Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

6 ಬಸವಣ್ಣ ಸ್ವಾಮಿಯವರ ತತ್ವಪದಗಳು

ಭಾಗ-6: ಬಸವಣ್ಣ ಸ್ವಾಮಿಯವರ ತತ್ವಪದಗಳು
1
ಪಾಲಿಸಯ್ಯ

ನೀ ಕೈಯ ಬಿಟ್ಟರಿನ್ಯಾತಕೆನಗೆ ಸುಖಾ |
ಗೋಕುಲ ಗಣನಾಥ…|| ಸಾಕು ಸರ್ವ
ದುರಾಧಿ ಸ್ನೇಹವು ನೂಕಿ ನಿಮ್ಮ ಶ್ರಮವ ಮಾಡಯ್ಯಾ |
ಯಾಕುಲಾಂತ ಪರಮಾತ್ಮ ಸತ್ಯಸಲೋಕ ಸರ್ವರು
ಏಕ ಭೀಮ ||ಪ||
ಸಮಜಾನ ಭೀತಿಯಿಂದಮಿತ ದುಃಖವನ್ನುಂಡೆ |
ಭ್ರಮಿಸಿದೆನು ಶ್ರೀ ಹರಿಯೇ | ಸಮನ ಸತ್ಯ ಸಮಾಜ
ಬಹುಮನೆ ಭ್ರಮರ ಕೀಟ ನ್ಯಾಯ ಸಮಚನೇ |
ಅಮರ ಗುಣಕಟ ಕಾಮಿನಿಯ ಸದ್ ವಿಮಲ
ಚಂತ ವಿಶಾಲ ಭೂಪ ||1||ಅಷ್ಟಾ ಪ್ರಣವಂಗಳ ಪ್ರತಿಷ್ಠಿಸಿ ಪರತತ್ವ
ಸೃಷ್ಠಿಗೋಡೆಯನು ನೀನು | ಕಷ್ಟವಳಿದು ಕಪಟಾಂ
ತಕನೆ ಶ್ರೀಭ್ರಷ್ಟ ಸಂಗವ ಬಿಡಿಸಿ ಪಾಲಿಸಯ್ಯ |
ಅಷ್ಟದೈವವೆ ಕೃಷ್ಣನಾಮ ಸೃಷ್ಟಿ ಶ್ರೀಗುರು
ತೊಲಸಿ ರಾಮ ||2||

2
ನಾನಾ ದೇವರ ತಿರುಗಿ

ಓಂ ಶ್ರೀ ಗುರುವೇ ನಮಃ | ನಿರಾಕಾರ ವಸ್ತುವೇ ನಮಃ |
ಪರಮಾತ್ಮನೇ ….ಏ….ಏ ||
ಎಲೆಯ ಮೇಲಿದ್ದ ಅನ್ನವನು ಬಿಟ್ಟು || ಇಂಟೆಯ
ಕಟ್ಟಿದಾತು ನಾಯಿಯಾಗಿ ತಿರುಗಿದೆನಲ್ಲಿ ಪರಮಾತ್ಮ |
ಎನ್ನೊಳಗೆ ಇದ್ದಂತ ಪರಮಾತ್ಮನನು ನಾ ತಿಳಿಯದೆ
ನಾನಾ ದೇವರ ತಿರುಗಿ ಬಳಲಿ ಭ್ರಷ್ಠನಾದೆನಲ್ಲ ಪರಮಾತ್ಮ |
ಎನ್ನೊಳಗೆ ಇದ್ದಂತ ಪರಮಾತ್ಮ ಬಾರಪ್ಪಾ ಕಂದಾ
ಎಂದು ಕರೆದೆನ್ನ ಕರ್ಣಕ್ಕೆ ಬೊದಿಸಿದ ಸದ್ಗುರುವು

ಪರಶಿವನು ಪರಬ್ರಹ್ಮ ಅಖಂಡ ಮೂರುತಿ ನೀನಲ್ಲದೆ
ನಿನ್ನ ವಿೂರಿಸಿದವರು ಯಾರಿಲ್ಲ ಪರಮಾತ್ಮಾ…||
ಅನೇಕ ಪಾಪಿಷ್ಟನು ನಾನು ದೇವ | ಪಾಪ
ರಹಿತನು ನೀನು | ನನ್ನ ತಪ್ಪನು ಮನ್ನಣೆ ಮಾಡಿ
ಸೇರಿಸಪ್ಪ ನಿನ್ನ ದಾಸ ದಾಸರ ಬಳಿಗೆ |
ಓಂ ನೀ ಗುರುವೇ ನಮಃ | ನಿರಾಕಾರ ವಸ್ತುವೇ
ನಮಃ ಪರಮಾತ್ಮನೆ…. ಏ …….

3
ಸಿದ್ಧಲಿಂಗನೊಳಗೆ ಬೆರೆತು

ಮರೆಯಬಾರದು ಶಿವನಾ ಮರೆಯಬಾರದೂ
ಮರೆತುಹೋದ ಮೇಲೆ ಮುಂದೆ ದೊರೆಯಲಾರದು
ಶಿವನ ಪಾದ ||ಪ||
ಎತ್ತಿ ಬಂದ ಬಳಿಕ ಜನ್ಮ | ವ್ಯರ್ಥವಾಗಿ ಹೋಗದಂತೆ |
ನಿತ್ಯಕಾಲ ಶಿವನ ಪೂಜೆ ಭಕ್ತಿಯಿಂದ ಮಾಡು ಬೇಗ ||1||
ಹಿಂದೆ ಘೋರಾರಣ್ಯ ಗಿಡವು | ಮರವು ಪಕ್ಷಿ
ಜೀವರಾಶಿ | ಹೊಂದಿ ಬಂದೆನೆಂದು ಪುಣ್ಯ ಜನ್ಮದಲ್ಲಿ
ತಿಳಿದ ಮೆಲೆ ||2||
ಆಗ ಈಗ ಎಂಬುದೆಲ್ಲ ಹಗಲು ಇರುಳು
ಕಳೆಯುತ್ತಲ್ಲಾ | ಹೋಗ್ವಕಾಲ ಎಂದ ಮೇಲೆ
ಅರಗಳಿಗೆ ತಾಳೆಂದರೆ ಬಿಡುವರೆ ಭಟರು ||3||
ಬಿದ್ದು ಹೋಗುವಾ ಗಟವು ಮುಂದೆ ಹದ್ದು ಕಾಗೆ
ಗೆದ್ದಲು ತಿಂದೂ | ನಿರ್ಧಾರವಾ ಮಾಡಿ ನಿನ್ನ
ಬುದ್ಧಿಯಿಂದ ತಿಳಿದ ಮೇಲೆ ||4||
ಹೋದ ಮೇಲೆ ಎಂದಿ ತಿನ್ನು ಹೋದ ರೂಪ
ಧರಿಸಿಕೊಂಡು ನಾದ ಬಂಧು ಕಳೆಯನುಳ್ಳ ಆದಿ
ಮೂರ್ತಿ ಧ್ಯಾನವನ್ನು ||5||
ಉದರ ಪೋಷಣೆಯನ್ನು ಬಿಟ್ಟು ಪದಮ್ಮಲಾಂತ್ಮ
ಬ್ರಹ್ಮನಿರುವಾ | ಮುದದಿ ನಡುಕೆರೆ
ಈಶಾ ಸಿದ್ಧಲಿಂಗನೊಳಗೆ ಬೆರೆತು ||6||

4
ನಂಬಿರುವೆನು

ಬೋಧಿಸೆನ್ನನು ಗುರುವೇ ನಿಮ್ಮೆಯ ದಿವ್ಯ
ಪಾದವ ನಂಬಿರುವೇ | ವೇದಾಂತದೊಳು ಗೋಪ್ಯ
ವಾದ ತತ್ವವನು ಸಂಪಾದಿಸಿ ಮನದಿವ್ಯ ವಿನೋದಿಸಿ
ಸುಖಿಸೆಂದು ||ಪ||
ಮೂಲ ಕುಂಡಲಿಯನೊತ್ತಿ | ಆಜ್ಞೆಯಾದ
ನಿರಿಜನ ಮನೆಗೆ ಹತ್ತಿ | ಸಾಲಿಟ್ಟು ಸುರಿತಿರ್ಪ
ಹಾಲನ್ನು ಸವಿದುಂಡು ಲೀಲ ಜ್ಯೋತಿಯೊಳ್ ದಿವ್ಯ ಜ್ವಾಲೆಯ
ಬೆಳಗೆಂದು ||1||
ರವಿ ಶಶಿಗಳ ತಡೆದು ಸುಸುಮಾದ
ನಮನದೊಳು ನಡೆದು ಜವದಿ ಪಶ್ಚಿಮ ದಿಕ್ಕು
ನವನಾದದೊಳಿರು ತೀರ್ಪ ತವ ಮೋಕ್ಷ ಸತಿಯನ್ನು
ಜವದಿ ಮೈ ಮರೆಗೊಂಡು ||2||
ತಳವಾಗಿ ಬೆಳೆದಿರುವ ಆಜ್ಞೆಯಾದ ದಳದೀ
ತಿರುಗುತ್ತಿರುವ ಕಳೆ ಅಂಶನೊಳುವಿನ ಸುಳುವನ್ನು
ತಿಳಿದು ನೀ ಸಿಳಿವ ಕಣಿವೆಯೊಳು ನಿಂತು ನೀ
ನಲಿಯೆಂದು ||3|| ಆದಿ ಅಂತ್ಯವ ಬೇಡಿಸಿ ||4||
ಪರಿಪೂರ್ಣ, ನಂದ ಭಾವ ತಾರಕ ರೂಪ
ಗುರುಸಿದ್ದ ದೇವ ದೇವಾ | ಅರಿತು ನಂಬಿರುವೆನು
ಮರೆವಿಯೊಳ್ ಬಿಡಿಸೆನ್ನ ಗುರು ಎಲ್ಲಾ ತೋರಿದ
ಬೆರೆನೇಕವಾಗಿ ||5||

5
ಅಖಂಡ ಬೆಳಗುತಿದೆ

ಗುರುವಿನ ಕರುಣಯೊಳ್ ಅರುವಿನೊಳ್ಗರು
ವಾಯ್ತು ಚಂದಮಾಮ ಲೋಕ ಚಂದಮಾಮ
ಅರವಿನ ಮರವೆ ಒಂದಿರುವೆ ನುಂಗೀತು ಲೋಕ
ಚಂದಮಾಮ-ಲೋಕ ಚಂದಮಾ ||ಪ||
ಕುಂಡಲಿ ಸರ್ಪವೂ ಭೂಮಂಡಲಕ್ಕಿಳಿದಿತು
ಚಂದಮಾಮ ಲೋಕ ಚಂದಮಾಮ | ಅದರ ಮಂಡೆ
ಯೊಳಗೆ ಅಮೃತಾ ಅಂಡರೀಸನೇ ಬಲ್ಲ ಚಂದಮಾಮ ||1||
324 / ತತ್ವಪದ ಸಂಪುಟ-1

ಬರುವದೊಳಗಿದೆ ಪೂರ್ಣ ಚಂದ್ರನ ಕಳೆ
ಚಂದಮಾಮ ಲೋಕ ಚಂದಮಾಮ ಗುರುವು
ಆರೂಢ ಕೊಂಡಾಡ ಸದ್ಗುರುವೇ ಇಲ್ಲ ಚಂದಮಾಮ….
ಗಂಗೆ ತೀರದಿ ವಾದ್ಯ ಅಂಗಾನ
ಬೆಳಕಿನೊಳ್ ಅಖಂಡ ಬೆಳಗುತಿದೆ ||3||

6
ಆಜ್ಞಾನವನಳಿದು

ಪರಮಾ ದಯಾ ನಿಧಿಯೇ | ಶ್ರೀ ಗುರು ನಿತ್ಯ
ಪರಮ ಪಾವನ ಮೂರ್ತಿಯೇ ||ಪ||
ದುರಿತ ಆಜ್ಞಾನವನಳಿದು ಸುಜ್ಞಾನದ ವರದೆ
ನಿನ್ನಂಥ ದಯಾಳುವಂತ ಜಗದೊಳ್ || ಅನು ಪಲ್ಲವಿ ||

ಇಳೆಯ ಭೋಗರಗಳೆಂಬ | ಆಶಿಯು
ಮೋಹ | ಬಲುರಾಗ ದ್ವೇಷವೆಂಬ | ಸುಳಿದು
ಸಂಸಾರ ಸಾಗರದಿ ಕಡೆಗಾಣದೆ | ಮುಳುಗಿ
ಹೋಗುತಲಿರೆ ಕರವಿಡಿದೆತ್ತಿದೆ ||1||

ವರಪುಣ್ಯವನುಗಳಿಸಿ | ಸ್ವರ್ಗವ ಸೇರಿ
ಉರುಭೋಗವನ್ನನುಭವಿಸಿ | ತಿರುಗಿ ಮತ್ರ್ಯಕೆ
ಬಂದು ಬಳಲಿ ಬಾಯಾರಿದೆ ಸ್ಥಿರ ಮುಕ್ತನಾಗೆಂದು
ಕರೆದು ಭೋಧಿಸಿದಂಥ ||2||

ಹಟಯೋಗಾದಿಗಳಿಂದಲೇ | ಲೋಕಕೆ ಮೆಚ್ಚು
ಚಟುಲ ಸಿದ್ಧಿಗಳಿಂದಲೇ | ಸಟೆಯು ಜೀವನ್ಮುಕ್ತಿ
ಯದರಿಂದಲೆನ್ನುತ್ತಾ | ಘಟಿತವಾಗಿಹ ರಾಗ ಯೋಗ
ಬೋಧಿಸಿದಂಥ
ಚಲುವ ಆಭರಣವಾಗಿ | ತೋರುವ ಪರಿಯುನ್ನತ
ಜಗವಿದಾಗಿ | ಸನ್ನೆಯಿಂ ಪರಮಾತ್ಮನೊಬ್ಬ
ತೋರುವನೆಂಬ | ಸನ್ನುತ ಸುಜ್ಞಾನವನ್ನು ಭೋದಿಸಿದಂಥ ||4||

ಸರ್ವ ತತ್ವಂಗಳನ್ನು | ವೇದಾಂತದ
ಸರ್ವ ರಹಸ್ಯವನ್ನು | ಸರ್ವಕ್ಕಧಿಕವಾದ ಅಪರೋಷ
ಜ್ಞಾನವಾ | ಸರ್ವ ಶ್ರೀ ಗುರು
ರಂಗನಾಗಿ ಭೋದಿಸಿದಂಥ ||5||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 325
7
ಪೊರೆಯುವ ಗುರು

ಭಜನೆ ಮಾಡುವ ಬನ್ನಿರೋ | ಸದಾಶಿವನ
ಭಜನೆ ಮಾಡುವ ಬನ್ನಿರೋ ||ಪ||

ಭಜನೆ ಮಾಡುವ ನಿತ್ಯ ಸುಜನರೆಲ್ಲರೂ ಕೂಡಿ
ಕುಜನ ಸಂಗವ ದೂರ ಮಾಡಿ ಸದ್ಭಕ್ತಿಯಿಂದ ||ಅ, ಪ||
ಶತಕೋಟಿ ಪಾಪವನ್ನು ಮಾಡಿದ ಮಹಾಪತಿತರು
ನಾವು ನೀವು | ಪತಿತ ಪಾವನನೆಂಬ
ಬಿರುದುಳ್ಳ ದೇವನು | ಕ್ಷಿತಿಯೋಳತ್ತಮ ಗತಿ
ತೋರೆಂದು ಶಿವನ ||1||

ಘುಡಿ-ಘುಡಿಸುತ ಬರುವಾ ಯಮನಾಳ್ಗಳಂ
ಕಡಿದು ಮಾಡುತ ಕೋಪವ |
ಝಡಿದು ಶೂಲದಿ ಭಕ್ತರನು ಕೈಪಿಡಿದು |
ಕಡುಗರೂಣದಿ ಪೊರೆಯುವ ಮೃತ್ಯುಂಜಯನಾ ||2||

ಪಂಚವಿಂಸತಿ ತತ್ವದಿ ತಾನಿರ್ದು
ಪ್ರಪಂಚದೊಳಾನಂದದಿ | ಪಂಚವಿಂಸತಿ ಲೀಲೆ
ತೋರಿತನ ಭಕ್ತರ |ಸಂಚಿತ ಕರ್ಮವನುರುರಿಂದ
ಶಿವನ ||3||

ಕಷ್ಟ ಕರ್ಮಗಳ ನೋಡಿ ನಿಮಿಶಾರ್ಧದಿ
ಸುಟ್ಟು ನಿರ್ಮಲವ ಮಾಡಿ | ಇಷ್ಟಾರ್ಥಗಳ ನಿತ್ತು
ಕರುಣಾದಿ ಪಾಲಿಪ | ಅಷ್ಟದಳದ ಪದ್ಮದಲ್ಲಿರುವ
ಶಿವನ ||4||
ಕರುಣ ರಸವನ್ನೆ ಬೀರಿ | ಯೋಗವು
ತತ್ವ ನೆರೆ ಶಾಂತಿ ವಿರತಿ ತೋರಿ | ಧರೆಯೊಳಾಧಿತ
ಬೋಧಿಸಿ ಪೊರೆಯುವ ಗುರು ಮಹಾ ಲಿಂಗನೆ
ನೀನೆಂದು ಶಿವನ ||5||

8
ಪೊರೆಯೆನ್ನ ಪ್ರಭುವೆ

ಪೊರೆಯೆನ್ನ ಪ್ರಭುವೆ ಶ್ರೀ ಗುರುವೆಂಬ |
ವರಕಲ್ಪ ತರುವೆ || ಕರುಣ ಕಟಾಕ್ಷ ವೀಕ್ಷಣದಿಂದಲೆನ್ನಯ್ಯ |
ಧುರಿತಾ ದುಗಣವೆಣಿಸದೆ ಕೃಪೆಯಿಂದಲಿ ||ಪ||

326 / ತತ್ವಪದ ಸಂಪುಟ – 1

ಗುರು ಬಂಧು ಮಿತ್ರ | ಗೋತ್ರವು ಸೂತ್ರ
ಗುರುವೆ ಪವಿತ್ರ | ಗುರು ಬ್ರಹ್ಮ ಗುರು ವಿಷ್ಣು
ಗುರು ಪರಾಶಿವನೆಂದು | ವರುಲವ ಶೃತಿ ನಂಬಿ
ನಿಮ್ಮಡಿ ನಂಬಿದೆ ||1||

ತಂದೆ-ತಾಯಿಗಳು ನಂಬಿದೆ ಮಿತ್ರ
ಬಂಧು ವರ್ಗಗಳು | ಎಂದಿದ್ದರೆನ್ನನ್ನು ಬಿಟ್ಟೋ
ಗುವರು ನೀವು | ಎಂದೆಂದು ಬಿಡುವನಲ್ಲೆನುತ್ತ
ನಂಬಿದೆನಯ್ಯ ||2||

ನಾರಿ ಮಕ್ಕಳನು | ತನು ಮನ ಧನವನ್ನು
ಭೂರಿ ಭಾಗ್ಯವನು | ಮೀರಿದ ಮಾನ ಅಭಿಮಾನ
ಒಪ್ಪಿಸಿಕೊಟ್ಟ ದೇಶನೊಪ್ಪಿಸಿದವನಿಗೆ ಸುಂಕ ಇನ್ನುಂಟೆ ||3||

ಸುಗುಣ ನಿರ್ಗುಣನೆ | ನಿರ್ಮಲನೆ
ನಿಗಮ ವಂದಿತನ | ಅಗಣಿತ ಕಿಲ್ಪಿಷವಳಿದು
ಪಾಲಿಸವನೆ | ಸುಗುಣಿ ಮುಕ್ತಿಯ ಕಾಣಿವರ
ಚಿಂತಾಮಣಿಯೇ ||4||

ಕಿರಿ ಸೊಬಗೆಂಬ | ಮೋಹವು ದುಃಖ
ದುರಿತವೆಂತೆಂಬ | ಶರಧಿಯ ದಾಂಟಿಸಿ ಮುಕ್ತಿ
ದುರಿತವೆಂತೆಂಬ ಬಿರುದು ಪೊತ್ತಿಹ ಗುರು
ಮಹಾಲಿಂಗ ರಂಗನೆ ||3||

9
ಸರ್ವ ಸಾಕ್ಷಿಕ ಗುರು

ಸರ್ವಜ್ಞ ಮೂರ್ತಿ ನೀನು | ಈ ಜಗದೊಳು
ಸರ್ವ ಪಾತಕಿಯ ನಾನು ||ಪ||
ಸರ್ವಜ್ಞ ಮೂರ್ತಿ ನಿಮ್ಮಡಿದಾವರೆಗಳನ್ನು | ಸರ್ವಕಾಲದಿಂ
ನಂಬಿದೆನು ಪಾಲಿಸೆನ್ನನು || ಅ. ಪ||

ನಿನ್ನ ವಿಲಾಸವಿದು | ಸೃಷ್ಟಿಸಿ ಜಗವನ್ನು
ಆಡಿಸುತಿಹುದು | ಉನ್ನಾಂತ ಊರ್ಣಾಭಿಯಾ ಪರಿಯಂತಕ್ಕೆ
ನಿನ್ನೊಳೆಲ್ಲವ ನುಂಗಿ ನೀನೊಬ್ಬನುಳಿಯುವೆ ||1||

ಸರ್ವ ಶಿರನಯನಂಗಳು | ಪಾದವು ಹಸ್ತ |
ಸರ್ವ ಕಿವಿ ತೋಳುಗಳು | ಸರ್ವ ಭೋಗವು
ಸರ್ವ ರೂಪು ನೀನೆನಿಸುತ್ತ ಸರ್ವ ಸಾಕ್ಷಿಕನಾದ
ವಿಶ್ವಕುಟುಂಬಿಯೆ ||2||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 327

ಜನನದಾರಭ್ಯದಿಂದ | ಸದ್ಗುಣಕ್ರಿಯೆ
ಮನದೊಳಗೆಣಿಸಿನೊಂದ | ವಿನಯ ಜ್ಞಾನವು
ಯಮ್ಮನಾಡಿನೊಳ್ ಕಾಣಿನು | ಅನಾಚಾರ ಚೇಷ್ಟೆಯ
ಅಜ್ಞಾನಿ ಜೀವನು ನಾನು ||3||

ಸರ್ವ ಪಾತಕಿ ನೀಚನು | ಕೃತಘ್ನನು |
ಸರ್ವ ದುರ್ಗುಣ ಜಾತನು | ಸರ್ವ ಪಾತಕಿ
ಕಾಳಿಕಾರರ ಒಡೆಯನು | ಸರ್ವ ದ್ರೋಹಿಗಳೊಳಗ್ರಗಣ್ಯನು
ನಾನು ||4||

ಸರ್ವ ದುರ್ಗುಣಗಳನ್ನು ನೋಡದೆಯೆನ್ನ
ಸರ್ವತ್ರ ಪೊರೆಯುವನು | ಸರ್ವ ಕಲ್ಯಾಣ
ಗುಣಗಳಿಂದೊಪ್ಪುವ ಸರ್ವ ಸಾಕ್ಷಿಕ ಗುರು
ಮಹಾಲಿಂಗ ದೇವನೆ ||5||

10
ನಿನ್ನೊಳು ನೀನೆ ಛೇದಿಸಿ

ಕೊಬ್ಬಿ ನೀ ಕೆಡಬ್ಯಾಡವೋ | ಮತ್ತೊಬ್ಬರ
ನುಬ್ಬಿ ಆಡಲಿ ಬ್ಯಾಡವೊ ||ಪ||
ಮಬ್ಬು ಕಣ್ಣಿಗೆ ಮುಚ್ಚಿ ಮರೆತಿರೆ ಶಿವಧ್ಯಾನ
ಹೆಬ್ಬುಲಿಯಂತೆ ನುಂಗುವ ಯಮನವನ ||ಅ. ಪ||

ಕಾಸುವಿರಿಸಂಗಳನು | ಕೂಡಿಸಿ ಧನದ ರಾಶಿಯ
ಮಾಡಿ ಮಾಡಿ | ಆಸೆಯಿಂದಲಿ ಈಶ ಧ್ಯಾನ
ಮಾಡದೆ ಕಾಲ ಪಾಶಕ್ಕೆ ಗುರಿಯಾಗಿ ಕೆಟ್ಟೆಲ್ಲೊ
ಪ್ರಾಣಿ ||1||

ಎಂಟು ಮಂದಿಗಳ್ ಕಟ್ಟಿ | ಎಚ್ಚರದಿಂದ
ತುಂಟರೈವರನು ಕಟ್ಟಿ | ನೆಂಟರಿಷ್ಟಾರಾಭಿಮಾನವ
ದೂರಿಟ್ಟು | ಭಂಟನಾಗದೆ ಶಿವ ಶರಣರ
ಪಾದದಿ ||2||

ನಿನ್ನೊಳಡಗಿರುವ | ಗರ್ವವು ಕ್ರೋಧವಿನ್ನು
ಮತ್ಸರವ ನೀಗಿ | ಉನ್ನತ ಶಾಂತಿಯ ಪಡೆಯದೆ
ಮನದೊಳಗನ್ಯರ | ಗುಣದೋಷವೆಣಿಸಿ ನೀ ಸುಮ್ಮನೆ ||3||

ಸಾಧಿಸುತೀ ಪರಿಯ ನಿನ್ನೊಳು ನೀನೆ ಛೇದಿಸಿ

328 / ತತ್ವಪದ ಸಂಪುಟ-1

ಮದಗರ್ವದ || ವೇದ ಪುರುಷ ಗುರುಮಹಾಲಿಂಗ
ರಂಗನಪಾದ ಪಲ್ಲವ ಪಿಡಿ ಸುಖವಪ್ಪುದೇವೋ
ವೇದ ಪುರಷಗುರು ಮಹಾಲಿಂಗ ದೇವನೆ ||4||

11
ಮೋಹವಡಗದೆ

ಕೇಳಿದಾಗಲೇ ಹೇಳಬಾರದು | ಪರಬ್ರಹ್ಮ ವಿದ್ಯವ
ಕೇಳಿದಾಗಲೆ ಹೇಳಬಾರದು | ಕೇಳಿದಾಗಲೇ ಹೇಳಬಾರದು |
ಪೇಳಿದಪರಿಯಿರದೆ ಗುರುವಿಗೆ
ಹೇಳುವೇನು ತಿರುಮಂತ್ರವೆಂಬುವ | ಕೂಳ ನರಧಿಕ
ಪ್ರಸಂಗಿಗೆ ||ಪ||

ಗುರುವರನ ಭಕ್ತಿಯಲಿ ಪೂಜಿಸದೆ | ತನುಮನ
ಧನವನ್ನು | ಗುರುವಿನದಿ ಕಮಲಕ್ಕೆ ಒಪ್ಪಿಸದೆ |
ನಿರಂತ ಶಾಸ್ತ್ರಾಗಮಗಳೋದಿ | ಹಿರಿಯರನು
ನಿಂದಿಸುತ ಗುಣ ಗರ್ವದಿ | ಉರಿಯ
ಮಾತಿನ ಬಣವೆವೊಟ್ಟುವ | ಅರಿತು ಅರಿಯದ
ನರಕದ್ಪುಳುವಿಗೆ ||1||

ಆರು ವರ್ಗ ದುಃಖದಿದು ಸಾಯುತ್ತ | ಹಗಲಿರುಳ
ಬಳಲುತ | ಮೂರು ತಾಪದಿ ಮುಳುಗಿ ತೇಲುತ್ತ
ನಾರಿ ಮಕ್ಕಳ ಮೋಹವಡಗದೆ | ಸೇರುವೆನು
ನಿಜಮುಕ್ತಿಯೆನುತಲಿ | ದೂರು ತನ್ನ ಗುಣ
ವಿಸ್ತಾರದಿಂದಲಿ ಹೊಗಳಿ ಕೊಂಬಗೆ ||2||

ಈಶನನಡಿಯಲಿ ಭಕ್ತಿಯಿಲ್ಲದೆರೆ |
ದುರ್ಮಾರ್ಗ ತನದಲಿ | ರೊಷ ಹೆಚ್ಚುವ ಶಾಂತಿಯಿಲ್ಲದೆಲೆ |
ದೂಷಿಸುತ ಮಹ ಸಾಧು ನಡೆಗಳ |
ಮೋಸ ಹಾದರ ಕಳವು ಪರಧನರಾಶಿಯಲಿ |
ಮನ ಮುಳುಗಿ ಜ್ಞಾನವ ದೇಶವರಿಯದೆ ಹೇಸಿ ಮೂಳಗೆ ||3||

ಜ್ಞಾನ ಗುರುವೆಂತೆಂದು ನಂಬುತ್ತ ಹನ್ನೆರಡು
ವರುಷವು | ನ್ಯೂನವಿಲ್ಲದೆ ಸೇವೆಗೈಯುತ್ತ ||
ಏನ ಹೇಳಲು ನಂಬಿಕಿಲ್ಲದೆ | ಹೀನ ವಿಷಯದಿ ಶಿಲ್ಕಿ
ಯನುದಿನ | ಗಾಣದೆತ್ತಿನ ಪರಿಯ ತಿರುಗುತ
ಜ್ಞಾನ ಹೊಂದದ ಮೂರ್ಖ ಮನುಜಗೆ ||4||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 329

ಧರೆಯ ಭೋಗವು ರೋಗವೆಂದೆನುತ
ತನ್ನೊಳಗೆ ಅರಿತು ಸ್ಥಿರದ ಮುಕ್ತಿಯ ಹೊಂದಬೆಕೆನುತ |
ಸದೆ ಬಡಿಯಲಿ ಬೇಕು ವಾಸನೆ ಮೂರ |
ಪರಮ ಪಾತಕರಿಂಗೆ ಬ್ರಹ್ಮನ |
ನಿರುತ ಬೋಧಿಸಿ ಹಬ್ಬದಂತೆ ||5||

12
ಕರ್ಪೂರವಾಗಿರು

ಕೇಳಿದಾಗಲೆ ಹೇಳ್ವ ಸದ್ಗುರುವು | ಸುಜ್ಞಾನ
ಮಾರ್ಗವ ಕೇಳಿದಾಗಲೆ ಹೇಳ್ವ ಸದ್ಗುರುವು ||ಪ||

ಕೇಳಿದಾಗಲೆ ಹೇಳ್ವ ಶಿಷ್ಯಗೆ | ಲೀಲೆಯಂಧದಿಕಾರವರಿತು |
ಕೇಳಿದವರಿಗೆ ಹೇಳ್ವದಲ್ಲದೆ ಪೇಳ್ವುದಿ
ನ್ಯಾರಿಗೆ ಜಗದೊಳು || ಅ. ಪ||

ತನುವು ಧನ ಮನವಿತ್ತು ಗುರುವರಗೆ
ಆಧ್ಯಾತ್ಮ ಶ್ರವಣದಿ ಜನಿಸಿ ಬ್ರಹ್ಮ ಜ್ಞಾನ ಮನದೊಳಗೆ |
ಯನಿತು ಅಭಿಮಾನಿ ನೀಡದೆ ರಾಜ್ಯವತೃಣ
ಸಮಾನದಿ ಕಂಡು ಧರಣಿಯ | ಘನದಿ
ಆಳಿದ ಜನಕನಂದದಿ | ಮನವು ನಿಲಿಸುವ
ಪ್ರೌಢನಾದರೆ ||1||

ಬಾಲತನದಲಿ ಬ್ರಹ್ಮ ಬೋಧಿಸಿದ |
ಪ್ರಣವಾಕ್ಷರಕ್ಕೆ ವಿಶಾಲ ಅರ್ಥವ ತಾನೆ ಬೋಧಿಸಿದ
ಬಾಲಕ ಜ್ಞಾನಕೆ ಹರ್ಷವ ತಾಳಿ ಪರಶಿವ
ನಿಜವನರುಪಲು | ಕೇಳಿ ಮುಕ್ತಿಯ ಪಡೆವ
ಗುಹನಂತೇಳಿ ಕೇಳ್ವಧಿಕಾರಿಯಾದೊಡೆ ||2||

ಧರೆಯೊಳುತ್ತಮ ವ್ಯಾಸಮುನಿವರನ ಪ್ರಿಯ
ಪುತ್ರನೆನ್ನಿಸಿ | ಪರಮ ಶಾಂತಿಯೊಳುಂ ಪರಿಶಿವನ |
ತರುಣಿ ಮೋಹದ ಬಲಿಗೆ ಶಿಲ್ಕದೆ ಉರು
ತಪ ತಾಗೈದು ಜ್ಞಾನವ | ಧರಿಸಿ ಮುಕ್ತಿಯ ಪಡೆದ
ಶುಕಮುನಿ | ಪರಿಯ ವಿರತಿಯೊಳಿರುವನಾದರೆ ||5||

ತೊರೆದು ತನಮಗನೆಂಬ ಬ್ರಾಂತಿಯನು
ಕಪಿಲ ಮುನಿಯಲಿ | ಇರಿಸಿ ತನ ಗುರುವೆಂಬ
ಭಾವವನು | ಅರಿತು ಯೋಗವು ಪರಮ ಜ್ಞಾನವ

330 / ತತ್ವಪದ ಸಂಪುಟ – 1

ನಿರುತ ಸರ್ವವು | ಬ್ರಹ್ಮವೆಂಬುವ ಅರಿವು ಮರೆಯದಿ
ದೇವ ಹೂತಿಯ | ಪರಿಯ ನಿಶ್ಚಲ ನಾಗ್ವನಾದಡೆ |

ಧರೆಯೊಳಾರಾದೊಡೆಯು ಮುಕ್ತಿಯನು |
ಹೊಂದುವನು ಯೆನ್ನುತ | ತರಿದು ಮುದ ಗುಣ
ಮೋಹವ್ಯಸನವನು | ಪರಮ ಗುರು ಮಹಾಲಿಂಗ
ರಂಗನ | ಚರಣ ಸೇವೆಯೊಳಿರಲು ಕರ್ಮವು
ಹರಿದು ನಿರ್ಮಲವಾದ ಮನವನು ಪರೀಕ್ಷಿಸಲು
ಕರ್ಪೂರವಾಗಿರು ||5||

13
ಜಾತಿ ಕಲ್ಪನೆಯಳಿದು

ಜಾತಿ ಸೂಚಕವೆಂಬ ಮಾತಿಲ್ಲ | ಸುಜ್ಞಾನ
ಮಾರ್ಗದಿ ಜಾತಿ ಕರ್ಮಾಧಿಗಳೇ ಮೊದಲಿಲ್ಲ ||
ಜಾತಿ ಗೋತ್ರಕೆ ಬದ್ದರಾಗುತ | ಆತ್ಮನರಿಯದ
ಕರ್ಮಿಗಲ್ಲದೆ | ಜಾತಿ ಕಲ್ಪನೆಯಳಿದು ಆತ್ಮ ಜ್ಯೊತಿಯಲಿ
ಮುಳುಗಿದ ಮಹಾತ್ಮಗೆ ||ಪ||

ಬ್ರಹ್ಮ ಬೀಜವೇ ಸರ್ವಯೋನಿಯೊಳು |
ಪುಟ್ಟಿರುವುದೆಂಬುವ | ಮರ್ಮವರಿಯದ ಮೂಢ
ಜನರುಗಳು | ನಮ್ಮ ಕುಲ ಮೇಲೆನುತ ವಂದಿಸಿ
ನಿಮ್ಮ ಕುಲ ಕೀಳೆನುತ ನಿಂದಿಸಿ | ಹಮ್ಮುಮದ
ಮತ್ಸರದಿ ಸಾಯುತ | ಒಮ್ಮೆ ನರಕಕ್ಕೆಳಿವರಲ್ಲದೆ ||1||

ಇಲ್ಲ ಜಾತಿಯು ಸ್ವರ್ಗ ನರಕದೊಳು
ತ್ರೈ ಮೂರ್ತಿಗಳೂ ಇಲ್ಲ ಜಾತಿಯು ತೀರ್ಥ
ಕ್ಷೇತ್ರದೊಳು | ಎಲ್ಲ ಬ್ರಹ್ಮಂ ಬರುಹು ಅಲ್ಲದೆ
ಇಲ್ಲದುಂಟೆಂತೆಂಬ ಕಂಗಳು | ನಿಲ್ಲದಿಹ ಘಾತಕಗಳ
ನಡೆಯೊಂದಲ್ಲದೆಲೆ ಸುಜ್ಞಾನ ಪಥದೊಳು ||2||

ಅನ್ನಮಯದ ಕಾಯವೆಂಬುದು ಸರ್ವರಿಗೂ
ಒಂದೇ | ಭಿನ್ನವಿಲ್ಲದೇ
ತೋರಿಯಡಗುವುದು ಮುನ್ನಲೆ ಅಂಡಜವು ಸೇರಿದ |
ಉನ್ನತುದ್ವಿಜ ಜವರ ಜರಾಯುಜ
ಸೃಜಿಸಲು ||3||

ಜಾತಿ ವರ್ಣವು ಗೋತ್ರ ಷಣ್ಮತವು | ಅಜಸೃಷ್ಠಿಯೆಲ್ಲವು |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 331

ಖ್ಯಾತಿ ಜೀವಿಗಳಿಂದ ನಿರ್ಮಿತವು
ಜಾತಿ ಅಜ ನಿರ್ಮಿತವಾದೊಡೆ | ಮಾತಿನಿಂದಲಿ
ಕಡೆದು ಪಗ ಪ್ರಖ್ಯಾತಿಯಾಗಿ ಯಮನುಜ
ಕರದಿ ಕುಂಭವು ಕುಂಭದೊಳು ಕ್ಷೀರ |
ಪ್ರತ್ಯೇಕವಾಗಿ ಇರುವ ಪರಿಯಾತ್ಮನಿಗೆ ಬೇರಾಗಿ |
ಶರೀರ ಕುಲ ವರ್ಣಾಶ್ರಮಂಗಳು | ಬರಿದೆ ತೋರಡಗು
ವುದು ಅಲ್ಲದೆ | ಪರಮ ಗುರು ಮಹಲಿಂಗ
ರಂಗನೊಳ್ಪರಿಕಿಸಲು ಲವ ಮಾತ್ರವಿಲ್ಲವು ||5||

14
ಬ್ರಹ್ಮದಿ ಮುಳುಗದೆ

ತೋರದು ಸುಖ ಮಾನಸೇಂದ್ರ | ನೀನು
ತಾರಕ ಬ್ರಹ್ಮದಿ ಮುಳುಗದೆ ಸುಮ್ಮನೆ ||ಪ||

ಹರಿದಾಡುವಿಂದ್ರಿಯ ಕರಣಗಳನು ಕಟ್ಟಿ |
ಅರಿಗಳಾರ್ವರ ನೆಂಟು ಮದಗಳ ಶಿರಮೆಟ್ಟಿ | ಸ್ಥಿರ ಕಾಯನಾಗಿ
ಚಿತ್ರಾಸನದಲಿ ಕುಳಿತು | ಅರವಿಂದ ದೃಷ್ಟಿಯ ನಿಲ್ಲಿಸಿ
ನೋಡದೆ ||1||

ವರಗಂಗೆ ಯಮುನ ಸಂಗಮದೊಳಗಿಳಿದು
ಈ ಪರಿಭವ ಕೋಟಿ ದುಷ್ಕರ್ಮವಂ ತೊಳೆದು |
ವರ ನೀಲಗಿರಿ ಮಧ್ಯದಶನಾದ ತಿಳಿದು |
ವರಬಿಂದು ರುಚಿಯೊಳುನಲಿದು ನೀ ಮುಳುಗದೆ ||2||

ವರಚಂದ್ರ ಸೂರ್ಯ ಬೀದಿಗಳಲ್ಲಿ ತೂರಿ |
ಶಿರದೊಳಗಿರುವಾ ಜರಂದ್ರವನೇರಿ |
ಭರದಿ ಪಶ್ಚಿಮ ದಿಕ್ಕಿನೊಳು ರಾಜಿಸುತಲಿಪ್ಪ |
ವರ ಮೋಕ್ಷಾಂಗನೆ ಕೂಡಿ ಆನಂದ ಪಡಿಯದೆ ||3||

ಅನುದಿನವೂ ಮೋಕ್ಷಕಾಂತೆಯ | ಕೂಡುತ್ತ
ಕ್ಷಣ ಕವೀ ಸಂಸಾರವೆಂದನುಭವಿಸುತ್ತಾ | ಜನನ
ಮರಣವೆಂಬೆರಡನ್ನು ತೊಳೆಯುತ್ತ | ಅನುಪಮಾದ್ವಯ
ಬ್ರಹ್ಮ ಚಿಂತನೆ ಗೈಯದೆ ||4||

ದೇಹವಾನೆಂಬುವ ಬ್ರಾಂತಿಯ ನೀಗಿ | ಸೋಹಂಭಾವದಿ
ಚಿತ್ತ ನಿಶ್ಚಲವಾಗಿ |
ಮೋಹ ಮತ್ಸರ ಪಾಶಗಳು

332 / ತತ್ವಪದ ಸಂಪುಟ – 1

ಉರಿದೋಗಿ ಮೋಹ ರಹಿತ ಗುರು ರಂಗ
ನೋಳ್ಪೆರೆಯದೆ ||5||

15
ಕಾಗೆಯಂದದಿ

ಭಜನೆ ಬ್ರಹ್ಮಾನಂದ ರಸವೋ | ಸೋಹಂ
ಭಜನೆ ಸದಾನಂದ ಸುಖವೋ ||ಪ||

ರಜನಿ ಚೇತೋ ರಜನಿ ನಿಹರಣ | ಸುಜನ
ಹೃದಯಾಂ ಗಣಪರಾಯನಾ…| ಅಜ ಸುರೇಂದ್ರ
ಮುನೀಂದ್ರ ಶೈವನ | ಭುಜಗ ಭೂಷಣ
ಭವ್ಯ ಶಿವನ || ಅ.ಪ||

ಮೂರೈದು ಗೇಣಿನ ಗುಡಿಯ | ಪದಿನಾರು
ಸ್ಥಂಭವು ಸಪ್ತ ಪ್ರಕಾರದೊಳು | ದ್ವಾರ ಒಂಭತ್ತೈದು
ಕಲಶಗಳಾರು | ಮೆಟ್ಲುಗಳೈದು ವರ್ಣದ |
ತೋರಣಂಗಳು ಕಾದು ಇರುತಿಹ ದ್ವಾರಪಾಲಕರೀರ್ವರೊಪ್ಪುವ ||1||

ನವರತ್ನ ಖಚಿತ ಮಂಟಪದ | ದ್ವಾರ
ಜವದೀಕ್ಷದಂಗುಳಿಯಿಂದಲಿ ತೆರಿಯೋ | ಪ್ರವಿಮಲಾತ್ಮೇಶ್ವರನು
ತೋರುವ ತವಕದಿಂದ್ರಿಯ ಕರಣವೆಂಬುವ
ವಿವಿಧ ಪುರಜನರಲ್ಲ ಬಂದು | ಶಿವನ ಸೇವೆಯೊಳಿಹರು
ಇಂದು ||2||

ಪರಬ್ರಹ್ಮದಂಡಿ ವೀಣೆಯನ್ನು ….| ಮಾಡಿ
ಮೆರೆವೇಳು ಚಕ್ರಗಳ್ ಮೆಟ್ಲುಗಳ್ಮಾಡಿ | ಇರಿಸಿ
ಪ್ರಾಣಗಳೆಂಬ ತಂತಿಯ ತಿರುವಿ ವಿಷಯಗಳೆಂಬ
ಬಿರುಡೆಯಾ | ಸ್ಮರಣೆಯಂಬಂಗುಳಿಯ ಮೀಟುತ
ವರಸರಸ್ವತಿಯಂತೆ ಪಾಡುವಾ ||3||

ಮೂರು ಮೂರ್ತಿಯ ಸಭೆಯಲ್ಲಿ | ಚಂದ್ರ
ತಾರೆಯಾ ಬೆಳಕಿನೊಳಾನಂದದಲ್ಲಿ | ಸಾರ ಸಂಗೀತಗಳು
ಢಣ ಢಣ | ಭೇರಿ ಗಂಟೆಯಾ ತಾಳ ಝಣ ಝಣ
ಚಾರು ಘೋಷಕೆ ಬೆದರಿ ಪಾತಕ ಊರ
ಬಿಟ್ಟೋಡುವುದು ಆಕ್ಷಣಾ ||4||

ಶ್ರೀಗುರು ಮಹಲಿಂಗ ರಂಗನಾ ಕೃಪೆಯಾಗಲು
ಭಕ್ತರ ಭವ ನಾಶನ | ಭೋಗ ಸುಖವಂ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 333

ಬಯಸಿ | ಜಗದೊಳು ಕಾಗೆಯಂದದಿ
ಮುಳುಗಲೊಲ್ಲದೇ | ಯೋಗ ನಿದ್ರೆಯೊಳ್
ಮುಳುಗಿ ಉರಭವ | ರೋಗನಳಿದಿಹ ಬ್ರಹ್ಮ ನಿಷ್ಟರ

16
ಅನಘ ಗುರು

ನೋಡು ನೋಡೆಲೆ ಮಾನಸೇಂದ್ರನೆ |
ನೋಡು ಮುನಿಕುಲ ಚಂದ್ರನೆ | ನಾಡು ನಾಡುಗಳಿರದು
ಬಳಲದೆ ನೋಡು ನಿನ್ನೋಳು ಬ್ರಹ್ಮವಾ |
ನಿರುಪ ಮದ್ವಯ ನಿರಘ ನಿಷ್ಕ್ರಿಯ |
ಭರಿತ ಸರ್ವ ಜಗಾಶ್ರಯ | ನಿರುತ ನಿಷ್ಕಳ ನಿತ್ಯ
ನಿರುಪದ | ಪರಮ ನಿಗುಣ ಬ್ರಹ್ಮವಾ ||1||

ಶಶಿಯು ರವಿ ಹವಿ ಮಿಂಚು ಗ್ರಹಗಳ
ಎಸೆವ ತಾರಾ ಗಣಗಳ | ಬಸುರಿನೋಳ್
ಹೊರಗೆಸೆದು ಬೆಳಗುವ | ಅಸಮ ಜ್ಯೋತಿ ಪ್ರಕಾಶವಾ ||2

ತ್ರಿಗುಣವಲ್ಲದ ತ್ರಿಮಲವಲ್ಲದ ಸ್ವಗತ
ಬೇಧಗಳೊಗೆಯುವ | ಅಗಣಿತನುಪಮ ಅಪ್ರತಕಟ್ಟಾದ
ನಿಗಮ ವಂದಿತ ಬ್ರಹ್ಮವಾ ||3||

ಕರಣ ಇಂದ್ರಿಯಗಳಿಗೆ ಪ್ರಭುವು | ಕರಣ
ದೋಷಗಳೆಲ್ಲವೂ | ಅರಿವು ಮರವೆಯ ಮೇಲಣರಿವು |
ಪರಮ ಸಚ್ಚಿದ್ರೂಪವಾ ||4||

ಜನನ ಮರಣದ ಜಡರು ಸೋಂಕದ
ಪ್ರಣವ ಪರತರವೆನಿಸದಾ | ಅನಘ ಗುರು ಮಹಲಿಂಗರಂಗನು |
ಎನಿಸಿ ರಾಜಪ ಬ್ರಹ್ಮವಾ ||5||

17
ಸುಂಕವಿಲ್ಲದ ಪುರವುಂಟು

ತೆರೆದ ಬಾಗಿಲ ಸುಂಕವಿಲ್ಲದ ಪುರವುಂಟು
ಬಂದು ನೋಡಿ ಹರಿಹರ ಬ್ರಹ್ಮಾದಿಗಳ ಕಾವಲ
ಕುಂಟು ಬಂದು ನೋಡಿ ||ಪ||

334 / ತತ್ವಪದ ಸಂಪುಟ – 1

ಪುರಕ್ಕರಸರು ಮುವ್ವರೊಂಭತ್ತು ಬಾಗಿಲು |
ಬಂದು | ವರಚೌಕ ಮಧ್ಯದೊಳಿದ | ಓಂಕಾರೇಶ್ವರ |
ಬಂದು | ಕರಣೀಕರೈವರು ಕರ ಜೋಡಿಸಿದರಲ್ಲಿ
ಬಂದು ನೋಡಿ ||1||

ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು |
ಬಂದು | ಏಳು ಲೋಕಂಗಳ | ನೊಳಕೊಂಡಿಹುದಿಲ್ಲಿ |
ಬಂದು | ಏಳೆಡೆ ಸರ್ಪವು ಬೋರುಗುಟ್ಟುತಲಿದೆ |
ಬಂದು | ಏಳೆಡೆ ಸರ್ಪವು ತಲೆಯೊಳು
ರತ್ವವುಂಟು ಒಂದು ನೋಡಿ ||2||

ಎರಡು ಪಕ್ಷದೊಳೊಂದೆ ಪಕ್ಷಿಯಾಡು ತಂದೆ |
ಬಂದು | ಎರಡು ರೆಕ್ಕೆಯು ಪುಕ್ಕ ಪಕ್ಷಿಗೆಲ್ಲವು |
ಬಂದು | ಧರಣಿ ಜೀವರ್ಕಳಿಗಾದಾರವಾಗಿದೆ |
ಬಂದು | ಕರಸ್ಥಲದೊಳಗಿದೆ ಕರಕೆ ಸಿಕ್ಕುವುದಿಲ್ಲ |
ಬಂದು ನೋಡಿ ||3||

ಗರುಡ ಸರ್ಪಗೆ ಅತಿ ಸ್ನೇಹವುಂಟಾಗಿದೆ | ಬಂದು |
ಸುರಸುರರು ಮಿತ್ರ ಭಾವದೊಳಿರ್ಪರು | ಬಂದು |
ಇರಿವೆ ಸಿಂಹವು ನುಂಗಿ ತಾನೊಂದೆ ಕುಳಿತಿದೆ | ಬಂದು |
ಉರು ವಿಷವಮೃತವು ಆಯಿತೇನೆಂಬೆನು | ಬಂದು | ||4||

ಚಾರು ಬೋಜವ ಶಸ್ತ್ರಾತಿ ತೆರೆದಿದೆ ಎದುರಿಗೆ |
ಬಂದು | ಊರ ಜನರು ಉಂಡು ಧಣಿವರಾನಂದದಿ|
ಬಂದು | ದೂರದೊಳಿಲ್ಲವು ಜ್ಞಾನ ಭಂಡಾರವು |
ಬಂದು | ಧೀರ ಶ್ರೀ ಗುರು ಮಹಲಿಂಗನೊಳಗಿದೆ
ಬಂದು ನೋಡಿ ||5||

18
ನಿಜ ದೇವನೆ

ಗುರುದೇವ ನೀನೊರ್ವ ನಿಜದೇವನೆ
ನಿಮ್ಮ ಚರಣಾದೊಳ್ ಬೆರೆಯಾದ ನರನೇ
ಪಾಮರನೊ ||ಪ||

ತಿರುಕಾನಂದದಿ ಪುರ ಪುರಾಗಳ ತಿರುಗುತಾ
ನರಳುವಾ ತರಳಾಗೆ ನರನ ತೋರಿಸಿದೆ ||ಗುರು||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 335
ಕರುಣಾವ ಕರಗಿಸಿ ಮುರುಗಿದ ಮುನಿಗಳಿಗೆ
ನಿಮ್ಮೊಳರಸಿ | ತಾವರೆಯಾದ ಸಿರಿಯಾ ತೋರಿಸಿದೆ
ಸದ್ಗುರುವೇ ತೋರಿಸಿದೆ ||ಗುರು||

ಸುತ್ತಿದ್ದ ಭವಮಾಲ್ಯೆ ಕಿತ್ತಿಟ್ಟೆ ಹೃದಯಾದೊಳ್
ಎತ್ತಿದ್ದ ಜ್ಯೋತಿಯಾ ಗೊತ್ತು ತೋರಿಸಿದೆ
ಸದ್ಗುರುವೇ ತೋರಿಸಿದೆ ||ಗುರು||

ಗುರು ಶಂಕರಾರ್ಯನೇ ಕರುಣಾ ತೋರಲು
ತಾನೇ ಗುರುವೆಂಬೋ ನಾಮಾವ ಧರಿಸಿ
ಬಂದಿದನಯ್ಯ | ಉದ್ಧರಿಸಿ ಬಂದಿದನಯ್ಯ ||ಗುರು||

19
ಎನ್ನಯ ಮೇಲೆ ದಯವುಟ್ಟಿ

ಗುರುದೇವ ನೀ ಮಾಡಿದುಪಕಾರವನು
ನಾನು ಮರೆಯುವುದೆಂದೆಂಗಿದರೊಳ್ ||ಪ||

ಪೊಡವಿಯೊಳ್ ಅರೆಳ ವೇದಾಗಮ ಶಾಸ್ತ್ರವಾಬಿಡದೆ
ಸಾದಿಸಿದ ವಾದಿಗಳೆಲ್ಲಾ | ಕಂದ ಮೂಲಗಳ
ಸೇವಿಸಿ ವಾಯುಗಳನ್ನೊತ್ತಿ | ಬಂಧಿಸಿ ಪಂಚಾಗ್ನಿ
ಮಧ್ಯದಿ ನಿಂದು ಯೋಗಿಗಳು ನೋಡುವ
ಪರಬ್ರಹ್ಮವಾ | ತಂದೆನ್ನ ಕಣ್ಗೆ ತೋರ್ಪದರಿಂದ ||1||

ಒಡನಾಡಿ ಕಾಣದ ಪರ ತತ್ವವನು ನೀನು
ಹಿಡಿದೆನ್ನ ಕರಕ್ಕೆ ಕೊಟ್ಟಿದ್ದರಿಂದ | ಗುರು ರೂಪಿನಿಂದೆನ್ನ
ಬೋಧಿಸಿ ತನ್ನೊಳು | ಬೆರೆಸುತ್ತಾ
ಮೋಕ್ಷವಿತ್ತದರಿಂದ ||2||

ತರಳ ಎನ್ನಯ ಮೇಲೆ ದಯವುಟ್ಟಿ ಶಿವನೆ
ಶ್ರೀ ಗುರುಸಿದ್ದನೆಂಬೋ ನಾಮವನಾಂತು | ಗುರು
ರೂಪಿನಿಂದೆನಗ ಬೋಧಿಸಿ ತನ್ನೋಳು |
ಬೆರೆಸುತ ಮೋಕ್ಷವಿತ್ತದರಿಂದ ||3||

20
ತಾನೆ ತಾ ಬಲ್ಲ

ಶೀಲವಾ ಮಾಡಬೇಡಣ್ಣ | ನೀನು ಮೇಲೆ
ಮಾಡುವುದೆಲ್ಲಾ ಸೂಳೆಯ ಬಣ್ಣ ||ಪ||

336 / ತತ್ವಪದ ಸಂಪುಟ – 1

ಹುಟ್ಟಿದ ತಳ ಕೂಳ ನೋಡು | ನೀನು
ಬ್ರಷ್ಟಾಗ ಬೇಡಣ್ಣ ಬರಿದೆ ನೀ ನೋಡಿ ||ಅ.ಪ||

ಒಂಭತ್ತು ಹೆಚ್ಚಾದಿ ರಸವು | ಅದು ತುಂಬಿ
ಸೂಸುತಲಿದೆ ಏಳಲೆ ನಿನ್ನಸವು | ಕುಂಬಾಣಿ ನರಕಾದ
ಕಸವು | ಅದ ನೀವಾಗಿ ನೋಡಣ್ಣ |
ಶಂಭು ನಿನ್ನ ವಶವು ||1||

ಸತ್ಯ ಸತ್ಯಾ ಎಂದು ನೋಡು | ಪರಾವಸ್ತು
ಬೇಕಾದರೆ ಇದು ಪಾಠ ಮಾಡು | ಕಳಿಯಬಾರದ
ಕರ್ಮ ಬಂಧ | ಇದನ್ನಳಿಯ ಬೇಕಾದರೆ ಗುರು
ಕೀಲಿನಿಂದ | ತಿಳಿಯಬಲ್ಲವರ ಸೈಗ್ಣೆಯಿಂದ ||2||

ಬರಿಯ ಶಾಸ್ತ್ರಗಳಿಂದಿಲ್ಲಿಲ್ಲ | ಪೂರ್ಣ
ಪರತತ್ವದನುಭಾವ ಬಾಯಿ ಮಾತಲ್ಲ | ಗುರು
ಪುತ್ರರಿಗೆ ದೂರವಿಲ್ಲ ಇದನೋರ್ವನೇ ಗುರುಸಿದ್ಧ
ತಾನೆ ತಾ ಬಲ್ಲ ||ಶೀಲವಾ||
21
ಆ ಗುರುತನರಿತು

ನುಡಿ ನುಡಿ ನೀ ನುಡಿ ನುಡಿಯಣ್ಣ | ಹರ
ಹರ ಎನ್ನುತ ನಡಿಯಣ್ಣ ||ಪ||

ಹುಟ್ಟಿದ ಠಾವಣಿ ತಿಳಿಯಣ್ಣ | ಇದು ಮುಟ್ಟಿನ
ದೇಹವು ಕಾಣಣ್ಣ | ಮುಟ್ಟು ಹುಟ್ಟಿದ ಮೂಲವ
ತಿಳಿದರೆ ಇದರುಟ್ಟುಗಡುತಲಿದೆ ಆವಾಗಣ್ಣ | ಖಂಡಿತ
ಮಾಡುವ ಜಾಗವ ತಿಳಿದರೆ ಅಖಂಡ ಮೂರ್ತಿಯೇ
ನೀನಣ್ಣ ||1||

ತಿರುಪತಿ ಯಾತ್ರೆಯೊಳ್ ಇಲ್ಲಣ್ಣ | ತಿರುಗಿ
ತಿರುಗಿ ನೀ ಬಂದೆಣ್ಣ | ಕಾಶಿಗೆ ಹೋದರೆ ಇಲ್ಲಣ್ಣ
ಈ ದೇಶವ ತಿರುಗಿದರಿಲ್ಲಣ್ಣ | ಪರ್ವತಕೊರಿದರೆ
ಇಲ್ಲಣ್ಣ | ಪಾತಾಳ ಗಂಗೆಯೊಳ್ ಮುಳುಗಿದರಿಲ್ಲ
ಧರೆಯೊಳು ಪುರವಾಶ ಯಡಿಯೂರು ಗುರು
ಸಿದ್ದೇಶ್ವರನ ಭಜಿಸಲು ಪಾರ್ವತಿ ಪತಿಯೇ ನೀನಣ್ಣ ||2||

ಗುರುವಿನ ಪಾದ ಇಡಿಯಣ್ಣ | ಆ ಗುರುತನರಿತು
ನೀ ನುಡಿಯಣ್ಣ | ವರ ಗುರು ಮೂರುತಿ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 337

ತೀರ್ಥ ಪ್ರಸಾದವ ಸವಿದರೆ ತಿರುಗ ಜನ್ಮಕೆ
ಬರುವುದಿಲ್ಲಣ್ಣ ||3||

22
ಬಸುರಾಗದೆ ಮಗನಡೆದವ್ವ
ಬಸುರಾಗದೆ ಮಗನಡೆದವ್ವ | ಮಗನೆಸರೇ
ನಿಡಬೇಕೆತ್ತವ್ವ ||ಪ||

ಹಸಿ ಬಿಸಿ ಎನ್ನದೆ ಅಡೆದವ್ವ| ಹಸಿ
ಕೆಸರಿಗೆ ಬೆಂಕಿ ಹಚ್ಚಿ ನಡೆದವ್ವ | ಏನು
ಕಿಂಚಿತು ಪುಣ್ಯ ನಿನ್ನದವ್ವ ಇಂಥ ಮಾನವ
ಜನ್ಮಕೆ ಬಂದೆವ್ವ ||1||

ಸೋದರ ಮಾವನಿಗುಟ್ಟುವನೆ | ಅವ ಮಾದಗಿತ್ತಿಗೆ
ಮನಸ್ಸಿಟ್ಟವನೇ | ಹಾದರವಾಡಿ
ಕುಲಗೆಟ್ಟವನೆ | ಅಮ ಬಾಮರ ಮಡಿವಾಳ
ಗುಟ್ಟುವನೆ ||3||

23
ಎಂಥಾ ಕನಸು ಕಂಡೇನೆ

ಎಂಥಾ ಕನಸು ಕಂಡೇನೆ ಕೇಳಮ್ಮ ಜಾಣೆ |
ಎಂಥಾ ಕನಸು ಕಂಡೇನೆ || ಕುಂತಾಣ ದೇಶದ
ಕುರುಕ್ಷೇತ್ರದೊಳಗೊಬ್ಬ | ಕುಂತೂ ನಿಂತಗಾಯಿತೆ |
ಕೇಳಮ್ಮ ಜಾಣೆ ಕುಂತುನಿಂತಂಗಾಯಿತೆ ||ಪ||

ಕಪ್ಪೆಯು ಚರಿಸಲಾಗಿ ಆ ಧ್ವನಿ ಕೇಳಿ ಘಟ ಸರ್ಪ
ಹೆಡೆ ಎತ್ತಿದೆ | ಮುಪ್ಪುರವನೆಗೆಲಿದು ಮೂರು ರತ್ನವ
ನುಂಗಿ ಮಣಿಯಲಾರದ ಹಣ ಕಟ್ಟಿತೆ | ಕೇಳಮ್ಮ
ಜಾಣೆ | ಮಿಣಿಯಲಾರದ ಹಣ ಕಚ್ಚಿತೆ ||1||

ಮುಪ್ಪಿನ ಮೂಲೆಯೊಳು | ಭಸ್ಮದಾ ಉದುಕಾದನು
ಕಂಡೇನೊ | ಮುಪ್ಪುಳಿ ಕಮಲವ ಪತಿತೆಯೊಳ್
ಬಿಗಿದೊತ್ತಿ | ಓಡಿಲುಂಬುದ ಕಂಡೆನೋ ಕೇಳಮ್ಮ
ಜಾಣೆ | ಓಡಿಲುಂಬುದ ಕಂಡೆನೋ ||2||

ಹಸವಲ್ಲದಾನೆ ಸೊಕ್ಕಿ ಮೇಲ್ಮದವೇರಿ ಓಣಿಯೊಳ್
ಬದುಕಿರಲು | ಕುಶಲದಿಂದಲೇ ಪೋಗಿ ಸೊಂಡಿಲ

330 / ತತ್ವಪದ ಸಂಪುಟ – 1

ಪಿಡಿದರೆ | ಗಜಮರೆತು ನಿಂತಿತಲ್ಲೆ ಕೇಳಮ್ಮ ಜಾಣೆ |
ಗಜ ಮರೆತು ನಿಂತಿತಲ್ಲೆ ||3||

ಉನ್ನಾತ ಕವಿ ಲಿಂಗನು ಹೇಳಿದ ಪಾಠ ಜನರೆಲ್ಲ
ಒಪ್ಪರಂತೆ ಸಪ್ತೇಳು ಸಮುದ್ರವು ಮಡೆ ಉಕ್ಕಿ
ಬರುತಿರೆ ಗಿರಿ ಗೋಪುರವ ಕಂಡೇನೋ
ಕೇಳಮ್ಮ ಜಾಣೆ | ಗಿರಿ ಗೋಪುರವ ಕಂಡೆನೊ ||4||

24
ಶ್ರೀ ಗುರು ಮಧ್ಯದಲಿ

ಯಾಗೆ ಮುಕ್ತನಾಗಬೇಕಣ್ಣ | ಈಗಾದ ಮೇಲೆ
ಸುಳ್ಳಲ್ಲ ಕೇಳು ಜೀವ ಮುಕ್ತನಾಗಬೇಕಣ್ಣ ||
ಯಾಗೆ ಮುಕ್ತನಾಗಬೇಕು ಈಗ ತಾಮಸದೊಳಗೆ
ಬಿದ್ದು | ಹೋಗುವ ಕಾಲಕ್ಕೆ ಮತ್ತಿನ್ಯಾಗ
ನೋಡಿದರೇನು ಕಾಣೆ | ಬೇಗ ಮಾಡು
ಗುರು ಸೇವೆಯ ||1||

ಹಿಂದೆ ಭವ್-ಭವ್ ಕೊಲೆಗೆ ಬಿದ್ದೆಲ್ಲೊ |
ಕತ್ತಲಗೆ ಸಿಲುಕಿ ಮುಂದೆ ಕೋಳಕಾ ಬೀಳುತೀಯಲ್ಲೊ ||
ಹಿಂದೆ ಛಿ ಛಿ ನಾಚಿಕಿಲ್ಲದೆ ನೋಡು ಕಣ್ಣೀರಾಕಿದಂತೆ |
ಹಿಂದೆ ಏಳು ಸಮುದ್ರದೊಳಗೆ ಮಂದ
ಮತಿಗಳ್ಯಾಕೊ ನಿನಗೆ ಇನ್ಯಾಗ ಮುಕ್ತನಾಗಬೇಡಣ್ಣ ||2||

ಮುತ್ತಿನಂಥ ಜನ್ಮ ಕಾಣಣ್ಣ | ಇಲ್ಲೀಗೆ
ಬಂದು ಮರೆತರೆ | ಮತ್ತೆ ಹಿಂದಕೆ ಹೋಗಬೇಕಣ್ಣ |
ಅತ್ತೆ ಮಾವನ ಮಗಳಿಗಿನ್ನು ಕತ್ತೆಯಂತೆ ನುಡಿದು
ದುಡಿದು | ಮತ್ತೆ ನಾನಾ ಜನ್ಮಗಳಿಂದ ಮೃತ್ಯುವಿನ
ಬಾಯಿಗಿನ್ನು ತುತ್ತುವಾಗಿ ಹೋಗಬೇಡಣ್ಣ | ಇಲ್ಲಿಗೆ
ಬಂದು ವ್ಯರ್ಥ ಹೋಗಬೇಡಣ್ಣ ||3||

ಹೆಡ್ಡತನಗಳ ಮಾಡಬೇಡಣ್ಣ | ಬಲ್ಲವರ ಕೇಳಿ
ದೊಡ್ಡ ಗುರುಗಳ ಸೇರಬೇಕಣ್ಣ | ಅಡ್ಡ ಬರುವ
ದುರ್ಗುಣಗಳ ಗೊಡ್ಡು ಗುರಿಯ ಮೂಡಿ
ಕಡಿದು | ಅಡ್ಡ ಬೆಟ್ಟದ ನಟ್ಟ ನಡುವೆ
ದೊಡ್ಡ ಗವಿಯ ಸೇರಬೇಕು ||4||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 339

ಮೀರು ಬೇಡಿ ಮಾತ ಕೇಳಣ್ಣ ಸುಳ್ಳಲ್ಲವೆಲ್ಲ
ಘೋರ ಪಾತಕ ಬೀಳುತೀಯಲ್ಲ | ಆರು ಚಕ್ರದ
ಹಂಸನ ಸೇರಿ ಶ್ರೀ ಗುರು ಮಧ್ಯದಲ್ಲಿ | ಧೀರ
ಗಂಗಾಧರನ ಬೆಳಕು ತೋರುತೈತೆ ನೋಡಿರಣ್ಣ ||
ಯಾಗೆ ಮುಕ್ತನಾಗಬೇಕಣ್ಣ ||5||

25
ಶಿವಮಂತ್ರ ನೆಲೆಯಾಗಿ

ಆವಾಗ ಶಿವಮಂತ್ರ ನೆಲೆಯಾಗಿ | ಗುರುದೇವ
ತೋರಿದ ಗೊತ್ತು ಗುರಿಯಾಗಿ ||ಪ||

ಆಸಾನ ಬಲಿದು ಊರ್ಮುಕವಾಗಿ | ತುದಿನಾಶಿಕ
ಕೊನೆಯಲ್ಲಿ ಸ್ಥಿರವಾಗಿ | ಸೂಸದೆ ಮನವು
ಅಂಪುಳಿಯಾಗಿ | ಗನ ಗೋಷದೊಳಗೆ
ಮನ ಸ್ಥಿರವಾಗಿ ||1||

ಚಂದ್ರ ಸೂರ್ಯರಿಬ್ಬರೊಂದಾಗಿ | ಅಲ್ಲಿ ರಂಧ್ರ
ಮಾಣಿಕ ಮುತ್ತು ಬೆಲೆಯಾಗಿ | ನಾಗೇಂದ್ರನು
ಮೇಲೆತ್ತಿ ಹೆಡೆಯಾಗಿ | ದೇವೇಂದ್ರನ ಸಭೆಯಲ್ಲಿ
ಬೆಳಕಾಗಿ ||2||

ಬ್ರಹ್ಮನೊಳಗೆ ವಿಷ್ಣು ರೂಪಾಗಿ ಪರಾಬ್ರಹ್ಮವೆ
……. | ಅಲ್ಲಿ ನಿರ್ಮಲ ನಿಜ
ಸುಖ ಘನವಾಗಿ | ಕರಸ್ಥಳದಾನಗೋ ಲಿಂಗು
ದಯವಾಗಿ ||3||

26
ಇಂಥ ಜನ್ಮವ ಕಳೆದುಕೊಂಡರೆ

ಇಂಥ ಜನ್ಮವ ಕಳೆದುಕೊಂಡರೆ ಇನ್ನೆಂಥ ಜನ್ಮವು
ಬರುವುದು | ಅಂತರಂಗವಾಗಿ ಚಿಂತಿಸಿ ನೋಡಿ ಇಂಥ
ಜನ್ಮವು ಬಾರದು ||ಪ||

ಮಡದಿ ಇದ್ದರು ಮಕ್ಕಳಿದ್ದರು ಮತ್ತೆ ಪುತ್ರರಿದ್ದರೂ
ಒಡೆಯ ಬಂದ ಕಾಲದಲ್ಲಿ ಬಿಡಿಸುವವರಾಗಿಲ್ಲವೂ ||1||

ನಾರಿ ಮಕ್ಕಳು ಸೇರಿಕೊಂಡು ಭಾರಿ ಮನೆಯ
ಕಟ್ಟಿದ್ದರ ಪಾರಿ ಚೌಕಿ ದಾರದಿಂದ ಮಂಚವೇರಿದ್ದರು ||2||

340 / ತತ್ವಪದ ಸಂಪುಟ – 1

ತೀರಿದರೆ ಋಣ ಬೀರಿ ಪಾಶಿಮನಾಳುಗಳು ಬಂದೆ
ಎಳೆದರು ನಾರಿ ಮಕ್ಕಳು ಸೇರಿಕೊಂಡು ಗಂಟೆಂದೆ ಕೇಳ್ಪರು ||3||

ನಾರಿ ಮಕ್ಕಳು ಮೋಹವಡಗದೆ ತೋರದೈ
ವೈರಾಗ್ಯ ತೋರಿದರು ವೈರಾಗ್ಯ ಭಾಗ್ಯವ ಸೇರದೈ
ಗುರುಪಾದವಾ ||4||

27
ಕ್ಲೇಶಂಗಳೈದು

ಪಾಲಿಸಯ್ಯ ಪಾರ್ವತೀಶ್ವರ | ನೀ ಎನ್ನ
ನೊಲಿದು ಪಾಲಿಸಯ್ಯ ಪಾರ್ವತೀಶ್ವರ ||ಪ||

ಪಾಲಿಸಯ್ಯ ಭಜಕ ಜನರ ದಯಾಳು
ಎನ್ನ …. ಭವಗುಣಗಳಾ | ಜಾಲವನ್ನು ತಪ್ಪಿಸಿ
ನಿಮ್ಮ ಬಾಲನೆಂದು ಕರುಣವಿಟ್ಟು ||ಅ.ಪ||

1. ಮರೆತೂ ನಿನ್ನ ಧರೆಗೆ ಬಂದೆನೋ |
ಸಂಸಾರವೆಂಬೋ ಉರಿವ ಕಿಚ್ಚಿನೊಳಗೆ ಬೆಂದೆನೋ
ಅಜ್ಞಾನವೆಂಬೋ ಹಿರಿಯ ಭೂತದಿಂದ ನೊಂದೆನೊ
ಪಂಚೇಂದ್ರಿಯಗಳ ಉರುಳಿನೊಳಗೆ ಸಿಲುಕಿ ಮುನ್ನ
ಅರಿಯದದಮನಾಗಿ ನಿನ್ನ ಚರಣ ಯುಗವ
ಪೂಜಿಸುವುದ ಮರೆತು ನಾನು ಕೆಟ್ಟೆನಕಟ ||1||

2. ಕಾಮಿನಿಯರ ರೂಪ ನೋಡುತ | ಮಾನಸಾ
ದೊಳೆಣಿಸಿ ಕಾಮ ಸೆರದ ಅತಿಗೆ ಬೀಳುತಾ
ವಾಯುಗಳನುಳಿದು ಕಾಮ ಕೇಳಿ ಒಳಗೆ ಕೂಡುತ
ಹೇಮ ಭೂಮಿಗಳನು ಬಯಸಿ ಪ್ರೇಮದಪ್ಪಿ
ತೊಳಲಿ ಬಳಲಿ | ಸೋಮದರನೇ ನಿನ್ನ ಮರೆತು
ತಾಮಸದೊಳು ಮುಳುಗಿ ಹೋದೆ ||2||

3. ಪರರ ಗುಣವಾನೆಣಿಸಿ ಜರಿಯುತ್ತಾ ಕಣ್ಣಲ್ಲಿ
ಕಂಡ ಸರ್ವ ವಿಷಯಗಳಿಗೆ ಅರಿಯುತ್ತಾ |
ದರ್ಮವದು ಸೊಕ್ಕಿ ಗುರುವು ಹಿರಿಯರನ್ನು
ಜರಿಯುತ್ತಾ ತರುಣಿ ಸುತರೂ ನಿತ್ಯವೆಂದು
ಕರಡಿಯಂತೆ ತಬ್ಬಿಕೊಂಡು | ಬರಿದೆ ಕೆಡುವೆನಯ್ಯ
ನಿಮಗೆ ಮರುಕವೆನಿತು ಬಾರದಲ್ಲ ||3||

4. ಕೆಡುವ ತನುವನಿದನು ನೆಚ್ಚುತ್ತಾ | ಲೌಕೀಕವಿದನು

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 341

ತೊಡರು ಮೋಹದೊಳಗೆ ಮೆಚ್ಚುತ್ತಾ ನಿರ್ಭಾಗ್ಯ
ನಡೆಯೊಳ್ ಎಡಹಿ ನಿಧಿಯ ಕಾಣದಂತೆ ಮೃತನೆ
ನಿತ್ಯ ಮುಕ್ತಿ ಸುಖವಾ | ಕೊಡುವ ನಿನ್ನ ಮರೆತು
ನಾನು ಕಡು ದುರಾತ್ಮನಾದೆನಲ್ಲ ||4||

5. ಆರು ಭ್ರಮೆಗಳನ್ನು ತಿನ್ನುತ್ತಿವೆ | ಆವರಿಸಿಕೊಂಡು
ಮೂರು ತಾಪ ಎನ್ನ ಸುಡುತ್ತಿದೆ | ಸಡ್ವರ್ಗ
ಎನ್ನಗಾರು ಮಾಡಿ ಹಿಡಿದು ಕೊಲ್ಲುತ್ತಿದೆ | ಕ್ಲೇಶಂಗಳೈದು
ವೈರಿಯಂತೆ ವಸಗಿ ಮಸಗಿ ಓರುತ್ತಿಹುದು ಭವ
ನೊಯ್ಯೊ | ಲಾರೆ ಶ್ರೀ ಗುರು ಸಿದ್ದರೂಪ
ಸಾರ ಮೋಕ್ಷ ಸುಖವನ್ನಿತ್ತು ||5||

28
ಅರಿತದನು ಮರೆತರೆ

ಓದಬೇಕಕ್ಷರವಾ ಕಾಣಣ್ಣ | ಸಾಧಿಸಿ ಗುರುವಿನೊಳ್
ಓದಬೇಕಕ್ಷರವಾ ಕಾಣಣ್ಣ ||ಪ||

ವೇದ ಗೋಚರನಾದ ಗುರುವಿನ ಪಾದಕ್ಕೆರಗುವುದೆ
ಪ್ರಥಮ ಅಕ್ಷರ | ಭೇದವನು ತಾ ತಿಳಿದು
ಮೋಕ್ಷದ ಹಾದಿಯೊಳು ನಡೆಯುವ ಮಹಾತ್ಮರು ||ಪ||

ಒಂದೇ ಅಕ್ಷರ ಮೊದಲು ಕಾಣಣ್ಣ | ಚೆಂದಾಗಿ
ನೋಡಿದರಿಂದ ಐದಕ್ಷರವ ಓದಣ್ಣ | ಮುಂದೆ
ಮೂರಕ್ಷರವು ಗೂಡಿ ಒಂದೆ ಆರುವ ಸಂದಿನೊಳಗೆ
ಇಂದು ಶೇಖರ ಚಂದ್ರ ತಾರೆಗಳು ಅಂದದಿಂದಲೆ
ಬಂದು ನಿಲ್ಲುವ ||1||

ಎಷ್ಟು ಭಾಗ್ಯವಿದ್ದೇನು ಫಲವಣ್ಣ |
ಇದನರಿಯದಿರ್ದಡೆ ಕಷ್ಟವೆಂದೂ ತಪ್ಪುದಿಲ್ಲಣ್ಣ |
ಅಷ್ಟ ಅಕ್ಷರಗಳನು ಅರಿತು ದೃಷ್ಟಿಯಿಂದ
ಓದಿಕೊಂಡರೆ | ಸೃಷ್ಠಿಪತಿ ಶ್ರೀ ಹರಿಯುಪರಮ
ಇಷ್ಟ ಭಾಗ್ಯವ ಪಾಲಿಸುವನು ||2||

ಅರಿತು ಕೊಂಡರೆ ಚಂದ ಕಾಣಣ್ಣ |
ಅರಿತದನು ಮರೆತರೆ ಧುರಿತ ದುಃಖವು ತಪ್ಪುದಿ
ಲ್ಲಣ್ಣ ಸರಸವಲ್ಲಿ ಮೂಲ ವಿದ್ಯೆಯು
ದೊರಕದೆಂದಿಗೂ ಕರ್ಮಿಗಳಿಗೆ
ದೊರೆತರವನಿಗೆ ಇಹಪರದೊಳು ಪರಮ ಭಾಗ್ಯವು

342 / ತತ್ವಪದ ಸಂಪುಟ – 1

ತಪ್ಪುದಿಲ್ಲವು ||3||

ಗುರುವುನಿಂದಲೇ ತಿಳಿಯಬೇಕಣ್ಣ | ಪಂಚಾಕ್ಷರಗಳ
ಅರಿವು ಬಂದರೆ ಪರಮ ಕಾಣಣ್ಣ | ಪರಮತತ್ವಕ್ಷರಗಳೆರಡನು
ಮರೆಯದಿರು ಮಗನೆಂದು ರಂಗನು
ಹರಸಿ ಶಿರದೊಳು ಕರವನಿರಿಸಿದ ಪರಮ ಗುರು
ರಾಜೇಂದ್ರ ಕರುಣದಿ ||4||

29
ಎರಡನರಿತು

ನಾನು ಎಂಬುವನಾರು ತಿಳಿಯಣ್ಣ | ನೀ
ನಿನ್ನೊಳರಿತು ನಾನು ಎಂಬುವನಾರು ತಿಳಿಯಣ್ಣ ||

ನಾನು ಎಂಬೆರಡಕ್ಷರಾದೊಳು ತಾನೆ ತಾನಾಗಿರುವ
ಸರ್ವ ಜ್ಞಾನ ತ್ರೀಣೆ ಓಂಕಾರ ಪರಮನು ಬಾನು
ಕಳೆಯಂ ತೊಳೆಯುತಿರ್ಪನು | ಗಾನ ನಾದ ವಿನೋದ
ಕಾಣಣ್ಣ | ನಾನಾ ವಿಚಿತ್ರದ ತಾರೆ ಮಧ್ಯದಿ ಕುಳಿತು
ನೋಡಣ್ಣ | ಜ್ಞಾನಾನುಭವ ಸಮಾಧಿಯೊಳು ಕಾಣುವನು
ಮುಕ್ಕಣ್ಣ | ಹೀನ ಗುಣಗಳ ನೂಕಿ ಚರಿಸುವ
ಶ್ವಾನನು ಕಾಲ್ಮುರಿದು ಭಕ್ತ | ದೀನನೊಳು
ಬೆರೆದೇಕವಾಗಲು ಜ್ಞಾನ ಗುಟ್ಟಿನ ಮೂಲದನುಭವ ||1||

ಸಾಧು ಜನರನುಭವದ ಕೀಲಣ್ಣ | ಶೋದಿಸಿ
ನೋಡುವ ಸಾಧು ಜನರನುಭವದ ಕೀಲಣ್ಣ |
ಶೋಧಿಸಿ ನೋಡುವ ಸಾಧು ಜನರನುಭವದ ಕೀಲಣ್ಣ
ವೇದಶಾಸ್ತ್ರ ಪುರಾಣ ಆಗಮಕಾದಿ ತತ್ವಗ್
ಮೂಲ ಪ್ರಣಮನು | ಸಾಧಿಸಿದ ಬ್ರಹ್ಮಾಂಡದೊಳು
ಪರಹಾದಿಯನು ತಾ ಕಲಿತು ನಡೆಯಲು | ವಾಡಿ
ಭೀಕರನಿರುವ ನೋಡಣ್ಣ | ಸಾದಾನು ಚಿತ್ತ ಪರಂ
ತರಂಗದೊಳೇಕವಾಗಣ್ಣ | ಕಾದಿದ್ದು ಪರಮ ಶಬಾರಿ
ಹೊರಡುವ ರೀಕು ನೋಡಣ್ಣ | ಕ್ರೋಧ ಕಪಟವ
ಸುಟ್ಟು ನಾನಾ ಭೇದ ಶೀಲಗಳಳಿದ ಶ್ರೀ ಗುರು
ಪಾದವನು ನೆರ ನಂಬಿ ಆ ನಿಜ ಭೋಧೆಯೊಳು
ಸುಖಿಸಪ್ತಲನುದಿನ ||2||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 342

ಸಣ್ಣ ಸೂಜಿಯ ಬಣ್ಣ ನೋಡಣ್ಣ | ಇನ್ನೀಯೊಳಿಕ್ಕಿ
ಸಣ್ಣ ಸೂಜಿಯ ಬಣ್ಣ ನೋಡಣ್ಣ | ತನ್ನ ತಾನೆ
ಅರಿತು ನೋಡಲು | ಚೆನ್ನಕೇಶವ ತಾನೆ ತಾ ಪ್ರಸನ್ನನಾಗುವ
ನಿತ್ಯ ನಿನ್ನೊಳು ಕಣ್ಣನೂರಿನೊಳಿಕ್ಕಿ ನೋಡಲು
ಚಿನ್ಮಯಾತ್ಮನ ಕಳೆಯು ಬೆಳಕಣ್ಣ | ಉನ್ನಂತ ಹಂಸನಂದ
ಪರಮ ದೇಕ್ಷ ಕಾಣಣ್ಣ | ಹೊನ್ನು ಭಾಗ್ಯದ
ಆಶೆಯಳಿದು ಕುನ್ನಿಗುಣಗಳ ನೂಕಿ ತುಳಿದು ಮುನ್ನ
ಪರಮಾನಂದ ದಾರಿಯ ತನ್ನೊಳರಿಯಲು ತಾನೆ
ಪರಮನು ||3||

ಲಿಂಗ ಕಾಣುತ್ತಿದ್ದಿಕ ನೋಡಣ್ಣ | ಬಂಗಾರ
ದೋಲ್ ಶಿವಲಿಂಗ ಕಾಣುತ್ತಿದ್ದಿಕ ನೋಡಣ್ಣ|
ಅಂಗ ಎಂಬ ನಗರ ಇದರೊಳು ತುಂಗೆ
ಯಮುನ ಎರಡು ಕೂಡ ಸಂಗಮದ ನಡುಗುಡಿಯ
ಒಳಗೆ ಲಿಂಗ ತಳ ತಳಿಸುತ್ತಿರುವನು | ಮಂಗಳಾರತಿ
ಬೆಳಕುಮಯವಣ್ಣ | ಮುಂಗಾರು ಮಿಂಚಿನ
ಗಡುಗಿನಾರ್ಭಟ ರಭಸು ಕಾಣಣ್ಣ | ತಂಗಾಳಿ
ರಂದ್ರದೊಳು ಏರಿ ಮೇಲಕ್ಕೆ ದಾರಿ ಮುಚ್ಚಣ್ಣ |
ಅಂಗಳದ ಒಳನೋಟ ಬಹುತರ ರಂಗು ಮಾಟದ
ಚಿತ್ರಕೆತ್ತಿವ ಶುಂಗಾರ ಮಣಿ ಪೀಠದೊಳು ನಿಜ
ಲಿಂಗ ತಳತಳಿಸುತ್ತಿರುವನು ||4||

ಎರಡನರಿತು ಒಂದಾಗಿ ಕೂಡಣ್ಣ | ಬೆರೆದು
ಕೀಲಿನನುಭವ | ಎರಡನರಿತು ಒಂದಾಗಿ ಕೂಡಣ್ಣ |
ಬೆರೆದು ಎರಡೊಂದಾಗಲು ಶ್ರೀ ಪುರುಷನಂತಾನಂದ
ಅದರೊಳು | ಅರಿತು ಧ್ಯಾನಿಸಿ ಕುರಿತು ನೋಡಲು
ಉರಿವ ಜ್ಯೋತಿಯಂತಿರುವ ಪರಮನೊಳು ವರವ
ಬೇಡಲು ಪರಮ ಸುಖವಣ್ಣ | ಕರದೊಳಗೆ ಉರುಗನ
ಧರಿಸಿ ಕೊಂಡೀತು ನೋಡಣ್ಣ | ಗುರು ಮಕ್ಕಳಿಗೆ ಇದು
ದೂರದಲ್ಲಿ ದಾರಿ ಸುಖವಣ್ಣ | ದುರಿತ ಮಾಯ
ಶರಧಿ ನಾಸನ ಪರಮ ಪಾವನರಾವ ಶ್ರೀಮದ್
ಗುರುರಾಜನ ಸ್ಮರಣೆಯೊಳ್ ಮನ ಇರಿಸಿ ಪೂಜಿಪ
ಗುರುತಿನನುಭವ ||5||

344 / ತತ್ವಪದ ಸಂಪುಟ – 1

30
ಶರಣು ಸೇವೆಯ ಮಾಡುಬೇಗ

ಶರಣು ಸೇವೆಯ ಮಾಡುಬೇಗ | ಗುರು ಕರುಣಾವ
ಪಡೆದು ನೀ ನಿತ್ಯನಾಗು ||ಪ||

ಮೂರು ಮೊಗೆಯದೊಂದು ಬೆಟ್ಟಿ | ಅದನ್ನಾರು
ಕಂಡವರಿಲ್ಲ ಅದೇ ಬಲು ಕಷ್ಟ | ಏರಿ ಓದವನೊಬ್ಬ
ದಿಟ್ಟ ಅಲ್ಲಿ ಸೂರ್ಯಗೊಂಡವನೋಗಿ ಮೂರೂರ
ಸುಟ್ಟ ||1||

ಹಲವು ಬಾಂಡದೊಂದು ಹೆಜ್ಜಾ | ಅಲ್ಲಿ ಕೆಲವು
ದಿವಸದಿಂದ ಸಾಧಿಸಿ ಕಂಡ | ಬಲಿದ ಬಾಗಿಲಿಗೊಂದು
ಗುಂಡ | ಅಲ್ಲಿ ನೆಲನೆವೊರ್ವಳೆ ಒಕ್ಕಿ ಕೈಸೇರಿ ಕಂಡ ||2||

ಮುಂದೆ ತಿಳಿಗೊಳ ಉಂಟಲ್ಲಿ | ಮುಳ-ಮುಳಗಾಡೋ |
ಮುಂದೆ ನೆಲಮಾಳಿಗೆಯೋಳ್ ಅಮೃತ ತಕ್ಕೊಂಡ |
ಚರಣೆಯಿಲ್ಲದೆ ಸವಿದುಂಡ ಶಿವ-ಶರಣರ
ಒಡಗೂಡಿ ಕೈ ಸೇರೆ ಕಂಡ ||3||

31
ದಾರಿಯನು ಕಂಡು

ಯಾಕೆ ಸುಮ್ಮನೆ ದುಃಖಿಸುವಿರಿ | ಲೋಕ
ಸ್ಥಿರವಿನ್ಯಾರಿಗೆ | ನೂಕಿ ಲೋಹದ ಆಶೆಯನು
ಜಗದೇಕನಾಥನ ಭಜಿಸಿರೋ ||ಪ||

ಹಿಂದೆ ಮಹರಾಜಾಧಿರಾಜರು ಸಂದು ಹೋದರು
ಮೃತ್ಯುವಿಗೆ | ಮುಂದೆ ಹೀಗೆಯೇ ಆತ್ಮ ಜೀವಿಗಳು
ಬಂದ ದಾರಿಯನಿಡದರೊ ||1||

ಬಂದವನು ಅನುಭವಿಸಲಾರದೆ ನಿಂದೆ ನುಡಿ ಮೊರೆ
ಯಾರಿಗೆ | ತಂದೆ ಶ್ರೀ ಗುರು ಪಾದಸ್ಥಾನವ
ಹೊಂದಿ ಸುಖಿಸುವುದರಿಯದೆ ||2||

ಎರಡು ದಿನದೈಶ್ವರ್ಯದಾಂಭವ ಮರವೆ
ಮಾಯಾದಿ ಮರೆಯಲು | ದುರುಳಿನೊಳ್ ಸಿಕ್ಕಿ
ಉರುಳಲ್ಯಾತಕೋ ಅರಿತು ಸ್ತುತಿಸಿರೊ ಪರಮನ ||3||

ಸ್ಥಿರವು ಇಲ್ಲವು ಧರೆಯ ಭಾಗ್ಯವು ಮರವೆ
ಮಾಯದಿ ಬಂದಾನ ಇರಂಗ್ ಬಾಯ್ದೆಡೆ| ಬೇಟಿ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 345

ಗೋದರು ಗಿಲಿಯೊಳೊಕ್ಕರು ಬಿಡುವರೆ ||4||

ನಾನು ಯಾರಿಂ ಬಂದ ಕಾರಣ ಏನು
ಎಂಬುದನರಿಯದೆ | ಹೀನಲೋಕದ ನಾನಾ
ವ್ಯಸನದಿ ಶ್ವಾನಗಿಂತ ಕಡೆ ಆಗ್ವಿರಿ ||5||

ಕೊಲ್ಲುವರು ನಮ್ಮೆಲ್ಲರನು ನಾವೆಲ್ಲಿ ಸೇರುವ
ಎನ್ನುವ | ಸೊಲ್ಲು ಸುಳ್ಳದು ನೂಕಿ ಲಕ್ಷ್ಮಿಯ
ವಲ್ಲಭನ ಮೊರೆ ಬೇಡಿರೋ ||6||

ಜಾತಿ ಕುಲ ಕೀಳ್ ಮೇಲ್ ಎಂಬುವ ಮಾತೆ
ನರಕದ ಬಂಧಾನ | ಕೋತಿ ಚೇಷ್ಟೆಯ ಬಿಟ್ಟು
ಪರಮಜ್ಯೋತಿ ಲಿಂಗವ ನೋಡಿರೋ ||7||

ಈಗಲೋ ಯಾವಾಗಲೋ ನಾವ್ ಹೋಗುವುದು
ನಮ್ಮೂರಿಗೆ | ಭೋಗ ಭಾಗ್ಯವ ಬಿಟ್ಟು ಹೋಗುವುದ್ಯಾಗ
ಎಂದರೆ ಬಿಡುವರೆ ||8||

ಸತ್ತು ಹುಟ್ಟುವ ಎಂಬ ವ್ಯಸನದಿ ಅತ್ತು
ಬದುಕು ಮಾರಿರಯ್ಯೊ | ಸತ್ತು ಹುಟ್ಟುವ ತೊಡಕು
ಬಂಧವ ಕಿತ್ತು ಬಿಡಿ ನೀವಿಲ್ಲಿಯೇ ||9||

ನಾರಿ ಮಕ್ಕಳು ಭೂರಿ ಭಾಗ್ಯವು ಬಾರದು
ನಮ್ಮೊಂದಿಗೆ | ಸೇರಿ ಶ್ರೀ ಗುರು ರಾಜೇಂದ್ರನರು
ವಿನೊಳ್ ದಾರಿಯನು ಕಂಡು ನಡಿಯಿರೋ ||10||

32
ಐವತ್ತು ದಳ ವರ್ಣ

ಬ್ರಹ್ಮಾಂಡದೊಳಗೊಂದು | ಹಮ್ಮೀನ ಮರವುಟ್ಟಿ
ಶಂಭುಲಿಂಗ | ಶಂಭುಲಿಂಗ || ಆಗಮ್ಯವಾಗಿದೆ
ಯಾರಿಗೂ ತಿಳಿಯದು ಶಂಭುಲಿಂಗ | ಶಂಭುಲಿಂಗ ||ಪ||

ನಾದು ಬಿಂಧು ಕಳೆ ಮೂರು ವರ್ಣದ
ಬೀಜ | ಶಂಭುಲಿಂಗ || ಅದು ಮೇದಿನಿಯೊಳು
ಬಿದ್ದು ಮೊಳೆತುಕೊಂಡಿದೆ ಶಂಭುಲಿಂಗ || ಪೀಳೆ
ಪಿಂಗಾಳೆಂಬ ಗಾಳಿ ನೀರೊಳು ಬೆಳೆದು | ಶಂಭುಲಿಂಗ ||
ಅದು ರೂಡಿಯೊಳಗೆ ಎಂದು ಪ್ರಜ್ವಲಿಸುತಲಿದೆ
ಶಂಭುಲಿಂಗ ಶಂಭುಲಿಂಗ |1||

ಎಪ್ಪತ್ತೆರಡು ಸಾವಿರದ ಎಲೆಗಳುಂಟು | ಶಂಭುಲಿಂಗ ||

346 / ತತ್ವಪದ ಸಂಪುಟ – 1

ಇದಕ್ಕೆ ತಪ್ಪದೆ ಇನ್ನೂರ ಹದಿನಾರು ಕೊಂಬೆಗಳುಂಟು |
ಶಂಭುಲಿಂಗ | ಒಪ್ಪದಿಂದಲೇ ಕೊಳ್ಳಿ ವಾರಿಜ ಕಮಲಕ್ಕೆ |
ಶಂಭುಲಿಂಗ || ಇದಕ್ಕೆ ತಪ್ಪಾದೆ ಐವತ್ತು ದಳ ವರ್ಣ
ಎಸಳುಂಟು ಶಂಭುಲಿಂಗ | ಶಂಭುಲಿಂಗ ||2||

ಪೂರ್ವ ದಿಕ್ಕಿನಲ್ಲಿ ಮೋರುಗಾಯಾಗಿದೆ | ಶಂಭುಲಿಂಗ ||
ಅದು ಏರಿ ಪಶ್ಚಿಮದಲ್ಲಿ ಹಣ್ಣಾಗಿ ನಿಂತಿದೆ |
ಶಂಭುಲಿಂಗ || ಸಾರಿ ದಕ್ಷಿಣದಲ್ಲಿ ತೊಟ್ಟು ಕಳಚಿ
ಬಿದ್ದಿದೆ | ಶಂಭುಲಿಂಗ||
ಅಷ್ಟಾಂಗ ಯೋಗಿಗಳ ಅರಸಿ ಕಾಣರಲ್ಲ | ಶಂಭುಲಿಂಗ || 3||

ತೊಟ್ಟು ಇಲ್ಲದ ಹಣ ಕೊಟ್ಟ ಶಿವಲಿಂಗಸ್ವಾಮಿ|
ಶಂಭುಲಿಂಗ || ಇದ ಮನಮುಟ್ಟ ಸವಿದಣ್ಣನಿಗೆ
ಹುಟ್ಟೇ ನಾಶವಯ್ಯ ಶಂಭುಲಿಂಗ | ಶಂಭುಲಿಂಗ ||
ಬ್ರಹ್ಮಾಂಡದೊಳಗೊಂಡು ||

33
ಸತ್ಯ ಮಾರ್ಗದೊಳಗಾಡು

ಭವ ಭವಾದಿಗಳ ಮದ್ದು | ನಮ್ಮ ಗುರು
ತಂದರು ತಾವಿದ್ದು | ಫಲವೇನು ನಾವಿದ್ದು | ನಮ್ಮ
ಜನ್ಮವೇ ಇಲ್ಲಿಗೆ ರದ್ದು ||ಪ||

ಪತ್ಯವನ್ನಿಟ್ಟು ನೋಡು | ನೀ
ಸತ್ಯಮಾರ್ಗ ದೊಳಗಾಡು | ಹತ್ತವತಾರದ ಗೂಡು ನೀ
ಪಿತ್ಯದ ಲೋಗವೀಡಾಡು ||1||

ಮಾದ್ರಿಕೊಟ್ಟನು ವೈದ್ಯ | ಸತ್ಪಾತ್ರರಿಗೆ
ಇದು ಸಾಧ್ಯ | ದೊರಕಿತು ಮನಸಿನ ಭಾಗ್ಯ |
ಗುರು ತೊಲಸಿರಾಮರ ಚೋದ್ಯ ||2||

34
ಕಿಂಚಿತು ಪುಣ್ಯ

ಇಡಿ ಇಡಿ ಗುರುಪಾದವ್ವ ತಂಗೀ | ಹುಡುಗತನದ
ಬುದ್ಧಿ ಸಾಕವ್ವ | ಬಿಡದೆ ಪುರಾತ್ರಗಂಜಿ ನಡೆಯವ್ವ
ಮುಕ್ತಿ ಪಡೆದು ಪಾವನಳಾಗಬೇಕವ್ವ ||ಪ||

ಕೆಟ್ಟ ಮಾತುಗಳಿಂದೇನವ್ವ ನಿಜ ನಿಷ್ಠವಂತರ
ಸಂಗ ಕಲಿಯವ್ವ | ಆಡಿಕೊಂಡದು ಎಲ್ಲಾ ಬರಿದೆವ್ವ ಅವ್ವ ನೀ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 347

ತಿಳಿದುಕೊಂಡರೆ ನಿನ್ನಲ್ಲಿಹುದವ್ವ ||1||

ಏನುಕಿಂಚಿತು ಪುಣ್ಯ ನಿನ್ನದಪ್ಪುದು
ಇಂತ ಮಾನವ ಜನ್ಮಕೆ ಬಂದೆವ್ವ | ಆಶೆ ಪ್ರಾಶನಲ್ಲ
ಅಳಿಯವ್ವ | ಕೈ ಹೊಡೆದು ನಗೆ ನಕ್ಕರೆ
ನಿನ್ನಲ್ಲಿಹುದವ್ವ ||2||

ಬಿಡದೆ ಭಜಿಸು ಮಡಿವಾಳವ್ವ | ಮುಕ್ತಿ
ಪಡೆದು ಪಾವನಳಾಗಬೇಕವ್ವ ||ಇಡಿ ಇಡಿ ||

35
ಬಂದವರಿಗನ್ನಾವ ನೀಡು

ನೀತೀಲಿ ನಡೆಯಬೇಕಣ್ಣ | ನೀನು ಅನೀತೀಲಿ
ನಡೆದರೆ ಮೆಚ್ಚ ಮುಕ್ಕಣ್ಣ ||ಪ||

ವೇದಾಂತ ಶಾಸ್ತ್ರಂಗಳೋದಿ ಇದರ ಬೇಧವಾ
ತಿಳಿಯದೆ ಅರ್ಥ ಕೆಟ್ಟೋಗಿ | ತಕ್ಕ ಬೇರವರನ್ನ
ಕೂಡಿ | ಅವಳಿಗೆ ಅಕ್ಕ ತಮ್ಮಿಂದರೊಳು
ಸವಿ ಮಾತನಾಡಿ | ಅಕ್ಕರೆಯಿಂದೊಡಗೂಡಿ ಇವರ
ಪಕ್ಕಕ್ಕೆ ಬಿದ್ದು ನೀ ಕೆಟ್ಟೆಲ್ಲೊ ಕೂಡಿ ||1||

ತಂದೆ ತಾಯ್ಗಳ ಪೂಜೆ ಮಾಡು | ಅವರು
ನೊಂದುಕೊಂಡರೆ ನಿನಗೆ ಬಂದೀತು ಕೇಡು |
ಬಂದವರಿಗನ್ನಾವ ನೀಡು | ನೀನು ನಂದೀಶನ
ವರವನ್ನ ಬೇಡು ||2||

36
ಅಂಗದೊಳಗಣ ಅರಿವು

ಆಗಮದೊಳು ತತ್ವಾಗಮ ತಿಳಿದರೆ | ಯೋಗವ
ಸಾಧನೆ ಇನ್ಯಾಕೆ | ಶ್ರೀ ಗುರುವಿನ ನಿಜ
ಸೇವಕರಿಗೆ ಭವ ರೋಗದ ಭಯಗಳಿನ್ಯಾಕೆ ||ಪ||

ಆಸೆಯು ಮೂರು ಅಗ್ಗಾದ ಮೇಲೆ ಜಗದಾಸೆಯ
ಬಯಸುವುದಿನ್ಯಾಕೆ | ಈಶನ ತನ್ನೊಳಗೆ ವಾಸವಾಗಿರಲು
ಕೈಲಾಸವ ಬಯಸುವುದಿನ್ಯಾಕೆ ||1||

ಅಂಗದೊಳಗಣ ಅರಿವು ತಿಳಿದರೆ | ಅಂಗನೆಯರ

340 / ತತ್ವಪದ ಸಂಪುಟ – 1

ಸಂಗ ಇನ್ಯಾಕೆ | ಮಂಗಳಾತ್ಮ ಗುರು ಚಿದಾನಂದನ
ಸಂಗಡ ಬಯಸುವುದಿನ್ಯಾಕೆ ||2||

37
ನಿಜವೆಂದು ತಿಳಿದು ಪೂಜಿಸು

ನಿಜವೆಂದು ತಿಳಿದು ಪೂಜಿಸು | ಗುರು ಚರಣಾ
ತ್ಯಜಿಸು ನಿರ್ಮಾಯ ಪ್ರಪಂಚಾದ ಸ್ಮರಣಾ ||ಪ||

ಎಂದಿಗೂ ಮರಣ ತಪ್ಪದು ಕೇಳು ಮರಳೇ
ಚಂದ್ರಶೇಖರನ ಭಜಿಸು ಹಗಲಿರುಳೇ |
ಸತ್ತು ಹುಟ್ಟುವ ದೇಹ ಸಾಧನೆ ಮಾಡು |
ನಿತ್ಯ ನಿರ್ಮಲವಾಗಿ ಧ್ಯಾನಿಸು ಹಗಲಿರುಳೇ ||1||

ಸಾಧಿಸು ಸದಾಕಾಲ ಬೋಧದಮೃತವನ್ನು
ಪರರಾಮರೊಟ್ಟೆಯ ಹೊರೆಯುವುದರಿಯೇ | ನಾನು
ನಾನೆಂಬೆನು ನಾನೇ ನನ್ನರಿಯೇ ಪರಮಾತ್ಮ
ತೊಲಗುವ ಪರಿಯ ನಾನರಿಯೇ ||2||

ಅನುಕೂಲ ದಿನವು ಎಂಬುದು ದೊಡ್ಡ ಶರಧಿ |
ಅನುಕಾಲ ನಿನೆ ಮಾಡಿ ದಾಂಟಿ ನೀ ಬರದೇ ||3||

38
ತತ್ವವನುಭವ ಬಾಯಿ ಮಾತಲ್ಲ

ತನ್ನ ತಾನರಿದೊಡೆ ಮುಕ್ತ | ತಾನೆ ತನ್ನ ತಾನರಿಯದೆ
ಹೇಗೆ ವಿರಕ್ತ ||ಪ||

ಮೂರು ಮಲಂಗಳ ತೊಳೆದು | ಮುವತ್ತಾರು ತತ್ವಂಗಳ
ಮರ್ಮಾವ ತಿಳಿದು | ಮೂರೈದು ಮದಗಳ
ತುಳಿದು ಪೂರ್ಣ ತಾರಕ ಬ್ರಹ್ಮನ ಪ್ರಭೆಯೊಳು ಸುಳಿದು ||1||

ಒಂದನ್ನು ಎರಡೊಂದು ಮಾಡಿ ಅಲ್ಲೆ ಒಂದನ್ನು
ಒಂಭತ್ತು ತೆರದಿಂದ ನೋಡಿ | ಮುಂದಾರು ಮೂರೊಂದು
ಗೂಡಿ| ಸಂಧು ನಿಂದೊಂದರಿವ ತಾನಿಲ್ಲದೆ ನೋಡಿ ||2||

ಆರು ಬಾಗಿಲ ಮುಚ್ಚಿ ನಡೆದು ಮುಂದೆ ಮೂರು
ನದಿಯ ದಾಟಿ ದಾರಿಯ ಹಿಡಿದು | ಬೋರೆಂಬೋ
ಸರ್ಪನ ತಡೆದು | ಮೇಲಕ್ಕೇರಿ ಸುಸುಮ್ನಯ ಸುಧೆಯನ್ನೆ ಕುಡಿದು ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 349

ಕರದಿಷ್ಟವಾಗುವುದೆಂದರಿತು | ಅದು ಶರೀರದೊಳಿರುವ
ಸ್ಥಾನದ ಹೊಕ್ಕಿ ಮರೆದು | ಉರಿವ ಕರ್ಪೂರದಂತೆ
ಬೆರೆದು ತಾನು ಬೆರೆದೇಕವಾದೆನೆಂಬರಿವನ್ನ ಮರೆತು ||4||

ಬರಿಯ ಶಾಸ್ತ್ರಂಗಳಿಂದಿಲ್ಲ | ಪೂರ್ಣ ಪರ ತತ್ವವನುಭವ
ಬಾಯಿ ಮಾತಲ್ಲ | ಗುರು ಪುತ್ರರಿಗೆ ದೂರವಿಲ್ಲ
ಇದರಿರವನ್ನು ಗುರುಸಿದ್ದನೋರ್ವನೆ ಬಲ್ಲ ||5||

39
ಶಂಕರಿಯೇ

ಹರಿ ದಾಸರ ಕಂಡು ನಿಂದಿನಿದಾತನು ಮರೆಮಾಡು
ಶಂಕರಿಯೇ | ನಿನ್ನ ವರವುಳ್ಳ ಪಾದಕ್ಕೆ ಕವಿ ಪಾಶ
ಬೀರುವೇ ಹರಗುಟ್ಟು ಉರುಕಾತಿಯೇ ||ಪ||

ಧರಣಿಯೊಳಗೆ ದೊಡ್ಡ ಪಟ್ಟಣ ಗ್ರಾಮದ ದೊರೆತಾನ ನಿನ್ನದಮ್ಮ |
ಮಾರಮ್ಮ ದೊರೆತಾನ ನಿನ್ನದಮ್ಮ ಬರೆದ ಲಿಖಿತವನ್ನು ಅತ್ತಿಸಿದಾತನ ಕೊರೆದು
ಬೀಸಾಡಿರಮ್ಮ ||1||

ಉತ್ತಾರ ದಿಕ್ಕಿಗೆ ಹೊತ್ತಿ ನೋಡವಳೆ ಸತ್ತೀಗೆ ನೆರಳವಳೆ | ಮಾರಮ್ಮ ಸತ್ತೀಗೆ ನೆರಳವಳೆ ಮುತ್ತೀನ ಮೂಗುತಿ ದುತ್ತಾಗಿ ಸೀರೆವಾ ಕತ್ತಿಯ ಕೈಯವಳೆ ||2||

ಗುಡುವಿನ ರೋಗಕ್ಕೆ ಕಿಡುಗಣ್ಣಿ ನೀನೆಂದು ಒಡಕೇಡು ಘನ ತಲೆಯ |
ಬಿಡದೆ ಖಡ್ಗವನ್ನೆತ್ತಿ ಕಡಿಯದಿರ್ದೊಡೆ ಜಗದೊಡತಿ ನಿನ್ನಾಣೆಯಮ್ಮ ||3||

ಕರುಣೀಸು ಸರ್ಪಾದ್ರಿ ಗುರುಭಕ್ತಿಯೋಗಿಯು | ಬರೆದÀವನೆಸರ
ಮಾರಮ್ಮಾ | ಬರೆದವ ನೆಸರರಿಯ ಕರೆದು ಕಾಲುಲಿಂಗ ನಡುನೆತ್ತಿ ನಡು
ಕೆರಿ ಇಡಿ ಗುರಿ ಒಡೆ ಮಾರಿಯ ||4||

40
ಇನ್ಯಾಕೋ ಯಮನ ಬಾಧೆಗಳೋ

ಇನ್ಯಾಕೋ ಯಮನ ಬಾಧೆಗಳೋ ಬಾಧೆಗಳೋ
ಎನ್ನ ಜಿಹ್ವೆಯೊಳಗೆ ಹರಿಧ್ಯಾನವಂದಿರಲು ||ಪ||

ಪತಿತ ಪಾವನನೆಂಬ ನಾಮ ಹರಿನಾಮ |
ಸತತವೂ ಯತಿಗಳು ಸ್ತುತಿಸುವ ನಾಮ | ಚತಿತ
ವಂದಿದ್ದರೆ ನಾನು | ಹರಿನಾಮ | ಸದ್ಗತಿಯ

350 / ತತ್ವಪದ ಸಂಪುಟ – 1

ಪಾಲಿಸುವಂತ ಅತಿಶಯ ನಾಮ ||1||

ಇದಕ್ಕೆ ಪ್ರಹ್ಲಾದನು ಸಾಕ್ಷಿ ಅದು ಸಾಕ್ಷಿ |
ಕನ್ನೆ ಶಿರೋಮಣಿ ದ್ರೌಪತಿ ಸಾಕ್ಷಿ ಚಿನ್ನದೊಂದ |
ಜಮೀಶ ಸಾಕ್ಷಿ ಅವ ಸಾಕ್ಷಿ | ನಮ್ಮ ಪುಣ್ಯ ಲೋಕವನಾಳುವ
ಧ್ರುವನೊಬ್ಬ ಸಾಕ್ಷಿ ಅವಸಾಕ್ಷಿ ||2||

ಹದಿನಾಲ್ಕು ಲೋಕವನಾಳ್ವ | ನಮ್ಮ ಮದನ ಜನಕನಾಗಿ
ಮುದದಿಂದ ಬಾಳ್ವೆ | ಪದುಭನಾಭನಾಗಿ ನಿಲ್ವ ಅವ ನಿಲ್ವ |
ನಮ್ಮ ಗುರುವಾದ ಪುರಂದರ ವಿಠಲನೇ ಕಾಯ್ವ ಅವಕಾಯ್ವ ||3||

41
ಗುಡಿ ಗುಡಿಯನ್ನು ಸೇದಿ ನೋಡಿ

ಗುಡಿ ಗುಡಿಯನ್ನು ಸೇದಿ ನೋಡಿ | ನಿಮ್ಮ ಒಡಲೊಳಗಿರುವ
ಒಳ ರೋಗಗಳನ್ನೀಡಾಡಿ ||ಪ||

ಬುರುಡೆ ಎಂಬುವುದು ಈ ಶರೀರ | ಕಾದಿರುವ ಸುಕೃತವೆಂಬ
ಕೊಳವೆ ಆಕಾರ | ಗುರು ಶೃತಿ ಎಂಬುವ ನೀರಾ | ಅದರಳತೆಯಿಂದಲೇ
ತುಂಬಿತೆಗೆ ಮುಜುಗಾರ ||1||

ನಿನ್ನ ದಿನ ಪಾತಕ ಎಂಬ ಭಂಗಿಯ ಕೊಟ್ಟ | ಅದನ್ನರಿತು
ಚಿಲ್ಮಿಯೊಳಚ್ಚಿ | ಸದಾ ಶಿವನ ಉರಿತೆಂಬ ಕೆಂಡವ ತಂದಚ್ಚಿ ||2||

ಹರನೆಂಬುವ ಅಮಲು ತೋರುವ | ಗುರು ಬುದ್ದಿಯನ್ನು
ನೆನಸುವುದು | ಸಚ್ಚಿದಾನಂದನೆಂತೆಂಬೋ ಪದವು ಕಾಂಬುವುದು ||3||

42
ಯಾತ್ರೆ ಮಾಡಿ ಬಂದೆ

ಶ್ರೀ ಗಿರಿಯ ಸುಕ್ಷೇತ್ರಕ್ಕಿಂದು | ಹೋಗಿ ಯಾತ್ರೆ
ಮಾಡಿ ಬಂದೆ | ಶ್ರೀ ಗಿರಿಯ ಶರೀರದೊಳ
ಗುಂಟು ಓಂ ಶ್ರೀ ಗುರುಸಿದ್ದಾ | ಯೋಗಿ ಜನರಿಗೆ
ವರ್ಮ ಬೇರುಂಟು ||ಪ||

ಆರು ಬೆಟ್ಟವಾ ದಾಂಟಿ ನಡೆವೆ ಮೂರುಕೊಳದ
ಮೂಲಕ್ಕಿಳಿದೆ | ಏರಿ ನೋಡದ ಕೈಲಾಸದ್ವಾರವಾ |
ಓಂ ಶ್ರೀ ಗುರು ಸಿದ್ದಾ ಸಾರಿ ಬರಗಾಲ |
ಗಡಿಯ ಕಂಡೇನೋ |
ಏಳು ಸುತ್ತಿನ ಕೋಟೆಯೊಳಗೆ | ನೀಲ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 351

ಮುಪ್ಪರಿಕೆಗಳ ನಡುವೆ | ತಾಳೆ ಮದ್ದಾಳೆ ಭೇರಿ
ಗಂಟೆಗಳೂ | ಓಂ ಶ್ರೀ ಗುರು ಸಿದ್ದ ವಾಳ್ಯ ವಾಳ್ಯಕೆ
ತಾವೇ ನುಡಿದಾವು |
ಬರುವ ಕೋಣಗಳೆಂಟಾ ಬಡಿದೆ | ಗಿರಿಯ
ಹುಲಿಗಳಾರ ತಡೆದೆ | ಮೊರೆವ ಸರ್ಪನ ಹೆಡೆಯ
ಮೆಟ್ಟಿದೆನೋ | ಓಂ ಶ್ರೀ ಗುರು ಸಿದ್ದಾ ಚರಿಪ
ಕಪಿಯನ್ನಿಡಿದು ಕಟ್ಟಿದೆನೋ |
ಒಂಭತ್ತು ಬಾಗಿಲದರೊಳ್ ಇಂಬವಾದ
ಬೀದಿಗಳ್ ನಾಲ್ಕು | ತುಂಬಿ ಸೂಸುವ ಕೊಳಗಳೇಳುಂಟು
ಓಂ ಶ್ರೀ ಗುರು ಸಿದ್ದಾ ಸ್ತಂಭ ಎರಡು
ಶಿಶಿರ ಒಂದುಂಟು|
ಪಾತಾಳ ಗಂಗೆಯೊಳ್ ಮಿಂದು ಜ್ಯೋತಿ
ಶಿಖರೇಶ್ವರನಿಗೆರಗಿ | ಜ್ಯೋತಿ ಲಿಂಗಕ್ಕೆ ದೃಷ್ಟಿ ಇಟ್ಟೆನೋ
ಓಂ ಶ್ರೀ ಗುರು ಸಿದ್ದಾ ಜ್ಯೋತಿ ಲಿಂಗವು
ಕಾಣಿಸಿತು ||
ಇಂದ್ರ ದಿಕ್ಕೀನೊಳ್ ಎದ್ದ ಸೂರ್ಯ ಚಂದ್ರಗುಪ್ತ
ಪುರದೊಳ್ ಮುಳುಗಿ ಅಂದ ಚೆಂದಾದ ಬೆಳಕೇ
ಕಾಂಬುವುದು | ಓಂ ಶ್ರೀ ಗುರು ಸಿದ್ದಾ ನಿಂದು
ನೋಡಲು ಬಯಲಿಗೆ ಬಯಲಾಯಿತು |
ಸಪ್ತ ನದಿಯ ಸಂಗಮ ದಾಂಟಿ | ಗುಪ್ತಕದಳಿ
ಮನದೊಳ್ ಸುಳಿದು | ಅಲ್ಲಿರ್ಪ ಗುಹೆ
ಯೊಳಗೊಬ್ಬಾಳೇ ಒಕ್ಕೇನೋ | ಓಂ ಶ್ರೀ ಗುರು
ಸಿದ್ದಾ ಸಪ್ತ ವರ್ಣದ ಲಿಂಗಾವ ಕಂಡೇನೊ |
ಅಂತಪ್ಪ ಶ್ರೀ ಗುರುಸಿದ್ದಾ ಅಂತರಂಗದ
ಗುಡಿಯ ಕಂಡೇನೊ ||
ಗುಡಿಯ ಶಿಖರಕಗ್ನಿ ಮುಖದೊಳ್ ಅಲ್ಲಿರುವ
ಅರಕೇಶ್ವರನ ಹಿಂದೆ ಸುರಿಯಧಮೃತ ಪಂಚಧಾರೆಗಳೋ
ಓಂ ಶ್ರೀ ಗುರು ಸಿದ್ದಾ ಅರಿತು ಸೇವಿಸು
ಮರಣ ಇಲ್ಲಿಂದ ||
ಶ್ರೀ ಗಿರಿಯ ಸುಕ್ಷೇತ್ರಕ್ಕಿಂದು | ಹೋಗಿ
ಯಾತ್ರೆ ಮಾಡಿ ಬಂದೆ ||

352 / ತತ್ವಪದ ಸಂಪುಟ – 1

43
ನಗು ಬಂದಿತಿಲ್ಲಿ

ಜಾಜಿ ಮಲ್ಲಿಗೆ ಸಂಪಿಗೆ ಕುಯ್ಯೂತಿದ್ದೆನವ್ವ
ನಾ ಕುಯ್ಯುತಿದ್ದೇನವ್ವ | ಅವ್ವಾ ಎನಗೊಂದು ನಗು
ಬಂದಿತಿಲ್ಲಿ ||ಪ||

ಅಂಡಂಡದೊಳಗಗ್ನಿ ರೂಪಾಯ್ತೆ | ಭೂ ಮಂಡಲದೊಳಗೆ
ಲೇಪ್ಸಿಕೊಂಡಾಯ್ತೆ | ಕಂಡರಂಜಿಕೆ ಬರುತಾಯ್ತೆ|
ಈ ಎಂಡಾರು ಮಕ್ಕಳು | ಹಗಲು ಸುತ್ತಾಯ್ತೆ |
|| ಅವ್ವಾ ಎನದೊಂದು ||
ಬಟ್ಟ ಬಯಲೊಳು ಸುತ್ತುತೈತೆ | ಸುಟ್ಟ
ಹಣದ ಭಸ್ಮಂಗಳ ಮೈಯೆಲ್ಲ ಧರಿಸಿಕೊಂಡೈತೇ |
ಹುಟ್ಟು ಮಾರ್ಗದಲಿ ನಿಂತೈತೆ | ಅದ ಕೆಟ್ಟಗಣ್ಣಲ್ಲಿ
ನೋಡಲಳವಲ್ಲ ಐತೆ || ಅವ್ವಾ ಎನಗೊಂದು ||
ಯಂತ್ರ ಮಂತ್ರಕೆ ಸಿಕ್ಕುವುದಲ್ಲ | ಈ ಯಂತ್ರ ಮೊದಲಿಲ್ಲ |
ಇದರರ್ಥ ಪರರ್ಥ ನಮ್ಮ ಓಂಕಾರ ಗುರುವೇ
ತಾಬಲ್ಲ || ಅವ್ವಾ ಎನಗೊಂದು ನಗು ಬಂದಿತಿಲ್ಲಿ ||

44
ಭವದಿಂದ ಪೊರೆವ ತಂದೆ

ಸಾಕು ಮಾಡು ಜನ್ಮವಾ ಸಾಕು ಮಾಡು
ಸಾಕು ಮಾಡಯ್ಯ ಜನ್ಮ | ಸ್ವಾಮಿ ನಿಮ್ಮ
ಚರಣ ಕಮಲ ಬೇಕು ಎಂದು ನಂಬಿ ಇರುವೆ
ಯಾಕೆ ಗುರುವೆ ಮರೆತು ಇರುವೆ ||ಪ||

ನಾನು ನೀನು ಎಂಬ ಕೆಟ್ಟ | ಹೀನ ತರವ
ಆಂಕಾರದಲ್ಲಿ ಜ್ಞಾನ ಕೆಟ್ಟು ತಿರುಗುವಂತ ಶ್ವಾನ
ತರದ ತನುವನಿದನು ||1||
ಹಸಿವು ತೃಷೆಗಳೆಂಬ ದೊಡ್ಡ | ವ್ಯಸನದಿಂದ
ಬೆಂದು ಬೆಂದು ಕುಸಿದು ಕೊನೆಗೆ ನಸಿದು ಪೋಪ
ತೃಷ ಸಮಾನ ಕಾಯವಿದನು ||2||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 353

ಜನನ ಮರಣ ಎಂಬುವಂತ | ರೂಢಿಯೊಳಗೆ
ತಿರುಗಿ-ತಿರುಗಿ | ಕನಸಿನಂತೆ ಕೆಟ್ಟು ಪೋಪ | ಮನದ
ರಾಜ್ಯ ಇದರ ಆಸೆ ||3||

ಕಾಗಿ ನೆಲೆಯಾದೀಶ ನಿನ್ನ ಕಾಣದಂಥ ಕಣ್ಣು ಮನವು |
ಗೂಡಿನಂತೆ ಇರಲು ಬೇಕೇ ಬೇಗ ಸಲಹು ಕನಕನೊಡೆಯ ||4||

ವಿಷಂಗಳೊಳಗೆ ಸಿಲುಕಿ ಮುನ್ನ | ದೋಷಕಾರಿಯಾದೆನಯ್ಯ |
ವಾಸುದೇವ ನಿಮ್ಮ ದಯದಿ ಭವದಿಂದ ಪೊರೆವ ತಂದೆ ||5||

45
ವಿಭೂತಿ

ಹರ-ಹರ ಎನುತಲಿ ವಿಭೂತಿ ಧರಿಸಲು
ಭವಗಳ ಅರಿಯುವ ವಿಭೂತಿ | ಭವನದ
ಜನರೆಲ್ಲ ಭಕ್ತೀಲಿ ಧರಿಸಲು ಶಿವ-ಪೊರೆ ಕೈವಲ್ಯ
ವಿಭೂತಿ ||ಪ||

ಭೂತ ಪ್ರೇತ ಪಿಶಾಚಿ ನವಗ್ರಹಗಳ್ ಭೀತಿಯ
ಬಿಡಿಸುವ ವಿಭೂತಿ | ಶೀತವು ಚಳಿ ಸಂಖ್ಯೆ ಜರ
ಜಾಢ್ಯಗಳ ಭೀತಿಯ ಬಿಡಿಸುವ ವಿಭೂತಿ ||1||

ಸಾಸಿರ ಮುನಿಗಳು ಹರಿಹರ ಇಂದ್ರರು
ಕುಶಲದಿ ಧರಿಸುವಾ ವಿಭೂತಿ | ವಾಸು ದೇವಕರೆ
ಮುರಹರಿ ಬಸವಣ್ಣ ವಿಷಧರ ಇಡುವಂಥ
ವಿಭೂತಿ ||2||

46
ಐದು ಅಂಗವಾಗಿದೆ

ಶೃಂಗಾರದರಮನೆಯ ನೋಡಿ | ಐದು ಅಂಗವಾಗಿದೆ
ಆತ್ಮ ಲಿಂಗಾನ ಮಾಡಿ ||ಪ||

ಅಂಗಾಲು ಅಧಿಯನ್ನೆ ತೋಡಿ | ಇದಕ್ಕೆ
ಮುಂಗಾಲು ತೊಡೆ ಕೀಲು ಮಂಡೀಗೆ ಕೂಡಿ
ಅಂಗ ಕುಂಡಿಯ ಸಿಂಬಿಯ ಕೂಡಿ | ಮೇಲಿನ
ಅಂಗವೆಂಬ ದೊಳ್ಳು ಮಾಲವನ್ನೇ ಮಾಡಿ ||1||

ಕೂಡಿದೇಗಳು ವಸ್ತು ಬುಡಕ್ಕೆ ಬೆನ್ನು ನಾಡಿಯ

354 / ತತ್ವಪದ ಸಂಪುಟ – 1

ನರಭೀಮು ತೊಗಲೀನ ಹೊದಿಕೆ ಬಾಗಿಲುಗಳು
ಒಂಭತ್ತು ಮಾಡಿ | ಇದಕ್ಕೆ ಬೀಗವಿಲ್ಲದ ವಾಯುಯಂತ್ರ
ವನ್ನೆ ಮಾಡಿ | ತೂರುವುದು ಎಪ್ಪತ್ತೇಳು ನಾಡಿ |
ಇದಕ್ಕೆ ಬಾಗುವುದು ಅರವತ್ತೆಂಟು ನಾಡಿ | ರೋಮ
ಕೋಪಗಳೆಂಬ ಕೋಟಿ | ಅಲ್ಲಿ ನೇಮವರ್ಣ ಸಿಂಗವನ್ನೆ
ನಂಬಿ ||2||

ಮೇಲೆ ಶಿರಕಳಸವನ್ನು ಮಡಗಿ | ಅಲ್ಲಿ ನೀಲಿ
ಹರಳೆರಡು ತುಳುಕುತ್ತಾ ಅಡಗಿ ಸುಲಾಡುವುವು ಮೂರು
ಕಿಟಕಿ | ಶಬ್ದ ಕೇಳುವುದು ಎರಡು ರಂಧ್ರಗಳ ಮಡಗಿ ||3||

ಈ ಮನೆಯ ಯಜಮಾನ ಕಾಯಾ | ಇವನ
ನೇಮಕ್ಕತೀತನು ಬಹಳ ಎಳಸಿನ ಪ್ರಾಯ |
ಇವ ಶ್ಯಾಮ ಸುಂದರನಿಗೆ ಬಹುಪ್ರಿಯ ||4||

47
ಪಾಪಗಳ ಪರಿಹರಿಸು

ಏನು ಬರೆದೆಯೋ ಬ್ರಹ್ಮನೇ | ಎನ್ನಿರಿಸಲಾರದೆ
ಸುಮ್ಮನೇ ಮಾನವನು ಹೊಗಲಾಡಿ ಜನರೊಳು
ಹೀನನಾಗುವ ಹಾಗೆ ಹಣೆಯೊಳಗೆ ||ಪ||

ಹಿಂದೆ ಮಾಡಿದ ಕರ್ಮವು ಇದಕ್ಕೊಂದು
ಪಾಯದ ಮರ್ಮವು | ತಂದೆ ನಿನ್ನನು ಇಂದು
ಬೇಡುವ | ಮಂದರೋದ್ದರನೆಂದು ಬಂದೆನು ||1||

ಪಾಪಿಗಳ ಹರ ಇವನಾರೆಲ್ಲೋ ಅಯ್ಯ ಭೂಪದಶವ
ತಾರನೇ | ಕೋಪ ಮಾಡದೆ ದಾನ ಮಾಡಿದ
ಪಾಪಗಳ ಪರಿಹರಿಸು ಬೇಗನೆ ||2||

ಗುರುವು ತೊಲಸೀ ರಾಮನೇ | ಅಯ್ಯ ಪರಮ
ಪವಿತ್ರಾ ಪ್ರೇಮನೆ | ಧರೆಯೊಳಧಿಕ ಚನ್ನಪುರಿಯ
ದೊರೆಯ ಲಕ್ಷ್ಮೀ ನಾರಾಯಣ ||3||

48
ಗುರು ದೊರಕೀದ

ದೊರಕೀದ ಗುರು ದೊರಕೀದ | ಮಾರಿ
ಪರಮನಂದದಿ ಬೋಧೆ ಅರಿವಿನೊಳಗೆ ಬಂದು ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 355

ಕರಪತ್ರ ಪಿಡಿದು ಈ ನರರ ಶರೀರದೊಳು
ತನ್ನರುವು ತನಗೆ ತೋಗಿ ಪರಮದಂಬಕದಿಂದ ||1||

ಇಂದಿನ ದಿನವು ಸ್ಥಾವೊಂದುಳಿಯದೇ ಬಿಂದು
ವಸ್ತುವಿನೊಳಾನಂದದಿಂದಲೇ ಬಿಂದು ||2||

ಶಿಸು ನಾಳೀಸ್ಯ ಪ್ರಕಾಶ ಗೋವಿಂದನ|
ಶರಣದೊಳಗೆ ಬಂದು ||3||

49
ಕಲ್ಯಾಣ ಪುರದಲಿ ಹಗರಣವಾಗಿದೆ

ಬನ್ನೀರಿ ಗಣವರರೇ…. ಸನ್ನುತ ಗುಣವಿತರೇ |
ಚನ್ನ ಶೈವ ಬಸವೇಶನ ಪರತರ ಉನ್ನತ
ಮದುವೆಯ ಸಂಭ್ರಮಬಿಂದು ||ಪ||

ಪಂಚಭಕ್ಷ ಪರಮಾನ್ನ ಭೋಜನೆ ವಂಚನೆ
ಇಲ್ಲದೆ ಸವಿಯುವ ಭರದಿ| ಪಂಚಮುಖನು ಅವತಾರೆ
ಬಸವಣ್ಣನ ಮದುವೆಯ ಸಂಭ್ರಮವಿಂದು ||1||

ಹರಳಯ್ಯ ಮದುವಯ್ಯನವರಿಗೊಂದೆಳೆ ಊಟ
ಶಂಬೋ ಮಹಾದೇವಾ | ಹರ-ಹರ ಶಂಬೋ
ಮಹಾದೇವಾ | ದುರುಳ ಬಿಜ್ಜಳನಿಗೆ ಕಡೆಗೊಂಡಿತೀದಿನ
ಶಂಭೋ-ಮಹಾದೇವಾ ಹರ-ಹರ ಶಂಭೋ
ಮಹಾದೇವಾ ||2||

ಕಲ್ಯಾಣ ಪುರದಲಿ ಹಗರಣವಾಗಿದೆ ಶಂಭೊ
ಮಹಾದೇವ | ಹರ ಹರ ಶಂಭೋ ಮಹಾದೇವ |
ಕಲ್ಯಾಣದಾಟವು ಕಡೆಗೊಂಡಿತೀದಿನ ಶಂಬೊ
ಮಹಾದೇವ ಹರ-ಹರ ಶಂಬೋ ಮಹಾದೇವ ||3||

ಅಲ್ಲಿದ್ದ ಶರಣರು ಇಲ್ಲಿಯೂ ಇರುವರು
ಶಂಭೊ ಮಹಾದೇವ | ಹರ-ಹರ ಶಂಬೋ
ಮಹಾದೇವ ಇಲ್ಲಿದ್ದ ಶರಣರು ಅಲ್ಲಿಯೂ ಇರುವರು
ಶಂಬೋ ಮಹಾದೇವ | ಹರ-ಹರ ಶಂಬೋ
ಮಹಾದೇವಾ ||4||

ಕೂಡಲ ಸಂಗಮನಲ್ಲಿಗೆ ಬಸವನು ಶಂಬೊ
ಮಹಾದೇವಾ ಹರ-ಹರ ಶಂಬೋ ಮಹಾದೇವಾ |

356 / ತತ್ವಪದ ಸಂಪುಟ – 1

ಕೂಡಿದೆ ಹರುಷದಿ ಪೋಗುವುದೆಲ್ಲಿಗೆ ಶಂಬೋ
ಮಹಾದೇವಾ ಹರ-ಹರ ಶಂಬೋ ಮಹಾದೇವ
ಶರಣೆ ನೀಲಮ್ಮನು ಲಿಂಗದೊಳೈಕ್ಯವು ಶಂಬೋ
ಮಹಾದೇವಾ ಹರ-ಹರ ಶಂಬೋ ಮಹಾದೇವಾ ||5||

50
ತೇರು ಸಾಗಿ

ತೇರು ಸಾಗಿತಮ್ಮ ನೋಡಿರೆ | ಈ ದೇಹವೆಂಬೋ
ತೇರು ಸಾಗಿತಮ್ಮ ನೋಡಿರಿ | ತೇರು ಸಾಗಿತಮ್ಮ ನೋಡಿ |
ಸಾರ ಮುಕ್ತಿ ಸತಿಯರೆಲ್ಲಾ ಪಾರಮಾರ್ಥ ತತ್ವದೊಳು ವಿಚಾರ
ವೆಂಬೋ ಆದಿಯೊಳಗೆ ||ಪ||

ಕಾಲೇ ಎರಡು ಗಾಲಿಯಾಗಿವೆ | ಜಗಂಗಳವಕ್ಕ
ಕೀಲಿನಚ್ಚಿನಂತೆ ತೋರಿದೆ | ಈ ತೊಡೆಗಳೆರಡು
ಮೇಲು ಮುಖದ ಕಂಭವಾಗಿದೆ |
ಆಧಾರ ಮುಖ್ಯ ಏಳು ಚಕ್ರವೇ ಸವತನೊಳೇಳು
ಏಳು ನೆಲೆಗಳಾಗಲದರ | ಮೇಲೆ ತೋರ್ಪ ಮಸ್ತಕವೆ
ಈಲೋಲ ರತ್ನ ಕಳಸವೆಣಿಸಿ ||1||

ಕರಗಳೆರಡು ಮದನ ತೋಳ್ಗಳೂ | ಮೇಲಿರುವ
ಭುಜದ ಶಿರಗಳೆರಡು ಹೊಳೆವಾ ಧ್ವಜಾಗಳೋ |
ನೇತ್ರಂಗಳೆರಡು ಮೆರೆವಾ ನೀಲ ದರ್ಪಣಂಗಳು
ಉಜ್ವಲಿಸುತಲಿರ್ಪ ಶರೀರ ಕಾಂತಿ ಇದಕ್ಕೆ ಸುತ್ತ
ಇರುವ ಪಟಗಳಾಗಿ ತೋರೆ | ನೆರೆ ಸುಸುಮ್ನನಾಡಿ
ಎಂಬ ಬಿರಿಯ ಬಲದ ಬಿರುಹುನಿಂದ ||2||

ತುನು ಗುಣುಗಳೆಲ್ಲಾ ಪ್ರಜೆಗಳೊ | ಮುಂಬರೆವ
ಬುದ್ದಿ ಮನಗಳೆಂಬೋ ಎರಡು ವಾಳಿಗಳು ||
ವೈಖರಿಯ ನುಡಿಗಾಲೆ ನೀತಿವೆಲ್ಲ ವಾದ್ಯರವಗಳೂ
ಸಂಭ್ರಮದಿ ಬಂಧು | ಮಿಸುಪ ಹೃದಯ
ಕಮಲವೆಂಬ ಕನಕ ಪೀಠಜೆಗ್ರದಲ್ಲಿ | ಚಿನುಮಯಾತ್ಮೆ
ಶ್ರೀ ಗುರುಸಿದ್ದಾ ನೆನುವಿನಿಂದ ಮೂರ್ತಿಗೊಳಲು ||3||

51
ಕಡೆ ಹಾಯಿಸು

ಗುರುರಾಯ | ಸದ್ಗುರುರಾಯ | ತವಚರಣದ
ಕರುಣವಾ ತೋರಯ್ಯ … ||ಪ||

ಮರೆತು ಬಂದೆನು ನರಜನ್ಮಕ್ಕೆ | ಗುರಿಯಾದೆನು
ಜನನ ಮರಣಕ್ಕೆ | ಅರಿಯಿತು ಪೊರೆಭವ ತರುವುದಕೆ …|
ಗುರು ರೇಣುಕಾ ನಿನ್ನ ಮೊರೆ ಹೊಕ್ಕೆ ||1||

ಪಿಡಿದಿಹುದೆನ್ನನು ಭವಶರಧಿ ಕಡೆಗಾಲಿಕೆ
ಬಂದು ನೀ ದೊರೆದೆ | ಬಿಡಿಸುತಾ ಭವವನು
ನೀ ದಯದಿ ಕಡೆ ಹಾಯಿಸು ಕರುಣಾ ಆ ಶರಧಿ ||2||

ಬಲ್ಲಿದನೆಂಬರ ನೋಡಿದೆನು | ಅವರಲ್ಲೆ
ವಿಚಾರವಾ ಮಾಡಿದೆನು | ಸಲ್ಲದವರ ಬಿಟ್ಟೊರಸಿದನು |
ಘನ ನಲ್ಲಾ ನಿನ್ನಯ ಪಾದ ಸೇರಿದೆನು ||3||

ಕ್ಷಿತಿಯೊಳು ರಂಭಾಪುರವಾಸ | ಅಲ್ಲಿ ಯತಿಗಳ
ಕೂಟವೇ… ಕೈಲಾಸ | ಪತಿ ಫೇರ್ ಸಿಂಗೇಶ್ವರ
ಕೊಡು ಲೇಸಾ ನಾಮತಿಯೊಳು ಮಾಡುವೆ
ನವದ್ಯಾಸ ||4||

52
ದೊರೆಗಳ ಭೀತಿಲ್ಲ

ನಾರಾಯಣ ಎನ್ನಿರೊ ನರಹರಿಯ ಪಾರಾಯಣ
ಮಾಡಿರೋ | ನಾರಾಯಣನೆಂದು ಅಜಮೀಳ ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳರುಹಿರೊ ||ಪ||

ಚೋರರ ಭಯವಿಲ್ಲವೋ ಇದಕ್ಕಿನ್ನು ಯಾರ
ಅಂಜಿಕೆ ಇಲ್ಲವೋ ಪುರವನ್ನಾಳುವ ದೊರೆಗಳ ಭೀತಿಲ್ಲ |
ಮೋಹ ಪಾಪಗಳೆಲ್ಲ ಹಾರಿ ಹೋಗುವುದಯ್ಯ ||1||

ಕಾಶಿಗೆ ಪೋಗಲ್ಯಾಕೆ ಕಾವಿಯ ಹೊತ್ತು
ದೇಶಿದ್ದು ತಿರುಗಲ್ಯಾಕೆ | ವಾಸುದೇವನ ದಿವ್ಯನಾಮಾದ
ನೆನೆದರೆ ಕ್ಲೇಶಗಳೆಲ್ಲವೂ ಲೇಶಮಾತ್ರವೂ ಇಲ್ಲ ||2||

ಸ್ನಾನವ ಮಾಡಲ್ಯಾಕೆ ಮಾನವರಿಗೆ
ಮೌನ ಮುದ್ರೆಗಳ್ಯಾತಕೊ | ರಂಗಶಯನ ಶ್ರೀ
ಪುರಂದರ ವಿಠಲನ ಧ್ಯಾನಕ್ಕೆ ಸರಿಯುಂಟೆ
ಕೇಳಿ ಸಜ್ಜನರೆಲ್ಲ ||3||

53
ಕುಣಿಸುತ್ತಿರುವುದಲ್ಲಣ್ಣ

ಶಿವನಲ್ಲಿ ಶರಣಾಗಿರಣ್ಣ ನಿನ್ನ ಭವದ
ಕೋಟಲೆಯನ್ನು ಪರಿಹರಿಪನಣ್ಣ || ಶಿವನಲ್ಲಿ ||

ಹುಟ್ಟುತ್ತ ಹೊತ್ತು ತರಲಿಲ್ಲಿ ತರಲಿಲ್ಲಿ ಮತೆ ಸತ್ತಾಗಕೊಂಡು
ಹೋಗೊಲ್ಲ | ಎತ್ತಿಂದಲೋ ಬಂದ ಹೆಣ್ಣು
ಮಣ್ಣಿಗಾಗಿ ಹುಚ್ಚಾಗಿ ಒದ್ದಾಡಿ ಸಾಯುವೆಯಲ್ಲೊ ||2||

ಮನವೆಂಬೊ ಮರ್ಕಟವು ನಿನ್ನ ಹಿಡಿದು
ಕುಣಿಸುತ್ತಿರುವುದಲ್ಲಣ್ಣ | ಅದನು ನೆನೆವೆಂಬ ಹಗ್ಗದಲಿ
ಕಟ್ಟಿ ಶಿವನಿಗೊಪ್ಪಿಸಿ ಅನುಪಮಾನಂದಕ್ಕೆ ದೊರೆಯಾಗಿರಣ್ಣ ||3||

54
ಗುರುವೀನ ಅರುವಿನೊಳ್

ಗುರುವೀನ ಅರುವಿನೊಳ್ ಇರಬೇಕು ಪರದೇಶಿಯಾಗಲು
ಗುರುವಿನ ಅರುವಿನೊಳ್ ಇರಬೇಕು ||ಪ||

ತನ್ನನು ತಾನೆ ತಿಳಿದಿರಬೇಕು ಕುನ್ನಿಯ
ಗುಣಗಳ ನೂಕಿರಬೇಕು | ಪನ್ನಂಗಧರ ಪರಮಾತ್ಮನ ಆ
ನಿಜಗಣ್ಣಿನಿಂದ ತಾ ಕಂಡಿರಬೇಕು ||1||

ವೇದಗಳೊಡಲನು ತಿಳಿದಿರಬೇಕು | ಭೇದವನ್ನೆಲ್ಲವ
ಬಿಟ್ಟಿರಬೇಕು | ಸಾಧಿಸಿನಾದ ಬಿಂದು ಕಳೆಯ
ಸಾಮಾಧಿಯೊಳಗೆ ತಾ ಮಲಗಿರಬೇಕು ||2||

ಸತಿ ಸುತರಾಶಿಯ ಬಿಟ್ಟಿರಬೇಕು | ಸ್ಥಿತಿ ಕುಲ
ಭಾಗ್ಯವ ದಾಂಟಿರಬೇಕು | ಮತ ಕುಲ ಸೂತಕವಳಿದಾ
ರೂಢನ ಪತವ ನಂಬಿ ತಾ ಸುಖಿಸಿರಬೇಕು ||3||

ಹರಿಹಜರೀರ್ವರ ಕೂಡಿಸಬೇಕು | ಹರನೊಳು ಮನಗುರಿ
ಇಟ್ಟಿರಬೇಕು | ಉರಿಯುವ ಜ್ಯೋತಿಯ ಬೆಳಕಿನೊಳಗೆ ತಾನೂ
ಬೆರೆದೇಕವಾಗಿ ಮನ ನಿಲ್ಲಿಸಬೇಕು ||4||

ಗಾನ ವಿನೋದವ ಕೇಳಿರಬೇಕು | ಭಾನು

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 359

ಪ್ರಕಾಶನ ನೋಡಿರಬೇಕು | ಜ್ಞಾನಿಯಾದ ಗುರು ರಾಜೇಂದ್ರನ
ಪಾದ ಧ್ಯಾನದೊಳಗೆ ಮನ ನಿಲ್ಲಿಸಬೇಕು ||5||

55
ಮೂರು ಬಾರಿಗೂ ಸಾರಿದೆ

ತತ್ವಚಿಂತೆಯ ಮಾಡು ಮನುಜ ವ್ಯರ್ಥ ಕಾಲವ
ಕಳೆಯದೆ | ವ್ಯರ್ಥಕಾಲವ ಕಳೆಯದೆ ಮೃತ್ಯು ಬರುವುದು
ಮುಂದೆ ಕೇಳಿರಿ ಮೂರು ಬಾರಿಗೂ ಸಾರಿದೆ ||ಪ||

ಮನೆಯು ಹತ್ತಿ ಉರಿಯುವಾಗ ಬಾವಿ ತೆಗೆಯುವ
ನರನ ತೆರದಿ ಕೊನೆಗೆ ಯಮನರು ಬಂದು ಎಳೆವಾಗ
ಕೋರಿದರೆ ಸುಖಬಾರದು ||1||

ನಾನು ನನ್ನದು ಎಂಬ ಉದರಭಿಮಾನವು ನಿನಗ್ಯಾಕೆಲೋ |
ಅಭಿಮಾನವು ನಿನಗ್ಯಾಕೆಲೋ ಸೊಹಂಭಾವಕೆ ಹಾನಿ
ಬರುವುದು ನೀನೆ ನಿನ್ನೊಳು ನೋಡೆಲೊ ||2||

ಮೂರು ಮೂಲೆಯ ಕೂಟದಲ್ಲಿ ಎತ್ತಿ ನಿಲ್ಲಿಸಿ
ಮನವನು || ಚಿತ್ತಸುದ್ದಿಯ ಮಾಡಿ ಗುರುವಿನ
ಒತ್ತಿನೊಳು ಸುಳಿದಾಡೆಲೊ ||3||

ಎಲ್ಲಿ ನೋಡಿದರಲ್ಲಿ ಶಿವನ ಸೊಲ್ಲು ಸುಲ್ಲಿಗು
ಭಜಿಸುತಾ || ಬಲ್ಲ ಹಿರಿಯರ ಕೇಳಿ ಸಂಶಯ ಎಲ್ಲ
ಕಳೆದೃಡ ಮಾಡೆಲೊ ||4||

ಕಾಮ ನಾಟಕೆ ಮನವ ಚಲಿಸದೆ ನೇಮಗಳನ
ಚಲಿಸಲೊ || ಸ್ವಾಮಿ ಶ್ರೀಗುರು ಫೇರ್
ಸಿಂಗೇಶನ ಪಾದ ಕಮಲವ ಭಜಿಸೆಲೊ ||5||

56
ದಾನಿ ನಿನ್ನನು ಬೇಡುವೇ

ಹೇಗೆ ಮಾಡಲು ಬೇಕೂ ವಿಠಲ ತಂದೆ
ಹೀಗೆ ಮಾಡಬೇಕು | ಯಾವಾಗಲೂ ಎನ್ನದುರಿತಗಳ್
ಕಾಣದ ಹಾಗೆ ಮೂಡಬೇಕೈ ||ಪ||

ಹಿಂದಿನ ನರಜನ್ಮವು ನಿಮ್ಮೆಯ ಕೃಪೆಯಿಂದ
ಬಂದಿತಲ್ಲವೇ | ಮುಂದೆನ್ನ ಜನನಿಯ ಗರ್ವದೊಳ್
ಜನಿಸಾದ ಹಾಗೆ ಮಾಡಬೇಕೈ ||1||

360 / ತತ್ವಪದ ಸಂಪುಟ – 1

ದಾನಿ ನಿನ್ನನು ಬೇಡುವೇ ನಿಷ್ಕರ್ಮದ
ಯೋನಿಯೊಳಗೆ ಸಲ್ಲದಾ || ನಾನು ಜನರಲ್ಲಿ ನಾನು
ಕೈ ಇಡದ ಹಾಗೆ ಮಾಡಬೇಕೈ ||2||

ವರದ ಶ್ರೀ ಪುರಂದರ ವಿಠಲ ತಂದೆ
ಮೊರೆಯ ಹೊಕ್ಕಿದೆ ನಾನಿಮ್ಮ | ಮುಂದೆನ್ನ
ಧರೆಯೊಳ್ ಜನಿಸದ ಹಾಗೆ ಮಾಡಬೇಕೈ ||3||

57
ಯಾರಿಂದಲೇನಹುದು

ಯಾರಿದ್ದರೇನಯ್ಯ ಲಿಂಗಾವೇ | ಮತ್ತೆ ಯಾರಿಂದಲೇನಹುದು
ಲಿಂಗಾವೇ || ಮಾರದರನೇ ನಿನ್ನ ಕರುಣೆ ತಪ್ಪಿದ ಮೇಲೆ
ದೂರ ನಾನಾರುವೆ ಲಿಂಗಾವೆ ||ಪ||

ತಂದೆ-ತಾಯಿಯ ನೀನೆ ಲಿಂಗಾವೇ | ಎನ್ನ ಬಂಧು
ಬಳಗವು ನೀನೆ ಲಿಂಗಾವೆ | ಬಂದುತ
ಕಂಟಕ ಪರಿಹಾರ ಮಾಡಯ್ಯ ಶಂಭು ಶಂಕರ
ಸಿದ್ದ ಲಿಂಗಾವೆ ||1||

ಅಡವಿ ಅರಣ್ಯದಲ್ಲಿ ಲಿಂಗಾವೇ ಮೇಲೆ
ಇಡಿಯಾರೆ ಕೊಂಬಿಲ್ಲಿ ಲಿಂಗಾವೆ | ನಡು ನೀರಿನೊಳು
ಹಡಗು ಮುಳುಗುದಾಗೆ ಕಡೆಯ ಸೇರಿಸಯ್ಯ ಲಿಂಗಾವೆ ||2||

ಹಕ್ಕಿ ಹಾರಕು ಮುನ್ನ ಲಿಂಗಾವೆ ನಾಳೆ ಪಕ್ಷಿ
ಕೂಗಾಕು ಮುನ್ನ ಲಿಂಗಾವೆ | ಹತ್ತೆಂಟು ಶರಣರೂ
ಶಿವಪೂಜೆ ಮಾಡುವಾಗ ಅದರೊತ್ತಲಿಂಗಯ್ಯ ಲಿಂಗಾವೆ ||3||

ಮನವೆ ಮಜ್ಜನ ಶಾಲೆ ಲಿಂಗಾವೆ | ಎನ್ನ ತನುವೇ
ದೂಪ ದೀಪ ಲಿಂಗಾವೆ | ಮನಯೊಳಗಿರುವಂತ ಎಳೆಯ
ಹೊಂಬಾಳೆ ತಂದು ನಿನಗೆ ಅರ್ಪಿಸುವ ಲಿಂಗಾವೆ ||4||

58
ಭಕ್ತನಾದೊಡೆ

ಭಕ್ತನಾದೊಡೆ ಭಯಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆ-ನುಡಿ ಶುದ್ಧವಾಗಿರಬೇಕು ||
ಭಕ್ತನಾದೊಡೆ ವಿವಿಧ ಭಕ್ತಿಯನರಿತಿರಬೇಕು
ಭಕ್ತನಾದೊಡೆ ಸದಾಚಾರ ಸಂಪನ್ನನಾಗಿರಬೇಕು

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 361

ಭಕ್ತನಾದೊಡೆ ಸದ್ವೀಕಾರ ಪರಿಪೂರ್ಣನಾಗಿರಬೇಕು
ಭಕ್ತನಾದೊಡೆ ಗುರುಲಿಂಗ ಜಂಗಮ ಪ್ರೇಮಿಯಾಗಿರಬೇಕು
ಭಕ್ತನಾದೊಡೆ ಶರಣರ ಸ್ನೇಹದಲ್ಲಿರಬೇಕು
ಭಕ್ತನಾದೊಡೆ ಲಿಂಗಪತಿ ಶರಣಸತಿ ತಾನಾಗಬೇಕು

59
ಬಂದೆನಪ್ಪಯ್ಯ

ಇಂತಮಾನ್ಸ್ ಜನ್ಮವೇನ್ ಕೆಡ್ಸಿ ಬಿಡ್ಸಿತೇನಪ್ಪ |
ಇಂತಮಾನ್ಸ್ ಜನ್ಮ ಮುಂದೆ ದೊರಕಿತೇನ್ರೋ ||ಪ||
ಸಾದು ಸಜ್ಜನರ ಸಂಗವಿಲ್ಲದೆ ಕಂತು ಹರನ
ಧ್ಯಾನವಿಲ್ಲದೆ | ಇಂತ ಬ್ರಾಂತಿನ್ ಸಂಸಾರಕ್ಕೆ ಸಿಕ್ಕಿಬಿದ್ದು
ಕೆಡ್ತಿರಪ್ಪಯ್ಯ ||1||

ವರವು ಎಂಭತ್ತು ಕೋಟಿ ಜೀವರಾಶಿಗಳಲ್ಲಿ ತಿರ್ಗಿ
ತಿರ್ಗಿ ಇಂತ ಅರವುಳ್ ನರಜನ್ಮಕ್ಕೆ ನೀವು ಬಂದೆನಪ್ಪಯ್ಯ ||2||

ಕಣ್ಣು ಮೂಗು ಕಾಲು ಕಿವಿ ಬಾಯಿ
ಇರಲಿಕ್ಕೆ ಕಾಲ ಹರನ ಧ್ಯಾನ ಮತ್ತು ಕೆಡ್ತಿರಪ್ಪಯ್ಯ ||3||

ಹಣವಿದ್ದಾಗಲೇ ಭಕ್ತಿ ಗುಣವಿದ್ದಾಗಲೇ ಮುಕ್ತಿ |
ಹಣ ಕೆಟ್ಟು ಹೋದ ಮೇಲೆ ನಿನ್ನ ಗುಣ ಕೆಟ್ಟು
ಹೋಗುವುದು | ಮುಂದೆ ಕಾಲ ಯಮನ
ಬಾಧೆಗೆ ಸಿಲ್ಕಿ ಕೆಡ್ತಿರಪ್ಪಯ್ಯ ||4||

