Categories
ರಚನೆಗಳು

ವೀರನಾರಾಯಣ

೩೮೮
ಹನುಮ
ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ
ಗಡ್ ಗಡ್‍ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ ೧
ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ ೨
ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ೩

(ಊ) ಆತ್ಮನಿವೇದನೆ
೪೦೫
ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ
ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ ೧
ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ ೨
ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ಸಾಕು ಬಿಡಿಸಯ್ಯ ನರಜನ್ಮದ ಗಂಟು ೩

(ಆ) ಶ್ರೀ ಹರಿಯ ಸ್ತುತಿ
೩೩೫
ಇದು ಕಣೋ ನಿನ್ನ ದಯಾರಾಮರಾಯಾ ಪ
ಮೃದು ಬಾಲನಿಗಳಿದುದು ಮೃತ್ಯುಭಯಾ ಅ.ಪ.
ನರಳುವ ಕೂಸನು ಚರಣಕೆ ಹಾಕಲುಮೊರೆಯಿಡೆ ಕರುಣದಿ ಕರಗಿತು ಹೃದಯ ೧
ಭಕುತರ ಬಯಕೆಯನೀವುದು ನಿನ್ನಯಸುಕರ ಕೆಲಸವೆಂದೆನು ಚಿನ್ಮಯಾ ೨
ಗದುಗಿನ ನೆ ಜಯ_ವೊದಗಿಸಿ ನಿರುತ ಸಲಹುವೆ ನಿಶ್ಚಯಾ ೩

೪೦೬
ಈಸಲು ಬಿಡು ನನ್ನ ಹರಿ ಘನ್ನ ಪ
ಮೀಸಲು ಭಕುತಿಯ ರಸಜಲ ನಿಧಿಯಲಿ ಅ.ಪ.
ಏನು ತಿಳಿಯದವನಾಗಿ ನೀಗುಟ್ವುಜ್ಞಾನದ ಸಿಂಗಡಿ ಸಂಗಡ ಕೊಟ್ಟುಧ್ಯಾನದ ಪಾಶದ ಬಿಗಿಲಿಯಲಿ ಕಟ್ಟುಶ್ರೀನಿವಾಸನೇ ನೀ ದಯವಿಟ್ಟು ೧
ಭವಸಾಗರವನು ದಾಟಿಸಬಲ್ಲನಾವಿಕ ನೀನಿಲ್ಲದೆ ಯಾರಿಲ್ಲಹವಣಿಸಿ ನಿನ್ನನೆ ನಂಬಿಹೆನಲ್ಲತವಕದಿ ಮನ್ನಿಸಿ ದೀನನ ಸೊಲ್ಲ ೨
ಬಿನ್ನಪ ನನ್ನನು ದಯದಿಂದಾಲಿಸುಸನ್ನುತ ಗದುಗಿನ ಎನ್ನೊಳು ನೀ ದಯಪಾಲಿಸು ೩

(ಈ) ದೇವತಾ ಸ್ತುತಿ
೩೮೭
ಎಂಥ ಧನ್ಯಳೇ ಯಶೋದೆಎಂಥ ಧನ್ಯಳೇ ಪ
ಎಂಥ ಧನ್ಯಳಮ್ಮ ನೀನುಎಂಥ ಪುಣ್ಯವಮ್ಮ ನಿನ್ನದುಕಂತುಪಿತನು ಕುವರನಾಗಿಸಂತೋಷವ ಪಡಿಸಿದನು ೧
ಕಷ್ಟಪಟ್ಟು ಮುನಿಗಳೆಲ್ಲಎಷ್ಟು ತಪವ ಮಾಡಿದರುಇಷ್ಟು ಪುಣ್ಯ ಪಡೆಯಲಿಲ್ಲಸೃಷ್ಟಿಯೊಳಗೆ ಸ್ಪಷ್ಟವಿಹುದು ೨
ಒಡಲೊಳಗೆ ಹೊರೆಯಲಿಲ್ಲಪಡೆಯಲಿಲ್ಲ ಅವನ ಪರರಒಡಲೊಳ್ಹುಟ್ಟಿ ಬಂದು ನಿನ್ನಹುಡುಗನಾಗಿ ಮೆರೆದ ನಮ್ಮ ೩
ಇಡಿಯ ಜಗವನುದರದಲಿಹಿಡಿದು ಬಾಲನಾಗಿ ಗದುಗಿನೊಡೆಯ ತೊಡೆಯ ಮೇಲೆ ಆಡಿದನು ೪

೪೦೭
ಎಂಥ ಪಾಪವನು ಮಾಡಿರುವೆನೋ ಶ್ರೀಹರಿಯೇಇಂಥ ದುರ್ದೆಸೆಗೆನ್ನ ಎಳೆತಂದು ಬಿಡಲಿಕ್ಕೆ ಪ
ಉದಯ ಕಾಲದೊಳೆದ್ದು ಉದರ ಪೋಷಣೆಗಾಗಿಹದವನರಿಯದೆ ಬಳಲಿ ಅಂತಿಂತು ಬಡೆದಾಡಿಬದುಕು ತಂದೊಡಲ ಹೊರಕೊಂಡು ಸಲೆನನ್ನಪದವ ನೆನೆಯಲು ಸ್ವಲ್ಪ ಸಹ ವೇಳೆ ಸಿಗದಂತೆ ೧
ಹಿಡಿದ ಕಾರ್ಯಗಳೆಲ್ಲ ಬಿಡದೆ ನಿಷ್ಫಲವಾಗಿಒಡವೆ ಇಲ್ಲದ ಬರಿಯ ಒಡೆತನಕೆ ಅಣಿಮಾಡಿಮಡದಿ ಮಕ್ಕಳ ಬಿರುಸು ನುಡಿಗೇಳಿ ಮನನೊಂದುಸುಡುಬಾಳ್ವೆ ಇದನೆಂದು ಮುಡುಕುವಂದದು ಗೈಸಿ ೨
ನಂಬಿದವರನು ಹರಿಯು ಬೆಂಬಿಡನು ಎಂದೆಂದುಎಂಬ ಬಿರುದನು ತೊರೆದು ಇಂಬುಗೊಡದಿರಲಿಕ್ಕೆಅಂಬುಜಾಕ್ಷನೆ ನಿನಗೆ ಸಂಬಂಧವಿರದೇನುಹಂಬಲಿಪ ದುಃಸ್ಥಿತಿಗೆ ತುಂಬ ತಂದಿಡಲಿಕ್ಕೆ ೩
ಅಣುಗರಿಗೆ ಉಣಿಸಲಿಕೆ ಹಣವೆತ್ತ ಗಳಿಸಲಿಫಣಿಶಯನ ನಿನಗಿನ್ನು ಗುಣವೆತ್ತ ತೋರಿಸಲಿಮಣಿಗಳನು ಎಣಿಸುತ್ತ ಪ್ರಣವೆತ್ತ ಧೇನಿಸಲಿಹಣಿವ ಭವದೊಳು ಸಿಲುಕಿ ಕ್ಷಣವು ಸಹ ಸಿಗದಾಯ್ತು ೪
ಬಾಳಿನೊಳು ಸೌಖ್ಯವೇ ಆಳವೈಶ್ವರ್ಯವೆತೋಳಿನೊಳು ದಾಢ್ರ್ಯವೆ ಚಿತ್ತದೊಳು ಸ್ಥೈರ್ಯವೆಹೇಳು ಗದುಗಿನ ನೆ ಮಣಿವೆ ೫

೩೩೭
ಎಂಥ ವಿಲಕ್ಷಣನೋ ಶ್ರೀಹರಿ ಪ
ಪಂಥವು ತಿಳಿಯದನಂತ ಮೂರುತಿಯೆ ಅ.ಪ.
ಅಣುವೆಂದರೆ ನೀ ಮಹತನಾಗುವಿಅಣುವಾಗುವಿ ನೀ ಮಹತನೆಂದರೆಅಣು ಮಹತ್ತೆರಡೂ ಕೂಡಿರ ಲಾ ಸಹಗುಣವು ತಿಳಿಯದೊ ಅಜ್ಞೇಯಾ ೧
ಧನವ ಕೊಟ್ಟರೆ ನೀ ಬೇಡೆನ್ನುವಿತಿನಿಸು ಕೊಟ್ಟರೆ ಒಲಿಯದಲಿರುವಿಅನುದಿನ ಮನವನ್ನಿತ್ತು ಮಾಳ್ಪ ಬರಿಘನ ಭಕ್ತಿಗೆ ಬಹು ನೀನು ಮೆಚ್ಚುವಿ ೨
ಆಕಾರವು ನಿನಗಿಲ್ಲವೆಂತೆನೆಸಾಕಾರ ನೀನಾಗಿ ತೋರುವಿಈ ಕಾರಣ ನಿಜ ನಿಜ ತಿಳಿಯದು ಪೇಳಲುಬೇಕೈ ಗದುಗಿನ ೩

೩೩೬
ಎಂದು ಕಾಂಬುವೆ ನಿನ್ನ ಚರಣ ನಾರಾಯಣತಂದು ತೋರಯ್ಯ ನಾ ಬಂದೆನು ಶರಣ ಪ
ಇಂದ್ರ ಸುರಮುನಿವಂದ್ಯ ಚರಣಾ _ನಂದ ಗುಣ ಸಂಪೂರಣಒಂದೆ ಮನದಲಿ ಮಾಳ್ಪೆ ಸ್ಮರಣಾಬಂಧು ತೋರೈ ನಿನ್ನ ಚರಣಾ ಅ.ಪ.
ಚಾರು ಲಕ್ಷ್ಮೀಯು ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ ೧
ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ ೨
ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ೩

೩೩೮
ಎಷ್ಟು ಭಜಿಸಿದರು ಸಾಕಷ್ಟು ನನಗಾಗದೊ ಪ
ಕಷ್ಟ ಮೂರ್ತಿ ನೀನು ಎಷ್ಟು ತುಷ್ಟಿವಡೆದರು ಅ.ಪ.
ಅಂಗಜಪಿತ ಮೋಹನಾಂಗಚೆಂಗೊಳಲನು ನುಡಿಸುತಲಿರುವಭಂಗಿಯಲಿ ನಿನ್ನ ರೂಪಕಂಗಳಿಂದ ನೋಡಿ ನೋಡುತ ೧
ಪೂರ್ಣ ಗುಣ ನಿರ್ದೋಷನೆಸುವರ್ಣಗರ್ಭ ನಿನ್ನ ಲೀಲೆವರ್ಣಿಸುತಿಹ ಕೀರ್ತನೆಯನುಕರ್ಣದಿಂದ ಕೇಳಿ ಕೇಳುತ ೨
ಅಪ್ಪ ನಿತ್ಯ ಮನಕೆ ಮುದವತಪ್ಪ ನಿನ್ನ ನಾಮ ಸುಧೆಯಚಪ್ಪರಿಸುತ ನಾಲಗೆಯಲಿಒಪ್ಪಿ ಸವಿದು ಸವಿಯುತಿರಲು ೩
ಅಮಮ ನಿನ್ನ ತನುವಿನಿಂದಘಮಘಮಿಸುತ ಬರುವ ಗಂಧಅಮಿತ ಮುದವ ಮೂಗಿಗಿಡಲುರಮಿಸಿ ಮೂಸಿ ನೋಡುತಿರಲು ೪
ಪಾವನತರ ನಿನ್ನಡಿಯಲಿಸೇವೆಗೊಳ್ಳು ನಿರುತದಲಿಕಾವುದಯ್ಯ ಶ್ರೀ ಗದುಗಿನದೇವ ವೀರನಾರಯಣ ೫

೩೩೯
ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ
ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ ೧
ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ ೨
ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ ೩

೩೪೦
ಏನಿದು ಚಂದ ಹರಿಯೆ ಮುಕುಂದ ಪ
ಒದಗಿದ ಬಾಧೆಯ ಬಿಡಿಸಲು ಬೇಡಲುತುದಿಕೆಳಸುವ ತನಕ ಹಾನಿಯ ಕಾಯ್ವುದು ೧
ಕುರು ಸಭೆಯೊಳು ಮಾನವನುಳಿಸೆಂದುತರುಣಿ ಬಾಯ್ದೆರೆ ಬೇಗ ಬಾರೆಂದು ೨
ಮಕರಿಯ ಹಿಡಿತವ ಬಿಡಿಸಲು ಕರಿನೃಪಮುಖವೆತ್ತಿ ಮೊರೆಯುತೆ ಜವದಿ ಪೊರೆಯುವುದು ೩
ತಡಮಾಡದೆ ಶರಣರ ರಕ್ಷಿಸದೆಚಡಪಡಿಸುವುದನು ನೋಡುತಲಿರುವುದು ೪
ಮೊರೆಯಿಡೆ ಭಕುತರ ಪೊರೆಯಯ್ಯ ಜವದಲಿಕರುಣಿಸು ಗದುಗಿನ ೫

೪೦೮
ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ ಪ
ದೇಶದ ಸೇವೆಗೆ ತನು ನೀಡಿದೆಯಾಭಾಷೆಯ ಏಳ್ಗೆಗೆ ಮನ ಮಾಡಿದೆಯಾಕಾಸಿಗಾಗಿ ವಂಚಿಸಿ ನಿನ್ನೊಡಲಿನಪೋಷಣೆಗಾಗಿ ದುಡಿದೆಯಲ್ಲದೆ ೧
ಆರ್ತರ ದುಃಖವನೀಡಾಡಿದೆಯಾಸ್ವಾರ್ಥದ ಹಂಬಲ ಬಿಟ್ಟು ನಡೆದೆಯಾಪೂರ್ತಿಯಾಗಿ ಜನಹಿತ ನೋಡಿದೆಯಾಧೂರ್ತತನವ ಬರಿದೆ ತೋರಿದೆಯಲ್ಲದೆ ೨
ಮದಮತ್ಸರಗಳ ನೆಲಕೆ ಬಡೆದೆಯಾಹೃದಯ ನಿರ್ಮಲಗೊಳಿಸಿ ನುಡಿದೆಯಾಮುದದಿ ಗದುಗಿನ ನಪದವನೊಮ್ಮೆಯಾದರೂ ಸ್ಮರಿಸಿದೆಯಾ ೩

೩೪೧
ಏನು ವೈಭವವೊ ಶ್ರೀನಿವಾಸ ಧೊರೆಯೆನಿನ್ನದೇನು ವೈಭವವೊ ಪ
ಸಿರಿಯು ತಾನೆ ನಿಂತು ನಿನ್ನನಿರುತ ಸೇವೆ ಗೈಯ್ಯುತಿಹಳೊಸರಸಿಜಾಸನಾದಿ ಸುರರುಕರವ ಮುಗಿದು ತುತಿಸುತಿಹರೂ ೧
ನಾಗರಾಯ ದಿವ್ಯಾಸನನಾಗಿ ಹೆಡೆಯ ಛತ್ರ ಪಿಡಿವಯೋಗಿ ನಾರದ ತುಂಬುರಾರುರಾಗ ಮಾಡಿ ಹಾಡುತಿಹರೊ ೨
ಗರುಡ ವಾಯು ಸುತರು ನಿನ್ನಪರಮ ವಾಹನರಾಗಿ ಬಹರುಸುರಮುನಿಗಳು ಸಕಲ ನರರುನಿರುತನಾಮ ಜಪಿಸುತಿಹರು ೩
ಮಂಗಳ ವಾದ್ಯಗಳು ಮೊಳಗಿಮಂಗಳಾರುತಿಯಾಗಿ ಬೆಳಗಿತಿಂಗಳು ನೇಸರರು ದಿವ್ಯಮಂಗಳ ದೀವಟಿಗರಾಗಿ ೪
ಕ್ಷೀರದಲ್ಲಿ ನಿನ್ನ ಸ್ನಾನಸಾರ ಅಮೃತ ನಿನ್ನ ಪಾನತೋರ ಭಕುತರಾಳೆ ಗದಗುನೆ ನಿನ್ನದೇನು ವೈಭವವೊ ೫

