Categories
Ebook Scanned Book ಅಕಾಡೆಮಿ ಪುಸ್ತಕಗಳು  ಇ-ಪಬ್ ಕರ್ನಾಟಕ ನಾಟಕ ಅಕಾಡೆಮಿ

ಗರುಡ ಶ್ರೀಪಾದರಾಯರು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಗರುಡ ಶ್ರೀಪಾದರಾಯರು ಶ್ಯಾಮಸುಂದರ ಬಿದರಕುಂದಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 64

Download  View

Ebook | Epub  | Text

 ರಂಗನಟ ಗರುಡ ಶ್ರೀಪಾದರಾಯರ ಜೀವನ-ಸಾಧನೆಯ ಕುರಿತು ಬರೆಯುವುದೆಂದರೆ, ಅವರ ತಂದೆ, ‘ನಾಟ್ಯಾಲಂಕಾರ’ ‘ಅಭಿನಯ ಕೇಸರಿ’ ಗರುಡ ಸದಾಶಿವರಾಯರ ನಾಟ್ಯ ಪರಂಪರೆಯ ಜೀವಂತ ಕುರುಹೊಂದನ್ನು ಇಂದಿಗೆ ಪರಿಚಯಿಸಿದಂತೆ. 20ನೆಯ ಶತಮಾನದ ಕರ್ನಾಟಕ ರಂಗಭೂಮಿಯನ್ನು ತಮ್ಮ ವಿಶಿಷ್ಟ ಪ್ರತಿಭೆ ಮತ್ತು ಅಪ್ರತಿಮ ಕಲಾತ್ಮಕ ಪರಿಶ್ರಮಗಳಿಂದ ಬೆಳಗಿದ ಹಲವು ನಾಟ್ಯದೀಪಗಳಲ್ಲಿ ಗರುಡ ಸದಾಶಿವರಾಯರದು ಒಂದು ಉಜ್ವಲ ಬೆಳಕು.