60
ಶಿವ ಜೀವ ಇಬ್ಬರಿಗೂ ಭೇದವಿಲ್ಲ

ಮನಸಿನ ಬ್ರಾಂತು ಕಳಿಯಲಿಲ್ಲ ಕರ್ಮ
ತೊಳೆಯಲಿಲ್ಲ | ದೇಹ ಉಳಿಯಲಿಲ್ಲ | ಗನ ಸುಖ
ಬ್ರಹ್ಮ ಕಾಣರಲ್ಲಿ ಪಾಪಿ ಏನು ಬಲ್ಲ ||ಪ||

ಒಂದರಿಂದಲೇ ಮೂರು | ಹಿಂದಕೈದು
ಅಲ್ಲಿ ಐದಕೈದು ಅಲ್ಲಿಪ್ಪತ್ತೈದು | ಬೇದಿಸಿ
ನೋಡಲು ಐದೇ ಮೂರು ಅಲ್ಲಿ ಮೂರೇ ಬಂದು ||1||

ಶಾಂತಿ ಸಿಂಹಾಸನದ ಮೇಲೆ ಕುಳಿತು
ಅಲ್ಲಿ ಪ್ರಣವು ಬಲಿತು | ಅಪಾರ ಬ್ರಹ್ಮ ರೂಪ
ವಳಿದ ಅದ್ವಯಿತ ತಿಳಿದ ||2||
362 / ತತ್ವಪದ ಸಂಪುಟ – 1

ಶಿವ ಜೀವ ಇಬ್ಬರಿಗೂ ಭೇದವಿಲ್ಲ | ಮುಂದೆ
ಬಾದಿ ಇಲ್ಲ| ತಿಳಿ ತಿಳಿದಂತ ಜ್ಞಾನಿ ದೂರವಿಲ್ಲ ಇದ ಶಿವನೇಬಲ್ಲ
ತಾನು ತನ್ನ ಅರಿತ ಮೇಲೆ ಇದ್ದರೇನು |
ದೇಹ ಬಿದ್ದರೇನು | ಬವದ ಪಾಶ ಕಳಿದ
ಮೇಲೆ ಮರಣವಿಲ್ಲ ಮುಂದೆ ಜನನವಿಲ್ಲ ||4||

ಈ ಪರಿಯಿಂದ ಇವ ಚಿಂತನಾದ ನಿಷ್ಕಳಂಕವಾದ |
ಅಪಾರಬ್ರಹ್ಮವುಳ್ಳ ಯೋಗಿಯಾಳ ಚಿದಾನಂದನಾದ ||5||

61
ಕಳಕಮಲನು ನೀನೆಲಾ

ಕಳಕಮಲನು ನೀನೆಲಾ | ನಿನ್ನೊಳಗೆ ನೀ
ತಿಳಿಕೋ ಶ್ರೀ ಗುರು ಮುಖದೀ ||ಪ||

ಕಳಂಕ ಬಾವಗಳನು ಅರಿತು ತಿಳಿಕೊ ಶಂಭು
ಲಿಂಗ ನೀನೆ ||ಅ.ಪ||

ಆಧಾರ ಮೊದಲಾಗಿರು ಪಶ್ಚಿಮ ಕಡೆಗೆ
ಸಾಧಿಸಿಧಳಲಿಂಗವ | ನಾದ ಬಿಂದು ಕಳನ ಮುದ್ರೆಯ
ಸಾಧಿಸಲು ಆನಂದ ಕಾಂಬುದ | ಗಾದಿ ಮಾತಿದಲ್ಲ
ವೇದದ ಬೋಧೆಯೊಂದೆ ನಿನ್ನೊಳಗೆ ||1||

ಪರಬ್ರಹ್ಮ ಕಾಣಿಲಾ | ನಿನಗೆಷ್ಟು ಗುರು ನಾಮ
ಗುರುತೇನೆಲಾ ನರವದಲಿ ಕಡೆಯಿಲ್ಲ ಜೀವವು
ಪರಮನಲಿ ತಾ ಬೇರೆಯಾಗಿದೆ |ನಿನ್ನ ಗುರುವ
ಬಿಟ್ಟು ಅರಿವು ಕಾಂಬುದೆ ಗುರುವು ಲಿಂಗ
ಜಂಗಮರ ಸುಖವು ||2||

ನಂಬು ಶ್ರೀ ಓಂಕಾರವ ಒಂದೇ ಮನದಿ ಶಾಂಭ
ನೀನಾಗು ಎಲಾ ಹಿಂಬವಾಗಿದೆಯೆಲ್ಲಾ ಶಿವಮಯ |
ನಂಬಿಕಿಲ್ಲದೆ ಭೇದವಾಗಿದೆ | ಕುರಿಬಿಳಿದು ಆಕಾಶ
ಕಡೆಯು ಶಂಭು ಒಂದೇ ಶಟೆ ಇದಲ್ಲಿ ||3||

62
ಬೇಸರಗೊಳ್ಳದಿರು

ಧರೆ ಸುಖ ಮುಖ ಭಾಗ್ಯವು ಸ್ಥಿರವಿಲ್ಲವು ತಿಳಿ
ಪರಮನ ಧ್ಯಾನದೊಳಿರು ಮನವೆ | ಮೊರೆಯುವ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 363

ನಾನಾ ತರತರ ವಾದ್ಯದೊಳ್ ಪರವಶವಾಗಿ ನೀನಿರು ಮನವೆ ||ಪ||

ಪತಿ ಸುತರಾಶಿಯು ಮತಕುಲ ಸೂತಕ
ಮತವ ನಂಬುಲು ಯಮಗತಿ ಮನವೆ | ಕ್ಷಿತಿಯೊಳು
ಗುರುನಿಜ ಮತವನು ನಂಬಲು ಔತಣಮಾಳ್ಪರಹಿತ
ಮನವೆ ||1||

ಎಂಟು ಜನರು ನಿನ್ನ ಗಂಟನ್ನು ಕದಿಯಲು
ಅಂಟಿಕೊಂಡಿರುವರು ಉಂಟು ಮನವೆ ತುಂಟರಿಬ್ಬರು
ನಿನ್ನ ತಂಟೆಗೆ ಬಂದರೆ ಸೊಂಟೆಯ ಮುರಿದು
ಕಾಯೋದುಂಟು ಮನವೆ ||2||

ನಿತ್ಯ ಆನಂದದ ಬುತ್ತಿಯ ಕಟ್ಟು ನೀ
ಪತ್ಯವಾಗಿರುವುದು | ಸತ್ಯ ಮನವೆ | ಮುಕ್ತಿಯ
ಪಾಲಿಗೆ ನಿತ್ಯವು ಮಂಗಳ ಎತ್ತಿ ನೋಡಲು ವಿಚಿತ್ರ
ಮನವೆ ||3||

ಲೋಕದ ಆಟವು ಬೇಕಿಲ್ಲವೊ ಬಿಡು |
ಮೂಕನಾಗಿರುವುದು ಜೋಕು ಮನವೆ | ಲೋಕಾದೀಶ
ನೊಳ್ ಏಕವಾಗಲು ಬಹು ನೀ ತಿಳಿ ಸುಖ
ಜೋಕು ಮನವೆ ||4||

ದೂಷಣೆ ಮಾಳ್ಪರು ದೇಶದೊಳಗೆ ನಿನ್ನನ್ನು
ಬೇಸರಗೊಳ್ಳದಿರು ಲೇಸು ಮನವೆ | ನಾಸಿಕ ಪುರದೊಳು
ಸೂಸುವ ರವಿ ಪ್ರಕಾಶನೊಳಗೆ ಬೆರೆ ನಿತ್ಯ ಮನವೆ ||5||

ಕವಿಯನು ಬರೆಯುತ ಗವಿಯನು ಸೇರಲು
ಕಿವಿ ಸುಡದಳಿಯದು ಭವ ಮನವೆ ಭುವನದೊಳಗೆ
ನಿಜ ವರವ ತಿಳಿದುಕೊಂಡು ಜೀವಾಮೃತವನು
ಸವಿ ಮನವೆ ||6||

ಸಾಧು ಜನರ ನಿಜ ಪಾದ ಸೇವೆಯೇ ಪರಹಾದಿಗೆ
ಸುಖ ಸಾಧನ ಮನವೆ | ಬೋಧಿಸಿ ತತ್ವದ ವಿನೋದಿಸಿ
ಸಮಾಧಿಯೊಳಗೆ ಸುಖಿಯಾಗು ಮನವೆ ||7||

ಕರುಣದಿ ನಿನ್ನೊಳು ಅರುಹಿದ ಪರಮ ಗುರುವಿನ
ಧ್ಯಾನದೊಳ್ ಇರು ಮನವೆ | ಶಿರವನು ಬಾಗಿಸಿ
ಗುರು ರಾಜೇಂದ್ರನ ಚರಣ ಸ್ಮರಣಿಯೊಳಗಿರು
ಮನವೆ || ಧರೆ ಸುಖ ಭಾಗ್ಯವು ಸ್ಥಿರವಿಲ್ಲವೂ ತಿಳಿ ||8||

374 / ತತ್ವಪದ ಸಂಪುಟ – 1
63
ತಾನೆ ತಾ ಕಾಣಿಸುವದು

ಕೆಂಪು ಮೂಗಿನ ಪಕ್ಷಿ ಸಂಪಿನೊಳಗಿರುವುದು
ನಿಂಪು ಬಲ್ಲವರು ನೀವು ಹೇಳಿ || ಹರ ಹರ ||ಪ||

ನಮ್ಮ ಹಂಪೆಯೊಳಗಿರುವಂತ ವಿರುಪಾಕ್ಷ ಲಿಂಗನ
ಸಂಪಿನೊಳಾಡುತಿದೆ ||ಅ.ಪ||

ಆರು ತಲೆ ಹದಿನಾರು ಕಣಿಗಳುಂಟು ಮೂರೇ
ಮೂರು ನಾಲಿಗೆ ಹರ-ಹರ ಮೂರೇ ಮೂರು ನಾಲಿಗೆ ||
ಅಯ್ಯ ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು ಸೇರಿತು
ತೆಂಗಲಾಗಿ ||1||

ಸಕಲ ಕಲಿಯುಗದೊಳು ಸೀತ ಮಲ್ಲಿಗೆ ಬೇರೆ
ಬೇರೆನ್ನಬಹುದು || ಅಯ್ಯ ಬಾರ ಹನ್ನೆರಡು ಬೇರಿ
ಗಂಟೆಗಳುಂಟು ಹಾರಿತು ಗಗನದಲ್ಲಿ ||2||

ಜ್ಞಾನಕ್ಕೆ ಸಿಲುಕದ ಕೋಣೆಯೊಳಿರುವುದು
ಕಾಣಿಸದು ಆ ಮೃಗ | ಜ್ಞಾನದೊಳು ನೋಡಲು
ತಾನೆ ತಾ ಕಾಣಿಸುವದು ಅಜ್ಞಾನಿಗೆ ಸಿಲುಕುವುದಿಲ್ಲ ||3||

ಪಟ್ಟ ಮಂಚದ ಮೇಲೆ ತಟ್ಟಾನೆ ಮಲಗುವುದು
ಗುಟ್ಟಾಗಿ ಇರುವುದಿಲ್ಲ | ಅಲ್ಲಿ ಕಟ್ಟು ಕಾಂಬುವುದು |
ಅಲ್ಲಿ ಘಂಟೆಯ ನಾದವೇ ನುಡಿಯುವುದು ||4||

ನೇತ್ರದೊಳಗೆ ಮನೆ ಮಾಡಾಯ್ತೆ | ಅಲ್ಲಿ ಸೂತ್ರದ
ಬೊಂಬೆ ತಾ ನಿಂತಾಯ್ತೆ ಈ ದಾತ್ರಿಯಲ್ಲವಾ
ಅಡಗಾಯ್ತೆ | ಅದು ತಾನೇ ತನ್ಮಯವಾಗಿರುವುದಣ್ಣ ||5||

ಸಾಲು ಮಂಟಪವೇ ಹಾಗಾಯ್ತೆ | ಅಲ್ಲಿಲೀಲದುಷ್ಪರಿಗೆ
ಮೇಲಾಯ್ತೆ | ಸಾಲು ದೀವಿಗೆ ಬೆಳಗುತ್ತಲಾಯ್ತೆ |
ಅಲ್ಲಿ ತಾನೇ ತನ್ಮಯವಾಗಿದದಣ್ಣ ||6||

ಮೂರು ಕಾಲಿನ ಪಕ್ಷಿ ಅದು ನಡು ನೀರಿನ
ಮದ್ಯದಿ ನಿಂತಿಹುದು | ಧೀರ ಪುರುಷರ ವಶವಾಯ್ತೆ
ದುರಂಕಾರಿಯ ಕಣ್ಣಿಗೆ ದೂರಾಯ್ತೆ ||7||

ಅಂಗದೊಳಗೆ ಶಿವಲಿಂಗವಿದೆ | ಅದು ಕಂಗಳಮದ್ಯದಿ
ಕಾಣುತ್ತಿದೆ | ಮಂಗಳ ಕರವಾಗಿ ಬೆಳಗುತ್ತಿದೆ | ನಮ್ಮ
ರಂಗಯ್ಯ ಗುರುವೇ ತಾನೆ ಆದ ||8||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 365

64
ಎಲ್ಲಾ ರೂಪವು ತಾನಂತೆ

ಎಲ್ಲಾ ರೂಪವು ತಾನಂತೆ ಶಿವನೆಲ್ಲೆಲ್ಲಿಯು
ತುಂಬಿದನಂತೆ ಅಲ್ಲಲ್ಲಿ ಅರಸುತ ಗುಡಿಗಳ ತಿರುಗುವ
ಕಳ್ಳರ ಕಣ್ಣಿಗೆ ಕಲ್ಲಂತೆ ||ಪ||

ದುಶ್ವವಿವಾದವ ತಾನಂತೆ ದುಶ್ವಯನರಿಯದ
ತಾನಂತೆ ದುಶ್ವಿ-ದುಶ್ವಿಗಳ ಎರಡರ ನಡುವೆ
ಶಾಸ್ವಿತವಾಗಿ ಇಹನಂತೆ ||1||

ಕಳವಳಗಳು ತನಗಿಲ್ಲಂತ ಮೊಳೆಯುವುದೊಂದಿಲ್ಲಂತೆ
ಬಳ ಬರ ಉದಿಸುವ ಕಲ್ಪಿತ ರೂಪಿನು
ಬೆಳಗಿಸುತ ಬೆಳಗಿಹನಂತೆ ||2||

ಕುಂದೆಂಬುದು ತನಗಿಲ್ಲಂತೆ ಮುಂದೊಂದಾ ವದತಾನಂತೆ |
ಮುಂದೊಂದಾದವರೊಳಕಿನೊಳ್ ಕೊಡುವ
ಸಂಧಿನೊಳಗೆ ಸೇರಿಹನಂತೆ ||3||

ಕಣ್ಣಿಂಬುದು ತನಗಿಲ್ಲಂತೆ ಕಣ್ಣಿಗೆ ಕಣ್ಣಗಿಹನಂತೆ |
ಕಣ್ಣ ತೆರೆದು ತನ್ನಂತರದವರಿಗೆ ಬಣ್ಣ
ಬಣ್ಣವಾಗಿಹನಂತೆ ||4||

ಕಳಿದುಳಿಯುವುದೊಂದಿಲ್ಲಂತೆ | ಕಳೆಯುವುದುಳಿಯವು
ದೊಂದಿಲ್ಲಂತೆ | ಕುಲ ಶೀಲಗಳೆಂಬ ಕೊಳೆಯು ಇಲ್ಲದಿದೆ
ನಿರ್ಮಲವಾಗಿ ಇಹನಂತೆ ||5||

ಕಿಂಕರನಾದವ ತಾನಂತೆ ಗುರುಶಂಕರನಾದವ ತಾನಂತೆ ಮಂಕನು
ಬಿಡಿಸುವ ಕಿಂಕರರಿಗೆ ಗುರು ಶಂಕರನಾದಮೌನಂದ ||6||

65
ಪರಮ ಪಾವನನೆ

ಗುರುವಿನ ಮಹಿಮೆಯ ಅರುಹಿದ ಪರಶಿವ
ತರುಣಿ ಪಾರ್ವತಿಯ ಕೇಳೆಂದ ಶರಣನ ಮಹಿಮೆಯು
ಎನಗಿಂತಧಿಕವು | ಮರೆಯಬೇಡ ಕೇಳ್
ಅವನೆಂದು ||ಪ||

ಧರಣಿಗೆ ಅದು ತಲಾರ್ಥದಿರೆ ನೀ ತಿಳಿ
ಪರಮ ಪಾವನನೆ ಅವನೆಂದ ನಿರುತವು ಅಂತರ

366 / ತತ್ವಪದ ಸಂಪುಟ – 1

ಭಾವವ ತೊಳೆಯಲು ಭರವಸೆ ಇಡದೆ ತಾಬಂದ ||1||

ಲಲಿತಾಂಗಿಯೇ ಕೇಳ್ ಶರಣನ ನಾಮಕೆ ಉರಿ
ಅಗ್ನಿಯು ಶಿತಳವಹುದು | ಕರೆಗೊಂಡವನಿಗೆ
ನಮಾಮಿ ಎನ್ನಲು ಗುರಿ ತೋರುವನು ತಾ ಬಂದು ||2||

ಸೃಷ್ಟಿಗೆ ಬ್ರಹ್ಮ ಸಂತೃಷ್ಟಿಗೆ ವಾಸು ಸ್ಪಷ್ಟಿ
ಪ್ರಳಯ ನಾನೇಳುವೆನು | ಶ್ರೇಷ್ಠನೆಂದು ತಿಳಿ
ಎರಡಕ್ಷರದೊಳು ಗೊರಷ್ಟಿ ತಿದಿಕೇಳ್ ಪಾಮರನು ||3||

ಪರಮಾನಂದದಿ ಪರಿದು ಕೇಳ್ಪೊಡೆ ಶರಣೆಂದಳು |
ಶಂಕರನಡಿಗೆ ಗುರುವು ರೂಢ ರಂಗಯ್ಯನೆ
ಅನುದಿನ ತರಳಿರ ಪೋಷಿಪ ತಾ ಬಂದು ||4||

66
ಯಾರೇನ ಮಾಡುವರು

ಯಾರೇನ ಮಾಡುವರು | ಯಾರಿಂದಲೇನಹುದು |
ಪೂರ್ವ ಜನ್ಮದ ಕರ್ಮ ಇದು ಬೆನ್ನ ಬಿಡದು ||
ಕುಲದೊಳಗೆ ಅತಿ ಶ್ರೇಷ್ಠ ಬಲವಂತ ರಘುರಾಮ
ಕಾಡಿನೊಳ್ ಅಪರಿಮಿತ ಸೌರ್ಯ ಲಕ್ಷ್ಮಣ
ದೇವರು | ಚಪಲಾಕ್ಷಿ ಸಿತೆಯನು ಕಳನು
ಕದ್ದೊಯ್ಯುವಾಗ ವಿಪರೀತರಿರ್ವರಿದ್ದೇನು ಮಾಡಿದರು
ಕೃಷ್ಣಾ ||
ಪಾಪಿ ದುಶ್ಯಾಸನನು ದ್ರೌಪದಿಯ ಸೀರೆಯನು
ಕೋಪದಿಂ ಸೆಳೆಸೆಳೆದು ಮಾನಭಂಗವನು ಮಾಡಿ
ಆಪತ್ತು ಎಡಬಿಡದೆ ಕಾಡುವ ಸಮಯದಲ್ಲಿ
ಭೂಪತಿಗಳೈವರಿದ್ದೇನು ಮಾಡಿದರು ಕೃಷ್ಣಾ ||
ರಣದೊಳಗೆ ಅಭಿಮನ್ಯು ಬಹು ಉಕ್ಕುತಿರಲಾಗ
ಪಾರ್ಥನಿದ್ದೇನು ಮಾಡಿದನು
ಕೃಷ್ಣಾ||

67
ಹೊಲನ ಹಸನು ಮಾಡಿ

ಶರೀರವೆಂತ್ತೆಂಬ ಹೊಲನ ಹಸನು ಮಾಡಿ
ಪರ ತತ್ವ ಬೆಳೆಯನ್ನೆ ಬೆಳೆದುಣ್ಣಿರೋ ||ಪ||

ಸಮೆದಮೆ ಎಂತೆಂಬ ಎರಡೆತ್ತುಗಳ ಮಾಡಿ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 367

ವಿಮಲ ಮಾನವ ನೇಗಿಲನೆ ಮಾಡಿ ಮಮಕಾರವೆಂತ್ತೆಂಬ
ಗರಿಕೆಯ ಕಳೆದಿಟ್ಟು ಸಮತೆ ಎತ್ತೆಂಬ
ಗೊಬ್ಬರವ ಚೆಲ್ಲಿ ||1||

ಗುರುವರನುಪದೇಶ ಎಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರ ಸೃಷ್ಟಿಯ ಬಲದಿ| ಅರುವೆಂಬ
ಪೈರನ್ನೆ ಬೆಳೆಸುತ್ತ ಮುಸುಕಿರ್ದ ದುರಿತ ದುರ್ಗುಣ
ವೆಂಬ ಕಳೆಯ ಕಿತ್ತು ||2||

ಸ್ಥಿರಮುಕ್ತಿ ಎತ್ತೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ದ
ನಡೆಗಳಿಗೆರಗುತ್ತ ಬರವೆಂಬ ಬರವನ್ನೆ ತಮ್ಮ
ಸೀಮೆಗೆ ಕಳುಹಿ ||3||

68
ರೂಪು ನಾಮ ಇಲ್ಲದವನ

ರೂಪು ನಾಮ ಇಲ್ಲದವನ ಕೂಡಿ ನಡೆಯಮ್ಮ
ನಿನ ಪಾಪಶೇಷ ಎಲ್ಲಾ ಕಳೆದು ಉಳಿವನನಮ್ಮ
ತಂಗಿ ಅವನೇ ಗುರುವಮ್ಮ ||ಪ||

ಹುಟ್ಟು ಬಂಜೆಗೆ ಹುಟ್ಟಿದ ಮಗನ ಹೆಸರು ಹೇಳಮ್ಮ |
ಅವ ಹುಟ್ಟಿ ಮೂರು ಪುರವ ಸುಟ್ಟು ಯಾವುದೇಳಮ್ಮ ||ಅ.ಪ.||

ಸುಟ್ಟು ಬೀಜ ಧರೆಗೆ ಒಳಗೆ ಹಾಕಿ ನೋಡಮ್ಮ |
ಅದು ಸುಟ್ಟ ಬೀಜ ಹುಟ್ಟಿ ದೊಡ್ಡ ಮರವು
ಆಯ್ತಮ್ಮ | ತಂಗಿ ||1||

ಒಣಗಿದ್ದ ಮರದೊಳಗೆ ಹೂ ಕಾಯಿ ಹಣ್ಣು ನೋಡಮ್ಮ |
ಅಲ್ಲಿ ಗಿಳಿಯು ಬಂದು ಮರದನಿಯಂತೆ
ಮೆದ್ದಿತಲ್ಲಮ್ಮ | ತಂಗಿ ||2||

ಆದಿಬೀದಿ ಕಾಡು ಸುದ್ದಿವಾದ ಏಕಮ್ಮ ಇಂತ
ವೇದ ತತ್ವ ಬೋಧಿಸಿದ ಗುರುಪಾದ ಇಡಿಯಮ್ಮ |
ತಂಗಿ ||3||

ಬ್ರಹ್ಮ ಹಮ್ಮು ಎಂದು ನೀನು ತಿಳಿಯಬೇಡಮ್ಮ
ಅದು ಬ್ರಹ್ಮ ಕುಣಿಕೆ ಬಹುದೂರ ಇರುವುದಿಲ್ಲಮ್ಮ ||4||

ಯಾವ ಜನ್ಮದ ಪುಣ್ಯಫಲವೂ ಫಲಿಸಿ ಬಂತಮ್ಮ |

378 / ತತ್ವಪದ ಸಂಪುಟ – 1

ಇದರ ಗುಟ್ಟು ತೋರಿದ ಬಸಪ್ಪ ಸ್ವಾಮಿಯ
ಮರೆಯಬೇಡಮ್ಮ | ತಂಗಿ ||5||

69
ಗುರುವನ್ನು ಕೂಡಿದನು

ಗುರುವನ್ನು ಕೂಡಿದನು ಒಂದು ಅರುವಿನ
ಮನೆಯೊಳಗೆ | ಇಂತ ನೂರೆಂಟು ನಾಯ್ಗಳು
ಬೋಗಳೆದರೇನು| ಗುರುಪಾದ ಸೇರಿದನು ||ಪ||

ನಿಂದನೆ ಮಾಡಿದರೆ ನಾನು ಹಿಂದಕೆ ಬರುವಳು
ಹಂದಿಯ ಜನ್ಮವು ಅವರಿಗೆ ಗೆಳತಿ ಗುರುಪಾದ
ಸೇರಿದೆನು ||1||

ಒಂಭತ್ತು ತೂತಿನ ಅವ್ವ ಕುಂಬಾರ ಗಡಿಗೆವ್ವ
ಅಂಬಲಿ ಕಾಯಿಸಿ ಅದಮಾಡು ಗೆಳತಿ ಗುರುಪಾದ
ಸೇರಿದನು ||2||

ಒಂದೇ ಮರದ ಹಣ್ಣು ಅದಕ್ಕೆ ಒಂಭತ್ತು ವರ್ಣಗಳು
ನೀ ಉಂಡುಟ್ಟು ಗಡಿಗೆಯ ತೊಳೆಕಾಳ ಗೆಳತಿ ಗುರುಪಾದ
ಸೇರಿದೆನು |3||

ಉತ್ತದ ಒಳಗೆ ಒಂದು ಮುತ್ತನ್ನೆ ಕಳಕೊಂಡ |
ಕಳಕೊಂಡ ಮುತ್ತು ದೊರಕೀತು ಗೆಳತಿ ಗುರುಪಾದ
ಸೇರಿದೆನು ||4||

ಗುರುಕೊಟ್ಟ ಬೀಜವ ಬತ್ತಿತು ಧರೆಯೊಳಗೆ |
ನೀ ಏಳು ಗಂಜಾರಿ ತೊಳಕಾಳೆ ಗೆಳತಿ ಗುರುಪಾದ
ಸೇರೆದೆನೊ ||5||

ಮರದ ಮೇಗನ ಪಕ್ಷಿ ಅದು ಹಾರೀತು ಗಗನಕ್ಕೆ
ಈ ಕಾಯ ಬಿಟ್ಟು ಆ ಕಾಯಕ್ಕೋಗುವಾಗ
ಗುರು ಪಾದ ಸೇರಿದೆನು ||6||

ತಂದೆ ತಾಯಿಯು ನೀನೆ ಫೇರ್ಸಿಂಗಪ್ಪ
ಬಂಧು ಬಳಗ ನೀನೆ ನಿತ್ಯ ನಿನ್ನ ಪಾದವ
ನೆನೆದು ಕೈಲಾಸ ಸೇರುವನು ||7||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 379

70
ಮಂಟೇದು ಸ್ವಾಮಿ ಬಂದರಲ್ಲಾ

ಹುಲಿಯ ವಾಹನನೇರಿ ಬರುವಾ ಮಂಟೇದು
ಸ್ವಾಮಿ ಬಂದರಲ್ಲಾ ನವರಾತ್ರಿಯಲೀ ||
ಶನಿವಾರ ಸಣ್ಣ ನಮಗಾಯಿತು ಕೇಳೆಂದು
ಶಿವರಾತ್ರಿಯ ಜಾಗುರುಣೆಯಲಿ ||ಹುಲಿಯ||
ಜಗದಗಲ ಜಾಗಟೆ ಮೊಗಲುದ್ದ ಕಂಡಾಯ |
ಗುರುವೆ || ಬೀದಿ ಬೀದಿಯಲ್ಲಿ ಮೆರೆಯುತ್ತಾ ||
ನಲಿಯುತ | ಸಾಧು ಸಜ್ಜನರೇಕ್ಷಮವ ವೀಚಾರಿಸುತಾ
||ಹುಲಿಯ||
ಮದ್ದುಕಾರರ ಗಂಡ ದುರ್ಗಿ ಚೌಡರ ಮಿಂಡ
ಇಂಥ ಸಿದ್ದು ವಿದ್ಯೆಕ್ಕೆಲ್ಲಾ ತಾ ಗಂಡ ||ಹುಲಿಯ||
ಮಾಳ್ವದ ಮಾಯಾವ ಬಲ್ಲೆ ಹೂಡಿರುವ
ಜಾಡ್ಯ ಬಲ್ಲೆ || ಗುರುವೇ || ಹೂತಿರುವ ಗೊಂಬೆಯಾ
ಕೀಳುಬಲ್ಲೆ || ಬೇಡಿದವರ್ಗೆ ನಿಮ್ಮ ವರವಾ ಕೊಡ
ಬಲ್ಲೆ ಧರಿಸಿದರೋ ಬಲದಲ್ಲಿ ಚಿನ್ನದ ರೇಖೆ
ಧರಿಸಿದರೋ ಹಣೆ ತುಂಬ
ಭಾರಿಯ ತಂಬೂರ ಬಲದಲಿರಿಕೊಂಡು
ಬಲದ ಕೈನಿಂದ ಮಿಡಿಯುತಾ ರಾಗವ ಹಾಡು ವೇದವಾ
ಓದುತಾ | ಬೀದಿ ಬೀದಿಯಲ್ಲಿ ಮೆರೆಯುತ
ನಲಿಯುತಾ
ರಾಚಪ್ಪಯ್ಯ ಗುರು ನಿಮಗೆ ನಮೋ ಜಯ
ರಾಜ್ಯಕೆ ದೊಡ್ಡವರು ನಿಮಗೆ ನಮೋ ||
ಸಿದ್ದಪ್ಪಯ್ಯ ಗುರು ನಿಮಗೆ ನಮೋ ಜಯ
ಇಂಥ ಸಿದ್ದು ಸಿದ್ದರಿಗೆಲ್ಲಾ ತಾ ಗಂಡ ||ಹುಲಿ||

71
ಯಮ ಭಯವಿಲ್ಲ

ಜಡದೃಶ್ಯನೆ ಎನಗೆದರಿಲ್ಲೇನುತಲಿ ಕೆಡ ಬ್ಯಾಡೆಲೊ
ಎಲೊ ಮಾನವ || ಎಡಬಿಡದಿರು ಪಂಚಾಕ್ಷರಿ ಮಂತ್ರವ |
ತಡ ಮಾಡದೆ ನಿನಗೊಲಿವ ಶಿವಾ ||ಪ||

370 / ತತ್ವಪದ ಸಂಪುಟ – 1

ಎತ್ತೆತ್ತಲು ಬಲು ಕತ್ತಲೆ ಮುಸುಕಿದೆ
ಚಿತ್ತದ ನೆಲೆ ಸಿಲ್ಕುವುದಿಲ್ಲ || ಮತ್ತೆ ಮತ್ತೆ
ವಿಭೂತಿಯ ಧರಿಸಲು ಉತ್ತಮರೊಳಗಿರು ಭಯವಿಲ್ಲ ||1||

ಎಲ್ಲವೂ ನಿನ್ನೊಳಗಿರುವವು ಅವುಗಳ ಬಲ್ಲ
ವಿವೇಕವು ನಿನಗಿಲ್ಲ || ಸಲ್ಲಲಿತದ ರುದ್ರಾಕ್ಷಿಯ
ಧರಿಸಲು ಎಲ್ಲೆಲ್ಲಿರು ಯಮ ಭಯವಿಲ್ಲ ||2||

ಗುರುಕುಲ ಜಾತರು ದುರಿತವಿದೂರರು ನೆಗೆ
ಪೊಗುಳುವ ಶಾಸ್ತ್ರವಿದೆಲ್ಲಾ | ಅರಿಯದ ಪಾಮರ
ಗೊಲಿಯುವುದಿಲ್ಲ | ಬರಿ ಪುಸಿ ಸ್ಥಿರವಿಲ್ಲಾ ಮನುಜಾ ||3||

ಕಳವಳವಿಲ್ಲದೆ ಶ್ರೀ ಗುರುಪಾದವ ತೊಳೆದುದಕವ ||3||
ಕುಡಿಯೋ ಮನುಜಾ | ನಿರುತವರಿತ್ತ ಪ್ರಸಾದವ
ಭಂಜಿಸಿ ನಿರ್ಮಲದೊಳಗಿರು ಭಯವಿಲ್ಲಾ ||4||

72
ನಿನ್ನ ನಾನೇನ ಬೇಡಲಿ ದೇವಾ

ನಿನ್ನ ನಾನೇನ ಬೇಡಲಿ ದೇವಾ |
ಕೊಡಲೆನಗೆ ನಿನ್ನೊಳೇನುಂಟು ಅದನ್ನೆಲ್ಲವಾ
ನಾನೆ ತಿಳಿದೂ ||ಪ||

ಅನ್ನವ ಬೇಡುವೆನೆ ಕಾಳಕೂಟವೂ |
ಹೂದಿಕೆಯ ಬೆಡುವೆನೆ ಎಡೆದಾನೆಯ ತೊಗಲು ||
ಪರಿಚಾರಕರ ಬೇಡುವೆನೆ ಭೂತಗಳು |
ಅರಮನೆಯ ಬೇಡುವೆನೆ ಪಿತೃಪನ ಭೂಮಿ ||
ಗಂಧವ ಬೇಡುವೆನೆ ಹೆಣದ ಬೂದಿಯು |
ಆಭರಣ ಬೇಡುವೆನೆ ರಾಕ್ಷಸ ತಲೆಮಾಲೆ ||
ತುರುಗುವ ಬೇಡುವೆನೆ ಬಹುದಿನದ ಮುದಿ ಎತ್ತು |
ಗಂಧವ ಬೇಡುವೆನೆ ಹೆಣದ ಬೂದಿಯು ||
ನಿನ್ನಯ ಸುಗುಣದ ಸಿರಿಯು ತುಂಬಾಭಿಕ್ಷಾವೃದ್ಧಿಯು
ನಿನ್ನಯ ನಿರ್ಗುಣದ ಸುಖವ ನೋಡೆ ಕೇವಲವು
ಇನ್ನೊಂದು ಬೇಡೆನಗೆ ನಿನ್ನಯ ಭಕ್ತಿಯನ ಕರುಣಿಸಿ
ಸಲಹು ಸಿದ್ಧರೂಪ || ನಿನ್ನ ನಾನೇನ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 371

73
ತನ್ನ ಮಾರ್ಗವಾ ತೋರಿಕೊಟ್ಟವರು

ನಮ್ಮ ಗುರುವು ಎಂಥ ದೊಡ್ಡವರು
ಹರಿಹರನೆ ಶಂಭೋ | ತನ್ನ ಮಾರ್ಗವಾ
ತೋರಿಕೊಟ್ಟವರು ||ಪ||

ಆಸೆ ಪಟ್ಟು ದೇಶ ತಿರುಗಿ | ಜೀವವೆಂಬೊ
ಗಿಳಿಯ ತಂದು | ಮುತ್ತೀನ ಪಂಜರಾದೊಳಗೆ
ಕೂಸಿನಿಂದ ಸಾಕಿ ಸಲರಿಂದೆನೊ | ಮೋಸವಾಗಿ
ಹೋಗುತೈತಲ್ಲೋ | ಈ ಊರಿಗೆ ಬಂದು
ವ್ಯರ್ಥವಾಗಿ ಹೋಗುತೈತಲ್ಲೋ ||1||

ಅಂಡಪಿಂಡದ ಮದ್ಯದೊಳಗೆ ಕುಂಡಲೆಂಬೊ
ಹಣ್ಣ ಇರಿಸಿದ್ದೆ | ಆ ಮಾರ್ಗದಲ್ಲಿ ಚಂದ್ರ
ಸೂರ್ಯರ ಕಾವಲಿರಿಸಿದ್ದೆ | ಕಾಯ ಸವಿದು
ಹಣ್ಣ ಸವಿದು ಭೂಮಂಡಲಕ್ಕೇ ಹೋಗುವಾಗ
ಮರಣವೆಂಬೊ ಕಳ್ಳ ಬೆಕ್ಕು ಕಾದು ಕುಂತೈತಲ್ಲೊ
ತಮ್ಮಾ | ಕಾದು ಕುಂತೈತಲ್ಲೊ ||2||

ಆರು ವಿಕ್ರಮ ಏರಿನಿಂತವರೆ ಆ ಮಾರ್ಗದಲ್ಲಿ
ಕಾದುಕುಂತಿರುವ ಮೃತ್ಯುಕೊಂದವರೆ
ಮೃತ್ಯುಕೊಂದು ದಾರಿ ಮಾಡಿ |
ಗುರುಪೇರ್ಸಿಂಗೇಶನ ಪಾದ ಸೇರಿದೇನೋ
ತಮ್ಮಾ || ಸೇರಿದೇನೋ ||3||

74
ಗುರುಪಾದವ ಹಿಡಿದರೆ

ಬದ್ದವಾಗಿ ಗುರುಪಾದವ ಹಿಡಿದರೆ ಸಿದ್ದವಾಗುತ್ತೈತೇ |
ಇದು ಮುದ್ದುವಾದ ಕೈಲಾಸಕ್ಕೆ ಇದು ಘನ, ಬದ್ದಾ ವದಿಕೆಯಂತೆ ||ಬದ್ದ||
ಎಷ್ಟು ಶಾಸ್ತ್ರವ ಓದಿದರೇನು ಸಿದ್ದಿಗೆ ಗುರುಬೇಕು
ಅವಾ ಇಟ್ಟಾರೇ ತನ್ನ ಕರ ದೃಷ್ಟಿ ಕಂಡಿತು ಪಟ್ಟಾಣರೊಗ
ಬಹುದು ||ಬದ್ದ||
ಆರು ಚಕ್ರದಲ್ಲಿ ಅಂಶ ನೆಲೆಯನು ಭೇದಿಸಿ ನೀ ನೋಡು |
ಅವರಾದಿ || ಅನಾದಿಗೆ ಸೋದರರಿರುವರು ಸೋದಿಸಿ
ನೀ ನೋಡ || ಬದ್ದ||

372 / ತತ್ವಪದ ಸಂಪುಟ – 1

ಲಕ್ಷದ ಮೇಲೆ ತ್ತೊಂಬತ್ತಾರು ಸಾವಿರ ಉತ್ತಮರಿರುವರು
ಈ ನಿಷ್ಠೆಯಿಂದಲಿ ನಿಂತು ನೋಡಲು ಮುಂದೆ ಕಾಣುವವರು ||ಬದ್ದ||
ಅಷ್ಟವರ್ಣದ ಲಿಂಗನ ಬೆಳಕಿನಲಿ ಬೆತ್ತಲೆ ನೀ ನಿಲ್ಲು |
ನೀ ಪಶ್ಚಿಮ ದಿಕ್ಕಿನಲ್ಲಿ ಗುರುರಾಚಪ್ಪನೊಳ್ ಅಂಜಿ ಅಂಜಿ
ಬಾಳು ||ಬದ್ದ||

75
ಸಾರಿ ಚಲ್ಲಿದೆ ಮುಕುತಿ
ಸಾರಿ ಚಲ್ಲಿದೆ ಮುಕುತಿ ಗುರು ತೋರಿಸೈಯ
ಗುರುತೋರಿಸಲರಿಯದೆ
ಕಾಣಿಸದೂ ಸಾರಿ ಚಲ್ಲಿದೆ ಮುಕುತಿ ||
ಹಿಂದೆ ನೋಡಿದರೆ ಬಂದಿಹುದು ಇದು ಮುಂದೆ
ನೋಡಿದರೆ ನಿಂದಿಹುದು
ಸಂದು ಸಂದಿಗೂ ಜಡದಿಹುದು ಆನಂದ ಗುಹೇಲಿಂಗೇಶ್ವ
ಕಾಣಯ್ಯ ||ಸಾರಿ||
ವೇದದ ಮೊದಲಿನ ಮೂಲವಿದು ಇದು ಮೇದಿನಿಯೊಳ್
ತಾ ಬಂದಿಹುದು
ಆದಿ ಅನಾದಿಯು ಚಲ್ಲಿಯಿಹುದು ಗುರುಸಾದ್ಯರಿಗಲ್ಲದೆ
ಕಾಣಿಸದೂ ||ಸಾರಿ||
ಎತ್ತಾ ನೋಡಲು ಪರಬ್ರಹ್ಮವಿದು ಇದು ಸುತ್ತಮುತ್ತಲು
ಸುರಿದಿಹುದು
ಮೊತ್ತ-ಮೊತ್ತವಾಗಿ ಕಾಣಿಪುದು ಗುರುಪುತ್ರರಿಗಲ್ಲದೆ
ಕಾಣಿಸದಣ್ಣ ||ಸಾ||

76
ನಿನಗಿನ್ನು ದಯಾಬಾರದೇ

ಪುರಹಾರ ನಿನಗಿನ್ನು ದಯಾಬಾರದೇ
ಪರಿ ಪರಿ ಬವದೊಳ್ ಬಳಲ್ದೆನಲ್ಲಾ ||
ಬರಬಾರ ಅತಿಹಿನ ಯೋನಿಯೊಳ್ ಬಂದು
ಧರಿಸಬಾರದ ದೇಹಗಳನ್ನು ತೊಟ್ಟ
ಸ್ವರಿಸಲು ಉಚಿತವಲ್ಲದ ಆಹಾರಗಳುಂಡು

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 373

ತಿರುಗಿ ತ್ರೈಪುದ ನೀನೆ ಕಂಡು ಕಂಡು ||ಪುರಹಾರ||
ಮಾಡಬಾರದ ಪಾಪಗಳನೇ ಮೊಹಿಸಿಮಾಡಿ
ಕೂಡಬಾರದ ಕಾಮಿನಿಯರ ಕೂಡಿ
ಆಡಬಾರದ ಪರದೋಷನ್ನೆಗಳಾನ್ನಾಡಿ
ಕೂಡಿ ಬಪ್ಪುದ ನೀನೆ ಕಂಡು-ಕಂಡು ||ಪುರಹಾರ||
ಎನ್ನಿತ್ತಿವನ ಗಣವ್ಯಾಸಗಿರಿದರು ಎನ್ನನು ಬಿಟ್ಟ
ಹೊನ್ನು ಕನ್ಯೆ ಗತಿ ಇಲ್ಲದ್ದು ನಾನೆ ||
ಎನ್ನಿತು ನೋಲಿಸಿ ಮುಕ್ತಿ ಕೋಡಬೇಕೆಂಬುವ ನಿನ್ನ
ಮನದಆಸೆಯ ನೀನೆ ಕಂಡು-ಕಂಡು || ಪುರಹಾರ||
ಪರಿಪೂರ್ಣ ಗುರುಸಿದ್ದನಾದ ನೀನು
ಈತನ ಮೋರೆಯ ಲಾಲಿಸಿ ಸಿಸ್ಕರಣದೊಳ್
ಮರೆದಿರೆ ಭಕ್ತ ವತ್ಸಲನೆಂಬ ಬೀರುದನ್ನಾ
ಮೆರೆಯುತ್ರ್ತಿಪುದ ನೀನೆ ಕಂಡು ಕಂಡು ||ಪುರಹಾರ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 375

ಅಕಾರಾದಿ ಪದ್ಯ ಶೀರ್ಷಿಕೆ

ಅಂಕೆಯಿಲ್ಲದೆ ಮೆರೆದು 315
ಅಂಗದೊಳಗಣ ಅರಿವು 347
ಅಂತರಾತ್ಮನ ಸೆರಗು 154
ಅಕ್ಕ ನೋಡಕ್ಕ 313
ಅಖಂಡ ಬೆಳಗುತಿದೆ 323
ಅಜ್ಞಾನಿಯಲ್ಲವೆ ನೀನು ಜೀವನೆ 116
ಅನಘ ಗುರು 333
ಅನುಭಾವದಡಿಗೆಯ ಮಾಡಿ 250
ಅಲಕ್ ನಿರಂಜನ್ 318
ಅಲ್ಲಿದೆ ನಮ್ಮ ಮನೆಯು ಹರ ಹರ 277
ಅಲಲಲೇನಾಶ್ಚರಿ 320
ಅರಗಿಬಿತ್ತಲಿಲ್ಲಾ 300
ಅರಿತದನು ಮರೆತರೆ 341
ಅರಿವಂತೆ ದೇಹಾದಿಗಳು ಬೇರಿಡದಂತೆ 99
ಅರಿವು ನೀನೆಂದು ಸದ್ಗುರು ಪೇಳೆ 86
ಅರಿವುದೇ ಚಂದ 295
ಅರಿವೆ ಬರಿಯರಿವೆ ನೀನು 85
ಅರಿವೆ ತಾನೆಂದು ನಂಬಿ 87
ಅವ ಪುಣ್ಯದ ಫಲವಿದೆಂದು 135
ಅರಿವೆಯೆಲೆ ಅರಿವೆ 135
ಅವ್ವನಿಗೆ ಹೂವುಗಳಾದೆ 174
ಅಷ್ಟದಳದ ಕಮಲದಲ್ಲಿ 160
ಅಳಿವುದಲ್ಲ ಜಗವು ತಾನೆ 238

ಆಜ್ಞಾನವನಳಿದು 324
ಆನಂದವಾಘನದೊಳಾಡುವನ್ಯಾರೆ 205
ಆಡುತೈದಾಳೆ ಮಾಯೆಯೆಂಬ ಕಾಮಿನಿ 124
ಆರು ಅರಿಯರು ನಮ್ಮೂರು 184
ಆರು ಕಾಣರು ಪುಣ್ಯಕ್ಷೇತ್ರವನು 25

376 / ತತ್ವಪದ ಸಂಪುಟ – 1

ಆರು ನಾನೆಂದು ವಿಚಾರಿಸಿ ತಿಳಿಯೆ 137
ಆರು ಬಲ್ಲರು ನಿಜಾನಂದ ಭೋಧಾಂಬುಧಿ 92
ಆವ ಪರಿಯ ಸುಖವ ಭಾವಿಸಿ 139
ಆಸೆಗಾಗಿ ದೇಶ ತಿರುಗಿ 170
ಆ ಗುರುತನರಿತು 336

ಇಂಥ ಜನ್ಮವ ಕಳೆದುಕೊಂಡರೆ 339
ಇಂಬುಕಾಣದೆ 241
ಇದೇ ನೋಡು ಇದೇ ರಾಮ 272
ಇದ್ದ ಮಾತೇಳಿದನಮ್ಮ 175
ಇದರ ತೆರನ ಕರುಣಿಸು 39
ಇನ್ಯಾರಿಗೇಳಣ್ಣಾ 306
ಇನ್ಯಾಕೋ ಯಮನ ಬಾಧೆಗಳೋ 349
ಇನ್ನೆನಗೆ ಭಯವುಂಟೆ 8
ಇಲ್ಲ ಮುಕ್ತಿ 191
ಇವನೆಂತ ಕಲಿಗಾರ 163
ಇವನ್ಯಾರಮ್ಮಯ್ಯ 218
ಇಷ್ಠ ಲಿಂಗಯ್ಯ ನಿ ಶ್ರೇಷ್ಠ ಲಿಂಗಯ್ಯಾ 278

ಈ ಮಂತ್ರ 267
ಈತನ್ಯಾರು ತಿಳಿದು ಪೇಳೆ 182

ಉದ್ದಾರ ಮಾಡುತ ಬರುತಲಿದೆ 249
ಉಳುಹಿರಯ್ಯ 10

ಎಂತ ಕನಸ ಕಂಡೆ! 45
ಎಂತ ಕುದುರೆ 319
ಎಂತೊಲಿವನೊ ತನಗೆಂತೊಲಿವನೊ 57
ಎಂಥ ರುಚಿ ನೋಡು 218
ಎಂಥಾ ಕನಸು ಕಂಡೇನೆ 337
ಎಂಥಾದ್ದೀ ಕಲಿಕಾಲವು 189
ಎಂದಿನಂತೆ ಜೀವ ಭಾವವಿರಲು 96

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 377

ಎಂದಿರ್ಪೆನೋ ನಿಜಸುಖದಲ್ಲಿ 101
ಎತ್ತ ಹೋಗುತ್ತೀಯೆ ತಂಗಿ 293
ಎತ್ತಿ ಕೊಡಮ್ಮ ವಚನವ 279
ಎತ್ತು ತೊತ್ತು ತೊಂಡನಾಗಿ ಇರಿಸು 34
ಎನಗೆ ಭೋಗಭಾಗ್ಯ ಬೇಡ 20
ಎನ್ನನೊಲವಿಂದೆ ಪಾಲಿಸು ಪಾರ್ವತೀಶ 110
ಎನ್ನ ಆಳ್ದ ಇಷ್ಟಲಿಂಗ 29
ಎನ್ನ ಏಕೆ ಕಾಯಲೊಲ್ಲೆ ? 32
ಎನ್ನ ಕರೆಯ ಬನ್ನಿ 2
ಎನ್ನಯ ಚನ್ನಯ 254
ಎನ್ನ ತನುಗುಣಗಳ ಭ್ರಾಂತುಗೆಡಿಸು 31
ಎನ್ನೊಳಗೆ ನಾ ತಿಳಕೊಂಡೆ 248
ಎನ್ನ ಬರಿಸದಿರು 5
ಎನ್ನಯ ಮೇಲೆ ದಯವುಟ್ಟಿ 335
ಎರಡನರಿತು 342
ಎರಡಕ್ಷಗರಳೇ ಸಾಕು 191
ಎಲ್ಲಿಂದ ನೀ ಬಂದೆ 311
ಎಲ್ಲರಂತವನಲ್ಲೆ ಎನ ಗುರುವು 298
ಎಲ್ಲರೊಡನೆ ವೈರವಿಲ್ಲದೆ 61
ಎಲ್ಲರವ ನಮ್ಮಣ್ಣ 301
ಎಲ್ಲವು ತಾನು 47
ಎಲ್ಲಾ ರೂಪವು ತಾನಂತೆ 365
ಎಲೆ ಆತ್ಮನೆ 4
ಎಷ್ಟು ಮಾತ್ರ ಭವದ ಕಡಲು 316

ಏನನೋದಿ ಏನು ಫಲ 18
ಏನ ಗಳಿಸಿನ್ನೇನ ತಿಳಿದು 294
ಏನು ಹೇಳಲಿ ಗುರುಲಿಂಗ 242
ಐದು ಅಂಗವಾಗಿದೆ 353
ಐವತ್ತು ದಳ ವರ್ಣ 345

378 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

ಒಂದು ತಾನಾದ ಶಂಭುಲಿಂಗ 56
ಒಂದೈದಕ್ಷರ ಹೊಳಪಿಂದ ತಿಳಿಮನವೆ 271
ಒಡೆಯ ವೆಂಕಟನನಿಗೆ 234
ಒಮ್ಮೆ ಹೊಳೆಯ ದಾಂಟಿಸೋ 179
ಒಳ್ಳೆ ಸ್ಥಾನವ ಪಡೆದುಕೋ 149
ಓಂಕಾರ ನಾದದೊಳಾಡು ಮನ 181

ಕಂಡು ಕೇಳಿ ಮತ್ತೆ ಮೋಹಿಪರೆ 117
ಕಂಡೆನು ನಾನೊಂದು ಪಕ್ಷಿಯ 223
ಕಂಬದ ಜ್ಯೋತಿಗೆ 236
ಕಡುಚೆಲುವೆಸೆವ ಜವ್ವನವನು 53
ಕಡೆ ಹಾಯಿಸು 357
ಕಣ್ಣಿನ ಮುಂದಿನ ಕಸವನು ತೆಗೆದು 275
ಕಣ್ಣೆತ್ತಿ ನೋಡಲು ಬೇಡ 227
ಕತ್ತಲೆ ಹರಿಸಿದೆಯಾ 176
ಕರ್ಪೂರವಾಗಿರು 329
ಕಬ್ಬುನದ ಮೇಲೆರೆದ ನೀರಂತಹುದು 140
ಕರ ಕಂಜದೊಳು ಕಾಣಿಸಿತು 78
ಕರವೆತ್ತಿ ಬೆಳಗುವೆನು 235
ಕರಹೃದಯದ ಹವಣೆನಿಸದೆ 79
ಕರುಣರಸವಾವುದರ ಕಡೆಯಿಂದಲಹುದು 75
ಕರುಣಿಸು ಕಾಡದೆನ್ನುವನು 111
ಕರುಣವಿರಲಿ ಜೀವರೊಳು 49
ಕರುಣಕುಲ ಚಕೋರ 50
ಕರುಣ ವಿನಯ ತಪೋ ವಿರತಿ 58
ಕರುಣೆಯ ತೋರಯ್ಯ 240
ಕಲ್ಲಾಬಿಡೆ 260
ಕಲ್ಯಾಣ ಪುರದಲಿ ಹಗರಣವಾಗಿದೆ 355
ಕಲ್ಲುಮೆತ್ತಗೆ ಮಾಡಬೇಕಣ್ಣ 297
ಕಳಕಮಲನು ನೀನೆಲಾ 362
ಕಾಗದ ಬಂದಿದೆ 226
ಕಾಗೆಯಂದದಿ 332
ಕಾಡಲಿನ್ನೇನಭವ ನಿನ್ನ ಕೃಪೆಯಿಂದೆ 98
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 379

ಕಾಮವಿದನು ಕಂಡ ಯೋಗಿ 121
ಕಾಯವೆ ನೀನಾರು ನಾನಾರು 97
ಕಾಯಮೋಹವನ್ನು ಮರೆ 19
ಕಾಯೈ ಕಾಯೈ 25
ಕಾರಣ ಗುರುವಿನ 305
ಕಿಂಚಿತು ಪುಣ್ಯ 346
ಕುಂದದೆ ಮನವಿರಲು ಕಾಣಿಸದು 141
ಕುಣಿಸುತ್ತಿರುವುದಲ್ಲಣ್ಣ 358
ಕುಲವೆಂಬ ತಿರಪುಗಂಭದೊಳು 66
ಕೂಡಿದೆ ಗುರುಪದವ 155
ಕೂಡೆ ನೇಮಿಸಿದೆ ಹಿತವಹಿತವೆಂಬೆರಡನು 112
ಕೆಡದಿರೆಲವೊ ಶಂಭುಲಿಂಗವನುಳಿದು 118
ಕೇಡುನುಳ್ಳದೆಂದು ವಿಶ್ವವಿಷಯದೊಳು 125
ಕೇಳಕ್ಕ 6
ಕೇಳು ಕೇಳಲೋ ತಮ್ಮ 296
ಕ್ಲೇಶಂಗಳೈದು 340
ಕೈಬಿಡ ಬೇಡಾ 311
ಕೋಗಿಲೆ 65
ಕೋಗಿಲೆ ಚೆಲ್ವ ಕೋಗಿಲೆ 54
ಕೊಟ್ಟು ಹುಟ್ಟಿ ಪಡೆಯಲಿಲ್ಲ 37
ಕೋಪವಂಟದ ತಪವನು 63
ಕೋಲು ಕೋಲೆನ್ನಿರೆ 300

ಗಗನದಂತಿರೆ ನಿರವಯವನಾಗಿ 133
ಗುಡಿ ಗುಡಿಯನ್ನು ಸೇದಿ ನೋಡಿ 350
ಗುಡಿಗಳ ತಿರುಗತ 199
ಗುರುಕುಲದಿರವನು ಪೇಳುವೆನಿಂತೊಲಿದು 82
ಗುರುದೇವ ನೀನೇ 213
ಗುರುದೇವರ ಕೇಳಿ ತಿಳಿಕೊಂಡೆ 182
ಗುರುಪಾದದೊಳು ಮನಹಿಂಗಿ 229
ಗುರುಪಾದವ ಹಿಡಿದರೆ 372
ಗುರುರಾಯನೊಲಿದ 295

380 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು

ಗುರುವನ್ನು ಕೂಡಿದನು 368
ಗುರುವಾದ ದೇಹಕ್ಕೆ 223
ಗುರುವಿನ ಆಜ್ಞೆಯ ಮೀರದೆ 274
ಗುರುವಿನ ಕೃಪೆಗೆ ಗುರಿ ತಾನಾದರೆ 159
ಗುರುವಿನ ಮುಖದಿಂದ 316
ಗುರುವಿನ ಮಹಿಮೆ ತಿಳಿಯಲಾಗದು 166
ಗುರುವೀನ ಅರುವಿನೊಳ್ 358
ಗುರುವೆ ನಿಮ್ಮಯ್ಯ 287
ಗುರುವೇ ನೀನಲ್ಲವೆ 244
ಗುರುವೇ ಮಂಗಳ 236
ಗುರುಬಂದ ಹರಬಂದ 302
ಗುರುಶಂಕರನ ಕೂಡಿ 187
ಗುರುಸ್ವಾಮಿ ತೂಗಿದರೆ 245
ಗುರು ದೊರಕೀದ 354
ಗುರು ಬೇಕ ತಂಗಿ 247
ಗುರು ಭೋದಿಸಿದವುಗಳ ತಿಳಿದು ನೋಡು 275

ಘಟವೆ ಪುಸಿ ಘಟವೆ ನೀನು 91
ಘಠವು ಎಂಬ ಮಠದಿ 197
ಘನತೇಜದೊಡನಾಡಿ 104
ಘನಮಹಿಮಲಿಂಗವೆ 9
ಘನಯೋಗ ಸಾಧನೆಯನು ಮಾಡಿರೋ 257

ಚತುರಂಗುಲದ ಮಿತಿಯೊ 71
ಚಾರು ಚಿತ್ಕಲಾಪ್ರಪೂರ್ಣ ಶಂಭುಲಿಂಗವೆ 78
ಚಿಂತ್ಯಾಕೋ ಮಾಡುತ್ತಿದ್ದಿ 258
ಚಿತ್ತನಿರ್ಮಲವದರಿಂದೆ ಸಂಸೃತಿ 131
ಚಿತ್ತವಿದು ಪರಿಶುದ್ಧವಾಯಿತು 188
ಚಿತ್ರವಿಚಿತ್ರವ ನಾ ಕಂಡೆನೇ 176
ಚಿನ್ನ ರನ್ನದ ಜೋಳಿಗೆ ಜಂಗಮ 224

ಜಪಿಸು ಪಂಚಾಕ್ಷರಿಯ 161

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 381

ಜನ್ಮ ಹರಿಯಲಿಲ್ಲ 203
ಜಾಗರದಲಿ ಜಾಗರನಾಗಿ 165
ಜಾತಿ ಕಲ್ಪನೆಯಳಿದು 330
ಜಾತಿ ಸೂತಕ ಭ್ರಾಂತಿ 221
ಜಾತಿ ಸೂತಕವೆಂಬ ಮಾತಿಲ್ಲ 195
ಜ್ಞಾನವಿರಬೇಕು 304
ಜ್ಞಾನ ರೂಪ ಪ್ರಾಣಲಿಂಗ 230
ಜ್ಞಾನಿ ಮೋಹಿಪುದಂದವೆ ಪರಮತತ್ತ್ವ 140
ಜ್ಞಾನಿಯ ಲಕ್ಷಣವಿಂತಿರಬೇಕು 302
ಜೋಪಾನವಮ್ಮ 183
ಜೋರ್ತಿಲಿಂಗವ ಕಂಡು 243
ಜ್ಯೋತಿ ಬೆಳಗುತಿದೆ 147

ಡಿಂಭದೊಳಗೆ ಒಂದು ಪ್ರಾಣ * 21

ತಂದು ತೋರೆ 27
ತಡೆಯದಿದನು ನೋಡಿ ತಿಳಿವುದು 68
ತತ್ವ ಚಿಂತನೆ 290
ತತ್ವದಿರವನರಿದು ನಿತ್ಯ ಸುಖಿಯಾದೆ 102
ತತ್ವದ ಲಾವಣೆ 307
ತತ್ವನುಭವ ಬಾಯಿ ಮಾತಲ್ಲ 348
ತನ್ನ ನಾವು ಏನು ಬೇಡಿದೆವು 22
ತನ್ನ ನಿಜವನು ಪರೀಕ್ಷಿಸದೆ 136
ತನ್ನನೆ ಪರವೆಂದು ತಿಳಿವುದಲ್ಲದೆ 90
ತನ್ನ ಮಾರ್ಗವಾ ತೋರಿಕೊಟ್ಟವರು 371
ತನುವನಂಟದ ರುಜೆಯು 52
ತನುವಿನೊಳಗೆ ಅನುವಿನವಿದ್ದೂ 277
ತನುವು ತಲ್ಲಣಿಸುವುದು 219
ತನ್ನಿರವಿಲ್ಲೆನಿಸಿದಭಾವವು 139
ತಪನಿಷ್ಟೆಯೊಳಗಿರ್ದ 258
ತಪ್ಪಿದಡಿಂತು ತಪ್ಪುವವಿವು 126
ತಾನಾರೆಂಬುದೆ ಸೂಚನೆ 93

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 381

ತಾನೆಂಬ ನಿಜವನರಿದ ಮೇಲೆ 103
ತಾನೆ ತನ್ನೊಳು ತನ್ನ ನಿಜವ ನೋಡಲು 91
ತಾನೆ ತಾ ಕಾಣಿಸುವದು 364
ತಾನೆ ತಾ ಬಲ್ಲ 335
ತಾವರೆಯಲರಿ ತಾವರೆ ಮುಟ್ಟಿ 114
ತಾಳಲಾರೆನು ತನುವನು 114
ತಿಳಿ ಮಂಗಳಾಗಿ 171
ತಿಳಿದು ಭಕ್ತಿ ಮಾಡು ಗುರುಪಾದದಲ್ಲಿ 196
ತಿಳಿಯದೆ ಜ್ಞಾನವ 242
ತಿಳಿವುದೀ ಪರಿಯೊಳು 132
ತಿಳಿಯಲಹುದೊಲಿದು ಬಿಡಲಹುದು 145
ತೇರನೋಡೋಣ 281
ತೇರು ಸಾಗಿ 356
ತೂಗು ಮಂಚದ ಮೇಲೆ 182
ತೂಗು ಮಂಚದ ಮೇಲೆ 288
ತೊಟ್ಟಿಲ್ಲದೀ ಹಣ್ಣು 173
ತೊಲಗಿಸಿ ತನ್ನೊಡನಾಡಿಗಳನು 127
ತೋರದಯ್ಯಾ ಸುಖ ತೋರದಯ್ಯಾ 88

ದಯಮಾಡು ಅಂತಃಕರಣಾ 249
ದಯವೆಂಬ ವಜ್ರಾಂಗಿ ತೊಡಿಸಲು 193
ದಾನಿ ನಿನ್ನನು ಬೇಡುವೇ 359
ದಾರಿಯ ನೀ ತೋರಬೇಕಣ್ಣ 278
ದಾರಿಯನು ಕಂಡು 344
ದಾರುಣಿಯ ಸುಖಕಾಗಿ 202
ದುಗ್ಗಾಣಿ ಬಹುಕೆಟ್ಟದಣ್ಣಾ 256
ದೇವತ್ವವಾವುದು 22
ದೇವರು ತನ್ನೊಳಗಿರಬೇಕಾದರೆ 304
ದೇವರೆಲೆ ದೇವರೆ 50
ದೇಶವುಂಟು ಶಂಭುಲಿಂಗವೆಂಬ 64
ದೇಶದೇಶವನ್ನೆಲ್ಲಾ | 251
ದೊಡ್ಡ ಊರು ನಮ್ಮದು ಶಿವಪುರ 246
ದೊರೆಗಳ ಭೀತಿಲ್ಲ 357

384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು

ನಂಬು ನೀನೆ ನಿತ್ಯಬೋಧನೆಂಬ 96
ನಂಬು ಜ್ಞಾನವನೆ 131
ನಂಬಿರುವೆನು 323
ನಗು ಬಂದಿತಿಲ್ಲಿ 352
ನಡುವಣ ನಾದವನು ಕೇಳಿ 70
ನದಿಗಳನೇಕದ ಜನನಿಯೊಂದರೊಳು 74
ನಮಗೆ ಸರಿಯದಾರು 15
ನಮ್ಮ ಗುರು ಪಾದ ಸೇರಿದೆನು 273
ನಮ್ಮ ದೇಶಕೆ ಹೋಹ ದಿನ ಬಂತು 26
ನಮ್ಮೂರು 262
ನರನೆಂಬೋ ನಾಮ 286
ನರಿಯ ಮೇಲೆ ಕೋಳಿ 167
ನಾಡಿನ ಸಿರಿಗಳ ಬೇಡುತ 210
ನಾನಾ ದಾರಿ ತಪ್ಪಿದನಲ್ಲೋ 237
ನಾನಾ ದೇವರ ತಿರುಗಿ 321
ನಾನು ನೀನದಿದೆಂಬುದೇನು ತೋರದೆ 77
ನಾನಿತ್ತಗೆಳೆದರೆ 309
ನಾನೆಂಬುದಡಗಿದಾನಂದ ನಿಜವೊ 87
ನಾನೇನ ಬೇಡಲಿ ಶಂಭುಲಿಂಗಾ 172
ನಾವು ಜಂಗಮರೆಂದು 292
ನಿಂದಿಸುವರು ನಮ್ಮ ಬಂಧು ಕುಲ 228
ನಿಜ ಕೈವಲ್ಯಹುದು ಗುರುವಿಡಿದು 94
ನಿಜಪದವೆ ತಾನೆಂಬ 72
ನಿಜವನರಿದ ಯೋಗಿಗಾವ ಕರ್ಮದ ಕಾಟ 93
ನಿಜವೆಂದು ತಿಳಿದು ಪೂಜಿಸು 348
ನಿಜ ದೇವನೆ 334
ನಿತ್ಯ ಜಂಗಮಕ್ಕಿದವಗೆ 234
ನಿದ್ರೆಯ ಮಾಡಿದೆನೇ 263
ನಿನಗಿನ್ನು ದಯಾಬಾರದೇ 373
ನಿನ್ನನಾನೇನಂತ 312
ನಿನ್ನ ನಾನೇನ ಬೇಡಲಿ ದೇವಾ 370

384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು

ನಿನ್ನ ನಾನೇನಂತ ಜೋಪಾನ ಮಾಡಲಿ 271
ನಿನ್ನ ನಿಜವಿದನೆ ತಿಳಿ 84
ನಿನ್ನ ನೀನರಿಯದೆ 244
ನಿನ್ನೊಳಾವ ಸುಗುಣವಿಹುದು 53
ನಿನ್ನೊಳಿಹುದು ನಿತ್ಯಪದವದನುಭವ 134
ನಿನ್ನೊಳೆನ್ನ ಬೆರೆಸೋ ತಂದೆ 162
ನಿನ್ನೊಳು ನೀನೆ ಛೇದಿಸಿ 327
ನಿಮ್ಮ ಮರೆಸಬೇಡ 33
ನಿಮ್ಮ ದರುಶನಕೆ 231
ನಿಸ್ಸೀಮ ನಿತ್ಯಾನಂದ 126
ನೀನೆ ಅಕಳಂಕಗುರು 1
ನೀನೊಲಿಯದ ನಿಮಿಷವೆ 113
ನೀರಿಗೆ ಬಾರವ್ವ ತಂಗಿ 171
ನೀರೆ ನೀ ತೋರೆ 206
ನೀ ಯನ್ನ ತಾಯೇ 269
ನುಡಿದಂತೆ ನಡೆಯಬೇಕಮ್ಮ 177
ನುಡಿಯಬಾರದ ಲಜ್ಜೆಗುಡುವ 115
ನೂರಾರು ಪೇಟೆಯ ಪೇಟೆ 239
ನೆನೆವುದು ಮೊದಲು ಹೃದಯನಳಿನವನಲ್ಲಿ 127
ನೆರೆದಿಹನು ಗುರುಶಂಭುಲಿಂಗವೇ 147
ನೆರೆಶಾಂತಿ ವಿರತಿ ತೋರಿ 194
ನೆಲಸಿರಬೇಕೊಂದು ತನುವಿನೊಳು 95
ನೋಡಬಾರದೇ ಬ್ರಹ್ಮವ 213
ನೋಡಿ ಮಿಗೆ ಮನ್ನಿಸೆನ್ನನು 142
ನೋಡಿ ಸಲಹಯ್ಯ 109
ನೋಡು ನೋಡು ನೀನೆ ಪರವೆಂದು 84
ನೋಡು ನೋಡು ಲಿಂಗವೆ 318
ನೋಡು ದಯದೊಳೆನ್ನನೆಂದು 108

ಪಗಡೆ ಆಟಕ್ಕೆ ಪೋದೇ 274
ಪಡೆವುದುಗಮ ನಿಜ ಸುಖವ 99
ಪದವಿಯ ಕರುಣಿಸಿದ 253

384 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

ಪದಿನಾಲ್ಕು ಜಗವಂತದರೊಳು 117
ಪರಂಜ್ಯೋತಿ ಬೆಳಗುತಿದೆ 233
ಪರಂಜ್ಯೋತಿ ಸ್ವರೂಪ ನೀನಾಗುತಿಂತು 85
ಪರನ ಸಂಗದ ಸೊಗಸನು ಮರೆಯದೆ 62
ಪರಮ ಪಾವನನೆ 366
ಪರಮಸುಖದ ಮೂಲ 205
ಪರಮಪಾವನ ಪಂಚಮುಖ ದಯಾಸಿಂಧುವೆ 108
ಪರಮಾರ್ಥದೊಳಿಟ್ಟು 156
ಪರಮೇಶನ ಭಜಿಸದೆ 266
ಪರತರ ಮುದ್ರೆಯ ನೋಡಿದನೆ 190
ಪರರನ್ನು ದೂಷಿಸಿ 161
ಪರಿಣಯವು ಯನಗಾಯ್ತು 163
ಪಾದ್ರಾಕ್ಷಿ 200
ಪಾಪಗಳ ಪರಿಹರಿಸು 354
ಪಾಪಿವಿಧಿಯೇ 255
ಪಾಲಿಸಯ್ಯ 321
ಪಾಲಿಸೆನ್ನ ಕರುಣದಿಂದ 237
ಪಾಶವನ್ನು ಹರಿಸೋ 201
ಪಾಳು ಪರದೇಶಿ ಬಂದವನೇ 217
ಪುಣ್ಯ ಫಲದಿಂದೆ ಪಡೆದು 124
ಪೊರೆಯುವ ಗುರು 325
ಪೊರೆಯುವ ಚಿಂತೆ ಪಿರಿದು 121
ಪೊರೆಯೆನ್ನ ಪ್ರಭುವೆ 325

ಬಂದನು ಮತ್ರ್ಯಕೆ 24
ಬಂದವರಿಗನ್ನಾವ ನೀಡು 347
ಬಂದಂತ ನೆಂಟರು 259
ಬಂದಿದೆ ಪಕ್ಷಿ 261
ಬಂದು ನೋಡಿ 157
ಬಂದೆನಪ್ಪಯ್ಯ 361
ಬರುವಾಗ ತರಲಿಲ್ಲ 201
ಬಲ್ಲವರ ನೀ ಸೇರು 160

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 386

ಬಲ್ಲಡುಸುರಿರಿ ಭಾವಕರು ನೀವೆಲ 146
ಬಹು ಮಂಗಳಕರ ಶಿವ 153
ಬಸುರಾಗದೆ ಮಗನಡೆದವ್ವ 337
ಬಾಗಿಲು ತೆರೆದಿದೆ ನೋಡಣ್ಣಾ 177
ಬಾರಮ್ಮ ಗುರುಸೇವೆ ಮಾಡುವ 251
ಬ್ಯಾಡವೋ ಯಂದೆಂದಿಗೂ 208
ಬಿಚ್ಚಿ ಪೇಳಿ 156
ಬಿಡು ರಾಜನ ಪೂಜೆಯನು 207
ಬಿನ್ನಾಣದ ಮಾತಿಗೆ ಕೊನೆಯಿಲ್ಲ 200
ಬುದ್ಧಿಮಾತು 228
ಬೆಕ್ಕು ಕೊಂಡು ಹೋಯಿತಯ್ಯೋ 225
ಬೆಣ್ಣೆ ತಾನೆ ತಾ ಕರಗಿತು 199
ಬೆರೆದೇಕನಾಗದೆ 186
ಬೆಳಗುತಿರ್ಪುದನು ಭಾವಿಸುವೆಡೆ ತಾನೆ 73
ಬೆಳಗುವ ತೇಜದಲ್ಲಿ 184
ಬೇಡ ಬೇಡ ಭೋಗದೊಡನಾಟ 123
ಬೇಡ ಬೇಡೆಲೆ ಮನವೆ ವಿಷಯದಾಸೆ 122
ಬೇಸರಗೊಳ್ಳದಿರು 362
ಬೋಧಿಸೆನ್ನಯ ಗುರುವೇ 178
ಬೊಮ್ಮವನರಿವೆವೆಂದು ಬಳಲುವರು 83
ಬ್ರಹ್ಮದಿ ಮುಳುಗದೆ 331

ಭಂಗ ಯಾಕೆ ಪಡುವೆ 185
ಭಕ್ತನಾದೊಡೆ 360
ಭವಗಳ ಹರಿವುದು ವಿಭೂತಿ 270
ಭವದಿಂದ ಪೊರೆವ ತಂದೆ 352
ಭಾವನೆಯ ಬಲಿಯುವ ತನಕ 309
ಭಾವಿಸುವುದರಿವಿಂಗೆ ನಿಜವೆಂದು 130
ಭ್ರಾಂತನಾಗಬೇಡ 179
ಭ್ರಾಂತಿಯ ಜಗವಳಿದು 185
ಭೋಗಿಯೆನಿಸದೆ ಜಗದೊಳು 69

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 387

ಮಂಗಳವಾಗಿ ಇದೆ 235
ಮಂಟೇದು ಸ್ವಾಮಿ ಬಂದರಲ್ಲಾ 369
ಮಂಡಲತ್ರಯದ ಮಧ್ಯದೊಳು 72
ಮಗಳೆ ಎನ್ನಯ ಮಾತು ಕೇಳು 13
ಮತಿಗೆ ಮಂಗಳವೀವುದಾವುದು 60
ಮತಿಯ ಹಂಗಿಲ್ಲದೆಲ್ಲವನರಿವಾತನೆ ಜಾಣರ ದೇವ 107
ಮನವ ನಿಲ್ಲುವಪಾಷಧಿ ಕೊಡು ಗುರುವೇ 297
ಮನವು ಮರೆತು 216
ಮನುಜರೊಳೈವರು ಸುಕೃತಿಗಳುಂಟು 143
ಮರಣಕಾಲದಲ್ಲಿ ಹೊಲನ ಹರಗಣೆನುತ 59
ಮರಿಯಬಾರದೊ 263
ಮರುಗಮಣಿಯೆಂಬ ರತ್ನ 198
ಮರೆಯಬಾರದೋ ಶಿವನಾ 245
ಮರೆಯಬೇಡ | 231
ಮಲ್ಲಿಗೆ ಹೂವಿನ ನೆಲ್ಮೆಯದಾರತಿ 248
ಮಹಾದೇವಾ ನಿಮಪೂಜೆ 290
ಮಾಡಲಿಲ್ಲವೆ ತಪವ ಮಾಡಲಿಲ್ಲವೆ 64
ಮಾಡಲಿಲ್ಲವೇ ತಪವ 260
ಮಾಡಲುಚಿತವೆ ಮನುಜ 55
ಮಾಡು ಶಿವಲಿಂಗಪೂಜೆಯನಂತರಂಗದೊಳು 128
ಮಾತು ಮಾತಿಗೆ 158
ಮಾನವ ಜನ್ಮ ದೊಡ್ಡದು 227
ಮಾನವ ಜನ್ಮಕೆ ಬಂದೀರಿ 233
ಮಾಯೆಕರ್ಮದ ಬಾಧೆ 51
ಮಾಯೆಯನು ಮೀರಿ ಕರ್ಮವನು ಸೋಂಕದೆ 80
ಮುಂದೆ ಏನಪ್ಪುದೋ* 11
ಮುಕ್ತನಿರವ ನೋಡು ರಮಣಿ 76
ಮುಕ್ತಿಯ ರಾಜ್ಯವ ಪಡೆಯೆಂದಾ 219
ಮುಳ್ಳ ಕೊನೆಯ ಮೇಲೆ 168
ಮೂರು ಬಾರಿಗೂ ಸಾರಿದೆ 359
ಮೂರು ಮೂರ್ತಿಯ ಕೂಡಿ 308
ಮೆರೆವಾತ್ಮನೊಳು ಪ್ರೀತಿಮಾತ್ರವೆ 103

388 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು

ಮೇಲು ಮಂಟಪ 282
ಮೊಲನ ತಲೆಯೊಳು ಕೋಡನು 58
ಮೋಹದಿಂದೆ ನೊಂದು ಬಳಿಕ 89
ಮೋಹವಡಗದೆ 328
ಮೋಹವಿಲ್ಲದೊಂದರೊಳಿಂತು 112
ಮೋಹವಿಲ್ಲದ ಪೂಜೆ 23
ಮೋಕ್ಷವ ಕೊಡುವುದು ರುದ್ರಾಕ್ಷಿ 270

ಯಂತಾ ಕಲಿಗಾರ ಪುರುಷ 266
ಯಂಥಾದೀ ಕಲಿಕಾಲವು 154
ಯಮ ಭಯವಿಲ್ಲ 369
ಯಲ್ಲಿ ನೋಡಿದರಿಲ್ಲ ಶಿವನು 268
ಯಾಕೆ ಬಂದಿಹನೆಂಬುವುದು 240
ಯಾತ್ರೆ ಮಾಡಿ ಬಂದೆ 350
ಯಾರಿಂದಲೇನಹುದು 360
ಯಾರಿಗೆ ಯಾರಿಲ್ಲ 303
ಯಾರೇನ ಮಾಡುವರು 366
ಯುಕುತಿವಂತನ ಬಗೆಯನು ನೋಡು 89
ಯೆಂತ ಕನಸು ಕಂಡೆನೇ 173
ಯೋಗ ಸೂತ್ರ ಸಾಧಿಸಿ 193
ಯೋಗಾನುಸಂಧಾನ 144
ಯೋಗಿಗೆ ಪಂಚಾವಸ್ಥೆಗಳುಂಟು 129

ರಂಜಿಸುವದಿದು ನಿಜವೆಂಬುದ 75
ರತ್ನ ಬಂದಿದೆ ನೋಡಿರೋ 192
ರಾಗಾದಿಗಳು ಪೋಗಲಿಲ್ಲ 150
ರಾಗಿಯ ತಂದಿರಾ 167
ರೂಪು ನಾಮ ಇಲ್ಲದವನ 367

ಲಗ್ನ ತೀರಿದ ಮೇಲೆ 180
ಲಾಂಛನವರಿದೊಡೆ 239
ಲಿಂಗದ ಬೆಳಕಿನೊಳು ನಿಜಗುಣ ನೋಡದೆ 276

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 389

ಲಿಂಗಪೂಜೊಂದಾಗುತೈದಣ್ಣ 310

ವಂದನಂ ಗುರುವೀರನೆ 189
ವಚನವ ಕೇಳು 197
ವಜ್ರ ಕಂಬವಲ್ಲ 253
ವರಗುಣದೊಳಗಾಡಿ ಮೆರೆಯದೆ 62
ವಿಭೂತಿ 353
ವ್ಯಾಕುಲಾ ನಿನಗ್ಯಾತಕೆ 269
ವೊರು ಚಂದಾಗಿಸಬೇಕಂಣಾ | 264

ಶಂಕರಿಯೇ 349
ಶಂಕೆಯಿಲ್ಲದೆ ಬಾಳಿರೆಂದು 186
ಶರಣು ಸೇವೆಯ ಮಾಡುಬೇಗ 344
ಶರೀರವ ನೋಡಿ ಹಿಗ್ಗುವೆಯಲ್ಲ 211
ಶಿರವೆ ಬಾಗಿಸಿ 250
ಶಿವಜೀವರು ಎಂದೆರಡಿಲ್ಲ 204
ಶಿವಜೀವರೆಂದೆರಡಿಲ್ಲ 289
ಶಿವನ ಪೂಜೆ ಮಾಡು ಮನವೆ 47
ಶಿವನ ಪೂಜೆಯನ್ನು ಮಾಡು 35
ಶಿವನ ಭಜನೆ ಮಾಡೋ 285
ಶಿವನಾಮ ಸ್ಮರಣೆ 314
ಶಿವನು ಭಿಕ್ಷಕ್ಕೆ ಬಂದ 276
ಶಿವಮಂತ್ರ ನೆಲೆಯಾಗಿ 339
ಶಿವಲೋಕದಿಂದ ಒಬ್ಬ ಸಾಧು 247
ಶಿವಶರಣರೇ ಬನ್ನೀರೆ ಪೋಗುವಾ 175
ಶಿವ ಜೀವ ಇಬ್ಬರಿಗೂ ಭೇದವಿಲ್ಲ 361
ಶ್ರೀಕರವಾಗಿ ಬೆಳಗುವನು 232
ಶ್ರೀಗಿರಿಯ ಸುಕ್ಷೇತ್ರಕ್ಕಿಂದು 283
ಶ್ರೀ ಗುರು ಮಧ್ಯದಲಿ 338
ಶ್ರೀ ಗುರು ಚರಣದಿ | 170
ಶ್ರೀ ಗುರುವಿನ ಪಾದ 317
ಶ್ರೀ ಗುರುವೆ ಶರಣು 145
ಶ್ರೀ ಗಿರಿಯ ಶರೀರದೊಳು 164

390 / ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು

ಶುದ್ಧ ಚೈತನ್ಯವಾನೆಂಬುದೆ ಧ್ಯಾನ 67
ಶ್ರುತಿಯ ಸುವಿಚಾರವನು ಮರೆದು 122

ಸಚ್ಚಿದಾನಂದದೊಳ್ 252
ಸದ್ಗುರು ಶಂಕರಾರ್ಯ ಬಲ್ಲ 190
ಸತ್ಯವಂತರ ಸಂಘದೊಳು ಬೆರೆದರೆ 272
ಸತ್ಯ ಶಾಂತಿ ಲಿಂಗವೇ 220
ಸತ್ಯ ಮಾರ್ಗದೊಳಗಾಡು 346
ಸನ್ನುತಿ ತನಗೆ ಸಂಪನ್ನವಾದರಿವಿದು 133
ಸಪ್ತರೂಪವಸು ನಿರೋಧನ 67
ಸರ್ವ ಸಾಕ್ಷಿಕ ಗುರು 326
ಸಲೆ ಸುಮ್ಮನಿಹುದೆ ನಿಜಯೋಗ 100
ಸಾರಿ ಚಲ್ಲಿದೆ ಮುಕುತಿ 372
ಸಾರಿ ಚೆಲ್ಲಿದೆ 293
ಸಾರುತೀದೆ ಶ್ರುತಿ 215
ಸಿದ್ಧಲಿಂಗನೊಳಗೆ ಬೆರೆತು 322
ಸಿರಿಯ ತೋರಿಸಿದೆ 149
ಸ್ಥಿರವಿಲ್ಲದ ಮನಸು 241
ಸ್ಥಿರಮುಕ್ತಿ ಸುಖವಿದು 244
ಸುಂಕವಿಲ್ಲದ ಪುರವುಂಟು 333
ಸುಖವೆ ನಿಜ ಸುಖವೆ ನೀನು 138
ಸುಗುಣಸಂಪನ್ನೆ ಶರ್ವಾಣಿ 106
ಸುಮ್ಮನಾಗದು ವಿಧಿಯೊಳೊಂದದೆ ಮುಕ್ತಿ 82
ಸುಮ್ಮನಿರು ಕಂಡ್ಯಾ 310
ಸುಮ್ಮನೆ ಕಾಲವನು ಕಳೆದು 55
ಸುರಸವಾದಂತೆ ಪತಿಶಂಭುಲಿಂಗ 81
ಸುವಿವೇಕವನು ಮಾಡೆ ಮನುಜ 115
ಸುಳಿಗಾಳಿ ಸುರಚಾಪ ಕನಸು 119
ಸೆರಗನೊಡ್ಡಿ ಬೇಡಿಕೊಂಬೆನು 26
ಸೆರೆಮನೆ ದೊರೆಗಳಿಲ್ಲ 150
ಸೇರಿದರೆ ಶರಣರ ಸಂಗ 313
ಸೊಲ್ಲಿಡಲದು ವೇದ್ಯವಲ್ಲ 209
ಸೋಲದಾತನೆ ವಿರತನು ಮನದೊಳಗೆ 120

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 391

ಹತ್ತಿ ನೋಡಿ ಬೆಟ್ಟ 284
ಹಮ್ಮಿನ ಮೂಲವ ಸುಟ್ಟು | 215
ಹಾರು ಕಂಡ್ಯಾ ಹಂಸ 29
ಹಾವು ಕಚ್ಚಿತಲ್ಲೊ ತಮ್ಮ 279
ಹಿಡಿ ಗುರುಪಾದವ 259
ಹುಂಜ ಬಂದಾಯ್ತೆ ತಂಗಿ 315
ಹೃದಯ ತಾಣದೊಳಗಿಟ್ಟು 69
ಹೇವವನಿಕ್ಕಲಾರೆ 28
ಹೊಲನ ಹಸನು ಮಾಡಿ 366
ಹೊಸದಾಗಿ ಒಂದು ಮೀನು 299

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

5 ರಾಮಸಮುದ್ರ ಮಠದ ತತ್ವಪದಗಳು

ಭಾಗ-5: ರಾಮಸಮುದ್ರ ಮಠದ ತತ್ವಪದಗಳು
1
ತೇರ ನೋಡೋಣ

ತೇರ ನೋಡೋಣಾ ಬನ್ನಿರೋ | ಸದ್ಗುರುವಿನ
ತೇರನೋಡೋಣ ಬನ್ನಿರೋ | ತೇರು ತೇರನ್ನೆ ನೋಡಿ |
ತೇರಿನ ಚಂದವನೋಡಿ | ತೇರಿನೊಳಗೆ
ಇದ್ದುಕೊಂಡು ಮಾಯವಾಗಿರೋ ದೇವನಾ |
||ತೇರನೋಡೋಣಾ ||ತೇರನ್ನೆ ತಾನೇ ಮಾಡಿದಾ | ದೇವಾರು ದೇವಾ
ಕುಂತು ತಾ ನಲಿದಾಡಿದಾ | ಮಾಯವಾದ
ಗಾಳಿಬಂದು | ತೇರಿನ ಚಕ್ರವ ಮುರಿದು |
ತೇರನ್ನೆ ತುಂಡುಮಾಡಿ | ಮಾಯವಾಗೋ
ದೇವನಾ | ತೇರ |

ಲೆಕ್ಕವಿಲ್ಲದ ದ್ವಾರಾ | ಈ ತೇರಿಗೆ ಒಂಬತ್ತು
ನಿಜದ್ವಾರಾ | ಆಡುವ ಮಾತು | ತೇರಿಗೆ
ತಾನೇ ಗೊತ್ತು | ಕಳಸವೇರಿ ಚಾಲೋಕ್
ಮಾಡಿ ಮಾಯವಾಗೋ ದೇವನಾ ||ತೇರ||

ಕಂಡ್ರು ಕಾಣ್ದಾಂಗ್ಗೆ ತಿರುಗಿದಾ | ಅಲ್ಲಿಂದ ಬಂದು
ಚೋರರನ್ನೇ ಸೇರಿದಾ | ಚೋರರಲ್ಲಿ ಇದ್ದುಕೊಂಡು |
ಸೂಳೆಯರ ಮನಗೆ ಬಂದಾ |
ಸೂಳೆಯರಲ್ಲಿ ಇದ್ದುಕೊಂಡ | ಸೂಳೇರ ಗಂಡ ದೇವನಾ ||ಪ||

ಸೂಳೆಯರನ್ನೇ ಕುಣಿಸಿದಾ | ಅಲ್ಲಿಂದ ಬಂದು |
ಸುಡುಗಾಡನ್ನೆಲ್ಲಾ ಬಳಸಿದಾ | ಸುಡುಗಾಡಲಿದ್ದುಕೊಂಡು
ಇದ್ದಕೊಂಡು | ಬೂದಿಯನ್ನೆ ಬಳಿದುಕೊಂಡು |
ಬೂದಿಯನ್ನೆ ಬಳಿದುಕೊಂಡ |
ಅದ್ವೈತ ರೂಪತಾಳಿ | ಮರೆವಂತ ದೇವನಾ ||ಪ||

ಗುರುವಿಗೆ ಗುಣವಾಗಿದ್ದ | ಅಲ್ಲಿಂದ
ಬಂದು ಅದಿನಾಲ್ಕು ತೇರ ಹಾರಿದಾ |
ಸೂರ್ಯ ಚಂದ್ರರ ಮಧ್ಯೆ | ಜ್ಯೋತಿಯಂತೆ

ಬೆಳಗುತ್ತಿದ್ದ | ಗುರುವು ಶಂಕರಾರ್ಯರು
ತಾವೆಯಾಗಿ ಮಾಯಾವಾದ |ಪ|

2
ಮೇಲು ಮಂಟಪ

ಮೇಲು ಮಂಟಪದಲ್ಲಿ ನೋಡಣ್ಣ | ಪಾಲಾಕ್ಷ
ಪರ ಬ್ರಹ್ಮ ತನ್ನೊಳಿಹನು ಕಾಣಣ್ಣಾ |
ಕೀಳು ಮೇಲು ಮಾಡುತಾಯ್ತ | ಮೇಲೇ ಜ್ಯೋತಿಯು
ಬೆಳಗುತಾಯ್ತೇ ಗಾಳಿಗೋಪುರ ಗಗನದಲ್ಲಿ |
ಬಾಲಕೃಷ್ಣನ ಲೀಲೆಯಲ್ಲಿ |ಪ|

ಎಷ್ಟು ದಿನವಿಲ್ಲದ್ದರೇನಣ್ಣಾ | ಈ ಲೋಕದೊಳಗೆ
ಕಷ್ಟವಾಯ್ತ ತಿಳಿಯೋ ನಮ್ಮಣ್ಣಾ | ಅಷ್ಟದಳದ
ಕಮಲದಲ್ಲಿ | ಇಷ್ಟಲಿಂಗನ ಕೋಣೆಯಲ್ಲಿ |
ಮುಟ್ಟಿ ಪೂಜೆಯ ಮಾಡುವಂತ ಯೋಗ |
ಹಠವ ಸಾಧಿಸಣ್ಣ |ಪ|

ವ್ಯಾನ ಧಾನ ಪಾನ ಅಪಾನ |ಸಾಮಾನ್ಯರೆಲ್ಲಾ
ನಿನ್ನ ಒಳಗೆ ಇಹರು ಕಾಣಣ್ಣ | ಪ್ರಾಣಕಾಂತನ
ಪಟ್ಟಣದಲ್ಲಿ | ಪ್ರಾಜ್ಞರಿರುವ ಸ್ಥಾನದಲ್ಲಿ ನಾನು
ನೀನೆಂತೆಂ ಭೇದವು ಏನೋ ಕಾರಣ
ಬಂದಿತಣ್ಣಾ |ಪ|

ಯೋಗ ಎಂಟನು ನೆಚ್ಚ ಬೇಡಣ್ಣಾ | ನಿರ್ಗುಣ
ರಾಜ | ಯೋಗಿ ತನ್ನೋಳಿಹನುಕಾಣಣ್ಣ |
ನಾಗ ಕೂರ್ಮ | ದೇವದತ್ತ | ತನುವು ಧನಂಜಯ
ರಿರುವರಣ್ಣಾ | ಬಾಗಿಲು ಒಂಭತ್ತು ಮುಚ್ಚಿ
ಯೋಗಿಷಯನನ ಸೇವಿಸಣ್ಣಾ |ಪ|

ಜೀವಸ್ಥಾನ ಯಾವುದೇಳಣ್ಣಾ | ನಿನ್ನೊಳಗೆ
ಇರುವ ಜೀವ ಸಾಕ್ಷಿ ಎಲ್ಲಿ ಇಹುದಣ್ಣಾ |
ಜೀವ ಶಿವರಿಬ್ಬರಿಗೂ ಸರ್ವಸಾಕ್ಷಿ ಒಬ್ಬನಣ್ಣಾ |
ಜೀವ ಶಿವರೈಕ್ಯರಾಗುವ ಸ್ಥಾನವೇ ಭಲುಗೋಪ್ಯವಣ್ಣಾ |ಪ|

ಜ್ಞಾನವಂತನಾಗಬೇಕಣ್ಣಾ | ಕೇಳಣ್ಣ ಕೇಳ್ ಅಜ್ಞಾನವನು
ಖಂಡಿಸಲು ಬೇಕಣ್ಣಾ | ಜ್ಞಾನವೆಂಬೋ ಖಡ್ಗಪಿಡಿದ ಜ್ಞಾನವೆಂಬ

ಜ್ಞಾನವೆಂಬೋ ಕುರಿಯಕಡಿದು | ಜ್ಞಾನಗುರುವಿನ
ಪಾದ ಹಿಡಿದು | ತಾನು ಧನ್ಯನಾಗಬೇಕು |ಪ|

ಕರ್ಮ ಕಾಂಡವ ಅಳಿಯಬೇಕಣ್ಣಾ ಗುರುಭಕ್ತ
ನಾದರೆ | ಗುರುವು ಪೂಜೆಯ ಮಾಡಬೇಕಣ್ಣಾ |
ಗುರುವು ಪೂಜೆಯ ಮಾಡಬೇಕು | ಗುರಿಯ
ತನ್ನೊಳಿರಸಬೇಕು | ಅರಿವು ತೋರಿದ ಗುರುವ
ಕಂಡರೆ ಮರೆಯದಿರುವುದೆ ಮರ್ಮವಣ್ಣಾ |ಪ|

3
ಶ್ರೀಗಿರಿಯ ಸುಕ್ಷೇತ್ರಕ್ಕಿಂದು

ಶ್ರೀ ಗಿರಿಯ ಸುಕ್ಷೇತ್ರಕ್ಕಿಂದು ಹೋಗಿಯಾತ್ರೆಯ
ನಾ ಮಾಡಿ ಬಂದೆ | ಶ್ರೀಗಿರಿಯು ಶರೀರದೂಳ
ಗುಂಟು | ಓಂ ಶ್ರೀ ಗುರುಸಿದ್ಧ | ಯೋಗಿ ಜನರಿಗೆ
ಮರ್ಮವು ಬೇರುಂಟು ||ಪ||

ಆರು ಬೆಟ್ಟವದಾಂಟಿ ನಡೆದೇದು | ಮೂರು ಕೊಳದ
ಮೂಲಕ್ಕಿಳಿದೇದು | ಏರಿದೆನು ಕೈಲಾಸ ದ್ವಾರವಾ |
ಓಂ ಶ್ರೀ ಗುರುಸಿದ್ಧ | ಸಾರಿ ಬಡಗಲ ಗಡಿಯ
ಕಂಡೇನು ||ಪ|| ||1||

ಏಳುಸುತ್ತಿನ ಕೋಟೆಯೊಳಗೇ | ನೀಲದುಪ್ಪರಿಕೆಗಳ
ನಡುವೇ | ತಾಳ ಮರ್ಧಳ ಘಂಟೆಯ ನಾದಗಳು
ಓಂ ಶ್ರೀ ಗುರುಸಿದ್ಧಾ | ವೇಳೆ
ವೇಳೆಗೆ ತಾವೇ ನುಡಿದೆವೋ ||ಪ||

ಒಂಬತ್ತು ಬಾಗಿಲೊಳಿದರ ಹಿಂಬದ ಬೀದಿಗಳ್ ನಾಲ್ಕು |
ತುಂಬಿಸೋಸುವ ಕೊಳಗಳೇಳುಂಟು | ಓಂ ಶ್ರೀಗುರುಸಿದ್ಧ
ಸ್ತಂಭವೆರಡು ಶಿಖರ ಒಂದುಂಟು ||ಪ|| ||3||

ಪಾತಾಳಗಂಗೆಯೊಳ್ ಮಿಂದು ಹೊತು ಶಿಖರೇಶ್ವರನಿಗೆರಗಿ
ಜ್ಯೋತಿರ್ಲಿಂಗಕ್ಕೆ ದೃಷ್ಟಿಯನಿಟ್ಟೇನು | ಓಂ ಶ್ರೀ ಗುರುಸಿದ್ಧ
ಜ್ಯೋತಿರ್ಲಿಂಗವು ಕರದಲ್ಲಿ ಕಾಣಿಸಿತು ||ಪ|| ||4||

ಬರುವ ಕೋಣಗಳೆಂಟ ಬಡಿದು | ಹಿರಿಯ ಹುಲಿಗಳ
ನ್ನಾರನ್ನು ಕಡಿದು | ಮೆರೆವ ಸರ್ಪನ ಹೆಡೆಯ ಮೆಟ್ಟಿದೆನು |
ಓಂ ಶ್ರೀಗುರುಸಿದ್ಧ | ಚಲಿಪ ಕಪಿಯನ್ನು ಹಿಡಿದು ಕಟ್ಟಿದೆನು ||ಪ|| ||5||

ಸಪ್ತಸಂಗಮ ನದಿಯದಾಂಟೀ | ಗುಪ್ತಕದಳಿಯ ವನದೊಳ್
ಸುಳಿದು | ಅಲ್ಲಿಪ್ಪ ಗುಹೆಯೊಳಗೊಬ್ಬನ ಹೊಕ್ಕೇನು | ಓಂ
ಶ್ರೀ ಗುರುಸಿದ್ಧ | ಸಪ್ತವರ್ಣದ ಲಿಂಗವು ಕಾಣಿಸಿತು ||ಪ||

ಇಂದ್ರದಿಕ್ಕಿನೊಳಿದ್ದ ಸೂರ್ಯ | ಚಂದ್ರಗುಪ್ತ ಪುರದೊಳ್ ಮುಳುಗೆ |
ಚಂದ ಚಂದವ ಬೆಳಕ ಕಂಡೇನು | ಓಂ ಶ್ರೀ ಗುರುಸಿದ್ಧ |
ನಿಂದು ನೋಡಲು ಬಯಲಿಗೆ ಬಯಲಾದುದು ||ಪ|| ||7||

ಗಿರಿಯು ಶಿಖರಕಗ್ನಿಮುಖದೋಳ್ | ಅಲ್ಲಿರುವ ಬೇಡ ಅರ್ಕೆಶ್ವರನ
ಹಿಂದೆ | ಹುರಿವುದ ಮೃತ ಪಂಚಧಾರೆಗಳು ಓಂ ಶ್ರೀಗುರುಸಿದ್ಧಾ | ಅರಿತು
ಸೇವಿಸೆ ಮರಣವಿಲ್ಲೆಂದಾ ||ಪ|| ||8||
ಇಂತೂ ಶ್ರೀಶೈಲಾದ ಘನವಾ | ಬ್ರಾಂತಿ ಅಳಿದು
ತಿರುಗಿ ನೋಡೇ | ಅಂತರಂಗದ ಗುಡಿಯಾ ಹೊಕ್ಕೇನು |
ಓಂ ಶ್ರೀಗುರುಸಿದ್ಧ | ಶಾಂತಮಲ್ಲನು ನೀನೇ ಅಗಿರ್ಪೆ ||ಪ|| ||9||

4
ಹತ್ತಿ ನೋಡಿ ಬೆಟ್ಟ

ಹತ್ತಿ ನೋಡಿ | ಬೆಟ್ಟಹತ್ತಿ ನೋಡಿ | ಮತ್ತೆ ನೋಡಿ ದೃಷ್ಟಿಯಿಟ್ಟು
ನೋಡಿ | ಹತ್ತಿದ ಬೆಟ್ಟವ ಇಳಿಯಲುಬೇಡಿ | ಸುತ್ತಮುತ್ತ
ನೋಡಲುಬೇಡಿ | ಕತ್ತಲೆ ಬೆಳಕಿಗೆ ಮನಕೊಡಬೇಡಿ | ನೆಟ್ಟಗೆ
ಮುಂದಕೆ ಸಾಗುತ ನೋಡಿ ||ಪ||

ರೇಚಕ ರೂಪದಿ ವಾಯುವ ಕೂಡಿ | ರೇಜಿಸಿ ಚಿರ್ರನೆ ಕುಂಭಕ
ಮಾಡಿ | ಮಂತ್ರವನೆಲ್ಲಾ ಪೂರಕ ಮಾಡಿ ಸೂಚನೆ ತೋರಿದ
ಗುರುವನ್ನೆ ನೋಡಿ ||ಪ||

ಹತ್ತುವ ಇಳಿಯುವ ಸೌಜ್ಞೆಯನೋಡಿ | ಚಿತ್ತವನದರೊಳು ಪಾಕವ ಮಾಡಿ
ಸುತ್ತುವ ಹುಲಿಗಳ ಬೆತ್ತಲೆಮಾಡಿ ಮೆತ್ತಗೆ ಮೃಗಗಳ ಶಕ್ತಾರ ಮಾಡಿ ||ಪ||

ಬೆಟ್ಟವ ಸುತ್ತುವ ಸುಸುಮ್ನನಾಡಿ ಗುಟ್ಟನು ತಿಳಿಯುತೆ
ಅದರೊಳು ಕೂಡಿ | ಕೆಟ್ಟಭಾವದಿ ಬಲುಬಂದಪ ದೂಡಿ |
ನೆಟ್ಟಗೆ ಮುಂದಕೆ ಸಾಗುತ ನೋಡಿ ||ಪ||

ಆರು ಚಕ್ರದ ಧೀರರ ನೋಡಿ ಸಾರುತ ಅವರಡಿ ಪೂಜೆಯ
ಮಾಡಿ| ಗುರು ಬಸವಾನಂದರ ಕೊರಳೊಳಗೂಡಿ ವಂದಿಸಿ
ಗುರುವನು ಪೂಜೆಯ ಮಾಡಿ ||ಪ||

ಬೀರುವನಾದಾನಂದದೊಳು ಕೂಡಿ ಭಲ್ಲಿದ ಗುರುವನ್ನು
ಪೂಜೆಯ ಮಾಡಿ | ಅಲ್ಲಿಗೆ ಏಳನೇ ಬೆಟ್ಟಾವ ನೋಡಿ ಮಲ್ಲಿಗೆ
ಹೂವಿನ ಹಾರವ ಮಾಡಿ | ಗುರುಬಸವಾನಂದ ಸ್ವಾಮಿ
ಕೊರಳೊಳಗೂಡಿ ವಂದಿಸಿ ಗುರುವನ್ನು ಪೂಜೆಯ ಮಾಡಿ ||ಪ||

ಕೀಟಕ ಭ್ರಮರದ ರೂಪನನೋಡೀ ರೂಪದ
ನೋಟವ ತಾದಿಟ ಮಾಡಿ | ದಾಟಿಯನೀಯದ ಜಗಕಿದು
ನೋಡಿ ದಾಟಿಯ ಬಸವಾನಂದರೊಳು ಕೂಡಿ ||ಪ||

ಅಮರ ಕನ್ನೋಪನ ಬೆಟ್ಟವ ನೋಡಿ | ತುಂಬಿದ ಬಯಲೊಳು
ಆಲಯದೊಳಾಡೀ ಸಾಂಬಸದಾಶಿವ ಲಿಂಗವ ನೋಡಿ |
ವಂದಿಸಿ ಬಸವನ ಪೂಜೆಯ ಮಾಡಿ ||ಪ||

5
ಶಿವನ ಭಜನೆ ಮಾಡೋ

ಶಿವನಭಜನೆ ಮಾಡೋ | ಶಿವಶರಣರಕೊಂಡಾಡೋ | ಈ ಭವದ ಮಾಯೇ
ಕೀಳೋ ಅಭವನಸ್ಮರಣಿಯ ಮರೆಯಬೇಡ ಶಿವಶಿವ ||ಪ||

ಮಂಗಳಮೂರುತಿ | ಜಂಗಮ ಪ್ರಭುರಾಯ | ಸಂಗನ ಬಸವಯ್ಯ
ನೀಲಾಗಂಗಮ್ಮನಾಳಾಗಿ ಶಿವ ಶಿವಾ ||ಪ||
ಒಕ್ಕಲಿಗ ಮುದ್ದಯ್ಯ | ಚಿಕ್ಕಚನ್ನಬಸವಯ್ಯಾ | ಅಕ್ಕಾನಾಗಲದೇವಿ
ಡೋಹರ ಕಕ್ಕಯನಾಳಾಗಿ ಶಿವ ಶಿವಾ ||ಪ||

ಕುಂಬಾರ ಗುಂಡಯ್ಯ | ಕೆಂಬಾವಿ ಭೋಗಯ್ಯ | ಅಂಬಿಗರ
ಚೌಡಯ್ಯ | ಸೌಂದರ್ಯ ನಿಂಬಣ್ಣನಾಳಾಗಿ ಶಿವ ಶಿವಾ ||ಪ||
ನನ್ನಯ್ಯ ನಾಧಯ್ಯ | ಕಿನ್ನಾರಿ ಬ್ರಹ್ಮಯ್ಯ | ಹೊನ್ನಯ್ಯ ಹುಚ್ಚಯ್ಯ | ಸಾಧು
ಶರಣರಿಗಳಾಗಿ ಶಿವ ಶಿವಾ ||ಪ||

ಮಾದರ ಚನ್ನಯ್ಯ | ಮಧುವರಸು ಹರಳಯ್ಯ
ಸಾಧು ಶರಣರಿಗಾಳಾಗಿ ಶಿವ ಶಿವಾ ||ಪ||

ಕುರುಬರ ಬೀರಯ್ಯ ಆಯ್ದಕ್ಕಿ ಮಾರಯ್ಯನೊಲಿನ ಚಂದಯ್ಯ ಸಾಧು
ಶರಣರಿಗಾಳಾಗಿ ಶಿವ ಶಿವಾ ||ಪ||

ಮೇಧರ ಕ್ಯಾತಯ್ಯ ಹಡಪರ ಹಂಚಯ್ಯ ಸೊಂಡಲ ದೇವಯ್ಯ
ಸಾಧು ಶರಣರಿಗಾಳಾಗಿ ಶಿವ ಶಿವಾ ||ಪ||

ಮಡಿವಾಳ ಮಾಚಯ್ಯ | ಕೊಗಿನ ಮಾರಯ್ಯ | ಗೊಲ್ಲಯ್ಯ ಚಿಕ್ಕಯ್ಯ
ಸಾಧು ಶರಣರಿಗಾಳಾಗಿ ಶಿವ ಶಿವಾ ||ಪ||

ಮಿಕ್ಕುಳಿದ ಶರಣರ ಶರಣರಕ್ಷಣೆ ಪಿಡಿದು | ಶರಣು ಶರಣೆಂಬ ಶ್ರೀ
ಗುರು ಬಸವ ರಾಜೇಂದ್ರಗೆ ||ಪ||

6
ನರನೆಂಬೋ ನಾಮ

ನರನೆಂಬೋ ನಾಮವ | ಧರಿಸಿ ಧರೆಗೆ ಬಂದು |
ಗುರು ಪಾದ ಸೇರೋ ಮನುಜಾ | ಮರೆಯದೆ
ಅನುವಿನ ಗುರುಪಾದವ ಪಿಡಿದು | ಮುಕ್ತಿ ರಾಜ್ಯವನಾಳೋ
ಮನುಜಾ | ಇನ್ನೇಕೆ ಚಿಂತಿಸುವೆ ||
ಇಹ ಲೋಕದ ಭೋಗವಾ ನಿನ್ನಾಣೆ ಬಿಡು
ಸ್ವಪ್ನ ಮನುಜಾ ||ಪ||

ಕಾಯನನ್ನದು ಎಂದು | ಮೋಹಪಾಶಕ್ಕೆ ಸಿಲುಕಿ | ಸಿಕ್ಕಿದಾಯ
ತಿಳಿದೋದೆ ಮನುಜಾ | ಸಾಯಿಸಲದು ಕರ್ಮ |
ಬದುಕಿಸಲದು ನಿನ್ನ ತಾಯಿತಂದೆಗಳಾರೋ ಮನುಜ ||ಪ||

ತನ್ನಹೆಂಡತಿಯೆಂದು | ಚೆನ್ನಾಗಿ ನಂಬಿರುವೆ | ಇದು ಮಣ್ಣಿನ
ಬೊಂಬೆಯು ಮನುಜಾ | ತನಯರಾಗುವರೆಂದು ತಬ್ಬಿ
ಮುದ್ಯಾಡಿರುವೆ | ಅನುಮಾನವಲ್ಲವೇ ಮನುಜಾ ||ಇನ್ನೇಕೆ ||ಪ||

ಹಣದ ಆಸೆಯು ನಿನ್ನ ಹೆಣ ಮಾಡಿಕೊಲ್ಲುವುದು | ಅಂತ ಹಣವು
ಎಲ್ಲಿಂದಾಯ್ತು ಮನುಜಾ | ಅನ್ನದ ಋಣತೀರಿದರೆ ಬಣ್ಣಗಳು
ಕೆಡುವವು | ಮಣ್ಣಾಗುವುದೀ ದೇಹ ಮನುಜಾ || ಇನ್ಯಾಕೆ ||ಪ||

ಮಾನಭಿಮಾನಗಳು ಮರೆತು ಹೋಗಲು ಮುನ್ನ | ಸೌಮ್ಯ
ಜ್ಞಾನಿಯಾಗುದೇಗೋ ಮನುಜಾ | ನಾನು ನೀನೆಂತೆಂಬೋ ಬೇಧ ಭಾವನ
ಬಿಟ್ಟು ಆನಂದದೊಳಗಿರು ಮನುಜಾ || ಇನ್ಯಾಕೆ ||ಪ||

ಭ್ರಮೆಯ ಕಾರಣಗಳಿಂದ ಬಹುಯೋನಿಗಳಲಿ ಬಂದು | ನೀನು ಬಹು
ನೋವ ನೊಂದೆಲ್ಲೋ ಮನುಜಾ | ನಾನು ನೀನೆಂತೆಂಬ ಭ್ರಮೆಯ
ನೀ ಅಳಿದರೆ ವಿಮಲ ಬ್ರಹ್ಮನು ನೀನೆ | ಮನುಜಾ || ಇನ್ಯಾಕೆ ||ಪ||

ಮೃತ್ಯುವಿನ ಬಾಯಿಗೆ ತುತ್ತಾಗಲು ಮುನ್ನ | ನಿನ್ನ ಚಿತ್ತ ಶುದ್ಧಿಯ ಮಾಡೋ
ಮನುಜಾ | ಹೊತ್ತು ಕಳೆಯಲು ಬೇಡಾ | ನಿತ್ಯವಲ್ಲದ ಕಾಯ ತತ್ವದರ್ಥವ
ತಿಳಿಯೋ ಮನುಜ || ಇನ್ಯಾಕೆ || ಪ ||

7
ಗುರುವೆ ನಿಮ್ಮಯ್ಯ

ಗುರುವೇ ನಿಮ್ಮ ಯ | ಕರುಣದಿಂದೆನೆಗೆ | ಅರಿವು
ತೋರಿಸಿದೇ | ಶ್ರೀ ಗುರುವೇ | ಪರಮನಿರುವ ನೆಲೆಯನು
ತೋರಿಸಿ | ಭರವಸೆ ನಿಲ್ಲಿಸಿದೇ | ಶ್ರೀ ಗುರುವೇ ||ಪ||

ಮಂದಮತಿಯನು | ಬಿಡಿಸಿ ಎಮಗೆ ಗೋವಿಂದನ
ತೋರಿಸಿದೇ | ಇಂದಿರ | ಶ್ರೀ ಗುರುವೇ ಇಂದಿರ ರಮಣಾನ ಸುಂದರ
ಕಮಲಕೆ ವಂದನೆ ಮಾಡಿಸಿದೇ ಶ್ರೀ ಗುರುವೇ ||ಪ||
ಕಪಿಯನು ಕಟ್ಟಿಸಿ | ಜಪವನು ಮಾಡಿಸಿ | ಸಪಥವ
ನಿಲ್ಲಿಸಿದೇ | ಶ್ರೀ ಗುರುವೇ | ಅಪರಮಿತಾ ತಾರಕ
ಮಂತ್ರವ | ಗುಪಿತದಿ ತೋರಿಸಿದೆ ಶ್ರೀ ಗುರುವೇ ||ಪ||

ನಾಟಿಯ ಮನಸ್ಸಿನ ತ್ರಿಕೂಟ ಮಧ್ಯದಿ | ಬೇಟೆಯ ನಾಡಿಸಿದೆ
ಶ್ರೀ ಗುರುವೇ ಸಾಟಿಲ್ಲದಿಹ ಅಮೃತ ಕೊಳದೊಳು ಊಟವ
ಮಾಡಿಸಿದೆ ಶ್ರೀ ಗುರುವೇ ||ನಾಟಿ|| ಪ ||

ಜನನವ ತಪ್ಪಿಸಿ ಮರಣವ ನಿಲ್ಲಿಸೀ ಮನವನು ನಿಲ್ಲಿಸಿದೇ ಶ್ರೀ ಗುರುವೇ |
ಚಿನುಮಯನಿರುವ ನೆಲೆಯನು ತಿಳಿಸಿ
ಅನುಭವ ತೋರಿಸಿದೆ ಶ್ರೀ ಗುರುವೇ ಅಲ್ಲಿ ಅನುಭವ ||ಪ||

ಯೋಗಗಳೆಂಟನು ಬೋಧಿಸಿ ಎನಗೇ ಸುಯೋಗವ
ತೋರಿಸಿದೆ | ಶ್ರೀ ಗುರುವೆ | ಶಂಕರಾರ್ಯನ
ಪಾದವ ತೋರಿಸಿದೇ ಶ್ರೀ ಗುರುವೇ ||ಪ||

8
ತೂಗು ಮಂಚದ ಮೇಲೆ

ತೂಗು ಮಂಚದ ಮೇಲೆ | ತೂಗಾಡುವ ಶಿವ| ಯೋಗಿಯ
ನೋಡೋಣ ಬನ್ನಿ ರಾಗರಹಿತ ಕರ್ಮ ತ್ಯಾಗವ ಮಾಡಿದ
ಯೋಗಿಯ ನೋಡೋಣ ಬನ್ನಿ || ಪ ||

ಆಧಾರವೆಂತೆಂಬೋ ಹಾಸಿಗೆಯ ಮೇಲೆ | ಅರಿವಿನಲ್ಲೊರಗವನೆ
ಸಾಧನೆ ನಾಲ್ಕನು | ಸಾಧಿಸಿ ಚಿಲುಮೆಯ ಅಂಗೈಲಿಡಿದವನೆ ||ಪ||

ಹುಬ್ಬಳ್ಳಿ ಎಂತೆಂಬೋ | ಕಲ್ಯಾಣಪಟ್ಟಣದಿ |ಆರೂಢ ನೆಲೆಸವರೇ |
ಜ್ಞಾನಾಸಿದ್ದಿಯೆಂಬೋ | ಅರಿವಲ್ಲಿ ಉರಿಗದ್ದಿಗೆ ಮೇಲೋರಗವನೆ ||ಪ||

ಅದ್ವೈತವೆಂತೆಂಬೋ | ಭಾರಿಯ ತಲೆದಿಂಬ | ತಲೆಕೆಳಕಿಟ್ಟವರೆ |
ಸಾರ್ಥಕವಾದಂತ ಕಾಶ್ಮೀರ ಸಾಲನ್ನು | ಮೈತುಂಬ ಹೊದ್ದವರೆ ||ಪ||

ಜನನ ಮರಣವೆಂಬೋ ಜಡವನ್ನು ಕಳೆಕೊಂಡು| ಹಾಯಾಗಿ ಹೊರಗವನೇ
ಕಾಲ್ಕಿಚ್ಚು ಎಂತೆಂಬೋನ ಕಾಲ್ಚಾಸನ್ನೆಲ್ಲಾ ಎಲ್ಲಾ ಕಾಲಲ್ಲಿ ಒದ್ದವನೇ ||ಪ||

ತನ್ನ ಭಕ್ತರಿಗೆಲ್ಲಾ ಮೋಕ್ಷವ | ನೀಡಲು ಜಂಗಮನಾಗವರೇ ಗಂಗೆ
ಯಮುನಗಳ ಸಂಗಮದೊಳು ನಿಂತು ಆತ್ಮಲಿಂಗವೇ ಆಗವರೆ ||ಪ||

9
ಶಿವಜೀವರೆಂದೆರಡಿಲ್ಲ

ಶಿವಜೀವರು ಎಂದೆರಡಿಲ್ಲ | ಪರಶಿವಮಯವೆ ಈ ಜಗವೆಲ್ಲ | ಭವಕಾನನ
ದಹಿಸುವ ಮಂತ್ರವ | ಭುವನದಿಗುರು ಪುತ್ರನೆ ಬಲ್ಲಾ || ಪ ||

ದಾನವ ಮಾಡದರೇನುಂಟು | ಬರಿಮೌನದೊಳಿರ್ದೊಡೆ
ಏನುಂಟು | ಜ್ಞಾನದಿ ವಸ್ತುವ ಅರಿತೊಡೆ ಸಾಕು ಮನಕೆ
ಸಿಲುಕದ ಫಲವುಂಟು || ಪ ||

ನದಿಯೊಳು ಮುಳುಗಿದರೇನುಂಟು | ಬಳಿಕದಿರಂ ನಡುಗುವ ಛಳಿಯುಂಟು
ಸದಮಲ ವಸ್ತುವ ತಾನೆಂದರಿತೊಡೆ ಅದು ನಿತ್ಯಾನಂದದಗಂಟು ||ಪ||

ವೇದವನೋದಿದರಲ್ಲೇನು | ಬಿರಿಬೂದಿಯ ಬಳಿದರು
ಯಮಬಿಡನು | ಭೇದವು ತೋರದೆ ವಿಮಲಜ್ಞಾನವ
ಸಾಧಿಸಿದರೆ ಶಿವನಾಗುವನೂ ||ಪ||

ಉತ್ತಮ ಕರ್ಮವಗೈದವರು| ಕೇಳ್ ಮತ್ತೀಧರಣಿಗೆ ಬರುತಿಹರು |
ತತ್ವದ ಮರ್ಮವನಣತಿಹಧೀರರು ನಿತ್ಯಾನಂದದಿ ಬೆರೆಯುವರು ||ಪ||

ದೇಶವ ಸುತ್ತಿದರೇನಿಲ್ಲಾ | ಭವಕಾಶಿಯೊಳಿದ್ದಿರುಬಿಡದಲ್ಲ |
ಈ ಸಕಲವು ಪುಸಿಯೆಂದರಿತೊಡೆ ಜಗದೀಶನು
ತಾನಾಗುವವನಲ್ಲ ||ಪ||

ಗಂಟೆಯ ಬಡಿದರು ಗುಡಿಯಲ್ಲಿ | ಯಮಭಟರುಬೇರೆ ಬಿಡರಲ್ಲಿ |
ಕಂಟಕವೆನಿಸಿದ ಮಾಯೆಯು ಕಳೆದರೆ ಮೋಕ್ಷವ ಪಡೆವೆ ಪರದಲ್ಲಿ ||ಪ||

ಎರಡೆಂಬುವನಿಗೆ ಕಡೆಯಿಲ್ಲ ಈ ಧರಣಿಗೆ ಬರುವುದು ಬಿಡದಲ್ಲ |
ಗುರು ಶಂಕರನಡಿಗಳ ಹಿಡಿದವರಿಗೆ ಮರಳೀ ಜನ್ಮದ
ಭಯವಿಲ್ಲಾ ||ಪ||

10
ತತ್ವ ಚಿಂತನೆ

ತತ್ವ ಚಿಂತನೆ ಮಾಡು ಮನುಜ | ವ್ಯರ್ಥ ಕಾಲವ ಕಳೆಯದೇ |
ಮೃತ್ಯುಬರುವುದು | ಮುಂದೆ ಕೇಳಿರಿ | ಮೂರು ಬಾರಿಗೂ ಸಾರಿದೆ ||ಪ||

ಮನೆಯು ಉರಿಯುವಾಗ ಭಾವಿಯ ತೆಗೆಸುವ
ನರನಂದದಿ | ಕೊನೆಗೆ ಯಮನವರೆಳೆದು ಹೋಗುವಾಗ |
ಕೋರಿದರೆ ಸುಖವು ದೊರೆಯುವುದೇ ||ಪ||

ಎಲ್ಲಿನೋಡಿದರಲ್ಲಿ ಶಿವನ ಸೊಲ್ಲು | ಸೊಲ್ಲಿಗೆ ಸ್ಮರಿಸುತಾ | ಬಲ್ಲ ಶರಣರೊಳು
ಕೂಡಿ ಸಂಗಮ | ಅಲ್ಲೇ ಕಳೆದುಳಿಮೆ ಮಾಡುತಾ ||ಪ||

ನಾನು ನನ್ನದು ಎಂಬ ಉದರದಿ | ಮಾನಹೀನನಾಗಬೇಡವೋ |
ನಿನ್ನ ಸ್ವಾನು ಭವಕ್ಕಾನಿ ತಪ್ಪದು | ನಿನ್ನ ನೀನೇ ನೋಡಿಕೊ ||ಪ||

ಈಶಣತ್ರಯದಿಂದ ನೀನು ಮೋಸ ಹೋಗಲು
ಬೇಡವೋ | ಕಾಮನಾಟಕೆ ಮನವ ಸೋಲದೆ
ನೇಮಗಳನುಸರಿಸಲ್ಲೊ ||ಪ||

ಪ್ರೇಮದಿಂದ ಗುರು ರಾಮ ವಿಠಲನ ನಾಮ ಸ್ಮರಣೆಯ ಮಾಡಲೋ
ರೋಸ ರೋಸಕ್ಕೆ ಕಾರಣಂಗಳು ನೇಮಗಳನನುಸರಿಸಲೋ ||ಪ||

11
ಮಹಾದೇವಾ ನಿಮಪೂಜೆ

ಮಹಾದೇವಾ ನಿಮ್ಮ ಪೂಜೆ
ಮಾಡುವ ಮನಕೊಡು | ಮಹಾದೇವಾ
ಶಂಭೋ ಮಹಾದೇವ ಮಹಾದೇವ ಶಂಭೋ
ಮಹಾದೇವಾ| ||ಪ||

ಆಧಾರ ಚಕ್ರಕ್ಕೆ | ನಾಲ್ಕು ಬೀಜಾಕ್ಷರ | ನಾಲ್ಕು ಎಸಳಿನ ಕಮಲ
ಮಹಾದೇವಾ | 4 ವರ್ಣವ ಲಿಂಗಾ 4 ವರ್ಣದ ಜ್ಯೋತಿ
ಮಹಾದೇವಾ ಶಂಭೋ ಮಹಾದೇವಾ ||ಪ||

ಸ್ವಾದಿಷ್ಠ ಚಕ್ರಕ್ಕೆ 6 ಬೀಜಾಕ್ಷರ| 6 ಎಸಳಿನ ಕಮಲ
ಮಹಾದೇವಾ | 6 ವರ್ಣದ ಲಿಂಗಾ | 6 ವರ್ಣದ ಜ್ಯೋತಿ
ಮಹಾದೇವಾ ಶಂಭೋ ಮಹಾದೇವಾ ||ಪ||

ಮಣಿಪುರ ಚಕ್ರಕ್ಕೆ 10 ಬೀಜಾಕ್ಷರ 10 ಎಸಳಿನ ಕಮಲ
ಮಹಾದೇವಾ | 10 ವರ್ಣದ ಲಿಂಗಾ 10 ವರ್ಣದ ಜ್ಯೋತಿ |
ಮಹಾದೇವಾ ಶಂಭೋ ಮಹಾದೇವಾ ||ಪ||

ಅನಾಹುತ ಚಕ್ರಕ್ಕೆ 12 ಬೀಜಾಕ್ಷರ 12 ಎಸಳಿನ ಕಮಲ
ಮಹಾದೇವಾ | 12 ವರ್ಣದ ಲಿಂಗಾ 12 ವರ್ಣದ ಜ್ಯೋತಿ
ಮಹಾದೇವ ಶಂಭೋ ಮಹಾದೇವಾ ||ಪ||

ವಿಶುದ್ಧ ಚಕ್ರಕ್ಕೆ 16 ಬೀಜಾಕ್ಷರ | 16 ಎಸಳಿನ ಕಮಲ |
ಮಹಾದೇವಾ 16 ವರ್ಣದ ಲಿಂಗಾ 16 ವರ್ಣದ ಜ್ಯೋತಿ
ಮಹಾದೇವಾ | ಶಂಭೋ ಮಹಾದೇವಾ ||ಪ||

2 ಆಗ್ನೇಯ ಚಕ್ರಕ್ಕೆ 2 ಬೀಜಾಕ್ಷರ 2 ಎಸಳಿನ ಕಮಲ | ಮಹಾದೇವಾ 2
ವರ್ಣದ ಲಿಂಗಾ | 2 ವರ್ಣದ ಜ್ಯೋತಿ | ಮಹಾದೇವಾ ಶಂಭೋ
ಮಹಾದೇವಾ ||ಪ||

ಬ್ರಹ್ಮಪುರಿ ಚಕ್ರಕ್ಕೆ | ಸಹಾಸ್ರಾರು ಬೀಜಾಕ್ಷರ | ಸಹಸ್ರಾರು
ಎಸಳಿನ ಕಮಲ | ಮಹಾದೇವಾ | ಸಹಸ್ರಾರು ವರ್ಣಲಿಂಗ |
ಸಹಸ್ರಾರು ವರ್ಣದ ಜ್ಯೋತಿ | ಮಹಾದೇವಾ ಶಂಭೋ
ಮಹಾದೇವಾ ||ಪ||

ಶಿವಪುರಿ ಚಕ್ರಕ್ಕೆ 3 ಬೀಜಾಕ್ಷರ | 3 ಎಸಳಿನ ಕಮಲ
ಮಹಾದೇವಾ | 3 ವರ್ಣದ ಲಿಂಗಾ 3 ವರ್ಣದ ಜ್ಯೋತಿ
ಮಹಾದೇವಾ ಶಂಭೋ ಮಹಾದೇವಾ ||ಪ||

ಪಶ್ಚಿಮ ಚಕ್ರಕ್ಕೆ 1 ಬೀಜಾಕ್ಷರ 1 ಎಸಳಿನ ಕಮಲ
ಮಹಾದೇವಾ | 1 ವರ್ಣದ ಲಿಂಗ 1 ವರ್ಣದ ಜ್ಯೋತಿ |
ಮಹಾದೇವಾ | ಶಂಭೋ ಮಹಾದೇವ ||ಪ||

12
ನಾವು ಜಂಗಮರೆಂದು

ನಾವು ಜಂಗಮನೆಂದು ಕರೆಯಾ | ನಮ್ಮ ದೇವ
ಮಾಡಿದ ನೀ ಪರಿಯಾ | ಗುರುದೇವಾ ಮಾಡಿದ ನೀ ಪರಿಯ
ಮಹಾದೇವ ಮಾಡಿದನೀ ಪರಿಯ ||ಪ||

ಬಸವನ ಸಂಪ್ರಾದಾಯಕರು | ನಮ್ಮ ಶಶಿಧರನಿಗೆ
ಸಹೋದರರು | ಅಸಮತೇಜೊವಾದ ಉದ್ಯೋಗದಲಿ
ಲಾಭ ಗಳಿಸಿಕೊಂಡುಣುವಂತಾ ||ಪ||

ಸಾಧನೆ ನಾಲ್ಕು ಭಜಾರ | ಇದನಾರು ಹೇಳುವರು
ವಿಚಾರ | ಸಾಧು ಸತ್ಪುರುಷರಿಗೆ ಸಮಭಂದ
ಒಡವೆಯ | ಆದಾಯದಲಿ ಲಾಭ ಗಳಿಸಿಕೊಂಡುಣುವಂತಾ ||ಪ||

ಕ್ಷಮ ಧಮೆ ಎಂತೆಂಬೋ ಚೀಲಾ ಅಲ್ಲಿ ಸರಳು ತುಂಬಿವೆ
ಬಹುಕಾಲ ನೇಮ ನಿಯಮ ಎಂಬ ತತ್ವ ತಕ್ಕಡಿಯೊಳು ಸಮನ
ಸಕ್ಕರೆಯನು ಮಾರುತ ಕುಳಿತೆವು ||ಪ||

ತೂಕ ನಮ್ಮದು ಕಡಿಮೆಯಿಲ್ಲಾ | ಇದು ಲೋಕಕ್ಕೆ
ಕೈ ಸೇರೋದಲ್ಲಾ | ಬೇಕಾದ್ರೆಕೊಂಡು ಕೊಳ್ಳಿ
ಜುಲುಮ್ ದುಷ್ಟೆ ಇಲ್ಲಾ ಸಹಕಾರ ನಿರಾಂಕಾರ
ಓಂಕಾರ ವಸ್ತುವಾ ||ಪ||

ಸತ್ಯದಿ ಹೇಳುತ್ತೀವಲ್ಲಾ ಅಸತ್ಯದ ಮಾತುಗಳಿಲ್ಲಾ |
ಚಿತ್ತ ಶುದ್ಧವಾಗಿ | ಕೂಡಲ್ ಗಿರೇಶನ ನಿಶ್ಚಿಂತೆ |
ನಿರ್ಭಯಲೊಳು ಹೊಕ್ಕಿಮೆರೆವಂತಾ ||ಪ||

13
ಎತ್ತ ಹೋಗುತ್ತೀಯೆ ತಂಗಿ

ಎತ್ತ ಹೋಗುತ್ತೀಯೇ ತಂಗಿ ಇತ್ತ ಬಾರಮ್ಮಾ | ನೀ ಸತ್ಯ
ಲೋಕಕ್ಕೋಗುವ ಮಾರ್ಗ | ಒಂದೇ ನಿತ್ಯಾ ಕಾಣಮ್ಮ ||ಪ||

ಆರುಲಿಂಗದ ನೆಲೆಯ ಕಂಡು | ಪೂಜೆ ಮಾಡಮ್ಮ | ಅಲ್ಲಿ
ಆರು ಉಂಟು ಆರು ಇಲ್ಲಾ ತಿಳಿದು ನೋಡಮ್ಮ ||ಪ||

ಅಷ್ಟದಳದ ಕಮಲದಲ್ಲಿ | ಒಂದು ಶಿಶುವು ಕಾಣಮ್ಮ | ಆ ಶಿಶುವನೆತ್ತಿ
ಮುದ್ದನಾಡಿ ಒಂದು ಮಾತ ಕೇಳಮ್ಮ ||ಪ||

ಮಮತೆ ಎಂಬೋ ಮುಸುರೆಯನ್ನು | ವರೆಸಿ ಬಾರಮ್ಮ |
ನೀ ಸಾಧು ಸೇವೆಯಲ್ಲಿ ನಿಂತು ಸಾಧಿಸಬೇಕಮ್ಮ ||ಪ||

ಆದಿ ಬೀದಿ ಕಾಡು ಶುದ್ದಿ ದಾಂಟಿ ಬಾರಮ್ಮ | ವೈರಾಗ್ಯ
ವೆಂಬೋ ಜ್ಞಾನ ಮಾರ್ಗದಿ | ನಿಂತು ನೋಡಮ್ಮಾ ||ಪ||

ಇಂದ್ರ ದಿಕ್ಕಿನೊಳಗೆ ಇರುವ | ಬೆಳಕ ನೋಡಮ್ಮ |
ಆ ಬೆಳಕಿನೊಳಗೆ ಬ್ರಹ್ಮಾನಂದನ | ಬೆಲೆಯ ಮಾಡಮ್ಮಾ || ಪ ||

ನಾನಾ ಜನ್ಮವ ತಿರುಗಿ ತಿರುಗಿ | ಹೀನಲಾದಮ್ಮ ಇಂತ |
ಮಾನವ ಜನ್ಮಕ್ಕೆ | ಬಂದ ಮೇಲೆ ದೀನಳಾಗಮ್ಮ || ಪ ||

ಚಿತ್ತದೊಳಗೆ ಇರುವ ಗುರುವಿನ | ಅರ್ಥ ತಿಳಿಯಮ್ಮ |
ಕತೃಶ್ರೀ ಗುರು ರಂಭಾಪುರೇಶನ ನಿತ್ಯ ನೆನೆಯಮ್ಮ || ಪ ||

14
ಸಾರಿ ಚೆಲ್ಲಿದೆ

ಸಾರಿ ಚೆಲ್ಲಿದೆ ಮುಕುತಿ | ಗುರು ತೋರಿ
ಸಲರಿಯದೇ ಕಾಣಿಸದಣ್ಣಾ || ಪ ||

ವೇದವ ಮೊದಲಿನ ಮೂಲವಿದು | ಮೇದಿನಿಯೊಳು
ತಾ ನಿಂತಿಹುದು | ಆದಿ ನಾದಿಯೊಳು ಬಿತ್ತಹುದು
ಗುರು ಸಾಧುಜನರಿಗೆ ಕಾಣುವುದಣ್ಣಾ ||ಪ||
ಎತ್ತನೋಡ ಪರಬ್ರಹ್ಮವಿದು | ಸುತ್ತಮುತ್ತಲು
ಸುಳಿದಿಹುದು | ಮೊತ್ತ ಮೊತ್ತವಾಗಿ ಕಾಂಬುವುದು |
ಗುರು ಪುತ್ರರಿಗಲ್ಲದೆ ಕಾಣಿಸದಣ್ಣಾ ||ಪ||

ಹಿಂದೆ ನೋಡಲು ನಿಂದಿಹುದು | ಮುಂದೆ ನೋಡಲು
ಕಾಂಬುವುದು | ಸಂದು ಸಂದಿಗೆಲ್ಲಾ ಜಡಿದಿಹುದು |
ಆನಂದ ಗುಹೇಶ್ವರ ಲಿಂಗವಿದಣ್ಣಾ || ಪ ||

15
ಏನ ಗಳಿಸಿನ್ನೇನ ತಿಳಿದು

ಏನ ಗಳಿಸಿನ್ನೇ ತಿಳಿದಿನ್ನೇನು ಫಲವಣ್ಣಾ | ಗುರುವಿನ
ಧ್ಯಾನವಿಲ್ಲದ ನರನ ಜನ್ಮವು |ವ್ಯರ್ಥ ಕಾಣಣ್ಣಾ || ಪ ||

ಏನು ಇಲ್ಲದ ಬಯಲಿನೊಳು ತಾನೇನು ಕಾರಣಮಾದುದೀ
ಜಗ | ಏನು ಇದರ ಸ್ವರೂಪವೆಂಬುದ | ಮೊದಲು ತಿಳಿಯಣ್ಣಾ
ಜ್ಞಾನ ಗುರುವಿನ ಪದವ ಪಿಡಿದು ಸ್ವಾನುಭವ ಸಿದ್ಧಾಂತವೆಂಬುವ
ಶಿವಾನುಭವವ ತಿಳಿಯೆ ಸಾರ್ಥಕ ಜನ್ನಕಹುದಣ್ಣಾ ಹುಟ್ಟು ಸಾವಿನ
ಬೀಜವ್ಯಾವುದು ಮೊಟ್ಟಮೊದಲದನರಿದು ಅದನು | ಸುಟ್ಟು

ಜ್ಞಾನಾಗ್ನಿಯೊಳು ನೀನೆ ಬೆಳಗಬೇಕಣ್ಣಾ ಇಷ್ಟ ಪ್ರಾಣವು ಭಾವವೆಂಬುದು
ಗುಟ್ಟಿನರಿಯುತೆ ಗುರು ಪದಾಬ್ಜದಿ ನಿಷ್ಟೆಯಿಂದಿಲೆ ಶ್ರೇಷ್ಠನೆನಿಸುವ ಮುಕ್ತ
ನೀನಣ್ಣಾ ಹಿಂದೆ ಮಾಡಿದ ಸುಕೃತ ಪುಣ್ಯದಿ ಬಂದೆ ಶ್ರೇಷ್ಠಾಂಗದಲಿ
ಮಾನವ ಮುಂದೆ ಜನಿಸಿದ ತೆರದಿ ಜ್ಞಾನವ ಪಡೆಯ ಬೇಕಣ್ಣಾ
ಬಂಧಮೋಕ್ಷಗಳೆಂಬೊವೆರಡರ ಸಂದು ತಿಳಿಯಲು ಗುರು ಕಟಾಕ್ಷದಿ
ಬಂದವನು ಕಳೆದುಳಿದು ಮೋಕ್ಷವ ಪಡೆವೆ ಕೇಳಣ್ಣಾ ಅರಿಯದಿರಲೀ
ತತ್ವದರ್ಥವ ನರಕ ಯಾತನೆ ಕೊನೆಗು ತಪ್ಪದು ತರಿಯೆ ಸಂಚಿತವನ್ನ

ಅಷ್ಟಾಕ್ಷರಿಯನರಿಯಣ್ಣಾ ಪರಮ ಗುರುವಿನ ಪಥವ ಪಿಡಿದು ಅರಿಯೆ ನಿನ್ನನು
ನೀನು ಗುರುಣಾಂ ಗುರುವೆನಿಸಿ ಇಹಪರದಿ ಸೌಖ್ಯವ ಪೆಡೆವೆ ಕೇಳಣ್ಣಾ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 295

ಅರಿಯಲೀ ತತ್ವಾರ್ಥವನು ನೀ ಧರೆಗನಾದಿಯ ಮೂರ್ತಿ ಎನಿಸುವ ಪರಮ
ಸದ್ಗುರುವನ ಕುರುಹನು ಪೇಳ್ವೆ ಕೇಳಣ್ಣಾ ಧರಣಿಯೊಳು ಮೆರೆಯುತಿಹ
ರಂಭಾಪುರದಿ ಶ್ರೀ ಗುರುರೇಣುಕಾರ್ಯನ ಚರಣ ಕಮಲವ ಪಿಡಿಯೆ ಸತ್ಯದಿ
ಮುಕ್ತಿಯುಹುದಣ್ಣಾ || ಪ ||

16
ಗುರುರಾಯನೊಲಿದ

ಗುರುರಾಯನೊಲಿದ ಮೇಲಮ್ಮ | ಈ ಧರಣಿಯ ಭ್ರಮಣೆಗಳಿರಬಾರದಮ್ಮ ||ಪ||
ಹಿಂದಣ ಸುಕೃತವಿದಮ್ಮ | ಗುರು ಬಂದು ತನ್ನಂತೆನ್ನ ಗೈದ ಕಾಣಮ್ಮ ಬಂಧನ
ಹರವಾಯಿತಮ್ಮ | ಮುಕ್ತಿಯೊಂದೆ ಸಾಕಿನ್ನೇನು ಬೇಡಕಾಣಮ್ಮ || ಪ ||

ನುಡಿದಂತೆ ನಡೆಯ ಬೇಕಮ್ಮ | ಬಲು ದೃಢ ಚಿತ್ತವಿರಬೇಕು ಮನದೊಳಗಮ್ಮ
ನುಡಿಯೊಳೊಂಚಿಸಬಾರದಮ್ಮ ಈ ಒಡಲಿಗೆ ಕಡುಕಷ್ಟ ಕೊಡುವುದಮ್ಮ ||ಪ||

ರಂಭಾಪುರದೊಳಿಹನಮ್ಮ | ಈ ಕಂಭಿಣಿ ಪೊರೆವ ರೇಣುಕನಿವನಮ್ಮಾ |
ನಂಬಿದವರ ಪ್ರಿಯನಮ್ಮ ಗುರುವೆಂಬುರೊಳಗಿವನೇ ಅಗ್ರೇಶನಮ್ಮ ||ಪ||

17
ಅರಿವುದೇ ಚಂದ

ಅರಿವುದೆ ಚಂದ | ಬ್ರಹ್ಮಾನಂದ ಅರಿವುದೆ ಚಂದ || ಪ ||
ಅರಿವುದೆ ಚಂದ ನಿರ್ಮಲಪ್ರಜ್ಞೆಯಿಂದ | ಅರಿವು ತಾನಲ್ಲದೆ
ಬೇರಿಲ್ಲವೆಲೊ ಕಂದ | ಅರಿವುದೆ || ಪ ||

ಹೇಳುವುದಲ್ಲಾ ಕಿವಿಕೊಟ್ಟಿನ್ನು| ಕೇಳುವುದಲ್ಲಾ ಹೇಳದೇಯಿರಲದು
ತಿಳಿಯುವದಲ್ಲಾ ಹೇಳಿವಾಚಕದಿಂದ ಕೆಡಿಸುವದಲ್ಲ || ಅರಿವುದೆ || ||ಪ||

ಪರಿಪರಿನಾಮರೂಪುಗಳೆಲ್ಲ ನೆರೆಗಳದುಳಿದ | ವರದ್ರಷ್ಟೃದರ್ಶನ
ದೃಶ್ಯಾದಿಗಳಿಗೆಲ್ಲ ಪೆರತಾದ ನಿರುಪಮ ನಿರ್ಗುಣ ಬ್ರಹ್ಮವಹುದು || ಪ ||

ಹೆಣ್ಣುಗಂಡಲ್ಲ ಹೊನ್ನಲ್ಲವು | ಮಣ್ಣೆಂಬೊದದಿಲ್ಲಾ ಹೆಣ್ಣುಗಂಡಾಗಿ ತುಂಬಿ
ಜಗವೆಲ್ಲಾ ಕಣ್ಣಿಗೆಕಾಣಿಸುವುದು ನಿಜವೇನು ಅಲ್ಲಾ || ಪ ||

ಧ್ಯಾನದೊಳಿಲ್ಲಾ ಧಾರಣಯೋಗ ಮೌನದೊಳಿಲ್ಲಾ |
ಧ್ಯಾನಧಾರಣೆ ಯೋಗಕ್ಕಾಗಿ ಅಂತ್ಯದೊಳು
ತಾನೊಂದು ಸಾಕ್ಷಿಯಾಗಿಹುದು ನಿಶ್ಚಲವಾಗಿ ||ಪ||

ವರಶಾಂತನಾಗಿ | ಮಾನಾಭಿಮಾನೆರಡನ್ನು ನೀಗಿ | ನಿರುತ ಅಖಂಡೈಕ
ಸಮಯನಾಗಿ | ಶ್ರೀ ಗುರುಮಹ
ಲಿಂಗರಂಗನೆ ತಾನೆಯಾಗಿ || ಪ ||

18
ಕೇಳು ಕೇಳಲೋ ತಮ್ಮ

ಕೇಳು ಕೇಳಲೋ ತಮ್ಮಾ | ಈ ತನುಸಾಕ್ಷಿಂಬುದೆ
ಬ್ರಹ್ಮ ||ಪ||
ಬೆಲ್ಲವ ಮುಂದಿಟ್ಟುಕೊಂಡು | ಉಣಬಾರದೇ
ನೋ ಸವಿಮಾಡಿ ಸವಿದು | ಬೆಲ್ಲವಬಿಟ್ಟು |
ಸವಿಮಾಡುವೆನೆಂದರೇ ಅದುನಿಮ್ಮ ವ್ವಾ ನಿಮ್ಮವ್ವಾ
ನಿಮ್ಮವನಿಂದಾಗದು ||ಪ||

ಹೂವನ್ನೆ ಮುಂದಿಟ್ಟುಕೊಂಡು | ಕಟ್ಟಾಬಾರ
ದೇನೋ | ಚೆಂದಾದ ಚೆಂಡು | ಹೂವನ್ನೆ ಬಿಟ್ಟು
ಪರಿಮಳ ಕಟ್ಟುವೆನೆಂದರೇ || ಅದು ನಿಮ್ಮಪ್ಪ
ನಿಮ್ಮಪ್ಪನಿಂದಾಗದು ||ಪ||

ಕಣ್ಣಿನ ಕಣಿಕೇಳೋ ತಮ್ಮ | ಚಿನ್ನದೊಂದು
ನವರತ್ನ ತಮ್ಮಾ ಹೆಣ್ಣದು ತಮ್ಮಾ
ಕೈಯಲ್ಲಿ ಹಿಡಿಯುವೆನೆಂದರೆ ಕೈಯಿಗೆ ಸಿಗದು
ಅದು ನಿಮ್ಮಯ್ಯಾ ನಿಮ್ಮಯ್ಯನಿಂದಾಗದು ||ಪ||

ಗುರುವನ್ನು ಮುಂದಿಟ್ಟುಕೊಂಡು | ಶಿಷ್ಯನಾಗ
ಬಾರದೇನು ಗುರುಪಾದ ಹಿಡಿದು | ಗುರುವನ್ನು
ಬಿಟ್ಟು | ಶಿಷ್ಯನೆಂದಾದೊಡೆ | ಅದು ನಿಮ್ಮಣ್ಣ
ನಿಮ್ಮಜ್ಜನಿಂದಾಗದು ||ಪ||

ಮೂಗಿನಲ್ಲಿರುವುದೇ ನತ್ತ ನತ್ತಿನೊಳಗೆ
ಇರುವುದೆ ಮುತ್ತು |
ಮುತ್ತನ್ನೇ ಬಿಟ್ಟು ಜ್ಯೋತಿ ಎಂದೊಡೇ
ಕಾಸಾಚಿದಾನಂದ ಗುರುವಿನಿಂದಾಗದು ||ಪ||

19
ಮನವ ನಿಲ್ಲುವಪಾಷಧಿ ಕೊಡು ಗುರುವೇ

ಮನವ ನಿಲ್ಲುವಪಾಷಧವಕೊಡು ಗುರವೇ |
ರೇಣುಕನೆ ಪ್ರಭುವೆ ||ಪ||

ಮನವ ನಿಲ್ಲಿಸಲ್ ಭವಗಳೆಲ್ಲವು |ತನಗೆ ತಾನೆ ಹಾರಿ
ಪೋಪುದು ಎನುತ ಕೋರುತಿರದರಿಂ ಚಿನುಮಯನೇ
ನೀ ಬೇಗ ಕರುಣಿಸು || ಪ ||

ಹೀನ ಜನರೊಳು ಕೂಡಿ ನಲಿದಾಡಿ | ಭಕ್ತಿಯನು
ತೊರೆದು | ಜ್ಞಾನ ಹೀನರೊಡನಾಡಿ | ಭಾನುಕೋಟಿ
ಪ್ರಕಾಶ ತವಪದ | ಧ್ಯಾನ ಪಾರಂಗಣವ ಮಾಡಿದೇ |
ಸೋನನಂದದಿ | ಮನೆ ಮನೆಗೆ ತಿರುಗುವ | ಹೀನ
ಮನವನು ನಿಲ್ಲಿಸುವ ||ಪ||

ಇದ್ದ ಮಾತಿದ್ಯಂತ ಹೇಳುವೆನು | ಶ್ರೀ ಗುರು
ರೇವಣ್ಣ ಸಿದ್ದಪೇಳಿದ ವಿಚಾರವನು | ಶ್ರದ್ಧೆಯೇ ಋತು
ಆ ಮಹಾ ಘನಾ | ಭದ್ದ ಮಾಡುಪದೇಶವೀಯುತ
ಶುದ್ದ ಜ್ಞಾನಾನಂದಪುಟ್ಟಿದಾ ಮುದ್ದು
ಶಿಶುವಾನಂದವೆಂಬುವಾ ||ಪ||

20
ಕಲ್ಲುಮೆತ್ತಗೆ ಮಾಡಬೇಕಣ್ಣ

ಕಲ್ಲುಮೆತ್ತಗೆ ಮಾಡಬೇಕಣ್ಣಾ | ಸುಳ್ಳೆಲ್ಲವಣ್ಣಾ
ಕಲ್ಲು ಮೆತ್ತಗೆ ಮಾಡಬೇಕಣ್ಣಾ | ಕಲ್ಲು ಮೆತ್ತಗೆ
ಮಾಡಬೇಕು | ಬಲ್ಲ ಗುರುವಿನ ಪಾದ ಪಿಡಿದು| ಕಲ್ಲು ಕರಗಿ
ಮೆತ್ತಗಾಗಿ ಕಲ್ಲುಸಕ್ಕರೆ ಆಗೋತನಕೆ || ಪ ||

298 / ತತ್ವಪದ ಸಂಪುಟ-1

ಯಾವುದೊಂದೋ ತಂದು ಹಾಕಿದಾ | ಬೆಂಕಿಯು
ತನ್ನ | ಭಾವದಂತೆ ಮಾಡುತ್ತಾಯ್ತಣ್ಣಾ | ರೇವ
ಗುರುವಿನ ಪಾದಪಿಡಿದು | ಭಾವಗುಣಂಗಳಳಿದ
ಮೇಲೇ | ಯಾವಾಗಲೂ ತನ್ನ ಭಾವದಂತೆ ಮಾಡುತ್ತಾಯ್ತೆ ||ಪ||

ಮೊಳೆಕೆ ಬೀಜವು ಕೊಳೆತು ಹೋಯ್ತಣ್ಣಾ | ಅಂತಪ್ಪ
ಗುರುವಿನ ಕಳೆಯು ಕಾಣುತ್ತಾಯ್ತೆ ನೋಡಣ್ಣಾ
ಥಳಥಳನೆ ಹೊಳೆಯುವಂತ್ತ ಸೂರ್ಯನಂತ ಪ್ರಳಯನಿವನು |
ಎಳೆಯ ಗಂಗಾಧರನ ಬೆಳಕು ಕಾಣುತ್ತಾಯ್ತೆ ನೀವೇ ನೋಡಿ ||ಪ||

ಕರ್ಮವನ್ನು ಕಡೆದು ಹಾಕಿದಾ ಆ ಜಾಲಗಾರ
ಒಪ್ಪುವಂತೆ ನನ್ನ ಮಾಡಿಟ್ಟ ಕಷ್ಟ ಎಂದು
ತಿರುಗಬೇಡಿ ಸರ್ಪಭೂಷಣ ಶಿವನಿಗುಂಟು |
ಸೃಷ್ಠಿಸಿದ ಈ ಕಾಯವನ್ನು | ತಪ್ಪದೆ ಕಾಪಾಡುತ್ತಾನೆ ||ಪ||

21
ಎಲ್ಲರಂತವನಲ್ಲೆ ಎನ ಗುರುವು

ಎಲ್ಲರಂತವನಲ್ಲೆ ಎನಗುರುವು | ಭಲ್ಲಿದನೆ ಪ್ರಭುವು ||ಎಲ್ಲ||
ಎಲ್ಲರಂತವನಲ್ಲೆ ಕೇಳಮ | ಎಲ್ಲವನು ಎನ್ನಲೇ ತೋರಿ |
ಎಲ್ಲೂ ಹೋಗದಂತೆ ಮಾಡಿಟ್ಟ | ಜನ್ಮವನೆ ಸುಟ್ಟ ||ಪ||

ನೋಡು ಪ್ರಣವ ಸ್ವರೂಪ ನೀನೆಂದಾ | ತಾನೈದುವಿಧದಿ ಕೂಡಿ
ಧರೆಯೊಳು | ತುಂಬಿರುವುದೆಂದಾ || ಇದ ನೋಡ ಸೃಷ್ಟಿಯ
ನೊಡದಂದದಿ ಭಾಸವಹುದೆಂದಾ | ಈ ರೂಪಿನಿಂದಾ
ಕೂಡಿಹಂಸನ ಹೂಡಿಸೂತ್ರವ | ನೋಡಿ ಆಪೋ ಜ್ಯೊತಿ
ತೇಜವಾ | ಮಾಡಿದವ ಶ್ರೀ ಗುರು ಎನ್ನಿಂದ | ಅದು ನೀನೆ ಎಂದಾ ||ಪ||

ಆದಿಅಂತ್ಯಗಳನ್ನೇಬೋಧಿಸಿದಾ | ಅತ್ಯಾತುಷ್ಟ ದ್ವಾದ ಶಾಂಕುಲದಂತೆ
ತೋರಿಸಿದಾ | ವರಮೋಕ್ಷಮಾರ್ಗದ ಹಾದಿ ಇದು ತತ್ವದವ
ನೋಡೆಂದಾ ಅದು ನೀನೆ ಎಂದ ||ಪ||
ಆದಿನಾಲ್ಕಾರ ನಡುವೆ ಶೋಭಿಪ ವೇದಿಕೆಯ ಮೇಲೇರಿ ಶ್ರೀಗುರು |
ಪಾದದಲಿ ನೀ ಬೆರೆತು ಸುಖಿಸೆಂದಾ | ಎರಡಿಲ್ಲವೆಂದು ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೊಗಿ ಮತ್ತು ಇತರ ತತ್ವಪದಗಳು / 299

ಆರುವರ್ಗವ ಅರಿದು ಬಿಸುಡೆಂದಾ | ಕರ ವಾಕು ಕಚ್ಚಿಯ
ಮೂರು ಗುಣಗಳ ಬಿಗಿದು ಹಿಡಿಯೆಂದಾ
ಆರಾರ್ಲಿ ಮುವತ್ತಾರು ತತ್ವದ | ಮೂಲ ವರಿಯೆಂದು
ಭಲು ಸಿಟ್ಟಿನಿಂದಾ | ಮೂರು ಕರ್ನವು ಶುದ್ದಿಯಿಲ್ಲದೇ ನೂರುಕಾಲವು
ತಪವ ಗೈಯ್ದೊಡೆ | ತೋರದಾತ್ಮ ಜ್ಞಾನಸುಖವೆಂದ |
ಜೋಪಾನವೆಂದಾ ||ಪ||