(ಇ) ಲಕ್ಷ್ಮೀದೇವಿ
೩೮೧
ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ
ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ.
ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ ೧
ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ ೨
ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ನ ೩

೩೪೨
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ
ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ ೧
ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ೨
ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು ೩
ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು ೪
ಸಾವಿರದ ಕಿವಿಯಂತೆ ಸಾವಿರದ ತಲೆಯಂತೆಸಾವಿರದ ಪಾದುಗಳು ನಿನಗಂತೆ ಕೇಳುಭಾವುಕರು ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ ೫
ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ ೬
ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ೭

೩೪೩
ಒಲಿಯುವೆ ನೀನೆಂತು ಹಲಧರಾನುಜಾ ಪ
ಹೊಗಳಲು ನೀ ಮರುಳಾಗುವನಲ್ಲಾತೆಗಳಲು ನೀ ಮುನಿಯುವನಲ್ಲಾಹೊಗಳಲ್ಯೊ ತೆಗಳಲ್ಯೊ ತಿಳಿಯುವುದಿಲ್ಲಬಗೆಯನು ತೋರಲು ಹೇಳಸೊಲ್ಲ ೧
ಪಂಚಪಕ್ವಾನ್ನವ ಹಂಚೇನೆಂದರೆಲಂಚಗುಳಿಯು ನೀನಲ್ಲಚಂಚಲಮನದವ ತಾನಾಗಿಹನೈಹಂಚಿಕೆಯನು ಹೇಳ್ ನಿತ್ಯತೃಪ್ತನೆ ೨
ಧನವ ಕೊಟ್ಟು ನಿನ್ನೊಲಿಸೇನೆಂದರೆಧನಲಕ್ಷ್ಮಿ ಪತಿ ನೀನಹುದೋಘನತರ ಗದುಗಿನ ಮನಸಿನ ಇಂಗಿತವನು ಪೇಳೆಲೊ ನೀ ೩

೩೪೪
ಕಂಡಿರೇನಯ್ಯ ಹರಿಯನ್ನು ಪ ಜ್ಞಾ
ಚಂಡ ಪ್ರಚಂಡನ ಪುಂಡರೀಕಾಕ್ಷನ ಅ. ಪ.
ಅಲ್ಲಲ್ಲಿ ಇರುವನಂತೆ ಎಲ್ಲೆಲ್ಲೂ ಶಿಕ್ಕನಂತೆಗುಲ್ಲನು ಕೊಡದಿಹನಂತೆ ಬಲ್ಲವ ಬಲ್ಲನಂತೆ ೧
ಧ್ರುವನ ಮುಂದೆ ನಿಂತಿದ್ದನಂತೆಕುವರ ಪ್ರಹ್ಲಾದನ ಹಿಡಿದಿದ್ದನಂತೆಬವರದಿ ಪ್ರಾರ್ಥಿಸೆ ತೋರಿದವನಂತೆಶಬರಿಯ ಎಂಜಲ ತಿಂತಿದ್ದನಂತೆ ೨
ಮುನಿಗಳು ಹೃದಯದಿ ಕಂಡರಂತೆವನಿತೆ ಯಶೋದೆಗೆ ಸಿಕ್ಕಿದನಂತೆಹನುಮ ಭೀಮರು ನೋಡಿದರಂತೆಅನಿತೋದ್ಭವಗೆ ಮೆಚ್ಚಿದನಂತೆ ೩
ದ್ರೌವ್ಯದ ಕಣ್ಣಿಗೆ ಕಾಣಿಸನಂತೆದಿವ್ಯ ದೃಷ್ಟಿಗೆ ಸಿಲುಕುವನಂತೆಭವ್ಯ ಗದುಗಿನ ದಿವ್ಯ ದೃಷ್ಟಿಯ ಕೊಡು ಓರಂತೆ ೪

೪೦೪
ಕನಕದಾಸರು
ಕನಕಾ ನಿನ್ನ ಕೆಣಕಿ ನಾನು ತಿಣಕಲಾರೆನೊ ಕ್ಷಣಕು ಕ್ಷಣಕು ತಿಣಿಕಿ ತಿಣಿಕಿ ದಣಕೊಲಾರೆನೊಅಡಿಗಡಿಗೊಗೆದ ಮುಂಡಿಗೆಯನು ಒಡಿಯಲಾರೆನೊಒಡೆಯಲು ದುಡುಕಿ ದುಡುಕಿ ದಣಿವನು ತಡಕೊಲಾರೆನೊ ೧
ಒಡೆಯ ದೇವನೆಂದಟ್ಟಿದ ಕುನಕವ ಮುಟ್ಟಿಲಾರೆನೋ ಮಡಿಯ ದೇವರೆಂದೊದಗಿಸಿದುರಗನ ಬಳಿಯ ಸಾರೆನೋ
ಪಾತ್ರೆಯ ಒಳ ಮೈಯ್ಯ ಮಾತ್ರ ತೊಳೆದುದು ತಿಳಿಯಲಾರೆನೋಗೋತ್ರವ ಕೇಳಿ ಸುಸೂತ್ರದೊಳುತ್ತರ ಪಡೆಯಲಾರೆನೋ ೨
ಅದಕೊ ಇದಕೊ ಯಾವುದಕೊ ನಾ ಕೆದಕಲಾರೆನೊಗದುಗಿನ ವೀರನಾರಾಣನ ಮರೆಯಲಾರೆನೊ ೩

೩೯೬
ಸರಸ್ವತಿ
ಕಮಲಭವನ ಪ್ರಿಯ ರಾಣಿ ಪ
ವಿಮಲಮತಿಯ ನೀ ಕರುಣಿಸು ಜಾಣೆ ಅ.ಪ.
ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ ೧
ವಿವಿಧ ಭಾಷೆಗಳೊಡತಿಯಾಗಿ ಬಲುವಿವಿಧ ಬಣ್ಣಗಳ ಕಣ್ಣೊಳು ಹೊಳೆಯಲುಪವಣಿಸಿ ಗರಿಗಳ ಪಸರಿಸಿ ಕುಣಿಯಲುನವಿಲನೇರುವ ಪನ್ನಗ ವೇಣಿ ೨
ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನನ ಸೊಸೆಯೆ ಸುವಾಣಿ ೩

೩೯೭
ಶಿವ
ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ಪ
ಕರುಣಿಸಯ್ಯ ಭವದ ತಾಪ ಹರಣ ಮಾಡು ನಿನ್ನ ದಿವ್ಯಚರಣಗಳಿಗೆ ನಮಿಪೆನುರಗಾಭರಣ ಶರಣು ಶರಣು ಶರಣು ಅ.ಪ.
ಕಾಳಭೈರವ ಶಂಭು ಶಂಕರ ಗಿರಿಜೆಯಾಣ್ಮಕೇಳು ಕೇಳು ನಿನ್ನ ಕಿಂಕರಹೂಳಿ ಷಡ್ರಿಪುಗಳನು ಮನದಲಿಊಳಿ ನಿಜಜ್ಞಾನವನು ಸಜ್ಜನರೋಳಿಯಲಿ ನಿಲಿಸುತ್ತ ನಿತ್ಯದಿಬಾಳಿ ತಾಳಿ ಎನುವಂತೆ ೧
ನಂಟನಯ್ಯ ಭಕ್ತ ಜನಕೆ ಇನ್ನು ಮಿತಿಯುಂಟೆ ನಿನ್ನಯ ಕರುಣಲಹರಿಂಗೆಎಂಟು ದಿಕ್ಕನು ಸುಡುವ ವಿಷವನುಕಂಠದಲಿ ಧರಿಸಿ ಜಗತ್ತಿನಕಂಟಕವನು ಪರಿಹರಿಸಿದಂಥಬಂಟ ನೀನೈ ಮಹಾದೇವಾ ೨
ಮೂರು ಊರುಗಳನು ಸಂಹಾರಾಮಾಡಿ ಉಳಿಸಿದಿಘೋರ ಸಂಕಟದಿಂದ ಜಗಪೂರಸೂರಿ ಬೊಮ್ಮನ ಮತ್ತೆ ಗದುಗಿನನ ಕೂಡಿನಾರಿ ಸತಿಯನಸೂಯಳನ್ನುದ್ಧಾರ ಮಾಡಿದ ರೀತಿಯಲ್ಲಿ ೩

೩೪೫
ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ
ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ.
ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ ೧
ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ ೨
ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ ೩
ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ ೪
ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ ೫

೩೪೬
ಕಾಯೋ ತೋಯಜ ನೇತ್ರ ಪ
ಸುಮಿತ್ರ ಪವಿತ್ರ ಚರಿತ್ರ ಅ.ಪ.
ಮಾನವ ಜನುಮದಿ ನೀ ತಂದೆಯೊಎನ್ನ ಗ್ಲಾನಿಯ ಕಳೆದು ಸುಜ್ಞಾನವನಿತ್ತು ೧
ಕಠಿಣ ಸಂಸಾರದ ಕಟು ಅನುಭವವ ಸೈಸೆಸಟಿಯಲ್ಲೋ ಇದ ಸಂಕಟವ ಪರಿಹರಿಸಿ ೨
ಹೃದಯದಿ ನೆಲಿಸಿ ನೀ ಸದಾವಕಾಲದೊಳುಗದುಗಿನೊಳ್ಮೆರೆಯುವ ೩

೩೪೭
ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ
ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ.
ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು ೧
ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು ೨
ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು ೩
ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ನೆದಯವ ತೋರಿ ಹೇಳು ಬೇಡುತಿಹೆನು ೪

೩೪೮
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ
ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ
ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ ೧
ಈ ವಿಶ್ವವನು ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ ೨
ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ೩

೩೪೯
ಕೊಳಲನೂದೆಲೋ ಕೃಷ್ಣ ಕೊಳಲನೂದೆಲೊ ಪ
ಕೊಳಲನೂದು ಮನದ ದುಗುಡಕಳೆದು ಮತ್ತೆ ಮನಕೆ ಪ್ರಶಾಂತೆತಳೆಯುವಂತೆ ನಿತ್ಯಮಂ_ಜುಳ ಸ್ವರಗಳನ್ನು ತೆಗೆದು ಅ.ಪ.
ಧರಿಸಿ ಕೈಯಲೀ ಕೊಳಿವೆಯಿರಿಸಿ ಬಾಯಲಿಭರದಿ ಉಸುರ ತುಂಬಿ ನಳಿನಬೆರಳುಗಳು ತೂತು ಮುಚ್ಚಿತೆರೆದು ಸವಿಯ ನಾದದಲ್ಲಿ ನಿಸಾರ ನಿ ದ ಪ ಮ ಪ ನಿ ಎಂದು ೧
ಇಲ್ಲಿ ಪೀಠದಿ ಎದ್ದು ನಿಲ್ಲು ಥಾ೭ಟದಿಮಲ್ಲಿಗೆ ವನಮಾಲೆ ಕೊರಳೊಳಲ್ಲಾಡುತಿರಲು ರೂಪದಲ್ಲಿ ಮನವಿನೈಕ್ಯವಾಗಿತಲ್ಲೀನರಾಗುವಂತೆ ಕೃಷ್ಣಾ ೨
ಎದ್ದುನಿಂತು ಮಾಟದಿ ನಿಂತು ಮುದ್ದು ನೋಟದಿಬಿದ್ದವರನು ನೋಡಿ ನಮಗೆಶುದ್ಧ ಬುದ್ಧಿ ಕೊಟ್ಟು ನಮ್ಮದುದ್ಧರಿಪುದು ಗದುಗಿನ ಪ್ರಸಿದ್ಧ ೩

೩೫೦
ಕೊಳಲೂದೋ ಕೃಷ್ಣ ಕೊಳಲೂದೊ ಪ
ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ.
ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ ೧
ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ ೨
ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ ೩
ಮಧುರ ನಿನ್ನಯ ಗಾನವ ಕೇಳ್ವುದುಗದುಗು ನ ಮಹಾ ಪ್ರಸಾದೊ ೪

(ಉ) ಗುರುನಮನ
೩೯೯
ಶ್ರೀ ರಾಘವೇಂದ್ರರು
ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ
ತಾಪವಿನ್ನಿದು ಮನವು ಹಿಡಿದುದುಪಾಪಿಯೆನ್ನನು ಕ್ಷಮಿಸಲಾರಿರ ಅ.ಪ
ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ ೧
ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ ೨
ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ಭಕುತರ ಸಲಹದೆ ೩

