Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಅಕರಾದಿ ತತ್ವಪದಗಳು

ಮರಕುಂದಿ ಬಸವಣ್ಣಪ್
ಅಡವಿ ವಾಸನ ತಂದೆ ನಿಮ್ಮಡಿ ಹುಡುಕುತ ನಾ ಬಂದೆ
ಅನ್ಯರಾತ್ಮದ ನೋವ ಯನ್ನಿಂದ ಕೊಳದಿರು
ಅನ್ಯರ ನಡೆ ನುಡಿ ಆರಿಸುವವರು
ಅಂಜದಿರಂಜದಿರಂಜದಿರು ಗುರು ಸಂಜಿವ ಸಿದ್ಧನ ಮರಿಯದಿರು
ಅಲಕ್ ನಿರಂಜನ ವೊಯಿ ಫಕೀರ
ಅನ್ಯರ ನಡಿ ನುಡಿ ಆರಿಸುವವರು ಅನಂತರುಂಟು ಜಗದಲ್ಲಿ
ಅಲ್ಲಹುದು ಮಾಡಿ ಬಿಟ್ಟಯಿಂತದು ಯಲ್ಲಿ ನಾ ಕಾಣಲಿಲ್ಲಾ
ಅಂತರಂಗವ ತಿಳಿಯಲಿಲ್ಲ ಸಾಧು ಸಂತರೆಂಬೊ
ಅನಾದಿಯಿರುವನು ಅಡವಿಯಲ್ಲಿ ಶಿವ ಅನುಭವದ ಮಂಟಪದಲ್ಲಿ
ಆಸಿ ಅಳಿದು ಪರದೇಶಿ ತಾನಾದ ಮೇಲಿನ್ನೆನಿನ್ನೇನೂ
ಇದ್ದರೆ ಬ್ಯಾಗ ಕಣ್ತೆರಿಯೊ ಯಿಲ್ಲದಿದ್ದರ ನೀಯನ್ನ ಮರಿಯೊ
ಇಷ್ಟ್ಯಾಕೊ ನಿನಗತಿಯಾಸಿ ಘೋರ
ಇಟ್ಟಂಗಿರಬೇಕು ಸದ್ಗುರು ಕೊಟ್ಟ ಗುಣ ಬೇಕು
ಇದ್ದು ಇಲ್ಲೆನಬೇಡಿರಣ್ಣ ಗುರು ಶಿದ್ಧಲಿಂಗನ ಬಾಕಿ ಕುಡತಕ್ಕದ್ದಣ್ಣ
ಇಷ್ಟ್ಯಾಕ ತಿಳಿವಲ್ಲಿ ಎಲೊ ಮೂಢ ಬರಿದೆ
ಇವ ಪರಿಯಲಿ ಹಾರ ಶರಣಾರು ಏಕೊ
ಎನಗ್ಯಾರು ದಿಕ್ಕಿಲ್ಲ ನಿನ್ನೊರತು ಗುರುಸಿದ
ಎಂತಾತ ಗುರು ನಮ್ಮ ಶಾಂತ ಮೂರುತಿ ಸಿದ್ಧ
ಎಂಥ ಅಚ್ಚರಿ ಮಾತಾಯಿತಲ್ಲ
ಎನ್ನಿಂದೇನು ಆದುದಲ್ಲಾ ನಿನ್ನಿಂದಾದ ಮಹತ್ವಿಯಲ್ಲ
ಎನ್ನ ಬೆನ್ನಿಗೆ ಚಿಕ್ಕ ಚನ್ನಬಸವನುಯಿರುವ
ಎಲೊ ಎಲೊ ತಿಳಿ ಹುಚ್ಚ ಮರುಳೆ
ಎನ್ನೊಳು ನೀವಿರ್ದು ಯನಗ ಕಾಣಿಸಕೊಳದೆ
ಎಂದೆಂದು ಛಲನಾಗದಂತ ದೀಕ್ಷವನು
ಎಂತ ಆಶ್ಚರ್ಯ ಮಾತಾಯಿತಲ್ಲಾ
ಎಷ್ಟು ಜೊಕಿ ಮಾಡಿದರೇನು ದೇಹ ಬಿಟ್ಹೊಹದು ತಪ್ಪುವದೇನು
ಎಲೋ ಎಲೋ ತಿಳಿ ಹುಚ್ಚ ಮರುಳೆ ನೀನು ಹಗಲಿರುಳೆ
ಎನ್ನ ಸ್ವತಂತ್ರ ಯಿನಿತಿಲ್ಲ ಗುರು ಬೆನ್ನಹತ್ತಿ ಮಾಡಿಸುತಿಹನಲ್ಲಾ
ಎಲ್ಲರ ನಡಿ ನುಡಿಗೆ ಅಲ್ಲಮನ ಚೇತನವ
ಎಲ್ಲಾರು ನಮಗಷ್ಟೆ ಗುರುವೆ ಎಲ್ಲರಿಗಿ ನಾವಷ್ಟೆ
ಎತ್ತನೋಡಿದಡತ್ತ ಗುರು ಸಿದ್ಧಲಿಂಗನು
ಎನಗ್ಯಾರು ದಿಕ್ಕಿಲ್ಲ ನಿಮ್ಮ ಹೊರತು ಗುರುಸಿದ್ಧ
ಎಪ್ಪ ಎಪ್ಪಯೆಂದು ಎನಗೆ ಒಪ್ಪಿಸಿ ಕರೆದಂತವರೆಲ್ಲ
ಏನಾರ ಮಾಡಯ್ಯ ನೀನು ಗುರುವೆ ನೀನೆ ಗತಿಯಂದು ನಂಬಿಕೊಂಡೆನು
ಏನಾರ ಮಾಡಯ್ಯ ನೀನು| ಮಹಾದಾನಿ ಶ್ರೀ ಗುರುಸಿದ್ಧ ನಿನ್ನಾಳು ನಾನು
ಏನಾದರೇನು ಗುರುಧ್ಯಾನ ವಂದಾರೆ ಸಾಕು
ಏನೆನು ಅರಿಯೆನವ್ವಾ ನಾನು ಮಹ
ಏನಾದರೇನು ಈ ದೇಹ ಗುರು
ಓಂ ನಮಃ ಶಿವಾಯ ಕಲಿರೊ ನಾಯಂಬುದಳಿರೊ
ಒಂದೆಂದು ಭಾವಿಸದೆ ಎರಡಿಟ್ಟು ನೋಡುವರೆ
ಕರುಣಿಸಯ್ಯ ಬ್ಯಾಗ ನೀನು ದಯ
ಕಂದನ ಹಟ ತಾಯಿ ತಂದಿಗಳೆ ನಡೆಸುವರು
ಕರುಣಿಸು ಗುರುಸಿದ್ಧಯೀಗ ಅಂತಃಕರಣಮಯಿ ಕುವರಿಯ ಮ್ಯಾಗ
ಕಸ ನೀ ಹೊಡಿಯಮ್ಮ ಮನಸಿನ ವಾಸನ ಬಿಡು ಹಮ್ಮ
ಕರಕರಿ ಮಾಡ್ವರೆ ಕಂದ ಗುರು
ಕಹಿ ಸವಿ ಮಾಡಬಲ್ಲ ಪ್ರಸಾದಿಗಿ ಸವಿ ಕಹಿಯಾಗುವದುಂಟೇನು
ಕಳಕೊ ಬ್ಯಾಡೆಲೊ ಸ್ನೇಹ ತಮ್ಮ ಮನಸಿಗಿ
ಕಾಳ ವಡ್ಡತು ಜನಕ ಹೇಳತಿನ್ನಳವಲ್ಲ
ಕಿತ್ತೋಣಾದತ್ತ ಶೆಪ್ಪ ಹರಿಯೋಣಾದತ್ತ
ಕುಡುವವನ್ಯಾರೊ ಕೊಂಬವನ್ಯಾರೊ
ಕೂಡಿ ಅಗಲದಂತ ಸ್ನೇಹ ಮಾಡಿದೆ ತಂಗಿ
ಕೆಟ್ಟವರೊಬ್ಬರು ನನಗಿಲ್ಲ ನಾಯಾರಿಗಿ ಕೆಟ್ಟದು ಮಾಡಿಲ್ಲ
ಖೂನ ಹೇಳುವೆನು ಕೇಳೊಂದು
ಗರ್ಜಿನ ಮಾತಾಡುವದ್ಯಾಕೊ
ಗಳಿಸಿಕೊಳ್ಳಿರೊ ಘನಸುಕ ದೊರಿವದು
ಗುರುವೆ ತಂದಿತಾಯಿ ಗುರುವೆ ಬಂಧು ಬಳಗಾ
ಗುರುವಿನ ಭಜಿಸಿ ಕಾಲಭಯ ಕಳಿಯೊ
ಗುರುವಿನ ಭಜನಿ ಬಿಡದೆ ಮಾಡಣ್ಣ
ಗುರುವೆ ನೀ ಗತಿಯೆಂದು ಮೊರೆ ಹೊಕ್ಕೆ ನಿಮ್ಮನ್ನ
ಗುರುವೆ ನೀ ಬೇಗನೆ ಮೊರೆ ಕೇಳೊ
ಗುರುವೆ ನಿನ್ಹೊರತು ಯಾರಿಲ್ಲ ಗೊತ್ತು ಅರಿಯದೆ ನನ್ನವರಿವರೆಂದೆನಲ್ಲ
ಗುರುವೆ ನಿನ್ನ ಪಾದದ ಧ್ಯಾನ ಮರಿಯದಂತೆ ಮಾಡು ಯನ್ನನ
ಗುರುವೆ ನಿನ್ನಗ ಬಿಟ್ಟುದಲ್ಲ ನಿನ್ನ ನೆರೆ ನಂಬಿಕೊಂಡವರು
ಗುರುವಿನ ಬೋಧ ಪರಮ ವಿನೋದ
ಗುರುವೆ ನೀ ಗತಿಯಂಬ ಮಂತ್ರ ಅಚ್ಚೊತ್ತಿರೆ ಕೇಳು ಸಖಿಯೇ
ಗುರುವೆ ತಾಯಿ ತಂದಿ ಗುರುವೆ ಬಂಧು ಬಳಗ
ಗುರುವೆ ನಿಮ್ ಕರುಣಾಮೃತವ ನೀವೆಯನ್ನು
ಗುರು ಮಾಡಿದ್ದಾಗುವದಲ್ಲಾ ಗೊತ್ತರಿಯದೆ ಬಳಲಿತು ಜಗವೆಲ್ಲಾ
ಗುರು ಉಂಡು ಉಳಿದ ಪ್ರಸಾದ ಪರಮ ಹರುಷದಿಕೊಳ್ಳೋ
ಗುರು ಕರುಣಾಮೃತ ಗುರು ಪುತ್ರರಿಗೆ
ಗುರುವಾಜ್ಞೆಯಲಿ ನಡಿವ ಗುರುಪುತ್ರನ ಪರಿ ಬ್ಯಾರೆ
ಗುರುವಿನ ಮರಿಬ್ಯಾಡ ಗುರುವಿನ ಸ್ಮರಣಿಯ ಬಿಡುಬ್ಯಾಡ
ಗುರುವಿನ ಚರಣ ಶರಣರಾಭರಣ
ಗುರುವಿನ ಹೆಸರಿಟ್ಟರೇನು ಗೊತ್ತು
ಗುರುವೆ ನೀ ಮಾಡಿದ್ದಾಗುವದು ಬಿಟ್ಟಿ
ಗುರು ದ್ರೋಹಿಯಾದ ಗುಪ್ತ ಪಾತಕರಿಗೆ ಸೂತಕ ಮನಸಿನವರಿಗೆ
ಗುರುವಿಗೆ ಬೈದರ ಸಿಟ್ಟಿಲ್ಲ ನಾ
ಗುರುವೆ ನೀ ತಪ್ಪಿಸಿಕೊಂಡರೇನಾಯ್ತು
ಗುರುವೆಂದು ಭಾವಿಸಿದ ಪರಿಯಂತು ಪೇಳುವೆನು ಕರಮನ ಭಾವದಲಿ ತಮ್ಮ
ಗುರುವಿಟ್ಟಂತೆ ಇರುವೆನು ಗುಣ ಅರಿಯದ ಬಾಲಕ ಕರು ನಾನು
ಗುರುಲಿಂಗ ಜಂಗಮದ ಸೇವಕಾಗಿ ಚರಣದಾವಿಗಾಗಿ
ಗುರುಪುತ್ರನಾದವನು ನರರೊಳಗೆ ಸಮನಲ್ಲ
ಗುರುಶಿಷ್ಯರೀರ್ವರೊಂದಾಗಿ ಪರಮ
ಗುರುವಿನ ಮಗನಾನು ಶರಣರ ಸೇವದೊಳಿರುವೆನು
ಗುರು ಸಿದ್ಧಲಿಂಗಾನ ಘೂಳಿ ಕೊಲ್ಲ
ಗುರು ಕೊಟ್ಟದರೊಳು ಪರಿಣಾಮ ಉಂಡು ಉಟ್ಟು ಇರುವದವರ ನೇಮ
ಗುರು ಉಂಡು ಉಳಿದ ಪ್ರಸಾದ ಪರಮ ಹರುಷದಿ ಕೊಳ್ಳೊ
ಗುರುಲಿಂಗ ಜಂಗಮದವರ ವರಪುತ್ರನಾದವಗ
ಗುರುವೆ ನಿಮ್ಮಯ ಪಾದ ಕರದುಣಲು ಬಹು ಸ್ವಾದ
ಗಂಗಾಧರನೆ ನಿಮ್ಮ ನಂಬಿದೆ ಅಂತರಂಗ ಸಾಕ್ಷಿ ಮಾಡಿದೆ
ಗಂಡನ ಪುಣ್ಯವನು ಉಂಡುಟ್ಟು ಸುಖ ಬಟ್ಟೆ
ಗುಂಡಗುರಕಿಯವರು ಯಂತ ಹೆಂಡಗಾರರಿವರು
ಘನ ಘಾತಕ ಮಾಳ್ವರೆ ಗುರುಚನ್ನ ಬಸವಯ್ಯ ನೀವೆಮ್ಮಗೆ
ಚೀ ಛೀ ಎನ್ನರಣ್ಣ ಥು ಥು ಎನ್ನರಣ್ಣ
ಚಿಂದಿ ಭಿಕ್ಷಕ ಬಂದೆವಮ್ಮ
ಝಳ ಝಳ ಯಿರು ಕಂಡ್ಯಮನವೆ ಜೀವ
ಜಾತ್ರಿ ನೋಡಾಶ್ಚಯ್ವಾದೇನು ಶ್ರೀಗುರು ನಿಮ್ಮ
ಡಂಬಕತನ ಮಾಡಬ್ಯಾಡ ಜಗ
ತನ್ನ ತಾನೆ ತಿಳಿಯಬೇಕಲ್ಲ ತಾನಲ್ಲದಿಲ್ಲ
ತನ್ನ ತಾನು ತಿಳಿದ ಮೇಲ ಭೇದವೇನು ಮತ್ತೊಂದಾದವೇನು
ತನ್ನ ಪಾಲಿಗೆ ಗುರು ತಂದು ಕೊಟ್ಟಿ ಪಡಿ ತಾನೆ
ತಮ್ಮ ತಾವರಿಯದ ಹಿರಿಯರು ಪರಬ್ರಹ್ಮದ ಗೋಷ್ಟಿ ನುಡಿವರು
ತಾನಾಗಿ ಬಂದದ್ದು ಬರಲಿ ತನ್ನ ಸ್ಥಾನ ಬಿಟ್ಟು ಅಗಲದಿರಲಿ
ತಾನಾಗಿ ಬಂದದು ಬರಲಿ ಗುರುಯೆನು ತಂದದೆಲ್ಲ ತರಲಿ
ತಾಳು ತಾಳು ತಾಳು ಗುರು ವಾಕ್ಯವ ಕೇಳು
ತಿಳಿವಲ್ಲಿ ತಿಳಿವಲ್ಲಿ ಮನ ತೊಳಿವಲ್ಲಿ
ತೂಕ ನಿಟ್ಟಕ ತೊಗೊ ತಮ್ಮ ಘಾಸಿ
ತೊಳದರ ಏನು ಹೋಯಿತೊ ದೇಹವು ತೊಳಿದಿರಿಕೆ ನಾಯ್ತು
ತೊತ್ತು ಸೇವಾ ಮಾಡಬೇಕಣ್ಣ ನಿಜ ಗೊತ್ತು ತಿಳಿದು
ತಂದಿ ಬಸವಲಿಂಗ ನಮ್ಮ ತಾಯ ನೀಲಗಂಗ
ತಂಬೂರಿ ಬಜಾಸು ಬೇಕೊ ತಮ್ಮ ತಂಬೂರಿ ಬಜಾಸು ಬೇಕೊ
ದೃಢದಿಂದಲಿ ನಮ್ಮ ಮೃಢ ಕಡವಸನನ
ದಿನ ದಿನ ಶಿವಯೋಗ ಲಿಂಗದ ನೆನವಿನೊಳಿರುವವಗ
ದೊರಕಿಸಿ ಕೊಂಬುವ ವ್ಯಾಳ್ಯ ಇದು ಏನು
ನಮ್ಮಪ್ಪ ಬಸವಣ್ಣಾ ನಮ್ಮವ್ವ ನೀಲಮ್ಮಾ ನಮ್ಮಯ್ಯ ಪ್ರಭುರಾಯ
ನಡಿಯವ್ವ ಹೋಗುವೆನು ಅತ್ತಕಡಿ ಅಡವಿ ಪಾಲಾಗುವೆನು
ನನ್ನವರ್ಯಾರು ಇವರಲ್ಲ ಸುಳ್ಳೆ ಬೆನ್ಹತ್ತಿ ತಿರಗಿದೆ ಏನು ಫಲವಿಲ್ಲ
ನಾ ನಾ ಅನಬ್ಯಾಡ ನಾಯಕ ನರಕ ಮುಂದ ಮೂಢ
ನಾನಾಯಂಬದು ಬ್ಯಾಡ ಅಪಮಾನ ನರಕಕ್ಕೀಡ
ನಾ ಮಾಡುವದೇನಿಲ್ಲ ಸಿದ್ಧ ನೀ ಮಾಡಿದ್ದೆ ಎಲ್ಲ
ನಾ ಎಂಬುವದ್ಹೊಯ್ತು ನಾಚಿಕಿ ಇಲ್ಲದ್ಹಂಗಾಯ್ತು
ನಾ ಮಾಡಿದಪರಾಧ ನೀವೆ ಪರಿಹರಿಸಿ ಯನ್ನ ಪ್ರೇಮದಲಿ ಸಲಹಿದ್ದಿರಿ ಗುರುವೆ
ನಾ ನೀನೆಂಬುವ ಸಂದಿಲ್ಲ ಶಿದ್ಧ ನೀನೆ ನಾನಾದೆನಲ್ಲ
ನಿಂದ ಮಾಡುವವರೆಲ್ಲ ನಮ್ಮ ತಂದಿ ತಾಯಿಗೆ ಮಿಗಿಲೆಂಬೆ
ನಿಂದ್ಯ ಸ್ತೋತ್ರವು ನಿನಗೆ ವಂದೆ ಕೆಲಸದಲ್ಲ
ನಿಮಗ ಬೇಡುವೆನು ಸಿದ್ಧಲಿಂಗ ನಿಮಗ ಕೊಂಡಾಡುವೆನೂ
ನಿಮ್ಮ ನಮ್ಮಗ ಸಂಗಿತಿಯೇನು ಪರ ಬ್ರಹ್ಮ ಸಿದ್ಧನಾಳೆಲೊ ನಾನು
ನಿಮ್ಮ ಭಕ್ತರ ಭಾವ ನೀವೆ ಬಲ್ಲಿರಿ ದೇವ
ನಿನ್ನ ನೀ ತಿಳಿವದೆ ಸಾಕು ನೀನು
ನಿನ್ನ ಭಕ್ತಿಗೆ ಬಂದೆನಮ್ಮ ಗುರುವು ಬೆನ್ನ ಹತ್ತಿ ಕರತಂದ ಹಸಿವು ತಡಿಯದಮ್ಮ
ನಿನ್ನ ಕಣ್ಣಿಲಿ ಕಂಡೆನು ಗುರುಸಿದ್ಧ ನಿನ್ನ ಕರದಲಿ ಪಿಡಿದೆನು
ನಿನ್ನಿಂದ ಹೊರತು ಇನ್ಯಾರು ಹಾರಸಿದ್ದ ನೀನೆ ಮೂರ್ಲೊಕಸರಕಾರ
ನಿನ್ನಿಂದ ಹೊರತು ನಮಗಿನ್ಯಾರು ಗುರು ಶಿದ್ಧ
ನೀ ಮಾಡಿದ್ದೆ ನಿಜವಾಪದು ಗುರುಸಿದ್ಧ ನಾ ಮಾಡಿದರೇನಾಪದು
ನೀ ಹ್ಯಾಂಗ ನಿನಗದು ಯದರ್ಹಾಂಗ
ನೀನೆ ಗತಿಯೆಂದು ಮನ ನಿಶ್ಚ್ವಿಸಿಕೊಂಡಿಹುದು
ನೀವೆ ಗತಿ ಗುರುವೆ ನಿಜ ಭಕ್ತ ಕಲ್ಪ ತರುವೆ
ನೀವೆ ಹುಟ್ಟಿಸಿ ತಂದಿರಿ ಗುರು ಶಿದ್ಧ
ನೀನೆ ಗತಿಯೆಂಬ ಸುಖ ಜ್ಞಾನಿ ಬಲ್ಲನು ಉಂಡು
ನೀರಿನ್ಹಾಂಗ ತಾ ನಿರಾಳವಿರತಿರೆ ನಿಂದಕ ಮನುಜರಿಗಂಜುವನೆ
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿಯಂದು ಮನನಿಶ್ಚೈಸಿ ಕೊಂಡಿಹುದು
ನೀನೆಗತಿಯೆಂಬುವಗ ತಾನೆ ಸಾರತಿ ಗುರುವು
ನೇಮ ನಿತ್ಯವಿಲ್ಲದ ಸಂತರಿಗೆ
ನೋಡುವ ನಡಿತಂಗಿ ನಮ್ಮವರ ಜ್ಞಾನ ಮಾರ್ಗ ಹಿಡಿದು ಕ್ರಿಯ ಸಡಿಸುರ
ನಂಬಿದೆ ನಿನ್ನ ನಚ್ಚಿದೆ ಶ್ರೀಗುರುರಾಯನ
ನಂದು ನಂದು ಅಂತನಲಿ ಹ್ಯಾಂಗೆ
ನಂದೇನ ಹೋಗತದಪ್ಪ ಹೋದರ ನಿಂದೆ ಹೋಯಿತಪ್ಪ
ಪ್ರಥಮಾರಂಭದಲ್ಲಿ ಭಜಿಸುವೆನು
ಪಡಿನಡಸುವ ಗುರುವಿರಲಿಕ್ಕೆ
ಪಾದಾರಕ್ಷೆಯ ಮಾಡಿದ ಶ್ರೀಗುರುಯನ್ನ
ಬಸವಯೆಂಬ ನಿಜನಾಮ ಪ್ರೇಮರಸ
ಬಸವನಾಮ ನುಡಿಯಲಿ ಬೇಕು ಹಾದಿ
ಬಸವಲಿಂಗಾಯ ನಮಃ ಶ್ರೀಗಿರಿವಾಸ ಸಿದ್ಧ ಜಂಗಮಾ
ಬಸವರಾಜ ರಾಜ ರಾಜ ಮೂಲ ಮಂತ್ರ ಪ್ರಣಮದ ಬೀಜ ಮಂತ್ರ
ಬಸವಯ್ಯ ನಿನ ಮಹಿಮ ಉಸುರಲೆನ್ನಳವಲ್ಲ
ಬಲ್ಲವನಿಗೆನ್ಹೇಳ ಬೇಕು ಭಕ್ತಿಯಿಲ್ಲದ ಜ್ಞಾನಿಯ ಸಂಗುತಿ ಸಾಕು
ಬಡತನ ಬಹು ದೊಡ್ಡದು ಪ್ರಮಥರಿಗೆಲ್ಲ
ಬ್ಯಾರಿಲ್ಲ ದೂರಿಲ್ಲ ಸನಿಯಿಲ್ಲೊ ತಮ್ಮ
ಬಿಟ್ಟಿದಾವತಿ ಮಾಡ ಬ್ಯಾಡ ಮನ
ಬಿರಿದುಳ್ಳನ ನೀನಾದರ ಗುರುವೆ ಭರದಿ ಪವಡ ತೋರಲಿ ಬೇಕು
ಬಿರಿದು ನಿಮ್ಮದು ಯಂದು ಬೀರಿದೆ ಜಗದೊಳು ಸಿದ್ಧಲಿಂಗ
ಬಿಕ್ಷ ಬೇಡುಂಬುವದೆ ಸಾಕ್ಷಿ ಜನ್ಮ
ಬೆಲ್ಲದಂತೆವರು ಬೇವಾದರ ಹಿತ ಯಾವಲ್ಲಿರ್ಪದು ಹೇಳಣ್ಣ
ಬೇಡಿಕೊಂಡೆನು ಸಿದ್ಧ ನಿನಗೆ ದಯಮಾಡಿ
ಬೇಡಿಕೊಂಬುವನ್ಯಂತ ಶೂರ
ಬಂದುದ್ದೆಲ್ಲ ಬರಲಿ ಗುರು ತಂದದ್ದೆಲ್ಲ ತರಲಿ
ಭಿಕ್ಷವ ಬೇಡುವೆನು ಶ್ರೀಗುರು ಪಾದರಕ್ಷ ಕೊಂಡಾಡುವೆನು
ಭಿಕ್ಷ ಬೇಡುತ ಬಂದೆ ನಾನು ಗುರು
ಭಿಕ್ಷಾಪತಿಯ ಬಿರಿದು ನಿಮ್ಮದು| ಪರಿಕಿಸಬೇಡ ಗುಣ ನಮ್ಮದು
ಭಜನಿ ಮಾಡೋ ಬನ್ನಿ ಭರದಿಂದ
ಭಜನಿಯಲ್ಲಿ ಅಮೃತ ಸುರಿಯುವದು
ಭಜನಿ ಮಾಡುವ ಬನ್ನಿರಿ ಸುಜನರೆಲ್ಲ
ಭಕ್ತಿಲಿ ಮಾಡೊ ಭಜನಿ ಮುಕ್ತಿಗೆ ಸಾಧನಿ
ಭ್ರಾಂತನಾಗಿ ಬಳಲುವದ್ಯಾಕೊ ಬಹು
ಭಾರವಿಳಸಿಕೊಳ್ಳಿರಿ ಶಿವ ಭಕ್ತರು ಭಾರವಿಳಸಿಕೊಳ್ಳಿರಿ
ಮರವಾಗದೆಂದೆಂದು ಗುರು ಮಾಡಿದುಪಕಾರ
ಮನ ಮನ ಕಲಿಯದ್ಯಾತರ ಮಾತು ಸುಳ್ಳೆ
ಮನವೆ ನೀ ಮಾಡೊ ಗುರು ಧ್ಯಾನ ಪ್ರೇಮ
ಮಗ ನೀ ನನ್ನವನಾದರ ಮಾತು
ಮಡಿ ಎಂಬೋದು ಅದ ಯಾವಲ್ಲಿ
ಮಡಿ ಮೈಲಿಗಿಯಂಬೊದಿನಿತಿಲ್ಲ ನಮ್ಮ
ಮಾತು ಹೇಳತೆ ನಿನಗೊಂದು ಮನ
ಮಾನವ ಮಾಡಿದರೇನು ಜನರಪಮಾನವ ಮಾಡಿದರೇನು
ಮಾಡಿದ ಮಹಗುರು ಈ ಪರಿ ನಾ
ಮಾಡಿರೊ ಬಸವನ ಸ್ತೋತ್ರ ಜನ್ಮ ಮಾಡಿದರೆ ಪವಿತ್ರ ಪವಿತ್ರ
ಮಾಡಬಾರದದು ಮಾಡಿದಿ ಜಗದೊಳು
ಮಾಡುವವನು ಯಾರಣ್ಣ ಜಗದೊಳು ಮಾಡಿಸಿಕೊಂಬುವನ್ಯಾರಣ್ಣ
ಮಾಡುವವನು ನೀನೆ ಸಿದ್ಧ ಮಾಡ್ಸಿಕೊಂಬುವ ನೀನೆ
ಮಾಡುಣ್ಣಲರಿಯೆನು ಬೇಡುಣ್ಣಲರಿಯೆನು ಸಿದ್ಧಲಿಂಗ
ಮುಂದಾಗೊದೆನು ತಿಳಿದಿಲ್ಲ ಹುಟ್ಟಿ
ಮೂರ್ಖ ಬೀಳೂ ಬೇಡ ಕಾಂತಾರ
ಮೊರಿಕೇಳು ಮೊರಿಕೇಳು ಗುರುಶಿದ್ಧಲಿಂಗ
ಮೊದಲೆ ನಿರಾಶಿ ನೀ ಪರದೇಶಿ ಭಿಕ್ಷಾಹಾರಿಯಾಗಿರಬೇಕು
ಯಾತರ ಬಿಡೆಯ ನಿಮ್ಮೊಳು ಘನ
ಯಾತಕ ಶಿಕ್ಷ ಮಾಡುವದು ಗುರುನಾಥ ಮಾಡಿದಷ್ಟು ತಾನೆ ಆಗುವದು
ಯಾತರ ಶೀಲವೆ ನಿಂದು ಮಲ
ಯಾರ ಸ್ವತಂತ್ರ ಯಿನಿತಿಲ್ಲ ಬಿಂಕ ಬೀರುತಾರ ಸುಳ್ಳೆ ಜಗವೆಲ್ಲಾ
ಯಾರಿಂದಾಗದು ಯಿಂತಾದು ನಮ್ಮ
ಯಾವ ಚಿಂತಿ ನಮಗೇತಕ ದೇವರು ತಾನೆ ಸಲಹುವನಿರಲಿಕ್ಕೆ
ಯಾರ ಗೊಡವಿ ನಮಗೇನಾದ ಗುರು ಧ್ಯಾನದೊಳಗ ಬಹುಮಾನಾದ
ಯಾರ್ಹೊದರೇನೊಯಿದರು ಶಿವಶಿವ
ಯಾರಿಂದೇನಾಗುವದಿಲ್ಲ ನಮ್ಮ ಗುರುಶಿದ್ಧ ಮಾಡಿದ್ದಾಗುವುದಲ್ಲಾ
ಯಾರಿಗೆ ದೊರಕದು ಯಿಂತಾದು
ಯಾರು ಮಾಡಿದರ ಅವರುಂಡರು ಫಲ
ಯಾರಿಗಿ ಸ್ತಿರವಿದು ಜಗದಲ್ಲಿ ನಮ್ಮನ
ಯಾರ ಗಮನ ನನಗೇನು ಶ್ರೀಗುರುವಿನ ಸೇವೆದೊಳಿರುವೆನು
ಯಾರ ಮನಿಯಿದು ಯಾರ ಸಂಸರ
ಯಾರ ಕೈಯೊಳಗೇನುಯಿಲ್ಲ ಗುರು ಮೂರು ಲೋಕ ತಾನೆ ಕುಣಸ್ಯಾಡಬಲ್ಲ
ಯಾರಿಲ್ಲದಂತೆ ಪರದೇಶಿ ಒಂದು ಊರಿಲ್ಲ ಮನಿಯಿಲ್ಲ
ವಿಪರೀತ ಕಾಲ ಯಿದು ಯಂತಾದು ಜನರಿಗೆ
ಶರಣ ಬಸವಪ್ಪನ ತೇರಿನ ಮುಂದ ದಿವಟಿಗ್ಹಿಡಿದು ಓಡ್ಯಾಡಣ್ಣ
ಶರಣಬಸವ ಸಿದ್ಧ ದಾಸೋಹಿ ಅಂತಃಕರುಣಿ ಜಂಗಮಕ ತಾಯಿ
ಶರಣರ ದಿವಟಿಗಿ ಹಿಡಿಯಣ್ಣ ಗುರು
ಶರಣು ಶರಣು ಸಿದ್ಧಿ ಗಣನಾಥ
ಶರಣಾರ್ಥಿ ಶರಣಾರ್ಥಿ ಶಿವ ಶರಣರ ಚರಣಕ ಶರಣಾರ್ಥಿ
ಶಿವನ ನೆನಿಯಬಾರದೇನೊ ದುರ್ಭವ ಜನ್ಮ ಸಿಗದೇನೊ
ಶಿವನ ಭಕ್ತಕಿಂತ ಬಲ್ಲಿದರು
ಶಿವ ಭಜನಿಯ ಮಾಡೊ ಶರಣರ ಕೊಂಡಾಡೊ
ಶಿವ ಶಿವ ಅನುಬಾರದೇನೊ
ಶ್ರೀಗುರು ಬಸವಲಿಂಗಾ ಕರುಣಾಪಾಂಗ
ಶ್ರೀಗುರು ಬಸವಲಿಂಗಾಯ ನಮ
ಶ್ರೀಗಂಧದಲ್ಲಿಹುದು ಸುಗಂಧ ಶ್ರೀಗುರುವಿಗೆ ಬೇಕಾದುದು ಪ್ರೀತಿ
ಸತ್ಯ ಶರಣರ ಕಂಡು ಸುತ್ತಿ ಸುಳಿಯರು ಜನರು
ಸತ್ಯ ಶರಣರ ಸೇವ ಮಾಡೊ ಅವರ ತೊತ್ತಾಗಿ
ಸಮಯ ಬಂತು ತಮ್ಮ ಸಾಧಿಸಿಕೊಳ್ಳೊ ಪರಬ್ರಹ್ಮ
ಸಾಕು ಸಾಕು ಸಂಸಾರವಾದ ಮೇಲೆ
ಸಾಯಸ ಮಾಳ್ಪದು ಸದ್ಗುರುವಿನ ಕೃಪ
ಸಿದ್ಧರಾಮ ನಾಮಾ ಮುದ್ದು ಬಸವಗ ಪ್ರೇಮಾ
ಸಿದ್ಧರಾಮರಾಮಾ ಸಿದ್ಧರಾಮೇಶ್ವರಾ
ಸಿದ್ಧನ ನಾಮ ಅಮೃತ ಸಾರ ಕೊಂಬುತಲಿದ್ದ ಬಸವ ಫಕೀರ
ಸಿದ್ಧ ನಿಮ್ಮಯ ಬಿರಿದಿಂತಾದು ಬಡವರುದ್ಧಾರ ಮಾಡಿಡುವಂತಾದು
ಸಿದ್ಧಸಿದ್ಧರಿಗೆಲ್ಲ ಗುರುಸಿದ್ಧ ಅಧಿಕೆಂದು
ಸಿದ್ಧ ನಿಮ್ಮ ನೆನಹಿನಲ್ಲಿ ಇದ್ದ ಇರುಳು ಹಗಲ ಬಿಡದೆ
ಸಿದ್ಧ ನೀ ಮಾಡಿದ್ದಾಗುವದು ಸುಳ್ಳೆ
ಸಿದ್ಧರಾಮನಿಗೆ ಸುದ್ದಿ ಹೇಳ ಹೋದಾ ಗುರುಶಿದ್ಧನ ವಿನೋದ
ಸಿದ್ಧ ಬಂದನಿ ಸಮಯಕ್ಕ ಮನ ಶುದ್ಧ ಮಾಡಿದ ನೆರದ ದಯವಕ್ಕ
ಸಿಟ್ಟು ಬಿಟ್ಟು ಕುಡು ಸೌಭಾಗ್ಯವತಿ ಮಂಗ ಮಂದಮತಿ
ಸೂಳಿ ಸೋಗಿನ ಡಂಬಕರೆಲ್ಲ ಲಂಚ
ಸೋಗ ಹಾಕಿದರೇನು ಶಿವಯೋಗಿ ಎನಬಹುದೆ
ಸಂಗ ಮಾಡುಬೇಕಿಂತಲ್ಲಿ ಸಿದ್ಧಲಿಂಗನಿಗೊಪ್ಪಾಗಂತಲ್ಲಿ
ಸಂಶ ಬಾರದು ಮನಕ ಸಂಶ ತೊರದು
ಹರಿವೆಣಾದಿತ ಶಷ್ಪ ಕಿತ್ತೊಣಾದಿತಾ
ಹಾದಿ ಹಸನ ಮಾಡುವೆ ಪ್ರಮಥರು ಬರುವ ಹಾದಿ
ಹುಶಾರಿ ಹುಶಾರಿ ಗುರು ತರುತನ ಮಾರಿ
ಜ್ಞಾನಿಯಾಗಿ ಸಂಚರಿಸೆನೆಂದಡೆ ಘನಗುಣ ಸಂಪಾದಿಸಬೇಕು
ಜ್ಞಾನದ ಮಾರ್ಗ ನಿನ್ನಲ್ಲಿ ಅಜ್ಞಾನಿ
ಜ್ಞಾನ ಹೀನರ ಸಂಗ ಏನು ಕೊಟ್ಟರ ಬ್ಯಾಡ
ಖಟಕ ಚಿಂಚೋಳಿ ಮಲ್ಲಪ್ಪ ಚಾಮರೆಡ್ಡಿ
ಅನ್ಯಾಯ ಕಾಲವಿದು ಶ್ರೀಗುರುಸಿದ್ಧ ಅನ್ಯಾಯ ಕಾಲವಿದು
ಆನಂದ ಘನವಾಗಲಿ ಸದ್ಗುರುನಾಥ ಆನಂದ ಘನವಾಗಲಿ
ಆನಂದ ಭಜನಿಯ ಮಾಡೆಂದ
ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ
ಈ ಗೋಲಿ ಆಟ ತಿಳಿದು ಸುಗಣ ಆಡುವದೋ
ಎನ್ನ ಕರ್ಮದ ಕಥೆ ಕೇಳೊ ದೇವ ತೋರೊ ಮಾರ್ಗವ
ಏನು ಮಾಡಲಿ ಶೋಧ ಎನ್ನಾಗ ತಿಳಿವಲದು
ಓಂ ನಮ ಶಿವಾಯ ಹೇಳಿದ ಮಂತ್ರವು ಮರಿಬಾರದು ಮರುಳೆ
ಕಾಯಪೂರ ಜಾತ್ರಿದೊಳಗ ನೋಡ ನೋಡುತ ಗೆಳೆಯ
ಕರೆದು ತಾರಮ್ಮಾ ಸ್ವಗೂರುವಿನ ಕರೆದು ತಾರಮ್ಮಾ ನೀನು
ಗುರುವಿನ ಭಜಿಸೊ ಮನದಲ್ಲಿ
ಗುರುವಿನ ಗುಪ್ತ ದಯಲಿಂದೆ ಮನ ನಿಜವನಾಯಿತು
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ ಬಲ್ಲವನೇ ಬಲ್ಲ
ಗುರುವೆ ನಿಮ್ಮ ಕೃಪಾ ಸಮುದ್ರ
ಗುರುತ ತೋರಿದ ಗುರವಿನ ಮರೆತು ಇರಬ್ಯಾಡ ಮನಸು
ಚಿಂತಿದೊಳಗ ಸಂತಿ ಭ್ರಾಂತಿ ಮಾಡಿರಿ
ತಿಳಿಬೇಕೊ ಗುರವಿನ ಕೀಲಿಯನು
ತಿಳಿ ತಿಳಿ ತಿಳಿ ತಿಳಿ ತಿಳಿ ತಮ್ಮ ಅದು ತಿಳಿಯದೆ ಮರೆತಿರುಬ್ಯಾಡೊ ಸುಮ್ಮ
ದಿನ ಸ್ವರೂಪಕೆ ಕಡಿಮಿಲ್ಲ ನಿನ್ನ ದೇಹದ ಅನುಕೂಲ ತಿಳಿಯಬೇಕಲ್ಲ
ದೇವರ ಪೂಜೆ ಬ್ಯಾರುಂಟು ನಿನ್ನ ದೇಹದೊಳಗೆ ಮನಿ ಮಾಡ್ಯಾದ ಗಂಟು
ನಾ ಹುಟ್ಟಿ ಬಂದೆನೊ ಈ ಬ್ರಹ್ಮಪುರದಲ್ಲಿ
ನೋಡಿರಿಕಿನ ಸೋಂಗ ಮೆರೆವಾಳೊ ಕುಂತು
ಮಾಡುವೆ ಪೂಜೆ ಮಾಡುವೆ ಮನ ನಿಜದ ಬೋಧವ ತಿಳಿದು
ಮಾತಾಡ ಜನರೆಲ್ಲ ಯಾತಕ ಬಂದಿರಿ ನೀತಿಯ ತಿಳಿಯಬೇಕಣ್ಣ
ಯಾತಕ ಚಿಂತಿಯೋ ತಮ್ಮ ನಿಜ ಬ್ರಹ್ಮ ತಾನಾದ ಬಳಿಕ
ಲಗು ಲಗು ನಡಿರೆವ್ವ ಗಾಡಿ ಬಂದದ ಓಡಿ
ಶುದ್ಧವಾಗಿ ದೈವ ಗಳಿಯುವ ಕಾಲ
ಶ್ರೀಗುರುವಿನ ಪಾದವ ಪಿಡಿಕೊ
ಶಿವ ಶಿವ ಅನು ತಂಗಿ ಸುಮ್ಮ
ಸ್ವತಾ ಹೊಲ ಮಾಡಿ ಹೋಡಿ ತಮ್ಮ ನೀ ಹಕ್ಕಿ
ಹಿಂಗ ಸಿಗುವದೋ ಗುರು ಮಾರ್ಗ
ಹೊತ್ತು ಗಳಿಯೋ ಚಿತ್ತಿನೊಳಗ ಚಿತ್ತು ಚಿನ್ಮಯ ದೇವರು
ಹೊಡಿಯಲಾರೆ ಈ ಊರೋಗಿನ ಗುಬ್ಬಿ ಹಗಲಿರುಳೆ

ಮಾಣಿಕ ಪ್ರಭುಗಳು
ಈಗ ಏನು ಪೇಳಲಿ ಗುರುರಾಯಾ
ಓ ಸಖಿ ಕಂಡೆ ನಾನು ಸ್ವಾಮಿ ಸಂಗಮೇಶನೆ
ಕಂಡೆ ನಾ ನಮ್ಮ ರೇವಣಸಿದ್ಧಾ
ಗುರುವಿಗೆ ಶರಣು ನಾ ಹೋದೆನೆ
ಗೋಪಿ ನಿನಕಂದಾ ಬಾಲ ಮುಕುಂದಾ
ಗೋಪೀ ಗೃಹೀ ದಧಿ ಚೋರಿ ಸೀದಾ
ಛಿಃ ಹೊಗೊ ನೀ ಮೂಢಾ ಇದೇನಿದು ತಿಳುವಳಿಕಿ
ನಿನ್ನ ಒಳಗೆ ನೀ ನಿನಗ ನೋಡೊ
ನೀ ದಾರು ನನಗೆ ನಾ ಏನು ನಿನಗೆ
ಬಸವ ಬಸವ ಬಸವ ಬಸವನೆಂಬಿನೆ
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ
ಮುಕ್ತನಾಗಿದ್ಯೊ ಅಣ್ಣಾ ಮುಕ್ತ ನೀ ಇದ್ಯೋ ತಮ್ಮಾ
ವಸ್ತು ಅಲ್ಲಿಲ್ಲಾ ಇಲ್ಲಿಲ್ಲಾ ಠಾವ ಠಿಕಾಣಿನೆ ಇಲ್ಲಾ
ವ್ಯಾಪಕ ಶಿವ ಹೀಂಗ ಅಂದವನು ತಾನೆ
ಹೇ ಪ್ರಭು ದಯಾನಿಧೆ ನೀ ನಮಗೆ ಪಾಲಿಸು
ನಿಜಲಿಂಗ ಭದ್ರೇಶ್ವರರ ಅನುಭವ ಪದಗಳು
ಅಂತಾ ಹಿಂಥಾದು ಎಲ್ಲಾ ಬರಲಿ
ಅಂಬಾ ಅಂಬಾ ಆರುತಿ
ಅಲಕ್ ನಿರಂಜನ ದತ್ತ ದಿಗಂಬರ
ಅಲಲಲಾ ಏನ ತಾರೀಪಾ
ಅಲಾಯಿ ಎಂಬುದು ಏನಿದು
ಅರುವು ತೋರಿದ ಗುರುವಿಗೆ ಮರತ್ಯಾಂಗಿರಲಮ್ಮ
ಆಗತಾದರೊ ಬಾಬಾ ಆಗತಾದರೊ
ಆರುತಿರೆ ಮಂಗಳಾರುತಿರೆ
ಆರುತಿ ಎತ್ತಿರಿ ಮ್ಯಾಗೆ
ಆರುತಿ ಮಂಗಳ ಮೂರುತಿಗೆ
ಆಲಯ ಮೇಲಪ್ಪಾ ಆಲಯ ಕಾಲ ಮೇಲಪ್ಪಾ
ಇದ್ದಾಂಗ ಆಗುವುದೊ
ಇದ್ದಾಂಗ ಆಗುವದಕ ಈಡಿಲ್ಲ ಯಾರ್ಯಾರು
ಉದಗಿರಿ ಜಾತ್ರಿಗೆ ಹೋಗಾನು ಬೇಗನೆ ಬಾರೆ
ಊರ ದೇವತೆ ಮಾಡುತಾರಮ್ಮ
ಎಕ್ಕಲ ಖಾಜಾ ಸಾಕ್ಷಾತ್ ಶಿವನು
ಎಡಾ ಕಣ್ಣು ಕುಣಕಿ ಬಲಾ ಚೋರಗಂಡಿ
ಎನ್ನ ಇಚ್ಚಾ ತೀರಿಸಿದವರೆ ಎನ್ನವರು
ಎಲೋ ನಂದಿನಾಥ ಮಾತಿನ ಗುಣವಂತ
ಏ ಎಪ್ಪಾ ಎಂಥದು ದಿನ ಬಂತೊ
ಏ ಎಪ್ಪಾ ಹದ್ದಿನ ಮಾರಿ ಹಕ್ಕಿ ನೋಡರೊ
ಏಕೋ ವಾಕ್ಯೆ ನಮ್ಮ ಸತ್ಯ ಶರಣರು ಬರುವಾಗ
ಏನಾರ ಮಾಡಯ್ಯೊ ನೀನು
ಒಬ್ಬನ ಮೆಚ್ಚಿಕೊಂಡು ಇರು ಲವಡಿ
ಒಳ್ಳೆಯ ಮಾತುಗಳ ಆಡನು ಕಲಿರಿ
ಕನಸು ಮನಸಿನಲ್ಲಿ ನೆನಸಿದಾಗಲೆ ನೆನುವಾಗಿ
ಕನಸೊಂದು ಕಂಡೆನಮ್ಮಾ
ಕರ್ಪೂರದಾರುತಿ ಮಂಗಳ ಮೂರುತಿ
ಕರವು ಮುಗಿದು ನಿನ್ನಾ ಶಿರ ಬಾಗುವೆ ನಾ
ಕಾಣಬೇಕಲೊ ಜಾಣ ಪಕ್ಷಿ
ಕುಲ ಕುಲ ಕುಲ ಕುಲ ಅಂತೀರಿ
ಕೂಡಲ ಸಂಗಮದೇವ ಕೂಡಿಕೊ ಎನ್ನ
ಕೆಂಪು ಮೂಗಿನ ಹಕ್ಕಿ ಎಂದರೆ ಫಿರಂಗಿ
ಕೇಳೊ ನಂದಿನಾಥ ಬಿಡಲೆಂಬ ದೈತ್ಯ
ಖಾತ್ಯಾದಾಗಿದ್ದಷ್ಟು
ಗುರುತಾಯಿ ಗುಣವಂತಿ ಸದಾನಂದಮೂರ್ತಿ
ಗುರುವಿನ ಮಾಡಿಕೊಳ್ಳಿರೊ
ಗುರುತು ಇಲ್ಲದ ಗುರುವಿನ ಅರತುಕೊಳ್ಳವ್ವ ತಂಗಿ
ಗುರುವೆ ನಿಮ್ಮ ನಾಮ ಸರ್ವರಿಗೆ ಪ್ರೇಮ
ಗುರುಲಿಂಗ ಜಂಗಮ ತ್ರೀವೇಣಿ ಸಂಗಮ
ಗೌಡನಾಗಬೇಕಣ್ಣಾ ಊರಿಗೆ ಗೌಡನಾಗಬೇಕಣ್ಣಾ
ಗಂಡನ ಮಾಡಿಕೊಂಡವರೆಲ್ಲಾ
ಘೂಟಾ ಕಿತ್ತಿಕೊಂಡು ಓಡಿಹೋಯ್ತು ಕುದುರಿ
ಚಂದನಾ ಸುಗಂಧಾ ಕೇತಕಿ ಮಕರಂದಾ
ಚೆಂಡಾಸುರನ ಹೊಡದಿ ಚೆಂಡಿ ಹೆಸರ ಪಡೆದಿ
ಚೆಂಡಿನಾಟ ಆಡಬಾರಮ್ಮಾ
ಛೀ ಛೀ ಮೂಳಿ ಸಂತರಿಗಿ ವಾಳಿ
ಜಮಾ ಮಾಡಿ ಇಕ್ಕಿರಿ ರೊಕ್ಕಾ
ಜಯದೇವ ಮಂಗಳಾರತಿ
ಜಯ ಜಯ ಮಂಗಳಾರುತಿ
ಜಯ ಜಯ ಜಗದಂಬೆ
ಜಂಗಮ ಜಗ ಕರ್ತಾ ಲಿಂಗದಲ್ಲಿ ಭರಿತಾ
ಜಾತಿ ಭೇದ ಅಳಿದು ಜ್ಯೋತಿರೂಪ ತಿಳಿದು
ಬಾರೊ ಬಾರೊ ಬಾವಗಿಪುರ ಭದ್ರಿನಾಥನೆ
ಬೀದರ ನಾಡು ಸಣ್ಣ ಹಳ್ಳಿ ನಿಡವಂಚಿ ಶಿವಪುರ
ಭಲಾ ಭಲಾ ನೀವು ಗೆದ್ದಿರೊ
ಮಂಗಳ ಮೂರುತಿ ಮಹಾದೇವ ಗಣಪತಿ
ಮನಮಯ ಮಹಲಿಂಗ ಚಿನ್ಮಯ ಚರಲಿಂಗ
ಮರ್ತ್ಯಕ ಬಂದು ದೇವರ ಕಂಡ ಸ್ವಾಮಿ ಮಲ್ಲಯ್ಯಾಜಿ
ಮಹಾತ್ಮರು ಬಂದಾರು ಮರ್ತ್ಯಕ್ಕೆ ಹಿರಿಯರು
ಮಹಾದೇವ ಬಳಿ ಚಕ್ರ ಕೈಲಾಸ ಗಿರಿ ಶಿಖರ
ಮಹಾಲಿಂಗನ ಮಠದೊಳಗೊಂದು
ಮಾತು ಹೋಯಿತು ನೀತಿ ಉಳಿಯಿತು
ಮುಡಿಯನ್ನು ಹಿಡಿದು ಎಳೆದೊಯ್ಯುವೆನೆಂದು
ಮೂಲ ಮಾಯಿ ಬಾರೆ ಮಿಗಿಲಾದ ಕುನ್ನಿಯರೆ
ರಾಜಯೋಗಿ ಮಹಾರಾಜ ಸಲಾಮ
ರಾಮನ ನುಡಿಯಲಿಬೇಕೊ
ರಿದ್ಧಿ ಸಿದ್ಧಿ ನಿಮ್ಮ ಮಾಡುತಾರೊ ಧ್ಯಾನ
ವಾರೆ ವಾರೇ ನನ್ನ ಹುಳಗೆಡಕ ಹೆಣ್ಣಾ
ಶಕ್ತಿಯ ಸಾಕಾರ ಮುಕ್ತಿಗೆ ಆಧಾರ
ಶರಣು ಶರಣು ಗುರುವೆ ಶಂಕರಾ
ಶ್ರವಣ ಮನನ ನಿಧಿ ಧ್ಯಾಸ ಮಾಡೊ
ಶಿರವು ರುದ್ರ ಲೋಕಾ ಹೃದಯ ಬ್ರಹ್ಮಲೋಕ
ಶಿವನಾಮ ನುಡಿಬೇಕೇ ಹೇ ಮನವೆ
ಶಿವ ಶಿವ ಶಿವಲಿಂಗಾ ಮೂರುತಿ ಘನಲಿಂಗ
ಸಹಗುಣ ಸೋಹಂ ನಿರ್ಗುಣ ನಿಜಲಿಂಗ ಮೂರುತಿ
ಸತ್ಯನಡಿ ಎಂದರ ಸಾಯಬ್ಯಾಡ ಮಗಳೆ
ಸದ್ಗುರುಮೂರ್ತಿ ಸ್ಥಾವರದಲ್ಲಿರುತಿ
ಸದ್ಗುರು ಕಂಡಾಡು ಮನಸೆ
ಸದ್ಗುರು ಶಂಕರಲಿಂಗ ಪಾದಕ
ಸಮಯ ಹೋಯಿತು ಭಾರಿಗೆ
ಸಾಪಿ ಹೋಯಿತೊ
ಸ್ಥಿರವಿಲ್ಲದ ಕೊಂಪಿಗೆ ನಾನು
ಸಿದ್ಧಾ ಸೇದಾನು ಬನ್ನಿರೊ
ಸೊನ್ನಿ ಅಂದರೆ ಪೂಜಿ
ಹಂ ಎಂಬುದು ದು:ಖದಾಯಕ
ಹಂಗ್ಯಾಕ ಹಿಂಗ ಬರ್ರಿ ನೆಟ್ಟಕ
ಹಿಂತಾ ಸನ್ಯಾಸಿ ಹೋರಿ ನಾ ಕಾಯಲಾರೆ

ಖಟಕ ಚಿಂಚೋಳಿ ಅಪ್ಪಾರಾಯ ಕುಲಕರ್ಣಿ
ಅಪರಾಧ ಕ್ಷಮೆ ಮಾಡೊ ಶರಣು ನಾ ನಿಮಗೆ
ಇದು ಏನು ಬಂತೋ ವಿಪರೀತ ಕಾಲ
ಎಚ್ಚರ ಆಗಿರಿ ಇನ್ನಾ ತಿರಗಿ ಬಾರದು ನರಜನ್ಮ ಕಠಿಣಾ
ಓಂ ನಮೊ ಶ್ರೀ ಗುರುರಾಯ ನಿಮ್ಮ ಭಜಿಸುವೆನ್ನಯ್ಯಾ
ಓಮನೆಂದು ಕುಟ್ಟನು ಬಾರೆ
ಗುರವಿಗಿ ಶರಣ್ಹೋಗೊ ಮರುಳೆ ನಿನ್ನ
ಗುರುದಯ ಕಮಿ ಆದಂಗೈತಾ ಎನ್ನ
ಗುರುವಿನ ಗುರುತವ ತಿಳಿಯಬೇಕೆ ಗೆಳದಿ
ಧೀರಾ ಶ್ರೀಗುರು ಮಹರಾಜ್ಯ ಬಾರೊ ಕರುಣದಲ್ಲಿ
ನಾ ಮೂಢ ಎನಗೊಲಿಸಮ್ಮ ಬ್ರಹ್ಮ
ನೋಡಿರಿಕಿನ ಸೋಂಗ್ ಮೆರೆವಾಳೊ
ವ್ಯರ್ಥ ದಿನಗಳಿಬ್ಯಾಡ
ಶರಣು ನಾ ಹೋಗಿದನೇ ಸದ್ಗುರುವಿಗಿ
ಸ್ವಾಮಿ ಸದ್ಗುರು ಮಹಾದೇವಾ ನಮಿಸುವೆ
ಸರ್ವವೇಶಮ ಗುರುಭಾವ ಭರಣ
ಹಿರಾಗಡತಿ ನೀವು ಆಗಿ ಬಂದಿರಿ ಗೋಲಿ ಆಡದಕ

ಲೇಂಗಟಿ ಕರಿಬಸವೇಶ್ವರರು
ಆತ್ಮನ ಕಾಣದ ಮನುಜ ನೀನು
ಆರು ತನಗೇನಂದರೇನೋ ಆಗೊ ಸಮಾಧಾನ
ಆತ್ಮಸಾಕ್ಷಿ ಆದವರಿಗೆ ಮತ್ತೆ ಭವ ಬಾಧೆಯಂಟೆ
ಆದಿ ಅನಾದಿ ಜಗಭರಿತ
ಆಸೆ ಎಂಬ ಬೀಸುವ ಕಲ್ಲಿಗೇಸು ದಿನ ಬೀಸಲೆಮ್ಮ
ಆತ್ಮದ ಅನುಭವ ತಿಳಿ ಮಾತೆ ಗುಣವಂತೆ
ಆತ್ಮ ರೂಪನಿಗೆ ಅಖಂಡ ವ್ಯಾಪಕಾದವಗೆ
ಊರ ಬಿಡಬೇಕರೋ ತಮ್ಮದೇರೆ
ಎಲ್ಲಾರು ಮಾಡುವದು ಹೊಟ್ಟಿಗಾಗಿ
ಎಂಥ ಗುರುರಾಯ ಎನಗೆ ದೊರೆದ
ಓಂ ನಮಃ ಶಿವಾಯೆನು ಮನ
ಕುಲವಾವುದು ಹೇಳಲಿ ಅಣ್ಣಾ
ಕರ್ಪೂರಾರತಿ ಬೆಳಗಿರೆ ಗುರುಲಿಂಗ ದೇವಸ್ವಾಮಿಗೆ
ಗುರವಿನ ಮಹಿಮವು ಬ್ಯಾರಾ
ಗುರಕೀಲ ಮಾತು ಗುರುತಿಟ್ಟು ಪೇಳಿರಿಗುರುವೆ
ಗುರು ಮುಟ್ಟಿ ಗುರುವಾಗಿ ಅರುವಿನೋಳರುವಾಗಿ
ಲಗ್ನ ತೀರಿದ ಮ್ಯಾಲೇ ವಿಘ್ನ ಬಾರಾದೆ ತಂಗಿ
ಲಿಂಗಪೂಜೆ ಮಾಡಿ ಮುಕ್ತಾದೆ ಈ ಭವದಿ ಬಂದು
ಶರಣರ ಸೇವೆ ಮಾಡಿ ಮರಣ ರಹಿತನಾಗೊ
ಶಿವಾಯನಮಃ ಓಂ ಹರಾಯನಮಃ ಓಂ
ಶಿವನಾಮ ನುಡಿ ಇದೇ ಜನ್ಮ ಕಡಿ
ಶ್ರೀ ಗುರುವೇ ನಿಜ ಇಡು ಅರುವೇ
ಶ್ರೀ ಗುರುವರ ಗಂಗಾಧರ ಮನೋಹರ ಸದಾಶಿವ ಶಂಕರ
ಸತ್ತಿಲ್ಲ ಯಾರು ಸತ್ತಿಲ್ಲ ಸತ್ತವರಿಗಾಗಿ ಯಾರು ಅತ್ತಿಲ್ಲ
ಸಂತರ ಸಂಗವ ಮಾಡಮ್ಮ ಹಡದಮ್ಮ
ಸುರತಿಟ್ಟು ಸುಜ್ಞಾನಿ ಕೇಳಿರಿ
ಸ್ಮರಿಸುವೆ ನಾಗಿರಿಧರ ಶ್ರೀಧರ ಮನೋಹರ ಮೇಘ ಶ್ಯಾಮಗೆ
ಸಾವಿರ ಕೊಬ್ಬರು ಸಾಧುರು ಹುಟ್ಟುವರ
ಜ್ಞಾನದ ಖೂನಿಲ್ಲ ಅಜ್ಞಾನಿಗಿ ಜ್ಞಾನದ ಖೂನಿಲ್ಲ

ಕೊಳ್ಳೂರು ಹುಸನಾ ಸಾಹೇಬರು
ಆರು ಗುಣ ಬಿಡುವೊ ಅವ ಗುಲಾಮ
ಒಡಗೂಡಲಾಕ ಒಡೆಯನು ಬೇಕ
ಕರ್ನಾಟಕ ಕ್ಷೇತ್ರ ಪರಮ ಪವಿತ್ರ
ಕಲ್ಯಾಣಂಬುದು ಅದ ಕೈಲಾಸ
ಕುಲೋತ್ತಮ ಕುಲದೀಪ ಕಿರಣ
ಗಾಂಜಿ ಸೇದಾ ಯೋಗಿ ನಿರಂಜನವಾಗಿ
ಗುರು ಬೇಕಾದರ ತನುಮನಧನ ಈ ಮೂರು ಗುರುವಿನ ಕೊಟಕೊ
ಗುರುವಿನ ಮನೆಯಲಿ ಅರಮನೆ ಇರುವುದು
ತಿಳಕೊ ತಿಳಕೊ ನಿನ್ನೊಳು ನೀ ವಿಚಾರ ಮಾಡಿ ತಿಳಕೊ
ತಿಳಿ ನೀರಿಗಿಂತ ತಿಳಿ ಹಾರಕೂಡ ಮುತ್ಯಾವ ತಿಳಿದಾವ
ದಯಾಳುವಂತ ದಾಮೋಜಿ ಪಂತ ಭಕ್ತಿಲಿ ನಡೆದವನು
ದೋಷ ರಹಿತಗ ಆಶಾ ಇದ್ದಿದ್ದಿಲ್ಲ
ನಾಯಿ ಬಾಲ ತಂದು ನಳಿಗ್ಯಾಗ ಹಾಕಿದರೇನೊ
ನೀ ಲಗು ಏಳು ಭಜನೆಯ ಮಾಡಲು ಏಳು
ಪರುಷದ ಖಣಿಯ ದರುಶನ ಮಾಡುವುದಕ
ಬಡತಾನದಾಗ ಬಡಿವ್ಯಾರ
ಭಕ್ತಿಯ ಬೆಳೆಸಿ ಹಿಂದಿನ ಹಿರಿಯರು ಆಗ್ಯಾರ ಮೆಂಬರ
ಭಜನಾ ಮಾಡಾನು ಸನಿ ಬಾ
ಮನ ಸಾಕ್ಷಿ ಮನ ಸಾಕ್ಷಿ
ಮರವಿನ ಮನೆಯೊಳಗೆ ಅರವಿನದು ಇರಲಿ ದೀವಿಗೆ
ಮಹಾತ್ಮನಂದು ಪರಾತ್ಮಕ ಧ್ಯಾನಿಸಿದವನೆ ಪರಮಾತ್ಮ
ವಿಠ್ಠಲನೆಂದರೆ ಬಟ್ಟಲ ಅಮೃತ ಸಿಗತದ ಪವಿತ್ರ
ಶಂಭೋ ಶಂಕರ ಶಿವನೇ ಅಂಬಾಪತಿ ನೀನೇ
ಶೆಕೆ 1791ಕ ವದ್ಯೆ ಭಾದ್ರಪದದಾಗ ಗಾಂಧಿ ಜನ್ಮ ದ್ವಾದಸಿಗ
ಸತ್ಯ ಸತ್ಯ ಶಿವಲಿಂಗದ ಪೂಜೆ ನಿತ್ಯ ಸ್ವರ್ಗದಾಗ
ಸುಖ ದುಃಖ ಸಂಭ್ರಮಕ ಈ ಶರೀರಕ
ಸೊಟ್ಟ ಇಲಿಚಾಬತ್ತ ಎಲ್ಲಿಂದಲ್ಲೆ ಹಾಕಿಟ್ಟದ ತೂತ
ಹಕ್ಕಿ ಹೊಡೆಯೊ ತೆಕ್ಕಿ ಸೋಮಣ್ಣ
ಹದವಾಗಿ ಹದಿಮೂರು ತೂತಿಂದು ಹುಟ್ಟಿ ಬಂದದೊಗಡಗಿ
ಹಾಯ್ದು ನೋಡು ಹೈದ್ರಾಬಾದಿ ಅಂಗಡಿ

ಶಿಲ್ಲಪ್ಪ ಕವಿ
ಅವ್ವ ಇವರ್ಯಾರೇ ಅಮ್ಮ ಈತನ್ಯಾರೇ
ಆರು ಮಂದಿ ಕಳ್ಳರ ಊರ ಒಳಗೆ ಹೊಕ್ಕರ
ಇನ್ನೇನು ಮಾಡಲಿ ಗೆಳೆದೆ
ಈ ಕಂದನಿಗೆ ಸಣ್ಣ ನಂದನಿಗೆ
ಈ ಮುಪ್ಪಿನ ಕಾಲ
ಈ ಲೋಕದ ಬಾಧಿ ಸಾಕಾಯಿತಪ್ಪ
ಈ ಭವದ ಬಾಜಾರಕ ಬಂದೆನಲ್ಲ
ಎಂಥ ಕಾಲವು ಬಂದಿತೋ
ಎಂಥ ಮದವಿ ನಾ ಮಾಡಿಕೊಂಡ
ಎಲ್ಲಾ ಜೀವರಾಶಿ ನಿನ್ನ ಕೈಗೆ ಆಸಿ
ಎಲ್ಲಾ ಪ್ರಾಣಿ ಮ್ಯಾಲ ಮಾನವ ಜನ್ಮ ಮೇಲ
ಏನಿದು ನ್ಯಾಯವೆ
ಏಳೇಳೊ ಮಾನವ
ಒಕ್ಕಲುತನಕ ಒಪ್ಪುವ ನೀನ
ಓಂ ನಮಃ ಧ್ಯಾನವ ಮಾಡೋ
ಓಂ ಶಿವ ನೀ ನಿರಂಜನ
ಓಂ ನಮಃ ಶಿವಾಯ ಮಂತ್ರವ ನುಡಿವೆ
ಕಷ್ಟ ಕುಡವಲಿ ಬೇಡ
ಕಂದನ ಕಂಡಿರೇನ ಮುಕುಂದನ ಕಂಡೀರೇನ
ಕ್ಷಣ ಕ್ಷಣ ಓಂ ಶಿವ ನುಡಿಯೊ ಮನ
ಕಾನಾ ಬಾರೈಯೋ
ಕುಡುಬ್ಯಾಡ ಹಡದವ್ವ ಹಳ್ಳಿ ಒಕ್ಕಲಗ್ಯಾನ
ಕೇರ್ಯಾಗಿನ ಅವ್ವಗಳಿಗೆ
ಜಯಮಂಗಲ ಮಲ್ಲಿನಾಥ ಮಹಾದೇವಗೆ
ಜೋ ಜೋ ಜೋ ಜೋ ಚೆನ್ನಬಸವಣ್ಣ
ಢಮರುಧರನೆ ಶಂಭೋಹರನೆ ನಿನ್ನ
ದೇವ ಕರುಣದಿ ಕಾಯ ಬಾರೊ
ದೇವ ನಾ ಬೇಡುವೆನು
ನನ್ನ ಹಳ್ಳಿ ತೊಗಲೂರ ಬಿಟ್ಟು ಬಂದ ದೊಡ್ಡೂರ
ನಮೋ ನಮೋ ನಮಿಪೇನಾ ಮನಾಮನಾ
ನಾ ಓಡಿ ಬಂದೆ ಅಡಗಿಸಿಕೊಳ್ಳೋ ನೀ ತಂದೆ
ನಾ ಗಂಭೀರಾದರೆ ನೀ ಒಲಿವೆ ಎನಗೆ
ನಾನು ಹೋಗುವೆನಾ ಹೋಗಿ ಬರುವೆನಾ
ನಾಲ್ಕು ತಿಂಗಳ ಮಳೆಗಾಲ ನಾಲ್ಕು ತಿಂಗಳ ಚಳಿಗಾಲ
ನಿನ್ನ ರೂಪಾ ನೋಡಿಲ್ಲಾ ನಿನ್ನ ನೆರಳು ಕಾಣಿಲ್ಲಾ
ನೀನೇ ನೀ ನೋಡುವ
ನೋಡಿರೆ ಗೆಳೆದೆರೆ
ನೋಡೆ ಅಮ್ಮ ನೋಡೆ
ಪಂಚಾಂಗ ನೋಡಿಕೊಂಡ
ಪತ್ಯ ಮಾಡಬೇಕೋ ಇಂತಹದೋ
ಪದರೊಡ್ಡಿ ಬೇಡುವೆ ನಾ
ಪ್ರಭು ನಾ ಮರೆಯದೆ ಸ್ಮರಿಸುವೆ ನಾ
ಪಾಂಡುರಂಗ ಧನಿಯ ತಂದೆ
ಪಾದವ ಕುಣಿಸುತ ಹಸ್ತವ ಬಡಿಯುತ
ಪ್ರೇಮ ಕೂಡಿದ ಮ್ಯಾಲೆ ಭಯವ್ಯಾಕ
ಬತ್ತಲೆ ಬಂದಿ ಬತ್ತಲೆ
ಬನ್ನಿರಪ್ಪಯ್ಯಾ ನೀವು ಬನ್ನಿರಪ್ಪಯ್ಯಾ
ಬನ್ನಿರಯ್ಯಾ ಗಣಪಯ್ಯಾ ಬಡವ ಭಕ್ತರ ಮನಿಗೆ ಬಾ
ಬರತೀನಿ ಹೋಗಿ ಬರತೀನಿ
ಬಾ ಬಾ ಬಾಲ ಗೋಪಾಲನೇ
ಬಾರಯ್ಯ ಭಗವಂತ ಬೇಗನೆ ಬಾರೋ
ಬಾರವ್ವ ಸಂಗವ್ವಾ ಬಾರವ್ವ ನಿಂಗವ್ವಾ ಬಾರವ್ವ ಗೆಳದಿ ಗಂಗವ್ವಾ
ಬ್ಯಾಡೋ ತಮ್ಮ ನೋಡೊ ಅಮ್ಮಗ ಹೇಳುವೆನೊ
ಬ್ಯಾಸರಾದ ಸಂಸಾರಕ್ಕ ದುಡಗಿ ಮಾಡಿ
ಬಿದ್ದಿಯಲೆ ಹುಡುಗ ಬಿದ್ದಿಯಲೆ
ಬೆನ್ನತ್ತಿ ನಮಗೆ ಬರಗಾಲ ಭೂತ
ಭಕ್ತರು ಹೊಂಟರ ಓಡುತೆ
ಭ್ರಾಂತಿ ಬಿಡಿಸೋ ಜಗದಾ ತಂದೆ
ಭಿಕ್ಷುಕ ನಾನು ಭಿಕ್ಷುಕ
ಮಡಿಯಲಿಂದೆ ಗುಡಿಗಿ ಹೋಗಿ
ಮದುವಿಯ ಹೆಂಡತಿ ಮನೆಯಲ್ಲಿ ಬಿಟ್ಟು ಗೆಳತಿ ಇಟ್ಟಾನಾ
ಮಮತಾವ ಮಾಡವಲ್ಲಿ ಮುನಿಸ್ಯಾಕೋ ದೇವ
ಮುತ್ಯಾ ನಿನ್ನ ಬಲ್ಲಿ ಒಂದು ಗಿಳಿ ಆದ
ಮೂಲ ಸ್ಥಾನದ ಮಾತ ಮಾಡಿಕೊಂಡ ಗುರುತ
ಯಾರಿಲ್ಲದವರಿಗೆ ನೀ ಕಾಯೋ ಶಿವನೆ
ರೂಪ ಬೇರೆ ಮಾಡಿ ಜೀವ ಒಂದೇ ಪಡಿ
ರೋಹಿದಾಸ ಸಮಗಾರ ಎಂಥ ಶರಣ ಆಗಿದಾರ
ಲಕ್ಷ ಚೌರ್ಯಾ ಐಂಸಿ ಮಾಡಿ ಜೀವರಾಶಿ
ವಾಯು ತೇಜ ಅಪ್ ಜೀವ ಮಣ್ಣು ಸಾಪಾ
ಶಿವ ಶಿವ ಸದ್ಗತಿ ನೀನು
ಸಾಕಾಯಿತೊ ಶಿಕ್ಷಾ ನಮಗೆ
ಹತ್ತವಿಂದ್ರಿನಗರ ಹುಟ್ಟಸಿದ್ದ ಸರಕಾರ
ಹವಲ ಹಾರಿ ನಡದಾನ ಅಡವಿದಾರಿ ಹಿಡದಾನ
ಹ್ಯಾಂಗ ಕರಿಯಲಿ ನಿನಗೆ
ಹ್ಯಾಂಗ ಪೂಜೆಯ ಮಾಡಲಿ ಶಿವರಾಮ ನಿನ್ನ
ಹ್ಯಾಂಗೆ ಮಾಡಲಿ ನಾ ಹ್ಯಾಂಗೆ
ಹುಚ್ಚ ಮಾಡಿದ
ಹೆಣ್ಣು ಗಂಡು ಜೋಡಿ ಎರಡು ಗೊಂಬಿ ಮಾಡಿ
ಹೇ ಸೃಷ್ಟಿಪಾಲ ಬೇಡುವೆ ನಿನ್ನ
ಹೋ ಹೋ ಹೋ ಹೋ ನಮ್ಮ ನಾಡು ಶುದ್ಧ ಕನ್ನಡ.

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಶಿಲ್ಲಪ್ಪ ಕವಿಯ ತತ್ವಪದಗಳು

ಅವ್ವ ಇವರ‍್ಯಾರೇ ಅಮ್ಮ ಈತನ್ಯಾರೇ
ಅವ್ವ ಇವರ‍್ಯಾರೇ ಅಮ್ಮ ಈತನ್ಯಾರೇ
ಗೀರ ಮೀಸಿ ವಾರಿ ಸೆಮಲಾ ಕಟ್ಟಿದವರೇ ||ಪ||
ಹಣಿಯ ಮ್ಯಾಲ ಹರಿನಾಮ ಏನ ಚಂದರೆ
ಮಾರಿ ನೋಡೆ ಮೂಡಿದಂಗ ಹುಣ್ಣಿ ಚಂದ್ರೇ
ಹಸನ ಮುಖದವರೆ ಹುಬ್ಬ ಹಾರಿಸುವರೇ ||1||
ಎಮ್.ಬಿ.ಬಿ.ಎಸ್. ಡಾಕ್ಟರ ಆಗಿದವರೇ
ಲಗ್ನ ಇನ್ನೂ ಆಗ್ಯಾದಿಲ್ಲ ಕೇಳಿ ಬಾರೇ
ಅವರ ತೂಕ ಭಂಗಾರ ಇಡುವೆ ರತ್ನದುಂಗರೆ ||2||
ಹುಂಡ್ಯಾದ ವೈರಿ ಶಿವದಾಸ ನೋಡಗೀಡ್ಯಾರೇ
ಅವರ ಕಂಡಿರ ಖಿಚಿಡಿ ಹಿಡಿದು ಓಡಿ ಬಾರೇ
ಮಾಡುವ ಜೋಡ ಕಂದುರೆ ಕೂಡಿಸಯ್ಯೊ ದೇವರೆ ||3||

ಆರು ಮಂದಿ ಕಳ್ಳರ ಊರ ಒಳಗೆ ಹೊಕ್ಕರ
ಆರು ಮಂದಿ ಕಳ್ಳರ ಊರ ಒಳಗೆ ಹೊಕ್ಕರ
ಠಾರ ಮಾಡಿ ಸಿಕ್ಕವರ ಅತ್ಯಾಚಾರ| ||ಪ||
ಐದು ಮಂದಿ ಪಂಚರ ಕರೆದು ಕೇಳಿ ಸದರ
ಊರಾಗಾದ ಖಬರ ತಿಳಿಸಂದರಾ| ||1||
ನೋಡಿದವರು ಇಬ್ಬರ ಖಡಿ ಸುಮನೆ ನಿಂತಾರ
ಕೇಳಿದವರು ಇಬ್ಬರ ಹೇಳೆವಲ್ಲರಾ| ||2||
ಐದನೆ ಪಂಚ ಚಾತುರ ಮಾಡಿದಾನೊ ಉಚ್ಚಾರ
ನೋಡಿಲ್ಲ ಕೇಳಿಲ್ಲ ನಾನರ ಇದ್ದೇ ಲಾಚಾರ| ||3||
ಎಲ್ಲ ಬಲ್ಲ ಸದರ ಸಾಕ್ಷಿಯಿಲ್ಲ ಎದುರು
ಎಲ್ಲ ಶಿವದಾಸರೆ ಖುಲ್ಲಾ ಮಾಡ್ಯಾರ| ||4||

ಇನ್ನೇನು ಮಾಡಲಿ ಗೆಳೆದೆ
ಇನ್ನೇನು ಮಾಡಲಿ ಗೆಳೆದೆ
ನಾನು ಇನ್ನೇನು ಮಾಡಲಿ ಗೆಳದೆ
ಎಷ್ಟು ಜ್ವಾಕಿ ಮಾಡಿದರೆ ಹೊಯತವ್ವ ಕಳಿವೆ| ||ಪ||
ಅತ್ತಿ ಮಾಂವರ ಗಂಟ
ಜ್ವಾಕಿ ಮಾಡಿ ಉಣು ಅಂದು ನನ್ನ ಕೈಲೆ ಕೊಟ್ಟು
ಇಟ್ಟ ತಿಜೋರ್ಯಾಗ ನಡುವಿನ ಖೊಲ್ಲ್ಯಾಗ
ತಟ್ಟಿ ಮಾಡಿ ಮುಂದ ಗುಳಿಯವು ಎಳದೆ| ||1||
ಈ ಮನಿಗಿ ಹನ್ನೆರಡು ದ್ವಾರ
ಯಾವ ದಾರೀಲಿ ಬಂದು ಒಯ್ದಿದಾರ
ಕೀಲಿಯ ಮುರದಿಲ್ಲ ಬೆನ್ನ ಗ್ವಾಡಿ ಒಡದಿಲ್ಲ
ಅಷ್ಟು ದ್ರವ್ಯಾಯೆಲ್ಲಾ ಒಯ್ದಾನ ಸೆಳಿದೆ| ||2||
ಗಾರುಡ ಜಾದುಗಾರ
ನಮ್ಮ ಎದುರಿಂದೆ ಒಯ್ದಾನ ನೋಡಿಲ್ಲ ಯಾರ
ಸತ್ಯ ಸಾವತ್ರಿ ಹಿಡಿದಾಳೋ ಅವರ
ಜಕ್ಕನೆ ಬಿಟ್ಟು ಹೋದಾನು ಉಳಿದೆ| ||3||
ಮಾರ್ಕಂಡ್ಯಾ ಎಂಥಾ ಶಾಣ್ಯಾ
ತನ್ನ ಗಂಟ ಮಹಾದೇವನ ಬಲ್ಲೆ ಇಟ್ಟಾನ
ಕಳ್ಳ ಬಂದಾನಾ ಹೆದರಿ ಮಹಾದೇವನ
ಹಿಂಬರಕಿ ತಿರುಗಿ ಹೋದಾನು ತಿಳಿದೆ| ||4||
ಹಿಂಥಾ ಮನಿ ಎದಕಂದ
ಉರಿ ಹಚ್ಚಿ ಸುಟ್ಟ್ಯಾಕರಿ ಶಿವದಾಸ ಎಂದ
ಘಳಕಿಯ ಆದರಲ್ಲಿ ಇಡರಿ ಶಿವನ ಬಲ್ಲಿ
ಇನ್ಯಾರ ಅಂಜಿಕಿ ನಮಗ ಉಳಿಯದೆ| ||5||

 

ಈ ಕಂದನಿಗೆ ಸಣ್ಣ ನಂದನಿಗೆ
ಈ ಕಂದನಿಗೆ ಸಣ್ಣ ನಂದನಿಗೆ
ಬಂದು ತೂಗಿರೆ ಬಾಲಿಗಳೆ| ||ಪ||
ಕುತನದ ಅಂಗಿ ಮುತ್ತ ಕುಲೈಗಿ
ರತ್ನದುಂಗರ ಬೆರಳಿಗೆ
ಜ್ಯೋಡಿಲೆ ತೂಗಿ ಪಾಡಿರೆ ಕೂಗಿ
ಮಧುರ ಮಧುರ ಸ್ವರದೊಳಗೆ| ||1||
ಅತ್ರೆಯ ಕಾಂತಿ ಅನುಸೂಯ ಸತಿ
ದತ್ತಾತ್ರೇಯನ ತೂಗುವಾಗೆ
ಗೌರಿ ಪಾರ್ವತಿ ಲಕ್ಷೀಸತ
ಪತಿ ವಾನವು ಬೇಡುವಾಗ| ||2||
ಮಥುರದಿ ಜನ್ಮ ಗೋಕುಳಾಶ್ರಮ
ಯಶೋಧಾನ ಉಡಿಯೊಳಗೆ
ಕೃಷ್ಣನ ನಾಮ ಇಡುವರು ಪ್ರೇಮ
ಪ್ರೇಮವಾದ ಜಗದೊಳಗೆ| ||3||
ವಾಲ್ಮೀಕಿ ಯೋಗಿ ಆಶ್ರಮಕ ಹೋಗಿ
ಜಾನಕಿ ಜನಿಸು ಆವಾಗೆ
ತೊಟ್ಟಿಲೊಳು ತೂಗಿ ನಾಮವೂ ಕೂಗಿ
ಲವಕುಶ ಅನುವಳು ಹೀಗೆ| ||4||
ಪಾರ್ವತಿ ಕಂದ ಗಜಮುಖನಂದ
ತೊಟ್ಟಿಲೊಳು ತೂಗುವ ಅವಗೆ
ಶಿವದಾಸ ಇಂದ ಪಾಡುವ ಚಂದ
ಮನ ಹಂಸಾನಂದವಾಗಿ| ||5||

ಈ ಮುಪ್ಪಿನ ಕಾಲ
ಈ ಮುಪ್ಪಿನ ಕಾಲ
ಕಳಿವದು ಬಹಳೇ ಮುಸಕೀಲ| ||ಪ||
ಟೊಂಕವು ಬಾಗಿತಲ್ಲ
ಶಿರವು ತೂಗಾಡುವದಲ್ಲ
ನಡಿವದಕೆ ಕೈಯೊಳಗೆ ಕೋಲ| ||1||
ಕಣ್ಣುಗಳು ಕಾಣುವದಿಲ್ಲ
ಕಿಂವಿಗಳು ಕೇಳುವುದಿಲ್ಲ
ಉಣ್ಣುವದಕೆ ಉಳಿದಿಲ್ಲ ಹಲ್ಲ| ||2||
ಉಗುಳಿದರೆ ಬೀಳುವದು ಮ್ಯಾಲ
ಮೂತ್ರವು ವಸ್ತ್ರವು ಎಲ್ಲ
ಮನಗುವ ಮನಿಯ ಮಗ್ಗಲ| ||3||
ಶಿವ ಶಿವ ರಾತ್ರಿ ಹಗಲು
ಶಿದಾಸನ ಹಂಬಲ
ಕರಕೋ ತೆರಿ ನಿನ್ನ ಬಾಗೀಲ| ||4||

ಈ ಲೋಕದ ಬಾಧಿ ಸಾಕಾಯಿತಪ್ಪ
ಈ ಲೋಕದ ಬಾಧಿ ಸಾಕಾಯಿತಪ್ಪ| ||ಪ||
ಖರೆ ಆಡಿದರ ಅಂತರ ಥೊಂಟಿ
ಬರದ ಬೇಡಿದರೆ ಮಾಡ್ತರ ತಂಟ
ಹೊಟ್ಟಿಗಿ ಮರಗಸಿ ಘಳಿಸಿ ಗಂಟ
ಘಟಿಂಗರು ಎಬ್ಬಿಸಿ ಮಾಡ್ಯಾರ ಲೂಟ| ||1||
ಪ್ರಾಯದ ಹುಡುಗರು ಮಾಡಲ ಕಷ್ಟ
ಊರಾಗ ತಿರುಗ್ಯಾರ ಕೂದಲ ಬಿಟ್ಟ
ಆಡತಾರ ಇವರು ಜವ್ವಾದ ಆಟ
ಸಿಂಧಿ ಸೇರಿ ಚಹ ಕುಡಿಯದು ರೇಟ ||2||
ಬಡವರ ಮಗಳು ಇದ್ದರ ನೇಟ
ನೆರಮನಿ ತುಡುಗರು ಕೆಟ್ಟ ಮನಸಿಟ್ಟ
ಅತ್ಯಾಚಾರ ಮಾಡ್ಯಾರ ಆದಷ್ಟ
ಸತ್ಯ ನುಡಿದಿದರೆ ದುಷ್‍ಮನಿ ಇಟ್ಟ ||3||
ನನ್ನವರಂದು ನಂಬಿಗಿ ಇಟ್ಟ|
ನಂಬಿಸಿ ಬಂದು ಮಡ್ಯಾರ ಕಪಟ
ಅಣ್ಣಗೆ ತಮ್ಮ ಆಡಿದ ಉಲಟ
ಹೋದನು ಧರ್ಮದ ದಾರಿಯ ಬಿಟ್ಟ| ||4||
ಬಡ ಶಿವದಾಸ ಮಾಡಿದ ಸಿಟ್ಟ
ನಡಿ ನುಡಿ ಶುದ್ಧ ನಡಿಯಿರಿ ಇಷ್ಟ
ಬಂದರೆ ಬರಲಿ ಭವದ ಕಷ್ಟ
ನಡಿಬ್ಯಾಡರಿ ಸದ್ಭಾವ ಬಿಟ್ಟ| ||5||

ಈ ಭವದ ಬಾಜಾರಕ ಬಂದೆನಲ್ಲ
ಈ ಭವದ ಬಾಜಾರಕ ಬಂದೆನಲ್ಲ
ಹೊತ್ತೊ ಹೋಯ್ತು ಇನ ಅಂಗಡಿ ಮುಗದೆ ಇಲ್ಲ
ಕತ್ತಲ ಬಿದ್ದಿತೊ ಸುತ್ತ ಎಲ್ಲಾ
ಜತಿಲಿ ಉಳದವರು ಯಾರು ಇಲ್ಲ| ||ಪ||
ಕೊಂಡು ಕೊಂಡೇನೊ ಬೆಂಡು ಬತ್ತಾಸಿ
ಉಂಡಿ ಖೊಬ್ಬರಿಯ ಉಡಿಯೊಳಗ
ಕಂಡಿದು ಉಂಡೇನ ಖಂಡ ಬಿರ್ಯಾನಿ
ಶಂಡಿಗೆ ತುಪ್ಪ ಅದರೊಳಗ
ಉಂಡುಂಡು ಬ್ಯಾಸರ ಆದೇನಲ್ಲ
ಮನಸಿನ ಆಪೇಕ್ಷಿ ತೀರಲೆ ಇಲ್ಲ| ||1||
ಬಟ್ಟಿ ತೊಟ್ಟಿನಿ ಚೆಸ್ಟರ ಮಲ್‍ವುರ್ಲ
ಕೋಟ ಖಮೀಸ ಮೈ ಒಳಗ
ಸೂಟ್ ಬೂಟ ಪಟ್ಲೋನ ನೆಕ್ಟಾಯಿ
ಬೆಲ್ಟ ಕಟ್ಟಿದೇನ ಟೊಂಕಿನಾಗ
ಉಟ್ಟುಟ್ಟು ಬ್ಯಾಸರ ಅದೇನಲ್ಲ
ಮನಸಿನ ಅಪೇಕ್ಷಕೆ ತೀರೇ ಇಲ್ಲ| ||2||
ಹಚ್ಚಿದ ನಾನು ಹೀನಾ ಚಮೇಲಿ
ಗುಲಾಬದೆಣ್ಣಿ ಕೂದಲಿಗ
ಕನ್ನಡಿ ನೋಡಿ ಬೇತಲ ತೀಡಿ
ಒರ ಒರಸಿ ತೊಳದೆ ಮಾರಿ ಮೂಗ
ತೋಳ ತೋಳದು ಬ್ಯಾಸರ ಆದೇನಲ್ಲ
ಒಳಗಿನ ವಾಸನೆ ಹೋಗಲೆ ಇಲ್ಲ| ||3||
ಸಾಲಿ ಬರಿದ ನಾ ಕಾಲೇಜದೊಳಗ
ಮೇಲಾದ ಮ್ಯಾಟ್ರಿಕ ಬಿ.ಎ.ದೊಳಗ
ಕನ್ನಡ ಮರಾಠಿ ಹಿಂದಿ ಅರಬ್ಬಿ
ಇಂಗ್ಲಿಷ ಮಾರ್ವಾಡಿ ತೆಲಗ
ಕಲಕಲ್ತು ಬ್ಯಾಸರಾದೆನಲ್ಲ
ಕಾಲೇಜ ವಿದ್ಯಾವು ಮುಗಿಯಲಿಲ್ಲ| ||4||
ಆದ ಮುಲಜುಮ್ ಮುನಸುಫ ನಾಜುಮ
ಮಂತ್ರಿ ಕೆಲಸ ಕೈ ಒಳಗ
ಶಾರ ಮೈಸೂರ ಹಸ್ತಿನಾಪುರ
ಹುಕುಮತ್ ಮಾಡಿದ ಬಲ್ಲಂಗ
ಪೃಥ್ವಿರಾಜ ಪೂರಾ ಆಳಲಿಲ್ಲ
ಮನಸಿನ ಮುಳ್ ಮುಳ್ ತೀರಲಿಲ್ಲ| ||5||
ರೊಕ್ಕ ಘಳಸಿ ನಾ ಲೆಕ್ಕ ಇಲ್ಲದೆ
ಲಕ್ಪತಿಯಾದ ಜಗದೊಳಗ
ಆಕೃತಿನಿಂದೆ ನಾ ಆರ ಮಂಜಲಾದ
ಬಿಲ್ಡಿಂಗ ಕಟ್ಟಿದ ಬಂಬೈ ಒಳಗ
ಕಟ್ಟಿ ಕಟ್ಟಿ ಬ್ಯಾಸರ ಆದೇನಲ್ಲಾ
ಆಬರಕ ಬಿಲ್ಡಿಂಗ ಮುಗಿಯಲಿಲ್ಲಾ| ||6||
ಮಾಡಿಕೊಂಡ ನಾ ಮದವಿಯ ಐದು
ಮಡದೀರಯರಿರುವರು ಮನಿಯೊಳಗ
ಮನಸಿಗೆ ಬಂದ ಕೇರಿಗೆ ಬಂದು
ಗೆಳದಿಯರಿರುವರು ಊರೊಳಗ
ಸ್ತ್ರೀ ಸಂಗ ಮಾಡಿ ಬ್ಯಾಸರಾದೆನಲ್ಲ
ಮನಸಿನ ಹಂಬಲ ತೀರೇ ಇಲ್ಲ| ||7||
ಬ್ಯಾಸರ ಆಗಿ ದೇಶಾಂತರ ಹೋಗಿ
ಸಾಕ್ಷಾತ್ ಭೆಟ್ಟಯಾಗೊ ಶಿವ ಎನಗ
ಹಂಪಿಗಿ ಕಾಶಿ ಹಂಗೆ ರಾಮೇಶ್ವರ
ಹುಡುಕುತ ಬಂದ ಪಂಢರೀಗ
ಹುಡುಕ್ಹುಡಕಿ ಬ್ಯಾಸರ ಆದೇನಲ್ಲ
ಸಕ್ಷಾತ್ ಶಿವನು ಸಿಕ್ಕೇ ಇಲ್ಲ| ||8||

ಎಂಥ ಕಾಲವು ಬಂದಿತೋ
ಎಂಥ ಕಾಲವು ಬಂದಿತೋ
ಶಿವರಾಯ ಬಲ್ಲ
ಇನ್ನು ಮುಂದೆ ಹ್ಯಾಂಗೆ ಬಂದತ್ತೋ| ||ಪ||
ಹೆಣ್ಣು ಮಕ್ಕಳು ಹುಟ್ಟಿ
ಹೆಚ್ಚಾಯಿತೊ ಮೆಜಾರಿಟಿ
ವರವ ಹುಡುಕುತೆ ಸಾಕು ಸಾಕಾಯ್ತೊ| ||1||
ಬಂಡಿ ಹೊಡೆಯುವರೆಲ್ಲ
ಹುಂಡ್ಯಾ ಬೇಡುವರೆಲ್ಲ
ಘಡಿಯು ಬೇಕೆಂದ ಮೊದಲ ಘಂಟೆ ಟೈಮ ಇಲ್ಲ ಗುರುತ| ||2||
ಮನಿಯ ಹೊಲವು ಮಾರಾಟ ಮಾಡಿ
ಮಗಳಿಗೆ ಕೊಟ್ಟ ಮದವಿಯ ಮಾಡಿ
ಇನ್ನೇನು ಉಳಿಯಲಿಲ್ಲ ಭಿಕ್ಷಾ ಬೇಡೋದೇ ಬಂತೋ| ||3||
ಕೊಡುವದು ತೊಕೊಳ್ಳದು ಖಂಡಿತ ಬಿಡರಿ
ವರವಿದ್ದರೆ ಕುಲ ಎಣಿಸ್ಯಾಡಬೇಡರಿ
ನೂರು ಹಡಿಯುವದಕ್ಕಿಂತ ಮೂರೆ ಇರಲೈಯೋ ಮುತ್ತ| ||4||
ಹಿಂದೂಸ್ಥಾನದ ಒಂದೇ ಭಾಷಾ
ಒಂದೇ ದೇವರ ಒಂದೇ ಕುಲವೊ
ಒಂದಾಗಿ ನಡಿರೆಂದು ಶಿವದಾಸ ಕೂಗಿ ನಿಂತು| ||5||

 

ಎಂಥ ಮದವಿ ನಾ ಮಾಡಿಕೊಂಡ
ಎಂಥ ಮದವಿ ನಾ ಮಾಡಿಕೊಂಡ
ಗೊತ್ತ ಇಲ್ಲದೆ ಫಾಸಿ ಹೈಕೊಂಡ
ಹೆಂಡತಿ ಸುಖ ಉಂಡ ಬಲು ಕಂಡ| ||ಪ||
ಬಂಧು ತಾಯಿ-ತಂದೆಗೆ ಬ್ಯಾರೆ ಇಟ್ಟ
ಅಕ್ಕ ತಂಗೇರು ಹೋದರೂ ಹೊಂಟ
ಅಣ್ಣ ತಮ್ಮರ ಹಂಚಿಕೆ ಕೊಟ್ಟ
ನಮ್ಮ ಪಾಲಿಗೆ ಹಳಿಮರ ಹುಟ್ಟ
ಮನಿ ಹೆಡ್ಡ ಕಳಕೊಂಡ ಹೆಂಡತಿ ಸುಖ| ||1||
ಇಕಿನ ಚಟಗಳು ಚಹಾ ಉಪ್ಪಿಟ್ಟ
ಎಲಿ ಅಡಕಿಯ ಮ್ಯಾಲ ಸಿಗರೇಟ
ಲೇಡಿ ಫ್ಯಾಷನ ಮಾಡಿ ಬಾಲ ಕಟ್
ಕೊಂಡು ಬ್ರಾಂಡಿಯ ಖಾರದ ಊಟ
ಉಳದಿದುಂಡ ನೀರ ಕೊಂಡ ಹೆಂಡತಿ| ||2||
ಎನ್ನ ಕೈಯೊಳಗೆ ಕೈಚೀಲ ಕೊಟ್ಟ
ಎನಗೆ ಖಳವಿಕೊಟ್ಟಳ ಮಾರ್ಕೇಟ
ಬಾಳಿಹಣ್ಣ ಅಂಗೂರ ತಮಾಟಾ
ಸೇಬ ಸೀಳಿ ತಂದಳ ಮಟಮಟ
ಇವಳ ಧಂಡ ಆಯಿತ್ರಿ ಪಿಂಡ ಹೆಂಡತಿ| ||3||
ಒಡಿದು ಕಟಗಿಯ ಒಲಿಮುಂದ ಇಟ್ಟ
ನನ್ನ ದೈವಕ ಬಿದ್ದಳ ಗಂಟ
ಲಗೂ ಬೀಸಿ ತಾ ಅಂತಾಳ ಹಿಟ್ಟ
ನಾನು ದಾರಿಗಿ ಹೇಳಲಿ ಕಷ್ಟ
ಮೂಗ ಮೊಂಡ ಕರಿ ತುಂಡ ಹೆಂಡತಿ| ||4||
ಟೂರ ಸಂಚಾರ ಮಾಡದಕೆ ಹೊಂಟ
ನನ್ನ ತಲಿ ಮ್ಯಾಲ ಹೊರಸ್ಯಾಳ ಗಂಟ
ಶಿವದಾಸ ನೋಡ್ಯಾರ ಕಣ್ಣಮುಟ್ಟ
ಅಂದು ಹುಂಡದು ತೆಲಿಮ್ಯಾಲ ಪೆಟ್ಟ
ತಂದಿ ಹುಂಡ ಅದೇ ಗಂಡ ಹೆಂಡತಿ ||5||

 

