Categories
Ebook ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಕೃಷಿ ಮತ್ತು ನೀರಾವರಿ – ಅಧ್ಯಾಯ 4

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಕೃಷಿ ಮತ್ತು ನೀರಾವರಿ ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 44

Download  View

ತುಮಕೂರು ಜಿಲ್ಲೆಯನ್ನು ಭೌಗೋಳಿಕ ಸ್ಥಿತಿಗತಿಯನ್ನನುಸರಿಸಿ ಬಯಲು ಪ್ರದೇಶದಿಂದ ಕೂಡಿದ್ದಾಗಿದೆಯೆಂದು ಪರಿಗಣಿಸಬಹುದು. ಇದು ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲೊಂದಾಗಿದೆ. ಜಿಲ್ಲೆಯ ದಕ್ಷಿಣ ಭಾಗದಲ್ಲಿ ಉತ್ತರ ದಕ್ಷಿಣವಾಗಿ ಬೆಟ್ಟದ ಸಾಲು ಹಬ್ಬಿರುತ್ತದೆ. ಕುಣಿಗಲ್ ತಾಲೂಕಿನ ಹುತ್ರಿದುರ್ಗ ಮತ್ತು ಹುಲಿಯೂರು ದುರ್ಗದ ಬೆಟ್ಟಗಳು ಮುಖ್ಯವಾದವುಗಳು. ಇವುಗಳಿಗೆ ಸಮಾನಾಂತರವಾಗಿ ಉತ್ತರ ಭಾಗದಲ್ಲಿ ಮತ್ತೊಂದು ಗುಡ್ಡದ ಸಾಲು ಹಬ್ಬಿದ್ದು, ಇವುಗಳಲ್ಲಿ ಪಾವಗಡ ತಾಲೂಕಿನ ಕಾಯನದುರ್ಗ, ನಿಡಗಲ್‍ದುರ್ಗಗಳು, ಮಧುಗಿರಿ ತಾಲೂಕಿನ ಬೆಟ್ಟಗಳು ಮತ್ತು ಮಿಡಿಗೇಶಿದುರ್ಗ, ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ, ತುಮಕೂರಿನ ದೇವರಾಯನದುರ್ಗ ಪ್ರಮುಖವಾದವುಗಳು.

ಸಂಬಂಧಿತ ಪುಸ್ತಕಗಳು