೪೦೯
ಲಾವಣಿ
ಖೋಡಿಮನಸು ಇದು ಓಡಿ ಹೋಗುತದಬೇಡೆಂದರು ಕೇಳದು ಹರಿಯೆಜೋಡಿಸಿ ಕೈಗಳ ಬೇಡಿಕೊಂಬೆ ದಯಮಾಡಿಹಿಡಿದು ಕೊಡು ನರಹರಿಯೆ ಪ
ಗಾಡಿಕಾರ ನಿನ್ನ ಮೋಡಿಯ ಮೂರ್ತಿಯಕೂಡಿಸಿ ಪೂಜಿಸಲಘ ಹರಿಯೆದೂಡುತ ಹೃದಯದ ಗೂಡಿನೊಳಗೆ ಸ್ಥಿರ ಮಾಡಲು ಹದವನು ನಾನರಿಯೆನೋಡಿಂದ್ರಿಯಗಳ ತೀಡಬಲ್ಲೆ ಮನತೀಡುವ ಯತ್ನವು ಬರೆಬರೆಯೆಬೇಡಬೇಡವೆಂದಾಡುವೆನೆ ನಿನ್ನನೋಡುವುದೆಂತೈ ಜಗದೊರೆಯೆಕೋಡಗನಂತಿದು ಕಿಡಿಗೇಡಿ ಜಿಗಿದಾಡಿ ಪೋಗುವುದು ತ್ವರೆಮಾಡಿಕೂಡಿಸದದು ಬಹುಕಾಡಿ ದಿಟಿಸ್ಯಾಡಿ ನೋಡಲದು ಅಡನಾಡಿಕಾಡಿಕಾಡಿ ಬಲು ಪೀಡಿಸುತಿರುವದುಕಾಡುವುದೇನಿದು ಈ ಪರಿಯಾಜೋಡಿಸಿ ಕೈಗಳ ೧
ತುಣುಕು ತುಣುಕು ಮನಸು ಇದು ಕ್ಷಣದೊಳು ಹಿಡಿವುದುತಿಣಿಕಿ ತಿಣಿಕಿ ಗಡ ಇದನ್ಹಿಡಿಯೆ ಹೆಣಗಲ್ಯಾತಕೆಂದು ಗೊಣಗುತಿಹರುಜನ ಗುಣ ಗೊತ್ತಿತ್ತಿಲ್ಲಿದೆ ಗುಣ ಖಣಿಯೆಗುಣರಹಿತನೆ ನಿನ್ನ ಗುಣ ನಾಮಂಗಳನೆಣಿಸುತೆ ನಾಲಗೆ ತಾದಣಿಯೆ ಟೊಣೆದು ನಿಮ್ಮನು ಕ್ಷಣಕ್ಷಣಕೊಂದುಕಣಕೆ ಹಾರುವುದು ಸುರಧರಣಿಯೆಇಣಚಿಹಾಂಗೆ ಚಪಲವೋಧಣಿಯೆಅಣಕಿಸಿದ್ಹಾಂಗ ಕುಣಿಕುಣಿಯೆಬಣಗು ಜನರು ನಮಗದು ಹೊಣಿಯೆಒಣ ಮಾತಿದು ಕೇಳ್ ನಿರ್ಗುಣಿಯೆಮಣಿಯದು ದಣಿಯದು ಹಣಿಯದು ತಣಿಯದುಟೊಣಿಯಲು ನಿನ್ನದು ಅದರಣಿಯೆ ೨
ಸ್ಪಷ್ಟ ಹೇಳುವೆನು ಚೇಷ್ಟೆಗಳದರದುಯ ಥೇಷ್ಟವಾಗಿ ಕಣಾ ಕಣಾಶಿಷ್ಯರನೆಲ್ಲಾ ಭ್ರಷ್ಟ ಮಾಡುವುದು ದೃಷ್ಟಿ ಇಂದೊಂದೇ ಕಾರಣಎಷ್ಟು ಮಾತ್ರಕಿವರಿಷ್ಟ ನಡೆಸದಿಂದಿಷ್ಟೇ ಇದರದು ಧೋರಣಾಕಷ್ಟದಿ ಹಿಡಿದಿಟ್ಟ ಅಷ್ಟು ಇಂದಿಯಕಿದೆದುಷ್ಟರುಪದೇಶದ ಪ್ರೇರಣಾನಷ್ಟಮಾಡೋ ಈ ಚೇಷ್ಟೆಗುಣ ಸುಪುಷ್ಟ ಮತಿಯ ಕೊಡೊ ಪೂರಣಮುಷ್ಠಿಯೊಳಗಿಸೊ ತನುಹರಣಸೃಷ್ಟಿಸ್ಥಿತಿಲಯ ಕಾರಣಸೃಷ್ಟಿಯೊಳಗೆ ಉತ್ರ‍ಕಷ್ಟ ಗದುಗಿನಶ್ರೇಷ್ಠ ೩

೩೫೧
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ
ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ.
ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು ೧
ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು ೨
ಸದಾ ಭಜಿಸುವಂತೆ ಮಾಡೋ ಗದುಗು ೩

೩೯೮
ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ಪ
ಚೆಂದಾಗಿ ಮನಸಿಗಾನಂದ ನೀಡುವ ನಿನ್ನಮುಂದೆಯೆ ಕಂದ ತಾ ಬಂದು ನಿಂದಿಹೆನವ್ವ ಅ.ಪ.
ಘನದಯಾವಂತೆ ಕಾಯೆ ಇದು ನಿನ್ನಅನುಗ್ರಹವೆಂಬೆ ತಾಯೆಕನಸಿನೊಳಿರಲಿಲ್ಲ ಮನಸಿನೊಳಿರಲಿಲ್ಲಜನನಿ ನೀನೆ ಕರೆಸಿ ದರುಶನವಿತ್ತವ್ವ ೧
ಸನಿತೆಯೊಳ್ಬಂದು ನಿಂತು ದಯಾಮೃತವಹನಿಸುವಿ ಜನರಿಂಗಿತುಜನರ ಪಾವನ ಮಾಡಿ ಘನ ಸಂತಸ ನೀಡಿಅನುದಿನ ಜನ ಪಾಡಿ ಕುಣಿಯುವಂತೆ ಕೃಪೆ ಮಾಡೆ ೨
ಸದಯಾಮೂರ್ತಿಯು ನೀ ಸತ್ಯ ನಿನ್ನಯ ಪಾದಪದುಮಕೆ ಮಣಿಯುವೆ ನಿತ್ಯಗದುಗಿನ ನೆನ್ನಯಹೃದಯದಿ ಸತತ ನಿಲುವಂತೆ ಕರುಣಿಸೌ ೩

೩೮೯
ಜನುಮದ ದಿವಸವಿದು ಹನುಮ ನಿನ್ನಜನುಮದ ದಿವಸವಿದೂ ಪ
ಜನುಮದ ದಿನವಿದು ಅನುದಿನ ನಿನ್ನನುನೆನೆಯುವ ಜನರಿಗೆ ಘನ ಮುದ ಕೊಡುವಂಥ ಅ.ಪ.
ಯಾವಾಗಲೂ ಹರಿಯ ಭಕುತಿಯಲಿಸೇವೆಮಾಳ್ಪ ಪರಿಯಭಾವುಕರಿಗೆ ಕಲಿಸುವುದಕೆ ಗಡಜೀವಿಯಾಗಿ ಅವತರಿಸಿದ ನಿನ್ನದೂ ೧
ಪೊಡವಿಯ ಮಾತೆಯನು ದನುಜಬ ಚ್ಚಿಡಲವಳಿರುವದನುಹುಡುಕಿ ತೆಗೆಯಲಾ ಕಡಲನೆ ಜಿಗಿಯುವಕಡುಶಕ್ತಿಯ ಗಡ ಪಡೆದ ನಿನ್ನಯ ೨
ಧಾರುಣಿನ ಕಾರಣ ಗದುಗಿನಚಾರು ಚರಣದಿ ತೋರಿ ಭಕುತಿಯನುಸೂರೆಗೈಯ್ಯೆ ಮೈದೋರಿದ ನಿನ್ನನು ೩

೩೮೨
ಜಯ ಕೊಲ್ಹಾಪುರ ನಿಲಯೇಶ್ರೀನಿವಾಸನ ಸತಿಯೇ ಸಾಗರರಾಜನ ಸುತೆಯೇನಾರಿಯರೆಲ್ಲದು ಕೂಡಿ ಆರತಿ ಬೆಳಗುವೆವು ಪ
ಬಿಳಿಯ ಪತ್ತಲವುಟ್ಟು ಕಡಗ ಕಂಕಣ ತೊಟ್ಟುಜಡೆಗೆ ಮಲ್ಲೆಯ ಮಾಲೆ ಮುಡಿದಾ ವರಮಹಾಲಕ್ಷ್ಮಿಗೆ ೧
ಮರುಗ ಮಲ್ಲಿಗೆ ಜಾಜಿ ಪಾರಿಜಾತದ ಕುಸುಮಸಿರಿಯ ಚರಣಕೆ ಅರ್ಪಿಸಲೆಂದು ಜಯ ಜಯ ಜಯ ೨
ಬಡವರಾ ಮನೆತನಕೆ ಅಭಿಮಾನವನ್ನಿಟ್ಟುನಿರುತ ಕಳಶದಿ ಕುಳಿತ ಮಹಾಲಕ್ಷ್ಮೀಗೆ ಹಾಡುತ ಪಾಡುವೆವು ೩
ಶುಕ್ರವಾರವು ಇಂದು ನಮ್ಮ ಸದನಕ್ಕೆ ಬಾ ಎಂದುಗದುಗಿನ ನ ಅರಸಿಗೆ ಹಾಡುತ ಪಾಡುವೆವು ೪

೪೦೨
ಕುಮಾರವ್ಯಾಸ
ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ
ಮಂಗಳಂ ನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ ೧
ಶ್ರೀ ವರನ ವರದಿಂದ ಧೀರವನಶ್ವತ್ಥಾಮದೆವನಾಶೀರ್ವಾದದಿಂದೆ ಸ್ಫೂರ್ತಿಯ ತಾಳ್ದುಭಾವಪೂರಿತ ಪದದ ಪ್ರೌಢಿಯಲಿ ಕನ್ನಡದೆಓವಿ ಭಾರತ ಬರೆದ ಕವಿ ಪುಂಗವಂಗೆ ೨
ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ ೩

ಜಯಮಂಗಳಂ ಪ
ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ ೧
ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ ೨
ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ ೩
ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ ೪
ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ ೫


ಜಯಮಂಗಳಂ ನಿತ್ಯ ಶುಭಮಂಗಳಂ ಪ
ಅಂಜನೆಯ ಕುವರಂಗೆ ಭಿಂಜನನ ಪುತ್ರಂಗೆಪಂಜುಗದಿರನ ನುಂಗೆ ಅಂಜದಲೆ ಜಿಗಿದಂಗೆಕಂಜಾಕ್ಷ ಶ್ರೀರಾಮ ದೂತಂಗೆ ಹನುಮಂಗೆಸಂಜೀವಿನಿಗೆ ಮುಖ್ಯ ಪ್ರಾಣ ದೇವಂಗೆ ೧
ಕಾನನದಿ ರಾಮನಿಗೆ ತಾನಾದ ಭೃತ್ಯಂಗೆದಾನವನ ಲಂಕೆಯನು ಸೂರೆಗೊಂಡವಗೆಜಾನಕಿಯ ಸುದ್ದಿಯನು ತಂದುರುಹಿದಾತಂಗೆವಾನರ ಪ್ರಮುಖನಿಗೆ ಧೀರ ಮಾರುತಿಗೆ ೨
ದುಷ್ಟರನು ಶಿಕ್ಷಿಸುತ ಕಷ್ಟಗಳ ಪರಿಹರಿಸಿತುಷ್ಟಿಕೊಡುವಾತನಿಗೆಸೃಷ್ಟಿಯಲಿ ಸಕಲ ಜನ ಪೂಜ್ಯನಿಗೆ ಮಹಿಮನಿಗೆಶ್ರೇಷ್ಠ ಗದುಗಿನ ನ ಪ್ರೀಯಂಗೆ ೩

೪೦೩
ಪುರಂದರದಾಸರು
ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ
ನಿಪುಣಮತಿ ಪುರಂದರ ದಾಸಮಲ್ಲ ಅ.ಪ.
ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ ೧
ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ ೨
ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ ೩

೪೦೦
ಧನ್ಯಧನ್ಯನೊ ಶ್ರೀ ಗುರುರಾಯಾಧನ್ಯ ಶ್ರೀ ರಾಘವೇಂದ್ರ ಯತಿವರ್ಯಾ ಪ
ವೀಣಾಪಾಣಿಯ ಆಣತಿಯಂತೆಮಾಣದೆ ಸನ್ಯಾಸವ ಗ್ರಹಿಸಿದೆವೇಣುಗೋಪಾಲನು ತಪದ ಕಾಣಿಕೆಗೆಕಾಣಿಸಿಕೊಂಡನೆ ಓ ಮಾರಾಯಾ ೧
ಆ ಸುಧೆಯ ಹೊತ್ತಿಗೆಯ ಪರಿಮಳದವಾಸನೆಗೆ ಬೆರಗಾದ ಸುಧೀಂದ್ರರಭಾಸುರ ಕರ ಕಮಲಾಸಂಜಾತನೆಏಸು ಜನ್ಮದ ಸುಕೃತವೊ ಜೀಯಾ ೨
ಉನ್ನತ ಗದುಗಿನ ಸನ್ನಿಧಿಯೊಳು ನರಸಿಂಹನೆದುರಿನಲಿಸನ್ನಿಹಿತನು ನೀನಾಗಿ ಕುಳಿತೆಯೋಆದರಿಸಿನ್ನು ಸಲಿಸಲು ನಿನ್ನ ಭಕ್ತಿಯಾ ೩

೩೮೪
ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ ಪ
ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ.
ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ ೧
ಕರದ ಕಂಕಣ ಕೊರಳ ಹಾರವುವರ ಕಿರೀಟವು ಶಿರದೊಳಿಂದಿರೆಕರಣ ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ ೨
ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ ೩
ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ ೪
ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನನ ಚಂದಿರೆ ೫

೩೫೨
ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ
ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ.
ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ ೧
ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ ೨
ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ನು ನೀನೆ ೩

೩೫೩
ನಾನೇನು ನಿನಗೆಂದೆನೊ ಶ್ರೀಹರಿಯೆನಾನಿನಗೇನೆಂದೆನೊ ಪ
ನಾನೇನು ನಿನಗೆಂದೆ ನೀನಿಂತು ನನ್ನದುಧ್ಯಾನವ ಬಿಡಿಸಲು ಜ್ಞಾನಿಗಳರಸನೆ ಅ.ಪ.
ಕರುಣಿ ನೀನೆಂತೆಂಬೋದು ನನಗೆ ಇನ್ನುಭರವಸೆ ಇಲ್ಲೆಂಬೆನೋಕರುಣಿ ನೀನಾದರೆ ಪರಿಪರಿ ಬೇಡಲುಕರುಣೆ ತೋರದೆ ಇರುವದು ಸರಿಯೇನೊ ೧
ಭಕ್ತನು ನಾನಲ್ಲವೇನೊ ನಿನ್ನೊಳಗನುರಕ್ತಿ ಮಾಡುವದಿಲ್ಲೇನೋಮುಕ್ತಿ ಮಾಡಲು ಮತ್ತೆ ರಿಕ್ತ ಕರಣನೆಂಬ ಉಕ್ತಿ ಸುಳ್ಳೇನೋ ೨
ಸ್ಮರಿಸಲು ದುರಿತಗಳ ತರಿವನುಡಿಬರಿದೆನ್ನ ಬಗೆಗಾಯ್ತೆನೊಧರೆಯೊಳು ಗದುಗಿನ ಬಿರುಸು ನನ್ನ ನುಡಿ ಬರೆಯಲ್ಲವೇನೋ ೩

೩೫೪
ನಾನೇನು ನಿನ್ನಯ ಚರಣವ ಮಾಣೆನು ಪ
ಮಾನವ ಕಾಯ್ವರನನ್ಯರ ಕಾಣೆನು ಅ.ಪ.
ಕಣ್ಣನು ಬಿಡುತಲಿ ಬಿರಿಬಿರಿ ನೋಡುತಿಣ್ಣನೆ ಬೆಟ್ಟದ ಮೇಲೆ ಬಿಸಾಡುಮಣ್ಣನುಗ್ಗಲು ಹಲ್ಲಲ್ಲಿ ತೋಡುಸಣ್ಣನ ಉಗುರಿಲಿ ಹರಿಕೊಂಡು ನೋಡು ೧
ಕಾಲಲಿ ತಲೆಯನು ತುಳಿಯುತೋಡಾಡುಮೇಲಾಗಿ ಕೊಡಲಿಯನೊಗೆದು ಈಡಾಡುಬಾಲದ ಮಂಗನ ಕರಡಿಯ ಛೂಬಿಡುಸೋಲಿಸಲಾವುದೆ ತಂತ್ರವ ಹೂಡು ೨
ಮೃದು ನುಡಿಯಲಿ ಅವಮಾನಿಸಿ ನೂಕುಕುದುರೆಯ ತಂದೆನ್ನ ಮೈಮೇಲೆ ಹಾಕುಗದುಗಿನ ಸಾಕುಪದಗಳ ಸೇವೆಯು ನಿತ್ಯದಿ ಬೇಕು ೩