ಕಾರಣದ ಗುರುವರನೇ ಬೇಕೆಂದಾ | ಆವದೇವಗುರುವು ಅಪಾರ
ಮಹಿಮನುವಿಹಿತನವನೆಂದಾ | ಆ ಗುರುವಿನಿಂದ ಘೋರ ಭವ
ದುರಿತಗಳ ಹರವೆಂದಾ | ಅರಿದಾತನಿಂದ | ಆರುಲಿಂಗವ
ಮೂರು ಮಾಡಿ | ಮೂರುಲಿಂಗವ ಒಂದು ಗೂಡೀ | ಸೇರಿ
ನೀನಾಸ್ಥಳದಿ ಬೆಳಗೆಂದಾ | ಘನಪದವಿದೆಂದಾ ||ಪ||

ತನ್ನ ತಾನೇ ತಿಳಿಯಬೇಕೆಂದ | ತಾ ತನ್ನ ತಿಳಿದರೆ
ಭಿನ್ನಭಾವಗಳಳಿವುದದರಿಂದಾ ನೀ ನಿನ್ನ ತಿಳಿವುದೇ ಎನ್ನಮತವಿದು

22
ಹೊಸದಾಗಿ ಒಂದು ಮೀನು

ಹೊಸದಾಗಿ ಒಂದು | ಮೀನು ಬಂದು |
ಕೆರೆಯಲ್ಲಿರುವ | ನೀರನ್ನೆಲ್ಲಾ | ಕುಡಿದು
ಭಟ್ಟಂಬಯಲ | ಮಾಡಿತು ಓಂ |
ಜ್ಞಾನಿ ಕೇಳೋ | ಮುತ್ತಿನಂತ ಮೀನು ನೋಡಯ್ಯ ||ಪ||

ಆಕಾಶದಲ್ಲಿ ಅಂಟಲಿಲ್ಲಾ | ಭೂಮಿಮೇಲೆ
ನಿಲ್ಲೊದಲ್ಲಾ | ನಟ್ಟನಡುವೆ ಇರುವುದು
ಏನಯ್ಯಾ | ಓಂ ಜ್ಞಾನಿ ಕೇಳೋ ಎಂಥ ಆಶ್ಚರ್ಯವಾಗಿದೆ
ಈ ಮೀನು ನೋಡಯ್ಯ || ಪ ||

ಕೈ ಇಲ್ಲಾ | ಕಾಲು ಇಲ್ಲಾ | ಬಾಯಿ ಕೊಂಬು
ಒಂದು ಇಲ್ಲಾ | ಆರು ಚಕ್ರವ ಹೊಡೆದು
ನುಂಗೀತು | ಓದಿ ಜ್ಞಾನಿಕೇಳೋ
ಸುಲಭವಲ್ಲವು ಈ ಮೀನು ನೋಡಯ್ಯಾ || ಪ ||
300 / ತತ್ವಪದ ಸಂಪುಟ-1

ಕಾಣದಿರುವ ಮರವು ಒಂದು ಆಕಾಶದಲಿ ಇರುವುದಯ್ಯಾ
ಐದು ಮೇಕೆಗಳು ಮೇಯ್ದು | ಹೋದವು
ಆ ಮರದ ಕೇಳೋ || ಐದು || ಓಂ ಜ್ಞಾನಿಕೇಳೋ
ಬಲ್ಲಂತ ಶರಣರು ಪೇಳಿರಯ್ಯಾ ಇದರರ್ಥವ
ತಿಳಿದು ಪೇಳಿರಯ್ಯ || ಪ ||
23
ಅರಗಿಬಿತ್ತಲಿಲ್ಲಾ

ಅರಗಿಬಿತ್ತಲಿಲ್ಲ ಮೊಳೆದುದ್ದ ತೆನೆಯಾಯ್ತು | ಶಂಭುಲಿಂಗಾ |
ಅಲ್ಲಿ ತಿನಬಂದ ಗಿಳಿಗಳು ಬೆದರಿ ಓಡುವತಲಿವೇ ಶಂಭುಲಿಂಗು || ಪ ||

ಹುಲ್ಲನ್ನೇ ಮೆಲ್ಲದು ನೀರನ್ನೆ ಕುಡಿಯದು ಶಂಭುಲಿಂಗ |
ಹಿಡಿದರೆ ಮೊಲ್ಲೆಯಿಲ್ಲ ಹಾಲನ್ನೆ ಕರೆವುದು | ಶಂಭುಲಿಂಗಾ || ಪ ||

ಕರಿಯ ಹಿಂಟೆಯ ಮೇಲೆ ಬಿಳಿಯಧಳವ ಬಿತ್ತಿ |
ಶಂಭುಲಿಂಗಾ | ಕೊಂಬುವರುಂಟಿನ್ನು ತಿಂಬುವರಾರಿಲ್ಲಾ ಶಂಭುಲಿಂಗಾ || ಪ ||

ಮೂರುಕಾಲಿನ ಪಕ್ಷಿ | ನೀರೋಳು ನಿಂತಿದೇ | ಶಂಭುಲಿಂಗಾ
ಆ ಪಕ್ಷಿಗೆ ರಕ್ಕೆಲ್ಲಾ | ಹಾರಿತು ಗಗನಕೆ | ಶಂಭುಲಿಂಗಾ ||ಪ||

ಇಬ್ಬರು ಸ್ತ್ರೀಯರಿಗೆ ಒಬ್ಬನೇ ಪುರುಷನು | ಶಂಭುಲಿಂಗಾ
ಆ ಪುರುಷನಿಗೆ ರಂಪಿಲ್ಲಾ ಗುರುವು ಗುಹೇಶ್ವರ
ಬಲ್ಲಾ ಶಂಭುಲಿಂಗಾ || ಪ ||

24
ಕೋಲು ಕೋಲೆನ್ನಿರೆ

ಕೋಲು ಕೋಲೆನ್ನಿರೆ | ಸದ್ಗುರುವಿನ ಕೀಲು
ಮೇಲೆನ್ನಿರೇ ಹತ್ತಿಬಿತ್ತಿ ಬಟ್ಟೆಕಾಣೇ ಭತ್ತಕುಟ್ಟಿ
ಬೋನ ಕಾಣೀ ಹೆತ್ತಮಕ್ಕಳ ಹೆಸರ ಕಾಣೀ
ಪತಿಯ ಸುಖವ ಮೊದಲೇ ಕಾಣೆ || ಪ ||

ಅತ್ತೆ ಹೆಸರು ಕಲ್ಲಿಪಿಲ್ಲಿ | ಮಾವನೆಸರು ಮಂಚದ ಪಾದ ||ಅತ್ತೆ||
ಗಂಡನೆಸರು ಗಂಡಗುಂಡಿ ನನ್ನ ಹೆಸರು
ತಳ್ಳಿಪಿಳ್ಳಿ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 301

ಗಂಡ ಧಂಡಿಗೋಗುವಾಗ ಅರಗಿನ ಮುದ್ರೆ ಹಾಕಿ
ಹೋದ ||ಗಂಡ|| ಅರಗಿನ ಮುದ್ರೆ ಹಾರಿ ನಾನು ಆರು
ಮಕ್ಕಳ ತಾಯಿ ಆದೆ ||ಪ||
ಹಾದಿಲೋಗೋ ಅಣ್ಣಾಗಳಿರಾ | ಬೀದಿಲೋಗೋ
ತಮ್ಮಗಳಿರಾ || ಆದಿ || ಧಂಢಿಲಿ ನನ್ನ ಗಂಡ ಸಿಕ್ಕರೆ
ಮಿಂಢನ ಕೂಡಿ ಹೋದಳೆಂತೇಳಿ || ಪ ||

ಗುಡ್ಡಕ್ಕೆ ನೆರಳಿಲ್ಲಾ | ಗುರವಿಗಿಂತಧಿಕರಿಲ್ಲಾ |
ಗುರುವು ಗುಹೇಶ್ವರ ಗೂಡಾರ್ಥ ಮಾಡಿಕೊಂಡ || ಪ ||

25
ಎಲ್ಲರವ ನಮ್ಮಣ್ಣ

ಎಲ್ಲರವ ನಮ್ಮಣ್ಣಾ | ಕಲ್ಯಾಣ ಬಸವಣ್ಣ |
ಎಲ್ಲರೆದೆಯಾಳು ತುಂಬಿ | ತುಳುಕಿದನು
ಹಿರಿಯಣ್ಣಾ | ಅವರೆಲ್ಲರೆದೆಯೊಳು ತುಂಬಿ |
ತುಳುಕಿದನು ಹಿರಿಯಣ್ಣಾ ಅವರೆಲ್ಲರೆಡೇ ||ಪ||

ಭಾಗೆವಾಡಿಯೊಳು ಜನಿಸಿ | ಕಲ್ಯಾಣದೊಳು
ನೆಲಸಿ | ತ್ಯಾಗ ಜೀವನಕ್ಕಾಗಿ ನೀಲಾಂಬಿಕೆ
ಯೊನ್ನೊರಿಸಿ ತ್ಯಾಗ ||ಪ||

ಅನುಭವ ಮಂಟಪದಿ | ಜಾತಿಮತದಂತ್ಯದೊಳು |
ಜನಿಸಿದೊಂದು ಜಾತೀ ಅಂತಮಾನವರು ನಾವಾಗಿ ಜನಿಸಿದೊಂದು ||ಪ||

ಕರ್ನಿಕೆಯ ಬೋಧಿಸಿದಾ ನಿಶ್ವಾರ್ಥಭಾವದೊಳು | ಕನಿಗೆ
ಅಂತಮನುಜ ದೇವರವರು ಅಂತಮನುಜ ಭಾಗ್ಯದಲಿ ನಮ್ಮ
ಭಾಗ್ಯದ ಬಸವಣ್ಣ ||ಪ||

ಲೋಕ ಹಿತಕ್ಕಾಗಿ ಬಿಜ್ಜಳನ ಪ್ರಧಾನಿಯಾಗಿ
ಅಂತ ಭಕ್ತ ಭಂಡಾರವನು ಪಡೆದವರು ನಮ್ಮಣ್ಣಾ ಅಂಕಭಕ್ತ ||ಪ||

302 / ತತ್ವಪದ ಸಂಪುಟ – 1

ಕೂಡಲ ಸಂಗಯ್ಯಾ | ರಾಮೇಶ್ವರ ಸೇರಿ || ಕೂಡಲ ||
ವರ ಭಕ್ತಿ ಜ್ಯೋತಿಯನು ಬೆಳಗಿದರು
ಪೊಡವಿಯೊಳು || ವರಭಕ್ತಿ ||ಪ||

26
ಜ್ಞಾನಿಯ ಲಕ್ಷಣವಿಂತಿರಬೇಕು

ಜ್ಞಾನಿಯ ಲಕ್ಷಣವಿಂತಿರಬೇಕು | ಅಜ್ಞಾನವ ಸುಟ್ಟು |
ಬೂದಿಯ ಮಾಡಿದ ||ಪ||

ಮಾತಿನೊಳಗೆ ಮಾತಾಡಲಿಬೇಕು ಖ್ಯಾತಿ
ಘಟದಿ ಮಠಮಾಡಿರಬೇಕು ಜ್ಯೋತಿಯೊಳಗೆ
ಜ್ಯೋತಿ ಬೆಳಗಬೇಕು ಗುರುನಾಥನ
ಓದೊಳಗೋದಲಿಬೇಕು ||ಪ||

ಹೊರಗಿನ ಮಾಯೆಯ ಮುರಿಯಬೇಕು |
ತನ್ನೊಳಗಿನ ಮಾಯೆಯನರುಹಿರಬೇಕು |
ಮರೆವೆಯ ಮೂಲವ ಮುರಿದು
ತನ್ನಂತರವನೇ ತಾ ತಿಳಿದಿರಬೇಕು ||ಪ||

ಅರಿವು ಎಂಬುದನರಿಯಬೇಕು ಆ ಅರಿವೇ ಮೂರುವಿದ ಎಂದರಿಯಬೇಕು
ಬರಿ ಅರಿವು ಬ್ರಾಂತಿ ಬರಿ ಅರಿವು ತನ್ನ ನಿಜದರಿವನರಿವನೆ ತಾನೆನ್ನಬೇಕು

ವರರಂಬಾ ಪುರಿ ಸೇರಲಿಬೇಕು | ಓಂ ಗುರು
ಶಿವಾಯ ಎನುತ್ತಿರಬೇಕು ವರ ಗುರು
ರೇವಣಸಿದ್ದನ ಪಾದದಿ | ಬೆರಸಿ ಮನವ
ಸ್ಥಿರಗೊಳಿಸಿರಬೇಕು ||ಪ||

27
ಗುರುಬಂದ ಹರಬಂದ

ಗುರುಬಂದಾ ಹರಬಂದಾ ಗುರುವೇ ರೇವಣಸಿದ್ದ
ತಾ ಬಂದಾ ಮನೆಗೆ ||ಪ||

ಎಂದು ಬಾರದಗುರು ಇಂದು ತಾ ಬಂದಾ |
ಆನಂದ ಪದವಿಯು ನಿಮಗಾಗಲೆಂದಾ || ಆನಂದ || ಪ ||

ಮುಕ್ಕಣ್ಣ ಶಿವತಾನು ಭಿಕ್ಷಕೆ ಬಂದಾ |
ಭಿಕ್ಷವ ನೀಡಿರಿ ಮೋಕ್ಷ ನಿಮಗೆಂದಾ || ಬಿಕ್ಷವಾ ||ಪ||

ಚಿನ್ನದ ಹಾವಿಗೆ ರನ್ನದ | ಬೆತ್ತ | ಹೊನ್ನಿನ ಜೋಳಿಗೆ
ತಾ ಧರಿಸಿ ಬಂದಾ || ಹೊನ್ನಿನ ||ಪ||

ಕುಂಟ ಕುರುಡರೆಗೆಲ್ಲಾ | ಕಣ್ಣು ಕಾಲು ತಂದಾ |
ಬರಡು ಗೋವಿನ ಹಾಲ ತಾ ಕರೆದು ಉಂಡಾ ||ಬರಡು || ಪ ||

ಧರೆಯೊಳು ಕೊಲ್ಲಿಯ ಪಾಕಿ ಪುರದಿಂದ ಬಂದಾ ||ಧರೆಯೊಳ್||
ಹರುಷದಿವರ ರಂಬಾಪುರದೊಳು ನಿಂದಾ ||ಹರುಷ|| ಪ ||

28
ಯಾರಿಗೆ ಯಾರಿಲ್ಲ

ಯಾರಿಗೆ ಯಾರಿಲ್ಲಾ | ಸಾರಿಹೇಳುವೆ ಕೇಳು | ಮೂರು
ದಿನದ ಸಂತೆ ತಂಗಿ | ಸಾರವಿಲ್ಲದ ಸಂಸಾರ ಸರದಿಯೊಳು |
ನೀರಮೇಲಣ ಗುಳ್ಳೆ ತಂಗಿ || ಯಾರಿಗೆ ||

ಸೂತ್ರಧಾರನ ಮರೆತು | ಗಾತ್ರವೇ ಗತಿಯೆಂದು ಸ್ತೋತ್ರ
ಮಾಡಲು ಬ್ಯಾಡಾತಂಗಿ | ಸ್ತೋತ್ರ ||
ಶೃತಿ ಅನುಭವ ಗುರುಬೋಧೆಗೆ
ಸಮಉಂಟೆ | ಮತಿವಂತೆಯಾಗಮ್ಮ ತಂಗಿ || ಪ ||

ಗಂಗೆ ಯಮುನನಡುವೆ | ಸಂಗಮಕೊಳದೊಳು |
ಸ್ನಾನವ ಮಾಡಮ್ಮ ತಂಗೀ || ಸ್ನಾನ || ಅಂಗ ಸಂಗದಿ ಬಂದ |
ಪಾಪವ ಕಳೆಕೊಂಡು | ಪುಣ್ಯವಂತೆ ಯಾಗಮ್ಮ ತಂಗಿ ||ಪ||

ನಾದ ಬ್ರಹ್ಮದಿ ಮೂಲ ವೇದವ ತಿಳಿಕೊಂಡು ಬೋದೆ
ಉನ್ಮನೆ ಸೇರೋ ತಂಗೀ || ಬೋದೇ || ಸಾದು ಸತ್ಪುರುಷರ
ಪಾದವ ಹಿಡಿದರೆ ಒದಗುವುದು ಕೈವಲ್ಯ ತಂಗಿ ||ಪ||

304 / ತತ್ವಪದ ಸಂಪುಟ – 1

ಮೂಲ ಕುಂಡಲಿಯೋಳು ಮೇಲೆ ಮಂಡಲಕ್ಕೇರಿ |
ಆಲಯದೊಳ್ ನೆಲಸಮ್ಮ ತಂಗೀ | ಮೂಲ ಮೂರುತಿ
ನಮ್ಮ ಗುರುಪಾದ ಹಿಡಿದರೆ ಕಾಲನ ಭಯವಿಲ್ಲ ತಂಗಿ ||ಪ||

ಓಂಕಾರವನು ತಿಳಿದು ಅಹಂಕಾರವನು ಕಳೆದು |
ಝೇಂಕಾರದೊಳಾಡಮ್ಮ ತಂಗೀ || ಝೇಂಕಾರ || ಮಂಕು ತನವ ಬಿಟ್ಟು |
ಕಿಂಕರ ಭಾವದೊಳು ಪಂಕಜನ ನೆನೆಯಮ್ಮ ತಂಗೀ ||ಪ||

29
ಜ್ಞಾನವಿರಬೇಕು

ಜ್ಞಾನವಿರಬೇಕು ಮನದೊಳು ಧ್ಯಾನಿಸುತ್ತಿರಬೇಕು || ಪ ||
ದೀನಪಾಲ ಗುರುವರನನು ಮರೆಯದೇ ಧ್ಯಾನಜ್ಞಾನಸಮನೆನಸಿ ಶೋಭಿಸುವ ||ಪ||

ಸೃಷ್ಟಿಸ್ಥಿತಿಲಯದ ಕ್ರಮದಿಂದರುಹುವ ಅಷ್ಟಾಕ್ಷರಿ
ಯೊಳಡಗಿರುವ | ಶ್ರೇಷ್ಟವಾದ ತ್ರೈಲಿಂಗವ ಕೊಡುತೇ |
ನಿಷ್ಠೆಯಿಂದ ಶಿವಪೂಜೆಯ ಮಾಡುವ ||ಪ||

ದೃಷ್ಠಿಯ ಕಣ್ಣಿನೊಳಿಟ್ಟು | ಅಚಲದ ಗುಟ್ಟಿನ
ಮಾರ್ಗದ ಗುರುತರಿದು | ನೆಟ್ಟನೆ ಘಮಿಸುತೆ ಮುಕ್ತಿ
ತರುಣೆಯೊಳು | ಪಟ್ಟದರಸನೆಂದೆನಿಸಿ ಶೋಭಿಸುವಾ || ಪ ||

ಅರಿವನು ಕರುಣಿಸಿ | ಜನನಮರಣಂಗಳ
ಹರಿಯುತೆ ಮೋಕ್ಷವ ಕರುಣಿಸಿ | ವರರಂಬಾಪುರಿ
ಗುರು ರೇಣುಕನಡಿ | ಚರಣವ ಬೆರೆದಾನಂದದಿ ಸುಖಿಸುವಾ ||ಪ||

30
ದೇವರು ತನ್ನೊಳಗಿರಬೇಕಾದರೆ

ದೇವರು ತನ್ನೊಳಗಿರಬೇಕಾದರೆ | ತನ್ನನಿಜವ ತಾ ತಿಳಿಯಬೇಕು | ತನ್ನನಿಜವ
ತಾ ತಿಳಿಯಬೇಕಾದರೆ | ಸಕಲ ಸಂಶಯಗಳ ಬಿಡಬೇಕು ||ಪ||

ಸಕಲ ಸಂಶಯಗಳ ಬಿಡಬೇಕಾದರೆ ಸಾಧು ಸಜ್ಜನರ
ಸಂಗಮಾಡಬೇಕು || ಸಾಧು ಸಜ್ಜನರ ಸಂಗ ಮಾಡಬೇಕಾದರೆ
ಸಾಧನೆ ನಾಲ್ಕನು ಕಲಿಯಬೇಕು ||ಪ||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 305

ಸಾಧನೆ ನಾಲ್ಕನು ಕಲಿಯಬೇಕಾದರೆ ಸಾಧಕವನ್ನೇ
ಮಾಡಬೇಕು ಸಾಧಕವನ್ನೇ ಮಾಡಬೇಕಾದರೆ
ತಾರಕ ಗುರಿ ಕಲಿತಿರಬೇಕು ||ಪ||

ತಾರಕ ಗುರಿ ಕಲಿತಿರಬೇಕಾದರೆ ತತ್ವದ ಸಂತತಿರಬೇಕು |
ತತ್ವದ ಸುಂತತಿಲಿರಬೇಕಾದರೆ ಏಕಾಂತ ಸ್ಥಳವನ್ನು ಸೇರಬೇಕು ||ಪ||

ಏಕಾಂತ ಸ್ಥಳವನ್ನು ಸೇರಬೇಕಾದರೆ ಕ್ಷಮೆ, ದಮೆ,
ಶಾಂತಿಯೊಳಗಿರಬೇಕು ಕ್ಷಮೆ, ದಮೆ,
ಶಾಂತಿಯೊಳಗಿರಬೇಕಾದರೆ ಗುರು ಉಪದೇಶ ಹೊಂದಬೇಕು ||ಪ||

ಗುರು ಉಪದೇಶವ ಹೊಂದಬೇಕಾದರೆ
ಪೂರ್ವದಗುಣಗಳು ಹೋಗಬೇಕು ಪೂರ್ವದ ಗುಣಗಳು
ಹೋಗಬೇಕಾದರೆ ಕರ್ಮದ ಕೋಟೆಯ ಗೆಲ್ಲಬೇಕು ||ಪ||

ಕರ್ಮದ ಕೋಟೆಯ ಗೆಲ್ಲಬೇಕಾದರೆ ಗರ್ವದಮೊಳಕೆಯ ಕೀಳಬೇಕು ಗರ್ವದ
ಮೊಳಕೆಯ ಕೀಳಬೇಕಾದರೆ ನಿರ್ಮಲ ಚಿತ್ತದೊಳಗಿರಬೇಕು ||ಪ||

ನಿರ್ಮಲ ಚಿತ್ತದೊಳಗಿರಬೇಕಾದರೆ ಸರ್ವೋತಮನಾಗಿರಬೇಕು |
ಬೇಕಾದ ಗುರು ಅರಿವಿನ ಮನೆಯೊಳಿರಬೇಕು

31
ಕಾರಣ ಗುರುವಿನ

ಕಾರಣ ಗುರುವಿನ ಪಾದವು ದೊರಕಿತು | ಇನ್ನೇನಿನ್ನೇನು |
ಇಂತ ಪರಮಾರ್ಥಕ್ಕೆ ದಾರಿ ಕರುಣೆಯ ತೋರಿದಿರಿನ್ನೇನುನ್ನೇನು || ಪ ||

ಕತ್ತಲೆ ದಿನದೊಳು ಬೆಳದಿಂಗಳುಟ್ಟಿತು ಇನ್ನೇನಿನ್ನೇನು | ನಮ್ಮ
ಕತ್ತಲೆಯಲ್ಲಾ ಕಳೆದು ಕಾಂತಿಯ ತೋರಿದರಿನ್ನೇನಿನ್ನೇನು | ||ಪ||

ಮರಳು ಮಾಯಾಶಕ್ತಿ ಮರವೆಯ ಮಾಡಿದರಿನ್ನೇನಿನ್ನೇನು | ನಮ್ಮ
ಅರುವಿನೊಳಗೆ ಅರುವ ತೋರಿದ ಗುರುರಾಯ ಇನ್ನೇನಿನ್ನೇನು | ||ಪ||

ಮಾಯಾ ಪ್ರಪಂಚದ ಮರ್ಮವು ತಿಳಿಯಿತು ಇನ್ನೇನಿನ್ನೇನು |
ಕುಲಗೋತ್ರವ ಬಿಟ್ಟೆ ಕುಜನರ ಸಂಘವ ಬಿಟ್ಟೆ ಇನ್ನೇನಿನ್ನೇನು | ||ಪ||

306 / ತತ್ವಪದ ಸಂಪುಟ – 1

ಅಳಿಯಾದ ಉಳಿಯಾದ | ಕುಲವನ್ನೇ ನಂಬಿದೆ | ಇನ್ನೇನಿನ್ನೇನು
ಈ ಬಣ್ಣಕಲ್ಲ್ಬೊಂಬೆಗೆ ||ಪ||

ಅನುದಿನ ಬಳಲಿದೆ ||ಪ|| ಅಂತರಂಗದಿ ಮಸಿ ಮಾಡಿದ ಮೇಲೆ ನಿನ್ನೇನು
ಅದು ಕಣ್ಣಲ್ಲಿಗೆ ಕಾಣದೆ | ಕಳವಳ ಪಡಿಸುತ್ತಿದೆ ||ಪ|| ಇನ್ನೇನಿನ್ನೇನು || ಪ ||

ಮೂರು ಐದಾರೆಂಟು ಮೂರ್ಖರ ಬಿಟ್ಟೇನು ಇನ್ನೇನಿನ್ನೇನು | ಅನುದಿನದ
ಗುರುವನ್ನು ಮನದೊಳುನೆನೆದೆ | ಇನ್ನೇನಿನ್ನೇನು || ಪ ||

ಸುಳ್ಳು ಕಳಾವಲ್ಲ | ಪೊಳ್ಳು ವಾಕ್ಯಗಳಲ್ಲಿ ಇನ್ನೇನಿನ್ನೇನು ನಮ್ಮ ನಲ್ಲಾರ್ಯ
ನಿಜಗುರು ಮೂರು ಲೋಕದ ಒಡೆಯನೂ ಇನ್ನೇನಿನ್ನೇನು || ಪ ||

ಅಕ್ಷರಾಮನು ನೀನೆ | ದೀನಬಂಧುವು ನೀನೇ | ಇನ್ನೇನಿನ್ನೇನು |
ಈ ಜ್ಯೋತಿ ಇರುವ ತಕ್ಕ ರೀತಿಯ ತೋರಿದರಿನ್ನೆನಿನ್ನೇನು ||ಪ||

ಇದಕ್ಕಿಂತ ಮಿಗಿಲಾದ ಪದವಿಲೋಕದಲುಂಟೇ ಇನ್ನೇನಿನ್ನೇನು |
ಒದಗಿತು ಮುಕ್ತಿಯು ವೀರ ನಂದನರಿಗೆ ಇನ್ನೆನಿನ್ನೇನು ||ಪ||

32
ಇನ್ಯಾರಿಗೇಳಣ್ಣಾ
ಇನ್ಯಾರಿಗೇಳಣ್ಣಾ ಸಾಧುಗಳೆಲ್ಲಾ ಚೆನ್ನಾಗಿ
ಕೇಳಿರಣ್ಣಾ | ನೆನ್ನೆ ಮೊನ್ನೆಯವರೆಲ್ಲಾ | ತಮ್ಮೊಳಗೆ
ತಾ ತಿಳಿದು | ಇಂತ ಚಲಿಸುತ ಹುಣ್ಣಿಮೆಯೊಳಗೆ |
ಕನ್ಯೆ ಪ್ರಾಯ ಏರಿದ ಮೇಲೆ || ಪ ||

ಆಕಾಶ ಸೀಳಾಗಲಿ ನಿಂತಲ್ಲಿ ನಿಂತು ಭೂಕಂಪ
ತಲೆದೂಗಲಿ | ಆ ಕಡೆ ತರ್ಕಮಾಡಿ | ಮೂರ್ಖನೊಬ್ಬನ
ಕೂಡಿ | ಪಾಕದಗಡಿಗೆ ಹೊಡೆದು ಜಡಿದು
ಕಾಕನ ಗಿಡವ ಏರಿದಮೇಲೆ || ಪ ||

ಹಾವು ಇಲ್ಲದ ಹುತ್ತ | ಕಚ್ಚೆಲು ಸರ್ಪ
ಜೀವ ಹೋಗದೆ ಸತ್ತ | ಮೋಹದ ಮಗನ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 307

ಮಾಡಿ ತಾಯಿ ಗಂಡನ ಕೂಡಿಕೊಂಡು
ದೇವರ ಕೋಣೆಯಲಿ ಹಾಸಿಗೆ ಹಾಸಿ |
ಕಾವಿ ಅಚ್ಚಡ ಹೊದ್ದ ಮೇಲೆ ||ಪ||

ಮುತ್ತಲ ಮರವ ಸೇರಿದಾ | ಅದರೊತ್ತಲಿರುವ
ತೊತ್ತಿನ ಭೂತವ ತರಿದಾ ಅತ್ತಾಇತ್ತ
ನೋಡಲಾಗಿ | ನೆತ್ತಲಿ ಬೀಳುವುದು ಕಣ್ಣು
ಬಚ್ಚಲ ಬಳಸಿ | ಬೆತ್ತಲೆ ಇರಿಸಿ ಈಶನಾದ
ಗುರುವ ಕಂಡ ಮೇಲೆ ||ಪ||
33
ತತ್ವದ ಲಾವಣಿ

ತತ್ವದ ಲಾವಣಿ ಅರ್ತಿಯಿಂದ ಹೇಳ್ತಿನಿ |
ಕೇಳಿರಿ ಶಿವಶರಣರು | ಸ್ವಾಮಿ || ಕೇಳಿರಿ || ಇದರರ್ಥವ ತಿಳಿದು
ಅನುಭವ ಮಾಡಿದರೆ | ಸತ್ತು ಹುಟ್ಟರು ಕೇಳಿ ||ಪ||
ಈ ಮನೆಯ ಒಳಗೆ | ಒಂದು ಸರ್ಪನು ಎಡೆಯ
ನಾಡುತ್ತಾಯ್ತೆ ಅದರ ಕೊನೆ ನೆಲ್ಲವ | ಬುಡುವ ನೆಲ್ಲವ
ಒಂದು ಕಪ್ಪೆ ಮೆಲ್ಲುತ್ತಾಯ್ತೆ ||ಪ||

ಆ ಸರ್ಪನಿಗೆ | ಆರು ಚಕ್ರದಗಾಲಿ | ಮೂರು ಮುಲ್ಕಿನ
ತೇರು ಭೇರಿ ಡಂಗೂರವ ಹೊಡಿತಾಯ್ತೆ | ತಾಳ
ಝಣ ಝಣ | ಘಂಟೆ ಗಣ ಗಣ | ಜಾಗವೆ ಧಣ ಧಣ ಎನುತಾಯ್ತೆ ||ಪ||

ಈ ಕಾಯದೊಳಗೆ | ಕಾವಲೊಡೆದು ಅಮೃತ |
ಸುರಿತಾಯ್ತೆ ಇಂತ ಭವದ ಮಡಿಕೆಯ | ಬೆಂಕಿಯೊಳಿಟ್ಟಾರೆ
ಭಸ್ಮವಾಗಿಗುತ್ತಾಯ್ತೆ ||ಪ||

ಆದಿಬೀದಿಯ ಅಮೃತ ರಸವ ಸಾದು ಸವಿಯುತ್ತಾಯ್ತೆ |
ಇಂತ ವಾದ ಭೇದ ಕುಂಬಾರನ ಚಕ್ರವು | ಮುರಿದು ನಿಲ್ಲುತ್ತಾಯ್ತೆ ||ಪ||

ತತ್ವ ಲಾವಣಿ ಅನುಗುಂಡು ಪುರುದೊಳು
ನೆಲಸಿರುವವಗೆ ತಿಳಿಯುತ್ತಾಯ್ತೆ ತಿಳಿಯದೆ ಇರುವ
ಜಡದೇಹಿಗಳಿಗೆ | ಅವರಂಗವರಂಗಾಗುತಾಯ್ತೆ ||ಪ||

308 / ತತ್ವಪದ ಸಂಪುಟ – 1

34
ಮೂರು ಮೂರ್ತಿಯ ಕೂಡಿ

ಮೂರು ಮೂರ್ತಿಯ ಕೂಡಿ | ಕಳೆದೆನಮ್ಮಾ
ನಿಂತು ನಲಿದೆನಮ್ಮಾ | ಸಾರಿ ಉನ್ಮಯನು ಸೇರ್ದೆನಮ್ಮಾ |
ನಾವು ಕಾರಣ ಗುರುವನು ಸೇರಬೆಕು ||ಪ||

ಉನ್ಮನ ಜ್ಯೋತಿ | ಚಿನ್ಮಯವಾಯ್ತು ಸನ್ನೆಯಿಂ
ಭೋದಿಸಿ ಇನ್ನಿಲ್ಲವಾಯ್ತು || ಉನ್ಮೆನ || ಚಿನ್ಮಯನೆಂಬೋ
ಅಗ್ನಿಯನ್ನಿಟ್ಟು | ಸಮತ್ರವೆಂಬೋ ಗುರುಪಾದವ
ಪಿಡಿದು | ಬಿನ್ನವಿಲ್ಲದೆ ಮುಕ್ತಿ ಪಡೆದೆನಮ್ಮಾ ||ಪ||

ಶ್ರವಣದ ಪಾಠಮನನದೊಳಿಲ್ಲಾ |
ಮನನನಿದಿದ್ಯಾಸ ಮಂತ್ರವಿದೆಲ್ಲಾ ಅನುಮಾನಿನಂಬೂ
ಸೋಹಂ ಬ್ರಹ್ಮ | ಎನುತ ವಾಯು ಪ್ರಾಣ ಪಿಡಿದು |
ಚಿನ್ಮಯನೆಂಬೋ ಗುರು ಸಂಜೀವನ ಚಿನ್ಮಯಿನೆ ಸೇರ್ದೆ ||ಪ||

ಈರೇಳು ಜಗವ ಆಳಿದರಿಲ್ಲಾ ನೀರಕಡೆದರೆ ಬೆಣ್ಣೆಂಬುದಿಲ್ಲ
ನಾರುಕಾಯವನ್ನೊತ್ತು ಮರೆದು ಬಾರಿ ಬಾರಿಗೂ ಬಾಂಢವ
ತೊಳೆದು ಸಾರವಿಲ್ಲದೆ ಸತ್ತು ಪೋಪರಲ್ಲಾ ||ಪ||

ಗುರುಗಳು ಎಂದು ಬಹುಜನರೆಲ್ಲಾ |
ಅರಿವಿನ ವಿದ್ಯವ ಬೋಧಿಪರೆಲ್ಲಾ | ಗುರು |
ತರತರದಿಂದ ಮಾತನಾಡಿ ಪರಿಪರಿಯಿಂದ
ಗದ್ದಿಗೆ ಹೂಡಿ | ಪರಿಪರಿ ರೊಕ್ಕವನ್ನು ಸುರಿವರೆಲ್ಲಾ || ಪರಿ || ಪ ||

ಅಜಹರಿ ರುದ್ರರು ಶೃತಿಸಿದೆರೆಲ್ಲಾ ಭಜಿಪರ ಭಾಗ್ಯಕ್ಕೆ
ಎಡೆಯೇ ಇಲ್ಲ | ಭಜಗೋವಿಂದನ ಹರಸಿಯೆಲ್ಲಾ |
ಭಜಗೋವಿಂದನ ಹರಸಿಯೆಲ್ಲಾ | ತ್ರಿಜಗವಂದಿತ ಜ್ಞಾನ
ನಂದಾನಮ್ಮಾ || ತ್ರಿಜಗ || ಪ ||

ರಂಬಾಪುರೇಷನ | ನಂಬುತ ಭಜಿಸಿ |
ಸಂಭ್ರಮದಿ ಮನಕೆ ಮಂದಿರ ಸ್ಮøತಿಸಿ || ರಂಭಾ || ಇಂಬಿಡದಂತೆ
ಎನುತ ಮೆರೆವಾ | ಕುಂಬಿಣಿ ಮಂಡ್ಯ ಕ್ಷೇತ್ರದಿ ಮೆರೆವಾ
ಅಂಬಾಲಿ ಚರಕೆ ಮಾಡಿ ನಿಂದನಮ್ಮ ||ಅಂಬಾಲಿ|| ಪ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 309

35
ನಾನಿತ್ತಗೆಳೆದರೆ

ನಾನಿತ್ತಗೆಳೆದರೆ | ತಾನತ್ತ ಎಳೆಯುವುದು | ಇನ್ನೇನಿನ್ನೇನು |
ಇಂತ ಜ್ಞಾನವಿಲ್ಲದ ಕೋಣ | ಸಾಧನವಾಗದು |
ಇನ್ನೇನಿನ್ನೇನು ||ಪ||

ಮುಪ್ಪರುಕೆಯ ಕೂಡಿ | ಮೂಗುದಾರ ಹಾಕಿವ್ನಿ |
ಇನ್ನೇನಿನ್ನೇನು | ತಪ್ಪಿಸಿಕೊಂಡೆಗೆ ಧಕ್ಕದೆ ಓಡುತ್ತಾಯ್ತೆ
ಇನ್ನೇನಿನ್ನೇನು ||ಪ||

ಹಸಿರು ಹುಲ್ಲನು ಕಂಡು | ಕೆಸರೊಳು
ಮೇಯ್ಯುವುದಿನಿನ್ನೇನಿನ್ನೇನು | ಇಂತ ಹಸನವಿಲ್ಲದ
ಕೋಣ | ಕೊಸರಿಕೊಂಡೋಡುತಾಯ್ತೆ |
ಇನ್ನೇನಿನ್ನೇನು ||ಪ||

ಮೂರಾರು ಕೋಣಗಳ | ಮೀರಿದ ಈ ಕೋಣ |
ಇನ್ನೇನಿನ್ನೇನು | ನಮ್ಮ ಧೀರಮಂಟೇಶನಿಗೆ
ಮಾರಿಬಿಟ್ಟ ಕೋಣ | ಇನ್ನೇನಿನ್ನೇನು ||ಪ||

36
ಭಾವನೆಯ ಬಲಿಯುವ ತನಕ

ಭಾವನೆಯು ಬಲಿಯುವ ತನಕ | ಒಣ ಬಕುತಿಯ
ಮಾಡಿದರೇನು | ದೇವ ದೇವೋತ್ತಮನ ಪಾದ ಸುಮ್ಮನೆ
ದೊರೆಯುವುದೇ ಗುರುವೇ ||ಪ||

ಸಾವಿರಗಿಡಮೂಲಿಕೆಗಳಿದ್ದು ಫಲವೇನೂ ಸಂಜೀವಿನಿ
ಸಾವಿರ ಗಿಡ ಮೂಲಿಕೆಗಳಿದ್ದು ಫಲವೇನು ಗುರುವೇ ||ಪ||

ರಂಜಕ ತಾ ನಿಡದೆ | ಯಂತ್ರದ ಗುರಿಯನ್ನೊಡ್ಡಿದೊಡೇನು |
ಗುರುವೇ | ಸೂರ್ಯ ತಾಉದಯಿಸದೆ ಕನ್ನಡಿ ಕಣ್ಣುಗಳಿದ್ದು ಫಲವೇನು ||
ಗುರುರಾಯನ ಕರುಣವ ಪಡೆಯದ ಮನುಜಾ |
ಯಂತ್ರ ಕಲಿತರೇನು | ಮಂತ್ರ ಕಲಿತರೇನು | ತತ್ವಹಾಡಿದರೇನು |
ಗುರುವೇ | ತಾನು ಅನುಭವಿಸದೆ | ಸುಖವಜ್ಞಾನದ
ಮಾತನಾಡಿದೊಡೇನು ಗುರುವೇ | ಘನಗುರು ಮಹಿಪತಿಯ
ನೆನೆಯದ ಮನುಜಾ ಎಲ್ಲಿದ್ದರೇನು ಹೇಗಿದ್ದರೇನು ಗುರುವೇ ||ಪ||

310 / ತತ್ವಪದ ಸಂಪುಟ – 1

37
ಸುಮ್ಮನಿರು ಕಂಡ್ಯಾ
ಸುಮ್ಮನಿರು ಕಂಡ್ಯಾ | ನಾಲಿಗೆ ಒಬ್ಬರಾಡಿಕೊಳ್ಳಲು
ಬೇಡಾ | ನಾಲಿಗೆ ಒಬ್ಬರ ಬೇಡಿಕೊಳ್ಳಲು ಬೇಡಾ ನಾಲಿಗೆ || ಪ ||
ನಂಟರು ಒಳ್ಳೆಯವರೆಂದು ನಾಲಿಗೇ ನೀನು ಗಂಟು
ತೋರಲು ಬೇಡಾ ನಾಲಿಗೇ ನಂಟರಿಗೂ ನಿನಗೂ
ತುಂಟಾಟ ಬಂದಾಗ | ನಿನ್ನ ಗಂಟು ಮುಳುಗಿತಯ್ಯ
ನಾಲಿಗೆ || ಪ ||

ಹೆಣ್ಣು ಒಳ್ಳೆಯವಳೆಂದು ನಾಲಿಗೇ ನೀನು ಕಣ್ಣು ಹಾಕಲು
ಬೇಡಾ ನಾಲಿಗೇ ಹೆಣ್ಣೆಂಬುದು ಕೇಳು ಎಡತಲೆ ಮೃತ್ಯುವು
ನಿನ್ನ ನೀ ತಿಳಿಯೋ ನಾಲಿಗೆ || ಪ ||

ಬುದ್ಧಿ ಹೇಳುವವರ ಕಂಡರೆ ನಾಲಿಗೆ ನೀನು
ಗುದ್ದಾಟಕ್ಕೆ ಹೋಗಬೇಡಾ ನಾಲಿಗೇ | ಸಿದ್ದಪನೆಂಬೋನು
ಶಿವದೊಣ್ಣೆ ತಕ್ಕಂಡು | ನಿನ್ನ ರುಬ್ಬಾಡಿ ಹೊಡೆದನು
ನಾಲಿಗೆ ||ಪ||

38
ಲಿಂಗಪೂಜೊಂದಾಗುತೈದಣ್ಣ
ಲಿಂಗ ಪೂಜೆ ಆಗುತಾದಣ್ಣಾ | ಯಾವಾಗ ನೋಡಲು ಲಿಂಗಪೂಜೆ
ಆಗುತಾದಣ್ಣಾ || ಪ ||

ಲಿಂಗ ಪೂಜೆ ಆಗುತಾಯ್ತೆ ಅಂಗ ಎಂಬೋ ಗುಡಿಯ ಒಳಗೆ | ಲಿಂಗದಂಥಾ
ಮನಸು | ತನ್ನ ಕಣ್ಣುಗಳಿಗೆ ಕಾಣುತಾದೆ ಆರು ಮೂರನೆ ಕೆಡಿಸಬೇಕಣ್ಣಾ
ಆರು ಮನೆಯ ದಾಟಬೇಕಣ್ಣಾ ಮೂರು ನದಿಯಾ ನಟ್ಟ ನಡುವೆ
ಏರಿಶಿಖರದಲ್ಲಿ ನೋಡಲು ಬೇರಿಕುಟ್ಟಿ ಕೂಗುತಾದೆ ||ಪ||

ನಾಲ್ಕು ದಾರಿ ಎಂಟು ನೋಡಣ್ಣಾ ಆ ಲಿಂಗ ಪೂಜೆಗೆ ಮೇಲೆ ಏರಿ
ನಿಲ್ಲಬೇಕಣ್ಣಾ | ಕಾಕಬುದ್ಧಿಕಳೆಯಬೇಕು ಮದಗಳೆಲ್ಲ ನೂಕಬೇಕು |
ಏಕನಾಗಿ ನೋಡಲು ಅನೇಕ ಬೆಳಕು ಕಾಣುತಾನೆ ||ಪ||

ಯೋಗಿ ಉನ್ನನದಾಸ ನೋಡಣ್ಣಾ | ಅದು ನಂಬಿದವರಿಗೆ ಚಿನ್ಮಯ ರೂಪ
ಹೊಳೆಯುತಾದಣ್ಣಾ ಆಗ ಈಗ ಎನ್ನದೆ ದೇಹ ಸಾಗಿ ಹೋಗುತಾರೆಯೇ
ಹೋಗುವಾಗ ಕೈವಾರ ವಾಸನ ಬೇಗ ನೀವು ಭಜಿಸಿರಣ್ಣಾ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 311

39
ಎಲ್ಲಿಂದ ನೀ ಬಂದೆ

ಎಲ್ಲಿಂದ ನೀ ಬಂದೆ | ಅಲ್ಲಿಂದ ಏನ್ತಂದೇ |
ಇಲ್ಲಿಂದ ಏನೊಯ್ವೆ, ಮನುಜಾ | ನೀನಾರೋ ನಾನಾರೋ |
ನನ್ನವರು ಎಲ್ಲಿಹರೋ | ನಿನ್ನವರು ಎಲ್ಲಿಹರೋ ಅದು
ತಿಳಿಯಬೇಕು ನೀ ಮುಂದೆ || ಅಣ್ಣಾ ||ಪ||

ಮಣ್ಣಲ್ಲಿ ಮಣ್ಣಾಗಿ ಮುಗಿಲೆಲ್ಲಾ ಹೊಗೆಯಾಗಿ | ಬೆರೆಯುವು
ದೀ ದೇಹವಣ್ಣಾ | ಇದನ್ನೆಲ್ಲಾ ನೀ ತಿಳಿದು ಅದರೊಳಗೆ
ನೀ ಭೆರೆತು ಮತ್ಯಾಕೋ ಈ ಮೋಹವಣ್ಣಾ ||ಅಣ್ಣಾ ||ಪ||

ಕೊಟ್ಟವನು ತಾ ಜಾಣ ಇಟ್ಟವನು ಖಡು ಮೂರ್ಖ | ಕೊಟ್ಟು
ನಾ ಕೆಟ್ಟೆನೆನಬೇಡಾ | ಹೂತಿಟ್ಟ ಹಣವೆಲ್ಲಾ | ಮಣ್ಣಾಗಿ ಹೋಗುವಾಗ |
ನಿನಗೇನು ಉಳಿದಿತೋ ಅಣ್ಣಾ || ಅಣ್ಣಾ || ಪ ||

ಮಮತೆಯೊಳು ಮನೆಮಾಡಿ ಮಡಿದಿಯೊಳೆ ಒಡಗೂಡಿ
ನಗು ನಗುತ ಇರುತ್ತದೆಯಣ್ಣಾ |
ಆ ಮನೆ ಮರೆಯಾಗಿ | ಈ ಮಡದಿ ಮಣ್ಣಾಗಿ | ನೀ ನಕ್ಕು
ನಗುವೇಕೋ || ಅಣ್ಣಾ ||ಪ||

ಗುರುದತ್ತತ್ರೇಯನ | ಮನದೊಳು ಮನೆ ಮಾಡಿ |
ಜಪಿಸುತ್ತಾ ನೆನೆಯಬೇಕಣ್ಣಾ | ಸತ್ಯ ಜ್ಞಾನಾದಿ ನಿಧಿದ್ಯಾಸದೊಳಗೆ
ನೀ ಮನೆ ಮಾಡಿ | ಸುಖವಾಗಿ ಬಾಳಿರೋ ಅಣ್ಣಾ || ಅಣ್ಣಾ || ಪ ||

40
ಕೈಬಿಡ ಬೇಡಾ

ಕೈಬಿಡಬೇಡಾ ಕೈಬಿಡಬೇಡಾ | ಕರುಣೆಯ ತೋರೋ ಗುರುರಾಯ | ಕೆಳಗೆ
ನೋಡಿದರೆದೆ | ಒಡೆಯುವುದು | ಮೇಲೆಕ್ಕೆಳದಿಕೋ ಗುರುದೇವಾ ||ಮೇಲ||ಪ||

ಆಶೆಗಳೆಂಬೋ ವಿಷಸರ್ಪಗಳು | ಬೋರುಗುಟ್ಟುತಲಿವೆ ನೋಡಿ|
ನಾನು ನನ್ನದು ಎಂಬುವ ವ್ಯಸನವು | ನುಂಗಲು
ಬರುತಿವೆ ನೋಡಿ || ನುಂಗಲು || ಪ ||

ಈಜಿ ಈಜಿ ಸಂಸಾರ ಸಾಗರದ | ದಡವನಾನಿನ್ನು ಕಾಣೆ |
ಸುತ್ತಲು ಕಡಲು | ಹತ್ತಿತು ದಾಹ ಕುಡಿಯಲು
ನೀರನು ಕಾಣೆ || ಕುಡಿಯಲು ||ಪ||

312 / ತತ್ವಪದ ಸಂಪುಟ – 1

ಹೇಳಲಾರೆನು ಅನುಭವಿಸಲಾರೆನು ಗುರುರಾಯ ನನ್ನೀ
ಭವಣೆಯನು ಇಲ್ಲಿ ತಾಳಲಾರದೆ ಶರಣು ಬಂದೆನು | ನಾನು ನಿಮ್ಮ
ಪಾದದಾಣೆ ||ಪ||

ನನ್ನವರಾರು ನನಗಿಲ್ಲಾ | ನೀನಿಲ್ಲದೆ ಬೇರೆ ಗತಿಯಿಲ್ಲಾ |
ನನ್ನಲಿ ಏಕೆ ಕೃಪೆಯಿಲ್ಲಾ ಗುರುರಾಯನೆ ನೀನೇ ನಮಗೆಲ್ಲಾ ಗುರುರಾಯನೇ ||ಪ||

ಹೊಸ ಹೊಸ ಆಶೆಯು ದಿನವೆಲ್ಲಾ ಈ ಮನವನು ಹಿಂಡದೆ
ಸುಖವಿಲ್ಲಾ | ಈ ಕಂದನ ನೆನಪು ಏಕಿಲ್ಲಾ
ಗುರುರಾಯನೇ ನೀನೆ ನಮಗೆಲ್ಲಾ ಗುರುರಾಯನೇ ||ಪ||

41
ನಿನ್ನನಾನೇನಂತ
ನಿನ್ನನಾನೇನಂತ | ಜೋಪಾನ ಮಾಡಲೀ |
ಏ ಗಿಳಿ ಏಗಿಳಿಯೇ | ನಿನಗೊಂದು ಕಂಟಕ
ಮುಂದೆ ಬರುತಲಿದೇ ಏ ಗಿಳಿ ಏ ಗಿಳಿಯೇ || ||ಪ||

ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲು ಏ ಗಿಳಿ
ಏ ಗಿಳಿಯೇ | ಢಂಭಕ ಪುರದೊಳು ಸುಮ್ಮನಿರು
ಕಂಡ್ಯಾ ಏ ಗಿಳಿ ಏ ಗಿಳಿಯೇ ಓ ಓ ||ಏಗಿಳಿ|| ||ಪ||

ತುಂಟರೆಂಟು ಮಂದಿ | ಸಾಮರ್ಥ್ಯರಾಗಿಹರು
ಏ ಗಿಳಿ ಏಗಿಳಿಯೇ | ತುಂಟತನದಿ ನಿನ್ನ
ಕೊಲ್ಲಬೇಕೆನುತಾಯ ಏ ಗಿಳಿ ಏ ಗಿಳಿಯೇ ||ಏಗಿಳಿಯಾ ||ಪ||

ಆ ಮರದ ಮೇಲೊಂದು | ಗೂಬೆಯು
ಕುಂತಾಯ್ತೆ | ಏ ಗಿಳಿ ಏ ಗಿಳಿಯೇ |
ಸಮಯ ನೋಡಿ ನಿನ್ನ ಕೊಲ್ಲಬೇ
ಕೆನುತಾಯ್ತೆ ಏ ಗಿಳಿ ಏ ಗಿಳಿಯೇ ||ನಿನ್ನ||

ಅಳವಲ್ಲದೀಮರ ಎಸಳೊಡೆದು ನಿಂತಾಯ್ತೆ
ಏ ಗಿಳಿ ಏಗಿಳಿಯೇ | ಅರಿವು ತೋರಿದಂತ ವಿಠಲನ
ನೀ ಕಂಡ್ಯಾ | ಏಗಿಳಿ ಏಗಿಳಿಯೇ ||ನಿನ್ನ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 313

42
ಅಕ್ಕ ನೋಡಕ್ಕ

ಅಕ್ಕ ನೋಡಕ್ಕ ನನಗೆ | ತಕ್ಕದ ಗಂಡ
ಸಿಕ್ಕಿದನಕ್ಕ | ಅಕ್ಕಪಕ್ಕದ ಮನೆಗಳನ್ನೆಲ್ಲಾ |
ಲೆಕ್ಕವಿಲ್ಲದೆ ಬಳಸುತ್ತಿದೆ | ದಿಕ್ಕು ದಿಕ್ಕಿಗೆ
ಬಲಿಯ ಕೊಟ್ಟು | ಸೊಕ್ಕು ಮುರಿದು ಹೋದನಕ್ಕ ||ಪ||

ಆರುಮಂದಿ ಚೋರರೊಡನೆ | ಮೂರು
ಪುರದೊಳಗಾಡುತ್ತಿದ್ದೆ | ಯಾರಗೊಡವೆ
ಹೋಗದಂತೆ | ಊರ ಮುಂದೆ ಬಡಿದನಕ್ಕ || ||ಪ||

ಎಂಟು ಮಂದಿ ತುಂಟರೊಡನೆ |
ಒಂಟಿಯಾಗಿ ತಿರುಗುತ್ತಿದ್ದೆ ||
ಭಂಟನಾದ ಗಂಡ ಬಂದು | ನನ್ನ
ಸೊಂಟವ ಮುರಿದು ಹೋದನಕ್ಕ| || ಪ ||
ಅಂಕೆಯಿಲ್ಲದ ಊರಿನೊಳಗೆ | ಶಂಕೆ
ಇಲ್ಲದೆ ಓಡಾಡುತ್ತಿದ್ದೆ | ಬೆಂಕಿಯಂತ
ಗುರುವು ಬಂದು | ನನ್ನ ಬಿಡು ನುಡಿಗಳನ್ನೆ
ಬಿಡಿಸಿದನಕ್ಕ || || ಪ ||

43
ಸೇರಿದರೆ ಶರಣರ ಸಂಗ

ಸೇರಿದರೆ ಶರಣರ ಸಂಗ ಸೇರಬೇಕು | ಓದಿದರೇ
ಪಾರಮಾರ್ಥ ಓದಬೇಕು | ಕಳೆದುಕುಳಿಯುವುದೇ
ಒಂದೇ ಗುರುನಾಮ ಮಂತ್ರವೊಂದೇ || ಪ ||

ಪೊಳ್ಳು ಸುಳ್ಳೆಲ್ಲಾ ಬಿಡು | ಬ್ರಹ್ಮಜ್ಞಾನವ ಮಾಡು |
ಭಲ್ಲಂತ ಗುರುವ ಪಿಡಿದು | ಎಲ್ಲಾ ವಿಚಾರ ಮಾಡು || ಪೊಳ್ಳು ||
ಮೋಕ್ಷವ ತಿಳಿಯಲು ತಮ್ಮ | ಮುಕ್ತಿಯ ಪಡೆಯಲು
ತಮ್ಮಾ | ಕಳೆದಿಕೋ ಕರ್ಮ ಕಳೆದಿಕೋ || ಪ ||

ಸಂಸಾರವೆಂಬುದೊಂದು | ಸಾಗರದಂತೆ ಕಾಣೋ
ಸಾಗರದಲ್ಲಿ ಮುಳುಗಿ ಬಿದ್ದುನೀ ಎದ್ದೇಕಾಣೊ |

314 / ತತ್ವಪದ ಸಂಪುಟ – 1

ಇನ್ನಾದ್ರು ಬುದ್ದಿಯಿಲ್ವಾ | ಏನಂದ್ರು ತಿಳಿಯಲಿಲ್ವಾ,
ಮಂಗಣ್ಣಾ …. ಕೇಳೋ…. ತಿಮ್ಮಣ್ಣಾ ||ಪ||

ಹೆಣ್ಣೆಂಬುದೊಂದು ಕೇಳು| ಮಾಯದ ಬೊಂಬೆ
ಕಣೋ | ಆ ಬೊಂಬೆಗೆ ಸಿಲುಕಿ ಕೆಡಲುಬೇಡರಕಣೋ |
ಒಲಿದರೆ ನಾರಿ ಕಣೋ | ಮುನಿದರೆ ಮಾರಿ ಕಣೋ |
ಮಂಗಣ್ಣಾ ಕೇಳೋ ನಮ್ಮಣ್ಣಾ ||ಪ||

ಮಣ್ಣ ಬಿಟ್ರೆ ಮಡಿಕೆಯಿಲ್ಲಾ | ನಿನ್ನ ಬಿಟ್ರೆ
ದೇವರಿಲ್ಲಾ | ಬೋರಪ್ಪ ಮಾಡಿದ ತತ್ವ
ಸುಳ್ಳಲ್ಲಾ ಕಾನಣ್ಣೋ | ಶರಣರು ಆಡಿದ ಮಾತು
ಹಿರಿಯರು ಹೇಳುವ ಮಾತು ಸುಳ್ಳಲ್ಲಾ |
ಕೇಳೋ ನಮ್ಮಣ್ಣಾ ||ಪ||

44
ಶಿವನಾಮ ಸ್ಮರಣೆ

ಶಿವನಾಮಸ್ಮರಣೆ ಮಾಡೋ | ಈ ಭವದ ಮಾಲೆಯ
ಪರಿಹರಿಸೋ | ಈ ಭವದ ಮಾಲೆಯ ಪರಿಹರಿಸೋ |
||ಶಿವನಾಮ||

ಮೂರುದಿನದ ಸಂತೀ ಆತ್ಮನ ಕಾಣದೆ ನೀಕುಂತೀ
ಬೇಡಾ ಪರರ ಚಿಂತೀ ನಾಳೆಯಮ ಕೇಳಿದರೇನಂತಿ
||ಶಿವನಾಮ||

ಆಯಸ್ಸು ಹತ್ತತ್ತು ರಾತ್ರಿಗೆ ಕಳೆದವು
ಐವತ್ತು ಕಾಯಕ್ಕೆ ಮುವತ್ತು |
ಈ ಕಾಯದ ಪ್ರಾಯಕ್ಕೆ ಇಪ್ಪತ್ತು |
||ಶಿವನಾಮ||

ಆಸೆ ಮಾಡಲು ಬೇಡಾ | ಈ ಭವದ
ಮೋಸಕೆ ಸಿಗಬೇಡಾ | ಯೋಚಿಸಿ ಕೇಡಬೇಡಾ |
ಗುರುಮ ಮಹಂತೇಶನ ಮರೆಯಬೇಡ
||ಶಿವನಾಮ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 315

45
ಅಂಕೆಯಿಲ್ಲದೆ ಮೆರೆದು

(ಶ್ಲೋಕ) “ಅಂಕೆಯಿಲ್ಲದೆ ಮೆರೆದು ಈ ದೇಹಕತಿ
ಸಂಕಟ ಬಂದೊದಗಿದಾಗ ಓ ಶಿವಶಂಕರ
ಎಂದು ಕೂಗಿದರೆ ಓಡೋಡಿ ಬರಲು ಆ
ಶಂಕರನೇನು ಮಂಕನೇ”

ಕೇಳ್ ಕೇಳೆಲವೋ ಮನುಜ ನಿನ್ನಯ
ಹಮ್ಮಿನಡೊಂಕನು ಮುರಿದು | ಕಾಲ
ಕಿಂಕರನಿಗೊಪ್ಪಿಸುವೆನೆನುತಾ |
ನಸುನಗುತ ತಲೆತೂಗುತಿಹನು
ಆ ನಮ್ಮ ಮುನಿವೇ || ಪ ||

46
ಹುಂಜ ಬಂದಾಯ್ತೆ ತಂಗಿ

ಹುಂಜ ಬಂದಾಯ್ತೆ ತಂಗೀ ಹುಂಜ ಬಂದಾಯ್ತೆ
ಅಂಗಳದೊಳಗೆ ಆಡಿ ಆಡಿ ಕೂಗುತಾದವ್ವ
|| ಹುಂಜ ||

ಕರಿಯ ಬಿಳಿಯ ಕೆಂಪು ಬಣ್ಣದ ಹುಂಜಕಣವ್ವಾ ||
ಹುಂಜ ಬಹಳ ಒಳ್ಳೆಯದಾಯ್ತೆ ಸಾಕಿ ನೋಡವ್ವ
ಸಾಕಿ ನೋಡವ್ವ ಜೋಪಾನ ಮಾಡವ್ವ
|| ಹುಂಜ ||

ವೇಳೆಯನರಿತು ಕೂಗುವಂತ ಹುಂಜಕಾಣವ್ವ
ಹುಂಜ ಬಹಳ ಒಳ್ಳೆದಾಯ್ತೆ ಸಾಕಿ ನೋಡವ್ವ
ಸಾಕಿ ನೋಡವ್ವ ಜೋಪಾನ ಮಾಡವ್ವ || ಹುಂಜ ||

ಮನು ಮುನಿಗಳು ಎಚ್ಚರಿಸುವಂತ
ಹುಂಜಕಾಣವ್ವ ಆ ಹುಂಜ ಬಹಳ
ಒಳ್ಳೆದಾಯ್ದೆ ಸಾಕಿ ನೋಡವ್ವ ಸಾಕಿ ನೋಡವ್ವ
ಜೋಪಾನ ಮಾಡವ್ವ || ಹುಂಜ ||

316 / ತತ್ವಪದ ಸಂಪುಟ – 1

ಒಡಲಿನೊಳಗೆ ಆಡುವಂತ ಹುಂಜಕಾಣವ್ವ
ಹುಂಜ ಬಹಳ ಒಳ್ಳೆದಾಯ್ತೆ ಸಾಕಿ ನೋಡವ್ವ
ಸಾಕಿ ನೋಡವ್ವ ಜೋಪಾನ ಮಾಡವ್ವ || ಹುಂಜ ||

47
ಎಷ್ಟು ಮಾತ್ರ ಭವದ ಕಡಲು

ಎಷ್ಟು ಮಾತ್ರ ಭವದ ಕಡಲದು ಗುರುಕೃಪಿರಲು
ದಾಂಟಲೊಂದು ಗೋಷ್ಟದವೆನಿಪುದು || ಪ ||

ಅಷ್ಟಭೋಗದಾಶೆ ಬಿಟ್ಟು ಅಷ್ಟಪಾಶಗಳನು ಸುಟ್ಟು
ಅಷ್ಟದಳದ ಕಮಲ ಮಧ್ಯ ದಿಟ್ಟೆ ಒಲದೀಶ್ವರಂಗೆ || ಪ ||

ಯೋಗ ಸರ್ಪದೆಡೆಯ ತುಳಿಯೆ ನಾಗರತ್ನ ಕಾಂತಿ
ಪೊಳೆಯೆ ನಾಗಸ್ವರದಿ ಮನವು ಮುಳುಗೆ ರಾಗವಳಿದ ಯೋಗಿರವಗೆ ||ಪ||

ಆರು ಬಾಗಿಲನ್ನು ಮುಚ್ಚಲು ದ್ವಿದಳಬೇರೆ ಆರು ಮೂರು
ಕಮಲ ಬಿಚ್ಚಲು ಮೂರು ನದಿಯ ಮಧ್ಯದಲ್ಲಿ ಮೂರು ಕಾಲಿನ ಹಂಸೆ
ಸಣ್ಣ ದ್ವಾರ ತೆಗೆದು ಬಡಿವಘಂಟೆ ಭೇರಿನಾದವ ಕೇಳ್ವ ಯತಿಗೆ || ಪ ||

ದುರಳ ಸಂತತಿ ದೂರಗೆಯ್ಯುತ ನಮ್ಮ ಶಿವನ ಶರಣ ಸಂತತಿಯಲ್ಲಿ ಸೇರುತ
ಧರೆಯೊಳಧಿಕವೆನಿಸಿ ಮೆರೆವ ಪರಮ ಶ್ರೀ ಗುರುರಂಗಲಿಂಗನ ಚರಣ ಕಮಲ
ಬೆರೆತು ಜಗವ ಮರೆತು ಮುಕ್ತನಾದ ಯತಿಗೆ || ಪ ||

48
ಗುರುವಿನ ಮುಖದಿಂದ

ಗುರುವಿನ ಮುಖದಿಂದ | ಗುರುತುಕಂಡವರಿಂದ |
ಗುರಿಕಂಡು ನೀ ಬಾಳೋ ಕುರಿಯೇ || ಪರಿ ಪರಿ ವರ್ಣದ
ಕುರಿಗಳ ಮೇಯಿಸುವ ಕುರುಬನ ನೀ ನೋಡು ಕುರಿಯೇ ||ಪ||

ಇಂತ ಪರಿ ಪರಿ ವರ್ಣದ ಕುರಿಗಳ ಮೇಹಿಸುವಾ
ಕುರುಬನ ನೀನೋಡೋ ಕುರಿಯೇ ||ಪ||
ವೇದಶಾಸ್ತ್ರಗಳೆಂಬೋ ಗಾಧೆಗೆ ಒಳೆಗಾಗಿ ಭಾದೆಯ ಪಡಬೇಡಾ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 317

ಕುರಿಯೇ ಹಾದಿ ಅನಾದಿಗೆ ಆಧಾರವಾಗಿರುವ ಹಾದಿಯೇ
ನಿನೋಡೋ ಕುರಿಯೇ ||ಪ||

ಬುದ್ಧಿಯಿಲ್ಲದೆ ನೀನು | ಭುವನವ ತಿರುಗುವೇ ಒದ್ಯಾಡಿ
ಸಾಯುವೇ ಕುರಿಯೇ | ಸದ್ದು ತಪ್ಪಿದ ಬಳಿಕ ಯಮನಾಳುಗಳು
ಬಂದು ಒದ್ದೆಳೆದೋಯ್ವರು ಕುರಿಯೇ ||ಪ||

ಹಾಳು ತೋಟಕೆ ನೀರ ಎತ್ತಿದರೆಟ್ಟೆಯು ಬೀಳುಬಿದ್ದಾಯ್ತಿಲ್ಲೂ
ಕುರಿಯೇ ಹೋಗುವ ಮತ್ತು ಯಮದಾಳಿಗೆ ಸಿಲುಕದ ಮಾಳಿಗೆ
ಮನೆಸೇರೋ ಕುರಿಯ ||ಪ||

ಇಲ್ಲನಂಗಡಿಯೊಳು ಯಾತರೆ ವ್ಯಾಪಾರ | ಬಲ್ಲವರ ನೀ
ಸೇರೋ ಕುರಿಯೇ ಪುಲ್ಲಲೋಚನ ಗುರು ಪುರಂದರ ವಿಠಲನ
ನಿಲ್ಲದೇ ನೀ ಭಜಿಸೋ ಕುರಿಯೆ ||ಪ||

49
ಶ್ರೀ ಗುರುವಿನ ಪಾದ

ಶ್ರೀ ಗುರುವಿನ ಪಾದ | ಪೂಜೆ ಮಾಡುವ ಜ್ಞಾನಾ |
ಯೋಗಿಣಿಯರೆ ಬನ್ನಿ ಮುದದಿಂದ ಜ್ಞಾನಾ
ಯೋಗಿಯರೇ ಬನ್ನಿ ಮುದದಿಂದ || ಪ ||

ವರನಿರ್ಮಲೋದಕದಲಿ ಮಿಂದು ಭಸಿತವಾ
ಧರಿಸುತ್ತೇ ವಿಧಿಯಿಂದ ಲಿಂಗಕ್ಕೆ |
ಉರುತರದಿಂದಾ ಪ್ರಾಣ ಭಾವ ಕೂಡಿ
ತ್ವರಿತದಿಂದಲಿ ಶಿವಪೂಜೆಯ ಮುಗಿಸುತ್ತೆ
ಶ್ರೀಗುರುವಿನ

ಗುರುಪಾದಕಗ್ಗಣಿ ಅರಿಶಿನ ವಿಭೂತಿ ವರಗಂಧ
ಕುಂಕುಮ ಪತ್ರೆ ಅಕ್ಷತೆಯಾ | ಪರಿಮಳವಾದ
ಧೂಪವಕೊಂಡು ನಮ್ಮ ಶ್ರೀ ಗುರುಪಾದದೆಡೆಗೆ
ಸಂತಸದಿಂದಾಗಮಿಸುತ್ತೇ ||ಪ||

ಧರೆಯೊಳಧಿಕ ರಂಭ ಪುರದೊಳು ನೆಲಸಿಹ
ಪರಮ ಸದ್ಗುರು ರೇಣುಕರ ಪಾದಕೆ |

318 / ತತ್ವಪದ ಸಂಪುಟ – 1

ಗುರುಮಂತ್ರದಿಂದಷ್ಟ ವಿಧದರ್ಚನೆಯ ಮಾಡಿ
ಶಿರಸಹಿತಲಿ ವಂದನೆಗಳನರ್ಪಿಸುತೆ || ಪ ||

50
ನೋಡು ನೋಡು ಲಿಂಗವೆ

ನೋಡು ನೋಡು ನೋಡು ನೋಡು ನೋಡು
ಲಿಂಗವೇ ನೋಡು ಬಸವಯ್ಯನವರು ಆಡಿದಾಟವಾ ||ಪ||

ಹರಳಯ್ಯ ಮಧುವಯ್ಯ ನವರಿಗೆ ಏಳೆಹೂಟೆ ಧುರಳೆ
ಬಿಜ್ಜಳನು ಕಟ್ಟಿದನೆಂದರೇ ಇರಬಾರದಿಂದೆನ್ನ ಶರಣರಿಗೆ
ಅರಿಹುವೆಂದು ಎನ್ನೊಡೆಯ ಬಸವರಾಜ ಹೋದರಂತೆ ||ಪ||

ಅಪ್ಪಯ್ಯಗಳಿಂದ ಕರೆಯ ಬಂದೈಯ್ಯಾಗೆ ಕಪ್ಪಡಿ
ಸಂಗಮ ದೇವಕೇಳೋ ಅಲ್ಲಿ ಇಲ್ಲೆನ್ನುವ ಉಭಯ
ಸನ್ನಹವೇಕೆ ಬಲ್ಲಂತ ಮಹಾತ್ಮರಿಗೆ ಇದು ತರವೇ ||ಪ||

ನುಡಿಯ ಲಾಲಿಸು ಬೇಗಾ ಕೆಡುವುದೀ ಕಲ್ಯಾಣ
ತಡಮಾಡಬೇಡಿರಿ ಮಹಡಿಗರುಹುವೆಂದು ಎನ್ನ ಅರಸು
ಬಸವರಾಜ ಪೋದರಂತೆ ||ಪ||

ಅಲ್ಲಿಗೆ ಎನ್ನನು ಬರಹೇಳಿದರಂತೆ ಅಲ್ಲಿದ್ದ
ಸಂಗಮ ಇಲ್ಲಿಲ್ಲವೇ ಪುಷ್ಪಕ್ಕೆ ಪರಿಮಳ
ಬೆರೆತಂತೆ ಆಯಿತು ಎನಗೆ ಒಪ್ಪಿದ ಲಿಂಗವೇ
ಮಾತನಾಡೋ ಎನ್ನ ಲಿಂಗಯ್ಯ ಲಿಂಗವೇ
ಮಾತನಾಡೋ ||ಪ||

51
ಅಲಕ್ ನಿರಂಜನ್

ಅಲಕ್ ನಿರಂಜನ್ ಅಲಕ್ ನಿರಂಜನ್
ಅಲಕ್ ನಿರಂಜನ್ ಅಲಕ್ಕಲಕ್ ಅಲಕ್ಕನ್ನುತಾ
ಚಾಲಕ್ಕು ಮಾಡಲು ಇಲ್ಲೇ ಇರುವರು
ಅವರು ಎಲ್ಲೆಲ್ಲೂ ಇರುವರು ಬಸವ ಎಲ್ಲೆಲ್ಲು ಇರುವರು || ಪ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 319

ಅಂಡದೊಳಿರುವರು ಪಿಂಡದೊಳಿರುವರು
ಪಿಂಡಾಂಡದೊಳೆಗವರಲಕ್ಕಲಕ್ ||ಪ||

ಬ್ರಹ್ಮನ ತಾಳವಿಷ್ಟು ಮೃದಂಗ | ಅಲ್ಲಿ ಪರಶಿವನೊಳಗೆ ಲಕ್ಕೆಲಕ್ಕೆ ||ಪ||
ತಂಬೂರಿ ನಾರದರು ಗಾನವಿಶಾಲರು ಗಾನ
ಪಾಡುವುದಲಕ್ಕಲಕ್ಕ್ ಅವರು ||ಪ||
ಆರು ಶಾಸ್ತ್ರ ಅದಿನೆಂಟುಪುರಾಣ ನಾಲ್ಕು
ವೇದಗಳ್ ಅಲಕ್ಕಲಕ್ಕ್ ||ಪ||

ಕೇಚರಿ ಭೂಚರಿ ವನಚರಿ ಜಲಚರಿ ಮನದ
ಸಂಚಾರದೊಳ್ | ಅಲಕ್ಕಲಕ್ಕ್ ||ಪ||
52
ಎಂತ ಕುದುರೆ

ಎಂತ ಕುದುರೆ ನಾ ಕೊಂಡು ಕೊಂಡೆನೇ |
ಕುಂತು ನೋಡಿ ಅದರ ಗುಣವ ತಿಳಿದು
ಕೊಂಡನೇ | ಕಂತು ಹರನ ಭಜನೆಯ |
ಮಾಡಿಕೊಂಡೆನೇ | ಗುರು ಶಾಂತ ಮಲ್ಲೇಶನ
ಕೂಡಿಕೊಂಡೆನೆ ||ಪ||

ಸಿಕ್ಕಿದಷ್ಟು ಉಳ್ಳಿನಾದ್ರು ಮುಕ್ಕುತಾಯ್ತೆ |
ಅದು ತೆಕ್ಕೆ ಹುಲ್ಲ ತಿಂದು | ನೆಲವ ನೆಕ್ಕುತಾಯ್ತೆ |
ಥಕ್ಕಥಕ್ಕ ಥೈ ಎಂದು ಕುಣಿಯುತ್ತಾಯ್ತೆ | ಅದು
ಪಕ್ಕ ಪಕ್ಕ ಲದ್ದಿಯನ್ನು ಹಾಕುತಾಯ್ತೆ ||ಪ||

ಊರ ಮುಂದಕ್ಕೋಗಿ ಕುದುರೆ | ಏರಬೇಕು |
ಏರಿ ನೋಡಿ | ಅದರ ಗುಣವ ತಿಳಿಯಬೇಕು |
ಸೂರ್ಯ ಮುಳುಗೊದ್ರೊಳ್ಗೆ ಊರ ಸೇರಬೇಕು |
ಸೇರದಿದ್ರೆ ಕಾಸಿಗೆ ಲೌಡಿ ಮಾರಬೇಕು ||ಪ||

ಅಡ್ಡರ ಗಾಲ ಹಾಕಿ ಕುದುರೆ ಏರಿದನಲ್ಲಾ |
ಅದು ತೊಡರಗಾಲ ಹಾಕಿ ನನ್ನ

320 / ತತ್ವಪದ ಸಂಪುಟ – 1

ಕೆಡಗಿತ್ತಲ್ಲಾ | ಬಾಲ ಎತ್ತಿ ಮುಖದ ಮೇಲೆ
ಬೀಳಿಸ್ತಲ್ಲಾ ಇದ ಗುಂಟೂರು ಗುಹೇಶ್ವರ
ಒಬ್ಬ ಬಲ್ಲಾ ||ಪ||

53
ಅಲಲಲೇನಾಶ್ಚರಿ

ಅಲಲಲೇನಾಶ್ಚರಿ | ಕಂಡಾಯಿತ್ತೆಮ್ಮ ಜೀವ ಗಾಬರಿ |
ಅರಿಯದ ಮೂರ್ಖರಿಗಿದು ಪರಿ | ಗುರುಭಕ್ತರಿಗೆ ಇಟ್ಟಂಗೆ ಗುರಿ ||ಪ||

ಮೋರೆಯಿಲ್ಲದ ಮೈಯಾದೆ | ಮೈಯಿಗೆ ಸಾವಿರ ಕಾಲಾದೆ |
ಕಾಲಿನ ತುದಿಯೊಳು ಕಣ್ಣಾದೆ | ಆ ಕಣ್ಣಿನೊಳಗೆ ಒಂದು ಹೆಣ್ಣಾದೆ ||ಪ||

ಹೆಣ್ಣಿನ ನೆಲೆ ಬಹು ದೂರಾಯ್ತೆ | ಮೂರು ಕಣ್ಣಿನೊಳಗೆ
ಅದು ಭ್ರಮಿಸಿದೆ | ಭಣ್ಣಿಸಿ ಬಾಯಿ ಬಾಯಿ ಬಿಡಿಸಿದೆ | ಒಳ್ಳೆ
ಪುಣ್ಯ ಪುರುಷನ ವಶವಾದೆ ||ಪ||

ಕವಿ ಜನರ ಕಣ್ಣಾ ತೆರೆಸಿದೆ | ಕೆಟ್ಟ ಕವಿಜನರ ಕಣ್ಣಾ ಕಳಚಿದೆ |
ಶಾಸ್ತ್ರಿಕರನ್ನೆಲ್ಲಾ ಮುರಿತಾಯ್ತೆ |
ನಮ್ಮ ಮಡಿವಾಳೇಶನ ವಶವಾಯ್ತೆ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ಪಪದಗಳು / 321

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

4 ಕೆಸ್ತೂರು ಕೂಸಯ್ಯನವರು ಹಾಡಿದ ತತ್ವಪದಗಳು

ಭಾಗ-4: ಕೆಸ್ತೂರು ಕೂಸಯ್ಯನವರು ಹಾಡಿದ ತತ್ವಪದಗಳು
1
ಪಾಪಿವಿಧಿಯೇ

ಸುರನರೋರುಗರನೆಲ್ಲರತಿಕ್ಕಿ ಮುಕ್ಕಿದೆ |
ಪಾಪಿವಿಧಿಯೇ ||ಪ||
ಹರಿಯನು ಹಂದಿಯ ಬಸಿರೊಳು ಬರಿಸಿದೆ ಪಾಪಿ ವಿಧಿಯೆ |
ಪರಮೇಷ್ಟಿಯೆಂಬನ |
ತಲೆಯೆನೆ ತೆಗೆಸಿದೆ |
ಪಾಪಿ ವಿಧಿಯೇ ಸುರಪನ್ನಗವನೆಲ್ಲಾ ಹಾನಿಯನೆಸಗಿದೆ |
ಪಾಪಿವಿಧಿಯೇ ||1||
ಸ್ಮರನ ದೇಹವ ಬೂದಿಮಾತ್ರವಾಗೊಳಿಸಿದೆ |
ಪಾಪಿವಿಧಿಯೇ ||1||
ಶಶಿಯನು ಗುರುವಾರ ಗಮನನೆಂದೆನಿಸಿದೆ |
ಪಾಪಿವಿಧಿಯೇ |
ಹೆಸರಾದ ನಹುಷನ ಹಾವಾಗಿ ಹರಿಸಿದೆ |
ಪಾಪಿವಿಧಿಯೇ |
ಅಸುರರಾಚಾರ್ಯನ ಕಣ್ಣೊಂದು ಕಳಚೀದೆ |
ಪಾಪಿವಿಧಿಯೇ
ಯೆಸವ ದಾರುವನೆರಡು ತುಂಡಾಗಿ ಕಡಿಸಿದೆ |
ಪಾಪಿವಿಧಿಯೇ ||
ಶ್ರೀ ರಾಮನನು ವನವಾಸದೊಳೆಳೆಸಿದೆ |
ಪಾಪಿವಿಧಿಯೇ |
ದಾರುವನದ ಋಷಿಗಳ ವ್ರತ ಕೆಡಿಸಿದೆ |
ಪಾಪಿವಿಧಿಯೇ ||
ತಾರಕಾಸುರನ ಸಂತತಿ (ಕೆಡಿಸಿದೆ)
ನಷ್ಟಗೊಳಿಸಿದೆ |
ಪಾಪಿವಿಧಿಯೇ |
ಸಾರನಿಗಮಿಗಳ ಕೂನಿಗಳೆಂದಿಸಿದೆ |
ಪಾಪಿವಿಧಿಯೇ |
ಬಲಿಚಕ್ರವರ್ತಿಯ ಸ್ಥಳ ಭ್ರಷ್ಟ ಮಾಡಿದೆ |

ಪಾಪಿವಿಧಿಯೇ |
ಹುಲು ಬೇಡನಿಂದೆ ಶ್ರೀಕೃಷ್ಣನ ಕೊಲಿಸಿದೆ |
ಪಾಪಿವಿಧಿಯೇ|
ನಳಚರ್ಕವರ್ತಿಯನಡುವಳನೆನಿಸಿದೆ |
ಪಾಪಿವಿಧಿಯೇ |
ಸಲೆ ಹರಿಶ್ಚಂದ್ರನ ಹೊಲೆಯನಾಳೆನಿಸಿದೆ ಪಾಪಿವಿಧಿಯೆ |
ಧುರುಧೀರ ಪಾಂಡುವರನು ತಿರಿದುಣ್ಣಿಸಿದಿ |
ಪಾಪಿವಿಧಿಯೇ |
ವರಶೇಷನನು ಸುರಾಸುರರಿಂದ ಕೇಡೆನಿಸಿದೆ |
ಪಾಪಿವಿಧಿಯೇ |
ಹಿರಿಯರಿಂತವರನ್ನ ಈ ಪಾಡುಪಡಿಸಿದೆ |
ಪಾಪಿವಿಧಿಯೇ |
ನರದ ನೀ ಬಿಡುವದು ಗುರುಸಿದ್ದನೇಬಲ್ಲಾ |
ಪಾಪಿವಿಧಿಯೇ |
ಸುರನರೋರುಗರನ್ನೆಲ್ಲರತಿಕ್ಕಿ ಮುಕ್ಕಿದೆ ಪಾಪಿವಿಧಿಯೇ|

2
ದುಗ್ಗಾಣಿ ಬಹುಕೆಟ್ಟದಣ್ಣಾ

ದುಗ್ಗಾಣಿ ಬಹುಕೆಟ್ಟದಣ್ಣಾ |
ಕಡೆಗಗ್ಗ ಮಾಡುತೈತೆ ಕೇಳೋ ನಮ್ಮಂಣ್ಣಾ ||ಪಲ್ಲ||
ವೋಟಕ್ಕೆ ನಿಡೋದು ದುಗ್ಗಾಣೆ |
ಹುಚ್ಚುಹಿಡಿಸಿದಂತೆ ಮಾಡೋದು ದುಗ್ಗಾಣೆ |
ನಾಚಿಕೆ ಇಲ್ಲದೆ ಮನೆ ಮನೇ ತಿರುಗೋದು |
ಛೀಛೀ ಯನಿಸೋದು ದುಗ್ಗಾಣಿ ದುಗ್ಗಾಣಿ |
ದುಗ್ಗಾಣಿ ಬಹುಕೆಟ್ಟದಣ್ಣಾ ||1||
ನೆಂಟರಿಷ್ಟಗಲ್ಲಿವೋದು ದುಗ್ಗಾಣಿ |
ನೆಂಟಸ್ಥಾನವ ಮಾಡೋದು |ದುಗ್ಗಾಣಿ|
ಒಂಟಿಯಾಗಿ ಮೋರೆ ಮೇಲಕ್ಕೆತ್ತಿಕೊಂಡು |
ಸೊಂಟಾವತಿರುವೋದು | ದುಗ್ಗಾಣೆ |
ದೊರೆತನ ಮಾಡೋದು |
ದುಗ್ಗಾಣಿ |

ಪರಸ್ತ್ರಿಯಾರನೊಲಿಸೋದು ದುಗ್ಗಾಣಿ |3|
ಧರೆಗೆ ದಕ್ಷಿಣೆ ಕಾಶಿ ವಾಸನಮ್ಮ |
ವರಗುರು ನಾಗಲಿಂಗೇಶ |
ಗುರುವಿನ ಪಾದವು ಅರಿವಿನಿಂದಲೆ ನಂಬಿ |
ಸ್ಥಿರದಿಂದ ಮಾಡಿತು ದುಗ್ಗಾಣಿ |
ದುಗ್ಗಾಣಿ ಬಹುಕೆಟ್ಟದಣ್ಣಾ ||4||

3
ಘನಯೋಗ ಸಾಧನೆಯನು ಮಾಡಿರೋ

ತನುವೆಂಬೊಗರುಯೊಳನುಭಾವ ಧೀರರು |
ಘನಯೋಗ ಸಾಧನೆಯ ಮಾಡಿರೊ |
ಮನುಜರೊಲಿವ ನಿಮ್ಮ ಬಿನುಗು ಸಾಧನೆಗಳ |
ಜನನ ಮರಣಕಲ್ಲಿಂದ ವೋಡದಿರೊ ||ಪ||
ಸ್ಥಿರಬುದ್ಧಿಯೆಂತೆಂಬೋ ಸಮವಾದ ನೆಲದೋಳು |
ಗುರುಭೋಧೆಯಂಬೊ ದಂಡೆಗಳನೊತ್ತಿ |
ಪರತತ್ವವೆಂತೆಂಬೊ ಬಸಿಕೆಗಳನ ವೊತ್ತಿ |
ತನುವೆಂಬೋ ಕೊಣತಿಯನೆತ್ತೀ ಕಟ್ಟೀ ||
ತನುವೆಂಬೋ ||1||
ವಾದ ಬಿಂದುಗಳೆಂಬೊ ಸಾಗ್ರಾಣಿಗಳನಾಂತು |
ಕಾಡಿ ಚಿಕ್ಕಳೆಯ ಲೋಹವತಿರುವಿ |
ಮೋದದಿಂ ನಾಡು ನಾಡಿಂಬದು ತುಡಿಗೇರಿ
ಬೇಧಿಸಿ ಬ್ರಹ್ಮ ಸಾಧನೆ ಕಲಿತೆ ||
ತನುವೆಂಬೊ ||2||
ಭಯದಿಂದ ಯಮ ಭಂಟರುಗಳನು ಮರಿದೊತ್ತಿ |
ಪರಿಭಾವನೆದೆಂಬೊ ವೈರಿಯನೆ ಕೊಂಡು ||
ಗುರುಸಿದ್ದನಂತೆಂಬೊ ಚಕ್ರೇಶನ ಮೆಚ್ಚಿಸಿ |
ವರಮುಕ್ತಿ ಪದವಿಯ ಪಡೆಯಲೆಂದು ತನು ವೆಂಬೊಗರುಡೀಯೊಳನುಭಾವಧೀರರು|
ಘನಯೋಗ ಸಾಧನೆಯನು ಮಾಡಿರೋ ||3||

4
ತಪನಿಷ್ಠೆಯೊಳಗಿರ್ದ

ತಪನಿಷ್ಠೆಯೊಳಗಿರ್ದ ಯೋಗಿಯ ನಾ ಕಂಡೆ |
ಗುಪಿತದಲಿರುತಿಹದೇನಮ್ಮ |
ಕಪಟನಾಟಕ ಸೂತ್ರದಾರನ ಮಹಿಮೆಯ |
ಚಪಲಾಕ್ಷಿ ನೀ ತಿಳಿದು ಪೇಳಮ್ಮ ||ಪ||
ಮಾದೆದಿನಾದಿಮೂರು |
ಬಿಜವುದಬ್ಬಿಸಿ ದರಂದವ ನೀ ತಿಳಿದು ಪೇಳಮ್ಮ |
ಕಂದರ್ಪ ಅರಿತೆನ್ನ |
ಕರುಣಾಕಟಾಕ್ಷದಿಂ ಇಂದು ಯೆನಗೆ ಪೇಳ್ದದ ಕಾಣಮ್ಮ |
ತಪನಿಷ್ಟೆ ||1||
ಕತ್ತಲೆ ಬೆಳಕಾಗಿ ವುತ್ತರಬಾಗಿಲೊಳ್ ಮುತ್ತು ಸುರಿಯುತಿದೆ ಕಾಣಮ್ಮ |
ಸತ್ತು ಚಿದಾನಂದ ಸಾಕ್ಷಾತ್ಪರವಾಗಿ ಪ್ರತ್ಯಕ್ಷವಾದನು ಕಾಣಮ್ಮ ||ತಪನಿಷ್ಟೆ||
ಮೂರು ರತ್ನವು ತನ್ನ ಮಸ್ತಕದೊಳಗಿಟ್ಟ |
ಧೀರಶಿವನೀತ ಕಾಣಮ್ಮ ||
ದಾರುಣಿಯೊಳು ಶ್ರೀಶೈಲದೀ ನೆಲಸಿದ ಧೀರ
ಮಹೇಶ್ವರ ಕಾಣಮ್ಮ |
ತಪನಿಷ್ಟೆಯೊಳಗಿರ್ದ ||4||

5
ಚಿಂತ್ಯಾಕೋ ಮಾಡುತ್ತಿದ್ದಿ

ಚಿಂತ್ಯಾಕೆ ಮಾಡುತ್ತಿದ್ದಿ |
ಚಿನ್ಮಯನಿದ್ದಾನೆ ಪ್ರಾಣಿ |
ನಿನ್ನ ಚಿಂತೆಯ ಬಿಡುಸುವಂತಾ ಗೌರಿಕಾಂತನಿದ್ದಾನೆ |
ಪ್ರಾಣಿ ಚಿಂತ್ಯಾಕೆ ಮಾಡುತ್ತಿದ್ದಿ ||ಅನುಪಲ್ಲವಿ||
ಎಳ್ಳು ಕೊನೆಯ ಮುಳ್ಳುಮನೆಯೋಳು |
ಪೊಳ್ಳು ಬಿಡಿದಾನೊಳಗೆ ಹೊಳಿಗೆ |
ಯಲ್ಲಾ ಕಾವಿನು |
ಗೌರಿವಲ್ಲಭನಿದ್ದಾನೆ |
ಪ್ರಾಣಿ ಚಿಂತ್ಯಾಕೊ ಮಾಡತಿದ್ದೀ |
ಹಿಂದೆ ನಿನ್ನ ಸಲಹಿದರಾರು |

ಮುಂದೆ ನಿನ್ನ ಸಲಹುವರಾರು |
ಅಂದಿಗೆ ಇಂದಿಗೆ ನಂದಿ ವಾಹನನಿದ್ದಾನೆ |
ಪ್ರಾಣಿ ಚಿಂತ್ಯಾಕೊ ಮಾಡುತ್ತಿದ್ದಿ ||2||
ನೀನು ನಾನು ಎಂಬ |
ಉಭಯ |
ಹಿನಗುಳ್ಳಂಗೆಳೆಲ್ಲ ಕಳೆದು |
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ |
ಪ್ರಾಣಿ ಚಿಂತ್ಯಾಕೋ ಮಾಡುತ್ತಿದ್ದಿ ||

6
ಹಿಡಿ ಗುರುಪಾದವ

ಹಿಡಿ ಹಿಡಿ ಗುರುಪಾದವ |
ತಂಗೀ ವುಡುಗುತನದ ಬುದ್ದಿ ಸಾಕಮ್ಮ |
ಬಿಡದೆ ಪುರಾತರಿಗಂಜಿ ನಡಿಯಮ್ಮ |
ಮುಕ್ತಿ ಪಡೆದು ಪಾವನಳಾಗಬೇಕಮ್ಮ ||ಪಲ್ಲವಿ||
ಯೇನು ಕಿಂಚಿತ್ತು ಪುಣ್ಯ ನಿಂದಮ್ಮ ಇಂತ ಮಾನವ ಜಲ್ಮಕೆ ಬಂದಮ್ಮ ಇಂತ
ಮಾನವ ಜಲ್ಮಕೆ ಬಂದವ್ವ ಈ ನವ ಶರೀರ ಕುಂದವ್ವಾ |
ತಂಗಿ ಹಿಡಿ ಹಿಡಿ ಹಿಡಿ ||1||
ಕೆಟ್ಟ ಮಾತಲೇನು ಪಲನಮ್ಮಾ |ನಿಜ|
ನಿಷ್ಟವಂತರ ಸಂಗ ಕಲಿಯಮ್ಮಾ |
ಆಪ್ರಪಾರಗಳೆಲ್ಲಾ ಕಲಿಯನಮ್ಮಾ |
ನಿಜ ನಿಷ್ಠೆಯ ಹಿಡಿದು ಭವಗೆಲಿಯಮ್ಮಾ |
ತಂಗಿ ಹಿಡಿ ಹಿಡಿ ||2||
ಆಡಿಕೊಂಡದ್ದುಯಲ್ಲ ಬಂದವ್ವಾ |
ತಂಗಿ ತಿಳಿದು ಕೊಳ್ಳೋದು ನಿನ್ನಲ್ಲಿಹುದವ್ವಾ ಬಿಡದೆ ಭಜಿಸು ಮಡಿವಾನವ್ವಾ |
ಜನಕ್ಕೆ ವಡೆದು ನಕ್ಕರೆ ನಿಂದೆ ನೋಯಿತವ್ವಾ ತಂಗಿ
ಹಿಡಿ ಹಿಡಿ ಗುರುಪಾದವ ||3||

7
ಬಂದಂತ ನೆಂಟರು

ಅಂದದಾ ಗುರುಬೋದೆ ಆಗಲು ತಕ್ಷಣ ಚಂದ್ರನಿಲ್ಲದ ಬೆಳಕೇನಮ್ಮ |
ಮದಗಮನೆ ಲಕ್ಷ್ಮಿ ರಮಣನ ನಾ ಬೆರೆಯುವ ಆನಂದದಾ ಮಾರ್ಗವ ತೋರಮ್ಮ ||ಪಲ್ಲವಿ||

ಅಂದಿಯು ಮಂಣನೇ ನುಂಗಿತು ಬೇಗದಿ ||
ಗಂಗೆಯಿಲ್ಲದನದಿ ನೋಡಮ್ಮ ಬಂದಂತ ನೆಂಟರು ಬಯಲಾಗಿ ಹೋದರು |
ಗಂಧವಿಲ್ಲದ ವಾಸನೇನಮ್ಮ ||
ಬಡಹಸು ಬಂಗೊಂದು ಗಿಡ್ವಾಗ ನಾನೋಡಿ ಬಿಡದೆ ಬಕ್ಷಿಸಿ ತಿಂತುಕಾಣಮ್ಮ |
ಶಿಡಿಲೆಂಬೋ ಸರ್ಪನಾ ವಡಹಡಿ ನುಂಗಿತು ದೃಡವೆಂತೆ, ನೀ ತಿಳಿದು ಪೇಳಮ್ಮ ||2||
ಪೇಳೆದ್ದು ಗರುಡನಾ ವಾಸಿಯ ನುಂಗಿತು |
ಸಾಸಿರದೊಡೆಯನ ತೋರಮ್ಮ |
ಶಾಶಿರ ಗುರುವುಳ್ಳ ಗುರು ರಾಮದಾಸರ |
ದಾಸರ ದಾಸ ಶ್ಯಮತವಮ್ಮ ||3||

8
ಮಾಡಲಿಲ್ಲವೇ ತಪವ

ಮಾಡಲಿಲ್ಲವೇ ತಪವ ಮಾಡಲಿಲ್ಲವೆ |
ಕೂಡೆ ಸುಗಣದಿಂದ ತಿಳಿದು ನೋಡಿ ತ್ರಿವಿದ ಕರಣದಿಂ|
ಮಾತನಾಡಲಿಲ್ಲವೆ ||ಪ||
ಗುರುಬಜನೆ ಸುಕರ್ಮ |
ವೃತ್ತಿ ಹರನಪೂಜೆ |
ಶರಣ ಶಾವೆಯೊಳಗೆ ನಿಲಶಿ ಪರಮ ಸಾತ್ವಿ ಕಂಗಳೆಂಟು|
ನೆರೆದುನಿಲಶಿತನುವಿಲ್ಲಿ |
ಮಾಡಲಿಲ್ಲವೆ ||1||
ವಿನಯ ಧ್ಯಾನ ಹಿತವ ಕರ್ಮ |
ವೆನಿಪ ಶಬ್ದ ವಚನೆಯತಾರ್ಥವನಗಮಂತ್ರವಾಗಮಂಗಳನಿತ್ತು ವಿಡಿದು ವಚನದಲ್ಲಿ||
ಮಾಡಲಿಲ್ಲವೆ ||
ಶಮೆ ವಿವೇಕ ಆತ್ಮವಿದ್ಯದಮೆ ವಿರಕ್ತಿ ಯೋಗ |
ನಮದುರ್ಪುರೆ ಸುಮನದಲ್ಲಿ ||
ಮಾಡಲಿಲ್ಲವ ತಪವ ||

9
ಕಲ್ಲಾಬಿಡೆ

ಎನ್ನಮ್ಮ ಕಲ್ಲಾಬಿಡೇ |
ಈ ದೋತ್ರವು ಚೆನ್ನಾಗಿ ವಗಿಯಬೇಕೂ ||ಪಲ್ಲ||
ಮುನ್ನ ಮಾಡಿದ ಪಾಪಕರ್ಮ ಹೋಗುವ ಹಾಗೆ |

ಚನ್ನಕೇಶವನ ಪ್ರಸಾದಕ್ಕೊದಗಬೇಕು ||
ಎನ್ನವ್ವಾ ಕಲ್ಲಾ ಬಿಡೆ ||1||
ವುಟ್ಟ ದೋತ್ರವು ಮಾಸಿತು ಮನದೊಳಗಿರುವ |
ದೃಷ್ಟಿ ರೈವರುಗಳಿಂದ |
ಕಷ್ಟ ಮರಿತವೆಲ್ಲ |
ಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳು |
ಘಟಾಗಿ ವಗಿಬೇಕು ||
ಯನ್ನವ್ವಾ ಕಲ್ಲಾ ಬಿಡೆ ||2||
ವೇದವ ನೋಡಬೇಕೂ ||
ಮನದೊಳಗಿದ್ದ ಬೇದವ ತಿಳಿಯಬೇಕು |
ಸಾದಾರಣೆಯಿಂದ ತಿಳಿದು ನಿಶ್ಚಯವಾಗಿ ಕ್ರೋಧ ಕರ್ಮಗಳೆಲ್ಲ |
ಬಿಟ್ಟು ಹೋಗುವ ಹಾಗೆ |
ಎನ್ನವ್ವಾ ಕಲ್ಲಾ ಬಿಡೆ ||3||
ವೆಲ್ಲಾಪುರಿಯ ಚನ್ನಾನ |
ಕೇಶವನ ಪ್ರಸಾದಕ್ಕೆ ಆಲಶ್ಯ ಮಾಡದೆ |
ಕೊ ಪೂರನು ಬಂದು ದ್ವಾರವತಿಲಿ ನಿಂದು |
ನಿಲಕುಂದತ್ವ ಕಲ್ಲಾ ಬಿಟ್ಟು |
ಆಕಡೆ ಸಾರಮ್ಮ |
ಎನ್ನವ್ವಾ ಕಲ್ಲಾಬಿಡೆ ಈ ದೋತ್ರ ||4||

10
ಬಂದಿದೆ ಪಕ್ಷಿ

ನಿರುಪಮ ದೇಶದಿ ಬಂದೆ ಬಂದಿದೆ ಪಕ್ಷಿ |
ಚಂದಮಮ ||ಪಲ್ಲವಿ||
ಅರಸಿ ನೋಡಿದರೆ ತುಪ್ಪಟ ತಿಕ್ಕಿಲ್ಲ |
ಚಂದಮಾಮ || ಅನುಪಲ್ಲವಿ ||
ಆರುಮುಖದ ಪಕ್ಷಿ ಆನಂದವಾಗಿದೆ |
ಚಂದಮಾಮ | ಕಾರುಣಕದ ಪಕ್ಷಿ ಕನಸಲ್ಲಾವಿದು | ಚಂದಮಾಮ ||1||
ಭೂಮಿ ಆಕಾಶಕ್ಕೆ ನಡುವೆ ಗೂಡಿಕ್ಕಿತು | ಚಂದಮಾಮ ||2||
ಅತಿಶಯದ ಅಮೃತದ ಗುಟುಕನಿಕ್ಕಿತು || ಚಂದಮಾಮ ||
ಪಕ್ಷಿಗೆ ತ್ರಯಗ್ನ ಘಾತಕವುಟ್ಟಿತು | ಚಂದಮಾಮ ||
ತಪ್ಪದೆ ಈರೇಳು ಜಗವಂತಾನರಿತು | ಚಂದಮಾಮ ||3||

ಕಕ್ಕಟೆ ಕಾಡೊಳು ಬೆದರಿತಾ ಕೂಗಿತು | ಚಂದಮಾಮ ||
ಅಕಟಕಟ ಶ್ರೀಗುರು ಶಾಂತನೊಳಡಗೀತು | ಚಂದಮಾಮ ||4||
ನಿರುಪಮದೇಶದಿ ಬರಿದೆ ಬಂದಿದೆ ಪಕ್ಷಿ |
| ಚಂದಮಾಮ |
ಅರಶಿ ನೋಡಿದರೆ ತುಪ್ಪಟರೆಕ್ಕಿಲ್ಲವು ||
ಚಂದಮಾಮ||5||

11
ನಮ್ಮೂರು

ಆರು ಅರಿಯರು ನಮ್ಮೂರು |
ಗುರು ಭಕ್ತರಿಗೊಲಿವ ನಮ್ಮೂರು ||ಪಲ್ಲವಿ||
ಅಂಬರದೊಳಗೆ ನಮ್ಮೂರು||
ತ್ರಿಅಂಕನಿರುವದು ನಮ್ಮೂರು ಇಂಬು ಕಾಣೋ ನಮ್ಮೂರು |
ತುಂಬಿದ ಬೆಳಕು ನಮ್ಮೂರು ||ಆರು||
ಅಕ್ಷಯದೊಳಗೆ ನಮ್ಮೂರು ||
ನಿಕ್ಷೇಪವಿರುವುದು ನಮ್ಮೂರು |
ಆರು ಅರಿಯರು ||2||
ಬೈರಿಗೆ ಬೈಲೆ ನಮ್ಮೂರು ಬೈಲ ಬ್ರಹ್ಮವೆ ನಮ್ಮೂರು |
ಭವ ಹರ ನಿರುವುದು ನಮ್ಮೂರು |
ಭವ ಪಾಶವಳಿವುದು ನಮ್ಮೂರು ||
ಆರು ಅರಿಯರು |
ಕುಂಡಲಿ ತುದಿಯಲಿ ನಮ್ಮೂರು ಇದು ಕಂಡವರಿಲ್ಲವೊ ನಮ್ಮೂರು |
ದಂಡಿತ ದೇಶದೊಳ್ ನಮ್ಮೂರು |
ನಡುಮಂಡಲಸ್ಥಳದೊಳ್ ನಮ್ಮೂರು ||
ಆರು ಅರಿಯರು ||4||
ಪರಮಾತ್ಮರದೊಳು ನಮ್ಮೂರು |
ಪರದೇಶಿಗಳಿರುವುದು ನಮ್ಮೂರು |
ಪರಿಶೇ ತುಂಬಿತು ನಮ್ಮೂರು |
ಗುರುಸರಸದೊಳಿರುವುದು ನಮ್ಮೂರು ||5||
ಭೂಪತಿ ಚಿದಾನಂದನ ಸಾಸಿತೇಜ |
ಜೋಕೆಯಲ್ಲಿರುವುದು ನಮ್ಮೂರು |
ಆರು ಅರಿಯರು ನಮ್ಮೂರು ||6||

12
ಮರಿಯಬಾರದೊ

ಮರಿಯಬಾರದೊ |
ಶಿವನ | ಮರಿಯಬಾರದೊ |
ಮರೆತು ಹೋದ ಮ್ಯಾಲೆ |
ಮುಂದೆ ದೊರೆಯದಾಗೊ |
ಶಿವನ ಪಾದ | ಮರಿಯ ||ಪಲ್ಲವಿ||
ಯೆತ್ತ ಬಂದ ಬಳಿಕ ಜಲ್ಮ ವ್ಯರ್ಥವಾಗಿ ಹೊಗದಂತೆ |
ನಿತ್ಯಕಾಲ ಶಿವನ ಪೂಜೆ |
ಭಕ್ತಿ ಮಾಡೀಲಿ ಪೂಜಿಸೋ ಬೇಗ | ಮರಿಯ ||1||
ಹಿಂದೆ ಗೋರಾರಣ್ಯಗಿಡ |
ಮರವು ಪಕ್ಷಿ ಜೀವರಾಶಿ |
ವೊಂದಿ ಬಂದೆನೆಂದು ಪುಣ್ಯ ಜಲ್ಮದಲಿ
ತಿಳಿಸ ಮ್ಯಾಲೆ || ಮರಿಯ ||1||
ಆಗ ಈಗ ಯಂಬದೆಲ್ಲಾ |
ಹಗಲು ಇರುಳು ಕಳಿಯಿತಲ್ಲ ||
ಹೋಗೋ ಕಾಲ ಬಂದ ಮ್ಯಾಲೆ ||
ಅರಗಳಿಗೆ ನಿಂತು ಹೋಗದು | ಮರಿಯ ||3||
ಬಿದ್ದು ಹೋಗೋಟವು ಮುಂದೆ ||
ಹದ್ದುಕಾಗೆ ಗೆದ್ದಿಲ ತಿಂದು |
ನಿರ್ಧರವ ಮಾಡಿ ನಿನ್ನ ಬುದ್ಧಿ ತಿಳಿದುಕೊಂಡು, ಮರಿಯ ||4||
ಹೋದ ಮ್ಯಾಲೆ ಬಂದಿತಿನ್ನು ಹೋದ ರೂಪು ಧರಿಸಿಕೊಂಡು |
ನಾದಬಿಂದ ಕಳೆಯನುಳ್ಳ |
ಆದಿಮೂರ್ತಿ ದ್ಯಾನವನ್ನು ||ಮರಿಯ||5||
ಸದಮಲಾತ್ಮ ಬ್ರಹ್ಮನಿರುವ |
ಮದದಿ ನಡು ಕೇರಿಸಮಲಾ ||
ಶಿದ್ದಲಿಂಗನೊಳಗೆ ಬೆರೆವಾ || ಮರಿಯ || ||6||

13
ನಿದ್ರೆಯ ಮಾಡಿದೆನೇ

ನಿದ್ರೆಯ ಮಾಡಿದೆನೇ ಪರತರ ಮುದ್ರೆಯ ನೋಡಿದೆನೇ ಸಿದ್ಧವಾದ ಶಿವಲಿಂಗನ
ಬೆಳಕಿನಲಿ ವೂರ್ದದ ಪ್ರಣವದ ಮಣಿಮಯ ಪೀಠದಿ ||ಪಲ್ಲವಿ||

ಆಧಾರದ ಮೇಲೆ |
ಹರುವಿನ ವೇದಿಕೆಗಳ ನೋಡಿ |
ಅರಿ ಇಲ್ಲದಿಹ ಮಣಿಯ ಪೀಠದಿ |
ಯೇರಿಸುಷುಮ್ಮದ ಮದ್ಯದಿ ನಿದ್ರೆ ||1||
ಪವಳದ ಮಂಟಪದೀ |
ದ್ವಿದಳಾದಿವಿ ಮೂಲಾಗ್ರದಲ್ಲಿ |
ದೇವಾಕರ್ನಿಕೆ ಮದ್ಯದ ನಡುವೆ |
ಶಿವ ಸೋಹಂಯ ಬೋಹಮಿಂನ ಬೆಳಕಲಿ ನಿದ್ರೆ ||2||
ಕಾಲ ಮೇಘದ ನಡುವೇ |
ಮಿಂಚಿನ ಸಾಲಿನ ಪವಳದಲಿ |
ಬಾಳನೇತ್ರನಾ ಭಜಿಸುತ ಪಾಡುಕ ಬಾಲನ ತೊಟ್ಲ ಕೀಲಿನ ಮನೆಯೊಳ ನಿದ್ರೆ ||3||
ಮೊದಲು ಗಂಡನ ಬಿಟ್ಟು |
ಈ ಲೋಬಿ ಚದುರತನದಿ ಕಂಡೂ ||
ಕದನ ತೆಗೆದು ಕೈಪಿಡಿ ದತ್ರಿ ಕೂಟದಿ : ಮದನೆದ ಮಂಟಪಪದೆಡೆಯೊಳೇ ನಿದ್ರೆ ||4||
ಆರುಕಾಲಿನ ಮಂಚಾ |
ಅದಕೇ ಸೇರಿಸಿದ ಸರಪಳಿಯು || ಧೀರ ಕರವ ಪಿಡಿದ ಮೃತ ಸವಿಯುತ |
ಸಾರಾ ಹೊಸ್ತುವ ಹೊದಿಸುತ ಹಾಸುತೆ || ನಿದ್ರೆ ||5||
ಮಿನು ಬಾಯೊಳು ಕಿಡಿಯು | ಪರಿಸಿರಿಸಿ |
ಬಾನು ಮಂಡಲಕುದಿಸಿ |
ನಾನತಿಯಂಬುವೊ |
ಮದಗಳ ಸುಡುತಲಿ |
ಜ್ಞಾನದ ವೃಕ್ಷದ ಮಾವಿನ ನೆರಳೊಳು ||ನಿದ್ರೆ||6||
ಯಲ್ಲಿ ನೋಡಿದರಲ್ಲಿ ಬೆಳಕು ನಿಲ್ಲದೆ ಪಸರಿಸೂ |
ಅಲ್ಲಮ ಪ್ರಭುವಿನ ಸಂಗಮ ಬಸವನ |
ಮೇಲಡಿಗಳ ಕಾರಣಾ ಮೃತ ಸವಿಯುತ, ನಿದ್ರೆ ||7||

14
ವೊರು ಚಂದಾಗಿಸಬೇಕಂಣಾ |

ವೊರು ಚಂದಾಗಿಸಬೇಕಂಣಾ |
ವುತ್ತಮರು ಕೂಡಿ ವೊರು ಚಂದಾಗಿಸಬೇಕಂಣಾ ||ಪಲ್ಲವಿ||
ವೊರು ಚಂದಾಗಿರಬೇಕು |
ವುತ್ತಮರು ತಾ ಬೆರಿಯಬೇಕು |
ಮತ್ತೆ ಮಾತಪಿತರ ಪೂಜೆ ಸತ್ಯದಲಿ ಮಾಡಬೇಕು ||

ವೊರ ಚಂದಾಗಿಸಬೇಕು ||1||
ಕರ್ಮಕರ್ತುಗಳಳಿಯಬೇಕಂಣಾ ಕಾಲನಿಗೆ ನಿತ್ಯ |
ಧರ್ಮ ಧಾರೆಯನೆರೆಯಬೇಕಂಣಾ
ದುರ್ಮದ ದಂಬವ ನಳಿಯಬೇಕು ||
ದೂರ ದೃಷ್ಟಿಯಾ ನೋಡಬೇಕು |
ಪರವಾರ್ತವ ತಿಳಿಯಬೇಕು, ವೂರು ಚಂದಗಿರಿಸಬೇಕು ||2||
ಮೂಲ ಮೂವ ತಿಳಿಯ ಬೇಕಂಣಾ |
ನಾರಿ ಮಕ್ಕಳ ಪಡೆಯಬೇಕು |
ಮುರಹರನನೆನಿಯಬೇಕು |
ಚೋರ ಬುದ್ಧಿಯನಳಿಯಬೇಕು |
ಸೋಹಾಂ ಭಾವದಿ ನೆಡೆಯಬೇಕು |
ವೂರು ಚಂದಾಗಿರಿಸಬೇಕಂಣಾ ||3||
ಕಾರು ಕತ್ತಲೆ ಕವಿಯುತಿ ಹುದಂಣಾ |
ಅಜ್ಞಾನವೆಂಬೋ |
ಚೋರ ನರಕದಿ ಪತನವು ಕಾಣಂಣಾ |
ವೂರು ದಾರಿಯು ಚಾರು ಚಾಪಕದ |
ಮೇರು ಮಂಡಲ ಮಧ್ಯ ಬೆಳಗುವೂ |
ಧೀರ ಬಾಸ್ಕರನು ದಯವಾದದ್ದು |
ತೋರುತಿದೆತ್ರೈಲೋಕವೆಲ್ಲಾ |
ವೂರು ಚಂದಾಗಿ ||4||
ಆರು ಮತಗಳ ನಳಿಯಬೇಕಂಣಾ |
ಅಷ್ಟಾಂಗ ಯೋಗವ |
ದಾರಿ ಯಾವುದೊ ತೋರಬೇಕಂಣಾ |
ತೋರುಯಂಬೊದೇನು ಲೋಕದ |
ಭಾರತ ಕರ್ತನ ಪಾದ ಮಹಿಮೆಯ |
ಸೇರಿ ಭಜಿಸುವರಾರು ಸದ್ಗುರು ಸಾರ ಸಾದ್ಯ ಸಮವ್ಯಾಪ್ಸಶ್ವೇತನ ವೂರು ಚಂದಾರಿಸ||5||
ಕೊಂಡಗುರುಪರ ದೈವ ಕಾಣಂಣಾ |
ನಂಬಿದವರಿಗೆ |
ಮುಂದೆ ಜಲ್ಮಗಳಿಲ್ಲ ಕಾಣಂಣಾ |
ಯಿಂದು ಮುಂದನು ತಿಳಿಯ ಲೋಕದ, ಮಂದ ಮತಿಗಳವೊಂದು ಶಾರಗೆ |
ಇಂದಿರೇಶ ಮಂದಿರದಿ |
ಶಂಕವೆಂದು ಶೇವಕರೆಂದು ಮುಕ್ಯಾ |
ವೊರು ಚಂದಾಗಿರಿಸಬೇಕಂಣಾ ||6||

15
ಯಂತಾ ಕಲಿಗಾರ ಪುರುಷ

ಯಂತಾ ಕಲಿಗಾರ ಪುರುಷ ನಮ್ಮ ಹಮ್ಮಿಯನಗಂಡಾ ಎಂತಾಕಲಿಗಾರ ಪುರುಷ
ನಮ್ಮ ||ಪಲ್ಲವಿ
ಅತ್ತಿತ್ತಲಾಟವ ಬಿಡು ಹೇಳುತಾನೆ |
ಹೆತ್ತ ತಾಯಿ ತಂದೆ ತೋರು ಯೇಳುತ್ತಾನೆ |
ಚಿತ್ತ ಸುದ್ದಿಯಾಗಿರು ಹೇಳುತ್ತಾನೆ |
ಬೆತ್ತಲೆ ಮನೆಯೊಳು ಬಾಯೆಂಬುತಾನೆ | ಮಯ||
ಮನೆಯ ಕೆಲಸವ ಮರಿಯೇಳು ತಾನೆ ||ಯಂತಾ||
ಮನಶಿಗೆ ಸರಿಯಾಗಿರು ಹೇಳುತಾನೆ |
ಮುನಿಸು ಬ್ಯಾಡ ಮತ್ತು ತಾರೆಂಬು ತಾನೆ |
ಮಲಗುವ ಮಂಚಕೆ ಬಾರೆಂಬು ತಾನೆ | ಯಂತಾ ||2||
ಪರಿಮಳ ಪುಷ್ಪಗಳ್ವ ಮುಡಿ ಪರಿಪರಿವಿಧದೊಳುಯಿರು ಹೇಳುತಾನೆ |
ತರತರದ ಮುತ್ತು ತಾರೆಂಬುತಾನೆ |
ಸದರದ ಮಾತುಗಳಾಡೆಂಬುತಾನೆ || ಯಂತಾ ||3||
ಭರಣ ಭಂಗಾರ ಯಿಡು ಹೇಳುತಾನೆ |
ಅಣ್ಣ ತಮ್ಮಂದಿರ ತೋರುಂಬತಾನೆ |
ಹಣ್ಣು, ಹಾಲು, ತುಪ್ಪವ ವುಂಣುಯೆಂಬುತ್ತಾನೆ |
ತಣ್ಣನೆ ತಪ್ಪದೆ ಬಾಳೆಂಬುತಾನೆ | ಯಂತಾ ||4||
ಬಾಲಪ್ರಾಯದ ಹೆಂಣು ಬಾ ಯೆಂಬುತಾನೆ |
ಲೀಲೆಯಾಗಿರುವ ಮಂದಿರದೊಳು ಇರುಯೆಂಬುತಾನೆ |
ಶಾಲೆ ರವಿಕೆಗಳ ಕಳಿ ಎಂಬುತಾನೆ |
ಚನ್ನಮಲ್ಲೇಶನ ಕೂಡೆಂಬುತಾನೆ ||ಯಂತಕಲಿಗಾರ ||

16
ಪರಮೇಶನ ಭಜಿಸದೆ

ವರ ಗಂಗಾಧರ ಪರಮೇಶನ ಭಜಿಸದೆ |
ಅನ್ಯ ದೈವ ಭಜಿಸಿದರೇನು ಫಲ |
ತನ್ನ ನಿಜವ ತಾ ತಿಳಿಯ ಪರರಿಗೆ |
ನಿರ್ಣಯ ಹೇಳಿದರೇನು ಫಲ ||
ನೆಡೆನುಡಿ ತಪ್ಪುವ ಕಡುಕೋಪಿ ನೀರೊಳು |

ಮಡಿಗಳ ಮಾಡಿದರೇನು ಫಲ |
ಮಡದಿರ ಗೊಡವೆ ಬಿಡದ ಭ್ರಮಿಸುವ |
ಜಡೆಗಳ ಬೆಳೆಸಿದರೇನು ಫಲ ಹೆತ್ತ ತಂದೆ ತಾಯಿಗೆ ಅನ್ನ ಇಡದವ |
ಗುಡಿ ನದಿಗೋದರೇನು ಫಲ |
ದೃಡಮನವಿಲ್ಲದೆ ಅರೆಗಣ್ಣು ಮುಚ್ಚಿಕೊಂಡು ಮೃಡನ ಜಪ ಮಾಡಿದರೇನು ಫಲ ||
ವರಗಂಗಾಧರ ||1||
ಜಂಗಮದ ನಿಂದವ ಮಾತಡುವ ಭಕ್ತನು |
ಲಿಂಗಪೂಜಿಸಿದರೇನು ಫಲ |
ಮಂಗನ ಕೊರಳಿಗೆ ಮುತ್ತಿನ ಕಂಠಿಯು |
ಶೃಂಗಾರ ಮಾಡಿದರೇನು ಫಲ |
ಅಂಗಜ ಮೋಹವು ಇಲ್ಲದ ವಾಸವಿ |
ದಿತ್ತಾಂಗನೆಯಿದ್ದರೇನು ಫಲ |
ಕಂಗಳು ಕರ್ನವುಯಿಲ್ಲದವರ ಮುಂದೆ |
ಸಂಗೀತವ ಹೇಳಿದರೆನು ಫಲ ||2||
ಕೃತಕ ಬುದ್ಧಿ ಬಿಡದೆ ನಿರಂತರ |
ಕತೆಗಳ ಓದಿದರೇನು ಫಲ |
ಪತಿಯರ ದೋಷಿಪ ಸತಿಯರು ಸೋಮ |
ವ್ರತಗಳ ನಡೆಸಿದರೇನು ಫಲ |
ಸುತರನು ಪಿಡಿಯದೆ ಹಿತದಲಿ ದಾನವ |
ಅತಿಯಾಗ ಗಳಿಸಿದರೇನು ಫಲ |
ಕ್ಷಿತೆಯೊಳ್ ರಸಿಕರ ಬಸವನ ಶತಕವ ನುತಿಸದೆ |
ಮನುಜನಿದ್ದೇನು ಫಲಾ |
ವರಗಂಗಾಧರ ಪರಮೇಶನ ಭಜಿಸದೆ ||

17
ಈ ಮಂತ್ರ

ಓನ್ನಮೋ ಗುರು ಪಂಚಾಕ್ಷರಿ ಮಂತ್ರವ |
ನೆನಿಶಿ ಪಠಿಸಿದರೇ ಮಂತ್ರ |
ವುನ್ನತ ಪಾತಕ |
ಶೂನ್ಯ ದೋಷ ಶತ | ಚೂರ್ನವ ಮಾಡುವುದೇ ಮಂತ್ರ || ಪಲ್ಲವಿ ||
ಪರ್ನ ಶಾಲೆಯೊಳು ಸನ್ನೆಶಿಗಳಿಗೆ |
ಅಮ್ಮದು ಕಾಕಾಹುವುದೀ ಮಂತ್ರ ಚನ್ನಬಸವಗುರು ಶರಣ ಕಗಣಂಗಳು |
ಮಾನ್ಯರು ಪಠಿಸುವದೀ ಮಂತ್ರ|

ಪನ್ನಗ ವೃಶ್ಚಿಕ ಭೂತ ಮೃಗದ ಭಯ |
ನಿರ್ನಯ ಮಾಡುವುದೀ ಮಂತ್ರ ||1||
ಪವನಜ ಪಾರ್ತರು ಪಠಿಸಲು ಭಕ್ತಿಲಿ |
ಶಿವಕೃಪೆದೊರಿದುದೀ ಮಂತ್ರ |
ಜವನ ಪಟ್ಟಣದಿ ಮುನಿಪನು ಜಪಿಸಲು |
ಬವಗಳ ಹರಿಸುವುದೇ ಮಂತ್ರ |
ಭುವನದ ವೃದ್ಧರು ಬಾಲೆರು ಪಠಿಸಲು |
ನವಗ್ರಹ ಬಿಡಿಸವದೀ ಮಂತ್ರ ||2||
ಚಂದ್ರಜ ಸೂರ್ಯರು ಹರಿ ಅಜ ಸುರರು |
ಇಂದ್ರರು ಜಪಿಸುವದೀ ಮಂತ್ರ |
ಮಂದರಗಿರಿಯಲಿಮುನಿಗಳು ಗಣಪನು |
ಇಂದು ಜಪಿಸುತಿಹದೀ ಮಂತ್ರ |
ಚಂದದಾರಸಿಕನ ನಂದಿಯ ಮುರಹರ ಕಂದಗೋಳನದೀಮಂತ್ರ ||5||

18
ಯಲ್ಲಿ ನೋಡಿದರಿಲ್ಲ ಶಿವನು

ಯಲ್ಲಿ ನೋಡಿದರಿಲ್ಲ ಶಿವನು |
ನಿನ್ನಲ್ಲಿಹನೆ ನೀನೋಡಂಣ |
ಬಲ್ಲಜಾಣರೊಳು ತಿಳಿದು ನಿಮ್ಮೊಳು ಉಲ್ಲಾಸದ ಭಕ್ತಿಯ ಮಾಡಣ್ಣಾ ||ಪ||
ಕಾಶಿ ರಾಮೇಶ್ವರ ವಾಸ ಹಂಪೆಯ ದೇಶ ತಿರುಗಿದರಿಲ್ಲಣ್ಣಾ |
ಮಾಸ ಶ್ರಾವಣ ಶಂಕರಾತ್ರೆವು ಪ್ರವಾಸವ ಮಾಡಿದರಿಲ್ಲಣ್ಣಾ ||
ಸಹಸ್ರನಾಮವು ಶಾಸ್ತ್ರ ಪುರಾಣವು ಸಾವು ಸಾಧಿಸಿ ಕಲಿತರಿಲ್ಲಣಾ ||1||
ಎಷ್ಟು ಕಾಲದೊಳು ಬ್ಯಾಸರವಿಲ್ಲದೆ ತಪಸ್ಸು ಮಾಡಿದರಿಲ್ಲಣ್ಣಾ ||
ಸಿರಿಸಂಪತ್ತು ಜರಿತು ಹರಣ್ಯವು |
ಚರಿಸಾಡಿದರೇನಿ ನಿಗಿಲ್ಲಾ ಪರ್ರ್ಸ ಕೋಗಿ ಪಾತಳ ಗಂಗೆಯೊಳು ||
ಮುಳು ಮುಳುಗಿ ನೀ ಬೆರಳುಗಳೆನಿಸಿದಲ್ಲಣಾ ||
ಆರುವುಗೆಟ್ಟು ಆಕಾರದಿ ಬೇಗನೆ ಪುರಾಣ ಕೇಳಿದರಿಲ್ಲಣ್ಣಾ |
ಪರಿಪರಿ ನೇಮವೃತಗಳ ನೀ ಪರಿಶಿಲವ ಮಾಡಿದರಿಲ್ಲಣ್ಣಾ |
ಸತ್ಯಪಿಡಿದು ನವನಿತ್ಯವನಳಿದು ನಾಮತ್ತೆ ಹೇಳುವೆನು ಕೇಳಣ್ಣಾ ||3||
ಹಸ್ತಂತವರಿಗೆ ತುತ್ತಂನವನು ಮತ್ತೆ ಮಾಡುವುದು ದಾನಣ್ಣಾ ಚಿತ್ತದೊಳು ಶಿವಗೊತ್ತನರಿಯದೆ ಯೆತ್ತ ತಿರುಗಿದರಿಲ್ಲಣ್ಣಾ |
ಕರ್ತ ಸೋಮಕರ್ತ ಬಸವನ ಭಕ್ತಿಯಲ್ಲಿ ಶಿವನು ನನ್ನ ಗಹನೆ ನೀನೋಡಣ್ಣಾ ||

19
ವ್ಯಾಕುಲಾ ನಿನಗ್ಯಾತಕೆ

ಸಾಕುಬಿಡು ವ್ಯಾಕುಲಾ ನಿನಗ್ಯಾತಕೆ |
ನಿಜ ನೂಕಿ ನೋಡಲು ಮೂರು ಕೂಡಿ ಮದ್ಯ ಪರಂಜೋತಿದೆ ||ಪಲ್ಲವಿ||
ಮತ್ತೆ ನೋಡಲು ಮುತ್ತು ರತ್ನವ ಕೆತ್ತಿದೆ |
ಅದಲೊತ್ತಿಲಿ ಸೂವರ್ನಕೊಜ್ಬರ ನಾಣ ಅಕ್ಷರದೊತ್ತಿದೆ |
ಸುತ್ತ ನೋಡಲು ಚುಕ್ಕೆ ಚಂದ್ರಮ ನಗುತಿದೆ |
ಕರಗೆತ್ತಿ ನೋಡಲು ಕತ್ತಲೆಸಿರಿಗೆತಿ |
ರಣವ ಬತ್ತಿದೆ ಸಾಕು ||1||
ವಾದಿಸಿ ನೋಡಲು ಬೆಲ್ಲದ ಪಾನಕ |
ಯೋಗ ಸಾದಿಸಿ ನೋಡಲು |
ಯತ್ನ ಕಾರ್ಯಸಿದ್ಧಿ ಮಾಣಿಕಾ ||
ಛೇದಿಸಿ ನೋಡಲು |
ಮಿಂಚಿನ ತಾರಕಾನೀಜನದಾದಿ ಇಡಿದು ನೋಡಲು
ಸದ್ಗತಿಯು ಪ್ರಾಣ ನಾಯಕಾ ||2||
ವಾರಿ ನೋಡೆಲೋ ಸೂರ್ಯ ಮಂಡಲನೇ ಕಾವಾ ||
ಕೈ ಮೀರದೆ ಕಣ್ಣಿಡುವೊ ಸರ್ಪನಗರಿ ವಾಸನ ಪಾದವ |
ದಾರಿ ಮಾಡಿಕೋ ಎಸಳಿನ ಮದ್ಯವಾ |
ನೀ ಸೇರಿ ಬಿಡದೆ ನಾಸಿಕಾಗ್ರದ ನೀಲ ಜೋತಿಯ ಸಂಗವಾ ||
ತೇರು ಶೃಂಗಾರವ ಮಾಡಿ ವಜ್ರ ಹಾಕಿದೆ |
ಚಲ್ಸಚಾರಿ ಮಂಟಪ ರತ್ನಕ್ಕೆ ಮೇಲೈದು ಕಳಶವೇರಿದೆ |
ಬೇರಿ ಜಾಗಟೆ, ಗಂಟೆ ವೀಣೆ ಸಂಪಿಡಿಯಲ್ಲಿ ಯರಡು ವೋಗುರುವಿ ಪಾದಕ್ಕೆ |
ಪರಿಸೆ ಕೂಡಿದೆ ಸಾಕು
ಬಿಡುಬಿಡು ವ್ಯಾಕುಲ ನಿನಗ್ಯಾತಕೆ |

20
ನೀ ಯನ್ನ ತಾಯೇ

ಶ್ಯಾರದಿರಲೆನ್ನ ಮಾಯೆ ||
ನಿನ್ನ ಕಂಡರೆ ಶಾರದು ನೀ ಯನ್ನ ತಾಯೇ ||ಪಲ್ಲವಿ||
ಮೊಟ್ಟಮೊದಲು ತಾಯಿಯಾದೆ ನಿನ್ನ ಮುಟ್ಟಿಕೊಂಡರೆ ಪಟ್ಟದ ರಾಣಿಯಾದೆ |
ಕಟ್ಟಕಡೆಗೆ ಮಗಳಾದೆ | ನಿನ್ನ ||
ಗುಟ್ಟನಾದರೆ ತಿಳಿದು ನಾ ಬಿಟ್ಟು ವೋದೆ || ಶ್ಯಾರ ||1||

ಹಗಲುಗತ್ತಲು ಮಾಡಿ ನಿದ್ದೇ | ನಿನ್ನ ತಗಲಿದೆ ಮೂರು ಲೋಕ ಕೆಟ್ಟಿರ್ತಲ್ಲೆಂದೇ |
ವಿಗಡರೂಪಿಲಿ ಬಂದು ನಿಂದೇ |
ಇತ್ತ ಜಗಮೋಸ ಮಾಡಿ ನೀ ಕೊಲ್ಲಬಂದೆ ||ಶ್ಯಾ|| ಕ್ಷೋಣೆಯಹೆಚ್ಚಚ್ಚ ||
ನಮ್ಮ ನಿರ್ವಣ ಮೌಳೇಶ ಕೇಳಿಕೊಂಡು ಮೆಚ್ಚ |
ಕ್ಷೋಣಿಗೆ ಅತ್ತೀತು ವುಚ್ಚು ಜಾಣ ಪ್ರವೀಣ |
ಪ್ರಭುಸ್ವಾಮಿಗೆ ಪ್ರಸನ್ನಾವೆ ಹೆಚ್ಚಾ ||3||

21
ಮೋಕ್ಷವ ಕೊಡುವುದು ರುದ್ರಾಕ್ಷಿ

ಹರಹರ ಎನ್ನುತ ರುದ್ರಾಕ್ಷಿ ಧರಿಸಲು ಭವಗಳ ಹರಿಯಲು ರುದ್ರಾಕ್ಷಿ
ಪರಮ ಭಿಕ್ಷುಕ ರುದ್ರಾಕ್ಷಿ ಧರಿಸಲು ಪರಶಿವನೊಲಿಸುವ ರುದ್ರಾಕ್ಷಿ
ವೀರಶೈವಾಚಾರರ ಮುಕ್ತಿಯ ಹಾದಿಯ ತೋರಿತು ಹೈರುದ್ರಾನಿರೊಲು
ನಿಂತು ನಿತ್ಯವೂ ಜಪಿಸಲು ಮುಕ್ತಿಯ ಸಾರವ ಕೊಡುವುದು ರುದ್ರಾಕ್ಷಿ
ಮಾರಿಭೂತಗಳ ಕ್ರೂರ ಮೃಗ ಭಯ ಹರಿಸುವ ರುದ್ರಾಕ್ಷಿ
ಮಣಿ ಎಂದು ಸಕಲ ಸನಕಗೆ ಕಟ್ಟಲು ಗಣಪನ ತೋರಿತು ರುದ್ರಾಕ್ಷಿ
ವನದೊಳಗೊಂದು ಗಾಂಧರ್ವ ಧರಿಸಲು ಮುಕ್ತಿಯ ಪದ ತೋರಿತು ರುದ್ರಾಕ್ಷಿ
ರವಿ, ಶಶಿ, ಹರಿ, ಅಜ, ಇಂದ್ರರು, ಮುನಿಗಳು ಭಕ್ತಿಯಲಿ ಜಪಿಸುವರು ರುದ್ರಾಕ್ಷಿ
ಪರಿಪರಿ ವಿಧದಲಿ ಶರೀರಕ್ಕೆ ಮಸ್ತಕ, ಕೊರಳೊಳು ಧರಿಸಲು ಜ್ಞಾನಪದ
ತೋರಿತು ರುದ್ರಾಕ್ಷಿ (ಹೃದ್ರಾಕ್ಷಿ)
ಕೊರಳೊಳು, ಭುಜದೊಳು, ಕರ್ಣಧಿ ಧರಿಸಲು ಸ್ಥಿರಪದ ಕೊಡುವುದು ರುದ್ರಾಕ್ಷಿ
ಇಂತ ಪರಮ ಭಕ್ಷಿತ ರುದ್ರಾಕ್ಷಿ ಧರಿಸಲು ಮೋಕ್ಷವ ಕೊಡುವುದು ರುದ್ರಾಕ್ಷಿ
ಹರಿಹರ ಎನುತಲಿ ರುದ್ರಾಕ್ಷಿ

22
ಭವಗಳ ಹರಿವುದು ವಿಭೂತಿ

ಶಿವ ಶಿವ ಎನ್ನುತ ವಿಭೂತಿ ಧರಿಸಲು ಭವಗಳ ಹರಿಯಿತು ವಿಭೂತಿ ಈ ಪರಮ
ಭಕ್ಷಿತ ವಿಭೂತಿ ಎದರಿ ಪರಶಿವ ನೊಲಿಯುವ ವಿಭೂತಿ ಭೂತ ಪಿಶಾಚಿಯ
ದುಷ್ಟಗ್ರಹಗಳ ಭೀತಿಯ ಬಿಡಿಸುವ ವಿಭೂತಿ ||ಶಿವ ಶಿವ||
ನಿತ್ಯವು ಚಳಿಜ್ವರ ಸಂಕಟ ಬಿಡಿಸುತ ಅತೀತಗೊಲಿಯುವುದು ವಿಭೂತಿ
ಜಾತಿ ಸೂತಕ ಜನ್ಮ ಜಾಡ್ಯ ಜ್ವರ ಪಾತಕ ಬಿಡಿಸುವುದು ವಿಭೂತಿ || ಶಿವ ಶಿವ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 271

ನಿಷ್ಠೆಯಿಂದ ಇದು ನಿತ್ಯವೂ ಪೂಜಿಸೆ ದುಷ್ಟವ ತೊರೆಯುವುದು ವಿಭೂತಿ || ಶಿವ ||
ಪುಟ್ಟ ಬಾಲಕರಿಗೆ ಹಣೆಯೊಳಗಿಟ್ಟರೆ ದೃಷ್ಟಿಗೆ ಒಳ್ಳೆಯದು ವಿಭೂತಿ || ಶಿವ ಶಿವ ||
ಮುಟ್ಟುದೋಷ ಗ್ರಹಗಳಿಂದ ಹುಟ್ಟುವ ದ್ರೋಹಗಳ ಅನಿಷ್ಟ ಹರಿಸೋದು ವಿಭೂತಿ
|| ಶಿವ ಶಿವ || ಅಜಹರಿರುದ್ರರು ಕುಶಲದಿ ಧರಿಸಲು ಪರಿಶುದ್ಧವಾಗಿಹ ವಿಭೂತಿ
ಶಿವ ಶಿವ ಎನ್ನುತ ವಿಭೂತಿ ಧರಿಸಲು ಭವಗಳ ಹರಿವುದು ವಿಭೂತಿ

23
ಒಂದೈದಕ್ಷರ ಹೊಳಪಿಂದ ತಿಳಿಮನವೆ

ಓಂ ನಮಃ ಶಿವ ಎಂಬ ಒಂದೈದಕ್ಷರ ಹೊಳಪಿಂದ ತಿಳಿಮನವೆ
ಕತೃ ಓಂಕಾರ ನಾದವ ಒಂದಿರುಳು ತಾಳಲು ವೈಕುಂಠ ಪದವಿಯೇ ಮನವೇ
ದಳ ನಾಲ್ಕು, ದಳ ಆರು, ದಳ ಹತ್ತು, ಹನ್ನೆರಡು, ಹದಿನಾರು, ದಶವೆರಡು ನಾಳದಿ
ಮನವೇ ||ಓಂ ನಮಃ ಶಿವ||
ದಳ ಸಾಸ್ತಿರ ನಾಡು ಕಳ್ಳಹಂಸನನ್ನು ಕೂಡಿ ಭವ ಮೇಲೆ ಅಳಿಯಲು ಮನವೆ ||ಓಂ||
ಆರು ಅಕ್ಷರಗಳು ಆರುಲಿಂಗಗಳಾಗಿ ಆರು ಚಕ್ರಗಳಾಗಿ ಮನವೆ ||ಓಂ||
ಆರು ಚಕ್ರವ ದಾಟಿ ಮೂರು ಶಿಖರದ ಮೇಲೆ ಮೂಲ ಪುರುಷನಿರುವನು ಮನವೇ ||ಓಂ||
ನಿನ್ನ ಅಂಗದೊಳು ಐದಾರು ಮಹಾಲಿಂಗವನ್ನು ನೋಡುಮನವೇ ||ಓಂ||
ಇದರ ಅರುಹು ತೋರಿ ದಾರಿ ನಮ್ಮ ಗುರು ಬಸವಾರ್ಯರು ಮರೆಯಾಗಿರಬೇಕು
ಮನವೇ, ಓಂ ನಮೋ ಶಿವಯೆಂದು ….

24
ನಿನ್ನ ನಾನೇನಂತ ಜೋಪಾನ ಮಾಡಲಿ

ನಿನ್ನ ನಾನೇನಂತ ಜೋಪಾನ ಮಾಡಲಿ ಹೇ ಗಿಣಿ ಹೇ ಗಿಣಿಯೇ
ನಿನ್ನ ಮುನ್ನಂತ ಕಂಟಕವು ಮುಂದೆ ಕಾದಿರುವುದು ಹೇ ಗಿಣಿ ಹೇ ಗಿಣಿಯೇ
ತುಂಟರೈವರು ಬಹು ಸಾಮಥ್ರ್ಯಗಾರರು ಹೇ ಗಿಣಿ ಹೇ ಗಿಣಿಯೇ
ನಿನ್ನ ಬೇಟೆಯಾಡಿ ಕೊಲ್ಲುತ್ತಾರೆ ಹೇ ಗಿಣಿ ಹೇ ಗಿಣಿಯೇ
ಎಂಟು ದಿಕ್ಕೆನೊಳೆಂಟು ಮದ್ದಾನೆ ನಿಂತಾವೆ ಹೇ ಗಿಣಿ ಹೇ ಗಿಣಿಯೇ
ನಿನ್ನ ತುಂಟತನವನ್ನು ನೋಡಿ ತುಳಿಯಬೇಕೆನ್ನುತಾವೆ ಹೇ ಗಿಣಿ ಹೇ ಗಿಣಿಯೇ
ದೂರದ ಪಟ್ಟಣಕೆ ಒಂಭತ್ತು ಬಾಗಿಲು ಹೇ ಗಿಣಿ ಹೇ ಗಿಣಿಯೇ
ನಿನ್ನ ಡಂಭಕ ಪಂಜರದೊಳಗೇನಿರುವುದು ಕಂಡೆ ಹೇ ಗಿಣಿ ಹೇ ಗಿಣಿಯೇ
ನಡುಮನೆಯೊಳಗುಂಟು ನಾಲ್ಕು ತೆಂಗಿನಮರ ಹೇ ಗಿಣಿ ಹೇ ಗಿಣಿಯೇ

272 / ತತ್ವಪದ ಸಂಪುಟ-1

ಅದು ಕೊನೆ ಮೊದಲಿಲ್ಲದ ಹಣ್ಣು ಬಿಟ್ಟಿತು, ನಿನ್ನ ಕುಳಿತಾರೆ ಮುರಿದು
ನುಂಗುತಾರೆ ಒಂದು ಬೆಕ್ಕು ಹೇ ಗಿಣಿ ಹೇ ಗಿಣಿಯೇ
ಅದು ಸರಸವಾಡಿ ನಿನ್ನ ತಿನ್ನಬೇಕೆನ್ನುತಾವೆ, ಅಳವಲ್ಲ ಇವು ಮೂರು ಎಲೆಯ
ಗೊಂಡಿವೆ ಹೇ ಗಿಣಿ ಹೇ ಗಿಣಿಯೇ
ನೀನು ಮರೆಯಾಗಿ ಶ್ರೀ ಗುರು ಚರಣದೊಲಿರುವುದ ಕಂಡೆ ಹೇ ಗಿಣಿ ಹೇ ಗಿಣಿಯೇ
ನಿನ್ನ ನಾನೆಂತು ಜೋಪಾನ ಮಾಡಲಿ ಹೇ ಗಿಣಿ ಹೇ ಗಿಣಿಯೇ

25
ಸತ್ಯವಂತರ ಸಂಘದೊಳು ಬೆರೆದರೆ

ಎರುವಿನ ಶಿರೆಗೆ ಬೆಮ್ಮನೆ ಬೆರೆದರೆ, ನೀರ ಕಡೆದರುಂಟೆ ಬೆಣ್ಣೆ ಜೀವವೇ
ಒಂದು ಉರುಗನ ಹೆಡೆಯೊಳು ನೆರಳ ಸೇರದ ಕಪ್ಪೆ ಸ್ಥಿರಕಾಲ ಬಾಳುವುದೇ ಜೀವವೆ
||ಎರುವಿನ|| ಕೆರೆಯ ಕಟ್ಟಿಸಬೇಕು ಹೂತೋಟವ ಹಾಕಿಸಬೇಕು, ಸೆರೆಯ ಬಿಡಿಸಬೇಕು
ಪುಣ್ಯ ಜೀವವೇ ಕರೆಯದೆ ಮನೆಗೆ ಬಂದವನಿಗೆ ಅನ್ನ ನೀಡಬೇಕು, ಪರಲೋಕ
ಸಾಧನೆ ಜೀವವೆ ||ಎರುವಿನ||
ಆಸೆ ಮಾಡಲು ಬೇಡ, ಭಾಷೆ ತಪ್ಪಲು ಬೇಡ, ಪರಸ್ತ್ರೀಯರ ಸಂಗ ಮಾಡಬೇಡ
ಜೀವವೆ ಇಂಥ ಮಹಾನಿಷ್ಟೀ (?) ನಡೆಯಬೇಡ ಮರಣವು ತಪ್ಪದು, ದೆಸಕಂಠನಾದರೂ
ಪುಣ್ಯ ಜೀವವೇ ||ಎರುವಿನ||
ಸತ್ಯವಂತರ ಸಂಘದೊಳು ಬೆರೆದರೆ ಮೃತ್ಯುದೇವಿಯು ಅತ್ತಲೇ ಸಾರುವಳು ಕೇಳು ಜೀವವೇ
ಸತ್ಯವಂತರ ಶ್ರೀಗುರು ಪೂಜ್ಯರೊಳ್ ಬೆರೆದರೆ ಸತ್ತು ಹುಟ್ಟುವುದಿಲ್ಲ ಪುಣ್ಯಜೀವವೇ ||ಎರುವಿನ||
ಆನೆ ಕುದುರೆ ಭಂಡಾರವೂ ಅಲ್ಲ ಕೇಳು ಜೀವವೆ, ಪುಷ್ಪವ ತಂದು ಶ್ರೀಗುರುವಿಗೆ
ಅರ್ಪಿತವ ಮಾಡಿ ಮುಕ್ತಿಯ ಪಡೆದುಕೊಳ್ಳೊ ಪುಣ್ಯ ಜೀವವೇ ||ಎರುವಿನ

26
ಇದೇ ನೋಡು ಇದೇ ರಾಮ

ಇದೇ ನೋಡು ಇದೇ ರಾಮ
ಇದರೊಳಗಿರುತಿದೆ ಸದಯವೆಂಬರುಡಯ
ದೊಳಗೆ ಕದವು ತೆರೆದಿದೆ ನೋಡಿ
(ಇದೇ ನೋಡು ಇದೇ ರಾಮ)
ಆರು ಚಕ್ರದ್ವೆರ ದೇವ ದೆವದ ದೊಳಗೆ
ಸೃಷ್ಟಿಯು ನೆಲಸೀದೆವೂರೊಳಗೆಲ್ಲ
ಪ್ರಣ ಮಸಬ್ದ ಬೋರು ಗುಟ್ಟುತ್ತಿದೆ ನೋಡೆ
(ಇದೇ ನೋಡು)

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 273

ನಿಮ್ಮ ದ್ಯೆನ ಮಳ್ಪನೆಂದರೆನಗೆ ಮನವು ನಿಲ್ಲದು, ಮನವು ನಿಲ್ಲದಯೋ ಶಿವನೆ.
ತನುವು ತಿರದು ಮನದೆ (ಇದೇ ನೋಡು)
ಪಟ್ಟಣದೊಳಗೆ ನಾಣ್ಯಗಳೆಲ್ಲವು ಕಟ್ಟಿ ಇಡಿಸಿದೆ ವುಟ್ಟತಿರುಕರೆಲ್ಲ ಬಂದು ಕಟ್ಟಿ ಕೊಳಿರಿ
ಕೊರಳಿಗೆ (ಇದೇ ನೋಡು)
ಅಂಕೆ ಮಾಡುವರಿಲ್ಲ ಇದಕ್ಕೆ ಸಂಕೆಬೇಡಿರೋ
ವೆಂಕಟೇಶನೆ ಚೆಲನೀ ವಾಸನೆ ನಿಮ್ಮ ಕಿಂಕರಣಾದೆನು ಗುರುವೆ (ಇದೇ ನೋಡು)
ಚನ್ನಾಡಳ್ಳಿ ಮಟದೊಳಗಿರುವ ಗುರುವರಣ್ಯನೆ
ಬಂಗ ಬಿಡಿಸಿ ಸಲಹೊ
ಲಿಂಗದೇವನೆ ಗುರುವೆ (ಇದೇ ನೋಡು)

27
ನಮ್ಮ ಗುರು ಪಾದ ಸೇರಿದೆನು

ಗುರುವನು ಕೂಡಿದೇನೂ ಬಂದು ಅರಮನೆಯೊಳಗೆ ಇಂತಹ
ನೊರೆಂಟು ನಾಯಿಗಳು, ಬೊಗಳಿದರೊ ನಮ್ಮ ಗುರು ಪಾದ
ಸೇರಿದೆನು ||ಪ||
ನಿಂದನೆ ಮಾಡಿದರೆ ನಾನೂ ಹಿಂದಕ್ಕೆ ಬರುವಳು
ಹಂದಿಯ ಜನ್ಮವು ಅವರಿಗೆ ಗೆಳತಿ. ನಮ್ಮ ಗುರು ಪಾದ ಸೇರಿದೆನು
ಒಂಬತ್ತು ತೋತಿನ ಕುಂಬಾರ ಗಡಿಗೆವ್ವ ||
ಅಂಬಾಲಂಕಾಯಿಸಿ ಅದ ಮಾಡು ಗೆಳತಿ.
ನಮ್ಮ ಗುರುಪಾದ ಸೇರಿದೆನು
ಒಂದೇ ಮರದ ಹಣ್ಣು ಅದಕ್ಕೆ ಒಂಬತ್ತು ವರಕೆಯು ನೀನು
ಊಡುಟ್ಟುಗಡಿಗೆಯ ನೀನು ತೋಳಕಲು ಗೆಳತಿ ಗುರುಪಾದ ಸೇರಿದೇನು
ಹೊತ್ತಿದ್ದ ಹೊಲದಲ್ಲಿ ಒಂದು ಮುತ್ತನ್ನು ಕಳೆದುಕೊಂಡೆ
ಕಳೆಕೊಂಡ ಮುತ್ತು ದೊರಕಿತ್ತು ಗೆಳತಿ
ಗುರುಪಾದ ಸೇರಿದೆನು
ಗುರು ಕೊಟ್ಟ ಬೀಜವ ನಿನ್ನ ಬಿತ್ತಿದೆ
ದರೆಯೊಳಗೆ ಏಳುಗಾಜಿಯ್ಕ ತೊಳೆಕಲು ಗೆಳತಿ
ಗುರುಪಾದ ಸೇರಿದೆನೂ
ಮರದ ಮೇಗಲ ಪಕ್ಕ ಅಂದು ಹಾರಿತು ಗಗನಕ್ಕೆ
ಈ ಕಾಯ ಬಿಟ್ಟು ಆಕಾಯ ಕೊಟ್ಟಾಗ
ಗುರುಪಾದ ಸೇರಿದೇನು ಆಕಾಯ ಬಿಟ್ಟು ಈ ಕಾಯ ಕೂಗುವಾಗ
ಗುರುಪಾದ ಸೇರಿದೆನು.

