Categories
asia

ಟರ್ಕಿ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಯೂರೋಪ್ ಮತ್ತು ಏಷಿಯಾ ಎರಡೂ ಖಂಡಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಏಷ್ಯಾದ ದೇಶ ರಿಪಬ್ಲಿಕ್ ಆಫ್ ಟರ್ಕಿ.ಯೂರೋಪಿನ ಗ್ರೀಸ್ ಮತ್ತು ಬಲ್ಗೇರಿಯ ದೇಶಗಳ ಗಡಿಗೆ ಹೊಂದಿಕೊಂಡಿದ್ದರೆ, ಏಷ್ಯಾ ಭಾಗದಲ್ಲಿ ಇರಾನ್, ಇರಾಕ್, ಆರ್ಮೇನಿಯ, ಸಿರಿಯ ಮತ್ತು ಜಾರ್ಜಿಯಾಗಳಿಗೆ ಗಡಿಗಳಿಗೆ ಅಂಟಿಕೊಂಡಿದೆ.ಉತ್ತರದಲ್ಲಿ ಕಪ್ಪುಸಮುದ್ರವಿದ್ದು, ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಹೀಗಾಗಿ ಪದೇ ಪದೇ ಭೂಕಂಪಕ್ಕೊಳಗಾಗುವ ದೇಶ ಇದು. ಸಕ್ರಿಯ ಜ್ವಾಲಾಮುಖಿಗಳೂ ಇವೆ.

ಈ ದೇಶದ ನೆಲದ ವಿಸ್ತೀರ್ಣ 7,83,562 ಚ.ಕಿ. ರಾಜಧಾನಿ ಅಂಕಾರ. ಇಲ್ಲಿನ ಕರೆನ್ಸಿ ಟರ್ಕಿಶ್ ಲಿರಾ. (TRY). ಮತ್ತೊಂದು ದೊಡ್ಡ ನಗರ ಇಸ್ತಾನ್ ಬುಲ್. ಇಲ್ಲಿರುವ ಪ್ರಮುಖ ಜನಾಂಗಗಳೆಂದರೆ ಟರ್ಕಿಗಳು ಮತ್ತು ಖುರ್ದಿಶ್ ಗಳು. ಅಧಿಕೃತ ಭಾಷೆ ಟರ್ಕಿ.

ಏಷಿಯಾ ಭಾಗದಲ್ಲಿ ಬರುವ ಅನಟೋಲಿಯ ಪರ್ಯಾಯ ದ್ವೀಪ ಎತ್ತರದ ಪರ್ವತ ಸಾಲು ಮತ್ತು ಆಳವಾದ ಕಣಿವೆಗಳನ್ನು ಹೊಂದಿದೆ. ಪೂರ್ವದಲ್ಲಿ ಎತ್ತರವಾದ ಶಿಖರಗಳ ಅರಾರತ್ ಪರ್ವತ ಶ್ರೇಣಿಯನ್ನು ಹೊಂದಿದೆ. ಒಳನಾಡಿನ ಮಧ್ಯಪ್ರಸ್ಥಭೂಮಿ ಅರೆ ಶುಷ್ಕ ವಾತಾವರಣ ಹೊಂದಿದ್ದು, ಪೂರ್ವದ ಪರ್ವತ ಪ್ರದೇಶಗಳಲ್ಲಿ ಚಳಿಗಾಲದ ಹಲವಾರು ತಿಂಗಳುಗಳ ಕಾಲ ಹಿಮ ಬೀಳುತ್ತದೆ.ಅನಟೋಲಿಯ ಅಥವಾ ಏಷ್ಯಾ ಮೈನರ್ ಪ್ರದೇಶದಲ್ಲಿ ಶಿಲಾಯುಗದಿಂದಲೂ ಮಾನವ ಅಲ್ಲಿ ವಾಸವಾಗಿದ್ದ ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ. ಕ್ರಿ.ಪೂ.2000ದಿಂ 1200ರವರೆಗೆ ಅಲ್ಲಿ ಹಿಟ್ಟೈಟ್ ಜನಗಳು ವಾಸವಾಗಿದ್ದರು. ನಂತರ ಫ್ರಿಜಿಯಾ ಮತ್ತು ಲಿಡಿಯಾ ದೇಶಗಳು ಅಸ್ತಿತ್ವಕ್ಕೆ ಬಂದವು. ಅವು ಬಹುಕಾಲ ಉಳಿಯದೆ ಅಖಿಮಿನಿಡ್ ಪರ್ಷಿಯನ್ ಸಾಮ್ರಾಜ್ಯದಲ್ಲಿ ಸೇರಿಹೋದವು.

