ನಿಸಿಕೊಂಡಿರುವ ಮಧ್ಯ ಪ್ರಾಚ್ಯ ದೇಶ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್. ಸ್ಥಳೀಯ ಹೆಸರು ಜೊಮ್ಹುರಿ ಎ ಇಸ್ಲಾಮಿ ಎ ಇರಾನ್. ಪ್ರಾಚೀನ ಇರಾನ್ ನಲ್ಲಿ ಬಳಕೆಯಾಗುತ್ತಿದ್ದ ‘ಅವೆಸ್ತಾನ್’ ಭಾಷೆಯಲ್ಲಿನ ಶಬ್ದ ‘ಆರ್ಯನಂ’ನಿಂದ ಇರಾನ್ ಎನ್ನುವ ಶಬ್ದೋತ್ಪತ್ತಿಯಾಗಿದೆ. ಇರಾನ್ ಎಂದರೆ ಆರ್ಯರ ನಾಡು ಅಥವಾ ಶ್ರೇಷ್ಠರ ನಾಡು ಎಂದರ್ಥ.ಈ ದೇಶದ ಹಳೆಯ ಹೆಸರು ಪರ್ಷಿಯಾ. ಹಲವು ಶತಮಾನಗಳ ಕಾಲ ಪರ್ಷಿಯಾ ಎನ್ನುವ ಹೆಸರಿನಿಂದ ಗುರುತಿಸಿಕೊಂಡು, ನಂತರ ಆ ಹೆಸರು ಸಮಗ್ರ ದೇಶವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಕಾರಣಕ್ಕೆ ಹೆಸರನ್ನು ಬದಲಾಯಿಸಲಾಯಿತು.

ಮೂವತ್ತೊಂದು ಆಡಳಿತಾತ್ಮಕ ಪ್ರಾಂತ್ಯಗಳನ್ನು ಹೊಂದಿರುವ ಈ ದೇಶದ ರಾಜಧಾನಿ ಟೆಹರಾನ್. ಧಾರ್ಮಿಕ ಗಣತಂತ್ರವಾಗಿರುವ ಇರಾನ್, ಇಸ್ಲಾಮಿಕ್ ಮತ್ತು ಜಾತ್ಯತೀತ ಕಾನೂನುಗಳನ್ನು ಹೊಂದಿದೆ. ಇಸ್ಲಾಮಿಕ್ ಸಮಾಲೋಚಕ ಸಭೆ ಅಥವಾ ಮಜ್ಲಿಸ್ ಎನ್ನುವ ಏಕಶಾಸನ ಸಭೆಯನ್ನು ಹೊಂದಿದ್ದು, 290 ಸದಸ್ಯರನ್ನು ಒಳಗೊಂಡಿದೆ.ಇರಾಕ್, ಪಾಕಿಸ್ತಾನ, ಆಫ್ಘಾನಿಸ್ತಾನ, ಟರ್ಕಿ ಮತ್ತು ತುರ್ಕ್ ಮೆನಿಸ್ತಾನ ದೇಶಗಳ ಗಡಿಗೆ ಹೊಂದಿಕೊಂಡಿರುವ ಈ ದೇಶ ಕ್ಯಾಸ್ಪಿಯನ್ ಸಮುದ್ರದ ಕರಾವಳಿ ತೀರವನ್ನೂ ಹೊಂದಿದೆ.15,31,595 ಚ.ಕೀ. ಭೂಪ್ರದೇಶವನ್ನು ಹೊಂದಿದ್ದು, ಈ ಪೈಕಿ ಶೇ.30.1ರಷ್ಟು ಕೃಷಿ ಭೂಮಿಯಾಗಿದೆ. ಕೃಷಿಯೋಗ್ಯ ಭೂಮಿ ಶೇ. 10.8, ಶಾಶ್ವತ ಬೆಳೆಗಳು ಶೇ. 1.2, ಮತ್ತು ಶಾಶ್ವತ ಹುಲ್ಲುಗಾವಲು ಶೇ. 18.1 ರಷ್ಟಿದೆ. ಅರಣ್ಯ ಭೂಮಿ ಶೇ.6,8ರಷ್ಟಿದೆ.

