Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ತಾಳಪಲ್ಲಿ ವೆಂಕಯ್ಯನ ತತ್ವಪದಗಳು

ಚಾರ ವಿರಕ್ತಿಯೆ ನಿಜ ನೇಮ
ಜಯ ಜಯ ಶ್ರೀ ಪರ್ವತ ಸ್ವಾಮಿ|
ದಯಸಾಗರ ಭಕ್ತರ ಪ್ರೇಮಿ ||ಪ||
ದೇಶಿಕ ಮೂರುತಿ ಮಕುಟ ಮಣಿ|
ಬಾಸುರ ಕೀರ್ತಿ ಸುಖದ ಕಣಿ|
ಆಶರಹಿತ ಸುಜನರ ಸುಗುಣೆ|
ಈಶವತಾರ ಶ್ರೀಮಠಕೆ ಧಣಿ ||1||
ಮೂರನ ಜಯಿಸಿದ ಮಹಾಮಹಿಮ|
ಕ್ರೂರ ವಿಷಯಜಿತ ನಿಷ್ಕಾಮ|
ಜಾರಜನರ ದೃಷ್ಟಿಗೆ ಭೀಮ|
ಚಾರ ವಿರಕ್ತಿಯೆ ನಿಜನೇಮ ||2||
ಪತಿ ಉತ್ತರ ಜನರೊಳು ಕೋಪ|
ಸತತ ಶಿವಾಚನೆಯೊಳು ಭೂಪ|
ಕ್ಷಿತಿಯೊಳ್ ಪುಷ್ಕಾರಣಿಯ ಪುರಪ|
ನೃತ ಬೋಳ್ ಬಸವೇಶನ ಭೂಪ ||3||

ದಯಸಾಗರ ಭಕ್ತರ ಪ್ರೇಮಿ
ಜಯ ಜಯ ಶ್ರೀ ಪರ್ವತಸ್ವಾಮಿ
ದಯಸಾಗರ ಭಕ್ತರ ಪ್ರೇಮಿ ||ಪ||
ದೇಶಿಕ ಮೂರುತಿ ಮಕುಟಮಣಿ
ಬಾಸುರ ಕೀರ್ತಿ ಸುಖದ ಕಣಿ|
ಆಶಾರಹಿತ ಸುಜನರ ಸುಗುಣೆ
ಈಶವತಾರ ಶ್ರೀಮಠಕೆ ಧಣಿ ||1||
ಮಾರನ ಜಯಸಿದ ಮಹಾಮಹಿಮ
ಕ್ರೂರ ವಿಷಯ ಜಿತನಾದ ನಿಷ್ಕಾಮ|
ಜಾರ ಜನರ ಪಾಲಿಗಿವನು ಬಲಭೀಮ|
ಚಾರ ವಿರಕ್ತಿಯೇ ನಿಜನಾಮ ||2||
ಪತಿತ ಪಾವನನಲ್ಲೇಕೆ ಕೋಪ
ಸತತ ಶಿವಾರ್ಚನೆಯೊಳು ಭೂಪ|
ಕ್ಷಿತಿಯೊಳ್ ಪುಷ್ಕರಣಿಯ ಪುರಪ
ನೃತ ಬೋಳು ಬಸವೇಶನ ಭೂಪ ||3||

ನಾರಿ ಗೊಲ್ಲತಿ
ಭಜನೆ ಮಾಡಿರಿ ಬಸವನ ಭಜನೆ ಮಾಡಿರಿ|
ಭಜನೆ ಮಾಡಿರಿ ಭವವೀಡಾಡಿರಿ| ಸುಜನ ಬಾಂಧವ
ತ್ರಿಜಗಭರಿತ ನೆಂದು ||ಪ||
ಸಾಲಿ ಓದುವ ಕಾಲದಲಿ ಸರ್ವ ಬಾಲರೆಲ್ಲರೂ ಬಾವಿ ದಂಡೆಯ|
ಮೇಲೆ ಇರುತಿರೆ ಯುವಕನೋರ್ವನು|
ಕಾಲವಾದೊಡೆ ಅಸುವಿತ್ತಸಮನ ||1||
ನಾರಿ ಗೊಲ್ಲತಿ ಮಾರುತಿರೆ ಪಾಲ್ ಭಾರಿ ಮಳೆ ಬರೆ|
ಜಾರಿ ಕಾಲ್ಗಳ್ ಕಾರಣಾತ್ಮಕ ಬಸವನೆಂದೆನಲು|
ಕ್ಷೀರಗಟ್ಟಿಡಿದು ಉದ್ಧಾರ ಮಾಡಿದನು ||2||
ಚಾರು ಮಂಗಲವಾಡ ಪುರದಲಿ|
ಕಾರಿಗರ್ವವ ಭಂಗಿಸಿ ಸಂತತ|
ಧಾರುಣಿಯ ಪುಷ್ಕರುಣಿಪ ಕರುಣ|
ವಾರುಧಿವರ ಗುರು ಬೋಳ ಬಸವನ ||3||

ನಿಮ್ಮನ್ನು ಪೊರೆವನು
ಭಜನೆ ಮಾಡಿರಿ ವಿಜಯ ಸಾರಥಿಯ
ಭರದಿ ಎನ್ನ ಪೊರೆದ ಮೂರುತಿಯ|
ಅಜಮೇಳನಿಗೊಲಿದ ಶ್ರೀ ಪಥಿಯ
ರಜ ಕತುಚ್ಯ ಪಾದಗಳ ಸ್ತುತಿಯ ||ಪ||
ಡಕ್ಕೆ ತಾಳ ಪೋಟಿ ಸ್ವರ ಕೂಡಿ
ಬಲು ಅಕ್ಕರದಿಂದಲಿ ರಾಗವ ಮಾಡಿ|
ಗಕ್ಕನೆ ಸಂಗೀತಗಳನು ಪಾಡಿ
ನಮ್ಮ ರಕ್ಕೂಸಾಂತಕನ ಕೊಂಡಾಡಿ ಪಾಡಿ ||1||
ನಾವು ಬಂದು ಎಲ್ಲರೊಂದುಗೂಡಿ ಗುಡಿಗೆ
ಆನಂದದಿಂದ ವಂದಿಸಿ ದೇವರಡಿಗೆ|
ಸಂದೇಹಗೊಳ್ಳಬೇಡಿರಿ ಈ ನುಡಿಗೆ
ಗೋವಿಂದ ನೊಲಿದು ಪೊರೆವನು ಕಡಿಗೆ ||2||
ಸನ್ನುತಾವರೆ ದಿನ್ನಿಯ ವೆಂಕಟರಮಣ
ಇರುವ ತನ್ನ ಭಕ್ತರ ಮೇಲೆ ದಯಾಪೂರ್ಣ|
ಎನ್ನ ಭಿನ್ನಪ ಮನ್ನಿಸಿ ಮಾಡಿರಿ ಕರುಣ
ನಿಮ್ಮನ್ನು ಪೊರೆವನು ಹರಶಿವನು ಭರಣ ||3||

ಪಾಲಿಸೆನ್ನ ಪಾರ್ವತಿ ರಮಣ
ಪಾಲಿಸೆನ್ನ ಪಾರ್ವತಿ ರಮಣ
ಮೂಲ ಕಾರಣ ಕರುಣ ಭರಣ|
ಪಾಲ ನಯನ ನೀಲ ಲೋಹಿತ
ಕಾಲ ಪಾಶ ಹರಿಸೋ ತ್ವರಿತ ||ಪ||
ದುರಿತ ತಿಮಿರದಿನಪ ನಿನ್ನ
ಸ್ಮರಿಸಿ ದಾಕ್ಷಣಗೈದ ಪಾಪ|
ಪರಿಹರಿಸುವ ಬಿರಿದು ಧರಿಸಿ
ಧರೆಯ ಮರೆಯ ಸೇರಿದನೆ ||1||
ಬೇಡಿಕೊಂಬೆ ಶಿವನೆ ದಯಮಾಡು
ಮಾಡು ಯಮ್ಮನು ಮನುಜನರನು|
ನೋಡ ನೋಡ ಎಳೆವ ಸುಮ್ಮನೆ
ಕೂಡಬಹುದೆ ನೀನು ರೂಢಿಗೀಶನೆ ||2||
ಸೋಮ ಸೂರ್ಯ ಅನಿಲ ನೇತ್ರ
ನಾಮ ಜಹರ ಶುಭ ಚರಿತ್ರ|
ರಮಣೇಯವಾದ ಪರಮ ಧಾಮ
ಹೋಮನೇಮ ಬೇಡ ಬಸವ ಭೀಮ ||3||

ಭಜನೆ ಮಾಡಿರಿ ವಿಜಯ ಸಾರಥಿಯ
ಭಜನೆ ಮಾಡಿರಿ ವಿಜಯ ಸಾರಥಿಯ|
ಭರದಿ ಎನ್ನ ಪೊರೆದ ಮೂರುತಿಯ|
ಅಜಮೇಳನಿಗೊಲಿದ ಶ್ರೀ ಪಥಿಯ|
ರಜಕತುಚ್ಯ ಪಾದಗಳ ಸ್ತುತಿಯ| ||ಪ||
ಡಕ್ಕೆ ತಾಳ ಪೇಟಿ ಸ್ವರ ಕೂಡಿ|
ಬಲು ಅಕ್ಕರದಿಂದಲಿ ರಾಗವ ಮಾಡಿ|
ಗಕ್ಕನೆ ಸಂಗೀತಗಳು ಪಾಡಿ|
ನಮ್ಮ ರಕ್ಕಸಾಂತಕನ ಕೊಂಡಾಡಿ ಪಾಡಿ ||1||
ನಾವು ಬಂದು ಎಲ್ಲರೊಂದುಗೂಡಿ ಗುಡಿಗೆ|
ಆನಂದಿಂದ ವಂದಿಸಿ ದೇವರಡಿಗೆ|
ಸಂದೇಹಗೊಳ್ಳಬೇಡಿರಿ ಈ ನುಡಿಗೆ|
ಗೋವಿಂದನೊಲಿದು ಪೊರೆವನು ನಿಮ್ಮನು ಕಡಿಗೆ ||2||
ಸನ್ನು ತಾವರೆ ದಿನ್ನಿಯ ವೆಂಕಟರಮಣ|
ಇರುವ ತನ್ನ ಭಕ್ತರ ಮೇಲೆ ದಯಾ ಪೂರ್ಣ|
ಎನ್ನ ಭಿನ್ನಪ ಮನ್ನಿಸಿ ಮಾಡಿರಿ ಕರುಣ|
ನಿಮ್ಮನನ್ನು ಪೊರೆವನು ಹರಶಿವನು ಭರಣ ||3||

ಭಜನೆ ಮಾಡಿರಿ
ಭಜನೆ ಮಾಡಿರಿ ಬಸವನ ಭಜನೆ ಮಾಡಿರಿ
ಭಜನೆ ಮಾಡಿರಿ ಭವವೀಡಾಡಿರಿ|
ಸುಜನ ಬಾಂಧವ ತ್ರಿಜಗಭರಿತನೆಂದು ||ಪ||
ಸಾಲಿ ಓದುವ ಕಾಲದಲಿ ಸರ್ವ ಬಾಲರೆಲ್ಲರೂ ಬಾವಿದಂತೆಯ
ಮೇಲೆ ಇರುತಿರೆ ಯುವಕನೋರ್ವನು|
ಕಾಲವಾದೊಡೆ ಕರುಣೆಯಿಂದಲಿ ಕೈಮುಗಿದು ಕೇಳಿರಿ ||1||
ನಾರಿಗೊಲ್ಲತಿ ಮಾರುತಿರೆ ಹಾಲನು ಭಾರಿ ಮಳೆ ಬರಲು
ಜಾರಿ ಕಾಲುಗಳ ಕಾರಣಾತ್ಮಕ ಬಸವನೆಂದೆನಲು|
ಕ್ಷೀರ ಗಟ್ಟಿಡಿದು ಉದ್ಧಾರ ಮಾಡಿದನವನು ||2||
ಚಾರುಮಂಗಲವಾಡ ಪುರದಲಿ ಕಾಲಿಗರ್ವವ ಭಂಗಿಸಿ
ಧಾರುಣಿಯ ಪುಷ್ಕರಣಿಪ ಕರುಣಸಂತತ|
ವಾರುಧಿವರ ಗುರುಚರಣ ಬೋಳು ಬಸವನ ||3||

ಶ್ರೀಹರಿ ಮುರವೈರಿ
ಸದಾ ಪೋರಿ ಶ್ರೀ ಹರಿ ಮುರವೈರಿ|
ಗರುಡಗಮನ ನಿಜ ಶರಣರ ಪಾಲ|
ಸರಸಿಜಾಕ್ಷರಮ ಲೋಲ ಪೊರಿ ||ಪ||
ಕಾಮ ಜನಕ ಸ್ತೋತ್ರಮು ಕಾಮರ|
ಸೋಮನ ಮಿತಗುಣ ಧಾಮ ||1||
ಹಿರೇ ದಿನ್ನಿಯ ಪುರ ಸ್ಥಿರತರ ಮಂದಿರ|
ಕರುಣಾ ಶರದಿ ವೆಂಕಟೇಶ್ವರ ಪೋರೆ ||2||

ಸಿರಿವರನೆ ಪೊರೆಯೋ
ಸಿರಿವರನೆ ಪೊರೆಯೋ| ಸ್ಮರಿಸುವೆನು
ತವಸರಸಿರುವ ಪದವ| ಮಾಧವ
ಸ್ಮರಿಸುವೆನು ಪದವ ||ಪ||
ಸಿಂಧು ಶಯನ ನಂದಗೋಪನ|
ಕಂದ ಕರುಣ ಸಿಂಧುವೇ|
ಸುಂದರಾಂಗನೆ ಮೃಂದಾಗೊಲಿದನೆ
ಮಂಧಾರಗಿರಿಧರಣೆ ||1||
ಧನುಜ ಕಾಲ ಗನಸುಶೀಲವೆನುತಾ
ನೀಲಾ ಗೋಪಾಲ|
ಸನಕಾ ಸಾನಂದದಿ ಮುನಿವೃದ್ವನಜನಿಮನೆ ಅನಂಗನೆ ||2||
ಕಾಮಜನಕ ಹೇಮ ಮಾಣಿಕ|
ಸ್ಥೋಮಕಟಕ ಅಲಂಕೃತನೆ|
ಭೂಮಿಯೊಳ್ ಹಿರೇದಿನ್ನಿಪುರಪ|
ಧಾಮ ವೆಂಕಟ ವಿಠಲನೆ ||3||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಅಯ್ಯಪ್ಪ ಪಂಥೋಜಿಯ ತತ್ವಪದ

ನೋಡಿದೆನು ಕೈಲಾಸವನು
ನೋಡಿದೆನು ಕೈಲಾಸವನು| ನಾ
ಹಾಡಿದೆನು ಶಿವನಾಮವನು ||ಪ||
ನೋಡಿದೆ ಕೈಲಾಸಪುರವ| ಅಲ್ಲಿ
ರೂಢೀಗೀಶ್ವರನ ಮಂದಿರವ| ಮಾಂತ
ರಾಡುವ ನಲಿವ ಸಂಭ್ರಮವ| ಬಂದು
ಕೂಡುವ ಸತಿಯರೊಯ್ ಭವವ| ವರ
ಈಡಪಿಂಗಳ ನಡುನಾಡಿ ಗೂಡಿನೊಳು
ಗಾಢದಿಂದುನ್ಮನಿ ಚಾಕು ಮಧ್ಯದೊಳು ||1||
ಮೂರು ಮೂರ್ತಿಗಳ ತಾಣವನು| ಸಣ್ಣ
ದ್ವಾರದೊಳ್ ಹೊಕ್ಕು ನೋಡಿದೆನು| ಸುರ
ನರದಾದಿಗಳ ಗಾನವನು| ಮನ
ಸೂರೆಗೊಂಡಿತು ಹೇಳೆನದನು| ಇತ್ತ
ಬಾರದಾದವು ಪ್ರಾಣ ಮಾರುತನು| ಅತ್ತ
ಭೇರಿಗಂಟೆಯ ನಾದ ನಿಂತು ಹೋದುದ ||2||
ಸಾಲು ಮುತ್ತಿನ ಗೊಂಚಲುಗಳ| ವಜ್ರ
ಕೀಲಿಸಿದ್ಹೇಮ ಸ್ತಂಭಗಳ| ದೀಪ್ತಿ
ಮೇಳೈಸಿ ಮೆರೆವ ಭಿತ್ತಿಗಳ| ಅಲ್ಲಿ
ಮೇಲಾದ ಪಟಝಲ್ಲಿಗಳ| ನಡುವೆ
ಮೂಲ ಪ್ರಣವಪೀಠದೋಲೈಸಿ| ಕುಳಿತಿರುವ
ಕಾಲ ಕಾಲನು ದಿವ್ಯ ಲೀಲೆಯಲಿ ಪೊಳೆಯುವದ ||3||
ಕಂಗಳ ಮಧ್ಯದ ಸ್ಥಾನ| ಧವ
ಳಾಂಗನ ಸನ್ನುತ ಸದನ| ಅಲ್ಲಿ ಲಿಂ
ಗಾಗ ಸಮರಸ ಕೂನ| ಮುಕ್ತಿ
ಯಾಂಗನೆ ಗೈವ ಬಹುಮಾನ| ಭವ
ಭಂಗ ಗುರು ಪಂಪಾಪತಿಯ ಪಾದವ ಕಂಡು
ಹಿಂಗದೆ ನರಜನ್ಮ ಭಂಗ ಬರುವ ಮುನ್ನ ||4||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ವೆಂಕಟಾಪುರದ ಖೇಮಣ್ಣನ ತತ್ವಪದಗಳು

ಆರುವು ನಿನ್ನೊಳು ತಿಳಿದು
ಬರಿದೆ ಯಾತಕೆ ನೀನು ಮರುವಿನೋಳ್ ಕುಳಿತು ಬಳಲುವುದೇನೊ ಮನುಜಾ|
ಆರುವು ನಿನ್ನೊಳು ತಿಳಿದು ಗುರು ಕರಣವನು ಪಡದು
ಅರಿವಿನಿಂದಲಿರೋ ಮನುಜಾ ||ಪ||
ಪುಸಿಯ ಮಾತುಗಳಾಡಿ ವಿಷಮಸಂಸಾರ ನಂಬಿ|
ದೆಸೆಗೆಟ್ಟು ತಿರುಗದಿರು ಮನುಜಾ|
ಪುಸಿಯ ಸಸಿಯನು ಮುರಿದು|
ಬಿಸಿಗಣ್ಣೆನೊಳು ಬೆರೆತು ಕುಶಲದಿಂದಿರಬೇಕು ಮನುಜಾ ||1||
ಪಂಚಕೋಶಗಳಿಂದ ವಂಚಿಸಿ ಜನರನ್ನು|
ಸಂಚಿತದಿ ಸಾವೊದ್ಯಾಕೋ ಮನುಜಾ|
ಸಂಚಿತಾಗಮ ಕರ್ತಕಂಚುಕಾ ದೊಳಗಿರುಲು|
ನಿಶ್ಚಿಂತದೀ ನೋಡೊ ಮನುಜಾ ||2||
ಮಂದಮತಿಗಳಿಂದ ಬಂಧನಾದೊಳು ಸಿಲುಕಿ|
ಕಂದಿ ಕುಂದಲಿಬ್ಯಾಡೋ ಮನುಜಾ|
ಯಿಂದುಶೇಖರನಾದ ಬಂಡೇಶನೊಡಗೂಡಿ|
ಸಂದೇಹ ಬಿಡಬೇಕು ನೀನು ಮನುಜಾ ||3||

ಆವಕುಲವಾದಡೇನು
ಆವಕುಲವಾದಡೇನಾತನೇ ಘನವೋ|
ಜೀವಶಿವನೆಲೆ ತಿಳಿಸಿದಂಥವನೆ ಗುರುವೊ ||ಪ||
ಆರು ಚಕ್ರದ ಸ್ಥಲವು ಮೂರು ಲಿಂಗಾದಿರವೂ|
ಮೂರು ಲಕ್ಷದ ಕುರುಹು ತನ್ನೊಳಗಿನರುವೂ|
ಮೂರೈದು ಅಕ್ಷರಕೆ ಮೂಲ ಅಕ್ಷರವೇ ಮುಕ್ತಿ
ಮಾರ್ಗದಿರಲಾತನೇ ಗುರುವೂ ||1||
ಅಂಗ ಗುಣಗಳ ಅಳಿಸಿ ಲಿಂಗ ದೇಹದಿನಿಲಿಸಿ|
ಗಂಗಯಮುನೆ ನದಿಯ ಸ್ಥಾನಗೈಸಿ|
ಶೃಂಗಾರವಾದಂತ ರಂಗುಪೀಠದಿ ನಿಜ|
ಲಿಂಗ ಪದವಿಯ ತೋರಿದಾತನೆ ಗುರುವೂ ||2||
ಸ್ಥೂಲ ತನುಗಳ ವಿವರ ಸೂಕ್ಷ್ಮಸಾಂಖ್ಯ ವಿಚಾರ|
ಫಾಲಭಾಗದಲಿರುವೊ ಪಶ್ಚಿಮ ದ್ವಾರಾ|
ನೀಲಸುನೀಲ ಶುದ್ಧ ಸ್ಫಟಿಕ ತೇಜದಿ ಬೆರಸಿ|
ಕಾಲಕರ್ಮವ ಕೆಡಿಸಿದಾತನೆ ಗುರುವೂ ||3||
ನಾದಬಿಂದು ಕಳೆದೋರಿ ಆದಿ ಅಂತ್ಯವನರುಹಿ|
ಸಾಧಿಸೋ ನಿಜ ಬೋಧೆ ಗುರಿಯನುಸಾರಿ
ಮೋದುವ ದಶವಿಧ ನಾದದಿಮನಗೊಳಿಸಿ|
ವಾದ ಭೇದವು ಬಿಡಿಸಿದಾತಾನೆ ಗುರುವೂ ||4||
ಮಂಡಲ ತ್ರಯವನು ಅಂಡಪಿಂಡಾಂಡವನು|
ಕುಂಡಲಿ ಕುಟಿರದೋಳ್ ಬ್ರಹ್ಮಾಮಡವಿನ್ನೂ|
ಥಂಡಥಂಡೋಪಾಖಂಡ ಮೂರ್ತಿ ಬಂಡೇಶನಾ|
ಖಂಡಿತದಿ ತೋರಿದಂಥವನೇ ಗುರುವೂ ||5||

ಎಣಿಸಬ್ಯಾಡಲೋ
ಎಣಿಸಬ್ಯಾಡಲೋ ಯೋಗಿ ಜನರ|
ನೀನೆಣಿಸಿದರೆ ಮುಂದೆ ನಿನಗೆ ಮುಕ್ತಿ ದೂರ ||ಪ||
ಗುಣ ಸಾದವ ಗುಣಗಾಳೆಲ್ಲಾ ಆಯಿದು|
ಪ್ರಣಮಗಳೆದುರಿಟ್ಟು ಭಾಗೀಸುವೆಲ್ಲಾ|
ಅಣುವಿನೋಳ್ ಜಗವೀಹುದಲ್ಲಾ ಈ ಮಾತ|
ಅಣಕವಲವು ತಿಳಿದು ನೋಡೆಲೋ ಖುಲ್ಲಾ ||1||
ಭೂತ ಪಂಚಕ ದೇಹವಿದನೂ ಬಲ್|
ಖ್ಯಾತಿಲಿಂದಿರುವೂದು ವಾತ ತುಂಬಿನ್ನೂ|
ಮಾತೆ ಪಿತ ಸತಿಸುತರಾರನ್ನೂ ಕಡೆಗೆ|
ಘಾತಮಾಡೋಗೋದು ಆಗಲಿ ತಾಯಿನ್ನೂ ||2||
ನ್ಯಾಯವ ನ್ಯಾಯರಿಯದೋಗೀ ಗುರು|
ರಾಯಬಂಡೇಶಾಗೆ ಯದುರೋಕ್ತನಾಗೀ|
ಮಾಯ ಸಂಸಾರದೊಳು ಮುಳುಗಿ ಮುಂದೆ|
ಸಾಯುವಾಗುವೂರಿಲ್ಲೋ ತಿಳಿಯಲೋಗೂಗಿ ||3||

ಕಣ್ಣುಯಿಲ್ಲಾದವನೂ ನೋಡಿ
ಅಂದಾವಾದಾ ಶ್ರೀಗಂಧ ಗಿಡದೋಳ್|
ಪಿಂದೆ ಹಣ್ಣುಗಳ್ ಕಾತಿರುತಿಹವೊ|
ಅಂದು ಹೋದಾರವು ಯಾರಿsಗೇ ಸುಜ್ಞಾನಿಗಳಿರ‍್ಯಾ
ಅಂದಿದವರೀಗಂಮಮೃತ ಸಾರವೊ ||ಪ||
ಕಣ್ಣುಯಿಲ್ಲಾದವನೂ ನೋಡಿ|
ಕಾಲುಯಿಲ್ಲಾದವನು ಯೇರಿ|
ಕಯ್ಯಿಯಿಲ್ಲಾದವನು ಅರದಾನೋ| ಸುಜ್ಞಾನಿಗಳಿರ‍್ಯಾ
ಬಾಯಿಯಿಲ್ಲಾದವನು ತಿಂದಾನೊ ||1||
ಯೇಳೆಂಟಾರ್ಹತ್ತು ಮಂದೀ ಕಳ್ಳರು|
ವ್ಯಾಳ್ಯಾಯಿದೇಯೆಂದು ನೋಡಿ|
ಕಾಳು ಮತಿಯಲಿ ಕಾಯ್ಹರಿಯ ಬಂದಾರೊ| ಸುಜ್ಞಾನಿಗಳಿರ‍್ಯಾ
ಕೋಳಿ ಕೂಗಿತು ಅಷ್ಟರೊಳಗೊ ||2||
ಗಿಡನೂ ಕಾಯುವ ಕಾವಲಿಗಾರ|
ಅಡರಿ ಬಂದನೊ ತಡವೂ ಮಾಡದೆ|
ವುಡಿಗಿವುಟ್ಟಿದ್ದು ಸಡಲಂತೆ ಹೊಡದಾನೊ| ಸುಜ್ಞಾನಿಗಳಿರ‍್ಯಾ
ಹಿಡದು ಫಾಲ್ಮೂರು ಜಿಲ್ಲಕ್ಕೆ ಕಳಿಸಿದನೊ ||3||
ಜಿಲ್ಲಾ ಧೋರಿಯು ಅಲ್ಲಾಮು ಸಾಹೇಬ|
ಕಳ್ಳಾರನೆಲ್ಲಾ ವಿಚಾರ ಮಾಡಿ|
ಕಳ್ಳತನಕ್ಕೆ ಸಲ್ಲೊಷ್ಟು ಜಲ್ಮಾನವೊ| ಸುಜ್ಞಾನಿಗಳಿರ‍್ಯಾ
ಆಳಿಗರವತ್ತು ದಂಡಾಮಾಡಿದನೊ ||4||
ದಂಡಾದ ರೂಪಾಯಿ ಕೇಳುವದಕೆ|
ಬಂಡೆ ಗುರುವೀನ ನಡಿಗಾಳು ಪಿಡಿದು|
ದಂಡ ಕೊಟ್ಟು ಧನ್ಯರಾದಾರೋ| ಸುಜ್ಞಾನಿಗಳಿರ‍್ಯಾ
ಕಂಡೆನಯ್ಯಾ ಶ್ರೀಗುರು ಕರುಣಾದಿ ||5||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ದೇವದುರ್ಗದ ಚೆನಮಲ್ಲನ ತತ್ವಪದ

ಲಿಂಗ ಬಾರೊ
ಲಿಂಗ ಬಾರೊ ಎನ್ನ ಮನಕೆ ಲೀಲೆಯ ತೋರೊ
ಶೃಂಗಾರದಂಗದಿ ಶಂಭು ಬರುತಾನೆ ದಾರಿಯ ತೋರೊ ||ಪ||
ವಿಷಯಗುಣವನಳಿದು ಹಸನಾಗಿ ಬೆಳಸಯ್ಯ
ನಸುನಗೆಯಿಂದಾಲಿ ಮನವನು ತಣಿಸಯ್ಯ|
ನೊಸಲಿ ವಿಭೂತಿ ಮಿಗೆ ಶೋಭಿಸುವದಯ್ಯ
ಆಸೆಯನತಿಗಳಿದು ಲೇಸದಿ ಕೂಡಯ್ಯ ||1||
ಅಖಿಲ ಮೇದಾಂತ ತರ್ಕ ಆಗ ಮಾತೀತನೆ ಬಾರೊ
ಮುಕುತಿ ರೂಪನೆ ಬಾರೊ ಮೋಹನಾಂಗನೆ ಬಾರೊ|
ಭಕುತಿ ಲೋಲನೆ ಬಾರೊ ಭವ್ಯ ಮೂರುತಿ ಬಾರೊ
ಮುಖವ ತೋರುತ ನಿನ್ನ ಮಹಿಮೆಯs ಸಾರೊ ||2||
ಮನವೆಂಬ ಮರ್ಕಟವ ಕಳಿಸುವೆನು ಹೊರಗೆ
ಚಿನುಮಯ ಕಾಂತನೇ ರೂಪ ತೋರಿಸು ಕೊನೆಗೆ|
ಅನುಮಾನವಿಲ್ಲದೆ ಸನುಮತವಾಗು ಎನಗೆ
ಘನಸುರದುರ್ಗನಾಥ ಬಂದು ಕೂಡುವೆ ನಿನಗೆ ||3||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಬಾಲಾರಾಮಪ್ಪ

ಏನ ಹೇಳಲಮ್ಮಾ
ಏನ ಹೆಳಲಮ್ಮಾ ಸಖಿಯೆ| ಅದಕೆ ಕಾಯವಿಲ್ಲವೊ ಇಂದು ಮುಖಿಯೆ
ಹಾವು ಭೂಮಿಯ ನುಂಗಿ| ಇರುವೆ ಹಾವನು ನುಂಗಿ
ಸೊಳ್ಳೆ ಇರುವೆಯನು ಸಂಪೂರ್ಣತಾ ನುಂಗಿತು ||1||
ಬೀಜವಿಲ್ಲದ ವೃಕ್ಷವಹುದು|
ಅದರ ಸ್ವಾದ ಕೊಂಬೆ ರೆಂಬೆ ಸಮಚರಿತವಹುದು|
ವೃಕ್ಷ ತುದಿಯಲಿ ಫಲವು ಮಾಗಿ ನಿಂತಿಹುದು|
ಮಾಗಿದ ಫಲ ನುಂಗಿದೊಡೆ ಮರಣವಿಲ್ಲವೆಂದು ||2||
ಸಂಧಿನೊಳು ನರಿಯ ಕೂಗೊಂದು|
ಅದನು ಅಂಧಕನು ಗುರಿಯಿಟ್ಟು ಹೊಡೆಯಲೆಂದು ಅಂದು ಇಂದೆನದೆ|
ಎಲ್ಲ ಸಂದು ಸಂದುಗಳಲಿ ತಿರುಗಲು|
ವಂಧ್ಯಾಸುನನು ಅದರ ಸಂದಿ ಮಾಡಿದ ಪರಿಯೆ ||3||
ಇಂತಿ ವಿಚಿತ್ರಗಳೆಲ್ಲಾ| ಬಹು ಭ್ರಾಂತಿಯಾಗಿ ತೋರ್ಪವೆಲ್ಲಾ
ಶಾಂತ ಸದ್ಗುರು ನಾಗನಾರ್ಯರ ಕೃಪೆಯಿರಲು|
ಭ್ರಾಂತಿ ಭ್ರಮೆ ತೊಲಗಿ ಬಯಾಲಾದ ಆ ಪರವಸ್ತು ||4||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಅರವಲಿ ಬಿಜಲಿವಸ್ತಾದಿಯ ತತ್ವಪದಗಳು

ಅಲಾವಿ ನೋಡಿರಣ್ಣ
ಅಲಾವಿ ನೋಡಿರಣ್ಣ ಮದೀನ ದಲಾವಿ ನೋಡಿರಣ್ಣಾ
ಕೆಂವ್ಸೇನ್ ಚಾಂವ್‍ಸೇನೆಂದು ಹಾಡಿರಣ್ಣಾ ||ಪ||
ಕಿಲ್ಲೆಸುತ್ತ ನೀ ನೋಡೋ ತಮ್ಮಣ್ಣಾ
ಡೋಲಿ ಮೇಲಕ-ಹೋಯಿತಲ್ಲಣ್ಣಾ|
ಕತ್ತಲ ಕಾಳಗ ಕರ್ಬಲ್‍ದೊಳಗs
ಇತ್ತ ಧೂಮಕೇತು ಮೂಡಿತಲ್ಲಣ್ಣಾ ||1||
ಅಲ್ಲಿ ತಿರುಗಿ ನೋಡೋ ತಿಮ್ಮಣ್ಣಾ
ಒಲ್ಲೆನೆಂದರೂ ಕರ್ಮ ಬಿಡದಣ್ಣಾ|
ಕಾಶಿಮ ಶರಣರು ಸಮರಕ್ಹೋಗಿ
ಐಸುರ್ ಮೊಹರಮ್ ಹಾಡಿದರಣ್ಣಾ ||2||
ಕಾಳಗದ ಖೇಲ್ ನೋಡೋ ತಮ್ಮಣ್ಣಾ
ಕೂಡಿ ರಿವಾಯತ್ ಹಾಡುವದಣ್ಣಾ|
ಈಶ್ವರ-ಅಲ್ಲಾ ಒಂದೇ ತಿಳಿಯಣ್ಣಾ
ಅರವಲಿ ಬಿಜಲಿ ನಿಮ್ಮವನಣ್ಣಾ ||3||

ಹೋಗೋಣ ನಡಿ ತೇರಿಗೆ
ಮಡಿಯ ಸಂಗತ ನಡಿರಿ ಮಟಮಾರಿಗೆ
ನಮ್ಮ ಶ್ರೀಗುರು ವೀರಭದ್ರಸ್ವಾಮಿ ದರ್ಶನಕೆ ||ಪ||
ಮಡದಿ ಮಕ್ಕಳಗೂಡಿ ಭಂಡಿ ಸರ್ನಾಟಗಾಡಿ
ಎತ್ತು ಕುದುರೆಯ ಹೂಡಿ ಪ್ರಸ್ತ ಸಣ್ಣವ ಮಾಡಿ
ಲಡ್ಡು ಮಿಠಾಯಿ ಜಂಗಮರಿಗೆ ನೀಡಿ
ಕರ್ಪೂರ ಊದಿನಕಡ್ಡಿ ಮಂಗಳಾರತಿ ಪಾಡಿ
ಬೇಡೋಣ ನಡಿ ಸೆರಗೊಡ್ಡಿ ಎರಡು ಕೈಗಳ ಜೋಡಿಸಿ
ಹೋಗೋಣ ನಡಿ ತೇರಿಗೆ ನಮ್ಮ ಶ್ರೀಗುರು ವೀರಭದ್ರಸ್ವಾಮಿಗೆ
ಹೋಗೋಣ ಮಡಿಲಿಂದಲಿ ವಿಶ್ವಾಸದಿಂದಲಿ ||1||
ಜಾತ್ರೆಯು ಬಲುಚಂದ ನೋಡಲಿಕ್ಕೆ ಅರ್ತಿಲಿಂದ
ಸೇನೆ ಸಡಗರದಿಂದ ನಂದಿಕೋಲುಗಳಿಂದ
ಪಾತ್ರದವರಾಡುವರು ಪಸಂದ
ಪ್ರೀತಿಯಿಂದ ಮಾತಾಪಿತನ ಬೆಳಕಿಲಿ ಪ್ರದಕ್ಷಿಣ
ಹೋಗೋಣ ನಡಿ ತೇರಿಗೆ ನಮ್ಮ ಶ್ರೀಗುರು ವೀರಭದ್ರಸ್ವಾಮಿಗೆ ||2||
ಹೋಗೋಣ ನಡಿಯಿರಿ ಅಯ್ಯನ ಜಾತ್ರಿಗಿ
ಐಶ್ವರ್ಯ ಏನ್ಹೇಳಲಿ ನೌಬತ್ತು ನಗಾರಿ
ತುತೂರಿ ಶಂಕು ಸೋನಾಯಿ ಜಾತ್ರಿ
ಕೊಡೆಯು ಆಪ್ತಗಿರಿ ಚವರಿ ನವಲ್ಗರಿ
ಶಂಭು ಜಾಗಟಿ ಭೇರಿ ವಾದ್ಯಗಳು ಪರಿಪರಿ
ಏಕನಾದ ತಂಬೂರಿ ಕೇಳಿ ಸೇವೆಯ ಮಾಡೋದಕೆ
ಹೋಗೋಣ ನಡಿ ತೇರಿಗೆ ನಮ್ಮ ಶ್ರೀಗುರು ವೀರಭದ್ರಸ್ವಾಮಿಗೆ ||3||
ವಾದ್ಯಮದ್ದಲಿ ತಾಳ ಗೊಂಬೆ ಆಟದ ಮೇಳ
ನೂಪು ಜಂಗಮರು ಬಹಳ ಧೂಮತ್ರಮಟ್ಟತಾಳ
ಗುಡಿಸುತ್ತ ರವಳ ಝಳ ಕೆಂಧೂಳ ಆಗಿನ ನಿರ್ಮಾಳ ||4||
ಗುಡಿಯೊಳು ಶೃಂಗಾರ ಸ್ವಾಮಿ ಶಿವಶಂಕರ
ಆರ್ತ ಆಕಾರ| ಮದಗಜಗಮನೆಯರು
ಕಮಲಮುಖಿಯರು ನೆರೆಮನೆಯ ಸ್ತ್ರೀಯರು
ಗಂಡುಳ್ಳ ಗರತಿಯರು ಚದುರೆಯರು ಚೆಲ್ವೆಯರು
ಚಿಕ್ಕ ಪ್ರಾಯದವರು ನಗುಮುಖದ ಬಾಲೆಯರು
ಕಂಚು ಕಳಸದವರು ನಿತ್ಯದಲಿ ಬೆಳಗುವರು ||5||
ಆರು ಗಾಲಿಯ ತೇರು ನೋಡಲಿಕೆ ಶೃಂಗಾರ
ಬಡಿಗೇರು ಕುಂಬಾರು ಮಾಡುವರು ತಯ್ಯಾರ
ಕಳಸಾರು ಬಂಗಾರ ಮೇಲ್ಗಡೆ ಝರತಾರ
ಪಟಗಳು ದಿನಸಾರ ಗೊಂಬೆಗಳು ಚಿತ್ತಾರ
ಬಾಳೆಗಿಡಗಳು ಐದಾರ ಸುತ್ತ ಹೂವಿನ ಹಾರ
ಪರಿಪರಿಯ ಅವತಾರ ಹೋಗೋಣ ನಡಿ ತೇರಿಗೆ ||6||
ತೇರು ಎಳಿಯುವಾಗ ಜನವೆಷ್ಟು ಝಗಝಗ
ಗೋಲ್ಗುಡಿ ಬಿಡುವಾಗ ಚಪ್ಪಾಳೆ ಇಡುವಾಗ
ಟೆಂಗಿನಕಾಯಿ ಒಡಿವಾಗ ರಥಸಾಗಿ ಕಳ್ಳರು ಕದಿವಾಗ
ಕಳಕೊಂಡು ಹುಡುಕಾಗ ಎಷ್ಟು ಐಶ್ವರ್ಯ ನೋಡಾಕ
ಹೋಗೋಣ ನಡಿ ತೇರಿಗೆ ನಮ್ಮ ಶ್ರೀಗುರು ವೀರಭದ್ರಸ್ವಾಮಿಗೆ ||7||
ಸುತ್ತ ಸರಕಾರದವರು ರಾಯ್ಚೂರು ಹವಲ್ದಾರರು
ಝಂಗಿ ಪೋಲಿಸದವರು ಗೌಡಕುಲಕರ್ಣ್ಯಾರು
ನಾಡಿಗೆ ಜಮೇದಾರ ಶೇಖ್ ಸಂದಿ ತಳವಾರರು
ಮೇಲೆ ಶಿವಭಕ್ತರ ಉಘೇ ಉಘೇ ಎಂಬವರು
ಧರೆಯೊಳು ಅರವಲಿ ಬಿಝಲಿ ಉಸ್ತಾದಿಯವರು
ಕರಕೊಂಡು ಹೊರಟರು ತಮ್ಮ ಶಿಷ್ಯರು
ಹೋಗೋಣ ನಡಿ ತೇರಿಗೆ ನಮ್ಮ ಶ್ರೀಗುರು ವೀರಭದ್ರಸ್ವಾಮಿಗೆ ||8||

ಜ್ಞಾನದಿಂದ ಶಿವ ಧ್ಯಾನವ ಮಾಡಣ್ಣಾ
ಜ್ಞಾನದಿಂದ ಶಿವ ಧ್ಯಾನವ ಮಾಡಣ್ಣಾ| ಹೇ ಜಾಣ
ಜ್ಞಾನದಿಂದ ಶಿವ ಧ್ಯಾನವ ಮಾಡಣ್ಣಾ ||ಪ||
ಕಾಮಕ್ರೋಧಗಳ ಕಡೆಪಡೆ ಮಾಡು
ಮದಮತ್ಸರಗಳ ಗೊಡವೆಯ ಬಿಡು|
ಮೂರು ಮಲಗಳನು ಮನದಿ ಸುಡು
ನಾನೆಂಬುದ ನೀ ಮರೆತುಬಿಡಣ್ಣಾ ||1||
ಕತ್ತಲಾದರೆ ಬೆಳಕನು ಮಾಡು
ಉತ್ತಮ ಮತಿಯ ಹೆಂಡತಿ ಕೂಡು|
ರಾತ್ರಿ ಆರು ತಾಸಿಗೆ ಭೋಗವ ಮಾಡು
ನಿತ್ಯ ದೇವನ ಸ್ಮರಣೆಯ ಮಾಡಣ್ಣಾ ||2||
ಸಿಟ್ಟು ಬಂದರೆ ನಿಧಾನ ಮಾಡು
ಹಸಿದು ಬಂದವಗೆ ಅನ್ನವ ನೀಡು|
ಪರನಿಂದೆಯ ಬಿಟ್ಟು ಪ್ರೀತಿಯ ಮಾಡು
ಹರಿ-ಹರ ಒಂದೇ ಲೆಕ್ಕವ ಮಾಡಣ್ಣಾ ||3||
ಊರಿಗೊಂದು ನೀ ಸ್ನೇಹವ ಮಾಡು
ತಾಸೊತ್ತಿರಲಿಕೆ ವಸ್ತಿಯ ಮಾಡು|
ವೈರಿ ಬಂದರೆ ಧೈರ್ಯವ ಮಾಡು
ರಾಮರಹೀಮರ ಸ್ಮರಣೆಯ ಮಾಡಣ್ಣಾ ||4||
ಪ್ರಾಸವಿಟ್ಟು ಪದವನು ಮಾಡು
ತ್ರಾಸು ಬಂದರೆ ಧ್ಯಾನವ ಮಾಡು|
ಧರೆಯೊಳ್ ಅರವಲಿ ಮಕಾಮ್ ಮಾಡು
ಅಲ್ಲಿ ಬಿಜಲಿಯ ಆಶ್ರಯ ಪಡೆಯಣ್ಣಾ ||5||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಘನಮಠದ ನಾಗಭೂಷಣನ ತತ್ವಪದಗಳು

ಅಸಮ ಮಹಿಮಾಗಾರ
ಪೋಷಿಸಯ್ಯಾ| ಈಶಾಂಘ್ರಿಶಯ್ಯಾ|
ಭಾಷೆಪಾಲಕ ಜೀಯಾ ಬಸವರಾಜಯ್ಯಾ||
ದೋಷರಹಿತ ಪರಮೇಶ ನಿರುಪಮ ಪ್ರ
ಕಾಶ ಭಕ್ತ ಪರಿತೋಷ ಈಶನೆ ||ಪಲ್ಲವಿ||
ಧೀರ ಸಂಸಾರವೆಂಬ| ಘೋರಾರಣ್ಯ
ಮಧ್ಯದೋಳ್| ದಾರಿ ಕಾಣೆನು ಪ್ರಭುವೆ ವಿಭುವೇ||
ತೋರಿ ಕೆಡುವ ದುರ್ವಿಕಾರ ವಿಷಯಂಗಳ|
ಹಾರಿ ಕೆಟ್ಟೆನು ಗುರುವೆ| ಸುರ ತರುವೆ||
ಭೂರಿ ಕರಣ ಸಂಚಾರದಿಂದೆ ಬಲುಗಾರಾದೆನು|
ಕರುಣರಸಾಭ್ದೇ ಭವದೂರನೆನುಸುತೀ|
ಕ್ರೂರ ಕರ್ಮವ ನಿವಾರಿಸಿ ಪರಮ ವಿಚಾರವ ತೋರಿ ||1||
ಮೂರು ಮಲಗಳಿಂದೆ ಮೂರು ತಾಪಗಳಿಂದೆ|
ಮೂರು ಗುಣಗಳಿಂದೆ ನಾನೊಂದೆ|
ಮೂರು ಕರ್ಮಗಳಿಂದೆ ಮೂರು ದೇಹಗಳಿಂದೆ|
ಮೂರು ಭಕುತಿಗಳನರಿಯನು ದೊರೆಯೆ||
ಮೂರು ದೀಕ್ಷೆಯೊಳೆರಳ್ಮೂರು ಬಿಡಿಸಿ ಮೂರು|
ಮೂರು ಚಕ್ರ ವರ್ಣಾಕ್ಷರ ದಳಗಳ|
ಮೂರು ಲಿಂಗದನುಭಾವದಿ ಭೇದಿಸಿ|
ಮೂರು ತತ್ವಗಳ ಮೂಲವ ತೋರಿ ||2||
ಆಶೆ ಪಾಶಗಳಿಂದೆ ದೋಷದ್ವೇಶಗಳಿಂದ|
ಕ್ಲೇಶ ಪಂಚಕದಿಂದೆ ನಾ ಬೆಂದೆ||
ದೋಷ ದುರ್ಗಣದಿಂದೆ ಈಷಣ ತ್ರಯದಿಂದೆ|
ಕೋಶವಿವೈದದರಿಂದೆ ಗುರು ತಂದೆ|
ಘಾಸಿಯಾದೆ ಜಗದೀಶ ನಿಮ್ಮ ಪದ|
ಧ್ಯಾಸವಿತ್ತು ಭವರಾಶಿ ಹರಿಸಿ ಪರಿ|
ತೋಷನೆನಿಸಿ ಚಿದ್ಫೂಷ ಘನಮಠನಿ|
ವಾಸ ಭಕ್ತಕುಲಧೀಶ ಗಣೇಶ ||3||

ಅಂಗೈಯೋಳ್ ನಿಜಲಿಂಗವಿರೆ
ಹೆಡ್ಡನಾರೊ ಜಗದೊಳು ಹೆಡ್ಡನಾರೊ|
ಗುಡ್ಡದಳಿಯನ ಭಕ್ತನೆನಿಸಿ ವಡ್ಡಿಗಲ್ಲಿಗೆರುಗುವನೆ ಹೆಡ್ಡ ||ಪ||
ಗುರುವೆ ಪರಿಶಿವನೆಂಬೊ ವಾಕ್ಯವಿರುತಿರಲು ಮತ್ತೊಬ್ಬ ನರನಂ
ಕರೆದು ತಂದವನಿಂದ ಮುಕ್ತಿ ಭರದಿ ಪಡೆಯೆನೆಂಬುವನೆ ಹೆಡ್ಡ ||1||
ಅಷ್ಟ ವಿಧಾರ್ಚನೆಗೆ ಸಲ್ಲದ ಸೃಷ್ಟಿಯ ಪಾಷಾಣಕರದೊಳ
ಗಿಟ್ಟು ಕುಣಿಕುಣಿದಾಡುತೆ ಭಕ್ತ ಶ್ರೇಷ್ಠನಾದೆನೆಂಬುವನೆ ಹೆಡ್ಡ ||2||
ಈಶ ಲಾಂಛನವನ್ನು ತಾಳಿ ಆಶೆರಹಿತನಾಗಿ ಮುಕ್ತಿ|
ಲೇಸಿನಿಂ ಪಡೆಯ ಹಗರಣದಾಸನಂತೆಡೆಯಾಡುವನೆ ಹೆಡ್ಡ ||3||
ನರ ಜನ್ಮವ ದೊರೆತಾಗ ಸದ್ಗುರು ಕರುಣವಡೆದಾಪರಮನೊಳು ತಾ|
ಬೆರೆದು ಸುಖಿಸಲರಿಯದೆ ಮೈ ಮರೆದು ಭವಕೈದುನೆ ಹೆಡ್ಡ ||4||
ಮಿಥ್ಯವಾದೀ ತನುಮನಧನ ಶಿವಂಗಿತ್ತು ನಿತ್ಯವಾದ ತ್ರಿವಿಧ|
ಭಕ್ತಿಮುದದಿ ಪಿಡಿಯದೆ ತಾಂ ವ್ಯರ್ಥವಾಗಿ ಸಾಯುವನೆ ಹೆಡ್ಡ|| ||5||
ಯೋಗ್ಯವಾದ ಬಸವಾದಿ ಪ್ರಮಥಾಗ್ರ ಗಣ್ಯರಮಳ ವಚನ |
ಸಂಜ್ಞೆಯಿಂದರಿಯದೆ ಬರೆ ವೈರಾಗ್ಯದಿಂದೆಡೆಯಾಡುವನೆ ಹೆಡ್ಡ ||6||
ಬಳಸಬಾರದಂತ ದ್ರವ್ಯ ನಿಲಯದೊಳಿರೆ ಬಿಟ್ಟು|
ಜಲಗದೊಳೆವನಂತೆ ಪ್ರಾಣಲಿಂಗವುಳಿದು ಜಾನಿಸುವವನೆ ಹೆಡ್ಡ ||7||
ಕ್ಷೀರಾಂಭುಧಿ ಸನ್ನಿಧಿಯೊಳಿರ್ದು ಹಾರಿಯನಾಂತಗಳಿವುಪ್ಪ
ನೀರನೀಂಟುವನಂತೆ ಶಿವನ ಸಾರದನ್ಯರ ಹಾಡುವನೆ ಹೆಡ್ಡ ||8||
ಮನೆಯೋಳ್ ಸಾಧನಗೈದು ಮತ್ತಾರಣರಂಗದಿ ಸುಮ್ಮನೆ ನಿಂತಿರ್ಪ|
ಮನುಜನಂತೆ ಲಿಂಗವನೆಜಿಸುತ್ತನ ಘಜಂಗಮವಗಲುವನೆ ಹೆಡ್ಡ ||9||
ಏಕೋ ದೇವ ರುದ್ರನೆಂದು ಲೋಕದೊಳು ಶ್ರುತಿಸಾರುತ್ತಿರಲು|
ಕಾಕು ದೈವಗಳನ್ನು ಭಜಿಸಿ ಶೋಕ ವಾರ್ಧಿಯೊಳಾಳುವನೆ ಹೆಡ್ಡ ||10||
ಆ ಶಿವಶರಣರಿದ್ದುದೇ ಕೈಲಾಸವೆಂದರಿಯದೆ ಫಲಪದ|
ದಾಸೆಯಿಂ ಗಿರಿಮುಖ್ಯ ಕ್ಷೇತ್ರವಾಸಂಗಳಿಗೆಡೆಯಾರುವನೆ ಹೆಡ್ಡ ||11||
ಬಾಳೆಗಿಡವ ಕಡಿದು ಕಳ್ಳಿಗೆ ಬೇಲಿಯಿಕ್ಕುವನಂತೆ ಪ್ರಮಥರ|
ಮೇಲೆ ಭಕ್ತಿಯುಕ್ತಿ ಕ್ಷೇತ್ರವಾಸಂಗಳಿಗೆಡೆಯಾರುವನೆ ಹೆಡ್ಡ ||12||
ಹತ್ತು ಮಾನಿಸರೊಳು ತನ್ನುಲಿದೆಣಿಸುತ್ತೊಂಬತ್ತೆಂದಳು ವನೋಲ್ಪ
ರಮಾರ್ಥದಿಂ ತನ್ನಂತಾನರಿಯದೆ ಮರ್ತ್ಯದೊಳಗಳಲುವನೆ ಹೆಡ್ಡ ||13||
ಚರಗುರು ಲಿಂಗಭಕ್ತಿ ಮೋಕ್ಷದಿರುವೆಂದಾ ಶ್ರುತಿ ಶಾಸ್ತ್ರಾಗಮತತಿ|
ಒರಲುತ್ತಿರಲದನಹುದಲ್ಲೋ ಯೆಂದಿರದೊಬ್ಬರ ಕೇಳುವನೆ ಹೆಡ್ಡ ||14||
ಕುರಿಯ ಬಗಲೊಳಿಟ್ಟು ಜಗದೋಳ್ ಕುರುಬ ಹುಡುಕುವಂತೆ ಶಿವತ
ನ್ನುರುವ ಭಾವದೊಲಿಹುದರಿಯದೆ ಪರಿಪರಿಯೋಳ್
ಧರೆಯೊಳಗರಸುವನೆ ಹೆಡ್ಡ ||15||
ಮುಂಗೈಯ ಕಂಕಣಕೆ ಕನ್ನಡಿ ಪೊಂಗಿ ತೋರುವಂತೆ ತನ್ನ|
ಅಂಗೈಯೋಳ್ ನಿಜಲಿಂಗವಿರೆ ಕರ್ಮಂಗಳೊಳು ಬಳಲುವನೆ ಹೆಡ್ಡ |16||
ಆದ್ಯರ ಮರಣ ವಚನವನ್ನು ಚೋದ್ಯದಿಂದ ಲೋದಿ ಕೇಳಿ|
ಸಧ್ಯ ಮುಕ್ತಿ ಪಡೆಯದೆ ಬಹು ವಿದ್ಯೆಯೊಳು ಬಳಲುವನೆ ಹೆಡ್ಡ ||17||
ಸತ್ತವರ ಕುಣಿಗೈದಿ ಸುತ್ತಿಸುತ್ತಿ ನಮಗಾಯುಷ್ಯ ಭಾಗ್ಯ|
ವಿತ್ತು ಪೊರೆವುದೆಂದು ಜಗದೊಳರ್ಥಿಯಲಿ ಬೇಡುವನೆ ಹೆಡ್ಡ ||18||
ಹಿತದಿ ಮನೆಗೆ ಬಂದ ಜಂಗಮವನತಿಗಳೆsದು ಮತ್ತೊಮ್ಮೆ ನಮಗೆ|
ವೃತನೇಮವಿದೆಂದು ಸಹಸ್ರ ಶತಕ ನೆರಹಿ ಮಾಡುವನೆ ಹೆಡ್ಡ ||19||
ಹಿಡಿದು ಭಕ್ತನಾಗದೆ ಮತ್ತೊಡೆಯ ಜಂಗಮನಾಗದೆ ಈ|
ಪೊಡವಿಯೋಳೊಡಲ್ಹರಕನಾಗಿ ಕಡೆಯೊಳ್ ದುರ್ಗತಿಗೈದವನೆ ಹೆಡ್ಡ ||20||
ಕಳದುಳಿದಾ ಪ್ರಮಥರ ಸುವಾಕ್ಯದ್ಹೊಲಬನರಿಯದೆ ಮತ್ತೆ|
ಮಲಪ್ರಬದ್ಧನಾಗಿ ಜಗದೋಳ್ ಗೆಲಸೋಲಕ್ಹೋರಾಡುವನೆ ಹೆಡ್ಡ ||21||
ತರಳಗೆ ನೆರೆ ಕುದುರೆಯದೊಂದು ಕರಿಕಿಯ ಕೊಡು ವಂದದೊಳಿತ್ತ|
ಕುರುಹನೆ ಪಿಡಿದಡೆಯಾಡುತ್ತ ಮೇಲರಿಯದೆ ಭವಕೈದುವನೆ ಹೆಡ್ಡ ||22||
ಪಿರಿಯರನ್ನು ಮರೆತು ತಾನೆ ಗುರುಚರರೇಶನೆಂದು ತನ್ನ|
ಚರಣವನೆ ತೊಳೆ ತೊಳಿಸಿಕೊಂಡು ಸುರಿದು ನಲಿದಾಡುವನೆ ಹೆಡ್ಡ ||23||
ಶ್ರೇಷ್ಠವಾದ ಶಿವನು ತಾನೆ ಎಷ್ಟು ವರ್ಣವಾದ ಪರಿಯ|
ನೈಷ್ಠೆಯಿಂದೆ ತಿಳಿಯದೆ ಕ್ರಯವ ಕೊಟ್ಟಿದಿರಿಟ್ಟಾಚರಿಸುವನೆ ಹೆಡ್ಡ ||24||
ಅರಸರಿಯದ ಬಿಟ್ಟಯಂತಿರ್ಪ ನರಲೋಕಾಚಾರವನೆ ಪಿಡಿದು|
ಶರಣರ ಸನ್ಮಾರ್ಗವನು ಜರಿದು ಚರಿಸಿ ನರಕಕ್ಕೆದುವನೆ ಹೆಡ್ಡ ||25||
ಬಾಳುತ್ತಲೆ ಲಿಂಗೈಕ್ಯನಾಗಿ ಕಾಲರಹಿತನಾಗದಂತೆ|
ಕಾಲಕೈಕ್ಯನಾದೆನೆಂಬ ಕಾಳುಮನುಜನವನೆ ಹೆಡ್ಡ ||26||
ಇಷ್ಟಪ್ರಾಣ ಭಾವವೇಕೊ ನೈಷ್ಟಿಯಿಂದರಿಯದೆ ಭಿನ್ನ
ವಿಟ್ಟಿಜಿಸುತ್ತೀ ಜಗದೊಳಗೆ ತಾಂ ಹೊಟ್ಟೆಹೊರಕೊಂಬುವನೆ ಹೆಡ್ಡ ||27||
ಲಿಂಗಕ್ಕೆ ಮುಖಜಂಗಮವಾದ ಇಂಗಿತವನರಿ ದರ್ಪಿಸದೆ ಜಡ
ಲಿಂಗಕ್ಕೆ ತೋರುಂಡು ಪ್ರಸಾದಂಗವಾಯಿತೆಂಬುವನೆ ಹೆಡ್ಡ ||28||
ನೀನೆ ಶಿವನೆಲೆಮಗನೆ ಎಂದು ಜ್ಞಾನನಿಧಿ ಶ್ರೀಘನಮಠವಾಸ|
ತಾನರುಹಿಸ ನಿಜವಗಲಿ ಜ್ಞಾನಧ್ಯಾನಪೂಜೆಯೊಳಾಳುವನೆ ಹೆಡ್ಡ ||29||

ಇತರರಿಯದಿರ್ದರೇನಲಾ
ಇತರರಿಯದಿರ್ದರೇನೆಲಾ ನಿನ್ನಂತರಂಗ|
ಸ್ಥಿತಿಯು ಮೇಶನರಿಯನೇನೆಲಾ|| ||ಪ||
ಇತರರಿಯದಿರ್ದರೇನು ಶತಶತಾಪರಾಧಗಳನು|
ಕೃತಕತನದಿ ಮಾಡಿ ಧರ್ಮಯುತನು ಮೆನಿಸಿ ಕೊಂಬಭಾವ ||ಅ.ಪ||
ದೇಹ ವಾಸನಾಹಮಾದಿ ಕೂಹಕತ್ವದಂತರಂಗ|
ದ್ರೋಹಿಯಾಗಿ ಪೊರಗೆ ಪುಣ್ಯದೇಹಿಯೆನಿಸಿ ಕೊಂಬಭಾವ ||1||
ಕಾಮ ಕ್ರೋಧ ಲೋಭ ಮೋಹ ತಾಮಸಾದಿಗಳೊಳು ಸಿಲ್ಕಿ|
ಭೂಮಿ ಜನರ ಕೂಡ ಮಹಾಸ್ವಾಮಿಯೆನಿಸಿ ಕೊಂಬಭಾವ ||2||
ವಂಚಕತ್ವ ಕಿಂಚಗುಣ ಪ್ರಪಂಚ ವಾಂಛದಿಂದ ಚಿತ್ತ|
ಸಂಚಲಾತ್ಮನಾಗಿ ನಿಷ್ ಪ್ರಪಂಚಿಯೆನಿಸಿ ಕೊಂಬ ಭಾವ ||3||
ಹೊನ್ನು ಹೆಣ್ಣು ಮಣ್ಣಿನಾಶೆಯನ್ನು ಮನದೊಳಿಟ್ಟು ಜನರ|
ಕಣ್ಣು ಕಟ್ಟಿ ಸುಳಿಯುತೆ ಬಹು ಮಾನ್ಯನೆನಿಸಿ ಕೊಂಬ ಭಾವ ||4||
ಆಶೆರೋಷ ದ್ವೇಷ ವಸ್ತು ದೂಷಕತ್ವದಿಂದೆ ಮಹಾ|
ದೋಷಿಯಾಗಿ ಪೊರಗೆ ಶಿವನ ವೇಷ ಹೊತ್ತು ಚರಿಪ ಭಾವ ||5||
ತನುವೊಳೊಂದು ಮತ್ತೆ ನಿನ್ನ ಮನದೊಳೊಂದು ಬಾಹ್ಯದೊಳ್ವ|
ಚನದೊಳೊಂದ ನಿಟ್ಟು ಗುಣಗುಣೆನುತ ಬೆರಳನೆಣಿಸೊ ಭಾವ ||6||
ಪ್ರಾಣದೊಳಗೆ ಮರಗುತಿಂತು ನೀನು ಕೀರ್ತಿ ವಾರ್ತೆಗಾಗಿ|
ಏನ ಬೇಡಲಿತ್ತು ಮಹಾ ದಾನಿಯನಿಸಿ ಕೊಂಬ ಭಾವ ||7||
ರಾಗ ದ್ವೇಷ ಮೋಹ ಲಜ್ಜೆ ಭೋಗಭಾಗ್ಯಗಳೊಳು ಪ್ರೀತಿ
ನಾಗಿ ಮರ್ತ್ಯದೊಳಗೆ ಬಹುವಿರಾಗಿಯೆನಿಸಿ ಕೊಂಬಭಾವ ||8||
ಘಾತಕಗುಣ ಸೂತಕತ್ವ ಜಾತಿ ಭ್ರಾಂತಿಯಿಂದ ನೇಕ|
ಪಾತಕೇಷ್ಟನಾಗಿ ಸ್ವಯಂಜ್ಯೋತಿಯೆನಿಸಿ ಕೊಂಬ ಭಾವ ||9||
ವಿೂನ ದೊರೆವ ತನಕ ಬಕವ ದೇನುವೆನ್ನದಿರ್ಪ ತೆರದಿ|
ನೀನು ಕಪಟ ವೇಷದಿಂದ ಮೌನಿಯನಿಸಿಕೊಂಬ ಭಾವ ||10||
ಆರು ಕಾಣದಂತೆ ಮನದಿ ಘೋರ ಪಾತಕೇಷ್ಟನಾಗಿ|
ಭೂರಿ ಜನರ ಮುಂದೆ ನೀತಿಸಾರಿ ಪೇಳುವಂತ ಭಾವ ||11||
ದರ್ಪಕಾರಿ ಭಕ್ತಿಯುಕ್ತಿದಪ್ಪಿಯುಭಯ ಭ್ರಷ್ಟನಾಗಿ|
ತಿಪ್ಪಿಸಾರ್ಸಿದಂತೆ ವೇಷದೊಪ್ಪಿನಿಂದ ಚರಿಪಭಾವ ||12||
ಕಳವು ಹಾದರವನು ಲೋಕದೊಳುನುಗೈದು ನೀನು ಮತ್ತೆ|
ಬಲು ವೀವೇಕಿಯೆನಿಸಿ ಮರ್ತ್ಯದೊಳಗೆ ಸುಳಿಯುತಿರ್ಪಭಾವ ||13||
ಮನಸಿನೊಳಗೆಗೈದ ದೋಷ ಜನರಿಗರಿಯ ಬಾರದಿನ್ನು|
ಮನಕೆ ಮನವೆ ಸಾಕ್ಷಿಯಾದ ಘನಮಠೇಶ ತಾನೆ ಬಲ್ಲ ||14||

ಈಶ ಘನಮಠ ನಿವಾಸ
ಕಾಯೊದೈ ಗುರುರಾಯ ಬಸವನೆ|
ಕಾಯೋ ಮೋಕ್ಷಸದುಪಾಯ ಪ್ರಮಥ ಸಮು|
ದಾಯ ವರ್ಯ ನಿರ್ಮಾಯ ನಿರಘನೆ ||ಪ||
ಯೋಗ್ಯಜ್ಞಾನ ವೈರಾಗ್ಯ ಭಕ್ತಿಸೌ
ಭಾಗ್ಯ ಪೂರ್ಣ ಸರ್ವಜ್ಞ ಚಿತ್ತನೆ ||1||
ಕಂದನೆಂದು ದಯದಿಂದ ಹೆದರಬೇ
ಡೆಂದ ಭಯವ ಕೊಟ್ಟಿಂದು ಬಂದು ನೀ ||2||
ಅಕ್ಷಯಕರ ಸಂರ್ತ್ಯಕ್ಷರ ಪಾಠಕ
ಪಕ್ಷ ಭಕ್ತಸುರವೃಕ್ಷ ದಯಾನಿಧೆ ||3||
ಅದ್ಭುತ ಚರಿತ ಜಗದ್ಭರಿತೋಜ್ವಲ
ಚದ್ಭಸಿತಾಂಗ ಸಮುದ್ಭೂಷಣನೆ ||4||
ಸ್ಥೈರ್ಯ ಭಕ್ತಿ ಸೌಂದರ್ಯ ಸತ್ಪಥಾ
ಚಾರ್ಯನಪಮದೌದಾರ್ಯ ಶೌರ್ಯನೆ ||5||
ಅಪ್ರಮೇಯ ಭಕ್ತಿ ಪ್ರಿಯ ಗಾನರ
ಸಪ್ರವೀಣ ಪರಮ ಪ್ರಸನ್ನನೆ ||6||
ಈಶ ಘನ ಮಠನಿವಾಸ ದೀನಜನ
ಪೋಷ ಘೋರ ಭವನಾಶ ನಿತ್ಯನೆ ||7||

ಊರ ತೊರೆದು ಹಾರಿ ಕಾಡಸೇರಿ
ಶರಣನಾಗ ಬಾರ ದಾರಿಗೆ ಈ ಜಗದಿ ಸತ್ಯ ಶರಣನಾಗ ಬಾರ ದಾರಿಗೆ|
ಶರಣನಾಗ ಬಾರದಾರಿಗರುಹಿ ನಿಂದೆ ಶರೀರಕರಣ|
ವುರುತರಾತ್ಮ ಲಿಂಗದಲ್ಲಿ ಬೆರೆದು ಪೂರ್ಣವಾದ ಸತ್ಯ ||ಪ||
ಊರ ತೊರೆದು ಹಾರಿ ಕಾಡಸೇರಿ ನಿತ್ಯ ಜಲ ಫಲಾಪ|
ಹಾರಿಯಾಗಿ ಘೋರ ತಪಸಿ ಸಾರಿಯೆನಿಸಬಹುದು ಸತ್ಯ ||1||
ಈಶನಾಮ ವಾಸುಭೂತಿ ಮೋಸದಿಂದ ಹೂಸಿ ನೆನೆದೆ|
ವಾಸಿಯಿಂ ಗಿರೀಶ ಪುರನಿವಾಸಿಯಾಗಬಹುದು ಸತ್ಯ ||2||
ವಿೂಸೆ ಗಡ್ಡ ಮುಂದೆ ಬೆಳಿಸಿ ಗೋಸಿ ಹಂಗಹರಿದ ಡಂಭ|
ವೇಷದಿಂದ ತ್ರಿವಿಧ ಸನ್ಯಾಸಿಯಾಗಬಹುದು ಸತ್ಯ ||3||
ಸಿದ್ಧರಸವ ಬದ್ಧಗೊಳಿಸಿ ಶುದ್ಧಿಯಿಂದ ಮುದ್ದೆ ಮಾಡಿ|
ಬುದ್ಧಿಯಿಂದಲಷ್ಟಮಂತ್ರ ಸಿದ್ಧಿನಾಗಬಹುದು ಸತ್ಯ ||4||
ಹಲವು ಜಪ ಸಮಾಧಿ ಕ್ರಿಯೆಗಳೊಲಿದು ಮಾಡಿ ತಾನು ಭಿನ್ನ|
ಫಲಪದಂಗಳನ್ನು ಪಡೆದು ಛಲಿಗನಾಗಬಹುದು ಸತ್ಯ ||5||
ಭೋಗಭಾಗ್ಯಗಳೊಳು ವಾಂಛೆ ನೀಗಿ ಸಕಲ ಜನರಿಗಿಷ್ಟ|
ವಾಗಿ ದಾನವಿತ್ತು ಜಗದಿ ತ್ಯಾಗಿಯಾಗಬಹುದು ಸತ್ಯ ||6||
ವೇದಸು ವೇದಾಂತ ನ್ಯಾಯವಾದ ತರ್ಕ ಮರ್ತ್ತದೊಳಗೆ|
ಓದಿ ಪ್ರೌಢಿಯಿಂದೆ ಶಾಸ್ತ್ರವೇದಿಯಾಗಬಹುದು ಸತ್ಯ ||7||
ತೋರ ಸಜ್ಜೆಯಲ್ಲಿಯೊಂದು ತೋರಲಿಂಗವಿಕ್ಕಿ ಮತದ|
ಮೇರೆಯಿಂದ ಕಪಟ ವೇಷಧಾರಿಯಾಗಬಹುದು ಸತ್ಯ ||8||
ಮೂಗು ಮುಚ್ಚಿಕೊಂಡು ತಲೆಯವಾಗದಾಶುಗವನು ಬಲಿದು|
ಯಾಗ ಶ್ಲೇಷ್ಮೆವುಂಬ ಕರ್ಮಯೋಗಿಯಾಗಬಹುದು ಸತ್ಯ ||9||
ಆಗಮಾರ್ಥದರಿವ ನೈಜವಾಗಿ ತನ್ನೊಳರಿಯದೊಂದು|
ಸೋಗು ಹಾಕಿಕೊಂಡು ಒಣವಿರಾಗಿಯಾಗಬಹುದ ಸತ್ಯ ||10||
ಘನಮಠೇಶನೊಳಗೆ ತ್ರಿವಿಧ ತನುವನಿತ್ತು ಮತ್ತೆ ಮರಣ|
ಜನನವಳಿದು ನಿರ್ಗುಣತ್ವವನು ಕರಿಸುತಲಾ ಸತ್ಯ ||11||

ಕರುಣಸಾಗರ ದೇವ
ಕರುಣಸಾಗರ ದೇವ ಕಾಯೋ ನಿತ್ಯ|
ಪರತತ್ವಮತಿ ಎನ್ನ ದೊರೆ ದಾನವೀಯೋ|| ||ಪ||
ಮಾಯಮರ್ದನ ಮೋಕಷೋಪಾಯ ಸದ್ಭಕ್ತನಿ|
ಕಾಯ ಹೃತ್ಸರ ಸಿಜಾಗಾರ ನಿರಸೂಯ ದುರ್ಗುಣ
ಸಮುದಾಯಾವಹಾರ ||1||
ಎನಗೇನು ಬೇಡ ನಿಮ್ಮನುಭಾವಿಗಳ ಪದವನಜರೇಣು
ಶಿರದೊಳು ಧರಿಸಿ ನೈಜ|
ವನು ತೋರಿ ಕರ್ಮವೆಲ್ಲವನು ಪರಿಹರಿಸಿ ||2||
ಶಾಶ್ವತ ಘನಮಠದೀಶ್ವರ ನಿನ್ನ ಚಿದೈಶ್ವರ್ಯದೆನ್ನ ಭಾವದಲಿ ಸಕ|
ಲೇಶ್ವರ ನೀ ನೆಲಸಿಹುದದನೆ ಬೇಗದಲಿ ||3||

ಕ್ರಿಯಾಶೂನ್ಯ ಜ್ಞಾನ ವ್ಯರ್ಥ
ಓದಿ ಓದಿ ಯೇನಾದಿ ಮರುಳೆ ಯದರಾಗಿ ತಿಳಿಯಲಿಲ್ಲ|
ಓದಿದ ಫಲ ಸದ್ಭಕ್ತಜನರಿಗಹುದೀ ಧರೆಯೊಳು ಖುಲ್ಲ ||ಪ||
ಹಲವು ಶಾಸ್ತ್ರ ತಂತ್ರಗಳೋದಿ ತ್ರೈಮಲವನು ಬಿಡಲಿಲ್ಲ|
ಫಲವೇನೈ ಗಿಳಿಯೋದಿ ಮಲವ ತಿಂದೊಲದಾಯ್ತು ಚದುಲ್ಲ||ಅಪ||
ಮಲವಿರಹಿತ ಶರಣರ ನಡೆನುಡಿಗಳ ತಿಳಿದು ಚರಿಸಬಲ್ಲ|
ಬಲವಂತನೆ ಪಂಡಿತನವಗೀ ಜಗದೊಳಗಾರ್ ಸರಿಯಲ್ಲ|| ||1||
ವೇದಶಾಸ್ತ್ರು ಪೌರಾಣಾದಿಗಳು ಹಾದರದೋದಲ್ಲ|
ಶ್ರೀದಸಖನ ನಿಜವರಿಯದೆ ಕೂಗುತೆ ಗಾದಿಯಾದವಲ್ಲ||
ವೇದಶಾಸ್ತ್ರ ಪುರಣಾಗಳೋದಿದ ವೇದಾದಿಗಳೆಲ್ಲ|
ಭೇದವನರಿಯದೆ ಭಂಗಬಟ್ಟವರು ಪೋದವು ನಿಜವಲ್ಲ|| ||2||
ಕುಂದದಾಸೆಯಿಂದೋದಿ ಜನರನೊಲಿಸಿಂದು ಬಾಳ್ವುದೆಲ್ಲ|
ಹಂದಿತಪವ ಮಾಡುತೆ ಪಾಳ್ಮನೆಯನ್ನೊಂದೆ ಪಡಿವೊಲಲ್ಲ||
ಛಂದಸಾದಿ ಷಟ್ ಶಾಸ್ತ್ರಗಳವು ಶಿವನಂದವರಿಯಲಿಲ್ಲ|
ಮಂದಮನುಜ ಯವನನುಕರಿಸುತೆ ಗರ್ವಾಂಧನಾದಿಯಲ್ಲ|| ||3||
ಕಪ್ಪುಗೊರಳನುಸುರಿಪ್ಪಾಗಮತತಿಯೊಪ್ಪಿ ಪಠಿಸಲಿಲ್ಲ|
ಅಲ್ಪ ಕಥೆಗಳನು ಪೇಳಿಯೊಳಡಲು ಹೊರುತಿಪ್ಪಿಹುದದನೆಲ್ಲ||
ತುಪ್ಪದಾಸೆಗಾಶುನಕನ ಶುದ್ಧ ವದಪ್ಪಿತಿಂಬೊಲಲ್ಲ|
ತಿಪ್ಪಿಯ ಬಾಳುವೆಯಪ್ಪವನಿನಗೆ ಗಣಪ್ರಸಾದವಿಲ್ಲ|| ||4||
ಆಯತವರಿಯದ ಜನರು ಮೆಚ್ಚಿ ಬಹುಮಾಯದ ನುಡಿಹೊಲ್ಲ
ಬಾಯಿ ತೆರದು ಪೇಳಲ್ ದಾರಿದ್ರಘಹೋಯಿತೆ ನಿನಗೆಲ್ಲ||
ಧೀಯುತರದನಲ್ಲಾ ಯೆಂದುಸುರಲುಪಾಯದಿ ತಿಳಿಲಿಲ್ಲ|
ಛೀಯೆನಲದನೆ ಬಲಿಯನಿಕೊಳುವವನ್ಯಾಯವಾಯಿತಲ್ಲ|| ||5||
ಆಚೆಯ ಮಾತದನೀಚೆಯೊಳೂಹಿಸಿ ಚಾಚಲದೇನಿಲ್ಲ|
ಈಚಲದಿಂದ ನರಿಯು ವೈಕಾರದಿಯಾಚರಿಸುವೋಲಲ್ಲ||
ಯಾಚಕ ವೃತ್ತಿಗೆ ಭೂಚಕ್ರದಿ ಯತಿವಾಚಕನಾದೆಲ್ಲ|
ನೀಚ ಮನುಜ ಜ್ಞಾನಾರ್ಥಕೋದಿ ಭವಮೋಚನಾಗಲಿಲ್ಲ|| ||6||
ಶ್ರೀಯುತ ಶಾಸ್ತ್ರವನೊರೆದು ನೀನು ಮೋಕ್ಷಾಯತವರಿಲಿಲ್ಲ|
ಕಾಯಮೋಹ ಮಮಕಾರ ವಾಸನವದೇ ಉಳಿದಿಹುದಲ್ಲ||
ನ್ಯಾಯಶಾಸ್ತ್ರ ನೀತಿಯ ಪೇಳುತಲನ್ಯಾಯದೋಳಿಹುದೆಲ್ಲ|
ನೇಯಪಾಲ್ ಪರರಿಗೆ ಕೊಟ್ಟು ಮಹಿಷಿ ಪಶುವೊಲಾಯಿತಲ್ಲ|| ||7||
ಶುಂಭಕವಿಗಳಾಶಯವರಿಯದೆ ನೀ ಹುಂಬತನದಿ ಸುಳ್ಳಾ|
ಕೊಂಬಕಿತ್ತದಾಡಿನಪರಿಯೊದರುತೆ ಶುಂಭನಾದಿಯಲ್ಲ||
ನಂಬಿ ಪ್ರಮಥರಾಡಂಬರ ವಚನವ ಸಂಭ್ರಮದರಿಲಿಲ್ಲ|
ತೊಂಬುಲಗಳ್ಳನೆನಿಸುತನ್ಯರ ನುಡಿಗಿಂಬುಗೊಟ್ಟೆಯಲ್ಲ|| ||8||
ಸ್ವರ್ಣವ ತೂಗಿದ ಕಟ್ಟಳೆಯದು ತಾಂ ಸ್ವರ್ಣವಾಗಲಿಲ್ಲ|
ವರ್ಣಕ ವಸ್ತುಕ ಟೀಕೆಯ ಪೇಳಿನೀಂ ಪೂರ್ಣನಾಗಲಿಲ್ಲ||
ದುರ್ನರನೇ ಶರಣರ ವಾಕ್ಕವನಾಕರ್ಣಿಸಿ ತಿಳಿಲಿಲ್ಲ|
ನಿರ್ಣಯವರಿಯದೆ ಒದರಿಯೊದರಿ ನರಕಾರ್ಣವಾಳಿದಲ್ಲ|| ||9||
ಕುರಿಯಾಳ್ದನ ಕುರುಹರಿದು ಬೆಂಬಿಡದೆ ತಿರುಗಿತಿರ್ಪುದಲ್ಲ|
ನರನಾಗುತ್ತಕ್ಷರಿತನಾಗಿ ಕರ್ತರನು ತಿಳಿಯಲಿಲ್ಲ||
ಕುರಿಗಿಂದತ್ತಲು ನಿನ್ನ ಬಾಳು ಈ ಧರೆಯೊಳಗಿಹುದಲ್ಲ|
ಗರುವದಿಂದ ಶರಣರನು ಜರೆದು ಬಹು ದುರಿತವಡದೆಯಲ್ಲ|| ||10||
ನಿಶ್ಚಲವಸ್ತುವನರುಪುವ ಹಿರಿಯರ ನಚ್ಚಿ ಭಜಿಸಲಿಲ್ಲ|
ಹುಚ್ಚುನಾಯಿ ಬೇಟೆಗೆ ಬಿಡಲೊಡೆಯನ ಕಚ್ಚುವೋಲಾಯ್ತಲ್ಲ||
ಅಚ್ಚಶರಣರನುವರಿಯದೆ ನೀಂಬಹು ತುಚ್ಛವಾಡಿದಲ್ಲ|
ಮೊಚ್ಚಿಲಿ ಬಾಯೊಳಗುಚ್ಚಿ ಹೊಯಿಸುತೆ ಮನೆಚ್ಚರಿಸುವನಲ್ಲ|| ||11||
ವೇದಾಂತದೊಳುದ್ಭವಿಸಿದ ಜ್ಞಾನವದಾದಿ ವಿದ್ಯೆಯಲ್ಲ|
ಸಾಧಿಸಿ ಸುಜ್ಞಾನದಿ ಚರಿಸುವನವನೇ ದೊರೆ ಜಗಕೆಲ್ಲ||
ಭೇದವಾದಿ ಚರನೋದಿ ಪೇಳ್ವ ಮಹದಾದಿ ತತ್ವದೆಲ್ಲ|
ಮಾದಿಗರೊಳು ಶ್ರುತಿ ಸರಸದೋದಿದಂತಾದುದು ನಿಜವಲ್ಲ|| ||12||
ಖಂಡಪರಶುವಿನ ಶರಣರನುಭವವನುಂಡು ದಣಿಯಲಿಲ್ಲ|
ಕೆಂಡವ ತುಳಿದಿಹ ಮಂಗನಂತೆ ಗರಿಕೊಂಡು ಬಿದ್ದಿಯಲ್ಲ||
ಭಂಡ ನೀನುಸುರ್ಧ ವೀರಶೈವದ ಪ್ರಚಂಡ ವಿದ್ಯೆಯಲ್ಲ|
ಚಾಂಡಾಲರ ಭಾಂಡದೊಳಿಹ ತೀರ್ಥವ ಕಂಡೊಲಾಯಿತಲ್ಲ|| ||13||
ಜಲಧಿ ಬಾಯ್ದೆರೆಯೆ ಹಲವು ರತ್ನಗಳು ಹೊಳೆದು ದೊರೆವವಲ್ಲ|
ಕಲಕು ನೀರು ತುಂಬಿದ ಮಡುವದು ಬತ್ತಲು ಹೊಲಸುಗಳಲ್ಲ||
ಬಲವತ್ ಶರಣರು ಬಾಯ್‍ದೆರೆಯಲು ಮುಕ್ತಿಲಲನೊಲಿವಳಲ್ಲ|
ಕಲಹನರರು ಬಾಯ್ದೆರೆಯೆ ನರಕದೋಕುಳಿಯಾಗಿಹುದಲ್ಲ|| ||14||
ಸಾಧಿಸಿ ನಿತ್ಯಾನಿತ್ಯವಿವೇಕವ ಭೇದಿಸಿ ತಿಳಿಲಿಲ್ಲ|
ಗಾದಿಮಾತುಗಳ ಕಲಿತು ನೀನು ಪಶುವಾದಿಯೆನಿಸಿದೆಲ್ಲ||
ಮೇದಿನಿಯೋಳ್ ಪರಮಾರ್ಥವರಿಯದನ ವೇದವಿದ್ಯೆಯೆಲ್ಲ|
ಓದಿ ಕೆಟ್ಟ ಬರೆ ಕೂಚಭಟ್ಟನಂತಾದುದು ನಿಜವಲ್ಲ|| ||15||
ಆನೆಯ ಕಂಡಾಶುನಕ ಬೊಗಳಲದಕೇನು ಕೊರತೆಯಲ್ಲ|
ಹೀನಮಾನವರು ಜರಿಯಲದಕೆ ಸುಜ್ಞಾನಿಯಳುಕಲಿಲ್ಲ||
ಕಾಣದೊಂದು ಕಂಡೊಂದಾಡಲ್ಕನುಮಾನವಗೊಳಲಿಲ್ಲ|
ಭಾನುವಿಂಗೆ ಮಣ್ ತೊರಲು ಕಣ್ಣೋಳ್ ತಾನೆ ಬೀಳ್ವುದಲ್ಲ|| ||16||
ಜಾತಿಹೀನರಿಗೆ ಜಾರ ಜನರಿಗೀ ನೀತಿ ಸೊಗಸದಲ್ಲ|
ನೀತಿವಂತರಿಗೆ ನಿಜ ಮಹೇಶ್ವರರ್ಗೀತೆರ ಪಾಲ್ವಳ್ಳಾ||
ಮಾತುಗಳ್ಳರಿಗೆ ಪಾತಕೇಷ್ಟರಿಗಿದೇ ತೊರೆಯದೆಸಲ್ಲ|
ಪ್ರೀತಿಲಿ ಘನಮಠನಾಥಕೃಪೆವಡೆದಾತನಿದನು ಬಲ್ಲ|| ||17||

ಕುಲವೇ ಶಿವಕುಲವೈ
ಕುಲವೇ ಶಿವಕುಲವೈ ಭಕ್ತನ|
ಕುಲವೇ ಶಿವಕುಲವೈ||
ಕುಲವೇ ಶಿವಕುಲ ವಿಲಸದ್ ಗುರುಕರ|
ಸ್ಥಲದೊಳು ಜನಿಸಿದಮಲ ಹರಭಕ್ತನ|| ||ಪ||
ಕೆಸರೋಳ್ ಕುಂಜವದು ಜನಿಸೆ|
ಕೆಸರೆನಿಸದ ತೆರನು|
ಅಸಮ ಪುಣ್ಯದಿಂ ಪಶುಪತಿ ಭಕ್ತನೆ|
ನಿಸಿ ತಾನೆಲ್ಲುದಯಿಸಲಾತನ ಸತ್| ||1||
ಮುತ್ತುದಯಿಸಿ ಜಲದೊಳ್ ಜಲವದು|
ಮುತ್ತಾಗಿರದದರೋಲ್||
ಮರ್ತ್ಯದೊಳಗೆ ತನುವೆತ್ತು ಪೂರ್ವವಳಿ|
ದುತ್ತಮ ಗುರು ಸತ್ ಪುತ್ರನಾದವನ|| ||2||
ಹಸರು ಪುಳನ ಭ್ರಮರ ಪಿಡಿದೊಯ್|
ದ್ಹಸಿಯ ಗೂಡೊಳದರ||
ಹಸನಾಗಿಡೆ ಪರವಶದಿ ಭೃಂಗನಾ|
ಗೆ ಸದಾ ಪರಿಗುರು ಶಿಶುವಾದಾತನ|| ||3||
ಧರೆಯ ಮೇಲಿನ ಜಲವ ಧರೆಯೊಳ್|
ಶರಧಿಯಳೊಡವೆರೆವಾ||
ಪರಿಯಿಂದೀ ತನುಕರಣ ಪ್ರಾಣಗುರು|
ವರಗರ್ಪಿಸಿ ತಾಂ ಗುರುವಾದಾತನ|| ||4||
ಜನನೀಪಿತರ ಸಂಗದಿ
ತಾ ಜನಿಸಿದ ಶರೀರ|
ಮಾಜದೆ ಖಂಡಿಸಿ ಯಾ ಜಗದ್ಗುರು ನಿ
ರ್ ಬೀಜದೀಕ್ಷೆವಡೆದೀಜಿತಪಾಶನ|| ||5||
ತಂದೆ-ತಾಯ್ಗಳವಗೆ ಹಿಮಗಿರಿ|
ನಂದನೇಶರೆಮಗೆ||
ಬಂಧು ವರ್ಗಮವರ್ಗಿಂದು ಭಕ್ತಜನ
ವೆಂದು ಹೊಗಳುವದರಿಂದ ಮಹಿಮನ|| ||6||
ನಾದಾಂಶದಿ ಜನಿಸಿ ಮತ್ತಾ|
ನಾದಾಂಶದಿ ನಟಿಸಿ||
ನಾದತ್ಮಕ ತಾನೆಂದು ತಿಳಿದು ಪರ
ನಾದ ಲಿಂಗಗುರು ಬೋಧದಿ ಪಡೆದನ|| ||7||
ವೇಧೆ ಸುಮಂತ್ರ ಕ್ರಿಯಾ ದೀಕ್ಷೆಯ|
ಮೋದದಿ ಪಡೆದನಯ್ಯಾ||
ಈ ಧರೆಯೊಳು ತನ್ನಾಧಿಮಧ್ಯ ತುದಿ|
ಸಾದರದಿಂ ತಿಳಿದಾ ಶಿವಾತ್ಮಕನ ||8||
ಮಲ ಸಂಭೂತರಿಗೆ ಜಗದೊಳ್|
ಕುಲದ ಹಂಗವರಿಗೆ||
ಸುಲಭ ಘನಮಠ ಸ್ಥಲದೊಳು ನೆಲೆಸಿದ|
ಲಲಿತ ಶ್ರೀ ಗುರುವಿನೊಳು ಬೆರೆದಾತನ|| ||9||

ಕೊಡು ಕೊಡು ಬೇಗ
ಕೊಡು ಕೊಡು ಕೊಡು ಕೊಡು ಬೇಗ|
ಹಡೆದೊಡವೆ ಶರಣ ಸಂಗತಿಗೀಗ||
ಕಡು ಲೋಭದಿ ಘಳಿಸಳಿವಾಗ ನಿ
ನ್ನೊಡನೆ ಬಾರದದರೊಳು ಹಾಗ ||ಪ||
ಸತಿ ಸುತ ಹಿತರಿಗೆ ಬೇಕೆಂದು ಧನ|
ವ್ಯಥೆಯೊಳು ಗಳಿಸಿ ಮಡಿಯೆ ಮುಂದು|
ಸತಿಪರಪತಿಗಡಕುವಳಂದು ಅರಿ|
ಸುತನಾಹಿತರ ಹಿತರುಮೆಂದು ||1||
ಧನವ ಭೂಮಿಯ ಗಿದಿಡಬೇಡ ಉರು|
ಫಣಿಭೂತಂಗಳು ನೆಲಸಿ ಗಡ|
ನಿನಗೆ ಸಾಧ್ಯವಾಗದೊ ಮೂಢ ಸು|
ಮ್ಮನೆ ಕೆಡುವದು ನೀನೋಡ ನೋಡ ||2||
ಉಣದೆಯುಡದೆ ಕೃಪಣ ತನದೊಳು ಬಲು|
ಹಣವ ಘಳಿಸಲೇಂ ಮೋದದೊಳು||
ಕುಣಿಯೊಳಗಿಡುವಾವೇಳೆಯೊಳು ಮ|
ಣ್ಣನೆ ತುಂಬುವರವಯವದೊಳು ||3||
ಧರ್ಮಕಗ್ನಿನೃಪತಸ್ಕರರು ಬಲು|
ಮರ್ಮದಿ ತಾಂ ಭಾಗಾದಿಯರು||
ಧರ್ಮಹೀನನಾಗಿರಲವರು ತನು|
ಚರ್ಮವೆತ್ತಿಯ ಪಹರಿಸುವರು ||4||
ನಿತ್ತಯವಲ್ಲಿವಿ ಸಂಪತ್ತು ಹಿಂದೆ|
ಕರ್ತರಾಗಿ ಹೋದರು ಸತ್ತು|
ಮೃತ್ಯುವಿಗಾಗುವಿ ನೀ ತುತ್ತುಸತ್|
ಪಾತ್ರದಾನವರಿತೀ ಹೊತ್ತು ||5||
ಶಿವನ ಸೊಮ್ಮು ಶಿವಶರಣರಿಗೆ ನೀ|
ನವಿವೇಕದಿ ವಂಚಿಸಲು ಮಿಗೆ||
ಜವನ ಭಟರು ತಮ್ಮೂರೊಳಗೆ ಕಾ|
ಡುವರು ಹಂಗಿ ಹಂಗಿಸಿ ಕಡೆಗೆ ||6||
ಧರಣಿಯೊಳಗೆ ಘನಮಠಧೀಶ ತನ್ನ|
ಮರೆಯಲೆಂದು ದ್ರವ್ಯದೊಳಾಸೆ||
ಪರಿಕಲ್ಪಿಸಿ ಮಾಡುವ ಮೋಸ ಇದ|
ನರಿತು ಸುಜನರಿಗೆ ಮಾನೀಸ ||7||

ಗುರುವೇ ನೀ ಕರುಣಿಸೋ
ಗುರುವೇ ನೀ ಕರುಣಿಸೋ ಬೇಗ ||ಪ||
ಪರಮಪಾವನ ನಿಮ್ಮ ಉರುಭಕ್ತಿ ಜ್ಞಾನಸ|
ದ್ವಿರತಿ ಸಂಪದವೆನ್ನ ದೊರೆಯೇ ನೀ ಕರುಣಿಸೊ ||1||
ಅನುಮಾನವಳಿದೆನ್ನ ತನುಮನಧನವ ನಿಮ್ಮ|
ದೆನಿಸಿ ಪರಮಸುಖವನಧಿಯೊಳಿಹುದನೆ ||2||
ಘನಮಠವಾಸನೆನ್ನನು ಪರಿಕಿಸದೆ ಸ|
ಜ್ಜನಶರಣರ ಸಂಗವನುದಿನ ದಯದಿ ನೀ ಕರುಣಿಸೊ ||3||

ಗಿರಿಧರ ಶರ ಸ್ಮರಹರ
ಪರಮೇಶ ಪಾಹಿ ಜೀಯಾ ಸುಖಕರ ಶಿವ ಮಹನೀಯ ||ಪ||
ವರದ ತ್ರಿಜಗದ್ ರಕ್ಷ ಗತಮಣ ದಕ್ಷ ಶಿಕ|
ಪುರಹರ ಮುನಿಗಣ ಪಕ್ಷ ಶಿವಶರಣ ಕಲ್ಪವೃಕ್ಷ ||1||
ಸಾಮಗಾನ ಲೋಲ ಭಮ ಭೀವ ವಿಜಿತ ಕಾಲ|
ಶುಭನಾಮ ವರದಯಾಲ ಧೃತ ಸೋಮ ಮುಕ್ತಿ ಮೂಲ ||2||
ಭಾವ ಭವ ವಿನಾಶ ಸದ್ಭಾವ ನಿಜ ನಿವಾಸ ಹೈ|
ಮಾವತಿ ಸುಪ್ರಾಣೇಶ ಮದ್ದೇವ ಘನಮಠೇಶ ||3||

ಗಿರಿಜಾ ರಮಣ ಮಹೇಶ
ಗಿರಿಜಾ ರಮಣ ಮಹೇಶ ಚಿರಮಾಮವ ಜಗದೀಶ|
ಶರಭವ ವರ ಜನಕ ಚಿದಾಭರಣ ಭವ ವಿನಾಶ ||ಪ||
ದುರಿತಗಹನದಹನ ಶಿವಶಂಕರ ಮರಣರಹಿತ ಸುಧಾ
ಕರ ಸರಸಿಜಸಖ ಶಿಖಿದೃಗ ಮುರಹರಪ್ರಿಯ ಭೋ
ಶಿವ ವ್ಯೋಮಕೇಶ ||1||
ನಂದಿವಾಹ ನಾಮಳಯತಿವೃಂದ ನಮಿತ ಚರಣ ಶ್ರೀ|
ನಂದನ ಮದ ಸಿಂಧೂರ ಪ್ರಮೃಗೇಂದ್ರ ಶಾಶ್ವತಾದ್ವಯ
ಸುಗಿರೀಶ ||2||
ವರದ ಶ್ರೀ ಘನಮಠ ನಿವಾಸ ಶರಣಕುಲಚಕೋರ ಗೌರೀ|
ದ್ವಿರದ ಚರ್ಮಾಂಬರ ಕೃಪಾರಸ ಶರಧೆ
ಪಾಂಡುರಗಾತ್ರ ಸುಪರಮೇಶ ||3||

ಗುರುರಾಯ ಬಸವಂಗೆಣ್ಣೆ
ಶ್ರೀ ಮತಿಯುತ ಗುರುರಾಯ ಬಸವಂಗೆಣ್ಣೆ
ಶ್ರೇಯರ್‍ಚ್ಚುವ ಬನ್ನಿರೆ ||ಪ||
ಸನ್ನುತಾಂಗಿಯರು ಸ್ವರ್ಣದ ಬಟ್ಟಲೊಳು ಸಂಪಿ
ಗೆಣ್ಣೆಯ ತುಂಬುತಲಿ|
ಮನ್ನಣೆಯಿಂ ಸುಪ್ರಸನ್ನ ಬಸವಣ್ಣಗೆ
ಳ್ಳಣ್ಣೆ ಹಚ್ಚುವ ಬನ್ನಿರೆ ||1||
ಸಾರ ಕಸ್ತೂರಿ ಘನಸಾರ ಶ್ರೀಗಂಧದ
ಸಾರವಗಡಣಿಸುತೆ|
ಮೂರು ಲೋಕಂಗಳ ಮುದದಿ ಪೊರೆವ ಘನ
ಧೀರಗ್ಹಚ್ಚುವ ಬನ್ನಿರೆ ||2||
ಚಿನ್ನದೋಲೆಯ ಬಳೆ ರನ್ನದ ಮೂಗುತಿ
ಯನ್ನುಳಿದಾ ತೊಡಿಗೆಗಳ|
ಚೆನ್ನಾಗಿ ಧರಿಸುತಲಣ್ಣ ಬಸವಣ್ಣಗೆ
ಳ್ಳಣ್ಣೆ ಹಚ್ಚುವ ಬನ್ನಿರೆ ||3||
ಶರಣ ಸತಿಯರು ಪರಮ ಮುತ್ತೈದೇರು
ಹರುಷದಿಂದಲಿ ಪಾಡುತೆ|
ಸಿರಿಗಂಧದೆಣ್ಣೆಯ ಸ್ಥಿರಮುಕ್ತಿಯರಸೆಗೆ
ಭರದಿ ಹಚ್ಚುವ ಬನ್ನಿರೆ ||4||
ಅಗಣಿತ ಮಹಿಮಗೆ ಜಗದೇಕವೀರಗೆ
ನಿಗಮ ಗೋಚರನಿಗೆ|
ಸೊಗಸಿಂದಲೆಳ್ಳೆಣ್ಣೆಯಘಹರ ಬಸವಗೆ
ಸುಗುಣೇರ್ ಹಚ್ಚುವ ಬನ್ನಿರೆ ||5||
ಎಲ್ಲ ಜನರೋಳೋರ್ವನಲ್ಲ ವೀತನೆ ಶಿವ
ಹುಲ್ಲೆಗಂಗಳೆಯರೆ|
ಉಲ್ಲಾಸಂದಿದೆಣ್ಣೆ ಕಲ್ಯಾಣ ಬಸವಂಗೆ
ಚೆಲ್ವೇರ್ ಹಚ್ಚುವ ಬನ್ನಿರೆ ||6||
ಗಂಗಾಂಬೆಯರ ಪ್ರಾಣ ಸಂಗವಾಗೊಪ್ಪುವ
ಸಂಗನ ಬಸವನಿಗೆ|
ಶೃಂಗಾರದಲಿ ಪಾಡುತಂಗನೆಯರು ತೈಲ
ವಿಂಗೆದ್ಹಚ್ಚುವ ಬನ್ನಿರೆ ||7||
ಇದೆ ಮುಕ್ತಿ ಮಾರ್ಗಮಿಂತಿದೆ ಭಕ್ತಿ ಮಾರ್ಗಮಿಂ
ತಿದೆ ಧರ್ಮ ಮಾರ್ಗಮಿದೆ|
ಮದನಾರಿ ಭಕ್ತಿಯರ್ ಸದಯ ಬಸವಂಗೆಣ್ಣೆ
ಮುದದಿ ಹಚ್ಚುವ ಬನ್ನಿರೆ ||8||
ಬಸವನ ನೋಡುತೆ ಬಸವ ಪಾಡುತೆ
ಬಸವನೊಳ್ ಕೊಡುತೆ|
ವಶವಾಗಿ ಘನಮಠವಾಸಗೆ ಕಮ್ಮೆಣ್ಣೆ
ಕುಶಲೇರ್ ಹಚ್ಚುವ ಬನ್ನಿರೆ ||9||

ಗುರುವರ ಪಾಹಿಸದಾ
ಗುರುವರ ಪಾಹಿ ಸದಾ ಮಾಂ ಭೋ|
ಭೋ ಭೋ ಭೋ ಭೋ ||ಪ||
ಭಾವ ಭವಾಹಿತ ಭವಭಯ ಕುಲಹತ|
ಅಗಣಿತಾಘಾಪಹಾರ ಭೋ| ಗುರುವರ ಅಗಣಿತಾ ಭೋ ||1||
ಘನಮಠ ವಾಸ| ಮುನಿಗಣ ಪೋಷ|
ಜನನ ಮರಣ ನಾಶ| ಗುರುವರ ಜನನ ಮರಣ ನಾಶ ||3||

ಘನಮಠ ವಾಸ
ಪಾವನ ನಾಮ ಭೋ ದೇವ ಪಾಹಿಮಾಂ|
ದೇವ ದೇವ ಪಾಹಿ ಮಾಂ ||ಪ||
ಮೃಢ ಕರಣಾರಸ ಜಡಧೆ ಗಿರೀಶ|
ಉಡುಪತಿಭೂಷ ಭೋ ದೇವ ಪಾಹಿ ಮಾಂ ||1||
ನಿಗಮ ಹಯಾದ್ವಯ ತ್ರಿಗುಣ ವಿದೂರ|
ನಗವರ ಚಾಪ ಭೋ ದೇವ ಪಾಹಿ ಮಾಂ ||2||
ಘನಮಠ ವಾಸ ಮುನಿಜನ ಪೋಷ|
ಪ್ರಾಣವ ಸ್ವರೂಪ ಭೋ ದೇವ ಪಾಹಿಮಾಂ ||3||

ಚಿರಸೊನ್ನಲಪುರ
ಸಿದ್ಧರಾಮಘ ವಿರುದ್ಧ ಜಯತು ಜಗ|
ದುದ್ಧಾರ ಪರಿಶಿವಾಕಾರರೆ ||ಪ||
ಜನನ ಮರಣ ಭಯ ಘನಮಾರುತ ಶುಭ|
ಗುಣ ತ್ರಿನಯನ ಸುವಿಚಾರರೆ ||1||
ಅವಿನಾಶನ ಶಾಂಭವ ದೀಕ್ಷಾಯತ|
ಪ್ರವಿಮಲಮನಸಾಂಭೋಜರೇ ||2||
ಚಿರಸೊನ್ನಲಪುರ ವರನಾಥಾಮಯ|
ಹರ ಘನಮಠ ನಿಜವಾಸರೆ ||3||

ಚೆನ್ನ ಬಸವೇಶ
ಚೆನ್ನಬಸವೇಶ ಚಿದಮೃತಸಾಗರ|
ಗಣಕುಶಲ ಶೇಖರ ||ಪ||
ಪರಮ ಪ್ರಸಾದ ಸುಶರೀರವೆನಿಸಿದುರು
ತರ ಷಟ್‍ಸ್ಥಲ ಗುರುವರ ನಿರುಪಮ ಶಿವ ||1||
ಪ್ರಣವದ ರಹಸ್ಯಾರ್ಥವ ಸಿದ್ಧರಾಮಗೆ|
ಅನುವಿಂದಲರುಹಿಸಿದನಘ ಕೃಪಾಕರ ||2||
ಗುರು ಬಸವೇಶನ ಕರುಣ ಸ್ವತಂತ್ರದಿ|
ಭರದಿ ಪಡೆದ ಸುರುಚಿರ ಘನಮಠಪತೆ ||3||

ಜನರು ಹಾಡಿ ಹರಸಲು
ಲೋಭಿಗಿಂದಿತರವಾಗಿ|
ದುರ್ಗುಣಗಳೀ ಭುವಿಯೊಳುಂಟೆ ನೋಡೆ| ಮತ್ತೆ ||ಪ||
ಗುರುಲಿಂಗ ಚರವರ್ಯರೂ|
ಸದ್ಭಕ್ತರುರೆ ಮಹೇಶ್ವರರೆಲೆಗಳು|
ಬಂದು ಭರದಿ ಭಿಕ್ಷಾಯನಲ್ಕೆ|
ವೈರಿಗಳ ಪರಿಗಂಡು ಪರಿವಜ ಶಿವಾ ಮತ್ತೆ ||1||
ಮನಿಯೊಳಗೆ ಹೆಣನು ಪೋಗೆ ಅಲ್ಲಿರುವ|
ಜನರ ಮುಂದಳಲ್ಪ ಬಿಳಲ್ವನೆದಕೆ||
ಹಣ ವೆಚ್ಚವಾದುದಕ್ಕೆ|
ಅಳುವನಾ ಹೆಣಕಳನು ಬಿಕ್ಕಿ ಬಿಕ್ಕಿ ಮತ್ತೆ ||2||
ಬೇಡ ಬಂದ ವರ್ಗಳೊಡನೆ|
ಒಂದು ಮಾತಾಡಗರ ಸೋಂಕಿದನೊಲೂ|
ಜನರೂ ಹಾಡಿ ಹರಸಲು ಹೆಣನದಲ್
ತಾನು ಮುಖ ಬಾಡಿತ್ತಲತ್ತ ನೋಡಾ ಮತ್ತೆ ||3||
ಹೆಣನಾಶ್ರಯಿಸಿದ್ದವರಿಗೆ|
ಅಷ್ಟಷ್ಟು ಹಣವು ದೊರಿವದು ಜಗದೊಳು ನೋಡೆ
ಹೆಣಕಿಂದ ಕಷ್ಟವಾದ|
ಈ ಜೀವದಾ ಹೆಣನಾಶ್ರಯಿಸಿ ನಿಷ್ಫಲಾ ||4||
ಶುದ್ಧ ಲುಬ್ಧನ ಕೊಲ್ಲಲು|
ಜಗದೊಳಗೆ ಮದ್ದೊಂದಿಲ್ಲ ನೋಡೆ|
ಅವನ ಬದಿಲಿದ್ದ ದ್ರವ್ಯವ ಕೇಳಲು|
ಸಾಯ್ವ ಪ್ರಸಿದ್ಧ ಘನಮಠ ವಾಸನಗಲಿ|| ||5||

ಜಯತೇ ಸದಾಶಿವ
ಜಯ ತೇ ಸದಾಶಿವ ಜಯ ಜಯ ಶಿವಾಧವ ||ಪ||
ಶ್ರೀಶ ಸಕಲ ಸಮಸ್ತ ಭುವನ ಪೋಷ ಶ್ರುತಿಹಯ|
ಸರ್ವೇಶ ಗಗನಕೇಶ ಪಾರ್ವತೀಶ ಗತ ಭಯ ||1||
ಕಾಲ ಕಾಲ ವರಮಹ ಭಕ್ತಲೋಲ ಶ್ರೀಕರ|
ಕರುಣಾಲವಾಲ ವ್ಯಾಲಮಾಲ ಬಾಲ ಶಶಿಧರ ||2||
ಅನರ್ಘ ಘನಮಠೇಶ ಶರಣ ಜನಸುರದ್ರುಮಪಾ|
ವನ ಶರೀರ ಕಲುಷನಿಚಯ ಘನತ ಮಾರ್ಯಮಾ ||3||