೪೦೧
ನಾಲಗೆ ಬರದಯ್ಯಾ ಶ್ರೀ ಗುರುವರರಾಯಾಪಾಲಿಸೆನ್ನೊಳು ನಿನ್ನ ಪೂರ್ಣದಯ ಪ
ನಾಲಿಗೆ ಮತಿಗಳು ತಡೆದು ನಿಂತಿಹವಯ್ಯಮೇಲು ನಿಮ್ಮಯ್ಯ ನಾಮಾ ನಾ ಪೇಳೆನೆಂದರೆ ಅ.ಪ.
ಕಥೆಯ ಕಟ್ಟಿದೆ ನಾಟಕ ಪದ್ಯವ ರಚಿಸಿದೆನೆಂಬಿ ಹೆಮ್ಮೆಯೊಳಿದ್ದೆ ಯತಿರಾಯಾನಿನ್ನ ಸುಚರಿತೆಯ ಕಥಿಸಲುಗತಿಕಾಣದೆ ನಿಂತು ಬಾಯ್ಬಿಡುವೆ ಪೊರೆಯಯ್ಯಾ ೧
ಬಡವನು ಮತಿಯೊಳು ಸಿರಿಯೊಳು ಸಹ ಎನ್ನಪಡಿಪಾಟಲನು ಕಡಿದು ಕಾಪಾಡೊಕಡಿದೆನ್ನ ಚಿತ್ತದ ದುಗುಡವ ಕಳೆಯೆಂದುಪಿಡಿದು ನಿನ್ನಯ ಪಾದ ತುತಿಸುವೆನೆಂದರೆ ೨
ಸ್ಮರಿಸುವೆ ಮನದೊಳು ನಿರುತದಿ ಯತಿವರ್ಯಾಶ್ರೀ ರಾಘವೇಂದ್ರರಾಯಾಧರೆಯೊಳು ಪರಮ ದಾನಿಗಳ ಹಿರಿಯನೆಂದುಅರಿತು ನಾ ಬಂದೆನೊ ಮೂಕನಾಗಿರುವೆನೊ ೩
ಮನದೊಳಗಿರುತಿರ್ದ ಭಕುತಿ ಭಾವಗಳುಏನಿತೆಂಬುದನು ನೀನೇ ನೋಡಿಮನಸಿನಭೀಷ್ಟವನಿತ್ತು ಕಾಯುವದಯ್ಯಾಮನದೊಳು ನೆನೆಯುವೆ ಹೊರಗಾಡಲಾರದೆ ೪
ಕರುಣಾಳು ಗದುಗಿನ ಹರನೆ ಕಳುಹಿಸಿದನೆಂದು ನಾನಿಲ್ಲಿ ಬಂದೇವರ ನಿನ್ನ ಚರಣವೂ ದೊರೆಯೆ ನಾ ತುತಿಸಲುಸರಿಯಾದ ನುಡುಗಳ ಕರುಣಿಸು ೫

೩೯೦
ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ಪ
ಇತರರ ದುಃಖವು ತನಗೆಂದರಿವಾಸತತದಿ ಸೇವೆಗೆ ತತಪರನಿರುವಾ ೧
ತೊರೆದು ಹೆಮ್ಮೆಯಾ ಸರುವರು ನಮಿಸುವ ಪರರನು ಜರಿಯಾ ನಿರುಮಲನಿರುವಾ ೨
ಧನ್ಯನವನು ತಾಯನ್ಯ ಸತಿಯರನುತನ್ನ ತಾಯಿಯೊಲು ಮನ್ನಿಸುತಿರುವಾ ೩
ಸಟಿಯನು ನುಡಿಯಾ ಪರಧನವೆಡಿಯಾಕಟ್ಟಿಲಿ ಸಿಕ್ಕದೆ ಸಮಮನನೆನವ ೪
ನಡೆನುಡಿಗಳಲಿ ಮಡಿಯಿಂದಿರುವಾದೃಢ ಮನದಿಂ ಬಹು ಶಾಂತಿಯಲಿರುವಾ ೫
ಪ್ರತಿಪ್ರಾಣಿಯಲಿ ಹರಿಯನು ನೋಡುವಾಅತಿಶಯ ದಯವನು ತೋರುತಲಿರುವಾ ೬
ಕಾಮಕ್ರೋಧಗಳ ಗಡ ಜೈಸಿರುವರಾಮನಾಮವ ನೇಮದಿ ಭಜಿಸುವ ೭
ಗದುಗಿನ ನಹೃದಯದಿ ಸತತ ಮುದದಲಿ ಪಿಡಿವ ೮

೩೫೫
ನಿನ್ನ ದಿವ್ಯ ಸ್ವರೂಪವನು ಕಣ್ಣಿಲಿ ನೋಡಿಧನ್ಯನಾದೆನು ಇಂದು ಪನ್ನಗಶಯನ ಪ
ಚೆನ್ನ ಪಾದಂಗಳಲಿ ಚಿನ್ನದಾ ಕಡಗರುಳಿಹನ್ನೆರಡು ನಿರುಗೆಗಳ ಹೊನ್ನ ಪೀತಾಂಬರಕೆರನ್ನಮಯದೊಡ್ಯಾಣವನ್ನು ಸುತ್ತಿದ ನಡುವುಚನ್ನ ಪದಗಳ ಮುಟ್ಟುವನ್ನಕ್ಕ ವನಮಾಲೆ ೧
ನನ್ನೀಯಿಂದೆಸೆವ ಕಂಪನ್ನ ಕೌಸ್ತುಭದೆದೆಯುಕನ್ನಿಕೆಯು ಲಕ್ಷುಮಿಯ ಚಿಹ್ನ ಧರಿಸಿದ ವಕ್ಷಘನ್ನ ಚಕ್ಕರ ಶಂಖ ಸನ್ನೆ ಕೌಮೋದಕಿಯುಕನ್ನೈದಿಲೆಯ ವಿಡಿದ ಇನ್ನಂತು ನಾಲ್ಕೈಯು ೨
ಪನ್ನೀರು ಬೆರೆತು ಬಾವನ್ನ ಕಂಪಿನ ಮೈಯುಬೆನ್ನಗಲ ಹೆಗಲು ದುಂಡನ್ನ ತೊಳಗುವ ಕೊರಳುಕನ್ನವುರ ಕುಂಡಲಂಗಳನ್ನು ಧರಿಸಿದ ಕಿವಿಯುಜೊನ್ನ ಪಸರಿಪ ನಗೆಯ ಮನ್ನಿಸುವ ಕೆಂದುಟಿಯು ೩
ಮುನ್ನೂರು ಕೋಟಿ ರವಿ ಸನ್ನಿಭದ ಚೆಲ್ವ ಮೊಗಕನ್ನೀಲ ಕಣ್ಣು ಚಂದನ್ನ ಎಳಸಿನ ಮೂಗುಉನ್ನತದ ಹಣೆಮೇಲೆ ಸೊನ್ನಿ ಕತ್ತುರಿ ತಿಲಕಸೊನ್ನ ಮುಕುಟವ ಧರಿಸಲಿನ್ನುಳಿದ ಕರಿಗುರುಳು ೪
ಎನ್ನೆದುರು ನಿಂತಿರಲು ಚಿನ್ನುಮಯ ರೂಪನೆಕುನ್ನಿ ಮಾನವ ನಾನು ಇನ್ನೆಂತು ಬಣ್ಣಿಸುವೆನಿನ್ನ ಕೃಪೆಯಿಲ್ಲದಿದನೆನ್ನಲಪ್ಪುದೆ ದೇವಚನ್ನ ಗದುಗಿನ ನೆ ಮಣಿವೆ ೫

೪೧೦
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ
ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ.
ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ ೧
ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ ೨
ಗದುಗಿನನೊಳ್ಮೆರೆವ ಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ ೩

೩೫೬
ನಿನ್ನೊರೆಗೆ ನಾ ತಿಳಿಯಲಾರೆ ಪ
ಪನ್ನಗಾದ್ರಿವಾಸ ಶ್ರೀಹರೆ ಅ.ಪ.
ಕುನ್ನಿ ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ ೧
ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ ೨
ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ ೩
ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು ೪
ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ೫

೩೯೧
ಮಾರುತಿ
ನಿಲ್ಲಿಸಯ್ಯ ನಿನ್ನ ಮೂದಲೆ ಮಾರುತಿ ಪ
ನಿಲ್ಲಸಯ್ಯ ನಿನ್ನ ಮೂರುತಿಫುಲ್ಲವಿಸಿದೆ ನಿನ್ನ ಕೀರುತಿಬಲ್ಲಭಕ್ತಿಪಥವ ತೋರುತಿಎಲ್ಲರೊಳಗೆ ಸುಖವ ಬೀರುತಿ ಅ.ಪ.
ಗಾಡಿಕಾರ ರಾಮನನ್ನು ನೋಡಿ ನೋಡಿಯವನ ಮೂರ್ತಿಮೂಡಿನಿಂತ ನಿನ್ನ ಕಣ್ಣ ನೋಡಿ ಧನ್ಯನಪ್ಪೆ ಮೂರ್ತಿ೧
ಪ್ರೇಮಭಕುತಿಯಿಂದ ನಿರುತ ರಾಮನನ್ನು ಭಜಿಸಿ ನುಡಿವನಾಮವೆನ್ನ ಪಾಪಿ ಕಿವಿಯ ಧಾಮದಲ್ಲಿ ಸೇರುವಂತೆ ೨
ಎನ್ನ ಕಾಡುವಂಥ ದುರಿತವನ್ನು ಸೌಖ್ಯವನ್ನುಇನ್ನು ಕೊಡುವ ನಿನ್ನ ದಿವ್ಯ ಸನ್ನಿಧಿ ತಾನಾಗುವಂತೆ ೩
ಧಾರುಣಿಯೊಳು ಗದುಗಿನಲ್ಲಿ ನ ಪದವತೋರಿ ನಿತ್ಯ ಸೇವಿಪಂತೆ ಧೀರತೆ ಬರುವಂತೆ ಎನ್ನೊಳು ೪

೩೫೭
ನೀನಲ್ಲದಿನ್ನಾರು ಸಲಹುವರು ಹರಿಯೆ ಪ
ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ.
ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ ೧
ಮಡದಿಯನು ಗಜವರನ ಮೊಸಳೆಯಿಂ ಸಲುಹಿದರೆಒಡಹುಟ್ಟಿದರ್ಜುನನ ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ ೨
ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ನೆ ನೀನು ೩

೩೫೮
ನೀನೊಲಿದರೇನು ಏನಿಲ್ಲ ಹರಿಯೆ ಪ
ನೀನೊಲಿಯದಿರೆ ಮಾತ್ರ ಏನೇನು ಇಲ್ಲ ಅ.ಪ.
ಸಾಧನವು ಸಂಪತ್ತು ಸಾಧಿಸದೆ ದೊರೆಯುವುದುಪಾದಗಳ ಸೇವೆ ತಾ ತಾನಾಗಿ ಲಭಿಸುವುದುಖೇದ ವ್ಯಸನಗಳೆಲ್ಲ ಬಾಧಿಸದಲೋಡುವುದುಸಾಧು ಸಂಗವು ಭಕ್ತಿ ಬೋಧಿಸದೆ ಬರುವವು ೧
ವಾಸುದೇವನೆ ವಿಪುಲ ಐಸಿರಿಯನೀಡುತಲೆಬೇಸರದೆ ನಿನ್ನವರ ಲೇಸಾಗಿ ಸಲಹುವೆಯೊದಾಸ ಭಕುತರು ಶೆರಗ ಹಾನಿ ಬೇಡಿದರೇನುಶೇಷಶಯನನೆ ನಿನ್ನ ಈಸು ಮಹಿಮೆಯ ತಿಳಿಯೆ ೨
ಮನಸು ನಿನ್ನಡಿಗಳಲಿ ಕೊನೆತನಕ ಇರಿಸುವದುಘನಕೆಲಸ ನಿನದಯ್ಯ ಮನುಜರಿಗೆ ಸಾಧ್ಯವೇತನುಮನಗಳಿವು ನಿನ್ನವೆ ನನದೆಂಬುದೇನುಂಟುಧಣಿಯ ಗದುಗಿನ ನೆ ಒಲಿಯೋ ೩

೩೫೯
ಪರಮಮಂಗಳ ಧಾಮಾ ಶ್ರೀರಾಮಾ ಪ
ಕರುಣಾಮೃತ ಸಾಗರ ನಿಸ್ಸೀಮಾಚರಣಕೆರಗುವೆ ಸಾಸಿರನಾಮಾ ೧
ಶರಣಾಗತರನು ಕರವಿಡಿವುದು ನೇಮಾಶರಣುಬಂದೆನಯ್ಯ ರಘುಕುಲ ಸೋಮಾ ೨
ವಚನವ ಪಾಲಿಪ ಸುಚರಿತವೈ ನಿಮ್ಮಅಚಲ ಭಕ್ತಿಕೊಡು ಮೇಘಶ್ಯಾಮಾ ೩
ಗದುಗಿನ ಪ್ರೇಮ ವೊದಗಿಸಿ ಕಾಯೋ ವೀರ ಲಲಾಮಾ ೪

೩೬೦
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ
ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ.
ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ೧
ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ೨
ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ೩

೩೬೧
ಪಾರ್ಥನ ಸಾರಥಿಯಾ ನೋಡಿದೆಯಾ ಪ
ಆರ್ತ ಜೀವನಿಗೆ ಕರ್ತವ್ಯವನುಗುರ್ತಿಸಿ ಪೇಳ್ವುದ ಪೂರ್ತಿಯ ರೀತಿಯಾ ಅ.ಪ.
ಗೀತೆಯ ಪೇಳಲು ವೇದಾಗಮಗಳಸಾರಧಾರೆಯ ಕರೆವನೆಂಬಂತೆಶ್ವೇತಾಶ್ವಂಗಳ ಕಡಿವಾಣಗಳಪ್ರೀತಿಲಿ ಪಿಡಿದಿಹ ಕೃಷ್ಣ ಮೂರುತಿಯ ೧
ಭವದ ತೇರಿನಲಿ ಜೀವನನಿರಿಸಿ ನಾಲ್ಕರ್ಥಗಳನು ಜೋಡಿಸುತತವಕದಿ ತಾ ಹೊರಗಿರುತಲೆ ನಡೆಸಿಪ್ರೇರಿಪನೆಂಬಂತಿಹ ಶ್ರೀಪತಿಯ ೨
ನೇತ್ರಕೆ ಜೀವನಯಾತ್ರೆಯ ಸಡೆಸುವಸೂತ್ರಧಾರನೆನೆ ತೋರುತಲಿರುವಕ್ಷೇತ್ರ ಗದುಗಿನ ನಪಾತ್ರ ವಹಿಸಿದ ದಿವ್ಯಾಕೃತಿಯ ೩