ಎಲ್ಲಾ ಜೀವರಾಶಿ ನಿನ್ನ ಕೈಗೆ ಆಸಿ
ಎಲ್ಲಾ ಜೀವರಾಶಿ ನಿನ್ನ ಕೈಗೆ ಆಸಿ
ನಿನ್ನ ಮ್ಯಾಲೆ ಮುನಸಿ ಬೇಡೇರೆನ| ||ಪ||
ಬಾಲಗ ಹಾಲು ಕುಡಸಿ ಹಂಬಲವ ಬಿಡಿಸಿ
ಹಂಗೆ ಸಮಜಾಸಿ ಮಲಗಸ್ಯಾನ| ||1||
ಮಳಿಹನಿ ಸುರಸಿ ಮನುಜನ ಉಣಸಿ
ತಾನೇ ಉಪವಾಸಿ ಉಳಿವನೇನಾ| ||2||
ಬನ ಭಾರ ತರಸಿ ಹಣ್ಣ ಹಂಸ ಸುರಸಿ
ಹಳ್ಳದ ನೀರ ಮುಗಸಿ ಕುಣಿವಾನೇನ| ||3||
ಮೊದಲ ಕೆಂಪ ಹರಸಿ ಪಕ್ಷಿಯೆಲ್ಲಾ ಕೂಡಿಸಿ
ಒಂದೇ ಸ್ವರ ಕಲಸಿ ಮಾಡಿ ಪ್ರಾರ್ಥನಾ| ||4||
ಪಕ್ಷಿ ಶಿಕ್ಷಾಕಲಸಿ ಮೂಸಲ ಚುಕ್ಕಿ ಕಾಣಿಸಿ
ಪ್ರಭು ಧ್ಯಾನ ಮಾಡಿಸಿ ಶಿದಾಸನಾ| ||5||

 

ಎಲ್ಲಾ ಪ್ರಾಣಿ ಮ್ಯಾಲ ಮಾನವ ಜನ್ಮ ಮೇಲ
ಎಲ್ಲಾ ಪ್ರಾಣಿ ಮ್ಯಾಲ ಮಾನವ ಜನ್ಮ ಮೇಲ
ಮಾಡಿ ಇಟ್ಟಿದೆಲ್ಲಾ ಜ್ಞಾನಿ ಬಲ್ಲಾ| ||1||
ಜ್ಞಾನ ಕೊಟ್ಟಿದೆಲ್ಲಾ ಪಾಪ ಪುಣ್ಯ ಖುಲ್ಲಾ
ತಿಳಿಯದು ವರಗಲ್ಲಾ ಕೊಟ್ಟಿದೆಲ್ಲಾ| ||2||
ಇಟ್ಟ ನಾಲಿಗೆ ಮೇಲಾ ತಿಳಿದು ಫಲಾ
ಮ್ಯಾಗೆ ನೋಡಿ ಮುಗಲಾ ಹೇಸಿತಲ್ಲಾ| ||3||
ಕೆಟ್ಟ ಶಬ್ದ ಕಿವಿ ಮ್ಯಾಲ ಪಟ್ಟನೆ ಸರಿದು ತನಕಾಲ
ಅತ್ಯಾಚಾರ ಅಮಲ ಕಣ್ಣಿಲಿ ನೋಡಿಲ್ಲ| ||4||
ತಿಳಿಯದಿದ್ದು ಇಷ್ಟೆಲ್ಲಾ ತಿಳಿದು ಹೋದರ ಹೊಲಪಾಲ
ಶಿವದಾಸ ಯಾರಿಗಿ ಆಡಿಲ್ಲಾ ಬಿಟ್ಟಾರ ಖುಲ್ಲಾ| ||5||

 

ಏನಿದು ನ್ಯಾಯವೆ
ಏನಿದು ನ್ಯಾಯವೆ
ನಿನ್ನಲಿ ಸಂಭಾನೆ
ಏನಿದು ನ್ಯಾಯವೇ| ||ಪ||
ಏಸೋ ದಿವಸಾಯಿತಲ್ಲ
ಧ್ಯಾಸಿಟ್ಟು ನಿನಮ್ಯಾಲ
ನಿನ ಮನ ಕರಗಿಲ್ಲ
ಕರಣಾವು ಬರಲಿಲ್ಲಾ| ||1||
ಹಸಿಯ ಮಣ್ಣಿನ ಬಂಗಲ
ಒಳಗೆನಗೆ ಇಟ್ಟೆಲ್ಲಾ
ಬೀಳುವದು ಎನಮ್ಯಾಲ
ಎನ್ನ ಮನಕೆ ಭುಗಿಲ| ||2||
ನಿನ್ನ ಮನಿ ಹಿತ್ತಲ
ಗುಂಪವ ಗುಡಿಸಲ
ಇಟಕೊ ಈ ಕಂಗಾಲ
ಕೊಟ್ಟು ನಿನ್ನ ಎಂಜಲ| ||3||
ಶಿವದಾಸ ಸಣ್ಣ ಬಾಲ
ಬಿಡಬ್ಯಾಡ ಅಡಿಮ್ಯಾಲ
ನಡುವೆ ಹದ್ದಿನ ಪಾಲ
ಕಡಿದು ತಿನುವವೋ ಎಲ್ಲಾ| ||4||

 

ಏಳೇಳೊ ಮಾನವ
ಏಳೇಳೊ ಮಾನವ
ಎಷ್ಟೊತ ಮನಗುವ
ಸೂರ್ಯನಾರಾಯಣ ಬರುವನು ಎಳು| ||ಪ||
ಶಿವ ಶಿವ ಅಡವಿಲಿ
ಪಕ್ಷಿಯ ಬಾಯಲಿ
ಊರೊಳು ಕೋಳಿ ಕೂಗ್ಯಾವ ಏಳು ||1|||
ಮನವ ಜನ್ಮಕ್ಕೆ ಬಂದಿ
ಮೇಲ ಪದವಿಗೆ ಹೊಂದಿ
ಮೊದಲಿನ ಸ್ಥಿತಿಯ ಮರಿಬೇಡ ಏಳು| ||2||
ಸತಿ ಸುತ ಸಂಭ್ರಮದಿ
ಬೇಕಾಗಿದು ಮಾಡಿ ತಿಂದಿ
ಕ್ಷಣವರ ಶಿವನಾಮ ನುಡಿಯಲಿ ಏಳು| ||3||
ಬರುವದು ಯಮ ಬಾಧಿ
ಹಿಡಿದುಕೊಳ್ಳೊ ಶಿವನ ಹಾದಿ
ಹುಟ್ಟಿ ಸಾಯುವದು ತಪ್ಪಿಸಲಿ ಏಳು| ||4||
ಮಂದಿರ ಮಸೀದಿಯಲ್ಲಿ
ಬಂದ ಭಕ್ತರು ಅಲ್ಲಿ
ಸಂಧ್ಯಾದ ಸಮಯದ ಬಂದಾದ ಏಳು| ||5||
ಓಂ ನಮಃ ನುಡಿಯುದರಲ್ಲಿ
ದಾಮ ಏನು ಇಲ್ಲ ಝೋಲಿ
ಸುಮ್ಮ ಮನಗಿ ಸಮಯ ಕಳಿಬೇಡ ಏಳು| ||6||
ನಾಲ್ಕು ತಾಸು ರಾತ್ರಿಲಿ
ಶಿವ ಶಿವ ಬಾಯಿಲಿ
ಶಿವದಾಸ ಕೂಗಿ ಎಬ್ಬಿಸುವ ಏಳು| ||7||

ಒಕ್ಕಲುತನಕ ಒಪ್ಪುವ ನೀನ
ಒಕ್ಕಲುತನಕ ಒಪ್ಪುವ ನೀನ
ಕಂಬಳಿ ಅಣ್ಣ ಕಂಬಳಿ ಅಣ್ಣ| ||ಪ||
ಶಲ್ಯೆವು ಟೊಂಕಿಗಿ ಕಟ್ಟಿದಿ ಏನ
ಪೊಲ್ಲೆದ ಚಪ್ಪಲಿ ಮೆಟ್ಟದಿ ಏನ
ಹೆಗಲ ಮ್ಯಾಲ ಬಾರಕೋಲ ಇಟ್ಟಿದಿ ಏನ| ||1||
ಬಾಳ್ಯಾ ಗೋಪಾಳ್ಯಾ ಕಟ್ಟಿದಿ ಏನ
ನಟ್ಟಿನ ಹೊಲ ಹಸನಿಟ್ಟಿದ ಏನ
ಮೋಸದ ಮ್ಯಾಲ ಬೀಜ ಬಿಟ್ಟಿದಿ ಏನ| ||2||
ಭೂದೇವಿ ಪೂಜಾ ಇಟ್ಟಿದಿ ಏನ
ಎಳ್ಳಾಮಾಸಿಗಿ ಎಡಿ ಕೊಟ್ಟಿದಿ ಏನ
ಅಂಬಲಿ ಬುತ್ತಿ ಕಟ್ಟಿದಿ ಏನ| ||3||
ಗುರುವಿನ ಪಾದವು ಮುಟ್ಟಿದಿ ಏನ
ದುರಾಚಾರ ದುರ್ಗುಣಗಳು ಬಿಟ್ಟಿದಿ ಏನ
ಶಿವದಾಸ ಸಾಕ್ಷಿ ಇಟ್ಟಿದಿ ಏನ| ||4||

 

ಓಂ ನಮಃ ಧ್ಯಾನವ ಮಾಡೋ
ಓಂ ನಮಃ ಧ್ಯಾನವ ಮಾಡೋ
ಶಿವ ನಾಮದ ಕೊಂಡಾಡೋ
ಹರ ನಾಮದ ಕೊಂಡಾಡೋ| ||ಪ||
ಸುಖ ದುಃಖ ನಮ ಜನ್ಮದ ಜೋಡೋ
ಕರ್ಮದ ಕೃತ್ಯ ಆಗುವದು ನೋಡ
ಯಾ ಹೊತ್ತು ಹೆದರಲಿ ಬ್ಯಾಡೋ| ||1||
ಜನನ ಮರಣ ನಮ ಫೇರಿಯೆ ನೋಡೋ
ಮಾನವ ಜನ್ಮ ಸಿಕ್ಕಾಗ ಪೂಜೆಯ ಮಾಡೋ
ಪುನಃ ಜನ್ಮದ ತಿರುಗಲಿ ಬ್ಯಾಡೋ| ||2||
ಸುಖ ಸಂಭ್ರಮ ಈ ದೇಹಕ ಬ್ಯಾಡೋ
ಸುಟ್ಟ ಮಡಕಿ ಪರಿ ನಾದವ ಮಾಡೋ
ಶಿವದಾಸ ನೀ ಕದರಿಡಬ್ಯಾಡೋ| ||3||

ಓಂ ಶಿವ ನೀ ನಿರಂಜನ
ಓಂ ಶಿವ ನೀ ನಿರಂಜನ
ಪಾಲಿಸೆನ್ನ ಪ್ರಾರ್ಥನಾ
ನೀನಲ್ಲದ್ಹೇಳಲಿ ಇನ್ನೆಲ್ಲಿ ನಾ
ನೀನೆ ಗತಿಯೊ ತ್ರಿಭುವನ| ||ಪ||
ಮಾಯಾ ಪರಪಂಚದ ಶರೀರಿಗೆ
ಹಾಕಿದೋ ಎನ್ನ ಕೊರಳಿಗೆ
ಹೀನ ಬಡತನವು ಎನಗೆ
ಬಿಡಸಿ ನಿನ್ನ ಧಾರಿಗೆ
ಭ್ರಾಂತಿ ಬಿಡಿಸೊ ದುಃಖವನ
ಶಾಂತಿಯ ಪಡಿಸೋ ಸುಖವನ| ||1||
ಯಾರು ನಿನ್ನ ಸ್ವರಿಯೊಳಗೆ
ಅವರ ಚಿಂತೆ ನಿನ್ನಗೆ
ಘೋರ ಸಂಕಟ ಪ್ರಲ್ಹಾದನಿಗೆ
ತಾರಿಸಿ ನೀ ಅವನಿಗೆ
ತೊಟ್ಟು ರೂಪ ನರಸಿಂಹನ
ಕೊಟ್ಟಿ ಭೆಟ್ಟಿಯ ಪ್ರಲ್ಹಾದನ| ||2||
ಬೇಡಿಕೆ ಬೇಡುವೆ ನಿನಗೆ
ಬಿದ್ದು ನಿನ್ನ ಪದರಿಗೆ
ಬಿಟ್ಟು ಹೋಗಬ್ಯಾಡಯ್ಯಾ ಎನಗೆ
ಇಟ್ಟುಕೊ ನಿನ್ ಪೂಜೆಗೆ
ಬಿಟ್ಟರೆ ಬಿಡಲಿ ದೇಹವನ
ನೀ ಬಿಡಬ್ಯಾಡೊ ಶಿವದಾಸನ| ||3||

 

ಓಂ ನಮಃ ಶಿವಾಯ ಮಂತ್ರವ ನುಡಿವೆ
ಓಂ ನಮಹಃ ಶಿವಾಯ ಮಂತ್ರವ ನುಡಿವೆ
ಮಾಡುವೆ ಸುತಿಯ ಮೊದಲಿನ ನುಡಿಯೆ| ||ಪ||
ತೊದಲ ನುಡಿಗಳನು ಬದಲು ಮಾಡಬೇಡ
ಹೃದಯದಿ ಕೂಡೊ ನೀ ಜ್ಞಾನದ ಕಣಿಯೆ| ||1||
ಮುದದಿ ಕೊಂಡಾಡೋದು ನೋಡೊ ಮಲ್ಲಿಗೆ
ಮುದ್ದಿನ ತನುವಿದು ನಿಮ್ಮ ಚರಣಕ ಎಡಯೆ| ||2||
ಸದಾ ನಿಮ್ಮ ದಾಸಾನುದಾಸನಾಗಿ ದುಡಿವೆ
ಶಿವದಾಸಗೆ ಒಲಿದು ದಯೆ ನೀಡು ಉಡಿಯೆ| ||3||

 

ಕಂದನ ಕಂಡಿರೇನ ಮುಕುಂದನ ಕಂಡೀರೇನ
ಕಂದನ ಕಂಡಿರೇನ ಮುಕುಂದನ ಕಂಡೀರೇನ| ||ಪ||
ಕಣ್ಣ ಎದುರೆ ಎನ್ನ ಕಾಣದೆ ಕಂದನ
ಮಂದಿರದೊಳು ಮನ ನಿಲ್ಲಾದೆನ್ನ
ಕೇರಿಲೇ ಅಡುವ ಹಾರೆತ್ತ ಓಡುವ
ನಾರೇರು ಎತ್ತಿಕೊಂಡು ಪೋದಾರೇನ| ||1||
ಹಾಲಗಡಗ ಕಾಲ ಗೆಜ್ಜಿ ಕುಲೈ ಕುಂಚಗಿ
ಹಣಿಮ್ಯಾಲ ಹರಿನಾಮ ಹಚ್ಚಿದೆನ
ನೀಲಿ ಬಣ್ಣದ ವರ್ಣ ಹಸನ ಮುಖದವನ
ಕೊಳಲವು ಊದುತ ನಿಲ್ಲುವನ| ||2||
ಬಿಸಿ ನೀರ ಬೆರಸಿನಿ ಹಸಿ ಹಾಲ ಕಾಸಿನಿ
ಫಲಾಹಾರ ಫಲಗಳು ತಂದಿದೆನ
ಹಸವಿನ ಮರಿವನ ಕಂಡು ಶಿವದಾಸನ
ಮರುಳಾಗಿ ಮಂತ್ರವ ಓದ್ಯಾನೇನ| ||3||

 

ಕಷ್ಟ ಕುಡವಲಿ ಬೇಡ
ಕಷ್ಟ ಕುಡವಲಿ ಬೇಡ
ಭ್ರಷ್ಟ ಆಗಾದು ದೃಢ
ದೃಷ್ಟಿಲಿ ನೋಡೊ
ಇಷ್ಟರಲ್ಲೆ ದೇವ ಕರವು ಕಾಪಾಡೊ| ||ಪ||
ಇಪ್ಪತ್ತೈದು ಸಾವಿರ ಕ್ರೀಡಾ ನಿರಾಧಾರ
ಹಳ್ಳ ಬಾವಿಯ ಬತ್ತಿ ಹೊರಳಾಡುವರ
ಮಳಿ ಇಲ್ಲದೈತೋ ಮೋಡ
ಬೆಳಿ ಒಣಗಿ ಹೋಯ್ತೊ ಬುಡ
ಇದು ಎಂಥ ಕೇಡೊ
ಇಷ್ಟರಲ್ಲೇ ದೇವ ಕರವು ಕಾಪಾಡೋ| ||1||
ಪಶುಗಳು ಒರಳಾಡುವರ
ಹಸವು ತಾಳದೆ ಅವರ
ಕೊಂಡೆನಂದರ ಇಲ್ಲ ನೀರ
ಮಂಡಲ ಪೂರ
ಪಕ್ಷಿ ಗಿಡ ಗಿಡ ಫಲವು ಹುಡಕ್ಯಾವು ನೋಡೊ
ಸಲವು ಸುಖ ಮಾಡೊ| ||2||
ಧ್ಯಾನ ಇದ್ದ ಸೌಕಾರ ಬೆನ್ನತ್ತಿ ಬಡವರ
ಅನ್ನ ಬೇಡಿ ಸಣ್ಣ ಮಕ್ಕಳು ಅಳುವರ
ಇನ್ನ ತಡಿಯಲಿ ಬೇಡೋ
ಚೆನ್ನ ದಿವಸವು ಮಾಡೊ
ಶಿವದಾಸ ನೀಡೋ
ಇಷ್ಟರಲ್ಲೇ ದೇವ ಕರವು ಕಾಪಾಡೋ| ||3||

 

ಕ್ಷಣ ಕ್ಷಣ ಓಂ ಶಿವ ನುಡಿಯೊ ಮನ
ಕ್ಷಣ ಕ್ಷಣ ಓಂ ಶಿವ ನುಡಿಯೊ ಮನ| ||ಪ||
ಜೇನಿನ ನೊಣ ತನ್ನ
ಶರೀರದಿ ಸೋರಿದ ಜೇನ
ಸವಿ ಮಾಡಿ ಸಕ್ಕರೆಯಂತೆ ತಾನೆ ನೆಕ್ಕುವನ
ಗವಿ ಗುಡಿ ಸಿಕ್ಕಿದಂತೆ ದೇವ ದರುಶನ| ||1||
ಮಹಾಯೋಗಿ ಮಸ್ತಕ ಕಿರಣ
ಕಿಡಿ ಕಾರತೈತೆ ಜ್ಞಾನ
ಸ್ವಯಂ ಬ್ರಹ್ಮನಂತೆ ಸತ್ಯ ಸತ್ಯ ವಚನ
ಸತ್ಪುರುಷರು ಬರೆದಿದ ಮಾತೆ ದೊರೆದಿದಂತೆ ರತುನ| ||2||
ಮಾಡಿದ ಪಕ್ವನ
ನೋಡುವ ಪಡಿತನ
ಪಕುವಾನ ಪಾಡೈತೆ ಜನಕ ನೀಡುವನ
ಉಂಡವರು ಕಾಣಿಯ ತೃಪ್ತಿ ಅಮೃತ ರಸನ| ||3||
ಮಹಾದೇವ ಮಾಡಿದಾನ
ಮಾನವರೊಳಗೆ ಶರಣ
ಮರ್ತ್ಯಕ್ಕೆ ಸತ್ಯ ಸತ್ಯ ಮಾತ ತಿಳಿಸುವನ
ಶಿವದಾಸ ತಿಳಿದು ಗುರುತ ಪಾದಕೆರಗುವನ| ||4||

 

ಕಾನಾ ಬಾರೈಯೋ
ಕಾನಾ ಬಾರೈಯೋ
ಎನ್ನ ಮೋಹನ ||ಪ||
ಬಾರೈಯೋ ಎನ್ನ ಮೋಹನ
ದಾರಿ ನೋಡುವೆ ಎನ್ನ
ಮೀರಿತೋ ಯಾಳ್ಯಾ ಎನ್ನ
ಸ್ವಾರಿ ಬರಲಿಲ್ಲಾ ಎನ್ನಾ ||1||
ಹಾಲ ಮೊಸರ ಧ್ರುಣ
ಸಕ್ಕರಿ ಬಾಳಿಹಣ್ಣ
ಕಲಸಿದ ತೀರ್ಥವನ್ನ
ಸುರಿಯ ಬಾರೈಯೋ ||2||
ಅಪ್ಪ ಶಿವದಾಸನ
ತಪ್ಪ ಆಯಿತೊ ಎನ್ನ
ವೆಪ್ಪಿದ ಮಂತ್ರಣ
ನೆಪ್ಪ ಹೋಯಿತು ಎನ್ನ ||3||

 

ಕುಡುಬ್ಯಾಡ ಹಡದವ್ವ ಹಳ್ಳಿ ಒಕ್ಕಲಗ್ಯಾನ
ಕುಡುಬ್ಯಾಡ ಹಡದವ್ವ ಹಳ್ಳಿ ಒಕ್ಕಲಗ್ಯಾನ
ಮಾಡಿಕೊಳ್ಳುವೆ ಶಾರ ದೊಡ್ಡ ಪಟ್ಟಣದವನ ||ಪ||
ಹೆಂಡಿ ಬಳಿದು ಬಿಂಡಿ ರೊಟ್ಟಿ ಬಡಿಲಾರೆನಾ
ಗಂಡನಗುಡ ಖಿಚಿಡಿ ಹೊಲಕ ದುಡಿಲಾರೆನಾ
ಬಿಂಡಿ ಹುಲ್ಲ ತೆಲಿ ಮ್ಯಾಲ ಇಡಲಾರೆನಾ
ಸುಡು ಇಂಥ ಸಂಸಾರ ನಡಿಲಾರೆನಾ ||1||
ಬೇಡಿಕೊಳ್ಳುವೆ ಸಿರಡಿ ಬಾಬಾ ಜೋಡಿ ಪುರುಷನಾ
ಕಣ್ಣಿಗೆ ಚಸ್ಮಾ ಕೈಯಲ್ಲಿ ಘಡಿಯ ಕರಾಪ ಬೆತಲದವನ
ಮುಂದೆ ಕುಂತು ಮೂಗಿನಾಗೆ ನಕ್ಕು ನಗಿಸುವನ
ಮುನಿದು ಮನಗಿದರೆ ಏಳೇಳು ಎಂದು ಎಬ್ಬಿಸುವನ ||2||
ಟೂರದೊಳಗೆ ಗಾಡಿ ಮೇಲೆ ಜೋಡಿಲಿಂದೆ ಕೂಡೋಣ
ಲಾಜಿನೊಳಗೆ ಗಾದಿ ಮೇಲೆ ಮೋಜಿನೊಳಗೆ ಮಲಗೋಣ
ಇಡ್ಲಿ ಸಾಂಬರ ಹೊಟೇಲ್ ಪುರಿ ನಾಷ್ಟಾ ಮಾಡಿಸುವನ
ಮಾಡಿಕೊಳ್ಳುವೆ ಶಾರ ದೊಡ್ಡ ಪಟ್ಟಣದವನ ||3||
ಚುಡಗುಪ್ಪಿ ಮಡಿವಾಳನ ಜಾತ್ರಿಯ ಮಾಡುವನ
ಉಡಿಯೊಳಗೆ ಹಿಡಿ ಹಿಡಿಯೆಂದು ಹಿಡಕಿ ರೊಕ್ಕ ನೀಡ್ಯಾನ
ಚುಡವಾ ಚೂರಮೂರಿ ಗುಲಾಬ ಜಾಮೂನ ಪೇಡದ ಪುಡಿಯ ಕೊಡುವನ
ಮಾಡಿಕೊಳ್ಳುವೆ ಶಾರ ದೊಡ್ಡ ಪಟ್ಟಣದವನ ||4||
ಭೂಮಿ ಮೇಲೆ ಪ್ರೇಮವಿಲ್ಲ ನರನಾರಿಯರನ
ಸರಿಯಾಗಿ ಬೆಳಿಯೋದಿಲ್ಲ ಖರೀಫ ಕಟಾಣ
ಶಿವದಾಸ ಯ್ಯಾಸ ಮಾಡರೆಂದು ಭೂಮಿ ತಾಯಿನ
ಮಾಡಿಕೊಳ್ಳುವೆ ಶಾರ ದೊಡ್ಡ ಪಟ್ಟಣದವನ ||5||

 

ಕೇರ್ಯಾಗಿನ ಅವ್ವಗಳಿಗೆ
ಕೇರ್ಯಾಗಿನ ಅವ್ವಗಳಿಗೆ
ಖಾದಿ ಭಂಡಾರಕ ಹೋಗಾನು ಬರ್ರೆ ||ಪ||
ಗಾಂಧಿ ಮುತ್ಯಾ ತೋರಿದ ದಾರಿ
ಹತ್ತಿ ಬೆಳಿಯಂದ ಒಕ್ಕಲಗೇರಿ
ನೂಲ ತೆಗಿಯಂದ ಅಕ್ಕ ತಂಗೇರೆ
ತಾವೇ ಕೈಯಿಂದ ನೂತಿದಾರೆ
ಉಟ್ಟ ಉಪರಾಣಿಯ ಧೋತಾರೆ ||1||
ನಮ್ಮ ದೇಶದ ನಡವಳಿ ನಡಿರೇ
ಪರದೇಶದ ಡ್ರೇಸಿಂಗ ಬಿಡರೇ
ಹೆಣ್ಣು ಗಂಡು ಖಾದಿಯ ಉಡರೇ
ಕಷ್ಟ ಮಾಡುವಲ್ಲಿ ಕಚ್ಚಿಯ ಹೊಡಿರೋ
ಊಟ ಮಾಡಲ್ಲಿ ಆನಂದಪಡಿರೇ
ಚುಡಗುಪ್ಪಿ ದೇಶ ಭಕ್ತರೇ ||2||
ಅಲ್ಲಿ ಮಾಡ್ಯಾರ ಖಾದಿ ಭಂಡಾರೇ
ಮಗ್ಗದವರು ಚರಕದವರೇ
ಐದನೂರ ಕೂಲಿಕಾರ್ರೇ
ಆನಂದದಿಂದ ಬಾಳುವರೇ ||3||

 

ಜಯಮಂಗಲ ಮಲ್ಲಿನಾಥ ಮಹಾದೇವಗೆ
ಜಯಮಂಗಲ ಮಲ್ಲಿನಾಥ ಮಹಾದೇವಗೆ ||ಪ||
ಮಹಾರುದ್ರ ವೀರಭದ್ರ ಸಿದ್ಧರಾಮಗೆ
ಘೋರ ಕಷ್ಟ ತೀರಿಸಿದಂಥ ವಿರೂಪಾಕ್ಷಗೆ ||1||
ಹರ ಹರ ಡಮರುಧರ ಶಿವಶಂಕರಗೆ
ಪ್ರಭುದೇವ ಶರಣಬಸವ ಚರಣಸೇವೆಗೆ ||2||
ಅರವು ಜ್ಯೋತಿ ಶಿರದಿ ಇಟ್ಟ ಶಿವನ ಧಾರಿಗೆ
ಮರವು ಹಿಡಿದು ಬರುವ ಶಿವದಾಸ ಪೂಜೆಗೆ ||3||

 

ಜೋ ಜೋ ಜೋ ಜೋ ಚೆನ್ನಬಸವಣ್ಣ
ಜೋ ಜೋ ಜೋ ಜೋ ಚೆನ್ನಬಸವಣ್ಣ
ನಾಗಮ್ಮಗ ಅಪವಾದ ತಂದೀದವನ
ಗರ್ಭದಲೆ ಇದ್ದು ಮಾತಾಡಿದವನ
ಹಿಂಗೇ ಕಿಂವಿಲಿಂದ ಹಾರಿ ಹೊರಗಾಗಿದವನ ಜೋ ಜೋ ||ಪ||
ಅರಳಗುಂಡಗಿಯಲಿ ಜನಿಸಿದ ಶರಣ
ಹಕ್ಕಿಗೆ ಹೊಲ ಮೇಯಿಸಿ ನೀರ್ಹಾಕಿದವನ
ಕಂಕ್ಯಾಗೆ ಐವತ್ತು ಚೀಲ ತುಂಬ್ಯಾನ
ಭಿಕ್ಷಾ ಬೇಡವರ ಅಷ್ಟೆಲ್ಲಾ ಮಾಡಿದ ದಾನ ||1||
ಭಾಗ್ಯವಾಡಿಲಿಂದೆ ಬಂದ ಬಸವಣ್ಣ
ಬಿಜ್ಜಳಂಕನ ಬಲ್ಲಿ ಆಳಾಗಿದವನ
ಸಿಕ್ಕವರಿಗೆ ಮಾಡಿ ಲಿಂಗ ಧಾರಣ
ಅವನು ಕಲ್ಯಾಣ ಕೈಲಾಸ ಮಾಡಿ ತೋರ್ಯಾನ ||2||
ಶ್ರೀಶೈಲ ಬೆಟ್ಟದ ಮ್ಯಾಲನುಷ್ಠಾನ
ಕಷ್ಟದಿಂದ ಮಾಡಿ ಮಲ್ಲಿಕಾರ್ಜುನ
ಕದಳಿಯ ಘಟ್ಟದಲ್ಲಿ ಹೋಗಿ ನಿಂತಾನ
ಶರಣೆ ಅಕ್ಕಮಹಾದೇವಿಗೆ ಕೊಟ್ಟಿದ ಸ್ಥಾನ ||3||
ಬಾಲಗೋಪಾಲನ ಮಾಡಿಸಿ ಸ್ನಾನ
ಕಾಡಿಗಿ ಕಪ್ಪ ಹಚ್ಚಿದೇನ
ತೂಗ ಮಂಚಾದ ಮೇಲೆ ಮಲಗಿಸಿದೇನ
ಹಾಡು ಕೇಳುತ ಮನಗೈ ಶಿವದಾಸನ ||4||

 

ಡಮರು ಧರನೆ ಶಂಭೋ ಹರನೆ ನಿನ್ನ
ಡಮರು ಧರನೆ ಶಂಭೋ ಹರನೆ ನಿನ್ನ
ಸಾಂಬ ನಿನ್ನ ಉಪಕಾರ ಕಳಿಲ್ಹ್ಯಾಂಗ ನಾ ||ಪ||
ನಮ್ಮ ಸಲುವಾಗಿ ಜಗವ ನೀ ಮಾಡಿ
ನಮ್ಮ ಜನ್ಮವ ಉದ್ಧಾರ ಮಾಡಿ
ಇಲ್ಲ ರೂಪ ನಿನ್ನ ಎಲ್ಲಿ ಕಾಣದೆನ್ನ ||1||
ನಮ್ಮ ಸಲುವಾಗಿ ಮಹಲ್ಲವ ಮಾಡಿ
ನಿಮ್ಮ ಠಾಂವೆಲ್ಲಿ ಕಾಣದೊ ಜಾಡಿ
ಭಸ್ಮ ಧರಿಸಿ ನಿನ ವಸ್ತ್ರ ಕಡುವಿ ನಮನ ||2||
ನಮ್ಮ ಸಲುವಾಗೆ ಸತಿ-ಸುತರ ಮಾಡಿ
ಹಾಲು ಸಕ್ಕರಿ ಅನ್ನವ ನೀಡಿ
ನಿರಾಹಾರ ನೀನ ಉಳದಿ ಕಡಿಯತನ ||3||
ನಮ್ಮ ಸಲುವಾಗಿ ಫಲಗಳ ಮಾಡಿ
ನಮ್ಮ ಸಲುವಾಗಿ ಜಲವ ಉಕ್ಕ್ಯಾಡಿ
ಶಿವದಾಸ ನಿನ್ನ ಧಾಂವ ತೋರೊ ಚರಣ ||4||

 

ದೇವ ಕರುಣದಿ ಕಾಯ ಬಾರೊ
ದೇವ ಕರುಣದಿ ಕಾಯ ಬಾರೊ
ದೇವ ಕೃಪಯಲಿ ಬೇಗನೆ ಬಾರೊ
ಭವ ಸಾಗರದಲಿ ನೂಕುವರೊ
ದಯಪಾಲಿಸಿ ಕೈ ಹಿಡಿಯ ಬಾರೊ ||ಪ||
ಆರು ವೈರಿಯವರೊ
ಜೋರ ಮಾಡಿ ಎಳಿವರೊ
ತೋರುವೆ ಅವರ ಹೆಸರೊ
ಬರಕೊಂಡು ಹಿಡಕೋರೋ
ಬರದಿದ್ದರೆ ಕೊಲ್ಲುವರೊ ||1||
ಕಾಮ ಕಾಲ್ಹಿಡಿವರೊ
ಕ್ರೋಧ ಕೈಹಿಡಿವರೊ
ಮದ ಕಣ್ಮುಚ್ಚುವರೊ
ಮುಖದಲ್ಲೆ ಮತ್ತರೊ
ಈ ಪರಿಯಲಿ ಜಗ್ಗುವರೊ ||2||
ಮೋಹ ಮುಂದ ಎಳಿವರೊ
ಲೋಭ ಹಿಂದ ಎಳಿವರೊ
ಹೊನ್ನ ಎನ್ನಲಿ ಮೂರೊ
ಬೆನ್ನಿಗಿ ಬಂದು ಕಳ್ಳರೊ
ಎನಗೆ ಕೊಲ್ಲಿ ಒಯ್ಯುವರೊ ||3||
ತನು ಮನ ಧನ ಮೂರೊ
ನಿನ್ನಲ್ಲೆ ಇಟ್ಟುಕೋರೊ
ಇನ್ನಾರು ವೈರಿಯರು
ನನ್ನನೇನು ಮಾಡುವರೊ
ಬೆನ್ನಿಂದ ಬೇಗ ನೀ ಬಾರೋ ||4||
ಶಿವದಾಸ ನಿಮ್ಮ ದ್ವಾರೊ
ಶಿರಾಸನ ಮಾಡುವರೊ
ದೋಷಿ ಮಾಡಯ್ಯ ದೂರೊ
ಮುಕ್ತಿ ಮಾರ್ಗವ ತೋರೊ
ಭಕ್ತರು ಬಡವರು ಬಾರೊ ||5||

 

ದೇವ ನಾ ಬೇಡುವೆನು
ದೇವ ನಾ ಬೇಡುವೆನು ||ಪ||
ಜೋಡಿಸಿ ಕರವನ್ನು ಬಾಗಿಸಿ ಶಿರವನ್ನು
ಒಡ್ಡಿದೆ ಉಡಿಯಾ ನಾನು ನೀಡಿರಿ ||1||
ದೃಢ ಮನವನ್ನು ಕೆಡಿಸು ಬ್ಯಾಡೆನ್ನ
ಕುರುಡನ ದಾರಿಯನ್ನು ತೋರಿಸು ತವಪಾದ ||2||
ರೂಢಿಯೋಳ್ ಒಬ್ಬವನು ಓಡ್ಯಾಡುವಾ ನೀನು
ಪಡಿಯಾ ಬಡಿಸುತ್ತಲೇ ಅನ್ನ ನಾಡಿನ ಜೀವರಾಸಿಯನ್ನು ||3||
ನಂಬಿದವರಾ ನೀನು ಹಿಂಬಾಲೆ ಇರುವನು
ಚಿಡಗುಪ್ಪಿ ಶಿವದಾಸನೋ ತವಪಾದನೆಂಬುವನೋ ||4||

 

ನನ್ನ ಹಳ್ಳಿ ತೊಗಲೂರ ಬಿಟ್ಟು ಬಂದ
ನನ್ನ ಹಳ್ಳಿ ತೊಗಲೂರ ಬಿಟ್ಟು ಬಂದ ದೊಡ್ಡೂರ
ರೊಕ್ಕ ಕೊಟ್ಟು ಖಳುವ್ಯಾರ ನಮ್ಮ ಹಿರಿಯರಾ ||ಪ||
ಇಲ್ಲಿ ದೊಡ್ಡ ಬಾಜಾರಾ ಗಡಿಬಿಡಿ ಅನುವರಾ
ಧಕ್ಕಾಮುಕ್ಕಿ ಮಾಡ್ಯಾರ ಬಾಜಾರದವರಾ ||1||
ಒಬ್ಬರಕಿನ್ನ ಒಬ್ಬರ ಮೇಲ ಛಾಯದ ಮುಣಗ್ಯಾರ
ಕೊಂಡುಕೊಂಡು ಶೃಂಗಾರ ಕಚ್ಚೆ ಭಂಗಾರ ||2||
ಬೇಕಾಗಿದು ಜರೂರ ತಕ್ಕೊಳಿಲ್ಲಾ ಒಂದಾರ
ರೊಕ್ಕಾ ಹೋಯಿತು ಸಾವಿರ ಹರದಂಗ ನೀರಾ ||3||
ಫಳಾರ ಮಾಡೆನಂದರಾ ರೊಕ್ಕವಿಲ್ಲಾ ಬಂದಾರಾ
ಶಿವದಾಸ ಅವರಿಗಿ ಅಂದಾರಾ ಕುಡಿಯೋ ನೀರಾ ||4||

 

ನಮೋ ನಮೋ ನಮಿಪೇನಾ ಮನಾಮನಾ
ನಮೋ ನಮೋ ನಮಿಪೇನಾ ಮನಾಮನಾ
ಶ್ರೀಹರಿ ಜಗದೀಶ ಮಾರುತಿನಾ ||ಪ||
ಆರ ಗುಣಗಳು ಪುಷ್ಪ ನಿವಳ
ಮೂರ ಗುಣಗಳು ಪತ್ರಿದಳ
ನಿರ್ಗುಣ ನಿಜ ಮಾಡಿ ಸ್ನಾನ
ಮದಮಸ್ಥ ಕಲ್ಲಿನ ಮ್ಯಾಲಿ ||1||
ಮತ್ಸರ ಎಂಬೋ ಕೊಡವನಿಟ್ಟಿ
ಕ್ರೋಧ ಎಂಬೋ ಹಾಕಿ ಅರಶಿಣ
ನಷ್ಟ ಗುಣಗಳೋ ಗಂಧ ಸೋಸಿ
ಅಷ್ಟ ಗುಣಗಳೋ ಅದರೊಳು ಕಲಸಿ ||2||
ಊದುಬತ್ತಿ ಉರಿಯ ಜ್ಯೋತಿ ಜ್ಞಾನ
ತನವ ಎಂಬೋ ತಾಂಬಡಿ ಒಳಗೇ
ಮನವ ಎಂಬೋ ಅಮೃತ ನೀಡಿ
ಚರಣದಲ್ಲಿಟ್ಟು ಬೇಡುವೇನಾ ||3||
ಸೃಷ್ಟಿಯೊಳಗೆ ಶಿವದಾಸನೊ
ಶ್ರೇಷ್ಠ ಚುಡಗುಪ್ಪಿ ಗ್ರಾಮವೊ
ಹೊಂದಿ ಪಾದಕ್ಕೆ ಜಗದಂಬನಾ ||4||

 

ನಾ ಓಡಿ ಬಂದೆ ಅಡಗಿಸಿಕೊಳ್ಳೋ ನೀ ತಂದೆ
ನಾ ಓಡಿ ಬಂದೆ ಅಡಗಿಸಿಕೊಳ್ಳೋ ನೀ ತಂದೆ
ಲಕ್ಷ ಚೌರ್ಯಾ ಐಂಸಿ ಬಂದೆ ಸೇರಿ ನಾ ಸಿಲುಕಿದೆ ||ಪ||
ಬಹು ಪರಿ ಕಷ್ಟ ನಾನು ಭೋಗಿಸಿ ಬಂದೆ
ನಿಮ್ಮನು ಅರಿಯದೆ ಅಪರಾಧಿ ಆಗಿದೆ
ಋಣ ಮುಣಗಿಸಿ ಮಾಯಾದೊಳೆಗ ಈಶಾಡಿ ದಣಿದೆ ||1||
ನಿಮ್ಮ ಪಾದಕೆ ಹೊಂದೆ
ಮೋಕ್ಷ ಮಾಡಯ್ಯ ನಂದೆ
ಬಿಡಬೇಡ ಶಿವದಾಸಗೆ ನಂಬಿಗಿ ಹಿಡದೆ ||2||

 

ನಾ ಗಂಭೀರಾದರೆ ನೀ ಒಲಿವೆ ಎನಗೆ
ನಾ ಗಂಭೀರಾದರೆ ನೀ ಒಲಿವೆ ಎನಗೆ
ನಾ ಹೆಂಬಳಾದರೆ ನೀ ನಂಬಲೆನಗೆ ||ಪ||
ಅಷ್ಟ ಐಶ್ವರ್ಯ ಸುಖ ಬಿಟ್ಟಿದವರಿಗೆ
ಈ ಕಾಯಕ ಕಷ್ಟ ಕೊಟ್ಟಿದವರಿಗೆ ||1||
ಹರಿಶ್ಚಂದ್ರನ ಸತಿ ತಾರಾಮತಿಗೆ
ಶಿರಛೇದ ಮಾಡಾಗೆ ಆಗೊಲ್ತಿ ಅಂವಗೆ ||2||
ಸೂರದಾಸನು ತಾನು ನಿನ್ನ ಸಲುವಾಗಿ
ಕಿತಕೊಂಡ ತನಕಣ್ಣ ಆಗೊಲ್ತಿ ಅಂವಗೆ ||3||
ಇಂಥ ಭಕ್ತರ ಮನ ಕೊಡುವಯ್ಯೊ ಎನಗೆ
ಬೇಡುವ ಶಿವದಾಸ ನೀಡಯ್ಯ ಎನಗೆ ||4||

 

ನಾನು ಹೋಗುವೆನಾ ಹೋಗಿ ಬರುವೆನಾ
ನಾನು ಹೋಗುವೆನಾ ಹೋಗಿ ಬರುವೆನಾ
ಯಾನಗುಂದಿ ಮಾಣಕೇಶ್ವರಿಗೆ ಹೋಗುವೆನಾ ||ಪ||
ಗುರು ಹಿರಿಯರ ಪುಣ್ಯವು ಇರಲಿ
ಅಣ್ಣ ತಮ್ಮರ ಕರುಣವು ಇರಲಿ
ನಿಲ್ಲೇ ತಾಯಿ ನೀನು ಪೋಗಿ ಬರುವೆನು ||1||
ಎನ್ನ ಭಕ್ತರ ಮನಿ ತಣ್ಣಗಿರಲಿ
ಹೊನ್ನ ಸಂತಾನ ಧಾನ್ಯವು ಬೆಳಿಲಿ
ಹರಕಿ ಕೊಡುವೆನು ಹೋಗಿ ಬರುವೆನು ||2||
ಮಾಣಿಕೇಶ್ವರಿ ದರುಶನ ಮಾಡಿ
ಅವರ ನಾಮವ ಹರುಷದಿ ಹಾಡಿ
ಕಂದ ಶಿವದಾಸನು ಬಂದು ಬಾಗುವನು ||3||

 

ನಾಲ್ಕು ತಿಂಗಳ ಮಳೆಗಾಲ
ನಾಲ್ಕು ತಿಂಗಳ ಮಳೆಗಾಲ ನಾಲ್ಕು ತಿಂಗಳ ಚಳಿಗಾಲ
ನಾಲ್ಕು ತಿಂಗಳ ಬಿಸಲಾ ಬ್ಯಾಸಗಿ ದಿನಾ ||ಪ||
ಮೋಸಮ್‍ದ ಮ್ಯಾಲ ಬಿತ್ತರೆಂದು ಹೊಲ
ಎತ್ತ ಮಾಡಿ ಮೊದಲ ಕೊಟ್ಟಿದಾನಾ ||1||
ಮೂವತ್ತು ಘಳಗಿ ಹಗಲ ಮೂವತ್ತು ಘಳಗಿ ಕತ್ತಲ
ಸುಸುಪ್ತಾದ ಅಮಲ ಅರವತ್ತ ಕ್ಷಣ ||2||
ಅಂತರ ಜ್ಞಾನ ಮೇಲಾ ತಿಳಿಸಿ ಮಾನವರೆಲ್ಲಾ
ಧರ್ಮ ನೀತಿ ಮ್ಯಾಲ ನಡಿರಂದನಾ ||3||
ಹೀನ ದೀನರ ಮ್ಯಾಲ ದಯಾಸದೋ ಕಾಲ
ಘಳಕಿ ಹಣ ಪಾಲ ಕೊಡರೆಂದನಾ ||4||
ನೂರಿಗಿ ಹತ್ತ ಪಾವಲಾ ಕೂಡರಿ ವರ್ಷದ ಮ್ಯಾಲ
ಕೂಡುವಲದಿದ್ದರೆ ಎಲ್ಲಾ ಸೆಳಿಯುತಾನಾ ||5||
ಶಿವದಾಸ ಬಾಲಶಾಸ್ತ್ರಯೇನು ಬಲ್ಲ
ಅನುಭವದ ಮ್ಯಾಲ ಬರದಿದನಾ ||6||

 

ನಿನ್ನ ರೂಪಾ ನೋಡಿಲ್ಲಾ
ನಿನ್ನ ರೂಪಾ ನೋಡಿಲ್ಲಾ ನಿನ್ನ ನೆರಳು ಕಾಣಿಲ್ಲಾ
ನಿನ್ನ ಹೆಜ್ಜೆಗಳಿಲ್ಲಾ ನಿರಂಜನಾ ||ಪ||
ನೀನೇ ಮಾಡಿದಿ ಮಂಡಲಾ ಮುಚ್ಚಿ ಒಳಗೆ ಕುಂತೆಲ್ಲಾ
ನೀ ಇಲ್ಲದ ಸ್ಥಳವಿಲ್ಲಾ ನಿರಂಜನಾ ||1||
ಋಷಿ ಮುನಿಗಳೆಲ್ಲಾ ಅಂಜನ ಹಚ್ಚಿ ಅಖಿಲ
ನಿನಗೆ ನೋಡಿದಾರಲ್ಲಾ ನಿರಂಜನಾ ||2||
ಕಟ್ಟಿಗಿ ಕಲ್ಲ ತಪ್ಪಲ ಭೂಮಿ ಘಾಳಿ ಮುಗಲ
ಬೆಂಕಿ ನೀರಾಗ ಇರಲ್ಲಾ ನಿರಂಜನಾ ||3||
ಶಿವದಾಸನ ಹಂಬಲಾ ತನು ನಿನ್ನ ಬಂಗಲಾ
ಹಸನ ಇದ್ದರ ಇರುತೆಲ್ಲಾ ನಿರಂಜನಾ ||4||

 

ನೀನೇ ನೀ ನೋಡುವ
ನೀನೇ ನೀ ನೋಡುವ
ನಾ ಏನು ಮಾಡುವ ದೇವ
ಬೇಗನೆ ನ್ಯಾಯವ ಮಾಡೋ ||ಪ||
ಕ್ಷಮಿಸು ಬೇಡಯ್ಯಾ ಅಪರಾಧವ
ಪಾಪಕ್ಕೆ ಪ್ರಾಯಶ್ಚಿತ್ ಆಗಿರುವ ದೇವ
ಪಾಪಕ್ಕೆ ಪ್ರಾಯಶ್ಚಿತ್ ಆಗಿರುವ ||1||
ಸೊಳ್ಳ ಗೊಳ್ಳ ತೂರಿ ಘಾಳಿಗವ
ಒಳ್ಳೆ ಬೀಜ ಇಟ್ಟು ಬೆಳೆಸುವ ದೇವ
ಒಳ್ಳೆ ಬೀಜ ಇಟ್ಟು ಬೆಳೆಸುವ ||2||
ಶಿವದಾಸ ಸಿಲುಕಿದ ಸಾಗರವ
ಈಜಾಟ ಬಂದರೆ ಬಾಳಿರುವ ದೇವ
ಬರಲಾರದಿದ್ದರೆ ಹಾಳಾಗುವ ||3||

 

ನೋಡಿರೆ ಗೆಳೆದೆರೆ
ನೋಡಿರೆ ಗೆಳೆದೆರೆ
ಪಾಡಿರೆ ಗೆಳೆದೆರೆ
ಜೋಡಿ ಶಂಕರನ ಗೌರಿಗೆ ಸೌಭಾಗ್ಯವೇ ||ಪ||
ನೆರೆದು ಮುತ್ತೈದೆರೆ
ಎರೆದು ಎಣ್ಣೆಯ ಧಾರೆ
ಕೊರೆದು ಘಂದವು ಗಮನಿಗೆ ಸೌಭಾಗ್ಯವೇ ||1||
ಪಾದ ಪೈಜಾಮ ಋಳಿ
ಪಿಲ್ಲ್ಯಾ ಉಂಗರ ಸುರುಳಿ
ಸಲ್ಲ್ಯಾವೇ ಡಾಬ ಸುಗುಣಿಗೇ ಸೌಭಾಗ್ಯವೇ ||2||
ಶೃಂಗಾರ ಸರಪಳಿ
ಬಂಗಾರ ಮೇಲ ತಾಳಿ
ಶೃಂಗಾರಿ ಸೀರೆ ಸುಗುಣಿಗೇ ಸೌಭಾಗ್ಯವೇ ||3||
ಕುಂದನ ಬಳಿ ಇಟ್ಟು
ಧರಿಸಿ ಕುಂಕುಮ ಬಟ್ಟು
ದಂಡಿ ಕಟ್ಟಿ ರಮಣಿಗೇ ಸೌಭಾಗ್ಯವೇ ||4||
ಹದಿನಾರ ವರ್ಷದ ಬಾಲಿ
ಫಲವು ತುಂಬಿ ಉಡಿಯಲಿ
ಉಡಿಯ ತುಂಬಿರೇ ರಮಣಿಗೆ ಸೌಭಾಗ್ಯವೇ ||5||
ಗೌರಮ್ಮಾ ಎಡಭಾಗ
ಶಂಕರ ಬಲಭಾಗ
ಶಿವದಾಸ ನೋಡಿ ಸಭೆದಾಗ ಸೌಭಾಗ್ಯವೇ ||6||

 

ನೋಡೆ ಅಮ್ಮ ನೋಡೆ
ನೋಡೆ ಅಮ್ಮ ನೋಡೆ
ಎನಗೆ ಸುತ್ಯಾದ ಸಂತರ ಪೀಡೆ ||ಪ||
ನಿದ್ರೀ ಕಣ್ಣೀಗಿಲ್ಲ
ಎನ್ನ ಮನ ಚಂಚಲ
ಸಪನದೊಳಗೆ ನಾನು
ಏನೇನು ಕಂಡೆ ||1||
ಚುಕ್ಕಿಯ ಮೂಡಲು
ಆಗ್ಯಾದ ಹಂಬಲು
ನಿದ್ರಿಗಣ್ಣಿಗೆ ತಾನೆ
ಎಚ್ಚರ ಮಾಡೆ ||2||
ಕಣ್ಣಿಗೆ ಕಾಣೇವಲ್ಲ
ಕೈಯಿಗೆ ಸಿಗುವಲ್ಲ
ಕಳ್ಳನಂಗೆ ಬಂದು
ಹೋದನು ಓಡೆ ||3||
ಬೇಕಾಗಿದು ಎಲ್ಲಾ
ಖಳವಿ ಕೊಡುವನಲ್ಲ
ಉಪಕಾರ ಎನಮೇಲ
ಭಾಳ ಪರಿ ಮಾಡಿ ||4||
ಅತ್ತ ಇತ್ತ ಬಿಡವಲ್ಲ
ಮನವ ತೃಪ್ತಿ ಮಾಡೆವಲ್ಲ
ಹೆಂತ ಗೆಳೆಯನ ಗೂಡೆ
ಶಿವದಾಸ ಕೂಡೆ ||5||

 

ಪಂಚಾಂಗ ನೋಡಿಕೊಂಡ
ಪಂಚಾಂಗ ನೋಡಿಕೊಂಡ
ಅಂಗದೇವಿ ಹೆಣ್ಣಿನ ಕಂಡ
ಜೀವಣ್ಣ ಇವಳ ಗಂಡ
ಇಬ್ಬರು ಕೂಡಿಕೊಂಡ ||ಪ||
ಆರು ಮಕ್ಕಳು ಇವರಿಗೆ ಪುಂಡ
ಎರಡು ಹೆಣ್ಣು ನಾಲ್ಕು ಗಂಡ
ಲಗು ಅಂಗಡಿ ಮಾಡಿಕೊಂಡ
ಮಡಿದು ನಾಲ್ವರು ಮಾಡ್ಯಾರ ದಂಡ ||1||
ತಾಯಿ ಅಳತಾಳ ನೆನಸಿಕೊಂಡ
ಮಣ್ಣಿಗಾಗಿ ಬೆಳಿತೇನೊ ಧಂಡ
ನಡು ನೀರಿನೊಳು ಸಂಗಡ
ಅಗಲಿ ಮಾಡಿರಿ ಅಗಡ ||2||
ಹೆಣ್ಣು ಮಕ್ಕಳು ಇಬ್ಬರು ಜೋಡ
ಹಂಗೇ ಉಳಿದಾರೋ ತಾಯಿ-ತಂದಿಗೂಡ
ನಾಲ್ವರಿಗೆ ಆಯಿತೋ ಕೇಡ
ಸತ್ತು ಸೇರಿ ಸುಡುಗಾಡ ||3||
ಪಂಚಾಂಗ ತತ್ವದ ಖಂಡ
ಅನುಭವದಿಂದೆ ತಿಳಿಕೊಂಡ
ಶಿವದಾಸ ಸಂತರ ಕಂಡ
ಶರಣಾಗಿ ಉರುಳ್ಯಾರ ದಿಂಡ ||4||

 

ಪತ್ಯ ಮಾಡಬೇಕೋ ಇಂತಹದೋ
ಪತ್ಯ ಮಾಡಬೇಕೋ ಇಂತಹದೋ
ಸತ್ತು ಸಾಯಿಲಾರದಂಥಾದೋ ||ಪ||
ಪರಸ್ತ್ರೀಯ ಸಂಗ ಮಾಡದು ಪತ್ಯ
ಪರಧನವು ತಿಂದು ಕೂಡದು ಪತ್ಯ
ಪರರ ಮೇಲೆ ಕ್ರೋಧ ಮಾಡಾದು ಪತ್ಯ
ಪ್ರಾಯದ ಮದವು ತೋರದು ಪತ್ಯ ||1||
ಪರಮಾತ್ಮ ಕೊಟ್ಟಿದರೇ ಕಾಡದು ಪತ್ಯ
ಪರಜನದ ನಿಂದ್ಯ ಮಾಡದು ಪತ್ಯ
ಪ್ರಾಣಿಯ ಪ್ರಾಣ ಕೊಂದುವದು ಪತ್ಯ
ಪರದೇಶ ಪಕ್ಷ ಮಾಡಾದು ಪತ್ಯ ||2|
ಪರಮಾತ್ಮನ ಮರೆತುಕೂಡಾದು ಪತ್ಯ
ಪರ ಆತ್ಮಾ ಬೇರೆ ನೋಡಾದು ಪತ್ಯ
ಶರಣರ ಸಂಗ ಬಿಡುವದು ಪತ್ಯ
ಶಿವದಾಸ ಹೇಳಿದ ಇದು ಹೆಂಥ ಪತ್ಯ ||3||

 

ಪದರೊಡ್ಡಿ ಬೇಡುವೆ ನಾ
ಪದರೊಡ್ಡಿ ಬೇಡುವೆ ನಾ
ನೀಡಯ್ಯೋ ನಿರಂಜನಾ ||ಪ||
ಬಿಟ್ಟಳ ಆಶಾ ಮಾಯದ ಫಾಶಾ
ಮಾಣಿಕಮ್ಮ ಮಾತಾನ ಮನಾ ||1||
ಅನ್ನದ ಧ್ಯಾಸ ನೀರಿನ ಹಂಸ
ದೂರನಾಗುವ ತೀರ್ಥವನ ||2||
ಗಾಳಿಯ ಶ್ವಾಸ ದೇಹಕೆ ಲೇಸ
ಭಕ್ಷಿಸಿ ಗುಪ್ತ ಉಳಿವ ಮನ ||3||
ಹುಚ್ಚ ಶಿವದಾಸನ ಮರಿಬ್ಯಾಡ ಮನಸ
ದುಡಿವನು ಎಡಿ ಎಂಜಲ ನಿನ್ನ ||4||

 

ಪ್ರಭು ನಾ ಮರೆಯದೆ ಸ್ಮರಿಸುವೆ ನಾ
ಪ್ರಭು ನಾ ಮರೆಯದೆ ಸ್ಮರಿಸುವೆ ನಾ ||ಪ||
ಮರಿಲಾರೆ ಎಂದೆಂದು ನಾ
ಸ್ವರಣಿ ಶ್ರೀ ಪ್ರಭು ನಿನ್ನಾ
ಚರಣಕ ಎರಗುವೆ ಕರುಣಿಸೊ ಎನ್ನ ||1||
ನೂರದ ಎಂಟ ನಿನ್ನ
ನಾಮವು ದೇವ ಚೆನ್ನ
ದಾವ ನಾಮದಿ ಕೂಗಿ ಕರಿಯಲಿ ನಿನ್ನ ||2||
ನಿಜ ಭಕ್ತಿ ಮಾಡಿದವನ
ಕೊಟ್ಟಿದಿ ದರುಶನ
ಬ್ಯಾರೆ ಬ್ಯಾರೆ ರೂಪ ಮಾಡಿದಿ ಧಾರಣ ||3||
ಬ್ಯಾಡರ ಕಣ್ಣಯ್ಯನ
ಅಂಬಿಗರ ಚೌಡಯ್ಯನ
ನಂಬಿದಂತೆ ನಂಬಿಕೊಳ್ಳೊ ಶಿವದಾಸನ ||4||

 

ಪಾಂಡುರಂಗ ಧನಿಯ ತಂದೆ
ಪಾಂಡುರಂಗ ಧನಿಯ ತಂದೆ
ಧ್ಯಾನ ಬೇಡದಕ ನಿನ್ನ ದ್ವಾರ ಬಂದೆ ||ಪ||
ಯಾವೊತ್ತೊ ನಿನ್ನ ನಾಮ ಒಂದೆ
ನನ್ನ ನಾಲಿಗೆ ಮ್ಯಾಲ ಇರಲಂದೆ
ಅಂಗೂರ ಫಲದಂತೆ ತಿಂದೆ
ಆರಿ ಹಸುವು ಆನಂದ ಆದೆ ||1||
ಭಕ್ತ ಜ್ಞಾನದೇವನ ಬೆನ್ನಿಗಾದೆ
ಗ್ವಾಡಿ ಮುಂದಕ್ಕೆ ನಡದಿತೋ ಹಾದಿ
ವೇದ ಮಂತ್ರ ಪುರಾಣ ಓದಿ
ಸತ್ಯ ಸತ್ವ ನೀ ತೋರಿದಿ ||2||
ಜನ್ಮ ಪಡಿದು ಮರಣಕ್ಕೆ ಹೊಂದಿ
ನಿನ್ನ ಛಾಯಾವು ಇಳಸ್ಯಾರೋ ಮಂದಿ
ಮೂರ್ತಿಯೊಳು ಅಮರಾಗಿ ಉಳದಿ
ಭಕ್ತರಿಗೆ ಭೇಟಿಯಾಗಿದೆ ||3||
ಅಪಾರ ಮಹಿಮಾ ನಿಂದೆ
ತೋರಿದಿ ಮರಿಯಾಲಿಂದೆ
ಶಿವದಾಸ ಋಣಿ ನಿಂದೆ
ಎಷ್ಟು ದುಡಿದರೆ ಸಾಲದೆ ||4||

 

ಪಾದವ ಕುಣಿಸುತ ಹಸ್ತವ ಬಡಿಯುತ
ಪಾದವ ಕುಣಿಸುತ
ಹಸ್ತವ ಬಡಿಯುತ
ಬಾಯಿಂದೆ ನುಡಿಯುತ ಹರ ಓಂ ದತ್ತ ||ಪ||
ಪಾರ್ವತಿ ಪುತ್ರ ಗಣನಾಥ
ಆಂಜನೇಯ ಕಂದ ಹಣಮಂತ
ರಾಮರಾಯ ಸೀತಾ ಹರ ಓಂ ದತ್ತ ||1||
ವೆಂಕಟರಮಣ ಅವಧೂತ
ಪವಿತ್ರ ಕಾಶಿ ವಿಶ್ವನಾಥ
ತ್ರಿಕೂಟ ಸಂಗಮನಾಥ ಹರ ಓಂ ದತ್ತ ||2||
ಶಿವದಾಸ ಕುಣಿಯುತ
ಕುಣಿ ಕುಣಿದು ದಣಿಯುತ
ಬಾಯಿಲಿಂದೆ ನುಡಿಯುತ ಹರ ಓಂ ದತ್ತ ||3||

 

ಪ್ರೇಮ ಕೂಡಿದ ಮ್ಯಾಲೆ ಭಯವ್ಯಾಕ
ಪ್ರೇಮ ಕೂಡಿದ ಮ್ಯಾಲೆ ಭಯವ್ಯಾಕ
ಬೊಗಳಿದರೆ ಬೊಗಳಲಿ ಜನಲೋಕ ||ಪ||
ಮನಸಿನ ಮಾತು ಮನದೊಳಗಿಟ್ಟು
ಮರಗುತ ತಿರಗುವ ಮನೆಮಾರು ಬಿಟ್ಟು
ಮಡದಿಯ ಮಕ್ಕಳ ಬಳಗವ ಬಿಟ್ಟು
ದುಡಿದಿರುವೆ ಪ್ರಭು ನಿನ್ನ ಪಾದಕ ||1||
ಆದ ದಿಗಂಬರ ಅರವಿಯ ಬಿಟ್ಟು
ಅನ್ನ ನೀರಿಲ್ಲದೆ ನಿದ್ರಿಯ ಸುಟ್ಟು
ಅನುದಿನ ನಿನ ಧ್ಯಾನ ಮನದೊಳಗಿಟ್ಟು
ಕರಗಿಸುವೆ ಈ ಕಾಯಕ್ಕ ||2||
ಈಸಿದ ನದಿಯೊಳು ನಿನ ನಂಬಿಗಿಟ್ಟು
ನೀ ಪೋಗಬ್ಯಾಡಯ್ಯೊ ಎನೆ ಕೈಯಬಿಟ್ಟು
ಪರದೇಶಿ ಬಂದೇನು ನಿನಗಾಗಿ ಹೊಂಟು
ಶಿವದಾಸನ ಮೇಲ ದಯಬೇಕ ||3||

 

ಬತ್ತಲೆ ಬಂದಿ ಬತ್ತಲೆ
ಬತ್ತಲೆ ಬಂದಿ ಬತ್ತಲೆ
ಸುತ್ತೇಸು ತಿರಗಿದಿ ಬತ್ತಲೆ ||ಪ||
ನಾಚಕಿ ಇಲ್ಲದೆ ಬತ್ತಲೆ
ಹೇಸಕಿ ಇಲ್ಲದೆ ಬತ್ತಲೆ
ಹೆದರಿಕಿ ಇಲ್ಲದೆ ಬತ್ತಲೆ
ಒದರುತ್ತ ಬಂದೆಲ್ಲಾ ಬತ್ತಲೆ
ವಸ್ತ್ರವು ಇಲ್ಲದೆ ಬತ್ತಲೆ ||1||
ವೈಢೂರ್ಯ್ಯವಿಲ್ಲದೆ ಬತ್ತಲೆ
ಕಾಮವೇರಿದಾಗ ಬತ್ತಲೆ
ಕಂದ ಜನಿಸುವಾಗೆ ಬತ್ತಲೆ
ಬಚ್ಚಲಿಗೆ ಅದಿ ಬತ್ತಲೆ
ಬೈಕಡಿಗ್ಹೋದಿ ಬತ್ತಲೆ ||2||
ಬಂದದಂತ ಬಿದ್ದು ಬತ್ತಲೆ
ಮದ ಮಸ್ತ ಹೋಗಿ ಬತ್ತಲೆ
ವೈರಾಗ್ಯ ಬಂದಾಗೆ ಬತ್ತಲೆ
ಶಿವಶರಣ ಆದಾಗೆ ಬತ್ತಲೆ
ಭವ ಬಿಟ್ಟು ಹೋಗಾಗೆ ಬತ್ತಲೆ
ಶಿವದಾಸ ಶಿಸು ಆಗಿ ಬತ್ತಲೆ ||3||

 

ಬನ್ನಿರಪ್ಪಯ್ಯಾ ನೀವು ಬನ್ನಿರಪ್ಪಯ್ಯಾ
ಬನ್ನಿರಪ್ಪಯ್ಯಾ ನೀವು ಬನ್ನಿರಪ್ಪಯ್ಯಾ
ನಾವು ಕೂಡಿಕೊಂಡು ಭಜನ ಮಾಡೋಣ ಶಿವರಾಯ ||ಪ||
ಚತರ್ದಸಿ ಸಮಯ ಮಹತ್ವದ ಸಮಯ
ಮನ ಒಪ್ಪಿ ಹೃದಯ ಜೈ ಅಂದರ ವಿಜಯ ||1||
ಹುಟ್ಟಿಸುವ ಶಿವಾಯ ಕೊಲ್ಲಿಸುವ ಶಿವಾಯ
ಸರ್ವ ಜೀವರಾಶಿ ಸಾಕುವ ಶಿವಾಯ ||2||
ಓಂ ನಮಃ ಶಿವಾಯ ರಾಂ ರಹೀಮ ಶಿವಾಯ
ಶಿವದಾಸ ನಿಮ್ಮಯ ನಮಿಸುವ ಸದಾಯ ||3||

 

ಬನ್ನಿರಯ್ಯಾ ಗಣಪಯ್ಯಾ ಬಡವ ಭಕ್ತರ ಮನಿಗೆ ಬಾ
ಬನ್ನಿರಯ್ಯಾ ಗಣಪಯ್ಯಾ ಬಡವ ಭಕ್ತರ ಮನಿಗೆ ಬಾ ||ಪ||
ಬಿಸಿಯ ನೀರು ಕಾಸಿದೇನು ತುಸುವ ಝಳಕ ಮಾಡು ಬಾ
ಮನಿಯ ಸಾರಿಣಿ ಮಾಡಿ ಚೌಕಿ ಹಾಕಿದೇನಿ ಕೂಡು ಬಾ ||1||
ಗೋಪಿಚಂದ ಸೊಸಿ ಗಂಧ ಧರಿಸುವೆ ನೀ ಧರಿಸು ಬಾ
ಜಾಜಿ ಜೂಜಿ ಮಲ್ಲಿಗೆ ಹೂವಿನ ಮಾಲೆ ಹಾಕುವೆ ಹೈಕೋ ಬಾ ||2||
ಕರಕಿ ಪತ್ರಿ ಕಸ್ತೂರಿ ಉತ್ತರಾಣಿ ಪೂಜೆಕ ತರುವೆ ಬಾ
ಕರವ ಮುಗಿದು ಶರಣ ಮಾಡುವೆ ವರವ ನೀಡು ಗುರುವೆ ಬಾ ||3||
ಪರಡಿ ಪಾಯಿಸ ಗೋಳೆಮಂಡಿ ಎಡಿಯ ಮಾಡಿನಿ ಮುಗಿಯು ಬಾ
ಹಾಲ ಸಕ್ಕರಿ ಮ್ಯಾಲೆ ನೀಡುವೆ ಮೇಲವಾಗಿ ಸುರಿಯು ಬಾ ||4||
ಹಪ್ಪಳ ಶಂಡಿಗಿ ಕರದಿನಿ ತುಪ್ಪ ಹೋಳಿಗಿ ಉಣುವು ಬಾ
ಕರಚಿಕಾಯಿ ಕರಿದ ಕಾನೋಲಿ ಕೈಲೆ ಉಣಿಸುವೆನು ಬಾ ||5||
ಕೂಸು ಶಿವದಾಸನು ತಾನು ಹಸಿದು ಹಾವರಿಸುವನು ಬಾ
ತುಸುವ ಎಂಜಲ ಕೊಟ್ಟು ಬಾಲನ ಹಸುವು ಆರಿಸಲ್ಲೆ ಬಾ ||6||

 

ಬರತೀನಿ ಹೋಗಿ ಬರತೀನಿ
ಬರತೀನಿ ಹೋಗಿ ಬರತೀನಿ
ಮೂರೇ ದಿನ ಅಲ್ಲೆ ಇರುತೀನಿ ||ಪ||
ಅಪ್ಪ ಕರಿಯಲಿ ಬಂದ
ಎತ್ತು ಮುಟ್ಟು ತಂದ
ಸಿಟ್ಟಿಲಿಂದೆ ಬಂದ
ಊಟ ಮಾಡಾಲೆಂದ
ತಪ್ಪ ಏನು ನಂದ ಮರತೀನಿ
ಒಗತಾನ ಕಡಿವನು ||1||
ಮತ್ತೊಬ್ಬರ ಕೊಡುವನು
ಯಾವೂರ ಯಾದೇಶ
ಹೇಳಲಾರೆ ನಾನು
ಕೊಟ್ಟ ಮನೆಯಲ್ಲಿ ಇರುತೀನಿ ||2||
ಕುಲ-ಛಲ ನೋಡಲ್ಲ
ವರ ನೋಡಿ ಮಾಡಲ್ಲ
ಆರೂಢ ನಮ ಕುಲ
ಅಪ್ಪ ತಾನೇ ಬಲ್ಲ
ಅನ್ಯವರಿಗೆಲ್ಲಾ ಗುರುತೇನೆ ||3||
ಅತ್ತಿ ಮಾವದೇರೆ
ಪತಿ-ಸುತದೇರೆ
ಸುತ್ತಿನ ಗೆಳದೇರೆ
ಮತ್ತ ಶಿವದಾಸರೆ
ಅತ್ತತ್ತು ನಿಮ ನೆಪ್ಪು ತರತೀನಿ ||4||

 

ಬಾ ಬಾ ಬಾಲ ಗೋಪಾಲನೇ
ಬಾ ಬಾ ಬಾಲ ಗೋಪಾಲನೇ ||ಪ||
ಬಾಲ ನಿನ್ಗೇನು ಬೇಕ
ಹೇಳಯ್ಯೊ ಮುನಸ್ಯಾಕ
ಹಾಲು ಸಕ್ಕರಿ ಪಾಕ
ಕೈಲೆ ಉಣುಸುವೆ ಬಾ ||1||
ಬಾಡ್ಯಾದೋ ನಿನ್ನ ಮುಖ
ಆಡ್ಯಾರೋ ಯಾರು ಹಲ್ಕ
ಅಡವಿಯೊಳು ಆಕಳ
ಕಾಯಿಕೊಂಡು ಬಾ ||2||
ಕಾಯ್ಲಾರೆ ಆಕಳ ಮಣಕ
ಬಳಿರಾಮ ಆಡಿದ ಹಲ್ಕ
ಯಾರ ಮಗನೆಂದು
ತಮ್ಮ ಅಲ್ಲೆಂದನೇ ||3||
ಬಣ್ಣ ಕಪ್ಪಂದು ಕರಕ
ಸಣ್ಣ ಹುಡುಗರು ನಕ್ಕ
ಅಣ್ಣ ಅಲ್ಲದ ಆಡಿ
ಸಣ್ಣ ಮಾಡಿದನೇ ||4||
ಬಲರಾಮ ಹುಡುಗರೆಲ್ಲ
ಕರಿದು ಬಡಿದಾಳೋ ಗಲ್ಲ
ಎನ್ನ ಮವ್ವದ ಬಾಲ
ಕನ್ಹಯ್ಯ ಕೇವಲ ||5||
ಹುಡುಗರು ಪಿಡಿದು ಕಾಲ
ಕ್ಷಮಾ ಬೇಡುವರೋ ಎಲ್ಲ
ಇನ್ನೆಂದು ಆಡುವರಲ್ಲ
ನಡಿ ನಮ್ಮ ಹಂಬಲ ||6||
ನೀವು ನಾವಿದ್ದ ಮ್ಯಾಲ
ದಾವ ಭಯವು ಇಲ್ಲ
ಶಿವದಾಸನ ಮೇಲ
ದೇವ ಕರುಣಿಸು ಬಾ ||7||

 

ಬಾರಯ್ಯ ಭಗವಂತ ಬೇಗನೆ ಬಾರೋ
ಬಾರಯ್ಯ ಭಗವಂತ ಬೇಗನೆ ಬಾರೋ
ಸಂತರ ಸತ್‍ಸಂಗ ಸಾಗಿಸ ಬಾರೋ ||ಪ||
ಸತ್ಯವುಳ್ಳವರ ಜತಿಲೀ ಬಾರೋ
ಸತ್ಯ ಶರಣರ ಸತ್ವದ ತೋರೋ ||1||
ಸುತ್ತೆಲ್ಲಾ ಕತ್ತಲ ಜ್ಯೋತ್ಯಾಗಿ ಬಾರೋ
ನಾಥ ಶಿವಪುರದ ದಾರಿಯ ತೋರೋ ||2||
ಅತ್ತತ್ತು ಬಾಲಕ ಬತ್ತ್ಯಾದ ಬಾರೋ
ದತ್ತಾ ಶಿವದಾಸನ ಎತ್ತಲಿ ಬಾರೋ ||3||

 

ಬಾರವ್ವ ಸಂಗವ್ವಾ ಬಾರವ್ವ ನಿಂಗವ್ವಾ
ಬಾರವ್ವ ಸಂಗವ್ವಾ ಬಾರವ್ವ ನಿಂಗವ್ವಾ ಬಾರವ್ವ ಗೆಳದಿ ಗಂಗವ್ವಾ
ಸಾಧು ಸಂತರು ಬಂದಾರ ಮನಿಗೆ ||ಪ||
ಸಂತರ ಸತ್ಸಂಗ ಕುಂತಾಗ ನಿಂತಾಗ
ಮುತ್ತಿನ ಮಳಿಯ ಸುರಿದಂಗ ||1||
ಸಂತರ ನುಡಿಗಳೆ ಭಕ್ತರ ವಡ್ವಿಗಳು
ಶೃಂಗಾರ ಸುಗುಣಿ ಮಾಡಿಕೋರೆ ||2||
ಮೂಗುತಿ ಮೂಗದಾರ ಮುಗರಾಣಿ ಬಿಗದಾರ
ಮುಂದಿರುವ ದಿವಸ ನಿರಹಾರ ||3||
ಕಿವಿಯಲ್ಲಿ ವಾಲಿ ಬುಗುಡಿ ಕಾಡಿಗಿ ಕಣ್ ತೀಡಿ
ನೋಡುವ ಒಳಗಿಂದೆ ಕನ್ನಡಿ ||4||
ಮಮತಾವು ಕುಡಿ ಮುಚ್ಚಿ ಮಾಯಾವು ಉರಿಹಚ್ಚಿ
ಮಾಡವ್ವ ಅಡಗಿ ಮನ ಮೆಚ್ಚಿ ||5||
ಸಂತರ ಸಹವಾಸ ಕುಂತಾರ ಶಿವದಾಸ
ಮಂತ್ರವು ಓಂ ಶಿವ ಉಲ್ಲಾಸ ||6||

 

ಬ್ಯಾಡೋ ತಮ್ಮ ನೋಡೊ ಅಮ್ಮಗ
ಬ್ಯಾಡೋ ತಮ್ಮ ನೋಡೊ ಅಮ್ಮಗ ಹೇಳುವೆನೊ ||ಪ||
ಅಮ್ಮ ನೋಡೆ ತಮ್ಮ ಕೃಷ್ಣ
ಮಣ್ಣು ತಿಂದು ಆಡುವನು
ಎನ್ನ ಮಾತು ಕೇಳವಲ್ಲ ನೀಚನೇ ||1||
ತಾಯಿ ಬಂದು ಕಿವಿಯ ಹಿಡಿದು
ಕೇಳಿದಳೋ ಗಲ್ಲ ಬಡಿದು
ಇಲ್ಲೇ ತಾಯಿ ಸುಳ್ಳೇ ಅಣ್ಣ ಹೇಳ್ಯಾನೇ ||2||
ಬಾಯಿ ತೆರೆದು ನೋಡ್ಯಾಳ ಬೇಗ
ಮೂರು ಲೋಕ ಕಾಣಿ ಒಳಗ
ಭವಳಿ ಬಂದು ಬಿದ್ದಿದಳು ಯಶೋಧನೇ ||3||
ಅಪ್ಪಿಕೊಂಡು ಎತ್ತೆಳ ಕಂದ
ತಪ್ಪ ಏನೂ ಇಲ್ಲೋ ನಿಂದ
ಸುಳ್ಳೇ ಹೇಳಿದೇನೋ ಬಲರಾಮನೇ ||4||
ಎನ್ನ ಬಾಲ ನಿನ್ನ ಲೀಲಾ
ಮೇಲಾಗಿ ತೋರಿದಿ ಎನ್ನ
ಧನ್ಯ ಧನ್ಯ ಎಂದ ಶಿವದಾಸನು ||5||

 

ಬ್ಯಾಸರಾದ ಸಂಸಾರಕ್ಕ ದುಡಗಿ ಮಾಡಿ
ಬ್ಯಾಸರಾದ ಸಂಸಾರಕ್ಕ ದುಡಗಿ ಮಾಡಿ
ಏಸೊ ದಿವಸ ಆಯಿತು ಇವನ ಸಂಗಡ ಕೂಡಿ
ತುಸು ಸುಖ ಕಾಣಲಿಲ್ಲ ದೈವಾ ಖೋಡಿ
ಗಂಡ ಬಿದ್ದಾನವ್ವಾ ಕೆಟ್ಟ ತಾಸೀಲಗೇಡಿ ||ಪ||
ಕಾಲ ಚಾಚಿ ಮಗತಾನ ಕಂಡ ಕಡಿ
ಇಲ್ಲದೊಂದು ಬೇಡತಾನ ಹಟ ಮಾಡಿ
ಎಷ್ಟು ತಂದು ಹಾಕಲೆವ್ವಾ ಕೂಲಿ ಮಾಡಿ
ಕಷ್ಟ ಏನು ಮಾಡೆವಲ್ಲಾ ಮುಗ್ಗಲಗೇಡಿ ||1||
ಇಷ್ಟೇ ಇದ್ದರ ಇರಲಿಯೆಂದ ಮನಕ ಜೋಡಿ
ಉಂಡು ಸುಮನೆ ಕೂಡವಲ್ಲ ಕುಲಗೇಡಿ
ಹೆಂಡಾ ಕುಡಿದು ಆಗತಾನ ಭಂಡ ನುಡಿ
ಮಾತಿಗೊಮ್ಮೆ ಆಡತಾನ ಭಂಡ ನುಡಿ ||2||
ಹರೆಯ ಇರುವ ತನಕ ಎನಗ ಹಂಬಲ ಮಾಡಿ
ವಾರಿವಾರಿಯಾಗಿ ಹೋದ ಮುಪ್ಪಿಗಿ ನೋಡಿ
ಬೆನ್ನ ಹತ್ತಿ ಬಂದಾಳೆಂದು ಊರೋರಕಡಿ
ಹೇಳಿ ಹೋದ ನೂಕರಿ ಹಾಳ ಕುಣಿಯ ನೋಡಿ ||3||
ಎನಗೆ ಬಿಟ್ಟು ಮಾಡಿಕೊಂಡ ಪೋರಿಗಿ ನೋಡಿ
ವ್ಯರ್ಥವಾಗಿ ಹೊಯ್ತೆ ತಾಯಿ ಎಷ್ಟು ಮಾಡಿ
ಶಿವದಾಸ ಹೇಳಿದಾರೆ ಸತ್ಯದ ನುಡಿ
ಗಂಡ ಜಾತಿಗಿ ನಂಬಬ್ಯಾಡಿರಿ ನಂಬಿಗಿ ಮಾಡಿ ||4||

 

ಬಿದ್ದಿಯಲೆ ಹುಡುಗ ಬಿದ್ದಿಯಲೆ
ಬಿದ್ದಿಯಲೆ ಹುಡುಗ ಬಿದ್ದಿಯಲೆ
ಬಿದ್ದಿಯಲೆ ನೀ ನಿದ್ದಿ ಕಣ್ಣ ತೆರಿ
ಇದ್ದ ಸಾಹಿತ್ಯವು ಬಿದ್ದವು ತೆಳಗ ||ಪ||
ಮುಂದೇ ನೋಡಿ ನಡಿ
ಒಂದೇ ದಾರಿ ಹಿಡಿ
ಒಂದೇ ಕಾಲ ಮೇಲೆ ಒಂದನೇ ಮಾಡುವಾಗ ||1||
ಮಧ್ಯ ರಾತ್ರಿಯೋಳು
ಮದ್ದಳಿ ಧ್ವನಿಯು
ಸಿದ್ಧರ ನುಡಿಗಳು ಮುದ್ದವು ನಮಗೆ ||2||
ಬುದ್ಧಿವಂತರು
ವಿದ್ಯಾವಂತರು
ಪದ್ಯ ಶಿವದಾಸನ ತಿದ್ದಿ ತೀಡುವಾಗ ||3||

 

ಬೆನ್ನತ್ತಿ ನಮಗೆ ಬರಗಾಲ ಭೂತ
ಬೆನ್ನತ್ತಿ ನಮಗೆ ಬರಗಾಲ ಭೂತ
ಇನ್ನೆಲ್ಲಿ ಓಡಿರಿ ಬೆನ್ನಿಲೆ ಬಂತ ||ಪ||
ಅನ್ನ ತುಪ್ಪ ಉಂಡು ಆಡಿದ ಶಾಂತ
ಧಿನ್ನ ಗಂಜಿಯ ಕೊಂಡು ದುಡಿಯದು ಬಂತ ||1||
ಹೊನ್ನಿಗೆ ಗಿದ್ದನ ಧಾನ್ಯವು ಆಯಿತ
ಇನ್ನೆಲ್ಲಿಗೋಡಿರಿ ಬೆನ್ನಿಲೆ ಬಂತ ||2||
ಭಾರತ ಸಂತಾನ ಕಂಟ್ರೋಲ ಆಯ್ತ
ಮೂರೇ ಮಕ್ಕಳ ಮ್ಯಾಲೆ ಮುಗಸಿರಿ ಅಂತ ||3||
ಹದನಾರು ಅನ್ನಕೆ ಸಾವಾದು ಬಂತ
ಮಂಗಲ ಕಾರ್ಯವು ಸಂಕ್ಷಿಪ್ತವಾಯ್ತ ||4||
ಆದಷ್ಟು ಮುಗಸಿರಿ ಮನಸಿಗೆ ಶಾಂತ
ಶಿವದಾಸ ನುಡಿವನು ನಡಿರಿಟ್ಟು ಗುರುತ ||5||

 

ಭಕ್ತರು ಹೊಂಟರ ಓಡುತೆ
ಭಕ್ತರು ಹೊಂಟರ ಓಡುತೆ
ಪಾದಯಾತ್ರೆ ಮಾಡುತೆ
ನೋಡನು ಬನ್ನಿರಿ ಬಾ ಗೆಳತಿ
ಮಾಡನು ಅವರಗ ಆರುತಿ ||ಪ||
ಮುಪ್ಪಿನವರು ಸ್ತ್ರೀ ಪುರುಷರು
ಹೊತ್ತರ ತೆಲಿಮ್ಯಾಲ ಶಾಯಿತೆ
ಶ್ರೀಶೈಲ ಅಂಬಿಕ ವೆಂಕಟ
ಗಿರಿಯ ಪರ್ವತ ಏರುತೆ
ಶಿವಾ ಶಿವಾ ಎನ್ನುತೆ
ಸಾಂಬನ ಭಜನೆ ಮಾಡುತೆ ||1||
ಹಂಪಿಗಿ ಕಾಶೀ ರಾಮೇಶ್ವರ
ಪಂಡ್ರಾಪುರ ತಿರುಗುತೆ
ಮಂತ್ರಾಲಯ ಯಾನಗುಂದಿ
ಮಾಣಿಕಮ್ಮಾ ಸಾಕ್ಷಾತ್
ಕಲಬುರ್ಗಿ ಶರಣ ಸತ್ಯೆ
ಅವರ ತೇರ ಮೆರಿಯುತೆ ||2||
ಚೆನ್ನಬಸವ ಸಣ್ಣ ಶಿಸುವ
ಬೆನ್ನಿಲೇ ಬರುತಾರಂತೆ
ಭ್ರಷ್ಟಾಚಾರ ದುಷ್ಟಾಚಾರ
ನಷ್ಟ ಮಾಡುತಾರಂತೆ
ಕಾಲ ಜ್ಞಾದ ಕಡಿ ಮಾತೆ
ಶಿವದಾಸನು ನುಡಿಯುತೆ ||3||

 

ಭ್ರಾಂತಿ ಬಿಡಿಸೋ ಜಗದಾ ತಂದೆ
ಭ್ರಾಂತಿ ಬಿಡಿಸೋ ಜಗದಾ ತಂದೆ
ಶಾಂತಿಪಡಿಸೋ ಶಾಂತಿಯೋ ||ಪ||
ಸತಿಸುತರಲ್ಲಿ ಶಾಂತಿ
ಜಾತಿ ಜಾತಿಯಲ್ಲಿ ಶಾಂತಿ
ಭಕ್ತಿ ಯುಕ್ತಿಯಲ್ಲಿ ಶಾಂತಿ ||1||
ರಾಜ-ರಾಜೇರಲ್ಲಿ ಶಾಂತಿ
ಪ್ರಜಾ ಜನರಲ್ಲಿ ಶಾಂತಿ
ಸೂರ್ಯ-ಚಂದ್ರರಲ್ಲಿ ಶಾಂತಿ ||2||
ಗಾಳಿ-ಧೂಳಿಯಲ್ಲಿ ಶಾಂತಿ
ಮಳಿಯ ಬೀಳುವದರಲ್ಲಿ ಶಾಂತಿ
ಉಳಿದ ಎಲ್ಲವರಲ್ಲಿ ಶಾಂತಿ ||3||
ದೇಶ ದೇಶದಲ್ಲಿ ಶಾಂತಿ
ನಾಲ್ಕು ದಿಕ್ಕಿನಲ್ಲಿ ಶಾಂತಿ
ಪಟ್ನ ಹಳ್ಳಿಯಲ್ಲಿ ಶಾಂತಿ ||4||
ಹಸಿದ ಪ್ರಾಣಿಯಲ್ಲಿ ಶಾಂತಿ
ವಿಷದ ಪ್ರಾಣಿಯಲ್ಲಿ ಶಾಂತಿ
ಶಿಶುವು ಶಿವದಾಸನು ಶಾಂತಿ ||5||

 

ಭಿಕ್ಷುಕ ನಾನು ಭಿಕ್ಷುಕ
ಭಿಕ್ಷುಕ ನಾನು ಭಿಕ್ಷುಕ
ಶಿವ ನಿನ್ನ ದ್ವಾರಕೆ ಬಂದೇನು ಭಿಕ್ಷಕೆ ||ಪ||
ಅನ್ನ ವಸ್ತ್ರವು ಬ್ಯಾಡ
ಹೊನ್ನ ಸಂಪತ್ತು ಬ್ಯಾಡ
ನಿನ್ನ ಧ್ಯಾಸವು ನನಗಿರಬೇಕ ||1||
ಜನನ ಮರಣ ಬ್ಯಾಡ
ಬ್ರಹ್ಮ ಬರಿಯಲಿ ಬ್ಯಾಡ
ಕರ್ಮದ ಫಲ ನನಗ ದೊರಿಬೇಕ ||2||
ಈ ದೇಹ ಬಿಡುಗಡೆ
ಆದ ಬಳಿಕವು ಕೂಡ
ಈ ಜೀವ ಮತ್ತಿರಲಿ ನಿಮ್ಮ ಪಾದಕ ||3||
ಮೆತ್ತಿಕೊಂಡೆನು ಕುರುಡ
ಕಿತ್ತಿ ಒಗೆಯಲಿ ಬ್ಯಾಡ
ಮತ್ತೆತ್ತ ಶಿವದಾಸ ಸರಿಬೇಕ ||4||

 

ಮಡಿಯಲಿಂದೆ ಗುಡಿಗಿ ಹೋಗಿ
ಮಡಿಯಲಿಂದೆ ಗುಡಿಗಿ ಹೋಗಿ
ದೇವರ ಪೂಜಾ ಮಾಡುವಾಗ
ಉಚ್ಚಿ ಬಂತೆ ತಾಯಿ ಕಚ್ಚಿ ತೊಯ್ತೆ ||1||
ಮಡಿಯಲಿಂದೆ ಗುಡಿಗಿ ಹೋಗಿ
ದೇವರ ಪೂಜಾ ಮಾಡುವಾಗ
ಮೈದಾನ ಬಂತೆ ತಾಯಿ ಮೈಲಿಗೆ ಆಯ್ತೆ ||2||
ಮಡಿಯಲಿಂದೆ ಗುಡಿಗಿ ಹೋಗಿ
ದೇವರ ಪೂಜಾ ಮಾಡುವಾಗ
ಶೀನ ಬಂತೆ ತಾಯಿ ಸುಂಬಳ ಹಾರಿತ್ತೆ ||3||
ಮಲಮೂತ್ರ ಇಟುಕೊಂಡು
ಸಡಗರಲಿಂದೆ ಗುಡಿಗೆ ಹೋದ
ಘಾತ ಆಯಿತ್ತೆ ತಾಯಿ ಮಾತ ಹೋಯಿತ್ತೆ ||4||
ಬಂದರೆ ಬರಲಿ ಹೋದರೆ ಹೋಗಲಿ
ದೇವರ ಪೂಜಾ ಬಿಡುವು ಬ್ಯಾಡ
ದಕ್ಷಣೆ ಹೋಗುತ್ತೆ ಮಗನೇ ಭಕ್ಷಣೆ ಹೋಗುತ್ತೆ ||5||
ಮಡಿಯ ಇಲ್ಲದೆ ಶಿವದಾಸ
ಅಡವಿ ಮ್ಯಾಲೆ ಭಜನ ಮಾಡಿ
ತಾನೇ ಕುಣಿದಿತ್ತೆ ಶಿವನ ಧ್ಯಾನ ಮಾಡಿತ್ತೆ ||6||

ಮದುವಿಯ ಹೆಂಡತಿ ಮನೆಯಲ್ಲಿ ಬಿಟ್ಟು
ಮದುವಿಯ ಹೆಂಡತಿ ಮನೆಯಲ್ಲಿ ಬಿಟ್ಟು ಗೆಳತಿ ಇಟ್ಟಾನಾ
ಹಿರಗೋಳು ಗಳಸಿದ ಜಿಂದಗಾನಿ ಅಷ್ಟು ಲುಟಾಸಿ ಬಿಟ್ಟಾನಾ ||ಪ||
ಮಡದಿ ಮಾಡಿದ ಅಡಗಿ ಉಳ್ಳಕ ರುಚಿಯಿಲ್ಲಂತಾನಾ
ಮರಾಠಿ ಹೋಟಲ ಮಟನ ತಂದು ರಟಾಸಿ ತಿಂತಾನಾ
ಬೀರ ಬ್ರಾಂಡಿ ನೀರಿನ ಪರಕಾರ ಬೇಗಾನಾ ಕುಡಿತಾನಾ
ಶಿವ ಶಿವ ಬೇಗಾನಾ ಕುಡಿತಾನಾ ||1||
ಭಂಗಾರ ಬೆಳ್ಳಿ ಭಾಂಡ್ಯಾ ಹೊಯ್ತು ಉಳಿಲಿಲ್ಲಾ ಏನಾ
ಅಲ್ಲೆಲ್ಲಾ ತಿಂದು ಸಾಲದೆ ಹೋಯ್ತು ಲಂಬರ ಮಾರ್ಯಾನ
ಹೆಂಡರ ಮಕ್ಕಳ ಕಂಡಲ್ಲೆ ದುಡಿದು ಉಂಡಾರೋ ಅನ್ನ
ಶಿವ ಶಿವ ಉಂಡಾರೋ ಅನ್ನ ||2||
ಮಟಕ ಆಟ ಲಕ್ಕಿ ಮುಟ್ಟಿ ಪರೇಲ ಆಡ್ಯಾನಾ
ಇನ್ನೊಂದು ಆಟ ಹತ್ಯಾತ್ತು ಎಂದು ಮನಿಯ ಮಾರ್ಯಾನ
ಉಳಿವಿಲ್ಲ ಎನ ಕಳ್ಳತನ ಮಾಡಬೇಕಂದನ
ಶಿವ ಶಿವ ಮಾಡಬೇಕಂದನ ||3||
ಹತ್ತು ಮಂದ್ಯಾಗ ಮುತ್ತಿನ ಕಳಸದಂತೆ ನಿನ್ನ ಮಾನ
ಕತ್ತಿಗಿಂತ ಕಡಿಮೆ ಆಯ್ತು ಕಿಮ್ಮತ್ತು ಬಹು ಸಣ್ಣ
ಹಾದಿ ಬಿಟ್ಟು ಹೋಗಿದವನ ಇದೇ ಹೈರಾಣ
ಶಿವದಾಸ ಇದೇ ಹೈರಾಣ ||4||

ಮಮತಾವ ಮಾಡವಲ್ಲಿ ಮುನಿಸ್ಯಾಕೋ ದೇವ
ಮಮತಾವ ಮಾಡವಲ್ಲಿ ಮುನಿಸ್ಯಾಕೋ ದೇವ
ಅಪರಾಧ ನನ್ನಲ್ಲಿ ದಾವದು ಇರುವ ಮಾಡೆನ್ನ ಅರಿವ ||ಪ||
ಬಾಲತ್ತ್ವದ ತಪ್ಪ ಮಾಫ ಮಾಡಿರೆಪ್ಪಾ
ತಾರುಣ್ಯಕೆ ಪುಣ್ಯ ಪಾಪ ಅರು ಮಾಡಿದೆಪ್ಪ
ಮರು ಬುದ್ಧಿ ಮರತಿದಲ್ಲಿ ಕ್ಷಮಾ ಮಾಡೋ ದೇವ ||1||
ಹಸದ ಪ್ರಾಣಿಯ ತಾಪ ಹಂಬಲ ಬಿಡಿಸಪ್ಪಾ
ಹಣ್ಣ ಹಂಪಲ ಸ್ವಲ್ಪ ಅಂಬಲಿ ಕುಡಿಸಪ್ಪಾ
ಒದಿ ಬ್ಯಾಡ ಕಾಲಿಲಿ ನಾ ನಿನ್ನ ಕರುವ ||2||
ನನ್ನಮ್ಮ ನನ್ನಪ್ಪ ಯಾರಿಲ್ಲ ನೀನೇ ಅಪ್ಪ
ಹರಿದಾಡೊ ಮನಸಿಗೆ ನಿಲ್ಲಿಸೋ ಭೂಪ
ಸದಾ ನಿಮ್ಮ ಪೂಜೆಯಲಿ ಶಿವದಾಸ ಇರುವೆ ||3||

ಮುತ್ಯಾ ನಿನ್ನ ಬಲ್ಲಿ ಒಂದು ಗಿಳಿ ಆದ
ಮುತ್ಯಾ ನಿನ್ನ ಬಲ್ಲಿ ಒಂದು ಗಿಳಿ ಆದ
ಗಿಳಿ ಆದ ಮಾತ್ ಆಡುತಾದ
ಪಿಂಜರ್ಯಾಗೆ ತಿರುಗಾಡತಾದ
ಬಂದವರಿಗೆ ರಾಂ ರಾಂ ಮಾಡತಾದ
ಮಾವಿನ ಹಣ್ಣ ಜಾಪಳಕಾಯಿ ಬೇಡತಾದ ||1||
ಭವಿಷ್ಯ ಜ್ಯೋತಿಷ್ಯ ನೋಡತಾದ
ಮುತ್ಯಾ ನಿನ್ನ ರಕ್ಷಣೆ ಮಾಡತಾದ
ಪಿಂಜರಿ ಬಿಟ್ಟು ಒಂದು ದಿನ ಓಡತಾದ
ಮುತ್ಯಾ ನಿನ್ನಗ ಹೈರಾಣ ಮಾಡತಾದ
ಶಿವದಾಸನ ಪಟ ಹಾಡತಾದ ||2||

ಮೂಲ ಸ್ಥಾನದ ಮಾತ ಮಾಡಿಕೊಂಡ ಗುರುತ
ಮೂಲ ಸ್ಥಾನದ ಮಾತ ಮಾಡಿಕೊಂಡ ಗುರುತ
ಒಬ್ಬವನೇ ಭಗವಂತಾ ನಿರಂಕಾರ ||ಪ||
ಜಲಜಗಭರಿತ ತುಂಬಿ ತುಳಕುತ
ಓಂ ಧ್ವನಿ ನುಡಿತಾ ಒಂದೇ ಸ್ವರ ||1||
ಜಲದ ಉಷ್ಣತಾ ಹೊಗಿಯ ಗವದಿತಾ
ಕತ್ತಲ ತಾಳಿತ್ತಾ ಅಂಧಕಾರ ||2||
ನಿರಂಕಾರ ನಿಂಗ ಜಗವು ಮಾಡ್ಯಾನಂತ
ಮಹಿಮಾವು ತೋರುತ್ತಾ ಮಾಯಾಕಾರ ||3||
ಜಲದ ಉಕ್ಕ ಕುಂತ ಭೂಮಿ ತೈಯಾರಾಯ್ತು
ಸೂರ್ಯಚಂದ್ರ ಜ್ಯೋತಾ ಮಾಡಿದರ ||4|
ಓಂಕಾರವು ಹೋಯ್ತ ಆಕಾರವು ಆಯಿತಾ
ಶಿವದಾಸ ರಹಿತಾ ಆಗಿದಾರ ||5|