ಡಾಂಭಿಕ ಭಕ್ತಿ ವಿಡಂಬನೆ
ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ| ಈ ಸೂಳೆ ಮಕ್ಕಳಿ|
ಗೆಲ್ಲಿ ಭಕ್ತಿಯದೆಲ್ಲಿ ಮುಕ್ತಿಯದೊ||
ಎಲ್ಲಿ ಭಕ್ತಿಯದೆಲ್ಲಿ ಮುಕ್ತಿಯೊ ಕಳ್ಳಹಾದರಗಿತ್ತಿಯಾ ಪರಿ|
ಖುಲ್ಲತನದಲಿ ಚರಿಸಿ ಶಿವಪದವೆಲ್ಲಿ ಕಾಣದೆ ಸಾವು ತಿಹರಿಗೆ ||ಪ||
ಒಳ್ಳೆ ನಾಗರ ಹಾವು ಹಿಡಿತಂದು| ಗಾರುಡಿಗನಂಗಳ|
ದಲ್ಲಿ ಭಲರೇ ಭಲರೆ ಭಲರೆಂದು| ಆಡಿಸುತಮಿದಕಿ|
ಷ್ಟಿಲ್ಲಿ ಹಾಲೆರಿರವ್ವಯಯೆಂದು| ಬೇಡಿಡರೆ ನಮ್ಮ|
ಲ್ಲಿಲ್ಲ ಇಲ್ಲಿಂದಾಚಿಗಾಗೆಂದು| ಪಳಿಯುತ್ತ ಭ್ರಷ್ಟರು|
ಬೆಲ್ಲವಾಕಳ ಹಾಲು ನಾರಿಯರೆಲ್ಲ ಸಂಭ್ರಮದಲ್ಲಿ ಪಿಡಿಯುತ|
ಕಲ್ಲನಾಗರ ಮೇಲೆ ವ್ಯರ್ಥದಿ ಚೆಲ್ಲುತಿಹ ಪಾಪಾತ್ಮರಿಗೆ ಮತ್ತೆಲ್ಲಿ|| ||1||
ಉಣುವ ಜಂಗಮದೇವರೈ ತಂದು| ಹಸಿವೆನಲು ಮುಂದಿನ|
ಮೆಗೆ ಹೋಗಿಲ್ಲೇಕೆ ನಿಂತೆಂದು| ಪಳಿಯುತ್ತ ಸಕ್ಕರಿ|
ಕಣನ ಮುಂತಾದವನು ಬಲಿತಂದು| ತೀರ್ಥಾರ್ಥಿಯೊಳು ಧಾ|
ರುಣಿಯ ತಿರುಗುತ ಬಳಲಿ ತಾವಂದು| ಪರಿಭ್ರಮಿತರಾಗುತೆ|
ಕುಣಿ ತೆವರ್ ಮಣ್ಣುಳ್ಳ ಗರಿಕನನಗುಹಂಗಳನರಸಿ ಕಷ್ಟದಿ|
ಉಣದ ಕಲ್ಲಿಗೆ ಅಟ್ಟುನೀಡುವ ಬಣಗಮಾನವ ಪಶುಗಳಿಗೆ ||ಮ|| ||2||
ಇಂದು ವೊಂದ್ಹೊತ್ತೆಂದು ಕಲ್ಪೆಸುತೆ| ನೈರರ್ಥ ಪ್ರಾಣನ|
ಕೊಂದು ಮಹಾತ್ಮದ್ರೋಹವಾರ್ಜಿಸುತೆ| ಆ ವೇಳೆಯೊಳು ಹಿರಿ|
ಹಂದಿಯಾಪರಿ ಮಲವ ಭುಂಜಿಸುತೆ| ಎಮ್ಮೊಳಗೆ ಹಸು ಹೋ|
ಯ್ತೆಂದು ದುರ್ಮೋಹದಲಿ ಹರ್ಷಿಸುತೆ ಅಕಟೀಭವಿಗಳು|
ಕಂದುಗೊರಳನ ಭಕ್ತಿ ಜ್ಞನಾನಂದರಸ ಸ್ಥಿರವಾಗಿಯುಂ ಮುದ|
ದಿಂದೆ ಕಾಣದೆ ಸಂಶಯಯದಿ ಬಹುದಂದುಗಕ್ಕೊಳಗಾದ
ಹೊಲೆಯಿರಿ ಗೆಲ್ಲಿ ||3||
ಮತ್ತೆ ನಾಗರ ಪಂಚಮಿಯಲ್ಲಿ| ಜನರೆಲ್ಲ ಹಾಳ|
ಹುತ್ತ ಹುಡುಕುತ ಪೋಗಿ ತಾವಲ್ಲಿ| ನಾಗಪ್ಪಯೆಂದೊದ|
ರುತ್ತ ಗಲ್ಲವ ಬಡಿದುಕೊಂಡಲ್ಲಿ| ಇಷ್ಟಾರ್ಥಗಳ ಬೇ||
ಡುತ್ತಲರಿಷಿಣ ದಾರ ಕೈಯಲ್ಲಿ| ಕಟ್ಟಿರುವವರುಗಳ|
ಚಿತ್ತ ವೃತ್ತಿಯ ಪರೀಕ್ಷೆಗಾ ಹೆಡೆಯೆತ್ತಿಯಾಡಲ್ಕೆವ್ವನಾನಿ|
ನ್ನೆತ್ತವೋಡಲಿಯೆಂದು ಕಲ್ಮರನೆತ್ತಿ ಹಾಕೆಂದೆಂಬ ಹೊಲೆಯಿರಿ ಗೆಲ್ಲಿ| ||4||
ಉಪಮವರಿದುಪವಾಸಿಯಾಗದೆ| ಅತಿಯಾಸೆ ಬಡುತಿಹ|
ಚಪಲಗುಣವದು ಕೆಟ್ಟು ಪೋಗದೆ| ಕ್ಷುತ್‍ತೃಷೆಯು ನಿದ್ರೆಯೆ|
ನಿಪ ನಿರೋಧವನೆಲ್ಲ ನೀಗದೆ| ಕರ್ಮಂಗಳೆಲಲವ||
ನಪಹರಿಸಿ ನಿಶ್ಚಿಂತರಾಗದೆ| ಈ ಪಾಪಿಗಳ್ಳರು|
ಅಪರಿಮಿತ ಶ್ರೀ ಘನಮಠೇಶನನುಪಮವರಯದೆ ಕಂಡಕಂಡದ|
ಉಪವಾಸಂಗಳ ಮಾಡುತಿಹ ಯೀತಪನಜಾತನ ಕುರಿಯಮರಿಗಳಿಗೆಲ್ಲಿ ||5||

ತನು ಕರಣಂಗಳು
ದೂಷಣೆ ಮಾಡಲದೊಂದೆ ಜನರತಿ ಭೂಷಣೆ ಮಾಡಲದೊಂದೆ|
ಈ ಷಣತ್ರಯದ ದೋಷವಳಿದು ನಿರ್ದೇಷಿಯಾದ
ಪರದೇನಗೆ ಜಗದೊಳು ||ಪ||
ಪ್ರೀತಿಲಿ ಕರೆದೊಯ್ದೀ ತನನಗೆ ಶಿವನೆಂದೋತು ವಂದಿಸಲದೊಂದೆ|
ಜಾತಿಹೀನನೆಂದಾತುರದಿಂದಲಿ ಮಾತುಗಳಾಡಲದೊಂದೆ ||1||
ಹೋಳಿಗಿ ತುಪ್ಪೊಳ ಮನೆಯೊಳು ನೀಡುತ ವೀಳ್ಯವನೀಯಲದೊಂದೆ|
ಸೂಳೆ ಮಗನೆಯೆಂದೊದರುತ ಹಳಸಿದ ಕೊಳ
ಹಾಕಲದೊಂದೆ ||2||
ಅಯ್ಯಪ್ಪಾಯೆಂದೊಯ್ಯನೆ ಘನತರ ಶಯ್ಯದೊಳುತತಿಳಿಸಲದೊಂದ|
ಕೈಯವಿಡಿದು ಯೆಳದೆಳದು ನೂಕುತಲಿ ಹೊಯ್ಯಲು
ಬಯ್ಯಲದೊಂದೆ ||3||
ಬಲ್ಲವರೆಂದುಲ್ಲಾಸಿಸಿ ಪಾಡುತ ಪಲ್ಲಕ್ಕಿ ಮೆರೆಯಲದೊಂದೆ|
ಸಲ್ಲದಿವನು ಬಲು ಕಳ್ಳನೆಂದು ಪುರದಲ್ಲಿದ್ಹೊರಡಿಸಲೊಂದೆ ||4||
ತನು ಕರಣಂಗಳು ಪುಸಿಯೆಂದವರಿಗೆ ವಿನಯಾ ವಿನಯಗಳೊಂದೆ|
ಘನಮಠೇಶನೊಳನುದಿನ ಬೆರೆದಿರುವನಿಗೆ
ಶುಭಾಶುಭವೊಂದೆ ||5||

ದಯಾನಿಧಿ ದಯಾನಿಧಿ
ಧಿಯಾನಿ ದಯಾನಿಧಿ ದಯಾನಿಧಿ ಶಿವ
ಸ್ವಯಾನುಭವ ಸುಖ ಪ್ರದಾಯವಯವ ಆರ್ಯಾಧವ ||ಪ||
ಮುರಸುರಾರಿ ಕಮಲಜಾದ್ಯ ಮರಾರ್ಚಿತ ಪದ|
ಪುರಾರಿ ಗಗನಕೇಶ ಮಹೇಶ್ವರ ರಹಿತಮದ ||1||
ಝಷ ಪತಾಕದಹನ ಗಿರಿನಿವಾಸಾಮಯಹತ|
ವೃಷೇಂದ್ರಗಮನ ಪರಮ ಪಾವನ ಸೋಮಧೃತ ||2||
ಹುತಾಶನೇಂದ್ರಿಯಾಘು ಕುಲರಹಿತಾ ಭಯಕರ
ಯತೀಶ ಹೃದಯ ಸರಸಿಜಾವಿರತ ಭಾಸ್ಕರ ||3||
ಗಜಾಸುರಾರೆ ಭಕ್ತದೇವ ಕುಜಾಧ್ವರಹರ|
ದ್ವಿಜೇಶಭೂಷ ಭೋ ಭವಭಯ ವ್ರಜಾಪಹರ ||4||
ಸದಾಶಿವಾಖಿಳೇಶ ವರ ಧನದಾಮಳ ಸಖ|
ಚಿದಾಬ್ಧೆ ಘನ ಮಠೇಶ ಭೋ ವರದಾಮಿತ ಸುಖ ||5||

ದೇವ ದೇವ ಪಾಲಿಸಯ್ಯ
ದೇವ ದೇವ ಪಾಲಿಸಯ್ಯ ಪಾವನಾಕಾರ|
ಪಾವನಾಕಾರ ಪಾವನಾಕಾರ ||ಪ||
ತಾರ ಹಾರಹೀರ ಘನಸಾರ ಸಶರೀರ ಸುಖ|
ಸಾರ ವೀರಭಕ್ತ ಪರಿಪೂರ ಮಾರಹರ ಧೀರ ||1||
ಕಾಲಕಾಲ ವ್ಯಾಲಮಾಲಶೀಲ ಗಾನಲೋಲ ಮುನಿ|
ಜಾಲಪಾಲ ಮಾಯಕೋಲಾಹಲ ಬಾಲ ಶಶಿಧರ ||2||
ಶೇಷಭೂಷ ದೋಷನಾಶ ಶ್ರೀಶಧೀಶತೋಷ ಮುಕ್ತಿ|
ಕೋಶ ಪರಮೇಶ ವ್ಯೋಮಕೇಶ ಘನಮಠೇಶ ಈಶ ||3||

ಧ್ಯಾನವ ಮಾಡೋ ನಿಜ ಗುರು
ಧ್ಯಾನವ ಮಾಡೋ ನಿಜಗುರು ಧ್ಯಾನವ ಮಾಡೋ|
ಮಾನವ ನೀನತಿಮತಿಯುತನೆನಿಸುತೆ ||ಪ||
ಜನಗದೊಳಗನುದಿನ ನಗುರೋರಧಿಕಮೆಂದು|
ಪೊಗಳುವ ಶ್ರುತಿಮತವಗಲದೆ ಮುದದೊಳು ||1||
ವರಕರುಣದೊಳಡಿಗೆರಗಿದವರ ಸ್ಮರ|
ಹರನೆನಿಸುವ ಶರಣರ ಸುರಭೂಜನ ||2||
ಮನುಮುನಿಜನ ಸುರಗಣರಿಗೆ ಮೊದಲಿಗ|
ನೆನಸಿದನಘ ಶ್ರೀಘನ ಮಠೇಶನ ||3||

ನರರಿಗೆಂತಹುದಯ್ಯಾ ಹರಭಕ್ತಿ
ನರರಿಗೆಂತಹುದಯ್ಯಾ ಹರಭಕ್ತಿ| ಬಸವಾಂಶಗಲ್ಲದೆ|
ನರರಿಗೆಂತಹುದಯ್ಯಾ ಹರಭಕ್ತಿ
ನರರಿಗೆಂತಹುದಯ್ಯಾ ಹರಭಕುತಿರದೆ ಗುಡಿ ಹೋಗುತೀಶ್ವರೇಶನ|
ಮರೆದು ಕೆರಹಿನ ಚಿಂತಿಹಲನೋಲ್ ತರುಣಿ ಧನವನು
ಕರಿಸಿರುವದುರ್ ||ಪ||
ಕರವಿಡಿದ ಸತ್ ಸತಿಯಳಂ ಪಡಿದು| ಕಣ್ ಮುಂದೆ ಸಲೆಚರ|
ವರರು ನೆರೆಯುತಲಿರಲಿ| ಬಲವರಿದು| ಗರ್ಭದೊಳು ಜನಿಸಿದ|
ವರ ಕುಮಾರನನಾಯುಧದಿ ಕಡಿದು ದಿಗ್ಬಲಿಯ ಮಾಡು||
ತ್ತಿರದೆ ಬಿರಿನುಡಿಯಿಂದೆ ಜರೆದೊದೆದು| ಮತ್ತಂತುಮಲ್ಲದೆ|
ಸೆರಗುಗೊಂಡೆಳದಾಡಿ ಶೂಲದಲಿರಿಯಲದ ತರಹರಿಸುತಂ ಶಾಂ|
ತರಸಭರಿತನುಮಾಗಿ ಶರಣೆನುತ್ತಿರುವದದು ಬಸವಾಂಶಗಲ್ಲದೆ ||1||
ಶೂಲಿಲಾಂಛನರೈದೆ ಜಗದೊಳಗೆ| ಪರಿಪರಿಯೊಳುಂದುಶ್|
ಶೀಲದಲಿ ನಡೆತರಲ್ ಕವರಡಿಗೆ| ಎರಗುತ್ತೆ ಭಯದಿಂ|
ಮೇಲು ಮಾರ್ಗವಿದೆನ್ನು ತಡಿಗಡಿಗೆ ತಚ್ಛರಣರಾಚರ||
ಣಾಳಿಮನದೋಳ್ ಬಿಡದೆ ನೆನೆದು ಮಿಗೆ| ಹರ್ಷಿತನುಮಾಗುತೆ|
ಫಾಲದೋಳ್ ಶ್ರೀಭೂತಿಯಕ್ಷಸುಮಾ|
ಲೆಕೊರಳೋಳ್ ಧರಿಸಿದರನೆ|
ಕಾಲಹರನೆಂದೆಂಬ ಭಾವದಿ ಪಾಲಿಪುದು ಬಸವಾಂಶಗಲ್ಲದೆ ||2||
ಅಂಗದಲಿ ಶಿವಲಿಂಗವುಳ್ಳವರ ಕಾಣುತ್ತ ಕೂಡಲ|
ಸಂಗನೆಂದೆಜಿಸುತ್ತಲವರವರ| ಪರಮ ಪ್ರಸಾದವ|
ಪಿಂಗದೆ ಭೋಗಿಸುತೆ ಸೌಖ್ಯಕರ| ನಾಗುತ್ತೆ ಸಂಕ|
ಲ್ಪಂಗಳಂ ಪರಿಹರಿಸಿ ಚರವರರ| ವಚನಾನುಸಾರದಿ|
ಸಾಂಗವಾಗಿಯೆ ನಡೆಯುತಂಗಗುಣಂಗಳೆಲ್ಲವ ದಹಿಸಿ ವೀರ ವ್ರ|
ತಂಗಳಂ ಪಿಡಿದಾಚರಿಪ ಭಕ್ತ್ಯಂಗವದು ಬಸವಾಂಶಗಲ್ಲದೆ ||3||
ಬೇಡಿದರ್ಥವನಿಲ್ಲೆನದೆ ಕೊಟ್ಟು| ಮನದೊಳೆ ಇದನಾ|
ಮಾಡಿದೇನೆಂಬುದನು ನೆರೆಬಿಟ್ಟು ನಿರಹಂಕೃತಿಯೊಳೋ|
ಲಾಡಿ ತೂಳದ ಮ್ಯಾಳದವನುಟ್ಟು| ಇಹಪರ ಭ್ರಾಂತೀ||
ತಾಡಿ ಕರ್ಮಂಗಳನು ಸೆಲೆ ಸುಟ್ಟು| ಸದ್ಭಾವಿಯಾಗುತೆ|
ನಾಡೆ ತ್ರಿಕರಣ ತ್ರಿವಿಧ ಲಿಂಗಕೆ ನೋಡಿಯರ್ಪಿಸಿ ತತ್ ಪ್ರಸಾದವ
ಪ್ರಾಢಿಯಿಂ ಪಡಿಯುತ್ತ ನಿಜದೋಳ್ ಕೂಡಿ ಹುದು ಬಸವಾಂಶಗಲ್ಲದೆ ||4||
ಪಂಚವಿಂಶತಿ ತತ್ವಗಳನಳಿದು| ಪರಮಾರ್ಥದಿಂ ಶಿವ|
ಪಂಚಮುಖ ಪಂಚಾಕ್ಷರದಿ ತಿಳಿದು| ಚಾತುರ್ಯದಿಂದಾ|
ಪಂಚ ಲಿಂಗಾಂಗಗಳ ಕಳೆಯರಿದು| ತನುಮನದೊಳಿಹ ಪ್ರ|
ಪಂಚವಾಸನೆ ಗುಣಗಳಂ ಜರಿದು| ನಿಶ್ಯಂಕನಾಗುತೆ|
ಪಂಚ ಸಾದಾಖ್ಯವನು ಇಂದ್ರಿಯ ಪಂಚಕವ ಪರತರದ ಸಂಜ್ಞಾ|
ಪಂಚಕವ ಶ್ರೀ ಘನಮಠೇಶನೊಳ್ ಹಂಚಿಹುದು ಬಸವಾಂಶಗಲ್ಲದೆ ||5||

ನಿಜಗುರು ಸಿದ್ಧರಾಮ
ಸಿದ್ಧರಾಮೇಶ್ವರ ಸಿದ್ಧರಾಮ ಹೋ| ನಿಜಗರು ಸಿದ್ಧರಾಮ ಹೋ|
ಸಿದ್ಧರಾಮರ್ಘ ವಿರುದ್ಧ ಮಾನಸ ವಿಶುದ್ಧ ತ್ರಿಭುವನ
ಪ್ರ್ರಸಿದ್ಧ ಸಿದ್ಧೇಶ್ವರ ||ಪ||
ನಿತ್ಯ ನಿರ್ಗುಣ ಪರತತ್ತ್ವಾರ್ಥ ವಿದಭವ|
ಮೃತ್ಯು ವಿಜಯ ಸಮರ್ಥ ಪರಮಶಿವ ||1||
ಆ ಪರಬ್ರಹ್ಮಸ್ವರೂಪನಾಗಿ ಜಗದ್|
ವ್ಯಾಪಾರವಳಿದ ಪ್ರತಾಪ ಪರಮಶಿವ ||2||
ಅರಿವರ್ಗಗಳನ್ನೆಲ್ಲ ಹರಿಸುತೆ ಚಿದ್ರತ|
ಶರಧಿಯೊಳಾಳುತಲಿರುವ ಮಹಿಮ ಶಿವ ||3||
ಅಂಗಕರಣ ಹರಣಂಗಳೆಲ್ಲವ ಶಿವ|
ಲಿಂಗವಾಗಿಹ ಮಹಾಮಂಗಳಮಯ ಶಿವ ||4||
ಹಸಿವು ತೃಷೆಯು ಹುಸಿ ವ್ಯಸನ ವಿಷಯ ನಿದ್ರೆ|
ಸಶರೀರ ಗುಣಧರ್ಮ ವಿಸಸರರಹಿತ ಶಿವ ||5||
ಮಾತೆ ಸುಗ್ಗಲೆ ಮುದ್ದಗೇ ತನಯನುಮೆನಿ|
ಸಾತಂದೆ ತಾಯ್ಗಳ ನೋತು ಪೊರೆದ ಶಿವ ||6||
ಶ್ರೀಶೈಲ ಕೈದಿಯಘನಾಶ ಮಲ್ಲನನೊಲಿ|
ಸೀ ಸೊನ್ನಲಿಗೆಗೆ ಶ್ರೀ ಗಿರೀಶನ ತಂದ ಶಿವ ||7||
ಧರೆ ಜೀವರೆಲ್ಲ ಸರ್ವ ತೀರ್ಥ ಫಲವಡೆ|
ದುರ ಮುಕ್ತರಾಗಲೆಂದು ಕೆರೆಯ ಕಟ್ಟಿದ ಶಿವ ||8||
ಜ್ಞಾನಾಗ್ನಿಯಿಂದೆ ಸುವಿಧಾನೋಕ್ತವಾಗಿ ಯಜ್ಞ|
ವಾ ನಿರ್ಮಿಸುತೆ ಜೀವ ಶ್ರೇಣಿ ಹೊರೆದ ಶಿವ ||9||
ದುಷ್ಟಾಷ್ಟ ಭೈರವರ ನಷ್ಟ ಸೇವೆಯೊಳ್ ನಿಲಿಸಿ|
ಶಿಷ್ಟ ಸ್ಥಲವ ಶ್ರೀಗೆ ಕೊಟ್ಟು ಪೊರೆದ ಶಿವ ||10||
ಆಗಮಾತೀತವಾದ ಯೋಗ ಸಮಾಧಿಯೊಳ|
ಗಾಗಿ ಪೊರಗಮರದಾಗೋಪ್ಯ ಸುಖಶಿವ ||11||
ಮೇಘಚೂಡನು ಶಿವಯೋಗಿ ಶಾಪದಿ ಮೃಗ|
ವಾಗಿ ಸೋಂಕಲು ನಿಜವಾಗಿತ್ತ ಪರಶಿವ ||12||
ಚಾರು ಹಸ್ತದೊಳು ಮಯೂರಕನತಿ ಶಾಪ|
ವಾರಿಸುತ ನಿಜ ಶರೀರವಿತ್ತ ಶಿವ ||13||
ಪೋಗೆನ್ನ ಲೋರ್ವ ನಸುಪೋಗಲದನು ಗುರು|
ವಾಗಲರುಪೆ ಶಂಕೆನೀಗಿದ ಪರಶಿವ ||14||
ಅಣ್ಣ ಭೋಮ್ಮಣ್ಣನ ಕಣ್ಣ ಪಡೆದು ಭೂರಿ|
ಪುಣ್ಯತೀರ್ಥ ಕ್ಷೇತ್ರವನ್ನೇ ತೋರಿದ ಶಿವ ||15||
ಕುಮದ ಶೇಖರ ತನುವಿಮಲನಾಗುತ ಪಾದ|
ಕಮಲ ಪರಗಲ ವಗಮರತ್ವಿತ್ತ ಶಿವ ||16||
ಹರಗೇಂದ್ರಿಯಂಗಳನರಿದರ್ಪಿಸುತೆ ಪಂಚ|
ಶರನ ಗರ್ವವ ಗೆದ್ದ ವರಯೋಗಿವಂದ್ಯ ಶಿವ ||17||
ಆಗಿಲ್ಲ ಸಂಸ್ಕಾರವೀಗಂಗೆಗೆಂದವರು|
ಕಾಗಿಂದ ಕೆಟ್ಟು ತೆಲೆವಾಗಲೊರೆದ ಶಿವ ||18||
ಶಿವೆಯಾಣತಿಯೊಳೀ ಭುವಿಯೊಳು ಯೋಗಮಜ್ಜ|
ನವ ಮಲ್ಲನಿಗೆ ಮಾಡಿದವಿನಾಶ ನಿಜಶಿವ ||19||
ಸಿಳ್ಳಿಗೆಯೊಳು ನಿಲಲೊಲ್ಲೆಂದ ಬೆನಕನ|
ನುಲ್ಲಾಸದಿಂದೆ ತಂದು ಮಲ್ಲನೊಳಿಟ್ಟ ಶಿವ ||20||
ವಿಷವಾಮೃತವ ಮಾಡು ತೊಸೆದು ಗುಡ್ಡೆರ್ಗೆ ನೀಡಿ|
ರಸೆಯೊಳು ಕೀರ್ತಿವಡೆದ ಸಮನಯನ ಶಿವ ||21||
ಕಾಳರಕ್ಕಸಿ ರಕ್ತಕೇಳಲುದರ ಹೋಗಿ|
ಸ್ಯಾಳಾದೆನೆನೆ ಗುದಮೂಲದಿ ಬಿಟ್ಟ ಶಿವ ||22||
ವಿಶ್ವಾಕಾರಕೆ ಹೆದರದೆ ಸ್ವೇಚ್ಛೆಯಿಂದ ಪರ|
ಮೇಶ್ವರೇಶನ ನಿಲಿಸಿ ದೈಶ್ವರ್ಯದಿಂದೆ ಶಿವ ||23||
ಅಮೃತ ಲಿಂಗಾಭಿಷೇಕಕಮೃತವ ತಹೆನೆನು|
ತಮೃತಾಂಶು ಭೂಷಣಾಜ್ಞದಮೃತ ತಂದೆರೆದ ಶಿವ ||24||
ಈ ಸೊನ್ನಲಿಗೆಯೊಳಗೇ ಸರ್ವಸಿದ್ಧಿಯಪ್ಪು|
ದೇ ಸತ್ಯವೆಂದು ಗುಂಡುಕಾಶಿ ಪಿಡಿದ ಶಿವ ||25||
ಮರಳಾಕರ್ಪುರ ಬಲುಗರುವದಿ ಬಂದು ನೇತ್ರ|
ದುರಿಯಿಂದ ಬೆಂದು ಪಾದಕೆರಗಲ್ ಪೊರೆದ ಶಿವ ||26||
ಪುರವ ಬಳಸಿ ಬರುತಿರಲಾ ಸಿಡಿಲು ಬಂ|
ದೆರಗಿ ಸುರಗಿಯೊಳೆತ್ತಿ ಮೆರೆದ ಮಹಿಮಶಿವ ||27||
ಉಘೆತಾಳನೆಂಬವನಿಗೆ ನೈಜ ತನುವನಿ|
ತ್ತಘವ ಪರಿಹರಿಸಿದ ನಿಗಮಾಗೋಚರ ಶಿವ ||28||
ದೇಶವರಿಯೆ ಬಿಲ್ಲೇಶ ಬೊಮ್ಮನು ಸಹ|
ವಾಸನರಕಿಗಳ ಲೇಸೆದೆತ್ತಿದ ಶಿವ ||29||
ಮುಪ್ಪುರವೈರಿಗಾಜ್ಯವೊಪ್ಪಿ ಮಜ್ಜನವನು|
ತಪ್ಪದೆ ಮಾಡಿಸಿದ ದರ್ಪಕಹರ ಶಿವ ||30||
ಕ್ಷೇತ್ರ ಪೂಜೆಯ ಮಾಡಿಸುತ್ತಾ ಮದುವೆಗಳ|
ನರ್ಥಿಯಿಂ ಮಾಡಿಸಿದ ಕರ್ತ ಪರಮಶಿವ ||31||
ಕರ್ನಿದೇವನು ಕರೆಯೆ ತನ್ನಾಳುಗಳ ಕಳುಹ|
ಲಿನ್ನವರ್ಗ ಸಾಧ್ಯವಾದ ಧನ್ಯ ಪರಮ ಶಿವ ||32||
ಬೆಕ್ಕಗ್ನಿ ಮಧ್ಯದೋಳ್ ಸಿಕ್ಕಿ ಸಾಯಲ್ಕದರ|
ಮಕ್ಕಳೊದರುತ್ತಿರಲಿಕ್ಕಸುವಿತ್ತ ಶಿವ ||33||
ಬೊಮ್ಮಿಶೆಟ್ಟಿಯ ಸತಿಯುಂ ಮಡಿಯೆ ಸುಪ್ರಸಾದ|
ಒಮ್ಮೆ ಕೊಟ್ಟಾಕೆಗಸುವಂ ಮಾಣದಿತ್ತ ಶಿವ ||34||
ಕಳವು ಕುಡಿದು ಸುತನಳಿದನೆನುತ್ತೆ|
ಯಳಲಾ ಕಳಲು ಕುಡಿಸೆಳ್ದ ಮಹಿಮ ಶಿವ ||35||
ನಿತ್ಯ ಸುಕೈಲಾಸಕರ್ಥಿಯಿಂದೈದಿ ಸ|
ಮರ್ಥ ಶಿವನ ಕೃಪೆವೆತ್ತ ಪರಮಶಿವ ||36||
ಅಸಮಾಕ್ಷನೊಳಗಿಹ ಬಸವೇಶ್ವರನ ಪೂರ್ಣ|
ತೆ ಸಮಸ್ತ ಭಕ್ತರೊಳಗೊಸೆದು ತೋರಿದ ಶಿವ ||37||
ಅಲ್ಲಮಪ್ರಭುವಿನ ಚೆಲ್ವೋಪದೇಶವಡೆ|
ದೆಲ್ಲ ಕರ್ಮಂಗಳನುಲ್ಲಂಘಿಸಿದ ಶಿವ ||38||
ಚೆನ್ನಬಸವನ ಪ್ರಸನ್ನ ದೀಕ್ಷೆಯ ಜಗ|
ದಿನ್ನು ಪಡೆದ ಗಣಮಾನ್ಯ ಪರಮಶಿವ ||39||
ಕಾಲಸೂಚನೆ ಭಕ್ತ ಜಾಲಕುಸುರಿಯಂತ|
ರಾಳ ವೇದಿಕೆಯೊಳು ಲೋಲತ್ಪದಿಹ ಶಿವ ||40||
ಈಶ ಸೊನ್ನಲಿಗೆಯಧೀಶ ಸುಗುಣ ಗಣ|
ಕೋಶ ಶ್ರೀ ಘನಮಠ ವಾಸ ಪರಮ ಶಿವ ||41||

ನಿನ್ನ ನಿಜವನರಿಯದೆ
ನಿನ್ನ ನಿಜವನರಿಯದೆ ಜೀವನಾದೆ ನಾ ||ಪ||
ಪಂಚವದನ ತವಪಂಚವರ್ಣವೆ ಸಪ್ರ|
ಪಂಚವಾದುದೆಂಬುದ ಮರೆಯುತೆ ನಾ ||1||
ಆಶೆವೇಷದಿ ಮಲಪಾಶಬದ್ಧಕನೆನಿ|
ಸೀಶನೆಂಬುದನಗಲಿ ಗಾಸಿಯಾಗಿ ನಾ ||2||
ತತ್ತ್ವಮಸೀತಿ ವಚನಾರ್ಥ ಹೊರವಳಿಸಿ|
ಮತ್ತನಾಗಿ ಶ್ರೀಘನಮಠ ವಾಸ ನಾ ||3||

ನಿತ್ಯ ನಿರ್ಮಲರು ನಮ್ಮವರು
ಗುರುಕರ ಜಾತರು ನಮ್ಮವರು ಭವಮರಣವ ಗೆಲಿದರು ನಮ್ಮವರು|
ಪರಮ ವೀರಶೈವಾಚಾರವನೀ ಧರೆಯೋಳ್
ಮೆರೆದರು ನಮ್ಮವರು ||ಪ||
ಮಾರಿ ಮಸಣಿಯೆಂಬೂರ ದೈವತರಗಾರು ಮಾಡುವರು ನಮ್ಮವರು|
ದಾರಿ ತಪ್ಪಿ ಚರಿಸಿಪ್ಪ ಮಾನವರ ಕೇರಿಯ ಮೆಟ್ಟರು ನಮ್ಮವರು ||1||
ಮಲತ್ರಿವಿಧಂಗಳ ಕಳೆದು ವಿೂರಿದ ಸ್ಥಲಸುಜ್ಞಾನರು ನಮ್ಮವರು|
ಕುಲಛಲ ಗೋತ್ರವ ತುಳಿದು ನಿಂದ ಶಿವಕುಲ
ಮಹೋತ್ತಮರು ನಮ್ಮವರು ||2||
ನಿತ್ಯ ನಿರ್ಮಲರು ನಮ್ಮವರು ಬಲು ಸತ್ಯವಾಚಕರು ನಮ್ಮವರು|
ದುಷ್‍ಕೃತ್ಯದಿ ಚರಿಸಾಡುತಲಿರುತಿಹ ವ್ಯರ್ಥರಗೂಡರು
ನಮ್ಮವರು ||3||
ಉಧೋ ಉಧೋ ಉಧೋ ಎಂದೊದರುವ ಹೊಲೆಯರ
ಮೆದಿವರಿ ತುಳಿಯರು ನಮ್ಮವರು|
ಮದನಾರಿಯ ಭಕ್ತಿಯ ನಿಂದಿಪ ದುರ್ಮದರನು
ಗೂಡರು ನಮ್ಮವರು ||4||
ಎಲ್ಲಿ ದುರ್ಗಿ ಪೆಸರಲ್ಲಿ ರೂಹುಗಳನೊಲ್ದು ಧರಿಸರೈ ನಮ್ಮವರು|
ಗುಲ್ಲ ಮಾಡುತಾ ಗಲ್ಲಿಗೆ ಬೀಳ್ವರ ಹಲ್ಲು ಮುರಿವರೈ ನಮ್ಮವರು ||5||
ಚರಣೋದಕ ಸುಸ್ಥಿರ ಪ್ರಸಾದ ನಿಜವರಿದುಕೊಂಬುವರು ನಮ್ಮವರು|
ಧರೆಯೊಳು ಸುರೆ ಮಾಂಸವ ಭುಂಜಿಪ ದುರ್ನರರನು ಕೂಡರು ನಮ್ಮವರು ||6||
ದಿಂಡೆಪುಂಡಿನಾರುಂಡಾಕೃತಿಗಳ ಕಂಡು ಹೇಸುವರು ನಮ್ಮವರು|
ಕಂಡ ಕಂಡ ಗುಂಡಿಗುಂಡ ತಿರಗುವರ ಮಂಡೆಯ ಹೊಯ್ವರು ನಮ್ಮವರು ||7||
ನಾರಯ ನರಸಯ ಬೋರು ಪೆಸರಿಂದಾರು ಕರೆಯರೈ ನಮ್ಮವರು|
ಕ್ರೂರ ಕರ್ಮವನು ಗೈವ ದುರ್ಜನರ ಸೇರರೆಂದಿಗೇ ನಮ್ಮವರು ||8||
ಒಳ್ಳುವಣಿಗೆ ಮರಜಲ್ಲಡಿ ಬೀಸುವ ಕಲ್ಲು ಪೂಜಿಸರು ನಮ್ಮವರು|
ಒಳ್ಳೆ ಶಿವನ ಪದವಲ್ಲದೆ ಸುಳಿವರನೊಲ್ಲರೆದಂದಿಗೆ ನಮ್ಮವರು ||9||
ಮೂಳೆಯೊಳಿರುತಿಹ ಕಾಳು ದೈವರೆಡೆ ಕೂಳೆಂದೊಲ್ಲರು ನಮ್ಮವರು|
ಭಾಳಲೋಚನನ ಶೀಲವ ಬಿಟ್ಟರೆ ನಾಲಿಗೆ ಕೊಯ್ವರು ನಮ್ಮವರು ||10||
ಕುಣಿಯ ಕಟ್ಟಿ ಮೇಲಣ ಕಲ್ಲಿಟ್ಟದಕೆಣಿಸಿ ನಮಿಸರೈ ನಮ್ಮವರು|
ತ್ರಿಣಯನಿಗೆಣೆ ದುರ್ಗುಣಿ ದೈವಂಗಳನೆಣಿಸರೆಂದೆಂದಿಗೆ ನಮ್ಮವರು ||11||
ಮನ ಸಂಕಲ್ಪದಿ ಹೆಣಗಳ ಪೆಸರೋಳ್ ದಿನ ತಿಥಿಮಾಡರು ನಮ್ಮವರು|
ಮನೆ ಲಕ್ಷ್ಮಿಯ ನೆವದಿಂ ಪಿಶಾಚಿಗಳಿಗುಣಿಸಿ ನಮಿಸರೈ ನಮ್ಮವರು ||12||
ಒಂದ ಭಾವದಿಂದೊಂದೆ ವಸ್ತುವೆಂದೆಂದರ್ಚಿಸುವರು ನಮ್ಮವರು|
ಸಂದಿಗೊಂದಿಲೊಂದಿಟ್ಟಿಜಿಸುವರಿಗೆ ಹಂದಿಗಳೆನುವರು ನಮ್ಮವರು ||13||
ಯಕ್ಕಲದೇ ಜೋಗಂಬರಿಗೇ ನೊಂದಿಕ್ಕರದೆಂದಿಗೆ ನಮ್ಮವರು|
ಕುಕ್ಕರವೇಷವ ತಾಳಿ ಬೊಗಳುವರ ಸೊಕ್ಕು ಮುರಿವರೈ ನಮ್ಮವರು ||14||
ತೀರ್ಥಯಾತ್ರೆ ಕ್ಷೇತ್ರಂಗಳ ಮಾಡುವ ಮರ್ತ್ಯರ ನೋಡರು ನಮ್ಮವರು|
ಮೂತ್ರಾಮೇಧ್ಯದ ತನುಭೋಗವನುಲಿದುತ್ತಮೊತ್ತಮರು ನಮ್ಮವರು ||15||
ಅಷ್ಟಾವರಣ ವಿಶಿಷ್ಟಾಚಾರದಿ ಶ್ರೇಷ್ಠರಾದವರು ನಮ್ಮವರು|
ಭ್ರಷ್ಟ ಮುದ್ರೆಗಳ ಕಟ್ಟುವವರ ಹಿಡಿದಿಟ್ಟಿಲೆs ಹೊಯ್ವವರುನಮ್ಮವರು ||16||
ಶರಣರು ಶುಭದಾಚರಣರು ಮಹಿಮಾ ಶರಣರು ಸತ್ಯರು ನಮ್ಮವರು|
ಭರದಲಿ ಘನಮಠವರನ ಪಾದೋಳ್ ಬೆರೆತು ಸುಖಿಸುವರು ನಮ್ಮವರು ||17||

ನಿನ್ನೋಳ ನೀ ತಿಳಿದು
ಮೃತ್ಯುಂಜಯನಾಗೋ ಎಲೊ ಎಲೊ ಮೃತುಯಂಜಯನಾಗೋ|
ಮೃತ್ಯುಂಜಯನಾಗತ್ಯುಕ್ತಿಲಿ ಗುರು ಪುತ್ರನಾಗಿ ಸಲೆ ಸತ್ಯವಿಡಿದು ನೀ ||ಪ||
ಚಲನಗುಣವನಿಗಿ ಮನವುಜ್ವಲ ಲಿಂಗದೊಳಾಗಿ|
ಮಲ ತ್ರಿವಿಧದ ಸಂಗಳಿದು ಷಟ್‍ಸ್ಥಲ ಲಿಂಗಾಂಗದ ನೆಲೆ ತಿಳಿಯುತೆ ನೀ ||1||
ನಿನ್ನೋಳ್ ನೀ ತಿಳಿದು ಜೀವದ ಭಿನ್ನ ಬುದ್ಧಿಯಳಿದು|
ಸನ್ನುತ ಗುರುಪದವನ್ನು ಬಿಡದ ಅತ್ಯುನ್ನತ ಭಕ್ತಿ ಪ್ರಸನ್ನನೆನಿಸಿ ನೀ ||2||
ಕಷ್ಟಕರ್ಮವರಿಸಿ ಕರದೊಳಗಿಷ್ಟಲಿಂಗವಿರಿಸಿ|
ಸೃಷ್ಠಿಯೊಳೊಂದಿರುವಷ್ಟದಲಾಬ್ಜವ ನೈಷ್ಠೆಯಿಂದರ್ಪಿಸಿ ಶ್ರೇಷ್ಠನಾಗಿ ನೀ ||3||
ಆಲಸ್ಯದಿ ಬೆರೆದು ಸುಮ್ಮನೆ ಕಾಲವನತಿಗಳೆದು|
ಕಾಲಕಿಂಕರರಿಗಾಳಾಗದೆ ನಿಜಮೂಲ ಮಂತ್ರದೊಳುಲೋಲನಾಗಿ ನೀ ||4||
ಆಶೆಪಾಶವರಿದು ರಾಗದ್ವೇಷವಾಸನಳಿದು|
ಸಾಸಿರದಳ ಪದ್ಮಾಸನನಾಗಿಹ ದೇಶಿಕ ಘನಮಠ ವಾಸನೊಳೈದಿ ನೀ ||5||

ನೀತಿಬೋಧೆ
ಹೊತ್ತಿರಲಿಕೆ ಊರಿಗೆ ಸೇರೋ | ದಾರಿ|
ಕತ್ತಲೆಯೊಳಗರುಪುವರಾರೊ ||ಪ||
ಬೀಜದ ನೆಲ್ಲು ಕುಟ್ಟಿಯು ಕೊಟ್ಟು | ಚಲ್ಲು|
ತೋಜೆಯಿಂ ಶುದ್ಧ ಭಾಂಡದೊಳಟ್ಟು||
ಮಾಜದೆ ಜಂಗಮೇಶನಿಗೆ ಕೊಟ್ಟು| ಘನ|
ತೇಜ ಪ್ರಸಾಧವನುಂಡುಟ್ಟು|| ||1||
ಅಖಿಳ ಪಂಚಾಂಗವಾಲಿಸೆ ಕೇಡು | ಶಿವ|
ಲಿಖಿತ ಪ್ರಮಾಣ ಸತ್ಯದಿ ನೋಡು||
ಸಖ ಬಂಧುಜನರ ಹಿಂದಕೆ ಮಾಡೊ| ಪದ್ಮ|
ಸಖನಿರುತಲೆ ಮನೆಯೊಳಗಾಡೊ|| ||2||
ಮೂರು ಬೆಟ್ಟಗಳ ಯುಕ್ತಿಲಿ ದಾಟೊ|| ಅಲ್ಲಿ|
ದಾರಿ ತಪ್ಪಿದರೆ ಪುಲಿಯ ಕಾಟೊ||
ಆರು ಮಂದಿ ಕಳ್ಳರಿರುವ ಮಾಟೊ| ಮಹಾ|
ಧೀರತ್ವದಿಂದಲಾಚೆಗೆ ದಾಟೊ|| ||3||
ಜನರಿಗ್ಹೇಳುವೆನೆಂಬುದವದ್ಯಾಕೋ| ಸಾಧು|
ಜನರಿಗೊಬ್ಬರಿಗುಸುರೆಲೆ ಸಾಕೊ||
ಅನುಮಾನವೆಲ್ಲವ ಕಡೆ ನೂಕೊ| ಮುಂದ|
ಕನುಪದ ಬಳಸಿ ನಡೆಯಬೇಕೊ|| ||4||
ಎಡಬಲದಲಿ ವಿವರಿಸಿ ನೋಡೊ| ನಟ್ಟ|
ನಡುದಾರಿ ಹಿಡಿದು ಮುಂದಕೆಯೋಡೊ||
ಅಡವಿ ಹಣ್ಣುಗಳ ಬಯಕೆ ಬೇಡೊ| ಗಡ|
ಗಡ ಪೋಗಿ ಘನಮಠೇಶನ ಕೂಡೊ|| ||5||

ನೀನೆಲ್ಲಿ ನಿನ್ನ ನಾಡೆಲ್ಲಿ
ನೀನೆಲ್ಲಿ ನಿನ್ನ ನಾಡೆಲ್ಲಿ ಕೇಳಲೆ ರಾಜ
ನಾನೆಲ್ಲಿ ನಾನಿರುವ ಸುಡುಗಾಡು ಠಾವಲ್ಲಿ
ಏನೆನ್ನ ನಾಶೆಯೆಂಬ ಪಾಶದಿ ಕಟ್ಟಿಹೆಯೋ
ಕಳ್ಳರನು ಕಟ್ಟು ರಾಜ ||1||
ಪರಶಿವಾನಂದ ಏಕಾಂತ ಗವಿಯೊಳಗಿರುವ
ಪರಮ ಶಿವಯೋಗಿಯೆಂಬೀ ಹುಲಿಗೆ ಪೇಳ್‍ನೃಪತಿ
ಇರದೆಯಾಶಿಸಿ ಭಕ್ತಿ ಬಲೆಯ ನೀನುರೆ ಹಾಕದಿರೆ,
ಗೆಲೆವ ಪರಿಯದೆಂತೋ?
ವರ ರಸನೆಯೊಳು ಮಂತ್ರ, ಘ್ರಾಣದೊಳು ಮಾರುತನು
ವರ ರೂಪದಿ ದೇಹದೊಳಗಿರ್ಪ ತೆರದಿಂದೆ
ದೊರೆಯೆ ಭೋಗದೊಳಿದ್ದು ಇಲ್ಲದಿಹ
ಯೋಗೀಶ ಗೆಣೆಯಾರು ನೀನರಿಯೆನಾ ||2||
ಮತ್ತೆ ಸತಿ ರುದ್ರಗಣ ದೇವಗಣ ಪ್ರಮಥಗಣ
ಭಕ್ತ ಗಣಗಳು ನಿನಗೆ ಹರಸಿದರು ಸತತೋತ್ತ
ರೋತ್ತರವು ದೊರೆತನ ಗುಣೈಶ್ವರ್ಯ
ಭೋಗಗಳು ವೃದ್ಧಿಸುತ್ತಿರಲೆನ್ನುತೆ
ಮತ್ತವರು ಜನ್ಮಜನ್ಮಾಂತರದಲಿದುವೆ ದೊರೆ
ಯುತ್ತಿರಲೆಂದು ಹರಿಸಲಿ. ಮತ್ತೆ ನನಗೆ ಹರಿ
ಸುತ್ತಿರಲಿ ಸರ್ವಕಾಲದಿ ಕುಂಬಳದ ಬುರುಡಿ
ಕೈಯ್ಯ ಬಿಡದಿರಲೆನ್ನುತ ||3||
ಧರೆಯೊಳಗೆ ಮೆರೆವ ಮೈಸೂರಾಧಿಪನೆ ಕೇಳು
ಬರಲೆಂದು ನಿನ್ನಲ್ಲಿ ರಥ ಹಯಾನೆಗಳಿಲ್ಲ
ಮೆರೆವ ಪಲ್ಲಕ್ಕಿಲ್ಲ ಹೊರವಾಳು ಮುನ್ನಿಲ್ಲ
ಬಲು ಪುರತಾನದಿಂದಿಹ
ಹಿರಿಯೆತ್ತು ನನಗಿರುವದರಿಂದ ಬರಲಾರೆ.
ಕರಿಸುವದು ನಿನಗುಚಿತವಲ್ಲ ಮೇಣ್ ಬೇಡ ಬಿಡು
ಬರಿದೇತಕೀ ತವಕ ಮನದೊಳುರುಭಕ್ತಿಯಂ
ಪಿಡಿದಲ್ಲಿ ಕಾಣೆನ್ನನು ||4||
ನಿರುಪಾದಿ ಯೋಗಿಯನು ಬಹಿರಂಗ ಯೋಜನೆಯ
ನರಿದು ವಿರಚಿಸಿ ನೀನು ಕರಿಸುವದು ತರವಲ್ಲ
ಅರಹುವೆನರಸ ನೀನು ಮೆರೆವ ಮಾನಸನಾದೆ
ಸಿರಿಭೋಗ ದೊರೆತನದಲಿ
ಹರಹರಿ ಬ್ರಹ್ಮಪದ ತೃಣಕೆ ಸಮಗಂಡಿರುವ
ಪರಮ ಪಂಚಾಕ್ಷರುಚ್ಚರಣಿಯೊಳಗಿರುತಿರುವ
ವರಲಿಂಗ ಜಲಧಿಯೊಳು ಸತತ ಮುಳುಗಿರ್ಪವಗೆ
ನರರ ಹಂಗೇನು ನೃಪತೀ ||5||
ಪರಮ ಕೈಲಾಸದೊಳು ಪರಶಿವನು ಶರಣರನು
ಕರೆದು ಕೇಳಿದನಾಗ ಹೋಗಿ ಧರೆಯೊಳಗಿನ್ನು
ಹರಭಕ್ತರಿಗೆ ಕಂದನಾಗಿ ಷಟ್‍ಸ್ಥಲ ಮಾರ್ಗವರುಹಿ ಬರುವವರಾರೆನೆ
ಶರಣರೆಲ್ಲರು ತಮ್ಮ ರಣಧೂಳಿಯ ತೆಗೆದು
ಇರದೊಂದು ಗೊಂಬೆಯನು ಕರುಣದಿಂ ರಚಿಸಿದರು
ವರನಾದ ಬಿಂದು ಕಳೆ ತುಂಬಲೊಡನಾ ಶಿಸುವು
ಓಂ ಮಹಾಂತೆಂದಿತಾ ||6||
ಆಗ ಪರಶಿವಮೂರ್ತಿ ಶಿಶು ಕಂಡು ನಸುನಕ್ಕ
ನೀಗಿದೇಂ ಸೋಜಿಗವು ಮಗುವೆಂತು ಜನಿಸಿತೆನೆ
ನಾಗಭೂಷಣನೆಂದು ಚರಣ ಧೂಳಿಯ ತೆಗೆದು
ಗೊಂಬೆಯೊಂದನುಗೈದೆವು
ರಾಗದಿ ಬಳಿಕ ನಾದಬಿಂದು ಕಳೆ ತುಂಬಿದೆವು
ಕೂಗಿತಾಗದು ‘ಅ ಉಮ’ ಎಂಬ ನಾಮವನೆನಲು
ಯೋಗಿ ಪರಶಿವ ಕೇಳಿ ‘ಜೋ ಪರಬ್ರಹ್ಮ ಶಿಸು’
ಬಾರೆಂದು ಪೆಸರಿಟ್ಟನು ||7||
ಪರಿಶಿವನು ಹರಭಕ್ತ ಹರಶರಣರೊಂದಾಗಿ
ಪರಮ ಪಶ್ಚಿಮ ಚಕ್ರ ಪಟ್ಟವನು ಕಟ್ಟಿದರು
ಹರಸಿದರು ಸಿಂಹಾಸನಾಧೀಶನಾಗೆಂದು ಮುದವೆರಸಿ ಹರಶರಣರು
ಧರೆಯೊಳಗೆ ಹೋಗಿನ್ನು ಚರ ರೂಪದಲಿ ಮೆರೆದು
ವರಧರ್ಮವನ್ನರುಹಿ ಕರಣಗುಗಳ ಜಯಿಸಿ
ತರದಟ್ಟಿ ಮಲಮೂರ ನಾರು ವೈರಿಯ ಗೆದ್ದು
ತರುಳ ಬಾರೆಂದೊರೆರು ||8||
ನಮ್ಮಪ್ಪ ಪರಶಿವನು ನಮ್ಮವ್ವ ನಮ್ಮವ್ವೆ
ನಮ್ಮಕ್ಕ ನಾಗಮ್ಮನಲ್ಲದೆ ಮಹಾದೇವಿ
ನಮ್ಮಮ್ಮನಿವರು ಕದಳಿಯ ಪೊಕ್ಕು ಬೈಲೊಡನೆ
ಬೈಲಾಗಿ ನೆರೆವೆರೆದರು
ನಮ್ಮಣ್ಣ ಷಣ್ಮುಖನು ಬಳಗೆವಾ ಗಣಗಡಣ
ನಮ್ಮ ಪ್ರಾಚೀನರರು ವತ್ತುಮುವರು ಶರಣ
ರೆಮ್ಮನ್ನು ಪೋಗಗೊಡರೆಲೆ ರಾಜ ನಿನ್ನೆಡೆಗೆ
ಸ್ವಾತಂತ್ರ್ಯವಿಲ್ಲವೆನಗೆ ||9||
ದೃಢಭಕ್ತ ಮೇದಾರ ಚನ್ನಯ್ಯನಂಬಲಿಯು
ಮೃಢಗೆ ಬಲು ಸವಿಯಾಯ್ತು ಸವಿದನಲ್ಲದೆಯುಳಿದ
ಕಡುಧನಿಕ ಪೊಡವಿಪರ ಸವಿಯ ಮೃಷ್ಟಾನ್ನವೆನ್ನೊಡೆಯ
ಪರಶಿವನೊಲ್ಲನು
ಪಡವಿಪತಿ ಕೇಳೆನ್ನ ಹಡದ ತಾಯಮ್ಮವ್ವೆ
ಬಡಮಗನ ಸಲಹುವೆಳು ಜಡಪಾಲ ವಿರದಿರಲು
ಬಡಿದೆನಗೆ ಕುಡಿಸುವಳು ಚರತೀರ್ಥ ಶೇಷವೇ ಪಾಲಾಗೆ
ಸವಿಯೆನ್ನುತಾ ||10||
ನೀರೊಳಿಹ ಜೀವಿಗಳ ಬಯಲೊಳಗಿಡುವ ತೆರದಿ
ಊರೊಳಿಹ ಮೃಗಗಣವನಡವಿಗಟ್ಟುವ ತೆರದಿ
ಘೋರಪಡಿಸುವದೆನ್ನನುಚಿತವಲ್ಲೆತಿ ರಾಜ
ಮನದೊಳಗೆ ತಿಳಿದು ನೋಡು
ಬಾಲ ಬ್ರಹ್ಮಿಯು ನಾನು ಬಳಸಿ ಬ್ರಹ್ಮಿಯು ನೀನು
ಹೇಳಲೇಂ ನಾನಿನ್ನು ತಿಳುವಳಿಕೆಯುಳ್ಳವಗೆ
ಮೇಲೆ ಮಿಗೆ ಸುಖವಿರುವದೊಳಗೇನು ಸುಖವಿಲ್ಲ
ಮೈಸೂರು ಮೈಚೂರಿಯು ||11||
ಅರಸ ಕೇಳ್ ನೀನೆನ್ನ ಮೆರಸದಿರು ಮೋದದಿಂ
ಪರಶಿವಾಜ್ಞೆಯನಾರಿತು ಮೆರೆಯುವದು ತರವಲ್ಲ.
ಮೆರೆಯುವಡೆ ಛತ್ರಚಾಮರಗಳೆಂಬಾ ತಟ್ಟು
ಕಸಬರಿಗೆಗಳು ಸುಖಪ್ರದಗಳೆಂತು
ಧರೆಯ ಭೋಗವನೊಲ್ಲೆ, ಪರರ ಭೋಗವನೊಲ್ಲೆ
ಗುರು ಬಸವ ಪ್ರಮಥಗಣ ಮೆರೆಯ ಬೇಡೆನ್ನುವರು
ಹೊರಗೆ ರಂಜನೆ ಬೇಡ, ಗುಪ್ತ ಭಕ್ತಿಯ ಮಾಡಿ
ಮುಕ್ತಿ ಪಡೆವುದು ರಾಜನೇ ||12||
ಮೂರು ತೆರೆನಾಗಿರುವ ಧೀರ ಶಿವಯೋಗೀಶ
ಮಾರಹರ ಮೊದಲಾದ ಯಾರ ಹಂಗಿಗನಲ್ಲ
ತೋರುವೀ ಜಗದ ಸುಖ ವೈಭವಂಗಳನೆಲ್ಲ ತೃಣಕೆ
ಸರಿ ಎಂದವರಿವನು
ಭೂರಮಣ ಕೇಳೆನ್ನ ಕರಿಸಿ ಘಾಸಿಪುದೇಕೆ
ತೋರ ಮುತ್ತನು ಬೆಳ್ಳಿ ಬಂಗಾರಗಳ ನೊಲ್ಲೆ
ಬೇರೆ ಕುಂಬುಳಬುರುಡಿಯಂ ಕಳುಹು
ಮನನೊಪ್ಪಿದೊಡೆ ಗುಪ್ತ ಭಕ್ತಿಯಿಂದ ||13||

ನೋಡಬಾರದೇನೋ ಶಿವನೇ
ನೋಡಬಾರದೇನೋ ಶಿವನೇ ನೋಡಬಾರದೇನೋ|
ನೋಡಬಾರದೀ ರೂಢಿಯೊಳಗೆ ನಾಂ ಬೇಡಿಕೊಳುವೆನೈ
ಕಾಡದೆ ಕರುಣದಿ ||ಪ||
ಶರಣ ಶರೀರ ಮಮ ಶರೀರವೆಂಬ ಶ್ರುತಿ|
ಯಿರುವದಿದನು ಮಮಕರಿಸಿ ಮುದದಿ ನೀ ||1||
ಧುರಿತ ಭಯದಿ ಹರ ಹರ ಹರ ಯೆಂದುರೆ|
ಮೊರೆಯಿಡುತಿರೆ ಸಾದರದಿ ಪರಮನೀ ||2||
ಜನನಿಯೊಳಣುಗನು ಬಿನದಿಸುವದ ದಯ|
ದಿ ನಿರೀಕ್ಷಿಸು ವೋಲ್ ಘನಮಠೇಶ ನೀ ||3||
[/fusion_toggle][fusion_toggle title=” ಪರಮ ದಯಾಳು
ಪರಮ ದಯಾಳು ಪರಿಪಾಲಿ ಸಭವನೆ ಪರಿಪಾಲಿಸ ಭವನೆ|
ದುರಿತವಿದೂರ ಮುರಹರ ನುತಪದ ಶಿವ|| ||ಪ||
ಇಂದು ಶೇಖರ ಭವ ಬಂಧವ ಛೇದಿಸಿ|
ಕಂದನೆಂದತಿ ಮುದದಿಂದೆ ಸದಾ|
ನಂದ ಮಯನೆನಿಸಿ ಮಂದರ ಮಂದಿರ ಶಿವಾ ||1||
ಎನ್ನವಗುಣತತಿಯಂ ನೀ ನೋಡದೆ|
ಮನ್ನಿಸಿ ಪರಮ ಪ್ರಸನ್ನನಾಗಿ|
ಧನ್ಯನೆನಿಸುತೆ ಸುಪುಣ್ಯಮಯನೆ ಶಿವ ||2||
ಘನಮಠ ವಾಸ ಪಾವನದಿವಿಜಾರ್ಚಿತ|
ಮನದ ಚಲನವಳಿದನುದಿನವಾ|
ಜನನ ಮರಣ ಭಯವನು ಹರಿಸುತೆ ಶಿವ ||3||

ಪಾಲಿಸೆನ್ನನು ಶಂಕರ
ಪಾಲಿಸೆನ್ನನು ಶಂಕರ ಕಾಲಸಂಹರ|
ಪಾಲಿಸೆನ್ನನು ಶಂಕರಾಮರಜಾಲನತಪದ ನೀಲಗಳ ನಭೋ|
ವಾಲ ಶೈಲಜಲೋಲ ಪರಮದಯಾಲ ನಿತ್ಯನಿರಾಳ ನಿರ್ಭಯ ||ಪ||
ನಂದಿವಾಹನ ಶಾಶ್ವತ ಪರಮಾತ್ಮ ಶಿವ ಸಾನಂದಾದಿ ಮುನಿವಂದಿತ
ಪಾಂಡು ಶರೀರ|
ನಂದ ನಂದನ ನಂದನಾಂತಕ ಹಿಂದೆ ಭವ ಮರಣ ಭಯಗಳೊಳತಿ||
ನೊಂದು ಬಂದೆನು ತಂದೆ ನೀದಯದಿಂದ ಕೈವಿಡಿದಿಂದು ಶೇಖರ ||1||
ಸೋಮಸುಜನ ಸೇವಿತ ಸಾರಂಗಕರ ನಿಸ್ಸೀಮ
ತ್ರಿಮಲವಾಲೇತ ರಜತಾಚತೀಶ|
ಸಾಮಜಾನನತಾತ ನಿಗಮ ಸ್ತೋಮಹಯ ಭವಭೀಮ ನಿಮ್ಮಸು|
ನಾಮವೆನ್ನಯ ಜಿಹ್ವೆಗನುಗೊಳಿಸಿ ಮಹೇಶ್ವರ ಪ್ರೇಮದಿಂದಲಿಗೆ
ಈಶ ಪರಮ ಪವನ ಮಹಾದೇವ ತ್ರಿಪುರವಿನಾಶ
ಪನ್ನಗಭೂಷಣ ಸರ್ವೇಶ್ವರಾಭವ|
ಭಾಸುರಾದ್ವಯ ಶ್ರೀಘನಮಠನಿವಾಸತಿಭುವನಪೋಷ ನಿಮ್ಮಯ|
ದಾಸ ದಾಸರ ದಾಸ ದಾಸರದಾಸನೆನಿಸುತೆ ವಾಸಿಯಿಂದಲಿ ||2||

ಪಾಹಿ ಮಹೇಶ
ಪಾಹಿ ಮಹೆಶ ಪಾಪ ವಿನಾಶ|
ಮೋಹರಹಿತ ವೃಷವಾಹ ಗಿರೀಶ| ||ಪ||
ಹಾರ ತುಷಾರ ಪಟೀರ ಪ್ರಗೌರಶ|
ರೀರ ನಿರುಪಮ ಕುಮಾರ ಜನಕ ಶಿವ ||1||
ಅಂಗಜಭಂಗ ಮತಂ ಗಜಿನಾಂಬರ|
ಮಂಗಳಮಯ ಮಹಾಲಿಂಗ ನಿರಾಮಯ ||2||
ಘನಮಠ ವಾಸ ಶರಣ ಹೃದಯೇಶ|
ಅನುಘದಯಾರಸವನಧೆ ಗಣೇಶ ||3||

ಪೊರಗೆ ಶಿವವೇಷವನು
ಪರಮ ವಿರತ ಜರಿಯಲುಂಟೇನೋ ಹೇ ಮರುಳ ಮಾನವ|
ಪರಮ ವಿರತರ ಜರಿಯಲುಂಟೇನೋ||
ಪರಮ ವಿರತರ ಜರಿಯಲುಂಟೆ ನಿರುತ ಸತ್ ಚಿತ್ ಸುಖಸ್ವರೂಪದಿ|
ಧರಣಿಯೊಳು ಸದ್ಭಕ್ತರಸುವಾಗಿರುತೆ ಸ್ವಾತಂತ್ರ್ಯದಿ ಚರಿಸುವ ||ಪ||
ಕರಣ ವಿಷಯೇಂದ್ರಿಯಗಳೊಳ್ ಕೊರಗಿ ಅರಿವರ್ಗಷಡುದು|
ಸ್ತರಗುಣಾವಳಿಗಳೊಳು ನೆರೆ ತೊಡಗಿ||
ಶರೀರ ಪೋಷಣೆಗಾಗಿ ಜಡವನು ಕಂಸಿ ಪರಮಾರ್ಥವನುಜರೆಯುತ|
ನರರೊಳುಂ ಪರಿಪರಿಯ ವೇಷದಿ ತಿರಗುವರ ನಾಹಳಿವೆನಲ್ಲದೆ ||1||
ವೀರಶೈವ ಜ್ಞಾನ ವತಿಗಳೆದು ಒಡಲಲಾಸೆಯಿಂ ಸಂ|
ಸಾರಿ ಜನರಿಚ್ಛೆಯೊಳು ತಾಂ ನುಡಿದು||
ಸೆರೆಯರಳಿಗೆ ನೂರುಸಾಸಿರಹೇರ ಹಾಬೀಜದ ಒಣಮೆಯನು|
ಹಾರಿಸುಟ್ಟಾಯ್ದುಂಬ ನಂತಿಹಕ್ರೂರಹ ಧಿಕ್ಕರಿಪೆನಲ್ಲದೆ ||2||
ಶ್ರೀಯುತಾದ್ಯರ ವಚನವನು ಬಿಟ್ಟು ದುರ್ಮಮತೆಯಿಂಸತಿ|
ಮಾಯಶಾಸ್ತ್ರಕೆ ತಾನೆ ಮತಿಗೊಟ್ಟು||
ತಾಯ ಮಾರುತೆ ತೊತ್ತ ಕೊಂಬುವ ನಾಯತದಿಯಭ್ಯಾಸಿಸುತೆ ಜಡ|
ಕಾಯಮೋಹದಿ ಚರಿಪ ಪರಮಾನ್ಯಾಯಿಗಳ
ಕಾಳ್ಗಳೆವೆನಲ್ಲದೆ ||3||
ಪೊರಗೆ ಶಿವವೇಷವನು ಹಲ್ಲಣಿಸಿ ಮನದಂತರಂಗ ದೊ|
ಳಿರದ ಕಾಪಟ್ಯವನು ನೆಲೆಗೊಳಿಸಿ||
ಭರದಿಯಾಕಳ ಮರೆಯೊಳಂಬನು ಹರಿಣಗಿಡುವವನಂತೆ ಜನರನು|
ಮರಳುಗೊಳಿಸುತೆ ಧನವನಿತೆರಿಗೆ
ಎರಗುವರದೂಷಿಸುವೆನಲ್ಲದೆ ||4||
ವಾಸಿಯಿಂ ಬೆನ್ನಿನಲಿ ಪೊತ್ತಿರುವ ಸುಪದಾರ್ಥ ಶಾಸ್ತ್ರದ|
ಲೆಸನರಿಯದೆ ವಿಷಯದಿಂ ಹರಿವ||
ರಾಸಭನವೋಲ್ ಶ್ರೀಘನಮಠ ನಿವಾಸವನು ಪರದೇಶಿ ಮಾಡಿ|
ತ್ತಾ ಸದಷ್ಟಾ ವರಣವರಿಯದ ದೋಷಿಗಳನಾನುಡಿವೆನಲ್ಲದೆ ||5||

ಬಸವಣ್ಣನೆ ಶ್ರೀಗುರು
ಆರಗೊಡವೆಯಿನ್ನೇನವಗೆ ಪಾರಮಾರ್ಥದೋಳಿರವವಗೆ|
ವೀರಶೈವ ಸುವಿಚಾರ ಪ್ರಮಥರಾಚಾರವಿಡುದು
ಭವದೂರನಾದಗಿನ್ ||ಪ||
ಬಸವಣ್ಣನೆ ಶ್ರೀಗುರುವೆಂದು ಅಸಮಲಿಂಗ ಚನ್ನವೃಷನೆಂದು|
ಕುಶಲದಲ್ಲಮಪ್ರಭು ಚರನೆಂಬೀ ಪೊಸ ನಂಬಿಗೆ
ಕೈವಶವಾದವಗಿನ್ ||1||
ಬಾಹ್ಯಕರ್ಮಕೆ ನಾಸ್ತಿಕವಾಗಿ ಗಹ್ವರಿಯೊಳು ಭ್ರಾಂತಿಯ ನೀಗಿ|
ಜಿಹ್ವೆಗುಹ್ಯಗಳ ಜರಿದು ಸದಾಶಿವನಾಹ್ವಯವೇತನುವಾಗಿ
ವಿರಾಜಿಪಗಿನ್ ||2||
ಮೃಢಶರಣರ ವಚನಾನುಭವ ಬಿಡದೆಯೋದಿಕೇಳದರನುವಾ|
ಸಡಗರದಿಂದರಿದಡಿಗಡಿಗಾ ನುಡಿನಡೆಯೊಂದಾಗುತೆ
ದೃಢದಿಂದಿರ್ಪವಗಿನ್ ||3||
ಕೋಶಪಂಚಕವನತಿಗಳೆದು ಈ ಷಣತ್ರಯವನೆ ನೆರೆ ಮರೆದು|
ವೇಷಭಾಷೆಯಿಂ ದಾಸನಾಗದೆ ನಿರಾಶೆಯಿಂದ
ಪರದೇಸಿಯಾದಗಿನ್ ||4||
ಜಾತಿಗೋತ್ರ ನೀತಿಯನಳಿದು ಭೂತ ಪಂಚಕದ ಗುಣವರಿದು|
ಖ್ಯಾತಿ ಯಲಾಭದ ಪೂಜೆಯಳಿದು ಪರಮಾತುಮನೊಳು
ಚಿರೆದಾತಗೆ ಮತ್ತಿನ್ ||5||
ಭುಮಿಯೊಳು ಶಿವನ ಪ್ರಸಾದವನು ವಿವರದಿ ಶಿವನ ಪದಾಂಬುವನು|
ಅವಿರಳ ಮತಿಯಿಂದನುಭವಿಸುತಲಾ ಪ್ರವಿಮಲ ತತ್ವಜ್ಞಾನಿ
ಯಾದಗಿನ್ ||6||
ಅಷ್ಟಾಂಗದೊಳಷ್ಟಾವರಣ ಶ್ರೇಷ್ಠದಿ ಸಂಬಂಧಾಚರಣ|
ಇಷ್ಟಪ್ರಾಣ ಭಾವದ ನಿಜವನು ಗುರು ಕೊಟ್ಟ
ಜ್ಞಾನವಳವಟ್ಟಾತಣಿಮಗಿನ್ ||7||
ವೇದಶಾಸ್ತ್ರ ತರ್ಕಾದಿಗಳಗಾದಿಯೆಂದು ಕಳೆದವರಚಲ
ಮೋದಿನಿಯೊಳು ತನ್ನಾದಿ ಮಧ್ಯ ತುದಿ ಮೋದದಿ ತಿಳಿದು
ವಿನೋದದೊಳಿರ್ಪ ||8||
ಜ್ಞಾನಕ್ರಿಯಾ ಸಂಧಾನವನು ನೂನವಿಲ್ಲದೆ ನಡೆಸುತವನು
ಸಾನುರಾಗದಿಂ ಘನಮಠೇಶನೊಳ್ ತಾನೆ
ತಾನಾಗಿ ವಿರಾಜಿಪ ||9||

ಬಹಳ ಬಲ್ಲವನೆಂದು ಕೂಗುವೆ \
ಸಾಕೊ ಹೇ ಭ್ರಾಂತ ಯಾವನೊ ನಿಶ್ಚಿಂತ ಎಲ್ಲರಿಗಿಂತ ನಾನು
ಬಹಳ ಬ್ಲಲವನೆಂದು ಕೂಗುವೆ|
ಖುಲ್ಲತನದಿ ಕಳ್ಳದಾರಿಯಲ್ಲಿ ಪೋಗಿ ಸಾಯುವೆ|| ||1||
ಜಾತಿಗೋತ್ರವೆಂದು ಬಹು ಪ್ರಖ್ಯಾತಿಯಲ್ಲಿ ಪೇಳುವೆ ನೀತಿ|
ಮಾತೆ ಸೂತಕದಿಂದೆಯಾದುದೀತನುವಲ್ಲೇನೋ ಕೋತಿ|| ||2||
ಹೆಚ್ಚು ಕುಂದುಯೆಂದು ಬೋಕನಚ್ಚಿಕೊಂಡು ನುಡಿವಿಯೊ|
ಮುಚ್ಚಿಕೊಳ್ಳೊ ನಿನ್ನ ಬಾಳು ಬಚ್ಚಲ ಭುವಿಯೊಳಿದ್ದಿಯೊ|| ||3||
ಮೌನವ ವ್ರತವ ಪಿಡಿದು ನೀನು ಶಿವನ ಭಕ್ತನೆಂಬುವೆ|
ಹೀನಮನದೊಳಾಶೆಯಿಂದ ಕುಹಕಿಗಳನೇ ನಂಬುವೆ|| ||4||
ಚಿಲುಮೆ ನೀರ ಕುಡಿದು ನಮ್ಮ ಜನ್ಮ ಪಾವನವೆಂಬಿಯೋ|
ಮಲಮೂತ್ರದ ಕುಳಿಯೊಳಗೆ ಮುಳುಗಿ ಮುಳುಗಿ ಬಂದೆಯೊ|| ||5||
ಉಪ್ಪನುಳಿಯ ಬಿಟ್ಟು ನಾನು ಸಪ್ಪೆಯನುಂಡೆನೆಂತೀದಿ|
ಉಪ್ಪನರಿಯದ ನಾಯಿನರಿಗಳಿಗಪ್ಪುವದೆ ಷಟ್‍ಸ್ಥಲದ ಹಾದಿ|| ||6||
ಗುಂಭಮಂತ್ರ ಧ್ಯಾನದೊಳಗೆ ತುಂಬಿತೀ ಮನವೆಂದೆಂಬ|
ಸಂಭ್ರಮದಿಂದಲಿ ತಗಣಿ ಬೆನ್ನಿನಲಿ ಚುಂಬನಂಗೊಡಲಾಗೇನಂಬಿ|| ||7||
ಬೆಳ್ಳಿ ತಾಮ್ರದೇವರ ಬಹು ಸತ್ಯುಳ್ಳದೆಂದು ಕೂಗುವೆ|
ಕಳ್ಳರು ಒಯ್ದು ಕಡಿದು ಕರಗಿದಡೆಲ್ಲಿಗೈದಿದವೋ ಭವಿ|| ||8||
ವಿೂಸಲು ಹಾಕಿ ದೇವರಿಗೆಂದು ಲೇಸಾದಡಿಗೆ ಮಾಡುವೆ|
ವಾಸಿಸಿಕೊಂಡು ದೇವರನಗಲಿ ಧ್ಯಾಸಗುಟಕೆ ನುಂಗುವೆ|| ||9||

ಬಾಲ ಶಶಿಧರ ಪರಮೇಶ
ಬಾಲ ಶಶಿಧರ ಪರಮೇಶ ಗಜಾವರ|
ಪಾಲಯ ರೇ ಮಾಂ ಶಿವ ||ಪ||
ಶೇಶ ವಿಭೂಷಣ ದೋಷ ವಿನಾಶನ|
ಪೋಷತ್ರೈಭುವನ ಸಮಾನಾಗಜಾವರ ||1||
ಭವ ಘನ ಮಾರುತ ಭವ ದಿವಿಜಾರ್ಚಿತ|
ಅವಿರಳ ಜ್ಞಾನ ಸಮೇತಾಗಜಾವರ ||2||
ಮುನಿ ಜನ ಮಾನಸವನಜನಿವೇಶ|
ಘನಮಠವಾಸ ಮಹೇಶಾ ಗಜಾವರ ||3||

ಬಿಡದಿರೈ ಎನ್ನ ಲಿಂಗೋಳ
ಬಿಡದಿರೈ ಎನ್ನ ಲಿಂಗೇಶ ನೀಂ ಬಿಡದಿರೈಯೆನ್ನ|
ಬಿಡದಿರೈ ಎನ್ನ ನಿನುಡುರಾಜಧರ ಭವ|
ದಡವಿಯೋಳ್ ಸಿಲ್ಕಿಬಾಯ್ ಬಿಡುವೆನೆನಯಕೈಯ ||ಪ||
ಗೌರಶರೀರ ಸದ್ಭಕ್ತ ಹೃತ್ಸಾರಸಾಗರ|
ವಾರಣ ದೈತ್ಯ ಸಂಹಾರ ಪರಶಿವ ಕೃಪಾ|
ವಾರಿಧೆ ಸುಜನ ಮಂದಾರ ಗೋಪತಿವಾಹ||
ಮೇರುಚಾಪ ಕುಮಾರಪಿತ ಭವದೂರ ಭುವನೋ|
ದ್ವಾರ ಗತ ಸಂಸಾರ ನುತಗಂ|
ಭೀರ ಚಿನ್ಮಯಸಾರ ಸುಖಸಂಪೂರ ಶಂಕರ ||1||
ಕುಧರಾತಪತ್ರ ನೇತ್ರಾಂಕಿತಪದ ಶ್ರೀದಯಮಿತ್ರ|
ಮದನ ಮರ್ದನ ಮೋಕ್ಷಪದ ಕಾತ್ಯಯನೀ ಸಮ್ಯಕ್|
ವದನಾರವಿಂದ ಷಟ್ಪದ ದೇವಗಣ ವಂದ್ಯ||
ವಿಧಿಕ ಪಾಲಕಾಬ್ಜ ಶೋಭಿತ|
ವಿಧು ಪ್ರಭಾಕರ ಜ್ವಲನನೇತ್ರ ವ|
ರದ ಪರಾಪರ ಭುವನ ಪೋಷಿತ ಬುಧಲಲಾಮ
ಸುಪೂಜ್ಯಶಂಕರ ||2||
ಘನಮಠ ವಾಸ ಸುನ್ಮುನಿಗಣೋನ್ಮಣಿ ಸುಪ್ರಕಾಶ|
ಕನಕಭೂಧರ ಕಾರ್ಮುಕಾನಘ ಸರ್ವೇಶ ಪಾ|
ವನ ಗಾತ್ರ ನಿತ್ಯನಿರ್ಗುಣ ಸಾಧುವನ ಚೈತ್ರ||
ಜನನ ಮರಣ ಗಹನಹುತಾಶನ|
ಫನಿಕುಲೇಶ ವಿಭೂಷ ವೃಷವಾಹನ ಗಿರೀಶ|
ದಯಾರ್ಣವಾದ್ವಯವಿನುತನಾಮ ಗಣೇಶ ಶಂಕರ ||3||

ಭಕ್ತಾಧಿಕ್ಯ
ಕುಲವೇ ಶಿವ ಕುಲವೈ ಭಕ್ತನ|
ಕುಲವೇ ಶಿವ ಕುಲವೈ||
ಕುಲವೇ ಶಿವಕುಲ ವಿಲಸದ್ ಗುರುಕರ|
ಸ್ಥಲದೊಳು ಜನಿಸಿದಮಲ ಹರಭಕ್ತನ|| ||ಪ||
ಕೆಸರೋಳ್ ಕಂಜವದು ಜನಿಸೆ|
ಕೆಸರೆನಿಸದ ತೆರನು||
ಅಸಮಪುಣ್ಯದಿಂ ಪಶುಪತಿ ಭಕ್ತನೆ|
ನಿಸಿ ತಾನೆಲ್ಲುದಯಿಸಲಾತನ ಸತ್|| ||1||
ಮುತ್ತುದಯಿಸಿ ಜಲದೊಳ್ ಜಲವದು|
ಮುತ್ತಾಗಿರದದರೋಲ್||
ಮತ್ರ್ಯದೊಳಗೆ ತನುವೆತ್ತು ಪೂರ್ವವಳಿ|
ದುತ್ತಮ ಗುರು ಸತ್‍ಪುತ್ರನಾದವನ|| ||2||
ಹಸರು ಪುಳನ ಭ್ರಮರ ಪಿಡಿದೊಯ್|
ದ್ಹಸಿಯ ಗೊಡೊಳದರ||
ಹಸನಾಗಿಡೆ ಪರವಶದಿ ಭೃಂಗನಾ|
ಗೆ ಸದಾ ಪರಿಗುರುಶಿಶುವಾದಾತನ|| ||3||
ಧರೆಯ ಮಲಿನ ಜಲವಾ ಧರೆಯೊಳ್|
ಶರಧಿಯೊಳೊಡವೆರೆವಾ||

ಭಜಿಸೋ ಹೇ ಮನುಜ
ನಿಟಿಲಾಕ್ಷನ ಭಜಿಸೋ ಹೇ ಮನುಜ ನಿಟಿಲಾಕ್ಷನ
ಭಜಿಸೋ ||ಪ||
ಕುಟಿಲ ಪ್ರಪಂಚದ ಚಟುವಳಿದನುದಿನ||
ಜರೆಯೋಳ್ ಪರರಿಗೆ ನೆರೆಹಂಗಾಗುತೆ|
ಮರಣವಾಗದೆ ಸುಖದಿರುವಾಗಲೆ ನೀ|| ||1||
ಈ ಶಿವ ಸಮಯ ಮಾನಿಸ ಜನ್ಮವಿ|
ನ್ನೇಸುಕಾಲಕೆ ಸಿಗದೀ ಸಮಯದೆ ನೀ|| ||2||
ಜಡಮತಿಗಳ ನುಡಿಗಡಣಕೆ ನೀ ಕಿವಿ|
ಗೊಡದಾ ಘನಮಠದೊಡೆಯನ ಬಿಡದೆ ನೀ ||3||

ಭಾವ ಲಿಂಗವೋ
ಭಾವಲಿಂಗೋ ಸದ್ಭಕ್ತ ಜನರ ಭಾವ ಲಿಂಗವೋ|
ಭಾವ ಲಿಂಗವೋ ಸದಾಶಿವಾವತಾರರೆನಿಸಿ ವೀರ||
ಶೈವ ಧರ್ಮನಿಷ್ಠೆ ಭುವಿಯೊಳೋವಿ ಮೆರೆದ
ಮಹಿಮರಮಳ ||ಪ||
ಮಲ್ಲವಿಭುಗಳು ಶಿವಗರ್ಪಿಸದುಣಲೊಲ್ಲೆನಾಗಳು|
ಯೆನೆ ಕುಹುಕರೊಂದು ಬಳ್ಳವಿಳೆಯೊಳು ನಿಲಿಸೇಳಿಸುತ್ತಲೆಲ್ಲರಾಗಳು ||ಅಪ||
ಮಲ್ಲಭಾವ ನಿಮ್ಮ ಗೌರಿವಲ್ಲಭನಿದೆಯೆಂದು ತೋರ|
ಲೊಳ್ಳಿತೆಂದು ಸಮನದೆ-ಜೀಸಲಲ್ಲಿ ಲಿಂಗವಾಯಿತಾಗಿ ||1||
ನಂಬಿಯಣ್ಣನು ಅಪರವೆನಾಚಿ ಕುಂಭ ಕುಚವನು ಕಾಣುತ್ತಲೆ ಸ್ವ|
ಯಂಭುವೀತನು ಯೆನುತಾಡಿಪಾಡುತುಂಬುರಾತನು||
ಸಂಭ್ರಮದಲಿ ತನನ್ ಚಿತ್ತಮಂ ಬಲಿದೆಜಿಸುತ್ತೆ ಕರೆಯೆ|
ಶಂಭುವೋಯೆನುತ್ತೆ ನುಡಿದು ನಂಬಿಗಿಷ್ಟವಿತ್ತವಾಗಿ ||2||
ಶರಣ ಕುಲಜನು ಆಕಾಟಕೋಟನರಿ ವಿಧೂತನು ನಟ್ಟಡವಿಯೋಳ್|
ಕುರತರಬಿಯಾತನು ಚರವರನು ಕೊಟ್ಟ|
ಕುರಿಯ ಹಿಕ್ಕಿಯನು ಡರಮನೆಂದೆಜಿಸುತ್ತಿರಲ್ಕೆ.
ಭರದಿ ತಂದೆಯೊದಿಲವನ ಶಿರವನರಿಯೆ ಹರನು ಮೆಚ್ಚಿ
ಪರಮ ಪದವನಿತ್ತನಾಗಿ ||3||
ಪೆದ್ದಯಾಖ್ಯನು ಶಿವಲಿಂಗ ದೀಕ್ಷೆ ಬದ್ಧನಾಹೆನು ನಾನೆನುತಲಾ ಗುರು|
ವಿದ್ದಠಾವನು ಕಾಯ್ದಿರಲು ನೋಡಿ ರೌದ್ರದಾತನು||
ಬಿದ್ದ ಗುಂಡುಗಲ್ಲನ್ನೆತ್ತಿ ಕ್ಷುದ್ಧ ಹೋಗೆನುತ್ತಕ|
ಲ್ಲುದ್ಧರಿಸಿದೆನೆಂದು ಪಿಡಿಯೆ ಸಿದ್ಧಲಿಂಗವಾಯಿತಾಗಿ ||4||
ಶರಧಿ ರತ್ನವ ಧರಿಸಿರ್ಪವೋಲ್ ಗಿರಿತರು ಸಮೂಹವ
ತಳೆವಂತೆ ಹರಣ|
ಕರಣದೊಳಿರುವ ಸ್ವತಂತ್ರ ಭಾವಭರಿತ ಲಿಂಗವ||
ಪರಮ ಘನಮಠೇಶನ ಸತ್ ಕರುಣದಿಂದೆ ಧರಿಸುವ ಶಿವ|
ಶರಣರಾವ ಕುರುಹಿಡಿವರದರೊಳುಮೇಶ ತೋರ್ಪನಾಗಿ ||5||

ಭಾವ ಭವ ವಿನಾಶ
ಪರಮೇಶ ಪಾಹಿ ಜೀಯಾ ಸುಖಕರ ಶಿವ ಮಹನೀಯ ||ಪ||
ವರದ ತ್ರಿಜಗದ್-ರಕ್ಷ ಗತಮಣ ದಕ್ಷ ಶಿಕ್ಷ|
ಪುರಹರ ಮುನಿಗಣ ಪಕ್ಷ ಶಿವಶರಣ ಕಲ್ಪವೃಕ್ಷ ||1||
ಸಾಮಗಾನ ಲೋಲ ಭವ ಭೀಮ ವಿಜಿತಕಾಲ|
ಶುಭನಾಮ ವರದಯಾಲ ಧೃತ ಸೋಮ ಮುಕ್ತಿ ಮೂಲ ||2||
ಭಾವ ಭವ ವಿನಾಶ ಸದ್ಭಾವ ನಿಜ ನಿವಾಸ ಹೈ|
ಮಾವತಿ ಸುಪ್ರಾಣೇಶ ಮದ್ದೇವ ಘನಮಠೇಶ ||3||

ಭೂರಿ ಪ್ರತಾಪ ಸುಪುಣ್ಯ
ಸೊಮಶೇಖರ ಶುಭನಾಮ ಮಹೇಶ|
ಸ್ವಾಮಿ ತ್ರೈಭುವನರಕ್ಷಾ ಮುಕ್ತಿ ಕೋಶ ||ಪ||
ಶರ್ವಾಣೀಶ್ವರ ನಿತ್ಯ ಗೀರ್ವಾಣವಿನುತ|
ನಿರ್ವಾಣಾಶ್ರಿತ ಭಕ್ತ ಸಾರ್ವಭೌಮ ನಮಿತ ||1||
ಮಾರಮರ್ಧನ ಮೋಕ್ಷಾಧಾರಾ ಪ್ರಮೇಯ|
ಭೂರಿ ಪ್ರತಾಪ ಸುಪುಣ್ಯ ಸಹಾಯ ||2||
ವರದ ಶ್ರೀಘನ ಮಠವಾಸ ಸರ್ವೇಶ|
ಪರಮ ದಯಾಲ ಮಾಂ ಪಾಹಿ ಗಣೇಶ ||3||

ಮದನ ದಹನ ಗಿರಿಸದನ
ಹರ ಹರ ಭೋ ಭೋ ಭೋ ಶಿವಶರಣ ಸಹಾಯ ||ಪ||
ವರದ ಪರಮ ಹಿಮಕರಧೃತ ಭವ ಉಮಾ|
ವರ ಭವಹರ ಕೃಪಾಕರ ಸಿತಕಾಯ ||1||
ಮರಣ ರಹಿತ ಮುರಹರನತಚರಣ ಸಿಂ|
ಧುರದಿತಿಸುತ ಚರ್ಮಾಂಬರ ಹತಮಾಯ ||2||
ಮದನದಹನ ಗಿರಿಸದನ ನಿರಘ ಪಂಚ|
ವದನ ಶ್ರೀಘನಮಠೇಶ ಧನದ ಪ್ರಿಯ ||3||

ಮೃಢನ ಪೂಜಿಸೋ
ಮೃಢನ ಪೂಜಿಸೋ ಬೇಗ ಮೃಢನ ಪೂಜಿಸೋ|
ಸಡಗರದಲಿ ನೀ ಬೇಗ ಮೃಢನ ಪೂಜಿಸೋ||
ನಡೆ ನುಡಿಕೆಡೆಗೊಡದೆಡರೆಡೆನಡನಡಗದೆ ದೃಢನ ಮನುಜ|
ಮೃಢನ ಪೂಜಿಸೋ ಬೇಗ ಮೃಢನ ಪೂಜಿಸೋ ||ಪ||
ಮುರಹರ ಸರಸಿ ಜರುಹರ ಮರರರಿಯರು ಮರುಳರ|
ಪರಿಯಿರದುರಳ್ದರತೆರನರಿದರಿದರಿದರಿದರಿದರಿದು ಭರತಿ ||1||
ಕುಲಛಲಮಲಗಳ ಕಳವಳದೊಳು ಸುಳಿಸುಳಿದಳಿಮನದಿಳೆ|
ಯೊಳು ಫಲಗಿಲಗಳಿಗೆಳ ಸುಲಿದುಲಿದುಲಿದುಲಿದುಲಿದಳಲದೆ ||2||
ತನುಗುಣದನುದಿನ ಮನಸಿನ ಕೊನೆ ಮೊನೆಯೊಳು ಧನವನಿತೆಯ|
ರನು ನೆನೆಯದೆ ಘನಮಠ ನಿವಸನ ನೆನೆನೆನೆನೆನೆನೆನೆನೆದು ||3||

ಮಾಡೋ ಗುರು ಭಜನೆ
ಮಾಡೋ ಗುರು ಭಜನೆ ನಿಜದೊಳು ಕೂಡುತಲೆ ನರನೇ|
ಮಾಡೋ ಗುರುಭಜನಾಡಿ ಪಾಡುತೆ
ಗಾಢ ಜಗದೊಳು ಪ್ರೌಢಿಯಿಂದಲಿ|
ಮೂಢಮತಿಗಳ ಕೂಡಿಯಾಡದೆ|
ನಾಡೆ ಭಕ್ತರ ನೋಡಿ ಮುದದೊಳು ||ಪ||
ಕೋಪಗುಣ ಸಂತಾಪವೆಂಬತಿ|
ಪಾಪವತಿಗಳೆದಾ ಪರಮ ಗುರು|
ಶ್ರೀಪದಾಬ್ಜ ಪ್ರತಾಪನಂ ನೆರೆ|
ಸ್ಥಾಪಿಸುತೆ ಚಿದ್‍ರೂಪನಾಗಿ ||1||
ತೋರಿ ಕೆಡುವತಿ ಘೋರತರ ಸಂ|
ಸಾರ ಭೋಗಕೆ ಹಾರದೆ ಸುವಿ||
ಚಾರದಿಂ ನಗುರೋರಧಿಕವೆಂ|
ಭೀ ರಹಸ್ಯವ ವಿೂರದನುದಿನ ||2||
ಮೋಸ ಮಾಡುತಿಹಾಸೆ ಮೂರನು|
ಹೇಸಿ ತನುಗುಣ ರಾಶಿಯೊಳು ನೀ||
ಗಾಸಿ ಯಾಗದಲಾ ಸುಘನಮಠ
ವಾಸಗನುದಿನ ವಾಸನಾಗುತೆ ||3||

ಮಾರ ಹರನೆ ನಿನ್ನ
ಮಾರಹರನೆ ನಿನ್ನ ಚಿದಾಕಾರಗಲ್ಲದೆ ಕೈ
ಸೇರದೀ ನಿಜ ಮುಕುತಿ ದೊರೆವ ಸಾಧನವಿರದೆ ||ಪ||
ಒಂದೆನ್ನದೆರಡೆಂದು ಬಗೆಯದಂದು ನಿನ್ನೊಳೇಕವಾದ
ಸಾಂದ್ರ ಪ್ರಮಥರಮಳ ಭಕ್ತಿಯಂದವ ಬಿಡದೆ ಸಾ|
ನಂದದಿಂದೆ ಪಡೆವುದೀ ಮತಿ ಮಂದರಿಗಹುದೆ ||1||
ನಾನು ನೀನೆಂಬ ಭೇದವೇನು ದೋರದಾಸ್ವಯಾತ್ಮ|
ಜ್ಞಾನವ ಬಹುಮತವ ಜರಿದು ನೂನವಿಲ್ಲದೆ||
ತಾನು ತಾನೆಯಾಗಿ ಪಡೆವುದೀ ಮನ ಹೀನರಿಗಹುದೇ ||2||
ಈಶ ಕೊಡುವ ಫಲ ಪದಂಗಳಾಶಯನಗತಿಳೆವ ವಿರತಿ|
ಲೇಸಿನಿಂದಲಾ ಘನಮಠ ವಾಸನೋಳ್ ಬಿಡದೆ ನಿರ್
ದೋಷಿಯಾಗಿ ಪಡೆವುದೀ ಮಾನೀಸರಿಗಹುದೆ ||3||

ಮುಕ್ತಿಗೆ ಅಧಿಕಾರಿ
ಮಾರಹರನೆ ನಿನ್ನ ಚಿದಾಕಾರ ಗಲ್ಲದೆ ಕೈ|
ಸೇರದೀ ನಿಜಮುಕುತಿ ದೊರೆವ ಸಾಧನವಿರದೆ ||ಪ||
ಒಂದೆನ್ನದೆರಡೆಂದು ಬಗೆಯದಂದು ನಿನ್ನೊಳೇಕವಾದ|
ಸಾಂದ್ರ ಪ್ರಮಥರಮಳಭಕ್ತಿಯಂದವ ಬಿಡದೆ ಸಾ|
ನಂದದಿಂದೆ ಪಡೆವುದೀ ಮತಿಮಂದರಿಗಹುದೆ ||1||
ನಾನು ನೀನೆಂಬ ಭೇದವೇನು ದೋರದಾಸ್ವಯಾತ್ಮ|
ಜ್ಞಾಬವ ಬಹುಮತವ ಜರಿದು ನೂನವಿಲ್ಲದೆ
ತಾನುತಾನೆಯಾಗಿ ಪಡೇ ವುದೀ ಮನ ಹೀನರಿಗಹುದೆ ||2||
ಈಶ ಕೊಡುವ ಫಲಪದಂಗಳಾಶಯನತಿಗಳೆವ ವಿರತಿ|
ಲೇಸಿನಿಂದಲಾ ಘನಮಠ ವಾಸನೋಳ್ ಬಿಡದೆ ನಿರ್|
ದೋಷಿಯಾಗಿ ಪಡೆವುದೀಮಾನೀಸರಿಗಹುದೆ ||3||

ರಾಗದ್ವೇಷಂಗಳ ನೀಗಿ
ಪಾದ ಪೂಜೆಯ ಮಾಡುವೆ ಜಂಗಮದ ಶ್ರೀ|
ಪಾದ ಪೂಜೆಯ ಮಾಡುವೆ|
ಪಾದ ಪೂಜೆಯ ಮಾಡುವೇ ಧರೆಯೊಳಗೆ ವಿ|
ನೋದದಿ ಚರಿಸುವನಾದಿ ಜಂಗಮದ ಶ್ರೀ ||ಪ||
ಪ್ರಾಣಲಿಂಗವ ಕರಸ್ಥಾನದೊಳರಿದು ಸು|
ಜ್ಞಾನದಿ ಚರಿಪನಿರ್ವಾಣ ಜಂಗಮದ ಶ್ರೀ ||1||
ವೇದ ವೇದಾಂತ ವಿದ್ಯಾದಿಗಳಿಗೆ ಸಿಲ್ಕ|
ದಾದಿ ಪರಬ್ರಹ್ಮನಾದ ಜಂಗಮದ ಶ್ರೀ ||2||
ಯೋನಿಜನಲ್ಲ ದಯೋನಿ ಸಂಭವನಾಗಿ|
ತಾನವತರಿಸಿದ ಜ್ಞಾನ ಜಂಗಮದ ಶ್ರೀ|| ||3||
ಅಂಗೇಂದ್ರಿಯ ತತಿ ಲಿಂಗದೊಳೈದಿ ನಿ|
ರಂಗನಾಗಿಹ ಪ್ರಾಣಲಿಂಗ ಜಂಗಮದ ಶ್ರೀ|| ||4||
ಶಾಂತಿದಾಂತಿಯ ಕಾಣುತಿಂತು ಚರಿಸುತಲೇ|
ಕಾಂತದೊಳಿರುವ ನಿಭ್ರಾಂತ ಜಂಗಮದ ಶ್ರೀ|| ||5||
ಜಾತಿಗೋತ್ರಂಗಳನತಿಳೆದು ಶಿವ|
ಜಾತನಾಗಿಹ ಸ್ವಯಂ ಜ್ಯೋತಿ ಜಂಗಮದ ಶ್ರೀ|| ||6||
ಆರು ಸ್ಥಲಂಗಳ ವಿೂರಿ ನಿಜಾನಂದ|
ವಾರಿಧಿಯೊಳ ತೋರ್ಪಾಚಾರ ಜಂಗಮದ ಶ್ರೀ|| ||7||
ಆಶಪಾಶವನುಳಿದೀಶನಾಗುತೆ ಚಿದ್ ವಿ|
ಲಾಸದೊಳಿಹ ಪರದೇಶಿ ಜಂಗಮದ ಶ್ರೀ|| ||8||
ರಾಗದ್ವೇಷಂಗಳ ನೀಗಿ ಪರಾತ್ ಪರ|
ನಾಗಿ ಚರಿಸುವ ವಿರಾಗಿ ಜಂಗಮದ ಶ್ರೀ|| ||9||
ಮೂರು ಮಲಂಗಳ ವಾರಿಸಿ ಪರಮ ವಿ|
ಚಾರದೊಳಿಹ ನಿರಾಭಾರಿ ಜಂಗಮದ ಶ್ರೀ|| ||10||
ನಾಮ ರೂಪ ಕ್ರಿಯಾನೇಮರಹಿತನಾಗಿ|
ಕ್ಷೇಮದೊಳಿರುವ ನಿಸ್ಸೀಮ ಜಂಗಮದ ಶ್ರೀ| ||11||
ತನ್ನ ತಾನರಿದು ಮತ್ತನ್ಯ ಪೂಜೆಯನುಳಿ|
ದನ್ನುತ ಪದವೀವ ಚಿನ್ನ ಜಂಗಮದ ಶ್ರೀ|| ||12||
ಹಮ್ಮುಬಿಮ್ಮುಗಳ ತಾನೊಮ್ಮೆ ಬಳಸೆ ಜಗ|
ವಂ ಮರೆದಿರುವ ಸದ್ಧರ್ಮ ಜಂಗಮದ ಶ್ರೀ|| ||13||
ಭಕ್ತರ ಹರಣದೋಳ್ ವ್ಯಕ್ತದಿ ನೆಲಸಿ ಸ|
ನ್ಮುಕ್ತಿದೋರುವ ಮದ್‍ವಿರಕ್ತ ಜಂಗಮದ ಶ್ರೀ|| ||14||
ನೂತನ ಬಸವ ಪುರಾತನರೆನಿಪ ಪ್ರ|
ಖ್ಯಾತ ಶ್ರೀ ಘನಮಠನಾಥ ಜಂಗಮದ ಶ್ರೀ|| ||15||

ರೆಕ್ಕೆ ಇಲ್ಲದ ಕಾಗಿ
ಕಾಗಿ ಕರೆಯುತಾದೋ| ಆಕಾಶದ ಕಾಗಿ ಕರಿಯುತಾದೋ
ಕಾಗಿ ಕರೆಯುತಾದೋ ಬೇಗನೆ ಬಾಯೆಂದು
ನಾಗಭೂಷಣನ ಯೋಗಾಭ್ಯಾಸಕೆ
ಕಾಗಿ ಕರೆಯುತಾದೋ ||ಪ||
ರೆಕ್ಕೆ ಇಲ್ಲದ ಕಾಗಿ ಮೇಲುಪ್ಪರ ಮೇಲೇರಿ
ತಪ್ಪದೆ ತ್ರಿಪುರವ ತಿರುಗಿ ತಿರುಗುತ್ತಾ
ಅಪ್ಪನ ಕರೆಯೆದು ಮುಪ್ಪಿನ ಕಾಗಿ
ಕಾಗಿ ಕರೆಯುತಾದೋ ||1||
ಆರು ಸ್ಥಲವ ನೇರಿ ಸಾಧಿಸಿ ಮೂರು ಧುಮ್ಮನೆ ಸೇರಿ
ಸಾರಾಮೃತದ ಸವಿಸವಿದು ತಾ ಧೀರತನದಿಂದ
ಮಾರಿ ಮೇಲಕ್ಕೆತ್ತಿ ಕೂಗಿ
ಕಾಗಿ ಕರೆಯುತಾದೋ ||2||
ಮೂರು ಕೊಳದ ನಡುವೆ ಮೂರೆರಡು ಐದು ಸ್ಥಲವ ಮಾಡಿ
ಮೂರು ನೇತ್ರವುಳ್ಳ ಕೋರಿಸಿದ್ಧ ಪ್ರಸಿದ್ಧ
ಚರಣ ಕಮಲಕೆ ಎರಗೋಣ ಬನ್ನಿರೆಂದು
ಕಾರಿ ಕರೆಯುತಾದೋ ||3||

ಲಿಂಗವನಗಲಿರ ಬೇಡಲೊ
ಲಿಂಗವನಗಲಿರ ಬೇಡಲೊ ಪ್ರಾಣ
ಲಿಂಗವನಗಲಿರ ಬೇಡಲೊ ||ಪ||
ಪಟು ರೋಗಾದಿಗಳ ಸಂಕಟ ಚೋರ ಭಯವೇಳಾ|
ಘಟದೊಳಹೊರಗಿಹ ಸ್ಫುಟಲಿಂಗವಗಲಿರ ||1||
ಕುಚಿತ ಮಾನಸದಿ ಗುರುವಚನವರಿಯದೆ ಮತ್ತೆ|
ಶುಚಿಯಾಶುಚಿಯ ಶಂಕದ ಚಲಿಸವಾಗಿಹ ಪ್ರಾಣ|| ||2||
ಸುತ್ತಿ ನಿಂದೆಗಳಿಗೆ ನೀನತಿ ಮೋಹಿಸಿಯು ತತ್ವ|
ಮತಿಗೆಟ್ಟು ಘನಮಠ-ಪತಿ ಲಿಂಗವಗಲಿರ ಬೇಡೆಲೊ ||3||

ವಂಚಿತ ಸೇವೆಯ ಖಂಡನೆ
ಉಂಟೆ ಭಕುತಿ ಮುಕುತಿ ಈ ಜನರಿಗದುಂಟೇ ಭಕುತಿ ಮುಕುತಿ|
ಉಂಟೇ ಭಕುತಿಯಿಂಥಾ ಶುಂಠಜನರಿಗೆ ಮನಭಂಟರ ಗೆದ್ದು
ಮುಕ್ತಿಯುಂಟು ಮಾಡದವರಿಗುಂ ||ಪ||
ದಾಸೋಹವ ಮಾಡುವೆವೆಂದು ಜನರನೆಲ್ಲ ಮೋಸ ಮಾಡುತಂದು|
ಲೇಸಾದ ದ್ರವ್ಯಗಳೊಳಾ ಸಿಟ್ಟು ಜಂಗಮಕ್ಕೆ|
ತುಸುನೀಡದೆ ದೇಹಪೋಷಣೆಗುಳುಹಿಕೊಂಬರಿಗುಂ|| ||1||
ಆದಿಜಂಗಮ ದೇವರು ಭಕ್ತುತಿವಿನೋಯಿಯರು ಪಲವರು|
ಗೋಧಿ ಬೀಸುವ ಸಮಯದಿ ಬರಲು ಬಲು|
ಗಾದಿಯಾಡುತೆ ರಾಗಿ ಬೂದೆಂತ ಹಿಟ್ಟು ತರುವವರಿಗುಂ|| ||2||
ದೇವರ ಹರಕೆಯೆಂದು ಬಹಳ ಬಹಳ ಧಾವತಿ ಬಿಡುವಂದು|
ದೇವರ ದೇವ ಜಂಗಮವಾವೇಳೆ ಹಸಿದರೆ|
ಭಾವದಿ ಭಿಕ್ಷಾಯನೆ ಗೋವಾ ಹೋಗಾಚೆಗೆಂಬರಿಗುಂ|| ||3||
ಹೋಳಿಗಿ ಕರ್ಚಿಕಾಯಿ ಮಾಡಿದ ದಿನದೊಳು ಜಂಗಮರಾಯ|
ಶೀಲದಿ ಬಂದು ಭಿಕ್ಷಾ ಕೇಳಲು ಹಳಸಿದಂಥ|
ಕೂಳಿಷ್ಟು ತಂದು ಹಿಡಿ ಜೋಳಿಗೆ ಬೇಗನೆಂಬರಿಗುಂ|| ||4||
ನೆರೆ ಘನಮಠೇಶನಿಂದು ಜಂಗಮ ರೂಪವ ಧರಿಸಿ ಬಂದವನೆಂದು|
ಅರಿಯದೆ ಕಸವರವಿರುವ ಸ್ಥಾನದಿ ಕೆಟ್ಟ ಕುರುಡ|
ನೋಲಾಗಿಪೋದ ನರನತೆರನಾದವರಿಗುಂ|| ||5||

ಶರಣ ಜನ ಸುಹೃತ್
ಶಿವಾಭವ ಶಾಶ್ವತಾಯಾಧವಾ ಪಾಹಿ ಮಾಂ ||ಪ||
ಶರಣ ಜನ ಸುಹೃತ್ ಸರೋಜ ಚರಣ ಶೋಭಿತ|
ದಿನಕರ ಶಶಾಂಕ ವಹ್ನಿನಯನ ಸುರಸಮರ್ಚಿತ ||1||
ಶರಭವಾತ್ಮ ಜನಕ ಶರಜಶರಪ್ರಭಂಜನ|
ವರಕರುಣಾಮೃತ ಸಾಗರ ಪುರಹರ ನಿರಂಜನ ||2||
ಶಂಕರಾಭ್ರಕೇಶ ಭವಭಯಂಕರಾದ್ವಯ ಶೋಭ|
ನಾಂಕುರ ಘನಮಠನಿವಾಸ ಕಿಂಕರ ಸುಪ್ರೀಯ ||3||