 

ದೇಶದ ಮಧ್ಯಭಾಗ ಮತ್ತು ಪೂರ್ವದಲ್ಲಿ ಮರುಭೂಮಿಯನ್ನು ಹೊಂದಿದ್ದು, ಇಲ್ಲಿ ಅತ್ಯಂತ ಕಡಿಮೆ ಜನಸಾಂದ್ರತೆ ಇದೆ.ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇರಾನ್ ನಲ್ಲಿ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು, ಕ್ರೋಮಿಯಂ, ತಾಮ್ರ, ಉಕ್ಕಿನ ಅದಿರು, ಸೀಸ, ಮ್ಯಾಂಗನೀಸ್, ಸತುವು, ಸಲ್ಫರ್ ಸಿಗುತ್ತವೆ.ಕ್ರಿ.ಪೂ.2500ರಿಂದ 644ರವರೆಗೆ ಎಲಮೈಟ್ ನಾಗರಿಕತೆ ಅರಳಿಕೊಂಡಿತ್ತು. ನಂತರ ಆಳಿದ ಮೀಡಿಯನ್ ಸಾಮ್ರಾಜ್ಯದಲ್ಲಿ ಜನ ಆರ್ಯರ ಭಾಷೆಗೆ ಹೋಲಿಕೆಯುಳ್ಳ ಭಾಷೆಯನ್ನು ಮಾತನಾಡುತ್ತಿದ್ದರು. ಎಕ್ಬಾಟಾನಾ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಕ್ರಿ.ಪೂ.728 ರಿಂದ 625ರವರೆಗೆ ಈ ಸಾಮ್ರಾಜ್ಯ ಆಡಳಿತ ನಡೆಸಿತು.

ಇರಾನಿನ ದಕ್ಷಿಣ ಭಾಗದಲ್ಲಿ ಜನ ಮಾತನಾಡುವ ಭಾಷೆ ಪರ್ಷಿಯನ್ ಆಗಿತ್ತು. ಆ ಭಾಗವನ್ನು ಪರ್ಸಿಸ್ ಎಂದೇ ಕರೆಯಲಾಗುತ್ತಿತ್ತು. ಕ್ರಿ.ಪೂ.559-330ರ ಅವಧಿಯಲ್ಲಿ ಪರ್ಸಿಸ್ ನ ಆಖಿಮಿಡಿಸ್ ಸಂತತಿಯವರು ಇರಾನನ್ನು ಆಳಿದರು. ಈ ಸಾಮ್ರಾಜ್ಯವನ್ನು ಸೈರಸ್ ದಿ ಗ್ರೇಟ್, ಡೇರಿಯಸ್ ದಿ ಗ್ರೇಟ್ ಮುಂತಾದವರು ಆಳಿದ್ದಾರೆ. ಸೈರಸ್ ದಿ ಗ್ರೇಟ್ ಕಾಲದಲ್ಲಿ ಅಖಿಮಿಡಿಸ್ ಸಾಮ್ರಾಜ್ಯ ಹಿಂದೂಕುಶ್ ಪರ್ವತಗಳ ಆಚೆಗೂ ಹಬ್ಬಿತ್ತು. ನಶ್ಕ್ ರೊಸ್ತುಮ್ ಬಳಿಯಿರುವ ಶಿಲಾಶಾಸನದಲ್ಲಿ ಡೇರಿಯಸ್ ದಿ ಗ್ರೇಟ್ ತನ್ನ ಬಗ್ಗೆ ಪರಿಚಯಮಾಡಿಕೊಂಡ ರೀತಿ ಹೀಗಿದೆ: ನಾನು ಡೇರಿಯಸ್ ದಿ ಗ್ರೇಟ್, ಅಖಿಮೇನಿಯನ್ ರಾಜ, ಪರ್ಷಿಯನ್ ರಾಜನ ಮಗನಾಗಿರುವುದರಿಂದ ಪರ್ಷಿಯನ್, ಆರ್ಯ ಜನಾಂಗಕ್ಕೆ ಸೇರಿದವನು.