೩೮೩
ಪಾಲಿಸು ಸೌಭಾಗ್ಯದ ಲಕ್ಷ್ಮೀದೇವಿಮೇಲಾದ ಕರವೀರವಾಸಿನಿದೇವಿಪ
ಬಡಬಡಿಸಿ ಬಂದಿಹೆ ನಾನಿಲ್ಲಿನೋಡಿಕೊಡುವಿ ವರವೆಂದು ಆಸೆಯ ಮಾಡಿಬಿಡಬೇಡ ಮಗನನು ಕರುಣದಿ ನೋಡಿಕೊಡು ನೀ ವರನನು ಸಿರಿಗಳ ನೀಡಿ ೧
ಬಡತನದ ಭೂತವ ಎದುರಿಸುವುದು ತಾಯೆತಡೆಯಲಾರೆನು ಇನ್ನು ಕರುಣಿಸಿ ಕಾಯೆಬಿಡದೆ ಭಜಿಪೆ ನಿನ್ನ ಹೇ ಶುಭಕಾಯೆಕೊಡು ನೀ ವರವನು ಧನಗಳನೀಯೆ ೨
ಇಡುವೆ ತಲೆಯ ನಿನ್ನ ಪದದಿ ಪನ್ನಗ ವೇಣಿನುಡಿಯೆ ಹರಕೆಗಳ ಹೇ ಶುಭವಾಣಿಒಡೆಯ ಗದಗುವೀರ ನಾರಾಯಣನ ಜಾಣಿಕೊಡು ನೀ ವರವನು ವಿಠಲನ ರಾಣಿ ೩

೩೬೨
ಪುಟ್ಟಿ ಬಂದಿಹೆಯಾ ಕಿಟ್ಟಯ್ಯಾ ಪ
ಕೆಟ್ಟ ಲೋಕವನೆಲ್ಲ ನೆಟ್ಟನೆ ತಿದ್ದಲುಕಟ್ಟಿ ನೋಡು ಶ್ರಾವಣದಷ್ಟಮಿ ದಿನದಲ್ಲಿ ೧
ಹೀನಾದ ಧರ್ಮದ ಜ್ಞಾನೋದಯ ಗೈಸಿದೀನರನುದ್ಧರಿಸಿ ಮಾನವನಾಗಿ ೨
ಬಾಧಿಪ ಕುಜನರ ಛೇದಿಸಿ ಜಗದೊಳುಸಾಧು ಸುಜನರನು ಮೋದದಿ ಸಲುಹಲುಮೇದಿನಿಯೊಳು ನೀ ಉದಿಸಿ ಬಂದೆಯಾ ೩
ಭಕ್ತರ ಮೊರೆ ಕೇಳಿ ಯುಕ್ತಿಯಿಂದ ಸಲುಹಲುಮುಕ್ತಿಯ ಸ್ಥಾನ ವೈಕುಂಠವ ಬಿಟ್ಟು ೪
ಸುರ ಮುನಿಗಳಿಗಿಂತು ವರವಿತ್ತ ಕಾರಣ ಧರೆಯೊಳು ಗದುಗಿನ ೫

೩೯೨
ಪ್ರಾಣದೇವಾ ಕಾವುದೆಮ್ಮ ಜೀವೋತ್ತಮಾಪ
ಜಾಣರೊಳು ನೀನು ಜಾಣತ್ರಾಣಿಕರೊಳು ನೀನು ತ್ರಾಣಕಾಣೆ ನಿನಗೆ ಸರಿಸಮಾನಕ್ಷೋಣಿಯಲ್ಲಿ ಹನುಮಾನ ೧
ಎಲ್ಲ ಗುರುಗಳಿಂಗೆ ಜಗದಿಬಲ್ಲಿದ ಗುರುವು ನೀನಾದಿಎಲ್ಲರನುದ್ಧರಿಪ ಮನದಿಯಲ್ಲಗುರೇಶನಾಗಿ ಬಂದಿ ೨
ಸ್ಮರಿಪೆನೇಳುಪುರಗಳೊಡೆಯಕರುಣಿಸಯ್ಯ ಮುಗಿವೆ ಕೈಯ್ಯಸಿರಿಗದುಗಿನ ವೀರ ನಾರಾಯಣನದೂತರೊಳಗೆ ಪ್ರಿಯಾ ೩

೩೬೩
ಬಂದೆಯಾ ಕೃಷ್ಣಯ್ಯಾ ಬಂದೆಯಾ ಪ
ಸುಂದರ ನರರೂಪದಿಂದಲೀ ಧರೆಯೊಳು ಅ.ಪ.
ಲೋಕೈಕ ದೇವನೆಂದು ಜ್ಞಾನಿಗಳೇಕಾಗಿ ಸಾರ್ವರಿಂದುಆಕಾರ ರಹಿತನ ಲೋಕ ಸಾಮಾನ್ಯರುಸ್ವೀಕರಿಸರು ಎಂದು ಸಾಕಾರನಾಗಿ ೧
ಪೂರಾ ವಿಶ್ವದಲ್ಲೆಲ್ಲ ತುಂಬಾ ನಿಂತಿಹ ನಿನ್ನ _ನಾರು ನಂಬರು ಎಂತೆಂಬಕಾರಣ ಜಗಕೆ ತೋರರೆಲ್ಲಾ ಗುಣಸಾರ ಸಂಗ್ರಹಿಸಿ ನೀ ಧೀರ ಮಾನವನಾಗಿ೨
ಜಗದೊಳಂದದ್ಭುತ ಶಕ್ತಿ ಇರುವುದೆಂ _ದುಗಮಿಕೆ ಜನದೊಳಾಸಕ್ತಿಜಗದೊಳು ಗದುಗಿನ ಬಗೆ ಬಗೆ ಮಹಿಮೆಯ ಸುಗುಣ ಮಾನವನಾಗಿ ೩

೩೬೪
ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀಪರಿಮೂಲ ಕೊಲೆಗಳಿಲ್ಲದಾತಗೋಲವ್ಯಾಪಿ ನಿರಾಕಾರಿ ಪ
ಸೊಕ್ಕಿ ಮೆರೆವ ಬಲಿಯ ಬಳಿಯಹೊಕ್ಕು ಮೂರು ಪಾದ ನೆಲವಬಿಕ್ಕೆಬೇಡಿಯವನು ಹತ್ತಿಕ್ಕಿ ತಳಕೆ ತುಳಿಯಲೆಂದು ೧
ಇಡಿಯ ಜಗವ ತನ್ನೊಡಲಿನಲ್ಲಿಹಿಡಿಯ ಪರಿಯ ಬಾಯ ತೆರೆದು ಜಡೆದು ತೋರಿ ಯಶೋದೆಯತೊಡೆಯ ಮೇಲೆ ಆಡಲೆಂದು ೨
ಹಾಳುಮಾಡಿ ಹೂಡಿದಾಟಕಾಲ ಬೆರಳು ಬಾಯೊಳಿಟ್ಟುಆಲದೆಲೆಯ ಮೇಲೆಮಲಗೆ ಗದುಗು ೩

೩೬೫
ಬಿಡಬೇಡೋ ರಂಗಾ ಬಿಡಬೇಡೋಕಡುಮೋಹಕದ ಕೊಳಲನೂದುವದನು ಪ
ಬಿಡುವೆಯಾದರೆ ಮನಕಡು ತವಕದೊಳುತಡವರಿಸುವುದೊಲೆಡೆಯನು ನೋಡೋ ಅ.ಪ.
ಕಿವಿಯೊಳು ನಾದವು ಅಮೃತವ ಸುರಿಯೆಸವಿಯುಣ್ಣುತಲೀ ಮನ ಮೈಮುರಿಯೆತಳಮಳಿಸುವದು ನಡುವೆ ನಿನಗಿದು ಸರಿಯೆಹೊರಗಿನ ಭಾವದ ಪವಣವನರಿಯೆ ೧
ಕೊಳಲನೂದುತಿರಲಾನಂದೊಳುಮುಳುಗಿರಲಾಗ ಕಣ್ಣಮುಂದಸುಳಿದಾಡುವ ನಿನ್ನ ಮೂರುತಿ ಚಂದತೊಲಗಿ ಪೋಗುವದೊ ಗೋಪಿಯ ಕಂದ ೨
ಮಧುರವೋ ನಿನ್ನ ಕೊಳಲು ಗಾಯನಇದರೊಳಿಲ್ಲವೊ ಲವ ಅನುಮಾನಮೊದಲು ಮುರಳಿಯ ಹಿಡಿಹಿಡಿ ಜಾಣಗದುಗಿನ ೩

೪೧೧
ಬುಗುರಿ ಆಡೋ ತಮ್ಮ ಬುಗುರಿ ಆಡೊ ಪ
ಬಗೆ ಬಗೆ ಜನುಮದಿ ತಿರುಗಿ ತಿರುಗಿ ಬಂದೊದಗತನದನುಭವ ಪರಿಕಿಸಿ ನೋಡೊ ಅ.ಪ.
ತನುವೆಂಬುದೆ ಕೊರಡಿನ ತುಂಡುದಿನದ ಕರ್ಮವೆ ಕೊನೇರು ದುಂಡುಮನವೆಂಬುವ ಮೊಳೆಯನು ಚುಚ್ಚಿಕೊಂಡುಘನ ಹರುಷದಿ ಕರದಲಿ ಕೊಂಡು ೧
ಭವವೆಂಬುದೆ ನಿನ್ನ ಜಾಳಿಗೆ ನೋಡೋತವಕದಿ ಬಿಡದಲೆ ಬಿಗಿಗಿಸುತ್ತ್ಯಾಡೋಸವಿಯನುಂಡು ನೀ ಹರಿಯನು ಬೇಡೊಜವದಲಿ ಝಾಡಿಸಿ ಭರದಿ ಬೀಸಾಡೊ ೨
ಧರೆಯ ಗದುಗಿನ ನಚರಣದಿ ಮೊಳೆಯೂರಿ ತಿರುಗುತಲಾಡೊಕರಣಗಳಳೆದು ಏಕ ಚಿತ್ತದಿಸ್ಮರಿಸುತ ನಿಂತು ನಿದ್ದೆಮಾಡೊ ೩

೪೧೨
ಬೇಡೆಲೊ ಜೀವಾ ಜನಿಸಲೆ ಬೇಡೋ ಪ
ಬೇಡ ನಿಜಸುಖ ದೊರೆಯದು ನೋಡೋ ಅ.ಪ
ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ ೧
ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ ೨
ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ ೩

೩೯೩
ಹನುಮ-ಭೀಮ-ಮಧ್ವ
ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ
ಮೂರು ಯುಗಗಳಲಿ ಮೂರವತಾರದಿಮೂರು ನಾಮಗಳಲಿ ಮೂರು ವೇಷದಲಿಮೂರು ಕ್ರಮಗಳ ಮೂರು ಧರ್ಮಗಳಮೂರು ಲೋಕಕೆ ತಿಳಿಸಿದ ಮೂರುತಿಯೆ ಅ.ಪ.
ಹನುಮನೆನಿಸಿ ಕೌಪೀನದಿ ತನುವಾಚ್ಛಾದಿಸಿಜನರೊಳು ತನುಮನ ಬ್ರಹ್ಮಚರ್ಯ ಬೋಧಿಸಿವನದೊಳು ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ ೧
ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ ೨
ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ ೩
ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ ೪
ಭೂಸುರ ಮಧ್ವರ ಹೆಸರಿಲಿ ಶಾಟಿಲಿ ರಾಜಿಸಿವ್ಯಾಸರ ಶಾಸನ ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ ೫

ಮಂಗಳಂ ಜಯ ಮಂಗಳಂ ಪ
ಇಂಗಡಲ ಕುವರಿಗೆ ಮಂಗಳಕಾಯೆಗೆ ಅ.ಪ.
ಮೂಜಗದೊಳು ನಿತ್ಯ ಪೂಜಿತದೇವಿಗೆರಾಜೀವ ನಯನೆಗೆ ಭಾಗ್ಯವೀವಳಿಗೆ ೧
ಹಸಿರು ಸೀರೆಯನುಟ್ಟು ಹಳದಿ ಕುಪ್ಪುಸತೊಟ್ಟುಎಸೆವ ಚಿನ್ನಾಭರಣನಿಟ್ಟು ಮೆರೆವವಳಿಗೆ ೨
ಪ್ರತ್ಯಕ್ಷಾಪ್ರತ್ಯಕ್ಷ ಶಕ್ತಿಯ ದೇವಿಗೆನಿತ್ಯ ಸಂಸಾರಿಗಗತ್ಯವಿರುವವಳಿಗೆ ೩
ಕುಲಗೋತ್ರವೆಣಿಸದಲೊಲಿಯುವ ದೇವಿಗೆನೆಲೆಗೊಡದ ಚಂಚಲೆಮಾಲಕುಮಿದೇವಿಗೆ ೪
ಮದನನ ಮಾತೆಗೆ ಪದುಮಲಯಳಿಗೆಗದುಗಿನ ನ ಸತಿಗೆ ೫

೪೧೩
ಮದಾಂಧನೋ ನಾನು ಮಧುಸೂದನ ಪ
ಜಗವನು ತುಂಬಿದ ತ್ರಿಗುಣಾತ್ಮಕನೆತೆಗೆದು ಕಣ್ಗಳ ನೋಡದ ನಾನು ೧
ಪವನನೊಡೆಯ ನಿನ್ನ ಸವಿಸವಿ ಸ್ತವಕೆಕಿವಿಗೊಡದೆ ಕಿವುಡನಾದೆನಾ ೨
ಎಡೆಗಿದ್ದರು ಗಡ ಅಡಗಿಹನಿಲ್ಲೆಂದುಹುಡುಕುತ ಕೇಳುವ ಜಡಮತಿ ನಾನು ೩
ಗದುಗಿನ ನೆ ಎನ್ನಎದೆಯೊಳು ನಿಂತಿರೆ ನೋಡದ ನಾನು ೪

೪೧೪
ಮನವೆ ನೀ ಸ್ಥಿರವಾಗಿ ಹರಿಯ ಪಾದಾಂಬುಜ_ವನು ಸೇರಿ ಅಲ್ಲಿಯೆ ನಿಲ್ಲಯ್ಯ ಬಿಡದೆ ಪ
ಅನುದಿನ ಸೇವಿಸಲನುವಾಗುದಯ್ಯಾಘನ ಚಂಚಲ ನೀನು ಎಚ್ಚರ ಎಚ್ಚರ ಅ.ಪ.
ಅಲ್ಲಲ್ಲಿ ಇಲ್ಲೆಂದು ಎಲ್ಲೂ ಹುಡುಕಲು ಬೇಡಎಲ್ಲೆಲ್ಲ್ಯೂ ಇರುವ ಶ್ರೀವಲ್ಲಭನುಬಲ್ಲವರಾಡುವ ಸೊಲ್ಲನು ಲಾಲಿಸುಖುಲ್ಲನೆಂಬುವ ನಿಂದೆಗೀಡಾಗಬೇಡಾ ೧
ಸದುಗತಿಯ ಕೊಡುವ ಶ್ರೀ ಪದುಮನಾಭನ ಪಾದಪದುಮದಿ ಮಧುರ ನಾಮಾಮೃತ ಸವಿಯುತ ಮುದದಿಸದನವ ಬಿಡದೆ ಸುತ್ತಾಡುತ್ತಲಿರು ನಿತ್ಯ ೨
ಧ್ಯಾನದ ದಾರದಿಂ ಜಪವೆಂಬ ಗಂಟಿರಲಿಶ್ರೀನಿವಾಸನ ಪಾದವೆಂಬ ಗೂಟಕೆ ಕಟ್ಟಿಮೌನದಿಂ ಕಟ್ಟಿಸಿಕೊಂಡಲ್ಲೇ ಸುಳಿದಾಡುಸ್ಥಾನವ ಬಿಟ್ಟನ್ಯನಿಟ್ಟಿಗೆ ಪೋಗದೆ ೩
ಸಕಲರ ಪಾಪವ ತೊಳೆದು ಪಾವನಗೈದುಮುಕುತಿಯ ದಾರಿಯ ತೋರುವ ನದಿಗಂಗೆಪ್ರಕಟವಾಗಿರುವಂತೆ ಚರಣದೊಳುರುಳಾಡುಭಕುತಿಯ ಬೇಡು ನೀ ಪ್ರತಿದಿನ ನೋಡು ೪
ಗದುಗಿನ ಗೂ ನಿನಗೂ ಹೃದಯವೆ ಮಂದಿರವಲ್ಲವೆ ದೀಪದಕದಿರಂತ ಚಾಚುತ ಪೋಗಿಬರುವದೇತಕೆಸದನವ ಬಿಡದಲ್ಲೇ ಹರಿಯನು ಸೇವಿಸು ೫