ಶರಣೆಂಬೆ ಶರಣೆಂಬೆ
ಶರಣೆಂಬೆ ಶರಣೆಂಬೆ|
ಶರೀರದಾಸೆಯನು ತೊರೆದ ವಿರಕ್ತಗೆ ||ಪ||
ಆರಾರಿಯದ ವೀರಶೈವದನು|
ತೋರಿ ರಕ್ಷಿಸುವ ಸಾರ ವಿರಕ್ತಗೆ|| ||1||
ವೇಷ ಭಾಷೆಯನು ಹೇಸಿ ತ್ರಿವಿಧ ಸ
ನ್ಯಾಸಿಯಾದ ನಿರ್ದೋಷ ವಿರಕ್ತಗೆ ||2||
ಭಿಕ್ಷಾನ್ನವನಾಪೇಕ್ಷಿಸುತಖಿಲೋ|
ಪೇಕ್ಷನಾದ ಪ್ರತ್ಯಕ್ಷ ವಿರಕ್ತಗೆ|| ||3||
ಜಗದ ಹಿತಾರ್ಥಕ್ಕೊಗೆದು ವಂದಿಸಿದ|
ರಘವ ಹರಿಸುತಿಹ ಸುಗುಣ ವಿರಕ್ತಗೆ|| ||4||
ಯುಕ್ತಿಯಿಂದ ತ್ರಿವಿದಾರ್ಥವ ತ್ರಿವಿಧ|
ಕ್ಕಿತ್ತು ಮೆರೆವ ಸದ್ಭಕ್ತ ವಿರಕ್ತಗೆ|| ||5||
ತಾನಿದಿರೆನ್ನದೆ ಹೀನಾಧಿಕರೆಂದೇ|
ನ್ನೆನ್ನದ ಸುಜ್ಞಾನಿ ವಿರಕ್ತಗೆ|| ||6||
ಪುರಹೂತನ ಭೋಗ ರಮೇಶನ ಸಿರಿ|
ತೃಣ ಕಣಕೆಣಿಸಿದ ವಿನಯ ವಿರಕ್ತಗೆ|| ||7||
ಅಣಿಮಾದೃಷ್ಟ ಸಗುಣ ಸಿದ್ಧಿಗಳನು|
ತೃಣ ಕಣಕೆಣಿಸಿದ ವಿನಯ ವಿರಕ್ತಗೆ|| ||8||
ಕನಕ ಲೋಷ್ಟ ಮಿತ್ರನು ಶತ್ರುವ ದೂ|
ಷಣನುತಿಯೊಂದಾದ ಘನ ವಿರಕ್ತಗೆ|| ||9||
ಬಾಲೆಯರಿಗೆ ಮನಸೋಲದಿಂದ್ರಿಯದ|
ಜಾಲವ ಜಯಿಸಿದ ಶೀಲ ವಿರಕ್ತಗೆ|| ||10||
ಉರ್ವಿಯೊಳನುದಿನ ಸರ್ವಜೀವದಯ|
ದುರ್ವಿರಂಜಿಪಾಪೂರ್ವ ವಿರಕ್ತಗೆ|| ||11||
ನಡೆ ಪಾವನ ಮೇಲ್ ನುಡಿ ತತ್ವವದಾ|
ಗೆಡೆವಿಡದಿಹ ಜಗದೊಡೆಯ ವಿರಕ್ತಗೆ|| ||12||
ಬಹಿರಂತರದೊಳಗಹ ಮಿಲ್ಲದೆ ನಿ|
ಸ್ವøಹನಾಗಿರುತಿಹ ಸಹಜ ವಿರಕ್ತಗೆ|| ||13||
ಎಲ್ಲ ಜೇವರೊಳಗಿಲ್ಲದುಳ್ಳನಾ|
ಗಲ್ಲಮ ನಾಮವ ತಾಳ್ದ ವಿರಕ್ತಗೆ|| ||14||
ಭಕ್ತನಂಗ ಪ್ರಾಣಾರ್ಥದೊಳಗೆ ಸ|
ದ್ಯುಕ್ತಿಯಿಂದಿರುವ ಯುಕ್ತ ವಿರಕ್ತಗೆ|| ||15||
ಕೋಪತಾಪ ಪುಣ್ಯಾಪುಣ್ಯದ ತನು|
ತಾಪವಿಲ್ಲದೆ ನಿರೂಪ ವಿರಕ್ತಗೆ|| ||16||
ಪೂಜಾ ಕರ್ಮದ ರಾಜಿಯಳಿದು ಶಿವ|
ತೇಜದಿಂದಿರುವ ರಾಜ ವಿರಕ್ತಗೆ|| ||17||
ಜನನ ಮರಣ ಭಯದನು ದಾಂಟಿದಪಾ|
ವನಮಯ ನೆ ಹ ಸಜ್ಜನ ಸುವಿರಕ್ತಗೆ|| ||18||
ಕ್ರಯ ವಿಕ್ರಯದಾಶ್ರಯವಿಲ್ಲದೆ ಸು|
ತ್ ಕ್ರಿಯದಿ ಚರಿಪ ಚಿನ್ಮಯ ಸುವಿರಕ್ತಗೆ|| ||19||
ಹರ ಲಾಂಛನವನು ಧರಿಸಿ ಸ್ವಲೀಲೆಯೊ|
ಳುರೆ ನಟಿಸುತ್ತಿಹ ಚರ ಸುವಿರಕ್ತಗೆ|| | |20||
ನಿಂದೆ ವಂದನೆಗಳೊಂದದೆ ಬಂದುವ|
ರೆಂದು ಹರ್ಷಿಪ್ಪಾನಂದ ವಿರಕ್ತಗೆ|| ||21||
ಪಿತಮಾತೆಯ್ ಸತಿ ಪತಿಯಾಗದೆ ತಾಂ|
ಸುತನವೆತ್ತ ಚಾರುತರ ವಿರಕ್ತಗೆ|| ||22||
ಕಾರ್ಯಕರಣ ಸಮುದಾಯ ಶೂನ್ಯನಾ|
ದಾ ಯತಿವರ ನಿರಸೂಯ ವಿರಕ್ತಗೆ|| ||23||
ಛಲಿದಿಂ ಮೂರು ಮಲಗಳನು ಕಳೆದು ನಿ|
ಶ್ಚಲನಾಗಿರ್ಪ ವಿರಳ ಸುವಿರಕ್ತಗೆ| ||24||
ಘನ ಮಠ ವಾಸನ ನೆನೆವುತ್ತನುದಿನ|
ಘನ ಲಿಂಗಿಯೆನಿಸಿದನಘ ವಿರಕ್ತಗೆ|| ||25||

ಶರಣರ ಸ್ತುತಿ
ಲೀಲೆಯಲಿ ನೂತನ ಪುರಾತನ|
ರಾಳಿನಾಮವ ಬಿಡದೆ ಉದಯದ|
ಕಾಲದೊಳು ಪಠಿ ಸಿದರಿಗಿಹ ವಿಷ್ಟಾರ್ಥ ಸಿದ್ಧಿಗಳು ||ಪ||
ಬಸವರಾಜನ ಚನ್ನಬಸವನ|
ಆಸಮ ಪ್ರಭುವನು ಸಿದ್ಧರಾಮನ|
ಕುಶಲಮತಿ ಮಡಿವಾಳನ ಅಜಗಣ್ಣನ ಸುಸೊಡ್ಡಳನ|
ಮುಸುಟಿ ಚೌಡಯ್ಯನ ಗಜೇಶ್ವರ|
ಮಸಣಿ ತಂದೆಯನಾದಿಮಯ್ಯನ|
ದಸರಿದೇವನ ಹಡಪದಪ್ಪಣ್ಣಗಳ ಕಲಿಗಣನಾ ||1||
ಹೊನ್ನಿ ತಂದೆಯನನಘ ಮಾದರ|
ಚನ್ನನುರೆ ಚಾರಮನ ನಂಬಿಯ|
ಕನ್ನ ಪಾಖ್ಯನ ಭೋಗಿದೇವನ ಕಾಶಿರಾಜನ|
ಧನ್ಯ ಶಂಕರ ದಾಸಿದೇವನ|
ಮಾನ್ಯನಹ ಹೊಡೆಹುಕಲ್ಲ ಬಂಕನ|
ಉನ್ನತದ ರೇಚಣ್ಣನಿರಿಭಕ್ತನ ಹಲಾಯುಧನಾ ||2||
ಬೊಮ್ಮಿದೇವನನೈದೆ ಕಿನ್ನರ|
ಬೊಮ್ಮಿದೇವನ ಸಾರಕನ್ನದ|
ಬೊಮ್ಮಿದೇವನ ಪರಮಸಗರದ ಬೊಮ್ಮಿಕಲಕೇತ|
ಬೊಮ್ಮಿದೇವನ ವಿನುತ ಹಾದರ
ಬೊಮ್ಮಿದೇವನನಾದಿ ರಕ್ಕಸ|
ಬೊಮ್ಮಿದೇವನ ನಿತಬಾಹೂರ್ಬೊಮ್ಮಿತಂದೆಗಳಾ ||3||
ಮಾರನಿಡುಗುಡಿ ಮಾರನರುವಿನ|
ಮಾರನಾನಗಿಮಾರ ಮೋಳಗಿ|
ಮಾರನಿಳೆಯಾಂಡ ಗುಡಿಮಾರನ ಧೀರನಾಡಕ್ಕಿ|
ಮಾರನಾಯ್ದಕ್ಕಿಯ ಸುಮಾರನ|
ಮಾರಭೂಪನ ಶೂರನಾ ನಿಡು|
ಮಾರಿದೇವನ ಸೋಮಸೀಮಾರರನ ಕಾಳಿಮನ ||4||
ವೇಮನಾರಾಧ್ಯರ ಪ್ರಮೈದುನ|
ರಾಮನುರೆ ತುರಗಾಹಿ ರಾಮನ|
ಕ್ಷೇಮಿಯಹ ತಳವಾರ ಕಾಯ್ಕದ ರಾಮನೇಕಾಂತ|
ರಾಮನುದರದ ರಾಮನ ಸದೃಶ|
ಕಾಮವಟ್ಟದ ಭೀಮನಾಕಲಿ|
ಕಾಮರಾಯನ ಪ್ರಹರಿ ಸೋಮಣ್ಣಗಳನನವರತ ||5||
ಪಂಡಿತಯ್ಯನನಧಿಕ ಶ್ರೀಪತಿ|
ಪಂಡಿತನ ಶಿವಲೆಂಕ ಮಂಚನ|
ಪಂಡಿತನ ತಿರುಜ್ಞಾನ ಸಂಬಂಧಿಗಳಿ ಸದ್ವಿದ್ಯಾ|
ಪಂಡಿತನು ಮಹದಾಸಿ ದೇವನ|
ದಂಡಿತಘಕುಲ ಜೇದಿರಾಜನ|
ಕೊಂಡ ಗೂಳಿಯ ಕೇಶಿರಾಜನ ಚಂಡಧೀಶ್ವರನಾ ||6||
ಪಾಲಗುರ್ಜರ ನೋಹಿಲಿನ ಸತಿ|
ಕೋಲಶಾಂತಯ್ಯಗಳ ನಾತಿರು|
ನೀಲಕಂಠಯ್ಯಗಳ ನಾ ತಿರುಮೂಲ ದೇವರ ನಾ|
ಚೋಳರಾಯನ ವಿಹಿತ ಮಾದರ|
ದೂಳಿನಾ ಹಳ್ಳಯ್ಯಗಳ ಶಿರಿ|
ಯಾಳನಾ ಗೊಲ್ಲಾಳನಾ ಬಲ್ಲಾಳನುತ್ತಮನಾ| ||7||
ಉರಗ ರಾಯಣ್ಣಗಳ ನೆರೆ ಮದು|
ವರಸನಾ ಶಿವನಾಗಮಯ್ಯನ|
ಮುರುಘರಾನೈನಾರರಾ ಉರುಲಿಂಗ ಪೆದ್ದಿಗಳ||
ಚಿರುಪುಲಿಯನಣು ಮೂರ್ತಿಯಾಲೆರು|
ಕುರುಪಿ ತೊಂಡನ ಸುರಿಯ ಚೌಡನ|
ಮರುಳ ಶಂಕರದೇವನಲೆ ಭಕ್ತನ ಹಲಾಯುಧನಾ ||8||
ಮೋರನ ರೇಮಯ್ಯಗಳ ನೆಘೀ|
ಶ್ವರನ ಕೇತಯ್ಯಗಳ ನಾ ಜೋ|
ದರದ ಮಾಯಣ್ಣಗಳ ಕುಕ್ಕಯ್ಯಗಳ ನೈಸರನಾ||
ಕರುಣ ಶಾಂತಯ್ಯಗಳ ಮೆರೆಮಿಂ|
ಡರನ ನಾಮಿಕ ನಾಚಿದೇವನ|
ಸರಳ ವೇಳ್ಕುತ್ತರ ಸುಗುರು ಭಕ್ತಯ್ಯಗಳ ಮತ್ತೆ ||9||
ಅರಿವಳನನನಿಮಿಷನ ಗೊಗ್ಗೇ|
ಶ್ವರನ ಪಾಂಡ್ಯರ ಬಾಚಿದೇವನ|
ಪುರದ ನಾಗಣ್ಣಗಳ ಶ್ವಪಚಯ್ಯಗಳನನವರತಾ||
ವರಕರ ಸ್ಥಳ ನಾಗಲಿಂಗನ|
ತರಿಗೆಲಿಯ ಶಾಂತಯ್ಯಗಳಾ ಪಾ|
ಲ್ಕುರಿಕಿ ಸೋಮೇಶ್ವರನ ತೋಂಟದ ಸಿದ್ಧ ಗುರುವರನ ||10||
ಹರಗಣೆನುತಳಿದವಗೆ ಶಿವ|
ಪುರವನಾದುದೆನಲ್ಕೆ ಬಸವೇ|
ಶ್ವರ ಮುಖ್ಯಾ ಭವಗಣ ತಲೆಯ ನಾಮವನು ನೂರೆಂಟು|
ಪರಮ ಭಕ್ತಿಯೊಳಿಂತು ಪಠಿಪ|
ರ್ಗರಿದೆ ಘನಮಠ ವಾಸನಾ ನಿಜ|
ಕರುಣದಿಂದಿಷ್ಟಾರ್ಥ ಸಂಪದವಡೆದು ಬಾಳುವದು ||11||

ಶರಣು ಶರಣೆ ಶರಣವರೇಣ್ಯ
ಪೊರೆವುದೈ ಗುರುವೆನುರುತರದ
ಕರುಣದಿ ಸುಪ್ರಸನ್ನವರದ|
ಪರಮ ಪಾವನ ಸರ್ವಮಾನ್ಯ|
ಶರಣು ಶರಣೆ ಶರಣವರೇಣ್ಯ ||ಪ||
ನಾನಾ ಯೋನಿ ಮುಖದ ಜನನವಟ್ಟು|
ಮಾಣಿಸುವ ಭಸಿತವಫಣೆಯೊಳಿಟ್ಟು||
ಸ್ವಾನುಭಾವದ ದೀಕ್ಷೆಯ ಕೊಟ್ಟು|
ಆಣವಾದಿಮಲವನೆರೆ ಸುಟ್ಟು ||1||
ತಂದೆತಾಯಿ ಬಂಧುಬಳಗ
ಎಂದು ನೀನೆಂದೆಂಬ ಸುಖಿಗ|
ಳೊಂದುಗೂಡಿರುವದು ನೀನೆನಗಾ|
ನಂದಬೋಧಾಂಬುನಿಧೆ ಕೊಡುತೀಗ ||2||
ದೇವ ಘನಮಠ ವಾಸ ಎಂದು|
ಭಾವದೊಳು ಸ್ಮರಣೆ ಮಾಡಲಿಂದು|
ಆವರಿಸೆ ಭವ ಜಾಲವು ಬಂದು|
ತೀವಿ ನನಗಾಗುವುದು ಬಲು ಕುಂದು ||3||

ಶಂಕರನೇ ಸಲಹೋ ನೀ ಬೇಗನೆ
ಶಂಕರನೇ ಸಲಹೊ ನೀ ಬೇಗನೆ
ಪಂಕಜಾಹಿತ ಭೂಷ ಭವನಾಶಾ ಭವ ||ಪ||
ನಂದಿವಾಹನಾಮರಸಿಂಧು ಪ್ರಜಟಾಧರ|
ಸ್ಕಂದ ಜನಕ ಮೌನಿನುತ ಮೌನಿನುತ ಮೌನಿನುತ ||1||
ಸುರನಗ ಶರಾಸನ ಹರಿತನಯ ವಿಜಿತ|
ನರನತರಚರಣಾಂಬುಜ ಚರಣಾಂಬುಜ|| ||2||
ಧನದ ಸುಸಖಾನತಜನ ಸುರಭೂಜ|
ಘನಮಠವಾಸಾಗಜಾವರ ಅಗಜಾವರ ಅಗಜಾವರ ||3||

ಶ್ರವಣಕ್ಕೆ ಅಧಿಕಾರ
ಸಾರವಚನಾರ್ಥವನು ಬೋಧಿಪರೆ ಅಜ್ಞಾನ ಜನರಿಗೆ|
ಸಾರವಚನಾರ್ಥವನು ಬೋಧಿಪರೆ ||ಪ||
ಸಾರವಚನಾರ್ಥವನು ಬೋಧಿಪರೇ ರಹಸ್ಯಕೆ ರಹಸ್ಯವಾದ ಪು|
ರಾರಿಯಂಶೀ ಭೂತರಲ್ಲದ ಕ್ರೂರ ಜನರಿಗೆ ಹಿತದಿ ಜಗದೊಳು
ಅಗಣಿತಶ್ಚರ್ಯಾರ್ಥವನು ದಯದಿ ಯೊರೆವಂತೆ ಗುರುಮೂ|
ರ್ತಿಗಳ ಧಿಕ್ಕರಿಸುತ್ತ ದುರ್ಮನದಿ||
ಹಗೆಯೊಳಗೆ ಬಿದ್ದಾ ಶುನಕವದು ತೆಗೆವರಂ ಬಡಿವರನು ಮರಿಯದೆ|
ಬೊಗಳುವಂದದಿ ಹಿತವತಾವೂಹೆಗೆ ತರದೆ ಮಾರ್ ಮಲೆವ ಜನರಿಗೆ|| ||1||
ಈಶ ಶರಣರಾನಂದದೆ ನಿಮಿತ್ತ ಬಾಂಧುತ್ವದಿಂದೊರೆ|
ದಾ ಸುವಚನಾರ್ಥವತಿಗಳೆವುತ್ತ||
ಹೇಸದೇ ಶಾಸ್ತ್ರಜ್ಞ ಪುಣ್ಗಡ್ಡೇಸಹಿತಪಾಳಿಸುತೆ ಸುಖವೀ|
ವಾಸುಜನರಂ ಪಳಿವವೋಲ್ ಗಣಭೂಷೆ ದೂಷಣವೆಂದು ತಿಳಿವಗೆ|| ||2||
ಹಾಲು ಬಟ್ಟಲವೆಡದ ಕೈಯೊಳಗೆ ಬಲ ಕೈಯೊಳುಂ ಬಡ್ಡಿ|
ಗೋಲ ಪಿಡಿದೈತಂದು ಜನಕೆ ಮಿಗೆ||
ಲೀಲಿಯಿಂದಡ್ಡಲಿಸಿ ತಾನಾಪಾಲ್ ಗುಡಿಪನ ಕೊಲುವ ಪುತ್ರನ|
ವೋಲು ಬಿರಿನುಡಿಯಿಂದ ತಿಳಹುವ ಶೀಲರಿಗೆ ಮುಳಿವಂತನರರಿಗೆ|| ||3||
ಪಂಡಿತರು ಪರಮಾರ್ಥದಿಂ ಲೋಕ ಹಿತರಾಗಿ ಪರಮಪ್ರ|
ಚಂಡದಿಂದೊರೆಯಲ್ಕೆ ದುರ್ಜನರು|
ಷಂಢನಂ ಸತಿಯಳನುಭೋಗಕೆ ಕಂಡು ಕಳುಹಲ್ಕವನು ವೈರದಿ||
ಮಂಡೆಯಂ ಹೊಡಕೊಂಬ ಪರಿ ¬ೂಭಂಡ ಜನರಿಗೆ ಸಜ್ಜನದಿ ಜಗದೊಳು|| ||4||
ರಸಿಕರಿಗೆ ಕನ್ನಡಿಯ ತೋರಲ್ಕೆ ನೋಡುತ್ತ ಬಲು ಸಂ|
ತಸ ಪಡುವರೀ ಜಗದಿ ಮತ್ತಮಿಗೆ||
ಸಸಿನೆ ಮೂಕೊರಿಯಂಗೆ ಕನ್ನಡಿಯೊಸೆದು ತೋರಲ್ಕವನು ಭುವಿಯೊಳು|
ಬಿಸಡುವಂದದಿ ಘನಮಠೇಶನ ನಿಸದವರಿಯದ ಪಾಮರರಿಗೀ || ||5||

ಶಾಂಕರಿ ಪ್ರೀತಿ
ಶಾಂಕರಿ ಪ್ರೀತ ಶಂಕ ವಿಧೂತ ||ಪ||
ಪಾಂಡುರಗಾತ್ರಾಖಂಲ ಸ್ತೋತ್ರ|
ಅಂಡಜಾತಲ್ಪ ಸುಮೈತ್ರ ||1||
ಅಂಬರ ಕೇಶ ಶಾಂಬರ ಭೂಷ|
ಶಂಬರ ವೈರಿ ವಿನಾಶ ||2||
ಘನಮಠ ವಾಸ ಗುಣಗಣ ಕೋಶ
ದಿನಕರಕೋಟಿ ಪ್ರಕಾಶ ||3||

ಶಿವನ ಚಿದಾಕಾರವೆ
ಸಿದ್ಧ ಗುರುವರೇಣ್ಯ| ರೇವಣ||
ಸಿದ್ಧ ಗುರುವರೇಣ್ಯ||
ಸಿದ್ಧ ಗುರುವರೇಣ್ಯೋದ್ಧತ ಗುಣ ಪರಿ|
ಶುದ್ಧ ದೇಹ ಭುವನೋದ್ಧಾರಾಮಳ ||ಪ||
ಶಿವನ ಚಿದಾಕಾರವೆ ತನುವಾಗಿ|
ಭುಮಿಯೊಳು ಜನಿಸಿದಭವ ಮದ್ರೇವಣ ||1||
ವೀರಶೈವ ಮತ ವಾರಿಧಿ ವಿಧು ಭವ|
ದೂರ ಸುಜನ ಮಂದಾರದ್ವಯ ಶಿವ ||2||
ನರರೂಪಳಿಯ ಸುಗುರು ರೂಪೆನಿಸಲು|
ನೆರೆ ಧರೆಯೊಳಗವತರಿಸಿದ ರೇವಣ ||3||
ರೇಣುಕನವತಾರಾನತ ಜನಸುರು|
ಧೇನುವೆ ಪರಮ ಪ್ರವೀಣಾಭಯ ಶಿವ ||4||
ವಿಧಿಸುತೆನಗುರೋರಧಿಕಮೆನುತೆ ಶೃತಿ|
ಯೊದರಲ್ ಸರ್ವ ಜಗದೊಳು ಚರಿಸಿದನೆ ||5||
ಅರಿತೇಳ್ ನೂರ್ವರು ಷವರಿಯದೇಳನೂ|
ರ್ವರುಷ ಜಗದಿ ಸಂಚರಿಸಿದ ರೇವಣ ||6||
ಕೊಲ್ಲಿಪಾಕಿ ಶಿವನಲ್ಲಿ ಮುದ್ರೆ ಸಹಿ|
ತೋಲ್ಲಾಸ ದೊಳೊಗೆದಲ್ಲಮ ರೂಪನೆ ||7||
ಮಲಯಾಚಲಕೈದಘು ಕುಂಭಜಗೆ|
ಸಲೆ ಷಟ್‍ಸ್ಥಲವನು ತಿಳುಹಿ ಪೊರೆದ ಶಿವ ||8||
ರಾಮೇಶ್ವರ ಮುಖ್ಯಾಮರ ಕ್ಷೇತ್ರ|
ಸ್ತೋಮಗಳೊಳ್ ಪರಿಣಾಮದಿ ಚರಿಸಿದ ||9||
ಅಲ್ಲಾಡನ ನೆರೆ ನಿಲ್ಲಿಸಿ ಚೋಳನೊ|
ಳುಳ್ಳ ಭಯದ ಕಳೆದುಲ್ಲಾಸನೆ ಶಿವ ||10||
ಮಾಸನೂರೊಳಿರ್ಪಾಸುರರಂ ಚು|
ರ್ಚೀಸುರಗಿಗಳೆನಿಸೀ ಶರದಿಟ್ಟನೆ ||11||
ವಿಕ್ರಮ ಚೋಳನ ಸತ್‍ಕ್ರಿಯೆಯರಿದಸಿ|
ಯ ಕ್ರಮವರು ಪಿತ್ತ ಕೃಪಾಂಬುನಿಧೆ ||12||
ಮಂಗಳ ಪುರವರಕಂಗಮಿಸುತೆ ಕ|
ನ್ನೀಗೈಶ್ವರ್ಯ ದೃಗಂಗಳಿತ್ತೆ ಶಿವ ||13||
ಮಾಯಾದೇವಿ ಮನೆಗೇಯುದಕವ ತರು|
ತಾಯಕಳಿಗಭಯದಿಯಿತ್ತನುಪಮ ||14||
ನೆರೆ ವಿಭೀಷಣನ ಪುರ ಲಂಕೆಯೊಳುರು|
ತರ ಲಿಂಗಂಗಳ ತರಿಸಿ ನಿಲಿಸಿದನೆ ||15||
ಋಷ್ಯಶೃಂಗಗೆಯ ನಶ್ವಕ ಕುದ್ಗಿರಿ|
ಶಾಶ್ವತ ಮಹಿಮ ಸುಭಾಷ್ಯವೊರೆದ ಶಿವ ||16||
ವರಕೂಷ್ಮಾಂಡಕುಧರಕೈದೆತಿ ಗುಣಿ|
ಗುರು ನಂದೀಶ ಪೆಸರುಗಳನರುಹಿದ ||17||
ನಾಡೆ ಹಂಪೆಯ ಸುಗೂಢ ಮಹಿಮೆಯನು|
ನೋಡುತ ಮಂಗಳವಾಡಕ್ಕೆದಿದ ||18||
ಪೊಡವಿಯೊಡೆಯ ಸುಡು ಸುಡು ಪಾಯಸವಿಡ|
ಲೊಡನೆ ಸುಡಲ್ ಮನೆ ಪೊಡಮಡೆ ಪೊರೆದನೆ ||19||
ಐಮಾನಕ್ಕಿಯು ನೇಮದೈ ಸೊಲ್ಲಿಗಿ|
ಕ್ಷೇಮ ಘೃತದಿ ಪರಿಣಾಮದುಣಿಸಿದನೆ ||20||
ಕೊಲ್ಲಾಪುರ ಕೈದಲಲ್ಲಿ ಸಿದ್ಧನ ಹ-|
ಮ್ಮೆಲ್ಲವಳಿದ ಪರಮೋಲ್ಲಾಸನೆ ಶಿವ ||21||
ವಾಸಿಯಿಂದಲಾ ಶ್ರೀಶೈಲಾದಿ ನಿ|
ವಾಸವಾಗಿ ವರ ಕಾಶಿಗೈದಿದನೆ ||22||
ನೆರೆಮಾಯ್ದೇವಿ ಕುವರಿ ಮುಖ ಕನ್ನೆಯ|
ರುರೆ ಸೆರೆ ಬಿಡಿಸಿದ ಪರಮ ದಯಾಳನೆ ||23||
ಮಾಸನೊರಿಗೈದಾಸುರಗಿಗಳ ಕ್ರ|
ಮಾಸಹಿತರಸಗೆ ಲೇಸೆಂದೊರೆದನೆ ||24||
ಬಂಧುರದಿಂ ರಾಜೇಂದ್ರ ಚೋಳನ ಸು|
ನಂದನಿಗೊಲಿದಘಛಿಂದಿ ಪರಮಶಿವ ||25||
ಸಕಲದೇಶ ಭೂಪ ಕುಮಾರಿಯರನು|
ಸುಖದಿಂದೊಲಿಸಿದ ಪ್ರಕಟ ಕೃಪಾಂಬುಧೆ ||26||
ಭದ್ರತರದಿ ಶ್ರೀರುದ್ರ ಮುನೀಂದ್ರನ|
ಶುದ್ಧತ್ವದಿ ಪಡೆದುದ್ಧರಿಸಿದ ಶಿವ ||27||
ಬಿಜ್ಜಳ ತನುಜೆಗೆ ಸಜ್ಜನ ಸತಿಯರ|
ಕಜ್ಜವರುಹಿಸಿದ ಪೂಜ್ಯ ಪರಮಶಿವ ||28||
ಮತ್ತೆ ರುದ್ರ ಮುನಿಗತ್ಯರ್ಥಿಯಲಿ ತ|
ತ್ತ್ಚಾರ್ಥವರುಹಿ ಕರ್ತೃತ್ವನಿತ್ತ ಭವ ||29||
ಹಾವಿನಾಳ ಕಲ್ಲದೇವನಿಂಗೆ ದೀ|
ಕ್ಷಾವಿಧಿ ರುದ್ರಯತಿವರನಿಂದರಿಸಿದ| ||30||
ಸೊನ್ನಲಿಗೈದಿ ಪ್ರಸನ್ನ ಸಿದ್ಧ ಸು|
ಜನ್ಮವಂ ಚಾಮಲೆಗೆ ನಿರವಿಸಿದನೆ| ||31||
ವಿಮಲತ್ವದಿ ರುದ್ರ ಮನಿಯ ತಾರಕ|
ಸುಮಹಾನಗರದೊಳ್ ಕ್ರಮದಿಂದಿರಿಸಿದ|| ||32||
ಕೊಲ್ಲಿಪಾಕಿ ಶಿವನಲ್ಲಿ ಬೆರೆದು ಸುಖ|
ದಲ್ಲಿಹ ಘನಮಠವಲ್ಲಭ ಶ್ರೀಗುರು|| ||33||

ಶಿವನ ಭಜಿಸಿ ನೀ ಬಾಳೋ
ಶಿವನ ಭಜಿಸಿ ನೀ ಬಾಳೊ|
ಪರಶಿವನ ಭಜಿಸಿ ನೀ ಬಾಳೊ ||ಪ||
ಕ್ಷಣಿಕವಾದ ತನು ಕರಣೇಂದ್ರಿಯ ಸುಖ|
ಕನಿಕರಿಸದೆ ಸದ್ಗುಣಿಯಾಗುತೆ ನೀ ಬಾಳೊ ||1||
ಪರಮ ಶರಣರ ಚರಣ ಸೇವೆಯನು|
ಮರೆಯದೆ ಮಾಡುತಲುರು ಭಾವದಿ ನೀ ಬಾಳೊ ||2||
ಅನಘ ಘನಮಠೇಶನ ಮನದೊಳ್ನೆಸಿ|
ನೆನೆದು ಜಗದಿ ನೈಪುಣನೆನಿಸುತೆ ನೀ ಬಾಳೊ ||3||

ಶಿವ ಶಿವ ಶಿವ ಎನ್ನಲೇ ಮನುಜ
ಶಿವ ಶಿವ ಶಿವ ಎನ್ನಲೆ ಮನುಜ ಭವ|
ಭವಬಂಧನವಳಿವುದು ಸಹಜ||
ಕುವಲಯದೊಳ್ ಮರೆಯದಿರೊ ನಿಜ| ನಿನ|
ಗವನತನಾಗುವ ನಿನ ತನುಜ|| ||ಪ||
ಆ ವಿಟಶ್ವೇತನು ಕಳತಂದಾ ಮೃದು|
ಸೇವಂತಿಗೆಯಲರ್ ಭುವಿಗೊಂದ||
ತೀವಿ ಬೀಳೆ ಶವನಿಗಿದೆಂದ| ಖಿಲ|
ಕೈವಲ್ಯಕೆ ಪೋದದರಿಂದ ||1||
ಕಡು ಪಾಪಿಷ್ಟ ವಿದಳನಾಗ|
ಮಡಿವೆಡೆಯೊಳು ಹರನೆಲ್ಕಾಗ||
ಮೃಢನು ಮೆಚ್ಚಿ ತನ್ನ ಪುರ ಬೇಗ| ಭವ|
ತಡೆಯದಿತ್ತ ಕಾರಣ ದೀಗ ||2||
ಅಜಭಾವದಿ ಗೋವತ್ಸ ವಧಿ|
ಸಿ ಜಗದೊಳರಿಯೆನೈ ನಾನಿದನಿ||
ಮಜಶಿವಯೆನಲಾ ಸತಿಯಳನು| ಶಿವ|
ನಿಜಪುರಕೊಯಿದ ತಿಳಿದುಯಿದನು ||3||
ತವೆ ಬಿಲ್ಲೇಶ್ವರ ಬೊಮ್ಮನು ತಾರೌ|
ರವ ನರಕದಿ ತಾ ಬಿದ್ದಿರುತೆ||
ಸವಿನಯದಿಂದಲಿ ಶಿವನೆನುತ| ಕಲು|
ಷವನೀಗಿದ ತಿಳಿದಿದ ತ್ವರಿತ ||4||
ಜವನ ಭಟರು ಬಿಲು ಕಿನಿಸಿಂಸ ಕಾ|
ಡುವ ವೇಳೆಯೊಳು ರಸನೆಯಿಂದ||
ಶಿವನ ನೆನೆವಾಗದು ಮಂದೆ| ಈಗ|
ಘನಮಠೇಶನ ದಯದಿಂದ ||5||

ಶಿವಲಿಂಗ ಪೂಜೆಯ ಮಾಳ್ಪ
ಏಳಿ ಮನುಜರಿರ ಶಿವಲಿಂಗ ಪೂಜೆಯ ಮಾಳ್ಪ|
ವೇಳೆಯಾಯಿತು ಮೋಹ ನಿದ್ರೆಯದು ಸಾಕಿನ್ನು|
ಕಾಲಹರನಂ ಭಜಿಸಲಿಷ್ಟಾರ್ಥಸಿದ್ಧಿ ನಿಮಗಹುದುಸದ್ಭಕ್ತಿಯಿಂಸ ||ಪ||
ಶಿವಲಿಂಗ ಪೂಜೆ ಮಾಳ್ಪರಿಗೆ ಭವ ಭಯವಿಲ್ಲ|
ಶಿವಲಿಂಗ ಪೂಜೆ ಮಾಳ್ಪರಿಗೆ ಮೃತ್ಯುಗಳಿಲ್ಲಿ|
ಶಿವಲಿಂಗ ಪೂಜೆ ಮಾಳ್ಪರಿಗೆ ದಾರಿರ್ದ್ಯದೋಷಂಗಳವು ಮುನ್ನಿಲ್ಲ ವೈ ||1||
ಶಿವಲಿಂಗ ಪೂಜೆ ಮಾಳ್ಪವ ಶ್ವಪಚ ನಾದೊಡೆಂ|
ತವನೆ ಮುನಿಮುಖ್ಯ ಶಿವಲಿಂಗ ಪೂಜೆ ಮಾಡದವನೆ|
ಭವಿ ಚಂಡಾಲನೆಂದು ಶ್ರುತಿ ಶಾಸ್ತ್ರಾಗಮ ಪುರಾಣತಲೆ ಪೊಗಳಲು||
ಶಿವಲಿಂಗ ಪೂಜೆಯ ಮಾಡುವ ಸತಿಯು ಮುಕ್ತಿಸತಿ|
ಶಿವಲಿಂಗ ಪೂಜೆ ಮಾಡುವ ಷಂಡನವ ಚಂಡ|
ಶಿವಲಿಂಗ ಪೂಜೆ ಮಾಳ್ಪವನು ಕುಲಕೋಟಿಯನುದ್ಧರಿಪನಾಕ್ಷಣದೊಳು ||2||
ಪುಸಿಯಿಂದಲಾಗೆ ಪರಿಹಾಸದಿಂದಾದೊಡಂ|
ವ್ಯಸನದಿಂದಾ ಮೋಹ ಭಯದಿಂದಲಾಗೆ ಪರ|
ವಶದಿಂದಲಾಗೆ ಶಿವಲಿಂಗ ಪೂಜೆಯ ಮಾಳ್ಪ ಮಾನವರ್ಜಗದಿ ಮತ್ತೆ||
ನಿಶದಿ ವದೊಳನುಗೈದ ದೋಷವದು ತೊಳಗಿ ಪು|
ಣ್ಯ ಶರೀರಗಳುಮೆನಿಸಿ ಸತಿಸುತರೊಳೊಡಗೂಡಿ|
ಅಸಮ ಕೈಲಾಸದೊಳಗಿರ್ಪರಾನಂದದಿಂದೆ ನಿಶ್ಚಿಂತರಾಗಿ ||3||
ತರಣಿಕಾಂತಾಬ್ಜಾರಿಕಾತಮೃಣ್ಮಯಸಿಕತ|
ದುರುತರದ ಶಿವಲಿಂಗದಾಕೃತಿಯ ಮಾಡುತೊಂ|
ದರಳು ಚುಳುಚೋದಕದೊಳರ್ಚಿಸುತ್ತಿರುವ
ನವನಾವನಾಗಲಿ ಜಗದೊಳು||
ಗುರುತಲ್ಪ ಹೇಮಜೋರಕ ಸುರಾಪಾನದು|
ಸ್ತರಮಾಂಸ ಭಕ್ತಣಾದ್ಯಘನಿವಳಿವುತವ ದೇವ|
ವರನಾಗಿ ಬಾಳ್ವಿನೆನಲಿನಿತಕ್ಕಿತು ಸಫಲ ಚಿರಪೂಜೆಗೆ ನಿತು ಫಲವೋ ||4||
ಜಲದಿಂದೆ ಶಾಂತಿಕರ ಗಂಧದಿಂದಾಯುಷ್ಯ|
ವಿಲಸ-ದಕ್ಷತೆಯಿಂದ ಶತ್ರುಗಳ ನಾಶನಂ|
ಸಲೆ ಪುಷ್ಪದಿಂದಲೈಶ್ವರ್ಯ ವಾಧೂಪದಿಂ ಪಾಪಹತ ದೀಪದಿಂದೆ||
ಬಲ ಮೃತ್ಯುಹರವಮೃತ ಹಾರದಿಂ ಸಾಮ್ರಾಜ್ಯ|
ಲಲಿತ ತಾಂಬೂಲದಿಂದಾಚಾರ ವರ್ಧನಂ|
ತಿಳಿದು ಶಿವಲಿಂಗಕೀ ಪರಿಯಷ್ಟೆ ವಿಧದಾರ್ಚನೆಯ ಮಾಡಿದತಿ ಮುದದೊಳು ||5||
ದುರಿತ ಶೇಷದ ಫಲದಿ ಸಚರಾಚರಂಗಳೋ|
ಳ್ ಪರಿಭವಿಸುತಲ್ಲಿ ಕಡಲೇಳನಿತ ಮೊಲೆಹಾಲ|
ಪರಿದುಂಡು ಬರಲು ಬಹುಪುಣ್ಯವಶದಿಂದೆ ನರಜನ್ಮದಿ ವಿವೇಕ||
ದೊರೆವುದದರಿಂದ ಹರಸಮಯ ಭಕ್ತಿಜ್ಞಾನ|
ದಿರವಪ್ಪುದೀಗ ಪರಶಿವಲಿಂಗ ಪೂಜೆಯಂ|
ಭರದಿ ಮಾಡೆಚ್ಚರದಿ ಕನಸಿನೊಳಗಣ ದುಃಖವಿರದೆ ಪೋಪಂದವಹದು ||6||
ದಿನವಿಂದೆ ಶಿವಲಿಂಗ ಕರಣಮಂ ಪಡೆವಂಗೆ|
ದಿನವಿಂದೆ ದುಷ್ಕರ್ಮ ಪಾಶರ್ಮ ಕಡೆವಂಗೆ|
ದಿನವಿಂದೆ ಸದ್‍ಭಕ್ತಿಯ ಸಾಮ್ರಾಜ್ಯವಾಳ್ಪ ಸುವ್ರತವನೆಡೆವಿಡಿದವಂಗೆ||
ದಿನವಿಂದೆ ಹಣೆಯ ದುರ್ಲಿಖಿತಮಂ ತೊಡೆವಂಗೆ|
ದಿನವಿಂದೆ ಚಾಂಚಲ್ಯಮನವ ನೆರೆ ತಡೆವಂಗೆ|
ದಿನವಿಂದೆ ತನ್ನತಾರಿದು ಭೋಂಕನೆ ಪಾರಮಾರ್ಥದಿಂ ನುಡಿವವಂಗೆ ||7||
ಹರಿಯ ಚಾಖಂಡಲಾದಿಗಳು ಶಿವಲಿಂಗದವನು|
ವರಿದರ್ಚಿಸಲ್ಕರಿಯದ ವರುರುಳ್ದರಲ್ಪಮನು|
ಜರು ಲಿಂಗಪೂಜೆ ಬೇಡೆನುವುದುಂಟೆಂಬ ಮಾತು ಕೇಳದೆ ಶ್ರೀಘ್ರದಿ||
ಪರಮ ಶಿವಲಿಂಗ ಪೂಜೆಯ ಮಾಡಿ ಭವ ಮರಣ|
ಪರಹರಿಸಿ ಷಟ್‍ಸ್ಥಲ ಜ್ಞಾನಸಂಪನ್ನರಾ|
ಗಿರಿ ವಿಹಿತವಿದು ಮಂದಮತಿ ಬೇಡ
ತಾಮಸವ ಬಿಟ್ಟು ನಿಜ ನೈಷ್ಠೆಯಿಂದ ||8||
ಉತ್ತಮ ಶಿವಲಿಂಗ ಪೂಜೆಯದು ಬಹಳ ನ|
ಕ್ಷತ್ರವಿಹ ಕಾಲದೋಳ್ ಪೂಜೆಯದು ಮಧ್ಯಮಂ|
ಮತ್ತಲ್ಪ ತಾರಕೆಗಳುಳ್ಳ ಕಾಲದೊಳಧಮ ಪೂಜೆ ದಿನಕರನುದಯದಿ||
ವ್ಯರ್ಥ ವಶನಾರ್ಥಕಾಲದೊಳು ಲಿಂಗಾರ್ಚನೆಯು|
ಚಿತ್ರದೊಳರಿದುತ್ತಮದ ಕಾಲದಲ್ಲಿ ನೀ|
ವತ್ಯರ್ಥಿಯಿಂದ ಶಿವಲಿಂಗ ಪೂಜೆಯ ಮಾಡಿ ಭಕ್ತಿಮುಕ್ತಿಯ ಪಡೆಯಿರೊ ||9||
ಜವನಾಳ್ಗಳೊಡನೆ ಕೋಣನ ಪತ್ತಿ ಘಂಟೆಯಂ|
ಭುವನದೊಳ್ ಬಾರಿಸುತ್ತಲ್ಲಲ್ಲಿಗೈದಿ ಮಾ|
ನವರ ಪರಿಕಿಸದ ಮುನ್ನವೇ ಶಿವಧ್ಯಾನದಿಂದೆದ್ದು ನಿಶ್ಯಂಕರಾಗೀ||
ತವೆನಿರ್ಮಲೋದಕ ಸ್ನಾನ ಭಸ್ಮಸ್ನಾನ|
ವಿವರದಿಂ ಮಾಡುತಕ್ಷಸುಮಾಲೆಯಂ ಧರಿ|
ನವ ಪುಷ್ಟದಿಂದ ಶಿವಲಿಂಗ ಪೂಜೆಯ ಮಾಳ್ಪನೆಗೆ ಕಾಲನಂಜುತಿಹನೈ ||10||
ನರರು ಹಿಂದಣ ಜನ್ಮದಲ್ಲಿ ಪರಶಿವ ಲಿಂಗ|
ವರಿದು ಪೂಜೆಯ ಮಾಡಿದಿಪ್ಪ ಕಾರಣರೆದೆ ಭವಿ|
ನರಕ ಗರ್ಭದೊಳುದ್ಭವಿಸುತಲನ್ನಕ್ಕೆ ಶತ್ರುಗಳಾಗುತೀ ಭೂಮಿಗೆ||
ಹೊರೆಯಾಗಿಯಂಗಹೀನರು ಮಾಗಿಯಪಕೀರ್ತಿ|
ಪರರಾಗಿ ಬಲಹೀನರಾಗಿ ರೋಗಿಗಳಾಗಿ|
ಕರಕಷ್ಟರಾಗಿ ದಾರಿದ್ರ ದೋಷಿಗಳಾಗಿ ಖಲರಾಗಿಬಾಳುತಿಹರೈ ||11||
ಹಾಲುಹಯನಗಳುಳ್ಳ ಕಾಲದೊಳು ಹಬ್ವನು|
ಲೀಲೆಯಿಂ ಮಾಳ್ಪಂತೆ ಕಾಲು ಕೈಯಾಡುತಿಹ|
ಕಾಲದೋಳ್ ಶಿವಲಿಂಗ ಪೂಜೆಯನುಗೈದು
ಸುವಿಶಾಲಮತಿಯುತರಾಗುತೆ||
ಬಾಲಾರ್ಧಚಂದ್ರಧರ ಭಕ್ತ ಮಾಹೇಶ್ವರರಿ|
ಗಳಾಗಿ ತನುಮನಧನಂಗಳಂ ಕೊಟ್ಟು ಭವ|
ಜಾಲಮಂ ಪರಿಹರಿಸುವವನ ಜನ್ಮವೆ ಜನ್ಮವವನೆಜಾಣನು ಜಗದೊಳು ||12||
ಮೃತ್ಯು ಭಯದಿಂದೆ ಮಾರ್ಕಂಡೇಯ ಶ್ವೇತರಂ|
ದುತ್ತಮದ ಶಿವಲಿಂಗ ಪೂಜೆಯನುಗೈದವರು|
ಮಿತ್ರ ಸುತನಂ ಜಯಿಸಿ ಕೈಲಾಸ ಕೈದಿದರದಂತಲ್ಲದೇ ನಂಬಿಯ||
ಭಕ್ತ ಚಂಡೇಶ ಗೊಲ್ಲಾಳ ಮುಂತಾದವರು|
ವೃತ್ತ ಕುಚಸೈಕತ ಜಪಿಕ್ಕಿಯೋಳ್ ವಿಶ್ವಾಸ|
ದೊತ್ತರದಿ ಶಿವಲಿಂಗಯಜಿಸಿ ನಿಜವಡೆದರಿದು ಸತ್ಯಶಿವನಾಣೆ ಜವದಿ ||13||
ಆಸನವನಿಕ್ಕಿ ಚಿತ್ ಕಲೆಯ ನಾಹ್ವಾನಿಸುತ|
ಧ್ಯಾಸದಿಂದರ್ಘ್ಯ ಪಾದ್ಯಾಚ ಮಾನವನಿತ್ತು|
ತೋಷದಿಂದಷ್ಟವಿಧದರ್ಚನೆಯ ಸೆಳೆ ಷೋಡಶೋಪಚಾರವ ಮಾಡಲಿ||
ವಾಸಿಯಿಂ ದೋಷ ದುರ್ಗುಣಗಳಳಿದೀಶನಸು||
ವಾಸದೋಳ್ ಪ್ರಮಥರೊಡವೆರೆದು ನಿತ್ಯತ್ವದಿಂ|
ಭಾಸಮಾನದೊಳಿಹರು ಪರಿಪೂರ್ಣ
ಚಿತ್ತದಿಂದೇಷಡ್‍ಗುಣೈಶ್ವರ್ಯದಿಂ ||14||
ಈ ವಿಧದಿ ಶಿವಲಿಂಗ ಪೂಜಾ ಮಹತಮಂ|
ಸಾವಧಾನದಿ ಕೇಳಿ ಬರೆದೋದಿ ಸದ್ಭಕ್ತಿ|
ಭಾವದಿಂದ ಘನಮಠೇಶನ ಕರುಣ ಪಡೆದು
ಸುಜ್ಞಾನಸಂಪನ್ನರಾಗಿ||
ತೀವಿ ಶಿವಲಿಂಗ ಪೂಜೆಯ ಸಮಾಧಾನದಿಂ|
ಭೂವಳಯದೋಳ್ ಮಾಳ್ಪ ಸಿದ್ಧಿಯಂ|
ಕೇವಲದಿ ದೊರಕೊಂಡು ತ್ರಿಭುವನ ವಿಜಯರಾಗಿ
ಬಾಳ್ವರತಿ ಸೌಖ್ಯದಿಂದೆ ||15||

ಶಿವಜ್ಞಾನ ವಿಹೀನತೆಯ ಪರಿಣಾಮ
ಏನಾದಿ ಮನುಜ ಏನಾದು ಶಿವ|
ಜ್ಞಾನವರಿಯದೆ ನೀನೇನಾದಿ ||ಪ||
ಕಾಶಿ ಹಂಪೆ ಕೇದಾರ ಪರ್ವತನಿವಾಶಿಯೆನಿಸಿ ನೀನೇನಾದಿ|
ಆಶೆಪಾಶದೊಳು ಸಿಲ್ಕಿಪೊರಗೆ ಸನ್ಯಾಸಿಯಾಗಿ ನೀನೇನಾದಿ ||1||
ವೇದವೇದಾಂತ ಶಾಸ್ತ್ರಾಗಮ ತರ್ಕವನೋದಿ ಬಳಲಿ ನೀನೀನಾದಿ|
ಮೇದಿನಿಯೊಳು ಬರೆ ಬೋಧೆವಡೆದು ದಶನಾದವಾಲಿಸಿ ನೀನೇನಾದಿ ||2||
ಚಪಲತನದಿ ಬಹು ಜಪವನೆಣಿಸಿ ಘೋರ ತಪವ ಮಾಡಿ ನೀನೇನಾದಿ|
ಕಪಟ ಲಾಂಛನವನು ತಾಳುತೆ ಮತ್ರ್ಯದೊಳು ನಿಪುಣನೆನಿಸಿ ನೀನೇನಾದಿ ||3||
ಸ್ನಾನಮೌನ ನೇಮಧ್ಯಾನಕ್ರಿಯಾದ್ಯನುಷ್ಠಾನವ ಮಾಡಿ ನೀನೇನಾದಿ|
ಪ್ರಾಣಾಪಾನಗಳನು ಮಾಣದೆ ಬಂಧಿಸಿ ಮೌನವಿರ್ದು ನೀನೇನಾದಿ ||4||
ಸೃಷ್ಟಿಯೊಳಷ್ಟ ವಿಧಾರ್ಚನೆ ಕ್ರಿಯೆಗಳ ಮುಟ್ಟಿ ಮಾಡಿ ನೀನೇನಾದಿ|
ಶ್ರೇಷ್ಠ ಶ್ರೀ ಘನಮಠ ವಾಸನನರಿಯದೆ ಕಷ್ಟ ಬಟ್ಟು ನೀನೇನಾದಿ ||5||

ಶ್ರೀಗುರು ಮಲ್ಲಿಕಾರ್ಜುನ
ಶ್ರೀಗುರು ಮಲ್ಲಿಕಾರ್ಜುನ ಪಂಡಿತೇಂದ್ರನೆ|
ಯೋಗಿಜನಾರ್ಚಿತ ಚರಣಪಯೋಜ ಜೋ ಜೋ||
ಯೋಗಿ ಜನಾರ್ಚಿತ ಶರಣೋಪಯೋಜನೆ|
ಬೇಗದಿಂದೆ ನಾ ನಿಮ್ಮ ಸ್ತುತಿಸುವೆ ಜೋ ಜೋ ||ಪ||
ಜೋ ಜೋ ಸದಾನಂದ ಜೋ ಜೋ ಸುಜನ ವಂದ್ಯ|
ಜೋ ಜೋ ಸುಗುಣ ವೃಂದ ಜೋ ಗುರುಕುಲೇಂದ್ರ ಜೋ ಜೋ||
ಜೋ ಗುರುಕುಲೇಂದ್ರ ಜೋ ಜಿತಭವ-ಬಂಧ|
ಜೋ ಜೋ ರಹಿತನಿಂದೆ ಜೋ ಭಕ್ತಿಸಾಂದ್ರ ಜೋ ||1||
ನಿತ್ಯ ನಿರುಪಮ ಪರಮಾರ್ಥ ವಿಚಾರ ಸಂ|
ಸ್ತುತ್ಯ ಕೋವಿದ ಶುಭಗಾತ್ರ-ಘನಾಶಪ|
ಮೃತ್ಯು ವಿಜಯನೆ ಪವಿತ್ರ ವಿಚಿತ್ರ ಜೋ ||2||
ಘೋರ ಸಂಸಾರವಿದೂರ ದಯಾನಿಧೆ|
ಮಾರಮರ್ಧನನವತಾರ ನಿಶ್ಚಲ ಸುಖ|
ಸಾರ ಶಿವಮತೋದ್ಧಾರಾ ಪ್ರಮೇಯ ಜೋ ||3||
ತ್ರಿಣಯನ ಪ್ರಮಥರ ನೆನೆಯಲಾಕ್ಷಣದೊಳು|
ಘನ ರೂಪವೆತ್ತು ನಿಲ್ಲಲು ಪರಮೇಶ ಜೋ||
ಘನ ರೂಪವೆತ್ತು ನಿಲ್ಲಲು ಪರಮೇಶನು|
ಮನುಜ ಲೋಕಕೆ ಪೋಗು ಎನುತೆ ಹರ್ಷದಲಿ ಜೋ ||4||
ಸರ್ವಜ್ಞತ್ವವ ಕೊಟ್ಟು ಉರ್ವಿಗೆ ಕಳುಹಲಾ|
ನಿರ್ವಾಣಮೂರ್ತಿಗೆ ಪರ್ವವೆನುತಾಗ ಜೋ||
ನಿರ್ವಾಣ ಮೂರ್ತಿಗೆ ಪರ್ವವೆನುತ್ತಾ|
ಗರ್ವರಹಿತನಾಗಿ ಘನ ಶೋಭೆಯಿಂದ ಜೋ ||5||
ಪುರಹರನಾಜ್ಞೆಯ ಶರದೊಳು ತಳೆದು ಬಂ|
ದುರದಿಂದ ದಕ್ಷಸತ್ ಪುರಕೈದು ಬಂದು ಜೋ||
ಧುರದಿಂದ ದಕ್ಷಸತ್-ಪುರಕೈದು ಭೀಮನ|
ವರನಾಮನರಸಿ ಗೌರಾಂಬೆ ಗರ್ಭದಲಿ ಜೋ ||6||
ನಿಜನಲ್ಲದ ಯೋನಿ ಸಂಭವನಾಗಿ|
ತಾನದಯಿ ಸಲವರಾನಂದದಿಂದ ಜೋ||
ತಾನುದಯಿಸಲವರಾನಂದದಿಂ ತೊಟ್ಲ|
ಸ್ವಾನುಭಾವದ ಸೂತ್ರದಿಂ ಕಟ್ಟುತವರು ಜೋ ||7||
ಶರಧಿ ರತ್ನವ ಧರಿಸುವ ಪರಿ ತಾನೆ|
ಉರು ಲಿಂಗ ಧಾರನಾಗಿಹ ವರನ ಜೋ||
ಉರುಲಿಂಗಧಾರಕನಾಗಿಹ ತರಳನ|
ಭರದಿಂದ ತೊಟ್ಟಲೊಳ್ ನೆರೆ ಮಡಗುತವರು ಜೋ ||8||
ಗುರು ಮಲ್ಲಿಕಾರ್ಜುನ ವರನಾಮದಿಂದಲಿ|
ಕರೆದು ಜೋಗುಳವಾಡಿದರು ಮೋದದಿಂದ ಜೋ||
ಕರೆದು ಜೋಗುಳವಾಡಿದರು ಮೋದದಿಂತೆಂದು|
ಶರಣರು ಕೇಳುವ ಪರಿಯೊಳು ಭರದಿ ಜೋ ||9||
ಕರುಣ ಪ್ರಸಾದದ ಎರೆವಾಲನುಣುತಲಿ|
ಪರಿಪೂರ್ಣ ಸುಖದೊಳಗಿರುಯೆನ್ನ ಕುವರ ಜೋ||
ಪರಿಪೂರ್ಣ ಸುಖದೊಳಗಿರು ಎನ್ನ ಕುವರ ನೆಂ|
ದುರವಣಿಸುತ ಪಾಡಿದರು ಮೋದದಿಂದ ಜೋ ||10||
ಎನ್ನ ಪುಣ್ಯದ ಪುಂಜವೆನ್ನ ಭಾಗ್ಯದ ನಿಧಿ|
ಮೆನ್ನ ಪ್ರಾಣದ ಪಡಿಯೆನ್ನಯ್ಯ ಬಾರೊ ಜೋ|
ಎನ್ನ ಹರಣದ ಪಡಿಯೆನ್ನಯ್ಯ ಬಾರೆಂದು|
ಉನ್ನತದಿಂದ ತೂಗಿದರು ತೊಟ್ಲವನು ಜೋ ||11||
ಎನ್ನಕುಲ ಪಾವನವೆನ್ನ ತಫದ ಫಲ|
ವೆನ್ನ ಸಲಹ ಬಂದ ಚೆನ್ನ ಮಲ್ಲೇಶ ಜೋ||
ಎನ್ನ ಸಲಹ ಬಂದ ಚೆನ್ನಮಲ್ಲೇಶ ಪ್ರ|
ಸನ್ನ ಮೂರುತಿಯಾಗಿ ಬಾಳೆನ್ನ ಕುವರ ಜೋ ||12||
ಧರೆ ಶಿಷ್ಯರಿಗೆ ದೀಕ್ಷೆ ಕರುಣಸಲೆಂದು ಸ|
ದ್ಗುರು ರೂಪವೆತ್ತ ಈಶ್ವರ ಜನಿತ ಜೋ||
ಗುರು ರೂಪವೆತ್ತ ಈಶ್ವರ ಭಾವಜನಿತನೆಂ|
ದ್ಹರಸಿದಾ ವೇಳೆಯೊಳು ಜನಿಯೊಳು ಜೋ ||13||
ಪರವಾದಿಗಳ ಪಡೆ ಮುರಿದು ಸದ್ಭಕ್ತರ|
ಚರಿತೆಯ ಮೆರೆದು ನೀ ಬಾಳಯ್ಯ ಕುವರ ಜೋ||
ಚರಿತೆಯ ಮೆರೆದು ನೀ ಬಾಳಯ್ಯ ಕುವರ-ನೆಂ|
ದಿರದೆ ಕೊಂಡಾಡುತೆಲಿಹರು ಸಂಭ್ರಮದಿ ಜೋ ||14||
ಮಡಿವಾಳ ಮಾಚಯ್ಯ ಹೊಡೆಹುಲ್ಲ ಬಂಕಯ್ಯ|
ಕಡವಲನಂಬಿಯ ಹುಡುಗನೆಂದೆನಿಸಿ ಜೋ||
ಕಡವಲನಂಬಿಯ ಹುಡುಗನೆಂದೆನಿಸುತೆ|
ಬಿಡದಪ್ಪರಸರ ನೀ ಹಾಡಿ ಬಾಳಯ್ಯ ಜೋ ||15||
ದಸರಯ್ಯನಗಜೇಶ ಮಸಣಯ್ಯಗಳ ಮುದ್ದು|
ಶಿಶುವೆನಿಸುತೆ ಹೊಗಳಿಸಿ ಶುಭದಿಂದ ಜೋ||
ಶಿಶುವೆಂದು ಹೊಗಳಿಸಿ ರಸೆಯೊಳು ಕೀರ್ತಿಯ|
ಒಸೆದು ಪಡೆದು ಬಾಳೊ ಕುಶಲ ನಿಧಾನ ಜೋ ||16||
ಮಾದಾರ ಚೆನ್ನಯ್ಯ ಮೇದಾರ ಕೇತಯ್ಯಾ|
ನಾದಿ ಕುಲಜನೆಂದು ಓದಿಸಿ ಮುದದಿ ಜೋ||
ಆದಿಕುಲಜನೆಂದು ಓದಿಸಿ ಮುದದೊಳು|
ಮೇದಿನಿಯೊಳು ಮೆರೆಯೊ ದಿವ್ಯಮೂರ್ತಿ ಜೋ ||17||
ಸಿದ್ಧರಾಮಯ್ಯ ಪ್ರಸಿದ್ಧ ಬುದ್ಧಗೆ ನೀ|
ಮುದ್ದು ಕುವರನಾಗಿ ಚೋದ್ಯದಿಂ ಬಾಳೊ ಜೋ||
ಮುದ್ದುಕುವರನಾಗಿ ಚೋದ್ಯದಿಂ ಬಾಳೊ ಸಂ|
ಸಿದ್ಧ ಪಂಡಿತ ಮಲ್ಲಿಕಾರ್ಜುನಾರಾಧ್ಯ ಜೋ ||18||
ಪರಮ ಪ್ರಸಾದದ ಶರಧಿಯೊಳಿರುವಂಥ|
ಮರುಳ ಶಂಕರನ ಸಂಸ್ಮರಿಸಿ ನಿಜ ಬಾಳೊ ಜೋ||
ಮರುಳ ಶಂಕರನ ಸಂಸ್ಮರಿಸುತ ಜಗದೊಳು|
ಪರಮಪಾವನಾಗಿ ಚರಿಸೆನ್ನ ಬಾಲ ಜೋ ||19||
ಬಸವಯ್ಯನಾ ಚೆನ್ನ ಬಸವಯ್ಯನಲ್ಲಮ|
ರಸಮ ಬಾಲಕನಾಗಿ ಕುಶಲದಿಂ ಬಾಳೋ ಜೋ||
ಅಸಮ ಬಾಲಕನಾಗಿ ಕುಶಲದಿಂ ಬಾಳಯ್ಯ|
ಶಶಿಧರನವತಾರ ಕುಶಲಸಂಸ್ತುತ್ಯ ಜೋ ||20||
ಅಕ್ಕ ಮಹಾದೇವಿಯಕ್ಕ ನಾಗಮ್ಮ ಸ|
ತ್ಯಕ್ಕ ಚಂಗಳೆ ಮುಕ್ತಯಕ್ಕ ನಮ್ಮವ್ವೆ ಜೋ||
ಅಕ್ಕಚಂಗಳೆ ನಂಬಿಯಕ್ಕಗಳಣುಗನಾಗಿ|
ಅಕ್ಕರದಿಂ ಬಾಳು ಬಾಳೆನ್ನ ಪುತ್ರಾ ಜೋ ||21||
ನೀಲ ಗಂಗಮ್ಮನ ಬಾಲೆ ಸುಗ್ಗಲೆಯಳ|
ಬಾಲಕನಾಗಿ ನೀ ಬಾಳೆನ್ನ ಕುವರ ಜೋ||
ಬಾಲಕನಾಗಿ ನೀ ಬಾಳೆನ್ನ ಕುವರನೆ|
ಬಾಳಲೋಚನವತಾರವುದಾರ ಜೋ ||22||
ಗೊಗ್ಗವ್ವೆ ಮುದನೂರ ದುಗ್ಗಳವ್ವೆಯರ ಸ|
ಮಗ್ರ ಸುತನುಮಾಗಿ ಬಾಳೆನ್ನ ಕುವರ ಜೋ||
ಆಗ್ರ ಸುತನುಮಾಗಿ ಬಾಳೆನ್ನ ಕುವರನೆ|
ಪ್ರಾಜ್ಞಾನೆನಿಸುತನು ದಿ ಜಗದೊಳು ಜೋ ||23||
ಎಲ್ಲ ಗಣಂಗಳ ಮೆಲ್ಲಡಿಗಳ ನೆನೆದು|
ಉಲ್ಲಾಸದಿಂ ಬಾಳು ಬಾಳೆನ್ನ ಕುವರ ಜೋ||
ಉಲ್ಲಾಸದಿಂ ಬಾಳು ಬಾಳೆನ್ನ ಕುವರನೆ|
ಮಲ್ಲಿಕಾರ್ಜುನ ಪಂಡಿತಾರಾಧ್ಯನಾಮ ಜೋ ||24||
ಈಶ ಜಿನಮತ ವಿನಾಶ ತ್ರಿಭುವನ ಪ್ರ|
ಪೋಷ ಸದ್ಗುಣ ಮಣಿಭೂಷ ಮಹೇಶ ಜೋ||
ಪೋಷ ಸದ್ಗುಣಮಣಿಭೂಷ ಶ್ರೀ ಘನಮಠ|
ವಾಸ ಶ್ರೀಗುರು ಪಂಡಿತೇಶ ಪ್ರಕಾಶ ಜೋ ||25||

ಶ್ರೀಗುರುನಾಥ ಬೇಗದಿ ಸಲಹು
ಶ್ರೀಗುರುನಾಥ ಬೇಗದಿ ಸಲಹು|
ರಾಗವಿರಹಿತ ವಿರಾಗಿಜನನಮಿತ ||ಪ||
ಘೋರಭವಮಣವಾರಿಸಿ ನಿಮ್ಮಯ|
ಚಾರುಪದಾಬ್ಜದೊಳಾರಡಿಯೆನಿಸುತೆ ||1||
ಪಾಪಹೃದಯ ಸಂತಾಪವಳಿದು ಕರು|
ಣಾಪಯೋನಿಧೆ ನಿಜರೂಪವರುಪಿಚಿರ ||2||
ಭೂನುತ ಘನಮಠೇಶಾನತ ಜನಪ್ರಿಯ|
ಸ್ವಾನುಭಾವದ ಸುಖ ದಾನವ ಕೊಡುತಲಿ ||3||

ಶ್ರೀ ಮಹಾದೇವ
ಶ್ರೀ ಮಹಾದೇವ ಪಾಹಿ ಮಾಂ ಕರಣಾಕರ ಭವ|
ಶ್ರೀ ಮಹಾದೇವ ಭಕ್ತಪ್ರೇಮ ಪರಾತ್ಪರಧೃತೇಂದು|
ನೇಮ ಸುರಪ ಹರಿ ಪಿತಾಮಹಾಮರಾಳಿನತ ಪದಾಬ್ಜ ||ಪ||
ಮೋಕ್ಷದಾಯಕ ವಿರಳ ಗಣಪಕ್ಷ ಪಾವನಾಂಗ ಶ್ರೀ ಮ|
ಹೋಕ್ಷವಾಹ ದುರ್ಮದಾಂಧ ದಕ್ಷಮುಖ ವಿಪಕ್ಷಧೀರ ||1||
ತಾರಕಾರಿಜನಕ ಸೂರ-ತಾಕೇಶ್ವರಾನಲಾಕ್ಷ|
ತಾರಕಾದ್ರಿ ನಿಲಯ ವಿಹಿತ ತಾರಕಾಕಾರ ಪರಮ ||2||
ಶುದ್ಧ ಘನಮಠೇಶ್ವರಾಘ ವಿರುದ್ಧ ತ್ರಿಗುಣರಹಿತ ಸುಪ್ರ|
ಸಿದ್ಧಭುವನಪೋಷ ಸರ್ಣರುಧ್ರಧನುಸು ಶೋಭಿತಕರ ||3||

ಸತ್‍ಶ್ರವಣ ಲಾಭ
ಕೇಳಿರೆ ಶರಣಗಣಾಳಿಸು ವಚನವ ಮೇಲು ಸುಖವು ನಿಮಗಾಗುವದು ||ಪ||
ಗೀಜಗನುಪದೇಶದಿ ಪೌಲಸ್ತ್ಯನು ಸೋಜಿಗದಿಂ ಕೇಳುತಲಾಗ|
ಈ ಜಗವರಿಯಲು ದಶಮುಖನನು ಪಡೆದಾಜನರೀದೃಷ್ಟವ ನಂಬಿ ||1||
ಕುಪಥ ವಿನಾಶಕ್ತಿಯರಾಯನು ಮೃಗದುಪದೇಶದಿ ಮಕರಶನನಾಗಿ|
ಸುಪಥವನೈದಿದ ಉಪಮೆಯರಿದು ನೀವೊಲಿಸದೆ ವಿೂಸಲಮನದಿ ||2||
ಕರಳು ತಂತಿ ಸುಸ್ವರವಾಲಿಸಿದ ಶಶಿರನೀಶನ ಪಾಡಿದಿಷ್ಟವನು|
ಭರದಿ ಪಡೆದನಿದನರಿದು ಶ್ರೀಘನಮಠೇಶ್ವರನ ಶರಣರ ವಾಕ್ಯವ ಮುದದಿ ||3||

ಸತಿಯರ ವ್ಯಾಮೋಹ ದುಃಖಕ್ಕೆ ಕಾರಣ
ಮೂಢ ಮನುಜ ಕೆಡಬೇಡ ಸತಿಯ|
ರೊಡಗೂಡಿ ಬರಿದೆ ಸಾರಿದೆನಿಲ್ಲಿ||
ನಾಡೆ ಶಿವನ ನೀ ನೋಡಿ ಭಜಿಸು|
ತೀಡ್ಯಾಡೋ ಜನನ ಮರಣವ ತಳ್ಳಿ ||ಪ||
ಪಾಪವೊಂದು ರೂಪಾಗಿ ಸತಿಯಳೆನಿ|
ಸೀ ಪರಿಯೊಳು ಜಗದೊಳು ಜನಸಿ||
ಕಾಪಟ್ಯದಿ ಪುರುಷರನೊಳಕೈದೆಮ|
ಕೂಪಕೊಯ್ವಳದ ನೀ ಬಯಸಿ ||1||
ಮೃತ್ಯು ಗನ್ನಿಕೆಯರರ್ಥದಾಸೆಯರು|
ಮರ್ತ್ಯದೊಳಗೆ ಹಿತವೈರಿಯರು||
ಭ್ರಾತೃವನುಜರೋಳ್ ಬೆರ್ತು ಬಹಳ ದು|
ಷ್ಕೃತ್ಯ ವರ್ತನದಿ ನಟಿಸುವರು ||2||
ಮಾಯಗಾರ್ತಿಯರು ಹೇಯ ಚರಿತೆಯರು|
ಮಾಯವತಿಯರ ಮಡಿಲ ನೋಡಿ||
ಕಾಯಮಧ್ಯದೋಳ್ ಮಾಯದ ಹುಣ್ಣದ|
ಕಾಯ್ದಿರ್ಪವರಿಗಹುದು ಪೀಡೆ ||3||
ಕಾಮಿನಿಯೆನ್ನವಳೆಂದು ಮನದೊಳಗೆ|
ನೀ ಮಮಕರಸಿ ಪಡೆವೆ ಬೆರಗು||
ಕಾಮಿನಿ ಕಾಮುಕರೂಡೆವೆಯೆಂದು ಶ್ರುತಿ|
ಪ್ರೇಮದಿಂದೆ ನೇಮಿಸಿ ನುಡಿಗು ||4||
ಸೊಗಸುದೋರುತಲಿ ಜಿಗುಳಿಯಂದದಲಿ|
ಮಿಗೆ ಪುರುಷರ ತಾವೆಡೆಬಿಡದೆ||
ನಗುತಲವನ ಹಣಗುಣವ ತ್ರಾ|
ಣತೊಟ್ಟನೇ ಹೀರುವರೀ ಜಗದರಿದೆ ||5||
ತರುಣಿಯರೊಲವದು ಸ್ಥಿರವಲ್ಲಲೆ ಚಾ|
ತುರದಿ ಪುರುಷನೊಲಿಸಿ ಸಿರಿಯ||
ಭರದಿ ಸೆಳೆದವರ ಶಿರದಮೇಲೆ ಕೆರ|
ಹೊರಿಸುವರೆಲೆ ಹೊರೆ ಹೊರೆ ಹೊರೆಯ ||6||
ಫುಲ್ಲಶರನ ರೂಪುಳ್ಳನಾಗಿ ಸ್ವಯ|
ವಲ್ಲಭನಿರುತಿರಲಾ ಸತಿಯರ್||
ಬಳ್ಳಿಯಂತೆ ಮತ್ತೆಲ್ಲ ಪುರುಷರನು|
ನಿಲ್ಲದೆ ಮನದೊಳಗಂ ನೆನೆವರ್ ||7||
ಒಡವೆ ವಸ್ತ್ರಗಳ ಕೊಡುವ ತನಕ ಬಲ್|
ಸಡಗರದಿಂದುಪಚರಿಸುವರು||
ಬಡವನಾಗಿ ತಮ್ಮೆಡೆಗೆ ಬರಲ್ ಘುಡಿ|
ಘುಡಿಸಿ ನುಡಿದು ಹೊರ ನೂಕುವರು ||8||
ತನುವೊಳೊಬ್ಬ ಮನಸಿನೊಳಗೊಬ್ಬನಾ|
ತ್ಮನಯನದೊಳಗೊಬ್ಬನ ನೆರೆವ||
ಘನಜಾರದ ಚೋರದ ಕಾಪಟ್ಯದ|
ವನಿತೆಯರಿಗೆ ಸೋಲುತೆ ಮನವ ||9||
ಮಾನಭಂಗ ಧನಹಾನಿ ದೀನತನ|
ನಾಣುಗೆಡಕು ಕುಲನಾಶವ|
ಮಾನಸ ವ್ಯಥೆ ನಿರ್ವಾಣ ಭಕ್ತಿಗುಣ|
ಹೀನವೆನಿಪ ವೇಶ್ಯಳಿಗೊಲಿದು ||10||
ಎಲವು ಮಾಂಸ ನರತೊವಲು ರಕ್ತದು|
ರ್ಜಲಮಲಯುತಮಾಗಿಹ ಸತಿಯ||
ನಳಿತೋಳ್ಗಳ ಕುಚಗಳ ಕಾಣುತ ಕಳ|
ವಳಸಿ ಪೋಗಿ ನೆರವನೆ ಹೊಲೆಯ ||11||
ಮಲದ ಭಾಂಡು ಬಲು ಹುಳದ ಕೊಂಡ ಬಿಗು|
ಮೊಲೆಯ ಖಂಡವದನಿಹ ಲಲನೆ||
ಗೆಳೆವ ಭಂಡಗೆಮಪೊಳಲ ದಂಡವಹು|
ದೆಲೆಲೆ ಪುಂಡನೀ ತಿಳಿದದನೆ ||12||

ಸಲೆ ಚಾಮರ ಬೀಸುತ
ಯೋಗಿಗೆ ದೂಷಕ ಭೂಷಕ ರತಿ ಹಿತರಾಗಿಹರೀ
ಜಗದೊಳು ನೋಡಾ||
ರಾಗ ದ್ವೇಷವದೇತಕೆ ಸಲೆ ತನಗಾಗಿ ಶ್ರೇಯವೀವರು ಗಡಾ ||ಪ||
ಸಲೆ ಚಾಮರ ಬೀಸುತ ಭೂಷಿತ ಜಗದೊಳು ಸುಖವೀವ ತೆರದಿ ಮತ್ತೆ|
ಮಲ ಮೂತ್ರವ ಕಸಬೊಳಿದು ಯೋಗಿ ನಿರ್ಮಲ
ಮೆನಿಸುತೆ ಹಿತಮಾಗಿಹವೋಲ್ ||1||
ಆ ಕರಿತಾನಿಲೋಕ ಮೆರೆಯುತನೇಕ ರೀತಿಯಲಿ ಸುಖ ವೀವೋಲ್|
ಸುಕರ ದುರ್ಮಲ ವದನೀಕರಿಸುತೆ ನಿರ್ ವ್ಯಾಕುಲದಿಂ
ಸುಖವೀವಂತೆ ||2||
ಸುಲಭನಾಳವದು ಹಲವು ಪರಿಯ ಸುಖವೆಳಸಿವುತಲಿಹ ಪರಿಯಂತೆ|
ಮಲವನು ಬಿಡಿಸುತ ಧೋನಾಳವ
ಸುಖಕುಲವೀವುತ ಹಿತವಾಹವೋಲ್ ||3||
ಕೂಪರು ದೇಹಕೆ ತಾವು ಜಗದೊಳು ಬಹೋಪಚಾರದಿಂ ಸುಖವೀವೋಲ್|
ನಾಪಿತ ಪುಣ್ಗಡ್ಡೆಯ ಪಾಳಿಸಿ ಸುಖವೇಪರಿಯದಿ ಹಿನೋಮತ್ತೆ ||4||
ಜನನಿಕರದಿ ದೇಹದ ಮಲಿನವ ತೊಳೆದನುಪಮ ಸುಖದಿ ಸಲಹುವಂತೆ|
ಮನುಜರು ನಾಲಿಗೆಯೊಳೆ ತೊಳೆಯುತ ಶ್ರೀ ಘನಮಠೇಶಗೊಪ್ಪಿಸಿ ಪೊರೆವರ್ ||5||

ಸ್ವಾಮಿ ನೀ ಸಲಹಯ್ಯಾ
ಸ್ವಾಮಿ ನೀ ಸಲಹಯ್ಯ ಸೋಮಶೇಖರನೆ ||ಪ||
ಮುರಹರಶರ ಸುರಪುರವರ ವರಸುತ|
ವರದ ಪರಮಸೃರಹರ ಗಿರೀಶನೆ ||1||
ಅಸದೃಶಯಶ ದಶದಿಶವಸನ ಸಹಿತ|
ಶಶಿವಸುಬಿಸಜಸಖ ಸುದೃಗ ಶಿವ ||2||
ಝಗಝಗಿಸುವ ನಗೆಮೊಗದಗಜೆಗೆ ಮಿಗೆ|
ಮಿಗೆ ಸೊಗಸಿನ ಸುಗುಣ ಗಣಾನ್ವಿತ ||3||
ಮನು ಮುನಿಜನ ಮನಸಿನ ಕೊನೆಮೊನೆಯೊಳ|
ಗನುದಿನವನು ಮನೆಯೆನಿಸಿದನಘ ||4||
ಹತ ಪಿತೃಪತಿ ಕ್ಷಿತಿರಥ ಮೃತಿಗತ ವಿಧಿ|
ಸುತ ನುತ ಘನಮಠಪತಿ ನತಯುತ ||5||

ಹರಿಸುತ ನಾಶ ಪರಮ ಪ್ರಕಾಶ
ಪಾಹಿ ಪರಮೇಶ ಶಿವ ದೇವ ದೇವ ||ಪ||
ದುರಿತವಿದೂರ ಶರಣ ಪ್ರಪೂರ|
ಕರಿಮುಖಪಿತ ಸುಖಸಾರ ಸಾರ ||1||
ಹರಿಸುತ ನಾಶ ಪರಮ ಪ್ರಕಾಶ|
ಶರಣು ಶರಣು ಗೌರೀಶ ಈಶ ||2||
ಮುನಿಜನಲೋಲ ಅನಘದಯಾಲ|
ಘನಮಠವಾಸ ಪ್ರಕಾಲ ಕಾಲ ||3||

ಹಾರಿ ಕೆಟ್ಟೆನು ಗುರುವೆ
ಪೋಷಿಸಯ್ಯಾ| ಈಶಾಂಘ್ರಿಶಯ್ಯಾ|
ಭಾಷೆಪಾಲಕ ಜೀಯಾ ಬಸವರಾಜಯ್ಯಾ||
ದೊಷರಹಿತ ಪರಮೇಶ ನಿರುಪಮ ಪ್ರ|
ಕಾಶ ಭಕ್ತ ಪರಿತೋಷ ಈಶನೆ ||ಪ||
ಧೀರ ಸಂಸಾರವೆಂಬ| ಘೋರಾರಣ್ಯ
ಮಧ್ಯದೊಳ್| ದಾರಿ ಕಾಣೆನು ಪ್ರಭುವೆ ವಿಭುವೆ||
ತೋರಿ ಕೆಡುವ ದುರ್ವಿಕಾರ ವಿಷಯಂಗಳ|
ಹಾರಿ ಕೆಟ್ಟೆನು ಗುರುವೆ| ಸುರ ತರುವೆ||
ಭೂರಿ ಕರಣ ಸಂಚಾರದಿಂದೆ ಬಲುಗಾರಾದೆನು|
ಕರುಣರ ಸಾಬ್ಧೇ ಭವದೂರನೆನುಸುತೀ|
ಕ್ರೂರ ಕರ್ಮವ ನಿವಾರಿಸಿ ಪರಮ ವಿಚಾರವ ತೋರಿ ||1||
ಮೂರು ಮಲಗಳಿಂದೆ ಮೂರು ತಾಪಗಳಿಂದೆ|
ಮೂರು ಗುಣಗಳಿಂದೆ ನಾನೊಂದೆ|
ಮೂರು ಕರ್ಮಗಳಿಂದೆ ಮೂರು ದೇಹಗಳಿಂದೆ|
ಮೂರು ಭಕುತಿಗಳನರಿಯನು ದೊರೆಯೇ||
ಮೂರು ದೀಕ್ಷೆಯೊಳೆರಳ್ಮೂರು ಬಿಡಿಸಿ ಮೂರು|
ಮೂರು ಚಕ್ರವರ್ಣಾಕ್ಷರ ದಳಗಳ|
ಮೂರು ಲಿಂಗದನುಭಾವದಿ ಭೇದಿಸಿ|
ಮೂರು ತತ್ವಗಳ ಮೂಲವ ತೋರಿ ||2||
ಆಶೆ ಪಾಶಗಳಿಂದೆ ದೋಷದ್ವೇಷಗಳಿಂದ|
ಕ್ಲೇಶ ಪಂಚಕದಿಂದೆ ನಾ ಬೆಂದೆ||
ದೋಷ ದುರ್ಗಣದಿಂದೆ ಈಷಣ ತ್ರಯದಿಂದೆ|
ಕೋಶವಿದೈದರಿಂದೆ ಗುರು ತಂದೆ|
ಘಾಸಿಯಾದೆ ಜಗದೀಶ ನಿಮ್ಮ ಪದ|
ಧ್ಯಾಸವಿತ್ತು ಭವರಾಶಿ ಹರಿಸಿ ಪರಿ|
ತೋಷನೆನಿಸಿ ಚಿದ್ಭೂಷ ಘನಮಠನಿ|
ವಾಸ ಭಕ್ತಕುಲಧೀಶ ಗಣೇಶ ||3||

ಹಿರಿಯರ್ ಬಸವಪುರಾತನರ
ವರುಷಕ್ಕೊಮ್ಮೆ ಹಿರಿಯರಿಗೆ ಮಾಳ್ಪೆವೆಂ|
ದುರುವಣಿಸುವ ನರ ಗುರಿಗಳಿರಾ||
ಹಿರಿಯರ ಪರಿ ನೀವರಿಯದೆ ಭುವಿಯೊಳ|
ಗರಸಿ ಕೆಡುವಿರೆಲೆ ಭ್ರಾಂತರಿರಾ ||ಪ||
ಹಿರಿಯರ್ ಬಸವ ಪುರಾತನರೆಂದರಿ|
ದರಿದು ಸ್ಮರಿಸುವವರೇ ಹಿರಿಯರ್||
ನಿರಯ ಜೀವಿಗಳನರಸಿ ಹೊಗಳುವ ನರರೆಲ್ಲಾ
ಜಗದೊಳ್ಪರಿಯರ್ ||1||
ಭವರಾಟಳದೊಳ ವಿರತ ತಿರುಗಿ ಬ|
ರುವ ಮಾನವರಲ್ಲಾ ಹರಿಯರ್|
ಕುವಲಯದೊಳು ಲೀಲಾರ್ಥದಿ ತನುತಾ|
ಳ್ದವಿನಾಶನರವರೇ ಹಿರಿಯರ್ ||2||
ನೆನದವರಘ ಕುಲವನು ಕೆಡಿಸದ ದುರ್|
ಜನರಾದವರಲ್ಲಾ ಹರಿಯರ್|
ಕ್ಷಣದಿ ಕಂಟಕಂಗಳನು ಹರಿಸಿ ನಿಜ|
ವನು ತೋರಿಸುವವರೇ ಹಿರಿಯ್ ||3||
ಕಾಲಕಾಮ ಮಾಯಾದಿಗಳಿಗೆ ತಾ|
ವಾಳಿದವರಲ್ಲಾ ಹಿರಿಯ್|
ಲೀಲೆಯಿಂದ ತನುತಾಳಿ ಭಕ್ತಿಗನು|
ಕೂಲಗಿರುವವರೇ ಹರಿಯರ್ ||4||
ಪಂಚಭೂತ ದೇಹವನು ತಾಳದ ಬಹು|
ವಂಚಕರಿವರಲ್ಲಾ ಹಿರಿಯರ್|
ಪಂಚ ಮಹಾಪಾತಕವಳಿದಾ ನಿರ್|
ವಂಚಕ ಭಕ್ತರವರೇ ಹಿರಿಯ್ ||5||
ಯೋನಿ ಯಂತ್ರದೊಳ್ ಮಾಣದೆ ಕ್ರೀಡಿಪ|
ಹೀನ ಮನುಜರೆಲ್ಲಾ ಹಿರಿಯರ್|
ಜ್ಞಾನಧ್ಯಾನದೊಳ್ ಪೂರ್ಣರಾದ ನಿರ್|
ವಾಣಾಶ್ರಿತರವರೇ ಹಿರಿಯ್ ||6||
ಸತ್ತು ಸ್ವರ್ಗ ನರಕಂ ಗಳಿಗೆಡೆಯಾ|
ಡುತ್ತಲಿರುವರೆಲ್ಲಾ ಹಿರಿಯರ್
ಮತ್ತೆ ಮತ್ತೆ ಮಹಾಲಿಂಗವ ಭಜಿಸುತೆ|
ಮೃತ್ಯುಂಜಯರಾದರೇ ಹಿರಿಯರ್ ||7||
ಹಲ್ಲು ಹೋಗಿ ತಲೆಯಲ್ಲಾಡುತ ಜಗ|
ದಲ್ಲಿ ಸತ್ತರಲ್ಲಾ ಹಿರಿಯರ್|
ಫುಲ್ಲ ಶರಾಂತಕನಲ್ಲಿ ಭಕ್ತಿರತಿ|
ಯುಳ್ಳಸುಬಾಲಕರೇ ಹಿರಿಯರ್ ||8||
ಸುತ್ತಿ ಸುತ್ತಿ ಚೌರಾಂಯ್ಸಿ ಲಕ್ಷಭವ|
ದತ್ತ ಬರುವರಲ್ಲಾ ಹಿರಿಯರ್|
ಉತ್ತಮ ಗುರು ಶಿವಹಸ್ತ ಜನಿತರೆ ನಿ|
ಸುತ್ತ ಮೆರೆವರೆಲ್ಲಾ ಹಿರಿಯರ್ ||9||
ಮಧ್ಯ ಮಾಂಸವನಮೇಧ್ಯವ ಭುಂಜಿ|
ಪಹದ್ದು ಕಾಗಿವಿಂಡಲ್ಲಾ ಹಿರಿಯರ್|
ಬುದ್ಧ ಕರ್ಮಗಳನೊದ್ದು ತಾವು ಭೂ|
ರುದ್ರರಾಗಿ ಮೆರೆವರೇ ಹಿರಿಯರ್ ||10||
ಮನಸಿಜನಾ ಮಾಯದೊಳು ಪಡೆದ ಯೀ|
ಜನನಿಜನಕರಲ್ಲಾ ಹಿರಿಯರ್|
ಮನಸಿಜನ ಛಲವನಳಿದು ಪರಮನೋ|
ಳುನುದಿನ ವೆರೆಯೆಂಬರೇ ಹಿರಿಯರ್ ||11||
ಶತದಶಾಬ್ದವನು ಬಾಳಲು ಕೌಶಿಕ|
ಶತವೃದ್ಧರುಮಲ್ಲಾ ಹಿರಿಯರ್|
ಮತಿವಂತರು ತಾವೆನಿಸುತೆ ಜಗದೊಳ|
ಗತಿವಿರತರಾದರೆ ಹಿರಿಯರ್ ||12||
ಮಾನಿನಿ ದ್ರವಿಣ ಕ್ಷೋಣಿಗಾಗಿ ಸ|
ತ್ತಾನರರವರೆಲ್ಲಾ ಹಿರಿಯರ್|
ಜ್ಞಾನಭಕ್ತಿ ವೈರಾಗ್ಯದಿಂದೆ ಸುವಿ|
ಧಾನಿಗಳಾದವರೇ ಹಿರಿಯರ್ ||13||
ಯಂತ್ರ ತಂತ್ರ ಬಹು ಭ್ರಾಂತ ಸಿದ್ಧಿಗಳ|
ನಂತ ವಡೆದರಲ್ಲಾ ಹಿರಿಯರ್|
ಮಂತ್ರಜಾತರೆನಿಸಿಂತು ಪರಶಿವನ ಚಿಂತೆಯೊಳಗಿರುವವರೇ
ಹಿರಿಯರ್ ||14||
ಮನುಮುನಿಜನ ಸುರಗಣ ಬ್ರಹ್ಮಾಚ್ಯುತ|
ರೆಣಿಸಲ್ಕವರಲ್ಲಾಹಿರಿಯರ್|
ಘನಮಠೇಶನೊಳಗನುದಿನ ಬೆರೆದಿರು|
ವಣುಗರು ನೋಡಲವರೇ ಹಿರಿಯರ್ ||15||

ಹಿತವೆಂದು ತಿಳುಹಲ ಹಿತವಾಗಿ
ನುಡಿಯದಿರಣ್ಣಾ ಜಡಮನುಜರೋಳ್|
ನುಡಿಯದಿರಣ್ಣಾ ನುಡಿಯದಿರಣ್ಣಾ ಯೀ||
ಪೊಡವಿಯೊಳನುದಿನ ದೃಢಭಕ್ತರಲ್ಲದರೊಡನೆ|
ಸಾವರಿಕೊಮ್ಮೆ ನೀ ನುಡಿಯದಿರಣ್ಣಾ ||ಪ||
ಹಿತವೆಂದು ತಿಳುಹಲಹಿತವಾಗಿ ಗ್ರಹಿಸುವ|
ಮತಿಹೀನರೊಡನೆ ಕ್ಷಿತಿ ಲಕ್ಷಕೊಮ್ಮೆ ನೀ ||1||
ನಿಜ ನಡೆ ನುಡಿಗಳ ತ್ಯಜಿಸುತೀ ಭುಮಿಯೊಳು|
ಕುಜನರೆನಿರೊಳೆ ನಿಜ ಕೋಟಿಗೊಮ್ಮೆ ನೀ ||2||
ಘನಮಠ ವಾಸನ ಗಣವರರಲ್ಲದ|
ಮನುಜಾಧಮರೊಳೊಸೆದನುಭವದೆಂದೆಂದು ನೀ ||3||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಗಬ್ಬೂರ ಹಂಪಣ್ಣನ ತತ್ವಪದಗಳು

ಆಡಬ್ಯಾಡೆಲೋ
ಬ್ಯಾಡೆಲೋ ಆಡಬ್ಯಾಡೆಲೋ| ನಿಂದ್ಯಗಳಾಡಬ್ಯಾಡೆಲೋ
ಆಡಬ್ಯಾಡಲೋ ಆಡಬ್ಯಾಡೆಲೋ ನಿಂದ್ಯ
ನೋಡು ತಿಳಿಯದು ಯಮತಾಡಗೀಡಾಗುವಿ ಕೇಡು ತಪ್ಪದು ||ಪ||
ಜೀವನಿಲ್ಲದ ತಾವೊದಲಾಗಳು|
ಲೋಹ ಪಂಚಕಗಳು ಕರಗುವವು ಕೇಳು|
ಜೀವರಾದರೆ ಸಾಜೀವರ ವರುಸಿರಿಡೆ|
ಸಾವೊ ಸಂಕಟವೊ ಇನ್ನಾರು ತಪ್ಪಿಸುವರು ||1||
ಸಂಗತಿ ಸಂಗ ದೋಷವು ಎಂದು ಶಾಸ್ತ್ರವು
ಹಿಂಗದೆ ಹೇಳ್ವದರಿಂಗಿತವರಿ ನೀನು|
ಸಂಗ ನಮ್ಮದು ಸನ್ಯಾಸಿಯು ಭಂಗಿ ವ್ಯಾಪಾರ
ಭಂಗ ಬಡುವಿ ಹುಚ್ಚ ಮಂಗನಾಗುವಿ ||2||
ಗೋಪುರವಾಸನ ಗೋಕರ್ಣ ಭೂಷನ
ಗೋಪಂಚನಾಶನ ಗೋಪ ವಾಹನನ|
ತಾಪಸ ಜನಮನದ್ಯಾಪಕ ಘನ ವೃಷಭಚಿ
ದ್ದೀಪಕರ ತನುಜಾತನೀ ಪರಿಯಲಿ ||3||

ಕೇಳೆಲೆ ನಾನಾ ವಿಕಾರದವಳೆ
ಎಂಥದ್ಹಿಡಿದಿತೆನಗೆ ದೆವ್ವ ಇದು| ಎಂಥವರಿಗೆ ಬಿಡದವ್ವ
ಅಂತರ ಸಾಕ್ಷಿ ಚಿದ್ಘನ ಪರಂಜಯ ಕಂತು ವಿಯನಾಡುವಂದದಿ ||ಪ||
ಲೀಲೆಯಿಂದಲಿನ್ನು ಅಸಿಯಂಬಾಲಯದೊಳಗಾನು
ಕಾಲಿಡಲಿಕೆ ತಾನು ಹಿಡಿದಿತು ಮೂಲ ಪ್ರಕೃತಿಯದನು|
ಕೇಳೆಲೆ ನಾನಾ ವಿಕಾರದವಳೆ ಇದನು
ಮ್ಯಾಲೆ ಮಹತ್ತಿನಲಿ ಸಂಜಿಸಿ ತಿರುಗುವಂದದಿ ||1||
ಸುಗುಣ ಬುದ್ಧಿಲಿಹುದೆ ತಿಳಿ ದುರ್ಗುಣದಲಿ ಸಾವಿದೆ
ಬಗೆದೋ ಚುತಲಾದೆ ಆಹುದಲ್ಲ ಮಿಗಿಲೆರಡೆನಿಸುವುದು|
ಬಗೆಯಲು ಬಳಿಕಿಲ್ಲೆನಿಸುವದಿಷ್ಟು
ಬಗೆ ಮೂರಾಗಿ ಬಲು ಬಗೆಲಂಜಿಸುವಂದದಿ ||2||
ಹಿಂದಲ ಮನೆಯೊಳಗೆ ಒಂದಾನೊಂದಾನಂದಿಹುದೆ
ಮುಂದಲ ಮನೆ ಹೋಗಲು ಒಂದೇ ಸಂದಾಗಿರುತಿಹುದೆ|
ಹಿಂದೆ ಮಂದಳಿದಿನ್ನು ನಿಂದು ನೋಡಿದರೆ
ಸಂದೇಹಿಲ್ಲದ ತನ್ನಿಂದ ಬಾರೆನುವಂದದಿ ||3||
ಮೊದಲೆ ಮಾನಸಗಲ್ಲೆ ಹೋಗಲು
ಅದರಿಂದ ಗೂಗಲ್ಲೆ ಬದಿಯಲಿ ಜೋಗರಕಲ್ಲೆ|
ಇದು ಬಿಡಿಸಲು ವಿಧಿ ವಿಷ್ಣುವಿಗರಿಯದು
ಮದಮುಖಿ ಮನುಜರಿಗಿನ್ನದು ಸಾಧ್ಯವೆ ||4||
ಬಸವನಂತಾಗುವದೆ ಮೇಲ್ ಚನ್ನಬಸವನಂತಾಗುವದೆ
ಅಸಮ ಪ್ರಭುವಿನಂತೆ ಎಸೆವದು ಎನ್ನ ಮುಂದೆ ನಿಂತು|
ವಸುಧಿಯೋಳ್ಮಣಿಪುರವರ ಘನ ವೃಷಭನ
ವಶದೊಳಿರುವ ಅದ್ಯಾರಗೊಶವಲ್ಲವದು ||5||

ಚಿತ್ತ ಚಂಚಲ
ಸತ್ತ ಚೇಳೇಯವ್ವ ಬೆನ್ನತ್ತಿ ಕಚ್ಚಿತೆ ಕೇಳವ್ವ
ಮತ್ತೆ ಬ್ಯಾನೆ ಎದೆ ಕುತ್ತಿಗಿ ಕಂಣೊಳು|
ಚಿತ್ತ ಚಂಚಲದಲಿ ಎತ್ತೆತ್ತಲಾಗುತಿದೆ ||ಪ||
ಏಳು ಗೇಣು ಇತ್ತು ಮಣಿಗಳು ಏಳು ಅದಕೆ ಮುತ್ತು
ಕೇಳೆ ಬದುಕಿದದು ಬಹಳ ಆಶ್ಚರ್ಯವದೆ|
ಭಾಳನಯನ ಗುರು ಬಂದನಾ ವ್ಯಾಳ್ಯಾದಿ ||1||
ಎದ್ದರೆ ಮತ್ತಷ್ಟೆ ಕುಂತಡ್ಡ ಬಿದ್ದರದರಷ್ಟೆ
ಉದ್ದ ಬಿದ್ದರಿನ್ನು ಸುದ್ದಿಗಿಲ್ಲ ಬ್ಯಾನೆ|
ಎದ್ದರೆ ಮೊದಲಿದ್ದಂತಿರುವ ಮಹಾಕಾಂತೆ ||2||
ಮಣಿಪುರವರ ತಾ ಮಂತ್ರಿಸಿದ ಮೂರು ಪದಗಳನು
ಅಣಗಿತು ಬಾಧೆ ಅರೆಕ್ಷಣದೊಳು ತಾನೆ|
ನಾ ನಿನ್ನನುಪಮ ಸುಖದಲಿರುವೆನು ಕಾಂತೆ ||3||

ತಿಳಿ ನೋಡೋ
ತಿಳಿ ನೋಡೋ ತಿಳಿ ನೋಡೊ
ತಿಳಿಯದೆ ನೀ ಕೆಡಬ್ಯಾಡೊ ||ಪ||
ನಾನೆಂತೆಂಬಭಿಮಾನವದಲ್ಲ
ತಾನದನರಿವುದೆ ಬರಿಯಲು ಬಲ್ಲ|
ನಾನೆಂತೆಂಬುದು ಸ್ವಾನುಭವವೊ
ಜ್ಞಾನದಿ ನಾನತ್ವನದು ಪುಸಿದೊ ||1||
ನಾನು ಜೀವನಂತೆಂಬುವದನು
ಏನು ಹಿಡಿದು ತಿಳಿದಿರುವೆಲೆ ನೀನು|
ತಾನದು ವಿಜ್ಞಾನ ಪರೋಕ್ಷವನು
ನಾನೆನುತಲಿ ಧ್ಯಾನಿಸುತಿರು ನೀನು ||2||
ಕನ್ನಡಿ ಎದುರಿನಲಿ ನಿಂದ ಕುನ್ನಿಯು
ಇನ್ನೊಂದೊದಗಿತೆಂದು ಸನ್ನರಿಯದೆ ಕೂಗಿ|
ತನ್ನ ಮರದಂಬಲು ಬನ್ನ ಬಡುವ
ಕುನ್ನಿಯಂತೆ ಕೆಡದಿರು ನೀನು ||3||
ಶರಧಿಯಲ್ಲಿ ತೆರೆಗಳನು ತೋರುವ
ತೆರದಲಿ ತೋರ್ಕಿದು ತಾನು|
ಅರಿವಂಬುಧಿಯಲಿ ಧರೆ ಸ್ವರ್ಗಗಳಂತೆ
ಪರಿಕಲ್ಪಿತ ರೂಪ ನಾಮಗಳನು ತೋರ್ಕಿದ ತಾನು ||4||
ಘಟ ಮಠವಳಿಯಲಿ ಬಂದೆ ಬಯಲದ
ದಿಟವಾಗಿರುವುದು ಎಂದೇ|
ಘಟಿಸಿರುವ ಘಟಭಾವವನಳಿಯೆ ನೀ
ನಟಿಸುವ ಮಣಿಪುರವರನಿಲಾಕ್ಷನು ||5||

ನಂಬಬ್ಯಾಡಲೊ ನೀನು
ನಂಬಬ್ಯಾಡಲೊ ನೀನು| ನಂಬದಿರು ದೇಹವನು
ನಂಬಿದರೆ ಹುರುಳಿಲ್ಲ| ಎಲೆ ಮರುಳು ಮನುಜ ||ಪ||
ಯಲು ಚರ್ಮ ನರಮಾಂಸ| ಮಲಮೂತ್ರಯುಕ್ತಾದ
ಹೊಲಿ ದೇಹವನು ನೆಚ್ಚಿ| ಹೊತ್ತುಗಳೆಯದಲೆ
ಬಲು ಶೀಲ ವ್ರತನೇಮ| ಕುಲಮದದಿ ಶಿಲ್ಕಿದೆ
ಮಲಹರನ ಚರಣ| ಸ್ಮರಣಿಯ ಮಾಡು ಮನುಜ ||1||
ಕಂಣಿನೊಳಗಿನ ಕಳೆಯು| ಸಂಣದೆಂದೆನ ಬ್ಯಾಡ
ಬಂಣಿಸಿ ಕಾಂಬುವದು| ಮೂಜಗವನು
ರನ್ನ ರವಿ ಶಶಿಕೋಟಿ| ಉನ್ನತದ ಪ್ರಜ್ವಲೆಯು
ನಿನ್ನೊಳಗಿರುತಿಹದು| ನಿನ್ನ ನೀ ತಿಳಿಯು ||2||
ಧರೆಯೊಳು ಮೆರೆವ| ಮಣಿಪುರ ವನದರೊಳಗಿರುವ
ಗುರು ರಾಯನಾದ| ಘನ ವೃಷಭೇಂದ್ರನ
ಚರಣ ಕಮಲವ ನೀನು| ನಿರುತದಿಂದಲಿ ಸ್ಮರಿಸಿ
ಪರಮುಕ್ತಿಯನು ಪಡೆದು| ಪರಶೆ ಪರನಾಗು ||3||

ನಿನ್ನ ನೀ ತಿಳಿಯಲೋ
ನಿನ್ನ ನೀ ತಿಳಿಯಲೊ ಮೂಢ
ನಿನ್ನ ತಿಳಿಯದೆ ಕುನ್ನಿ ಮನುಜ ಕೆಡಬ್ಯಾಡ ||ಪ||
ಮೂರು ದಿನದ ಸಿರಿಯಿದನು ದೇಹ
ನೀರ ಗುಳ್ಳೆಯ ತೆರ ತಿಳಿಯದೆ ನೀನು|
ಚೋರತನದಿ ಒಡಲನ್ನು ಹೊರೆದು
ನರಕಕೀಡಾಗಿ ನಡೆದೆಲ್ಲೋ ನೀನು ||1||
ಪಾಪದಿಂದಲಿ ಗಿಡಮರ ಕ್ರಿಮಿ
ರೂಪಾಗಿ ಜನಿಸಿ ಬರುವದಿದು ಘೋರ|
ಯೀಪರಿಯಲತ್ತ ಸಂಸಾರ ನಿರಯ
ಕೂಪದೊಳಗೆ ಮುಳುಗಿ ಹೋದೆಲೊ ನೀ ಪೂರಾ ||2||
ಪರಧನ ಪರಸತಿಗೂಡಿ ನೀನು
ಪರದೇಶಿಯಾಗಿ ಸಂಚರಿಪೆಲ್ಲೋ ಖೋಡಿ|
ದುರಿತ ದುರ್ಗುಣಗಳೀಡ್ಯಾಡಿ ಮಣಿ
ಪುರವರನಡಿಜಡಜವನು ಕೊಂಡಾಡಿ ||3||

ಬ್ರಹ್ಮವು ತಿಳಿವುದೆ
ಬ್ರಹ್ಮವು ತಿಳಿವುದೆ ಸುಮ್ಮನೆ ಬ್ರಹ್ಮವು ತಿಳಿವುದೆ
ಬ್ರಹ್ಮವ ತಿಳಿವುದು ಸುಮ್ಮನಲ್ಲ ಕೋತಿ
ತಿಮ್ಮನಂತೆ ತಿರುಗ್ಯಾಡುವ ಮನುಜರಿಗೆ ||ಪ||
ಅಂಗದ ಗುಣಗಳನಳಿಯದೆಲೆ ನಿಜ|
ಲಿಂಗದ ಕಳೆಯನು ತಿಳಿಯದಲೆ|
ಅಂಗನಿಯರ ಕಂಡಳುಕಿ ಕಾಮಕೇಳಿ|
ಸಂಗದಲ್ಲಿರುವ ಮಂಗ ಮನುಜರಿಗೆ ||1||
ಕಾಮ ಕ್ರೋಧಗಳ ಕಳಿಯದಲೆ|
ತಾಮಸ ಮದಗಳಳಿಯದಲೆ|
ಕಾಮಿನಿಯರ ಕೂಡ ಕಾಲ ಕಳಿಮಯಮ|
ಸೀಮೆ ಸೇರುವವಂಥ ಪಾಮರ ಮನುಜರಿಗೆ ||2||
ಕುಲಛಲ ಮಲತ್ರಯವ ತಿಳಿಯದಲೆ| ತನ್ನ
ನೆಲೆಯ ಗುರುವಿನಿಂದ ಅರಿಯದೆಲೆ|
ಜಲಜ ಮುಖಿಯರನು ಕಂಡಳು ಕಿಭವ
ಬಲೆಗೆ ಬೀಳುವಂತ ಹುಲು ಮನುಜರಿಗೆ ||3||
ನೇತ್ರದ ಭಾವವ ಮರಿಯದಲೆ ಪರಂ|
ಜೋತಿ ಯೆಂಬುದನರಿಯದಲೆ|
ಪಾತಕ ಸ್ತ್ರೀಯರ ನಚ್ಚಿ ತಾವು ಭವ|
ಪಾತಕೆ ಬೀಳುವ ಕೋತಿ ಮನುಜರಿಗೆ ||4||
ತನು ಮನ ಧನವನು ನೀಡದಲೇ ಮತ್ತೆ
ಮಣಿಪುರದೊಡೆಯನ ಪಾಡದಲೆ
ಜನನ ಮರಣಗಳ ಜಾಲದಿ ಬಳಲುತ
ಅನರ್ಘ್ಯರಲ್ಲದ ಮಂದ ಮನುಜರಿಗೆ ||5||

ಭವದಲಿ ಭಜಿಸೋಣ
ದೇವರುಹಾನ ಅಕರಾಮ ಸಾಹೇಬ ದೊಡ್ಡಪೀರ
ಭವದಲಿ ಭಜಿಸೋಣ ನಾವು ಪೂರಾ ||ಪ||
ಆಧಾರದಿಂದ ಆರು ಚಕ್ರವನ ಕರಿದನು| ಭ್ರೂಧ್ಯಕೆ ತೊಡರಿದನಾಕಿ
ಮೊದಲಲಿ ದಶವಿಧನಾದವ ಕೇಳಿದನು| ಸಾಧಿಸಿದ ಸಹಸ್ರದರಗವನು
ಶೋಧಿಸಿ ಒಂದು ಗೋರಿಯನು| ಆಧಾರ ಮಾಡಿ ಅಲ್ಲಿಹನು ಅವತಾನು ||1||
ನಾನು ನೀನು ಎಂಬ ಕೂನು ಗುರುತು ಇಲ್ಲದವನು
ಹಾನಿ ವೃದ್ಧಿಗಳಳಿದಿಹನು ಭಾನು ಕೋಟಿ ಪ್ರಕಾಶ ಮೀರಿ ಬೆಳಗಿಹನು
ಧ್ಯಾನ ಧಾರಣ ಸಮಾಧಿ ಮಾನವನು| ಏನೇನು ಇಲ್ಲ ದ್ವಂದ್ವ ಸಚ್ಚಿದಾನಂದ
ಮನ್ಮಥನ ಮೀರಿದದರಿಂದ ಏನು ತೋರಿಸಬಾರದದರಿಂದ ||2||
ಅನುಪಮನದ್ವಯನು ಜನನ ಮರಣ ರಹಿತ
ಘನ ಮೂರುತಿ ತಾ ಮಣಿಪುರನಾಥ ಅಕರಾಮ ಸಾಹೇಬ ಪ್ರಖ್ಯಾತ
ಮನದ ವರವ ಕೊಡುವಂಥ ದಾತ| ಆತನನು ಘನ ವೃಷಭ ತಾನೆ
ತಾನುಳುಹಿದನು ಅನುದಿನದಿ ಸ್ಮರಿಸು ಆತನನು ಘನ ಮುಕ್ತಿ ಪದವಿ ಕೊಡುವಾನು||3||