ಪರ್ಷಿಯನ್ನರ ಕಾಲದಲ್ಲಿ ಹಲವು ಬಂದರು ನಗರಗಳನ್ನು ನಿರ್ಮಾಣ ಮಾಡಲಾಯಿತು. ಅನಟೋಲಿಯವನ್ನು ಹಲವಾರು ಸತ್ರಪಿಗಳನ್ನಾಗಿ ವಿಂಗಡಿಸಿ, ಅವುಗಳ ಆಡಳಿತಕ್ಕೆ ಸತ್ರಪಗಳನ್ನು (ಗವರ್ನರ್) ನೇಮಿಸಲಾಯಿತು. ಐದನೇ ಶತಮಾನದಲ್ಲಿ ನಡೆದ ಗ್ರೀಕೋ ಪರ್ಷಿಯನ್ ಯುದ್ಧಗಳು ಯೂರೋಪ್ ಚರಿತ್ರೆಗೆ ಭಾರಿ ತಿರುವು ನೀಡಿತು.ಪರ್ಷಿಯಾದ ದೊರೆ ಮೂರನೇ ಡೇರಿಯಸ್ ಮೇಲೆ ವಿಜಯ ಸಾಧಿಸಿ, ಅನಟೋಲಿಯ ಮೇಲೆ, ಅಲೆಕ್ಸಾಂಡರ್ ದಿ ಗ್ರೇಟ್ ಸಂಪೂರ್ಣ ಹಿಡಿತ ಸಾಧಿಸಿದ. ಅಲೆಕ್ಸಾಂಡರ್ ನಿಧನದ ನಂತರ ಅನಟೋಲಿಯ, ರೋಮ್ ನ ಅಧಿಪತ್ಯಕ್ಕೆ ಸಿಲುಕಿತು.

