Categories
asia

ಸಿರಿಯಾ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಇತಿಹಾಸದುದ್ದಕ್ಕೂ ಏಷಿಯಾ, ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಕೊಂಡಿಯಂತಿದ್ದ ‘ಗ್ರೇಟರ್ ಸಿರಿಯಾ’ದ ಭಾಗವಾಗಿರುವ ಇಂದಿನ ಸಿರಿಯಾ ಮೂಲಭೂತವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆ.ಸಿರಿಯನ್ ಅರಬ್ ರಿಪಬ್ಲಿಕ್ ಎನ್ನುವ ಅಧಿಕೃತ ಹೆಸರನ್ನು ಹೊಂದಿರುವ, ಪಶ್ಚಿಮ ಏಷಿಯಾ ಪ್ರದೇಶಕ್ಕೆ ಸೇರಿರುವ ಈ ದೇಶದ ವಿಸ್ತೀರ್ಣ 1,85,180 ಚ.ಕೀ. 2016ರ ಅಂದಾಜು ಜನಸಂಖ್ಯೆ 1,85,64,000. ರಾಜಧಾನಿ ಡಮಾಸ್ಕಸ್. ಸಿರಿಯನ್ ಪೌಂಡ್ (ಎಸ್ ವೈ ಪಿ) ಇಲ್ಲಿನ ಕರೆನ್ಸಿ.

ಅರೆಶುಷ್ಕ, ಮರುಭೂಮಿ ಮತ್ತು ಕಿರಿದಾದ ಕಡಲ ತೀರ, ಮತ್ತು ಪಶ್ಚಿಮ ದಿಕ್ಕಿನಲ್ಲಿ ಪರ್ವತಗಳನ್ನು ಹೊಂದಿರುವ ಸಿರಿಯಾದಲ್ಲಿ, ಪೆಟ್ರೋಲಿಯಂ, ಫಾಸ್ಫೇಟ್, ಮ್ಯಾಂಗನೀಸ್, ಕಬ್ಬಿಣ, ಜಿಪ್ಸಂ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿವೆ.ಗ್ರೇಟರ್ ಸಿರಿಯಾ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗುವ ಪ್ರದೇಶ ಇಂದು ಸಿರಿಯಾ, ಲೆಬನಾನ್, ಇಸ್ರೇಲ್ ಮತ್ತು ಜೋರ್ಡಾನ್ ದೇಶಗಳಾಗಿ ವಿಭಜನೆಯಾಗಿವೆ. ಇಸ್ರೇಲ್, ಲೆಬನಾನ್, ಇರಾಕ್, ಜೋರ್ಡಾನ್ ಗಳನ್ನು ಗಡಿದೇಶಗಳನ್ನಾಗಿ ಹೊಂದಿದೆ. ಈ ದೇಶ ಎರಡು ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ.ಮೂರು ಖಂಡಗಳ ವ್ಯಾಪಾರ, ವಹಿವಾಟು ನಡೆಸಲು ಗ್ರೇಟರ್ ಸಿರಿಯಾ ಮೂಲಕವೇ ಹಾದುಹೋಗಬೇಕಾಗಿದ್ದರಿಂದ ಒಂದು ಪ್ರಮುಖ ಪ್ರದೇಶವಾಗಿತ್ತು. ಇದು ಈ ಪ್ರದೇಶದ ರಾಜಕೀಯ ಸ್ವಾಮಿತ್ವದ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿತು.