274 / ತತ್ವಪದ ಸಂಪುಟ-1

28
ಗುರುವಿನ ಆಜ್ಞೆಯ ಮೀರದೆ

ಗುರುವಿನ ಆಜ್ಞೆಯ ಮೀರದೆ ನಡೆದವನು ನರನು ಎನ್ನಲು
ಬೇಡಾ ಪರಮಾತ್ಮನೂ ಏನೂ ಅರಿಯದ ಮೂಡನರರೇನು
ಬಲ್ಲರೂ ಪರಕೆ ಪರತರವಾದ ಪರವಸ್ತು ಅವನು ||ಪ||
ನದಿಯು ತಾ ಬಂದಲ್ಲಿ ನದಿಯು ಸಮುದ್ರವ ಸೇರಿ ನದಿಯು
ತಾ ಪೋಗುವುದೇ ಪುಟ್ಟಿ ಹೆಡೆಗೆ ಸದಮಲ ಜ್ಞಾನಿಯು
ಪ್ರಪಂಚವನು ಕಳಿದು ಅದರೊಳಗೆ ಕೂಡವ ತೆರನೇ ಬೇರೆ ||1||
ಹೆಪ್ಪು ಹಾಲಿಗೆ ಕೂಡಲು ತುಪ್ಪ ಅದರೊಳಗಿರಲು ಹೆಪ್ಪು ತಾ
ಸೇರುವುದೇ ಹಾಲಿನಲ್ಲಿ ನಿತ್ಯಾಂತನಿರಾಲಂಬಾ ತಾನಾದ ಶರಣನು
ಅಪ್ಪು ಸಂಸಾರದೊಳು ಅರುಗಾದನೂ ||2||
ಮುತ್ತು ನೀರೊಳು ಪುಟ್ಟಿ ಮತ್ತೆ ನೀರಪ್ಪುವುದೇ ಮುತ್ತು
ಲಕ್ಷಾಂತರಕ್ಕೆ ಬೆಲೆಯಾಯಿತು ತತ್ಪರಜ್ಞಾನಿ ಅವನು ಹುಟ್ಟುವ
ನರನಲ್ಲಾ ಅತ್ಯಂತ ಆನಂದ ಪರ ವಸ್ತು ಅದನು ||3||
ಗರುಡನ ಮಂತ್ರವಾ ಕಲಿತಿರುವಾತಗೆ ಉರಗ ಕಚ್ಚಿದರೆ ವಿಷ ಏರುವುದೇ
ಪರಿ ಪರಿ ಲೀಲೆಯೊಳು ಮುಳುಮುಳುಗಾಡುವಾತನು ಅದರೊಳು
ಕೂಡುವ ತೆರನೇ ಬೇರೆ ||4||
ಜಾತಿಯೊಳು ಹುಟ್ಟಿ ಆವಜಾತನಾದವಗೆ ಜಾತಿ ಬೇದಗಳ ಇನ್ಯ
ತಕೆವಗೇ ಪ್ರೀತಿ ನೀತಿಯಿಂದಾ ಕೂಡಲು ರೇಚಕ ಆತ್ಮ ಪ್ರಖ್ಯಾತ
ಆವ ದೂತನಹುದೇ ||5||

29
ಪಗಡೆ ಆಟಕ್ಕೆ ಪೋದೇ

ಪಗಡೆ ಆಟಕ್ಕೆ ಪೋದೇ ಕೆಟ್ಟ ಗುಣಗಳ ನೆಲವ ಮೊರೆ
ನೋಡದ ಸೀರೆಯ ಸುಟ್ಟು ನಿನ್ನ ಕಾಮದ ಕಚ್ಚೆಯ ಕಟ್ಟು
ಪ್ರೇಮಕೆ ಸಜ್ಜನರಲ್ಲಿ ಕುಳಿತು ಗುರುವಿನ ಮಾತು ಕೇಳೋಣ ಬಾರೇಲಾ ||1||
ಹಿಂದಕೆ ಹೋಗಲು ಬೇಡ ನೀ ಮುಂದಕೆ ಬಂದು ಮುಕ್ತಿಯ ಬೇಡು
ಹಿಂದು ಮುಂದಲ ಹಂಬಲ ಬಿಟ್ಟು ಒಂದಾಟ ಆಡೋಣ ಬಾರೆ ||2||
ದುಗುಡದಿ ಪೂಜಿಸಬೇಡ ನಿನ್ನೋಡೆಯನು ನಗುತಾನೆ ನೋಡೆ ದುಗುಡದಿ ಮೋರೆಯ
ನೋಡಿ ಭಜಿಸಿರೆ ನಾಚಿಕೊಂಬರಲ್ಲೇ ಶರಣರು ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 275

ನೇಮ ನಿಷ್ಠೆಯಿಂದ ಸಾವ್ಯ ಜ್ಞಾನದಲ್ಲಿ ಬಂದು ಜಾವ ಜಾವಕೆ ಮನವ
ನಿಲ್ಲಿಸಿ ಮೋಕ್ಷವ ಪಡೆಯೋಣ ಬಾರೇ ||4||
ಪುಗುಡೀ ಬಂದವಲ್ಲಾ ಪಂಚ ಪಗಡೇ ಎಂಬುವರೆಲ್ಲಾ ಪಗಡೇ
ಆಟದ ಕೋಭಂಗ ಶ್ರೀಗುರು ಹೊಸ ಬಾಳಾರ್ಯಾರೇ ||5||

30
ಗುರು ಭೋದಿಸಿದವುಗಳ ತಿಳಿದು ನೋಡು

ಭಗವಾನ್ ನಾಮವೇ ಬಾಗವ ತೇರೆ ನಿಂದಿಸೋದಕ್ಕೆ ಸುಲಭ ಈ
ಹಾದಿ ಜಗದುರು ಕಾನ್ನಗಿ ಜಗದ ಸುಖವ ನೀಗಿ ಹೋಗದೆ ನರಕಕ್ಕೆ ನೀ ಹಂಸನಾಗಿ||1||
ಆತ್ಮನೆಂಬವ ಪತಿತಾನ ನೋಡಿ ಈ ತನುವೂ ಎಂಬುವ ರಥದೊಳು ಕೂಡಿ ಇಂದ್ರಿಯಗಳನ್ನೇ ತೇಜಯ ಮಾಡಿ ನಿನ್ನ ಬುದ್ಧಿಯನ್ನೇ ಸಾರಥಿ ಮಾಡಿ ||2||
ಮೆನಸಾ ಎಂಬುವ ಹಗ್ಗವ ಹಿಡಿದು ವಿನಯದಿ ನೀವುಗಳು ಬಿಗಿಯಾಗಿ ತೆಳೆದ ಅನುಮಾನ ಇಲ್ಲ ಮುಕ್ತಿಯಾ ಪಡೆದು ಅನ್ಯರಾ ನೋಡಲು ತನ್ನನೇ ತಿಳಿದಾಗ ||3||
ಕೆಟ್ಟ ವಿಷಯದ ಬೀದಿಗೆ ಮನ ಕೋಡಬೇಡ ಗ್ರಾತಿಸುವರು ನಿನ್ನಯ ಮನವವರು
ಮೂಢ || ಗುರು ಭೋದಿಸಿದವುಗಳ ತಿಳಿದು ನೋಡು ಗಾಣಿ ಇಲ್ಲದ ಮೋಕ್ಷವ ಬಿಡ||4||
ಇಂಥ ಸುಲಭದ ಹಾದಿಯ ಮರೆತರೆ ನಿನ್ನ ಮೃತ್ಯು ನೋಡಿ ನಗುತಿಹುದು ಅರುವು ತೋರಿದ ನಮ್ಮ ಗುರು ಹೋ ಬಾಳಾವರ ಪಾದವ ನಂಬಿ ನಾವು ಮುಕ್ತರಾಗದೇ ||ಭಗವಾನ್||

31
ಕಣ್ಣಿನ ಮುಂದಿನ ಕಸವನು ತೆಗೆದು

ಆರ ಗೊಡವೆ ನಿನಗ್ಯೆ ನಮ್ಮ | ಮಗಳೇ ಮುನ್ನೊಡಂಜಿ ಸೂಲಮ್ಮ ಆಕೆ ||
ಕಣ್ಣಿನ ಮುಂದಿನ ಕಸವನು ತೆಗೆದು ಸಣ್ಣ ಪಟ್ಟಿಯ ಸೂಲಮ್ಮ |
ದಾರಕಾರರು ನಿನ್ನ ಮೋರೆಯ ನೋಡಲು ಮೊರೆ ಎತ್ತಿ ನೋಡಬೇಡಮ್ಮ ||1||
ಆಸನಾ ದೊಡ್ಡ ಮಣಿಯನು ಮಾಡಿ | ಆಶಶಿ ರವಿಗಳ ಕುಂಭ ಹೂಡಿ ಸುಂಸುವ ಚಕ್ರದ ಎಲೆಗಳ ಮೇಲೆ ದಶವಾಯುಗಳೆಂಬ ನುಲಿಗಳ ಬಿಗಿದು ||2||
ಕುಲಕೆ ಎಂಭೋವ ಕಸವನು ಕಳೆದು ಸುಖ ದುಃಖವೆಂಬ ಕಳೆಗಳ ತೆಗೆದು ಭಕ್ತಿ ಎಂಭೊ ಕೊಳವಿಯ ಹಿಡಿದು ಕುಳಿತು ಸುಮ್ಮನೆ ಸೂಲಮ್ಮ ||3||
ಮುಪ್ತ ತೊಂದು ಸಾವಿರದ | ಮೇಲಾರು ನೂರು | ಎಳೆಗಳ ಹೂ
ಯುದ್ಧ | ತಪ್ಪದೆ ಎನಕೆಯ ಮಾಡಿ ನೀನು ವಷ್ಟಿಸಿ ಪಟ್ಟಿಯ ಸೂಲಮ್ಮ ||4||
ಪತ್ಯಕ್ಷ ಪರಮಾತ್ಮನಿಂದ || ಉತ್ತಮ ಪಿತಾಂಭರನೆ ಯುದ್ಧ ಕೃತಿ
ವಾಳ ಶಿಶುನಾಳದೀಶನಿಗೆ ಮುಟ್ಟಿಸಿ ಮುಕ್ತಯ ಪಡೆಯಮ್ಮ ||5||

32
ಲಿಂಗದ ಬೆಳಕಿನೊಳು ನಿಜಗುಣ ನೋಡದೆ

ಬೆಳಕಿನ್ನೆಲ್ಲಹುದೂ ಆಲಿಂಗದ ಕಳೆಯಿನ್ನೆಲ್ಲಿಹುದು ಹರಹರ ಬೆಳಕಿನ್ನೊಳಗಣ ಸುಳಿವೂ
ತಾ ತಿಳಿಯದೆ ಭರಿದೆ ಕೂಗಾಡುವ ಕೂಳ ಮನುಜರಿಗೆ
ಆರು ಶಾಸ್ತ್ರಗಳ ಓದಿದರೇನು ಅದಿನೆಂಟು ಪುರಾಣ ಕೇಳಿದರೇನು ಕಾಮನ ಕಳಿಯದೆ
ಕ್ರೋದವ ಅಳಿಯದೆ ಹೋರಾಡಿ ಮುಳುಗುವ ಹೊಳೆಸಾತ್ಮಂಗೆ
ಮತಿನ ಬಣವೆಯ ಮುಂದಿಟ್ಟುಕೊಂಡು ಗುರು ನೀತಿ ಶಾಸ್ತ್ರದ
ಗುಟ್ಟು ಅರಿಯದೆ ಹೇಳುತ ಆತ್ಮದಲ್ಲಿರುವೂ ಅರುವು ತಾ ತಿಳಿಯದೆ ಮಾತ್ರದ
ಗುಂಡಿ ಕಿಲೋಹ ಮುಳುಗಾಡುವವರಿಗೆ
ತನ್ನಲ್ಲಿ ಶಿವನಿರಲು ಬನ್ನಿಸಲರಿಯದೆ ಅನ್ನಂತ ದೈವದ ಕಂಡು ಅಡ್ಡಡ್ಡ ಬೀಳುತಾ ಹೊನ್ನು ಹೆಣ್ಣು ಮಣ್ಣು ಸಿಲುಕಿ ಒಗೆಸಿ ತಿರುಗುವ ಬನಗು ಮನುಜರಿಗೆ
ಕಾಯರೊಳು ರೋವಳದಾಯದ ಲಿಂಗವು ಇದರಾಯತ ತಿಳಿಯದ
ಅದು ನಗುತಲಿದೆ ಬರಿ ಬಾಯಿ ಮಾತಲ್ಲಿ ಒಂದೊಂದು ಹೇಳುತ
ಮಾಯಿಗೆ ಸಿಲುಕಿ ಮುಳುಗಾಡುವವನೋಮನುಜ
ಅಂಗಕಳೆಯಲಿಂಗಕೆ ತೋರನೆ ಗುರು ಲಿಂಗದ ಬೆಳಕಿನೊಳು ನಿಜಗುಣ ನೋಡದೆ
ನಮ್ಮ ಸಂಗನ ಬಸವನ ಶರಣರಿಗಳದ ದುರುಳುತನದಿ ಕೂಗಾಡುವ ಮನುಜರಿಗೆ

33
ಶಿವನು ಭಿಕ್ಷಕ್ಕೆ ಬಂದ

ಶಿವನು ಭಿಕ್ಷಕ್ಕೆ ಬಂದ ನೀಡು ಬಾ ತಿಂಗೀ ಶಿವಾಗಿಂತ ಚಲುವರುಂಟೆ ನೋಡಬಾ
ತಂಗೀ ಅವನು ಧರಿಸಿರೂವಂತ ರುಂಡಮಾಲೆ ಕಾಣಮ್ಮಾ| ಹೆಬ್ಬೂಲಿ ಚರ್ಮದ
ವದಿಕೆ ಕಾಣಮ್ಮಾ, ಶಿವನು ಒಂದು ಕೈಯಲ್ಲಿ ಕಪ್ರೆ ಕಾಣಮ್ಮಾ, ಭೀಕ್ಷಾಂದೇಹಿ ಎಂಬದು
ಸಾರುತ್ತಾನಮ್ಮಾ ||ಶಿವನು||
ಎಷ್ಟೂ ನೀಡಲಿ ಕಪ್ರೆ ಬರ್ದು ಕಾಣಮ್ಮಾ ಅದರ ಮಹಿಮೇಯ ವರ್ಣಿಸಲು ಸಾಧ್ಯವಿಲ್ಲಮ್ಮಾ
||ಶಿವನು||
ಊರೊಳಗೊಬ್ಬನೆ ಬಂದ ಕಾಣಮ್ಮಾ ಅವನು ಬರುವಂತ ಚಂದವಾ ನೋಡು
ಬಾರಮ್ಮ ಶಿವನು ಭಕ್ತಾರ ಬಾಗಿಲಲ್ಲಿ ನಿಂದ ಕಾಣಮ್ಮಾ ಭಿಕ್ಷಾಂದೇಹಿ ಎಂದು
ಸಾರುತ್ತಾನಮ್ಮ ||ಶಿವನು||
ಮೂರು ಬೆರಳಲ್ಲಿ ಬರೆದ ಭರ್ಷ ಕಾಣಮ್ಮಾ ಮೂರು ಮೂರ್ತಿಗಳಲ್ಲಿ ಸರಯ
ಕಾಣಮ್ಮಾ ||ಶಿವನು||
ಹಗೆಯಲ್ಲಿ ಚೆಂದ್ರ ಭೂಷಣ ಚನ್ನ್ಮೆ ಕಾಣಮ್ಮ ಕೊರಳಲಿ ನಾಗಸರ್ಪ ಎಡೆಯು
ಕಾಣಮ್ಮಾ ||ಶಿವನು||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 277

ಮುಗಿಲನಂತ ಕಾವಿವಸ್ತ್ರವಧಿಕೆ ಕಾಣಮ್ಮ ಬಲ್ಲದಾ ಕೈಯ ತ್ರಿಶೂಲ ಕಾಣಮ್ಮಾ ||ಶಿವನು||
ಒಂದು ಕೈಯಲ್ಲಿ ಡಮರುಗ ಕಾಣಮ್ಮ ನಮ್ಮ ಬೇಲೂರು ಚೆನ್ನಕೇಶವರಾಯ ಕಾಣಮ್ಮ
||ಶಿವನು||

34
ತನುವಿನೊಳಗೆ ಅನುದಿನವಿದ್ದೂ

ತನುವಿನೊಳಗೆ ಅನುದಿನವಿದ್ದೂ ಆ ಎನ್ನ ಮನಕ್ಕೊಂದು ಮಾತಾಹೇಳದೆ ಹೋದೆ
ಹಿಂಸೇ ||ತನು||
ಗಾಳಿ ಪಂಚರದಂಗೆ, ಮಾಳಿಗೆ ಮನೆ ಮಾಡಿ, ನೀನು ಹೋಗುವದೊಂಬತ್ತು
ಬಾಗಿಲೊಳೂ, ತನ್ನ ತಾಳಿಗೆ ಎಳೊಯ್ತೆ ಬಂದೂ ಮಾತಾ || ತನು ||
ಅಷ್ಟಗುಡ್ಡದ ನಡುವೇ ಇಟಾರೇ ಮಳೆಯೋಳು ಜೇನು
ಕಚೀತು ತನ್ನಾ ಸುಖಕೋಸ್ಕರಾ ಹುಳವೆದ್ದು ತುಪ್ಪವಾ ಸವಿಗೊಂದು ಹೋಗುವಾಗ
ತನ್ನ ಇಚ್ಚೇಗೆ ಹೇಳೊಯ್ತೆ ಒಂದು ಮಾತಾ || ತನು ||
ನೀರುಳ್ಳ ಕಟೇಗೆ ಏರಿಯ ತಡೆದಂಗೆ, ನಾನು ನಿನ್ನನ್ನು ತಡೆದುಕೊಂಡಿದ್ದೆನಲಾ,
ಕಾರೆಂಬಕದಾಲ್ಲ ಬೋರೆಂಬ ನಾಳೆಹೊದು, ಮೋಳೆದ್ದು ಹೋಗುವಾಗ ತನ್ನ ಏರಿಗೆ
ಏಳೊಯ್ತೆ ಬಂದು ಮಾತಾ, ||ತನು||
ನಾನು ನಿನ್ನನು ಕೂಡಿ ಕಡೆಗೆದ್ದು ಹೋಗಲೇ ಕಾಲಾಡಿ ಯೋಳು ಬಿದ್ದು ಏಳು
ಎನ್ನುವರೂ, ಮಟ್ಟಾದೆ ಜನರೂ ಮುಂದಾಲೆ ಹಿಡಿವಾರು, ಕೆಟ್ಟ ಶರೀರವೆ ನಿನ್ಯಾರೊ
ನಾನ್ಯಾರೊ ನಾನ್ಯಾರೊ ||ತನು||
ಆಗ ಬೋಗದ ಎರಡು ಮಾಯಾದಗಳಿ ಬಂದು ಕಾಯ ಕೋಟೆಯ ಮೇಲೆ
ಕಾಯ್ದು ಕುಳಿತುಕೊಂಡು, ಜೀವಾವ ತೆಗೆದು,
ವೈಕುಂಠಕ್ಕೆ ಹೋಗುವಾಗ, ತನ್ನ ಬರಿಗೂಡ ಮಂದಿಟ್ಟು ಅಳುವುದು ನಾ ಕಂಡೆ
ಪುರಂದರವಿಠಲಾ ||ತನು||

35
ಅಲ್ಲಿದೆ ನಮ್ಮ ಮನೆಯು ಹರ ಹರ

ಅಲ್ಲಿದೆ ನಮ್ಮ ಮನೆಯು ಹರ ಹರ
ಇಲ್ಲಿ ಇರುವುದು ಸುಮ್ಮನೆಯು
ಕದ ಬಾಗಲಿಲ್ಲದ ಕಳ್ಳರ ಮನೆಯ
ಬಿರುಗಾಳಿ ಬೀಸುವ ಬೀದಿಯ ಮನೆಯ
ಕಾವೇರಿ ತದಿಯಲ್ಲಿ ಕಟ್ಟಿರುವ ಮನೆಯು
ವೈಕುಂಟ ದಾರಿಯ ತೋರುವ ಮನೆಯು

278 / ತತ್ವಪದ ಸಂಪುಟ-1

36
ದಾರಿಯ ನೀ ತೋರಬೇಕಣ್ಣ

ಊರಿಗೆ ನಾನೋಗ ಬೇಕಣ್ಣ ದಾರಿಯ ನೀ ತೋರಬೇಕಣ್ಣ ಘೋರ
ಹರನ ಪಾದದಲ್ಲಿ ಸೇರಿ ಮುಕ್ತನಾಗಬೇಕಣ್ಣ
ಹತ್ತು ಗ್ರಾಮವ ಸುತ್ತಬೇಕಣ್ಣ ಮತ್ತೆಂಟು ಗ್ರಾಮವ ಬಿಟ್ಟು
ಮುಂದಕ್ಕೆ ನಡೆಯಬೇಕಣ್ಣ
ಹುತ್ತಲಿರುವ ಅಳ್ಳಿಯಂಟನ್ನು ಅತ್ರ ಸೇರಬೇಡಣ್ಣಾ
ಚಿತ್ತದೊಳಗೆ ನೋಡಿಕೊಂಡು ಇತ್ತ ತಿರುಗಿ ಬಾರದಂತೆ
ಚಂದ್ರ ಸೂರ್ಯ ಗಿರಿಯ ಮದ್ಯ ಹೋಗುತ್ತಾ ನೋಡಿದರೆ ತಾರಕ
ಬ್ರಹ್ಮನ ತೋರುವದು

37
ಇಷ್ಟ ಲಿಂಗಯ್ಯ ನಿ ಶ್ರೇಷ್ಟ ಲಿಂಗಯ್ಯಾ

ಇಷ್ಟ ಲಿಂಗಯ್ಯ ನಿ ಶ್ರೇಷ್ಟ ಲಿಂಗಯ್ಯಾ, ನಿಷ್ಠವಂತರ ಆತ್ಮ
ನೀನೆ ಲಿಂಗಯ್ಯ || ಅಂಗಯ್ನಾ ಪೀಠದಿ ಮೆರೆವ
ಲಿಂಗಯ್ಯ | ಕಂಗಳ ಕೊನೆಯಲ್ಲಿ ಕಾಣವ ಲಿಂಗಯ್ಯ ||ಪ||
ಗಂಗೆಯ ಮುನರಲ್ಲಿ | ಸ್ಥಾನವ ಮಾಡುವ | ಸಂಗಯ್ಯ ಯನ್ನಾತ್ಮ
ನೀನೆ ಲಿಂಗಯ್ಯಾ | ವಟಲಿಂಗಕೆ ದಾರನ ಭಲಿಂಗಯ್ಯ | ನವಚಕ್ರದಳಗ ಬೆಲೆವ
ಲಿಂಗಯ್ಯ ||ಪ||
ನವಶಕ್ತಿ ನವ ಶಕ್ತಿ ನವರಂಗದಲ್ಲಿ | ನವ ಪ್ರಣವ ಎನ್ನಾತ್ಮ ನೀನೆ ಲಿಂಗಯ್ಯ ||ಪ||
ಗುರುಲಿಂಗಮ ಜಂಗಮ ನೀನೆ ಲಿಂಗಯ್ಯ | ಶರಣ ಜಲ
ಶೇಶದಿ ಭಸದಿ ಲಿಂಗಯ್ಯ | ಹರ ನೀಷ್ಠ ಮಂತ್ರರ್ಥ ಮನನ
ಮಾಡಿದಾತ | ಪರಮ | ಗುರುಯನ್ನಾತ್ಮ ನೀನೆ ಲಿಂಗಯ್ಯ ||
ಆ ರಾ ರಾ ರಾ ರಾ | ನೀನೆ ಲಿಂಗಯ್ಯ | ಮೂರಾರೊಳಾದಂತ |
ಪರಮಲಿಂಗಯ್ಯ | ಆರಾರ ಬೇದವ | ಸ್ಪಷ್ಟದಿ ಅರುವಿದ
ಶರೀರಯನ್ನಾತ್ಮ ನೀನೆ ಲಿಂಗಯ್ಯ ||ಪ||
ಪಂಚಮ ಕೇಷರೇತ ಲಿಂಗಯ್ಯ | ಪಂಚಚಾರಗಳಲ್ಲಿ ಪ್ರಾಣ ಲಿಂಗಯ್ಯ |
ಸಂಚಿತ ಕಲೆಯನ್ನು ತನ್ನಂತೆ ಮಾಡಿದ |
ಪಂಚ ಮುಖಗುರು ಶ್ರೀಸಾದಶಿವಲಿಂಗಯ್ಯ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 279

38
ಹಾವು ಕಚ್ಚಿತಲ್ಲೊ ತಮ್ಮ

ಹಾವು ಕಚ್ಚಿತಲ್ಲೊ ತಮ್ಮ | ಹೋಗುತೈತೆ ಜೀವ ||
ಯಿಂತ ಬಾವ ಭಲ್ಲಿಗ ಬರೆದ ಬ್ರಹ್ಮನ ರೂಣತೀರಲಿಲ್ಲ ||ಪ||
ಹಾವುಯೆಂತಿ ಹಾವಲ್ಲ ತಮ್ಮ | ಯನ್ನಕಚ್ಚಿತಲ್ಲೊ | ಇಂತ
ಹರಿಹರ ಭ್ರಹ್ಮರಿ ಕಚ್ಚಿದ ಹಾವು ಯನ್ನ ಕಚಿತಲ್ಲ ||ಪ||
ಚಿಕ್ಕ ವಯಸ್ಸಿನಲ್ಲಿ | ಪುಟ್ಟ ಬಾಲಕನಲ್ಲಿ ಸಂತನಯನಗಿಲ್ನ |
ಮಾತಾನಾಡೋಣ ಯೆಂದರೆ ನನಗೆ ಬಾಯೆ ಬರದಲ್ಲ || ಒಂದು
ಬಳಗವು ಬಂದು ನಿಂತತೆ | ಯಾರಿಗಳವಲ್ಲ ಸೊಲ್ಲ | ಈ ಬಂಢ ಶಿಸುವಿನ ಮಾತಾನಾಡಲು ಬಾಯೆ, ಬರದಲ್ಲ | ಕಚ್ಚಿದ ವಿಷವು ತಲೆಗೆ ಏರಿತು | ಭೂಮಿಗೆ ಬಿದ್ದೆನಲ್ಲ
ಯಂತ ಹಲಿಗೆ ಮರಣ ಯಾವಾಗ ಬರುವುದೊರೆಳೆಸೊ
ಗುರುದೇವ ||ಪ||

39
ಎತ್ತಿ ಕೊಡಮ್ಮ ವಚನವ

ಚಂದ್ರುಗಾವಿಯನುಟ್ಟು ದುಂಡು ಮಲ್ಲಿಗೆ ಮುಡಿದು ಅಂಗಳ
ದೊಳಗೆ ಪಗಡೆಯನಾಡವ | ಅಂಗಾಳದೊಳಗೆ ಪಗಡೆಯ
ನಾಡುವ ರಂಬೆ ಸರಸ್ವತಿ ನೀಡುಮತಿಯಾ ||ಪ||
ಬೆಟ್ಟದ ಮಸಿಯವಳ ಬೆಟ್ಟಿನುಂಗುರದವಳೆ | ಪಟೆಯ
ಸೀರೆ ನೆರಿಯವಳೇ ಪಟ್ಟಿಯ ಸೀರೆ ನೆರಿಯವಳೆ
ಸರಸ್ವತಿ | ಎತ್ತಿ ಕೊಡಮ್ಮ ವಚನವ ||2||
ಆದಿ ಮನೆಯವಳೆ | ಪಾದದುಂಗುರದವಳೆ | ಗೊ
ನಡೆಯವಳೆ ಸರಸ್ವತೀ ಓದಿಕೊಡಮ್ಮ ವಚನವ ||3||
ಬೀದಿ ಮನೇಯವಳೆ | ಬಿಸಣಿಗೆ ನಡಿಯವಳೆ ಜಾಂಡುವಿನ
ಓಡಿಯುವಳೆ | ಸರಸ್ವತಿ ಹೇಳಿ ಕೊಡಮ್ಮ ವಚನವ ||4||
ಎಂಟೆಲೆ ಮಾವಿನ ದಂಟಿನಲಿ ಇರುವವಳೆ | ಗಂಟೆಯ ನಾದಕ್ಕೆ
ಒಲಿದವಳೆ ಸರಸ್ವತಿ ಗಂಟಲ ತೊಡರ ಬಿಡಿಸವ್ವ ||5||
ಎಳಲೆ ಮಾವಿನ ತಾಳಿನಲ್ಲಿರುವಳೆ | ತಾಳ ತುಂಬೂರಿಗೆ ನಲಿಯುವಳೆ
ಸರಸ್ವತಿ | ಹೇಳಿ ಕೊಡಮ್ಮ ವಚನವ ||6||
ಹಳ್ಳ ಕೊಳ್ಳದಲ್ಲಿ | ಮುಡಿಜಾಜಿ ಬನದಲ್ಲಿ ಗೋದಿಂಬಿ ಸೀರೆ
ನರಿಯವಳೆ ಸರಸ್ವತಿ ನಾಲಿಗೆ ಬಿಡಿಸವ್ವ ಸರಸ್ವತಿ ||7||

280 / ತತ್ವಪದ ಸಂಪುಟ-1

ಮತಿಕೊಡು ಮಹಾಲಿಂಗ | ಸತ್ತಿಕೊಂಡು ಶಂಭುಲಿಂಗು ವಿದ್ಯೆ
ಕೊಡು ವಿನಾಯಕ || ವಿದ್ಯಾ ಕೂಡುವರೆ ನಾನೊಬ್ಬನೆ ಅಲ್ಲ | ನಮ್ಮ
ಅವಳೆ ಸಾರದಾಂಬೆ ನನ್ನ ಅಕ್ಕ ನಾನು ಇಬ್ಬಾರು ಸೇರಿ, ರಾಜ್ಯಕ್ಕೆ
ರಾಜ ಹರಡವೂ ||8||
ಏಳುತಲೆ ಎದ್ದು ಯಾರನ್ನ ನೆನೆವೇನು ಎಳ್ಳು ಜೀರಿಗೆ
ಬೆಳೆನಂತೆ ಭೂಮಿ ತಾಯಿ | ಎದ್ದೆದ್ದು ಬೆಳಗ್ಗೆ ನೆನೆದಾರೆ ನಿನ್ನ
ಹೊದ್ದಿದ ಪಾಪ ಪರಿಹಾರ ||9||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 281

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

3 ಕುಣಗಳ್ಳಿ ಮಠದ ಗುರುಲಿಂಗೇಶರ ತತ್ವಪದಗಳು

ಭಾಗ-3: ಕುಣಗಳ್ಳಿ ಮಠದ ಗುರುಲಿಂಗೇಶರ ತತ್ವಪದಗಳು
1
ಸಿರಿಯ ತೋರಿಸಿದೆ

ಗುರುದೇವ ನೀನೋರ್ವ ನಿಜದೇವನೈ ನಿಮ್ಮ ಚರಣದೊಳ್ ಬೆರೆಯದೆ |
ನರನೇ ಪಾಮರನೈ ಸದ್ಗುರುದೇವ ನೀನೋರ್ವ ನಿಜದೇವನೈ ||
ತಿರುಕನಂದದಿ ಪುರ ಪುರಗಳ ತಿರುಗುತ್ತಾ ನರಳುವ ತರಳನ ಹರನ ಮೀರಿಸಿದೆ |
ಕರುಣವ ಕರಗಿಸಿ ಮರುಗಿದ ಮುನಿಗಳ ಹರಸಿದ ಪರಿಯದ |
ಸಿರಿಯ ತೋರಿಸಿದೇ ||ಗುರು||
ಗುರುಲಿಂಗೇಶನೊಳ್ ಕರುಣತೋರಲು
ತಾನೆ ಗುರುವೆಂಬ ನಾಮವ ಧರಿಸಿ ಬಂದಿಹನೈ ||ಗುರು||

2
ಒಳ್ಳೆ ಸ್ಥಾನವ ಪಡೆದುಕೋ

ಒಳ್ಳೆಯದಾಗಿ ಮಾಡಿಕೋ ನಿನ್ನೊಳಗೆ ನೀ |
ಹುಡುಕಾಡಿಕೋ ಒಳ್ಳೆ ಸ್ಥಾನವ ಪಡೆದುಕೋ
ಈ ಸುಳ್ಳು ಕಾಯವ ಮರೆತುಕೋ ||ಒಳ್ಳೆ||
ಕಾಳ ರಾತ್ರಿಲಿ ಕನ್ನವಿಕ್ಕಿ ಒಳಗೆ ಇರುವ ವಸ್ತುವಾ ನೀ ತಿಳಿದುಕೋ ||ಒಳ್ಳೆ||
ನಾಯಿ ಹಂದಿಯ ಮರೆತುಕೋ ನಿನ್ನ ತಾಯಿ-ತಂದೆಯ ತಿಳಿದುಕೋ||
ಈ ಕಾಯದೊಳಗಿನ ಕೀಲು ತಿಳಿದು ಸಾಯದಂತೆ ಮಾಡಿಕೋ||ಒಳ್ಳೆ||
ಗುಡ್ಡದ ಮೇಲಿದ್ದಿಕೋ |
ಭೂಮಂಡಲವ ನೀ ಹೊದ್ದುಕೋ |
ದಿಟ್ಟ ಯೋಗೀಶ್ವರನ ಕಂಡು ಸಣ್ಣ ಕಿಂಡಿಯಲಿ ನೀ ತೂರಿಕೋ ||ಒಳ್ಳೆ||
ಹುಬ್ಬಿನ ನಡವಿದ್ದಿಕೊ ನೀ ಇಬ್ಬರ ಸ್ನೇಹ ಮಾಡಿಕೋ |
ಮೂಗಿನ ಮೇಲಿದ್ದಿಕೋ ನೀ ಬೇಗ ಉಸಿರನ ಬಿಗಿದುಕೊ ಧರೆಯೊಳಗೆ
ಚಿನುಮಯನಾದ ಗುರುಲಿಂಗೇಶನೊಳಬೆರೆತುಕೋ ||ಒಳ್ಳೆ||

3
ರಾಗಾದಿಗಳು ಪೋಗಲಿಲ್ಲ

ಗುರುಸೇವೆ ಕೊನೆ ಸಾಗಲಿಲ್ಲ ||ಈ||
ಮರಣಭೀತಿಯು ಹೋಗಲಿಲ್ಲ ಕರುಣವ ಬ್ಯಾರಿಟ್ಟು
ಚರಣವದರೊಳಿಟ್ಟು ಸಿರಿತನವನು ಸುಟ್ಟು ಜಯಸುವರ್ಯಾರಿಲ್ಲ ||ಗುರು||
ಕೇಳಿದರ್ಥವು ನಿಲ್ಲಲಿಲ್ಲ ಮುಂದೆ |
ಕೇಳಲೇನದು ಫಲವಿಲ್ಲ |
ಕಾಲುಗಳುದಿಸಿಲ್ಲ ಗಮನವೆಂತವಬಲ್ಲ |
ಕೀಳು ಮೇಲರಿಯದೆ ಪಾಳಾಯ್ತು ಜಗವೆಲ್ಲ ||ಗುರು||
ರಾಗಾದಿಗಳು ಪೋಗಲಿಲ್ಲ |
ಸುಖವಾಗಲೆಂದೊಡೆ ಸಾಗೋದಲ್ಲ |
ರೋಗಪೋಗದಿರದೆ ಸೇವಿಸಿ ಫಲವಿಲ್ಲ
ಯೋಗವಿಲ್ಲದೆ ಶಿರಬಾಗಿದೊಡೆ ನಿಲ್ಲ ||ಗುರು||
ಹರುಷ ತನ್ನೊಳಗೇರಲಿಲ್ಲ |
ಸಾಧು ಚರಣ ಕೈವಶವಾಗಲಿಲ್ಲ |
ನರಭಾವ ಕೆಡಲಿಲ್ಲ ಕೊರತೆಗೆ ಕಡೆಯಿಲ್ಲ |
ಗುರುಲಿಂಗೇಶನೊಳು ತನ್ನೆರಕ ತೋರಿಸಲಿಲ್ಲ ||ಗುರು||

4
ಸೆರೆಮನೆ ದೊರೆಗಳಿಲ್ಲ

ಪೋಗಿ ಬಾಳುವ ಬನ್ನಿರೋ ನಮ್ಮೂರೊಳು ರೋಗವಿಲ್ಲವೊ ಕಾಣಿರೋ ||ಪ||
ತ್ಯಾಗವಿಯೋಗಾನುರಾಗ ಭೋಗಗಳೆಂಬ ಸಾಗರವನು ದಾಟಿ
ಯೋಗಿಗಳೊಂದಾಗಿ ಪೋಗಿಬಾಳುವ ಬನ್ನಿರೋ
ಅನುಚರವೆಂಬ ಭಯವಿಲ್ಲವೋ |
ಕಳ್ಳರ ಕಾಟ |
ಸೆರೆಮನೆ ದೊರೆಗಳಿಲ್ಲ |
ಕೊರತೆಯಾಗಲು ಬೇರೆ ಸಿರಿವಂತರಲ್ಲಿಲ್ಲ |
ಮರಣ ಜನ್ಮಗಳ ಪೊತ್ತಿರುವ ಭವಗಳಿಲ್ಲವೋ ||ಪೋಗಿ||
ನೆರೆಹೊರೆಯೆಂಬುವುದಿಲ್ಲ |
ಕಿಂಕರಭಾವ |
ವರಿಸಿನೋಡಿಕೊಡಲಿಲ್ಲ|

ಬರುವ ಸಂಕಟವಿಲ್ಲ ಮರುಳಮಾಡುವರಿಲ್ಲ |
ನರಕ ನಾಕಗಳೆಂಬೊ ಪರಿಕಲ್ಪನೆಗಳಿಲ್ಲ ||ಪೋಗಿ||
ಚಳಿ ಮಳೆ ಗಾಳಿಗಳಿಲ್ಲ |
ಸೂತಕದಿಂದ ಬಳಲುವೊ ಕೊಳೆಗಳಿಲ್ಲ |
ಕುಲಜಾತಿಗಳೆಯುವ ಬಳಗದ ಸುಳುಹಿಲ್ಲ |
ನೆಲಸಿಹರಲ್ಲಿ ಸತ್ಕುಲದ ಸಜ್ಜನರೆಲ್ಲ ||ಪೋಗಿ||
ಬರುವ ತಾಪಂಗಳಿಲ್ಲ ನೋಡಲು ನಿತ್ಯ |
ಪರಿಪೂರ್ಣಾನಂದವೆಲ್ಲ ನರಕುರಿಗಳೊಳಿದನರಿತವರ್ಯಾರಿಲ್ಲ |
ಧರೆಯೊಳಿದನು ನಮ್ಮ ಗುರುಶಂಕರನು ಬಲ್ಲ ||ಪೋಗಿ||

5
ಬಹು ಮಂಗಳಕರ ಶಿವ

ಲಿಂಗವ ನೋಡಮ್ಮಾ |
ತನುವಿನ |
ಸಂಗವು ಬ್ಯಾಡಮ್ಮಾ |
ಭಂಗ ಪಡುವ ವಿವಿಧಾಂಗದೊಳಿದ್ದರು |
ರಂಗು ಕೆಡದ ಬಹುಮಂಗಳಕರ ಶಿವ ||ಪ||
ಕಂಗಳನೊಡಗೂಡಿ |
ಬಗೆ ಬಗೆ |
ರಂಗಾಗುತಮೂಡಿ |
ಅಂಗದೊಳುಗುಬಹಿ| ರಂಗದೊಳಬೆಳದಿಂಗಳಪೋಲ್ ಭುವ |
ನಂಗಳ ಬೆಳಗಿಪ ||ಪ||
ಖಂಡವೆನಿಸುವುದಿಲ್ಲ ಈ ಮಲ |
ಭಾಂಡವಡಲಿಲ್ಲ |
ಪಿಂಡವಳಿಯೆ ಗಗನಾಂಡದ ಪರಿಯೆ |
ಕಾಂಡವೆನಿಸಿ ಬ್ರಹ್ಮಾಂಡ ಬೆಳೆಸುವ
ಸಡಗರದೊಳಗಿಹುದು |
ಇದು ಬಹುವಡಲೊಳಡಗಿಹುದು |
ಯಡಬಿಡದೊಡಲಿನ ಬುಡವನು ಕಡಿದೊಡೆ |
ಪೊಡವಿಯ ಕೋಟಿಗೆ ಯಡೆಯಾಗುವ ಘನಲಿಂಗವ ||
ತನುವಿನೊಳಗೆ ಮಾಡಿ ಚಲಿಸುವ |
ಮನಸಿನೊಡನೆ ಕೂಡಿ ಕನಕದನಾ ರಂಗನೆ ಮನೆಗಳ ರೂಪದಿ |

ಜನಿಸುತ ತೋರುವ ಜಗನಾಗಿರುವೀ ಲಿಂಗವ ||
ಯರಡೆಂಬುದ ಪಿಡಿದು ಬರಿದೆ ಶರೆಯೊಳಡಗಿಹುದು |
ಕರುಣವು ಗುರುಶಂಕರನೊಳು ಬೆರೆತರೆ |
ತೆರೆಕೊರೆಯಿಲ್ಲದೆ ನಿರವಧಿಯೆನಿಸುವ ಲಿಂಗವ ||

6
ಅಂತರಾತ್ಮನ ಸೆರಗು

ಕರದಲ್ಲಿ ಕೌಂಡಿಲ್ಯ |
ಪರದೊಳು ಸಂಗಮ ಕುರುಹು ಕಾಣುತ್ತಿತ್ತೆ |
ಇಂಥ ಅರುವಲ್ಲಿ ನೋಡಲು ಅಂತರಾತ್ಮನ ಸೆರಗು ಸಿಕ್ಕುತ್ತಿತ್ತೆ ||
ನಾಸಿಕ ತುದಿಯೊಳು ನೋಡುತ ದಾರಿಯಲ್ಲಿ ಕೂಸು ಕುಂತಾಯ್ತೆ |
ಇಂಥ ಭಾಸುರ ಬ್ರಹ್ಮನ ಪ್ರಣವವುದ್ಭವಿಸಲು |
ಪುಷ್ಪವು ಸುರಿಯುತ್ತಿತ್ತೆ ||
ಉತ್ತರ ದಿಕ್ಕಿನಲ್ಲಿ ಉದಯವಾಗಲು ಗೊತ್ತು |
ಗೋ ಕಾಣುತ್ತಾಯಿತ್ತೆ |
ಇಂಥ ಬಿತ್ತಿದ ಬೀಜವು ನಿತ್ಯವು ಬಲಿತರೆ ಮುತ್ತು ಸುರಿಯುತ್ತಿತ್ತೆ ||ಕರ||

7
ಯಂಥಾದೀ ಕಲಿಕಾಲವು

ಯಂಥಾದೀ ಕಲಿಕಾಲವು|
ದುರ್ಗತಿಗೆಳೆಯುವಂಥಾದ್ದೆ ಬಹುಮೇಳವು
ಅಂತರಂಗದೊಳು ಶಿವಶಾಂತಿಯಂ ಪಡೆಯದೆ |
ಭ್ರಾಂತರೆಲ್ಲರು ಪೂಜ್ಯರಂತೆ ಭೂಸುರರಂತೆ ||ಪ||
ಹರನ ಮಾಡದೆ ಗಾತ್ರವ |
ಮೋಹಿಗಳಾಗೀ ಧರಿಸಿ ಪಾತಕ ಸೂತ್ರವ |
ಮರಣ ಜನ್ಮಗಳಲ್ಲಿ ಬೆರೆತು ಸೂತಕದಲ್ಲಿ ಮರಳಿ
ವೈತರಣಿಯಲ್ಲಿರುವರೇ ದ್ವಿಜರಲ್ಲಿ ||1||
ಭಿನ್ನಾಕಾರವ ತಳ್ಳದೆ |
ದೇವರು ಬಂದು |

ತನ್ನಂಗದೊಳು ನಿಲ್ಲದೆ |
ಬೆನ್ನಂಟಿರುವ ಶಿವನನ್ನು ತಾ ಬೆರೆಯದೆ |
ಜನ್ಮಕರ್ಮಿಗಳೆಲ್ಲ ಮಾನ್ಯರಾದವರಂತೆ ||2||
ದೃಢವಾದ ಮಡಿಯನಿಲ್ಲದೆ |
ಶಂಕರದೇವ |
ನಡಿಯಲ್ಲಿ ಶಿರವ ಬಾಗದೆ |
ವಡಲ ಸೂತಕದಿಂದ |
ಬಿಡದ ಪಾತಕದಿಂದ ಕೆಡುವ
ಪಾಪಿಗಳೆಲ್ಲ ಮಡಿ ಮಾನವರಂತೆ ||3||

8
ಕೂಡಿದೆ ಗುರುಪದವ |ನಾ|

ಕೂಡಿದೆ ಗುರುಪದವ |ನಾ|
ನೀಗಾಡಿದೆ ನೀ ಭವದ ಮಾಡಿದ ಮನಸಿಗೆ ಪರಮನೊಳೈಕ್ಯವ |
ನೋಡಿದೆ ಜನಸುಖವಾ |ಪ|
ಚಿತ್ತವನೊಳಸೆಳೆದು |
ಸುಖಮಯ |
ಚಿತ್ಪ್ರಭೆಯೊಳು ಸುಳಿದು |
ಚಿತ್ತಿನ ಪರಿಪೂರ್ಣತ್ವವ ತಳೆದು |
ಸುರೋತ್ತಮನಾಗುಳಿದು ||1||
ಹೊರವೃತ್ತಿಯ ಬಿಟ್ಟು |
ಹೃದಯಾಂ | ತರದೊಳಗದು ನಿಟ್ಟು |
ಪರಮನ ಪ್ರಭೆಯೊಳು ಬೆಳುಗುವ ದೃಶ್ಯವ |
ಪರವೆಂಬುದು ಸುಟ್ಟು ||2||
ನಾನೇ ಜಗವಾಗಿ |
ಜಗದೊಳು |
ನಾನೇ ನಿಜವಾಗಿ |
ನಾನೆ ನನ್ನಯ ನೋಡುತ ಕೂಡುತ |
ನೀನೆಂಬುದ ನೀಗಿ ||3||
ಬೆಳಕಿಗೆ ಬೆಳಕಾಗಿ ಮನಸಿನ |
ಕಳವಳಗಳು ಪೋಗಿ |
ಒಳಹೊರಗೆಂಬುವ ಭಾವಗಳಿಲ್ಲದೆ |

ಥಳಥಳಿಸುವವನಾಗಿ ||4||
ಮರಣವು ನಮಗಿಲ್ಲ |
ಮುಂದಕೆ ಕರಣವು ಬೇಕಿಲ್ಲ |
ಕರಣವು ಗುರುಲಿಂಗೇಶನೊಳಡಗಲು ಎರಡೆಂಬುವುದಿಲ್ಲ ||5||

9
ಪರಮಾರ್ಥದೊಳಿಟ್ಟು

ಗುರುಪಾದದಿ ನೀ ಬೆರೆದು |
ನೀನಿರೆ |
ಮರಣದ ಭಯವಿರದು |
ಪರಿಪರಿ ವಿಷಯವನರಸುತ ತಿರುಗುವ |
ಮರುಳಾಟವನುಳಿದು ||ಪ||
ಸಿರಿಬರಗಳ ಪೋಗಿ |
ಗುರುವಿನ ಕರುಣವು ಹಿತವಾಗಿ |
ಕರಣದೊಳಿರುವಾವರಣ ಸಿಲುಕದೆ,
ಹೊರ ಒಳಗೊಂದಾಗಿ ||1||
ಭ್ರಾಂತಿಯ ಜಗವಳಿದು ಈ ಮಲ |
ಯಂತ್ರವ ಕಳದುಳಿದು |
ಕಾಂತ ಕನಕದ ಚಿಂತೆಯ ಕಳೆದು |
ಶಾಂತಿಯ ಗುಣ ಬಲಿತು ||2||
ಕುರುಡರ ನಡೆಬಿಟ್ಟು ದೃಷ್ಟಿಯ |
ಪರಮಾರ್ಥದೊಳಿಟ್ಟು |
ಕರಣವ ಬೆಳಗಿಪ ಗುರು-ಶಂಕರನಿಗೆ |
ಪೆರದೆಂಬುದ ಸುಟ್ಟು ||3||

10
ಬಿಚ್ಚಿ ಪೇಳಿ

ಬಿಚ್ಚಿ ಪೇಳಿರರ್ಥಬಲ್ಲ ಬಲ್ಲ ಜಾಣರು |
ನಿತ್ಯಮುಕ್ತರು |
ಮುಚ್ಚು ಮರೆ ಯಾತಕಿನ್ನು ಕಂಡ ಮಾತಿಗೆ ಉಂಡ ಸುಖಕೆ ||ಪ||
ಬಿಚ್ಚಿ ಪೇಳಿ ಕಾಯಪುರಿಯಲ್ಲಿ ಮೂರು ಕೆರೆಗಳುಂಟು |

ಅದರಲ್ಲೊಂದು ಹುಯ್ಯೊ ಮಳೆಗಾಲದಲ್ಲೂ ತುಂಬೋದಲ್ಲ |
ಒಣಗೋದಲ್ಲ ||ಬಿಚ್ಚಿ||
ಬರಿಗೆರೆಗಳೆರಡರ ಮಧ್ಯೆ ಜ್ಯೋತಿರ್ಲಿಂಗಮಿಹುದು |
ನಿರುತ ದೇವಗಂಗೆಯಭಿಷೇಕಗೈವಳು |
ಶಿವನ ಪ್ರಿಯಳು ||ಬಿಚ್ಚಿ||
ಪೂಜೆಯಿಲ್ಲ ರಾತ್ರಿಯಲ್ಲು ಹಗಲಲ್ಲು |
ಆತ್ಮಲಿಂಗಕ್ಕೆ |
ಪೂಜೆಗೈದ ರಾತ್ರಿ ಹಗಲು ಒಂದೆಯಾಗಿ |
ದೃಢವಾಗಿ ||1||
ಹತ್ತು ಎಂಟು ಏಳು ಆರು ಐದು ದಳದ |
ಪುಷ್ಪ ಕೊಯ್ದು ಹಸ್ತವಿಲ್ಲದರ್ತಿಯಿಂದಲರ್ಚಿಸಿದನೂ |
ಒಬ್ಬ ಜಾಣನು ||ಬಿಚ್ಚಿ||
ಹೆತ್ತ ಮಾತೆ ಶಿರವ ಚಂಡಾಡಿದನು |
ರಾಮನಂತೆ |
ನಿತ್ಯಪೂಜ್ಯನೆನಿಸಿಕೊಂಡನಿಹದಲ್ಲಿ ಪರದಲ್ಲಿ ||ಬಿಚ್ಚಿ||
ಕುರುಡ ನಿಂತು ಪೇಳೆ ಬಲು ಬೆರಗಾದ ಹೆಳವಾನು |
ಧರೆಯೊಳಿದ ನೋಡಿದವರಿಗ ನಾಲಿಗಿಲ್ಲ | ಪೇಳಿಸಲ್ಲ ||ಬಿಚ್ಚಿ||
ಜಲಕಂಠೇಶ್ವರನಿಂದ ಸುರಿವಮೃತಾವ |
ನುಂಡ ಪುರುಷ |
ಸಲೆಗುರು ಮಹಲಿಂಗರಂಗನಿಹನು |
ನಿಸ್ಸಂಗನಿಹನು ||ಬಿಚ್ಚಿ||

11
ಬಂದು ನೋಡಿ |

ತೆರೆದ ಬಾಗಿಲು ಸುಂಕವಿಲ್ಲದ ಪುರವುಂಟು |
ಬಂದು ನೋಡಿ |
ಹರಿಹರ ಬ್ರಹ್ಮಾದಿಗಳ ಕಾವಲದಕುಂಟು |
ಬಂದು ನೋಡಿ ||
ಪುರಕ್ಕರಸರು ಮೂವ್ವರೊಂಭತ್ತು ಬಾಗಿಲು |
ಬಂದು ನೋಡಿ ||
ಎರಡು ಕಿಟಕಿ ಸೂರ್ಯಚಂದ್ರರ ಬೀದಿಯೂ|
ಬಂದು ನೋಡಿ |
ವರಚೌಕ ಮಧ್ಯದೊಳಿಹ ಓಂಕಾರೇಶ್ವರ |

ಬಂದು ನೋಡಿ |
ಕರಣೇಕರೈವರು ಕರಜೋಡಿಸಿಹರಲ್ಲಿ |
ಬಂದು ನೋಡಿ ||
ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು |
ಬಂದು ನೋಡಿ ||
ಏಳು ಲೋಕಂಗಳನೊಳಗೊಂಡಿಹದಲ್ಲಿ ||
ಬಂದು ನೋಡಿ ||
ಏಳೆಡೆ ಸರ್ಪವು ಬೋರುಗುಟ್ಟುತಲಿದೆ |
ಬಂದು ನೋಡಿ ||
ಏಳೆಡೆ ಸರ್ಪನ ತಲೆಯೊಳು ರತ್ನವುಂಟು |
ಬಂದು ನೋಡಿ ||
ಎರಡು ಪಕ್ಷದೊಳೊಂದೆ ಪಕ್ಷಿಯಾಡುತಲಿದೆ | ಬಂದು|
ಎರಡು ರೆಕ್ಕೆಯು ಪಕ್ಕ ಪಕ್ಷಿಗಿಲ್ಲವೂ | ಬಂದು ||
ಧರಣಿ ಜೀವರ್ಕಳಿಗಾಧಾರವಾಗಿದೆ |
ಬಂದು ನೋಡಿ ||
ಕರಸ್ಥಳಗೊಳಗಿದೆ ಕರಕೆ ಸಿಕ್ಕುವುದಿಲ್ಲ | ಬಂದು||
ಗರುಡ ಸರ್ಪಗೆ ಅತಿಸ್ನೇಹವುಂಟಾಗಿದೆ | ಬಂದು||
ಸುರಾರಸುರರು ಮಿತ್ರ ಭಾವದೊಳಿರ್ಪರು |
ಬಂದು ನೋಡಿ |
ಇರುವೆ ಸಿಂಹವ ನುಂಗಿ ತಾನೊಂದೆ ಕುಳಿತಿದೆ | ಬಂದು |
ಉರುವಿಷಮೃತವು ಆಯಿತನೆಂಬೆನು | ಬಂದು ||
ಭೂರಿಭೋಜನ ಶಾಲೆ ತೆರೆದಿದೆ ಎದುರಿಗೆ | ಬಂದು ||
ಊರುಜನರು ಉಂಡು ದಣಿಪರನಂದದಿ | ಬಂದು |
ದೂರದೊಳಿಲ್ಲವು ಜ್ಞಾನ ಭಂಡಾರವು |
ಬಂದು ನೋಡಿ |
ಧೀರ ಶ್ರೀ ಗುರುಲಿಂಗಮಹಲಿಂಗನೊಳಗಿದೆ ||
ಬಂದು ನೋಡಿ ||

12
ಮಾತು ಮಾತಿಗೆ

ಮಾತು ಮಾತಿಗೆ ಶಂಕರ ಶ್ರೀ ಗುರುವೇ ಸರ್ವೋತ್ತಮನೆನಬಾರದೆ ||
ಜ್ಯೋತಿ ಸಂಗ ಉರಿದೋಗ್ವ ಕರ್ಪೂರದಂತೆ
ಪಾತಕರಾಶಿ ನಿಂತುರಿದು ಯೋಗವಾಗಿ ||
ಮಾತು||
ಸ್ನಾನ ಮಾಡುವಾಗ ನೇಮದಿ ಆತ್ಯಧ್ಯಾನವ ಮಾಡುವಾಗ |
ಜಾಣತನದೆ ಅನ್ನವುಂಡು ಗಂಗಾಮೃತ |
ಪಾನ ಮಾಡುವ ಕಾಲದಿ ಮನವೇ ||ಮಾತು ||
ಬಿಸಜಾಕ್ಷಿ ನೋಡುವಾಗ ಕೂಡುತ ನಿತ್ಯ ಒಸೆದು ಮಾತಾಡುವಾಗ |
ಬಸುರಲಿ ಬಂದ ಮಗನ ಮುದ್ದಿಸುವಾಗ
ಹಸನಾದ ವಸ್ತುಂಗಳುಡುವಾಗ ಮನವೆ ||ಮಾತು ||
ಬೆಟ್ಟವನೇರುವಾಗ ಕಾಲ್ಮುರಿದಲ್ಲಿ ತಟ್ಟನೆ ಬೀಳುವಾಗ ಅಷ್ಟಭೋಗದಿ ನಿತ್ಯಲೋಲುಪ್ತಿ ಪಡೆದಾಗ ದಟ್ಟ ದಾರಿದ್ರ್ಯ ಬಂದಾಗಲು ಮನವೇ ||ಮಾತು ||
ಸುಲಿವ ಕಳ್ಳನು ಬಂದಾಗ | ಫೋರಾರಣ್ಯದಲ್ಲಿ ವ್ಯಾಘ್ರನು ಮುರಿಯುವಾಗ |
ಚಳಿ ಜ್ವರ ಕೆಮ್ಮು ಉಬ್ಬಸ ರೋಗ ಮಳೆ ಗಾಳಿ ಸಿಡಿಲಿನಾರ್ಭಟದಲ್ಲಿ ಮನವೆ||ಮಾತು||
ಗುರುಸೇವೆಗೆಯ್ಯುವಾಗ ಶ್ರೀ ಗುರು ಕೊಟ್ಟ ವರಮಾತ್ರ ಜಪಿಸುವಾಗ |
ಗುರುವೆ ಗುರುವೇ ಕಲ್ಪತರುವೆ ಪಾಲಿಸು ಎಂದು |
ಗುರು ಮಹಾಲಿಂಗ ರಂಗನ ನಂಬಿ ಮನವೇ ||ಮಾತು ||

13
ಗುರುವಿನ ಕೃಪೆಗೆ ಗುರಿ ತಾನಾದರೆ

ಗುರುವಿನ ಕೃಪೆಗೆ ಗುರಿ ತಾನಾದರೆ ಜರಮರಣದ ಬೇರುಳಿದೀತೆ |
ಇಂಥ ಮರುಶೀಲಗಳಿಗೆ ಶರಣುಯೆಂದರೆ ಸ್ಥಿರ ಮುಕ್ತಿಯು ತನಗಾದೀತೆ ||ಪ||
ಮತ್ರ್ಯದ ಜಗವನು ಸತ್ಯದಿ ನಂಬಿರೆ ಕತ್ತೆಗೆ ಯಮಪದ ತಪ್ಪೀತೆ |
ಎತ್ತ ನೋಡಿದರೂ ತಾನೆ ತಾನಾದರೆ ಮತ್ತೆ ಮಾನವ ಭಯ ಅಂಟೀತೆ ||ಗುರು||
ಕಮಲದ ಮಧುರವು ಭ್ರಮರಕೆ ಅಲ್ಲದೆ ಕಪ್ಪೆಗೆ
ಆರತಿ ತೋರಿತೆ ಆ ಮಹಯೋಗಿ ಅಮನಸಕ ಭಾವವು ಹೀನಗೆ ತಿಳಿದೀತೆ ||1||
ಜಾರಿಯ ವಿಠಲನ ದಾರಿಯ ನೋಡುವ ನಾರಿಗೆ ಪತಿಮನ ತಿಳಿದೀತೆ |
ಒಡ್ಡಕೋರಿ ಮಾಡಲು ಸಾರಿ ಕರ್ಮಕ್ಕೆ ಚೋರರಿಗೆ ಜನ್ಮ ಅಳಿದೀತೆ ||ಗು||
ಕಾಣದೆ ಇಲ್ಲಿರುವ ಆತ್ಮನ ಭೇದವು ಕಾಣದಿನೆಲ್ಲಿಗೆ ಹೋದರೂ ಕಂಡೀತೆ,
ಇಲ್ಲೆ ಹುಡುಕಿ ಇಲ್ಲದಂತೆ ಇಲ್ಲೆ ಹುಡುಕಿ ಕಾಣದೆ ಹೋದೆ ||ಗುರು||
ಮಾಣದ ವಿಷಯವು ಕಾಣುತ ಭಯವನು ಕುರಿನರಿ ಜನ್ಮವು ತಪ್ಪೀತೆ
ಗುರುಲಿಂಗೇಶನ್ನೊಳ ಬೆರೆದೇಕನಾದರೆ ಮರಳಿ ಜನ್ಮಗಳುಳಿದೀತೆ ||ಗುರು||

14
ಬಲ್ಲವರ ನೀ ಸೇರು

ಇಲ್ಲದಂಗಡಿಯೊಳು ಅಲ್ಲೇನು ವ್ಯಾಪಾರ ಬಲ್ಲವರ ನೀ ಸೇರು ಕುರಿಯೇ
ಬಗೆ ಬಗೆ ವರ್ಣದ ಕುರಿಗಳ ಮೇಸುವ ಕುರುಬನ ನೀ ಸೇರು ಕುರಿಯೆ ||ಇಲ್ಲ||
ಆಳು ತೋಟಕೆ ನೀರುಯೆತ್ತಿ ತೋಳುಗಳು ಬೀಳುಬಿದ್ದಂತಾಯಿತು ಕುರಿಯೇ |
ಯಮನಾಳುಗಳು ಬಂದು ಎಳೆದು ಕೊಂಡೋಗುವಾಗ
ಮಾಳಿಗೆ ಮನೆಸೇರು ಕುರಿಯೇ ||1||
ಬುದ್ಧಿಯಿಲ್ಲದೆ ನೀನು ಭುವನವ ತಿರುಗುತಾ, ಕದ್ದು ಹೋಗಲು ಬೇಡ ಕುರಿಯೇ
ಸದ್ದುತಪ್ಪಲು ನಿನ್ನ ಯಮನಾಳುಗಳು ಬಂದು
ಗುದ್ದಿಕೊಂಡಳೆವರು ಕುರಿಯೇ ||ಇಲ್ಲ||
ಬೇದ ಬೇಸ್ತಗಳೊಳು ಗಾದಿ ಪುರಾಣಕ್ಕೆ, ಕೀಲು ಬಾಧೆ ಪಡಬೇಡ ಕುರಿಯೇ
ಆದಿಯನಾದಿಯ ಮೀರಿದ ಗುರುವನ್ನು ದೀರನ ನೀ ಸೇರು ಕುರಿಯೇ ||ಇಲ್ಲ||

15
ಅಷ್ಟದಳದ ಕಮಲದಲ್ಲಿ

ಮೇಲೆ ಮಂಟಪದಲ್ಲಿ ನೋಡಣ್ಣ |
ಪಾಲಾಕ್ಷಪಾಲ ಬ್ರಹ್ಮತನೊಳಗಿಹನು ಕಾಣಣ್ಣ |
ಕೀಳು ಮೇಲು ಮಾಡುತಾಯ್ತೆ |
ಮೇಲೆ ಜ್ಯೋತಿ ಬೆಳಗುತಾಯ್ತೆ |
ಗಾಳಿಗೋಪುರ ಗಗನದಲ್ಲಿ |
ಬಾಲಕೃಷ್ಣನ ಲೀಲೆಯಲ್ಲಿ ||ಮೆ||
ಎಷ್ಟುದಿನವಿಲ್ಲಿದ್ದರೇನಣ್ಣ | ಈ ಲೋಕದೊಳಗೆ ಕಷ್ಟವಾಯ್ತೆ ತಿಳಿಯೋ ನಮ್ಮಣ್ಣ |
ಅಷ್ಟದಳದ ಕಮಲದಲ್ಲಿ ಇಷ್ಟ ಲಿಂಗನ ಕೋಣೆಯಲ್ಲಿ |
ಮುಟ್ಟಿ ಪೂಜೆ ಮಾಡುವಂತ ಯೋಗಿ ಹಠವ ಸಾಧಿಸಣ್ಣ ||2||
ಯೋಗವೆಂಟನು ನೆಚ್ಚಬೇಡಣ್ಣಾ |
ನಿರ್ಗುಣರಾಜಯೋಗಿ ತನ್ನೊಳಗಿಹನು ಕಾಣಣ್ಣಾ |
ನಾಗ ಕೂರ್ಮ ದೆವದತ್ತ ಧನಂಜಯರಿರುವಣ್ಣಾ |
ಬಾಗಿಲೊಂಬತ್ತು ಮುಚ್ಚಿ ಭೋಗಿಶಯನನ ಸೇವಿಸಣ್ಣ ||3||
ವ್ಯಾನ ದಾನ ಪ್ರಾಣ ಅಪಾನ |
ಸಾಮಾನ್ಯರು ತನ್ನಲಿ ಇರುವರೇನಣ್ಣ |
ಪ್ರಾಣಕಾಂತನ ಪಟ್ಟದಲ್ಲಿ ಪ್ರಜ್ಞನಿರುವ ಸ್ಥಾನದಲ್ಲಿ |
ನಾನು ನೀನೆಂತೆಂಬ ಭೇದಯೇನಕಾರಣ ಬಂದಿತಣ್ಣಾ ||4||

ಜೀವಸ್ಥಾನವು ಯಾವುದೇಳಣ್ಣಾ |
ಈ ದೇಹದೊಳಗೆ ಜೀವಸಾಕ್ಷಿಯ ಇಹನೆ ಕಾಣಣ್ಣಾ –
ಜೀವಶಿವರಿಬ್ಬರಿಗೂ ಸರ್ವಸಾಕ್ಷಿ ಒಬ್ಬನಣ್ಣಾ |
ಜೀವಶಿವರೊಳು-ಐಕ್ಯವಾಗುವ ಸ್ಥಾನವದು ಬಹುಗೋಪ್ಯವಣ್ಣಾ ||1||
ಜ್ಞಾನವಂತನಾಗಬೇಕಣ್ಣಾ ಕೇಳಣ್ಣ ಕೇಳು ಅಜ್ಞಾನವ ಖಂಡಿಸಬೇಕಣ್ಣಾ
ಜ್ಞಾನವೆಂಬೋ ಖಡ್ಗ ಪಡೆದು ಅಜ್ಞಾನವೆಂಬೋ ಕುರಿಯ ಕಡಿದು
ಜ್ಞಾನಗುರುವಿನ ಪಾದ ಪಿಡಿದು ತಾನು ಧನ್ಯನಾಗಬೇಕಣ್ಣಾ ||ಮೇಲೆ||
ಕರ್ಮಕಾಂಡವ ಕಳಿಯಬೇಕಣ್ಣಾ |
ಹರಿಭಕ್ತನಾದರೆ ಗುರುಸ್ಮರಣೆಯ ಮಾಡಬೇಕಣ್ಣಾ |
ಗುರುಸ್ಮರಣೆಯ ಮಾಡಬೇಕು |
ಗುರುತು ತನ್ನೊಳರಿಯಬೇಕು |
ಹರವು ತೋರಿದ ಗುರುಲಿಂಗೇಶನ |
ಮರೆಯದಿರುವುದು ಮರ್ಮವಣ್ಣಾ ||ಮೇಲು||

16
ಜಪಿಸು ಪಂಚಾಕ್ಷರಿಯ

ಜಪಿಸು ಜಪಿಸು ಪಂಚಾಕ್ಷರಿಯ ನಿಪುಣ ಜ್ಞಾನದ ಶಿವಸಿರಿಯಾ ||ಜಪಿಸು||
ವೇದಶಾಸ್ತ್ರ ಕುಲಾಧಿಪತಿಯ |
ಗುರುನಾಥ ಬ್ರಹ್ಮನೆ ಕೊಡು ಮತಿಯಾ ||ಜಪಿಸು||
ಮಡದಿಯು ಮಿಂಡನ ಕೂಡಿರಲಿ |
ಕಡು ಮೋಹದ ಮಗ ಸತ್ತು ಮಲಗಿರಲಿ ||ಜಪಿಸು||
ಸಾಲಗಾರನು ಬಂದು ಬಾಧಿಸಲಿ |
ಶಿರಸವನೆತ್ತಿ ಶೂಲಕಾಕಿರಲಿ ||ಜಪಿಸು||
ಪೋಲಿಯು ಇವನೆಂದು ದೂಷಿಸಲಿ ಕೆಟ್ಟ ಕಾಳಿಂಗ ಸರ್ಪವು ಕಚ್ಚಿರಲಿ ||ಜಪಿಸು||
ಬಂದೆಲ್ಲವೂ ಬಂದಿರಲಿ ನಮ್ಮ ಗುರುಲಿಂಗೇಶನ ದಯ ನಮಗಿರಲಿ ||ಜಪಿಸು||

17
ಪರರನ್ನು ದೂಷಿಸಿ

ಗುರುನಾಮ ಸ್ಮರಣೆ ಸ್ಮರಿಸೋ ಈ ಭವ ಮಾಯೆಯ ಪರಿಹರಿಸೋ |
ಮಾಯೆಯ ಪರಿಹರಿಸೋ ಈ ಭವ ಅಲೆಯ ಪರಿಹರಿಸೋ ||ಗುರು||
ಮೂರು ದಿನದ ಸಂತೆ ಆತ್ಮನಾ ಕಾಣದ ನೀ ಕುಂತೇ |
ಇನ್ನೇಕೆ ಪರರ ಚಿಂತೆ ನಾಳೆಮಕೇಳಿದರೇನಂತೇ ||1||

ಮಂಗಳಾ ಮೂರುತೀ ಜಂಗಮ ಪ್ರಭುರಾಯ |
ಸಂಗಯ್ಯ ಬಸವಣ್ಣಾ ಸಾಧು ಶರಣಾರಿಗಳಾಗಿ ||2||
ಮಡಿವಾಳ ಮಾಚಯ್ಯ ಮಧುವರಸ ರುದ್ರಯ್ಯ |
ಅಂಬಿಗರ ಚೌಡಯ್ಯ ಇವರು ಗಂಗಮ್ಮನಾಳಾಗಿ ||
ಕುಂಬಾರ ಗುಂಡಯ್ಯ ಕೆಂಬಾವಿ ಬೋಗಯ್ಯ |
ಬಹುಶರಣಾರ ಹೊನ್ನಯ್ಯ ಸಾಧು ಶರಣಾರಿಗಾಳಾಗಿ ||ಗುರು||
ಆಯಸ್ಸು ಅಂತಸ್ತು ರಾತ್ರಿಗೆ ಕಳೆದಾವು ಇವತ್ತು ಪ್ರಾಯಕ್ಕೆ
ಮೂವತ್ತು ಪ್ರಾಯದ ಕಾಯಕ್ಕೆ ಇಪ್ಪತ್ತು ||
ಆಸೆ ಮಾಡಲು ಬೇಡ ಪರರನ್ನು ದೂಷಿಸಿ ಕೆಡಬೇಡ
ಮೋಸ ಮಾಡಲು ಬೇಡ ಗುರುಲಿಂಗೇಶನ ಮರೆಯಬೇಡ ||

18
ನಿನ್ನೊಳೆನ್ನ ಬೆರೆಸೋ ತಂದೆ

ಯಾಕೆನಗೆ ಜನ್ಮಪದವಿಯೋ ಶ್ರೀ ಶಂಬುಲಿಂಗಾ |
ಸಾಕು ಮಾಡು ಈಸಲಾರೆನೋ ಕಾಕುಮನದಿ ಕಪಟಕರ್ಮ |
ವಿಷಯ ವ್ಯಸನದೊಳಗೆ ಸಿಲುಕಿ ಲೋಕನಾಥ
ನಿನ್ನೊಳೆನ್ನ ಏಕಮಾಡಿ ಬೆರಸೊ || ತಂದೇ || ಪ ||
ಆಸೆಯೆಂಬ ದೋಷ ಎನ್ನನ್ನು ಮುಸುಕಿ ಬಹಳ ಗಾಸಿ ಮಾಡಿ ಸುಡುತಲಿದೆ |
ಕ್ಲೇಶವೈ ಮಂತ್ರಿ ಗುಣ ಮೂರು ಲೇಶ ಮಾತ್ರ ತೋರಗೂಡದೇ |
ಈಶನಂಘ್ರಿಯ ಪಾದಕೆ ಮಾಡಲಾಶೆ ಇತ್ತು ಕಾಯೋ ತಂದೆ ||ಯಾಕೆ||
ಹೊನ್ನು-ಹೆಣ್ಣು-ಮಣ್ಣು ಮೂರನು ಎಡೆಬಿಡದೆ ನಾನು ಕಣ್ಣ ಕೆಟ್ಟು
ಕುರುಡನಂದದೀ ಇನ್ನು ಇರದೆ ತೊಡರನರಸಿ ನಿಮ್ಮ ಮಮತೆಯೊಳಗಿರಿಸಿ |
ಹೀನ ಬುದ್ಧಿಗಳನು ಬಿಡಿಸಿ ನಿನ್ನೊಳೆನ್ನ ಬೆರೆಸೋ ತಂದೆ ||ಯಾಕೆ||
ಎನ್ನ ಕರದಿ ನೀವೇ ಇರುತಿರೆ ಶ್ರೀ ಶಂಭುಲಿಂಗಯ್ಯಾ ಯೆನ್ನಗಲಿ ನೀವೇ ಪೋಪರೆ|
ಎನ್ನ ಗುರುವು ಇಷ್ಟಲಿಂಗ ನಮ್ಮ ಕರದೊಳಿಟ್ಟು |
ಯನ್ನ ಮನ ಮಾಡಿದಂತೆ ಆದ ಭಾಷೆಯನ್ನು ಮರೆವರೆ ತಂದೆ ||ಯಾಕೆ||
ನೋಡಲಂಜಿ ನಮ್ಮ ಸ್ಮರಿಸುವೇ ಬ್ಯಾಡೋ ಶಿವನೇ ನಿಮ್ಮ ಬೇಡಿಕೊಂಬೆ ಕರಪುರೀಶ|
ಕೂಡಿದಾಂಗಿ ನ್ಯಾಯನಗಲಿ |
ಬಿಡದೆಮ್ಮ ಪ್ರಮಥರಾಣಿ || ಯಾಕೆನಗೆ ||

19
ಇವನೆಂತ ಕಲಿಗಾರ

ಅಮ್ಮಿ | ಯನ್ನಗಂಡ ಇವನೆಂತ ಕಲಿಗಾರ ಪುರುಷನಮ್ಮಿ |
ಬಂಧು ಬಳಗವೆಲ್ಲ ಕರಸಿದರಮ್ಮೀ ಅಷ್ಟದಿಕ್ಕಿನೊಳ್ ಆಸೆಯನ್ನು ಬರೆದರಮ್ಮೀ
ಮೇಲ್ಕಟ್ಟಿ ಚಪ್ಪರ ಕಟ್ಟಿದರಮ್ಮೀ ಅಲ್ಲಿ ರತ್ನದ ಕಳಸವ ಊಡಿದರಮ್ಮೀ ||ಅಮ್ಮೀ||
ಮುತ್ತೈದೆರೈದು ಮಂದಿ ಕರೆಸಿದರಮ್ಮಿ ಶಕ್ತಿ ಸಂತೋಷ ಸೋಬಾನ ಪಾಡಿದರಮ್ಮೀ |
ಬಾಬಾಯೆಂದು ಕರದಾರಮ್ಮಿ | ಅಲ್ಲಿ ಪದ್ಮಾಸನದಲ್ಲಿ ಕೂರಿಸಿದರಮ್ಮಿ ||ಅಮ್ಮಿ||
ಯೆನ್ನಂಗವನೆಲ್ಲ ನೋಡಿದರಮ್ಮಿ | ಅಲ್ಲಿ ಮೂರ್ಹೆಜ್ಜೆ ಭೂಮಿಯ ಕೇಳಿದರಮ್ಮಿ |
ಯನ್ನೆತ್ತಿಯ ಮೇಲೆ ವುವ್ವನಿಟ್ಟರಮ್ಮಿ ||ಅಮ್ಮಿ||
ಯೆನ್ನಂಗಕೆ ಲಿಂಗವಧರಿಸಿದರಮ್ಮಿ |
ಯೆನ್ನ ಕಿವಿಯೊಳು ಅಮೃತ ಸುರಿಸಿದರಮ್ಮಿ |
ಯೆನ್ನಲಿಂಗವಂತರಾಗಿ ಮಾಡಿದರಮ್ಮಿ |
ಆಲಿಂಗಾದ ನಿರ್ಣಯ ಹೇಳಿದರಮ್ಮೀ ಯೆನಗೆ ಮುಕ್ತಿ ಮಾರ್ಗವ ತೋರಿದರಮ್ಮೀ|
ಆನಂದವೆಂಬ ಆದಿಯ ನೆಲೆಯ ತೋರಿದರಮ್ಮಿ ||ಅಮ್ಮಿ||

20
ಪರಿಣಯವು ಯನಗಾಯ್ತು

ಪರಿಣಯವು ಯನಗಾಯ್ತು |
ಮರಣವಿಲ್ಲದ ವರನ ವರಿಸಿ ನಾ ನಿತ್ಯ ಮುತ್ತೈದೆಯಾದೆನು |
ಸಖಿಯೆ ಬಹುಪುಣ್ಯ ಫಲದಿ ||ಪ||
ಕೂಡಿ ನಾನಾಮತದ ವಾದಿಗಳು ಬಂದು
ಬೇಡಿದರು ಪುತ್ರಿಯನು ಕೊಡಿ ಯಮಗೆಯೆಂದು ||1||
ಜಾತಿಕೂಟವೈಕ್ಯವಾಗುವುದು ನೋಡಿ |
ಮಾತುಕೊಟ್ಟರು ಲಗ್ನ ನಿಚ್ಚಯ ಮಾಡಿ |
ಪರತತ್ವವೆಂತೆಂಬ ಎಣ್ಣೆಯನ್ನು ಬಳಿದು |
ದುರಿತ ಜಾಲಗಳೆಂಬ ಕೊಳೆಯೆಲ್ಲ ಕಳೆದು ||2||
ಗುರುಭಕ್ತಿಯೆಂಬ ಸಂಕಲಿಕೆಯನ್ನು ಉಡಿಸಿ |
ಕರಣ ಶಾಂತಿಗಳೆಂಬ ಕುಪ್ಪಸವತೊಡಸಿ ||
ಪರಮಾತ್ಮವೆಂಬ ಸೂತ್ರವನ್ನು ಅನುಸರಿಸಿ |
ಸ್ಥಿರಬುದ್ಧಿಯೆಂಬ ಬಾಸಿಂಗವನ್ನು ಧರಿಸಿ ||
ಪೂರ್ವ ಸುಕೃತಗಳೆಂಬ ತರುಣಿಯರು ಮುದದಿ

ಸೇರಿಸಿದರೆನ್ನದ್ವೈತ ಮಂಟಪದಿ ||3||
ಗುರುದೀಕ್ಷೆಯೆಂಬ ಅಗ್ನಿಕುಂಡವನೆಯಿಟ್ಟು |
ಮರವೆಯೆಂಬ ಸಮಿತ್ತುಗಳನೆಲ್ಲ ಸುಟ್ಟು |
ಪರಮಪಾಪಿಯ ಕಣ್ಗೆ ಗೋಚರಿಸದಿರುವ |
ಕರದಿ ಕಟ್ಟಿದ ಸೋಹಂವೆಂಬ ಕಂಕಣವ |
ಮತ್ತೆ ಸುಮೂಹರ್ತದಲ್ಲಿ ಕಟ್ಟಿದನುಗಳದಿ |
ತತ್ವಮಸಿಯೆಂಬ ಮಾಂಗಲ್ಯವನ್ನು ಮುದದಿ ||4||
ಸಾರತರ ದಶವಿಧದ ನಾದಗಳು ಮೊಳಗೆ
ಧಾರೆಯೆರದರು ಎನ್ನ ಪರಮ ಪುರುಷನಿಗೆ |
ಅಜ್ಞಾಭಾವನೆಯೆಂಬ ಬಾಲ್ಯವನ್ನು ಕಳೆದು |
ಸುಜ್ಞಾನವೆಂಬ ಘನಯೌವನವನ್ನು ಕಳೆದು ||5||
ತೊರೆದು ಹೊರಗಣ ಬಂಧು ಬಳಗವನ್ನು |
ಸ್ಮರಿಸುತಿಹೆನು ಎನ್ನ ಗುರುಚರಣಗಳನ್ನು |
ಮುಂದೈದು ದಿನಕೆ ಶೋಭನವು ನಿಶ್ಚಯವಾಯಿತ್ತು |
ಸಂದೇಹವೆಂಬ ಹುಡುಗಾಟ ಬಯಲಾಯ್ತು |
ಮೀರಿ ಪ್ರಾರಬ್ಧವೆಂತೆಂಬ ಲಜ್ಜೆಯನ್ನು ಏರಿದನು
ಆನಂದವೆಂಬ ಮಂಚವನು ||6||
ಯಾರು ಸರಿ ಯನಗಿನ್ನು ಜನನ ಮರಣಗಳಿಲ್ಲ
ತೋರಿದಲ್ಲಿನ ಸುಖವ ಪರಶಿವನೇ ಬಲ್ಲ |
ಪರತರ ನಂದರ ಸಮೀಪ ಬರಬಿಡದೆ |
ಮರೆತು ದೇಹವ ಗುರುಲಿಂಗೇಶನೊಳ್ ಬರದೆ ||7||

21
ಶ್ರೀ ಗಿರಿಯ ಶರೀರದೊಳು

ಶ್ರೀ ಗಿರಿಯ ಸುಕ್ಷೇತ್ರಕ್ಕೆಂದು ಹೋಗಿ ಯಾತ್ರೆಯ ಮಾಡಿ ಬಂದೆ
ಶ್ರೀ ಗಿರಿಯ ಶರೀರದೊಳು |
ಓಂ ಶ್ರೀ ಗುರುಸಿದ್ಧ ಯೋಗಿ ಜನರಿಗೆ ಮರ್ಮವು ಬೇರುಂಟು ||ಪ||
ಆರು ಬೆಟ್ಟದ ದಾಂಟಿ ನಡೆದು ಮೂರು ಕೊಳ್ಳವ ಮೂಲಗಳಿದು |
ಏರಿದೆನು ಕೈಲಾಸದ್ವಾರವ ಓಂ ಶ್ರೀ ಗುರುಸಿದ್ಧ
ಸಾರಿ ಬಡಗಲ ಗುಡಿಯ ಕಂಡೆನು ||ಪ||
ಏಳುಸುತ್ತಿನ ಕೋಟೆಯೊಳಗೆ ನೀಲದುಪ್ಪರಿಗೆಗಳ
ನಡುವೆ ತಾಳ ಮರ್ದಳ ಭೇರಿ ಘಂಟೆಗಳು

ಓಂ ಶ್ರೀ ಗುರುಸಿದ್ಧ ವೇಳೆವೇಳೆಗೆ ತಾವೆ ನುಡಿವವು ||2||
ಒಂಬತ್ತು ಬಾಗಿಲುಗಳದರೊಳಿಂಬಾದ ಬೀದಿಗಳು ನಾಲ್ಕು
ತುಂಬಿ ಸೂಸುವ ಕೊಳಗಳೇಳುಂಟು
ಓಂ ಶ್ರೀ ಗುರುಸಿದ್ಧ ಸ್ತಂಭವರದು ಶಿಬಿರವೊಂದುಂಟು ||ಪ||
ಪಾತಾಳ ಗಂಗೆಯೊಳು ಮಿಂದುವೋತು ಶಿಬಿರೀಶ್ವರನಿಗೇರಿ
ಜ್ಯೋತಿರ್ಲಿಂಗಕೆ ದೃಷ್ಟಿಯಿಟ್ಟನೋ
ಓಂ ಶ್ರೀ ಗುರುಸಿದ್ಧ ಜ್ಯೋತಿರ್ಲಿಂಗವು ಕರದಿ ಕಾಣಿಸಿತು ||ಪ||
ಬರುವು ಕೋಣಗಳೆಂಟು ಬಡಿದೆ ಹರಿಯ ಹುಲಿಗಳ |
ನಾರ ಕಡಿದೆ ಮೆರೆವ ಸರ್ಪನ ಹೆಡೆಯ ಮಟ್ಟಿದೆನೋ
ಓಂ ಶ್ರೀ ಗುರುಸಿದ್ಧ ಚರಿಪ ಕಪಿಯನು ಹಿಡಿದು ಕಟ್ಟಿದೆನೊ ||ಪ||
ಸಪ್ತನದಿಯ ಸಂಗಮ ದಾಂಟಿ ಗುಪ್ತಕದಳಿಯ ಬನದೊಳು |
ಸುಳಿದಲ್ಲಿ ಸ್ವಗುಹೆಯೊಳಗೊಬ್ಬನೆ ಹೊಕ್ಕೆನೋ
ಓಂ ಶ್ರೀ ಗುರುಸಿದ್ಧ ಸಪ್ತವರ್ಣದ ಅಂಗವ ಕಂಡೆನೊ ||ಪ||
ಇಂದ್ರ ದಿಕ್ಕಿನೊಳಿದ್ದ ಸೂರ್ಯ ಚಂದ್ರಗುಪ್ತದ |
ಪುರದೊಳು ಮುಳಗೆ ಚಂದಚಂದದ ಬೆಳಕು ತೋರ್ಪುದು |
ಓಂ ಶ್ರೀ ಗುರುಸಿದ್ಧನಿಂದು ನೋಡಲು ಬಯಲಿಗೆ ಬಯಲದು ||ಪ||
ಗಿರಿಯ ಶಿಬಿರ ಅಗ್ನಿ ಮುಖದೊಳಿರುವ |
ಅರ್ಕೇಶ್ವರನ ಹಿಂದೆ ಸುರಿವುದಾಮೃತನ ಪಂಚದಾಶೆಯ |
ಓಂ ಶ್ರೀ ಗುರುಸಿದ್ಧ ಅರಿತು ಸೇವಿಸು ಮರಣವಿಲ್ಲವು ||ಪ||
ಇಂತು ಶ್ರೀ ಶೈಲವಶ ನವಭ್ರಾಂತಿಯಳಿದು |
ತಿರುಗಿ ನೋಡಿಯಂತರಂಗದ ಗುಡಿಯ ಹೊಕ್ಕನೋ |
ಓಂ ಶ್ರೀ ಗುರುಸಿದ್ಧ ಶಾಂತಿಯಿಲ್ಲದೆ ನೀನೆಯಾಗಿರ್ದೆ ||ಪ||

22
ಜಾಗರದಲಿ ಜಾಗರನಾಗಿ

ಜಾಗರದಲಿ ಜಾಗರನಾಗಿ ಗುರುವಿನಂಘ್ರಿಯಾ ಹೊಂದು |
ಶೀಘ್ರದಿಂದ ದಾಂಟಿಸುವನು ಭವದ ಶರಧಿಯಾ ||ಪ||
ಬೂರುಗದ ಫಲವ ಗಿಣಿಯು |
ಆರು ಮಾಸವೂ ಕಾದು ಹಾರಿ ಪೋದುದಿನಿತು ಸಾರವರಿಯದಾಪರಿ |
ಘೋರ ಸಂಸಾರ ವೃಕ್ಷದ ಫಲವು |
ನೂರು ವರ್ಷ ಕಾಯ್ದುವರಿಲ್ಲವೆಂಬುದವರಿತುಕೋ ||ಪ||

ಶರದಿ ಅಲೆಗಳಡಗಿದಾಗ ಸ್ನಾನಗೈಯ್ಯುವೆನೆಂದು ಮರಳುನೋರ್ವ ಕಾಯ್ದಪರಿ ಸಂಸಾರವೆಂಬುದು |
ಶರಧಿಯಲ್ಲಿ ಪುತ್ರ ಮಿತ್ರ ಗೋತ್ರ ಬಾಂಧವ |
ರೆಂಬ ತೆರಗಳಡಗಿದಾಗ ಶಿವನ ಭಜಿಪೆನೆನ್ನದೆ ||ಪ||
ಕೋಟಿಗೊಂದು ಮಾತು ಪೇಳ್ವೆ ಜಗವಿದೆಲ್ಲವು ಮಿಥ್ಯೆ ಬೂಟಕಿದನು
ಸ್ವಪ್ನದಂತರಿತು ನಿನ್ನಯ | ದೃಷ್ಟಿಯೊಳಗೆ ಗುರುಮಹಲಿಂಗರಂಗನ ಕಂಡು |
ನಿಷ್ಠೆಯಿಂದ ಭಜಿಸಿ ನಿತ್ಯಮುಕ್ತನಾಗಲೋ ||ಪ||

23
ಗುರುವಿನ ಮಹಿಮೆ ತಿಳಿಯಲಾಗದು

ಗುರುವಿನ ಮಾಯ ತಿಳಿಯಲಾಗದು ನರಮಾನವರಿಗೆ ಗುರುವಿನ ಮಹಿಮೆ ತಿಳಿಯಲಾಗದು ||ಗುರು||
ಹಿರಿಯವನೆಂದು ಹಿಗ್ಗಲುಬಹುದು |
ಬರಿಯ ಮಾತುಗಳ ಆಡಲುಬಹುದು ಅರಿವು ಮರವೆಯ ನಿಲ್ಲಿಸಿ ಗುರುವಿನ ಹರುವ ತಿಳಿಯಲಾಗದು ||ಪ||
ಅನ್ನದಾನವು ಮಾಡಲುಬಹುದು ಹೊನ್ನನು ಚಿನ್ನವ ಗಳಿಸಲುಬಹುದು ತನ್ನ
ಚಿತ್ತವ ತಾನೆ ನಿಲಿಸಿ ನಿರ್ಧಾರನಾಗಿರಲಾಗದು ||ಪ||
ದಂಡಿಯನ್ನು ಹಿಡಿಯಲುಬಹುದು ಮಂಡೆ ಬೋಳಗಳು ಆಗಲುಬಹುದು.
ಕೊಂಡಗುರುವಿನ ಪಾದವ ಕಂಡು ಅಬಂಡನಾಗಿರಲಾಗದು ||ಗುರು||
ಮುದ್ರೆಯನ್ನು ಹಿಡಿಯಲು ನಿದ್ರೆ ಆಹಾರವ ತೊರೆಯಲುಬಹುದು |
ಭದ್ರ ಆಸನದಲ್ಲಿ ಕುಳಿತು ನಿರ್ಧಾರನಾಗಿರಲಾಗದು ||ಪ||
ಹರನ ನಾಮವ ಹೊಗಳಲುಬಹುದು |
ಕರವ ಜೋಡಿಸಿ ನಿಲ್ಲಲುಬಹುದು |
ಅರುಹು ಮರೆವೆಯ ನಿಲ್ಲಿಸಿ ಗುರುವಿನ ಕುರುಹ ತಿಳಿಯಲಾಗದು ||ಗುರು||
ನೀರಿನೊಳು ಮುಳುಗಲುಬಹುದು |
ನಾರಿಯರನು ತೊರೆಯಲುಬಹುದು |
ಮಾರಜನಕನ ಗುರುರಾಯನ ಸೇರಿ ಭಜಿಸಲಾಗದು ||ಗುರು||
ಕಾಸೆಯನ್ನು ಕಟ್ಟಲುಬಹುದು |
ದೇಶವನ್ನು ತಿರುಗಲುಬಹುದು |
ಆಸೆಪಾಶನ ವ್ಯಸನವ ಬಿಟ್ಟು ಲೇಸಿನಿಂದಿರಲಾಗದು ||ಗುರು||

24
ನರಿಯ ಮೇಲೆ ಕೋಳಿ

ಬೆಕ್ಕಿನ ಮೇಲೆ ಒಂದು ಗೋಣಿ ಹೇರಿಕೊಂಡು ಇಲಿಯು ಸಂತೆಗೆ ಹೋಗುತ್ತಿತ್ತು |
ಸಂತೆ ಒಳಗೆ ಒಂದು ಇರುವೆ ನಿಂತುಕೊಂಡು ಆನೆಯ ವ್ಯಾಪಾರ ಮಾಡುತ್ತಿತ್ತು ||ಪ||
ಬೆಕ್ಕಿನ ತರಗತಿ ಗುಡ್ಡದ ಮೇಲೆ ಇರುವಿನ ಸಾಲೊಂದು ಹರಿತಿತ್ತು |
ಹಿಂದಲ ಇರುವಿಗೆ ಮುಂದಲ ಇರುವೆ ತಾನೊಂದು ಧೈರವ ಕೊಡುತ್ತಿತ್ತು |
ಮಧ್ಯದಲ್ಲಿದ್ದ ಇರುವೆ ತಾನೊಂದು ಅರ್ಜಿಯ ಬರಕೊಂಡು ಹೋಗುತ್ತಿತ್ತು |
ಬೇಲಿಲಿರುವ ಗೀಜಗನ ಹಕ್ಕಿ ಟಪಾಲು ತೆಗೆದುಕೊಂಡು ಹೋಗುತ್ತಿತ್ತು |
ಕಲಿಯುಗದೊಳಗೆ ಕಾಮುಕರೆಚ್ಚಿ ನಾರಿ ಕಣ್ಣಲ್ಲಿ ನಿಂತಿತ್ತು ||1||
ನೊಣವಿನ ಮೇಲೆ ಹಣ ಹೇರಿಕೊಂಡು ಅದು ಒಂದು ಸಂತೆಗೆ ಹೋಗುತ್ತಿತ್ತು |
ಕಿರುಬನ ಮೇಲೆ ಕತ್ತೆಯೇರಿಕೊಂಡು ಅದು ಒಂದು ಸಂತೆಗೆ ಹೋಗುತಿತ್ತು |
ಹೆಗ್ಗಣ ಸುಂಡ ಎರಡು ಸೇರಿಕೊಂಡು ಬನಾತಿನ ಕವಚ ಹೊಲಿತಿತ್ತು |
ನಾಯಿ ಮೊಲ ಎರಡು ಸೇರಿಕೊಂಡು ಗುಡ್ಡಕ ಬಂದೂಕ ಹೊಡಿತಿತ್ತು |
ಹೊಡೆದ ಪೆಟ್ಟಿಗೆ ದಡುವಲಾಗಿ ಕೊನೆಯ ಮೇಲಾಗಿ ಬಿದ್ದಿತು ||1||
ಅತ್ತೆ ಸೊಸೆಯ ಜಗಳದೊಳಗೆ ಗಿಣಿ ನ್ಯಾಯವ ಮಾಡುತಿತ್ತು |
ಗೂಡಲಿರುವ ಕಾಡುಹಕ್ಕಿ ಅದ ವಂದು ಮಾತು ಕೇಳುತ್ತಿತ್ತು |
ನೀರುವೊಳಗಿರುವೊ ಮೀನು ಮೊಸಳೆ ಶಿವನ ಪಾದವ ಬೇಡುತ್ತಿತ್ತು |
ಕಾಡಿನ ತರುವೋ ಸಿಪಲೆ ಹೂ ರಾಜ್ಯಭಾರವನಾಳುತ್ತಿತ್ತು |
ಹಾವು ಕೀರ ಎರಡು ಸೇರಿ ದಾವಾದಾಖಲ್ ಮಾಡುತ್ತಿತ್ತು |
ನರಿಯ ಮೇಲೆ ಕೋಳಿ ಕೂತುಕೊಂಡು ಜಾವ ಜಾವಕ್ಕೆ ಕೂಗುತ್ತಿತ್ತು |
ತೋಳನ ಮೇಲೆ ಆಡು ಏರಿಕೊಂಡು ಇಂದ್ರಲೋಕಕ್ಕೆ ಹೋಗುತ್ತಿತ್ತು |
ಬೇಲಿಲಿರುವೋ ಗೀಜಗನಹಕ್ಕಿ ಪುಸ್ತಕ ಪುರಾಣ ಓದುತಿತ್ತು |
ಬಿಲ್ಲಾಳ ದೇಶದ ಪಾದವ ಬೇಡಿಕೊಳ್ಳಿರಾ ಈ ಮಾತು ||3||

25
ರಾಗಿಯ ತಂದಿರಾ

ರಾಗಿಯ ತಂದಿರಾ ಭಿಕ್ಷಕ್ಕೆ ರಾಗಿಯ ತಂದಿರಾ |
ತ್ಯಾಗಿಯರಾಗಿ ಬೋಗಿಯರಾಗಿ ಭಾಗ್ಯವುಳ್ಳವರಾಗಿ ಒಳ್ಳೆರಾಗಿ ||ಪ||
ನಾನಾ ಯೋನಿಯಲಿ ಪುಟ್ಟವರಾಗಿ | ಮಾನವ ಜನ್ಮಕೆ ಬರದವರಾಗಿ |
ಜ್ಞಾನಾಮಾರ್ಗವನು ತಿಳಿದವರಾಗಿ |
ದಾನಧರ್ಮವ ಮಾಡುವರಾಗಿ ಒಳ್ಳೆರಾಗಿ ||1||

168 / ತತ್ವಪದಗಳು ಸಂಪುಟ-1

ಮಾತಾಪಿತರಿಗೆ ಮರೆತವರಾಗಿ | ಪಾತಕದಲಿ ಮರುಳುವರಾಗಿ |
ನೀತಿವಂತರ ಜರೆಯವರಾಗಿ ಪಾತಕ ಮಾಡುವರಾಗಿ | ಒಳ್ಳೆರಾಗಿ ||2||
ಅನ್ನ ಛತ್ರವ ಇಡಿಸುವರಾಗಿ | ಕನ್ಯಾದಾನವ ನಡೆಸುವರಾಗಿ |
ಅನ್ನ ದೈವವ ಬಿಟ್ಟವರಾಗಿ | ಮಾನ್ಯರು ನಡೆಸುವರಾಗಿ || ಒಳ್ಳೆರಾಗಿ ||2||
ಭಾಷೆ ಕೊಟ್ಟು ತಪ್ಪುವರಾಗಿ ಮೋಸಮಾಡಿ ಕೊಲ್ಲುವರಾಗಿ |
ಯೇಸು ಜನ್ಮಕ್ಕೆ ಬಂದವರಾಗಿ |
ಭಾಷೆ ಪಾಲಿಪರಾಗಿ ||ಒಳ್ಳೆರಾಗಿ||
ತುರುವೇಗೆರೆ ಈಸನಭಜಿಪರಾಗಿ |
ಪರಮಯೋಗಿತರಾಗಿ ಒಳ್ಳೇರಾಗಿ ||ತಂದಿರಾ||

26
ಮುಳ್ಳ ಕೊನೆಯ ಮೇಲೆ

ಮುಳ್ಳ ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ |
ಎರಡು ಬತ್ತಿ ಹೋದ್ರೆ ಒಂದರಲ್ಲಿ ನೀರೆಯಿಲ್ಲ ||ಪ||
ನೀರಿಲ್ಲದ ಕೆರೆಗೆ ಬಂದರು ಮೂವರು ವಡ್ಡರು |
ಇಬ್ಬರು ಹೆಡ್ಡರು ಒಬ್ಬನಿಗೆ ಬುದ್ಧಿಲ್ಲ |
ಬುದ್ಧಿಯಿಲ್ಲದ ವಡ್ಡನು ಕಟ್ಟೀದ ಮೂರು ಹಳ್ಳಿಗಳು |
ಎರಡು ಹಾಳಾದ್ರೆ ಒಂದ್ರಲ್ಲಿ ಒಕ್ಕಲೇಯಿಲ್ಲಾ |
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು
ಇಬ್ಬರು ಮೋಟರು ಒಬ್ಬನಿಗೆ ಕೈಯೇಯಿಲ್ಲ |
ಕೈಯಿಲ್ಲದ ಕುಂಬಾರ ಮಾಡಿದ ಮೂರು ಮಡಕೆಗಳ |
ಎರಡು ದದ್ದಾದ್ರೆ ಒಂದಕ್ಕೆ ತಳವೇಯಿಲ್ಲಾ ||1||
ತಳವಿಲ್ಲದ ಮಡಕೆಗೆ ಹಾಕಿದರ್ ಮೂರು ಅಕ್ಕಿಕಾಳು |
ಎರಡು ಮುಳ್ಳಕ್ಕಿ ಒಂದು ಬೇಯಲೇಯಿಲ್ಲಾ |
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು |
ನೆಂಟರು ಇಬ್ಬರು ವಾಪಸ ಒಬ್ಬನಿಗೆ ಅನ್ನವೇಯಿಲ್ಲಾ |
ಅನ್ನವಿಲ್ಲಾದ ನೆಂಟನು ತಂದಿದ್ದ ಮೂರು ಹೊನ್ನುಗಳ
ಎರಡು ಸಾಲೋದರೆ ವಂದು ಮುಚ್ಚೆಲೇಯಿಲ್ಲಾ ||2||
ಇಡಲಿಲ್ಲದವನಿಗೆ ಬಂದರೂ ಚಿನ್ವಾರರೂ ಬಂದಿದ್ದ |
ಇಬ್ಬರು ಚೋರರು ವಬ್ಬ ಕಳಕಳ್ಳ |
ಕಳ್ಳನಾದ ಚಿನ್ವಾರನು ತಂದಿದ್ದ ಮೂರು ಎಮ್ಮೆಗಳು ಎರಡು ಗೊಡ್ಡಾದ್ರೆ ಒಂದು ಈಯ್ಲೇಯಿಲ್ಲ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 169

ಈಯಲಿಲ್ಲದ ಎಮ್ಮೆಗೆ ಬಂದರು ಮೂವರು ಸಾಹುಕಾರರು |
ಇಬ್ಬರು ಕುರುಡರು ಒಬ್ಬನಿಗೆ ತುರುಬೇಯಿಲ್ಲ |
ತುರುಬಿಲ್ಲಾದ ಹೆಣ್ಣಿಗೆ ತಂದರು ಮೂರು ಸೀರೆಗಳ |
ಎರಡು ವಳ್ಳಾದ್ರೆ ಒಂದು ತತಾತೂತು |
ತತಾತೂತಿನ ಸೀರೆಗೆ ತಂದರು ಮೂರು ಸೂಜಿಗಳ |
ಎರಡು ಮೋಟಾದ್ರೆ ಒಂದಕ್ಕೆ ತೂಬೇಯಿಲ್ಲಾ |
ತೂಬಿಲ್ಲಾದ ಸೂಜಿಯ ಯಾರಣ್ಣ ಬಲ್ಲರು |
ಗುರುಲಿಂಗೇಶ್ವರೇ ತಾನೇ ಬಲ್ಲ ||4||
170 / ತತ್ವಪದಗಳು ಸಂಪುಟ-1

170 / ತತ್ವಪದಗಳು ಸಂಪುಟ-1

27
ಆಸೆಗಾಗಿ ದೇಶ ತಿರುಗಿ

ಯನ್ನ ಗುರು ಇನ್ನೇಯಂತ ದೊಡ್ಡವರು ಹರಿಹರನೇ ಶಂಬೋ |
ತನ್ನ ಮಾರ್ಗವ ತೋರಿಕೊಟ್ಟವರು ||
ಆಸೆಗಾಗಿ ದೇಶ ತಿರುಗಿ ಜೀವನೆಂಬ ಗಿಳಿಯ ತಂದು
ಕೂಸಿನಂತೆ ಸಾಕಿ ಸಲುಹಿ ಮಾಯವಾಗಿ ಹೋಯಿತಲ್ಲ ||ಯನ್ನ||
ಆರು ಚಕ್ರವ ಬಳಸಿ ನಿಂತಯಿತೆ |
ಆ ಮಧ್ಯದಲ್ಲಿ ಹಾರಿ ಬಂದು ಒಂದು ಹದ್ದು ಕುಳತಯಿತೇ |
ಹದ್ದಿಗೊಂದು ಹಾರಮಾಡಿ ತನ್ನ ಪಂಜರ ಕೂಗುವಾಗ
ಬ್ರಹ್ಮನೆಂಬೋ ಕಳ್ಳ ಬೆಕ್ಕು ಕದ್ದುಕೊಂಡು ಹೋಯಿತಲ್ಲ ||2||
ಅಂಡಪಿಂಡಗಳು ಮಧ್ಯ ಆ ಮಧ್ಯದಲ್ಲಿ ಗುಂಡಲೆಂಬ |
ಹಣ್ಣ ಇರಿಸವರೇ ಅಂಡಪಿಂಡಗಳ ಮಧ್ಯದಲ್ಲಿ ಚಂದ್ರ ಸೂರ್ಯರ |
ಕಾವಲಿರಿಸಿ ಕಂಡ ಸವದು ಕಾಯ ಸವಿದು ಭೂ ಮಂಡಲಕ್ಕೆ ಹಾರಿತಲ್ಲ ||ಯನ್ನ||

28
ಶ್ರೀ ಗುರು ಚರಣದಿ |
ಶ್ರೀ ಗುರು ಚರಣದಿ |
ನಿಂದಿಹ ಮನುಜನು |
ಶ್ರೀಕರವಾಗಿ ಬೆಳಗುವನು |
ಈ ಪತಿ ವಿಧಹರ |
ಯತಿಮುನಿ ಬುಧರೆಲ್ಲ |
ಮಂಗಳವಾಗಲೆಂದರಸುವರು ||ಶ್ರೀ||
ಉದಯದೊಳೆದ್ದು |
ಸ್ನಾನವ ಮಾಡಿ ನೊಸಲಲಿ |
ವಿಭೂತಿಯ ಧರಿಸಿ ||
ಗುರುಚರಣಕೆ ತನು ಮನ ಧನವೊಪ್ಪಿಸಿ, ಕೃಪೆತೋರೆಂದು ಬೇಡುವರು ||1||
ಅನುದಿನ ಕಾರ್ಯಕಲಾಪಗಳೆಲ್ಲವ ನಗುತಲೇ |
ಮಾಡಿಮುಗಿಸುವರು |
ಅಂದಿನ ಅಭ್ಯಾಗತರನು |
ಮುದದಿಂ ಮನ್ನಿಸಿ |
ಮಮತೆಯ ತೋರುವರು ||2||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 171

ಕರ್ಮವ ಮಾಡುತ |
ಮರ್ಮವ ತಿಳಿಯುತ |
ಚರ್ಮದ ಋಣವನು ಮುಗಿಸುವರು |
ಸೂತ್ರದ ಮರ್ಮವನರಿತಿಹ ಧೀರರು |
ಗಾತ್ರಕೆ ಮನವನು ವಪ್ಪುವರು |
ಮನದಲಿ ಮೂಡಿದ |
ಚಿನ್ಮಯನರಿಯಲು |
ಗುರುಲಿಂಗೇಶನನು |
ಬೇಡುವರು |
ನಂಜೇಶಗುರುವಿನ ಕಿಂಕಿರ |
ಗುರುಲಿಂಗೇಶನ ಚರಣವ ನಂಬಿಹರು ||ಶ್ರೀಗುರುಚರಣದಿ||

29
ತಿಳಿ ಮಂಗಳಾಂಗಿ
ಪ್ರಣವ ಪಂಚಾಕ್ಷರಿ ಪರಶಿವ ಗುರುವನ್ನು ಮನದೊಳು ನೆನೆಯಮ್ಮ ತಂಗಿ|
ಇದು ಘನವೆಂದು ತಿಳಿ ಮಂಗಳಾಂಗಿ ||ಪ||
ಹಿಂದಿನ ಜನ್ಮದಿ ಬಂದ ಪುಣ್ಯರಾಶಿ | ಇಂದಿಗೆ ಒದಗಿತೇ ತಂಗಿ |
ಇದು ನಿಜವೆಂದು ತಿಳಿ ಮಂಗಳಾಂಗಿ ||ಪ||
ಬರಿದೆ ಮುಚ್ಚಿದೆ ಕೆಟ್ಟು ಜಗವಲ್ಲಿ ಕೆಡೆಗಟ್ಟು |
ನಿಜಮುಕ್ತಿ ಕೊಡುವಾನೆ ತಂಗಿ | ಆತನ ಬಿಡಬೇಡ ತಿಳಿ ಮಂಗಳಾಂಗಿ ||ಪ||
ಶ್ರೀ ಗುರುಕರುಣವ ಪಡೆಯದಿದ್ದರೆ ಘೋರ ನರಕವು ತಪ್ಪದು ತಂಗಿ |
ಇದು ನಿಜವೆಂದು ತಿಳಿ ಮಂಗಳಾಂಗಿ ||ಪ||
ಗುರು ತಂದೆ ತಾಯವ್ವ ಗುರು ಬಂಧುಬಳಗವ್ವ ಗುರು ಪರಮಾತ್ಮನೆ ತಂಗಿ
ಈತನ ಬಿಡಬೇಡ ತಿಳಿ ಮಂಗಳಾಂಗಿ ||ಪ||
ಧರೆಯೊಳ್ ಮಿಣುಕನು ಪುರುದೊಳು ನೆಲೆಸಿದ |
ಶ್ರೀ ಗುರುಲಿಂಗೇಶ ತಂಗಿ ಶಿವನ ಮಹಿಮೆಯ ತಿಳಿಮಂಗಳಾಂಗಿ ||ಪ||

30
ನೀರಿಗೆ ಬಾರವ್ವ ತಂಗಿ
ವಾರದಿಗೆಳೆದೀರಿ |
ನಾರಾಗಿ ಕರೆದಳು |
ನೀರಿಗೆ ಬಾರವ್ವ ತಂಗಿ |

172 / ತತ್ವಪದಗಳು ಸಂಪುಟ-1

ಚಂದ್ರ ಪಟ್ಟಣದೊಳು ಕುಂಬಾರ ಮಾಡಿದ ಚೆಂದಕ್ಕಿ ತಂದವ್ವನವ ಬಿಂದಿಗೆ |
ಗ್ಯಾನಿಟ್ಟು ಕೇಳಿರಿ ಸ್ನಾನ ವಂದನೆ ಮಾಡಿ |
ಕುಂಬಾರ ನಡೆದನು ಬೀದಿಬೀದಿ |
ಗುರುಗ್ಯಾನಯೆಂತೆಂಬ ಗುದ್ದಾಲಿ ತಕೊಂಡು ಮಣ್ಣು ಅಗೆಯುತ್ತಾನೆ ಪಾರಿಪಾರಿ ||ಪ||
ಗರ್ವವೆಂತೆಂಬ ಕತ್ತೆಯ ಮೇಲೆ |
ಮಣ್ಣ ಹೇರಿದನು ಬಾರಿಬಾರಿ |
ನಿರಾಶೆಯೆಂಬುವ ಆಧಾರ ಪಿಡಿದು |
ಕೆಸರು ತುಳಿಯುತ್ತಾನೆ ಸಾರಿತೂರಿ ||ಪ||
ಮುನ್ನೂರು ಅರವತ್ತು ನರಗಳ ಮಾಡಿ ಬೊಂಬೆಯ ಮಾಡಿದ ಯೇನು ಚೆಂದಾ |
ವಾಯು, ಅಪ್ಪು, ತೇಜ, ಆಕಾಶ |
ಹೊರ ಒಳಮಾಡಿದ ಸಮನಾಗಿ ||ವ||
ಉತ್ತಮ ಮಧ್ಯಮ ಕನಿಷ್ಠ ಇವ ಮೂರು ಸಿಂಬಿಯ ಮಾಡಿದರೇನು ಚೆಂದಾ |
ಚಿತ್ಹಸ್ವೆಯೆಂತೆಂಬ ಬಿರುಡೆಯ ತೆರೆದಿದೆ |
ಪಂಚತತ್ವ ಬಿಂದಿಗೆ ಬಳಸಿದನೆ ||ಪ||
ಭಕ್ತಿರಥವ ಮಾಡಿ ಯುಕ್ತಿ ಕುದುರೆಯ ಮಾಡಿ |
ಸತ್ಯ ಸಾರತಿಯಾಗಿ ನೀ ಬಾರಮ್ಮ |
ಶಿವಶರಣರ ಸಂತತಿಗೆ ನೀ ಬಾರಮ್ಮ |
ಅಮ್ಮ ಕೈಲಾಸಕೋಗುವ ನೀಬಾರಮ್ಮ ||ಪ||

31
ನಾನೇನ ಬೇಡಲಿ ಶಂಭುಲಿಂಗಾ
ನೀನೆ ಅನಾದಿಯು ನಾನೇನ ಬೇಡಲಿ ಶಂಭುಲಿಂಗಾ |
ಇಂತ ಮಾನವ ಜನ್ಮಕೆ ಬಂದು ಯೇನೇನು ಕಾಣಲಿಲ್ಲ ಶಂಭುಲಿಂಗಾ |ಪ|
ಹಾವು ಹರಿದಾಡಿತು ಚೇಳು ಕುಣಿದಾಡಿತೋ ಶಂಭುಲಿಂಗಾ ||
ಇಂಥ ಹಾವು ಚೇಳುಗಳನೊಂದು ಕೋಳಿಯು ನುಂಗಿತು ಶಂಭುಲಿಂಗಾ |ನೀನೇ|
ಅಲಸು ಫಲವಾಯಿತು ಹರಿ ಹಣ್ಣು ಅಳಸಿತ ಶಂಭುಲಿಂಗಾ |
ಫಲವು ನೆಲಕ್ಕೆ ಬಿದ್ದು ಬೀಜ ಬೇರಾಯಿತು ಶಂಭುಲಿಂಗಾ ||ನೀನೆ
ಮಟ್ಟವೂ ಕೆಟ್ಟಿತು ಮಂತ್ರವು ಬಿಟ್ಟಿತು ಶಂಭುಲಿಂಗಾ |
ಈ ಮಂತ್ರ ಮೂಲದ ಮಟ್ಟ ಬೇರೆ ಬೇರಾಯಿತು ಶಂಭುಲಿಂಗಾ ||ನೀನೇ||
ಕಾಗೆಯು ಕೂಗಿತು ಗೂಬೆಯು ನೋಡಿತು ಶಂಭುಲಿಂಗಾ |
ಈ ಕಾಗೆ ಗೂಬೆಗಳೊಂದು ಗೀಜಗವು ನುಂಗಿತು ಶಂಭುಲಿಂಗಾ ||ನೀನೇ||
ಹಿತ್ತಲ ಗುಡ್ಡೆಯ ಮೇಲೊಂದ್ ಪಕ್ಷಿಯು ಕುಂತಾಯ್ತೇ ಶಂಭುಲಿಂಗಾ |
ಆ ಪಕ್ಷಿ ಹಾರುದ ಕಂಡು ಶಿವ ನೋಡಿ ನಗುತಾನೆ ಶಂಭುಲಿಂಗಾ ||ನೀನೇ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 173

32
ತೊಟ್ಟಿಲ್ಲದೀ ಹಣ್ಣು
ಬ್ರಮ್ಮಾಂಡದೊಳಗೊಂದು ಅಮ್ಮಿನ ಮರವುಟ್ಟಿ ಶಂಭುಲಿಂಗಾ |
ಅಗಮನವಾಗಿದೆ ಯಾರಿಗೂ ತಿಳಿಯದು ಶಂಭುಲಿಂಗಾ ||ಪಲ್ಲವಿ||
ನಾದ ಬಿಂದು ಕಳೆ ಮೂರು ವರ್ಣದ ಬೀಜ ಶಂಭುಲಿಂಗಾ |
ಅದು ಮೇದಿನಿಯೊಳು ಬಿದ್ದು ಮೊಳೆತುಕೊಂಡು ಇರುವುದು ಶಂಭುಲಿಂಗಾ ||ಪ||
ಇಡಾ ಪಿಂಡಳೆಂಬ ಗಾಳಿ ನೀರೋಳು ಬೆಳೆದು ಶಂಭುಲಿಂಗಾ |
ಅದು ರೂಢಿಯೊಳಗೆ ಬಿದ್ದು ಪ್ರಜ್ವಲಿಸುತ್ತಲಿದೆ ಶಂಭುಲಿಂಗಾ ||ಪ||
ತಲೆಕೆಳಗಿನ ಮರ ಯಾರಿಗೂ ತಿಳಿಯದು ಶಂಭುಲಿಂಗಾ |
ಎಪ್ಪತ್ತೆರಡು ಸಾವಿರ ಎಲೆಗಳು ಅದಕುಂಟು ಶಂಭುಲಿಂಗಾ |
ಅದಕೆ ಒಪ್ಪುವ ಕೊಂಬೆಗಳು ಇನ್ನೂರು ಹದಿನಾರು ಶಂಭುಲಿಂಗಾ |
ಒಪ್ಪದಿಂದಲಿ ನೋಡು ವಾರೀಜ ಕಮಲವ ಶಂಭುಲಿಂಗಾ |ಪ|
ತಪ್ಪದೆ ಐವತ್ತು ದಳವರ್ಣ ಎಸಳುಂಟು ಶಂಭುಲಿಂಗಾ |
ಪೂರ್ವದಿಕ್ಕಿನಲ್ಲಿ ಆರು ವರ್ಣದ ಕಾಯಿ ಶಂಭುಲಿಂಗಾ |
ಏರಿ ಪಶ್ಚಿಮದಲ್ಲಿ ದೋರುಗಾಯಾಗಿದೆ ಶಂಭುಲಿಂಗಾ |
ಸಾರಿ ದಕ್ಷಿಣದಲ್ಲಿ ತೊಟ್ಟು ಕಳಚಿ ಉರುಳಿದೇ ಶಂಭುಲಿಂಗಾ ||ಪ||
ತೊಟ್ಟಿಲ್ಲಿದೀ |
ಹಣ್ಣು ಬಟ್ಟ್ಟಂಬೈಲೊಳಗಿದೆ ಶಂಭುಲಿಂಗಾ |
ಅಷ್ಟಾಂಗಯೋಗಿಗಳು ಅರಸಿ ಕಾಣಲಿಲ್ಲ ಶಂಭುಲಿಂಗಾ |
ತೊಟ್ಟಿಲ್ಲದೀ ಹಣ್ಣು ಕೊಟ್ಟ ಸದ್ಗುರು ಸ್ವಾಮಿ ಶಂಭುಲಿಂಗಾ |
ಇದನು ಮನಮುಟ್ಟಿ ಸವಿದರೆ ಹುಟ್ಟೇನಾಶವಯ್ಯ ಶಂಭುಲಿಂಗಾ ||ಪ||

33
ಯೆಂತ ಕನಸು ಕಂಡೆನೇ
ಯೆಂತ ಕನಸು ಕಂಡೆನೇ ಕೇಳಮ್ಮ ನಾನೆಂತ ಕನಸು ಕಂಡನೇ |
ಯೆಂತ ಕನಸು ಕಂಡೆ | ಕಂತು ಜನಕನಾಣೆ
ಪರಿತಾಪ ಮಾಡಿ ನಾನಂತರಂಗದೊಳಿದ್ದು ||ಯಂತ||
ಮೂರಾರು ಒಂದಾರಲ್ಲೀ ಸಾಚಾವೆಂದು ಸೇರಿದೆ ನಾನಿನ್ನಲಿ ||
ಆರಿಗೂ ಅಳವಲ್ಲಾ ದಾರಿಯಾಗಿರುವಂತಾ |
ಘೋರಾಂಧಕಾರವು ಸಾರಿತು ನಿನ್ನಲ್ಲಿ ||ಯಂತ||
ಅಂದವಾಯಿತು ನೋಡಲು|| ನೋಡದರಿಂದಾ ಬಂದು ಕರೆಯುವಾಗಲು |
ಒಂದೆರಡಾದಂತ ಚಂದವುಳಿಯಲೂ |

146 / ತತ್ವಪದಗಳು ಸಂಪುಟ-1

ಇಂದೆ ಬಾಳಿದ ಬಾಳು ಯೆಂದಿಗಿಲ್ಲಂತಾಯ್ತು ||ಯೆಂತ||
ಹೇಮ ವರ್ಣದ ಪೀಠವೂ ನೋಡದಕಿನ್ನು ನೇಮ ನಿಷ್ಠೆಗಳಿಲ್ಲವೂ ||
ಕಾಮನಂತಿರುವಾ ನಿಷ್ಕಾಮನ ಚರಿತ್ರೆಯಾ |
ಆ ಮಹದೇವನಾ ಆರ್ಯನ ಕೃಪೆ ಇಂದಾ ||ಯೆಂತಾ||
ಕೆಟ್ಟದೊಂದಿರುತಿಹುದು ಜನ್ಮದ ಕರ್ಮ ಸುಟ್ಟು ಬೂದಿಯ ಮಾಳ್ಪುದು |
ದೃಷ್ಟಿಯೊಳ್ ನೋಡಲು ದಿಟ್ಟವಾಗಿರುವುದು |
ನಟ್ಟನೇ ಮನೆಯೊಳು ಪುಟ್ಟಿತು ನಿನ್ನಲಿ ||ಯಂತ||
ಗುಡಿ ಗುಡಿಸುತ ಬರುವ ಯಮನಾಳುಗಳ ಕಡಿದು ರೋಷವ ಮಾಡುತಾ |
ಜಡಿದು ತ್ರಿಶೂಲದೀ ಪಿಡಿದು ಭಕ್ತರ ಕೈಯ್ಯಾ ಒಡೆಯನೆ ಕಾಯೋ
ಶ್ರೀಗುರು ಲಿಂಗದೇವನೇ ||ಯಂತ||

34
ಅವ್ವನಿಗೆ ಹೂವುಗಳಾದೆ
ಸುವ್ವೀಸುವಮ್ಮಾನಾರಿ ಸುವ್ವೀಸುಜ್ಞಾನದಪೂರಿ
ಸುವ್ವೀ ಪೂಜಾರಿ ನೆಲೆಗೂಂಡಾ ಸೂವ್ವಮ್ಮನಾರಿ ||ಪ||
ಒಂಬತ್ತು ಬಾಗಿಲ ಮುಂದೇ ಒಂದೇ ಜೋತಿಯ ಬೆಳಕು ನಾ
ನಂಬಿಕಿಲ್ಲದ ಒಗೆತನ ಮಾಡಿನೇ ಸುವ್ವಮ್ಮನಾರಿ ||ಸುವ್ವಿ||
ತನುವೆಂಬ ಕಾಯದೊಳಗೆ ಮನವೆಂಬ ಧಾನ್ಯವ ತೆಗೆದು
ಒನೆದು ಒನೆದು ಒಮ್ಮನ ಮಾಡಿದೇನೆ ಸುವ್ವಮ್ಮನಾರಿ ||ಸುವ್ವಿ||
ಮನವೆಂಬ ಕಲ್ಲಳೀಗೆ ತನುವೆಂಬ ಧಾನ್ಯವನೂದೂ |
ನಾ ಹದವನರಿತು ಒಬ್ಬಾಳೆ ಬೀಸಿದೆನೆ ||ಸುವ್ವಿ||
ಅಷ್ಟಮದಗಳೆಂಬುನಷ್ಟ ದಾನ್ಯವ ತೆಗೆದು |
ನಾ ಕುಟ್ಟಿ ಕುಟ್ಟಿ ಒಟ್ಟನು ಕಳೆದೇನೆ ಸುವಮ್ಮನಾರಿ |ಸು||
ಅಂಗಚಲದ ಬದನೆಕಾಯಾ | ತಂದು ಲಿಂಗಪುಷ್ಪವನ್ನೇ ಮಾಡಿ |
ಸಂಭ್ರಮದ ಸರವ ಪೋಣಿಸಿಕೊಂಡೆನೇ ||ಸುವ್ವಿ||
ಒಮ್ಮನೇ ಜೋಳವ ತಂದೂ | ಮುಮ್ಮೇಳದ ಕಲ್ಲೆಲಿ ಬೀಸಿ |
ನಾ ಲಿಂಗ ಸಡ್ಡೋಳಿಗೆಯ ಮಾಡಿದೇನೆ ||ಸುವ್ವಿ||
ಮಾವನಿಗೆ ಮರಗಿದೆನವ್ವಾ ಅತ್ತೆಗೆ ಅಂಜಿದೆನವ್ವಾ
ನಾ ಬಾವ ಮೈದನಿಗೆ ಬಾಗಿ ಬಾಳಿದನೇ ||ಸುವ್ವಿ||
ಅಪ್ಪನಿಗೆ ನೆಪ್ಪುಗಳಾದೆ |
ಅವ್ವನಿಗೆ ಹೂವುಗಳಾದೆ ನಾ ಅಕ್ಕತಂಗಿರಿಗೆ ಅಡಗಿ ಬಾಳಿದೇನೆ ||ಸುವ್ವಿ||
ಅಷ್ಟರೊಳಗೆ ಪುಟ್ಟಿತು ತನುವೂ| ಕಾಮಕಟ್ಟಿಗೆ ನುರಿಯೂ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 175

ನಾ ಬಿಟ್ಟಳುಳ್ಳ ಅನ್ನವ ಬಸಿದೇನೆ ಸುವ್ವಮ್ಮನಾರಿ ||ಸುವಿ||
ಅಷ್ಟರೊಳಗೆ ನನ ಗಂಡನು ಬಂದು ಹಲವು ಮಡಕೆಗಳನೊಡೆದಾ |
ನಾ ಮುಟ್ಟಿ ಮುರಿದು ಮೂಲೆಗೆ ಚಾಚಿದನೆ ||ಸುವಿ|
ಯೆವ್ವಯೆಂತೆವ್ವಕೂಡಿ ಉರಿಯಲಾರೆ ಬೇಯಲಾರೆ |
ನಾ ಸಿಕ್ಕ ಬಾರದ ಸಿಲಕಿಗೆ ಸಿಕ್ಕಿದೆನೆ ||ಸುವಿ||
ಸಾಕಪ್ಪ ಈ ಸಂಸಾರ ಬೇಕಿಲ್ಲ ಈ ಅವತಾರ |
ಆ ಸಾಕು ಗುರುಲಿಂಗೇಶನ ಪಿಡಿಯೆಂದಾ ಸುವ್ವಮ್ಮನಾರಿ ||ಸುವ್ವಿ||

35
ಇದ್ದ ಮಾತೇಳಿದನಮ್ಮ
ಗುರುಶರಣರಿಗೆರಗಮ್ಮ | ನೀನು ಯೆರಗದೆ ಗರ್ವದಿಂದಿರಬಾರದಮ್ಮ |
ಮುಂದಪರಾಧವಮ್ಮ ||ಗುರು||
ವೇದನೋದಬೇಕಮ್ಮ | ಅರ್ಥ ಸಾಧು ಸಜ್ಜನರಿಗೆ ತಿಳಿಯಬೇಕಮ್ಮ |
ಅದರಾದಿಯು ದೂರ ಕಾಣಮ್ಮ |
ಇದನು ಮನದೊಳಗಂತು ಶೋಧಿಸಬೇಕಮ್ಮ ||ಗುರು||
ನರನಂತೆ ನಡೆಯದಿರಮ್ಮ | ತಂಗಿ ನರಕಕ್ಕೆ ಬಿದ್ದು ನೀ ಕೆಡಬೇಡಮ್ಮ
ಈ ದೇಹವು ಸ್ಥಿರವೆಂದು ನಂಬಬೇಡಮ್ಮ
ಗುರುಪರಮನೊಳಿದ್ದರೆ ಭಯವಿಲ್ಲವಮ್ಮ ||ಗುರು||
ಇದ್ದ ಮಾತೇಳಿದನಮ್ಮ | ತಂಗಿ ಬುದ್ಧಿಯಾಗಿ ನಡೆದರೆ ಸಿದ್ಧಿ ಕಾಣಮ್ಮ ||ಗುರು||
ಅದ್ದು ತಪ್ಪಿದರಿಲ್ಲವಮ್ಮಾ |
ಇಲ್ಲಿಗೆದ್ದರೆ ಯಮದಾರಿ ಸುದ್ದಿ ಇಲ್ಲವಮ್ಮ |
ಬಲ್ಲಂತ ಶರಣರ ಒಲಿಸಿಕೊಳ್ಳಮ್ಮ |
ನಿನ್ನ ಸೊಲ್ಲಿನೊಳಿರುವನು ಅಲ್ಲಮದೇವನಮ್ಮ ||ಗುರು||

36
ಶಿವಶರಣರೇ ಬನ್ನೀರೆ ಪೋಗುವಾ
ಅವಾಗ ಶಿವಮಂತ್ರ ನೆಲೆಯಾಗಿ |
ಗುರುರಾಯ ತೋರಿದ ಗೊತ್ತು ಗುರಿಯಾಗಿ ||ಪ||
ಹಿಂದುನೋಡಲು ಪರಬ್ರಹ್ಮನಾಗಿ |
ಪರಬ್ರಹ್ಮವೇ ಮೂರು ಮುಖವಾಗಿ ||ಅವಾಗ||
ಚಂದ್ರ ಸೂರ್ಯರರು ಊಧ್ರ್ವ ಮುಖವಾಗಿ
ಅಲ್ಲಿ ನಾಶಿಕದೊಳಕೊಕ್ಕು ನೆಲೆಯಾಗಿ ||ಅವಾಗ||

175 / ತತ್ವಪದಗಳು ಸಂಪುಟ-1

ಶರೀರವೆಂತೆಂಬ ಹೊಲನಾಗಿ ಅಲ್ಲಿ ಪರತತ್ವ ಬೀಜ ಮೊಳೆಯಲಾಗಿ ||ಅವಾ||
ಚಂದ್ರ ಸೂರ್ಯರು ಇಬ್ಬರೊಂದಿಗೆ |
ಅಲ್ಲಿ ನಾಗೇಂದ್ರ ಸಭೆಯೊಳು ಬೆಳಕಾಗಿ ||ಅವಾಗಿ||
ಬಲ್ಲ ಮಾನ್ಯರೊಳಿದ್ದ ಸ್ಥಿರವಾಗಿ | ನಮ್ಮ ಬಂಧನಗಳು ಎಲ್ಲ ಬಯಲಾಗಿ|
ನಮ್ಮ ದೇಶಕೆ ಪೋಪೋದಿನ ಬಂತು |
ಶಿವಶರಣರೇ ಬನ್ನೀರೆ ಪೋಗುವಾ ||ಅವಾಗ||

37
ಕತ್ತಲೆ ಹರಿಸಿದೆಯಾ
ಮೊರೆ ಕೇಳೋ ಸದ್ಗುರುಲಿಂಗೇಶನೇ | ಕ್ಷಣಕಾಲ ಮರೆತರೆ ಮುನ್ನಿಸಯ್ಯಾ ||ಪ||
ಹಗಲಿರುಳು ಕಾಯುವ ದೈವಾ ನೀನೆ |
ಭವಬಂಧನ ಬಿಡಿಸುವ ತಂದೆ ನೀನೆ |
ಎಂದಿಗೆ ದೊರೆಯುವುದು ನಿನ್ನ ಪಾದವೋ ನಿಮ್ಮ ನಿಜರೂಪವೋ ||ಮೊರೆ||
ಹರಿಹರ ಜಪಿಸುವ ಮಹಾ ಮಂತ್ರವಾ | ನಿಜಮುಕ್ತಿ ಕೊಡುವಂತ ಉಪದೇಶವ |
ಬೋಧಿಸಿ ಜಗನಂಜೋತಿ ತೋರಿದೆಯಾ |
ಕತ್ತಲೆ ಹರಿಸಿದೆಯಾ ||ಮೊರೆ||
ಹಿಂದಿನ ಕರ್ಮವೂ ಸುಡುತಲಿದೇ |
ಮುಂದಿನ ಸುಕೃತ ಮೂಡಲಿದೆ ||
ಎಂದಿಗೆ ಅಳಿಸುವೆ ಈ ಕರ್ಮವಾ ಪ್ರಾರಬ್ಧವಾ ||ಮೊರೆ||
ಅರಿಯದೆ ಮಾಡಿದ ನಿಜ ತಪ್ಪನೂ |
ಇದ ಮನ್ನಿಸಿ ಕಾಪಾಡೋ ಶ್ರೀ ಗುರುವೆ |
ಸದ್ಗುರುವೇ ಈ ಜಗಕ್ಕೆಲ್ಲ ನಿಜವಾದ ಪರಮಾತ್ಮನೂ ||ಮೊರೆ||

38
ಚಿತ್ರವಿಚಿತ್ರವ ನಾ ಕಂಡೆನೇ

ನಿತ್ಯ ಕೇಳಲೇ ಸಖಿ ಒತ್ತಿನ ಸಪನವಾ |
ಚಿತ್ರವಿಚಿತ್ರವ ನಾ ಕಂಡೆನೇ ಮತ್ತೇ
ಪೂರ್ವ ದೇಶದೊಳ್ ಚಿತ್ರ ರಾಜನು ಸತ್ತು ಪುತ್ರ ರಾಜ್ಯವನಾಳಿದ ||ನಿತ್ಯ||
ಅಗಸರ ಹೊಳೆಯಲ್ಲಿ ಸೊಗಸುಗಾತಿಯ ಕಂಡು |
ನಗಸಿ ಅವಳ ಕೂಡಳೋ ಶಿವ ಶಿವಾ |
ಇಹಚಿತ್ತ ಮಹಾಚಿತ್ತ ವಿಮಲ ಚಿತ್ಕಳೆ ಬಿಂದು ನಗಿಸಿ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 177

ಮುತ್ತನೊಡೆದಳು ಶಿವ ಶಿವಾ ||ನಿತ್ಯ||
ಮಂಜಿನ ಮನೆಯೊಳು ಪಂಜಿನ ಬೆಳಕಲಿ |
ಬಂಜೆ ಮಗನ ಹೆತ್ತಳೋ ಶಿವ ಶಿವಾ |
ಬಂಜೆ ಮಗನು ತಾನು ಕುಂಜರವನು ಯೇರಿ ಭುಂಜಿಸಿದನು ಲೋಕವ ||ನಿತ್ಯ||
ಮಂಡಲದೊಳಗೊಂದು ಭಂಡಾರದರಮನೆ ಲಂಡಚೋರರಿಗಸಾಧ್ಯ ಶಿವ ಶಿವಾ |
ಕಿಂಡಿಯ ಕೊರೆದಾರು ಪಂಜಿನ ಕಳ್ಳರು ಕೊಂಡು ಪೋಗದು ನಾ ಕಂಡೆ ||ನಿತ್ಯ||
ನಿಪುಣರೆ ನೀವ್ ಕೇಳಿ ಸ್ವಪನಾದ ಪ್ರಶ್ನೆಯ ಅಪರಿಮಿತ ಆನಂದವೋ ಶಿವ ಶಿವಾ |
ಗುಪಿತಸಂಕೀರ್ತನೆ ತಿಳಿಯದಿದ್ದರೆ ನಮ್ಮ ಗುರುಲಿಂಗೇಶನಂ ತಾ ಕೇಳಿ ||ನಿತ್ಯ||

39
ಬಾಗಿಲು ತೆರೆದಿದೆ ನೋಡಣ್ಣಾ
ಬಾಗಿಲು ತೆರೆದಿದೆ ನೋಡಣ್ಣಾ ನಿನ್ನ ಮೂಗಿನ ಕೊನೆಯೊಳಗಿಹುದಣ್ಣಾ |
ಯೋಗಾನಂದದ ಕೀಲಣ್ಣ ಭವರೋಗಿಗಳಿಗೆ ಕಾಣುವುದಿಲ್ಲಣ್ಣಾ ||ಪ||
ಹತ್ತನೇ ಬಾಗಿಲು ತೆರೆದಯ್ತೆ |
ಅಲ್ಲಿ ಪುತ್ಥಳಿ ಬೊಂಬೆಯು ನಿಂತೈಯ್ತೆ ||
ಚಿತ್ರ ಚಿತ್ರವಾಗಿ ಹೊಳೆಯುತಿದೇ ತಾನೆ ತನ್ಮಯನಾಗಿರುತಿಹುದೆ ||ಬಾಗಿಲು||
ಸಾಲುಮಂಟಪವು ಆರಯ್ತೆ |
ಅಲ್ಲಿ ನಿಲದುಪ್ಪರಿಗೆಯು ಮೇಲೈಯ್ತೆ |
ಸಾಲು ಜ್ಯೋತಿಯು ಬೆಳಗುತಿದೆ |
ತಾನೇ ತನ್ಮಯವಾಗಿ ಕಾಣುತಿದೆ ||ಬಾ||
ಎಂಟು ಎಸಳಿನ ಕಮಲವಿದೂ ನಡುದಂಟಿನೊಳಗೆ ಸುಳಿದಾಡುವುದು
ಚಿತ್ತೈಸಿ ನೋಡಲ್ಲಿ ಕಾಣುವುದು |
ಅಲ್ಲಿ ಘಂಟೇ ನಾದಗಳಾಗುವುದು ||ಬಾಗಿಲು||
ಮುದ್ರೆಯ ಪಿಡಿಯಣ್ಣಾ ನಿನ್ನ ಕಣ್ಮನಬಿಟ್ಟು ನೋಡಣ್ಣಾ |
ಹುಣ್ಣಿಮೆ ಚಂದ್ರನಂತೆ ಹೊಳೆಯುತ್ತಿದೆ |
ರಂಗಯ್ಯ ವಿಠಲನು ಕಾಣುವುದೇ ||ಬಾಗಿಲು||

40
ನುಡಿದಂತೆ ನಡೆಯಬೇಕಮ್ಮ
ಗುರುರಾಯ ಒಲಿದಮೇಲಮ್ಮಾ |
ಈ ಶರೀರದ ಯಾತ್ರೆಯ ಮಾಡಬೇಕಮ್ಮ ||ಪ||
ಇಂದಿನ ಸುಕೃತವಿದಮ್ಮ |

178 / ತತ್ವಪದಗಳು ಸಂಪುಟ-1

ಗುರುಬಂದು ತನ್ನಂತೆಗೈದ ಕಾಣಮ್ಮ |
ಬಂಧನ ಅರುಗಾಯಿತಮ್ಮ |
ಮುಕ್ತಿ ಒಂದೇ ಸಾಕೀನ್ನೇನು ಬೇಡಕಣಮ್ಮಾ ||ಗುರು||
ನುಡಿದಂತೆ ನಡೆಯಬೇಕಮ್ಮ |
ಮನದೊಳಗೆ ದೃಢಚಿತ್ತವಿರಬೇಕಮ್ಮ |
ಅಲ್ಲಿ ನುಡಿಗಳೊಂಬಿಸಬಾರದಮ್ಮ |
ನಿನ್ನ ಒಡಲಿಗೆ ಕಡು ಕಷ್ಟ ತೊಡರುವುದಮ್ಮ ||ಗುರು||
ಗುರುವು ಡಂಬಕಪುರದೊಳಿಹನಮ್ಮ |
ಈ ಕುಂಭಿಣಿ ಪೊರೆಯುವ ರೇಣುಕನಮ್ಮ |
ನಂಬಿದವರ ಪ್ರಿಯನಮ್ಮ ಗುರುವು ನಂಬಿದವರಿಗೆ ಅಗ್ರೇಸನಮ್ಮ |
ಈ ಧರಣೀ ಭ್ರಮೆಗಳಿರಬಾರದಮ್ಮ ||ಗುರು||

41
ಬೋಧಿಸೆನ್ನಯ ಗುರುವೇ

ಬೋಧಿಸೆನ್ನಯ ಗುರುವೇ ನಿಮ್ಮಯ ದಿವ್ಯ ಪಾದವ ನಂಬಿರುವೇ
ವೇದಾಂತದೊಳು ಗೋಪ್ಯವಾದ ತತ್ವವನೇ ಸಂಪಾದಿಸಿ
ಮನದಿ ವಿನೋದಿಸಿ ಸುಖಿಸೆಂದು||ಪ||
ತಲೆವಾಗಿ ಬೆಳೆದಿರುವ ಪಂಕೇಜದದಳದೇ ತಿರುತಿರುವಾ |
ಕಳಹಂಸ ಶಿಶುವಿನ |
ಸುಳುಹನ್ನು ತಡೆದು ತನ್ನಳಿನದ ಕರ್ಣಿಕೆಯೊಳು ನಿಂದು ನಲಿಯೆಂದು ||ಬೋಧಿ||
ಆದಿಯಂತ್ಯವ ಭೇದಿಸಿ |
ನಿರ್ಗುಣವಾದ ನಾದಬಹ್ಮವ ಸಾಧಿಸಿ |
ಆದಿ ನಾಲ್ಕರ ನಡುವೆ ವೇದಿಕೆಯೊಳು ಕುಳಿತು ಮೋದದಿಂದ
ದಶವಿಧ | ನಾದವ ಕೇಳೆಂದು ||ಬೋಧಿ||
ಮೂಲಕುಂಡಲಿಯನೆತ್ತಿ |
ಅಗ್ನೇಯಾದ ಮೇಲಣ ನೆಲೆಗೆ ಹತ್ತಿ |
ಸಾಲಿಟ್ಟು ಸುರಿತೀರ್ಪ ಹಾಲನ್ನೆ ಸವಿದುಂಡು ನೀಲ ಜೋತಿಯ ದಿವ್ಯ |
ಜ್ವಾಲೆಯೊಳ್ ಬೆಳಗೆಂದು ||ಬೋಧಿ||
ರವಿ ಶಶಿಗಳ ತಡೆದು |
ಸುಷುಮ್ನಯೆ ನವಮಾರ್ಗದೊಳು ನಡೆದು |
ಜವದಿ ಪಶ್ಚಿಮ ದಿಕ್ಕಿ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 179

ನವನೀಗದ ಮೇಲೆ ತವಮೋಕ್ಷ ಸತಿಯನು |
ಭವದಿ ಮೈ ಮರೆಯೆಂದು ||ಬೋಧಿ||
ಪರಿಪೂರ್ಣನಂದ ಭಾವ |
ತಾರಕರೂಪ ಗುರುಲಿಂಗದೇವ ದೇವಾ ಅರಿದೆ ನಂಬಿರುವೆನ |
ಮರೆತು ಎನ್ನೊಳು ನೀನು ಕುರುಹೇನು ತೋರದೆ ಬೆರೆದೇಕನಾಗೆಂದು ||ಬೋಧಿ||

42
ಒಮ್ಮೆ ಹೊಳೆಯ ದಾಂಟಿಸೋ
ಇದು ಒಮ್ಮೆ ಹೊಳೆಯ ದಾಂಟಿಸೋ |
ಅಂಬೀಗರಣ್ಣಾ ಇದು ಒಮ್ಮೆ ಹೊಳೆಯದಾಂಟಿಸೋ ||1||
ನಿಂಬೆಯ ವನದಲ್ಲಿ ರಂಬೆತೊಟ್ಟಿಲು ಕಟ್ಟಿ ಗುರುವಿನ ಮಗಳು ನಾನಯ್ಯ ||ಇದು||
ಮಲ್ಲಿಗೆ ವನದಲ್ಲಿ ರಂಬೆತೊಟ್ಟಿಲು ಕಟ್ಟಿ |
ಮಲ್ಲೇಶನ ಮಗಳು ನಾನಯ್ಯ ಅಂಬೀಗರಣ್ಣಾ ||ಇದು||
ಸಂಪಿಗೆ ವನದಲ್ಲಿ ರಂಬೆ ತೊಟ್ಟಿಲು ಕಟ್ಟಿ ಸಂಪತ್ತಿನ ಮಗಳು ನಾನಯ್ಯ
ಅಂಬೀಗರಣ್ಣಾ ||ಇದು||
ಪುಂಡು ಪೋಕರಿಯಲ್ಲ ಬಂಡತನಗಳಿಲ್ಲ |
ಪಂಡಿತರಾಯನ ಮಗಳು ನಾನಯ್ಯ |
ಅಂಬೀಗರಣ್ಣಾ ||ಇದು||
ಮಾರಿ ಮಸಣಿಯು ಅಲ್ಲ ಗಾಡಗಿತ್ತಿಯು ಅಲ್ಲ-
ಚಂಡಿಚಾಮುಂಡಿ ನಾನಯ್ಯ ಅಂಬೀಗರಣ್ಣಾ ||ಇದು||
ಭಕ್ತರ ಮನೆಯಲ್ಲಿ ಬೆಳದಿಂಗಳುಟ್ಟಿತ್ತಲ್ಲಿ |
ಆದಿಶಕ್ತಿಯು ನಾನಯ್ಯ ಅಂಬೀಗರಣ್ಣಾ ||ಇದು||
ಭಕ್ತಿ ಹುಟ್ಟನ್ನ ಮಾಡಿ ಧ್ಯಾನ ಹರಿಗೋಲ ಮಾಡಿಯನ್ನ ಶಿವಪುರಕ್ಕೆ ಕಳಹು
ಬಾರಯ್ಯ ಅಂಬೀಗರಣ್ಣಾ ಇದು ಒಮ್ಮೆ ಹೊಳೆಯ ದಾಂಟಿಸೋ ||

43
ಭ್ರಾಂತನಾಗಬೇಡ
ಭ್ರಾಂತನಾಗಬೇಡ ನಿಜದೊಳು ಶಾಂತನಾಗೋ ಮೂಢ ||
ಸಂತಸ ಬಹುವಿಧ ಚಿಂತೆಯ ಪುಟ್ಟಿಸಿ ಇಂತಿರುವೀ
ಮಲಯಂತ್ರದ ಮೋಹಿಸಿ ||ಭ್ರಾಂತ||
ಸ್ನಾನ ಹರಿಯಲಿಲ್ಲ |

180 / ತತ್ವಪದಗಳು ಸಂಪುಟ-1

ಮಡಿಯ ವಿಧಾನ ದೊರೆಯಲಿಲ್ಲ |
ಮಾನವನೆಂಬಭಿ | ದಾನವು ಬಂದರು, ದ್ಯಾನದ ಹರಿಯೆ ವಿಧಾನವ ಕಾಣದೆ ||ಭ್ರಾಂತ||
ಹರಕೆ ಮಾಡಲಿಲ್ಲ ಕಣ್ಣಿಗೆ ಹರಿಯು ಕಾಣಲಿಲ್ಲ |
ಹರಿಹರನಾಮದ ಶರೀರದೊಳಡಗಿಹ ಸ್ಥೀರ ಚಿನ್ಮೂರ್ತಿಯನರಿಯದೆ ಬಳಲುತ ||ಭ್ರಾಂತ||
ಭಜನೆ ತೀರಲಿಲ್ಲ ಜನ್ಮದ ರುಚಿಗೆ ಪಾರವಿಲ್ಲ |
ಅಜಹರಿ ರುದ್ರರ ಭಜನೆಗಳೆಂಬುದು,
ಸುಜನರು ಪೇಳುವ ನಿಜಕೇಂದ್ರವರಿಯದೇ ||ಭ್ರಾಂತ||
ಖಂಡವಳಿಯಲಿಲ್ಲ |
ತನ್ನೊಳು ಖಂಡಮೊಳೆಯಲಿಲ್ಲ, ಚಂಡಿಸಿ ನೀನಾರೆನ್ನುವನರಿಯದೆ ಭಂಡನಾಗಿ ಮಲಭಾಂಡ ತೋರುತು ||ಭ್ರಾಂತ||
ಒಳಗೆ ತೊಳೆಯಲಿಲ್ಲ ಮನಸಿನ ಕಳವಳ ಕೆಡಲಿಲ್ಲ |
ಮೊಳೆಯುವ ಕುಲಚಲ, ಮನವನು ಸೆಳೆಯುವ
ಕುಲ ಗುರು ಶಂಕರ ನಡಿಗಳ ಪಿಡಿಯದೇ ||ಭ್ರಾಂತ||

44
ಲಗ್ನ ತೀರಿದ ಮೇಲೆ
ಲಗ್ನ ತೀರಿದ ಮೇಲೆ ವಿಘ್ನಬಾರದು ತಂಗಿ |
ಸುಜ್ಞಾನಿಯನ್ನ ಪತಿ ಪುರುಷ ||ಸೊ||
ಈ ಸುಭಲಗ್ನಾ ಅಜ್ಞಾನಿಗಳಿಗೆ ತಿಳಿಯದಮ್ಮ ||ಸೊ||
ಆಧಾರ ಹಸೆಯ ಕಟ್ಟೀ ಮೇದಿನೀ ಚೌಕವಮೆಟ್ಟಿ ನಾದ ಮೂರುತಿ ಕ್ರಿಯಾಶಕ್ತಿ ||ಸೊ||
ಆಚಾರಲಿಂಗ ಗಣಪತಿಗೂ ಎನಗೂ ಶುಭಾಲಗ್ನ ||ಸೊ||
ಸೋದಿಷ್ಠ ಹಸೆಯ ಜಗುಲಿ ಷಡ್ವರ್ಗ ಮೇದಿನಿಯ
ಅನುಭವದ ಭೂಮಿಕೆಯ ಕೊಂಡುಣ್ಣ ಬಾರೆ ||ಸೊ||
ಈ ಗುರುಲಿಂಗಬ್ರಹ್ಮನಿಗೂ ಎನಗೂ ಬೀಗಣವು ||ಸೊ||
ಮಣಿಪೂರಕ ಮಂಟಪದಲ್ಲಿ ಗುಣಪೂರ್ಣ ಇಚ್ಛಾಶಕ್ತಿ
ಇನತಿ ಮುತ್ತಿನ ಯಳೆಯದಂಡೆ ||ಸೊ||
ಈ ಶಿವಲಿಂಗಾ ವಿಷ್ಣುವಿಗೂ ಎನಗು ಮಂಡಲದುಂಬಿ ||ಸೊ||
ಅನಾಹತ ಆದಿಶಕ್ತೀ ವನಿತೆಗೆ ಬಸರು ಬಯಕೆ
ದರನು ದ್ವಾದಶ ಸೆಳೆಯ ಚನ್ನಾ ||ಸೊ||
ಜಂಗಮಲಿಂಗಾ ರುದ್ರನಿಗೂ ಯನಗೂ ಹೂವ್ವಿನಸಲ್ಯಾ ||ಸೊ||
ವಿಶುದ್ಧಿ ಪರಶಕ್ತಿ ಪರಿಪೂರ್ಣ ಗರ್ಭವ ತುಂಬಿ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 181

ಅಸರು ಸೊಡಶ್ಯ ಶಲ್ಯ ವುಡಿಸೀ ||ಸೊ||
ಪ್ರಸಾದಲಿಂಗಾ ಸದಾಶಿವನಿಗೂ ಯನಗೂ ಮಲ್ಲಿಗೆ ಮುಡಿಸಿ ||ಸೊ||
ಅಗ್ನಿಗೆ ತೃಪ್ತಿಶಕ್ತಿ ಮದಗ್ನಿಗೆ ನವಮಾಸವು ತುಂಬಿ
ಮಹಾಗ್ನಿಯೆಂಬ ಮಗನು ಜನಿಸಿ ||ಸೋ||
ಈ ನಾದ ಲಿಂಗ ಪರಶಿವನಿಗೂ ಎನಗೂ ಪಟ್ಟವಕಟ್ಟಿ ||ಸೊ||
ಸಹಸ್ರದಳಗಳ ಮೇಲೆ ಮೋಕ್ಷದ ತೊಟ್ಟಿಲ ಕಟ್ಟಿ ಸಾಕ್ಷಾತ್
ಸಂಗಮನೆಂಬೆಸರಿಟ್ಟು ||ಸೊ||
ಕೋಟಿ ಶರಣರು ಬರುವರಮ್ಮ ಬೀಗಣಕ್ಕೆ ||ಸೋ||
ಕೋಟಿದಳಗಳ ಮೆಲೆ ಚಕ್ರಶಾಂತಿಯ
ಪಿಡಿದು ಸಮವಲಮೃತ ಸೇವಿಸಿದೆನಮ್ಮ ||ಸೊ||
ಈ ಸೂರ್ಯ ಮಂಡಲ ನಿವಾರ್ತಿಯಮ್ಮ ||ಸೊ||
ನಾನಾ ಜನ್ಮವ ತಿರುಗಿ ಕೋಬಾರಿ ಬಂದೆನಮ್ಮ |
ಮಾದಿ ಮಾನವಸಟ್ಟೆನಮ್ಮ ||ಸೊ||
ಈ ಮುನಿಪತ್ನಿ ತನ್ನಂತೆ- ಮಾಡಿದಳಮ್ಮ ||ಸೊ||
ಎತ್ತ ನೋಡಲು ತಂಗಿ ಸುತ್ತಲು ಮುತ್ತಿನ ಮೂಲ |
ಸತ್ತ ಕೋಟಿ ದೇವರ ಸೇವೆಯಮ್ಮ ||ಸೊ||
ಈ ಸತ್ಯಾಲೋಕ ಮುತ್ತಿನ ಮಾಲೆಯಮ್ಮ ||ಸೊ||

45
ಓಂಕಾರ ನಾದದೊಳಾಡು ಮನ
ಬ್ರಹ್ಮಾನಂದದೊಳು ಇರುವನು |
ನಾದ ಬ್ರಹ್ಮದೊಳಾಡು ಮನ |
ನಿನ್ನ ನಾನತ್ವ ಭಾವವು ಬಿಡುಮನ ||1||
ಓಂಕಾರ ನಾದದೊಳಾಡುಮನ |
ನಿನ್ನ ಅಹಂಕಾರ ಭಾವವ ಬಿಡು ಮನ ||ಬ್ರಹ್ಮ||
ಹಂಸನಾದದೊಳು ಅಡುವನ ನಿನ್ನ ಸಂಶಯ ಸಂಕಲ್ಪಬಿಡು ಮನ |
ಜ್ಞಾನಜೋತಿಯ ಬೆಳಗುವನ |
ನಿನ್ನ ಅಜ್ಞಾನ ಭಾವವ ಬಿಡು ಮನ ||1||
ಗುರುವಿನ ಗುಲಾಮನಾಗುವನ |
ಗುರುಬೋಧೆಯು ಜಗವೆಲ್ಲ ಆಡು ಮನ ||ಬ್ರಹ್ಮ||

182 / ತತ್ವಪದಗಳು ಸಂಪುಟ-1

46
ತೂಗು ಮಂಚದ ಮೇಲೆ
ತೂಗು ಮಂಚದ ಮೇಲೆ ತೂಗಾಡುವ ಶಿವ ಯೋಗಿಯ ನೋಡಿರೋ ||
ಇಂತ ರಾಗರಹಿತ ಕರ್ಮತ್ಯಾಗವ ಮಾಡಿರುವ
ಶ್ರೀಗುರುಲಿಂಗೇಶನ ಕೂಡಿರೋ ||ಪ||
ಸಾಧನೆ ನಾಲ್ಕನು ಸಾಧಿಸಿ ಚಿನ್ಮಯ ಅಂಗದೊಳಿಟ್ಟವರೇ ಇಂತ
ಆಧಾರವೆಂತೆಂಬ ಹಾಸಿಗೆಯ ಮೇಲೆ ತಾನಾಗಿ ಮಲಗವರೆ ||ತೂ||
ಜನನ ಮರಣಯೆಂಬ ಜಡವನೆ ಕಳೆಕೊಂಡು ತಾನಾಗಿ ಬಂದವರೇ |
ಇಂತ ಗಂಗ ಯಮನೆಯೆಂಬ ಸಂಗವನ್ನು ಸೇರಿ ಲಿಂಗವು ತಾನಾಗವರೇ ||ತೂಗು||
ಅದ್ವೈತವೆಂಬ ಬಾರಿಯ ತಲೆದಿಂಬು ತಲೆಕೆಳಗಿಟ್ಟವರೇ ||
ಕಾರಣವರಿತೆಂಬ ಕಾಶ್ಮೀರ ಸಾಲನ್ನು ಮೈ ಮೇಲೆ ಒದ್ದವರೇ ||ತೂಗು||
ಹುಬ್ಬಳ್ಳಿಯೆಂತೆಂಬ ಕಲ್ಯಾಣ ಪುರದೊಳು ಗುರುಲಿಂಗಂದೆನಿಸವರೇ ಇಂತ
ಜ್ಞಾನಸಿದ್ಧರೊಳು ಬೆರೆತು ಉರಿವ ಗದ್ದುಗೆ ಮೇಲೆ ತಾನಾಗಿ ಒರಗವರೇ ||ತೂಗು||

47
ಈತನ್ಯಾರು ತಿಳಿದು ಪೇಳೆ
ಯೋಗಿ ತೂಗುತಲಿದಾನೆ ಉಯ್ಯಾಲೆ ನಾಗಾಭರಣನು ತಾನಾದ ಮೇಲೆ ||
ತಾನು ತ್ರಯದ ಮಂಡಲ ಮಧ್ಯದಲ್ಲಿ ಜ್ಞಾನ ವೃಕ್ಷ ಮಾವಿನ ನೆರಳಲ್ಲಿ ||ಪ||
ನಾಲ್ಕು ವೇದಗಳನೆ ಸರಪಣಿ ಮಾಡಿ ನಾದ ಬಿಂದೆಂಬ ತೊಟ್ಟಿಲು ತೂಗಿ|
ತಾನು ಚಿನ್ಮಯನಾಗಿ ಮಲಗಿದನೇ ||
ಜ್ಞಾನ ತರದ ನಿದ್ರೆಯ ಮಾಡುತಿಹನೆ ||ಪ||
ಈತನ್ಯಾರು ತಿಳಿದು ಪೇಳೆ ಜಾಣೆ ಭವಗೆದ್ದ ಗುರುಲಿಂಗೇಶು ಕಾಣೆ ||ಯೋಗಿ||

48
ಗುರುದೇವರ ಕೇಳಿ ತಿಳಿಕೊಂಡೆ
ಯನ್ನಯ ಗುರುತಂದೆ ತನ್ನಂತೆ ಮಾಡಿದ |
ಅನ್ಯಾರ ಆಸೆ ನಮಗ್ಯಾಕೆ ||ಪ||
ಅನ್ಯರ ಆಸೆ ನಮಗ್ಯಾಕೆ ತಂಗಮ್ಮ ಮತ್ತೊಬ್ಬರಾಸೆ ನಮಗ್ಯಾಕೆ ||ಪ||
ಅಷ್ಟ ವರ್ಣದ ಜೋಳ ಕುಟ್ಟಿಕೇರಿದೆನವ್ವಾ ನಿಷ್ಠೆಯಿಂದಲಿ ಅನ್ನ ಅದಮಾಡಿ
ನಿಷ್ಠೆಯಿಂದಲಿ ಅನ್ನ ಅದಮಾಡಿ ತಂಗಮ್ಮ ಲಿಂಗ ಜಂಗಮರಿಗೆ ಯೆಡೆಮಾಡೆ ||ಯನ್ನ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 183

