Categories
ರಚನೆಗಳು

ಕದರುಂಡಲಗಿ ಹನುಮಯ್ಯ

೧೦೧
ಹನುಮಂತ ದೇವರು
(ದಂಡಕ)
ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ
ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ
ರಣರಂಗಧೀರಾ ಕದನಕಂಠೀರಾ
ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್
ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ
ಭಾಪು ಭಲ ಭಲ್ಲ ಭಾರತಿಯ ನಲ್ಲ
ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ-
ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು
ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ
ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ
ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ
ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ
ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ-
ವನ್ನು ಪೇಳಲಿನ್ನೇನು ಭುಜಬಲವನ್ನು
ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ-
ಗಳಿಂದ ಮಾಡಿದೈ ಛಂದ ಅಂಜನೆಯ ಕಂದ
ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು-
ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ
ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ
ಚರಣಮಂ ಕಂಡು…. ಮಾಡಿದೈ ಗಂಡು
ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ-
ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ
ಮೆರೆವಂಥಾ ಜಯ ಹನುಮ ಭೀಮ ಬಲವಂತಾ
ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ
ಸುತ್ತ ಓಡ್ಯಾಡಿ ದೈತ್ಯರಂ ಕಾಡಿ
ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು
…………………………….ಮಹಿಮೆ ಹೌಧೌದು
ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು
ಎನ್ನ ಧೊರೆಯೆ ನಾ ನಿನ್ನ ಮರೆಯೆ
ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು
ಮಹಾರಾಯ ಅವನಾಯುಗೇಯಾ ಹನುಮಂತರಾಯಾ
ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ
ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ
ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ
ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು
ಜಯಸ್ತೇ ಯಶಸ್ತೇ ನಮೋ ನಮಹಾ ಶ್ರೀ ಪರಾಕು ಪರಾಕು

೧೦೨
ಅಂಜಲ್ಯಾತಕೋ ಅಖಿಳ ಭವದುರಿತನೆ
ಅಂಜನೆಯ ಸುತಗೆ ಆರೋಪಿಸಿದ ಬಳಿಕ ಪ
ಪಾತಕವು ಬಿಡದೆಂದು ಪರಿಪರಿಯ ಚಿಂತಿಸುತ
ಯಾತಕೆನ್ನಭಿಮಾನ ನಾಥನಿರಲು
ಮಾತಪಿತರಲ್ಲಿ ನಿರ್ಮಿತಮಾಡಿ ನಿಲ್ಲಿಸಿದ
ಆತನಾಜ್ಞೆಯಾದಂತೆ ಆಗುವುದಲ್ಲದೆ ೧
ಗುಡ್ಡದಂತೆ ದುರಿತ ಘೋರಿಸುವೆನೆನುತಲಿ
ಅಡ್ಡಬಂದಾಗ ಓಡಿಸುವೆನೆನುತ
ಅಡ್ಡಬಂದಾಗಂತ್ಯ ಕಾಲದಲಿ ರಕ್ಷಿಸುವ
ದೊಡ್ಡ ಕಂಗಳನೆಂಬ ಧೊರೆಯ ಹೊಂದಿದ ಮೇಲೆ ೨
ಸೃಷ್ಟಿಯನು ಮಾಡಿದ ಇಷ್ಟ ದೇವತೆ ನಿಮ್ಮ ಬಿಟ್ಟವನೆ
ಭ್ರಷ್ಟ ಚಿಂತೆಯು ಬೇಡವೋ
ಕಷ್ಟಗಳ ಕಳೆವ ಕದರುಂಡಲಗಿ ಹನುಮಯ್ಯನ
ನಿಷ್ಠೆಯಲಿ ಭಜಿಸಿ ನಿಶ್ಚಿಂತನಾಗಿರು ಮನವೆ ೩