ಕ್ರಿ.ಪೂ.2000ದಿಂದಲೂ ಬಲಾಢ್ಯ ಸಾಮ್ರಾಜ್ಯಗಳು ಸಿರಿಯಾವನ್ನು ಆಳಿದೆ. ಪ್ರಾಚೀನ ನಗರ ಎಬ್ಲಾ, ಕ್ರಿ.ಪೂ.2400ರ ಸಮಯದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಅಂದಾಜು ಮಾಡಲಾಗಿದೆ. ಅಲೆಪ್ಪೋ ನಗರದ ಸಮೀಪ ಈ ಪ್ರಾಚೀನ ನಗರದ ಜಾಗವನ್ನು 1970ರಲ್ಲಿ ಪತ್ತೆಹಚ್ಚಲಾಗಿದ್ದು, ಅದು ಅನಟೋಲಿಯ (ಇಂದಿನ ಟರ್ಕಿ), ಮೆಸೊಪೊಟಮಿಯ (ಇಂದಿನ ಇರಾಕ್), ಈಜಿಪ್ಟ್ ಜೊತೆ ವಾಣಿಜ್ಯ ಸಂಬಂಧಗಳನ್ನು ಇಟ್ಟುಕೊಂಡಿದ್ದ ಬಗ್ಗೆ ಸಾಕ್ಷ್ಯಾಧಾರಗಳು ದೊರಕಿವೆ. ಎಬ್ಲಾದಲ್ಲಿ ಮಾತನಾಡುತ್ತಿದ್ದ ಭಾಷೆ ಅತ್ಯಂತ ಪ್ರಾಚೀನ ಸೆಮಿಟಿಕ್ ಭಾಷೆ ಎಂದು ಪರಿಗಣಿಸಲಾಗಿದೆ.

ಮೆಸೊಪೊಟಮಿಯದ ರಾಜ ಎಬ್ಲಾ ನಗರವನ್ನು ನಾಶಪಡಿಸಿದ ನಂತರ, ಅಮೋರೈಟ್ಸ್ ಆ ಪ್ರದೇಶವನ್ನು ಆಳಿದರು. ಕ್ರಿ.ಪೂ.1600ರ ಹೊತ್ತಿಗೆ ಅಧಿಕಾರದ ಚುಕ್ಕಾಣಿ ಈಜಿಪ್ಟಿಯನ್ನರ ಕೈಗೆ ಹೋಯಿತು. ನಂತರ ಸಿರಿಯಾವನ್ನು ಫೊನಿಷಿಯನ್ನರು, ಕೇನನೈಟ್ ಗಳು (ಗ್ರೀಕ್-ಮೆಸಿಡೋನಿಯ ಸಾಮ್ರಾಜ್ಯ), ಹೀಬ್ರೂಗಳು, ಅರಮೇನಿಯನ್ನರು, ಅಸ್ಸಿರಿಯನ್ನರು, ಬ್ಯಾಬಿಲೋನದವರು, ಪರ್ಷಿಯನ್ನರು, ಸೆಲುಸಿಡ್ ಗಳು (ಗ್ರೀಕ್-ಮೆಸಿಡೋನಿಯ ಸಾಮ್ರಾಜ್ಯ), ನೆಬಟಿಯನ್ನರು ( ಇಂದಿನ ಜೋರ್ಡಾನ್) ರೋಮನ್ನರು, ಮುಸ್ಲಿಂ ಅರಬ್ಬರು, ಆಟೋಮನ್ ಟರ್ಕ್ ಗಳು, ಪಾಶ್ಚಿಮಾತ್ಯ ಮಿತ್ರಪಡೆಗಳು ಮತ್ತು ಫ್ರೆಂಚರು ಈ ದೇಶವನ್ನು ಆಳಿದ್ದಾರೆ.