ಒಂಬತ್ತು ತೂತಿನ ಕುಂಬಾರ ಗಡಗವ್ವಾ |
ಅಂಬಾಲಿ ಕಾಸಿ ಅದಗೂಡಿ ಅಂಬಾಲಿಕಾಸ್ತಿ ಅದಗೂಡಿ ತಂಗಮ್ಮ
ಸಾಧು ಸಜ್ಜನರಿಗೆ ಉಣಲಿಕ್ಕೆ ||ಯನ್ನ||
ಅಂತರಂಗದ ಪೇಟೆ ಸಂತೆಗೋದೆನವ್ವಾ | ಚಿಂತೆಯಿಲ್ಲದೆ ತಂದೆ ನವರತ್ನ |
ಚಿಂತೆಯಿಲ್ಲದೆ ತಂದೆ ನವರತ್ನದ ಬೆಳಕಲ್ಲಿ |
ಕಾಂತೆ ಕೇಳವ್ವಾ ನನದುಃಖವಾ ||ಯನ್ನ||
ಅತ್ತಿತ್ತ ವುಡುಕಿದೇ ಎಲ್ಲರ ಕೇಳಿದೇ ಇಲ್ಲೆ ಇತ್ತವ್ವ ಹೊಸಮುತ್ತು |
ಇಲ್ಲೇ ಇತ್ತವ್ವ ಹೊಸಮುತ್ತು ತಂಗಮ್ಮ
ನಮ್ಮ ಗುರುದೇವರ ಕೇಳಿ ತಿಳಿಕೊಂಡೆ ||ಯನ್ನ||

49
ಜೋಪಾನವಮ್ಮ
ಅಂಬರದೊಳಗೊಂದು ಇಂಬಾದ ಗುಡಿಯುಂಟು ಶಂಭುಲಿಂಗನ ಪೂಜೆ ನಡೆಯಿತಾದಮ್ಮ |
ಸ್ತಂಭ ಒಂದರ ನಡುವೆ ಶೃಂಗಾರಮಾಗಿರ್ಪ ಜಂಗಮರ ಮಠಕೆ ಎರಡು ದಾರಿಯಮ್ಮ||ಪ||
ದಾರಿಯಲ್ಲಿ ಹೋಗುವಾಗ ಧೀರರಾರು ಮಂದಿ ಪಾರಾದ ಅವರಲ್ಲಿ ಇರುವರಮ್ಮ |
ಮೀರಿ ಅವರನ್ನು ಬಿಟ್ಟು ಏರಿ ಹೋದ ಮೇಲೆ ಶೂರರೆಂಟು ಮಂದಿ ಬರುವರಮ್ಮ||ಪ||
ಕರೆದು ಬೋಧಿಸುವರು. ದುರ್ಗುಣದ ಮಂತ್ರವ ತೊರೆದು ಅವುಗಳನ್ನೆಲ್ಲಾ ನೀ ನೋಡಮ್ಮ |
ಗುರುವು ಹೇಳಿರುವಂತೆ ಅರುವಿನ ಮಂತ್ರವ ಮರೆಯದೆ ಮನದೊಳಗೆ ಜೋಪಾನವಮ್ಮ||1||
ಕುದುರುಗಾತರ ಹಾದಿಯ ವಿಧವನ್ನು ತಿಳಿಯದೆ ಅದಗೆಟ್ಟು ಹೋಗುತಿ ಎಚ್ಚರವಮ್ಮ|
ಪದುಮನಾಭನ ಪಾದ ಬೆರೆಯಬೇಕಾದರೆ ಪದೇ ಪದೇ ಮೆಲ್ಲನೇ ಅದನೇರಮ್ಮ ||ಅಂಬರ||
ಮುತ್ತಿನ ಮಂಟಪ ಸುತ್ತಲು ಇರುತಿಹ ಚಿತ್ರದ ಕೊಳ ಒಂದೇ ನೀ ನೋಡಮ್ಮ |
ಸತ್ಯಶರಣರು ಬಂದು ನಿತ್ಯ ಸ್ನಾನವ ಮಾಡಿ ಮುಕ್ತಿ ಕಾಂತೆಯೊಳು ಸೇರುವರಮ್ಮ ||ಅ||
ಶಂಭುಲಿಂಗನ ಕೊಳದಿ ರಂಭೆ ಮೇನಕೆ ಬಂದು ತುಂಬಿದ ಅಮೃತವ ಕೊಡುವರಮ್ಮ|
ಡಂಭ ಮಾಡದೆ ನೀನು ತುಂಬಿದ ಕೊಳದೆ ಶಂಭುಲಿಂಗನ ಜ್ಞಾನ ತೀರ್ಥವಮ್ಮ ||ಪ||
ಭಕ್ತಿ ರಥವ ಮಾಡಿ ಯುಕ್ತಿ ಕುದುರೆಯ ಮಾಡಿ |
ಸತ್ಯ ಸಾರಥಿಯಾಗಿ ನೀ ನೋಡಮ್ಮ |
ಸತ್ಯಶರಣರ ಸೇವೆ ನಿತ್ಯ ಬಿಡದೆ ಮಾಡಿ ಮುಕ್ತಿ ಕಾಂತೆಯೊಳು ನೀ ಸೇರಮ್ಮ ||ಅಂಬರ||

184 / ತತ್ವಪದಗಳು ಸಂಪುಟ-1

50
ಆರು ಅರಿಯರು ನಮ್ಮೂರು
ಆರು ಅರಿಯರು ನಮ್ಮೂರು ಗುರುಭಕ್ತರು ಬಲ್ಲರು ನಮ್ಮೂರು
ಅಂಬರದೊಳಗೆ ನಮ್ಮೂರು ತ್ರಿಪುರಾಂತಕನಿರುವನು ನಮ್ಮೂರು ||1||
ಇಂಬರ ಕಾಣದೆ ನಮ್ಮೂರು ತುಂಬಿದ ಬೆಳಕು ನಮ್ಮೂರು
ಅಕ್ಷಯದೊಳಗಿದೆ ನಮ್ಮೂರು, ನಿಕ್ಷೇಪ ಇರುವುದು ನಮ್ಮೂರು ||2||
ದಕ್ಷಿಣ ದಿಕ್ಕಿಗೆ ನಮ್ಮೂರು ಪಂಚಾಕ್ಷರಿ ಮಹಿಮೆಯು ನಮ್ಮೂರು |
ಪರಶಿವ ತುಂಬಿದ ನಮ್ಮೂರು ಶಿವಸಭೆಯೊಳಗಿರುವುದು ನಮ್ಮೂರು ||3||
ಕುಂಡಲಿ ತುದಿಯಲಿ ನಮ್ಮೂರು ಅದು ಕಂಡುವರಿಲ್ಲವು ನಮ್ಮೂರು |
ಕಂಡಿತ ಜನರಿಗೆ ನಮ್ಮೂರು |
ನರಮಂಡಲ ಸ್ಥಳವಿದು ನಮ್ಮೂರು ||4||
ಬಯಲಿಗೆ ಬಯಲೇ ನಮ್ಮೂರು, ಬಯಲೊಳ ಬ್ರಹ್ಮವೇ ನಮ್ಮೂರು |
ಭವಹರರಿರುವರು ನಮ್ಮೂರು ಬಹು ಪವಿತ್ರರಿಹರು ನಮ್ಮೂರು ||5||
ಪರಾತ್ಪರದೊಳ್ ನಮ್ಮೂರು |
ಪರದೇಶಿಗಳಿರುವರು ನಮ್ಮೂರು |
ಮಾಲಾರು ಹುಚ್ಚನಲಿ ಬಹುತೇಜದಲ್ಲಿ ತೇಜದಲಿರುವುದು ನಮ್ಮೂರು ||ಆರು||

51
ಬೆಳಗುವ ತೇಜದಲ್ಲಿ
ಕೋಳಿ ಕೂಗಿತು ಮಗಳೇ ಬೆಳಗಾಯಿತೇಳಮ್ಮ |
ಮನದೊಳಗೆ ಗುರುಸ್ಮರಣ ಮರೆಯಬೇಡಮ್ಮ ||ಕೋಳಿ||
ಉದಯಕಾಲದೊಳೆದ್ದು ವಂದನ ಗೋವಿಂದನ |
ಮನದಲ್ಲಿ ಧ್ಯಾನಿಸುತ್ತ ಮುದದಿಂದ ನಡೆಯಮ್ಮ ||2||
ಗಂಗೆಯ ಮನೆಯಲ್ಲಿ ಮಿಂದು ಸ್ನಾನವ ಮಾಡಿ
ಅಂತರಂಗದಲ್ಲಿ ಹರಿಯ ಭಜಿಸಮ್ಮ ||3||
ಆರು ಕಮಲದಲ್ಲಿ ಆಡುವ ಹಂಸದಲ್ಲಿ |
ಅರಿವರಿತು ಗುರಿಯರಿತು ಬೆರೆಯಬೇಕಮ್ಮ ||4||
ಏಳು ಕೋಟೆಯ ಮೇಲೆ ಬೆಳಗುವ ತೇಜದಲ್ಲಿ |
ವರಗುರು ತಾತನ ಭಜನೆಯ ಮಾಡಮ್ಮ ||5||
ಸೂರ್ಯ ಚಂದ್ರರು ಸೇರಿ ಬೆಳಗುವ ಠಾವಿನಲ್ಲಿ
ಅಮರ ನಾರಾಯಣನ ಪಾದದಲ್ಲಿ ಬೆರೆಯಮ್ಮ ||6||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 185

52
ಭ್ರಾಂತಿಯ ಜಗವಳಿದು
ಗುರುಪಾದದಿ ನೀ ಬೆರೆದು |
ನೀನಿರೆ ಮರಣದ ಭಯವಿರದು |
ಪರಿಪರಿ ವಿಷಯವನರಸುತ ತಿರುಗುವ ಮರುಳಾಟವನಳಿದು |
ಸಿರಿಬರಗಳು ಪೋಗಿ |
ಗುರುವಿನ ಕರುಣವು ಹಿತವಾಗಿ ಕರುಣದೊಳ್ ಬೆಳಗುವ |
ಒರುಣಕೆ ಸಿಲುಕದಾ |
ಹೊರವಳವಂದಾಗೀ ||ಗುರು||
ಭ್ರಾಂತಿಯ ಜಗವಳಿದು |
ಈ ಮಲಯಂತ್ರವ ಕಳೆದುಳಿದೂ |
ಕಾಂತೆ ಕನಕನ ಚಿಂತೆಯ ಕಳೆದು ಅಶಾಂತಿಯ ಗುಣವರಿತು ||ಗುರು||
ಕುರುಡರ ನಡೆಬಿಟ್ಟು ದೃಷ್ಟಿಯ ಪರಮಾತ್ಮದೊಳಿಟ್ಟು |
ಕರಣವ ಬೆಳಗಿಪ ಗುರುಲಿಂಗೇಶನೊಳ್ ಪೆರಂಬುದ ಸುಟ್ಟು ||ಗುರು||

53
ಭಂಗ ಯಾಕೆ ಪಡುವೆ
ಭಂಗಯಾಕೆ ಪಡುವೆ |
ನೀ ನಿಸ್ಸಂಗಿಯಾಗೋ ಮನವೇ ರಂಗುಗೂಡಿ ಬಹಿ |
ರಂಗವಾಗಿ ತನು |
ಸಂಗದಿಂದ ನಿಜಲಿಂಗವಕಾಣದೆ ||ಪ||
ಬಂಧು ಬಳಗವೆಂದು |
ಸಡಗರದಿಂದ ಬಳಲಿ ನೊಂದು ಸಂದು ತಿಳಿಯದೆ
ಹಿಂದೆವುಳಿಯದೆ ಎಂದಿನಂತಲೆ| ಹೊಂದುತ ತನುಗಳ ||ಭಂಗ||
ಆತ್ಮ ಭಾವವಳಿದು |
ಇಲ್ಲದ ಜಾತಿಯಲಿ ಸುಳಿದು |
ಛಾತಿಪೋಗಿ ಯಮ | ಭೀತಿಗಾಗಿ ಬಹು |
ನಾಥನಾಗಿ ಕಡು ಪಾತಕಿಯಾಗುತ ||2||
ಶಂಕೆಯಲ್ಲಿ ಪಳಗಿ | ಪಾಪದ | ಪಂಕದಲ್ಲಿ ಮುಳುಗಿ |
ಸಂಕಟವಿಗೆ ಬೆಂಕಿಯಾದ ಗುರು |
ಶಂಕರಾರ್ಯನಿಗೆ | ಕಿಂಕರನಾಗದೆ ||ಭಂಗ||

186 / ತತ್ವಪದಗಳು ಸಂಪುಟ-1

54
ಬೆರೆದೇಕನಾಗದೆ
ಬಿಡದೈ ದುಃಖ ಬಿಡದೈ |
ಯೆಂದಿಗೂ | ಬಿಡದೈ ದುಃಖ ಬಿಡದೈ ||
ಕಡೆಯ ಕಾಣದ ಕರ್ಮ | ದೊಡಲಿದು ತಾನಾಗಿ |
ಮಡದಿ ಮಕ್ಕಳನ್ನು ಬಿಟ್ಟು | ಅಡವಿಗೆ ಪೋದರು ||ಬಿಡದೈ||
ತಾನಾರೊ ತನ್ನ ವಿಧಾನವನರಿಯದೆ | ನಾನಾದೇವರನ್ನೆಲ್ಲ |
ಧ್ಯಾನ ಮಾಡಿದರಿನ್ನು ||1||
ದೇಹವೇನಾನೆಂಬ | ಮೋಹವನರಿಯದೆ |
ಆಹಾರ ಬಿಟ್ಟು ಸಾಹಸಿಯಾದರು ಬಿಡದೈ ||2||
ಮರಣ ಭೀತಿಯು ಪೋಗಿ | ಪರಮನೆ ತಾನಾಗಿ |
ಗುರುಲಿಂಗೇಶನೋಳ್ |
ಬೆರೆದೇಕನಾಗದೆ ||ಬಿಡದೈ||

55
ಶಂಕೆಯಿಲ್ಲದೆ ಬಾಳಿರೆಂದು
ಹೇಳಿಬಾರೋ ಪೋಗಿ ಹೇಳಿಬಾರಣ್ಣ |
ಪೇಳಿರ್ದವನೊಳಗೆ ಶಾಂತವ |
ತಾಳಿ ಚಿಂತಿಸಿ ನೋಡಿರೆಂದು ||ಪ||
ಹಿಂದೆ ಜನಿಸದೆ ಮುಂದೆ ಸಾಯದೆ ಹಿಂದು ಮುಂದಗಳೆಂಬ ಯರಡರ |
ಸಂದಿನೊಳಗಿಹ ಶಿವನ ಕಂಡರೆ ವಂದನೆಗಳಿನ್ನಾತಕೆಂದು ||ಹೇಳಿ||
ಪ್ರಜ್ಞೆಯೆಂಬವ ಖಡ್ಗ ಪಿಡಿದು ವಿಘ್ನಹೋತನ ಶಿರವ ಕಡಿದು |
ಅಜ್ಞಭಾವವ ಕಳೆದು ನಿಂತೊಡೆ ಯಜ್ಞ ಕೋಟಿಗಳಾಯಿತೆಂದು ||ಹೇಳಿ||
ಇಹಪರಗಳೆಂಬ ದುಷ್ಟಗ್ರಹಗಳನು ಯಡಬಿಡದೆ ಬಂಧಿಸಿ |
ಅಹಮಿನೊಳಗದು ಮುಳಗಿನಿಂತೊಡೆ ಗ್ರಹಣತರ್ಪಣವಾಯಿತೆಂದು ||ಹೇಳಿ||
ಎಂಟು ಗೇಣಿನ ಹಟ್ಟಿಯೊಳು ಮೂರೆಂಟು ಮೂಲೆಯ ಕೋಣೆಯೊಳಗಿಹ |
ಗಂಟುಕಾಣದೆ ಬರಿದೆ ಗಂಟಿಗೆ ಬಂಟರಾಗಿ ಕೆಟ್ಟರೆಂದು ||ಹೇಳಿ||
ಪಂಚಪದರದ ಚೀಲದೊಳಗೆ ಹೊಂಚುಮಿಂಚುತ್ತಿರುವ ರತ್ನದ |
ಪಂಚವರ್ಣವ ತಿಳಿಯದ ಯೋಗಿಗೆ ಪಂಚಸೂತಕವಿಲ್ಲವೆಂದು ||ಹೇಳಿ||
ಇಲ್ಲೆಂಬುದು ಕಂಡುಕಂಡು ಕಲ್ಲುಬೊಂಬೆಗಳನ್ನು ಪೂಜಿಸಿ ಕಲ್ಲೆ ಶಿವನೊ
ಶಿವನೆ ಕಲ್ಲೋ ಬಲ್ಲೋಡಿದ ನೀವ್ ಪೇಳಿರೆಂದು ||ಹೇಳಿ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 187

ಹಿಂದೆ ಪುಟ್ಟಿದ ಹಿರಿಯರಿಲ್ಲ ಮುಂದೆ ಪುಟ್ಟುವ ಕಿರಿಯರಿಲ್ಲ |
ಸಂದಿಗೊಂದಿಯ ಸಂಗವಿಲ್ಲದು ಹೊಂದಿದರೆ ಬಹು ಚಂದವೆಂದು ||ಹೇಳಿ||
ಯೆಲ್ಲರೊಳು ತಾ ಸೇರಬೇಕವರೆಲ್ಲರೂ ವೋಡ್ಯಾಡಬೇಕು |
ಅಲ್ಲಿ ಇಲ್ಲೊಂದಾಗಬೇಕಿದು ಇಲ್ಲದಿರ್ದೊಡೆ ಸುಳ್ಳೆಂದು ||ಹೇಳಿ||
ಮೂರು ಪುರಗಳ ಮೂರು ಗುಣಗಳ ಮೂರು ವಲಗಳ ಮೂರವಸ್ಥೆಯ |
ಮೂರು ಭಟರನು ಮೀರಿ ಬೆಳಕಿನ ದಾರಿಯಲ್ಲಿ ವೋಡ್ಯಾಡಿರೆಂದು ||ಹೇಳಿ||
ನಾನು ಯಂಬೀ ವಸ್ತುವಿಲ್ಲದೆ ನೀನುಯಂಬುವದಿಲ್ಲವದರಿಂ |
ನಾನೇನೀಂದರಿಯದೆಸಗುವ ಧ್ಯಾನ ಮೌನಗಳ್ಯಾತಕೆಂದು ||ಹೇಳಿ||
ಎಂದಿಗಾದರೂ ಸಾವು ತಪ್ಪದು ಎಂದು ತಿಳಿದ ಮೇಲು ಸುಮ್ಮನೆ ಇಂದು ನಾಳೆಂದು ಕಳೆದರೆ ಮುಂದೆ ಯಮ ಕಾದಿರುವನೆಂದು ||ಹೇಳಿ||
ಬಾಲನಾಗುತ ಬೆಳೆದು ಯೌವನ ತಾಳಿ ಬಳುಕಿ ತನುವು ಮುಪ್ಪಿನ
ಚೀಲವಾಗುತ ಕೆಡಲು ನೀವಾಕಾಲಪಾಶದಿ ಬೀಳ್ವಿರೆಂದು ||ಹೇಳಿ||
ಮರಣವೆಂಬುದ ಸ್ಮರಿಸಿಕೊಂಬಿರಿ ಧರೆಯ ಸುಖವನ್ನೇತಕೆಂದರಿ |ಮರೆತು
ಮರಣವ ಮರಳಿ ಭೋಗದಿ ಬೆರೆತು ದುಃಖಿಗಳಾದಿರೆಂದು |ಹೇಳಿ|
ಮುಂದೆ ಬರುವುದು ಮುಪ್ಪು ಅಲ್ಲಾನಂದವೆಂಬುದೆ ಇಲ್ಲವದರಿಂ ಮಂದ ಬುದ್ಧಿಯ
ಬಿಟ್ಟು ನಿತ್ಯಾನಂದ ಪದದಲ್ಲಿ ಸೇರಿರೆಂದು ||ಹೇಳಿ||
ಮಂಕುತನ ನಿಮಗ್ಯಾತಕೆ ಬಿಡುವಾತಂಕವಿಲ್ಲದೆ |
ನಮ್ಮ ಸದ್ಗುರು ಶಂಕರಾರ್ಯನ ಪದವಸೇರಿ |
ಶಂಕೆಯಿಲ್ಲದೆ ಬಾಳಿರೆಂದು ||ಹೇಳಿ||

56
ಗುರುಶಂಕರನ ಕೂಡಿ
ನರರೆಂದು ತನ್ನ ಪೇಳುವನು | ನೋಡೆ
ಕುರಿಯಂತೆ ತಾನು ಸಾಯುವನು |
ಅರುಹಿ ಸಿಂಹನಾಗಿ |
ಮರಣವ ಹರಿಸದೆ |
ನರಜನ್ಮವನು ನೀಗಿ ನರಕಕ್ಕೆ ಗುರಿಯಾಗಿ ||ನರ||
ಧೀರನಾನೆಂದು ತಿರುಗುವನು | ಬಂತು |
ಮಾರಿನೋಡೆನಲು ಕೊರಗುವನು |
ಈರೇಳು ಲೋಕವ ಮೀರಿತಾನಿಲ್ಲದೆ |
ಘೋರಮೃತ್ಯುವಿಗೆ ಈ ಸಾರದ್ದೇಹವ ಕೊಟ್ಟ ||ನರ||
ಜಾಣನೆನ್ನುತ ಕೊಬ್ಬಿ ಮರೆವ |

188 / ತತ್ವಪದಗಳು ಸಂಪುಟ-1

ಹಣವ | ಕಾಣುತ ಮಲವನ್ನೇ ಬಿಡುವ |
ಜ್ಞಾನದಿಂ ಹರನಾಗಿ |
ಹಾನಿಯಂ ಹರಿಸದೆ ನಾನಾ ದುಃಖಗಳಿಂದ ಪ್ರಾಣವ ಕಳೆಯುತ್ತ ||ನರ||
ಹುರಿ ಮಾಡುತ್ತಿರುವ ರೋಮಗಳ ಮತ್ತೊಬ್ಬರಿಗೆ ಜೋಡಿಸುವ ಹಸ್ತಗಳ |
ಗುರುಶಂಕರನ ಕೂಡಿ ಮರಣವ ಹರಿಸದೆ |
ಮರೆವೆಯಿಂ ಕುರಿನಾಯಿ |
ನರಿಯಾಗಿ ಪುಟ್ಟುತ್ತ ||ನರ||

57
ಚಿತ್ತವಿದು ಪರಿಶುದ್ಧವಾಯಿತು
ಮರಣದಲಿ ಕೈಲಾಸವನು ನೋಡಿ |
ನವಜೀವರಾಗಿ ನರಕಮಾರ್ಗವ ಕಡಿ ಕೆಡಬ್ಯಾಡಿ ||ಪ||
ಧರಿಸಿ ನಿಯಮವ ಬಾಡಿದಿರಿ ಪುರ | ಹರನಪೂಜೆಯ ಮಾಡಿದಿದಿತನು |
ದುರಿತಗಳನೀಗಾಡಿದಿರಿಸು |
ಸ್ಥಿರದ ಮುಕ್ತಿಯ ಬೇಡಿದಿರಿ ನೀವ್ | ಮರಣದಲ್ಲಿ ಕೈಲಾಸ ||ಮರಣ||
ವರಿಸಿ ಕನ್ಯಾದಾನ ಮಾಡಿ | ಸ್ನಾನಗಳ ಮಾಡುತ |
ಚರಿಸಿ ನಾನಾ ಕ್ಷೇತ್ರಗಳ ನೋಡಿ | ದುರಿತತೊಲಗಿತು | ಧನ್ಯರಾದಿರಿ |
ಹರನಲೋಕ ನಿವಾಸರಾದಿರಿ |
ಮರಳಿ ಸಂಕಲ್ಪವನು ಮಾಡದೆ |
ನರಕದ ಮಾರ್ಗಪ್ರೇತರಾಗದೆ ||ಮರಣ||
ಸತ್ಯಥಾಶ್ರವಣಾದಿಗಳ ಮಾಡಿ |
ಶಿವರಾತ್ರಿ ಮೊದಲಾದುತ್ತಮವ್ರತ ಪುಣ್ಯಗಳ ಕೂಡಿ |
ಚಿತ್ತವಿದು ಪರಿಶುದ್ಧವಾಯಿತು |
ಮೃತ್ಯುಮಾರ್ಗವು ದೂರವಾಯಿತು |
ಕತ್ತಲೆಯ ಮಾತುಗಳ ಕೇಳದೆ |
ಮತ್ತೆವೈತರಣಿಯಲ್ಲಿ ಬೀಳದೆ ||ಮರಣದಲ್ಲಿ||
ಸಂಕಟದಿ ಸಾಯುವರು ಮಾನವರು ದರ್ಭೆಗಳ
ಪಿಡಿದೆಮಕಿಂಕರರು ಪುರಗಳನು ಸೇರಿದರು |
ಕಿಂಕರರು ಮಾಡುವರು ಬಹುವಿಧ |
ಶಂಕೆಗಳ ಹೆಚ್ಚಿಸುತ ನರಕದ ಬೆಂಕಿಯಲಿ ಮುಳಗಿಸುವದರಿಂದ
ಶಂಕರಾರ್ಯನ ಪದವ ಭಜಿಸುತ ||ಮರಣ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 189

58
ಎಂಥಾದ್ದೀ ಕಲಿಕಾಲವು
ಎಂಥಾದ್ದೀ ಕಲಿಕಾಲವು |
ದುರ್ಗತಿಗೆಳೆಯುವಂಥಾದೀ ಬಹುಮೇಳವು
ಅಂತರಂಗದೊಳು ಶಿವಶಾಂತಿಯಂ ಪಡೆಯದ |
ಭ್ರಾಂತರೆಲ್ಲರು ಪೂಜ್ಯರಂತೆ ಭೂಸುರರಂತೆ ||ಪ||
ಹರನ ಮಾಡದೆ ಗಾತ್ರವ | ಮೋಹಿಗಳಾಗಿ | ಧರಿಸಿಪಾತಕ ಸೂತ್ರವ |
ಮರಣಜನ್ಮಗಳಲ್ಲಿ ಬೆರೆತು ಸೂತಕದಲ್ಲಿ ಮರಳಿ ವೈತರಣಿಯಲ್ಲಿರುವರೇ ದ್ವಿಜರಲ್ಲಿ ||1||
ಭಿನ್ನಾಕಾರವತಳ್ಳದೆ | ದೇವರು ಬಂದು |
ತನ್ನಂಗದೊಳುನಿಲ್ಲದೆ | ಬೆನ್ನಿಗಂಟಿರುವ ಶಿವನನ್ನು ತಾ ಬೆರೆಯದ |
ಜನ್ಮಕರ್ಮಗಳಲ್ಲಿ ಮಾನ್ಯರಾದವರಂತೆ ||2||
ದೃಢವಾದ ಮಡಿಯನಿಲ್ಲದೆ | ಶಂಕರದೇವ |
ನುಡಿಯಲ್ಲಿ ಶಿರಬಾಗದೆ | ವಡಲಸೂತಕದಿಂದ |
ಬಿಡದ ಪಾತಕದಿಂದ ಕೆಡುವ ಪಾಪಿಗಳೆಲ್ಲ ಮಡಿಯ ಮಾನವರಂತೆ ||ಎಂಥಾದಿ||

59
ವಂದನಂ ಗುರುವೀರನೆ
ವಂದನಂ ಗುರುವೀರನೆ |
ನಿನ | ಗೊಂದನವು ಸುಖಸಾರನೆ |
ಬಂಧಮೋಕ್ಷಗಳೆಂಬಯೆರಡರ |
ಸಂದುತೋರಿದ ಧೀರನೆ ||ಪ||
ತನ್ನ ನಿಜವನು ನೋಡನು |ಈ|
ಭಿನ್ನವಳಿಯದ ಮೂಡನು |
ನಿನ್ನ ಪಾದವ ಕಂಡು ಮನುಜನು |
ಜನ್ಮವಳಿದಾರೂಢನು ||ವಂದ||
ಹಿಂದೆ ಸುಕೃತವ ಮಾಡಿದೆ |
ಅದರಿಂದ ನಿನ್ನೊಳು ಕೂಡಿದೆ |
ಬಂಧನವಿಲ್ಲದ ಪೂರ್ಣ ಸಹಜಾನಂದಪದವಿಯ | ನೋಡಿದೆ ||2||
ತಂದೆ ತಾಯಿಗಳಾರು |
ಬಹುಮಂದಿ ಕಳಿಯದೇ ಪೋದರು |
ತಂದೆ ಸದ್ಗುರು ಶಂಕಾರಾರ್ಯನ ಹಿಂದೆ ನಿಲ್ಲುವ ದೇವರು ||ವಂದನ||

190 / ತತ್ವಪದಗಳು ಸಂಪುಟ-1

60
ಸದ್ಗುರು ಶಂಕರಾರ್ಯ ಬಲ್ಲ
ಶಿವರಾತ್ರಿ ಸಾಕಾಯ್ತು | ಅಲ್ಲಿಂದ ಶಿವನೊಡನೆ ಸಂಗವಾಯ್ತು |
ಶಿವನೆ ಬಹಿರಂಗನಾಯ್ತು | ಬಾಧಿಸುವ ಶಿವದೇಹ ಭಂಗವಾಯ್ತು ||ಪ||
ಉಪವಾಸಿಯಾಗಿ ನಾನು | ಬಿಡಿಸಿತಂ | ದುಪಚಾರ ಬಿಲ್ವಗಳಡು |
ಗುಪಿತ ಶಿವ ಮಂದಿರವನು ಸೇರಿ | ಮಂಟಪ ಬಾಗಿಲ ತೆರೆದನು ||1||
ಸಂಗಿಸದೆ ಖಂಡದಲ್ಲಿ | ಕೂಡಿ ಬಹಿರಂಗ ಬ್ರಹ್ಮಾಂಡದಲ್ಲಿ ಮಂಗಳಾಕಾರದಲ್ಲಿ |
ಬೆಳಗುತಿಹ ಲಿಂಗವನು ಕಂಡೆನಲ್ಲಿ ||2||
ಪಾತಾಳ ಭುವನಗಳನು | ಗಗನನಾಂಡ | ಬೇತಾಳ ಭೂತಗಳನು |
ಭೂತಾದಿ ಕಾಲಗಳನಂ | ಬಳಶಚಿ | ಜ್ಯೋತಿರೂಪಾಯ್ತು ತಾನು ||3||
ಅಭಯವೇ ತೋರುತಿಹುದು | ಯೆಲ್ಲೆಲ್ಲು | ಶುಭಮಹೋದಯವಾದುದು |
ಸಭೆಯ ಸಂಸರ್ಗವಿರದು | ಅಮೃತದಿಂ | ದಭಿಷೇಕವಾಗುತಿಹುದು ||4||
ಘಂಟೆಯನು ಬಡಿಯಲಿಲ್ಲ | ಅದು ಬಹಳ | ಕಂಟಕವೆ ತೋರಲಿಲ್ಲ |
ಕುಂಟರೀನೆಂಟರಿಲ್ಲ | ದೀಪಗಳ | ನಂಟಿಸುವನ್ಯಾವನಿಲ್ಲ ||5||
ಗಾತ್ರವೇ ಕಾಣಲಿಲ್ಲ | ವದರಿಂದ | ಪಾತ್ರೆಗಳ ನಿರಸಲಿಲ್ಲ |
ಪಾತ್ರೆಗವಕಾಶವಿಲ್ಲ | ಶಿವನ ಬಳಿ | ರಾತ್ರಿಯ ತೋರಲಿಲ್ಲ ||6||
ಭೇದವಲ್ಲಿಲ್ಲವಾಯ್ತು | ಮಂತ್ರಪಠ | ನಾದಿಗಳು ಬ್ಯಾಡವಾಯ್ತು |
ಪಾದವೇ ಭುವನವಾಯ್ತು | ಅದರಿಂದ ಪಾದವೇ ಶೂನ್ಯವಾಯ್ತು ||7||
ಪಂಚಪಾತ್ರೆಗಳ ತೊಳದೆ | ಅಗಾಮಿ | ಸಂಚಿತಂಗಗಳನು ಕಳೆದೆ |
ಪಂಚಾಮೃತವನು ಸವಿದೆ | ಹರಿಹರವಿ | ರಿಂಚಿ ರೂಪವನು ತಳೆದೆ ||8||
ಮರಣ ಜನ್ಮಗಳಿಲ್ಲ | ಮುಂದುದರಂ | ಭರಣದುಃಖಗಳಿಲ್ಲ |
ಬರುತಾಪಂಗಳಿಲ್ಲ | ಇದನು | ಸದ್ಗುರು ಶಂಕರಾರ್ಯಬಲ್ಲ ||9||

61
ಪರತರ ಮುದ್ರೆಯ ನೋಡಿದನೆ
ನಿದ್ರೆಯ ಮಾಡಿದನೇ ಪರತರ ಮುದ್ರೆಯ ನೋಡಿದನೇ ಸಿದ್ಧವಾದ ಶಿವಲಿಂಗ
ಬೆಳಕಲ್ಲಿ|
ಉಧ್ರ್ವದ ಪ್ರಣವದ ಮಣಿಮಯ ಪೀಠದಿ ||1||
ಆಧಾರದ ಮೇಲೆ ಅರುವಿನ ವೇದಿಕೆಗಳ ನೋಡಿ ಹರಿಯಿಲ್ಲದಿಹ ಮಣಿಮಯ
ಪೀಠದಿ ಏರಿಸು ಸುಸುಮ್ನದಿ ದಾಮದ ಮಧ್ಯದಿ ||ನಿದ್ರೆ||
ಪವಳದಿ ಮಂಟಪದಿ ದ್ವಿದಳಾರವಿ ಮೂಲಾಗ್ರದಲಿ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 191

ದೇವರ್ನಿಕ ಮಧ್ಯದ ನಡುವೆ ಶಿವ ಸೋಹಂ |
ಎಂಬೋ ಹಮ್ಮಿನ ಬೆಳಕಿನಲ್ಲಿ ||ನಿದ್ರೆ||
ಕಾಲ ಮೇಘವ ನಡುವೆ ಮಿಂಚಿನ ಸಾಲಿನ
ಪವಳದಲ್ಲಿ ಬಾಳನೇ ತನಭಜಿಸುತ ಪಾಡುತ |
ಬಾಲನ ತೊಟ್ಟಿಲು ಕೀಲಿನ ಮನೆಯೊಳ್ ||ನಿದ್ರೆ||
ಮೊದಲು ಗಂಡನ ಬಿಟ್ಟು ಈ ಲೋಭಿ ಚತುರತನದಿ ಕಂಡು |
ಕದನವು ತೆಗೆದು ಕೈ ಪಿಡಿದು ತ್ರಿಕೂಟದ
ಮದನದ ಸಾಲಿನ ಮಂಟಪದಡಿಯೊಳು ||ನಿದ್ರೆ||
ಆರು ಕಾಲಿನ ಮಂಚ ಅದಕ್ಕೆ ಸೇರಿದ ಸರಪಳಿಯೂ |
ದೀರಕರವಾ ಪಿಡಿದಮೃತ ಸವಿಯುತ ಸಾರ ವಸ್ತುವ ಹೊದಿಸುತ ಹಾಸುತ ||ನಿದ್ರೆ||
ಮಾನನಿ ಬಾಯಿಯೊಳು ಕಿಡಿಯ ಪಸರಿಸಿ ಬಾನು ಮಂಡಲಕುನಿಸಿ |
ನಾನನಿಯೆಂಬುವೂ ಮದಗಳ ಸುಡುತಲಿ ಜ್ಞಾನ ವೃಕ್ಷದ ಮಾವಿನ ನೆರಳೊಳು ||ನಿದ್ರೆ||
ಎಲ್ಲಿ ನೋಡಿದರಲ್ಲಿ ಬೆಳಕು ನಿಲ್ಲದೆ ಪಸರಿಸಿ ಭೂ |
ಶ್ರೀ ಗುರುಲಿಂಗೇಶನ ಕರುಣಾಮೃತ ಸವಿಯುತ್ತಾ ||ನಿದ್ರೆ||

62
ಇಲ್ಲ ಮುಕ್ತಿ
ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ |
ಸತ್ಯವಾಗಿ ಅಲ್ಲವಾದ್ದು ಬೆಲ್ಲವಾಗಿ ಬೆರೆತ ಬೇವು ಆಗೋತನಕ ಇಲ್ಲ ಇಲ್ಲ ||ಪ||
ಭೋಗ ಭಾಗ್ಯ ಆಸೆ ಮೋಹ ವಿಷವಾಗೀ ತೋರಲಾಗೀ
ಕಾಗೆ ಗೂಗೆ ನಾಯಿ ಹಂಸವಿಯಾಗಿ |
ಮೊಲ್ಲೆ ತನಕ ||ಇಲ್ಲ||
ಅತ್ತೆ ಸೊಸೆಯಾಗಿ ಹತ್ತು ಐದು ಆಗಿ |
ಸುಖವಾಗಿ ಹತ್ತು ಮಂದಿ ಸತ್ತುಹೋಗಿ ಬೆತ್ತಲಾಗಿ |
ನಿಲ್ಲೋತನಕ ||ಇಲ್ಲ||
ಕಣ್ಣುಯಿದ್ದು ಕಾಣದಿಹ ಕುರುಡನಾಗಿ |
ಮೂಕನಾಗೀ ತನ್ನೊಳಿಹ ಗುರು ರಂಗನನ್ನು ತಾನೇ |
ಕಾಣೋತನಕ ||ಇಲ್ಲ ಇಲ್ಲ||

63
ಎರಡಕ್ಷಗರಳೇ ಸಾಕು
ಸ್ಥಿರ ಮುಕ್ತಿ ಸಂಪದಕೇ ಶ್ರೀ ಗುರು ಕೊಟ್ಟು ಎರಡಕ್ಷಗರಳೇ ಸಾಕು ||
ನಿರಕ್ಷರಕುಕ್ಷಿಯೆಂದು ವರ ಮೋಕ್ಷಲಕ್ಷ್ಮಿ ಕೈಬಿಡುವಳೆ ಅವನ ||ಸ್ಥಿರ||

192 / ತತ್ವಪದಗಳು ಸಂಪುಟ-1

ಅವನು ನಿಶ್ಚಲನಾಗಿ ಕುಳಿತು |
ಕಂಗಳು | ಅರೆ ಮುಚ್ಚಿದುನ್ನ ಖೇಚರಿ |
ಮಿಂಬಿನೊಳ್ಕನಸಿನ ಚಂಚಲವಡಗಿಸಿ |
ಸಂಚಿತ ಕಳೆದು ನಿಶ್ಚಿಂತನಾಗುವಂಥ ||ಸ್ಥಿರ||
ಅಕ್ಷರವೆರಡರಿತು |
ಆಡುವ ಹಂಸ | ಪಕ್ಷಿಯ ಕಾಲ್ಮುರಿದು |
ಲಕ್ಷವು ಚದರದೆ ಈಕ್ಷಿಸಲಾಕ್ಷಣ |
ನಕ್ಷತ್ರಮಳೆ ತನ್ನ ಕುಕ್ಷಿಯೊಳ್ಸುರಿವಂಥ ||ಸ್ಥಿರ||

64
ರತ್ನ ಬಂದಿದೆ ನೋಡಿರೋ
ರತ್ನ ಬಂದಿದೆ ನೋಡಿರೋ ಉನ್ನತ ಜೀವ |
ರತ್ನ ಬಂದಿದೆ ನೋಡಿರೋ ||ಪ||
ಪೃಥ್ವಿಗಧಿಕ ಬ್ರಹ್ಮಪುರದಿಂದ ಬಂದಿದೆ |
ರತ್ನ ಪರೀಕ್ಷೆಯ ಬಲ್ಲ ಸತ್ಪುರುಷರು ರತ್ನ ಬಂದಿದೆ ನೋಡಿರೋ ||ಉನ್ನತ||
ಶಿರದೊಳಡಗಿದೆ ಯಾವಾಗಲೂ ಕರದಲ್ಲಿ ಕಾಣುತ್ತಿದೆ |
ವರ ಚಂದ್ರ ಸೂರ್ಯ ಬೀದಿಗಳೊಳಗಿಟ್ಟಿದೆ |
ದುರಿತ ಕರ್ಮಗಳಳಿದವಗೆ ಕಾಣುತ್ತಿದೆ ||ರತ್ನ||
ಅಷ್ಟದಳಂಗಳಿಂದಾ |
ಆ ರತ್ನವು ದಿಟ್ಟವಾಗಿಹುದರಿಂದ ದೃಷ್ಟಿಯನಗಲದೆ ನೋಡಿದ ಪುರುಷನು |
ನಷ್ಟಪಾತಕನಾಗಿ ಶ್ರೇಷ್ಠನಾಗುವಂತ ||ರತ್ನ||
ಕಳ್ಳರ ಭಯವಿಲ್ಲವು ಈ ರತ್ನಕ್ಕೆ |
ಸುಳ್ಳರ ಸುಳುಹಿಲ್ಲವು | ಎಲ್ಲೆಲ್ಲಿ ನೋಡಲಲ್ಲಲ್ಲೆ ಕಾಂಬುದು
ತಾನು ಒಲ್ಲೆನೆಂದರು ಬಿಡುದೆ ದೂರಿಗೆ ನಿಲ್ವದು ||ರತ್ನ||
ಶಿರದೊಳು ರತ್ನವನ್ನು ಧರಿಸಿರುವಂಥ |
ಉರಗನ ಹೃದಯವನ್ನು ಉರಗಭೂಷಣ ಪಕ್ಷಿಹಂಸವಾಹನ ಮುಖ್ಯ |
ಸುರಮುನಿ ಹೃದಯಾದಿ ನಿತ್ಯ ಬೆಳಗುವಂಥ ||ರತ್ನ||
ದೊರೆ ದೇಸಾಯಿಗಳಲ್ಲಿಯೂ ನವಕೋಟಿಯ |
ವರ ನಾರಾಯಣನಲ್ಲಿಯು |
ನೆರೆ ಚಕ್ರವರ್ತಿ ಬೊಕ್ಕಸದೊಳಗಿಲ್ಲ
ಶ್ರೀ ಗುರುಲಿಂಗೇಶನ ಭಂಡಾರದೊಳಿಹ ||ರತ್ನ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 193

65
ದಯವೆಂಬ ವಜ್ರಾಂಗಿ ತೊಡಿಸಲು
ಭಯ ನಿವಾರಣವಾಯಿತಿಂದು |ಗುರು||
ದಯವೆಂಬ ವಜ್ರಾಂಗಿ ತೊಡಿಸಲು ಒಂದು ಭಯನಿವಾರಣವಾಯಿತಿಂದು ||ಪ||
ಆಶಾಪಾಶದ ಕೈಕಾಲುಡುಗಿ |
ನಿಲ್ಲೆ ಭಾಸುರ ಬ್ರಹ್ಮೋಪದೇಶವೆಮಗಾಗಿ |
ಸೂಸುವಿಂದ್ರಿಯ ವ್ಯಾಪಾರುಡುಗಿ |
ಕಮಲಾಸನಾಂತರ್ಲಕ್ಷ್ಯ ಸ್ಥಿರವಾಗಲಾಗಿ ||ಭಯ||
ತರಣೀಂದುಗಳ ಗತಿಯಳಿಯೇ ಕಂಗಳೆರಡರ ನಡುನೀಲ ಜ್ಯೋತಿ ನಿಂತುರಿಯೆ |
ಹರಿದು ಕತ್ತಲು ಬೆಳಕರಿಯೆ ಅಲಿ |
ವರಬಿಂದು ರುಚಿಕೋಟಿ ಮಿಂಚಿನೋಳ್ಪೊಳೆಯ ||ಭಯ||
ಸಣ್ಣ ಸೂಜಿಯ ಕಂಡಿಯೊಳಗೆ ದೊಡ್ಡ ಹುಣ್ಣಿಮೆ ಚಂದ್ರನ ಕಳೆಯುಕ್ಕಿ ಬೆಳಗೆ |
ಕಣ್ಣಾರ ಕಂಡಾಯಿತೊಳಗೆ ಸುಖ |
ಬಣ್ಣಿಸಲಸದಳ ಬ್ರಹ್ಮಾದಿಗಳಿಗೆ ||ಭಯ||
ಏಳು ಕೋಣೆಯ ಮನೆಯಲಿ |
ಘಂಟ ತಾಳ ಮುದ್ದಾಳೆ ಢಣಢಣ ಘೋಷದಲ್ಲಿ ಸಾಲುದೀವಿಗೆ ಹಳಕಲ್ಲಿ |
ಆಗ್ವ ನೀಲಕಂಠನ ಪೂಜೆ ನೋಡಲಿಕ್ಕಲ್ಲಿ ||ಭಯ||
ಧರಣಿ ಕತ್ತಲು ಮುಸುಕಿರಲೂ ಸೂರ್ಯಶಿರದೋರಲೆಸರಿಲ್ಲದಡಗುವ ವೋಲು |
ಗುರುಮಹಲಿಂಗನ ಸೇರಲು |
ಪೂರ್ವ ದುರುಕರ್ಮರಾಶಿ ನಿಂದುರಿದು ಹೋಗಲು ||ಭಯ||

66
ಯೋಗ ಸೂತ್ರ ಸಾಧಿಸಿ
ಎಷ್ಟು ಮಾತ್ರ ಭವದ ಕಡಲದು | ಗುರು ಕೃಪೆಗಿರಲು |
ದಾಟಲೊಂದು ಗೋಷ್ಪದವೆನಿಪುದು ||ಪ||
ಅಷ್ಟಭೋಗದಾಶೆ ಬಿಟ್ಟು |
ಅಷ್ಟ ಪಾಶಗಳನ್ನು ಸುಟ್ಟು ಅಷ್ಟದಳದ ಕಮಲ ಮಧ್ಯ |
ದಿಟ್ಟೆ ಬಲದೀಶ್ವರಂಗೆ ||ಎಷ್ಟು ಮಾತ್ರ||
ಯೋಗ ಸೂತ್ರ ಸಾಧಿಸಿ |
ಈ ಕಾಯವೆಂಬ |
ಯೋಗಮಂಟಪವನು ಶೋಧಿಸಿ |

194 / ತತ್ವಪದಗಳು ಸಂಪುಟ-1

ನಾಗಸರ್ಪದೆಡೆಯ ತುಳಿಯೆ |
ನಾಗರತ್ನ ಕಾಂತಿ ಪೊಳೆಯ |
ನಾಗಸ್ವರದಿ ಮನವು ಮುಳುಗಿ ರಾಗವಳಿದು ಯೋಗಿವರೆಗೆ ||ಎಷ್ಟು||
ಆರು ಬಾಗಿಲನ್ನು ಮುಚ್ಚಲು |
ದ್ವಿದಳ ಬೇರೆ ಆರು ಮೂರು ಕಮಲ ಬಿಚ್ಚಲು |
ಮೂರು ನದಿಯ ಮಧ್ಯದಲ್ಲಿ |
ಮೂರು ಕಾಲಿನ ಹಂಸೆ ಸಣ್ಣ ದ್ವಾರ ತೆಗೆದು ಬಡಿವ ಗಂಟೆ |
ಬೇರಿರುವವ ಕೇಳ್ವ ಯತಿಗೆ ||ಎಷ್ಟು||
ದುರಳ ಸಂತತಿ ದೂರಗೈಯುತ |
ನಮ್ಮ ಶಿವನ |
ಶರಣ ಸಂತತಿಯಲ್ಲಿ ಸೇರುತ |
ಧರೆಯೊಳಧಿಕವೆನಿಸಿ ಮೆರೆವ | ಪರಮ ಶ್ರೀ ಗುರುರಂಗಲಿಂಗನ |
ಚರಣ ಕಮಲ ಜಗವ |
ಮರೆತು ಮುಕ್ತನಾದ ಯತಿಗೆ ||ಎಷ್ಟು||

67
ನೆರೆಶಾಂತಿ ವಿರತಿ ತೋರಿ
ಭಜನೆ ಮಾಡುವ ಬನ್ನಿರೋ ಸದಾಶಿವನ ಭಜನೆ ಮಾಡುವ ಬನ್ನಿರೋ ||
ಭಜನೆ ಮಾಡುವ ನಿತ್ಯ | ಸುಜನರೆಲ್ಲರೂ ಕೂಡಿ |
ಕುಜನ ಸಂಗವ ದೂರಮಾಡಿ ಸದ್ಭಕ್ತಿಯಿಂದ ||ಭಜನೆ||
ಶತಕೋಟಿ ಪಾಪವನು |
ಮಾಡಿದ ಮಹ | ಪತಿತರು ನಾವು ನೀನು |
ಪತಿತ ಪಾವನವೆಂಬ ಬಿರುದುಳ್ಳ ದೇವನು |
ಕ್ಷಿತಿಯೊಳುತ್ತಮ ಗತಿ ತೋರೆಂದು ಶಿವನ ||ಭಜನೆ||
ಘುಡುಘುಡಿಸುತ ಬರುವ ಯಮನಾಳ್ಗಳು ಕುಡಿದು ಮಾಡುತ ಕೋಪವ |
ಝಡಿದು ಶೂಲದಿ ಹಿಡಿದು ಭಕ್ತರ ಕೈಯ ಕಡುಕರುಣದಿ
ಪೊರೆಯುವ ಮೃತ್ಯುಂಜಯನ ||ಭಜನೆ||
ಪಂಚವಿಂಶತಿ ತತ್ವದಿ ತಾನಿರ್ದು ಪ್ರ | ಪಂಚದೊಳಾನಂದದಿ |
ಪಂಚವಿಂಶತಿ ಲೀಲೆ ತೋರಿ ತನಭಕ್ತರ
ಸಂಚಿತ ಕರ್ಮವನುರುಹಿದ ಶಿವನ ||ಭಜನೆ||
ಕಷ್ಟ ಕರ್ಮಗಳ ನೋಡಿ ನಿಮಿಷಾರ್ಧದಿ |
ಸುಟ್ಟು ನಿರ್ಮೂಲವ ಮಾಡಿ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 195

ಇಷ್ಟಾರ್ಥಗಳನಿತ್ತು ಕರುಣದಿ ಪಾಲಿಪ |
ಅಷ್ಟದಳದ ಪದ್ಮದಲ್ಲಿರುವ ಶಿವನು ||ಭಜನೆ||
ಕರುಣಾರಸವನೆ ಬೀರಿ |
ಯೋಗವು ತತ್ವ |
ನೆರೆಶಾಂತಿ ವಿರತಿ ತೋರಿ |
ಧರೆಯೊಳಧಿಕ |
ಜ್ಞಾನ ಬೋಧಿಸಿ ಪೊರೆಯುವ ಗುರುಮಹಾಲಿಂಗನೆ ನೀನೆಂದು ಶಿವನೆ ||ಭಜನೆ||

68
ಜಾತಿ ಸೂತಕವೆಂಬ ಮಾತಿಲ್ಲ
ಜಾತಿ ಸೂತಕವೆಂಬ ಮಾತಿಲ್ಲ |
ಸುಜ್ಞಾನ ಮಾರ್ಗದಿ ಜಾತಿ ಕರ್ಮಾದಿಗಳು ಮೊದಲಿಲ್ಲ ||ಪ||
ಜಾತಿ ಗೋತ್ರಕೆ ಬದ್ಧರಾಗುತ |
ಆತ್ಮನರಿಯದ ಕರ್ಮಿಗಲ್ಲದೆ |
ಜಾತಿಕಲ್ಪನೆಯಳಿದು ಆತ್ಮ |
ಜ್ಯೋತಿಯಲ್ಲಿ ಮುಳುಗಿದ ಮಹಾತ್ಮಗೆ ||ಅ||
ಬ್ರಹ್ಮಬೀಜವೆ ಸರ್ವಯೋನಿಯೊಳು |
ಪುಟ್ಟಿರುವದೆಂಬುದ |
ಮರ್ಮವರಿಯದ ಮೂಢ ಜನರುಗಳು |
ನಮ್ಮ ಕುಲ ಮೇಲೆನುತ ವಂದಿಸಿ |
ನಿಮ್ಮ ಕುಲ ಕೀಳೆನುತ ನಿಂದಿಸಿ |
ಹಮ್ಮು ಮದ ಮತ್ಸರದಿ ಸಾಯುತ |
ಒಮ್ಮೆ ನರಕಕೆ ಯಿಳಿವರಲ್ಲದೆ |ಜಾತಿ|
ಇಲ್ಲ ಜಾತಿಯು ಸ್ವರ್ಗ ನರಕದೊಳು |
ತ್ರೈಮೂರ್ತಿಗಳಿಗು |
ಇಲ್ಲ ಜಾತಿಯು ತೀರ್ಥಕ್ಷೇತ್ರದೊಳು |
ಯೆಲ್ಲ ಬ್ರಹ್ಮಂಬರವುಯಿಲ್ಲದೆ |
ಯಿಲ್ಲದುಂಟೆಂತೆಂಬ ಕಂಗಳು |
ನಿಲ್ಲದಿರು ಘಾತಕಗಳ ನಡೆಯೊಂದಲ್ಲದೆ ಸುಜ್ಞಾನಪಥದೊಳು ||ಜಾತಿ||
ಅನ್ನಮಯದೀಕಾಯವೆಂಬುದು |
ಸರ್ವರಿಗುವೊಂದೇ ಭಿನ್ನವಲ್ಲದೆ ತೋರಿಯಡಗುವುದು |
ಮುನ್ನಲೇ ಅಂಡಜ, ಸ್ವೇದಜ |

196 / ತತ್ವಪದಗಳು ಸಂಪುಟ-1

ಉನ್ನತದ್ವಿಜವರ ಜರಾಯಜ |
ವೆನ್ನುತೀ ಪರಿ ನಾಲ್ಕು ಜಾತಿಯ |
ನನ್ನಿಯಿಂದಜಸೃಜಿಸಿಯಿರಲು ||ಜಾತಿ||
ಜಾತಿ ವರ್ಣವು ಗೋತ್ರಷಣ್ಮತವು |
ಅಜಸೃಷ್ಟಿಯಲ್ಲವು |
ಖ್ಯಾತಿ ಜೀವಿಗಳೆಂದ ನಿರ್ಮಿತವು ಜಾತಿ ಅಜನಿರ್ಮಿತವದಾದೊಡಿ |
ಮಾತಿನಿಂದಲಿ ಕಡೆದು ಜಗ ಪ್ರಖ್ಯಾತಿಯಾಗಿಯೆ ಮನುಜ ನಿರ್ಮಿತ ಜಾತಿ ಗೋತ್ರವು ಕೆಡುವುದರಿಂದ ||ಜಾತಿ||
ಕರದಿ ಕುಂಭವು ಕುಂಭದೊಳು ಕ್ಷೀರ |
ಪ್ರತ್ಯೇಕವಾಗಿ ಇರುವ ಪರಿಯಾತ್ಮನಿಗೆ ಬೇರಾಗಿ ಶರೀರ ಕುಲವರ್ಣಾಶ್ರಮಂಗಳು |
ಬರಿದೆ ತೋರಡಗುವು ಅಲ್ಲದೆ |
ಪರಮಗುರುಮಹಾಲಿಂಗರಂಗನೋಳ್ಪರಿಕಿಸಲು ಲವಮಾತ್ರನಲ್ಲವು ||ಜಾತಿ||

69
ತಿಳಿದು ಭಕ್ತಿ ಮಾಡು ಗುರುಪಾದದಲ್ಲಿ
ತಿಳಿದು ಭಕ್ತಿ ಮಾಡು ಗುರುಪಾದದಲ್ಲಿ | ಮನಸ್ಸಿನಲ್ಲಿ |
ಬಲವಂತ ಮಾಘಸ್ನಾನವಲ್ಲಾ | ಕೇಳೋ ಸೊಲ್ಲ ||ಪ||
ಕೋಪತಾಪದಿಂದ ಸತ್ಯ ಜ್ಞಾನ ನಾಶಾ ಮಾಯಾಪಾಶ |
ತಾಪಸೋತ್ತಮರ ಸೇವೆ ಕ್ಲೇಶ ನಾಶಾ |
ಭವನಾಶ ||ತಿಳಿ||
ಅಸತ್ಯದಿಂದ ನೀನು ಘಾಸಿಯಾಗುವೆ |
ಮೋಸಹೋಗುವೆ | ಈಶನಲ್ಲಿ ಆಶೆಯಿಡು ಹೇಶೀ ಜೀವವೇ |
ಮುಕ್ತನಾಗುವೆ ||ತಿಳಿ||
ತನುತ್ರಯ ಬೆಳಗುವ ಆತ್ಮನೊಬ್ಬನು ಸತ್ಯವೆಂದು |
ಕನಸಿನಂತೆ ತೋರ್ಪ ಜನ ಮಿಥ್ಯವೆಂದು |
ಮನಸಂದೂ ||2||
ಗುರುದೇವ ಸರತತ್ವ ಬೋಧಕರ್ತಾ |
ಕೇಳೋ ಮತ್ರ್ಯ ಗುರುಪಾದ ಹೊಂದದಿರೆ ಜನ್ಮವ್ಯರ್ಥ |
ಇದು ಸತ್ಯ ||ತಿಳಿ||
ಸಲೆಗುರು ಮಹಲಿಂಗ ರಂಗ ಬಂದಾ |
ದಯದಿಂದ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 197

ಕಳೆಯುವನು ಬಕುತರ ಭವಬಂದ |
ಕ್ರಮದಿಂದ ||ತಿಳಿ||

70
ವಚನವ ಕೇಳು
ನಾಳೆಯೆಂಬನ ಮನೆ ಹಾಳು |ನೀನು|
ನಾಳೆತನಕಿರುವುದು ನಿಜವೇನು ಹೇಳು |
ನಾಳೆಯೆಂಬನ ಮನೆಹಾಳು ||ಪ||
ಕ್ಷಣಭಂಗುರವುಯೆನ್ನಿಸದೆ |
ನಿನ್ನ ತನುವು ಆಚಂದ್ರಾರ್ಕವಾಗಿ ನಿಲ್ಲುವುದೆ ||
ದಿನವು ರೋಗದಿ ಸಾಯುತ್ತೀಯೆ |
ಇದನು ಮನದೊಳಗರಿತು ಶೀಘ್ರದಿ ಮುಕ್ತನಾಗದೆ ||ನಾಳೆ||
ಹಾಳು ವಾದವ ಮಾಡಬಲ್ಲೆ |
ನಿನ್ನ ಮೂಲ ತತ್ವವನು ಕಿವಿಯಲೊಲ್ಲೆ ಖೂಳಕುಹಕ ವಿದ್ಯೆ ಬಲ್ಲೆ ||
ಎಷ್ಟು ಹೇಳಲು ಆಶೆ ಮೋಹವ ಬಿಡಲೊಲ್ಲೆ ||ನಾಳೆ||
ಕೊಡಬೇಕಾದರೆ ನಾಳೆಯನ್ನದೆ ಕಟ್ಟಿ ಇಡಬೇಕಾದರೆ
ಎನ್ನ | ದೀಗಲೆಯೆಂಬೆ |
ಮಡದಿ ಮಕ್ಕಳಗಿರಲೆಂಬೆ |
ನಾಳೆ ಜಡಿಯುವ ಯಮಭಟರುಗಳಿಗೇನೆಂಬೆ ||ನಾಳೆ||
ಬರುವ ಕಾಲದಿ ಬರಿಗೈಯ |
ನೀನು ಹೊರಡುವ ಕಾಲದೊಳಗೆ ಬರಿಗೈಯ |
ಪರರನ್ನು ಜರಿಯುವ ಬಾಯಿ |
ಇಹವು ಪರಕಾಣದಾಡುವ ತಲೆಹುಳಿತ ನಾಯಿ ||ನಾಳೆ||
ವಿರತಿ ಸದ್ಭಕ್ತಿಯ ತಾಳು ಕೆಟ್ಟ ದುರಿತದಿ ಕುದಿಯುವದ್ಯಾತರ ಬಾಳು
ಸ್ಥಿರ ಮುಕ್ತಿಕಾಂತೆಯನಾಳು |
ನಮ್ಮ ಗುರುಮಹಲಿಂಗನ ವಚನವ ಕೇಳು ||ನಾಳೆ||

71
ಘಠವು ಎಂಬ ಮಠದಿ
ಓದಬಾರದೇ ತರಳ | ಓದಬಾರದೆ ||ಪ||
ಓದಿನೊಳಗಣೋದು ಶ್ರೀಗುರು |

198 / ತತ್ವಪದಗಳು ಸಂಪುಟ-1

ಬೋಧಿಸಿರುವ ಅರ್ಥವರಿತು ಓದಬಾರದೆ ||ಅ||
ಮೂರು ನದಿಯೆ ನಡುವೆ ಮಿಂದು ಚಾರುಬ್ರಹ್ಮಗಿರಿಯ ಮರದ |
ಆರು ಮೆಟ್ಟಲುಯೇರಿ ಸಣ್ಣ |
ದ್ವಾರವನ್ನು ತೆರೆದು ನೋಡಿ ||ಓದಿ||
ಜಲಜವಾರು ಕಂಡು ಒಳಗೆ ಪೊಳೆವಕಾರವಾದಿಯಾಗಿ ಸಲೆ ಕ್ಷಕಾರದಂತ್ಯವರಿತು |
ದಳದೊಳಕ್ಷರೈವತ್ತನ್ನು ||ಓದಿ||
ಈಡ ಪಿಂಗಳಯೆಂಬುವಂಥ |
ನಾಡಿಯರಡು ತಡೆದ ಬ್ರಹ್ಮ |
ನಾಡಿ ಮಧ್ಯ ಕುಳಿತು ಮುದದಿ |
ನೋಡಿ ಸೋಹಂ ಸೋಹಂಮೆನ್ನುತ ||ಓದಿ||
ಚಾರುಪಚ್ಚೆ ಹಲಿಗೆ ಮೇಲೆ |
ಸಾರಬ್ರಹ್ಮ | ಸೂತ್ರ ಪಿಡಿದು ಮೂರು ಮುಖದ ಕಂಠದಿಂ |
ಸಾರಮಂತ್ರ ಪ್ರಣವ ಬರೆದ ||ಓದ||
ಚಟುಲ ಶ್ರೀಗುರು ರಂಗಲಿಂಗ |
ಸ್ಫುಟದಿವರದೀ ಮಂತ್ರರಾಜ |
ಕುಟಿಲವಳಿದು ಭಕ್ತಿಯಿಂದ |
ಘಠವು ಎಂಬ ಮಠದಿ ನಿತ್ಯ ||ಓದಬಾರದೆ||

72
ಮರುಗಮಣಿಯೆಂಬ ರತ್ನ
ಮರುಗಮಣಿಯೆಂಬ ರತ್ನ ದೊರೆತವಗೆ |
ಮರಣ ಬಾಧೆಗಳಿಲ್ಲವು |
ವತ್ಸ ಮರುಗಮಣಿಯೆಂಬ ||ಪ||
ಚಿನುಮಲಾದ್ರಿಯೊಳಿರ್ಪುದೂ |
ರವಿಯಂತೆ ನಿರ್ಮಳದಿ ಬೆಳಗುತಿಹುದು |
ಇದಕೆ| ಮನ್ಮುನಿಗಳಜಮುಖ್ಯರೂ ಕಾದಿಹರು |
ಒಮ್ಮೆ ತಪವನುಗೈಯುತ | ವತ್ಸ ||ಮರು||
ಸತ್ತವರ ಬದುಕಿಸುವದು |
ತೃಣವೆನಿಪ |
ದುತ್ತಮದ ಜೀವರತ್ನ | ಇದನು |
ಅರ್ಥಿಯಿಂ ಪೂರ್ವದವರು |
ಪಡೆದುತಪಮೃತ್ಯು ಬಾಧೆಯನಳಿದರು ವತ್ಸ ||ಮರು||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 199

ಹಿಂದೆ ರಾವಣ ಯುದ್ಧದೀ ಸಾವಿತ್ರಿ |
ಕಂದಿ ಮೂರ್ಛಿತನಾಗಿರೆ |
ಹನುಮ| ತಂದ ಸಂಜೀವನ ಗಿರಿಯಂ | ದೆಚ್ಚೆತ್ತ |
ನೆಂದುಕೊಂಬರು ಜಗದೊಳು ||ಮರು||
ಇಂದು ಆತ್ಮಾರಾಮನು |
ಪುಸಿಮಾಯ |
ಬಂಧಿಯಿಂತಾ ಮರೆತಿರೇ |ಗುರುವು|
ಬಂದು ಪ್ರತ್ಯಕ್ಷ ಕೊಟ್ಟು |
ವಾಕ್ಯದಿಂದ ಬಂಧನವೆ ಬಯಲಾಯಿತು ||ಮರು||
ಮೀರಿರುವ ಜಾಡ್ಯಕಿದರ ಸುಳಿಗಾಳಿ |
ದೂರ ಬೀಸಿದ ಮಾತ್ರದಿ ಅವನ |
ಪೂರ್ವ ಪ್ರಾರಬ್ಧವೆಲ್ಲ ನಸಿದು ನಿರ್ಮಳದ |
ದೀರಗುರುರಂಗನಪ್ಪಂ | ವತ್ಸ ||
ಮರುಜಮಣಿಯೆಂಬ ರತ್ನ ||

73
ಗುಡಿಗಳ ತಿರುಗತ
ನಡೆಯ ತಿಳಿಯರೆಲ್ಲ ಗುರುವಿನ ನುಡಿಯ ತಿಳಿಯರಲ್ಲಾ
ಅಡಿಯಾಕಾಶವ ಕಾಣದೆ ನೀವು |
ಗುಡಿಗಳ ತಿರುಗತ ಕೆಡುವುದು ಬಿಟ್ಟು ||1||
ಕೆಡು ನುಡಿಗಳ ಬಿಟ್ಟು ಗುರುವಿನ ಅಡಿಯೊಳ್ ಶಿರವಿಟ್ಟು |
ಮಡಿಯೆಂಬುದನ್ನು ಕಡೆಯೊಳಗಿಟ್ಟು ನಾನು ನೀನು ಎಂಬುದನ್ನು ಬಿಟ್ಟು ||2||
ಪಂಚಾಕ್ಷರಿಯಿಂದ ಪಂಚಮಿ ಪಾದಕಗಳಿನೀಗ ಹೊಂಚುತ್ತಿರುವ ಕರ್ಮಗಳಿದು |
ಸಂಚರಿಸುವ ಗುರುದೇವನ ಮರೆಯದೆ ||3||
ನೋಟಕೆ ದೃಢರಂಗ ನಮ್ಮಯ್ಯ ಸದ್ಗುರು ಗುರುಲಿಂಗ ಅಂಗದೊಳಗೆ
ತನ್ನಂಗವ ಬೆರಸಿದ ಚಂದವ ಕಾಣದ ಭಂಗವ ಪಡುವೆ ||4||
ಗುರುವಾಕ್ಯವ ವೇದ ಗುರುವಿನ ಘನಪಾದವೆ ಮೋಕ್ಷ ಗುರುವೆಂಬುದು
ಅರುವಿನ ನುಡಿಯು ಗುರುವ ಮರೆತು ನೀವು ಜರಿಯುತ ತಿರುಗದೆ ||5||

74
ಬೆಣ್ಣೆ ತಾನೆ ತಾ ಕರಗಿತು
ಓಂ ಗುರುಬೋಧೆಯಿಂದ ಏನಾಯಿತು ಮಹಾಗುರು
ಬೋಧೆಯಿಂದ ತಾನೇ ತಾನಾಯಿತು ||ಪ||

200 / ತತ್ವಪದಗಳು ಸಂಪುಟ-1

ಅಂಗಪೂಜಾದ ಮೇಲೆ ಲಿಂಗ ಪೂಜಾಯಿತು |
ಲಿಂಗಪೂಜಾದ ಮೇಲೆ ಕರಸ್ಥಳವಾಯಿತು ||1||
ಕರವ ತೊಳೆಯಲು ಮುನ್ನ ಎಂಜಲಾಯಿತು
ಹಾಲು ಕರೆಯಲು ಮುನ್ನ ಮೀಸಲಾಯಿತು ||1||
ಕಂಬವು ಮುರಿದೀತು ಗುಂಬವು ಒಡೆದಿತ್ತು
ಗುಂಬವು ಒಡೆದ ಮೇಲೆ ಗೂಡಾರ್ಥವಾಯಿತು ||1||
ಕಂಬವು ಒಡೆದಿತ್ತು ಗೂಡಾರ್ಥವಾಯಿತು |
ನೆಲವಿನ ಮೇಲೆ ಬೆಣ್ಣೆ ತಾನೆ ತಾ ಕರಗಿತು ||1||

75
ಪಾದ್ರಾಕ್ಷಿ
ಗುರು ಪಾದಕೆ ಪಾದ್ರಾಕ್ಷಿ ಕೊರಳಲಿ ರುದ್ರಾಕ್ಷಿ ನಡುಬೆಟ್ಟದ ಮಠವೆಲ್ಲ
ಲಿಂಗವಾಗಿ ಬರುವಾ ಗುರುವಿಗೆ ಮಡಿಯಾಗಿ ||1||
ಗುರುಸ್ವಾಮಿ ಮಠ ಗುರುತು ಚಿನ್ನದ ಕಳಸ ರುದ್ರಾಕ್ಷಿ
ತೋಟ ಗುರುಮಠ ಪಾದಕೆ ಪಾದ್ರಾಕ್ಷಿ ||2||
ರುದ್ರಾಕ್ಷಿ ತೋಟ ಗುರುಮಠ ಗುರುಸ್ವಾಮಿ ಅವರು
ನಿದ್ರಿ ಮಾಡುವುದು ಕಲ್ಲುಮಠ ಪಾದಕೆ ಪಾದ್ರಾಕ್ಷಿ ||3||
ಅತ್ತಿತ್ತಲ ದೇಶ ಮೇಲೆ ಉತ್ತರದೇಶ ಉತ್ತರ ದೇಶದಿಂದ
ಉಪದೇಶ ಪಾದಕೆ ಪಾದ್ರಾಕ್ಷಿ ||4||
ಶಿವರಾತ್ರಿ ದೀಪಾವಳಿ ಹಬ್ಬದ ದಿನದಲ್ಲಿ ಅಲ್ಲಿ ಬಂದಂತೆ
ಭಕ್ತರಿಗೆ ಉಪದೇಶ ಪಾದಕೆ ಪಾದ್ರಾಕ್ಷಿ ||5||
ಅಂಗವೆ ಲಿಂಗವಾಗಿ ಲಿಂಗವೆ ತಾನಾಗಿ ಗುರುಲಿಂಗಕ್ಕೆ
ವಸ್ತು ಧರಿಸೀವಿ ಪಾದಕ್ಕೆ ಪಾದ್ರಾಕ್ಷಿ ||6||

76
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಜಾಲಿಯ ಮರದಂತೆ ಧರೆಯೊಳ್ ದುರ್ಜನರು ||1||
ಬಿಸಿಲೊಳ್ ಬಳಲಿ ಬಂದವರಿಗೆ ನೆರಳಿಲ್ಲ |
ಹಸಿದು ಬಂದವರಿಗೆ ಹಣ್ಣುವಿಲ್ಲ ||ಜಾ||
ಕುಸುಮ ವಾಸನೆಯಿಲ್ಲ ಕೂರಲು ಸ್ಥಳವಿಲ್ಲ |
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ||1||
ಊರ ಹಂದಿಗೆ ನಿತ್ಯಸ್ನಾನವು ಮಾಡಿದರೆ ನಾರುವ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 201

ದುರ್ಗಂಧ ಬಿಡುವುದುಂಟೆ ||1||
ಘೋರ ಪಾಪಿಗೆ ತತ್ವಜ್ಞಾನವ ಹೇಳಿದರೆ ಕ್ರೂರ
ತನವನ್ನು ಬಿಟ್ಟು ಸುಜ್ಞಾನಿಯಾಗುವನೇ ||1||
ತನ್ನಿಂದ ಉಪಕಾರ ತೋಟಕಾದರು ಇಲ್ಲ |
ಬಿನ್ನಾಣದ ಮಾತಿಗೆ ಕೊನೆಯಿಲ್ಲ ||1||
ಅನ್ನಕ್ಕೇ ಸೇರಿದ ಕುನ್ನಿ ಮಾನವರಂತೆ ಇನ್ನಿವರ
ಕಾರ್ಯವ ಗುರುಲಿಂಗೇಶನೆ ಬಲ್ಲ ||1||

77
ಬರುವಾಗ ತರಲಿಲ್ಲ
ಪಾಪ ಪುಣ್ಯದ ಕತೆಯ ಕೇಳಿರಿ ಅನ್ಯಾಯ ಮಾಡಬೇಡಿ ಮಣ್ಣಿನ ಕಾಯವು
ಮಣ್ಣಿಗೆ ಹೋದ ಮೇಲೆ ಹಿಂದಲೆ ಬರುವುದು ಒಂದು ದಿನ ||1||
ಬರುವಾಗ ತರಲಿಲ್ಲ ಹೋಗುವಾಗ ಒಯ್ಯಲಿಲ್ಲ ನೀರೆಂಬ ನಿರ್ಧಾರ ಸಾಯಂಕಾಲ ಬಂದ ಮೇಲೆ ಬೇಕಾದ್ದ ಮಾಡ್ತಾರೆ ಹೋಗುವಾಗ ಕೇಳ್ತಾರೆ ಉಡುದಾರ ||2||
ಕೆರೆಯ ಕಟ್ಟಿಸಿ ತೋಟವ ಹಾಕಿಸಿ ಸೆರೆಯ ಬಿಡಿಸು ಸತ್ಯ ಪುಣ್ಯಜೀವ ಕರೆಯದೇ ಮನೆಗೆ ಬಂದವರಿಗೆ ಅನ್ನವ ನೀಡು ಪರಲೋಕ ಸಾಧನೆ ಎಲೆ ಜೀವ ||3||
ತಂದೆಯ ಮನಸ್ಸು ನಿಂದಿಸಿ ಬೈದವನು ಹಂದಿಯಾಗಿ ಹುಟ್ಟುವರಣ್ಣ |
ತಾಯಿಯ ಮನಸ್ಸನ್ನು ನೋಯಿಸಿ ಬೈಯ್ದರೆ ನಾಯಿಯಾಗಿ ಹುಟ್ಟುವರಣ್ಣ ||4||
ಅಣ್ಣನ ಹೆಂಡತಿ ಕೂಡ ಅಡ್ಡ ಮಾತಾಡಿದರೆ ಬಡ್ಡಿಸಾಲ ತೆತ್ತುವರಣ್ಣ ||
ನೂತನದಿಂದಲೇ ಸುಳ್ಳನ್ನು ಹೇಳಿದರೆ ಸೂಳೆಯರಾಗಿ ಹುಟ್ಟುವರಣ್ಣ ||5||
ಇರುವ ಎಂಬತ್ತು ಕೋಟಿ ಜೀವರಾಶಿಯಲ್ಲಿ ಹುಟ್ಟಿ ಮರಳಿ ಬಂದಲ್ಲೆಲ್ಲ
ಮೋಜುಗಾರ ಗುರುವಿನ ಪಾದವ ಹಿಡಿದ ಮೋಕ್ಷ ಮಾರ್ಗವ ಪಡೆದು ||6||

78
ಪಾಶವನ್ನು ಹರಿಸೋ
ವಂದಿಪೆ ನಿಮಗೆ ಗುರುನಾಥ |
ಮೊದಲೊಂದಿಪೆ ನಿಮಗೆ ಗುರುನಾಥ ||ಪ||
ಹಿಂದುಮುಂದರಿಯದೆ ನಿಮ್ಮ |
ಕಂದನಾದ ಯನ್ನ ನಿತ್ಯಾ |
ನಂದದಲ್ಲಿ ಸೇರಿಸು ಗುರುನಾಥ ||ಪ||
ಈಶ ನಿಮ್ಮ ದಾನರಿಗೆ | ದಾಸನಾದ ಯನ್ನಭವ |

202 / ತತ್ವಪದಗಳು ಸಂಪುಟ-1

ಪಾಶವನ್ನು ಹರಿಸೋ ಗುರುನಾಥ ||ಮೊದ||
ಭೇದವಾದವಾದಿಗಳ | ಹಾದಿಯನ್ನು ಬಿಡಿಸಿ ನಿಮ್ಮ |
ಪಾದವನ್ನು ಪಾಲಿಸೋ ಗುರುನಾಥ ||ಮೊ||
ಲೀಲೆಯಿಂದ ನಿನ್ನಪಾದ |
ಧೂಳಿಯನ್ನು ಶಿರದಮೇಲೆ ಬೀಳುವಂತೆ ಮಾಡೋ ನಿ ಗುರುನಾಥ ||ಮೊ||
ಅಲ್ಲಿ ಇಲ್ಲಿಯಿರುವ ದೇವರೆಲ್ಲ ಬಂದು ನಿನ್ನ ಪಾದ |
ದಲ್ಲೆ ನಿಂತರಲ್ಲೊ ಗುರುನಾಥ ||
ಗುರುವೆ ನಿನ್ನ ಚರಣದಲ್ಲಿ |
ಕರಣವಿಟ್ಟನೈಯ್ಯ ಮುಂದೆ ಮರಣವನ್ನು ಹರಿಸೋ ಗುರುನಾಥ ||ಮೊ||
ಗುರುವೆ ನಿಮ್ಮ ಚರಣದಲ್ಲಿ |
ಶಿರವನಿಟ್ಟ ನರನು ಪುರ |
ಹರನ ಮೀರುವನು ಗುರುನಾಥ ||ಮೊ||
ಮಂಕನಾದೊಡೇನುನಿವ ಕಿಂಕರನಾದೊಡೆ ಗುರು |
ಶಂಕರನಾಗುವ ಗುರುನಾಥ ||ವಂದಿಪೆ||

79
ದಾರುಣಿಯ ಸುಖಕಾಗಿ
ಯಾವ ಲೋಕದ ಭಕ್ತಿಯೋ ಇದು |
ಕಾಮಲೋಕದ ಮುಕ್ತಿಯೋ ಭಾವದೊಳು ಪರಿಶುದ್ಧವಿಲ್ಲದ್ಯಾಪರಿಯ ವಿರಕ್ತಿಯೋ ||
ರೋಗಬಂದರೆ ಸತಿಗೆ ವೈದ್ಯರಿಗಾಗಿ ಧನವನು ಸುರಿಸುವೇ |
ಯೋಗಿ ಸೇವೆಗೆಯೆನಲು ಶಿರವನು |
ಬಾಗಿ ಭೂಮಿಗೆ ಕೊರಗುವೆ ||
ಬೋಗಿಸಲು ವಿಷಯವನು ಹಂದಿಯ |
ಜೋಗಿಯಂದದಿ ತಿರುಗುವೇ ನಾಗಶಯನ ಗುಡಿಗೆ
ಬಾರೆನ | ಲಾಗುತಿರಲದುಯೆನ್ನುವೇ ||1||
ಬಾಲತರುಣಿಯ ಕೇಳಿಗಾದರೆ |
ಲೀಲೆಯಿಂದೋಡ್ಯಾಡುವೆ |
ಕಾಲಕಂಠನ ಗುಡಿಗೆ ಬಾರೆನೆ |
ಕಾಲು ಉಳುಕಿದೆಯೆನ್ನುವೇ |
ಸೂಳೆಯರ ಕುಣಿದಾಟಕಾದರೆ ಶಾಲು ಜೋಡಿಯ ಹೊದಿಸುವೆ |
ಪಾಲನಯನನ ಸೇವೆಗೆಂದರೆ ನಾಳೆ ಬಾರೆಂದುಸುರವೇ ||2||
ಹಾದಿಬೀದಿಯ ಕಾಡುಸುದ್ದಿಯೊಳಾದರದಿ ನೀ ಕೂಡವೇ ವೇದವಾಕ್ಯವ ಪೇಳೆ
ಹೊಟ್ಟೆಯ ಸಾಧನಗಳೆಂದಾಡುವೆ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 203

ಬಾಧೆ ಸುತನಿಗೆ ತೋರಿದರೆ ಹೊಲೆಮಾದಿಗರ ಕಾಲ್ಕಟ್ಟುವೇ |
ಸಾಧು ಸೇವೆಗೆ ಕರದೊಡಿಲ್ಲದೆ |
ವಾದವಾಡುತ ಮಲಗುವೆ ||3||
ನೋಡಿ ವಿಷಯದ | ಸೂಡಿಸುಖವನು |
ಕೂಡಿ ಭೇದವ ತೊಟ್ಟಿರೈ |
ನಾಡೆ ಕರ್ಮದಿ ನೋಡಿ ದುಃಖವ ಕಾಡಿನೊಳು ಕಾಲಿಟ್ಟರೈ |
ಕೇಡುತೋರದ ರುಂಡ ಮಾದಾರೂಢ ಮಾರ್ಗವ ಬಿಟ್ಟರೈ |
ಮೂಢ ಮನುಜರು ಮಾಡಿ ಪೂಜೆಯ |
ಬೇಡಿ ಫಲಗಳ ಕೆಟ್ಟರೈ ||4||
ದಾರುಣಿಯ ಸುಖಕಾಗಿ ಲಜ್ಜೆಯ ತೊರೆದು ನೀಚರಿಗೆರಗುವೆ |
ಬಾರಿಬಾರಿಗೂ ಭಕ್ತಿಯಿಂದವರಿರುವ ಠಾವಿಗೆ ತಿರುಗುವೇ ||
ಮೀರಿ ಹುಂಕರಿಸಿದರು ||
ಧರೆಯೊಳಗುರುಳಿ ದುಃಖಿಸಿ ಕೊರಗುವೇ |
ವೀರಗುರು ಶಂಕರನ ಭಜಿಸೆನ |
ಬರಿದೆ ನಿದ್ರೆಯೊಳೆರಗುವೇ ||5||

80
ಜನ್ಮ ಹರಿಯಲಿಲ್ಲ
ಗುರುಪಾದದೊಳು ಮನ ಬೆರೆಯಲಿಲ್ಲ | ಜನ್ಮ ಹರಿಯಲಿಲ್ಲ |
ಸ್ಥಿರಮುಕ್ತಿಸುಖವದು ದೊರೆಯಲಿಲ್ಲ ಪಾಪಿ ಅರಿಯನಲ್ಲ ||ಪ||
ಜೀವಶಿವರಿಗೆ ಭೇದ ಮಾಡಬೇಡ ಅದ ನೋಡಬೇಡ |
ಭಾವಿಸಿ ಕರ್ಮದೊಳು ಕೂಡಬ್ಯಾಡ ಓಡ್ಯಾಡಬೇಡ ||1||
ಎರಡೆಂಬ ಭ್ರಾಂತಿಯ ಪೋಗಲಿಲ್ಲ | ಜನ್ಮ ನೀಗಲಿಲ್ಲ |
ಗುರುಪಾದಸೇವೆ ಕೊನೆಸಾಗಲಿಲ್ಲ ಬ್ರಹ್ಮನಾಗಲಿಲ್ಲ ||2||
ತನ್ನ ಮರೆತು ತನುವ ತೊಳೆದರೇನು ಬೂದಿ ಬೊಳೆದರೇನು |
ಬಿನ್ನೀಶಿಗೈದಧ್ಯಾನ ಬಲ್ತರೇನ ವೇದಕಲ್ತರೇನು ||3||
ರೂಪು ನಾಮ ಬಿಟ್ಟ ಮೇಲೆ ಕೋಪವಿಲ್ಲ ಪುಣ್ಯ ಪಾಪವಿಲ್ಲ |ಅ|
ಪರಬ್ರಹ್ಮನೊಳು ತಾಪವಿಲ್ಲ ಅಧ್ಯಾರೋಪವಿಲ್ಲ ||4||
ಸತ್ಯವರಿತ ಮೇಲೆ ನೀತಿಯಿಲ್ಲ ಕುಲಜಾತಿಯಿಲ್ಲ |
ಮಿಥ್ಯೆಯ ಕಳೆದ ಮೇಲೆ ರೀತಿಯಿಲ್ಲ ಲೋಕಭೀತಿಯಿಲ್ಲ ||5||
ತಾನಾರುಯೆಂಬುದ ತಿಳಿಯಬೇಕು ಭೇದವಳಿಯಬೇಕು |
ನಾನಾತತ್ವಭಾವವನುಳಿಯಬೇಕು ಜನ್ಮಕಳಿಯಬೇಕು ||6||

204 / ತತ್ವಪದಗಳು ಸಂಪುಟ-1

ಜ್ಞಾನವಿಲ್ಲದ ಬರಿ ಮೌನವ್ಯಾಕೆ ಜಪಧಾನ್ಯವೇಕೆ |
ತಾನೇತಾನಾದ ಮೇಲೆ ಮೌನಬೇಕೆ ಗಂಗಾಸ್ನಾನ ಬೇಕೆ ||7||
ಅಂತನಿಲ್ಲದ ಮೇಲೆ ಚಿಂತೆಯಿಲ್ಲ ಬೇರೆ ಶಾಂತಿಯಿಲ್ಲ |
ಭ್ರಾಂತಿಯ ಕಳೆದ ಮೇಲೆ ಪಥವಿಲ್ಲ ತನ್ನಂತೆಯಲ್ಲ ||8||
ಲಿಂಗತಾನಾದ ಮೇಲೆ ಭಂಗವಿಲ್ಲ ಪಾಪ ಸಂಗವಿಲ್ಲ |
ಅಂಗವ ಕಳೆದ ಮೇಲೆ ರಂಗನಿಲ್ಲ ನರಸಿಂಗನಿಲ್ಲ ||9||
ಸಂಶಯವಳಿಯೆ ದೇಹ ಬುದ್ಧಿಯಿಲ್ಲ ಜಗವ ಸುದ್ದಿಯಿಲ್ಲ |
ಸಂಸಾರದೊಳಗವನಿದ್ದುಯಿಲ್ಲ ಮುಂದೆ ಬದ್ಧನಲ್ಲ ||10||
ಗುರುಶಂಕರಾರ್ಯನ ಚರಣದಲ್ಲಿ ಶಿರವನಿರಿಸಿದ್ದಲ್ಲಿ |
ಮರಳಿ ಜನ್ಮಿಸನೀ ಧರಣಿಯಲ್ಲಿ ಬೆರೆವ ಪರಮನಲ್ಲಿ ||1||

81
ಶಿವಜೀವರು ಎಂದೆರಡಿಲ್ಲ
ಶಿವಜೀವರು ಎಂದೆರಡಿಲ್ಲ ಪರಶಿವಮಯವೇ ಈ ಜಗವೆಲ್ಲ ||
ಭವಕಾನನವ ದಹಿಸುವ ಮಂತ್ರವ |
ಭುವನದಿ ಗುರುಪುತ್ರನೇ ಬಲ್ಲ ||ಪ||
ದಾನವ ಮಾಡಿದರೇನುಂಟು ಬರಿ |
ಮೌನದೊಳಿರ್ದಡೆ ಏನುಂಟು ಜ್ಞಾನದಿ ವಸ್ತುವನರಿತೊಡೆ ಸಾಕು |
ಮಾನಕೆ ಶಿಲುಕದ ಸುಖವುಂಟು ||ಶಿವಜೀವರು||
ನದಿಯೊಳು ಮುಳುಗಿದರೇನುಂಟು |
ಬಳಿಕದರಿಂ ನಡುಗುವ ಛಳಿಯುಂಟು ಸದಮಳ ವಸ್ತುವ ತಾನೆಂದರಿತೊ
ಅದು ನಿತ್ಯಾನಂದದ ಗಂಟು ||ಶಿವ||
ವೇದಗಳೋದಿದರಲ್ಲೇನು ಬಿಳಿ ಬೂದಿಯ ಬೊಳೆದರು ಯಮ ಬಿಡನು ||ಭೇದವು||
ತೋರದೆ ವಿಮಲ ಜ್ಞಾನವ ಸಾಧಿಸಿದರೆ ಶಿವನಾಗುವನು ||ಶಿವ||
ಉತ್ತಮ ಕರ್ಮವಗೈದವರು ಕೇಳ್ ಮತ್ತೀ ಧರಣಿಗೆ ಬರುತಿಹರು |
ತತ್ವದ ಮರ್ಮವನರಿತಿಹ ಧೀರರು ನಿತ್ಯಾನಂದದಿ ಬೆರೆಯುವರು ||ಶಿವ||
ದೇಶವ ಸುತ್ತಿದರೇನಿಲ್ಲ ಭವ ಕಾಶಿಯೊಳಗಿದ್ದರು ಬಿಡದಲ್ಲ |
ಈ ಸಕಲವು ಪುಸಿಯಂದರಿತೊಡೆ ಜಗದೀಶನೇ ತಾನಾಗುವನಲ್ಲ ||ಶಿವ||
ನಂದನರಿಂದಲೂ ಭವಕೆಡದು |
ಸಂಧ್ಯಾವಂದನೆ ನಿಜ ಮುಕ್ತಿಯ ಕೊಡದು |
ಕುಂದದೆ ಶಿವತಾನೆಂದರಿತೊಡೆ ಆನಂದವು ಬ್ಯಾಡೆಂದರು ಬಿಡದು ||ಶಿವ||
ಉರುತರ ಕರ್ಮಗೈದವರು ಕೇಳ್ ಪರಿಪರಿ ಯಜ್ಞದ ದೀಕ್ಷಿತರು ಮರವೆಯು ತೋರದೆ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 205

ನಿಜಸುಖದೊಳಗಿಹ |
ಗುರುಪುತ್ರನ ಪದಕಿಂಕರರು ||ಶಿವ||
ಘಂಟೆಯ ಬಡಿದರು |
ಗುಡಿಯಲ್ಲಿ ಯಮಭಂಟರು ಬೇರೆ ಬಿಡರಿಲ್ಲಿ |
ಕಂಟಕವೆನಿಸುವ ಮಾಯೆಯ ಕಳೆದರೆ ಗಂಟಾಗುವುದದು ಪರದಲ್ಲಿ ||ಶಿವ||
ಎರಡಂಬುವನಿಗೆ ಕಡೆಯಿಲ್ಲ ಈ ಧರಣಿಗೆ ಬರುವುದು ಬಿಡದಲ್ಲಿ
ಗುರುಶಂಕರನಡಿಗಳ ಹಿಡಿದವರಿಗೆ ಮರಳೀ ಸಂಸಾರ ಭಯವಿಲ್ಲ ||ಶಿವ||

82
ಪರಮಸುಖದ ಮೂಲ
ಮನವೇನು ಪುಣ್ಯಮಾಡಿ ಗುರುವಿನ ಪದವ ಸೇರಿತ್ತೇ |
ಮಾನಿನೀ ಮಣಿಯನಿಂದಿಗೆ ಬಂದ ತೊಲಗಿತೆ ||ಪ||
ವಂದರೊಳಗೆಲ್ಲ ಬಳಸುವಂದ ತೋರೀತೆ |
ಕುಂದದೆನ್ನೊಳಗೆ ಬ್ರಹ್ಮಾನಂದವೇರೀತೇ |
ಮನದೇಹದೊಡನೆ ಮೊದಲೊಳಿದ್ದ ಸಂಗ ಪೋಯಿತೆ |
ಮೋಹವೇರಿಸುವಲಿಂಗ ಭಂಗವಾಯೀತೆ ||1||
ಕಲ್ಲಿನೊಳಗೆ ಕಂಡ ದೇವರೆಲ್ಲಿಗೋಡೀತೇ |
ಅಲ್ಲಿ ಇರುವುದನ್ನೆಲ್ಲ ಬಂದು ಕೂಡೀತೆ ||2||
ಪೇಳಲಾರೆನು ಸಖಿಯ |
ಪರಮಸುಖದ ಮೂಲವ ಪಾಲಲೋಚನನೆಲ್ಲ ಬಲ್ಲ ಗುರುವಿನಾಳವ ||
ತನುವ ಕೂಡಿ ಕಳೆವ ಬೀಜಗಣಿತ ದೊರತೀತೆ |
ಜನಿಸಿ ಸಾಯುವುದಿದೆಲ್ಲ ತನುವಿಗಾಯಿತೇ ||ಮನ||
ನೂರುಕೋಟಿ ಜನ್ಮ ಸುಕೃತರಾಸಿಫಲಿಸೀತೇ |
ಮೂರು ಮೂರ್ತಿಗಳ ಪದವಿ ತುಚ್ಚಮೆನಿಸೀತೆ ||ಮನು||
ಅಂಕೆಯಿಲ್ಲದೆ ಮೆರೆವ ಮನದ ಹರುಷವೆಂಬುದು |
ಶಂಕಾರಾಹಿತ್ಯನಲಿಸೇರಿ ಪರಮನಾದುದು ||ಮನವೇನು||

83
ಆನಂದವಾಘನದೊಳಾಡುವನ್ಯಾರೆ
ಆನಂದವಾಘನದೊಳಾಡುವನ್ಯಾರೆ ನೋಡುವೆ ತೋರೆ |
ಬೇಡುವೆ ನೀರೆ ಆನಂದವನದೊಳಾಡುವನ್ಯಾರೇ ||ಪ||
206 / ತತ್ವಪದಗಳು ಸಂಪುಟ-1

ಮಾನ ಮೋಹಗಳಿಗೆ ಶಿಲುಕನಂತೆ |
ಅಭಿಮಾನಾವ ಮಾನಗಳಿವನಂತೆ |
ಜಗದ್ಯಾನಾದಿಗಳಿಗೆ ಗೋಚರಿಸನಂತೆ ಅವಧಾನಿಗಳಿಗೆ ಬಹುದರಸನಂತಮ್ಮಮ್ಮ ||ಆನಂದ||
ಮೂರು ಕಾಲದೋಳು ತಾನಿರುವನಂತೆ |
ತನ್ನ ಮೀರಿದ ವಸ್ತು ಬೇರಿಲ್ಲವಂತೆ |
ಇಲ್ಲಿ ತೋರುವ ಜಗವೆಲ್ಲ ತಾನೆಯಂತೆ |
ದೊಡ್ಡ ಮಾರಿಯ ಮುರಿದು ನುಂಗಿದನಂತೆ-ಕಾಣಮ್ಮ ||ಆನಂದ||
ವಂದು ಜತಿಯೊಳು ತಾ ಸೇರನಂತೆ |
ತನ್ನ ಹಿಂದು ಮುಂದರಿಯಾದೀಗಾದನಂತೆ |
ಬಹುಮಂದಿಗೊಬ್ಬನಿಗೆ ಕಾಣಿಸುವನಂತೆ ತನ್ನ ನಂದವ ಕಂಡವರಿಲ್ಲವಂತಲ್ಲಮ್ಮ ||ಆನಂದ||
ಕಾಶಿಯೊಳಗು ನೆಲೆಸಿರುವನಂತೆ |
ಜಗದೀಶರಿಗೆಲ್ಲ ನಿವಾಸನಂತೆ |
ಮಾಯಾ ಪಾಶಕಳದರತಿ ಸುಲಭನಂತೆ |
ದೇಹವಸನೆಗುವ ಯಮ ಪಾಶನಂತಮ್ಮ ||ಆನಂದ||
ಐದು ಸುತ್ತಿನದೊಂದು ಕೋಟೆಯಂತೆ ಇಪ್ಪತ್ತೈದು
ಕೀಲುಗಳಿಂದಾಯಿತಂತೆ ಹೊರಬೀದಿ ಬಾಗಿಲು ನಾಲ್ಕೈದುಂಟಂತೆ |
ಅಲ್ಲಿ ಭೇದಿಸಿಬಂದು ಸೇರಿದನಂತೆ ನೋಡಮ್ಮ ||ಆನಂದ||
ಹಿಂದೆ ಗುರುಶಂಕರನೊಳ್ಬಂದ ಕಾಣೆ |
ವಿದ್ಯಾನಂದನ ಪದದೊಳು ನಿಂದು ಕಾಣೆ |
ನಿಜಾನಂದ ಗುರುವಿನ ಕಂದ ಕಾಣೆ |
ತನ್ನಾನಂದವರಿತ ಶಿವನಂದ ಕಾಣಮ್ಮಮ್ಮ ||ಆನಂದ||

84
ನೀರೆ ನೀ ತೋರೆ
ನೀರೆ ನೀ ತೋರೆ ನಾ ಕೋರುವವರನಾ ||ಪ||
ಮೂರು ಗುಣಂಗಳ ಮೀರಿ ಬೆಳಗವನ ||ಅ||
ರುಚಿಸಿಯಲ್ಲವನು ತಾ ಶುಚಿಯಾಗಿರುವನ
ವರಿಸಲು ಶ್ರುತಿಗನಿರ್ವಚನೀಯ ಪರನ ||ನೀರೇ||
ಮರಣ ಜನ್ಮಗಳೆಂಬಿ |
ಶರೆಯಿಲ್ಲದವನ ಕರಕ ಸಂಕಲ್ಪದಿ |
ನರನೆನಿಸುವನ ||ನೀರೆ||
ಕಲತು ಕರ್ಮದೊಳು ನಿರ್ಮಲವಾಗಿರುವನ ತಿಳಿಯದೆ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 207

ತತ್ವವ ಕಳವಳಿಸುವನು ||ನೀರೆ||
ಪಿರಿದಾದ ಮಾಯೆಯ ಮುರಿದಿಕ್ಕಿದವನ |
ಶರೀರ ನಾನೆಂದವತರಿಸಿಬಂದವನ ||ನೀರೆ||
ವಡಲಿನ ಬೆಡಗನು ಪಿಡಿದು ಮಿಡುಕುವನು |
ತಡೆ ಬಿಡುಗಡೆ ನುಡಿ |
ನಡೆಯಿಲ್ಲದವನ ||ನೀರೆ||
ಅಂದಿಂದೆನ್ನದೆ ತಾನೆಂದೆಂದೀಗಿರುವನ ಕುಂದ
ತೋರದ ಪರಮಾನಂದ ಛಿದನನ ||ನೀರೆ||
ಕರಣಕಾರ್ಯಂಗಳನರಿವ ಸಾಕ್ಷಿಕನ |
ಗುರುಶಂಕರಾರ್ಯನೊಳ್ ಬೆರೆದುಕೊಂಡಿಹನ ||ನೀರೆ||

85
ಬಿಡು ರಾಜನ ಪೂಜೆಯನು
ಬಿಡು ಬಿಡು ರಾಜನ ಪೂಜೆಯನು |
ಮೊದಲೊಡಲಭಿಮಾನವ ತೊರೆ ನೀನು |
ಮಡದಿಯ ಕಾಣದೆ ಮಿಡುಕುತ ಮನದಲಿ |
ಮೃಡನುಡಿ ಪೂಜಿಸಿ ಫಲವೇನು ||ಬಿಡು||
ಹರನೊಳು ಚಿತ್ತವನಿಡಲಿಲ್ಲ |
ಶಿವಶರಣರಗರ್ಥವ ಕೊಡಲಿಲ್ಲ |
ಮರಣದ ಭೀತಿಗೆ ಶಿವ ಪೊರೆಯೆಂದರೆ |
ನರಕದ ಯಾತನೆ ಬಿಡದಲ್ಲ ||1||
ಆಗಮ ಧರ್ಮಂಗಳ ತೊರೆದು ಸತಿಭೋಗದಿಸ್ಮøತಿಯಿಲ್ಲದೆ ಮರೆದು |
ರೋಗವು ಬಂದರೆ ಹರಪೊರೆಯನಲ್ಲಾ |
ರೋಗವು ನಿನ್ನ ಕೊಲ್ಲದೆ ಬಿಡದು ||2||
ದೃಢಶನ ಶಿವಭಕ್ತಿಯ ಬಿಟ್ಟು ನಿಜ |
ಮಡದಿಯ ಮೋಹಕೆ ವಳಪಟ್ಟು |
ಸಡಗರದೊಳಗಿರೆ ದೂತರು ಬರಲವ |
ರೊಡನೋಡುವಯಲ್ಲವ ಬಿಟ್ಟು ||3||
ತರುಣಿಗೆ ಮುತ್ತಿನ ಮಾಲೆಗಳು |
ಪುರಹರನಿಗೆ ಹತ್ತಿಯ ಜೂಲುಗಳು |
ಸರಿ ಸರಿ ನೀ ಮಾಡುವ ಈ ಭಕ್ತಿಗೆ |
ಹುರಿವರು ನಿನ್ನೆಮನಾಳುಗಳು ||4||

208 / ತತ್ವಪದಗಳು ಸಂಪುಟ-1

ಶಿರಿಯೊಳು ಶಿವನಾಮವ ತೊರೆದು |
ಅತಿ ಹರುಷದಿ ಕಣ್ಕಾಣದೆ ಮೆರೆದು ಬರ ಬಂದರೆ ಶಿವಪೊರೆಯೆಂದರೆ |
ನಿನ್ನುರು ನರಕದೊಳಿರಿಸುವ ಮುರಿದು ||5||
ಹರನೊಳು ಚಿತ್ರವನಿಡಲಿಲ್ಲ |
ಶಿವಶರಣರ ಸೇವೆಯು ಹಿತವಿಲ್ಲ |
ತರಳರ ಪೊರೆಯೋ ನಿವನೀಯೆಂದರೆ |
ಪುರಹರ ಕೇಳ್ನಿನ್ನಾಳಲ್ಲ |
ದಾಸರಿಗನ್ನವನಿಡಲಿಲ್ಲ |
ಪರದೂಷಣೆಗಳ ನೀ ಬಿಡಲಿಲ್ಲ |
ಕಾಸನ್ನು ತೋರಿಸಿ ಶಿವನೇ ಪೊರೆಯೆನಲಾ ಶಿವನಿಗೆ ಬಡತನವಿಲ್ಲ ||
ಪಾಪದ ಕೃತ್ಯವು ಕೆಡಲಿಲ್ಲ |
ಪರಿತಾಪವಗೈದುದು ಬಿಡಲಿಲ್ಲ |
ದೀಪವ ಹಚ್ಚಿಸಿ ಶಿವನೇ ಪೊರೆಯನಲಾಪರಮಗೆ ಕತ್ತಲೆಯಿಲ್ಲ ||ಬಿಡು||
ಸಿರಿ ಬರಗಳು ಸಮನಾಗಿಲ್ಲ ||
ಈ ಶರೀರ ಭ್ರಾಂತಿಯು ಬಿಡಲಿಲ್ಲ |
ಬರಿದೇ ದುಃಖವು ಹರಿಯಲಿಯೆಂದರೆ |
ಗುರುಶಂಕರ ನಿನ್ನೊಶನಲ್ಲ ||ಬಿಡು||

86
ಬ್ಯಾಡವೋ ಯಂದೆಂದಿಗೂ
ಬ್ಯಾಡವೋ ಯಂದೆಂದಿಗೂ ಬ್ಯಾಡವೋ |
ನೋಡಿದೆಲ್ಲೊಂದೆಂಬದಾಗಿ ಶ್ರುತಿಪಾಡುತಿಹುದು ದೃಢವಾಗಿ |
ಲೋಕರೂಢ ಚಿದ್ರೂಪ ನೀನಾಗಿ
ಬರಿದೆ ನಾಡಿನೊಳಿರುತಿದ್ದ ಕಾಡಕಲ್ಲಿಗೆ ಕೈಯಜೋಡಿಸಿ ಫಲಗಳ |
ಬೇಡುವ ಬಾಧೆಯು ಬ್ಯಾಡವೋ ಎಂದೆಂದಿಗು ಬ್ಯಾಡವೋ ||ಪ||
ದೇವನಂಶಕೆ ಮನಕೊಡದೆ ದೇಹದೊಳಗಿನ ತತ್ವವರಿಯದೆ
ದುಃಖದೊಳಗೆ ಸಿಲುಕಿ ನೀನು ಬರಿದೆ |
ಅಹ ಛಳಿ ಗಾಳಿ ಮಳೆಯೊಳು ಮುಳುಗಿ |
ನೀರೊಳು ಮೈಗೆ ಬೊಳೆದು ಬೂದಿಯನ್ನೆಲ್ಲ ಬಳಲುವ ಬಾಧೆಯು ||ಬ್ಯಾಡವೊ||
ಧರೆಯ ತೀರ್ಥದೊಳೆಲ್ಲ ಮುಳಗಿ |
ನಾನಾಪರಿಯ ಕಲ್ಗಳಿಗೆಲ್ಲಯರಗಿ ತನ್ನ ಮರತು ಕರ್ಮಗಳಲ್ಲಿ ಕೊರಗಿ |
ನಿತ್ಯನಿರುಪಮ ವಸ್ತುವನರಿಯದೆ ಭವಿಯವರ ನರಕನಾಕಗಳಿಗೆ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 209

ತಿರುಗುವ ಬಾಧೆಯು ಬ್ಯಾಡವೋ ||2||
ಅಲ್ಲುಂಟಲ್ಲಿಲ್ಲೆಂಬುದಿಲ್ಲ |
ನೋಡಲೆಲ್ಲೆಲ್ಲು ತುಂಬಿಹನಲ್ಲ ಶಿವನಿಲ್ಲದೆ ವಸ್ತುವೆಯಿಲ್ಲ |
ಇಲ್ಲಿ ಯಳ್ಳು ದರ್ಭೆಗಳ ಕೈಯಲ್ಲಿ ಪಿಡಿದು |
ನೀರಚಲ್ಲಿದೊಡೇನದರಲ್ಲುಂಟೆ ಕೈವಲ್ಯ | ಬ್ಯಾಡವೋ ||3||
ದೇಶಿಕನಂಘ್ರಿ ಪಿಡಿಯದೆ ಪಂಚಕೋಶಧರ್ಮಗಳ
ಬೇರಿಡದೇ ಜಗದೀಶ ತಾನೆಂಬುದರಿಯದೇ |
ಛೀ ಛೀ ಮಾಸ ಮಾಸದೊಳುಪವಾಸದೀ ಬಳಲುತ |
ದೇಶದೇಶವ ಸುತ್ತಿ ಘಾಸಿಯಾಗುವ ಬುದ್ಧಿಬ್ಯಾಡವೋ ||4||
ಗುರುಶಂಕರಾರ್ಯನ ಪದವ ಪಿಡಿದರಿತು ನಿನ್ನೊಳಗಿಹ
ನಿಜವ ನೀನು ಬೆರಸದೆ ಕ್ರಿಯಾದಿ ಮಾನಸವ |
ನಿತ್ಯ ನಿರುಪಮ ವಸ್ತುವನರಿತು ನಿಶ್ಚಿಂತೆಯೊಳಿರದೆ |
ಕ್ಷೇತ್ರಗಳಿಗೆ ತಿರುಗುವ ಬಾಧೆಯು ಬ್ಯಾಡವೋ |
ಯೆಂದೆಂದಿಗೂ ಬ್ಯಾಡವೋ ||5||

87
ಸೊಲ್ಲಿಡಲದು ವೇದ್ಯವಲ್ಲ
ಬಲ್ಲೋಡಿ ತತ್ವದೊಳ್ ಕೂಡಿ ನೀವು |
ಅಲ್ಲಲ್ಲಿ ಬೆರೆತು ಸುಮ್ಮನೆ ಕೆಡಬ್ಯಾಡಿ ಬಲ್ಲೋಡಿ ತತ್ವದೊಳ ಕೂಡಿ ||ಪ||
ಸೊಲ್ಲಿಡಲದು ವೇದ್ಯವಲ್ಲ |
ಅದಿನ್ನೆಲ್ಲಿನೋಡಿದರು ಕಣ್ಣಿಗೆ ಕಾಂಬೋದಲ್ಲ |
ಯಲ್ಲಲ್ಲು ತಾನೆತಾನಲ್ಲ ಅದರುಲ್ಲಾಸನೋಡಿ ಈ ಜಗವೆಲ್ಲ ||ಬಲ್ಲೋಡಿ||
ವಂದಾಗಿ ಐದೆನಿಸುವುದು ಬಳಿಕೊಂದಾಗಿ ಮುಂದೆ ಮೂರೆನಿಸಿಕೊಂಬುವುದು |
ಬಂದನವನು ಕಲ್ಪಿಸುವುದು ಅದರೊಳ್ |
ಹೊಂದಿಯಿಲ್ಲದೆ ಚಿತ್ರಗಳನೆ ನೋಡುವುದು ||ಬಲ್ಲೋಡಿ||
ರೂಪುನಾಮಗಳದಕಿಲ್ಲ ಅಧ್ಯಾರೋಪದೊಳಿರಿಸಿದೊಡದು ಸಿಕ್ಕೋದಲ್ಲ
ತಾಪತ್ರಯಂಗಳಲ್ಲಿಲ್ಲ ದೂಪದೀಪನೈವೇದ್ಯಕ್ಕೆ ಅದು ವೇದ್ಯವಲ್ಲ ||ಬಲ್ಲೋಡಿ||
ಕಾಶಿಯೊಳರಸಿದೊಡಲ್ಲಿ ಉಪವಾಸದಿಂದ ಬಳಲುವರಿಗೆ ಸುಲಭವಲ್ಲ |
ನಾಶವೆಂಬುದದಕಿಲ್ಲ |
ಮಾಯಾಪಾಶಕಳದರದುಗೂಢಮಾಗಿಲ್ಲ ||ಬಲ್ಲೋಡಿ||
ಅರಶಿ ಕಾಣರು ಲೋಕಾಯತರು ಅದನರಿತವರೆಲ್ಲ ದೇಹವನೆ ಬಿಡುವರು |
ಪರಕಿಸುತದನೆ ಹಿಗ್ಗುವರು |
ಅದರ ಸಿರಿಯ ಕಂಡವರಿನ್ನು ಮರಳಿಜನ್ಮಿಸರು ||ಬಲ್ಲೋಡಿ||

210 / ತತ್ವಪದಗಳು ಸಂಪುಟ-1

ಕಳದುಳಿಯುವದೆ ತಾನಹುದು ನೋಡಲೊಳಹೊರಗೆಲ್ಲುತಾ ತುಂಬಿಕೊಂಡಿಹುದು|
ತಿಳಿಯದೆ ಕಳವಳಿಸುವುದು |
ಅದು ತಿಳಿದೊಡೆ ಲೋಕವೆಲ್ಲವ ಕೆಡಿಸುವುದು ||ಬಲ್ಲೋಡಿ||
ಮೂರು ದೇವರ ಮೇಲೇರುವುದು ಬೇರೆಬೇರಾಗಿ ಮೂರು ಲೋಕಗಳನಾಳುವುದು|
ಆರಾನೇನೇಲೆಯ ತಾನಹುದು ||ಬಲ್ಲೋಡಿ||
ಯಡಬಲದೊಡೆಯರ ಪಿಡಿದು ಕಟ್ಟಿನಡುವ ಮೇಲಿರುವರಡನ್ನೆಲ್ಲೆ ತಡದು |
ಬಡಗಲ ಗುಡಿಯೊಳ ಸುಳಿದು ಸುಧೆಯ ಕುಡಿದೊಡೇನದು ಬೇರಿನ್ನೆಲ್ಲಿ ಕಾಣಿಸದು
||ಬಲ್ಲೋಡಿ||
ಮರಣ ಜನ್ಮಗಳದಕಿಲ್ಲ ಕಾಯಕರಣ ಕಾರ್ಯಗಳೊಳು ಬೆರೆಯುವುದಲ್ಲ |
ಮರೆಯೊಳಗದು ನೆಲಸಿಲ್ಲ ಇದನು ಗುರುಲಿಂಗೇಶನೊಳ್ ಬೆರೆದಾತಬಲ್ಲ
||ಬಲ್ಲೋಡಿ ತತ್ವ||

88
ನಾಡಿನ ಸಿರಿಗಳ ಬೇಡುತ
ಯಾವ ಕರ್ಮವೋ ಶಿವ ಶಿವ |
ದ್ಯಾವ ||ಪ||
ಭಾವ ಶಿಲುಕದ ಭವ್ಯ ಚಿದಾತ್ಮಗೆ |
ಭಾವಿಸಿ ಭಾವಿಸಿ ಮುಳುಗುವ ದ್ಯಾವ ||ಪ||
ಮೂರು ಗುಣಂಗಳ ಮೀರಿದ ಶಿವನೊಳು | ಸೇರದೆ |
ಮಡಿಯೆಂದು |
ಹಾರುತ ತಿರುಗುವ ದ್ಯಾವ ||1||
ಅಂಡವಿದನು ಪಿಂಡಾಂಡದೊರಿಯದೇ |
ಚಂಡಿಸುತೀ ಮಲಭಾಂಡವ ತೊಳೆಯುವ ||ದ್ಯಾವ||
ಈಶನೊಳಿಲ್ಲದ ಪಾಶವಕಲ್ಪಿಸಿ |
ದೋಷಿಯನುತಲುಪ | ವಾಸದಿ ಬಳಲುವ ||ದ್ಯಾವ||
ವಡಲಿನ ತೊಡಕನು ಬಿಡಿಸುವ ಗುರುವರನಡಿಗಳ
ಪಿಡಿಯದೆ ಮಡಮಡಿಯೆಂಬವ ||ದ್ಯಾವ||
ಸಾಕ್ಷಿಯೆನಿಸುತೀಕುಕ್ಷಿಯೊಳಿಹ ವಿರೂಪಾಕ್ಷನ ಕಾಣದೇ ಅಕ್ಷತೆಯೆರಚುವು ||ದ್ಯಾವ||
ತಿಳಿಯದೆ ತತ್ವವು ಕಳಿಯದೆ ಮೋಹವ |
ಸುಳಿಯದೇ ಸುಖದೊಳು |
ಛಳಿಯೊಳು ಮುಳುಗುವ ||ದ್ಯಾವ||
ಪುರುದೊಳು ನೆಲಸಿದ ಪುರುಷನ ಶೋಧಿಸಿ | ಹರಿಸದೆ ಜನ್ಮವ ಮರವನು ಸುತ್ತುವು ||ದ್ಯಾವ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 211

ಎಂದಿಗೂ ತೊಲಗದೆ | ಬಂದಿರುವೀಭವ |
ಬಂಧನವಳಿಯದೆ ವಂದನೆ ಮಾಡುವ ದ್ಯಾವ ||
ಗಾತ್ರದೊಳಿಹ ನಿಜಸೂತ್ರವ ಕಾಣದೆ |
ಪಾತ್ರೆಯ ತೊಳೆಯುತ ಮೂತ್ರದೊಳುರುಳುವು ||ದ್ಯಾವ||
ಸೋಹಂಭಾವದೊಳೂಹೆಗೆ ಸಿಲುಕದ |
ಮೋಹವಹರಿಸದೆ | ದೇವಬಾಧಿಪು ||ದ್ಯಾವ||
ಕರಣದ ಧರ್ಮದಿ ಬೆರೆತು ಮರೆತು ತನ್ನ |
ನರಕನಾಕಗಳಿಗೆ ತಿರುಗುತ ಬಳಲುವು ||ದ್ಯಾವ||
ಕಲ್ಪಿಸಿ ಜಾತಿಯ ಜಲ್ಪಿಸಿ ಭೇದವ |
ಸಲ್ವನುಯವಿಸಿ ವಿಕಲ್ಪದಿ ಕೂಡುವು ||ದ್ಯಾವ||
ನಿತ್ಯ ಚಿದಾತ್ಮ ತತ್ವವನರಿತು ಮಹತ್ವವ ಪಡೆಯದೆ |
ಮೃತ್ತಿಕೆಗೆರಗುವ ||ದ್ಯಾವ||
ಕೂಡದೆ ಗುರುವನು | ನೋಡದೆ ನಿಜವನು |
ನಾಡಿನ ಸಿರಿಗಳ ಬೇಡುತ ತಿರುಗುವ ||ದ್ಯಾವ||
ಕರ್ಮದಿ ಬೆರೆಯದ ನಿರ್ಮಲ ತಾನೆಂಬ ಮರ್ಮವನರಿಯದೆ ಚರ್ಮವ ತೊಳೆಯುವ ||ದ್ಯಾವ||
ಚಿನುಮಯ ಶಿವ ತನ್ನ ನೆನೆಯುವ ಮನುಜರ |
ಮನುಜರ ಮನದೊಳು ತಪಿಸುವ ||ದ್ಯಾವ||
ಸ್ಥಿರದೊಳು ಗುರುಶಂಕರನೊಳು |
ಬೆರೆಯದೆ ಉರುಸಂಸಾರದ ಶರೆಯೊಳು ಶಿಲುಕವ ||ದ್ಯಾವ||

89
ಶರೀರವ ನೋಡಿ ಹಿಗ್ಗುವೆಯಲ್ಲ
ಬಿಡುಬಿಡು ಸಂಸಾರ ಸುಖವಿಲ್ಲ | ಅಲ್ಲಿ |
ಹುಡುಕಿನೋಡಿದರೇನು ಹುರುಳಿಲ್ಲ |
ವಡಲಿನ ತೊಡಕನು ಕೆಡಿಸದೆ ಮುಕ್ತಿಯ
ಪಡೆದವನೆಂಬುವನಿಗೆ ಪೆಸರಿಲ್ಲ ||ಬಿಡುಬಿಡು ||ಪ||
ಮಡದಿ ಮಕ್ಕಳನೆಚ್ಚಿ ಕೆಡಬ್ಯಾಡ |
ಈ ಪೊಡವಿ ಸುಖವು ನಿಜವೆನಬ್ಯಾಡ ಬೇಡ ಕಡೆಗೆ ನೀ ಮಿಡುಕುತ |
ಕಡುಕುಂಭೀಪಾಕದ ಮಡುವಿನೊಳಗೆ ವಡಲಿಡಬ್ಯಾಡ |
ಸಿರಿತನದೊಳಗೆ ಸುಸ್ಥಿರವಿಲ್ಲ ಮುಂದೆ |
ನರಜನ್ಮವೆಂದಿಗೂ ಬರದಲ್ಲ |
ತರುಣಿ ಮರುಳಾಗಿ ನರಕಕ್ಕೆ ಗುರಿಯಾಗಿ ಕುರಿನರಿಯಾಗಿ ಪುಟ್ಟುವೆಯಲ್ಲ |

212 / ತತ್ವಪದಗಳು ಸಂಪುಟ-1

ಉಂಡನ್ನವಾದರೂ ನಿನದಲ್ಲ ಬೆಂದು ಬೆಂಡಾಗಲದು ಫಲವಿಲ್ಲ |
ಕಂಡವರೊಂದಿಗೆ ಗಂಡನಾನೆಂದುರಿಗುಂಡಿಯೊಳಗೆ ಬೀಳುವಿಯಲ್ಲ |
ಶರೀರವ ನೋಡಿ ಹಿಗ್ಗುವೆಯಲ್ಲ |
ನಿನ್ನ ಕೊರಳ ಕೊಯ್ಯುವುದಿದೆ ಪರದಲ್ಲಿ |
ಅರಿಯದೀ ತತ್ವ ಮರೆತು ನಿಜತತ್ವವ ತಿಳಿಯದೆ
ನಾನಾ ಯೋನಿಗಳಲ್ಲಿ ಸಿರಿಯ ಸಂಪಾದಿಸಿ ಫಲವಿಲ್ಲ |
ಮುಂದೆ ಮರಣವಾಗುವುದು ತಪ್ಪುದಿಲ್ಲ |
ನರಕುರಿಗಳು ಇದನರಿಯದೆ ಮೃತ್ಯುವಿನುರುಳಿಗೆ ಕೊರಳನೊಡ್ಡುವರಲ್ಲ |
ಹಿಂದಿದ್ದ ತನ್ನವರಿಗಿಲ್ಲ ಇನ್ನು ಮುಂದೆ ಪುಟ್ಟುವರು ನಿಲ್ಲುವರಲ್ಲ |
ಸಂದೇಹವೇಕಿನ್ನು ಯೆಂದಿಗಾದರೂ ಮೃತ್ಯು ಬಂದು ಕೊಲ್ಲದೆ ಇಲ್ಲಿ ಬಿಡದಲ್ಲ |
ಗರಿಕಿಸುತಿಲ್ಲಿ ಕಣ್ಣೊಳು ತಾನು ನಾನಾ ಪರಿಹರಿಯೊಳುಗುರುಳಿ ಸಾಯುವರನು |
ಸ್ಥಿರ ಬದುಕನೆದೆಂದು |
ಶಿರವೆತ್ತಿ ತಿರುಗುವ ನರನಿಗೂ ಕುರಿಗೂ ಭೇದಗಳೇನು |
ಹಣವಿರ ನೀವಳ್ಳೆ ಗುಣವಂತ ನೀನೆ |
ಹಣವಿಲ್ಲದಿದ್ದರೆ ಕಡೆ ಹೆಣಕ್ಕಿಂತ ನೊಣಗಳಾದರು ಒಂದು |
ಹೆಣವ ಮುತ್ತುವದಿಲ್ಲ |
ಹಣವಿಲ್ಲದವನು ನಿರ್ಗುಣವಂತನರಿಯಲು ಮಾಂಸ ಕೀವಿನ ಬೊಂಬೆ ಅದರೊಳಿರುವ
ಸಂಪತ್ತು ದುಃಖದ ಕೊಂಬೆ ಕರುಳು ರಕ್ತಗಳಿಂದ ಬೆರತಿಹ ಶ್ಲೇಷ ಪಂಜರಕಾಗಿ
ಬರಿದೆ ನೀ ಹೊಡಕೊಂಬೆ |
ಮಿಡುಕುವೆ ಮಡದಿ ಮಕ್ಕಳಿಗೆಲ್ಲ ನಿನ್ನ ವಡಲ ನಿನ್ನೊಡನೆ ಬರುವುದಿಲ್ಲ |
ಹುಡುಕಿ ದೂತರು ನಿನ್ನ ಪಿಡಿದು ಗುದ್ದೆಳೆವಾಗ ಹೊಡೆದಾಡಿ ಬಿಡಿಸುವರ್ಯಾರಿಲ್ಲ |
ಹೋರಿ ಸಂಪಾದಿಸುವವ ಮಾಣ ಅದನು ಧಾರುಣಿಯೊಳು ಹೂಣಾಂತಿ ಜಾಣ |
ತೋರಿ ಕೆಡುವ ಪ್ರಾಣ ಹಾರಿ ಪೋಗಲು ಅದನ್ಯಾರಿಗಾಗುವದೊ ಯೆಂಬದ ಕಾಣಾ||
ನಿಲ್ಲುವರು ಸುಡುಗಾಡಲ್ಲಿ ನಿಲ್ಲಲು ಬೇರೆ ದಿಕ್ಕಿಲ್ಲದೆ ನೀನೊಬ್ಬ ನಿಲ್ಲುವೆ ಮುಂದೆ ನರಕದಲ್ಲಿ |
ಮಾನಾಭಿಮಾನ ಬಿಡಲಿಲ್ಲ ಮೊದಲು |
ತಾನಾರುಯೆಂಬುದೆ ಗೊತ್ತಿಲ್ಲ |
ಹಾದಿತೋರ್ವ ಸಮ್ಯಕ್ ಜ್ಞಾನವಿಲ್ಲದೆ ಬರಿ ಸ್ನಾನ ಮಾಡಿದರೇನು ಫಲವಿಲ್ಲ |
ಶರೀರದೊಳಭಿಮಾನ ಬಿಡಬೇಕು ಮುಂದೆ |
ಮರಣದೊಳಗೆ ದೃಷ್ಟಿ ಬೇಕು |
ಗುರುಶಂಕರಾರ್ಯನ ಚರಣ ಪಿಡಿದು ತನ್ನಿರವ ತಾ ಕಂಡು ಸುಖಿಸಬೇಕು ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 213

90
ಗುರುದೇವ ನೀನೇ
ಗುರುದೇವ ನೀನೇ ದೀನರ ಬಂಧು |
ಸ್ಥಿರ ಕರುಣಾಸಿಂಧು ||ಗುರು||
ಕೊರತೆಯಪಡಿಸದೆ |
ಶರೀರವ ಬಿಡಿಸದೆ |
ನೆರೆಯೊಳು ನಡಿಸದೆ ಮರೆವೆಯ ಕೆಡಿಸದೆ |
ಹರುಷವ ಹರಿಸದೆ |
ಹರನೊಳು ಬೆರಸದೆ ||
ಧರಣಿಗೆ ಮರಳದ ಪರಿಯೊಳು ಪೊರದೆ ||ಗುರು||
ನಿನ್ನೊಳು ಸೇರದೆ ಜನ್ಮವ ತೋರದೆ |
ಮನ್ನಣೆ ಬಾರದೆ ಉನ್ನತಿಗೇರಿದೆ |
ಧನ್ಯತೆ ತೋರದೆ |
ಮಾನ್ಯರ ಮೀರದೆ ||
ಇನ್ನೊಂದರಿಯದೆ ನಿನ್ನೊಳು ಬೆರೆದೆ ||ಗುರು||
ಗುರುಚರಣಕೆ ನಿಜ ಶರೀರವ ಮಾರದೆ |
ಪರಮಾನಂದದ ಸಿರಿತನ ಬಾರದೆ ||
ಕರಣದ ಧರ್ಮವನರಿತದ ಕೇಳದೇ |
ಗುರುಶಂಕರ ಪದ ದೊರೆವುದು ಬರಿದೆ ||
ಗುರುದೇವ ನೀನೇ ದೀನರಬಂಧು |

91
ನೋಡಬಾರದೇ ಬ್ರಹ್ಮವ
ನೋಡಬಾರದೇ ಬ್ರಹ್ಮವ ನೋಡಬಾರದೇ ||
ಆಡುತ ಪಾಡುತ ಬೇಡುತ ಕಾಡುತ |
ಓಡುತ ನೋಡುತ ನಾಡೊಳು ಕೂಡಿದೆ ||ನೋಡ||
ನಿರುಪಮ ನಿರ್ಗುಣ ನಿತ್ಯ ನಿರಾಮಯ ನಿರಘ ನಿರಂಜನ ನಿರವಧಿಯಾಗಿದೆ ||ನೋಡ||
ನಶ್ವರಮಾಯೆಯ ||
ವಶವಗೊಳಿಸಿ ಮಹೇಶ್ವರನೆನಿಸುವ ವಿಶ್ವವುಯಾಗಿದೆ ||ನೋ||
ತಾಪಕೆ ಸಿಲುಕದೆ |
ವ್ಯಾಪಿಸಿ ಗುಣದೊಳು ಶ್ರೀಪತಿ ವಿಧಿಹರರೂಪವ ಧರಿಸಿದೆ ||ನೋ||

214 / ತತ್ವಪದಗಳು ಸಂಪುಟ-1

ಮಲಿನವ ವಿದ್ಯೆಯ ಕಲಿತು ಮರೆತ ತನ್ನ |
ತಿಳಿಯದೆ ತತ್ವವ |
ಕಳವಳಿಸುತಲಿದೆ ||ನೋಡ||
ತೋರಿ ತಾ ಮಸಿಯೊಳು |
ಧಾರುಣಿ ಜಲಶಿಖಿಮಾರುತ ಗಗನಾ |
ಕಾರವಧರಿಸಿದೆ ||ನೋಡ||
ಇಂದ್ರಾದ್ಯುತ್ತಮ |
ಬಂಧುರ ತನುಗಳ ಹೊಂದಿ ಮನುಜರಿಂದ |
ವಂದಿಸಿಕೊಳುತಿದೆ ||ನೋಡ||
ವಿಧವಿಧ ಮತ್ರ್ಯದಧ್ಯಮದೇಹವಸೇರಿ |
ಸದಮಳ ಪೂಜಾ ವಿಧಿಯನುಪಿಡಿದಿದೆ | ನೊಡ |
ನಿಜದೊಳಿಗಿಲ್ಲದ ವ್ಯಜನವ ಕಲ್ಪಿಸಿ |
ಅಜ ಹರಿ ರುದ್ರರ |
ಭಜಿಸುತ ಕೂತಿದೆ ||ನೋಡ||
ದಾಸವೆನಿಸಿ ಸನ್ಯಾಸಿಯೆನಿಸಿ |
ಪರದೇಶಿಯೆನಿಸುವೇ ವೇಷವ ಧರಿಸಿದೇನೋಡ |
ತಾತ ತರುಣಿ ತನುಜಾತ |
ಮಾತುಳರೇಂಬೀ ಮಾತುಗಳಿಂ |
ವಿಪರೀತ ಭಾವದೊಳಿದೆ ||ನೋಡ||
ಬೆರೆತು ಕರಣದೊಳಗರಿಯದ ಮೂಢನ |
ಪರಿಯೊಳು ಸುಮ್ಮನೆ |
ಶರೀರದೊಡನಿದೆ ||ನೋಡ||
ವಿದ್ಯಾವಿದ್ಯೋಪಾದಿಯ ಕಳೆದರೆ |
ಶುದ್ಧಚಿದಾನಂ |
ದಾದ್ವಯವೆನಿಸಿದೆ ||ನೋಡ||
ಕುಂಭಿನಿಕೋಟೆಯೊಳೆಂಬಿಲ್ಲದೆ |
ತಾನಂಬರದಂದದಿ |
ತುಂಬಿ ತುಳುಕುತಿದೆ ||ನೋಡ||
ಗುರುಶಂಕರನೊಳು ಬೆರೆಯದ ಮನುಜರು |
ಗಿರಿಯದೆ ಪರಿಯೊಳು |
ಮರೆಯೊಳು ಕೂತಿದೆ ||
ನೋಡಬಾರದೇ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 215
92
ಹಮ್ಮಿನ ಮೂಲವ ಸುಟ್ಟು |

ಸುಮ್ಮನಿರಲು ಮುಕ್ತನಹುದು ಪರಬೊಮ್ಮನ ನಾನೆಂಬಮರ್ಮವ ತಿಳಿದು |
ಸುಮ್ಮನಿರಲು ||ಪ||
ಹಮ್ಮಿನ ಮೂಲವ ಸುಟ್ಟು |
ಕರ್ಮಸಮ್ಮತವಾದ ಹಾದಿಯನೆಲ್ಲಬಿಟ್ಟು |
ಬೊಮ್ಮನ ನಿಜವಳವಟ್ಟು ಶಿವೋಹಂಮೆಂಬೋ ನಿಜಬೋಧೆ ಕವಚವ ತೊಟ್ಟು ||1||
ಕೋಶ ಪಂಚಕ ಮರ್ಮ ತಿಳಿದು |
ಮತ್ತಾಕೋಶ ಪಂಚಕದೊಳಗೊಂದೊಂದಕಳದು |
ಈಶಜೀವರ ಭೇದವಳಿದು ಜಗದೀಶನೆ ನಾನೆಂಬ ಮರ್ಮ ತಿಳಿದು ||2||
ಜಾತಿ ನೀತಿಯ ಭ್ರಾಂತಿ ಪೋಗಿ ವಿಷಯಾತಿಶಯದ ಭೋಗಂಗಳನ್ನೆಲ್ಲ ನೀಗಿ ಆತ್ಮಾನುಭವದ ದೃಢ ಮಾಗಿ ನೆಲೆಸಿ ಕಾತರಗೊಳದೆ ನಿಶ್ಚಲಚಿತ್ತನಾಗಿ ||3||
ಲೋಕಾದಿ ವಾಸನೆ ಬಿಟ್ಟು ಪರಲೋಕದಾಶೆಯ ಮೂಲವನು ಮೊದಲೆ ಸುಟ್ಟು |
ಶೋಕಮೋಹಗಳೆಲ್ಲ ಕೆಟ್ಟು |
ಸನ್ನಿರಾಕಾರ ಬ್ರಹ್ಮಭಾವನೆಯಳವಟ್ಟು ||ಸುಮ್ಮ ||
ಪರಮಾನಂದದ ತುದಿಗೇರಿ ಮುನ್ನ ಶರೀರದೊಳಿರ್ದಳಿ ಮಾನವತೂರಿ ಪರಿಪೂರ್ಣಭಾವನೆ ತೋರಿ |
ನಮ್ಮ ಗುರುಶಂಕರಾರ್ಯನ ಪದದೊಳು ಸೇರಿ || ಸುಮ್ಮನಿರಲು ||

93
ಸಾರುತೀದೆ ಶ್ರುತಿ

ಸಾರುತೀದೆ ಶ್ರುತಿ ಸಾರುತೀದೆಲ್ಲ |
ಪರಮಾರ್ಥ ಜ್ಞಾನವಿಲ್ಲದೆ ನೂರು ಸಾವಿರ ದೇಹದೊಳಗತಿ ಘೋರತಪದಿಂ |
ತಪ್ತನಾದರು ಗೋರುದಾನಾನಂದವೆಂದು | ಸಾರುತೀದೆ |
ತನ್ನ ನಿಜವನು ತಿಳಿಯಲಾರದೆ ಭಿನ್ನಭಾವನೆಯಿಂದ ಕಲ್ಮರ ಮಣ್ಣು ಬೊಂಬೆಗಳನು ಪೂಜಿಸಿ |
ಜನ್ಮಬಾಧೆಯು ತೊಲಗದೆಂದು |
ಓದಿವೇದವಜೀವಪರಮರ ಭೇದವಳಿಯದ ಮನುಜ ಧರೆಯೊಳು |
ವಿರದಬಾರವ ಪೊತ್ತು ತಿರುಗುವ ಮಾದಿಗರ ಮನೆ ಕತೆಯೆಂದ ||ಸಾರು||
ಜಾತಿನೀತಿಗಳಿಲ್ಲದಾತ್ಮಗೆ | ಜಾತಿಯನು ಕಲ್ಪಿಸುತ ಕರ್ಮದ ಮಾತನಾಡುವ ನರನೇ |
ಕಾಲದಿ ದೂತಪಾಶಕ ಬದ್ಧನೆಂದು ||ಸಾರು||

216 / ತತ್ವಪದ ಸಂಪುಟ – 1

ಕಂದ ಮೂಲವ ತಿಂದು ನದಿಯೊಳು ಮಿಂದು ಬೂದಿಯ ಧರಿಸಿ ಪಿಟಿ
ಪಿಟಿಯೆಂದು ಮಂತ್ರವ ಜಪಿಸಿದರು ಭವಬಂಧವೆಂದಿಗು ಹರಿಯದೆಂದು ||
ತತ್ವಮಸಿವಾಕ್ಯಾರ್ಥದೊಳಗಿನ ತತ್ವವರಿಯದೆ ಶಂಭುಪೂಜೆಯ ಹತ್ತು ಸಾವಿರ ವರ್ಷಗೈದರಂ | ಮೃತ್ಯುವೆಂದಿಗು ತಪ್ಪದೆಂದು ||ಸಾರು||
ತನುವೆ ತಾನೆಂದರಿತು ತನ್ನೊಳು |
ತನುವಿಗುಸುರಿದ ಜಾತಿಕರ್ಮವ |
ನೆಣಿಸಿ ಕರ್ಮಾಗ್ನಿಯಲಿ ಬೇಯುವ |
ಮನುಜನಿಗೆ ಭವತೊಲಗದೆಂದು ||ಸಾರು||
ನಾನು ನೀನಿದಿದೆಂಬ ಭಾವಗಳೇನು ತೋರದ ಸಚ್ಚಿದಾನಂದಾನುಭವ ಸುಜ್ಞಾನ ತಳೆದಿಹ ಮಾನವನೆ ಪರಮಾತ್ಮನೆಂದು ||ಸಾರು||
ಸತ್ಯವೆಂದುಸುರುತ್ತ ಕರ್ಮಕೆ ಭೃತ್ಯರಾಗಿಹ
ಮೂಢ ಮನುಜರು ಸುತ್ತ ಜನಿಸುತ್ತಿರುವೆಂದು ||ಸಾರುತೀದೆ||
ನಾರಿವಲಿದೊಡೆ ಪತಿಯ ಮನಕನು |
ಸಾರಮಾಗಿರುತಿಹಳು ಮುನಿದೊಡೆ |
ಮಾರಿಸುವಳವನೊಡನದರಿಂ ನಾರಿಯೇ ಹಿರಿಮಾರಿಯೆಂದು ||ಸಾರು||
ಸಾಯುವರ ದುಃಖಾಗ್ನಿಯಲ್ಲಿ ಕಡುಬೇಯುವರ ನೋಡುತ್ತ ಎನಗೀ
ಕಾಯಸುಸ್ಥಿರವೆಂದು ನಂಬಿದ |
ನಾಯಿಗುಂಟೆ ಸೌಖ್ಯವೆಂದು ||ಸಾರು||
ಬಾಧೆಗೊಳಿಸುತ ತನುವ ಸಮ್ಯಗ್ಬೋಧೆಯಿಲ್ಲದೆ ಬಹುವ್ರತಂಗಳ
ಸಾಧಿಸಿದರದರಿಂದಲೀ ಭವಬಾಧೆಯೆಂದಿಗು ತೊಲಗದೆಂದು ||ಸಾರು||
ಎಷ್ಟು ದಿನ ಧರೆಯೊಳಗೆ ಬಾಳ್ದರು ನಷ್ಟವಾಗದ ನಿಲ್ಲದೀತನು |
ಭ್ರಷ್ಟನಿದನರಿತರಿತು ತತ್ವವ ಬಿಟ್ಟು ಬರಿದೇ ಕೆಟ್ಟರೆಂದು ||ಸಾರು||
ಸ್ವರ್ಗಭೋಗಬಯಸಿ ನಿರ್ಮಲನಿರ್ಗುಣಾದ್ವಯ ವಸ್ತುವನು ಹರಿಗರ್ಭಾನುಮಾದಿಗಳ|
ಪೂಜಿಸುವರಿಗಪರ್ವವೆಂದಿಗು ದೊರೆಯದೆಂದು ||ಸಾರು||
ಪರಮ ಸದ್ಗುರು ಶಂಕರಾರ್ಯರ |
ಚರಣಕಮಲವ ಪಿಡಿದು ತತ್ವವನರಿತು ಬ್ರಹ್ಮಾನಂದದೊಳಗಿಹ |
ನರನ ಸಾಕ್ಷಾದೀಶನೆಂದು ||ಸಾರುತ್ತಿದೆ||

94
ಮನವು ಮರೆತು

ದೇವರ ಮರೆತು ನೀವು ದೇಶ ತಿರುಗಲು ಬೇಡ ದೇಹವ ಕೆಡುತ್ತಾತೇ ನಿಮ್ಮ ದೇಹದೊಳಗಿರುವಂತ ದೇವ ಗುರುಲಿಂಗೇಶ ದೇವರಾಗಿರುತ್ತಾರೆ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 217

ಮನವು ಮರೆತು ನೀವು ವನವು ತಿರುಗಲಿಬೇಡ |
ಮನವು ಕೆಡುತ್ತಾತೆ |
ನೀವು ಮನ ಮೆಚ್ಚಿ ನಡೆದರೆ ಮನಸ್ಸಿನ ಗುರುಲಿಂಗ ಘನವಾಗಿರುತ್ತಾತೆ ||1||

ಘರವು ಮರೆತು ನೀವು ಮರವು ತಿರುಗಲಿಬೇಡ ಘರವು ಕೆಡುತ್ತಾತೆ ನಿಮ್ಮ ಘರಕ್ಕೆ ಒಡೆಯನಾದ ಒಡೆಯ ಗುರುಲಿಂಗೇಶ ದಿಟ್ಟವಾಗಿರುತ್ತಾತೆ ||ದೇವ||
ಅಂಗದೊಳಗಾವಿಷ್ಟ ಲಿಂಗದೊಳಗೆ ಶಿವ ಮಂಗಳ ಪರಿಪೂರ್ಣ ಕಾಣಮ್ಮ ನಮ್ಮ ಸರ್ವರ ಪಡೆದಂತ ಪರಶಿವಮೂರ್ತಿ ಸರ್ವರೊಳಗೆ ಉಂಟು ಕಾಣಮ್ಮ ||2||

95
ಪಾಳು ಪರದೇಶಿ ಬಂದವನೇ

ಅಮ್ಮ ಪಾಳು ಪರದೇಶಿ ಬಂದವನೇ ಕೇಳಮ್ಮ ಜಾಣೆ |
ಅವನ ಊರಿಂದ ಹೊರಗೆ ನಿಂದವನೇ ಕೇಳಮ್ಮ ಜಾಣೆ ||ಅಮ್ಮ ||
ಅವನು ಊರಿಂದ ಹೊರಗೆ ನಿಂದವನೇ ಕೇಳಮ್ಮ ಜಾಣೆ ||
ಅವನ ನಿಂತಲ್ಲೇ ನೆಲೆಯ ಮಾಡಿದನೆ ಕೇಳಮ್ಮ ಜಾಣೆ ||
ಅವನ ಸೋಹಂ ಎಂದು ರಾಗ ಪಾಡಿದನೆ ಕೇಳಮ್ಮ ಜಾಣೆ |
ಅವನು ಒಂದು ಊರಿನಲ್ಲಿ ಹೊಂದಿ ನಿಂತವನೇ ಕೇಳಮ್ಮ ಜಾಣೆ |
ಅವನು ಒಂದು ಊರಲ್ಲಿ ಹೊಂದಿ ನಿಂತವನೇ ಕೇಳಮ್ಮ ಜಾಣೆ ||
ಅವನು ಎರಡು ತಿಳಿದು ನಿಂತವನೇ ಕೇಳಮ್ಮ ಜಾಣೆ ||
ಅವನು ಎರಡು ಊರಲ್ಲಿ ತುಳಿದು ನಿಂತವನೇ ಕೇಳಮ್ಮ ಜಾಣೆ ||
ಅವನು ಮೂರು ಮುರಿದು ನಿಂತವನೇ ಕೇಳಮ್ಮ ಜಾಣೆ ||
ಅವನು ನಾಲ್ಕು ಊರಲ್ಲಿ ನಾದ ಪಾಡುವನೇ ಕೇಳಮ್ಮ ಜಾಣೆ ||
ಅವನು ನಾಲ್ಕು ಊರಲ್ಲಿ ನಾದವ ಪಾಡುವನೇ ಕೇಳಮ್ಮ ಜಾಣೆ ||
ಅವನು ಐದು ಊರಲ್ಲಿ ಐಕ್ಯವಾಗಿಹನೆ ಕೇಳಮ್ಮ ಜಾಣೆ ||
ಅವನು ಐದು ಊರಲಿ ಐಕ್ಯವಾಗಿಹನೇ ಕೇಳಮ್ಮ ಜಾಣೆ ||
ಅವನು ಆರು ಊರಲಿ ಅರಸಿನಿಂದವನೇ ಕೇಳಮ್ಮ ಜಾಣೆ ||
ಅವನು ಆರು ಊರಲ್ಲಿ ಅರಸಿನಿಂದವನೇ ಕೇಳಮ್ಮ ಜಾಣೆ |
ಅವನು ಏಳು ಊರಲ್ಲಿ ಯಾಗವ ಮಾಡಿದನೆ ಕೇಳಮ್ಮ ಜಾಣೆ ||
ಅವನು ಏಳು ಊರಲ್ಲಿ ಯಾಗವ ಮಾಡಿದವನೆ ಕೇಳಮ್ಮ ಜಾಣೆ |
ಅವನು ಎಂಟು ಊರಲ್ಲಿ ಮಂಟಪದೊಳಗಿಹನೆ ಕೇಳಮ್ಮ ಜಾಣೆ ||
ಅವನ ಒಂಬತ್ತು ಊರಲ್ಲಿ ತುಂಬಿಕ್ಕಿದನೆ ಕೇಳಮ್ಮ ಜಾಣೆ |
ಅವನು ಒಂಬತ್ತು ಊರಲಿ ತುಂಬಿಕ್ಕಿದನೆ ಕೇಳಮ್ಮ ಜಾಣೆ |
ಅವನು ಹತ್ತು ಊರಲಿ ಸುತ್ತಿ ಬಂದವನೇ ಕೇಳಮ್ಮ ಜಾಣೆ ||

218 / ತತ್ವಪದ ಸಂಪುಟ – 1

ಅವನು ಹತ್ತು ಊರಲ್ಲಿ ಸುತ್ತಿ ಬಂದವನೇ ಕೇಳಮ್ಮ ಜಾಣೆ |
ಅವನು ಹನ್ನೊಂದು ಊರಲ್ಲಿ ಆನಂದವಾಗಿಹನೇ ಕೇಳಮ್ಮ ಜಾಣೆ ||
ಅವನು ಹನ್ನೊಂದು ಊರಲ್ಲಿ ಆನಂದವಾಗಿಹನೇ ಕೇಳಮ್ಮ ಜಾಣೆ |
ಅವನು ಹನ್ನೆರಡು ಊರಲ್ಲಿ ಗುರುಪಾದದಲ್ಲಿಹನೇ ಕೇಳಮ್ಮ ಜಾಣೆ ||ಅಮ್ಮ ||

96
ಎಂಥ ರುಚಿ ನೋಡು

ಎಂಥ ರುಚಿ ನೋಡು ನೋಡು |
ಶಿವಗುರು ಧ್ಯಾನವ ಮಾಡು |
ಶಿವಗುರು ಧ್ಯಾನವ ಮಾಡು ಹರಗುರು ಭಜನೆಯ ಮಾಡು ||1||
ಕಾಯಿ ಕಾಯಿ ತಿಳಿದವರಿಗೆ ತಾಯಿ |
ಇದ ತಿಳಿಯದೇ ಹೋದರೆ ಬೀದಿಯ ನಾಯಿ ||ಎಂಥ||
ಹಣ್ಣು ಹಣ್ಣು ರಸಬಾಳೆಯ ಹಣ್ಣು
ಇದ ತಿಳಿಯದೇ ಹೋದರೆ ಬಾಯಲ್ಲಿ ಮಣ್ಣು ||ಎಂಥ||
ಖಾರಖಾರ ತಿಳಿದವರಿಗೆ ಧೀರ |
ಇದ ತಿಳಿಯದೇ ಹೋದರೆ ಭೂಮಿಗೆ ಭಾರ ಉಪ್ಪು ಉಪ್ಪು ತಿಳಿದವರಿಗೆ ನೆಪ್ಪು |
ಇದು ತಿಳಿಯದೆ ಹೋದರೆ ಅದರಲ್ಲಿ ಮುಪ್ಪು ||ಎಂಥ||
ಈಶ ಈಶ ಪರಮಗುರು ಲಿಂಗೇಶ |
ಇದ ತಿಳಿಯದೆ ಹೋದರೆ ಯಮನ ಕೈವಶ ||ಎಂಥ||
ಈ ಕಾಯವು ಸ್ಥಿರವಿಲ್ಲವು ಕೇಳಿ ತಿಳಿದು ನೀವೆಲ್ಲರೂ ಬಾಳಿ |
ಇದು ತಿಳಿಯದೇ ಹೋದರೆ ನಮ್ಮ ಗುರುಲಿಂಗೇಶನ ಕೇಳಿ ||ಎಂಥ||

97
ಇವನ್ಯಾರಮ್ಮಯ್ಯ

ಎಂತ ಮೋಹದಾರನಮ್ಮ ಭ್ರಾಂತಿ ತೋರಿದ ಗುರುವು ಬಹುಶಾಂತಿ ಪುರುಷ ಇವನ್ಯಾರಮ್ಮ ಯ್ಯ ಚಿಂತೆ ತೋರಿದ ||1||
ಮೂರು ಮುಖದ ಮುತ್ತನ್ನೇ ತಂದಿ ನೆತ್ತಿಲಿ ಬಿಗಿಸಿದಾಗ |
ಯಾರು ಅರಿಯದಂತೆ ಮೂಗಿನ ಕೊನೆಯಲ್ಲಿರಿಸಿದಾ ||ಎಂತ||
ಭದ್ರಮಂಪಟದೊಳು ಕುಳಿತು ಬೈಲನ್ನೇ ತೋರಿದ ಗುರುವು ರುದ್ರ ಕಂಕಣವನ್ನೇ
ಕಟ್ಟಿ ಲಗ್ನವ ಮಾಡಿದ ||ಎಂತ||
ಶರಣು ಶರಣು ಶರಣುಯೆನ್ನುತ ಶಿರದೊಳಿರಿಸಿದಾ ಗುರುವೈ ಶಿರದ ಮಧ್ಯ ಕುಳಿತು
ಗುರುವು ಮುಕ್ತಿಯ ತೋರಿದ ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 216

ಅಂಗ ಮಾಡಿದ ಗುರುವು ಸಂಗ ಬೆಳೆಸಿದಾ |
ಸಂಗದ ಮಧ್ಯ ಕುಳಿತು ಗುರುವು ಲಿಂಗವ ತೋರಿದಾ ||1||
ಮುದ್ದು ಮುಖದ ಸಖಿಯ ಒಡವೆಯ ಬಚ್ಚಿಟ್ಟ ಗುರುವು ಮುದ್ದುವೀರ
ಬ್ರಹ್ಮೋಪದೇಶಕ್ಕೆ ಮುಕ್ತಿಯ ತೋರಿದ ||ಎಂತ||

98
ಮುಕ್ತಿಯ ರಾಜ್ಯವ ಪಡೆಯೆಂದಾ

ಸಾಗರದೊಡೆಯನೆ ಗುರುರಾಯ ನಿನ್ನನಗಲಿ ನಾನಿರಲಾರೆ
ನೀ ನಗುಮುಖ ಎನಗೆ ತೋರಿ ಬಾರೋ ||ಸಾ||
ಗುರುವೇ ಬಂಧು ಬಳಗವೊ ಯನಗವರೇ ಏನ್ ಬಂದಿಸ್ಸಲಹುವರ್ಯಾರಿಲ್ಲಾ ||
ಗುರುವೇ ಹೆಂಡಿರು ಮಕ್ಕಳು ಎನಗವರೇ ಎನ್ ಕೂಡಾಡಿ ಬರುವರ್ಯಾರಿಲ್ಲಾ ಗುರುವೇ ಮನೆಯ ಕಟ್ಟಿಸಿ ಮಾಳಿಗೆ ಹಾಕಿದೆ ಏನ್ |
ನೋಡನೆ ಹೋಯ್ತಕ್ಕಿ ನಾಳಿಗೆ ||1||
ಗುರುವೇ ಕೊಟ್ಟರು ಕಂಬಳಿ ಜೋಳಿಗೆ |
ಎನ್ಯಳೆದು ಕೊಂಡೊಯ್ಯುತ್ತಾಳೆ ನಾಳೆಗೆ ಗುರುವೇ ಕುಣಗಳ್ಳಮಠಕ್ಕೆ ನಡೆಯೆಂದಾ|
ಗುರುರಾಯರ ಸ್ಥಳವ ನೋಡೆಂದಾ ||
ನಿನಗೊಪ್ಪಿದ ಗುರುವ ಇಡಿಯೆಂದಾ ||
ಅವರಿಂದ ಮುಕ್ತಿಯ ರಾಜ್ಯವ ಪಡೆಯೆಂದಾ ||

99
ತನುವು ತಲ್ಲಣಿಸುವುದು

ಬಿಡದೀರೆನ್ನಯ್ಯ ಕೈಯ್ಯಾ ಶ್ರೀ ಗುರುರಾಯ ಬಿಡದಿರೆನ್ನಯ ಕೈಯ್ಯಾ ||
ಬಿಡದಿರೆನ್ನಯ ಕೈಯ್ಯಾ ಬೇಡಿಕೊಂಬೆನು ಜೀವ ಕೊಡು ಕೊಡು ಕೊಡು ಗುರುವೇ
ಕೊಡು ಜೀವನ್ಮುಕ್ತಿಯಾ ||1||
ಜರಣ ಮರಣಾದ ದುಃಖವಾ ತಾಳಲು ಕಷ್ಟ ಈ ಜನನೀ ಗರ್ಭದೆ ವಾಸವಾ |
ನೆನಸಿಕೊಂಡರೆ ಯೆನ್ನ ತನುವು ತಲ್ಲಣಿಸುವುದು |
ಈ ಘನಮಾಯ ಮನೆಯೊಳು ಜರಣವ ಹರಿಸಯ್ಯ ||1||
ಘೋರ ಪಾತಕ ಸಂಹಾರ ಮುನೀಶ್ವರ ನೀನೇ ಶ್ರೀ ಜಗದೀಶ್ವರ ದೀರ ಗುರುವೇ
ನಮ್ಮ ನೋಡಿ ರಕ್ಷಿಸು ದೇವಾ ಚರಣವಲ್ಲದೆ ಬೇರೊಂದೇ ನಾನರಿಯಯ್ಯ ||ಬೇಡದಿರು||
ಇಂದೇ ಮಾಡಿದ ಕರ್ಮವ ಮುಂದೆ ಬಾಧಿಸುತಿಹುದು ಬಂದೆನ್ನ ಸಲಹಯ್ಯ
ಗುರುಲಿಂಗದೇವರೇ ತಂದೆ ತಾಯಿಯು ನೀನೆಂದು ನಂಬಿದೆ ಗುರುವೇ