ನಾಲ್ಕನೇ ಶತಮಾನದಲ್ಲಿ ಕಾನ್ಸ್ ಸ್ಟಾಂಟಿನ್ ದಿ ಗ್ರೇಟ್, ಕಾನ್ ಸ್ಟಾಂಟಿನೋಪಲ್ ನಗರವನ್ನು ಆಡಳಿತಾತ್ಮಕ ಕೇಂದ್ರವನ್ನಾಗಿ ಮಾಡಿಕೊಂಡ. ನಂತರ ಬೈಜಂಟೈನರು, ಸೆಲ್ಜುಕರು ಆಡಳಿತ ನಡೆಸಿದ್ದಾರೆ. 12 ಮತ್ತು 13ನೇ ಶತಮಾನದಲ್ಲಿ ಅನಟೋಲಿಯ ಪ್ರಕ್ಷುಬ್ಧ ಸ್ಥಿತಿಯಲ್ಲಿತ್ತು. ಟರ್ಕಿ ಬುಡಕಟ್ಟು ಜನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಬೈಜಂಟೈನರು ತಮ್ಮ ಆಡಳಿತ ಅಲ್ಲಿ ಮುಂದುವರಿಸಲು ಭಾರಿ ಪ್ರಯತ್ನ ನಡೆಸಿದರು.
1285ರಲ್ಲಿ ಅಂಕಾರ ಮತ್ತು ಕಾನ್ ಸ್ಟಾಂಟಿನೋಪಲ್ ನಡುವೆ ಒಂದಷ್ಟು ಪ್ರದೇಶವನ್ನು ಟರ್ಕಿ ಬುಡಕಟ್ಟು ಜನಾಂಗದ ರಾಜ ಗೆದ್ದು, ತನ್ನ ರಾಜ್ಯ ಸ್ಥಾಪಿಸಿದ. ನಂತರ ಆತನ ಮಗ ಒಸ್ಮಾನ್ ಅಧಿಕಾರದ ಚುಕ್ಕಾಣಿ ಹಿಡಿದ. ಟರ್ಕಿ ಭಾಷೆಯಲ್ಲಿ ಒಸ್ಮಾನ್ ನನ್ನು ಓತ್ಮಾನ್ ಎನ್ನುತ್ತಾರೆ. ಆತನ ಸಾಧನೆಗಳಿಂದಲೇ ಅದು ಆಟ್ಟೋಮನ್ ಸಾಮ್ರಾಜ್ಯ ಎಂದು ಹೆಸರಾಗಿದ್ದು.ಬೈಜಂಟೈನ್ ಕೋಟೆಯನ್ನು ಗೆಲ್ಲುವುದು ಆಟ್ಟೋಮನ್ ಟರ್ಕಿಗಳಿಗೆ ಕಷ್ಟವಾಗಿತ್ತು. ಹೀಗಾಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಲೂಟಿ ಮಾಡಲು ಆರಂಭಿಸಿದರು. ಕಡೆಗೆ ಬೈಜಂಟೈನ್ ಬಗ್ಗಿತು. ಮೊದಲ ಯಶಸ್ಸಾಗಿ ಬುರ್ಸಾ ನಗರ ಟರ್ಕಿಗಳ ಪಾಲಾಯಿತು. ನಂತರ ಬಾಲ್ಖನ್ಸ್ ಪ್ರದೇಶವನ್ನು ಗೆದ್ದರು. 1389ರಲ್ಲಿ ಸರ್ಬಿಯಾ, 1393ರಲ್ಲಿ ಬಲ್ಗೇರಿಯಾ ಆಟ್ಟೋಮನ್ ಸಾಮ್ರಾಜ್ಯದ ಪಾಲಾಯಿತು.

ಆಟ್ಟೋಮನ್ ಟರ್ಕರ ಯಶಸ್ಸು ನಿಧಾನವಾಗಿ ಮುಂದುವರಿದು, 1458-60ರಲ್ಲಿ ಅಥೆನ್ಸ್ ಮತ್ತು ಗ್ರೀಕ್ ಪರ್ಯಾಯ ದ್ವೀಪವೂ, ಅವರ ಆಡಳಿತಕ್ಕೆ ಒಳಪಟ್ಟಿತು. ವೆನ್ನಿಸ್ ಪಟ್ಟಣ, ಬೋಸ್ನಿಯಾಗಳನ್ನು ಗೆದ್ದು ಇಸ್ಲಾಮೀಕರಣ ಮಾಡುವಲ್ಲಿ ಅವರು ಸಾಕಷ್ಟು ಯಶಸ್ವಿಯಾದರು.ವಾಯುವ್ಯ ಗ್ರೀಕ್ ನಿಂದ ಮಧ್ಯ ಪ್ರಾಚ್ಯದ ವರೆಗೆ ಆಟ್ಟೋಮನ್ ಸಾಮ್ರಾಜ್ಯ ವಿಸ್ತಾರಗೊಂಡಿತ್ತು. ಗ್ರೀಕರಿಂದ ಹಳೇ ರೋಂ ರಾಜಧಾನಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡು, ಅದಕ್ಕೆ ಇಸ್ತಾನ್ ಬುಲ್ ಎಂದು ಹೆಸರಿಟ್ಟರು.