ಕ್ರಿ.ಪೂ.333ರಲ್ಲಿ ಅಲೆಕ್ಸಾಂಡರ್ ಆಕ್ರಮಣದೊಂದಿಗೆ ಸಿರಿಯಾದೊಳಗೆ ಪಾಶ್ಚಿಮಾತ್ಯ ಚಿಂತನೆಗಳು ಹರಿದುಬಂದವು. ಅಲೆಕ್ಸಾಂಡರ್ ನಿಧನದ ನಂತರ ಸೆಲುಸಿಡ್ ಗಳು ಡಮಾಸ್ಕಸ್ ನಗರವನ್ನು ರಾಜಧಾನಿಯಾಗಿಸಿಕೊಂಡು ಮೂರು ಶತಮಾನಗಳ ಕಾಲ ಗ್ರೇಟರ್ ಸಿರಿಯಾವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಕ್ರಿ.ಶ. ಮೊದಲನೇ ಶತಮಾನದಲ್ಲಿ ಕ್ರೈಸ್ತಧರ್ಮದ ಪ್ರವೇಶವಾಯಿತು.ಏಳನೇ ಶತಮಾನದವರೆಗೆ ಸಿರಿಯಾ ಕ್ರೈಸ್ತಧರ್ಮದ ಕೇಂದ್ರವಾಗಿತ್ತು. ಕ್ರಿ.ಶ.635ರಲ್ಲಿ ಅಲ್ಲಿಗೆ ಮುಸ್ಲಿಂ ಅರಬರ ದಾಳಿ ನಡೆಯಿತು. ಉಮೇಯ್ಯದ್ ಸಂತತಿಯ ಖಲೀಫರ ಆಡಳಿತಾವಧಿಯಲ್ಲಿ ಸಿರಿಯದ ಬಹುತೇಕ ಜನ ಮುಸ್ಲಿಮರಾಗಿ ಮತಾಂತರಗೊಂಡರು.

ನಂತರ ಉಮೇಯ್ಯದ್ ಗಳನ್ನು ಸೋಲಿಸಿದ ಅಬ್ಬೇಸಿದ್ ಸಂತತಿ ಖಲೀಫರು ಬಾಗ್ಧಾದ್ ನಗರವನ್ನು ಕೇಂದ್ರವನ್ನಾಗಿಸಿಕೊಂಡು ಖಲೀಫನ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆಗ ಅವರ ರಾಜ್ಯದೊಳಗೆ ಸಿರಿಯ ಕೇವಲ ಒಂದು ಪ್ರಾಂತ್ಯವಾಗಿತ್ತು. ನಂತರ 1516ರಲ್ಲಿ ಆಟ್ಟೋಮನ್ ಸಾಮ್ರಾಜ್ಯದ ಭಾಗವಾದ ಸಿರಿಯಾ, 400 ವರ್ಷಗಳ ಕಾಲ ಅವರ ಆಳ್ವಿಕೆಗೆ ಒಳಪಟ್ಟಿತು.ಮೊದಲನೇ ವಿಶ್ವ ಸಮರ ಆರಂಭವಾಗುವ ಹೊತ್ತಿಗೆ, ಯೂರೋಪಿನ ರಾಷ್ಟ್ರಗಳು, ರಷ್ಯಾದ ಪ್ರಭಾವವನ್ನು ನಿಯಂತ್ರಿಸಲು ಮತ್ತು ತಮ್ಮ ತೈಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಿರಿಯಾ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡಿದರು. ಇನ್ನೊಂದು ಕಡೆ ಜ್ಯೂಗಳು ಪ್ಯಾಲೆಸ್ಟೈನ್ ಮೇಲೆ ಹಿಡಿತ ಸಾಧಿಸಲು ಪ್ರಯತ್ನದಲ್ಲಿದ್ದರು. ಮಧ್ಯಪ್ರಾಚ್ಯದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿದ್ದ ಫ್ರೆಂಚರು ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಕಡೆಗೆ ಸಿರಿಯಾ ಮತ್ತು ಲೆಬೆನಾನ್ ಫ್ರೆಂಚ್ ಪ್ರಾಬಲ್ಯಕ್ಕೆ ಹಾಗೂ ಟ್ರಾನ್ಸ್ ಜೋರ್ಡಾನ್ (ಜೊರ್ಡಾನ್ ನದಿಯ ಪೂರ್ವಭಾಗ, ಈಗ ಬಹುತೇಕ ಜೋರ್ಡಾನ್ ದೇಶದಲ್ಲೇ ಇದೆ) ಮತ್ತು ಇರಾಕ್ ಬ್ರಿಟಿಷರ ಆಡಳಿತಕ್ಕೆ ಸಿಕ್ಕಿತು.