220 / ತತ್ವಪದ ಸಂಪುಟ / 1

ಬಂಧು ಬಳಗವು ನೀನೆಂದು ನಂಬಿದೆ ||ಬಿಡದಿರು||
ಹಗಲು ನಿನ್ನಯ ಜ್ಞಾನ ಇರುಳು ನಿನ್ನಯ ಸ್ಮರಣೆ ಹಗಲಿರುಳು ನಿನ್ನಯ ಪಾದವ ನಂಬಿರುವೇ ||ಬಿಡ||
ತಾಯಿ ಗರ್ಭದ ವಾಸವ ತಾಳಲು ಕಷ್ಟ |
ಈ ಕಾಮಿನಿ ತಾಪವನ್ನೇ |
ಕಾಮ ಕ್ರೋಧಂಗಳ ಕಡಿದು ಬಿಸಾಡುವೇ ಜ್ಞಾನಲೋಕದ ಮಾಯ ಜರಣವ ಹರಿಸಯ್ಯ ||ಬಿಡದಿರು||
ಘೋರ ಪಾತಕ ಸಂಹಾರ ಗುಹೇಶ್ವರ ಶ್ರೀಶೈಲ ಜಗದೀಶ್ವರ ಗುರುವೇ ಗುರುವೇ ಎಂದು ನಂಬಿದ ನರರೀಗೆ ಪರಲೋಕದ ಸದ್ಗತಿಯು ದೊರಕುವುದು |
ನಿನ್ನ ನೋಡಲು ಗುರುವೆ ಯೆನ್ನ ತನುವು ತಲ್ಲಣಿಸುವುದು ||ಬಿಡದಿರು||

100
ಸತ್ಯ ಶಾಂತಿ ಲಿಂಗವೇ

ಓಂ ನಮಃ ಶಿವಾಯ |
ಓಂ ನಮಃ ಶಿವಾಯ |
ಓಂ ನಮಃ ಶಿವಾಯ |
ಒಂದು ದಳದ ಕಮಲದಲ್ಲಿ ಅಂದವಾದ ಲಿಂಗವೇ |
ಮಧ್ಯ ಪ್ರಾಣ ಲಿಂಗವೇ |
ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಎರಡು ದಳದ ಕಮಲದಲ್ಲಿ ಅರಳಿ ಬಂದ ಲಿಂಗವೇ |
ಸತ್ಯ ಶಾಂತಿ ಲಿಂಗವೇ |
ಮಧ್ಯ ಪ್ರಾಣ ಲಿಂಗವೇ ||
ಓಂ ನಮಃ ಶಿವಾಯ ||
ಮೂರು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ |
ಮಧ್ಯಪ್ರಾಣ ಲಿಂಗವೇ ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ ಮಧ್ಯಪ್ರಾಣ ಲಿಂಗವೇ ಸತ್ಯ
ಶಾಂತಿ ಲಿಂಗವೇ ||
ಓಂ ನಮಃ ಶಿವಾಯ||
ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ ಮಧ್ಯಪ್ರಾಣ ಲಿಂಗವೇ ಸತ್ಯ ಶಾಂತಿ
ಲಿಂಗವೇ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 221

ಆರು ದಳದ ಕಮಲದಲ್ಲಿ ಆರಿ ಬಂದ ಲಿಂಗವೇ ಮಧ್ಯಪ್ರಾಣ ಲಿಂಗವೇ|
ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಏಳು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ ಮಧ್ಯಪ್ರಾಣ ಲಿಂಗವೇ |
ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಎಂಟು ದಳದ ಕಮಲದಲ್ಲಿ ಬ್ರಹ್ಮನಾದ ಲಿಂಗವೇ ಮಧ್ಯಪ್ರಾಣ ಲಿಂಗವೇ ||
ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಒಂಬತ್ತು ದಳದ ಕಮಲದಲ್ಲಿ ಅಮೃತವಾದ ಲಿಂಗವೇ ಮಧ್ಯಪ್ರಾಣ ಲಿಂಗವೇ||
ಸತ್ಯಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಹತ್ತು ದಳದ ಕಮಲದಲ್ಲಿ ಸತ್ಯವಾದ ಲಿಂಗವೇ ಮಧ್ಯಪ್ರಾಣ ಲಿಂಗವೇ ||
ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಹನ್ನೊಂದು ದಳದ ಕಮಲದಲ್ಲಿ ಬ್ರಹ್ಮನಾದ ಲಿಂಗವೇ ಮಧ್ಯಪ್ರಾಣ ಲಿಂಗವೇ ಸತ್ಯ ಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||
ಹನ್ನೆರಡು ದಳದ ಕಮಲದಲ್ಲಿ ಅಡಿ ಬಂದ ಲಿಂಗವೇ ಮಧ್ಯಪ್ರಾಣ ಲಿಂಗವೇ
ಸತ್ಯಶಾಂತಿ ಲಿಂಗವೇ ||
ಓಂ ನಮಃ ಶಿವಾಯ ||

101
ಜಾತಿ ಸೂತಕ ಭ್ರಾಂತಿ

ಯಲ್ಲ ಪರಬ್ರಹ್ಮವೆನಬೇಕು |
ಬೇರೊಂದಿಲ್ಲವೆಂಬುದು ದೃಢವಿರಬೇಕು |
ಇಲ್ಲಲ್ಲಿ ತೋರುವುದೆಲ್ಲ |
ಪರಬ್ರಹ್ಮನುಲ್ಲಾಸವೆ ಯೆಂದೆನಬೇಕು ||ಯಲ್ಲ||
ಪರಮ ನಾನೆಂಬುದರಿಯಬೇಕು |
ಅದನರಿಯಬೇಕಾದರೆ ಗುರು ಬೇಕು ಗುರು ದೊರೆಯಾಕಾರದ ಚರಣದೊಳಗೆ |
ತನ್ನ ಶಿರವನು ಮರಸದಿಟ್ಟಿರಬೇಕು ||
ರೂಪು ನಾಮಂಗಳ ಬಿಡಬೇಕು |

222 / ತತ್ವಪದ ಸಂಪುಟ – 1

ಅಧ್ಯಾರೋಪದೊಳದನು ಕಟ್ಟಿಡಬೇಕು |
ಆ ಪರಂಜ್ಯೋತಿ ಸ್ವರೂಪವೇ ತಾನಾಗಿ |
ಪಾಪ ಪುಣ್ಯಗಳೆಲ್ಲ ಕೆಡಬೇಕು || ಯಲ್ಲ ಪರಬ್ರಹ್ಮ ||
ವಡಲು ನಾನೆಲ್ಲೆಂಬ ನುಡಿಬೇಕು |
ತಾನು ನುಡಿದ ನುಡಿಗೆ ತಕ್ಕ ನಡೆ ಬೇಕು |
ವಡಲಿನ ತೊಡಕನು ಬಿಡಿಸಿದ ಗುರುವರ |
ನದಿಯೊಳಗಾ ವಡಲನಿಡಬೇಕು || ಯಲ್ಲ ಪರಬ್ರಹ್ಮ ||
ತಾನೆಂಬ ನುಡಿಯ ಒದ್ದಿಸಬೇಕು |
ಸಮ್ಯಜ್ಞಾನದಿಂದದನುತಿದ್ದಿಸಬೇಕು |
ಮಾನಮೇಯಗಳೆಂಬುದೇನು ತೋರದ |
ಸಚ್ಚಿದಾನಂದಭಾವ ಸಿದ್ಧಿಸಬೇಕು || ಯಲ್ಲ ಪರಬ್ರಹ್ಮ ||
ಆರು ನಾನೆಂದು ಶೋಧಿಸಬೇಕು |
ಮುಂದೆ ತೋರುವ ಜಗವ ಬಾಧಿಸಬೇಕು |
ಬೇರೇನು ತೋರದೆ ಈರೇಳು ಲೋಕವ |
ಮೀರಿದ ಪದವ ಸಾಧಿಸಬೇಕು || ಯಲ್ಲ ಪರಬ್ರಹ್ಮ ||
ಜಾತಿ ಸೂತಕ ಭ್ರಾಂತಿ ಬಿಡಬೇಕು |
ಮನವ ಸ್ವಾತ್ಮಾನುಭಾವದೊಳಗಿಡಬೇಕು |
ಭೀತಿ ತೋರದೆ ಪರಿಪೂತನಾಗುತ |
ತನುಜಾತ ಕರ್ಮಗಳನು ಸುಡಬೇಕು ||
ಯಲ್ಲ ಪರಬ್ರಹ್ಮ ||
ವಂದಿಸುವರನ್ನು ವಂದಿಸಬೇಕು |
ತನ್ನ ನಿಂದಿಸುವರಿಗೆ ವಂದಿಸಬೇಕು |
ನಿಂದೆ ವಂದನೆ ಎಂಬ |
ಬಂಧನವೆಲ್ಲದಾನಂದ ಭಾವದೊಳು ಹೊಂದಿರಬೇಕು ||
ಯಲ್ಲ ಪರಬ್ರಹ್ಮ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 223

ಅರುಹುತನ್ನೊಳು ನೆಲಸಿರಬೇಕು |
ಕಾಯಕರಣ ಕಾರ್ಯದೊಳೆಚ್ಚರಬೇಕು |
ಗುರುಶಂಕರಾರ್ಯನೊಳ್ ಬೆರದೇಕನಾಗಿ |
ತಾ ಹೊರವಳಗೆಲ್ಲ ತುಂಬಿರಬೇಕು |
||ಯಲ್ಲ ಪರಬ್ರಹ್ಮವೆನಬೇಕು||

102
ಕಂಡೆನು ನಾನೊಂದು ಪಕ್ಷಿಯ

ಕಂಡೆನು ನಾನೊಂದು ಪಕ್ಷಿಯ ಧರೆಯೊಳು |
ಮಂಡಲ ತುದಿಯೊಳು ತಿರುಗುವುದಾ |
ಕಂಡಿತ ಹರಿಹರ ಬ್ರಹ್ಮಾದಿಗಳಿಗೆ ಹಿಡಿಯಲು ಅಸದಳವಾಗಿಹುದಾ ||ಪ||
ರೆಕ್ಕೆ ಪುಕ್ಕಿಲ್ಲದೆ ಕೊಕ್ಕು ಮೊದಲಿಲ್ಲದೆ ಲೆಕ್ಕದೊಳಗೆ ತಾ ತಿರುಗುವುದಾ |
ಅಕ್ಕರದಿಂದಲಿ ನೋಡುತ ಜಗವನ್ನು ಗಕ್ಕನೆ ನಗುತ್ತಾ ತಾ ನಿಂತಿಹುದಾ ||ಪ||
ಕಣ್ಣು ಕಿವಿ ನಾಲಿಗೆ ಬಣ್ಣ ಮೊದಲಿಲ್ಲದೆ ಸಣ್ಣದರೊಳಗೆ ಸಣ್ಣವಾಗಿಹುದಾ ಕಣ್ಗಿಲ್ಲದೀ ಜಗವ ತಿರುಗಿ ನೋಡಿಕೊಂಡು ತನ್ನ ಸ್ಥಾನಕೆ ತಾಪ ಬರುತಿಹುದಾ ||
ಇಪ್ಪತ್ತೊಂದರೊಳು ಒಪ್ಪದಿಂದಿರುತಿರೆ ತಪ್ಪದೆ ಸಂಚಾರ ಮಾಡುವುದು |
ಇಪ್ಪತ್ತೊಂದು ಮತ್ತು ಆರು ಎರಡರ ಸೊನ್ನೆ ಲೆಕ್ಕದೊಳಗೆ ತಾ ತಿರುಗುವುದಾ ||ಪ||
ಎಲ್ಲರ ಮನೆಯೊಳು ವಾಸವಾಗಿರುತಿರೆ ಬಲ್ಲವರಿಗೆ ನಿಜ ತೋರುವದಾ ಇದು ಅಲ್ಲ ಹೌದು ಎಂಬ ಕ್ಷುಲ್ಲ ಮಾನವರಿಗೆ ಉಲ್ಲಾಸ ಮಾರ್ಗವ ಬಿಡಿಸುವುದಾ ||ಪ||
ಒಂಬತ್ತು ಬಾಗಿಲೊಳ್ ತುಂಬಿ ತುಳುಕುತಿರೆ ಕಂಬದೊಳಗೆ ಮನೆ ಮಾಡಿಹುದಾ ನಮ್ಮ ಕಂಬು ಕನ್ನಡ ಶ್ರೀ ಗುರುಲಿಂಗೇಶನ ನಂಬಿದವರಿಗದು ಕಾಣುವುದು ||ಕಂಡೆನು||

103
ಗುರುವಾದ ದೇಹಕ್ಕೆ

ಹಿಗ್ಗುವೆ ಯಾಕೋ | ಈ ದೇಹಕ್ಕೆ |
ಹಿಗ್ಗುವೇ ಯಾಕೋ ||ಪ||
ಹಿಗ್ಗೂವೆ, ತಗ್ಗೂವೆ, ಮಗ್ಗೂವೆ ಮರುಗುವೇ |
ಅಗ್ನಿಯೊಳಗೆ ದಗ್ಧವಾಗುವ ದೇಹಕೆ ಸತಿ ಪುರುಷರೊಡಗೂಡಿ |
ರತಿಕ್ರೀಡೆಗಳ ಮಾಡಿ |
ಪೃಥನಾದ ಇಂದ್ರಿಯ ಪೃಥುವೆಯು ದೇಹಕ್ಕೆ ||1||
ಆಗಾಗ ಭೋಗಗಳಾಗುಮಾಡುತಲಿರ್ಪ |
ರೋಗ ಬಂದರೆ ಬಿದ್ದು |
ಹೋಗುವ ದೇಹಕ್ಕೆ ||2||
ಪರರ ಸೇವೆಯ ಮಾಡಿ |
ನರಕಭಾಜನವಾಗಿ |
ಮರಳಿ ಮರಳಿ ಬಿದ್ದು |
ಉರುಳೂವ ದೇಹಕ್ಕೆ ||3||

224 / ತತ್ವಪದ ಸಂಪುಟ – 1

ಸೋರುವದೊಂಬತ್ತು |
ಬಾಗಿಲ ಮಲದೊಳು |
ನೀರಿಲ್ಲದಿದ್ದರೆ ನಾರುವ ದೇಹಕ್ಕೆ ||4||
ಹೇಳುತ ಕೇಳುತ |
ಬಾಳುತ ಬದುಕುತ |
ಹೇಳದೇ ಹೋಗುವೀ ಹಾಳಾದ ದೇಹಕ್ಕೆ ||5||
ಪುರಂದರ ವಿಠಲನ |
ಚರಣಕಮಲಕ್ಕೆ |
ಹೆರಗಾದೆ ಇರುತಿಹ |
ಗುರುವಾದ ದೇಹಕ್ಕೆ ||6||

104
ಚಿನ್ನ ರನ್ನದ ಜೋಳಿಗೆ ಜಂಗಮ

ಹುಬ್ಬಳ್ಳಿ ಕೆರೆ ಬಾವಿ ಜಂಗಮಾ |
ನೀರಿಗೊಬ್ಬಳೇ ಹೋಗಲಾರೆ ಜಂಗಮಾ ||
ನಾಗಚಿತ್ತದ ಕೋಲು ಜಂಗಮ |
ಚಿನ್ನ ರನ್ನದ ಜೋಳಿಗೆ ಜಂಗಮ ||ಪ||
ಕನ್ನೆ ಸೂತಕವಾದ ಜಂಗಮ |
ಯನ್ನ ಕರೆದು ಮಲಗುವರಿಲ್ಲ ಜಂಗಮ |
ಇಬ್ಬನಿ ಮಳೆಯಂದು ಜಂಗಮ |
ನಾನೊಬ್ಬಳೆ ಇರಲಾರೆ ಜಂಗಮಾ ||
ಕೋಟೆಯಿಲ್ಲಾದ ಮನೆ ಜಂಗಮಾ |
ಅದಕ್ಕೆ ರಾಟುಂಟು ಕದವಿಲ್ಲ ಜಂಗಮಾ |
ನೀಟ ಪಾಳೆಗಾರರ ಆಟವೆಂತೇಳಲಿ ನೋಟಕ್ಕೆ ಗೋಚರ ಜಂಗಮ |
ಗಂಡದಂಡಿಗೆ ಹೋದ ಜಂಗಮಾ |
ಎನ್ನ ಮಾವ ಮಲ್ನಾಡಿಗೆ ಹೋದ ಜಂಗಮಾ |
ಉಂಡಾಡಿ ಹೋದರು |
ಚಂಡಾಡಿ ಹೋದರು ಚಂಡಿ ನಾನೊಬ್ಬಳೇ ಜಂಗಮಾ ||
ಹೋಗುವಾಗ ಹೊಲೆಯಾದೆ ಜಂಗಮ |
ಬರುವಾಗ ಬಸುರಾದೆ ಜಂಗಮ|
ಆರು ಮಕ್ಕಳ ತಾಯಿ ನಾನಾದೆ ಜಂಗಮ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 225

ನನ್ನ ಗಂಡನ ಗುರ್ತು ನಾನರಿಯೆ ಜಂಗಮ |
ಹಾಸಿಗೆ ಹಾಸತ್ತೆ ಜಂಗಮ |
ನಡು ಮನೆಯಲ್ಲಿ ಪರಂಜ್ಯೋತಿ ಉರಿಯುತ್ತೆ ಜಂಗಮಾ |
ಹಾಸಿಗೆಗೆ ತಕ್ಕಂಥ ಪುರುಷನಿಲ್ಲದ ಮೇಲೆ ಪರದೇಶಿ ನಾನಾದೆ ಜಂಗಮಾ |
ಕತ್ತರಿಸಿದಾಕಳಿ ಅಡಿಕೆ ಜಂಗಮಾ |
ಕತ್ತರಿಸಿದ ಬಿಳಿಯಲೆ ಜಂಗಮಾ |
ತಾವರೆ ಕೆನೆ ಸುಣ್ಣ ಜಂಗಮ |
ಅದು ಕಳವಳ ಮಾಡಿತು ಜಂಗಮಾ |
ಪಾತ್ರೆ ಕುಳಿಯೊಳು ಜಂಗಮ |
ನನ್ನ ಜೋಳಿಗೆಯಲಿ ಕುರುಕಲ್ ಜಂಗಮಾ |
ಗುರುಲಿಂಗೇಶನಿಂದ ನೀ ತಿಳಿ ಜಂಗಮಾ |
ನಿನಗೆ ಹುಚ್ಚುನಾಯಿ ಕಡಿಯಲಿ ಜಂಗಮಾ || ಹುಬ್ಬಳ್ಳಿ||

105
ಬೆಕ್ಕು ಕೊಂಡು ಹೋಯಿತಯ್ಯೋ

ಗಿಳಿಯು ಪಂಜರದೊಳಿಲ್ಲ ||ಪ|| ಶ್ರೀ ರಾಮ |
ಬರಿದೇ ಪಂಜರವಾಯ್ತಲ್ಲ ||ಅ.ಪ.||
ಅಕ್ಕ ನಿನ್ನ ಮಾತ ಕೇಳಿ |
ಚಿಕ್ಕದೊಂದು ಗಿಳಿಯ ಸಾಕಿದೆ |
ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ ||1||
ಅರ್ತಿಗೊಂದು ಗಿಳಿಯ ಸಾಕಿದೆ |
ಮುತ್ತಿನ ಹಾರವ ಹಾಕಿದೆ |
ಮುತ್ತುಕೊಂಡು ಗಿಳಿಯು ತಾನು |
ಎತ್ತಲೋಡಿ ಹೋಯಿತಯ್ಯೋ ||3||
ಹಸಿರು ಬಣ್ಣದ ಗಿಳಿಯು |
ಕುಶಲ ಬುದ್ಧಿಯ ಗಿಳಿಯು |
ಅಸುವ ಕುಂದಿ ಗಿಳಿಯು |
ಕುಶಲ ಬುದ್ಧಿಯ ಗಿಳಿಯು |
ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ ||3||
ಮುಪ್ಪಾಗ ಬೆಣ್ಣೆಯನ್ನು |
ತಪ್ಪದೆ ನಾ ಹಾಕಿ ಸಾಕಿದೆ |
ಒಪ್ಪದಿಂದ ಗಿಳಿಯು ಈಗ |

226 / ತತ್ವಪದ ಸಂಪುಟ -1

ತೆಪ್ಪನೆ ಹಾರಿ ಹೋಯಿತಯ್ಯೋ ||4||
ರಾಮ ರಾಮ ಎಂಬೋ ಗಿಳಿಯು |
ಕೋಮಲ ಕಾಯದ ಗಿಳಿ |
ಸಾಮಜಪೋಷಕ ತಾನು |
ಪ್ರೇಮದಿ ಸಾಕಿದ ಗಿಳಿ ||5||
ಒಂಬತ್ತು ಬಾಗಿಲು ಮನೆ |
ತುಂಬಿದ ಸಂದಣಿಯಿರಲು |
ಕಂಬ ಮುರಿದು ಡಿಂಬ ಬಿದ್ದು |
ಅಂಬರಕ್ಕೆ ಹಾರಿಹೋಯಿತು ||6||
ಅಂಗಯ್ಯಲಾಡುವ ಗಿಳಿ |
ಮುಂಗಯ್ಯ ಮೇಲಣ ಗಿಳಿ
ರಂಗ ಶ್ರೀ ಗುರುಲಿಂಗೇಶನ ರಂಗದಿ ಭಜಿಸುವ ಗಿಳಿ ||7||

106
ಕಾಗದ ಬಂದಿದೆ ||

ಕಾಗದ ಬಂದಿದೆ | ನಮ್ಮ ಗುರುಲಿಂಗೇಶನಿಂದ ಈ ಕಾಗದವನ್ನು ಓದಿಕೊಂಡು
ಆನಂದವ ಪಡೆಯಿರಿ ||1||
ಕಾಮ ಕ್ರೋಧವ ಬಿಡಬೇಕು ಎಂದು ಕಾಗದ ಬಂದಿದೆ |
ನೇಮನಿಷ್ಠೆಯೊಳಿರಿರೆಂಬೋ ಕಾಗದ ಬಂದಿದೆ ||1||
ತಾಮಸ ಜನರ ಕೂಡಿರೆಂಬ ಕಾಗದ ಬಂದಿದೆ |
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||
ಹೆಣ್ಣಿನಾಸೆ ಬಿಡಿರೆಂಬೋ | ಕಾಗದ ಬಂದಿದೆ ||
ಹೊನ್ನಿನಾಸೆ ಬಿಡಿರೆಂಬೋ ಕಾಗದ ಬಂದಿದೆ ||
ಮಣ್ಣಿನಾಸೆ ಬಿಡಿರೆಂಬೋ ಕಾಗದ ಬಂದಿದೆ ನಮ್ಮ ಗುರುಲಿಂಗೇಶನು ತಾನೇ ಬರೆದ
ಕಾಗದ ಬಂದಿದೆ ||
ಗೆಜ್ಜೆ ಕಾಲ್ಕಟ್ಟಿರೆಂಬೋ | ಕಾಗದ ಬಂದಿದೆ |
ಹೆಜ್ಜೆ ಹೆಜ್ಜೆಗೂ ಗುರುವೆಯೆಂಬ ಕಾಗದ ಬಂದಿದೆ |
ಲಜ್ಜೆ ಬಿಟ್ಟು ಕುಣಿಯಿರೆಂಬೋ ಕಾಗದ ಬಂದಿದೆ |
ನಮ್ಮ ಗುರುಲಿಂಗೇಶನು ತಾನೇ ಬರೆದ ಕಾಗದ ಬಂದಿದೆ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 227

107
ಕಣ್ಣೆತ್ತಿ ನೋಡಲು ಬೇಡ

ಕಣ್ಣೆತ್ತಿ ನೋಡಲು ಬೇಡ ||ಪ||
ಅವಳ ಸಣ್ಣ ಬೈತಲೆ ನೋಡಿ ನೋಡಿ ಮರುಳಾಗಬೇಡ ||
ಕಣ್ಣಿಟ್ಟು ಕೀಚಕ ಕೆಟ್ಟ |
ಪರ ಹೆಣ್ಣಿಗಾಗಿ ರಾವಣ ತಲೆ ಕೊಟ್ಟ |
ಇನ್ನೆಷ್ಟು ಹೇಳಲಿ ನಷ್ಟ |
ಪರಹೆಣ್ಣ ಮೋಹಿಸಿದರೆ ಬರುವುದು ಕಷ್ಟ ||1||
ದೂಷಿಸದಿರು ದುರುಳ ಕಣ್ಣ |
ಅವಳ ತೋರ ಕುಪ್ಪಸ ಕುಚ ನಡು ಬಹು ಸಣ್ಣ |
ಸೀರೆಯ ಬಿಗಿದುಟ್ಟ ಹೆಣ್ಣು |
ಅವಳ ಓರೆ ನೋಟದ ನೋಡಿ ಹಾರಬೇಡಣ್ಣ ||2||
ಹಸಿವುಇಲ್ಲದ ಸವಿಯೂಟ, ತನ್ನ ವಶಕೆ ಬಾರದ ಸ್ತ್ರೀಯರ ಕೂಟ |
ದೇಶದೇಶದೊಳಪಕೀರ್ತಿ ಮಾಟ
ವಸುದೇಶ ಗುರುಲಿಂಗೇಶನಗಲ್ಲದ ನೋಟ ||3||

108
ಮಾನವ ಜನ್ಮ ದೊಡ್ಡದು

ಮಾನವ ಜನ್ಮ ದೊಡ್ಡದು ||ಇದ||
ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ |
ಮಣ್ಣು ಮುಕ್ಕಿ ಹುಚ್ಚರಾಗುವರೇ ||
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ |
ಉಣ್ಣದೆ ಉಪವಾಸ ಇರುವರೆ ಖೋಡಿ ||1||
ಕಾಲನ ದೂತರು ಕಾಲ್ಪಿಡಿದೆಳೆವಾಗ |
ತಾಳು ತಾಳೆಂದರೆ ತಾಳುವರೆ ||
ಧಾಳಿ ಬಾರದ ಮುನ್ನ ಧರ್ಮವ ಗಳಿಸಿರೋ
ಹಾಳು ಸಂಸಾರ ಸುಳಿಗೆ ಸಿಕ್ಕಲು ಬೇಡಿ||2||
ಏನು ಕಾರಣ ಯದುಪತಿಯನು ಮರೆತಿರಿ |
ಧನಧಾನ್ಯ ಪುತ್ರರು ಕಾಯುವರೇ ||
ಇನ್ನಾದರೂ ಏಕೋಭಾವದಿ ಭಜಿಸಿರೋ ||
ಚನ್ನ ಶ್ರೀ ಗುರುಲಿಂಗೇಶನ ಭಜಿಸಿರೋ ||3||

109
ಬುದ್ಧಿಮಾತು

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ |
ಮಗಳೇ ಮನ | ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ ||
ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೇ |
ಚಿತ್ತದೊಲ್ಲಭನಕ್ಕರೆಯನು ಪಡೆಯಬೇಕಮ್ಮ ||
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ |
ಮಗಳೇ |
ಹತ್ತು ಮಂದಿ ಒಪ್ಪುವ ಹಾಗೆ ನಡೆಯಬೇಕಮ್ಮ ||
ಕೊಟ್ಟು ಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ ಮಗಳೇ |
ಅಟ್ಟು ಉಂಬುವ ಕಾಲದಲ್ಲಿ ಆಟಬೇಡಮ್ಮ ||
ಹಟ್ಟಿ ಬಾಗಿಲಲಿ ಬಂದು ನಿಲ್ಲಬೇಡಮ್ಮ |
ಮಗಳೇ |
ಕಟ್ಟಿ ಅಳುವ ಗಂಡನೊಡನೆ ಸಿಟ್ಟು ಬೇಡಮ್ಮ ||
ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ||
ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ ||
ಪರರ ನಿಂದಿಪ ಹೆಂಗಸರೊಡನೆ ಸೇರಬೇಡಮ್ಮ ಮಗಳೇ |
ಗುರುಲಿಂಗೇಶನ ಸ್ಮರಣೆಯನ್ನು ಮರೆಯಬೇಡಮ್ಮ ||ಬುದ್ಧಿ||

110
ನಿಂದಿಸುವರು ನಮ್ಮ ಬಂಧು ಕುಲ

ನಿಂದಿಸುವರು ನಮ್ಮ ಬಂಧು ಕುಲ |
ನರಹಂದಿಗಳೊಡನೆ ಛಲ |
ಸಂದುಗೊಂದಿಲ್ಲದಾನಂದರಸವ ತುಂಬಿ ಬಂಧುರಮಾಗಿದೆ ನಮ್ಮ ಬಲ |
ಬಂದಿರುವೀ ಭವ ಬಂಧನವಳಿಯದ ವಂದನೆಯಿಂದೆಮಗೇನುಫಲ ||ನಿಂದಿ||
ಯೆಲ್ಲೆಲ್ಲಿಯು ಯೆಡೆಯಿಲ್ಲದ ಮೂರ್ತಿಗೆ ಕಲ್ಲಿನ ಮದೆಯಿಂದೇನು ಫಲ |
ಸಲ್ಲಿಲತಾನಂದೊಲ್ಲಸಿತಾತ್ಮಗೆ ಬೆಲ್ಲವ ತೋರಿದೊಡೇನು ಫಲ ||ನಿಂ||
ಮಾರಜನಕನಾಕಾರವ ಕಾಣದೆ ಆರತಿ ಬೆಳಗಿದೊಡೇನು ಫಲ||
ಮೂರು ಗುಣಂಗಳ ಮೀರಿದ ಪದದೊಳು ಸೇರದ ಸುಖದಿಂದೇನು ಫಲ ||ನಿಂದಿ||
ಪರಮ ಪುರುಷ ತನ್ನ ಕರಣದಿನೆಲಸಿರೆ ಧರೆಯನು ತಿರುಗಿದೊಡೇನು ಫಲ |
ಮರಣವು ಬಂದಿಹ ಪರಿಯನು ತಿಳಿಯದೆ ಶರಣನುಯಂದೊಡೇನು ಫಲ ||ನಿಂ||
ದೇವರ ಬೆಳಗುವ ಭಾವವ ತಿಳಿಯದೆ ಬಾವಿಗೆ ತಿರುಗಿದೊಡೇನು ಫಲ ||ನಿಂ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 229

ಹೊರಬಳಗೆಂಬುವಧರಿಸಿದ ಮಾಯೆಯನರಿಯದ ಮತಿಯಿಂದೇನು ಫಲ |
ವರಗುರುಶಂಕರನಡಿಯೊಳು ಬೆರೆಯದ ನರದೇಹವುಯಿದ್ದೇನು ಫಲ || ನಿಂದಿಸುವರು||
111
ಗುರುಪಾದದೊಳು ಮನಹಿಂಗಿ

ಗುರುಪಾದದೊಳು ಮನಹಿಂಗಿ |
ಬಂಧು ತೊರೆದು ಪೋಯಿತು ನೋಡೆ ತಂಗಿ |
ಹೊರಗೆಂಬೊ ಒಳಗೆಂಬ ಹೊರವಳ ಸಂದೆಂಬ |
ಬಿರುಕಿನೊಳೆನ್ನ ತುಂಬಿರುವಂತೆ ಮಾಡಿದ ||ಪ||
ತಾಪಕೋಪಂಗಳ ಕೆಡಿಸಿ | ಬಳಿಕ |
ರೂಪುನಾಮಂಗಳ ಸುಡಿಸಿ |
ದೂಪದೀಪಗಳೆಂಬಾರೋಪವೆಲ್ಲವನು
ನಿರ್ಲೇಪಾವೆನಿಸಿ ನೀ ಚಿದ್ರೂಪಾನೆಂದರುಪಿದ ||ಗುರು||
ತನ್ನನಂದವ ಸಾರವೆಸಗಿ | ಮನ |
ವಿನ್ನೆಲ್ಲು ಪೋಗದಂತೆಸಗೀ |
ಭಿನ್ನವೆಂಬುವನುಡಿ ಶೂನ್ಯವಾಯಿತು ಎಂಬ |
ಎನ್ನಲ್ಲಿಯೇ | ಜಗವನ್ನೆಲ್ಲ ತೋರಿದ ||ಗುರು||
ಗುರುವೆಂಬ ನಾಮವ ಧರಿಸಿ |
ಹೊಟ್ಟೆ | ಹೊರೆಯುವೊ ಜನ್ಮವ ಹರಿಸಿ |
ಹರುಷವನೇರಿಸಿ |
ಹರನನೊಳು ಸೇರಿಸಿ ಮರಣ ಜನ್ಮಗಳ
ಗೋಚರಿಸದಂತೆಸಗಿದ ||ಗುರು||
ಮೂರು ಮೂರ್ತಿಗಳಲ್ಲೂ ಕೂಡಿ | ನಾ |
ಸೇರಿಕೊಂಡಿರುವಂತೆ ಮಾಡಿ |
ತೋರುವ ಬಗೆಯನು |
ತೋರಿಸಿ ನಮ್ಮಲ್ಲೇ ತೋರಿಸಿ ಬೇರೇನು |
ತೋರದಂತೆಸಗಿದ ||ಗುರು||
ಮರಣ ಜನ್ಮಂಗಳ ಸುಟ್ಟು | ನಿಜ |
ಗುರುದೂಷಕರಗದ ಕೊಟ್ಟು |
ಮರವೆಯ ಬ್ಯಾರಿಟ್ಟು ಅರಹಿಗೆ ಗುರಿಯಿಟ್ಟು
ಗುರುಲಿಂಗೇಶನ ಗುಟ್ಟನ್ನರಿಯದವನ ಬಿಟ್ಟು ||
ಗುರುಪಾದದೊಳು ಮನವಿಂಗಿ ||

230/ತತ್ವಪದ ಸಂಪುಟ-1

112
ಜ್ಞಾನ ರೂಪ ಪ್ರಾಣಲಿಂಗ

ತೂರಿ ಬಾರೋ ಪೋಗಿ |
ತೂರಿ ಬಾರಣ್ಣ |
ತೋರುವೀ ಜಗವೆಲ್ಲ |
ಶಿವನಾಕಾರವೆಂಬ ಜ್ಞಾನವನ್ನು ||ಪ||
ಮೂರು ಗುಣಗಳು |
ಕೂಡಿ ಮಾಡುವ ಮೂರು ದೇಹಗಳಲ್ಲಿ ಬೆಳಗುವ |
ಮೂರು ಲಿಂಗಗಳಲ್ಲಿ ಬೆರೆಯದೆ |
ಸೃಷ್ಟಿಕೋಟಿಯೊಳಗಿರುವ ದೇವರ |
ನಷ್ಟು ತನ್ನಂಗದಲಿ ಬೆಳಗಿಸುವಿಷ್ಟಲಿಂಗವ ಬಿಟ್ಟು ಬರಿದೇ |
ಶ್ರೇಷ್ಠರೆಂಬಿ | ಭ್ರಷ್ಟಭವಿಗಳ ||2||
ತಾನು ತನುವಲ್ಲೆಂಬ ಸಮ್ಯ |
ಜ್ಞಾನ ರೂಪ ಪ್ರಾಣಲಿಂಗ |
ಧ್ಯಾನವಿಲ್ಲದೆ | ಪೂಜ್ಯರೆಂಬುವ |
ಮಾನವಾಧಮರಾದ ಭವಿಗಳ ||33||
ಭಾವನೆಯೊಳುಂಟಾದ ಜಗವನು |
ಭಾವದೊಳು ಲಯಪಡಿಸಿ ಬೆಳಗುವ
ಭಾವಲಿಂಗದೊಳೈಕ್ಯವಾಗದೆ
ಭಾವಯೊಳು ಮುಳುಗಿರುವ ಭವಿಗಳ ||ತೂರಿ||
ಎಷ್ಟು ಕರ್ಮಗಳನ್ನು ಮಾಡಿದರೆಷ್ಟು ನಿಯಮದಿ ಬಾಡಿದರು ತನು |
ಬಿಟ್ಟರೆ ತಾವ್ ಪ್ರೇರಿತರಾಗುವ |
ನಷ್ಟ ಸೂತಕ ದುಷ್ಟಭವಿಗಳ ||4||
ಹುಟ್ಟು ಸೂತಕದಿಂದ ದೇಹದ |
ನಷ್ಟ ಸೂತಕದಿಂದ ಮಧ್ಯದ ಮುಟ್ಟು ಸೂತಕದಿಂದ ಕೆಟ್ಟು |
ನಿಕೃಷ್ಟರಾಗಿಹ ದುಷ್ಟಭವಿಗಳ ||ತೂರಿ||
ವೇದಗಳನೋದಿದರು |
ಘಂಟಾನಾದಗಳ ಮಾಡಿದರು ಪುಣ್ಯವಸಾಧಿಸಿದರಂ ತುದಿಗೆ |
ನರಕದ ಹಾದಿಗಿಳಿಯುವ ಕರ್ಮಭವಿಗಳ ||5||
ಸಂಕಟದ ಮೂಲವನು ಮುರಿಯುವ ಶಂಕರಾರ್ಯನ ಇಟ್ಟು ಪರಿಪರಿ ಶಂಕೆಯಿಂ ಕಣ್ಕಾಣದೇ ಭವ |
ಪಂಕದಲಿ ಮುಳುಗಿರುವ ಭವಿಗಳ ||
ತೂರಿ ಬಾರೋ ಪೋಗಿತೂರಿ ಬಾರಣ್ಣ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 231

113
ನಿಮ್ಮ ದರುಶನಕೆ

ಬಾರಯ್ಯ ಗುರುದೇವನೇ ನಮ್ಮ ಯ |
ಮನೆಗೇ ಬಾರಯ್ಯ ||ಪ||
ಮನೆಯೆಂಬ ದೇಹ ತೊಳೆದು ವಸ್ತ್ರವನುಟ್ಟು
ಮನನ ಮಾಡುತ್ತ ನಿಮ್ಮ ದರುಶನಕೆ |
ಕಾದಿಹರು || ಬಾರಯ್ಯ ||
ಹಿತದೊಳಹಿತವಾಗಿ ಬಳಲುತ್ತ ನರಳುವ |
ತರಳರ ಪೊರೆಯಲು ಮುದದಿಂದ ಬಾರಯ್ಯ |
ಹಿತವಂತರೆನಿಸಿಕೊಂಬುವರು | ಬಾಂಧವರೆಲ್ಲ |
ನಟನೆ ಮಾಡುವ ದುರುಳ |
ಮನುಜರಿಂಪೊರೆಯಲು ||ಬಾರಯ್ಯ||
ಪರವೆಂಬ ಪದಬಿಟ್ಟು ಆತ್ಮ | ನೆಂಬುದ ತೊಟ್ಟು |
ಸಹಜಾದಿಂಜವಾಗಿ ತುಂಬಿಕೊಂಡಿರುವಂಥ |
ಪರಮಾತ್ಮವನು ತೋರಿ |
ಪರಮಾನಂದದಿ ಕೂಡಿ ಬಯಲು ತೋರಿದ
ನಮ್ಮ ಗುರುಲಿಂಗದೇವನೇ ||ಬಾರಯ್ಯ||

114
ಮರೆಯಬೇಡ |

ಮರೆಯಬೇಡ | ಚರಣ ಕಮಲವಾ ||ಪ||
ಮರವೆಯಿಂದ ಮಾಡಿದ ಪಾಪವ |
ಮರೆಯ ಮಾಡಿದ ಗುರುವನು ||ಮರೆಯ||
ಬರಿದೆ ವಾದ ಮಾಡಬೇಡ |
ಬದಲು ಭಜನೆ ಬಿಡಲು ಬೇಡ |
ಬಯಸಿ ನುತಿಯ ಗತಿಗೆ ಮುಂದೆ |
ಬಸುರಿನಲ್ಲಿ ಬೀಳಬೇಡ |
ಮನದ ಮಲಿನವೆಲ್ಲ ಹೋಗಿ |
ಮನವು ಮೂಲದಲ್ಲಿ ಸಾಗಿ ತನುವ ತ್ಯಜಿಸಿ ತನ್ನ ಪ್ರಭೆಯ |
ನೋಡುವಂಥ ಮಾಡಿದ ಗುರುವಾ ||ಮರೆಯ||
ಶಾಸ್ತ್ರ ಧರ್ಮಂಗಳನ್ನು ತಿಳಿದು |
232 / ತತ್ವಪದ ಸಂಪುಟ-1

ಸಾಧು ಸಂತರಲ್ಲಿ ಸವಿದು |
ವೇದಸಾರವನ್ನೆಲ್ಲ ಪೊರೆವ |
ತಂದೆ ಗುರುಲಿಂಗೇಶ ಗುರುವಾ ||ಮರೆಯ||

115
ಶ್ರೀಕರವಾಗಿ ಬೆಳಗುವನು

ಶ್ರೀ ಗುರು ಚರಣದಿ |
ನಿಂದಿಹ ಮನುಜನು |
ಶ್ರೀಕರವಾಗಿ ಬೆಳಗುವನು |
ಶ್ರೀಪತಿ ವಿಧಿಹರ |
ಯತಿ ಮುನಿಬಂಧರೆಲ್ಲ |
ಮಂಗಳವಾಗಲೆಂದರಸುವರು ||ಶ್ರೀ||
ಉದಯದೊಳೆದ್ದು |
ಸ್ನಾನವ ಮಾಡಿ ನೊಸಲಲಿ |
ವಿಭೂತಿಯ ಧರಿಸೀ ||
ಗುರುಚರಣಕೆ ತನು ||
ಮನ ಧನವನೊಪ್ಪಿಸಿ ಕೃಪೆ ತೋರೆಂದು ಬೇಡುವರು ||
ಅನುದಿನ ಕಾರ್ಯಕಲಾಪಗಳೆಲ್ಲವ ನಗುತಲೇ ||
ಮಾಡಿ ಮುಗಿಸುವರು ||
ಅಂದಿನ ಅಭ್ಯಾಗತರನು |
ಮುದದಿಂ ಮನ್ನಿಸಿ |
ಮಮತೆಯ ತೋರುವರು ||
ಕರ್ಮವ ಮಾಡುತ |
ಮರ್ಮವ ತಿಳಿಯುತ |
ಚರ್ಮದ ಋಣವನು ಮುಗಿಸುವರು |
ಸೂತ್ರದ ಮರ್ಮವನರಿತಿಹ ಧೀರರು |
ಗಾತ್ರಕಮನವನುವಪ್ಪಿಸರು ||
ಮನದಲಿ ಮೂಡಿದ |
ಚಿನ್ಮಯನರಿಯಲು |
ಗುರುಶಂಕರ |
ನನುಬೇಡುವರು |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 233

ಶಂಕರ ಗುರುವಿನ ಕಿಂಕರ |
ಗುರು ಗುರುಲಿಂಗೇಶನ ಚರಣವ ನಂಬಿಹನು ||
ಶ್ರೀ ಗುರುಚರಣದಿ ||

116
ಪರಂಜ್ಯೋತಿ ಬೆಳಗುತಿದೆ

ಜ್ಯೋತಿ ಬೆಳಗುತಿದೆ |
ನಿತ್ಯಾನಂದ ಮಂಗಳ ಜ್ಯೋತಿ ಬೆಳಗುತಿದೆ ||ಪ||
ಭೂತಾದಿ ತೈಜಸ |
ವೈಕಾರಿಕದೊಳು |
ಸಂಜಾತವಾಗಿಹ ಪಿಂಡ ಬ್ರಹ್ಮಾಂಡವನು ಮೀರಿ ||ಜ್ಯೋತಿ||
ಧರಣಿ ಚಂದ್ರನಲತಾರೆ ಮಿಂಚುಗಳೆಂಬ |
ಪರಿಪರಿ ಬೆಳಕಿನ ಬಳಗವನೊಳಗೊಂಡು ||ಜ್ಯೋತಿ||
ರಂಗುಗೆಡದೆ ಮಲಸಂಗವಿಲ್ಲದೆ |
ವಿವಿಧಾಂಗದೊಳಾಡುವ ಮಂಗಳಾತ್ಮಕಪೂರ್ಣ ||ಜ್ಯೋತಿ||
ಅಂಕೆಗೆ ನಿಲುಕದ ಸಂಕರವೆನಿಸಿದ |
ಶಂಕರಗುರುವೆಂಬಾತಂಕವಿಲ್ಲದ ಪರಂಜ್ಯೋತಿ ಬೆಳಗುತಿದೆ ||ಜ್ಯೋತಿ||

117
ಮಾನವ ಜನ್ಮಕೆ ಬಂದೀರಿ

ಜ್ಞಾನಪೂರ್ಣ ಜಗನ್ಜ್ಯೋತಿಗೆ
ನಿರ್ಮಲವಾದ ಮನವೇ ಕರ್ಪೂರದಾರತಿ ||
ಅನುದಿನ ನೀವೆಲ್ಲ ಗುರುವಿನೊಳೊಡಗೂಡಿ
ಅನುಭವದ ಲಿಂಗಕ್ಕೆ ಮನಮುಟ್ಟಿ ಬೆಳಗಿರಿ ||ಜ್ಞಾನ||
ಅಷ್ಟವರ್ಣದ ಶೂಲ ಮಾನವ ಜನ್ಮ
ಹುಟ್ಟಿ ಬರುವುದೇ ದುರ್ಲಭ ಕೊಟ್ಟನು,
ಶಿವ ನಮಗೆ ಹುಟ್ಟಿದ ಫಲದಿಂದ
ಹುಟ್ಟಿದ ಗುರುಲಿಂಗನೆಸರಿಟ್ಟು ಬೆಳಗಿರಿ ||1||
ನಾನುಯೆಂಬುದೆ ಬೀಡಿರೊ ನರಕವೇ ಪ್ರಾಪ್ತಿ ಜ್ಞಾನಿಗಳೊಡಗೂಡಿರೋ
ಸ್ವಾನುಭಾವದಶುಕ ತಾನೇ ಕೈಸೇರುವುದು
ಹಿಂದುಳಿದ ಗುರುವಿನ ಜ್ಞಾನವೇ ಗತಿಯೆಂದು ||
ನಾನಾ ಜನ್ಮದ ಕತ್ತಲೆ ಕಳಿದುಳಿದು ನೀವು

234 / ತತ್ವಪದ ಸಂಪುಟ-1

ಮಾನವ ಜನ್ಮಕೆ ಬಂದೀರಿ ಸ್ವಾನುಭಾವದ ಶುಕ ತಾನೇ ಕೈ ಸೇರುವುದು ಜ್ಞಾನವೇ
ಗತಿಯೆಂದು ||
ಮನ ಮುಟ್ಟಿ ಬೆಳಗಿರಿ ||ಜ್ಞಾನ||

118
ಒಡೆಯ ವೆಂಕಟನನಿಗೆ

ಮಂಗಳಾರತಿ ಗುರುಲಿಂಗದೇವರಿಗೆ ಜಂಗಮರರ್ಚಿತ ಪಾದವ ಗಳಿಸುತ ರಂಗಲಿಂಗನಿಗೆ ||1||
ಸುತಗಣಿ ಮಣಿಸುತಗೆ |
ಜಯರುಕ್ಮಿಣಿ ಜಯಪತಿಗೆ ನಾರಿಯರೊಲವಿಗೆ ನಮಿಸುವ ಲಕ್ಷ್ಮಿಗೆ ನಾರಾಯಣ ಹರಿಯೇ||
ದಾಸ ದಾಸರಿಗೆ ಶೇಷಾದ್ರಿ ವಾಸನಿಗೆ ನಮ್ಮ ದಾಸರೈವರು ತರವು ತುಳಸಿ ರಾಮದಾಸರಿಗೆ ||ಮಂಗಳ||
ಪೊಡವಿ ಪಾಲಕನೇ ಬಲು ಕಡಲ ಶಯನನಿಗೆ ಹಡೆದ ಮಕ್ಕಳ ಎಲ್ಲಾ ಸಲಹುವು ಒಡೆಯ ವೆಂಕಟನನಿಗೆ ||ಮಂಗಳ||
ಗೋವುಗಳ ಕಾಯುವವರಿಗೆ ಗೋವರ್ಧನಗಿರಿಧರಗೆ ಮಾವ ಕಂಸನ ಮರ್ದನ
ಮಾಡಿದ ಮಾರಜನಕನಿಗೆ ||ಮಂಗಳ||

119
ನಿತ್ಯ ಜಂಗಮಕ್ಕಿದವಗೆ

ಮಂಗಳಾರತಿಯೆತ್ತಿ ಅಂಗನೆಯರೆಲ್ಲ |
ಸಂಗಯ್ಯ ಬಸವಣ್ಣನಿಗೆ ಚಿಣ್ಣನಿಗೆ ಮಂಗಳಾರತಿ ||ಪ||
ಗಂಗೆಯ ಧರಿಸಿದ ಲಿಂಗಾವತಾರೇ |
ಸಂಗೈಯ್ಯದೊಳಗಾಡುವಗೆ ಪಾಡುವಗೆ ಮಂಗಳಾರತಿ ||
ಲಕ್ಷದ ಮೇಲೆ ತೊಂಬತ್ತೈದು ಸಾವಿರ |
ನಿತ್ಯ ಜಂಗಮಕ್ಕಿದವಗೆ ಪಾಡುವಗೆ ||ಮಂಗಳಾ||
ಯಡೆಯೂರುಪುರದೊಳು ನೆಲೆಸಿದ್ದ ದೇವಗೆ ಗುರುಸಿದ್ಧದೊಳದಾಡುವಗೆ |
ಪಾಡುವಗೆ ||ಮಂಗಳ||
ಕರಿಯಾಲಕ್ಕೋಸ್ಕರ ಬಿಳಿಯಾಲೆ ಚಿನ್ನಯ್ಯ ||
ಬರೆದು ತಂದು ವಪ್ಪಿಸಿದವಗೇ ಮಹದೇವಗೇ ||ಮಂಗಳಾ||
ಹಾಲು ಮಾರಲು ಹೋಗಿ ಕಾಲು ಜಾರಲು ಬೀಳೈ
ಆ ಬಾಲೆಯ ಕೊಡವ ಹಿಡಿದವಗೆ ಎತ್ತಿದವಗೆ ||ಮಂಗಳಾ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 235

120
ಕರವೆತ್ತಿ ಬೆಳಗುವೆನು

ಕರವೆತ್ತಿ ಬೆಳಗುವೆನು |
ಕರ್ಪೂರ ಜ್ಯೋತಿ ||
ಕರವೆತ್ತಿ ಬೆಳಗುವೆನು ||ಪ||
ಧರಣಿ ಪಾವನಕಾಗಿ ಅವತಾರವನು ಗೈದ |
ಕರುಣಾಸಾಗರನಾಗ ಶ್ರೀಗುರುಮೂರ್ತಿಗೆ ಕರವೆತ್ತಿ ||ಅ.ಪ.||
ವರನಾದ ಖಗಹಂಸವಾಹನವನ್ನೇರಿ |
ಕರದಿ ತ್ರಿಶೂಲ ಕಮಂಡಲ ವರಚಕ್ರ |
ನಿರುತಲುಮೆಯು ರಮೆಯು ಭಾರತಿ ಹೊಂದಿಹ |
ಪ್ರಣವಾತ್ಮಕ ಗುರುಪಾಹಿಮಾಂ ಎಂದು ||ಕರವೆತ್ತಿ||
ಮೆರೆವಾರು ಮತವಳಿದ ದ್ವೈತ ಸ್ಥಾಪಿಸಿ |
ಭರದಿ ಮಂಡನಮಿಶ್ರಗಾಶ್ರಮ ಪಾಲಿಸಿ |
ನೆರೆ ಜಗದ್ಗುರುವಾದ ಪರಶಿವರೂಪವ |
ವರಶಂಕರಾಚಾರ್ಯಯತಿ ಪಾಹಿಮಾಂ ಎಂದು ||ಕರವೆತ್ತಿ||
ಗುರುಮಹಲಿಂಗ ರಂಗನೆ ಮೂರು ರೂಪಾಗಿ
ಇರುವನೆಂಬುವ ಮರ್ಮ ಸೂಚಿಸನೆಂಬಂತೆ|
ಶಿರಮೂರರಿಂದಲಿ ಅವತಾರವನು ಗೈದ
ಪರಮ ದತ್ತಾತ್ರೇಯ ಗುರುಪಾಹಿಮಾಂ ಎಂದು ||ಕರವೆತ್ತಿ||
ಮಂಗಳವಾಗಿ ಇದೆ | ಜಯ ಜಯ |

121
ಮಂಗಳವಾಗಿ ಇದೆ

ಮಂಗಳವಾಗಿ ಇದೆ ಜಯ ಜಯ | ಮಂಗಳವಾಗಿ ಇದೆ ||ಪ||
ಕಂಗಳ ಕೊನೆಯಲಿ ಥಳಥಳ ಹೊಳೆಯುವ |
ತಿಂಗಳ ಬೆಳಕಿನ ತಿಳಿರಸ ವುಕ್ಕುತ ಮಂಗಳವಾಗಿದೆ ||ಅ.ಪ.||
ಆರು ಚಕ್ರವ ಮೀರಿ ಸೂಕ್ಷ್ಮ ದ್ವಾರದೊಳಗೆ ಸೇರಿ |
ಏರಿ ಸಾಸಿರದಳ ಪದ್ಮಸಿಂಹಾಸನ |
ಭೂರಿ ಬ್ರಹ್ಮಾನಂದ ಪದವಿಯ ಸೇರಲು ||ಮಂಗಳ||
ವಿರಕ್ತಿಯೆಂಬುವ ಬತ್ತಿ |
ಭಕ್ತಿಯು ಎರಕವಾಗಿಹತ್ತೈಲ |
ಎರಡು ವೊಂದಾಗಿರಲರುವೆಂಬ ಜ್ಯೋತಿಯು |

236 / ತತ್ವಪದ ಸಂಪುಟ-1

ಉರಿಯಲು ತಾಮಸ ಕತ್ತಲೆಯಳದು |
ರವಿ ಶಶಿ ತಾರೆಗಳ ಬೆಳಗುವವು ವಿಮಲ ಚಿತ್ಕಳೆಯ |
ಕವಿದೊಳಗೊರಗೆಂದೆಂಬುದ ತೋರದ |
ಅವಿರಳ ಗುರುಮಹಲಿಂಗನ ತೇಜವೇ ||ಮಂಗಳವಾಗಿದೆ||

122
ಕಂಬದ ಜ್ಯೋತಿಗೆ

ಆರತಿ ಬೆಳಗಿದೆವೋ ನಾವೊಂದಾರತಿ ಬೆಳಗಿದೆವೋ
ಆರಾರಾದೈವರು ಸೇರೋಂದಾರತಿ ಬೆಳಗಿದೆವೊ ||ಪ||
ಡಂಬಕ ಪುರದೊಳಗೆ ಹೊಳೆಯುವ ಅಂಬಾರ ಗುಡಿಸಿಕರಾ ||
ಕಂಬದ ಜ್ಯೋತಿಗೆ ತುಂಬಿತೊಂದರಗಿಣಿ ||ಅ.ಪ.||
ಮೇಲ್ಗಿರಿಕೊಳದೊಳಗೇ ಹೊಳೆಯುವ ಕೀಲ್ಗಳ
ಗುರುವರಗೇ ಪಾದ ಕಮಲಕೆ ಸೋಹಂ ಪಾಡುತ ||ಅ.ಪ.||
ಆರು ಸ್ಥಳದೊಳಿರುವಾ ಆರು ಲಿಂಗಾವಮೀರಿರುವಾ
ಕಾರಣ ಗುರುಲಿಂಗೇಶನ ಪಾದಕೊಂದಾರತಿ ಬೆಳಗಿದೆವೋ ||
ಆರನೇ ನೆಲೆಯೊಳಗೇ |
ಕ್ರಿಯಾಚಾರದಿ ಹೊಳೆಯುವಾತ್ಮನ
ಗುರುಲಿಂಗೇಶನ ಪಾದಕೊಂದಾರತಿ ಬೆಳಗಿದೆವೋ ||ಅ.ಪ.||

123
ಗುರುವೇ ಮಂಗಳ

ಓಂ ಮಂಗಳಂ |
ಓಂಕಾರ ಮಂಗಳಂ |
ಓಂ ನಮಃ ಶಿವಾಯ ಮಂಗಳಂ ಶಿವಾಯ ಮಂಗಳಂ
ನಾಮಂಗಳು ನಕಾರಮಂಗಳ ನಾದ ಬಿಂದು ಕಳಾತೀತ
ಗುರುವೇ ಮಂಗಳು ಗುರುಲಿಂಗೇಶ ಮಂಗಳ
ಮಂಗಳ ಮಹಾಮಂಗಳು ಮಹದೇವ ತಾನೆಯೆಂದ ಗುರುವೇ ಮಂಗಳ
ಗುರುಲಿಂಗೇಶ ಮಂಗಳ
ಶ್ರೀ ಮಂಗಳ ಶಿಕಾರ ಮಂಗಳು ಸಿದ್ಧ ಬುದ್ಧ ಸ್ವರೂಪರಾದ ಗುರುವೇ ಮಂಗಳು ಗುರುಲಿಂಗೇಶ ಮಂಗಳು
ವಾಮಂಗಳು ವಕಾರ ಮಂಗಳು ವಾದ ಭೇದ ದೂರನಾದ ಗುರುವೇ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 237

ಮಂಗಳು, ಗುರುಲಿಂಗೇಶ ಮಂಗಳು
ಯಾಯಾಕಾರ ಮಂಗಳು ಯಲ್ಲಾ ವಸ್ತು ತಾನಾಗಿರುವ ಗುರುವೇ
ಮಂಗಳು ಗುರುಲಿಂಗೇಶ ಮಂಗಳು ||

124
ನಾನಾ ದಾರಿ ತಪ್ಪಿದನಲ್ಲೋ

ಶರಣು ಶ್ರೀ ಗುರುಲಿಂಗು ಶರಣು ಸಜ್ಜನರ ಸಂಗ|
ಶರಣು ಜಂಗಮ ಲಿಂಗ ಲಿಂಗಯ್ಯ ಶರಣು ||
ಘೋರ ಸಂಸಾರವೆಂಬೋ |
ಅರಣ್ಯದೊಳು ನಾನಾ ದಾರಿ ತಪ್ಪಿದನಲ್ಲೋ ಧೀರಲಿಂಗಯ್ಯ ||
ಮಾಯಾಪಾಶಕೆ ಶಿಲುಕಿ ನಾಯಿಯಿಂದರಿಯಿದೇ ತಿಳಿಸುಳಿದು ನ್ಯಾಯವ ಬಿಟ್ಟು
ಕೆಟ್ಟೆನಲ್ಲೋ ಜ್ಞಾನಲಿಂಗಯ್ಯ ಶರಣು ಬೆಟ್ಟಕ್ಕೆ ಬಾಣವ ಇಟ್ಟರೆ ತಪ್ಪದೆ ಕೆಟ್ಟವರುಂಟೇ
ನಂಬಿ ಶ್ರೇಷ್ಠ ಲಿಂಗಯ್ಯ ಶರಣು ||
ಮಲಹಾರ ಯೋನಿಯೊಳು ಮುನಿದರೆ ಲೋಕದೊಳು ಶಲೆಯುಂಟೆ ನಿಲುಕುವುದಕ್ಕೆ
ಒಲವು ಲಿಂಗಯ್ಯ ಶರಣು ಸತ್ಯ ಶರಣರ ಮನೆಯ
ಬಚ್ಚೊಲೊಳ್ ನನ್ನನ್ನು ತೂತನ್ನ ಮಾಡಿಸೋ ಸತ್ಯಲಿಂಗಯ್ಯ ಶರಣು ||
ಲೋಕದವರು ನಮ್ಮ ಬೇಕೆಂದು ಬೇಡಿದರೆ ಏಕೆ ಸುಮ್ಮ ನಿರುವೆ ಜ್ಯೋತಿಲಿಂಗಯ್ಯ ಶರಣು ||
ವೇದಾಂತ ಮಾರ್ಗವ ಹಾದಿಯನರಿಯದೆ ಮರುಳಾಗಿ ಕೆಟ್ಟೆನಲ್ಲಾ ಮುದ್ದುಲಿಂಗಯ್ಯ
ಶರಣು ||

125
ಪಾಲಿಸೆನ್ನ ಕರುಣದಿಂದ

ಪಾಲಿಸೆನ್ನ ಕರುಣದಿಂದ ತ್ರಿಪುರಸುಂದರಿ |
ನಿನ್ನ ಬಾಲನೆಂದು ಯನ್ನ ಕೈಯಬಿಡದೆ ಶಂಕರಿ ||ಪಾಲಿಸು||
ಹರನಶಕ್ತಿ ಹರಿಯಶಕ್ತಿ ಅಜನಶಕ್ತಿಯೇ ವ್ಯೋಮ |
ಧರಣಿಶಕ್ತಿ ಸಲಿಲಶಕ್ತಿ ಜ್ವಲನಶಕ್ತಿಯೆ ||
ಕರಣಶಕ್ತಿ ಪ್ರಾಣಶಕ್ತಿ ಬೀಜಶಕ್ತಿಯೂ |
ಎನಿಸಿ ಧರೆಯ ಜೀವಿಗಳನು ಪೊರೆವ ಲೋಕಜನನಿಯೇ ||ಪಾಲಿಸು||
ಆದಿಶಕ್ತಿ, ಭೋಗಶಕ್ತಿ, ಭಾಗ್ಯಶಕ್ತಿಯೆ |
ತರ್ಕ |
ವಾದಶಕ್ತಿ ಕ್ರೋಧಶಕ್ತಿ ಶಾಂತಿಶಕ್ತಿಯೇ |

238 / ತತ್ವಪದ ಸಂಪುಟ-1

ವೇದಶಕ್ತಿ ತಂತ್ರ ಶಕ್ತಿಯೂ |
ಎನಿಸಿ | ಮೋದದಿಂದಲೆಮ್ಮ ಪೊರೆವ ಲೋಕಜನನಿಯೇ | ಪಾಲಿಸು ||
ಧ್ಯಾನಶಕ್ತಿ | ಧಾತೃಶಕ್ತಿ ಧೈರ್ಯಶಕ್ತಿಯೆ |
ಶ್ರವಣಶಕ್ತಿ ಘ್ರಾಣಶಕ್ತಿ ಸ್ಪರ್ಶಶಕ್ತಿ ಈಶಶಕ್ತಿಯೆ ||
ಜ್ಞಾನಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿಯೂ |
ಎನಿಸಿ ಸಾನುರಾಗದಿಂದ ಪೊರೆವ ಸರ್ವಲೋಕ ಜನನಿಯೆ ||ಪಾಲಿಸು||
ಮನಃಶಕ್ತಿ, ಶ್ರವಣಶಕ್ತಿ ಬೋಧಶಕ್ತಿಯೆ ದೇವಿ |
ಗಣಧಶಕ್ತಿ ಮಹಿಮೆ ಶಕ್ತಿ ಯೋಗಶಕ್ತಿಯೆ ||
ಪ್ರಣವಶಕ್ತಿ ಬಿಂದುಶಕ್ತಿ ನಾದಶಕ್ತಿಯೂ | ಎನಿಸಿ |
ಜನಗಳೀಪ್ಸಿತಾರ್ಥವೀವ ಲೋಕಜನನಿಯೆ || ಪಾಲಿಸು ||
ಸರ್ವಕರ್ತೃ ಸರ್ವಬೋಕ್ಷ ಸರ್ವನಿಯಮಳೂ |
ಎನಿಸಿ ಸರ್ವಕಾಲದಲ್ಲಿ ಚಂದ್ರ ಚಂದ್ರಿಕೆ ಚಂದದಿಂ |
ಸರ್ವಶ್ರೀ ಗುರುರಂಗಲಿಂಗನನ್ನು ಅಗಲದೆ |ಇರುತ|
ಸರ್ವಭಕ್ತರನ್ನು ಪೊರೆದು ಲೋಕ ಜನನಿಯೆ ||
ಪಾಲಿಸೆನ್ನ ಕರುಣದಿಂದ ||

126
ಅಳಿವುದಲ್ಲ ಜಗವು ತಾನೆ

ತಿಳಿಯಬಾರದೆ |
ಹೀಗೆ |
ತಿಳಿಯಬಾರದೆ ||ಪ||
ಅಳಿವುದಲ್ಲ ಜಗವು ತಾನೆ |
ಉಳುಮೆಯಾದ ಬ್ರಹ್ಮವೆಂದು |
ತಿಳಿಯಬಾರದೆ ||ಅ||
ನೂರು ವರುಷದೊಳಗೆ ಮಡಿದು ||
ಬಾರಿ ಬಾರಿ ಭವಕ್ಕೆ ಬರುವ |
ತೋರದೇಹಮಯಕೆ ದೊರಸಾಕ್ಷಿ ಬ್ರಹ್ಮವೆಂದು ||ತಿಳಿ||
ನೂರುಜನ್ಮ ಸುಕೃತಫಲದಿ |
ಚಾರು ಜ್ಞಾನವುದಿಸಲಳಿವ |
ಕಾರಣಾಂಗ ಸಾಕ್ಷಿಯಾದ |
ಪೂರ್ಣ ಬ್ರಹ್ಮತಾನೆ ಎಂದು ||ತಿಳಿ||
ಮೂರು ತನುವು ಮೂರು ಶಕ್ತಿ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 239

ಮೂರವಸ್ಥೆ ಮೂರು ಜೀವ |
ಮೂರು ಗುಣಗಳಂಟದಿರುವ |
ಸಾರಚಿನ್ಮಯ ಬ್ರಹ್ಮವೆಂದು ||ತಿಳಿ||
ಕರುಣ ಶ್ರೀ ಗುರುಲಿಂಗೇಶನ |
ವರದ ತತ್ವಸಾರ ತಿಳಿಯೆ |
ನಿರಘ ನಿತ್ಯ ಮುಕ್ತತಾನೆ |
ನಿರುಪಮದ್ವಯೆ ಬ್ರಹ್ಮವೆಂದು ||ತಿಳಿ||

127
ಲಾಂಛನವರಿದೊಡೆ

ಪಂಚಾಗ್ನಿಯೊಳಗೆ ತಪ್ಪಿಸುವ ವಂಚಕರಮನಕ್ಕೆ ಮನವನೀಯದೆ
ತೊಡಗಿದ ಕಂಚುಕಹವಕೋಸಂಕಳ ಪಂಚಕವನು ಕಳೆದು ನೋಡೈ ಹೊಂಚಿ ನಿನ್ನಲ್ಲಿ
ಮಿಂಚುವುದು ಪ್ರಪಂಚದ ನೋಡಲ್ಲಿ ಪಂಚ ವಿಧದ ನಿನ್ನ ಲಾಂಛನವರಿದೊಡೆ
ಸಂಚಿತವಳಿದು ಪ್ರಪಂಚವೆ ಹಾರಿ ವಿರಿಂಚಿಯೆನಿಸುವೆ ಚಿತ್ಸುಖವೆಂಬ
ಮಂಚದೊಳಿರುವ||1|
ವ್ಯರ್ಥಮಾಡದೆ ದೇಹವ ಮಿಥ್ಯಾಕರ್ಮದಲಿ ಬಳಸಿಬಳಲದೆ ಮೃತ್ತೀವರ್ತ್ಯಕೆ ಬಾರದೆ
ತೆರದಲಿ ಸತ್ಯಾರ್ಥವ ತಿಳಿದು ನೋಡು ತತ್ವಜರಲ್ಲಿ ಗೊತ್ತಿಹುದು ನಿತ್ಯತ್ವ ನಿನ್ನಲ್ಲಿ ಸತ್ತು
ಚಿತ್ತಾನಂದ ನಿತ್ಯಾಖಂಡವು ಎಂಬ ತತ್ವ ನೀನಾಗಿ ಸರ್ವೋತ್ತಮನೆನಿಸಿ ನಿಶ್ಚಿತ್ತನಾಗಿರುವೆ ಪೇಳಿಹುದಿಯ ತತ್ವಮಸಿಯೊಳಗೆ ||2||
ಪರಿಪರಿಲೋಕವ ಸುತ್ತಿದೆ ಪರಿಪರಿಲೋಕದಲ್ಲಿ ಮುಳುಗಿ ಬಳಲಿದೆ ಒಂದೇ
ಪರಿಪರಿಯಾಗುವ ಚಿತ್ತಕೆ ಚರಶಕ್ತಿಯ ಕೊಟ್ಟೆ ನಿಜವ |
ನರಿಯದೆ ಪೋದೆ |
ಪರಿಪರಿ ಯೋನಿಶರೆಗೊಳಗಾದೆ |
ಬೆರೆಯದೆ ನೀ ಮುಂದಾದರೂ ಪುಸಿಯೊಳು ನಿಜವರಿತು ನಿಶ್ಚಲದಿ ನಿಂದಿರು ನಿತ್ಯಾನಂದ
ಶ್ರೀ ಶರಧಿ ಮಧ್ಯದೊಳು ದೊರೆಯುವದಿದು ಗುರುಶಂಕರನೊಳು ||3||

128
ನೂರಾರು ಪೇಟೆಯ ಪೇಟೆ

ಎಲೆ ಸಖಿ ಮಣಿ ಮಾತ ನೀನು ಮೇಲಕ್ಕೆ ಹೇಳುವೆ ಕುಳಿತು ||1||
ಹೇಳು ಗುರುವಿನ ಕಾತುರ ನಾಳೆಯೆಂಬುದು ಬರಿ ಮಾತು ||
ಒಂಬತ್ತು ಬಾಗಿಲು ಮನೆಯು ಅಲ್ಲಿ ತುಂಬಿರುವುದು ಹಂಸದ ಘನವು ಮಾಯಾಶಕ್ತಿಯ

240 / ತತ್ವಪದ ಸಂಪುಟ-1

ಜ್ವಾಲೆ ಅಲ್ಲಿ ತಾಳವೆ ಹಾಕಿನೂಕಿ ||2||
ನೂರಾರು ಪೇಟೆಯ ಪೇಟೆ ಆ ಪೇಟೆಗಳಿಗೊಂದು ಕೋಟೆ ಕೋಟೆಯೊಳಗೊಂದು
ಕೋಟೆ ಅಲ್ಲಿ ತಾಲ ಮದ್ದಳೆ ಗಲಾಟೆಯು ||ಎಲೆ ಸಖಿ||
ಏಳು ಅಂತಸ್ತಿನ ಮಾಡಿ ಅಲ್ಲಿ ನಿಜ ಸಖಿ ಮಣಿಯರು ಜೋಡಿ ಅವಳಂತಿರುವಳು
ಬಾಲೆ ಮೂರು ಮುತ್ತಿನ ಸೂಳೆ ||3||
ಕರ್ಪೂರದ ಜಗುಲಿ ಅಲ್ಲಿ ಹೇಳಿದವರಿಗೆ ಗುರುವು ಗುರುವಿನೊಳಗೆ ಅರಿವು
ಅರಿವಿನೊಳಗೆ ಒಂದು ರತ್ನ ||ಎಲೆ||

129
ಯಾಕೆ ಬಂದಿಹನೆಂಬುವುದು

ಮರವೆಯೊಳ್ ಕೆಡಬ್ಯಾಡಿರೋ ಗುರುಲಿಂಗೇಶನ ಸ್ಮರಿಸಿ ಅರುವಿನೊಳ್ ನೋಡಿರೋ
ಮರೆವೆಯ ಮುರಿದಿಟ್ಟು ನಾಲ್ಕು ಬರಣವ ತೊಟ್ಟು ಸ್ಮರಣೆಯ ಮಾಡಲು ಮರವೆಯು
ಅರಿಸುವ ||ಮರೆ||
ಯಾಕೆ ಬಂದಿಹನೆಂಬುವುದು ನಿಮ್ಮೊಳಗಿರುವ ಆತ್ಮಲಿಂಗವ ಕೇಳಿರೊ ಆತ್ಮದೊಳಿರುವಂತ
ಅರಿಷಡ್ವರ್ಗಗಳ ಪರೀಕ್ಷಿಸಲು ಬಂದಿರುವ ಪರಮಾತ್ಮನು ಈತನು ||2||
ಪರಮ ಈತನು ಕಾಣಿರೋ ಪಂಚಾಕ್ಷಾರಿ ಮುಂದೆ ಗೈದವ ಕಾಣಿರೋ
ಪಂಚಭೂತಗಳನ್ನು ಮುಂಚೆ ನಿರ್ಮಿತಮಾಡಿ ವಂಚಿಸಲು ಪರರೆಂಬ ಪರಮಾತ್ಮ
ಈತನು ||3||
ಶಿವನು ಈತನು ಕಾಣಿರೋ |
ಕರ್ಮ ಮರ್ಮವಿಲ್ಲದೆ ಗೈಯ್ಯುವ ಕರ್ಮಪಾಶದ ಹಾದಿಲೀಲೆಯಿಂದ ಅರಿಸುವ
ಪ್ರೇಮದಿಂದ ಭಜಿಸಲು ಲೀಲೆಯಿಂದ ಅರಿಸುವ ||ಮರೆಯು||

130
ಕರುಣೆಯ ತೋರಯ್ಯ

ಗುರುರಾಯ ಸದ್ಗುರುರಾಯ ತಮ್ಮ ಚರಣದ ಕರುಣೆಯ ತೋರಯ್ಯ |
ಮರೆತು ಬಂದೆನು ನರಜನ್ಮಕೆ ಗುರಿಯಾದೆನು ಜನನ ಮರಣಕ್ಕೆ ಅರಿವಿತ್ತು ಪೊರೆಯು
ಭವತರುಸುವಕ್ಕೆ ಗುರು ಲಿಂಗೇಶ ನಿನ್ನ ಮರೆಯಾಕೆ ||ಗುರು||
ಪಿಡಿದೆವುದೆನನು ಭವಶರಧಿ ಕಡೆಗಾಲಕೆ ಚಂದುನೀದೊಂದೆ |
ಬಿಡಿಸುತ ಭವವನು ನೀದಯದಿ ಕಡೆಗಾಲಕೆ ಆಯಿತು ನಿನ್ನ ಕರುಣ ಆಶ್ರಯದಿ ||ಗುರು||
ತನ್ನನ್ನು ತಾ ತಿಳಿಯು ವಿಧವಿಧವಾ ಮನ್ನಿಸಿ ಪೊರೆಯುವನು ಗುರು ದೇವ
ಚೆನ್ನಿಗನೆನೆಸುತ ನವಗುಣವ ಸಂಪನ್ನನೆ ಪೊರೆಯು ಪಿಡೆದೆನು ನಿನ್ನ ಘನ ಪದವ ||ಗುರು||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 241

ಒಲಿದು ಸಮರಸ ಮಾಡಿದೆವು ಅವರಲ್ಲಿ ವಿಚಾರವ ಮಾಡಿದನು ||
ಸಲ್ಲಿದವರನು ಬಿಟ್ಟಿರಿಸಿದೆನು ಘನವಲ್ಲನ್ನೇ ನಿನ್ನಯ ಪಾದವ ಸೇರಿದನು ||ಗುರು||
ಯತಿಯೊಳು ರಂಭೆ ಊರ್ವಶಿಯು ಅಲ್ಲಿ ಯತಿಗಳ ಕೂಟವೇ ಕೈಲಾಸ ಪತಿಯೇ
ಗುರುಲಿಂಗೇಶನೆಲ್ಲಿ ಯತಿಗಳು ಮಾಡುವ ತವಧ್ಯಾನ ||ಗುರು||

131
ಇಂಬುಕಾಣದೆ

ಆರು ಅರಿಯರು ನಮ್ಮೂರು ಗುರುಭಕ್ತರು ಬಲ್ಲರು ನಮ್ಮೂರು ಅಂಬರದೊಳಗೆ
ನಮ್ಮೂರು ತ್ರಿಪುರಾಂತಕರಿರುವರು ನಮ್ಮೂರು ||1||
ಇಂಬುಕಾಣದೆ ನಮ್ಮೂರು ತುಂಬಿದ ಬೆಳಕು ನಮ್ಮೂರು |
ಅಕ್ಷಯದೊಳಗಿದೆ ನಮ್ಮೂರು ನಿಕ್ಷೇಪವು ಇರುವುದು ನಮ್ಮೂರು ||2||
ದಕ್ಷಿಣ ಇದು ನಮ್ಮೂರು ಪಂಚಾಕ್ಷಾರಿ ಮಹಿಮೆಯಾ ನಮ್ಮೂರು
ಪರಶಿವ ತುಂಬಿದ ನಮ್ಮೂರು ಶಿವಸಭೆಯೊಳಗಿರುವುದು ನಮ್ಮೂರು ||3||
ಕುಂಡಲಿ ತುದಿಯಲಿ ನಮ್ಮೂರು, ಆದ ಕುಂಡುವರಿಲ್ಲವು ನಮ್ಮೂರು |
ಕಂಡಿತ ಜನರಿಗೆ ನಮ್ಮೂರು |
ನರಮಂಡಲ ಸ್ಥಳವಿದು ನಮ್ಮೂರು ||4||
ಬಯಲಿಗೆ ಬಯಲೇನೇ ನಮ್ಮೂರು, ಬಯಲೊಳ್ ಬ್ರಹ್ಮವೇ ನಮ್ಮೂರು |
ಭವಹರರಿರುವರು ನಮ್ಮೂರು ಬಹು ಪವಿತ್ರರಿಹರು ನಮ್ಮೂರು ||5||
ಪರಾತ್ಪರದೊಳ್ ನಮ್ಮೂರು ಪರದೇಶಿಗಳಿರುವರು ನಮ್ಮೂರು |
ಮಾಲೂರು ಹುಚ್ಚನಲಿ ಬಹುತೇಜದಲ್ಲಿ ತೇಜದಲಿರುವುದು ನಮ್ಮೂರು ||6||

132
ಸ್ಥಿರವಿಲ್ಲದ ಮನಸು

ಶಿವಯೆಂಬ ಶಬ್ದವು ಬಾಯೊಳು ಬಂದರೆ ಬಂದಾ ಪಾಪ ದೂರಾಗುವುದು ಬಂದ
ಪಾಪ ಬಯಲಾಗುವುದು |
ಈ ದೇಹದೊಳಗೆ ಸ್ಥಿರವಿಲ್ಲದ ಮನಸು ನೆಲೆ ಇಲ್ಲದೆ ಹರಿದಾಡುವುದು ||
ತಾನುವುಣ್ಣುವಂತ ದ್ರವ್ಯವಗಳಿಸಿ ಮಣಿಗೂಳಿದರೇನಾಗುವುದು ವುಣ್ಣಲಾರದ ಕಲ್ಲು
ದೇವರಿಗೆ ಯೆಡೆಯ ಕೊಟ್ಟರೆ ವುಣ್ಣುವುದೇ ||2||
ಭೂಮಿಯ ಮೇಲೆ ಬಂದೂ ಹೋಯಿತು ಜನ್ಮ ಇದು ಯೋಚನೆ ತಾನಿರಬಹುದು|
ಬರೆದ ಪ್ರಮಾಣ ಮೀರಿದಾಕ್ಷಣ ನಿಮಿಷ ಮಾತ್ರದಲ್ಲಿ ದಾಟುವುದು ||ಶಿವ||
ಕಾಮ ಕ್ರೋಧ ಮದ ಮತ್ಸರ ತನ್ನಗ್ನಾನಕ್ಕೆ ಜಗ್ಗುವುದು |
ಆರು ಮೂರು ಅಳಿದು ನಿಂದರೆ ಶಿವಕೈಲಾಸವು ದೊರೆಯುವುದು ||1||

242 / ತತ್ವಪದ ಸಂಪುಟ-1
133
ತಿಳಿಯದೆ ಜ್ಞಾನವ

ಮುಳುಗಿ ಹೋದೆಯಲ್ಲೋ ಭವದಲಿ |
ಮುಳಗಿ ಹೋದೆಯಲ್ಲೋ ||ಪ||
ತಿಳಿಯದೆ ಜ್ಞಾನವ ಗುರುಮುಖದಲಿ |
ಹೊಲೆತನವಾ ನಂಬಿ ಮೋಹಕೆ ಸಿಲುಕಿದ ಮನವನು ತೆಗೆಯದೆ |
ನರಕದ | ಹುಳುವಿನ ಪರಿ ಸಂಸಾರದ ಕೂಪದಿ ||ಮುಳುಗಿ ||1||
ಓದಿ ತರ್ಕಶಾಸ್ತ್ರ | ತತ್ವದ | ಹಾದಿ ತಿಳಿಯದಿರಲು |
ಸಾಧಿಸಿ ಶಿವರಾಮೆನುತ ಗಂಭೀರದಿ |
ಓದಿದ ಗಿಣಿ ಮಲ ತಿಂದಂತಿಹುದು ||ಮುಳುಗಿ||
ಪಾಯಸವನು ಕುಡಲೂ |
ತಿನ್ನದೆ ನಾಯಿಕುನ್ನಿಯಂತೆ |
ರಾಯ ಶ್ರೀ ಗುರುಮಹಲಿಂಗನೆ ನಿನ್ನಯ ಕಾಯದಿ
ಇರವದ ಕಾಣದೆ ವ್ಯರ್ಥದಿ ||ಮುಳುಗಿ||

134
ಏನು ಹೇಳಲಿ ಗುರುಲಿಂಗ

ತೊರೆದು ಕೊಟ್ಟೇಯಲ್ಲಾ ಯನ್ನ |
ಈ ಭವ ರೋಗವ ತೊರೆದು ಕೊಟ್ಟೆಯಲ್ಲಾ ಭವರೋಗಿದೊಳಗಿರುವ ಭವ ಬಂದ
ಮಕ್ಕಳನ್ನು ತೊರೆದು ಕೊಟ್ಟೆಯಲ್ಲಾ ಗುರುವೇ ||1||
ಅಂಗವಾ ಕೇಳಿದ್ಯಲ್ಲಾ ಎನ್ನಯ್ಯ ಗುರುಲಿಂಗವ ಮಾಡಿದ್ಯಲ್ಲಾ |
ಸಂಗಮದೊಳಗಿಂದ ಲಿಂಗವ ಬೆರಸಿ ಲಿಂಗ ಜಂಗಮರೊಳು
ಗುರುಲಿಂಗೆಂದೆನಿಸರುವ |
ಎನ್ನಯ ಗುರು ಮೋಕ್ಷದಿಗಳನ್ನರಿಸಿದೆಯಯ್ಯಾ
ಆರು ಹೊನ್ನುಗಳನ್ನು ಎನ್ನೊಳಗಿಟ್ಟು ಮೂರು ಹೊನ್ನುಗಳಾ ಕೊಟ್ಯೆಲ್ಲಾ ಮೂರು
ಹೊನ್ನುಗಳೊಲು ಮೂರು ಮೂರ್ತಿಯ ಬೆರಸಿ ಯಾರೋ ತೋರದಂತಹ ಎನ್ನಯ್ಯ ಗುರು ||
ಬುದ್ಧಿ ಮಾತವ ತೋರಿದೆಯ ಎನ್ನಯ್ಯ ಗುರು ಆರನ್ನೆ ಗಳಿದು ಮೂರಾರೊಳೊಂದಾಗಿ|
ಆರು ಮೂರನ್ನು ಕೂಡಿ ಸುಜ್ಞಾನಿ ಎನಿಸಿರುವ |
ಎನ್ನಯ್ಯ ಗುರು ಜಡಯನ್ನೆ ಮಾಡಿಸಿಟ್ಟಲ್ಲಾ |
ಎನ್ನಯ್ಯ ಗುರು ಎಲ್ಲರ ತೊರೆದು ಬಿಟ್ಟಯ್ಯ |
ಎಲ್ಲರ ತೊರೆದು ಬಿಟ್ಟು ಮಾಯವಾ ಮಾಡಿದೆ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 243

ನ್ಯಾಯ ತೋರೊ ಎನ್ನ ಗುರುಲಿಂಗದೇವನೆ |
ಏನ ಹೇಳಲಿ ಗುರುಲಿಂಗ ನಿನ್ನಯ ಮಹಿಮೆ |
ಏನು ಹೇಳಲಿ ಗುರುಲಿಂಗ |
ಓ ಏನ ಹೇಳಲಿ ಗುರುಲಿಂಗ ನಿನ್ನಯ ಮಹಿಮೆ |
ಏನ ಹೇಳಲಿ ಗುರುಲಿಂಗ |
ಮಿಂಚು ಸುಳಿದಂತೆ ಸುಳಿದೆ ಸಜ್ಜನರೊಳು ಕಂದನೊಂದು ತೊರೆದೆ |
ಆ ಕಂದನ ಹಗಲೊಳು ಮೋಡಿಯ ನೂಕೀ |
ಅಡವಿಗೆ ಕೆಡಸಿದೆ ಎನ್ನಯ ಗುರು |
ಬಯಲೊಳು ತೊರೆದೆ |
ಮೇಲ ಕೀಳನ್ನು ಸೇರಿ ಗುರು ಪಂಚಾಕ್ಷರಿ ಮಂತ್ರ |
ಅರುವಿನೊಳ್ ಮಾಡಿಸಿಟ್ಟಿಲ್ಲಾ ಎನ್ನಯ ಗುರು |
ಓ ಅರುವಿನೊಳ್ ಮಾಡಿಸಿಟ್ಟಲ್ಲಾ ||1||

135
ಜೋರ್ತಿಲಿಂಗವ ಕಂಡು

ಗುರುಬಿಟ್ಟಿನ್ನಿರಲಾರೆನು ಸದ್ಗುರುದೇವ ನಿನ್ನ ಬಿಟ್ಟನ್ನಿರಲಾರೆನು |
ಗುರುವಿನ ಮಹಿಮೆಯ ನರರೇನು ಬಲ್ಲರು ||ಗುರು||
ಆಸೆಪಾಸೆಯ ಬಿಡಿಸಿದ ಸದ್ಗುರುದೇವ ನಾಸಿಕದ ಕೊನೆ ತೋರಿದ
ನಾಸಿಕದ ಕೊನೆಯೊಳ್ ಜೋರ್ತಿಲಿಂಗವ ಕಂಡು ||1||
ಆರು ಗುಣವ ಅಳಿ ಎಂದರು ಸದ್ಗುರುದೇವ ಮೂರು ಗುಣವ ಆರು ಮೂರು
ಕೂಡಿ ಕಳಸಕ್ಕೆ ತುಂಬಿಟ್ಟು ಶರಣರಿಗೆ ಬೆಳಗೆಂದನು ||2||
ಕಾಮ ಕ್ರೋಧದ ಬಿಡಿಸಿದ ಸದ್ಗುರುದೇವ ಮೂಲ ಮಂತ್ರವ ಹೇಳಿದ ಮೂಲ
ಮಂತ್ರವ ಹೇಳಿ ಪಾವನ ಮಾಡಿದ ||ಗುರು||
ಸಾಧುಗಳನೆನಸಿ ಎಂದನು ಸದ್ಗುರುದೇವ ಪಾದಕ್ಕೆ ಎರಗೆಂದನು ಸಾಧು ಸತ್ಪುರುಷ
ಬೋಧೆ ನಮಗಾದರೆ ಯಮನ ಬಾಧೆ ನಮಗಿಲ್ಲೆಂದನು ||3||
ಬಯಲಿಗೆ ಬಯಲೆಂದನು ಸದ್ಗುರು ದೇವ ಬಯಲೊಳಗೆ
ಅಂಡದೆಂದನು ಬಯಲು ನೀರಿನ ಕರಿ
ಗುರುಪಂಚಾಕ್ಷರಿ ಮಂತ್ರ ಅರುವಿನೊಳಗಾಡ ಎಂದನು ||ಗುರು||

244 / ತತ್ವಪದ ಸಂಪುಟ-1

136
ಸ್ಥಿರಮುಕ್ತಿ ಸುಖವಿದು

ಆನಂದವಾದ ಚಿದ್ಘನ ವಸ್ತುವನೆ ಕಂಡೆ ಬಾನವಿಲ್ಲದ ಪೆಸರೇನಮ್ಮ
ಶ್ರೀ ಗುರುಕೃಪೆಯಿಂದ ಸ್ಥಿರ ಮುಕ್ತಿ ಸುಖವಿದು
ದೊರಕಿತು ನಮಗಿಂದು ಕಾಣಮ್ಮ ||1||
ನಡುನಿರೋಳ್ ಮಧ್ಯಗಿಡವೃಕ್ಷ ಮರವಾಗಿ ಈಡುಗಾಯಿ ಹಣ್ಣು ಸುರಿದವು
ತಾವಲ್ಲದಿದ್ದರೆ ಅವರವರ ಪುಣ್ಯವು ತಾ ಮಾಡಿದ ಪುಣ್ಯತಮಗಮ್ಮ ||ಆನಂದ||
ಮಂಡಲದೊಳಗೊಂದು ನಿಲಗನ್ನಡಿಯನ್ನು ಕಂಡೆ ಮಂಡಲದೊಳಾಡುವ
ಸುಖವೇನಮ್ಮ ಶ್ರೀ ಗುರುಕರಣದಿಂದ ಸ್ಥಿರಮುಕ್ತಿ ಸುಖವಿದು ದೊರಕಿತು ನಮಗಿಂದು
ಕಾಣಮ್ಮ ||ಆನಂದ||
ಭೂಮಿ ರಕ್ಷಸವಲ್ಲ ನಾದ ಭೂಷಣವಲ್ಲ ಬಯಲೊಳಗಾಡುವ ಸೊಗಸೆನಮ್ಮ
ತಾವಲ್ಲದಿರ್ದೊಡೆ ಅವರವರ ಪುಣ್ಯವು ತಾ ಮಾಡಿದ ಪುಣ್ಯತಮಗಮ್ಮ ||ಆನಂದ||

137
ಗುರುವೇ ನೀನಲ್ಲವೆ

ಗುರುವೇ ನೀನಲ್ಲವೆ |
ಮಹಾಪ್ರಭು ನೀನಲ್ಲವೆ ||
ದಾನವಾಂತಕ ಗುರು |
ನಾನಾ ಕಾಯುವ ಪ್ರಭು ನಾನಾ ದೇವರನ್ನೆಲ್ಲ ದ್ಯಾನಿಸಿ ನೋಡು ||ನೀನಲ್ಲವೆ||
ಹಿಡಿದಂತ ಕಾರ್ಯವ ಒಡನೆ ರಕ್ಷಿಸುವಂತ ದೃಢವಂಶ ಭಗವಂತ ಎನ್ನ
ಗುರುಲಿಂಗುದೇವರೆ ||ನೀನಲ್ಲವೆ||
ಸಂಜೀವಿ ನೀನೆಂದು ಎಂದು ನಂಬಿದೆ ನಿನ್ನ ಓಂ ಮುಕ್ಕಣನ ಮೂರುತಿ ಎನ್ನ
ಗುರುಲಿಂಗುದೇವನೆ ||ನೀನಲ್ಲವೆ||
ಸತ್ಯರ ಮನದೊಳು ಶೋಭಿಸುತಿರುವಂತ |
ಈ ಭಗವಂತ ಎನ್ನ ಗುರುಲಿಂಗುದೇವರೆ ||ನೀನಲ್ಲವೆ ||

138
ನಿನ್ನ ನೀನರಿಯದೆ

ಇನ್ನೇಕೆ ಚಿಂತಿಸುವೆ ಇಹಲೋಕದ ಭೋಗವ ನಿನ್ನಾಣೆ ನೀ ಬಿಡು ಸ್ವಪ್ನಮನುಜ |
ನಿನ್ನ ನೀನರಿಯದೆ ಮಣ್ಣಿನೊಳಮನೆ ಮಾಡಿ ಇನ್ನಾದರೋ ಕೇಳು ಮನುಜ ||ಇನ್ನೇಕೆ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 245

ಸಾಯಲಿಸದ ಕರ್ಮ ಬದುಕಲಿಸದೆ ನಿನ್ನ ತಾಯಿ ತಂದೆಗಳಾರು ಮನುಜ ||1||
ತನ್ನ ಹೆಂಡತಿ ಎಂದು ಚೆನ್ನಾಗಿ ನಂಬಿರುವೇ ಮಣ್ಣಿನ ಬೊಂಬೆಯು ಮನುಜ
ತನ್ಮಯರಾಗಿರುವರೆಂದು ತಬ್ಬಿ ಮುದ್ದಾಡವೇ ಅದು ಅನುಮಾನ ವಲವೆ ಮನುಜ ||ಇನ್ನೇಕೆ||
ಅನ್ನದ ಋಣತೀರಿ ಬಣ್ಣಗಳ ಕೆಡುತಿಹವು ಮಣ್ಣಿವ ದೇಹವು ಮನುಜ ||2||
ಹಣದಾಸೆಗಾಗಿ ನೀನು ಹೆಣಮಾಡಿ ಕೊಲ್ಲುವೆ ಹಣವೆಂದಿಗಾಗುವುದು ಮನುಜ
ಗುರುವರ್ಯನ ಕೃಪೆಯಿಲ್ಲದೆ ಹಠಮಾರಿ ಎನ್ನವೇ ಪರಮ ಪದವಿಯೋಗ ಮನುಜ ||3||
ನಾನು ನೀನು ಎಂಬುವ ಭ್ರಮೆ ನಾಶವಾಗದೆ ಅಮಲ ಬ್ರಹ್ಮನಾಗು ಮನುಜ
ಬ್ರಹ್ಮದೊಳು ಈ ಜಗವೆಲ್ಲ ಭ್ರಮಿಸಿಕೊಂಡಿರುವುದು ತಮ್ಮ ತಾನಾಗು ಮನುಜ ||4||

139
ಮರೆಯಬಾರದೋ ಶಿವನಾ

ಮರೆಯಬಾರದೋ ಶಿವನಾ |
ಮರೆಯಬಾರದೋ ಶಿವನ ಮರೆತುಹೋದ ಮೇಲೆ
ಮುನ್ನ ದೊರೆಯುವುದೇ ಶಿವನ ಪಾದ ||1||
ಆಗ ಈಗ ಎಂಬುದಲ್ಲಿ |
ಹಗಲು ಇರಳು ಕಳಿಯಿತಲ್ಲ ಹೋದ ಗಳಿಗೆ
ಬಂದ ಕಾಲ ಅರಗಳಿಗೆ ನಿಂತು ಹೋಗದ ಜೀವ ||2||
ಬಿದ್ದು ಹೋಗುವ ಘಠವು ಮುಂದೆ ಹದ್ದು ಕಾಗೆ ಗೆದ್ದಲು
ತಿಂದು ನಿರ್ಧಾರವ ಮಾಡಿ ನಿನ್ನ ಬುದ್ಧಿಯಿಂದ ತಿಳಿದ ಮೇಲೆ ||3||
ಉದರ ಪೋಷಣೆಗಳನು ಬಿಟ್ಟು ಸದಮಲಾಂಗ ಬ್ರಹ್ಮನಿರುವ ಮುದದಿ ನಡತೆಗೆ
ಸೇರಿಸುವ ಮಯಗುರುಲಿಂಗೇಶನೊಳ ಬೆರೆವ ||4||
ಗಟ್ಟಿ ಮಣ್ಣಿಲಿ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ |
ಕೊಟ್ಟ ಶಿವನು ಕೊಂಡು ಪೋದರೆ ಕೆಟ್ಟನೆಂಬ ಲೋಕಜನರು ||5||
ಎತ್ತಿ ಬಂದ ಬಳಿಕ ನಮ್ಮ ವ್ಯರ್ಥವಾಗಿ ಹೋಗದಂತೆ
ನಿತ್ಯ ಕಾಲ ಶಿವನ ಪೂಜೆ ಭಕ್ತಿಯಿಂದ ಮಾಡಬೇಕು ||6||

140
ಗುರುಸ್ವಾಮಿ ತೂಗಿದರೆ

ಎನ್ನಯ ಗಂಡನ ನಾನೆಂತ ಕರೆಯಾಲಿ ಬಾರಪ್ಪ ಗಂಡಯ್ಯ ಮಲಗುವಾ ||
ಬಾರಪ್ಪ ಗಂಡಯ್ಯ ಮಲಗು ಮಂಚದ ಮೇಲೆ ಒಲ್ಲೇ ಕಾಣವ್ವ ಹುರಿಗಾಲು ||1||
ಒಲ್ಲೆ ಕಾಣವ್ವ ಹುರಿಗಾಲ ಆ ಗದ್ದುಗೆ ಮೇಲೆ ಬಲ್ಲ ಬಲ್ಲವರು ನಗುತ್ತಾರೆ

246 / ತತ್ವಪದ ಸಂಪುಟ-1

ಬಲ್ಲಬಲ್ಲವರು ನಗುತ್ತಾರೆ ಕಾಣಮ್ಮ ನೆರೆಹೊರೆಯುವರು ಬೈಯುತ್ತಾರೆ ||2||
ನೆರೆಹೊರೆಯುವರು ಬೈಯುತ್ತಾರೆ ಕಾಣಮ್ಮ ಕಿರುಮನೆಯವರ ಅಳುತ್ತಾರೆ ||3||
ಚಂಡಿದಂಡಿನಲ್ಲಿ ನಾ ಕಂಡೆ ಸೋಜಿಗವ ಗಂಡು ಗಂಡುಸುರೆಲ್ಲ ಬಸುರಾಗಿ |
ಗಂಡು ಗಂಡಸುರೆಲ್ಲ ಬಸುರಾಗಿ ತಮ್ಮ ತಮ್ಮ ಹೆಂಡಿರ ಹಾಲ ಕೊಡುತ್ತಾರೆ ||4||
ಮುಪ್ಪಿನ ಕಾಲಕ್ಕೆ ಮೂರು ವರ್ಣದ ಕೂಸು ಮುತ್ತಾವ ಅರಳು ಕೇಳಿ ಅಳುತ್ತದೆ |
ಮತ್ತಾವ ಅರಳು ಕೇಳಿ ಅಳುತ್ತದೆ ಆ ಕೂಸು ಯಾರು ತೂಗಿದರು ಮಲಗಾದು |
ಯಾರು ತೂಗಿದರು ಮಲಗಾದು ಆ ಕೂಸು ನಮ್ಮ ಗುರುಸ್ವಾಮಿ ತೂಗಿದರೆ
ಮಲಗುವುದು||5||

141
ದೊಡ್ಡ ಊರು ನಮ್ಮ ದು ಶಿವಪುರ
ಗುರುವಿನ ಭಜನೆ ಮಾಡೋಣ |
ನಾವು ಸುಜನರೆಲ್ಲರೂ ಕೂಡೋಣ ಗಜಿಬಿಜಿ ಸಂಸಾರ ದೂಡೋಣ |
ನಾವು ನಿಜವಾದ ಮುಕ್ತಿಯ ಬೇಡೋಣ ||ಪ||
ಸದ್ಗುರು ಇರಬೇಕಂಥವಾ |
ನಮ್ಮ ಗುರು ನಂಜು, ಗುರುಲಿಂಗುನಂತಾವಾ |
ವೇದಾಂತ ಸಿದ್ಧಾಂತ ಹೇಳುವವ |
ನಮ್ಮ ಮನಸಿನ ಭ್ರಾಂತಿ ಬಿಡಿಸುವಾ ||2||
ಮಾನ ಅಭಿಮಾನ ಬಿಡಬೇಕು |
ಹರಗುರುವೆ ಗತಿ ಎಂದೆನಬೇಕು ಜ್ಞಾನದಿ ನಮ್ಮ ನು ತಿಳಿಯಬೇಕು |
ಗುರುಸ್ವಾನುಭಾವದ ಸುಖ ಅರಿಯಬೇಕು ||3||
ಆರು ಮಂದಿ ನಮಗೆ ಗೆಳೆಯರಾ |ಮತ್ತೆ|
ಮೂರು ಮಂದಿ ನಮಗ ಹಿರಿಯರಾ |
ಪಾರುಮಾಡಿಗೊಡವಲ್ರೋ ಸಂಸಾರಾ |
ತಿರುಗಿ ದೂರ ಮಾಡಿ ಇದ್ದಾರಪ್ಪಾ ಶಿವಪೂರ ||4||
ದೊಡ್ಡ ಊರು ನಮ್ಮ ದು ಶಿವಪುರ |
ಇದು ದೊಡ್ಡವರು ಮಾಡಿದ ವ್ಯಾಪಾರ |
ವ್ಯಾಪಾರಕಾಗಿ ಕಳಿಸಿದಾರೊ ಇಷ್ಟು ದೂರ |
ತಿರುಗಿ ಹೋದೇವಂದ್ರ ಸಿಗವಲ್ಲದೊ ಶಿವಪುರ ||5||
ಗುರುವನ್ನೀಗ ಕರಿಸೋಣ ನಾವು ತೊಟ್ಟಿಲಲ್ಲಿ ಹಾಕಿ ತೂಗೋಣ ಗುರುನಂಜು,
ಗುರುಲಿಂಗು ಎಂತ ಕರೆಯೋಣ |
ನಾವು ಜಯಘೋಷ ಪದ ಹಾಡೋಣ ||6||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 247

142
ಶಿವಲೋಕದಿಂದ ಒಬ್ಬ ಸಾಧು

ಶಿವಲೋಕದಿಂದ ಒಬ್ಬ ಸಾಧು ಬಂದಾನವ್ವ |
ಒಬ್ಬ ಯೋಗಿ ಬಂದಾನವ್ವ |
ಶಿವನಾಮ ಶಬ್ದ ಕೇಳಿ ಅಲ್ಲೇ ನಿಂತಾನವ್ವ ಕೇಳ ಹಡೆದವ್ವ ||ಪ||
ಮೈಯೆಲ್ಲಾ ಬಸ್ಮವ ಬಳಕೊಂಡು ಬಂದನವ್ವ |
ಕೊರಳೊಳು ರುದ್ರಾಕ್ಷಿ |
ಹಾಕ್ಯಾನವ್ವ |
ಕೈಯೊಳು ತ್ರಿಶೂಲ ಹಿಡಿದು ನಿಂತಾನವ್ವಾ |
ಕೇಳ ಹಡದವ್ವ ||1||
ಊರ ಹೊರಗೆ ಒಂದು ಮಠ ಕಟ್ಟಿಸ್ಯಾನವ್ವ |
ಒಂಬತ್ತು ಬಾಗಿಲ ಹಚ್ಯಾನವ್ವ |
ಬಾಗಿಲೊಂಬತ್ತರೊಳು ತಾನೆ ನಿಂತಾನವ್ವ |
ಕೇಳ ಹಡದವ್ವ |
ಆರು ಮೂರು ಒಂಬತ್ತು ಒಬ್ಬ |
ಒರಳಿಗೆ ಹಾಕ್ಯಾನವ್ವ ಸಾಧು |
ಒರಳಿಗೆ ಹಾಕ್ಯಾನವ್ವ ಆರು ಮೂರು ಒಂಬತ್ತು ಒಬ್ಬಿ ಒರಳೆ ನುಂಗಿತವ್ವ |
ವಸುಧೆಯೊಳಗೆ ಗುರುಲಿಂಗೇಶನವ್ವ |
ಗುರುಬಸವೇಶನವ್ವ ಈಶಯೋಗಿಯ ಪಾದಕ್ಕೆ ಶರಣೆಂದೆನವ್ವ |
ಕೇಳ ಹಡೆದವ್ವ ||2||

143
ಗುರು ಬೇಕ ತಂಗಿ

ಗುರು ಬೇಕ ತಂಗಿ ಗುರು ಬೇಕ |
ನಿನ್ನ ಶಿರದೊಳು |
ಕರವಿಟ್ಟು ಗಿರಿಜಾ ದೇವಿಯ ಮಾಳ್ಪ ||ಪ||
ಶರಣರ ಪಾದಕ್ಕೆ ಶಿರಹಚ್ಚಿ ಬಾಗೆಂದು |
ಮರೆದು ಸಾವಿರತಪ್ಪು ಕರೆದು ಬೋಧಿಸುವಂತ ||ಪ||
ಪರದೇಶಿ ಮಗಳೆಂದು |
ಮರಮರುಗುತ |
ಪಿಡಿದು ಜೋಕೆಯ ಮಾಡಿ |
ಹರನಿಗರ್ಪಿಸುವಂಥ ||2||

248 / ತತ್ವಪದ ಸಂಪುಟ-1

ಹಡೆದವರ ಮರೆಸುತ |
ನಡೆನುಡಿ ಕಲಿಸುತ |
ಒಡಲವಂಚಿಸಿ ಭವಕಡಲ ದಾಟಿಸುವಂಥ ||3||
ಅಂಗನೆ ಕೇಳವ್ವ |
ಅಂಗದ ಮೇಲಿನ ಲಿಂಗದ ಪೂಜೆಯ ಗುಂಗನು ಹಿಡಿಸುವ ||4||
ಪಿಡಿದು ಪಾಶದಿ ನಿನ್ನ |
ಹೆಡಮುರಗಿಯ ಕಟ್ಟಿ |
ಕೆಡುಹುದ ಯಮನ ಹೊಡೆದು ಓಡಿಸುವಂಥ ||5||
ದಿಶೆಯೊಳು ಬೆಳಕಾಗಿ ಎಸೆಯುತ್ತಲಿಹ
ನಮ್ಮ ಹಸನಾದ ಗುರುಲಿಂಗೇಶನ ಭಜಿಸುತ ||ಗುರುಬೇಕ||

144
ಎನ್ನೊಳಗೆ ನಾ ತಿಳಕೊಂಡೆ

ಎನ್ನೊಳಗೆ ನಾ ತಿಳಕೊಂಡೆ |
ಎನಗೆ ಬೇಕಾದ ಗಂಡನ ಮಾಡಿಕೊಂಡೆ ||ಪ||
ಆಜ್ಞಾಪ್ರಕಾರ ನಡಕೊಂಡೆ ಎಲ್ಲಾರ ಹಂಗೊಂದ ಹರಕೊಂಡೆ ||1||
ಆರು ಮಕ್ಕಳ ಅಡವಿಗಟ್ಟಿದೆ |
ಮೂರು ಮಕ್ಕಳನ್ನು ಬಿಟ್ಟುಕೊಟ್ಟೆ |
ಇವನ ಮೇಲೆ ನಾ ಮನಸಿಟ್ಟೆ |
ಎನ್ನ ಬದುಕು ಬಾಳುವೆವೆಲ್ಲಾ ಬಿಟ್ಟುಕೊಟ್ಟೆ ||2||
ಒಂದನಾಡಿದರೆ ಕಡಿಮೆಂದೆ |
ಮತ್ತೆರಡನಾಡಿದರೆ ಹೆಚ್ಚೆಂದೆ ಇದು ಬೆಡಗು
ಮಾತಿಗೆ ನಿಜವುಂಟೆ |
ಇದು ಸುಜ್ಞಾನಿಗಳಿಗೆ ತಿಳಿತಂದೇ ||3||
ಶಿವ ಶಿವ ಎಂಬುವ ಹಾದಿ |
ಹಿಡಿಕೊಂಡೆ ಗುರೂಪದೇಶವ ಪಡಕೊಂಡೆ ಈ ಭವಕೆ ಬಾರದಂತೆ ಮಾಡಿಕೊಂಡೆ
ಗುರುಲಿಂಗೇಶನ ಪಾದ ಹಿಡಿಕೊಂಡೆ ||4||

145
ಮಲ್ಲಿಗೆ ಹೂವಿನ ನೆಲ್ಮೆಯದಾರತಿ

ಮಲ್ಲಿಗೆ ಹೂವಿನ ನೆಲ್ಮೆಯದಾರತಿ ಎಲ್ಲರು ಬೆಳಗಿರೆ |
ಬಲ್ಲಿದ ಗುರುವಿನ ಒಳ್ಳೆಯ ಕರುಣವನಿಲ್ಲದೆ ಪಡೆಯಿರಿ ||ಪ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 249

ಅರುಹಿನ ಕುರುಹನು |
ಗುರುತಿಸಲಾರದೆ ಮರೆತಿಹ ಮನುಜರಿಗೆ |
ಕರುಣದಿ ಕರೆಯುತ ಪೊರೆಯುತ ಪ್ರಭೆಯನು |
ಮರಣವ ಗೆಲಸಿದಗೆ ||1||
ಅವಗುಣವಿಲ್ಲದೆ ಶಿವಗುಣಬಲ್ಲಿದ |
ಭವಹರದೇವನಿಗೆ |
ನವನವ ವಿದ್ಯೆಯ ಅವನಿಯ ಜನರಿಗೆ ಕಿವಿಯೊಳು ಪೇಳ್ವವಗೆ ||2||
ವಸುಧೆಯೊಳ್ ರೋಣದ ಅಸಮಸದ್ಭಕ್ತರ |
ವಿಷಮತ ಕಳೆದವಗೆ ಪಶುಪತಿ ಪಾದವ ಹಸನಾಗಿ ಬೆಸಸಿದ ಗುರುಲಿಂಗೇಶನಿಗೆ ||
ಮಲ್ಲಿಗೆ ಹೂವಿನ ನೆಲ್ಮೆಯದಾರತಿ ಎಲ್ಲರ ಬೆಳಗಿರೆ ||

146
ಉದ್ದಾರ ಮಾಡುತ ಬರುತಲಿದೆ

ಸದ್ಗುರು ಸಾಕಿದ ಮದ್ದಾನಿ ಬರುತಿದೆ |
ಎದ್ದು ಹೋಗಿರಿ ಇದ್ದ ನಿಂದಕರೆ ||ಪ||
ಬಿದ್ದು ಈ ಭವದೊಳು ಹೊರಳಾಡೊ ಜನರನ್ನು |
ಉದ್ದಾರ ಮಾಡುತ ಬರುತಲಿದೆ ||1||
ಆಕಾಶ ನೋಡುತ ವಾಯುವ ನುಂಗುತ |
ಝೇಂಕರಿಸುತಲದು ಬರುತಲಿದೆ ||2||
ಅಷ್ಟಮದಗಳೆಂಬೋ ಕೆಟ್ಟ ನೀಚರನ್ನು ಸಿಟ್ಟಲೆ ಸೀಳುತ ಬರುತಲಿದೆ ||2||
ಪ್ರಣವ ಸ್ವರೂಪದ ಅನುದಿನ ನೋಡುತ |
ಘನ ಸುಖದಲಿ ಅದು ಬರುತಲಿದೆ ||4||
ಮನವು ಗುರುನಂಜೇಶನೊಳು |
ಮಗ್ನ ಮಾಡಿ ಚಿನ್ಮಯಾತ್ಮಕವಾಗಿ ಬರುತಲಿದೆ ||5||

147
ದಯಮಾಡು ಅಂತಃಕರಣಾ

ಗುರುದೇವ ನಿಮ್ಮ ಯ ಚರಣ |
ಸ್ಮರಣೆಯ ಮಾಡುವೆ ನಾವು |
ಪರಿಹರಿಸು ಜನನ ಮರಣ |
ದಯಮಾಡು ಅಂತಃಕರಣಾ ||1||
ನವಖಂಡ ಬ್ರಹ್ಮಾಂಡವನು ಪಿಂಡಾಂಡದೊಳಗೆ ಇಹನು |

250 / ತತ್ವಪದ ಸಂಪುಟ-1

ಅಖಂಡ ಮೂರುತಿ ನೀವು ನಿಮ್ಮ ಸೇವೆಯೊಳಿರುವೆವು ನಾವು ||
ಅರಿತು ಮರೆತು ಬೆರೆತೇವೋ |
ನೀವು ಬೆರೆತು ಬೆರೆಯಲಿಲ್ಲ ನೀವು ತ್ವರಿತಪ್ಪಿ
ಪೇಳೆವು ನಾವು ನಿಜಮಾಮೃತ ನೀಡುವೆ ನೀವು ||2||
ಪರದೇಶಿಗಳಿಗೆ ಮಠಾಧೀಶ ನಿಮ್ಮ ಸೇವೆಯಲ್ಲಿರುವೆನು ದಾಸ
ಪರಮಾಮೃತ ಬೋಧಿಸು ಈಶ ನಮಗೆ ಮೋಕ್ಷವ ಕೊಡು ಗುರುಲಿಂಗೇಶ ||

148
ಅನುಭಾವದಡಿಗೆಯ ಮಾಡಿ

ಅನುಭಾವದಡಿಗೆಯ ಮಾಡಿ ಅದಕ್ಕನುಭಾವಿಗಳು ಬಂದು ನಿವೆಲ್ಲ ಕೂಡಿ
ತನುವೆಂಬ ಭಾಂಡವ ತೊಳೆದು |
ಕಟ್ಟಿ ಮನವ ಜಂಜಡವೆಂಬ ಮುಸುರೆಯ ಕಳೆದು |
ಘನವೆಂಬ ಮನೆಯನೆ ಒಳಿದು |
ಅಲ್ಲಿ ಬಿನಗು ತ್ರಿಗುಣವೆಂಬ ವೊಲೆಗುಂಡ ತುಳಿದು |
ವಿರತಿಯೆಂಬು ಮಡಿಯುಟ್ಟು |
ಪೂರ್ಣ ಹರಭಕ್ತಿಯೆಂಬ ನೀರನೆ ಹೆಸರಿಟ್ಟು ಹರುವೆಂಬ ಬೆಂಕಿಯ ಕೊಟ್ಟು |
ಮಾಯಾ ಮರವೆಯೆಂಬುವ ಕಾಷ್ಠಗಳನ್ನೆಲ್ಲ ಸುಟ್ಟು ||
ಪರವೆಂಬ ಸಾಮಗ್ರಿ ಕೂಡಿ |
ಸಾರತರ ಮೋಕ್ಷವೆಂತೆಂಬ ಪಾಕವ ಮಾಡಿ |
ಹರಶರಣರು ಸವಿದಾಡಿ |
ನಮ್ಮ ಗುರುಲಿಂಗದೇವನ ಪಾದವ ಬೇಡಿ ||

149
ಶಿರವೆ ಬಾಗಿಸಿ

ಶರೀರವಡಗಿಸಿ ಶಿರವೆ ಬಾಗಿಸಿ ಕರದಿ ಪುಷ್ಪವ ಧರಿಸಿ |
ಓಂ ಗುರುವಿನ ಚರಣ ಕಮಲಕ್ಕೆ ಬರದೇ ವರಭಾಗ್ಯವಿನೆಂದಿಗೆ ||
ಒಲ್ಲೆನೆಂಬುದು ಇಲ್ಲವಾಗಿ ಒಂದನಾಲ್ಕನು ಬಲ್ಲವರಾಗಿ ಮಂದಮತಿಗಳ ಎಲ್ಲ ಪೋಗಿ
ಆನಂದವಾಗುವುದು ಎಂದಿಗೆ ||1||
ಮೋದವಿಭಕ್ತಿಯುಳ್ಳವರಾಗಿ ಸಾಧನೆ ನಾಲ್ಕನು ಸಾಧಿಸುವರಾಗಿ ವಾದಿಗಳಿಗೆ ದೂರನಾಗಿ|
ನೀ ಸಾಧುವಾಗುವರೊಂದಿಗೆ ಎಲ್ಲವು ತಾನೆಯಾಗಿ ಒಲ್ಲೆನೆಂಬೊದಿಲ್ಲವಾಗಿ ಅಲ್ಲಿ
ಇಲ್ಲಿ ಎಂಬ ಭಾವ ಎಲ್ಲ ವೋಗುವ ಎಂದಿಗೆ ||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 251

ಮೂಡನೆಡೆಗೆ ಪೋಗಿ ನಿಂದು ಸಡಗರದಿ ನಮಿಸಲೆಂದು ಬಿಡು ಭಯವಿನ್ನೇತಕ್ಕೆಂದು
ಕಡು ಜವದಿ ಪೇಳ್ವೆನೆಂದಿಗೆ ||

150
ಬಾರಮ್ಮ ಗುರುಸೇವೆ ಮಾಡುವ

ಬಾರಮ್ಮ ಗುರುಸೇವೆ ಮಾಡುವ |
ನಿತ್ಯ ಭೂರಿ ಬ್ರಹ್ಮಾನಂದ ಹೊಂದುವಾ ||ಪ||
ಎಂದಿಗಾದರೂ ಸಾವು ತಪ್ಪದು |
ಗುರು ಹೊಂದದೆ ನಿಜಮುಕ್ತಿ ಸಿಕ್ಕದು |
ಸುಂದರ ತನುವಿದು ನಿಲ್ಲದು |
ಮೋಹ ಬಂಧನಾದಿಗಳು ಪೋಗದು ||ಬಾರಮ್ಮ ||
ಗಂಗೆ ಯಮುನಾ ಸ್ನಾನಗೈಯುವ |
ಅಲ್ಲಿ ಬಂಗಾರದರಮನೆ ನೋಡುವ |
ಹಿಂಗಾದ ಕಳೆಬಿಂದು ನೋಡುವ |
ನಿತ್ಯ ಮಂಗಳ ವಾದ್ಯವ ಕೇಳುವ ||1||
ವರಹಂಸ ತನುವನೇರುವ |
ಬ್ರಹ್ಮಪುರದೊಳು ಉಯ್ಯಾಲೆ ಆಡುವ |
ನೆರೆಮೋಕ್ಷದ್ವಾರವ ತೆರೆಯುವ |
ಅಲ್ಲಿ ಪರಮಾತ್ಮನೊಳ್ ಸೇರಿ ಬೆರೆಯುವಾ ||ಬಾರಮ್ಮ ||

151
ದೇಶದೇಶವನ್ನೆಲ್ಲಾ |
ಸುತ್ತಿನೋಡಿದರೂ |

ಗುರುಲಿಂಗೇಶ್ವರ |
ಭಕ್ತಿ ನೋಡಮ್ಮ ಒಳಗೆ |
ಗುರುಬಸವೇಶ್ವರ |
ತಮಾಷೆ ನೊಡಮ್ಮ | ಹೊರಗೆ ||1||
ಗುರುಲಿಂಗೇಶ್ವರ |
ಗುಣಾವ|
ನೋಡೋಣ ಬನ್ನಿ |
ಶಿವರಾತ್ರಿ |
ದೀಪಾವಳಿ ಹಬ್ಬದ ದಿನದೊಳು ||

252 / ತತ್ವಪದ ಸಂಪುಟ-1

ಅಪ್ಪ ಗುರುಲಿಂಗೇಶ್ವರರ |
ಪರುಸೆ |
ಬರುವುದ ನೋಡಿ |
ಕರೆತರಿಸಿ |
ಉಪಚರಿಸಿ |
ಕಳುಹುವ ಸಂಭ್ರಮವಾ ||
ಗುರುಗಳು ಹಿರಿಯರು |
ಬಾಲ ಬಾಲಕಿಯರು |
ಲೀಲೆಯಿಂದ |
ಉಪಚರಿಸಿ |
ಕಳುಹುವ ಸಂಭ್ರಮಾ |
ಶಿಷ್ಯರಿಗುಪಚರಿಸಿ |
ಶಿವಗುರು ಲಿಂಗೇಶನ |
ಅರಿವು ಪರಿಶೋಧಿಸಲು |
ಹರಿಹರರಿಗಳವಲ್ಲಾ |
ದೇಶದೇಶವನ್ನೆಲ್ಲಾ |
ಸುತ್ತಿನೋಡಿದರೂ |
ಸಾಧುಗಳೊಳಗಿಂತ |
ಸಾಧುವ ನಾಕಾಣೆ

152
ಸಚ್ಚಿದಾನಂದದೊಳ್

ಸಚ್ಚಿದಾನಂದದೊಳ್ |
ಸದಾ ಬೆರೆಯುವ ವಿದ್ಯಾ ತಿಳಿಯಬೇಕು |
ಈ ವೇದದ ಮೊದಲಿನ ಹಾದಿಯ ಪದವೀಯ ಸಾಧಿಸಿಕೊಳ್ಳಬೇಕು |
ಏ ಮಾನವ ಸಾಧಿಸಿಕೊಳ್ಳಬೇಕು ||1||
ಅರುವಿನ ಮನೆಯಲ್ಲಿ ಗಲಿಬಿಲಿ ಮಾಡಿದೆ ತಿರುಗುವನೆ ಮೂಢ ಏ ಮಾನವ
ತಿರುಗುವನೇ ಮೂಢ ||ಪ||
ಈ ಅರವನಿಟ್ಟಾ ಪರಮಾತ್ಮನ ಜ್ಞಾನವ ಅರಿತುಕೊಳ್ಳಗಾಡ ಏ ಮಾನವ
ಅರಿತುಕೊಳ್ಳಗಾಡ||2||
ಇಂದು ಮಾತ್ರದಲ್ಲಿ ಬಂದು ಒದಗಿತು ಅವು ತಂದೆತಾಯಿಗಳಲ್ಲಿ ಎನಮಾನವ
ಬಂಧುಬಳಗವೆಲ್ಲ |

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 253

ಈ ಇದನೊಂದಿದ ಮಾತ್ರದ ಬಂಧುಬಳಗವೆಲ್ಲ ನಿನ್ನಿಂದ ಬರುವುದಿಲ್ಲ |
ಏ ಮಾನವ ನಿನ್ನಿಂದೆ ಬರುವುದಿಲ್ಲ ||3||
ಹೆಣ್ಣು ಹೊನ್ನು ಮಣ್ಣು ಎಂಬುವ ಬಿನ್ನಾಣ ಬಿಡು ಮನದಿ |
ಏ ಮಾನವ ಬಿನ್ನಾಣ ಬಿಡು ಮನದಿ ಈ ಅನ್ನದ ಗರ್ವದಿ ಅಣಕ್ಕಿ ತಿಳಿ ಮನದಿ ಏ ಮಾನವ ||
ಅಣಕ್ಕಿ ತಿಳಿ ಮನದಿ ||ಪ||
ಎಲ್ಲೊ ಎಲ್ಲೊ ಎಲ್ಲೊ ನಿನ್ಯಾರೊ ನಿನ್ನ ದೇಹ ಯಾವುದು ಅನುಮಾನ ಬಿಡು
ಮನದಿ ಏ ಮಾನವ ಅನುಮಾನ ಬಿಡು ಮನದಿ |
ನಾನು ನೀನೆಂಬ ಜ್ಞಾನ ಬೋಧೆಯಲ್ಲಿ ನೀಸರುಬಹು ಘನದಿ ಏ ಮಾನವ ನೀಸರು
ಬಹುಘನದಿ ||ಪ||
ಕಂಗಳೂರಿನಲ್ಲಿ ಲಿಂಗ ಬೆಳಗುವ ಎಂಗಿರುವನು ಜಾಣ ಏ ಮಾನವ ಏಂಗಿರುವನು ಜಾಣ ಈ ಕಾಯವೂರಿ ಗಂಗಾಧರನಿಗೆ
ಮಂಗಳ ಮಾಡೋಣ ಬಾ |
ಮಂಗಳ ಮಾಡೋಣ ಬಾ ||ಪ||

153
ವಜ್ರ ಕಂಬವಲ್ಲ

ನಂಬಬೇಡ ನಂಬಬೇಡ ಇದು ನಂಬೋಲ್ಲ
ವಜ್ರ ಕಂಬವಲ್ಲ ನಂಬಬೇಡ ನಂಬಬೇಡ ||1||
ದೇಶದವರ ಆಸೆಗಾಗಿ ಮಾತಿನ ಗಿಳಿಯ ತಂದು |
ಕೂಸಿನಂತೆ ಸಾಕಿ ಸಲುಹಿ ಮೋಸವಾಗಿತಲ್ಲೊ ||ತಮ್ಮ ||ನಂಬ||
ಮಾಳಿಗೆಯ ಮನೆಯ ಕಟ್ಟಿ ಮಾಡಿದವ್ರ ಉಂಗುರವ ಬಿಟ್ಟು ಜೋಳಿಗೆ
ಹೊನ್ನುನ್ನೆ ಬಿಟ್ಟು ಜಾರುವವನ ತನುವ ಬಿಟ್ಟು ||ನಂಬ||
ಈಗಲ್ಲೋ ಇನ್ನೊವಾಗಲು ಭೋಗದಾಸೆ ತೀರಲೆಂದು
ಅಗಾಗ್ಯು ನಿಲ್ಲದಯ್ಯ ಈಗಿರುವ ಪರಮಾತ್ಮ ||ನಂಬ||
ದೇಶದವರ ಆಸೆಗಾಗಿ ಈಶನನ್ನು ಮರೆತು
ನೀವು ಘಾಸಿಯಿಂದ ಬಳಲಿನೊಂದು ಮೋಸವಾಗಿ ಹೋಗುವಿಯಲ್ಲ ||ನಂಬ||

154
ಪದವಿಯ ಕರುಣಿಸಿದ

ಪಂಚಮುಖನ ಪೂಜೆ ಮಾಡದ ಜನರಿಗೆ
ಪಂಚಪಾತಕ ಕಳೆಯುವುದೆ ಶಂಭೊ ||1||

254 / ತತ್ವಪದ ಸಂಪುಟ-1

ಮಿಂಚಿನ ಸರದಿಯೊಳು ಸಂಪಿಗೆ ಚೆಲ್ಲಲ್ಲ
ಕೊಂಚ ದೈವಗಳಿಂದ ಕಳೆಯುವುದೇ ಶಂಭೋ ||2||
ಮಾಡಿದ ಗುರುದೋಷ ಹಿಂದೆ
ಪಾರ್ಥನು ಮುಂದೆ ಬೇಡರ ಕಣ್ಣಯ್ಯನಾಗಿರ್ಪನೆ ಶಂಭೋ ||3||
ತಾಯಿಯನೊದಿಸಿದ ಮಾರ್ಗದಿ
ಶ್ರೀರಾಮಗೆ ಮಾಯದ ದೋಷ ಬಂದ ಒದಗಿತ್ತೇ ಶಂಭೋ ||4||
ತೋಯ ಜನರೇ ನಿಮ್ಮ ಪೂಜಿಸಿ
ಶ್ರೀರಾಮ ಸ್ತ್ರೀಹತ್ಯಾಪಾತಕನೀಗಿದನೇ ಶಂಭೋ ||4||
ಕೈವಲ್ಯ ಪುರವಾಸ ಒಲೆದು ಭೂಸುರರಿಗೆ
ಕೈವಲ್ಯ ಪದವಿಯ ಕರುಣಿಸಿದ ಶಿವನೋ ||ಪಂಚ||

155
ಎನ್ನಯ ಚನ್ನಯ

ಶಿವನ ಭಜನೆ ಮಾಡು |
ಶಿವಶರಣರ ಕೊಂಡಾಡು ಈ ಭವದ ಮಾಲೆ ಕೇಳು
ಅಭಯವ ಸ್ಮರಣೆಯನ್ನು ಮರೆಯಬೇಡ ||1||
ಮಂಗಳ ಮೂರುತಿ ಜಂಗಮ ಪ್ರಭುರಾಯ ಸಂಗಯ್ಯ ಬಸವಣ್ಣ ನೀಲಗಂಗಮ್ಮ ನಾಳಾಗಿ||
ಅಕ್ಕಿಯ ಮಾರಯ್ಯ ಚಿಕ್ಕ ಚನ್ನಬಸವಣ್ಣ ಅಕ್ಕ ನಾಗಮ್ಮ ತಾಯಿ ಡೋಹರ
ಕಕ್ಕಯನಾಳಾಗಿ||2||
ಕುಂಬಾರ ಗುಂಡಯ್ಯ ಕೆಂಬಾವಿ ಬೋಗಯ್ಯ ಅಂಬಿಗರ ಚೌಡಯ್ಯ ಅವರು
ನಿಂಬಣ್ಣನಾಳಾಗಿ ||3||
ಮಾಡಿವಾಳ ಮಾಚಯ್ಯ ಮಧುವರಸ ಹರಳಯ್ಯ ಅಕ್ಕಿಯ ಮಾರಯ್ಯ
ಸಾಧುಶರಣಾರಿಗಳಾಗಿ ||4||
ನನ್ನಯ್ಯ ಮಾದರಿ ಎನ್ನಯ್ಯ ಚನ್ನಯ್ಯ ನನ್ನಯ್ಯ ಹೊನ್ನಯ್ಯ ಬೇಡರ ಕಣ್ಣಪ್ಪನ್ನಳಾಗಿ ||
ಗುರುಲಿಂಗ ಲಿಂಗಯ್ಯ ನಾಲ್ವರು ಪುತ್ರರು ಮಕ್ಕಳಿದ ಶರಣಾರು ಅವರ ಪಾದಾಕ್ಷಿಯ
ಪಿಡಿದು ||5||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 255

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

2 ನಿಜಗುಣ ಶಿವಯೋಗಿಯ ಕೈವಲ್ಯಪದ್ಧತಿ

ಭಾಗ-2: ನಿಜಗುಣ ಶಿವಯೋಗಿಯ ಕೈವಲ್ಯಪದ್ಧತಿ
ಪಠ್ಯ- ಒಂದು
1. ಕರುಣವಿರಲಿ ಜೀವರೊಳು
ರಾಗ: ನಾದ ನಾಮ ಕ್ರಿಯೆ

ಶ್ರೀ ಗುರುವಚನೋಪದೇಶವಪಾಲಿಸಿ
ದಾಗಳಹುದು ನರರಿಗೆ ಮುಕುತಿ ||ಪಲ್ಲ||ದುರಿತಕರ್ಮವನೊಲ್ಲದಿರು ಪುಣ್ಯವನೆ ಮಾಡು
ಹರನಡಿವಿಡಿ ಶಾಂತರೊಡನಾಡು
ಕರುಣವಿರಲಿ ಜೀವರೊಳು ನೀತಿವಿದನಾಗು
ಪೊರೆ ಪೊರ್ದಿದರನೆಂದು ಬೆಸಸುವ ||1||

ನಿಂದಿಸಿ ನುಡಿಯದಿರಾರನು ಮನಸಿಗೆ
ಬಂದಂತೆ ನಡೆಯದಿರಿಹದಲ್ಲಿ
ಕುಂದುವಡೆಯದಿರು ಕಾಮಾದಿಗಳ ಜಯಿ
ಸೆಂದು ಕೈವಿಡಿದನುಗ್ರಹಿಸುವ ||2||

ಭವಮಾಲೆಗಲಸು ಪುಸಿಯದಿರೆಡರು ಬಂದು
ಕವಿಯಲಂಜದಿರು ಸಂಪದದೊಳು
ತವೆ ಮದವಳಿದಿರು ತತ್ತ್ವ ಸಂತತಿಯನು
ವಿವರಿಸಿ ನೋಡೆಂದು ತಿಳುಪುವ ||3||

ಬಳಸದಿರದ್ವೈತವನು ಬಾಹ್ಯದಲ್ಲಿನಿ
ನ್ನೊಳಗೇಳಕೋಭಾವನೆಯೊಡಗೂಡು
ತಿಳಿದು ಸಮಯ ನಿಷ್ಠೆಯಲಿ ವೇದವಿದ ಭಕ್ತಿ
ಗಳನಗಲದಿರೆಂದುಸುರುವ ||4||

ಆರು ನಾನೆಂದು ವಿಚಾರಿಸು ವಿಷಯ ಸಂ
ಸಾರವಿದನು ಕನಸೆಂದರಿ
ಮಾರಮರ್ದನ ಶಂಭುಲಿಂಗವನೊಲಿಸಿ ಗಂ
ಭೀರ ಸುಖದೊಳಿರೆಂದರುಪುವ ||5||

2. ಕರುಣಕುಲ ಚಕೋರ
ರಾಗ : ಸುವ್ವಾಲೆ

ನೋಡಲಾಗದೆ ದೇವ ನೋಡಲಾಗದೆ
ಕೂಡಿ ನಿನ್ನ ದಿಟ್ಟಿ ಮೂರು ನಾಡೆ ಲೇಸಮಾಡಲೆನ್ನ ||ಪಲ್ಲ||

ಮಿಸುಕಲೀಯದೆನ್ನ ಮೋಹ
ವಿಸರವೆಂಬ ವನವನುರುಹಿ
ಭಸಿತವೆನಿಸಿ ರುದ್ರ ನಿನ್ನ
ನೊಸಲವಹ್ನಿ ನೇತ್ರದಿಂದೆ ||1||

ಕಲುಷ ತಿಮಿರ ಮುಸುಕಿ ಮುಗಿದು
ನಲಿಯದೆನ್ನ ಹೃದಯ ನಳಿನ
ವಲರೆ ದಿವ್ಯರೂಪ ನಿನ್ನ
ಬಲದ ಭಾನುನಯನದಿಂದ ||2||

ಕರುಣಕುಲಚಕೋರ ತಣಿಯೆ
ಹರುಷ ಶರಧಿ ಮೀರಲೆನ್ನ
ವರದ ಶಂಭುಲಿಂಗ ವಾಮ
ದುರು ಸುಧಾಕರಾಕ್ಷಿಯಿಂದೆ ||3||

3. ದೇವರೆಲೆ ದೇವರೆ
ರಾಗ : ನಾದ ನಾಮಕ್ರಿಯೆ

ಯಾಕೆನ್ನನಿಂತು ಸಂಸೃತಿಯೊಡಗೂಡಿದೆಯೆಲೆ ದೇವರೆ
ಸಾಕಿನ್ನು ನಿಜವನೀಯದೆ ತಳುಮಾಡಿದೆಲೆ ದೇವರೆಲೆ ದೇವರೆ ||ಪಲ್ಲ||

ಮೊದಲು ನೀನೆನ್ನ ಜ್ಞಾನಶಕ್ತಿಗೆ ಮಾರಿದೆಲೆ ದೇವರೆಲೆ ದೇವರೆ
ಒದವಿ ಮತ್ತದನೇಕೆ ಕೆಡೆಸೆಲೆಂದರುಹಿದೆಯೆಲೆ ದೇವರೆಲೆ ದೇವ
ಪುದಿದ ಕರ್ಮದ ಪಾಕದನುಗುಣದೊಳು ಮೀರಿದೆಲೆ ದೇವ…
ವಿಧಿಸಿ ಬಳಿಕ ಮಾಯಾಮಲಪಾಶವನು ಬೀರಿದೆಲೆ ದೇವ… ||1||

ಬಿತ್ತರವೆನಿಪ ಭುವನದೇಹವೆನು ಮಾಡಿದೆಲೆ ದೇವರೆಲೆ ದೇವರೆ
ಮತ್ತೆ ನನ್ನವರ ವರಭಿಮಾನದೊಡಗೂಡಿದೆಲೆ ದೇ…
ಸುತ್ತಿ ಬರಿಸಿ ಬಹು ಜನನಮಾರ್ಗದೊಳಾಡಿಯೆಲೆ ದೇ…
ಮುತ್ತಿ ಮೋಹಿಸುವ ಸುಖಾದಿಭೋಗವನೂಡಿದೆಲೆ ದೇ… ||2||

ಮರಳಿ ವಿನಯವಿವೇಕವನೆನ್ನೊಳಿಂಬಿಟ್ಟೆಲೆ ದೇ…
ಪರಬೋಧವರುಹಿ ಬಂಧದ ಬಲುವನೆ ಸುಟ್ಟೆಯೆಲೆ ದೇವ
ವರವಾಗಿ ನಿನ್ನ ಸಮಾನ ಪದವಿಗೊಟ್ಟೆಯೆಲೆ ದೇವ
ಗುರು ಶಂಭುಲಿಂಗ ನೀನೆನಗಾಗಿ ಕೃಪೆವಟ್ಟೆಯೆಲೆ ದೇವ ||3||

4. ಮಾಯೆಕರ್ಮದ ಬಾಧೆ
ರಾಗ: ತೆಲುಗು ಕಾಂಬೋಧಿ

ನೋಡು ನೀನೆನ್ನ ಪರಿಭವದ ಬಾಧೆಯನು ಕೃಪೆ
ಮಾಡು ಬೇಗದೊಳಭಯವಿತ್ತು ಶಂಕರ ||ಪ||

ಮಾಯೆಕರ್ಮದ ಬಾಧೆ ಕಾಯಮೋಹದ ಬಾಧೆ
ವಾಯು ವಿಷಯೇಂದ್ರಿಯದ ಬಾಧೆ ಶಂಕರ
ಹೇಯವಹ ಜನನಮರಣದ ಬಾಧೆ ತಾಪ ಸಮು-
ದಾಯದತಿಬಾಧೆ ಬಲುಹೆನಗೆ ಶಂಕರ ||1||

ಹಸಿವುತೃಷೆಗಳ ಬಾಧೆ ವ್ಯಸನವೇಳರ ಬಾಧೆ
ದೆಸೆಗೆಡಿಸುವರಿಕುಳದ ಬಾಧೆ ಶಂಕರ
ಕುಸುಮಬಾಣನ ಭಾದೆ ಮದಶೋಕ ಮೋಹರತಿ
ವಿಸರದುರು ಬಾಧೆ ಘನವೆನಗೆ ಶಂಕರ ||2||

ಬೇರೆ ಬೇರಿನ್ನು ಮೈದೋರಿ ಕಾಡುವ ಬಾಧೆ
ನೂರು ಸಾಸಿರ ಕೋಟಿಯುಂಟು ಶಂಕರ
ಮೀರಲರಿದವನೆನಗೆ ನೀನೆ ತೊಲಗಿಸಿ ಸುಖದ
ಸೂರೆಗೊಂಡು ಗುರುಶಂಭುಲಿಂಗ ಶಂಕರ ||3||

5. ತನುವನಂಟದ ರುಜೆಯು
ರಾಗ : ಬಹುಳಿ

ಕರುಣಿಸೆನ್ನೊಳು ಸುಗುಣವಿನಿತಿಲ್ಲವೆಣಿಸುವಡೆ
ನಿರವಧಿಗಳೆನಿಸುತಂಡಲೆವ ದೋಷ
ನೆರದಿವಕೆ ಪರಿಹಾರವಿದು ನೋಡಲಹುದೆನಿಸ
ದಿರುತಿರ್ಪವಾಗಿಯನಿಮಿತ್ತವಭವ ||ಪಲ್ಲ||

ಜನಿಸಬಾರದಯೋನಿ ಮರಣವಾಗದ ತಾಣ
ವನುಗೆಡದರೀತಿ ಮೋಹಿಸದ ವಿಷಯ
ತನುವನಂಟದ ರುಜೆಯು ಮುಖಗೆಡಿಸದಿಹ ಲಜ್ಜೆ
ಮನವನಡಸದ ಚಿಂತೆ ಮರೆಯದರಿವು
ಕೊನೆಯದ ವಿಕಾರವಂಚಿಸದ ಭೂತಾದಿ ವಂ
ಚನೆ ಮಾಡದನ್ಯಧನವಿಲ್ಲದಧಟ
ಮುನಿಯದರಿ ಮುಟ್ಟದಾಹಾರವೆನಗಿಲ್ಲವೆನ
ಲಿನಿತವಸ್ಥೆಯೊಳು ಸಿಲುಕಿದೆನೊ ಶಿವನೆ ||1||

ಅಡಿಯಿಡದ ನೀತಿ ಮಾಡದ ಪಾಪವೆಳಸಿ ಮೈ
ವಿಡಿಯದಂಗಜ ಮುದ್ರೆಸುಡದ ತಾಪ
ಜಡಿಯದೆಮದೂತರೆಳೆಯದ ನಿರಯತತಿಯಳ್ಕಿ
ನಡುಗಿಸವ ಕೊರತೆ ನಿಂದಿಸದ ಸುಜನ
ಕಡೆಗಣಿಸದಾಸೆ ಕೆಡಿಸದ ಬಾಳು ಹರಣವನೆ
ಬಿಡಬೇಹುದೆಂದು ಬಗೆಯದ ಬಡತನ
ಪಡೆಯದಿಹ ದೂಷಣವರಸಲೆನ್ನೊಳಿಲ್ಲ ವೆಂ
ದೊಡೆ ಪೇಳಲೇನು ಪೆರತಿಹುದು ಮೃಡನೆ ||2||

ಪರಿಹರಿಸಬಹುದೆಂಬ ದುಃಖವಿನ್ನೇನಿಲ್ಲಿ
ಪರಿಯಂತವೆನಿಸಿಕೊಳುತಿಹ ಸಂಸ್ಕೃತಿ
ತರಹರಿಪನೆಲೆ ಬಾರದಿರುವ ಕಂಟಕವಿನ್ನು
ಚರಿಸದುಳಿದಿರ್ಪುದು ಮಾರ್ಗಮೊಂದು
ಪರಿಭಾವಿಸಿದೊಡಿಲ್ಲವೆನ್ನೊಳದು ಕಾರಣದಿ
ಶರಣುಹೊಕ್ಕೆನು ವರದಕರನೆ ನಿನ್ನ
ಬಿರುದಿಗಾಗಿಯೆ ಬಿಡದೆ ಪೊರೆ ಶಂಭುಲಿಂಗ ನಿಜ
ಚರಣವಾರಿಜದ ನಡುವಗಲದಿರಿಸಿ ||3||

6. ನಿನ್ನೊಳಾವ ಸುಗುಣವಿಹುದು
ರಾಗ: ಮಧುಮಾಧವಿ

ನಿನ್ನೊಳಾವ ಸುಗುಣವಿಹುದು ವಿಚಾರಿಸಿ ನೋಡ
ದೆನ್ನೊಳರಸುವೆ ಲೇಸುಗಳನೇಕೆ ದೇವ ||ಪಲ್ಲ||

ಕರಚಲುವಿನ ರತಿಪತಿಯನುರುಹಿದೆ ಮು
ಪ್ಪುರದವರೆಲ್ಲರೊಕ್ಕಲನೆ ಕೆಡಿಸಿದೆ
ವರವೇದವಿದನ ತಲೆಯನೆಚ್ಚು ಕೆಡಹಿದೆ
ಪುರುಷೋತ್ತಮನ ಕಣ್ಣನೊಪ್ಪಿ ತೆಗೆಸಿದೆ ||1||

ನುತಧರ್ಮರಾಜನನಿರಿದೆ ಮುಮ್ಮೊನೆಯಿಂದೆ
ಶ್ರುತಿತತಿಯನು ಶುನಿಯೆನಿಸಿ ನಡಿಸಿದೆ
ಕ್ರತುಪೂಜೆಯಳಿದೆ ದಕ್ಷನ ಋಷಿಯರ ಕುಲ
ಸತಿಯರೆಲ್ಲರನು ಸೈತಿರದೆ ಲಜ್ಜಿಸಿದೆ ||2||

ನೋಡಲಿಂತನೇಕ ಗುಣ ನಿಂದೆಯುಂಟು ನಿನಗದ
ನಾಡಲಿನ್ನೇನದು ಕಾರಣದಿ ನಾನರಿಯದೆ
ಮಾಡಿದಪರಾಧ ಕೋಟಿಯನು ಮರೆದವನೊಂದು
ಗೂಡಿಕೊ ನಿನ್ನೊಳೆನ್ನನೆಲೆ ಶಂಭುಲಿಂಗವೆ ||3||

7. ಕಡುಚೆಲುವೆಸೆವ ಜವ್ವನವನು
ರಾಗ : ಮಧುಮಾಧವಿ

ಕೂಡೆ ನೇವಿಸಿದೆ ಹಿತವಹಿತವೆಂಬೆರಡನು
ನೋಡು ನಿನ್ನದಾವ ಬಲ್ಲತನವಹುದಭವ

ಕಡುಚೆಲುವೆಸೆವ ಜವ್ವನವನು ಜರೆಯನು
ಬಿಡಲರಿದೆನಿಪ ಭೋಗವನು ರೋಗವನು
ತಡೆಯದಖಿಳ ವಿದ್ಯೆಯನು ದರಿದ್ರತೆಯನು
ಪೊಡವಿಗಧಿಕ ಸಂಪದವನು ಲೋಭವನು ||1||

ಪರಿತೋಷವನು ವಿತ್ತದಳಿಯಾಸೆಯನು
ಪರತರ ಶಮೆಯನು ನೀರೆಯರ ವಿಲಾಸವನು
ಕರ ಸೊಗಸಿನ ಜೀವನವನು ಮರಣವನು
ವಿರತಿಯನಗಲದರಿವನು ಗರ್ವವನು ||2||

ಮನುಜತ್ವವನು ಮುಕ್ತಿಯೊಲವಿಲ್ಲದಹುದನು
ತನುದಂಡನೆಯನು ಚಿತ್ತದೊಳು ಕಾಮವನು
ಮುನಿವರ್ತನೆಯನು ಲೋಕದ ರಂಜನೆಯನು ಪಾ
ವನ ಶಂಭುಲಿಂಗವಾದೆನು ಸಂಸೃತಿಯನು ||3||

8. ಕೋಗಿಲೆ ಚೆಲ್ವ ಕೋಗಿಲೆ
ರಾಗ: ಸೌರಾಷ್ಟ್ರ

ಕೋಗಿಲೆ ಚೆಲ್ವ ಕೋಗಿಲೆ ಮುದ್ದು
ಕೋಗಿಲೆ ಜಾಣ ಕೋಗಿಲೆ ||ಪಲ್ಲ||

ಹಿಂದೆ ತಪದೊಳೀಶನೊಂದಿರುತಿರಲೆಚ್ಚು
ಬೆಂದ ಕಾಮನ ಬಿಟ್ಟು ಕೋಗಿಲೆ
ಬಂದು ಬೇಗದೊಳು ಬಾಲೇಂದುಧರನ ಕೂಡಿ
ಕುಂದದೆ ನೀ ಬಾಳು ಕೋಗಿಲೆ ||1||

ಮನು ಮುನಿಗಳ ನೀತಿಯನು ಕೆಡಿಸುವ ದುಷ್ಟ
ಮನಸಿಜನನು ಮೀರಿ ಕೋಗಿಲೆ
ಘನ ಪದವನು ತನ್ನ ನೆನೆವರಿಗೊಲಿದೀವ
ಧನದ ಮಿತ್ರನ ಸಾರು ಕೋಗಿಲೆ ||2||

ನಲ್ಲರನಗಲಿದ ಮೆಲ್ಲೆದೆಯರ ಕೊಲ್ವ
ಫುಲ್ಲ ಶರನ ಪಿಂಗಿ ಕೋಗಿಲೆ
ಎಲ್ಲ ಜೀವರಿಗೆರವಿಲ್ಲದೊಲವನೀವ
ಬಲ್ಲಭವನೊಳಿರು ಕೋಗಿಲೆ ||3||

ಮಂಗಳರವದೊಳನಂಗನ ಬಣ್ಣಿಸೆ
ಭಂಗವಲ್ಲವೆ ನೋಡು ಕೋಗಿಲೆ
ಕಂಗೊಳಿಸುವ ಸರ್ವ ಮಂಗಳೆಯರಸನ
ಪಿಂಗದೆ ನೀ ಪಾಡು ಕೋಗಿಲೆ ||4||

ದುರುಳ ಕಂತುವಿನೊಡನಿರೆ ಲೋಕದೊಳು ನಿನ್ನ
ಪರಪುಟ್ಟನೆಂಬರು ಕೋಗಿಲೆ
ಧರೆಗೆ ಜನಕನಾದ ಗುರು ಶಂಭುಲಿಂಗದ
ಚರಣಪಲ್ಲವ ಪಿಡಿ ಕೋಗಿಲೆ ||5||

9. ಸುಮ್ಮನೆ ಕಾಲವನು ಕಳೆದು
ರಾಗ : ಶಂಕರಾಭರಣ

ಸುಮ್ಮನೆ ಕಾಲವನು ಕಳೆದು ಸಾವುದುಚಿತವೆ
ನೆಮ್ಮಿ ನಿಜವನು ಮುಕ್ತಿಪಡೆಯದೆ ಮನುಜ ||ಪಲ್ಲ||

ಧರೆಯನೆಲ್ಲವನು ಸಣ್ಣಿಸಿ ದೂಳಿ ಮಾಡಲಾ
ಪರಮಾಣುಗಳವೆನಿತೆನಿತು ದೇಹವನು
ಧರಿಸಿತೊಂದೊಂದು ದೇಹದ ಬಸುರೊಳು ಬಂದು
ಮರಳಿ ನೀನಿತ್ತ ತಿರುಗದಂತೆ ರಚಿಸದೆ ||1||

ಜನನ ಮರಣ ರುಜೆ ಭಯ ಶೋಕ ಜರೆ ಬಡ
ತನ ಪರಸೇವೆ ಹಾನಿ ಹಳಿವು
ಮುನಿಸು ವಿಷಯರತಿ ವಿರಹಸಂತಾಪ ಚಿಂ
ತನೆಗಳು ನಿನಗಾಗದಿಹ ಬುದ್ಧಿಗಲಿಯದೆ ||2||

ಹವಣಿಸಬಾರದ ಹಲವು ದುಃಖಂಗಳ
ನವಿರತವನುಭವಿಸುವ ನಿನಗಿನ್ನು
ಸವೆಯದಾನಂದವಹುದು ಶಂಭುಲಿಂಗದ
ಸುವಿಚಾರ ಭಜನೆ ಭಕ್ತಿಯೊಳೆಂಬುದರಿಯದೆ ||3||

10. ಮಾಡಲುಚಿತವೆ ಮನುಜ
ರಾಗ: ಸುವ್ವಾಲೆ

ಮಾಡಲುಚಿತವೆ ಮನುಜ ಮಾಡಲುಚಿತವೆ
ಕೂಡೆ ಬಾಧೆ ಬಹಳವಿಹುದ ನೋಡಿ ಧನದ ಲೋಭವಿದನು ||ಪಲ್ಲ||

ಧನವ ಗಳಿಸುವಲ್ಲಿ ಮೊದಲು
ತನುವಿಗತಿ ಬಳಲ್ಕೆ ನಡುವೆ
ಮನಕೆ ದಿಗಿಲು ಮಿಗಿಲುವೆರಸಿ
ಜನರು ನೋವುವೆಡೆಯೊಳಿಂತು
ಜನಿಪುದಳಲು ಮತಿಗೆ ವೆಚ್ಚ
ವಿನಿತನೆಸಗೆ ಕೆಡಲು ಕಡೆಗೆ
ತನಗೆ ಕಂಟಕಂಗಳಾವ
ದಿನದೊಳೊದಗಿ ಬಪ್ಪವಾಗಿ ||1||

ಉರಗ ವಹ್ನಿ ಮರಳು ಮೋಸ
ವರಸು ಕಳ್ಳರನುಜರುಜಗು
ಳಿರಿಸೆ ನೆಲದಿವೆಲ್ಲವಳುಪಿ
ಸರಿದು ತಾನೆ ಪೋಪುದಾಗಿ
ಪಿರಿದು ಧನವ ನೆರಪುವಂಗೆ
ದುರಿತಕೋಟಿ ಪುದಿದು ಪಲವು
ಪರಿಯನೋವನಿಹಪರದೊಳು
ತಿರುಗುವಂತೆ ಮಾಳ್ಪುದಾಗಿ ||2||

ಇಂತು ವಿಷಸಮೇತ ಮಧುವಿ
ನಂತೆ ಸೊಗಸುದೋರಿ ನಿಖಿಳ
ಚಿಂತೆಗೊಡುವ ಧನದ ಕಾಂಕ್ಷೆ
ಯಂ ತೊರೆದು ಸುಜಾಣನಾಗಿ
ಮುಂತೆ ಶಂಭುಲಿಂಗದೊಲವ
ನಿಂತು ಪಡೆಯೆ ಶರಣತತಿಗೆ
ಸಂತಸದೊಳು ಸವೆವುದುಂಬು
ದೆಂತು ತನುವಿದಳಿವುದಾಗಿ ||3||

11 ಒಂದು ತಾನಾದ ಶಂಭುಲಿಂಗ
ರಾಗ: ಸೌರಾಷ್ಟ್ರ

ಗಣಿತವಿದನು ಕೂಡಿ ಕಳೆಯ ಬಲ್ಲಾತನೆ
ತ್ರಿಣಯನೆನಿಪನು ಲೆಕ್ಕಿಗರ ಮಧ್ಯದೊಳು ||ಪಲ್ಲ||

ಒಂದನು ಮೂರಾಗಿ ಪೆಚ್ಚಿಸುತದರೊಳ
ಗೊಂದೊಂದರೊಳಗೆರಡೈದನೀರೈದು
ಒಂದರೊಳೊಂದು ನಾಲ್ಕನುಕೂಡುತದನು ಮ
ತ್ತೊಂದೊಂದನೆರಡು ಮೂರೆನಿಸಲೊಂದಾಗೆ ||1||

ವೊಂದರೊಳೆಂಟಾರುದೋರಲವರ ನಡು
ವೊಂದರೊಳೆರಡಾರುಗೊಂಡದೇಳೆನಿಸೆ
ಮುಂದೆರಡೊಂದಾಗಲೊಂದೊಂಬತ್ತಾಗು
ತ್ತೊಂದು ಮೂರಾರುಳ್ಳದ್ದಾಗೆ ಕಡೆಯೊಳು ||2||

ಒಂದು ತಾನಾದ ಶಂಭುಲಿಂಗವದರೊ
ಳೊಂದಾಗುತೈದು ಸೇರುವೆದಳೆದಿದನು
ಒಂದು ಸೂತ್ರದೊಳುಪಾದ್ಯರುಗೂಡಿ ಗುಣಿಸಿದೊ
ಡೊಂದುಳಿದಿದೆ ಸೊನ್ನೆಯಿಲ್ಲ ಬೇರೊಂದು ||3||