೩೬೬
ಮನೆಗೆ ಬಾರೋ ಕೃಷ್ಣ ಬೇಗನೆ ಪ
ವನಿತೆಯರಕೋ ಓಡಿ ಬರುತಿಹರು ಅ.ಪ.
ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ ೧
ಬೆಣ್ಣೆಯಾನೆ ನೀಡಿ ಕರೆವರೊ ಕಣ್ಣು ತಪ್ಪಿಸ್ಯಾಡಿಚಿನ್ನ ನಿನ್ನನಲ್ಲೆಲ್ಲೆಳದಾಡಿಹಣ್ಣು ಮಾಡುವರೊ ಘಾಸಿ ಮಾಡಿ ೨
ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ ೩

೩೬೭
ಮೀಸಲಾಗಿ ನಿನ್ನದೊಂದು ಚೆಲ್ವರೂಪವನ್ನಿಡೋವಾಸುದೇವ ನಿನ್ನನಂತ ದಿವ್ಯರೂಪಗಳಲಿ ಎನಗೆ ಪ
ಮಣಿವ ಭಕುತ ಜನರು ಕರೆದಕ್ಷಣಕೆ ಓಡಿಬಂದು ಮುಂದೆಕುಣಿದು ಕುಣಿದು ಕುಣಿದು ಹೋಗಿ ಬಂದುದಣಿದುಕೊಳುವ ಮೊದಲು ಎನಗೆ ೧
ಎಷ್ಟು ನೋಡಿದರು ಎನಗೆತುಷ್ಟಿಯಿಲ್ಲವಯ್ಯ ಕೃಷ್ಣಅಷ್ಟಷ್ಟಕೆ ಹೋಗಿಬರುವಕಷ್ಟವೇಕೆ ದಯದಿ ಎನಗೆ ೨
ಮಾಡಿದಘವ ಕುಟ್ಟಿ ಹಣಿವೆನೋಡಿ ನೋಡಿ ಪದಕೆ ಮಣಿವೆಹಾಡಿಹಾಡಿ ನಲಿದು ಕುಣಿವೆನಾಡೆ ಕುಣಿದು ತುಂಬ ತಣಿವೆ ೩
ಸಾವಿರಾರು ಭಕ್ತಜನರುದೇವ ನಿನಗೆ ಗೈವೆಯೆಂತುಪಾವನಾತ್ಮ ಗದುಗು ದಯವ ತೋರಿ ೪

೩೬೮
ಯಾದವಾ ಮಾಧವಾ ಕರುಣಿಸು ಪ
ಮೋದವನೀವ ದೇವ ಅ.ಪ .
ತುಂಬಿದ ಸಭೆಯೊಳಾ ತರುಣಿಯಾ ಪೊರೆದೆಯಾ ನಂಬಿದ ಶರಣರ ಕಾವಾ ೧
ಕರೆಯದೆ ವಿದುರನಾ ಮನೆಗೆ ನೀ ಬಂದೆಯಾನಿರುತದಿ ಭಕುತರ ಜೀವಾ ೨
ಪ್ರಾರ್ಥಿಸೆ ಗದುಗಿನ ವೀರನಾರಾಯಣಾಪಾರ್ಥನ ಬಂಡಿಯ ಬೋವಾ ೩

೩೬೯
ಯಾರಲ್ಲಿ ಅಡಗಿರುವೆ ಕೃಷ್ಣಯ್ಯ ನೀ_ನಾವಲ್ಲಿ ಅಡಗಿರುವೆ ಪ
ಯಾವಲ್ಲಿ ಅಡಗಿರುವಿ ಯಾವಲ್ಲಿ ಹುಡುಕಲಿಭಾವದ ಮೂಲೆಯ ರಾವನು ಬಿಟ್ಟು ಅ.ಪ.
ಕಣ್ಣುಮುಚ್ಚಾಲೆಯಾಟ ಬೇಡಯ್ಯ ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ ೧
ಎಲ್ಲೆಲ್ಲೂ ತುಂಬಿರುವೆ ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರುಚೆಲ್ವರೂಪದೆ ಬಂದು ನಿಲ್ವುದನ್ನು ಬಿಟ್ಟು ೨
ಕಡುಕಷ್ಟ ಹುಡುಕುವದು ಹಿಡಿದು ಹಿಡಿದು ತಂದುಒಡಲಲ್ಲಿಡಲು ಮತ್ತೇಒಡನೆ ನುಸುಳಿಕೊಂಡುಬಿಡವಲೋಡೋಡಿ ೩
ಇದೀಗ ನಡೆದು ತಂದು ನೆನೆಯಲು ನಿನ್ನಸದಾವಕಾಲಕೆಂದು ಹೃದಯದ ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ ಕಾವಲವಿಟ್ಟು ಮನವ ಟೊಣೆದು ನೀ ೪
ಬದರಿ ಕಾಶಿ ಕಂಚಿಯೋ ನೀನಿರುವುದುಮಥುರೆ ಪಂಢರಪುರವೊಪದುಮಾವತಿ ಗಿರಿಯೋ ಉಡುಪಿ ದ್ವಾರಕೆಯೊಗದುಗೋ ನೀ ಹೇಳಯ್ಯ ೫

೩೭೦
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ
ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು ೧
ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ ೨
ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು ೩
ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ನುಮುದದಿಂದ ಸಲಹುವನು ಸಂದೇಹವೇನು ೪

೩೭೧
ರಘುಪತಿಯೆ ನಿನ್ನನ್ನೆ ಪೊಗಳುವ ಪದಗಳನುಸೊಗಸಾಗಿ ರಚಿಪಂತೆ ಬಗೆಯನ್ನು ನೀಡೋ ಪ
ಪರರ ಪೊಗಳಿಕೆ ಬೇಡ ಪರರ ತೆಗಳಿಕೆ ಬೇಡಪರಮಪಾವನ ನಿನ್ನ ಮಹಿಮೆಯನು ಬಣ್ಣಿಸುವಸರಸ ನುಡಿಗಳು ಬಾಯೆ ಬರುವಂತೆ ಮಾಡೊ ೧
ಒಂದು ಲಕ್ಷದ ನಾಮದೊಂದು ಮಣಿಮಾಡಿಕುಂದದಿಹ ಭಕ್ತಿಗುಣದಿಂದ ಪೋಣಿಸಿ ಪದ್ಯದಂಥ ಹಾರವ ಮಾಡಿ ನಿನ್ನೆಡೆಗೆ ಅರ್ಪಿಸಲುಮಂದ ಬುದ್ಧಿಯ ನನಗೆ ಶಕ್ತಿಯನೀಡೋ ೨
ರಾಗ ನಿನಗೆಯೆ ತಾಳ ನಿನಗೆಯೆ ಗೊತ್ತುರಾಗ ತಾಳಗಳ ಮೇಳ ನನಗೇನು ಗೊತ್ತುರಾಗತಾಳಗಳಲ್ಲಿ ಹಗುರಾಗಿ ಹಾಡಲಿಕೆತೂಗಿ ಶಬ್ದಗಳಿಡಲು ಸನ್ಮತಿಯ ನೀಡೋ ೩
ಸುರವರನೆ ಬೇಕಯ್ಯ ನಿನ್ನ ಪ್ರೇರಣೆ ಇದಕೆವರಕವಿಯು ಸು ಕುಮಾರವ್ಯಾಸನಿಗೆ ವರವಿತ್ತುಉರುತರದ ಕನ್ನಡದಿ ಭಾರತವ ಬರೆಯಿಸಿದತೆರದಿ ಗದುಗಿನ ನೆ ಸಲಹೊ ೪

೪೧೫
ರತ್ನವ ದೊರಕಿಸಿರೊ ಬಹಳ ಪ್ರಯತ್ನದಿಂದ ರಕ್ಷಿಸಿರೊಪ
ಕತ್ತಲೆ ತುಂಬಿದ ಕತ್ತಲೆಗೂಡೊಳುಸುತ್ತಲು ಬೆಳಗಿಸಿ ಝಗಝಗಝಗಿಸುವ ಅ.ಪ.
ಜ್ಞಾನದ ಖಣಿಯಿಂದಲಗೆದು ಮನಸಿನಹೀನ ಕಸವನೆಲ್ಲ ತೆಗೆದುಧ್ಯಾನ ಕುಂದಣದಿಂದ ಘಟ್ಯಾಗಿ ಬಿಗಿದುಮಾನಸ ಭಾಂಢಾರದೊಳಗಿಡಲು ಬಗೆದು ೧
ಬೆಲೆ ಇದಕೆ ಒಂದೇ ಲಕ್ಷ ಕೊಟ್ಟರೆಸುಲಭವೊ ನಿಮಗೆ ಪರೋಕ್ಷಒಲಿದೊಗೆವುದು ತಾನು ಕಿರಣಕಟಾಕ್ಷನಿಲುವಿಗೆ ಬೇಕಾದ ಅಳತೆಗೆ ಬರುವ೨
ತೇಜದಿ ಕೋಟಿಸೂರ್ಯರ ಮಿಕ್ಕುವ ನಿತ್ಯಭಾಜಕ ಜನರಘರಾಶಿಯ ಮುಕ್ಕುವಓಜದೆ ಮನಕಾನಂದವನಿಕ್ಕುವಗದುಗಿನ ವೀರ ನಾರಾಯಣನೆಂಬುವ ೩

೩೭೨
ರಾಮಚಂದ್ರ ನೀ ದಯಮಾಡೊಪ್ರೇಮದಿಂದಲಿ ಹರಕೆಯ ನೀಡೋ ಪ
ನಿನ್ನ ಜನುಮದ ದಿನವಿದು ನೋಡೊಘನ್ನ ತರದ ಸಂತೋಷ ನೀಡೊಬನ್ನವನ್ನು ನೀನಿಂತೀಡಾಡೊಮನ್ನಿಸಿ ಎನ್ನನು ದಯದಿ ಕಾಪಾಡೊ ೧
ವನಿತೆ ಅಹಲ್ಯೆಯ ಶಾಪವ ಹರಿದೆದನುಜರುಪಟಳ ತಾಪವ ತರಿದೆಮನುಜರೆಲ್ಲರ ಧರ್ಮದಿ ಪೊರೆದೆಘನ ಸೌಖ್ಯವ ಭೋಗಿಸುವಂತಿರದೆ ೨
ಕುಣಿಯುವದು ಮುದದಲಿ ಭಕ್ತರ ಗಡಣದಣಿಯದು ನೋಡೈ ಸೀತಾರಮಣಗುಣಿ ನೆ ಸುಖವಕೊಡು ಕರುಣಾಭರಣಮಣಿವೆ ಗದುಗಿನ ೩

೪೧೬
ರಾಯ ಕೇಶವ ಚರಣಕೆರಗುವೆನು ಕಾಯೊ ಮಾಧವ ಪ
ಮಾಯಾ ಪ್ರಪಂಚದಿ ಬಾಯಾರಿ ಬಳಲುತಿಹೆತೋಯಜಾಕ್ಷನೆ ನೀ ಕಾಯೊ ಮಾಧವ ಅ.ಪ.
ಪಾರುಗಾಣೆನಯ್ಯ ಸಂಸಾರ ಬಂಧನದಿಂದ ನಾನುಸಾರಾಸಾರಾ ವಿಚಾರವಿಲ್ಲವೊ ಗಡ ತೀರ ಅಲ್ಪನು ತಿಳಿ ೧
ಜ್ಞಾನಹೀನನಾಗಿ ನಿನ್ನ ಧ್ಯಾನಮಾಡದಾದೆ ನಾನುಮಾನಾಪಮಾನಕ್ಕೆ ನೀ ಹೊಣೆಗಾರನು ದೀನಜನಪಾಲಕನೆ ೨
ಆರು ಹಗೆಗಳೆನ್ನ ಮೈಯ್ಯ ಸೇರಿ ನಿನ್ನ ಭಜಿಸಗೊಡರುಬಾರೊ ನೀ ದಯವನು ತೋರೊ ಗದುಗಿನ ನೆ ೩

೪೧೭
ಶರಣು ಬಂದೆನೊ ಹರಿಯೆ ಶರಣು ಬಂದೆನೊ ಪ
ಕರುಣದಿ ನೋಡೆನ್ನ ಸಲಹು ಎಂದೆನೊ ಅ.ಪ.
ಜನನ ಮರಣ ಸುಳಿಗಳಲಿ ತೊನೆದು ಬಳಲಿ ನೊಂದೆನೊಘನಭವದಲಿ ಮೂರುತಾಪಗಳಲಿ ಸಿಲುಕಿ ಬೆಂದೆನೊ ೧
ಧನಕೆ ಮೆಚ್ಚಿ ನಿನ್ನ ಮರೆತು ಕಹಿಯ ಫಲವ ತಿಂದೆನೊಅನುದಿನ ಘನ ಚಿಂತೆಯಿಂದ ಮನದ ಶಾಂತಿ ಹೊಂದೆನೊ ೨
ವನಿತೆ ಸುತರು ಪೊರೆವರೆಂಬ ಭ್ರಮದೊಳಾತ್ಮ ಕೊಂದೆನೊಕೊನೆಗೆ ಗದುಗು ನೆ ಗತಿಯೆಂದೆನೊ ೩

(ಅ) ಶ್ರೀ ಗಣೇಶ
೩೩೩
ಗಣಪತಿ
ಶ್ರೀ ಗಜವದನಾ ಬೇಗದಿ ಕರುಣಿಸು ಪ
ಬಾಗುತ ಬೇಡುವೆ ನೀಗು ವಿಘ್ನಗಳ ಅ.ಪ.
ಪದ್ಯವ ರಚಿಸಲು ಬುದ್ಧಿಯನೀವುದುಬಿದ್ದು ಬೇಡುವೆ ಸಿದ್ಧಿ ವಿನಾಯಕ ೧
ತೋರು ದಯವನೋಂಕಾರ ರೂಪನೆಶೌರಿಯ ತುತಿಸಲು ಬೀರು ಬಲವನು ೨
ಗದುಗಿನ ದೇವನಪದವನು ಭಜಿಸಲು ಪದಗಳ ರಚಿಸಲು ೩