17ನೇ ಶತಮಾನದ ಹೊತ್ತಿಗೆ ಒಂದು ಕಡೆ ರಷ್ಯಾ, ಇನ್ನೊಂದು ಕಡೆ ಆಸ್ಟ್ರಿಯಾ, ಮತ್ತೊಂದು ಕಡೆ ಪರ್ಷಿಯಾ ಬಲವಾಗಿ ತಲೆ ಎತ್ತಿತ್ತು. ರಷ್ಯಾ ಜೊತೆ 17ನೇ ಶತಮಾನದ ಅಂತ್ಯದಲ್ಲೊಂದು ಮತ್ತು 18 ನೇ ಶತಮಾನದ ಆರಂಭದಲ್ಲಿ ಮತ್ತೊಂದು ಯುದ್ಧ ನಡೆಯಿತು. ಇವುಗಳಲ್ಲಿ ರಷ್ಯಾ ಯಶಸ್ಸನ್ನು ಸಾಧಿಸಿ, ಕ್ರಿಮಿಯಾ ಪರ್ಯಾಯ ದ್ವೀಪದ ಬಂದರುಗಳನ್ನು ವಶಪಡಿಸಿಕೊಂಡಿತು.1911ರಲ್ಲಿ ಇಟಲಿ ಪಡೆಗಳು, ಟರ್ಕಿಯ ಪ್ರಾಂತ್ಯವಾಗಿದ್ದ ಲಿಬಿಯಾವನ್ನು ಆಕ್ರಮಿಸಿಕೊಂಡು, ಬಾಲ್ಕನ್ ಪ್ರದೇಶದ ಗ್ರೀಸ್, ಸೆರ್ಬಿಯಾ, ಬಲ್ಗೇರಿಯಾ ದೇಶಗಳೂ ಆಟ್ಟೋಮನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದುಕೊಂಡವು. ಪ್ರಥಮ ವಿಶ್ವಸಮರದ ನಂತರ ವಿಶಾಲ ಟರ್ಕಿಯ ವಿಸ್ತೀರ್ಣವೂ ಕಿರಿದಾಯಿತು. ಆಟ್ಟೋಮನ್ ಸಾಮ್ರಾಜ್ಯದ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ಆ ಸಮಯದಲ್ಲಿ ಮುಸ್ತಫಾ ಕೆಮಾಲ್ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಕ್ರಾಂತಿಕಾರಿ ಚಳವಳಿ ನಡೆಯಿತು. ಇದರ ಪರಿಣಾಮವಾಗಿ ಅಂತಾರಾದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಹೀಗಾಗಿ ಮುಸ್ತಫಾ ಕೆಮಾಲ್ ಅವರನ್ನು ಅಲ್ಲಿನ ಜನತೆ ಅತಾತುರ್ಕ್ ಅಥವಾ ಟರ್ಕಿಯ ರಾಷ್ಟ್ರಪಿತ ಎಂದು ಗೌರವಿಸುತ್ತಾರೆ.2016 ಅಂದಾಜಿನಂತೆ ದೇಶದ ಜನಸಂಖ್ಯೆ 7.96,22,000 ರಷ್ಟಿದ್ದು, ಜನಸಾಂದ್ರತೆ 103.5 ಆಗಿದೆ. ರಾಜಧಾನಿ ಅಂಕಾರಾದ ಜನಸಂಖ್ಯೆ 47,50,000.ಟರ್ಕಿಯ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಕಳೆದ ಐದು ದೇಶಗಳಲ್ಲಿ ಭಾರಿ ಬದಲಾವಣೆಯನ್ನೇನು ಕಂಡಿಲ್ಲ. 2010ರಲ್ಲಿ 7,31,114 ಅಮೇರಿಕನ್ ಡಾಲರ್ ಇದ್ದ ಜಿಡಿಪಿ, 2014ರಲ್ಲಿ 7,98,414 ಅಮೇರಿಕನ್ ಡಾಲರ್ ನಷ್ಟಾಗಿತ್ತು.