ಈ ನಡುವೆ 1919-20ರಲ್ಲಿ ಒಂದು ವರ್ಷದ ಅಲ್ಪಕಾಲೀನ ಸ್ವಾತಂತ್ರ್ಯವನ್ನು ಈ ದೇಶ ಅನುಭವಿಸಿತು. ಈ ಅಲ್ಪಕಾಲೀನ ಸ್ವಾತಂತ್ರ್ಯವೇ ಆಧುನಿಕ ಅರಬ್ ರಾಷ್ಟ್ರೀಯತೆಗೆ ದಾರಿ ಮಾಡಿಕೊಟ್ಟಿತು. ಫ್ರೆಂಚ್ ಆಡಳಿತದ ಕಾಲದಲ್ಲಿ ಪತ್ರಿಕಾ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ರಾಜಕೀಯ ಚಟುವಟಿಕೆಗಳನ್ನು ದಮನ ಮಾಡಲಾಯಿತು. ಸಿರಿಯಾಗೆ ಒಂದು ಸಂವಿಧಾನ ರಚಿಸಿ, ಸ್ವಾಯುತ್ತತೆ ನೀಡಲು ಅದು ಹಿಂದೇಟು ಹಾಕಿತು. ಹೀಗಾಗಿ ಸಿರಿಯನ್ನರಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಅಲ್ಪಸಂಖ್ಯಾತ ಡ್ರೂಜ್ ಸಮುದಾಯದವರ ಬಂಡಾಯದಿಂದ 1925ರಲ್ಲಿ ಸೇನಾ ಆಡಳಿತವನ್ನು ಹೇರಲಾಯಿತು. ಫ್ರೆಂಚರ ವಿರೋಧದ ನಡುವೆಯೂ ರಷ್ಯ ಮತ್ತು ಅಮೇರಿಕ 1944ರಲ್ಲಿ ಸಿರಿಯಾ ಮತ್ತು ಲೆಬನಾನ್ ಗೆ ಸಾರ್ವಭೌಮ ರಾಷ್ಟ್ರಗಳ ಸ್ಥಾನವನ್ನು ನೀಡಿತು. ಮರುವರ್ಷ ಬ್ರಿಟಿಷರೂ ಕೂಡ ಆ ಮಾನ್ಯತೆ ನೀಡಿದರು. ಸಿರಿಯಾಗೆ ಸ್ವಾತಂತ್ರ್ಯವನ್ನು ನೀಡುವಂತೆ ಈ ಮಿತ್ರರಾಷ್ಟ್ರಗಳು ಫ್ರಾನ್ಸ್ ಮೇಲೆ ಒತ್ತಡ ಹೇರಿದವು. ಆದರೆ 1946ರ ಫೆಬ್ರವರಿಯಲ್ಲಿ ಸಿರಿಯಾ ಬಿಟ್ಟು ಹೊರಡುವಂತೆ ವಿಶ್ವಸಂಸ್ಥೆ ಆದೇಶ ನೀಡಿ ನಿರ್ಣಯ ಕೈಗೊಳ್ಳುವವರೆಗೂ ಇದು ಸಾಧ್ಯವಾಗಲಿಲ್ಲ. ಏಪ್ರಿಲ್ 15, 1946ರಂದು ಫ್ರೆಂಚ್ ಪಡೆಗಳು ಸಿರಿಯಾ ನೆಲವನ್ನು ಬಿಟ್ಟು ತೆರಳಿದವು.