ಯಾರಿಲ್ಲದವರಿಗೆ ನೀ ಕಾಯೋ ಶಿವನೆ
ಯಾರಿಲ್ಲದವರಿಗೆ ನೀ ಕಾಯೋ ಶಿವನೆ ||ಪ||
ತಾಯಿ ತಂದಿಯು ಇಲ್ಲ ಬಂಧು ಬಳಗ ಇಲ್ಲ
ಇದ್ದಂಥವರು ಎಲ್ಲಾ ಬೈಲಾಗಿ ಶಿವನೆ ||1||
ಕಾಂತಾರ ಕತ್ತಲ ಸಿಂಹ ಶಾರದೂಲ
ಬರುವವೂ ಮೈಯ ಮ್ಯಾಲ, ನೀ ಕಾಯೋ ಶಿವನೇ ||2||
ಘದ್ರಣಕಿ ಮುಗಲ ಕಡಕಡದು ಸಿಡಿಲ
ಎನ್ನ ಎದಿ ಭುಗಿಲ, ನೀ ಕಾಯೋ ಶಿವನೇ ||3||
ಶಿವದಾಸ ಬಾಲ ತುಂಬಿ ನದಿ ನಾಲ
ಅಂಬಿಗನಾಗಿ ನೀ ಕಾಯೋ ಶಿವನೇ |4||

ರೂಪ ಬೇರೆ ಮಾಡಿ ಜೀವ ಒಂದೇ ಪಡಿ
ರೂಪ ಬೇರೆ ಮಾಡಿ ಜೀವ ಒಂದೇ ಪಡಿ
ಎಲ್ಲಾ ಕಡಿ ನೋಡಿ ಬಂದಿದೇನಾ ||ಪ||
ಯಾರು ನಿಂತು ಖಡಿ ಯಾರು ಓಡ್ಯಾಡಿ
ಯಾರಿಗೆ ಮೂಕ ಮಾಡಿ ಇಟ್ಟಿದೇನಾ ||1||
ಯಾರಿಗೆ ಕೈ ಮಾಡಿ ಯಾರಿಗೆ ಮಾಡಿದೆ ಸೊಂಡಿ
ಯಾರಿಗೆ ಬಾಯಿಲಿ ತಿಂಡಿ ತಿನಸಿದೇನಾ ||2||
ಒಬ್ಬರ ಬಾಲಕ ಕೊಂಡಿ ಯಾರಿಗೆ ವಿಷದ ಹೆಡಿ
ಯಾರಿಗೆ ಖೋಡ ಮಾಡಿ ಇಟ್ಟಿದೇನಾ ||3||
ಯಾರು ಮಾತಾಡಿ ನಿನ್ನ ತಾರೀಫ ಮಾಡಿ
ಶಿವದಾಸ ಹಾಡಿ ಬಗಳುವಾನ ||4||

ರೋಹಿದಾಸ ಸಮಗಾರ ಎಂಥ ಶರಣ ಆಗಿದಾರ
ರೋಹಿದಾಸ ಸಮಗಾರ ಎಂಥ ಶರಣ ಆಗಿದಾರ
ತಾಯಿ-ತಂದೆ ಸೇವೆ ಮಾಡಿ ಪಾವನಾಗ್ಯಾರ ||ಪ||
ಎಡಕ ಬಲಕ ತೊಟ್ಟಿಲ ಕಟ್ಟಿ ನಡುವೆ ಕುಂತಿದಾರ
ಒಂದೊಂದು ಝೋಕಿ ಹೊಡೆದು ಕೆರವು ಮಾಡುವರ ||1||
ಪುಂಡಲೀಕ ಫಂಡ್ರಾಪುರ ಯಾತ್ರೆಕೆ ಹೊಂಟಾರ
ತಾಯಿ-ತಂದಿಗಿ ಹಗ್ಗ ಹಚ್ಚಿ ಜೊಗ್ಗಿ ಎಳಿವಾರ ||2||
ಹೆಗಲ ಮ್ಯಾಲೆ ಸತಿಗೆ ಎತ್ತಿಕೊಂಡು ನಡೆದೀದಾರ
ರೋಹಿದಾಸ ಕೇಳುತಾರ ಎಲ್ಲಿಗ್ಹೋಗುವರ ||3||
ಪುಂಡಲೀಕ ಹೇಳುತಾರ ಹೋಗದು ಪಂಢರಪುರ
ಯಾತ್ರಾ ಮಾಡಿ ಎಲ್ಲಾ ಪಾಪ ಆಗುವದೋ ದೂರ ||4||
ತೊಗಲ ದುಡ್ಡು ಕೊಯ್ದು ಕೊಟ್ಟಿದಾನೋ ಸಮಗಾರ
ಚಂದ್ರಭಾಗದಲ್ಲಿ ಬಿಡರಿ ಹೇಳಿ ನನ್ನ ಹೆಸರ ||5||
ಕಾರ್ತಿಕ ಶುದ್ಧ ಏಕಾದಶಿ ಗುರುವಾರ
ಪಾಂಡುರಂಗನ ದರ್ಶನಕಾಗಿ ಮಾಡಿ ನಿರಾಹಾರ ||6||
ಯಾತ್ರಾ ಮಾಡಿ ಪುಂಡಲೀಕ ಹಿಂದಕ ತಿರಗ್ಯಾರ
ನದಿಯ ದಾಟದರಲ್ಲೆ ನೆನಪ ಸಮಗಾರ ||7||
ತೊಗಲ ದೊಡ್ಡ ನದಿಯದೊಳಗೆ ಬೀಸಿ ಒಗಿದಾರ
ಚಂದ್ರಭಾಗ ಕೈಎತ್ತಿ ಬುತ್ತಿ ಹಿಡಿದಾರ ||8||
ಪುಂಡಲೀಕ ನೋಡಿ ಅಂದ ಹೆಂತ ಚಮತ್ಕಾರ
ವ್ಯರ್ಥವಾಗಿ ಹೋಯ್ತೋ ಯಾತ್ರಾ ಮಾಡಿ ರೊಕ್ಕ ಸಾವಿರ ||9||
ರೋಹಿದಾಸ ಸಮಗಾರನ ಮನಿಗೆ ಹೋಗ್ಯಾರ
ಪಾದದ ಮೇಲೆ ಬಿದ್ದು ಹೊರಳ್ಯಾಡುವರ ||10||
ಎಂಥ ಪಾತಕ ಪಾಪಿಯು ನಾನು ಮಾಡೋ ಉದ್ಧಾರ
ವ್ಯರ್ಥವಾಗಿ ಹೋಯ್ತೋ ಯಾತ್ರಾ ಮಾಡಿ ರೊಕ್ಕ ಸಾವಿರ ||11||
ರೋಹಿದಾಸ ಹೇಳುತಾರ ತಿರುಗಿ ನೋಡೋ ಜರಾ
ಎಡಕ ಬಲಕ ತೊಟ್ಟಿಲದೊಳಗೆ ಕಾಶೀ ರಾಮೇಶ್ವರ ||12||
ಪುಂಡಲೀಕ ಮನಸ್ಸಿನಲ್ಲೇ ತ್ಯಾಗ ತಂದಿದಾರ
ಅಡವಿ ಏರಿ ನಡೆದಿದಾರೋ ಬಿಟ್ಟು ಮನಿಮಾರ ||13||
ಚಂದ್ರಭಾಗದಲ್ಲೇ ಹೋಗಿ ಖಡಿಯ ನಿಂತಾರ
ಅಲ್ಲೇ ಅವರ ಮುಕ್ತಿ ಆಯ್ತೋ ಮೂರ್ತಮಾಡ್ಯಾರ ||14||
ಪಂಢರಪುರ ಚುಡಗುಪ್ಪಿಗಿ ಆದ ಬಹಳ ದೂರ
ಶಿವದಾಸ ಯಾತ್ರಾಕ್ಹೋಗಿ ಬರಿದ ಚರಿತ್ರ ||15||

ಲಕ್ಷ ಚೌರ್ಯಾ ಐಂಸಿ ಮಾಡಿ ಜೀವರಾಶಿ
ಲಕ್ಷ ಚೌರ್ಯಾ ಐಂಸಿ ಮಾಡಿ ಜೀವರಾಶಿ
ಬೇರೆ ಬೇರೆ ಉಣಸಿ ಸಾಕುವನ ||ಪ||
ದಾವುದಕ ಹುಲ್ಲಿನ ಆಸಿ ದಾವುದ ತಪ್ಪಲ ಮುಗಸಿ
ದಾವುದ ಜಲ ಈಸಿ ಬದಕ್ಯಾವಣ್ಣಾ ||1||
ದಾವೂ ನರಕ ಹೇಸಿ ದಾವು ಕಟ್ಟಿಗೆ ಕತ್ತರಿಸಿ
ದಾವೂ ರಕ್ತ ಸೋಸಿ ಕುಡಿವನಣ್ಣಾ ||2||
ದಾರಿಗೆ ಮಣ್ಣ ತಿನಿಸಿ ದಾರಿಗೆ ಹಣ್ಣ ತಿನಿಸಿ
ದಾರಿಗೆ ಮಾಂಸ ಹರಿಸಿ ಕುಡುವನಣ್ಣಾ ||3||
ದಾರಿಗೆ ಲಡ್ಡು ದೋಸಿ ಭರಪಿ ಪೇಡಾ ತಿನಿಸಿ
ಮನ ತೃಪ್ತಪಡಿಸಿ ಶಿವದಾಸನಾ ||4||

ವಾಯು ತೇಜ ಅಪ್ ಜೀವ ಮಣ್ಣು ಸಾಪಾ
ವಾಯು ತೇಜ ಅಪ್ ಜೀವ ಮಣ್ಣು ಸಾಪಾ
ಪಂಚಧಾತು ರೂಪ ಮಾಡಿದಾನ ||ಪ||
ಮಂತ್ರ ಮಾಡಿ ಭೂಪ ತಂತ್ರವು ತಾರೀಫ
ತಾರವಿಟ್ಟ ಸಮೀಪ ಮೂವತ್ತೆರಡನಾ ||1||
ಮೂವತ್ತೆರಡು ಕುಡುಪ ಮುಗಸಿ ಮ್ಯಾಲ ಝಡಪ
ಮೂವತ್ತೆರಡ ಗುಪ್ತ ಗುಣವನಾ ||2||
ಎರಡು ನೂರಾ ಮೇಲಪ್ಪಾ ಏಳಹತ್ತ ದಿವಸಪ್ಪಾ
ಅಲ್ಕ ಮಲ್ಕ ಮಂಟಪಾ ಮುಗಸಿದಾನಾ ||3||
ಹಾದಿಗಳು ಹತ್ತಪ್ಪಾ ಒಂದೇ ಚಲು ಇತ್ತಪ್ಪಾ
ಒಂಬತ್ತು ದಾರಿ ತೆರಿತಪ್ಪಾ ಒಂದೇ ಮುಚ್ಯಾನ ||4||
ಮೂವತ್ತೆರಡು ದಂತಪ್ಪಾ ಹತ್ತು ತಿಂಗಳಿಗಾಯ್ತಪ್ಪ
ಶಿವದಾಸ ಸಂಕ್ಷಿಪ್ತ ಸಾರುವನಾ ||5||

ಶಿವ ಶಿವ ಸದ್ಗತಿ ನೀನು
ಶಿವ ಶಿವ ಸದ್ಗತಿ ನೀನು
ನಿನ್ನನು ನಂಬಿದೇನು ||ಪ||
ನಿಮ್ಮ ಮಹಿಮಾ ಘನ ಭವನು
ಗ್ರಾಮ ಗುಡಿಯೊಳು ನೀನು ||1||
ಪವಿತ್ರನಾದ ಪರಮಾತ್ಮನು
ಸತ್‍ಚಿತ್ ಆನಂದ ನೀನು
ನಿರಂಕಾರ ನಿಜ ನೀನು ||2||
ಜನ್ಮ ಮರಣವಿಲ್ಲದವನು
ಅನಾದಿ ಅಂತ ಸರಿ ಇರುಹುವನು
ಎಲ್ಲ ಜಗ ಘುಲಶ್ಯಾಡುವನು ||3||
ನಿನ್ನನು ಅರಿಯದೆ ಇನ್ಯಾಸ್ಥಾನು
ಏನನ್ನು ಕಾಣದೆ ಖಿನ್ನಾದೇನು
ಧನ್ಯ ಧನ್ಯ ಗಿರಿಧರನೊ ||4||
ಅಗಣಿತ ಕಿವಿ ಕಣ್ಣಿದ್ದವನು
ಕದ್ದೆತ್ತ ಓಡಲಿ ಸುಳ್ಳಾಡಲೇನು
ಎಲ್ಲ ಬಲ್ಲ ಸಾರಥಿ ನೀನು ||5||
ದಾರಿಯೊಳು ದೊರಿಯುವ ಪುರ ಚುಡಗುಪ್ಪಿನೊ
ಅರಿವಿನ ಗುರಿ ಸಾರುವ ಶಿವದಾಸನು
ಶಿರ ಧರಿಸಿ ಶ್ರೀಧರನು ||6||

ಸಾಕಾಯಿತೊ ಶಿಕ್ಷಾ ನಮಗೆ
ಸಾಕಾಯಿತೊ ಶಿಕ್ಷಾ ನಮಗೆ
ಮೊಕ್ಷಾ ಮಾಡೋ ಭಗವಂತಾ
ಕರುಣಾಸಾಗರ ಕರುಣಿಸೊ ನಮಗೆ
ಶರಣಾಗುವೆನೋ ಸಮರ್ಥ ||ಪ||
ಲಕ್ಷಾ ಚೌರ್ಯಾಐಂಸಿ ಜನ್ಮ
ಅದರೊಳು ಐದು ಭಾಗಗಳು
ಒಂದೊಂದು ಜನ್ಮ ಭೋಗಿಸುವನಾ
ಬಹು ಕಷ್ಟವು ಸಹಿಸುತ ||1||
ಮೊದಲು ಪಕ್ಷಿ ಎರಡನೆ ಪಶುವೆ
ಮೂರನೇ ಕ್ರೀಡಾ ಹುಳುಗಳು
ನಾಲ್ಕನೇ ವೃಕ್ಷಾ ಐದನೇ ಮನುಷ್ಯಾ
ತಿಳಿವುಳ್ಳಂಥಾ ತಿಳಿಮಾತಾ ||3||
ನರಕ ಎಂಬೋ ನಾಲ್ಕು ಜನ್ಮ
ಎಷ್ಟು ಕರ್ಮ ಅಷ್ಟು ಭೋಗ
ಸ್ವರ್ಗ ಎಂಬೋ ಮಾನವ ಜನ್ಮ
ಅಷ್ಟು ಐಶ್ವರ್ಯ ಕಾಣುತ ||4||
ಇಷ್ಟೆ ತಿಳಿದು ಶಿವದಾಸನು
ಮಾನವ ಜನ್ಮಕೆ ನಾಲ್ಕು ಛಿಡಿಯ
ಬಡವ ಸಾವುಕಾರ ಯಾಂವ ರಾಜಾ
ಯಾಂವ ಯೋಗಿ ಆಗುತಾ ||5||

ಹತ್ತವಿಂದ್ರಿನಗರ ಹುಟ್ಟಸಿದ್ದ ಸರಕಾರ
ಹತ್ತವಿಂದ್ರಿನಗರ ಹುಟ್ಟಸಿದ್ದ ಸರಕಾರ
ಎರಡ ಗಾಲಿ ಆಧಾರ ಮ್ಯಾಲೆ ಮಾಡ್ಯಾರ ||ಪ||
ಅದರಾಗ ಐದು ಪಂಚರ ಆರಿಸಿ ಅವರಿಗಿ ಇಟ್ಟಾರ
ಹಾದಿ ಬೀದಿ ಉಡುಗುವರಾ ಇಬ್ಬರು ಚಾಕರರಾ ||1||
ನಗರ ಜತನ ಮಾಡುವರಾ ಇಬ್ಬರ ಹಾರ ಜಮಾದಾರ
ಹನ್ನೊಂದನೆಯ ಸದರ ನ್ಯಾಯ ಮಾಡುವರಾ ||2||
ಇವರಿಗಿಲ್ಲ ಪಗಾರ ಕೂಳಕ್ಕಾಗಿ ದುಡಿಯುವರಾ
ಯಾರ ಕೆಲಸ ಅವರ ನಿಂತ ಮಾಡುವರಾ ||3||
ಹತ್ತ ಮಂದಿ ನೌಕರ ಹತ್ತಕಡಿ ದುಡಿಯುವರಾ
ಹತ್ತರ ಒಂದೇ ಸರದಾರ್ ಒಬ್ಬರೆ ಇರುವರಾ ||4||
ಕೋಟ್ಯಾಧೀಶ ಸಾಹುಕಾರ ಊಟ ಇವರು ಕೊಟ್ಟಾರ
ಕೊಡುವಲ್ಲದಿದ್ದರ ಬಿಟ್ಟರ ಶಿವದಾಸರ ||5||

ಹವಲ ಹಾರಿ ನಡದಾನ ಅಡವಿ ದಾರಿ ಹಿಡದಾನ
ಹವಲ ಹಾರಿ ನಡದಾನ ಅಡವಿದಾರಿ ಹಿಡದಾನ
ಹುಲಿಯ ಎದರ ಕಂಡಾನ ಹತ್ಯಾದ ಬೆನ್ನಾ ||ಪ||
ಘಾಬರಾಗಿ ಓಡ್ಯಾನ ಹಾಳ ಭಾಂವ್ಯಾಗ ಛಿಡದಾನ
ನಡುವೆ ಜಡಿಯ ಹಿಡದಾನ ಜೋತ್ಯಾಡುವನ ||1||
ಹುಲಿಯು ಬಂತು ಭಾವಿನ ಬಾಯಿ ತೆರೆದು ನೋಡೋಣ
ಕಣಗಿಲ ಎದ್ದು ಕಡಿಯೋಣ ಮಾಡಲೇನಾ ||2||
ಕೆಳಗೆ ಛಿಡಿ ಬೇಕಂದಾನ ಕೆಳಗೆ ನಾಗರ ಹಾವಣ್ಣ
ಬಾಯಿ ತೆರೆದು ನುಂಗುವನಾ ಮಾಡಲೇನಾ ||3||
ಇಲಿಯು ಜಡಿಯ ಬೇರಿನ ಕಡಿಯುತಾವ ನಡುವಿನಾ
ವ್ಯಾಳೆ ಹೆಂತದು ಬಂತಣ್ಣಾ ಕಾಯೋ ಭಗವಾನ ||4||
ಶಿವದಾಸ ಹೀಂಗ ಅಂದಾನ ಹಾದಿ ಬಿಟ್ಟು ಹೋದವನಾ
ಇದೇ ಶಿಕ್ಷಾ ಆಗೋಣ ಎಲ್ಲಾರನ್ನಾ ||5||

 

ಹ್ಯಾಂಗ ಕರಿಯಲಿ ನಿನಗೆ
ಹ್ಯಾಂಗ ಕರಿಯಲಿ ನಿನಗೆ
ನನಗ ಹೇಳಿಕೊಡು ಏನಂತ ಒಳ್ಳಾಲಿ ನಿನಗೆ ||ಪ||
ಆಯಿ ಎಂದರೆ ಮುತ್ತ್ಯಾನ ಹೆಂಡತಿ
ಅವ್ವ ಎಂದರೆ ಅಪ್ಪನ ಹೆಂಡತಿ
ದೊಡ್ಡವ್ವ ಎಂದರೆ ದೊಡ್ಡಪ್ಪನ ಹೆಂಡತಿ ||1||
ಸಣ್ಣವ್ವ ಎಂದರೆ ಸಣ್ಣಪ್ಪನ ಹೆಂಡತಿ
ಅತ್ತಿ ಎಂದರೆ ಮಾವನ ಹೆಂಡತಿ
ಅತ್ತಿಗೆ ಅಂದರೆ ಅಣ್ಣನ ಹೆಂಡತಿ ||2||
ಅಕ್ಕ ಅಂದರೆ ಮಾಮನ ಹೆಂಡತಿ
ಸೊಸೆ ಅಂದರೆ ಮಗನ ಹೆಂಡತಿ
ಧೊರಿಯೋಳು ಎಂದರೆ ಧೊರಿಯ ಹೆಂಡತಿ ||3||
ಮಹಾರಾಣಿ ಎಂದರೆ ರಾಜನ ಹೆಂಡತಿ
ದೇವಿ ಎಂದರೆ ದೇವರ ಹೆಂಡತಿ
ಶಿವದಾಸಗೆ ಬಿಡಿಸವ್ವ ಭ್ರಾಂತಿ ||4||

 

ಹ್ಯಾಂಗ ಪೂಜೆಯ ಮಾಡಲಿ ಶಿವರಾಮ ನಿನ್ನ
ಹ್ಯಾಂಗ ಪೂಜೆಯ ಮಾಡಲಿ ಶಿವರಾಮ ನಿನ್ನ
ಹ್ಯಾಂಗ ಪೂಜೆಯ ಮಾಡಲಿ ||ಪ||
ಕೈ ಇಲ್ಲ ಕಾಲಿಲ್ಲ ಕಣ್ಣಿಲ್ಲ ಹಣಿ ಎಲ್ಲ
ಗಂಧ ನಾ ಎಲ್ಲಿ ಕೊರಿಯಲಿ ||1||
ಹುಟ್ಟಿಸುವ ನೀನೇ ಕೊಲ್ಲಿಸುವ ನೀನೇ
ನಿನ್ನ ಮೂರ್ತಿ ಹ್ಯಾಂಗ ಮಾಡಲಿ ||2||
ಅಷ್ಟು ಜೀವರಾಶಿ ಎಲ್ಲಾ ಉಣಿಸುವೆ ನಿತ್ಯ ಕಾಲ
ನೈವೇದ್ಯ ನಿನ್ನ ಹ್ಯಾಂಗ ತೋರಲಿ ||3||
ನಿನ್ನ ಬೆಳಕ ಜಗವೆಲ್ಲ ಸೂರ್ಯ ಚಂದ್ರನು ಮೊದಲ
ದೀಪ ನಿನಗ್ಹ್ಯಾಂಗ ಬೆಳಗಲಿ ||4||
ತನು ಮನ ಕೊಟ್ಟವನ ಬೆನ್ನ ಹತ್ತುವ ನೀನ
ಶಿವದಾಸ ಇಷ್ಟೇ ಬಲ್ಲ ||5||

ಹ್ಯಾಂಗೆ ಮಾಡಲಿ ನಾ ಹ್ಯಾಂಗೆ
ಹ್ಯಾಂಗೆ ಮಾಡಲಿ ನಾ ಹ್ಯಾಂಗೆ
ಎನ್ನ ಪ್ರಾಣ ಪತಿಯು ಬಿಟ್ಟು ಪೋದಾನು ಎನಗೆ ||ಪ||
ನಾ ಇದ್ದ ಸಣ್ಣಕಿ ಐದ ತಿಂಗಳದಕಿ
ತಾಯಿ-ತಂದಿಯು ಜ್ವಾಕಿ ಮಾಡ್ಯಾರ ನನಗೆ ||1||
ಒಂಬತ್ತ ಬಾಗಿಲು ಒಳಗಿದ್ದ ಖುಶಿಯಾಲ
ಮನಸಿಟ್ಟು ಎನ ಮೇಲೆ ಬಂದಿದ್ದ ಒಳಗೆ ||2||
ಅಪ್ಪಿಕೊಂಡನು ಬಂದ ಲಗ್ನವಾಯಿತು ನಂದ
ದಿನಸಿಗೆ ಒಂದೊಂದ ಉಣಸ್ಯಾರ ಎನಗೆ ||3||
ನಾಕೇ ತಿಂಗಳ ಉಳಿದ ಸಾಕೆಂದು ಕೈಹಿಡಿದ
ಲೋಕೂರಿಗೆ ಎಳೆದ ಒಯ್ದನೇ ಎನಗೆ ||4||
ಹರುಷದಿ ಇಟಕೊಂಡ ಸಂತೋಷ ಉಟ್ಟುಂಡ
ಬೇಕಾಗಿದುಕೊಂಡು ಕುಡುವಾನು ಎನಗೆ ||5||
ತಪ್ಪ ಇಲ್ಲದ ನಂದ ನನ್ನ ಗಂಡ ಒಲ್ಲಂದ
ಬಿಟ್ಟುಕೊಟ್ಟ ಎನಗೆ ಹೋದಾನ ಹೊರಗೆ ||6||

ಹುಚ್ಚ ಮಾಡಿದ
ಹುಚ್ಚ ಮಾಡಿದ
ಹುಚ್ಚ ಮಾಡಿದ ಎನಗೆ
ಈ ಜಾದುಗಾರ ಮೆಚ್ಚ ಮಾಡಿದ ಎನಗೆ ||ಪ||
ತಾಯಿ-ತಂದಿ ಹಡೆದವರ
ಇಡಲಿಲ್ಲ ನಾನು ಖಬರ
ಬಂಧು ಬಳಗ ಊರ ಬಿಡಿಸೊಯ್ದ ಎನಗೆ ||1||
ನನಗಿದ್ದ ಶೃಂಗಾರ
ದಾನ ಮಾಡಿದ ಪೂರಾ
ಮನವು ಅರಿಯದಂತೆ ಮಾಡಿ ಬತ್ತಲೆ ಎನಗೆ ||2||
ಆಟವು ಅಪರಂಪಾರ
ಆಡುವ ಬ್ಯಾರೆ ಬ್ಯಾರೆ
ನೋಡಿ ನೋಡಿ ಬ್ಯಾಸರ ಆಯಿತು ಎನಗೆ ||3||
ಎತ್ತೆತ್ತ ನೋಡಿದರ
ಅತ್ತತ್ತ ಇವನ ಚಹರ
ಕತ್ತಲ ಬೆಳಕನಾಗಿ ಕಾಣಿತು ಎನಗೆ ||4||
ವೈದಂತೆ ಮನೋಹರ
ಬಿಡುಬ್ಯಾಡೋ ಅತಂತ್ರ
ಬಿಟ್ಟರೆ ಶಿವದಾಸನ ಅಪವಾದ ನಿಮಗೆ ||5||

ಹೆಣ್ಣು ಗಂಡು ಜೋಡಿ ಎರಡು ಗೊಂಬಿ ಮಾಡಿ
ಹೆಣ್ಣು ಗಂಡು ಜೋಡಿ ಎರಡು ಗೊಂಬಿ ಮಾಡಿ
ಜನಿಸುವ ಪೀಡಿ ಕೀಲಿಟ್ಟನಾ ||ಪ||
ಜನಿಸಿದಂತ ಗಡಿ ಜನನೀ ಪಾಲನ ಮಾಡಿ
ಅಮೃತದ ಪುಡಿ ತುಂಬಿಟ್ಟನಾ ||1||
ಮಾಡಿದಾನೋ ಗುಡಿ ದೀಪ ಆರಕಡಿ
ಕಾರತಾವಾ ಕೀಡಿ ಹುಶಿಯಾರಣ್ಣಾ ||2||
ಒಳಗೆ ನಿಂತ ಖಡಿ ಮಾನವರಾಟ ನೋಡಿ
ಬರೆದು ಲೆಕ್ಕವ ಮಾಡಿ ಜನ್ಮ ಪುನಃ ||3||
ನೂರು ವರ್ಷ ಕಡಿ ಜನ್ಮ ಬದಲ ಮಾಡಿ
ಖಳುವಿ ದಾವಕಡಿ ತಿಳಿಯದಣ್ಣಾ ||4||
ನಡಿ ನುಡಿ ನೋಡಿ ಮಾಡಿದಂತಾ ಎಡಿ
ದೇವ ಜನ್ಮ ಮಾಡಿ ಶಿವದಾಸನಾ ||5||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಕೊಳ್ಳೂರು ಹುಸನಾ ಸಾಹೇಬರ ತತ್ವಪದಗಳು

ಆರು ಗುಣ ಬಿಡುವೊ ಅವ ಗುಲಾಮ
ಆರು ಗುಣ ಬಿಡುವೊ ಅವ ಗುಲಾಮ
ಆಗೋ ಗುರುವಿನ ಗುಲಾಮ ||ಪ||
ಮೋಹಕ್ಕ ತಿಳಿದಿಲ್ಲ ಮರಮ
ಮದವೆಂಬುದು ಕಟ್ಟ ಹರಾಮ
ವಂಚೆರ ಆಡತಾವ ವರಮ
ಆಗೋ ಗುರುವಿನ ಗುಲಾಮ ||1||
ನೋಡಿದರ ನೀಚೆಂಬ ಧರಮ
ಉಚ್ಚುವೆನು ಬೆನ್ನಿನ ಚರಮ
ನಿಂದ ನೀನೆ ಕಾಯ್ದಕೊ ಭರಮ
ಆಗೋ ಗುರುವಿನ ಗುಲಾಮ ||2||
ಅಲ್ಲಂದರ ಯಾತರ ಜಲಮ
ಗುರುವಿಲ್ದೆ ಹತ್ತಲಿಲ್ಲ ಪಲಮ
ಹುಸನಾ ಹೇಳ್ಯಾನ ಹೊಸ ಕಲಮ
ಆಗೋ ಗುರುವಿನ ಗುಲಾಮ ||3||

ಒಡಗೂಡಲಾಕ ಒಡೆಯನು ಬೇಕ
ಒಡಗೂಡಲಾಕ ಒಡೆಯನು ಬೇಕ
ಶಿವಶರಣರ ನಡಿನುಡಿ ಸಾಕ ||ಪ||
ಭವ ದಾಟಲಾಕ ಭಾವ ಶುದ್ಧ ಇರಬೇಕ
ಜನನ-ಮರಣವನ್ನು ತಪ್ಪಿಸಬೇಕ ||1||
ಸಂಶಯ ಪಾತಕ ಸುತ್ತುವುದು ಸೂತಕ
ಹಮ್ಮ-ದಿಮ್ಮಗಳನ್ನು ಬಿಟ್ಟು ಸುಮ್ಮನಿರಬೇಕ ||2||
ಬಸವ ಬಸವ ಓಂ ಶ್ರೀಗುರು ಬಸವ
ಬಸವನ ನಾಮ ನುಡಿದ ಹುಸನಾ ಶಿಶುವ ||3||

ಕರ್ನಾಟಕ ಕ್ಷೇತ್ರ ಪರಮ ಪವಿತ್ರ
ಕರ್ನಾಟಕ ಕ್ಷೇತ್ರ| ಪರಮ ಪವಿತ್ರ
ಕಲ್ಯಾಣಕ ಹೋಗಾನು ಬಾ
ಬಸವಣ್ಣಗ ನೋಡಾನು ಬಾ ||ಪ||
ಸಮೀಪ ತಿಪರಾಂತದ ಕೆರಿ ಧಡಿಯೊ
ಅಲ್ಲೇ ಅಕ್ಕನಾಗಮ್ಮನ ಗವಿಯೊ
ಪ್ರಭುಸ್ವಾಮಿಯ ಅದ ಗದ್ದಗಿಯೊ
ಸಂಗಮೇಶ್ವರ ಇದ್ಹಾಂಗ ರವಿಯೊ ||1||
ಪುರಾತನರು ಅಲ್ಲಿ ಅರವತ್ತು ಮೂರು
ಪರ ಉಪಕಾರಿಗೆ ಪರಮಾದ್ಯರು
ಶೂಚಿರ್ಭೂತ ಸುರಲೋಕದವರು
ತೊಂಬತ್ತಾರು ಸಾವಿರ ಗಣಂಗಳು ||2||
ಶರಣರ ಸ್ಥಲದಲಿ ಪ್ರಾಣಲಿಂಗ
ಆನಂದ ಭಕ್ತಿ ಆಕಾಶಲಿಂಗ
ದರ್ಪಣಾಕೃತಿ ನಂದಿಯ ಶೃಂಗ
ಕಲ್ಯಾಣ ಊರ ತುಂಬ ಲಿಂಗಾನೇ ಲಿಂಗ ||3||

ಕಲ್ಯಾಣಂಬುದು ಅದ ಕೈಲಾಸ
ಕಲ್ಯಾಣಂಬುದು ಅದ ಕೈಲಾಸ
ಅಲ್ಲಿ ಶರಣರು ಮಾಡ್ಯಾರ ವಾಸ ||ಪ||
ಎಲ್ಲಿ ನೋಡಿದಲ್ಲಿ ದೇವರ ಘೋಷ
ಗಲ್ಲಿಗಲ್ಲಿಗಿ ಮಲ್ಲಿಗಿ ವಾಸ ||1||
ಬಂದು ಕಲ್ಯಾಣಕ ಶ್ರೀ ಬಸವೇಶ
ಜಗ ಉದ್ಧಾರ ಮಾಡ್ಯಾನ ಜಗದೀಶ ||2||
ಕಂಡು ಆಯಿತು ನಮಗ ಉಲ್ಲಾಸ
ಕುಡದ್ಹಾಂಗಾಯಿತು ಪಂಚಾಮೃತ ರಸ ||3||
ಚೆನ್ನ ಕೊಳ್ಳೂರ ಚೆನ್ನಮಲ್ಲೇಶ
ನಿನ್ನ ಚಿನ್ಹ ನೋಡಿದರ ಪಾಪ ನಾಶ ||4||

ಕುಲೋತ್ತಮ ಕುಲದೀಪ ಕಿರಣ
ಕುಲೋತ್ತಮ ಕುಲದೀಪ ಕಿರಣ
ಶರಣ ತೋರೊ ನಿನ್ನ ಚರಣ ||ಪ||
ಹಾರಕೂಡ ಸ್ಥಾನದಲ್ಲಿ ಪೂರ್ಣ
ಚೆನ್ನಬಸವ ನಿಮ್ಮ ಕಿರಣ ||1||
ಮಾಯಾ ರಹಿತನಾದವನ
ಪರುಷದ ಖಣಿ ದಯಾಘನ ||2||
ಹಳ್ಳದ ರಾಚಣ್ಣ ಪ್ರೇಮಿಕನ
ಅನುಭವ ಮಂಟಪ ಕಟ್ಟಿಸಿದವನ ||3||
ಉದ್ಧರಿಸಿ ಮಾಳ್ಪರು ಹಸನ
ಬೇಡಿಕೊಳ್ಳುತ್ತಾನ ಕೊಳ್ಳೂರ ಹುಸನ ||4||

ಗಾಂಜಿ ಸೇದಾ ಯೋಗಿ ನಿರಂಜನವಾಗಿ
ಗಾಂಜಿ ಸೇದಾ ಯೋಗಿ ನಿರಂಜನವಾಗಿ
ಅಂಜನ ಹಚ್ಚಿ ಕಂಜವದನ ಕೃಷ್ಣನೇ ಆಗಿ ||ಪ||
ಹಸನ ಮಾಡೊ ಹಸರ ತಂಬಾಕ
ತುಸು ಏನೂ ಇಡಬ್ಯಾಡ ಫರಾಕ
ಕಸ ತಗಿ ಕಡಿಯಾಕ
ವಿಷ ಹೋಗತಾದ ವಿಷಕಂಠಕ ||1||
ಹದ ಮಾಡೋ ಯುಕ್ತಿಯಲಿಂದ
ಸದಾಚಾರ ಸದ್ಭಕ್ತಿಯಲಿಂದ
ಮದ ಕ್ರೋಧದ ಫಂದ
ನ್ಯಾಯ ಪಿಡಿ ಒಂದಕೊಂದ ||2||
ಚಿಲಮಿ ತುಂಬಬೇಕೊ
ಕಿಲಮನರಿಯಬೇಕೊ
ಹೊಲಮದ ಹೋಗಿ ಬರುವುದು ಮುಂದಕೊ
ಪಲ್ಮ ತಿಳಿದು ಅರವಿಯ ಸುತ್ತಕೊ ||3||
ಬೆಂಕಿ ಹೇರಬೇಕೊ
ಬಿಂಕದ ನುಡಿ ಬಿಡಬೇಕೊ
ಶಂಕರನಾಗಬೇಕೊ
ಕಿಂಕರ ನೀ ಅನಕೊ ||4||
ಗಾಂಜ್ಯಾನಂದರ ಗಾಂಜಿಯನಲ್ಲ
ಗಜಬಿಜಿದೊಳು ತಿಳಿಯನಿಲ್ಲ
ತಜಬಿಜಿ ಮಾಡಿಕೊಂಡವನೇ ಬಲ್ಲ
ತಾಜಾಕಲ್ಮ ಗುರುವಿನ ಚೇಲಾ ||5||
ಕೊಳೂರ ಸ್ಥಾನ ಜಿಂದಾವಲಿ ಸ್ಥಾಪನ
ಹುಸನನ ಬಲ್ಲಿ ಹೋದರೆ ಹಸನ
ಹಸನಾದರ ಹೋಗತಾದ ವ್ಯಸನ ||6||

ಗುರು ಬೇಕಾದರ ತನುಮನಧನ
ಗುರು ಬೇಕಾದರ ತನುಮನಧನ
ಈ ಮೂರು ಗುರುವಿನ ಕೊಟಕೊ
ಸಿಗತದ ಅಮೃತ ಗುಟಕೊ ||ಪ||
ಸೇವಾ ಮಾಡಿದರ ಮೇವಾ ಸಿಗತದ
ಸದ್ಯ ಮಧ್ಯಾಹ್ನ ಊಟಕೊ
ಅಷ್ಟಾವರಣ ಇಷ್ಟಾರ್ಥ ತೀರಲಾಕ
ಜ್ಞಾನದ ಶೆಲ್ಲ್ಯಾ ಸುತಕೊ ||1||
ಓಂ ಶಿವಾಯ ಶೀಘ್ರದಿ ಜಾಗ್ರದಿ
ಮಂತ್ರ ನುಡಿ ಪಟಪಟಕೊ
ಭವದಾಟಲಾಕ ಭಾವಶುದ್ಧ ಬೇಕು
ಭಕ್ತಿ ಸಂಗಡ ಕಟಕೊ ||2||
ಸ್ಥೂಲ ಸೂಕ್ಷ್ಮ ಕಾರಣ ಇವು ಮೂರು
ಹ್ಯಾಂಗ ತಿಳಿಬೇಕು ನೆನಪಿಟಕೊ
ತಿಳಿದು ಅಳಿದ ಮ್ಯಾಲ ಅಳಿದು ಉಳಿದ ಮ್ಯಾಲ
ಒಪ್ಪುತಿ ಗುರುವಿನ ಮಠಕೊ ||3||
ಗುರುಮನಿ ದಾರಿ ಗುಪ್ತದಾಗ
ತಿಳಿ ಅಂದಿ ತಟತಟಕೊ
ಹುಸಿಯಲ್ಲ ಕೊಳ್ಳೂರ ಹುಸನಾ ಹೇಳ್ಯಾನ
ಹಸನಾಗಿ ನೀ ಕುದಿ ಬಿಟಕೊ ||4||

ಗುರುವಿನ ಮನೆಯಲಿ ಅರಮನೆ ಇರುವುದು
ಗುರುವಿನ ಮನೆಯಲಿ ಅರಮನೆ ಇರುವುದು
ಅರುವಿಲಿ ಸೇರು ಒಳಗ ||ಪ||
ಹತ್ತಿರ ಹೋಗಿ ಜ್ಯೋತಿ ನೋಡಿಕೋ ಹಳುಗ
ಮರುವಿನೊಳು ಬಾಯಿ ಮಾಡಬ್ಯಾಡ ಬೆಳ್ಳಗ |ಅ.ಪ.|
ಸುಷುಮ್ನ ದಾರಿ ಬಿಟ್ಟು ಸೀಮಿಸುತ್ತ ತಿರುಗ್ಯಾಡಬೇಡ
ಸಿಕ್ಕಿ ಕೆಂಚಗ್ಯಾನ ಪೆಳ್ಳ್ಯಾಗ
ಕಟ್ಟನಾದ ತಟ್ಟಿ ನೀ ಕಾಡ ಮುಳ್ಳಾಗ
ಲಾಗ ಆಗತಾದ ಗುರುವಿನ ಕಳ್ಳಗ ||1||
ಜ್ವಾಕಿಲಿಂದೆ ನೋಡಿದರ ಏಕರೂಪ ತೋರತದ
ಮೂಕನಾಗಿ ಸೇರು ಒಳಗ
ಧಾಕ ಬಿಟ್ಟು ತೂಕ ತಿಳಿ ಮನದೊಳಗ
ಲೋಕದಾಟ ಸಾಕು ಸುಡು ಕಾರಕುಳ್ಳಾಗ ||2||
ಜ್ಯೋತಿ ನೋಡಿಕೊಂಡು ತಮ್ಮ ಜಾತನಾಗಿ ಜಾಗರಿರು
ತಿರುಗಿ ತಿರುಗಿ ಹೊರಳಿ ನೋಡಾಗ
ಹಾರಿ ಹೋಗಿ ಜಾರಿ ಬಿದ್ದಿ ಕಾರಿ ಮುಳ್ಳಾಗ
ಉಳಿದುಕೊ ಕೊಳ್ಳೂರ ಈಶನ ನೆರಳಾಗ ||3||

ತಿಳಕೊ ತಿಳಕೊ ನಿನ್ನೊಳು
ತಿಳಕೊ ತಿಳಕೊ
ನಿನ್ನೊಳು ನೀ ವಿಚಾರ ಮಾಡಿ ತಿಳಕೊ ||ಪ||
ಒಂದ ಮನಸ್ಸು ಮಾಡಿ ಒಬ್ಬವನೇ ತಿಳಕೊ
ಎರಡಕ್ಷರ ಶಿವನಾಮ ತಿಳಕೊ
ಮೂರಕ್ಷರ ಬಸವ ನಾಮವ ತಿಳಕೊ
ನಾಲ್ಕಕ್ಷರ ಪಾದೋದಕ ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||1||
ಐದಕ್ಷರ ಪಂಚಾಕ್ಷರ ತಿಳಕೊ
ಪಂಚಭೂತದ ಹಂಚಿಕಿ ತಿಳಕೊ
ಪಂಚಸ್ಥಲದ ಪೀಠವ ತಿಳಕೊ
ಪಂಚ ಸಿಂಹಾಸನ ಎಲ್ಲ್ಯಾವ ತಿಳಕೊ
ತಿಳಕೊ ನಿನ್ನೊಳು ನೀ ತಿಳಕೊ ||2||
ಆರಕ್ಷರ ಷಡಕ್ಷರ ತಿಳಕೊ
ಆರು ಮುದ್ರೆ ಸುದ್ರಾಸಿ ತಿಳಕೊ
ಆರು ಗುಣದ ಅರ್ಥವ ತಿಳಕೊ
ಆರು ಸ್ಥಲದ ಪೀಠವು ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||3||
ಏಳು ಪರಧಿಯೊಳಗ ಏನಾದ ತಿಳಕೊ
ಏಳು ವ್ಯಸನದ ಹಂಬಲ ತಿಳಕೊ
ಏಳು ರಾಗದ ಸ್ವರವನು ತಿಳಕೊ
ಏಳು ನದಿಯಲಿ ಈಸಾಡಿ ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||4||
ಎಂಟು ಪರಧಿಯೊಳಗ ಏನಾದ ತಿಳಕೊ
ಎಂಟು ಅಷ್ಟಾವರಣಗಳ ತಿಳಕೊ
ಎಂಟು ಮಂಟಪ ಎಲ್ಲ್ಯಾವ ತಿಳಕೊ
ಎಂಟಕ್ಕ ಬಿಟ್ಟು ಒಂಟಾಗವದು ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||5||
ಒಂಬತ್ತು ಗ್ರಹದ ಗ್ರಹಣ ತಿಳಕೊ
ಒಂಬತ್ತು ದ್ವಾರದ ಸ್ವಾಸವ ತಿಳಕೊ
ಒಂಬತ್ತು ಲಿಂಗದ ಪೂಜೆಯ ತಿಳಕೊ
ಪಾನವಟ ಝಲ್ಲಾರಿ ಎಲ್ಲ್ಯಾವ ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||6||
ದಶಾವತಾರಿಕ ಯಾರ್ಹಾರ ತಿಳಕೊ
ದಶ ಇಂದ್ರಿಯ ಏನು ಮಾಡತಾವ ತಿಳಕೊ
ದಶನಾದವ ವಾದ್ಯವು ತಿಳಕೊ
ದಶನಾದ ಅವು ಬ್ಯಾರೆ ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||7||
ಹನ್ನೊಂದು ಅವತಾರ ಪೂರಾ ತಿಳಕೊ
ಹನ್ನೊಂದು ರುದ್ರನ ಅಭಿಷೇಕ ತಿಳಕೊ
ಹನ್ನೊಂದರ ಮೇಲೆ ಇನ್ನೊಂದು ಲಿಂಗ
ಕೊಳ್ಳೂರ ಈಶನ ಬಲ್ಲಿ ಹೋಗಿ ತಿಳಕೊ
ತಿಳಕೊ ತಿಳಕೊ ನಿನ್ನೊಳು ನೀ ತಿಳಕೊ ||7||

ತಿಳಿ ನೀರಿಗಿಂತ ತಿಳಿ ಹಾರಕೂಡ
ತಿಳಿ ನೀರಿಗಿಂತ ತಿಳಿ ಹಾರಕೂಡ ಮುತ್ಯಾವ ತಿಳಿದಾವ
ಓಂ ಸೋಂ ಸೂತ್ರ ಭಾವ ಬಲಿಸಿ ಮೇತ್ರಿ ಆದಾವ ||ಪ||
ಪೀರನ ಪಂಜಿ ಪವಿತ್ರವೆಂದು ತ್ರಿಶೂಲ ಹಿಡಿದಾವ
ನವದ್ವಾರ ಮುಂದ ನವಲಿನ ಪಂಖ ನೃತ್ಯ ನಡೆಸಾವ
ಕಾಮ ಕ್ರೋಧ ಮದ ಊದ ಸುಡಲಾಕ ಉದಾನಿ ಇಟ್ಟಾವ
ಓಂ ಸೋಂ ಸೂತ್ರ ಭಾವ ಬಲಿಸಿ ಮೇತ್ರಿ ಆದಾವ ||1||
ಕಿರೀಟ ಕುಂಡಲ ತ್ರಿಪುಂಡ್ರಧಾರಿ ವಿಭೂತಿ ಧರಿಸಾವ
ಹಾಲ ಗಡಗಿಟ್ಟು ಹಾಲ ಕುಡಿದು ಮೂಲಮಂತ್ರ ಸ್ಮರಿಸಾವ
ಹಾಳ ಬಿದ್ದ ಹಾರಕೂಡ ಗ್ರಾಮದಲ್ಲಿ ತುಂಬಿಸಿದ್ದ ಜೀವ
ಓಂ ಸೋಂ ಸೂತ್ರ ಭಾವ ಬಲಿಸಿ ಮೇತ್ರಿ ಆದಾವ ||2||
ದಶನಾದ ಪೈಕಿ ಒಂಬತ್ತನೆ ನಾದ ನಗಾರಿ ನುಡಿಸಾವ
ಬಾರಾಬಂದಿ ಬಾರಾ ಜ್ಯೋತಿರ್ಲಿಂಗದ ಕಸಿ ಕಟ್ಟಿದಾವ
ಉಫ್‍ಂತ್ ಊದಿ ಸುಟ್ಟಿದ ಬೀಡಿ ಕಿಸ್ಯಾದಾಗ ಇಡಾವ
ಓಂ ಸೋಂ ಸೂತ್ರ ಭಾವ ಬಲಿಸಿ ಮೇತ್ರಿ ಆದಾವ ||3||
ತಪ್ಪದೆ ಇಪ್ಪತ್ತೊಂದು ಸಾವಿರದ ಆರನೂರು ಜಪಾ ನುಡಿಸಾವ
ಆನಂದ ಅನುಭವ ಮಂಟಪ ಗೋಪುರದೊಳಗ ಉನ್ಮನಿ ಸೇರಿದಾವ
ಕೊಳ್ಳೂರ ಹುಸನಾ ಕೃಪಾ ಪಡೆದು ಹೀಂಗ ಹಾಡಿದಾನು ಭಾವ
ಓಂ ಸೋಂ ಸೂತ್ರ ಭಾವ ಬಲಿಸಿ ಮೇತ್ರಿ ಆದಾವ ||4||

ದಯಾಳುವಂತ ದಾಮೋಜಿ ಪಂತ
ದಯಾಳುವಂತ ದಾಮೋಜಿ ಪಂತ ಭಕ್ತಿಲಿ ನಡೆದವನು
ಯುಕ್ತಿಲಿ ಮುಕ್ತಿಯ ಪಡೆದವನು ಪಂಢರಿ ನಾಮ ನುಡಿದವನು ||ಪ||
ಬರ ಬಂದು ಬಡವರ ಹಗರಾಣಿ
ಸರಕಾರ ತುಂಬಿದ್ದು ಕೊಡಲಿಲ್ಲ ದಾಣಿ
ದಾಮೋಜಿ ಪಂತದ್ದು ಕೇಳಿ ವಾಣಿ
ತುಂಬಿ ಒಯ್ದಾರೊ ಗೋಣಿ ಗೋಣಿ ||1||
ಬೀದರ ಭಾಷಾ ಕೇಳಿ ಹುಕುಂ ಕೊಟ್ಟಾನೊ
ಹಿಡಿ ತರ್ರೆಂದು ಪೋಲಿಸ ಬಿಟ್ಟಾನೊ
ಶಿಕ್ಷಾ ಆಗತದೆಂದು ಪೋಲಿಸ ಲಕ್ಷಣೊ
ಪಂಢರಿನಾಥಗ ಬಂದಿತೊ ಕರುಣೊ ||2||
ವಿಠೋಬಾನೋ ಸ್ವಂತ ಶೂದ್ರನಾಗಿ
ಹುಕುಂ ತೊಗೊಂಡು ಬಂದ ಕಛೇರಿಗಿ
ಸಣ್ಣ ಹಮ್ಮಿಣಿ ಬಿಟ್ಟಿದ ಎದುರಿಗಿ
ಬರಕಿದ ಕೂಡಲೆ ಬಿದ್ದಿತೊ ಡಿಗ್ಗಿ ||3||
ರಸೀದಿ ತೊಗೊಂಡು ದೇವ ಗುಪ್ತನಾದನೊ
ದಾಮೋಜಿಪಂತ ಹಿಂದಿಂದು ಬಂದಾನೊ
ರಸೀದ ನೋಡಿ ದೇವ ದುಃಖ ಮಾಡಿದಾನೊ
ಬಿದರ ಭಾಷಾ ನೋಡಿ ಹುಚ್ಚನಾದನೊ ||4||
ವಿಠೋಬಾಗ ತೋರಿಸು ನಡಿಯಂದ
ಸ್ವಂತ ಭಾಷಾ ಪಂಡರಿಗಿ ಬಂದ
ದಾಮೋಜಿ ಪಂತನ ಭಕ್ತಿಯಲಿಂದ
ಪ್ರತ್ಯಕ್ಷ ವಿಠೋಬಾ ಎದುರಿಗ ಬಂದ ||5||
ಪರೋಪಕಾರ ಮಾಡಿದ್ದು ಸುಖವಾಯ್ತೊ
ಧರ್ಮ ಅನುಸಾರ ಕರ್ಮ ಹೋಯ್ತೊ
ಮರ್ಮ ತಿಳಿದರೆ ಆಗ್ತದ ಮುತ್ತೊ
ಕೊಳ್ಳೂರ ಹುಸನಾ ಹೇಳಿದ ಮಾತೊ ||6||

ದೋಷ ರಹಿತಗ ಆಶಾ ಇದ್ದಿದ್ದಿಲ್ಲ
ದೋಷ ರಹಿತಗ ಆಶಾ ಇದ್ದಿದ್ದಿಲ್ಲ
ದೇಶಕ ಬೆಳೆದಿದ ಕೀರ್ತಿ
ಪಡಿವಡಿ ಸೂತ್ರದಿ ಪಡೆದು ಬಂದಿದ
ಪಡದಪ್ಪ ಗುರುಮೂರ್ತಿ ||ಪ||
ಚೆನ್ನಬಸವ ಮಹಾರಾಜರ ಚಿನ್ಹ
ಚಂದ್ರಮನ ಆಕೃತಿ
ಬಾಳುಳ್ಳವರಿಗಿ ಭಾಗ್ಯಶಾಲಿ
ಬಾಲಹಳ್ಳಿ ಸಿಂಹಾಸನ ಶಾಂತಿ
ಒಂದೇ ಮಂತ್ರ ಒಂದೇ ತಂತ್ರ
ಒಂದೇ ಸ್ತೋತ್ರ ಸದ್ಗತಿ ||1||
ಕ್ವಾರಮೀಸಿ ಮ್ಯಾಲ ಕೈಯ ತಿರುವಿದರ
ಕರ್ಮ ಲಯ ಆಗೈತಿ
ಬಿಳಿ ಗಡ್ಡದ ಖಳಿ ನೋಡಿದರ
ಹಳಿದೆವ್ವ ಓಡಿ ಹೋಗೈತಿ
ಮ್ಯಾಣಾದಾಗ ಗೋಣು ತಿರುವಿದರ
ಗೇಣಂತರಲೇ ನಡದೈತಿ ||2||
ಖೇಚರಿ ಭೂಚರಿ ಸಾಚರಿ ಸೋಸಿಕಿ
ಅಗೋಚರಿ ಮ್ಯಾಲ ಬಹಳ ಪ್ರೀತಿ
ಮುದ್ರಾ ಹಿಡಿಬೇಕಾದರ ನಿದ್ರಿಯದೊಳಗ
ಸದಾ ಅವರ ಜಾಗೃತಿ
ಭಕ್ತಿ ಜನರಲ್ಲಿ ಭಕ್ತಿಯ ಬೆಳೆದು
ಬಿನ್ನದ ಮ್ಯಾಲ ಬಿನ್ನಾ ಜಾಸ್ತಿ ||3||
ಹತ್ತು ಬೆರಳು ತುಂಬ ಹತ್ತು ಅವತಾರದ
ಉಂಗುರ ಇಟ್ಟಾರೊ ಭರ್ತಿ
ಮಂಡಲದೊಳಗ ತ್ರಿಪುಂಡ್ರಧಾರಿ
ಮಾರ್ತಾಂಡನಂತೆ ಹೊಳಪೈತಿ
ಸುಷುಮ್ನದಲ್ಲಿ ಸಾಧನ ಸಿದ್ಧಿ
ಅಪೋಕ್ಷದ ಮಾಹಿತಿ ||4||
ಅಕ್ಷಸರಸ್ರ ರುದ್ರಾಕ್ಷಿ ಲೇಪ
ಭಿಕ್ಷೆ ಬೇಡುವುದು ರೀತಿ
ದೀಕ್ಷೆವಂತರು ಅದೀಕ್ಷೆ ಎನಿಸಿ
ಮೋಕ್ಷ ಪಡೆದರೊ ಮುಕ್ತಿ
ಪಡೆದಪ್ಪನ ಬಲ್ಲಿ ಹಡೆದಪ್ಪಗಳು
ಉಂಡು ಆಗ್ಯಾರ ತೃಪ್ತಿ ||5||
ಹಾರಕೂಡ ಸ್ಥಳದಲ್ಲಿ ಹಾಡಿ ಹರಿಸಿದಾರೊ
ನಾಡಿಗೆ ನಾಡೆಲ್ಲ ಪ್ರೀತಿ
ರೂಢಿ ಶರಣರೆಲ್ಲ ಓಡಿ ಬಂದು
ಮಾಡ್ಯಾರ ಮಂಗಳಾರುತಿ
ಕೂಡಿದ್ದೆ ಕೂಡಲ ಸಂಗಮ ನಮ್ಮ
ಕೊಳ್ಳೂರ ಹುಸನಾನ ಸ್ತುತಿ ||6||

ನಾಯಿ ಬಾಲ ತಂದು ನಳಿಗ್ಯಾಗ
ನಾಯಿ ಬಾಲ ತಂದು ನಳಿಗ್ಯಾಗ ಹಾಕಿದರೇನೊ ||ಪ||
ನಾಯಿ ತನ್ನ ಬಾಲಕ್ಕೆ ನಾರಾಯಣ ಅಂದಿದರೇನೊ
ಡೊಂಕನಾಗಬಲ್ಲುದಲ್ಲದೆ ನೆಟ್ಟಗಾಗಬಲ್ಲುದೇನೊ ||1||
ಕಾಗಿ ತನ್ನ ಮಗನಿಗೆ ಕೋಗಿಲಂದಿದರೇನೊ
ಕೋಗಿಲ ಸರಿ ಸ್ವರ ಬರಹುವುದೇನೊ ||2||
ಬೆಳ್ಳಕ್ಕಿ ಅಷ್ಟು ಬೆಳಗಿದ್ದರೇನೊ
ಬೆಳದಿಂಗಳ ಸರಿ ಬರಹುವುದೇನೊ ||3||
ಹುಡುಕೊ ಹುಡುಕೊ ಬೀಳಲ್ದಾಂಗ ತೊಡಕೊ
ಕೊಳ್ಳೂರ ಹುಸನಾನ ಕವಿತಾ ಮುರಿತಾವ ಹೆಡಕೊ ||4||

ನೀ ಲಗು ಏಳು ಭಜನೆಯ ಮಾಡಲು ಏಳು
ನೀ ಲಗು ಏಳು ಭಜನೆಯ ಮಾಡಲು ಏಳು ||ಪ||
ದಿನಮಾನ ಎಣಿಸಿದರ ಲೆಕ್ಕಿಗೆ ಅವ ಏಳು
ರಾಗ ಮಾಡುವ ಬನ್ನಿ ಸ್ವರಗಳು ಅವ ಏಳು
ಸಾರಿಗಮ ಪದನಿ ಎಂಬೊ ರಾಗದ ಅಕ್ಷರ ಏಳು ||1||
ಸೂರ್ಯನ ಕುದುರೆಗೆ ಮುಖಗಳು ಅವ ಏಳು
ಅಗ್ನಿ ನಾರಾಯಣಗ ನಾಲಗಿ ಅವ ಏಳು
ಧುರ್ಪಿಸಿ ನೋಡಿದರ ಸರ್ಪಿನ ಹೆಡಿ ಏಳು ||2||
ಭೂಲೋಕ ಮೇಲಣ ಸ್ವರ್ಗಗಳು ಅವ ಏಳು
ಭೂಲೋಕ ಕೆಳಗಣ ಪಾತಾಳ ಅವ ಏಳು
ಸಪ್ತ ವ್ಯಸನಗಳು ಅವ ನೋಡು ಏಳು ||3||
ಬಾರಿಸಿ ನೋಡುವ ವೀಣೆಯ ತಂತಿಗಳು ಏಳು
ಕಾಮನಬಿಲ್ಲಿನ ವರ್ಣಗಳು ಅವ ಏಳು
ಬೆಳ್ಳಿ ಬಂಗಾರ ಧಾತುಗಳು ಅವ ಏಳು ||4||
ಸೃಷ್ಟಿಯಲಿ ಶ್ರೇಷ್ಠವಾದ ಸಪ್ತಮುನಿಗಳು ಏಳು
ಕೊಳ್ಳೂರ ಜಿಂದಾನ ಕೆಳಗ ಗಿರಿಗಳು ಅವ ಏಳು
ಹುಸನಾ ಸಾಹೇಬ ಇಂಥವು ಎಣಿಸ್ಯಾನ ಏಳು ||5||

ಪರುಷದ ಖಣಿಯ ದರುಶನ ಮಾಡುವುದಕ
ಪರುಷದ ಖಣಿಯ ದರುಶನ ಮಾಡುವುದಕ
ಕೊಳ್ಳೂರಕ ಹೋಗಾನು ಬಾ
ಚೆನ್ನವೀರಗ ನೋಡಾನು ಬಾ
ಚಿನ್ಮಯ ರೂಪವ ಕಾಣಾನು ಬಾ ||ಪ||
ಆನಂದ ಅನುಭಾವ ಮಂಟಪ
ಶಾಂತ ವೃತ್ತಿ ಮಹಾಸಾಧುರ ಗುಂಪ
ಒಂಬತ್ತು ದ್ವಾರಕ ಹಚ್ಯಾರ ತಲ್ಪ
ಮಿಂಚ ಹೊಳೆಯತಾವ ಬ್ಯಾಟರಿಗುಲ್ಪ ||1||
ಪಂಚತತ್ವದ ಪಂಚವಿಸ ಕಂಬ
ನಾಲ್ಕು ಕಮ್ಮ ನೂರು ಅಂಗುಲ ಗುಂಪ
ಸದ್ಗುರುನಾಥ ಒಳಗ ಹಾನ ಮುಂಬ
ಸೇವೆ ಮಾಡತಾಳ ಸಾಕ್ಷಾತ ಅಂಬಾ ||2||
ಸೀಗಿ ಹುಣ್ಣಿವಿ ದಿನ ಆಗತದ ಖಾಂಡ
ಶರಣರು ನೆರಿತಾರ ಜುಂಡಿಗಿ ಜುಂಡ
ಕ್ಷೇತ್ರದೊಳಗ ಯಾತ್ರಾ ಪ್ರಚಂಡ
ಹುಸನಾ ಸಾಹೇಬ ಅಲ್ಲಿ ಮೆರಿಸ್ಯಾನ ಝೆಂಡ ||3||

ಬಡತಾನದಾಗ ಬಡಿವ್ಯಾರ
ಬಡತಾನದಾಗ ಬಡಿವ್ಯಾರ| ನಮ್ಮೂರ
ಈ ಊರ ಹೆಸರ ಕಾಯಾಪೂರ
ಒಳಗ ಹಾರ ಐದು ಮಂದಿ ಗೌಡರ
ಪರಬ್ರಹ್ಮವಸ್ತು ಒಬ್ಬನೇ ಸರಕಾರ
ಬಡತಾನದಾಗ ಬಡಿವ್ಯಾರ| ನಮ್ಮೂರ ||ಪ||
ಈ ಊರ ಹೆಸರ ಕಾಯಾಪೂರ
ಹತ್ತು ಮಂದಿ ಸುತ್ತ ಸುಳಿವವರ
ಸಪ್ತ ವ್ಯಸನ ಜತ್ತಾಗಿ ಇರುವವರ
ಬಡತಾನದಾಗ ಬಡಿವ್ಯಾರ| ನಮ್ಮೂರ ||1||
ಈ ಊರ ಹೆಸರ ಕಾಯಾಪೂರ
ಊರ ಅವಾರ ಪೋಣೆಂದೋನವಾರ
ಒಂಬತ್ತು ಖಿಡಕಿಗಳು ಕಟ್ಟಿ ನವದ್ವಾರ
ಬಡತಾನದಾಗ ಬಡಿವ್ಯಾರ| ನಮ್ಮೂರ ||2||
ಈ ಊರ ಹೆಸರ ಕಾಯಾಪೂರ
ಎಕವೀಸ ಸ್ವರ್ಗ ಒಳಗ ಭರಪೂರ
ಎಂಟು ಮಂದಿ ಕಾವಲುದಾರ ಅದಾರ
ಬಡತಾನದಾಗ ಬಡಿವ್ಯಾರ| ನಮ್ಮೂರ ||3||
ಈ ಊರ ಹೆಸರ ಕಾಯಾಪೂರ
ಪಾಡ ಕೊಳ್ಳೂರ ಪಶ್ಚಿಮ ಜಿಂದಾಮದಾರ
ಕೂಡಲೂರ ಸೀಮಿ ಧಾಟಿ ನಡೀರಿ ಭರಾದರ
ಬಡತಾನದಾಗ ಬಡಿವ್ಯಾರ| ನಮ್ಮೂರ ||4||

ಭಕ್ತಿಯ ಬೆಳೆಸಿ ಹಿಂದಿನ ಹಿರಿಯರು
ಭಕ್ತಿಯ ಬೆಳೆಸಿ ಹಿಂದಿನ ಹಿರಿಯರು ಆಗ್ಯಾರ ಮೆಂಬರ
ಪಂಢರಿನಾಥಾಗ ಒಲಸಿಕೊಂಡಿಹನು ರಾಕಾ ಕುಂಭಾರ ||ಪ||
ಮಣ್ಣಿನ ಮಡಕಿ ಮಾಡಿ ಇಟ್ಟಿದನು ಮನಿಯ ತುಂಬಾ ಪೂರಾ
ಸದಾ ವಿಠ್ಠಲನ ಧ್ಯಾನದೊಳಗ ಇರುತಿದ್ದನು ನಿರಹಂಕಾರಾ
ಸತಿಪತಿ ಪ್ರೀತಿಲಿ ಭಕ್ತಿ ಮಾಡತಿದ್ದರು ಜೋಡಿ ಇಬ್ಬರಾ ||1||
ದೊಡ್ಡ ಹರವಿಯೊಳಗೆ ಬೆಕ್ಕ ಈದೀದು ನೆನಪವಿದ್ದಿಲ್ಲರಿ ಜರಾ
ಆವಗ್ಯಾಗ ಹಾಕಿ ಬೆಂಕಿ ಹಚ್ಚಿದನು ಹೊಗೆಯು ಎದ್ದಿತು ಜೋರಾ
ಬೆಕ್ಕ ಬಂದು ಧಡಪಡಿಸಿ ಒಳ್ಳತಿತ್ತು ಸುತ್ತು ಹಾಕಿ ಘೇರಾ ||2||
ಬೆಕ್ಕಿಗಿ ನೋಡಿ ರಾಕಾ ಕುಂಬಾರಗ ಆಯಿತು ಎಚ್ಚರಾ
ಮರಿಯ ಸಾವುತಾವ ಬಿರಿಯ ಬಂತು ಇದಕೇನು ವಿಚಾರಾ
ಪಂಢರಿನಾಥನ ಧ್ಯಾನ ಮಾಡತಾನ ಕುಡು ಅಂತ ವರಾ ||3||
ಪ್ರಾಣ ಹತ್ಯಾ ಮಹಾಪಾತಕದೊಳಗಿಂದು ಉಳಿಸೋ ದೇವರಾ
ಪ್ರಪಂಚ ನಾವು ತ್ಯಾಗ ಮಾಡತೇವು ಮರಿಗಳು ಉಳಿದಿದರಾ
ಮೂರಾನ ಮೂರು ದಿನ ಆವಗಿ ಬಲ್ಲೆ ಉಪವಾಸ ಕೂತಿದರಾ ||4||
ಆವಗಿ ಆರಿದ ಮ್ಯಾಲ ಮಣ್ಣಿನ ಮಡಕಿ ಕಡ್ಯಾಕ ತಗದಿದರಾ
ಬೆಕ್ಕಿನ ಮರಿಗಳು ಜೀವದಲ್ಲಿದ್ದುದು ಕಣ್ಣಿಲಿ ನೋಡಿದರಾ
ಬೆಕ್ಕ ಬಂದು ಮರಿಗ ಹಾಲು ಕುಡಿಸುತ್ತಿತ್ತು ದೇವ ತಂತಾರಾ ||5||
ಹರಕಿ ಮಾಡಿಧಾಂಗ ತರಕಿಲಿ ಪ್ರಪಂಚ ತ್ಯಾಗ ಮಾಡಿದರಾ
ನಿಷ್ಕಾಮ ಭಕ್ತಿ ಪೂರ್ಣ ಇಟ್ಟು ಮಿಕ್ತಿಯ ಪಡದಿದರಾ
ಪಂಢರಿನಾಥನ ನಾಮಸ್ಮರಣಿಯನು ಭಕ್ತಿಲಿ ನುಡಿದಿದರಾ ||6||
ನಿಷ್ಠಾವಂತರು ಶ್ರೇಷ್ಠ ಇದ್ದರೊ ಹಿಂದಿನ ಸಂತರ
ಅಂದಿನ ಶರಣರು ಇಂದಿಗಾದರ ವಿರಳಹರಾ ಒಬ್ಬರ
ಇಲ್ಲ ಅಂತು ಅನಬಾರದು ಹೇಳ್ಯಾರ ಕೊಳ್ಳೂರ ಪಹಾಡದವರ ||7||

ಭಜನಾ ಮಾಡಾನು ಸನಿ ಬಾ
ಭಜನಾ ಮಾಡಾನು ಸನಿ ಬಾ
ಶ್ರೀಗುರುವಿನ ನಾಮ ನೆನಿ ಬಾ ||ಪ||
ಪಂಚಾಕ್ಷರಿ ಮಂತ್ರ ನುಡಿ ಬಾ
ಷಡಕ್ಷರಿ ಸೂತ್ರ ಹಿಡಿ ಬಾ
ನಿನ್ನ ನಾಲಗಿ ನುಡಿದಂಗ ನುಡಿ ಬಾ
ಭಜನಾ ಮಾಡಾನು ಸನಿ ಬಾ ||1||
ಸಪ್ತ ವ್ಯಸನ ಹೊಳಿದಾಗ ತೊಳಿ ಬಾ
ಗುಪ್ತದಾಗ ವಿಚಾರ ತಿಳಿ ಬಾ
ಉಮಾವರ ಪತಿಯಲಿಂದ ಉಳಿ ಬಾ
ಭಜನಾ ಮಾಡಾನು ಸನಿ ಬಾ ||2||
ದಶ ಇಂದ್ರಿಯಗಳಿಗೆ ಹೊಂದಿಸಿ ಬಾ
ದಶನಾದವನ್ನು ಗರ್ಜಿಸಿ ಬಾ
ಒಂಬತ್ತು ಲಿಂಗ ಪೂಜಿಸಿ ಬಾ
ಭಜನಾ ಮಾಡಾನು ಸನಿ ಬಾ ||3||
ಆರು ಗುಣಗಳಿಗೆ ಬಂಧಿಸಿ ಬಾ
ಅಷ್ಟಮದವನು ತ್ಯಜಿಸಿ ಬಾ
ಕೊಳ್ಳೂರ ಚೆನ್ನನ ವಂದಿಸಿ ಬಾ
ಭಜನಾ ಮಾಡಾನು ಸನಿ ಬಾ ||4||

ಮನ ಸಾಕ್ಷಿ ಮನ ಸಾಕ್ಷಿ
ಮನ ಸಾಕ್ಷಿ ಮನ ಸಾಕ್ಷಿ
ಮೈ ಮ್ಯಾಲ ಇರಲಿ ರುದ್ರಾಕ್ಷಿ ||ಪ||
ಕಂಠಸ್ಥಾನದಲ್ಲಿ ಮೂವತ್ತೆರಡು
ಹದಿನೈದು ಹದಿನೈದು ರೊಟ್ಟಿಗೆ ನೋಡು
ಶಿಖರಕ್ಕ ಮುಖ ಒಂದೇ ಬೇಕೊ
ಸಿಕ್ಕಾ ವೀರಶೈವರದಿರಬೇಕೊ ||1||
ನೆಲಿ ತಿಳಿದು ತೆಲಿಗ ಸುತ್ತಬೇಕೊ
ಇಪ್ಪತ್ತರ ಮ್ಯಾಲ ನಾಲ್ಕಿರಬೇಕೊ
ಆರಾರು ಎರಡೆರಡು ಕಿವಿಯಲ್ಲಿರಬೇಕೊ
ಜಪಮಣಿ ಸರ ನೂರೆಂಟು ಎಣಿಸಬೇಕೊ ||2||
ಸಾವಿರಕ್ಕೊಬ್ಬ ಸತ್ಯಶರಣ
ಸ್ಫೂರ್ತಿ ಸಾರುತಾನ ಶಿವ ಕರುಣ
ಶರಣಾದವರಿಗಿ ಇರುದಿಲ್ಲ ಮರಣ
ಕೊಳ್ಳೂರ ಹುಸನಾ ಹಿಡಿದಾನ ಚರಣ ||3||

ಮರವಿನ ಮನೆಯೊಳಗೆ ಅರವಿನದು ಇರಲಿ
ಮರವಿನ ಮನೆಯೊಳಗೆ
ಅರವಿನದು ಇರಲಿ ದೀವಿಗೆ ||ಪ||
ಅಜ್ಞಾನವೆಂಬೋ ಕತ್ತಲೆ
ಜ್ಞಾನಕ್ಕೆ ಅಂಜಿ ಓಡುತ್ತಲೆ ||1||
ಪರುಷ ಮುಟ್ಟಿ ಕಬ್ಬಿಣ
ಲೋಹವಾಗಬಲ್ಲುದೇನ ||2||
ದರ್ಶದಿಂದ ದರಿದ್ರ ನಾಸ್ತಿಯಂತೆ
ನಡಿ ಒಡೆಯರು ಹೇಳಿದಂತೆ ||3||
ಶಿವಶರಣರು ಅನಿಸಿದ ಬಳಿಕ
ನರರಾಗಬಲ್ಲರೇನು ಮೂರ್ಖ ||4||
ನುಡಿದಂತೆ ನಡೆದರೆ ಹಸನ
ಹೀಂಗ ಹೇಳಿದ ಕೊಳ್ಳೂರ ಹುಸನ ||5||

ಮಹಾತ್ಮನಂದು ಪರಾತ್ಮಕ ಧ್ಯಾನಿಸಿದವನೆ
ಮಹಾತ್ಮನಂದು ಪರಾತ್ಮಕ ಧ್ಯಾನಿಸಿದವನೆ ಪರಮಾತ್ಮ
ಅವನಿಗೆ ಅನಬೇಕೊ ಉತ್ತಮ ||ಪ||
ಕ್ಷಮೆ ದಮೆಯಲ್ಲಿ ಇರಬೇಕೊ ಶಾಂತಿ
ಮಹಾತ್ಮ ಅಂದಿದನೋ ಶಾಂತಿ ಶಾಂತಿ
ಶಾಂತಿಯಲಿಂದೆ ಮಾಡಿ ವಿನಂತಿ
ಬ್ರಹ್ಮಾಂಡ ತುಂಬಾ ಬೆಳಸಿದ ಕೀರ್ತಿ ||1||
ವೇದ ಓದಿ ಅವ ಅನಿಸಿದ ವಾದಿ
ಶ್ರದ್ಧಾದಿಂದ ಶಾಸ್ತ್ರ ತರ್ಕದ ಹಾದಿ
ಬೀಜಕ್ಷರದಿಂದ ಮಾಡಿದ ಬೋಧಿ
ಆವಾಗ ಸಿಕ್ಕಿತು ಕೈಲಾಸದ ಹಾದಿ ||2||
ಪ್ಯಾರಿಸದಲ್ಲಿ ಪರಿಯತ್ನ ಮಾಡಿದ
ಆತ್ಮಿಕದಲ್ಲಿ ಅಪರಂಪಾರ ದುಡಿದ
ಮುಂಬಯಿ ದೆಹಲಿಯಲ್ಲಿ ಮುಂಬಾ ನೆನಸಿದ
ಜಂಬುದ್ವೀಪದಲ್ಲಿ ಖಂಬಾ ನಡಸಿದ ||3||
ಪರ ಉಪಕಾರದಂತಹ ಪುಣ್ಯ ಯಾವುದಿಲ್ಲ
ಪರಪೀಡಕ ಬರಗೂಡೋದಿಲ್ಲ
ಕೊಳ್ಳೂರ ಪಹಾಡದಾಗ ಕವಿತಾ ಎಲ್ಲ
ಹುಸನ ಹೇಳಿ ಹಸನ ಆಗ್ಯಾನಲ್ಲ ||4||

ವಿಠ್ಠಲನೆಂದರೆ ಬಟ್ಟಲ ಅಮೃತ
ವಿಠ್ಠಲನೆಂದರೆ ಬಟ್ಟಲ ಅಮೃತ
ವಿಠ್ಠಲನೆಂದರೆ ಬಟ್ಟಲ ಅಮೃತ ಸಿಗತದ ಪವಿತ್ರ
ನಿತ್ಯ ನಾಮ ನುಡಿಯಬೇಕು ಸ್ತೋತ್ರ ಉದ್ಧಾರಾಗ್ಯಾಳೊ ಕಾನುಪಾತ್ರ ||ಪ||
ಬೀದರ ಭಾಷಾ ನೆದರ ಇಟ್ಟಿದ ಪೂರ್ಣ
ಎದರಾಕಿಗಿ ಹಿಡತರ್ರಿ ಅಂತಾನ
ಹೆದರಿ ಓಡಿಹೋಗಿ ಬಿದ್ದಾಳೊ ಬೆನ್ನ
ಹಿಡಿದಳೊ ಪಂಡರಿನಾಥನ ಚರಣ ||1||
ಇವೊತ್ತಿಗೆ ಪಂಢರಿಪುರ ಸ್ಥಾನ
ಕಾನು ಪಾತ್ರವೆಂಬ ಗಿಡದ ಖೂನ
ಭಕ್ತಿಮಾರ್ಗ ಒಳಗಿದ್ದರ ಪೂರ್ಣ
ಆಗತಾದ ಬಸವನ ಕಲ್ಯಾಣ ||2||
ಕಾನು ಪಾತ್ರನ್ಹಂಗ ಭಕ್ತಿ ಬಲ್ತರ
ಹೆಣ್ಣಮಕ್ಕಳು ಆಗ್ತಾರ ಉದ್ಧಾರ
ಸತಿಗೆ ಪತಿನೇ ಹಾನ ದೇವರ
ಹುಸನಾ ಸಾಹೇಬ ಹೇಳ್ಯಾನ ವಿಚಾರ ||3||

ಶಂಭೋ ಶಂಕರ ಶಿವನೇ
ಶಂಭೋ ಶಂಕರ ಶಿವನೇ
ಅಂಬಾಪತಿ ನೀನೇ ||ಪ||
ತ್ರಿಜಗ ಉದ್ಧಾರಕ ತ್ರಿನೇತ್ರನೇ
ತ್ರಿಶೂಲಧಾರಿ ನೀಲಕಂಠನೇ
ಗಜವದನ ಹಿತಪಿತನೇ
ಅಂಬಾಪತಿ ನೀನೇ ||1||
ಬ್ರಹ್ಮಾಂಡ ನಾಯಕ ಭವ ಭೂಪನೇ
ತ್ರಿಯಂಬಕ ದಾತ ತ್ರಿಶೂಲಧರನೇ
ಗಂಗಾವಲ್ಲಭ ಶಿವಲಿಂಗ ಮಹಾಲಿಂಗ
ಅಂಬಾಪತಿ ನೀನೇ ||2||
ಕೊರಳಲ್ಲಿ ರುಂಡಮಾಲಾ ಶಂಕರ ಭೋಲಾ
ಗಜ ಚರ್ಮಾಂಬರ ಗೌರೀಶನೇ
ಅಕ್ಕಮಹಾದೇವಿ ಐಕ್ಯಸ್ಥಲ ಶ್ರೀಶೈಲ
ಅಂಬಾಪತಿ ನೀನೇ ||3||
ಶೂನ್ಯ ಮಹಾಶೂನ್ಯ ನೆಲೆ ಇಲ್ಲದವನೇ
ಅನಂತ ನಾಮವುಳ್ಳ ಶಾಂತೇಶನೇ
ಹಸನಾದ ಹುಸನಾದ ಕವಿತಾ ಅಮೃತಾ
ಅಂಬಾಪತಿ ನೀನೇ ||4||

ಶೆಕೆ 1791ಕ ವದ್ಯೆ ಭಾದ್ರಪದದಾಗ
ಶೆಕೆ 1791ಕ ವದ್ಯೆ ಭಾದ್ರಪದದಾಗ
ಗಾಂಧಿ ಜನ್ಮ ದ್ವಾದಸಿಗ ||ಪ||
ಮುತ್ಯಾನ ಹೆಸರು ಉತ್ತಮಚಂದ
ತಂದೆಯ ಹೆಸರು ಕರಮಚಂದ
ತಾಯಿ ಪುತಳಾಬಾಯಿ ಬಲು ಚಂದ
ಸರ್ವರಿಗೆ ಆಯಿತೊ ಆನಂದ ||1||
ರಾಜಕೋಟಿಯಲ್ಲಿ ಆಯಿತೊ ಅಭ್ಯಾಸ
ಅಂಗ್ರೇಜಿ ಮೆಟ್ರಿಕ್ ಸಿಕ್ಕಿತೋ ಪಾಸ
ದೇಶ ಸುಧಾರಣಕ್ಕಾಗಿ ಮಾಡಿದ ಸೊಗಸ
ಸ್ವರಾಜ್ಯ ತೊಗೊಂಡು ಆಗ್ಯಾನ ದಾಸ |2||
ಸತ್ಯ ವಚನಕೆ ರಾಮನೇ ಹಾನ
ಕರ್ಮಯೋಗದಲಿ ಅನಿಸಿದ ಕೃಷ್ಣ
ವಾಯುಸವಾಯಿಹೀ ಭಗವಾನ
ಸದೋದಿತ ಮಾಡರಿ ವಂದನ ||3||
ಪ್ರಜಾಸತ್ಯ ರಾಜಕೀಯ ನಡದೀತೊ
ಪರುಷದ ಖಣಿ ದರುಶನ ತೋರೀತೊ
ಸ್ಮರಣ ಸಂಭಾಷಣ ಮುಗಿದೀತೊ
ಕೊಳ್ಳೂರ ಈಶನ ದಯವಾಯಿತೊ ||4||

ಸತ್ಯ ಸತ್ಯ ಶಿವಲಿಂಗದ ಪೂಜೆ
ಸತ್ಯ ಸತ್ಯ ಶಿವಲಿಂಗದ ಪೂಜೆ
ನಿತ್ಯ ಸ್ವರ್ಗದಾಗ
ಶಿವನ ಲಿಂಗವೇ ಕಳದ್ಯೋಯಿತು
ಖಬರಿಲ್ಲ ಒಬ್ಬರಿಗ ||ಪ||
ಸುರರು ಎಲ್ಲರೂ ಗಾಬರಿಗೊಂಡಾರ
ಮಾಡಾರಿ ಇನ್ಹ್ಯಾಂಗ
ತಪಶ್ಚರ್ಯ ಮಾಡಿ ರಾವಳ ಒಯ್ಧಾಂಗ
ಆಯ್ತು ಆತ್ಮಲಿಂಗ
ಮಹಾದೇವಗರೆ ಕುದಿನೇ ಇಲ್ಲ
ಕುಂತಾನ ಜಪದಾಗ ||1||
ಪಾರಬತಿ ಅಂತಾಳ ಪೂಜಾ ಮಾಡಾದು
ಬಂದಾಯಿತೊ ಈಗ
ಉಪವಾಸ ವನವಾಸ ತಪಾಸ ಮಾಡೂತ
ಹೊಂಟಾಳೊ ಅಡಿವ್ಯಾಗ
ಹುಡುಕುತ ಮಿಡುಕುತ ತಿರುಗ್ಯಾಡತಾಳ
ತಿಳಿವಲ್ಲದು ಯೋಗ ||2||
ಹಿಮಾಲಯ ಭಾದ್ರಿಕೆ ಸೇತು ಬಂಧು
ಕಾಶಿ ಉಜ್ಜೈನಿ ಭಾಗ
ಹೈರಾಣಾಗಿ ಹುಡುಕ್ಯಾಳ
ಹನ್ನೆರಡು ಜಾಗ
ಕೈಯ ಹಚ್ಚಿ ಹಿಡಿಲಾಕ ಹೋದರ
ಹೋಯ್ತೊ ಪಾತಾಳದಾಗ ||3||
ಸೌರಾಷ್ಟ್ರದಲ್ಲಿ ಹೋಗಿ ಸೋಮಲಿಂಗ
ಬಾ ಅಂತಾಳೊ ಮನದಾಗ
ಶಕ್ತಿ ಭಕ್ತಿಗಾಗಿ ಶಿವನ ಲಿಂಗ
ಅಲ್ಲಿ ತೇಲಿತೊ ನೀರಾಗ
ಕೈಯ ಹಚ್ಚಿ ಹಿಡಿಲಾಕ ಹೋದರ
ಮುಳುಗಿತೊ ನೀರಾಗ ||4||
ಧ್ಯಾನ ಮಾಡದರೊಳು ಖೂನಕ ಬಂದಿತೊ
ಸ್ತ್ರೀ ಪಾರ್ವತಿಗ
ಲಿಂಗ ಕೂಡಲಿಕ ಪಾನವಟ ಇದ್ದಿದ್ದಿಲ್ಲ
ಯೋಗ ಮಹಾಯೋಗ
ಪಾರ್ವತಿ ಪಾನವಟ ಮಾಡ್ಯಾಳಾವಾಗ
ಲಿಂಗ ಬಂದಿತೊ ಮ್ಯಾಗ ||5||
ಪಾರ್ವತಿ ಪಾನವಟ ಯಾತರದು ಮಾಡ್ಯಾಳ
ತಿಳಿವಲ್ಲದು ನಮಗ
ಗುರುತ ಇದ್ದರ ಇದ್ದಿರಬಹುದು
ಗುರುಪುತ್ರ ಆದವರಿಗ
ಭದ್ರಪ್ಪನ ಶಿಷ್ಯ ಕೊಳ್ಳೂರ ಹುಸನಾ
ಹಾಡ್ಯಾನ ಸಭಾದಾಗ ||6||

ಸುಖ ದುಃಖ ಸಂಭ್ರಮಕ ಈ ಶರೀರಕ
ಸುಖ ದುಃಖ ಸಂಭ್ರಮಕ
ಈ ಶರೀರಕ ಬ್ರಹ್ಮ ಬರೆದಿದ ಲೇಖ ||ಪ||
ಸ್ವಾರ್ಥ ನಿಸ್ವಾರ್ಥ ಹಿಡಿ ಅರ್ಥ ಗುರ್ತ
ಬ್ರಹ್ಮೀಯ ಭ್ರಾಂತೆ ಕನಸಿನ ಪರಿಯಂತೆ
ಸದಾ ಬೇಕು ಶಾಂತೆ ಲೀನ ತಾವಿನಂತೆ ಉದ್ಧಾರಕ ||1||
ಅವಿಚಾರ ಪರದಿ ಎಂದ ನೀ ಹರದಿ
ಒಡಲೊಳು ಉಕ್ಕಿ ಕಡಲಕೆ ಕೊಡು ನೀ ಧಕ್ಕಿ
ಸರ್ವಕ ತೇಜ ಆನಂದ ಬೀಜ ಜನ್ಮಕ ||2||
ತತ್ವದ ಮಸಿಯು ಅಲ್ಲ ಹುಡಿಯು
ಶಿವನಾಮ ಸ್ಮರಣ ಶಾಶ್ವತ ಪೂರ್ಣ
ಆಗಿ ತ್ಯಾಗಿ ಅನಿಸೋ ಯೋಗಿ ಧಾರ್ಮಿಕ ||3||
ಗುರು ಚರಿತ್ರ ಪರಮ ಪವಿತ್ರ
ಓದಿದವ ಪುತ್ರ ಸಂಚಿತ ಸೂತ್ರ
ಆಗತಾದ ಹಸನ ಹೇಳ್ಯಾನ ಹುಸನ ಆತ್ಮಕ ||4||

ಸೊಟ್ಟ ಇಲಿಚಾಬತ್ತ ಎಲ್ಲಿಂದಲ್ಲೆ
ಸೊಟ್ಟ ಇಲಿಚಾಬತ್ತ
ಎಲ್ಲಿಂದಲ್ಲೆ ಹಾಕಿಟ್ಟದ ತೂತ ||ಪ||
ತಲ ಬಾಗಿಲದ ತಟ್ಟಿಗೆ ತೂತ
ನೀರಿನ ಟಾಕಿಗೆ ಸಣ್ಣನ ತೂತ
ಘಗ್ಗರಗಟ್ಟಿಗೆ ಘಾಯನ ತೂತ
ಪಡಸಾಲಿಗೆ ಒಂದು ಪೈಸಾನ ತೂತ ||1||
ಅಡಗಿ ಮನ್ಯಾಗಿನ ಗಡಿಗಿಗೆಲ್ಲಾ ತೂತ
ಅಡಕಿಲ ಸಂದ್ಯಾಗ ಅಡ್ಡನ ತೂತ
ಜಾಜಲ ಕೆಳಗೆರಡು ಜೋಡು ತೂತ
ಜಾಜಲನೊಳಗೊಂದು ಜಾರುವ ತೂತ ||2||
ಆರು ಮೂರು ಮಂದಿ ಆಗ್ಯಾರ ಜತ್ತ
ಇಲಿಗ ನೋಡಬೇಕಂತ ಮಾಡ್ಯಾರ ಬೇತ
ಗುದ್ದಾ ಹೊಡೆದು ಇಲಿ ಹಾರಿ ಹೋಯಿತ
ಹುಸನಾ ಸಾಹೇಬ ಹೀಂಗ ಹೇಳಿದ ನಗುತ |3||

ಹಕ್ಕಿ ಹೊಡೆಯೊ ತೆಕ್ಕಿ ಸೋಮಣ್ಣ
ಹಕ್ಕಿ ಹೊಡೆಯೊ ತೆಕ್ಕಿ ಸೋಮಣ್ಣ
ಸಿಗತಾನ ಮುಕ್ಕಣ್ಣ ||ಪ||
ಅವಗುಣವೆಂಬೋ ಹಕ್ಕಿ
ಧಂಟಿಗ ಬಂದು ಹೊಡಿತದ ಧಕ್ಕಿ
ಫರಾಳಕ್ಕೆ ಇಡಲಿಲ್ಲ ಫಕ್ಕಿ
ನೀನಾದರೂ ಹ್ಯಾಂಗ ಬದುಕಿ
ಕರ್ಮವೆಂಬೋ ಕರ್ರನ ಕಾಗಿ
ಕದ್ದು ತಿಂದು ಒಳ್ಳತಾದೊ ಗೂಗಿ
ಹಲ್ಯಾ ಅವ ನೋಡೊ ಹದಿನೆಂಟೀ ನೀಚ
ಹಾಕತಾವ ನೋಡೋ ಪೇಚ ||1||
ಚಂಚಲವೆಂಬ ಚಿಟ್ಟಗುಬ್ಬಿ
ನಟ್ಟನಡು ಇರತಾದೊ ಹುಬ್ಬಿ
ಹೊಡೆದಾರೇನೊ ಹೋಗಲ್ಲ ಗುಬ್ಬಿ
ಭಾರಿಸಬೇಕಾಗತದ ಡೆಬ್ಬಿ
ಮಾಡಿದ ಒಂದೇ ಹೊಲ
ಆಳಿದ ಒಂದೇ ಅಬಲ
ಜ್ಞಾನ ಬರಲ್ದೆ ಖೂನಾ ಆಗೋದಿಲ್ಲ
ಕೊಳ್ಳೂರ ಹುಸನಾ ಹೇಳಿದನಲ್ಲ ||2||

ಹದವಾಗಿ ಹದಿಮೂರು ತೂತಿಂದು
ಹದವಾಗಿ ಹದಿಮೂರು ತೂತಿಂದು ಹುಟ್ಟಿ ಬಂದದೊ ಗಡಗಿ
ಮಾಡಲಾಕ ಕಲ್ತರ ನೀಡಲಾಕ ಬರ್ತದ ಅನುಭಾವದ ಅಡಗಿ ||ಪ||
ಮಾಡಿ ಮಾಡಲಧಾಂಗ ನೀಡಿ ನೀಡಲಧಾಂಗ ಆಗಿರಿ ಕಡಿಗಿ
ಬೇಡಿ ಬೇಡಲಧಾಂಗ ನೋಡಿ ನೋಡಲಧಾಂಗ ಹತ್ತರಿ ಥಡಿಗಿ| ||1||
ಎಣಿಸಿ ನೋಡಿದರ ಎಣಕಿಗಿ ಅವ ಒಂಭತ್ತು ನಡುವಿಗಿ
ದಿಟ್ಟಿಸಿ ನೋಡಿದರ ಪುಟ್ಟಸಿ ತೇಲ್ಯಾವ ಹಿನಾ ಎರಡು ಎದುರಿಗಿ| ||2||
ಎಲ್ಲ ಕಲ್ತು ಹನ್ನೊಂದು ಆದುವು ಹಿನಾ ಎರಡು ಉಳದಾವ ಸಿಲಕಿಗಿ
ಅವರೆಡು ತೂತಾ ಗುರುತ ಅವ ಗುರುಪುತ್ರ ಆದವ ನೀಗಿ| ||3||
ಹದವಾಗಿ ಹದಿಮೂರು ತೂತಿಂದು ಹುಟ್ಟಿ ಬಂದದೊ ಗಡಗಿ
ಹದಿಮೂರು ತೂತಾ ಹುಡುಕಲಾಕ ಹೋಗಬೇಕೊ ಗುರುವಿನ ಬದಿಗಿ| ||4||
ಜ್ಞಾನ ಬರಲ್ದೆ ಖೂನ ಆಗುವುದಿಲ್ಲ ಮಾನವ ಜಲ್ಮಿಗಿ
ಪಹಾಡ ಕೊಳ್ಳೂರ ಹುಸನಾನ ಕವಿಗಳು ಪ್ರಸಿದ್ಧ ನಾಡಿಗಿ| ||5||

ಹಾಯ್ದು ನೋಡು ಹೈದ್ರಾಬಾದಿ ಅಂಗಡಿ
ಹಾಯ್ದು ನೋಡು ಹೈದ್ರಾಬಾದಿ ಅಂಗಡಿ
ಕಳಕೋಬ್ಯಾಡ ನಿನ್ನ ಘೋಂಗಡಿ ||ಪ||
ಮೂಸಾನದಿ ಆದ ನಡುವೀಗಿ
ದಾಟಿ ಹ್ಯಾಂಗ ಹೋಗೂತಿ ಕಡಿಗಿ
ಜತನ ಮಾಡಿಕೊ ಚೀಲಾ ಚುಂಗಡಿ
ಕಳಕೋಬ್ಯಾಡ ನಿನ್ನ ಘೊಂಗಡಿ ||1||
ಮೂಲ್ಯಾಗ ಕುಂತಾಳ ಮುಕಡಿ
ವಂಕ ಹಿಡಿದು ತೂಗತಾಳ ತಕಡಿ
ಜತನ ಮಾಡಿಕೊ ಸೇಂಗಾದ ಚುಂಗಡಿ
ಕಳಕೋಬ್ಯಾಡ ನಿನ್ನ ಘೊಂಗಡಿ ||2||
ಮಾಯಾದ ಮುಂಬಯಿ ಬಾಜಾರ
ಒಂದಿನ ಮಾಡತಾದ ಬೇಜಾರ
ಹುಸನಾ ಹೇಳ್ಯಾನ ಮುರಿಯೊಟಂಗಡಿ
ಕಳಕೋಬ್ಯಾಡ ನಿನ್ನ ಘೊಂಗಡಿ ||3||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಲೇಂಗಟಿ ಕರಿಬಸವೇಶ್ವರರ ತತ್ವಪದಗಳು

ಆತ್ಮನ ಕಾಣದ ಮನುಜ ನೀನು
ಆತ್ಮನ ಕಾಣದ ಮನುಜ ನೀನು
ನಿನ್ನೊಳು ಶಿವಹಾನ ತಿಳಿ ತಿಳಿ ||ಪ||
ಭ್ರಾಂತಿ ಬುದ್ಧಿ ನೀ ಅಳಿ ಅಳಿ
ಶಾಂತರೋಳು ಸದಾ ಉಳಿ ಉಳಿ ||ಅ.ಪ.||
ಬಾಲ ಪ್ರಾಯ ಮುಪ್ಪಾಗುವ ದೇಹದ
ಮೂಲ ತತ್ವ ನೀ ತಿಳಿ ತಿಳಿ
ಕಾಲನ ಕೈಯಲ್ಲಿ ಸಿಲುಕಿ ನೀನು
ಗೋಲ ತಿರಗುವದು ಹಳಿ ಹಳಿ ||1||
ಶ್ರೋತ್ರ ತ್ವಕ್ಕು ನೇತ್ರ ರಸನಿ
ನಾಶಿಕಾ ದೈಂದ್ರಿಗಳು
ಶಬ್ದ ಸ್ಪರ್ಶ ರೂಪ ರಸ ಗಂಧ
ವಿಷಯಕ್ಕೆ ಸಾಕ್ಷಿ ನೀನೆ ತಿಳಿ ||2||
ಮಾಯಾ ಮೋಹದ ಅಯವು ತಿಳಿದು
ಸಾಯಾಸದೊಳಗಿಂದ ಉಳಿ ಉಳಿ
ಕಾಯರಹಿತ ನಮ್ಮ ಗುರುಲಿಂಗ ಜಂಗಮ
ಅವರಲ್ಲಿ ಪರಶಿವ ಖಳಿ ಖಳಿ ||3||