೧೦೩
ಎಷ್ಟು ಪೊಗಳಲಿ ನಾನು
ಎನ್ನೊಡೆಯ ನಿನ್ನ ವಿ-
ಶಿಷ್ಟ ಮಹಿಮೆಗಳನು
ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು
ಸುರಕಾಮಧೇನು
ವಿಷ್ಣುವೇ ಪರದೈವವೆಂದು
ದುಷ್ಟರಾಕ್ಷಸರನ್ನೆ ಕೊಂದು
ಸೃಷ್ಟಿಪಾಲಿಪ ಶ್ರೀ ರಮೇಶನೇ
ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ
ತಾಯಿಯೂ ಬಂದು ಸೇವೆಗೆ ರಘುಪತಿ
ರಾಯನಲೆ ನಿಂದು ಬಯಸಲಿಲ್ಲಾ ಒಂದು
ಶ್ರೀಹರಿಗೆ ಬಂದು
ಕಾಯಬೇಕು ಸುಗ್ರೀವನೆನುತಲಿ
ತೋಯಜಾಕ್ಷಗೆ ಪೇಳಿ ವಾಲಿಯ ಉ-
ಪಾಯದಿಂದಲಿ ಕೊಲಿಸಿ ರವಿಜಗೆ ಸ-
ಹಾಯ ಮಾಡಿದಿ ವಾಯುತನಯನೆ ೧
ಕಡಲ ಬೇಗನೆ ಹಾರೀ ಶ್ರೀರಾಮನ
ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ
ಜಡಿದೆ ಬಲು ಹೊಂತಕಾರಿ
ಮಾಡಿಯೊ ಸೂರಿ
ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ
ನಡೆಸಿ ಸೈನ್ಯವ ದಶಮುಖನ ಶಿರ
ಹೊಡೆಸಿದಾಕ್ಷಣ ಲೋಕಮಾತೆಯ
ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ ೨
ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ
ಸಾರ ತತ್ವವ ಪೇಳ್ದಿ
ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ
ಮೊರೆಯ ಕೇಳ್ದಿ
ಧೀರ ಕದರುಂಡಲಗಿ ಹನುಮಯ್ಯ
ಸೇರಿದೆನೊ ನಿನ್ನಂಘ್ರಿ ಕಮಲವ
ಗಾರು ಮಾಡದೆ ಸಲಹೊ
ಕರುಣವಾರಿಧಿ ನೀಯೆನ್ನನೀಗಲೆ ೩

೯೪
(ಬಾಲಕೃಷ್ಣ ವರ್ಣನೆ)
ಕಾಡದಿರೆನ್ನನು ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ
ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ
ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ
ಅಹಿನೇರಿ ಹುಡುಗಾ ಮಾಡಿದಿ ತುಡುಗಾ ೧
ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ
ನಾರಿ ನೀನಾರೆಂದ್ವಿಚಾರಿಸುವೀ
ದೂರದಲ್ಲಿರುವಿ ಬದಿಯಲ್ಲಿ ಬರುವಿ
ಬೇರೆ ಕರೆವೆ ಈ ಬುದ್ಧಿ ತರವೆ ೨
ವರ ಕದರುಂಡಲಗಿ ಹನುಮಯ್ಯನೊಡೆಯನೆ
ನಿನಗೆಣೆಯಿಲ್ಲವೊ ವನಜನಾಭಾ
ವನಿತೆಯರೆಲ್ಲಾ ಒಲಿಸಿದೆಯಲ್ಲಾ
ಮನುಜನಲ್ಲಾ ಮಾಯದ ಗೊಲ್ಲಾ ೩

೯೫
ಜೋ ಜೋ ಜೋ ಜೋ ಜೋ ಕೃಷ್ಣ ಪರಮಾ-
ನಂದ ಗೋಪಿಯ ಕಂದ ಮುಕ್ಕುಂದ ಜೋಜೋ ಪ
ಪೆಟ್ಟಿಗೆಯೊಳಗಿದ್ದ ಪರಿಪೂರ್ಣ ಕಾಮಾ
ಮುಟ್ಟಿ ಭಜಿಸೊ ಮಹಾಯತಿಗಳ ಪ್ರೇಮಾ
ತೊಟ್ಟಿಲವೊಳಗೆ ಮಲಗಿದ್ದ ಶ್ರೀರಾಮಾ
ಘಟ್ಯಾಗಿ ತೂಗಿರಿ ಯತಿಗಳ ಸ್ತೋಮಾ ೧
ಪಠವಳಿನುಟ್ಟು ಬಂದರು ಸುರರಾಗ
ಘಟಣಿ ಬಿದ್ದೀತೆಂದು ಮಹಪುಣ್ಯವೀಗ
ವಟಪತ್ರ ಕಲ್ಪನ್ನ ತೂಗಿರಿ ಬೇಗ ಶ್ರೀರಾಮಾ
ಘಟ್ಯಾಗಿ ತೂಗಿರಿ ಯತಿಗಳ ಪ್ರೇಮಾ೨
ಪಾಕಶಾಸನ ಬಂದು ಮಳೆಗಳ ಕರೆಯೆ
ಗೋಕುಲವನು ಕಾಯ್ದ ಮಹಿಮೆಯು ಸರಿಯೆ
ಲೋಕದೊಳಜಭವರಿಗೆ ದೊಡ್ಡ ಧೊರೆಯೆ
ಶ್ರೀಕಾಂತ ಸರ್ವೋತ್ಮ ನೀನೆ ಶ್ರೀಹರಿಯೆ ೩
ಆಲದೆಲಿಮ್ಯಾಲೆ ಮಲಗಿರೊ ಕಂದಾ
ಮ್ಯಾಲ ಕಲ್ಪವನು ದೃಷ್ಟಿಸಿದ್ಯೋ ನಿನ್ನಿಂದಾ
ಬಾಲನ ಪಡದ್ಯೊ ನಾಭಿಕಮಲದಿಂದಾ
ಪಾಲಾಬ್ಧಿ ಶ್ರೀರಮಣ ಮುಕ್ಕುಂದಾ ೪
ಮಾಮುನಿ ಸತ್ಯಬೋಧರಾಯರಿಂದ
ಪ್ರೇಮದಿಂದಲ್ಲೆ ತೂಗಿಸಿಕೊಂಬೊ ಛೆಂದಾ
ಸ್ವಾಮಿ ಕದರುಂಡಲಗಿ ಹನುಮಯ್ಯಗಾನಂದ
ಪ್ರೇಮದಿಂದಲ್ಲೆ ತೂಗಿದರು ಗೋವಿಂದ ೫