12. ಎಂತೊಲಿವನೊ ತನಗೆಂತೊಲಿವನೊ
ರಾಗ : ಕಾಂಬೋಧಿ

ಎಂತೊಲಿವನೊ ತನಗೆಂತೊಲಿವನೊ
ಎಂತೊಲಿವನೊ ಕರಣತ್ರಯದ ದೋಷಮಿರೆ
ಕಂತು ಕಾಲಪುರದ ವೈರಿ ಗುರುಶಂಭುಲಿಂಗ ||ಪಲ್ಲ||

ಪರವಧುವಿನ ಕೂಟವನ್ಯರ ವಿತ್ತಾಪ
ಹರಣವಭಕ್ಷ್ಯ ಸೇವನೆ ಹಿಂಸೆ
ಪರಿವಿಡಿದೀ ನಾಲ್ಕು ಪಾತಕಂಗಳು ಪಾ
ಮರಜನ್ಮವೀಯ್ಯೆ ಕಾಯದೊಳೊಂದಿರೆ ತನಗೆಂತೊಲಿವನೊ ||1||

ಪುಸಿಯನುಚಿತ ನಿಷ್ಠುರತ್ವ ಪೈಶುನ್ಯತೆ
ಮುಸುಕಿದೀ ನಾಲ್ಕು ದೋಷಂಗಳು
ಪಶುಪಕ್ಷಿ ಮೃಗಯೋನಿಯೊಳಗೆಳದೊಯ್ದು ಪು
ಟ್ಟಿಸುವ ವಚನದೊಳೆಡೆವಿಡದಿರೆ ತನಗೆಂತೊಲಿವನೊ ||2||

ಜನರೊಲಿಯದ ಕಾರ್ಯದೆರಕವನಿಷ್ಟಚಿಂ
ತನೆಯನ್ಯಧನ ಸತಿಯರ ಕಾಂಕ್ಷೆ
ಯೆನಿಸುವೀ ನಾಲ್ಕುದುರಿತ ಜನನವೀಯೆ
ಮನದೊಳೊಂದಿರೆ ಗುರುಶಂಭುಲಿಂಗ ತನಗೆಂತೊಲಿವನೊ ||3||

13. ಕರುಣ ವಿನಯ ತಪೋ ವಿರತಿ
ರಾಗ : ಶಂಕರಾಭರಣ

ತನ್ನೊಳು ಸುಖದುಃಖ ಮೋಹಾದಿಗಳು ತೋರ
ಲುನ್ನಿಪುದವನೆಲ್ಲ ಗುಣಮಯವೆಂದು ||ಪಲ್ಲ||

ಒಡಲು ತಾನೆಂದರಿವುದೇ ಮಂದಮತಿ ಮೋಸ
ಜಡಭಾವ ನಿದ್ರೆ ನಿಷೇಧ ಕರ್ಮಾಳಿ
ಬಿಡದಲಸತೆ ಚಪಲತ್ವವಿಡಿದು ವೃಥಾ
ಕೆಡುವ ತನುವನೆ ಕೂಡಿಹುದು ತಾಮಸಗುಣ ||1||

ಮದಲೋಭ ಮೋಹ ಮಾತ್ಸರ್ಯ ನಿಷ್ಠುರ ಕರ್ಮ
ಸುದತಿಯರಾಶೆ ಕಪಟರೀತಿ ಕೋಪ
ಕದನ ಕರ್ಕಶವೃತ್ತಿ ಕಡುಶೋಕ ನಿರ್ದಯೆ
ಮೊದಲಾದ ಕಲುಷವಿವರಿಯೆ ರಾಜಸಗುಣ ||2||

ಕರುಣ ವಿನಯ ತಪೋ ವಿರತಿ ವಿವೇಕ ವಿ
ತರಣ ನಿರ್ಧಾರಣ ದಮೆ ಧರ್ಮ ಧೈರ್ಯ
ನಿರಭಿಮಾನತೆ ಸತ್ಯ ವರವಿದ್ಯೆಯೆಂಬಿವೆ
ಗುರುಶಂಭುಲಿಂಗದೊಲುಮೆಯ ಸಾತ್ವಿಕಗುಣ ||3||

14. ಮೊಲನ ತಲೆಯೊಳು ಕೋಡನು
ರಾಗ: ಭಹುಳಿ

ತಡೆವುದಾಗದು ತನಗಗಣಿತ ವಿಷಯದೊ
ಳೆಡೆಯಾಡುವತಿ ಚಪಲತೆಯ ಚಿತ್ತವನು ||ಪಲ್ಲ||

ಧರೆಯನಜಿನದಂತೆ ಸುರುಳಲಹುದು ಮೇರು
ಗಿರಿಯನಂಗುಲಿಯ ಕೊನೆಯೊಳಾನಲಹುದು

ಶರಧಿಯನೊಮ್ಮೆ ಪಾನವ ಮಾಡಲಹುದು ಸೈ
ತಿರಬಾರದು ನಿಮಿಷಾರ್ಧವೀ ಮನವ ||1||

ಮೊಲನ ತಲೆಯೊಳು ಕೋಡನು ಕಾಣಲಹುದಭ್ರ
ದೊಳು ಸೌರಭದ ವಾರಿಜವನೆತ್ತಲಹುದು
ಬಳಸಲಹುದು ರವಿಕಿರಣೋದಕವನಸ
ದಳವರೆಘಳಿಗೆ ನಿಲ್ಲಿಸಲು ಮಾನಸವ ||2||

ಮಾರವಿರೋಧಿ ಮಾಯಾ ಮೋಹರಹಿತನ
ಪಾರ ಮಹಿಮ ಶಂಭುಲಿಂಗದೊಲವನು
ಭೂರಿಪುಣ್ಯದ ಫಲದಿಂದೆ ಪಡೆಯದೆ ಸಂ
ಸಾರಿ ಸುಮ್ಮನೆ ಗೆಲಲರಿದು ಹೃದಯವ ||3||

15. ಮರಣಕಾಲದಲ್ಲಿ ಹೊಲನ ಹರಗಣೆನುತ
ರಾಗ:ತೋಡಿ

ಸದರವಲ್ಲವೆ-ತಿಳಿಯೆ ಸದರವಲ್ಲವೆ
ಮದನವೈರಿ ತನ್ನವರ್ಗೆ ಪದುಳದಿಂದ ಕೊಡುವ ಮುಕ್ತಿ ||ಪಲ್ಲ||

ಕಳವಿಗೆಂದು ಬಂದು ತನ್ನ ನಿಳಯದೊಳಗೆ ಕೆಡುವ ಸೊಡರ
ಬೆಳಗಲವನಿಗಮಳತೆಯನು ತಳುವದೀಶನಿತ್ತನಾಗಿ ||1||

ಮರಣಕಾಲದಲ್ಲಿ ಹೊಲನ ಹರಗಣೆನುತ ಕಳವಳಿಸಿದ
ನರನಿಗಭವನೊಲಿದು ಸಾರತರದ ಸೊಗಸುಗೈದನಾಗಿ ||2||

ನೆಲಕೆ ಬಿದ್ದುದೊಂದಲರನು ಸಲಲಿ ತನಗೆನಲ್ಕೆ ಶೂಲಿ
ನಲಿದು ಶ್ವೇತನಿಗೆ ವಿಲಾಸವಲರೆ ಮನ್ನಿಸಿದನಾಗಿ ||3||

ಕಲ್ಲಿಲಿಟ್ಟು ಕಾಲಿಲೊದೆದು ಬಿಲ್ಲಿನಲ್ಲಿ ಪೊಯ್ದು ಬಿಟ್ಟಿ
ಯಲ್ಲಿ ನಡಸಿದವರನಂದದಲ್ಲಿ ಹರನಿರಿಸಿದನಾಗಿ ||4||

ಶಲಭ ಜಾಯಿಲಾನೆ ಪಂದಿ ಮೊಲನಿರುಂಪೆ ಹದ್ದು ಹಕ್ಕಿ
ಗಳನು ಶಂಭುಲಿಂಗವಮರಕುಲಕೆ ಮಿಗಿಲೆನಿಸಿದನಾಗಿ ||5||

16. ಮತಿಗೆ ಮಂಗಳವೀವುದಾವುದು
ರಾಗ : ಶಂಕರಾಭರಣ

ಸಂಗತಮಾಗಿ1ಬೋಧಿಸಿ1 ಪೇಳಿದುತ್ತರ
ದಿಂಗಿತವರಿತು ನಡೆವನೆ ಬಲ್ಲವನು ||ಪಲ್ಲ||

ದುರಿತದೊಳಧಿಕವಾವುದು ನಿಂದೆ ಜೀವನ
ವೆರಸಿದ ಮರಣವಾವುದು ಚಿಂತೆ ಕೆಡುವ
ಶರೀರದ ಸಫಲವಾವುದು ಪರಹಿತ ಕಿಂ-
ಕರವೃತ್ತಿಯಾವುದು ತನಗಳಿಯಾಸೆ ||1||

ಅಸುವಿನೋರಗೆ ಯಾವುದೆಂದಡೊಂದಭಿಮಾನ
ವೆಸೆವ ಜಾಗರಣವಾವುದು ಸದ್ವಿವೇಕ
ಶಶಿಯ ಶೀತಳದಂದವಾವುದು ಶಮೆ ಸುಧಾ
ರಸಧಾರೆ ಯಾವುದು ಮಿಗೆ ಮೃದುವಚನ ||2||

ತಳುವದೆ ಮಾಳ್ಪುದಾವುದು ಭವಹರಣವ
ಗ್ಗಳಿಕೆ ಯಾವುದು ಸುಚರಿತ್ರವೀ ಮನುಜ-
ಕುಲಜನನದ ಲಾಭವಾವುದಾನಾರೆಂದು
ತಿಳಿವುದು ವೀರವಾವುದು ಕಂತುವಿಜಯ ||3||

ಗುರುತನವಾವುದಿಳೆಯೊಳಯಾಚನೆ ಪರ-
ತರ ಸುಖವಾವುದಖಿಳಭೋಗವಿರತಿ
ವರಗುಣವಾವುದುದಾರವಚ್ಚಳಿಯದಾ
ಭರಣವಾವುದು ಬಗೆಗೊಳಿಸುವ ವಿದ್ಯೆ ||4||

ಮತಿಗೆ ಮಂಗಳವೀವುದಾವುದುತ್ತಮ ಸಂಗ
ವತಿ ನಿಷ್ಠೆವಿಡಿವುದಾವುದು ಹರಸಮಯ
ಹಿತವಾವುದಿಹಪರದೊಳು ಧರ್ಮರತಿ ಸದು-
ಗತಿ ಯಾವುದೆನೆ ಶಂಭುಲಿಂಗವಾಗಿಹುದು ||5||

17. ಎಲ್ಲರೊಡನೆ ವೈರವಿಲ್ಲದೆ
ರಾಗ: ನಾದನಾಮಕ್ರಿಯೆ

ಎಲ್ಲರೊಡನೆ ವೈರವಿಲ್ಲದೆ ಕೂರ್ಪುದೆ ಚಂದ ಮಾ ಮಾ
ತಲ್ಲಣಿಸದೆ ನೀತಿಯಲ್ಲಿರಲಾರ್ಪುದೆ ಚಂದಮಾಮಾ ||ಪಲ್ಲ||

ಹಿತವಿದಹಿತವೆಂದತಿಶಯಿಸಿ ತಿಳಿವುದೆ ಚಂದಮಾಮಾ
ಶ್ರುತಿವಿರಹಿತವಾದ ಮತವ ತಾನುಳಿವುದೆ ಚಂದಮಾಮಾ
ಮತಿಯೊಳೊಗೆದ ದುರ್ವಿಕೃತಿಯನಚ್ಚಳಿವುದೆ ಚಂದಮಾಮಾ
ಸತಿಸುತಾದಿಗಳನಿತ್ಯತೆಯೆಂದು ಪಳಿವುದೆ ಚಂದಮಾಮಾ ||1||

ಕೊರತೆಯನಾನದೆಚ್ಚರೊಳೊಂದಿ ಚರಿಪುದೆ ಚಂದಮಾಮಾ
ಪರರ ದುರ್ಗುಣಗಳ ಮರೆವುತಾದರಿಪುದೆ ಚಂದಮಾಮಾ
ಮರುಗದಾಪತ್ತಿನೊಳುರೆ ತರಹರಿಪುದೆ ಚಂದಮಾಮಾ
ತೊರೆದುದರಲ್ಲಿ ಮತ್ತೆರಗದುತ್ತರಿಪುದೆ ಚಂದಮಾಮಾ ||2||

ದುರಿತವೆಳ್ಳನಿತನಾದರು ನೇತಿಗಳೆವುದೆ ಚಂದ ಮಾ ಮಾ
ದೊರಕಲೇನವರೊಳು ಪರಿಣತೆದಳೆವುದೆ ಚಂದ ಮಾ ಮಾ
ಕರಣವನಖಿಳಸಂಸರಣದಿಂ ಸೆಳೆವುದೆ ಚಂದ ಮಾ ಮಾ
ಪರಪುಣ್ಯಲತೆಯನಾವರಿಪಂತೆ ಬೆಳೆಪುದೆ ಚಂದ ಮಾ ಮಾ ||3||

ಭವರಿಪು ಮರಳದಂದವನೊಂದಿ ಗೆಲುವುದೆ ಚಂದಮಾಮಾ
ಜವನ ದಾಳಿಯ ನೋಡಿಸುವ ಭಕ್ತಿಗೊಲಿವುದೆ ಚಂದಮಾಮಾ
ಶಿವಪದಧ್ಯಾನಲಕ್ಷ್ಯವ ನೋಡಿ ನಲಿವುದೆ ಚಂದಮಾಮಾ
ತವೆ ತನ್ನ ನಿಜವನರಿವ ಯುಕ್ತಿಗಲಿವುದೆ ಚಂದಮಾಮಾ ||4||

ದುರುಳ ಕಂತುವಿನ ಕಾತರವನು ತಡೆವುದೆ ಚಂದಮಾಮಾ
ವಿರತಿವಜ್ರದಿ ಮೋಹಗಿರಿಯ ನುಗ್ಗೊಡೆವುದೆ ಚಂದಮಾಮಾ
ಶರಣರಂಘ್ರಿಯೊಳಹಂಕರಿಸದೆ ಕೆಡೆವುದೆ ಚಂದಮಾಮಾ
ಗುರು ಶಂಭುಲಿಂಗದಿಂದುರೆ ಮುಕ್ತಿ ಪಡೆವುದೆ ಚಂದಮಾಮಾ ||5||

18. ಪರನ ಸಂಗದ ಸೊಗಸನು ಮರೆಯದೆ
ರಾಗ : ಶಂಕರಾಭರಣ

ಜಾಣನು ಲೌಕಿಕ-ಪರಮಾರ್ಥವೆರಡನು
ಮಾಣದೆ ಕೂಡಿ ನಡಿಸುತಿಹನಿಂತು ||ಪಲ್ಲ||

ತರುಣಿಯ ಮೊಲೆಯೊಂದನುಣುತಲಣುಗನನ್ಯ
ಕರದೊಳುಳಿದ ಕುಚಾಗ್ರವನೋವುವಂತೆ
ನರಜನ್ಮವಿಡಿದಿಹೆ ಭೋಗಾನುಭವದೊಳು
ಪರಲೋಕಗತಿಯ ಸಾಧನದೊಳೊಂದಿಹನು ||1||

ಕೊಳನ ಹೊಕ್ಕರೆಯೊಡಲಿನ ತಂಪು ಬಿಸಿಲಿನ
ಜಳವನು ಮಿಕ್ಕ ಮೈಯೊಳು ಕಾಣ್ಬನಂತೆ
ತಿಳಿವಿನ ಸುಖವನು ವಿಷಯಬಾಧೆಯೆನು ಸಂ
ಗೊಳಿಸುತ ಸಮಯವೊಂದರೊಳೈದುತಿಹನು ||2||

ಪರನ ಸಂಗದ ಸೊಗಸನು ಮರೆಯದೆ ನಿಜ
ಪುರುಷನೊಳೊಂದುವ ಪುಂಶ್ಚಲಿಯಂತೆ
ಗುರುಶಂಭುಲಿಂಗದ ನೆನೆಹು ನೆಲಸಿ ಬಾಹ್ಯ
ಪರಿಕರದಭಿರತಿಯನು ಪಿಂಗದಿಹನು ||3||

19. ವರಗುಣದೊಳಗಾಡಿ ಮೆರೆಯದೆ
ರಾಗ : ಸಾಳಂಗ

ಮುಕ್ತಿಕಾಂತೆಯ ರತಿ ಸುಮ್ಮನಾಗದು | ಗುರು
ಭಕ್ತರ ನಡೆನುಡಿಗಲಿಯದೆ ||ಪಲ್ಲ||

ಶ್ರುತಿ ಗುರು ಸಖರನುಕೂಲವಿಲ್ಲದೆ ಮಾಯಾ
ಸತಿಯ ಮುನ್ನಿನ ಮೋಹವಳಿಯದೆ
ಮತಿಲಯದೇಕಾಂತದೆಡೆ ಸಮನಿಸದೆ ಸಂ
ಸೃತಿ ದುಃಖದಾತಂಕವಡಗದೆ ||1||

ವರಗುಣದೊಳಗಾಡಿ ಮೆರೆಯದೆ ಸುಕೃತದ
ಕರಚಲುವೆಸೆಯುವ ಮನುಗಳ
ಸರಸ ಸಲ್ಲಾಪವಿಲ್ಲದೆ ವಿವೇಕದ ಸನ್ನೆ
ವೆರಸಿ ನೋಡದೆ ನೇಮವಿಡಿಯದೆ ||2||

ಮುದವಲರುವ ಭಾವವರಿದನುಭವಿಸದೆ
ಒದವಿ ಕರಣಬಂಧವೆಸಗದೆ
ಸದಮಲ ಶಂಭುಲಿಂಗದ ಕೃಪೆವಡೆಯದೆ
ಹೃದಯವಗಲಡೊಂದುಗೂಡದೆ ||3||

20. ಕೋಪವಂಟದ ತಪವನು
ರಾಗ : ಶಂಕರಾಭರಣ

ಬೇಡುವೆನಭವ ನಿಮ್ಮನು ಭವ ಭವದೊಳು
ಮಾಡೆನಗೊಲಿದು ಸುಗುಣಸಂತತಿಯನಿಂತು ||ಪಲ್ಲ||

ಎಡರಡಸಿದ ವೇಳೆಯೊಳು ಧೈರ್ಯವನು ಸಿರಿ
ವಡೆದು ಜೀವಿಸುವೆಡೆಯೊಳು ವಿನಯವನು
ಕಡು ಜವ್ವನದೊಳು ವಿಕೃತಿದೋರದಿಹುದನು
ಪಿಡಿದ ನೇಮವ ನೆಡೆವಿಡದತಿಛಲವನು ||1||

ಅಸುವಳಿಯಲು ದೇಹಿಯೆನಲೊಲ್ಲದಧಟನು
ಪುಸಿಯನೆಲ್ಲಿಯು ನುಡಿಯದ ಸತ್ಯವಿದನು
ಮಸುಳಿಸದಿಹ ಪುಣ್ಯಮಯ ಕೀರ್ತಿಯನು ಶಾಂತ1
ಕೊಸೆಹಹುದೆಂದು ಬಣ್ಣಿಸುವ ವರ್ತನೆಯನು ||2||

ವಿತರಣದೊಡನೆ ಭೋಗಿಸುವರ್ಥದೊದವನು
ಹಿತವಚನವೆ ತೊಡವೆನಿಪ ದಾನವನು
ಶ್ರುತಿಬೋಧನೆಯೊಳು ಪರತಿಯಿಲ್ಲ2ದರಿವನು
ನುತಿವೆತ್ತು ಕೈಸಾರುತಿಹ ಮನೋರಥವನು ||3||

ಕೋಪವಂಟದ ತಪವನು ಪರವಧುವಿನ
ರೂಪುಗಂಡೆಳಸದ ಕರಣವಿಜಯವನು
ತಾಪವಡರಿ ಕೆಡಿಸದ ಸಾರಸುಖವನು
ಕಾಪಟ್ಯವಿಲ್ಲದಾಶ್ರಮಧರ್ಮರತಿಯನು ||4||

ಧರೆಯೊಳತ್ಯಧಿಕವೆನಿಪ ಶಾಂತಿಮತವನು
ಕರುಣ ವಿದ್ಯೆಗಳುಳ್ಳ ಗುರುಭಜನೆಯನು
ಪರತರ ಮುಕುತಿದೋರುವ ಶಾಸ್ತ್ರವನು ಕಂತು
ಹರ ಶಂಭುಲಿಂಗನಿಮ್ಮಡಿಯ ಭಕ್ತಿಯನು ||5||

21. ಮಾಡಲಿಲ್ಲವೆ ತಪವ ಮಾಡಲಿಲ್ಲವೆ
ರಾಗ : ಸುವ್ವಾಲೆ

ಮಾಡಲಿಲ್ಲವೆ ತಪವ ಮಾಡಲಿಲ್ಲವೆ
ಕೂಡಿ ಸುಗುಣದೊಡನೆ ತಿಳಿದು
ನೋಡಿ ತ್ರಿವಿಧ ಕರಣದ1ಲ್ಲಿ ||ಪಲ್ಲ||

ಗುರುಭಜನೆ ಸುಕರ್ಮವೃತ್ತಿ
ಹರನ ಪೂಜೆ ಶರಣಸೇವೆ
ಪರಮ ಸಾತ್ವಿಕಂಗಳೆಂಟು
ನೆರೆದು ನೆಲಸಿ ತನುವಿನಲ್ಲಿ ||1||

ವಿನಯವನ್ಯ ಹಿತವತರ್ಕ
ವನಪಶಬ್ದವಚಲಿತಾರ್ಥ
ವನಘ ಮಂತ್ರವಾಗಮಂಗ
ಳಿನಿತು ವಿಡಿದು ವಚನದಲ್ಲಿ

ಶಮೆ ವಿವೇಕವಾತ್ಮ ವಿದ್ಯೆ
ದಮೆದಯಾ ವಿರಕ್ತಿಯೋಗ
ವಮಳರೂಪ ಶಂಭುಲಿಂಗ
ವಮರ್ದು ತೋರೆ ಸುಮನದಲ್ಲಿ

22. ದೇಶವುಂಟು ಶಂಭುಲಿಂಗವೆಂಬ
ರಾಗ : ಮಾಳವ

ಯೋಗಿಗೆ ಸಕಲ ಸಂಸಾರವದಿಲ್ಲ
ವಾಗಿ ತಿಳಿವಡದು ಪುಸಿ ನೋಡು ರಮಣಿ ||ಪಲ್ಲ||

ವರವಿದ್ಯೆಯೆಂಬ ಕುಲವನಿತೆಯುಂಟಗಲದ
ಪರಿತೋಷವೆಂಬ ಮೋಹದಣುಗನುಂಟು
ವಿರತಿಯೆಂಬನುಕೂಲ ಜನಮುಂಟು ಕ್ಷಮೆಯೆಂಬ
ಚರನುಂಟು ಶಾಂತಿಯೆಂಬ ಸಖನ ಸರಸಮುಂಟು ||1||

ನುತ ಭಕ್ತಿಯೆಂಬ ಮಾತೆಯುಂಟು ಸುಚ-
ರಿತವೆಂಬ ಪಿತನುಂಟು ಸತ್ಯವೆಂಬ ಕುವರಿಯುಂಟು
ಹಿತವಾದ ನಂಬುಗೆಯೆಂಬಾಪ್ತ ಜನರ ಸೇವೆಯುಂಟು
ಮತಿಯೆಂಬ ಗೇಹಮುಂಟಾಚಾರವೆಂಬ ಕ್ಷೇತ್ರಮುಂಟು ||2||

ದಾಸಿಯುಂಟಹಿಂಸೆಯೆಂಬ ದಾಸನುಂಟಸ್ತೇಯವೆಂಬ
ಲೇಸನೀವ ಧರ್ಮವೆಂಬ ವಾಹನಮುಂಟು
ಭಾಸುರ ಮೈತ್ರ್ಯಾದಿಯೆಂಬ ಪೌತ್ರರುಂಟು ಮುಕ್ತಿಯೆಂಬ
ದೇಶವುಂಟು ಶಂಭುಲಿಂಗವೆಂಬ ದೇವರುಂಟು ||3||

23. ಕೋಗಿಲೆ
ರಾಗ: ಕಾಂಬೋಧಿ

ದನಿದೋರು ಕರ್ಮವೆನಿಸುವ ಮಾಗೆ ಪೋದುದಿ
ನ್ನನುನಯದಿ ಗುರುಕರುಣವೆಂಬ | ಕೋಗಿಲೆ
ಘನವಸಂತವಿದೆನಗೆ ಸೊಗಸುಮಿಗೆ ಪ್ರಣವರೂ
ಪಿನ ಚಿತ್ರತರವಾದ ಕೋಗಿಲೆ ||ಪಲ್ಲ||

ದಳನಾಲ್ಕು ದಳವಾರು ದಳ ಹತ್ತು ಹನ್ನೆರಡು
ದಳ ಷೋಡಶ ದ್ವಿದಳವನಾಂತ | ಕೋಗಿಲೆ
ನಳಿನ ಕುಲದಿಂದೆಸೆವ ಚಕ್ರವೆಂಬಾರು ತಿಳಿ
ಗೊಳನ ಕೆಲದಲ್ಲಿ ಭೋರೆಂದು | ಕೋಗಿಲೆ
ಸುಳಿವ ಸರಸ್ವತಿ ಗಂಗೆ ಯಮುನೆಯೆಂದೆಂಬ ನದಿ
ಗಳ ನಡುವೆ ಚೌಕ ಮಧ್ಯದೊಳು | ಕೋಗಿಲೆ
ನಳನಳಿಸಿ ಬೆಳೆದು ಬೆಳಗುವ ಬಿಂದುವೆಂಬಿನಿದು
ದಳೆದ ಮಾಮರದ ಮೇಲಿರ್ದು | ಕೋಗಿಲೆ ||1||

ಶರಧಿಯ ಮೊರಹಿನಂತೆ ಘನಘೋಷದಂತೆ ನಿ
ರ್ಝರರವದಂತೆ | ದುಂದುಭಿ ಸ್ವನದಂತೆ | ಕೋಗಿಲೆ
ವರನಾದದಂತೆ ಘಂಟಾನಿನದದಂತೆ ಬಂ
ಧುರದ ಶಂಖಧ್ವಾನದಂತೆ | ಕೋಗಿಲೆ
ಮುರಜೆಯ ಸ್ವರದಂತೆ ವಾಸವ ಧ್ವನಿಯಂತೆ
ಮೊರೆವಳಿಯ ಝೇಂಕಾರದಂತೆ | ಕೋಗಿಲೆ
ನೆರೆದ ಕಿಂಕಿಣಿಯ ಮೆಲ್ಲುಲಿಯಂತೆ ವೀಣೆಯಿಂ
ಚರದಂತೆ ಪೊಸ ಪರಿಗಳಿಂದೆ | ಕೋಗಿಲೆ ||2||

ಯೋಗಿಗಳಿಗಣಿಮಾದಿ ಸಿದ್ಧಿಗಳು ವಾದಿಗಳಿ
ಗಾಗಮಂಗಳು ಚಂದನಾದಿ | ಕೋಗಿಲೆ
ಭೋಗಿಗಳಿಗೊಲವೀವ ಸವಿಗಲೆಯೊಳಿಹ ಪರ ವಿ
ರಾಗಿಗಳಿಗಹ ಸುಖಾಳಿಗಳು | ಕೋಗಿಲೆ
ಬೇಗದೊಳು ನಿನ್ನ ಧ್ವನಿಗೇಳಿ ಕೈಸಾರುತಿಹ
ವಾಗಿ ಗುರು ಶಂಭುಲಿಂಗವನು | ಕೋಗಿಲೆ
ಕೂಗಿ ಕರೆದೆನಗೆ ತೋರಿಸಿದೆ ನಿನ್ನಂತೆ ಸಖ
ರಾಗಿ ಮತ್ತಾರುಂಟು | ಕೋಗಿಲೆ ||3||

24. ಕುಲವೆಂಬ ತಿರಪುಗಂಭದೊಳು
ರಾಗ: ಮಾಳವ

ಯೋಗಿ ನಿಜಾನಂದದೊಳು ನುಡಿಸುವ ವೀಣೆ
ರಾಗ ರಸದ ತರಂಗಿಣಿ ನೋಡು ರಮಣಿ ||ಪಲ್ಲ||

ತನುವೆಂಬ ಹೊಳಹಿಗೆರಡು ದಿಟ್ಟಿಯೆಂಬ ಕಾಯ
ನನುವರಿದಲುಗದಂತಿರೆ ಕೀಲಿಸಿ
ಸನುಮತವಾದ ಷೋಡಶಾಧಾರವೆಂಬ ರಮ್ಯ
ಮೆನಿಸುವ ಮೆಟ್ಟುಗಳ ನೆಲೆಯನಾರೈದು ನೋಡಿ ||1||

ತಿಳಿದೇಳು ಮುಖ್ಯ ನಾಡಿಯೆಂಬ ತಂತಿಗಳನು ನಿ
ರ್ಮಲ ಮತಿಮನವಸುವಿಂದ್ರಿಯಂಗಳ
ಕುಲವೆಂಬ ತಿರಪುಗಂಭದೊಳು ಬಂಧಿಸಿ ಮೂಲ
ದೊಳಗಣ ತಾರೆಯೆಂಬ ಕಲೆಯ ಶ್ರುತಿಯನೆತ್ತಿ ||2||

ವರ ಶಂಕರಾಭರಣವನು ಮೇಳೈಸಿ ಯೋಗ
ಕರಣವೆಂಬಂಗುಲಿಯನಿಟ್ಟು ಬಾಜಿಸಿ
ಪರನಾದವೆಂಬ ಗೀತವನು ಗುರುಶಂಭುಲಿಂಗ
ವರಿದೆಂದು ಮೆಚ್ಚಿ ಮುಕ್ತಿಪದವೀಯೆ ಕೇಳಿಸುವ ||3||

25. ಸಪ್ತರೂಪವಸು ನಿರೋಧನ
ರಾಗ : ಪಾರಶಿ

ಯೋಗದಂಗವೆಂಟು ಭೇದವಾಗಿ ತೋರ್ಪವವನು ತಿಳಿವು
ದಾಗಮ ಪ್ರಮಾಣದಿಂದೆ ಮುಕುತಿಗೆಳಸುವಧಿಕರು ||ಪಲ್ಲ||

ವಿದಿತಯಮವಹಿಂಸತಾದಿ ದಶವಿಭಾಗವಹುದು ನಿಯಮ
ವದು ತಪೋವಿಧಾನವಾದಿ ಪಂಚ ಯುಗಸಮೇತವು
ಪದುಳದಾಸನವೆ ಮಹೋತ್ಪಲಾದಿ ನಿಖಿಳ ಮುಖವೆನಿಪ್ಪು
ದೊದವಿರೇಚಕಾದಿ ಸಪ್ತರೂಪವಸು ನಿರೋಧನ ||1||

ಚರಿಸುವಿಂದ್ರಿಯವನುಪಾಯದಿಂದೆ ಸೆಳೆವುದೊಳಗೆ ಪ್ರತ್ಯಾ
ಹರಣವದು ಶಿವಾಶ್ರಯದೊಳು ಚಿತ್ತವಿಹುದೆ ಧಾರಣ
ಹರಪದಾನುಚಿಂತೆ ಧ್ಯಾನವೆನಿಪುದಾಸ್ವರೂಪದಲ್ಲಿ
ಮರಳದಚಲಭಾವಮಾಗೆ ವರಸಮಾಧಿ ನಿಜವದು ||2||

ತಿಳಿಯೆ ಮೊದಲು ನಾಲ್ಕು ಬಾಹ್ಯವೆನಿಸಿ ಕಾಮ ಕೋಪ ರೋಗ
ಕಲುಷಸಂತತಿಯನು ಕೆಡಿಪವಂತರಂಗವೆನಿಸುತ
ಉಳಿದ ನಾಲ್ಕು ವಿಷಯ ಮೋಹ ವಿಮತಿ ಮರವೆಗಳನೆ ನೇತಿ
ಗಳೆದು ಶಂಭುಲಿಂಗದಂಘ್ರಿಸಂಗಸುಖವನೀವುವು ||3||

26. ಶುದ್ಧ ಚೈತನ್ಯವಾನೆಂಬುದೆ ಧ್ಯಾನ
ರಾಗ: ನಾದನಾಮಕ್ರಿಯೆ

ಪರಿವಿಡಿದು ನಿರ್ಗುಣಾಷ್ಟಾಂಗ ಯೋಗವನರಿದ
ವರಯೋಗಿಗಾನಂದಮಯ ಮುಕ್ತಿಯಹುದು ||ಪಲ್ಲ||

ತನುಕರಣ ವಿಷಯೇಂದ್ರಿಯವಿಸರವೆಲ್ಲರೊಳು ವಿರತಿ
ಜನಿಸಿಹುದೆ ಯಮವಾತ್ಮ ನಿಜದೊಲುಮೆ ನಿಯಮ
ವನಿತಾದಿ ವಿಷಯದೊಳುದಾಸೀನವಾಸನವು
ಕನಸೆಂದು ಬಾಹ್ಯವನು ಬಿಡುವದಸುನಿಯಮ ||1||

ಬಗೆಯನೊಳದೆಗೆವನುವೆ ಪ್ರತ್ಯಾಹರಣವಲ್ಲಿ
ತೆಗೆವುದರಿವಿನೋದನು ಧಾರಣವೆನಿಪುದು
ಮಿಗೆ ಶುದ್ಧ ಚೈತನ್ಯವಾನೆಂಬುದೆ ಧ್ಯಾನ
ವಗಲದಿರಲಾ ಬುದ್ಧಿಯದು ಸಮಾಧಿ ||2||

ಪೇಳಿದಿವರೊಳು ಮೊದಲಿನೈದಂಗದಿಂದಹಿತ
ಜಾಲವಳಿದಮಲತೆಯ ಚಿತ್ತವನು
ಮೇಲಣಂಗತ್ರಯದಿ ಗುರುಶಂಭುಲಿಂಗದೊಳು
ಮೇಳೈಸಲದೆ ಯೋಗ ಲಕ್ಷಣಮಹುದಾಗಿ ||3||

27. ತಡೆಯದಿದನು ನೋಡಿ ತಿಳಿವುದು
ರಾಗ: ಸುವ್ವಾಲೆ (ಸಾಳಂಗ)

ಆಸನಸ್ಥಿರನಾಗಿ ಮನವಸುವೆರೆದಕ್ಷಿ
ನಾಸಾಗ್ರದಲ್ಲಿ ನಿಂದೊಡೆ ಮುಕ್ತಿ ||ಪಲ್ಲ||

ಎಡದ ಹಿಮ್ಮಡದಿನಾಧಾರದೆಡೆಯನೊತ್ತು
ತೊಡನೆ ದಕ್ಷಿಣದ ಹಿಮ್ಮಡವನು
ಮಡಗಿ ಮೇಹನದ ಮೇಲ್ಗಡೆಯೊಳು ರುಜುವೆನಿ
ಪೊಡಲಿಂದಮಿರೆ ಸಿದ್ಧಾಸವನದು ||1||

ತೊಡೆ ಕಿರುದೊಡೆಗಳ ನಡುವೆರಡಂಘ್ರಿಗ
ಳಡಗಿರ್ದು ಸಸಿನವಾದೊಡಲಿಂದ
ಬಿಡದೆ ಕುಳ್ಳಿರೆ ಸ್ವಸ್ತಿಕಾಸನವಹುದೆಂದು
ತಡೆಯದಿದನು ನೋಡಿ ತಿಳಿವುದು ||2||

ತೊಡೆಗಳೆರಡರ ಮೇಲಡರಿ ಮಡಂಗಳು
ಬಿಡದೆ ಕೂಡಿರಲೆಡಬಲವಾಗಿ
ಕಡು ನೇರಿತ್ತಾದೊಡಲಿಂದ ಕುಳ್ಳಿರ್ಪುದಾ
ದೊಡೆ ಪದ್ಮಾಸನವೆಂದೆನಿಪುದು ||3||

ಎಡದ ಪಾದದ ಮಡವಡಿಯಾಗಿ ನಿಲೆ ಬಲ
ದಡಿ ಮಡದೆಡದ ತೊಡೆಯ ಮೇಲೆ
ಮಡಗಿರೆ ರುಜುಕಾಯದಿಂದೆ ಕುಳ್ಳಿರ್ದಡೆ
ನುಡಿವರದನು ವೀರಾಸನವೆಂದು ||4||

ತನಗಾವ ತೆರದಿಂದೆ ಜನಿಪುದು ಧೈರ್ಯವಂ
ತನುವಾಗಿ ಕುಳ್ಳಿರ್ದು ಚಲಿಸದೆ
ಮನವಸುಗಳನು ನಿರೋಧಿಸಿದಡೆ ಸುಖಾ
ಸನವದು ಗುರುಶಂಭುಲಿಂಗವೆ ||5||

28. ಹೃದಯ ತಾಣದೊಳಗಿಟ್ಟು
ರಾಗ: ಮಧುಮಾಧವಿ

ಮೂರು ಬಂಧದ ಲಕ್ಷಣವನರಿದೊಡೆ ಬಂಧ
ಮೂರಳಿದಿಹುದು ಸಕಲ ಸಿದ್ಧಿ ||ಪಲ್ಲ||

ಅನಿಲರೋಧನದಿಂದಾಧಾರವಾದಪಾನ
ದಿನಪತಿಯನು ಹೃದಯದಿ ಶಶಿ
ಯೆನಿಸುವ ಪ್ರಾಣದೊಡನೆ ಕೂಡಿ ನಡುನಾಡಿ
ಗನುಗೂಡಲದೆ ಮೂಲ ಬಂಧವು ||1||

ವರನಾಡಿ ಕಂದದೆಡೆಯೆ ನಾಭಿ ಚಕ್ರದು
ಪರಿ ಕೆಳಗೆಂಬೆರಡೆಡೆಯನು
ಪಿರಿದು ಬಂಧಿಪುದುಡ್ಡಿಯಾಣಬಂಧವಹದದು
ಜರೆ ಮರಣವನು ಜಯಿಸುತಿರ್ಕು ||2||

ಗಳ ಸಂಕೋಚವನೆಸಗಿ ತನ್ನ ಚುಬಕವ
ನಿಳುಹಿ ಹೃದಯ ತಾಣದೊಳಗಿಟ್ಟು
ಚಲಿಸದಿರಲು ಜಾಳಂಧರ ಬಂಧವಿದರಿಂದು
ಜ್ವಲಿಪಮೃತವೆ ಶಂಭುಲಿಂಗವು ||3||

29. ಭೋಗಿಯೆನಿಸದೆ ಜಗದೊಳು
ರಾಗ: ಭೈರವಿ
ಯೋಗಿಯೆಂದೆನಿಸೆನ್ನನು ವಿಷಯಸುಖ
ಭೋಗಿಯೆನಿಸದೆ ಜಗದೊಳು | ಶಿವನೆ ||ಪಲ್ಲ||

70 / ತತ್ವಪದಗಳು ಸಂಪುಟ-1

ವರಚೌಕ ಮಧ್ಯದೊಳಗೆ | ರಾಜಿಸುವ
ಪರನಾದವನೆ ಬೋಧಿಸಿ | ಪೊರಗೆ
ತರುಣಿಯನುಭವದ ನುಡಿಯ | ಕೇಳುವಾ
ತುರವಿದನು ಬಗೆಗೊಳಿಸದೆ | ಶಿವನೆ ||1||

ಚಲಿಸದಾಸನ ಮುದ್ರೆಯ | ಮೊದಲಲ್ಲಿ
ಸಲೆ ಸಾಂಗವೆನಿಸಿ ನಿಲಿಸಿ | ಬಳಿಕ
ಲಲನೆಯಾಲಿಂಗವನು | ಮಾಡುವಿನಿ
ಗಲೆಯ ಮೋಹನವೆಸಗದೆ | ಶಿವನೆ ||2||

ಮಂಡಲತ್ರಯದ ಮೇಲೆ | ದೀಪಿಸುವ-
ಖಂಡತೇಜವನೆ ತೋರಿ | ಬೇರೆ
ಪುಂಡರೀಕಾಕ್ಷಿಯಧಿಕ | ರೂಪನೆಡೆ
ಗೊಂಡು ಭಾವಿಸಲೀಯದೆ | ಶಿವನೆ ||3||

ನಡುನಾಡಿಯಗ್ರದಲ್ಲಿ | ಸಾರ ಸುಖ
ದೆಡೆಯಮೃತರಸವನೂಡಿ | ಕೂಡೆ
ಕಡು ಚಲುವೆಯಧರಸುಧೆಯ | ಸೇವನೆಯ
ಸಡಗರದೊಳೊಡವೆರಸದೆ | ಶಿವನೆ ||4||

ನವ ಹೃದಯ ಕಮಲವಲರೆ | ಬಿಡದೆ ತೀ
ಡುವ ಸುಗಂಧವನೆ ತೀವಿ | ಮಿಕ್ಕಾ
ಯುವತಿಯುಸುರೊಳು | ಗಂಪನು ವಾಸಿಸುವ
ಸವಿಗುಡದೆ ಶಂಭುಲಿಂಗ | ಶಿವನೆ ||5||

30. ನಡುವಣ ನಾದವನು ಕೇಳಿ
ರಾಗ : ಶ್ರೀರಾಗ

ಯೋಗಿಗಲ್ಲದೆ ದೊರೆವುದೆ ಪರತರ ಮುಕುತಿ ||ಪ||

ಚಿರಸುಖಾಸನತೆ ಶರೀರದ ಸಸಿನತೆ
ಕರಣನಿಕರದ ನಿಶ್ಚಲತೆ
ಮರುತಮನ ದಿಟ್ಟಿಗಳೊಂದುಗೂಡುತೆ
ವರ ಹೃದಯಾನುಸಂಧಾನತೆ ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 71

ಮಂಡಲತ್ರಯದ ತಾರಾಗ್ರದ ನಭದೊಳ
ಖಂಡ ಚಂದ್ರೋದಯವಾಗಲು
ಕಂಡು ತದೀಯ ಸುಧೆಯನು ದಣ್ಣನೆ ದಣೆ
ದುಂಡು ನಿಜಾನಂದಲೀನತೆ ||2||

ಮೂರು ಹೊಳೆಯ ನಡುವಣ ನಾದವನು ಕೇಳಿ
ವಿೂರುತದನು ವಾಗೀಶ್ವರಿಯೊಳು
ಬೇರಾಗದೊಂದೆನಿಸಿದ ಚಿತ್ತಿನೊಡನೊಂದಿ
ತೋರುವ ಶಂಭುಲಿಂಗೈಕ್ಯತೆ ||3||

31. ಚತುರಂಗುಲದ ಮಿತಿಯೊ
ರಾಗ : ದೇಶಿ

ಪರತತ್ವವದು ತನಗೆ ತಾನೆ ಗೋಚರವಹುದು
ವಿರಚಿಸಿದವೀಮೂರು ಲಕ್ಷ್ಯವರಿದಂದು ||ಪಲ್ಲ||

ತನುಮಧ್ಯವಿಡಿದಖಿಳ ಚಕ್ರಭೇದಿನಿಯಾಗಿ
ಮಿನುಗುತಿಹ ನಡುನಾಡಿಯಂತರಾಳದೊಳು
ವನಜಸೂತ್ರದ ಹವಣಿನೆಳೆ ಮಿಂಚುಗಳಿಗಧಿಕ
ವೆನಿಪ ತೇಜವನು ಮನದೊಳಗೆ ಭಾವಿಸಲು ||1||

ಕರಿದು ಪೊಗೆ ಕೆಂಪು ಸಿತ ಪೀತ ವರ್ಣಂಗಳನೆ
ಪರಿವಿಡಿದು ನಾಸಾಗ್ರದಲ್ಲಿ ಪನ್ನೆರಡು
ವರದಶಕವೆಂಟಾರು ಚತುರಂಗುಲದ ಮಿತಿಯೊ
ಳಿರಿಸಿ ದೃಷ್ಟಿಯನು ಚಲಿಸದೆ ನಿರೀಕ್ಷಿಸಲು ||2||

ಪಲವು ಶಶಿ ರವಿ ತಾರೆ ಶಿಖಿ ರನ್ನ ವೆಳಗುಗಳ
ನೊಳಕೊಂಡು ನೇಮ ಸೀಮೆಯನುಳಿದು ಮೆರೆವ
ಸುಲಭ ಗುರುಶಂಭುಲಿಂಗದ ಪಾದಪಂಕಜವ
ನಲಸದನುಸಂಧಾನಿಸುತ್ತೆ ಸುಖಮಿರಲು ||3||

72 / ತತ್ವಪದಗಳು ಸಂಪುಟ-1

32. ನಿಜಪದವೆ ತಾನೆಂಬ
ರಾಗ: ಸೌರಾಷ್ಟ್ರ

ತಾರತ್ರಯದ ವಿಚಾರವೆಲ್ಲರನು ಸಂ
ಸಾರಸಾಗರವನುತ್ತರಿಸದಿಹುದೆ ||ಪಲ್ಲ||

ಭೂತಪಂಚಕದ ಪಂಚೀಕರಣದಿಂ ಪುಟ್ಟಿ
ದಾ ತತ್ವಪಂಚವಿಂಶತಿಯವನರಿದು
ನೇತಿಗಳೆದು ನಿಜಪದವೆ ತಾನೆಂಬ ಪು
ನೀತ ಭಾವನೆಯ ಸಾಂಖ್ಯವಿದು ಪೂರ್ವತಾರೆ ||1||

ಧರಣಿಯ ತಾಣವೆರಡರೊಳು ಶಿಖಿಯ ಮಂ
ದಿರಯುಗದೊಳು ನಭದೆಡೆಯುಗಳದೊಳು
ಕರ ಶಾಖೆ ಋತುಗೂಡಿ ಬಲಿದು ನೋಡುತೆ ಕೇಳು
ತಿರೆ ಮಧ್ಯ ತಾರೆ ತಾನಿದು ಬಾಹ್ಯಮುದ್ರೆ ||2||

ಪೊರಗಣ ವಿಷಯ ವಿಭ್ರಮತೆ ಗಾಣಿಸದೆವೆ
ದೆರದಕ್ಷಿತುಂಬಿ ಸೂಸದೆ ನಿಂದ ವಾಯು
ಕರಿಗೊಂಡು ಶಂಭುಲಿಂಗದೊಳಿಹ ಮನವಿದ
ನರಿಯಲಂತರ ಮುದ್ರೆಯದಮನಸ್ಕತಾರೆ ||3||

33. ಮಂಡಲತ್ರಯದ ಮಧ್ಯದೊಳು
ರಾಗ: ಶಂಕರಾಭರಣ

ಕಣ್ಣ ಮುಂದೆ ಕಾಣಿಸುತಿದೆ ಪರವಸ್ತುವಿದ
ನಣ್ಣಗಳರಸಿ ಬೇರೆ ಬಳಲುವರದೇಕೆ ||ಪಲ್ಲ||

ಕರಿಯ ಬಿಳಿಯ ಕೆಂಪಿನರುಣೇಂದು ಶಿಖಿಯ ಸು
ಸ್ಥಿರವಾದ ಮಂಡಲತ್ರಯದ ಮಧ್ಯದೊಳು
ನೆರೆದು ತೋರುವ ನಾನಾಪರಿಯ ಬಿಂದುವಿನ ಬಂ
ಧುರ ಕಾಂತಿ ಕೋಟಾನುಕೋಟಿಯ ನಡುವೆ ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 73

ಮುಕುಳಿತಮಾಗಿ ಮಿಡುಕದಾಲಿ ರೇ
ಚಕ ಪೂರಕವಿಲ್ಲದಿಹ ಗಂಧವಹನನ್ಯ ವಿಷಯ
ವಿಕೃತಿ ಸೋಂಕದೆ ನಿಂದ ಮನವಚ್ಚಳಿಯದೊಪ್ಪು
ವಕಳಂಕಮತಿ ಮರೆಯದೆ ನಿರೀಕ್ಷಿಸಲು ||2||

ಇದಿರಿಟ್ಟು ಸಕಲವೆಲ್ಲವನು ನೋಡುವ ದಿವ್ಯ
ಹೃದಯಕಮಲಕರ್ಣಿಕಾಪೀಠದೊಳಗೆ
ಸದಮಳ ಶಂಭುಲಿಂಗವೆ ಸಚ್ಚಿದಾನಂದ
ಪದವೆನಿಸಿಹುದಾಗಿ ಪರಿಭಾವಿಸಿದೊಡೆ ||3||

34. ಬೆಳಗುತಿರ್ಪುದನು ಭಾವಿಸುವೆಡೆ ತಾನೆ
ರಾಗ : ಮಧು ಮಾಧವಿ (ಶಂಕರಾಭರಣ)

ಪರತತ್ವದಿರವನು ಕರತಳಾಮಳಕದ
ಪರಿಯಂತೆ ಕಾಣಿಸುವೆಡೆಯಾವುದೆನಲು ||ಪಲ್ಲ||

ಕಪ್ಪುರವೆರೆದಗ್ರದೊಳು ತನ್ನಿರವನು
ಕಪ್ಪುರವಿಡಿದೊಪ್ಪುಗೆಡಿಸುವನೊಳಗೆ
ಕಪ್ಪುರದೊಳಗಪ್ಪಿಗೆಣೆಯ ಮುಗಿಲ ಮಿಂಚಿ
ನೊಪ್ಪವೆ ನಿಜವೆಂದು ತಿಳಿವೆಡೆ ತಾನೆ ||1||

ಪೊರಗೆ ತೋರುವ ಸತಿ ಪತಿಗಳ ಮೇಲಣ
ಮೆರೆವಾತುಮನೆಯ ಸುಪುರದಂಬರದೊಳು
ನೆರೆ ನೀವಾರದ ಕಂಟಕದ ತನುವಿನ ಪೊನ್ನ
ತೆರನದು ತತ್ವವೆಂದರಿವೆಡೆ ತಾನೆ ||2||

ಜಲದ ಮೇಲಾಡುವ ರಾಜಹಂಸನ ಗೂಡ
ಕೆಲದ ಸಾಸಿರ ಸುವರ್ಣದ ಮಧ್ಯದಲಿ
ಸುಲಲಿತ ಶಂಭುಲಿಂಗವೆ ಕಂಜದೆಳೆಯಂತೆ
ಬೆಳಗುತಿರ್ಪುದನು ಭಾವಿಸುವೆಡೆ ತಾನೆ ||3||

74 / ತತ್ವಪದಗಳು ಸಂಪುಟ-1

35. ನದಿಗಳನೇಕದ ಜನನಿಯೊಂದರೊಳು
ರಾಗ: ಸೌರಾಷ್ಟ್ರ (ವಸಂತ)

ಯೋಚಿಸಿ ಪೇಳಿದವನಿಗುಂಟು ಮೂರು ಕಣ್ಣಿ-
ನಾ ಚತುರತೆಯುಳ್ಳದಿದೇನೆಂಬುದನು ||ಪಲ್ಲ||

ಮೊದಲೊಂದರೊಳು ಮೂವರಬಲೆಯರೆನಿಸಿ-
ಹುದು ಪುಣ್ಯ ಫಲವನು ಪಡೆವುದೊಂದರೊಳು
ಸದಮಳರು ಪುಟ್ಟುಗೆಡಿಪುದೊಂದರೊಳು
ನದಿಗಳನೇಕದ ಜನನಿಯೊಂದರೊಳು ||1||

ಒಂದರೊಳು ಬೆಸಗೊಂಬುದೊಂದರೊಳು ಪೊರೆವು
ದೊಂದರೊಳೆರಡನು ತಾನೊಂದುತಿಹುದು
ಒಂದರೊಳು ಬೆಳಗುಗತ್ತಲೆಗಳುಕದ ಪೆರ
ತೊಂದರೊಳು ಬಂದು ತನ್ನ ಮುಂದುಗೊಂಡಿಹುದು ||2||

ಹೆಣ್ಣು ಮಕ್ಕಳುಗಳೊಂದಾಟ ಮುಳಿದು ಪೊಗೆ
ವಣ್ಣದೊಂದೆರಡು ಬಟ್ಟೆಗಳನುಟ್ಟಿಹುದು
ತಣ್ಣೆಸೆವುತಜ್ಞೆಯೆನಿಪುದಾಸುರವೃತ್ತಿ
ಬಣ್ಣಿಸಿಕೊಂಬುವದದೊಂದೆರೆಡೆಯೊಳು ||3||

ತಿರುಗುತಿಹುದು ನಿಲ್ಲದೊಂದರೊಳದು ನಿಂದು
ಪರಿವುದೊಂದರೊಳೆರಡೆಂಟೆಂಬರವನು
ನೆರೆದಳತೆ ಬಂದುದೊಂದೆಡೆಯೊಳು ತೆರೆ
ದೆರೆ ತನಗದು ಭೋಗನೀವುದೊಂದರೊಳು ||4||
ಕುಂದದಾನಂದವನೀವುದದೊಂದದತಿಬಲ್ಲಿದರ
ಸಂದು ಕಳೆವಡೆದಿಹುದದೊಂದೆಡೆಯೊಳು
ಮುಂದನಾಡಿತೋರ್ಪುದೊಂದರೊಳಾಡದಿಹುದದು
ಸಂದು ಶಂಭುಲಿಂಗದೊಲವಿತ್ತುದೊಂದರೊಳು ||5||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 75

36. ಕರುಣರಸವಾವುದರ ಕಡೆಯಿಂದಲಹುದು
ರಾಗ : ದೇಶಿ
ನೀನರಿದು ನೀರೆ ಪೇಳೆನಗೆ ಕಣ್ದೆರಪಾಗಿ
ನಾನೀಗಳೊಂದೊಂದನೊಲಿದು ಕೇಳುವೆನು ||ಪಲ್ಲ||

ಕರಣಾದಿ ಕಾಲಾಟವೇನೇತರಿಂದಹುದು
ಹರನ ತನುವೆಂಟಗಲದೆಲ್ಲಿ ಕೂಡಿಹವು
ಎರಡನೆಯ ಮಾತು ಮೈವೆತ್ತಿರ್ಪದಾವ ನೆಲೆ
ಕರುಣರಸವಾವುದರ ಕಡೆಯಿಂದಲಹುದು ||1||

ಶಿವನು ಶಕ್ತಿಗಳೆರಡು ಕಾಣಿಸುತ್ತಿಹವೆಲ್ಲಿ
ಶಿವನ ಚಿತ್ಪದವನರುಪುವ ಮಾರ್ಗವೇನು
ಶಿವಯೋಗ ಮುದ್ರಾನುಭವದ ಬೀಡಾವುದು
ಶಿವಲಿಂಗದೆಡೆಯನೇನೆಂದು ಪೇಳುವರು ||2||

ಶರಿರವಿಡಿದರ ವಿಷಯಭೋಗಾಶ್ರಯವೇನು
ಕರಪೀಠದಿಷ್ಟವೆನಿಸುವ ಶಂಭುಲಿಂಗವು
ಗುರುಮತದೊಳಾವದೆಸೆಯಿಂದ ಬಂದುದು ಮನದ
ಪರಿಣಾಮ ಪರವಶವದೆಲ್ಲಿ ಸೂಚಿಪುದು ||3||

37. ರಂಜಿಸುವದಿದು ನಿಜವೆಂಬುದ
ರಾಗ : ಸೌರಾಷ್ಟ್ರ (ಸಾವೇರಿ)

ನಿನ್ನ ಕಣ್ಣಿಂದ ಕಾಣೆಲವೊ ನೀನರಿವೆಂಬ
ಸನ್ನೆಯನನ್ಯಭಾವನೆಯಳಿದು ||ಪಲ್ಲ||

ಮೂರು ಬಣ್ಣಗಳು ಗುಣಾಕ್ಷರ ದೇವತೆ
ಮೂರು ಕಾಲವಸ್ಥೆ ತನು ಜೀವರು
ಮೂರು ವೇದಾತ್ಮಾದಿಗಳು ದೃಶ್ಯವಾಗಿಂತು
ತೋರುತಿರ್ಪವು ನೀನೆ ದೃಶಿಯೆಂಬುದ ||1||

76 / ತತ್ವಪದಗಳು ಸಂಪುಟ-1

ರವಿ ಸೋಮ ಶಿಖಿ ಮಂಡಲದ ಕಾಂತಿಯಿಂದೆ ತೋ
ರುವವೆಂತು ಘಟಪಟಾದಿಗಳಂತುಟು
ವಿವಿಧ ತತ್ವಂಗಳು ನಿನ್ನ ಬೆಳಗಿನಿಂ
ದವೆ ರಂಜಿಸುವದಿದು ನಿಜವೆಂಬುದ ||2||

ಸಕಲಜ್ಞನಖಿಳೇಂದ್ರಿಯಾದ್ಯನಮಳಯೋಗಿ
ನಿಕರಹೃದಯವಾರಿಜ ಹಂಸನು
ಸಕಲಾರ್ಥಸಾಧಕನಹ ಶಂಭುಲಿಂಗವೆ
ಸಕಲಾನುಭಾವದಿ ನೀನಹುದೆಂಬುದು ||3||

38. ಮುಕ್ತನಿರವ ನೋಡು ರಮಣಿ
ರಾಗ : ವಡ್ಡಿ (ಭೈರವಿ)

ಬಹುಕೃತ್ಯವಳಿದಾತ್ಮಯೋಗನಿದ್ರೆಯೊ
ಳಿಹ ಮುಕ್ತನಿರವ ನೋಡು ರಮಣಿ ||ಪಲ್ಲ||

ವರ ವಜ್ರಾಸನದಿಂದೆ ಸಮನೆನಿಪ ಸು
ಸ್ಥಿರವಾದ ತನುವೆಂಬ ಸಜ್ಜೆವನೆಯ
ಕರಣನಿಕರವೆಂಬ ಬಾಗಿಲನೆಲ್ಲವ
ನಿರದೆ ಷಣ್ಮುಖಿಯೆಂಬ ಕದವನಿಕ್ಕಿ ||1||

ನಡುನಾಡಿ ಗಂಭದೊಳು ಮೂಲಶಿಖಿಯೆಂಬ
ಸೊಡರ ಬೆಳಗನೆತ್ತಿ ಬ್ರಹ್ಮರಂಧ್ರ
ದೆಡೆಯಣಂಬುಜವೆಂಬ ಸಿರಿಮಂಚವ
ನಡರಿ ಪರಮಶಾಂತರೊಡನೊರಗಿ ||2||

ಬಳಿಕ ಶಾಂಭವಿ ಮುದ್ರೆಯಿಂದೆ ಲೋಚನಂ
ಗಳನೊಯ್ಯನರೆ ಮುಚ್ಚಿ ಮೇಲೆ ಕವಿವ
ಬೆಳಗಿನುನ್ಮನಿಯೆಂಬ ಸುಖಸುಪ್ತಿಯ
ಚ್ಚಳಿಯದೆ ಗುರುಶಂಭುಲಿಂಗವೆನಿಸಿ ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 77
39. ನಾನು ನೀನದಿದೆಂಬುದೇನು ತೋರದೆ
ರಾಗ : ಚೌಪದಿ (ಸಾಳಂಗ)

ಪರಿಭಾವಿಸಲು ನಾಲ್ಕುತೆರದೊಳೀ ಮನವೆ ಸಂ
ಚರಿಸುತಿರ್ಪುದು ಪೇಳ್ವೆನದನಿಂತು ||ಪಲ್ಲ||

ಪದುಳಮಿರದೆ ಕಾಲತ್ರಯದೊಳು ವಿಷಯ ಸಂ
ಪದವನೆಳಸಿ ಚಿಂತೆಗೊಳಗಾದ
ಒದವಿ ತಾಮಸ ಹೃದಯದ ಹೀನವೃತ್ತಿಯೆಂ
ಬುದು ತಾನೆ ವಿಕ್ಷಿಪ್ತವೆನಿಸುವುದು ||1||

ಯೋಗದೊಳಂತರಂಗದೊಳೊಮ್ಮೆ ಬಾಹ್ಯದ
ಭೋಗ ಸಂತಾನ ವಿಧಿಯೊಳೊಮ್ಮೆ
ರಾಗಿಪ ರಾಜಸವಾದ ಚಿದ್ಗತಿಯೆ ಗ
ತಾಗತವಿದು ಮಧ್ಯವೆನಿಸುವದು ||2||

ಪೆರತೊಂದು ವಿಷಯದೊಳೆರಗದಂತರಮಾಗಿ
ಮೆರೆವ ತತ್ವದೊಳೆಡೆಯುಡಗದೆ
ಕರಿಗೊಂಡು ಸತ್ವದುತ್ತಮ ಬುದ್ಧಿನಿಲಲದ
ನರಿಯೆ ಸಂಶ್ಲಿಷ್ಟವೆಂದೆನಿಸುವುದು ||3||
ನಾನು ನೀನದಿದೆಂಬುದೇನು ತೋರದೆ ಸಚ್ಚಿ
ದಾನಂದ ಬೋಧಾನುಭವದೊಳು
ಮಾನಸವಡಗಿ ಸುಷುಪ್ತನಂತಿರಲು ಸ್ವ
ಲೀನವತ್ಯಧಿಕ ನಿರ್ಗುಣವಿದು ||4||
ಇವರೊಳುತ್ತಮವೆನಿಸುವ ಮೂರನೆಯದಾಗಿ
ಹವಣಿಸಿ ನಿಂದ ಚೇತನವನು
ತವೆ ತುರಿಯಾತ್ಮಕವನೆ ಮಾಡಿ ಶಂಭುಲಿಂ
ಗವೆ ತಾನಾದಿರವದು ನಿಜಮುಕ್ತಿ ||5||

78 / ತತ್ವಪದಗಳು ಸಂಪುಟ-1

40. ಕರ ಕಂಜದೊಳು ಕಾಣಿಸಿತು
ರಾಗ : ಕಾಂಬೋಧಿ (ಭೈರವಿ)
ಪರತರ ಶಿವಲಿಂಗವೆಳಸಿ ನಿನಗಾಗಿ
ಕರ ಕಂಜದೊಳು ಕಾಣಿಸಿತು ಯೋಗಿ ಯಜಿಸು ||ಪಲ್ಲ||

ಮೊದಲ ಪೀಠವೆ ಬಿಂದುವಾಗಿ ಮೇಲೆ ನಿಂದೆ
ಸೆದ ಪೀಠವದು ನಾದವಾಗಿ ಗೋಮುಖವೆ
ಸದಮಳ ಕಳೆಯಾಗಿ ಸಕಲಾತೀತನೆ ಲಿಂ
ಗದ ನಿಜವಾಗಿರಲದರೊಳುಜ್ವಲಿಪ
ತರುವಿಸ್ತಾರವನೊಳಕೊಂಡು ಬೀಜದ
ಪರಿಯಂತರಾರಧ್ವಗಳಿಂಬುವಡೆದ
ಪರಬೊಮ್ಮಕಾಶ್ರಯವಾಗಿಹ ನಿಜಶಕ್ತಿ
ವೆರಸಿ ತನಗೆ ತಾನಾಧಾರಮಾಗಿರ್ಪ ||2||

ಮೂರು ಮಂಡಲವನುಚ್ಚಳಿಸಿ ಗುಣವರ್ಣ
ಮೂರನು ವಿೂರಿ ಬೋಧಾಮೃತ ಮಾತ್ರವಾಗಿ
ತೋರುವ ಗುರುಶಂಭುಲಿಂಗವದು ತಾನು ನಿಜವಾಗಿ
ಬೇರೆನಿಸದೆ ನಿನ್ನ ಕಣ್ಣ ಮುಂದಿಹುದು ||3||

41. ಚಾರು ಚಿತ್ಕಲಾಪ್ರಪೂರ್ಣ ಶಂಭುಲಿಂಗವೆ
ರಾಗ : ಫಾರಶಿ
ಪ್ರಾಣಲಿಂಗವಿದನು ಗುರುವಿನಾಣತಿಯೊಳು ಕೇಳಿ ನೋಡಿ
ಮಾಣದೇಕಚಿತ್ತದಿಂದೆ ಜಾನಿಪನೆ ಕೃತಾರ್ಥನು

ಅಸುವೆ ರವಿಯಪಾನಮಿಂದುವೆನಿಪುದಿವರೊಳಗಲದೊಂದಿ
ಮಿಸುಪಸಾಂತಷಾಂತಮಾದ ಶೈವಶಕ್ತಿ ಬೀಜದ
ಬೆಸುಗೆಯಾದ ತಾಣದೇಕವರ್ಣದಖಿಳ ವೃತ್ತಿಮಯದ
ಪೆಸರುದಳೆದು ಶ್ರವಣವಿಷಯಮಾದ ಪರಮನಾದವೆ ||1||

ಮೂಲ ಲಿಂಗ ನಾಭಿ ಹೃದಯ ಕಂಠ ಕೂರ್ಚ ಗೋತ್ರ ಮೊತ್ತ
ಜಾಲದಂಬುಜಾಕ್ಷರಾದಿ ದೈವಮಂತ್ರ ಶಕ್ತಿಯ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 79

ಮೇಳದೊಡನೆ ಕೆಂಪು ಮಿಂಚು ರನ್ನ ಚಿನ್ನ ಸೊಡರು ಚಂಚ
ಲಾಲತಾಗ್ನಿ ದೀಪ್ತಿರೂಪದೋರ್ಪ ದಿವ್ಯಬಿಂದುವ ||2||

ಪಲವು ವಿವರವಾಂತ ಕುಂಭದೊಳಗಣಚಲದೀಪದೊಂದು
ಬೆಳಗು ಮಸಗುವಂತೆ ದೇಹ ಕರಣನಿಕರ ಮುಖದೊಳು
ಪೊಳೆದು ವಿಶ್ವದೃಶ್ಯವೀಥಿಗಳನು ಬೇರೆ ಬೇರೆ ತೋರ್ಕೆ
ಗೊಳಿಪ ಚಾರು ಚಿತ್ಕಲಾಪ್ರಪೂರ್ಣ ಶಂಭುಲಿಂಗವೆ ||3||

42. ಕರಹೃದಯದ ಹವಣೆನಿಸದೆ
ರಾಗ : ಫಾರಶಿ (ದೇಶಿ)
ಭಾವಲಿಂಗವನೆ ಬಿಡದೆ ನೀನು | ಪರಿ
ಭಾವಿಸು ಭೇದವಿಲ್ಲದೆ ಯೋಗಿ ||ಪಲ್ಲ||

ಗುರುಮಂತ್ರ ಶಕ್ತಿಯಿಂದುದಿಸದೆ ಯೋಗ
ಕಣರಮಥನದೊಳುಜ್ವಲಿಸದ
ಕರಹೃದಯದ ಹವಣೆನಿಸದ ನಿತ್ಯ
ಪರಿಪೂರ್ಣಾನಂದವಚ್ಚಳಿಯದ ||1||

ದೀಪವಾದೀಪದ ಕಿರಣವ | ತಾನೆ
ವ್ಯಾಪಿಸಿ ತೋರುವ ಪ್ರಭೆಯಂತೆ
ರೂಪಿಸಿ ಬೆಳಗುವ ಇಷ್ಟಪ್ರಾಣ | ಲಿಂಗಾ
ರೋಪವಿಲ್ಲದ ನಿರುಪಾಧಿಯ ||2||

ಸುಕರದರ್ಚನೆ ಧ್ಯಾನವೆಸಗಲು | ತೋರ್ಪ
ಸಕಲಾಸಕಲನಿಷ್ಕಲಂಗಳ
ನಿಕರ ವಿಷಯ ವಿಕಲ್ಪನೆಗೂಡ | ದೊಪ್ಪು
ವಕಳಂಕ ನಿತ್ಯನಿರ್ಮಲವಾದ ||3||

ಕುರುಹುವಡೆದು ಬಣ್ಣ ಬಗೆಯಾಗಿ
ಬರಿ ಬಳಕೆಯೊಳೊಂದದವಿರಳ | ದೀಪ್ತಿ
ಪೊರಗೊಳಗಣ ನೇತ್ರ ಮಾನಸ | ದಿಂದೆ
ಕರಿಗೊಂಡು ವಿಕೃತಿಯೊಂದಿಲ್ಲದ ||4||

80 / ತತ್ವಪದಗಳು ಸಂಪುಟ-1

ಸ್ಥೂಲ ತತ್ವಾತ್ಮಕ ಜೀವನ | ವೃತ್ತಿ
ಜಾಲವಂಟದ ಸೂಕ್ಷ್ಮಾಂತರದೊಳು
ಮೇಳವಿಸದ ಸದಮಳ ಪರ | ಮಾನು
ಕೂಲದಿಂದಖಿಳ ಸಾಕ್ಷಿಕಮಾದ ||5||

ನೋಟದ ಸಮರತಿ ಕೂಟದ ಮೇಲೆ
ವಿೂಟೆನಿಸುವ ಪರವಶನಂತೆ
ನಾಟಿಸುತಿಹ ರೂಪುರುಚಿಗಳ ಮೀರಿ
ಸಾಟಿದೋರದ ತೃಪ್ತಿಮಯವಾದ ||6||

ತನುಕರ್ಮವನುವಾಯುಜಯವನು ಹಾರ
ದನುಭವ ಮಾತ್ರದೊಳಪರೋಕ್ಷ
ವೆನಿಸುವ ಗುರುಶಂಭುಲಿಂಗದಾ ನಿಜ
ದನುವಿನ ಚಿನ್ಮಾತ್ರವೆನಿಸುವ ||7||

43. ಮಾಯೆಯನು ಮೀರಿ ಕರ್ಮವನು ಸೋಂಕದೆ
ರಾಗ : ದೇಶಿ

ಆವ ಮತದವರರಿವರಾಗವನುಳಿದು ಪರಿ
ಭಾವಿಸಲು ಸಕಲ ಜಗದಾದಿ ಲಿಂಗವನು ||ಪಲ್ಲ||

ಕಲೆ ವರ್ಣ ಪದ ಮಂತ್ರ ಭುವನ ನಿರ್ಮಳ ತತ್ವ
ಕುಲವೆನಿಸಿ ಲಯಭೋಗವಧಿಕಾರವೆಂಬ
ಪಲವವಸ್ಥೆಯನೈದಿ ಪರಮ ಪತಿಗಾ ಪೆಸರು
ಗಳನುಂಟು ಮಾಡುವತಿಶಯದ ಬಿಂದುವನು ||1||

ಹರನ ಬಹುಕೃತ್ಯದೆಡೆಯೊಳು ಪರಿಗ್ರಹಶಕ್ತಿ
ವರಲಿಂಗ ಪೀಠವಮಳಕ್ರಿಯಾರೂಪು
ಪರೆಮೊದಲೆನಿಪ ನಾಲ್ಕುನುಡಿವಳಿಯೊಳೂಲವಿತ್ತು
ಪರಿಪೂರ್ಣದೇಕವೆನಿಸುವ ಕುಂಡಲಿಯನು ||2||

ಮಾಯೆಯನು ಮೀರಿ ಕರ್ಮವನು ಸೋಂಕದೆ ಮಲದ
ಸಾಯಸವನುಳಿದ ವಿಜ್ಞಾನ ಕೇವಲರ
ವಾಯದ ವಿವರ್ತಪರಿಣತೆಯುಳಿದು ಕಾರ್ಯಸಮು
ದಾಯವನು ವೃತ್ತಿಯೊಳು ಪಡೆವಂಬರವನು ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 81

ತನಗಭವನೋರ್ವನಲ್ಲದೆ ಮಿಕ್ಕಿನಣುಕರ್ತೃ
ತನವಿಲ್ಲದಖಿಳ ದೀಕ್ಷಾಪ್ರತಿಷ್ಠೆಯೊಳು
ವಿನುತ ಸಿದ್ಧಿಗಳ ಸಾಧನದೆಡೆಯೊಳಧಿಕರಣ
ವೆನಿಸಿ ತಾನವನುಭವಿಸುವ ಬ್ರಹ್ಮವಿದನು ||4||

ತಿಳಿದು ತಂತ್ರಾಂತರವನೆಳಸಿ ದೀಕ್ಷಿತರಾಗಿ
ಕಳೆದು ಮಾಯಾಕರ್ಮಪಾಶಯುಗಳವನು
ಬಳಿಕ ಮುಕ್ತಿಯನೈದಿದವರೆಲ್ಲರನು ತನ್ನ
ಕುಳದ ಭೋಗಿಗಳೆನಿಸಿ ತಡೆವ ಕುಟಿಲೆಯನು ||5||

ನವಚಕ್ರದೊಳು ಮಂಡಲತ್ರಯದ ಮಧ್ಯದೊಳು
ಹವಣಿಡಿದ ಬೆಳಗು ಬಹುವಿಧನಾದವೆಂಬ
ಸವಿದೋರಿ ಯೋಗಿಗಳಿಗಾನಂದವನು ಮಾಳ್ವ
ಶಿವನ ತನುವೆನಿಪ ನಿಜವಾಗೀಶ್ವರಿಯನು ||6||

ನಿರುಪಮ ನಿರಾಲಂಬ ನಿರುಪಾಧಿಯೆಂದೆನಿಪ
ಗುರುಶಂಭುಲಿಂಗವನು ತನ್ನ ನೆಡೆವಿಡದ
ವರ ಯೋಗಿಗಳ ಮನೋಭಾವ ದೃಷ್ಟಿಗಳಲ್ಲಿ
ಕರತಳಾಮಳಕವೆನೆ ತೋರ್ಪವಿದ್ಯೆಯನು ||7||

44. ಸುರಸವಾದಂತೆ ಪತಿಶಂಭುಲಿಂಗ
ರಾಗ : ದೇಶಿ (ಪೂರ್ವಿ)

ಸತಿಪತಿಗಳಿವರ ಸಮರತಿಸುಖದ ಬಾಳುವೆಗೆ
ಪ್ರತಿಯುಂಟೆ ಲೋಕದೊಳು ನೋಡೆ ಲಲಿತಾಂಗಿ ||ಪಲ್ಲ||

ಕಂಗಳೂರಿನ ಸೋಮಸೂರ್ಯ ವೀಧಿಯ ನಡುವೆ
ಸಿಂಗರದ ನೀಲದರಮನೆಯ ಮಧ್ಯದೊಳು
ರಂಗುವೆಳಗೆಸೆವ ಸಜ್ಜೆಯ ಶಕುನಿ ಮಂಚದೆಡೆ
ಗಂಗವಿಸಿ ಬಂದು ಭರದೊಳು ಜವಳಿಗೊಂಡು ||1||

ನಿರಿ ಸಡಿಲುತಿರೆ ತಾನೆ ತೊಟ್ಟ ಕಂಚುಕಗಳೆಯೆ
ನೆರೆ ತವಕವದರಿಂದೆ ಮುಂದುವರಿಯೆ
ಮುರಿದೊಡೆ ಲಜ್ಜೆ ಗಾಢಾಲಿಂಗನದ ಸೊಗಸು
ದೊರೆಯೊಳಾಳುತ್ತೆ ಸವಿಗಲೆಯೊಳೇಳುತ್ತೆ ||2||

82 / ತತ್ವಪದಗಳು ಸಂಪುಟ-1

ಬೆರೆಸಿ ಬೇರೆನಿಸದೆರಡಾಲಿಕಲ್ಲುಗಳೇಕ
ಸುರಸವಾದಂತೆ ಪತಿಶಂಭುಲಿಂಗ
ಶರಣ ಸತಿಯ ಕೂಡಿ ಪರತರಾನಂದದೊಳು
ಷರವಶವನೈದಿಹುದನುಪಮಿಸಲು ಬಹುದೆ ||3||

45. ಗುರುಕುಲದಿರವನು ಪೇಳುವೆನಿಂತೊಲಿದು
ರಾಗ: ಸಾಳಂಗ ನಾಟ
ಆರು ತೆರನಾದ ಭಾವಕರಿಗನುಗುಣವಾಗಿ
ತೋರುವ ಗುರುಕುಲದಿರವನು ಪೇಳುವೆನಿಂತೊಲಿದು ||ಪಲ್ಲ||

ಆಕರುಷಣ ವಶ್ಯಾದಿಗಳಿಂದಿಹ ಸುಖವನು ಮೇಲೆ
ಶೋಕವನೈದಿಸುವವನೆ ನಿಪೇಧಗುರುವಹನು
ಬೇಕೆನಿಸುವ ಸಂಪದವನು ತನಗಿಲ್ಲಿ ಮುಂದೆ ಪರ
ಲೋಕದ ಲೇಸನು ಕೊಡುವನೆ ಕಾಮ್ಯಗುರುವಹನು ||1||

ಭೇದಗತಿಗಳು ಹೇಯಮೆಂದು ಶಮೆದಾಂತ್ಯಾದಿ
ಸಾಧನವನು ಕುರುಹಿಡುವನೆ ಸೂಚಕ ಗುರುವಹನು
ವೇದಸನುಮತವೆನಿಸಿದ ತತ್ವಸಂಪ್ರೀತಿಯನೆ
ಬೋಧಿಸಿ ತಿಳುಹುವ ಕುಶಲನೆ ವಾಚಕ ಗುರುವಹನು ||2||

ಜೀವ ಪರಮತುರಿಯ ಪರವಸ್ತುಗಳೇಕತ್ವದನು
ಭಾವವನರುಹಿಸುವಾತನೆ ಕಾರಕಗುರುವಹನು
ಪಾವನಾತ್ಮಕ ಶಂಭುಲಿಂಗವೆ ತಾನಾದ ನಿಜ
ಕೈವಲ್ಯಪದವೀವನೆ ವಿಹಿತ ಗುರುವಹನು ||3||

46. ಸುಮ್ಮನಾಗದು ವಿಧಿಯೊಳೊಂದದೆ ಮುಕುತಿ
ರಾಗ : ಶ್ರೀರಾಗ
ಸುಮ್ಮನಾಗದು ವಿಧಿಯೊಳೊಂದದೆ ಮುಕುತಿ ||ಪಲ್ಲ||

ಇದು ನಿತ್ಯವಿದನಿತ್ಯವೆಂಬುದನರಿಯದೆ
ಹೃದಯದ ಭೋಗೇಚ್ಛೆ ದೊರೆಯದೆ
ವದವಿ ಸಮಾಧಿ ಸಾಧನವಾರು ನೆರೆಯದೆ
ಸದುಗತಿಯಾಸೆಯೊಳುರಿಯದೆ ||1||
ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 83

ಗುರುಪಾದ ಸೇವೆಯನೊಲವಿಂದೆ ಮಾಡದೆ
ವರನಿಗಮವ ನೋಡಿ ಪಾಡದೆ
ಶರೀರ ಮುಂತಾದುಪಾಧಿಗಳನೀಡಾಡದೆ
ಪರಮಜೀವರನೊಂದುಗೂಡದೆ ||2||

ಸ್ವಪರವೆಂಬುಭಯ ಭಾವನೆದೋರ್ಕೆಯಡಗದೆ
ವಿಪರೀತ ಭಾವನೆಯಳಿಯದೆ
ಉಪಮೆಗೈಯದ ಶಂಭುಲಿಂಗವಾಗುಳಿಯದೆ
ಸುಪಥವೀತೆರನೆಂದು ತಿಳಿಯದೆ ||3||

47. ಬೊಮ್ಮವನರಿವೆವೆಂದು ಬಳಲುವರು
ರಾಗ : ಪಹಡಿ (ದೇಶಿ)

ಬೊಮ್ಮವನರಿವೆವೆಂದು ಬಳಲುವರು
ತಮ್ಮನತಿಗಳೆದನ್ಯವನೆ ನೋಡಿ ಮನುಜರು ||ಪಲ್ಲ||

ತಿಳಿದು ಮೊದಲು ತತ್ವಕುಳವೆಲ್ಲವನು ನೇತಿ
ಗಳೆದನಾತ್ಮಕನೆಂದು ಬಳಿಕವನು
ವಳಗಧಿಕರಣವೆನಿಪ ನಿರ್ವಿಕಾರ ಸಂವಿ
ದುಳುಮೆ ತಾವೆಂಬ ವಿವೇಕವ ಬಳಿವಿಡಿಯಿದೆ ||1||

ಜಾಗರಣದೊಳು ಕನಸಿನೊಳು ನಿದ್ರೆಯೊಳು ಬೇ
ರಾಗಿ ಬಾಧೆ ಪಡುವ ವಿಶ್ವದಿ ಜೀವರು
ಆಗುಹೋಗಿನೊಳಗಲ್ಲದನುಪಮಾನಂದ ಸುಧಾ
ಸಾಗರವೆ ತಮ್ಮ ನಿಜವೆಂದು ಬಗೆಯದೆ ||2||

ಸ್ವಗತ ಸಜಾತಿ ವಿಜಾತಿಗಳೆಂಬ ಭೇದಭಾವ
ನೆಗಳು ಸಹಜವಾಗಿ ತಮಗಿಲ್ಲದೆ
ಗಗನದಂತವಿರಳವಹ ಶಂಭುಲಿಂಗದೊಡ
ನಗಲಿಕೆ ತಮಗಿಲ್ಲದನುಭೂತಿ ಜನಿಸದೆ ||3||

84 / ತತ್ವಪದಗಳು ಸಂಪುಟ-1

48. ನಿನ್ನ ನಿಜವಿದನೆ ತಿಳಿ
ರಾಗ : ಪಹಡಿ
ನಿನ್ನ ನಿಜವಿದನೆ ತಿಳಿ ಬೇ | ರೆನ್ನದೆಲೆ ಮನುಜ ||ಪಲ್ಲ||

ಇದಮೆನಿಸಿಹುದಾ |ವುದದಕೆ ತಾನಾಶ್ರಯ
ಪದವಾಗಿ ಬಾಧೆಯೊಂದದೆ ತೋರುತಿಹ ಸತ್ತೆ ||1||

ಮೂರವಸ್ಥೆಗಳೊಳು ತೋರುವಖಿಳವನು
ಬೇರಿಟ್ಟರಿವುದಾಗಿ | ವಿೂರಬಾರದ ಚಿತ್ತೆ ||2||

ಎಲ್ಲವನಾರೈದು ನೋಡಲಿಲ್ಲೆನಿಸಿದ ನೇಹ
ವೆಲ್ಲಿ ನೆಲಸಿಹುದು ತ | ನ್ನಲ್ಲಿಯದರಿಂದೆ ಸುಖ ||3||

ಪ್ರಾಗಭಾವ ಮೊದಲಾದವೀ ಘಟಾಳಿಗಳಿಗಲ್ಲ
ದೇಗೈದು ತನ್ನೊಳಗಿಲ್ಲ | ವಾಗಿ ವಿಚಾರಿಸೆ ನಿತ್ಯ ||4||

ಗಗನಾದಿಗಳು ತನ್ನೊ || ಳೊಗೆದ ಕಾರಣದಿಂದೆ
ಮಿಗೆ ಪೂರ್ಣಪದವಿಂತು ಬಗೆ ಶಂಭುಲಿಂಗವೆ ||5||

49. ನೋಡು ನೋಡು ನೀನೆ ಪರವೆಂದು
ರಾಗ : ನಾದನಾಮಕ್ರಿಯೆ
ನೋಡು ನೋಡು ನೀನೆ ಪರವೆಂದು ತತ್ವ
ಗೂಡದೆ ವಿಲಕ್ಷಣನಾಗಿ ನಿಂದು ||ಪಲ್ಲ||
ಅದಿದೆನ್ನದಿದಿರಿಟ್ಟುದಳಿದು
ಪೋಪುದಿದಸತ್ಯವೆಂದು ನೇತಿಗಳೆದು
ಮೊದಲ ವಾಸನೆಯ ಹಮ್ಮಳಿದು
ನಿಜ ಪದವಖಂಡಿತವೆಂದು ತಿಳಿದು ||1||

ನೆನಸಿನಖಿಳ ಜಗವೆಲ್ಲ ಪುಸಿ
ಕನಸಿನಂದದಿ ನಿತ್ಯವಲ್ಲ
ಜನನಾದಿ ವಿಕೃತಿಯೊಂದಿಲ್ಲ ನಿನ
ಗೆನುತಿವೆ ಶ್ರುತಿಕುಲವೆಲ್ಲ ||2||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 85

ಧರೆಮೊದಲಾದ ಮೂಲ ಬಿಂದು ತಡೆ
ಚರವಚರಾದಿಯೊಳಗೆಂದು
ಬೆರಸದಾಶ್ರಯವಾಗಿ ನಿಂದು ತೋರ್ಪ
ಗುರುಶಂಭುಲಿಂಗವೆ ನೀನೆಂದು ||3||

50. ಪರಂಜ್ಯೋತಿ ಸ್ವರೂಪ ನೀನಾಗುತಿಂತು
ರಾಗ: ತೋಡಿ
ಭವಮಾಲೆಗೊಳಗಾದೆನೆಂಬುದೆ ಪುಸಿ ನಿನ್ನ
ವಿವರಿಸಿ ನೋಡು ನೋಡೆಲೆ ಜೀವನೆ ||ಪಲ್ಲ||

ಪೊರಚಿಂತೆಯಳಿದದನಾಹತ ನಾದದೊಳು ಬುದ್ಧಿ
ಕರಿಗೊಂಡು ಪರಮಶಾಂತಿಯನೈದಲು
ಮಿರುಗುವ ಬೆಳಗಿನ ಬಳಗವನೊಳಕೊಂಡು
ಮೆರೆವ ಶಿವಾತ್ಮ ನೀನಾಗುತಿಂತು ||1||

ನೇತಿಗಳೆದು ಕಾಯ ಕರಣ ಕಾರ್ಯಂಗಳ
ಭೂತಕಾರಣ ಪಂಚಕವನುಳಿದು
ನೀತಿ ಭೀತಿಯ ವಿೂರಿ ನಿಂದು ನೋಡಲು ಪರಂ
ಜ್ಯೋತಿ ಸ್ವರೂಪ ನೀನಾಗುತಿಂತು ||2||

ಅನಘನದ್ವಯ ನಿತ್ಯಮುಕ್ತ ಸತ್ಯಾನಂದ
ಜನನಾದಿ ರಹಿತ ಮಾಯಾವಿದೂರ
ನೆನಿಪ ತತ್ವಮಸೀತಿಯೆನೆ ವೇದವಚನವು
ಘನಶಂಭುಲಿಂಗ ನೀನಾಗುತಿಂತು ||3||

51. ಅರಿವೆ ಬರಿಯರಿವೆ ನೀನು
ರಾಗ : ತೆನಗು ಕಾಂಬೋಧಿ
ಅರಿವೆ ಬರಿಯರಿವೆ ನೀನು
ಮರೆಯದೊಮ್ಮೆಯು ಜಗದಿರವನಿಂತರಿವೆ ||ಪಲ್ಲ||

ಜಾಗರಣದ ಜಡಪೂಗವಿದನು ವಿಶ್ವ
ನಾಗಿ ನೇತ್ರಾದಿಕ ಯೋಗದಿಂದರಿವೆ ||1||

86 / ತತ್ವಪದಗಳು ಸಂಪುಟ-1

ಕನಸಿನ ಕಲ್ಪನೆಯನು ಮನವೆಂಬ ಸಾ
ಧನದಿಂದೆ ತೈಜಸನೆನಿಸಿ ನೀನರಿವೆ ||2||

ವರಸುಖವನು ನಿದ್ರೆವೆರಸಿ ಮಾಯಾವೃತ್ತಿ
ಕರಣದಿ ಪ್ರಾಜ್ಞಪೆಸರುದಳೆದರಿವೆ ||3||

ಮರಹನರಿವೆ ಮೊದಲರಿವನರಿವೆ ಬಳಿ
ಕರಿವು ಮರವೆ ಸೋಂಕದಿರವ ನೀನರಿವೆ ||4||

ಅರಿವು ತಾನೆ ಪರತರ ಶಂಭುಲಿಂಗದ
ಕುರುಹಿನ ಭಾವನೆ-ದೊರೆದುನರಿನೀವೆ ||5||

52. ಅರಿವು ನೀನೆಂದು ಸದ್ಗುರು ಪೇಳೆ
ರಾಗ : ನಾದನಾಮಕ್ರಿಯೆ
ಅರಿವು ನೀನೆಂದು ಸದ್ಗುರು ಪೇಳೆ ತಿಳಿವೆನೆ ಜಾಣರದೇವ
ಅರಿವಿನೊಳನ್ಯ ಕಲ್ಪನೆಗಳನುಳಿವನೆ ಜಾಣರದೇವ ||ಪಲ್ಲ||

ಅರಿವೆ ಪರಬ್ರಹ್ಮವೆಂದು ಭಾವಿಸುವನೆ ಜಾಣರದೇವ
ಅರಿವನೆ ನಿತ್ಯ ನಿರ್ಮಳವೆಂದು ನೆನೆವನೆ ಜಾಣರದೇವ
ಅರಿವೆ ನಿರ್ಗುಣ ನಿರ್ವಿಕೃತಿಯೆಂದು ಬಗೆವನೆ ಜಾಣರದೇವ
ಅರಿವಿಲ್ಲದುದೆ ಜಡವಹುದೆಂದು ಬಿಡುವನೆ ಜಾಣರದೇವ ||1||

ಅರಿವೆ ಸದಾನಂದವೆಂದನುಭವಿಪನೆ ಜಾಣರದೇವ
ಅರಿವೆ ಸ್ವಯಂಜ್ಯೋತಿಯೆಂದರುಹಿಸುವನೆ ಜಾಣರದೇವ
ಅರಿವಿನೊಳಿಲ್ಲೊಮ್ಮೆ ಮರಹೆಂದು ಬಲ್ಲನೆ ಜಾಣರದೇವ
ಅರಿವವಸ್ಥೆಗಳಿಗೆ ಪೆರತೆಂದು ಕಾಣ್ಬನೆ ಜಾಣರದೇವ ||2||

ಅರಿವೆ ವಿಶ್ವಾಶ್ರಯವೆಂದನುಕರಿಪನೆ ಜಾಣರದೇವ
ಅರಿವಿಲ್ಲದಾಗದೆಂಬುದನೂಹಿಸುವನೆ ಜಾಣರದೇವ
ಅರಿವರುಹಿಸಿಕೊಳ್ಳದೆಂದನುಮಿಸುವನೆ ಜಾಣರದೇವ
ಅರಿವೆ ಸಕಲಶಾಸ್ತ್ರಮತವೆಂದು ತೋರ್ಪನೆ ಜಾಣರದೇವ ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 87

ಅರಿವೆ ತ್ರಿಪುಟಿಗಾದಿಯೆಂದು ಲಕ್ಷಿಸುವನೆ ಜಾಣರದೇವ
ಅರಿವನು ತನ್ನ ಕಣ್ಣೊಳು ಕುರುಹಿಡುವನೆ ಜಾಣರದೇವ
ಅರಿವೆ ವಿಷಯಪಲ ರೂಪೆಂದು ನೊಳ್ಪನೆ ಜಾಣರದೇವ
ಅರಿವೆ ಸತ್ಕ್ರಿಯೆಗಳಿಗಸುವೆಂದು ಬಿಡದನೆ ಜಾಣರದೇವ ||4||

ಅರಿವೆ ವಿದ್ಯಾದೈವ ಗುರುವೆಂದು ಭಜಿಪನೆ ಜಾಣರದೇವ
ಅರಿವನೆ ಪರಮೋಕ್ಷದಿರವೆಂದು ಕೂರ್ಪನೆ ಜಾಣರದೇವ
ಅರಿವೆ ತಾನೆಂದು ಸಂದೇಹವಿಲ್ಲದಾತನೆ ಜಾಣರದೇವ
ಅರಿವಿದು ನಿಜಶಂಭುಲಿಂಗವೆಂದಿರ್ಪನೆ ಜಾಣರದೇವ ||5||

53. ಅರಿವೆ ತಾನೆಂದು ನಂಬಿ
ರಾಗ : ಸಾವಂತ
ಅರಿವೆ ತಾನೆಂದು ನಂಬಿ ನಿಂದೊಡೆ ಮುಕ್ತಿ
ಪೆರತಿಲ್ಲವೆಂದುದು ನಿಗಮೋಕ್ತಿ ||ಪಲ್ಲ||

ತನುವಿಂದ್ರಿಯಾಳಿಯಸುವರ್ಗವನು ಬಿಟ್ಟು
ಮನಬುದ್ಧಿ ಹಂತೆಯನು ಸುಟ್ಟು
ಜನಿತ ಭೂತವಿಷಯವನ್ದೆ ಬೇರಿಟ್ಟು
ಘನ ನಿರ್ಮಾಣಾತ್ಮತೆಯಳವಟ್ಟು ||1||

ವಿಕೃತಿರೂಪ ವಿಶ್ವತುಷವೆಲ್ಲವನು ತೂರಿ
ಪ್ರಕೃತಿ ಮಾಯೆಗಳನು ವಿೂರಿ
ಸುಕೃತಾದಿ ಕರ್ಮವಾಸನಾ ರಸವಾರಿ
ಪ್ರಕಟಬಿಂದು ಶಿಖರಿಯನೇರಿ ||2||

ಭಾವಕಲ್ಪನೆ ಭೇದಬಣ್ಣವಳಿದು ಪೋಗಿ
ಜೀವತ್ವವನು ನೆರೆ ನೀಗಿ
ತೀವಿ ಶಂಭುಲಿಂಗದೊಲುಮೆಯೊಚ್ಚತಮಾಗಿ
ಕೈವಲ್ಯ ಪಡೆದವನೆ ಯೋಗಿ ||3||

54. ನಾನೆಂಬುದಡಗಿದಾನಂದ ನಿಜವೊ
ರಾಗ : ದೇಶಿ
ನಾವರಿದೆವರಿದೆವೆಂಬಿರಿ ನಿಜವನದು ನಿಮ್ಮ
ಭಾವನೆಗೆ ಬಂದ ಪರಿಯನು ಪೇಳಿರಿ ||ಪಲ್ಲ||

88 / ತತ್ವಪದಗಳು ಸಂಪುಟ-1

ದೇಹದಿರಿವಿನೊಳು ಸೋಜಿಗವೆನಿಸಿಹುದು ನಿಜವೊ
ದೇಹದೊಳಗಾಡಿ ನೋಡುವದು ನಿಜವೊ
ದೇಹ ಕರಣಾದಿಗಳಿಗಾಧಾರವಾದಸು ನಿಜವೊ
ದೇಹಾಭಿಮಾನಿಯಹ ಮನವೆ ನಿಜವೊ ||1||

ನಾನೆಂಬುದೆಡೆವಿಡದೆ ಪೊರಗನರಿವುದೆ ನಿಜವೊ
ನಾನೆಂಬುದಡಗಿದಾನಂದ ನಿಜವೊ
ಆನಂದವದು ತೋರ್ಪುದೇನು ವಿಡಿದುದು ನಿಜವೊ
ಆನಂದವೆಂಬುದಡಗಿದ ನಿಲವೆ ನಿಜವೊ ||2||

ಸಗುಣರೂಪವೆ ತನ್ನ ಸಹಜವಾದುದು ನಿಜವೊ
ಸಗುಣ ನಿರ್ಗುಣ ತತ್ವತಾನೆ ನಿಜವೊ
ಸಗುಣ ನಿರ್ಗುಣವನಚ್ಚಳಿದ ಪದವದು ನಿಜವೊ
ಸಗುಣಾದಿಗಳ ಸೋಂಕದಿಹುದೆ ನಿಜವೊ ||3||

ಬಗೆಯ ಕರುಹಿನ ಕಲಾ ಬಿಂದು ನಾದವೆ ನಿಜವೊ
ಬಗೆಯೆ ಬಣ್ಣಕೆ ಬಾರದಿಹುದೆ ನಿಜವೊ
ಜಗದ ನಾನಾತತ್ವದೊಡಗಲದಿರ್ಪುದೆ ನಿಜವೊ
ಮಗುಳೆಯಾ ಜಗಕನ್ಯವಹುದು ನಿಜವೊ ||4||

ಪಲವು ಮತಭೇದವಾದನುಳಿದು ಸಂಶಯದ
ಹೊಲಬಿಲ್ಲದಾನು ನೀನೆಂಬುದಳಿದು
ಸಲೆ ನೇಮ ಸೀಮೆದೋರದ ಶಂಭುಲಿಂಗವಾ
ದುಳುಮೆ ಚಿನ್ಮಾತ್ರವದು ನಿಜ ಕಾಣಿರೈ ||5||

55. ತೋರದಯ್ಯಾ ಸುಖ ತೋರದಯ್ಯಾ
ರಾಗ : ಕಾಂಬೋಧಿ
ತೋರದಯ್ಯಾ ಸುಖ ತೋರದಯ್ಯಾ
ಬೇರೆಬೇರೆ ಭಾವಿಸಿ ಬ್ರಹ್ಮಜ್ಞಾನಮೊಂದಿಲ್ಲದವಗೆ ||ಪಲ್ಲ||

ನಿಗಮಾಗಮವನೋದಿ ಸುಗುಣ ಸಂತತಿಗೂಡಿ
ಜಗದೊಲವಾಂತು ತನ್ನ ಬಗೆಯನಾರೈಯದಿರೆ ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 89

ಕಪಟವಳಿದು ಕೋಟಿ ಜಪವನೆಸಗಿ ಬಲು
ತಪವನೇ ಮಾಡಿ ತತ್ವದುಪದೇಶವಡೆಯದೆ ||2||

ಹಿಂಗದಣಿಮಾಡಿ ಸಿದ್ಧಿಯಂಗಮಾಗಿ ಪೇರ್ಮೆಲೋಕ
ಡಂಗುರವೆನಿಸಿ ಶಂಭುಲಿಂಗದನುವರಿಯದಿರೆ ||3||

56. ಯುಕುತಿವಂತನ ಬಗೆಯನು ನೋಡು
ರಾಗ : ಕಾಂಬೋಧಿ
ಮುಕುತಿಸುಖವನು ಪಡೆವೆನೆಂಬ ಬಲು
ಯುಕುತಿವಂತನ ಬಗೆಯನು ನೋಡು ರಮಣಿ ||ಪಲ್ಲ||

ಕನಸಿನ ಪುರುಷನು ಮಿಂಚಿನ ಹೆದೆಗಿಂದ್ರ
ಥನುವನೇರಿಸುತಾಲಿಕಲ್ಲಿನಂಬು
ಮೊನೆದುರದೆಚ್ಚು ಗಂಧರ್ವ ಪುರದ ರಿಪು
ವನು ಕೆಡಪಿದನಂತೆ ತನುಧರ್ಮವಳಿದು ||1||

ಮೊಲನ ಕೋಡನು ಕಿತ್ತು ಗಗನ ಕುಸುಮವೆತ್ತಿ
ತಳುವದೇ ಕೂರ್ಮ ಕುಂತಳವಿಡಿದು
ತುಳುಕಿ ಬಿಸಿಲು ದೊರೆಯನು ಬಂಜೆಯಣುಗನೆ
ಸಲುಗೆ ವಡೆದನಂತೆ ಗೆಲಿದು ಮಾಯೆಯನು ||2||

ನರನು ತೆಂಕಲು ಪೋಗಿ ಸುರಗಿರಿಯನು ಕಂಡು
ತರುಣಿಯರೊಲವನು ದಿಟವೆಂದು
ಉರುಪುವ ವಹ್ನಿಯನಧೋ-ಮುಖವಾಗಿ ನಲಿದನು
ತುರು ಶಂಭುಲಿಂಗವೆ ತನಗನ್ಯವೆಂದು ||3||

57 ಮೋಹದಿಂದೆ ನೊಂದು ಬಳಿಕ
ರಾಗ : ಅಹರಿ
ಏನೆಂದು ಪೇಳುವೆನು ಪರಮಾನಂದ
ವೆನಗಾದ ಹದನನಾನಿನ್ನು ||ಪಲ್ಲ||

ಘೋರಭವಮಾರಗಳುಕಿ ಮನದೊಳಿ
ದಾರಿಂದ ತೊಲಗುವದೆಂದು
ಚಾರು ಗುರುಪದವಿಡಿಯೆ ಮೊದಲ ಸಂ
ಸಾರವೆನಗಿಲ್ಲವಾದುದ ||1||

90 / ತತ್ವಪದಗಳು ಸಂಪುಟ-1

ದೇಹಾದಿಗಳನೆ ತಾನೆಂಬ ಜಡಮಾಯಾ
ಮೋಹದಿಂದೆ ನೊಂದು ಬಳಿಕ
ಊಹಿಸಿ ತಿಳಿದೊಡಂತವನುಳಿದು ನಿ
ರ್ದೇಹಿಯಾನೆನಿಸಿದಿರವ ||2||

ಆನೆಂಬುದದರರ್ಥವೇನೆಂದು ನಿಗ
ಮಾನುಮಾನ ವಿಡಿದು ವಿಚಾರಿಸೆ
ಜ್ಞಾನನಿಧಿ ಶಂಭುಲಿಂಗದ ನಿಜರೂಪ
ವಾನಾಗಿ ಸುಖದೊಳಿಹುದ ||3||

58 ತನ್ನನೆ ಪರವೆಂದು ತಿಳಿವುದಲ್ಲದೆ
ರಾಗ : ಬಹುಳಿ

ತನ್ನನೆ ಪರವೆಂದು ತಿಳಿವುದಲ್ಲದೆ ಬೇರೆ
ಭಿನ್ನವಿಟ್ಟರಸಲೇನುಂಟು ಕಾಣಿಸಲು ||ಪಲ್ಲ||

ಶ್ರುತಿಗುರುಗಳ ಬೋಧೆಯದು ತತ್ವಮಸಿಯೆಂದು
ನುತಿಸಲಾನಾರೆಂದು ಬೆಸಗೂಂಡ ಬಗೆಗೆ
ಗತಿಯಾವುದಿನ್ನು ತನ್ನುಳುಮೆ ತನ್ನೊಳಗಿಲ್ಲ
ದಿತರಂಗಳಲ್ಲಿ ಭೇದಿಸಲುಂಟೆ ಬರಿದೆ ||1||

ತೋರುವಜಾಂಡ ಜಾಲಂಗಳನೊಳಕೊಂಡು
ವಿೂರಿದಪ್ರತಿಮ ಬೋಧಾತ್ಮ ರೂಪಾಗಿ
ಬೇರಿದೆಂದರುಹಲಿಲ್ಲಾಗಿ ತನ್ನೊಳಗೊಂದು
ದೂರಿಲ್ಲದಾರೈಯಬೇಕನುಭವದಿ ||2||

ತುಂಬಿ ತುಳುಕದಾನಂದ ಸುದಾಬ್ಧಿ ತಾ
ನೆಂಬುದೊಂದರಿವು ತನ್ನೊಳು ಲೀಯಮಾಗೆ
ಶಂಭುಲಿಂಗದ ಕೂಟವದು ತಾನೆ ನಿಜಮುಕ್ತಿ
ಯೆಂಬುದೆ ನಂಬುಗೆ ಪೆರತಿಲ್ಲವೆಂದು ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 91

59. ಘಟವೆ ಪುಸಿ ಘಟವೆ ನೀನು
ರಾಗ : ತೆನಗು ಕಾಂಭೋಧಿ
ಘಟವೆ ಪುಸಿಘಟವೆ ನೀನು
ದಿಟದಂತೆ ತೋರಿ ಮೋಹಿಪುದನೇನೆಂಬೆ ||ಪಲ್ಲ||

ಮೊದಲು ಮೃತ್ತಿಕೆಯ ಪಿಂಡದೊಳು ನೀನಿಲ್ಲ ಪು
ಟ್ಟಿದ ಬಳಿಕೊಡೆದು ಧೂಳಾಗೆ ನೀನಿಲ್ಲ
ವಿದಿತವಿದಾದ್ಯಂತದೊಳಗೆ ನೀನಿಲ್ಲ ಮ
ಧ್ಯದೊಳಾವ ರೂಪು ನಿನಗೆ ನಿಜವಹುದು ||1||

ನರರ ಮುಖದ ನುಡಿ ಮಾತ್ರದಿರವಿನಿಂದೆ
ಪರಿಕಲ್ಪಿತಾಕಾರದಿಂದೆ ವಿವೇಕ
ವಿರಹಿತರಿಗೆ ಪರಮಾರ್ಥವೆನಿಸಿ ತೋರ್ಪೆ
ಪರಿಕಿಸಲೆಂದು ನಿನಗುಂಟೆ ತೋರ್ಕೆ ||2||

ಇಲ್ಲೆನಿಸದೆ ತೋರದಡಗದ ಮೃತ್ತಿಕೆ
ಯಲ್ಲದೆ ನಿನ್ನನೆಲ್ಲಿಯು ಕಾಣೆನರಸಿ
ಉಳ್ಳ ಮೃತ್ತಿಕೆಯಂತೆ ಶಂಭುಲಿಂಗವೆ ಜಗ
ವೆಲ್ಲವು ನಿನ್ನಂದವಾದುದಿಂತರಿಯೆ ||3||

60 ತಾನೆ ತನ್ನೊಳು ತನ್ನ ನಿಜವ ನೋಡಲು
ರಾಗ : ಶಂಕರಾಭರಣ

ತಾನೆ ತನ್ನೊಳು ತನ್ನ ನಿಜವ ನೋಡಲು ಪರ
ಮಾನಂದಮಯ ಚಿದಖಂಡರೂಪಹನು ||ಪಲ್ಲ||

ತನು ಬಾಹ್ಯವೆಲ್ಲವನರಿವುದರಿಂದೆ
ಮನ ವಾತುಗಳನು ವಿೂರಿಹುದರಿಂದೆ
ಇನಿತನಿತೆಂದು ರೂಹಿಸಬಾರದಿಹುದರಿಂದ
ಲನುಪಮನಹುದರಿಂದವಿರಳನಹನು ||1||

92 / ತತ್ವಪದಗಳು ಸಂಪುಟ-1

ಅಣುಪರಿಮಾಣ ಮಧ್ಯಮ ಪರಮಾಣಂಗ
ಳೆಣಿಕೆ ತನ್ನೊಡಗೂಡದಿಹುದರಿಂದೆ
ಗುಣ ಜಾತಿ ಕರ್ಮಾದಿರಹಿತತ್ವದಿಂದ ಕ
ರಣ ವಿಡಿಯದುದರೆಂದದ್ವಯನಹನು ||2||

ಸಕಲಾರ್ಥ ಸಾಧಕನಹುದರಿಂ ತಿಳಿಯಲಾ
ಸಕಲಾರ್ಥ ಸಂಬಂಧಿಯಹುದರಿಂದ
ಸಕಲಾರ್ಥ ದೂರನಹುದರಿಂದೆ ಬಳಿಕಲಾ
ಸಕಲಾರ್ಥನಹುದರಿಂದನವಧಿಯಹನು ||3||

ಗಗನದಂದದಿ ನಿರವಯವನಹುದರಿಂದೆ
ಸ್ವಗತಾದಿ ಭೇದವಿಲ್ಲದ ಕತದಿಂದೆ
ನಿಗಮವನಂತಮೆಂದೊರೆವುದರಿಂದಾವ
ಬಗೆದೋರದಿಹುದರಿಂದಗಣಿತನಹನು ||4||

ಹವಣಿಸುತಿಹ ದೇಶ ಕಾಲ ವಸ್ತುಗಳೆಂಬ
ನಿವಹಕಲ್ಪನೆ ಮಿಥ್ಯೆಯಹುದರಿಂದೆ
ಭವದೂರನೆನಿಸುವ ಗುರುಶಂಭುಲಿಂಗದೊ
ಳವಿಭೇದನಹುದರಿಂದವೆ ಪೂರ್ಣನಹನು ||5||

61 ಆರು ಬಲ್ಲರು ನಿಜಾನಂದ ಭೋಧಾಂಬುಧಿ
ರಾಗ : ತೆನಗು ಕಾಂಬೋಧಿ
ಆರು ಬಲ್ಲರು ನಿಜಾನಂದ ಭೋಧಾಂಬುಧಿ
ಮೆರೆಯನೊಮ್ಮೆ ಕಳೆದು ಮಾಯೆಯ
ಭೂರಿ ವಿಕಾರವೆಲ್ಲವನೊಳಕೊಂಡು ಗಂ
ಭೀರಾದ್ವಯಾತ್ಮಕವಾಗಿಹುದ ||ಪಲ್ಲ||

ದೇಹವಲ್ಲದ ಕರಣೇಂದ್ರಿಯವಲ್ಲದ
ಮೋಹಿಸುವಹಮಾದಿಕವಲ್ಲದ
ಬಾಹಿರಂಗದ ಭೂತವಲ್ಲದಿನ್ನಾವುದ
ನೂಹಸಲಂತದಲ್ಲದ ವಸ್ತುವ ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 93

ಪವಣವೈದದ ಪರಿಣಮಿಸದ ಪರಿತಾಪ
ನಿವಹವಂಟದ ನಿತ್ಯ ಮುಕ್ತವಾದ
ನವಗುಣವಡಸದ ನಾನಾತ್ವವಿಲ್ಲದ
ಭವದೂರವೆನಿಸುವ ತತ್ವವನು ||2||

ಮರವೆ ಹೊದ್ದದ ಮೊದಲರಿವುದೋರದ ಮತ್ತೆ
ಬರಿದಾಗದಿದಿರಿಟ್ಟು ಕಾಣಿಸದ
ಮೆರೆದೇಕರಸವಾದ ತನ್ನೊಳಗಿಂತೆಂಬ
ಕುರುಹಿಲ್ಲದ ಶಂಭುಲಿಂಗವನು ||3||

62 ನಿಜವನರಿದ ಯೋಗಿಗಾವ ಕರ್ಮದ ಕಾಟ
ರಾಗ : ಸೌರಾಷ್ಟ್ರ
ನಿಜವನರಿದ ಯೋಗಿಗಾವ ಕರ್ಮದ ಕಾಟ
ಭಜನೆಯಿಂದಾವ ಪುಣ್ಯದೊಳೊಡಗೂಟ ||ಪಲ್ಲ||

ಕನಸಿನೊಳರಸಿಗೆ ಬಡತನವಾಗೆ ತ
ಜ್ಜನಿತ ದುಃಖವನೆಚ್ಚರೊಳು ನೀಗಿದಂತೆ
ತನಗೆ ಸಂಸೃತಿ ಮಾಯಾವಿಕೃತಿಯಿಂ ತೋರೆ ಮ
ತ್ತನುಭವದಿಂದರಿದೊಡೆ ಪುಸಿಯೆಂದು ||1||

ಧರೆ ಮೊದಲಾದಖಿಳಾವರಣಾತೀತ
ಪರಮನೀ ದೇಹಾದಿಗಳಿಗನ್ಯ ಜೀವ
ಎರಡಾಗಿ ತೋರೆ ತದ್ಗತಗುಣನೇತಿಯಿಂ
ಪರಿಭಾವಿಸಿದೊಡೇಕಬೋಧರೂಪೆಂದು ||2||

ರವಿಯಂತೆ ಕರ್ಮಸಾಕ್ಷಿಕನಾಗಿ ಬಂಧವಿ
ಲ್ಲವಿರಳನಾಗಿ ಬೇರೈದಲಿಂಬಿಲ್ಲ
ಹವಣಿಸಲಿಲ್ಲ ಖಂಡಿತಮಾಗಿ ತನಗೆ ಸಂ
ಭವವಿಲ್ಲ ಗುರುಶಂಭುಲಿಂಗ ತಾನಾಗಿ ||3||

63. ತಾನಾರೆಂಬುದೆ ಸೂಚನೆ
ರಾಗ : ಪಹಡಿ
ಜ್ಞಾನಿಯಂದವನರಿಯವೆಂಬರು ಅನು
ಮಾನವೇಕವನಂಗ ತಾನೆ ಸೂಚಿಸುತಿದೆ ||ಪಲ್ಲ||

94 / ತತ್ವಪದಗಳು ಸಂಪುಟ-1

ಹಿತವಿದಹಿತವೆಂಬ ತಿಳಿವಿಗೆ ವಿಷಯ ವಿ
ರತಿಯೆ ಸೂಚನೆ ವಿರತಿಗೆ ವಿಶ್ವದ
ನುತಿವೆತ್ತ ಶಮೆ ತಾನೆ ಸೂಚನೆ ಶಮೆಗೆ ಸ
ನ್ಮತವಾದ ಪರಮುಕ್ತಿಪದದೊಲಮೆ ಸೂಚನೆ ||1||

ಪರಮುಕ್ತಿಯೊಲುಮೆಗೆ ಗುರುಸೇವೆ ಸೂಚನೆ
ಗುರುಪಾದ ಸೇವೆಗೆ ವೇದಾರ್ಥ ಸೂಚನೆ
ವರವೇದಾರ್ಥಕೆ ಶರೀರಾದಿ ನೇತಿಯೆ ಸೂಚನೆ
ಶರೀರಾದಿ ನೇತಿಗೆ ತಾನಾರೆಂಬುದೆ ಸೂಚನೆ ||2||

ಆರು ನಾನೆಂಬುದಕೆ ಸೋಹಂಭಾವನೆ ಸೂಚನೆ ವಿ
ಚಾರಿತ ಸೋsಹಂಭಾವನೆ ಹವಣಿಸದ
ಸಾರಸುಖ ಸೂಚನೆ ಸುಖಕೆ ನಿತ್ಯ ನಿಜ ನಿರ್ವಿ
ಕಾರ ಗುರು ಶಂಭುಲಿಂಗವಾಗಿಹುದೆ ಸೂಚನೆ ||3||

64 ನಿಜ ಕೈವಲ್ಯಹುದು ಗುರುವಿಡಿದು
ರಾಗ : ನಾಟ
ನೋಡಿ ತಿಳಿಯಲು ತತ್ವಮಸಿವಾಕ್ಯದರ್ಥವನೆ
ಕೂಡೆ ನಿಜ ಕೈವಲ್ಯವಹುದು ಗುರುವಿಡಿದು ||ಪಲ್ಲ||

ತನು ಕರಣ ಮೊದಲಾದವನಿತುವನೆ ತಾನೆಂದು
ಜನನಾದಿ ಕೃತಿದಳೆದಹಮಿನೊಡವೆರೆದು
ತನಗದರ ಬಗೆಪತ್ತಿ ಬಿಡದಿರ್ಪ ವಿಶ್ವಜೀ
ವನೆ ತ್ವಂ ಪದಕೆ ಮುಖ್ಯವಾದರ್ಥವೆಂದು ||1||

ಮೊದಲೊರೆದ ಚೀತನಾಚೇತನಂಗಳಿಗಾದ
ಮುದವಸುಖಮೋಹಾದಿಗಳು ತನ್ನದೆಸೆಗೆ
ಪದವಿಡದ ಸಲೆ ಸಾಕ್ಷಿ ತುರ್ಯ ಕೂಟಸ್ಥನೆನಿ
ಸಿದ ತಾನೆತ್ವಂಪದಕೆ ಲಕ್ಷ್ಯಾರ್ಥವೆಂದು ||2||

ಪ್ರಕೃತಿಯುಪಹಿತನಾಗಿ ಸಕಲೇಶತಾದಿ ಗುಣ
ನಿಕರವಿಡಿದಖಿಳಕಾರಣನಾಗಿ ತನಗೆ
ವಿಕೃತಿಯೊಂದಿಲ್ಲದಾನಂದಮಯ ಪರಮನೀ
ಸುಕರವಹ ತತ್ಪದಕೆ ಮುಖ್ಯಾರ್ಥವೆಂದು ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 95

ನಿರುಪಮ ನಿರಾಲಂಬ ನಿತ್ಯ ನಿರ್ಮಳ ನಿರಾ
ವರಣ ನಿರುಪಾಧಿಕ ನಿರಂಜನ ನಿರೂಪ
ನಿರತಿಶಯ ನಿರಘ ನಿಸ್ತತ್ವ ಪರಬೊಮ್ಮವದು
ಪರಿಕಿಪೊಡೆ ತತ್ಪದಕೆ ಲಕ್ಷ್ಯಾರ್ಥವೆಂದು ||4||

ಆತನಿವನೆಂಬಂತೆ ಭಾಗಲಕ್ಷಣದಿಂದೆ
ನೇತಿಗಳೆದುಭಯದೌಪಾಧಿಗಳನುಳಿದ
ಚೈತನ್ಯವೇಕರಸವೆಂಬುದಸಿ ಪದದರ್ಥ
ವೀ ತೆರದಿ ಗುರುಶಂಭುಲಿಂಗವೆ ತಾನೆಂದು ||5||

65 ನೆಲಸಿರಬೇಕೊಂದು ತನುವಿನೊಳು
ರಾಗ : ಸೌರಾಷ್ಟ್ರ
ಚಿತ್ತೊಂದೆ ಪರಮಾರ್ಥದಿಂದದು ಬಹುರೂಪು
ವೆತ್ತುದುಪಾಧಿಯೆಂದರಿವುದಿಂತು ||ಪಲ್ಲ||

ಪಲವರೆನಿಸಿ ನಿತ್ಯ ಪೂರ್ಣರಾದಾತ್ಮರು
ನೆಲಸಿರಬೇಕೊಂದು ತನುವಿನೊಳು
ಬಳಿಕದರಿಂದಲ್ಲಿ ಭೋಗವೀತನಿಗೆಂದು
ತಿಳಿದು ನೇಮಿಸಲರಿದಹುದರಿಂದ ||1||

ಏಕಾತ್ಮನಾಗಲೋರ್ವನಿಗಾದ ಸುಖದುಃಖಾ
ನೀಕವೆಲ್ಲರಿಗಪ್ಪುದೆನಲಾಗದು
ಏಕ ರವಿ ಕಂಪಾದಿಜಲದೊಳು ಬೇರೆ ಬೇ
ರಾ ಕಲ್ಪನೆಯನೆ ತಾಳಿಹುದರಿಂದ ||2||

ವಾದಿಸಲೇಕಿನ್ನು ಗುರುಶಂಭುಲಿಂಗದ
ಭೇದಭಾವನೆ ಸತ್ಯವಲ್ಲವೆಂದು
ವೇದದ ನೇಹನಾನಾಸ್ತಿಯೆಂಬುದು ಮೊದ
ಲಾದ ವಾಕ್ಯದೊಳು ಪೇಳಿಹುದರಿಂದ ||3||

96 / ತತ್ವಪದಗಳು ಸಂಪುಟ-1

66 ನಂಬು ನೀನೆ ನಿತ್ಯಬೋಧನೆಂಬ
ರಾಗ : ಕಾಂಬೋಧಿ

ನಂಬು ನೀನೆ ನಿತ್ಯಬೋಧನೆಂಬ ನಿಗಮವನಿನ್ನು
ಹಂಬಲಿಸದಿರು ಮುಕ್ತಿಯಂ ಬಯಸಿ ಬೇರೆ ಯೋಗಿ ||ಪಲ್ಲ||

ತಾನಲ್ಲದೆ ಭೃಂಗ ಭಾವನೆಯೊಳದರಂದವನು
ಮಾನವಿಲ್ಲದಾದುದಂತೆ ಗಡ ಕೀಟನರಿವ
ನೀನಾದ ಪರಮಾತ್ಮ ತತ್ವವನು ನೀನೆಂದಿರಲಾವ
ಹಾನಿಯುಂಟು ತ್ವಂ ಬ್ರಹ್ಮಾಸ್ಮಿಯೆಂದು ಶಾಸ್ತ್ರವಿಹುದಾಗಿ ||1||

ವೇದವಾಕ್ಯದಿಂದೆ ಜಾತಿ ಸೂತಕಾದಿಯಲ್ಲಿ ನಿಜ
ವಾದ ಬುದ್ಧಿ ಜನಿಸಬಹುದು ಕಂಡ್ಯ ನಿನ್ನನೆ
ಭೇದದೂರನೆನಿಸುವನಾದಿ ವಸ್ತುವೆಂದಿರು ವಿ
ವಾದವೇಕೆ ತ್ವಂ ತದಸಿ ವಚನವಿಹುದರಿಂದ ||2||

ರಾಮಚಂದ್ರನಲ್ಲಿ ನರನೆಂಬುದಾಗೆ ನಾರದನ
ನೇಮದುಪದೇಶವಿಡಿದಾದುದಚ್ಯುತತ್ವವೆ
ಆ ಮತದಪರಿ ನಿನ್ನ ಜೀವಭಾವವಳಿದು ನಿ
ಸ್ಸೀಮಶಂಭುಲಿಂಗವಾಗಿರೇಕಮೇವೆನಲ್ ಶ್ರುತಿ ||3||

67. ಎಂದಿನಂತೆ ಜೀವ ಭಾವವಿರಲು
ರಾಗ : ಸೌರಾಷ್ಟ್ರ

ಎಂದಿನಂತೆ ಜೀವ ಭಾವವಿರಲು ನಿಜನಿಗಮ ಗುರು
ವಿಂದರಿದೊಡೇನು ಮುಕ್ತಿ ಸುಖಸಾಧ್ಯವಹುದೆ ||ಪಲ್ಲ||

ಎಂದಿನಂತೆ ಕಾಮವೆಂದಿನಂತೆ ಕೋಪವತಿ ಲೋಭ
ವೆಂದಿನಂತೆ ಮದ ಮೋಹ ಮತ್ಸರ ನಿಕರ
ಎಂದಿನಂತೆ ಭಯ ಶೋಕವೆಂದಿನಂತೆ ಮೂರವಸ್ಥೆ
ಯೆಂದಿನಂತೆ ತೋರ್ಪು ಪಸಿವು ತೃಷೆಗಳಿರುತಿರಲು ||1||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 97

ಎಂದಿನಂತೆದೇಶ ಕಾಲ ಗತಿ ದೇಹದಭಿಮಾನ
ವೆಂದಿನಂತೆ ಕುಲ ಜಾತಿ ನಾಮ ರೂಪಗಳು
ಎಂದಿನಂತೆ ಜಗವಾರು ವಿಕೃತಿ ಸಂಸರಣವಿ
ದೆಂದಿನಂತೆ ಕರ್ಮವಿಹ ಪರದೊಲವಿರಲು ||2||

ಎಂದಿನಂತೆ ನವಗುಣವೆಂದಿನಂತೆ ಮಮಕಾರ
ವೆಂದಿನಂತೆ ನಿಂದೆ ವಂದನೆ ಕುಂದು ಕುಶಲ
ವೆಂದಿನಂತೆ ತೋರುವಿವರಿಂದೆ ವಿಲಕ್ಷಣವಾದಾ
ನಂದ ಬೋಧಾಂಬುಧಿ ಶಂಭುಲಿಂಗವಾಗಿರದೆ ||3||

68. ಕಾಯವೆ ನೀನಾರು ನಾನಾರು
ರಾಗ : ವಡ್ಡಿಧನ್ಯಾಸಿ
ಎನ್ನೊಡನೆ ಸಮರಸವಿನ್ನು ಬೇಡೆಲೆ
ಮುನ್ನಿಂತೆ ತನುವೆ ನೀನನ್ಯವೆನಗೆ ||ಪಲ್ಲ||
ಪುಸಿನೀನು ನಿಜವಾನು ಮಲವೆರಡರ
ಬೆಸುಗೆ ನೀನತಿ ಶುದ್ಧ ನಾನು ಕರ್ಮ
ವಿಸರದೇಳಿಗೆ ನೀನು ಸಾಕ್ಷಿಯಾನು ಭಾ
ವಿಸೆ ಬಂಧವದು ನೀನು ಮೋಕ್ಷವಾನು ||1||

ಜಡವೆ ನೀನಜಡನೆ ನಾನು ಬಹುರೂಪು
ವಡೆದಿಹೆ ನೀನೇಕರೂಪ ನಾನು
ಕೆಡುವೆ ನೀನೆಂದೆಂದು ನಾನು ನಿತ್ಯನು
ಕಡೆಗೆ ನೀನಹೆ ಮಣ್ಣು ನಾನೆ ವಸ್ತು ||2||

ಒಂದವಸ್ಥೆಯೊಳಿರ್ಪೆ ನೀನಖಿಳಾವಸ್ಥೆ
ಯೊಂದಿರುತಿಹೆ ನಾನು ಭೂತ ವಿಕೃತಿ
ಅಂದವೆನಿಪ ನೀನು ನಿರ್ವಿಕೃತಿಯಾನು
ಕುಂದು ಹೆಚ್ಚು ನೀನು ಸಮವಾನು ||3||

ಆರು ವಿಕಾರದ ಬಾಧೆ ಪಡುತಿಹೆ ನೀನು
ಬೇರೆ ನೋಡುವದಕೆ ನಾನು ದೃಶ್ಯವಾಗಿ
ತೋರುವೆ ನೀನಲ್ಲಿ ನಾನು ದೃಕ್ಕು ರುಜೆಗಳಹೆ ವಿ
ಚಾರಿಸೆ ನೀನು ಸುಖ ನಾನು ||4||

98 / ತತ್ವಪದಗಳು ಸಂಪುಟ-1

ಹೇಯವಹುದು ನೀನು ಕೇಳು ನಾನುಪಾ
ದೇಯಾತ್ಮಕನು ಮಿಥ್ಯೆ ಮಾಯೆ ನೀನು
ಮಾಯಾ ರಹಿತ ಶಂಭುಲಿಂಗವಾನಿಂತು
ಕಾಯವೆ ನೀನಾರು ನಾನಾರು ||5||

69 ಕಾಡಲಿನ್ನೇನಭವ ನಿನ್ನ ಕೃಪೆಯಿಂದೆ
ರಾಗ : ಅಹರಿ

ಕಾಡಲಿನ್ನೇನಭವ ನಿನ್ನ ಕೃಪೆಯಿಂದೆ
ನೋಡಿ ಮಿಗೆ ಮನ್ನಿಸೆನ್ನನು ||ಪಲ್ಲ||

ತನು ಮೂರನಗಲದಿರ್ಪ ರುಜೆಗಳ
ಜಿನುಗಿನುಮ್ಮಳವಿಡಿದು
ಜನಿಸುವಖಿಳ ಬಾಧೆಯನಿಹದೊಳು
ನೆನೆಯದಂತಿರಿಸೆನ್ನನು ||1||

ಕಲುಷ ಕರ್ಮವನೆ ಮಾಡಿ ಸುಕೃತವ
ನುಳಿದೊದಗುವ ಚಿಂತೆಗೆ
ನೆಲೆಯಾದ ಪರಲೋಕ ದುಃಖವ
ತೊಲಗಿಸಿ ಸಲಹೆನ್ನನು ||2||

ನರನು ತೊಡಗಿ ಬ್ರಹ್ಮನು ಕಡೆಯಾದ
ವರೊಳು ನೂರ್ಮಡಿಸಿ ಮಿಕ್ಕಾ
ಹರುಷಂಗಳನು ದಾಂಟಿದ ನಿಜಸುಖ
ಭರಿತನೆಂದೆನಿಸೆನ್ನನು ||3||

ಪಲವು ಲೌಕಿಕ ವೈದಿಕವಹ ಕರ್ಮ
ಕುಲವನೆಸಗಿ ಮುನ್ನವೆ
ಬಳಿಕ ನಿನ್ನಿರವರಿದೆನಿನ್ನವ
ನೆಳಸಲೀಯದಿರಿಸೆನ್ನನು ||4||

ಸದುಗತಿಗಳನು ಬೇರೆ ಬಯಸಲೀ
ಯದೆ ಪರತರ ಮುಕ್ತಿಗೆ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 99

ಪದವಾದ ಶಂಭುಲಿಂಗ ನೀನಗ
ಲದೆ ಬೆರಸಿಹುದೆನ್ನನು ||5||

70 ಅರಿವಂತೆ ದೇಹಾದಿಗಳು ಬೇರಿಡದಂತೆ
ರಾಗ: ನಾಟ
ನಾವರಿಯೆವಿದನು ನಾನಾ ವಿಕೃತಿವಿಡಿದ ಮಾ
ಯಾವರಣವಿಲ್ಲದನುಭವದ ಸುಖಸುಧೆಯ
ಸೇವನೆಯ ಸೊಗಸು ತೀವಿರದೆ ಸುಮ್ಮನೆ ತನಗೆ
ಕೈವಲ್ಯವಾದುದೆಂಬವನ ಬಗೆ ಪೊಸತು ||ಪಲ್ಲ||

ಹಿತವಿದಹಿತವಿದೆಂಬ ತಿಳಿವಂತೆ ವಿಷಯಾಭಿ
ರತಿಯಂತೆ ಶಮೆಯಂತೆ ಮನಮರುಕವಂತೆ
ನುತ ಸುಕೃತವಂತೆ ಸದುಗತಿಗೆ ಮುಖವಿಡದಂತೆ
ಶ್ರುತಿಯೊಳೊಲವಂತೆ ಗುರುಮತ ರಹಿತವಂತೆ ||1||

ಅರಿವಂತೆ ದೇಹಾದಿಗಳು ಬೇರಿಡದಂತೆ
ನೆರೆ ಚಿದದ್ವಯವಂತೆ ಜೀವತ್ವವಂತೆ
ಮರವೆ ಪುಗದಂತೆ ಸಂಶಯವಳಿಯದಂತೆ ನಿಜ
ಕರಿಗೊಂಡುದಂತೆ ವಿಪರೀತ ಮತಿಯಂತೆ ||2||

ನಿರಭಿಮಾನತೆಯಂತೆ ವಿೂರದಿಹ ವಿಧಿಯಂತೆ
ಪರಿಪೂರ್ಣ ಕಾಮವಂತೆಣಿಕೆಗೆಡದಂತೆ
ಗುರುಶಂಭುಲಿಂಗವಾಗಿಹ ಮುಕ್ತಿಪದವಂತೆ
ಮರಳಿ ಭವಮರಣ ಸಂಸೃತಿಯ ಭಯವಂತೆ ||3||

71 ಪಡೆವುದಾಗದು ನಿಜಸುಖವ
ರಾಗ : ಕಾಂಬೋಧಿ

ಪಡೆವುದಾಗದು ನಿಜಸುಖವ ತನ್ನ ತಾ
ನೆಡೆಬಿಡದಾರಯ್ಯಲರಿಯವಾತನಿಗೆ ||ಪಲ್ಲ||

100 / ತತ್ವಪದಗಳು ಸಂಪುಟ-1

ಪೊರಗೊಂದು ರೂಪ ನಿರೀಕ್ಷಿಸದೆ ಬೇರಾವ
ತೆರದ ಲಕ್ಷ್ಯವನೊಳಗರಿದು ಭಾವಿಸದೆ
ಮರೆಯದೆಚ್ಚರವನಚ್ಚಳಿಯದೆ ವಾಸನೆ
ಯುರಿಸದೇಕಾಗ್ರತೆ ಕರಿಗೊಂಡಂಗಲ್ಲದೆ ||1||

ಇದಮೆನಿಸದೆಯಹಮೆನಿಸಿ ತೋರದಾ
ವುದನೊಡಗೂಡದನ್ಯತೆಯಾಗದುಳಿದ
ಪದವಿದೆಂಬುದನರಿಯದೆ ಮೋಸವಿ
ಲ್ಲದೆ ಸಮರಸ ಭಾವದೊಳು ನಿಂದಂಗಲ್ಲದೆ ||2||

ಎರಡೆನ್ನದೊಂದೆಂಬ ಬಗೆಯನಿರಿಸದೆ
ಪರವಶಮಿರದೆ ಚೇತರಿಸದೇನೊಂದು
ಪೊರಗಾಣಿಸದೆ ಶಂಭುಲಿಂಗವಾಗಿ ತಾ
ನಿರುತಿಹ ನಿಜಮುಕ್ತಿಯನು ಕಂಡಂಗಲ್ಲದೆ ||3||

72 ಸಲೆ ಸುಮ್ಮನಿಹುದೆ ನಿಜಯೋಗ
ರಾಗ : ಕಲ್ಯಾಣಿ
ಬೇರೊಂದು ಯೋಗದೊಳು ಬಳಲದಾನಂದವನೆ
ಸೂರೆಗೊಡುವಾತ್ಮ ನಿಜನಿಷ್ಠರಾಗಿರಿರೋ ||ಪಲ್ಲ||

ಮನದೊಳಾರಬ್ಧ ಕರ್ಮಾಧೀನದಿಂದಿರದೆ
ಜನಿಸುವಂಗಜ ವಿಕಾರಾದಿ ಗುಣವೆಲ್ಲ
ತನಗೆ ವಿಷಯಂಗಳವನರಿವರಿವೆ ತಾನೆಂಬ
ನೆನಹು ಸಂತತವಳಿಯದಿಹುದೆ ಯೋಗ ||1||

ಮಹದಾದಿ ವಿಕೃತಿಯೊಡಗೂಡದದ್ವಯ ನಿತ್ಯ
ವಹ ಸಚ್ಚಿದಾನಂದ ಪರಿಪೂರ್ಣವೆನಿಪ
ಸಹಜ ಪರಬೊಮ್ಮವನೆ ತಾನೆಂಬ ಮತಿ ಮರೆಯ
ದಿಹುದೆ ವೇದಾನುಮತವಾದ ಯೋಗ ||2||

ಕರಣಾದಿ ಗುಣ ವಿಷಯತತಿಗೆ ಸಾಕ್ಷಿಕನೆಂಬ
ಗುರುಶಂಭುಲಿಂಗ ತಾನಾದೆನೆಂಬ
ಪರಿಕಲ್ಪನೆಯನುಳಿದು ತೆರೆಯಡಗಿದಂಬುಧಿಯ
ಪರಿಯಂತೆ ಸಲೆ ಸುಮ್ಮನಿಹುದೆ ನಿಜಯೋಗ ||3||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 101

73 ಎಂದಿರ್ಪೆನೋ ನಿಜಸುಖದಲ್ಲಿ
ರಾಗ : ವಡ್ಡಿಧನ್ಯಾಸಿ

ಎಂದಿರ್ಪೆನೋ ನಿಜಸುಖದಲ್ಲಿ ಬಹು
ದಂದುಗವೆಲ್ಲವನಳಿದುಳಿದು ||ಪಲ್ಲ||

ಮಡದಿ ಮಕ್ಕಳು ಮಿತ್ರರನುಜರು ನೆಂಟ
ರೊಡಲೊಡವೆಗಳನೆ ಮೋಹಿಸಿ
ಬಿಡಲಾರದಿಹದೊಳಗಣ ಚಿಂತೆ ಪಿಂಗಿ
ಪಡೆದು ನಿತ್ಯಾನಂದ ಪದವನು ||1||

ಭೋಗ ವಿಶೇಷದೊಡನೆ ಸ್ವರ್ಗ ಲೋಕ
ವಾಗಲೆಂದೆಳಸಿ ಜ್ಯೋತಿಷ್ಟೋಮ
ಯಾಗಾದಿಗಳನೊಂದಿ ರಚಿಸುವ ಬಾಧೆ
ಪೋಗಿ ಸಕಲಜಗನ್ಮಯನಾಗಿ ||2||

ದುರಿತಕರ್ಮದ ಕಾಟವಿಲ್ಲದೆ ತತ್ಪರಿ
ಹಾರ ವಿಷಯವೆಂದೆನಿಸುವ
ಪರಿವಿಡಿದೊಳ ಹೊರಗಣ ಪೂಜಾ ನೇಮ
ದುರುವಣೆ ನಿಂದು ನಿರ್ಮಲನಾಗಿ ||3||

ಮರವೆ ಸಂಶಯ ವಿಪರೀತದ ಮೂರು
ಕುರುಹುದೋರಲು ಬಳಿಕವರಿಂದ
ಮೆರೆವ ಸುಶ್ರವಣ ಮನನನಿದಿಧ್ಯಾಸ
ದೆರಕವಿಲ್ಲದೆ ಸ್ವತಂತ್ರತೆಯೊಳು

ಅವಮತದೊಳಾರು ವಿಧಿಸುವ ವಿಶ್ವ
ಭಾವನೆಗಳನೊಮ್ಮೆ ಬೆರಸದ
ಪಾವನಾತ್ಮಕ ಶಂಭುಲಿಂಗವ ಕೂಡಿ
ಜೀವನ್ಮುಕ್ತತೆ ಮಿಗೆ ನೆಲೆಗೊಂಡು ||5||

102 / ತತ್ವಪದಗಳು ಸಂಪುಟ-1

74 ತತ್ವದಿರವನರಿದು ನಿತ್ಯ ಸುಖಿಯಾದೆ
ರಾಗ : ಫಾರ್ಸಿ
ಗುರುವೆ ನಿಮ್ಮಯ ಕರುಣದೊಳೆನ್ನ ತತ್ವ
ದಿರವನರಿದು ನಿತ್ಯ ಸುಖಿಯಾದೆ ||ಪಲ್ಲ||

ನಾಮ ರೂಪವನಭಿಮಾನಿಸಿಕೊಂಡು
ತಾಮಸ ಮತಿಗೊಳಗಾಗಿರೆ
ಪ್ರೇಮಾಸ್ತಿ ಭಾತಿಯೆಂಬಿದೆ ನಿನ್ನ ನಿಜ
ಧಾಮವೆಂದೊಸೆದೆಚ್ಚರಿಸಲಾಗಿ ||1||

ತನು ನೇತ್ರ ಮನವೆಂಬಿವೆಲ್ಲವು ನೋಡೆ
ನಿನಗೆ ವಿಷಯವಾದ ಕತದಿಂದ ನಿನಗೆ
ಬಂಧಕವಿದೆಂದೆನಲುಂಟೆ ಸಾಕ್ಷಿಕನೆ
ನೀನೆಂದು ತಿಳುಹಲಾಗಿ ||2||

ದೇಹಾದಿಗಳು ಲೋಹಕಾಂತವ ಹೊಂದಿ
ಲೋಹದಂತಿರದೆ ಚಲಿಸುವಂತೆ
ಊಹಿಸೆ ನಿನ್ನ ಸನ್ನಿಧಿಯಿಂದೆ ಚೇಷ್ಟಿ
ಪಾ ಹದನೆಂದು ಸೂಚಿಸಲಾಗಿ ||3||
ಪಳಕುಪಾಧಿಯನೊಂದಿ ತದ್ರೂಪವೆಂಬ
ವೊಲು ನೀನಖಿಳ ತತ್ವಮಯನಾಗಿ
ಬೆಳಗಲಂತದು ನೈಜವಪ್ಪುದೆ ನಿ
ರ್ಮಳನು ನೀನೆಂದನುಗ್ರಹಿಸಲು ||4||

ಪ್ರಾಣದೊಳಗೆ ಪ್ರಾಣಪದವಾಗಿ ತನ
ಗೂಣೆಯವಿನಿತಿಲ್ಲದಪರೋಕ್ಷ
ತಾಣವೆನಿಪ ಶಂಭುಲಿಂಗವ ಕೂಡಿ
ಜಾಣನಾಗೆಂದು ಬೋಧಿಸಲಾಗಿ ||5||

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 103

75 ತಾನೆಂಬ ನಿಜವನರಿದ ಮೇಲೆ
ರಾಗ : ಭೈರವಿ
ಬಾಧೆ ತನ್ನೊಳು ತೋರದ ಪರಮಾರ್ಥ
ಬೋಧೆ ನೆಲೆಗೊಂಡು ನಿಂದ ಮೇಲೆ ||ಪಲ್ಲ||

ಆನಂದಮಯನ ಜಗವ ರಚಿಸಿ
ವಿಜ್ಞಾನಮಯವೆನಿಸಿ ಕರ್ಮವಿಡಿದು
ಹಾನಿಗೊಳಗಹನಲ್ಲದೆ ಸಲೆ ಸಾಕ್ಷಿ
ತಾನೆಂಬ ನಿಜವನರಿದ ಮೇಲೆ ||1||

ಪರಮ ಜೀವರುಗಳೆಂಬ ಚೈತನ್ಯ
ವೆರಡನತಿಗಳೆದು ಬೇರೆ ಬ್ರಹ್ಮ
ತುರಿಯವೆಂಬುಭಯವಳಿದ ಚಿನ್ಮಾತ್ರ
ದಿರವೆ ತಾನೆಂದು ತಿಳಿದ ಮೇಲೆ ||2||

ಮರೆದು ಮೊದಲರಿದ ಬಳಿಕ ಸಹಜದೊಳು
ನಿರಿಗೆ ನೆಲೆಯಾದುದೆಂಬ ಮತಿಗೆ
ಪೆರತೆನಿಪ ಶಂಭುಲಿಂಗವಾಗಿ ತಾ
ನುರೆ ಮಾನವನು ವಿೂರಿದ ಮೇಲೆ ||3||

76. ಮೆರೆವಾತ್ಮನೊಳು ಪ್ರೀತಿಮಾತ್ರವೆ
ರಾಗ : ಸೌರಾಷ್ಟ್ರ

ಪ್ರಾರಬ್ಧಕರ್ಮ ವಾಸನೆಯೊಂದೆ ನಾಲ್ಕು ಪ್ರ
ಕಾರವಾಗಿಹುದು ಜೀವನ್ಮುಕ್ತರ ||ಪಲ್ಲ||

ಅರಿದಮೇಲೊಡಲುವಿಡಿದು ಭೋಗದೊಳು ಮನ
ವೆರಕವೆಂದೆನಿಸಿ ಪಶುವಿನಂದದಿ
ಮೆರೆವಾತ್ಮನೊಳು ಪ್ರೀತಿಮಾತ್ರವೆ ಕರ್ಮದೊ
ಳುರಿವ ಸಂಸ್ಕಾರದ ತೀವ್ರವಿದು ||1||

104 / ತತ್ವಪದಗಳು ಸಂಪುಟ-1

ಭೋಗಕ್ಕೆ ಮುಖ್ಯತೆದೋರೆ ತಾನಾತ್ಮವಶ
ನಾಗಿ ಬಾಲಕನಂತೆ ಭುವನದೊಳು
ರಾಗಿಯೆನಿಸಿ ನಲಿದಾಡುತಿರಲು ಕರ್ಮ
ವೇಗದೊಳಿದು ಮಧ್ಯದಿರವಹುದು ||2||

ತೊಲಗಿ ಭೋಗವನು ಪರಮಾತ್ಮನೊಡನೆ ಮತಿ
ನೆಲಸಿ ಸುರತಸುಖಮಿಥುನದಂತೆ
ಸಲೆ ನಿಜಾನಂದದಿಂದಿರೆ ಕರ್ಮಗಂಧದ
ಬಲದಿಂದೆ ಮಂದವೆನುತಿಹರದನು ||3||

ನಿರುಪಮಾದ್ವಯ ನಿತ್ಯ ಪರಿಪೂರ್ಣ ಸುಖಬೋಧ
ತುರಿಯಾತ್ಮನಾಗಿ ನಿಂದನುಗೆಡದೆ
ಪರಮುಕ್ತನಂತೆ ಪದುಳಮಿರೆ ಕರ್ಮದ
ವರಸುಪ್ತಭಾವನೆಯೆನಿಪುದು ||4||
ಇಂತು ಕರ್ಮದ ವೇಗವೆಂತು ಫಲಿಸುತಿಹು
ದಂತೆ ಜ್ಞಾನಿಗಳಿರೆ ಪಲವಂದದಿ
ಸಂತಸದೊಳು ಶಂಭುಲಿಂಗವಾಗಿಹ ಮೋಕ್ಷ
ವಂತರಿಗೆ ಸಮಾನವೇಯಹುದು ||5||

77 ಘನತೇಜದೊಡನಾಡಿ
ರಾಗ: ಶಂಕರಾಭರಣ

ಶರಣ ಜನರ ಸದುಹೃದಯನಳಿನದೊಳು
ಪರಿಶೋಭಿಸುತ್ತಿಹುದು ನಿನ್ನ ಪಾದ
ಹರಿಯ ನಯನದ ಕುರುಹುವಿಡಿದಿಹುದೀಗ
ಗುರು ಶಂಭುಲಿಂಗ ನಿನ್ನ ದಿವ್ಯಪಾದ ಪ

ದಿಟ್ಟರಾವಣನು ರಜತಾಚಲವನೆತ್ತಲೊತ್ತಿ
ಬಿಟ್ಟಿತು ರಸಾತಳಕೆ ನಿನ್ನ ಪಾದ
ನೆಟ್ಟನಂಧಕಾಸುರನೆದೆಯ ಮೇಲೆ ಭರತದ
ಕಟ್ಟಳೆಗೆ ಕುಣಿದುದು ನಿನ್ನ ಪಾದ
ಬೊಟ್ಟಿನೊಳು ಬರೆದ ಚಕ್ರವ ಜಲಂಧರನಿಗೆ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 105

ಕೊಟ್ಟು ಶಿರವರಿದುದು ನಿನ್ನ ಪಾದ
ತಿಟ್ಟನೆ ತಿರುಗುವ ಮುಪ್ಪುರವ ನಿಟ್ಟಿಸಿ ಬೇಗ
ಸುಟ್ಟು ಜಯಸಿತು ಶರ್ವ ನಿನ್ನ ಪಾದ 1

ಬೆಂದನುಲಿಯಂದವಾಗಿ ಮುಂದಿರೆ ಕಂದರ್ಪನನು
ಬಂದು ತುಳಿದಾಡಿತಲ್ಲೊ ನಿನ್ನ ಪಾದ
ಕುಂದದಿಳೆಯೆಂಬ ರಥವಂದು ನಾಗಲೋಕದೊಡ
ನೊಂದುವಂತೆ ಮೆಟ್ಟಿದುದು ನಿನ್ನ ಪಾದ
ಚಂದ ಚಂದದಿಂದೆ ಕಾಳಿದಾಸ ಮೊದಲಾದ ಕವಿ
ವೃಂದವೈದೆ ಬಣ್ಣಿಪುದು ನಿನ್ನ ಪಾದ
ಇಂದು ಕುಂದ ಹಿಮಹಾರ ಪುಂಡರೀಕ ಪಾಂಡುರಂಗ
ಮಂದರ ಮಂದಿರವಾಸ ನಿನ್ನ ಪಾದ 3

ಮೃಗರೂಪದಳೆದಗಧರನರಸಲು ತನ್ನ
ಬಗೆದೋರಿತಿಲ್ಲವಲ್ಲೊ ನಿನ್ನ ಪಾದ
ಬಗೆದು ಪಾತಾಳವೇಳನುಳಿದಿಳಿದು ಅತ್ತಲತ್ತ
ಮಿಗೆ ಮೀರಿ ಮೆರೆದುದು ನಿನ್ನ ಪಾದ
ನಿಗಮ ನಿಕರಜಾಯಿಲಂಗಳನಾರಣ್ಯದೊಳು
ಪೊಗಲೊಡನೈದಿಸಿತ್ತು ನಿನ್ನ ಪಾದ
ನಗಜಾಧಿಪತಿ ನಿರುಪಮ ನಿತ್ಯ ನಿರವಧಿ
ಜಗದಂತರ್ಯಾಮಿ ಶಿವ ನಿನ್ನ ಪಾದ 2

ಮನು ಮುನಿ ನರ ನಾಗದಿವಿಜದನುಜರನು
ದಿನದೊಳು ಭಜಿಪುದು ನಿನ್ನ ಪಾದ
ವಿನಮಿತಸುರವಿಸರದ ಮುಕುಟದ ಮಣಿ
ಘನತೇಜದೊಡನಾಡಿ ನಿನ್ನ ಪಾದ

106 / ತತ್ವಪದಗಳು ಸಂಪುಟ-1

ನೆನೆದವರಘರಿಪು ಗಹನದಹನ ನುತ
ಜನವನರುಹರವಿ ನಿನ್ನ ಪಾದ
ಕನಕಶಿಖರಿ ನಿಜನಿಳಯ ಧನದ ಸಖ
ಜನನ ರಹಿತ ಭವ ನಿನ್ನ ಪಾದ 4

ಪ್ರಣವದ ನೆಲೆ ಮಂತ್ರಗಣದ ಭವನ ಗುಣ
ಮಣಿಕುಲ ಜಲನಿಧಿ ನಿನ್ನ ಪಾದ
ಅಣಿಮಾದಿಗಳ ಜನನದ ಭೂಮಿ ಸುಖದ ಸಂ
ದಣಿ ಸತ್ಯ ಶುಭದಾಗು ನಿನ್ನ ಪಾದ
ಗಣತತಿಗಳ ಬೀಡು ತಣುವಿನ ತಾಣ ತತ್ತ್ವ
ದಣಿ ಮುಕುತಿಯ ಖಣಿ ನಿನ್ನ ಪಾದ
ಫಣಿಪಕಂಕಣ ಕರುಣಾರಸಭರಿತೇ
ಕ್ಷಣ ಗುರುಶಂಭುಲಿಂಗ ನಿನ್ನ ದಿವ್ಯ ಪಾದ 5

78. ಸುಗುಣಸಂಪನ್ನೆ ಶರ್ವಾಣಿ
ರಾಗ:ದೇಶಿ
ಪಾಲಿಸೆನ್ನನು ಪದುಳವೆರಸಿ ಪರಶಿವನಿಗತಿ
ಮೇಲೆನಿಪ ಸುಗುಣ ಸಂಪನ್ನೆ ಶರ್ವಾಣಿ ಪ

ಜರೆ ಮರಣವನು ಜಯಿಸುವಮೃತ ಸೇವನೆಯುಳ್ಳ
ಹರಿಯಜಾದಿಗಳ ಬಲುಹನಪಹರಿಸಿದ
ಗರಳವನು ನಲಿದುಂಡು ಹರನಳುಕದುಳಿದ ಭಾ-
ಸುರತೆ ನಿನ್ನೈದೆದಾಳಿಯ ಮಹಿಮೆ ಗಿರಿಜೆ 1

ಹೇಳಹೆಸರಿಲ್ಲದಭವನು ನಿನ್ನ ದೆಸೆಯಿಂದೆ
ಭಾಳಲೋಚನನೆನಸಿ ನಿಖಿಳ ನಿರ್ಜರರ
ಮೇಳಕಧಿಪತಿಯಾದನೆಂದೊಡಾಗಮ ನಿಗಮ
ಜಾಲವೆಯ್ದುವವೆ ನಿಜನುತಿಗೆನಗಜಾತೆ 2
ನಿನಗೆ ತನ್ನರೆಯೊಡಲನೊಲಿದಿತ್ತನೀಶನೆಂ-
ದೆನುತಿಹರು ತಿಳಿದು ನೋಡದೆ ಕವೀಶ್ವರರು
ಮನಸಿಜಾರಿಗೆ ಮಂತ್ರಮಯ ಮೂರ್ತಿಗಳನು ನೀ
ನನುಗೊಳಿಸಿ ಪೂಜ್ಯನೆನಿಸಿದೆ ಲೋಕಜನನಿ 3
ಜಡೆಗಟ್ಟಿ ತಿರಿದುಂಡು ಮರುಳಿನೊಡನಾಡಿ ಮೈ
ದೊಡೆದು ಬೂದಿಯನು ಸುಡುಗಾಡದೊಳಗಾಡಿ
ಜಡರೀತಿವಡೆದ ರುದ್ರನಿಗೆ ನೀನೊಲಿದು ಕೈ
ವಿಡಿದು ಪಾವನಚರಿತನೆನಿಸಿದೆ ಭವಾನಿ 4

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 107

ಸಿರಿಸಕಲ ಸಿದ್ಧಿಸಂಪದ ವಿದ್ಯೆವಿಭವಾದಿ
ಪರಿಕರದೊಳೊಂದಿ ನೀನುಪಕರಿಸದಿರಲು
ಗುರು ಶಂಭುಲಿಂಗದೊಳಗಾವ ಲೇಸಿಹುದಿಳೆಯ
ನರರ ಮನದೊಲವೀಯಲೆಳಸಿದೊಡೆ ಗೌರಿ 5

79. ಮತಿಯ ಹಂಗಿಲ್ಲದೆಲ್ಲವನರಿವಾತನೆ ಜಾಣರ ದೇವ
ರಾಗ : ನಾದನಾಮಕ್ರಿಯೆ
ಅಗಣಿತ ಮಹಿಮೆಯನಗಲದ ವಿಭವನೆ ಜಾಣರ ದೇವ
ಸೊಗಸುವ ಸುಗುಣಸಂತತಿಗೂಡಿದಭವನೆ ಜಾಣರ ದೇವ ಪ

ಪಿತಮಾತೆಯರೊಳೊಗೆಯದೆ ರೂಪುವೆತ್ತನೆ ಜಾಣರ ದೇವ
ಮತಿಯ ಹಂಗಿಲ್ಲದೆಲ್ಲವನರಿವಾತನೆ ಜಾಣರ ದೇವ
ಗತಿಗೆಳಸದೆ ನಿತ್ಯಮುಕ್ತನೆನಿಸಿದನೆ ಜಾಣರ ದೇವ
ಯತಿಗಳ ಲೋಚನಾಗ್ರದೊಳು ಸಂಚರಿಪನೆ ಜಾಣರ ದೇವ 1