ಆರು ತನಗೇನಂದರೇನೋ ಆಗೊ ಸಮಾಧಾನ
ಆರು ತನಗೇನಂದರೇನೋ ಆಗೊ ಸಮಾಧಾನ ||ಪ||
ಚೋರತನದಿ ಮಾರಹರನ ಸಾರ ತಾನು ತಿಳದಿದಮ್ಯಾಲೆ ||ಅ.ಪ||
ದೀನನಾದ ಪುರುಷನಿಗೆ| ಮಾನದಭಿಮಾನೇನೋ
ಶ್ವಾನ ಶಬ್ದವು ಪಾನಗೈಯದ ಆನೆಯಂತೆ ತಾನು ||1||
ಹಾಲಿನೋಳು ತುಪ್ಪದಂತೆ| ಗಪ್ಪನಾಗೊ ನೀನು
ಮತ್ತೆ ತುಪ್ಪ ಹಾಲೊಳಗೆರೆದರೆ ಅಪ್ಪದಂತೆ ತಾನು ||2||
ಸಿಂಪಿಯೋಳು ಮುತ್ತು ಪುಟ್ಟಿದಂತೆ| ಗಟ್ಟಿಯಾಗೊ ನೀನು
ಮತ್ತೆ ಮುತ್ತು ಸಿಂಪಿಯೋಳಿಟ್ಟರೆ ಅಪ್ಪದಂತೆ ತಾನು ||3||
ದೇಶದೋಳು ವಾಸವಾದ| ಅಲ್ದಿ ಈಶನನ್ನು
ಧ್ಯಾಸವಿಟ್ಟು ವಿಷಯವ ಸುಟ್ಟು ಪಾದ ತಾನು ಮುಟ್ಟಿದ ಮ್ಯಾಲೆ ||4||

ಆತ್ಮಸಾಕ್ಷಿ ಆದವರಿಗೆ ಮತ್ತೆ ಭವ ಬಾಧೆಯಂಟೆ?
ಆತ್ಮಸಾಕ್ಷಿ ಆದವರಿಗೆ ಮತ್ತೆ ಭವ ಬಾಧೆಯಂಟೆ
ಮಿಥ್ಯವು ಅಳಿದವರಿಗೆ ಸತ್ಯದ ಅಭಾವವುಂಟೆ ||ಪ||
ಕತ್ತಲೆ ಬೆಳಕಿನಿಂದ| ಮತ್ತೆ ಆಕಾಶ ಅಳಕುವದೇನೋ
ತತ್ವಸಾಕ್ಷಿ ಆಗಿದ ಯೋಗಿ
ಕುಂತಿದರೇನು ನಿಂತಿದರೇನು ||1||
ನೀರಿನೊಳಗೆ ನೊರೆತೆರೆ ತೋರಿ ಅಡಗಿದಂತೆ
ಗುರುಲಿಂಗ ಸ್ವಾಮಿ ಶಿಷ್ಯರಿಗೆ
ಯೋಗಿ ಯಂದರೇನು? ಭೋಗಿಯಂದರೇನು? ||2||

ಆದಿ ಅನಾದಿ ಜಗಭರಿತ
ಆದಿ ಅನಾದಿ ಜಗಭರಿತ
ಮಹಾದೇವ ಮಾಹೇಶ್ವರ ದಾತ ||ಪ||
ಮೊದಲಿಗೆ ಶೂನ್ಯದೋಳು ಇದ್ದಿ
ಮಧ್ಯದಿ ನೀರೊಳು ಬಂದಿ
ಸದ್ಯ ಓಂಕಾರದೋಳು ಬೆರೆದಿ
ಮಹಾದೇವ ಮಾಹೇಶ್ವರ ದಾತ ||1||
ಆಸ್ತಿ ಭಾತಿ ಪ್ರಿಯ ನಾಮ ರೂಪ
ಜಾಸ್ತಿ ಕಡಿಮೆ ಇಲ್ಲ ನಿನ್ನ ಮಾಪ
ಸ್ತುತಿ ಇಲ್ಲ ದೇವ ತಿಳಿದವಗಪ್ಪ
ಮಹಾದೇವ ಮಾಹೇಶ್ವರ ದಾತ ||2||
ದೇಶ ಕಧಿಕ ಗುರುಲಿಂಗ ಜಂಗಮ
ನಿರ್ಗುಣ ನಿರ್ವಿಕಾರ ಬ್ರಹ್ಮ
ನಿಮ್ಮ ಶರಣರಿಗಿ ನಾಮದ ಪ್ರೇಮ
ಮಹಾದೇವ ಮಾಹೇಶ್ವರ ದಾತ ||3||

ಆಸೆ ಎಂಬ ಬೀಸುವ ಕಲ್ಲಿಗೇ ಸುದಿನ
ಆಸೆ ಎಂಬ ಬೀಸುವ ಕಲ್ಲಿಗೇಸು ದಿನ ಬೀಸಲೆಮ್ಮ ||ಪ||
ಹೇಸಿತ್ತು ಎನ್ನ ಮನವು ಈಶನ ಧ್ಯಾಸಲಿಂದೆ ||ಅ.ಪ||
ಅರುವನೆಂಬ ಮೊರವ ಹಿಡಿದು
ಗರುವನೆಂಬ ಒರಳ ಒನಿದು
ಕ್ರೋಧಾದಿ ಧ್ಯಾನದ ಬೀಸಿ
ಗುರವೀನ ನೆನದೇ ನಮ್ಮ
ಬುದ್ಧಿ ವಂತಿ ಯಾದ ಮ್ಯಾಲ
ಬುಧವಾರ ಬೀಸಿ ತೆಗೆದೆ
ಮಧುರ ಅಮೃತ ಮಾಡಿ
ಮದನಳಿದೆಗೆಳದೆಮ್ಮ ||1||
ಮಾನ ಹೀನ ಜನರಿಗೆ ಅಂಜಿ
ಮೌನದಿಂದೆ ಬೀಸಲು ಕುಂತೆ
ಶ್ವಾನ ಸೂಕರಾದಿ ಜನ್ಮ
ನನಗಿಲ್ಲೇ ಗೆಳದೆಮ್ಮ ||2||
ತುತ್ತು ಮಾಡಿ ಉಣಿಸೇನೆಂದು
ಮತ್ತೆ ಅಲ್ದಿ ಗ್ರಾಮಕೆ ಹೋದೆ
ಹತ್ಯನಗಲಿ ಗುರು ಎನಗೆ
ಎತ್ತಿ ಮುದ್ದಾಡಿದರಮ್ಮ ||3||

ಆತ್ಮದ ಅನುಭವ ತಿಳಿ ಮಾತೆ ಗುಣವಂತೆ
ಆತ್ಮದ ಅನುಭವ ತಿಳಿ ಮಾತೆ ಗುಣವಂತೆ
ಮೋಹಕ್ಕೆ ಮನ ಸೋತೆ ||ಪ||
ಪಂಚತತ್ವ ಎಂಬುವ ದೇಹ ಮಾಡಿಟ್ಟ ಮಹಾರಾಯ
ನಿಜವಿಲ್ಲ ಅಸ್ಥಿರ ದೇಹ ಕಣ್ಣ ಮುಂದೆ ಕಾಣ್ವದು ಛಾಯಾ ||1||
ಪ್ರಾಯಂಬೊ ಮೋಹದ ಮಾಯಾ ಮಾಡಬ್ಯಾಡ ಅನ್ಯಾಯ
ಕನ್ನಡಿಯೊಳಗಿನ ದ್ರವ್ಯಾ ಕಂಡು ನೀ ತೆರಿಬ್ಯಾಡ ಬಾಯಾ
ಮನಸಿಗಿ ಸೋತಿ ಮರುಳಾಗಿ ಕುಂತಿ ||2||
ಮಲ ಮಾತ್ರ ಮಾಯದ ಹೊಲಸ ಅಲ್ಲಿದ್ದಿ ಏಸು ದಿವಸ
ಇದ್ದಿದಿಲ್ಲ ಇತ್ತಿನ ಧ್ಯಾಸ ಬಂದಿಖ್ಯಾನಗ ಆ ಕೂಸ ||3||
ಮಾಡುತ್ತಿತ್ತು ಈಶನ ಧ್ಯಾಸ ಹೇಳಲಾರೆ ವನವಾಸ
ತುಂಬಿತ್ತು ನವಮಾಸ ಪಂಚತತ್ವ ದೇಹವು ಸೋಸ
ಅಲ್ಲಿ ಕಾಂತಿ ಗೊತ್ತಿಲೆ ಕುಂತಿ ||4||

ಆತ್ಮ ರೂಪನಿಗೆ ಅಖಂಡ ವ್ಯಾಪಕಾದವಗೆ
ಆತ್ಮ ರೂಪನಿಗೆ ಅಖಂಡ ವ್ಯಾಪಕಾದವಗೆ
ನಿತ್ಯದಿ ಆರತಿ ಎತ್ತಿ ಬೆಳಗಿರಿ ಮುಕ್ತಿದಾಯಕಗೆ ||ಪ||
ಅಂಗಜ ಭಂಗನಿಗೆ ಮಾಯಾ ಸಂಗರಹಿತನಿಗೆ
ಭೃಂಗ ಭಾವವುಳ್ಳ ಸುಜನರ ಅಂಗ
ಸಂಗದಿ ಮೆರೆಯುವಗೆ ||1||
ತೀತಾ ವಸ್ತುವಿಗೆ ತ್ರಿಮಲ ರಹಿತನಾದವಗೆ
ಅಖಿಳ ತತ್ವಗಳ ನಿಖಿಳವು ತಿಳಿಸಿದ
ಅಕಲಂಕ ಬ್ರಹ್ಮನಿಗೆ ||2||
ಮುಮುಕ್ಷು ಜನಗಳಿಗೆ ಭವಗಳ ನಾಶ ಮಾಡುವಗೆ
ಬ್ಯಾಲಹಳ್ಳಿಯಲಿ ವಾಸ ಮಾಡಿದ
ಗುರುಲಿಂಗ ಸ್ವಾಮಿಗೆ ||3||

ಊರ ಬಿಡಬೇಕರೋ ತಮ್ಮದೇರೆ
ಊರ ಬಿಡಬೇಕರೋ ತಮ್ಮದೇರೆ
ಊರ ಬಿಡಬೇಕರೋ ||ಪ||
ಊರ ಬಿಡಬೇಕೊ ಬೀಮಾರಿಗಂಜಿ
ನಾರ ಇಲಿಗಳು ಜೋರಾಗಿ ಬಿದ್ದವ ||ಅ.ಪ||
ಎಂಟು ಹೆಗ್ಗಣ ಗಂಟು ಬಿದ್ದ
ಕೆದರುತಾವೋಮಣ್ಣ
ಥುಂಟತನಕ ಬಿದ್ದು ಗಂಟ ಕೆದರುತಾವ
ಭಂಟನಾಗಿ ತಾ ತಿರುಗಲಿ ಬ್ಯಾಡ ||1||
ಆರು ಇಲಿಗಳು ಅವು ತನ್ನ
ಇರುಬೇಕೊ ಆರಿನೊಳು
ಸಾರ ತಿಳಿದು ತಾ ಸಾಕಿರ ಬೇಕೊ
ಸರ್ವ ಸಾಕ್ಷಿತಾ ನಾಗಿರ ಬೇಕೊ ||2||
ಧರಿಯೊಳಗೆ ನಮ್ಮ ಅಲ್ದಿಯ
ಗುರುಲಿಂಗ ಜಂಗಮ ಧರಿಯೊಳಗೆ
ಪರಮ ಪಂಚಾಕ್ಷರಿ ಮಂತ್ರ ಪ್ರಣಮ
ಕರಬಸಪ್ಪಗೆ ಹೇಳ್ಯಾರೊ ತಮ್ಮ ||3||

ಎಲ್ಲಾರು ಮಾಡುವದು ಹೊಟ್ಟಿಗಾಗಿ
ಎಲ್ಲಾರು ಮಾಡುವದು ಹೊಟ್ಟಿಗಾಗಿ
ಹೊಟ್ಟಿಗಾಗಿ ಗೇಣ್ ಬಟ್ಟಿಗಾಗಿ ತುತ್ತು ರೊಟ್ಟಿಗಾಗಿ ||ಪ||
ವೇದ ಆಗಮ ಪುರಾಣ ಶಾಸ್ತ್ರ
ಓದ್ಯೋದಿ ಹೇಳುವದು ಹೊಟ್ಟಿಗಾಗಿ
ಹಾದಿ ಕಾಣದೆ ಇವರು ಗಾದಿ ಮಾತುಗಳಾಡಿ
ವಾದ ಹಾಕುವದು ಹೊಟ್ಟಿಗಾಗಿ ||1||
ತನ್ನ ತಾನರಿಯದೆ ಅನ್ಯರನು ನಿಂದಿಸಿ
ಮನ್ನಣೆ ಬೇಡುವದು ಹೊಟ್ಟಿಗಾಗಿ
ತನುವ ತಾನೆಂಬುವ ಹೀನತ್ವ ನೀಗದೆ
ಘನ ಮಹಾತ್ಮನಾಗುವದು ಹೊಟ್ಟಿಗಾಗಿ ||2||
ಹಳ್ಳದ ದಡೆಯಲ್ಲಿ ಕಲ್ಲದೋಣಿ ಹಿಡಕೊಂಡು
ಕಳ್ಳತನ ಮಾಡುವದು ಹೊಟ್ಟಿಗಾಗಿ
ಕಳ್ಳತನ ಗೆಳೆತನ ಸುಳ್ಳುಹಾದಿ ಹಿಡಿತಾನ
ಒಳ್ಳೆವನಿದ್ದೆ ಅಂತಾನ ಹೊಟ್ಟಿಗಾಗಿ ||3||
ಧರಿಯೋಳು ಅಲ್ದಿವಾಸ ಗುರುಲಿಂಗ ಸರ್ವೇಶ
ಅರಿಯದೆ ಮಾಡುವದು ಹೊಟ್ಟಿಗಾಗಿ
ಅರಿತಿದ್ದು ಮರೆತಿದ್ದು ಗುರು ಪಾದಕರ್ಪಿಸಿ
ಕರಿಬಸವ ತಿರುಗುವದು ಹೊಟ್ಟಿಗಾಗಿ ||4||

ಎಂಥ ಗುರುರಾಯ ಎನಗೆ ದೊರೆದ
ಎಂಥ ಗುರುರಾಯ ಎನಗೆ ದೊರೆದ ||ಪ||
ಪಂತಗಾರ ಇವನೆ ಕಂತುಹರ ಮಂತ್ರವನ್ನು
ಅಂತರಂಗದಿ ಪೇಳಿದಾನೇ ||ಅ.ಪ||
ಆರು ಗುಣ ಅಳಿಸಿದನೆ ಮೂರು ಗುಣ ತಿಳಿಸಿದನೆ
ಅಷ್ಟ ಮದಗಳನ್ನು ಸುಟ್ಟು ಅಂಗಕ್ಕೆ ತಾ ಧರಿಸಿದನೆ ||1||
ದಶ ಇಂದ್ರಿದೊಳು ಒಯ್ದು ಧರ್ಮಿಂದ್ರಿ ಪೇಳಿದನೆ
ಕಮೇಂದ್ರಿ ಕಡ್ಯಾಕ ನೂಕಿ ಕರ್ಮವನ್ನು ಕಳದಿದನೆ ||2||
ದೇಶದೋಳು ವಾಸವಾದ ಅಲ್ದಿಪುರ ಈಶನೆ
ಧ್ಯಾಸ ನಾನು ಮರಿಯಲಾರೆ ಮೂಲಮಂತ್ರ ಜಪಿಸಿದನೇ ||3||

ಓಂ ನಮಃ ಶಿವಾಯೆನು ಮನ
ಓಂ ನಮಃ ಶಿವಾಯೆನುಮನ
ಓಂ ನಮಃ ಶಿವಾಯೆನು ಮನ ||ಪ||
ಅಂಗಕ್ಕೆ ಲಿಂಗವ ಧರಿಸಿ ಮಂಗನಾಂಗ ಹೋಗಬ್ಯಾಡ
ಮಂಗ ಮನಸು ಗುಂಗಾಗುವದೊ
ಅಂಗಾವೇ ಲಿಂಗವೆಂದು-ಸಂಗಾ ನೀ ಮಾಡಮನ ||1||
ಕಂತುಹರನ ಧ್ಯಾನ ಸಂತೋಷದಿಂದೆ ನೆನಿ
ಚಿಂತಿ ಪರಿಹಾರಾಗುವದೊ
ಕುಂತರ ನಿಂತರ ಮಂತರ ನೆನಿಮನ ||2||
ಆಸೆಯು ಹೋಗದೆ ರೋಷವು ನೀಗದೆ
ಮೋಸದಿ ಮೋಹದೋಳಾಡುವದೊ
ಖಾಸ ಪಂಚಾಕ್ಷರಿ ಧ್ಯಾಸ ನೀ ಮಾಡ ಮನ ||3||
ಮರವೆಯ ಸಂಸಾರ ವಿಪರೀತವೆಂದು ತಿಳಿ
ಸಂಪತ್ ಷಡಾಕ್ಷರಿ ನೆನಿಕಂಡ್ಯಾ
ಸತ್ಯದ ಗುರುಮನಿ ವ್ಯರ್ಥದ ಜನ್ಮ ಮರಣ ||4||
ದೇಶದೊಳಗೆ ನಮ್ಮ ವಾಸುಳ್ಳಲ್ದಿಯ ಗ್ರಾಮ
ಈಶ ಗುರು ಲಿಂಗ ಜಂಗಮ
ಆತನ ದಾಸನಾಗಿ ಸೋಸಿ ನೀ ನೋಡಮನ ||5||

ಕುಲವಾವುದು ಹೇಳಲಿ ಅಣ್ಣಾ
ಕುಲವಾವುದು ಹೇಳಲಿ ಅಣ್ಣಾ
ಕುಲವಿಲ್ಲದವನೊಡಗೂಡಿ ಉಂಬುವೆನಣ್ಣಾ ||ಪ||
ಹಿಂದಿನ ಕರ್ಮದಿಂದೆ ಹೊಲೆಯೊಳು ಬಂದೆ
ಮರೆತು ಅನಂತ ಜನ್ಮ ತಿರುತಿರುಗಿ ನೊಂದೆ ||1||
ಆಸೆನಳಿದಲ್ಲದೆ ಅಲ್ದಿಗೆ ನಾ ಬಂದೆ
ಈಶ ಗುರುಲಿಂಗಯ್ಯ ಖಾಸ ಎನಗೆ ತಂದೆ ||2||

ಕರ್ಪೂರಾರತಿ ಬೆಳಗಿರೆ ಗುರುಲಿಂಗ ದೇವಸ್ವಾಮಿಗೆ
ಕರ್ಪೂರಾರತಿ ಬೆಳಗಿರೆ ಗುರುಲಿಂಗ ದೇವಸ್ವಾಮಿಗೆ ||ಪ||
ಕಾಯಪೂರ ಕಠಿಣವೆಂದು
ಕಡಿಯ ಧರಿಸಿದ ಯೋಗಿಗೆ
ಆರು ಹರಿಸಿದ ಐದು ಚರಿಸಿದ
ಮೂರು ಬೆರಸಿದ ದೇವಗೆ ||1||
ಆರು ಗುಣಗಳ ದೂರ ಮಾಡಿದ
ಮೀರಿದುನ್ಮನಿ ದಾರಿ ತೋರಿದ
ಅಷ್ಟ ಮದಗಳ ನಷ್ಟ ಮಾಡಿದ
ಹತ್ತು ಇಂದ್ರಿಯ ಗೊತ್ತಿಗ್ಹಚ್ಚಿದ ದೇವಗೆ ||2||
ಅಂಗ ಎಂಬ ಅಲ್ದಿ ಒಂದ
ಗುರುಲಿಂಗ ಎನಗೆ ದೊರೆದ
ಸರ್ವರೋಳು ತಾನೆ ಬೆರೆದ
ವಿಶ್ವ ಧರ್ಮದ ಬಿರುದ ತೋರಿದ ದೇವಗೆ ||3||

ಗುರುವಿನ ಮಹಿಮವು ಬ್ಯಾರಾ
ಗುರುವಿನ ಮಹಿಮವು ಬ್ಯಾರಾ
ಬೋಧಿಸಿ ಮಾಡಿದ ಉದ್ಧಾರಾ ||ಪ||
ನಾ ದೇಹ ಎಂಬುದು ಮೊದಲಿತ್ತು ಮರವು
ನೀನೇ ಬ್ರಹ್ಮೆಂದು ತೋರಿದಿ ಅರವು
ಬ್ರಹ್ಮಾಸ್ಮೀ ಅಕ್ಷೇರಾ ||1||
ತಮಗುಣ ಎಂಬುದು ಅಹಂಕಾರ ಮೂಲ
ಮಮಕಾರೆಂಬುದು ಅಜ್ಞಾನ ಮಾಲ
ಹರಿದು ಹೋಯಿತು ಅಹಂಕಾರ ||2||
ರಜಗುಣ ಸಂಗ ಮಾಡಿತು ಮಂಗ
ಮಜ ಮಾಡಿ ಎನಗೆ ಹಿಡಿಸಿತು ಘುಂಗ
ಗೋಜ ಕಡಿಸಿದ ಗುರು ಧೀರಾ ||3||
ಸತ್ವದಿ ತತ್ವದ ವಿಚಾರ ಮಾಡೊ
ನಿತ್ಯದಿ ನಿರ್ಗುಣ ನಿಜ ಕೊಂಡಾಡೊ
ಮುತ್ಯ ಅಲ್ದಿಯ ಗುರು ಧೀರಾ ||4||

ಗುರಕೀಲ ಮಾತು ಗುರುತಿಟ್ಟು ಪೇಳಿರಿ
ಗುರಕೀಲ ಮಾತು ಗುರುತಿಟ್ಟು ಪೇಳಿರಿ ಗುರುವೆ
ಬಾಯಿ ಮಾತಲ್ಲಪ್ಪ ಸುಮ್ಮನೇ
ಅಜ್ಞಾನಿ ಜನರೀಗಿ ತಿಳಿಗೂಡದಂಥಾದು
ಮಾಡಿ ಇಟ್ಟಿರಿ ಪರಬ್ರಹ್ಮವೇ ||ಪ||
ಆಧಾರ ಸ್ಥಳದಲ್ಲಿ ನಾಲ್ಕು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಆಚಾರ ಲಿಂಗನ ಮರೆತು ವಿಚಾರ ಇಲ್ಲದೆ ಕುಂತೆ
ಖೂನ ತೋರಿರಿ ಪರಬ್ರಹ್ಮವೇ ||1||
ಸ್ವಾಧಿಷ್ಟ ಸ್ಥಳದಲ್ಲಿ ಆರು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಗುರುಲಿಂಗನ ಗುರುತು ಮರೆತು ಕುಂತಿದೆ
ಖೂನ ತೋರಿರಿ ಪರಬ್ರಹ್ಮವೇ ||2||
ಮಣಿಪೂರ ಸ್ಥಳದಲ್ಲಿ ಹತ್ತು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಶಿವಲಿಂಗನ ಮರೆತು ಸುಮನೆ ಕುಂತಿದೆ ಗುರುವೆ
ಖೂನ ತೋರಿರಿ ಪರಬ್ರಹ್ಮವೇ ||3||
ಅನುಹಾತ ಸ್ಥಳದಲ್ಲಿ ಹನ್ನೆರಡು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೇ
ಜಂಗಮ ಲಿಂಗನ ಮರೆತು ಜಂಗಿಲಿ ಯಾಗಿದೆ ಗುರುವೆ
ಖೂನ್ ತೋರಿರಿ ಪರಬ್ರಹ್ಮವೇ ||4||
ವಿಶುದ್ಧಿ ಸ್ಥಳದಲ್ಲಿ ಹದಿನಾರು ದಳಗಳಿಟ್ಟು
ಲಿಂಗ ತೋರಿರಿ ಬೇರೆ ಬಣ್ಣವೆ ||5||

ಗುರು ಮುಟ್ಟಿ ಗುರುವಾಗಿ ಅರುವಿನೋಳರುವಾಗಿ
ಗುರು ಮುಟ್ಟಿ ಗುರುವಾಗಿ ಅರುವಿನೋಳರುವಾಗಿ
ಇಹದಾಸೆ ಎರವಾಗಿ ಯೋಗಿಯಾಗೊ ನೀನು
ಯೋಗಿಯಾಗೊ ತಮ್ಮ ನೀನು ತ್ಯಾಗಿಯಾಗೊ ನೀನು ||ಪ||
ಆಧಾರ ಸ್ಥಳದಲ್ಲಿ ನಾಲ್ಕು ದಳಗಳುಂಟು
ಶುಚಿರಲಿಂದೆ ಆಚಾರ ಲಿಂಗನ ವಿಚಾರ ಮಾಡೊ ನೀನು
ವಿಚಾರ ಮಾಡೊ ತಮ್ಮ ನೀನು ವಿಚಾರ ಮಾಡೊ ನೀನು ||1||
ಸ್ವಾದಿಷ್ಟ ಸ್ಥಳದಲ್ಲಿ ಆರು ದಳಗಳುಂಟು
ಗುಪ್ತಲಿಂದೆ ಗುರುಲಿಂಗನ ಗುರ್ತು ಮಾಡೊ ನೀನು
ಗುರ್ತು ಮಾಡೊ ತಮ್ಮ ನೀನು ಗುರ್ತು ಮಾಡೊ ನೀನು ||2||
ಮಣಿಪೂರ ಸ್ಥಳದಲ್ಲಿ ಹತ್ತು ದಳಗಳುಂಟು
ಸಿದ್ಧ ಆಸನ ಬಲಿಸಿ ನೀ ಶಿವಲಿಂಗ ನೋಡೊ
ಶಿವಲಿಂಗ ನೋಡೊ ತಮ್ಮ ಶಿವಲಿಂಗ ನೋಡಿ ||3||
ಅನುಹಾತ ಸ್ಥಳದಲ್ಲಿ ಹನ್ನೆರಡು ದಳಗಳುಂಟು
ಜಂಗಮ ಲಿಂಗ ಜಗಭರಿತ ಜಾಗ್ರನಾಗೊ ನೀನು
ಜಾಗ್ರನಾಗೊ ತಮ್ಮ ನೀನು ಜಾಗ್ರನಾಗೊ ನೀನು ||4||
ವಿಶುದ್ಧಿ ಸ್ಥಳದಲ್ಲಿ ಹದಿನಾರು ದಳಗಳುಂಟು
ಪ್ರಸಾದ ಲಿಂಗನ ಪ್ರಸಾದ ಸೇವಿಸಿ ಪ್ರಸಿದ್ಧನಾಗೊ ನೀನು
ಪ್ರಸಿದ್ಧನಾಗೊ ತಮ್ಮ ನೀನು ಪ್ರಸಿದ್ಧನಾಗೊ ನೀನು ||5||
ಅಜ್ಞಿಯ ಸ್ಥಳದಲ್ಲಿ ಎರಡು ದಳಗಳುಂಟು
ತ್ರಿಕೂಟ ದೋಳು ಮಿಂದು ಮಹಾಲಿಂಗ ನೋಡೊ
ಮಹಾಲಿಂಗ ನೋಡೊ ತಮ್ಮ ಮಹಾಲಿಂಗ ನೋಡೊ ||6||
ಬ್ರಹ್ಮ ಸ್ಥಳದಲ್ಲಿ ಸಾವಿರ ದಳಗಳುಂಟು
ಇಷ್ಟಾರ್ಥ ಕೊಡುವಂಥ ಇಷ್ಟಲಿಂಗ ನೋಡೊ
ಇಷ್ಟಲಿಂಗ ನೋಡೊ ತಮ್ಮ ಇಷ್ಟಲಿಂಗ ನೋಡೊ ||7||
ಶಿಖಾ ಸ್ಥಳದಲ್ಲಿ ಮೂರು ದಳಗಳುಂಟು
ಪ್ರಣಮಲಿಂದೆ ನೀನು ಪ್ರಾಣ ಲಿಂಗ ನೋಡೊ
ಪ್ರಾಣಲಿಂಗ ನೋಡೂ ತಮ್ಮ ಪ್ರಾಣಲಿಂಗ ನೋಡೊ ||8||
ಪಶ್ಚಿಮ ಸ್ಥಳದಲ್ಲಿ ಬಂದೇ ದಳಾ ಉಂಟು
ಭಾವ ಭಕ್ತಿಯಲಿಂದೆ ಭಾವಲಿಂಗ ನೋಡೊ
ಭಾವಲಿಂಗ ನೋಡೊ ತಮ್ಮ ಭಾವಲಿಂಗ ನೋಡೊ ||9||
ಆಶಾಪಾಶವ ಬಿಟ್ಟು ಅಲ್ದಿ ಗ್ರಾಮಕೆ ಮುಟ್ಟು
ಗುರುಲಿಂಗನಗುಪ್ತದ ಗಂಟು ಬಿಚ್ಚಿ ನೋಡೊ ನೀನು
ಬಿಚ್ಚಿ ನೋಡೊ ತಮ್ಮ ನೀನು ಬಿಚ್ಚಿ ನೋಡೊ ನೀನು ||10||

ಗಂಡನೇ ಗುರು ತಿಳಿರೆವ್ವ
ಗಂಡನೇ ಗುರು ತಿಳಿರೆವ್ವ
ಪತಿಲಿಂದೇ ಮುಕ್ತಿ ಪಡಿರೆವ್ವ ||ಪ||
ಅನಸೂಯ ಎಂಥಾ ಭಕ್ತಿ ಸೋತಿದಾರೊ ತ್ರೀಮೂರುತಿ
ಗೌರಿಲಕ್ಷ್ಮೀ ಸರಸ್ವತಿ ಆಗಿದಾರೊ ಫಜೀತಿ
ಮೊಲೆ ಉಣಸಿ ಮಾಡಿ ಮೋಹವ ||1||
ಅನುಲಾಯಿ ಎಂಥಾಭಕ್ತಿ ಖೂನ ಗಂಡನ ಮ್ಯಾಲೆ ಪ್ರೀತಿ
ದೇವತರಿಂದಲಿ ಸ್ವತಾ ಗಂಡನಿಗೆ ಮಾಡಿ ಮುಕ್ತ
ಉದ್ಧಾರಾಗಿದ ಮಾಂಡವ ||2||
ಸತಿ ಸಾವಿತ್ರಿಯ ಕೀರ್ತಿಜಗದೋಳು ಸಾರುತೈತಿ
ಪ್ರಾಣ ಕೊಳ್ಳುದಕ್ಕೆ ಸ್ವತ ಬಂದು ನಿಂತ ಯಮ ದೂತ
ಸತ್ತ ಗಂಡನ ಮಾಡಿ ಸಂಜೀವ ||3||
ಕರಿಬಸವಗ ಮೀರಿತೊ ಗರ್ವ
ಗುರುಲಿಂಗಸ್ವಾಮಿ ಕೊಟ್ಟರೊವರವ
ನೀನೆ ಬ್ರಹ್ಮೆಂದು ತೋರಿದ ಅರುವ ||4||

ಗುರುವಿನ ಕೂಡಿದನೇ ಅರುವಿನ ಮನೆಯೋಳು
ಗುರುವಿನ ಕೂಡಿದನೇ ಅರುವಿನ ಮನೆಯೋಳು
ನೂರೆಂಟು ನಾಯಿ ಬೊಗಳಿದರೇನ
ಗುರುವಿನ ಕೂಡಿದನೇ ||ಪ||
ಪಂಚರು ಐವರು ಸಂಚಿತಕಂಜುವರು
ಕಿಂಚಿತ ಭಯವು ಎನಗಿಲ್ಲಗೆಳದಿ
ಗುರುವಿನ ಕೂಡಿದನೇ ||1||
ಕಾಮಾದಿ ಆರು ಮಂದಿ ಬಿದ್ದು ಓಡ್ಯಾರ ಸಂದಿ
ಓಡಿಸಿಕೊಟ್ಟ ಸದ್ಗುರು ತಂದಿ
ಗುರವಿನ ಕೂಡಿದನೇ ||2||
ಎಂಟು ಮಂದಿಗೆ ನಾನು ಸೊಂಟದ ಮುರದೇನೇ
ಕಂಠ ಹರಿದು ಅದೇ ಘಂಟಾದೊಳಗೆ
ಗುರುವಿನ ಕೂಡಿದನೇ ||3||
ಆಶಾಪಾಶವ ಅಳಿದು ಅಲ್ದಿಗೆ ನಾ ಹೋದೆ
ಈಶ ಗುರುಲಿಂಗೇಶ ಕೈವಶನಾದ
ಗುರವಿನ ಕೂಡಿದನೇ ||4||

ಗುರುರಾಜ ಗುರುಲಿಂಗ ಸ್ವಾಮಿ
ಗುರುರಾಜ ಗುರುಲಿಂಗ ಸ್ವಾಮಿ ದಯಾಳಾ
ಬೆಳಗುವೆನಾರತಿಯಾ ||ಪ||
ಮರವಿನೊಳಗೆ ಬಿದ್ದು ಮೈ ಮರೆತಿರ್ಪಗೆ
ಅರವು ನೀ ತೋರಿದಿಯಾ
ಮೂಲಾಕ್ಷರದ ಮಂತ್ರವು ಹೇಳಿ
ಮುಪ್ಪುರದ ಗೆಲಸಿದಿಯಾ ||1||
ತತ್ವಮಸಿ ಮಹಾ ವಾಕ್ಯವ ಹೇಳಿ
ತತ್ವವ ತೋರಿದಿಯಾ
ಅತ್ಯಾಧಿಕ ಮನ ಪರಿಪೂರ್ಣಾತ್ಮನ
ಸತ್ವವ ತೋರಿದಿಯಾ ||2||
ಬಾಲಚಂದ್ರನಂತೆ ಲೀಲೆಯ ತೋರುತ
ಅಲದಿಗೆ ಬಂದಿದಿಯಾ
ಬಾಲ ಭಕ್ತರಿಗೆ ಮೂಲವ ಹೇಳಿ ಭವ
ಮಾಲೆಯ ಕಳದಿದಿಯಾ ||3||

ತನ್ನ ಬಿಟ್ಟು ದೇವರೇ ಇಲ್ಲ ಈ ಭೂಮಿಯ ಮ್ಯಾಲ
ತನ್ನ ಬಿಟ್ಟು ದೇವರೇ ಇಲ್ಲ ಈ ಭೂಮಿಯ ಮ್ಯಾಲ
ತನ್ನ ಬಿಟ್ಟು ದೇವರೇ ಇಲ್ಲ ||ಪ||
ಬಂಡೆಗಲ್ಲಿಗಿ ಭಂಡಾರ ಬಡದು
ದೇವರಂತಿರಿ ಎಲ್ಲಕ ದೊಡದು
ಟೆಂಗಿನ ಕಾಯಿ ತಂದು ಮುಂದೊಡೆದು
ಪರಟಿ ಒಗಿತಿರಿ ಒಳಗಿನು ತಿಂದು ||1||
ಕುಲಕುಟಗ್ಯಾ ಕಲ ಬಸವಣ್ಣ ಕಟಿದು
ನೋಡಿರಿ ಬಾಜಾರದಾಗ ಮಾರುವದು
ಊದಾನ ಹಾಕಿ ಕಾಲ ಬೀಳುವದು
ಎತ್ತಿನ ಮ್ಯಾಲ ಕಲ್ಲೆತ್ತಿ ಹಾಕುವದು ||2||
ಕಬ್ಬಿಣ ಪಟ್ಟಿ ಕಂಬಾರ ಬಡದು
ಇಟ್ಟಾರ ಮಸೂದಿ ಒಳಗ ಒಯ್ದು
ಯಾರು ಮಾಡಿದರೆ ಏನಾಗುವದು
ಮುಲ್ಲ ಕೂಗಿದರೆ ಕಲ್ಲ ಒಡಿಬಹುದೆ ||3||
ಊರ ದೇವತೆ ಮೀರ್ಯಾಳ ಎಂದು
ನಂದಾದೀವಗಿ ಇಡ ತಿರಿ ತಂದು
ಜೀವದ ದೇವರಿಗಿ ಕೊಯಿತೀರಿ ತಂದು
ವೀರಶೈವರ ಧರ್ಮ ಅಲ್ಲ ಇದು ||4||
ಆಸೆ ರಹಿತನಾಗಿ ಅಲ್ದಿಗೆ ಹೋಗಿ
ಹೇಸಿ ದೇಹದ ದೋಷವ ನೀಗಿ
ಗುರುಲಿಂಗಯ್ಯನ ಪಾದಕೆ ಎರಿಗಿ
ಮತ್ತೆ ನೀ ಬರಬ್ಯಾಡ ಮರ್ತ್ಯಕೆ ತಿರುಗಿ ||5||

ತಿಳಿಯೊ ಅಳಿಯೊ ಉಳಿಯೊ ಭ್ರಷ್ಟ
ತಿಳಿಯೊ ಅಳಿಯೊ ಉಳಿಯೋ ಭ್ರಷ್ಟ
ಕಳಿಯೊ ಜನ್ಮ ಮರಣದ ಕಷ್ಟ ||ಪ||
ಬಾಯಿ ಬ್ರಹ್ಮ ಓದುತಿ ಎಷ್ಟ
ಖರೆ ಇಲ್ಲೋ ಒಂದೆಳ್ಳಷ್ಟ ||ಅ.ಪ||
ನಾದ ಪ್ರಿಯ ಶಿವನೂ ಅಲ್ಲ
ವೇದ ಪ್ರಿಯ ಶಿವನೂ ಅಲ್ಲ
ಬೂದಿ ಹಾಕಿ ತುಳಿ ಬ್ಯಾಡೊಕಲ್ಲ
ಉದಿರ್ಯಾವೋ ಬತ್ತೀಸ ಹಲ್ಲ ||1||
ಸದ್ಗುರುವಿನ ಚರಣಕ್ಕಾಗಿ
ಸಾಧಕರು ಕುಂತರೊ ಗೂಗಿ
ಹಾದಿ ಹಾದಿ ಹುಡುಕುತ ಹೋಗಿ
ದೊರ್ದಿಲ್ಲೆಂದು ಗುರು ಅವರೀಗಿ ||2||
ವೇಶ ಭೂಷ ಪಲ್ಲಟ ಮಾಡಿ
ದೇಶ ದೇಶ ತಿರುಗಿದಿ ಖೋಡಿ
ಹೇಸಿ ಮನದ ಕಡಿ ನೀ ಬೇಡಿ
ಕುಂತಲ್ಲಾದೊ ಶ್ರೀಶೈಲ ಗುಡಿ ||3||
ಅಲ್ದಿ ಹಾದಿ ಹಿಡಿಯೊ ನೀ ಮತ್ತ
ದೊರದಿತಲ್ಲಿ ಗುರವಿನ ಗುರ್ತ
ಗುರುಲಿಂಗಯ್ಯ ಮಾಡಿದ ಮುಕ್ತ
ಇರಬೇಕೊ ಇದ್ದು ನೀ ಸತ್ತ ||4||

ತೇರೇ ಸೂರತ್ ತೂ ದೇಖ್ ಲೇನಾ
ತೇರೇ ಸೂರತ್ ತೂ ದೇಖ್ ಲೇನಾ
ತೂ ಹೋನಾ ಐನಾ ತೂ ಹೋನಾ ಐನಾ ||ಪ||
ಐನಾಮಿಲಾ ಐಸಾ ಶಾನ್ ದಾರ್
ಐನೇಕೆ ಅಂದರ್ ಸಾತೋಸಮಂದರ್
ಫಿರಕರ್ ದೇಖೇತೊ ವಜೂದ್ ಕೆ ಅಂದರ್ ||1||
ಅಲ್ದೀಕೆ ಆಲಮ್ ಸಿಖಲಾಯಾ ಇಲ್ಮ್
ಬಾತಿನ್ ಕಾ ರಾಜ್ ಗುರುಲಿಂಗ ಜಂಗಮ್
ಐನೇಮೇದೇಖೇತೊ ಆಪ್ ಹೀಮೇಕಲ್ಮ ||2||

ದೇವಿ ಎನ್ನ ತಾಯಿ ಒಮ್ಮೆ ಪಾಲಿಸೆ ಮಮ್ಮಾಯಿ
ದೇವಿ ಎನ್ನ ತಾಯಿ| ಒಮ್ಮೆ
ಪಾಲಿಸೆ ಮಮ್ಮಾಯಿ ||ಪ||
ಮೂರು ಲೋಕಕೆ ಎನಿಸಿದಿ ಮಾಯಿ
ನಾ ಮೇಲಂದವಗೆ ತೆರಸಿದಿ ಬಾಯಿ
ನಂಬಿದವನಿಗಿ ಆಗಿದಿ ನಾಯಿ ||1||
ಸತ್ಯ ವಿಜಯಗ ಸಂಜೀವ ನೀನೇ
ಧರ್ಮ ಶೀಲನಿಗೆ ಧೈರ್ಯವು ನೀನೇ
ಎನ್ನ ಮುತ್ತೈದಿತಾನ ಕಾಯಕಿ ನೀನೇ ||2||
ಮಣಿಪೂರದಲಿ ವಾಸ ವಾದಕಿ ನೀನೇ
ನಂಬಿದವರ ದಾಸಾದಕಿ ನೀನೇ
ಅಲ್ದಿ ಈಶಗ ವಶ ಅದಕಿ ನೀನೇ ||3||

ನಿಜ ಹಿಡಿ ಗುರು ಮಂತ್ರವನು
ನಿಜ ಹಿಡಿ ಗುರು ಮಂತ್ರವನು ತಿಳಿದರೆ
ಸೋಹಂ ಬ್ರಹ್ಮ ತಾನು ||ಪ||
ಅರಿಯದೇ ಬೀದಿಗಾದವನು ನೀ ಮಾಡೋ
ಗುರುಮನಿ ಶೋಧವನು
ಅರಿತುಕೋ ಮಂತ್ರದ ಭೇದವನು
ಅರಿದು ನೀಗೊ ಭವದ ಬಾಧೆಯನು ||1||
ನಿಃಶೂನ್ಯದಿಂದೆ ಶೂನ್ಯ ಜನಿಸಿ ಅದರಿಂದೆ
ನಿರಾಕಾರ ಎನಿಸಿ
ತ್ರಿಬಿಂದು ಲಿಂದೆ ಓಂಕಾರವ ನುಡಸಿ
ಅದರಿಂದೆ ಷಡಕ್ಷರಿ ಎನಿಸಿ ||2||
ಪಂಚ ಅಕ್ಷರದ ರಂಗ ಶೋಧಿಸಿ
ದವನೇ ಗುರು ಲಿಂಗ
ತಿಳಿಯದಿದ್ದರೆ ತಿಳಿ ಮಂಗ
ತಿಳಿದರೆ ಯಮಬಾಧೆ ನಿನಗ್ಹ್ಯಾಂಗ ||3||
ಖರೇ ಪರ ಬ್ರಹ್ಮ ನೀನಿದ್ದಿ ಕಂಡ
ಬಂಡಿಗೆ ಕಾಲ ಬಿದ್ದಿ
ಭಂಡ ವಿಷಯಕ್ಕೆ ನೀ ಬಿದ್ದಿ
ಷಂಡ ಭವದಾಸೆ ನೀ ಹಿಡದಿ ||4||
ಆಸೆ ಹಿಡದು ನೀ ನಡದಿ ಏಸೋ
ಜನ್ಮ ನೀ ಪಡದಿ
ಇರುವು ಮೊದಲು ಆನಿ ಕಡಿಯಾಗಿ
ಶ್ವಾನ ಸೂಕರ ನಂದದಿ ||5||
ಬರುಬಾರದೆ ನೀ ಬಂದಿ ಬಾರದು
ಎಲ್ಲಾ ನಂದಂದಿ
ತೊಳೆದುಕೊ ನಿನ್ನ ನಿಜ ಸಂದಿ
ಖಾಸ ಅಲ್ದಿ ಈಶನ ಹೊಂದಿ ||6||

ನಿನ್ನ ನಿಜವು ನೀನೇ ನೋಡೋ
ನಿನ್ನ ನಿಜವು ನೀನೇ ನೋಡೋ
ಅನು ಮಾನಿಸಲು ಬ್ಯಾಡೋ ||ಪ||
ತತ್ವ ಐದು ಐದ ಕೈ ದೈದು
ನಿತ್ಯ ನಿತ್ಯ ಭಾಗಿಸಿ ನೋಡೋ ||ಅ.ಪ||
ಕಾಮ ಕ್ರೋಧ ಶೋಕ ಮೋಹ
ಭಯ ಆಕಾಶದ ಅಂಶಗಳು
ಚಲನವಲನ ಧಾವನ ಪ್ರಸರಣ
ಆ ಕುಂಚನ ವಾಯು ಅಂಶಗಳು ||1||
ಹಸಿವು ತೃಷೆ ಆಲಸ್ಯ ನಿದ್ರಾ
ಕಾಂತಿ ತೇಜದ ಅಂಶಗಳು
ಶುಕ್ಲ ಶೋಣಿತ ಮೂತ್ರ ಲಾಲಾರಸ
ಶ್ವೇದ ಜಲದ ಅಂಶಗಳು ||2||
ಆಸ್ತಿ ಮಾಂಸ ನಾಡಿ ತ್ವಚ
ರೋಮ ಭೂಮಿಯ ಅಂಶಗಳು
ಅಳ್ಳಿಗೆ ಅಳ್ಳು ಪೂಜಿಗಿ ಪೂಜು
ಅಲ್ದಿ ಈಶನ ಬೋಧವೆ ಸಹಜು ||3||

ನಮ್ಮ ಜಾತಿ ವಡ್ಡಾರ್ ನಮಗೆ
ನಾನೆಂದು ಮರೆಯಲಾರೆ ಗುರುವೆ ನಿಮ್ಮುಪಕಾರವ
ನಾನೆಂದು ಮರೆಯಲಾರೆ ಗುರುವೆ ನಿಮ್ಮುಪಕಾರವ ||ಪ||
ಗುರುವೆ ನಿಮ್ಮುಪಕಾರವ ಸದ್ಗುರುವೆ ನಿಮ್ಮುಪಕಾರವ ||ಅ.ಪ||
ನಾ ನೀನೆಂಬುದು ಭ್ರಾಂತಿ ಬಿಡಸಿದಿ
ಪರಬ್ರಹ್ಮ ಪ್ರಕಾಶ ತೋರಿದಿ ||1||
ಮೂಜಗದೋಳು ನಿನ್ನ ಪ್ರಖ್ಯಾತ
ನಿರಂಕಾರ ನಿಜ ನಾಮ ಭರಿತ ||2||
ತತ್ವಮಸಿ ಮಹಾ ವಾಕ್ಯ ಹೇಳಿದಿ
ಜನ್ಮ ಮರಣವನು ದೂರ ಮಾಡಿಸಿ ||3||
ತೀತಾವಸ್ಥಾ ನಿನ್ನ ಸ್ವರೂಪ
ನಿನ್ನ ಪಾದದಲಿ ಆದೆನೊಲೋಪ ||4||
ಈ ಜಗದೋಳು ಅಲ್ದಿಯವಾಸ
ಕೃಪೆಯಿರಲಿ ಶ್ರೀಗುರು ಲಿಂಗೇಶ ||5||

ನರ ದೇಹದ ಧನ ಸ್ಥಿರ ಯಾರಿಗಿಹುದೋ
ನರ ದೇಹದ ಧನ ಸ್ಥಿರ ಯಾರಿಗಿಹುದೋ
ಚರಮಗಣ್ಣಿಲಿ ನೋಡಿ ಮರೆಯಾಗುತಿಹುದೋ ||ಪ||
ಸತಿಯ ಸುತರು ತನ್ನ ಹಿತಕಾಗಿ ಬಂದವರು
ಗತಿಗೆಡಿಸಿ ಸನ್ಮತಿಗೆಡಿಸುವರು ||1||
ಹಲ್ಲು ಕಣ್ಣು ಕಿವಿ ಕೈಕಾಲು ಇಲ್ಲದಂತೆ ಆಗುವವು
ಬಲ್ಲಿದ್ದ ಜನರೆಲ್ಲ ಬೈಲಾಗುವರೊ ||2||
ಧರಿಯೋಳಧಿಕವಾದ ಪರತರಲ್ದಿಯೋಳು
ಗುರುಲಿಂಗ ಜಂಗಮ ಪಾದ ಮರಿಬ್ಯಾಡ ನಿನ್ನೋಳು ||3||

ನಮ್ಮ ಹೂಗಾರಣ್ಣಾ ಮನೆ ಮನೆಗೆ
ನಮ್ಮ ಹೂಗಾರಣ್ಣಾ ಮನೆ ಮನೆಗೆ ಹುವ್ವಾ ಕುಡುತಾನ| ನಮ್ಮ ||ಪ||
ಮನೆ ಮನೆಗೆ ಹುವ್ವಾ ಕುಡುತಾನ ಕುಡುತಾನ| ಹೂಗಾರಣ್ಣ ||ಅ.ಪ||
ಭಕ್ತಿ ಎಂಬ ಭಾವ ಲಿಂಗ ಕೊಟ್ಟನ
ಯುಕ್ತಿ ಎಂಬ ಮಜ್ಜಾನ ಗೈದನ
ಮುಕ್ತಿ ಎಂಬ ನಿಜಪದವೀಗೊಯ್ದಾನ ಓಯ್ದಾನ |1||
ಚೌರ್ಯಾಂಶಿ ಲಕ್ಷ ಕುಲದ ಹುವ್ವ ತಂದನ
ಭವಬಾಧೆ ಎಂಬ ಹೂ ಮಾಲೆ ಮಾಡ್ಯನ
ಜವದಿ ಜನ್ಮ ಮರಣರಹಿತ ಮಾಡ್ಯಾನ ಮಾಡ್ಯಾನ ||2||
ಇಂದು ದಸರಿ ಹಬ್ಬ ಎಂದು ಹೇಳ್ಯನ
ಚಂದ ತಿಳಿಸಿ ಮುಂದೀನ ಸೂಚನ
ಮಂದ ಬುದ್ಧಿ ಸಂದಿಗೊಂದಿ ಬಳದಾನ ಬಳದಾನ ||3||
ಬಂಬತ್ತು ದಿವಸ ಪೂಜ ಮಾಡ್ಯನ
ಅಂಬಬಾಯಿಗೆ ನಂಬಿ ನಡದನ
ಢಾಂಭಿಕರ ಖಂಭ ಮುರದಾನ ಮುರದಾನ ||4||
ಅರಿವು ಎಂಬುವ ದೀವಗಿ ಹಚ್ಚ್ಯನ
ಮರವು ಎಂಬ ಕತ್ತಲೆ ಕಳದನ
ಗುರು ಅಲ್ದಿ ಈಶ ತಾನೇ ಆಗ್ಯಾನ ಆಗ್ಯಾನ ||5||

ನಾಗರತೆವ್ವ ನಾಗರತೆ ನಾಗರತೆ
ನಾಗರತೆವ್ವ ನಾಗರತೆ ನಾಗರತೆ ಭಾಳ ಪತಿವರತೆ ||ಪ||
ಹಲವು ಮಾತಿನೊಳು ಹಾದರಗಿತ್ತೆ
ಸನಚ್ಚಿ ಕೊಳ್ಳೇ ಛೀನಾಲಿ ಕೋಕೆ ||ಅ.ಪ||
ಎನ್ನ ಮೇಲೆ ಮೂಗರಿದ್ದಾರೆ ಆರು ಮಂದಿನೇ
ನೂರಾರು ಮಂದಿಗೆ ಮುದ್ದು ಕೊಟ್ಟಿಬಿಟ್ಟೇನೇ
ತಪ್ಪಲದ್ಹಂಗ ಇಪ್ಪತ್ತೈದು ಮಂದಿಗ್ಹೋಗಿದೆನೇ
ಅಪ್ಪಟ್ಟ ಗರತಿ ಅಳಿಯನ ಸೂಳಿನಾನೆ ಆಗಿದೆನೇ ||1||
ಎಂಟು ಮಂದಿ ತಂಟ ಕಡೆದು ಬಿಟ್ಟುಬಿಟ್ಟೇನೇ
ತನುವು ಮನವು ಧನವು ಗುರುವಿಗೆ ಕೊಟ್ಟು ಬಿಟ್ಟೇನೇ
ಊರ ಒಳಗಿನ ಮುಂದೆದೇನು ಹೊಯ್ದು ಗಂಟೇನೇ
ಯಾರೆನಂದರೇನು ಶೆಂಟಾ ಅಂಜಕಿ ನನಗೇನೇ ||2||
ದೇಶದೋಳು ಅಲ್ದಿ ಈಶಗೆ ವಶವು ಆದೇನೇ
ಧ್ಯಾಸವಿಟ್ಟು ಮೋಸದಿಂದ ಮಾಡಿಕೊಂಡೇನೆ
ದೇಶ ದೇಶ ತಿರುಗುವಾಗ ಹಿಂಸಾ ಮಾಡ್ಯಾನೇ
ಫಾಸಿ ಮಾಡಿ ಗೋಶ್ಯದೊಳಗೆ ಎಳೆದು ಒಯ್ದಾನೇ ||3||

ನೆನೆದೇನೊ ಶ್ರೀ ಸದ್ಗುರುವಿಗ ಸಭೆದಾಗ
ನೆನೆದೇನೊ ಶ್ರೀ ಸದ್ಗುರುವಿಗ ಸಭೆದಾಗ
ನೆನೆದೇನೊ ಶ್ರೀ ಸದ್ಗುರುವಿಗ ||ಪ||
ಬ್ರಹ್ಮವಿಷ್ಣು ರುದ್ರರಿಗ -ತೆಂತೀಸ ಕೋಟಿ ದೇವತರಿಗ
ಪರಮಾನಂದ ದಾರಿ ತೋರಿದವಗ ||1||
ಆರು ಮಂದಿ ನೆರೆದೈತಯರಿಗ ಎಂಟು ಮಂದಿ ತಂಟಕಾರಿಗ
ಹತ್ತು ಮಂದಿಗೆ ಗೊತ್ತಿಗ್ಹಚ್ಚಿದವಗ ||2||
ಆರು ಮಂದಿ ದವಗ-ಐದು ಮಂದಿ ಚರಿಸಿದವಗ
ಮೂವರಿಗಿ ಮೋಹ ಮಾಡಿದವಗ ||3||
ಆರು ಎಂಬುವ ಅಲ್ದಿಯದೊಳಗ ಆರನೆ ಸ್ಥಲ ಏರಿದವಗ
ಗುರುಲಿಂಗ ಜಂಗಮರಿಗ ||4||

ನಮ್ಮ ಜಾತಿ ವಡ್ಡಾರ್ ನಮಗೆ
ನಮ್ಮ ಜಾತಿ ವಡ್ಡಾರ್| ನಮಗೆ
ಅಂಜಿಸುವ ರಿನ್ಯಾರ್ ||ಪ||
ಕಲ್ಲು ಒಡಿಲಕ ಬಲ್ಲವ ಬೇಕೋ
ಕುಲ್ಲ ಮನುಜರಿಗೆ ಹೇಳದು ಸಾಕೋ
ಮೂರೊರಿ ಕಲ್ಲಿಗೆ ಮನಿ ಮುಗಿಬೇಕೋ
ಅರುವಿನಲ್ಲಿ ಆರು ಥರವಿರಬೇಕೋ ||1||
ಮೂರು ಚಿಂಪುಗಳು ಮೂಲಿಗೆ ಹಾಕಿ
ಆರು ಕಲ್ಲಿಗೆ ಬಿದ್ದಿಲ್ಲ ಪಾಕಿ
ಪಂಚ ತತ್ವದ ಫಡತರ ಹಾಕಿ
ಕೈ ಜಜ್ಜಿತ್ತು ಕಲ್ ಒಡಿ ಜ್ವಾಕಿ ||2||
ಆನಂದ ಅಲ್ದಿಯ ಮನೆಯೊಂದು ಕಟ್ಟು
ತನುಮನ ಧನವನು ಗುರುವಿಗೆ ಕೊಟ್ಟು
ಮ್ಯಾಲಿನ ಸ್ಥಾನಕ್ಕೆ ಮಹಾಲಿಂಗ ನಿಟ್ಟು
ಗುರುಲಿಂಗಯ್ಯನ ಪಾದಕೆ ಮುಟ್ಟು ||3||

ಪಂಚತತ್ವ ದೇಹವಿದು ಪರ ಉಪಕಾರ
ಪಂಚತತ್ವ ದೇಹವಿದು ಪರ ಉಪಕಾರ| ಪರ
ಮಾಡಿ ನೋಡೋ ಜರಾ ||ಪ||
ಶಾಸ್ತ್ರದ ಸಾರ ಓದಿ ನೋಡೊ ಚದುರ
ತ್ರಿಜಗದಪೂರ ಗುರವಿನ ಆಧಾರ
ಕಾಮಧೇನು ಕಲ್ಪವೃಕ್ಷ ಪರ ಉಪಕಾರ
ಮಾಡಿ ನೋಡೋ ಜರಾ ||1||
ಮಹಲು ಮಂದಿರ ಗುಡ್ಡಗಂವ್ಹಾರ
ಕಬ್ಬಿನ ರಸಪೂರ ತನುವಿಗಾಧಾರ
ಊರ ಭಾವಿ ನೀರು ಆವ ಪರ ಉಪಕಾರ
ಮಾಡಿ ನೋಡೊ ಜರಾ ||2||
ಅಲ್ದಿಯ ಊರ ಧುರತನ ಹೆಸರ
ಗುರು ಸ್ಥಲದವರ ಗುರುಲಿಂಗಪ್ಪನವರ
ದೀಕ್ಷೆ ಕೊಡುವರು ಚದುರ ಪರ ಉಪಕಾರ
ಮಾಡಿ ನೋಡೊ ಜರಾ ||3||

ಬಾತಿನ್ ಮೇ ಮೈ ಮುಸಲ್ಮಾನ್ ಹೂಂ
ಬಾತಿನ್ ಮೇ ಮೈ ಮುಸಲ್ಮಾನ್ ಹೂಂ
ಜಾಹಿರ್ ಮೇ ಹಿಂದು| ಭಾಯಿ ಮೈ
ಜಾಹಿರ್ ಮೇ ಹಿಂದು ||ಪ||
ಅವ್ವಲ ಸಖತ್ ಬಾತ್ ನ ಕರನಾ
ಬಾದಸೆ ನರಮ್ ನ ಹೋಜಾನಾ
ಮುಸಲ್ಮಾನ್ ಕಾ ಲಾಜ್ ರಖನಾ ||1||
ಪಹಲೇತೋ ನರತನಕೋ ಪಾನಾ
ಮೈ ಕೌನ್ ಹೂಂ ಏಹಿ ಪಹಚಾನಾ
ಖೂಬ್ ಸೋಚಕರ್ ಸಮಝಲೇನಾ ||2||
ಮುರಷಿದ್ ಮಿಲನಾ ನಂಬರ್ ಪಹಲಾ
ತನಮೆ ಖುದಾಕೋ ಬತಾನೆ ವಾಲಾ
ದಿಲಸೇ ಕಲ್ಮಾ ಪಢಾನೆ ವಾಲಾ ||3||
ಜಾಹಿರ್ ಮೇ ತೋ ಆಳಂದ್ ಗ್ರಾಮ
ಬಾತಿನ್ ಮೇ ಗುರುಲಿಂಗ ಜಂಗಮ
ಮುಝೇ ಪಢಾಯಾ ಆಜ್ ಕಲ್ಮಾ ||4||

ಬರೆದ ಪ್ರಮಾಣ ಹರಿದು ಹೋಗೊತನ
ಬರೆದ ಪ್ರಮಾಣ ಹರಿದು ಹೋಗೊತನ
ಸಂಸಾರವ ಮಾಡೊ
ಹರನ ಮರೆಯದೆ ಕೊಂಡಾಡೊ ಆಸ್ಥಿರ ಸಂಸಾರೀ ಡ್ಯಾಡೊ… ||ಪ||
ಆಧಿ ಆಧಾರದ ಶೋಧನೆ ಮಾಡೋ
ನಾದ ಬಿಂದು ಕಲೆ ನೀಗಿ ನೋಡೊ
ಭೇದ ರಹಿತ ಸದ್ಗುರವಿನ ಕೊಡೊ ||1||
ದಾರಿಕಾರಗೆ ಊಟ ಸಿಕ್ಕಂತೆ
ಸಾರಾಮೃತ ಸುಖ ಸವಿ ಉಂಡಂತೆ
ನಿರಾಳ ಮನಸಿಲಿ ತಾ ಹೋದಂತೆ ||2||
ಹಸಿದ ಹಕ್ಕಿ ಅಂಗಳ ಕಿಳಿದಂತೆ
ಖುಸಿಲಿಂದೆ ಕಾಳು ತಿಂದು ತೆರಳಿದಂತೆ
ಆಸೆ ಅಣು ಮಾತ್ರ ಇಡದಂತೆ ||3||
ಹುಡುಗಿಯರು ಮನಿ ಕಟ್ಟ್ಯಾಡಿದಂತೆ
ಅಡಗಿಯಲ್ಲಿ ಹೋಳಗಿ ಉಂಡಂತೆ
ಕೆಡಸಿ ಹೋಗುವರು ಇಡದಂತೆ ||4||
ಸುಣ್ಣದೊಳಗೆ ನೀರು ಕಲಿತಿದ್ದಂತೆ
ಬಣ್ಣ ಕೊಟ್ಟು ತಾ ಬಯಲಾದಂತೆ
ಮಣ್ಣಿನ ಕಾಯ ಮರೆಯಾದಂತೆ ||5||
ಧರಿಯೊಳು ನಮ್ಮ ಅಲ್ದಿಯ ಗ್ರಾಮ
ಮೆರೆಯುತಿರುವ ಗುರುಲಿಂಗ ಜಂಗಮ
ಪರಮ ಭಕ್ತರಿಗಿ ಮಾಡಿ ನಿಷ್ಕಾಮ ||6||

ಮಾಡೋ ಗುರು ಭಕ್ತಿಯನು ನೀನು
ಮಾಡೋ ಗುರು ಭಕ್ತಿಯನು| ನೀನು
ಮಾಡೋ ಗುರು ಭಕ್ತಿಯನು ||ಪ||
ಮಾಡೋ ಗುರು ಭಕ್ತಿಯನು ಹಾಡೊ ಗುರು ಕೀರ್ತಿಯನು
ರೂಢಿಯೊಳಗೆ ಮಾಡಿ-ನೀಡಿ ನೀಡಲದ್ಹಂಗೆ ತಾನು ||ಅ.ಪ||
ಗುರು ಭಕ್ತಿ ಮಾಡಿ ಉಡುತಣ್ಣ
ಹರ ನಿಂದೆ ವರ ಪಡದಾನ
ಮರಣ ರಹಿತ ಮುಕ್ತಿಯ ಸ್ಥಾನ
ಕರದೊಯ್ದನೊ ತನ್ನ ಗುರುವಿನ ||1||
ಗುರುಭಕ್ತ ರಾಮ ದೂತ
ದುರುಣಗಿರಿ ಎತ್ತಿ ಬಲವಂತ
ಹಾರಿಹೋಗಿ ತಂದನೋ ಸೀತ
ಚಿರಂಜೀವಿಯಾಗಿ ಕುಂತ ||2||
ಹೆಣ್ಣು ಹೊನ್ನು ಮಣ್ಣಿನ ಭಕ್ತಿ
ಜನುಮ ಮರಣ ಕಾರಣ ಐತಿ
ಗುರುಲಿಂಗ ಜಂಗಮ ಭಕ್ತಿ
ಘನ ಮುಕ್ತಿಗೆ ಸಾಧನ ಐತಿ ||3||
ಧರಿಯೋಳು ಅಲ್ದಿಯ ಗ್ರಾಮ
ಗುರುಲಿಂಗ ಜಂಗಮ
ತೋರಿದ ತನ್ನ ಮಹಿಮ
ಸಾರಿದ ಪ್ರಣಮ ||4||

ಮಾಡಿ ಭಕ್ತಿ ಪಡಿರಿ ಮುಕ್ತಿ
ಮಾಡಿ ಭಕ್ತಿ ಪಡಿರಿ ಮುಕ್ತಿ
ನುಡಿದಂತೆ ನಡೆಯಿರಣ್ಣಾ ||ಪ||
ಅಡಿಗಡಿಗೆ ಗುರು ನಾಮವ ನುಡಿರಿ
ಮೃಢಹರ ನಡಿತಲಿ ದೃಢವೊಂದಿಡಿರಿ
ಬಡಿವಾರ ಭಜನೆ ಮಾಡದು ಬಿಡರಿ
ಕಡಿ ಜನ್ಮಕ್ಕೆ ಕಡಿಗೀಶನ ಕೂಡರಿ ||1||
ಬ್ರಹ್ಮರಲ್ಲಿ ಹುಟ್ಟಿದ ಬಸವಣ್ಣ
ಧರ್ಮ ಶಾಸ್ತ್ರ ಓದ್ಯೋದಿ ನೋಡ್ಯನ
ಕರ್ನಾಟಕ ಕಲ್ಯಾಣ ಸೇರ್ಯನ
ದುರ್ಳ ಬಿಜ್ಜಳನ ಗರ್ವ ಮುರದನ ||2||
ಶರಣ ಬಸವ ಹರಭಕುತಿ ಮಾಡ್ಯನ
ಸರಿಯಾಗಿ ದಾಸೋಹ ಸದಾ ನಡಸ್ಯನ
ಅರಿವಿನಿಂದೆ ಗುರು ಮನಿ ಸೇರ್ಯನ
ಗುರು ಮುಟ್ಟಿ ಗುರುವಾಗಿ ಕುಂತನ ||3||
ಶರೀರವೆಂಬುದು ಅಲ್ದಿಯ ಊರ
ಅರಿವು ಎಂಬ ಗುರುಲಿಂಗ ಜಂಗಮರ
ಪರಮ ಭಕ್ತರಿಗಿ ಕರೆದು ಹೇಳ್ಯರ
ಪರಮಾನಂದ ಪದವಿಯ ನೀಡ್ಯರ ||4||

ಮೂಡಲವಾಯಿತೆ ಮುರಲಿಧರನ ನೆನಿಯಮ್ಮ
ಮೂಡಲವಾಯಿತೆ ಮುರಲಿಧರನ ನೆನಿಯಮ್ಮ
ಹಾಡಿ ಬೀಸಾನು ಬಾರೆ ಜೋಡಿನ ಗೆಳದೆಮ್ಮ ||ಪ||
ಮೋಕ್ಷಕ್ಕೆ ನರಜನ್ಮ ಬಕ್ಷೀಸ ಪಡದೇವಮ್ಮ
ದೀಕ್ಷೆಯ ಪಡೆದು ನಾವು ಸಾಕ್ಷಿರೂಪ ತಿಳಿದೇವಮ್ಮ ||1||
ಪತಿಸೇವೆಯಲ್ಲಿ ನಾವು ಅತಿಜಾಗ್ರ ಇರಬೇಕಮ್ಮ
ಅತ್ತಿ ಮಾವರಭಿಮಾನ ಹಿತದಿಂದೆ ಕಾಯಿಬೇಕಮ್ಮ ||2||
ಊರೊಳು ಸೇರ್ಯಾರೆ ಆರುಮಂದಿ ದುರುಳಾರೆ
ಯಾರು ಅರಿಯದಂತೆ ನಾವು ಪರಮಾರ್ಥಗೆಲಿಬೇಕಮ್ಮ ||3||
ತೊಂಟರು ಎಂಟುಮಂದಿ ಗಂಟಗಳ್ಳರಿರುವಾರು
ಕಂಠ ಹರಿದು ಘಂಟದೊಳಗೆ ಎಂಟು ವರ್ಣಅರಿಯರಮ್ಮ ||4||
ದೇಶದೊಳಗೆ ನಮ್ಮ ವಾಸುಳ್ಳಲ್ದಿಯ ಗ್ರಾಮ
ಈಶ ಗುರುಲಿಂಗ ಜಂಗಮ ಸೋಸಿ ಹೇಳಿದರಮ್ಮ ||5||

ರಾಮಯ್ಯ ಕೇಳೊ ರಾಮಯ್ಯ
ರಾಮಯ್ಯ ಕೇಳೊ ರಾಮಯ್ಯ
ಹಾದರ ಜನರಿಗೆ ಪ್ರೇಮಯ್ಯ ||ಪ||
ಗರತೆಯರಿಗೆ ನೀ ಗಂಡಯ್ಯ| ನಿನ್ನ
ಮರೆತವರಿಗೆ ನೀ ಷಂಡಯ್ಯ ||ಅ.ಪ||
ಬಲ್ಲವರಿಗೆ ನೀ ಬೆಲ್ಲಯ್ಯ| ನೀ
ಕುಲ್ಲ ಮನಜರಿಗೆ ಇಲ್ಲಯ್ಯ
ರೂಪನಾಮ ರಾಮ ಕೃಷ್ಣಯ್ಯ| ನೀ
ರಾಮ ನಾಮ ತಾಳಿದೆಯಯ್ಯ ||1||
ಆಶ ಕಂಡಿದವಗ ಈಶಯ್ಯ| ನೀ
ಅಲ್ದಿಯೊಳಗೆ ನಿವಾಸಯ್ಯ
ನಂಬಿದವಗ ನೀ ದಾಸಯ್ಯ| ನೀ
ಒಲಿದ ಗುರುಲಿಂಗ ಜಂಗಮಯ್ಯ ||2||

ಲಿಂಗಪೂಜೆ ಮಾಡಿ ಮುಕ್ತಾದೆ
ಲಿಂಗಪೂಜೆ ಮಾಡಿ ಮುಕ್ತಾದೆ| ಈ ಭವದಿ ಬಂದು
ಲಿಂಗಪೂಜೆ ಮಾಡಿ ಮುಕ್ತಾದೆ ||ಪ||
ಲಿಂಗಪೂಜೆ ಮಾಡಿ ಮುಕ್ತನಾದೆ ನಾಲ್ಕು ದಳದೋಳು
ಆಚಾರಲಿಂಗ ಪೀತ ವರ್ಣ ಕ್ರಿಯಾಶಕ್ತಿ ಒಡಗೂಡಿ ||1||
ಲಿಂಗಪೂಜೆ ಮಾಡಿ ಮುಕ್ತನಾದೆ ಆರು ದಳದೋಳು
ಗುರುಲಿಂಗ ಶ್ವೇತವರ್ಣ ಇಚ್ಚಾ ಶಕ್ತಿ ಒಡಗೂಡಿ ||2||
ಲಿಂಗಪೂಜೆ ಮಾಡಿ ಮುಕ್ತನಾದೆ ಹತ್ತು ದಳದೋಳು
ಶಿವಲಿಂಗ ಕೆಂಪು ವರ್ಣ ಜ್ಞಾನ ಶಕ್ತಿ ಒಡಗೂಡಿ ||3||
ಲಿಂಗಪೂಜೆ ಮಾಡಿ ಮುಕ್ತನಾದೆ ಬಾರಾ ದಳದೋಳು
ಜಂಗಮ ಲಿಂಗ ಹರಿದ ವರ್ಣಆದಿ ಶಕ್ತಿ ಒಡಗೂಡಿ ||4||
ಲಿಂಗಪೂಜೆ ಮಾಡಿ ಮುಕ್ತನಾದೆ ಸೋಳಾ ದಳದೋಳು
ಪ್ರಸಾದಲಿಂಗ ಕಪ್ಪುವರ್ಣ ಪರಾಶಕ್ತಿ ಒಡಗೂಡಿ ||5||
ಲಿಂಗಪೂಜೆ ಮಾಡಿ ಮುಕ್ತನಾದೆ ಎರಡು ದಳದೋಳು
ಮಹಾಲಿಂಗ ಮಾಣಿಕ್ಯವರ್ಣ ಚಿತ್ ಶಕ್ತಿ ಒಡಗೂಡಿ ||6||
ಲಿಂಗಪೂಜೆ ಮಾಡಿ ಮುಕ್ತನಾದೆ ಅಲ್ದಿ ಗ್ರಾಮದೋಳು
ಆಸೆ ರಹಿತ ಗುರುಲಿಂಗ ಜಂಗಮರ ಒಡಗೂಡಿ ||7||

ಲಗ್ನ ತೀರಿದ ಮ್ಯಾಲೇ ವಿಘ್ನ
ಲಗ್ನ ತೀರಿದ ಮ್ಯಾಲೇ ವಿಘ್ನ ಬಾರಾದೆ ತಂಗಿ
ಸುಜ್ಞಾನಿಗಳಿಗೆ ಸತಿ ಪುರುಷ ಶೋಭಾನವೇ
ಈ ಶುಭ ಲಗ್ನ ಅಜ್ಞಾನಿಗಳಿಗೆ ತಿಳಿಯಗೂಡದು ||ಪ||
ಆಧಾರ ಸಾಶಿ ಕಟ್ಟಿ ವೇದ ಚೌಕಿಯ ಮೆಟ್ಟಿ
ನಾದ ಮೂರುತಿ ಕ್ರಿಯಾಶಕ್ತಿ ಶೋಭಾನವೇ
ಈ ಆಚಾರಲಿಂಗ ಜಂಗಮಗ ಎನಗೆ ಸೌಭಾಗ್ಯ ||1||
ಸ್ವಾದಿಷ್ಟ ಸಾಶಿ ಜಗುಲಿ ಷಡುವಾದ ಮೈದುನಿಯಲ್ಲಿ
ಅನುಭವದ ಭೂಮಕ ಕೂಡನು ಬಾರೆ ಶೋಭಾನವೇ
ಈ ಗುರುಲಿಂಗ ಜಂಗಮಗ ಎನಗೆ ಸೌಭಾಗ್ಯ ||2||
ಮಣಿಪೂರ ಮಂಟಪದಲ್ಲಿ ಗುಣಪೂರ ಜ್ಞಾನ ಶಕ್ತಿ
ಎಣಿಕೆಗೆ ದಶ ಕಳೆಯ ಚಿನ್ಹ ಶೋಭಾನವೇ
ಈ ಶಿವಲಿಂಗ ಜಂಗಮಗ ಎನಗೆ ಸೌಭಾಗ್ಯ ||3||
ಅನಾಹತ ಆದಿಶಕ್ತಿ ವನಪಿಗೆ ಬಸಿರು ಬಂಕಿ
ಎಣಕಿ ದ್ವಾದಶಿಯ ನೆನಿಯದಂಡಿ ಶೋಭಾನವೇ
ಈ ಜಂಗಮಲಿಂಗ ಜಂಗಮಗ ಎನಗೆ ಸೌಭಾಗ್ಯ ||4||
ಎತ್ತ ನೋಡಲೆ ತಂಗಿ ಸುತ್ಯಲ್ಲ ಮುತ್ತಿನ ಮಾಲೆ
ಬತ್ತೀಸಕೋಟಿ ಗಿಣತಿ ತಣಿಯೆ ಶೋಭಾನವೇ
ಈ ಪ್ರಸಾದಲಿಂಗ ಜಂಗಮಗ ಎನಗೆ ಸೌಭಾಗ್ಯ ||5||
ಅರುವೆಂಬ ಆಜ್ಞಿಯ ಕಟ್ಟಿ ದುರುಗುಣಗಳ ಮೆಟ್ಟಿ
ಗುರುವಿನ ಪಾದ ಹಿಡಿಯಿರಿ ಘಟ್ಟಿ ಶೋಭಾನವೇ
ಈ ಮಹಾಲಿಂಗ ಜಂಗಮಗ ಎನಗೆ ಸೌಭಾಗ್ಯ ||6||
ಆರು ಸ್ಥಲದ ನೇರಿ ಮೀರಿದುನ್ಮನಿ ಸೇರಿ
ಗುರುಲಿಂಗ ತೊರ್ಯರ ನಿಜ ದಾರಿ ಶೋಭಾನವೇ
ಈ ಅಲ್ದಿವಾಸ ಈಶಾಗ ಎನಗೆ ಸೌಭಾಗ್ಯ ||7||

ಶಿವಾಯ ನಮಃ ಓಂ ಹರಾಯ ನಮಃ ಓಂ
ಶಿವಾಯ ನಮಃ ಓಂ ಹರಾಯ ನಮಃ ಓಂ
ನಮಃ ಶಿವಾಯ ಓಂ ನಮಃ ಶಿವಾಯ ||ಪ||
ಕಾಯದ ಸಂಗ ಮಾಡಿದರಿಂದ
ಆಯಿತೊ ಭವ ತಾಪ
ಸೋಹಂ ಸೋಹಂ ಸೋಹಂ ಎಂದು
ಕಳಕೊ ಭವ ತಾಪ ||1||
ಪಂಚ ವಿಂಶತಿ ತತ್ವಗಳಿಂದ
ಆಯಿತೊ ಈ ತನುವು
ಹಂಚಿ ಹಾಕಿ ಉಳಿದ ಚೈತನ್ಯ ತಿಳಿ
ನೀನೇ ಆ ಘನವು ||2||
ಮರದ ಮ್ಯಾಲಿನ ಹಕ್ಕಿ ಹಾರಿದಂಗ
ಹಾರುತೈತಿ ಈ ಮನವು
ಸ್ಥಿರದಿಂದೇ ಖರೆ ಅರಿವಿನಿಂದ ಪಿಡಿದು
ಬೆರಿಸೋನೀ ಘನವು ||3||
ಸನುಮತದಿಂದಲಿ ತನುಮನ ಧನವನು
ಗುರವಿಗಿ ಅರ್ಪಿಸೋ
ಘನ ತ್ರಿಪ್ರಸಾದವನ್ನೇ ಸವಿದು
ಚಿನುಮಯ ನಾಗಿ ಸೂಸೊ ||4||
ಧರಿಯೊಳಗಧಿಕ ಅಲ್ದಿಯ ವಾಸ
ಗುರುಲಿಂಗ ಸರ್ವೇಶ
ಪಾರು ಮಾಡುತನ ಧೀರತನದಿಂದ
ಸದಾ ಅವರ ದಾಸ ||5||

ಶರಣರ ಸೇವೆ ಮಾಡಿ ಮರಣರಹಿತನಾಗೊ
ಶರಣರ ಸೇವೆ ಮಾಡಿ ಮರಣರಹಿತನಾಗೊ
ಕಿಂಕರ ಭಾವದಿಂದ| ದಯಾವಂತ
ಶಂಕರನ ಒಲುಮೆಯಿಂದ ||ಪ||
ಆದಿ ಅನಾದಿಲಿಂದೆ ಸಾಧು ಸಂತ ಶರಣರು
ಶರಣಾಗಿ ನಡೆದಾರೆ ಮರಣವಿಲ್ಲೆಂದಿದಾರು
ವೇದ ವೇದಾಂತಿಗಳು ಬೋಧಿಸಿ ಹೇಳಿದರು ||1||
ಶರಣ ಮಹಿಮೆಯು ತಿಳಿದುಕೊಂಬದಕ
ಹಿಂದಿನ ಜನ್ಮದ ಪುಣ್ಯ ಬೇಕಿದಕ
ಇಂದಿನ ಮಾನವ ಜನ್ಮ ಸಾರ್ಥ ಕಾಗೋದುಕ ||2||
ನಿತ್ಯ ಪ್ರತಿನಿತ್ಯ ಸಂಗದೋಳು ಬೆರೆದು
ಅಂಗದ ಅವಗುಣಗಳನೆಲ್ಲ ಕಳೆದು
ಮಂಗಳ ಮಹಿಮನ ರೂಪ ಕಾಣೊದುಕ ||3||
ಬಸವಾದಿ ಪ್ರಮಥರು ಕೈಎತ್ತಿ ಸಾರಿದರು
ಭಕ್ತಿಯ ಮಾರ್ಗವು ಶ್ರೇಷ್ಠೆಂದು ಹೇಳಿದರು
ಯುಕ್ತಿಲಿಂದೆ ಸಾಧಿಸಿ ಮುಕ್ತಿ ಹೊಂದೋದುಕ ||4||
ಶುದ್ಧ ಸತ್ವದ ಗುಣ ಸಿದ್ಧ ಮಾಡೋದುಕ
ಬದ್ಧ ಭವ ಬಂಧನದಿಂದ ಮುಕ್ತಿ ಹೊಂದೋದುಕ
ಗುರುಲಿಂಗ ಜಂಗಮರ ಕೃಪೆ ಬೇಕಿದಕ ||5||

ಶಿವನಾಮ ನುಡಿ ಇದೇ ಜನ್ಮ ಕಡಿ
ಶಿವನಾಮ ನುಡಿ ಇದೇ ಜನ್ಮ ಕಡಿ| ಈ
ಭವ ರೋಗದ ನೀ ಬೇರ ಕಡಿ ||ಪ||
ಮಾಯಾ ಸರ್ಪಿಗೆ ಬೀಳಲಿ ಬೇಡ
ಆಯಾಸದೊಳು ನೀ ಕೊಡಲಿಬೇಡ
ಕಾಯರಹಿತನ ಮರಿಯಲಿ ಬೇಡ
ಭವ ರೋಗದ ನೀ ಬೇರ ಕಡಿ ||1||
ದುರುಳರ ಸಂಗ ಮಾಡಲಿ ಬೇಡ
ಮರುಳನಾಗಿ ನೀ ಕೊಡಲಿ ಬೇಡ
ಸರಳ ನಾಥನ ಮರಿಯಲಿಬೇಡ
ಭವ ರೋಗದ ನೀ ಬೇರ ಕಡಿ ||2||
ಕುಜನರ ಸಂಗ ಮಾಡಲಿಬೇಡ
ಗಾಂಜೆದಾರು ನೋಡಲೆ ಬೇಡ
ಮೂಜಗದೊಡಿಯನ ಮರಿಯಲಿಬೇಡ
ಭವ ರೋಗದ ನೀ ಬೇರ ಕಡಿ ||3||
ಧರಿಯೊಳು ನಮ್ಮ ಅಲ್ದಿಯ ಗ್ರಾಮ
ಮೆರೆಯುತಿರುವ ಗುರುಲಿಂಗ ಜಂಗಮ
ಪರಮ ಬೋಧವನು ಪಡಿವುದು ನೇಮ
ಭವ ರೋಗದ ನೀ ಬೇರ ಕಡಿ ||4||

ಶ್ರೀಗುರುವೇ ನಿಜ ಇಡು ಅರುವೇ
ಶ್ರೀಗುರುವೇ ನಿಜ ಇಡು ಅರುವೇ
ಜಗದಿ ನಿಮ್ಮ ನಾಮ ಸಾರುವೇ ||ಪ||
ನಿಮ್ಮ ನಾಮವನು ನುಡಿಯೇ
ಪಂಚ ಅಕ್ಷರದ ಕಡಿಯೇ
ಓಂದೋಳು ಭೇದ ನಾನರಿಯೇ
ದೊರೆಯೇ ಕಾಯೊ ಎನ್ನ ಮರಿಯೇ ||1||
ಆರು ಅಕ್ಷರದ ಹಿಂದೆ
ಮೂರು ಅಕ್ಷರದ ಮುಂದೆ
ನಡುವಿನ ಅಕ್ಷರವು ನಿಂದೆ
ತಂದೆ ಜನಿಸಿ ನಾ ಬಂದೆ ||2||
ಪಂಚ ಅಕ್ಷರದ ಅರ್ಥ
ಮಹಾ ಜ್ಞಾನಿಗಳಿಗೆ ಗುರ್ತ
ಸತ್ತು ಹುಟ್ಟಿ ಮಾನವರಿಗೆ ವ್ಯರ್ಥ
ಸಲ್ಲುವದು ಅಲ್ದಿ ಈಶಗೆ ತುರ್ತ ||1||

ಶ್ರೀಗುರುವರ ಗಂಗಾಧರ ಮನೋಹರ
ಶ್ರೀಗುರುವರ ಗಂಗಾಧರ| ಮನೋಹರ
ಸದಾಶಿವ ಶಂಕರ ||ಪ||
ಗುರುವರಪುರಹರ ಸದಾಶಿವ ಶಂಕ
ಪರಮಾನಂದ ಪಾರ್ವತಿ ಎದುರ
ಪರಿಪರಿಯಿಂದ ನಾಟ್ಯ ಮಾಡುವರ
ಮನೋಹರ ಸದಾಶಿವ ಶಂಕರ ||1||
ಕೈಲಾಸ ಮೇಲೆ ನೀನೆ ಕೇವಲ
ನಿನ್ನಗಿಂತ ದೊಡ್ಡವರು ಯಾರಿಲ್ಲ
ಗುರುಹರ ಕೊರಳಲಿ ಸರ್ಪದ ಹಾರ
ಮನೋಹರ ಸದಾಶಿವ ಶಂಕರ ||2||
ರುದ್ರಾವತಾರದಲ್ಲಿ ತೆಗೆದಿ ಬ್ರಹ್ಮನ ಶಿರ
ಮಾಡಿದಿ ತ್ರಿಪುರ ಸಂಹಾರ
ತಾರಕಾಸುರ ದೈತ್ಯನ ಸಂಹಾರ
ಮನೋಹರ ಸದಾಶಿವ ಶಂಕರ ||3||
ಪಂಕಜ ವದನ ಮಾಡೊ ಪವಿತ್ರ
ಪಾರ್ವತಿ ರಮಣ ಕಾಯೊನೀ ಹರ
ಅಲ್ದಿಯ ಊರ ಗುರುಲಿಂಗ ದೇವರ
ಮನೋಹರ ಸದಾಶಿವ ಶಂಕರ ||4||

ಸತ್ತಿಲ್ಲ ಯಾರೂ ಸತ್ತಿಲ್ಲ ಸತ್ತವರಿಗಾಗಿ
ಸತ್ತಿಲ್ಲ ಯಾರು ಸತ್ತಿಲ್ಲ ಸತ್ತವರಿಗಾಗಿ ಯಾರೂ ಅತ್ತಿಲ್ಲ ||ಪ||
ಸತ್ತುಳ್ಳ ಪ್ರಾಣಿಗೆ ಮತ್ತೆ ಜನ್ಮಗಳಿಲ್ಲ
ಎತ್ತೇಸು ಜನ್ಮ ತಾಳಿ ಇತ್ತೆ ತಿರಗುವರಲ್ಲ ||1||
ನಾನಾ ಜನ್ಮಗಳೆತ್ತಿ ಶ್ವಾನಶೂಕರ ಕತ್ತಿ
ತಾನಾರೆಂಬುದು ತಿಳಿದು ಅಳಿದು ಉಳಿದ ಮ್ಯಾಲೆ ||2||
ಧರಿಯೋಳು ಅಲ್ದಿವಾಸ ಗುರುಲಿಂಗ ಸರ್ವೇಶ
ಅವರಿಂದ ಪರವರಿತು ಜೀವನ್ಮುಕ್ತಿಯ ಪಡೆದು ||3||

ಸಂತರ ಸಂಗವ ಮಾಡಮ್ಮ ಹಡದಮ್ಮ
ಸಂತರ ಸಂಗವ ಮಾಡಮ್ಮ| ಹಡದಮ್ಮ
ಸಂತರ ಸಂಗವ ಮಾಡಮ್ಮ|| ಹಡದಮ್ಮ ||ಪ||
ಕುಂತಲ್ಲಿ ನಿಂತಲ್ಲಿ ನುಡಿಶಿವನಾಮ ||ಅ.ಪ||
ಗುರು ಮುಖದಿ ತತ್ವಮಸಿ ಮಹಾವಾಕ್ಯವ ಕೇಳಿ
ಶ್ರವಣಾದಿ ವಿಚಾರ ಮಾಡಮ್ಮ ||1||
ಪಂಚೀಸ ತತ್ವಗಳು ಹಂಚಿಹಾಕಿ ಮಿಂಚಿನಂತೆ
ಸಚ್ಚಿದಾನಂದನ ತಿಳಿಯಮ್ಮ ||2||
ದೇಹ ಇಂದ್ರಿಯ ಪ್ರಾಣ ಮತಿ ಹಮ್ಮಾದಿ ದೃಶ್ಯ
ಬ್ರಹ್ಮೆಂದು ತಿಳಿಯಲು ಬ್ಯಾಡಮ್ಮ ||3||
ದೇಶಕ್ಕೆ ಅಲ್ದಿಯವಾಸ ಗುರುಲಿಂಗ ಸರ್ವೇಶ
ಆತನ ಪಾದಕೆ ಎರಗಮ್ಮ ||4||

ಸುರತಿಟ್ಟು ಸುಜ್ಞಾನಿ ಕೇಳಿರಿ
ಸುರತಿಟ್ಟು ಸುಜ್ಞಾನಿ ಕೇಳಿರಿ
ಹೇಳತೀನಿ ಗುರು ಹಿರಿಯರ
ಜನ್ಮಕೆ ಬಂದು ಗುರು ಕೃಪಾಲಿಂದೆ
ದೇಹ ಅಯಿತ್ರಿ ಉದ್ಧಾರ ||ಪ||
ಈ ಪ್ರಪಂಚದೊಳಗ ಖಾಲಿ ಮಾಯಾ
ವ್ಯರ್ಥ ತಿಳಿರಿ ಸಂಸರ
ಮೂರು ದಿನದ ಸಂತಿ ಇದು
ತಿಳಿದು ಮಾಡರಿ ವ್ಯಾಪಾರ ||1||
ಗುರುಲಿಂಗ ಜಂಗಮ ಪಾದೋದಕ ಪ್ರಸಾದ
ಅಂಗಕ್ಕೆ ವಿಭೂತಿ ತಯ್ಯಾರ
ಆಕಾಶದಲ್ಲಿ ರುದ್ರಾಕ್ಷಿ ನೋಡಿ
ಬಂದ ಕರ್ಣದಲ್ಲಿ ಮಂತರ ||2||
ದೇಶದೊಳಗೆ ನಮ್ಮ ಅಲ್ದಿಯ ಊರ
ಮಹಾಗುರು ಸೂರ್ಯ ಚಂದರ
ಚರಣ ಪಿಡಿದು ನಾವು ಸ್ಮರಣೆ ಮಾಡುತೇವು
ನಿಶ್ಚಿಂತಾಗಿ ನಿರ್ಧಾರ ||3||

ಸ್ಮರಿಸುವೆ ನಾ ಗಿರಿಧರ ಶ್ರೀಧರ ಮನೋಹರ
ಸ್ಮರಿಸುವೆ ನಾಗಿರಿಧರ ಶ್ರೀಧರ
ಮನೋಹರ ಮೇಘ ಶ್ಯಾಮಗೆ ||ಪ||
ಶೋಭಿಪ ಪೀತಾಂಬರ ಜರತಾರಿ
ಕಟ್ಟಿರುವನು ಮಾಲ ಪರಿಪರಿ
ಗರುಡ ವಾಹನ ಮುರಳೀಧರನ
ಮನೋಹರ ಶ್ರೀಮುಖ ಮಾಧವಗೆ ನಾ ||1||
ಗಂಗಾಧರನ ಗೌರೀವರನ
ಸರ್ಪ ಸದಾ ಭೂಷಣನ
ನಂದಿ ವಾಹನ ಕಂತುಹರನ
ಇಂದು ಸಭೆಯೋಳು ವಂದಿ ಸುತಲಿ ನಾ ||2||
ದೇಶದೋಳು ವಾಸವಾದ
ಅಲ್ದಿ ಪುರದ ಈಶನನ್ನು
ಧ್ಯಾಸ ನಾನು ಮರಿಲಾರೆ
ಮೂಲಮಂತ್ರ ಜಪಿಸುತಲಿ ನಾ ||3||

ಸಾವಿರ ಕೊಬ್ಬರು ಸಾಧುರು ಹುಟ್ಟು
ಸಾವಿರ ಕೊಬ್ಬರು ಸಾಧುರು ಹುಟ್ಟುವರ
ಗುರುವೇ ಸಾಧುರು ಹುಟ್ಟುವರ|| ಹಿಂಗ
ನೂರಕೊಬ್ಬರು ಸತಿಪುರುಷರ ಸಂಸಾರ ||ಪ||
ಈಗಿನ ಸಾಧೂರ ಆವ ಬಗಿ ಬ್ಯಾರ
ಸಾಲ ಕೊಟ್ಟವರ ತಿರಗಿ ಕೇಳಿದರ
ಸಾಧುರಂತೆ ವೇಷ ತಾವು ಧರಿಸುವರ
ಗುರು ಧರಿಸುವರ|| ಹಿಂಗ
ನೂರಕೊಬ್ಬರು ಸತಿ ಪುರುಷರ ಸಂಸಾರ ||1||
ಆರು ಮಂದಿಗರಿದು ಮೂರು ಮಂದಿ ಜರಿದು
ಪ್ರಪಂಚ ಹಿಡಿದು ಪರಮಾತ್ಮ ನೆನೆದು
ಬಳಸಿ ಬ್ರಹ್ಮಚಾರಿ ಯಾರು ಹಾರ
ಭವ ನೀಗಿದವರ|| ಹಿಂಗ
ನೂರಕೊಬ್ಬರು ಸತಿಪುರುಷರ ಸಂಸಾರ ||2||
ಅಲ್ದಿಯ ಗುರು ಲಿಂಗಪ್ಪನವರ
ಅಷ್ಟಾವರಣದ ಆಚಾರ ಪೂರ
ಪ್ರಪಂಚ ಹಿಡಿದು ತಾವು ನಡೆದವರ
ಗುರುವೆ ನಡೆದವರ|| ಹಿಂಗ
ನೂರಕೊಬ್ಬರು ಸತಿ ಪುರುಷರ ಸಂಸಾರ ||3||

ಜ್ಞಾನದ ಖೂನಿಲ್ಲ ಅಜ್ಞಾನಿಗಿ
ಜ್ಞಾನದ ಖೂನಿಲ್ಲ ಅಜ್ಞಾನಿಗಿ ಜ್ಞಾನದ ಖೂನಿಲ್ಲ
ಜ್ಞಾನದ ಅಜ್ಞಾನದ ಮಧ್ಯದಕೀಲ ಗುರುಪುತ್ರನೆ ಬಲ್ಲ ||ಪ||
ಕತ್ತಲೆ ಖೂನಿಲ್ಲ ಬೆಳಕಿಗಿ ಕತ್ತಲೆ ಖೂನಿಲ್ಲ
ಕತ್ತಲ ಖರ್ಮದ ಖಳಿಗೇಡಿ ಗೂಗಿಗೆ ಬೆಳಕಿನ ಗರ್ಜಿಲ್ಲ ||1||
ಕೋಗಿಲೆ ಸಮನಲ್ಲ ಕಾಗಿ ಕೋಗಿಲೆ ಸಮನಲ್ಲ
ಪಿಂಜರಿದೊಳಗೊಯ್ದಿಟ್ಟರೆ ಕಾಗಿ ರಾಗ ಮಾಡೊದಿಲ್ಲ ||2||
ಕುದುರೆಯ ಸಮನಲ್ಲ ಕತ್ತೆ ಕುದುರೆಯ ಸಮನಲ್ಲ
ಜೀನು ಹಾಕಿ ಶೃಂಗಾರ ಮಾಡಿದರೆ ಚಾಲ ಹೋಗೊದಿಲ್ಲ ||3||
ತುಪ್ಪದ ಸರಿಯಿಲ್ಲ ತೈಲ ತುಪ್ಪದ ಸರಿಯಿಲ್ಲ
ತಿಪ್ಪಿಯ ನೀರಿಗಿ ಒಪ್ಪಿದ ಕಪ್ಪಿಗಿ ತೀರ್ಥ ಯೋಗ್ಯವಲ್ಲ ||4||
ಪತಿವೃತೆ ಸಮನಿಲ್ಲ ಗರತಿ ಪತಿವೃತೆ ಸಮನಿಲ್ಲ
ಪತಿಯ ನಿಂದೆ ಮಹಾಪಾತಕ ಸ್ತ್ರೀ ಪತಿವ್ರತೆಯಾಗೊದಿಲ್ಲ ||5||
ಗುರುಲಿಂಗನ ಲೀಲ ಅಲ್ದಿ ಗುರುಲಿಂಗನ ಲೀಲ
ಅರಿತು ಮರೆತರವ ರಜ್ಜಮುತ್ಯಗೆ ಸಾವು ತಪ್ಪೋದಿಲ್ಲ ||6||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಖಟಕಚಿಂಚೋಳಿ ಅಪ್ಪಾರಾಯ ಕುಲಕರ್ಣಿ ಇವರ ತತ್ವಪದಗಳು

ಅಪರಾಧ ಕ್ಷಮೆ ಮಾಡೊ ಶರಣು ನಾ ನಿಮಗೆ
ಅಪರಾಧ ಕ್ಷಮೆ ಮಾಡೊ ಶರಣು ನಾ ನಿಮಗೆ
ನಂಬಿದೆ ನಿಮ್ಮ ಚರಣ ಮರಿಬ್ಯಾಡೊ ಎನಗೆ ||ಪ||
ಆರು ಕೊಳ್ಳುವ ದಾಟಿ ಮೂರು ಕೊಳ್ಳಿಳಿದೇನೊ
ಆರು ಮೂರೊಂಬತ್ತು ನವನಾಳಳಿದೇನೊ ||1||
ಸಪ್ತ ವ್ಯಸನವೆಂಬೊ ತೆನೆ ಹಾಲ ಕುಟ್ಟಿ
ಆಶೆ ವಿಷಯವೆಂಬ ಕಂಗಳ ಕಟ್ಟಿ ||2||
ಜಡ ದೇಹದಾಸೆ ನಾ ಇಟ್ಟಿಲ್ಲೊ ಗುರುವೆ
ಇಷ್ಟು ದಿವಸ ಇದಿಮಾಯಿ ಹಾಕಿದಳೊ ಮರುವೆ ||3||
ನಿಮ್ಮ ಹಸ್ತ ಕೃಪಲಿಂದೆ ಕಂಡೇನೊ ಭೃಕುಟ
ಮಲ್ಲಿಕಾರ್ಜುನ ಛಾಯಾ ಉನ್ಮಯಿ ಪೀಠ ||4||