ನರಸಿಂಹದೇವರ ಪರೋಕ್ಷ ವರ್ಣನೆ
೯೬
ಬಾಯಿ ತೆರೆದ ಬಗಿಯೇನೊ ದೇವದೇವ
ತೋಯಜದಳ ನೇತ್ರನೆ
ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ
ರಾಯಣ ನರಸಿಂಹನೆ ಪ
ಅಸುರನ ಉದರವ ಹಸನಾಗಿ ಬಗೆವಾಗ
ಬಾಯ ತೆರೆದಿಯಾ
ಬಿಸಜ ಭವಾಂಡವು ಬಸುರೊಳಗಿದ್ದ ಉ-
ಬ್ಬಸಿಗೆ ಬಾಯ ತೆರೆದಿಯೊ ೧
ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ
ಬಿಡದೆ ಬಾಯ ತೆರೆದಿಯಾ
ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ
ನುಡಿಗೆ ಬಾಯ ತೆರೆದಿಯೊ ೨
ಗುರು ಸತ್ಯಬೋಧರಾಯರ ನಿತ್ಯಭಜನೆಗೆ
ಬರಿದೆ ಬಾಯ ತೆರೆದಿಯೊ
ವರ ಕದರುಂಡಲಗಿ ಹನುಮಯ್ಯನೊಡೆಯನೆ
ಕರವ ಮುಗಿವೆ ಕರುಣಿಸೊ ೩

ಮೂರನೆಯ ಗುಣ ತಮೋಗುಣ
೧೦೪
ಭಾರ ನಿನ್ನದು ದೇವಾ ಭಕುತ ಸಂಜೀವಾ ಪ
ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ.
ಮೂರನೆ ಗುಣದಿಂದ ಮತ್ತನಾಗಿ ಬಹಳ
ಮೂರು ವಿಧ ವಿಷಯದಲಿ ಮಗ್ನನಾದೆ
ಮೂರುಖಾಗ್ರೇಸರಿಗೆ ಮುಂದಾವಗತಿಯೈಯ
ಮೂರಾವತಾರವುಳ್ಳ ಮರುತಾತ್ಮಜನೆ ೧
ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ
ಆರು ವೈರಿಗಳು ಕಂಡಾವಾಗಲೂ
ಆರು ಬಿಡಿಸದ ಬವಣೆ ಬಡಿಸುತಲೈದಾವರೆ
ಆರೆರಡು ಪೆಸರುಳ್ಳ ಅಂಜನಾತ್ಮಜನೆ ೨
ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ
ಪಂಚಮಹಾ ಪಾತಕಕೆ ಎಳೆಯುತಾರೆ
ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ
ಪಂಚಪದಕವೇ ಫ್ದರುಂಡಲಗಿ ಹನುಮಯ್ಯ ೩

೯೭
ಮುದದಿ ನಕ್ರನ ಕೊಂದು ಸಲಹಿದ
ಸದುಭಕುತರ ಬಂಧು ೧
ನಾರಿಯು ತನ್ನ ಕರೆದಾ ಮಾತ್ರದಿ
ಸೀರೆಯ ಮಳೆಗರೆದಾ
ಕ್ರೂರ ಖಳರ ಮುರಿದಾ ಪಾಂಡವ-
ರಾರಣ್ಯದಿ ಪೊರೆದಾ
ನಾರಗೆ ಅಜಮಿಳ ನಾರಾಯಣನೆನೆ
ಪಾರುಗಾಣಿಸಿದಪಾರಗುಣನಿಧಿಯಾ ೨
ಒಂದು ಬಾರಿಗೆ ಶ್ರೀಶನ ನೆನೆದರೆ
ಬಂದ ದುರಿತ ನಾಶಾ
ಬೆಂದದ್ದು ಬಹುಪಾಶಾ ಅವಗಿ-
ನ್ನೆಂದಿಗಿಲ್ಲವೊ ಕ್ಲೇಶಾ
ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ-
ವಿಂದನ ನೆನೆದವರೆಂದಿಗು ಧನ್ಯರು ೩