ಶರೀರದೊಳಗೊಬ್ಬಳು ನಾರಿ
ಶರೀರದೊಳಗೊಬ್ಬಳು ನಾರಿ ಬಣ್ಣಗೆಟ್ಟವಳು
ಸರ್ವ ಗೆಳೆಯರ ಕೂಡಿದಳು ಕೇಳು ||ಪ||
ಭವ ಕಂಡು ಬೆರಗುಗೊಂಡು ಮರುಗತಲಿರುತಿಹನು
ಆವುದರಿಯಿದ ಗಂಡನು ತಾನು|
ಲಾವಕ ಮೈದುನ ಕೇಳಿ ಮನದೊಳಳುತಿಹುನು ||1||
ಮಾವ ಅತ್ತೆ ನೆಗೆವೆಂಣೆರಿಗಿನ್ನು
ಸಾವು ಬಾರದ್ಯಾಕೆ ಅಗರಿಗೆ| ದೇವರು ತರುವನೆಂದೀಗೆ
ಜೀವದೊಳಗೆ ಕುದಿವಳವಳ್ಹೀಗೆ| ಈ
ಭವದಿ ಬಂದುದು ಹ್ಯಾಗೆ ||2||
ನೋಟದಿಂದ ಬಲು ಬ್ಯಾಟಿವ ಮಾಡುವಳು| ಭುವ
ಸಾಟಿಗಳೂಡುವಳಾಕಿ| ಕೂಟ ಸುಪ್ತಿಯಲಿ
ಭೂಟಕಳಾಗುವಳು| ಮತ್ತು ನಾಟಿಸುತಿರುವಳು ಕೇಳು
ನೀಟಿಲ್ಲ ಇವಳ ಸಂಗವದು| ಕೋಟಿಗೊಬ್ಬ ಶರಣ ಪಿಂಗಿಹನು
ಸಾಟಿಲ್ಲದ ಶಿವಲಿಂಗವನು ಅವಳಾಟಕೆ ಇಡಿಸಿರುವನು ||3||
ಮೂರು ಊರು ಕೇರಿಕೇರಿಯ ತಿರುಗುವಳು|
ಆರು ತೆರದಲಿ ತೋರುವಳಾಕಿ| ಮತ್ತು
ಮೂರು ತಾಪ ಮಲ ಮೂರಕೆ ಗುರಿಯಿವಳು
ದೂರ ಮಾಡಬೇಕಿವಳನ್ನು ಊರೊಳಗೆ ಥರವಲ್ಲಿನ್ನು
ಚಾರುಮಣಿಪುರಪತಿ ಮೆಚ್ಚ್ಯಾನು ಜಾರಿ ಚೋರಿ ಛೀಮಾರಿವಳನ್ನು ||4||

ಹರನೆಂಬರುಹಿನ ಕುರುಹು
ಜೀವನಲ್ಲ ಮನುಜ ನೀನೇ ಶಿವ ಸಹಜ
ಜೀವನೆಂದು ಭಾವಿಸಿದ ಕಾರಣದಿ|
ಸಾವು ಜನನಗಳ ಬಾಧೆಗೆ ಶಿಲುಕಿದಿ ನೀ|| ||ಪ||
ಕಾಯದ ಕರ್ಮ ಧರ್ಮಗಳು ನಿನಗಿಲ್ಲ|
ಮಾಯನು ನೀನೆ ನಿನ್ನುಪಿಮಿಸಲಳವಲ್ಲ|
ಭಾವಿಸು ಭೋನಿಗಮಾಖ್ಯವು ಇದು ಪುಸಿಯಲ್ಲ
ಮಾಯ ಭ್ರಮೆಯು ಮೃಗ ಜಲದಂತೆ ನೀ ಸುಳ್ಳೆ
ಛಾಯೆ ತೋರುವದು ಕಾಯದಂತೆ ನೀ ||1||
ಗುರು ಮುಖದಿಂದಲಿ ಶ್ರವಣ ಮನನ ನಿಧಿ ಧ್ಯಾನ
ಪರಿ ಪರಿ ವಿಧದಲಿ ಮಾಡುತ ಬಾರ ಅಭ್ಯಾಸ|
ಪರಮ ಜೀವೈಕ್ಯರನು ತಿಳಿ ವಿಶೇಷ
ನರನೆಂಬುದು ತಾ ಮರಸುತ ಬರುವದು
ಹರನೆಂಬರುಹಿನ ಕುರುಹು ತೋರುವದು ನೀ ||2||
ಧರೆಯೊಳು ಮಣಿಪು ಪತಿಹರ ಘನ ವೃಷಭೇಂದ್ರ
ನಿರುತದಲಿ ಭಜಿಸಾತನ ಚರಣ ಅರವಂದ|
ಪರಮಾತ್ಮನು ನೀನೆಂಬುದನು ತಿಳಿ ಮುದದಿಂದ
ಗುರುಕರ ಕಮಲದಲಿ ಬಂದ ಬಳಿಕ ನರನಲ್ಲವೊ ಹರನೆಂದ ||3||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಅಂಕಲಗಿ ಮಠದ ನಿರುಪಾದಿ ಸ್ವಾಮಿಯ ತತ್ವಪದಗಳು

ಅಡಗಿದಾ ಸಡಗರವು ತಿಳಿಯದೈಯ್ಯ
ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ
ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||
ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ
ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||
ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||
ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ
ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||
ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ
ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||
ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ
ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||
ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು
ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ ||6||
ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ
ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||
ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ
ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||
ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ
ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||
ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ
ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||
ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ
ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||
ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ
ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||
ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ
ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||
ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ
ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||
ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ
ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||
ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು
ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||
ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ
ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||
ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ
ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||
ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ
ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||
ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ
ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||
ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ
ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||
ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ
ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||
ಹೂವ್ವನಿಲ್ಲದ ದೇವಪೂಜೆ ಮಾಡಲು ಚಂದವೆ ಪರಮಹಂಸಾ
ಏಕೋ ಭಾವವಿಲ್ಲದ ಮನುಜ ಭಕ್ತನಾದರೆ ಚಂದವೆ ಪರಮಹಂಸಾ ||ಪ||
ಸತಿ ಸುತರಿಲ್ಲದ ಸಂಸಾರ ಮಾಡಲು ಚಂದವೆ ಪರಮಹಂಸಾ
ದೊಡ್ಡ ಯತಿಗಳಾದ ಮೇಲೆ ಇಂದ್ರಿಯ ಬಲಿಸದಿದ್ದರೆ ಚಂದವೆ ಪರಮಹಂಸಾ
ಮತಿ ಹೀನ ಮೂರ್ಕನು ಮಂತ್ರಿಯಾದರೆ ಚಂದವೆ ಪರಮಹಂಸಾ
ಗತಿಗೆಟ್ಟ ಮುದುಕಗೆ ಗಮಕದಾ ಸತಿ ಚಂದವೆ ಪರಮಹಂಸಾ ||1||
ಬಾಳೆಯ ಫಲ ಹಣ್ಣಾಗದೆ ಉಣಲು ಚಂದವೆ ಪರಮಹಂಸಾ
ಶಾಸ್ತ್ರ ಆಲಿಸಿ ಸವಿಯದ ಮಕ್ಕಳಿದ್ದು ಚಂದವೆ ಪರಮಹಂಸಾ
ಆಳು ಕುದುರೆಯಿಲ್ಲದ ಅರಸು ಇದ್ದು ಚಂದವೆ ಪರಮಹಂಸಾ
ಅಳುವ ಪತಿ ನುಡಿಯ ಕೇಳದ ಸತಿಯಿತದ್ದು ಚಂದವೆ ಪರಮಹಂಸಾ ||2||
ಫಲವ ಕಾಯದ ವೃಕ್ಷ ಬಲು ಬೆಳೆದರೇನು ಚಂದವೆ ಪರಮಹಂಸಾ
ನೆಲೆಗಾಣದ ನಾರಿಯ ನೆರೆ ನಂಬಿ ನಡೆದರೆ ಚಂದವೆ ಪರಮಹಂಸಾ
ಸಲುಗೆಯಿಂದ ಪರುವನು ಮಾಡಿದ ಕೃತಿಗೇಳಿ
ಸಲೆನಂಬಿ ಶಿವನ ಸತ್ಕೀರ್ತಿ ಸಡಿಲದೆ ಪಡೆ ನೀ ಪರಮಹಂಸಾ ||3||

ಅಡಗಿದಾ ಸಡಗರವು ತಿಳಿಯದೈಯ್ಯ
ಅಡವೀಶ ನಿನ್ನ ಮಹಿಮಾ ಲೋಕದೊಳು ಆಡಲಿಕ್ಕರಿದು ದೇವಾ
ದೃಢವುಳ್ಳ ಭಕ್ತರಾ ನುಡಿಯಲ್ಲಿ ಅಡಗಿದಾ ಸಡಗರವು ತಿಳಿಯದೈಯ್ಯ ||ಪ||
ಕುಂದರ ನಾಡಿನಲ್ಲೀ ನೀ ನಿಂತು ಕುಹಕರ ಯೆದೆದಲ್ಲಣೌ
ವಂದೆ ಮನದಲಿ ತನ್ನ ಹೊಂದಿಕೊಂಡಿದ್ದವರಾ ಮಂದಿರಕೆ ಮಹಮೂರ್ತಿಯಾ ||1||
ಮೂಢ ತಾನೇನು ಬಲ್ಲಾ ನೀ ಬಂದ ಗೂಢ ಗುಪ್ತದ ಲೀಲವಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ ಆಡುವ ಆಟ ಬೇರೆ ||2||
ನರ ಕಾಯ ಧರಿಸಿ ಬಂದು ಧರೆಯೊಳಗೆ ಅರರೆ ಕೌತುಕವ ತೋರಿ
ಗುರುಲಿಂಗ ಜಂಗಮಕ್ಕೆ ವರ ಸೂತ್ರಧಾರಕನು ಗುರುತು ಬಲ್ಲವರಿಗರಿಕೀ ||3||
ಯೇನೇನು ಇಲ್ಲದಂತ ಸ್ಥಳದಲ್ಲಿ ತಾನೆ ತಾನಾಗಿ ನಿಂತಾ
ಸ್ವಾನುಭಾವದ ಮೂರ್ತಿ ಸಾಕ್ಷತ ಅವತಾರ ಯೇನು ಹೇಳಲಿ ಶೃಂಗಾರ ||4||
ಹರಹರಿ ಬ್ರಹ್ಮನಾಗಿ ಈಶ್ವರ ವರ ಸದಾಶಿವನು ನೀನೇ
ಗುರುಲಿಂಗ ಜಂಗಮ ಪರಿ ಪರಿ ಲೀಲವು ವುರುತರದ ಬೈಲರೂಪಾ ||5||
ವಂದರೊಳಗಿಲ್ಲ ನೀನು ತಿಳಿದರೆ ಸಂದಿಲ್ಲದಿರ್ಪ ತಾನು
ಕುಂದು ಕೊರತಿಯು ಹೊಂದದಂತಾ ಚಿನ್ಮಯ ವಸ್ತು ಮಂದಮನುಜರು ಅರಿಯರ||6||
ಕಪ್ಪಿ ಕಮಲವು ಬಲ್ಲುದೇ ಕೆಚ್ಚಲೊಳಲು ಉಂಣಿ ಹಾಲನು ಸವಿವುದೇ
ಕಪ್ಪು ಗೊರಳನ ಲೀಲಾ ಅಹುದಹುದು ನಿಜವೆಂದು ವಪ್ಪವಿಟ್ಟರು ಶರಣರು ||7||
ಕಾಂತರವನ್ನು ಸೇರಿ ತನ್ನಯ ಕಾಂತಿ ಜಗಕೆಲ್ಲ ಹರಹಿ
ಚಿಂತೆ ದೂರಾನಂದಯೆಂತು ವರ್ಣಿಸುವೆ ನಾನೂ ||8||
ನಾಲಿಗೆಯು ವಂದು ಯನಗೆ ಹೊಗಳಲಿಕೆ ಹಸ್ತ ಯರಡೈ ಬರಿಯಲಿಕೆ
ಕಾಲ ಕಾಲದ ಲೀಲಾ ಕರುವೇನು ಬಲ್ಲದು ಕೀಲಿಸಿದ ನುಡಿ ನುಡಿವದು ||9||
ಅನ್ನದಾನಿಯು ಯನ್ನಿಶಿ ನಿನ್ನದಾಸನೆನ್ನಿಶಿ ಶಿವನೆನ್ನಿಸಿ
ಚಿನ್ಮಯನೆನ್ನಿಸಿ ಚಿತ್ರಕನೆಸಿ ಉನ್ನತೋನ್ನತವೆನ್ನಿಸಿ ||10||
ಸಗುಣ ನಿರ್ಗುಣನು ನೀನೇ ಪರಿ ಪರಿ ಹಗರಣದ ರೂಪೂ ನೀನೇ
ನಿಗಮ ವೇದ್ಯನು ನೀನೇ ನಿತಾ ಅನಿತನು ಗಜ ನುಂಗಿದ ಬೆಳವಲು ||11||
ಸಾಕ್ಷಿ ರೂಪನೆ ನಿನ್ನೊಳು ಸರ್ವವೆಲ್ಲ ಸಕಾರವಾಗಿಹುದೂ
ಯೀಕ್ಷೀಶಿ ನೋಡಿದರೆ ನಾನು ಕೃತಾರ್ಥನಯ್ಯ ಯೇಕಮೇವಾತ್ಮ ನೀನೇ ||12||
ಅಪರಾಧಿ ನಾನು ದೇವಾ ನೋಡದೆ ಗುಪಿತ ರೂಪದ ತೋರಿಸೂ
ವಿಪರೀತ ಭಾವನೆಯ ಬಿಡಿಸಿ ನಿಶ್ಚಯ ಹಿಡಿಸಿ ಸುಪಥ ಕೊಡುವದು ನುಡಿಸೂ ||13||
ಪಾಪಿ ನಾನೈಯ್ಯ ದೇವಾ ನನ್ನೊಳಗನೀತಿ ಗುಣಗಳ ನೋಡದೆ
ಭೂಪ ನಿನ್ನ ಕರುಣ ನಿನಗೆ ನಾ ಹೇಳುವದೇ ವ್ಯಾಪಾರ ನಿನ್ನದಯ್ಯ ||14||
ಕರ್ಮಿ ನಾನೈಯ್ಯ ಗುರುವೆ ನನ್ನೊಳಗೆ ಅಧರ್ಮ ಗುಣಗಳ ಹುಡುಕದೇ
ನಿರ್ಮಳ ದೃಷ್ಟಿಯಲಿ ನಿಜ ಕೃಪ ಮಾಡುವ ಧರ್ಮ ನಿನ್ನದು ಸಾಂಬನೇ ||15||
ನಾನಾ ಕ್ಷೇತ್ರದ ಮೂರ್ತಿಯೋ ನೀನಿರುವ ಸ್ಥಾನಕ್ಕೆ ಯಳದುಕೊಂಡು
ಕೂನ ವರಿತರೆ ನೀನೇ ಸಾಕ್ಷಾತ ಪರದೇವಾ ಮಾನದಿಂ ರಕ್ಷಿಸೈಯ್ಯ ||16||
ಕೆಟ್ಟ ದುರ್ಗುಣಿಯು ನಾನೂ ನನ್ನಲ್ಲಿ ನಿಕೃಷ್ಟ ಗುಣಗಳ ಹುಡುಕದೇ
ದೃಷ್ಟ ಮೂರುತಿ ನಿನ್ನಾ ಬಿರದಿಗಾಗಿಯೆ ಬಿಡದೇ ಕಷ್ಟಮನ ಸುಖವ ಮಾಡು ||17||
ಪ್ರತಿ ರಹಿತನಯ್ಯ ನೀನೂ ನಿನ್ನಂತ ಹಿತಯಿಲ್ಲಾ ಲೋಕದೊಳಗೆ
ಗತಿ ಮತಿಗೆ ವಡಿಯನು ಗಾಡಿಕಾರ ಪ್ರಭುವು ನುತಿಸಲಿಕ್ಕೆ ಪುಣ್ಯ ಬೇಕು ||18||
ಬಾಲ ನಾನಯ್ಯ ದೇವಾ ಮಹಾ ಭಕ್ತಿ ಕೀಲಿನೊಳಗಾಡಿಸೈಯ್ಯ
ಕಾಲ ಕಾಲದ ಮಹಿಮಾ ಕರುವೇನು ಬಲ್ಲೆನೈ ಲೋಲ ಮಾರುತಿ ನೀನೆಲ್ಲಾ ||19||
ಶರಣು ಗುರುಕುಲಕೆ ಭಾನು ನೀನೈಯ್ಯ ಶರಣು ಚಂದ್ರಶೇಖರಾ
ಶರಣನು ಶ್ರೀ ಶಂಭುವೆ ಪರಮ ಯತಿಕುಲರಾಜ ಶರಣು ಶ್ರೀಗುರು ಮೂರ್ತಿಯೆ ||20||
ಶರಣು ಪೂರ್ವ ಪ್ರಮಥನೇ ನಿಜಶರಣು ಶರಣು ಆದಿಪುರುಷನೆ
ಶರಣು ಕರುಣಿ ನೀನು ಕಲ್ಪವೃಕ್ಷಾದನೇ ಶರಣು ಶರಣೈ ನಿನ್ನಗೆ ||21||
ಶರಣು ನಿರುಪಾಧಿ ಗುರುವೆ ಅಂಕಲಗಿ ಪರಮ ಶಿವ ಅಡವೀಶನೇ
ಪರಿ ಪರಿಯ ಲೀಲಾದಿಂ ಕಾದುಕೊಂಡಿರುವೆಯೆಂದು ಮರೆಯ ಹೊಕ್ಕೆನು ನಿನಗೆ ||22||

ಅಡವಿ ಸ್ವಾಮಿ ನಿಮ್ಮ ಸೇವಕರನು
ಅಡವಿಸ್ವಾಮಿ ನಿಮ್ಮ ಪಾದಕ್ಕಾಗಿ ಮಹ|
ಸಡಗರದಿಂದೆ ಉಬ್ಬಿ ಬಂದೆ ನೋಡು ||ಪ||
ಕರುಣದಿಂದ ಹಸ್ತವಿಟ್ಟು ಯಿತ್ತ ನೋಡು |ನಿನ್ನ|
ಚರಣ ಸೇವಕನು ನಾನರಿದು ನೋಡು
ಪರಮ ತೇಜದಲ್ಲಿ ದೃಷ್ಟಿಯಿರಿಸಿ ನೋಡು |ನಿನ್ನ|
ದರಶನಕ್ಕೆ ಪಾಪಕ್ಹಚ್ಚಿದೆ ನೋಡು ||1||
ನಿತ್ಯಾನಂದ ನಿನ್ನ ಮೂರ್ತಿಶೇವಿಪಲ್ಲೆ |ಬಾಳಿ|
ಅತ್ಯಧಿಕ ನರಕ ಮೆಚ್ಚುಗೊಳಿಪಲ್ಲೆ
ಸತ್ಯವಯ್ಯ ನಿನ್ನ ಧ್ಯಾನಾ ಅರಿವಿನಲ್ಲೇ | ಸದಾ
ಮೃತ್ಯುಂಜಯನು ನಿನ್ನ ವಚನ ಪಾಲಿಪನಲ್ಲೆ ||2||
ಅಂಕಲಗಿ ಸ್ವಾಮಿ ಮಹತ್ತು ತಿರುಗಿ ನೋಡೂ| ಈತ
ಶಂಕರನು ಯಂದು ದೇಶದೊಳಗೆ ನೋಡೂ|
ಲೆಂಕನಾಗಿ ಹೊಗಳಲಿಕ್ಕೆ ಆನೆ ನೋಡೂ
ನಿಃಶಂಕ ನಿರುಪಾಧಿ ತಾನೆ ತಾನೆ ನೋಡೂ ||3||

ಅಡವೀಶ ಸಿಗುವಂತ ಬೆಡಗು
ಅಡವೀಶ ಸಿಗುವಂತ ಬೆಡಗು ಅದು ಬೇರೆ
ಹುಡುಗರೇನ್ ಹಿರಿಯರೇನ್ ದೃಢಗುಣವು ಬೇಕು ||ಪ||
ಕೇವಲ ಸುಜ್ಞಾನ ಪೀಠ ಹಾಕಿಸಿಕೊಂಡು
ಭಾವ ಭರಿತಾನಂದದಿಂ ಮೂರ್ತವಾಗಿ
ನಾವು ನೀವೆಂಬು ಭಯವಳಿದು ಏಕಾಂತದೊಳು
ಠಾವು ಮಾಡಿಯೆ ತಾನು ಸಾಕ್ಷಾತನಾದಾ ||1||
ವಂದು ನೂರಾರು ವಂಬತ್ತು ನೂರಾವಂದು
ಮುಂದೆ ಇನ್ನೂರು ಹದಿನಾರರೊಳಗೆ
ಚಂದ ಚಂದ ಮೂರ್ತಿ ಮಂತ್ರ ಬೀಜಾಕ್ಷರಾ
ಒಂದರೊಳು ಸರ್ವವೆಲ್ಲ ಅಡಕ ಮಾಡಿದ್ದಾ ||2||
ನಿರುಪಾಧಿ ತಾನಾದೆ ನಿಜಲಿಂಗ ಗುರುತಿನೊಳು
ಕರಿಗೊಂಡು ಪೂರ್ಣ ಬ್ರಹ್ಮದ ಬಯಲಿನೊಳಗೇ
ಬೆರೆದು ನಿಬ್ಬೆರಗಾಗಿ ಎಲ್ಲಾ ಸುಖದಿಂ ತೂಗಿ
ಅರಿತು ಅರಿಯದೆಯಿರುವಾ ಶೂನ್ಯ ತಾನಾದ ||3||

ಅಡವಿ ಪಾಶ್ಯಾ
ಅಡವು ಪಾಶ್ಚ್ಯ ಹರನೆ ನಿಶ್ಚಯಾ ಘನವೆಂದು
ಮುಂಡಿಗಿಡುವೆ ವೇದಾಂತ ವಾಕ್ಯದಿ
ಪೊಡವಿಯೊಳಗೆ ಜ್ಞಾನ ವೈರಾಗ್ಯೋಪರತಿಗಳಿಂದಾ
ದೃಢದಿ ಮೆರೆವ ಕಾರಣಕೇ ಹೊಡದೆ ಡಂಗುರವಾ ಗುರುವೇ ||ಪ||
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣಾ
ಯುಕ್ತ ಐಕ್ಯನೆಂಬೋ ವಚನದಾ
ಯುಕ್ತಿಯಲ್ಲಿ ನಿಜವ ಕಂಡೆ ವಪ್ಪುವಾರು ಆರು ಸಲವು
ಮುಕ್ತಿಗೊಡೆಯನಾಗಿ ಜಗದಿ ಭಕ್ತಿಲೀಲೆ ಆಡುವಾತಾ ||1||
ಕರ್ಮಿ ಮುಮುಕ್ಷಭ್ಯಾಸನುಭವಿ ಆರೂಢ
ನಿರ್ಮಳಾದ ಚೇತನಾತ್ಮನು
ಮರ್ಮ ತಿಳಿದರೀತ ಜಗದಿ ಗುರುವು ಆರು ಮತದ ಜನರು
ಬರುವದೈಯ್ಯಾ ಸುತ್ತದೇಶ ಕರುಣಿ ಕಲ್ಪವೃಕ್ಷನೀತ ||2||
ಮೂಢ ಮತಿಗಳೇನು ಬಲ್ಲರು ಶಿವ ಆಡುವಂತಾ
ಗೂಢ ಗುಪ್ತವಾದಾ ಲೀಲವಾ
ನೋಡಿದರೆ ನರ ಶರೀರ ತಾಳಿ ಅಂಕಲಗಿ ಸ್ಥಳಕೇ
ಆಡಬಂದ ನಿರುಪಾಧಿ ನಾಡಿನೊಳಗೆ ಶಿದ್ಧಲಿಂಗ ||3||

ಅಡವಿ ಪಾಶ್ಚನ ಪಾದ ಕಾಣುತ
ಅಡವಿ ಪಾಶ್ಚನ ಪಾದ ಕಾಣುತ
ದಿಡಿಗಿನಲಿ ಓಡುವವು ಪಾತಕ
ಸಡಗರಾನೂಗುವ ಒಂದೆ ನಿಮಿಷದಲೀ ||ಪ||
ಲಂಕ ಪುರಕೆಯು ಹೋಗಿರಲ್ಲಿಹ
ಶಂಕರಿಯ ದರುಶನ ತಕ್ಕೊಳೆ
ಸಖ್ಯ ಇಲ್ಲದ ಮುಕ್ತಿ ದೊರೆಯದು ನಿಃಷ್ಪಲವು ಚರಿಸೇ
ಶಂಕರಿಯಪತಿ ಶಂಕರಿಲ್ಲಹ (ದೆ)
ಡಂಕ ಹೊಡೆಯಿತು ಮೂರು ಲೋಕದಿ
ಬಿಂಕ ಬೀರಿತು ಸಾಧು ಶಿವನೆಂದೆನುತು ಶೃತಿಸಾರೇ ||1||
ಕಂಚಿಯೆಂಬೋ ಪುರದ ವಳಗಿಹ
ಕೆಂಚೆ ಕಾಮಾಕ್ಷಿಯನ್ನು ನೋಡಲು
ಸಂಚಿತಾರಾಬ್ದಾಗಾಮಿಗಳಿವು ಮಾರರೊಳಗೊಂದು
ಹಂಚಿ ಹಾಕಲು ಹೋಗಲಿಲ್ಲವು
ಮಿಂಚಿನಾ ಪ್ರಭೆ ಬಲ್ಲ ಪುರುಷಗೆ
ಕಿಂಚಿತಿಹ ಅಣುವಾಗಿ ನಡದವ ಭವವ ಕಳಕೊಂಬಾ ||2||
ಪೃಥ್ವಿಯನು ನಾ ನೋಡ್ವೆನೆನುತಲಿ
ಶುದ್ಧದಲಿ ಸ್ರುಂಕಾಳಿ ದ್ವೀಪದಿ
ಬಿದ್ದು ಬಂದರೆ ಯೇನು ಯಿಲ್ಲವು ಬರಿದೆ ನಿಃಷ್ಪಲವು
ಸಿದ್ಧ ಪುರುಷನ ಸಂಗದಿಂದಲಿ
ಬುದ್ಧಿ ಬರುವದು ಜ್ಞಾನಿಯೆನಿಸುವ
ಬದ್ಧವೈ ಈ ಮಾತು ಶರಣನೆ ಶಂಭು ಶಿವ ಸತ್ಯ ||3||
ಚ್ಯಾಮುಂಡಿಯನು ಕಾಣ್ವೆನೆನುತಲಿ
ಕಾಮ್ಯದಲಿ ನಾ ಕ್ರೌಂಚ ಪಟ್ಟಣ
ಭೂಮಿ ತಿರುಗಿದರಲ್ಲೇನಿಲ್ಲೆಲೆ ಬರಿದೆ ಬರಿ ಗಂಟೆ
ನೇಮದಿಂದಲಿ ಸಾಧು ದುರುಶನ
ಸ್ವಾಮಿಯಿವನೆಂತೆಂದು ಆಗಲು
ಭೂಮಿಕೆಯ ಮೆಟ್ಟುವನು ತೂರ್ಯಾತೀತ ದೊರಕುವದು ||4||

ಅಡವಿ ಪಾಶ್ಚನ ಮಹಿಮೆ
ಅಡವಿ ಪಾಶ್ಚನ ಮಹಿಮೆ ಆಡಲಿಕ್ಕದರಿದು
ಬೆಡಗು ಆಗದೆ ಲೋಕಕೇ ಮಗುವೇ
ಇಡಬೇಕು ಭಕ್ತಿ ತಾ ಪರಿಪೂರ್ಣ ಮನದಿಂದ
ವಡಿಯ ಸಿಗುವನು ಸೂಕ್ಷ್ಮದಿ ಮಗುವೇ ||ಪ||
ಗೂಢದೊಳಗಿಹ ಗುಪ್ತವಾದಂತ ವಸ್ತುವಾ
ನೋಡುವ ದೃಷ್ಟಿ ಬೇರೆ ಮಗುವೆ
ಕಾಡ ಸಿದ್ಧನ ಮಹಿಮೆ ಕಾಪಟ್ಯಗೇನರಿಕೇ
ಆಡವನು ತಾನೇ ತಾನೇ ಮಗುವೇ
ಮಾಡಬಾರದ ಕೆಲಸ ಮಾಡಿದರೆ ಮಗನೆಂದು
ನೋಡುವನು ಕರಣದಿಂದ ಮಗುವೇ
ಕೂಡಿಕೋ ಬಿಡದಲೆ ಇದೇ ವ್ಯಾಳ್ಳೆ ಮೊಂದಿಲ್ಲ
ಕೇಡು ತಪ್ಪಿಸುವ ದೇವಾ ಮಗುವೇ ||1||
ಮೂರೊಂದು ಹಿಡಕೊಂಡ ನಾಲ್ಕಕು ಮೊದಲರಿವದು
ಆರು ಹತ್ತನ್ನೆರಡು ಮಗುವೇ
ಮೀರಿದ ಹದಿನಾರು ಎರಡು ತಿಳಕೊಂಡಲ್ಲಿ
ಭೋರೆಂಬ ನಾಡವುಂಟು ಮಗುವೇ
ಸೇರಿಕೊಂಡುನ್ಮನಿಯ ಬಿಂದುಕಳದೊಳು ಮೊಳಗೆ
ತೋರುವನು ಬ್ರಹ್ಮವಾಗಿ ಮಗುವೇ
ಧೀರ ಶ್ರೀಗುರುನಾಥ ವಲಿದರೇ ತನ್ನರಿವಾ
ಜ್ಞಾನದ ಕಣ್ಣು ಕೊಡುವಾ ಮಗುವೇ ||2||
ಕಾಲಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ
ತೋಲ ಮೂರ್ತಿಯ ಪದದಲೀ ಮಗುವೇ
ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ
ಜಾಲ ಹರಿವದು ಉತ್ತಮಾ ಮಗುವೇ
ಮೂಲವಾಗಿಹ ಕರ್ಮ ಹರಿಯಲಿಕೆ ಈ ನುಡಿಯು
ಮೇಲು ಮಂತ್ರವಾಗದೆ ಮಗುವೇ
ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲ
ಮೂಲ ಮೂರುತಿ ನಿಶ್ಚಯ ಮಗುವೇ ||3||
ಕಾಲ ಕಾಲದ ಪುಣ್ಯ ವದಗಲಿಕೆ ಅಡವೀಶ್ಯಾ
ಲೋಲ ಮೂರ್ತಿಯ ಪದದಲೀ ಮಗುವೇ
ಕೀಲಹುದು ಸಾಧುಗಳ ಕೇಳಿ ನಿರುಪಾದ್ಯಾಗಿ
ಜಾಲ ಹರಿವದು ವುತ್ತಮಾ ಮಗುವೇ
ಮೂಲವೇಗಿಹ ಕರ್ಮ ಹರಿಯಲಿಕೆ ಈ ನುಡಿಯ
ಮೇಲು ಮಂತ್ರವಾಗsದೆ ಮಗುವೇ
ಸೋಲು ಗೆಲುವೇನಿಲ್ಲ ಒಂದರೊಳಗಿಹುದೆಲ್ಲಾ
ಮೂಲ ಮಾರುತಿ ನಿಶ್ಚಯ ಮಗುವೇ ||4||

ಅಂಗ ವಾಚಮನ ತೀನೋ ತೇರಾ
ಅಂಗ ವಾಚಮನ ತೀನೋ ತೇರಾ ಪರು ಭಜಿಸೈ
ಅಂಗ್ವಾಚಮನ ತೀನೋ ತೇರಾ ಪರು ಭಜಿಸೈ ||ಪ||
ಜಾಹ ದೇಖೆ ಹೋ ಹೈ ತುಮೆ ಕೋಹಿನಹಿ ದುಸರಾ
ಸಾಹೆಬ್ಮೆಹರಬಾನಿ ತೇರಾ ಗುರುಜಿಸೈ ||1||
ಸೋಬ್ತುಮೆ ಹುಯಬಾದು ಅಬುಕಬುಕಾಹೈ
ಚಾಮನೈ ಬೋಲೆ ಕು ಮೇರಾ ಗುರುಜಿಸೈ ||2||
ನಿರುಪಾಧಿ ಗುರುಹೋನಾ ಸಾರದಿನ್ನು ಸಖನಿ
ಪೂರಣಬ್ರಹ್ಮಮೋ ಮಿತಿ ಗುರುಜಿಸೈ ||3||

ಉದಯವಾದಿತೇಕೊ
ಉದಯವಾದಿತೇಕೊ ತೀವ್ರ ಹೊತ್ತು ನಿಲ್ಲದೇ ||ಪ||
ಪರಮ ನಿದ್ರಾ ಯೋಗದಲ್ಲಿ ಹರುಷದಿಂದ ಪಾರ್ವತಿಯೊಳು
ಸರಸದಿಂದ ಸಮರಸದೊಳಿರುವ ವ್ಯಾಳ್ಳೆದೀ ||1||
ಹಾಡಿ ನೋಡಿ ಮಾಡಿ ಕೂಡಿ ಕಾಡ ಸಿದ್ಧನರ್ಧಾಂಗಿಯನು
ನಾಡೊಳರಿಯದಂಥ ವಸ್ತು ಬೇಡವಾಗಲೀ ||2||
ನಿರುಪಾಧಿಯ ತಾನೆ ಎಂದು ಶಿರದಿ ಕರವನಿಟ್ಟು ತನ್ನ
ಅರಿತು ನಿದ್ರಿ ಜಾಗ್ರ ಸ್ವಪ್ನ ಸ್ಮರಣ ವ್ಯಾಳ್ಳೆದಿ ||3||

ಏನು ಹೇಳಲೈ
ಏನು ಹೇಳಲೈಯ್ಯಾ ನಿನ್ನಗೇ| ಗುರು ಜಂಗ್ಮ ಖೂನಾ
ಮೂರುತಿಯು ತಾನಾಗೇ|
ಕಾನನದಿ ಮಠವು ಮಾಡಿ| ಸ್ವಾನುಭವ ಶ್ರೇಷ್ಠನೆನಿಸಿ|
ಧೇನುವಾಗಿ ಭಕ್ತರನ್ನು| ಭಾವದಂತೆ ನಡೆಸುವಧಿಕಾ ||ಪ||
ಅರಿತು ಅರಿಯದಂತೆ ಜಗದೊಳು ನರವೇಷ ಹಾಕಿ
ಗುರುತು ತಿಳಿಯಗೊಡದೆ ಮೆರೆವುತಾ
ಪರಮ ಪಾವನ್ನ ನೀನೂ ಪಾಪ ಕ್ಷಯವ ಮಾಡಲಿಕ್ಕೆ
ಧರೆಗೆ ಬಂದು ಲೀಲವಾಡಿ| ಶರಣರಿರವು ನೀನೇದೇವಾ ||1||
ಅನ್ನದಾನಿ ಆದಿ ಶರಣನು| ಆಗಾದನು|
ವುನ್ನತಾದ ವಸ್ತು ರೂಪನು|
ಕುನ್ನಿ ನಾನು ಕಾಲ ಕಾಲ| ಮನ್ನಿಸುವ ವಡಿಯ ನೀನು ||2||
ತಂದೆ ನಿರುಪಾಧಿ ನೀನೆಲೋ| ಅಂಕಲಗಿವಾಸ|
ಬಂದು ಅಡವಿ ಸಿದ್ಧನಾಗಿಯೇ| ಕುಂದು ಕೊರತೆ ಬಾರದಂತೆ|
ಹಿಂದು ಮುಂದು ಕಾಯ್ವ ನೀನೇ| ಎಂದು ಬಂದೆ ಕಟಾಕ್ಷವನ್ನು|
ಚಂದವಾಗಿ ತೆರೆದು ನೋಡೋ ||3||

ಏನು ಕಾರಣ ಸುಮ್ಮನಿರುವೆ
ಏನು ಕಾರಣ ಸುಮ್ಮನಿರುವೆ ಅಡವೀಶ್ಯಾ
ಖೂನದೊಳಗಿಡು ನಿನ್ನಾ ಶಾಖದ ಅಣುವು ||ಪ||
ನಿತ್ಯ ನಿರ್ಗುಣ ಮೂರ್ತಿ ನಿಜರೂಪ ನೀನೂ
ತೊತ್ತಿನ ಮ್ಯಾಲೆ ಕರಣವ ಮಾಡೊ ದೇವಾ
ಅತ್ಯಧಿಕ ಆನಂದದಿಂದ ಮೆರೆವವನೇ
ಚಿತ್ತ ನಿಲುಕಡೆ ಮಾಡು ಶೇವಕನು ನಾನು ||1||
ನೋಡೋ ದಯದೃಷ್ಠಿಯಲ್ಲಿ ಅಂತರಂಗದೊಳು
ನೀಡೊ ಕರುಣಾಮೃತವ ನಿಜ ರೂಪ ನೀನೇ
ಆಡಲೇನಯ್ಯ ಸರ್ವೆಲ್ಲ ನಿನಗರುವು
ಬೇಡಿದ ಪದವಿಯಾ ನಡೆಸುವಧಿಕಾರೀ ||2||
ಬಂಧು ಬಳಗದಿಯನ್ನಾ ಕೊರತೆ ಆಲಿಸದೆ
ತಂದೆ ತಾಯಿ ನೀನಾಗಿ ಪೊರೆಯ ಬೇಕೆಂಬೆ
ಕಂದ ನನ್ನಾ ಬಿರದು ಪೊಗಳುವನೆಂದು ತಿಳಿದು
ಸಂದೇಹ ಕಳದು ಸಾಕ್ಷಾತನ ಮಾಡೊ ||3||
ಶರೀರಯಿರುವನ್ಕ ನಿಜ ಸುಖದ ಬೇಡುವೆನು
ಗುರುವೇ ಕಡಿಯಲ್ಲಿ ನಿನ್ನೊಳಗೇ ರೂಪಾ
ಯಿರಿಸೆಂಬೊ ಬಯಕೆ ವಂದಲ್ಲಾದೆ ಮತ್ತೆ
ನಿರುತದಿಂ ನಿಮ್ಮ ನೆನೆವಂತ ಸುಖವಿರಲಿ ||4||
ಅಂಕಲಗಿ ವಾಸನೇ ಅಡವಿ ಸಿದ್ದೇಶ್ಯಾ
ಕಿಂಕರ ಪ್ರೀತಿಯ ಗುಣ ಪಾಲಿಸೆಂಬೇ
ಶಂಕರಾ ಶಿವ ಶಂಭೋ ಹರ ಗುರು ಲಿಂಗ
ಸೋಂಕೋ ನೀ ನಿರುಪಾದಿ ಜಂಗಮದೇವಾ ||5||

ಏನು ಹೇಳಬೇಕು
ಏನು ಹೇಳಬೇಕು ಜೀವಗೆ| ಅಡವೀಶ ಕೊಡುವಾ ಕೂನವನರಿಯೆದೆಲೆ ಬಳಲುವಾ||
ಧ್ಯಾನದೊಳಗೆ ಐಕ್ಯವಾಗೆ| ಬೋನ ಬಟ್ಟೆ ದುಡ್ಡು ರುಚಿಯೂ|
ತಾನೆ ನಡೆಸುವಂತ ದೇವಾ| ಮೌನ ಮೂರುತಿಯು ಸಿದ್ಧಾ ||ಪ||
ಕೊಡುವದರಿಯದೆ ಚಿಂತಿಯ| ಮನದೊಳಗೆ ತಾನು
ಹಿಡಿದು ಹೊಯ್ಯದಾಡಿ ವರುಲುವಾ| ವಡೆಯನಾಗ್ನೆ ಅರಿಯ ಮಂತ್ರ
ಪಡೆದು ವಳಗೆ ಜಪಿಸಿದಾಗಲೆ ವಡಲ ಆಶೆಗಳಲುವಾನು|
ದೃಢವು ಇಲ್ಲಾ ಬಯಕೆ ಬಿಡದು ||1||
ನಾಥನಾಟ ಅರಿಯದಲೆಯೂ| ಸಂಶಯದಿ ತಾನೆ
ಕೋತಿಯಂತೆ ಕುಣಿದು ಕೆಡುವನು| ನೀತಿ ಭೀತಿಯರಡು ಮರೆತು|
ಕಾತುರದಿ ಕಂಡ ಕಡೆಗೆ| ಪ್ರೀತಿ ಇಡುವದಯ್ಯಾ ಇದರ
ಜ್ಯಾತಿ ಸುಡಲಿ ತಿಳಿಯದೆನಗೆ ||2||
ಹಿತವ ಬಯಸುವದು ನಿತ್ಯದಿ| ಅರಿಯದೆ ಬಹ
ಕೃತಕವೇನು ಬೇಡಿಕೊಂಡರೇ ಪತಿತ ಪಾವನ ನಾನು ಪುಣ್ಯ
ಗತಿಯು ಇದ್ದಾ ಪರಿಯು ಮೂಡ್ವ ಪಥವನರಿತು ಪಾದದಲ್ಲಿ|
ರತಿಯನಿಡರು ನಿಶ್ಚಯಿಲ್ಲಾ ||3||
ನಾನು ನನ್ನನೆಂದು ಕೆಡುವದು| ನಿನ್ನಾಜ್ಞೆ ಮರದು|
ಸ್ವಾನನಂತೆ ಸೊಟ್ಟ ಚರಿಪದು| ಧೇನುವಾದ ಗುರುವಿನಂಘ್ರಿಯ|
ಮೌನದಿಂದ ಭಜಿಪದಗಲೀ| ತಾನೇ ಶ್ರೇಷ್ಟನಾಗಿ ಮನದಿ|
ಹೀನ ಕಂಜದಾತಿ ಇಹುದು ||4||
ಮೂರರಂತೆ ನಡೆಸುವಾತನು ಅಂಕಲಗಿ ಮಠದಿ
ಸಾರ ಸೌಖ್ಯ ಸಿದ್ಧಲಿಂಗನು| ಪೂರಣನಂದೈಕ್ಯ ಕಾರ್ಯ|
ಕಾರಣಡವಿಯ ಪಾಶ್ಚಾ| ಧೀರ ಗುರು ನಿರುಪಾಧಿಯಾದ|
ಸೇರುವಿಯೊಳು ಸಮ್ಮತಿಲ್ಲ ||5||

ಏನು ಹೇಳಲಮ್ಮಾ
ಏನು ಹೇಳಲಮ್ಮಾ| ಅಡವಿಸಿದ್ದಂತಾ| ಮಹಾ ಪ್ರಚಂಡಾ
ಸ್ವಾನುಭಾವದ ಸುಖ ತಾನೆ ವುಂಡಾ| ನಿಜ ಮುಕ್ತಿ ಕಂಡಾ ||ಪ||
ಹಮ್ಮು ಅಹಂಕಾರವಾ ಬಿಟ್ಟನಮ್ಮಾ| ಸುಖ ಕೊಟ್ಟನಮ್ಮಾ|
ವಮ್ಮಾನ ಇರುಯೆಂದು ಇಟ್ಟನಮ್ಮಾ| ಭವಗೆಟ್ಟನಮ್ಮಾ|
ಅಮ್ಮಮ್ಮಾ ಈತನ ಮ್ಯಾಲೆನಮ್ಮಾ| ಮಮತೆ ಹತ್ತಿತಮ್ಮಾ
ನಮ್ಮ ನಿಮ್ಮ ವರೆಂಬೊದ್ಹೊಯಿತಮ್ಮಾ| ಸುಮ್ಮನಾಯಿತಮ್ಮಾ ||1||
ಕಂಡ ಕಡಿಗಿ ಚಿತ್ತಯಿಡಲಿ ಬ್ಯಾಯೆಂದಾ| ಯನ್ನ ನೋಡುಯಂದಾ|
ಹಿಂಡು ದೋಷಾದಿಗಳ ಕಳಿವೆಯೆಂದಾ| ಬಹು ಪ್ರೀತಿಯಿಂದಾ|
ಚಂಡಿತನ ಮನದೊಳು ಬ್ಯಾಡಯಂದಾ| ತಿಳಿದು ನೋಡುಯಂದಾ|
ಭಂಡಾಟ ಲೌಕಿಕ ಪಾಡಲ್ಲಂದಾ| ಯನ್ನ ಕೂಡುಯಂದಾ ||2||
ನಿರುಪಾಧಿ ತಾನೆ ಅಡವೀಶನೆಂದು| ಸ್ವಪ್ನಾದಿ ಬಂದಾ|
ಗುರುಲಿಂಗ ಜಂಗಮ ತಾನೆಯಂದಾ| ಸಂಶಯಯಿಲ್ಲಂದಾ|
ಪರಕೆ ಪರತರ ವಸ್ತು ಇದೆಯೆಂದಾ| ಗುಪ್ತಯಿರುಯಂದಾ|
ಧರೆಯೊಳು ನರರಂತೆ ಮೆರೆಯಂದಾ| ಮುಕ್ತಿ ಅರಿಯಂದಾ ||3||

ಏನು ಬರಿಯಲಿ
ಏನು ಬರಿಯಲಿಬೇಕು ಬ್ರಹ್ಮ ತಾನಾದಂಥ
ಖೂನ ಬಲ್ಲ ಗ್ನಾನಿ ಆನಂದಗೊಂಡಾ ||ಪ||
ಮುಕುತಿ ಮಾರ್ಗವ ಲಿಖಿಸೊ| ವಿಧ ಮೂರವಸ್ತೆಯೊಳು
ಯುಕುತಿ ಆನಂದಾಗಿ ತೂಗುತಿಹುದು
ವಿಕಳ ಪ್ರಪಂಚದಲಿ ತೋರುವದು ಬಹು ಪರಿಯು
ನಕಲು ಆಗ್ವದು ಇದ್ದ ವಚನವನು(ದು) ಖರಿಯೆ ||1||
ಬಲ್ಲಗಾರನು ಬಲ್ಲ ಮಾರು ಪ್ರಾರಬ್ಧಗಳ
ನಿಲ್ಲೋಣಾಗದೆ ಮಾರು ಮಾರ್ಗದವನಲ್ಲಿ
ಎಲ್ಲಾಗೇನರಕಿ ಶಿವನು ಶರಣನು ಎಂಬೊ
ಸೊಲ್ಲು ತಿಳಿದವಗೆ ಸುಕೃತವು ಬೇಕು ಜ್ಯಾಣಾ ||2||
ಜೀವ ಭಾವಿಗೆ ಏನು ನಿರುಪಾಧಿ ಸುಖವರಿಕೀ
ಕೇವಲ ಸ್ವರ್ಗ ಕೈಲಾಸ ಕೈವಲ್ಲ್ಯೆ
ಭಾವ ಭರಿತನು ಅಡವಿಶಿದ್ಧ ಯೋಗೀಶ್ವರನಾ
ಸೇವೆಯೊಳಗಿದ್ದವಾ ಭವವನು ಕಳಕೊಂಬಾ ||3||

ಓಂ ನಮೊ ಅಡವಿಸಿದ್ದಾ
ಓಂ ನಮೊ ಅಡವಿಸಿದ್ದಾ ಬಂದೇನಯ್ಯ|
ಕೃಪೆ ಮಾಡು ತಂದೆ ಹಿಡಿಯನ್ನಯ ಕೈಯ್ಯ
ತೊತ್ತು ನಾನು ದಯದಿಂದ| ||1|
ಅತ್ಯಧಿಕ ಸುಖವ ಕೊಡು ಎನಗೆ ನೀನು ||2||
ಕರುಣ ಮಾಡೋ ಮಗುವಿನಾ|
ಹರಣದಾನಂದೊಳು ನೀನೆ ಕೂಡೊ ||3||
ಶಿರವ ಬಾಗಿ ಮನವನು ಚರಣದಲ್ಲಿಡುವೆ|
ಸಾಕ್ಷಾತ್ ಯೋಗಿ ||4||
ನಿನ್ನ ಮಾಯಾ ತಿಳಿಯದು| ವುನ್ನತಾ ಮೂರ್ತಿ ಛಾಯಾ|
ನಿನ್ನ ವಳಗೆ ನಾನಿರುವ| ಸನ್ನುತವ ಪಾಲಿಸೆನಗೆ ||5||
ನಾಥ ನೀನು ನೀ ವಲಿಯೆ|
ಪ್ರೀತಿ ಮಾಡಂಬೋದೇನು ||6||
ದೇವನಾಗಿ ನಿಜ ಸುಖ|
ಭಾವ ಒಂದರಲಿ ತಾನಾಗಿ ತೂಗಿ ||7||
ಎಲ್ಲಾ ಜಗದಿ ನೀನಿದ್ದು|
ಉಲ್ಲಾಸ ನಾಡ್ವೆ ಮುದದಿ ||8||
ದಯದಿ ನೋಡು ಕೇವಲ|
ಭಯ ಭಕ್ತಿ ಇರುವ ಆನಂದ ನೀಡು ||9||
ನೀನೇ ದೇವಾ ತತ್ವದಾ|
ಕೂನದೊಳು ಏಕವಾದಂಥ ಭಾವ ||10||
ಮಾರರೊಳಗೆ ಮನವಿರುವ|
ಸಾರಾಂಶ ತನ್ನ ಒಳಗೆ ||11||

ಕರುಣಿಸಿ ಕಾಯೋ ಯನ್ನ
ಕರುಣಿಸಿ ಕಾಯೋ ಯನ್ನ| ಅಂಕಲಿನಾಥ|
ಕರುಣಿಸಿ ಕಾಯೋ ಯನ್ನ ||ಪ||
ಕರುಣಿಸಿ ಕಾಯೋ ಯನ್ನ| ಗುರುಲಿಂಗ ಜಂಗಮನೆ
ಮರೆಯ ಹೊಕ್ಕೆನು ನಿನ್ನಾ ಬಿರದಿಗಾಗಿಯೆ ಬಿಡದೆ ||ಅ.ಪ||
ನಂಬಿ ಬಂದೆನು ಇಲ್ಲಿಗೆ ನೀನೇ ಮಹಾ
ಸಾಂಬಶಿವನು ಯನ್ನುತಾ|
ಹಂಬಲಿಸುತ ಬಂದ| ಕಂದನ ಯತ್ತಿಕೊಂಡು|
ಯಿಂಬು ಮಾಡಿದು ಮುಕ್ತಿ ತಕ್ತಮಾಲಿಯ ಹಾಕಿ ||1||
ನಿತ್ಯ ನಿರ್ಗುಣ ಮಾರುತಿ| ಅರವಿರಳ ಜ್ಯೋತಿ|
ಅತ್ಯಧಿಕಾರಿ ಪ್ರಭುವೇ|
ಸತ್ಯ ಸದಾಚ್ಯಾರಿ ಸಾಕ್ಷಿರೂಪನೇ|
ತೊತ್ತೆನ್ನ ಮಾಡಿಡು ಬೃತ್ಯನಾನಯ್ಯ ||2||
ನಿರುಪಾಧಿ ನೀನೆಂದೆನೋ| ಕರ್ತೃವು ಪರನೇ|
ಪರತರ ಗುರುವೆಂದೆನೋ| ಸ್ಮರಣಿ ಮಾತ್ರದಿ ನಿನ್ನಾ|
ಕುರುಹು ಕಾಣಿಸುವಂತಾ ಇರವು ತೋರಿಸಿ ಭವವಾ|
ಹರಿಯೋ ಶ್ರೀ ಅಡವೀಶಾ ||3||

ಕರುಣ ಮಾಡೊ ದೇವಾ
ಕರುಣ ಮಾಡೊ ದೇವಾ| ಶ್ರೀಗುರು| ಕರುಣ ಮಾಡೊ ದೇವಾ||
ಕರುಣ ಮಾಡೊ ನೀ ಧೊರಿ ಅಡವೀಶನೇ|
ಚರಣ ಧೂಳಿನಾ| ಪರಿಪರಿ ನುತಿಸುವೇ ||ಪ||
ಹಿಂದೆ ಮುಂದೆ ನೀನು ಕಾದಿರು
ಬಂಧು ಬಳಗ ತಾನೂ ಮಗುವಿನ
ಅಂದ ಚಂದವನು ನೋಡಲಿ
ಕಂದುಗೊರಳನೆ ಕಾಲ ಕಾಲದಲೀ| ಸಂದೇಹ ಬಿಟ್ಟಾನಂದವಾಗುವಾ ||1||
ನೀತಿ ಪುರುಷನೆಂದು ಲೋಕದಿ
ಧಾತ ನೀನೆ ಎಂದು ಅರಿವುತ ಭೀತಿಯಿಂದ ಬಿಂದೂ
ಮಾತು ಮನ್ನಿಸು ಅನಾಥ ನೀನೆ ತಿಳಿ
ಯಾತರೊಳಗೆ ಬಹು ನೂತನವಾಗುವಾ ||2||
ನಿರುಪಾಧಿಯು ನೀನೇ ಎನ್ನುತಾ
ಮರಿಯ ಹೊಕ್ಕೆ ನಾನೆ ಅಂಕಲಗಿ ಪುರದ ಸಿದ್ಧ ತಾನೆ ನಿಶ್ಚಯಾ
ಅರಮರಿಲ್ಲದೆ ಹಾಡಿ ಹರಸುವಾ
ಗುರುತಿನೊಳಗೆ ಮೈ ಮರೆವ ಮಹ ಸುಖಾ ||3||

ಕಳೆದ ವಸ್ತುವ ನಿನ್ನ ಬಳಿಯಲ್ಲಿ
ಕಳೆದ ವಸ್ತುವ ನಿನ್ನ ಬಳಿಯಲ್ಲಿ ಕೇಳಲಿಕೆ
ಯಿಳೆಯಲ್ಲ ಬಂದು ಕೂಡಿತೊ ಅಡವಿಸಿದ್ಧಾ ||ಪ||
ಮಗನು ಹೋದನೆ ಎಂದು ತಾಯ್ ಜಗವೆಲ್ಲಾ ತಿರುಗುತಾ
ನಿಗಮಗೋಚರ ನಿನ್ನಲ್ಲಿ ಹುಡುಕುತ ಬಂದು
ಅಘಹರ ನಿನ್ನಪಾದ ಮಗನ ಮೋಹದಿ ಕಂಡೆ
ಸುಗುಣ ಕೊಟ್ಟಿಡು ಸುಖದೀ ಎನ್ನುವರೈಯ್ಯಾ ||1||
ಗಂಡ ಬಿಟ್ಟೋದನೆಂದು ಹೆಂಡತಿ ಹುಡುಕುತಾ
ಕಂಡಾಳು ನಿನ್ನ ಪಾದದೀ ಆನಂದವಾಗಿ
ಮಂಡಲದೊಳು ಭಕ್ತಿ ಪುಂಡ ದೇವರ ದೇವಾ
ಗಂಡನಾಳ್ವಂತೆ ಮಾಡೋ ಯನ್ನುವರೈಯ್ಯಾ ||2||
ತಂದೆ ಹೋಗಲು ಮಗನು ಬಂದು ಹುಡುಕುತಾ
ತಂದೆ ಕಂದುಗೊರಳ ನಿನ್ನಲ್ಲಿ ಕಂಡು
ಸಂತೋಷದಿಂದ ಕಳುಹಿಯನ್ನ ಮಂದಿರ ಸುಖದುಃಖ
ನಿಂದೆ ನಿಜವು ಸರ್ವೇಶ್ಯಾ ಯನ್ನುವರೈಯ್ಯಾ ||3||
ತಮ್ಮ ಹೋದನು ಯಂದು ಸುಮ್ಮನೆ ತಿರುಗಿ
ಅಂಣಾ ನಿಮ್ಮ ಚರಣದಿ ಕಂಡನು ಅರ್ಥೀ ಅಹಲ್ಹಾದ
ವಮ್ಮನ ಕೊಟ್ಟೆನ್ನ ತಮ್ಮನ ಕಳುಹಿಸಿ
ನಿಮ್ಮ ಧರ್ಮವು ಮಹಾದೇವಾ ಯನ್ನುವರೈಯ್ಯಾ ||4||
ಮುಕುತಿ ಕಾಣದೆ ಹೋಗಿ ಭಕ್ತಿ ಪುರುಷರೆಲ್ಲಾ
ಸುಕೃತಾದಿ ಬಂದು ಕಂಡು ನಿರುಪಾಧಿಯಂದ
ಅಕಲಂಕ ಮಹಿಮಾ ನೀನು ಸುಖರೂಪ ಅಡವಿಸಿದ್ಧಾ
ಮುಕುತಿ ಕೊಡಿಸೂ ಯನ್ನಗೆ ಯನ್ನುವರೈಯ್ಯಾ ||5||

ಕನಸು ಕಂಡೆನು
ಕನಸು ಕಂಡೆನು ಕಾಮಿನೀ| ನಿಮಿಷದೊಳು
ಚಿನುಮಯನು ಕಂಡು ಬಯಲು ಆದಾ|| ||ಪ||
ನಾಲ್ಕು ಮನಗಳಿಂದ| ವಪ್ಪುವನು|
ಮೂಲೋಕದೊಡೆಯನಾಗೀ ತಾನೇ||
ಕಾಲ ಕರ್ಮವ ಹರಿವನು| ಯಿಂತವನ
ಕೀಲರಿದ ಯೋಗ ನಿದ್ರೆಯೊಳಗೇ|| ||1||
ಹತ್ತು ದಿನಸಿಲಿ ಕೂಗಿತು| ಅದು ತಾನು|
ಚಿತ್ರ ವಿಚಿತ್ರದಿ ತೂಗುತ್ತಾ
ಮುತ್ತು ಮಾಣಿಕ ಉಗುಳಿತು| ಪ್ರಭೆ ತಾನು|
ಮೊತ್ತ ಮೊತ್ತಾಗಡಗಿತೂ ಸುಖದಿ|| ||2||
ಬೆಳಗೂತನ ಭಯಗೊಂಡೆನು| ಎಚ್ಚತ್ತು|
ಕಳೆವರನ ಕೊಂಡಾಡಿದೆ ಯನ್ನಾ
ವುಳುಹಿ ಚಿನ್ಮಾತ್ರ ಮಾಡೀ| ನಿರುಪಾಧಿ
ಭಳಿರೆ ಭಳಿರೆ ಅಡಿವಿಸಿದ್ಧಾ|| ||3||

ಕಥೆ ಕಾವ್ಯದೊಳು ನೀನೇ
ಕಥೆ ಕಾವ್ಯದೊಳು ನೀನೇ ಪ್ರಥಮ ಮೂರುತಿಯಂದು
ನುತಿಸಬಲ್ಲವ ಪುಣ್ಯನೂ ಪತಿತ ಪಾವನ
ಚೇತನಾತ್ಮನು ಅಶಿತ ಆನಂದೈಕ್ಯ ತಾನೇ
ಕೃತಕವಲ್ಲವು ತಾನೆ ಆಧಾರಾ ಹಿತದಿ ತಿಳಿಯಬಲ್ಲ ಶಾಂತಗೆ ||ಪ||
ನವಚಕ್ರ ನವಲಿಂಗ ನವಶಕ್ತಿ ನವಭಕ್ತಿ
ನವವಿಧವನು ತಿಳಿಯೋ ಕವಲುಯಿಲ್ಲದೆ ಏಕ ಬ್ರಹ್ಮದ
ವಿವರದೊಳು ತಾ ತುಂಬಿ ತುಳಕುವ
ಭವವುಯಿಲ್ಲದ ಪೂರ್ಣ ಸುಖಮಯ ಸುವಿವೇಕಗಳಿಗೇ ಸೂಕ್ಷ್ಮದರ್ಥವು ||1||
ಜಗಮಯಾ ಶಿವನಂಬೋ ಬಗಿಯನರಿದು ಬ್ರಹ್ಮಾ
ನಗರಾದಿಚರಿಸುವಗೇ ನಗಿಯು ಕಾಣ್ವದು ನಾನಾ ಅರ್ಥವು
ನಿಗಮಗೋಚರ ಒಬ್ಬ ತಾನಿರೇ ಸುಗುಣ ತನದಲಿ ತಿಳಿದು ತನ್ನದು
ಅಗಲದಲೆಯಿರಬಲ್ಲ ವೀರಗೇ ||2||
ನಿರುಪಾಧಿ ಅಡವಿಪಾಶ್ಚಾ ತಾನೇ ತಾನೇ ಎಂದು
ವರಲಿ ವರಲಿ ವೇದವು ಚರಣ ಕಾಣದೆ ಮೌನಗೊಂಡವು
ಖರಿಯ ಖರಿಯ ಖರಿಯ ನಿಜ ನಿಜ
ವುಸುರಲೇತಕೆ ಗುಪ್ತವಸ್ತುವಾ ಕರದಿ ಕಂಡೂ ಅಣುರೂಪಾದಗೇ ||3||

ಕಾಯಯ್ಯ ಕರುಣಾ ನಿಧಿಯೇ
ಕಾಯಯ್ಯ ಕಾಯಯ್ಯ ಕರುಣಾ ನಿಧಿಯೇ ನೀನು| ಅಡವಿಶಿದ್ಧಾ|
ನೋಯಲಾರೆನು ಭಯ ಸಂಕಟ ಹರಿಸಯ್ಯ| ಅಡವಿಶಿದ್ಧಾ|| ||ಪ||
ನಿತ್ಯಾನಂದಾ ನಿನ್ನ ತೊತ್ತೆಂದು ಅನಿಸೈಯ್ಯ ಅಡವಿಶಿದ್ಧಾ| ನೀನು
ಸತ್ಯ-ಸದಾಚಾರಿ ಸಾಕ್ಷಾತ್‍ನೆನ್ನುವಾ ಅಡವಿಶಿದ್ಧಾ
ಮೃತ್ಯುಂಜಯನು ನೀನು ಮಹಾದಾದಿ ವಡಿಯನು ಅಡವಿಶಿದ್ಧಾ| ನಾನು
ಯತ್ತ ಹೋದರೆ ನಿನ್ನಾ ಚಿತ್ತದೊಳಿರಿಸೈಯ್ಯ ಅಡವಿಶಿದ್ಧಾ ||1||
ಸ್ವರ್ಗ ಕೈಲಾಸ ಕೈವಲ್ಯ ನೀನಿರುವದೂ| ಅಡವಿಶಿದ್ಧಾ
ನರ್ಮ ಮಾಡುಯನ್ನ ಸಂಶಯ ಚಿಂತೆಯಾ| ಅಡವಿಶಿದ್ಧಾ
ಆರ್ಗಳ ವಡಿದಂಥ ಅನಾದಿ ಶಂಭುವೇ ಅಡವಿಶಿದ್ಧಾ
ಭರ್ಗೋದೇವೀಶ್ವರ ರುದ್ರ ವಿಷ್ಣು ಬ್ರಹ್ಮ| ಅಡವಿಶಿದ್ಧಾ ||2||
ನಿರುಪಾಧಿ ನೀನೆಂದು ಪರಿಪರಿ ಹೊಗಳಿದೆ| ಅಡವಿಶಿದ್ಧಾ
ಗುರುಲಿಂಗ ಜಂಗಮ ಪರತರ ವಸ್ತುವೆ| ಅಡವಿಶಿದ್ಧಾ
ವರದ ಅಂಕಲಿನಾಥ ಸ್ಮರಹರ ವುರುತರ| ಅಡವಿಶಿದ್ಧಾ
ಮರೆಯನು ಹೊಕ್ಕೆನು ಬಿರದಿಗೆ ಕಾದುಕೊಂಡಿರು| ಅಡವಿಶಿದ್ಧಾ ||3||

ಕಾಡಿ ಬೇಡದ ಗುರುಗಳಿಲ್ಲಾ
ಕಾಡಿ ಬೇಡದ ಗುರುಗಳಿಲ್ಲಾ ಭಿಕ್ಷೆ ಬೇಡುವರು
ಭಕ್ತರನು ನಾಡಿನೊಳಗೆಲ್ಲಾ ||ಪ||
ವಂದೆ ಜಾಗದಿ ಕುಳಿತುಕೊಂಡು ದೇವಾ ಭಕ್ತ
ಬಂದು ಬೇಡಿದ ಭಕ್ತಿ ತೀರಿಸಲಿ ಸದ್ಗುರುವು
ಯಂದು ಕಂಡು ಕೇಳಿ ತಿಳಿದೇ ಗುರು ನಿಜವೆಂದು
ಸಂದೇಹ ಇಲ್ಲದಲೆ ಹಾಡಿ ಹರಸಿದೆ ನಿತ್ಯ
ಬಂದು ಸಾರೂ ಜೋಗಿ ಬೈರಾಗಿ ಗಣವೆಲ್ಲಾ
ಹಿಂದಿನಾ ಶರಣೀತ ಲೀಲವಾಡಲಿಕ್ಕೆ
ಬಂದ ಯನ್ನವರೂ ಐನೂರು ಗಾವುದದವರು
ಕಂದಗಳು ಮುದುಕರೂ ಕೊಂಡಾಡುವದು ನೋಡಿ
ವಂದು ಜಾಗದಿ ಮನೆ ವರುಷಾಸನಗಳಿಲ್ಲಾ
ದುಂದು ಕಾಣ್ವದು ನಿತ್ಯ ಖರ್ಚು ಕಂಡಾಬಟ್ಟಿ
ಬಂದ ಭಕ್ತರ ತಂದದೊರುಷ ದಿನ ಕಲಶಿದರೆ
ವಂದೇ ದಿನಕೆ ಸಾಲದೈಯ್ಯಾ ವಿಚಾರಿಸಲು
ಕಂದು ಗೊರಳನ ಆಟ ಅರಿಯಲಸಾಧ್ಯ ||1||
ಆನೆ ಒಂಟಿ ಕುದುರೆ ಎತ್ತು ಕಂಟಲಿ ಹಾಕಿ
ನಾನು ಸಿಂಹಾಸನ ಪತಿಯೆಂದು ಜಗದ್ಗುರುವೆಂದು
ಮಾನ ನಮ್ಮದು ಬಹಳ ಬಿರುದು ಬಟ್ಟಂಗಿಯಾ
ಶ್ಯಾನೆ ನೂರಾರು ಕಾಲ್ಮಂದಿ ಚತ್ರ ಚಾಮರ
ಯೇನು ಕೊಡುವಿರಿ ಭಕ್ತ ಜನರು ಕರ್ತು
ಪೈಣ ಪಟ್ಟಣಕೆ ಪಂಚರಾತ್ರಿ ಹಳ್ಳಿಗೆಯೇಕ ರಾತ್ರಿ
ಜಾಣರಲ್ಲದ ದಡ್ಡ ಮತಿಗಳು ಬಡಿದ್ಹೊಡಿದು
ಯೇನು ಕೊಟ್ಟರೆ ಕೊಡಲು ಮಾನ ಕೊಡುವರು
ಅವರ ಮನೆಯೊಳಗೆ ಉಣ್ಣುವರು
ಗ್ನಾನಿಯಾಗಿರುಯೆಂದು ಹೇಳಿ ಘಳಿಸಿದ ದ್ರವ್ಯ
ಖೂನವರಿತರೆ ನಿನ್ನಾ ಅಂಬುಲಿಗೆ ಸಾಲದೂ
ಮೌನಿ ನಿನ್ನಾ ಮಹತ್ತು ತಿಳಿಯದರಿದರಿದೂ ||2||
ಪೊಡಯೊಳು ವೇದ ಆಗಮ ಪುರಾಣಗಳಲ್ಲಿ
ನಡೆ ನುಡಿಯಂತೆ ವಪ್ಪುವದು ಆರೂ ಸ್ಥಲವೂ
ಯಡಬಿಡದೆ ಶ್ರವಣ ಮನನ ನಿಧಿ ಧ್ಯಾಸವನೂ
ಬಿಡದೆ ಆನಂದಾಗಿ ಸವಾಕಾರ್ಯವು ತೂಗಿ
ಯಿಡಿಕಿರಿ ಬ್ರಹ್ಮವನು ತಿಳಿದು ಸುಮ್ಮನೆ ಕುಳಿತು
ವಡಲ ಆಶಯ ಬಿಟ್ಟು ವಸ್ತು ರೂಪನು ಆಗಿ
ಕೊಡುವ ಭುಕ್ತಿ ಮುಕ್ತಿ ಸಕಲ ಸಂಪದಗಳನು
ಬೆಡಗೇನು ಅಲ್ಲ ಕೇಳಿ ಕಂಡು ತಿಳದವಗೆ
ಸಡಗರೈಶ್ವರ್ಯ ಕಾಣ್ವದು ಮಠದ ಶೃಂಗಾರಾ
ವಡಿಯ ನೀನಲ್ಲದಲೆಯಿಲ್ಲ ಮೂಲೋಕದೊಳು
ಕೊಡುವರುಗಳಿಲ್ಲ ಬೇಡುವರು ಬಹಳುಂಟು
ಅಡವಿಪಾಶ್ಚನೆ ನಿರುಪಾಧಿ ಗುರು ಘನವೆಂದು
ಯಿಡುವೆ ಮಂಡಿಗೆಯನ್ನು ಯಿಲ್ಲನಿನ್ಹೊರತು ||3||

ಕಿವಿಯು ಹೋದವು
ಕಿವಿಯು ಹೋದವು ನಿನ್ನಗೇ| ಶ್ರೀಗುರು ಶಿದ್ಧ
ಸುವಿವೇಕ ಜನ ಬಲ್ಲಾರೂ ವಿವರ ತಿಳಿಯಲು ಗಂಗೆ ಜಡಿಯಲಿ
ಸವನಿಸಿ ಹಳಿದು ಒಂದು ಚಂದ್ರನ ನಯನ ಎರಡರ ಸೀತ ಮುಚ್ಚಲು
ಭುವನದವರಾಡುವದು ಕೇಳದೇ ||ಪ||
ಯಾಗ ದಾನಗಳಿಂದಲೀ ಜಪ ನೀತಿಯು
ಯೋಗ ಪೂಜೆಗಳಿಂದಲೀ ಆಗಮ ಪುರಾಣಗಳು
ತಿಳಿದು ಸುಖಾ ಭೋಗವ ಬೇಡುವರೂ
ಯೋಗ ಹಾಗೆಂತೆಂದು ಕರ್ಮದಿ
ಸಾಗಿದವು ಬಹುದಿವಸ ಕೇಳದೆ
ತೂಗುವಿಯು ಆನಂದ ಸಂಬ್ರಮಾ
ರಾಗ ರಹಿತ ನಿಃಶಬ್ದ ಬ್ರಹ್ಮವೇ ||1||
ಆರು ಮತದ ವಳಗೆ ಹದಿನೆಂಟು ಜ್ಯೋತಿ
ನೂರೆಂದು ಕುಲವೆಲ್ಲವೂ ಸೇರಿವೆಯಲಿ ನಿನ್ನನೂ
ಹೊಗಳ್ವದು ಅವರಾ ಆರೈಕೆ ತೀರಿಸಲೂ
ಭಾರಿ ಭಾರಿಗೆ ನಿನ್ನ ನೆನಿವರು
ಭೂರಿ ಪಾಪದಿ ಆಗದಿದ್ದರೆ
ತೋರಿ ಹೇಳಲಿ ಕರೆದು ಬೈವದು
ತಾರದಲೆ ನೀ ಮನಕೆ ಸುಮ್ಮಿರೆ ||2||
ಬಾಲವುನ್ಮದ ಪಿಶ್ಯಾಚೀ ಮೂಕ್ಬದಿರಂಥಾ
ಲೀಲಾವು ಶಿವಯೋಗಿಗೇ ಹೇಳುವ ಮಾತು ನಿಜವು
ಸುಳ್ಳಲ್ಲವೋ ಕೇಳಿ ಕಂಡ ತಿಳಿದೇ
ನಾಲ್ಕುವೇದಾರು ಶ್ಯಾಸ್ತ್ರವು ಕಾಲ ಕಾಲದಿಂದ ನುಡಿವವು
ಕೀಲು ತಿಳಿದರೆ ನೀನೆ ಶಿವ ನಿನ್ನ
ಮೂಲ ಅರಿಗು ಅರಿಯದು ಮೌನಿಯೇ ||3||
ಸುಖವಿರೇ ಹೊಗಳುವರೂ ಅವರ ಕರ್ಮ
ದುಃಖವಿರೇ ಬೊಗಳುವರೂ ಅಕಲಂಕ ಮಹಿಮಾ ನೀನೂ
ಪುಣ್ಯ ಪಾಪ ನಿಕರಕ್ಕೆ ನೀರಾವರಣಾ
ವಿಕಳ ಮತಿಯಲಿ ನಿನ್ನ ಬೈದರೆ
ಸಕಲ ನಿನ್ನ ಚೇತನೆನುತಲಿ
ಪಕಪಕನೆ ನಗುವಂತ ದೇವನೆ
ಲಕಲಕ ಹತನಾದ ಮಯದಲಿ ||4||
ನಿರುಪಾಧಿಯಾದವನೆ ವಂದ್ಯನೆ ನಿಂದೆ
ಗುರುತೀಗತ್ತತ್ತ ತಾನೇ ಯಿರುವನೆಂತೆಂದು ಶೃತಿ
ಕೂಗಲೂ ನೋಡಿ ವರದೆ ನೀ ಮುಡಿಸಿದಂತೇ
ಪರಮ ಮುಕ್ತಿ ಪತಿಯೆ ನಿನ್ನಯಾ
ಬಿರದು ಸ್ತುತಿಪನ ದೂರಯಿಡುವದು
ತರವೆ ನಿನ್ನಯ ಶ್ಯಾಖ ತಿಳಿದರೆ
ಕರಸಿಕೋ ಏಕಾಂತದಲಿ ಪ್ರಭು ||5||

ಕೇಳಿರಣಾ ಲೋಲಮೂರ್ತಿ
ಕೇಳಿರಣಾ ಲೋಲಮೂರ್ತಿ ಕೀಲು ತಿಳಿಸಲಿಕ್ಕೆ ಯೀತಾ
ಕಾಲ ಕರ್ಮ ಹರಿದು ನಿಂತಿಹಾ ಕೇಳಿ ಜನಾ ||ಪ||
ನರ ಶರೀರವನ್ನು ಧರಿಸಿ ಹರಹಿ ಲೋಕದಲಿ ಪ್ರಭುವು
ಗರುಲಿಂಗ ಜಂಗಮ ನೆನಸಿದಾ ಕೇಳಿಜನಾ|
ಪರಮ ಸದಾ ಶಿವನು ಯೀತಾ ಪಾಪಕ್ಷಯವ ಮಾಡಲಿಕ್ಕೆ
ಧರೆಗೆ ಬಂದು ಲೀಲಾ ಆಡುವಾ ಕೇಳಿ ಜನಾ ||1||
ನಾದ ಬಿಂದು ಕಳಾಯೀತ ಭೇದ ಭೇದಕ್ಕೆ ಹೊರಗು
ಶೋಧಿಸಿರಿ ಶಂಭುಯೀತನು ಕೇಳಿ ಜನಾ|
ಸಾಧು ಇವನು ಸಾಕ್ಷಿರೂಪ ವೇದ ನಾಲ್ಕು ಹೊಗಳುತಿಹನು
ವಾದಿ ಮಾಡದಾಲೆ ಭಕ್ತಿಲೀ ಕೇಳಿ ಜನ ||2||
ಬೋಧ್ಯ ಬೋಧಕನು ತಾ ಆದ್ಯ ಸಾಧ್ಯ ವೇದ್ಯ ಪೂರ್ಣ
ಚೋದ್ಯವಾದ ಮಹತ್ತುಮೆ ಶಿವನೂ ಕೇಳಿ ಜನಾ|
ಶಿದ್ಧ ಶುದ್ಧ ಮಹಾಪ್ರಸಿದ್ಧ ಯಿದ್ದು ಯಿಲ್ಲದಂತಮೂರ್ತಿ
ಸಾಧ್ಯ ನೋಡಿಯಿದರು ಕಾಣ್ವದೂ ಕೇಳಿ ಜನಾ ||3||
ಮುಕುತಿಗೊಡೆಯ ಮಹಾರಾಜ ಭಕ್ತಿ ಜ್ಞಾನ ವೈರಾಗ್ಯ
ಯುಕ್ತಿಯಲ್ಲಿ ನಿಂತು ಮೆರೆವನೂ ಕೇಳಿ ಜನಾ|
ಸುಖದ ರೂಪು ಶೂನ್ಯ ಕಾಯಾ ನಿಖಿಳವೆಲ್ಲ ತನ್ನ ಬೆಳಗು
ಪ್ರಕಟವಾಗದಲೆ ಅಡಗಿಹಾ ಕೇಳಿ ಜನಾ ||4||
ತಾನೆ ತಾನೆ ನಿಂತು ನಿಜದ ಖೂನದಲಿ ಮುಳುಗುತಲಿ
ಯೇನೂ ತಿಳಿಯಗೊಡದೆ ಮೆರೆವನು ಕೇಳಿ ಜನಾ|
ಸ್ವಾನು ಭಾವ ಶ್ರೇಷ್ಠ ಈತ ಮೌನಿ ಮಹಾದಾದಿ ವಡಿಯ
ಧ್ಯಾನ ಮಾಡಿ ತ್ರಿಕಾಲದೀ ಕೇಳಿ ಜನಾ ||5||
ಆಧಾರಾದಿ ಪಶ್ಚಮಂತ್ಯ ಶೋಧ ಮಾಡಿ ತಾನು ಮಹಾ
ವಿನೋದದಲ್ಲಿ ತಿರುಗುತಿಹನೂ ಕೇಳಿ ಜನಾ|
ಪಾದ ಮರಿಯದಲೆ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ
ಸಾಧಿಸಿರಿ ಸರ್ವಯೀತನು ಕೇಳಿ ಜನಾ| ||6||
ಕಾಲಜ್ಞಾನ ಪುರುಷನೀತ ಕಾಲ ಕಾಲದಲ್ಲಿ ಇರುವ
ಮೂಲವರಿತು ಮುಕ್ತಿ ಪಡೆಯಿರೀ ಕೇಳಿ ಜನಾ|
ಜ್ಯಾಲ ಮಾಯವಗದು ಭಕ್ತಿ ಕೀಲು ಅಡಗಿಸಿಹ್ಯಾ ಅರಿದು
ಆಲಯದಿ ಧ್ಯಾನ ಮಾಡಿ ಕೇಳಿ ಜನಾ ||7||
ಬ್ರಹ್ಮ ವಿಷ್ಣು ರುದ್ರ ಈಶ್ವರುಂ ಯೆಂಬೊ ಸದಾಶಿವನು
ಬೊಮ್ಮ ಪಂಚಾಕ್ಷರೀತನೂ ಕೇಳಿ ಜನಾ|
ನಿಮ್ಮವಳಗೆ ನಮ್ಮವಳಗೆ ನೆಮ್ಮಿಕೊಂಡು ಯಿರುವನೀತ
ಹಮ್ಮು ಬಿಟ್ಟರೊಲಿಯುತಿಹನೂ ಕೇಳಿ ಜನಾ ||8||
ಅಂಕಲಗಿ ಮಠದ ವಾಸ ಶಂಕರನು ಅಡವಿಸಿದ್ಧಾ
ಲೆಂಕರಾದವರಿಗೊಲಿವನು ಕೇಳಿ ಜನಾ|
ಮೊಂಕು ನಾನು ತೊದಲ ನುಡಿ ಸೊಂಕು ನಿರುಪಾಧಿಯಂದು
ಕಿಂಕರಾದಿ ಹಾಡಿ ಹರಿಸಿರೀ ಕೇಳಿ ಜನಾ ||9||

ಕೇಳಿ ಕಂಡು ತಿಳಿದು ನುಡಿದೆ
ಕೇಳಿ ಕಂಡು ತಿಳಿದು ನುಡಿದೆ ಹರುಷದಿಂದಲೀ
ಬಾಳ ಲೋಚನನಹುದು ನಿಶ್ಚಯವು ನಿಜವೂ ||ಪ||
ವೇದ ಆಗಮ ಪುರಾಣಗಳ ನಡೆ ನುಡಿಯಂತೆ
ಸಾಧು ಶಿವನೆಂದೆ ಸಾಕ್ಷಾತನಹುದೆಂದೆ
ವಾದಿ ಮಾಡಲಿಕಿಲ್ಲಾ ವಸ್ತು ರೂಪನು ಪೂರ್ಣ
ವಾದ ಆರೂಢ ಆರೂಕ್ಷೈಕ್ಯನೆಂದೇ ||1||
ಗುರುಲಿಂಗ ಜಂಗಮನು ಹರಹರಿ ಬ್ರಹ್ಮನು
ವುರುತರಕೆ ವುರುತರನು ವುತ್ತಮೋತ್ತಮನೆಂದೇ
ಪರಕೆ ಪರತರನೀತ ನರಕಾಯಧರನೆಂದೆ
ಶರಿರಿರುವ ಪರಿಯ ನಿನ್ನಾ ಸ್ಮರಣೆಯಿರಿಸೆಂದೇ ||2||
ಬಹಳ ಆನಂದಾಗಿ ಬಹು ನಾಮದವನೆಂದೇ
ವಿಹಿತ ಬಸವಾದಿ ಪ್ರಮಥರ ಸೂತ್ರನೆಂದೇ
ದಹಿಶಿದವ ಆರು ಗುಣ ಅಷ್ಟಮದಗಳನೆಂದೇ
ವಹಿಸಿಹುದು ಗುರು ಲೀಲಾ ಪೂರ್ಣಕಳೆಯೆಂದೇ ||3||
ಗೂಢಾರ್ಥ ಗುಪ್ತನು ಗಾಡಿಕಾರನುಯೆಂದೇ
ಕಾಡಶಿದ್ಧನೆ ಶಂಭು ಶರಣನಹುದೆಂದೂ
ನಾಡಿನೊಳಗೆ ತುಂಬಿಕೊಂಡಿಹ ಪ್ರಭುವು ನೀನೆಂದೆ
ನೀಡು ಭಕ್ತಿಯ ಕೀಲು ನಿನ್ನವನೂಯೆಂದೇ ||4||
ನಾಲಿಗೆಯು ವಂದೆ ನಗೆಯೆಷ್ಟು ಹೊಗಳಿದರು ಅಲ್ಪೇ
ಶೂಲಿಯ ಶೃತಿಯಂತೆ ಸಹಜವನು ಕಂಡೇ
ಆಲೋಚನಿಯ ಹರಿಸು ಅತಿತ ಅಡವಿ ಪಾಶ್ಚ
ಲೋಲ ವಿರಾಟೂರ್ತಿ ನೀನೆ ನಿರುಪಾಧಿ ||5||

ಕೇಳು ಯನ್ನ ಬಿನ್ನಪವನೆ
ಕೇಳು ಯನ್ನ ಬಿನ್ನಪವನೆ ಅಳಿದಾನೆ ಅಡವಿ ಪಾಶ್ಚಾ
ಬಹಳ ಬಲ್ಲವನು ಅಲ್ಲಾ ಚರಣ ಧೂಳಿಯು ||ಪ||
ನೀನೆ ಬಲ್ಲೆ ನಿನ್ನ ಶ್ಯಾಖಾ ಯೇನು ಹೇಳಲೈಯ್ಯಾ ನಾನು
ಖೂನದೊಳಗೆ ಯಿಡುವ ಭಾರ ನಿನ್ನದೆಂದೆನೊ
ಸ್ವಾನುಭಾವ ಶ್ರೇಷ್ಠ ನೀನೇ ಕಾನನದೊಳು ಮಠವ ಮಾಡಿ
ದೇನುವಾಗಿ ಭಕ್ತಭಿಷ್ಠ ನಡೆಸುವಧಿಕಾರೀ ||1||
ಕರ್ತು ನೀನೆಯಂದು ಮನದಿ ಬೃತ್ಯ ಭಾವದಿಂದ ಹಾಡೋ
ಅರ್ಥಿಯಿಡು ಎನ್ನುವಂಥ ಬಯಕೆ ಯನ್ನದೂ|
ತುರ್ತಿನಿಂದ ಕರುಣವಾಗೋ ವಾರ್ತಿ ಕೊಡು ದೇಶ ಚರಿಸಿ
ನಿರ್ತದಿಂದ ನಿನ್ನ ನಿಜದ ವಳಗೆ ಯಿರಿಸೈಯ್ಯಾ ||2||
ಎತ್ತ ಹೋದರೆಯು ನಿನ್ನ ಚಿತ್ತದೊಳಗೆ ನೆನೆವಾ ಮನವ
ಯಿತ್ತು ರಕ್ಷಿಸಯ್ಯಾ ಯಂಬೊ ಹರಕೆ ಯನ್ನದೂ|
ಸತ್ಯ ಸದಾಚಾರಿ ನೀನೂ ಅತ್ಯಧಿಕ ಮಹತ್ತು ಮೆರೆವೆ
ಉತ್ತಮರ ಸಂಗವಿರಿಸೂ ಘಟವು ಇಹಪರೀ ||3||
ನಾನು ನೀನು ಎಂಬೊ ಭಾವ ಖೂನಬಲ್ಲ ಭಕ್ತಗರಿಕೀ
ಹೀನ ನರರೇ ಬಲ್ಲರೇನು ನಿಮ್ಮ ಮಹಿಮೆಯ
ಮೌನಿ ಮಹದಾದಿ ವಡಿಯಾ ಭಾನು ಕೋಟಿ ಪ್ರಭೆಯು ನೀನೇ
ಮಾನ ಅಭಿಮಾನ ನಿನ್ನದಾಗಿ ರಕ್ಷಿಸು ||4||
ಅಡಿವಿಪಾಶ್ಚಾ ಅಂಕಲಗಿಯೊಳ್ ಸಡಗರಾನಂದಾ ನಿರುಪಾಧಿ|
ಅಡಿಯ ಬಿಡದೆ ಭಜಿಸುವಂಥಾ ಮನವಯಿರಿಸೈಯ್ಯಾ|
ದೃಢದಿ ಕಾಲ ಕಾಲದಲ್ಲಿ ವಡಿಯನೆಂದು ಸ್ತುತಿಪ ಹಾಗೆ
ಕೊಡು ನಿರೂಪ ಸಕಲ ಭಾರ ನಿನ್ನದೆಂದೆನೋ ||5||

ಕೊಹಿ ನಹಿ
ಕೊಹಿ ನಹಿ ತುಮೆ ಏಕ ಮಹಸಿದ್ಧ ರಾಜ್ಯ ಜೀ
ಕಾಹ ದೇಖೇತೊಜಾಹೈ ಪರಬೂಜಿ
ಸೋಹಂ ಸೋಹಂ ನಾದ ಬ್ರಹ್ಮ ತೂಹೀ
ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||1||
ಜಂಗ್ಮ ಧೆಡಮೊ ಸಂಗ ತುಮಾರಾ
ಸಂಗರಾಗ ನಹಿ ಪೂರ್ಣಾ
ಸಂಗ ಅಡವಿ ಪಾಶ್ವಪೀರಾ ಸಿದ್ಧರಾಜಾ ಜೀ ||2||
ನಿರೂಪಾಧಿಕಾ ಗುರು ಮಝರಿಕೊ
ಕರಾರು ಹುಯೆ ಬಾದತುಮೆ
ಪರ ಅಡವಿ ಪಾಶ್ವಪೀರಾ ಸಿದ್ಧರಾಜಾಜಿ ||3||

ಕೋಲು ಕೋಲಿನ ಕೋಲು
ಕೋಲು ಕೋಲಿನ ಕೋಲು| ಕೋಲು ಕೋಲಿನ ಕೋಲು
ಶಿದ್ಧೇಶನ ಬಲಗೊಂಬೆ ಕೋಲು ||ಪ||
ಮಹದಾದಿ ವಡಿಯನು ಸಹಜಾನಂದದಿಂದಾ
ಮಹಿಯೊಳು ಬಂದ ಲೀಲವ ಕೇಳಿ || ಕೋಲು||
ದಹಿಸುವ ಸಕಲ ದೋಷ ಭಕ್ತ ಜನಂಗಳ
ವಹಿಸಿ ಸಂತೋಷವ ಕೊಡವನು ಕೋಲು ||1||
ಮುಕ್ತನಾಗುವೆನೆಂದು ಭಕ್ತಿಯಿಂದಲಿ ಬಂದು ತಾ
ಮುಕ್ತನಾದರೆ ಕೊಡುವಾತ ಕೋಲು
ಶಕ್ತನಾದರೆ ತನ್ನ ತಕ್ತನೇರುವಂಥಾ
ಫೊಕ್ತ ಮಾರ್ಗವ ತೋರಿಸುವನೀತಾ ||ಕೋಲು|| ||2||
ಕಂದ ಬಾರೆಂದು ಆನಂದದಿಂದಲಿ ತನ್ನ
ಮುಂದೆ ಕರೆದು ಸ್ಥಲವ ತೋರುವಾ ||ಕೋಲು||
ಸಂದೇಹ ಬ್ಯಾಡನೀ ಸಾಕ್ಷಿ ಬ್ರಂಹ್ಮನೆಂಬ
ಹೊಂದಿಕೆಯ ತಿಳಿಸುವ ಗುರು ||ಕೋಲು|| ||3||
ಆಧಾರದೊಳಗೀಹಾ ಭೇದ ನಾಲ್ಕಕ್ಷರ
ಶೋಧಿಸಿ ತಿಳಿಸುವ ಗುರುರಾಯ ||ಕೋಲು||
ಸ್ವಾಧಿಷ್ಠನೊಳು ಇರುವ ಭೇದಕ್ಷರ
ವಿನೋದದಿಂದಲಿ ತೋರ್ವ ಗುರುರಾಯಾ ||ಕೋಲು|| ||4||
ಪಣಿಪೂರಕದೊಳಿಹ ಅನುವು ಹತ್ತಕ್ಷರಾ
ವಿನಯಾದಿಂದಲಿ ತೋರ್ವ ಗುರುರಾಯಾ ||ಕೋಲು||
ಅನಹತದಲ್ಲಿ ಹನ್ನೆರಡು ಅಕ್ಷರಾ
ಸಂತೋಷದಿದೋರಿದ ಗುರುರಾಯಾ ||ಕೋಲು|| ||5||
ವಿಶುದ್ಧಿ ಸ್ಥಲದಲ್ಲಿ ಹದಿನಾರು ಅಕ್ಷರಾ
ಸೋಸಿ ತೋರಿದಾ ತಾನು ಗುರುರಾಯಾ ||ಕೋಲು||
ಈಶ ಇರು ಆಗ್ನೇಯ ಎರಡಾಕ್ಷರದ ನೆಲೆ
ಬ್ಯಾಸರಿಲ್ಲದೆ ತೋರ್ವ ಗುರುರಾಯಾ ||ಕೋಲು|| ||6||
ಸಾಸಿರದಳ ಪೀಠ ಬ್ರಹ್ಮ ಸ್ಥಾನವು ಯಂದು
ಆಶರಹಿತನಾದ ಗುರುರಾಯಾ ||ಕೋಲು||
ಕೂಶೆ ನೀನರಿ ಶಿಖಾದಲಿ ಮೂರಕ್ಷರಾ
ಪಾಶ ರಹಿತನೆಂದು ಗುರುರಾಯಾ ||ಕೋಲು|| ||7||
ಪಶ್ಚಿಮದೊಳು ಒಂದೇ ಅಕ್ಷರ ಇರುವಂತಾ
ಸ್ವಚ್ಛವ ತಿಳಿಸಿದ ಗುರುರಾಯಾ ||ಕೋಲು||
ಮುಚ್ಚು ಮರೆಯೊಳು ತನ್ನಂಗದಿ ಒಂಬತ್ತು
ನಿಚ್ಚಳ ಸ್ಥಳ ತೋರ್ವ ಗುರುರಾಯಾ ||ಕೋಲು|| ||8||
ನವ ಚಕ್ರದೊಳು ನವಲಿಂಗವ ಹೇಳಿದಾ
ಮೂರುತಿ ಗುರುರಾಯಾ ||ಕೋಲು||
ವಿವರಿಸಿ ತನ್ನ ಶರೀರದೊಳಿಹವೆಂದು
ಸುವಿವೇಕ ತೋರ್ವಂತ ಗುರುರಾಯಾ ||ಕೋಲು|| ||9||
ಪಂಚ ತತ್ವದ ಮಿಶ್ರ ಹಂಚಿಗಿಯಿದುಯಂದು
ಸಂಚೀತ ಕಳಿದಾತ ಗುರುರಾಯಾ ||ಕೋಲು||
ಗೊಂಚಲನೇಕ ಒಂದೆ ವೃಕ್ಷದೊಳಗೆಂದು
ಮಿಂಚಿನ ಪ್ರಭೆ ತೋರ್ವ ಗುರುರಾಯಾ ||ಕೋಲು|| ||10||
ಸುಖದ ಯಿಚ್ಛೆಯೊಳಿರೆ ಸುಖರೂಪದ ದೊರಕುವಾ
ನಿಖಳ ಎಲ್ಲವು ಆದ ಗುರುರಾಯಾ ||ಕೋಲು||
ಆಕಳಂಕ ಆತ್ಮ ವಿಚಾರದಿ ನಡೆದರೆ
ರಕಮು ತೀರಿಸುವಂಥಾ ಗುರುರಾಯಾ ||ಕೋಲು|| ||11||
ನಿಸ್ಸಂಗದೊಳಗಾಡಿ ನೀತಿದೋರುವದೆಂದು
ಪುಸಿ ಪ್ರಪಂಚೆಂದನು ಗುರುರಾಯಾ ||ಕೋಲು||
ದುಸ್ಸಂಗ ಹರಿವಾ ವಾಸನಗಳು ಕ್ಷಯವಾಗೆ
ಸುಸೀಲನಾದಂಥ ಗುರುರಾಯಾ ||ಕೋಲು|| ||12||
ಸ್ವಾನುಭಾವದಿಂದ ಆನಂದವಾಗಲು
ಮೌನೀತನೆನಿಸುವಾ ಗುರುರಾಯಾ ||ಕೋಲು||
ಏನು ಹೇಳಲಿ ತೂರ್ಯದೊಳಗೆ ನಿರ್ಭಯವೆಂದಾ
ಮೌನ ಮೂರುತಿಯಾದ ಗುರುರಾಯಾ ||ಕೋಲು|| ||13||
ತೂರ್ಯಾತೀತದಲ್ಲಿ ಸುಷುಪ್ತಿ ಸುಖಪರಿ
ಕಾರ್ಯಕಾರಣ ಮೀರ್ದ ಗುರುರಾಯಾ ||ಕೋಲು||
ಪ್ರೇರ್ಯ್ಯ ಪ್ರೇರಕತ್ವ
ಎರಡಕ್ಕೆ ನಿಲ್ಕದಾ ಗುರುರಾಯಾ ||ಕೋಲು|| ||14||
ಈ ಪರಿ ಸಪ್ತ ಭೂಮಿಕೆಗಳ ತೋರುವಾ
ಭೂಪ ಅಡವೀಶನೇ ಗುರುರಾಯಾ ||ಕೋಲು||
ಕಾಪಟ್ಯ ಕಳದು ನಿರುಪಾಧಿಯೆನಿಸುವಾ
ಇಹ ಪರದೊಳು ಬ್ರಹ್ಮನಾಗುವ ಗುರುರಾಯಾ ||ಕೋಲು|| ||15||

ಕೋಪ ಸಲ್ಲದು ಸಾಧು ಸಂಗದೊಳು
ಕೋಪ ಮಾಡಿದರೆ ನಾನೇನಂಬೆ| ನಿನ್ನೊಳು ತಿಳಿಯಂಬೆ||
ಕೋಪ ಸಲ್ಲದು ಸಾಧು ಸಂಗದೊಳು|
ಅಪರ ಮೋಕ್ಷವ ಕೂಡಿದ ಪುರಷಗೆ ||ಪ||
ತಾನೇ ತನ್ನೊಳು ತನ್ನನು ತಿಳಿದು|
ಹಂಕಾರ ಅಳಿದು ಹೀನ ದುರ್ಗುಣವೆಲ್ಲ ಬಳಿದೂ|
ಮಾನ ನಿಧಿಯೆ ನಿಜ ಧ್ಯಾನದೊಳಿರುತಿಯ|
ಸ್ವಾನುಭವಿಯ ಖೂನಕೆ ತರದಲೆ ||1||
ತನುವಿನ ಗುಣಗಳೆಲ್ಲಾ ನೀಗಿ|
ಆನಂದದಲ್ಲಿ ತೂಗಿ ಘನ ಪರಬ್ರಹ್ಮದಲ್ಲಿ ಭೋಗಿ|
ನಿನಗೆ ನನಗೆ ಎಂಬೊ ಭೇದ ವಿಲ್ಲದ|
ಚಿನುಮಯ ಮೂರುತಿ ಅನುವಿನೊಳಾಡ್ವಗೇ ||2||
ನಿರುಪಾಧಿ ಎಂದು ಗುರುವಿನ ತಿಳಿದು| ಸಂಶಯವನು ಅಳಿದು
ಹರುಷದಿ ಪುಣ್ಯ ಪಾಪವ ಕಳಿದು
ಅರವು ಮರವು ವುಭಯದ ಸಂಕಟಗಳ
ಹರಿದು ತೂರ್ಯಾತೀತದ ಸುಖಯಿರುವಗೆ ||3||

ಗುರು ಶಿದ್ಧಲಿಂಗಾ
ಗುರು ಶಿದ್ಧಲಿಂಗಾ| ನಿಂದೇ| ಪ್ರಾಣಿಗಳರಿಯರೈಯ್ಯ
ಮಹಾ ಪುರುಷರ ನಡೆ ನುಡಿ ನಿಂದೇ ಪ್ರಾಣಿಗಳರಿಯರೈಯ್ಯ
ನಿಂದೆ ಪ್ರಾಣಿಗಳು ಬಲ್ಲರೆಯಾಗಿಯಾ
ಕಂದುಗೊರಳ ಶಿವ ಅಡವೀಶನ ನಿಜಾ ||ಪ||
ನಾಯಿ ಬಲ್ಲದೇ ನಾನಾ ರುಚಿಯಾ
ಅದರಂತೇ ಮೂರ್ಖಗೆ ನ್ಯಾಯವೆ
ನರ ಹಿರಿ ಕಿರಿದೆಂಬೋ ಸೋವೆ ಅರಿಯದೆ ಬೊಗಳುವ
ಮಾಯಾ ಪಾಶದೊಳಗೆ ಬಿದ್ದುರುಳಿ ಮುಳಿಗ್ಯಾಡುವಾ ||1|
ಗುರುಲಿಂಗ ಜಂಗಮವೇನು ಭಲ್ಲಾ ತಿಳಿಯದ
ಗುಣ ಹೀನರಿಗೇನು ನರಕ ಸ್ವರ್ಗದ ಹಾದಿ
ಪರ ತರದೊಲು ಮನ ಯರಕವಾಗದೆ
ಗರಿವಿನಿಂದ ಶರಣರ ಜರಿವಂತಾ ||2||
ನಿರುಪಾಧಿ ಅಡವಿಸಿದ್ಧನ ಗುರುತೂ| ಮೈ ಮರತು
ಭವ ಭವ ತಿರುಗುವ ಜನ್ಮ ಅನಂತಗಳ
ಗುರು ಕರುಣದಿ ತಾ ತಿರುಗಿ ಭಾರದಾ
ಅರವು ತಿಳಿದು ಆನಂದವಾಗದಾ ||3||

ಗುರು ನಾಮ
ಗುರು ನಾಮ ಏಕ ಮೂಲ ಸಂತಕೊ
ಸಬ್ ತಾಡೇಕಾ ಬಾಲಾ ||ಪ||
ನಿತ್ಯ ನಿರಂಜಾನಂದ ತಃಕ್ತಮೊಬೈಟಿ
ಸತ್ಯ ಚಿತ್ತಾನಂದ ಭರಗೌಯೆಬಾದ ||1||
ಗಗನ ಮಹಲಮೋ ಜೋತಿಲಗಾಕರ
ಜಗ ಸರ್ವಮೋ ಆಪು ಹೆ ಬಾದ ||2||
ಅಡವಿ ಸಿದ್ದಜೀ ಚರಣ ಮಿಮತ್ಯಾ
ಖಡೆಗುರು ನಿರುಪಾದಿ ಬ್ರಹ್ಮ ||3||

ಗುರುವಿನ ವಚನವ
ಗುರುವಿನ ವಚನವ ಸರಿ ನೋಡು ಮಗುವೇ ||ಪ||
ಭವಗೆಡಿಸುವ ಸುವಿವೇಕ ಕಲಿಸುವಾ
ವಿವರಿಸಿದರೆ ನಿಜ ಮುಕ್ತಿ ತೋರಿಸುವಾ ||1||
ದುರ್ಗುಣ ಕಳಿವನ ನಿರ್ಗುಣತಿಳುಹಿ
ಭಾರ್ಗೋ ದೇವ ವೈರ ವರ್ಗವ ಕಳೆವಾ ||2||
ನಿರುಪಾಧಿಯೊಳು ಮನ ಯರಕವಾಗುತಲಿ
ತಿರುಗಿಬಾರದ ಗುರು ರೂಪಾ ಅಡವೀಶ್ಯಾ ||3||

ಚಿತ್ತ ಸ್ವರೂಪನೆ
ಚಿತ್ತ ನಿಲುಕಡಿ ಮಾಡೊ ಚಿತ್ತ ಸ್ವರೂಪನೆ
ಹೆತ್ತ ತಾಯಿ ತಂದೆ ಬಂಧು ಬಳಗ ನೀನೇ|| ||ಪ||
ವಳಗದೋ ಹೊರಗದೋ ಹಿಂದು ಮುಂದೆಡಬಲವೋ
ತಿಳಿಯದೈ ನಿನ್ನಾಟ ತಿರುಗುತಿಹುದೋ
ಕಳವಳಿಸುವದು ಮತ್ತೆ ಮರಳಿ ಧೈರ್ಯವ ಮಾಡಿ
ಸುಳಿ ನೀರಿನಂತೆ ಮರಳಿ ಜಾಗ್ರದಿ ಹೊರಳುತಿಹುದೊ|| ||1||
ನೀನಾರೋ ಅದು ನೀನೋ ಯರಡು ತಿಳಿಯದು ಯನಗೇ|
ಮಾನಿತರ ವಾಕ್ಯ ಮಹದಾದಿ ಮನವೆಂದೂ
ಕೂನ ವರಿತರೆ ಸರ್ವ ನಿನ್ನ ಚೇತನವಂತೆ
ಯೇನು ಹೇಳಲಿ ಅಹುದೊ ಅಲ್ಲವೆಂಬಂತಾ|| ||2||
ನಿರುಪಾಧಿ ನೀನಂತೆ ಸಕಲ ಜಾಗ್ರದಿ ಚರಿಪಾ
ಗುರುತು ತಿಳಿದರೆ ಅಡವಿಸಿದ್ಧ ನಿಜವಂತೇ
ವರಲಿ ಓಡಾಡುವದು ಅರಿದು ಸುದ್ದಾಗುವದು
ಗುರುಲಿಂಗ ಜಂಗಮಾ ತಾನೆಯಾದಂತಾ|| ||3||

ಚಿನ್ಮಯ ಮೂರುತಿ
ಚಿಂತಿಸಲೇತಕೆ ಚಿನ್ಮಯ ಮೂರುತಿ
ಹಂತೆಲಿ ಇರುತಿರೆ ಕಲ್ಪನೆ ಮಾಡುವ
ಭ್ರಾಂತಿಯ ಕಳದನು ಅಡವೀಶನೀ ನಿಶ್ಚಿಂತ ಪದವ ನೋಡಿ ||ಪ||
ಬೇಡಿದ ಪದವಿಯ ನಡೆಸುವನಿರುತಿರೆ
ಆಡಲಿಯೇಂ ಯಾತಕೆ ಹಾಗ್ಹೀಗೆನ್ನತಾ
ನೋಡಿದೆ ಮುಕ್ತಿಯ ಕೂಡಿದೆ ವಸ್ತುವ ಕಾಡಶಿದ್ಧನಲ್ಲೀ ||1||
ದೇಶದ ಜನಗಳ ಆಸೆಯ ಸಲಿಸುವ
ಈಶನ ಇದಿರಲಿ ಕಾಣಿತ ಸಂಶಯ
ಪಾಶವು ಹರಿದವು ದೋಷವು ಹುರಿದಾವು
ಸೋಸಿ ನೋಡಿದೆ ನನ್ನೊಳಗೆ ||2||
ಸೇವಕನಾಗುತಾ ಕಾವವ ನೀನಿಹೆ
ನಾವರಲಿದರೇನಹುದು ಶಂಕರಾ
ಕೇವಲ ಕತ್ರ್ರುವು ಕಲ್ಪವೃಕ್ಷವಿರೆ
ನೋವು ಸಂಕಟಳಿದೇ ||3||
ಹಿಡಿದೆನು ಸ್ತುತಿಯನು ಬಿಡೆ ಘಟವಿಹರಪರಿ
ಇಡು ಕರುಣವು ನಿನ್ನಂಶದ ಅಣುಗಾ
ಸಡಗರರ್ಥಿಯು ಗುಡಿಗಟ್ಟಿತು
ನಿನ್ನಡಿಯ ಸ್ಮರಣೆಯೊಳಗೆ ||4||
ನಿರುಪಾಧಿಯು ನಿಜ ಗುರುತಿನ ಬೈಲೊಳು
ಪರ ಬ್ರಹ್ಮಾನಂದದಿ ಹೊಯಿದಾಡುತಾ
ವುರುತರ ಸಿದ್ಧನ ಮರೆ ಹೊಕ್ಕೆನು ನಾ
ಬಿರದು ನಿನ್ನದೆಂದೂ ||5||