ಇದು ಏನು ಬಂತೋ ವಿಪರೀತ ಕಾಲ
ಇದು ಏನು ಬಂತೋ ವಿಪರೀತಕಾಲ
ಇಂದು ಮುನಿದನೊ ಶ್ರೀಹರಿ ನಮ್ಮ ಮ್ಯಾಲ ||ಪ||
ನಾನು ಮಾಡಿದೆ ಪಂಥ ಭಾಗ್ಯುಳ್ಳವಾದೆನಂತ
ಪ್ರಾರಬ್ಧ ಸಂಚೀತ-ಬೆಳಕೋತ ನಡೆತ ||1||
ಧನವು ಬೆಳೆವಂಥ ಹೊಲ ಏನೇನು ಬೆಳಿಲಿಲ್ಲ
ಹೊಟ್ಟಿಗೆ ತಂದ ಸಾಲ ತಿರಿಗಿ ಕುಡುವೋದಿಲ್ಲ ||2||
ಧೀರ ಸದ್ಗುರು ನಾಥ ಮಲ್ಲಿಕಾರ್ಜುನ ದಾತ
ಧೈರ್ಯ ಬಿಡುಬಾರದಂತ ಹೇಳ್ಯಾರೊ ಮಾತ ||3||

ಎಚ್ಚರ ಆಗಿರಿ ಇನ್ನಾ ತಿರಗಿ ಬಾರದು
ಎಚ್ಚರ ಆಗಿರಿ ಇನ್ನಾ ತಿರಗಿ ಬಾರದು ನರಜನ್ಮ ಕಠಿಣಾ ||ಪ||
ಲಕ್ಷ ಚೌರ್ಯಯಿಸಿಯ ಫಿರಕಿ ತಿನ್ನುವದು ಗಿರಕಿ
ಮುಣಗದು ಭವ ನರಕಿ ತಿಳಿ ಮನಸಿನ ಹಚಿಕಿ
ಗುರು ಚರಣದಲ್ಲಿ ಮನಸಿಕಿ ನವಖಂಡದೆಹ ಹುಡಕಿ
ನೋಡಬೇಕೊ ಮನಸಕ್ಕಿ ದಶಖಂಡದ ಖಿಡಕಿ ||1||
ಮುರುವರಿ ಮಳಾ ತೊಟಾ ಬೆಲಿ ಜಿಗಿದು ನಾಲ್ಕು ಪಾಡಗಳಿಟಾ
ಮುರುಠಿ ಕಾಣಾ ಹಸನಿಟಾ ಆರು ಹೊಡೆದು ಬಿಡೊದು ಕಷ್ಟ
ಮಧ್ಯ ಭಾವಿಯಲ್ಲಿ ತ್ರಿಕೊಟ, ಕಂಡೆನೋ ನಾ ಬ್ರುಕೂಟ
ಬಿತ್ತಿ ಬೆಳೆದು ಮಾಡಿಟ್ಟ ಸವಿ ಮಾಡಿರಿ ಊಟ ||2||
ಬೈಲೊಳೊ ಬಾಗಶಾಯಿ ನಾನಾ ತರಹದ ಹೂ ಕಾಯಿ
ಬೇಕಾಗಿಲ್ಲೊ ನಿನ್ನ ಕೈ ಕಲ್ಪವೃಕ್ಷದ ಬಾವಿ
ಪಂಚಾ ಅಮುೃತ ನೀಸವಿ ಯೋಗಿಗಳಗಿ ತೆರದ ಬಾಯಿ
ಗುರು ಮಲ್ಲಿಕಾರ್ಜುನ ಮಿಠಾಯಿ ಚಿಂಚೊಳಿಯಲ್ಲಿ ಸ್ಥಾಯಿ ||3||

ಓಂ ನಮೊ ಶ್ರೀ ಗುರುರಾಯ ನಿಮ್ಮ
ಓಂ ನಮೊ ಶ್ರೀ ಗುರುರಾಯ ನಿಮ್ಮ ಭಜಿಸುವೆನ್ನಯ್ಯಾ ||ಪ||
ಚಿದ್ರೂಪ ಚಿದಘನ ತೇಜ
ಮುಲ ಮಂತ್ರ ಪಂಚಾಕ್ಷರಿ ಬೀಜ
ಆದಿ ಪ್ರಾಣ ಮಾಡಿ ನಿಲಿಸಿ ಉತ್ತಮ
ಉತ್ತಮ ಮಧ್ಯ ಸೋಮ ಝಂಕಾರಣ ನಾಮ
ಪ್ರಜಿಸುವೆನು ನಿತ್ಯ ನೇಮ
ನುಡಿವುವದೊ ಝಂ ಸೊಂ ಕಾರಣನಾಮ ||1||
ಚವದ ಭವನ ಮಧ್ಯ ಭಾಗ
ಏಕವಿಸ ಸ್ವರ್ಗದ ಮೇಲೆ ಅದರ ಪೀಠದ ಭಾಗ
ಏರಡು ಮಧ್ಯದಿ ಸುಸುಮ್ನ
ಸುಸಂದಿಲೆ ಊಲ್ಲಟಾ ಮಾರ್ಗದಿ ವಾಯು ಸುಸಮ್ನ
ನಿಲಸಿ ಜೊತ ಕೂಡಿ ಸಂಗಮ
ತ್ರಿಕುಟದಲ್ಲಿ ನೊಡೊ ಲಿಂಗನ ಮಹಿಮಾ ||2||
ಸಹಸ್ರ ದಳದ ನಿಮ್ಮ ವಾಸ
ಚಂದ್ರ ಸೂರ್ಯ ಬಾನು ತೇಜ ಪ್ರಕಾಶ
ಝಗಾಟಿ ಜಂಗನಾ ಭೇರಿ ಖಡ ಖಡ
ನಾದ ಬಡ ವಾಧ್ಯ ಘಡ ಘಡ ಘಡ
ರೂಪ ಹರಿ ಹರ ಮನ ಸ್ಥಿರನಾಮ
ಗುರು ಮಲ್ಲಿಕಾರ್ಜುನ ನಾಮ ಚಿಂಚೊಳಿ ನೇಮ ||3||

ಓಮನೆಂದು ಕುಟ್ಟನು ಬಾರೆ
ಓಮನೆಂದು ಕುಟ್ಟನು ಬಾರೆ
ಸೋಮನೆಂದು ಬೀಸನು ಬಾರೆ
ಓಮ ಸೋಮ ಎರಡು ತಿಳಿಯಬೇಕೆ ನಾರಿ
ಹಾಕವ್ವ ಯಾರಿ ||ಪ||
ಓಮ ಸೋಮ ಎರಡು ಅಕ್ಷರ ತಿಳಿದರೆ
ಗುರು ಕೀಲಿ ಆವಾಗ ದೊರದತ್ತೆ ನಾರಿ ||1||
ಗುರುಕೀಲಿ ದೊರೆದರೆ ದುರ್ಗಣ ಅಳಿಬೇಕೆ
ಮಾಯ ಪದ ಪಂಚ ಸುಡಬೇಕೆ ನಾರಿ ||2||
ಪರಪಂಚೆಂಬ ಕಳವಿ ಪರಮಾರ್ಥೆಂಬ ಅಕ್ಕಿ
ಜ್ಞಾನದ ಒಣಕಿಲಿ ಕುಟ್ಟಬೇಕೆ ನಾರಿ ||3||
ಕಲ್ಪನೆಂಬ ಉಸುಕ ನಾಯ್ಡು ಸೂಕ್ಷುವೆಂಬ ಅಕ್ಕಿ ತೆಗೆದು
ನಿಜವೆಂಬ ನೀರ ಎಸರಿಡಬೇಕೆ ನಾರಿ ||4||
ಅಂಗವನ್ನು ಹದವ ಮಾಡಿ ಗಡಗಿ ತೂಕವನ್ನು ನೋಡಿ
ಮೂರು ಕಲ್ಲಿನ ಒಲಿ ಹುಡಬೇಕೆ ನಾರಿ ||5||
ಕಾಮಕ್ರೋಧವೆಂಬ ಕಿಚ್ಚು ದುರುಳ ಬುದ್ಧಿ ಹುಲ್ಲ ಹಚ್ಚು
ಗುರು ಮಂತ್ರ ಬೆಂಕಿಯ ಹಚ್ಚಬೇಕೆ ನಾರಿ ||6||
ಜಂಗಮಗ ಎಡೆಯ ಮಾಡಿ ಮಹಲಿಂಗಗ ನೌದಿ ತೋರಿ
ಗುರುಹಸ್ತ ಪರಸಾದ ಮುಗಿಯಬೇಕೆ ನಾರಿ ||7||
ಅನುಮಾನೆಂಬ ಅಡಕಿ ಒಡೆದು ಸದಗುರು ಪಾದ ಪಿಡಿದು
ಸತ್ವದಿಂದೆ ಸಂತರ ಸಂಗ ಮಾಡಬೇಕೆ ನಾರಿ ||8||
ದೇಶಕೆ ಚಿಂಚೋಳಿ ವಾಸ ಸಿದ್ಧನ ಬಳಿ
ಗುರು ಮಲ್ಲಿಕಾರ್ಜುನಗ ನೆನಿಯ ಬೇಕೆ ನಾರಿ ||9||

ಗುರವಿಗಿ ಶರಣ್ಹೋಗೊ ಮರುಳೆ
ಗುರವಿಗಿ ಶರಣ್ಹೋಗೊ ಮರುಳೆ | ನಿನ್ನ
ದೇಹದ ಅನುಕೂಲ ತಿಳಿಸುವ ಕೇಳ್
ವ್ಯರ್ಥ ಕಾಡುಬ್ಯಾಡೊ ಸುಳ್ಳೇ ||ಪ||
ಕಂಡ ದೇವರದು ಬೀಳುತಿ ಕಾಲ | ಗುರು
ನಿನ್ನಲ್ಲಿ ಇರುಲಾಕೆ ನಿನಗರುವಿಲ್ಲ
ಮಾ ತಾಡ್ಯದೇನೋ ಕಲ್ಲ ||1||
ತೀರ್ಥ ಯಾತ್ರಾ ಮಾಡುವ ಭ್ರಾಂತಿ ನಿನ್ನಗ | ತ್ರೀ
ಸಂಗಮ ನಿನ್ನಲ್ಲಿ ತ್ರಿವೇಣಿ ಗಂಗ
ಅಲ್ಲಿ ಮುಳುಗ್ಯಾಗೋ ಗುಂಗ ||2||
ತೀರ್ಥ ಅನುವಾದೆ ಜ್ಞಾನದ ಗುಂಡ | ನಮ್ಮ
ಧರೆಯೋಳು ಚಿಂಚೋಳಿ ಮಲ್ಲೇಶ ಗೂಡ
ಆತನ ಚರಣ ಕೊಂಡಾಡ ||3||

ಗುರುದಯ ಕಮಿ ಆದಂಗೈತಾ
ಗುರುದಯ ಕಮಿ ಆದಂಗೈತಾ | ಎನ್ನ
ಪ್ರಾರಬ್ಧ ದೊಳಗಿಲ್ಲ ಟೇಕಣಿ ತೀರ್ಥ
ನಾಕುಂತ ಮೈ ಮರತಾ …
ಗುರು ದಯ ಕಮಿ ಆದಂಗೈತಾ ||ಪ||
ಗುರು ತೋರಿದ ಸೂಚದ ಗುರುತ | ಭ್ರಾಂತಿ
ಅಜ್ಞಾನ ಕಮಿ ಇದು ಬಲತ್ರಾಯ ಬಿತ್ತ
ನಾ ಕುಂತ ಮೈ ಮುರತಾ ||1||
ನಯನ ಅಂಗುಷ್ಠ ಏಕಾದಂಗೈತಾ | ನಯನ
ನಾಶೀಕ ಸಮೀಪಿದ್ದು ಭೇಟಿ ಇಲ್ಲ ಧೊಯಿತ
ನಾಕುಂತ ಮೈ ಮರತಾ ||2||
ದೇಶದೋಳು ಚಿಂಚೋಳಿ ಸಿಸ್ತ| ಗುರು-
ಮಲ್ಲಿಕಾರ್ಜುನ ದಯ ಪರಿಪೂರ್ಣ ಇತ್ತ-
ನಾ ಕುಂತ ಮೈ ಮರತಾ . . . ||3||

ಗುರುವಿನ ಗುರುತವ ತಿಳಿಯಬೇಕೆ ಗೆಳದಿ
ಗುರುವಿನ ಗುರುತವ ತಿಳಿಯಬೇಕೆ ಗೆಳದಿ| ತಿಳಿ
ಬೀಸಾನು ಗೋಧಿ ||ಪ||
ಬೀಸಾನು ಗೋಧಿ ಹಸನಾಗಿ ಹಾದಿ
ಹಾದಿದೊಳಗೆ ಮೂರು ಬೀದಿ ಕಲತಾವ ಗೆಳದಿ ||ಅ.ಪ||
ನೀರಿನೋಳು ಕೊಡ ತುಂಬಿ ಮಾಡಿ ಇಟ್ಟಾರ ಸಿಂಬಿ
ಕೊಡ ಬಿಟ್ಟು ಸಿಂಬೀನೆ ಒಯ್ದಾರೆ ಗೆಳದಿ ||1||
ಸುತ್ತಮುತ್ತ ಆವಾರಗೋಡಿ ನಟ್ಟ ನಡುವೆ ದೇವರ ಗುಡಿ
ಗುಡಿಯ ಮುಂದ ದೇವರಿಗಿ ಕೊಯ್ದಾರೆ ಗೆಳದಿ ||2||
ಕೊಯ್ದ ಮಾಡ್ಯಾರ ಅಡಗಿ ಅಡಗ್ಯಾಗ್ಹಾಕ್ಯಾರ ಗಡಗಿ
ಅಡಗಿ ಬಿಟ್ಟು ಗಡಗೀನೆ ಉಂಡಾರೆ ಗೆಳದಿ ||3||
ಚಿಂಚೋಳಿ ಊರ ಚಂದ ಪಗಡಿ ಬಾಜಾರ ಮುಂದ
ಗುರುಮಲ್ಲಿಕಾರ್ಜುನಗ ನೆನಿಯ ಬೇಕೆ ಗೆಳದಿ ||4||

ಧೀರಾ ಶ್ರೀಗುರು ಮಹರಾಜ್ಯ ಬಾರೊ ಕರುಣದಲ್ಲಿ
ಧೀರಾ ಶ್ರೀಗುರು ಮಹರಾಜ್ಯ ಬಾರೊ ಕರುಣದಲ್ಲಿ
ನೀನು ಬಾರೋ ಕರುಣದಲ್ಲಿ
ವಿಶಾನೇತ್ರ ಇಂಗನಲ ನೀ ದೋಶವಾಗಿರುವೆ
ಕುಸಿನಂತೆ ಜಗದೋಳಾಡಿ ಈನಾಗಿರುವೆ ||ಪ||
ಅಷ್ಟಮದ ಇಂಗೆಲನೆ ಸುಟ್ಟು ದಿಟ್ಟನಾಗಿರುವೆ
ದೃಷ್ಟಿ ಭ್ರಷ್ಟರನೆಲ್ಲರ ಕೊಂದಿ ಶ್ರೇಷ್ಟನಾಗಿರುವೆ ||1||
ಮೈಸಾಸುರನ ಮರದಾನವಾ ಮಾಡಿ ಮಹಿಮೆ ಘನ ಉಂಡೆ
ಸಂಜನರ ಶ್ರೀ ಜಡಿರಾಯ ಆಗಿ ಆರು ಮುರು ಸರಿ ಉಂಡೆ ||2||
ಧಿರಾಶ್ರೀ ಗುರು ಮಲ್ಲಿಕಾರ್ಜುನ ಮಹರಾಜ
ಜಗದಲ್ಲಿ ಚಿಂಚೋಳಿ ವಾಸ ಗುರುರಾಜ್ಯ ||3||

ನಾ ಮೂಢ ಎನಗೊಲಿಸಮ್ಮ
ನಾ ಮೂಢ ಎನಗೊಲಿಸಮ್ಮ | ಬ್ರಹ್ಮ
ಹರಿಹರಗೆ ಹಡದಂಥ ಜನನಿ ತಾಯಮ್ಮ ||ಪ||
ಆದಿ ಅನಾದಿಯ ಮನ್ನ | ನಿಜ
ರೂಪಕ್ಕೆ ರೂಪಾಗಿ ಮುನ್ನ |ನಿಜ
ಪ್ರಥಮದಲ್ಲಿ ಪಂಚಗುಣ | ಇದ
ರಂತೆ ತ್ರಿಮೂರ್ತಿ ಬ್ರಹ್ಮ ವಿಷ್ಣು ಶಿವನ ||1||
ಆಕಾರ ಮಾಡಿದಿ ರಚನ | ಸ್ವರ್ಗ
ಮರ್ತ್ಯ ಪಾತಾಳ ಮೂರು ಜಗಚಾದ ಭುವನ
ಇದರಂತೆ ಸೃಷ್ಟಿಯ ರಚನ | ಪಿಂಡ
ಬ್ರಹ್ಮಾಂಡ ಭುವನಕ್ಕೆ ಆದಿ ಸಂಪೂರ್ಣ ||2||
ಎಷ್ಟೆಂತ ಮಾಡಲಿ ಸುತ್ತಿನಾ | ಎನ್ನ
ಬಾಲನ ಅಡಿನುಡಿಗೆ ಆಗಿ ಪ್ರಸನ್ನ
ಉನ್ಮಾನಿ ಗಿರಿವಾಸ ಸ್ಥಾನ | ನಮ್ಮ
ಧರೆಯೋಳು ಚಿಂಚೋಳಿ ಮಲ್ಲಿಕಾರ್ಜುನ ||3||

ನೋಡಿರಿಕಿನ ಸೋಂಗ್ ಮೆರೆವಾಳೊ
ನೋಡಿರಿಕಿನ ಸೋಂಗ್ ಮೆರೆವಾಳೊ
ಕುಂತು ಹುಲಿಯ ಮ್ಯಾಗ ||ಪ||
ಮೂರು ಲೋಕ ಮುರದಾಕ್ಯಳೊ ಒಳಗ
ಆರು ಲೋಕ ನೋಡಿದಾಳೊ ಮ್ಯಾಗ್
ಆರು ಮೂರು ನುಗ್ಗಿದಾಳೊ ಒಮ್ಮಿಗ್
ಮತ್ತೆ ಅಂಭುವಳೊ ಎನ್ನ ಮುಗ ಮ್ಯಾಗಾ ||1||
ಕರಿಯ ಮಾರಿ ರಂಡಿ ಈಕಿ
ಒಳ್ಳೆ ಬಲ್ಲವರಿಗೆ ಮಿಂಡಿ
ಈಕಿನಲ್ಲಿ ತುಂಬಿತೊ ಬ್ರಹ್ಮನ ಬಂಡಿ
ಸತ್ಪುರುಷರಿಗೆ ತೋರಸ್ಯಾಳೊ ಗುಂಡಿ ||2||
ನಾಜುಕ್ಹಾಳೋ ಹೆಣ್ಣಾ ಈಕಿನಲ್ಲಿ
ಪಂಚ ರತ್ನದ ವರ್ಣಾ
ಈಕಿ ಹೋಗಿ ತುಂಬ್ಯಾಳೊ ಎಲ್ಲರ ಕಣ್ಣಾ
ಈಕಿನ ಮಿರಿ ಬೆಳಕ ಸೂರ್ಯನ ಕಿರಣಾ ||3||
ತೈಲ ನಿಲ್ಲ ಬತ್ತಿ | ದೀವಿಗೆ
ಹಚ್ಚಿದಾಳೊ ಜೊತ್ತಿ
ಧರಿಯೋಳು ಚಿಂಚೋಳಿ ಗುರು ಮಲ್ಲಿಕಾರ್ಜುನ ಸತಿ
ಗುರು ಪುತ್ರರಿಗೆ ಈಕಿನಿಂದೆ ಮುಕ್ತಿ ||4||

ವ್ಯರ್ಥ ದಿನಗಳಿಬ್ಯಾಡ
ವ್ಯರ್ಥ ದಿನಗಳಿಬ್ಯಾಡ |
ಸದ್ಗುರುವಿನವಿ ಚರಣ ಪಾದವ ಬಿಡುಬ್ಯಾಡ
ನೀ ನೆನಿ ನೆನಿ ಮೂಢ ||ಪ||
ಪಾಪ ಕರ್ಮ ವಿಷಯ ಲುಬ್ದನಾದಿ | ಪರ
ಸ್ತ್ರೀಯರ ಕಂಡು ಮೋಹಕೆ ಮರುಳಾದಿ
ನೀ ಕಂಡ್ಯೊ ಯಮಬಾಧಿ ||1||
ಮೊದಲೆ ದುಷ್ಟ ಅಷ್ಟವ ಗುಣ ಅಳಿದು | ಕಷ್ಟ
ಬಿಟ್ಟು ಶ್ರೇಷ್ಟಾದಂಥ ಮೂಲವ ತಿಳಿದು
ಸಂಕಲ್ಪವ ತೊಳೆದು ||2||
ಮಾಡೊ ಸಾಧನ ನರ ಜನ್ಮಕ ಬಂದು | ಪರ-
ಬ್ರಹ್ಮ ಗೂಡಿದಾನೊ ನಿನ್ನಲ್ಲಿ ಬಂದು
ನೀ ನೊಡೊ ಕಣ್ಣ ತೆರೆದು ||3||
ಇಡಾ ಪಿಂಗಳ ಸ್ವರ ದಾರಿ ಹಿಡಿ | ಮುಂದೆ
ಆನಂದ ಆದಿಯ ಬ್ರಹ್ಮದ್ವಾರ ನೋಡಿ
ಮಹಾಲಿಂಗನ ಕೂಡಿ ||4||
ಮುಂದೆ ಕಾಣ್ವಾದೊ ರವಿಚಂದ್ರ ಬಿಂಬ | ತೇಜ
ಪ್ರಕಾಶ ಬೆಳಕಿನೋಳು ಬ್ರಹ್ಮಾಂಡ ಶೋಭ
ಗುರು ಮಲ್ಲೇಶ ಶಂಭ ||5||

ಶರಣು ನಾ ಹೋಗಿದನೇ
ಶರಣು ನಾ ಹೋಗಿದನೇ | ಸದ್ಗುರುವಿಗಿ
ಶರಣು ನಾ ಹೋಗಿದನೆ
ಜನ್ಮ ಮರಣ ದೂರ ಮೂಡಿದಂಥವನಿಗಿ ||ಪ||
ಭ್ರಾಂತಿಯ ಹರಿಸಿದನೇ | ಮನಸಿನ
ಚಿಂತನೆಯು ಬಿಡಿಸಿದವನೇ
ಸಂಚಿತ ನೀಗ ಮನ ನಿಶ್ಚಿಂತನಾಗುವ
ಯುಕ್ತಿಯ ತೋರಿದವನೇ ||1||
ಮೊಟ್ಟ ಮೊದಲ ಕಷ್ಟ | ಷಟಸ್ಥಲ
ತಿಳಿದಿಳಿದವ ಶ್ರೇಷ್ಠ
ಭ್ರುಕೂಟ ಮೇಲೊಂದು ತ್ರಿಕೋಟ ನೋಡಿದೆ
ಆನಂದದ ಆಟ ||2||
ಮ್ಯಾಲೆ ಬ್ರಹ್ಮನ ಪೀಠ | ನೋಡಿದವಗೆ
ಕಾಣುವದು ವೈಕುಂಠ
ಶಿಖರ ಶಿವಾಲಯ ಪ್ರಭುದೇವಾಲಯ
ಕಂಡೆನೊ ನಜರಿಟ್ಟ ||3||
ದೇಶದೋಳು ಚಿಂಚೋಳಿ | ಈಶಗುರು
ಮಲ್ಲಿಕಾರ್ಜುನ ಬಳಿ
ಸಜ್ಜನ ಜನ ಆನಂದ ಮನಸಿನ
ಹಾಡಿನ ರುಚಿ ಕೇಳಿ ||4||

ಸ್ವಾಮಿ ಸದ್ಗುರು ಮಹಾದೇವಾ ನಮಿಸುವೆ
ಸ್ವಾಮಿ ಸದ್ಗುರು ಮಹಾದೇವಾ ನಮಿಸುವೆ
ನಿಮ್ಮಗೆ ನಮಿಸುವೆ ನಿತ್ಯ ನಮಿಸುವೆ ||ಪ||
ಮುರು ಮ್ಯಾಲ ಏಂಟ ಏಳು ಆರು ಸೇರುವರು ಯಮ್ಮಗೆ
ಎರಡು ಒಂದು ನಾಲ್ಕು ಐದು ಐದು ತೋರಿಸುವನ್ನೊ ಒಳಗೆ ||1||
ಗಂಗಾ ಯಮನಳೊ ಮಧ್ಯ ಸಮನುಂಟು ಸಂಗಮ ಅಗ್ನಿ ಒಳಗೆ
ರಂಗಾ ಮಂಟಪಾ ಸಹಸ್ರದೋಳೊಲಿಂಗ ಮುರುತಿಗೆ ||2||
ಸುಕ್ಷ್ಮ ಆದಿ ಅನಾಹುತ ಬಾಜು ಅಕ್ಷಯ ಗುಡಿಯದೊಳಗೆ,
ಸಾಕ್ಷಿ ಶ್ರೀಗುರು ಮಲ್ಲಿಕಾರ್ಜುನ ಮೋಕ್ಷದಾಂತನಿಗೆ ||3||

ಸರ್ವವೇಶಮ ಗುರು ಭಾವ ಭರಣ
ಸರ್ವವೇಶಮ ಗುರು ಭಾವ ಭರಣ
ಶರಣಾಗ್ತಶಿರ ಇಡುವೆ ತಮ್ಮ ಚರಣ ||ಪ||
ಮದ ಮಚ್ಚರ ಇತ್ಯಿಂದಿ ಐಶ್ಚರ್ಯ ಸಮನ ಹೃದಯಾದಿ
ಬೋಧ ಸುಜ್ಞಾನ ನಯಾನದಿ ನಾಲ್ಕು ಆರು ವಶಾದ್ಯಾದಿ
ಸೇಗಣ ಅರಿಯಲಾರದು ಸೋಡಷಗಣರ ಪೂರ್ಣ ಆಗದು ಸ್ಮರಣ ||1||
ದ್ವಿದಳಾದಿ ದಳಾ ಮಧ್ಯ ಗಂಗಾದಿ ಯಮುನಾ
ನಡುಗರ್ಭ ಯೋಗಾಧಿ ಕಲಿಯುವ ಸುಸ್ಮನಾ
ಆಗುವೆ ಸಂಗಮ್ಮಾ ತ್ರಿವೇಣಿನಾ ಸತ್ಪುರುಷರು ಸ್ಪರ್ಶ ಮಾಡುವ ಸ್ಥಾನ ||2||
ಬ್ರಹ್ಮರಂಧ್ರ ಪೂರಾ ಚಂಕರ ಜೊತಿಯ ಪಾರಾ
ರವಿ ಕೂಡಿ ದ್ಪಿಪ್ತಿಯ ತೊರುವ ಪೈಪರಾ
ದಳ ಸಹಸ್ರ ಕಮಲದೋಳೊ ಕಿರಣಾ ಗುರು ಮಲ್ಲಿಕಾರ್ಜುನ ||3||

ಹಿರಾಗಡತಿ ನೀವು ಆಗಿ ಬಂದಿರಿ
ಹಿರಾಗಡತಿ ನೀವು ಆಗಿ ಬಂದಿರಿ ಗೊಲಿ ಆಡದಕ
ಜರ ಸಂಭಾಳಸೊ ನಮ್ಮಾ ಗೊಲಿಯ ಚೋಟು ಬಂತೊ ತೆಲಿಯಮ್ಯಾಕ ||ಪ||
ಎಕ್ಕಲ ಖಜಾ ಎ ಓಂಕಾರ ಗೋಲಿ ಎಲ್ಲಿ ಇತ್ತೊ
ದುಡ್ಡಿಗಿ ರಾಜಾ ದುಡ ದುಡದು ಇಲ್ಲಗಿ ಹ್ಯಾಂಗ ಬಂತೊ
ತಿರಣಂ ಭೋಜ ತೀನ ತಾಳದಲಿ ಗೋಲಿ ತಿರಗುತ್ತಿತ್ತೊ
ಚಾರಿಗಿ ಚಂಡು ಚಾರ ಖಾನದಲಿ ಮೋಜ ಮಾಡುತಿತ್ತೊ
ಪಾಚಗಿಪಚಿಡು ಸ್ಪಷ್ಟ ಹೇಳತಿನಿ ಒಚಿದೆ ಫಾಜಕ ಇತ್ತೊ ||1||
ಸೀಮನ ದಂಡು ಸತ್ರಾ ಮಾತು ಹೇಳಭ್ಯಾಡ ಸುದ್ಧಿ
ಸಾತ ಪಟಾಲ ಸಪ್ತಪಾತಳ ಸ್ವರ್ಗಲೋಕ ತಂದಿ
ಆಟಪ ನಲ್ಲಿ ಆಟೊ ಪ್ರಹರ ಕಾಯುತ್ತಿತ್ತು ಮಂದಿ
ನಮ್ಮನ ಗೊಟ ನವಖಂಡ ಪ್ಲಥ್ವಿ ತಿರಗುತಿತ್ತು ನಂದಿ
ದಶಕಿ ಚೋಟು ದಶವತಾರ ಒಟ್ಟು ಎಷ್ಟು ಮಂದಿ ||2||
ಓ ಓ ನೆಂಬದು ಓದಿ ಹೇಳಿದ ವಿದ್ಯದ ಗುರು ನಮ್ಮ
ಹಲಗಿಯ ಪ್ರಜೆ ಮಾಡಿ ಹೇಳಿ ಕಲಿಸಿದ ಓ ನಾಮ ||3||
ಎಕ್ಕಲ ಖಜಾ ದಾವತಕೊಂಡು ಬಂದನೋ ಜನ್ಮಾಕ
ದುಡ್ಡಿಗಿ ರಾಜಾ ಆಕರಾಯಿತೊ ಕಾಯಪೂರ ಕೊಡುಲಾಕ
ತಿರಣಂಭೊಜ ತ್ರಿಹುಣಾಕಾರ ಕಲತವೋ ತ್ರಿಕೂಟಕ
ಚಾರಿಗಿ ಚಂಡು ನಾಲ್ಕು ದೇಹ ತಿರುಗಿ ನೊಡೊ ಅದಕ
ಪಾಚಾಗಿ ಪಚಿಡು ಪಂಚತತ್ವದ ಬೆಳಕ ಬಿತ್ತೊ ಮ್ಯಾಕ
ಸೀಮನ ದಂಡು ಷಡ್ವೀಕಾರ ಮಡಚ್ಯಾವೊ ಹಿಂದಕ ||4||
ಸಾತಪಟಾಲ ಸಪ್ತ ಪಾತಾಳ ವ್ಯಸನಗಳು ಎರಕ
ಆಟಪನಲ್ಲಿ ಅಷ್ಟಮದಗಳು ಕೂಡಿ ಬಿದ್ದವ ನೆಲಕ
ನಮ್ಮನ ಟಿಲ್ಲಿ ನವ ದರ್ವಾಜ ಮುಚ್ಚಿ ನೋಡ ಒಳಕ
ದಶಕಿ ಚೋಟು ಹ್ರೆಡಿಯೊ ನಿಶಾನಿ ಖಿಡಕಿ ಮುಂದೆ ಮ್ಯಾಕ
ಗುರು ಮಲ್ಲಿಕಾರ್ಜುನ ನಾಮಸ್ಮರಣೆ ರಾತ್ರಿ ಹಗಲು ಬೇಕ
ಗುರು ಪುತ್ರಾದವ ಗುರ್ತ ತಿಳಿತನ ಅನುಭಾವದ ತರಕ ||5||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ನಿಜಲಿಂಗ ಭದ್ರೇಶ್ವರರ ಅನುಭವ ಪದಗಳು

ಅಂತಾ ಹಿಂಥಾದು ಎಲ್ಲಾ ಬರಲಿ
ಅಂತಾ ಹಿಂಥಾದು ಎಲ್ಲಾ ಬರಲಿ
ಚಿಂತಿ ಎಂಬುದು ನಿಜವಾಗಿರಲಿ
ಅಂತಪುರ ಗುರುವೆ ನಿಮ್ಮ
ಅಂತಃಕರಣ ನಮ್ಮ್ಯಾಲ ಇರಲಿ| ||1||
ಉದ್ದಿಮೆ ವ್ಯಾಪಾರ ಹುಟ್ಟಿದಂಗ ಆಗಲಿ
ಬುದ್ಧಿ ಜ್ಞಾನ ಇಲ್ಲದಂಗ ಆಗಲಿ
ಮದ್ದು ಹಾಕಿ ಎನಗೆ ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ| ||2||
ಹೆಂಡರು ಮಕ್ಕಳು ಬಿಟ್ಟುಕೊಟ್ಟ ಹೋಗಲಿ
ಗಂಡ ಸಂತಾನ ಇಲ್ಲದಂಗ ಆಗಲಿ
ಸಾಲಗಾರು ಬಂದು ಕುಂಡಿ ಕುಂಡಿ ಒದಿಲಿ
ಜಗದೊಳು ಭಂಡನಾಗಲಿ| ||3||
ವಿಷಯಪಂಥ ಗೆಲ್ಲಲದಂಗ ಆಗಲಿ
ವೇಶ್ಯಾ ಸೂಳಿ ಮಗನಾಗಲಿ
ದಾಸನಾಗಿ ಭಧ್ರೇಶ್ವರನಾ
ಧ್ಯಾಸ ಮರಿಯಲದಾಂಗಿರಲಿ| ||4||

ಅಂಬಾ ಅಂಬಾ ಆರುತಿ
ಅಂಬಾ ಅಂಬಾ ಆರುತಿ
ಬೆಳಗುವೆ ಕರ್ಪೂರದ ಜ್ಯೋತಿ
ಮೀರಿದ ಉನ್ಮನಿಯಲ್ಲಿ ಸೇರಿದ ಪ್ರಕೃತಿ| ||1||
ಪರಲೋಕದಲ್ಲಿ ನಿಮ್ಮ ಪಾರ್ಬತಿ ಎಂಬ ನಾಮ
ತೂಕಾ ತೂಕಾ ಅಂತಾರಮ್ಮ
ತುಳಜಾಪುರ ವಾಸ ನಿಮ್ಮ| ||2||
ಮಹಾನವಮಿ ನಿಮ್ಮ ತಿಥಿ
ಉಧೋ ಉಧೋ ಎಂಬ ಸ್ತುತಿ
ಮಾತಂಗನ ಮನಿಯೊಳಿರತಿ
ಮುರಳಿ ವೇಷ ತಾಳಿ ಬರತಿ| ||3||
ಅಹಂ ಸೋಹಂ ದಿವ್ಯ ಜ್ಯೋತಿ
ಮೂರು ಲೋಕದಲ್ಲಿ ಶೃತಿ
ನವಲಕ್ಷ ತಾರಾ ಆಕೃತಿ
ನಯನಕ ಅಕೃಷ್ಣ ಶಕ್ತಿ| ||4||
ಸುಷುಮ್ನದಲ್ಲಿ ಇರುತಿ
ಕಾರ್ಯಕಾರಣಕೆ ಬರುತಿ
ನಿಗಮಕೆ ನಿಲುಕದ ಮೂರ್ತಿ
ಸಂತರೊಳು ತೊತ್ತಾಗಿರುತಿ| ||5||
ನಿಡವಂಚಿ ಗ್ರಾಮದ
ಶಂಕರಲಿಂಗ ಸೇವಕನಾದ
ನಿಲಯದಿ ಗುರುಮಠ
ಆಲಯದೋಳು ಆಡಿದಂತೆ| ||6||

ಅಲಕ್ ನಿರಂಜನ ದತ್ತ ದಿಗಂಬರ
ಅಲಕ್ ನಿರಂಜನ ದತ್ತ ದಿಗಂಬರ
ದೀವಟಿಗಿ ಬೆಳಗುವ ದೀನ ದಯಾಳಗೆ| ||1||
ನಿಷ್ಕಳ ಮೂರುತಿ ನಿರ್ಮಲದಾರುತಿ
ದೀವಟಿಗಿ ಬೆಳಗುವೆ ದೀನದಯಾಳಗೆ| ||2||
ಸಂಗನ ಶರಣರ ಗಣಗಂಳ ಪಾದಕೆ
ದೀವಟಗಿ ಬೆಳಗುವೆ ದೀನದಯಾಳಗ| ||3||
ಉದಗಿರಿ ಈಶಗೆ ಉನ್ಮನಿ ವಾಸಗೆ
ದೀವಟಿಗಿ ಬೆಳಗುವೆ ದೀನದಯಾಳಗ| ||4||

ಅಲಲಲಾ ಏನ ತಾರೀಪಾ
ಅಲಲಲಾ ಏನ ತಾರೀಪಾ
ಬೈಲದೊಳಗೆ ಕಾನಸ್ತಾದ ಅಪರೂಪ
ನೀಲದೊರಣಕಪ್ಪ ಮೇಲೆ ಹಸರ ಬಿಳುಪ
ಇಲ್ಲೊ ಎನಕಡಿ ತಪ್ಪ ಬಲ್ಲವರಿಗೆ ತಿಳದೀತಪ್ಪ| ||1||
ನೋಡಿದವ ಹುಡಕೋದಿಲ್ಲ
ಗಡಬಡಿಸಿ ಹುಡುಕಿದರೆ ಸಿಗೋದಿಲ್ಲ
ಹಿಡದವಗ ಏನಿಲ್ಲ ಕಡದವಗ ಸಾವ ಪಲಾ
ಬಡದಾಟ ಗಾಳಿ ಮೇಲಾ ಸುಡುತಾದ ಬೆಂಕಿ ಬಿಸಲಾ| ||2||
ಗಾಳಿಗೆ ಮೊಟ್ಟಿ ಕಟ್ಟತಾರ
ಮಾಳಿಗಿ ಮ್ಯಾಲ ತುಳಸಿ ರಾಸಿ ಮಾಡತಾರ
ಜಾಳಗ್ಯಾಗ ತುಂಬತಾರ ಕೋಳಿ ಮ್ಯಾಲ ಹೇರತಾರ
ಹೇಳಿ ಕೇಳಿ ಮಾರತಾರ ತಾಳಿಕೋಟಿ ಬಾಜಾರ| ||3||
ಒಣಕಿ ಪೆಟ್ಟು ಬೀಳಲಿಲ್ಲಾ
ಸಣ್ಣಕ್ಕಿ ಥಳಿಸಿಕೊಂಡು ಹೋದಳಲ್ಲ
ಜಾಣತನ ಬಹಳ ಇಲ್ಲ ಕೋಣ ಸೂಳೆ ಮಕ್ಕಳವರಲ್ಲಾ
ಕಾಣಸಂತಾದ ದೂರಿಲ್ಲ ಕಣ್ಣು ತುಂಬ ನೋಡಿದೆನಲ್ಲ| ||4||
ಸೆಂಡಾ ಗುಂಡಾ ಬಸರಾಗಿ
ಪುಂಡಮಗ ಹುಟ್ಟಿದನೋ ಶಿವಯೋಗಿ
ಗಂಡ ಊರಿಗೆ ಹೋಗಿ ಪುಂಡ ಬಂದನೋ ತಿರಗಿ
ರಂಡೆರೆಲ್ಲಾ ಮುತ್ತೈದೇರು ಕಂಡವರೆಲ್ಲಾ ತೆಲಿಬಾಗಿ| ||5||

ಅಲಾಯಿ ಎಂಬುದು ಏನಿದು
ಅಲಾಯಿ ಎಂಬುದು ಏನಿದು
ಯಾರ್ಯಾರಿಗೆ ಇದು ತಿಳಿದಿಲ್ಲಾ
ತಿಳಿದ ಮ್ಯಾಲ ಅವರುಳಿದಿಲ್ಲಾ
ಉಳಿದ ಮ್ಯಾಲ ಅವರಳಿದಿಲ್ಲಾ| ||1||
ಪೀರ್ ಪೈಗಂಬರ ಉಳಿದವರು
ಹಿಂದು-ಮುಸಲ್ಮಾನ ಆಗಿದರು
ರಾಮ ರಹೀಮ ಅವರಿಬ್ಬರು
ದೀನ ದಯಾಳ ಶರಣಂ| ||2||
ಶರಣರು ಕಲಮಾ ಓದಿದರು
ಮಾಯಿಗೆ ಉತ್ಪನ್ನ ಮಾಡಿದರು
ಮಾಯಿ ಹೊಟ್ಟಿಲೆ ಹುಟ್ಟಿದ ಮಾವಯ್ಯ
ಹೇಜಿಬನಂತ ಹೆಸರಿಟ್ಟಿದರು| ||3||
ಮಾಯಿಗೆ ಮದವಿ ಆಯಿತಲ್ಲ
ಚಿಕ್ಕ ಪ್ರಾಯ ವಯ ಬಂತಲ್ಲ
ಸದ್ಗುಣ ದುರ್ಗುಣ ಹುಟ್ಟಿದರಲ್ಲಾ
ಜನ್ಮ ಮರಣ ಅವರ ಹಿಂಬಲ| ||4||
ಸದ್ಗುಣ ಸತ್ಯ ಶರಣಂ
ದುರ್ಗುಣ ಮಿಥ್ಯ ಹೇಜಿತರು
ಸದ್ಗುಣದವರಿಗೆ ದುರ್ಗುಣದವರು
ಹೊಡಿದು ಯಾಲಿ ಧೂಲಾ ಆಡಿದರು| ||5||
ಯಾಲಿ ಧೂಲಾ ಅನ್ನುತ ಕುಣಿವರು
ಕುಣಿಯುತ ಸುತ್ತ ಕುಣಿದಾಡುವರು
ಸತ್ತವರ್ಯಾರು ಹೊತ್ತವರ್ಯಾರು
ಅತ್ತವರ್ಯಾರು ಹೇಳುವರ್ಯಾರು| ||6||
ಈ ಮಾತಿನ ಗುರುತಾ
ವೈರಿಗೆ ಕೇಳುತಿನಿ ಮಜಬೂತಾ
ಯಾರ ಅಲಾಯಿ ಯಾರ ಮಾಡತಾರ
ಜಲ್ದಿ ಕೇಳಿ ಹೇಳಿರಿ ಗುರ್ತಾ| ||7||
ಭಲೇ ಸಿಕ್ಕಿ ನಮ ಕೈಯಾಗ
ಕೌಡಿ ಪೇಣಸ್ತಿನಿ ಮೂಗಿನಾಗ
ಹುಡುಕಿ ನೋಡೋ ನಿನ್ನ ಕಿತಾಬದಾಗ
ಕರಕೊಂಡು ಬಾ ನಿನ್ನ ವಸ್ತಾದಗ| ||8||
ಕಿತಾಬದೊಳಗಿನ ಮಾತಲ್ಲಾ
ಹುಡುಕಿ ನೋಡಿದರೆ ಸಿಗೋದಿಲ್ಲಾ
ಕಣ್ಣಿನ ಕೊನಿ ಮ್ಯಾಲ ಕುಣಿದಾಡುವದಲ್ಲಾ
ಯ್ಯಾರ್ಯಾರಿಗೆ ಇದು ತಿಳಿದಿಲ್ಲ| ||9||
ಫಕೀರ ಬೇ ಫಿಕಿರೀ
ಅವನಿಗೆ ಅಂತಾರ ಪಯಂಬರಿ
ಎಲ್ಲರಿಗೆ ಅಂವ ಸಾಕ್ಷಾತ್ ಹಾನೋ
ಮಾಲಕ ಇದ್ದನೊ ಪರಭಾರಿ| ||10||
ಮಾಲಕ ಗುರು ಶಂಕರ ಭವಲಾ
ಅವರ ಹಸ್ತ ನಮ ತೆಲಿಮ್ಯಾಲ
ಮೂರು ಲೋಕ ಬೆಳಕ ಬಿದ್ದಿತಲ್ಲಾ
ಚಿನ್ಮಯ ಜ್ಯೋತಿ ಜಗಮೇಲಾ| ||11||

ಅರುವು ತೋರಿದ ಗುರುವಿಗೆ
ಅರುವು ತೋರಿದ ಗುರುವಿಗೆ ಮರತ್ಯಾಂಗಿರಲಮ್ಮ
ತೋರಡಗಿದನಮ್ಮ| ||1||
ಒಳಗೆ ಹೊರಗೆ ತಾನೇ ನಿಂತು ಛಾಯಾ ತೋರಿದನಮ್ಮ
ಮಾಯಾ ಆದನಮ್ಮ| ||2||
ಶಿವನೊಳಗೆ ಜೀವ ರೂಪ ಜಂಗಮಾದನಮ್ಮ
ಸಂಗಮೇಶನಮ್ಮ| ||3||
ಖೂನಾ ಇಲ್ಲದಂತವರ ಖೂನಾ ತೋರಿದನಮ್ಮ
ಕೂಡಿ ಉಂಡೆನಮ್ಮ| ||4||
ನಾನು ನೀನು ಎಂಬುದು ಬಿಡಿಸಿ ತಾನೇವಾದನಮ್ಮ
ತನವು ಸಾಕ್ಷಿ ಬ್ರಹ್ಮ| ||5||
ಮಾನಾಪಮಾನ ಎರಡು ಪಾನ ಮಾಡಿದನ್ನ
ಪರಮ ಸುಖವಮ್ಮ| ||6||
ಜ್ಞಾನ ಮಾರ್ಗ ತೋರಿ ಮುಕ್ತಿ ಮೂಲ ತಿಳಿಸಿದನಮ್ಮ
ಹ್ಯಾಂಗ ಮರಿಯಲಮ್ಮ| ||7||
ನಾದ ಶಬ್ದದೊಳಗೆ ಮನವು ಮುಕ್ತಿ ಮೂಲ ತಿಳಿಸಿದನಮ್ಮ
ಲೀಲಾ ತೋರಿದನಮ್ಮ| ||8||
ಜಾತಿಗೆಡಿಸಿ ಭೀತಿ ಜ್ಯೋತಿ ರೂಪವಮ್ಮಾ
ಮುದ್ರದಲ್ಲಿ ತೋರಿದನಮ್ಮ| ||9||
ಕಂಡು ಮನಸು ನೆನಸಿದಲ್ಲಿ ನಿಲಕ್ಯಾಡಿದನಮ್ಮಾ
ನೀಲಕಂಠನಮ್ಮ| ||10||
ಆರು ಲಿಂದೊಳಗಿರುವ ಅರಿವು ತೋರಿದನಮ್ಮ
ಸ್ಥಿರವು ಮಾಡಿದನಮ್ಮ| ||11||
ಚಿತ್ತಿನೊಳಗೆ ಚಿನ್ಮಯವಾದ ರೂಪಾ ತೋರಿದನಮ್ಮ
ಚೆನ್ನಬಸವನಮ್ಮ| ||12||
ಮನದ ಕೊನೆಯ ಮೇಲೆ ಉಯ್ಯಾಲೆ ಉದಗಿರಿ ಕ್ಷೇತ್ರವಮ್ಮಾ
ಶಿಖರ ಏರಿ ನೋಡಿದೆನಮ್ಮಾ| ||13||
ಸಿದ್ಧರಾಮ ರಾಚೋಟೇಶ್ವರನ ಕೂಡಿಕೊಂಡೆವಮ್ಮಾ
ಬೈಲೊಳು ಬೈಲಾದರಮ್ಮ| ||14||

ಆಗತಾದರೊ ಬಾಬಾ ಆಗತಾದರೊ
ಆಗತಾದರೊ ಬಾಬಾ ಆಗತಾದರೊ
ಮೂರು ಲೋಕದೊಳಗ ಮೃತ್ಯುದೇವಿ ಹಬ್ಬ ಆಗತಾದರೊ
ಕಾಡಿಗಿ ಹಚ್ಚಕೊಂಡವರೆಲ್ಲಾ ಕಣ್ಣ ತುಂಬಾ ನೋಡತಾರೊ
ಕನ್ಯ ಮುತ್ತೈದೆಯರು ಕಾರ ಮಿಂಚಿದಂಗರೊ| ||1||
ಹಸರ ತೇಜಿ ಏರಿ ನಿಂತಾದರೊ
ಕಲಕಿ ಅವತಾರ ಮುಂದ ಬರುತಾದರೊ
ಅರಸಿಣ ಹಚ್ಚಿಕೊಂಡು ಮದಿಮಗಳ ಆಗ್ಯಾದಾರೊ
ಹಂದರದೊಳಗೆ ಗೊಬ್ಬಿಕ್ಕುತ ನಡದಾರೊ| ||2||
ಅಕ್ಕ ತಂಗಿ ಏಳ ಮಂದಿ ಹೊಂಟಾರೊ
ಏಳ ದಿಕ್ಕು ಏಕಾಗಿ ಉರಿತಾದರೊ
ನಾಲ್ಕು ದೇಶ ನಾಶವಾಗಿ ಹೋಗತಾದರೊ
ನಾಶವಾದ ಮೇಲೆ ಈಶ ಬರುತಾನರೊ| ||3||
ನವರಂಗಿ ಬಾಜಿಗಳು ಆಗತಾವರೊ
ಧ್ವಜ ಹಚ್ಚಿ ಗಜವೇರಿ ಹೊಂಟಾದರೊ
ಗಜಿಬಿಜಿ ಆದತಾದಜಗದೊಳರ್ಯೊ
ಜಲ್ದಿ ತಿಳಿದು ಜಂಗಮಲಿಂಗನ ಭಜನಿ ಮಾಡರೊ| ||4||
ಯಮದೂತರು ಪೋತರಾಜರು ಕುಣಿತಾರೊ
ಜಗಮಾಯಿ ಜಾಣಿಯರೆಲ್ಲಾ ಆಡುತರೊ
ನರಕುರಿ ಮರಿಗಾವ ಹರಿತರೊ
ಕೊಲ್ಲಾಪುರ ಕೋಣಗಳು ಕಡಿತಾರೊ| ||5||
ಹಬ್ಬಾ ಉಂಡು ಗುಬ್ಬಿಯಾಗಿ ಹಾರತಾದರೊ
ಹೆಬ್ಬುಲಿಮ್ಯಾಲ ಕುಂತು ಬರುತಾದರೊ|
ಗುಡ್ಡ ಬಿಟ್ಟು ಗುಮ್ಮಟದೊಳಗೆ ಸೇರತಾದರೊ
ಶಿಖರದಲ್ಲಿ ಸಿಂಗಿ ಬಾಜಿ ಮಾಡತಾದರೊ| ||6||
ಕತ್ತಲ ಮನಿಯೊಳಗೆ ಬತ್ತಲೆ ನಿಂತಾದರೊ
ಕದ್ದು ಕಾಣದಾಂಗ ಇದ್ದು ಇಲ್ಲದಾಂಗದರೊ
ಭದ್ರಗಿರಿಯ ಮ್ಯಾಲ ನಿಂತಾದರೊ
ಗುಂಗಿ ಮನಿ ಮ್ಯಾಲ ಕಾಗಿ ಕುಂತಾದರೊ| ||7||

ಆರುತಿರೆ ಮಂಗಳಾರುತಿರೆ
ಆರುತಿರೆ ಮಂಗಳಾರುತಿರೆ
ಗುರುಬಕ್ಕಯ್ಯ ಮಹಾಪ್ರಾಭುಗಾರುತಿರೆ
ಆರು ಲಿಂಗದೊಳಗಿರುತಿರೆ
ಗುರು ಸಾರಾಮೃತ ಸುರಿಯುತಿರೆ| ||1||
ಗೊಟ್ಟಂ ಗೊಟ್ಟಿ ಬಕ್ಕಯ್ಯನವರು
ಬ್ರಹ್ಮ ಧಾಟಿಯೊಳಗಿರುತಿರೆ
ಶ್ರೀ ಆಟ ವಿರಾಟ ಶೂರಾಟ ಗೊಲ್ಲಾಟ
ಮಂಗಳ ಮಹಾಪ್ರಭು| ||2||
ಉದ್ದನ ಚಿಲಮಿ ತನುಮನರೆ
ಶಿವಸಿದ್ಧನ ಪತ್ತಿ ಸೇದುತಿರೆ
ಶಿವ ಸಿದ್ಧ ಸಿದ್ಧ ಎಂದು ಕೂಗುತಿರೆ
ಶಿವ ಸಿದ್ಧನ ರೂಪವ ಕಾಣುತಿರೆ| ||3||
ಗುಡ್ಡದ ವಾರಿಗಿ ದುಡಿದೀರಿ
ಕರ್ಕನಳ್ಳಿ ಕೈಲಾಸದಲ್ಲಿ
ನಿಮ್ಮ ಚರಣ ಕಮಲಕರಿ
ಗುರು ಭದ್ರನಾಥನ ಕೂಡಿ ಕೋರಿ| ||4||

ಆರುತಿ ಎತ್ತಿರಿ ಮ್ಯಾಗೆ
ಆರುತಿ ಎತ್ತಿರಿ ಮ್ಯಾಗೆ
ಆ ಶ್ರೀಗುರು ಭದ್ರಿನಾಥಗೆ| ||1||
ರನ್ನದಾರುತಿ ಚಿನ್ನದಾರುತಿ
ಕನ್ಯರೆತ್ತಿ ಬೆಳಗುವ ಜ್ಯೋತಿ| ||2||
ಮಂಗಳಮೂರ್ತಿ ಭಕ್ತವತ್ಸಲಗೆ
ನಿತ್ಯ ನಿರಂಜನ ನಿರ್ಗುಣನಿಗೆ| ||3||
ಭೇದರಹಿತನಿಗೆ ಭಾವ ಭಗುತಿಗೆ
ನೀಲಕಂಠ ನಿಗಮ ಗೋಚರನಿಗೆ| ||4||
ಸರ್ವೆಶ್ವರನಿಗೆ ಕರುಣಾಮಯಿಗೆ
ಪರಬ್ರಹ್ಮಪೂರಿಗೆ ಸದಾಶಿವಹರಗೆ| ||5||
ನಿಡವಂಚಿ ವಾಸಗೆ ಮುಕ್ತಿದಾತಗೆ
ಶ್ರೀಗುರು ರಾಚೋಟೆಶ್ವರ ಪಾದಪೂಜಿತಗೆ| ||6||

ಆರುತಿ ಮಂಗಳ ಮೂರುತಿಗೆ
ಆರುತಿ ಮಂಗಳ ಮೂರುತಿಗೆ
ಮೂರುತಿ ಮಂಗಳ ಮಾರುತಿಗೆ
ಸದ್ಗುರು ಶಂಕರಲಿಂಗನಿಗೆ
ಜಯಹರ ಗುರು ಮುಕ್ತಾಂಗನಿಗೆ| ||1||
ಆರುತಿ ಸಂಗನ ಶರಣರಿಗೆ
ಮೂರುತಿ ಜಂಗಮ ಭಕ್ತರಿಗೆ
ಮಾರು ಮಹಾಲಿಂಗನಿಗೆ
ಶಂಕರ ಗುರು ಮುಕ್ತಾಂಗನಿಗೆ| ||2||
ಆರುತಿ ಕಲ್ಯಾಣ ಬಸವನಿಗೆ
ಮೂರುತಿ ಮಲ್ಲಿಕಾರ್ಜುನನಿಗೆ
ಮಾರುತಿ ಮನ್ಮಹಾದೇವನಿಗೆ
ಜಯಹರ ಗುರು ಮುಕ್ತಾಂಗನಿಗೆ| ||3||
ಆರುತಿ ಅನಂತ ರೂಪನಿಗೆ
ಮೂರ್ತಿ ಏಕೋ ದೇವನಿಗೆ
ಮೂರುತಿ ಉದಗಿರಿ ಶಂಕರಗೆ
ಜಯಹರ ಗುರು ಮುಕ್ತಾಂಗನಿಗೆ| ||4||

ಆಲಯ ಮೇಲಪ್ಪಾ ಆಲಯ ಕಾಲ ಮೇಲಪ್ಪಾ
ಆಲಯ ಮೇಲಪ್ಪಾ ಆಲಯ ಕಾಲ ಮೇಲಪ್ಪಾ
ಆಲಯ ಮೇಲ್‍ಮನಿ ಮಧ್ಯದೊಳು
ಆನಂದ ತೊಟ್ಟಿಲದೊಳು ಮನಗಿಕೊಂಡಾದ| ||1||
ಕಾಲ ಮೇಲಪ್ಪಾ ಕಾಲದ ಕೀಲು ಮೇಲಪ್ಪಾ
ಕಾಲದ ಕೀಲು ಮನದ ಕೊನಿಯ ಮೇಲ
ಉಯ್ಯಾಲದೊಳು ಕುಂತು ವಯ್ಯಾರ ಮಾಡತಾದ| ||2||
ನಾನೇ ಮೇಲಪ್ಪಾ ನನ್ನೊಳು ತಾನೆ ಮೇಲಪ್ಪಾ
ತಾನೇ ತನ್ನೊಳು ಬೈಲೊಳಯ ಬಯಲಾಗಿ
ಹೊಯಿಲಿನೊಳಗೆತಾ ಸಯಿಲ ಮಾಡುತಾದ| ||3||
ದೇಶ ಮೇಲಪ್ಪಾ ಉದಗಿರ ಈಶ ಮೇಲಪ್ಪಾ
ಈಶ ರಾಚೋಟೇಶನೆ ಮೇಲು ತಾನೆ
ತನ್ನೊಳು ಶಂಕರ ಭದ್ರಿನಾಥ ಅದೆಪ್ಪಾ| ||4||

ಇದ್ದಾಂಗ ಆಗುವುದೊ
ಇದ್ದಾಂಗ ಆಗುವುದೊ
ಸಿದ್ಧನ ಮಗನಿಗೆ ತಿಳಿಯುವದೊ
ಸಿದ್ಧನ ಮಗನಿಗೆ ಶಿವನೆಂಬೊ ನಾಮ
ಮೂರು ಲೋಕ ತುಂಬಿ ಹೆಚ್ಚಾಯಿತಮ್ಮ| ||1||
ಉನ್ಮನಿ ಖಡಕಿ ನೋಡರೊ ಒಳಗಿನ ದಢಕಿ ನೋಡರೊ
ಖಟಪಿಟಿ ಲಟಪಿಟಿ ಝಟಪಿಟಿ ಆಗತಾದ
ಫಟಪುಟಿ ಆಗತಾದ ಘಟಕನೆ ಸಾಯತಾದ| ||2||
ಉರಕೋತ ಬರುತಾದೊ
ಊರೆಲ್ಲಾ ಮೆರಕೋತ ಬರುತಾದೊ
ಎರಕೋತ ಮರಕೋತ ಇಳಕೋತ ತಿಳಕೋತ
ಕರಕೋತ ತಿರುಕೋತ ತಾನೇ ಬರುತಾದ| ||3||
ನಿಡವಂಚಿ ಹಳ್ಳ್ಯಾದರೊ
ಶ್ರೀಗುರುಸಿದ್ಧನ ಮಗನ್ಹಾನರೊ
ಸಿದ್ಧನ ಮಗನಾದ ಶುದ್ಧ ಸೇವಕನಾದ
ಭವ ಗೆದ್ದು ಭದ್ರಿನಾಥ ಬೈಲಾದ| ||4||

ಇದ್ದಾಂಗ ಆಗುವದಕ ಈಡಿಲ್ಲ ಯಾರ್ಯಾರು
ಇದ್ದಾಂಗ ಆಗುವದಕ ಈಡಿಲ್ಲ ಯಾರ್ಯಾರು
ಮೂರುಲೋಕದಲ್ಲಿ ಹುಚಧುಲಿ
ಬಿತ್ತಿದ್ದೆ ಬೆಳಿವದು ಅತ್ತಿದರೇನು ಆಗುವದು
ಗೊತ್ತ ಯಾಕ ತಿಳಿವಲ್ಲಿ ಹುಚುಧುಲಿ| ||1||
ಝಂಕಾರ ಜಾಂಗುಟಿ ಓಂಕಾರ ಭೃಕುಟಿ
ಮಧ್ಯವಾದ ತಿಳಿವಲ್ಲಿ ಹುಚಧುಲಿ
ನಾದವ ಕೇಳುತ ಸೋದವ ಮಾಡುತ
ಸಾಧುನ ಖೂನಾ ತಿಳಿವಲ್ಲ ಹುಚುಧುಲಿ| ||2||
ಇದ್ದ ಅಂಗವು ನೋಡುತ ಲಿಂಗವು ಕಾಣುತ
ಜಂಗಮನ ಖೂನಾ ತಿಳಿವಲ್ಲಿ ಹುಚುಧುಲಿ
ಆರು ಲಿಂಗದೊಳು ಅರ್ತು ಮೈಮರ್ತು
ಮರ್ತ್ಯಾದೊಳು ತಿಳಿವಲ್ಲಿ ಹುಚುಧುಲಿ| ||3||
ನಾನು ನೀನೆಂಬ ತಾನೇ ತಾನೊಬ್ಬ ತಿಳಿವಲ್ಲಿ
ನಯನದ ಕೊನೆಯಲ್ಲಿ ಹುಚುಧುಲಿ
ತಾರಕ ದಂಡಕ ಕುಂಡಲಿ ಮಧ್ಯದಿ
ಕೋಟಿ ಸೂರ್ಯನ ಬೆಳಕು ನೋಡಲ್ಲಿ ಹುಚುಧಲಿ| ||4||
ಈಡಾ ಪಿಂಗಳ ಮಧ್ಯ ಆಡುವವನ ಕಂಡು
ಸೋಂ ಎಂಬ ಅಕ್ಷರ ತಿಳಿವಲ್ಲಿ ಹುಚುಧುಲಿ
ನಿಡವಂಚಿ ಗ್ರಾಮದ ನಿಜಲಿಂಗ ಮೂರುತಿ
ರಾಚೋಟೇಶನ ತಿಳಿವಲ್ಲಿ ಹುಚುಧುಲಿ| ||5||

ಉದಗಿರಿ ಜಾತ್ರಿಗೆ ಹೋಗಾನು
ಉದಗಿರಿ ಜಾತ್ರಿಗೆ ಹೋಗಾನು ಬೇಗನೆ ಬಾರೆ
ಶಂಕರಲಿಂಗನ ದರ್ಶನ ಮಾಡಮ್ಮ
ಓಂ ಶ್ರೀ ಶಂಕರಲಿಂಗಗಾ
ಮುಕ್ತಿ ಪದವಿ ಬೇಡಾನು ಬಾರಮ್ಮ| ||1||
ಆಧಾರ ಗಿರಿಯನೇರಿ ನಾಲ್ಕುದಳ ಮಧ್ಯದಲ್ಲಿ
ಆಚಾರ ಲಿಂಗನ ಕಂಡೆ
ಸ್ವಾದಿಷ್ಟ ಗಿರಿಯನೇರಿ ಷಡ್‍ದಳ ಮಧ್ಯದಲಿ
ಗುರುಲಿಂಗ ದರ್ಶನ ಕಂಡೆ| ||2||
ಮಣಿಪುರ ಗಿರಿಯನೇರಿ ದಶದಳ ಮಧ್ಯದಲ್ಲಿ
ಶಿವಲಿಂಗನ ದರ್ಶನ ಮಾಡಿದೆ
ಅನಾಹತ ಗಿರಿಯನೇರಿ ದ್ವಾದಶದಳ ಮಧ್ಯದಲ್ಲಿ
ಜಂಗಮಲಿಂಗನ ದರ್ಶನ ಮಾಡಿದೆ| ||3||
ವಿಶುದ್ಧಿ ಗಿರಿಯನೇರಿ ಸೋಡಶದಳ ಮಧ್ಯದಲ್ಲಿ
ಜಂಗಮಲಿಂಗನ ಕಂಡಿದೆ
ಇಂದ್ರಗಿರಿಯಲಿಂದೆ ನಾನು ಚಂದ್ರಗಿರಿಯನೇರಿ ನೋಡಿ
ಕೈಲಾಸ ಶಿಖರ ಕಂಡನೆ| ||4||
ಉನ್ಮನಿ ಉದಗಿರಿಯೊಳಗೆ ಚಿನ್ಮಯ ರಾಚೋಟೇಶ
ಸದ್ಗುರುನಾಥ ಕಂಡನೆ
ಓಂ ಶ್ರೀ ಶಂಕರಲಿಂಗಾ
ಮುಕ್ತಿ ಪದವಿ ಬೇಡಿಕೊಂಡನೋ| ||5||

ಊರ ದೇವತೆ ಮಾಡುತಾರಮ್ಮ
ಊರ ದೇವತೆ ಮಾಡುತಾರಮ್ಮ
ನಮ್ಮೂರ ಒಳಗೆ ನೋಡಾನು ಬಾರಮ್ಮ| ||1||
ಕುಂಡಲೆಂಬ ಗುಡಿಯ ಮುಂದೆ
ಮಂಡಲೆಂಬ ಹಂದರ ಹಾಕಿ
ಚಿತ್‍ಶಕ್ತಿ ಮಹಾದೇವಿಗೆ
ತಿರುಗಿ ಭೂಚರಿ ಖೇಚರಿಯರಮ್ಮ| ||2||
ಕಾಯನೆಂಬ ಕೋಣ ಕಟ್ಯಾರೆ
ಆ ಮಹಾದೇವಿಗೆ ಕುಟಿಲನೆಂಬ
ಕುರಿಯ ಕಟ್ಯಾರೆ
ಕ್ರೋಧನೆಂಬ ಪೋತರಾಜ
ಮೋಹನೆಂಬ ಜಾಣಿ ಕುಣಿಸಿ
ಅನಾಹುತಯೆಂಬ ಡಪ್ಪ ಬಾಜಿ
ಸೋಹಂ ಎಂಬ ಸೋನೆಯಿ ಬಾಜಿ
ಓಂಕಾರನೆಂಬ ಸ್ತುತಿಯ ಹಿಡಿಸಿ
ಪೋತರಾಜನ ಕುಣಿಸಿದಾರಯ್ಯ| ||3||
ಆತ್ಮರಾಮ ಶೆಟ್ಟಿಕಾರನೆ
ಸ್ವಧರ್ಮವೆಂಬ ಕಟ್ಟಿಮ್ಯಾಲೆ ಏರಿ ಕುಂತಾನೆ
ಮನವೆಂಬ ಮಾದಿಗಿ ಕರೆಸಿ
ಧೈರ್ಯವೆಂಬ ಕತ್ತಿ ಹಿಡಿಸಿ
ಒತ್ತಿ ಕೋಣನ ನೆತ್ತಿ ಹಿಡಿಸಿ
ತೆಲಿಯ ಕೋಯ್ಸಿ ಪಲ್ಯಾ ಮಾಡಿಸಿ
ಮ್ಯಾಲೆ ಜ್ಯೋತಿ ದೀವಗಿ ಇಡಿಸಿ
ಮುಂದೆ ಜಾನಿನ ಮೈಯ ತುಂಬಿಸಿ
ಅಹಂ ಸೋಹಂ ನುಡಿಸದಾರಮ್ಮ| ||4||
ಆಶೆಯೆಂಬ ಕುರುಬನ ಕರೆಸಿ
ಸಂಶಯದ ಕುರಿಮರಿ ಕೈಯೊಳಗೆ ಹಿಡಿದು ಆಡಿಸಿ
ಚಂದ್ರ ಹಚ್ಚಿ ಪೋತರಾಜ
ಕಣ್ಣ ತೆರೆದು ಚಬಕ ಘಡಿಸಿ
ಗುಡಿಯ ಸುತ್ತ ಚವರಿ ತಿರುಗಿಸಿ
ಚೆಬಕ ಏರಿಸಿ ಬೆನ್ನ ಬಾರಿಸಿ
ಹಿಸುಕಿ ಕುರಿಯ ಮರಿಯ
ಗಾವ ಹರಿಸಿದಾರಮ್ಮ| ||5||
ಅಗಸಿ ಬಾಗಿಲದೊಳಗೆ ಭವರಮ್ಮ
ಹಮ್ ಎಂಬೋ ಹಂದಿ ಮರಿಯ ತಂದು ಹೂಳಿದಾರಮ್ಮ
ಅಷ್ಟಗುಣಗಳೆಂಬೋ ಕರುಗಳು
ಬಿಟ್ಟು ದನಗಳು ಕಟ್ಟಿ ಓಡಿಸಿ
ಸೂಕರ ಮ್ಯಾಲಿಂದೆ ಧಾಟಿಸಿ
ಸೀಮಿಕಲ್ಲು ಸುತ್ತಿ ಬರಿಸಿ
ಕಟ್ಟಿ ಬಂಧನ ಮಾಡಿ ಬಿಡಿಸಿ
ಸೂಕರೆಂಬುದು ಎತ್ತ ಹೋಯಿತಮ್ಮ| ||6||
ಕಲ್ಪನೆಂಬ ಕಳ್ಳ ಹೊಲಿಯರೊ
ಕದ್ದೋಡಿ ಬಂದು ಕೂಳವೆಲ್ಲಾ ತಾವೆ ತಿಂದಾರೊ
ಮಾಯೆ ಎಂಬ ಮೇತ್ರಿ ಹೊಲಿಯನ
ಮೇಲೆ ತೆಲಿಯ ಹೊದಿಸಿದಾರೊ
ರಾಚೋಟೇಶನ ಹಂತಿಲಿಟ್ಟು
ಆತ್ಮರಾಮನ ಭಜಸಿದಾರಮ್ಮ| ||7||

ಎಕ್ಕಲ ಖಾಜಾ ಸಾಕ್ಷಾತ್ ಶಿವನು
ಎಕ್ಕಲ ಖಾಜಾ ಸಾಕ್ಷಾತ್ ಶಿವನು
ಹಾನೋ ಆತ್ಮದೊಳಗೆ
ನಿನ್ನೊಳಗೆ ನೀ ತಿಳಿದು ನೋಡಿದರೆ
ಶಿವನ ಮಹಿಮಾ ಹೀಗೆ| ||1||
ದುಡ್ಡಿಗೆ ರಾಜಾ ದೊಡ್ಡ ಗುರು ತಾ
ಹಾನೋ ಶರೀರದೊಳಗೆ
ದೇವಾ ಹಾನೋ ಶರೀದೊಳಗೆ
ತ್ರೀಣಂಭೋಜಾ ಬ್ರಹ್ಮ ವಿಷ್ಣು ಮಹೇಶ್ವರೊಳಗೆ| ||2||
ಚಾರಿಕ ಚಂಡು ಚೌಕ ಮಧ್ಯದಿ
ಗುರುವಿನ ಮನಿ ಒಳಗೆ
ಪಾಚಿಗಿ ಪಂಡು ಪರಮೇಶ್ವರನು
ಇದೇ ಶರೀರದೊಳಗೆ| ||3||
ಸೀಮಾ ಝಂಡು ಷಣ್ಮುಕಸ್ವಾಮಿ
ಕುಂತ ಗದ್ದಗಿ ಮ್ಯಾಲೆ
ಸಟಾಪಟೋಲೆ ಸಪ್ತಋಷಿಗಳು
ತಿರುಗುತಿಹರು ಒಳಗ| ||4||
ಅಟಾಪನಲ್ಲಿ ಅಷ್ಟಪಲಕರು
ಎಂಟು ಕೋಣಿ ಒಳಗೆ
ನಮ್ಮನ ಬಿಟಿಲ್ಲಿ ನವಖಂಡ ಪೃಥ್ವಿ ||5||
ಇದೇ ಶರೀರದೊಳಗ|
ಅಟ ನಿಂತಿತೋ ನವಲ ಕಟ್ಟಿತೊ
ಎರಡು ಕೋಣೆ ಒಳಗೆ
ಭದ್ರಿನಾಥನ ಪಾದ ಪಿಡಿದು
ಮುಕ್ತಿ ಹೊಂದಿರಿ ಶಂಕರಗೆ| ||6||

ಎಡಾ ಕಣ್ಣು ಕುಣಕಿ ಬಲಾ ಚೋರಗಂಡಿ
ಎಡಾ ಕಣ್ಣು ಕುಣಕಿ ಚೋರಗಂಡಿ
ಷಂಢ ಮಾರ್ಗವಲ್ಲ ಇದು ಪ್ರಚಂಡ ಮಾರ್ಗ| ||1||
ಜಾಣ ಮುಖದಿಂದ ಜರಿದು ಪೋದ ಶರಣ
ಅನಂತ ಜನ್ಮದ ಪುಣ್ಯ ಅನಂತ ಜನ್ಮದ| ||2||
ಸಿದ್ಧರಾಮ ನಾಮ ರಾಚೋಟೇಶ ನಿಮ್ಮ
ಚರಣ ಕಮಲದಲ್ಲಿ ಐಕ್ಯವಾದ ಚರಣ ಕಮಲದಲ್ಲಿ| ||3||
ಕುಡಿಕೊಂಡ ತಾನು ತಾನೇ ತಾನಯ್ಯ
ತಾನೇ ತನಯ್ಯ ಶಂಕರ ಒಬ್ಬ ದೇವನಯ್ಯ| ||4||
ಬೈಲಿಗೆ ನಿರ್ಬೈಲು ಮಹಾ ಬಯಲು ಕಾಣೆನಯ್ಯ
ಆ ಬೈಲು ಅತ್ತೆತ್ತ ಸದ್ಗುರು ಸೊನ್ನಿಯ ಘನವಯ್ಯ| ||5||
ದಯವಾಗೊ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೂಡವೂ ಮುಕ್ತಿಯ ಮಂದಿರ ||6||

ಎನ್ನ ಇಚ್ಚಾ ತೀರಿಸಿದವರೆ ಎನ್ನವರು
ಎನ್ನ ಇಚ್ಚಾ ತೀರಿಸಿದವರೆ ಎನ್ನವರು
ಅವರೆ ನಮ್ಮವರು
ಇಚ್ಚಾ ತೀರಿಸದವರೆ ಎನ್ನ ಶತ್ರುಗಳು| ||1||
ಎನ್ನ ಆನಂದ ಪಡಿಸಿದವರೆ ಎನ್ನ ಶತ್ರುಗಳು
ಅವರೆಂತಹ ಪುಣ್ಯವಂತರು
ಆನಂದಬಿಡಿಸಿದವರೆ ಎನ್ನ ಶತ್ರುಗಳು| ||2||
ಎನ್ನ ಗುರುತು ಹಿಡಿದವರೆ ಎನ್ನವರು
ಗುರುಪುತ್ರರವರು
ಗುರ್ತು ಹಿಡಿಯದವರೆ ಎನ್ನ ಶತ್ರುಗಳು| ||3||
ಕಾಯಾಪುರಕ ಅಧಿಪತಿ ಆದವರು
ಗ್ರಾಮದ ಗೌಡರವರು
ಗ್ರಾಮಕ ಅಧಿಪತಿಯಾದವರು ಮಹಾಪುರುಷರು| ||4||
ಎನ್ನ ಗುರುತು ಹಿಡಿದು ಶರಣು ಬಂದವರು
ನಿಜದ ಖೂನಾ ತಿಳಿದವರು
ನಿನ್ನ ಖೂನಾ ಮರ್ತು ಬಂದವರು ಮಾಯದಲ್ಲಿ ಸಿಲ್ಕಿದರು| ||5||
ದೇಶದೊಳು ವಾಸ ನಿಡವಂಚಿ
ಅದು ಶಿವಕಂಚಿ
ಮಠದೊಳು ಭದ್ರೇಶ್ವರ ಪಾದಕ ಶರಣಾದರು. ||6||

ಎಲೋ ನಂದಿನಾಥ ಮಾತಿನ ಗುಣವಂತ
ಎಲೋ ನಂದಿನಾಥ ಮಾತಿನ ಗುಣವಂತ
ಮಹಾಲಕ್ಷ್ಮಿಸುತ ಕೇಳೊ ಮಹಾಲಕ್ಷ್ಮಿಸುತ| ||ಪ||
ಚಕೋರ ಎಂಬ ದೈತ್ಯ ಬಂದಾನೊ ಓಡುತ
ಮಹಾಪುಂಡ ಸಮರ್ಥ ದೇವಿನ ಹೊಡಿಬೇಕಂತ| ||1||
ಮಹಾದೇವಿ ಪ್ರಚಂಡ ತ್ರಿಶೂಲ ತಡಕೊಂಡ
ತೀವ್ರವಾಗಿ ಹೊಡೆದು ದೈತ್ಯನ ಹಾರಿಸಿದಾಳೋ ರುಂಡ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||

ಏ ಎಪ್ಪಾ ಎಂಥದು ದಿನ ಬಂತೊ
ಏ ಎಪ್ಪಾ ಎಂಥದು ದಿನ ಬಂತೊ
ಮುದುಕರೆಲ್ಲಾ ರಂಡೆರ ಮಾಡ ಖ್ಯಾಲಾಯಿತೊ
ಡೊಂಬರ ಪಾತರದವರಿಗೆ ಕೇಳಲ್ದಾಂಗಾಯಿತೊ
ಹೆಂಡರ ಬಿಟ್ಟು ಕಂಡವರ ಮನಿ ಸೇರೋದಾಯಿತೊ| ||ಪ||
ಸುಂಬಳ ಸುರುಕಿ ಸೂಳಿ ಸಂಗಾ ಸವಿ ಆಯಿತೋ
ಸುಂದರಂಗಿ ಸತಿ ಸಂಗಾ ಹೀನಾಯಿತೊ
ಮಚ್ಚಿಲಿ ಹೊಡಿರೆಂಬ ಎಚ್ಚರ ಕಾಣದಾಯಿತೊ
ಕೆಚ್ಚಲದೊಲಗಿನ ಬಚ್ಚಲ ಮೋರಿ ಹುಳವಾಯಿತೊ| ||1||
ಮಾತಾಪಿತಾಗ ಮಚ್ಚಿಲಿ ಹೊಡಿಯುವ ಕಾಲ ಬಂತೊ
ನಾಚಿಗೆಟ್ಟು ಆಚಿ ಬೀಳೊದಾಯಿತೊ
ಹೆಚ್ಚಿನ ಮಾತು ಇದು ಒಂದು ಕೇಳುದಾಯಿತೊ
ಉಚ್ಚಿ ಕುಣಿಗಿ ಮೆಚ್ಚಿಕೊಂಡು ಹುಚ್ಚುನಾಯಿತೊ| ||2||
ಸೂಳಿತನ ಕಳ್ಳತನ ಹೆಚ್ಚಾಯಿತೊ
ಗುರು ಬಚ್ಚಿಟ್ಟ ಗಂಟು ಬೈಲಿಗೆ ಬಿತ್ತೊ
ಶರಣರಿಗೆ ಸತ್ಯಕಾಲ ಒದಗಿ ಬಂತೊ
ನಿಜ ಗೊತ್ತು ತಿಳಿದವರಿಗೆ ಮುಕ್ತಾಯಿತೊ| ||3||
ನಿಡವಂಚಿನೆಂಬುದು ಹಳ್ಳಾಯಿತೊ
ಶ್ರೀಗುರುವಿನ ಚೌದ ಅವತಾರ ಬಂತೊ
ಬದ್ಧನಡಿ ಜಗದಲ್ಲಿ ಬಹಳಾಯಿತೊ
ಗುರುಸಿದ್ಧನ ಮಗನಿಗೆ ತಿಳಿದಾಯಿತೊ| ||4||

ಏ ಎಪ್ಪಾ ಹದ್ದಿನ ಮಾರಿ ಹಕ್ಕಿ ನೋಡರೊ
ಏ ಎಪ್ಪಾ ಹದ್ದಿನ ಮಾರಿ ಹಕ್ಕಿ ನೋಡರೊ
ಹೆಣಾ ತಿಂದು ನೊಣ ಹಿಪ್ಪಿ ಭೀಟತಾದರೊ
ಆಕಾಶದ ಪಂಥಿಲಿಂದ ಇಳದಾದರೊ
ರಣದೊಳಗೆ ಬಿದ್ದು ಗೆದ್ದ ಜೈಸತಾದರೊ| ||1||
ಎಕವೀಸ ಸ್ವರ್ಗದ ಮೇಲೆ ಇರುತಾದರೊ
ಶವದ ವಾಸನೆ ಕಂಡು ಸರ್ರನೇ ಇಳಿತಾದರೊ
ಸಾರಕೊಂಡು ಮೀರಿ ಮೇಲಕ ಹಾರತಾದರೊ
ಸತ್ಯವಂತರೆಲ್ಲಾ ಗೊತ್ತು ತಿಳಿಕೊಳ್ಳಿರೊ| ||2||
ಹದ್ದಿನ ಮಾರಿ ಹಕ್ಕಿ ಎಂದರೆ ನಾರಾಯಣ
ಆತನ ಭಜನಿ ಮಾಡರೆಪ್ಪಾ ನಾಮಸ್ಮರಣ
ಮನದ ಕೊನಿಮ್ಯಾಲ ಅವರ ಠಿಕಾಣ
ದಿಟ್ಟಿಸಿ ನೋಡರೆಪ್ಪಾ ಹಿರಿಯ ಕಣ್ಣಾ| ||3||
ಭಕ್ತಿ ಮಾಡಿ ಮುಕ್ತಿ ಪಡಿಬೇಕೋ ಮುನ್ನ
ತಡಾವೇಕೆ ಸನಿ ಬಂತು ದಿನಮಾನ
ಇನ್ಯಾಕೆ ಮಾಡತಿರ ಅನುಮಾನ
ಏ ಎಪ್ಪ ಸರಲ ಮಾಡಿಕೊಳ್ಳಿರಿ ಭಾವನಾ| ||4||
ನಿಡವಂಚಿನೆಂಬುದು ನಿಜ ಲಿಂಗಿರೊ
ಗುರು ಭದ್ರಿನಾಥ ಮೂರುತಿ ನಿರಸಂಗಿರೊ
ನಿರ್ಮಲ ಮಂಗಳಾರುತಿ ಬೆಳಗಿರೊ
ನಿಶ್ಚಿಂತವಾಯಿತು ನಿಜಲಿಂಗಿರೊ| ||5||

ಏಕೋ ವಾಕ್ಯೆ ನಮ್ಮ ಸತ್ಯ ಶರಣರು ಬರುವಾಗ
ಏಕೋ ವಾಕ್ಯೆ ನಮ್ಮ ಸತ್ಯ ಶರಣರು ಬರುವಾಗ
ಉಕ್ಕಿನ ಹೂಜಿಗಳು ಕೈಯಾಗ
ಅಮೃತ ಕುಡಿಕುಡಿದು ಜಗವೆಲ್ಲಾ ಆಡುವಾಗ
ಸ್ತ್ರೀಯರ ಉಪದ್ರ ಹೆಚ್ಚು ಆವಾಗ| ||1||
ಹಾಂಗ ಹಾಂಗ ಮಳಗಾಲಾ
ಜಗವೆಲ್ಲಾ ಬಂತೊ ಅಳಿಗಾಲಾ
ಸೊಳ್ಳು ಹಾರಿ ಸ್ವಧರ್ಮ ಉಳಿದಿತ್ತು
ಈ ಮಳ್ಳ ಮಾನವರಿಗೆ ತಿಳಿಯಲ್ದಾಂಗ ಆದತ್ತು| ||2||
ಅಳಿಯನ ಸೋದರ ಮಾಂವಪ್ಪಾ
ಜಗದಪ್ಪಾ ನಮ್ಮಪ್ಪಾ ಚೆನ್ನಬಸವನಪ್ಪಾ
ಬರುವಾಗ ನಿಜಯೆಂಬೊ ನಿಶಾನಿಗಳು
ಸಾಲು ಸಾಲಾಗಿ ನಡಸ್ಯಾರುಛತ್ರ ಚಾಮರಗಳು| ||3||
ಆನಂದ ಪಿಂಗಳನಾಮ ಸಂವತ್ಸರ
ಆಶ್ವಿಜಯ ಶುದ್ದ ನವಮಿ ಆದಿತ್ಯ ವಾರ
ಮಧ್ಯಾಹ್ನಕಾಲ ಬಂದು ಎರಗುವಾಗ
ಸೂಚನೆಗಳು ಕೇಳಿ ಬರುವಾಗ| ||4||
ಬಿಂದುವಾದವ ನುಂಗಿ
ನಾದ ಕಳೆಗಳು ನುಂಗಿ
ನಿಜನುಂಗಿದಯೋಗಿ ಮುಕ್ತಿ ರಾಜ್ಯಕ್ಕೆ ಅರಸಾ
ಭದ್ರಿನಾಥನ ಬೆಡಗು ಬಿರುಸಾ ನುಡಿ ಸರಪಾ| ||5||

ಏನಾರ ಮಾಡಯ್ಯೊ ನೀನು
ಏನಾರ ಮಾಡಯ್ಯೋ ನೀನು
ಬಲ್ಲೆನೆಂಬವರ ಪಾದರಕ್ಷೆ ಆಗುವೆ ನಾನು| ||1||
ತಾಯಿಯು ನೀನು ಕೂಸೇ ನಾನು
ನೀ ಬಂದು ಮೋಹಿಸಿ ಪಾಲು ಕುಡಿಸೋ ಎನ್ನನು| ||2||
ಗರುವೆ ನೀನು ಜ್ನಾನದ ಭಾನು
ಗುರುತಾದ ಮಾತೊಂದು ಹೇಳಬೇಕು ನೀನು| ||3||
ಅಜ್ಞಾನಿ ಬಾಲಕ ನಾನು
ಸ್ವಾನುಭಾವದ ಜ್ಯೋತಿಯ ತೋರಬೇಕೊ ನೀನು| ||4||
ಪದವೊಂದು ಹಾಡುವೆ ನಾನು
ಪಾದ ನಟ್ಟಿದ ಸ್ಥಲದ ಹೇಳಬೇಕೊ ನೀನು| ||5||
ಸೋಮಶಂಕರ ಲಿಂಗವು ನೀನು
ನಿಮ್ಮ ಚರಣಕಮಲದಲ್ಲಿ ನಾ ಭೃಂಗಿ ಆಗುವೆನು| ||6||

ಒಬ್ಬನ ಮೆಚ್ಚಿಕೊಂಡು ಇರು ಲವಡಿ
ಒಬ್ಬನ ಮೆಚ್ಚಿಕೊಂಡು ಇರು ಲವಡಿ
ಇಬ್ಬರ ಮೆಚ್ಚಿಕೊಂಡು ಇರುಬ್ಯಾಡ ಹುಚ ಲವಡಿ
ಒಬ್ಬನ ಮೆಚ್ಚಕೊಂಡು ಇದ್ದರ
ಆಧಾರ ಏರಿ ಕುಂಭಕ ಸೇರಿ ಕೂಡ ಲವಡಿ
ಗುರಿ ನೋಡ ಲವಡಿ ಬಲು ಬಿರಿ ಲವಡಿ| ||ಪ||
ಹಟಯೋಗ ಮಾಡಿ ದಿಟ ಕಾಣ ಲವಡಿ
ರಾಜಯೋಗ ಮಾಡಿ ತೇಜಿ ಏರ ಲವಡಿ
ಹಟಯೋಗ ಮಾಡಿದರೆ ದಿಟವಾಗಿ ನಿಲ್ಲುವದು
ಏರಿ ಬ್ರಹ್ಮರ ಗುಂಪಾ ಸೇರ ಲವಡಿ
ಅಲ್ಲಿ ಬೆರಿ ಲವಡಿ ಬಲು ಬಿರಿ ಲವಡಿ| ||1||
ಏಕಾಂತ ಮನ ಸಾಧಿಸು ಲವಡಿ
ಲೋಕಾಂತ ಗಜಬಿಜಿ ಬ್ಯಾಡ ಲವಡಿ
ಏಕಾಂತ ಸಾಧಿಸಿಕೊಂಡರ
ಉನ್ಮನಿ ಖಿಡಕಿ ನೋಡ ಲವಡಿ
ಉನ್ಮನಿನಾಥ ಚರಣ ಕಮಲದಲ್ಲಿ ಐಕ್ಯ ಆಗ ಲವಡಿ| ||2||
ಸೋದರ ಮಾವನ ಕಾಲ ಜಪ್ಪಿಸಿ ಹಿಡಿ ಲವಡಿ
ಸ್ವಾನುಭಾವ ತಿಳಿದು ಗಪ್ಪಾಗ ಲವಡಿ
ಸೊದರ ಮಾವನ ಹಿಡಿದರೆ ಸ್ವಾತಿ ಮಳೆ ಸುರಿದಂಗ
ಶಂಕರಲಿಂಗನ ಪಾದ ಪಿಡಿದು ಬಾಗ ಲವಡಿ
ಐಕ್ಯ ಆಗ ಲವಡಿ ಭವ ನೀಗ ಲವಡಿ| ||3||

ಒಳ್ಳೆಯ ಮಾತುಗಳ ಆಡನು ಕಲಿರಿ
ಒಳ್ಳೆಯ ಮಾತುಗಳು ಆಡನು ಕಲಿರಿ
ಎಲ್ಲಾ ಬಲ್ಲವರಲ್ಲಿ ಕೂಡಿ ನಡಿಯಿರಿ
ಪರನಾರಿ ಸಂಗವನು ಬಿಟ್ಟುಬಿಡಿರಿ
ಪರಬ್ರಹ್ಮನ ಭಾವ ಇಟ್ಟು ತಿಳಿಯರಿ| ||ಪ||
ಪರತತ್ವವನು ಕೊಂಡಾಡಿರಿ
ಅನ್ಯಾಯದ ಬೆಂಬಲ ಬಿಡಿರಿ
ಹರಶರಣರ ಮಾರ್ಗವ ಹಿಡಿರಿ
ಅದ್ವೈತ ಖೂನವನು ತಿಳಿಯರಿ| ||1||
ಪ್ರಾಣಿದಯೆ ಮಾಡಿರಿ ಪರ ಉಪಕಾರಿ
ಗುರು ಚರಣದಲ್ಲಿ ಭಾವ ಇಡಿರಿ
ವಿರೂಪಾಕ್ಷನ ನುಡಿಗಳ ನುಡಿರಿ
ನರಜನ್ಮ ಉದ್ಧಾರ ಮಾಡಿಕೊಳ್ಳಿರಿ| ||2||
ನಿಡವಂಚಿ ನಿಜಲಿಂಗ ನೆನಿರಿ
ಭದ್ರಿನಾಥನ ಪಾದವ ಪಿಡಿರಿ
ಭೀಮರಾವ ಆತನ ಸೇವಾಧಾರಿ
ಭಾವಕ ಒಲಿದು ಮೇವಾ ಉಣಸ್ತಾನರಿ| ||3||

ಕನಸು ಮನಸಿನಲ್ಲಿ ನೆನಸಿದಾಗಲೆ ನೆನುವಾಗಿ
ಕನಸು ಮನಸಿನಲ್ಲಿ
ನೆನಸಿದಾಗಲೆ ನೆನುವಾಗಿ| ||1||
ಹಸರು ಹಳದಿ ಕೆಂಪು ತರತರದ ಬಣ್ಣಾಗಿ
ಬಣ್ಣ ಕರಗಿ ಬಯಲಾಗಿ ಬಲ್ಲವರ ಸವಿಯಾಗಿ| ||2||
ಸ್ವರ್ಗ ಮತ್ರ್ಯೆ ಪಾತಾಳ ಅಡಗಿ ಯಾರಿಗ ಕಾಣದಂತಾಗಿ
ನಿರ್ನಾಮ ನಿಜಯೋಗಿ ಶಂಕರಲಿಂಗ ರಾಚೋಟೇಶ್ವರ ತಾನಾಗಿ| ||3||
ಭದ್ರೀನಾಥ ಮಗನಾಗಿ ಬೇಡಿದ ಪಾದಕ್ಕೆರಗಿ
ಕರುಣಿಸಯ್ಯಾ ಮಹಾಯೋಗಿ ಸದ್ಗುರುವೆ ಎನಗಾಗಿ| ||4||

ಕನಸೊಂದು ಕಂಡೆನಮ್ಮಾ
ಕನಸೊಂದ ಕಂಡೆನಮ್ಮ
ಎಂತ ಸೋಜಿಗಾಯಿತಮ್ಮ
ಬಿದಗಿ ಚಂದ್ರಮ ಮೂಡಿದಾನಮ್ಮ ||1||
ಈ ಕನಸಿನೊಳಗ|
ರಂಗಮಂಟಪದಲ್ಲಿ
ಬೆಳ್ಳಿಚುಕ್ಕಿ ಮೂಡಿತಮ್ಮ
ಬೆಳ್ಳನೆ ಬೆಳಗಾಯಿತಮ್ಮ
ಈ ಕನಸಿನೊಳಗ| ||2||
ಬೊಡ್ಡಿಯಿಲ್ಲದ ಮರದ ಮೇಲೆ
ಬಣ್ಣವಿಲ್ಲದ ಪಕ್ಷಿಯ ಕುಂತು
ಸಣ್ಣದೊಂದು ಗುಡ ಕಟ್ಟಿತೆ
ಈ ಕನಸಿನೊಳಗ| ||3||
ಗೂಡಿನೊಳಗೆ ಗುಡ್ಡವನಿಕ್ಕಿ
ಸುತ್ತಮುತ್ತ ಸುಳಿದಾಡುತಿತ್ತು
ಹೆಣ್ಣು ಗಂಡು ಅರಿಯೆನು ನಾನಮ್ಮ
ಈ ಕನಸಿನೊಳಗ| ||4||
ಲಕ್ಷ ಯೋಜನೆ ಮ್ಯಾಲಿರುತಿತ್ತು
ಲಕ್ಷವಿಟ್ಟರೆ ಅದು ಕಾಣಿಸುತಿತ್ತು
ಕಾಲಿಗಿ ದನಿ ಮಾಡಿ ಒದರತಿತ್ತಮ್ಮ
ಈ ಕನಸಿನೊಳಗ| ||5||
ಅಗಣಿತ ರೂಪವ ಕಂಡೆ
ಸೊಗಸಿನ ಮೂರುತಿ ಕಂಡೆ
ನಿಗಿನಿಗಿಸುವದು ನಿಜವಮ್ಮಾ
ಈ ಕನಸಿನೊಳಗ| ||6||
ನಿಡವಂಚಿ ಗ್ರಾಮದಲ್ಲಿ
ನಿಜಲಿಂಗ ಮುರುತಿ ಕಂಡೆ
ಭದ್ರಿನಾಥ ಗುರುವಿನ ಕಂಡೆ
ಮುಕ್ತಿ ಪಡೆದುಕೊಂಡೆ| ||7||

ಕರ್ಪೂರದಾರುತಿ ಮಂಗಳ ಮೂರುತಿ
ಕರ್ಪೂರದಾರುತಿ ಮಂಗಳ ಮೂರುತಿ
ಜಯಹರ ಗುರು ಮುಕ್ತಾಂಗನಿಗೆ| ||1||
ಉದಗಿರಿ ಶಂಕರ ಉನ್ಮನಿ ಈಶ್ವರ
ಜಯಹರ ಗುರು ಮುಕ್ತಾಂಗನಿಗೆ| ||2||
ಸದ್ಗುರು ಶಂಕರ ಸಿದ್ಧ ರಾಚೋಟೇಶ್ವರ
ಜಯಹರ ಗುರು ಮುಕ್ತಾಂಗನಿಗೆ| ||3||
ಝೇಂಕಾರ ಓಂಕಾರ ಚರಣ ಕಮಲಾಕಕರ
ಮಧ್ಯೆ ಮಂಗಳಕರ ಮುಕ್ತಾಂಗನಿಗೆ| ||4||
ನಾಟಕ ಗುರುವಿನ ಆಟ ನೋಡಿರಿ
ಕಾಟದ ಕೊನಿ ಮ್ಯಾಲ ಆಡುವುದೊ| ||5||

ಕರವು ಮುಗಿದು ನಿನ್ನಾ ಶಿರ ಬಾಗುವೆ ನಾ
ಕರವ ಮುಗಿದು ನಿನ್ನಾ ಶಿರ ಬಾಗುವೆ ನಾ
ವರವ ಕೊಡೊ ಎನ್ನ ವರದ ಹಸ್ತ| ||1||
ಹರನಹುದಂತೆ ನರನು ಅಲ್ಲಂತೆ
ಬಿರುದು ಸಾರುತೈತೆ ಮೂರು ಲೋಕ| ||2||
ಗುರುವಿನ ಆಜ್ಞೆಯನ್ನು ಮೀರಬಾರದಿನ್ನು
ಮೀರಿದ ಫಲವನ್ನು ಸೂತ್ರಧಾರಿ| ||3||
ಕ್ರಿಯಾ ಕರ್ಮ ರಹಿತಾ ಮಾಯಾವಿರಹಿತ
ಅದ್ಭುತ ನಿಮ್ಮ ಪಂಥ ಧೃತವಿಲ್ಲ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||