ದೇಶದ ಆಡಳಿತ 1971ರಿಂದ ಮೂವತ್ತು ವರ್ಷಗಳ ಕಾಲ ಸರ್ವಾಧಿಕಾರಿ ಹಫೀಜ್ ಅಲ್ ಅಸದ್ ಕೈಯಲ್ಲಿತ್ತು. ನಂತರ ಈಗ ಅವರ ಮಗ ಬಷರ್ ಅಲ್ ಅಸದ್ ಅಧ್ಯಕ್ಷರಾಗಿದ್ದಾರೆ. ಅಸದ್ ಆಡಳಿತದ ವಿರುದ್ಧ 2011ರಿಂದ ಆಡಳಿತ ವಿರೋಧಿ ದಂಗೆಗಳು ಪ್ರಾರಂಭವಾದವು. 2011-12ರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನ ನಡೆಸಿದರು.ಈ ನಡುವೆ, 2013ರಲ್ಲಿ ಅಲ್ ಖೈದಾ, ಇರಾಕ್ ನ ಮುಖಂಡ ಅಬುಬಕರ್ ಅಲ್ ಬಾಗ್ದಾದಿ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಲಿವಾಂಟ್ (ಐಎಸ್ಐಎಲ್) ಸ್ಥಾಪಿಸಿದಾಗ ಆಂತರಿಕ ದಂಗೆ ಇನ್ನೊಂದು ಮಜಲು ತಲುಪಿತು. ಇರಾಕ್ ಇಸ್ರೇಲ್, ಪ್ಯಾಲೆಸ್ಟೇನ್, ಜೋರ್ಡಾನ್ ಮತ್ತು ಲೆಬನಾನ್ ಪ್ರದೇಶಕ್ಕೆ ಲಿವಾಂಟ್ ಎನ್ನಲಾಗುತ್ತದೆ. ಅದೇ ಸಂಘಟನೆಯೇ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ – ಐಎಸ್ಐಎಸ್- ಐಸಿಸ್. ಖಲೀಫನ ಸಾಮ್ರಾಜ್ಯ ರಚಿಸಲು ಅಬುಬಕರ್ ಅಲ್ ಬಾಗ್ದಾದಿಯ ಉಗ್ರ ಸಂಘಟನೆ ಆಕ್ರಮಣಕಾರಿಯಾಗಿ ಮುನ್ನುಗ್ಗತೊಡಗಿತು. ಅಲ್ ರಖಾ ನಗರವನ್ನು ಕೇಂದ್ರವನ್ನಾಗಿಸಿಕೊಂಡು ಯೂಫ್ರಟಿಸ್ ಕಣಿವೆ ಮೇಲೆ ಹತೋಟಿ ಸಾಧಿಸಿತು. ನಂತರ ಇರಾಕಿನ ಮೊಸುಲ್ ನಗರ ಕೂಡ ಐಸಿಸ್ ವಶವಾಯಿತು. ಉಗ್ರಪಡೆಗಳ ದಮನಕ್ಕೆ ಮೊದಲು ಅಮೇರಿಕ ಮತ್ತು ಮಿತ್ರಪಡೆ ಹಾಗೂ ನಂತರ ರಷ್ಯಾ ಕೂಡ ಸೈನ್ಯವನ್ನು ಕಳಿಸಿತು. ಮೊಸುಲ್ ನಗರವನ್ನು ಉಗ್ರರ ವಶದಿಂದ ಬಿಡಿಸಲು ಅಂತಾರಾಷ್ಟ್ರೀಯ ಪಡೆಗಳಿಗೆ ಸಾಧ್ಯವಾಗಿದೆ. ಕ್ರಮೇಣ ಉಗ್ರರ ಹಿಡಿತದಿಂದ ಸಿರಿಯಾ ಬಿಡುಗಡೆಯಾಗತೊಡಗಿದೆ.