ಜಾತ್ರಿ ನೋಡುವನು ಬನ್ನಿ
ಜಾತ್ರಿ ನೋಡುವನು ಬನ್ನಿ ನಿತ್ಯ ನಿತ್ಯ ಜಾತ್ರಿ ನೋಡುವನು ಬನ್ನಿ|
ಜಾತ್ರಿ ನೋಡುವನು ಬನ್ನಿ ಧಾತ್ರಿಯೊಳಧಿಕಾದ ಕರ್ತೃ ಅಂಕಲಗಿಯಾ
ಅಡವಿ ಪಾಶ್ಚಾಯೋಗಿ ||ಪ||
ದಿಕ್ಕು ಎಂಟರಿಂದ ಹೊರಟು ಬರುವ ಜನಾ|
ಲೆಖ್ಖ ಮಾಡುವರಿಗೆ ತೀರದು ಶಿದ್ಧಾಟ|
ಅಕ್ಕರದಿಂದಲಿ ಮೇಣೆ ಪಾಲಕಿ ಬಂಡಿಯೂ|
ಚಕ್ಕಡಿ ಕುದುರೆ ಎತ್ತು ಕತ್ತೆ ಕೋಣಗಳು|
ಕುಕ್ಕ ಕುರಿಕೋಳಿ ಗಿಳಿ ಜಕ್ಕವಕ್ಕಿ ಕೌಜುಗಾ|
ಅಕ್ಕರತಿಯಿಂದ ಸಕಿ ಹಿಡಿದು ಬರುವಂತ|
ಮೂಕರಾಪಾಟ ಜಂಗಮ ಜೋಗಿ ಭೈರಾಗಿ|
ಲಕ್ಕಿನಲಿ ಸಾಧು ಫಕೀರ ಹುಚ್ಚಾ ಶಾಣ್ಯಾ|
ಮಕ್ಕಳಾ ಫಲ ಮೊದಲು ಸರ್ವ ಭೋಗವ ಬೇಡ್ವ|
ಅಕ್ಕವ್ವಗಳು ಬಂದು ಬಯಕೆ ತೀರಿಸುವಂತಾ|
ಮುಕ್ಕಂಣ ಹರಸಿದ್ದ ಮಹಾತ್ಮಕ್ಕೆ ವಡಿಯನೂ|
ಅಕ್ಕಿ ಗೋಧಿಯು ಬೇಳೆ ಅಲ್ಲ ಜೀರಿಗೆ ಮೆಂತೆ|
ಮೆಕ್ಕೆ ಜೋಳವು ರಾಗಿ ನವಣಿ ಶ್ಯಾವಿಯು ಚಣಗಿ|
ಚೊಕ್ಕಟಾ ತೊಗರಿ ಕಡಲಿ ವುದ್ದು ಅಲಸಂದಿ|
ಸಕ್ಕರೆ ಬೆಲ್ಲ ಹೆಸರೂ ಸಜ್ಜಿ ಮಡಿಕೆಯೂ
ರೊಕ್ಕ ಮೊದಲು ಹುರುಳಿ ರೂಪಾಯಾವರ ಹೊನ್ನು|
ಇಕ್ಕಬೇಕು ಮುಂದೆ ಬಾಳೆ ತೆಂಗು ಹಲಸೂ|
ಮುಕ್ಕರಿಸುವಾ ಅಷ್ಠಗಂಧ ಊದಿನ ಕಡ್ಡಿ|
ಯಿಕ್ಕಿ ಕಾರಿಯ ಕಾಯಲಿ ಅಡಕಿ ನಸಿಪುಡಿ ಸಹಾ|
ಚೋಕ್ಕ ಸಿದ್ದೇಶನಮ್ಹರಕಿ ನಡೆಸೆನುತಲಿ|
ಚಿಕ್ಕವರು ಮುದಕರು ನಡು ಜನವೂ ಎಲ್ಲಾ ||1||
ಯಂಟು ದಿನಕೊಮ್ಮೆ ಸೋಮವಾರ ಪಾಲಕಿ ಸೇವೆ|
ಕಂಟಣಿ ಗೋಣಿ ಹಸಬಿ ಕಂಬಳಿ ಕಲೂತಿ|
ಸೊಂಟ ಹೆಗಲ ಮೇಲೆ ಹೊತ್ತು ಬರುವಾ ಜನಾ|
ಕುಂಟೆತ್ತು ಕುರುಡೆತ್ತು ಚಿಂಚ ಹಂಡಾ ಗುದಗ|
ಒಂಟೆತ್ತು ಮಾಸ ಬೂದ ಚಿಲ್ಲಗಿವಿಯತ್ತು|
ಸೊಂಟ ಎಳೆವಾಯತ್ತು ಮಲಗಿ ಏಳುವ ಎತ್ತು|
ಸೊಂಟ ಕೋಡು ಮುರಕ ಕಿವಿ ಹರಕ ಮೊಂಡ ಬಾಲ|
ಸುಂಟರಗಾಳಿಯಂತೆ ಓಡಿಯಾಡುವ ಎತ್ತು|
ವುಂಟು ಆಕಳ ಕರಾ ಕೋಣ ಎಮ್ಮಿ ಹೆಳಗಾ|
ಕಂಟಕಾಕಳಿ ಅಡವಿ ಪಾಶ್ಚಾ ಸಿದ್ದೇಶ್ಯಾ|
ವುಂಟು ಮಾಡಯ್ಯ ಫಾಲಾಕ್ಷ ಪರಮ ಶಿವಯೆಂದ್ಹೊಂಟಿತು ಪರುಷಿ|
ಕಾಳಿಕೊಂಬೂ ಕರಡಿಯಾ ಟೆಂಟೆಣೌ ಹೊಡೆವುತಾಡೊಳು|
ಸಮಾಳ ತಪ್ಪಡಿಗುಂಟ ಕುರುಡಾ ಹೇಳುವಾ ರೋಗಿ ಸ್ವಶ್ಚಾಕಿಲ್ಲ|
ಗಂಟೆ ಜಂಗೂ ಧೂಳ್ತ ವಿಭೂತಿ ಕೊಡಗಡಿಗಿ|
ಟೆಂಕಲು ಬಡಗಲು ಪಡುವಲು ಮೂಡಲು|
ಹೊಂಟು ಸೊಪ್ಪೆ ಬಿದರು ತೊಲಿ ಕಲ್ಲು ಮೊದಲಾಗಿ|
ನೆಲ್ಲವರಳಿಯರು ಮಾವ ಅತ್ತೆ ಮಕ್ಕಳು ನಾರಿ|
ವುಂಟ ವರವಿಲ್ಲಿ ಹರಹರಾ ಹರನು ನಿಜ ನಿಜವೂ|
ಮಂಟಪದ ಶೃಂಗಾರ ಮಹಾದಾದಿ ಕೈವಲ್ಯ|
ತೊಂಟರು ಪ್ರಾಜ್ಞರು ನಡುತರದ ಪ್ರಾಜ್ಞರೂ ||2||
ಬಂದ ತಡಾಕಿಲೆ ಕಜ್ಜ ಅಂಬಲಿ ಖಾರಾ|
ಆನಂದದಿಂದಲೇ ಸಲಿಸು ವಿಸ್ತಾರ ಬಲ್ಲೋಹುಜು|
ದುಂದು ಕೊಡಗಡಿಗಿ ಬಿಂದಿಗಿ ಸ್ವಾರಿ ಮಗಿ|
ಮನಿಯಿಂದ ತಂಬಿಕೆ ದೊನ್ನೆ ಹಂದು ಹರಿವಾಣದಲೀ|
ಚಂದ ಕಡಿಯುವರು ಋಪ್ತಿ ಕೈಯ ನೆಲದಾ ಮ್ಯಾಲೆ|
ಮಂದಿ ಕುಲ ನೂರೊಂದು ಎಲ್ಲ ಜಿನಸಿನ ದೈವ|
ತಂದೆ ಅಡವೀಸಿದ್ಧ ಅನ್ನದಾನಿಯು ಎಂದು|
ಸಂದೇಹ ಅಡಗುವದು ಪಾದ ಕಂಡಾಕ್ಷಣಕೆ|
ಒಂದೆರಡು ಮೂರು ಲಕ್ಷ ದಿನವೇಕೆ|
ಯೆಂದು ತಮ್ಮೊಳು ತಾವು ಯಳದಂಥ ಸ್ಥಳದಲ್ಲಿ|
ಕುಂದು ಕೊರತೆಯ ಕಳೆವಾ ಸಾಕ್ಷತ್ ಪರದೇವಾ|
ಬಂದ ಅವತಾರ ತಾಳೀ ಜನವ ರಕ್ಷಿಸಲಿ|
ಹಿಂದು ಮುಂದಿನ ಕರ್ಮಾ ಹರಿವಾ ಶ್ರೀ ಗುರುಸಿದ್ಧಾ|
ಬಂದು ತೋರಿಸು ಪಾದಾ ಪಾತಕರು ನಾವೆನುತ|
ನಿಂದು ಕುಂತು ಮಲಗಿ ತಿಗಾಡಿ ಧ್ಯಾನಿಸುತ|
ಬಂದ ಜಂಗಮ ಜೋಗಿ ಹಕೀರ್ರು ಪಕೀರ್ರು|
ನಿಂದು ಸಕ್ಷಾತ್ ದರುಶನ ರುದ್ರ ಹರಿ ಬ್ರಹ್ಮ|
ವೆಂದು ಕೈ ಜೋಡಿಸಿ ಬರುವ ದಾರಿ ನೋಡ್ವು|
ಅಂದವೇನೆಂಬೆ ಮಾರು ಹಾದಿ ಪರುಷಿಬಾಹ|
ಛಂಡ ಕಲ್ಯಾಣವು ಯಿದೇಯಿದೇ ನಿಶ್ಚವೂ|
ಹೊಂದುವಾ ಮುಕ್ತಿಯ ವಡಿಯ ಸದ್ಗುರುವೂ ||3||
ದೂರಲ ದೇಶದ ಪರುಷಿಯ ಬರುವಂತಾ|
ತಾರಿಪ ಕಂಚಿ ಕಾಳಾಶ್ರೀ ವಾಲೋಜಿ ಕಪ್ಪಲಿ|
ಶಹರ ಕಾಶಿ ವುಜ್ಜನಿಯೂ ಬಳಿಹಳ್ಳಿ ಗಡಾ|
ತೇರ್ದಾಳು ಕೊಪ್ಪ ಬಾರದ ಬಂಡಿ ಗದ್ವಾಲಿ|
ತಾರೀಪ ಸುರುಪುರ ಗಟ್ಟು ಗುಣ (ರ) ಮಟಕಲ್ಲು|
ನಾರಾಯಣ ಪೇಟೆ ಕೋಶ್ಗಿ ಕೋಡಂಗಲ್ಲು|
ಧೀರ ಹುಬ್ಬಳ್ಳಿ ಧಾರ್ವಾಡ ಮೈಸೂರ ಮಿರ್ಜಿ|
ಪುರಾಣಾ (ಪುಣಾ) ವುಳವಿ ಗೋಕರ್ಣ ಪುಣ ಪುನೇ ಸಾತಾರಿ|
ದ್ವಾರಕ ಮಥುರ ರಾಮೇಶ್ವರಾ ನಗರ ಹಂಪಿ|
ಧೀರ ಮೊಂಮಾಯಿ (ಬೊಂಬಾಯಿ) ಚನ್ನಪಟ್ಟಣ ಗುತ್ತಿಯೂ|
ಧಾರವಾಢವು ಕದಡಿ ಮಸಗಿ ಬಳಗಾನೂರ|
ಸೂರೆ ಜಮಖಂಡಿ ನರಗುಂದ ಆನೆಗುಂದಿ|
ಪುರಾಣ ಕಲ್ಯಾಣ ಕಲಬುರಗಿ ಬಿದ್ರಕೋಟೆ|
ಮಾರಹರಿನಾನಾ ನಾಮಪೇಟೆ ಶ್ಯಾಪೂರ ಸಗರ|
ಪೂರ ಬಿಜಾಪುರ ಸವನೂರ ಬಂಕಾಪೂರ|
ಕಾರಿಗನೂರು ಸೊಲ್ಲಾಪೂರ ಸುಲೆಗಾಂವಿ|
ಭಾರಿವುಕ್ಕೇರಿ ನಿಡಗುಂದ ಸಾಲಗುಂದ ಹರತಿ|
ತೀರದೈ ಶಿವನಾಟ| ಐವತ್ತಾರು ದೇಶ ಸಾರಿ
ಬರುವದುವೂರ ಹೇಳಲಿಕೆ ಅರಿದರಿದೂ|
ಮಾರಹರಬಲ್ಲ ಸುತ್ತಲಿರುವ ಗ್ರಾಮಗಳು|
ತೋರಿ ಹೇಳುವ ತೊತ್ತು ತಾಕಂಡು ಕೇಳ್ದಷು|
ಭೋರನೊದಗುವದು ಹೋಗುವದುಯಿರುವದಷ್ಟೆ ||4||
ಅರಿದೆನೆಂದರೆ ಮಹಿಮೆ ಗುರುಲಿಂಗ ಮನೆರಹದಿಹದು|
ಪಂಚ ಸಮಯವು ಏಕ ರೂಪದಲೀ|
ನರಗುರಿಗಳರಿಯರಿದು ವರಸಾಧು ಸಾಕ್ಷಾತ್|
ಪರಮ ಪಾವನನೀತಾ ಪಾಪಕ್ಷಯ ಮಾಡ್ವ ತಾಧರೆಗೆ ನರರೂಪ|
ತಾಳಿದ ಕುರುಹು ಕಾಣಿಸನು ಹರಶಬ್ದ ಜ್ಞಾನವೆಲ್ಲಾ ಕೂಗುವದು ಸರ್ವಮನೇ|
ಇರುವರು ಅಲ್ಲಲ್ಲೆ ಲಿಂಗಾರ್ಚನೆಯ ಮಾಡಿ|
ಇರುಳು ಹಗಲೆನ್ನಲೆ ವೂಟ ಅರವತ್ತುಗಳಿಗೆ|
ಚರಣ ತೋರಿಸುವ ನಾಲ್ಕೈದು ತಾಸಿನ ಒಳಗೆ|
ಪರಮ ಆನಂದ ಕಾಣ್ವದು ಮಠದ ಶೃಂಗಾರ|
ಗುರುಲಿಂಗ ಜಂಗಮಾ ಭಕ್ತ ಸರ್ವರೂ ಕೂಡಿ|
ಹರಹರ ಶಂಭೂ ಮಹಾದೇವಾ ಶಿವಶಿವೆನುತಾ|
ಬಿರದಿನಾ ಭಜನೆ ಸರ್ವ ಮಾರ್ತಿವಳ ಮಾಡಿ|
ತಿರಿಗ್ಯಾಗಾಡಿಯೇ ಕಾಂತವನದಲ್ಲಿ ವಾಸಾಗೀ|
ಭರದಿಂದ ಜನಕ್ಕೆಲ್ಲಾ ಸಾಹಗಿತ್ಯವನೂ|
ಹೊರಿಸಿ ಸಿದ್ದೇಶಾ ಬಲಭಾಗ ಚಿನ್ಮಯ ಮೂರ್ತಿ|
ಬರಲಿಕ್ಕೆ ಸಕಲಜನ ಸಾಷ್ಟಾಂಗದಿಂ ನಮಿಸಿ|
ಹರಣದು ಶುಭವನು ಕೇಳುವರು|
ಮನಬಿಷ್ಟ ಹರುಷ ಮಾಡುವದೇ ಜಂಗಮಕೆ ಅತೀಪ್ರೇಮಾ|
ಬರುವನು ತಾ ಶಿರಲಿ ಹೊರಹೊಂಟು ಗವಿ ಹೋಗುವಾ|
ಬರುವದೈ ಸಕಲ ಸಾಹಿತ್ಯ ಪಾರಾಳ ಜಿನಸು|
ನೆರಸಿ ಮಂದಿಯನೆಲ್ಲಾ ಪಂಗ್ತಿ ಲಿಂಗಾರ್ಚನೆಯಾ|
ಹರಿಹರಾಯೆಂದು ಮೃಷ್ಟಾನ್ನ ಭೋಜನ ಬಡಿಸಿ|
ಹೊರವಳಗೆ ಎಲ್ಲಾ ಉಂಡು ತೇಗಿ ತೃಪ್ತ್ಯಾಗಿ|
ನೆರೆಹಳ್ಳಿಯವರು ವಳಗಿರುವರೂ ಬೀಸುವರೂ|
ವುರುವೈ ಜ್ಯೋತಿ ಹಗಲಿರುಳು ಎನ್ನದಂತೆ ನಿಂತು|
ಗುರು ಅಂಕಲಗಿ ಅಡವಿಪಾಶ್ಚಾ ನಿರುಪಾಧಿ ||5||

ಜೋಯಂದು ಹಾಡಿರೆ
ಜೋ ಜೋ ಯನ್ನಿ ಅಡವಿಸಿದ್ದನಿಗೇ
ಜೋ ಜೋ ಯನ್ನಿ ಕಾಲಕಾಲನಿಗೇ
ಜೋ ಜೋ ಯನ್ನಿ ಕರುಣಾ ಸಾಗರಗೇ| ನಿತ್ಯ|
ಜೋಯಂದು ಹಾಡಿರೆ ಸಾಕ್ಷಾತ್ ಶಿವನಿಗೇ ||ಜೋ|| ||1||
ಗುರುಲಿಂಗ ಜಂಗಮ ರೂಪ ಧರಿಸಿದಗೆ
ಪರಕೆ ಪರತರವಾದ ಲೀಲಾ ಹಾಡುವಗೆ
ಇರುವೆ ಮೊದಲಾನೆ ಕಡೆ ಸರ್ವ ಆದವಗೆ| ನಿತ್ಯ|
ಹರುಷ ಆನಂದದಿ ನಲಿನಲಿದಿಹಗೆ ||ಜೋ|| ||2||
ನಿತ್ಯ ನಿರ್ಗುಣ ಮೂರ್ತಿ ನಿಜರೂಪ ಧರಗೆ
ಕರ್ತು ಆಗಿಯೆ ಭಕ್ತಿ ಕಾರ್ಯ ಮೆರೆವನಿಗೆ
ಸತ್ತು ಚಿತ್ತಾನಂದ ಸಕಲ ಸಕಲ ಸೂತ್ರನಿಗೆ| ನಿತ್ಯ
ಅತ್ಯಧಿಕವಾದಂಥ ಗುಪ್ತ ರೂಪನಿಗೇ ||ಜೋ|| ||3||
ಒಂದು ಮೂರಾರು ಒಂಬತ್ತರವಳಗೆ
ಚಂದದಿಂದಲಿ ನಾದ ಬಿಂದು ಕಳೆಬೆಳೆಗೆ
ಸಂದೇಹವಿಲ್ಲ ಶಿವ ಬಂದನು ಇಳೆಗೆ| ನಿತ್ಯ
ಕುಂದು ಕೊರತೆಯ ಹೊಂದದಂಥ ಪ್ರಭುವಿಗೆ ||ಜೋ|| ||4||
ಕಾಡಿನೋಳ್ ಮಠ ಮಾಡ್ದ ಕಾಡಸಿದ್ಧನಿಗೆ
ನೋಡಲಿಕೆ ಆಶ್ಚರ್ಯ ಮಹತ್ತು ಮೆರೆವನಿವಗೇ
ಕೂಡಿ ಕೂಡದ ಮೂರು ಲೋಕದೊಳಿಹಗೇ |ನಿತ್ಯ
ಗಾಡಿಕಾರ ಶಿಸುವು ಗಂಗಾಧರ ಹರಗೆ ||ಜೋ|| ||5||
ನಾನಾ ದಿನಸಿನ ರೂಪತನಾದ ಶಿವಗೇ
ಖೂನವರಿತರೆ ಎಲ್ಲಾರೊಳಗೆ ಹುದಗಿಹಗೇ
ತಾನೇ ತಾನಾದವನು ಬಾರ ಈ ಇಳೆಗೆ | ನಿತ್ಯ
ಸ್ವಾನುಭಾವದ ಲೀಲಾದಿಂದ ಮೆರೆವನಿಗೆ ||ಜೋ|| ||6||
ಶಿವನೆನಿಸಿ ಭಕ್ತ ಜನ ಭವರೋಗ ಹರಗೆ
ವಿವರ ತಿಳಿಯಲು ಐದು ಮೂರ್ತಿಯಾದವಗೇ
ಭುವನದಿ ಬಹು ನಾಮದಿಂದ ಮೆರೆವನಿಗೇ| ನಿತ್ಯ
ಸುವಿವೇಕ ನಿರುಪಾಧಿ ಬೈಲ ರೂಪನಿಗೆ ||ಜೋ|| ||7||

ತಡದ ಕಾರಣವೇನು
ತಡದ ಕಾರಣವೇನು ಶ್ರೀಗುರು ಅಡವಿ ಪಾಶ್ಚನೆ ತಿಳಿಯದು ||ಪ||
ಕೊಡು ದರುಶನವ ಮೃಢನೆ ನಿನ್ನಯ|
ಅಡಿಯ ಕಾಣದೇ ನೊಂದೆನೊ|
ಇಡು ಕರುಣ ಇನ್ನಾರುಯನ್ನಗೆ|
ಒಡೆಯ ನೀನೇ ಎಂದೆನೊ ||1||
ಕರ್ತೃ ನಿನ್ನಯ ಚರಣ ಕಾಣದೇ|
ಅರ್ಥಿ ಆಗದ್ವುರ್ಲಭಾ|
ತುರ್ತುನಿಂದಲಿ ನಿತ್ಯ ನಿರ್ಗುಣ
ಗುರ್ತು ತೋರಿಸು ಬೇಗನೆ ||2||
ನಾದ ಬಿಂದು ಕಳಾದ ಮೂರುತಿ|
ಪಾದ ತೋರಿಸು ದೇವನೇ|
ಆದಿ ಶರಣನೆ ಭೇದ ಹರಿತನೆ|
ವಾದಾತೀತ ವಸ್ತುವೇ ||3||
ಶಾಂತರೂಪನೇ ಶ್ರೇಷ್ಠ ಸಾಧುವೆ|
ಪ್ರಾಂತದೊಳು ಸುಕೀರ್ತಿಯೇ|
ಅಂತ್ಯ ಮಧ್ಯಾ ಆದಿ ರಹಿತನೇ|
ಚಿಂತಿ ದೂರ ಏಕಾಂತನೇ ||4||
ಗುರುವರನೆ ಪರತರನೆ ಅಂಕಲಿ|
ಸ್ಥಿರ ಮಠವು ಬೆಳ್ಳಾರಿಲಿ|
ನಿರುಪಾಧಿ ನೀನಾಗಿ ಮೆರೆಯುತ|
ಕರುಣಾ ಮಾಡ್ವೆ ಭಕ್ತರಾ ||5||

ತಟ್ಟಿನ ಶೃಂಗಾರ
ತಟ್ಟಿನ ಶೃಂಗಾರ ಕೇಳೀ ಲೋಕದ ಜನರು
ಬಿಟ್ಟರೆ ಸರ್ವ ಕಾರ್ಯವು ನಿಂತೀತಣ್ಣ ||ಪ||
ತಟ್ಟು ಮೈಲಿಗೆಯಲ್ಲಾ ನಾರ ಮಡಿಯೆನಿಸುವದು
ಯೆಷ್ಟು ದಿನವಿದ್ದರೆ ಮುಡಚಟ್ಟು ಇಲ್ಲ
ಮುಟ್ಟುವರು ಹೊಲಿ ಬ್ಯಾಡರೆಲ್ಲ ಜೋಳದ ಗೋಣಿ
ಯಿಟ್ಟಿಹರು ನಡು ಗ್ರಹದಿ ತೊಳಿಯಲಿಲ್ಲದನೂ ||1||
ಗೋಣಿ ಕಂಟಲಿಯಾಗಿ ಬಟಾರ ಸೊಬರಾಗಿ
ಕಾಣ ಬಂದರಮನಿಗೆ ಪದರಿ ಹಾಸಲಿಕ್ಕೆ
ಜಾಣನಾದವ ಬಲ್ಲ ಇದರ ಮೊದಲು ಕಡೆಯಾ
ಮಾಣದು ದೂರದಲಿ ಶ್ರವಣವಾಗುವದು ||2||
ಜನಿಸಿದಾ ಮೊದಲಿಂದಾ ಪೆಟ್ಟುಧಕ್ಕಿಯ ತಿಂದು
ಮನುಜರಿಗೆ ಉಪಕಾರ ಮಾಡುತಿಹುದು
ಘನ ಮನುಜರಿಗೆ ಬೇಕು ಬಡವರಾದರೆ ಬೇಕು
ಎನಿತು ಎಲ್ಲವು ಇದೆ ಸರ್ವ ಕಾರ್ಯಕ್ಕೆ ||3||
ಹರಿದು ಚಿನ್ನಾಟ್ಯಾಗೆ ಮತ್ತೆ ಕುಟ್ಟಿ ತಿಕ್ಕಿ
ಅರದರದು ನೀರ್ಮಾಡೆ ಕಾಗದಾಗುವದು
ಬರಿಯಲಿಕೆ ಬಹುಪ್ರಿಯ ವಚನ ಶಾಸ್ತ್ರಾದಿಗಳು
ಸರಿ ನೋಡಿದರೆ ಸರ್ವ ಪೂಜಿಗಧಿಕಾ ||4||
ಗುರು ಅಂಕಲಗಿ ಅಡವಿ ಪಾಶ್ಚಾ ನಿರುಪಾಧಿಯಾ
ಸ್ಮರಣೆ ಸ್ತೋತ್ರವ ಬರಿಯೆ ಮೂಲ ವಿವಸ್ತು
ಜರಿದು ನುಡಿದರೆ ತೊತ್ತು ಯೇನನಗಲಿದಿ ಗಣಾ
ಪರಮ ಷಠಸ್ಥಲ ಬ್ರಹ್ಮ ಹರಹರಗಂಗಾಧರನೇ ||5||

ತಿಳಿಯದೈ ಮಹಿಮಾ
ತಿಳಿಯದೈ ಮಹಿಮಾ ಅಡವಿಸಿದ್ಧಾ ಜನದೊಳು ಪ್ರಸಿದ್ಧ
ತಿಳಿಯದೈ ಮಹಿಮಾ ಅಡವಿಸಿದ್ಧಾ ||ಪ||
ಇಳಿಯೊಳೀ ಮಹಾತ್ತಿನ ಸುಳವು ತಿಳಿಯಲಿಕೆ
ಕೆಳೆವರ ನಿನ್ನೌಂಶಲ್ಲದೆ ಬೇರೆ
ತಿಳಿಯದೈ ಮಹಿಮಾ ಅಡವಿಸಿದ್ಧಾ ||1||
ದೇವ ದೇವರಿಗೆ ಒಡೆಯ ನೀನೂ ತಿಳಿದರೆ ಸುರಧೇನು
ಕಾಯ್ವಾತ ನೀನು ಹೇಳಲೇನೂ
ಜೀವ ಶಿವನು ನೀನೊಲಿಯ ಅರಿದರೆ
ಆವಕಾಲದಲಿ ಕೇವಲ ಮೂರ್ತಿ ||2||
ಬಾವನ್ನ ಅಕ್ಷರಕ್ಕೆ ಮೂಲ ಆದಿ ಮಾರುತಿಯೇ
ಅ ಉ ಮಾ ಮೂರು ಅಕ್ಷರ ಮೊದಲು
ನೋವೆ ತಿಳಿದರೆ ಸಾಕ್ಷಿ ರೂಪನು
ಕಾವ ಭಾರ ನಿನ್ನದು ಮಹದೇವಾ ||3||
ನಿರುಪಾದಿ ನೀನು ನಿಜ ನಿಜವೆಂದು ಹೊಡದೆ ಡಂಗುರವಾ
ಗುರುಲಿಂಗ ಜಂಗ್ಮಾ ಅಹುದಹುದೆಂದು
ವರದೆ ವಾಕ್ಯ ನೀ ನುಡಿಸಿದಂತೆ ಪ್ರಭೂ
ಚರಣ ಧೂಳಿ ಮಹಾ ಕರುಣವಿರಲಿ ಸಖಾ ||4||

ತೂಹಿ ಗುರು
ತೂಹಿ ಗುರುಕೆಕೊ ಮೈ ಜಾಹೀರ ಕರೇಗಿ ತುಮೆ ||ಪ||
ಗ್ನಾನ ತುಮಾರಾ ಮಾನ ತುಮಾರಾ
ಕೋನು ಆಪು ಪಹಚನಾರೇ ಧ್ಯಾನವೆ ತೂ ಸಹ ಹುಯೇ ||1||
ಮರ್ಜಿ ಸಾಹೇಬಕಾ ಅರ್ಜಿ ಸೇವಕಾ ದರ್ಜಿ ಅಂಗಕರೆ ಹಮ್ಮ
ಸರ್ಜಿ ಬಹದ್ದೂರ ಪಾಶ್ಚಾ ಜಾಹಿಕರೇಗೀ ತುಮೆ ||2||
ನಿರುಪಾಧಿ ತೂ ನಿರಂಜನಾ ತೂ
ಕರಾರು ಪ್ರಿಯಾ ಅಡವಿಸಿದ್ಧಾ ವಿರುಪಾಕ್ಷ ಚರಣರೇಣೂ ||3||

ತೊಗಲಿನಾಟವು
ತೊಗಲಿನಾಟವು ತಿಳಿಯದಣ್ಣೌ| ನಿತ್ಯ ಅಘಹರನ ಮುಂದೆ ತಾ|
ಪೂಜೆಗೊಂಬುವದು ತೊಗಲಿನಾಟು ತಿಳಿಯದಣ್ಣ ||ಪ||
ಸಿದ್ಧನ ಮುಂದೆ ಬಾರಿಸುವ ಸಮಾಳ ತೊಗಲು
ಮದ್ದಲಿ ದಮ್ಮಡಿ ಹೊಳೆದಾಟೋ ಹರಗೋಲೂ ತೊಗಲು
ಬುದ್ದಲಿ ನಗಾರಿ ಡೋಲು ತಪ್ಪಡಿ ತೊಗಲು
ಜತ್ತಿಗೆ ಮಿಣಿ ಕಣ್ಣ ಪಾದರಕ್ಷೆಯು ತೊಗಲು
ಉತ್ತಮರು ಕೆಟ್ಟವರು ಹುಟ್ಟೋದ್ಹಶೆ ತೊಗಲು ||1||
ಕರಡಿ ಜೇರು ಬಂದು ಪಟದಾಳಿ ಬಾರು
ಹರಿಯದ್ಹುಡುಗರು ಹಾಡೋ ಹಲಗಿ ಚಿಮ್ಮು ತೊಗಲು
ಕುರುಬರ ಬೀರನದು ವಂದೇ ಡೊಳ್ಳು ತೊಗಲು
ಪರಶಿವನ ಹೊದಿಕೆ ಗಜ ವ್ಯಾಘ್ರ ಯರಡರ ತೊಗಲು
ಪರಿಯ ತಿಳಿಯಲು ನಿನ್ನ ಶರೀರವೆ ತೊಗಲು ||2||
ತೊಗಲು ನಾ ತೊಗಲು ಹುಟ್ಟೋದು ಹುಟ್ಸೋದೊಂದು ತೊಗಲು
ಪ್ರೀತಿಯಿಂದಲೇ ಎತ್ತಿ ಮುದ್ದಾಡೊ ಶಿಶು ತೊಗಲು
ನೂತನ ಧಾನ್ಯ ಪದಾರ್ಥ ಬೆಳೆವದು ತೊಗಲು
ಯಾತರ ಶೀಲ ಹಾಲು ಬರುವ ಮಲಿ ತೊಗಲು
ಜ್ಯೋತಿ ರೂಪಗೆ ಸಂಗವೇನೋ ನಿರುಪಾಧಿ ತೊಗಲಿನಾಟವು ತಿಳಿಯದಣ್ಣ ||3||

ದಯವೇಕೆ ಬಾರದೈಯ್ಯಾ
ದಯವೇಕೆ ಬಾರದೈಯ್ಯಾ| ದಾರಿ ನೋಡುವೆವೈಯ್ಯಾ|
ಪ್ರೀತಿಯಿಂದ ಪಾದ ತೋರಿಸೂ| ಸಂಶಯ ಬಿಡಿಸು|
ಪ್ರೀತಿಯಿಂದ ಪಾದ ತೋರಿಸೂ ||ಪ||
ತಾಯ ಅಗಲಿದ ತರುಳಾ| ತಾವ ಬಿಟ್ಟಂತೆ ಇಹುದು|
ನ್ಯಾಯವೇನೈಯ್ಯಾ ಸದ್ಗುರುವೇ| ಮಾಯ ಜನ ಮರವೆ|
ನ್ಯಾಯವೇನಯ್ಯಾ ಸದ್ಗುರುವೇ|
ರಾಯರಾಯರಿಗೆ ರಾಯ| ರಾಜಶಿವಯೋಗಿ ಎಂದು ಸಾಹಸದಿ
ಪ್ರಜೆಯು ಬಂದಿಹರು|
ಆಯಾಸವಾಗುವದು ಸಾಹಸದಿ ಪ್ರಜೆರು ಬಂದಿಹರು ||1||
ಕಂದಿ ಕುಂದವ ಜೀವರನು ಕರುಣಿಸಿ ಕಾಯ್ವದಕೆ ನೀನೇ ತಂದೆ ತಾಯಿ
ಬಂಧು ಬಳಗವು ನಿಂದೆ ಎಲ್ಲವೂ ತಂದೆ ತಾಯಿ ಬಂಧು ಬಳಗವೂ|
ನಂದಿ ಸೂತ್ರಕನೆ ನಿನ್ನ ನಾಂಟ್ಯಿದ ಸ್ವಲೀಲಾ ಅಂದ ಆರಿಗೆ ತಿಳಿಯದೊ|
ಸಂದೇಹ ಹೋಗದು ಅಂದ ಆರಿಗೆ ತಿಳಿಯದು ||2||
ನಾಮ ರಹಿತ ದೇವನಾದ ಬಿಂದು ಕಾಳಾದ ಸೋಮ ಕೋಟಿಗಳ ತೇಜವನು|
ಪ್ರೇಮದಿ ನೋಡುವೆನು ಸೋಮಕೋಟಿಗಳ ತೇಜವನು|
ಕೋಮಲಡವಿಯ ಸಿದ್ಧೇಶ ಕೋಪರಹಿತ ಸ್ವಾಮಿ ನೀ|
ಸರ್ವಾಂತರ‍್ಯಾಮಿ ಭಕ್ತರಿಗತಿ ಪ್ರೇಮಿ| ಸರ್ವಾಂತರ‍್ಯಾಮಿ ||3||

ದುಡ್ಡೇ ಲೋಕಾಧಾರವಾಗಿದೆ
ದುಡ್ಡೇ ಶ್ರೀಗುರು ಮಾರುತಿ| ಈ ಜಗದೊಳು| ದೊಡ್ಡವ ಸಣ್ಣವಗೆ||
ದುಡ್ಡಿನಾ ಸೂತ್ರದೊಳು ಕುಣಿವದು| ದುಡ್ಡೇ ಲೋಕಾಧಾರವಾಗಿದೆ|
ದುಡ್ಡೇ ಸರ್ವ ಪೂಜೆಗಧಿಕವು| ದುಡ್ಡು ಇರುತಿರೆ
ನೇಮ ನಡೆ ನುಡಿ ||ಪ||
ದುಡ್ಡು ಲಿಂಗಕೆ ಮೂಲವು| ವಿಭೂತಿಯು ದುಡ್ಡಿರೆ ಬರುತಿಹದು|
ದುಡ್ಡಿರೆ ಜಂಗಮವು ತಿಳಿದು ನೋಡೀ| ದುಡ್ಡಿನೋಳ್ ಸುಖ ದುಃಖವು|
ದುಡ್ಡಿನಿಂದಲಿ ಸಕಲ ದೇವರು| ದುಡ್ಡಿನಿಂದಲಿ ಮನ ಮನ್ನಣೆ|
ದುಡ್ಡು ಇಲ್ಲದಿರಲು ಛೀ ಛೀ| ದುಡ್ಡೇ ಶ್ರೇಷ್ಠವಾದ ದೈವತಾ ||1||
ದುಡ್ಡಿನಿಂದಲಿ ಜನಿವಾರ| ಅಕ್ಷತಿ ಗಂಧಾ| ದುಡ್ಡಿರೆ ಸಾಲಿಗ್ರಾಮ|
ದುಡ್ಡಿರೆ ಬ್ರಾಹ್ಮಣನೂ ವಿದ್ಯೆವೇದಾ| ದುಡ್ಡಿರೆ ಸಾಧನವು|
ದುಡ್ಡೆ ಬಂಗಾರ ಬೆಳ್ಳಿ ಮೂರ್ತಿಯು| ದುಡ್ಡೇ ಪರಡಿ ಪಾಯಸನ್ನವು|
ದುಡ್ಡೇ ಕಂಠ ಕಡಗ ಉಂಗರ| ದುಡ್ಡು ಬಿಟ್ಟರೆ ಪಾಪಿಯನಿಸುವು ||2||
ದುಡ್ಡೇ ನಾಮವು ಗೋಪಾಳ ದೀಪದ ಕಂಭ| ದುಡ್ಡಿರೆ ದಾಸರಾಟ
ದುಡ್ಡಿರೆ ಅಪು ಗಾಂಜಿಯು| ಆರೂಢಗೆ ದುಡ್ಡಿರೆ ಪೂರ್ಣ ಸುಖಾ|
ದುಡ್ಡು ಚಿನ್ಮಯ ಹಾದಿ ತೋರ್ಪುದು| ದುಡ್ಡು ಚೇತನವ ಮಾಡ್ವದು
ದಡ್ಡೆ ಶ್ರಂಗಾರ ನಾನಾ ವಸ್ತ್ರವು| ದುಡ್ಡಿಗಿಂತ ಅಧಿಕವಿಲ್ಲವು ||3||
ದುಡ್ಡಿರೆ ಕವಡಿ ಸರವು| ಬಂಡಾರ ಚವಡ್ಕಿ| ದುಡ್ಡಿರೆ ಜಾಂಗಟಿ ಹಡ್ಲಿಗಿಯು
ದುಡ್ಡಿರೆ ಜೋಗ್ರಿ ವಗ್ಗಯ್ಯಾ ಬೈರಾಗಿ ಜೋಗಿ| ದುಡ್ಡು ಬಿಟ್ಟವರಿಲ್ಲವು
ದುಡ್ಡೆ ದೊರೆ ದೇಸಾಯಿ ನಾಡಿಗ| ದುಡ್ಡೆ ಸರ್ವಕುಲ ಛಲವು
ಮಠ ದುಡ್ಡು ಜೀವನವೆಲ್ಲ ಚರಿಪದು| ದುಡ್ಡಿನಾಟವ ತಿಲಿವನಧಿಕನೂ ||4||
ದುಡ್ಡೇ ಕರ್ಮವ ಕಳಿವದೂ| ಮೋಕ್ಷಕೆ ಹಾದಿ | ದುಡ್ಡೆ ನರಕಕೆ ಯಳೆವದು|
ದುಡ್ಡಿರೆ ಅಡವೀಶನ ಸುತ್ತಾಮುತ್ತಾ| ದುಡ್ಡಿರೆ ಬಹು ಜನವೂ
ದುಡ್ಡೆ ಕಲಿಯುಗ ಕರ್ತೃವಾಗಿದೆ| ದುಡ್ಡೇ ತಾ ನಿರೂಪಾದಿ ಲಕ್ಷಣ
ದುಡ್ಡಿನಂತವ ತಿಳಿದ ಪುರುಷನು| ದುಡ್ಡು ಗುರುವಾದಂತೆ ಸಕಲದಿ ||5||

ದುಷ್ಟರ ಗೆಳೆತನವು ಭ್ರಷ್ಟ್ರಯನಿಸುವದು
ದುಷ್ಟರ ಗೆಳೆತನವು ಭ್ರಷ್ಟಯನಿಸುವದು
ಶ್ರೇಷ್ಟ ದೇವರಯಡಿಯ ಶ್ವಾನವುಂಡಂತೆ
ತನ್ನ ತಾ ತಿಳಿದಿಲ್ಲ ತಾನಾದ ಸುಖವಿಲ್ಲ ||ಪ||
ವುನ್ನತವಾದಂಥ ಸ್ಥಳವು ನಿಲಿಕಿ|
ಅನ್ಯಾಯ ನ್ಯಾಯ ಎರಡು ಗೊತ್ತು ತನಗಿಲ್ಲ
ಚಿನ್ನ ಲೋಹವೆಂಬ ಗುರುತರಿಯದಂಥ ||1||
ಜ್ಞಾನ ಮಾರ್ಗಕ್ಕೆ ಹೋಗದೆ ನೀತಿಯೆಂದಿಗೂ ಸಿಗದು
ಯೇನೇನೊ ಯೆತ್ತೆತ್ತೊ ಮನ ಬಂದ ತೆರ ಕುಣಿದು
ಕಾನನಕೆ ಬಿದ್ದು ಕೂನವ ಮರೆತು ಇರುವಾ ||2||
ನಿರುಪಾಧಿ ಅಡವೀಶ್ಯಾ ನಿಃಶ್ಚಯ ಯನ್ನದಲೇ
ಬರೆ ಬಾಯ ಬ್ರಹ್ಮವನು ನುಡಿದು ಕೆಡುವಂಥಾ
ಕುರುವರಿಯದಲೆ ಗುರುವು ಹಿರಿಯರೆಂದೆನ್ನದೆ
ಗರಿವಿನಿಂದಲಿ ಜರಿದು ನುಡಿವಂತಾ ಕೆಟ್ಟಾ ||3||

ದೇವದೇವ ದೇವ ನೀನೆ
ದೇವದೇವ ದೇವ ನೀನೆ ಭಾವಭರಿತ ಅಡವಿಸಿದ್ಧಾ
ಕಾವುದೆನ್ನ ಕರುಣನಿಧಿಯೆ ಕೇವಲದ ಅಡವಿಸಿದ್ಧಾ ||ಪ||
ನಿತ್ಯ ನಿನ್ನ ಧ್ಯಾನವನ್ನು ಚಿತ್ತವಿಟ್ಟು ಅಡವಿಸಿದ್ಧಾ
ಗೊತ್ತು ತೋರು ದಿವ್ಯವಾದ ತೊತ್ತು ನಾನು ಅಡವಿಸಿದ್ಧಾ
ಕರ್ತು ನೀನೆ ಒಬ್ಬ ಪ್ರಭುವು ಮಿಥ್ಯ ತೋರ್ಕೆ ಅಡವಿಸಿದ್ಧಾ ||1||
ಕಂದನಾಗಿ ಬೇಡಿಕೊಂಬೆ ಕರುಣವಿರಲಿ ಅಡವಿಸಿದ್ಧಾ
ಹಿಂದು ಮುಂದು ನೀನೆ ಯನ್ನ ತಂದೆ ತಾಯಿ ಅಡವಿಸಿದ್ಧಾ
ಹೊಂದಿಯಿದ್ದವರ ಭಾರ ನಿನ್ನದೆಂದೆ ಅಡವಿಸಿದ್ಧಾ
ಕಂದುಗೊರಳನೆಂದು ನಿನ್ನ ಬೇಡಿಕೊಂಬೆ ಅಡವಿಸಿದ್ಧಾ ||2||
ಪಾತಕನು ಯನ್ನ ಗುಣವ ನೋಡಬೇಡ ಅಡವಿಸಿದ್ಧಾ
ನೀತಿ ಮಾರ್ಗವನು ತೋರಿ ನೀಟು ಮಾಡು ಅಡವಿಸಿದ್ಧಾ
ಯಾತರೊಳಗೆಯಿಲ್ಲದಂತಾ ಶ್ರೇಷ್ಠ ನೀನು ಅಡವಿಸಿದ್ಧಾ
ನೂತನದ ವಸ್ತು ರೂಪು ಜ್ಯೋತಿ ನೀನು ಅಡವಿಸಿದ್ಧಾ ||3||
ಕರ್ಮಿ ನಾನು ಬಹಳ ಜನ್ಮ ತಿರಿಗಿ ಕಂಡೆ ಅಡವಿಸಿದ್ಧಾ
ಧರ್ಮ ಮಾರ್ಗವ ತೋರಿ ಭವವಾ ದಾಂಟಿಸೈಯ್ಯಾ ಅಡವಿಸಿದ್ಧಾ
ಮರ್ಮ ನಿನದೈಯ್ಯ ಮೂಢ ಮತಿಗೆ ಸಿಲುಕಿ ಅಡವಿಸಿದ್ಧಾ
ನಿರ್ಮಳದ ನಿಜದಿ ಗುಣವು ಲೀಯ್ಯಮಾಡು ಅಡವಿಸಿದ್ಧಾ ||4||
ಪಾಮರನು ನಾನು ಗುಣವ ನೋಡೋದೇಕೋ ಅಡವಿಸಿದ್ಧಾ
ಸ್ವಾಮಿ ನೀನು ಕಾರ್ಯ ನಿನ್ನದಲ್ಲೆ ಅಡವಿಸಿದ್ಧಾ
ಧಮ ಸೀಮೆ ರಹಿತ ನಿನ್ನಾ ನೇಮವರಿದು ಅಡವಿಸಿದ್ಧಾ
ಕೋಮಲದ ಮುಕ್ತಿ ಪತಿಯು ಸದಾಶಿವನು ಅಡವಿಸಿದ್ಧಾ ||5||

ದೇವ ಬಂದಾನು ಭಾವ ಭರಿತನು
ದೇವ ಬಂದಾನು| ಭಾವ ಭರಿತನು ಕೇವಲ ಸಾಂಬಾ ಮೂರುತೀ|
ಆವ ಕಾಲದಿಂದವಗತಿಯ| ಮಹದೇವ ಈತ ನಿಜ ನಿಶ್ಚಯಯನ್ನುತಾ
ಜಾವ ಜಾವಕೆ ನೆನದರೆ ಮುಕ್ತಿಯೇ| ಸೋವೆ ತೋರ್ವ ಹರ ಶಿವಡಿವೀಸನೂ ||ಪ||
ದಶದ ನಾದದ ಸಂಭ್ರಮದೊಳು ಬೈಲಿಗೆ ಬಂದಾನೋ| ಮಹಾ
ಕುಶಿಯಿಂದಲಿ ಆನಂದದಿ ನಾನು ನಿಂದೆನೊ
ಪಶುಪತಿ ಯೀತನೆ ಪಾವ್ತಿ ರಮಣನೆಂದೆನೊ ನಾನು
ಅಸಮಾಕ್ಷನ ಕಂಡರುಷದಿ ಮನಕೆ ತಂದೆನೊ
ಶಿಶುವಿನ ಭಾರವು ನಿನ್ನದುಯೆನುತಲಿ
ಯೆಸೆವಾನಂದದಿ ಹೊಗಳಿದೆ ಬಹು ಪರಿ
ರಶಿಕನಲ್ಲ ನೀನು ಸುರಿದರ್ಹಾಡುವೆ|
ಹಸಿತ ಮುಖವ ನೋಡಲೆ ಯತಿಯಾದೇನು ||1||
ಬಿಂದು ಕಳಾ ಸ್ವರೂಪನೆ ನಿನ್ನನು ನೋಡಿದೆ|
ಯನ್ನಯ ತಂದಿಯು ತಾಯಿ ಬಂಧು ಗುರುವೆಂದ್ಹಾಡಿದೆ|
ಕುಂದಿದ ಮನ ಖುಷಿಯಾಯಿತು ಮುಕ್ತಿಯ ಬೇಡಿದೆ|
ಮಹಾಪರವೆಂದೆನ್ನುತಾ ನಿನ್ನೊಳು ನಾನು ಕೂಡಿದೆ|
ಹೊಂದಿದವನು ನಾ ನಿಂದೆ ಭಾರವು|
ಮುಂದು ಮಾಡು ಘಟ ಇರುವ ಪರಿಯ ಸುಖವೆಂದು ಬಯಸುವೆನು|
ಸುಂದರ ಶ್ರೀಗುರು ತಂದೆಯನ್ನಯ ಮಂದಿರ ನಿನ್ನದು ||2||
ನಿರೂಪಾಧಿಯು ನೀನೆಂದೆನು ಅಂಕಲಿನಾಥನೆ|
ನಾನಾ ತರದ ಲೀಲವ ಆಡುವ ಮಹ ಪ್ರಖ್ಯಾತನೆ|
ಗುರುವರ ಅಡವೀಶನೆ ಸಂಭ್ರಮದಾತನೆ|
ಪೂರ್ಣ ಅರುವೈ ನೀ ನಿಸ್ಸಂಶಯಾ ನೀ ನಿರ್ಭೀತನೆ|
ಪರತರ ಗುರುವರ ಸ್ಥಿರಕರ ಉರುತರ ಮರಸು ಮನ ಮಹಾ ಆನಂದವಾಯಿತು|
ಮರವು ಮಾಡದಾವಾವಕಾಲದಲಿ ಕರುಣ
ಮಾಡು ನೀ ಗುರುಲಿಂಗ ಜಂಗಮಾ ||3||

ದೇವಾ ನಂಬಿದ ಭಕ್ತರ ಕಾವ
ದೇವಾ ದಯವು ಬಾರದೇ| ಎನ್ನಯ ಮೇಲೆ|
ದೇವಾ ದಯವು ಬಾರದೇ ದೇವಾ ನಂಬಿದ ಭಕ್ತರ ಕಾವ
ಕೇವಲ ಸುಖದ ಭಾವಾ
ತಿಳಿದರೆ ಶಿವಾ ಜೀವಾ| ನಿಜ ಮುಕ್ತಿ ಈವಾ ||ಪ||
ಬಾರಿ ಬಾರಿಗೆ ಕೇಳಲಾರೇ ಪರಬ್ರಹ್ಮ ನೀನೂ
ಧಾರುಣಿ ವಾಕ್ಯ ಹಾರಲಾರೇ
ತೋರು ಸುಖ ಸಾಮ್ರಾಜ್ಯ ಬೀರು
ನೀನಲ್ಲದೆ ಇನ್ನಾರೂ| ಸಂತೋಷ ತಾ ಸಾರೂ|
ಯನ್ನಲ್ಲೆಯಿರೋ ||1||
ಶಾಂತಿ ಮಾರುತಿ ಕಳೆಯಾ ಚಿಂತೆ|
ನಿನ್ನಗೆ ನಾನು ಯಂತು ಹೇಳಲಿ ಯನ್ನ ಭ್ರಾಂತೆ|
ಹಂತೇಲೆ ನೀನೇ ಇರುವಂತೆ| ಪ್ರೀತಿಯ ಮಾಡಂತೆ
ಹೊಗಳಿದೆ ನಿನ್ನಾಕಾಂತೆ| ಮಾಡೋ ನಿಶ್ಚಿಂತೆ ||2||
ಕಾಡೊಳು ಮನೆ ಮಾಡಿದವನೇ ಅಡವಿಯಾ ಪಾಶ್ಚಾ|
ನಾಡೊಳು ನಿರುಪಾಧಿ ತಾನೇ|
ನೋಡೋ ಕಟಾಕ್ಷವ ಮಾಡೊ ದೃಷ್ಟಿಯನ್ನಲ್ಲೀಯಿಡೋ|
ಭವದಲ್ಲಿ ತರಲಿ ಬ್ಯಾಡೋ| ಸಂತೋಷ ಕೊಡೋ ||3||

ಧಿನ್ ಕ್ಯಾ ಹುಶೇನ್ನು
ಧಿನ್ ಧಿನ್ ಧಿನ್ ಧಿನ್ ಕ್ಯಾ ಹುಶೇನ್ನು| ಬಾ ಹುಶೇನ್ನು ಧಿನ್ ಧಿನ್ ||ಪ||
ತತ್ವ ತಾತ್ವಿಕ ತಾನೆ ನಿತ್ಯ ನಿರ್ಗುಣ ತಾನೇ
ಯತ್ತ ಯತ್ತ ನೋಡಿದರೆ ಕರ್ತೃ ಒಬ್ಬನಾಟವಿಹುದು ||1||
ಪೀರನಾದವ ತಾನೆ ಫಕೀರ ನಾದವ ತಾನೆ
ಭಾರಿ ಖೂನವಳಗೆ ಪದ್ಯ ಸಾರಿ ಹೇಳುವ ಮೂಲ ತಾನೆ ||2||
ನಿರುಪಾಧಿ ತಾನೇ ಪರಕೆ ಪರತರನೇ
ಗುರುವು ಅಂಕಲಗಿ ಅಡವಿಪಾಶ್ಚಾ ಪೀರ ಪೈಂಗಬಾರಿ ||3||

ಧಂ ಛಡಾವು
ಧಂ ಛಡಾವು ಧಂ ಛಡಾವು ಸಿದ್ದಪ್ಪ ಗೆಲಲೆಲಾಗುವು ||ಪ||
ಕಹಾ ಸಿಲ್ಹಾಯೋ ಕಹಾ ಛಲೆಗಾ ದೇಖೋ ತುಮಾರ ದಿಂಮ್ಮೊ
ಸಹಾಸಕರೋ ಸಾಧುಕಾ ಮಹಿಲ್ಜತಿ ಮುನ್ನಾ ||1||
ನೀತಿ ವಾಕ್ಕುಯಿನುವಲೇ ಜೋತಿ ರೂಪುದೇಲುವಲೆ
ನಾಥನಾಂಘ್ರಿ ಕಮಲ ಗಂಧ ಇತೆರಾಯ್ತೆ ದೊರಕುತುಂದಿ ||2||
ನಿರುಪಾದಿಯಾಗುವಿ ಪರಿಭವಗಳ ನೀಗುವಿ
ಗುರು ಅಡವಿಸಿದ್ಧಲಿಂಗ ನಾಮಾಮೃತನುಂಡು ಸೋಕ್ಕು ||3||

ನಗಬ್ಯಾಡೋ ಅಣ್ಣಾ
ನಗೀ ಬರುತದೆ ನಕ್ಕರೆ ಬೈದಿರಿ ಜಗದ ಹಗರಣ ನೋಡಿ
ನಗೀ ಬರುತಿದೆ ನಕ್ಕರೆ ಬೈದೀರಿ
ಪಕ ಪಕ ನಗಲೇನೋ ತಮ್ಮಾ ನಗಬ್ಯಾಡೋ ಅಣ್ಣ ||ಪ||
ಕಾಯ ನಾನು ಯಂದೆಂಬೊ ಹಮ್ಮಿಲಿರುತಾ
ಸಂಶಯದೊಳು ಮುಳುಗಿ ಬಾಯ ಬ್ರಹ್ಮವ
ನುಡಿದನು ಭಯವಿಲ್ಲದಲೇ
ನ್ಯಾಯ ಅನ್ಯಾಯವ ತಿಳಿಯದೆ ಮರಗುತಿರುವಾ ಮತಿಹೀನರ ಕಂಡು ||1||
ಒಬ್ಬ ಶಿವನೆಂದು ಹಾಡಿ ಹರಸಿ ನೋಡಿ ಘನಶಾಸ್ತ್ರವ ಓದಿ
ಮಬ್ಬಿನಿಂದ ತಿರತಿರಗಿ ಬರುವ ಹಾದಿ
ದೊಬ್ಬಿ ಕಲ್ಪನೆಯ ಸಂತರ ಸಂಗದೊಳಗೆ ಇರದವರನು ಕಂಡು ||2||
ನಿರುಪಾಧಿಯು ಅಡವೀಶ ಎಂದು ಅನ್ನದೇ ನಾ ನನ್ನದು ಎಂದು
ಗರವು ಮಾಡಿ ಬಹು ನಿಂದೆಯೊಳಗೆ ಬಿದ್ದು
ಮರ ಮರಳಿ ಹುಟ್ಟುವ ಮಾತುಗಳನು ಕೇಳಿ ಮನದೊಳಗೆ ಮರುಗಿ ||3||

ನಂಬಿರಯ್ಯ ಸಾಂಬನ ಅವತಾರಿದು
ನಂಬಿರಯ್ಯ ಜನರು ನಂಬಿರಯ್ಯ
ಸಾಂಬನ ಅವತಾರಿದೂ ಸಟೆಯಲ್ಲ ನಿಜ ನಿಜವೆಂದು ||ಪ||
ಕಿಂಕರ ನುಡಿಯಿಂದೆ ಶಂಕರ ಬಂದಾನೆ
ಡಂಕಾ ಹೊಡೆಯಿತು ವೇದದಂಕೆಯೊಳಿಹನೆ ಶಿವನೂ ||1||
ಮೂರು ಮಲಗಳಗೆದ್ದು ಸೇರಿ ಉನ್ಮನೀ ಸ್ಥಳದೀ
ಭೋರೆಂಬೊ ವಾದ್ಯ ವಸ್ತುವಾ ಸಾರಾ ಬಲ್ಲವನೇ ಹರನು ||2||
ತಾನೇ ತಾನಾದ ಗುರುತೂ ಸ್ವಾನುಭಾವದಿ ತಿಳಿದು
ಮಾನಿ ತಾ ನಿರುಪಾಧಿ ಖೂನಾ ಅಡವೀಶ ಗುರುತೂ ||3||

ನಾಥ ನಾಥನಮ್ಮ
ನಾಥ ನಾಥನಮ್ಮ| ಲೋಕದಿ ಮಹಾ ಖ್ಯಾತ ಈತನಮ್ಮ|
ಭೀತಿ ರಹಿತ ಬಹು ನೂತನ ವಸ್ತುವಾ
ಜ್ಯೋತಿ ರೂಪು ನಿಜ ಆತ್ಮನು ಅಡವೀಶ್ಯಾ ||ಪ||
ಎಲ್ಲಾ ದೇಶದಲ್ಲಿಯೂ| ನಾಮದ ಮಹಾತ್ತಲ್ಲಲ್ಲೆ ಪ್ರಭೆಯಿಹುದು|
ಬಲ್ಲಿದ ನಿನ್ನ ಕರುಣ ಕಟಾಕ್ಷದ|
ಪಲ್ಲವೆನ್ನಯ ಶಿರದಲ್ಲಿ ಇಡು ದೇವಾ ||1||
ಜೀವ ಶಿವನು ಜಗವು ಮೂರು ನಿನ್ನ ಭಾವದಿ ಆಗಿಹುದು|
ಕೇವಲ ಸುಖದಿಂದ ಗುರುಲಿಂಗ ಜಂಗ್ಮದಾ|
ಸೋವಿ ತಿಳಿದು ಭಕ್ತಿ ಧರಿಸಿ ಮರ್ತ್ಯಕ್ಕೆ ಬಂದಾ ||2||

ನಿಶ್ಚಯಾ ಸೋಮಶೇಖರ ನೀನು
ನಾಮ ಹಾಲೇ ನಿಶ್ಚಯಾ ಸೋಮಶೇಖರ ನೀನು
ಭೂಮಿಯೊಳೆಲ್ಲ ಕಾಣೆ ಈ ಮಹಾತ್ಮೆಯಾ ||ಪ||
ಮೊದಲೆ ಪ್ರಮಾಣವೆ ಹಾಲು ಚದುರ ದ್ವಿತೀಯ ದಧಿ
ವಿಧ ಮೂರರಲ್ಲಿ ಮಜ್ಜಿಗೆ ಬೆಣ್ಣೆ ವೇದಕ್ಕೆ ಸದಮಲ ಜ್ಞಾನಿ ಬಲ್ಲ
ಮದನ ಬಾಣವೆ ತುಪ್ಪಾ ಇದನರಿತವನು ತಿಳಿವನು ಐದು ನೀಡನೇ
ಮಿಂಚಿನ ಮೂಲದಿ ಸಂಚರಿಸುವ ಬಲ್ಲಾ
ಸಂಚಿತಾರಾಬ್ದಾಗಾಮಿ ಕಳದಂತ ಮಹಿಹಾ ||1||
ಹೆಸರಿಗೆ ಹಾಲಪ್ಪ ಹಸುವಿಗೆ ಮಜ್ಜಿಗಿಲ್ಲೆಂದು
ವುಸುರುವೆ ನಿನ್ನ ವಾಕ್ಯದಿ ನಿಜ ನಿಜವೈಯ್ಯ
ಶಿಶುವಿಗೆ ಹಾಲು ಬೆಣ್ಣೆ ತೃಪ್ತಿಗೆ ಮಜ್ಜಿಗೆ ಮೊಸರು
ಪಶುಪತಿ ಸರ್ವಕ್ಕೆ ತುಪ್ಪಾ ನೀಡುವೆವೈಯ್ಯಾ ||2||
ಹಾಲು ಮೊಸರು ಐದು ಕೀಲು ತಿಳಿದರೆ ಕರ್ತು
ಮೂಲ ಮಾರುತಿ ನಿನ್ನದೇ ಏನುಂಟೇನಿಲ್ಲಾ
ಜಾಲ ಮಾಯವ ತುಂಬಿ ಲೀಲ ತಿಳಿಯಗೊಡದೇ
ಕಾಲ ಕಾಲದಿ ಮೆರೆವಂಥ ಮಹಾತ್ಮ ನೀನೈಯ್ಯ ||3||
ನಿರುಪಾಧಿ ಅಡವೀಶನ ಗುರುತು ಬಲ್ಲವನೆ ಬಲ್ಲಾ
ನರಗುರಿಗೆಳೆಲ್ಲಾ ನಿನ್ನನು ಅರಿವರೇನೈಯ್ಯಾ
ಪರಮಾ ಯೋಗಿಯೆ ನಿನ್ನ ಪರಿಪೂರ್ಣವಾದಂತಾ
ಕುರುಹು ಕಾಣಿಸುವನೈಯ್ಯ ಸಾಕ್ಷಾತನೆಂದು ||4||

ನಿಜರೂಪ ಅಡವೀಶ
ನಿಜರೂಪ ಅಡವೀಶ ನಿಶ್ಚಯ ಶರಣನು ನಂಬಿ ಜೋಕೆ|
ಗಜಿಬಿಜಿಯಾದಿರಿ ಭಕ್ತಿಯ ಮರೆತರೆ ನಂಬಿ ಜೋಕೆ ||ಪ||
ಪ್ರಭುವಿನ ಅಪ್ಪಣೆ ಹಿಡಿದು ತಾ ಬಂದಾನೆ ನಂಬಿ ಜೋಕೆ|
ಮಹಾ ವಿಭವಗಳನು ಕೊಟ್ಟು ಸಂರಕ್ಷಿಸುತಾನೇ ನಂಬಿ ಜೋಕೆ|
ಕಬಲಾಗಬೇಕೆನ್ನು ಭಕ್ತಿಯ ಮಾರ್ಗಕೇ ನಂಬಿ ಜೋಕೆ|
ಮಹಾ ಶುಭ ಬೇಕಾದರೆ ಸೂಕ್ಷ್ಮವ ತಿಳಿಕೊಂಡು ನಂಬಿ ಜೋಕೆ ||1||
ಕಾಡೊಳು ಮನಿ ಮಾಡಿ ಕಾಡು ಬೇಡನು ನಂಬಿ ಜೋಕೆ|
ಲೀಲಾ ಆಡಲು ಬಂದಾನೆ ಸಲೆಯಂದು ತಿಳಕೊಂಡು ನಂಬಿ ಜೋಕೆ|
ಪಾಡದೆ ಯೀ ಕಾಯ ಮುಕ್ತಿಯ ಪಡಿಲಿಕ್ಕೆ ನಂಬಿ ಜೋಕೆ|
ನೀವು ಕೇಡಾಗಬೇಡಿರಿ ದಿನ ಮುಂದೆ ಕೆಟ್ಟಾವು ನಂಬಿ ಜೋಕೆ ||2||
ವರದ ಅಂಕಲಿನಾಥ ನಿರುಪಾಧಿ ಅಡವೀಶಾ ನಂಬಿ ಜೋಕೆ|
ಕಾಯವು ಸ್ಥಿರವಲ್ಲ ಈಗಲೋ ಆಗಲೋ ನಂಬಿ ಜೋಕೆ|
ಗುರು ಶಿದ್ಧಾ ದಯವಾಗೊ ಕಾವ್ಯವ ಕೇಳುತಾ ನಂಬಿ ಜೋಕೆ|
ಇದು ಖರಿಯ ನಿಶ್ಚಯವೆಂದು ಧರ್ಮದಿಂದಿರುವದು ನಂಬಿ ಜೋಕೆ| ||3||

ನಿನ್ನ ಖೂನವರಿತು
ನೀನೇ ಶಿವಾ ನೀನೇ ಶಿವಾ
ನಿನ್ನ ಖೂನವರಿತು ನಿಜ ಧ್ಯಾನದೊಳಿದ್ದರೆ ನೀನೆ ಶಿವಾ ||ಪ||
ವೇದಾಂತದೊಳು ಗೋಪ್ಯವಾದ ಅರ್ಥದೊಳು
ಸಾಧು ಶಿವನು ಎಂದು ಓದುವದರಿದರೆ ನೀನೆ ಶಿವ ||1||
ಗುರು ರೂಪವಾಗಿ ತಾ ಮರಳಿ ಬಾರದಂಥ
ಕುರುಹು ತಿಳಿದೂ ನಿಬ್ಬೆರಗಾಗಬಲ್ಲರೆ ನೀನೆ ಶಿವಾ ||2||
ಯೋಳು ಸೋಪಾನದ ಕೀಲನರಿದ ಮ್ಯಾಲೆ
ಮೂಲ ಮೂರತಿ ತಾನೆ ಲೀಲವಾಡುವ ವಸ್ತು ನೀನೆ ಶಿವಾ ||3||
ದೋಷವ ಕಳಕೊಂಡು ಆಶರಹಿತನಾಗಿ
ಪಾಶವ ಹರಿದು ತಾ ಈಶನಾಗಿರುತಿರೆ ನೀನೆ ಶಿವಾ ||4||
ತ್ರಿಪುಟಿಗಳಿರುವನು ಗುಪ್ತ ಭಾವದಿಂದ
ನಿಪುಣ ತನವ ಬಿಟ್ಟು ಸುಪಥದೊಳಾಡಲು ನೀನೆ ಶಿವಾ ||5||
ನಡೆ ನುಡಿಯೇಕಾದ ಗಡಣದೊಳಗೆ ತಾನೇ
ಮೃಢನೆಂದು ಶೃತಿ ಸಾರೆ ಪೊಡವಿಗೊಬ್ಬನೆ ದೇವಾ ನೀನೆ ಶಿವಾ ||6||
ನಿರುಪಾಧಿ ಅಡವೀಶ ಗುರುಲಿಂಗ ಜಂಗಮ
ಖರಿಯವೆಂದು ಯನ್ನ ಕರವನೆತ್ತಿದೆ ನಿಜ ನೀನೆ ಶಿವಾ ||7||

ನೀ ತವರ ಮನಿಯಂದು ಬಂದೆ
ನೀ ತವರ ಮನಿಯಂದು ಬಂದೇ ನಾನು ಬಾಳ ಸಂತೋಷಾ
ಯಾತಕ್ಕ ಅಂಟದಂತ ಅರವೀ ಕೊಡು ನೀನು ಬಾಳ ಸಂತೋಷಾ ||ಪ||
ಭಕ್ತಿಯಂಬೋ ಅಂಗಿಯ ಕೇಳುವೆನು ಬಾಳ ಸಂತೋಷಾ
ಯುಕ್ತಿಯು ಈ ಜಾಕೀಟಾ ದಾನ ಕೊಡರೀ ಬಾಳ ಸಂತೋಷಾ
ವ್ಯಕ್ತೆಂಬ ಸುಗುಣದ ಧೋತ್ರ ಬೇಗ ನೀಡಿ ಬಾಳ ಸಂತೋಷಾ
ವ್ಯಕ್ತೆಂಬೋ ಟೋಪಿ ಇಟ್ಟೆನ್ನ ಹರುಷ ನೋಡಿ ಬಾಳ ಸಂತೋಷಾ ||1||
ಧ್ಯಾನೆಂಬೊ ದೇಶದೊಳು ನಾನು ಹೊಗಳಿವೆನೂ ಬಾಳ ಸಂತೋಷಾ
ನೀನ್ಹಿಂದೆ ತೊಟ್ಟುಬಿಟ್ಟಂತ ಮೈಲಿಗೆಯನು ಬಾಳ ಸಂತೋಷಾ
ತಾನಾದ ಗುರುತು ಕೊಡುಯೆಂದು ತನ್ನ ಬೇಡಿ ಬಾಳ ಸಂತೋಷಾ
ಖೂನಾಗಬೇಕು ಗ್ನಾನೆಂಬ ಪ್ರಭೆಯು ನೋಡಿ ಬಾಳ ಸಂತೋಷಾ ||2||
ದೂರಿಂದ ಸುದ್ದ ಕೇಳುತ ಬಂದೆನೈಯ್ಯಾ ಬಾಳ ಸಂತೋಷಾ
ತೂರ್ಯಾತೀತ ಕೊಟ್ಟೆನ್ನ ರಕ್ಷಿಸೈಯ್ಯಾ ಬಾಳ ಸಂತೋಷಾ
ತಾರಕ ಸಾಂಖ್ಯ ಅಮನಸ್ಕ ಅಡವೀಸಿದ್ಧಾ ಬಾಳ ಸಂತೋಷಾ
ಪೂರ್ಣದ ಬ್ರಹ್ಮ ನಿರುಪಾಧಿ ಮೂರು ಗೆದ್ದ ಬಾಳ ಸಂತೋಷಾ ||3||

ನೀನೆ ತಿಳಿಯೋ ನಿನ್ನೊಳು
ನೀನೆ ತಿಳಿಯೋ ನಿನ್ನೊಳು
ತಿಳಿಯೋ ನಿನ್ನೊಳು ತಿಳಿಯೋ ||ಪ||
ಜಗದ ಆಟದೊಳಗೆ ಸೂಕ್ಷ್ಮ
ಬಗೆಯನರಿದು ನುತಿಸೆ ಮಗುವಾ
ಸುಗುಣರೆನಿಸಿ ಜೀವರೊಳಗೆ
ನಗೆಗೀಡಾಗದಿರುವ ಭಾವ ||1||
ಸುಖದ ಸಕಲ ಜೀವ ಪುತ್ರನಿಂದು
ಸಕಲ ಜೀವ ಪುತ್ರನಿಂದು
ವಿಕಳ ಮತಿಗಳೆಲ್ಲ ಕೂಡಿ
ನಕಲಿ ಆಡ್ಯಾರೆಂಬೊ ಭಾವ ||2||
ಗುರುವು ನಿರುಪಾಧಿ ನೀನು
ಪರಮ ಸಾಧು ಅಡವಿಸಿದ್ಧಾ
ಪೊರೆಯಬೇಕು ಕಾಲ ಕಾಲ
ಬಿರದು ಸ್ತುತಿಪ ತೊತ್ತುಯಂದು ||3||

ನೀನೆ ದೇವಾ
ನೀನೆ ದೇವಾ ನಿನ್ನಾಟದ ಲೀಲವಾ
ತಾನೇ ತಾನಾದ ಪುರುಷಗೇ ಬೇಗೇ ತೂಗೇ
ಆನಂದವಾಗೇ ಹಾ ಆನಂದವಾಗೆ
ಮಾನನಿಧಿ ನೀ ಮೌನ ಯೋಗದಿ
ಖೂನವಡಗಿಸಿ ಲೋಕದವರಿಗೆ
ಸ್ವಾನುಭಾವಿಯಾದ ಪರಿತಾ
ಯೇನು ಬಲ್ಲರು ಮೂಢಮತಿಗಳು ||ಪ||
ಹಿಂದೆ ಮಾಡಿದ ಪುಣ್ಯದ ಫಲದಿಂದೇ ಬಂದೇ ನಿಂದೇ ಪಾದದ ಮುಂದೆ
ಚಂದವಾದಾ ವಸ್ತು ನಿನ್ನ ನೋಡಿ ಹಾಡೀ ಕೂಡಿ ಮುಕ್ತಿಯ ಬೇಡೀ
ಕುಂದು ಕೊರತೆ ಗುಣಗಳನ್ನು ನೀಗಿ ಯೋಗೀ ಭೋಗೀ
ಆನಂದವಾಗೀ ಹಾ ಆನಂದವಾಗೀ
ದುಂದು ನುತಿಸಿದೆ ಅ,ಕ,ಚ,ಟ,ತ,ಪ,ಯ,ಸ ವಂದು ಅರಿಯದೆ ಬಾಲ ಲೀಲದಿ
ಬಂಧು ಬಳಗಾ ಸಾಧು ಯನುತಲಿ ಯಂದ ವಚನ ಬಲ್ಲಗಾರಗೆ ||1||
ಸಾಧು ನಿಂತ ಜಾಗ ಕೈಲಾಸಾ ವಾಸಾ ಯೀಶ್ಯಾ ಭಕ್ತರ ಪೋಷಾ
ಭೇಧ ಭೇಧಗಳೆಲ್ಲ ಹೋದಂತಾ ಶಾಂತಾ ಕಾಂತಾ ನೀನೇ ಕಾಂತಾ
ವಾದ ವರ್ಜಿತವಾದ ಗುರುಮೂರ್ತಿ ಕೀರ್ತಿ ಪೂರ್ತಿ
ಜಗವೆಲ್ಲವಾರ್ತಿ ಹೌ ಜಗವೆಲ್ಲವಾರ್ತೀ
ಖೇದ ಮೋದಗಳಿಲ್ಲದ ಚಲಿತ ನಾದಬಿಂದು ಕಳಾ ಸ್ವರೂಪನೆ
ಆದಿ ಮಾರುತಿ ಬ್ರಹ್ಮನಾದನು ಶೋಧ ಮಾಡಲು ಸಾಕ್ಷಿ ರೂಪನೂ ||2||
ಯೇಕ ದ್ವಂದ್ವ ಮೂರು ನಾಲ್ಕೈದು ತಿಳಿದೂ ಆರನ್ನು ಅಳಿದು
ಜೋಕೆಯಿಂದಲಿ ಯೊಳರೊಡಗಾಡೀ ನೋಡಿ ಕೂಡೀ ಅದರಂತೆ ಆಡೀ
ನಾಕ್ಲೋಕ ಮೀರಿ ಬೈಲಾಟ ನೀಟಾ ಸೋಟಾ ಯಂಟರೊಳು ಕೂಟಾ
ಹಾಯೆ ಎಂಟರೊಳು ಕೂಟ
ಯಾಕೆ ಹೇಳಲಿ ವಂಭತ್ತಾಗಲೂ ಯೇಕ ಸೂನ್ಯದಿ
ಮಾಡ್ವ ಗಣನೀಯಾ ಜೋಕು ಅರಿದರೆ
ವಬ್ಬ ತಾನಿರೆ ಲೋಕ ರಂಜನೆ ತೋರಿತೆಂಬಗೇ ||3||
ಆರು ಕರ್ಮಾ ಮೀರಿದ ಜ್ಞಾನಾ ಖೂನಾ ಧ್ಯಾನಾ ಕೇವಲ ಮೌನಾ
ಶೇರಿ ವುನ್ಮನಿ ಚಿನ್ಮಾತ್ರದಿರವೂ ಅರವು ಮರವೂ
ಯರಡಳಿದ ಪರವೂ ಕಾರ್ಯ ಕಾರಣ
ಮೀರಿದಾನಂದಾ ಚಂದಾ ದುಂದಾ ತೋರಿಕೆ ಸುಳ್ಳೆಂದಾ
ಹಾ ತೋರಿಕೆ ಸುಳ್ಳೆಂದಾ
ಪಾರ ಮಹಿಮಾ ಹೇಕಬ್ರಹ್ಮದ ಸಾರವರಿದು ಸಾಕ್ಷಿಯಾದ
ಧೀರ ಗುರುವಿನ ಹೊಂದಿ ತಾನೇ ಪೂರ್ಣನಾಗಿ ನಿಂದ್ರಬಲ್ಲ ||4||
ಕಾಲ ಕರ್ಮಾತೀತ ತಾನೆಂದೂ ಅಂದೂ ಯಿಂದೂ ಯೆಂದೆಂದು ಅಂದು
ನಾಲ್ಕವೇದಾರು ಶಾಸ್ತ್ರದಿ ಓದೀ ಬೆದಿಸಿದವನಾದಿ
ಕೀಲು ಸರ್ವ ಬ್ರಹ್ಮನದಾಟ ತಾಟಾ ನೀಟಾ ಅರಿಯದೆ
ಭವದಾಟಾ ಹಾ ಅರಿಯದೆ ಭವದಾಟಾ
ಮೂಲ ತಾ ನೆಲೆ ಮೂರುಲಾಗಿಹ ಲೋಲ ಅಡವಿಯ ಸಿದ್ದಲಿಂಗನೆ
ಜ್ಯಾಲ ನಿರುಪಾಧಿ ತನ್ನದು ಆಲಯವ ನಾನೇನು ವರ್ಣಿಪೇ ||5||

ಪರಮ ಗುರುವರ ನೀನೂ
ನೋಡಿದೆನು ನಾ ನಿನ್ನ ಗುರು ಬಂಧು ಯಂದು
ಹಾಡಿದೆನು ಸಂಪನ್ನಾ ಸಲಹೈಯ್ಯಾ ಯನ್ನಾ
ಪೀಡಿ ಸಂಸಾರ ಬಹಳ ಬಗಿಯಲಿ
ಕಾಡುವದು ಯಿದಕೇನು ಗತಿಯಿಂದ್ಹೇಡಿಗೊಂಡಾ
ಮನ ಮನಕೆ ಧೈರ್ಯವ ನೀಡಿ ನಿಜ ಸುಖವ ಮಾಡು ಸಿದ್ದನೇ ||ಪ||
ವಡಿಯ ನಿನ್ನಯ ಮೂರ್ತಿ ದೇಶದೊಳು ನಾಮದ
ಸಡಗರವು ಸಂಪೂರ್ತಿ ತುಂಬಿಹುದು ವಾರ್ತಿ
ಮೃಢನು ಈತನು ಶ್ರೇಷ್ಠ ಶಿವನೆಂದಡಿಗಡಿಗೆ ನುತಿಸುವುದು ಕೇಳತಾ
ಅಡಿಯ ಧ್ಯಾನದಿ ಬಂದು ಕಂಡೆನು
ಇಡು ಕರುಣ ಕಾಯ ಇರುವ ಪರಿಯಲಿ ||1||
ಕಾಲ ಕಾಲ ದೇವಾ ಶಿವ ಶರಣನೆಂದು
ಹೇಳುವತಿ ನುಡಿ ಭಾವ ಸರ್ವರನು ಕಾವಾ
ಕೀಲುಯಿಲ್ಲದೆಯಂದು ಶೃತಿ ನಿಜ ಲೀಲವರಿತೆನು ದರುಶನಾಗಲು
ಮೂಲಯಿವನೆಂತೆಂದು ಕಂಡಾ
ಆಲಯವ ನಾನೇನು ವರ್ಣಿಪೇ ||2||
ಪರಮ ಗುರುವರ ನೀನೂ ಅಂಕಲಗಿ ಮಠದೊಳು
ಹರುಷವತಿ ಸುರಧೇನು ನಾನಾಡಲೇನೂ
ಅರವು ಮರವಿಯ ನೋಡದಲೇ ಯನ್ನಾ
ಶರೀರ ಸುಖ ದುಃಖ ನೋಡಿ ರಕ್ಷಿಸು
ಚರಣ ಧೂಳಿಯು ಬೇರೆ ಅಲ್ಲವು ನಿರುಪಾಧಿಯೇ ನೀ ಅಡವೀಪಾಶ್ಚನೆ ||3||

ಪರ ಶತ್ರುಗಳ ಭಯ
ಗುರುಬ್ರಹ್ಮಾ| ಸರ್ವರಿಗೂ ಶ್ರೀ| ಗುರು ಪರಬ್ರಹ್ಮಾ ||ಪ||
ಗುರುವೇ ಸಾಕ್ಷಾತ್ ಬ್ರಹ್ಮನಲ್ಲದೆ ಬೇರಿಲ್ಲ|
ಪರತತ್ವವೆಲ್ಲ ಪ್ರಕಾಶ ಮಾಡವನಾಗಿ ಗುರು ಪರಬ್ರಹ್ಮಾ ||ಅ.ಪ||
ಭವ ಬೀಜವ ಸುಡುವ| ಇಷ್ಟಾರ್ಥವ| ಜವದಿ ಪಾಲಿಸುವ|
ಶಿವ ಪಂಚಾಕ್ಷರಿ ಮಂತ್ರಗೌಪ್ಯದಿಂದರುಹುತೆ
ನವವಿಧ ಭಕ್ತಿಯ ರಸದಿ ಮುಳುಗೆಂಬುವ| ಗುರು ||1||
ನರಲೋಕ ಸುಖವು| ಭೋಗ ರೋಗ| ದುರಿತ ಭಯವು|
ದುರುತ ಭಯವು| ವರಯಿಂದ್ರ ಪದವಿಯು| ಪರಶತ್ರುಗಳ ಭಯ|
ಪರಶತ್ರುಗಳ ಭಯ|
ವುರು ವೈರಾಗ್ಯೊಂದೇ ನಿರ್ಭಯವೆಂದು ಭೋದಿಪ| ಗುರು ||2||
ಆಲೆಯ ನಿಲಿಸೀ| ಅಜ್ಞಾನದ ಮೂಲವ ಕೆಡಿಸಿ|
ನಿಲ ತೋಯದ ಮದ್ದ್ಯ ಆಪೊ ಜೋತಿಯನು|
ಲೀಲೆಯಿಂ ತಾರಕ ತ್ರಯದಿ ಸೂಚಿಸುವಂತ| ಗುರು ||3||
ಧರೆ ಮೊದಲಾದ ಭೂತಗಳಿಂದ
ವಿರಚಿತಮಾದ ನೆರೆ ಪಂಚವಿಂಶತಿ| ತತ್ವಸಂಕುಳವೆಲ್ಲಾ
ವರಸಾಂಖ್ಯ ಯೋಗದಿ ವಿವರಿಸಿ ಹೇಳುವ| ಗುರು ||4||
ಮರವೆಯ ತೇಗಿಸೀ| ಬ್ರಹ್ಮಜ್ಞಾನ| ದರುವಿನೊಳಿರಿಸೀ|
ಗುರು ಮಹಾ ಅಡವೀಶಿದ್ದನೆ ನೀನೆಂದರುವಿತ್ತು|
ವುರುತರದ ಮನಸ್ಕ ಮುದ್ರೆ ಸೂಚಿಸುವಂತ| ಗುರು ||5||

ಪರದೇವಾ ಪರುಷದ ಖಣಿಯೇ
ಪರಿಪರಿಯ ಹೊಗಳಲಾರೆನು ಅಡವೀಶನಾಟ
ಗುರುತು ಬಲ್ಲವರು ತಿಳಿವರು ಸಾಕ್ಷತನ ಲೀಲಾ ||ಪ||
ಕುಂದರ ನಾಡಿನೊಳಗಿಹ ಕೋಮಲ ಮೂರ್ತಿ
ಚಂದ ಕಾಣುವದು ನೋಡಲಿಕೆ ಸಾಕ್ಷಾತನ ಲೀಲಾ
ಸಂದೇಹ ಬೇಡಿ ಪ್ರಭುಯೀತಾ ಬಂದಂತ ಕುರುಹು
ನಿಂದ್ಯ ಪ್ರಾಣಿಗಳರಿಯರೂ ಸಾಕ್ಷಾತನ ಲೀಲಾ ||1||
ವಸ್ತು ರೂಪನೆ ಓಂಕಾರ ಬೀಜಾಕ್ಷರಾ
ಮಸ್ತಲಿದ್ದವರ ಸಂಹಾರ ಸಾಕ್ಷಾತನ ಲೀಲಾ
ವಿಸ್ತಾರ ಪೂರ ಶೃಂಗಾರ ನೀ ಪಾರಾವಾರ
ಅಸ್ಥಿಯಂದವರ ವುದರ ಸಾಕ್ಷತನ ಲೀಲಾ ||2||
ಕೋಮಲ ಮೂರ್ತಿ ಶಂಕರನೂ ತಾನೆ ಕಿಂಕರನೂ
ಸೋಮ ಸೂರ್ಯಾನ್ನೇತ್ರನೇ ಸಾಕ್ಷಾತನ ಲೀಲಾ
ನಾಮರಹಿತನೇ ನಿಜ ಗುರುವೆ ನಾನಾ ಚಮತ್ಕಾರ
ಸೀಮೆರಹಿತನೆ ನಿಶ್ಯೀಮಾ ಸಾಕ್ಷಾತನ ಲೀಲಾ ||3||
ದೇವ ದೇವೇಶ ಸರ್ವೇಶ್ಯಾ ಜಗದೊಳಗೆ ಬಂದು
ಭಾವ ವಂದಕ್ಕೆ ವಲಿವನು ಸಾಕ್ಷಾತನ ಲೀಲಾ
ಕೇವಲ ಕೀರ್ತಿ ಪ್ರಖ್ಯಾತಾ ನಾ ತೊತ್ತು ನಿನಗೇ
ಆವ ಕಾಲದಲಿ ಕಾಯುವದು ಸಾಕ್ಷಾತನ ಲೀಲಾ ||4||
ಪರದೇವಾ ಪರುಷದ ಖಣಿಯೇ ರಾಜ್ಯಕ್ಕೆ ಧೊರಿಯೇ
ಚರಣ ಕಿಂಕರನು ನಾನೈಯ್ಯ ಸಾಕ್ಷಾತನ ಲೀಲಾ
ಗುರುಲಿಂದ ಜಂಗಮಾದವನೇ ಗತಿಮತಿಗೆ ನೀನೇ
ಹರಣ ಭಾರವು ನಿನ್ನದು ಸಾಕ್ಷಾತನ ಲೀಲಾ ||5||
ಅಕಲಂಕ ಮಹಿಮಾ ಆನಂದಾ ಆದಿ ಮಾರುತಿಯೆ
ಸುಖದುಃಖ ನಿನ್ನ ಚೇತನವು ಸಾಕ್ಷಾತನ ಲೀಲಾ
ಮುಕುತಿಗೊಡೆಯನೆ ಮಹಾದೇವಾ ಯೇನನೂ ಅರಿಯೆ
ಯುಕತೀ ನಿನ್ನನು ತಿಳಿಯಲಿಕೆ ಸಾಕ್ಷಾತನ ಲೀಲಾ ||6||
ಜಯ ಮಹಾದೇವ ಸಾಂಬಶಿವ ಸಗುಣ ನಿರ್ಗುಣನೆ
ಭಯಹರ ಭಕ್ತ ಪೋಷಣ ಸಾಕ್ಷಾತನ ಲೀಲಾ
ಪ್ರಿಯವಾದ ರೂಪು ನಿರೂಪು ನೀನೇ ಸರ್ವೆಲ್ಲಾ
ನಯನ ಮಾನಸಕೆ ನಿಲ್ಕದವನೇ ಸಾಕ್ಷಾತನ ಲೀಲಾ ||7||
ನಮೋಯೆಂಬೆ ಆದಿ ಅನಾದಿ ನೀನೇ ಮಹದಾದಿ
ನಮೋಯೆಂಬೆ ನಾನಾ ರೂಪಕನೆ ಸಾಕ್ಷಾತನ ಲೀಲಾ
ನಮೋಯೆಂಬೆ ನಾನು ಅನಾಥ ನೀ ಅಂತಃಕರುಣಿ
ನಮೋಯೆಂಬೆ ನಿತ್ಯ ನಿತ್ಯದಲೀ ಸಾಕ್ಷಾತನ ಲೀಲಾ ||8||
ತ್ರಾಹಿ ನಾ ನಿನ್ನ ಸೇವಕನು ಯೆನ್ನೊಡೆಯ ನೀನೇ
ತ್ರಾಹಿ ಸರ್ವೇಣಾ ಮಾಂ ಪಾಹಿ ಸಾಕ್ಷಾತನ ಲೀಲಾ
ತ್ರಾಹಿ ನಿರುಪಾಧಿ ಅಡವೀಶಾ ಅಂಗಲಗಿ ವಾಸಾ
ತ್ರಾಹಿ ಅಪರಾಧವ ಕ್ಷಮಿಸುವದು ಸಾಕ್ಷಾತನ ಲೀಲಾ ||9||

ಪರಮ ಶ್ರೀಗುರು ಮಾರುತೀ
ಪರಮ ಶ್ರೀಗುರು ಮಾರುತೀ| ನಿನ್ನಯ ಮಹಾ
ಬಿರದೀನ ಮಗನು ನಾನು
ಕರುಣವಿರಲೈ ಘಟವು ಯಿಹಪರಿ
ಹರನ ನಾಮದಿ ಮೆರೆಯಂದ್ಹಾಡಿದಾ
ಕುರುಹಿಗೆಯು ಕೊರತಿರದೇ
ಕಡಿಯಲಿ ಚರಣದೊಳು ಐಕ್ಯವನು ಮಾಡಿಕೋ ||ಪ||
ಕಾಲ ಕಾಲದಿಂದಲೀ| ನಿನ್ನಗೆ ನಾನು
ಬಾಲನಾಗಿಹ ಕಾರಣಾ| ಲೀಲವ ಹೊಗಳುವೆನು
ತಿಳಿದು ನೋಡೋ| ಬಾಲ ಚಂದ್ರಾಧರನೇ
ಮೂಲ ನೀನೆಲೆ ಮೂರು ಲೋಕಕೆ|
ಜ್ಯಾಲಮಾಯವ ತುಂಬಿ ನಿಜ ಸುಖ
ಆಲಯದಿ ನೀನಿರುತಿ ಅರಿತೆನು ಕಾಲ ಕರ್ಮಾ ಹರಿಯೋ ಪತಿತನೇ ||1||
ಕೊಡು ಸುಖಮಯ ಸಾಧನಾ| ತನುವಿಹಪರಿ ಯಿಡು ನಿನ್ನ ಸ್ಮರಣೆಯೊಳು
ಬಡವನ ಭಾಗ್ಯದಲೇ ಸಾಧುರ ಸಂಗ ಬಿಡುಗಡಿಲ್ಲದೆ ನಡೆಸೂ
ಪೊಡವಿ ಜನಗಳ ಬೇಡಲಾರೆನು| ಅಡಿಯ ಧ್ಯಾನವು ಅರ್ಥಿ ಕಾಣ್ವದು ವಡಿಯ ನೀನೈ
ನಾನು ಸೇವಕ ಬಿಡದೆ ರಕ್ಷಿಸೋ ಭಾರ ನಿನ್ನದು ||2||
ಜನರರಿಯರು ನಿನ್ನಯಾ ಗುಪ್ತ ಲೀಲಾ| ಘನವರಿತಾಡುವರೂ
ಘನ ಗುಣಗಳು ಬಲ್ಲರೂ| ನೀ ಬಂದಂಥಾ ಚಿನುಮಯ ಚಿದ್ವಿಲಾಸಾ ಘನಕೆ ಘನಕೆ
ಘನವಾದ ಮಹತ್ಮೆಯ| ಸುನಯಾಸದಿ ನೀ ನುಡಿಸಿದಂದದಿ ತನು ಮನವು ನಿನದೆಂದು
ಸರ್ವಧಾ| ವಿನಯದಿಂ ಕೊಂಡಾಡಿದೆನು ಹರಾ ||3||
ನರಕ ಸ್ವರ್ಗವನು ವಲ್ಲೇ| ಈ ಜಗದೊಳು ಧೊರಿತನ ಕಿರಿತನವು
ಬರೆ ಕಷ್ಟವಲ್ಲದಲೆ ನಿನ್ನ ದಿವ್ಯ| ಚರಣ ಸ್ಮರಣೆ ಸಮವೇ
ಬರಿದೆ ಆರು ಕರ್ಮ ಫಲವದು ತರುವದೈ| ಮರಳಿ ಮರಳಿ ಜನನಕೆ ಹರುಷ ನಿನ್ನಯ
ತೇಜ ಜ್ಞಾನದ| ಗುರುತಿನೊಳು ಮೈಮರವದುತ್ತಮಾ ||4||
ದೇವಾ ಅಂಕಲಗಿ ವಾಸ ಅಡವಿಸಿದ್ಧಾ| ಜೀವ ಶಿವನು ನೀನಾದಾ
ಓವಿ ಅರಿದವನೆ ಮುಕ್ತಾ| ಜನ್ಮವು ನಾಸ್ತಿ ಸಾಹು ಹುಟ್ಟುಗಳಿಲ್ಲವೂ ನೋವು ಸಂಕಟ
ಹೋಗಿ| ಆನಂದಾವ ಕಾಲದಿ ಮೆರೆವ ನಿಜ ನಿಜ ನೀವು ಹೇಳಿದ ಪೂರ್ಣ ಬೆಳಕಿನ|
ಭಾವದೊಳು ನಿರುಪಾಧಿ ಯೆನಿಸುವಾ ||5||

ಪೊರೆಯೊ ಯನ್ನ ಕರುಣಾಕರನೇ
ಪೊರೆಯೊ ಯನ್ನ ಕರುಣಾಕರನೇ ಚರಣ ಧೂಳಿಯೋ
ನಾನು ಮರೆಯ ಹೊಕ್ಕೆ ಪೂರ್ಣಬ್ರಹ್ಮ ನಿತ್ಯ ಮುಕ್ತಿಯಲೀ ||ಪ||
ಆನೆ ಕಡೆಯು ಇರುವೆ ಮೊದಲು ನೀನೆ ನೋಡಿದರೇ ಇಹುದು
ನೀನೇ ಇಲ್ಲದಿರಲೂ ಇಲ್ಲಾ ತಾನೆ ಶಿವ ನಿಜವೂ
ಮೌನಿ ನಿನ್ನ ಲೀಲದಾಟಾ ಸ್ವಾನ ಬಲ್ಲದೇ ಮರವೆ
ಜ್ಞಾನ ಹೀನ ಜನಗಳೆಲ್ಲಾ ತನ್ನ ಬಲ್ಲಾರೇ ||1||
ಘಟಕೆ ನೇತ್ರ ಸಾಕ್ಷಿ ಹ್ಯಾಗೊ ಕುಟಿಲ ಕಾಣಲಿಕೇ ತಾನೇ
ಕುಟಿಲ ದರ್ಪಣವು ತಿಳಿಯೆ ಸ್ಫಟಿಕ ಮಣಿಯಂತೆ
ಘಟವ ನೋಡುತಲಿ ತಮ್ಮಾ ಹಟದ ಪರಿಯಂತೆ ಗುರುತು
ನಿಟಿಲಾಕ್ಷಿವನೂ ಶಿವಯೋಗೀಶಾ ಸಟೆಯಲ್ಲೆ ದೇವಾ ||2||
ತನ್ನಾಭಜಿಸಿ ತನ್ನ ತಿಳಿದು ತಮ್ಮ ಬಲ್ಲವಾಗಿ ನಿನ್ನಾ
ಯನ್ನುತಿಹನು ಶಿವನು ಈತಾ ಸರ್ವರಾಧಾರಾ
ಭಿನ್ನ ಭಾವಿ ಕರ್ಮಿ ಜನರೂ ನಿನ್ನ ಕಾಣುತಲೀ ಯಾರೋ
ಯನ್ನ ಮನಕೆ ತೋಚದೆಂದು ಅನುವಾ ನುಡೀ ||3||
ನೀನೆ ಮನಕೆ ತಂದು ಯನ್ನ ಮಾನ ಅಭಿಮಾನಾ
ಆನೇನು ಹೇಳಲಯ್ಯ ಭಕ್ತಿಕಾಯ ತಾಳೀದೀ
ಸ್ವಾನುಭಾವಿ ಅಡವಿಸಿದ್ಧಾ ತಾನೆ ನಿರುಪಾಧಿವೇದ
ಖೂನವಾದ ಗೌಪ್ಯ ನುಡಿಯಾ ನುಡಿದೇ ನುಡಿದಂತೆ ||4||
ಮರ್ತ್ಯದೊಂದು ಮುಂದೆ ತಿಳಿದೂ ಗುರ್ತು ಕಾಣಿಸಿತೂ ಪೂರ್ವಾ
ಕರ್ತಲೋಚನಾದಂತೆ ಅಣುವ ಮರ್ತು ಹಾಡಿದರೂ
ಅರತು ಅರಿದ್ಹಾಡಿದಂಥಾ ಗುರ್ತು ನೀನಯ್ಯಾ ದೇವಾ
ಕರ್ತು ನೀನು ಅಡವಿಸಿದ್ಧಾ ಕರ್ತು ನಿರುಪಾಧಿ ||5||

ಬಸವಂತನ ಹಬ್ಬಾ ದುಂದುಮೆ
ಬಂತು ಬಾರೊ ಬಸವಂತನ ಹಬ್ಬಾ ದುಂದುಮೆ ||ಪ||
ಅಡವೀಶ ಆಡುವ ಲೀಲವ ಕೇಳಿ
ಸಡಗರ ಸೌಖ್ಯದಿಂದಲಿ ಬಾಳಿ
ತಡವಿಲ್ಲ ದಿನಗಳು ಅರುವು ತಿಳಿಯಬೇಕು
ವಯಡಿನ ಬಿಟ್ಟರೆ ಗತಿಯಿಲ್ಲವಣ್ಣ| ದುಂದುಮೆ ||1||
ಭಕ್ತಿ ಮಾರ್ಗದ ಮುಕ್ತಿಯ ತಿಳಕೊಂಡು
ಶಕ್ತರಾಗಬೇಕು ಗುರುಪಾದಕೇ
ಫೋಕ್ತು ನಿಲ್ಲುವಂತ ಹಾದಿ ತಿಳಿಯಬೇಕು
ಮುಕ್ತಿ ಮಮಾರ್ಗ ತೋರಲಿ ಬಂದನಣ್ಣ| ದುಂದುಮೆ ||2||
ಸೌಮ್ಯ ಮೊದಲು ಸಾಧಾರಣ ದಿನ ಬಂತು
ಕಮ್ಮೈದ ಗುಣಗಳ ಕಡಿಯಬೇಕು
ಹಮ್ಮು ಕ್ರೋಧ ಲೋಭ ನಾಶವಾಗಿ ಮುಂದೆ
ವಮ್ಮನವಾದರೆ ವಳಿತಾದಿರಣ್ಣ| ದುಂದುಮೆ ||3||
ಗರ್ವ ಬಿಡಲೀ ಬೇಕು ಕರ್ತನಾಟ ಬಂತು
ಇರಲಿಕ್ಕೆ ದಿನವಿಲ್ಲ ಅಸ್ಥಿರವೂ
ಅರುವಿಲೆ ಆನಂದ ಗುರುತಿಗೆ ಮುಟ್ಟಿರಿ
ಧರೆಯಾಟ ಸಮೀಪ ಮರಿಬೇಡಿರಣ್ಣ| ದುಂದುಮೆ ||4||
ಸುಖದ ಇಚ್ಛೆಗೆ ನೀವು ಮನವಿಡಬೇಕು|
ಅಕಲಂಕ ಆತ್ಮದೋರುವ ಸತ್ಯವು
ಲಕಲಕ ಗುರುವರ ನಿಸ್ಸಂಗ ತಿಳಿಸುವ
ಶಕುಲಾತಿ ವಾಸನ ಹೋಗೋದಂಣ| ದುಂದುಮೆ ||5||
ಆನಂದನಾಗಿ ಆಮೇಲೆ ತೂರ್ಯದಿಂದ
ಸ್ವಾನುಭಾವದ ಮದವೇರುವದು
ಯೇನು ಹೇಳಲಿ ತೂರ್ಯತೀತದ ಸುಖವನ್ನು
ಜ್ಞಾನಿಯೆನಿಪ ಮುಕ್ತಿಪರ ಕೇಳಿರಣ್ಣ| ದುಂದುಮೆ ||6||
ಶ್ರವಣವೆ ಬೀಜ ಮೂರು ಜ್ಞಾನ ತಿಳಿಯಲಿ
ಸುವಿವೇಕವಾಗೋದು ಸೂಕ್ಷ್ಮದಿಂದ
ವಿವರಿಸೆ ಮೂಲ ಮೇಲು ಕಾಲಜ್ಞಾನವು
ಸವನಿಶಿ ತನ್ನ ಕಾಂಬುವದಣ್ಣಾ| ದುಂದುಮೆ ||7||
ಈ ಕಾರ್ಯಕ್ಕಾಗಿ ಬಂದನು ಅಡವೀಶನು
ಜೋಕೆಯಿಂದಲಿ ತಿಳಿದರೆ ಸುಖವೂ
ಯೇಕಮೇವಾತ್ಮೆಂಬ ಬಿರದು ಧರಿಸಿ ಬಂದು
ಲೋಕೇಶ ಈತನು ನಂಬ ಬೇಕಣ್ಣ| ದುಂದುಮೆ ||8||
ಆದಿ ಶರಣನು ಬಂದಾ ಅನ್ನದಾನಿಯು ಬಂದಾ
ಶೋಧನ ಮಾಡಿರಿ ಮರತು ನೀವು
ಘಾಸಿಯಾಗುವದೇಕೆ ಘಟ ಸ್ವಲ್ಪು ಆಯುಷ್ಯ
ಭೇದಿಸಿ ನೋಡಿರಿ ಸುಖವಾದಿತಣ್ಣ| ದುಂದುಮೆ 9||
ಮೂರು ಅಕ್ಷರದಾತಾ ನಾಲ್ಕಕ್ಷರಕೆ ಬಂದಾ
ಸಾರಜ್ಞರರಿವರು ಸಂಜ್ಞೆಯನ್ನು|
ಧೀರತನ ಗರ್ವ ಮಾಡಲು ಕೆಟ್ಟೀರಿ
ಮಾರಹರನು ಅಡವೀಶ ಕೇಳಿರಣ್ಣ ದುಂದುಮೆ ||10||
ಕುಂದರ ನಾಡೊಳು ಬಂದವುತ್ತುಂಬಿ
ಹೋದಾನು ತಾನೇಕ ಜನರ ಸಂಗಾ
ತಂದೆ ಈತನೆಂಬೋ ಗುರುತಿನ ಭಕ್ತರು
ತಂದಾರು ಬೈಲಿಗೆ ಸಾಕ್ಷಾತನಣ್ಣ| ದುಂದುಮೆ ||11||
ಕಾರ್ಯ ಕಾರಣವನ್ನು ತಿಳಿಯಗೊಡದಲೆ
ತೂರ್ಯಾತೀತಾವಸ್ಥೆಯೊಳು ನಿಂತಿಹ
ಪ್ರೇರ್ಯ ಪ್ರೇರಕತ್ವ ಎರಡಾಗಿ ಹೊರಗಾಗಿ
ಸೂರ್ಯ ಕೋಟಿ ಪ್ರಭೆ ಶಿವಯೀತನಣ್ಣ| ದುಂದುಮೆ ||12||
ಶಿವಶಿರಿಯಲ್ಲಿ ವೈರಾ ವರ್ಗ ಇಲ್ಲೆಂದು
ಸುವಿವೇಕ ವೇದ ಆಗಮದೊಳಗೆ
ವಿವರಿಸೆ ಅಡವೀಶಾ ಇರುವಂಥ ಸ್ಥಳದಲ್ಲಿ
ಕವಲಿಲ್ಲ ಯೇಕದಿಂ ಸಾಗುವದಣ್ಣ| ದುಂದುಮೆ ||13||
ಇದರಂತೆ ತಿಳಕೊಂಡು ನಂಬಲಿಬೇಕು
ಚದುರಾದ ಜ್ಞಾನ ಪುರುಷರೆಲ್ಲ ಮರವು
ಹೋದರ ಮಹಾಗುರುವು ವಲಿವನೆಂದು
ವಿಧವಿಧವಾದ ವೇದ ವಾಕ್ಯವಣ್ಣ| ದುಂದುಮೆ ||14||
ಚ್ಯಾಟಕತನಗಳು ಬಿಡಬೇಕು ಮುಂದೆ
ನೀಟಾಗಬೇಕು ಭಕ್ತಿಯ ಮಾರ್ಗಕೆ
ಕೋಟಲೆ ಕಳೆವಾನು ಭವ ಭವ ತಿರುಗುವ
ಪಾಟ ಕೆಡಿಸಲಿಕ್ಕೆ ಅಡಿವೇಶನಣ್ಣ| ದುಂದುಮೆ ||15||
ಈತನ ಆಟದ ರೀತಿಯು ತಿಳಿಯದು ಜನಕೆ ಕೋತಿ
ಮನುಜರರಿವರು ಸಾಂಬನ
ಪ್ರೀತಿ ಇಟ್ಟರೆ ಮೋಕ್ಷ ಸಾಧನ ತೋರುವಾ
ನಾಥ ಅಡವೀಶನೆ ಶವ ನಂಬಿರಣ್ಣ| ದುಂದುಮೆ ||16||
ನಾಮ ರಹಿತ ನಿಶೀಮ ಬಂದ ಗುರುತು
ಕಾಮ್ಯ ಕರ್ಮಗಳು ಎಂದೆಂಬುವಾ
ಭೂ ಮಯ ಜನರಿಗೆ ಮಾರ್ಗ ತೋರಲಿ ಬಂದ
ಕಾಮ ಸಂಹರ ಸಾಧು ಬಿಡ ಬೇಡಿರಣ್ಣಾ| ದುಂದುಮೆ ||17||
ಜಗದಿ ಅಡವಿ ಬಂದ ತಾನು ತಾನಾಗಿಯೆ
ಅಘಹರ ಅಡವೀಶ ಯನಿಸುತಲೀ
ನಿಗಮ ವೇದ್ಯನೀತ ನಿರುತದಿಂದಲಿ ಬಂದಾ
ಸುಗುಣತನದಿ ತಿಳಿದರೆ ಸುಖವಣ್ಣ| ದುಂದುಮೆ ||18||
ಛಪ್ಪನ್ನ ದೇಶಕ್ಕೆ ನಾಮಾದ ಪ್ರಭುವು
ಅಪ್ಪ ಅಡವೀಶ ಆದಿಯ ಸಿದ್ಧನ ಎಂದು
ಮೋದದಿ ನುಡಿವರು ಕೇಳಿ ಕಂಡು ತಿಳಿದೂ
ವಪ್ಪವಿಟ್ಟೆನು ಕೇಳಿ ಬಿಡಬೇಡಿರಣ್ಣ| ದುಂದುಮೆ ||19||
ಸ್ಥಿರವಿಲ್ಲ ಕಾಯವು ನೀತಿಯ ತಿಳಿಯಲಿಬೇಕು
ಖಾತರಿ ಇದು ಎಂದು ತಿಳಿದಿಲ್ಲವೊ
ಮರತು ಕೆಡಲಿಬ್ಯಾಡ ಬಹುಜನ್ಮ ಬರಬೇಡಾ
ತರಗಬ್ಯಾಡರಿ ಕ್ಷೇತ್ರ ಇದೆ ನಂಬಿರಣ್ಣ| ದುಂದುಮೆ ||20||
ಬೇಡಿದ ವರಗಳ ನಡೆಸುವನೀತಾ
ಕಾಡನು ಬೇಡನು ತಾ ಕೊಡುತಿಹನು
ನಾಡ ಜನರ ನುಡಿ ಗುರು ಕೊಡುವನು ಎಂದು
ಆಡುವ ವಚನವ ಸರಿ ನೋಡಿರಣ್ಣ| ದುಂದುಮೆ ||21||
ಶ್ರೇಷ್ಠ ಲೋಕದೊಳು ಈತನೇ ನಿಶ್ಚಯಾ
ಭ್ರಷ್ಟಾಗಬೇಡಿರಿ ಮರತು ನೀವು
ನಿಷ್ಠೆಯಿಂದಲಿ ಅಡವೀಶನ ಧ್ಯಾನವ
ಬಿಟ್ಟರೆ ಕೆಟ್ಟೀರಿ ಬಿಡಬೇಡಿರಣ್ಣ| ದುಂದುಮೆ ||22||
ಧರ್ಮ ತಿಳಿಯಬೇಕು ದಾರಿದ್ರ್ಯ ದಿನಮಾನ
ಕರ್ಮಿಗಳಿಗೆ ಕೇಡು ಬಂದಿತೆಂದು
ನಿರ್ಮಳ ಗುರುವರ ಅಡವೀಶ ಬಂದಂಥ
ಮರ್ಮವ ತಿಳಿದರೆ ವಳಿತಾದಿರಣ್ಣ| ದುಂದುಮೆ ||23||
ಅರವು ಮರಿಯಬ್ಯಾಡ್ರಿ ಅಂಕಲಿನಾಥನು
ಗುರುವರ ಪರತರ ಶಂಕರನೂ
ವರದ ವಾಕ್ಯವ ನಂಬಿ ಗಾಡಿಕಾರ ಪ್ರಭು
ಪರಿಪರಿ ಮಹತ್ವ ಗುರುತ್ಹಿಡಿರಣ್ಣ| ದುಂದುಮೆ ||24||
ಬರೆ ಮಾತು ಅಲ್ಲ ಗುರುಹಿರಿಯರ ವಾಕ್ಕು
ಅರಿತು ನಿರುಪಾಧಿಯ ಪೂರ್ಣವನ್ನು
ಪರಮ ಸಂತೋಷದಿ ಗುರುತಿಗೆ ತಂದರೆ
ಕರಕರೆ ನಷ್ಠವು ಬಹು ಸುಖವಣ್ಣ| ದುಂದುಮೆ ||25||

ಬಸವ ನಾಮದ
ಬಸವಿಯಾದರೆ ಮೋಕ್ಷ ವಸುಧೆಯೊಳಗೇ
ಬಸವ ನಾಮದ ಮಾದ್ರಿ (ಮದಿರ) ಬಟ್ಟಲನು ಹೊತ್ತು ||ಪ||
ಬಟ್ಟಲನು ಹೊರುವದಕೆ| ಬಹು ತರದ ಗುಣ ಬೇಕು|
ನಿಷ್ಠೆಯಿರಬೇಕು ವಿವೇಕ ಮಿಂಡರೊಳು
ಪೊಟ್ಟುಗುಡುಪ ಮೋಹಕದ ವರಶ್ಯಾರದಿರಬೇಕು
ಗಟ್ಯಾಗಿ ದೈವದ ವಚನದಂತೀರೂ ||1||
ತಂದೆ ತಾಯಿ ಬಂಧು ಬಳಗ ಮರತು
ಪರ ಪುರುಷರನ್ಹೊಂದಿ ಅನ್ಯರು ಇಲ್ಲ ಯೀತನೇ ಘನವೆಂದು
ಸಂದೇಹ ಗುಣವಳಿದು ಸಾಕ್ಷಿ ಬಾಜರದೊಳು
ವಂದರನು ಮಾನವಿಲ್ಲದೇ ತಿರುಗುವಂತಾ ||2||
ನಿರುಪಾಧಿ ಅಡವೀಶ್ಯಾ ನಿಜಲಿಂಗದೊಳು ಕೂಟ
ಬೆರಿಸಿ ಬೇರಿಲ್ಲದಂತೇಕವಾಗಿ
ಪರಿಪರಿಯ ಕಲ್ಪನೆ ಪರ ಪುರುಷನೊಳು ಮನವಿರದೇ
ನೆರೆ ನಂಬಿದಂತವನ ಬಿಡದೇಕ ನಿಷ್ಠೆ ||3||