ಕಾಣಬೇಕಲೊ ಜಾಣ ಪಕ್ಷಿ
ಕಾಣಬೇಕಲೊ ಜಾಣ ಪಕ್ಷಿ
ಕಾಣದ ಮಾನವ ಕೋಣಿನ ಸಾಕ್ಷಿ| ||ಪ||
ಕರಿದು ಬಿಳಿದು ಕೆಂಪಾಗಿಹುದೊ
ಎರಡು ಪಂಕ ತೆರೆದರೆ ಮರಕೆ ಹಾರುವದೊ
ಕರೆದರೆ ಕೆಂಡ ಕಾರುವದೋ
ಗುರು ಹಿರಗೋಳು ಕರೆದಲ್ಲಿ ಸೇರಿಕೊಂಬುವದೊ| ||1||
ಅಂತರಾತ್ಮದಲ್ಲಿ ಆಡುವದೊ
ಅನಂತಮುಖ ಹಿಂದ ನಿಂಗು ನೋಡುವದೊ
ಶಾಂತ ಚಿಂತಿ ಮಾಡುವದೊ
ಕಂತು ಎಕ್ಕೇಳಿ ಬಸವನ ಹಂತಿಲಿ ಆಡುವದೊ| ||2||
ಭದ್ರಗಿರಿಯ ಮ್ಯಾಲ ಆಡುವದೊ
ತದ್ರೂಪ ನಿದ್ರಿ ಮಾಡುವದೊ
ಮುದ್ರಯೋಗಿಗಳಿಗೆ ಎದ್ದು ಬುದ್ದಿ ಹೇಳುವದೊ
ಗುರು ಶಂಕರಲಿಂಗನ ಕೂಡಿ ಕೊಂಬುವದೊ| ||3||

ಕುಲ ಕುಲ ಕುಲ ಕುಲ ಅಂತೀರಿ
ಕುಲ ಕುಲ ಕುಲ ಕುಲ ಅಂತೀರಿ
ನಿಮದ್ಯಾವ ಕುಲ ನಮಗ ಹೇಳೀರಿ
ವರ್ಮಾ ತಿಳಿಲಾರದೆ ಕುಂತೀರಿ
ವರ್ಮಾವಗೆಟ್ಟು ಮರಣಾದಿರಿ| ||1||
ತಾಯಿ ಉದರದಲ್ಲಿ ಜನಿಸಿದಿರಿ
ಅಲ್ಲಿ ಯಾವ ಕುಲ ಇತ್ತು ಹೇಳೀರಿ
ಹೊರಗೆ ಬಂದು ನೀವು ವೇಷ ಧರಿಸೀರಿ
ಕುಲಛಲಕ ಹೊಡದಾಡುತೀರಿ| ||2||
ಎಲುವಿನ ಪಿಂಜರಿ ಮಾಡ್ಯಾನರಿ
ಹೊಲಸು ಮಾಂಸ ಒಲಗೆ ತುಂಬ್ಯಾನರಿ
ಚರ್ಮದ ಮುಚ್ಚಕಿ ಮಾಡ್ಯಾನರಿ
ಇದಕ ಯಾವ ಕುಲ ಅನಬೇಕರಿ| ||3||
ನಿಡವಂಚಿನೆಂಬುದು ಹಳ್ಯಾದರಿ
ಮಹಾದೇವನ ದಯಾ ನಮ್ಮ್ಯಾಲದರಿ
ಗುರು ಶಂಕರಲಿಂಗನ ಪಾದಕ
ನೆಂಬಿದ ಸೇವಕ ಭವಗೆದ್ದಾನರಿ| ||4||

ಕೂಡಲ ಸಂಗಮದೇವ ಕೂಡಿಕೊ ಎನ್ನ
ಕೂಡಲ ಸಂಗಮದೇವ
ಕೂಡಿಕೊ ಎನ್ನ
ಚರಣಕಮಲ ಮಧ್ಯ
ಮುಕ್ತಿ ಮಾಡೆನ್ನ| ||1||
ತ್ರೀವೇಣಿ ಸಂಗಮನಾ
ತ್ರಿನಯನ ಸ್ಥಾನಾ
ಗೋದಾವರಿ ತುಂಗಾ
ತ್ರಿಗಂಗಾ ಜಮುನಾ| ||2||
ಉದಗಿರಿನಾಥನ
ಚರಣ ಸೇವಕನಾ
ಸದ್ಗುರು ರಾಚೋಟೇಶನಾ
ಕೂಡಿಕೊ ಎನ್ನ| ||3||

ಕೆಂಪು ಮೂಗಿನ ಹಕ್ಕಿ ಎಂದರೆ ಫಿರಂಗಿ
ಕೆಂಪು ಮೂಗಿನ ಹಕ್ಕಿ ಎಂದರೆ ಫಿರಂಗಿ
ಹಚಕೊಂಡು ಬರುತಾನ ನವರಂಗಿ
ಗೆದ್ದುಕೊಂಡು ಹೋಗುತಾನ ಸುಂದರಾಂಗಿ
ಕದ್ದುಕೊಂಡು ಹೋಗುತಾನ ಸುಂದರಾಂಗಿ
ಕದ್ದು ಓಡಿ ಹೋಗುತಾನ ಕಾಣದಾಂಗೆ| ||1||
ದೊಡ್ಡ ಶರಣ ಬರುತಾನ ಉಳವಿಲಿಂದ
ಗುಡ್ಡ ಕರಗಿ ತಿಳಿಯಾಗಿ ಕಣ್‍ಬಂದ
ಶರಣ ಗಣಂಗಳೆಲ್ಲಾ ಅವರ ಹಿಂದಾ
ಹಂದ್ರ ಹಾಕಿದಾರೋ ಹಂಪಿ ದ್ವಾರ ಮುಂದಾ| ||2||
ಬಾವನ್ ಸುಬೇದಾರು ನೆರೆದು ಬಂದಾ
ಅರಸಿಣ ಹಚ್ಚುತಾರೊ ಬೀದರ ದ್ವಾರ ಮುಂದ
ಭೂರಜಗಲಿ ಹಾಕಿದರೊ ಬ್ರಹ್ಮಾನಂದಾ
ಶರಣಗ ಪಟ್ಟ ಗಟ್ಟುತಾರೊ ಇನ್ನು ಮುಂದ| ||3||
ಛಪ್ಪನ ಕೋಟಿ ರಾಜರೆಲ್ಲಾ ಬರುತಾರೊ
ಬಾವನ ಬಾಗೀಣೆಲ್ಲಾ ಹಂಚುತಾರೊ
ಸತ್ಯವಂತ ಶರಣರಲ್ಲಾ ಬರುತಾರೊ
ಗೊತ್ತಿನಲ್ಲೆ ಸತ್ತವರಿಗೆ ಕಾಣತಾರೊ| ||4||
ನಿಡವಂಚಿ ಎಂಬುದು ಹಳ್ಳಿಯಲ್ಲಾ
ನಿಜಲಿಂಗ ಗುರು ಸಕೀಲ ಸುಳ್ಳಲ್ಲಾ
ಶಂಕರ ಲಿಂಗನ ಪಾದ ಮುಟ್ಟಿ ಕೇಳಿಸಲ್ಲಾ
ಗುರು ರಾಚೋಟೇಶನಲ್ಲಿ ಬೈಲಾಗೋದೆಲ್ಲಾ| ||5||

ಕೇಳೊ ನಂದಿನಾಥ ಬಿಡಲೆಂಬ ದೈತ್ಯ
ಕೇಳೊ ನಂದಿನಾಥ ಬಿಡಲೆಂಬ ದೈತ್ಯ
ಬಂದಾನೊ ಓಡುತ ದೇವಿನ ಕೊಂದು ಬಿಡುವೆನಂತ| ||1||
ದಂಡು ಬಂತೋ ಓಡಿ ಹತ್ತು ಖರ್ವ ಕೂಡಿ
ಮುತ್ತಿಗಿ ಹಾಕಿದಾರೋ ದೇವಿಸುತ್ತ ಮುತ್ತಗಿ ಹಾಕಿದಾರೋ| ||2||
ದೇವಿ ಕೋಪದಿಂದೆ ಚಕ್ರ ಬಾಣ ಬಿಡಲು
ಆರು ಮೂರಕ್ಷೋಣಿ ಮಡಿತೊ ಆರುಮೂರಕ್ಷೋಣಿ| ||3||
ದಯವಾಗೇ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||4||

ಖಾತ್ಯಾದಾಗಿದ್ದಷ್ಟು
ಖಾತ್ಯಾದಾಗಿದ್ದಷ್ಟು
ಕೊಡಬೇಕು ಸಾವಕಾರನ ಗಂಟು
ಸಾವಕಾರನ ಗಂಟು ಸತ್ತರೆ ತಪ್ಪದು
ಸತ್ತು ಹುಟ್ಟಿ ಬಂದು ತೊತ್ತಾಗಿ ದುಡಿಬೇಕು| ||1||
ಸಾಲಾವು ಕೊಡಬೇಕು
ಸಂಗಾಟ ರೋಕ್ಯಾವು ಬರಬೇಕೊ
ರೋಕ್ಯಾ ಇದ್ದರೆ ನಿಮ್ಮ ಪಾಕಿ ಬರುತಾದೊ
ಪಾಕಿ ತೀರಿದ ಮ್ಯಾಲೆ ಪರಿಕಾನೆ ಹರಿತಾದ| ||2||
ಗಂಟೇನು ಕೊಡತಿರೊ
ಮ್ಯಾಗಿನ ಬಡ್ಡಿಯ ಕೊಡುವಲ್ಲರಿ
ಬಡ್ಡಿ ಏರಿ ಏರಿ ಗುಡ್ಡ ಆಗುತಾದ
ಗುಡ್ಡ ಹೊದಿಲಾರದೆ ಗುರುವಿನ ಬೈಯತಿರಿ| ||3||
ರಿಣದಾಗ ಸಿಲ್ಕಿರೊ
ಮಾಯಿ ಉಡಿದಾಗ ಬಿದ್ದಿರೊ
ಜೋಗುಳ ಹಾಡಿ ನಿಮ್ಮ ಜ್ವಾಕಿ ಮಾಡುತಾಳ
ಯಮರಾಜನ ಕೈಯಲ್ಲಿ ಒಯ್ದೊಯ್ದು ಕೊಡುತಾಳ| ||4||
ಗುರುವಿನ ಪಾದಾಕ ಶರಣಾಗಿರೊ
ಗುರುತಾವ ತಿಳಕೊಂಡು ಗಪ್ಪಾಗಿರೊ
ಗುರುತು ತಿಳಿದ ಮ್ಯಾಗ ಗಂಟು ತೀರುತಾದ
ಬಂಟಾ ಬಂದು ನಿಮ್ಮ ಸೊಂಟ ಮುರಿತಾನ| ||5||
ಧರಿಯೊಳು ನಿಡವಂಚಿ
ಶಂಕರನ ಪಾದಾವ ಹಿಡಿ ಗಚ್ಚಿ
ಪದ ಪಿಡಿದ ಮ್ಯಾಗ ಪಾಕಿ ತಿರುತಾದ
ಪಾಕಿ ತೀರಿದ ಮ್ಯಾಲೆ ಪರಿಕಾನೆ ಹರಿತಾದ| ||6||

ಗಂಡನ ಮಾಡಿಕೊಂಡವರೆಲ್ಲಾ
ಗಂಡನ ಮಾಡಿಕೊಂಡವರೆಲ್ಲಾ
ಗರತೆರಾದಿರಿ ಪತವ್ರತೆರಾದಿರಿ
ಪತಿವ್ರತಾ ಖೂನಾ ಆರ್ತು ಗುರುತು ತೋರಿರಿ
ಧಿಮಾಕ ಬಿದ್ದವರು ನೋಡಿರಿ| ||1||
ಮಂತ್ರಬೋಧ ಮಾಡಿದಾನೋ ಕರ್ಣದಲ್ಲಿ
ಅದರ ಸುದ್ದಿ ತಿಳಿದವನಿಗೆ ಸುಕದಲ್ಲಿ
ಅಕ್ಷಯ ಪಾತ್ರಿ ಕೊಟ್ಟು ಕರದಲ್ಲಿ
ಸಾವು ಹುಟ್ಟು ತಪ್ಪಸಿದ ಕ್ಷಣದಲ್ಲಿ| ||2||
ಸತ್ತು ಇದ್ದು ಇಲ್ಲದಂಗ ಇರಬೇಕರಿ
ಐಕ್ಯಸ್ಥಲದ ಗುರುತು ಅರಿತುಕೊಳ್ಳಿರಿ
ಹಸ್ತ ಪ್ರಸಾದ ನೀವು ಬೆರೆತುಕೊಳ್ಳಿರಿ
ನೀವು ಉಂಡು ನೋಡಿರಿ ಮೇಲ ಕೊಂಡ ನೋಡಿರಿ| ||3||
ನೀಲಗಿರಿಯ ಮೇಲ ನಿಡವಂಚಿ
ಭಲೆ ಶಿವಕಂಚಿ ನಿಜಲಿಂಗ ಮೂರುತಿ ನಿಶ್ಚಿಂತಿ
ಮಾಡಿಕೊಂಡರೆ ಮನದಲ್ಲಿ ಕ್ರಾಂತಿ
ಹೋಯಿತೊ ಭ್ರಾಂತಿ ಆಯಿತೋ ಶಾಂತಿ| ||4||

ಗುರುತಾಯಿ ಗುಣವಂತಿ ಸದಾನಂದಮೂರ್ತಿ
ಗುರುತಾಯಿ ಗುಣವಂತಿ ಸದಾನಂದಮೂರ್ತಿ
ಸ್ವಾನುಭಾವ ಜ್ಯೋತಿ ವಿರಾಟಶಕ್ತಿ ಸ್ವಾನುಭಾವ ಜ್ಯೋತಿ| ||ಪ||
ಶಿವತ್ಯಾ ಜ್ಯೋತಿ ಲಿಂಗದೊಳು ಇರುತಿ
ಅಣುವಾಗಿ ಸಾಧುಸತಿ ಸಂತರ ಚಿತ್ತಿನಲ್ಲಿ ಬೆರತಿ| ||1||
ಚಿನ್ಮಯ ಮೂರುತಿ ಚಿದಾನಂದನ ಹೆಂಡತಿ
ಬಾರೇ ಅಚ್ಚಗರತಿ ಮೂಗಿನೋಳು ಮುತ್ತಿನ ಮೂಗುತಿ| ||2||
ದಯವಾಗೆ ಶಂಕರಿ ಕಾಯಿಎನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||

ಗುರುತು ಇಲ್ಲದ ಗುರುವಿನ ಅರತುಕೊಳ್ಳವ್ವ ತಂಗಿ
ಗುರುತು ಇಲ್ಲದ ಗುರುವಿನ ಅರತುಕೊಳ್ಳವ್ವ ತಂಗಿ
ನಾ ನೀ ಎಂಬುದು ಬಿಟ್ಟು ತಾನೆ ತನ್ನೊಳಗ ಕೂಡಿ
ಐಕ್ಯನಾಗವ್ವಾ ತಂಗಿ| ||1||
ಆಕಾರಿಲ್ಲದ ವಸ್ತು ನಿರಾಕಾರ ಇಲ್ಲವ್ವಾ ತಂಗಿ
ಝೇಂಕಾರ ಭ್ರಾಂತಿ ಅಳಿದು ಸಂತೋಷ ಆದ ಮೇಲೆ
ನಿಶ್ಚಿಂತ ಆಗವ್ವಾ ತಂಗಿ| ||2||
ಸಿರಸ್ಸಿನಲ್ಲಿರುವ ಶಿವ ಶಿವ ಸ್ಫಟಿಕ ಲಿಂಗ
ತಾನೇ ತಾನೆಂಬ ಗುರ್ತು ಬೈಲಿಗೆ ನಿರ್ಬೈಲಿನೊಳಗ
ಸಹಿಲ ಮಾಡವ್ವಾ ತಂಗಿ| ||3||
ಮಾತು ಮಾತಿನ ಗುರ್ತು ನೀತಿ ತಿಳಿಯವ್ವಾ ತಂಗಿ
ಭದ್ರಿನಾಥನ ಚರಣ ಪಿಡಿದು ಆ ಲಕ್ಷದೊಳಗೆ ಬೈಲಾದ ಮೇಲೆ
ಅಡಗಿ ಹೋಯ್ತವ್ವಾ ತಂಗಿ| ||4||

ಗುರುವಿನ ಮಾಡಿಕೊಳ್ಳಿರೊ
ಗುರುವಿನ ಮಾಡಿಕೊಳ್ಳಿರೊ
ಒಬ್ಬನ ಗುರುವಿನ ಮಾಡಿಕೊಳ್ಳಿರೊ
ಗುರುವು ಆದ ಮೇಲೆ ಅರವು ಆಗತಾದ
ಮರವು ಹರಿದು ಮಹಾಲಿಂಗನ ಕೂಡಿರೊ| ||1||
ಮರತು ಕುಂಡ್ರಬ್ಯಾಡರೊ ಗುರುವಿನ ಮಗನಾಗಿರಬೇಕರೊ
ಮಗನಾದ ಮೇಲೆ ತಗಾದಿನೆ ಹಾರುವದು
ಉಗಾದಿ ಮರದಿನ ತಗಾದಿ ಬರುತಾದರೊ| ||2||
ಆಸಿಯ ಅಳಿಬೇಕರೊ ನಿರಾಶಕನಾಗಬೇಕರೊ
ಆಶಿ ಅಳಿದ ಮೇಲ ಘಾಸಿ ಹರಿವದು
ಉಲ್ಲಾಸದೊಳಗೆ ನೀವು ಫುಲ್ಲಸತ್ ಕುಡಬೇಕರೊ| ||3||
ಜಗದೊಳಗಿರಬೇಕರೊ ಜಾತಿ ಜಂಗಮ ತಿಳಿಬೇಕರೊ
ಜಂಗಮ ತಿಳಿದರೆ ಝಲ್ಲನೇ ಹಾರುವದು
ಜೊಲ್ಲಿನ ಜಗವಿದು ಗಂಡ ಹೆಣ್ಣಿನಿಂದಾಯಿತರೊ| ||4||
ಲಿಂಗಮಧ್ಯ ಜಗವೊ ಮೂರು ಲೋಕ ಆಗಮವೊ
ಆಗಮ ತಿಳಿದರೆ ಲಗಾಮ ಹರಿವದು
ಬೇಗನೆ ಹೋಗಿ ನೀವು ಬೈಲೊಳಡಗಿರೊ| ||5||
ನಾ ನೀ ಅಳಿಬೇಕರೊ ತಾನೇ ತಾನಾಗಿರಬೇಕರೊ
ತಾನೆ ತಾನಾದ ಮೇಲೆ ತಂಟಾನೆ ಹರಿವುದು
ಗಂಟು ತೊಕೊಂಡು ಚೋರಗಂಡಿಯ ಧಾಟಿರೊ| ||6||
ನಿಡವಂಚಿ ಗ್ರಾಮ ಭದ್ರಿನಾಥ ರಾಮ ರಾಮ
ರಾಮನ ತಿಳಿದರೆ ಕಾಮನೆ ಹಾರುವದು
ಸೋಹಂ ತಿಳಿದು ಸ್ವರ್ಗಕ್ಕೆ ಮುಟ್ಟಿರೊ| ||7||

ಗುರುವೆ ನಿಮ್ಮ ನಾಮ ಸರ್ವರಿಗೆ ಪ್ರೇಮ
ಗುರುವೆ ನಿಮ್ಮ ನಾಮ ಸರ್ವರಿಗೆ ಪ್ರೇಮ
ಪರಮ ಮೋಕ್ಷ ಧಾಮ ಪರಮಾನಂದ| ||ಪ||
ಕಲ್ಪವೃಕ್ಷ ಖಣಿ ಪರುಷ ಚಿಂತಾಮಣಿ
ಸಾಧು ಮುಕುಟ ಧ್ವನಿ ನಾದ ಬ್ರಹ್ಮ| ||1||
ದೀಕ್ಷ ಮೋಕ್ಷದಾತ ರಕ್ಷಿಸೆನ್ನ ತಾತ
ಅಪರೋಕ್ಷ ಜ್ಞಾನವಂತ ಮಾನನಿಧಿ| ||2||
ಸಕಾಮ ನಿಷ್‍ಕಾಮ ರಾಜಾರಂಕ ಪ್ರೇಮ
ಏಕೋ ಪರಬ್ರಹ್ಮ ದೇವಾ ನೀನೆ| ||3||
ಪರಮ ಯೋಗಿ ಪುರುಷ ಕರ್ಮಲಿಖಿತ ಪ್ರೇಮ
ಏಕೋ ಪರಬ್ರಹ್ಮ ದೇವಾ ನೀನೆ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗಮೂರ್ತಿ| ||5||

ಗುರುಲಿಂಗ ಜಂಗಮ ತ್ರೀವೇಣಿ ಸಂಗಮ
ಗುರುಲಿಂಗ ಜಂಗಮ ತ್ರೀವೇಣಿ ಸಂಗಮ
ಮಹಾತೀರ್ಥ ಮಹಾತ್ಮ ಶಂಕರಲಿಂಗ| ||ಪ||
ಆರು ಎಸಳ ಮಧ್ಯ ಸ್ವಾಲಿಂಗದ ಗುರುತ
ಕುಂಡಲಿಯ ಆಕೃತ ಶಂಕರಲಿಂಗ| ||1||
ಗುರುವಿಗೆ ಗುಣವಿಲ್ಲ ಲಿಂಗಕ್ಕೆ ನೆಲೆಯಿಲ್ಲ
ಜಂಗಮ ಭಕ್ತರಿಗೆ ಜಾತಿಯಿಲ್ಲ| ||2||
ಆಗಿಲ್ಲ ಹೋಗಿಲ್ಲ ಮ್ಯಾಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪಿಲ್ಲ ಲಿಂಗಕ್ಕೆ ದೇಗುಲ ಇಲ್ಲ| ||3||
ರಜ ತಮ ಸತ್ವ ಮೂರ ಅಕ್ಷರ ತಿಳಿದು
ಗುರುಪಾದವ ಪಿಡಿದು ಮುಕ್ತನಾಗೊ| ||4||
ಅನಂತ ರೂಪಗಳು ಅನಂತ ಅವತಾರಿ
ಅಂಗಲಿಂಗ ಶರಣರ ಶಂಕರಲಿಂಗ ಶ್ಯಾಮವರ್ಣ| ||5||
ದಯವಾಗೊ ಶಂಕರಾ ಶಶಿಧರ ಸುಂದರಾ
ಭಾವಿಕ ಭಕ್ತರ ಕೊಡುವೊ ಮುಕ್ತಿ ಮಂದಿರಾ| ||6||

ಗೌಡನಾಗಬೇಕಣ್ಣಾ ಊರಿಗೆ ಗೌಡನಾಗಬೇಕಣ್ಣಾ
ಗೌಡನಾಗಬೇಕಣ್ಣಾ ಊರಿಗೆ ಗೌಡನಾಗಬೇಕಣ್ಣಾ
ಗೌಡನ ಒಳಗೊಂದು ದೌಡ ಮಾಡುತಾದ
ದವಡನ ಹಿಡಿದು ದಂಡ ತಗೋಬೇಕು| ||ಪ||
ಕಾಯಾಪುರದ ಅಗಸಿ ಮುಂದ
ಮಾಯಾಪುರದ ಪ್ಯಾಟಿಯ ಚಂದ
ಪ್ಯಾಟಿಯ ಒಳಗೊಬ್ಬ ಪಠಾಣ ಇರುತಾನ
ಪಠಾಣಗ ಹಿಡಿದು ಪಟ್ಟತಗೋಬೇಕು| ||1||
ಪಂಚೇತಿ ಮಾಡಬೇಕಣ್ಣಾ
ಸಂಚಿತ ಶಾಸ್ತ್ರ ಓದಬೇಕಣ್ಣಾ
ಶಾಸ್ತ್ರದೊಳಗೊಬ್ಬ ಶತ್ರು ಇರುತಾನ
ಶತ್ರುನ ಹಿಡಿದು ಸಜಾ ಮಾಡಬೇಕು| ||2||
ನ್ಯಾಯ ಮಾಡಬೇಕಣ್ಣಾ
ನೇವರಿಸಿ ಲಂಚ ತಗೋಬೇಕಣ್ಣಾ
ಲಂಚ ತಗೊಂಡರ ಹಂಚಕಿ ಆಗುತಾದ
ಪಂಚ ಕಳ್ಳರ ಕೈದ ಮಾಡಬೇಕು| ||3||
ನಿಡವಂಚಿ ನಮ್ಮ ಜಾಗೀರಿ
ಠಾಣ್ಯನದು ಉದಗೀರಿ
ಠಾಣ್ಯದ ಮೇಲ ನಮ್ಮ ರಾಚೋಟಿ ಕುಂತನ
ಗುಲಾಮನಾಗಿ ಸಲಾಮ ಮಾಡಬೇಕು| ||4||

ಘೂಟಾ ಕಿತ್ತಿಕೊಂಡು ಓಡಿಹೋಯ್ತು ಕುದುರಿ
ಘೂಟಾ ಕಿತ್ತಿಕೊಂಡು ಓಡಿಹೋಯ್ತು ಕುದುರಿ
ಪಾವ ಬಂದ ಹರಿಕೊಂಡು ಪಾರಾಯ್ತು
ಶಿವಮಂದಿರದೊಳಗಿಂದ ಛಿಡದೋಯ್ತು
ಭವ ಗೆದ್ದು ಬಯಲೊಳು ಲಯವಾಯಿತು| ||1||
ಕುದುರಿ ಹೋಗಿ ನಾಲ್ಕು ದಿವಸಾಯಿತು
ಹುಡಕುತ್ತ ಹೊಂಟೆಂಟು ದಿವಸಾಯಿತು
ತಿರುಗಿ ತಿರುಗಿ ಬೇಸರ ಬಂದಿತ್ತೊ
ತೀಸ ರೋಜಗಿ ತಿರುಗಿ ತಾ ಬಂದಿತ್ತೊ| ||2||
ಖಡಿ ಖಡಿ ಮಧ್ಯಾಹ್ನ ಹೊತ್ತಾಯಿತೊ
ಕುದುರಿ ಬಂದು ಠಾವಿಗೆ ನಿಂತಾಯಿತೊ
ಕಟಲಿಕ್ಕೆ ಹೋದರ ಕಚ್ಚಲಿಕ್ಕೆ ಬರುತಾದ
ಮುಟಲಿಕ್ಕೆ ಹೋದರ ಕುದರಿ ಮುಕ್ತನಾಗತದ| ||3||
ನಿಡವಂಚಿನೆಂಬುದು ಹಳ್ಳಿಯಾಯಿತು
ಸಿದ್ಧನ ಕುದುರಿಯು ಸಿದ್ಧಾಯಿತೊ
ಭದ್ರಗಿರಿ ಮ್ಯಾಲಿಂದು ಸುಳುದ ಹೋಯಿತು
ಭದ್ರನಾಥನೊಳು ಐಕ್ಯಾಯಿತೊ| ||4||

ಚಂದನಾ ಸುಗಂಧಾ ಕೇತಕಿ ಮಕರಂದಾ
ಚಂದನಾ ಸುಗಂಧಾ ಕೇತಕಿ ಮಕರಂದಾ
ಪಾರಿಜಾತ ತಂದು ಅರ್ಪಿಸುವೆನು| ||1||
ಏಕೋ ಭಾವದಿಂದಾ ಸೇವಕನಾಗಿ ಬಂದಾ
ಭಾವಕ ಒಲಿಯೋ ಚಂದಾ ಭದ್ರಿನಾಥ| ||2||
ಸಿದ್ಧಿಯೋಗಿ ಪುರುಷ ಸಾಧು ಮುಕಟ ಕಳಸಾ
ಆನಂದ ಉಲ್ಲಾಸಾ ನಿಜಾನಂದ| ||3||
ಚೈತ್ರಮಾಸದಲ್ಲಿ ನಿಮ್ಮ ಜಾತ್ರಿ ಆಗುತಲಿ
ನಿಡವಂಚಿ ಮಠದಲ್ಲಿ ನಿಜಲಿಂಗಾ| ||4||
ತುಕಾರಾಮ ಮಾಸ್ತಾರಾ ಭದ್ರೇಶ ಗುರುವರಾ
ಭೀಮರಾಯ ಬಾಂಧವರಾ ಇಬ್ಬರೂ ಕೂಡಿ| ||5||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತಾ ಲಿಂಗಮೂರ್ತಿ| ||6||

ಚೆಂಡಾಸುರನ ಹೊಡದಿ ಚೆಂಡಿ ಹೆಸರ ಪಡೆದಿ
ಚೆಂಡಾಸುರನ ಹೊಡದಿ ಚೆಂಡಿ ಹೆಸರ ಪಡೆದಿ
ಮುಂಡ ದೈತ್ಯನ ಹೊಡದಿ ರಂಡಿ ಮುರಳಿ ಹೆಸರ ಪಡೆದಿ| ||ಪ||
ದುರ್ಗಾ ದೈತ್ಯನ ಹೊಡದಿ ದುರ್ಗಿ ಹೆಸರ ಪಡದಿ
ಜನಕನ ಮಾಡಿ ತಂದಿ ನೀನು ಜಾಹೀರ ಹೆಸರ ಪಡೆದಿ| ||1||
ಕಳ್ಳಗ ವರ ಕೊಟ್ಟಿ ಕಳಕ ಭವಾನಿ ಆದಿ
ಭಕ್ತರಿಗೆ ವರಕೊಟ್ಟಿ ದೇವಿ ಭವಾನಿ ಹೆಸರ ಪಡೆದಿ| ||2||
ದಯವಾಗೆ ಶಂಕರಿ ಕಾಯೆನ್ನ ಓಂಕಾರಿ
ಭಕ್ತರ ಭವಹಾರಿ ಮುಕ್ತೇಶ್ವರಿ ಭಕ್ತರ ಭವಹಾರಿ| ||3||

ಚೆಂಡಿನಾಟ ಆಡಬಾರಮ್ಮಾ
ಚೆಂಡಿನಾಟ ಆಡಬಾರಮ್ಮಾ
ಗೋಪಾಲರು ಕೂಡಿ ಚೆಂಡಿನಾಟ ಆಡಬಾರಮ್ಮ| ||ಪ||
ಚೆಂಡಿನಾಟ ಆಡಬನ್ನಿರಿ
ನಾವು ನೀವು ತಾವು ಕೂಡಿ
ನೀನೆ ಎಂಬುದು ಬೋಧ ಮಾಡಿ
ನಾನೇ ಎಂಬುದು ಫಣಿಯ ಮಾಡಿ
ತಾನೇ ಚಿತ್ತು ಚಿನ್ಮಯ
ಎಂಬೋ ಚೆಂಡು ಹೊಡಿಯಮ್ಮಾ| ||1||
ನಾವು ನೀವು ಹಿರಗಡಿಯಮ್ಮಾ
ತಾವು ನಾಲ್ಕು ಮಂದಿ ಕೂಡಿ ಕಟ್ಟಿಕೊಟ್ಟು ಬಾರಮ್ಮಾ
ಹಟ್ಟಿ ಬಿಟ್ಟೋ ಕರುಣಾ ಓಂಕಾರ
ಹಟ್ಟಿ ಬಿಟ್ಟ ಸೋಮಶೇಖರ
ಗಟ್ಟಿ ಪಾದಕೆ ಮುಟ್ಟಿ ಬರಬೇಕು
ಒಳ್ಳೆ ಮುತ್ತಿನ ಚೆಂಡ ಆಡಬಾರಮ್ಮ| ||2||
ಚಿತ್ತು ಪಟ್ಟು ಹಾರಿಸು ಬಾರಮ್ಮ
ನಾವು ನೀವು ಕೂಡಿ ಚಿತ್ತು ಪಟ್ಟು ಹಾರಿಸುವಾರಮ್ಮ
ಚಿತ್ತು ಬಿದ್ದರೆ ಚೆಂಡು ನಿಮದು
ಪಟ್ಟು ಬಿದ್ದರೆ ಫಣಿಯು ನಮದು
ಭಾವನೆಂಬೋ ಬೋಧಿನೊಳಗೆ
ಚೆಂಡು ಚೀಕಿ ಚುಮ್ಮನಾಡಮ್ಮಾ| ||3||
ಸಪ್ತ ಪಾದಕ ಫಾಜಾ ಮಾಡಮ್ಮ
ಇಲ್ಲಿಂದಲ್ಲಿಗೆ ಹಾರಿ ನಿಂತು ಘೂಟ ಹೊಡಿಯಮ್ಮ
ಒಮ್ಮೆ ಮುಂದ ಒಮ್ಮೆ ಹಿಂದ
ನೀವು ನಾವು ಕೂಡಿ ಆಡೋಣು
ಸಪ್ತ ಝಲ್ಲಾ ಏರಿ ಮೇಲಕ
ಕೈಲಾಸಕ ಹೋಗಬೇಕಮ್ಮಾ| ||4||
ನೆತ್ತಿ ಮೇಲೆ ಬುತ್ತಿ ಬರಬೇಕೋ
ಆ ಚೆಂಡು ಹೊಡಿದರೆ ಮೂಗಿನ ಚೆಂಡಿ ಮೇಲೆ ಇರಬೇಕೊ
ಅತ್ತ ಇತ್ತ ಒಲುಮೆನಾದರೆ
ಮತ್ತೆ ಹಿಂದಕೆ ದಬ್ಬುತೇವೊ
ಸರಿಗೆ ನಿಂತು ಸತ್ಯ ಹೊಡೆದರೆ
ಗೊತ್ತೆ ಬುತ್ತಿ ಸಿಗಬೇಕಮ್ಮಾ| ||5||
ಚೆಂಡು ನಿಮ್ಮಲ್ಲಿ ಫಣಿಯ ನಮ್ಮಲ್ಲಿ
ಇದು ನ್ಯಾಯ ಮಾಡಿರಿ ಯಾರು ಮುಂದ ಯಾರು ಹಿಂದಲಿ
ಎಡ ಹಸ್ತ ಚೆಂಡು ಹಿಡಿದು ಬಲಹಸ್ತ ಫಣಿಹಿಡಿದು
ಫಣಿಯ ಏರಿಸಿ ಚೆಂಡು ಹಾರಿಸಿ
ಎತ್ತಿ ಮೇಲಕೆ ಒತ್ತಿ ಹೊಡೆದರೆ
ಬ್ರಹ್ಮಲೋಕ ಸೇರಬೇಕಮ್ಮ| ||6||
ಎಡ ಮುಂಚ ಬಲಾ ಹೊಡಿಯಮ್ಮಾ
ಅಲ್ಲಿ ಅಚ್ಚಿಯಾದರೆ ಎದುರು ಗಿಚ್ಚಿ ಹೊಡೆಯಬೇಕಮ್ಮಾ
ಚು-ಚಾ ಓಂಕಾರ ಹಿಡಿಯಬೇಕು
ಒಂದೇ ಹೈ ಖೈಂ ಹೊಡಿಯಬೇಕು
ಸದ್ಗುರು ಫಾಜಕ ಮುಟ್ಟಬೇಕಮ್ಮಾ
ಸದ್ಗುರು ಶಂಕರಲಿಂಗನೊಳಗೆಲ್ಲ ಈಸಬೇಕಮ್ಮ| ||7||

ಛೀ ಛೀ ಮೂಳಿ ಸಂತರಿಗಿ ವಾಳಿ
ಛೀ ಛೀ ಮೂಳಿ ಸಂತರಿಗಿ ವಾಳಿ
ಪೊರ್‍ಗಳ ಸೂಳಿ ಗೈಯ್ಯಾಳಿ
ಪುಣ್ಯವಂತರ ಸಂಗಮ ಮಾಡಿ
ಮಾಯಾ ಹಚ್ಚಿ ಯಮಲೋಕ ಸೇರಿಸಿದಿ
ಅತತ ನಿಲ್ಲು ನೀ ಬಂಗಾಲಿ
ಬಹು ಛಿನಾಲಿ| ||ಪ||
ಕುದುರಿ ಕುಣಸ್ತಿ ಫೇರಿ ಹಾಕಸ್ತಿ
ಸರಕಾರದೊಳ ನೀ ಸರದಾರತಿ
ರಾಜರಗಿ ಒತ್ತಿ ನೀ ರಾಜನಾಳುತಿ
ನರಕದ ಕುಣಿಯೊಳು ನೂಕುಸ್ತಿ
ನಿನ್ನ ಬಿಟ್ಟ ದೂರಾದ ಮಹಾತ್ಮರಿಗಿ
ಕೊಟ್ಟು ಮುಕ್ತಿ ಭವ ದಾಟಸ್ತಿ| ||1||
ವೇಶ್ಯಾ ಸ್ತ್ರೀಯೊಳು ದೈವದ ಬಸವಿ
ಕಳ್ಳನ ಸೂಳಿ ಕಟ್ಟಾಳೀ
ವಲ್ಲ ವಲ್ಲ ಅಂದರ ಬೆನ್ನ ಹತ್ತಿ ಬರತಿ
ಬಾಜಾರ ಬಸವಿ ಬಂಗಾಲಿ
ಸಾಕು ಸಂಗತಿ ಬೇಕಿಲ್ಲ ಎನಗ
ಗುರುಪಾದಕ ನೀ ಅರ್ಪಿತ ತೆರಳಿ| ||2||
ಮಂಗ ರಂಡಿ ಸಂಗ ಮಾಡಿ
ಮಾಯಾ ಘಾಸಿ ಬಿದ್ದಿತು ಅಂವಗ
ಸಂಗನ ಶರಣರು ದೊಬ್ಬಿ ಹಾಕಿದರು
ಭವ ಗೆದ್ದು ಬೈಲಾದವಗ
ಸದ್ಗುರು ಶಂಕರಲಿಂಗನ ಪಾದಕ
ಅರ್ಪಿತನಾದೆನು ಮುಕ್ತಾಂಗಿ| ||3||

ಜಂಗಮ ಜಗ ಕರ್ತಾ ಲಿಂಗದಲ್ಲಿ ಭರಿತಾ
ಜಂಗಮ ಜಗ ಕರ್ತಾ ಲಿಂಗದಲ್ಲಿ ಭರಿತಾ
ಸ್ವಲಿಂಗ ಗುರುತಾ ಚಿನ್ಮಯ ಚಿತ್ತದಲ್ಲಿ ಬೆರಿತಾ| ||ಪ||
ಮಂಗಳ ಮಹಾದೇವಾ ಜಂಗಮ ಜಗದೇವ
ಸಂಗನ ಶರಣರ ಆಳಿನ ಆಳಾದೆನಯ್ಯ| ||1||
ಅಂಬಿಕೆ ಪತಿನಾಥ ಆತ್ಮದಲ್ಲಿ ಬೆರಿತಾ
ಶಂಭೋ ಶಮರಂತ ಕುಂಭಕೋಣೆಯಲ್ಲಿರುತ| ||2||
ನಂಬಿದ ಭಕ್ತರ ನೆನವಿನಲ್ಲಿ ಇರುತ
ಕುಂಬಿಣಿ ಭಕ್ತರ ಕುಂಬಾರ ಗುಮಟದಲ್ಲಿರುತ| ||3||
ಅಂಬುಕೇಶ್ವರಾ ಜಂಗಮ ಭಕ್ತರ
ಜಾತಿ ಜ್ಯೋತಿ ನೀತಿ ಮಾತಿನ ಭೇದ ತಿಳಿಸಯ್ಯ| ||4||
ದಯವಾಗೋ ಶಂಕರ ಶಶಿಧರ ಸುಂದರ
ಭಾವಿಕ ಭಕ್ತರ ಕೊಡುವೋ ಮುಕ್ತಿಯ ಮಂದಿರ| ||5||

ಜಮಾ ಮಾಡಿ ಇಕ್ಕಿರಿ ರೊಕ್ಕಾ
ಜಮಾ ಮಾಡಿ ಇಕ್ಕಿರಿ ರೊಕ್ಕಾ
ನಾಳೆ ಸರಕಾರದವರುಕೇಳುತಾರೊ ಲೆಕ್ಕಾ
ಸಂತಿ ಬಾಜಾರ ತಿರುಗಿ ತಿರುಗಿ
ಭ್ರಾಂತಿಗೆಟ್ಟ ಭಾವ ಮರೆತ
ಚಿಂತಿಯೊಳಗೆ ಸಿಕ್ಕಿ ಬಿದ್ದು ಹಕ್ಕಿಪಕ್ಕಿನಾಗಬೇಡರಿ| ||ಪ||
ಅಣುರೇಣು ಅರಗುಂಜಿಯೊಳಗೆ
ಅರದಾ ಗುಣಿಸಿ ಭಾಗಿಸಿ ತಿಳಿಬೇಕೋ ತನ್ನೊಳಗೆ
ಆರು ಸೋಪಾನ ಏರಿ ನಿಂತು
ಮೇಲೇರಿ ಮುಂದಕ್ಕೆ ನೋಡಿದರೆ ಏಳರಾಚಿಗೆ ಏನು ಇಲ್ಲಾ
ಎತ್ತ ನೋಡಿದರತ್ತ ಬೈಲೇಬೈಲಾ ಹೇಳೆನೆಂದರೆ ಹೆಸರಿಲ್ಲಾ
ಆ ಬೈಲಿನೊಳಗಿನ ಹೊಯಿಲಾ ತಿಳಿದವನೇ ಬಲ್ಲಾ| ||1||
ವಟ ಬೀಜದೊಳು ಅಂಕುರಡಗಿ
ಆ ಅಂಕುರದೊಳಗೊಂದು ಅಸವಲದ ಮರನಾಗಿ
ಬಣ್ಣವಿಲ್ಲದ ಪಕ್ಷಿಯು ಬಂದು
ಮರದ ಕೊನೆ ಮೇಲೆ ಕುಂತು ಸಣ್ಣದೊಂದು ಗೂಡ ಕಟ್ಟಿ
ಗುಡ್ಡನಿಕ್ಕಿ ಸುಳಿಯುತಾದ ಪಕ್ಷಿ ಜಾತಿ ಹೆಣ್ಣ ಗಂಡು
ಆ ಪಕ್ಷಿಗೆ ಹೊಡೆದು ಗುಡ್ಡ ತಿಂದವನೇ ಮುಕ್ತಾ| ||2||
ಈಡಾ ಪಿಂಗಳ ನಾಡಿ ಬಲಿದು
ಸುಷುಮ್ನದೊಳಗೆ ಸುಳಿಯುವ ಅಕ್ಷರ ತಿಳಿದು
ಸಾವಧಾನದಿ ಸರ್ವವು ತಿಳಿದು
ಜಪದ ಜೀವ ಮೂಲನೆ ಅರಿದು ಮುಂದೆ ಬರುವ ಮೂಲನೆ ತಿಳಿದು
ಮೋಕ್ಷ ಪದವಿ ಕಾಣಬೇಕು ನಿಡವಂಚಿ ಗ್ರಾಮದ ರೊಕ್ಕ
ಗುರು ರಾಚೋಟೇಶ ಬಂದು ಮಾಡಿರುವ ಲೆಕ್ಕಾ| ||3||

ಜಯದೇವ ಮಂಗಳಾರತಿ
ಜಯದೇವ ಮಂಗಳಾರತಿ
ರಾಚೋಟೇಶ ಗುರುಮೂರ್ತಿ
ನಿಮ್ಮ ಪಾದಕೆ ಮಾಡುವೆ ಸ್ಫೂರ್ತಿ
ಕೊಡು ಎನಗೆ ನೀ ಮುಕ್ತಿ| ||ಪ||
ನಾಲ್ಕಾರು ದಶ ದ್ವಾದಶ
ಷೋಡಶ ಮಾಡಿ ವಾಶಾ
ಅಲ್ಲಿ ಇರುವ ಜೀವ ಹಂಸ
ಬಲ್ಲಂತ ರಾಚೋಟೇಶ| ||1||
ಈಡಾ ಪಿಂಗಳ ಸುಷುಪ್ತಿ
ಆಧಾರ ಲೀಲಾ ಮಾಡುತ್ತಿ
ಹಂ ಕ್ಷೇಮ ದಿವ್ಯಜ್ಯೋತಿ
ಅಲ್ಲಿ ಮಹಾಲಿಂಗ ಮೂರುತಿ| ||2||
ತ್ರಿಲೋಕ ಚರಸ್ಯಾಡತಿ
ಚೌದ ಅಂತರದಲ್ಲಿ ಇರುತಿ
ಬೆಳಗುವೆ ಆತ್ಮಜ್ಯೋತಿ
ಭದ್ರಿನಾಥ ಬೇಡುವೆ ಮುಕ್ತಿ| ||3||

ಜಯ ಜಯ ಜಗದಂಬೆ
ಜಯ ಜಯ ಜಗದಂಬೆ
ಜಯ ಜಗ ಜನನಿ
ಜಯ ಜಯ ಕರುಣೆ ವರದಾಯಿನಿ| ||ಪ||
ಮಹೇಶ ಮರ್ಧಿನಿ
ಮಹಾಂಕಾಳಿ ಮಾನಿನಿ
ಶುಂಭ-ನಿಶುಂಭನ ಸಂಹರಿಸಿದಿ ನೀ| ||1||
ಶುಭ ಯೋಗವು ಸಾಧಿಸಿ ಕೊಟ್ಟಂತ ಜನನಿ
ನೀನೇ ಮಾಯಾ ನೀನೇ ತಾಯಾ
ನಿನ್ನ ಘನ ಮಹಿಮೆ ಅರಿಯಲಾರೆಯಾ| ||2||
ನೀ ನಿಜ ಭವಾನಿ
ತುಕಾ ತುಳಜಾಪುರ ವಾಸಿನಿ
ಉಘೇ ಎಂದು ನಿನ್ನ ಪಾದಕೆ ಎರಗುವೆ ಜನನಿ| ||3||
ನಿಡವಂಚಿ ನಿಲಯದೊಳು
ಭದ್ರಿನಾಥನ ಪಾದದೊಳು
ವಂದಿಸಿ ಬೇಡುವೆ ಪಾಲಿಸು ಜನನಿ| ||4||

ಜಯ ಜಯ ಮಂಗಳಾರುತಿ
ಜಯ ಜಯ ಮಂಗಳಾರುತಿ
ಕರಬಸಪ್ಪ ಗುರುಮೂರ್ತಿ
ನಿಮ್ಮ ಪಾದಕ ಮಾಡುವೆ ಶ್ರುತಿ
ಕೊಡು ಎನ್ನಗೆ ಮತಿ| ||ಪ||
ಜಲ್ಮಸ್ಥಾನ ಚಳಕಾಪುರ
ಹುಡಗಿಮಠಕ ಅಧಿಕಾರ
ಆರು ಶಾಸ್ತ್ರ ಓದಿದವರ
ಕಡಿಗಿ ಆದ ದಿಗಂಬರ| ||1||
ಕಡಗಂಚಿ ಮಡಿವಳ ಧೀರ
ಭಕ್ತಿ ಅವನ ಮ್ಯಾಲ ಪೂರಾ
ಬೋಧ ಮಾಡಿ ಮಂತರ
ಕಡಗಿ ಆದ ದಿಗಂಬರ| ||2||
ಮಹಾತ್ಮೆ ಮಾಡಿ ಚಿಟಗುಪ್ಪಿ ಊರಾ
ಗವಿ ಹೊಡಿಸಿ ಆಕಾರಾ
ಯಂಕಮ್ಮ ತಾಯಿ ಸತ್ಯಪೂರಾ
ತ್ಯಾಗ ಮಾಡ್ಯಾಳ ಸಂಸಾರಾ| ||3||
ನಿಡವಂಚಿ ನಿಜಲಿಂಗ
ಭದ್ರಿನಾಥ ಗುರುಲಿಂಗ
ಅಂಗಲಿಂಗ ಓದಿದವರಾ
ಕಡಿಗಾದ ದಿಗಂಬರಾ| ||4||

ಜಾತಿ ಭೇದ ಅಳಿದು ಜ್ಯೋತಿ ರೂಪ ತಿಳಿದು
ಜಾತಿ ಭೇದ ಅಳಿದು ಜ್ಯೋತಿ ರೂಪ ತಿಳಿದು
ಪ್ರೀತಿ ವಿಷಯ ಕಳೆದು ಅಜಾತನಾದೆ| ||ಪ||
ತನು ಮನ ಧನದಿಂದೆ ಶರಣು ಆಗಿ ಬಂದೆ
ಕರುಣಿಸೆನ್ನ ತಂದೆ ಕರುಣಾ ಬೋಧಾ| ||1||
ನಿಮ್ಮ ಚರಣಾಮೃತ ಕೇವಲ ಅಮೃತಾ
ಜನ್ಮ ಮರಣ ರಹಿತಾ ಅದೇನಯ್ಯಾ| ||2||
ಪೂರ್ವ ಸುಕೃತ ಎನಗಾ ಒದಗಿ ಬಂತೋ ಈಗಾ
ಪುಣ್ಯದ ಫಲ ಯೋಗಾ ತೋರುತೈತೆ| ||3||
ಸಾಕೋ ಜನ್ಮ ಎನಗಾ ಬೇಕಿಲ್ಲ ಗುರುವೆ ನನಗಾ
ನಿಡವಂಚಿ ಗ್ರಾಮದ ನಿಜಲಿಂಗ ಮೂರುತಿ| ||4||
ಯೋಗಿ ಭದ್ರಿನಾಥ ಜಗದೊಳು ಪ್ರಖ್ಯಾತ
ಜಂಗಮ ಜಗಭರಿತ ಲಿಂಗ ಮೂರ್ತಿ| ||5||

ಜಾತ್ರಿಗೆ ಹೋಗಾನು ಬನ್ನಿರಿ
ಜಾತ್ರಿಗೆ ಹೋಗಾನು ಬನ್ನಿರಿ
ಶಿವಶರಣರ ಜಾತ್ರಿ ನೋಡಾನು ಬನ್ನಿರಿ| ||ಪ||
ಅಂತರಂಗದ ಜಾತ್ರಿಯೊಳಗೆ
ಮಂತ್ರ ಬಾಜಿ ಆಗುತೈತೆ
ಚೌದ ಭವನದ ಮ್ಯಾಲೆ
ತೊಟ್ಟಿಲ ಕಟ್ಟಿ ತೂಗುವಂತ
ಶರಣರ ದರ್ಶನ ಮಾಡ ಬನ್ನಿರೊ| ||1||
ಕಾಯಪುರದ ಪ್ಯಾಟಿಯೊಳಗೆ
ಏಳು ಸುತ್ತಿನ ಕೋಟಿ ಒಳಗೆ
ಕಾಳದುರ್ಗಿಯ ಮನೆಯ ಹಿಂದೆ
ಕಳ್ಳ ಕುಂತನ ಜತ್ತನಣ್ಣಾ
ಕದ್ದು ಆಚೆಗೆ ಹೋಗಬೇಕಣ್ಣ| ||2||
ಬಲಕಿನ ಮಾರ್ಗವ ಹಿಡಿರೊ
ಎಡಕಿನ ಮಾರ್ಗವು ಯಮಪುರ ತಿಳೀರೊ
ಬ್ರಹ್ಮಪುರಿಯೊಳಗೆ
ಉನ್ಮನಿಯ ಚಿತ್ರ ಮಂಟಪದೊಳಗಾ
ಸಹಸ್ರ ಪೀಠ ಮಧ್ಯದಲ್ಲಿ| ||3||
ಶ್ರೇಷ್ಠ ರಾಚೋಟೇಶ್ವರನಿಗೆ
ಪಾದ ಪದ್ಮಗಳನು ಪಿಡಿದು
ಮುಕ್ತಿ ಪದವಿ ಬೇಡ ಬನ್ನಿರೊ
ನಿಡವಂಚಿ ಗ್ರಾಮದ ಮುಕ್ತರೊ
ಪದವಿ ಬೇಡಿಕೊಂಡಂಥ ಭಕ್ತರೊ| ||4||

ಡೊಂಗರ ಹೊಡಿವೆ ನಮ್ಮವರಿಗೆ ಹುಷಿಯಾರಿ
ಡೊಂಗರ ಹೊಡಿವೆ ನಮ್ಮವರಿಗೆ ಹುಷಿಯಾರಿ
ಡಿಗ್ರಿ ಹುಕುಮ ಬರತಾದ ಸರಕಾರಿ
ಹುಕುಮ ತಂದು ಯಮ ಹುಕುಮ ಮಾಡತಾನ
ಜೋಕಮ್ ತಿಂದು ಜೇಲಖಾನಿಗಿ ಹೋದಿರಿ| ||ಪ||
ಸತ್ಯವು ತಿಳಿರಿ ಮಿಥ್ಯವು ಕಳಿರಿ
ಗೊತ್ತವ ತಿಳಿಕೊಂಡು ಗುರು ನೋಡಿರಿ
ಗುರಿಯ ನೋಡುತ ಮರಿಗೆ ನಿಂತು
ಮಾಟನಿಟ್ಟು ಮಹಾ ಬಗರಿನ ಹೊಡಿರಿ| ||1||
ವಾಸನ ಅಳಿರಿ ಈಶನ ತಿಳಿರಿ
ಫಾಸಿ ಗುಣಗಳು ಬಿಟ್ಟುಕೊಡಿರಿ
ಫಾಸಿ ಹರಿದ ಮೇಲೆ ಪೇಶಿ ಹಾರುವದು
ಈಶ ಪಂಚಾಕ್ಷರಿ ಜಪವ ಮಾಡಿರಿ| ||2||
ತ್ರಿಕೂಟದೊಳಗೊಂದು ಭೃಕುಟಿ ಮಧ್ಯರಿ
ಅಷ್ಟದಳ ತಿರುಗುತಾದರಿ
ನಾಶಿಕ ದಂಡಿ ನೋಡುತ ಚಂಡಿ
ಭಾನು ಪ್ರಕಾಶನ ನೀವು ಕಂಡಿರಿ| ||3||
ತಾರಕ ದಂಡಕ ಕುಂಡಲ ಮಧ್ಯರಿ
ಮಂಡಲದಾಚಿಗಿ ಓಡುವ ಚಿಗರಿ
ಅಧ್ವೈತ ಗುರು ರಾಚೋಟೇಶನ
ಚರದಲ್ಲಿ ನೀವು ಕೂಡಿರಿ| ||4||

ತಗಣಿಯ ಲಸ್ಕರ ಬಂತು
ತಗಣಿಯ ಲಸ್ಕರ ಬಂತು
ಏನು ಮಾಡಿದಾ ಶಿವನಾ ತಂತು
ಜುರ್ರು ಜುರ್ರೆಂದು ನೆತ್ತರ ಗುಂಜುವದೆ
ಜಿಗಳಿ ಪರಿಯಂತೆ| ||ಪ||
ದೈತ್ಯರ ವಂಶದಲಿ ಹುಟ್ಟಿ
ಬಿಂದುವಿಗೆ ಕೋಟ್ಯಾನುಕೋಟಿ
ಸಾವಿರ ಸಂಖ್ಯೆಗೆ ಗಿಣಿತಿಲ್ಲಾ ಏನು ಹೇಳಲಮ್ಮ
ಸಾಯುತ ಸಂತತಿ ಹೆಚ್ಚವದೆ ಏನು ಹೇಳಲಮ್ಮ| ||1||
ಮನಗಿದಲ್ಲಿ ಮನಗಗೊಡದು
ಕುಂತಲ್ಲಿ ಕೂಡಗೊಡದು
ಮನಸಿಗೆ ಬ್ಯಾಸರವು ಬಂತೆ ಏನು ಹೇಳಲಮ್ಮ
ಮನಸಿಗೆ ಚಿಂತಿ ಬಹಳಾಯಿತು ಏನು ಹೇಳಲಮ್ಮ| ||2||
ಮಾತಂಗ ಪರ್ವತದಲ್ಲಿ
ಮಹಾತಾಯಿ ಹೊಟ್ಟಿಲಿ ಹುಟ್ಟಿ
ಮರ್ತ್ಯಾಕ ಕಳುಹಿದ ಯಮಧರ್ಮ ಏನು ಹೇಳಲಮ್ಮ
ಮಾತು ಮಾತ್ರಕ್ಕೆ ತಿಳಿಯದಮ್ಮ ಏನು ಹೇಳಲಮ್ಮ| ||3||
ಕರ್ಮ ಹೆಚ್ಚಾಯ್ತು ಮರ್ತ್ಯಾದ ಮ್ಯಾಲ
ವರ್ಮ ತಿಳಿಯರು ಈ ಜನರೆಲ್ಲಾ
ಖಜ್ಜಿ ಹೇನು ಹೆಚ್ಚಾದವೆಲ್ಲಾ ಏನು ಹೇಳಲಮ್ಮ
ಮಾತು ಮಾತ್ರಕ್ಕೆ ತಿಳಿಯಮ್ಮ ಏನು ಹೇಳಲಮ್ಮ| ||4||
ಕೃತಾಯುಗ ತ್ರೇತಾಯುಗ
ದ್ವಾಪರಯುಗ ಕಲಿಯುಗ
ಕಲಕಿ ಹುಟ್ಟುತಾದಮ್ಮ ಏನು ಹೇಳಲಮ್ಮ
ವಿನಾಶ ಕಾಲಕ ಬಂತಮ್ಮ ನುಡಿರಿ ರಾಮ ರಾಮ| ||5||
ದುರ್ಗುಣ ಹೆಚ್ಚಾಯಿತಲ್ಲಾ
ದುರ್ಗಿ ಬ್ಯಾನಿ ಮರ್ತ್ಯಾದ ಮ್ಯಾಲ
ಊರೂರಿಗೆ ಕೊಂಪಿಗಳು ಹಾಕ್ಯಾರೆ ಏನು ಹೇಳಲಮ್ಮ
ನಾಲ್ಕು ದಿಕ್ಕಿನ ಮೂಲಿ ಉರಿವದು ಎಷ್ಟು ತಾಳಲೆಮ್ಮ| ||6||
ಧರ್ಮದ ಮಾರ್ಗ ತಿಳಿರಿ
ಮನಸಿನ ಅವಗುಣ ಅಳಿರಿ
ಸದ್ಗುರುವಿನ ಪಾದಕ ಶರಣು ಹೋಗಿರಿ ಗುರ್ತು ತಿಳಿರಿ
ಮಹಾ ಗುರುವಿನ ಸೇವಾಮಾಡಿಕೊಳ್ಳಿರಿ ಮುಕ್ತಿಪಡಿರಿ| ||7||
ತಗಣಿ ತಾಯಿ ತನುವಾಯಿತಮ್ಮ
ಖಜ್ಜಿ ತಾಯಿ ಕರ್ಮಾಯಿತಮ್ಮ
ಹೇನೆಂಬುದು ಹೇಸಕಿ ನೋಡಮ್ಮ ಏನು ಹೇಳಲಮ್ಮ
ಸೀರಿನ ಸಂಖ್ಯಾ ಬಹಳಮ್ಮ ಏನು ನೋಡಲಮ್ಮ| ||8||
ಅಮ್ಮಾ ಎಂದು ಗುಮ್ಮಾಡವರು
ಅಕ್ಕಾ ಎಂದು ಹೊಕ್ಕಾಡುವರು
ತಂಗಿಯೆಂದು ದೆಂಗ್ಯಾಡುವರಮ್ಮ ಏನು ಹೇಳಲಮ್ಮ
ಇಂಥ ಅಧಮರು ಇವರಮ್ಮ ಇಚ್ಛಾ ಕೆಟ್ಟದಮ್ಮ| ||9||
ತಂದಿ ಮಗನಿಗೆ ಒಬ್ಬಾಕಿ ಹೆಣತಿ
ತಾಯಿ ಮಗಳಿಗೆ ಒಬ್ಬಾನೆ ಪತಿ
ಹೆಣತಿ ಮಗಳ ಸಂಗತಿ ಮಾಡುವರಮ್ಮ
ಬಲ್ಲವರು ಭವಿಸಂಗ ಮಾಡುವರಮ್ಮ ಏನು ಹೇಳಲಮ್ಮ| ||10||
ಇಂಥ ಕರ್ಮಾ ಫಲಿಸದೆ ಹೋಯಿತು
ಪ್ಲೇಗ ರೋಗ ಬ್ಯಾನಿಯ ಬಂತು
ಝಟಪಿಟಿ ಲಟಪಿಟಿ ಕೆಲಸಾ ಆಯಿತು ಕುಲ ನಾಶಯಿತಮ್ಮ
ಸಾಲ ಬಾಗಿ ರಥಾ ಓಡ್ಯಾಡುತಾ ಯಮಲೋಕ ಸೇರುವರಮ್ಮ| ||11||
ಇದರ ಗುರುತ ಮನಸಿಗೆ ಅರತು
ಗುಂಜಿ ತೂಕಾ ಬಂಗಾರ ಗಳಸಿ
ಚಿತಾಪುರ ಸಂತಿಗಿ ಒಯ್ಯಮ್ಮ ಬೆಲೆಯ ಕೇಳಮ್ಮ
ಸತ್ಯ ಚಿದಾನಂದ ಗುರುತಮ್ಮ ಗಚ್ಛಿ ಹಿಡಿಯಮ್ಮ| ||12||
ನಿಡವಂಚಿ ನಿಜಲಿಂಗ ಶಿವಕಂಚಿ ಸಿದ್ಧಲಿಂಗ
ಉದಗೀರ ಶಂಕರಲಿಂಗಮ್ಮ
ಚರಣ ಭಜಿಪೆನು ತಿರುಗಿ
ಬಾರದ ದಾರಿ ಹಿಡಿದೇನು ಮುಕ್ತಾದೆನಮ್ಮ| ||13||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಮಾಣಿಕಪ್ರಭುಗಳ ತತ್ವಪದಗಳು

ಈಗ ಏನು ಪೇಳಲಿ ಗುರುರಾಯಾ
ಈಗ ಏನು ಪೇಳಲಿ ಗುರುರಾಯಾ
ನೋಡ ನೋಡುತ ಕಳದೆಲ್ಲೊ ಮಾಯಾ ||ಪ||
ತತ್ತ್ವಮಸಿ ಮಹಾಕಾವ್ಯ ಕೇಳಿ
ಹಾರಿ ಹೋಯಿತು ದ್ವೈತದ ಧೂಳಿ ||1||
ನಾನೇ ದೇಹ ಅಂಬೋದು ಇತ್ತು ಮರವು
ನೀನೇ ಬ್ರಹ್ಮ ಅಂದ ತೋರಿದಿ ಅರವು ||2||
ಮಾಣಿಕ ಪೆಸರು ಆಗಿ ಲೋಪಾ
ಉಳಿತು ಸಚ್ಚಿದಾನಂದ ಸ್ವರೂಪಾ ||3||

ಓ ಸಖಿ ಕಂಡೆ ನಾನು ಸ್ವಾಮಿ ಸಂಗಮೇಶನೆ
ಓ ಸಖಿ ಕಂಡೆ ನಾನು
ಸ್ವಾಮಿ ಸಂಗಮೇಶನೆ ||ಪ||
ಕೇತಕಿ ಪ್ರಿಯ ಕಮಲೋದ್ಭವ ದಾತಾ
ಕಲ್ಮಿಶನಾಶನ ಮಹೇಶನೆ ||1||
ಬಾಣಾ ಕೃತಿಸಿಹ ಅಂಬ ವಿರಾಜಿತ
ಭವ ಭಯನಾಶ ದಿನೇಶನೆ ||2||
ಸದಾನಂದ ಶಾಶ್ವತ ಶಿವ ಸರ್ವಾತ್ಮಕ
ಮಾಣಿಕ ಪ್ರಭು ಜಗದೀಶನೆ ||3||

ಕಂಡೆ ನಾ ನಮ್ಮ ರೇವಣಸಿದ್ಧಾ
ಕಂಡೆ ನಾ ನಮ್ಮ ರೇವಣಸಿದ್ಧಾ
ಕಂಡೆ ನಾ ನಮ್ಮ ರೇವಣಸಿದ್ಧಾ ||ಪ||
ನಿರ್ವಿಕಾರ ನಿರಂಜನ ನಿರ್ಗುಣ
ನಿರಾಲಂಬ ಸ್ವತಃಸಿದ್ಧ ||1||
ರೇವಗಿಪುರಿ ಗಿರಿ ವಾಸ ಮಾಡಿದಾ
ಜಗದೊಳಗೆ ಎಲ್ಲಾ ಪ್ರಸಿದ್ಧಾ ||2||
ಮಾಣಿಕ ಗುರು ಎನ್ನ ಮಾಯಾಕೆ
ಆದಳು ಚಿತ್ಸ್ವರೂಪ ತೋರಿಸಿದಾ ||3||

ಗುರುವಿಗೆ ಶರಣು ನಾ ಹೋದೆನೆ
ಗುರುವಿಗೆ ಶರಣು ನಾ ಹೋದೆನೆ
ಸ್ವಯಂಮೇವ ಬ್ರಹ್ಮ ನಾ ಆದೆನೆ ||ಪ||
ಮರತಿದ್ದೇನೆ ನನ್ನ ನಾ ನನಗೆ
ಶ್ರೀಗುರು ತೋರಿದ ನನ್ನ ಒಳಗೆ ||1||
ಜೀವ-ಶಿವ ಎರಡು ಒಂದಾಯಿತೆ
ಜನನ ಮರಣ ಭ್ರಾಂತಿ ಹೋಯಿತೆ ||2||
ಅಜ್ಞಾನ ಕತ್ತಲ ಜ್ಞಾನದ ಬೆಳಗೆ
ಮಾಣಿಕ ತುಂಬ್ಯಾನ ಜಗದೊಳಗೆ ||3||

ಗೋಪಿ ನಿನ ಕಂದಾ ಬಾಲ ಮುಕುಂದಾ
ಗೋಪಿ ನಿನ ಕಂದಾ ಬಾಲ ಮುಕುಂದಾ
ಹಿಂಗ ಮಾಡಿದರೆ ಏನು ಛಂದಾನೆ ||ಪ||
ಬಾಲ ಗೊಲ್ಲರ ಕುಡಿ ನಂದ ಕಿಶೋರಾ
ಹಾಲ ಮೊಸರು ಕೆನಿ ತಿಂದಾನೆ ||1||
ನಿನ್ನೆ ನನ್ನ ಸಣ್ಣ ಸೊಶಿವಯದಾನೆ
ಯಳದಿಕಶಿ ಭೋಗಿಸಿದಾ ಗೋವಿಂದಾನೆ ||2||
ಮಾಣಿಕ ಪ್ರಭು ಅವತಾರ ಗೋಕುಳದಲ್ಲಿ
ದುಷ್ಟ ಕಂಸನಿಗೆ ಕೊಂದಾನೆ ||3||

ಗೋಪೀ ಗೃಹೀ ದಧಿ ಚೋರಿ ಸೀದಾ
ಗೋಪೀ ಗೃಹೀ ದಧಿ ಚೋರಿ ಸೀದಾ
ನೋಡಿರಮ್ಮ ಎನ್ನಾ ||ಪ||
ಮಸ್ತಕದಲ್ಲಿ ಮುಗುಟ ಮುಖ ಕರದಲ್ಲಿ
ಮುರಲಿ ಕುಂಡಲ ಮಕರಾಕಾರಾ ||1||
ಕಸ್ತೂರಿ ತಿಲಕ ಕಂಠದಲ್ಲಿ ಪದಕಾ
ಶಂಖ ಚಕ್ರ ಗೋವರ್ಧನ ಧಾರಾ ||2||
ಮಾಣಿಕನೆ ಪ್ರಭು ಕಂಸವಿಧಾತಾ
ಪೀತವಸನ ನಂದಕಿಶೋರಾ ||3||

ಛಿಃ ಹೋಗೊ ನೀ ಮೂಢಾ
ಛೀಂ ಹೋಗೊ ನೀ ಮೂಢಾ ಇದೇನಿದು ತಿಳುವಳಿಕಿ
ದೃಶ್ಯ ದೇಹಗ ನೋಡಿ ನಾನೇ ದೇಹ ಅಂದು ಸೊಕ್ಕಿ ||ಪ||
ಬ್ರಹ್ಮ ಹುಲಿ ನೀ ಇದ್ದು ಮಾಯಿ ಕುರಿ ಹಿಂದ ಸಿಕ್ಕಿ
ಸುಖ ಸಾಮ್ರಾಜ್ಯ ನಿಧಿ ನೀ ಬಿಡು ಈ ವಿಷಮ ಸುಖ ಭಿಕ್ಕಿ ||1||
ಈ ಮಾಯಾ ಕೇಳೊ ಯಾರಕ್ಕಿ ತಾ ಶೂನ್ಯವಾಗಿ ಕಾಣಕ್ಕಿ
ನಿಜ ಆತ್ಮದಲ್ಲಿ ಹುಟ್ಟಕಿ ಶಿವಭಕ್ತರಿಗೆ ಸಣ್ಣಾಕಿ ||2||
ಅಜ್ಞಾನಿ ಜನಕೆ ದೊಡ್ಡಾಕಿ ಆಗಿ ಚಲವಕ್ಕಿ ಬೀಳತಾಳ ತಕ್ಕಿ
ಚಿನ್ಮಾರ್ತಾಂಡ ಬೆಳಗಿಗೆ ಮಾಯಿತೊ ಮಾಯದ ಚುಕ್ಕಿ ||3||

ನಿನ್ನ ಒಳಗೆ ನೀ ನಿನಗ ನೋಡೊ
ನಿನ್ನ ಒಳಗೆ ನೀ ನಿನಗ ನೋಡೊ
ಎಲೊ ಅನುಮಾನಿಸಬ್ಯಾಡೊ ||ಪ||
ನಿರಾಕಾರ ನೀ ಆಕಾರನು ಅಲ್ಲಾ
ನಾ ದೇಹ ಭ್ರಾಂತಿ ಬಿಡೊ ||1||
ದೇಹ ಅಶಾಶ್ವತ ವಸ್ತುನೆ ಶಾಶ್ವತ
ಮೃತ್ಯು ಚಿಂತಿ ಬಿಟ್ಟು ಕೊಡೊ ||2||
ಮಾಣಿಕ ನಿನಗೆ ಈ ಮಾತ ತಿಳಿಲಿಕ್ಕೆ
ಸದ್ಗುರು ಸೇವಾ ನೀ ಮಾಡೊ ||3||

ನೀ ದಾರು ನನಗೆ ನಾ ಏನು ನಿನಗೆ
ನೀ ದಾರು ನನಗೆ ನಾ ಏನು ನಿನಗೆ
ನಾ ನೀ ಅಂಬೋದು ಪ್ರಕೃತಿ ಸ್ವಭಾವ ||ಪ||
ಪ್ರಥಮಲ್ಲಿ ಶಿವನು ಅವರಿಂದ ಜೀವನು
ಶಿವನು ಇಲ್ಲದಲಿ ಜೀವನು ಅಭಾವ ||1||
ಎಲ್ಲಿತ್ತು ಕಾಯಾ ಅಲ್ಲಾದೊ ಛಾಯಾ
ಕಾಯಾ ಇಲ್ಲದಲ್ಲಿ ಛಾಯಾನು ಅಭಾವಾ ||2||
ಮಾಣಿಕ ಹೆಸರಲ್ಲಿ ನೀ ನಾನು ಹುಟ್ಟಲ್ಲಿ
ದ್ವೈತಮಾರ್ಗ ಬಿಟ್ಟು ನೋಡ ಅನುಭವಾ ||3||

ಬಸವ ಬಸವ ಬಸವ ಬಸವನೆಂಬಿನೆ
ಬಸವ ಬಸವ ಬಸವ ಬಸವ ಬಸವನೆಂಬಿನೆ
ಬಸವ ಬಸವ ಬಸವನೆನಿಸಿ ಬಸವನಾದೇನೆ ||ಪ||
ತಾಯಿ ಬಸವ ತಂದಿ ಬಸವ ಬಳಗ ಬಸವನೆ
ಮಿತ್ರ ಬಸವ ಗೋತ್ರ ಬಸವ ಸೂತ್ರ ಬಸವನೆ ||1||
ಅರಸ ಬಸವ ರಂಕ ಬಸವ ರೂಪಿ ಬಸವನೆ
ಕುರೂಪಿ ಬಸವ ಸ್ತ್ರೀನು ಬಸವ ಪುರುಷ ಬಸವನೆ ||2||
ನೀನು ಬಸವ ನಾನು ಬಸವ ಗುರು ಬಸವನೆ
ಶಿಷ್ಯ ಬಸವ ಜ್ಞಾನಿ ಬಸವ ಅಜ್ಞಾನಿ ಬಸವನೆ ||3||
ಹಿಂದ ಬಸವ ಮುಂದ ಬಸವ ಎಡಬಲಕೆ ಬಸವನೆ
ಮ್ಯಾಲ ಬಸವ ಕೆಳಗ ಬಸವ ನಡುವ ಬಸವನೆ ||4||
ಬೇಡು ಬಸವ ಕಾಡು ಬಸವ ಮಾತಾಡು ಬಸವನೆ
ವಿರಕ್ತಿ ಬಸವ ಶಾಂತಿ ಬಸವ ಭಕ್ತಿ ಬಸವನೆ ||5||
ಯೋಗಿ ಬಸವ ತ್ಯಾಗಿ ಬಸವ ಭೋಗಿ ಬಸವನೆ
ರೋಗಿ ಬಸವ ಆಗಿ ಬಸವ ಹೋಗಿ ಬಸವನೆ ||6||
ಜೀವನು ಬಸವ ಶಿವನು ಬಸವ ಮಾಯಾ ಬಸವನೆ
ಕಾಯಾ ಬಸವ ಪ್ರಾಣ ಬಸವ ಲಿಂಗ ಬಸವನೆ ||7||
ಅಯ್ಯಾ ಬಸವ ಕ್ರಿಯಾ ಬಸವ ನಡನುಡತಿ ಬಸವನೆ
ಪಾದೋದಕ ಬಸವ ಪ್ರಸಾದ ಬಸವ ಆನಂದ ಬಸವನೆ ||8||
ಪೃಥ್ವಿ ಅಪ್ ತೇಜ ವಾಯು ಆಕಾಶ ಬಸವನೆ
ನಿರ್ಗುಣ ಬಸವ ಸಗುಣ ಬಸವ ಮಾಣಿಕ ಬಸವನೆ ||9||

ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ
ಬ್ಯಾಗನೆ ಗುರುವಿಗೆ ಶರಣು ನೀ ಹೋಗೊ ||ಪ||
ಹೃದಯ ಕಮಲದಲ್ಲಿ ಗುರು ಚರಣಕ್ಕೆ ಇಟ್ಟು
ಪ್ರೇಮಲಿ ಜೋಗುಳ ಜೋಗೊ ||1||
ಮಾಣಿಕನೆ ಗುರು ಶರಣಕ್ಕೆ ಹೋಗಿ
ಸ್ವಯಮೇವ ಬ್ರಹ್ಮನೀ ಆಗೋ ||2||

ಮುಕ್ತನಾಗಿದ್ಯೊ ಅಣ್ಣಾ ಮುಕ್ತ
ಮುಕ್ತನಾಗಿದ್ಯೊ ಅಣ್ಣಾ ಮುಕ್ತ ನೀ ಇದ್ಯೋ ತಮ್ಮಾ
ನೀ ಮುಕ್ತ ನಾನು ಮುಕ್ತ ಜಗಸಹಿತ ಜಂಗಮ ಮುಕ್ತ ||ಪ||
ಪಂಚಭೂತಾದಿಗಳು ಸುಳ್ಳೇನೆ ಕಾಣವಂದು
ಊರು ಇಲ್ಲದೆ ಸೀಮಿ ಇಲ್ಲ ಕಾಣ್ಯಾದೊ ತಮ್ಮಾ ||1||
ವಂಧ್ಯಾನಾ ಪುತ್ರಗಳು ಮುಗಲ ಪುಷ್ಪವು ಹಾಕಿ
ಪ್ರಾಣ ಇಲ್ಲದೆ ಕಣಶಿ ರಾಜ್ಯಾ ಮಾಡ್ಯಾದೊ ತಮ್ಮಾ ||2||
ಅಜ್ಞಾನ ಕತ್ತಲದಲ್ಲಿ ನಾ ನೀನು ಬದ್ಧಾ ಮುಕ್ತಾ
ಜ್ಞಾನ ಮಾರ್ತಾಂಡ ಬಳಿಗಿ ಸುಮನೆ ನೀ ಆಗೊ ತಮ್ಮಾ ||3||

ವಸ್ತು ಅಲ್ಲಿಲ್ಲಾ ಇಲ್ಲಿಲ್ಲಾ ಠಾವ ಠಿಕಾಣಿನೆ ಇಲ್ಲಾ
ವಸ್ತು ಅಲ್ಲಿಲ್ಲಾ ಇಲ್ಲಿಲ್ಲಾ
ಠಾವ ಠಿಕಾಣಿನೆ ಇಲ್ಲಾ ||ಪ||
ತೆಳಗೆ ಮ್ಯಾಲಿಲ್ಲಾ ನಡುವಿಲ್ಲಾ
ನೋಡಿದವನು ನೋಡಿಲ್ಲಾ ||1||
ರಕ್ತ ಶ್ವೇತಲ್ಲಾ ಶಾಮಲ್ಲಾ
ನೀಲಪೂರ್ಣ ಅದು ಅಲ್ಲಾ ||2||
ಮಾಣಿಕ ಹೆಸರಲ್ಲಾ
ಹಾನ ಇಲ್ಲಾ ತಾನೆ ಬಲ್ಲಾ ||3||

ವ್ಯಾಪಕ ಶಿವ ಹೀಂಗ ಅಂದವನು ತಾನೆ
ವ್ಯಾಪಕ ಶಿವ ಹೀಂಗ ಅಂದವನು ತಾನೆ
ಮತ ಒಬ್ಬ ತಾನೇನು ರಂಕನು ತಾನೆ ||ಪ||
ಮೂಢನು ತಾನೆ ಚತುರನು ತಾನೆ
ಅರಸನು ತಾನೇನು ರಂಕನು ತಾನೆ ||1||
ರೂಪನು ತಾನೇನು ಕುರೂಪನು ತಾನೆ
ಬಲವಾನ ತಾನೇನು ನಿರ್ಬಲನು ತಾನೆ ||2||
ಸಣ್ಣವನು ತಾನೇನು ದೊಡ್ಡವನು ತಾನೆ
ಶ್ರೀಗುರು ತಾನೇನು ಶಿಷ್ಯನು ತಾನೆ ||3||
ಪಿಂಡಾಂಡ ತಾನೇನು ಬ್ರಹ್ಮಾಂಡ ತಾನೆ
ಮಾಣಿಕ ಹೆಸರ ಹೀಂಗ ಇಟ್ಟವನು ತಾನೆ ||4||

ಹೇ ಪ್ರಭು ದಯಾನಿಧೆ ನೀ ನಮಗೆ ಪಾಲಿಸು
ಹೇ ಪ್ರಭು ದಯಾನಿಧೆ ನೀ ನಮಗೆ ಪಾಲಿಸು
ಜ್ಞಾನಹೀನ ನಮ್ಮ ಮತಿಗೆ ಬೆಳಕು ಕಾಣಿಸು ||ಪ||
ನಾನು ನೀನು ಅವಳು ಅವನು ಯಾರುಯೆಂಬುದು
ಹೇಗೆ ಏನೊ ಯಾಕೆ ಎಂದು ಏನು ತಿಳಿಯದು ||1||
ಯೋಗಲೇಸು ಧ್ಯಾನ ಲೇಸು ಭಕ್ತಿ ಲೇಸವೋ
ಹೀನದೀನ ಮಂದಮತಿಗೆ ಏನು ತೋಚದು ||2||
ಏನು ತತ್ವಜ್ಞಾನ ವೇದ ವಾಕ್ಯವೋ
ನೀ ಕರ್ಮ ಜಾತಿ ಧರ್ಮ ಏನು ಅರಿಯದು ||3||
ನೋಡಿ ನೋಡದೆ ಕಂಡು ಕಾಣದೆ ಸುಳ್ಳು ನುಡಿಯದು
ದೈವ ಜಾತ ಕಲಿಯಕಾಟ ಹೇಗೆ ಸಹಿಸದು ||4||
ನಾಕು ದಿಕ್ಕು ದಿಗಿಲು ಹೆಚ್ಚು ಹೇಗೆ ತಡಿಯದು
ಸಿದ್ಧನಾಗಿ ದಾರಿ ತೋರೊ ಪಾರವಾಗದು ||5||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಖಟಕಚಿಂಚೋಳಿ ಮಲ್ಲಪ್ಪ ಚಾಮರೆಡ್ಡಿ ಅವರ ತತ್ವಪದಗಳು

ಅನ್ಯಾಯ ಕಾಲವಿದು ಶ್ರೀಗುರು ಸಿದ್ಧ
ಅನ್ಯಾಯ ಕಾಲವಿದು| ಶ್ರೀಗುರು ಸಿದ್ಧ
ಅನ್ಯಾಯ ಕಾಲವಿದು ||ಪ||
ಅನ್ಯಾಯ ಕಾಲಕೆ-ಇನ್ನೇನು ಮಾಡಲಿ
ತನ್ನವರೇ ತನಗೆ-ಘನ ವೈರಿಯಾದರೊ ||ಅ.ಪ||
ಕೇಡು ಬಂದೊದಗಿದರೆ ಬಿಡಿಸುವರ್ಯಾರಿಲ್ಲ
ದೃಢವುಳ್ಳ ಭಕ್ತರೆ ಬಿಡದೆ ಭಜಿಸಿರೆಲ್ಲ ||1||
ಚಕ್ಕನೆ ಬಹು ಪ್ರೀತಿ ಸೊಕ್ಕಿದರೆ ಹಲ್ಲು ಮುರಿತಿ
ಲೆಕ್ಕ ನೋಡಿ ತಕ್ಕ ಶಿಕ್ಷೆ ಮಾಡಿನೀಬಿಡತಿ ||2||
ಧರೆಗೆ ಚಿಂಚೋಳಿ ಊರ ಸಿದ್ಧಲಿಂಗ ಗುರುಧೀರ
ಮರೆಯದೆ ಭಜಿಸಿದರೆ ಭವಮರಣ ದೂರ ||3||

 

ಆನಂದ ಘನವಾಗಲಿ ಸದ್ಗುರುನಾಥ
ಆನಂದ ಘನವಾಗಲಿ| ಸದ್ಗುರುನಾಥ
ಆನಂದ ಘನವಾಗಲಿ
ಆನಂದ ಆನಂದ ಆನಂದ ಆನಂದ ||ಪ||
ಆರು ಮುಂದಿನ ಹರಿಸಿದೆ| ಸದ್ಗುರುನಾಥ
ಮೂರು ಮಂದಿನ ಚರಿಸಿದಿ
ಮತ್ತೇಳು ಮಂದಿ ಚೋರರನು ಹಿಡಿತಂದು
ಪೈರೆದೊಳಗೆ ಕೊಟ್ಟಿದಿ ||1||
ಎಂಟು ಮಂದಿನ ಕೊಲ್ಲಿದಿ| ಸದ್ಗುರುನಾಥ
ಒಂಟದರುವ ನಿಲಿಸಿದಿ
ಮೂಗಿನ ನೇರ ತಿಳಿದು ಹತ್ತು ಬೆಟ್ಟವನೇರಿ
ಪಟ್ಟಣವ ಸೇರಿಸಿದಿ ||2||
ಮಾಯಮೋಹನ ಹರಿಸಿದಿ| ಸದ್ಗುರುನಾಥ
ಮಡದಿ ಮಕ್ಕಳ ಹರಸಿದಿ
ಹರದಾಡುವಂಥ ಹಂಸನ ಪಕ್ಕವ ಮುರಿದು
ಮೂಲಿಯೊಳಗೆ ಹಾಕಿದಿ ||3||
ಬಯಲಿಗಿ ಬೈಲಾಗಿದಿ| ಸದ್ಗುರುನಾಥ
ಹುಲಿಕುಂಠಿ ಗಿರಿ ಏರಿದಿ
ಶ್ರೀಗುರು ಸಿದ್ಧನೆ ನಿಮ್ಮಯ ಕೃಪಾಲಿಂದೆ
ಶಾಂತನ ಓಡಗೂಡಿದಿ ||4||

 

ಆನಂದ ಭಜನಿಯ ಮಾಡೆಂದ
ಆನಂದ ಭಜನಿಯ ಮಾಡೆಂದ
ಇನ್ನೊಬ್ಬರ ಗೊಡವಿ ಬ್ಯಾಡೆಂದ
ಯಾರ ಯಾತಕ ನಿನ್ನ ಜೋಡೆಂದ
ಶಿವನೊಬ್ಬನೆ ಸಾಕು ನೋಡೆಂದ ||ಪ||
ಪದ್ಮಾಸನ ಹಾಕಿ ಕೂಡೆಂದ
ನಿಜ ಶಿವ ಮಂತ್ರವು ನುಡಿ ಎಂದ
ಇಡಾ ಪಿಂಗಳನಾಡಿ ಜೋಡೆಂದ
ನಾಶಿಕ ಬಲಸಿ ನೀ ನೋಡೆಂದ ||1||
ಸೂಕ್ಷ್ಮದ ಮಾರ್ಗವ ಹಿಡಿ ಎಂದ
ಷಡು ಚಕ್ರವ ಶೋಧಿಸಿ ನೋಡೆಂದ
ಚೌದ ಭುವನ ತಿರುಗ್ಯಾಡೆಂದ
ಎಕವೀಸ ಸ್ವರ್ಗ ಏರಿ ನೋಡೆಂದ ||2||
ಅಮೃತ ಪಾನವ ಮಾಡೆಂದ
ಗಂಭೀರ ಹುಲಿಕುಂಠಿ ಮಠಚಂದ
ಶ್ರೀಗುರು ಸಿದ್ಧನ ದಯಲಿಂದ
ಶಾಂತನ ಚರಣವ ಪಿಡಿ ಎಂದ ||3||

 

ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ
ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ ಇಟ್ಟಿಕೊಳ್ಳೊ| ನಿನ್ನ
ಬಿಟ್ಟು ಕೊಡಬ್ಯಾಡ ನಿನ್ನ ಮನದೋಳೊ
ಕೆಟ್ಟ ಸ್ಥಾನದಲ್ಲಿರುವ ಬ್ಯಾಡ ಮಳ್ಳೊ| ನೀ
ಕಷ್ಟಪಟ್ಟು ಮಾಡಿದೆಲ್ಲವ ಹಾಳೊ ||ಪ||
ಅರವು ಎಂಬತ್ತು ಕೋಟಿ ಮೊದಲಿಟ್ಟೆ
ಆತ್ಮದಲ್ಲಿ ಮನ ರಾಜನ ಭೇಟಿ
ಸರ್ವ ಜನರಿಗಾಗಿದಿ ಬೋಟಿ| ಅಲ್ಲಿ
ತಿಳಿದಿಕ್ಕಿ ಎಲ್ಲಿಂದ ರಂಗನಪ್ಯಾಟಿ ||1||
ಪ್ರವೃತ್ತಿ ದಾರಿಯ ಮೊದಲ್ಹಿಡಿದಿ
ಪ್ರಬಂಧ ಕಾಮರಾಜನ ಕರೆದಿ
ಸೃಣಿತ ಹಾದಿಗೆ ನೀ ಹೋದಿ| ಆ
ಸಂಬಂಧ ಸುಖ ಏನೇನು ಪಡದಿ ||2||
ನಿವೃತ್ತಿ ನೇಮವ ಹಿಡಿಬೇಕ
ಬುದ್ಧಿ ರಾಜನ ಸ್ತುತಿ ಮಾಡಿ ಕರಿಬೇಕ
ಖಾಸಿಕಿ ಚಿಂಚೋಳಿ ವಿಸ್ತಾರ ನೋಡಬೇಕ| ನಮ್ಮಾ
ಗುರು ಸಿದ್ಧಲಿಂಗನೋಳ್ ಕೂಡಬೇಕ ||3||

 

ಈ ಗೋಲಿ ಆಟ ತಿಳಿದು ಸುಗಣ ಆಡುವದೋ
ಈ ಗೋಲಿ ಆಟ ತಿಳಿದು ಸುಗಣ ಆಡುವದೋ
ಜಗದೋಳೊ ಬಗಿಯನ್ನು ಬಿರಿಯದೋ ||ಪ||
ಅಗಣಿಸುವದೊ ಏಕ್ಕಲ ಖಾಜನಾದೊ
ದುಡ್ಡಿಗಿ ರಾಜ ಸುಗಣ ಸ್ವರೂಪನಿರದೊ
ತ್ರಿಗುಣ ಆತ್ಮ ತ್ರಿಣಮ್ಮ ಭೂಜದೊ
ಪರಿಯದಿ ಬಗ್ಗಿಯನ್ನು ಬಿರಿಯದೊ ||1||
ಚಾರಗಿ ಚೆಂಡುವೆ ಚಾರದೇಹಗೈದು
ಸಾರವ ಅರಿಯುದೊ ಪಾಂಚಗಿ ಪಂಡು
ನಿರ್ಣಯ ತತ್ವದ ಜರಿದು ಪೊಗುವದೊ
ಸಿಮನ ಜಂಡು ಬಗಿಯನ್ನು ಬಿರಿಯದೋ ||2||
ಸಾತಪಚೋಲ ಸಾಧಿಸಿ ಆಟಪ
ಜೊತ ಕಾಣವುದೊ ನಿತ್ಯ ನೌವ
ಟೊಲಿಗಿ ನೌಬತ ನೂಡಿವದೊ
ಸತ ತಾವ ಸಿದ್ಧನ ಪಾದವನ್ನು ನುಡಿವದೊ ||3||

 

ಎನ್ನ ಕರ್ಮದ ಕಥೆ ಕೇಳೊ ದೇವ
ಎನ್ನ ಕರ್ಮದ ಕಥೆ ಕೇಳೊ ದೇವ ತೋರೊ ಮಾರ್ಗವ ||ಪ||
ಲಕ್ಷಚಾರ್ಯಾಂಶಿ ತಿರುಗಿ ಬಂದೆ
ಮೋಹಕ್ಕಾಗಿ ಮತ್ತೆ ನೊಂದೆ
ನನ್ನೊಳಗೆ ನಾನು ಮರೆದೆ-ಅದೇನೊ ಭೋಗಿ ||1||
ಜಲನಿಲ್ಲದ ಬಾವಿಯಂತೆ
ಫಲನಿಲ್ಲದ ವೃಕ್ಷದಂತೆ
ರುಚಿಯಿಲ್ಲದ ಕಬ್ಬಿನಂತೆ-ಆಯಿತೆನ್ನ ಜೀವ ||2||
ಸತ್‍ಸಂಗ ಮಾಡಲಿಲ್ಲ
ಹಿತ ಗುಣವ ಬಯಸಲಿಲ್ಲ
ಈ ಮಾನವ ದೇಹ-ಎಂದೂ ಸ್ಥಿರವಿಲ್ಲ ||3||
ಅಷ್ಟ ಮದಗಳನ್ನು ಕೆಡಿಸಿ
ದುಷ್ಟ ಗುಣದಿ ಬಿದ್ದೇನೊ ಫಾಸಿ
ಪೂರ್ವ ಸಂಚಿತ ಎನಗೆ-ಮಾಡಿತೊ ಫಾಸಿ ||4||
ಆರು ಮಂದಿನ ದೂರೀಕರಿಸಿ
ಮೂರು ಮಂದಿಲಿ ಮನವನು ಬೆರಸಿ
ಗುರು ಸಿದ್ಧಲಿಂಗ ಎನಗ-ಬಾಧಿಯ ಗೆಲಿಸೊ ||5||

 

 

ಏನು ಮಾಡಲಿ ಶೋಧ ಎನ್ನಾಗ ತಿಳಿವಲದು
ಏನು ಮಾಡಲಿ ಶೋಧ ಎನ್ನಾಗ ತಿಳಿವಲದು
ಮನವ ನಿಲ್ಲುವದು ಅಂತರ ಭೇದ ||ಪ||
ಸಂಸಾರದ ದ್ಯಾಸ ಹಗಲು ಹನ್ನೆರಡು ತಾಸ
ದೀವಿಗಿ ಹಚ್ಚಿತಾಸ ಬಿಡುವಲ್ದು ಆಶಾ ||1||
ಪುರಾಣ ಪುಸ್ತಕ ಓದಿ ತಪ್ಪಿ ನಡೆದರೆ ಹಾದಿ
ವ್ಯರ್ಥವು ಗುರು ಬೋಧಿ ಮರೆತು ಹೋದಿ ||2||
ಅರಿವು ಬರುವೋದಿಲ್ಲ ಗರುವ ಬಿಡೋದಿಲ್ಲ
ಪೂಜೆ ಮಾಡಿದ್ರೆ ಕಲ್ಲ ಓಲಿಯೊದಿಲ್ಲ ||3||
ಧರೆಯೋಳು ಚಿಂಚೋಳಿ ಗುರುಸಿದ್ಧ ಮಾದಾತ
ಅವರ ಚರಣಕೆ ಎರಗಿ ಆದೇನೊ ಮುಕ್ತ ||4||

 

ಓಂ ನಮ ಶಿವಾಯ ಹೇಳಿದ ಮಂತ್ರವು
ಓಂ ನಮ ಶಿವಾಯ ಹೇಳಿದ ಮಂತ್ರವು
ಮರಿಬಾರದು ಮರುಳೆ| ಗುರುವಿನ
ಮರಿಬಾರದು ಮರುಳೆ| ಪ್ರಭುನ
ಮರಿಬಾರದು ಮರುಳೆ ||ಪ||
ಆರು ಅಕ್ಷರದ ಗುರುತ ತೋರಿದ
ಮೂರು ಅಕ್ಷರದ ಮೂಲ ತಿಳಿಸಿದ
ಅರುವ ಕೊಟ್ಟು ಗರುವ ಕಳಿದಿದ
ಮೀರಿದ ಉನ್ಮನಿ ಮಾರ್ಗ ತೋರಿದ ||1||
ವಿಠ್ಠಲ ದೊರಿಲಾಕ ನೆಟ್ಟಾಕ ನಡಿಬೇಕೊ
ಅಷ್ಟ ಮದಗಳು ಸುಟ್ಟಿರಬೇಕೊ
ದೃಷ್ಟಿ ಬಲಸಿ ತಾ ನೋಡಿರಬೇಕೊ
ಶ್ರೇಷ್ಠ ಕೈಲಾಸವು ಕಂಡಿರಬೇಕೋ ||2||
ದೇಶಕಧಿಕ ಶ್ರೀವಾಸ ಚಿಂಚೋಳಿ
ಸಿದ್ಧಲಿಂಗ ಗುರು ಹಾಕಿದ ಸಾಲಿ
ಮರೆಯದೆ ತಿಳಿಬೇಕೊ ಮಾತಿನ ನೆಲಿ
ಮರೆತು ಕುಂತವರಿಗಿ ಹತ್ತಿತ ಹಳಾಳಿ ||3||

 

ಕಾಯಪೂರ ಜಾತ್ರಿದೊಳಗ ನೋಡ
ಕಾಯಪೂರ ಜಾತ್ರಿದೊಳಗ
ನೋಡ ನೋಡುತ ಗೆಳೆಯಾ ಕಳದ್ಹೋಗಿದ ಕೈಯಾಗಿಂದ ||ಪ||
ನಾಲ್ಕು ಬಾಜಾರ ತಿರುಗಿ ನೋಡಿದಾ
ಸೋತು ಬಂದು ಸುಸ್ತಾಗಿ ಕುಂತಿದಾ
ಸತ್ತುಳ್ಳ ಮೈಲಾರಿ ಭೇಟಿ ಮಾಡಿದರೆ
ಎತ್ತಿದಷ್ಟು ಎಣ್ಣೆ ಅರಸಿಣ ಪೂಜಾ ||1||
ಹರಕಿ ಮಾಡಿನಾ ಮತ್ತ್ರ್ಯ ಸೇರಿದ
ತಿರುಗಿ ಸೋತು ರೇಲಗಾಡಿ ಏರಿದೆ
ತ್ರಿಪುರ ಸ್ಟೇಷನದೋಳ್ ಇಳಿದು ನೋಡಿದರೆ
ಬೆಳಕಿನಲ್ಲಿ ಭೆಟ್ಟಿಯಾಗಿದ ಗೆಳೆಯಾ ||2||
ಆರು ಮಂದಿನ ಬಿಟ್ಟುಕೊಟ್ಟಿದ
ಮೂರು ಮಂದಿನ ಸೊಬ್ತಿ ಮಾಡಿದ
ಹತ್ತು ಮಂದಿಗೆ ಗೊತ್ತು ಮಾಡಿಕೊಂಡು
ಮುತ್ತಿನ ಮೂಗುತಿ ಮೂಗಿನೊಳಗಿಟ್ಟೆ ||3||
ದೇಶದೊಳಗೆ ಚಿಂಚೋಳಿಯ ಊರ
ಸಿದ್ಧಲಿಂಗ ಗುರು ಹೇಳಿದ ಸಾರ
ಹರಿದಾಸವರ ಹಾಡಕಿ ಭಾರ
ಡಪ್ಪಿನ ಮ್ಯಾಲ್ಹಚ್ಚಿ ತುರಜರತಾಳ ||4||

 

 