ಅದೇ ಶಾಸನದಲ್ಲಿ ಮುಂದುವರಿದು, ಮೀಡಿಯ, ಪಾರ್ಥಿಯ, ಏರಿಯ, ಬ್ಯಾಕ್ಟ್ರಿಯ, ಸೊಗ್ಡಿಯಾನ, ಖೊರಾಸ್ಮಿಯ, ಡ್ರಾಂಗಿಯಾನ, ಅರಖೋಸಿಯ, ಸತ್ತಗಿಡಿಯ, ಆರ್ಮೇನಿಯ, ಗಾಂಧಾರ, ಸಿಂಧ್, ಬ್ಯಾಬಿಲೋನಿಯ, ಐಯೋನಿಯ, ಲಿಬಿಯ, ಇಥಿಯೋಪಿಯ ಸಾಮ್ರಾಜ್ಯಗಳನ್ನು ಗೆದ್ದಿರುವುದಾಗಿ ಆತ ಬರೆದುಕೊಂಡಿದ್ದಾನೆ.ಗ್ರೀಕರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತ ಬಂದಾಗ ಅವರು ಇರಾನ್ ಪ್ರಸ್ಥಭೂಮಿಯಲ್ಲಿ ಸಹಜವಾಗಿಯೇ ಎದುರಿಸಬೇಕಾಗಿ ಬಂದಿದ್ದು ಆಖಿಮಿಡಿಸ್ ರಾಜರನ್ನೇ. ಕ್ರಿ.ಪೂ.330ರ ಅವಧಿಯಲ್ಲಿ ‘ಅಲೆಕ್ಸಾಂಡರ್ ದಿ ಗ್ರೇಟ್’ ಸಂಪೂರ್ಣವಾಗಿ ಆಖಿಮಿಡಿಸ್ ರಾಜ್ಯವನ್ನು ಗೆದ್ದುಕೊಂಡ. ಅವರ ಸಂಸ್ಕೃತಿ, ಭಾಷೆ ಪರ್ಷಿಯನ್ ಆಗಿದ್ದುದರಿಂದ, ಇಡೀ ಇರಾನ್ ಗೆ ಪರ್ಷಿಯಾ ಎಂದು ಕರೆಯಲು ಶುರು ಮಾಡಿದರು. ನಂತರ ಅದೇ ಹೆಸರು ಜನಪ್ರಿಯವಾಯಿತು. ಬಹಳ ವರ್ಷ ಅದೇ ಹೆಸರಿನಲ್ಲಿದ್ದರೂ ಅದು ಸಮಗ್ರ ದೇಶವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಕಾರಣಕ್ಕೆ, ಅಲ್ಲಿನ ಸರ್ಕಾರ 1935ರಲ್ಲಿ ಇರಾನ್ ಎಂದು ಹೆಸರು ಬದಲಾ ಯಿಸಿಕೊಂಡಿತು.

ಅಲೆಕ್ಸಾಂಡರ್ ಕ್ರಿ.ಪೂ.323ರಲ್ಲಿ ಮೃತಪಟ್ಟಾಗ ಗ್ರೀಕ್ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಇರಲಿಲ್ಲ. ಹೀಗಾಗಿ ವಿಶಾಲ ಗ್ರೀಕ್ ಸಾಮ್ರಾಜ್ಯದ ಮೇಲೆ ನಿಯಂತ್ರಣಕ್ಕಾಗಿ ಒಳಜಗಳಗಳು ಪ್ರಾರಂಭವಾದವು. ಕ್ರಿ.ಪೂ.ನಾಲ್ಕನೇ ಶತಮಾನದ ಕಡೆಕಡೆಯಲ್ಲಿ ಗ್ರೀಕ್ ಸಾಮ್ರಾಜ್ಯದ ವಶದಲ್ಲಿದ್ದ ಪರ್ಷಿಯಾ ಭಾಗವನ್ನು ಸೆಲ್ಯೂಕಸ್ ಒಂದನೇ ನಿಕೇಟರ್ ವಶಪಡಿಸಿಕೊಂಡ. ಆತನ ಮಗ ಮೊದಲನೇ ಆಂಟಿಯೊಕಸ್ ಅಧಿಕಾರಕ್ಕೆ ಬಂದ ನಂತರ ಎರಡು ರಾಜಧಾನಿಗಳನ್ನು ಸ್ಥಾಪಿಸಿದ: ಒಂದು, ಸಿರಿಯದಲ್ಲಿನ ಒರೊನ್ಟಿಸ್ ನದಿ ದಡ ಮೇಲಿನ ಆಂಟಿಯೋಕ್, ಮತ್ತೊಂದು ಬ್ಯಾಬಿಲೋನಿಯದಲ್ಲಿ ಟೈಗ್ರಿಸ್ ನದಿ ದಡದ ಮೇಲೆ ಸೆಲ್ಯುಸಿಯಾ. ಸೆಲ್ಯೂಸಿಡರ ರಾಜ್ಯ ಇಂದಿನ ಭಾರತದ ಪಂಜಾಬಿನವರೆಗೂ ಹಬ್ಬಿತ್ತು. ನಂತರ ಕ್ರಿ.ಪೂ.304ರಲ್ಲಿ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ , ಹಿಂದೂಕುಶ್ ಪರ್ವತದವರೆಗಿನ ಪ್ರದೇಶವನ್ನು ಗೆದ್ದುಕೊಂಡ. ಸಿಂಧೂ ನಾಗರಿಕತೆ ಪ್ರದೇಶವನ್ನು ಕಳೆದುಕೊಂಡಿದ್ದು ಸೆಲ್ಯೂಸಿಡರಿಗೆ ಆದ ಬಹುದೊಡ್ಡ ಹಿನ್ನಡೆ.ಆನಂತರದ ಮಹತ್ವದ ಘಟ್ಟ ಎಂದರೆ ಏಳನೇ ಇರಾನ್ ಅರಬ್ಬರ ದಾಳಿಗೆ ಸಿಲುಕಿದ್ದು. ಪ್ರವಾದಿ ಮಹಮ್ಮದ್ ರ ಹುಟ್ಟಿದ ಸ್ಥಳ ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರ ಅರೇಬಿಯನ್ ಕ್ರಾಂತಿಯ ಕೇಂದ್ರಗಳಾದವು.