2014ರಲ್ಲಿ ತಲಾ ಜಿಡಿಪಿ 10,299 ಅಮೇರಿಕನ್ ಡಾಲರ್ ನಷ್ಟಿದೆ.ಒಟ್ಟು ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ (ಜಿವಿಎ) ಶೇ.8, ಕೈಗಾರಿಕೆಯದು ಶೇ.27.1 ಮತ್ತು ಸೇವಾ ವಲಯದ್ದು 64.9ರಷ್ಟಿತ್ತು. ಒಟ್ಟು ಕಾರ್ಮಿಕ ಬಲದ ಶೇ.9.9ರಷ್ಟು ನಿರುದ್ಯೋಗ ಕಾಡುತ್ತಿತ್ತು. ಮಹಿಳಾ ಜನಸಂಖ್ಯೆಯ ಶೇ.30.4, ಪುರುಷರ ಪೈಕಿ ಶೇ. 71.5 ರಷ್ಟು ಕಾರ್ಮಿಕ ಬಲವಾಗಿದ್ದಾರೆ. ಅಂದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚಾಗಲು ಅವಕಾಶಗಳಿವೆ.

ಜರ್ಮನಿ, ಯುನೈಟೆಡ್ ಕಿಂಗ್ ಡಂ ಮತ್ತು ಇರಾಕ್ ದೇಶಗಳೊಂದಿಗೆ ಉತ್ತಮ ರಫ್ತು ವಹಿವಾಟು ಹಾಗೂ ಚೈನಾ, ಜರ್ಮನಿ ಹಾಗೂ ರಷ್ಯಾ ಒಕ್ಕೂಟದದೊಂದಿಗೆ ಹೆಚ್ಚಿನ ಆಮದು ವಹಿವಾಟನ್ನು ನಡೆಸುತ್ತಿದೆ. 2015ರಲ್ಲಿ ಶೇ.73.4ರಷ್ಟು ಜನ ನಗರ ವಾಸಿಗಳಾಗಿದ್ದರು. ಈ ದೇಶದಲ್ಲಿ ಶೇ.200ರಷ್ಟು ಅವಲಂಬಿತರು ಇದ್ದಾರೆ. ಅಂದರೆ 14 ವರ್ಷ ಒಳಗಿನ ಮತ್ತು 65 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ 100 ಜನರಿಗೆ 15-64ವರ್ಷ ವಯಸ್ಸಿನ ಕೇವಲ 50 ಜನ ಇದ್ದಾರೆ.

2014ರ ಹೊತ್ತಿಗೆ ಶೇ.94ರಷ್ಟು ಜನ ಮೊಬೈಲ್ ಫೋನ್ ಹೊಂದಿದವರಾಗಿದ್ದರೆ, ಶೇ.51ರಷ್ಟು ಜನ ಇಂಟರ್ನೆಟ್ ಉಪಯೋಗಿಸುತ್ತಿದ್ದರು.ಇತ್ತೀಚಿನ ಸಿರಿಯಾ ಬಿಕ್ಕಟ್ಟಿನಿಂದ ಟರ್ಕಿ ವಲಸೆಗಾರರ ಸಮಸ್ಯಗೆ ಸಿಲುಕಿಕೊಂಡಿದೆ. 2016ರ ಹೊತ್ತಿಗೆ ಟರ್ಕಿಯಲ್ಲಿ ವಲಸೆಗಾರರ ಸಂಖ್ಯೆ ಸುಮಾರು 26 ಲಕ್ಷದಷ್ಟಿತ್ತು. ಈ ಹಿಂದೆ ಇರಾಕಿನ ಖುರ್ದ್ ಗಳು, ಬೋಸ್ನಿಯಾ ಮುಸ್ಲಿಮರು ಮತ್ತು ಆಫ್ಘನ್ನರಿಗೆ ಟರ್ಕಿ ಆಶ್ರಯ ತಾಣವಾಗಿತ್ತು. ಆಗ ಇಷ್ಟೊಂದು ಆಶ್ರಯ ಹುಡುಕಿಕೊಂಡು ಇಷ್ಟೊಂದು ಜನ ಬಂದಿರಲಿಲ್ಲ. ಈ ಸಮಸ್ಯೆಯನ್ನು ಎದುರಿಸುವ ಸವಾಲು ಟರ್ಕಿ ಮುಂದಿದೆ.

[/fusion_text][/fusion_builder_column][/fusion_builder_row][/fusion_builder_container]