ಕರೆದು ತಾರಮ್ಮಾ ಸ್ವಗೂರುವಿನ
ಕರೆದು ತಾರಮ್ಮಾ ಸ್ವಗುರುವಿನ
ಕರೆದು ತಾರಮ್ಮಾ ನೀನು ||ಪ||
ಕರೆದು ತಾರಮ್ಮಾ ನೀನು ಹರನಾ ನಿನ್ನ ಗುರವಿನ
ಸ್ವಗೂರವಿನ ಮುಲ ಪ್ರಣಮದಲ್ಲಿ ಮಾತ್ತು
ಮಾಡುತ್ತವನ ||1||
ಪಾರಬತಿ ಅಲ್ಲವನ ನೀಲಕಂಠ
ನಿಜರೂಪ ಶಿವನ ವಾಲಿ ಕಾಲವನಿಟ್ಟು
ವಜೀರ ಸಂಬನ ಸ್ಥಲ ಕಡಿದೊಳೊ ಸುಖದಿಂದೆ ಇರಹುವವನ
ಚತುರಂಗ್ ವರ್ಣನ ನಕ್ಷತ್ರದಾರಿ ಶೇರಿ ಕೊಡುವನ
ಸಲುವು ದೃಷ್ಟಿಯನಿಟ್ಟು ಸುಖ ತೋರುವನ ||2||
ಏರಿ ತ್ರಿಕೂಟದಾರಿ ತೋರಿಪನ್
ವರನಾ ಸಂಚಿದನಂದನ ನಿಜವ ತೋರಿ ನಿಮಗೆ
ಶಿವನ ಧರಿಯೊಳೊ ಚಿಂಚೋಳಿ ಹರಶಾಂತಲಿಂಗ
ಕರುಣದಿಂದಲ್ಲಿ ತಂದಿ ಗುರುಸಿದ್ಧಲಿಂಗ ||3||

 

 

ಗುರುವಿನ ಭಜಿಸೊ ಮನದಲ್ಲಿ
ಗುರುವಿನ ಭಜಿಸೊ ಮನದಲ್ಲಿ| ಆ
ಗುರುವಿನ ಮರೆತು ನೀ ಇರುತಿದಾವಲ್ಲಿ ||ಪ||
ಗುರುವೆನೆಂಬುವ ಮೂರಕ್ಷರ| ಮೂರ-
ರಾರರೊಳಗೆ ಬಂದು ಸೇರಿಕೊಂಬುವರ
ಸೇರಿದವರು ಯಾರ್ಯಾರ| ಮೂವ
ತ್ತಾರರೊಳಗೆ ಬಂದು ಅರ್ಥ ಹೇಳುವರ ||1||
ಯರಡು ಬಾಣಿಲಿ ಕಮಲನಿಟ್ಟು| ತುದಿ
ನಾಶಿಕದಲ್ಲದು ದೃಷ್ಟಿಯನಿಟ್ಟು
ಗುಣಗಳೆಂಬುವ ಗುರಿಯನಿಟ್ಟು| ಆ
ಪಂಚಾತ್ಮರಿಗೆ ತಡಿಯದೆ ಮುಟ್ಟು ||2||
ಪಂಚ ಪಂಚವರೆಲ್ಲಾ ಕೂಡಿ| ಆ
ಪಸ್ತೀಸರೊಳಗಿವು ಹತ್ತಿ ಸರಿ ಮಾಡಿ
ಖಚಿತ ಚಿಂಚೊಳಿ ಖೂನ ನೋಡಿ| ನಮ್ಮ
ಘನ ಗುರುಸಿದ್ಧನ ಕೂಡಿ ಕೊಂಡಾಡಿ ||3||

 

 

ಗುರುವಿನ ಗುಪ್ತ ದಯಲಿಂದೆ ಮನ
ಗುರುವಿನ ಗುಪ್ತ ದಯಲಿಂದೆ| ಮನ
ನಿಜವನಾಯಿತು ಮಹಾಜ್ವಾಲಿಯಲಿಂದೆ ||ಪ||
ಅರು ಮನೆಯ ಸ್ತಂಭ ಹಿಡಿದು| ಮುಂದೆ
ಮೂರು ನದಿಯ ದಾಟಿ ಸಾಗಿ ಪೋಗುವದು
ಅರದ ಪಂತಿಯ ಸಾಗುವದು| ಮುಂದೆ
ಗುರುವೀನ ಕೂಡಿ ಪ್ರಸಾದ ಮುಗಿಯುವದು ||1||
ಕಿರ್ದ ಹಿರ್ದ ಉರ್ದ ಮೂರ| ಅದರ
ಮೂಲ ತಿಳಿದ ಮೇಲೆ ಕಡಿಗೆ ಹಾರುವದು
ಉರ್ದ ಕೈಸೆರೆ ಮಾಡುವದು| ಸರ್ವ
ಸಾಧನ ಮಾಡಿ ಮನ ಲೋಲಾಡಿಸುವದು ||2||
ಸಕಲ ಸಮಸ್ತನ ಕೂಡಿ| ಪ್ರೇಮ
ಅತಿ ಹಿಗ್ಗಿಲಿ ಎನ್ನ ಮನವು ಲೋಲಾಡಿ
ಶಾಂತಲಿಂಗನ ಧ್ಯಾನ ಮಾಡಿ| ನಮ್ಮ
ಘನ ಗುರುಸಿದ್ಧನ ಕೂಡಿ ಕೊಂಡಾಡಿ ||3||

 

 

ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ| ಬಲ್ಲವನೇ ಬಲ್ಲ
ಗುರುವು ಬಿಟ್ಟು ಅಧಿಕಾರ ಯಾರು ಇಲ್ಲ ||ಪ||
ತಿಳಿಯಬೇಕೊ ಆತ್ಮದ ಮೊದಲನುಕೂಲ
ಮರೆ ತಿರಹುವರಲ್ಲ ||ಅ.ಪ||
ಆಕೃತಿ ತಾರಕ ಆರು ಸ್ಥಳದಲಿಟ್ಟಿ| ವರ್ಣ ಎಂಬತುಕೋಟಿ
ಭಕ್ತಿ ಸ್ಥಾನದಲಿ ಬ್ರಹ್ಮವರ್ಣ ಜಟ್ಟಿ
ಮೂಲ ಪ್ರಣಮದಲಿ ಖೂನ ಯಾವ ದಿಟ್ಟಿ…
ಆಗುಬ್ಯಾಡೊ ಲಟಪಿಟಿ ||1||
ಆರು ಎಂಬುವವು ಮೊದಲ ಸುರತಗಟ್ಟಿ| ನೋಡೊ ಮನಮುಟ್ಟಿ
ಚತುರು ವರ್ಣದ ಚಂದ್ರ ಹಾನೊಗಟ್ಟಿ
ಒಳಗೆ ನೀಲವರ್ಣದ ರಂಗನ ಪ್ಯಾಟಿ
ಪ್ರಭು ಆದರೂ ಭೇಟಿ ||2||
ಆತ್ಮನೆಂಬುವ ಮೊದಲ ಸಕಿಲ ಬಲ್ಲ| ಆ ತಿರುಹುವನಲ್ಲ
ಐದು ಆರು ಹನ್ನೊಂದು ಪೀಠದ ಮ್ಯಾಲ
ಗೊತ್ತಿಗೆ ಚಿಂಚೋಳಿ ಗುರ್ತ ಹೇಳುವರಲ್ಲ
ಸಿದ್ಧಲಿಂಗ ತಾ ಬಲ್ಲ ||3||

 

 

ಗುರುವೆ ನಿಮ್ಮ ಕೃಪಾ ಸಮುದ್ರ
ಗುರುವೆ ನಿಮ್ಮ ಕೃಪಾ ಸಮುದ್ರ
ಕರ್ಣದೋಳುದಿರಿ ಮುಲ ಅಕ್ಷರ ||ಪ||
ಕರ್ಣ ಕುಂಡಲ ಹಿಡಿದು ಒತ್ತಿ
ಎರಡು ನೇತ್ರಗಳೊತ್ತಿ ಬೆಳ್ಳಾಗೈತಿ ಜೋತಿ
ಭ್ರುಕುಟದಲ್ಲಿ ದಿವ್ಯ ಬೆಳಗ ಆಯಿತಿ
ಸಂದು ಸಂಧಿಗೆ ನಿಮ್ಮ ಅಮೃತಧಾರ ಆಗಾಯಿತಿ ||1||
ನಾದದಿಂದೆ ಬಿಂದುವಿನಾಕಾರ
ಬಿಂದುವಿನೊಳೊ ಚಿದ್ರೂಪ ಬ್ಯಾರ ಬ್ಯಾರ
ನಾದ ದರ್ಪಣ ಕಿಡಿಯ ತರತಾರ
ಸುಷುಮ್ನ ಏದುರ ಏರುತ ಜನಸಿತ್ತೋ ಓಂ ಅಕ್ಷರ ||2||
ಘಟ್ಟಿಗೊಂಡಿತ್ತೊ ಪಿಂಡಾದ್ರಿ ಷಡುಚಕ್ಕರ
ಶಿಖ ಶೀರಧಾರಿಯ ನೋಡೊ ಚಕ್ರ
ದೇಶ ಧೋಳಧಿಕ ವಾಶ ಚಿಂಚೋಳಿಗಾರ
ಗುರು ಸಿದ್ಧಲಿಂಗನ ಮುಕ್ತಿಗೆ ಕರ ವೀರಭದ್ರ ||3||

 

 

ಗುರುತ ತೋರಿದ ಗುರವಿನ ಮರೆತು
ಗುರುತ ತೋರಿದ ಗುರವಿನ
ಮರೆತು ಇರಬ್ಯಾಡ ಮನಸು
ಆಶಾ ಪಾಶವ ಬಿಟ್ಟು ಲೇಸಾದ ಗುರುವಿನ
ಕೂಡಿಕೊಂಡಿರು ನೀನು ಮನಸು ||ಪ||
ಹಮ್ಮು ಬಿಮ್ಮನೆ ಬಿಟ್ಟು ಒಮ್ಮರ ಗುರುವಿನ
ನಾಮಕೊಂಡಾಡವೈ ಮನಸು ||1||
ಎಲ್ಲಾ ಚಿಂತನೆ ಬಿಟ್ಟು ಬಲ್ಲಿದ ಗುರುವಿನ
ಹೊಂದಿಕೊಂಡಿರವ್ವ ಮನಸು ||2||
ಧರೆಯೋಳು ಚಿಂಚೋಳಿ ಗುರು ಸಿದ್ಧಲಿಂಗನ
ಕೂಡಿ ಕೊಂಡಿರವ್ವ ಮನಸು ||3||

 

 

ಚಿಂತಿದೊಳಗ ಸಂತಿ ಭ್ರಾಂತಿ ಮಾಡಿರಿ
ಚಿಂತಿದೊಳಗ ಸಂತಿ ಭ್ರಾಂತಿ ಮಾಡಿರಿ
ಸುಳ್ಳೆ ಬಯಲೀಗಿ ಬಯಲಾದ ತಿಳಿರಿ
ಅರುವಿನ ಜನ್ಮಕೆ ಬಂದು ಎಚ್ಚರ ಹಿಡಿರಿ
ಗುರು ಮೆಚ್ಚಿದ ಮಾರ್ಗದಿ ನಡಿರಿ ||ಪ||
ಹುಡುಕುತ್ತ ಹೊಂಟೆವರಿ ದೂರಿಂದ ದಾರಿ
ಅಲ್ಲಿ ಬಿದ್ದವರಿ ಚೌರ್ಯಾಂಶಿ ಪೇರಿ
ಭಾಳ ದಿವಸಾಯಿತು ಹುಡುಕುತ್ತ ಹೊಂಟೆವರಿ
ಈಗ ಸಾಕಾಯಿತು ಮಂಡಲ ಜಾತರಿ ||1||
ಆರುಮೂರು ಒಂಬತ್ತು ದಾರಿ
ಮ್ಯಾಲಿ ನಂತರ ಚಂದ್ರನ ಗಿರಿ
ಅಲ್ಲಿ ನಡಿದಿತ್ರಿ ಮಹದೇವನದೈಶ್ವರಿ
ಹೂವಿನ ಬಾಗಶಾಯಿಲಿ ಮುಕ್ತಿ ಕಂಡೆಯವರಿ ||2||
ಧರೆಯೋಳು ಚಿಂಚೋಳಿ ಸಿಸ್ತ
ಅಲ್ಲಿ ಗುರು ಸಿದ್ಧಲಿಂಗ ಮಹದಾತ
ಆತನ ಪಾದಕೆ ಆದೆನೊ ನಮಿತ
ಆಯಿ ತಿಂದಿಗೆ ನರಜನ್ಮ ಸಾರ್ಥ ||3||

 

 

ತಿಳಿಬೇಕೊ ಗುರವಿನ ಕೀಲಿಯನು
ತಿಳಿಬೇಕೊ ಗುರವಿನ ಕೀಲಿಯನು| ಅಲ್ಲಿ
ತಿಳಿದಾರೆ ಒಂದಾಗಿ ತೋರುವನು ||ಪ||
ಆನಂದಪುರವೆಂಬ ಪಟ್ಟಣಾದ| ಅಲ್ಲಿ
ಒಂದೊಂದು ಹಾದಿಗೆ ವರುವಾದ
ಚಂದಾಗಿ ಸೌಹಾದಿ ತೋರಿದ| ಅಲ್ಲಿ
ಕಂದನ ಬಾಗಿಲು ಕಡಿಲಾಗಿದ ||1||
ಕಂದನ ಬಾಗಿಲು ಕಡಿಲುಂಟೊ| ಅಲ್ಲಿ
ಹತ್ತಾರು ಒಳಗೆ ಹೊರಗ್ಹೊಂಟೊ
ನಿತ್ಯ ನಿತ್ಯ ಅಲ್ಲಿ ಹೋಗುವದುಂಟೊ| ಅಲ್ಲಿ
ಚಿತ್ತೈಸಿ ತಿಳಿದವನ ಎದೆಗಂಟೊ ||2||
ಒಂಬತ್ತು ವರುಷದ ಮ್ಯಾಲುಂಟೊ| ಅಲ್ಲಿ
ಹತ್ತು ತೂತಿಗೆ ಹವಳದ ಕಟ್ಟೊ
ನಿತ್ಯ ಚಿಂಚೋಳಿ ಹೊರಗ್ಹೊಂಟೊ| ನಮ್ಮ
ಗುರು ಸಿದ್ಧಲಿಂಗನ ನೆನಹುಂಟೊ ||3||

 

ತಿಳಿ ತಿಳಿ ತಿಳಿ ತಿಳಿ ತಿಳಿ ತಮ್ಮ ಅದು
ತಿಳಿ ತಿಳಿ ತಿಳಿ ತಿಳಿ ತಿಳಿ ತಮ್ಮ| ಅದು
ತಿಳಿಯದೆ ಮರೆತಿರುಬ್ಯಾಡೊ ಸುಮ್ಮ
ಆತ್ಮನೆಂಬುವಾಶ್ರಮ ಧಾಮ ಅಲ್ಲಿ
ಸೋಸಿ ನೋಡೊ ಶಾರೀರ ಗ್ರಾಮ ||ಪ||
ಆಧಾರನೆಂಬುವಾಶ್ರಯ ಹಿಡಿದು| ಅಲ್ಲಿ
ಚಿದ್ರೂಪ ವರ್ಣವು ತೋರುವದು
ಥರ ಥರ ಥರ ಥರ ನಡಗುವದೊ…| ಆಗದು
ಧಿಮಿತ ಧಿಮಿತನಂತ ಕೊಡುವದೊ ||1||
ಒಂಬತ್ತು ಬಾಗಿಲ ಕದ ಮುಚ್ಚಿ| ಅಲ್ಲಿ
ಪ್ರೀತಿಲಿಂದೆ ಸಂಜೀವ ಹಚ್ಚಿ
ನೋಡೊ ನೋಡೊ ನೋಡೊ ಪರದಿಯ ಬಿಚ್ಚಿ… ಅಲ್ಲಿ
ಚಂದ್ರ ಜ್ಯೋತಿ ಸ್ವರೂಪ ಹಚ್ಚಿ ||2||
ನಾದನೆಂಬೊ ಶಬ್ದ ಮೊದಲ್ಹಿಡಿದು| ಆ
ನಾಥ ಪ್ರಭುನ ದಯ ಆಗುವದು
ಧರೆಗೆ ಚಿಂಚೊಳಿ ವರ್ಮವದು| ನಮ್ಮ
ಗುರು ಸಿದ್ಧಲಿಂಗನೋಳ್ ಕೊಡುವದು ||3||

 

 

ದೇವರ ಪೂಜೆ ಬ್ಯಾರುಂಟು
ದೇವರ ಪೂಜೆ ಬ್ಯಾರುಂಟು
ನಿನ್ನ ದೇಹದೊಳಗೆ ಮನಿ ಮಾಡ್ಯಾದಗಂಟು ||ಪ||
ದೇವರೆಂಬುದು ನ್ಯಾಯ ಬಲ್ಲಿ| ನಿನ್ನ
ದೇಹದ ಮೂಲವ ಹೇಳಂದರವಲ್ಲಿ
ತಿಳಿಬೇಕೊ ತಾನು ತನ್ನಲ್ಲಿ| ತಾ
ತಿಳಿದರೆ ದೇವರು ಹಾನೋ ತನ್ನಲ್ಲಿ ||1||
ಕಲ್ಲು ದೇವರು ದೇವರಲ್ಲ| ತಾ
ಬಲ್ಲಿದು ಬಯಸಿದರೆ ತಿಳಿಯುವದಲ್ಲ
ತಿಳಿದರೆ ಉಳಿ ಆಗೊದಿಲ್ಲ| ಆ
ತಿಳಿ ಉಳಿದೊಳಗಿದು ಖಳಿಯಾಗಿತ್ತಲ್ಲ ||2||
ದೇವರ ಗವಿ ಸೇರಬೇಕೊ| ನಮ್ಮ
ಒಪ್ಪುಳ್ಳ ಚಿಂಚೋಳಿ ವರ್ಮ ಹಿಡಿಬೇಕೊ
ಸುಚಿತ ಶಾಂತನ ನೆನಿಯಬೇಕೊ| ನಮ್ಮ
ಘನ ಗುರುಸಿದ್ಧನ ಹೊಂದಿರಬೇಕೊ ||3||

 

ದಿನ ಸ್ವರೂಪಕೆ ಕಡಿಮಿಲ್ಲ
ದಿನ ಸ್ವರೂಪಕೆ ಕಡಿಮಿಲ್ಲ| ನಿನ್ನ
ದೇಹದ ಅನುಕೂಲ ತಿಳಿಯಬೇಕಲ್ಲ ||ಪ||
ಕೊಚ್ಚಿ ಕೊಚ್ಚಿಯ ನೋಡಬೇಕೊ| ಮನ
ಸಚ್ಚಿತ ಅವು ಆರು ಕದ ಮುಚ್ಚಬೇಕೊ
ಪಶ್ಚಿಮ ಗಿರಿ ಏರಬೇಕೊ ||1||
ಮುಚ್ಚಿ ಮುಚ್ಚಿಯ ನೋಡಬೇಕೊ| ಮುಂದೆ
ಬಿಚ್ಚಿ ಹೇಳದು ಅದು ಯಾರಿಗೆ ಬೇಕೊ
ಮೂವತ್ತಾರು ತಿಳಿಯಬೇಕೊ| ಅದು
ಮೂಗಿನ ಕೊನೆಯಲ್ಲಿ ಮುಳುಗಾಡಬೇಕೊ ||2||
ಒಂದೆರಡು ಮೂರಾಕ್ಕೆಲ್ಲಾ| ಮನ
ಸಂದೇಹ ಲೆಕ್ಕ ಜಮ ಆಯಿತಲ್ಲ
ಬಂಧನ ಬಿಡಿಸಬೇಕಿಲ್ಲ| ನಮ್ಮ
ಧರೆಯೊಳು ಚಿಂಚೋಳಿ ಗುರುಸಿದ್ಧ ಬಲ್ಲ ||3||

 

 

ನೋಡಿರಿಕಿನ ಸೋಂಗ ಮೆರೆವಾಳೊ ಕುಂತು
ನೋಡಿರಿಕಿನ ಸೋಂಗ| ಮೆರೆವಾಳೊ
ಕುಂತು ಹುಲಿಯ ಮ್ಯಾಗ ||ಪ||
ಮೂರು ಲೋಕ ಮುರದ್ಹಾಕ್ಯಳೊ ಒಳಗ
ಮತ್ತೆ ಅಂಬುವಳೊ ಎನ್ನ ಮೂಗ ಮ್ಯಾಗ ||1||
ಕರಿಯ ಮಾರಿ ರಂಡಿ| ಈಕಿ ಒಳ್ಳೆ
ಬಲ್ಲವರಿಗಿ ಮಿಂಡಿ
ಈಕಿನಲ್ಲಿ ತುಂಬಿತ್ತೊ ಬ್ರಹ್ಮನ ಬಂಡಿ
ಸತ್ಪುರುಷರಿಗೆ ತೋರಿಸ್ಯಾಳೊ ಗುಂಡಿ ||2||
ನಾಜುಕ್ಹಾಳೋ ಹೆಣ್ಣ| ಈಕಿನಲ್ಲಿ
ಪಂಚ ರತ್ನದ ವರ್ಣ
ಈಕಿ ಹೋಗಿ ತುಂಬ್ಯಾಳೊ ಎಲ್ಲಾರ ಕಣ್ಣ
ಈಕಿನ ಮಾರಿ ಬೆಳಕ ಸೂರ್ಯನ ಕಿರಣ ||3||
ತೈಲ ನಿಲ್ಲ ಬಿತ್ತಿ| ದೀವಿಗಿ
ಹಚ್ಚಿದಾಳೊ ಜ್ಯೋತಿ
ಧರೆಯೊಳು ಚಿಂಚೋಳಿ ಗುರುಸಿದ್ಧನ ಸತಿ
ಗುರುಪುತ್ರರಿಗೆ ಈಕಿನಿಂದೆ ಮುಕುತಿ ||4||

ನಾ ಹುಟ್ಟಿ ಬಂದೆನೊ ಈ ಬ್ರಹ್ಮಪುರದಲ್ಲಿ
ನಾ ಹುಟ್ಟಿ ಬಂದೆನೊ ಈ ಬ್ರಹ್ಮಪುರದಲ್ಲಿ
ಅನರ್ಥ ಆಯಿತಿಲ್ಲಿ| ಜನ್ಮದಲ್ಲಿ ||ಪ||
ನಾನಾ ಜನ್ಮವ ತಿರುಗಿ ತಿರುಗಿ ಮತ್ತೆ ಬಂದೆನೊ ಮೋಹದಲ್ಲಿ
ಮನವ ಸೋತು ಹೋದ ಮೇಲೆ ಕೊಡಬೇಕು ಯಾವಲ್ಲಿ ||ಅ.ಪ||
ಬ್ಯಾಸರಾಯಿತು ಮನ ಈ ಘಟ ಸ್ಥಳದಲ್ಲಿ
ಹೋಗಿ ಕೊಡಬೇಕಿಲ್ಲಿ ಸಂತರ ಬಲ್ಲಿ
ಅಲ್ಲಿ ಹೋಗಿ ಕುಂತಿದಾರೆ ಹೇಳಾತರ ಗುರುಕೀಲಿ
ಆ ಕೀಲಿ ತಕ್ಕೊಂಡು ಇಡಬೇಕಿಲ್ಲಿ| ಜತ್ತಿನಲ್ಲಿ ||1||
ಎಂಟು ಮದಗಳು ಬಿಟ್ಟು ಬಂಜೆಂಬ ಕುಂಡದಲ್ಲಿ
ಝಳಕ ಮಾಡಿದೆ ನಾನಲ್ಲಿ ಸಿದ್ದನಲ್ಲಿ
ಅಲ್ಲಿ ಝಳಕ ಮಾಡಿದರೆ ತೊಲಗಿತು ಭವ ಮರಣ
ಪಾವನ ಆದೆನೊ ಸಂತರ ಕರುಣೆಯಲ್ಲಿ| ಸಂಗದಲ್ಲಿ ||2||
ದೇಶಕಧಿಕವಾದ ವಾಸುಳ್ಳ ಚಿಂಚೋಳಿ
ಈಶ ಸಿದ್ದನ ಬಳಿಯಲ್ಲಿ ಕೂಡಿದೆ ನಲ್ಲಿ
ದೋಷ ಗುಣಗಳು ಬಿಟ್ಟು ವಿಷಯವಾಸನೆ ಬಿಟ್ಟು
ಹರಚರಣ ಕಂಡೆ ನಾನಿಲ್ಲ ಜನ್ಮದಲ್ಲಿ ||3||

ಮಾಡುವೆ ಪೂಜೆ ಮಾಡುವೆ ಮನ
ಮಾಡುವೆ ಪೂಜೆ ಮಾಡುವೆ| ಮನ
ನಿಜದ ಬೋಧವ ತಿಳಿದು ಮಹ ರಾಮಲಿಂಗನ ||ಪ||
ಅಷ್ಟಾವರಣದ ಆಚಾರದಿಂದೆ
ಸುಚಿತ ಪಂಚ ಇಂದ್ರಿಯ ಗೆಲದಿಂದೆ
ಮುಂಚಿನ ಕಿಂಚಿತ ಭೋಗ ಫಲದಿಂದೆ
ಸಚ್ಚಿತ ಕಂಡೆನೊ ಪಾದ ನಿಮಲಿಂದೆ ||1||
ಅಷ್ಟದಳದ ಕಮಲ ಐಶ್ವರ್ಯದಿಂದೆ
ತಿರಗುತ್ತ ತಿರಗುತ್ತ ಕಂಡೆ ನಿಮಲಿಂದೆ
ಹಸಿರು ಹಳದಿ ವರ್ಣ ಸುವರ್ಣದಿಂದೆ
ಹಸನಾಗಿ ಲಾಲಿಸು ಪೇಳೆನ್ನ ತಂದೆ ||2||
ಚತುರ ಕೋನಿ ಚೌಬಾಜಾಗಳಿಂದೆ
ಝಾಂಗಟಿ ಕೈತಾಳ ಗರ್ಜನದಿಂದೆ
ಧರೆಯೋಳು ಚಿಂಚೋಳಿ ಖೂನಕ ತಂದೆ
ಘನ ಗುರು ಸಿದ್ಧನ ಚರಣ ದಯದಿಂದೆ ||3||

ಮಾತಾಡ ಜನರೆಲ್ಲ ಯಾತಕ ಬಂದಿರಿ
ಮಾತಾಡ ಜನರೆಲ್ಲ ಯಾತಕ ಬಂದಿರಿ
ನೀತಿಯ ತಿಳಿಯಬೇಕಣ್ಣ
ಹೊತ್ತಿರುವ ಹಳೆ ಕೊಡ ಇತ್ತಲ್ಲೆ ಉಳಿಯಿತ್ತು
ಮತ್ತೆ ಹೊಳೆಯಲಿ ಸುರಿಬೇಕಣ್ಣ ||ಪ||
ಒಬ್ಬವಗ ನಾಲ್ಕಲ್ಲು ಒಬ್ಬವಗ ಆರ್ಹಲ್ಲು
ಒಬ್ಬವಗ ಹತ್ತು ಹಲ್ಲಣ್ಣ
ಒಬ್ಬವಗ ಹನ್ನೆರಡು ಒಬ್ಬವಗ ಹದಿನಾರು
ಒಬ್ಬವಗ ಯರಡು ಹಲ್ಲಣ್ಣ
ಒಬ್ವವಗ ಸಾವಿರ ಅನು ತಲೆ ಬೊಬ್ಬಿಟ್ಟು
ಭೂತಗಳು ಬೊಗಳುತಾವಣ್ಣಾ ||1||
ಹತ್ತು ಬಾಗಿಲ ಮನೆ ಹೊಕ್ಕು ನೋಡಿದರೊಮ್ಮೆ
ಚಿತ್ರವು ಕಾಣುತಾದಣ್ಣ
ಚಿತ್ರಾದ ಬೆಳಕೆಲ್ಲಾ ಕತ್ತಲೆ ನುಂಗಿತ್ತು
ಚುಕ್ಕಿಯ ಗುರುತು ಹೇಳಣ್ಣಾ
ಮತ್ತೆ ಆ ಚುಕ್ಕಿಯೋಳ್ ಛಾಯನ ಮಿಂಚ್ಹುಟ್ಟಿ
ಉತ್ತಮ ಚಂದ್ರ ನೋಡಣ್ಣ ||2||
ಖಸ ಖಸಿ ಕಿನ್ನ ಸಣ್ಣ ಅಗಸಿ ಬಾಗಿಲ ಪೊಕ್ಕು
ರಸಕಿಡಿ ಉದುರುತಾವಣ್ಣ
ಹುಸಿಯಲ್ಲ ಈ ಮಾತು ಪಸರಿಸಿ ಕಣ್ಣಿಗಿ
ಹಸಿವು ನೀಡಕಿ ಇಲ್ಲಣ್ಣ
ವಸುಧಿಗಿ ಚಿಂಚೋಳಿ ಗುರುವು ಸಿದ್ಧಲಿಂಗನ
ವಾಸಾಗಿ ಇರುತಿದ್ದರಣ್ಣ ||3||

ಯಾತಕ ಚಿಂತಿಯೋ ತಮ್ಮ ನಿಜ
ಯಾತಕ ಚಿಂತಿಯೋ ತಮ್ಮ| ನಿಜ
ಬ್ರಹ್ಮ ತಾನಾದ ಬಳಿಕ ಇರಬೇಕೊ ಸುಮ್ಮ ||ಪ||
ಚಿಂತಿ ಎಂಬುವದೊಂದೆ ಭಾವ| ಈ
ಆರು ಮನಿಯ ಮುರಿದು ನುಂಗಿತ್ತೊ ಜೀವ
ಆಚಾರ ಶಬ್ದದಿ ಜೀವಾ| ಜೀವ
ಝಂಕಾರಿಸುತಕ್ಕ ಜೀಯ ಹಿಡಿಸುವ ||1||
ನಾಲ್ಕು ದಳದ ನ್ಯಾಯ ತಿಳಿದು| ಸರ್ವ
ಸಂಗ್ರಹನೆಂಬುದು ಮೊದಲಿಗೆ ಹರಿದು
ತೆಗೆದ್ಹಾಕೊ ನಿನ್ನ ನೆಲೆ ತಿಳಿದು| ಮುಂದೆ
ನಿರ್ಭಯ ಆಗೊ ಮನ ಜ್ವಾಲಿಯ ಹರಿದು ||2||
ಕತ್ತಲೆಂಬುವ ಕಾಳಹರಿದು| ಮುಂದೆ
ಮುತ್ತಿನ ಜ್ಯೋತಿಯ ಬೆಳಗನೆ ತಿಳಿದು
ಸುತ್ತ ಚಿಂಚೊಳಿಯಲ್ಲುಳಿದು ನಮ್ಮ
ಗುರು ಸಿದ್ಧಲಿಂಗನ ಒಳಗೆ ಕೂಡುವದು ||3||

ಲಗು ಲಗು ನಡಿರೆವ್ವ ಗಾಡಿ ಬಂದದ ಓಡಿ
ಲಗು ಲಗು ನಡಿರೆವ್ವ ಗಾಡಿ ಬಂದದ ಓಡಿ
ಗಾಡಿ ಬಂದದ ಓಡಿ ನಿಂತದ ಠೇಷಾನ ನೋಡಿ ||ಪ||
ನೀರ ಕೊಳಸಿ ನಿಲ್ಲದ ಗಾಡಿ| ಬಂದಿತವ್ವ ಓಡಿ
ಹಸಿರು ಹಳದಿ ಬಣ್ಣದ ಗಾಡಿ| ಬಂದಿತವ್ವ ಓಡಿ ||1||
ಓಡುಲಾಕ ಹಾದಿನಿಲ್ಲ| ತಿರುಗುಲಾಕ ಗಾಲಿ ನಿಲ್ಲ
ಕೊಡುಲಾಕ ಜನರಿಲ್ಲ| ಬಂದಿತವ್ವ ಓಡಿ ||2||
ಗುರುಸಿದ್ಧ ಎಂಥಾದಾತ| ತಿಳಿಸಿ ಹೇಳಿದಾರೊ ಮಾತ
ಅವರ ಲಿಂದೆ ಆದೆನು ಮುಕ್ತ| ಬಂದಿತವ್ವ ಗಾಡಿ ||3||

ಶುದ್ಧವಾಗಿ ದೈವ ಗಳಿಯುವ ಕಾಲ
ಶುದ್ಧವಾಗಿ ದೈವ ಗಳಿಯುವ ಕಾಲ
ಗುರು ಶಿಕ್ಷಣ ಬೇಕರಿ ಮೊದಲ ||ಪ||
ನೆತ್ತಿ ಮ್ಯಾಲೆ ಹೊತ್ತುಕೊಂಡು ಕಲ್ಲ
ಗುರು ನಿಲ್ಲದೆ ಮಾನವ ನಲ್ಲ
ಆರು ಶಾಸ್ತ್ರಗಳು ಓದಿದರಿಲ್ಲ
ಮಸುದ್ಯಾಗ ನಿಂತು ಒದರುವದಲ್ಲ ||1||
ತನ್ನ ಮುಖ ತಾನು ತೊಳಿಯುವದಿಲ್ಲ
ರಾಮ ರಹೀಮ ರಸೂಲಿಲ್ಲ
ಅಷ್ಟ ಮದಕ ಹಾಕಬೇಕೊ ಜೇಲ
ಎಷ್ಟು ಸಡಿಲ ಬಿಡುಬ್ಯಾಡ ಖುಲ್ಲಾ ||2||
ರಜತಮ ಗುಣ ಸತ್ವದ ಮೂಲ
ನಡೆದಿದ್ದಾವೊ ಗುರುವಿನ ಚೇಲ
ಬಳಸಿ ಬ್ರಹ್ಮಚಾರಿಯ ಬಾಲ
ಗುರು ಚಿಂಚೋಳಿ ಇರು ಸ್ಥಳ ||3||
ಶಂಬೊ ಹರನ ನಂಬಗಿ ಮ್ಯಾಲ
ಗುರು ಸಿದ್ಧನ ದಯ ಅದೊ ನ ಮ್ಯಾಲ
ನಂಬಗಿ ಇದ್ದಾರೆ ಆಗಿರೊ ಬಾಲ
ಗಳಿಯುವಾರೊ ಕಾಲಾನ ಕಾಲ ||4||

ಶ್ರೀಗುರುವಿನ ಪಾದವ ಪಿಡಿಕೊ
ಶ್ರೀಗುರುವಿನ ಪಾದವ ಪಿಡಿಕೊ| ಕರ
ಮುಗಿದು ನೀ ಶಿರ ಬಾಗಿ ಬೇಡಕೊ ||ಪ||
ಗುರುವಿನ ಮಾರ್ಗಕೆ ಗರುತಿಟ್ಟು ನಡಿಬೇಕೊ
ಅರುವಿನೋಳು ಸುಳಿದಾಡಿ ನೀ ನೋಡಕೊ
ದುಷ್ಟ ಗುಣಗಳು ಸುಟ್ಟು ಭಸ್ಮವ ಮಾಡಿಕೊ
ನೆಟ್ಟಕ ಹಾದಿ ನೀ ಹಿಡಿಕೊ ||1||
ಹುಚ್ಚ ಆಗೊಸ್ತನಕ ಎಚ್ಚರ ಬರೊದಿಲ್ಲ
ನೆಚ್ಚಕಿ ನಿಲ್ಲ ಈ ದ್ಯಾಹಕೊ
ಆರು ಗುಣಗಳನ್ನು ಆವರಿಸಿ ಹಿಡಕೊಂಡು
ಆತಮ್ದೊಳಗೆ ನೀ ನೋಡಕೊ ||2||
ಬುದ್ಧಿ ಹೇಳುವರ ಗೂಡ ಶುದ್ಧಾಗಿ ಇರಬೇಕೊ
ಬದ್ಧ ಗುಣಗಳು ಹೊರಿಯಾಕ ನೂಕೊ
ಶಿವನಾಮ ಶಬ್ದವು ಬಾಯಿಲಿ ನುಡಿಲಾಕೊ
ನೀ ಹೋಗಿ ಇನ್ನೊಬ್ಬನ ಹಿಡಕೊ ||3||
ನಾಲ್ಕು ಆರು ಹತ್ತು ಹನ್ನೆರಡು ಹದಿನಾರು
ಎರಡು ಅಕ್ಷರ ನಜರಿಡಕೊ
ನಾಶಿಕ ಕೊನೆಯಲ್ಲಿ ದೃಷ್ಟಿಯ ನಿಲಿಸೊ
ಮೀರಿದ ಉನ್ಮನಿ ಗವಿ ಸೇರಿಕೊ ||4||
ಏಳು ಸುತ್ತಿನ ಕೋಟೆ ಬಾಜಾರದೊಳಕೊ
ನೀಲಗನ್ನಡಿ ಛಾಯ ಸುತ್ತೆಲ್ಲಾ ಬೆಳಕೊ
ಉತ್ತರ ದಕ್ಷಿಣ ದ್ವಾರ ನಾದ ನೀ ಕೇಳಕೊ
ಝಾಂಗಟಿ ಕೈ ತಾಳ ಗರ್ಜನ ಲಾಕೊ ||5||
ಪಶ್ಚಿಮ ದಿಕ್ಕಿಗೆ ಹೆಚ್ಚಿದು ಪ್ರಬಲ
ಸಚ್ಚಿದಾನಂದನ ಚಿದ್ರೂಪ ತಿಳಕೊ
ಧರೆಯೋಳು ಚಿಂಚೋಳಿ ಗುರು ಸಿದ್ಧಲಿಂಗನ
ನಾಮವ ಧ್ಯಾನಿಸಿ ಸೇವದಲ್ಲಿ ದುಡಕೊ ||6||

ಶಿವ ಶಿವ ಅನು ತಂಗಿ ಸುಮ್ಮ
ಶಿವ ಶಿವ ಅನು ತಂಗಿ ಸುಮ್ಮ| ಗುರು
ಭಜನಿ ಮಾಡಿದವರಿಗಿಲ್ಲವೊ ಕರ್ಮ ||ಪ||
ಅಜ್ಞಾನೆಂಬುವ ಕತ್ತಲಳಿದು| ಸು
ಜ್ಞಾನದ ದೀವಿಗಿ ಹಚ್ಚವ್ವ ತಿಳಿದು
ಮುಚ್ಚಿದ ಬಾಗಿಲು ತೆರೆದು| ತುದಿ
ಪಶ್ಚಿಮ ದಿಕ್ಕಿನಲ್ಲಿ ಕರೆದೊಯ್ದಾನೆಳೆದು ||1||
ನಾನಾ ರೀತಿಲಿಂದೆ ಹೇಳಿ| ನಿನ್ನ
ಕೊರಳಲ್ಲಿ ಕಟ್ಟಿದ ಮಾಸಿಯ ತಾಳಿ
ಗುರುಮಂತ್ರ ಕಿವಿಯಲ್ಲಿ ಹೇಳಿ| ತೋ
ರಡಗಿದ ಗುರುವಿನ ಮರತ್ಹ್ಯಾಂಗಹ ಸುಳಿ ||2||
ಕಾವಿ ಹಚ್ಚಡವನ್ನು ಹಚ್ಚಿ| ಆ
ನಂದ ಗುರು ಮನೆಯೊಳೆಳೆದೊಯಿದ ಮುಚ್ಚಿ
ಗುರು ಸಿದ್ಧನ ಮಗಳೆ ನೀ ಗಚ್ಚಿ| ಶಿವನ
ಧ್ಯಾನ ಮಾಡದೆ ಭವ ದೊಳಗ್ಹಾಂಗೆ ಇರತಿ ||3||

ಸ್ವತಾ ಹೊಲ ಮಾಡಿ ಹೋಡಿ ತಮ್ಮ ನೀ ಹಕ್ಕಿ
ಸ್ವತಾ ಹೊಲ ಮಾಡಿ ಹೋಡಿ ತಮ್ಮ ನೀ ಹಕ್ಕಿ
ಒಂದು ಭಾರಕ್ಕೆ ಬೇಲಿ ಮಾಡೋ ನೀ ಜೋಕಿ ||ಪ||
ಸ್ವತಾ ಕವಣಿಯೋಳೋ ಧೈರ್ಯದ ಕಲ್ಲಾ ಹಾಕಿ
ನಿಂತು ಹೊಡಿದರೆ ಮುರಿಯಬೇಕೋ ರೆಕ್ಕಿ ||1||
ನಾಲ್ಕು ದಿಕ್ಕಿಗಿ ಹಚ್ಚಣ್ಣಾ ಬೆಂಕಿ
ಕಷ್ಟ ಬಿಟ್ಟು ತೆಗಿಯಬೇಕೋ ಕರಕಿ
ದುಷ್ಟ ಗುಣಗಳ ನೂರಾರು ಹಕ್ಕಿ
ನಷ್ಟ ಮಾಡ್ಯಾವೊ ತಿಂದೆಲ್ಲಾ ಕಂಕಿ ||2||
ಇಪ್ಪತ್ತೊಂದು ಸಾವಿರದಾ ಆರುನೂರ ನೆಪಲಿಂದೆ ಗಳಿ ಪಡ್ಯಾ ಹಾಕುವರಾ
ಒಪ್ಪಲಿಂದೆ ಮಾಡೋ ಸಂಸಾರ
ಮುಂದೆ ಆಗುವದೋ ಉದ್ಧಾರ ||3||
ಧರಿಯಳೊ ಚಿಂಚೋಳಿ ಊರ ಸಿಸ್ತಾ
ಗುರು ಶಾಂತಲಿಂಗನ ಪಾದಕ್ಕೆ ಮಸ್ತಾ
ಹಗಲಿರುಳು ಮಾಡುವೆ ನಮಸ್ತಾ
ಕಾಯಬೇಕು ನಮ್ಮಗೆ ಸಮಸ್ತಾ ||4||

ಹೊತ್ತು ಗಳಿಯೋ ಚಿತ್ತಿನೊಳಗ ಚಿತ್ತು
ಹೊತ್ತು ಗಳಿಯೋ ಚಿತ್ತಿನೊಳಗ
ಚಿತ್ತು ಚಿನ್ಮಯ ದೇವರು ಹಾರೊ ನಿನ್ನೊಳಗ ||ಪ||
ಆರು ಮಂದಿ ಹಾರೊ ಒಳಗ| ನಿನ್ನೊಳಗ
ಸುಳ್ಳೆ ಬಡದಾಡುತ್ಯಾಕೊ ಗಳಸೀದಿ ಹಿಂಗ ||1||
ಎಂಟು ಮಂದಿ ಸಂಗವ್ಯಾಕ-ಬಿಡುಬೇಕ
ತುಂಟ ಮೂವರು ಹಾರೊ ಜೀವ ಆತ್ಮರಿಗ ||2||
ಮೂಲ ಮಾಯದ ಬಲಿ ಹಾಕ್ಯಾರ ಬಿಡುವಲ್ಲರ
ಬಲಿ ಕಡಿದು ನೀ ಕಡಿಗಾಗೊ ಸಿಲುಕದೆ ಇದರಾಗ ||3||
ಧರೆಯೋಳು ಚಿಂಚೋಳಿ ಊರ-ವಿಸ್ತಾರ
ನಮ್ಮ ಗುರು ಸಿದ್ಧನ ಮರಿಬ್ಯಾಡ-ನುಡಿದ ನುಡಿಗಳಿಗೆ ||4||

ಹಿಂಗ ಸಿಗುವದೋ ಗುರು ಮಾರ್ಗ
ಹಿಂಗ ಸಿಗುವದೋ ಗುರು ಮಾರ್ಗ
ಮುಕ್ತಿ ಮಾರ್ಗ ಮನುಜ ಮುಕ್ತಿ ಮಾರ್ಗ ||ಪ||
ಸಂತರ ಸಂಗತಿ ಹಿಡಿಯಬೇಕೊ
ಸತ್ಯವನ್ನು ನುಡಿಯಬೇಕೊ
ಅಸತ್ಯವನ್ನು ಬಿಡಬೇಕೊ
ಭಕ್ತಿಯನ್ನೂ ನೀನೆ ಮಾಡಬೇಕೊ
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||1||
ಸ್ರಾವಣ ಮನಸ ನಿಧೀ ಧ್ಯಾಸ
ಸರ್ವರಿಗಿ ನೀ ಈದ್ಧಿ ಕೂಸ
ಭ್ರುಕುಟದಲ್ಲಿ ನಿನ್ನ ವಾಸ
ಯೋಗದಿಂದ ಕಂಡೆನೋ ಕೈಲಾಸ
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||2||
ಪ್ರಾಹಲದ ಹೆಂತ್ತ ಭಕ್ತನೊ
ಓಂ ನಾಮ ನುಡಿದಾನೊ
ವಿಷವನ್ನು ಕುಡಿದನೊ
ನಿಮಗೆ ಆದೆನೋ ನಾನು
ಮನುಜ ಭಕ್ತಿಲಿಂದೆ ಮುಕ್ತಿ ಮಾರ್ಗ ||3||
ಧರಿಯೋಳೋ ಚಿಂಚೋಳಿ ಊರ,
ಗುರು ಸಿದ್ಧಲಿಂಗ ಹಾರಾ ಧೀರಾ
ಗುರುವೇ ನಮಗೆ ಆಧಾರ
ಮಾನವ ಜನ್ಮವು ಉದ್ಧಾರ
ಮನುಜ ಭಕ್ತಿಲಿಂದೆ ಮುಕ್ತಿಮಾರ್ಗ ||4||

ಹೊಡಿಯಲಾರೆ ಈ ಊರೋಗಿನ ಗುಬ್ಬಿ
ಹೊಡಿಯಲಾರೆ ಈ ಊರೋಗಿನ ಗುಬ್ಬಿ ಹಗಲಿರುಳೆ
ಬೊಬ್ಬಿ ಹೊಡಿಯಲಾರೆ ಈ ಊರೊಳಾಗಿನ ಗುಬ್ಬಿ ||ಪ||
ಹೊಡಿಯಲಾರೆ ಎದೆ ಭುಗಿ ಭೂಗಿಲು ಅನುತ್ತಲೆ
ಹೊಡಿಯಲಾರೆ ಎದೆ ಭುಗಿ ಭೂಗಿಲು ಅನುತ್ತಲೆ
ಕವಣಿಯ ಪಿಡಿದು ಒದರಿಕೊಂಡ ಬೊಬ್ಬಿ
ಬರುತಾವಲ್ಲೊ ಗುಬ್ಬಿ ||1||
ಉದಯದಲೆದ್ದು ಮುನ್ನ ಹೋಗಿದ ಹೊಲಕ್ಕಾಗಿ ಬರುತಾವೊ ಅಲ್ಲೊ ಸಾಗಿ
ಸೆಸಿಯ ಮಿಂಚಿನಕಾಳು ಉದುರುಸುತ್ತಾವೊ ಬಾಗಿ
ಒದುಕೊಂದು ಮೇಲಾಗಿ ತಿತ್ತಾವೊ ಏನು ಭೇಗಿ
ಹೊಗುತ್ತಾವ ಲಗು ಭೇಗಿ ||2||
ಬರುತ್ತಾಲೆ ಬಂದು ಗುಬ್ಬಿ ಏರಿದಾವೊ ತೆನಿಯಾ
ಕಾಳಿನ ಕೊನಿ ಕೋನಿಯಾ ಅಂದ ಚಂದದಿಂದ
ಉದುರುಸುತ್ತಾವೊ ಗುನಿಯಾ ಹ್ಯಾರೈಡು ಗೆಣಿಯ
ಉಚ್ಚುತಾವೊ ಗುನಿಯಾ ||3||
ಇಂದಿನ ರಾತ್ರಿ ಹೊಂದಿಕೊಂಡಿದರೆ ಕೇಳುತ್ತಾವೊ ಧನಿಯಾ
ಹಾರೈಡೋ ಗೆಣಿಯ ಬರುತಾವೊ ಸನಿ ಸನಿಯಾ
ಒಂದುಕೊಂದು ಸನಿಯಾ ಮೇಲಿನ ದೇಶಿಯ
ಚಂದ್ರ ಸೂರ್ಯ ನತ್ತ ಗೆಣಿಯ ||4||
ಈ ಹೊಲ ಏನ್ನಾಗೆ ಬ್ಯಾಸರ ಆಗಿತ್ತಲ್ಲ ಮುಂದಕೆ ಸಾಗಣ್ಣ
ಸಂಹರ್ಸ ಲಿಂಗನ ಪಾದವು ನೋಡಲ್ಲಾ ಸಿದ್ಧಲಿಂಗ ತಾ ಬಲ್ಲ
ಊರೊಳಗೊಬ್ಬ ಬಸವೇಶನಲ್ಲಾ ಶರಣ ಹೋಗಿದೆನಲ್ಲಾ
ಶರಣ ಹೋದೆನಲ್ಲಾ ||5||

Categories
Tatvapadagalu ಮರಕುಂದಿಯ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು

ಮರಕುಂದಿ ಬಸವಣ್ಣಪ್ಪ ಅವರ ತತ್ವಪದಗಳು

ಅಡವಿವಾಸನ ತಂದೆ ನಿಮ್ಮಡಿ ಹುಡುಕುತ ನಾ ಬಂದೆ

ಅಡವಿವಾಸನತಂದೆನಿಮ್ಮಡಿಹುಡುಕುತನಾಬಂದೆ ||ಪ||ಶರಣರಂಶಕೇಳೊನಾನಿಮ್ಮಚರಣರಕ್ಷಿಧೂಳೊ
ಚರಣಕೆರಗಿದೆನೆಳೊಉತ್ಸವಪೂರ್ಣಮನಸಿನೊಳು
ಕರುಣಿಸುಕೃಪಾಳುಅಂತಃಕರಣದೃಷ್ಟಿಯೊಳೂ |1||
ಕಾಲಭಯವಬಿಡಿಸೊಗುರುಕಳಕೀಲಮೂಲವತಿಳಿಸೊ
ಮೆಲುಮನಸುನಿಲಿಸೊನಿಜಸುಕಲೀಲಾಮೃತಉಣಿಸೊ
ಬಾಲನಿಗುದ್ಧರಿಸೊಭವದುಃಖಮಾಲೆಯಪರಿಹರಿಸೊ ||2||
ನಿಮ್ಮದುಈಕಾಯಸಂಸಾರ| ಸುಮ್ಮನೆಮೇಲಿಛಾಯ
ಹಮ್ಮಿಲ್ಲಗುರುರಾಯಅರಿಕಿನಿಮ್ಮೊಳಗಿನ್ಯಾಯ
ವಮ್ಮನಾದಪರಿಯವರಪರಬ್ರಹ್ಮಸಿದ್ಧಅರಿಯಾ ||3||

 

ಅನ್ಯರಾತ್ಮದನೋವಯನ್ನಿಂದಕೊಳದಿರು
ಅನ್ಯರಾತ್ಮದನೋವಯನ್ನಿಂದಕೊಳದಿರು
ನಿನ್ನವನೆನಿಸಿರ್ದಫಲವೇನುಗುರುವೆ
ಯನ್ನಾತ್ಮದನೋವಗಳುಚೆನ್ನಾಗಿಕೊಳಲವರು
ನಿನ್ನಪಾದದಧ್ಯಾನಘಟಿಸುವದರಿಂದ ||ಪ||
ಕೊಡುಕೊಳುವಠಾವಿನಲಿನುಡಿಬದಲಬೀಳದಲಿ
ಬಡವರಿಗನ್ನವಸ್ತ್ರಕುಡುವಸಮಯದಲಿ
ತಡಿಯದೆಬಂಧೆನ್ನಒಡಗೂಡಿಅವರಿಗೆ
ಕುಡುಸುಖವುಸಕಲಸಂಪತ್ತಿನಮುಖದಿಂದ ||1||
ಯತ್ತಕಾಣದೆಯನ್ನಸುತ್ತಸುಳಿಹುವರೆಲ್ಲ
ವತ್ತಿನೋಯಿಸಲಿಮನವುತೊತ್ತಾಗಿಯಿರುವೆ
ಮತ್ತೇನುನುಡಿಯದೆಚಿತ್ತನಿಮ್ಮಡಿಯಲ್ಲಿ
ಯಿತ್ತುಭಜಿಸುವೆವ್ಯಾಳ್ಯಹೊತ್ತುಯಂದರಿದೆ ||2||
ಅಘತಿಮಿರಹರಿಸಲ್ಕೆಯುಗಯುಗದಿಬರಲವರು
ಬಗೆಬಗೆತರದಿಂದನಿಂದಮಾಡುತಲಿ
ಜಗದೊಡೆಯಗುರುಶಿದ್ಧನಿಗಮಗೋಚರನಿನ್ನ
ಮಗನಾಗಿಬಾಳುವೆನುಮಹಗ್ನಾನದಿಂದ ||3||

 

ಅನ್ಯರ ನಡೆ ನುಡಿ ಆರಿಸುವವರು

ಅನ್ಯರ ನಡೆ ನುಡಿ ಆರಿಸುವವರು
ಅನಂತರುಂಟು ಜಗದಲ್ಲಿ
ತನ್ನ ನಡಿಗೆ ತಾ ಶಿಕ್ಷವ ಮಾಡಿ
ಚಿನ್ಮಯನೊಲಿಸುವರ್ಯಾರಿಲ್ಲಿ ||ಪ||
ತಮ್ಮ ಪೌರುಷವು ತಾವೇ ಪೇಳುವರು
ಅನಂತರುಂಟು ಜಗದಲ್ಲಿ
ಬ್ರಹ್ಮಜ್ಞಾನ ಸಂಪೂರ್ಣ ಧ್ಯೇಯದ
ಹಮ್ಮಳಿದವರ್ಯಾರಿಲ್ಲಿ? ||1||
ವೇದ ಆಗಮ ಶಾಸ್ತ್ರ ಪುರಾಣ
ಓದುವರುಂಟು ಜಗದಲ್ಲಿ
ಸಾಧಿಸಿ ಸದ್ಗುರು ಬೋಧಾಮೃತ ರಸ
ಸದಕಂಥವರ್ಯಾರಿಲ್ಲಿ ||2||
ನೀರಿನ ಕ್ರೀಯ ನಿತ್ಯ ನೇಮ ಜಪ
ಮಾಡುವರುಂಟು ಜಗದಲ್ಲಿ
ವೀರಶೈವ ಸುವಿಚಾರ ಮಾರ್ಗ
ಹಿಡಿದಾಚರಿಸುವರ್ಯಾರಿಲ್ಲಿ ||3||
ಭಕ್ತಿ ಜ್ಞಾನ ವೈರಾಗ್ಯ ಹೇಳುವರು
ಅನಂತರುಂಟು ಜಗದಲ್ಲಿ
ಮುಕ್ತಿ ಪುರುಷ ವಿರಕ್ತನ ಸಂಗ
ಸಮರಸ ಮಾಡುವರ್ಯಾರಿಲ್ಲಿ ||4||
ಸಿದ್ಧ ಶುದ್ಧ ಪ್ರಸಿದ್ಧ ನಾಮವ
ಭಜಿಸುವರುಂಟು ಜಗದಲ್ಲಿ
ಮುದ್ದುಬಸವ ಗುರುಸಿದ್ಧನ
ಸಂಗದೊಳಿದ್ದಂಥವರು ಯಾರಿಲ್ಲಿ ||5||

 

ಅಂಜದಿರಂಜದಿರಂಜದಿರು ಗುರು

ಅಂಜದಿರಂಜದಿರಂಜದಿರು ಗುರು|
ಸಂಜಿವ ಸಿದ್ಧನ ಮರಿಯದಿರು
ಗುಂಜಿ ಬಿಟ್ಟು ಮುಕ್ಹಾಕದಿರು ಹುರಿದ
ಗಂಜಿ ದೇಹಕ ಬಿಗಿ ಆದೆ ಕುರು ||ಪ||
ಹರನಿಂದಾದುದು ಇದುಯೆಲ್ಲ ಈ ನರರಿಂದಾಗುದೇನಿಲ್ಲ
ಗುರುವಿನ ಮಗ ತಾ ಇದು ಬಲ್ಲ ಶ್ರೀಗುರುವಿನ ಹೊರತು ಇನ್ನೊಬ್ಬಿಲ್ಲ ||ಅ.ಪ||
ಕಾಯವ ಕೊಲ್ಲುವ ದೇವನೆಯಲ್ಲ
ಸಾಯ ಮಾಡವರಿನ್ಯಾರಿಲ್ಲ
ಆಯಸ ಬಡಿಸುವ ನ್ಯಾಯದಿಂದ ಗುರು
ಪಾಯಸ ಉಣಿಸುವ ಮುಂದೆಲ್ಲ ||1||
ದೇಹಕ ಸುಖ ದುಃಖ ಎರಡುಂಟು
ಸಂದೇಹವೇಕೊ ನಿನಗಿನಿತಿಷ್ಟು
ಮಾಯ ಮರ್ದನ ಹಾಕಿದ ಗಂಟು ಗುರು
ರಾಯ ಸಿದ್ಧನ ನೆನಿ ಸುಖವುಂಟು ||2||

 

ಆಸಿ ಅಳಿದು ಪರದೇಶಿ ತಾನಾದ ಮೇಲಿನ್ನೆನಿನ್ನೇನೂ
ಆಸಿ ಅಳಿದು ಪರದೇಶಿ ತಾನಾದ ಮೇಲಿನ್ನೆನಿನ್ನೇನೂ
ರಾಸಿ ದೈವದ ಗಂಡ ಈಶನೊಳಗಾದ ಮೇಲಿನ್ನೆನನ್ನೇನೂ ||ಪ||
ಮೀಸಲ ನುಡಿಗಳು ಏಸು ಬಸಳಿದರೇನು ಇನ್ನೇನಿನ್ನೇನೂ
ಕೂಸಿನಂದದಿ ಮನ ಉಲ್ಲಾಸದೊಳಿರ್ದ ಮೇಲಿನ್ನೇನಿನ್ನೇನೂ ||1||
ಕೊಡುವ ಕೊಳುವ ಸಂಸಾರ| ಬಿಡಗಡಿಯಾದ ಮೇಲಿನ್ನೇನಿನ್ನೇನೂ
ಬಡ ಮನವಳಿದೊಂದೆ ದ್ರಿಢವಾಗಿ ನಿಂತ ಮೇಲಿನ್ನೇನಿನ್ನೇನೂ ||2||
ಭಕ್ತಿ ಮಾರ್ಗದೊಳು ವಿರಕ್ತಿ ತಾನಾದ ಮೇಲಿನ್ನೇನಿನ್ನೇನೂ
ಯುಕ್ತಿ ವಿವೇಕ ಜ್ಞಾನ ಮುಕ್ತಿಗ್ಹೊಂದಿದ ಮೇಲ ಇನ್ನೇನಿನ್ನೇನೂ ||3||
ವಳ ಹೊರಗೊಂದಾಗಿ| ಝಳ ಝಳಯಿರ್ದ ಮೇಲ ಇನ್ನೇನಿನ್ನೇನೂ
ಬಳಗ ಶಿವಶರಣರ ವಳಗ ಕೂಡಿದ ಮೇಲ ಇನ್ನೇನಿನ್ನೇನೂ ||4||
ಅರಿವು ಹಿಡಿದು ಆಚರಿಸುತಲಿರ್ದ ಮೇಲ ಇನ್ನೇನಿನ್ನೇನೂ
ಗುರುವು ಸಿದ್ಧೇಶ್ವರನ ಗೋಪ್ಯದೊಳಾದ ಮೇಲ ಇನ್ನೇನಿನ್ನೇನೂ ||5||

 

ಅಲಕ್ ನಿರಂಜನ ವೊಯಿ ಫಕೀರ
ಅಲಕ್ ನಿರಂಜನ ವೊಯಿ ಫಕೀರ
ಸಬ್ ದುನಿಯಾ ಹೈ ಮಾಯಾ ಪೀರ
ಅಲ್ಲಾ ಸಾಹೇಬ ವೊಯಿ ಸರಕಾರ
ಸಬ್ ದುನಿಯಾ ಹೈ ಪೇಟ ಚಾಕರ ||ಪ||
ಸಬ್ ದುನಿಯಾ ಕೊ ಪಾಲನೆ ವಾಲ
ಪಾಂಡರಂಗ ಪಂತ ಮೊಯಿ ಅಖೆಲಾ ||1||
ಬ್ರಹ್ಮ ಏಕ ಹೈ ಧಪತರವಾಲ
ಹಿಸಾಬ ಕಿತಾಬ ಲಿಖನೆವಾಲ ||2||
ಪುನ್ಯ ಪಾಪ ವೊ ತೋಲನೆವಾಲ
ಯಮದೂತ ಹೈ ಶಿವಾಯ ಚೆಲ ||3||
ಅಲ್ಲಾ ಕರೆಸೊ ಸಬ ಹೊತ ಹೈ
ಆದ್ಮಿ ಭಡವ ಕ್ಯಾ ಕರತಾ ಹೈ ||4||
ಜೋ ಕರೆಸೊ ದೇವ ಏಕ ನ್ಯಾರ
ಹುಕುಮ ಶಿವಾಯ ಕೊಯಿ ಕರನೆ ಹಾರ
ಸಿದ್ಧ ಅಲ್ಲ ಸಾಹೇಬ ಮೇರ
ಕದೀಮ ದಾತ ಜೀತಾ ಪೀರ ||5||

 

ಅನ್ಯರ ನಡಿ ನುಡಿ ಆರಿಸುವವರು ಅನಂತರುಂಟು
ಅನ್ಯರ ನಡಿ ನುಡಿ ಆರಿಸುವವರು ಅನಂತರುಂಟು ಜಗದಲ್ಲಿ
ತನ್ನ ನಡಿಗೆ ತಾ ಶಿಕ್ಷವ ಮಾಡಿ ಚಿನ್ಮಯ ನೊಲಿಸುವರ್ಯಾರಲ್ಲಿ ||ಪ||
ತಮ್ಮ ಪೌರುಷ ತಾವೆ ಪೇಳ್ವರನಂತರುಂಟು ಜಗದಲ್ಲಿ
ಬ್ರಹ್ಮಜ್ಞಾನ ಸಂಪೂರ್ಣ ದೇಹದ ಹಮ್ಮಳಿದುಳೀದವರ್ಯಾರಲ್ಲಿ ||1||
ವೇದ ಆಗಮ ಶಾಸ್ತ್ರ ಪುರಾಣ ಓದಿದವರುಂಟು ಜಗದಲ್ಲಿ
ಸಾಧಿಸಿ ಸದ್ಗುರು ಬೋಧಾಮೃತರಸ ಸ್ವಾದ ಕೊಂಬವರ್ಯಾರಲ್ಲಿ ||2||
ನೀರಿನ ಕ್ರಿಯೆ ನಿತ್ಯನೇಮ ಜಪ ಮಾಡುವರುಂಟು ಜಗದಲ್ಲಿ
ವೀರಶೈವ ಸುವಿಚಾರ ಮಾರ್ಗ ಹಿಡಿದಾಚರಿಸುವಂತವರ್ಯಾರಲ್ಲಿ ||3||
ಭಕ್ತಿ ಜ್ಞಾನ ವೈರಾಗ್ಯ ಹೇಳುವರನಂತ ರುಂಟು ಜಗದಲ್ಲಿ
ಮುಕ್ತಿ ಪುರುಷ ವಿರಕ್ತನ ಸಂಗ ಸಮರಸ ಮಾಡವರ್ಯಾರಲ್ಲಿ ||4||
ಶಿದ್ಧ ಶುದ್ಧ ಪ್ರಸಿದ್ಧನ ನಾಮ ಭಜಿಸುವರುಂಟು ಜಗದಲ್ಲಿ
ಮುದ್ದು ಬಸವ ಗುರುಸಿದ್ಧನ ಸೇವದೊಳಿದ್ದಂತಿರುವವರ್ಯಾರಲ್ಲಿ ||5||

 

ಅಲ್ಲಹುದು ಮಾಡಿ ಬಿಟ್ಟಯಿಂತದು ಯಲ್ಲಿ ನಾ ಕಾಣಲಿಲ್ಲಾ
ಅಲ್ಲಹುದು ಮಾಡಿ ಬಿಟ್ಟಯಿಂತದು ಯಲ್ಲಿ ನಾ ಕಾಣಲಿಲ್ಲಾ
ಅಲ್ಲಮಪ್ರಭು ಸಿದ್ಧ ಅಲ್ಲದಾಟವನಾಡಿ ಬಲ್ಲಿದವನೆನಸಿಕೊಂಡ ||ಪ||
ಬಸವನ ಹೆಸರಿನಲ್ಲಿ ಹುಸಿ ಕಳವು ಹಾದರವ ತಾ ಮಾಡಿದ
ದಶದಿಕ್ಕಿನೊಳು ಜನರು ಹುಸಿಯೆಂದು ಕೂಗುವರು ಹಸಿಬಿಸಿ ನುಡಿಗಳಿಂದ
ಕುಲಗೇಡಿ ತಾ ಮೊದಲಿಗೆ ನೆಲಿಬುಡ ಕೊನಿಯಿಲ್ಲ ಯಾವಲ್ಲಿಯೂ
ಬಲವಿಲ್ಲ ವಬ್ಬರದು ಹಿಡಿದು ಹಟವು ಬಿಡಲರಿಯ ಛಲದಂಕನೆನಸಿಕೊಂಡಾ
ಮೂರು ಲೋಕಕ ಮೀರಿದ ಗುರುಸಿದ್ಧ ತೋರಿದನು ಮಹಿಮಾತ್ಮಿಯ
ಧೀರ ಬಸವಗ ಭಕ್ತಿ ಪುರ ಅಳವಡಿಸಿದನು ತೋರಿದನು ನಿಜ ಮುಕ್ತಿಯಾ ||1||

 

ಅಂತರಂಗವ ತಿಳಿಯಲಿಲ್ಲ ಸಾಧು ಸಂತರೆಂಬೊ
ಅಂತರಂಗವ ತಿಳಿಯಲಿಲ್ಲ ಸಾಧು ಸಂತರೆಂಬೊ
ಅಂತರಂಗವು ತಿಳಿಯದೆ ನೇನೆಂತು ಭಕ್ತಿ ಮಾಳ್ಪಿ ತಮ್ಮ
ಕಂತುಹರನ ಶರಣರಾವಗ ಸಂತೋಷದಲ್ಲಿ ಇರುತಿಹರು ||ಪ||
ಚಂಚಲ ಮನವು ಚಾಷ್ಟೆ ಮಾಳ್ಪದು ಪ್ರಾ
ಪಂಚವೆಂಬ ವಂಚನೆ ಬುದ್ಧಿ ಬೆಳಗು ತೊರದು
ಕಿಂಚಿತ ಭೋಗ ಭಾಗ್ಯವಿದನು ಸಂಚಿತ ಪ್ರಾರಬ್ಧಗಮಿಯನಿಸಿ
ಪಂಚಾಕ್ಷರಿಯಂಬ ಮಂತ್ರ ಪಂಚಕಲಶ ಹೂಡಹೋಗಿ ||1||
ಸುಟ್ಟು ಸರವಿ ಬಿಗಿದು ಕಟ್ಟುವರೆ ಜ್ಞಾನಗ್ನಿ ಭಸಿತ
ಮುಟ್ಟಿ ಹಸ್ತದಿ ಧರಿಸಿಕೊಂಬರೆ ಕೊಟ್ಟವಾಕ್ಯ ತಪ್ಪದಂತೆ
ದೃಷ್ಟಿ ಲಿಂಗದಲ್ಲಿಟ್ಟು ತಟ್ಟು ಮುಟ್ಟು ಎಂಬ ಸಂಶ
ಹುಟ್ಟು ಅಳಿದುಳಿದಂತೆ ಶರಣ ||2||
ಅರಿಗೆ ಗುರುವು ಶಿದ್ಧಲಿಂಗನು ಮಾಯಮರವಿಹಿರಿವ
ಭರದಿ ಭಕ್ತರ ಮನಿಗೆ ಬರುವನು ಕುರುಹು ತೋರಿಸಿಕೊಟ್ಟು ತನ್ನ
ಕರವು ಶಿರದ ಮೇಲಿಟ್ಟು ಸ್ಥಿರಕಾಲ ಬಾಳು ಮಗನೆಯಂದು
ಪರಮು ಹರುಷ ಕುಡುವ ಯೋಗಿ ||3||

 

ಅನಾದಿಯಿರುವನು ಅಡವಿಯಲ್ಲಿ ಶಿವ ಅನುಭವದ ಮಂಟಪದಲ್ಲಿ
ಅನಾದಿಯಿರುವನು ಅಡವಿಯಲ್ಲಿ| ಶಿವ ಅನುಭವದ ಮಂಟಪದಲ್ಲಿ
ಘನ ಸುಖ ಅನುದಿನ ಮನದಲ್ಲಿ ತನ್ನನೆನವು ನಿಷ್ಪತ್ತಿ ಆದಲ್ಲಿ ||ಪ||
ದೇಹ ಭಾವ ಅಳಿದುಳಿಯಲ್ಲಿ| ಗುರುರಾಯನ ಸೇವಕನಾದಲ್ಲಿ
ಮಾಯ ಮೋಹ ಬಿಟ್ಹೊದಲ್ಲಿ| ನಿರ್ದೇಹಿ ದಾಸೋಹ ಸ್ಥಲದಲ್ಲಿ ||1||
ತಾನೆ ತಾನಾಗಿರ್ದದಲ್ಲಿ ಮಹಜ್ಞಾನ ಆನಂದ ಸ್ಥಲದಲ್ಲಿ
ಖೂನ ಇಡುವದಿನ್ಯಾವಲ್ಲಿ ಸುಟ್ಟು ದಹನವಾದಿತು ಬೂದಿ ಮೈಯಲ್ಲಿ ||2||
ವೈರಾಗ್ಯದ ಬಲಯಿದ್ದಲ್ಲಿ ಮಾಯ ಸೇರದು ಮೀರಿದ ಸ್ಥಲದಲ್ಲಿ
ಧೀರ ಬಸವ ಸಿದ್ಧನ ಬಲ್ಲಿ ಆಶಿ ತೊರದು ತನುಮನಧನದಲ್ಲಿ ||3||

 

ಇದ್ದರೆ ಬ್ಯಾಗ ಕಣ್ತೆರಿಯೊ ಯಿಲ್ಲದಿದ್ದರ ನೀಯನ್ನ ಮರಿಯೊ
ಇದ್ದರೆ ಬ್ಯಾಗ ಕಣ್ತೆರಿಯೊ ಯಿಲ್ಲದಿದ್ದರ ನೀಯನ್ನ ಮರಿಯೊ
ಸಿದ್ಧ ಶಿವಭಕ್ತ ಮನ ಶುದ್ಧ ಮಾಡೋಯನ್ನ
ಮುದ್ದು ಮೂರ್ಲೋಕ ಪ್ರಸಿದ್ಧ ಶರಣಬಸವ ||ಪ||
ಅಂತರಂಗದ ಸಾಕ್ಷಿಮಾತು ಕೇಳಿ| ಅಂತ ಬಂದೆನು ಮನಸೋತು
ಕಂತುಹರನ ಅಂತಃಕರುಣದಿಂದಲಿ ಯನ್ನ
ಚಿಂತಿ ಬಿಡಿಸು ಬಹುಶಾಂತ ಶರಣಬಸವ ||1||
ಆರು ಕಾಣದ ಪರದೇಶಿ ಗೊತ್ತು| ತೋರಿಸು ಬಂದೆನ್ಹಾರೈಸಿ
ದಾರಿ ತೊರದು ವಶ ಮೀರಿ ಬಂದಿತು ಯನ್ನ
ಸೇರಿಸು ದಡಿಗೊಯಿದು ವೀರ ಶರಣಬಸವ ||2||
ಕೀರ್ತಿ ಬಂದಿತು ಜಗದೊಳಗೆ ಅಪ| ಕೀರ್ತಿ ತಕ್ಕೊ ಬ್ಯಾಡ ನಿನಗೆ
ಸಾರ್ತಕ ಮಾಡೊ ಮನಪೂರ್ತಿಯಿದರೊಳು ಪೊಕ್ಕು
ಮೂರ್ತಿ ಶ್ರೀಗುರು ಶಿದ್ಧೇಕಾರ್ತ ಶರಣಬಸವ ||3||

 

ಇಷ್ಟ್ಯಾಕೊ ನಿನ ಗತಿಯಾಸಿ ಘೋರ
ಇಷ್ಟ್ಯಾಕೊ ನಿನ ಗತಿಯಾಸಿ ಘೋರ
ಯೆಷ್ಟು ಮಾಡಿಕೊಂಡಿ ಮಾಯ ಪಾಶಿ
ದೃಷ್ಟಿ ಮಾರ್ಗ ಬಡು ಪ್ರಾಣ ಫಾಸಿ ಜ್ಞಾನ
ದೃಷ್ಟಿಯಿಟ್ಟು ನೋಡು ನಿನ್ನ ಮನ ಸೋಸಿ ||ಪ||
ಸತ್ತು ಹೋದ ಮೇಲ ದೊರಿವದೆನು ವಂದು
ಗೊತ್ತು ಮಾಡಿಕೊ ಯಿರುವಾಗ ನೀನು
ಮಿತ್ಯ ಸಂಸಾರ ದುಃಖ ಫಲವಿಲ್ಲೇನು ಜನ್ಮ
ಯತ್ತಿ ಬಾರದಂತ ಹಾದಿ ಹಿಡಕೊ ನೀನೂ ||1||
ನರಜನ್ಮಕ ಹಿರಿದು ಜನ್ಮುಯಿಲ್ಲ ಈಗ
ದೊರಕಿಸಿಕೊಳ್ಳೊ ಮುಂದ ಸಿಗವೊದಿಲ್ಲ
ಗುರು ಹಿರಿಯರ ಸೇವೆ ಮಾಡೊದೆಲ್ಲ ಮುಕ್ತಿ
ದೊರಕುವ ಪಥ ಕೊಳು ಸೊಲ್ಲ ||2||
ಶರಣರ ಸೇವಕ ನೀನಾಗಿ ಗುರು
ಚರಣಕ ತನು ಮನ ಶಿರ ಬಾಗಿ
ಕರುಣಿ ಸಿದ್ಧನೊಲಿಸೆಲ್ಲೆ ಬೇಗಿ ಮುಕ್ತಿ
ದೊರಕುವ ದಾವಗ ಭವ ನೀಗಿ ||3||

 

ಇಟ್ಟಂಗಿರಬೇಕು ಸದ್ಗುರು ಕೊಟ್ಟ ಗುಣ ಬೇಕು
ಇಟ್ಟಂಗಿರಬೇಕು ಸದ್ಗುರು ಕೊಟ್ಟ ಗುಣ ಬೇಕು
ನಿಷ್ಟೆಯಿಂದ ನಿಜ ತತ್ವವ ತಿಳಿದು ಹುಟ್ಟಿ ಹುಟ್ಟದ್ಹಾಂಗಿರಬೇಕು ||ಪ||
ಬಂದದ್ದುಣಬೇಕು ಹಿಂದಿನ ಕರ್ಮ ತೊಳಿಯಬೇಕು
ಮುಂದ ತಿಳಿಯಬೇಕು ಮೂರನು ಕೊಂದು ಉಳಿಯಬೇಕು
ಸಂದೇಹವಿಲ್ಲದೆ ಶಿದ್ಧನ ಭಜಿಸುತ ಆನಂದದೊಳಿರಬೇಕು ||1||
ಮೀಸಲ ನುಡಿಬೇಕು ದೇಹದ ವಾಸನ ಬಿಡು ಬೇಕು
ಆಸಿಯ ಕಡಿಬೇಕು ಮನ ಪರದೇಶಿ ಮಾಡಬೇಕು
ಈಶ ಶಿದ್ಧ ಪರಮೇಶನ ಭಜನಿ ಉಲ್ಲಾಸದೊಳಿರಬೇಕು ||2||
ಚಿಂತಿಯ ಮರಿಬೇಕು ತಾನಿಸ್ಚಿಂತಿಯೊಳಿರು ಬೇಕು
ಭ್ರಾಂತಿಯನಳಿಬೇಕು ಬಹುಸುಖ ಶಾಂತಿಯೊಳಿರುಬೇಕು ಮ
ಹಂತ ಸಿದ್ಧನ ಮರಿಯದ ಅನುದಿನ ಅಂತರಂಗದೊಳಗಿರಬೇಕು ||3||

 

ಇದ್ದು ಇಲ್ಲೆನಬೇಡಿರಣ್ಣ ಗುರು ಶಿದ್ಧಲಿಂಗನ ಬಾಕಿ ಕುಡತಕ್ಕದ್ದಣ್ಣ
ಇದ್ದು ಇಲ್ಲೆನಬೇಡಿರಣ್ಣ ಗುರು ಶಿದ್ಧಲಿಂಗನ ಬಾಕಿ ಕುಡತಕ್ಕದ್ದಣ್ಣ
ಬುದ್ಧಿವಂತರು ತಿಳಿವೊದಣ್ಣ ಸಕಲ ಉದ್ಯೋಗ ವ್ಯಾಪಾರ
ಅವನಿಂದಾದಣ್ಣ ||ಪ||
ಧನ ಧಾನ್ಯ ನಿಮ್ಮದಲ್ಲಣ್ಣ ಕೆಟ್ಟ
ದಿನ ಕಾಲ ಒದಗಿದವು ತಂದ ಮುಕ್ಕಣ್ಣ
ಘನ ಮಹಿಮ ಚನ್ನಬಸವಣ್ಣ ಬಕ್ತಿ
ವಿನಹ ಎಂದಿಗಿ ಮುಕ್ತಿ ಕುಡುವೊದಿಲ್ಲಣ್ಣ ||1||
ನಯ ಭಯ ಭಕ್ತಿ ಮೂಲಣ್ಣ ಭೂತ
ದಯವಿರುತಿರೆ ಮುಕ್ತಿ ಬೇರಿಲ್ಲವಣ್ಣ
ಜಯ ಜಯ ಜಯತ್ಕಾರವಣ್ಣ ಪುಣ್ಯ
ಮಾಯರೂಪು ಪರವಸ್ತು ಅಲ್ಲಿರ್ಪನಣ್ಣ ||2||
ಬೇಡಿಕೊಂಬುವನೇನು ಕಿರಿದೆ ಭಕ್ತಿ
ಮಾಡಿ ನೀಡುವನೆನು ಜಗದೊಳು ಹಿರಿದೇ
ಕೂಡಿ ವಂದಾದದ್ದು ಅರಿದೇ ಶಿದ್ಧನ
ಹಾಡಿ ಹರಸದೆ ವ್ಯರ್ಥ ಕೆಡುಬ್ಯಾಡೊ ಬರಿದೆ ||3||

 

ಇಷ್ಟ್ಯಾಕ ತಿಳಿವಲ್ಲಿ ಎಲೊ ಮೂಢ ಬರಿದೆ
ಇಷ್ಟ್ಯಾಕ ತಿಳಿವಲ್ಲಿ ಎಲೊ ಮೂಢ ಬರಿದೆ
ಭ್ರಷ್ಟ ಸಂಕಲ್ಪದೊಳಿರು ಬ್ಯಾಡ
ಕಷ್ಟಿ ಕರ್ಮದ ಯೋಗ ಬಿಡು ಗಾಡ ಲಿಂಗ
ನಿಷ್ಟಿಯೊಳಿರುವದು ಬಹು ಪಾಡ ||ಪ||
ಜಾತಿ ಜಂಗಮನಾಗಿ ಬಂದಾತ ಜ್ಞಾನ
ಜ್ಯೋತಿ ಪ್ರಕಾಶದಲ್ಲಿರುವಾತ
ಮಾತು ಮಾತಿಗೆ ನೀತಿ ತರುವಾತ ಮನ
ಸೋತು ಭಕ್ತಿಗೆ ಬೆನ್ನು ಹತ್ತಾತ ||1||
ಶರಣರಂಶಿಕನಾಗಿ ಜಗರೊಳು ಗುರು
ಚರಣ ಸ್ಮರಣಿ ತನ್ನ ಮನದೊಳು
ಕರುಣ ದೃಷ್ಟಿ ಬಡ ಜನರೊಳು
ಅಷ್ಟವರಣ ಪೂರಿತ ಬಸವನಂದದೊಳು ||2||
ಲೋಕಪಾವನ ಶಿದ್ಧಲಿಂಗೇಶ ನಕಲು
ಬೇಕಂತ ಚರಿಸುವ ದೇಶ ದೇಶ
ಸೋಕಗುಡನು ಮಾಯ ಭವಪಾಶ ಸಕಲ
ಏಕಾಗಿ ತೋರಿದರೆ ಶಿವನಂಶ ||3||

 

ಇವ ಪರಿಯಲಿ ಹಾರ ಶರಣಾರು ಏಕೊ
ಇವ ಪರಿಯಲಿ ಹಾರ ಶರಣಾರು ಏಕೊ
ಭಾವ ಸಜ್ಜನರಿಗೆ ದೊರಿವಾರು
ಸಾವಸು ಅತಿ ಸ್ನೇಹ ಬಳಸಾರೂ
ಸರ್ವ ಜೀವರೊಳಗ ಅಂತಃ ಕರುಣಾರು ||ಪ||
ಜ್ಞಾನ ಕ್ರಿಯಗಳೆರಡು ಸಮವಾಗಿ ಮಹ
ಜ್ಞಾನಿಗಳಿದ್ದಲ್ಲಿಗೆ ಹೋಗಿ
ಸ್ವಾನುಭಾವದ ಸುಖ ಮನನಾಗಿ
ಶಿವಧ್ಯಾನ ಗುರುವಿನ ಪಾದ ನೆನಪಾಗಿ ||1||
ಸಾಧು ಸಂತರ ಕೂಡ ಬಳಸ್ಯಾಡಿ ನಾಲ್ಕು
ವೇದ ಸಮ್ಮತವಾಗಿ ನಲಿದಾಡಿ
ಹೋದ ಮಹತ್ವದ ಹಾದಿ ಹುಡಕ್ಯಾಡಿ ಪ್ರೇಮ
ಉದರ ನಿತ್ಯಾನಂದ ಸೂರ್ಯಾಡಿ ||2||
ಬುದ್ಧಿವಂತರ ಉದಿಮಿದರಂತ ಗುರು
ಸಿದ್ಧನು ವಶವಾದನು ಅವರಂತೆ
ಗೆದ್ದರು ಭವ ಭಾದಿ ತಿರಗದಂತ
ಜಗದೊಳಿದ್ದರ ಏನವರು ಇಲ್ಲದಂತ ||3||

 

ಎನಗ್ಯಾರು ದಿಕ್ಕಿಲ್ಲ ನಿನ್ನೊರತು ಗುರುಸಿದ್ಧ
ಎನಗ್ಯಾರು ದಿಕ್ಕಿಲ್ಲ ನಿನ್ನೊರತು ಗುರುಸಿದ್ಧ
ಅನುದಿನ ಮೊರೆಯಿಡುವೆ ನೀನೆ ಗತಿಯೆಂದು ||ಪ||
ತಂದಿಯಾದರು ನೀನೆ ತಾಯಿಯಾದರು ನೀನೆ
ಬಂಧು ಬಳಗವು ನೀನೆ ಅಂದಿಂದಿಗೆ
ಯಂದೆಂದಿಗಗಲಾದೆ ಹೊಂದಿಕೊಂಡಿರುವಂತಹ
ಕಂದ ನಿಮ್ಮವನೆಂದು ಕರುಣಿಸೆಲೆ ದೇವಾ ||1||
ಯೇಳುತ ನಿಮ್ಮ ನೆನವು ಬೀಳುತ ನಿಮ್ಮ ನೆನವು
ವೇಳ್ಯಾಳ್ಯೆದೊಳು ನಿಮ್ಮ ನೆನಹು ಬಲಗೊಂಡು
ಯೆಳೇಳು ಜನ್ಮದಲಿ ಆಳಾಗಿ ಇರುವೆನು
ಬಾಳಾಕ್ಷ ಹರನಿಮ್ಮ ಘೂಳಿಯೆಂದೆನಿಸಿ ||2||
ನಡಿವಲ್ಲಿ ನಿಮ್ಮ ಧ್ಯಾನ ನುಡಿಯಲ್ಲಿ ನಿಮ್ಮ ಧ್ಯಾನ
ಕುಡಕೊಂಬೊ ವ್ಯಳಿಯಲ್ಲಿ ನಿಮ್ಮ ಧ್ಯಾನವನೂ
ಬಿಡದೆ ನಿಮ್ಮಯ ಪಾದ ಸಡಗರ ಸಂಪತ್ತೆಂದು
ಕಡಿ ಮೊದಲಿಲ್ಲದೆ ಭಜಿಸಿ ಕಾಯ್ದುಕೊಂಡಿರುವೆ ||3||
ಎಲ್ಲಿ ಕುಳಿತರು ನೀನೆ ಎಲ್ಲಿ ಹೋದರು ನೀನೆ
ಎಲ್ಲಾವು ತುಂಬಿಕೊಂಡಿರುವಿ ನೀನೆ
ಬಲ್ಲೆ ನೆನ್ನಯ ಪ್ರಾಣದೊಲ್ಲಭ ಅಲ್ಲಮನೆಂದು
ಸೊಲ್ಲು ಸೊಲ್ಲಿಗೆ ಭಜಿಸಿ ಸುಖದೊಳಿರುವೆನೂ ||4||
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿ ಗುರುಸಿದ್ಧಲಿಂಗ ಜಂಗಮವೇ
ನೀನಲ್ಲದಿನ್ನುಂಟೆ ದಾನಿ ತ್ರೈಜಗದೊಳೂ
ಮಾನಾಪಮಾನವನು ನಿಮ್ಮ ದೆಂದೆನುತಾ ||5||
ಎಂತಾತ ಗುರು ನಮ್ಮ ಶಾಂತ ಮೂರುತಿ ಸಿದ್ಧ
ಎಂತಾತ ಗುರು ನಮ್ಮ ಶಾಂತ ಮೂರುತಿ ಸಿದ್ಧ
ಚಿಂತಿ ಬಿಡಿಸಿ ಮನಕ ಸಂತೋಷ ತೋರಿದ್ದ ||ಪ||
ತನ್ನಿಂದ ತಾನೆ ಬಂದ ಯಿವಯನ್ನ ಭಕ್ತನೆಂದ
ಭಿನ್ನ ಗುಣಗಳು ಕೊಂದ ಬಿಡದೆನ್ನ ಬಯಲಿಗೆ ತಂದ ||1||
ಹರುಷ ಮನಸಿನೊಳಿಟ್ಟು ಪರುಷ ಜೊಳಿಗಿ ಕೊಟ್ಟು
ಪುರುಷ ಯಂತಾತ ದಿಟ್ಟ ಹರಸಿ ಭಸಿತ ವಿಟ್ಟ ||2||
ನರರ ಹಂಗಿಲ್ಲದ್ಹಾಂಗೆ ವರವು ಪಾಲಿಸಿದ ಬೇಗೆ
ಪರವಸ್ತು ಸಿದ್ಧಯನಗೆ ಮೆರೆಸುತ್ತಲಿರ್ದ ಹಿಂಗೆ ||3||

 

ಎಂಥ ಅಚ್ಚರಿ ಮಾತಾಯಿತಲ್ಲ
ಎಂಥ ಅಚ್ಚರಿ ಮಾತಾಯಿತಲ್ಲ
ಚಿಂತಿ ಎಂಬುದು ಬಿಟ್ಹೋಯಿತಲ್ಲ
ಸಂತೋಷ ಹೆಚ್ಚಿತು ಸರ್ವಾಂಗಕೆಲ್ಲ
ಶಾಂತ ಮೂರುತಿ ಸಿದ್ಧ ಆತ ಬಲ್ಲ ||ಪ||
ಆ ಊರು ಬಿಟ್ಟು ಈ ಊರಿಗೆ ಬಂದೆ
ದೇವರ ದಯಾ ಆಗಿತ್ತೊ ಮೊದಲಿಂದೆ
ಕಾವಲಿ ಕಳ್ಳರ ಭಯ ಹಿಂದ ಮುಂದೆ
ಸೇವಕ ನಿಮ್ಮವ ಸಿಗದೋಡಿ ಬಂದೆ ||1||
ಹಳ್ಳ ಕೊಳ್ಳ ಹುಲಿಗವಿ ಗಂಡಿ
ಮುಳ್ಳಿನ್ಹಾಸಕಿ ಫಾಸಿಖೋರ ಮಿಂಡಿ
ಕುಳ್ಳಿಲಿ ರಸ ಹಿರಿಕೊಂಬುವಳೊ ಹಿಂಡಿ
ಒಳ್ಳೊಳ್ಳೆ ಹಿರಿಯರನು ಬಿಡದಂಥ ರಂಡಿ ||2||
ಶರಣರಾಳು ಎಂಬ ಗರ್ವದಲ್ಲಿ
ಮರಣದಂಜಕಿ ಬಿಟ್ಟು ಮಾರ್ಗದಲ್ಲಿ
ಸ್ಮರಣಿ ಮಾಡುವೆ ಸಿದ್ಧನ ಹೆಸರಲ್ಲಿ
ಚರಣಕ್ಕೆರಗುವೆ ಬಂದು ಜೀವದಲ್ಲಿ ||3||

 

ಎನ್ನಿಂದೇನು ಆದುದಲ್ಲಾ ನಿನ್ನಿಂದಾದ ಮಹತ್ವಿಯಲ್ಲ
ಎನ್ನಿಂದೇನು ಆದುದಲ್ಲಾ ನಿನ್ನಿಂದಾದ ಮಹತ್ವಿಯಲ್ಲ
ಚನ್ನಬಸವರಾಜಯಿದನು ಬಲ್ಲನಲ್ಲಾದೆ ||ಪ||
ಗುರುವೆ ನಿಮ್ಮ ಕರುಣ ದೃಷ್ಟಿ| ಕರಕೆ ಲಿಂಗವಾಗಿ ಬರಲು
ಶರೀರ ದುರ್ಗುಣಂಗಳೆಲ್ಲ ಹರಿದು ಹೋದವೂ
ಶರಣನಾಗಿ ಚರಿಸುತಿರ್ದೆ ಸ್ಮರಣಿ ನಿಮ್ಮ ಪಾದದಲ್ಲಿ
ಧರಣಿ ಭೋಗ ಯನಗೆ ತೃಣವು ಆಗಿ ತೋರಿತೂ ||1||
ನಡಿಯಲರಿಯೆನಯ್ಯ ನಾನು| ನಡಿಯಲರಿಯೆನಯ್ಯ ಗುರುವೆ
ಪಿಡಿದು ಒಂದು ಕಡ್ಡಿಯೆತ್ತಿ ಬಿಸುಟಲರಿಯೆನೂ
ವಡಿಯ ನಿಮ್ಮ ಅಂಘ್ರಿ ಬಲದಿ| ಪೊಡವಿಯಲ್ಲಿ ಗಿಡವ ಕಿತ್ತಿ
ಬಡಿದು ಬಡಿದು ವಬ್ಬಳಿಯನು ಹಾಕಿ ಬಿಡುವೆನು ||2||
ಗುರುವ ಲಿಂಗ ಜಂಗಮ ವಂದೆ ಉದರಾದಲ್ಲಿ ಹುಟ್ಟಿ ಬಂಧೆ
ಪರವು ಸಾಧ್ಯವಾದ ಬಳಿಕ ಹೋದರಲ್ಯಾತಕೆ
ಅರಿವಿನಲ್ಲಿ ಅರಿತು ಸಿದ್ಧ ಲಿಂಗನಲ್ಲಿ ಬೆರೆವ ಸುಖವ
ಭರದಿ ಕರ್ಪುರಕ್ಕೆ ವುರಿಯ ಕೊಂಡಂತಾದೆನೊ ||3||

 

ಎನ್ನ ಬೆನ್ನಿಗೆ ಚಿಕ್ಕ ಚನ್ನಬಸವನುಯಿರುವ
ಎನ್ನ ಬೆನ್ನಿಗೆ ಚಿಕ್ಕ ಚನ್ನಬಸವನುಯಿರುವ
ಯಿನ್ನಾವ ಭಯವು ಯನಗೆ ಗುರುವೆ|
ನಿನ್ನ ಪಾದುಕಿ ಹೊತ್ತು ಚೆನ್ನಾಗಿ ಮೆರಿವೆನು
ಕುನ್ನಿ ಜನರಡ್ಡಾಪರೆ ಗುರುವೆ ||ಪ||
ಯತ್ತ ನೋಡಿದರೆನ್ನ ಸುತ್ತ ಮುತ್ತಲು ನೀವೆ|
ಕತ್ತಲಿಯ ಯಿರು ಬಲ್ಲದೆ ಗುರುವೆ
ಕತ್ತಿ ಮಾನ್ವರು ನಿಮ್ಮ ತೊತ್ತಿಗೆ ಸರಿಯುಂಟೆ|
ಕತ್ತಿಯಿಟ್ಟ್ಯರಗುತಿಹರು ಗುರುವೆ ||1||
ಹುತ್ತಿನ ಸರ್ಪದ ಗೊತ್ತು ತಿಳಿಯದೆ ಜನರು|
ವತ್ತೊತ್ತಿ ನೋಡುತಿಹರು ಗುರುವೆ
ಸುತ್ತ ಚಿತ್ತಾನಂದ ಹೊತ್ತು ಹೆಡಿಯೆತ್ತಿರಲು
ಸತ್ತು ಹೋಗದೆ ಉಳಿವರೆ ಗುರುವೆ ||2||
ಮಲದೇಹ ತೊಳದೇನು ಮನದಲ್ಲಿ ಹೊಲೆ ಬಿಡದು
ಬಿಲುಬಿಂಕ ಬೀರುತಿಹರು ಗುರುವೆ
ಹೊಲಿಮಾದರಿಗೆ ಹೊರತು ಸರಿಯಲ್ಲ ಪೆದ್ದಯ್ಯ
ಕುಲದಲ್ಲಿ ಹೊಲ್ಯೆಯಲ್ಲವೆ ಗುರುವೆ ||3||
ಡಂಬಕದ ನಡಿನುಡಿಗೆ ನಂಬಿ ಕೆಟ್ಟಿತು ಲೋಕ
ರಂಬಿರ್ಯೊವಳ ಬಲಿಯಲಿ ಗುರುವೆ
ನಂಬುವರೆ ನಿನ್ನ ಪಾದ ಕುಂಭಿನಿಯ ಪಾತಕರು
ಕಂಬಿ ಮುರಿದೆಯ ಬಿಡುವನೆ ಗುರುವೆ ||4||
ಯಾರು ಅರಿಯರು ನೀವು ಬ್ಯರಾದ ಪರಿಗಳನು
ಧೀರ ಬಸವನಿಗಲ್ಲದೆ ಗುರುವೆ
ಕಾರಿಕಂಟಿಯ ಸಿದ್ಧ ದಾರಿ ತೋರನು ಅವರ
ಸೇರಿಸುವ ಯಮಪುರದಲಿ ಗುರುವೆ ||5||

 

ಎಲೊ ಎಲೊ ತಿಳಿ ಹುಚ್ಚ ಮರುಳೆ
ಎಲೊ ಎಲೊ ತಿಳಿ ಹುಚ್ಚ ಮರುಳೆ
ನಿನ್ನ ಹಗಲಿರುಳೆ
ಗೆಲಿವದು ತ್ರಯಮಲ ಇದೇ ಯಾಳೆ
ದೇಹ ನೀರ ಗುರುಳೆ ||ಪ||
ನಾನಾ ಜನ್ಮದಲಿ ಜ್ಞಾನ ಹೀನನಾದಿ
ಅಪಮಾನಿತನಾದಿ
ಜ್ಞಾನವುಳ್ಳ ಜಲ್ಮಕ ಬಂದು ತಿಳಿಯಲ್ದ್ಹೋದಿ
ಎಂಥ ಮೂರ್ಖನಾದಿ ||1||
ಮಂದಿ ನಿಂದೆ ಮಾಡಿ ವ್ಯರ್ಥ ಕೆಡುವದ್ಯಾಕೊ
ಪಾಪ ಕೊಳ್ಳುವದ್ಯಾಕೋ
ಮುಂದೆ ನಿನ್ನ ಹಾದಿ ಚಂದ ಹಸನ ಮಾಡಕೊ
ಹಿಂದಿನ ಕರ್ಮ ತೊಳೆದುಕೊ ||2||
ದಾನ ಧರ್ಮ ಪರಹಿತಾರ್ಥ ಪುಣ್ಯಕೊಳ್ಳೊ
ದೇಹಭೋಗ ಸುಳ್ಳೋ
ಜ್ಞಾನಮಾರ್ಗ ಹಿಡಿದು ಮುಂದೆ ದಾಟಿಕೊಳ್ಳೊ
ಭವದಿ ಹಾದಿ ಮುಳ್ಳೊ ||3||
ಗುರು ಹಿರಿಯರೆಂದು ಅವರ ವಾಕ್ಯ ಕೇಳೊ
ಗೋಪ್ಯವಿಟ್ಟುಕೊಳ್ಳೊ
ಅರಿವು ಹಿಡಿದು ಶಾಂತಿ ಭಕ್ತಿ ತಾಳೊ
ಶರಣರ ಕೂಡಿ ಬಾಳೊ ||4||
ತಂದಿ ಸಿದ್ಧನ ಒಲಿಸಿ ನಿಜ ಮುಕ್ತಿ ಬೇಡಿಕೊ
ವಂದನೆ ಮಾಡಿಕೊ
ಎಂದೆಂದಿಗ್ಹುಟ್ಟದಂತಹ ಪದವಿ ಪಡಕೊ
ಗುರುವಿನ ಪಾದ ಹಿಡಿಕೊ ||5||