ಭ್ರಷ್ಟರಾ ಸಂಗದಿಂದ
ಭ್ರಷ್ಟರಾ ಸಂಗದಿಂದ ಕೆಟ್ಟು ಹೋಗೋದಕ್ಕಿಂತ
ಶ್ರೇಷ್ಟ ನಿನ್ನಯ ಪಾದ ನಂಬುವದೇ ಸುಖ ||ಪ||
ಮೂಢಮತಿ ಕೂಡ ಮಾತಾಡಿ ಮೆರೆವದಕಿಂತಾ
ಆಡಲುತ್ತಮ ಜಗಳ ಸುಖನರಾದರೇ
ನೋಡಿ ನಂಬಲು ನಿನ್ನಾ ನಾಡಿನೋಳಗುತ್ತಾಮಾ
ಕೇಡು ಪ್ರಪಂಚ ನಂಬಿ ಕೆಟ್ಟವರುಂಟೊ ||1||
ತಿಂದರೇ ಸಾಯ್ವದು ಹಿಂದಾಗೆ ನೇತ್ರ ನಾಸ್ತಿ
ಮುಂದೆ ನಿನ್ನಗೆ ಕೊಟ್ಟರೆ ದೋಷವೇ ಪ್ರಾಪ್ತಿ
ಯಂದ ವಚನವ ಸೂಕ್ಷ್ಮದಿಂದ ನಡೆದರೆ ಮೊಕ್ಷ
ಕುಂದುಕೊರತೇ ಮನವಿ ನರಕವೇ ಸಿದ್ದಾ ||2||
ತನ್ನ ನುಡಿ ನಂಬಲು ತನ್ನ ಪದ ಸೇರುವಾ
ವುನ್ನತೋನ್ನತವಾಗುವಾ ನಿಜದೊಳಗಾಗಿ
ಚನ್ನ ಶ್ರೀ ನಿರುಪಾಧಿ ಮನ್ನಿಸೊ ಅಡವಿಯ ಸಿದ್ಧಾ
ಕುನ್ನಿ ನಾನೈಯ್ಯ ಸೇವಕಾ ತೊತ್ತಿನಾ ತೊತ್ತು ||3||

ಬುದ್ಧಿಯ ಬಾರದು
ಬುದ್ಧಿಯ ಬಾರದು ಮನಕೆ ಬುದ್ಧಿ ಬಾರದು|
ಸಾಧು ಮಾಡಿ ಶಿದ್ಧ ನಡೆಯೆಯೊಳ್‍ಯಿದ್ದ ಬ್ರಹ್ಮ ನಾಗುವಂತಾ ||ಪ||
ಗುರುವಿನೊಚನ ಕೇಳಿ ತನ್ನ|
ಅರವು ಗುರುತು ಹಿಡಿದು ನಿತ್ಯ|
ಮರಿಯದಲೆ ತನ್ನ ನಿಜದೀ|
ಬೆರೆತು ವಸ್ತುವಾಗುವಂತಾ ||1||
ಯಿದರ ನುಡಿಯ ಗುರುವಿಗ್ಹಾಡೋ|
ಚೆದುರಗಾರಕೀಯ ಬಿಟ್ಟು
ಸದಮಲಾನಂದವಾಗೋ|
ಮಧುರ ಮುಕ್ತಿಯಾಗುವಂಥಾ ||2||
ಕಠಿಣ ವಾಕ್ಯಗಳನು ಬಿಟ್ಟು|
ಕುಟಿಲತನಗಳನ್ನು ಸುಟ್ಟು
ಹಟವು ಕಳದು ಶಾಂಥ ಗುಣದೀ|
ಘಟವೆ ಲಿಂಗವಾಗುವಂತಾ ||3||
ಸುಳ್ಳು ಮಾತಿನಿಂದ ಕಷ್ಟ|
ಕಳ್ಳ ವಚನ ಮಹಾ ಕನಿಷ್ಟ
ಎಳ್ಳಿನಷ್ಟು ಸುಖವಿಲ್ಲಂತಾ|
ವಳ್ಳೇಬೈಲು ಆಗುವಂತಾ ||4||
ಅಡವಿಸ್ವಾಮಿ ನಿರುಪಾಧೀ|
ಬೆಡಗು ಅಲ್ಲವೆಂದು ತಿಳಿದು
ದೃಢದಿ ನಂಬಿ ಶುದ್ಧವಾಗಿ| ಮೃಢನು ತಾನೇಯಾಗುವಂತಾ ||5||

ಬೇಡುವ ಪದವಿಗಳಾ
ಬೇಡುವನಲ್ಲಿನ ರೂಢಿಯೊಳಧಿಕನು
ನೀಡುವ ಬೇಡುವ ಪದವಿಗಳಾ
ಕಾಡದೆ ಬೇಡದೆ ಕಾಡೊಳು ಮನೆ ಮಾಡಿ
ಗಾಡಿಕಾರ ಪ್ರಭು ಈತನಮ್ಮಾ ||ಪ||
ಅಷ್ಟ ಭೋಗವೀವಾ ಶ್ರೇಷ್ಠಯೀತನೆಂದು
ಯಿಟ್ಟ ಮುಂಡಿಗಿ ಯತ್ತುವರ ಕಾಣೆನು
ನಿಷ್ಠೆಯಿಂದಲಿ ತನ್ನಾ ಮುಟ್ಟಿ ಭಜಿಸುವಗೆ
ಕೊಟ್ಟು ನಡೆಸುವ ತಾ ಬೇಡಿದುದಾ ||1||
ಗುರು ಲಿಂಗ ಜಂಗಮ ಪರ ಮಂತ್ರ ವಿಭೂತಿ
ವರ ರುದ್ರಾಕ್ಷಿ ತೀರ್ಥ ಪ್ರಸಾದವು
ಅರಿಯರು ಅಷ್ಟಾವರಣವೇ ಅಂಗವಾದಂಥಾ
ಗುರು ಸಾಕ್ಷಾತ್ಕಾರ ಸಾಕ್ಷೀ ರೂಪಾ ||2||
ಹೊನ್ನು ಮೊದಲು ಹೆಣ್ಣು ಕಡಿಯಾಗಿ ಸಕಲವು
ಚನ್ನಾಗಿ ಕೊಡುತಿಹ ಹೊಂದಿದರೇ
ಪನ್ನಗಭೂಷಣ ಪರಮಾತ್ಮಯಿವನೆಂದು
ಎನ್ನುತ ಡಂಗುರ ಸಾರಿದೆನೆ ||3||
ಕುಲ ಹದಿನೆಂಟು ಜಾತಿಯು ಬರುವದು
ಮಲಹರ ಮಹದೇವ ಮಹದಾದಿಯಾ
ಲಲಿತ ಲೀಲೆಯನ್ನು ಹಾಡುವ ಕಲಿಯುಗ
ಭಲರೆ ಭಲರೆಯಂದು ಕೊಂಡಾಡ್ವರೂ ||4||
ಛಪ್ಪನ್ನ ದೇಶದಿ ಈತನ ಪ್ರಭೆ ತಾನು
ತಪ್ಪದೆ ನುಡಿವರು ಕಂಡು ಕೇಳೀ
ವಪ್ಪವಿಚ್ಚೆನು ತೊತ್ತು ನಿರುಪಾಧಿ ಅಡವೀಶ
ಅಪ್ಪ ಜೀವಿಗಳನು ರಕ್ಷಿಸುವಾ ||5||

ಬೇಗ ಬನ್ನಿ
ಬೇಗ ಬನ್ನಿ ಕಾಯಿಯಂದು ಬೇಡುವ ಬಯಕೇ
ಯೋಗಿ ಯನ್ನಯ ದೋಷ ಹೀರಿಕಾಯಿ ||ಪ||
ನಿತ್ಯ ನಿರ್ಗುಣ ನೀನೆ ಮೌಕ್ತಿ ಕಡಲೆಕಾಯಿ
ಸತ್ಯ ಸದ್ಗುಣದಾ ಕಾರೆಕಾಯೀ
ಯತ್ತ ಹೋದರೆ ಬೀಡದೇ ಯನ್ನ ಹೆಸರಕಾಯಿ
ತೊತ್ತು ಯನುತಿಹನು ನಾ ನಿಂಬೆಕಾಯಿ ||1||
ಭೂ ಲೋಕದೊಳು ಇಲ್ಲ ನಿನ್ನ ಸವತೆಕಾಯಿ
ಕಾಲ ಕಾಲದಿ ಬಿಂದು ಪಡುವಲಕಾಯಿ
ಲೀಲದಾಟವ ತೋರಿ ಯನ್ನ ಹತ್ತಿಕಾಯಿ
ಕೀಲ ನಿನ್ನದು ಸಕಲ ಬಾಳೆಕಾಯಿ ||2||
ನಿನ್ನ ನಂಬಲು ಕರ್ಮವಡದು ವಿಸರಿಕಾಯಿ
ಮನ್ನಿಸೋ ಅಡವೀಶ್ಯಾ ತಾ ಪೋಸ್ತಕಾಯಿ
ಚನ್ನ ನಿರುಪಾಧಿ ಯನ್ನಲ್ಲಿ ನೀರಲಕಾಯಿ
ಕುನ್ನಿ ನಾನೈಯ್ಯಾ ಸದಾ ನೇಮಿಕಾಯಿ ||3||

ಭವ ರೋಗ ವೈದ್ಯ
ಭವರೋಗ ವೈದನೀ ಮಂತ್ರ ತಂತ್ರಕೆ ಆದಿ
ವಿವರಿಸಲು ತನುಭಾರ ತನ್ನದಲ್ಲೇ ||ಪ||
ಏನಾದಡೇನೆನಗೆ ಹೀನ ಜಡ ದೇಹವು
ಮೌನ ಅಭಿಮಾನವು ಕೂಡಿತೆಂಬೇ
ಜ್ಞಾನಿಯಾದ ಮೇಲೆ ಶರೀರದಾಸೆ ಯಾಕೆ
ಖೂನ ತಿಳಿದಾ ಬಳಿಕ ಹೇಗಾದರೇನು ||1||
ಬಂದದ್ದುಣ್ಣುವನು ಸುಖದಿ ಬಾರದ್ದು ಬಯಸದೇ
ಒಂದೆಯಾದ ನಿಜದಿ ತೂಗ್ಯಾಡುತಿಹನು
ತಂದೆ ತಾಯಿ ಬಂಧು ಬಳಗ ಇಂದ್ರೀಹಂಗು
ಒಂದು ಇಲ್ಲವು ಅವಗೆ ತನುವ ಮರೆತಿಹನೂ ||2||
ನಗುವು ಬಂದರೆ ನಗುವ ದುಃಖ ಬಂದರೆ ಅಳುವ
ಬಗೆಯೊಳಗೆ ತಾಬೆರಿತಾ ಚೈತನ್ಯ ರೂಪಾ
ನಿಗಮ ವೇದ್ಯನು ನಿರುಪಾಧಿ ಅಡವಿಯ ಸಿದ್ಧಾ
ಬಗಿ ಬಗಿಯ ಕಲ್ಪನೆಯು ನೀನೆ ಆಗಿದ್ದೀ ||3||

ಮಹದೇವ ಲಿಂಗ ಅಡವೀಶ್ಯಾ
ಮಹದೇವ ಲಿಂಗ ಅಡವೀಶ್ಯಾ| ಪಾದವನು ತೋರೋ ಕೃಪದಿ
ಸಹಜ್ಯಾನಂದ ಸರ್ವೇಶ್ಯಾ ಭಕ್ತರನು ರಕ್ಷಿಸೂ ||ಪ||
ನಿನ್ನಾಟ ತಿಳಯದೈ ದೇವಾ| ನಾನೇನು ಬಲ್ಲೆ ಲೀಲಾ|
ಅನ್ಯಾಯವಲ್ಲೆ ಈ ಮಾತು ದರುಶನವ ಕೊಡದ ಮೂಲಾ
ಮನ್ನಿಸಲಿಬೇಕ ಶ್ರೀಸಾಂಬಾ ನೀ ನೋಡಿ ಕಾಲ ಕಾಲಾ|
ಯನ್ನಾತ್ಮದೊಡೆಯ ನೀ ಬೇಗ ಬಾರಯ್ಯ ಸದ್ಗುರೂ ||1||
ಜನ ನಿನ್ನ ಧ್ಯಾನದಲ್ಲಿಹರು ಶಂಕರನೆ ಶಂಭುಶಿವನೇ|
ನಗಿ ಮುಖವ ತೋರು ಸಂತೋಷಾ| ಯೆನೇನು ಬೇಡೋ ಹರನೇ|
ಭುಗಿಲಾಗಿ ಕಾಯ ವಾಚ್ಯ ಮನಸು ನಡುಗುವದು| ಥರಥರನೇ|
ಮಿಗಿಲಾದ ಮಹತ್ತು ಇದುಯೇನು| ಸಾಕ್ಷಾತ್ ಶ್ರೀಗುರೂ ||2||
ಹದಿಮೂರು ದಿನಕೆ ಹದಿಮೂರು ಯುಗವಾಗಿ ಕಾಂಬುದೈಯ್ಯ|
ನದಿ ಮೇರೆದಪ್ಪಿ ಬಂದಂತೆ ಮೈಮರೆದು ನಿಂತೆನಯ್ಯಾ|
ಮುದದಿಂದ ಬಂದು ನಿನ್ನಾ ರೂಪ ನೀ ತೋರಬೇಕು ಜೀಯ್ಯ|
ಯದೆ ವಡೆದು ತಾಯ ಅಗಲೀದ ಕರುವಿನ ಪರಿಯಲಾ ||3||
ನಿರುಪಾಧಿ ನೀನೆ ಗುರುದೇವಾ| ಧೈರ್ಯವನು ಕೊಟ್ಟು ನೋಡು|
ವರಶ್ರೇಷ್ಠವಾದ ಆನಂದಾ ಕರುಣದಲಿ ದೃಷ್ಟಿಯಿಡು|
ಪರತರನೇ ಅಂಕಲಗಿನಾಥ ದಯಮಾಡಿ ಬಂದು ಕೊಡು
ಗುರು ಸಿದ್ಧಲಿಂಗ ಅಡವೀಶ್ಯಾ ನಾನೇನು ಬೇಡಲಿ| ಮಹದೇವಲಿಂಗ
ಅಡವೇಶಾ ಪಾದವನು ತೋರು ಕೃಪದಿ ||4||
ಆರಾರು ಅರಿಯದ ಮೂರ್ತಿ ನಾನೇನು ಬಲ್ಲೇ ನಿನ್ನಾ|
ಪರಾಕು ಸೂಕ್ಷ್ಮದ ಸೌಜ್ಞೆ ತಿಳಿಸೈಯ್ಯಾ ಆರ್ಥಿಚಿನ್ನಾ|
ಕಾರಣ ಕಾರ್ಯಕೆ ನೀನೆ| ನಿಜವಾದ ಗುಣದಿರಂನ್ನಾ
ತೋರೈಯ್ಯಾ ಬೇಗಾ ನಮ್ಮಲ್ಲಿ ದುರ್ಗುಣವ ನೋಡದೆ ||5||

ಮರಿಯಬೇಡೋ
ಮರಿಯಬೇಡೋ ಮಹಾ ಕರುಣಾದಿ ನೋಡೋ|
ಪರಿಪರಿ ತಿರುಗುವ ಮನವ ಯೇಕ ಮಾಡೋ ||ಪ||
ಬಂಧು ಬಳಗದೊಳು ಬಹು ಸುಖವ ನಡಿಸೋ|
ಹಿಂದೆ ಮುಂದೆ ಕಾದು ಸಂಶಯ ಬಿಡಿಸೋ ||1||
ತನುವ ಯಿಹಪರಿ ನಿನ್ನ ನಾಮವ ನೆನಸಿ
ಚಿನುಮಯನಾಗುವ ಗುಣವನು ಸರಿಸೀ ||2||
ನಿರುಪಾಧಿ ಅಡವೀಶ್ಯಾನೆಂದಂತವರಿಗೇ
ತರುಬ್ಯಾಡಾ ಯಂದೆಂದು ಈ ಕೆಟ್ಟ ಗಳಿಗೇ ||3||

ಮಂದಮತಿಯು ಅರಿಯನಯ್ಯಾ
ಮಂದಮತಿಯು ಅರಿಯನಯ್ಯಾ ಕಂದುಗೊರಳನ ಭಕ್ತ ಮಹಿಮಾ
ನಿಂದೈ ಪ್ರಾಣಿಗೆ ನಿಜವು ನಿಲ್ಲುವದೇ ಹೋ ಅಡವಿಯಾ ಸಿದ್ಧಾ
ವಂದೆ ಭಾವದಲ್ಲಿ ವಲಿವನು ||ಪ||
ನೀತಿ ಗುಣವ ಹೋಗದೆ ನಿನ್ನ ಮಾತು ಅರಿಯಲಿಕ್ಕೆ ಅರಿದು
ಕೋತಿ ಮನುಜರರಿವರೈ ನಿಮ್ಮಾ ಹೋ ಅಡವಿಯ ಸಿದ್ಧಾ
ಜೋತಿ ರೂಪಾ ನೀನೆ ಮತ್ತೆಲ್ಲಾ ||1||
ಜ್ಞಾನದೊಳಗೆ ಮನ ನಿಲ್ಲಲಾಗಿ ಮೌನಿ ನಿನ್ನ ಮಹತ್ಮೆಯನ್ನು
ತಾನೆ ತನ್ನ ತಿಳಿದವ ಬಲ್ಲ ಹೋ ಅಡವಿಯ ಸಿದ್ಧಾ
ಹೀನ ನರರೆ(ರ) ವಸ್ತು ತಿಳಿವನೆ ||2||
ಗುರುವು ಲಿಂಗ ಜಂಗಮದಾ ನಿರುತ ಭಕ್ತಿ ಬೆಳಗಿನೊಳಗೆ
ಬೆಳೆದು ಬ್ರಹ್ಮವಾಗಿ ನಿಂತಿಹಾ ಹೋ ಅಡವಿಯಾ ಸಿದ್ಧಾ
ಅರಿತ ದೂರನಾದಿ ಬ್ರಹ್ಮನು ||3||
ಕಾನ ರಹಿತ ಕರುಣೌ ಕರನು ಸೀಮೆ ರಹಿತ ಶ್ರೇಷ್ಠ ಗುರುವು
ಸೋಮ ಸೂರ್ಯಕೋಟಿ ತೇಜನು ಹೋ ಅಡವಿಯಾ ಸಿದ್ಧಾ
ನೇಮ ದೂರನಾದಿ ಬ್ರಹ್ಮನು ||4||
ವೇದ ನಿರುಪಾಧಿಯು ಯೆನಿಸಿ ಅವಕಾಲದಲ್ಲಿ ಮೆರೆವ
ಸೋವೆ ಅರಿದರವನೆ ಶ್ರೇಷ್ಠನು ಹೋ ಅಡವಿಯಾ ಸಿದ್ಧಾ
ಭಾವನೆಗೆ ನಿಲ್ಕದಸದಳ ||5||

ಮಾತಿನಿಂದಲಿ ಯೋಗಿ ಎನಿಪನು
ಮಾತಿನೊಳು ಮಂತ್ರವು| ಸುಖದುಃಖ| ಮಾತೆ ಮಂಗಳಕಾರವು
ಮಾತಿನಿಂದಲಿ ಯೋಗಿ ಎನಿಪನು| ಮಾತಿನಿಂದಲಿ ಭೋಗಿಯೆನಿಸುವಾ|
ಮಾತುಗಳು ಮಾಣಿಕವು ತಿಳಿದರೆ| ಮಾತೆ ಶ್ರೀ ಗುರು
ಬೋಧ ಹೇಳ್ವದು ||ಪ||
ಮಾತೆ ಆರೈದಕ್ಷರಾ ಬಾವನ್ನ ಸಹಾ| ಮಾತಿನಿಂದಲಿ ಅರಿವರು
ಮಾತೆ ಅಘೋರಾದಿ ಮಂತ್ರಗಳೆಲ್ಲ| ಮಾತಿನೊಳಗೆ ಜನನಾ
ಮಾತು ಐದು ಮೂರಕ್ಕೆ ಐದವು| ಮಾತು ಎಪ್ಪತೈದು ಆದವು
ಮಾತು ಮೂರು ಆರು ಎಂಬೋದು| ಮಾತು ಇನ್ನ ಹದಿನಾರಾದುದು ||1||
ಮಾತು ಪ್ರೀತೀಲೆ ಹುಟ್ಟೋದು| ವಿವಾಹ ಲಗ್ನ ಮಾತಿನಿಂದಲಿ ಶೋಭನ|
ಮಾತಿನಿಂದಲಿ ಶಿಪಾಯಿ ಸುಭೆದಾರ| ಮಾತಿನಿಂದಲಿ ಸರದಾರ|
ಮಾತಿನಿಂದಲಿ ಜಗಳ ಬೀಳ್ವದು| ಮಾತಿನಿಂದಲಿ ಪೆಟ್ಟು ದಕ್ಕೆಯು|
ಮಾತಿನಿಂದಲಿ ಸತ್ತು ಹುಟ್ಟುವ| ಮಾತೆ ಬಹುತರವಿಹುದು ಜಗದಲೀ ||2||
ಮಾತೆ ಖೇತರಿ ಭೂಚರಿ| ಸಾಚರಿ ಷಣ್ಮುಖಿ| ಮಾತೆ ಶಾಂಭವಿ ಮೌನಿಯು
ಮಾತೆ ಧ್ಯಾನ ಧಾರಣೌ| ಸಮಾಧಿಯು| ಮಾತಿನಿಂದಲಿ ತಿಳಿವು|
ಮಾತು ಚಕ್ರ ದೈವ ಶಕ್ತಿಯು| ಮಾತು ನವವಿಧ ಭಕ್ತಿ ಹೇಳ್ವುದು|
ಮಾತು ಶ್ಯಾಂತಿ ಶಮದಮಿರುತಿದೆ| ಮಾತು ಕೇಳುತ ಯೋಗಿಯೆನಿಪರು ||3||
ಮಾತಿನಿಂದಲೆ ವುದ್ಯೋಗ| ಜಾಣ ಧಡ್ಡ| ಮಾತಿನಿಂದಲೆ ಲಾಭ ನಷ್ಟ
ಮಾತಿನಿಂದಲಿ ಮನೆ ಬಂಧು ಹಿರಿ ಕಿರಿಯರೊಳು| ಮಾತಿನಿಂದಲೆ ಮಾನ ಅಭಿಮಾನ
ಮಾತು ನಯ ನುಡಿಯಾಗಿ ನುಡಿದರೆ| ಮಾತು ಅನ್ನುವರು ಭೋಗಿ ವಳ್ಳೆವ| ಮಾತಿ ನೋಳು
ಸುಗುಣವು ಸೂಕ್ಷ್ಮವು| ಮಾತು ನಾಜೂಕಣ್ಣಾ ಲೋಕದಿ ||4||
ಮಾತಿನಿಂದಲಿ ಅಡಿವೀಶ್ಯಾ| ಸುತ್ತದೇಶ್ಯಾ| ಮಾತಿನಿಂದಲಿ ಪ್ರಭುವು
ಮಾತು ನಿರುಪಾಧಿ ತಾನೇಯಲ್ಲಾ ದಿನಸು| ಮಾತೆ ಪದ ದಂಡಕ ಮಂಗಳಾರ್ತಿ
ಮಾತು ಕನ್ನಡ ಅರೆ ಪಾರಶಿ| ಮಾತು ಇಂಗ್ರೇಜಿ ತೆಲುಗು ದ್ರಾವಿಡ ಮಾತು ಪ್ರಥ್ವಿಯ
ನರರೊಳಗೆ| ಬಹು ಮಾತಿನೊಳು ಗುರುಶಬ್ದವಂದೇ ||5||

ಮಾತು ಕೇಳೆ
ಮಾತು ಕೇಳೆ ಮಮತೆಯುಳ್ಳ ನಾರೀ ಶೃಂಗಾರೀ
ಮಾತು ಕೇಳೆ ಮಮತೆಯುಳ್ಳ ನಾರೀ
ನೀತಿವಂತಳಾಗಿ ನಿಜದ ಭೀತಿಯಿದ್ದರೊಳ್ಳೆದೆಂಬ ||ಪ||
ಪರ ಪುರುಷನ ಕೂಟದೊಳಗೇ ಬೆರೆದು ಬೇರೆ ಆಗದೆ
ದುರುಳ ಗುಣಗಳೆಲ್ಲ ಹೋಗಿ ಧರೆದೊಳಹುದು ಯನ್ನವಂತಾ ||1||
ಅಸ್ತಿರವು ಯವ್ವನ ಪ್ರಾಣ ಆಸ್ತಿರವು ಪುತ್ರದ್ರವ್ಯ
ಅಸ್ತಿರೆಂದು ದುರ್ಗುಣಗಳ ಶಿಸ್ತು ಹರಿದು ಬಿಡುವ ರೀತಿ ||2||
ಸಿದ್ಧ ನಿರುಪಾಧಿ ಹೊಂದಿ ಬುದ್ಧಿವಂತೆಯಾಗು ಕಾಂತೆ
ನಿದ್ದೆ ಸ್ವಪ್ನ ಜಾಗ್ರದಲ್ಲಿ ಮುದ್ದು ಅಡವಿ ಈಶೆನ್ನೊ ||3||

ಮುತ್ತು ವಡದ ಲಿಂಗಾ
ಮುತ್ತು ವಡದ ಲಿಂಗಾ ಮತ್ತು ಅಡವೀಶನ
ತೊತ್ತು ಯನ್ನಲಿ ಬಹುದು ಆನಂದದಿಂದಾ ||ಪ||
ಯೇಕ ನಿಷ್ಠೆಯಲಿಂದಾ ಜೋಕೆಲಿ ಪಾದ ಸೇವೆ
ಸಕಾರವಾಗಿ ಮಾಡುವ ಕೇವಲ ಭಕ್ತಿ
ಪಾಕವಾದಂತ ನಿಜದೀ ಸಾಕು ಯನದೇ
ಕಾಯ ವಾಕ್ಕು ಮನ ಶುದ್ಧವಾಗಿ ಆನಂದದಿಂದಾ ||1||
ಅಲ್ಲಮಪ್ರಭು ಯಂದ ಬಲ್ಲ ಬಸವಣ್ಣನಂತೆ
ಉಲ್ಲಾಸದಿಂದ ಮೆರೆವನೂ
ಕೇವಲ ಭಕ್ತಿಯಲ್ಲಿ ಎಲ್ಲ ದೇಶದಿ ಬಂದಾರೆಲ್ಲ ದೇವ ಭಕ್ತರಾ
ಸೊಲ್ಲಿನೊಳು ಸುಖಿಯೆನಿಪಾ ಆನಂದದಿಂದಾ ||2||
ಒಬ್ಬನೆ ಕುಲದೀಪಾ ಮೊಬ್ಬು ಗುಣವ ಸುಟ್ಟು
ಕಬ್ಬಿನ ಸ್ವಾದದಂದದೀ ಕೇವಲ ಭಕ್ತಿ
ಹಬ್ಬಿದಾ ಮೋಹದಿ ದೊಬ್ಬಿ ಸಂಶಯವನ್ನು
ತಬ್ಬಿ ಪಾದವ ಬಿಡದೇ ಆನಂದದಿಂದಾ ||3||
ಹೆಂಡತಿಯನ್ನು ಕಾಂಬಾ ಯರವಿನ ಆಭರಣದಂತೆ
ದಂಡನಾಯಕ ನೆನಬಹುದು ಕೇವಲ ಭಕ್ತಿ
ಉಂಡು ಉಪವಾಸಿಯು ಬಳಸಿ ಬ್ರಹ್ಮಚಾರಿ
ಹಿಂಡು ಗುಣ ಬಂದು ಮಾಡೀ ಆನಂದಿಂದಾ ||4||
ಅಂಕಲಗಿ ಕಲ್ಯಾಣ ಶಂಕರನು ಅಡವಿ ಸಿದ್ಧಾ
ಕಿಂಕರನು ನಂದಿ ಈತನೂ ಕೇವಲ ಭಕ್ತಿ
ಮೊಂಕಾಗಿ ನಿರುಪಾಧಿ ಮೋಕ್ಷದೊಳಾಡುವಾ|
ಡಂಕಾ ಹೊಡೆದಂತೆ ತಾನು ಆನಂದಿಂದಾ ||5||

ಮುಕ್ತ ಅಡವಿಯಸಿದ್ಧಾ
ಮುಕ್ತಿ ಕಾಂತಿಯ ಹಿಡಿದು ಮುಕ್ತ ಅಡವಿಯಸಿದ್ಧಾ
ತಃಕ್ತೇರ ಬಂದಾ ಸಾಕ್ಷಾತಾಃ ಶೋಭಾನವೆ
ತಃಕ್ತೇರ ಬಂದಾ ಸಾಕ್ಷಾತನ ಸಂಮುಖಕೆ
ಭಕ್ತಿ ನಾರಿಯರು ಕೂಡಿದರೂ ||ಶೋ|| ||ಪ||
ಗುರು ಸದಾಶಿವ ಬಂದ ಚರಣ ಪಿಡಿಯಿರೆ
ಹರುಷ ಆನಂದ ತುಳಕುತ ||ಶೋ||
ಹರುಷ ಆನಂದ ತುಳಕುತ ಸಾಂಬನ ಮುಂದೆ
ಪೊರಿಯೆಂದು ಸ್ತೋತ್ರ ಹಾಡಿರೇ ||ಶೋ|| ||1||
ಈಶ್ವರ ಮಾರುತಿ ಈತಾ
ಶಾಶ್ವತಯನ್ನಿರಿ ಜನರು ||ಶೋ||
ಆಶರಹಿತ ಪರಬ್ರಹ್ಮನ ಮುಂದೆ
ದೋಷ ಕಳಿಯೆಂದು ಹಾಡಿರೇ ||ಶೋ|| ||2||
ರುದ್ರಮಾರುತಿ ತಾನು ಕ್ಷುದ್ರದೈವದ ಗಂಡಾ
ನಿರ್ಧಾರವೆಂದು ನಂಬೂತಾ ||ಶೋ||
ನಿರ್ಧಾರವೆಂದು ನಂಬೂತಾ ದೇವರ ಮುಂದೆ
ಅದೇ ನೀನೆಂದು ಹಾಡೀರೇ ||ಶೋ|| ||3||
ವಿಷ್ಣು ಸ್ವರೂಪವನ ಶ್ರೇಷ್ಠ ಸಂರಕ್ಷಣಕೆ
ಅಷ್ಠ ದಿಕ್ಕಿನ ಅಧಿಪತಿ ||ಶೋ||
ಅಷ್ಠ ದಿಕ್ಕಿನ ಅಧಿಪತಿ ಯಾದಂಥವನ
ಕಷ್ಠ ಕಳಿಯಂದು ಹಾಡಿರೇ||ಶೋ|| ||4||
ಬ್ರಹ್ಮ ಸ್ವರೂಪನು ನಮ್ಮ ಹುಟ್ಟಿಶಿದಾತಾ
ಅಮ್ಮ ಅನಾದಿ ಪ್ರಭು ಈತಾ ||ಶೋ||
ಅಮ್ಮ ಅನಾದಿ ಪ್ರಭು ಈತ ಯೆಂತೆಂದು
ವಮ್ಮನದಿಂದ ಹಾಡಿರೇ ||ಶೋ|| ||5||
ನಾದ ಸ್ವರೂಪನು ವಾದ ತೀತಾನಂದ
ಶೋಧಿಸಿ ನೋಡೀ ಸಖಿಯರು ||ಶೋ||
ಶೋಧಿಸಿ ನೋಡೀ ಸಖಿಯರು ಸಂತೋಷಾ
ಮೋದ ನೀಡೆಂದು ಹಾಡಿರೇ ||ಶೋ|| ||6||
ಬಿಂದು ಲೋಕೇಶನ ಚಂದಾದಿ ಕಾಣಿರೀ
ಕಂದುಗೊರಳ ಶಿವ ಈತಾ ||ಶೋ||
ಕಂದುಗೊರಳ ಶಿವ ಈತನ ಮುಂದೆ
ತಂದೆ ನೀನೆಂದು ಹಾಡಿರೇ ||ಶೋ|| ||7||
ಶಿವಕಳೆ ಮೂರುತಿಯು ಭವ ರೋಗಹರನೆಂದು
ವಿವರಿಸಿ ನೋಡಿ ಸುಖದಿಂದಾ ||ಶೋ||
ವಿವರಿಸಿ ನೋಡಿ ಸುಖದಿಂದ ಶಂಕರನ
ಸುವಿವೇಕದಿಂದ ಹಾಡಿರೇ ||ಶೋ|| ||8||
ಗುರುವಾದ ಮಹಿಮನೀತಾ ಶರಣರರಿತುಕೊಳ್ಳಿ
ನರಕಾಯ ಧರಿಸಿ ಮರ್ತ್ಯುಕೆ ||ಶೋ||
ನರಕಾಯ ಧರಿಸಿ ಮತ್ಯುಕೆ ಬಂದಂತಾ
ಕರುಹಿನ ಮೂರ್ತಿ ಹಾಡಿರೇ ||ಶೋ|| ||9||
ಲಿಂಗ ಯೀತನುಯಂದುಅಂಗನೆಯೆರರಿವುತ
ಸಂಗಮ ಬಂದಾ ಸಭೆಯಲ್ಲಿ ||ಶೋ||
ಸಂಗಮ ಬಂದಾ ಸಭೆಯಲ್ಲಿಯೆಂತೆಂದು
ಮಂಗಳ ಕೀರ್ತಿ ಹೊಗಳಿರೇ ||ಶೋ|| ||10||
ಜಂಗಮನಾಗಿ ಸರ್ವಾಂಗ ರಕ್ಷಿಸ ಬಂದಾ
ಶೃಂಗಾರವಾದ ಶುಭ ಕೀರ್ತಿ ||ಶೋ||
ಶೃಂಗಾರವಾದ ಶುಭಕೀರ್ತಿ ಸುಖದಿಂದಾ
ಸಂಗವಾಗೆಂದು ಹಾಡೀರೆ ||ಶೋ|| ||11||
ಮಂತ್ರ ದೈವತ ನಾನು ಕಂತು ಮರ್ದನದೇವ
ಶಾಂತಾ ಮಹದೇವ ದಯವಾಗೋ ||ಶೋ||
ಶಾಂತಾ ಮಹಾದೇವ ದಯವಾಗೋ ಆಗೆಂದು
ಚಿಂತೆ ಕಳಿಯಂದು ಹಾಡಿರೇ ||ಶೋ|| ||12||
ವಿಭೂತಿ ಸ್ವರೂಪಾ ವಿಭವ ನಡಿಸಲಿ ಬಂದಾ
ಕೋಪ ರಹಿತ ಕಲಿಯಲ್ಲಿ ||ಶೋ||
ಕೋಪಾರಹಿತಾ ಕಲಿಯಲ್ಲಿ ಬಂದಂತಾ
ವ್ಯಾಪಾರ ಅರಿತೂ ನಡಿಯಿರೇ ||ಶೋ|| ||13||
ತಾನೇ ರುದ್ರಾಕ್ಷಿಯೂ ಯೇನು ಅನುಮಾನಿಲ್ಲಾ
ತಾನಾದ ನಿಜದೀ ನಲಿವುತಾ ||ಶೋ||
ತಾನಾದ ನಿಜದೀ ನಲಿವುತ ಬಂದಂತಾ
ವ್ಯಾಪಾರ ಅರಿತು ಹಾಡಿರೇ ||ಶೋ|| ||14||
ತೀರ್ಥ ಈತನುಯೆಂದು ಅರ್ಥಿಯಿಂದಿರುತಾ
ಸಾರ್ಥ ಮಾಡೆನ್ನ ತನುವನು ||ಶೋ||
ಸಾರ್ಥ ಮಾಡೆನ್ನ ತನುವನು ಯೆಂತೆಂದು
ಕೀರ್ತಿ ಪ್ರಬಲನ ಹಾಡಿರೇ ||ಶೋ|| ||15||
ಮಹ ಪ್ರಸಾದವು ತಾನೇ ಸಹಜ ಸದ್ಗುರು ಹರಾ
ವಹಿಸಿಹುದಿಲ್ಲಿ ಗುರುಲೀಲ ||ಶೋ||
ವಹಿಸಿಹುದಿಲ್ಲಿ ಗುರುಲೀಲ ಯೆಂತೆಂದು
ಮಹದೇವನಿದಿರು ಹಾಡಿರೇ ||ಶೋ|| ||16||
ಆಧಾರ ಸ್ವಾಧಿಷ್ಟಾ ಮಣಿಪೂರಕನಾಹತಾ
ಭೇದದ ಮೂರ್ತಿ ದಯವಾಗೋ ||ಶೋ||
ಭೇದದ ಮೂರ್ತಿ ದಯವಾಗುಯನ್ನುತಾ
ವಿನೋದದಿಂದ್ಹಾಡಿ ಹರಿಸಿದೇ ||ಶೋ|| ||17||
ವಿಶುದ್ಧಿ ಆಗ್ನೇಯಲೀ ಸಾಸಿರದಳ ಪಶ್ಚಿಮದಿ
ಸೋಸಿದರೀತಾನಿಹನೆಂದು ||ಶೋ||
ಸೋಸಿದರೀತಾನಿಹನೆಂದು ತಿಳಕೊಂಡು
ಕೂಸಾಗಿ ನಿತ್ಯ ಹಾಡಿರೇ ||ಶೋ|| ||18||
ನಾಲ್ಕಾರ್ಹತ್ತು ಹನ್ನೆರಡು ಹದಿನಾರೆರಡುಗುಪ್ತ
ನಿಲ್ಕದವೆರಡು ಕೂಡಲ್ಕೆ ||ಶೋ||
ನಿಲ್ಕದವೆರಡು ಕೂಡಲ್ಕಭವನಾ
ಮಾಲ್ಕೀನಕ್ಷರ ಕೂಡಿರೇ ||ಶೋ|| ||19||
ಕರ್ಮಿ ಮುಮುಕ್ಷನು ನಿರ್ಮಳಭ್ಯಾಸಿಯು
ಅನುಭವಾರುಷ ಆರೂಢ ||ಶೋ||
ಅನುಭವಾರುಷ ಆರೂಢನಾದಂಥ
ಮರ್ಮ ನಿನ್ನದೂ ಹಾಡಿರೇ ||ಶೋ|| ||20||
ನಿರುಪಾದಿ ಅಡವೀಶ ಗುರು ಅಂಕಲಗಿವಾಸ
ಹರುಷ ಆನಂದ ಕೊಡುಯಂದು ||ಶೋ||
ಹರುಷ ಆನಂದ ಕೊಡುಯಂದು ತ್ರಿಕರಣ
ಪರಿಶುದ್ಧವಾಗಿ ಹಾಡಿರೇ ||ಶೋ|| ||21||

ಮೂರ್ತಿ ಪ್ರದಕ್ಷಣವು ಚಂದ
ಮೂರ್ತಿ ಪ್ರದಕ್ಷಣವು ಚಂದಾ
ತೂರ್ಯಾತೀತ ಆನಂದ ಮಂಗಳವಾರ ||ಪ||
ಮಹದೇವನ ಬಲ ಮಾಡಿ
ಹಿಂದು ಮುಂದು ಜಂಗಮ ಭಕ್ತ ಸರ್ವರು ಕೂಡೀ
ಸಹಜ್ಯಾನಂದದಿ ನೋಡಿ
ಹರ ಹರ ಶಂಭು ಶಂಕರ ಭಜನೀ ಮಾಡೀ ||1||
ನಾನಾ ದಿನಸಿನ ವಾದ್ಯಯೀತ
ಆರಿಗೆ ನಿಲುಕನು ವೇದಕೆ ವೇದ್ಯ
ಕೂನದ ಶಿಶುವಿಗೆ ಸಾಧ್ಯಾ
ನಿಜವಾದ ಗುರುಲಿಂಗ ಜಂಗಮನೀತಾ ಆರಾಧ್ಯ ||2||
ನಿರುಪಾಧಿ ಅಂಕಲಗಿವಾಸ
ಐವತ್ತಾರು ದೇಶದೊಳು ಯೀತನೆ ಯೀಶ್ಯಾ
ಪರತರ ಅಡವೀಸಿದ್ಧೇಶ್ಯಾ
ಪೃಥ್ವಿಯೊಳಗೆ ನೋಡಲಿಕೆಯಿದೇ ಕೈಲಾಸ ||3||

ಮೊಲೆಯೊಳಿಹ ವಸ್ತು ಮೂಲವೋ ಮೋಕ್ಷಕೆ
ಮೊಲೆಯೊಳಿಹ ವಸ್ತು ಮೂಲವೋ ಮೋಕ್ಷಕೆ
ಕೀಲುಯಿಹುದು ತನ್ನೊಳು
ಕಾಲ ಕಾಲದ ದೇವನೆನುತಲಿ
ಬಾಲ ಹೊಗಳಿದೆ ವೇದ ವಚನದೀ
ಶೂಲಿ ಶಾಖವು ಸಾಧುಯನುತಲಿ
ಅಲಿಯದಿ ನಾ ಹಾಡಿ ಹರಶಿದೇ ||ಪ||
ಭಕ್ತಿ ಜ್ಞಾನ ವೈರಾಗ್ಯ ಯುಕ್ತಿಯ ಕಾಣುತಾ
ಮುಕ್ತಿಗೊಡೆಯನೆಂದೆನೋ ||ಅ.ಪ||
ಸುಖದ ರೂಪನು ಸೂಕ್ಷ್ಮ ಅವತಾರ
ವಿಕಳ ಮತಿಗಳು ತಿಳಿಯಲರಿಯರು
ಅಖಿಳ ವಸ್ತು ತನ್ನ ಕಾರಣ
ಅಕಳಂಕಾತ್ಮ ವಿಚಾರ ಬಲ್ಲಗೆ ||1||
ಮೂರಾರು ನವ ಮುವತ್ತಾರು
ಬಾವನ್ನ ಯಿನ್ನೂರ್ಹದಿನಾರಾದುದೂ
ಕಾರಣವು ತಾನೆಂದು ಶೃತಿಯಿರೆ
ಪೂರಣಾನಂದಾಗಿ ನುತಿಶಿರೆ
ಸೇರುವೆಯ ಅರಿದಂತ
ಬಲ್ಲಗಾರಗೀನುಡಿ ಅಮೃತ ಹನಿಯಾ ||2||
ಅಮನಸ್ಕತೂರ್ಯದ ಮನೆಯೊಳು ಮಾಲಿಯು
ಸುಮನಿಸಲು ಈ ದೇಹ ಗೃಹದೊಳು
ವುಮಾಪತಿಯು ತ್ರಿಕೋಣ ತಾರಕಾ
ಅಮಮ ಸಾಂಖ್ಯದಿ ಲೋಕವರಿಯಲು
ರಮಣ ನಿರುಪಾಧಿ ಅಡವೀಶಿರುವದು ||3||

ಯಚ್ಚರಿಕೆಚ್ಚರಿಕೆ
ಯಚ್ಚರ ಹೇಳಿ ವಿಭಕ್ತಿಯ ತಾಳಿದಾ ಎಚ್ಚರಿಕೆಚ್ಚರಿಕೆ|
ನಿಶ್ಚಯ ಈ ಮಾತು ನಿಜ ನಿಜವೆನ್ನಿರಿ ಎಚ್ಚರಿಕೆಚ್ಚರಿಕೆ ||ಪ||
ನಂಬಿದ ಭಕ್ತರಿಗೆ ಭಯವು ನಡಿಸ್ಯಾನು ಎಚ್ಚರಿಕೆಚ್ಚರಿಕೆ|
ನಂಬಿದ ಜನಗಳ ನಷ್ಟ ಮಾಡಲೇ ಬಂದ ಎಚ್ಚರಿಕೆಚ್ಚರಿಕೆ|
ಯಿಂಬು ಮಾಡಲಿಕ್ಕೆ ಇದೇ ಸಮಯವು ತಿಳಿಯದೆಚ್ಚರಿಕೆಚ್ಚರಿಕೆ|
ಶ್ರೀಸಾಂಬನ ಮರೆತರೆ ನರಕವ ಶೃತಿ ಶಿದ್ಧಾ ಎಚ್ಚರಿಕೆಚ್ಚರಿಕೆ ||1||
ಗುರು ಲಿಂಗ ಜಂಗಮ ಅರಿವಿಲಿ ತಿಳಕೊಳ್ಳಿ ಎಚ್ಚರಿಕೆಚ್ಚರಿಕೆ|
ಸ್ಥಿರವಲ್ಲ ಈ ಕಾಯಾ ಈಗಲೋ ಆಗಲೋ ಎಚ್ಚರಿಕೆಚ್ಚರಿಕೆ|
ನರ ಜನ್ಮವೇ ಮುಕ್ತಿ ಅಧಿಕಾರಿಯಾಗ್ವದು ಎಚ್ಚರಿಕೆಚ್ಚರಿಕೆ ||2||
ಶ್ರೀ ನಿರುಪಾಧಿಯು ಅಂಕಲಿನಾಥನು ಎಚ್ಚರಿಕೆಚ್ಚರಿಕೆ|
ಕಾನನದೊಳು ಮೂಡಿದ ಅಡವೀಶನು ಎಚ್ಚರಿಕೆಚ್ಚರಿಕೆ|
ಸ್ವಾನುಭಾವದ ಸುಖ ನೀಡಲಿ ಬಂದಾನೆ ಎಚ್ಚರಿಕೆಚ್ಚರಿಕೆ|
ಯೇನೇನು ಸಂಶಯವಿಲ್ಲ ಶ್ರೀಗುರು ಸಿದ್ಧಾ ಎಚ್ಚರಿಕೆಚ್ಚರಿಕೆ ||3||

ಯಂತಾ ಕರುಣಿ ನೋಡೇ
ಯಂತಾ ಕರುಣಿ ನೋಡೇ ಅಡವಿಸಿದ್ಧಾ
ಯಂತಾ ಕರುಣಿ ನೋಡೇ
ಯಂತಾ ಕರುಣಿಯು ಚಿಂತೆ ದೂರ ಮಾಡಿ
ಪ್ರಾಂತಿನ ಪ್ರಭೆಮೂರ್ತಿ ಹಂತೇಲೇ ಯಳಕೊಂಡಾ ||ಪ||
ಐವತ್ತಾರು ದೇಶದೀ ನಾಮದ ಕೀರ್ತಿ
ಸ್ವಯಮೂರ್ತಿ ಯನಿಸುವದೂ
ಕೈವಲ್ಯ ಕೈಲಾಸ ಸ್ವರ್ಗ ಮೂರು ತನ್ನ
ವಿವರಿಸಿದರೆ ಕೆಟ್ಟ ಭವದ ಕಳಿಯಲಿಕ್ಕೆ ||1||
ಬಂದ ಜಂಗಮ ಭಕ್ತರಾ
ಊಟ ಉಡಗಿ ಚಂದ ನೋಡುತಲಿ
ಕಂದಗೆ ಹಾಲ್ತುಪ್ಪ ಹಣ್ಣು ಕೊಟ್ಟಂತೆ
ಬಂದವರ ಇದ್ದವರ ಒಂದೆಂದು ಕಾಣುವಾ ||2||
ನಿರುಪಾಧಿ ನಿಶ್ಚಯವೂ
ಮೂರು ಸಲ ಅರುವಿಲಿ ಜೈಸಿದನೂ
ಗುರುಲಿಂಗ ಜಂಗಮ ಅನುಭವಿಯೀತಾ
ಪರಿ ಪರಿ ವಿಧದಿಂದ ಪೊರೆವ ಜೀವಿಗಳಾ ||3||

ಯಾಕೆ ಧೈರ್ಯವ ಬಿಡುವೆ
ಯಾಕೆ ಧೈರ್ಯವ ಬಿಡುವೆ ಜೀವನೇ
ಲೋಕ ವಂದ್ಯನು ಅಡವಿ ವಿಪಾಶ್ಚನು
ಬೇಕೆನುಸುತಿಹ ಸುಖವ ನಡಸುವಾ
ಯೇಕೊ ದೇವನೆ ನಂಬಲಾರದೇ ||ಪ||
ನಿನ್ನ ಪುಣ್ಯದ ಪರಿಯು ನಡವದೂ
ಯೆನ್ನುತಿಹ ವಾಕ್ಯ ಬಿಡದಲೆ
ನಿನ್ನ ವಳಗೆಯೂ ನೀನೆ ಅರಿದರೆ
ಮನ್ನಿಸುವ ತನ್ನ ಮನಸಿನಂತೆಯು ||1||
ಮೂರ್ತಿ ಧ್ಯಾನವ ಬಿಡದಿ ನಿತ್ಯದಲೀ
ಕೀರ್ತಿ ಹೊಗಳ್ಳೆ ಮೂರು ಕಾಲದಿ
ಅರ್ಥಿ ಮಾಡುವ ಹರುಷ ಮಾಡುವ
ಕರ್ತು ಈತನೆ ಕಲ್ಪವೃಕ್ಷನೇ ||2||
ನಿರುಪಾಧಿಯ ಮೊದಲು ತಿಳಿದರೇ
ಗುರುವು ಲಿಂಗ ಜಂಗಮಾದುದೂ
ಅರಿಯ ನೀನಾಧಾರ ಅದೇನೀ
ಗುರುತಿನೊಳು ಮೈ ಮರತು ಮತ್ತೆ ||3||

ಯಾಕೆ ಅಪ್ಪಣೆಯಿಲ್ಲ
ಯಾಕೆ ಅಪ್ಪಣೆಯಿಲ್ಲ ಎಲೆ ದೇವನೇ
ನೀ ಕರುಣಿ ಕೃಪೆ ಮಾಡು ಸೇವಕನು ನಾನು ||ಪ||
ಜಾತಿಗಾರನು ಒಬ್ಬ ಬಗೆಬಗೆಯ ವೇಷದಲಿ
ಆತುರದಿ ತಿರುಗುವನು ನಿತ್ಯನಿತ್ಯ
ಪ್ರೀತಿಯಿಂದಲಿ ಅವಗೆ ಮಾನ ಮನ್ನಣೆ ಕೊಟ್ಟು
ಪ್ರೀತಿವಂತರು ನೋಡಿ ರಕ್ಷಿಸುವರಯ್ಯಾ ||1||
ಗಿಡ ಮರಾ ಕ್ರಿಮಿ ಕೀಟ ಪತಂಗಾ ಪಕ್ಷಿ ಕುಲ
ಬೆಡಗಿನ ಮೃಗ ಪಶುವು ನರದೇಹ ತಾಳೀ
ವಡಿಯ ನಿನ್ನ ಧ್ಯಾನ ಮರತು ತಿರತಿರಿಗ್ಹುಟ್ಟಿ
ಕಡಿಗೆ ನಿನ್ನನು ಸುಖವ ಬೇಡ ಬಂದೇ ||2||
ವೇಷಧಾರಿಗೆ ತ್ಯಾಗಿ ಹರುಷ ಮಾಡಿದ ಹಾಂಗೆ
ಯೀಶ ನೀಯನ್ನ ಆನಂದ ಮಾಡಿದರೇ
ಏಸು ಕಾಲದ ಸಂಶಯ ಹರಿದು ನಿರುಪಾದ್ಯಾಗಿ
ದೋಷ ಹೋಯಿತೆಂಬೆ ಅಡವೀಶ ದಯನಿಧಿಯೇ ||3||

ಯೇನೆ ಪಾರ್ವತಿ
ಯೇನೆ ಪಾರ್ವತಿ ನಿನ್ನಾ| ಹೀನ ಭಾವನೆ ನಿನಗೆ
ಮಾನವೇನೆಲೆ ಶಾಂಭವಿಯೇ| ಗ್ನಾನಿಗಳ ನೋವು ||ಪ||
ಸಾಧು ಸಂಗಳೆ ನೀನು ಸಕಲ ಆಧಾರಿಯು
ಭೇದವೇತಕೆ ನಿನಗೆ ಯನ್ನೊಳು ತಿಳಿಸೌ
ಭೇದವಾಗದೆ ಮಹಾ ಕೇವಲ ಮುದವಾಗು
ಹಾದಿಯೊಳರ್ಥಿ ಮಾಡು ಹರಣವೇ ನೀನು ||1||
ಮುಕುತಿ ಕಾಂತಿಯೆ ನೀನು ಮೂಢೆಯಾದರೆ ನಿನ್ನಾ
ಶಕುತಿ ನಾಮಕೆ ಒಟ್ಟಾವೇ ನಿಂನೊಳು ತಿಳಿ
ಭಕುತಿ ಜ್ಞಾನ ವೈರಾಗ್ಯ ಭಾಪುರೆ ವೀರರ
ಸುಖ ದುಃಖ ನಿನ್ನದಲ್ಲವೇ ಹರಣವೇ ನೀನೂ ||2||
ನಿರುಪಾಧಿ ಅಡವೀಶಾ ನಿಜರೂಪನಹುದೆಂದು
ಮರೆಯ ಹೊಕ್ಕೆನು ಮೋಕ್ಷಕೆ ನಿನ್ನೊಳು ತಿಳಿ
ಚರಣ ಬಿಡು ಬಿಡು ನಿನ್ನಾ ಚೇಷ್ಟಿಗಂಜದ ಸಿದ್ಧಾ
ಕರುಣೆಯಾಗುವದೊಳ್ಳಿತೆ ಹರಣವೆ ನೀನು ||3||

ಯೋಗಿ ನಿನ್ನ ದಿವ್ಯ ಪಾದವ
ಯೋಗಿ ನಿನ್ನ ದಿವ್ಯ ಪಾದವ ರಾಗದಿಂದಲಿ ಭಜಿಪಗೇ
ಭೋಗ ವೀಯ್ಯಲಿ ಕರುಣ ಸಾಗರ ಶ್ರೀಗುರುವೆ ಲಿಂಗ ಜಂಗಮಾ ||ಪ||
ಸ್ಥೂಲ ಸೂಕ್ಷ್ಮವು ಕಾರಣಾಂಗದ ಮೂಲವರಿದಂತೆ ಮಾರುತೀ
ಆಲಯದಿ ಶಿಶು ನಿತ್ಯ ಲೀಲ ಹೊಗಳಿದೆ ಕರ್ತುವೇ
ಜ್ಯಾಲ ನಿನ್ನದು ಲೋಕ ಮುಚ್ಚದೆ ಕೀಲು ಅರಿದಂತೆ ಕುಶಲಿಗೇ
ಪಾಲಿಸೆನ್ನನು ಪಾವನಾತ್ಮನೆ ಕಾಲಕಾಲದ ಮಹಿಮನೇ ||1||
ಶಕ್ತನಾಗಲು ನಿನ್ನ ವಚನಕೆ ಭಕ್ತ ವಸ್ತ್ರಲಂಕಾರವೂ
ಮುಕ್ತಿ ಮಾರ್ಗಕೆ ಹೋಗುವಂಥಾ ಯುಕ್ತಿಗಲಿಸುವೆ ನೀನೆಲ್ಲಾ
ವ್ಯಕ್ತ ಮಾರುತಿ ವಿರತಿ ವಜ್ರದ ತಕ್ತಿನಲ್ಲಿ ಸೆಳೆದುಕೋ
ಯುಕ್ತಿ ಕಳವುತ ವೀರಶೈವದ ಶಕ್ತಿ ಧೈರ್ಯವ ನೀಡುವೇ ||2||
ನಂಬಿ ಭಜಿಸಲು ತಿಳಿದ ಪುರುಷಗೆ ಶಂಭು ನೀನೇ ಶಂಕರಾ
ಅಂಬಪತಿ ಅರಣ್ಯವಾಸದಿ ಯಿಂಬು ಮಾಡಿಹ ಲೀಲವೂ
ಕುಂಬಿನಿಯರ ಸಲಹಲೋಸುಗ ಅಂಬರದಿ ಧರೆಗಿಳಿದು ತಾ
ಶುಂಭು ಮನುಜರು ಕೆಟ್ಟು ಹೋದರು ಯಂಬುತಲಿ ಬಂದ ಮಹಿಮನೇ ||3||
ನಿನ್ನ ಆಟದ ಗುರುತು ತಿಳಿಯಲು ನಿನ್ನ ವಂಶಕ್ಕದೇ
ಭಿನ್ನ ಭಾವಿಯು ಯೇನು ಬಲ್ಲನು ಚನ್ನ ಶ್ರೀಗುರುವಾದನಾ
ತನ್ನ ತಾನೇ ನೋಡಿ ಚಿನ್ಮಯದೇ
ಘನ ಪರಂಜ್ಯೋತಿಯು ಯೆನ್ನುತಿಹ ತ್ರಿಕಾಲದೀ ||4||
ಜ್ಯೋತಿ ರೂಪನು ನೀನು ಆಡುವ ಮಾತುಗಳು ಮಾಣಿಕವು
ಕೋತಿ ಬಲ್ಲದೆ ರತ್ನದ್ಹಾರವಾ ಪ್ರೀತಿಯಿಂದಲಿ ಹಾಕಲಿ
ಆ ತೆರದಿ ನಿನ್ನ ನಿಜವರಿಯಲೀ ಆತುರವೆ ಕೆಟ್ಟ ಭವಿಗೇ
ಸೋತೆ ನಿನ್ನಯ ವಾಕ್ಕು ಹಸನ್ಮುಖ ನೂತನದ ನುಡಿ ನಂಬಿದೇ ||5||
ಕರುಣಿ ನಿನ್ನಯ ಅಂತರಾತ್ಮನ ಬಿರಿದು ಸ್ತುತಿಪ ಜ್ಯಾಣನು
ಬರನು ಯಂದಿಗೆ ನರಕ ದರುಶನ ಮರಿಯಾ ಕೈವಲ್ಲಾಹುದು
ಸ್ಥಿರವು ಸ್ಥಿರವು ಸ್ಥಿರವುಯಂದು ವರಲುವವು ವೇದಾಗಮ
ಪೊರಿಯೆ ಯೆನ್ನನು ಶರಣ ಸಾಧುವಾ ಮೊರೆ ಹೊಕ್ಕೆನು ಸೇವಕಾ ||6||
ಒಡಿಯ ನಿನ್ನಯ ದಿವ್ಯ ಪಾದದ ಸಡಗರೆಲ್ಲಿಯೂ ಕಾಣೆನು
ಯಿಡು ಕರುಣ ಆನಂದ ದೃಷ್ಟಿಯ ಮೃಢನು ನೀನೇ ಎಂದೆನು
ಪೊಡವಿಯೊಳಗೆಯು ದೇಹ ವಿಹಪರಿ ಬಿಡನು ನಿನ್ನಯ ಸ್ಮರಣೆಯು
ಖಡಕು ಬೇಡುವೆ ಬಂಧು ಬಳಗದಿ ಕಡಿಗೆ ನಿನ್ನೊಳು ಐಕ್ಯವಾ ||7||
ಪಿಡಿ ಸಂಸಾರ ಶರಧಿ ದಾಂಚಲಿ ಬೇಡಿದಾ ಶ್ರೀಪಾದ ಕಾಯನು
ನೋಡಿ ಕಟ್ಟದೆ ಅಂಜಿ ಅಳುಕದೆ ಆಡುತಲಿ ನಾ ದಾಟುವೇ
ಕೂಡಿ ಕೂಡದ ಹಾಂಗೆ ಸರ್ವದಿ ಮಾಡಿ ಮಾಡಿದ ರೀತಿಯೂ
ಕಾಡಿದೆನು ನಾ ನಿನ್ನ ಸ್ತೋತ್ರದಿ ಗಾಡಿಕಾರ ಶಂಭುವೇ ||8||
ಈಶ ಅಂಕಲಗಿ ಬೆಳ್ಳಾರಿಯ ಮಠವಾಸ ಅಡವಿಯ ಸಿದ್ಧನೇ
ಆಸೆ ಇಲ್ಲದಾನಂದ ಮಾರುತಿ ದೇಶದೋಳ್ ನೀ ನಿರುಪಾಧಿಯು
ದೋಷ ಹರಿಯಂದು ನಿನ್ನ ಹೊಗಳಿದೇ ಯೇಸು ಕಾಲದ ತೊತ್ತುನಾ
ವಾಸವಾಗೆನ್ನ ಮನದ ಕೊನೆಯೊಳು ರಾಶಿದೈವವ ವಲ್ಲೆನೂ ||9||

ರಾಜ ಗುರು ಹುಷಾರ ಹೋಕೋ
ರಾಜ ಗುರೂ ರಾಜ ಗುರೂ
ಶರಣ ಪಕಡೊ ತುಂ ಪೂರ್ಣ ಗುರೂ ||ಪ||
ರಾಜ ಗುರು ಹುಷಾರ ಹೋಕೋ ಧ್ಯಾನ ಕರೋ ಘನ
ಖುಷಿ ಅಮಲ್ಮೇ ಬೈಠೇ ತು ಮಹಾ ||1||
ಅಂಗ ವಾಚ ಮನ ತಿನೋ ವುನ್ಕಾ
ಲಿಂಗ ಏಕ ತುಂ ಸಂಗ ಹರಾಮಹಾ ||2||
ನಿರುಪಾಧಿ ಅಡವಿ ಪಾಶ್ಚಕು ಕರಾರು ಹೋಕೋ
ಧ್ಯಾನ ಕರೋ ಮಹಾರಾಜ ಗುರು ||3||

ಶಿವಯೋಗಿ ಈತನು
ಶ್ರೀಗುರು ಅಡವೀಶ ಯೋಗಿ ಸಾಕ್ಷಾತನು ಹೊಯ್ಯೊಲೊ ಡಂಗುರವ|
ರಾಗ ರಹಿತ ನಿಸ್ಸೀಮ ಈತನೆಂದು ಹೊಯ್ಯೊಲೊ ಡಂಗುರವ ||ಪ||
ಕಾಮ ಸಂಹರ ಕರುಣಿ ಕಲ್ಪವೃಕ್ಷನು ಹೊಯ್ಯೊಲೊ ಡಂಗುರವ|
ಸೋಮಕೋಟೆ ಪ್ರಭೆ ಪರಬ್ರಹ್ಮನೀತನು ಹೊಯ್ಯೊಲೊ ಡಂಗುರವ ||1||
ನೀತಿ ಪುರುಷನೀತಾ ನಿಜವಾದ ಸಾಧುವಾ ಹೊಯ್ಯೊಲೊ ಡಂಗುರವ|
ನಾಥ ನಿಶ್ಚಯ ನರಗೆ ಮುಕ್ತಿಯ ತಿಳಿಸುವ ಹೊಯ್ಯೊಲೊ ಡಂಗುರವ ||2||
ಪಾತಕರರಿಯರು ಪರಮ ಯೋಗೀಶನ ಹೊಯ್ಯೊಲೊ ಡಂಗುರವ|
ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||3||
ಶಂಕರನಾಗಿ ಕಿಂಕರ ನುಡಿಯಿಂದಿಹ ಹೊಯ್ಯೊಲೊ ಡಂಗುರವ|
ಜ್ಯೋತಿ ರೂಪವಾಗಿ ಹೊಳೆವ ಮೂರ್ತಿಯೀತಾ ಹೊಯ್ಯೊಲೊ ಡಂಗುರವ ||4||
ಗುರುವಿನ ಬಿಟ್ಟರೆ ಗತಿಯಿಲ್ಲ ನಂಬೋ ಹೊಯ್ಯೊಲೊ ಡಂಗುರವ|
ಅರುವಿಲೆ ತಿಳಿದರೆ ಆನಂದವಾಗ್ವದು ಹೊಯ್ಯೊಲೊ ಡಂಗುರವ ||5||
ಶಿವಯೋಗಿ ಈತನು ಭವರೋಗ ವೈದ್ಯನು ಹೊಯ್ಯೊಲೊ ಡಂಗುರವ|
ಸುವಿವೇಕದಿಂದಲಿ ಸಾಕ್ಷಾತ ಬಂದಾನೆ ಹೊಯ್ಯೊಲೊ ಡಂಗುರವ ||6||
ನಿರುಪಾಧಿ ಗುರು ಈತನು ಪರಿಪರಿ ಲೀಲನು ಹೊಯ್ಯೊಲೊ ಡಂಗುರವ|
ವರ ಅಂಕಲಿನಾಥ ಅಡವೀಶ್ಯಾಯೆನಿಸಿದ ಹೊಯ್ಯೊಲೊ ಡಂಗುರವ ||7||

ಶಿವನೆ ನೀನೋ ನೀನೋ ಶಿವನೂ
ಶಿವನೆ ನೀನೋ ನೀನೋ ಶಿವನೇ ವಿವರ ತಿಳಿದವಗೆ ಗುರುವೇ
ಭವವ ಕಳಿಯೆ ನರ ಶರೀರ ತಾಳಿ ಬಂದಿಹೇ ||ಪ||
ನಡೆಯು ನುಡಿಯು ವಂದೆಯಾದ ಸಡಗರೆಲ್ಲಿಯೂ ಕಾಣೆ
ವಡಿಯ ಇಲ್ಲಿ ಕಂಡು ಸುಖದಿ ಹಾಡಿ ಹರಸಿದೇ
ಬಿಡದೇ ನಿನ್ನ ಸ್ತೋತ್ರ ಘಟವು ಪೋಡವಿಲೀಹ ಪರಿಯಾಯೇಕ
ದೃಢವಾ ಕೊಟ್ಟು ನಡಿಸು ಯೆಂಬೊ ಬಯಕೆ ಯನ್ನದೂ ||1||
ಯೇಸು ದೇಶ ತಿರುಗಿದವರ ಸೋಸಿ ನೋಡುತಲೀತ
ಯೋಗೀಶ್ಯಾನೆಂದು ಪ್ರಥಮರೆಲ್ಲ ನುಡಿವ ನುಡಿಗೇಳಿ
ಪೋಷಿಸೆಂದು ಬೇಡಿಕೊಂಬೆ ಕೂಸು ನಿನ್ನವ ನಾನು
ಯೇಸು ಕಾಲದಿಂದ ತೊತ್ತು ನುತಿಸ ಬಂದಿಹನೇ ||2||
ಪಿಡಿ ಸಂಸಾರದೊಳು ಯೆನ್ನ ಕೂಡಿ ಕೂಡದ ಹಾಗೆ
ನೋಡಿ ರಕ್ಷಿಸೈಯ್ಯಾ ನಿನ್ನ ಸೇವಕನು ನಾನು
ಆಡಲೇಕೆ ಬಾಯಿ ತೆರೆದು ನಾಡೊಳಧಿಕನೇ ನಿನಗೆ
ಬೇಡಿದಂತಾ ವರವ ನಡಸಲಿಕ್ಕೆ ಅಧಿಕಾರೀ ||3||
ಬಾಳ ಬಲ್ಲವರ ತೊತ್ತು ಆಳಿನಾಳಯ್ಯಾ ಅಣುವೂ
ಕೇಳುಯೆನ್ನಾ ಬಿನ್ನಪವನು ಹೇಳಲಾರಿಗೇ
ಆಳಿದನೆ ಆರ್ಥಿಮಾಡು ಬಾಳ ಲೋಚನಾ ತಾನೇ
ಹೇಳಲೇನ ತಿಳಿದು ನೀನು ರಕ್ಷಿಸೈದೇವಾ ||4||
ವಂದೆ ಕಾಂಕ್ಷೆಯಿಹದು ಜಗದಿ ಬಂದೆ ಅರುವೆಂದೂ ಯಿಲ್ಲೀ
ಚಂದದಿಂದ ನೋಡಿ ಹೊಗಳೇ ಮುಕ್ತನಾದೆನೋ
ತಂದೆ ತಾಯಿ ಬಂಧು ಬಳಗಾಯಂದು ಮರೆ ಹೊಕ್ಕೆದಯದಾ
ಸಿಂಧು ಅಡವಿಸಿದ್ಧ ತಾನೆ ನಿರುಪಾಧಿ ||5||

ಶಿವಲಿಂಗ ನಿರುಪಾಧಿ ಅಡವೀಶ್ವರ
ಶಿವಲಿಂಗಾ ಸ್ತ್ರೀಲಿಂಗಾ ಮೂರು ಮಾಲಾ ಗುರುಲಿಂಗ ಜಂಗ್ಮಾದನೇ
ಭವ ರೋಗಹರ ತಂದಿ ತಾಯಿ ತಾನೂ ಸ್ತ್ರೀಯಾಗಿ ಪುತ್ರಾದನು
ವಿವರ ತಿಳಿಯಲಿ ಪುತ್ರಿ ಅಜ್ಜ ಆಯಿ ನಿರುಪಾಧಿ ಅಡವೀಶ್ವರ ||1||
ಪರಮ ಗುರುವರ ನಂದಿ ನಾಥ ಪ್ರಭುವೇ ಮೋಕ್ಷಕ್ಕೆ ಅಧಿಕಾರನೇ
ವರಣ ತಿಳಿಯಲು ಮೂರು ಮೂರ್ತಿಗರಿದೂ ಜಂಗಮಕೆ ಭಕ್ತಾಗಿಯೇ
ಯಿರವು ತಿಳಿಯಲ್ಕರಿದು ರೂಪ ಧರನೇ ನಿರುಪಾದಿ ಅಡವೀಶ್ವರ ||2||
ಕಾಂತಾ ಕಾಂತಿಯು ಕಾಂತಿಯಲ್ಲಿಯಿಡಲೂ ಸದ್ಗುರುವು ತಾನಾದನೇ
ಶಾಂತಾ ಶಾಂತಿಯೇ ಶಾಂತದಿಂದ ಬೋಧ ನಿನಾದ ನಿಜವಾದನೇ
ಅಂತ್ಯ ಆದಿ ಮದ್ಯ ರಹಿತ ಗುರುವೇ ನಿರುಪಾಧಿ ಅಡವೀಶ್ವರ ||3||
ಅತೀತ ಆನಂದೈಕ್ಯ ಪದದ ನೆರವೇ ಕರ್ಮಿ ಮುಮುಕ್ಷಾದನೇ
ಹಿತದಿ ಅರಿಯಲು ಸಾಧಕನು ಭವಿಯಾಗಿ ಆರೂಢ ಮಹಿಮಾದನೇ
ಗತಿಯಿಂ ನೋಡಲು ಎಂಟು ಮೂರ್ತಿ ಕೀರ್ತಿ ನಿರುಪಾಧಿ ಅಡವೀಶ್ವರ ||4||
ನಾಥನಾಥರ ಸಲಹಲಿಕ್ಕೆ ಖ್ಯಾತಾ ಅರವು ಅಹಲ್ಲಾದನೇ
ನೀತಾ ನೀತದಿ ಹೋಗದ ಜ್ಯಾತಿ ರಹಿತಾ ಅಹುದಲ್ಲದೊಳು ಭೇದ್ಯನೇ
ಮಾತು ಮಾತ್ರದಿ ಜಗದ ರಚನೆ ಮಾಡೀ ನಿರುಪಾಧಿ ಅಡವೀಶ್ವರ ||5||
ವಾ ಆದಿ ಸಾ ಅಂತ್ಯ ಪ್ರಣಮದೊಳಗೇ ಆಚಾರ ಲಿಂಗಾದನೇ
ಬಾ ಆದಿ ಲಾ ಅಂತ್ಯ ಮನುಗಳಲ್ಲಿ ಗುರುಲಿಂಗ ತಾನಾದನೇ
ಡಾ ಆದಿ ಪಾ ಅಂತ್ಯ ದಳದ ಶಿವಲಿಂಗ ನಿರುಪಾಧಿ ಅಡವೀಶ್ವರ ||6||
ಕಾ ಆದಿ ಟಾ ಅಂತ್ಯ ಬೀಜದೊಳಗೇ ಜಂಗಮ ಲಿಂಗಾದನೇ
ಆ ಆದಿ ಅಃಕಡೆಯು ಮೂಲದೊಳಗೇ ಪ್ರಸಾದ ಲಿಂಗಾದನೇ
ಹಂ ಆದಿ ಕ್ಷಂ ಕಡೆಯು ಎರಡರಲ್ಲಿ ಮಹ ಲಿಂಗ ನಿರುಪಾಧಿ ಅಡವೀಶ್ವರ ||7||

ಸಡಗರಾನಂದ ಚಿಂತೆ ನಿನಗೆ ಹತ್ತಿದೆ
ಸಕಲ ತಾಪತ್ರಯದ ಭಾರ ನಿನ್ನಗ್ಹತ್ತಿದೆ
ಸುಖದಿ ನಿನ್ನ ಧ್ಯಾನ ಮಾಡೋದೆನಗೆ ಹತ್ತಿದೆ ||ಪ||
ಮಡದಿ ಮನೆಯು ಪಶುವು ಚಿಂತೆ ನಿನಗೆ ಹತ್ತಿದೆ
ಷಡು ಚಕ್ರಂಗಳ ಸುಳುವು ಕಾಣೋದೆನಗೆ ಹತ್ತಿದೆ
ಸಡಗರಾನಂದ ಚಿಂತೆ ನಿನಗೆ ಹತ್ತಿದೆ
ಅಡಿಯ ಧ್ಯಾನ ಮಾಡ ಲಹರಿ ಯನಗೆ ಹತ್ತಿದೆ ||1||
ಪುತ್ರ ಪೌತ್ರನ ಮದುವೆ ಚಿಂತೆ ನಿನ್ನಗ್ಹತ್ತಿದೆ
ನಿತ್ಯ ನಿನ್ನ ನಾಮ ಸ್ತುತಿಪದು ಯನಗೆ ಹತ್ತಿದೆ
ಅತ್ಯೆ ಮಾವ ಅಳಿಯನೆಂಬೊದು ನಿನಗೆ ಹತ್ತಿದೆ
ಚಿತ್ತ ನಿನ್ನೊಳಗಾಗಿ ನಿಲ್ಲೊದೆನಗೆ ಹತ್ತಿದೆ ||2||
ಮುತ್ತು ಭಂಗಾರ ಬೆಳ್ಳಿ ಅರವಿ ನಿನ್ನಗ್ಹತ್ತೆದೆ
ಕರ್ತು ಮುಕ್ತಿ ಪಾಲಿಶಂಬುದೆನಗೆ ಹತ್ತಿದೆ
ಮಿಥ್ಯದಾಟ ಮಾಡಿ ತೋರೊದು ನಿನಗೆ ಹತ್ತಿದೆ
ಸತ್ಯವಾದ ವಸ್ತು ಬೆರೆವದು ಯನಗೆ ಹತ್ತೆದೆ ||3||
ಕಾಲ ಕಾಲದಲ್ಲಿ ಕಾವದು ನಿನಗೆ ಹತ್ತಿದೆ
ಲೋಲ ಮೂರ್ತಿಯಾಗಿ ಚರಿಪೊದೆನೆಗೆ ಹತ್ತಿದೆ
ಮಾಲಿ ಹಾಕಿ ಮೆರೆಸುವದು ನಿನಗೆ ಹತ್ತಿದೆ
ಕೀಲನರಿದು ಕೊಂಡಾಡೋದು ಯನಗೆ ಹತ್ತಿದೆ ||4||
ಚರಣ ಧೂಳೀ ನನ್ನವೆಂಬೊದು ನಿನಗೆ ಹತ್ತಿದೆ
ಗುರುವು ಅಂಕಲಗೀಶನೆಂಬೊದು ಯನಗೆ ಹತ್ತಿದೆ
ಪರಿ ಪರಿಯು ಕಾಯ್ದು ಬರುವದು ನಿನಗೆ ಹತ್ತಿದೆ
ಅರಮರಿಲ್ಲಾ ನಿರುಪಾಧಿ ಯನಗೆ ಹತ್ತಿದೆ ||5||

ಸಂತೋಷದಿಂದ ಗುರು ಭಕ್ತರ‍್ಹಾಡಿ
ಸ್ವರ್ಗ ಕೈಲಾಸ ಕೈವಲ್ಯಯಿದೆ ನಿಶ್ಚಯವೂ
ಭಾರ್ಗೋದೇವೀಶ್ವರಿ ಸದಾ ಶಿವ ಅಡವೀಶ್ಯಾ ||ಪ||
ಮೇಲೆಂಬ ಬಗೆ ನಾನು ಕಂಡಿಲ್ಲಾ ಕೇಳಿದುದೂ
ಲೋಲ ಮಾರುತಿ ನೋಡಿ ಸಾಕ್ಷಾತನೆಂದೇ|
ಕೀಲಿಹುದು ಯಿಲ್ಲಿ ಶೃತಿಯೊಳಗೆ ಪೇಳಿದ ಹಾಂಗೇ
ಮೂಲ ಪ್ರಮಥರ ವಾಕ್ಯದಂತೆ ಅಹುದಹುದು ||1||
ನಿಂತುದೇ ಕ್ಷೇತ್ರ ನುಡಿದುದೇ ಮಂತ್ರವೆಂತೆಂದೂ
ಸಂತೋಷದಿಂದ ಗುರುಭಕ್ತರ‍್ಹಾಡಿಹರ
ಕಾಂತಿ ತ್ರೈಲೋಕದೊಳು ಬೆಳಗಿಹುದು ಅದು ಕಂಡು
ಅಂತ್ಯ ಮಧ್ಯ ಆದಿ ರಹಿತನಃ ಪ್ರತಿಮಾ ||2||
ನಿರುಪಾಧಿ ಗುರು ಬ್ರಹ್ಮದೊಳು ನಾದಬಿಂದು ಕಳೆ
ಗುರುಲಿಂಗ ಜಂಗಮ ಹರಿಹರ ವೇದ ಮುಖನೂ
ಪರಿಪರಿಯ ತ್ರಿಪುಟಿಗಳು ಪರಮ ಸೂತ್ರಗಳೆಂದು
ವರದ ವಚನವ ನೋಡಿ ನಿಜ ನಿಜವುಯೆಂದೇ ||3||

ಸದಮಲಾನಂದ ಸಾಕ್ಷತ ಅಡವೀಶ್ಯಾ
ಸದ್ಗುರುವು ಆದಂತ ವಿಧ ಮೂಢ ಮತಿ ಅರಿಯಾ
ಸದಮಲಾನಂದ ಸಾಕ್ಷಾತ ಅಡವೀಶ್ಯಾ ||ಪ||
ಭವಿ ಭಕ್ತರೇಕಾದ ಸುದ್ದಿಯನು ಕೇಳುತಲಿ
ಸುವಿವೇಕದಿಂ ಪತ್ರಿ ವೃಕ್ಷದಡಿಯಿರುವಾ
ಭುವಿಯ ಮೃತ್ತಿಕೆ ಲಿಂಗ ಮಾಡಿ ಕರದೊಳಗಿರಿಸಿ
ವಿರಿಸಲು ಸಕಲ ಅದ್ವೈತ ವೀರಶೈವಾ ||1||
ಕಾಲಜ್ಞಾನದ ಸೂಚನೆಯ ನೋಡಲಿಕೆ ಇಲ್ಲಿ
ಕೀಲು ಕಾಣುವದು ಸುಜ್ಞಾನ ಪುರುಷರಿಗೇ
ಕಾಲಕಾಲದ ವಸ್ತು ಲೀಲವಾಡಲಿ ಬಂದು
ಮೇಲು ಮಹತ್ತಿಲಿ ಮೆರೆವ ಮಹದಾದಿ ವಡಿಯಾ ||2||
ನಿರುಪಾಧಿ ತಾನಾದ ಗುರುತಿನೊಳು ಮೈಮರೆದು
ಶರೀರ ಸುಖ ದುಃಖಕೆ ನೀ ಸಾಕ್ಷಾತನಾಗೀ
ಪರಮ ಯತಿ ಕುಲ ಚಂದ್ರ ಅಂಕಲಗಿವಾಸ
ಹರುಷ ಆನಂದರುವು ತಾನೆ ತಾನಾಗೀ ||3||

ಸಿದ್ಧ ಶ್ರೀಗುರು
ಸಿದ್ಧ ಶ್ರೀಗುರು ಪ್ರಸಿದ್ಧ ಮಹಿಮ ತಾನೇಯಲ್ಲಾ ||ಪ||
ಜಗದವಳಗೆ ನಾಮ ಶ್ರೇಷ್ಠ
ನಿಗಮ ಕೂಗುತಿಹದು ಅರಿದು
ಅಗಲದಾಲೆ ಬ್ರಹ್ಮವನ್ನು
ಸೊಗಸು ಮಾಡಿ ಅರಿದ ಪುರುಷಾ ||1||
ತಾನೆ ತಾನೆಯಾದ ಸುಖವ
ಮೌನ ಮುದ್ರೆಯಿಂದ ಅರಿದು
ಖೂನದೊಳಗೆ ಆಡುವಂಥಾ
ಜ್ಞಾನಿಗರಿಕಿ ನಿನ್ನ ಗುರುತು ||2||
ಅರ್ಥದ್ಹಮ್ಮಿನೊಳಗೆ ನನ್ನ
ಗುರುತು ಅರಿಯಲಿಕ್ಕೆ ಅರಿದು
ಕರ್ತು ನಿನ್ನ ಕರುಣವಲ್ಲದೇ
ಮತ್ರ್ಯ ವಸ್ತು ಸಿಗುವದುಂಟೇ ||3||
ಗೂಢ ಗುಪ್ತ ಲೀಲದಾಟವ
ಮೂಢ ಮತಿಗಳೇನು ಬಲ್ಲರು
ಮಾಡಿದಂಥಾ ಕರ್ಮವೇಕೆ
ಆಡುವದು (ನು) ಸದಾನಂದಾ ||4||
ನಿರುಪಾಧಿ ಅಡವಿಪಾಶ್ಚನು
ಸ್ಮರಣೆ ಮಾತ್ರ ಮುಕ್ತಿಯಾಗ್ವ
ಕುರುಹು ತಿಳಿಯಬಲ್ಲಡವನೇ
ಗುರು ಲಿಂಗ ಜಂಗಮದಾ ||5||

ಸುಮ್ಮನಾಗದು
ಸುಮ್ಮನಾಗದು ಕರುಣಾ ಕರ್ಮವರಿಯದನಕಾ|
ವಮ್ಮನವಾದರೆ ಬೇಗ ವಲಿವ ಅಡವೀಶ್ಯಾ ||ಪ||
ಬಾಯಿ ಬಿಟ್ಟರೆ ಇಲ್ಲ. ಬಳಲಿ ಅತ್ತರೆ ಇಲ್ಲ|
ಸಾಹಸದಿ ಯೇನೇನು ಮಾಡಿದರೆ ಇಲ್ಲ|
ಕಾಯಾ ವಾಚಾ ಮನ ಮೂರು ಸುದ್ದಾದರೆ|
ಆಯಾಸ ಕಳೆದು ಆನಂದದಲಿಡುವಾ ||1||
ಯಾಗ ಮಾಡಿದರಿಲ್ಲ ದಾನ ಮಾಡಿದರಿಲ್ಲ|
ಸೋಗೀಲಿ ಜಪ ನೀತಿ ಹಿಡಿದಿರಿಲ್ಲ|
ಯೋಗ ಪೂಜಿಗಳಿಂದ ಮುಕ್ತಿವಡೆಯನು ಶಿಗನು|
ಆಗ ಬೇಗದಿ ವಲಿವ ಪುಣ್ಯ ವದಗಲಿಕ್ಕೆ ||2||
ನಿರುಪಾಧಿ ತಿಳಿದಾತನೀತ ಅಂಕಲಿವಾಸ|
ಪರಮ ಗುರುಲಿಂಗ ಸದಾಶಿವನು|
ಪರತರಾನಂದೈಕ್ಯ ಪದಕೆ ಸಂಶಯ ನಾಸ್ತಿ|
ಇರಬೇಕು ಸುಕೃತ ತಾನೆ ತಾನೆ ಆಗ್ವ ||3||

ಸುಮ್ಮನಿರಬೇಕು
ಸುಮ್ಮನಿರಬೇಕು ಶಿವನಾದ ಮ್ಯಾಲೆ ಸುಮ್ಮನಿರಬೇಕು
ನಿಮ್ಮ ನಿಜಾನಂದ ವಮ್ಮನದಿಂದಲಿ ||ಪ||
ಕಂಮ್ಮು (ಕಮ್ಮು) ಹೆಚ್ಚು ಯೆಂಬೊ
ಹಮ್ಮಳಿದ್ಹರುಷದಿ ಸುಮ್ಮನಿರಬೇಕು ||1||
ನೂತನ ವಸ್ತುವಾ ಪ್ರೀತಿಯಿಂದಲೇ ತಿಳಿ
ದಾತುಮ ಸುಖದೊಳು ಅತೀತ ಎನ್ನದೆ ಸುಮ್ಮನಿರಬೇಕು ||2||
ಸ್ಥೂಲದೊಳಗೆ ಸೂಕ್ಷ್ಮ ಕೀಲು ದೋರಿದ ಮೇಲೆ
ಕಾಲ ಕರ್ಮ ಹರಿದಾಲಯವಾದವಾ ಸುಮ್ಮನಿರಬೇಕು ||3||
ಗೂಢದ ಭಕ್ತಿಯ ಗೂಡು ಸೇರಿದ ಮೇಲೆ
ಕೂಡಿ ಕೂಡದಂತೆ ಇರ್ದು ನಿರ್ಲಿಪ್ತದಿ ಸುಮ್ಮನಿರಬೇಕು ||4||
ನಿರುಪಾಧಿಯಾದವ ಕರಕರೆ ಹೋಗದಲೆ
ವರ ಬೈಲಾಟವು ಗುರುಲೀಲಯೆಂದವಾ ಸುಮ್ಮನಿರಬೇಕು ||5||

ಸುವ್ವಿ ಸುವ್ವೆಯ್ಯ
ಸುವ್ವಿ ಸುವ್ವೆಯ್ಯ ಜ್ಯಾಣೇ| ಸುವ್ವಿ ಸುವ್ವೆಯ್ಯ ಜ್ಯಾಣೇ
ಸುವ್ವಿ ಸುಕ್ಷೇಮವೆ ಪ್ರವೀಣೇ| ಸುವೈಯ್ಯ ಜ್ಯಾಣೇ ||ಪ||
ಸುಖದ ಯಿಚ್ಛೆಯೆಂಬೊ ವಳ್ಳೊಳು
ಅಖಿಳ ವಿರತಿಯಂಬವ ಜೋಳ
ಅಕ್ಕರದಿ ಒಬ್ಬೋಳೇ ಕುಟ್ಟುವೇನೇ ||ಸುವ್ವಿ|| ||1||
ಆತ್ಮವಿಚಾರ ವಿಚಾರ ಯಂಬೊ ನೀರು
ಸ್ವಾತ್ಮೆ ತಿಳಿಯದು ವ್ಯಾಳ್ಯವ್ಯಾಳ್ಯಕೆ
ಪ್ರೀತಿಯಿಂದ ಒಬ್ಬಳೇ ಮಾಡುವೆನು ||ಸುವ್ವಿ|| ||2||
ನಿಸ್ಸಂಗೆಂಬೊ ವಬ್ಬೆಯ ದೊಬ್ಬಿ
ಪಸು ಸರ್ವ ಪ್ರಪಂಚೆಂಬೊ
ಯಶಸ್ಸೀನ ಗುರುವಿನ ಹಾಡುವೇನು ||ಸುವ್ವಿ|| ||3||
ವಾಸನ ಕ್ಷಯವೆಂಬೊ ವನಿಕೆ
ದೋಷ ರಹಿತನಂದ ಕರದಿ
ಈಶ ತನೆಂದ್ಹಾಡಿ ಕುಟ್ಟುವೆನೇ ||ಸುವ್ವಿ|| ||4||
ತೂರ್ಯದಿಂದೆ ಹೊಟ್ಟು ಹಾರಿಸಿದೇ
ತೂರ್ಯಾತೀತದ ಅಕ್ಕಿಯ ಮಾಡಿ
ಕಾರ್ಯ ಕಾರಣ ಮೀರಿ ಕುಳಿತನೇ ||ಸುವ್ವಿ|| ||5||
ಶಿದ್ಧ ಹಸಿದನೆಂದು ಮನದಿ
ಬುದ್ಧಿ ಹುಟ್ಟಲಿಕ್ಕೆ ಯದ್ದು
ಶುದ್ಧ ಪುರುಷರ ಸಂಗ ಹುಡುಕಿದೆನೆ ||ಸುವ್ವಿ|| ||6||
ಶ್ರವಣವೆಂಬೊ ಗಡಗಿಯ ಒಳಗೆ
ವಿವರ ನೀರು ಮನನ ಅಕ್ಕಿ
ಜವದಿ ನಿಧಿ ಧ್ಯಾಸವೆಂಬೊ ಅಗ್ನಿಯ ಹಚ್ಚಿದೆನು ||ಸುವ್ವಿ|| ||7||
ಧೈರ್ಯಯೆಂಬೊ ಕುದಿಯ ಬರಲು
ಸೈರಣಿಯಂಬೊ ಕಿಚ್ಚಿಗೆ ಯಿಳುಹಿ
ಕಾರ್ಯ ಕಾರಣ ಮೀರರ್ದಾ ಮುಖ ತೊಳಿದೇ ||ಸುವ್ವಿ|| ||8||
ನಿರುಪಾಧಿ ಅಡವೀಶನಿಗೆ
ಪರಿಪೂರ್ಣ ನವವಿಧ ಭಕ್ತಿಯಲಿ
ವರಣ ಮೀರಿದವನಿಗುಣಿಸಿದೆನೇ ||ಸುವ್ವಿ|| ||9||

ಸೇವಕನು ನಾ ನಿನಗೆ
ಸೇವಕನು ನಾ ನಿನಗೆ ಕರುಣ ಮಾಡೊ
ಕೇವಲಾನಂದಾಗೊ ಹರುಷದಿಂ ನೋಡು ||ಪ||
ಆದಿಯಲಿ ಪ್ರಭು ನೀನು| ಅನಾದಿ ಭಕ್ತನು ನಾನು
ಶೋಧಿಶಿದರದ ಕಾರಣವೆ ನಿನ್ನ ಧ್ಯಾನ
ಮೋದದಿಂದಲಿ ಮಾಳ್ವೆ| ನಿಜದಲ್ಲಿ ನೋಡಿ ವಿನೋದವಾಗಿಹ
ಮುಕ್ತಿ ಮಹವುಖವ ಮಾಡು ||1||
ಬಹು ಜನ್ಮ ಬರಲಾರದಲೆ ನಿನ್ನ ಮರೆ ಹೊಕ್ಕೆ
ವಹಿತ ಕೃಪದಿಂ ನೋಡು ನಿನ್ನ ಶ್ಯಾಕಾ
ವಹಿಸಿಕೊಡು ನಿಜ ನುಡಿಯ ವಸ್ತುವಿಹಪರಿಯಂತ
ಸಹಿಸಲಾರೆನು ತಾಪ ಸಾಕ್ಷಾತನೇ ||2||
ಶರಿರಿರುವ ಪರಿಯಂತ ನಿನ್ನ ಧ್ಯಾನವ ನುಡಿಸಿ
ಪರಮ ಕಡಿಯಲಿ ನಿನ್ನ ಚರಣದೊಳಗೈಕ್ಯ
ನಿರುಪಾಧಿ ಅಡವೀಶ ನೀನಲ್ಲದಿನ್ನುಂಟೆ
ಬಿರದಿಗಾಗಿಯೆ ಬಿಡದೆ ಕರುಣಾಕರ ತನ್ನ ||3||

ಹರ ಸಾಂಬ ಸದಾಶಿವ
ಹರ ಹರ ಹರ ಹರ| ಸಾಂಬ ಸದಾಶಿವ
ಶಿವ ಶಿವ ಶಿವ ಶಿವ ಶಂಭು ಶಿವಾ ||ಪ||
ಅಡವೀಶನ ಲೀಲಾಮೃತ ನಿತ್ಯದಿ
ನುಡಿವದು ಮಹಘನ| ಸಾಂಭಶಿವಾ
ನುಡಿಯಲು ಕರ್ಮವು ಹರಿವದು ನಿಶ್ಚಯಾ
ಸಡಗರ ಸುಖಮಯ ಸಾಂಭಶಿವಾ ||1||
ಪರಮನು ಗುರುವರ ವುರತರ ಸ್ಥಿರಕರ
ಹರುಷಾನಂದದಿ ಸಾಂಭಶಿವಾ
ಮರಿಯದೆ ನೆನೆದರೆ ಚರನ ತೋರಿಸುವ
ಖರಿಯ ನಂಬಿ ನಿಜ ಸಾಂಭಶಿವಾ ||2||
ಪಾಪವು ಹರಿವದು ಭೂಪನ ಕರುಣದಿ
ಕಾಪಟ್ಯವು ಕಳಿ ಸಾಂಭಶಿವಾ
ಯೀ ಪರಿಯಲಿ ತ್ರಿಕಾಲದಿ ನೆನೆದರೆ
ಮಾಫ ಅಪರಾಧವು ಸಾಂಭಶಿವ ||3||
ಕರ್ಮವು ಹರಿವದು ನಿರ್ಮಳವಾಗೋದು
ಧರ್ಮವು ತಿಳಿದರೆ ಸಾಂಭಶಿವ
ಮರ್ಮವು ತಿಳಿವದು ವಸ್ತು ತಾನಾಗುವ
ನರ್ಮ ದೋಷಗಳು ಸಾಂಭಶಿವ ||4||
ನಿರುತಿದಿ ಧ್ಯಾನಿಸು ಬರಿಯಾ ಬಯಲಾಗುವೆ
ಖರಿ ಖರಿಯ ನಿಜ ಸಾಂಭಶಿವ
ಗುರು ನಿರುಪಾಧಿ ಅಂಕಲಿನಾಥನ
ಚರಣ ಬಿಡಲಿರು ಸಾಂಭಶಿವ ||5||

ಹಣ್ಣು ಸಿಕ್ಕರೆ ಹಬ್ಬೊ
ಹಣ್ಣು ಸಿಕ್ಕರೆ ಹಬ್ಬೊ ನಮ್ಮಣ್ಣ| ಹಣ್ಣು ಸಿಕ್ಕರೆ ||ಪ||
ಬಯಲ ವೃಕ್ಷದೊಳಗೆ ಹುಟ್ಟಿತೇ ಹಣ್ಣು
ನಯನ ಮಾನಸಕೆ ಗೋಚರವು ಈ ಹಣ್ಣು
ಸ್ವಯ ಪರ ಎರಡಕ್ಕೆ ನಿಲ್ಕದ ಹಣ್ಣು
ಕೈಲಾಸ ಸ್ವರ್ಗಕ್ಕೆ ಮೀರಿದ ಹಣ್ಣು ||1||
ಮೂರು ಮೂರ್ತಿಗಳಿಗೇ ಸೂತ್ರ ಈ ಹಣ್ಣು
ಆರು ಮುದ್ರಿಗಳಿಗತ್ತತ್ತ ಹಣ್ಣು
ತೋರೋದು ತೋರದ್ದಕ್ಕಾಗಿ ಈ ಹಣ್ಣು
ಪೂರಣ ವಸ್ತುತಾ ಪರಿಪೂರ್ಣ ಹಣ್ಣು ||2||
ನಿರುಪಾದಿ ನಾಮದ ಗುರುತಿನ ಹಣ್ಣು
ಗುರುಲಿಂಗ ಜಂಗಮ ನಾದಂಥ ಹಣ್ಣು
ವರದ ಅಂಕಲಿನಾಥ ಅಡವಿಸಿದ್ದನೆಂದು
ಪರಮ ಸಂತೋಷದಿ ಕೂಗುವ ಹಣ್ಣು ||3||

ಹೇಳಬೇಕೀ ನಾರಿಗೆ
ಹೇಳಬೇಕೀ ನಾರಿಗೆ ತಾನೆ ತಾ ಬಾಳ ಲೋಚನವಾದವಾ| ನೋವು ||ಪ||
ಸಂಚಿತದಿಂದ ಪ್ರಾರಬ್ಧಾ ಮಿಂಚುವದು ಮೂರು ದಿವಸ ಎಂದೂ
ಹಂಚಿಕೆಯನರಿತ ಮಹಿಮಾ ನಿಜ ಸುಖವು ಕಿಂಚಿತಿಲ್ಲ ದುಃಖವೂ| ನೋವು ||1||
ತನ್ನ ತನು ಸುಳ್ಳುಯಂದು ಅರಿದಂತ ಅನುವಿನೊಳು ಬಾಧೆಯುಂಟೇ ಅವಗೆ
ಮುಂದೆ ದೇಹ ದೋಷವಿಲ್ಲಾ ಘಟಕಾಗೋ
ಘಟಕಾಗೋ ಘನತೆ ಅಭಿಮಾನವಿಲ್ಲಾ| ನೋವು ||2||
ನಿರುಪಾಧಿಯಾದ ಮೇಲೆ ಅಡವೀಶ ಅರುಹು ಕುರುಹುಗಳಿಲ್ಲವೋ
ಅಲ್ಲಿ ಶರೀರ ತಾನೆಂಬೊದಿಲ್ಲಾ ತಿಳಿದವಗೆ
ಬರೆ ಬೈಲ ರೂಪವಾದವರಿಗೆ ನೋವು ಶ್ರೀಕ್ಷೇತ್ರ ||3||

ಹೊಕ್ಕನಯ್ಯ ಗವಿಯ ಹೊಕ್ಕನಯ್ಯ
ಹೊಕ್ಕನಯ್ಯ ಗವಿಯ ಹೊಕ್ಕನಯ್ಯ|
ಮುಕ್ಕಣ್ಣ ಮುಕ್ಕಣ್ಣ ಹರಿನೀತ ಮಹಾದೇವ ಅಡವಿಯ ಶಿದ್ಧಾ ಹೊಕ್ಕನಯ್ಯ ||ಪ||
ತನ್ನಶ್ಯಾಕದ ಮೂರ್ತಿ ಚನ್ನಾಗಿ ದರುಶನಕೆ
ವುನ್ನತೋನ್ನತವೆಂಬೋ ವಾದ್ಯ ಭಜನಿಗಳಿಂದಾ ||1||
ನಾನಾ ದೇಶದ ರೂಪ| ಕೂನದೊಳಿರುತಲೀ
ಕಾನನದೊಳು ಬೈಯಲು| ಸ್ವಾನುಭಾವದ ಸುಖ|| ||2||
ನಿರುಪಾಧಿ ಗುರು ಈತಾ| ಪರಿ ಪರಿ ಲೀಲದಿಂದಾ|
ಗುರುಲಿಂಗ ಜಂಗಮದ ಪರಿಯನರಿದ ಪೂರ್ಣ|| ||3||

ಹೋಗತೀನಿ ನಾನು ಹೋಗತೀನಿ
ಹೋಗತೀನಿ ನಾನು ಹೋಗತೀನಿ
ನಾನು ಹೋಗತೀನಿ ಯೋಗಿ ಅಡವೀಶನಾ ಕಂಡು ಮುಕ್ತಿಗೆ ||ಪ||
ಹಿಂದೇಳು ಜನ್ಮದ ಪಾಪ ಹರಿದು ಸಂಶಯ ಹುರಿದು
ಸಂದೇಹ ಗುಣಗಳೆಲ್ಲ ಮರದು ನಿಜದೊಳು ಬೆರದು
ಕುಂದು ಕೊರತಿ ಎಲ್ಲಾ ನೀಗಿ ತೂಗಿ ಬ್ರಹ್ಮ ತಾನಾಗಿ
ಅಂದು ಇಂದು ಯೇನು ಇಲ್ಲ ನೀನಾಗಿ ಸುಗುಣದ ಭೋಗಿ ||1||
ಯೇನು ಹೇಳಿ ಅಲ್ಲಿ ಇರುವಂತ ಸೂಯೇಕಾಂತ
ಸ್ವಾನು ಭಾವದ ಸುಖ ನಿಶ್ಚಂತ ಹೋಯಿತು ಪಂಥಾ
ಕೂನದೊಳಗೆ ಚಿಂತೆಯೇನು ಇಲ್ಲ ಶಿವ ಜಗವೆಲ್ಲಾ
ತಾನಾದ ಬ್ರಹ್ಮವು ಸೀಬೆಲ್ಲಾ ಹೇಳುದಕಿಲ್ಲಾ ||2||
ಅಲ್ಲಿ ಬೀರು ಸುಖ ನಿರುಪಾಧಿ ಎಲ್ಲವುಪಾಧಿ
ಬಲ್ಲಿದ ಭವ ಜೈಸುವ ಹಾದೀ ಯೇನಿಲ್ಲವಾದೀ
ಸೊಲ್ಲು ಸೊಲ್ಲಿಗೆ ಗುರುನಾಮ ವಳಗೆ ನುಡಿಯುತ ಬೆಳಗೇ
ಯಳ್ಳಷ್ಟು ಬಾರ ಇಳಿಗೆ ಆನಂದ ವಳಗೆ ||3||

Categories
Tatvapadagalu ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು

ಗೂಗಲ್ಲ ಪರಪಯ್ಯನ ತತ್ವಪದಗಳು

ಆರಿಗೆ ಮೊರೆ ಇಡುವೆನಯ್ಯ
ಆರಿಗೆ ಮೊರೆ ಇಡುವೆನಯ್ಯ
ಮಾರಹರನೆ ಮರ್ತ್ಯಕೆ ಮಳೆಗರೆಸೊ ||ಪ||
ಬಾಡಿತು ಬೆಳೆಸೆಲ್ಲ ಬರಗಾಲ ಬಂದಿತು
ಬಡವರು ಬಳಲ್ಯಾರು ಉಸಿರು ಬೆನ್ನಿಗೆ ಹತ್ತಿ
ಮಡದಿ ಮಕ್ಕಳ ಮಾರಿಕೊಂಡು ಮರ್ತ್ಯವೆಲ್ಲ
ಕಡೆಗಾಣವೆಂದು ಕ್ರಮಗಟ್ಟು ನೀ ಜಡಿದು ಸೋನೆಗರಿಸೊ ಜಗವರಕ್ಷಿಪನೆ ||1||
ಮೇರೆದಪ್ಪಿ ಮೂರು ಮಾರ್ಗವ ಕೆಡಿಸಿತು
ಬಾರನು ಮಳೆರಾಜ ಬಾಯಿ ಬಿಟ್ಟಿತು ಲೋಕ
ದೂರ ದಿನವು ಸತ್ಯರು ಅಡಗ್ಯಾರು
ಮಾರಿ ಬಂದೈತೆ ಮರುಗ್ಯಾರು ಜನವೆಲ್ಲಾ
ನಿವಾರಿಸಿ ನೋಡಲಿ ಬ್ಯಾಡ ಒಲಿದು ಮಳೆ ಸುರಿಸೊ ||2||
ಹೊನ್ನಿಗೆಮ್ಮನ ಮಾರಿ ಹೋಯಿತೆಂದು ನಂಬಿದ್ದೆವು
ಬೆನ್ನಟ್ಟಿ ಬಿಡದಯ್ಯ ಬೆಂದ ದಿನಮಾನ
ಅನ್ನ ಕಾಣದೆ ಅಲೆದು ಕಷ್ಟಪಟ್ಟಾರು
ಮುನ್ನಿರ ಹಿರಿಯರು ಮುಂಚೆ ಗೆದ್ದರು ದೇವಾ
ಇನ್ನಾರಿಗೆ ಮೊರೆ ಇಡುವುದು ಇಳವು ಮಳೆಗಾಲ ||3||
ಗತಿಗೆಟ್ಟಿತು ಈ ಲೋಕವೆಲ್ಲಾ ಗಂಗಾನ ಕಾಣದೆ
ಹಿತವಿಲ್ಲವೆಂಬೋ ಮಣಿಹವಿಲ್ಲದ ಕಾಲಕ್ಕೆ
ಯತಿ ಮುನಿಗಳೆಲ್ಲ ಎಣಿಸ್ಯಾಡುತಿರ್ದರು
ಮತಿವಂತರು ಹೀನತ್ವರಾದಂತೆ ಮನಿಮನಿಗೆ ಯಾಚಿಸಿ
ಸುತ ನಾ ಮೊರೆಯ ಕೇಳಿ ಸುರಿಸೋ ಮಳೆಗಾಲ ||4||
ಹಿರಿಯರು ಕಿರಿಯರು ನೆರೆ ಬಂದ ಮುದುಕರು
ಬರಿದೆ ಚಿಂತೆಯ ಮಾಡಿ ಬಳಲಿದರು ಅಳಗುಂದಿ
ಇರುವೆ ಮೊದಲು ಆನೆ ಕಡೆ ಸರ್ವ ಜೀವನದ ಕರ್ತನೆ
ಪರ್ವನ ನುಡಿಗೇಳ ಪಂಚಮುಖ ದೇವಾ
ನೀ ಜರಿದು ನೋಡಲು ಬ್ಯಾಡ ಜಡಿದು ಮಳೆ ಸುರಿಸೋ ||5||

ಇರಬ್ಯಾಡಂಥವರೊಳು ಅತಿ ಸ್ನೇಹ
ಇರಬ್ಯಾಡಂಥವರೊಳು ಅತಿ ಸ್ನೇಹ
ಮರೆತಾದರೂ ಒಮ್ಮೆ ಮನ ಮಾಡದಿರು ಮನವೇ ||ಪ||
ನೆರೆ ನಂಬಿಗೀಲಿ ಹೀನ ನೆನಸುವರೊಳು ಬ್ಯಾಡ
ಪರಸತಿಯ ನೊಲಿಸುವನ ಪ್ರಾಂತದಲಿರಬ್ಯಾಡ
ಸಿರಿಯ ನೆಚ್ಚಿ ಶಿವನ ಮರೆತವರೊಳು ಬ್ಯಾಡ
ಹರಗುರು ನಿಂದಕರ ಹಾದಿಗೆ ಹೋಗಲಿ ಬ್ಯಾಡ ||1||
ಆಡಿ ತಪ್ಪುವಂಥವಗೆ ಆಶೆ ಮಾಡಲಿ ಬ್ಯಾಡ
ಚಾಡರ ಸ್ನೇಹಕ್ಕೆ ಕಿವಿ ಚಾಟು ಕೊಡಬ್ಯಾಡ
ನೀಡುವ ದಾನ ನಿಲ್ಲಿಸುವರೊಳು ಬ್ಯಾಡ
ಬರಿದೆ ಕೇಡೆಣಿಸುವಂಥರೊಳು ಬ್ಯಾಡ ||2||
ಕಟ್ಟಿದ ಕೆರೆಭಾವಿ ಕೆಡಿಸುವವರೊಳು ಬ್ಯಾಡ
ಖೋಟಾ ಮಾನವರ ಕೂಡಾ ಸ್ನೇಹವು ಬ್ಯಾಡ
ಪಾಠಕರ ನಡೆನುಡಿ ಪಾಠ ಮಾಡಲಿ ಬ್ಯಾಡ
ನಾಟಿಸೀಮೆಯ ಕಲ್ಲು ಕೆಡಿಸುವರೊಳು ಬ್ಯಾಡ ||3||
ನ್ಯಾಯ ಅನ್ಯಾಯವ ಮಾಡುವರೊಳು ಬ್ಯಾಡ
ಹೆಣಗಾಡಿ ದಣಿಸುವವರೊಳು ಬ್ಯಾಡ
ಬಲಿಯ ಗಾಣಕ್ಕೆ ಬಿದ್ದ ಘಾತಕರೊಳು ಬ್ಯಾಡ
ಹಾಲಿನೊಳಗೆ ವಿಷ ಬೆರೆಸುವರೊಳು ಬ್ಯಾಡ ||4||
ವೀರಶೈವರ ಕೂಡ ವಿರೋಧತನ ಬ್ಯಾಡ
ಆರು ಅಕ್ಷರದಿಂದ ಹಾದಿ ಇಲ್ಲವೆನಬ್ಯಾಡ
ಮೂರು ಕಣ್ಣಿನವನಿಂದ ಮುಕ್ತಿಯಿಲ್ಲೆನು ಬ್ಯಾಡ
ನಗರ ಪರ್ವನ ನುಡಿ ಪುಸಿಯೆನಬ್ಯಾಡ ||5||