ಮೊಹಮದ್ ಪೈಗಂಬರ್ ನಿಧನದ ನಂತರ, ಕ್ರಿ.ಶ.636-637ರ ಹೊತ್ತಿಗೆ ಪರ್ಷಿಯಾದಲ್ಲಿ ಸಾಸಾನಿಯನ್ನರ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಮೊದಲನೇ ಖಲೀಫ ಅಬುಬಕರ್ ಸಿರಿಯಾದಲ್ಲಿ ಬೈಜಂಟೈನರು ಮತ್ತು ಪರ್ಷಿಯಾದಲ್ಲಿ ಸಾಸಾನಿಯನ್ನರನ್ನು ಸೋಲಿಸಿದ್ದು ಹೊಸ ಇರಾನಿನ ಹುಟ್ಟಿಗೆ ಕಾರಣವಾಯಿತು. ಬಹುಸಂಖ್ಯೆಯ ಜನ ಶಿಯಾ ಮುಸ್ಲಿಮರಾಗಿ ಮತಾಂತರಗೊಂಡರು.ಆನಂತರ ಅಲ್ಲಿ ಖಜಾರ್ ಮನೆತನ ಮತ್ತು ಪಹ್ಲವಿ ಮನೆತನಗಳು ಆಡಳಿತ ನಡೆಸಿದವು. 1979ರಲ್ಲಿ ಪಹ್ಲವಿ ಮನೆತನದ ಸರ್ವಾಧಿಕಾರಿಯನ್ನು ಕೆಳಗಿಳಿಸಿ, ಮುಸ್ಲಿಂ ಪಂಡಿತ ಆಯಾತುಲ್ಲಾ ಖೊಮೇನಿ ನೇತೃತ್ವದ ಧಾರ್ಮಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಖೊಮೇನಿ ಸಾರ್ವಭೌಮ ಅಧಿಕಾರವನ್ನು ಹೊಂದಿದ್ದು, ಆಯ್ಕೆಗೊಂಡ 86 ಧಾರ್ಮಿಕ ಪಂಡಿತರಿಗೆ ಮಾತ್ರ ಉತ್ತರದಾಯಿತ್ವ ಹೊಂದಿದ್ದ. 1980ರಿಂದ 88ರವರೆಗೆ ಎಂಟು ವರ್ಷಗಳ ಕಾಲ ಇರಾಕ್ ಜೊತೆ ಇರಾನ್ ಯುದ್ಧಲ್ಲಿ ತೊಡಗಿಕೊಂಡಿತು. ನಂತರ ಅಣ್ವಸ್ತ್ರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರಿಂದ ಕೆಲ ವರ್ಷ ಅಮೇರಿಕ, ಯೂರೋಪ್ ಒಕ್ಕೂಟಗಳಿಂದ ಇರಾನ್ ಮೇಲೆ ಕೆಲವ ವರ್ಷಗಳ ಕಾಲ ಆರ್ಥಿಕ ನಿರ್ಬಂಧ ಹೇರಲಾಗಿತ್ತು.ದೀರ್ಘ ಕಾಲ ಕಾಡುವ ಬರಗಾಲಗಳು, ಪ್ರವಾಹ, ಸುಂಟರಗಾಳಿ, ಮರಳುಗಾಳಿ, ಭೂಕಂಪಗಳು ಈ ದೇಶವನ್ನು ಪದೇ ಪದೇ ಕಾಡುವ ನೈಸರ್ಗಿಕ ತೊಂದರೆಗಳು. ಮೂಲಭೂತವಾದ ಬಿಟ್ಟೂಬಿಡದೆ ಕಾಡಿದೆ. ಇವೆಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳುವ ಹೊಣೆಗಾರಿಕೆ ಅಲ್ಲಿನ ಸರ್ಕಾರದ ಮೇಲಿದೆ.

[/fusion_text][/fusion_builder_column][/fusion_builder_row][/fusion_builder_container]