ಏನಾರ ಮಾಡಯ್ಯ ನೀನು ಗುರುವೆ
ಏನಾರ ಮಾಡಯ್ಯ ನೀನು ಗುರುವೆ|
ನೀನೆ ಗತಿಯಂದು ನಂಬಿಕೊಂಡೆನು
ಮಾನವರಾಸಿ ನನಗೇನು ಮಹದಾನಿ ರೇವಣಸಿದ್ಧ ನಿನ್ನಾಳು ನಾನು ||ಪ||
ಮಂತ್ರ ಮೂರುತಿ ನಿಸ್ಸಂಸಾರಿ ಸ್ವಾತಂತ್ರ ನಿನ್ನಲ್ಲುಂಟು ಜಗದಧಿಕಾರಿ
ಯಂತ್ರ ವಾಹಕ ವಿರಾಭಾರಿ ಮಾಯ
ತಂತ್ರದಿ ಕುಣಿಸುವಿ ಲೋಕ ಪರಿಪರಿ ||1||
ಆರಿಗಿ ತಿಳಿಯದೀ ಆಟ ಭವ| ಭಾರಿಗಳರಿವರೆ ನಿನ್ನ ಕಪಟ
ಮೀರಿದ ಸ್ಥಲ ಶಾಂತಿನೋಟ ಗ್ನಾನ| ಪೂರಿತ ಲಿಂಗಾಂಗ ಸಮರಸ ಕೂಟ ||2||
ಮಾನಪಮಾನಕ್ಕೆ ಮೀರಿ ಶಿದ್ಧ| ನಾನಾಗಿಯಿರುವೆ ನಿಸ್ಸಂಶ ಮಾಯಾರಿ
ಸ್ವಾನುಭಾವದ ಸುಖ ತೋರಿ ನಿಮ್ಮ| ಧ್ಯಾನದೊಳಿರುವೆನು ನಡಿನುಡಿಬ್ಯರಿ ||3||

ಏನಾರ ಮಾಡಯ್ಯ ನೀನು
ಏನಾರ ಮಾಡಯ್ಯ ನೀನು|
ಮಹಾದಾನಿ ಶ್ರೀ ಗುರುಸಿದ್ಧ ನಿನ್ನಾಳು ನಾನು ||ಪ||
ಮಾನಾಪಮಾನ ವಂದೇನು ನಿಮ್ಮ |
ಧ್ಯಾನವಲ್ಲದೆ ಬ್ಯಾರೆ ಮತ್ತೊಂದರಿಯೆನು
ತಾನಾಗಿ ಬರುವದೆಲ್ಲವನು ಭಕ್ತಿ|
ಗ್ನಾನ ವೈರಾಗ್ಯದಲಿ ಅನುಭವ ಮಾಳ್ಪೆನೂ ||1||
ಆಳಿನ ಅಭಿಮಾನ ಅರಸನಿಗೆ ಕರಿಮಣಿ|
ತಾಳಿಯ ಅಭಿಮಾನ ಕಟ್ಟಿದ ಗಂಡನಿಗೆ
ವಿಳ್ಯದ ಅಭಿಮಾನ ಯತ್ತಿದವಗೆ ಬಿಕ್ಷದ
ಜೋಳಿಗಿ ಅಭಿಮಾನ ಕೊಟ್ಟಗುರುವಿಂಗೆ ||2||
ಯನ್ನ ಕಾಯುವದೆ ನಿನ್ನ ಬಿರುದು ನಾನು
ಯಿನ್ನೆಷ್ಟು ಹೇಳಲಿ ಅಭಿಮಾನ ತೊರದು
ನಿನ್ನಗ ಬಟ್ಟ ಬರಹುವದು ಶಿದ್ಧ
ಬೆನ್ಹತ್ತಿಯಿರು ಕಂಡ್ಯ ನಿನ್ನೊಳ್ನೀ ತಿಳಿದು ||3||

ಎನ್ನೊಳು ನೀವಿರ್ದು ಯನಗ ಕಾಣಿಸಕೊಳದೆ
ಎನ್ನೊಳು ನೀವಿರ್ದು ಯನಗ ಕಾಣಿಸಕೊಳದೆ
ಯನ್ನಂತೆ ನಿವಿರ್ದಿರಿ ಗುರುವೆ
ಯನ್ಯಾದ ಗತಿಪಥವ ಯಿಹಪರಕ ಯಡೆಯಾಟ
ನಿನ್ನ ಪಾದ ಕಾಣಲಿಲ್ಲಾ ಗುರುವೆ ||ಪ||
ನಾನ ಜನ್ಮದಿ ತಿರುಗಿ
ಯೆನು ಕಾಣದೆ ಸುಳ್ಳೆ ಸುಖ ದುಃಖಕೊಳಗಾದೆನು ಗುರುವೆ
ನೀನೆ ಕರುಣೆಸಿ ಯನ್ನ ಮಾನ್ವ ಜನ್ಮಕ ತಂದು
ಗ್ನಾನವನು ಅಂಕುರಿಸಿದಿ ಗುರುವೆ ||1||
ಬಿರಿಮೊಗ್ಗಿಯಲಿ ಗಂಧ ಮರೆಯಾಗಿ ಯಿರ್ದಂತೆ
ಪರಿ ಪರಿಯ ಘಟಗಳಲ್ಲಿ ಗುರುವೆ
ಯಿರುವಿ ನೀರೊಳು ಬೆಂಕಿ ಇರ್ದಂತೆ ಯನ್ನೊಳಗೆ
ಸ್ಥಿರ ಕಾಲ ಅಡಗಿರ್ದಿರಿ ಗುರುವೆ ||2||
ಗತಿಯಾಗಲೆಂದೆನ್ನ ಮತಿಗೆ ಮಂಗಲವಾಗಿ
ಪಥ ತೊರ ಹೊರಹೊಂಟಿರೀ ಗುರುವೆ
ರಥಕ ಸಾರತಿಯಂತೆ ಪತಿಯಾಗಿ ಗುರುಸಿದ್ಧ
ಗತಿಯಾಗಲೆಂದೆನ್ನ ಮತಿಗೆ ಮಂಗಲವಾಗಿ ||3||

ಎಂದೆಂದು ಛಲನಾಗದಂತ ದೀಕ್ಷವನು
ಎಂದೆಂದು ಛಲನಾಗದಂತ ದೀಕ್ಷವನು
ತಂದಿ ರೇವಣಸಿದ್ಧ ಬಂದು ಮಾಡಿದನೂ ||ಪ||
ನಾನಾ ದುರ್ಗುಣ ದೇಹದ್ಹಂಕಾರ ಸುಟ್ಟಿ
ಜ್ಞಾನಾಗ್ನಿ ಭಸಿತ ಸರ್ವಾಂಗ ತುಂಬಿಟ್ಟ
ಸ್ವಾನುಭಾವದ ಸೂತ್ರ ಮನಕ ಹಚ್ಚಿ ಬಿಟ್ಟ
ನಾನಿನೆನ್ನದೆ ಲಿಂಗ ಅರಿವಿನೊಳಿಟ್ಟ ||1||
ಹೆಂಡರ ಮಕ್ಕಳನೆಲ್ಲ ಅಗಲಿಸಿ ಬಿಟ್ಟ
ದಂಡಕೋಲು ಜೋಳಿಗಿ ಸ್ಥಿರವಾದ ಪಟ್ಟ
ದಂಡನಾಯಕ ಮಂತ್ರ ಉಪದೇಶ ಕೊಟ್ಟ
ಮಂಡಲದೊಳು ತಿರಕನೆಂಬ ಹೆಸರಿಟ್ಟ ||2||
ಭಕ್ತಿ ಪ್ರಸಾದಕ್ಕೆ ಗುರಿ ಮಾಡಿ ಯಿಟ್ಟ
ಶಕ್ತೆರರ್ವರ ಸಂಗ ಮಾಡಿಸಿ ಕೊಟ್ಟ
ಮುಕ್ತಿದಾಯಕ ಸಿದ್ಧ ಮುನಿವರ ಧಿಟ್ಟ
ಯುಕ್ತಿಯಿಂದಲಿ ತನ್ನ ವೇಶ ಹಾಕಿ ಬಿಟ್ಟ ||3||

ಎಂತ ಆಶ್ಚರ್ಯ ಮಾತಾಯಿತಲ್ಲಾ
ಎಂತ ಆಶ್ಚರ್ಯ ಮಾತಾಯಿತಲ್ಲಾ
ಚಿಂತಿಯಂಬುದು ಬಿಟ್ಟೊಯಿತಲ್ಲಾ
ಸಂತೋಷ ಹೆಚ್ಚಿತು ಸರ್ವಾಂಗಕೆಲ್ಲ
ಶಾಂತ ಮೂರುತಿ ಶಿದ್ಧಲಿಂಗ ತಾ ಬಲ್ಲ ||ಪ||
ಆ ಊರು ಬಿಟ್ಟು ಈ ಊರಿಗೆ ಬಂದೆ
ದೇವರ ದಯವಿತ್ತು ಮುದದಿಂದೆ
ಕಾವಲಿ ಕಳ್ಳರ ಭಯ ಹಿಂದ ಮುಂದೆ
ಸೇವಕ ನಿಮ್ಮನ ಸಿಗದೋಡಿ ಬಂದೆ ||1||
ಹಳ್ಳ ಕೊಳ್ಳ ಹುಲಿಗವಿ ಗಂಡಿ
ಮುಳ್ಳಿನ್ಹಾಸಿಕಿ ಫಾಸಿಕೊರ ಮಿಂಡಿ
ಕುಳ್ಳಿಲಸು ಹೀರಿ ತೊಂಬುವಳು ಹಿಂಡಿ
ಒಳ್ಳೊಳ್ಳೆ ಹಿರಿಯರ ಬಿಡದಂತ ರಂಡಿ ||2||
ಶರಣರಾಳು ಯಂಬ ಗರ್ವದಲಿ|
ಮರಣದಂಜಿಕಿ ಬಿಟ್ಟು ಮಾರ್ಗದಲಿ
ಸ್ವರಣಿ ಮಾಡಿದೆ ಸಿದ್ದನ್ಹೆಸರಲಿ|
ಚರಣಕ್ಕೆರಗಿದೆ ಬಂದ ಜೀವದಲಿ ||3||

ಎಷ್ಟು ಜೊಕಿ ಮಾಡಿದರೇನು ದೇಹ ಬಿಟ್ಹೊಹದು ತಪ್ಪುವದೇನು
ಎಷ್ಟು ಜೊಕಿ ಮಾಡಿದರೇನು ದೇಹ ಬಿಟ್ಹೊಹದು ತಪ್ಪುವದೇನು
ನಿಷ್ಟಯುಳ್ಳ ಶಿವಶರಣರಿಗೆ ಧನ ಅಷ್ಟು ತನುಮನ ಕುಡು ನೀನೂ ||ಪ||
ತನುಮಿನ ಗುಣ ತಾಮಸ ಬಹಳ ದುಃಖ ಅನುದಿನ ತಪ್ಪದು ನೀ ಕೇಳು
ಘನ ಸುಖ ದೊರಕದು ಮರವಿ ಬಹಳ ಮಾಯಿ
ಅನುಕೂಲ ಯಿದಹರೊಳು ತಿಳಕೊ ಮೂಳ ||1||
ಮನಸಿನ ಗುಣ ಹಲವಾಗುವದು ಸುಳ್ಳೆ ನೆನಸಿ ನೆನಸಿ ಹರದ್ಹೊಗುವದು
ಕನಸಿನ ಪರಿ ಕೈಗೆ ಬಾರಾದು ಆಶಿ ಘನವಾಗಿ ಕಷ್ಟಯೆಂದು ತೀರಾದು ||2||
ಜೀವನ ಬುದ್ಧಿ ಜನ್ಮಯತ್ತಿಸುವದು ವಂದು ಝಾವದೊಳುಸತ್ತು ಹುಟ್ಟಿಸುವದು
ಭಾವ ಭರಿತ ಸಿದ್ಧನ ತಪ್ಪಿಸುವದು ಗುರುದೇವಗೊಪ್ಪಿಸು ಮುಕ್ತಿ ಘಟಿಸುವದು ||3||

ಎಲೋ ಎಲೋ ತಿಳಿ ಹುಚ್ಚ ಮರುಳೆ ನೀನು ಹಗಲಿರುಳೆ
ಎಲೋ ಎಲೋ ತಿಳಿ ಹುಚ್ಚ ಮರುಳೆ ನೀನು ಹಗಲಿರುಳೆ
ಗೆಲಿವದು ತ್ರೈಮಲ ಇದೆ ವ್ಯಾಳೆ ದೇಹ ನೀರ ಗುರುಳೆ ||ಪ||
ನಾನಾ ಜನ್ಮದಲ್ಲಿ ಜ್ಞಾನಹೀನನಾದಿ ಅಪಮಾನನಾದಿ
ಜ್ಞಾನ ಉಳ್ಳ ಜನ್ಮಕ ಬಂದು ತಿಳಿಯದ್ಹೊದಿ ಯಂತ ಮೂರ್ಖನಾದಿ
ಮಂದಿ ನಿಂದಮಾಡಿ ವ್ಯರ್ಥ ಕೆಡುವದ್ಯಾಕೊ ಪಾಪ ಕೊಳುವದ್ಯಾಕೊ
ಮುಂದ ನಿನ್ನ ಹಾದಿ ಚಂದ ಹಸನ ಮಾಡಿಕೊ ಹಿಂದಿನ ಕರ್ಮ ತೊಳದುಕೊ ||1||
ದಾನಧರ್ಮ ಪರಹಿತಾರ್ಥ ಪುಣ್ಯಕೊಳ್ಳೊ ಈ ದೇಹ ಭೋಗ ಸುಳ್ಳೊ
ಜ್ಞಾನಮಾರ್ಗ ಹಿಡದು ಮರ್ತ್ಯ ದಾಟಿಕೊಳ್ಳೊ ಭವದ ಹಾದಿ ಮುಳ್ಳೊ ||2||
ಗುರು ಹಿರಿಯರೆಂದು ಅವರ ವಾಕ್ಯ ಕೇಳೊ| ಗೊಪ್ಯಯಿಟ್ಟ ಕೊಳೊ
ಅರಿವು ಹಿಡಿದು ಶಾಂತಿ ಭಕ್ತಿ ತಾಳೊ ಶರಣರ ಕೂಡಿ ಬಾಳೊ ||3||
ತಂದಿ ಸಿದ್ಧನೊಲಿಸಿ ನಿಜ ಮೋಕ್ಷ ಬೇಡಿಕೊ ನಂದನಿಯ ಮಾಡಿಕೊ
ಯಂದೆಂದು ಹುಟ್ಟದಂತ ಪದವಿ ಪಡದು ಕೊ ಗುರುವಿನ ಪಾದ ಹಿಡದು ಕೊ ||4||

ಎನ್ನ ಸ್ವತಂತ್ರ ಯಿನಿತಿಲ್ಲ ಗುರು
ಎನ್ನ ಸ್ವತಂತ್ರ ಯಿನಿತಿಲ್ಲ ಗುರು
ಬೆನ್ನ ಹತ್ತಿ ಮಾಡಿಸುತಿಹನಲ್ಲಾ
ಯಿನ್ನೊಬ್ಬರು ಅಧಿಕಾರರಿಲ್ಲಾ ಪ್ರಭು
ತನ್ನ ಹುಕುಮಿಟ್ಟನ ಜಗವೆಲ್ಲಾ ||ಪ||
ನಡಿ ನುಡಿ ಚೇತನ ತನ್ನದಲ್ಲಿ ಸೂತ್ರ
ಹಿಡಿದು ಕುಣಿಸುವನು ಜಗವೆಲ್ಲ ||1||
ಪಡಿ ಕುಡುವನು ಸರ್ವ ಜೀವಕೆಲ್ಲ ಮುಕ್ತಿ
ಪಡಿವದು ಯದರಿಂದ ಕಾಂಬೊದಿಲ್ಲ ||2||
ತನು ಮನ ಧನ ಶಾಶ್ವತವಲ್ಲ ಸುಖ
ಅನುದಿನ ಇರುವದು ತಿಳದಿಲ್ಲ
ಘನತರ ಮಾಯಿ ಕೈಯೊಳಗೆಲ್ಲ ಜಗ ||3||

ಏನಾದರೇನು ಗುರುಧ್ಯಾನ ವಂದಾರೆ ಸಾಕು
ಏನಾದರೇನು ಗುರುಧ್ಯಾನ ವಂದಾರೆ ಸಾಕು
ನಾನಾ ಯೋಚನೆ ಮನವೆ ನಿನಗ್ಯಾಕ ಬೇಕು ||ಪ||
ದೇಹವಿದ್ದರೆಯೇನು ದೇಹ ಬಿದ್ದರಯೇನು
ದೇಹ ಸುಖ ದುಃಖ ಭೋಗ ಯಂತಾದರೇನು ||1||
ಜನರು ಮೆಚ್ಚಿದರೇನು ಜನರು ಮೆಚ್ಚದಿರಲೇನು
ಜನರು ಜಗದೊಳಗಿವನು ಹುಚ್ಚಂದರೇನು ||2||
ಕೆಲರು ಹೊಗಳಿದರೇನು ಕೆಲರು ಬಗಳಿದರೇನು
ಕೆಲರು ಛಿ ಛಿಯಂದು ಉಗುಳಲದಕೇನು ||3||
ತಿಪ್ಪಿ ಆದರಯೇನು ಉಪ್ಪರಗಿ ನೆಲಯೇನು
ಮುಪ್ಪು ಹೊಸಕಿ ಸುಚಿ ಅಸುಚಿಯಾದರೇನು ||4||
ಮಾಡಿ ಉಂಡರಯೇನು ಬೇಡಿ ಉಂಡರಯೇನು
ಕೂಡಿ ಅಗಲದೆ ಶಿದ್ಧನಾಂಘ್ರಿವಿರೆ ಸಾಕು ||5||

ಎಲ್ಲರ ನಡಿ ನುಡಿಗೆ ಅಲ್ಲಮನ ಚೇತನವ
ಎಲ್ಲರ ನಡಿ ನುಡಿಗೆ ಅಲ್ಲಮನ ಚೇತನವ
ಅಲ್ಲ ಹೌದೆನ್ನಲಾರೆನೋ ತಮ್ಮ
ಬಲ್ಲ ಜಾಣರು ತಮಗ ಬಲ್ಲಷ್ಟ ಆಡುವರು
ಬಲ್ಲವನು ನಾನಲ್ಲವೋ ತಮ್ಮ ||ಪ||
ಸರ್ವಾಂತರ್ಯಾಮಿ ಶಿವ ನಿರ್ಮಾಣವು ನಾನರಿಯೆ
ಕರ್ಮ ದೇಹದ ಭೋಗವೊ ತಮ್ಮ
ಧರ್ಮಯಂತಿಹುದು ಆದರಂತೆ ಮಾಡಿಸುತಿಹುದು
ನಿರ್ಮಳಾತ್ಮರು ಬಲ್ಲರು ತಮ್ಮ ||1||
ತನ್ನ ನಡಿ ನುಡಿ ತನಗ ಸ್ವಾತಂತ್ರವಿನಿತಿಲ್ಲ
ತನ್ನಂತೆ ಜಗವೆಲ್ಲವೊ ತಮ್ಮ
ಭಿನ್ನವಿಟ್ಟಾಡಲಿಕೆ ಯನ್ನ ತ್ರಾಣವೆ ಗುರುವು
ಚಿನ್ಮಯ ಚಿದ್ರೂಪನೊ ತಮ್ಮ ||2||
ಯುಗ ಯುಗದಿ ಗುರು ಶಿದ್ಧ ಅಗಲದಲಿ ಸರ್ವರಿಗಿ
ಬಗಿ ಬಗಿಯ ಕುಣಿಸುತಿಹನೊ ತಮ್ಮ
ನಿಗಮ ಆಗಮ ಶಾಸ್ತ್ರ ವೇದ ಕೂಗುತಲಾವ
ಅಘಹರನ ಆಟ ವಿದನೂ ತಮ್ಮ ||3||

ಎಲ್ಲಾರು ನಮಗಷ್ಟೆ ಗುರುವೆ ಎಲ್ಲರಿಗಿ ನಾವಷ್ಟೆ
ಎಲ್ಲಾರು ನಮಗಷ್ಟೆ ಗುರುವೆ ಎಲ್ಲರಿಗಿ ನಾವಷ್ಟೆ
ಸೊಲ್ಲಿನೊಳಗೆ ಶಿವನಿಚ್ಛೆ ಸದ್ಗುರು ಬಲ್ಲಿದ ಭಜನಿ ತೊಟ್ಟಿ ||ಪ||
ನೀಡಿದವರು ನಮಗಷ್ಟೆ ಗುರುವೆ ನೀಡದವರು ನಮಗಷ್ಟೆ
ಹಾಡಿ ಹರಸಿದರಷ್ಟೆ ನಿಂದ ಮಾಡಿ ಪಿಡಸಲವರಷ್ಟೆ ||1||
ಬಡವರಾದರು ನಮಗಷ್ಟೆ ಸಂಪತ್ತು ಸಡಗರಿದ್ದರ ಅವರಷ್ಟೆ
ಪೊಡವಿನಾಳಿದರವರಷ್ಟೆ ತ್ರೈಜಗದೊಡಿಯ ನಾದರ ನಮಗಷ್ಟೆ ||2||
ಯಾವ ದೇಶದ ನಡಿನುಡಿ ಅಷ್ಟೆ ಜಂಗಮ ದೇವ ಭಕ್ತರು ನಮಗಷ್ಟೆ
ದೇವ ದೇವರ ದೇವನಷ್ಟೆ ಗುರು ಸಂಜೀವ ಸಿದ್ಧ ನಮಗಷ್ಟೆ ||3||

ಎತ್ತ ನೋಡಿದಡತ್ತ ಗುರು ಸಿದ್ಧಲಿಂಗನು
ಎತ್ತನೋಡಿದಡತ್ತ ಗುರು ಸಿದ್ಧಲಿಂಗನು| ಕೇಳು ಸಖಿಯೇ
ಸುತ್ತಮುತ್ತ ಎನ್ನ ಸುತ್ತಿಕೊಂಡಿರ್ಪನು| ಕೇಳು ಸಖಿಯೇ ||ಪ||
ತೆಳಗ ಮೇಗತಾನೆ ಒಲಗ ಹೊರಗ ತುಂಬ್ಯಾನೆ| ಕೇಳು ಸಖಿಯೇ
ಒಳಗ ಶಿವಶರಣರು ಬರುವ ಪಥವು ತಾನೆ| ಕೇಳು ಸಖಿಯೇ ||1||
ಪಿಂಡ ಬ್ರಹ್ಮಾಂಡ ಎದರಿಟ್ಟು ನೋಡುವ ತಾನೆ| ಕೇಳು ಸಖಿಯೇ
ಪಿಂಡಾಂಡವಳಿದ ಅಖಂಡನಾದವ ತಾನೇ ಕೇಳು ಸಖಿಯೇ ||2||
ಸರ್ವಂಗ ಲಿಂಗ ಪರ್ವತ ಕೊನೆ ಮೊನಿಯಲ್ಲಿ| ಕೇಳು ಸಖಿಯೇ
ನಿರ್ವಯಲಾದಂತ ನಿಜವಸ್ತು ಶಿದ್ಧನು| ಕೇಳು ಸಖಿಯೇ ||3||

ಏನೇನು ಅರಿಯೆನವ್ವಾ ನಾನು ಮಹ
ಏನೇನು ಅರಿಯನವ್ವಾ ನಾನು ಮಹ
ಜ್ಞಾನಿ ಪುರುಷ ಬಂದು ಸಂಗ ಮಾಡಿದನು
ಮಾನಪಮಾನ ಹೇಳಲೇನು ತನ್ನ
ಖೂನ ತೋರಿಸಿ ಬಿಗಿದಪ್ಪಿ ಕೊಂಡಾನು ||ಪ||
ಉಟ್ಟ ಸೀರಿಯ ಕುಪ್ಪಸ ಬಿಡಿಸಿ ಮೊಲಿ
ಮುಟ್ಟಿ ಮುಟ್ಟಿ ಮುದ್ದಾಡಿದ ಬಾಯಿ ಚಪ್ಪರಿಸಿ
ಕೊಟ್ಟ ಪ್ರಸಾದ ತಾ ಸ್ವೀಕರಿಸಿ ಮಗ
ಹುಟ್ಟಿದ ಹಡದೆನವ್ವ ಅವನೊಳು ಸಮ ಬೆರಸಿ ||1||
ಮಂದಿ ಮಕ್ಕಳಿಗೆ ಹೊರತಾದೆನು ಎನ್ನ
ಹಿಂದ ಮುಂದ ಕಾವಲಿಟ್ಟು ಮಾಡಲಿನ್ನೆನು
ಹಿಂದಿನವಗುಣವ ಬಿಟ್ಟೇನು ಆತನ
ಹೊಂದಿಕೊಂಡು ಅಗಲದಂತೆ ಅನುದಿನಯಿರುವೆನು ||2||
ದಿಕ್ಕಿಲ್ಲ ಯಾರು ಎಂದು ತಿಳಿದೆ ಮದ
ಸೊಕ್ಕಿದ ಪ್ರಾಯವೆಲ್ಲ ಒಪ್ಪಿಸಿ ಮೈಮರೆದೆ
ತಕ್ಕ ಪುರುಷನ ಕೂಡಿ ಮೆರೆದ ದಶ
ದಿಕ್ಕು ಮೀರಿದ ಗುರುಸಿದ್ಧನೆಂದು ಕರದೆ ||3||

ಎನಗ್ಯಾರು ದಿಕ್ಕಿಲ್ಲ ನಿಮ್ಮ ಹೊರತು ಗುರುಸಿದ್ಧ
ಎನಗ್ಯಾರು ದಿಕ್ಕಿಲ್ಲ ನಿಮ್ಮ ಹೊರತು ಗುರುಸಿದ್ಧ
ಅನುದಿನ ಮೊರೆಯಿಡುವೆ ನೀನೆ ಗತಿಯೆಂದು ||ಪ||
ತಂದಿ ಆದರ ನೀನೆ ತಾಯಿ ಆದರ ನೀನೆ
ಬಂಧು ಬಳಗೆಲ್ಲಾ ನೀನೇ ಅಂದು ಇಂದೀಗೆ ||1||
ಎಂದೆಂದಿಗೆ ಅಗಲದೆ ಹೊಂದಿಕೊಂಡಿರುವಂಥ
ಕಂದ ನಿಮ್ಮವನೆಂದು ಕರುಣಿಸೆಲೆ ದೇವಾ ||2||
ಎಳುತ್ತ ನಿಮ್ಮ ನೆನವು ಬೀಳುತ್ತ ನಿಮ್ಮ ನೆನವು
ಯಾಳ್ಯಾಳ್ಯಾದೊಳು ನಿಮ್ಮ ನೆನವು ನೆಲೆಗೊಂಡು ||3||
ಏಳೇಳು ಜನ್ಮದಲಿ ಆಳಾಗಿ ಇರುವೆನು
ಭಾಳಾಕ್ಷ ಹರ ನಿಮ್ಮ ಘೋಳೆಂದೆನಸಿ ||4||
ನಡೆಯಲ್ಲಿ ನಿಮ್ಮ ಧ್ಯಾನ ನುಡಿಯಲ್ಲಿ ನಿಮ್ಮ ಧ್ಯಾನ
ಕುಡುಕೊಂಬೊ ಎಡಿಯಲ್ಲಿ ನಿಮ್ಮ ಧ್ಯಾನವನು ||5||
ಬಿಡದೆ ನಿಮ್ಮಯ ಪಾದ ಸಡಗರ ಸಂಪತ್ತೆಂದು
ಕಡಿ ಮೊದಲು ಭಜಿಸಿ ಕಾಯ್ದುಕೊಂಡಿರುವೆನು ||6||
ಎಲ್ಲಿಗೆ ಹೋದರು ನೀನೆ ಎಲ್ಲಿ ಕುಳಿತರು ನೀನೆ
ಎಲ್ಲವು ತುಂಬಿಕೊಂಡಿರುವನು ನೀನೆ
ಬಲ್ಲೆನಯ್ಯ ಪ್ರಾಣದೊಲ್ಲಭ ನೀನೆಂದು
ಸೊಲ್ಲು ಸೊಲ್ಲಿಗಿ ಭಜಿಸಿ ಸುಖದೊಳಿರುವೆನು ||7||
ನೀನೆ ಗತಿ ಗುರುಸಿದ್ಧ ನೀನೆ ಮತಿ ಗುರುಸಿದ್ಧ
ನೀನೆ ಗತಿ ಗುರುಸಿದ್ಧ ಲಿಂಗ ಜಂಗಮವೋ
ನೀನಿಲ್ಲದಿನ್ನುಂಟೆ ಧನಿತ್ರಯ ಜಗದೊಳು
ಮಾನಪಮಾನ ನಿಮ್ಮದೆಂದೆನಿಸಿ ||8||

ಏನಾದರೇನು ಈ ದೇಹ ಗುರು
ಏನಾದರೇನು ಈ ದೇಹ ಗುರು
ತಾನೆ ಮುಟ್ಟಿದ ಬಂದು ಮೊದಲಿನಾ ಪ್ರಾಯ
ಜ್ಞಾನ ಉದಸಿತು ಅಂಗಮಾಯ ಇದೆ
ಖೂನ ಲಿಂಗಾಂಗಕ್ಕೆ ಸತಿಪತಿ ನ್ಯಾಯ ||ಪ||
ರಸ ಉಂಡು ಹಿಪ್ಪಿ ಬಿಟ್ಟಂತೆ ಗಂಧ
ಮೂಸಿ ನೋಡಿ ಪುಷ್ಪ ಪತ್ರಿ ಬಿಸಡಿ ಕೊಟ್ಟಂತೆ
ಮುಸಕ್ಷರಿದು ತಗಿದನದರಂತೆ ಹಾದಿ
ಹಸನ ಮಾಡಿದ ಗುರು ಬಸವ ಬರಲಂತೆ ||1||
ಸೂತ್ರಧಾರಿಯ ಆಟವೆಂದು ಸ
ತ್ಪಾತ್ರದಲ್ಲಾಡುವೆ ನೆನವಿಗೆ ತಂದು
ಕ್ಷೇತ್ರ ಯಾತ್ರಿಯು ಇದೆಯೆಂದು ನಿತ್ಯ
ಸ್ತೋತ್ರ ಮಾಡುವೆ ನಿರ್ಮಲ ಮನ ಒಪ್ಪಿನಿಂದೂ ||2||
ಬರುವ ಸುಖ ದುಃಖ ನಿಂದ್ಯ ಸ್ತೋತ್ರ ಶಿದ್ಧ
ವರನಾಗ್ನಿಯೆಂದರಿದು ಹರುಷಮಯ ಗಾತ್ರ
ಇರುವೆನಂಜದೆ ಅಣುಮಾತ್ರ ಪ್ರಮಥರು
ಬರುವ ದಾರಿಗೆ ದೃಷ್ಟಿ ಮುಚ್ಚಲರಿಯೆ ನೇತ್ರ ||3||

ಎಪ್ಪ ಎಪ್ಪಯೆಂದು ಎನಗೆ ಒಪ್ಪಿಸಿ ಕರೆದಂತವರೆಲ್ಲ
ಎಪ್ಪ ಎಪ್ಪಯೆಂದು ಎನಗೆ ಒಪ್ಪಿಸಿ ಕರೆದಂತವರೆಲ್ಲ
ಹೆಪ್ಪುಗೂಡಿ ಬಂದಾ ಹೆತ್ತಾ ಮಕ್ಕಳೆಂಬೊನೂ
ಕಪ್ಪುಗೊರಳ ಶಿದ್ಧ ತಾನು ನಪ್ಪು ಮಾಡಿಕೊಟ್ಟನೆಂದು
ತಪ್ಪದೆ ನಡೆನುಡಿಗಳಲ್ಲಿ ಅಪ್ಪಿಯಿರ್ದೆನು ||ಪ||
ಭಿನ್ನ ಭಾವ ಮಾಡಲರಿಯ ಅನ್ಯರವಗುಣ ನೋಡಲರಿಯೇ
ತನ್ನ ತಾನೆ ಬಂದ ಭೋಗ ತನ್ನ ತಾನೆ ಹೋಗುವಾಗ
ಎನ್ನದೆಂದು ಬೆನ್ನು ಹತ್ತಿ ಬರಲರಿಯೆನು ||1||
ಆತ್ಮಸಾಕ್ಷಿಯಾಗಿ ನಡಿವೆ ಆತ್ಮ ಸಾಕ್ಷಿಯಾಗಿ ನುಡಿವೆ
ಆತ್ಮ ಸಾಕ್ಷಿಯಾಗಿ ಸಕಲ ಅನುಭವ ಮಾಳ್ಪೆನೂ
ಆತ್ಮರಾಮ ತಾನೆ ಗುರುವು ಆತ್ಮರಾಮ ತಾನೆ ಲಿಂಗ
ಆತ್ಮರಾಮ ತಾನೆ ಜಂಗಮವಾಗಿ ಬಂದಿಹನೂ ||2||
ತಂದಿ ಮಕ್ಕಳೆಂಬೊ ಭಾವ ವಂದೆ ಮುಖವಾಗಿರ್ದ
ಕುಂದು ಉಂಟೆ ಜಗದೊಳದಕ ಸಮವಾಗಾಣೆನು
ತಂದಿ ತಾಯಿ ಶಿದ್ಧಲಿಂಗ ಬಂಧು ಬಳಗ ಶಿದ್ಧಲಿಂಗ
ಕಂದನಾಗಿ ಬಂದ ಎನಗೆ ಶಿದ್ಧಲಿಂಗನೂ ||3||

ಓಂ ನಮಃ ಶಿವಾಯ ಕಲಿರೊ ನಾಯಂಬುದಳಿರೊ
ಓಂ ನಮಃ ಶಿವಾಯ ಕಲಿರೊ ನಾಯಂಬುದಳಿರೊ
ಓಂ ನಮಃ ಶಿವಾಯ ಯಂಬುದ ತಿಳಿರೊ ||ಪ||
ಅಂತರಂಗದೊಳಿರ್ಪ ಆನಂದ ಲೋಲಾ
ಭಕ್ತಿಗೆ ಭಾಗ್ಯ ಜ್ಞಾನ ವೈರಾಗ್ಯ
ವ್ಯಕ್ತಾಗಿ ಸಾಧಿಸು ಮುಕ್ತಿಗೆ ಯೋಗ್ಯ
ಸಿದ್ಧನ ನಾಮ ಸದ್ಭಕ್ತಿ ಪ್ರೇಮ
ಉದ್ಧಾರ ಮಾಳ್ಪ ಪ್ರಸಿದ್ಧ ನಿಸ್ಸೀಮ ||1||

ಒಂದೆಂದು ಭಾವಿಸದೆ ಎರಡಿಟ್ಟು ನೋಡುವರೆ
ಒಂದೆಂದು ಭಾವಿಸದೆ ಎರಡಿಟ್ಟು ನೋಡುವರೆ
ಒಂದೆಯರಡಾದುದರಿಯೆ ಪ್ರಾಣಿ
ಮಂದಮತಿ ಗುಣ ಬಿಟ್ಟು ಚಂದಾಗಿ ಮನವಿಟ್ಟು
ಕುಂದಾದೆ ಕೇಳ್ನೀತಿಯಾ ಪ್ರಾಣಿ ||ಪ||
ಮುಂದಾಗಿ ಮಗ ನಿನ್ನ ಹೊಂದಿ ಮೊಲಿತಿಂದ್ಹಾಲು
ತಂದು ನೀ ತೋರಿಲ್ಲವೆ ಪ್ರಾಣಿ
ಹಿಂದ ನಾ ನೀ ಇಬ್ಬರೊಂದಾದ ಕಾರಣದಿ
ಬಂದ ಗುರುಪುತ್ರನೊಬ್ಬ ಪ್ರಾಣಿ ||1||
ಪಡದ ಮಗನೊಬ್ಬ ನೀ ಹಡದ ಮುಗವಬ್ಬಿರಲು
ವಡಲೊಂದೆ ಎರಡಿಲ್ಲವೆ ಪ್ರಾಣಿ
ಬಡಗಿಲಿ ನೀರಲಿ ಬಡಿದರೆ ಎರಡಾಪುವದೆ
ವಡಗೂಡಿ ವಂದಿರ್ಪುದು ಪ್ರಾಣಿ ||2||
ಅರವು ಹಿಡಿದು ನೀ ಗುರುಪಾದ ಬಿಡುಬೇಡ
ಸ್ತಿರ ಪದವಿ ಮುಂದಿರುವದು ಪ್ರಾಣಿ
ಗರವ ಅಹಂಕಾರಕ್ಕೆ ಗುರಿಯಾಗಿ ಗುರುಸಿದ್ಧಗ
ಹೊರತಾಗಿ ಕೆಡುಬ್ಯಾಡ ಪ್ರಾಣಿ ||3||

ಕರುಣಿಸಯ್ಯ ಬ್ಯಾಗ ನೀನು ದಯ
ಕರುಣಿಸಯ್ಯ ಬ್ಯಾಗ ನೀನು ದಯ| ಕರುಣಿ ಬಡವರಾಪೇಕ್ಷಿಯನು
ಶರಣಬಸವ ಕಲ್ಪವೃಕ್ಷ ಕಾಮಧೇನು
ಚರಣಕ್ಕೆರಗಿದೆ ಬಂದು ಬಿಡೆ ನಿನ್ನನಾನು ||ಪ||
ನಿಮ್ಮ ತೊತ್ತಿನ ಮಗನಯ್ಯ ಯಿಷ್ಟು| ಹಮ್ಮಿಲಿ ಬೇಡುವೆ ಜಿಯ್ಯಾ
ಗಮ್ಮನೆ ಪಾಲಿಸು ಸುಮ್ನಿರ್ಪುದು ಸಲ್ಲ
ನಮ್ಮನದಲಿ ನಿಮ್ಮ ನಂಬಿಕೊಂಡಿರ್ದೆನೂ ||1||
ಯಿರ್ಚಿದೊಳಿರ್ದ ಭಕ್ತಿರಿಗೆ ಚಿಂತಿ| ಹಚ್ಚಿ ಕಾಡುವರೆ ಸೇವಕಗೆ
ಮೆಚ್ಚರು ಪ್ರಮಥರು ಯಚ್ಚತ್ತು ನೋಡಯ್ಯ
ಅಚ್ಚೊತ್ತಿದಂತೆನ್ನ ಬಿಚ್ಚಿ ಬ್ಯಾರಾಗದ್ದು ||2||
ಮಾನಪಮಾನಕ್ಕೆ ವಡಿಯ ನಿಮ್ಮ| ಧ್ಯಾನದೊಳಿರ್ದ ಮನಮಡಿಯ
ಸ್ವಾನುಭಾವದಲಿ ನಿನ್ನ ಖೂನ ತೊರಿಕೊಟ್ಟು
ಯೆನೇನು ಉಪದ್ರಯಿಲ್ಲದ್ದು ಗುರುಶಿದ್ಧ ||3||

ಕಂದನ ಹಟ ತಾಯಿ ತಂದಿಗಳೆ ನಡೆಸುವರು
ಕಂದನ ಹಟ ತಾಯಿ ತಂದಿಗಳೆ ನಡೆಸುವರು|
ಮಂದಿ ನಡೆಸಿಕೊಡುವರೆ ಗುರುವೆ
ಕಂದ ನಿಮ್ಮವನೆಂದು ಚಂದಾಗಿ ಹಟಮಾಳ್ಪೆ
ತಂದು ಕುಡು ಬ್ಯಾಗದಲ್ಲಿ ಗುರುವೆ ||ಪ||
ಹಡದ ತಾಯಿ ತಂದಿ ಬಡಿದು ಹೊಡದು ಬೈದು
ಹಿಡಿದು ಹೊರ ನೂಕುತಿಹರು ಗುರುವೆ
ಅಡಗಿಯಾದಾಕ್ಷಣಕ ಹುಡುಗನಿಗೆ ಹುಡುಹುಡುಕಿ
ಹಿಡತಂದು ಉಣಿಸುತಿಹರು ಗುರುವೆ ||1||
ಯನ್ನ ಮನ ಬಯಸುವದು| ನಿನ್ನ ಅಮೃತ ವಚನ
ಚನ್ನಾಗಿ ದಯಪಾಲಿಸು ಗುರುವೆ
ಯಿನ್ನೆನು ಬಯಕಿಲ್ಲ ನಿವ್ಹೊರತು ದಿಕ್ಕಿಲ್ಲ
ಮನ್ನಿಸು ತಕ್ಕದಯ್ಯ ಗುರುವೆ ||2||
ಯಲ್ಲಿ ಹೊಕ್ಕರು ಬಿಡೆನು ಅಲ್ಲಮ ಪ್ರಭು ಸಿದ್ಧ
ಕಲ್ಲಿಲ್ಹೊಡಸಿ ಕೊಳಲಿಲ್ಲವೆ ಗುರುವೆ
ಬಲ್ಲಿದ ಬಸವ ನಿನ್ನಲ್ಲಿ ಸಮರಸವಾಗಿ
ನಿಲ್ಲಲೊಡನೆ ಬಿಡುಬಲ್ಲನೆ ಗುರುವೆ ||3||

ಕರುಣಿಸು ಗುರುಸಿದ್ಧಯೀಗ ಅಂತಃಕರಣಮಯಿ
ಕರುಣಿಸು ಗುರುಸಿದ್ಧಯೀಗ ಅಂತಃಕರಣಮಯಿ ಕುವರಿಯ ಮ್ಯಾಗ
ಧರಣಿಯೊಳತಿ ದುಃಖ ಆಕಿಮನದೊಳಗೆ
ಪರಿಣಾಮ ತೋರಿಸಿ ಪರಿಹರಿಸು ಬ್ಯಾಗ ||ಪ||
ನಿನೆಗ್ಹೊಂದಿದಂತ ಪ್ರಾಣಿಗಳು ಯಿಷ್ಟು ಕನಿಕರ ಬರದೆ ನಿಮ್ಮೊಳು
ಮನ ಮುಚ್ಚಿ ಅನುದಿನ ನಿಮ್ಮ ಧ್ಯಾನ ಮಾಳ್ಪಳೂ
ಜನದೊಳಗೆ ಅಪಹಾಸ್ಯ ಆರಿಯ ಮೊರಿ ಕೇಳೊ ||1||
ಸತಿಪತಿಯಂಬನ್ಯಯವನು ಮೊದಲೆ
ಅತಿ ಮಾಡಿ ಕಳಿಸಿದ್ದಿ ನೀನು| ಪತಿವೃತ ಧರ್ಮದಲ್ಲಿ ಪತಿವಾಕ್ಯ ಮೀರದಲಿ
ಹಿತವಪ್ಪಿ ನಡಿವಳು ಪ್ರೀತಿಗಾಣೆ ಜಗದೊಳು ||2||
ಭಕ್ತರು ಮೆಚ್ಚರು ನಿನಗೆ ನಿಜ| ಮುಕ್ತಿಯ ಕುಡುವಿನೀ ಹ್ಯಾಂಗೆ
ತಕ್ತದೊಡಿಯ ಸಿದ್ಧಲಿಂಗ ಯಿದು ತರವಲ್ಲ
ಶಕ್ತಿ ವೀರಗ ಕೊಟ್ಟು ಸಮರಸ ಮಾಡವಳ ||3||

ಕಸ ನೀ ಹೊಡಿಯಮ್ಮ ಮನಸಿನ ವಾಸನ ಬಿಡು ಹಮ್ಮ
ಕಸ ನೀ ಹೊಡಿಯಮ್ಮ
ಮನಸಿನ ವಾಸನ ಬಿಡು ಹಮ್ಮ
ಹುಸಿಯಂಬ ಸಂಸಾರ ಹೊಟ್ಟು ಹಾರಿಸಿ ಘಟ್ಟಿ
ಬಸವನ ಪಾದ ಹಿಡಿಯಮ್ಮ ||ಪ||
ನಾಚಿಕೆ ಬಿಟ್ಟು ನಡಿ ನುಡಿ
ಹೆಜ್ಜಿ ತಪ್ಪದೆ ಇಟ್ಟು
ಸುಜನ ಭಾವದ ಭಕ್ತಿಯ ತೊಟ್ಟು ಕಿರಿ
ಗೆಜ್ಜಿ ಕಟ್ಟಿದ ಠಾಳಿ ಚಪ್ಪಳಿಗಿಟ್ಟು ||1||
ನಾನೀ ಯಂಬದು ಬಿಟ್ಟು
ನಾನಾ ಜನ್ಮ ರೋಗ ಸುಟ್ಟು
ಜ್ಞಾನದ ಸೀರಿ ಕುಪ್ಪಸ ತೊಟ್ಟು ಶಿವ
ಧ್ಯಾನ ಮುರಿಯದೆ ಬಹು ಯಚ್ಚರ ಯಿಟ್ಟು ||2||
ಅನುದಿನ ಯಿಷ್ಟಷ್ಟು ಶಿವ
ಅನುಭಾವಕ ಕಿವಿಗೊಟ್ಟು
ಘನಸುಖ ಮನಸಿಗೆ ತಂದು ಹಚ್ಚಿಟ್ಟು
ಸಿದ್ಧಗ ತನುಮನ ವಪ್ಪಿಸಿ ಕೊಟ್ಟು ||3||

ಕರಕರಿ ಮಾಡ್ವರೆ ಕಂದ ಗುರು
ಕರಕರಿ ಮಾಡ್ವರೆ ಕಂದ ಗುರು
ವರಪುತ್ರ ನೀಯಿದ್ಧಿ ಯಿದು ಯೇನು ಚಂದ
ಪರಮ ಹರುಷ ಗುಣದಿಂದ ನಿಜ
ದರುವಿಟ್ಟು ನೋಡುತ ಆಡು ಆನಂದ ||ಪ||
ಯಾವ ದುಃಖವು ನಿನಗಿಲ್ಲ ಭಕ್ತಿ
ಭಾವ ನೋಡುವೆನೆಂದು ಬಂದಿದ್ದಿಯಲ್ಲಾ
ಶಿವಪೂಜೇಶ್ವರ ತಾನೆ ಬಲ್ಲ ಪ್ರೇಮ
ತವಕದಿ ಕರದುಣ್ಣು ಸವಿಸಕ್ಕರಿ ಬೆಲ್ಲ ||1||
ಠಕ್ಕುತನವ ಮಾಡಬ್ಯಾಡ
ನಾಲ್ಕು ದಿಕ್ಕಿಲಿ ನಿನ್ನ ಸುದ್ದಿ ಹೊಗ್ಯದಗಾಡ
ಚಿಕ್ಕತನದ ಬುದ್ಧಿ ಬ್ಯಾಡ ನಿನ್ನ
ವಕ್ಕರುಳಿಯದು ತಮ್ಮ ಯಿದು ಯೆನಪಾಡ ||2||
ಶಾಂತಿ ರೂಪವ ತಾಳಿಕೊಂಡು ಮಹ
ಮಹತ್ವ ಸಿದ್ಧನ ಪಾದ ನೋಡಿ ಮನಗಂಡು
ಅಂತರಂಗದ ಸಾರವುಂಡು ಲೋಕ
ರಂತೆ ನೀಯಿರುಬ್ಯಾಡ ಜನರೊಳು ಭಂಡು ||3||

ಕಳಕೊಬ್ಯಾಡೆಲೊ ಸ್ನೇಹ ತಮ್ಮ ಮನಸಿಗಿ
ಕಳಕೊಬ್ಯಾಡೆಲೊ ಸ್ನೇಹ ತಮ್ಮ ಮನಸಿಗಿ
ತಿಳಕೊ ನೀ ಇರದು ಮದ ಹಮ್ಮ
ತೊಳಕೊ ಮೈಲಿಗಿ ಪಾಪ ಕರ್ಮ ಬಿತ್ತಿ
ಬೆಳಕೊ ಗುರುಕೃಪ ಪೂರ್ಣ ಜ್ಞಾನ ಪರ ಬ್ರಹ್ಮ ||ಪ||
ಯಾರಿಗಿ ಸ್ಥಿರವಲ್ಲೊ ಯಿದನು ಭಕ್ತಿ
ಹಾರಿಸಿ ಬಿಡುವದು ಆರು ಸ್ಥಲವನು
ಸಾರಿ ಹೇಳುವೆ ಸತ್ಯವಿದನು ಪಥ
ತೋರುವ ಗುರುವಿನ ಬೆನ್ನು ಹತ್ತೊ ನೀನು ||1||
ಹೊನ್ನು ಹೆಣ್ಣು ಮಣ್ಣು ಮೂರು ಭವದ
ಹುಣ್ಣೆಂದು ತಿಳಕೊಂಡು ಪ್ರಮಥರು ಸೇರರೂ
ಕಣ್ಣಿಲ್ಲದಂತೆ ಕುರುಡರೂ ಮುಚ್ಚಿ
ಮಣ್ಣು ಪಾಲಾದರು ಗತಿಯಂದು ಕಾಣರೂ ||2||
ಕೇಳಿದರ ವಳಿತಾದ ನಿನಗ ಮಾತು
ಕೇಳದಿದ್ದರ ಕೆಟ್ಟಿ ಫಲವಿಲ್ಲದರೊಳಗ
ಭಾಳ ಲೋಚನ ಸಿದ್ಧ ನಿನಗ ಮೆಟ್ಟಿ
ಸೀಳಿಸಿ ಬಿಸುಟುವ ನರಕ ಕುಣಿಯೊಳಗ ||3||

ಕಾಳ ವಡ್ಡತು ಜನಕ ಹೇಳತಿನ್ನಳವಲ್ಲ
ಕಾಳ ವಡ್ಡತು ಜನಕ ಹೇಳತಿನ್ನಳವಲ್ಲ ಹೇಳಿದರ ಕೇಳೊ ಗುಣವಿಲ್ಲ
ಲೋಕದೊಳು ಬಹಳ ಹೆಚ್ಚಿತು ಪಾಪವೆಲ್ಲ ಯಮರಾಜ ಕೇಳಿ ಸೈರಿಣಿಲ್ಲಾ
ಸೂಳಿ ಮಕ್ಕಳ ತಂದು ಶೂಲಕ್ಹಾಕುವೆನೆಂದು
ಮ್ಯಾಳೈಸಿ ಹೊಂಟ ಬಿಡನಲ್ಲ ತ್ವಂಸಾರಿದೆ ||ಪ||
ಪಾಪಾತ್ಮರುದ್ಭವಿಸಿ ಲೋಪವಾಯಿತು ಭಕ್ತಿ
ತಾಪತ್ರಯಡೆಗೊಂಡಿತಲ್ಲ ಅತಿ ಕೋಪ ಹೆಚ್ಚಿತು ಶಾಂತಿಯಿಲ್ಲ
ಸಜ್ಜನರ ತಾಪ ಬಡಿಸುತ ಯಿರುವರಲ್ಲಾ
ಈಪರಿ ದುಷ್ಕರ್ಮ ವ್ಯಾಪಾರ ಮಾಡುವರು
ವಿಪರೀತ ಕಾಲ ಬಂತಲ್ಲಾ ತ್ವಂಸಾರಿದೆ ||1||
ಸತ್ಯ ಶರಣರ ಚಿತ್ತ ವತ್ತಿ ನೋಯಿಸಿದ ದ್ರೋಹ
ಬುತ್ತಿಯಾಯಿತು ಯಮಪುರಕ ಪಾಪವನು
ಬಿತ್ತಿ ಬೆಳದರು ಉಣಲಿಕ್ಕೆ ನರಕವನು
ಗುತ್ತಿಗ್ಹಿಡಿದರು ಬೀಳಲಿಕ್ಕೆ ಸತ್ತು ಹುಟ್ಟರು ಅಲ್ಲೆ
ಗೊತ್ತಾಯಿತವರಿಗೆ ಯತ್ತ ಹೊಂಟರು ಹೊರಿಯಕ್ಕೆ ತ್ವಂಸಾರಿದೇ ||2||
ಗುರುವು ಮಾಡಿಸುತಿರಲು ಅವರೇನು ಮಾಡುವರು
ಗುರುಪುತ್ರರರಿದು ಪೇಳಿದರು ಬಂದದ್ದು ಬರಲೆಂದು ಧೈರ್ಯ ತಾಳಿದರು
ಹಗಲಿರುಳು ಗುರು ಭಜನೆ ಬಿಡದೆ ಮಾಡುವರು
ನರರೊಳಗೆ ನರರಂತೆ ಶರೀರ ಧರ್ಮದ ತಾಳಿ
ಗುರುಸಿದ್ಧನ ಹೆಸರ್ಹೇಳುತಿಹರು ತ್ವಂಸಾರಿದೆ ||3||

ಕಿತ್ತೋಣಾದತ್ತ ಶೆಪ್ಪ ಹರಿಯೋಣಾದತ್ತ
ಕಿತ್ತೋಣಾದತ್ತ
ಶೆಪ್ಪ ಹರಿಯೋಣಾದತ್ತ
ಗುರು ಕರಜಾತನಿಂದ ಅರಿಯದೇ ಗರ್ವಿಲಿ
ನರ ಕುರಿಗೋಳ್ ನೀವು ಎಲ್ಲರು ಕೂಡಿ ||ಪ||
ಗುರುವಿನ ಮಗ ತಾನು
ದೇಹದ ಪರವಿ ಅವನಿಗೇನು
ನರಕುರಿಗೊಳ್ ನುಡಿ ಲಕ್ಷ್ಯಕ್ಕೆ ತಾರನು
ಪರಮಾನಂದ ಸುಖದೊಳ್ ಇರುವನು ||1||
ಕುಲ ಛಲದವನಲ್ಲ
ಕುಟಿಲರ ಮೆಟ್ಟಿ ಸೀಳಬಲ್ಲ
ಹೊಲೆಮಾದಿಗರಿಗೆ ಅಂಜುವನಲ್ಲ
ಮಲಹರ ನಾಜ್ಞೆಯ ಮೀರಲಿಕಿಲ್ಲ ||2||
ಕಾರಣಿಕನಾದವನು
ಮಹಾತ್ಮೆ ತೋರಿ ಕಳಿಸ್ಯಾನ ಶಿವನು
ಧೀರ ಬಸವ ವಿರಕ್ತ ಸಿದ್ಧನು
ಮೀರಿದವರ ಹಲ್ಲ ಮುರಿಯ ಬಂದಿಹನು ||3||

ಕುಡುವವನ್ಯಾರೊ ಕೊಂಬವನ್ಯಾರೊ
ಕುಡುವವನ್ಯಾರೊ ಕೊಂಬವನ್ಯಾರೊ
ಸುಡುಗಡ ಸಿದ್ಧನ ಸಾಕ್ಷಿಯ ತೊರೊ
ಬಡಿವಾರ ಯಾತಕ್ಕೆ ಭಕ್ತಿಗೆ ದೂರೊ
ನಡಿ ನುಡಿಯಲ್ಲಿ ಶಿವನ ನೆನವಿಗೆ ತಾರೊ ||ಪ||
ಅವನರಿಯದೆ ನೀ ತಂದಿದಿಯೇನು
ತವನಿಧಿ ತುಂಬ್ಯಾನ ತ್ರಿಜಗವನು
ಆವಯಿವಗ ಕುಡುವ ದಕ್ಷಿರಿ ತನಯೇನು
ಶಿವನೀಗೆ ಶಿವ ಇನ್ನೊಬ್ಹಾನೇನೂ ||1||
ಪಿಂಡ ಬ್ರಹ್ಮಾಂಡವನ ಭಂಡಾರ ಕೋಟಿ
ಉಂಡು ಉಟ್ಟು ಮೆರಿತದ ಎಂದಿಗಿಲ್ಲ ತುಟ್ಟಿ
ದಂಡನಾಯಕನೊಬ್ಬ ಮುಕ್ತಿಯ ಮುಟ್ಟಿ
ಕಂಡೆನಾ ಕಣ್ಣ ತುಂಬ ರಾಸಿ ಮನ ಮುಟ್ಟಿ ||2||
ತಾನೆ ವಸ್ತು ತಾನೆ ಮಾಯಿ|
ತಾನೆ ಇಹಪರ ಸಕಲ ಪ್ರಪಂಚ
ತಾನೆ ಶ್ರೀಗುರುಸಿದ್ಧ ನಿರ್ಲೆಪಕ
ತಾನೇ ತಾನಾಗಿರುವನು ಅನುದಿನ ||3||

ಕೆಟ್ಟವರೊಬ್ಬರು ನನಗಿಲ್ಲ ನಾ ಯಾರಿಗಿ ಕೆಟ್ಟದು ಮಾಡಿಲ್ಲ
ಕೆಟ್ಟವರೊಬ್ಬರು ನನಗಿಲ್ಲ ನಾಯಾರಿಗಿ ಕೆಟ್ಟದು ಮಾಡಿಲ್ಲ
ಹುಟ್ಟುಸಿ ತಂದವ ತಾಬಲ್ಲ ಮನ ಮುಟ್ಟಿ ಹೇಳುವ ನಿಮಗೆಲ್ಲ ||ಪ||
ಒಳ್ಳೆವ ಕೆಟ್ಟವ ಗುರುತಾನೆ ಯಿಷ್ಟು ಸುಳ್ಳೆ ನಿಮಿತ್ಯವ ಕೊಟ್ಟಾನೆ
ಕಳ್ಳ ಸುಳ್ಳರಿಗೆ ಬಲಹಾನೆ ಗಟ್ಟಿ ಸೊಳ್ಳು ಮಾಡಿ ಹಾರಿಸಿ ಬಿಡತಾನೆ ||1||
ವಿಪರೀತ ಮಾಡುತ ನಿಂತಾನೆ
ಇಲ್ಲದ ಪರಾಧ ನಮ್ಮೆಲ್ಲ ತರತಾನೆ
ಉಪಕಾರಸ್ತರನೆಲ್ಲ ನೋಡುತಾನೆ ತಪ್ಪಗಿ
ತಪರಾಕಿ ಬಡದು ಹಸನ ಮಾಡುತಾನೆ |2||
ಮಾರಿ ತರುವನು ಮಿತಿ ಮೀರಿದಂತೆ ಭವ
ಭಾರಿಗಳು ಹಾಸ್ಯ ಮಾಡಿ ನಗುವಂತೆ
ತಾರಿಸುವ ಘಾಳಿ ಬಿಸಲು ತಗಲದಂತೆ ಮಹತ್ವ
ತೋರಿಸುವ ಶಿದ್ಧ ಜನಕ ಕಾಣುವಂತೆ ||3||

ಕಹಿ ಸವಿ ಮಾಡಬಲ್ಲ ಪ್ರಸಾದಿಗಿ
ಕಹಿ ಸವಿ ಮಾಡಬಲ್ಲ ಪ್ರಸಾದಿಗಿ|
ಸವಿ ಕಹಿಯಾಗುವದುಂಟೇನು|
ಮೈಯ ಮರದಂತ ಮಹತ್ವ ಪುರುಷನ
ಮಾಯಿ ಕಾಡುವದುಂಟೇನೊ ||ಪ||
ಬಡತನಕ ಹಿಗ್ಗು ಹಚ್ಚಿಕೊಂಬುವಗ
ಸಡಗರ ಸಂಪತ್ತು ದುಃಖವೇನೊ
ಸುಡಗಾಡಿನಲ್ಲಿ ವಸ್ತಿ ಮಾಡುವ ಪುರುಷಗ
ಗುಡಿ ಸಿಕ್ಕರ ಭಯ ಬರುವದೇನೊ ||1||
ಕಿರಿತಾನಕ ಮನಯಳಸಿದ ಪುರುಷಗ
ಹಿರಿತನ ಬಂದರ ದುಃಖವೇನೊ
ಗುರುಪಾದಕ ಗುರಿಯಿಟ್ಟ ಶರಣಗ
ತಿರಿದುಂಡರ ಲಜ್ಜ ಬಾಹೊದೇನೊ ||2||
ನಿಂದ ಕೇಳಿ ಮನಕುಂದದ ಪುರಷಗ
ವಂದಿಸಿ ಸ್ತುತಿಸಲು ದುಃಖೇನೊ
ಬಂದ ಸುಖ ದುಃಖ ವಂದೆಂದವನಿಗೆ
ಅಂದಿಂದಿಗಿ ಭವ ಉಂಟೇನೊ ||3||
ಮಾನಪಮಾನಕ ಎದರ ನಿಂತವನಿಗೆ
ಮಾನವರಂಜಿಕಿ ಉಂಟೇನೊ
ತಾನೆ ತನ್ನೊಳು ತಿಳಿದ ಸತ್ಪುರಷಗ
ನಾನಾ ಶಾಸ್ತ್ರವ ಬೇಕೇನೊ ||4||
ತತ್ವ ಐದರೊಳೈದು ಬೆರಸ ಬಲ್ಲವನಿಗೆ
ಸತ್ವ ರಜ ತಮ ಉಂಟೇನೊ
ಮಹತ್ವಕ ಸಿದ್ಧನ ಹೊಂದಿದ ಭಕ್ತಗ
ಪಾತಕ ಸೂತಕ ಉಂಟೇನೊ ||5||

ಕೂಡಿ ಅಗಲದಂತ ಸ್ನೇಹ ಮಾಡಿದೆ ತಂಗಿ
ಕೂಡಿ ಅಗಲದಂತ ಸ್ನೇಹ ಮಾಡಿದೆ ತಂಗಿ| ಕೇಳು ಸಖಿಯೇ
ಗಾಡಿಕಾರನು ಮಂತ್ರ ಮಾಡಿ ಮನ ಶಳದಾನು| ಕೇಳು ಸಖಿಯೇ
ಮಾಡಲಿನ್ನೇನವ್ವ ಕೂಡಿದೆ ಅವನೊಳು| ಕೇಳು ಸಖಿಯೇ
ನಾಡೆಲ್ಲ ಬೆಳಗಾಯಿತು ನಾಚಿಕಿ ಅಳದೊಯಿತು| ಕೇಳು ಸಖಿಯೇ ||ಪ||
ಸ್ನಾನ ಮಾಡಿಸಿದ ಸುಜ್ಞಾನ ತೀರ್ಥಕ ವೈದು| ಕೇಳು ಸಖಿಯೇ
ನಾನಾ ರೋಗಂಗಳು ತಾನೆ ಬಿಟ್ಟೋದವು| ಕೇಳು ಸಖಿಯೇ
ನಾನಿನೆಂಬುವದೆರಡೊಂದಾಗಿ ತೋರಿತು| ಕೇಳು ಸಖಿಯೇ
ಏನೇನು ಇಲ್ಲದ ತಾನೆ ತಾನಾಯಿತು| ಕೇಳು ಸಖಿಯೇ ||1||
ಪಾಡು ಇಳಸಿ ಹಣ್ಣು ಮಾಡಿದಾಕ್ಷಣದೊಳು| ಕೇಳು ಸಖಿಯೇ
ಕೂಡಿ ಉಣಸಿಕೊಂಡ ಸವಿಯಿತ್ತು ಸಮರಸ| ಕೇಳು ಸಖಿಯೇ
ನಾಡಿನೊಳಿವನಂತ ಜೋಡೆಲ್ಲಿ ಕಾಣೆನು| ಕೇಳು ಸಖಿಯೇ
ಬೇಡಿದ್ದು ಕುಡುವನು ಆಡಿದ್ದು ತಪ್ಪಾನು| ಕೇಳು ಸಖಿಯೇ ||2||
ಉಟ್ಟು ಕಳಿಯದಂತ ಧಟ್ಟಿ ಪಿತಾಂಬರ| ಕೇಳು ಸಖಿಯೇ
ಇಟ್ಟು ತೆಗಿಯದಂತ ಪೆಟ್ಟಿಗಿ ವಸ್ತವ| ಕೇಳು ಸಖಿಯೇ
ಎಷ್ಟು ಹೇಳಿ ಅಷ್ಟವರಣ ಅಂಗಾದದ್ದು| ಕೇಳು ಸಖಿಯೇ
ಇಷ್ಟಾರ್ಥ ಸಿದ್ಧಿ ಎದಿರಿಲಿಟ್ಟು ತೊರಿಸುವನು| ಕೇಳು ಸಖಿಯೇ ||3||
ಕೊಟ್ಟು ಬೇಡದಂತೆ ಉದ್ದಿಮಿ ಮಾಡೆಂದ| ಕೇಳು ಸಖಿಯೇ
ಮುಟ್ಟದೆ ಬಸುರಾಗಿ ಮುಕ್ತಿ ಹಡಕೊಳ್ಳೆಂದ| ಕೇಳು ಸಖಿಯೇ
ಹುಟ್ಟಿನ ಕೂಸಿನ ತೊಟ್ಟಿಲಲ್ಲದೆ ಕಟ್ಟಿ| ಕೇಳು ಸಖಿಯೇ
ಮುಟ್ಟಿ ಮುದ್ದಾಡಿಸಿ ಜೋಗುಳ ಪಾಡೆಂದ| ಕೇಳು ಸಖಿಯೇ ||4||
ಯಾರಿಗೆ ದೊರಕಾದು ಈರೇಳು ಭುವನದಿ| ಕೇಳು ಸಖಿಯೇ
ಮೀರಿದ ಘನವಸ್ತು ತಾನೆ ಕೈಸಾರಿತ್ತು| ಕೇಳು ಸಖಿಯೇ
ಮೇರು ಮಂದಿರವಾಗಿ ಧೀರ ಸಿದ್ಧೇಶನ| ಕೇಳು ಸಖಿಯೇ
ಆ ಹರನೊಳಗಾದೆನು ಮೂರು ಬಾಗಿಲ ಮುಚ್ಚಿ| ಕೇಳು ಸಖಿಯೇ ||5||

ಖೂನ ಹೇಳುವೆನು ಕೇಳೊಂದು
ಖೂನ ಹೇಳುವೆನು ಕೇಳೊಂದು|
ಧ್ಯಾನ ಮಾಡು ನಿತ್ಯ ಗುರುವಿಂದು| ಮಾಡು ನಿತ್ಯ ಗುರುವಿಂದು ||ಪ||
ನಾನಾ ಜನ್ಮಕಧಿಕ ನರಜನ್ಮ|
ಜ್ಞಾನಮಾರ್ಗ ಉಂಟು ತಿಳಿತಮ್ಮಾ ಮಾರ್ಗವುಂಟು ತಿಳಿತಮ್ಮ ||1||
ದಾನ ಧರ್ಮ ಪರರಿಗುಪಕಾರ
ಅನುದಿನ ಮಾಡೊ ಭಕ್ತಿ ಮನಪೂರಾ| ಮಾಡೊ ಭಕ್ತಿ ಮನಪೂರಾ||2||
ಗುರು ಹಿರಿಯರನ ಕಂಡು ಶಿರ ಬಾಗೋ
ಧರಿಯೊಳು ಹತ್ತು ಜನಕಬೇಕಾಗೊ| ಹತ್ತು ಜನಕ ಬೇಕಾಗೊ ||3||
ದೇವ ಭಕ್ತರಲ್ಲಿಗೆ ಹೋಗೊ
ಸೇವಾ ಮಾಡಿ ಅವರ ತೊತ್ತಾಗೊ| ಮಾಡಿಯವರ ತೊತ್ತಾಗೋ ||4||
ಸಿದ್ಧ ಸಿದ್ಧಯೆಂದು ನೀ ಕೂಗೋ
ಸದ್ಗತಿ ಮಾರ್ಗ ಹೊಂದಿ ಭವನೀಗೊ| ಮಾರ್ಗ ಹೊಂದಿ ಭವನೀಗೊ ||5||

ಗಂಗಾಧರನೆ ನಿಮ್ಮ ನಂಬಿದೆ ಅಂತರಂಗ ಸಾಕ್ಷಿ ಮಾಡಿದೆ
ಗಂಗಾಧರನೆ ನಿಮ್ಮ ನಂಬಿದೆ|
ಅಂತರಂಗ ಸಾಕ್ಷಿ ಮಾಡಿದೆ ||ಪ||
ಬೇಡಿಕೊಂಬೆ ನಿಮ್ಮ ಚರಣ ಕಮಲಕ್ಕೆ
ಅಮೃತ ನೀಡೊ ಗುರುವೆ ಉಣಲಿಕ್ಕೆ
ನೀಡೊ ಗುರುವೆ ಉಣಲಿಕ್ಕೆ ||1||
ವ್ಯರ್ಥ ಮಾಡುಬೇಡ ಎನ್ನ ದೇಹ
ಸಾರ್ಥಕ ಮಾಡೊ ಜನ್ಮ ಗುರುರಾಯಾ
ಮಾಡೊ ಜನ್ಮ ಗುರುರಾಯಾ ||2||
ಸಿದ್ಧಲಿಂಗ ಮದನ ಸಂಹಾರ
ಬಸವಗ ಸಿದ್ಧಿಯಾಗೊ ದಯಪೂರಾ
ಸಿದ್ಧಿಯಾಗೊ ದಯಪುರಾ ||3||

ಗುರುವೆ ತಂದಿತಾಯಿ ಗುರುವೆ ಬಂಧು ಬಳಗಾ
ಗುರುವೆ ತಂದಿತಾಯಿ| ಗುರುವೆ ಬಂಧು ಬಳಗಾ
ಗುರುವೆ ಸಕಲೈಶ್ವರ್ಯ| ಗುರುವಿನ ನೆನಪೆ ಕಾರಣ ಕಾರ್ಯ ||ಪ||
ಗುರು ಮುಖ್ಯವೆಂಬುವರು| ಬಸವಾದಿ ಪ್ರಮಥರು
ಅರುವಿಡಿದು ಬಂದವರು| ಗುರುಕರುಣ ಪ್ರಸಾದ ಕೊಂಬುವರು ||1||
ಭಕ್ತಿ ಜ್ಞಾನ ವೈರಾಗ್ಯ| ಬಸವನೆ ಸೌಭಾಗ್ಯ
ಮುಕ್ತಿ ಪುರುಷ ಯೋಗ್ಯ| ನಿಜವಿರಕ್ತ ಪ್ರಭುವಿನಾಗ್ಯ ||2||
ಗುರುಪುತ್ರರಾದವರು| ನೆರೆ ನಂಬಿಕೊಂಡಿಹರು
ಸಿರಿ ಭೋಗ ಬಯಸಾರು| ಗುರುವಿನ ಮರಿಯದೆ ನೆನೆಸುವರು ||3||
ಕುಲಕೊಬ್ಬ ಶರಣಾರ| ಕೂಡಿ ಬಳಸುವ ಧೀರಾ
ಮಲಹರನವತಾರ| ಮುಕ್ತಿಫಲ ಕೊಡುವನು ಸಾರ ||4||
ಗುರುಸಿದ್ಧ ದಯಾಳ| ಮಾಯಿಕೊಳ ಹಾಳ
ಯಿರುವ ಮೀರಿದ ಸ್ಥಳ| ಕೂಡಿ ಮೆರೆವ ಭಕ್ತಿಯೊಳ ||5||

ಗುರುವಿನ ಭಜಿಸಿ ಕಾಲಭಯ ಕಳಿಯೊ
ಗುರುವಿನ ಭಜಿಸಿ ಕಾಲಭಯಕಳಿಯೊ
ಗುರುತಾದ ಮಾತು ಮನಸಿಗೆ ತಿಳಿಯೊ| ಮಾತು ಮನಸಿಗೆ ತಿಳಿಯೋ||ಪ||
ನರನೆ ಮಾಯ ಫಾಸಿ ಸಂಸಾರ
ಅರಿನೀರ ಗುರಳಿ ದೇಹ ಅಸ್ಥಿರ| ನೀರಗುರಳಿ ದೇಹ ಅಸ್ಥಿರ ||1||
ಸ್ಥಿರವಹ ಪದವಿ ಪಡಿಯೊ ಸುಖಸಾರ
ಅಸ್ಥಿರ ನಂಬಬೇಡ ಯಮ ಘೋರ| ನಂಬಬೇಡ ಯಮಘೋರ ||2||
ಗುರುಸಿದ್ಧ ನಾಮಾಮೃತ ಫಲ ತಮ್ಮ
ಮರಿಯದೆ ಸವಿಯೊ ನೀನೆ ಪರಬ್ರಹ್ಮ| ಸವಿಯೋ ನೀನೆ ಪರಬ್ರಹ್ಮ ||3||

ಗುರುವಿನ ಭಜನಿ ಬಿಡದೆ ಮಾಡಣ್ಣ
ಗುರುವಿನ ಭಜನಿ ಬಿಡದೆ ಮಾಡಣ್ಣ
ಭವ ಪರಿಹರಿಸಿ ಬಿಡುವ ಮುಕ್ಕಣ್ಣ| ಹರಿಸಿ ||ಪ||
ಕರಮನ ಭಾವ ಶುದ್ಧ ಮೊರೆಯಿಟ್ಟು
ಪರಿಪರಿ ಭಜಿಸಿ ಕೇಳೊ ಕಿವಿಕೊಟ್ಟು| ಭಜಿಸಿ ||1||
ಮನಸಿಗೆ ತಂದು ನೋಡೊ ಸುಖವುಂಟು
ಕನಸೆಂದರಿಯೊ ಕಣ್ಣಿಗೆ ಕಾಣಷ್ಟು| ಆರಿಯೊ ||2||
ದೇಹ ಭೋಗದಾಸಿ ಬಿಟ್ಟು ಕೊಟ್ಟು
ನ್ಯಾಯದಿ ಸಿದ್ಧವೇಷ ನೀ ತೊಟ್ಟು| ಸಿದ್ಧ ||3||

ಗುರುವೆ ನೀ ಗತಿಯೆಂದು ಮೊರೆಹೊಕ್ಕೆ ನಿಮ್ಮನ್ನ
ಗುರುವೆ ನೀ ಗತಿಯೆಂದು| ಮೊರೆಹೊಕ್ಕೆ ನಿಮ್ಮನ್ನ
ಪರಿಹರಿಸು ಮಾಯಾನ| ಕರಕೊ ಕರಪಿಡಿದು ಸಣ್ಣವನಾ ||ಪ||
ಅಂಸಿಕ ನಿಮ್ಮವಾ| ಸಂಸಾರ ದುಃಖವ
ಸಂಸಾರ ಬಾಧಾವ| ಯಿಂತ ಅವಸರ ಯಿಡುವರೆ ದೇವಾ ||1||
ಆಳಿನ ಅಭಿಮಾನ| ಆಳ್ವೋಡಿಯರಿಗೆಂದು ಹೇಳುವರಂದಿದು ||2||
ಪ್ರಮಥರು ಕೇಳರೆ ನಿಮಗಿಂದೊ
ಬಿರುದುಳ್ಳೊ ಗುರುಸಿದ್ಧ| ಕರುಣಿಸು ಸೋತಿದ್ದಾ
ಚರಣ ಕಮಲಕ ಶುದ್ಧ| ಮೂರನು ಪಪ್ಪಿಸಿ ಬಿಟ್ಟಿದ್ದಾ ||3||

ಗುರುವೆ ನೀ ಬೇಗನೆ ಮೊರೆ ಕೇಳೊ
ಗುರುವೆ ನೀ ಬೇಗನೆ ಮೊರೆ ಕೇಳೊ
ವ್ಯರ್ಥ ಹರದು ಹೋಗತಿನಿ ಹಿಡಕೊಳೊ
ಅರವು ತೊರದು ಅಸಿಗುಣದೊಳು
ಮುಕ್ತಿದೊರಕದು ಬಿದ್ದೆ ಮಾಯಿ ಬಲಿಯೋಳು ||ಪ||
ಗುರುವೆನೀ ಹಾಕಿದ ಬಲಿವೆಂದು|
ನಾ ಹಾಯಿಕೊಂಡೆನು ಮತ್ತೊಂದು
ಘೋರದುಃಖ ಸಂಸಾರ ಬಂದು
ತಾನೆ ಕೊರಳಿಗಿ ಬಿದ್ದಿತು ಬಿಡೆನೆಂದು ||1||
ಮಾಯ ಮೋಹಕ ಬಿದ್ದು ಮರುಳಾದೆ|
ಅಪಾಯ ಬರುವದು ಮುಂದ ತಿಳಿದ್ಹೊದೆ
ಆಯಸ ಬಹಳ ಭವಕ ಗುರಿಯಾದೆ ಗುರು
ರಾಯ ತಪ್ಪಿಸು ನಿಮ್ಮ ಮಗನಾದೆ ||2||
ಆಯಸ ಬಹಳ ಭವಕ ಗುರಿಯಾದೆ ಗುರು
ಸಿದ್ಧ ತೊಡಿಯೊ ಮೊದಲದರುಷ್ಟ
ಯಿದ್ದೆನು ಸೇವಕ ಗಟ್ಟಿಮುಟ್ಟ ಮಾಯ
ವದ್ದೆನು ಆವಗ ಮನಮುಟ್ಟ ||3||

ಗುರುವೆ ನಿನ್ಹೊರತು ಯಾರಿಲ್ಲ
ಗುರುವೆ ನಿನ್ಹೊರತು ಯಾರಿಲ್ಲ ಗೊತ್ತು ಅರಿಯದೆ ನನ್ನವರಿವರೆಂದೆನಲ್ಲ
ಆರು ವ್ಯಳ್ಯಕ ಆಗಲಿಲ್ಲಾ ನೆರದವ್ರ್ಹರದ್ಹೊದರೊಬ್ಬರಿರಲಿಲ್ಲ ||ಪ||
ತಂದಿ ತಾಯಿ ಬಂಧು ಬಳಗ ನೀನೆಯಂದು ನಿಶ್ಚೈಸಿದೆ ಯನ್ನ ಮನದೊಳಗೆ
ಹೊಂದಿಕೊಂಡಿರುವೆ ಕೈಕೆಳಗ ಬಂದು ಕರುಣಿಸು ಗುರುವೆ ನೀ ಯಿಷ್ಟರೊಳಗ ||1||
ಸುಖಯಿದ್ದರಿರುವೊರೆಲ್ಲಾರು ಯಿಂತ ದುಃಖದಲ್ಲಿ ಅವರ್ಯಾಕ ನನ್ನ ಸೇರ್ಯಾರು
ಪಕ ಪಕ ಕಂಡು ನಗುವರು ನಿಂದ ಮುಖರಾಗಿ ಬಹುತೇಕ ಅಡಿಕೊಂಬುವರು ||2||
ಹಗಲಿರುಳ ಭಜಿಸುವೆ ನಿನ್ನ ತೊತ್ತಿನ ಮಗನೆಂದು ಕರೆದೆತ್ತಿಕೊಳ್ಳಯ್ಯಯನ್ನ
ಯುಗ ಯುಗದಿ ಬಿಟ್ಟಿಲ್ಲ ನಿನ್ನ ಕಡಿಗೆ ತಗಿದು ಆಳಲಿಬೇಕು ಗುರುಶಿದ್ಧಯೆನ್ನ ||3||

ಗುರುವೆ ನಿನ್ನ ಪಾದದ ಧ್ಯಾನ ಮರಿಯದಂತೆ ಮಾಡು
ಗುರುವೆ ನಿನ್ನ ಪಾದದ ಧ್ಯಾನ ಮರಿಯದಂತೆ ಮಾಡು ಯನ್ನನ
ಪರಮ ಪುರುಷ ತುಂಬಿ ತುಳುಕಿದ್ದೆ ಖೂನ
ಯಿರುವೆ ನಿಮ್ಮ ಸೇವದೊಳನುದಿನ ||ಪ||
ಮರವಿಯಂಬೊ ಮಾಯದ ಪಾಶಿ
ಉರಲು ಬಿದ್ದಿತು ಬಿಡದು ಅತಿ ಆಶಿ
ಶರೀರ ಸುಖ ದುಃಖ ಭೋಗ ನೆನನೆನಸಿ
ಅರವು ತೋರದು ಆಗುವೆ ಘಾಸಿ ||1||
ಸೇವೆ ತಪ್ಪಿಸಿಕೊಂಡಿರ್ದಿರಾಗಿ
ಝಾವ ಅಗಲದು ವಿಧಿ ಮಾಯಿ ಕಾಗಿ
ಯಾವ ಜನ್ಮದಿ ಗತಿಯಿಲ್ಲ ವಳಗಾಗಿ
ದೇವ ಇದೆ ಜನ್ಮ ಹಿಡಿ ಕಯ್ಯ ಬೇಗಿ ||2||
ಅಂಶಿ ಭೂತ ನಿಮ್ಮವನೆಂದು
ಅವಸರ ಹೇಳುಮೆಯಿಹದಲ್ಲಿ ನಿಂದು
ಮಾಸ ಪಿಂಡದ ವರ್ತನಿ ಬಿಡನೆಂದು
ಸಂಶಯವಿಲ್ಲದೆ ಸಿದ್ಧ ಭಜಿಸುವೆಯೆಂದು ||3||

ಗುರುವೆ ನಿನ್ನಗ ಬಿಟ್ಟುದಲ್ಲ ನಿನ್ನ ನೆರೆ ನಂಬಿಕೊಂಡವರು
ಗುರುವೆ ನಿನ್ನಗ ಬಿಟ್ಟುದಲ್ಲ ನಿನ್ನ
ನೆರೆ ನಂಬಿಕೊಂಡವರು ಮಾಡಿದ್ದುದೆಲ್ಲ ||ಪ||
ಭಕ್ತ ದೇಹಕ ದೇವ ನೀನು ಮೂಲ
ಭಕ್ತಿ ಪುರುಷ ನಿನಗರಿವಲ್ಲದ್ದೆನು
ಶಕ್ತಿ ಪುರುಷ ನಿನಗರಿವಲ್ಲದ್ದೆನು
ಮುಕ್ತಿದಾಯಕ ಕಾಮಧೇನು
ಅಶಕ್ತ ನಿನ್ನಗಲ್ಲದೆ ಯಿರುವೆನು ನಾನು ||1||
ಕಂಭ ಸೂತ್ರದ ಬೊಂಬಿನಾನು ಘಾಳಿ
ತುಂಬಿ ಕುಣಿಸ್ಯಾಡುವಿ ಜಗವೆಲ್ಲ ನೀನು
ನಂಬಿ ಕೊಂಡಿರ್ದಿಯನ್ನನೂ ನಿನ್ನ
ಚಿಂಬತ್ತಿ ಬರುವೆನು ಕರದಲ್ಲಿ ನಾನು ||2||
ನಾನೀ ಯಂಬುವ ಭೇದವಿಲ್ಲ ನೀನೆ
ಖೂನಕ್ಕ ತಂದಿಟ್ಟಿ ನಾನೇನು ಬಲ್ಲ
ಮಾನಾಪಮಾನ ನಂದಲ್ಲ ಮಹ
ದಾನಿ ಶ್ರೀ ಗುರು ಸಿದ್ಧಲಿಂಗ ತಾ ಬಲ್ಲ ||3||

ಗುರುವಿನ ಬೋಧ ಪರಮ ವಿನೋದ
ಗುರುವಿನ ಬೋಧ ಪರಮ ವಿನೋದ
ಮರಿಯಾದೆ ಜಪಿಸಲು ದೊರಿವದು ಸ್ವಾದ ||ಪ||
ಗುರುಮಂತ್ರ ಮೂಲ ಶರಣರ್ಸಕಿಲ
ಅರಿವಿನ ಆಲಯ ಕರುಣ ಕೃಪಾಲ ||1||
ಹರನವತಾರ ನರಜನ್ಮ ಉದ್ಧಾರ
ನೆರೆ ನಂಬಿದವರಲ್ಲಿ ಇರುವ ಮನೋಹರ ||2||
ದೀಕ್ಷಾಧಿಕಾರಿ ಶಿಕ್ಷಪರಿ ಪರಿ
ಮೋಕ್ಷದಾಯಕ ಸಿದ್ಧ ಸಾಕ್ಷಾತ್ ಆಧಾರಿ ||3||

ಗುರುವೆ ನೀ ಗತಿಯಂಬ ಮಂತ್ರ ಅಚ್ಚೊತ್ತಿರೆ ಕೇಳು ಸಖಿಯೇ
ಗುರುವೆ ನೀ ಗತಿಯಂಬ ಮಂತ್ರ ಅಚ್ಚೊತ್ತಿರೆ| ಕೇಳು ಸಖಿಯೆ
ಹರಿವದು ಭವಪಾಶ ದೊರಿವದು ನಿಜ ಮುಕ್ತಿ| ಕೇಳು ಸಖಿಯೆ ||ಪ||
ಗುರುವೆ ಕಾರಣಕರ್ತ ಗುರುವೆ ಪರ ಬ್ರಹ್ಮನು| ಕೇಳು ಸಖಿಯೆ
ಗುರುವೆ ಸಕಲೈಶರ್ಯ ಭಕ್ತಿ ಜ್ಞಾನ ವೈರಾಗ್ಯ| ಕೇಳು ಸಖಿಯೆ ||1||
ಗುರುವೆ ಮಂತ್ರಕ ಮೂಲ ಸ್ವಾತಂತ್ರ ಧೀರನು| ಕೇಳು ಸಖಿಯೆ
ಗುರುವೆ ಅಷ್ಟಾವರ್ಣ ಯಿಷ್ಟಾರ್ಥ ಸಿದ್ಧಿಯು| ಕೇಳು ಸಖಿಯೆ ||2||
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ| ಕೇಳು ಸಖಿಯೆ
ಶಕ್ತಿ ಸಹವಾಗಿ ಶರಣೈಕ್ಯ ಸ್ಥಲವಿದೆ| ಕೇಳು ಸಖಿಯೆ ||3||
ಯಿಂತಪ್ಪ ಮಂತ್ರದ ಮಹತ್ವಿ ಯೆಷ್ಟೆಳಲಿ| ಕೇಳು ಸಖಿಯೆ
ಅಂತಿಂತು ಯಣಿಕಿಲ್ಲ ಸಂತೋಷ ಘನಮಕ್ಕು| ಕೇಳು ಸಖಿಯೆ ||4||
ಪರಮ ಹರುಷದಿಂದ ಪಠಿಸಲು ನಿಜ ಸುಖ| ಕೇಳು ಸಖಿಯೆ
ಪರಿಪೂರ್ಣ ಜ್ಞಾನದ ಪಥವಿದು ಪರಿಣಾಮ| ಕೇಳು ಸಖಿಯೆ ||5||
ಗುರು ವಚನಾಮೃತ ಕರಮನ ಭಾವದಿ| ಕೇಳು ಸಖಿಯೆ
ಸುರಿಯಲು ಶುಭಮಕ್ಕು ಸ್ಥಿರಂ ಜೀವಿ ಮಾಳ್ವದು| ಕೇಳು ಸಖಿಯೆ ||6||
ಆರು ಪ್ರಣಮದ ನೆಲೆ ಯಾರು ಅರಿಯರು ತಂಗಿ| ಕೇಳು ಸಖಿಯೆ
ಮಾರಹರಿ ಶರಣರು ಮನಗಂಡರಲ್ಲದೆ| ಕೇಳು ಸಖಿಯೆ ||7||
ಗುರುವೆ ಗತಿ ಚೈತನ್ಯ ಸಕಲ ಲೋಕಾಧಾರಿ| ಕೇಳು ಸಖಿಯೆ
ಮರಿಯಾದೆ ಭಜಿಸುತ ನರೆ ನಂಬು ಅನುದಿನ| ಕೇಳು ಸಖಿಯೆ ||8||
ಗುರುವು ಆದವ ತಾನೆ ಲಿಂಗವಾದವ ತಾನೆ| ಕೇಳು ಸಖಿಯೆ
ನರ ಸುರರೊಂದಿತ ಶಿದ್ಧ ಜಂಗಮ ತಾನೆ| ಕೇಳು ಸಖಿಯೆ ||9||

ಗುರುವೆ ತಾಯಿ ತಂದಿ ಗುರುವೆ ಬಂಧು ಬಳಗ
ಗುರುವೆ ತಾಯಿ ತಂದಿ ಗುರುವೆ ಬಂಧು ಬಳಗ
ಗುರುವೆ ಸಕಲೈಶ್ವರ್ಯವೊ ತಮ್ಮ
ಗುರುವಿನ ಹೊರತಿಲ್ಲ ಗುರುಪುತ್ರ ತಾ ಬಲ್ಲ
ನರ ಕುರಿಗಳೆಂತರಿವರೂ ತಮ್ಮ ||ಪ||
ಗುರುಪಾದದಲಿ ಚಿತ್ತು ಚರಣ ರಕ್ಷಿಯ ಪೊತ್ತು
ಧರಣಿಯೊಳು ಮೆರೆವುತಿರ್ದೆ ತಮ್ಮ
ಉರಿಉಂಡ ಕರ್ಪುರದ ಗಿರಿಯಂತೆ ಶೋಭಿಸುತ
ನಿರ್ಮಳ ಮನಸಿನಲ್ಲಿ ತಮ್ಮ ||1||
ಶರೀರ ತಾಳಿದಡೆನು ಸುಖ ದುಃಖವೆರಡಿಲ್ಲ
ನರಜನ್ಮದೊಳಧಿಕವೊ ತಮ್ಮ
ಪರಮ ಸಂತೋಷ ರಸ ಹೊರಸೂಸಿ ಚಲ್ಲುತಲಿ
ಕುರುಹು ನಿರ್ವಯಲಾಪುದೂ ತಮ್ಮ ||2||
ಅಂಗಲಿಂಗವೆರಡು ಸಂಗಮಾಗಿರಲಿಕ್ಕೆ
ಸಂಗಯ್ಯನೆಂಬ ನಾಮ ತಮ್ಮ
ಮಂಗಲಮೂರ್ತಿ ಮಹಾಲಿಂಗ ಜಂಗಮ ಸಿದ್ಧ
ಸಂಗನ ಬಸವಣ್ಣನೂ ತಮ್ಮ ||3||

ಗುರುವೆ ನಿಮ್ ಕರುಣಾಮೃತವ ನೀವೆಯನ್ನು
ಗುರುವೆ ನಿಮ್ ಕರುಣಾಮೃತವ ನೀವೆಯನ್ನು
ಕರದು ಕರವ ಪಿಡಿದು ಶಿರದ ಮೇಲೆ ಹಸ್ತಯಿಟ್ಟಿರಲಾದೆ ||ಪ||
ಅಂದೆ ನಿಮ್ಮ ಸೇವಾದಲ್ಲಿ ಹೊಂದಿಕೊಂಡು ಯಿರ್ದೆನಯ್ಯಾ
ಬಂದ ಸುಖ ದುಃಖ ನಿಮ್ಮದೆಂಬೆ ಕೀರ್ತಿ ಅಪಕೀರ್ತಿ ||1||
ಕಂಬಸೂತ್ರ ಬೊಂಬಿಯಂತೆ ಅಂಬಲಿಯನು ತುಂಬಿಯನ್ನ
ಕುಂಭಿಯೊಳ್ಳುಣಿಸುತಿರ್ಪಿ ನಿಮ್ಮ ಲೀಲೆಯಾ ||2||
ಕೊಂಬು ಹೊಲಿಯಂದಾದರೇನು ಬಿರಿದು ಹೊಲಿಯಂದಾಗ ಬಹುದೆ
ಶಂಭು ಭಕ್ತ ಭೀಮಾನಿಯಂಬೊ ಬಿರಿದು ಸಾರಿತ್ತು ||3||
ತೊತ್ತು ಸೇವದಲ್ಲಿ ನಿತ್ಯ ಹೊತ್ತು ಗಳೆಯುತಿರ್ದೆನಯ್ಯ
ಸೊತ್ತು ಚಿತ್ತಾನಂದ ಸುಕವು ಕೊಟ್ಟಿರಲ್ಲಾದೆ ||4||
ಆವ ಚಿಂತಿಯಲ್ಲಿ ಮನಸು ಯಳೆಸದಂತೆ ಭ್ರಾಂತಿ
ಭಾವದೊಡನೆ ಕೂಡಿ ಯಿತ್ತ ಬರ್ಪದೂ ||5||
ನಿಮ್ಮ ನ್ಹಾಡಿ ಹರಸುತಿರ್ದೆ
ನಿಮ್ಮ ಧರ್ಮಯಂದು ಬಿಡದೆ ಭಜಿಸುತಿರ್ಪೆನೂ ||6||
ಎತ್ತ ಹೋದರೆನ್ನ ನೀವು
ಎತ್ತು ಮಾಡಿಕೊಂಡು ಮೇಲ
ಹತ್ತಿ ಹಲವು ದೇಶವೆಲ್ಲ ಚರಿಸುತಿರ್ಪಿರಿ
ಯಾವ ಜನ್ಮದಲ್ಲಿ ನೀವು ಯನ್ನ ತಂದಿಯಾದಿರಾಗಿ ||7||
ದೇವಭಕ್ತನೆಂಬೊ ನಾಮ ಆಯಿತಲ್ಲದೆ
ಯಿದ್ದು ಇಲ್ಲದ್ಹಾಂಗೆ ಬಸವ
ಸಿದ್ದಲಿಂಗನೊಳೈಕ್ಯವಾಗಿ
ಸುದ್ದಿ ಹೇಳುತಿರ್ಪ ಮಧ್ಯ ಮಾಯ ಸ್ಥಿತಿಗತಿಯಾ ||8||

ಗುರು ಉಂಡು ಉಳಿದ ಪ್ರಸಾದ
ಗುರು ಉಂಡು ಉಳಿದ ಪ್ರಸಾದ
ಪರಮ ಹರುಷದಿ ಕೊಳ್ಳೋ ಫಲವಾದ
ಪರಿಪೂರ್ಣ ಜ್ಞಾನ ವಿನೋದ ಮುಕ್ತಿ
ದೊರಿವದು ಸತ್ಯ ನಿಜ ಬೋಧ ||ಪ||
ಗುರು ಮುಖ್ಯವೆಂದು ತಿಳಕೊಂಡು ಅವರು
ಬರುವ ಹಾದಿಯ ಕಾಯಿದು ಕೊಂದು
ಕರಶಿರ ಮನ ಬಾಗಿ ಕೊಂಡು ಭಕ್ತಿ
ಪರನಾಗಿ ದೃಷ್ಟಿಯಿಟ ಕೊಂಡು ||1||
ಗುರುವಿನಲ್ಲಿಯು ಕರುಣ ಹುಟ್ಟಿ ಕಣ್ಣು
ತೆರದು ನೋಡುವ ದಯ ದೃಷ್ಟಿ
ಗುರು ಪುತ್ರನಾದಿ ಭವಗೆಟ್ಟಿ ಪ್ರಮಥರು
ನೆರದು ಕೊಂಡಾಡುವದು ಘಟ್ಟಿ ||2||
ಉರಿಉಂಡ ಕರ್ಪುರದಂತೆ ಕತ್ತಲಿ
ಹರಿವದು ನೀ ಅದರಂತೆ
ನರನೊಳು ನರನ ಕಂಡಂತೆ ಸಿದ್ಧ
ಮರಿಮಾಡಿ ಇಡುವ ತನ್ನಂತೆ ||3||

ಗಂಡನ ಪುಣ್ಯವನು ಉಂಡುಟ್ಟು ಸುಖ ಬಟ್ಟೆ
ಗಂಡನ ಪುಣ್ಯವನು| ಉಂಡುಟ್ಟು ಸುಖ ಬಟ್ಟೆ
ಗಂಡು ಹೆಣ್ಣು ಮಕ್ಕಳ ಹಡದೆನವ್ವಾ
ಷಂಡನಂತ ಅಲ್ಹ್ಯಾಂಗೆ| ಪುಂಡನಂತಲ್ಲಿ ಹ್ಯಾಂಗೆ
ಗಂಡು ಹೆಣ್ಣು ತಾನೆ ನಾನಾದೆನೂ ||ಪ||
ತನು ತ್ರಯಕ ಗುರುವಾಗಿ
ಮನ ತ್ರಯಕ ಲಿಂಗಾಗಿ
ಧನ ತ್ರಯಕ ಜಂಗಮಾಕೃತಿಯ ತಾಳಿ
ತನು ಮನ ಧನ ಮೂರು
ಅನುಭವಿಸಿ ದಾಕ್ಷಣಕೆ
ಜನನ ಮರಣದ ಭೀತಿ ಹಾರಿತವ್ವಾ ||1||
ಭಕ್ತಿ ಜ್ಞಾನ ವೈರಾಗ್ಯ| ಯಂಬ ಭಾಗ್ಯವ ತಂದು
ಯುಕ್ತಿಯಿಂದಿಡು ಮುತ್ತು ಮೂಗಿಗೆಂದ
ವ್ಯಕ್ತ ಹಾಸಿಕಿ ಮಾಡಿ
ಮುಕ್ತಿ ಪುರುಷನ ಕೂಡಿ
ಶಕ್ತಿ ಸಮರಸ ಭಾವ ನಿತ್ಯ ಸೇವಾ ||2||
ಅರಿವು ಮರವನು ಮೀರಿ
ಪರವಶದೊಳಗಾದೆ
ಹರುಷಾಬ್ದಿಯಂಬ ಜಲ ತುಂಬಿ ತುಳುಕಿ
ಗುರುಸಿದ್ಧ ಲಿಂಗನ
ಶರೆ ಹಿಡಿದು ಬಿಡೆನವ್ವಾ
ಕರಪುರದ ಗಿರಿ ಉರಿಯ ಉಂಡ ಪರಿಯಾ ||3||