೩೭೪
ಶ್ರೀ ವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ಪ
ಶ್ರೀ ವ್ಯಾಸರಾಯಾರ್ಜಿತ ಕರುಣಾ ದೇವಾದಿನುತಚರಣ ಗುಣಗಣಾಭರಣ ಅ.ಪ.
ಭೂಮಿ ಆಕಾಶಾದಿ ಸಕಲವನು ವ್ಯಾಪಿಸಿದಪ್ರೇಮದಿಂ ನಿನ್ನಂಶವನು ಪೂರ್ಣಗೊಳಿಸಿದನೇಮದಿಂ ಜಾಂಬುವತಿ ಭಕುತಿಯಿಂ ಪೂಜಿಸಿದಭೀಮರಥಿಯಿಂ ಬಂದು ಶ್ರೀ ವ್ಯಾಸರಾಯಗೊಲಿದ ೧
ಅಚ್ಚೆಯದ ಪುರಂದರ ಕಚ್ಚು ನೈವೇದ್ಯಕ್ಕೆಮೆಚ್ಚಿಯತಿ ವ್ಯಾಸರನು ಅಚ್ಚರಿಯಗೊಳಿಸಿದಹುಚ್ಚು ಕುರುಬಗೆ ಜಗನ್ನಾಥದಾಸರ ಜನುಮದಿಚ್ಛೆಯನು ವ್ಯಾಸರಿಂ ಪೂರೈಸಿ ಮೆರೆಯುತಿಹ ೨
ಕನ್ನಡದ ರಾಜ್ಯವೆಂದೆನಿಸಿದ ವಿದ್ಯಾನಗರದುನ್ನತಿಯ ಗೈದ ಯತಿ ವ್ಯಾಸರನು ಪಟ್ಟದೊಳುಸನ್ನಹಿಸಿ ಘನ ಕೃಷ್ಣ ನರಪತಿಗೆ ಬಂದಿದ್ದಬನ್ನ ಕುಹುಯೋಗವ ಸಂಹರಿಸಿ ಪಾಲಿಸಿದ ೩
ಪ್ರಾಣಯತಿ ಹರ ವ್ಯಾಸರಾಯಾದಿ ಹರಿದಾಸಜಾಣರನು ಕುಣಿಸಲಿಕೆ ನಾದವನು ಕೊಡಲೆಂದುವೇಣುವನು ಊದುತ್ತೆ ಮೋದಿಸುವನೆಂಬಂತೆಕಾಣಿಸುವ ರೀತಿಯಲಿ ನರ್ತಿಸುತ ನಿಂತಿರುವ ೪
ವ್ಯಾಸರಂದದಿ ಧರ್ಮದುಪದೇಶ ಮಾಡುತ್ತೆದೇಶದೊಳು ಪಸರಿಸಲು ಲಕ್ಷ್ಮೀಶ ತೀರ್ಥರನುಶಾಸನವ ಗೈದುಪನ್ಯಾಸಕ್ಕೆ ನೇಮಿಸಿದಶ್ರೀಶ ಗದುಗಿನ ನು ಎಂಬ ೫

೩೭೩
ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ
ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ.
ಸಂಸಾರ ತಾಪವನಳಿಯೆ ಬಗೆಬಗೆಯುನಪುಂಸಕನಾಲೋಚನೆ ಮಾಡುವೆನೊಕಂಸಾರಿಯೆ ನೀನೆ ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ ೧
ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ ೨
ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ ೩
ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ೪

೩೭೬
ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ ಪ
ಪಕ್ಕದೊಳೆಲ್ಲೆಲ್ಲ್ಯೂ ಹರಿ ತುಂಬಿಹನಕ್ಕ ಅ.ಪ.
ಅಡಗಲು ಎಲ್ಲೆಲ್ಲ್ಯೂ ಸ್ಥಳವಿಲ್ಲವಕ್ಕಜಡ ಜೀವಗಳೊಳು ತೋರುವನಕ್ಕ ೧
ಸಕಲರಿಗಿವನು ಕಾಣನು ತಕ್ಕಭಕುತರಿಗಷ್ಟೇ ಕಾಣುವನಕ್ಕ ೨
ಶಕ್ತಿಯುಕ್ತಿಯಿಂದರಸಲು ಸಿಗನಕ್ಕಭಕ್ತಿಯೊಳರಸಲು ಇಲ್ಲೇ ಸಿಗುವನಕ್ಕ ೩
ಇಲ್ಲೆ ಗದುಗಿನಲ್ಲೆ ನಿಂದಿಹನಕ್ಕಬಲ್ಲ ನಕ್ಕ ೪

೩೭೭
ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ
ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ.
ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ ೧
ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ ೨
ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ನು ಅಚಲ ೩

೩೭೮
ಸೇವೆ ಮಾಳ್ಪೆ ನಾರಾಯಣಈವುದಯ್ಯ ನಿನ್ನ ಚರಣ ಪ
ಸುರಮುನಿಗಳಿಗಿದು ದುರ್ಲಭಸಿರಿದೇವಿಗೆ ಮಾತ್ರ ಸುಲಭಕರುಣಿಸು ಹೇ ಕಮಲನಾಭಇರದೆ ಭೌವ್ಯ ನಿನ್ನ ಚರಣ ೧
ತ್ರಿಜಗಗಳ ಗೆಲ್ದ ಚರಣಭಜಕ ಗುಹಕಗೊಲಿದ ಚರಣರಜತ ನದಿಯ ಹೆತ್ತ ಚರಣಕಲ್ಲಹಲ್ಯೆ ಪೊರೆದ ಚರಣ೨
ಕುರುನೃಪನನು ಕೆಡೆದ ಚರಣಉರಗ ಕಾಳಿ ಹಣಿದ ಚರಣಧರೆಗೆ ಮೆರೆದ ಗದಗು ನಿನ್ನ ಚರಣ ೩

೩೭೫
ಸ್ಮರಿಸಿವುದು ರಘುನಂದನನ ಪ
ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ಅ.ಪ.
ಜನಪತಿ ದಶರಥನುದರದಿ ಜನಿಸಿದವನಿತೆ ಅಹಲ್ಯೆಯ ತಾನುದ್ಧರಿಸಿದಘನ ಶಂಕರ ಧನುವ ಭಂಗಿಸಿದಜನಕ ಸುತೆಯ ವರಿಸಿದ ಶ್ರೀರಾಮನ ೧
ತಾಯಿ ಕೈಕೇಯಿಯ ಮಾತು ನಡೆಸಿದನೋಯದೆ ವನವನು ಸತಿಸಹ ಸೇರಿದಮಾಯಾಮೃಗದಾಶೆಗೆ ಸತಿಯನಗಲಿದರಾಯ ಲಕ್ಷ್ಮಣನಣ್ಣ ಶ್ರೀರಾಮನ ೨
ದಂಡಕದೊಳು ಸತಿಯನು ಶೋಧಿಸಿದಚಂಡ ಹನುಮಗೆ ತಾ ದೊರೆಯಾದಪುಂಡ ಜಲಧಿಯ ದಾಟಿಸಿದಹೆಂಡತಿ ಇರವನು ತಿಳಿದ ಶ್ರೀರಾಮನ ೩
ಜಲಧಿಗೆ ಸೇತುವೆ ನಿಂತು ಬಿಗಿಸಿದಖಲ ರಾವಣನ ರಣದೊಳು ಕೆಡಹಿದಒಲಿದು ವಿಭೀಷಣನನು ತಾ ಪೊರೆದನೆಲದೊಳು ಸುಖ ಬೀರಿದ ಶ್ರೀರಾಮನ ೪
ಧರುಮವ ನೆಲಸಲು ದುಷ್ಟರ ತರಿದಾ ಧರೆಯೊಳು ಶಿಷ್ಟರ ಪೊರೆಯಲು ಬಯಸಿದಸಿರಿಪತಿ ಗದುಗಿನ ನರನಾಗವತರಿಸಿದ ಶ್ರೀ ರಾಮ ೫

೩೭೯
ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ ಪ
ತುಂಟ ಕಾಮನು ಕೇವಲೆಂಟು ವರ್ಷದ ಬಾಲಗಂಟಿದ್ದು ಹ್ಯಾಗೆಯದ ಗಂಟೊಡೆಯದ ಮುನ್ನ ೧
ಜಾರನೆಂದು ಕಡು ಶಿಶುಪಾಲನುದೂರಲಿಲ್ಲೆಂಬುದನಾಹದನಾ ಯಾರು ಅರಿಯದೆ ಘನಾ ೨
ಪಾವನ ಪರಮಾತ್ಮಾ ಜೀವರೇಕಾಗುವ ಭಾವದ ಮರ್ಮವನಾತಾವರಿಯದಾ ಠೀವಿಯಲಿ ಕುಜನಾ ೩
ಅತಿಶಯೋಕ್ತಿಯು ಮತ್ತು ಉತುಪ್ರೇಕ್ಷಾಲಂಕಾರಮತಿ ಕೊಟ್ಟ ಕಾವ್ಯವನಾ ಅರ್ಥವನಾ ಮಥಿಸದೆ ಚೆನ್ನಾ೪
ಸದ್ಧರ್ಮವನು ಬೀರಿ ಉದ್ಧರಿಸಲು ಬಂದಸಿದ್ಧ ಗದುಗಿನ ಪದ್ದುಮನಯನೇ ೫

೩೯೪
ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ
ಹರಿಯನ್ನು ನಿನ್ನದೆ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ.
ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು ೧
ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ ೨
ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ ೩
ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ ೪

೩೮೦
ಹುಡುಕತಲಿಹೆನವನಾ ಮಾಧವನಾ ಪ
ಹಿಡಿಯುತ ಭಕುತಿಯ ಸೊಡರನು ಕರದೊಳುಕಡುಗತ್ತಲೆಯೊಳು ಕಡೆಗಾಣದೆನಾ ೧
ಸಿದ್ಧವೇದದೊಳು ಕದ್ದಡಗಿದನಾಬುದ್ಧಿಯ ತಟ ಗಡ ನೆದ್ದಿ ಕದಡಿನಾ ೨
ಜಗ ತುಂಬಿಹನೆಂದು ನಿಗಮವು ಸಾರಲುಜಗದೊಳಗೆಲ್ಲಾ ಖಗವಾಹನನ ೩
ಜ್ಞಾನಿಗಳಿಗೆ ತಾ ಕಾಂಬನು ಎಂಬರುಧೇನಿಸುತಲಿ ಸಾಮಾನ್ಯನಲ್ಲನ ೪
ಎದೆಯ ಮರೆಯಲಿ ಹುದುಗಿ ಮೆರೆವನಾಗದುಗಿನ ನನ್ನ ೫

ಇಟ್ಟಂತೆ ಇರುವೆನೊ ಹರಿಯೇ
(ಊ) ಆತ್ಮನಿವೇದನೆ
೪೦೫
ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ
ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ ೧
ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ ೨
ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ಸಾಕು ಬಿಡಿಸಯ್ಯ ನರಜನ್ಮದ ಗಂಟು ೩

ಹಾಡಿನ ಹೆಸರು :ಇಟ್ಟಂತೆ ಇರುವೆನೊ ಹರಿಯೇ
ಹಾಡಿದವರ ಹೆಸರು :ರಮಾಕಾಂತ್ ಆರ್. ಎಸ್.
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಎಂಥ ಧನ್ಯಳೇ ಯಶೋದೆ
(ಈ) ದೇವತಾ ಸ್ತುತಿ
೩೮೭
ಎಂಥ ಧನ್ಯಳೇ ಯಶೋದೆಎಂಥ ಧನ್ಯಳೇ ಪ
ಎಂಥ ಧನ್ಯಳಮ್ಮ ನೀನುಎಂಥ ಪುಣ್ಯವಮ್ಮ ನಿನ್ನದುಕಂತುಪಿತನು ಕುವರನಾಗಿಸಂತೋಷವ ಪಡಿಸಿದನು ೧
ಕಷ್ಟಪಟ್ಟು ಮುನಿಗಳೆಲ್ಲಎಷ್ಟು ತಪವ ಮಾಡಿದರುಇಷ್ಟು ಪುಣ್ಯ ಪಡೆಯಲಿಲ್ಲಸೃಷ್ಟಿಯೊಳಗೆ ಸ್ಪಷ್ಟವಿಹುದು ೨
ಒಡಲೊಳಗೆ ಹೊರೆಯಲಿಲ್ಲಪಡೆಯಲಿಲ್ಲ ಅವನ ಪರರಒಡಲೊಳ್ಹುಟ್ಟಿ ಬಂದು ನಿನ್ನಹುಡುಗನಾಗಿ ಮೆರೆದ ನಮ್ಮ ೩
ಇಡಿಯ ಜಗವನುದರದಲಿಹಿಡಿದು ಬಾಲನಾಗಿ ಗದುಗಿನೊಡೆಯ ತೊಡೆಯ ಮೇಲೆ ಆಡಿದನು ೪
ಹಾಡಿನ ಹೆಸರು :ಎಂಥ ಧನ್ಯಳೇ ಯಶೋದೆ
ಹಾಡಿದವರ ಹೆಸರು :ಗೀತಾ ಬಿ. ಆರ್.
ರಾಗ :ಜೋಗ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

ಎಂದು ಕಾಂಬುವೆ ನಿನ್ನ
೩೩೬
ಎಂದು ಕಾಂಬುವೆ ನಿನ್ನ ಚರಣ ನಾರಾಯಣತಂದು ತೋರಯ್ಯ ನಾ ಬಂದೆನು ಶರಣ ಪ
ಇಂದ್ರ ಸುರಮುನಿವಂದ್ಯ ಚರಣಾ _ನಂದ ಗುಣ ಸಂಪೂರಣಒಂದೆ ಮನದಲಿ ಮಾಳ್ಪೆ ಸ್ಮರಣಾಬಂಧು ತೋರೈ ನಿನ್ನ ಚರಣಾ ಅ.ಪ.
ಚಾರು ಲಕ್ಷ್ಮೀಯು ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ ೧
ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ ೨
ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ೩

ಹಾಡಿನ ಹೆಸರು : ಎಂದು ಕಾಂಬುವೆ ನಿನ್ನ
ಸಂಗೀತ ನಿರ್ದೇಶಕರು :ರಮಾ ಪಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏಕೆ ಬೇಕಾಗಿತ್ತೊ ನಿನಗೆ
೩೩೯
ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ
ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ ೧
ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ ೨
ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ ೩

ಹಾಡಿನ ಹೆಸರು :ಏಕೆ ಬೇಕಾಗಿತ್ತೊ ನಿನಗೆ
ಹಾಡಿದವರ ಹೆಸರು :ಮೋಹನ್ ಜೆ.
ರಾಗ :ಕೀರವಾಣಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನೆಂದು ವರಿಸಿದೆಯೇ ಹರಿಯ ಲಕುಮಿ ತಾಯಿ
(ಇ) ಲಕ್ಷ್ಮೀದೇವಿ
೩೮೧
ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ
ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ.
ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ ೧
ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ ೨
ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ನ ೩

ಹಾಡಿನ ಹೆಸರು :ಏನೆಂದು ವರಿಸಿದೆಯೇ ಹರಿಯ ಲಕುಮಿ ತಾಯಿ
ಹಾಡಿದವರ ಹೆಸರು :*
ರಾಗ :ಶ್ರೀರಾಗ
ತಾಳ :ತ್ರಿಶ್ರ ಆದಿ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ
ಸ್ಟುಡಿಯೋ : ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏಳು ನಾರಾಯಣ ಏಳು
೩೪೨
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ
ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ ೧
ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ೨
ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು ೩
ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು ೪
ಸಾವಿರದ ಕಿವಿಯಂತೆ ಸಾವಿರದ ತಲೆಯಂತೆಸಾವಿರದ ಪಾದುಗಳು ನಿನಗಂತೆ ಕೇಳುಭಾವುಕರು ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ ೫
ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ ೬
ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ೭