ಉತ್ತಮರಿಗೆ ಮಾಡಿದುಪಕಾರ
ಅಲ್ಲದವರಿಗೆ ಮಾಡಿದುಪಕಾರ ಎಲ್ಲಾರು ಕೇಳಿರಣ್ಣ
ಕಲ್ಲು ಸಕ್ಕರೆ ಜೇನು ಕತ್ತೆಗೆ ಮೇಯಿಸಿದರೆ
ಕಾಳಗಕೆ ತೇಜ ಆದೀತೇನಯ್ಯ? ||ಪ||
ಉತ್ತಮಗ ಮಾಡಿದುಪಕಾರ
ಹೆತ್ತಪ್ಪ ಹಾಲು ಸಕ್ಕರೆಯ ಕೊಡಯೆತ್ತಿ ಕುಡಿದಂತೆ
ಏಕವಾಗಿರುವರು ಸತ್ತಲ್ಲಿ ಸಾಯ್ವರು
ಪ್ರತಿಷ್ಠೆ ಮಾಡಿದಾತನು ನರಕವು
ಬಿಡದವರ ವಂಶಕ್ಕೆ ಕಷ್ಟವಾಗ್ಯದ ಮುಂದೆ ಕೇಳಿರಣ್ಣ ||1||
ಬಲ್ಲಾತಗೆ ಮಾಡಿಬಿಟ್ಟ ಉಪಕಾರ
ಬಿಲ್ಲ ಝೇಂಕರಿಸಿದಂತೆ ಕೇಳಿರಣ್ಣ ||2||
ಅಲ್ಲಿ ರಾಮರ ಬಾಣದಂತವರ ಪಾಶಕ್ಕೆ
ಮಲ್ಲಿಕಾರ್ಜುನನು ಮೆಚ್ಚುವ ಕೇಳಿರಣ್ಣ ||3||
ಅನ್ಯ ಮನುಜಗೆ ಮಾಡಿದುಪಕಾರ ಚೆನ್ನಾಗಿ ಕೇಳಿರಣ್ಣ
ಚೆನ್ನಗಾವಿನ ಹಾಲು ಕುಜಿ ಎರೆದಾರ
ಖಿನ್ನವಾಗುವುದು ಮುಂದ ಕೇಳಿರಣ್ಣ ||4||
ಸಾಧು-ಸತ್ಪುರುಷರಿಗೆ ಮಾಡಿದುಪಕಾರವು
ಸಾಧ್ಯವಾಹುದು ಸ್ವರ್ಗವ ಕೇಳಿರಣ್ಣ
ಈ ಧರೆಯೊಳು ಪುರುವನ ವಿಸ್ಮಯ ರೂಪನ
ಶಿವಪಾದಕ ನುಡಿದುದು ಕೇಳಿರಣ್ಣ ||5||

ಎಂದೆಂದು ನಿಮ್ಮ ಅಡಿದಾವರೆಗೆ ಹೊಂದಿದೆನಯ್ಯ
ಎಂದೆಂದು ನಿಮ್ಮ ಅಡಿದಾವರೆಗೆ ಹೊಂದಿದೆನಯ್ಯ
ಚಂದನ ಬಯಸಿ ಚಕೋರ ಉಂಡಾಡುವಂತೆ ||ಪ||
ಗರುಡ್ಡಿ ಕುಠಾರದ ಹುಳವು ಕಚ್ಚಲಾಗಿ ಕುರುಡಿಯಾದಂತೆ
ಕರುಣೆ ನಿಮ್ಮದು ಮರೆಯದೆ ನಡೆದರೆ ಕೀರ್ತಿ ಮಸಿ ಮಾಡುವುದೆ ||1||
ಕಸ್ತೂರಿ ಪಂಕಜಾತರ ಕಣ್ಣು ನಯನ ಮೂರ್ತಿಗೆ
ವಸ್ತಾದಿ ನಿನ್ನೊಳು ದುಂಬಿ ನಾನೊಲಿದು ಬಂದುಂಡಾಡುವೆನು ||2||
ಮೋಹ ಪರುಷವ ಹೊಂದಿ ಪಾವನವಾದಂತೆ
ಕಾಹದೇವರ ದೇವ ನೀ ಸೋಂಕಿದ ಜನ್ಮ ಮುಕ್ತನಾದೆ ||3||
ಮುಳ್ಳು ಚಿಪ್ಪಿನೊಳು ಸ್ವಾತಿಹನಿ ಮುತ್ತಾದಂತೆ
ಮಳ್ಳಪರುವನ ಹೃದಯದಿ ಶಿವನು ಬೆರೆದಂತೆ ||4||

ಎನ್ನ ನೀ ಬಿಡದಿರು ತಾಯೆ
ಎನ್ನ ನೀ ಬಿಡದಿರು ತಾಯೆ
ಪ್ರಸನ್ನಳಾಗಿ ಬಂದು ಕಾಯೇ ||ಪ||
ಪಂಚ ಮುಖನೊಡಗೂಡಿ ಪ್ರಪಂಚವಿಲ್ಲದೆ
ಪಂಚ ಪರುಷದ ಕಣಿ ಪರಮಕಲ್ಯಾಣಿ
ವಶವಲ್ಲದ ಸಿಂಹವಾಹನ ಏರಿ ಖಡ್ಗದಿ
ದುಶ್ಮಾನರನೆಲ್ಲ ತರಿದಿಟ್ಟಿ ದೂಸರ ಮುಟ್ಟಿ ||1||
ಕಾಲ ಭೈರವಿ ಕಾಸೆ ಚಲ್ಲಾಣಿ ತ್ರಿ
ಶೂಲವ ಪಿಡಿದ್ಹೋರಿದಲ್ಲಾಣಿ
ಕಾಲ ಕರ್ಮಂಗಳ ಖಂಡಿಸಿ ರುಂಡ
ಮಾಲೆಯ ಧರಿಸಿ ಮಲೆತ ಮಲ್ಲರ ಮರ್ದಿಸಿ ||2||
ಭವಾನಿ ಗೌರಿ ಶಂಕರ ತ್ರಿ
ಭವನಕೆ ಅಧಿಕ ಭಯಂಕಾರಿ
ಆವಾವ ಕಾಲದಿ ಅಭಯ ಹಸ್ತವನಿಟ್ಟು
ಪವಾಡ ಗೆಲಿಸಮ್ಮ ಪ್ರತಿಪಾಲಿಸಮ್ಮ ||3||
ಛಪ್ಪರ ದೇಶದೊಳಾಡಿ ನಿನ್ನ
ಶಿಪ್ಪಾಳ ಶಿರಸಂಗಿ ನೋಡಿ ವಶ
ವಪ್ಪ ಪರುವಾಗೆ ವರವು
ಚಿಂಪಾಲು ತುಪ್ಪ ಸಕ್ಕರೆ ತುಂಬಿಕೊಡು ಜಗದಂಬೆ ||4||

ಎನ್ನಮ್ಮ ಕಲ್ಲು ಬಿಡೇ
ಎನ್ನಮ್ಮ ಕಲ್ಲು ಬಿಡೇ ಈ ಧೋತರ
ಚೆನ್ನಾಗಿ ತೊಳೆಯಬೇಕು ||ಪ||
ಉಟ್ಟ ಧೋತರ ಮಾಸ್ಯಾವೆ ಮನಸೀಗೆ
ಕೆಟ್ಟ ಕರ್ಮಗಳುಂಟೆ
ಮುಟ್ಟಿ ಅಪ್ಪಳಿಸಿ ಲೋಲಾಡಿ ತೊಳೆಯಲಿ ಬೇಕೇ
ನೀಲಕುಂತಳೆ ಕಲ್ಲ ಬಿಟ್ಟು ಕಡಿಗೆ ನಿಲ್ಲೇ ||1||
ವೇದವನೋಡಬೇಕೋ ಈ ಮನಸಿನ
ಕ್ರೋಧವ ಕಳೆಯಬೇಕೋ
ಕ್ರೋಧ ಮತ್ಸರವೆಂಬ ಕಪಟವಳಿದು
ಯೋಗದೊಳಗೆ ಲೋಲಾಡಿ ತೊಳೆಯಬೇಕೋ ||2||
ಅಲ್ಲಮ ಪ್ರಭು ಸ್ವಾಮಿಯ ಸೇವೆ ನಾನು
ಆಲಸ್ಯವನು ಮಾಡದೆ
ಕೋಲು ಪಿಡಿದು ದ್ವಾರಪಾಲನಾಗಿರುವೆ
ಚಂದ್ರಶೇಖರನ ಪ್ರಸಾದ ಪರುವಗೆ ಬೇಕೋ ||3||

ಎನ್ನಯ ಶ್ರೀಗುರುವೆ
ಎನ್ನಯ ಶ್ರೀಗುರುವೆ ಸ್ವಾಮಿ ಬನ್ನಿಕಾಯಿ
ಎನ್ನಯ ಅಪರಾಧಗಳತ್ತ ದೂರ ಕಾಯಿ ||ಪ||
ತಂದೆ ತಾಯಿ ಬಂಧು ಬಾಂಧವರನೆಲ್ಲ ಕಾಯಿ ಎನಗೆ
ಹೊಂದಿದ ದೋಷವ ಕಡೆಗೆ ಹೀರಿಕಾಯಿ
ಕುಂದು ಕೊರತೆ ಇಲ್ಲದಂಗ ಬಾಳಿಕಾಯಿ ಮನದ
ಸಂದೇಹ ಸಟೆ ಮಾಡು ಸರ್ವಚಿಂತಿ ಕಾಯಿ ||1||
ಅಂಗದ ಅವಗುಣಕ್ಕೆಲ್ಲ ಜಾಜಿಕಾಯಿ ಗುರು
ಲಿಂಗಸುಖದೊಳು ಮುಚ್ಚುವ ಹತ್ತಿಕಾಯಿ
ಕಂಗಳತ್ರಯ ಎನ್ನ ಮನದ ಕಾರಿಕಾಯಿ ಅಂತ
ರಂಗದಿ ಅಮೃಯ್ಯಗೆ ಎರೆದ ಕಾಯಿ ||2||
ಪರಧನ ಪರಸತಿ ಬಹು ದೋಷ ಕಾಯಿ ಎನ್ನ
ನೆಗೆದು ಅಪ್ಪಿಕೊಂಡಿರುವ ಪ್ರಾಣದರಸ ಕಾಯಿ
ಅರೆಮರೆ ಇಲ್ಲದ ಕಾಕ ಸಂಗಿ ಕಾಯಿ ಮುಂದೆ
ಗರಸುರ ದೇವರ್ಕಳೊಪ್ಪಿದ ಮುಕ್ತಿಕಾಯಿ ||3||
ಎಣೆಯಿಲ್ಲದ ಅಪರಾಧ ಕಡಲೆ ಕಾಯಿ ದೈವ
ಹೊಣೆಯಿಲ್ಲದ ಕೀರ್ತಿ ಬೆಳವಲ ಕಾಯಿ
ಅಣಕವಾಡುವರ ಹಲ್ಲು ಜಾನಿಕಾಯಿ ಎನ್ನ
ಹಣೆಬರೆಹ ತಿದ್ದಿಡುವಂಥ ಕರುಣಿ ಕಾಯಿ ||4||
ವಾಸ ಮಾಡಿದವನ ಸೂತ್ರದಾಟ ಲಿಂಗದಕಾಯಿ ಸುತ್ತ
ದೆಸೆಗೆಟ್ಟು ಆಡುವ ಮಹೇಂದ್ರ ಜಾಲಿಕಾಯಿ
ಬಸವಾದಿ ಪ್ರಮಥರಿಗೆಲ್ಲ ಪಿಳ್ಳಿಪಿಸಿರಿ ಕಾಯಿ ಚಲುವ
ಶಶಿಧರ ಪರುವಗೆ ಹೊಂದಿದ ಹೆಸರು ಕಾಯಿ ||5||

ಎನ್ನೊಳಗೆ ನೀನು ಲಿಂಗಯ್ಯ
ಎನ್ನೊಳಗೆ ನೀನು ಲಿಂಗಯ್ಯ ನಾನು ಭಿನ್ನ ಭೇದಗಳಿಲ್ಲಾ
ವಿವರಿಸಿ ನೋಡಲು ಪನ್ನಂಗ ಭೂಷಣ ಆದವನ್ಯಾರೋ ||ಪ||
ಮಾತನಾಡುವರ‍್ಯಾರೋ ಲಿಂಗಯ್ಯ ಮಾತ ಕೇಳುವರ‍್ಯಾರು
ಭೂತ ಪಂಚಾಕ್ಷರಿ ಧಾತು ಪಂಜರದೊಳು ಜ್ಯೋತಿ ಸ್ವರೂಪ ಆದವನ್ಯಾರೋ ||1||
ಜೀವಿಯೆಂಬುವರ‍್ಯಾರೊ ಲಿಂಗಯ್ಯ ನಿರ್ಜೀವಿಯೆಂಬುವರ‍್ಯಾರು
ಜೀವಭಾವದೊಳು ಭಾವಿಸಿ ನೋಡಲು ಕೇವಲ ಮೂರುತಿ ಚೈತನ್ಯನಾದವನ್ಯಾರೋ ||2||
ಅಪ್ಪನು ನೀಯೆನಗೆ ಲಿಂಗಯ್ಯ ಒಪ್ಪಿದ ಮಗ ನಾನು
ಎಪ್ಪತ್ತೇಳು ಉಪ್ಪರಿಗೆಯ ಮೇಲೆ ಕರ್ಪೂರ ನಿಜಗಾತ್ರ ಅಪ್ಪ ನಿರಂಜನ ನೀನೋ ||3||

ಎಲ್ಲರ ಸರಿ ಎನ್ನಬಹುದೇ
ಎಲ್ಲರ ಸರಿ ಎನ್ನಬಹುದೇ ಗುಡಿ
ಕಲ್ಲುಲಿಂಗಕ್ಕೆ ಬರೋಬರಿ ಅಹುದೇ ||ಪ||
ಬೆಟ್ಟವೆಲ್ಲ ಪರ್ವತಗಿರಿಯೆ ಕೆರೆ
ಕಟ್ಟೆ ತುಂಬಿ ಹರಿಯಲು ಭಾಗೀರಥಿ ಸರಿಯೇ
ಹುಟ್ಟಿದ ಜನರೆಲ್ಲ ದೊರೆಯೆ| ಪರುಷ
ಮುಟ್ಟಿದ ಲೋಹವು ಕಬ್ಬಿಣ ಸರಿಯೆ ||1||
ಮಲೆ ಎಲ್ಲ ಶ್ರೀಗಂಧಕ್ಕೆ ಈಡೆ
ಜಲ ಸಾಗರ ಸವಿ ನೀರಿಗೆ ಜೋಡೆ
ಬೆಲೆ ಹೆಣ್ಣು ಗರತಿಗೆ ತಾಡೆ ಸಿಟ್ಟು
ನಿಲಿಸಿದ ಮಹಿಮರಿಗೆ ಜನರೆಲ್ಲ ಹರುಡೆ ||2||
ಹೋಮಕ್ಕೆ ಸರಿಯೆ ಒಲೆಗಳು
ಕಾಮಧೇನುವಿಗೆ ಸರಿಯೆ ಜಗದ ಗೋವುಗಳು
ಈ ಮಹಿಮೆಯ ವಿಸ್ತರಿಸಿ ಹೇಳಿದ
ನಗರ ಪರುವ ನುಡಿಯೊಳು ||3||

ಎಷ್ಟು ಬಣ್ಣಿಪೆ ನಿನ್ನ
ಎಷ್ಟು ಬಣ್ಣಿಪೆ ಕಷ್ಟ ಪ್ರತಾಪಕ್ಕೆ
ಸೃಷ್ಟಿಗಧಿಕ ಹಲಕರಟೆಯಾ ಶರಭ ||ಪ||
ತುಂಗ ವಿಕ್ರಮ ಕಾಶಿ ಸರ್ವಾಂಗ ಭಸಿತವ ತಾಳಿ
ಮುಂಗಯ್ಯ ಹಲಗೆಯು ರಂಗು ಮಿಂಚುವ ಖಡ್ಗ
ಹಿಂಗದ ಬಿಲ್ಲುಬಾಣವ ತೊಟ್ಟು ಝೇಂಕರಿಸಿ
ಅಂಗ ಮುಂಗೈಗೆ ರುದ್ರ ಕಂಕಣ ಕಟ್ಟಿ
ಮುಂಗಾಲು ಮೇಲುಲಿವ ಜಂಗು ಬಾವಲಿ ಪೆಂಡಿ
ಶೃಂಗಾರವಾದನು ಕಾಲ ರುದ್ರಾವತಾರ
ಕಂಗಳಲಿ ಕಿಡಿ ಸೂಸಿ ಕಾರ್ಬೊಗೆ ಎದ್ದು ಕೂಗುತ
ಜಂಗುಳಿದೇವನ ಗಂಡನೈ ಖಂಡ್ಯ
ಈಶ್ವರ ನುರಿಯಲಿ ರಂಗು ನೇತ್ರದಿ ಬಂದನು
ಆರ್ಭಟಸಿ ಜುಂಜುಗೆದರಿ ನಿಂದನು
ತ್ರಿಜಗವನು ಅಂಘ್ರಿಯಲೊರೆಸುವೆನೆಂದನು
ಕಡಲೇಳು ತಾ ನುಂಗಿ ಕಳೆವೆನೆಂದನು
ವೈರಿಗಳ ಮೇಳುಲ್ಲಂಘಿಸಿ ನಡೆ ತಂದನು
ಕಂಗಳು ಮೂರುಳ್ಳ ಹಿಂಗದ ವರವಿಟ್ಟು ||1||
ನಡೆಯಲು ಮಾರ್ತಾಂಡ ಪೊಡವಿಯು ಹೊರಳಿತು
ನಡುಗಿ ಕೂರ್ಮನು ಹೆಡೆ ಬಾಗಿ ಶೇಷನು
ಅಡಿಯಿಟ್ಟರೆ ಕರಿಘಟೆ ಶಿರದೂಗಿ ಕೂಗುತ
ಬಿಡದೆ ಸಪ್ತ ಶರಧಿ ಬಡಿದಾಡಿ ಸೂಸುತ
ತುಡಕುತ ಭಗ್ಗನವು ಪೊಡವಿಗೆ ಇಳಿದಾವು
ಖಡೆ ಖಡೆನುತಲಿ ಝಡಿದು ತ್ರಿಶೂಲದಿ
ಸಿಡಿಲಿನ ಮರಿಯಂತೆ ಅಡರಿದ ರಣದೊಳು
ಕಡಿದೊಟ್ಟಿ ತಾ ನಡೆದಾನು
ಆಹವಕ್ಕೆ ದಕ್ಷನ ಶಿರ ಹೊಡೆದು ಆಹುತಿ ಕೊಡುವ
ರಣವೆದ್ದು ಆರ್ಭಟಿಸಲು ಜಗವನು
ಚಂದ್ರನ ವಡಲನ್ನೊದ್ದು ದ್ವಿಭಾಗವ ಮಾಡಿ ||2||
ಇಂದ್ರನಲಂಘಿಸಿ ಒಂದು ಹಲ್ಲನೆ ಮುರಿದು
ಅಂಧಕಾಸುರನ ಕೊಂದು ಸರ್ರನೆ ಸೀಳಿ
ಒಂದಕ್ಕೆ ತಿರುಗುತ ಚಂದ್ರ ಬೀಗದ ಹೊಡೆದು
ನಿಂದು ಜವನನ ಹಲ್ಲು ಸಂದು ಸಂದನೆ ಮುರಿದು
ಬಮದಳು ಪಾರ್ವತಿ ತಂದೆಯ ಪ್ರಾಣವ ಪಡೆಯಲೆಂದು
ಆಂದಿಗೆ ದಕ್ಷಗೆ ಕುರಿದಲೆಯನಿಟ್ಟನು
ಅಂದು ಅಸುರರ ಶಿರಮಾಲೆಯ ಧರಿಸಿದಾ
ನಂದೀಶ ಬಂದು ಕಂದನಯೆತ್ತಿಳುಹಿದ
ವಿಘ್ನೇಶನಿಂದು ತಂದೆಯ ಪಾದಕೆ ಎರಗಿದ
ನಾಲ್ವರ ಮ್ಯಾಲೆ ತಂದು ಹೂಮಳೆಗರೆದಾ
ಅಸುರರ ಬಾಡಿಂದ ಕಟ್ಟಿಹಾಕಿದ
ಹಲಕರಟ್ಟೀಶನೆಂದು ಮೆರೆದ ಶರಭ ಇಂದು
ಪರಬ್ರಹ್ಮನ ಕಂದ ಪರವನ ಮನೆದೇವ ಶರಭ ನಿನ್ನ ||3||

ಏನು ಕೆಟ್ಟೆಲೋ ನೀಚ
ಏನು ಕೆಟ್ಟೆಲೋ ನೀಚ ಯತಿಗಳಿಗೆ ಕುಹಕತನ ಮಾಡಿ
ಮನ ಗಾಣಕ್ಕೆ ಬಿದ್ದಂತೆ ಮಿಡಕು ಅದರಂತೆ ||ಪ||
ಹಿಡಿ ಕೊಡುವೆ ಶಾಪ ಕೊಟ್ಟವ ಋಷಿ ವಿಧಿ ನೀನು
ಹೊಡತಲೆ ಮಿತ್ತಾಗಿ ಯುದ್ಧ ಬರಲಿ ಹೆರೆ ಹಿಂಗದಿರಲಿ ||1||
ಅಡವಿ ಹೊಕ್ಕರೆ ನಿನ್ನ ಅದೃಶ್ಯ ಮಾಡಲಿ ಬ್ಯಾಡ
ಬಿಡದ ನೆಲಕಿಟ್ಟು ಒರೆಸಲಿ ಬೆಂಕಿ ಬೆರೆಸಲಿ ||2||
ಶೂನ್ಯ ಮಾಡಿರಿ ಎಮಗೆ ಸರ್ವ ಶೂನ್ಯ ನಿಮಗಾಗಲಿ
ಆನೆ ನುಂಗಿದ ಬೆಳವಲ ಕಾಯಗೊಳಿಸೆನ್ನ ||3||
ಕೊಂದ ಕೊಲೆಗಳು ನಿಮಗೆ ಹಿಂದ್ಹತ್ತಿ ಬಾಹೋದು ಸಹಜ
ಕಂದರ‍್ಪ ಬೆರಿಕಾಯ ಕರುಣಿ ಪ್ರಸನ್ನಾ ||4||
ಪಟ್ಟಕ್ಕೆ ಹೂಡಿ ಪಾದರಾಕ್ಷಿಯಲಿ ಮರ್ದಿಸಿ ಅವನಾ
ಕೊಟ್ಟು ಕೂಡಿಸಿರಿ ಕುಲದಿಂದ ಹೊರಗ ||5||
ಅನ್ನ ಉಂಡವರ ಕೈಯಾ ಅನ್ಯಾಯ ಮಾಡಿದಿಯೊ
ತೊನ್ನ ಬಡಿಯಲಿ ನಿನ್ನಂಗ ತೊಲಗು ಮಾನಭಂಗಾ ||6||
ಪನ್ನಂಗಧರನಾಣೆ ದಂಗಾಗಿ ಬೀಳು ನೀನು
ಗನ್ನಘಾತಕ ನಿನಗಾಗಿ ನಿಮ್ಮ ಗರ್ಭಿಣಿ ಹೋಗಾ ||7||
ಬಂದ ದುರಿತಗಳು ಎಲ್ಲಾ ಬಯಲು ಮಾಡೊ ಪರವಾನ
ತಂದೆ ಅಲ್ಲಮನ ಹೊಂದಿ ಈ ತನುವಿನ ಬಂದೆ ||8||

ಏನು ತಿಳಿಯದ ಎಡ್ಡ
ಏನೂ ತಿಳಿಯದ ಎಡ್ಡ ಮೂರ್ಖಮಾನವ ನಾನು
ಭೀಮಶೇಖರಗೆ ಬಾಯ್ದೆರೆದೆ ಮುಂದರಿಯದೆ ||ಪ||
ಅನ್ಯಾಯವನು ಹೇಳಿ ಅನಾದಿಗಳ ಬಾಯ್ಬಡಿದು
ಹೊನ್ನುಗಳಿಸಿದೆ ನನ್ನ ಹೊಟ್ಟೆ ಗುಣದೆ
ತನ್ನ ನಾಲಿಗೆ ತಪ್ಪಿ ಆಡಿ ಅರಮನೆಯೊಳು
ಬೆನ್ನು ತೊಗಲು ಕೆತ್ತಿಸಿಕೊಂಬ ಬೆಡಗು ನಾನರಿಯೆ ||1||
ಬಲ್ಲಿದನೆಂದು ಬಡವರ ಮೂಲೆಗೊತ್ತಿದೆನು ನಾನು
ಎಲ್ಲ ವಿತ್ತವ ಅಳಿದು ಮನೆಯ ಕಟ್ಟಿದೆನು
ಮಲ್ಲಿಕಾರ್ಜುನ ದೇವನೊಲಿದು ಸಂತಾನ
ವಿಲ್ಲದಂತಹ ವಿಪರೀತ ಮಾಡಿದ್ದು ನಾನರಿಯೆ ||2||
ಹೆರವರ ಹೆಂಡಿರ ಕಂಡು ಹಿರ್ರನೆ ಹಿಗ್ಗಿದೆನು
ಮರುಳಾಗಿ ಮನ ಸೋತು ಮಾತನಾಡಿಸಿದೆ ನಾ
ಸುರರ ಕೈಯಿಂದ ಧರೆಗಿಳಿದು ಪಾಪಕ್ಕೆ
ನರಕಕ್ಕೆಳಸುವ ನಡತೆಯ ನಾನರಿಯೆ ||3||
ಹೆಂಡಿರು ಮಕ್ಕಳು ಬಂಧುಗಳು ಘನವೆಂದು
ಕಂಡಾಂಗ ಆಡಿದೆ ಕಾವರ ದಿನದಲ್ಲಿ
ಅಂಡಲೆವ ದೋಷಕ್ಕೆ ಅನ್ನ ಕಾಣದೇ ಬಡ
ರಂಡಿ ಮನೆಯ ಹಿಂಡಿ ಬೋಳಿಸುವ ನಡತೆಯ ನಾನರಿಯೆ ||4||
ಇಂತಿಂಥ ತರ್ಕವನು ಕಂತುಹರ ಮಾಡಿದನು
ಪಂಥವನು ಅಳಿದು ಪಾವನನಾದೆ
ಸಂತೋಷದಿಂದೆನ್ನ ಸಲಹು ಪರುವನ ಮನದ
ಭ್ರಾಂತಿ ಬಿಡಿಸುವವನಾದ ರಾಚೋಟಿ ಶರಭ ||5||

ಏನು ಬಂದೆಲೆ ಪ್ರಾಣಿ ಯಮಬಾಧಿ ಪಟ್ಟಣಕ್ಕೆ
ಏನು ಬಂದೆಲೇ ಪ್ರಾಣಿ ಯಮ ಬಾಧೆ ಪಟ್ಟಣಕ್ಕೆ
ನಾನಾ ಯೋನಿಯಲಿಂದ ತೊಳಲಿ ಬಳಲಿ ||ಪ||
ಹೊಲಗೇರಿಯೊಳಗೊಂದು
ಎಲುಬಿನ ಗುಡಿ ಕಟ್ಟಿ ನೆರವಿನ ಬೆನ್ನು ಕಟ್ಟ ಬಿಗಿಬಿಗಿದು
ತ್ರಿಮಲ ಕೀಟಕದೊಳಿರೆ ಉರಿ ರಕ್ತವನು ಸೆಳಕೊಂಡು
ಕುಲ ಅಲ್ಲದಲಿ ಬಂದು ಕೂಡಿ ಉಣ ಬಂದಿ ಪ್ರಾಣಿ ||1||
ತಂದೆ ತಾಯಿಗಳೆಂಬೊ ಬಂದೀಖಾನೆ ಹಾಕಿ
ಮಂದಿ ಮಕ್ಕಳನ್ನೆಲ್ಲ ತೆಕ್ಕೆಕೊಳ್ಳ ಹಾಕಿ
ಕಂದ ಸತಿಸುತರ ಕಾಲು ಸಂಕೋಲೆ ಹಾಕಿ
ನಿನ್ನ ಕೊಂಡೊಯ್ಯವಾಗ ಅಡ್ಡ ಬಂದು ಬಿಡಿಸುವರ‍್ಯಾರು ಪ್ರಾಣಿ ||2||
ಇಂದು ನಾಳೆಯೆಂಬೊ ಆಶೆ ಹಂಬಲವನಳಿದು
ಇಂದೀಗೆ ಮೋಕ್ಷ ತೋರಿ ತೋರಿ
ಚಂದ್ರಶೇಖರ ಅಲ್ಲಮ ಪ್ರಭುವಿನ ಪಾದಕ್ಕೆ
ಬಂದು ಬಂದಾದಾಗಲೇ ತಿಳಿಯುವದು ಪ್ರಾಣಿ ||3||

ಏನು ಬೇಡುವೆ ಕೊಡುವೆ ನೀಡ್ಯಾಡಿ
ಏನು ಬೇಡುವೆ ಕೊಡವೆ ನೀಡ್ಯಾಡಿ
ತನು ಕನಕ ಪುತ್ಥಳಿ ನಿನ್ನ ಕಾಂತನನೊಡಗೂಡಿ ||ಪ||
ಶಂಭುಗೆ ಪಡಿ ಹೊನ್ನು ಪರವಿನಾಚಿಗೆ ಕೊಟ್ಟ
ಇಂಬಿಟ್ಟು ಚನ್ನಿಗೆ ಪತಿಯ ಪ್ರಾಣವ ಕೊಟ್ಟ
ಕುಂಭಿನಿಯೊಳಗಿಳಿ ಹೊನ್ನ ಮಳೆಯ ಚೋಳಗೆ ಕೊಟ್ಟ
ನಂಬಿದ ಅರ್ಜುನಗೆ ಐರಾವತವ ಇಳಿಬಿಟ್ಟ ||1||
ಇಂದು ವಾಹನ ಹಸ್ತ ನಾರಿಮಣಿಗೆ ಕೊಟ್ಟ
ಬಂದ ಕಾಮನ ಸತಿಗೆ ಬೇಡಿದ ವರವ ಕೊಟ್ಟ
ಮಂದಾಕಿನಿಗೆ ಕಾರ್ತಿಕ ಮಗನ ತಂದಿಳಿಬಿಟ್ಟ ||2||
ಓಲಗದೊಳು ಭೃಂಗಿಗೊಲಿದು ಕಾಲನೆ ಕೊಟ್ಟ
ಲಾಲ ಹನುಮನ ಪಡೆದು ಬಲುದಾದ ಮಗನ ಕೊಟ್ಟ
ತರಿಗಳೆದ ತನುಜನಿಗೆ ಕರಿದಲೆಯನ್ನಿಟ್ಟ
ಪಾಲಿಸಿದ ಪರುವಗೆ ಪರಮ ಪದವಿಯ ಕೊಟ್ಟ ||3||

ಏನು ಮಾಡಿದರೇನು
ಏನು ಮಾಡಿದರೇನು ಮಾನವಾ ನೀ ನಿಶ್ಚಯದಲಿ ಧ್ಯಾನ
ಶ್ರೀಗುರು ರಾಯ ನಿಮ್ಮ ದಯವಿರದನಕ ||ಪ||
ರಾತ್ರಿ ಇಲ್ಲದೆ ಜ್ಯೋತಿ ರಮ್ಯ ಮಾಡಿದರೇನು
ಸೂತ್ರ ಇಲ್ಲದ ಗೊಂಬೆ ಶೃಂಗರಿಸಲೇನು
ನೇತ್ರ ಇಲ್ಲದ ಜನರು ನೆರೆದು ನೋಡಿದರೇನು
ತುಸು ಮಾತ್ರ ಮೆಚ್ಚದಂತೆ ಅರಸು ಮಂಡಿಸಲೇನು ||1||
ಬರೆ ಕಣ್ಣು ಮುಚ್ಚಿ ತಪಸ್ಸು ಬಸಕ ಧ್ಯಾನ ಮಾಡಿದರೇನು
ಮಲೆತು ಮದ ಎಂಟು ಮುರಿಯದವ ಜ್ಞಾನಿಯೇನು
ಹಲವ ನೋಡದೆ ಪರರ ಲಲನೆಗೆ ಪೋಪಾತ ನೀನು
ಮನ ಮುಟ್ಟಿ ಅರಗಿಳಿಯ ಮಾತಾಡಲೇನು ||2||
ಪುರುಷನೊಲಿಯದಿದ್ದ ದಿವ್ಯ ಪುತ್ಥಳಿ ಬೊಂಬೆ ಇದ್ದರೇನು
ಪರಿಮಳವಿಲ್ಲದ ಗಂಧ ಧರಿಸಿದರೇನು
ಪರುಷ ಹೊಂದಿ ಲೋಹ ಪಾವನವಾದಂತೆ
ಪ್ರಭು ಪರ್ವಗೆ ಪ್ರಸನ್ನ ಬಂದಾ ದಯದಿಂದಾ ||3||

ಏನು ಹೇಳಲಿ ನಿಮ್ಮ ಮಹಿಮೆಯ
ಏನು ಹೇಳಲಿ ನಿಮ್ಮ ಮಹಿಮೆಯ
ಅಜ್ಞಾನಿಗೆ ಪ್ರತಿಫಲ ಸ್ವಾಮಿ ||ಪ||
ಹಲವು ಚಿಂತೆಯ ಭ್ರಾಂತ ನಾನು
ಅನುಕೂಲವಾಗಿ ನಡೆಸುವೆ ನೀನು
ಛಲದಿಂದ ಮಕ್ಕಳು ಚಂಡು ಬುಗರಿಯ ಬೇಡಿ
ನೆಲಕೆ ಬೀಳಲು ಎತ್ತಿ ನೇವರಿಸಿ ಕೊಟ್ಟೆಯಯ್ಯ ||1||
ಜಗಳವ ತರುವೆನು ನಾನು ಬಲು
ಬಗೆಬಗೆಯಲಿಂದ ಗೆಲಿಸುವೆ ನೀನು
ಮಗನೇನು ಅರಿಯದವ ಮರ್ತ್ಯಕ್ಕೆ ಬಂದನೆಂದು
ಸಲಹಿದಿ ರಾಜ್ಯದಿ ಪ್ರಭುವಿನ ಮಗನೆಂದು ||2||
ಪಾಷಂಡಿ ಪಾಮರ ನಾನು
ಸ್ವಪ್ನಸನ್ನೆದೋರುವಿ ನೀನು
ಏಸೇಸು ಜನ್ಮದಲಿ ಎಣೆಕೆಯಿಲ್ಲದಪರಾಧ
ನಾಶ ಮಾಡಿ ನೀ ನಂಬಿಕಗೆ ಕೊಟ್ಟೆಯಯ್ಯ ||3||
ಪಂಚಪಾತಕನು ಹೀನ ನಾನು
ಪ್ರಪಂಚವಿಲ್ಲದೆ ಹಿಡಿಯೋ ನೀನು
ಸಂಚರಿಸುವ ಮನದ ಸಂದೇಹ ಸಟೆಮಾಡಿ
ಪಂಚ ಪರುಷ ಪದವಿಯಲ್ಲಿ ಇಡಯ್ಯ ||4||
ಸೋಮವಾರ ಅಮವಾಸ್ಯೆ ಛಟ್ಟಿಯ ದಿನ
ನೇಮಿಸಿ ತುರಾಯಿ ನೀ ಇಟ್ಟೆ
ಕಾಮಿತ ಫಲವ ದೇವ ಕರುಣಿಸು ಸೂಗೂರಯ್ಯ
ಪ್ರೇಮದಿಂದಲಿ ಕೊಟ್ಟ ಪರುವಗೆ ಕೈಯ ||5||

ಏನೆಂದು ಹೇಳಲಿ
ಹೇಗೆಂದು ಹೇಳಲಿ ಇನಿಯ ಬಂದನು
ಅನುಮಾನ ಆಡಿ ಅಭಯ ಹಸ್ತವಿಟ್ಟು ನೋಡಿ ||ಪ||
ಕಿಡಿಗಣ್ಣ ಕೆಂಜೆಡಿ ಕೀರ್ತಿ ಪ್ರಚಂಡಕನಯ್ಯ
ಖಡ್ಗ ಕನ್ನಡಿ ಕಾಶಿ ಕಾಲ ಕರ್ಮದ ಗಂಡ
ಒಡೆ ಮುರಿವ ಮೀಸೆ ದೋರ್ದಂಡ
ಒಡರಿಸಿ ನಿಳಯಕೆ ಬಂದನಯ್ಯ ||1||
ಬಿಲ್ಲು ಬಾಣ ಚಕ್ರ ಬಿರುದಿನವತಾರ ಎದೆ
ಝಲಕ ಅಸುರ ದಕ್ಷಸಂಹಾರ
ಕೊಲ್ಲಾಪುರದ ಮಾಯಿ ಗೆಲಿದಂಥ ಶೂರ ನಮ್ಮ
ಎಲ್ಲರ ಸಲಹಲಿ ಬಂದನುದ್ಧಾರ ||2||
ಗಂಭೀರ ನಡಿಗಡಿಗೆ ಮದಗಜ ಪುಂಡ ನಮ್ಮ
ಶಂಭು ಶಂಕರನೊಳು ಸೆಣೆಸುವರ ಗಂಡ
ಸಂಭ್ರಮ ಸಿಡುಕಿನಾ ಸುಂದರ ರೂಪಿಂದ ಬಹು
ತುಂಬಿದಾ ನದಿಯಂತೆ ತುಡುಕುತಲಂದಾ ||3||
ರವಿ ಶಶಿಯಂತೆರಡು ರಂಜಿಪ ನಯನ
ಕಿವಿಯಲಿ ಬಂಡೆ ತ್ರಿಭುವನ ಹೊತ್ತವನ
ಸವಿ ನುಡಿ ಪ್ರವೀಣಾ ಸತ್ಯ ಸಂಜೀವನಾ ಎನಗೆ
ವಿವರಿಸಲಳವೆ ಕಾಣೆನಿಂಥವನಾ ||4||
ಎಷ್ಟೆಂದು ಯವನ ಸಂಗಕೆ ಶಾಪ
ದೃಷ್ಟ ಮೂರತಿ ದುರ್ಬೀನ ಕುಲದೀಪ
ನಿಟ್ಟಂದ ನಗರ ಪರುವನ ರಕ್ಷಿಪ ನಮ್ಮ
ಕೊಟ್ಟದ ರಾಚಗೆ ಮಾಡಿದ ಬಿನ್ನಪ ||5||

ಏನೇನು ಜಾತಿ ನನಗಿಲ್ಲ
ಏನೇನು ಜಾತಿ ನನಗಿಲ್ಲ
ಮಾನಾಭಿಮಾನದಾಧಾರ ನೀನೆ ಎಲ್ಲ ||ಪ||
ಸತ್ಯ ಮಾರ್ಗದಿಲಿಟ್ಟು ಸಲಹೊ ಕರ್ತನು ನೀನು
ಉತ್ತಮನೆನಿಸು ಹಿತವ ವಸ್ತಾದಿ ನೀನು ||ಅ.ಪ||
ಅತಿ ಸ್ನೇಹ ಗತಿ ಸರ್ವರೊಳು ಆಗಿರುವೆ ನೀನು
ಪಿತ ಮಾತೆಯರಿಗೆ ನೀನಯ್ಯ
ಗತಿ ತಪ್ಪಿದರೆ ಬಂದು ಧೈರ್ಯ ಪೇಳುವ ನೀನು
ಹಿತದಿಂದ ತಲೆಗಾಯುವಾತನು ನೀನು ||1||
ಯಾರು ಹೇಳಿದರೂ ಆಧಾರ ನೀನು
ದೂರು ಕೇಳುವಾತ ನೀನು
ವಾರಿಧಿಗಧಿಕ ಉದ್ಧಾರ ನೀನು
ಬೇರೆ ಸ್ವಾತಂತ್ರ್ಯ ಎನಗಿಲ್ಲ ಸರ್ವ ನೀನಯ್ಯ ||2||
ತೃಣವ ಪರ್ವತ ಮಾಡಿ ತೋರಿ ನಡೆಸುವಾತ ನೀನು
ಸೆಣೆಸುವ ನಿಂದಕರ ಶಿಕ್ಷೆ ಮಾಡುವಾತ ನೀನು
ಬಾಳಿ ದಣಿದವರ ಬೆನ್ನಿಗೆ ಬಳಲುವಾತ ನೀನು
ಪರುಷದ ಖಣಿ ಎಂದು ಕೈ ಎತ್ತಿಸಾರುವ ಬಿರುದು ನೀನಯ್ಯ ||3||
ಅಳಿವಿಲ್ಲದ ದೀಪ ಅನಂತ ರೂಪನು ನೀನೆ
ಬೆಳಗಿಗೆ ಬೆಳಗಾಗಿ ಬೆಳಗುವಂಥ ನಿಜ ರೂಪ ನೀನೆ
ತಿಳಿಗೊಳದೊಳು ಘನ ತಿಂತಿಣಿಯ ಸ್ವರೂಪ ನೀನೆ
ಅಳವಲ್ಲದ ಮಹಿಮನೆ ಪರುವನ ಒಳಹೊರಗಾಡುವ ವಸ್ತಾದಿ ನೀನಯ್ಯ ||4||

ಏನೇನು ಭೀತಿ ಎನಗಿಲ್ಲಾ
ಏನೇನು ಭೀತಿ ಎನಗಿಲ್ಲಾ
ಎನ್ನ ಮಾನದಭಿಮಾನದಾಧಾರ ನೀನೆ ಅಯ್ಯಾ ||ಪ||
ಸತ್ಯ ಮಾರ್ಗದಲಿಟ್ಟು ಸಲಹೊಕತ್ರ್ತನು ನೀನೆ
ಉತ್ತಮರು ಧ್ಯಾನಿಸೆ ಒಳಿತು ತೋರುವಾತ ನೀನೆ
ಅತಿ ಸ್ನೇಹ ಸರ್ವರೊಳು ಆಗಿರುವಾತ ನೀನೆ
ಕಾಯ ಸತ್ತರೆ ಜೀವಕ್ಕೆ ಸ್ವರ್ಗದಲಿ ನೀನೆ ||1||
ಒಪ್ಪಿ ಕಾಯ್ದ ಗುಡಿಯ ಒಳಗಿರುವಾತ ನೀನೆ
ಗೋಪ್ಯ ಸೂತ್ರವ ಪಿಡಿದ ಸರ್ವ ಗಾರುಡಿಗ ನೀನೆ
ಅತಿ ಪ್ರೀತಿಯಲಿ ಕುಣಿಸಿ ಆಡಿಸುವಾತ ನೀನೆ
ಛಪ್ಪನ್ನ ಚದುರ ನೀನೆ ಅಯ್ಯಾ
ಆಟ ತಪ್ಪಿದರೆ ಒಂದು ಕಾಯ್ವಾತ ನೀನೆ ||2||
ಯಾರು ಹೇಳಿದರೂ ದೂರು ಕೇಳ್ವಾತ ನೀನೆ
ವಾರುಗಧಿಕ ಮಮದ್ವಾರ ವಸ್ತಾದಿ ನೀನೆ
ಬ್ಯಾರೆ ಸ್ವತ್ರಂತ್ರ ನಾನಲ್ಲಯ್ಯ
ಹರಿವ ನೀರಿಗೆ ಕಾಷ್ಠ ಎದುರೇರಿಸುವಾತ ನೀನೆ ||3||
ತೃಣ ಪರ್ವತ ಮಾಡಿ ತೋರಿ ನಡೆಸುವ ನೀನೇ
ಸೆಣೆಸುವ ನಿಂದಕರ ಶಿಕ್ಷೆ ಮಾಡುವ ನೀನೆ
ದಣಿದು ಬೆನ್ನಲಿ ಬರುವಾತನೆಂದೆನಿಸುವಿ ನೀನೆ
ಎಣಿಕೆಯ ಮಹತ್ವ ನೀನಲ್ಲದೆ ಅಯ್ಯಾ
ಪರುಷ ಖಣಿಯೇ ನೀನೆಂದು ಕರವೆತ್ತಿ ಸಾರುವೆನು ||4||
ಅಳವು ಇಲ್ಲದಿಹ ಅನಂತ ರೂಪನು ನೀನೆ
ಬೆಳಗಿಗೆ ಬೆಳಗಾಗಿ ಬೆಳಗುವಂತಹ ನಿಜರೂಪ ನೀನೆ
ಘನ ತಿಂತಿಣಿಯ ಸ್ವರೂಪ ಅಳವಲ್ಲದ ಮಹಿಮ ಅಯ್ಯ
ಅಸಂಖ್ಯ ಪರ್ವನೊಳಗೆ ಆಡುವ ಆ ವಸ್ತು ನೀನೆ ||5||

ಏರಿದ ಉನ್ಮಾದವನರಿ
ಆರಿಗಿ ಶಿವ ಸಿಕ್ಕ ಬ್ಯಾಗ|
ಪರಮ ಯೋಗದಿ ನೆಲೆಸಿದ ಕರಸ್ಥಲದಿನಾಗ ||ಪ||
ಹೆಂಡಿರು-ಮನೆಯ ಮರೆತುಬಿಟ್ಟಾ|
ಕರ್ಮ ಖಂಡಿಸಿ ಕಾಯದ ಕರಣೇಂದ್ರಿಯ ಸುಟ್ಟ
ಕೆಂಡಗಲ್ಲಿನ ರೂಪ ತೊಟ್ಟ
ಅಮೃತ ಗುಂಡಿಗೆಯೊಳು ಪರಶಿವನಳವಟ್ಟ ||1||
ಪುರವನದ ದ್ವಾರವ ಬಿಗಿದು
ಹೊಕ್ಕು ಕೇರಿ-ಕೇರಿಗಳೊಳು ದಶವಾಯು ತೆರೆದು|
ಏರಿದ ಉನ್ಮಾದವರಿದು
ಮಿಗೆ ಮೀರಿದ ಅಷ್ಟಮದಗಳ ಮುರಿದು ||2||
ಪಂಚ ಎಸಳ ಕಮಲ ತೋರಿ
ವರ ಪಂಚಾಕ್ಷರಿ ಎಂಬೋ ಮಂತ್ರ ಜಪಿಸಿರಿ
ಪಂಚ ಭೂತಗಳ ಸಂಹರಿಸಿ
ಪಾದ ಮುಂಚೆ ಇಡಲು ಶಿವನು ದಯಮಾಡಿ ||3||
ಬ್ರಹ್ಮಾಂಡಕಗ್ನಿಯ ಕೊಂಡು
ಬಂದು ಬ್ರಹ್ಮಸ್ಥಾನಕ್ಕೇರಿದ ಭವಹರನ ಕಂಡು
ಧರ್ಮ ಶ್ರೀಗುರುವೆ ಮೈಯುಂಡು
ಪರಬ್ರಹ್ಮನ ಕರದೊಳು ಬೆರೆದು ಮನಗಂಡು ||4||
ಪರಶಿವನ ಆತ್ಮಕ್ಕೆ ಬೇಡಿ
ಮುಂದೆ ಗುರುಶಾಂತನ ಕೂಡಿ ಪವಾಡ ಮಾಡಿ|
ಪರಮ ಮುಕ್ತಿಯೊಳು ಈಡಾಡಿ
ನಗರ ಪರುವನ ನುಡಿಯೊಳು ಶಿವನು ದಯೆದೋರಿ ||5||

ಕಾಯ್ವೆನೆಂಬ ಬಿರುದು
ಕಾಯ್ವೆನೆಂಬ ಬಿರುದು ಖರೆಯಾದೆ
ಪಾವನ ಮಾಡಯ್ಯ ಎನ್ನ ಪರಮ ಶ್ರೀಗುರುವೆ ||ಪ||
ಮಳೆ ಬೆಳೆಯಿಂದ ಮರ್ತ್ಯಜೀವನ ಕಾಯ್ವೆ
ಸುಳವು ಸೂಕ್ಷ್ಮವ ತೋರಿ ಸುಜನರ ಕಾಯ್ವೆ
ಅಳವಳಲ್ಲದ ಅನಂತ ಕೋಟಿ ಜೀವನ ಕಾಯ್ವೆ ||1||
ನಂಬಿದವರ ಬೆನ್ನು ನಾನಾ ತೆರದಲಿ ಕಾಯ್ದೆ
ಸಂಭ್ರಮದಲಿ ಸತ್ಯಶರಣರ ಕಾಯ್ವೆ
ಎಂಭತ್ನಾಲ್ಕು ಲಕ್ಷ ಜೀವನ ಕಾಯ್ವೆ
ಇಂಬಿಟ್ಟು ಈರೇಳು ಭುವನವ ಕಾಯ್ವೆ ||2||
ಆಶೆಯನಳಿದು ನಿರಾಶೆಯಲಿರ್ಪರ ಕಾಯ್ವೆ
ಸಾಸಿರ ಮುಖದಲಿ ಸವಿದುಂಡು ಕಾಯ್ವೆ
ಭಾಸುರ ಶಶಿಬ್ರಹ್ಮ ಋಷಿಗಳ ಕಾಯ್ವೆ
ರಾಶಿ ದೈವಗಳೆಲ್ಲರ ರಕ್ಷಿಸಿ ಕಾಯ್ವೆ ||3||
ಅಣುರೇಣು ತೃಣಕೆ ಧಣಿ ಆಧಾರನಾಗಿ ಕಾಯ್ವೆ
ಮಣಿಸಿದ್ದ ಮಹಾಮೇರು ಪರ್ವತ ಕಾಯ್ವೆ
ಹೊಣೆಯಾಗಿ ತ್ರಿಭುವನ ಹೊತ್ತಾರೆ ಕಾಯ್ವೆ
ಗುಣಮಣಿ ಸರ್ವರಿಗೆ ಗುರುವಾಗಿ ಕಾಯ್ವೆ ||4||
ಕರ್ಮಕಂಟಕ ದುರಿತ ಖಂಡಿಸಿ ಕಾಯ್ವೆ
ಧರ್ಮದ ಮುಖದಲ್ಲಿ ಧಣಿಯಾಗಿ ಕಾಯ್ವೆ
ನಿರ್ಮಿತ ಪರುವನ ನಿಜವಾಗಿ ಕಾಯ್ವೆ
ಮರ್ಮದಿಂದ ನಿಮ್ಮಡಿಗೆ ವಂದಿಪರ ಕಾಯ್ವೆ ||5||

ಗಂಡು-ಹೆಣ್ಣೆಂಬ ಎರಡು ಕುಲವಯ್ಯ
ಶ್ರೀಗುರುವೆ ನೀ ಕೇಳೊ ಚೆನ್ನಬಸವಣ್ಣ
ಲಿಂಗವಂತರು ನಾವು ಚೆನ್ನಾಗೊ ಕೇಳಿರೆ ||ಪ||
ಗುಂಡದೊಳಗಿನ ನಾರು ಕಂಡವರು ಕಾಲೆದ್ದಿ
ಕುಂಡಿ ಮಂಡಿಗಳೆಲ್ಲವ ಕೂಡೆ ತೊಳೆದು|
ತೊಳೆದಂಥ ಆ ನೀರು ಲಿಂಗಕ್ಕೆ ಮಜ್ಜನವು
ಲೇಸಾಯಿತೇನು ನಿಮ್ಮ ಆಚಾರ ಕುಲುವು ||1||
ಸತ್ತ ಹೋತಿನ ತೊಗಲು ಘಡಿಸಿ ಬುದ್ಧಲಿ ಮಾಡಿ
ಅದರೊಳಗೆ ಗಂಧೆಣ್ಣೆ ಕಸ್ತೂರಿ ತುಂಬಿ
ವಾಸನೆ ಒಳ್ಳೆಯದೆಂದು ಮೂಸಿ ನೋಡಿದರ
ಲೇಸಾಯಿತೆ ನಿಮ್ಮ ಆಚಾರ ಕುಲವು ||2||
ನಾಡ ಎಂಜಲ ತಂದು ಜ್ಯಾಡ ಮಗ್ಗವ ಹೂಡಿ
ಅದರೊಳಗೆ ಕೊಂಬಿsನ ಲಾಳಿ ಆಡಿ|
ಆ ಸೀರಿ ಉಟ್ಟಂತ ಸತಿಯು ಮಂಚಕ್ಕೆ ಕರಿಯೇ
ಲೇಸಾಯೀತೇನಯ್ಯ ನಮ್ಮ ಆಚಾರವು ||3||
ಸತ್ತ ಬಸವನ ತೊಗಲು ಜಡಿಗೆ ಮಿಣಿಮಾಡಿ
ಹೊತ್ತು ಕೊಂಡೊಯ್ದನು ತನ್ನ ಹೊಲಕೆ|
ಉತ್ತಾರಿ ಮಳೆಬಂದು ಸುತಿಸುತ್ತಿ ಹೊಡೆವಾಗ
ಜತ್ತಿಗಿ ಒಳಗಿನ ನೀರು ಬುತ್ತೀಯ ಒಳಗಯ್ಯ ||4||
ಬಣ್ಣದ ಗೊಂಬೆಲ್ಲ ಭೇದಗಳು ತೊಗಲಲ್ಲ
ಕಣ್ಣು ಕಾಣಿಸುವ ತನಕ ಗಿರಿಯೇ|
ಬೆಂಡೆಬೆಂಬಳಿ ಪರವ ಹೇಳಿದಾ ಈ ಮಾತು
ಗಂಡು ಹೆಣ್ಣೆಂಬ ಎರಡು ಕುಲವಯ್ಯಾ ||5||

ಗುಮ್ಮ ಬಂದಾದೇ
ಗುಮ್ಮ ಬಂದಾದೇ
ಅಮ್ಮೋಜಿ ಇದ ಕಂಡು ನಾನಂಜುತೀನಿ ||ಪ||
ಕತ್ತಲ ಮನೆಯೊಳಗೆ ಹೊಕ್ಕಾದ ಗುಮ್ಮ
ಕತ್ತೀಯ ಹಿಡಕೊಂಡು ನಿಂತಾದ ಗುಮ್ಮ
ಸತ್ಯಕ್ಕನ ಮನೆಗೆ ಭಿಕ್ಷಕ್ಕೆ ಹೋಗ್ಯಾದೆ ಗುಮ್ಮ
ಹುಟ್ಟೀಲಿ ಹೊಡೆದರೆ ಒಲಿದಿತ್ತು ಗುಮ್ಮ ||1||
ಕಾಲನ್ನ ಮೂಲನ್ನ ಕಾಲಿಲ್ಲೊದ್ದಾರೆ ಗುಮ್ಮ
ಅಘೋರನಾಥನ ಗುಡಿಗೆ ಒಯ್ದಾದೆ ಗುಮ್ಮ
ಅಂಧಕಾಸುರನ ಎದೆ ಮೇಲೆ ಕುಳಿತಾದೆ ಗುಮ್ಮ
ಚಂದ ಚಂದದಲಿ ನಲಿದಾಡೋ ಗುಮ್ಮ ||2||
ಕಾವಿಯ ಲಾಂಛನ ಪೊದ್ದಾದೆ ಗುಮ್ಮ
ನೀರಾನೆ ಹೊತ್ತು ನಿಂತಾದೆ ಗುಮ್ಮ
ಬಾಣಾಸುರನ ಬಯಲು ಕಾದಾದೆ ಗುಮ್ಮ
ಕರೆದರೆ ಯಾತಕ್ಕೆ ಬಾರದೀ ಗುಮ್ಮ ||3||
ಕರ್ಣಕುಂಡಲ ಕಿವಿಗೆ ಇಟ್ಟಾದೆ ಗುಮ್ಮ
ಕೊರಳಿಗೆ ಸರ್ಪನ ಸುತ್ತ್ಯಾದೆ ಗುಮ್ಮ
ನಡು ಮಧ್ಯ ತಂತೀಯ ನುಡಿಸ್ಯಾದೆ ಗುಮ್ಮ
ಶಂಬು ಭೋರಿಟ್ಟು ಬರುತಾದೆ ಗುಮ್ಮ ||4||
ಹುಲಿಯ ಚರ್ಮವನು ಪೊದ್ದಾದೆ ಗುಮ್ಮ
ಉರಿಗಣ್ಣಿನ ಬಾಣ ಬಿಟ್ಟ್ಯಾದೆ ಗುಮ್ಮ
ತರುಳ ಬಾಲನ ಕೊರೆದು ಉಂಡಾದೆ ಗುಮ್ಮ
ಬೆಂಡೆಗಂಬಳಿ ಪರುವಾಗೆ ಒಲಿದಾದೆ ಗುಮ್ಮ ||5||

ಚೆಲ್ವ ಪುಣ್ಯ ಪುತ್ಥಳಿ ಬೊಂಬೆ
ಚೆಲ್ವ ಪುಣ್ಯ ಪುತ್ಥಳಿ ಬೊಂಬೆ ಪೂರ್ಣ ದಯಾಳೆ
ಗೆಲ್ವವರದೇವಿ ಪರಿಹರಿಸು ||ಪ||
ಹಸಿವು ತೃಷೆಗಳು ಅಡಗದೆ ಹಗಲಿರುಳು
ದೆಸೆಗೆ ಬಾಯ್ಬಿಡುವರು ದೇವಿ ಕೇಳಮ್ಮ
ಶಿಶುವಿನುಗ್ರದ ತಪ್ಪ ಶೀಘ್ರದಲಿ ಪರಿಹರಿಸು
ಎಸೆಯುವುದು ಸುಕೀರ್ತಿ ತ್ರಿಣಯ ಲೋಚನೆಯೆ ||1||
ಗ್ರಹಣ ಹಿಡಿದ ಚಂದ್ರ ಘಾಸಿಯಾದ ಹಾಗೆ
ಪ್ರಾಣಿಗಳು ಬಳಲಿದವು ಪ್ರತಿಷ್ಠೆ ಮಾಡಮ್ಮ
ಆಣೆ ನಿನ್ನದು ಕೊಟ್ಟು ಆರ್ಭಟವ ನಿಲಿಸಮ್ಮ
ಕೋಣ ಬಂದು ಮೈಲಿಗೆ ಕಳೆಯೇ ಕಾಮಾಕ್ಷಿ ||2||
ಎಲ್ಲ ದೇವರ ದೇವಿ ವಲ್ಲಭೆಯು ವರಮೂರ್ತಿ
ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಸುವರು ಬಹುಜನರು
ಬಲ್ಲ ಭಕ್ತರ ಪ್ರೇಮಿ ಬಡವರಿಗೆ ಬಾಂಧವಿ
ಬೆಂದು ಕುಸಿಯಲಿಲ್ಲದ ಬಿರುದುಂಟು ಮಾಡಮ್ಮ ||3||
ಸತ್ಯವರಗಳ ತೋರಿ ಸಾವಿರ ಮುಖದಲಿ
ನಿತ್ಯದಿ ಸವಿದುಂಟು ನಿಜ ರೂಪದಲಿ ಬಂದು
ಪುತ್ರಗ್ಹಾಕಿದ ಮೃತ್ಯುವನು ಪರಿಹರಿಸು
ಎತ್ತಿದ ಅಭಯ ಹಸ್ತ ವಿಶ್ವಕುಟುಂಬಿ ||4||
ಹುಗ್ಗಿ ಹೋಳಿಗೆ ತುಪ್ಪ ಹೂವ್ವ ಕುಂಕುಮ ನಿಮಗ
ದೀರ್ಘ ಆಯುಷ್ಯ ಕೊಟ್ಟು ದಿವ್ಯಾಂಬರ ಉಟ್ಟು
ಹೆಗ್ಗಳಿಕೆ ಇಲ್ಲದೆ ಇತ್ತು ಪರುವಗೆ ದಯವ
ದೀಘ್ರದಲಿ ಸಲಹಮ್ಮ ಸತ್ಯ ಸಮರ್ಥಿನಿ ||5||

ಜಗದೀಶ ನೀ ಎಂಥ ದೊರೆಯೇ
ಜಗದೀಶ ನೀ ಎಂಥ ದೊರೆಯೇ
ಎಂದು ಪೊಗಳುವರು ಬಾ ಮನಿಗೆ ಅಷ್ಟೈಶ್ವರಿಯೇ ||ಪ||
ಸಿಂಧು ಬಲ್ಲಾಳಗೊಲಿದಿ ನೀ
ಉಂಡಾಡು ಶಿಶುವಾಗಿ ಮೊಲೆಗಳ ಸವಿದಿ
ಕೊಂದಿರಿ ಗೊಲ್ಲಾಳನಬ್ಬರದಿ ಅವರ
ತಂದೆಯ ಪ್ರಾಣವ ಕೊಟ್ಟು ನೀ ಮೆರೆದಿ ||1||
ಕಾಳಿದಾಸಗೆ ಕರುಣವಿಟ್ಟು ನೀ
ಆಳಾಗಿ ಮೂಗಳ ಕಣ್ಣವರಿಗೆ ಕೊಟ್ಟಿ
ಬಾಳ ಭಾಷೆಯ ನಂಬಿಗಿಟ್ಟು ಅವರ
ಆಳಾಗಿ ನಿತ್ಯ ಪಡಿಹೊನ್ನು ಕೊಟ್ಟಿ ||2||
ಪಿಟ್ಟವ್ವೆ-ದೋಷಿಗಳಾಗಿ ಕೆರಿಯಾ
ಕಟ್ಟೆಗೆ ಮಣ್ಣ ಹೊತ್ತಂತೆಯಾಗಿ
ತಟ್ಟನೆ ಭಿಕ್ಷಕ್ಕೆ ಹೋಗಿ ಅವರ
ಹುಟ್ಟೀಲೆ ತಿವಿದರೆ ಒಲಿದೆ ನಿಜವಾಗಿ ||3||
ನುಲಿಯಾ ಚಂದನ ಬಿಟ್ಟು ಬಿದ್ದಿ ಎದ್ದು
ಬಲು ಹಿಂದೆ ಹಿಂದ ಹೋದದ್ದು ನಿನ್ನ ಬುದ್ದಿ
ಕಾಲಿಲೆ ಒದ್ದವಗ ಒಲಿದಿದ್ದೀ
ಸಲೆನೆಚ್ಚು ಬೇಡಿದ್ದು ಕೊಡುವೆ ನೀ ಬುದ್ಧಿ ||4||
ಹೆತ್ತ ಮಕ್ಕಳು ನಿನಗವರು ಇದು
ಸತ್ಯವ ಶ್ರಮಬಡಿಸಿ ನೋಡುವರೆ ಹೀಗೆ
ಸತ್ಯವ ಸ್ಥಿರ ಮಾಡೋ ಧರೆಗೆ
ನಿತ್ಯ ಪರವನುದ್ಧಾರ ಬಾರೋ ಮನಿಗೆ ||5||

ತಡೆಯಬಹುದೇ ಎನ್ನೊಡೆಯ
ತಡೆಯಬಹುದೆ ಎನ್ನೊಡೆಯ ಅಲ್ಲಮ ಪ್ರಭು
ತಡೆಯಬಹುದೆನ್ನ ತಪ್ಪು ನಾಟಿಸುವ ಮುನ್ನ
ಬಿಡುವಡಳಲ್ಲ ಬಿಂಕದ ಬಿರುನುಡಿಗಳು ಸಲ್ಲ
ನಡೆ ಮನೆಗೆ ನಲ್ಲಾ ||ಪ||
ನಗೆಮಾತುಗಳು ಸಲ್ಲಾನು ಸುಳಿಹೋಗುವಳಲ್ಲಾ
ರಂಭೆಯರೊಳಗೆನ್ನ ರತಿಗೆಡಿಸಿದಳು ಮುನ್ನ
ತುಂಬಿತು ದ್ವಾರ ತುಸು ಮಾತ್ರ
ಹಂಬಲದೂರ ಕುಂಭ ನೀರೆ ತುಂಬಿ ನೀರೆಯಂಬುದೋರಿತು
ಬಾರೊ ಕರೆದರೆ ಧ್ವನಿದೋರೋ ಇಳೆಯೊಳಗತಿ ಶೂರ ||1||
ಮಾತಾಪಿತರನ್ನೆಲ್ಲ ಮರೆತೇನು
ಎನ್ನಯ ಪ್ರಾಣನಾಥ ನಿನ್ನಿಂದ
ನಂಬಿದೆ ಮನ ಘಾತಕರಿಂದ ಪತಿಯಾಗಿ ನೀ ಬಂದು
ಪಂಥ ಮಾನಕೆ ತಂದೆ
ಯಾತಕ್ಕೆ ಎನ್ನೊಳು ಮುನಿದೆ ಎಳೆ ಪ್ರಾಯಕ್ಕೆ ಬಂದು ||2||
ಕುಂಜರಾರಿಯ ಮಾನ
ಕುಶಲ ಹಾರವ ತಾಕಿ
ಅಂಜಿ ಬಿದ್ದೆನೋ ಅನಿತರೊಳು ನಿರಂಜನ ಬಂದನು
ಚಂಚಲಾಗದ ಮುನ್ನಾ
ಚೆಲ್ಲವರಿಯಿತು ಮಾನ ನಂಜುಂಡ ನಗರ ಪರ್ವಗೆ ಪರಿದು ||3||

ತಂದು ತೋರೈ ಬಯಸಿದಂತಾ
ತಂದು ತೋರೈ ಬಯಸಿದಂತಾ ಭಕ್ತ ಕೃಪಾಂಗ ಚಂದ್ರಮೌಳಿ
ಒಂದು ಚಿತ್ತವಾಗಿರಲಿ ಅಭಯ ಹಸ್ತವಿಡು ಗುರುವೆ ||ಪ||
ಉಕ್ಕಿನ ದರ್ಪಣಕ್ಕೆ ದೃಷ್ಟಿಯಿಕ್ಕಿ ನೋಡುವರೆ ಕೈಯೊಳು
ಸಿಕ್ಕಿದಂತೆ ತೋರು ಶಿವಲಿಂಗ ಪೂಜೆಯೊಳು ನಿಮ್ಮ ಮುಖವಾ ||1||
ಗಿರಿಯ ದೇಗುಲದಿ ನಿಂದು ಕರಿಯಲು ಶಬ್ದಕ್ಕೆ ನೀ
ಮರೆಯದೆ ಕೊಟ್ಟ ತೆರದಿ ಮಾತಾಡು ನನ್ನ ಕರದಲ್ಲಿ ||2||
ಹೆತ್ತವರು ತಮ್ಮ ಶಿಶುವ ಹತ್ತೆ ವಿಡಿದು ನಡೆಸೋ ತೆರದಿ
ಸತ್ಯದಲ್ಲಿ ನಡಿಸು ನೀ ಎನ್ನ ಸರ್ವಲೋಕದೊಳು ಕೈವಿಡಿದು ||3||
ಶರಧಿ ಮಥನದಲ್ಲಿ ಅಮೃತ ಸುರರಿಗೆ ಉಣ ಬಡಿಸಿದಂತೆ
ಕರುಣದಿ ಉಣಿಸಯ್ಯ ಅಮೃತ ಕರದಲ್ಲಿ ನಾ ನಿನ್ನ ಶಿಶುವೆಂದು ||4||
ಭಕ್ತವತ್ಸಲನೆಂಬೋ ಬಿರುದ ಭುವನದಿ ಸಾರುವೆ ಪಂಚವಕ್ತ್ರ
ವರಪುತ್ರ ಪರುವನ ವಾಕ್ಯಕ್ಕೆ ಒಡಗೂಡು ಒಲಿದು ||5||

ತನುವೆಂಬ ಮನೆ
ತನುವೆಂಬ ಮನಿಯೊಳಗs ನಾರಿ
ತನ್ನ ಇನಿಯsಗ ಮಂಚ ಹಾಕಿದಳೊ
ಗುರುರಾಯ ಕೇಳೊ ||ಪ||
ಒಮ್ಮನ ನಿಷ್ಟಿಲಿಂದ ನಿಶ್ಚಯಿಸಿ ನಿರ್ವಿತಳಾಗಿ
ಗಮ್ಮನೆ ಗುರುವಿನಾಂಘ್ರಿಯ ಪಿಡಿದು ಗಂಡನ ಪಡೆದು
ಹಮ್ಮು ಪಂಥಗಳ ಹರಿದೊಡೆ ಹರುಷಾಬ್ದಿ ಕೂಡಿ
ಬ್ರಹ್ಮಾನಂದದೊಳಾಡಿದಳೊ ಪರಮಾತ್ಮನೆ ಕೇಳೊ ||1||
ಭಕ್ತಿ ಹಾಸಿಗೆಯ ಹಸನ ಮಾಡಿ ಭಾವದಲಿ ಕೂಡಿ
ಮುಕ್ತಿ ತಲಿಗುಂಬು ತಂದಿಡಿಸಿ ಮುಗಿರಾಯನೊಲಿಸಿ
ಶಕ್ತಿ ವಿರಕ್ತಿ ಜರ್ನಶಕ್ತಿ ಈಶ್ವರನ ಕೃಪೆಯಿಂದಲಿ
ಯುಕ್ತಿಲಿ ಮೇಲ್ಕಟ್ಟು ಕಚ್ಚಿs ದಳೊ ಸುರರೊಪ್ಪುವಂತೆ ||2||
ಕಾಲಕರ್ಮಿಗಳು ವಿರಹಿತ ಕಾಲಂ ಜ್ಯೋತಿಯೆ
ಮೇಲು ಮಂಡಲಿಕವಪ್ಪುವಳೊ ಸುರರೊಪ್ಪುವಂತೆ
ಬಾಲಚಂದಿರs ಬೆಳೆದಂತೆ ಬಳಲಿs ಕಾಂತೆ
ಪಾಲಿಸೋ ಪರವನೊಳಾಡಿ ಪರಮಾತ್ಮನ ಕೂಡಿ ||3||

ತಾಯಿ ನಮೋ ನಮೋ
ತಾಯಿ ನಮೋ ನಮೋ ಮಾಯಿ ನಮೋ ನಮೋ
ತಾಯಿ ರತ್ನದ ಬೊಂಬೆ ಕಾಳಮ್ಮ ನಮೋ ನಮೋ ||ಪ||
ಜಗದ ವಿದ್ಯೆಗೆ ಜಾಣೆ ಜಗನ್ಮಾತೆ ಶ್ರೀ ಪಾರ್ವತಿ
ಯುಗಗಳ ಗೆಲಿದ ತಾಯಿ ಕಾಳಿಕಾ ದೇವಿ
ಆಘೆಹರ ಸಿಂಹವಾಹಿನಿ ಅಮೃತ ದಯಾನಿಧಿ
ಆಗರು ಕಸ್ತೂರಿ ಗಂಧ ಅಮ್ಮಾಜಿ ನಮೋ ನಮೋ ||1||
ಶಿರ ಪವಾಡವ ಕೊಂಬಿ ತರಿಸಿ ಪ್ರಾಣವ ತುಂಬಿ
ಅರಸಿ ಚಾಮುಂಡಿ ಹಸ್ತಿಗಮನೆ ನೀನು
ಕರಗಸ ಗಂಡು ಕತ್ತರಿ ಗಂಟಲ ಗಾಣೆಂಬೊ ಶಿರಕೆ
ಉರಿವ ಕೊಂಡೆಗಳ ಸುಟ್ಟ ಉಮೆಯೆ ನಮೋ ನಮೋ ||2||
ಅಸಹಾಯ ಶೂರಳೆ ದೈತ್ಯರ ಅಟ್ಟೆ ಶಿರವ
ಕೊಸರಿ ಚಂಡಾಡಿದಂಥ ಕೋವಿದಳೆ
ದುಸ್ಮನ್ನರಿಗೆ ಮೂಲ ದುಷ್ಕರರಿಗೆ ಎದೆಯ ಶೂಲ
ನೊಸಲು ಉರಿಗಣ್ಣಿನ ನಗಸುತೆ ನಮೋ ನಮೋ ||3||
ಕಾಲಲಂದಿಗೆ ಕಟ್ಟಿ ಸೂತ್ರ ಕಡಗ ಕಂಠಮಾಲಿ
ಬಾಲೆ ಮೂಗುತಿಗೊಪ್ಪುವ ವಜ್ರ ದಾಮಕೂಟ
ತ್ರಿಶೂಲ ಕಂಜರ ಕಾಸೆ ತ್ರಿಜಗವ ರಕ್ಷಿಪಳೆ
ಕಾಲ ಕರ್ಮವಗೆಲಿದ ಕಂಜಾಕ್ಷಿ ನಮೋ ನಮೋ ||4||
ದಿನಕರ ಕೋಟಿ ಪ್ರಭೆಯ ದಿವ್ಯ ರತ್ನದ ಮಣಿಯೆ
ಅನುವಾಗಿ ಐವರ ಜನನಿಯು ನೀನೆ
ಕರಕ ನಿರ್ಮಿತ ಕಂದ ಪರುವಗೆ ವರವ
ಮನಕೆ ಬಂದಷ್ಟು ಕೊಡುವ ಮಾಂಕಾಳಿ ನಮೋ ನಮೋ ||5||

ತಿಳಿಯಬಾರದೇನೋ ಚಿದ್ಘನ
ತಿಳಿಯಬಾರದೇನೋ ಚಿದ್ಘನ ವಿಮಲ ರೂಪನ ||ಪ||
ಕರಿದು ಬಿಳಿದು ಕೆಂಪು ತೋರುವದು ಸೊಂಪು
ಪರಮ ಪಾವನ ಪೀಠದಲ್ಲಿ ತಾನೆರಡು
ಪರಿಪರಿ ಬಂಧುವಿನ ನಿನ ಕಿರಣ ಕೋಟಿಯ ನಡುವೆ
ಪರಮ ಆನಂದದೊಳಗಿರುವ ||1||
ಅಗ್ನಸ್ತಂಭದಿ ಮಧ್ಯ ಅಲ್ಲಿರುವ ಪ್ರಜ್ವಲೆಗೆ
ಅಭೇದ್ಯ ಆಗಮಿಕ ವಿದ್ಯೆ ಆರುಚಕ್ರ ಕಮಲದಳ
ಸಂಜ್ಞೆವಿಡಿದಮೃತವ ಪ್ರಭಾಮಯ
ದಿಗ್ದೆಸೆಯೊಳು ಬೆಳುಗವ ಚಿದ್ಘನ ವಿಮಲ ರೂಪನೆ ||2||
ಸಹಸ್ರ ದಳ ಕಮಲ ಪೀಠದ ಮೇಲೆ
ಸಾವಧಾನ ಸುಶೀಲದಿ ಮೇಲೇರಿ
ಕವಿದು ಲೋಕವೆಲ್ಲ ಪ್ರಜ್ಯೋತಿ ತನ್ಮಯ ಭಾವ
ಕರದೊಳು ತೋರ್ಪ ಪರುವನ ದೇವರೆ ನೀನೆಂದು ||3||

ನಗರೇನು ಈ ಮಾತು
ನಗರೇನು ಈ ಮಾತು ಮೂಜಗದವರು ಕೇಳಿ
ಖಗರಾಜನ ಅಣುಗನ ಅಣ್ಣನ ಶಿರವನು
ಉಗುರಲಿ ಚಿವುಟಿದಾ ಹಗರಣ ಕೇಳಿ ||ಪ||
ಕಡಲಳಿಯಾತನು ಜಾನು ಪೊಡವಿ ಯೋಳಲೆ ಚಲ್ವ
ಮೃಢಹರನ ಅಡಿಗೆರಗಲು ಉರಿಗಣ್ಣಿಂದಲಿ ಸುಡುವದು
ಇದೆಯೇನೋ ||1||
ಶಿರಿಯಾಳ ಚಾಂಗುಳಿಯಾ ತರುಳನೋರ್ವನು ಯೆಂದು
ಕೊರೆದು ಬಾಣಸ ಮಾಡಿ ನಿಜ ಪುರಕೊಯ್ತಂದು
ತಿರುಗಿಸಿದರುಯಂದು ಸುರರೆಲ್ಲರೂ ಕೇಳಿ ||2||
ಓರುಗಲ್ಲಿಗೆ ಹೋಗಿ ಧೀರ ಗಣಪತಿ ಮನಿಯಾ
ನಾರದ ಮುನಿ ಕೂಡ ಚೋರ ಕಾಯಕ ಮಾಡಿ
ಮಾರಹರಗರಣರು ಮೊರೆ ಹೊಕ್ಕರೆಂದು ||3||
ನಿತ್ಯ ಲಕ್ಷದ ಮೇಲೆ ತೊಂಬತ್ತಾರು ಸಾವಿರಕ್ಕೆ
ಭಕ್ಷ ಪಾಯಸ ತುಪ್ಪ ನೀಡಿದ
ಬಸವಗೆ ಕಪ್ಪಡಿ ಸಂಗಮ ನುಂಗಿದನೆಂದು ||4||
ಹೀಗೆ ಎಲ್ಲರು ನೀವು ಭಂಗಿಸಿದಾ ಭಕ್ತರನಾ
ಭಾಗೀರಥಿಯಲಿ ಬಾಗಿಲ ಸ್ಥಿರವೆಂದು
ಗೂಗಲ್ಲು ಗವಿಯೊಳು ಪ್ರಭುರಾಯನೆಂದು ||5||

ನಗೆ ಬರುತಿದೆ ಸಾಂಬ
ನಗೆ ಬರುತಿದೆ ಸಾಂಬ ನಿನ್ನಾಟಕೆ
ಬಹಳ ಬಗೆಯಲಿ ಬಂದು ಎನ್ನ ಭವದ ಬಟ್ಟೆಯ ಬಿಡಿಸೋ ||ಪ||
ನಂಬಿಗೆ ಕುಂಟಾಣಿತನ ಮಾಡಿ ಚನ್ನನ
ಅಂಬಲಿ ಉಣಬಹುದು ಅಲ್ಲದಲ್ಲಿ
ಕುಂಬಾರನ ಮನೆ ಮುಂದೆ ಕುಣಿದಾಡಿ ಕುಚದೊಳು
ಇಂಬಾಗಿ ಪೋ ಎಂದ ವಿಪರೀತ ಮನಕೆ ||1||
ಚಿಕ್ಕವರು ಕಲ್ಲೀಲಿಕ್ಕೆ ಒಲಿದೆ ಗೋವ
ಮಕ್ಕಳಾಗಿ ಬಂದು ಕರುವ ಕಾಯ್ದೆ
ರೊಕ್ಕವ ಕದ್ದು ಮೇಲ್ಹೊಕ್ಕು ಕೊಲ್ಲಿಸಿ ಕುರಿಯ
ಹಿಕ್ಕಿಯೊಳಗೆ ವರವ ಕೊಟ್ಟೆನೆಂಬುದಕೆ ||2||
ಕಟ್ಟಿಗೆ ಮಣ್ಣನ್ನು ಪೊತ್ತು ಭಿಕ್ಷಕ್ಕೆ ಪೋಗಿ
ಪುಟ್ಟೀಲಿ ಇಕ್ಕೀಸಿಕೊಂಬುದು ಋಷಿಯೋ
ಬಟ್ಟಲ ಹಾಲ ಸವಿದು ಪಾರ್ಥನ ಬಿಲ್ಲು
ಪೆಟ್ಟಿಗೆ ಬೆನ್ನು ಕೊಟ್ಟೆನೆಂಬುದಕೆ ||3||
ಬಾಣನ ಬಾಗಿಲು ಕಾಯ್ದ ಬಲ್ಲಾಳಗೆ
ರಾಣಿಯ ಬೇಡುತ ಬಾಣಸವ ಮಾಡಿ
ಗೇಣು ಹೊಟ್ಟೆಗೆ ಬ್ರಹ್ಮನ ಶಿರದೊಳು
ಮೂಜಗವ ತಿರಿದುಂಡೆನೆಂಬುದ ಕೇಳಿ ||4||
ಒಂದೊಂದು ಪರಿಯಲಿ ಒಲಿದು ಭಕ್ತರಿಗೆಲ್ಲ
ಮುಂದೆ ಮುಕ್ತಿಯ ನೀಡುವ ಮೃತ್ಯುಂಜಯ
ಚಂದ್ರಶೇಖರ ಪ್ರಭು ಪರುವನೊಳಗ
ಹೊಂದಿ ಹೋದಾನೆಂಬ ಸುದ್ದಿಯ ಕೇಳಿ ||5||

ನಂಬದಿರು ಸಂಸಾರ
ನಂಬದಿರು ಸಂಸಾರ ನಮ್ಮದಲ್ಲ ಈ ಕಾಯ
ಶಿವನು ದಿನ ತುಂಬಿದ ಮೇಲೆ ಬಿಡರಣ್ಣ ||ಪ||
ಬಲು ಮೋಹವೆಂಬೋ ಪಾಶಾ| ಬಾ ಹೊಗಾಲನ ಕಟ್ಟಿ ಕೆಡವಿ
ಮೂಲಾದ್ರಿವಾತನ ಅಬ್ಜಿ| ಮುತ್ತು ಉಡಗೈಯಿ ಬಿಗಿದು ||1||
ಮ್ಯಾಲೆ ಮಾತಾ-ಪಿತರೆಂಬೋ ಮುಗದಾಣಿಗಳನಿಕ್ಕಿ
ಯಾಕಾಲಾಗಿಂದಭಿಮುಖವಾಗಿ ಕಾಡತಾರೋ ಮನವ
ನೆಂಟರು ಇಷ್ಟರು ನೆರೆದು ಕಟ್ಟು ಕಾವಲಿದಕೆ ಹೊಂಟು ||2||
ಹೋಗದಂತ ಮೋಹದಿ ಹೊರಳಿ ಕೊಲುವರು
ಎಂಬಾರು ಜನದಿ ಇತ್ತ ನಗರ ಪರುವನ ಶತಕಂಠನ
ಶೃತಿ ನುಗ್ಗಿ ಒಳಗಿಡು ಮನವೆ ||3||

ನಂಬಿದೆ ನಿನ್ನ ಪಾದವ
ನಂಬಿದೆ ನಿನ್ನ ಪಾದವ ನಿಟಿಲಾಂಬಕ ರಕ್ಷಿಸು ದೇವರ ದೇವ ||ಪ||
ಒಂಬತ್ತು ನಾಲ್ಕು ಲಕ್ಷದಿ ಪುಟ್ಟಿ ಬರಲಿ
ಶಂಭು ಶಂಕರ ನಿನ್ನ ಸಂಕೀರ್ತಿ ಕೋಟಿ
ಕಂಭ ಸೂತ್ರದಿ ತಂದಿಟ್ಟು ನರ
ಬೊಂಬೆ ಆಡಿಸಿ ಧರೆಯೊಳು ಮನ ಮುಟ್ಟಿ ||1||
ಗುರುಪಾದ ಮನೆಯ ಮಟ್ಟಿ
ಕಿಂಕರ ಮೇಲು ಮಾಳಗಿ ಏಳು ಮುಖದಟ್ಟಿ
ಅರುಹೆಂಬ ಜ್ಯೋತಿ ಕೈಸಾರಿ
ಹರಶರಣರ ನೆರವಿಯೊಳಾಡಿಸು ದಾರಿ ||2||
ಎಲ್ಲಾ ಸೂತ್ರದಿ ಪಿಡಿದಾಡಿ
ಎಲ್ಲರ ಮನದಲಿ ಕುಳಿತು ನೀನೋಡಿ
ಅಲ್ಲಹುದೆಂಬುದ ತಿದ್ದುವ ಎದೆ
ಝಲ್ಲ ಬಿಡಿಸುವ ಗುರುರಾಯ ಕೈ ಪಿಡಿ ||3||
ಆಟದಲಿ ಆಟ ಆಡಲು ಚಂದ್ರ ಚಂದ
ಜೂಟನ ನೆನೆದರೆ ಬರುವುದೆ ಕುಂದ
ಕೆಟ್ಟಪರಾಧ ಬರದು ನಿಮ್ಮಿಂದ
ದಾಟಿಸು ಪ್ರತಿಷ್ಠೆಯ ಎಣಿಸದೆ ||4||
ತಗುಮನ ಹಿಡಿಯೊ ನಿನ್ನಂಶ
ನಿನ್ನ ನೆನೆದವರ ಬೆನ್ನೊಳಿರುವೆ ಮಹೇಶ
ಮನಸಿನಭೀಷ್ಟವಿಟ್ಟು ಈಶ
ಘನ ಮೂರ್ತಿ ಅಪರಂಪಾರ ಪರುವತೇಶ ||5||

ನಂಬಿದೆನಲ್ಲಾ ನಾರೀಮಣಿ
ನಂಬಿದೆನಲ್ಲಾ ನಾ ನಾರಿಮಣಿಯ ತೊರೆ ಅಂಬುಜಾಕ್ಷಿ
ಎನ್ನ ಹಂಬಲ ಮರದಾನು ಹ್ಯಾಂಗ ಮಾಡಲೆಮ್ಮ ಅಂಬುಕಾಕ್ಷಿ ||ಪ||
ತಾಳಿ ಕಟ್ಟಿದಾತನವಳೆಂದು ನಾ| ಅಂಬುಜಾಕ್ಷಿ ನಾ ಹೇಳಲಿನ್ನಾರಿಗೆ
ಹೀಗಳಿಯೊಳ್ ಪಂಥ ಅಂಬುಜಾಕ್ಷಿ| ಆಳುವ ಪತಿ ಎನ್ನ
ಅಂಗದೊಳಗೆ ಬಾರಾ| ಅಂಬುಜಾಕ್ಷಿ ನಾ ತಾಳಲಾರೆನು
ಪ್ರಾಯ ತಾಪ ಹೆಚ್ಚಿತು ಕಾಣೆ| ಅಂಬುಜಾಕ್ಷಿ ||1||
ಬೇಕೆಂದು ಮೊದಲಾಗಿ ಸಿಕ್ಕಿದ್ದೆ ತನಗಾಗಿ ಅಂಬುಜಾಕ್ಷಿ
ಎನ್ನ ತೆಕ್ಕೆಯ ನಗಲೊದು ತೇಜವಲ್ಲವೆ ತನಗೆ ಅಂಬುಜಾಕ್ಷಿ
ನಿನ್ನ ವರವೀರನೆಂದೆಂಬ ವಸ್ತಾದಿ ಬರತಾನ ಅಂಬುಜಾಕ್ಷಿ
ಎರಗುವ ಎದುರಿದ್ದು ಏಳೆಂದು ಕೈವಿಡಿದು ಅಂಬುಜಾಕ್ಷಿ
ನಮ್ಮ ನಿರ್ಮಿತ ಪರುವಾಗ ನಿಜ ರೂಪ ತೋರಿದ ಅಂಬುಜಾಕ್ಷಿ ||2||

ನಿತ್ಯ ನಿರಂಜನ ನಿನಗೆ ನಾನೇನೆಂದೆನೊ
ನಿತ್ಯ ನಿರಂಜನ ನಿನಗೆ ನಾನೇನೆಂದೆನೊ
ನಿರುತ ತ್ರಿಜಗವರಕರ್ತನೆಂದೆ ||ಪ||
ತರವಲ್ಲಾ ಕುಂಟಣಿತನ ನಿನಗೆಂದೆ
ತಿರುವುತಾ ಹುಟ್ಟೀಲಿ ತಿವಸಿಕೊಂಡವನೆಂದೆ
ಮರಿಯಾದಿಲುಂಡ ಮಾದಿಗರೆಂದೆ
ಸೆರೆಗಾದ ಸೀರೆಯ ಶಿರಕೆ ಸುತ್ತಿದವನೆಂದೆ
ಎಳೆಗರುವ ಕಾಯ್ದವನೆಂದೆ
ಕೊಂದೊಬ್ಬರ ನೇತಿಯಾಗಿ ನಿಂತನೆಂದೆ
ಶಿಶುವಿನ ಕೊರೆದಿಟ್ಟರೆ ಉಂಡೆನೆಂದೆ
ಈ ಪರಿಪರಿಯ ನಿಮ್ಮ ಬಿರುದು ಸಾರುತಲಿದ್ದೆ ||1||
ವಾಣಿಯ ಪತಿಯ ತಲೆಯ ಡೋಗಿಯೊಳು ಉಂಡವನೆಂದೆ
ಬಾಣಾಸುರನ ಬಾಗಿಲ ಕಾಯ್ದವನೆಂದೆ
ಜಾಣೆ ದೊಂಬತಿಗೆ ಜಾತೊಡೆಯರ ಸುತನೆಂದೆ
ಜಾಣನಾ ಕೈ ಸುಟ್ಟವನೆಂದೆ
ಕಾಣುತ ಜಪಮಾಲೆ ಕಳದವನೆಂದೆ
ಹಿಕ್ಕಿಯೊಳಗಿದ್ದು ಕಾಣಿಸಿಕೊಂಡವನೆಂದೆ
ಪರಸತಿಯ ಕೈ ಬ್ಯಾಡೆಂದೆ ||2||
ಕೆಡವಿದ ಪ್ರಾರ್ಥನ ಕೆಳಗೆ ಬಿದ್ದವನೆಂದೆ
ಜಡಿಯನು ಬಿಟ್ಟು ಹೆಡಿಗೆ ಹೊತ್ತವನೆಂದೆ
ಪಡದವರಿಲ್ಲದೆ ಪರದೇಶಿಯಂದೆ
ಬಹು ಕೇಡು ಮುಪ್ಪಿನವನಂದೆ
ಕಲ್ಲಲಿ ಹೊಡೆಸಿಕೊಂಡವನೆಂದೆ
ನಂಬೆಣ್ಣಗೆ ಅಡಪ ಪೊತ್ತವನೆಂದೆ
ಈಗ ಹಿಡಿದವರ ಕಡೆ ಹಾಯಿಸುವ ಹಿತಕಾರಿಯೆಂದೆ ||3||
ಭಿಕ್ಷೆವೆಂದೆನಲು ಬಂದು ನೀಡಿದವನೆಂದೆ
ಆ ಕ್ಷಣದಲಿ ಆರು ಶಿರವ ಪಡದವನೆಂದೆ
ರಾಕ್ಷಸರಾಡುವ ರಥವ ಮುರಿದವನೆಂದೆ
ನಕ್ಷತ್ರ ನಾಮದ ಮುದ್ದಿರಿಯೆಂದೆ
ದಕ್ಷ ಸಂಹರನೆಂದೆ
ದೇಶವೆಂಬೊ ಕುಕ್ಷಿಕುಂಟಣಿ ಎಂದೆ
ಕನ್ನಯ್ಯಗೆ ಮೋಕ್ಷಯಿತ್ತವನೆಂದೆ
ಮೋಕ್ಷವಾಯಿತು ದೊಡ್ಡ ಋಷಿಗಳಿಗೆ ಇನ್ನೆಂದೆ ||4||
ಭಾವ ಮಾವಗೆ ಮೈಗೂಡಿದವನೆಂದೆ
ಸರ್ವಕಾಲಕೆ ನಿಮಗೆ ಸಾವಿಲ್ಲವೆಂದೆ
ಕೋವಿದ ನಿಮಗೊಂದು ಕುಲವಿಲ್ಲವೆಂದೆ
ಕಾಮನ ಕಣ್ಣಿಗೆ ನಿಲುಕದವನಂದೆ
ಈ ಹೂವಿಗೆ ದುಂಬಿ ಎಂದೆ
ಈ ಶರಣರ ಮುದ್ದಿನ ಶಿಶುವೆಂದೆ
ಈ ಪರ್ವನ ಭಾವಭರಿತನೆಂದೆ
ಎನ್ನ ದೇವರ ದೇವಾ ಪ್ರಭು ಶಿಖಾಮಣಿಯೆಂದೆ ||5||

ನೀತಿಯ ತಪ್ಪಿ ಅನೀತಿ ನಡೆದವನು
ನೀತಿಯ ತಪ್ಪಿ ಅನೀತಿಯ ನಡೆದವನು ನೀಚ ಹೊಲೆಯ
ಪಂಚ ಪಾತಕವನು ಮಾಡಿ ಪಾತಕಿ ಈಡಾದವನು ನೀಚ ಹೊಲೆಯ ||ಪ||
ಸತ್ಯವ ಕೆಡಸಿ ಅಸತ್ಯವ ನಡೆಸುವ ನೀಚ ಹೊಲೆಯ
ಮತ್ತೆ ಈಡಾದಂತಹವರ ಹರಣಕ್ಕೆ ಮುನಿವನು ನೀಚ ಹೊಲೆಯ
ಕುಟಿಲವು ಉತ್ತಮರೊಳು ಉಗುಳಿಸಕೊಂಬುವ ನೀಚ ಹೊಲೆಯ ||1||
ಉಪಕಾರ ಮಾಡಿದರೆ ಅಪಕಾರ ಮಾಡುವವನು ನೀಚ ಹೊಲೆಯ
ವಿಪರೀತ ಪರಹೆಣ್ಣಿಗೆ ಕಣ್ಣಿಟ್ಟ ಪಾತಕ ನೀಚ ಹೊಲೆಯ
ಜಪತಪ ಪೂಜೆಯ ಮಂತ್ರ ಜರಿವಾತನು ಅತ್ಯಂತ ನೀಚ ಹೊಲೆಯ
ಉಪದೇಶ ತೋರಿದ ಗುರುವಾಜ್ಞೆ ಮೀರಿದಾ ನೀಚ ಹೊಲೆಯ ||2||
ಬಾಲ ಬ್ರಹ್ಮಾಚಾರಿಯ ವ್ರತಗೆಡಿಸೆ ಹೋಪ ನೀಚ ಹೊಲೆಯ
ತನ್ನ ನಾಲಗೆಯಲ್ಲಿ ತಪ್ಪ ನುಡಿದು ಹೋಗುವ ನೀಚ ಹೊಲೆಯ
ಸಾಲವ ಇಸಕೊಂಡು ಸತ್ಯವಾಗಿ ಕೊಡನೆಂಬ ನೀಚ ಹೊಲೆಯ
ಅಕುಲತನ ನಡೆಸುವ ಕೂಡಿ ತಾ ಸಲಿಸುವ ನೀಚ ಹೊಲೆಯ ||3||
ವಾದಿ ಒರಟು ಕುಲವ ಬೆರೆವನಲ್ಲಾ ನೀಚ ಹೊಲೆಯ
ಗುರುಪಾದಕೆ ತೊಟ್ಟ ಪಾಪಾತ್ಮರೊಳು ನೆಂಟಾ ನೀಚ ಹೊಲೆಯ
ವೇದವ ನಿಂದಿಸುವ ಯತಿಗಳಿಗೆ ಕುಂದಿಸುವ ನೀಚ ಹೊಲೆಯ
ಸತ್ಯಸಾಧಕರೊಳಗೆ ಮದ ಸಟೆಮಾತು ಮಾತನಾಡುವ ನೀಚ ಹೊಲೆಯ ||4||
ಚಾಡಿ ಶೂನ್ಯಗಳಿಂದ ಶಬ್ದಗಳ ಕೊಂದನು ನೀಚ ಹೊಲೆಯ
ಬಡದಾಟಕೆ ಹೇಸ ಬಾಜಿಗಾರಿಕೆ ವೇಷ ನೀಚ ಹೊಲೆಯ
ಚಾಡಿಯ ಮಾಡುವ ಛೀ ಛೀ ಎಂದರೆ ಕೇಳದಾ ನೀಚ ಹೊಲೆಯ
ಪೊಡವಿಗೆ ಬಲು ಭಾರ ಪರ್ವನೊಳಗೆ ಪರಮ ನೀಚ ಹೊಲೆಯ ||5||

ನಿನ್ನ ಮಹಿಮೆ ನಿಲುಕದೆನಗೆ
ನಿನ್ನ ಮಹಿಮೆ ನಿಲುಕದೆನಗೆ ಗುರುರಾಯ
ಪ್ರಸನ್ನನಾಗಿ ಸಲಹಯ್ಯ ಸ್ವಾಮಿ ಗುರುರಾಯ ||ಪ||
ಶರಧಿ ಎಂಬ ಸಂಸಾರಕ್ಕೆ ಗುರುರಾಯ
ಕೆರೆಗಳೆಂಬೊ ಬಿರಿಯು ದಿನವು ಗುರುರಾಯ
ಎರಗುದಪ್ಪಿಸಯ್ಯ ಗುರುರಾಯ
ಧರಿಸು ಹರಕೆಯ ಸೋತೆನಯ್ಯ ಗುರುರಾಯ ||1||
ಎಡಬಲ ನೋಡಗೊಡದು ಗುರುರಾಯ
ಸಿಡಲಿ ಮಿಂಚು ಗರ್ಜನೆಗಂಜಿ ಗುರುರಾಯ
ಮಡದಿ ಮಕ್ಕಳೆಂಬೊ ಬಲೆಯು ಗುರುರಾಯ
ಬಡತನೆಂಬೊ ಸುಳಿಯ ಒಳಗಾದೆ ಗುರುರಾಯ ||2||
ಮುಳುಮುಳುಗಿ ಏಳಲಾರೆ ಗುರುರಾಯ
ಸುತ್ತ ಅಣಕವಾಡುವರ ಕಂಡು ಗುರುರಾಯ
ಹೆಣಗಿ ಹಣ್ಣಾಗಿ ಈಸಲಾರೆ ಗುರುರಾಯ
ಬಹಳ ದಣಿದೆನಯ್ಯ ದಣಿವಿಲ್ಲವೇನೋ ಗುರುರಾಯ ||3||
ಅಂತರಂಗದ ಹರಗೋಲು ಗುರುರಾಯ
ತಂತ್ರವೆಂಬೊ ಹುಟ್ಟು ಅದಕ್ಕೆ ಗುರುರಾಯ
ಪಂಥವಾಗಿ ಪಾಶ ಹಿಡಿಯೊ ಗುರುರಾಯ
ಹಂತಕಾರಿ ಜಗದ ಹೊಳೆಯ ಹಾಯಿಸೋ ಗುರುರಾಯ ||4||
ಚದುರ ಛಪ್ಪನ್ನ ದೇಶಕೆ ನೀ ಗುರುರಾಯ
ಮಧುರವೆಂಬೊ ಮನವ ಸೋಸೊ ಗುರುರಾಯ
ಬೆದರಿದವರ ಬೆನ್ನಕಾಯೊ ಗುರುರಾಯ
ಸದರ ಪರುವಗಿತ್ತು ಗುರುರಾಯ ||5||

ನೀನ್ಯಾರೊ ನಿನ್ನ ದೇಹವಿನ್ಯಾರೊ
ನೀನ್ಯಾರೊ ನಿನ್ನ ದೇಹವಿನ್ಯಾರೊ
ನಾನಾ ಪರಿಯಲಿ ಶಿವ ನೆನಿ ಕಂಡ್ಯಾ ಮನವೆ ||ಪ||
ಅಳಿಯ ಬೀಗನು ಯಾರೊ
ಗೆಳೆಯ ಬಾಂಧವನು ಯಾರೊ
ಕಳೆಯುಳ್ಳ ಜೀವವು ಕದಲಿ ಹೋಗುವಾಗ
ತಳಿಗೆ ಚಂಬು ಸೆಳೆ ಮಂಚ ತಾನ್ಯಾರೊ ||1||
ಮಡದಿ ಮಕ್ಕಳು ಯಾರೊ
ಒಡವೆ ಬಂಗಾರವೇಕೊ
ಹಿಡಿದು ಯಮನವರು ಬಂದು ಎಳಕೊಂಡು ಒಯ್ವಾಗ
ನಡೆವ ಸಂಗತಿಯಲಿ ನುಗ್ಗಾದ ಮನವೆ ||2||
ಹೆರವಿನ ಒಡವೆಗೆ ಯಾಕೆ ಬಂದೆಲೆ ಪ್ರಾಣಿ
ಮಾನವರ ಕಾಲಲಿಲ್ಲಾ ಮತ್ರ್ಯದೊಳಗೆ ಬಂದು
ಪರ್ವ ಹೇಳಿದ ಮಾತು
ಪಂಚಾಯ್ತಿಯವರು ಕೇಳಿ ||3||

ನೀನಾರೊ ನಿನ್ನ ದೇಹವಾರೊ
ನೀನಾರೊ ನಿನ್ನ ದೇಹವಾರೊ ನಾನಾ ಪರಿಯಲಿ
ಶಿವನ ನೆನೆ ಕಂಡ್ಯಾ ಮನುಜಾ ||ಪ||
ಮಡದಿ ಮಕ್ಕಳು ಯಾರೋ ಒಡವೆ ಬಂಗಾರ ಯಾರೊ
ಪಡೆದ ತಂದೆ ತಾಯಿ ಒಡಹುಟ್ಟಿದವರ್ಯಾರೊ
ಕಡೆಯ ಕಾಲಕೆ ಯಮನು ಎಳೆದು ಒಯ್ವಾಗ
ನಡೆವಾಗ ಸಂಗಡಕೆ ಯಾರಿಲ್ಲೊ ನುಗ್ಗಾದಿ ಮನುಜಾ ||1||
ಗೆಳೆಯ ಬಂಧು ನೆಂಟ ಅಳಿಯ ಬೀಗನು ಯಾರೊ
ಬಳಗ ಭಾಗ್ಯ ಬದುಕು ಭಾವ ಮೈದುನನು ಯಾರೊ
ಒಳ ಪ್ರಾಣನಾಥ ಹೊರ ಹೊಂಟು ಹೋಗುವಾಗ
ತಳಿಗೆ ತಂಬಿಗೆ ಮೂರ್ತಿ ಸೆಳೆ ಮಂಚ ಯಾರೊ ||2||
ಎರವಿನ ಬದುಕಿಗೆ ಏನು ಬಂದೆಲೊ ಪ್ರಾಣಿ
ಮರುಳಾಗಿ ಮಲಹರನ ಮರೆಯದಿರು ಜಾಣಿ
ಪರುವನ ನುಡಿಕೇಳಿ ಪಂಚ ಐವರು ಕೂಡಿ
ಪರಶಿವನೆ ನೆರೆ ನಂಬಿ ಘನ ಪದವಿ ನಿಮಗುಂಟು ||3||

ನೀರು ಕಟೆದರೆ
ನೀರು ಕಟೆದರೆ ಬೆಣ್ಣೆ ನಿಜವಾಹುದೆ
ಕ್ಷೀರದೊಳು ಪರಿಪರಿ ಪಂಚ ವರ್ಣಗಳುಂಟು ||ಪ||
ಅನ್ನ ಉಂಡರೆ ಹತ್ತದಲಿ ಹರುಷವಾಗೋದು
ಹೊನ್ನು ಹಸಿದುಂಡರೆ ಹೊಟ್ಟೆ ತುಂಬುವುದುಂಟೆ ||1||
ತರಣಿ ಬಂದರೆ ಪ್ರಭೆ ತಿಳಿವದು ಜಗಕೆಲ್ಲ
ತಾರೆ ಮೂಡಿದರೆಷ್ಟು ತಮವು ಓಡುವುದೆ ||2||
ಹನುಮ ಶರಧಿಯ ಹಾರಿ ಹಚ್ಚಿ ಸುಟ್ಟನು ಲಂಕೆ
ಬಿನುಗು ಕಪಿಗಳೆಲ್ಲ ಬಿಡಿಸುವರೆ ಸೀತೆಯನು ||3||
ಸ್ವಾತಿ ಮಳೆಗೆ ಶಿಂಪು ಬಾಯಿ ತೆರೆದಂತೆ
ಆ ತೆರದಲ್ಲಿ ಶಿವನ ಚರಿಸಿ ನಂಬಲಿ ಬೇಕು ||4||
ನಗರಕೆ ಬಂದೆ ವರವ ನಡೆಸೋ ಜಗದೀಶ್ವರನೆ
ಯುಗ ಹೊಂದಿದೆನಯ್ಯ ವಿಮಲ ಮತಿಗಳ ಬೇಡಿ ||5||

ನೆರೆ ನಂಬಿಕೊಂಡಿದ್ದೆ
ನೆರೆ ನಂಬಿಕೊಂಡಿದ್ದೆ ನಿನ್ನ ನೇಮಗಾರ ದೇವ ಎನ್ನ
ಕಿರುಕುಳ ಉಪದ್ರವ ಪರಿಹರಿಸು ಕೀರ್ತಿಯೊಳಿರಿಸು ||ಪ||
ಮನದ ಮೈಲಿಗೆಯನ್ನು ಕಳೆದು ಜ್ಞಾನವ ಎನ್ನೊಳು ಬೆರೆದು
ಅನುಮಾನವಿಲ್ಲದೆ ಮಾತಾಡು ಅಂಗಕ್ಕೆ ಕೊಡು
ಚಿನ್ಮಯ ಶ್ರೀ ಗಿರಿಮಲ್ಲಾ ಚಿಕ್ಕಂದಿಲಿ ನೀ ಕೊಟ್ಟಸೊಲ್ಲ
ವನಜೂಟ ಲಿಂಗ ನಡೆಸಯ್ಯ ಒಲಿದೊಮ್ಮೆ ಅಯ್ಯ ||1||
ಮಿಂಚುವ ನಯನಕ್ಕೆ ಮೀರಿ ಮಿಂಚುವಂಥ ಮುಖವ ತೋರಿ
ಪಂಚ ಪುರುಷವಾದಂಥ ಮೂರ್ತಿ ಪಾಲಿಸಿಂದು ಅರ್ತಿಲಿ
ಹೆತ್ತು ಹೊತ್ತು ಎನ್ನ ಹೆರೆ ಹಿಂಗಬಹುದೆ
ಮೋಹನ ಮಂಚವೆನ್ನೆದೆ ಏರೋ ಮಧುರ ಬೀರೊ ||2||
ಸಕ್ಕರಿ ಚಿನಿಪಾಲು ಜೇನು ಸರಿಹೋದಂಥ ನಾಮವನು
ಇಕ್ಕಿ ಎನ್ನಯ ಪ್ರಿಯಾ ಸಲಿಸಿಂದು ಎರಗುವೆ
ಇಕ್ಕಿ ದಯಾಸಾಗರದೊಳು ಇಕ್ಕಿ ನಗರ ಪರವಗೆ
ಮುಕ್ಕಣ್ಣ ಪ್ರಭುರಾಯ ನೀನೊಲಿದು ಮುಕ್ತಿಗೆ ಬೆರೆದು ||3||