ಇಂತಹ ಪರಿಸ್ಥಿತಿಯಲ್ಲಿರುವ ಸಿರಿಯಾದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 2010ರಲ್ಲಿ 60465 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014ರಲ್ಲಿ 34,184 ದಶಲಕ್ಷ ಅಮೇರಿಕನ್ ಡಾಲರ್ ಗೆ ಇಳಿದಿದೆ. ತಲಾ ಜಿಡಿಪಿ 2010ರಲ್ಲಿ 2918 ಇದ್ದಿದ್ದು, 2014ರ ಹೊತ್ತಿಗೆ ಅದು 1821ಕ್ಕೆ ಇಳಿದಿದೆ.2014ರಲ್ಲಿ ಆರ್ಥಿಕತೆಯ ನಿವ್ವಳ ಮೌಲ್ಯವರ್ಧನೆ (ಜಿವಿಎ) ಕೃಷಿ ಶೇ.20.6, ಕೈಗಾರಿಕೆ ಶೇ.30.2 ಮತ್ತು ಸೇವಾ ಕ್ಷೇತ್ರ ಶೇ.49.2ರಷ್ಟು ಹೊಂದಿದೆ. ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. 100 ಮಹಿಳೆಯರ ಪೈಕಿ ಕೇವಲ 12.3ರಷ್ಟು ಮಾತ್ರ ಕಾರ್ಮಿಕ ಬಲವಾಗಿದ್ದಾರೆ; ಶೇ.71.6ರಷ್ಟು ಪುರುಷರು ಕಾರ್ಮಿಕ ಬಲವಾಗಿದ್ದಾರೆ. ಪ್ರಜೆಗಳ ಆರೋಗ್ಯಕ್ಕಾಗಿ ದೇಶದ ಜಿಡಿಪಿಯ ಶೇ.3.3 ರಷ್ಟು ಮಾತ್ರ. ಶೇ.71ರಷ್ಟು ಜನ ಮೊಬೈಲ್ ಹಾಗೂ ಶೇ.28.1ರಷ್ಟು ಜನ ಇಂಟರ್ನೆಟ್ ಬಳಸುತ್ತಿದ್ದಾರೆ.

ದೇಶದಲ್ಲಿ ಹಲವಾರು ವರ್ಷಗಳಿಂದ ತುಂಬಿರುವ ಅಶಾಂತಿಯಿಂದಾಗಿ ವಿವಿಧ ದೇಶಗಳಿಗೆ ಜನ ವಲಸೆ ಹೋಗುತ್ತಿರುವುದರಿಂದ ಜನಸಂಖ್ಯೆ ಕಡಿಮೆಯಾಗತ್ತಿದ್ದು, 2010-2015 ಜನಸಂಖ್ಯೆ ವೃದ್ಧಿಯ ಪ್ರಮಾಣ -2.3. ಈ ಆಂತರಿಕ ಸಂಘರ್ಷದಲ್ಲಿ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಏಪ್ರಿಲ್ 2016ರಲ್ಲಿ ಅಂದಾಜು ಮಾಡಿದೆ. ಡಿಸೆಂಬರ್ 2016ರ ಹೊತ್ತಿಗೆ ಒಂದು ಕೋಟಿ 35 ಲಕ್ಷ ಜನರಿಗೆ ಮಾನವೀಯ ನೆರವಿನ ಅವಶ್ಯಕತೆ ಇದೆ. ಈ ಪೈಕಿ ದೇಶದಲ್ಲೇ 63 ಲಕ್ಷ ಜನ ಸ್ಥಳಾಂತರಗೊಂಡಿದ್ದು, ಹೊರದೇಶಗಳಿಗೆ 48 ಲಕ್ಷ ಜನ ವಲಸೆ ಹೋಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಪ್ರಾಣ ಉಳಿಸಿಕೊಳ್ಳಲು ಮತ್ತು ಜೀವನೋಪಾಯಕ್ಕಾಗಿ ಯೂರೋಪಿನ ಕೆಲವು ದೇಶಗಳಿಗೆ ವಲಸೆ ಹೋಗುತ್ತಿರುವುದು, ನೆರೆಯ ದೇಶಗಳಿಗೂ ಹೊಸ ಸಮಸ್ಯೆ ತಂದಿಟ್ಟಿದೆ.

[/fusion_text][/fusion_builder_column][/fusion_builder_row][/fusion_builder_container]