ಹಾಡಿನ ಹೆಸರು :ಏಳು ನಾರಾಯಣ ಏಳು
ಹಾಡಿದವರ ಹೆಸರು :ಉದಯ್ ಅಂಕೋಲ
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕನಕಾ ನಿನ್ನ ಕೆಣಕಿ ನಾನು
೪೦೪
ಕನಕದಾಸರು
ಕನಕಾ ನಿನ್ನ ಕೆಣಕಿ ನಾನು ತಿಣಕಲಾರೆನೊ ಕ್ಷಣಕು ಕ್ಷಣಕು ತಿಣಿಕಿ ತಿಣಿಕಿ ದಣಕೊಲಾರೆನೊಅಡಿಗಡಿಗೊಗೆದ ಮುಂಡಿಗೆಯನು ಒಡಿಯಲಾರೆನೊಒಡೆಯಲು ದುಡುಕಿ ದುಡುಕಿ ದಣಿವನು ತಡಕೊಲಾರೆನೊ ೧
ಒಡೆಯ ದೇವನೆಂದಟ್ಟಿದ ಕುನಕವ ಮುಟ್ಟಿಲಾರೆನೋ ಮಡಿಯ ದೇವರೆಂದೊದಗಿಸಿದುರಗನ ಬಳಿಯ ಸಾರೆನೋ
ಪಾತ್ರೆಯ ಒಳ ಮೈಯ್ಯ ಮಾತ್ರ ತೊಳೆದುದು ತಿಳಿಯಲಾರೆನೋಗೋತ್ರವ ಕೇಳಿ ಸುಸೂತ್ರದೊಳುತ್ತರ ಪಡೆಯಲಾರೆನೋ ೨
ಅದಕೊ ಇದಕೊ ಯಾವುದಕೊ ನಾ ಕೆದಕಲಾರೆನೊಗದುಗಿನ ವೀರನಾರಾಣನ ಮರೆಯಲಾರೆನೊ ೩

ಹಾಡಿನ ಹೆಸರು :ಕನಕಾ ನಿನ್ನ ಕೆಣಕಿ ನಾನು
ಹಾಡಿದವರ ಹೆಸರು :ಶಂಕರ ಶಾನುಭಾಗ್
ಸಂಗೀತ ನಿರ್ದೇಶಕರು : ರಮಾ ಪಿ.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕಮಲಭವನ ಪ್ರಿಯ ರಾಣಿ
೩೯೬
ಸರಸ್ವತಿ
ಕಮಲಭವನ ಪ್ರಿಯ ರಾಣಿ ಪ
ವಿಮಲಮತಿಯ ನೀ ಕರುಣಿಸು ಜಾಣೆ ಅ.ಪ.
ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ ೧
ವಿವಿಧ ಭಾಷೆಗಳೊಡತಿಯಾಗಿ ಬಲುವಿವಿಧ ಬಣ್ಣಗಳ ಕಣ್ಣೊಳು ಹೊಳೆಯಲುಪವಣಿಸಿ ಗರಿಗಳ ಪಸರಿಸಿ ಕುಣಿಯಲುನವಿಲನೇರುವ ಪನ್ನಗ ವೇಣಿ ೨
ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನನ ಸೊಸೆಯೆ ಸುವಾಣಿ ೩

ಹಾಡಿನ ಹೆಸರು :ಕಮಲಭವನ ಪ್ರಿಯ ರಾಣಿ
ಹಾಡಿದವರ ಹೆಸರು :ರಿತೀಶ ಪದ್ಮನಾಭ
ರಾಗ :ದೇಶ್
ತಾಳ :ತ್ರಿಶ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

ಕಾಲಬೆರಳು ಬಾಯೊಳೇತಕೊ
೩೪೭
ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ
ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ.
ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು ೧
ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು ೨
ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು ೩
ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ನೆದಯವ ತೋರಿ ಹೇಳು ಬೇಡುತಿಹೆನು ೪

ಹಾಡಿನ ಹೆಸರು :ಕಾಲಬೆರಳು ಬಾಯೊಳೇತಕೊ
ಹಾಡಿದವರ ಹೆಸರು :ನಾಗಚಂದ್ರಿಕ
ರಾಗ :ಮಿಶ್ರ ಪೀಲು
ತಾಳ :ತ್ರಿಶ್ರನಡೆ ಏಕ ತಾಳ
ಶೈಲಿ :ಚತ್ರುಶ್ರಏಕ
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಜಯ ಮಂಗಳಂ ನಿತ್ಯ ಶುಭ
೪೦೨
ಕುಮಾರವ್ಯಾಸ
ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ
ಮಂಗಳಂ ನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ ೧
ಶ್ರೀ ವರನ ವರದಿಂದ ಧೀರವನಶ್ವತ್ಥಾಮದೆವನಾಶೀರ್ವಾದದಿಂದೆ ಸ್ಫೂರ್ತಿಯ ತಾಳ್ದುಭಾವಪೂರಿತ ಪದದ ಪ್ರೌಢಿಯಲಿ ಕನ್ನಡದೆಓವಿ ಭಾರತ ಬರೆದ ಕವಿ ಪುಂಗವಂಗೆ ೨
ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ ೩

ಹಾಡಿನ ಹೆಸರು :ಜಯ ಮಂಗಳಂ ನಿತ್ಯ ಶುಭ
ಹಾಡಿದವರ ಹೆಸರು :ಸವಿತಾ
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ವಿಷನ್ ಟೆಕ್ನಾಲಜಿ, ಬೆಂಗಳೂರು

ನಿರ್ಗಮನ

ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ
೩೮೪
ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ ಪಾದ ನೋಡಿದೆ ಪ
ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ.
ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ ೧
ಕರದ ಕಂಕಣ ಕೊರಳ ಹಾರವುವರ ಕಿರೀಟವು ಶಿರದೊಳಿಂದಿರೆಕರಣ ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ ೨
ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ ೩
ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ ೪
ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನನ ಚಂದಿರೆ ೫

ಹಾಡಿನ ಹೆಸರು :ಧನ್ಯನಾದೆ ಧನ್ಯನಾದೆ ಘನ್ನ ಲಕುಮಿಯ
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನನ್ನದೇನಿದೆಯೊ ದೇವ ನಿನ್ನದೆ
೩೫೨
ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ
ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ.
ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ ೧
ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ ೨
ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ನು ನೀನೆ ೩

ಹಾಡಿನ ಹೆಸರು :ನನ್ನದೇನಿದೆಯೊ ದೇವ ನಿನ್ನದೆ
ಹಾಡಿದವರ ಹೆಸರು :ಸುಚೇತನ್ ಆರ್
ಸಂಗೀತ ನಿರ್ದೇಶಕರು :ರಮಾ ಪಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನೀನಲ್ಲದಿನ್ನಾರು ಸಲಹುವರು
೩೫೭
ನೀನಲ್ಲದಿನ್ನಾರು ಸಲಹುವರು ಹರಿಯೆ ಪ
ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ.
ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ ೧
ಮಡದಿಯನು ಗಜವರನ ಮೊಸಳೆಯಿಂ ಸಲುಹಿದರೆಒಡಹುಟ್ಟಿದರ್ಜುನನ ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ ೨
ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ನೆ ನೀನು ೩

ಹಾಡಿನ ಹೆಸರು :ನೀನಲ್ಲದಿನ್ನಾರು ಸಲಹುವರು
ಹಾಡಿದವರ ಹೆಸರು :ನಾಗರಾಜರಾವ್ ಹವಾಲ್ದಾರ್
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ವಿಷನ್ ಟೆಕ್ನಾಲಜಿ, ಬೆಂಗಳೂರು

ನಿರ್ಗಮನ

ನೀನೊಲಿದರೇನು ಏನಿಲ್ಲ
೩೫೮
ನೀನೊಲಿದರೇನು ಏನಿಲ್ಲ ಹರಿಯೆ ಪ
ನೀನೊಲಿಯದಿರೆ ಮಾತ್ರ ಏನೇನು ಇಲ್ಲ ಅ.ಪ.
ಸಾಧನವು ಸಂಪತ್ತು ಸಾಧಿಸದೆ ದೊರೆಯುವುದುಪಾದಗಳ ಸೇವೆ ತಾ ತಾನಾಗಿ ಲಭಿಸುವುದುಖೇದ ವ್ಯಸನಗಳೆಲ್ಲ ಬಾಧಿಸದಲೋಡುವುದುಸಾಧು ಸಂಗವು ಭಕ್ತಿ ಬೋಧಿಸದೆ ಬರುವವು ೧
ವಾಸುದೇವನೆ ವಿಪುಲ ಐಸಿರಿಯನೀಡುತಲೆಬೇಸರದೆ ನಿನ್ನವರ ಲೇಸಾಗಿ ಸಲಹುವೆಯೊದಾಸ ಭಕುತರು ಶೆರಗ ಹಾನಿ ಬೇಡಿದರೇನುಶೇಷಶಯನನೆ ನಿನ್ನ ಈಸು ಮಹಿಮೆಯ ತಿಳಿಯೆ ೨
ಮನಸು ನಿನ್ನಡಿಗಳಲಿ ಕೊನೆತನಕ ಇರಿಸುವದುಘನಕೆಲಸ ನಿನದಯ್ಯ ಮನುಜರಿಗೆ ಸಾಧ್ಯವೇತನುಮನಗಳಿವು ನಿನ್ನವೆ ನನದೆಂಬುದೇನುಂಟುಧಣಿಯ ಗದುಗಿನ ನೆ ಒಲಿಯೋ ೩

ಹಾಡಿನ ಹೆಸರು :ನೀನೊಲಿದರೇನು ಏನಿಲ್ಲ
ಹಾಡಿದವರ ಹೆಸರು :ಮಾರುತಿ ಪ್ರಸಾದ್
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು
ನಿರ್ಗಮನ

ಬುಗುರಿ ಆಡೋ ತಮ್ಮ
೪೧೧
ಬುಗುರಿ ಆಡೋ ತಮ್ಮ ಬುಗುರಿ ಆಡೊ ಪ
ಬಗೆ ಬಗೆ ಜನುಮದಿ ತಿರುಗಿ ತಿರುಗಿ ಬಂದೊದಗತನದನುಭವ ಪರಿಕಿಸಿ ನೋಡೊ ಅ.ಪ.
ತನುವೆಂಬುದೆ ಕೊರಡಿನ ತುಂಡುದಿನದ ಕರ್ಮವೆ ಕೊನೇರು ದುಂಡುಮನವೆಂಬುವ ಮೊಳೆಯನು ಚುಚ್ಚಿಕೊಂಡುಘನ ಹರುಷದಿ ಕರದಲಿ ಕೊಂಡು ೧
ಭವವೆಂಬುದೆ ನಿನ್ನ ಜಾಳಿಗೆ ನೋಡೋತವಕದಿ ಬಿಡದಲೆ ಬಿಗಿಗಿಸುತ್ತ್ಯಾಡೋಸವಿಯನುಂಡು ನೀ ಹರಿಯನು ಬೇಡೊಜವದಲಿ ಝಾಡಿಸಿ ಭರದಿ ಬೀಸಾಡೊ ೨
ಧರೆಯ ಗದುಗಿನ ನಚರಣದಿ ಮೊಳೆಯೂರಿ ತಿರುಗುತಲಾಡೊಕರಣಗಳಳೆದು ಏಕ ಚಿತ್ತದಿಸ್ಮರಿಸುತ ನಿಂತು ನಿದ್ದೆಮಾಡೊ ೩

ಹಾಡಿನ ಹೆಸರು :ಬುಗುರಿ ಆಡೋ ತಮ್ಮ
ಹಾಡಿದವರ ಹೆಸರು : ಕವಿತಾ ಕಾಮತ್
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮನೆಗೆ ಬಾರೋ ಕೃಷ್ಣ
೩೬೬
ಮನೆಗೆ ಬಾರೋ ಕೃಷ್ಣ ಬೇಗನೆ ಪ
ವನಿತೆಯರಕೋ ಓಡಿ ಬರುತಿಹರು ಅ.ಪ.
ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ ೧
ಬೆಣ್ಣೆಯಾನೆ ನೀಡಿ ಕರೆವರೊ ಕಣ್ಣು ತಪ್ಪಿಸ್ಯಾಡಿಚಿನ್ನ ನಿನ್ನನಲ್ಲೆಲ್ಲೆಳದಾಡಿಹಣ್ಣು ಮಾಡುವರೊ ಘಾಸಿ ಮಾಡಿ ೨
ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ ೩

ಹಾಡಿನ ಹೆಸರು :ಮನೆಗೆ ಬಾರೋ ಕೃಷ್ಣ
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಯಾದವಾ ಮಾಧವಾ ಕರುಣಿಸು
೩೬೮
ಯಾದವಾ ಮಾಧವಾ ಕರುಣಿಸು ಪ
ಮೋದವನೀವ ದೇವ ಅ.ಪ .
ತುಂಬಿದ ಸಭೆಯೊಳಾ ತರುಣಿಯಾ ಪೊರೆದೆಯಾ ನಂಬಿದ ಶರಣರ ಕಾವಾ ೧
ಕರೆಯದೆ ವಿದುರನಾ ಮನೆಗೆ ನೀ ಬಂದೆಯಾನಿರುತದಿ ಭಕುತರ ಜೀವಾ ೨
ಪ್ರಾರ್ಥಿಸೆ ಗದುಗಿನ ವೀರನಾರಾಯಣಾಪಾರ್ಥನ ಬಂಡಿಯ ಬೋವಾ ೩

ಹಾಡಿನ ಹೆಸರು :ಯಾದವಾ ಮಾಧವಾ ಕರುಣಿಸು
ಹಾಡಿದವರ ಹೆಸರು : ದಿವ್ಯಾ ರಾಘವನ್
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ
೩೭೬
ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ ಪ
ಪಕ್ಕದೊಳೆಲ್ಲೆಲ್ಲ್ಯೂ ಹರಿ ತುಂಬಿಹನಕ್ಕ ಅ.ಪ.
ಅಡಗಲು ಎಲ್ಲೆಲ್ಲ್ಯೂ ಸ್ಥಳವಿಲ್ಲವಕ್ಕಜಡ ಜೀವಗಳೊಳು ತೋರುವನಕ್ಕ ೧
ಸಕಲರಿಗಿವನು ಕಾಣನು ತಕ್ಕಭಕುತರಿಗಷ್ಟೇ ಕಾಣುವನಕ್ಕ ೨
ಶಕ್ತಿಯುಕ್ತಿಯಿಂದರಸಲು ಸಿಗನಕ್ಕಭಕ್ತಿಯೊಳರಸಲು ಇಲ್ಲೇ ಸಿಗುವನಕ್ಕ ೩
ಇಲ್ಲೆ ಗದುಗಿನಲ್ಲೆ ನಿಂದಿಹನಕ್ಕಬಲ್ಲ ನಕ್ಕ ೪

ಹಾಡಿನ ಹೆಸರು :ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ
ಹಾಡಿದವರ ಹೆಸರು :ಶ್ರೀದೇವಿ
ಸಂಗೀತ ನಿರ್ದೇಶಕರು :ರಮಾ ಪಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