ನೋಡುವ ಬನ್ನಿರಿ
ನೋಡುವ ಬನ್ನಿರಿ ಜನರು ಈ ನಮ್ಮ ಕಾಳಬೆಳಗುಂದಿ ವೀರನನ್ನು ||ಪ||
ಮಲ್ಲಗಾಸೆ ಮಡಕೆಸರ ಜಂಗು ಬಾಯಲಿ ಬೊಬ್ಬೆ
ಝಲ್ಲ ಚಕ್ರ ದರ್ಪಣ ಚೂರಿ
ಬಿಲ್ಲುಬಾಣ ಬಿಚ್ಚುಗತ್ತಿ
ಬಿಡದೆ ವರವ ನಡೆಸುವನೆಂದು ಮತ್ತೆರಡು ಆಯುಧ ಮುಂಗೈಲಿ ||1||
ಹಲಗೆ ಕೋ ಎಂದು ಕೋಲ್ಗಳ ಪಿಡಿದಿಹನು
ಕೇವಲ ಪರಶಿವನ ಮೂರ್ತಿಯು
ಕೆಂಗಣ್ಣಿನಿಂದ ಜನಿಸಿದ ಧೀರನಿವನೆಂದು
ದಿಟ್ಟ ವೀರಭದ್ರ ಜನಿಸಿದ ದಕ್ಷನ ಶಿರವ ಕುಟ್ಟಿ ಬಿಟ್ಟ ||2||
ಕುದಿಯುವ ಹೋಮ ಮೆಟ್ಟಿ ಅಗ್ನಿ ಜಿಹ್ವೆಯ ಸೀಳಿದ
ಶ್ರೇಷ್ಠರಾಗಿ ಮೆರೆದವರ ಗಂಡ ನಾನೆಂದು
ತನ್ನ ನಂಬಿ ನೆನೆಯುವ ಭಕ್ತರ
ತಂತ್ರದಿಂದ ಬಿಡದೆ ಬೆನ್ನ ಕಾಯುತ್ತಿಹನು ||3||
ಹೊನ್ನು ಗಂಟೆಯು ಹುಲಿಚರ್ಮ ಹುತ್ತಿನೊಳು ಬೆರೆದ ಮಹಿಮ ನೀನೆಂದು
ತ್ರಿನೇತ್ರನೆಂದೆನಿಸಿದ ಬನದಯ್ಯ ತಾನು
ಒಣ ಮರವ ಚಿಗಿಸಿದ ಆನಂದದಿ
ಎಣಿಕಿಲ್ಲದಾ ವರವು ಹರುಷದಿ ಮನ ಪರುವಗೆ ನಡೆಸುವನೆಂದು ||4||

ನೋಡೆನ್ನ ಗುರುವೆ ಕಣ್ದೆರೆದು
ನೋಡೆನ್ನ ಗುರುವೇ ಕಣ್ದೆರೆದು
ಎನ್ನ ಕಾಡುವ ರೋಗವ ಬಿಡಿಸು ಮೈ ಬೆರೆದು ||ಪ||
ಕಾಯವ ನಿರಾಳ ನಿಜ ಮಾಡೋ
ಚಿನ್ಮಯ ಚಿದ್ರೂಪ ಎನ್ನೊಳು ಒಡಗೂಡೋ
ಬಾಯಿಂದ ಬೆಸನಯೀಡ್ಯಾಡೋ
ಪ್ರಭುರಾಯ ಪವಾಡ ಪಾರಂಪಾರು ಮಾಡೋ ||1||
ಸಂಜೀವಿನಿ ಸರ್ವಾಂಗಕಿಟ್ಟು
ನಿರಂಜನನೇ ಹಲವು ರೋಗವ ಕಡಿದಿಟ್ಟು
ಅಂಜಿಕೆ ಬಿಡಿಸಿ ಅಭಯ ಕೊಟ್ಟು
ಧನಂಜಯ ನೇತ್ರಕ್ಕೆ ಆಹುತಿ ಕೊಟ್ಟು ||2||
ನಿಂದಕರ ನಿರ್ಧೂಮಾಧಾಮ
ಮಾಡಿ ಹಿಂದಿಟ್ಟುಕೊಂಡೆನ್ನವರ ನಿಸ್ಸೀಮ
ತಂದೆ ಅಸಂಖ್ಯಾತ ಮಹಿಮೆ
ಭರದಿಂದೆ ಕೊಡುವ ಅಪರಂಪಾರು ಅಲ್ಲಮ ||3||
ವರವೆಂಬೋ ಕ್ಷೀರಾಬ್ದಿ ಕೊಟ್ಟು
ನೀ ಸ್ಥಿರವೆಂಬೋ ಹರಗೋಲನ್ನ ಇಟ್ಟು
ಪರಿ ಪರಿ ದೃಷ್ಟವೆ ಉಟ್ಟು
ಹಾಕು ನರಾಸುರಾ ದೇವರ್ಕಳಾಶ್ಚರ್ಯ ಬಿಟ್ಟು ||4||
ಅಂಬಿಗ ನಡೆಸು ಅನುವಿಂದ
ಪೈಗಂಬರಕೊಪ್ಪುವ ಪಾರು ಮಾಡೋ ಚಂದಾ
ಕುಂಭಿನಿವರ ಕೃಪೆಯಿಂದಾ
ನಿನ್ನ ನಂಬಿದ ಪರ್ವನ ಮನದಾನಂದ ||5||

ಪಾಲಿಸಯ್ಯ ತಂದೆ ಪ್ರಭು
ಪಾಲಿಸಯ್ಯ ತಂದೆ ಪ್ರಭು ನಿನ್ನ
ಪಾಲಿಗೆ ಹೊಂದಿ ನಾ ಬಂದೆ ||ಪ||
ತಂದೆ ತಾಯಿಯು ನೀನೆ ಎನ್ನ
ಬಂಧು ಬಳಗವು ನೀನೆ
ಬಂದಂಥ ಅನ್ಯಾಯ ಬಯಲು ಮಾಡು
ಮಂದರ ಕೋದಂಡ ಮಲೆತ ದುಷ್ಟರ ಗಂಡ ||1||
ಅನ್ಯಾಯ ಅಪರಾಧವ ಅತಿಗಳೆದು
ಎನ್ನ ನೀ ಸಲಹಯ್ಯ ಸ್ವಾಮಿ
ಗನ್ನಘಾತಕ ಜನರ ಗರ್ವ ಮುರಿದು
ಪ್ರಸನ್ನನಾಗೋ ಸ್ವಾಮಿ ಸರ್ವ ಭಕ್ತರ ಪ್ರೇಮಿ ||2||
ಒಡೆಯ ನೀನೊಲಿದು ಬಂದು
ಕಡಲೇಳು ಸಿಂಧು ವರವಿಯೊಳು
ಆಡಲು ಆ ಸಂಗವೆ ಲೇಸು
ನಡೆ ನುಡಿಗಳ ಕರ್ತ ನಗರ ಪರವನ ಬೆರೆತ ||3||

ಬಂದದ್ದು ಬಯಲು ಮಾಡೋ
ಏನು ಕೆಟ್ಟೆಲೋ ನೀಚ ಯತಿಗಳಿಗೆ ಕುಹಕವಾಡಿ
ಮೀನು ಗಾಣಕ್ಕೆ ಬಿದ್ದಂತೆ ಮಿಡುಕು ಅದರಂತೆ ||ಪ||
ಕಟುಕನ ಸಲವಿ ಪಾದರಕ್ಷಲಿ ಮರ್ದನ ಮಾಡಿ
ಕುಟ್ಟಿ ಕೂಡಿಸಿರಿ ಕುಲದಿಂದ ಹೊರಗೆ ||1||
ಅನ್ನ ಉಂಬುವವರಿಗೆ ಅನ್ಯಾಯ ಮಾಡಿದೊ ಹೊಲೆಯ
ತೊನ್ನು ಬಸಿಯಲಿ ನಿನ್ನಂಗ ತೊಲಗಲ ಮಾನಭಂಗ ||2||
ಶೂನ್ಯ ಮಾಡಿದವರಿಗೆ ಸರ್ವ ಶೂನ್ಯ ನಿಮಗಾಗಲಿ
ಆನೆ ನುಂಗಿತು ಬೆಳವಿನ ಕಾಯಗೊ ಶ್ವಾನಾ ||3||
ಅಡವಿ ಹೊಕ್ಕರೆ ಬಿಡದು ಅರ್ಧ ಆಯುಷ್ಯ ನಿಮಗಾಗಲಿ
ಬಿಡದೆ ನೆಲಕೆಟ್ಟು ಒರೆಸಲಿ ಬೆಂಕಿ ಬೆರಸಲಿ ||4||
ಬಂದದ್ದು ಬಯಲು ಮಾಡೋ ತಂದೆ ಅಲ್ಲಮಾ ಪ್ರಭೋ
ಕಂದ ಪರ್ವಗೆ ಹೊಂದೀದಿ ತನುವಿಗೆ ಬಂದೀದಿ ||5||

ಬರಹೇಳಮ್ಮ ಭ್ರಮರ ಕುಂತಳೆ
ಬರಹೇಳಮ್ಮ ಭ್ರಮರ ಕುಂತಳೆ ಭಾವಜ ಹರನ
ಆರ್ತಿಯಿಂದ ನೋಡುವರಿಗೆ ಅಮೃತ ಸವಿ ಎರಗಿದೆ ನಾ ||ಪ||
ಸಖಿ ಚಲ್ವೆ ಸ್ವರದ ಕೋಗಿಲೆ ಸರಳ ನಡಿಯೆ
ಸುಖ ಪ್ರಾಣನಾಥನ ಗಲಿದ ಸುಟ್ಟ ಸುಣ್ಣದ ಹರಳಾದೆ
ರತ್ನದ ಬೊಂಬೆ ಈಗಳಂಗಗೊಳುತಿರೆ ಈ ಕ್ಷಣ ತಂದು ತೋರೆ
ಮುಖವೈದಾತನ ಸಕಲಾಂತರಂಗನ ಸಜ್ಜನ ಲಿಂಗನ
ಭಾಳಾಕ್ಷ ಶ್ರೀ ವಿರೂಪಾಕ್ಷನ ||1||
ಹರಿಣಾಕ್ಷಿ ಏಳೆ ಹಂಸಗಾಮಿನಿ
ಹಲವಂಗದ ಚದುರೆ ನಾ ಕರಗಿ ಕುಂದೆ ನೊಂದೆ
ಕರುಣವಿಲ್ಲ ಮುಂದೆ ಪರಿಯಂದು ಬುದ್ಧಿಪಾಲಿಸೆ ಪದ್ಮಜಾತೆ
ಬಿರಿ ಬೊಟ್ಟು ಮಗ್ಗಿಮಾಲಿಯ ಬಿನ್ನವಿಸಿ ತಾ ಸವಿದ ಹಗಲೆ
ಕರಿ ಚರ್ಮನ ಕಾಶಿಯ ನಾಥನ ಪುರಮೂರು ಸುಟ್ಟನ ಶ್ರೀಪತಿ ಮಿತ್ರನ ||2||
ನಡುಸಗಣ್ಣ ನಗು ಮುಖದವಳೆ
ನಂಬಿದ್ದೆ ನಾ ಬಿಡದ ರಾಹು ನುಂಗಿ ಬಿಟ್ಟು ಚಂದ್ರಮನಾದೆ ನಾ
ಹೊಡೆದು ಮುಂದೆ ಕದನ ತೊರೆದು ಬಿಡಿದಪ್ಪಿಕೊಂಡ
ಹಿಡಿ ಮುತ್ತಿನ ಹಾರವೆಂದು ಹಾಕಿದ ಪರವಗ ಬಂದು
ಷಡುಮುಖದವನ ಸಖನ ನದಿ ಪಾಲನ
ಹೊಡೆದ ಜಿತೇಂದ್ರ ಹೊತ್ತಿಳೆ ಚಂದ್ರನ
ಒಡಿದಲೆ ಬಸವನ ಜಾಹ್ನವಿ ವಾಸನ
ಪಡೆದ ಶ್ರೀವೀರನ ಪಂಪಾಪತಿ ಧೀರನ ||3||

ಬರೆದ ಬರೆಹ ತಪ್ಪದಯ್ಯ
ಬರೆದ ಬರೆಹ ತಪ್ಪದಯ್ಯ ಬಾಳಿರುವ ತನಕ
ಬರಿದು ಚಿಂತೆಯ ಮಾಡಿ ಬಳಲದಿರು ಮನವೆ ||ಪ||
ಉಮಾಪತಿ ಗರಳಕೆ ಉರಗನ ವಿಷ ಬಿಡದು
ಕಮ್ಮಗೋಲನ ಹರನು ಉರಿಗಣ್ಣಿಂದ ಉರಿದ
ಬ್ರಹ್ಮನು ಶಿರವ ಕಳಕೊಂಡು ಭಾಗೀರಥಿ ನುಂಗಿದಳು
ನಮ್ಮ ಪಾಡೇನು ನರಗುರಿಗಳು ||1||
ಸೀತೆಯನು ಸೆರೆಯೊಯ್ದು ಶ್ರೀರಾಮ ವನವಾಸ
ಆತನ ತಮ್ಮ ಲಕ್ಷ್ಮಣ ಅನ್ನವಿಲ್ಲದುಪವಾಸ
ರಾತ್ರಿ ಪತಿ ನಡುಗಟ್ಟು ರವಿ ರಥದೊಳು ಮೊಂಡ
ಸಾತ್ವಿಕ ಬಸವಣ್ಣ ಸರ್ವರ ಕೂಲಿಯಾಳಾದ ||2||
ಹನುಮಂಗೆ ಚಪ್ಪೆಂದು ಹಸ್ತಿಮುಖ ಗಣಪಂಗೆ
ಮನಗುಂದಿ ಸುರಪತಿಗೆ ಮೈಯೆಲ್ಲ ಯೋನಿ
ಬಿನಗು ರಾವಣನ ಬಿಡಿಸಿದರು ದಶಶಿರವ
ಅನುಜರೈವರು ಆಳಿನಾಳಾದರೋ ||3||
ಹರಿಶ್ಚಂದ್ರ ಹರಿಗೆಟ್ಟು ಹೊಲೆಸೇವೆ ಮಾಡಿದ
ಪರೀಕ್ಷಿತ ರಾಯ ಮಂದಸ್ಥಾನ ಮರೆಗೊಂಡನೊ
ವರ ಶೂದ್ರಕನ ತಲೆ ಕಂಚಾಲ ಮರಕೆ ಕಟ್ಟಿಸಿತು
ಬಿರುದುಳ್ಳ ಕೀಚಕನ ಭೀಮ ಸೀಳಿದನು ||4||
ಕಂಡ ದೇವರಿಗೆರಗಿ ಕಾಮಿಸದಿರು ಮನವೆ
ಮಂಡೆ ಪಣೆಯೊಳೋದಿ ಮರಳಿ ತಿದ್ದುವರಿಲ್ಲ
ಕಂಡಿಲ್ಲ ಶಿವನಾಟ ಕಡೆಗ್ಹಾಯಿಸೋ ಲಲಾಟ
ಕೆಂಡಗಣ್ಣಿನ ವೀರ ಕೇಳೋ ಪರುವನ ನುಡಿಯ ||5||

ಭಾಷಾಹೀನರ ಸಂಗವನೊಲ್ಲೆ
ಏಸೇಸು ಪರಿಯಲ್ಲಿ ದುಸ್ತರ ಕೊಟ್ಟೆ ಭಾಷೆ ಹೀನರ ಸಂಗವನೊಲ್ಲೆ ಗುರುವೆ ||ಪ||
ಸತ್ಯರ ದೇಹವು ಸಕ್ಕರಿ ಚಿನಿವಾಲ ನಿತ್ಯನೆ ಜೇನು ತುಪ್ಪದ ಬೀಗನೆ
ತುತ್ತು ಮಾಡಿವುಂಡು ತೃಪ್ತನಾದೇನು ಕರ್ತು ಅಲ್ಲಮಪ್ರಭು ಕರುಣಿಸು ಎನಗೆ ||1||
ಧರ್ಮರು ಹೋಗುವ ದಾರಿಯಲಿ ಇದು ಎನ್ನ ಕರ್ಮ ಕಂಟಕ ಏನು ಕಳೆವೆನೆಂದು
ಭ್ರಮೆಯಿಂದ ಬಾಳ್ವರ ಭ್ರಮೆಯಲ್ಲಿ ಇಡದೆ ಪರಬ್ರಹ್ಮ ಪಾಲಿಸು ಎನ್ನನು ||2||
ನೀತಿಯಲಿ ನಡಿಯುವರು ನಿರ್ಮಳದಲ್ಲಿ ಪರಂಜ್ಯೋತಿಗೆ ಜೋಡೆನಿಸುವರು
ಮಾತಲಿ ನೆನೆದು ನಾ ಮನ ಮುಟ್ಟ ಮಾಡಿದ ಪಾತಕವನು ಪರಹರಿಸು ಗುರುವೆ ||3||
ಪರಧನ ಪರಸತಿ ಪಾಪಕ್ಕೆ ಸಿಲುಕದೆ ಪರಹಿತ ಮಾಡಿ ಪ್ರಳಯವ ಗೆದ್ದರು
ಪರಿಪರಿಯ ಪ್ರಾರ್ಥನೆ ಮಾಡಿ ಪರಸತ್ಯ ಲೋಕವನು ಪಡೆದರು ಗುರುವೆ ||4||
ಹರಕೆಯ ಕೊಡು ನೆರೆ ನಂಬಿದವರಿಗೆ ಸ್ಥಿರ ಪಟ್ಟವಾಗಿ ಬಾಳಲಿಯೆಂದು
ಪರಿಣಾಮ ಪರಿಪರ್ವತೇಶಮನು ತುಂಬಿದ ಶರಧಿಯು ಬಂದಂತೆ ಸ್ಥಿರವಾದ ||5||

ಮತಿಯ ಪಾಲಿಸೊ
ಮತಿಯ ಪಾಲಿಸೊ ಎನಗೆ ಶ್ರೀ ಗಣರಾಯ
ಹಿತ ಮಾಡಿ ಉಣಿಸುವೆನೋ
ಶ್ರುತಿವೇದ ಶಾಸ್ತ್ರ ಪುರಾಣಾಗಮ ಪುಣ್ಯ
ಕಥೆ ಕಾವ್ಯಗಳ ಬರೆದೋದಿ ಹೇಳುವಂಥ ||ಪ||
ಚಿಗಳಿ ಚಿನಿಪಾಲು ಭಕ್ಷ್ಯ
ಈ ಚೀಟಿ ಬ್ಯಾಳಿ ಅಗಲಾದ ಹರಿವಾಣದಿ
ಮಗಿಮಾವು ರಸದಾಳಿ ಅಂಜುರಿ ದ್ರಾಕ್ಷಿಯು
ಉಗುರೊತ್ತು ಬಟವಿ ಉಂಡಲಗಿಯು ನೊರೆಹಾಲು ||1||
ಹಣ್ಣು ಹಪ್ಪಳ ಸಂಡಿಗಿ
ಸಣ್ಣ ಶಾವಿಗಿ ಈ ಹಸನಾದ ಬಿಸುರಿ
ಎಣ್ಣೆಹೋಳಿಗಿ ಗೌಲಿ ಎಸೆವ ಗಾರಿಗಿ ಗಿಣ್ಣ
ಉಣ್ಣೊ ಪಾಯಸ ಪರಡಿ ಉದುರ ಸಕ್ಕರಿ ತುಪ್ಪ ||2||
ರಜಾನ್ನ ಕೆನಿಮೊಸರು
ರುಚಿ ಗಾರಗೆ ಭೋಜನ ಕೆಸವಿ ಮಜ್ಜಗಿ
ಹೂಜಿಯ ನೀರ ಕೈಬಾಯಿ ತೊಳೆದು
ಸಹಜನಾಗಿ ಬಂದು ಸತಿ ಮಂಚದೊಳು ಕುಳಿತು ||3||
ಗಂಥ ಕಸ್ತೂರಿ ಪುನಗು ಗೌರಮ್ಮನ
ಕಂದಗ ಧರಿಸುವೆನು
ಅಂದದ ಬಿಳಿ ಎಲಿ ಅಡಿಕೆ ಕಾಂಚು ಸುಣ್ಣ
ಮುಂದೆ ಮಡಚಿ ಕೊಡುವೆ ಮಲ್ಲಿಗಿ ಮಳೆಗರೆವೆ ||4||
ನರಾಸುರ ದೇವರ್ಕಳು ನಿಮ್ಮಡಿಯ
ಧರೆ ಮೂರು ಪೂಜಿಪರು
ಪರಿಪರಿ ಕುಸುಮದ ಪರಿಮಳ ಧರಿಸುವೆ
ಪರಿವಾರದ ಪಾಲಿಸು ಪಾರ್ವತಿ ವರಪುತ್ರ ||5||

ಮನದ ಚಿಂತೆಯ ಮಾಣಿಸಯ್ಯ
ಮನದ ಚಿಂತೆಯ ಮಾಣಿಸಯ್ಯ ಎನ್ನ
ಅನುಮಾನ ಪರಿಹರಿಸೋ ಅಲ್ಲಮರಾಯ ||ಪ||
ಮೊರೆ ಹೊಕ್ಕವರ ಕಾಯ್ವ ಬಿರುದು
ಭರದಿಂದ ಮಾಡಯ್ಯ ಬ್ರಹ್ಮಾಂಡ ಕಟ್ಟಿರಿದು
ಪರವಾದಿಗಳ ಹಲ್ಲ ಮುರಿದು ಎನ್ನ
ಕರ ಹಿಡಿದಾಡಿಸೊ ಖಾಸಾ ನೀ ಬೆರೆದು ||1||
ಯಜಮಾನ ನೀನೆಂದು ಬಂದೆ
ಪ್ರಜಾ ಪ್ರಮಥರೊಳು ಪೂಜೆದೋರು ಮುಂದೆ
ನಿಜವಾಗಿ ಪ್ರತಿಪಾಲಿಪನೆಂದೆ ಎನ್ನ
ಸುಜನ ಸುಜ್ಞಾನಕ್ಕೆ ಸುಳಿ ಪ್ರಭು ತಂದೆ ||2||
ಅಪರಾಧ ಕ್ಷಮೆ ಮಾಡೋ ಎನ್ನ
ಕೃಪೆಯೊಳಗೆ ಇಡು ಕಸರಿಲ್ಲದೆನ್ನ
ವಿಪರೀತ ವಿಮಲ ಪ್ರಸನ್ನ
ಅಪರಾಂಪರ ಪೂಜಪೆ ಅರ್ತಿ ಮೋಹನ ||3||
ಎಂಭತ್ನಾಲ್ಕು ಲಕ್ಷ ಸಂತೆ ಮಾಡಿ
ಕೊಂಬುತ್ತ ಬರಲಾಗ ಕೋಟಿ ನರಕ
ಅಂಬು ತಾಗಿದ ಮೃಗದಂತೆ ಮನ
ಸ್ತಂಭನ ಕಿತ್ತಯ್ಯ ತನುವಿನ ಚಿಂತೆ ||4||
ಕುಂದು ಕೊರತೆ ಬರಲಿಗೊಡದೆ ಕಾಯೋ
ಸಂದೇಹವಿಲ್ಲದೆ ಸಾಯುಜ್ಯ ಪದವಿಯ ನೀಡೋ
ಕುಂದಣಕೆ ರತ್ನವ ಜಡಿದು ಅದ
ರಿಂದಾಗಿ ಪರ್ವನ ಹಿಡಿಯೊ ಕೈ ಬಿಡದೆ ||5||

ಮಂದಮತಿ ಬೇಡ
ಮಂದಮತಿತನವು ಬೇಡ ಮಾಯೆಯೊಡನೆ
ಮಂದಮತಿಯನ ಕೊಂದ ಮಾಯೆ ಮೂಲೋಕ
ನುಂಗಿ ನಿಂತಳು ಜಗದೊಳು ||ಪ||
ಸೀತೆ ಮಾಯಾಮೃಗವ ರಾವಣನ
ಶತಕೋಟಿ ರಾಕ್ಷಸರ ಹತ ಮಾಡಿ ನುಂಗಿದಳು
ಶತಕಾಲ ನಿಂತುರಿಯಿತು ಹಾಳಾಯಿತು ಲಂಕಾ ||1||
ದ್ರೌಪದಿಯ ಭೂಮಿಗಾಗಿ ಕೌರವರು
ಭೂಪ ಹದಿನೆಂಟು ಅಕ್ಷೋಹಿಣಿ
ಅಪರಂಪ ನಾಯಕರು ಅಜರು ಹಾಳಾಗಿ ನಡೆದರು ||2||
ಇಂದ್ರಚಂದ್ರ ಸೂರ್ಯರು ಕಳೆಗುಂದಿ
ನೋಪತ್ತಿ ಹೋದರೆಲ್ಲಾ
ಬೆಂದು ಭಸ್ಮಾಸುರ ಬಿರುದು ನಾಯಕ ಮಾಗಿ
ಸಂಧಿಗೆ ಸೇರಿ ಹೋದರು ||3||
ಹಮ್ಮು ಪಂಥಗಳು ಬೇಡ ಮಾಯೆಗೂಡ
ಸಮ್ಮೋಹ ತಿಳಿದು ನೋಡಾ
ಬ್ರಹ್ಮವಿಷ್ಣು ರುದ್ರ ಭ್ರಾಂತರಾದರು ಮಾಯೆಗೆ
ಹಮ್ಮು ಮಾಯೆಗೆ ಇಲ್ಲವೋ ||4||
ಪರಸತಿಯ ಭ್ರಾಂತಿ ಬೇಡ
ಪರುವನ ವರನುಡಿಯ ಒಲಿದು ನೋಡಾ
ಪರಮ ಶ್ರೀಗುರು ಪಾದವ ಪಿಡಿದು
ಪೂಜಿಸಲಿಲ್ಲಾ ಕಡಿಗೆ ಸೇರಲಿಲ್ಲಾ ||5||

ಮಾಡುವೆ ಶರಣು
ಮಾಡುವೆ ಶರಣು ಮಾಡುವೆ ನಮ್ಮ
ಕೂಡಲ ಸಂಗsನ ಶರಣರಿಗೆ ||ಪ||
ಕಂಬಳಿ ಮರುಳಾರು ಕಕ್ಕಯ್ಯಗೆ
ಉಂಬೊ ಪ್ರಸಾದದಲಿ ಉದ್ಭವಿಸಿದಾತಗೆ
ಅಂಬಿಗರ ಚೌಡಯ್ಯ ಘನಗಟ್ಟಿವಾಳಯ್ಯಗೆ ||1||
ಮಲ್ಲಿsಯ ಬೊಮ್ಮಯ್ಯ ಮಧುವರಸ ಹರಳಯ್ಯ
ಭಿಲ್ಲಮ ಬಿಂಕsದ ಮಾರಯ್ಯಗೆ|
ಗೊಲ್ಲಾಟ ಬಲ್ಲಾಳ ಕಲಕ್ಯಾತ ಕನ್ನಪ್ಪ
ನುಲಿಯ ಚಂದಯ್ಯಾ ಮೋಳ್ಗಿಮಾರಯ್ಯಗೆ ||2||
ಮ್ಯಾದಾರ ಕೇತಯ್ಯಾ ಮೆರೆಮಿಂಡ ಚಿಕ್ಕಯ್ಯ
ಆಯ್ದಕ್ಕಿ ಮಾರಯ್ಯ ಅಜಗಣ್ಣಗೆ|
ಮೈದುನ ರಾಮಯ್ಯ ಮಡಿವಾಳ ಮಲುಹಣ
ಸಾಧು ಮರುಳ ಶಂಕರ ಸಿದ್ಧರಾಮಗೆ ||3||
ಸತ್ಯಕ್ಕ ವೆಟ್ಟವ್ವ ಶ್ರೀ ನೀಲಲೋಚನಿ
ಮುಕ್ತವ್ವೆ ಚಂಗುಳಿ ಗೊಗ್ಗವ್ವೆಗೆ|
ಸತ್ಯ ಗಂಡನ ಪಡೆದು ಹೆತ್ತಮಗನ ಕೊಂದು
ಬತ್ತಲೆ ಕದಳಿಯ ಪಕ್ಕಂತ ಅಕ್ಕನಿಗೆ ||4||
ಕರಿವೇನು ಯೇಳೂರದ ಎಪ್ಪತ್ತು ಗಣಂಗಳು
ಅರವತ್ತುಮೂರು ಪುರಾತನರಿಗೆ|
ಪರಿಪೂರ್ಣ ಶ್ರೀಗುರು ಪಾದವ ಭಕುತಿsಲಿ
ಪರಿಪರಿ ಪೂಜೆಯs ಪರವsನಿಗೆ ||5||

ಮಾತನಾಡೊ ಮಹಾದೇವ
ಮಾತನಾಡೋ ಮಹಾದೇವ ಮಾಯಾಕೋಲಾಹಲ ಪ್ರಭು
ಜಾತವಿಹಿತ ಈ ರೇಳು ಜಗದ ಜೀವಾಳ ||ಪ||
ಮನ ಸೋತೆಯನಯ್ಯ ನಿನಗೆ ಮಂಗಳವಾಗಿರು ಎನಗೆ
ಘನ ಶಿಖಾಮಣಿ ಗಂಭೀರ ಗೌರೀ ಮನೋಹರ ||1||
ಮೊರೆ ಹೊಕ್ಕವರ ಕಾಯ್ವಂಥ ಮನಸಿಜಾರಿ ನಿನ್ನ ಪಂಥ
ಬಿರಿದುಳ್ಳ ಬಿಸಿಗಣ್ಣಿನ ಭೀಮಾ ಬಿಂಕದಲ್ಲಿ ನಿಸ್ಸೀಮಾ ||2||
ಅಗಣಿತ ಗುಣಮಣಿ ಅಣುರೇಣು ತೃಣಕ್ಕೆ ಧಣಿ
ಬಗೆ ಬಗೆಯಿಂದಲಿ ಬಂದು ಮಿಗೆ ಭಕ್ತರೊಳು ನಿಂದು ||3||
ದೈನ್ಯದಿ ಸೇವೆಯ ಮಾಡಿ ದಯಾಳು ನೀನೆಂದು ಬೇಡಿ
ನಯ ತೆರೆದು ನೋಡಯ್ಯ ನಗುತ ಹಿಡಿ ಎನ್ನ ಕೈಯ್ಯ ||4||
ಗೂಗಲ್ಲ ಗವಿಯೊಳಗಿದ್ದ ಗುರುರಾಯ ಅಲ್ಲಮಾ ಸಿದ್ಧ
ನಗರ ಪರವಗೆ ಮೈ ಬೆರೆತ ನಂದೀಶನ ಕರ್ತ ||5||

ಮಾತಾಡೋ ಮಹಾಂಕಾಳಿ
ಮಾತಾಡೋ ಮಹಾಂಕಾಳಿ ಮಧುರ ವಚನಗಳಿಂದ
ಶಾಂತಳಾಗಿರು ತಾಯಿ ಧೈರ್ಯದ ಲಕ್ಷ್ಮಿ ||ಪ||
ಅಂಬರಕೇಶಳೆ ನೀ ಆದಿಶಕ್ತಿಯು ಶಿಖೆ ತುಂಬಿದ ತಾರೆಯೆ
ದಂಡೆತೊಂಡಿಲು ಚಂದ್ರ ಸೂರ್ಯಂಗಳು
ಎಂಬತ್ನಾಲ್ಕು ಲಕ್ಷ ವಿಶ್ವ ಕುಟುಂಬಿ
ಇಂಬಿಟ್ಟು ಈರೇಳು ಭುವನಮಂ ಪೊರೆವಿ ||1||
ಸಿಡಿಲು ಮಿಂಚು ಘರ್ಜಿಸಿ ಸೃಷ್ಟಿಯೊಳು ನಿಮ್ಮ ಸೊಲ್ಲ
ಗಣಿಸುವನು ದೇವೇಂದ್ರ ನವಖಂಡ ಪೃಥ್ವಿಯಲಿ
ಮೃಢನ ತೊಡೆಯ ಮೇಲಿಟ್ಟು ಮಲಗಿದ ಶಕ್ತಿ
ಸಡಗರದಿ ಸಂಗ ಆದಿ ಸಹಸ್ರ ಜಿಹ್ವೆಯಂಗದಿ ||2||
ಪಂಚ ಶತಕೋಟಿಯಲಿ ಪರಿಪೂರ್ಣ ಮಹಾಂಕಾಳಿ
ಹಂಚಿಟ್ಟ ರವಿ ಶಶಿಗೆ ಹಗಲಿರುಳು ಆಗೆಂದು
ವಂಚನೆ ಇಲ್ಲದೆ ಕೈ ಮುಗಿದು ವೇದ
ಪಂಚ ಮುಖವದನೆ ಪರಮ ದಯಾಳೆಂದು ಸಾರುತಿವೆ ||3||
ಹರಗೆ ತ್ರಿಶೂಲ ಹರಿಗೆ ಚಕ್ರವ ಕೊಟ್ಟು
ಬರೆವ ಬ್ರಹ್ಮಗೆ ಕಂಠಾಭರಣವ ಕೊಟ್ಟು
ಕರಿದೆಲಿಯ ಪಡೆದೇಕ ಮಹೇಶ್ವರಿಯೆ
ಶಿರದಿ ಶಾಂತೆ ಗುಣವಂತೆ ಹಿತಚಿಂತೆ ಅತಿ ಕಾಂತೆ ||4||
ಓಂಕಾರ ವದನದೊಳು ವಾಸ ಮಾಡಿರಿ
ಸಂಸಾರ ಶಿರಶೃಂಗಿ ನಿನಗೆ ಸಾಷ್ಟಾಂಗ ವೆರಗುವೆನು
ಪರಿಕಜನ ಕೈ ಪೂಜಿಪಳೆ ಪರಿಪೂರ್ಣ ಮಹಾಂಕಾಳಿ
ಕಂಕುಳ ಶಿಶುವೆಂದು ಕೊಟ್ಟೆ ಪರುವಗೆ ವರವ ||5||

ಮುದ್ದು ಸೂಗೂರ ವೀರಾ
ಮುದ್ದು ಸೂಗೂರ ವೀರಾ ಮುದದೆಮ್ಮ ಕರುಣಾಬ್ಧಿಯೆಂಬೊ
ಬಿರುದು ಕೇಳಿ ಆಸೆ ಮಾಡಿ ನಾ ಬಂದೇ ||ಪ||
ಈಶ ವಿರಕ್ತ ಇಂದುಧರ ನೀನು ಬಂದು
ಭಾಷೆ ಕೊಟ್ಟು ಭಕ್ತರ ಭಾವ ಭರಿತ ಪ್ರಿಯ ನೀನು
ರಾಶಿ ದೈವದ ಗಂಡರಣ್ಣ ಶೂರ ದಕ್ಷ ಹಾಸ್ಯವಾಡೆ
ಅವನ ಹಿಡಿಕಿಲಿ ಹರಣಗಳೆದ ಹತ್ತಿಟ್ಟು ||1||
ಧೀರ ಗಂಭೀರ ಶೂರ ಭವ ದೂರಾ
ಆರು ಅಗ್ನ ಜಿಹ್ವೆ ಮಟ್ಟ ಸೀಳಿ ಅಸುರಾರಿ ಕೋಪವ ತಾಳಿ
ಮೂರು ವೈರಿಗಳ ಮರ್ದನ ಇಂತು
ವೀರಘಂಟೆ ಮಡಿವಾಳಯ್ಯನ ಯುದ್ಧ ಕೇಳಿ ವಿಪರೀತ ||2||
ಕೊಬ್ಬಿನ ದುಷ್ಟರ ಕೊಂದು ಗೊಬ್ಬೂರು ಸುಟ್ಟು
ಬಿಬ್ಬಿ ಬಾಚರಸರ ಬಿರಿದಿನಿಂದ ರಕ್ಷಿಸಿ
ಸದ್ಭಾವ ಮೂರ್ತಿ ಸರ್ವದಾಧಾರ ಕರುಣ
ಉಬ್ಬಿ ನಗರ ಪರ್ವತನೊಳಗಾಧಾರ ಬೆರೆದು ಬೆಸನಿತ್ತಾ ||3||

ಮೊರೆಯಿಡುವೆ ಕೇಳೆನ್ನ ಗುರುವೆ
ಮೊರೆ ಇಡುವೆ ಕೇಳೆನ್ನ ಗುರುವೆ ಬಂದ
ದುರಿತವನ್ನು ಕಾಯನ್ನ ಯನ್ನ ಗುರುವೆ ||ಪ||
ಮುಗಿಲು ಹರಿದು ಮೇಲೆ ಬಿತ್ತು
ಜಗದ ವಲ್ಲಭ ಮೇಲಕೆತ್ತು
ತಗೆ ಬಗೆಗೊಳ್ಳಲೇನ ತಡಿಯ ಸೇರಿಸು
ಹಗರಣ ಮಾಡದ ಲೀಗಕೆಯೆಂದು ||1||
ರಾಹು ನುಂಗಿದ ಚಂದ್ರನಂತೆ
ನಿರ್ಜೀವನಾಗಿ ನಾ ನಿಂತೆ
ದೇವರ ದೇವ ಚಿರಂಜೀವಿಯನ್ನ
ನೋವು ಮಾಣಿಸಿಕಾದ ನವರುದ್ರನಂತೆ ||2||
ಮೊರೆಯ ಹೊಕ್ಕರೆ ಕಾಯೋ ಮುನ್ನ
ಬಿರಿದುಂಟು ಮಾಡೋ ಪ್ರಸನ್ನ
ಉರಿಯ ಒಳಗಿನ ಸಸಿಯ ಪರಹರಿಸಿದಂತೆ
ಬಿರುಮಳೆಗರೆದು ಬಿಗಿದಪ್ಪಿ ಕಾಯೋ ಎನ್ನ ||3||
ಚಂದ್ರಗುಪ್ತನ ಮಗಳಿಗಾಗಿ ಸತ್ಯಗೊಂದನವನು
ಬಿಡದೆ ಕಾಯ್ದೆ ಇಂತೆಂಬ
ಶೃತಿಗಳನು ಎತ್ತಿ ಸಾರುವೆ ಮುನ್ನ
ತಂದೆ ಅಲ್ಲಮಾ ಪ್ರಭು ಕಾಯೋ ||4||
ಧರ್ಮವ ಶ್ರೀಗುರವೆ ಮರೆತೇವು
ಪರಬ್ರಹ್ಮನಹುದು ನೀದಯಾಳು
ನಿರ್ಮಿತ ಪರುವನ ನಿಜಾತ್ಮ ಸತಿಯಳ
ಕರ್ಮ ಕಂಟಕ ಕಡಯೋ ಕರುಣಿ ಅಲ್ಲಮನೆ ||5||

ಮೊರೆ ಹೊಕ್ಕೆ ನೀ ಕಾಯೋ
ಮೊರೆ ಹೊಕ್ಕೆ ಕಾಯೋ ಮಲೆತ ಮಲ್ಲನ ಗೂಳಿ ಸೂಗೂರು ವೀರ
ಕರೆದರೆ ಓ ಎಂದು ಕಾಮಿತ ಫಲದಾಯ ಸೂಗೂರು ವೀರ ||ಪ||
ಮುನ್ನೂರದರವತ್ತು ವ್ಯಾಧಿ ವಿಘ್ನದ ಗಂಡ ಸೂಗೂರು ವೀರ
ಚಿನ್ಮಯ ಚಿದ್ರೂಪ ಚಿತ್ಕಳ ಮೂರುತಿ ಸೂಗೂರು ವೀರ ||1||
ವಜ್ರದ ಖಣಿ ನಿನ್ನ ವರವೆಂಬ ವಾಕ್ಯವು ಸೂಗೂರು ವೀರ
ಸಜ್ಜನರ ಮನಸ್ಸಿಗೆ ಸರಿಹೋಗಲಿರುವಂತ ಸೂಗೂರು ವೀರ ||2||
ಉಪಮಿಸಲಳವಲ್ಲ ಅಪರಾಂಪರ ಮಹಿಮ ಸೂಗೂರು ವೀರ
ಜಪಿಸಿದವರ ಕಾರ್ಯ ಜಯಿಸುವುದು ತ್ರಿಜಗದಿ ಸೂಗೂರು ವೀರ ||3||
ಸತ್ಯ ಸಮರ್ಥನು ಸರ್ವ ಸೂತ್ರಧಾರಿ ಸೂಗೂರು ವೀರ
ತೊತ್ತಿನ ತೊತ್ತೆಂದು ತೊಲಗದಿರೆಂದೆಂದು ಸೂಗೂರು ವೀರ ||4||
ಗಂಧ ಕಸ್ತೂರಿ ಭೋಗಿ ಘನ ಮಹಾತ್ಮ ನೀನಹುದು ಸೂಗೂರು ವೀರ
ಬಂದಂಥ ಕಂಟಕ ಬಯಲು ಮಾಡೋ ಸ್ವಾಮಿ ಸೂಗೂರು ವೀರ ||5||
ಅಡಿಗಡಿಗೆ ಪವಾಡವೆಬ್ಬೆಸಿ ಮೆರೆವಂಥ ಸೂಗೂರು ವೀರ
ಅಡಿಗಳಿಗೆರಗುವೆ ಅಖಂಡವಾಗಿರೊ ಸ್ವಾಮಿ ಸೂಗೂರು ವೀರ ||6||
ಬಲವಂತ ನೀನೆಂದು ಭಾಷೆಯ ಒಳಗಾದೆ ಸೂಗೂರು ವೀರ
ಛಲವೆಂಬ ಅಭಯ ಹಸ್ತ ಛತ್ರವಿಡೋ ಎನಗೆ ಸೂಗೂರು ವೀರ ||7||
ಶೂನ್ಯ ಸಿಂಹಾಸನ ಸೂರೆಗೊಂಡೇರಿದಿ ಸೂಗೂರು ವೀರ
ಆಲಿಪ ಅನುಭವ ಅಲ್ಲಮಪ್ರಭು ನೀನೆ ಸೂಗೂರು ವೀರ ||8||
ಶೂನ್ಯ ಬಾಚರಸರ ಬಿರುದಿನ ಮನೆ ದೇವ ಸೂಗೂರು ವೀರ
ಅಬ್ಬರದಿ ಪರುವಾನ ಅಭಿಮಾನ ಕಾಯ್ವಂತ ಸೂಗೂರು ವೀರ ||9||

ಯಾಕೆ ಕಾಡುವಿ ಎನ್ನ ಪ್ರಾಣವಲ್ಲಭನೆ
ಯಾಕೆ ಕಾಡು ಎನ್ನ ಪ್ರಾಣವಲ್ಲಭನೆ
ಬೇಕಾಗಿ ನಿನಗಿದೇನುದ ಬಡಿದಾಟ ಶಿವನೆ ||ಪ||
ಭಿಕ್ಷೆ ಬೇಡುಂಬುವೆನು ಸಾಕ್ಷಿಯಲಿ ತಿರುಗುವೆನು
ಅಪೇಕ್ಷ ವರವಾಗಿ ಮೋಕ್ಷ ಬೇಡುವೆನು
ಅಪರೋಕ್ಷಗ್ಯಾನವನು ಅಂತರದಿ ನಡೆಸುವೆನು
ರಕ್ಷಿಸೈ ಶ್ರೀಗುರುವೆ ಎನ್ನಾ ಪಂಥವನು ||1||
ಬಂದುದನು ಭವ ಮಾಡಿ ಕಂದನಾಗಿರುತಿಹನು
ಹಿಂದು ಮುಂದ್ಯಾಡುವರಾ ಭಂಧುವಾಗುವೆನು
ತಂದೆ ಶ್ರೀಗುರುದೇವಾ ನಿನ್ನಿಂದಾದ ಧರ್ಮವನು
ಎಂದೆಂದಿಗಿ ಪಾಪ ಹೊಂದದಲೆ ನಾನು ||2||
ಉಪಾಯದಲಿ ತಿರುಗುವೆನು ಶಿವಭಕ್ತಿ ನಡೆಸುವೆನು
ಅನ್ಯಾಯ ಹೇಳುವರ ಗಂಡನಾಗುವೆ ನಾನು
ಜಯಾಜಯ ಗುರು ಶರಭಾ ಈ ಕಾಯದಾಟವನು
ಆವಾವ ಕಾಲದಲಿ ಮಹಾ ಪ್ರಭುವೆ ನೀನು ||3||

ಯಾಕೆ ದಯೆ ಮಾಡೆ
ಯಾಕೆ ದಯೆ ದೋರೆಯೋ ಎನ್ನೊಡೆಯನೇ
ನಿನ್ನ ಪುರುಷ ವಾಕ್ಯನ ಮರೆವರೇ ಎನ್ನೊಡೆಯನೇ
ಬೇಕೆಂದು ಬೆರೆದೆ ಫಲದೋರಿ ಸಂಸಾರವನು ಸಾಕೆನಲಿ ಕೀರ್ತಿಯುಂಟು ||ಪ||
ಪತಿಯು ಬಲ್ಲಿದನೆಂದು ಪಿತ-ಮಾತೆಯರು ಕೂಡಿ
ಮಥನವನು ಮಾಡಿಕೊಂಡೆ| ನಿನ್ನ ಹಿತವ ತಪ್ಪಿದ ಮೇಲೆ
ಹಿಡಿದವರೆ ಮುಂದೆ| ಸದ್ಗತಿಯ ತೋರೋ ಗುರುವೇ ||1||
ಮರಣ ವಿರಹಿತ ಮೈಭರಿತನೆಂದು
ಪರರ ಸ್ಮರಣೆಯೆನಗದಿಲ್ಲ ಉದಯದರುಣದೊಳು
ಏನೆಂದು ದರ ಪೊಗಳಲು
ನಿಮ್ಮ ಶ್ರೀ ಚರಣ ಕಮಲಾಬ್ದಿ ಬಿಡದೆ|
ಮೊದಲಿಂದ ಇದಕಂಜಿ ಬೆದರಿ ಬೇರೆ ಸಾಕಿದೆನು ||2||
ಬದಲಾಮ ಮಾಡಿಕೊಟ್ಟ ಕದನಕ್ಕೆ ಕಾದಿಸುವಾತ
ಸರಿದರೆ| ಇದು ಕೀರ್ತಿ ಅರುದೆ ನಿಮಗೆ ||3||
ಮೂಲದಲಿದ್ದ ಸೊತ್ತು ಮುಂದಕ್ಕೆ ತಂದು
ಸುತ್ತದಿಕೆ ಕಾವಲಿಯಾದಾತನು|
ಹೋಳಾಗಿ ನೋಡಿದರೆ ಹೋದನೆಂದಪಕೀರ್ತಿ
ಕೇಳಿ ಹೇಳಿದೆನು ನಿಮಗೆ ||4||
ಪಶುವು ಶಿಶುವಿನ ನೆನೆದು ಕೂಸರೋಡಿ ಬಂದಂತೆ
ಪಶುಪತಿಯು ಬಂದು ಬೆರೆತ
ಬಿಡಬೇಡೆಂದು ಪರುವಗ| ಶಶಿಧರನು ಬಂದು ಬೈಗುವಾ ||5||

ಯಾಕೆನ್ನ ಹಣೆಬರೆಹ
ಯಾಕೆನ್ನ ಹಣೆಬರೆಹ ಕಾಕು ಮಾಡಿದೆ ಸ್ವಾಮಿ
ಅನೇಕ ಜೀವದ ಕರ್ತು ಆದಿ ಅಲ್ಲಮಪ್ರಭುವೆ ||ಪ||
ಪರರ ನಿಂದೆಯನಾಡಿ ಪಾಪಕ್ಕೊಳಗಾಗಿದ್ದೆನೇನೊ
ಹರನ ರೂಪವ ಕಂಡು ಹಳಿದಿದ್ದೆನೇನೊ
ಗುರುವಿಗೆರಗದೆ ಗರ್ವಿಸಿ ನಡೆದಿದ್ದೆನೇನೊ
ಭರದಿ ಸಿಟ್ಟಿಲಿ ಶಿವಗೆ ಬೈದಿದ್ದೆನೇನೊ ||1||
ಸತಿ ಪತಿ ಹಿತವಿರಲು ಅಹಿತವ ಮಾಡಿದ್ದೆನೇನೊ
ಹಿತವಾಗಿದ್ದವರನ್ನು ಅಗಲಿಸಿದ್ದೆನೇನೊ
ಗತಿಗೆಟ್ಟು ಬಂದವರನ್ನು ದಬ್ಬಿ ನಾ ನುಡಿದಿದ್ದೆನೇನೊ
ಪತಿವ್ರತದವರನು ಬಯಸಿ ಪಾತಾಳಕ್ಕಿಳಿದಿದ್ದೆನೇನೊ ||2||
ಸತ್ಯವ ಸಭೆಯೊಳು ಕಲಿತು ಅಸತ್ಯವ ನುಡಿದಿದ್ದೆನೇನೊ
ಉತ್ತಮರ ಮಾತ ಉಲ್ಲಂಘಿಸಿದ್ದೆನೇನೊ
ಚಿತೈಸು ಪರಬ್ರಹ್ಮ ಚಿಕ್ಕ ಪರುವನ ತಪ್ಪ
ಕರ್ತು ಶ್ರೀ ಗಿರಿಮಲ್ಲ ಕರುಣಿಸಿ ಕಾಯೋ ||3||

ಯಾತರ ಕುಲವಯ್ಯ
ಯಾತರವನಂತ ಉಸರಲಿ|
ಜಗನ್ನಾಥ ಮಾಡಿದ ನರರೂಪ ಗುರುವೆ ||ಪ||
ಒಂಬತ್ತು ತುಂಬಿದ ಹೊಲಸಿsನ ಊರೊಳು
ಎಂಬತ್ತು ಕುಲವಾಗಿ ತುಳುಕ್ಯಾಡುತಿರೆ|
ಯಿಂಬಿಟ್ಟು ಈ ದೇಹ ಪೊರಳುಗೊಂಡಮೇಲೆ
ದಿಂಬಕ್ಕ ನಮಗ ಯಾತರ ಕುಲವಯ್ಯ ||1||
ಒಂದ ಬಚ್ಚಲ ಕುಣಿಗೆ ತುಂಬ್ಯಾವು ಮಲ ಮೂತ್ರ
ತುಂಬಿ ತುಂಬಿ ಹೊಲಸು ನಾರುತsದೆ|
ಒಂಬತ್ತೂ ದ್ವಾರದಿ ನರಕ ಸೋರುತsದೆ
ಹೊಲೆಯಾಗದ ಮನ ಯಾತರ ಕುಲವಯ್ಯ ||2||
ಅಚ್ಚರ ಮೇಲೆ ಲಕ್ಷಣವಿಟ್ಟಂತ ಹಕ್ಕಿ
ಪುಚ್ಚವ ಬಿಚ್ಚಿ ಹಾರಾಡುತಿದೆ|
ನಿಶ್ಚಿಂತ ನಿಜ ರೂಪದಲ್ಲಮಪ್ರಭುವಿಗೆ
ಹುಚ್ಚು ಪರವಾಗೆ ಯಾತರ ಕುಲವಯ್ಯ ||3||

ಯಾತರ ಶೀಲವಿದಣ್ಣ
ಯಾತರ ಶೀಲವದಣ್ಣ| ಪರಮಾತ್ಮನು ಮೆಚ್ಚನು ಮೇಲಿನ ಬಣ್ಣ|
ಜೇನುತುಪ್ಪಕ ಮನವು ಬಯಸಿ| ಜನಜಾತ್ರೆಯಲಿ ಅದನು ತರಿಸಿ|
ಮನಿಯೊಳಗೆ ಮರಿ ಮಾಡಿ ಇಡಿಸಿ| ಅಟ್ಟ ಅನ್ನವ ನೊಣದಿಂದ ಸರಿಸಿ ||ಪ||
ಶೀಲ ಮಾಡುತ ಸುಮ್ಮನ್ಯಾಕ ಕೂತಿ
ಮೂಲ ಅರ್ಥ ತಿಳಿದು ನೋಡೊ ಮೂರು ದಿನದ ಸಂತಿ|
ಹಿಂಗ ಉಣ್ಣಲು ಬಹುದೇನೊ ಶೆಟ್ಟಿ| ಪರ
ಹೆಂಗಳ ಬಯಸಿ ಕಡೆಗೆ ನೀ ಕೆಟ್ಟಿ ||1||
ಭವಿ ಬಹಳ ಕೆಟ್ಟನಂತಂಬಿ ಅಷ್ಟ
ಭವಿಗಳನೊಡಗೂಡಿ ಸುಳ್ಳಲ್ಲಟ್ಟುಂಬಿ|
ವಿವರಿಸಿ ನೋಡಿಕೊ ಪರಾವಲಂಬಿ ನಿನ್ನ
ನವದ್ವಾರದೊಳು ಕೆಟ್ಟ ಹೊಲಸು ತುಂಬಿ ||2||
ಹಲವಂಗಿ ಹರಿದಾವ ನೋಡು
ಹೊಲೆಯೆಂಬ ಬಳಕೆ ನೀ ಬಿಡು|
ಛಲದಿಂದ ಉನ್ಮನಿಗೆ ಹೋಗು ಅಲ್ಲಿ
ಮಲಗಿದ್ದ ಸರ್ಪನ ಊರ್ಧ್ವಮುಖವಾಗು ||3||
ಆಗ ಬೆಳಗುತಿದೆ ಸುಜ್ಞಾನವೆಂಬ ದೀಪ
ಬೇಗ ತೋರಿಸು ಷಡ್‍ಚಕ್ರದ ಪ್ರತಾಪ|
ಸಾಗಲಿ ನಿಜಲಿಂಗದ ಕುಲದೀಪ
ಬಾಗಲಿ ಶಿವನ ನಮ್ಮ ಪರವನಪಾಲಿಪ ||4||

ಯಾರಿಗೆ ಯಾರಿಲ್ಲ
ಯಾರಿಗೆ ಯಾರಿಲ್ಲ ಯಲ್ಲಾರು ನಮಗಿಲ್ಲಯೇ ಮನವೆ ನಮ್ಮ
ಮಾರಹರನ ಪಾದ ಮರಿಯದೆ ನೆನಿಕಂಡ್ಯಾಯೇ ಮನವೆ ||ಪ||
ಆಸೆ ಮಾಡಲಿಬೇಡ ಹೇಸಿ ಮಾನವರೀಗೆ ಯೇ ಮನವೆ
ಮೀಸಲಳಿಯದಿರು ಮಿಕ್ಕ ದೈವಕ್ಕೆರಗಿ ಯೇ ಮನವೆ|
ಸಾಸಿರ ನಾಮವ ಬಿಡದೆ ನೀ ನೆನಿಕಂಡ್ಯಾ ಯೇ ಮನವೆ ಜಗ
ದೀಶನ ಪಾದವ ನೆರೆ ನಂಬಿನೆನಿ ಕಂಡ್ಯಾ ಯೇ ಮನವೆ ||1||
ದೈವಯಿದ್ದಮ್ಯಾಲೆ ಧರೆಯೆಲ್ಲಾ ನೆಂಟರು ಯೇ ಮನವೆ
ದೈವ ತೊಲಗಿದ ಮ್ಯಾಲೆ ಯಾರಿಗೆ ಯಾರಿಲ್ಲ ಯೇ ಮನವೆ|
ವಿವರಿಸಿ ನೋಡಿಕೊ ಅಂತರಾತ್ಮದೊಳು ಯೇ ಮನವೆ
ಶಿವನ ಪಾದವನಂಬು ಕೈವಲ್ಯ ನಿನಗುಂಟು ಯೇ ಮನವೆ ||2||
ಮಾನವ ಜನ್ಮಕ ಬಂದು ಮರೆಯಾದಿರೆಚ್ಚರಿಕೆ ಯೇ ಮನವೆ
ದಾನ ಧರ್ಮವ ಮಾಡುವದು ಯಾರಿಗೆ ನೀ ಹೇಳು ಮನವೆ|
ಹೊನ್ನು ಹೆಣ್ಣು ಮಣ್ಣು ನನ್ನದೆಂದೆನುಬ್ಯಾಡ ಯೇ ಮನವೆ ಅನು
ಪನ್ನಂಗಧರಬಲ್ಲ ಪರಿಪರಿ ಅದರಾಚ ಯೇ ಮನವೆ ||3||
ಸಿಟ್ಟಿಲಿಂದೊಬ್ಬರ ಕೆಡುಕು ನುಡಿಯಲುಬ್ಯಾಡ ಯೇ ಮನವೆ
ಕೊಟ್ಟ ಭಾಷೆಗೆ ತಪ್ಪಿ ಕೂಲಿಗಾರ ನಾಗಲಿಬ್ಯಾಡ ಯೇ ಮನವೆ|
ಬಟ್ಟಗಾರಿಯೆಂಬೊ ಬಾಳಿವಿ ಹೊರಬ್ಯಾಡ ಯೇ ಮನವೆ
ಮುಟ್ಟಿ ಭಜಿಸೊ ನೀ ಮುಕ್ಕಣ್ಣನ ಪಾದವsಯೇ ಮನವೆ ||4||
ಹಾಸ್ಯ ಮಾಡಲಿಬೇಡ ಹರಿಗೆಟ್ಟು ಪರರಿಗೆ ಯೇ ಮನವೆ
ಮೋಸ ಮಾಡಿ ಪರಸತಿಯರನು ಅಪ್ಪದಿರುಯೇ ಮನವೆ|
ಲೇಸಾಗಿ ಪರವಚನ ನೀನು ನಡೆಸಯ್ಯ ಯೇ ಮನವೆ
ಈಶ್ವರನಲ್ಲಿ ವಿಮಲ ಭಕ್ತಿಯನಿಡು ಯೇ ಮನವೆ ||5||

ರಾಜಮೋಹನ ರಮಣ
ರಾಜ ಮೋಹನ ರಮಣ ಬಾರನಮ್ಮ
ಬಿತ್ತೋ ಬೀಜದಂತೆ ಬಿನ್ನೈಸಿ ಕರೆತಾರಮ್ಮ ||ಪ||
ಮನಕೆ ಬಂದವರ ಮಾತು ಮೀರಿ ಬಂದು
ತನ್ನ ಅನುವಿನೊಳಗಾದರೆನ್ನ ಅಗಲಿ ಹೋಗಬಹುದೆಂದು
ತನುವು ತನ್ನ ಪಾಪದೊಳಗಾಗಿ ಬಂದು
ದಿನವು ಎಂಬುದು ನನಗೆ ದಿವ್ಯ ಸಾವಿರ ವರುಷವಾಯಿತಮ್ಮ ||1||
ಹರಣಉಳ್ಳ ವೈರಿನ ಹಸ್ತಿಗಮನೆ ಹೋಗಿ
ಅಂತಃಕರುಣದಲಿ ಬೆಂಬಲಿಯಾ ಹಾಕಿ ಕರೆದು
ತೊರೆಯ ನಿನ್ನಯ ನಾಮಸ್ಮರಣ ತಪ್ಪಿತು ಶರೀರ
ತನ್ನ ಕಿರಣ ಮನಕೆ ಸೂಸುವಂತೆ ಕಿವಿದೆರೆದು ಹೇಳಮ್ಮ ||2||
ಅಳಿವ ಜ್ಯೋತಿಗೆ ತೈಲವಿತ್ತಂತೆ ಮನಕೆ
ಕಳೆ ತುಂಬಿ ಬಂದ ಕಾಳಬೆಳಗುಂದಿ ವೀರೇಶ
ಸುಳವಿನೊಳಗೆ ಸೊರೆಗೊಂಡನಮ್ಮ
ನಗರ ಪರವನ್ನಾಳಿದ ಪರಬ್ರಹ್ಮವೀರೇಶನಮ್ಮ ||3||

ರೋಗಿ ಹಳಿಯಲು ಕ್ಷೀರ
ರೋಗಿ ಹಳಿಯಲು ಕ್ಷೀರ ಹೋಗಬಲ್ಲುದೆ ಸಿಹಿಯು ಯೋಗಿನಾಥ
ಗೂಗಿ ಹಳಿಯಲು ಭಾನು ತೇಜಕೆ ಕುಂದುಂಟೇ ಯೋಗಿನಾಥ ||ಪ||
ಶ್ವಾನ ಬೊಗಳಲು ಮಸ್ತಿ ಆನೆಗೆ ಕುಂದುಂಟೆ ಯೋಗಿನಾಥ
ಜನವು ಹಳಿಯಲು ಕೊಡುವ ದಾತಗೆ ಕುಂದುಂಟೆ ಯೋಗಿನಾಥ
ವಾನರ ಹಳಿಯಲಿ ವನಕೆ ಕುಂದುಂಟೆ ಯೋಗಿನಾಥ
ಮಾನಹೀನರು ಹಳಿಯಲು ಘನಜ್ಞಾನಿಗಳಿಗೆ ಕುಂದುಂಟೆ ಯೋಗಿನಾಥ ||1||
ತುಡುಗ ಹಳಿಯಲು ಉಡುಪತಿಗೆ ಕುಂದುಂಟೆ ಯೋಗಿನಾಥ
ಬಡವ ಹಳಿಯಲು ಭಾಗ್ಯಪುರುಷಗೆ ಕುಂದುಂಟೆ ಯೋಗಿನಾಥ
ಮೂಢ ಹಳಿಯಲು ಪುಣ್ಯಕ್ಕೆ ಕುಂದುಂಟೆ ಯೋಗಿನಾಥ ||2||
ಕುರಿಯು ಹಳಿಯಲು ಕಬ್ಬು ಕಹಿಯುಂಟೆ ಯೋಗಿನಾಥ
ತೂರಿದ ಮಣ್ಣು ತಾ ಸೂರ್ಯಗೆ ಮುತ್ತಲುಂಟೆ ಯೋಗಿನಾಥ
ಜರಿವಗಲ್ಲದೆ ದೋಷ ಕರುಣಿಗುಂಟೆ ಯೋಗಿನಾಥ
ತೋರುವ ಕೃತ್ಯ ದುರಿತರಿಗಲ್ಲದೆ ನಗರ ಪರುವನಿಗುಂಟೆ ಯೋಗಿನಾಥ ||3||

ಲಜ್ಜೆ ನಾಚಿಕೆ
ಲಜ್ಜೆ ನಾಚಿಕೆ ಹೋದಮೇಲೆ
ನಿಮ್ಮದೋಯ್ತೋ ರಾಚೋಟಿ ವೀರ ||ಪ||
ಆನೆಯನೇರಿದವಗೆ ಶ್ವಾನ ಕಚ್ಚಬಲ್ಲುದೇನು
ಇನ್ನೇನು ಇನ್ನೇನು ಇನ್ನೇನು
ಜೀವರಾಶಿ ಪ್ರಾಣಫಲ ಮುನ್ನೂರದರವತ್ತು
ಪ್ರಾಣಕ್ಕೆ ಬಂದ ಭಾನುಕೋಟಿ ತೇಜೋರೂಪ ರಾಚೋಟಿ ವೀರ ||1||
ಸ್ವಾರಿಯ ಕಾಯ್ದವಗೆ ತೋರಿ ಬದುಕೇನೆಂಬಂತೆ
ಆನೆ ಕಂಗಳಿಗೆ ಇನ್ನು ಕನಿಕಷ್ಟವೋ
ಪರಮ ಪಾವನ ಮೂರ್ತಿ ನಿಮ್ಮ ಪಾದವ ನಂಬಿ
ಹರಿಹರ ಬ್ರಹ್ಮರಿಗೆ ನಾನು ಅಂಜಿಲ್ಲೋ ||2||
ಹಿಂಡು ದೇವರಿಗೆಲ್ಲ ಗಂಡನೆಂಬ ನಿನ್ನ ಬಿರುದು
ಕಂಡ ಕಂಡ ಕಲ್ಲಿಗೆ ಮಂಡೆ ನಾನು ಎರಗಲಾರೆ
ಕೊಂಡು ಒಯ್ದರೆ ಒಯ್ಯೋ ಎನ್ನ ಪ್ರಾಣ ||3||
ಎಲ್ಲಮ್ಮ ಎಕನಾತಿ ಮಾರೆಮ್ಮ ಮಸಣೆಮ್ಮ
ಜಾರಿಬಿದ್ದ ಜಾಣರು ಮೈಲಾರ ಕೇತುಕ
ನೀರ ಕೊಡ ಹೊತ್ತುಕೊಂಡು ಕೋಲಗೊಂಬೆ ಕುಣಿಸುತ
ಹುಟ್ಟಿದೂರಿಗೆ ಉಟ್ಟುಗೈಲೆ ಹೋಗಲಾರೆನೋ ||4||
ಧರೆಯೊಳು ಯಾದಗಿರಿ ಪುರದಲ್ಲಿ ನಿಂದು
ಹಿರಿಯ ಬೆಟ್ಟದ ಕಲ್ಲು ಕರಿವೀರ
ಸ್ಥಿರದಿಂದಲಿ ಬಂದು ಪರುವನ ವ್ಯಾಧಿಯ
ಪರಿಹರಿಸು ಬಾರೋ ರಾಚೋಟಿ ವೀರ ||5||

ಲಿಂಗವಂತರಿವರಲ್ಲ
ಲಿಂಗವಂತರಿವರಲ್ಲ ಜಗಜಂಗುಳಿ ದೈವಕ್ಕೆ ಎರಗುವರಲ್ಲ ||ಪ||
ಲಿಂಗವೇ ಶಿವನೆಂದು ಪೂಜಿಸಲಿಲ್ಲಾ
ರಂಗು ಇಟ್ಟು ಎರಗಿ ಕೇಳುವನೆ ಇಲ್ಲಾ
ಜಂಗಮರ ಕಂಡರೆ ಹಿಡಿಯುವನು ಕಲ್ಲಾ
ತಂಗಿ ತಾಯಿ ಎಂದು ತಪ್ಪುವರೆಲ್ಲಾ ||1||
ವಿಭೂತಿ ರುದ್ರಾಕ್ಷಿ ಇಟ್ಟು ಗುರು
ಡಿಂಬ ಶೋಭಿಸುವ ಸ್ತ್ರೀಯಳ ಸೋಕಿ ಅಪ್ಪಿಕೊಂಬ
ಜಿಬಿ ನಾಣ್ಯವುಟ್ಟು ಜಾತೇವ ತಿಂಬ
ಕಾಬುಶ್ ಬಂದಾಗ ತಪ್ಪಿಸಿಕೊಂಬಾ ||2||
ಮಾರಹರಲಿಂಗ ಮಂಡಲೊಳಿಗಿದ್ದು
ಊರ ದೇವತೆ ಮಾಡಿ ಹಾಸ್ಯಕ್ಕೆ ಬಿದ್ದು
ಹಾರಿಸಿ ಭಂಡಾರ ಧರಿಸಲಿ ಎದ್ದು
ಇವ ಯಾರವನಲೆಂದು ಯಮರಾಯನೊದ್ದು ||3||
ಹಿಂಡಿಪಲ್ಲೆ ಕಡಬು ಹಿತವಾಗಿ ಮಾಡಿ
ಮಂಡಿಸಿ ಮನೆಯೊಳು ಮಾತಂಗೇರು ಕೂಡಿ
ಅವರು ಉಂಡ ಮೇಲೆ ಉಣ್ಣದ ಲಿಂಗಕ್ಕೆ ನೀಡಿ
ಈ ಗುಂಡಿಗೆ ಧರಿಸಿದ ಗುರುವೆಲ್ಲ ಖೋಡಿ ||4||
ಹೇಮ ಹಿತ್ತಾಳಿಗೆ ಹೆಚ್ಚು ಕುಂದಿಲ್ಲ
ಗ್ರಾಮದ ರೈತರಿಗೆ ಗೌಡ ಘನವಲ್ಲ
ಪ್ರೇಮಾದಿ ಪರ್ವಗೆ ಶಿವನೆಂಬಾಸೆ ಇಲ್ಲ
ಕಾಮವೇರಿ ಕಾಣದೆ ಕಟ್ಟುವರು ಎದೆಗಲ್ಲ ||5||

ಲಿಂಗವಿದ್ದ ಮೇಲೆ ನಿಜವಾಗಿರಬೇಕು
ಲಿಂಗವಿದ್ದ ಮೇಲೆ ನಿಜವಾಗಿರಬೇಕು
ಅಂಗನಲ್ಲಿ ಅವಗುಣ ಅಳಿದಿರಬೇಕು|
ಸಂಗಮ ಶರಣರ ಸಂಗದಲ್ಲಿರಬೇಕು
ಲಿಂಗದೊಳಗ ಮನ ಬೆರೆತಿರಬೇಕು ||ಪ||
ಗುರುಪಾದವ ಕಂಡು ಗುಪ್ತದಲಿರಬೇಕು
ದುರುಳರನು ಕಂಡು ದೂರಾಗಬೇಕು|
ಪರಸತಿಯರನು ತಾಯಿಯೆನ್ನಬೇಕು
ಪುರದೊಳಗಿನ್ನು ಈಶಾಡಬೇಕು ||1||
ಸಸ್ತಿ ಅಂದರೆ ಮನಸ್ವಸ್ತಿಲಿರಬೇಕು
ತುತ್ತು ತುತ್ತನ್ನು ಶಿವಗೆ ತೋರುಣಬೇಕು|
ಕತ್ತಲೆ ಮನದೊಳು ಕರಗಿರಿಬೇಕು
ಉತ್ತರ ಕೊಟ್ಟರs ಮಾತುಳಿಬೇಕು ||2||
ವೈರಿಯ ಕಂಡು ಮುರಾರಿಯಾಗಬೇಕು
ಯಾರ ಹಂಗಿಲ್ಲದೆ ಬದುಕಿರಬೇಕು|
ನರನ ಸಾಧನೆಯ ಅರಿತಿರಬೇಕು
ಹರನೆಂಬೊ ಶಬುದವ ನೆನಪಿಡಬೇಕು ||3||
ಮಂಕು ಮನುಷನೆಂಬೊ ಮಾತಿರಬೇಕು
ಕಿಂಕರ ನಿಷ್ಠೆಯಲಿರುತಿರಬೇಕು
ಬಿಂಕದ ಮಾತು ಬಿಟ್ಟಿರಬೇಕು
ಶಂಕರ ತಾನೋಡಿ ನಕ್ಕಿರಬೇಕು ||4||
ಧರ್ಮವೆಂದರೆ ದಯಾಮನ ಇರಬೇಕು
ಕರ್ಮಕ್ಕೆ ಸಿಲುಕದೆ ಕಡೆಗಾಗಬೇಕು
ನಿರ್ಮಿತ ಪರವಗ ನೀಲಕಂಠರಿರಬೇಕು
ಧರ್ಮ ಶ್ರೀಗುರುವಿನ ದಯವಿರಬೇಕು ||5||

ವರವ ಪಾಲಿಸು ಎನಗೆ
ವರವ ಪಾಲಿಸು ಎನಗೆ ಸೂಗೂರು ವೀರ ವರವ ಪಾಲಿಸೆನಗೆ ||ಪ||
ವರವ ಪಾಲಿಸು ಎನಗೆ ಮರಣ ರಹಿತ ನಿಮ್ಮ
ಚರಣ ಕಮಲವ ನೆರೆ ನಂಬಿದೆನಯ್ಯ ||ಅನುಪಲ್ಲ||
ಮೃಢನ ಉರಿಗಣ್ಣಿನಿಂದ ಉದ್ಭವಿಸಿ ಕಿಡಿ ಕಿಡಿ ಸೂಸುತ
ಸಿಡಿಲಿನ ಪರಿಯಂತೆ ತೋರಿ ಸೂಗೂರು ಭಕ್ತರ
ತೊಡರು ಬಾರದೆ ಗಡಣದೊಳಗೆ ನಿಮ್ಮ ||1||
ಅಹಂಕಾರ ಬಂದವರ ಹಲ್ಲನೆ ಮುರಿದ ಬಿಂಕದ ದೊರೆಯೆ ಕೇಳೊ
ಟೊಂಕದಲಿ ಬಾಕು ವಂಕಿ ತೋಳು ಭಾಪುರೆ|
ಶಂಕರ ಸುತನೆ ನಿರಹಂಕಾರಯುತ ನಿಮ್ಮ ||2||
ನೀಲ ವಜ್ರದ ತುರಾಯಿ ಫಣಿಯಲಿ ಬಾಲ ಚಂದ್ರ ಮೌಳಿ
ಡಾಲು ಫಿರಂಗಿಯ ಮೇಲಾದ ವಡ್ಯಾಣ ಪಾದ ಪೆಂಡಿಯಲಿ
ಲೋಲ ಪರಪ್ಪಯ್ಯಗೆ ವರವ ಪಾಲಿಸೋ ಸೂಗೂರು ವೀರ ||3||

ಸಣ್ಣವರು ದೇವಿ
ಸಣ್ಣವರು ದೇವಿ ಪರಿಹರಿಸೆ ಚಲ್ವ ಪುಣ್ಯ
ಪುತ್ಥಳಿ ಬೊಂಬೆ ಪೂರ್ಣ ದಯಾಳೆ ||ಪ||
ಎಲ್ಲ ದೇವರ ದೇವಿ ವಲ್ಲಭೆಯಾವರ ಮೂರ್ತಿ
ಸೊಲ್ಲುಸೊಲ್ಲಿಗೆ ನಿನ್ನ ಸ್ತುತಿಸುವರು ಬಹುಜನರು
ಬಲ್ಲ ಭಕ್ತರ ಪ್ರೇಮಿ ಬಡವರಿಗೆ ಬಾಂಧವಿ
ಬಿಲ್ಲು ಕಸರಿಲ್ಲದೆ ಬಿರಿದುಂಟು ಮಾಡೋ ||1||
ಹಸಿವು ತೃಷೆಗಳಿಲ್ಲ ಹಡೆದವರಿಗೆ
ಹಗಲಿರುಳು ದೆಸೆಗೆ ಬಾಯಿ ಬಿಡುವರು ದೇವಿ ಮೊರೆ ಕೇಳೆಂದು
ಶಿಶುವಿಗೆ ಸೆರೆ ಬಿಡಿಸು ಶ್ರೀಘ್ರದಲಿ ಬಂದು
ಎಸೆವುದು ಕೀರ್ತಿವೇಣಿ ಲೋಚನೆಯೇ ||2||
ಗ್ರಹ ಹಿಡಿದ ಚಂದ್ರ ಘಾಸಿಯಾದ ತೆರದಿ
ಪ್ರಾಣಿಗಳು ಬಳಲುವವು ಪ್ರತಿಷ್ಠೆ ಮಾಡಮ್ಮ
ಆಣೆ ನಿನ್ನದು ಕೋಟಿ ಆರ್ಭಟ ನಿಲ್ಲಿಸು ತಾಯಿ
ಕಾಣಬಂದಾ ಮೈಲಿಗೆಯ ಕಳೆಯೇ ಕಾಮಾಕ್ಷಿ ||3||
ಸತ್ಯವರಗಳನ್ನು ತೋರಿದಿ ಸಾವಿರ ಮುಖದಲ್ಲಿ
ನಿತ್ಯನ್ನ ಸವಿದುಂಬಿ ನಿಜ ರೂಪದಲ್ಲಿ ಬಂದು
ಮುತ್ತಿಗೆಯ ಹಾಕಿದ ಮೃತ್ಯುವನು ಪರಿಹರಿಸೇ
ನೀ ಎತ್ತಿ ಹಿಡಿಯೇ ಅಭಯ ಹಸ್ತವಿಶ್ವ ಕುಟುಂಬಿ ||4||
ಹುಗ್ಗಿ ಹೋಳಿಗೆ ತುಪ್ಪ ಕುಂಕುಮ ನಿನಗೆ
ದೀರ್ಘಾಯುಷ್ಯ ಕೊಡು ಅಂಬರವನಿಟ್ಟು
ಎಗ್ಗು ಎಣಿಕಿಲ್ಲದೆ ಕೊಟ್ಟು ಪರ್ವಗೆ
ದಯ ನೀಡಿ ಶೀಘ್ರದಲಿ ಸಲಹಮ್ಮ ಸತ್ಯಸುಮಾತೆ ||5||

ಸತ್ಯ ಸಖನ ಮಾಡೆಂದೆ
ಸತ್ಯರ ಸಖನ ಮಾಡೆಂದೆ ಎನ್ನ
ಚಿತ್ತದೊಳಿರು ಪ್ರಭು ತಂದೆ ||ಪ||
ಕಿನ್ನರಿಯ ಬ್ರಹ್ಮಯ್ಯ ಸತ್ಯ
ಪ್ರಸನ್ನವಾಗಿರು ಪ್ರಭು ನಿತ್ಯ
ಹನ್ನೊಂದು ಹಣ ಅಘಹರಳು ಪಡಕೊಂಡು
ಚೆನ್ನಾಗಿ ಗುರುವಿಗೆ ಉಣಿಸ್ಯಾಡುವಂತೆ ||1||
ವೇದವು ನಾಲ್ಕು ಕಲ್ಲಯ್ಯ
ಓದಿಸಿದ ಶ್ವಾನನ ಕೈಯಲಿ
ವಾದವ ಗೆಲಿದ ಉನ್ನತ ಕೀರ್ತಿ
ಆದನು ಗುರುವಿನಂಘಿಯ ಕಂಡಂತೆ ||2||
ವರಮೂರ್ತಿ ನಾಗಯ್ಯ ಶಕ್ತ ಲಿಂಗವ
ಚರಣಕೆ ಧರಿಸಿದ ಪರಮ ವಿರಕ್ತ
ಕೊರೆದರೆ ಪ್ರಾಣವು ಕೊಟ್ಟಂತೆ ಮರಳಿರೆ
ಹರಗುರು ಶಾಂತಯ್ಯನೆನುತಲಿ ಇದ್ದಂಥ ||3||
ಸತ್ತಂತ ಬಸವನ ಪ್ರಾನಮಾನ
ಅರ್ತೀಲೆ ಪಡೆದ ನಿರ್ಮಾಣ
ಸತ್ಯ ಪೈಗಂಬರನ ಸರ್ವ ಪವಾಡವು
ಎತ್ತೆತ್ತ ಅಲ್ಲಮನೊಳು ಏಕವಾಗಿದ್ದಂಥ ||4||
ಎಲ್ಲ ಶರಣರ ಬಲಗೊಂಡು
ಕರೆವೆ ಅಲ್ಲಮಪ್ರಭುವಿನ ದಂಡು
ಸೋಲಿಸಿ ಪರುವಾಗ ಸುರಿಸಿದಮೃತವನ್ನು
ಎಲ್ಲ ಗಣಂಗಳಿಗೆರಗಿ ಅರ್ಪಿಸುವಂಥ ||5||

ಸದ್ಗುರುವಿನ ಪಾದವೇ ಗತಿಯೆನಗೆ
ಸದ್ಗುರುವಿನ ಪಾದವೇ ಗತಿಯೆನಗೆ
ಮೋದದಿ ದಶವಿಧ ನಾದವ ಕೇಳಿದಾ ವೇದ ಮೂರುತಿಯಾ ||ಪ||
ಆರು ಸ್ಥಲಂಗಳೊಳು ಆರು ಲಿಂಗವ ಕೂಡಿ
ಮೀರಿದುನ್ಮನಿಯೊಳು ಸೇರಿದ ಮಹಿಮನಾ ||1||
ಗಂಗಿಯ ಮುನಿಗಳು ಸಂಗಮದೊಳು ಮಿಂದು
ಅಂಗ ಮೂರನಳಿದು ಲಿಂಗದೊಳಾದ ಮಹಿಮನಾ ||2||
ಲಕ್ಷದೊಳು ಲಕ್ಷ ಕೂಡಿ ಲಕ್ಷದೊಳು ಲಯವಾಗಿ
ಮೋಕ್ಷ ಕೊಡುವಂಥಾ ಸಾಕ್ಷಾತ್ ಮಹಿಮನಾ ||3||

ಸಂತಿಗೆ ಬಂದವರು ನಾವೆಲ್ಲಾರು
ಸಂತಿಗೆ ಬಂದವರು ನಾವೆಲ್ಲಾರು
ಚಿಂತಿಯ ಮರತರಗಳಿಗೆ ನಿಲ್ಲೋರು ||ಪ||
ಎಚ್ಚರಿಕೆ ಮನದಲ್ಲಿ ಯೇನೇನು ಇದ್ದದ್ದು
ಹಚ್ಚಿ ಹೇಳುವರುಂಟೆ ಹೃದಯದಲ್ಲಿ|
ಗಿಚ್ಚ ಗಂಣನ ಶುೃತಿಗೆ ಕಿವಿಗೊಡು ನೀನೆಂದು
ಬಚ್ಚಿಟ್ಟು ಲೆಕ್ಕವನು ಬಿಡದೆ ಕೊಂಬುವರು ||1||
ಹೊಸಪೇಟೆಯೊಳ ಹೊಕ್ಕು ನಸುಕಲಿ ನಗಿ ಮಾತು
ವಿಷಯಕ್ಕೆ ಮನಸೆಲ್ಲಯಿಡುತಲಿ ಮಾತಾಡಿ|
ಶಶಿಧರನ ಸಕಲ ಸತಿಸುತರೆಂಬುವ ಮೋಹ
ಮುಸುಕಲ್ಲಿ ಮಾತಾಡಿ ಮುಂದಾಗಿ ಹೇಳ್ಯಾರು ||2||
ಹಣದ ಆಕಾಂಕ್ಷೆ ಹತ್ತಿದವರಿಗೆ
ದಣಿಯೆ ನಾನೆಂಬೊ ಧಿಮಾಕಿನಲ್ಲಿ
ಕುಣದಾಡಿ ಮನುಜರನ ಕರವರಿಯದವನೆಂದು
ಎಣಿಕೆ ಮಾಡುವಾಗ ಏನೆಂದು ಹೇಳವರು ||3||
ಕಾಲಹರನ ಕೀರ್ತಿ ಕೆಡಬಾರದೆಂದು
ಮೇಲಾಗಿ ಸ್ತುತಿಸುವರು ಮೇಲೆ ಕಂಡವರು|
ನೀಲಕಂಠನ ಭಕ್ತ ನಿರ್ಮಲ ಪರುವನಿಗೆ
ಆಲಿಸಿ ವರ ಕೊಟ್ಟ ಪರಮಾತ್ಮನೆಂಬುವರು ||4||

ಸರ್ವ ಜೀವ ದಯಾಪರ
ಸರ್ವ ಜೀವ ದಯಾಪರನೆಂದು ಬಿರುದು ಸಾರುವೆ ಭಿನ್ನವಿಲ್ಲದೆ ನಿಂದು ||ಪ||
ವರವ ಕೊಟ್ಟು ಸಲಹು ದಯಾಸಿಂಧು ಮರಣವಿದೂರ
ಮಾರ್ಮಲೆತ ದುಸ್ಮನರ ಹರಣ ಸಂಹರನೇ ||1||
ಹರುಷಾಬ್ಧಿ ಶೂರ ಹರಿಣನಾಳ್ಬನ ಧರ ಅಜಶಿರಕಾರ ಶಶಿಧರನೆ
ಮನೋಹರ ಶಂಕರನೆ ಧೀರ ಆಶಾವಿರಹಿತ ಅಲ್ಲಮ ಅಜಾತ ರಾಶಿದೈವನೆ ||2||
ಪಿತನೆ ರಕ್ಷಿಸುವಾತ ಕಾಶಿ ವಿಶ್ವನಾಥನೆ
ಪರ್ವತಗೆ ಕೊಟ್ಟ ಭಾಷೆ ನಡಿಸುವಾತನೆ ಭಕ್ತಿಗೆ ಸೋತನೆ ||3||
ಅನಾದಿ ಬಾಂಧವನೇ ಅಮೃತ ಸಂಜೀವನೆ
ಆದರಿಸಿ ಕಾಯ್ವ ನಿಟಿಲಾಕ್ಷ ದೇವನೆ ||4||
ಕನಸಿನ ಭಾವ ಕರದೊಳು ಈವ ಮನಸಿನ ವಿಸ್ತಾರ
ನಗರ ಪರವಾನ ವರನೆ ||5||

ಸಾರಂಗ ನಯನೆ ನೀ ಸಾರೊ
ಸಾರಂಗ ನಯನೆ ನೀ ಸಾರೋ
ಆತ ಬಾರದಿದ್ದರೆ ಶಖಿಯದುಂಗುರವ ತೋರೊ ||ಪ||
ಕುಂಭ ಕುಚದ ನಡುವೆ ಬಂದು
ಕೋರಂಬು ತಾಕಲು ನಾರಿ ನಡುಗಿದಳೆಂದು
ಬೊಂಬೆ ಆದಳು ಬೆರಳು ನೊಂದು
ನಿನ್ನ ನಂಬಿದವಳ ಭ್ರಾಂತ ನಡೆಸಬೇಕೆಂದು ||1||
ಸೆಳೆ ಮಂಚದೊಳು ಕಂಡ ಕನಸು
ಆಕೆ ತಿಳಿದು ಹೇಳಿದಳಯ್ಯಾ ನೀ ಬಂದ ದಿನಸು
ಎಳೆದುಂಬಿ ಗುರಳಿಯ ಮನಸು
ಇಕ್ಕಿಕಳೆ ಹೇಳ ಬಾರಯ್ಯ ಇನ್ಯಾಕೆ ಮುನಿಸು ||2||
ಕಸ್ತೂರಿಯ ಮೃಗವು ಕಮಲಾಕ್ಷಿ
ಎರಡು ಹಸ್ತಗಳು ಮುಗಿದು ಹೇಳಿದಳು ಶಿವಸಾಕ್ಷಿ
ಹಸ್ತಗಮನೆಯಂದುಪೇಕ್ಷಿಸಿ
ಕೇಳು ಸ್ವಸ್ತಿಯಿಂದೆರಗಿದಳು ಈಡು ದಯಸಾಕ್ಷಿ ||3||
ಪಂಕಜ ಮುಖಿಯೇ ನಿಮ್ಮ ಅಡಿಗೆ
ಬಹಳ ಕಿಂಕರಳಾಗಿ ಕೀರ್ತಿಸುವಂತ ನುಡಿಗೆ
ಝೇಂಕರಿಸುವ ತುಂಬಿ ಮುಡಿಗೆ
ಕೇಳಿ ಶಂಕರ ನಡೆತಂದ ಅವಳಿದ್ದಯೆಡಿಗೆ ||4||
ಬಂದ ದೇವನು ಒಡಗೂಡಿ
ಪಾದಕೊಂದಿಸುವೆನುತೆ ಹಾಡುವ ಮೃದನುಡಿ
ಚಂದ್ರಶೇಖರ ಮೆಚ್ಚಿ ಬೇಡೆಂದು
ಪರ್ವಗೆ ಕೊಟ್ಟ ಭ್ರಾಂತ ಕೈಗೂಡಿ ||5||

ಸಾರುವೆ ಸಟೆಯಲ್ಲ
ಸಾರುವೆ ಸಟೆಯಲ್ಲ ಸರ್ವ ಜನರ ಮುಂದೆ
ಮಾರಹರನ ಬಿರಿದು ಮನಸ್ಸಿಗೆ ಬಂದೈತೆ ||ಪ||
ಕೂಡು ಉಂಡು ಮಾದರ ಕುಲ ಛಲ ಎಣಿಸದೆ
ಬ್ಯಾಡರ ಕನ್ನನ ಭಕ್ತಿಗೆ ಬೆಸನಾದೆ
ಅಡಗೀದ ಕೈ ಕೊರುವರಾತ್ಮದೊಳಗೆ ಹೋಗಿ
ಜಡಿದು ಹೊನ್ಮಳೆ ಜಗದೊಳು ಸುರಿಸಿಸನೆಂದು ||1||
ಕರಸ್ಥಲದಯ್ಯನು ಕಟ್ಟದ ಸರವಿಗೆ
ಕುರಿ ಹಿಕ್ಕಿಯೊಳು ವರವಾ ತೋರಿಹನೆಂದು
ಬಿರಿದುಳ್ಳ ಪಾರ್ಥನ ಬಿಲ್ಲು ಪೆಟ್ಟಿಗೆ ಬಿದ್ದು
ಧೀರರ ಅರಮನೆ ದ್ರವ್ಯ ಶ್ರದ್ಧಾನೆಂದು ||2||
ಕನಸಿನಾ ರಸ ಬೇರುಂಡ ಹಕ್ಕಿಯ ತೋರಿ
ಅಡಪಿಗನಾದನೋ ಹರುಷಾದಿ ನಂಬಿಗೆ
ಜಡಿಗಳ ಮರಿ ಮಾಡಿ ಹೆಡಿಗಿಯ ಹೊತ್ತನು
ಬಡವಿಯ ಮಗನಿಗೆ ಭಾವನಾದನೆಂದು ||3||
ಸಿರಿಯಾಳ ಚಂಗುಳಿಯ ಶಿಶುವಾ ಕೊಂದುಂಡನು
ಹರವಿಯ ಹಾಲನೆ ಸವಿದು ಹಸುಳೆಯ ಕೈಯಿಂದ
ಹರುಷಾದಿ ಚನ್ನಯ್ಯ ಪರುಷವ ಪಡೆದಾನು
ಪರವೆ ನಾಬಿಯ ಕುಚದಿ ಪಡಿ ಹೊನ್ನ ಕೊಟ್ಟನೆಂದು ||4||
ಮೊದಲು ಸ್ತ್ರೀಯಳ ಬೇಡಿ ಮೊಲೆಗಳನುಂಡನು
ಮಧುಸೂದನನು ತನ್ನ ಮಾವನ ಮಂದಿರ ಕಾಯ್ದನು
ನಂದಿಧರನೊರವಿಟ್ಟು ನಗರ ಪರ್ವಗೆಯಿತ್ತು
ಪರ್ವತದೊಳು ವಾಸವಾದನು ||5||

ಸಾಕ್ಷಿ ಪೇಳುವರಾರು
ಸಾಕ್ಷಿ ಪೇಳುವರಾರು ಮೋಕ್ಷ ದಾಯಕನೇ
ಶಿಕ್ಷ ನಿನ್ನಿಂದ ಅಧಿಕ ಎನಲಾಗಿ ಶಿವನೇ ||ಪ||
ಆದಿಗೆ ಅನಾದಿಯ ಬಾಧೆ ಬಿಡಿಸುವನು ನೀನೆ
ಸಾಧನದ ಶಿವಮಂತ್ರ ನುಡಿಸುವಾತನು ನೀನೆ
ಸಾಧು ಸತ್ಪುರುಷರೊಳು ಕೂಡಿ ಅಗಲುವವ ನೀನೆ
ನಾದದೊಳು ಕುಣಿಕುಣಿವ ವಿಧಿಮಾಯೆ ನೀನೆ ||1||
ಜಾಣನು ಲೌಕಿಕ ಶ್ಯಾಣೇತನವು ನೀನೆ
ಅಣು ಮಾತ್ರ ಸುಖವೆಂದು ಕ್ಷಣ ಮಾತ್ರ ನೀನೆ
ಎಣಿಕೆಯಲ್ಲದ ವಸ್ತು ಪ್ರಾಣದೊಲ್ಲಭನು ನೀನೆ
ದಣಿದಣಿದು ಹಣ ಗಳಿಸಿ ಋಣಮುಕ್ತ ನೀನೆ ||2||
ಗಾತ ದಯಾಳ್ದನು ಸೂತ್ರಧಾರಿಯು ನೀನೆ
ಮಾತು ಮಾತಿಗೆ ತತ್ವ ಕೊಟ್ಟಾತ ನೀನೆ
ಜಾತ ಧರ್ಮದ ನೆಲೆಯು ಪ್ರೀತಿಯಾದವ ನೀನೆ
ಶತಿ ಕಂಠ ಗುರು ಶರಭ ಮಹಾ ಪ್ರಭುವೆ ನೀನೆ ||3||

ಶೃಂಗಾರವಾಗಿಹಳು
ಶೃಂಗಾರವಾಗಿಹಳು ಶೂಲಧರನಡಿಗೆ|
ಮಂಗಳ ಭಾಗ್ಯಳು ಮನಬಂದ ವಸ್ತುವ ತೊಟ್ಟು ||ಪ||
ಮರವೆಂಬ ಮನ ತೊಟ್ಟು| ಮೈಲಿಗೆಯನೆ ಬಿಟ್ಟು|
ಇಹ-ಪರವು ಒಂದೆಂಬ ಇಂಪಿನ ಮಡಿಯುಟ್ಟು
ಅರಹು ಸುಜ್ಞಾನದ ಅಂಜನಂಗಿಯ ತೊಟ್ಟು
ಪರಸತಿಗೆ ಮೈಯೊಳ ಪಾಪಕ್ಕೆ ನಡು ಕೆಟ್ಟು ||1||
ತೆರವಾದ ಸುತ್ತ ತಿಳಿಗುಣವೆಂಬ ಮುಂಡಾಸ|
ನಿರುಪಾದ ಗುಣ ಉಳಿದು| ನಿಧಾನದ ಹಚ್ಚಡ ಹೊದ್ದು
ಕರವೆತ್ತಿ ಮಾಡೋ ಧರ್ಮವೇ ||2||
ಕನಕದಾಭರಣ ಇಂತು ವರಗುರು ಧ್ಯಾನದ
ಒಂಟಿ ಜೋಡನೆ ಉಟ್ಟು
ಆರೆರಡು ಗುಣವೆಂಬ ಅಡಿಗೆ ಆತ್ಮದಿ ಕಡಿದು
ಮೂರೆರಡು ಗುಣಗಳ ಮುರಿದು
ವೀಳ್ಯವ ಮಾಡಿ ಬಾಯಿ ಸವಿಯೆಂಬ
ಸತ್ಯರ ಒಡಗೂಡಿ ಮಾರನಂಘ್ರಿಗೆ ಎರಗದೇ
ಪರುವಾಗ ಮನದಿ ||3||

ಶರಣೆಂದು ಪಿಡಿವೆ ಶ್ರೀಗುರು ಪಾದ
ಶರಣೆಂದು ಪಿಡಿವೆ ಶ್ರೀಗುರು ಪಾದ| ದಯ
ಕರುಣದಿಂದ ಎನ್ನ ಕಾಯ್ದ ಪಾದ ||ಪ||
ವಾದ ತರ್ಕಕ್ಕೆ ವಜ್ಜೆ ಪಾದ
ವೇದ ಶಾಸ್ತ್ರಕ್ಕೆ ನಿಲುಕದ ನಿಜಪಾ
ಆದಿ ಅನಾದಿಗಾಧಾರವಾದ ಪಾದ ಸತ್ಯ
ಸಾಧು ಸಜ್ಜನರು ಪ್ರಾರ್ಥಿಸುವ ಪಾದ ||1||
ಪಾಪವಿದೂರ ಪಾವನ ಪಾದ
ಮುಕ್ತಿ ಸೋಪಾನ ಸುರರಿಗೆ ಪಾದ
ವಿಪರೀತವಾದ ವಿಶ್ವರೂಪವಾದ
ನಿತ್ಯ ಜಪತಪ ಜನಜಾತ ಹೊರುವುದೀ ಪಾದ ||2||
ಆರೆಂಟು ಲೋಕವಾಳುವ ಪಾದ
ಭಕ್ತಿ ಸಾರ ಶರಧಿಯ ಸವಿಗೊಂಬ ಪಾದ
ಘೋರ ಪಾತಕ ಪರಿಹಾರ ಪಾದ
ಪುಣ್ಯ ವಾರಿಧಿ ಎನಿಸಿತು ವಸುಧೆಗೆ ಪಾದ ||3||
ಕಂಟಕ ದುರಿತವ ಕಳೆವುದೀ ಪಾದ
ವೈರಿ ಗಂಟಲ ಗಾಣವು ಘನ ಮಹಿಮನ ಪಾದ
ಉಂಟೆನ್ನ ಪವಾಡ ಉದ್ಧಾರ ಪಾದ
ಕೀರ್ತಿ ಎಂಟು ದಿಕ್ಕಲಿ ತುಂಬಿದ ಶಿವ ಪಾದ ||4||
ಸರ್ವ ಪುಣ್ಯಕ್ಕೆ ಅಧಿಕವಾದ ಪಾದ
ಕಾಶಿ ಪರ್ವತ ಹಂಪಿ ರಾಮೇಶ್ವರ ಪಾದ
ಪೂರ್ವದಲಿ ಪುಣ್ಯಪೂಜಿತ ಪಾದ
ನಗರ ಪರುವನಿಗೆ ಸಾಯುಜ್ಯವೀವ ಪಾದ ||5||

ಶಾಂತ ಮೂರುತಿ ತನ್ನ ಕರದೊಳಗಿದ್ದು
ಶಾಂತ ಮೂರುತಿ ತನ್ನಕರದೊಳಗಿದ್ದು ಮನದ
ಚಿಂತೆ ಬಂದರೆ ಕ್ಷುದ್ರ ದೈವಕ್ಕೆರಗುವರೆ ||ಪ||
ಹಾಲು ಸಾಗರ ತನ್ನ ಹತ್ತಿರ ಇರಲಿಕ್ಕೆ
ವಾಳಿ ಆಕಳ ಹಿಂಡ ಓಡ್ಯಾಡಬಹುದೆ
ಹೋಳಿಗೆ ಹುಗ್ಗಿ ತುಪ್ಪ ಹೊತ್ತುಕೊಂಡು ಪರರ
ಆಳಾಗಿ ಅಂಬಲಿಯ ಬೇಡಿ ಉಣ್ಣಬಹುದೆ ||1||
ತನಗೊಲಿದು ತಾಳಿಯ ಕಟ್ಟಿ ಆಳುವನಿದ್ದು
ಅನ್ಯ ಪುರುಷರಿಗೆ ಅಳವಡಬಹುದೆ
ಹನ್ನೆರಡು ಬಣ್ಣದ ಹಸ್ತಕಡಗವಿದ್ದು
ಇನ್ನು ಹಿತ್ತಾಳೆ ಬಳೆಯ ಇಡಿಸೆನ್ನಬಹುದೆ ||2||
ಮಂಚದ ಸುತ್ತಮುತ್ತ ಮಹಾಂತ ನಿಲುಗನ್ನಡಿಯಿದ್ದು
ಹಂಚಿಕೆ ಹಲ್ಲು ತೆರೆದು ಫಲವೇನು
ಪಂಚ ಬ್ರಹ್ಮರ ತರುಳ ಪರುವನ ಪಾಲಿಸುವಂಥ
ಪಂಚಮುಖ ಪ್ರಭು ಇದ್ದು ಪರದೈವಕ್ಕೆ ಎರಗುವರೆ ||3||

ಶಿವನೆ ಶ್ರೀಮನ್ಮಹಾದೇವ
ಶಿವನೆ ಶ್ರೀಮನ್ಮಹಾದೇವ ಪುಷ್ಪಕೆ ಆರ್ತಿತು ಮೋಹ
ಭುವನದ ಭಕ್ತರಿಗನುಭಾವದ ಪೂಜೆಯ ಕೇಳೆಲೊ ಜೀವ ||ಪ||
ಕಸ್ತೂರಿ ಕಮ್ಮೆಣ್ಣೆ ಪುನುಗು ಕದಂಬಾ
ಮಸ್ತಕ ಬಿಚ್ಚಿ ಪುಟೆಯ ಗೊಂಬೆ
ವಿಸ್ತರದಿಂದ ಪೂಜೆಯ ಕೊಂಬಾ
ವಸ್ತು ಹುಲಿಚರ್ಮ ತಲಿಗುಂಬಾ ||1||
ವಿಭೂತಿ ಗಂಧಾಕ್ಷತೆಯಿಟ್ಟು
ನಾಭಿ ಕಮಲ ಸಾವಿರ ತೊಟ್ಟು
ಅಭವನ ತ್ರೈ ಮುಖಗಳಳವಟ್ಟು
ಲೋಬಾನ ಕರ್ಪುರಗಳ ಸುಟ್ಟು ||2||
ರುಂಡಮಾಲಿಯಾ ಹಾರವ ಹಾಕಿಕೊಂಡು
ಕೆಂಡಗಣ್ಣಿಗೆ ಕಾಮನ ನೂಕಿ
ಕೊಂಡೊಯ್ದ ಭಸ್ಮ
ಸರ್ವಾಂಗ ಪೂಸಿ ಪೂಜೆ ನೋಡಾ ||3||
ಕೇಳು ಸಾವಿರ ಶಂಖ ಘಂಟಾನಾದ
ಬಾಳ ಸಕ್ಕರೆ ಜೇನು ಹಾಲಿಲಿಂದೆ
ಬಾಳಾಕ್ಷಗೆ ಸಮರ್ಪಿತವೆಂಬೆ ||4||
ಸುರರು ಪುಷ್ಪದ ಮಳೆಗರೆವುತಲಿ
ಪರಶಿವನ ಪಾದಕ್ಕೆ ಎರಗುತಲಿ
ವರವು ನಿರ್ಮಿತ ಪರುವಗೆ
ಧರೆಯೊಳು ಮೆರೆವ ವೀರೇಶಗೆ ||5||

ಹತ್ತುಪ್ಪ ಹಾಲು ಸಕ್ರಿ ಕೂಡಿದಂಗ
ಅಲ್ಲದವರಿಗೆ ಮಾಡಿದ ಉಪಕಾರವು
ಯಲ್ಲಾರು ನೀವು ಕೇಳಿರಣ್ಣ |
ಕಲ್ಲು ಸಕ್ರಿ ಜೇನು ಕತ್ತಿsಗೆ ಮೇಸಿದರೆ
ಕಾಳಗಕ್ಕೆ ತೇಜ ಆದಿತೇನಣ್ಣ ||ಪ||
ಉತ್ತಮರಿಗೆ ಮಾಡಿದ ಉಪಕಾರವು
ಹತ್ತುಪ್ಪ ಹಾಲು ಸಕ್ರಿ ಕೂಡಿದಂಗ |
ಪ್ರತಿಷ್ಠೆಯs ಮನುಜ ಬಿಟ್ಟರs ಪ್ರಾಣವ
ಅತ್ತ ನರಕಕ್ಕ ಹೋಗೋದು ಕೇಳಿರಣ್ಣ ||1||
ಬಲ್ಲವರಿಗೆ ಮಾಡಿದ ಉಪಕಾರವು
ಬಿಲ್ಲು ಝೇಂಕರಿಸಿದಂತೆ ನೋಡಿರಣ್ಣ |
ಅಧಮರಿಗೆ ಮಾಡಿದ ಉಪಕಾರವು
ಖಿನ್ನವಾಗುವುದು ಮುಂದೆ ಕೇಳಿರಣ್ಣ ||2||
ಸಾಧು ಸತ್ಪುರುಷರಿಗೆ ಮಾಡಿದುಪಕಾರವು
ಸಾಧನವಾಗುವದು ಸ್ವರ್ಗಕೆ ಕೇಳಿರಣ್ಣ |
ಈ ಧರೆಯೊಳು ಪರುವನ ವಿಸ್ಮಯ ರೂಪನ
ಪಾದಕೆರಗಿ ನೀವು ಪುಣ್ಯ ಪಡೆಯಿರಣ್ಣ ||3||

ಹಳ್ಳದ ರಾಚಯ್ಯ
ಹಳ್ಳದ ರಾಚಯ್ಯ ಆರಿಗೂ ತಿಳಿಯದು ನಿನ್ನ ಮಾಯೆ ||ಪ||
ಹಳ್ಳದ ರಾಚಣ್ಣ ಪುಂಡ
ಮಲೆತ ದುಷ್ಟರ ಗಂಡ
ಭಕ್ತರ ಭಕ್ತಿಯ ಕೈಕೊಂಡ
ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||1||
ಹಳ್ಳದ ರಾಚಣ್ಣ ಕೀರ್ತಿ
ದೇಶಕ್ಕೆ ಹರಿದಿತ್ತು ನಿನ್ನ ವಾರ್ತೆ
ಪಂಚಪೌರುಷದ ಮೂರ್ತಿ
ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||2||
ಮೂರು ಕಣ್ಣಿನ ಕಂದ
ಭದ್ರ ಕಾಳಮ್ಮನ ಕಂದ
ಗುಡ್ಡದಾಗೆ ಮನೆ ಮಾಡಿಕೊಂಡ
ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||3||
ಹಿಂದಕ್ಕೆ ಅಸುರರ ಸೀಳಿ
ವೀರ ಅವತಾರವ ತಾಳಿ
ಉಡುಪತಿಗೆ ತಂದೆಲ್ಲೋ ದಾಳಿ
ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||4||
ದೇಶಕ್ಕಧಿಕವಾದ
ವಾಸುಳ್ಳ ಯಾದಗಿರಿ ನಗರದ
ಬಂಡೆ ಮೇಲೆ ತೋರುವ ನಿನ್ನ ಪಾದ
ಸ್ವಾಮಿ ರಾಚಯ್ಯ ಆರಿಗೆ ತಿಳಿಯದು ನಿನ್ನ ಮಾಯೆ ||5||

ಹೂವ್ವನಿಲ್ಲದ ದೇವಪೂಜೆ
ಹೂವ್ವನಿಲ್ಲದ ದೇವಪೂಜೆ ಮಾಡಲು ಚಂದವೆ ಪರಮಹಂಸಾ
ಏಕೋ ಭಾವವಿಲ್ಲದ ಮನುಜ ಭಕ್ತನಾದರೆ ಚಂದವೆ ಪರಮಹಂಸಾ ||ಪ||
ಸತಿ ಸುತರಿಲ್ಲದ ಸಂಸಾರ ಮಾಡಲು ಚಂದವೆ ಪರಮಹಂಸಾ
ದೊಡ್ಡ ಯತಿಗಳಾದ ಮೇಲೆ ಇಂದ್ರಿಯ ಬಲಿಸದಿದ್ದರೆ ಚಂದವೆ ಪರಮಹಂಸಾ
ಮತಿ ಹೀನ ಮೂರ್ಕನು ಮಂತ್ರಿಯಾದರೆ ಚಂದವೆ ಪರಮಹಂಸಾ
ಗತಿಗೆಟ್ಟ ಮುದುಕಗೆ ಗಮಕದಾ ಸತಿ ಚಂದವೆ ಪರಮಹಂಸಾ ||1||
ಬಾಳೆಯ ಫಲ ಹಣ್ಣಾಗದೆ ಉಣಲು ಚಂದವೆ ಪರಮಹಂಸಾ
ಶಾಸ್ತ್ರ ಆಲಿಸಿ ಸವಿಯದ ಮಕ್ಕಳಿದ್ದು ಚಂದವೆ ಪರಮಹಂಸಾ
ಆಳು ಕುದುರೆಯಿಲ್ಲದ ಅರಸು ಇದ್ದು ಚಂದವೆ ಪರಮಹಂಸಾ
ಅಳುವ ಪತಿ ನುಡಿಯ ಕೇಳದ ಸತಿಯಿತದ್ದು ಚಂದವೆ ಪರಮಹಂಸಾ ||2||
ಫಲವ ಕಾಯದ ವೃಕ್ಷ ಬಲು ಬೆಳೆದರೇನು ಚಂದವೆ ಪರಮಹಂಸಾ
ನೆಲೆಗಾಣದ ನಾರಿಯ ನೆರೆ ನಂಬಿ ನಡೆದರೆ ಚಂದವೆ ಪರಮಹಂಸಾ
ಸಲುಗೆಯಿಂದ ಪರುವನು ಮಾಡಿದ ಕೃತಿಗೇಳಿ
ಸಲೆನಂಬಿ ಶಿವನ ಸತ್ಕೀರ್ತಿ ಸಡಿಲದೆ ಪಡೆ ನೀ ಪರಮಹಂಸಾ ||3||