ತಿರಿದುಂಡು ಸಕಲ ಲೋಕವನಾಳ್ವ ಗರುವನೆ ಜಾಣರ ದೇವ
ವರನಿಗಮನಸುಗತಿಯೊಳಗೊರೆದನೆ ಜಾಣರ ದೇವ
ಸುರರ ಬಲುಹನೊಂದು ತೃಣದಿಂದ ಮುರಿದನೆ ಜಾಣರ ದೇವ
ಬರೆದ ಚಕ್ರದೊಳಸುರನ ಶಿರವರಿದನೆ ಜಾಣರ ದೇವ 2

ಪೂಜಿಸದಾರನು ಪೂಜೆಗೊಂಬಧಿಕನೆ ಜಾಣರ ದೇವ
ಮೂಜಗವೆಂಬ ನಾಟಕವನಾಡಿಸುವನೆ ಜಾಣರ ದೇವ
ರಾಜೀವನಾಭನು ವಧುವಾಗಲಾಳ್ದನೆ ಜಾಣರ ದೇವ
ಸೋಜಿಗದೊಡಲೊಳಾತ್ಮರ ಭೋಗವೀವನೆ ಜಾಣರ ದೇವ 3

ಕಾಮನನುರುಹಿ ಕಾಮಿನಿಯೊಡವೆರೆದನೆ ಜಾಣರ ದೇವ
ತೀವಿ ನಿಜಾನಂದದೊಳು ಮಿಕ್ಕು ಮೆರೆದನೆ ಜಾಣರ ದೇವ
ಜೀವರೊಳೆಡೆವಿಡದಿರ್ದು ಕಾಣಿಸದನೆ ಜಾಣರ ದೇವ
ಭಾವಿಸಲಾವುದನದರೊಳು ತೋರ್ಪನೆ ಜಾಣರ ದೇವ 4

ಹರಿಯಜರುಗಳ ವಾದವನು ಮಾಣಿಸಿದನೆ ಜಾಣರ ದೇವ
ಗರಳವ ಸೇವಿಸಿ ಮರಣವ ಗೆಲಿದನೆ ಜಾಣರ ದೇವ
ಶರಣಜನರ ಭವರುಜಗಾದಿ, ವೈದ್ಯನೆ ಜಾಣರ ದೇವ
ಪರಿಭಾವಿಸಲು ಶಂಭುಲಿಂಗ ನೀನೋರ್ವನೆ ಜಾಣರ ದೇವ 5

108 / ತತ್ವಪದಗಳು ಸಂಪುಟ-1

80. ಪರಮಪಾವನ ಪಂಚಮುಖ ದಯಾಸಿಂಧುವೆ
ರಾಗ : ಸಾಳಂಗ
ಪರಮಪಾವನ ಪಂಚಮುಖ ದಯಾಸಿಂಧುವೆ ಶಂಭುಲಿಂಗ
ವರದ ವಾಸವನತ ಲೋಕೈಕಬಂಧುವೆ ಶಂಭುಲಿಂಗ ಪ

ಅನಪಮಾಚಲ ಭಕ್ತಿಭಾವಾನುಕೂಲನೆ ಶಂಭುಲಿಂಗ
ಮನುಮುನಿ ಜನರ ತಪೋನಿಧಿಲೋಲನೆ ಶಂಭುಲಿಂಗ
ಜನನ ಮರಣ ಭಯಹರ ಜಿತಕಾಲನೆ ಶಂಭುಲಿಂಗ
ವನಜಭವಾಂಡ ಮಂಡಲಪರಿಪಾಲನೆ ಶಂಭುಲಿಂಗ 1

ಗಿರಿಜೆಯ ಕುಚಗಂಧವಕ್ಷಾನುಲೇಪನೆ ಶಂಭುಲಿಂಗ
ಶಿರದರಮನೆಯ ಸಿಂಗರವೆಂಣಿನೋಪನೆ ಶಂಭುಲಿಂಗ
ಶರಣಸತಿಯನೊಲಿಸುವ ಸತ್ಕಲಾಪನೆ ಶಂಭುಲಿಂಗ
ಸರಸ ಸಂಗೀತ ಸಾಹಿತ್ಯ ಸಲ್ಲಾಪನೆ ಶಂಭುಲಿಂಗ 2

ಅಕಳಂಕ ಮಹಿಮ ಸುಗುಣಮಣಿಹಾರನೆ ಶಂಭುಲಿಂಗ
ಸಕಲ ಚರಾಚರ ಜೀವರಾಧಾರನೆ ಶಂಭುಲಿಂಗ
ವಿಕಸಿತ ಹೃದಯನಳಿನವಂಸಾಕಾರನೆ ಶಂಭುಲಿಂಗ
ಮುಕುತಿ ಸಂಪದಸಿದ್ಧಿ ಸಮುದಾಯೋದಾರನೆ ಶಂಭುಲಿಂಗ 3

81. ನೋಡು ದಯದೊಳೆನ್ನನೆಂದು
ರಾಗ : ನಾದನಾಮಕ್ರಿಯೆ
ನೋಡು ದಯದೊಳೆನ್ನನೆಂದು ಬಾಳನಯನವನೊಪ್ಪು
ಮಾಡಿ ಹರಿಯ ದಿಟ್ಟಿ ನಿಂದುದೀಶನಡಿಯೊಳು ಪ

ಮುಳಿದು ಕಾಲಕಾಮಪುರವಜಾಂಡಕೋಟಿಯನುರುಹಿ
ಕಳೆವ ಬಲವನುಳ್ಳ ನಿನ್ನ ಸಲುಗೆಯಿಲ್ಲದೆ
ನೆಲೆಯೆನಿಸದೆನಗೆ ಶಿವಾಂಘ್ರಿಯೆಂದು ಭೀತಿಸಿ ಬೇಡಿ
ಕೊಳುವೆನೆನ್ನನುಳುಹಿಕೋ ಕೃಶಾನುಚಕ್ಷುವೆ 1

ಹರಿವರಾಹವಾದಿಯಾದ ಪಲವು ಜನನವ ನೈದಿ
ಬರುವ ಚಕ್ರಿಯೊಡನೆ ತಿರುಗಿ ಬಳಲಲಾರದೆ
ಶರಣೆನುತ್ತಭವನ ಚರಣವಿಡಿದೆನೆಂದೊಡೆ ನಿನಗೆ
ಸರಿಯಗಾಣೆ ನಾನು ಚಿತ್ರಭಾನುನೇತ್ರನೆ 2

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 109

ಜಡಮತಿಗಳೆನಿಸುವ ಕೆಲರು ವಾರಿಜಾಕ್ಷನ ರುದ್ರ
ನೊಡನೆ ಸದೃಶವಾಗಿ ನುಡಿವರದನು ತೊಲಗಿಸಿ
ಮೃಡನೆ ಪೂಜ್ಯನಸುರ ವೈರಿಯಹನು ಪೂಜಕನೆಂದು
ಪೊಡವಿಗರುಹಿ ಮನ್ನಿಸೆನ್ನನನಲದೃಷ್ಟಿಯೆ 3

ನಿಗಮವರಸುವಾಗಮಾಳಿಗಳು ಪೊಗಳುವ ಮೂರು
ಜಗದ ಜನರು ಸೇವಿಸುವ ಮುನಿಗಳು ಜಾನಿಪ
ನಗಸುತಾಧಿಪತಿಯ ಪನ್ನಳಿವನೊಂದಿದ ಎನ್ನ
ನಗಲಲೀಯದಿರಿಸುವದೆಲೆ ಪಾವಕಾಕ್ಷಿಯೆ 4

ಚಂದದಿಂದ ತನ್ನ ನಿಜವನಿಂತು ನುತಿಸುವ ಶೌರಿ
ಯಂದದೀಕ್ಷಣಕ್ಕೆ ಮೆಚ್ಚಿ ಶಂಭುಲಿಂಗದ
ಹೆಂದದಮರನತ ಪಾದಾರವಿಂದದಲ್ಲಿಯೆ ನೀನಿ
ರೆಂದು ಶಾಂತರಸದೊಳೆಸೆದುದಳಿಕಲೋಚನ 5

82. ನೋಡಿ ಸಲಹಯ್ಯ
ರಾಗ : ನಾದನಾಮಕ್ರಿಯೆ- ಝಂಪೆ ತಾಳ
ನೋಡಿ ಸಲಹಯ್ಯ ನಿನ್ನಡಿವಿಡಿದೆನಭವ ನೆರೆ
ಕಾಡುತಿಹ ಪೂಗೋಲನ ಬಿಡದೆ
ಹೇಡಿಗೊಳಿಸುವ ಕಾಲನ ಬಲುಹಿಂ
ಗೀಡು ಮಾಡದೆ ಬಾಲನ ಎನ್ನ ಪ

ಎಳೆವರೆಯದಬಲೆ ಕಂಗೊಳಿಸಲಳುಕಿದೊಡೆ ಕೊಲೆ
ಗೆಳಸಿ ಬೇಗದಲಿ ಬಂದು ಕಡುಪಿಂ
ಮುಳಿದು ಬೊಬ್ಬಿಡುತಲಂದು ಮದನ
ಬಿಲುವಿಡಿದು ಬಂದು ನಿಂದು ||
ತಳುವದೆಸೆವುತ್ತಿಹನು ಮದನ
ಗೆಲುವಡರಿದಿವನ ಕದನ ನೀ
ನುಳುಹಿಕೋ ಪಂಚವದನ ಎನ್ನ 1

ತನುವನಂಜಿಸಲು ರೋಗದ ಬೇಸಿಗೆಯ ಬಿಸಿಲು
ವನು ಮುನ್ನ ದಾಳಿಯಿಂ ಕಾಡಿ ಕಾಡಿ
ಘನಬಾಧೆಗಳನು ವೊಡಗೂಡಿ ಕೂಡಿ

110 / ತತ್ವಪದಗಳು ಸಂಪುಟ-1

ಮನೆಯ ಸತಿಸುತರು ನೋಡಿ ||
ಮುನಿದು ಪಾಶವನು ಬೀರಿ ಕಾಲ
ನನುಗೆಡಿಸುತಿಹನು ಸಾರಿ ಪೇಳಿ
ದೆನು ಶಿವನೆ ನಿಜವ ತೋರಿ ಎನ್ನ 2

ಶರಣಜನಬಂಧು ಶಂಕರ ಕೃಪಾಸಿಂಧು ಸ
ದ್ಗುರು ಶಂಭುಲಿಂಗ ಕೃಪೆಯಿಂದೆ ನೀನೇ
ಪರಿಭವಾಂಬುಧಿಯಿಂದಲಿಂದೆ ಬೇಗದಿ
ಹೊರದೆಗೆದು ಸಂತಸದಿಂದೆ
ಪೊರೆವುದು ಮನೋಜದಂಡ ದಂಡ
ಧರವಿಜಿತಸುಪ್ರಚಂಡ ವಿನುತ
ಹರಿಯ ಅಜರುಗಳ ತಂಡ ಎನ್ನ 3

83. ಎನ್ನನೊಲವಿಂದೆ ಪಾಲಿಸು ಪಾರ್ವತೀಶ
ರಾಗ : ಭೈರವಿ- ಝಂಪೆ ತಾಳ

ಎನ್ನನೊಲವಿಂದ ಪಾಲಿಸು ಪಾರ್ವತೀಶ
ಸನ್ನುತಾಗಮನಿಗಮಜಿತ ಪಂಚನಾಶ ಪ

ಸುದತಿಯರ ಸವಿನೋಟದಲರಂಬು ಬಂದು
ಹೃದಯವಿಮ್ಮೈಗಾಣಲಂಗಜನ ತಾಪವಂದು
ಮುದವನುಡುಗಿಸುತಿದೆ ವಿವೇಕವಿರಹಿತನೊಂದು
ಹದನರಿಯೆನಿದಕೆ ನಿಮ್ಮಡಿವಿಡಿದೆನಿಂದು 1

ಭವ ಮಹಾವನದೊಳು ಸುಮಾರ್ಗದ ಹೊಲಬುಗೆಟ್ಟು
ಹವಣಿಸಲು ಬಾರದ ಕಲುಷಕಂಟಕ ನಟ್ಟು
ಜವನದೂತರ ದಾಳಿಯಿಂದಲತಿ ಭಯಪಟ್ಟು
ಶಿವದಿಡುವೆ ನಾನು ನಿಮ್ಮವನಾಶೆವಟ್ಟು 2

ಹರಿವಿರಿಂಚಿಸುರೇಂದ್ರವಂದಿತ ಪದಸರೋಜ
ಶರಣ ಸಂದೋಹ ಕಾಮಿತ ಕಲ್ಪಭೂಜ
ಗಿರಿಸುತಾವನಧಿವರ್ಧನ ಪೂರ್ಣರಾಜ
ವರದ ಗುರು ಶಂಭುಲಿಂಗವೆ ದಿವ್ಯತೇಜ 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 111

84. ಕರುಣಿಸು ಕಾಡದೆನ್ನುವನು
ರಾಗ : ಕುರಂಜಿ

ಕರುಣಿಸು ಕಾಡದೆನ್ನುವನು ಬಂದು
ಶರಣುಹೊಕ್ಕೆನು ಶಂಕರ ನಿನ್ನ ಪ

ಬಿಡಲಾರದ ವಿಷಯಂಗಳಿಗೀ ಮನ
ವೆಡೆಯಾಡುತಿಹುದನವರತ
ತಡೆಯದೆ ನೀನಲ್ಲಲ್ಲಿಯೆ ಕಾಣಿಸಿ
ಕೆಡಿಸೆನಗವರಾಸೆಯನೀಶ 1

ತನುಧನ ವನಿತಾದಿಯೊಳಾವಭಿರತಿ
ಜನಿಸಿಹುದಂತೆ ನಿನ್ನಯ ನಿಜಾಂಘ್ರಿ
ವನಜದೊಳೀ ಮತಿಗನುರಾಗವನಿ
ತ್ತೆನಗಭಯಂಗುಡು ಪುರಮಥನ 2

ಶಿಶುವಿನ ದುರುಳತೆಯನು ಸೈರಿಸಿ ಪಿತ
ಸೊಸೆದು ಮುದ್ದಿಸಿ ಲಾಲಿಸುವಂತೆ
ಮುಸುಕಿ ದುರ್ಗುಣವಿರಲದನೆಣಿಸದೆ ಮ
ನ್ನಿಸು ಬಿಡದೆನ್ನನುಮಾರಮಣ 3

ಕಲುಷವಡಸಿದವನೆಂದು ನೀನೆನ್ನುವ
ನುಳಿಯಲಹುದೆ ನಿನ್ನಯ ನೆನಹು
ತೊಲಗಿಸಲಘಮೊಂದಿಲ್ಲದರಿಂದೆನ
ಗೊಲಿದು ಸಲಹು ಸಾರಿದೆನಭವ 4

ಬಡವರನೀಕ್ಷಿಸುತವರುಚಿತವನುರೆ
ನಡೆಸುವರೊಡಲಿದು ಸಜ್ಜನರೆಲ್ಲ
ಪೊಡವಿಗೆ ದೀನನೆನಿಸುವೆನ್ನನಧಿಕ ನೀ
ನೆಡವಿಡದಿರು ಗುರು ಶಂಭುಲಿಂಗ 5

112 / ತತ್ವಪದಗಳು ಸಂಪುಟ-1

85. ಮೋಹವಿಲ್ಲದೊಂದರೊಳಿಂತು
ರಾಗ : ನಾದನಾಮಕ್ರಿಯೆ
ಸಾರವಸ್ತುವಲ್ಲದನ್ಯವನೊಲಿವೆ ಸುವಿ
ಚಾರವಿಲ್ಲವೇಕೆ ನಿನ್ನೊಳು ದೇವರೆ ಪ

ಕೂಡೆ ಕಂಪುವೆತ್ತ ಗಂಧವನುಳಿದು ಸುಡು
ಗಾಡ ಬೂದಿಯ ತಾಳ್ದೆ ಮೈಯೊಳು ದೇವರೆ
ಮಾಡಿದಲಂಕಾರವೆಲ್ಲವನೊಲ್ಲದೆ ಕೊಂ
ಡಾಡಿ ತೊಟ್ಟೆ ಪನ್ನಗಂಗಳ ದೇವರೆ 1

ಹಿಂಗಿ ತೋರಹಾರವಂ ಮಿಗೆ ಮಂಡೆಮಾಲೆ
ಗಂಗವಿತ್ತೆ ಸಂತಸದಿಂದೆ ದೇವರೆ
ಮಂಗಳ ದುಕೂಲವನೊಮ್ಮೆ ಪೊದೆಯದೆ ಮಾ
ತಂಗ ಚರ್ಮವಾಂತೆ ಭಾವಿಸಿ ದೇವರೆ 2

ವಾರಣಾದಿ ವಾಹನಂಗಳನಗಲಿ ನೀನು
ಸಾರಿ ಬಿಡದೆತ್ತನೇರಿದೆ ದೇವರೆ
ಭೂರಿ ವಿಶ್ವವಲ್ಲಭನಾಗಿ ಮತ್ತೆ ಮನ
ವಾರೆ ತಿರಿದುಂಡು ಬಾಳುವರೆ ದೇವರೆ 3

ಗಾಡಿಯುಳ್ಳ ನಿರ್ಝರಾಳಿಯನೆಳಸದೊಂದು
ಗೂಡಿದೆ ಪೈಶಾಚವೃಂದವ ದೇವರೆ
ನೋಡದೆ ಹೇಮಾದ್ರಿವಾಸವನೊಪ್ಪಿ ಮನೆಯ
ಮಾಡಿಕೊಂಡೆ ಪ್ರೇತಭೂಮಿಯ ದೇವರೆ 4

ಮೋಹವಿಲ್ಲದೊಂದರೊಳಿಂತು ನೀನು ಸುರಸ
ಮೂಹದಿಷ್ಟ ಸಿದ್ಧಿ ಮಾಳ್ಪುದು ದೇವರೆ
ಊಹಿಸಲಾತ್ಮಾನುಭಾವಿಗೆ ಭೋಗದೊಳು ನಿ
ರ್ಮೋಹವೈಸೆ ಶಂಭುಲಿಂಗವೆ ದೇವರೆ 5

86. ಕೂಡೆ ನೇಮಿಸಿದೆ ಹಿತವಹಿತವೆಂಬೆರಡನು
ರಾಗ : ಮಧುಮಾಧವಿ
ಕೂಡೆ ನೇಮಿಸಿದೆ ಹಿತವಹಿತವೆಂಬೆರಡನು
ನೋಡು ನಿನ್ನದಾವ ಬಲ್ಲತನವಹುದಭವ ಪ

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 113

ಕಡುಚೆಲುವೆಸೆವ ಜವ್ವನವನು ಜರೆಯನು
ಬಿಡಲರಿದೆನಿಪ ಭೋಗವನು ರೋಗವನು
ತಡೆಯದಖಿಳ ವಿದ್ಯೆಯನು ದರಿದ್ರತೆಯನು
ಪೊಡವಿಗಧಿಕ ಸಂಪದವನು ಲೋಭವನು 1

ಪರಿತೋಷವನು ವಿತ್ತದಳಿಯಾಸೆಯನು
ಪರತರ ಶಮೆಯನು ನೀರೆಯರ ವಿಲಾಸವನು
ಕರ ಸೊಗಸಿನ ಜೀವನವನು ಮರಣವನು
ವಿರತಿಯನಗಲದರಿವನು ಗರ್ವವನು 2

ಮನುಜತ್ವವನು ಮುಕ್ತಿಯೊಲವಿಲ್ಲದಿಹುದನು
ತನುದಂಡನೆಯನು ಚಿತ್ತದೊಳು ಕಾಮವನು
ಮುನಿವರ್ತನೆಯನು ಲೋಕದ ರಂಜನೆಯನು ಪಾ
ವನ ಶಂಭುಲಿಂಗವಾದೆನು ಸಂಸೃತಿಯನು 3

87. ನೀನೊಲಿಯದ ನಿಮಿಷವೆ
ರಾಗ : ನಾದನಾಮಕ್ರಿಯೆ

ನೀನೊಲಿಯದ ನಿಮಿಷವೆ ಪಲವರುಷವ
ದಾನೆಂತುಳಿವೆನು ಮನ್ನಿಸು ದೇವ ಪ

ಜ್ಞಾನವಿರೋಧಿ ಮಾಯಾವಿಕೃತಿ ಬಹು
ಧಾನ್ಯದೆ ಶುಕ್ಲಧಾತುಗಳಾಗೆ
ಈ ನಿಖಿಳಪ್ರಜೋತ್ಪತ್ತಿಯನವರೊಳು
ನೀನುಂಟುಮಾಳ್ಪೆ ಸರ್ವೇಶ್ವರ 1

ಮುಳಿದು ಮನ್ಮಥನ ವಿಕ್ರಮವನು ಜಯಿಸಿ ಮು
ಪ್ಪೊಳಲದುರ್ಮುಖಿ ರಾಕ್ಷಸರನಿಕ್ಕಿ
ನಳಪಾರ್ಥಿವಾದಿ ಶ್ರೀಮುಖದ ಸೌಮ್ಯರಿಗೆ ಮಂ
ಜುಳಕರಾನಂದವೀವನುಪಮ 2

ಭಾವಿಸೆ ಪ್ರಭವಾದಿ ಕ್ಷಯ ಕಡೆಯಾದವರ
ಭಾವ ವಿಕಾರತ್ವ ವಿರಹಿತ
ಜೀವದುಃಖಾರ್ಣವೋತ್ತಾರಣ ಪ್ಲವ ಮಹಿ
ಮಾವಿಭವದ ಶಂಭುಲಿಂಗವೆ 3

114 / ತತ್ವಪದಗಳು ಸಂಪುಟ-1

88. ತಾವರೆಯಲರಿ ತಾವರೆ ಮುಟ್ಟಿ
ರಾಗ : ಸೌರಾಷ್ಟ್ರ

ತಂದು ತೋರೆ ಪಳೆವಾತು ಪೊಡೆಯನೈಮೊಗದ ಸಾ
ಲಂದವನು ಸರಿಮಾಡಿದನಿಂದುವದನೆ ಪ

ನೆಲದಾಳಿಗಳ ರಾಯನ ಕುವರಿಗೊಲಿದು ನೆಲ
ಕಲನೆನಿಸದೆ ನೆಲದೊಲವಿತ್ತು ನೆಲನ
ಪಲವೆಡೆ ನೆಲೆಯಾಳಾಂತನ ಪಚ್ಚವನೆ ತೊಟ್ಟು
ನೆಲಗಣ್ಣನಣುಗನನಿಕ್ಕಿ ಮಿಕ್ಕವನ 1

ಮುಗಿಲ ಪಗೆಯನುಂಬವನ ಪಗೆಗಳಿಯನ
ಪಗೆಯಾಗಿ ಮುಗಿಲೇರಿದನ ಮಗನೊಡನೆ
ಪಗೆಯಂತೆ ಸೆಣಸಿ ಮುಗಿಲಹಾದಿಗಟ್ಟಿಗೆ
ಮುಗಿಲ ಹೂವನೆ ಸೂಡಿ ಬಗೆಗೊಳಿಸುವವನ 2

ತಾವರೆಯಾಗದ ತಾವರೆಗಳನೊಮ್ಮೆ
ತಾವರೆಯಲರಿ ತಾವರೆ ಮುಟ್ಟಿ ತನ್ನ
ತಾವರೆ ವನೆಯಳೆರೆಯನು ತಾವರೆಯುಳ್ಳ
ತಾವರೆಗೀಯಲೊಲಿದ ಶಂಭುಲಿಂಗನ 3

89. ತಾಳಲಾರೆನು ತನುವನು
ರಾಗ : ಶಂಕರಾಭರಣ
ನಿದ್ರೆಬಾರದಿದೆನ್ನ ಪರಿಭವ ದುಃಖ ಸ
ಮುದ್ರವೆನಿಸುವ ಸಾಯಸವ ನೆನೆನೆನೆದು ಪ

ಪಾಪಾನುಗುಣದಿಂದೆ ಗಿಡಮರಕ್ರಿಮಿಗಳ
ರೂಪಾಗಿ ಕೀಟಪತಂಗಾದಿಯಾಗಿ
ಆ ಪಕ್ಷಿಕುಲವಾಗಿ ಮೃಗಜಾತಿಯಾಗಿ ಮೇ
ಲಾ ಪಶುರೂಪಾಗಿ ಬಹುಬಾಧೆಗೇಳಿ 1
ಭೂತಪಂಚಕದ ರೂಪಾಗಿಯೋಷಧಿಯಾಗಿ
ಧಾತು ಸಪ್ತಕದ ರೂಪಾಗಿ ತಂದೆಯೊಳು
ಮಾತೃ ಸೂತಕ ರುಧಿರ ರೂಪಾಗಿ ಮ
ತ್ತೀ ತನುವಾಗುವಚ್ಚರಿಯನೆ ಕೇಳಿ 2

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 115

ಬಾಲಕ ತರುಣ ಜರಾಜೀರ್ಣ ರೂಪಾಗಿ
ಮೇಲೆ ನರಕಿಯಾಗಿ ಬಳಿಕೀ ಕ್ರಮದೊಳು
ತಾಳಲಾರೆನು ತನುವನು ಶಂಭುಲಿಂಗವೆ
ಪಾಲಿಸೆಂದೆರಗಿ ಬಿನ್ನೈಪೆ ಭೀತಿಯೊಳು 3

90. ನುಡಿಯಬಾರದ ಲಜ್ಜೆಗುಡುವ
ರಾಗ : ಕನ್ನಡ ಕಾಂಬೋಧಿ

ಅರುತರಹರಿಸಬಹುದಡಿಗಡಿಗೆ ತೋರುವತಿ
ಘೋರ ಸಂಸಾರದನಂತಾಪಸಂತತಿಯ ಪ

ಮಾತೆಯುದರದೊಳು ಮೊಗವಿಡದ ಮುನ್ನಸುವಳಿವ
ಪೂತಿಗಂಧದ ಹೇಯವನು ಸಿಡಿಲಸಮದಾ –
ಘಾತಿ ಮಿಗೆ ಪೊಡೆದು ಕೆಡಪುವ ಸೂತಿವಾಯುವನು
ಯಾತನೆಯ ನಡುಗಡಲಿದೆನಿಪ ಜನನವನು 1

ನಿರಯದೋಕುಳಿಯನಾಡುವ ಪರಿಯ ಶಿಶುತ್ವವನು
ದುರುಳತೆಯೊಳೇನನರಿಯದ ಬಾಲ್ಯವನು
ಮರುಳುಗೊಳಿಸುವ ಕಂತುವಿನ ಕಾಟ ಮೊದಲಾದ
ದುರಿತ ಕುಲಬಂಧುವೆನಿಸುವ ಯೌವ್ವನವನು 2

ನುಡಿಯಬಾರದ ಲಜ್ಜೆಗೂಡುವ ಜರೆಯನು ತನ್ನ
ನಡಸಿ ತೀರದ ಬಾಧೆಗೊಳಿಪ ಮರಣವನು
ಜಡಿವ ಯಮಭಟರ ಕೋಪವನಿಂತು ಭವಭವದೊ
ಳಿಡೆವಿಡದೆ ಶಂಭುಲಿಂಗವೆ ಬಿಡಿಸು ನೀನಿದನು 3

91. ಸುವಿವೇಕವನು ಮಾಡೆ ಮನುಜ
ರಾಗ : ಮಧುಮಾಧವಿ
ಪಡೆವೆ ನೀನೆಂದಿಗೆ ಪರಮುಕ್ತಿಸುಖವನು
ಕೆಡುವ ಕಾಯದೆ ಮೋಹವನು ಮಾಣಿ ಮನುಜ ಪ

ಮಲಮೂತ್ರವಣುವಿರ್ದ ನೆಲೆಯೊಳು ನಿಲೆನಿಂಬೆ
ಪಲವುಪೇಯದ ತಾಣವೆನಿಸುವಂಗದೊಳು

116 / ತತ್ವಪದಗಳು ಸಂಪುಟ-1

ನೆಲಸಿ ವಿಷಯಸುಖವನು ಭೋಗಿಸುವೆನೆಂದು
ಸಲೆ ಮನವೆಳಸಿಹುದನು ಬಿಡೆ ಮನುಜ 1

ಜಡ ದೃಶ್ಯಮಿತಿ ಪರಿಣತೆ ಭೂತಕಾರ್ಯತೆ
ವಿಡಿದು ಕನಸುನಿದ್ರೆಯೊಳಗಿಲ್ಲವಾಗಿ
ಕೊಡನಂತೆ ಬೇರೆನಿಸಿಹುದು ತಾನಲ್ಲವೀ
ಯೊಡಲೆಂಬ ಸುವಿವೇಕವನು ಮಾಡೆ ಮನುಜ 2
ಅನಿಮಿತ್ತವರಿಗಳೆನಿಸುವ ಕಾಮಾದಿಗಳಿಗೆ
ತನುವನೇಕವನಿತ್ತೆ ಭವಭವಂಗಳಲಿ
ನಿನಗೊಂದು ದೇಹವಿದನು ತೊಟ್ಟು ತಪವಾಂತು
ಘನಶಂಭುಲಿಂಗವಾಗಿರಲೊಲ್ಲೆ ಮನುಜ 3

92. ಅಜ್ಞಾನಿಯಲ್ಲವೆ ನೀನು ಜೀವನೆ
ರಾಗ : ವಸಂತ
ಅಜ್ಞಾನಿಯಲ್ಲವೆ ನೀನು ಜೀವನೆ
ಸುಜ್ಞಾನಿಯೆಂದು ನುಡಿವರೆ ಪ

ಚೈತನ್ಯರೂಪನಾಗಿರ್ದು ಜಡಪಂಚ
ಭೂತದೇಹವನು ನೀನೆಂಬೆ
ಪೂತನಿರ್ಮಲ ನಿಜತತ್ತ್ವಮಯನಾಗಿ
ಸೂತಕಾದಿ ವಿಧಿವಿಡಿದಿರ್ಪೆ 1

ಮೂರವಸ್ಥೆಗಳೊಂದರೊಳೆಗೊಂದಿಲ್ಲಾ
ಮೂರವಸ್ಥೆಯನರಿವುತ
ಬೇರೆ ಸಾಕ್ಷಿಕನಾಗಿರ್ದು ಸಂಸ್ಕೃತಿ
ದೂರಿಗೀಡಾಗಿ ಬಳಲುವೆ 2

ಚಿತ್ತೊಂದೆಯದು ಗುರುಶಂಭುಲಿಂಗವೆಂ
ದುತ್ತಮ ಶ್ರುತಿ ಸಾರುತಿರೆ
ಮತ್ತೆ ನೀನೋರ್ವನೆಂದು ಬರಿದೆ ಮೋಹಿ
ಸುತ್ತಿರ್ಪೆ ನಾಮರೂಪವನು 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 117

93. ಕಂಡು ಕೇಳಿ ಮತ್ತೆ ಮೋಹಿಪರೆ
ರಾಗ : ಶಂಕರಾಭರಣ
ಕಂಡು ಕೇಳಿ ಮತ್ತೆ ಮೋಹಿಪರೆ ಬಲ್ಲವರು ಭೂ
ಮಂಡಲದ ಭೋಗಪೂಗವನತಿಗಳಿಯದೆ ಪ

ಪಡೆದವರೊಡನಾಡಿಗಳು ಬಗೆಗೊಳಿಸುವ
ಮಡದಿಯರೊಲವೀವ ತನುಜರೊಂದಿನಿಸು
ಬಿಡಲರಿದೆನಿಪ ಬಂಧುಗಳಚ್ಚ ಸುಖಿಗಳು
ಕಡುಜಾಣರುಗಳು ತಮ್ಮಿದಿರೊಳಳಿವುದನು 1

ಬಲಿ ವಾಲಿ ಕರ್ಣ ಕೌರವ ರಾಮ ರಾವಣ
ನಳ ನಹುಷ ರಘು ಭೀಮ ಬಲಭದ್ರ ಸಗರ
ಕಲಿಪಾರ್ಥ ಕೀಚಕ ಶಿಶುಪಾಲ ದಶರಥ
ರೊಳಗಾದನೇಕರೆಲ್ಲರ ಹಾನಿಕಥೆಯನು 2

ಸೊಡರಿನ ಸುಡುವತನವನರಿಯದೆ ಬಂದು
ಕೆಡುವ ಪುಳುವಿನವೋಲಖಿಳ ವಸ್ತುಗಳ
ಕೆಡುವ ದೋಷವನು ವಿಚಾರಿಸಿ ವಿಬುಧರು
ಬಿಡದಿಹುದನುಚಿತವೆಲೆ ಶಂಭುಲಿಂಗವೆ 3

94. ಪದಿನಾಲ್ಕು ಜಗವಂತದರೊಳು
ರಾಗ : ಬಹುಳಿ

ಮನುಜ ನೀನಖಿಳ ಭೋಗಾಶ್ರಯಂಗಳ ಮಿಗಿಲ
ನನುಕರಿಸಿ ನೋಡಿ ಮತ್ತೀ ನೆಲದೊಳು
ಘನದುರಾಸೆಯನು ಮಾಡಿದೊಡೆ ನಿನ್ನಂತೆ ಜಡ
ರೆನಿಸುವವರುಂಟೆ ಭಾವಿಸಿ ನೋಡಲು ಪ

ಶಿವ ಶಕ್ತಿ ವರಸದಾಶಿವನೀಶ್ವರನು ವಿದ್ಯೆ
ತವೆಕಾಲ ಕಲೆ ನಿಯತಿಯವಿದ್ಯೆಯು
ಸವೆಯದನುರಾಗ ಪುರುಷ ಪ್ರಕೃತಿ ಗುಣಬುದ್ಧಿ
ಕವಿದಹಮ್ಮು ಚಿತ್ತು ವಿಜ್ಞಾನೇಂದ್ರಿಯ

118 / ತತ್ವಪದಗಳು ಸಂಪುಟ-1

ವಿವಿಧಕರ್ಮೇಂದ್ರಿಯ ರವಾದಿ ತನ್ಮಾತ್ರ ನಭ
ಪವಮಾನ ಶಿಖಿ ವಾರಿ ವಿಶ್ವಂಭರ
ಅವರ ಪಂಚೀಕರಣ ಪಂಚವಿಂಶತಿ ತತ್ತ್ವ
ನಿವಹದೊಬ್ಬುಳಿಯವರ ಕಾರ್ಯದೊಳಗೆ 1

ಪಲವಜಾಂಡಂಗಳವರೊಳಗಿದೊಂದಂಡವಿದ
ರೊಳಗೆ ಪದಿನಾಲ್ಕು ಜಗವಂತದರೊಳು
ಇಳೆಯೊಂದು ಬಳಿಕೇಳು ದ್ವೀಪಂಗಳವರೊಳಗೆ
ಕಳೆದಾರನೊಂದು ಜಂಬೂದ್ವೀಪವು
ತಿಳಿಯೆ ನವಖಂಡವವರೊಳಗೆಂಟನುಳಿದೊಂದು
ಬಳಿಕದೈವತ್ತಾರು ದೇಶವವರ
ಒಳಗೊಂದನೇಕ ಪುರವವರೊಳೊಂದೊಂದದರೊಳಗೆ
ನಿಳಯಕೋಟಿಗಳವರ ಗೋಟಿನಲ್ಲಿ 2

ನಿನಗೊಂದು ಮನೆಯದಕೆ ಬಲುದಾಯಿಗರ ಭಾಗ
ವನುವಾಗಿ ಮಿಕ್ಕದೊಂದಲ್ಪವೆನಿಪ
ಮನೆಯದರೊಳಗೆ ಮಕ್ಕಳಳಿಯರೆಡೆ ವನೆಗಳೆದು
ವನಿತಾದಿಗೂಡಿ ನೀನಿರುವ ನೆಲನು
ಇನಿತಲ್ಲದುಂಟೆ ಪರಿಕಿಪೊಡಿದಕ್ಕಾಗಿ ಕೆ
ಮ್ಮನೆ ಸಾವ ಬಲುಗೇಡನಿದನು ಮರೆದು
ತನುಮನಂಗಳನು ನೋಯಿಸದೆ ಶಂಭುಲಿಂಗದ
ಘನಸುಖ ಪದವನೊಲಿಸು ನೀ ಬಲ್ಲಡೆ

95. ಕೆಡದಿರೆಲವೊ ಶಂಭುಲಿಂಗವನುಳಿದು
ರಾಗ : ಮಾಧುಮಾಧವಿ
ಮನುಜ ನೀನೆಡೆವಿಡದನುದಿನವೆಳಸುವ
ವನಿತೆಯೊಳೆಣಿಸಲೊಂದಿನಿಸು ಲೇಸಿಹುದೆ ಪ

ಮೊಲೆಯ ಮಾಂಸವನು ಮುಡಿಯ ನವಿರನು ದೇಹ
ದೆಲುವನು ಮುಸುಕಿದ ಪಸಿಯ ತೊವಲನು
ಪಲವೆಡೆಯಣ ನರವನು ಬೇರೆ ಬೇರೆ ನೀ
ನಲಸದರಸಿ ನೋಡು ಲಲನೆಮೋಹನವೆ 1

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 119

ಕರಣದೊಳಿಳಿವ ಮಲವನು ಕಾಂತಿಯೊಳು ಮುಂ
ಬರಿವ ಶೋಣಿತವನು ಪೊಸ ಜವ್ವನದೊಳು
ಪರಿಣಾಮವನು ಚಿತ್ತದೊಳು ಕಪಟವನು ಬಿ
ತ್ತರಿಸಿ ಭಾವಿಸಿ ನೋಡು ನಿನಗೆ ಶೋಭನವೆ 2

ಪಡೆವ ಸಾಯಸವನು ನಡುವಲ್ಪ ಸುಖವನು
ಕಡೆಯ ನಿರಸವನು ಕೆಡುವ ತನುವನು
ಬಿಡದೆ ಬರಿಯ ರಂಜನೆಯ ಸತಿರತಿಗಾಗಿ
ಕೆಡದಿರೆಲವೊ ಶಂಭುಲಿಂಗವನುಳಿದು 3
96. ಸುಳಿಗಾಳಿ ಸುರಚಾಪ ಕನಸು
ರಾಗ : ತೆಲುಗ ಕಾಂಬೋಧಿ
ವನಿತೆಯರೊಲವಾದ ನೆಲೆಯೆಂದು ಮೋಹ
ವನು ಮಾಡುವರು ಮುಕ್ತಿ ಪಡೆಯದೆ ನರರು ಪ

ಕಲೆಯನರಿದು ಕೂಡಿ ಬಯಸಿದುಚಿತವಿತ್ತು
ಚಲುವನೆನಿಸಿ ನಿರತವನಾಂತು
ಒಲಿಸಿದನೊಡನಿರುತಿರಲನ್ಯರತಿಗೆ ಹಂ
ಬಲಿಸುವರಂಬುಜಾಕ್ಷಿಯರೆಡೆವಿಡದೆ 1

ಸವಿನುಡಿ ಸೊಬಗು ಬಿನ್ನಣವನುಕೂಲತೆ
ನವರೂಪು ಜವ್ವನದಿಂಪುದೋರಿ
ತವಕಗುಂದದೆ ತಾವು ಮೆಚ್ಚಿದನನು ಹಿಂ
ಗುವರು ಹೆಂಗಳು ಬೇರೆ ಮನದೊಳಗೆಳಸಿ 2

ಸುಳಿಗಾಳಿ ಸುರಚಾಪ ಕನಸು ನೀರಿನಲಿಪಿ
ಪೊಳೆವ ಮಿಂಚಿವನೊಮ್ಮೆ ನಿಜವೆನಿಸಿ
ಕೊಳಲಹುದರಿದಬಲೆಯರತಿಯದರಿಂದ
ಸಲೆ ಶಂಭುಲಿಂಗದರ್ಚನೆ ಗೈಯುತಿರದೆ 3

120 / ತತ್ವಪದಗಳು ಸಂಪುಟ-1

97. ಸೋಲದಾತನೆ ವಿರತನು ಮನದೊಳಗೆ
ರಾಗ : ಭೈರವಿ

ಸೋಲದಾತನೆ ವಿರತನು ಮನದೊಳಗೆ
ಬಾಲೆಯರ ಸಿಂಗರವನೆ ಕಂಡು ಪ

ತಳಿರಡಿಯ ನುಣ್ದೊಡೆಗಳ | ಚೆಲುವಿನೊ
ಬ್ಬುಳಿಯಹ ನಿತಂಬ ಭರದ | ನಡೆಗೆ
ಬಳುಕುವತಿ ಬಡ ನಡುವಿನ | ತೆಳುವಸುರ
ನಳಿತೋಳ ನಲ್ಲಳನುವ | ಕಂಡು 1

ನಸುದೋರ್ಪ ಬಲ್ಮೊಲೆಗಳ | ಲಾವಣ್ಯ
ರಸಮೊಸರ್ವ ಮುದ್ದುಮೊಗದ | ಕಾಂತಿ
ಪಸರಿಸುವ ನಿಡುಗಂಗಳ ಜವ್ವನದ
ಮಿಸುನಿವಣ್ಣದ ಮೈಯಳ | ಕಂಡು 2

ಜೊಲ್ಲೆಯದ ಬಳಲು ಮುಡಿಯ | ತೊಳಪ ಕೆಂ
ಬಲ್ಲು ಕಂಬು ಗ್ರೀವದ | ಸೊಗಸ
ನುಳ್ಳ ಚೆಂದುಟಿಯ ವೊಗರ | ನುಗುಳ ತೆಳು
ಗಲ್ಲದಸಿಯಳ ರೀತಿಯ | ಕಂಡು 3

ಮುರಿದು ನೋಡುವ ನೋಟಿದ | ಮುಗುಳ್ನಗೆಯ
ಸರಸದಿನಿಗಲೆಯ ನುಡಿಯ | ಸನ್ನೆ
ವೆರಸಿ ತೋರುವ ಭಾವದ | ಮೋಹಮುಂ
ಬರಿವ ಸೊಬಗಿನ ಸುದತಿಯ | ಕಂಡು 4

ಮನವನಳ್ಳಿರುವುದೊಂದು | ಭಯವಿಲ್ಲ
ದನುಕೂಲ ನೀರೆ ತನ್ನ | ನೆಳಸಿ
ವಿನಯವಾಂತಿರಲಳುಪದೆ | ನಿಜಧೈರ್ಯ
ವನು ಶಂಭುಲಿಂಗದಿಂದೆ | ಪಡೆದು 5

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 121

98. ಪೊರೆಯುವ ಚಿಂತೆ ಪಿರಿದು
ರಾಗ : ತೆಲುಗಕಾಂಬೋಧಿ
ಸುತನ ಸೊಗಸು ಮಿಗಿಲೆನ್ನದೆ ಚಿಂತೆಗಳ
ಮತಿವಂತರರಿದು ಮೋಹವನುಳಿದಿಹುದು ಪ

ಮೊದಲು ಪುತ್ರನ ವಾಂಛೆಯೊಳು ಚಿಂತೆ ಗರ್ಭವಾಗ
ಲದು ಕೆಡದಿರಲೆಂಬ ಕಡು ಚಿಂತೆ ಪಡೆವಾ
ಹದನುರುತರ ಚಿಂತೆ ಗ್ರಹರೋಗದುಪಹತಿ
ಯೊದಗುವ ಚಿಂತೆ ಪೊರೆಯುವ ಚಿಂತೆ ಪಿರಿದು 1

ಬಾಲನ ದುರುಳತನದ ಚಿಂತೆ ಯೌವನದ
ಕಾಲದೊಳುಕಂತು ಕಂಗೆಡಿಪ ಚಿಂತೆಯದರ
ಮೇಲೆ ವಿವಾಹವೆಸಗುವ ಚಿಂತೆ ಬಾಳುವೆಗೆ
ಪೇಳಿ ಬುದ್ಧಿಯನು ಕಲಿಸುವ ಚಿಂತೆ ಬಲುಹು 2

ಬಳಿಕ ದೈವಾಧೀನದಿಂದಳಿಯಲತಿ ಚಿಂತೆ
ತಿಳಿಯಲಾತ್ಮಜರಿಂದೆ ಬಹು ಚಿಂತೆಗಳನು
ತಳೆವುದೀ ಪರಿ ತಥ್ಯವಹುದಾಗಿ ಶಂಭುಲಿಂಗ
ದೊಳು ಪ್ರೀತರೆನಿಸಿ ಚಿಂತಿಸರು ಬಲ್ಲವರು 3

99. ಕಾಮವಿದನು ಕಂಡ ಯೋಗಿ
ರಾಗ : ಸೌರಾಷ್ಟ್ರ
ಬಿಡಬೇಕು ಬಲುಹಿಂದೆ ಬರಿದೆ ತನ್ನಿರವನು
ಕೆಡಿಸುವ ಕಾಮವಿದನು ಕಂಡ ಯೋಗಿ ಪ

ಸುಗುಣಸಂತತಿಯನು ನಿಗಮಾದಿ ವಿಧಿಯನು
ಮಿಗೆ ತಪವನು ತನಗಹ ಸಿದ್ಧಿಗಳನು
ಜಗದ ಪೂಜ್ಯತೆಯನು ಸೊಗಸುವೀ ತನುವನು
ಬಗೆಯ ಕಾಮವೆ ಬಣ್ಣವಳಿವುದರಿಂದೆ 1
ಪಿರಿಯರೊಲವನು ರಾಜರ ಮನ್ನಣೆಯನು ಸ
ತ್ಪುರುಷರ ಭಯಭಕ್ತಿಯನು ಲೋಕದವರ
ವರ ವಂದನೆಯನು ತನ್ನುರುತೇಜವನು ಕಷ್ಟ
ತರದ ಕಾಮವೆ ಕಡೆಗಾಣಿಪುದರಿಂದೆ 2

122 / ತತ್ವಪದಗಳು ಸಂಪುಟ-1
ತನಗೆ ಮುಂದೊದಗುವ ಮುನಿದೇವ ಗಣಪದ
ವನು ರುದ್ರೇಶ್ವರ ಸದಾಶಿವ ಭಾವನೆಯನು
ಘನಶಂಭುಲಿಂಗವಾಗಿಹ ಮುಕ್ತಿಸುಖವನು
ಜನಿಸಿದೀ ಕಾಮವಿಲ್ಲೆನಿಪುದರಿಂದೆ 3

100. ಬೇಡ ಬೇಡೆಲೆ ಮನವೆ ವಿಷಯದಾಸೆ
ರಾಗ : ಲಹರಿ
ಬೇಡಬೇಡೆಲೆ ಮನವೆ ವಿಷಯದಾಸೆ
ಮಾಡಿ ಕೆಡದಿರು ಸಾರಿದೆ ಪ

ಅಳಿ ಮೀನು ಗಜ ಪತಂಗ ಮೃಗವೆಂಬಿ
ವಳಿವವೊಂದೊಂದರೊಳು
ಬಳಸಿದೈದಿಂದ್ರಿಯದ ಗುಣದೊಳು
ಸುಳಿಯಲೆಂತುಳಿವೆ ನೀನು 1

ಕಾಸಿದ ಪೊಂದೊಡಿಗೆ ನಂಜಿನ
ಬೀಸು ಹೂರಿಗೆ ಜಾರೆಯ
ಲೇಸಿವನನುಕರಿಸೆ ಕಡೆಯೊಳು
ಘಾಸಿಯಾಗುವೆ ತಪ್ಪದು 2

ಪೊಲ್ಲವೆನಿಪ ಮಾಯಾಮಯಭೋಗ
ದಲ್ಲಿ ದುಃಖವೆ ನೋಡಲು
ಬಲ್ಲೊಡೆ ಶಂಭುಲಿಂಗವನೆ ಭಜಿ
ಸೆಲ್ಲ ಸುಖವನೈದುವೆ 3

101. ಶ್ರುತಿಯ ಸುವಿಚಾರವನು ಮರೆದು
ರಾಗ : ನಾದನಾಮಕ್ರಿಯೆ
ಯಾಕೆ ವಿರತಿಯನುಳಿದು ಹೀನವಿಷಯವನೊಲಿವೆ
ಕಾಕುಮಾನಸವೆ ನಿನಗದರೊಳೇನುಂಟು ? ಪ

ಚಿಲುಪಾಲು ಚೆಲ್ಲಿ ಸುರೆಗುಡಿವಂತೆ ಮಧುರಾನ್ನ
ದೊಲವರತು ಪಳೆಮಾಂಸವನು ಭಕ್ಷಿಪಂತೆ
ಗೆಲವು ಬರಲೊಲ್ಲದೆ ಮಹಾರುಜೆಯನುಂಬಂತೆ
ಸಲೆತತ್ತ್ವಮತಿಗೆಡಿಸಿ ಮರವೆಯೊಳು ಸುಳಿವೆ 1

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 123

ದಾರಕ್ಕೆ ಹಾರಮಣಿಗಳನು ತೆಗೆದಿಡುವಂತೆ
ಸಾರಕತ್ತುರಿದೊಳೆದು ಕೆಸರದೊಡೆವಂತೆ
ಮೇರುವನು ಬಿಟ್ಟು ಗದುಗನು ಪಡೆದು ಬಾಳ್ವ
ಚಾರು ಪರಮಾರ್ಥವನು ಪಿಂಗಿಪುಸಿವಿಡಿವೆ 2

ಶ್ರುತಿಯ ಸುವಿಚಾರವನು ಮರೆದು ತರ್ಕಿಸುವಂತೆ
ವ್ರತನಿಷ್ಠೆಗಳೆಂದು ನೊಣನಗಿದು ತಿಂಬಂತೆ
ಗತಿಯೊಳುತ್ತಮ ಶಂಭುಲಿಂಗವಾಗಿಹ ಮುಕ್ತಿ
ಯತಿಶಯವನುಳಿದು ಲೌಕಿಕದೊಳೊಡವೆ 3

102. ಬೇಡ ಬೇಡ ಭೋಗದೊಡನಾಟ
ರಾಗ : ಕುಂತವರಾಳಿ
ಬೇಡ ಬೇಡ ಭೋಗದೊಡನಾಟ
ನೋಡು ನಂಜುವೆರಸಿ ಸವಿಯೂಟ
ಕೇಡು ಕಡೆಯೊಳಿಹುದದು ಮಾಯೆಯ ಕೈಮಾಟ ಪ

ಮೊದಲು ಸಾಹಸದೊಳತಿ ಸುಖವನನುಭವಿಸಿ
ಮುದವಣು ಮಾತ್ರವನಿತ್ತು ನಡುವಿಹುದು ತವಿಸಿ
ಒದವಿ ಕಾಣಿಪುದದು ಕಡೆಯೊಳು ಹೇಸಿಕೆಯವಗಡಿಸಿ
ಹದನಿದು ವಿಷಯವನೆಳಸಲಹುದೆ ಲವಲವಿಸಿ 1

ಕನಸು ಬಿಸಿಲುದೊರೆ ಸುರಪನ ಧನು ಸುಳಿಗಾಳಿ
ಘನತತಿ ಮಿಂಚಿನ ಪರಿಯಂತಿರೆ ವಿಷಯಾಳಿ
ಜನಿಸಿ ಕೆಡುತಿಹುದಿದನಿಳೆಯೊಳು ಕಂಡು ಕೇಳಿ
ಮನವಿಡೆ ಫಲವೆ ಭಸಿತದೊಳು ಹವಿಯನು ಬೇಳೆ 2

ಈ ತೆರದಿಂದಖಿಳದ ನಿರಸನವನು ತಿಳಿದು
ಭೀತಿಸದವರಳಿಯಾಸೆಗಳನು ಮಿಗೆ ಪಳಿದು
ಖ್ಯಾತಿ ಮಿಗಿಲು ಶಂಭುಲಿಂಗದ ನಿಜವಾಗುಳಿದು
ನೇತಿಗಳೆಯದಾನಂದದೊಳಿರು ಮೋಹವಳಿದು 3

124 / ತತ್ವಪದಗಳು ಸಂಪುಟ-1

103. ಆಡುತೈದಾಳೆ ಮಾಯೆಯೆಂಬ ಕಾಮಿನಿ
ರಾಗ : ದೇಶಿ
ಆಡುತೈದಾಳೆ ಮಾಯೆಯೆಂಬ ಕಾಮಿನಿ ಬಿಡದೆ
ನೋಡಿ ಬಲ್ಲವರು ಸಂಸಾರ ನಾಟಕವ ಪ

ಶಿವಭಕ್ತಿಯೆಂಬ ರಂಗದೊಳು ನರನಾಗ ದಾ
ನವದೇವತಾದಿ ಪೆಸರಿನ ತನುಗಳೆಂಬ
ವಿವಿಧ ರೂಪಿನ ಬೊಂಬೆಗಳಿಗಾತ್ಮರೆಂಬ ಸೂ
ತ್ರವನು ಹವಣಿಸಿ ಮೋಹದೊಡನೆ ಮೇಳೈಸಿ 1

ಮೂರವಸ್ಥೆಯ ಮರೆಯೊಳಿರ್ದು ತಾನಲ್ಲಲ್ಲಿ
ಆರು ವಿಕೃತಿಗಳು ನವಗುಣತತಿಗಳೆಂಬ
ಬೇರುವಡೆದಿಹ ಭಾವರಸ ಚಿತ್ರರಚನೆ ಕೆಲ
ಜಾರದಂತಭಿನ್ನೈಸಿ ತೋರಿ ನಿಯತಿಯೊಳು 2

ಪರಮುಕ್ತರೆಂಬ ಕೋವಿದರೊಂದುಗೂಡಿ ಪರ
ತರ ಶಂಭುಲಿಂಗವೆಂಬತುಳ ಭೂಭುಜನು
ಪರಿವಿಡಿದು ತನ್ನ ಸನ್ನಿಧಿಯೊಳಿಂತೆಸೆವವರ
ಪರಿಯನವಿಕಾರದಿಂದೀಕ್ಷಿಸುತ್ತಿರಲು 3

104. ಪುಣ್ಯ ಫಲದಿಂದೆ ಪಡೆದು
ರಾಗ : ಕಾಂಬೋಧಿ
ಕಂಡು ಸಂಸ್ಕೃತಿಯನಿದಿಂದ್ರಜಾಲವೆ ನೆಲೆ
ಗೊಂಡುದೆಂದರಿತುಕೋ ನಿನ್ನೊಳಗೆ ಪ

ಹುರುಳಿಲ್ಲದಿಹ ಬಿಂದುವೀ ಗರ್ಭದೊಳು ನಿಂದೀ
ಪರಿಯ ಶರೀರವೆನಿಸಿ ಬಂದು ಬೆಳೆದು
ಪರಿವಿಡಿದುಂಡು ನುಡಿದು ನೋಡಿ ಕೇಳಿ ಮ
ತ್ತಿರದಡಗುವ ವಿಸ್ಮಯವಿದನು 1

ತೊಗಲ ತಿತ್ತಿಗೆ ಸಮನಾದ ಕಾಯದೊಳು ಕಂ
ಡಿಗಳು ತೆಗೆದಿರೆ ಪಲವವರೊಳಗೆ
ಸಂಗತಿಯನುಳ್ಳ ಮಾರುತನಿರ್ದು ತೊಲಗದೆ
ಸೊಗಸುದೋರುವ ಸೋಜಿಗವನು 2

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 125

ಧರೆ ವಾರಿ ಶಿಖಿ ವಾಯು ನಭವೆಲ್ಲವನು ಮೀರಿ
ಪರಿಪೂರ್ಣವೆನಿಸುವಾತ್ಮನಿಗಿಂತು
ಕರಣಸಂಕ್ರಮಣವಾದೊಡನೆ ಖಂಡಿತವೃತ್ತಿ
ದೊರಕೊಂಡ ನವ ವಿಚಿತ್ರವನು 3

ಬೇರೆಬೇರೆನಿಸಿ ನಾನಾ ವಿಷಯದೊಳೊಂದಿ
ತೋರಿ ಮೋಹಿಸಿ ಕೂಡೆ ಕೆಡುತಿರುವ
ಮೂರವಸ್ಥೆಯನೊಂದು ದಿನದೊಳೈದುವ ಹಂಸ
ನಾರಡಿತನದಚ್ಚರಿಯನು ಕಂಡು 4

ಭವದುಃಖಿ ಜೀವನುತ್ತಮ ಗುರುಕೃಪೆಯನೊ
ಪ್ಪುವ ಪುಣ್ಯಫಲದಿಂದೆ ಪಡೆದು
ಹವಣಿಸದಾನಂದಮಯನಾದ ಶಂಭುಲಿಂ
ಗವೆ ತಾನೆನಿಸುವ ಚೋದ್ಯವಿದನು 5

105. ಕೇಡುನುಳ್ಳದೆಂದು ವಿಶ್ವವಿಷಯದೊಳು
ರಾಗ : ಪಹಡಿ
ಕೇಡುನುಳ್ಳದೆಂದು ವಿಶ್ವವಿಷಯದೊಳು
ಮಾಡಲುದಾಸೀನವನದೀಗಳೆ ಮಹಾವಿರತಿ ಪ

ಧರೆಗೋವಿನಡಿ ಮೇರುಗಿರಿಯೊಂದು ಮೊರಡೇಳು
ಶರಧಿಯೊಚ್ಚೆರ ದಶದಿಕ್ಕು ದೇಹಳಿ
ನೆರೆದ ಜನವೆ ಚಿತ್ರದಿರವಜಾಂಡವೆ ಚಂಡು
ಸುರತರುವೆ ನಿಂಬಭೂಜಮಾಗೆ ವಿರತಿ 1

ಜಗವಿದು ತೃಣವಜಹರಿಸುರಪದವಣು
ವಗಣಿತ ಸಿದ್ಧಿ ನಾಟಕದ ರಚನೆ
ಬಗೆದೊಡೀ ತನು ಭಿನ್ನಘಟವಂಗನಾದಿಭೋಗ
ದೊಗುಮಿಗೆ ನಿರಸವೆನಿಸೆ ವಿರತಿ 2

ನಿರುಪಮಾದ್ವಯ ನಿತ್ಯಸುಖಬೋಧ ರೂಪನಾದ
ಗುರುಶಂಭುಲಿಂಗವೇ ತಾನಾಗಿ ಮಿಕ್ಕಿನ
ವರಗತಿಗಳನೆಲ್ಲವನು ಹೇಯವೆಂಬ ಮತಿ
ದೊರೆದಚಲಿತಮಾಗಲದೇ ವಿರತಿ 3

126 / ತತ್ವಪದಗಳು ಸಂಪುಟ-1

106.. ತಪ್ಪಿದಡಿಂತು ತಪ್ಪುವವಿವು
ರಾಗ : ಪಹಡಿ
ಆ ಹದ ತಪ್ಪಿದರಿಂತು ತಪ್ಪುವವಿವು
ದೇಹಿಗಳಿಗೆ ನೋಡು ರಮಣಿ ರನ್ನೆ ಪ

ಮದುವೆ ಕಾಲೋಚಿತದಿನಿವಾತು ಕನಸಿನೊ
ಳುದಿಸಿದ ಸಿರಿ ಸುದತಿಯ ಸತ್ಕಲೆ
ಒದವಿದ ಯವ್ವನದಿಂಪು ವಿಷಯಸುಖ
ವದು ನೇಮದೇರು ಮಾರುಗಳೆಂಬಿವು 1

ಬೆಳೆವ ಭೂಮಿಯ ಬೆದೆ ಲಂಚದೆಡೆಯ ಪೊನ್ನು
ಪೊಳೆವ ಮಿಂಚಿನೊಳು ತೋರುವ ಭಾವನೆ
ಸುಳಿವೆಲರೊಳು ಬಂದ ಸೌರಭವರಿವುದು
ಪಳುವಿನ ಪೊನಲಕಾಲುವೆಯೆಂಬಿವು 2

ಪರಸಿ ನೇಮದೊಳೊಂದು ವೇಳೆ ಮಾಡುವ ದಾನ
ವರಸಿನ ಸೇವೆ ಪರೋಪಕಾರ
ಕರಗಿದೆರಕವದು ರಸಪಾಕಪರಿಣತೆ
ಗುರುಶಂಭುಲಿಂಗದೊಲುಮೆಯೆಂಬಿವು 3

107. ನಿಸ್ಸೀಮ ನಿತ್ಯಾನಂದ
ರಾಗ : ಶಂಕರಾಭರಣ
ಮನವೆಂಬ ಗಿಳಿಯನೊಯ್ಯಾರದಿಂದೋವಿ ಮೆ
ಲ್ಲನೆ ಮುದ್ದು ನುಡಿಗಲಿಸೆಲೆ ಮಾನಿನಿ ಪ

ಆರು ಜಾಳಂಧರದೊಳೆಸೆವಾಜ್ಞೆಯೆಂಬ ಮಿಂ
ಚೇರಿದ ರನ್ನಪಂಜರದೊಳಗೆ
ಮೂರು ವರ್ಣದ ಕೋಲಿನ ಮೇಲಿರಿಸಿ ಕಾಲ್ಗೆ
ಪಾರದಂತಸುಸರಪಳಿಯ ಹೂಡಿ 1

ನಯನವಟ್ಟಲೊಳು ಚಿನ್ಮಯದಿನಿಗೆನೆಯೂಡಿ
ಸ್ವಯಸುನಾದದ ತನಿವಣ್ಣನಿತ್ತು
ಭಯವೀವ ರಿಪುವೆಂಬ ಚೀಲಿಯನೆಬ್ಬಟ್ಟಿ
ಪ್ರಿಯದಿ ಮೈದಡವಿ ಭಾವದ ಕೈಯೊಳು 2

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 127

ನಾಮವಿದೂರ ನಿಸ್ಸೀಮ ನಿತ್ಯಾನಂದ
ಧಾಮ ಬೋಧಾದ್ವಯಾನಂತ ರೂಪ
ನೇಮರಹಿತ ಶಂಭುಲಿಂಗವೆನಿಸುವಾತ್ಮಾ
ರಾಮನೆ ಶಿವ ಶಿವನೆಂದೋದಿಸಿ 3

108. ತೊಲಗಿಸಿ ತನ್ನೊಡನಾಡಿಗಳನು
ರಾಗ : ಸೌರಾಷ್ಟ್ರ

ತೊಲಗಿಸಿ ತನ್ನೊಡನಾಡಿಗಳನು ಮುಕ್ತಿ
ಲಲನೆಯನೊಡಗೂಡಿದನ ನೋಡೆ ರಮಣಿ ಪ

ತನುವೆಂಬ ಸಜ್ಜೆಮನೆಯ ಚೌಕ ಮಧ್ಯವೆಂ
ದೆನಿಸುವ ಸಿರಿಮಂಚವಡರಿ ಮುಂದೆಸೆವ
ಮನವೆಂಬ ಸಖನನಿಂದ್ರಿಯವೆಂಬ ಭೋಗ ಸಾ
ಧನವನೀವರನಸುವೆಂಬ ಪರಿಚಾರರನು 1

ನೆಲಸಿದಾರಧ್ವವೆಂಬನುಕೂಲ ಜನವನು
ಜ್ವಲನಾದಬಿಂದುಗಳೆಂಬ ಗಾನರನು
ನಲಿವ ಶಕ್ತಿಗಳೆಂಬ ಸಖಿಯರನಧಿದೈವ
ಕುಲವೆಂಬ ಸಕಳಕೋವಿದರ ಮೇಳವನು 2

ಇನಿತೆಲ್ಲರನು ಪೊರಮಡಿಸಿ ರಮಿಸುವೆನೆಂ
ಬನಿತರೊಳಾದುದಚ್ಚರಿಯದ ಮುಕ್ತಿ
ವನಿತೆಯನೊಲುಮೆಯನುಳ್ಳ ತನ್ನನು ಕಾಣ
ದನುಪಮ ಶಂಭುಲಿಂಗವೆಯಾದನಮ್ಮ 3

109. ನೆನೆವುದು ಮೊದಲು ಹೃದಯನಳಿನವನಲ್ಲಿ
ರಾಗ : ಸೌರಾಷ್ಟ್ರ

ನೆನೆವುದನುದಿನ ಮೊದಲು ಹೃದಯನಳಿನವನಲ್ಲಿ
ಚಿನುಮಯಲಿಂಗದರ್ಚನೆ ಗೈಯ್ಯೊ ಯೋಗಿ ಪ

128 / ತತ್ವಪದಗಳು ಸಂಪುಟ-1

ವರಧರ್ಮಕಂದದ ಸುಜ್ಞಾನನಾಳಿದ
ಸುರುಚಿರೈಶ್ವರ್ಯವೆನಿಪ ದಳಾಷ್ಟಕದ
ಪರಮವೈರಾಗ್ಯ ಕರ್ಣಿಕೆಯ ರುದ್ರಾದಿ ವಿ
ಸ್ತರಕೇಸರದ ಶಶಿಭದ ಹೃದಯವ 1

ಗುಣಮಂಡಲದ ವರ್ಣವಿಸರ ಮಂಡಲಭದ್ರ
ಮಣಿ ಸೋಮ ಶಿಖಿ ಮಂಡಲದ ಬಿಂದು ನಾದ
ಗಣಮಂಡಲದ ಪರಮಕುಂಡಲಿ ಭುಜಗನ
ಫಣದ ಬೆಳಗಿನ ಮಂಡಲದ ಹೃದಯವ 2

ಬಿಸತಂತು ನೀವಾರಶೂಕ ಸದೃಶಮಾದ
ಮಿಸುಪ ಮಿಂಚಿನ ತನಿವಣ್ಣದಾಕೃತಿಯ
ದೆಸೆಗಳೆಲ್ಲವನುಜ್ವಲಿಪ ಶಂಭುಲಿಂಗವೆ
ಜಸವೆತ್ತು ತನ್ನೊಳೊಂದಿರ್ಪ ಹೃದಯವ 3

110. ಮಾಡು ಶಿವಲಿಂಗಪೂಜೆಯನಂತರಂಗದೊಳು
ರಾಗ : ನಾದನಾಮಕ್ರಿಯೆ
ಮಾಡು ಶಿವಲಿಂಗ ಪೂಜೆಯನಂತರಂಗದೊಳು
ನೋಡಿ ಸುಖಮಯಸಾಧನಂಗಳಿಂದೊಲಿದು ಪ

ಹರನೆ ಸಕಲಾಧಾರನೆಂಬುದಾಸನವಖಿಳ
ಭರಿತನೀಶ್ವರನೆಂದು ತಿಳಿವುದಾಹ್ವಾನ
ಪರಮಶಿವಪದವೆ ಜಗವೆಂಬುದೆ ಪಾದ್ಯವದು
ಹರುಷವಾರಿಧಿಯಭವನಹುದೆಂಬುದರ್ಘ್ಯ 1

ಪಾವನಾತ್ಮಕನೀಶನೆಂಬುದಾಚಮನೀಯ
ವಾ ವಿಮಳಶಮೆಯೆಂಬ ಸಲಿಲದಭಿಷೇಕ
ಭಾವ ಪರಿಪೂರ್ಣವಾದುವೆ ವಸ್ತ್ರವಹಿತಕುಲ
ವಾವರಿಸದಿಹ ವಿದ್ಯೆಯದು ಯಜ್ಞಸೂತ್ರ 2

ಮಿಗೆ ಮಂಗಳೋದಯವಲಂಕಾರವನುಭವದ
ಸೊಗಸೆ ಲೇಪನಗಂಧವಧಿಕ ಕರುಣವಕ್ಷತೆಯು
ಬಗೆಯಲರು ವಿಷಯವಾಸನೆಯ ವಿಲಯವೆ ಧೂಪ
ವಗಲದ ಪರಂಜ್ಯೋತಿಯದು ದೀಪವಹುದು 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 129

ಭೇದವಡಗಿದ ಮತಿಯೆ ನೈವೇದ್ಯವಸಮರೂ
ಪಾದ ಸತ್ವಾದಿ ಗುಣ ವೃತ್ತಿತಾಂಬೂಲ
ವಾದನವೆ ಪರನಾದವಹುದು ಸೋಹಂಭಾವ
ದಾದರಣೆಯಳಿಯದಿರಲದೆ ಪ್ರದಕ್ಷಿಣವು
ಬಹುತತ್ತ್ವವನು ವಿೂರಿದಿರವದು ನಮಸ್ಕಾರ
ವಹುದು ಗುರುಶಂಭುಲಿಂಗದೊಳು ತನ್ನವನು
ವಿಹಿತವೆನಿಸುವ ಯೋಗಮಾರ್ಗದಿಂದೊಡವೆರಸಿ
ಸಹಜ ಕೈವಲ್ಯವಡೆವುದೆ ವಿಸರ್ಜನವು

111. ಯೋಗಿಗೆ ಪಂಚಾವಸ್ಥೆಗಳುಂಟು
ರಾಗ : ಸಾಳಂಗ (ದೇಶಿ)
ಯೋಗಿಗೆ ಪಂಚಾವಸ್ಥೆಗಳುಂಟು ಬೇರಂತವನರಿ
ದಾಗಳೆ ಕೈಗೂಡುವಳೊಲಿದಾ ಮುಕುತಿ ವನಿತೆ ಗ
ಇಹಪರ ಲೋಕದ ಭೋಗವನೆಳಸದೆ ನಿಜಮೋಕ್ಷವೆಂ
ತಹುದು ತನಗೆಂದು ಶ್ರುತಿಗುರುಗಳನಾರೈದು
ಸಹಜ ಶಮೆಸತ್ಯಬುಧಜನಸಂಗತಿ ಮೊದಲಾದ
ಬಹು ಸುಗುಣದೊಳೆಚ್ಚರುದಳೆದುದೆ ಜಾಗರಾವಸ್ಥೆ 1

ಬಿಸಿಲುದೊರೆ ಸುರಪನಧನು ಶರಭ್ರದಂತೆ ಮೋ
ಹಿಸಿ ತೋರುವ ಭೂತ ಭುವನಾದಿ ವಸ್ತುಗಳು
ಪುಸಿಯೆಂದು ತಿಳಿದಾತ್ಮನುಳುಮೆಯನೆಡವಿಡದೆ ಭಾ
ವಿಸುತಿರಲದು ತಾನೆ ಕನಸೆಂದೆನಿಸುವವಸ್ಥೆ 2

ಭೇದವಳಿದವಿರಳ ಸುಖ ಭೋಧವಳವಟ್ಟು ಬಳಿ
ಕಾದ ಪ್ರಾರಬ್ಧ ಭೊಗದೊಳು ವಿಕೃತಿಗಳ
ಹೋದ ಹೊಲಬಿಲ್ಲದಚಲಿತ ಚಿತ್ತದಿರವೆ ತನ
ಗಾದೊಡದು ಸುಪ್ತಿಯೆನಿಸುತಿಹವಸ್ಥೆ 3

ಬಯಲಬರಿಗೊಡದಂತೊಳ ಹೊರಗಣ ಭಾವನೆಯ ಸಂ
ಶಯವಿಲ್ಲದಂಬುಧಿಯೊಳು ಮುಳುಗಿದ ಘಟದಂತೆ
ಸ್ವಯವೆನಿಸುವ ಪರಿಪೂರ್ಣತೆ ಕರಿಗೊಂಡಚ್ಚಳಿಯದೆ ನಿ
ಶ್ಚಯವಾಗಲದೀಗಳೆ ನಿರ್ಮಲ ತುರೀಯಾವಸ್ಥೆ 4

130 / ತತ್ವಪದಗಳು ಸಂಪುಟ-1

ಶರೀರವಿಡಿದಾವುದರೊಡನಭಿಮಾನತೆಯಣುವಿಲ್ಲದೆ
ನಿರುಪಮ ಸಾಕ್ಷಿಕ ಶಂಭುಲಿಂಗವಾಗುಳಿದು
ದರುಶನಮತ ವಾದಿಗಳೆಲ್ಲರು ತಮತಮಗೊಂದೊಂದು
ಪರಿಯೊಳು ಪೊಗಳ್ದಿರವದು ತುರಿಯಾತೀತಾವಸ್ಥೆ 5

112. ಭಾವಿಸುವುದರಿವಿಂಗೆ ನಿಜವೆಂದು
ರಾಗ : ಮಧುಮಾಧವಿ
ಜ್ಞಾನ ವೈರಾಗ್ಯೋಪರತಿಗಳೆಂಬಿವನೆ ಸಂ
ಧಾನಿಸುತ್ತಿರೆ ಭೊಗಮೋಕ್ಷವಾಂಭಿತರು ಪ

ಶ್ರವಣಾದಿಗಳು ಬೀಜವಾತ್ಮಹಂಕೃತಿಗಳ
ವಿವರಣವದು ರೂಪು ಮರಳಿ ಸಂಸೃತಿಯ
ನಿವಹ ಸಾಕ್ಷಿತ್ವವೇ ಕಾರ್ಯವಹುದೆಂದು ಬ
ಲ್ಲವರು ಭಾವಿಸುವುದರಿವಿಂಗೆ ನಿಜವೆಂದು 1

ವನಿತಾದಿ ದೋಷದರುಶನವೆ ನಿಮಿತ್ತವಾ
ವನುವಿಂದವನು ಬಿಡುವುದು ರೂಪು ಬಳಿಕ
ಮನವತ್ತವೆರಗದ ನಿಷ್ಠೆಯದು ಕಾರ್ಯವೆಂ
ದೆನುತೆ ಬಗೆವುದು ವಿರಾಗತೆಗೆ ನೆಲೆಯೆಂದು 2
ಯಮವಾದಿ ಯೋಗವೆ ಕಾರಣವಹುದು ವಿ
ಶ್ರಮಿಸಿ ನೆಲೆ ಚಿತ್ತವದು ರೂಪು ಬಾಹ್ಯದೊಳು
ಭ್ರಮಿಸುವ ಕರ್ಮವಳಿದಿಪ್ಪುದೆ ಕಾರ್ಯವೀ
ಕ್ರಮದಿಂದೆ ತಿಳಿವುದುಪರತಿಗೆ ಮತವೆಂದು 3
ಇವರೊಳರಿವಲ್ಲದುಳಿದೆರಡು ಕೂಡಿರೆ ಮುಕ್ತಿ
ಸಮನಿಸದುತ್ತರಲೋಕಗತಿಯಹುದು
ಪವಣದರಿವಿರ್ದು ಮಿಕ್ಕೆರಡಿಲ್ಲದಿರೆ ಮೋಕ್ಷ
ಸವನಿಪುದು ಪ್ರಾರಬ್ಧ ದುಃಖವದು ಬಿಡದು 4
ವಿರತಿಗೆಲ್ಲವನು ತೃಣವೆಂಬುದುಪರತಿಗೆ
ಪರವಶವಾಗಿಹುದಮಳಜ್ಞಾನಕ್ಕೆ
ಗುರುಶಂಭುಲಿಂಗವೆ ತಾನೆಂಬ ದೃಢಬುದ್ದಿ
ಶರೀರದಭಿಮಾನದಂದದೊಳಿಹುದವಧಿ 5

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 131

113. ಚಿತ್ತ ನಿರ್ಮಲವದರಿಂದೆ ಸಂಸೃತಿ
ರಾಗ : ವಸಂತ
ಕೈವಲ್ಯವರಿವಿಂದಹುದೆಂದೊಡಾತ್ಮ
ಕೋವಿದರಿಂತು ಮಾಳ್ಪುದು ಪ

ಹಿಂಗದೆ ನಿತ್ಯಕರ್ಮವ ಮಾಡಲು
ತುಂಗಧರ್ಮವಿವರ್ಧನ
ಮಂಗಳಮಯ ಧರ್ಮದಿಂ ದುಷ್ಕøತ
ಭಂಗವಂತಾಗೆ ಮೋಹಿಪ 1

ಚಿತ್ತ ನಿರ್ಮಲವದರಿಂದೆ ಸಂಸೃತಿ
ಮೊತ್ತದ ದೋಷ ದರುಶನ
ಮತ್ತದರಿಂದ ವೈರಾಗ್ಯವದು ತಾನೆ
ಮುಕ್ತಿಯೊಲವೀವುದು 2

ಕೂಡೆ ಕರ್ಮೋಪರತಿಯದು ಕೈಸಾರೆ
ಮಾಡುವಾಪೇಕ್ಷೆಯೋಗವ
ನೋಡಲಂತದರಿಂದೆ ಶಂಭುಲಿಂಗದಾ
ರೂಢ ಸುಜ್ಞಾನವಪ್ಪುದು 3

114. ನಂಬು ಜ್ಞಾನವನೆ
ರಾಗ : ಕಾಂಬೋಧಿ

ನಂಬು ಜ್ಞಾನವನೆ ಕರ್ಮವೆಂಬ ಜಾಲದೊಳು ಸಿಲ್ಕಿ
ಹಂಬಲಿಸದಿರು ಮುಕ್ತಿಯಂ ಬಯಸಿ ಮನುಜ ನೀ ಪ

ಆಗಮ ಪುರಾಣ ವೇದಪೂಗದೊಳು ವಿಧಿಸುವ
ಯಾಗ ದಾನ ಜಪ ನೀತಿ ಯೋಗ ಪೂಜಾದಿಗಳು
ಈಗ ಜ್ಞಾನೋದಯ ಮಾತ್ರವಾಗದರೊಳು ಕೋಟಿ
ಭಾಗದೊಳೊಂದಕ್ಕೆ ಸಮವಾಗಲದರಿಂದ 1

132 / ತತ್ವಪದಗಳು ಸಂಪುಟ-1

ತನುವ ದುಡಿಸಬ್ಯಾಡ ಮನವ ನಿಲ್ಲಿಸಬ್ಯಾಡ
ಧನವ ನೀಗಿರಬ್ಯಾಡ ಮನೆಮಾರದೊರೆದು
ವನವಾಸಬ್ಯಾಡ ನಿನಗಿನಿತು ತತ್ತ್ವಜ್ಞಾನ ಸಂ
ಜನಿಸಲಾದಘವೆಲ್ಲವನು ಕೆಡಿಪುದರಿಂದೆ 2
ಜ್ಞಾನವೆ ಮುಕ್ತಿಗೆ ಮಾರ್ಗವೇನು ಬೇರೊಂದಿಲ್ಲವೆಂದು
ಮಾನನಿಧಿಯಾದ ಶ್ರುತಿ ನಾನ್ಯಃಪಂಥಾಯೆನಲು
ನೀನಿದನು ಬಿಡದಿರನೂನ ಶಂಭುಲಿಂಗದ
ಸುಜ್ಞಾನದೃಢಮಾಗೆ ಪರಮಾನಂದವಹುದದರಿಂದ 3

115. ತಿಳಿವುದೀ ಪರಿಯೊಳು
ರಾಗ : ಕಾಂಬೋಧಿ

ತಿಳಿವುದೀ ಪರಿಯೊಳು ಮುಕುತಿದೊರೆವುದೆಂದೆಳಸಿ
ನಿಗಮನಿಷ್ಠರೆನಿಪ ಯೋಗಿಗಳು ಪ
ಜ್ಞಾನದಿಂ ಮರೆವೆಯಳಿವುದು ಮರವೆಯ
ಹಾನಿಯಿಂದ ಭೇದಬುದ್ಧಿ ಕೆಡುವುದು ಕೆಡಲು
ಹಾನೋಪದಾನವನುಳ್ಳ ವಿಷಯಾವದಿ
ಮಾನಸದೆಂಬ ವಿಕೃತಿ ಪೋಪುದದು ಪೋಗಲೊಡನೆ 1
ರಾಗ ವೈರಾಗ್ಯದಿರವು ತೊಲಗೆ ಮಾಡಲಹುದ
ದಾಗದೆಂಬ ವಿಧಿನಾಶವದು ನಾಶವೆನಿಸಿ
ಬೇಗಪುಣ್ಯಪಾಪಕರ್ಮ ವಿಲಯವದು ಪಿಂಗ
ಲಾಗಿ ದೇಹಭಾವ ನಷ್ಟವದರ ನಷ್ಟದೊಳು 2

ಮತ್ತೆ ಸಂಸøತಿಗೆ ನಿರಾಕರಣವಹುದು ಮೇ
ಲುತ್ತಮ ಸಹಜವೆನಿಪಾವಸ್ಥೆ ಬಳಿಕಾ
ಬಿತ್ತರಿಸಲರಿದಾದ ನಿಜಸುಖವೆ ಸಲೆ ನೆಲ
ಸಿತ್ತದೀಗ ಶಂಭುಲಿಂಗವಾಗಿ ತಾನಿರ್ಪಿರವದು 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 133

116. ಸನ್ನುತಿ ತನಗೆ ಸಂಪನ್ನವಾದರಿವಿದು
ರಾಗ : ಶಂಕರಾಭರಣ
ಸನ್ನುತ ತನಗೆ ಸಂಪನ್ನವಾದರಿವಿದು
ನನ್ನಿಯೆಂದು ನಂಬು ಯೋಗಿ ನಿನ್ನ
ಮುನ್ನಿನ ಜಡಭಾವಮಂ ನೀಗಿ ನಲಿದಿದು
ನನ್ನಿಯೆಂದು ನಂಬು ಯೋಗಿ ನಿನ್ನ ಪ

ದುರಿತಕಾನನವಹ್ನಿ ಪರಿಭವ ಘನಚಂಡ
ಮರುತನಜ್ಞಾನತಿಮಿರ
ತರಣಿ ಮಾನಸ ಕುಲಗಿರಿ ವಜ್ರವನು ತಾಪ
ಸರಸಿಜ ಹಿಮವಿದೆಂಬ ಆಹಾ ಸರಸಿಜ ಹಿಮವಿದೆಂಬ 1

ಸಾರಸುಖದ ಸುಧಾವಾರಿಧಿ ಸುಕೃತದ
ಮೇರು ಮುಕ್ತಿಯ ಜನ್ಮಭೂಮಿ
ಚಾರುಸಿದ್ಧಿಗಳ ಮಂದಾರವಿಪಿನದ ಮೂಲ
ಕಾರಣದಿರವಿದೆಂಬ ಕಾರಣದಿರವಿದೆಂಬ 2

ನಿಗಮವರಸುವ ಮುನಿಗಳು ಜಾನಿಪ ಸುರೋ
ರಗ ನರರ ಜಾಣುಮೆ ಗಾಣದ
ಜಗದಾಗು ಹೋಗಿನೊಳ್ಪುಗದಿಹ ಶಂಭುಲಿಂಗ
ದಗಣಿತ ನಿಜವಿದೆಂಬ ಆಹಾ ಅಗಣಿತ ನಿಜವಿದೆಂಬ 3

117. ಗಗನದಂತಿರೆ ನಿರವಯವನಾಗಿ
ರಾಗ : ಸೌರಾಷ್ಟ್ರ
ಸ್ವಗತಾದಿ ಭೇದವಾತ್ಮನೊಳಿಲ್ಲವೆಂತೆನೆ
ಗಗನದಂತಿರೆ ನಿರವಯವನಾಗಿ ಪ

ತರುವಿಗೆ ಶಾಖಾದಿ ಸ್ವಗತ ಭೇದವದನ್ಯ
ತರುವೆ ಸ್ವಜಾತೀಯವಹ ಭೇದವು
ಗಿರಿಮುಖ್ಯವಹುದು ವಿಜಾತೀಯ ಭೇದವೀ
ಪರಿ ಭೇದವಿಲ್ಲವಾ ಪರದೊಳೆಂದು 1

134 / ತತ್ವಪದಗಳು ಸಂಪುಟ-1

ಏಕಮೇವಾದ್ವಿತೀಯಂ ಬ್ರಹ್ಮವೆಂಬ ವ
ಚೋಕ್ರಮದೊಳು ವಿಶೇಷಣ ಪದದಿಂ ನಿ
ರಾಕರಿಪುದು ಭೇದತ್ರಯವನದಾಗಿ ಚಿ
ತ್ತೇಕವೀ ಜಗದುದಯಕೆ ಮೊದಲು 2

ಉಳುಮೆಗೆ ಪೆರತಾಗಿ ಪರಮಾರ್ಥವೆನಿಸಿಕೊಂ
ಡುಳುಮೆಯೊಂದಿಲ್ಲಮೆಲ್ಲಿಯು ನೋಡಲು
ಉಳುಮೆಯಾದವಿರಳ ಶಂಭುಲಿಂಗದ ನಿಜ
ದುಳುಮೆಯ ತಾನೈಸೆ ಬೇರಾವುದುಂಟು 3

118. ನಿನ್ನೊಳಿಹುದು ನಿತ್ಯಪದವದನುಭವ
ರಾಗ : ಸೌರಾಷ್ಟ್ರ
ನಿನ್ನೊಳಿಹುದು ನಿತ್ಯಪದವದನುಭವ
ದಿಂ ನೋಡು ಮನುಜ ನೀನಹೆ ಮುಕ್ತನು ಪ

ಮೊದಲಜನ್ಮದ ದೇಹವೀ ದೇಹವಿನ್ನು ಮುಂ
ದೊದಗುವ ದೇಹವೆ ಬೇರೆ ಬೇರೆ
ಪುದಿದು ನೀನೋರ್ವನವರೊಳಗಲ್ಲದೆ ಕರ್ಮ
ದುದಯದಿಂ ದೇಹಿಯಾಗಿಹುದರಿಂದೆ 1

ನೆನಸಿನೊಳಗೆ ನಿದ್ರೆ ಕನಸುಗಳಿಲ್ಲವಾ
ಕನಸಿನೊಳಿಲ್ಲವಾ ನೆನಸು ನಿದ್ರೆ
ತನಿನಿದ್ರೆಯೊಳು ಮತ್ತೆ ಕನಸು ನೆನಸುಗಳಿಲ್ಲ
ವನಿತನನುಭವಿಪ ನೀನಹುದರಿಂದ 2

ತಿಳಿಯಲೀಪರಿ ಬಾಲ್ಯ ಯೌವನ ವಾರ್ಧಕಂ
ಗಳು ತಮ್ಮೊಳಗೆ ವಿಲಕ್ಷಣಮುಳ್ಳವು
ತಳೆದು ನೀನೇಕರೂಪನು ಬಿಡದಂತವ
ರೊಳಗನುಸಂಧಾತೃವಹುದರಿಂದ 3
ದಿನ ಪಕ್ಷ ಮಾಸ ವರುಷ ಯುಗ ಕಲ್ಪಾದಿ
ಯೆನಿಸುವಿವೊಂದರೊಳಿಲ್ಲವೊಂದು
ಅನಿತೆಲ್ಲರಾಗುಹೋಗನು ವಿಚಾರಿಸಿ ಕಾಣ್ಬ
ನಿನಗೆ ವಿಕೃತಿ ದೋರದಿಹುದರಿಂದೆ 4

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 135

ಅರಿಯದಜ್ಞಾನವನರಿವ ವಿವೇಕವ
ನರಿವ ವಿದ್ಯೆಯನದ್ವಿತೀಯಮಾಗಿ
ಅರಿವ ಗುರುಶಂಭುಲಿಂಗದೊಳನ್ಯವಿಲ್ಲದೆ
ಮೆರೆವ ಸದ್ರೂಪು ನೀನಹುದರಿಂದ 5

119. ಅರಿವೆಯೆಲೆ ಅರಿವೆ
ರಾಗ : ತೆಲುಗು ಕಾಂಬೋಧಿ
ಅರಿವೆಯೆಲೆ ಅರಿವೆ ನಿನ್ನ ತೆರ
ನರಿಯೆ ಮುಕ್ತಿಯಹುದು ನಿಶ್ಚಯವಂತೆ ಪ

ಪೊರಗಣ ರೂಪಾದಿ ವಿಷಯವೆಲ್ಲವನು ಕಂ
ಣ್ದೆರಪಾಗಿ ಸಲೆ ಬೇರೆ ಬೇರೆ ಗೋಚರಿಸುವ 1

ಒಂದರೊಳೊಂದಿಲ್ಲದಿಹ ಮೂರವಸ್ಥೆಯ
ನೊಂದದೆ ನಿತ್ಯ ಸಾಕ್ಷಿಕಮಾಗಿ ಬೆಳಗುವ 2

ನಾನಾ ತನು ಭಿನ್ನವಾಗಲವರಕೂಡ
ಹಾನಿ ಚಲನೆ ಭೇದವಿನಿತಿಲ್ಲದೊಪ್ಪುವ 3

ದಿನ ಪಕ್ಷ ಮಾಸಾದಿ ಭೂತಾದಿ ಸರ್ಗಾದಿ
ಯೆನಿಪ ಕಾಲದೊಳು ಖಂಡಿತಮಾಗದೊಪ್ಪುವ 4

ನಯನ ಮಾನಸ ಜೀವ ತುರಿಯನೀಶ ಬ್ರಹ್ಮ
ಮಯವಾದ ಶಂಭುಲಿಂಗದ ನಿಜವೆನಿಸುವ 5

120. ಅವ ಪುಣ್ಯದ ಫಲವಿದೆಂದು
ರಾಗ : ದೇಶಿ
ಆವ ಪುಣ್ಯದ ಫಲವಿದೆಂದು ಕುರುಹಿಡಲಹುದು
ಜೀವಭಾವವನುಳಿದ ನಿಜನಿಷ್ಠೆಯ ಪ

ಅರಸು ನರ್ತಕಿ ತಾಳಧಾರಿ ಸೂರಿಗಳನಾ
ವರಿಸಿ ಬೆಳಗುವ ರಂಗದೆಡೆಯ ಸೊಡರಂತೆ
ನೆರೆದಹಮುಬುದ್ಧೀಂದ್ರಿಯಾದಿ ವಿಷಯಂಗಳಾ
ಚರಣಸಾಕ್ಷಿಕ ಚಿತ್ತು ತಾನೆಂಬ ಸುಖವ 1

136 / ತತ್ವಪದಗಳು ಸಂಪುಟ-1

ಮನೆಯ ಕಂಡಿಯೊಳೈದಿ ದಿನಕಿರಣದಲ್ಲಿ ಕರ
ವನು ಚಲಿಸೆ ನೇಸರು ಚಲಿಸಿತೆಂಬಂತೆ
ಜನನಾದಿ ವಿಕೃತಿ ಜೀವಂಗೆ ತೋರಿದೊಡದನು
ತನಗೆ ನಿಜವಲ್ಲವೆಂದರಿದ ಪರಿಣಾಮವ 2

ಬೆಳಗು ಕತ್ತಲೆಗಳನು ತಳೆದೊಡಾಗಸದ ನಿ
ರ್ಮಳವಳಿಯದಂತೊಪ್ಪುವರಿವು ಮರವೆಗಳ
ಬಳಕೆಗಾತ್ರಯವೆನಿಸುತವರೊಡನೆ ಬೆರಸದವಿ
ರಳಶಂಭುಲಿಂಗ ತಾನಾದ ಸಂಪದವ 3

121. ತನ್ನ ನಿಜವನು ಪರೀಕ್ಷಿಸದೆ
ರಾಗ : ಕಾಂಬೋಧಿ
ಜೀವನಿಗವಸ್ಥೆಗಳೇಳವನು ಪರಿ
ಭಾವಿಸಿ ನೋಡಿರೆ ಬಂಧರಹಿತರಪ್ಪವರು ಪ

ತನ್ನ ನಿಜವನು ಪರೀಕ್ಷಿಸದೆ ಹೇಯ
ವೆನ್ನದೆ ವಿಕೃತಿಯುಳ್ಳ ತನುವೆ ತಾನೆಂದು
ಭಿನ್ನ ವಿಷಯದ ವಿಶ್ವವಿದನು ಕಂಡು
ನನ್ನಿಯೆಂಬ ಬಗೆ ಬಿಡದಿರಲದಜ್ಞಾನ 1

ವೇದವಿಚಾರವನೊಲ್ಲದುಳಿದ ಶುಷ್ಕ
ವಾದದಿಂ ಸಲೆ ಸಾಕ್ಷಿ ತುರೀಯ ಕೂಟಸ್ಥ
ಬೋಧವಿಲ್ಲವದು ತೋರದೆಂಬ ಮೋಸದಾದಿ
ಯಾದುದುಭಯರೂಪವೆನಿಸುವಾವರಣ 2

ಕರ್ಮವನು ಮಾಡಿ ತತ್ಫಲವನು ತನ್ನ
ಧರ್ಮವೆನಿಸಿದ ಹಮ್ಮಿನೊಳಗೆರವಳಿದು
ಮರ್ಮವರಿಯದ ಚಿದಾಭಾಸನೆಂದು
ನಿರ್ಮಿತವಾಗೆ ಸಹಜವಹುದು ವಿಕ್ಷೇಪ 3

ಮತ್ತೆ ಶ್ರುತಿ ಗುರುಪದವಿಡಿದು ಸಾಕ್ಷಿ
ಚಿತ್ತು ಬೇರುಂಟದು ಸ್ವರ್ಗದಂತೆ ಸತ್ಯವೆಂದು
ಚಿತ್ತದೊಳು ನಂಬಲಾಗಿ ಮೊದಲು ಪೇಳ್ದ
ವೃತ್ತಿನಾಶವದು ಪರೋಕ್ಷಾತ್ಮಕಜ್ಞಾನ 4

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು 137

ಚಾರು ತತ್ತ್ವಮಸಿವಾಕ್ಯಾರ್ಥವನು ಸುವಿ
ಚಾರಿಪುದರಿಂದೆ ಪ್ರತ್ಯಗಾತ್ಮನೆ ತಾನೆಂಬ
ಸಾರನಿಷ್ಠೆಯಿಂದುಳಿದಾವರಣ ಪೋಪು
ದಾರಯ್ಯಲದಪರೋಕ್ಷಜ್ಞಾನವೆನಿಪುದು 5

ಕೂಡೆ ಕರ್ತೃತ್ವ ಭೋಕ್ತøತ್ವವದರ ಬಾಧೆ
ಗೂಡಿ ಮೋಹಿಸುವ ಬಹುವಿಧದ ಸಂಸøತಿಗೆ
ನಾಡೆ ನಾಶವಾಗಲದನರಿದು ಸಂತ
ರಾಡುವರು ದುಃಖನಿವೃತ್ತಿಯು ತಾನೆಂದು 6

ಜ್ಞಾನದಿಂದ ಶೋಕವಿಂತು ತೊಲಗೆ ಪರ
ಮಾನಂದ ವಾರಿಧಿ ನಿತ್ಯಮುಕ್ತ ಶಂಭುಲಿಂಗವೆ
ತಾನಾಗಿ ಸೈತಿರೆ ತತ್ತ್ವವಿದರನುಮಾನಿಸದ
ನೂನ ತೃಪ್ತಿಯೆಂಬರದನೊಲಿದು 7

122. ಆರು ನಾನೆಂದು ವಿಚಾರಿಸಿ ತಿಳಿಯೆ
ರಾಗ : ಬಹುಳಿ
ಆರು ನಾನೆಂದು ವಿಚಾರಿಸಿ ತಿಳಿಯೆ ಸಂ
ಸಾರ ಸಾಗರವನುತ್ತರಿಪುದರಿದೆ ಪ

ತನುವಿದಾನಲ್ಲವಿಂದ್ರಿಯವಾನಲ್ಲವಸುವರ್ಗ
ವೆನಿಪವಾನಲ್ಲಹಮು ಚಿತ್ತ ಬುದ್ಧಿ
ಮನವನಲ್ಲಿಳೆ ವಾರಿ ಶಿಖಿ ವಾಯು ನಭವೆಂಬಿ
ವಿನಿತು ನಾನಲ್ಲವೆನಗೆ ವೇದ್ಯವಾಗಿ 1

ಗುಣಹಂತೆ ಮಹದವಿದ್ಯಾ ಮಾಯಾಶಕ್ತಿಗೆ
ಳೆಣಿಸಲಾನಲ್ಲವರ ಧರ್ಮಕರ್ಮ
ಗುಣಮೊಂದು ನಾನಲ್ಲವಿದಮಹಮೆಂದು
ಗಣಿಸಲಾನಲ್ಲೆನಗದು ದೃಶ್ಯಮಾಗಿ 2

ಪರಮ ಜೀವಾಂತರ ವಿಶ್ವ ತೈಜಸ ಪ್ರಾಜ್ಞ
ತುರಿಯಾದಿ ವಿಷಯದೃಕ್ಕುಗಳಿವಾನಲ್ಲ
ಪರತರಾನಂದೈಕ ರಸರೂಪ ದೃಶ್ಯಮಾತ್ರ
ಗುರುಶಂಭುಲಿಂಗದ ನಿಜವೆ ತಾನಾಗಿ 3

138 / ತತ್ವಪದಗಳು ಸಂಪುಟ-1

123. ಸುಖವೆ ನಿಜ ಸುಖವೆ ನೀನು
ರಾಗ : ತೆನುಗು ಕಾಂಬೋಧಿ

ಸುಖವೆ ನಿಜಸುಖವೆ ನೀನು
ನಿಖಿಲವೆನಿಸದೇಕ ಸುಖವೆಮುಖವಾಗಿರೆನ್ನೊಳು ಪ
ರಾಗ ವಿಷಯಸಿದ್ಧಿಯಾಗೆ ಸಾತ್ವಿಕ ಬುದ್ಧಿ
ಯೋಗದೊಡನೆ ಜೀವಭೋಗವೆನಿಸಿ ತೋರ್ಪ 1

ಕಡುನಿದ್ರೆಯೊಳು ಮತಿಯಡಗೆ ಮಾಯಾವೃತ್ತಿ
ವಿಡಿದನಂತತೆಯನು ಪಡೆದು ರಾಜಿಪ ಶಿವ 2

ತನಿನಿದ್ರೆಯಳಿದನ್ಯ ನೆನಹು ಜನಿಸದೆ ಸು
ಮ್ಮನೆ ನಿಂದ ವೇಳೆಯೊಳಿನಿದುಗಾಣಿಸುವಚ್ಚ 3

ಪ್ರಿಯವಾದ ವಿಷಯ ಸಂಚಯೆದೆಡೆಯೊಳು ತಾನೆ
ಪ್ರಿಯತಮನೆಂದು ತಿಳಿಯೆ ತನಗವಿರಳ 4

ಹಾನೋಪಾದಾನವೆಂಬೇನುವಿಲ್ಲದುಪೇಕ್ಷೆ
ಮಾನಸವೈದಲನೂನವಾದನುಪಮ 5

ಕನಸಿನಂತಿರೆ ಜಗವನು ಪುಸಿಯೆಂದು ತ
ನ್ನನೆ ಭೇದರಹಿತನೆನುಂಬನುಭೂತಿಯೊಳು ಮಿಕ್ಕ 6

ಮಾನಸದೊಳು ಬಾಹ್ಯವೇನು ತೋರದೆ ಪರ
ಮಾನುಸಂಧಾನ ಸಂತಾನದೊಳಪರೋಕ್ಷ 7

ಪರಿಪೂರ್ಣ ಕಾಮತೆ ದೊರೆದ ಸಮಯದೊಳು
ಸರಿಯಾವುದಿಲ್ಲದೆ ಪರತರವಹ ಸತ್ಯ 8

ಪದುಳದಿಂದೀ ಬಹುವಿಧದೆಡೆಯೊಳು ತೋರಿ
ಸದಮಳ ಶಂಭುಲಿಂಗದೊಳೇಕರಸವಾದ 9

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 139

124. ಆವ ಪರಿಯ ಸುಖವ ಭಾವಿಸಿ
ರಾಗ : ದೇಶಿ

ಆವ ಪರಿಯ ಸುಖವ ಭಾವಿಸಿ ಬೇರೆಣಿಸಿದೊಡೆ
ಜೀವ ಪರಮಯೋಗದ ನಿಜವರಿದನುಭವಿಯ ಸುಖಕೆ ಸರಿಗಾಣೆ ಪ

ಕವಿಜನರುಪಮೆಗೆ ಹವಣಿಸ ಬಾರದ
ನವಲಾವಣ್ಯದ ಜವ್ವನೆಯ
ತವಕದ ರತಿಗನುಕೂಲ ಸುಸಾಧನ
ನಿವಹವೆಸೆವ ಸುಖ ಮೊದಲಾದ 1

ಮೇರು ಸಿಂಹಾಸನವಖಿಳ ದೇವ ಪರಿ
ಚಾರಕರಣಿಮಾದಿಗಳೊಡನೆ
ಭೂರಿ ಭುವನವನಾಳುವತನವಿದು ಕೈ
ಸಾರಿರಲೊದಗುವ ಸುಖವಿಡಿದು 2

ಸಾಕೆನಿಸದ ಸವೆಯದ ಬೇರೊಂದನು
ಬೇಕೆನಿಸದ ಕಡೆಯೊಳು ತನ್ನ
ಜೋಕೆಗುಂದದೆ ನಿರುಪಮ ಶಂಭುಲಿಂಗದೊ
ಳೇಕವೆನಿಪ ಸುಖಮೊಂದಲ್ಲದೆ 3

125. ತನ್ನಿರವಿಲ್ಲೆನಿಸಿದಭಾವವು
ರಾಗ : ಪಹಡಿ
ನಿನ್ನೊಳೊಡಗೂಡದ ಭಾವವನುನ್ನಿಸಲೆ ಜೀವನೆ ಪ
ಮುನ್ನವಿಲ್ಲದ ಭಾವಮುದಿಸಿಯಳಿದ ಮೇಲೆ
ತನ್ನಿರವಿಲ್ಲೆನಿಸಿದಭಾವವು 1
ಇದರೊಳಿದಿಲ್ಲೆನಿಸುವ ಭಾವವನುದಿನ
ವದಕಿಲ್ಲ ತೋರ್ಕೆಯನಿಪ ಭಾವವು 2
ಎಲ್ಲವನೊಳಕೊಂಡ ಭಾವಚತುಷ್ಟಯ
ವಿಲ್ಲಾಗಿ ಶಂಭುಲಿಂಗದ ನಿತ್ಯಪದವಾದ 3

140 / ತತ್ವಪದಗಳು ಸಂಪುಟ-1

126. ಕಬ್ಬುನದ ಮೇಲೆರೆದ ನೀರಂತಹುದು
ರಾಗ : ತೋಡಿ

ಶ್ರೀಗುರು ವಚನವಾಗಳೆ ಮಾಳ್ಪ ರಚನೆ ನೋಡ
ಲಾಗಿ ಮೂವಿಧವಹುದು ಸಾಧಕರ ಪೂಗದಲ್ಲಿ ಪ

ಉಬ್ಬಿನೊಳು ಹೀನನಿಗೆ ಪೇಳಿದ ಬ್ರಹ್ಮಬೋಧೆ ಕಾದ
ಕಬ್ಬುನದ ಮೇಲೆರೆದ ನೀರಂತಹುದು ಬರಿದೆ 1

ನಲಿದು ಮಧ್ಯಮಗೆ ನಿರೂಪಿಸಿದಾತ್ಮವಿದ್ಯೆ ಕಂಜ
ದೆಲೆದಳೆದ ಜಲದಂತೆ ಮುಕ್ತಾಕೃತಿಯೊಳಿಹುದು 2

ವರವಿಶಿಷ್ಟನೊಳೊರೆದ ಶಂಭುಲಿಂಗದರಿವು ಚಿಪ್ಪು
ವೆರೆದು ಮುತ್ತಾದಂತೆ ವಾರಿಯಹುದು ಸಫಲ 3

127 ಜ್ಞಾನಿ ಮೋಹಿಪುದಂದವೆ ಪರಮತತ್ತ್ವ
ರಾಗ : ಪಹಡಿ
ಜ್ಞಾನಿ ಮೋಹಿಪುದಂದವೆ ಪರಮ ತತ್ತ್ವ
ಜ್ಞಾನಿ ಮೋಹಿಪುದಂದವೆ
ತಾನೆ ನಿತ್ಯಾನಂದ ನಿಜರೂಪವೆನಿಪ ಪ

ತನು ಮೂರು ಕರಣಾಳಿ ಮನಸಾದಿಗಳನು
ತನಗೆ ವಿಲಕ್ಷಣವಹುದೆಂದು ತಿಳಿದ
ಜನನ ಮರಣವನಳಿದ ಜೀವತ್ವವನುಳಿದ 1

ಕನಸು ಬಿಸಿಲುದೊರೆ ಸುರಚಾಪದಂತೆ
ಜನಿಸಿ ತೋರುವ ವಿಶ್ವವಿದು ನೆಲೆಯಲ್ಲ ಕಾ
ಮನೆಗನ್ಯವಿಲ್ಲವೆಂಬುದ ಮಿಗೆ ಬಲ್ಲ 2

ಹರುಷವಾರಿಧಿ ಶಂಭುಲಿಂಗದೊಡವೆರೆದು
ಮರಳಿ ಸಂಸøತಿಯ ವಾಸನೆಯ ನೆರೆಸುಟ್ಟ
ಪರಿಕಲ್ಪನೆಗೆಟ್ಟ ಸಹಜವಳವಟ್ಟ 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 141

128. ಕುಂದದೆ ಮನವಿರಲು ಕಾಣಿಸದು
ರಾಗ : ಶ್ರೀರಾಗ

ಆಗದಾಗದು ವರವಿವೇಕಿಗೆ ಮುಕ್ತಿ
ನೀಗದೆ ಭೂತಾದಿ ಪ್ರತಿಬಂಧಕವನು ಪ

ವಿರತಿಯೊಳ ಖಿಳಸಂಸರಣವನಳಿದು ಶ್ರೀ
ಗುರುವಿನಿಂ ನಿಗಮಾರ್ಥವರಿಯಲು
ಪರವಪರೋಕ್ಷವಾಗದು ಮುನ್ನಿನಬಲಾದಿ ಸಂ
ಸ್ಮರಣವೆ ಮುಂಬರಿವುದರಿಂದ 1

ಜಡಬುದ್ಧಿ ಜಡಸಂಗ ರತಿ ವಿಷಯಾಸಕ್ತಿ
ಬಿಡದೆ ಮಾಡುವ ತರ್ಕವಭಿಮಾನ
ಕಡು ಚಪಲತೆಗೂಡಿ ಸುವಿಚಾರವಿರೆ ತತ್ತ್ವ
ದೆಡೆ ವೇದ್ಯವಾಗದಿಪ್ಪುದರಿಂದ 2

ಮುಂದೆ ಕೆಲವು ಜನ್ಮವನು ಮಾಡುವಾರಬ್ಧ
ಹೊಂದಿದುತ್ತರಲೋಕ ಗತಿಯಾಸೆ
ಕುಂದದೆ ಮನನವಿರಲು ಕಾಣಿಸದು ನಿಜಾ
ನಂದ ವಾರಿಧಿ ಬೋಧವದರಿಂದ 3

ಇಂತು ಮೂದೆರನೆನಿಸುವ ಬಂಧದಿರವನೋ
ರಂತರಿದವನು ತೊಲಗಿಸುವ
ಶಾಂತಿ ಮುಂತಾದ ಸುಗುಣವಿಲ್ಲದರಸಲ
ನಂತ ಚಿನ್ನಿಧಿದೋರದುದರಿಂದ 4

ಬಹು ವಿಧಿಗಳನುಳಿದಾರೈವುತಿರೆ ಪೇಳಿ
ದಹಿತವಾವೆಡೆಯೊಳಳಿವವಲ್ಲಿ
ಸಹಜರೂಪಿನ ಶಂಭುಲಿಂಗವೆ ಗೋಚರ
ವಹುದೆಂಬ ದೃಢವಾಗದುದರಿಂದ 5

142 / ತತ್ವಪದಗಳು ಸಂಪುಟ-1

129. ನೋಡಿ ಮಿಗೆ ಮನ್ನಿಸೆನ್ನನು
ರಾಗ : ಆಹರಿ
ಕಾಡಲಿನ್ನೇನಭವ ನಿನ್ನ ಕೃಪೆಯಿಂದ
ನೋಡಿ ಮಿಗೆ ಮನ್ನಿಸೆನ್ನನು ಪ

ತನುಮೂರನಗಲದಿರ್ಪ ರುಜೆಗಳ
ಜಿನುಗಿನುಮ್ಮಳವಿಡಿದು
ಜನಿಸುವಖಿಳ ಬಾಧೆಯನಿಹದೊಳು
ನೆನೆಯದಂತಿರಿಸೆನ್ನನು 1

ಕಲುಷ ಕರ್ಮವನೆ ಮಾಡಿ ಸುಕೃತವ
ನುಳಿದೊದಗುವ ಚಿಂತೆಗೆ
ನೆಲೆಯಾದ ಪರಲೋಕ ದುಃಖವ
ತೊಲಗಿಸಿ ಸಲಹೆನ್ನನು 2

ನರನು ತೊಡಗಿ ಬ್ರಹ್ಮನು ಕಡೆಯಾದ
ವರೊಳು ನೂರ್ಮಡಿಸಿ ಮಿಕ್ಕಾ
ಹರುಷಂಗಳನು ದಾಂಟಿದ ನಿಜಸುಖ
ಭರಿತನೆಂದೆನಿಸೆನ್ನನು 3

ಪಲವು ಲೌಕಿಕ ವೈದಿಕವಹ ಕರ್ಮ
ಕುಲವನೆಸಗಿ ಮುನ್ನವೆ
ಬಳಿಕ ನಿನ್ನಿರವರಿದೆನಿನ್ನವ
ನೆಳಸಲೀಯದಿರಿಸೆನ್ನನು 4

ಸದುಗತಿಗಳನು ಬೇರೆ ಬಯಸಲೀ
ಯದೆ ಪರತರ ಮುಕ್ತಿಗೆ
ಪದವಾದ ಶಂಭುಲಿಂಗ ನೀನಗ
ಲದೆ ಬೆರಸಿಹುದೆನ್ನನು 5

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 143

130. ಮನುಜರೊಳೈವರು ಸುಕೃತಿಗಳುಂಟು
ರಾಗ : ಅಹರಿ
ಮನುಜರೊಳೈವರು ಸುಕೃತಿಗಳುಂಟು ಪೇ
ಳ್ವೆನವರನುತ್ತರೋತ್ತರ ಗುಣವಿಡಿದು ಪ

ಹಿತವಿದಹಿತವೆಂದರಿಯದೆ ಲೌಕಿಕ
ಯುತನಾಗಿ ಜಾತಿ ಮಾತ್ರದ ವಿಧಿಗಳನೆ
ಪತಿಕರಿಸುತೆ ಭೋಗದಭಿಲಾಷೆಯೊಳು ಜನ್ಮ
ಶತದಿಂದೆ ಮುಕ್ತನಹನೆ ಕರ್ಮಿಯಹನು 1

ಜಗವಿದು ನಿಜವಿದರೊಳು ಬಾಹ್ಯಕರ್ಮವೆ
ಮಿಗಿಲೆಂದು ಚತುರಾಶ್ರಮವನೈದಿ ತನಗೆ
ಸಂಗತಿಯನೆಳಸುವವನೆ ಮೂರು ಜನ್ಮದೊ
ಳಗೆ ಮುಕ್ತಿವಡೆವ ಮುಮುಕ್ಷುವೆನಿಪನು 2

ಪುಸಿಯೆಂದು ವಿಶ್ವವನಾತ್ಮನೆ ನಿತ್ಯನೆಂ
ದುಸುರೆ ಸದ್ಗುರು ಕೇಳಿ ಪೊರ ಚಿಂತೆಯಳಿದು
ಒಸೆದೊಳಗಾರೈವುತಿಹನೇಯಭ್ಯಾಸಿಯೆ
ನಿಸುವನೆರಡು ಜನ್ಮದೊಳು ಮುಕ್ತನಹನು 3

ಲೋಕವೆಲ್ಲವನು ಮರೆದು ಪರತತ್ತ್ವಾವ
ಲೋಕನದಿಂದೊಳ ಹೊರಗಣ ಕೃತ್ಯಾ
ನೀಕವಿಲ್ಲದವನೆಯನುಭವಿಯೆನಿಸುವ
ನೇಕ ಜನ್ಮದೊಳು ಭಾವಿಸೆ ಮುಕ್ತನಹನು 4

ಗುರುಶಂಭುಲಿಂಗವೆ ತಾನಾಗಿ ಮಿಕ್ಕಿನ
ಪರಿಕಲ್ಪನೆಗಳು ತೋರದ ನಿತ್ಯಸುಖದ
ಶರನಿಧಿಯೆನಿಸಿದನಿಹದೊಳು ಮುಕ್ತನಾ
ಗಿರುತಿರ್ಪನಾರೂಢನೆನಿಸುವನವನು 5

144 / ತತ್ವಪದಗಳು ಸಂಪುಟ-1

131. ಯೋಗಾನುಸಂಧಾನ
ರಾಗ : ದೇಶಿ

ನೋಡಿ ತಿಳಿದನುಗುಣ ಯೋಗಾನುಸಂಧಾನವನೆ
ಮಾಡುತಿರೆ ಮುಕ್ತಿ ಸುಖಸಿದ್ಧಿಯಹುದು ಪ

ಅನಿಲ ಶಿಖಿ ಹೃದಯ ತನು ಗೃಹ ನಗರ ದೇಶ ಲೋ
ಕನಿಕಾಯದೊಡನೆ ಪರಿವಿಡಿದಡರಿ ಮೇಲೆ
ಘನ ಪರಂಜ್ಯೋತಿಯೊಳು ಮನವಳಿದಿವುದೇ ಸ್ಥೂಲ
ವೆನಿಪುದದು ಪಲ್ಲಟಿಸೆ ಸೂಕ್ಷ್ಮಯೋಗ 1

ತಿಳಿವೆಂಬ ತೆರೆಮಸಗೆ ಮಾಯಾಪುಳಿನಸೇತು
ವಳಿಯೆ ಜೀವೇಶರೆಂಬುಭಯ ಭಾವನೆಯ
ಕಳೆದು ಬೋಧಾಂಬುನಿಧಿ ಪಡೆದೇಕ ರೂಪವನು
ಬಳಕೆಗೊಳಗಾಗದಿರುತಿರೆ ವಿನುತಯೋಗ 2

ಪರಮಾತ್ಮವೆಂಬಮೃತಶರಧಿ ಸಪ್ತಾವರಣ
ದಿರವನುಳಿದಖಿಳ ಭುವನವನು ತನ್ನುವನು
ಬೆರಸಿ ಬೇರಿಲ್ಲದೊಳಕೊಂಡು ತೆಕ್ಕನೆ ತೀವಿ
ಪರಿಕಲ್ಪನೆಗೆ ಬಾರದಿರಲಧಿಕಯೋಗ 3

ಬಳಿಕಾತ್ಮ ಬೋಧಾಂಬುರಾಶಿ ಕೋಶದಮೇರೆ
ಗಳೆದು ಪರತತ್ತ್ವವನು ಸಚರಾಚರವನು
ಒಳಕೊಂಡು ವಿಪರೀತ ಭಾವನಾ ವೀಚಿಗಳ
ನುಳಿದು ಸಲೆ ಸಹಜ ಸುಖವಿಹುದಮಳ ಯೋಗ 4

ಶಿವ ಜೀವರೊಡವಿರ್ದ ಭೇದಾಪರೋಕ್ಷಮೆನಿ
ಸುವ ಜಾಡ್ಯ ಧರ್ಮಗಳು ನೇತಿಗಳೆದುಳಿದ
ಅವಿರಳಚಿದಾನಂದಮಯನಾದ ಶಂಭುಲಿಂ
ಗವೆ ತಾನೆನಿಸಿ ತೋರುತಿಹುದೆ ನಿಜಯೋಗ 5

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 145

132. ಶ್ರೀ ಗುರುವೆ ಶರಣು
ರಾಗ : ಭೂಪಾಳಿ
ಶ್ರೀ ಗುರುವೆ ಶರಣು ಶಿವಯೋಗಸಂಪದವನೆನ
ಗಾಗುಮಾಡಿದ ನಿಜವಿರಾಗಿಜನವಂದ್ಯ ಪ

ಪೊರಗಣ ಘಟಾದಿ ವಿಷಯವನು ಪಲರೂಪದಿಂ
ದರಿವುತಾಶ್ರೈಸಿದ ಚಿದಾಭಾಸದ
ಕುರುಹವಿಡಿದಂತಲ್ಲಿ ಸತ್ಯಸುವಿತ್ತೆನಿಸಿ
ಮೆರೆವ ಪರತತ್ತ್ವವನು ನೀನೆಂದು ಪೇಳ್ದ 1

ಒಳಗೆ ವಪುರಸುಮನೋಮತಿನಿದ್ರೆಯೆಂದೆನಿಸಿ
ಕೊಳುತಿರ್ಪುವೈದುಕೋಶವನು ಬೇರಿಟ್ಟು
ತಿಳಿವ ಕೂಟಸ್ಥ ನೀನಾ ವಿಶ್ವ ಸಾಕ್ಷಿಯಾ
ಗುಳಿದಿಹ ಪರಬ್ರಹ್ಮವೆಂದು ಬೋಧಿಸಿದ 2

ಭೇದಾಪರೋಕ್ಷವೆಂಬೆರಡುಪಾಧಿಯನುಳಿದು
ವಾದಿಸದಖಂಡೈಕರಸರೂಪೆನಿಸಿದ
ಬೋಧಾಂಬುನಿಧಿಶಂಭುಲಿಂಗವಾಗಿಹ ಮುಕ್ತಿ
ಯಾದ ಪರಿ ನಿನಗಿದೆಂದೆಲಿದರುಪಿದ 3

133. ತಿಳಿಯಲಹುದೊಲಿದು ಬಿಡಲಹುದು
ರಾಗ : ನಾದನಾಮಕ್ರಿಯೆ

ತಿಳಿಯಲಹುದೊಲಿದು ಬಿಡಲಹುದು ಮೋಹಿಸದೆ ಭೂ
ತಳದೊಳಾನೆಂದಹಂಕರಿಸದಿಹುದರಿದು ಪ

ಪ್ರಕೃತಿಮಹದಹಮಂ ಚೇತನಕರಣವಸುಭೂತ
ವಿಕೃತಿಗಳನಾ ವಿಶ್ವತೈಜಸಪ್ರಾಜ್ಞ
ಸಕಲೇಶ ಸೂತ್ರಿ ವೈಶ್ವಾನರರುಗಳನು ಸಾ
ಕ್ಷಿಕಪರಬ್ರಹ್ಮರನು ಶ್ರುತಿಗುರುಗಳಿಂದ 1

146 / ತತ್ವಪದಗಳು ಸಂಪುಟ-1

ಧನಕನಕವಸ್ತ್ರಭೂಷಣಗಂಧಮೌಲ್ಯವಾ
ಹನರಮ್ಯವಾಸವನಿತಾದಿ ವಸ್ತುಗಳು
ಮನವಾರೆ ಮುಂದೆ ತೀವಿರೆ ಭೋಗಿಸುವ ಶಕ್ತಿ
ತನಗಿರ್ದೊಡಂತವೆಲ್ಲವನು ತೃಣವೆಂದು 2

ಜ್ಞಾನಿ ತರಹರಿ ಶಾಸ್ತ್ರಿ ಸುಗುಣಿ ವಿಜಿತೇಂದ್ರಿಯನ
ನೂನಮತಿ ಯೋಗಿ ಮುನಿ ವಿಮಲನತಿಮಹಿಮ
ದಾನಿಯೆಂದಿಳೆ ತನ್ನನೆಳಸಿ ಬಣ್ಣಿಸಿದೊಡಭಿ
ಮಾನಿಸದೆ ನಡೆವುದಚ್ಚರಿ ಶಂಭುಲಿಂಗ 3

134. ಬಲ್ಲಡುಸುರಿರಿ ಭಾವಕರು ನೀವೆಲ್ಲ
ರಾಗ : ವಡ್ಡಿ ಧನ್ಯಾಸಿ

ಬಲ್ಲಡುಸುರಿರಿ ಭಾವಕರು ನೀವೆಲ್ಲ
ರಿಲ್ಲಿ ಗುರುಶಿಷ್ಯರೊಳು ಮೊದಲಾವುದರಿವೆ ಪ

ಪೊರೆವೆನೀತನನೆಂಬವನಿಚ್ಛೆ ಮೊದಲೊ
ವಿರತಿಚಿತ್ತದವರ ಪರಿಪಾಠ ಮೊದಲೊ
ಕರುಣಕಟಾಕ್ಷದವನ ನೋಟ ಮೊದಲೊ
ಶರಣುಹೊಕ್ಕವರ ಕಿಂಕರಭಾವ ಮೊದಲೊ 1

ಮೋಹ ಮುಂಬರಿವವನಾರೈಕೆ ಮೊದಲೊ
ಕೋಹಮೆಂಬವನ ಬಿನ್ನಪದೇಳ್ಗೆ ಮೊದಲೊ
ಸೊಹಮೆಂದರಿಯೆಂಬವನ ಬೋಧೆ ಮೊದಲೊ
ಊಹದೋರದವನ ನಿಜನಿಷ್ಠೆ ಮೊದಲೊ 2

ಮೌನಮುದ್ರೆನೆ ಸಂದವನ ಸನ್ನೆ ಮೊದಲೊ
ತಾನು ತಾನಾದವನನುರಾಗ ಮೊದಲೊ
ಏನುಮಿಲ್ಲದ ಶಂಭುಲಿಂಗವೆ ಮೊದಲೊ
ಮಾನವಳಿದು ನಿಂದವನ ಮುಕ್ತಿಮೊದಲೊ 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 147

135. ನೆರೆದಿಹನು ಗುರುಶಂಭುಲಿಂಗವೇ
ರಾಗ : ನಾದನಾಮಕ್ರಿಯೆ

ಆವ ಬಾಧೆಯನುಂಟುಮಾಡಬಹುದಖಿಳಭೋ
ಗಾವಲಂಬನದೊಳಿರೆ ಶಿವಯೋಗಿಗೆ ಪ

ರವಿ ಸರ್ವಸಾರವನು ಸವಿದು ನಾನಾವಸ್ತು
ನಿವಹವನು ನಲಿದುಂಡು ವಾಯುಸಖನು
ಪವನನೆಲ್ಲವನು ಮೈಸೋಂಕಿ ಶುಚಿಯೆನಿಸಿದಂ
ತವಿಭೇದರೂಪ ತತ್ತ್ವಜ್ಞಾನಿಗೆ 1

ಪಳುಕುಪಾಧಿಯನೊಂದಿ ನಳಿನದಳಮಿರ್ದು ಜಲ
ದೊಳು ಮೇಘಜಾಲದೊಡವೆರಸಿ ಗಗನ
ಮಲಿನವಾಗದೆ ಲೇಪಿಸದೆ ನೆನೆದು ಕೆಡದಂತೆ
ತಿಳಿದಾತ್ಮನಿಷ್ಠೆನೆಲೆಗೊಂಡ ಯತಿಗೆ 2

ಮರದೊಳಿಹುದನಲನಾ ಮರನನಲನಲ್ಲಿರದ
ಪರಿಯಂತೆ ಸಕಲಸಂಸಾರದೊಳಗೆ
ನೆರೆದಿಹನು ಗುರುಶಂಭುಲಿಂಗವೇ ತಾನಾದ
ಶರಣನಾ ಸಂಸಾರವಿಲ್ಲಾತಗೆ 3

136. ಜ್ಯೋತಿ ಬೆಳಗುತಿದೆ
ರಾಗ : ನಾದನಾಮಕ್ರಿಯೆ

ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
ಮಾತುಮನಂಗಳಿಂದತ್ತತ್ತ ಮೀರಿದ
ಸಾತಿಶಯದ ನಿರುಪಾಧಿಕ ನಿರ್ಮಲ ಪ

ಶಿವಧರ್ಮನಾಳವೆಂತೆಂಬ ಕಂಬದ ಮೇಲೆ
ಸುವಿವೇಕಹೃದಯಾಬ್ಜಪಣತೆಯೊಳು
ಸವೆಯದ ಸದ್ಭಕ್ತಿರಸತೈಲ ತೀವಿದ
ಪ್ರವಿಮಲಕಳೆಯೆಂಬ ಬತ್ತಿವಿಡಿದು ದಿವ್ಯ 1

148 / ತತ್ವಪದಗಳು ಸಂಪುಟ-1

ಮುಸುಕಿದ ವಿಷಯಪತಂಗ ಬಿದ್ದುರುಳೆ ತಾ
ಮಸಬುದ್ಧಿಯೆಂಬ ಕತ್ತಲೆಯಳಿಯೆ
ಮಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೊರ್ದದನುಪಮ 2

ಪ್ರಣವಾಕಾರದ ಗುಣಮೂರು ಮುಟ್ಟದ
ಗಣನೆಗತೀತಾರ್ಥವನೆ ತೋರುವ
ಅಣುಮಾತ್ರ ಚಲನೆಯಿಲ್ಲದ ಮೋಕ್ಷಚಿಂತಾ
ಮಣಿಯೆನಿಸುವ ಶಂಭುಲಿಂಗವೆ ತಾನದ 3

ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು / 149

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

1 ಮುಪ್ಪಿನ ಷಡಕ್ಷರಿಯ ಕೈವಲ್ಯಪದ್ಧತಿ

ಭಾಗ-1: ಮುಪ್ಪಿನ ಷಡಕ್ಷರಿಯ ಕೈವಲ್ಯಪದ್ಧತಿ
1
ನೀನೆ ಅಕಲಂಕಗುರು
ಕುಸುಮ ಷಟ್ಪದಿ

ಸಕಲಕೆಲ್ಲಕೆ ನೀನೆ
ಅಕಳಂಕ ಗುರುವೆಂದು
ನಿಖಿಳಶಾಸ್ತ್ರವು ಪೇಳುತಿರಲರಿದೆನು ||ಪ||

ಎರಗಂಬಳಿಯ ಸಿದ್ಧ
ವರಲಿಂಗ ನಾಮದಿಂ
ಹರನೆ | ನೀನೆನಗೆ ದೀಕ್ಷೆಯ ಮಾಡಿದೆ
ವರಷಡಕ್ಷರಿಯ ದೇ
ವರ ನಾಮದಿಂದೆನಗೆ
ಅರುಹಿದಿರಿ ಶಿವಶಾಸ್ತ್ರದನುಭವವನು ||ಪ||
ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ ||2||

ಹೋರಾಟವಿಕ್ಕಿಸಲು
ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ‘ನೀನಲ್ಲದೆ’
ಆರು ಅರಿಯರು ನೀನು
ಬೇರಾದ ಪರಿಗಳನು
ಮಾರಾರಿ ಶಿವಷಡಕ್ಷರಿಲಿಂಗವೆ ||3||

2
ಎನ್ನ ಕರೆಯ ಬನ್ನಿ
ಕುಸುಮ ಷಟ್ಪದಿ

ಹೆಮ್ಮೆಗಳು ನಾ ನಿಮ್ಮ
ನೆಮ್ಮಿಕೊಂಡಿರುವೆನೈ
ಗಮ್ಮನೇ ಎನ್ನುವನು ಕರೆಯ ಬನ್ನಿ ||ಪ||

ಸುವ್ವಿ ಚೆನ್ನಣ್ಣನಿಗೆ
ಸುವ್ವಿ ಮಡಿವಾಳನಿಗೆ
ಸುವ್ವಿ ನಮ್ಮಪ್ಪ ಬಸವಯ್ಯನಡಿಗೆ
ಸುವ್ವಿ ಅಜಗಣ್ಣನಿಗೆ
ಸುವ್ವಿ ಸತ್ಯಣ್ಣನಿಗೆ
ಸುವ್ವಿ ನಮ್ಮಯ್ಯ ಪ್ರಭುರಾಯನಡಿಗೆ ||1||

ಸುವ್ವಿ ಹಳ್ಳಯ್ಯನಿಗೆ
ಸುವ್ವಿ ಧೂಳಯ್ಯನಿಗೆ
ಸುವ್ವಿ ನಮ್ಮಯ್ಯ ಶ್ವಪಚಯ್ಯನಡಿಗೆ
ಸುವ್ವಿ ಭೀಮಯ್ಯನಿಗೆ
ಸುವ್ವಿ ಕಕ್ಕಯ್ಯನಿಗೆ
ಸುವ್ವಿ ನಮ್ಮಯ್ಯ ಚೆನ್ನಯ್ಯನಡಿಗೆ ||2||

ನಮ್ಮವರ ಪಾಡುವೆನು
ನಮ್ಮವರ ಪೊಗಳುವೆನು
ನಮ್ಮವರನಾವಗಂ ಹರಸುತಿಹೆನು

ನಮ್ಮವರು ಬರುವುದನು
ಉಮ್ಮಳಿಸಿ ನೋಡುವೆನು
ಹಮ್ಮೈಸುವೆನು ಮನದಿ ಬಾರದಿರಲು ||3||

ಕುಟ್ಟುತ್ತ ಬೀಸುತ್ತ
ನೆಟ್ಟನೇ ನಮ್ಮ ಒಡ
ಹುಟ್ಟಿದ ಪುರಾತರನು ಹಾಡುತಿಹೆನು
ಕಷ್ಟಘನ ಮತ್ರ್ಯದಾ
ಬಟ್ಟೆ ನಾನೊಲ್ಲೆ ಕೃಪೆ
ಹುಟ್ಟದೇ ನಮ್ಮವರು ಕರೆಯಿರಯ್ಯಾ ||4||

ನೀರ ಹೊಳೆಯಲಿ ನಿಂದು
ದಾರಿಯನು ನೋಡುವೆನು
ಬಾರದಿರೆ ಮನದೊಳಗೆ ಕರಗಿ ಕೊರಗಿ
ಆರೈದು ಮತ್ತೊಮ್ಮೆ
ದೂರ ದೃಷ್ಟಿಯನಿತ್ತು
ಸಾರಿ ನೋಡುವೆ ನಿಲುಕಿ ಅಳಲಿ ಬಳಲಿ ||5||

ಬಂದವರ ಬರುವವರ
ನಿಂದವರ ನೆರೆದವರ
ಕುಂದದಲೆ ಕೇಳುವೆನು ನಮ್ಮವರನು
ಹಿಂದಾದ ದುಃಖದಲಿ
ನೊಂದನೈ ನಮ್ಮವರು
ಎಂದಿಗೆ ಎನ್ನುವನು ಕರೆಯಬಹರೋ ||6||

ಪದುಳವೇ ನಮ್ಮವರ
ಪದಪದ್ಮ ಎನ್ನುವೆನು
ಪದಪಿಂದ ಕರೆದೊಯ್ಯಲೊಲ್ಲರೇಕೆ
ಉದಯಾಸ್ತಮಾನದಲಿ
ಕುದಿದು ಕೋಟಲೆಗೊಂಬೆ
ಹೃದಯ ತಾ ಕರಗದೇ ನಮ್ಮವರಿಗೆ ||7||

ಅಳಲುವೆನು ಮನದೊಳಗೆ
ಬಳಲುವೆನು ಬಾರದಿರೆ
ಕಳೆಯೇರುವೆನು ಒಮ್ಮೆ ನೆನೆದು ನೆನೆದು
ಮಲಹರನ ಶರಣರಾ
ಬಲವ ನೋಡುವೆನೊಮ್ಮೆ
ಸಲೆಯೆನ್ನ ಕನಸಿಂಗೆ ಬಾರರೆನುತ ||8||

ಹಿಂದುಳಿಯಿತಮವಾಸ್ಯೆ
ಮುಂದೆ ಹುಣ್ಣಿಮೆ ಬಂತು
ಎಂದಿಗೇ ಎನ್ನನ್ನು ಕರೆಯಬಹುರೋ
ನೊಂದು ಸುಯ್ಗರೆಯುವೆನು
ಬೆಂದು ಬೆಂಡಾಗುವೆನು
ಚಂದವೇ ತಮಗೆನ್ನ ನೋಡದಿಹುದು ||9||

ತರಗೆಲೆಯು ಗಿರುಕೆನಲು
ಹೊರಗೆ ನಾನಾಲಿಸುವೆ
ಬರವಿಲ್ಲದಿರೆ ಮನದಿ ಸುಯ್ಗರೆವೆನು
ಪರರ ಶಿಶುವೆಂದೆನುತ
ಶರಣರೂ ಎನ್ನುವನು
ಮರೆದರೋ ಎಂದೆನುತ ಹೆದರುತಿಹೆನು ||10||

ಶರಣರೊಳು ಸುಖದುಃಖ
ದಿರವ ಹೇಳುವೆ ನಾನು
ಪರರೆನ್ನ ಚಿಂತೆಯನ್ನರಿಯರಾಗಿ
ಅರಸು ಷಡಕ್ಷರಿಯ
ವರರೆನ್ನ ಕಾಡಿದರೆ
ಶರಣರಿಗೆ ಹೇಳಿ ನಾ ಕಳೆವೆನಯ್ಯಾ ||11||

3
ಎಲೆ ಆತ್ಮನೆ
ಕುಸುಮ ಷಟ್ಪದಿ

ತನುವಿಡಿದ ದುಷ್ಕೃತವ
ನೆನಿತೆನಲು ಪೇಳುವೆನು
ಮನವೊಲಿಸು ಕೇಳು ನೀನೆಲೆಯಾತ್ಮನೆ ||ಪ||

ಅನ್ನ ಉದಕದ ಚಿಂತೆ
ಎಣ್ಣೆ ನೀರಿನ ಚಿಂತೆ
ಬಣ್ಣ ಬಳಿದಾಭರಣ ತೊಡುವ ಚಿಂತೆ
ಮಣ್ಣುಮನೆಗಳ ಚಿಂತೆ
ಹೊನ್ನುಹೆಣ್ಣಿನ ಚಿಂತೆ
ಇನ್ನು ಪುತ್ರರ ಬೇಡಿ ಬಳಲ್ವ ಚಿಂತೆ ||1||

ಅರಸುಗಳ ಭಯವಿದಕೆ
ಚರಿಪ ಚೋರರ ಭಯವು
ಮರಳಿ ಅಗ್ನಿಯ ಭಯವು ನೀರ ಭಯವು
ಉರಗ ವ್ಯಾಘ್ರನ ಭಯವು
ಅರಿ ರೋಗಗಳ ಭಯವು
ಕರಕಷ್ಟತನುವಿದಕೆ ಭಯವು ನೋಡಾ ||2||

ಶೀತೋಷ್ಣಗಳ ಭೀತಿ
ಭೂತ ಪ್ರೇತದ ಭೀತಿ
ಓತು ನಡಿಯಲು ಮುಳ್ಳು ದಸಿಯ ಭೀತಿ
ಮಾತು ಮಥನದ ಭೀತಿ
ರಾತ್ರಿ ಹಗಲಿನ ಭೀತಿ
ಈ ತನುವ ಹಿಡಿದಿನಿತು ಭೀತಿ ನೋಡಾ ||3||

ಆಗಲದಕೇನಿನಿತು
ಸಾಗಿಸಲು ನಿನಗಿವನು
ಆಗುವುದೆ ಧರೆ ಗಗನವುಳ್ಳತನಕ
ಆಗ ಹುಟ್ಟಿದ ಬಳಿಕ
ಬೇಗ ಸಾವೀ ತನುವ
ಹಾಗೆ ಮನವೇ ನೀನು ನಂಬಬಹುದೆ ||4||

ಇಂತಪ್ಪ ತನುವಿನ
ಭ್ರಾಂತಿಯಳಿದಾಲಿಂಗ
ಚಿಂತೆಯೊಳಗಿರು ನಿನಗೆ ಸುಖವಪ್ಪುದು
ಮುಂತೆ ನಿನ್ನುವನು ತ
ನ್ನಂತೆ ಮಾಡುವನೊಲಿದು
ಕಂತುಹರ ಶಿವಷಡಕ್ಷರಿಲಿಂಗವು ||5||

4
ಎನ್ನ ಬರಿಸದಿರು
ಕುಸುಮ ಷಟ್ಪದಿ

ಧರೆಯತ್ತ ಎನ್ನುವನು
ಬರಿಸದಿರು ಸದ್ಗುರುವೆ
ಧರೆಯ ಪಾಪದೊಳು ನಾ ಜನಿಸಲಾರೆ ||ಪ||

ಹುಸಿ ಕಳವು ಡಂಭಕವು
ನುಸುಳು ಆರಡಿ ತಳ್ಳಿ
ಹಿಸುಣಹೀನ ಅಪಹಾಸ್ಯ ಶಬ್ದಗಳು
ಕಿಸುಕುಳವು ಕೊರಚಾಟ
ವಿಷಮ ವಿಗಡವು ಕರುಬು
ಹೊಸಹುರುಡು ಜಾರರಾ ಜನ್ಮಾಲಯ ||1||

ನಿರುದಯವು ನಿಷ್ಠುರವು
ದುರುಳತ್ವ ಢಾಳಕವು
ಪರಬಂಧಕವು ಡಂಭವಪವಾದವು
ನೆರೆಚೆಂಡಿತನ ಪೊಲಬು
ಪರಧನದ ವಂಚನೆಯು
ಪರರ ಕೆಡಿಸುವ ಸಿದ್ಧಿಗಳು ಮಂತ್ರದಾ ||2||
ಹರನರ್ಚಕರು ಅಲ್ಪ
ಪರನಿಂದಕರು ಬಹಳ
ಗುರುಭಕ್ತರಲ್ಪ ಗರುವಿಗಳು ಬಹಳ
ಹರಶ್ರುತಿಯ ಬಿಟ್ಟು ತಾ
ನರಸ್ತುತಿಯಲಾಲಿಪರು
ನಿರಯದಾಲಯವಾಗಿ ತೋರುತಿಹರು ||3||

ಪತಿವ್ರತೆಯರಿಲ್ಲ ಪರ
ಪತಿಮುಖಿಯರಿರುತಿಹರು
ಜಿತಕಾಮರಿಲ್ಲ ಅತಿಕಾಮರಿಹರು
ವ್ರತನೇಮಗಳು ಇಲ್ಲ
ಕೃತಕಿಗಳು ಘನವಯ್ಯ
ಕ್ಷಿತಿಯು ಅವಗುಣಿಗಳಿಗೆ ತವರುಮನೆಯು ||4||

ಇಲ್ಲವೆನಬಾರದೆಲೆ
ಇಲ್ಲುಂಟು ಧರ್ಮಿಗಳು
ಕಲ್ಲೊಳಗೆ ಅಡಗಿರ್ಪ ಪರುಷದಂತೆ
ಖುಲ್ಲಮಾನವ ನಿನಗೆ
ಒಳ್ಳಿದರು ಕಾಣಿಸರು
ಒಲ್ಲೆ ಮತ್ರ್ಯವ ಷಡಕ್ಷರಿಲಿಂಗವೆ ||5||

5
ಕೇಳಕ್ಕ
ಕುಸುಮ ಷಟ್ಪದಿ

ನಮ್ಮ ಮನೆ ಕೇಳಕ್ಕ
ಬ್ರಹ್ಮ ಬಂದೆಡೆಗೊಂಡು
ನಮ್ಮ ಮನೆ ಸುತಬಂಧುಗಳ ಕೊಂದಿತು ||ಪ||

ಏಳು ಮಕ್ಕಳ ಕೊಂದು
ಏಳು ತೊತ್ತಿರ ಕೊಂದು
ಮೇಲೈವರಣ್ಣಗಳ ಕೊಂದಿತಕ್ಕ
ಕಾಳಿನೊಳಗಿರುತಿರ್ಪ
ಜಾಳಿಗೆಲ್ಲವ ತಿಂತು
ಬಾಳಲೀಸದು ಮನೆಯನೆಲ್ಲರಂತೆ ||1||

ಮೂರು ಕರುಗಳ ಕೊಂದು
ಮೂರು ಪಶುಗಳ ಕೊಂದು
ಮೂರೈದು ಕೋಣಗಳ ಕೊಂದಿತಕ್ಕ
ಮೂರು ಸೊಸೆಯರ ಕೊಂದು
ಮೂರಳಿಯರನು ಕೊಂದು
ಕೇರಿಕೇರಿಗಳಲ್ಲಿ ಹರಿಯುತಿದೆಕೊ ||2||

ಜಡೆಗಳನು ಕೆದರಿ ತಾ
ಹಿಡಿದು ಶೂಲದಿ ಪೆಣನ
ಬಿಡದೆ ಮೈಯೊಳು ಹಾವ ತೊಡರಿಸಿಹುದು
ಕಡಿದ ತಲೆ ಕರದೊಳಗೆ
ಮಡಿದ ತಲೆ ಕೊರಳೊಳಗೆ
ಬಿಡದೆನ್ನನಂಜಿಸುತ ಬರುತಲಿದೆಕೊ ||3||

ಇರುಳು ಸುಳಿಯಲಿಕಂಜಿ
ಪುರಮೂರು ಹಾಳಾಗಿ
ನೆರೆವ ಜನರುಗಳೆಲ್ಲ ಓಡಿತಕ್ಕ
ಪುರಪುರದ ಮಧ್ಯದಲಿ
ಉರಿವುತ್ತ ತಿರುಗುತಿದೆ
ಇರುಳು ನಾ ಕಣ್ಮುಚ್ಚಲಮ್ಮೆನವ್ವ ||4||

ಇನ್ನೇನನೆನ್ನುವೆನು
ಬೆನ್ನ ಬಿಡದಕ್ಕಯ್ಯ
ತನ್ನನಗಲುವಳೆಂದು ಹಿಂದುಮುಂದು
ಎನ್ನ ಕಾದಿರುತಿಹುದು
ತನ್ನ ಹೆಸರೇನೆನಲು
ಚೆನ್ನಿಗ ಷಡಕ್ಷರಿಯ ಲಿಂಗವಂತೆ ||5||

6
ಇನ್ನೆನಗೆ ಭಯವುಂಟೆ
ಕುಸುಮ ಷಟ್ಪದಿ

ಎನ್ನ ಕಾಯವು ನಿನಗೆ
ಉನ್ನತಾಲಯವಾಯಿ
ತಿನ್ನೆನಗೆ ಭಯವುಂಟೆ ಎಲೆ ಲಿಂಗವೇ ||ಪ||

ಎನ್ನ ಕಾಲುಗಳೆರಡು
ಉನ್ನತದ ಕಂಭವೈ
ಎನ್ನ ಒಡಲೇ ನಿಮಗೆ ದೇವಾಲಯ
ಎನ್ನ ತೋಳುಗಳೆರಡು
ಉನ್ನತದ ಮದನಕೈ
ಎನ್ನ ಶಿರ ಸೌವರ್ಣಕಲಶವಯ್ಯ ||1||

ಎನ್ನ ಕಿವಿ ಕೀರ್ತಿಮುಖ
ಎನ್ನ ನಾಲಿಗೆ ಘಂಟೆ
ಎನ್ನ ನಯನಗಳೆರಡು ಜ್ಯೋತಿ ನಿಮಗೆ
ಎನ್ನ ಮುಖವೇ ದ್ವಾರ
ಎನ್ನ ದಂತವೆ ಅದಕೆ
ಮಿನ್ನುತಿಹ ಮೌಕ್ತಿಕದ ಸೂಸಕಗಳು ||2||

ಎನ್ನಧರ ಜವಳಿಗದ
ಎನ್ನ ನಾಸಾಪುಟವು
ಸನ್ನಿಧಿಯ ಸೌರಭ್ಯ ವೆರಸಿಗಾಳಿ

ಚೆನ್ನಾಗಿ ಬೀಸುತಿಹ
ಹೊನ್ನ ಜಾಳೇಂದ್ರವೈ
ಇನ್ನುಳ್ಳ ಉಪಕರಣವೆಂತೆಂದೆನೆ ||3||

ಎನ್ನ ಸಮತೆಯೆ ಜಲವು
ಎನ್ನ ಸದ್ಗುಣ ಗಂಧ
ಎನ್ನ ನಿತ್ಯತ್ವವೇ ಅಕ್ಷತೆಗಳು

ಎನ್ನ ಜ್ಞಾನವೆ ಪುಷ್ಪ
ಎನ್ನ ಭಕ್ತಿಯೆ ಬೋನ
ಎನ್ನ ಮನವೇ ನಿಮಗೆ ಪೂಜಾರಿಯು ||4||

ಇಂತಪ್ಪ ಪೂಜೆಯನು
ಸಂತಸದಿ ಕೈಕೊಳುತ
ಕಂತುಹರ ಶಿವಷಡಕ್ಷರಿಲಿಂಗವು
ಮುಂತೆ ಎನ್ನೊಳಗೆ ನಿ
ಶ್ಚಿಂತನಾಗಿರುತಿರಲು
ಚಿಂತೆಯುಂಟೇ ಹಲವು ಭವಭೀತಿಯ ||5||

7
ಘನಮಹಿಮಲಿಂಗವೆ
ಕುಸುಮ ಷಟ್ಪದಿ

ಘನಮಹಿಮಲಿಂಗವೇ
ಅನು ಪ್ರಾಣಿ ಎನ್ನ ಕರ
ವನಜಕ್ಕೆ ಬಂದು ಚುಳುಕಾದಿರಲ್ಲ ||ಪ||

ತರಣಿಕೋಟಿಪ್ರಭೆಯ
ಕಿರಿದೆನಿಪ ಬೆಳಗಿನಾ
ವರಹೇಮಶೈಲಾಗ್ರದೊಳಗೊಪ್ಪುವ
ಹರಗಣಂಗಳ ಸುಖವ
ನೆರೆಯುಳಿದು ಎನ್ನ ಕರ
ಸರಸಿಜಕೆ ಬಂದು ಚುಳುಕಾದಿರಲ್ಲ ||1||

ಹರಿಯಜರ ತಿಂಥಿಣಿಯು
ಸುರರುಗಳ ಮೊತ್ತವಾ
ವರಮುನೀಶ್ವರರುಗಳ ಸಂತಾನದ
ಹರುಷದಾನಂದದೊಳು
ಇರದುಳಿದು ಎನ್ನ ಕರ
ಸರಸಿಜಕೆ ಬಂದು ಚುಳುಕಾದಿರಲ್ಲ ||2||

ಹರಿಗೆ ನಿಲುಕದ ಚರಣ
ಸರಸಿಜಭವನಿಗೊಮ್ಮೆ
ಅರಸಿ ಕಾಣದ ನಿಮ್ಮ ಶ್ರೀ ಮುಕುಟವು
ಪರಮವಾಚಾತೀತ
ಕಿರಿದಾಗಿ ಎನ್ನ ಕರ
ಸರಸಿಜಕೆ ಬಂದು ಚುಳುಕಾದಿರಲ್ಲ ||3||

ಮಡದಿ ಗಿರಿಜಾತೆಯನು
ತೊಡೆಯ ಮೇಲಿಂದಿಳುಹಿ
ಒಡನೆ ಗುಹಗಣಪವೀರೇಶರೆನಿಪ
ಕಡುಮೋಹದತಿ ಸುತರ
ಬಿಡುತೆನ್ನ ಕರದೊಳಗೆ
ಒಡೆಯರೊಡೆಯನೆ ಬಂದು ಚುಳುಕಾದಿರಲ್ಲ ||4||

ಎನ್ನಲ್ಲಿಯುಪಚಾರ
ವಿನ್ನೇನು ನಿಮಗುಂಟು
ಸನ್ನುತದ ಶಿವಷಡಕ್ಷರಿಲಿಂಗವೆ
ಎನ್ನ ಮನ ಪ್ರಾಣಗಳು
ಹೊನ್ನು ಹಾವಿಗೆಯಾಗಿ
ನಿನ್ನ ಚರಣಕೆ ಯೋಗ್ಯ ಮೆಟ್ಟಾಗಲಿ ||5||

8
ಉಳುಹಿರಯ್ಯ
ಕುಸುಮ ಷಟ್ಪದಿ

ಭವಕಾಟಕಾರದಲೆ
ಶಿವಶರಣರ ಮನೆಯ
ತವೆ ದ್ವಾರದೊಳು ಬಿದ್ದೆನುಳುಹಿರಯ್ಯ ||ಪ||

ಹೇಸಿ ಮಾನವ ನಾನು
ಭಾಷೆವಂತನು ಅಲ್ಲ
ಈಶನೊಳು ಸಲುಗೆ ಎಂತಪ್ಪುದಯ್ಯಾ
ಘಾಸಿಯಾದೆನು ಭವದಿ
ಓಸರಿಸದೇ ಎನ್ನ
ಈಶನಂಘ್ರಿಗೆ ಒಲಿದು ಸಲಿಸಿರಯ್ಯಾ ||1||

ಉದ್ಧರಿಸುವರ ಕಾಣೆ
ಇದ್ದೆಸೆಯ ಕೆಡಿಸಿದೆನು
ಹೊದ್ದುವೆನು ಇನ್ನಾವ ದೆಸೆಯ ನಾನು
ಬಿದ್ದೆ ನಿಮ್ಮಂಗಳದಿ
ಉದ್ಧರಿಸಿಯಲ್ಲದೊಡೆ
ಒದ್ದು ಕಡೆಗೆನ್ನನ್ನು ನೂಕಿರಯ್ಯಾ ||2||

ನೀತಿಯರಿಯದೆ ನಾನು
ಪಾತಕದ ನಡೆಯಲ್ಲಿ
ಭೂತಳದೊಳಂನಡೆದ ಗತಿಯಾವುದು
ಓತು ಕರುಣಿಸಿ ನೀವು
ಪಾತಕಾಭ್ರಕೆ ಜಂಝ
ವಾತರೆಂಬುದ ಕೇಳಿ ಬಂದೆನಯ್ಯಾ ||3||

ತಪ್ಪ ನೋಡದೆ ಎನ್ನ
ಒಪ್ಪವಿಟ್ಟು ನಡೆಸಿ
ತಿಪ್ಪೆಯನು ಬಗೆದಲ್ಲಿ ಏನಿಪ್ಪುದು
ಸರ್ಪಧರ ನಿಮಗಂಜಿ
ಇಷ್ಟೆನಾಗಿಯು ನಿಮಗೆ
ಅಪ್ಪದಪ್ಪದದೊಂದು ಉಂಟೆ ಹೇಳಿ ||4||

ಎಲ್ಲಾ ಪುರಾತನರು
ಎಲ್ಲಿ ನೆನೆದಲ್ಲಿ ಎ-
ನ್ನಲ್ಲಿ ಇಪ್ಪುದ ನಾನು ಬಲ್ಲೆನಾಗಿ
ಇಲ್ಲಿ ನತನಾಗಿ ನಾ-
ನಿಲ್ಲಿ ಕೃಪೆಯನು ಪಡೆವೆ
ಸಲ್ಲಲಿತ ಶಿವಷಡಕ್ಷರಿಲಿಂಗವೆ ||5||

9
ಮುಂದೆ ಏನಪ್ಪುದೋ*
ಕುಸುಮ ಷಟ್ಪದಿ

ತನುವಿನಾ ಗುಣವು ನಿ
ಮ್ಮನು ನೆನೆಯಲೀಯದಲೆ
ಘನಮಹಿಮನೇ ಮುಂದೆ ಎನಪ್ಪುದೋ ||ಪ||

ಅರಣ್ಯದೊಳಗಿಹನೆ
ಧೀರತನವೆನಗಿಲ್ಲ
ಊರೊಳಗಿಹನೆ ವಾಗ್ವಿಷಯ ಘನವು
ಮಾರಾರಿ ನಿಮ್ಮುವನು
ಸೇರಲೀಯದು ಮನವು
ಗಾರಾದೆ ನಾಮುಂದೆ ಏನಪ್ಪೆನೋ ||1||

ಇರುಳು ನಾ ನೆನೆವೆನೆನೆ
ಇರುಳು ನಿದ್ರೆಯ ಜಡವು
ಇರದೆ ಹಗಲೆನಗೆ ವ್ಯವಹರದ ಹಸಿವು
ತೊರೆಯಲಾರೆನು ಅಶನ
ತರುಬಲಾರೆನು ನಿದ್ರೆ
ಮರಳಿ ನಾಮುಂದೆ ಇನ್ನೇನಪ್ಪೆನೋ ||2||

ಘನವ ನಾ ನೆನೆವೆನೆನೆ
ಮನ ಹಲವು ನೆನೆವುತಿದೆ
ಮನವ ಹಿಡಿತರುವತನಕ ನಿಮಗೆ ಮುನಿಸು
ಮನಭೋಗ ಬಯಸುವದು
ತನು ಸೊಬಗಿಗೆಳಸುವದು
ಘನಮಹಿಮ ನಾ ಮುಂದೆ ಏನಪ್ಪೆನೋ ||3||

ಅಂಗವನು ವೇಷದಲಿ
ಶೃಂಗರಿಸಿ ಫಲವೇನು
ಲಿಂಗದೊಳು ಮನ ಪ್ರಾಣ ಬೆರೆಯದನಕ
ಅಂಗಜಾರಿಯೆ ಎನ್ನ
ಸಂಗವನು ನೀನೊಲ್ಲೆ
ಲಿಂಗವೇ ನಾ ಮುಂದೆ ಏನಪ್ಪೆನೋ ||4||

ಮನವು ಬೇರೆನ್ನುವನು
ಜಿನುಗಿ ಕಾಡುತ್ತಲಿದೆ
ನೆನಹಿಂಗ ಬಾರದಿರೆ ನೀನೆನ್ನುವ
ಅನವರತ ಕಾಡುತಿಹೆ
ಅನುಪ್ರಾಣಿ ನೀ ಕರುಣ
ವನು ಮಾಡು ಶಿವಷಡಕ್ಷರಿಲಿಂಗವೆ ||5||

10
ಮಗಳೆ ಎನ್ನಯ ಮಾತು ಕೇಳು
ಕುಸುಮ ಷಟ್ಪದಿ

ಮಗಳೆ ಎನ್ನಯ ಮಾತು
ಮಿಗೆ ಕೇಳು ನಿನ್ನಾಳ್ದ ಪ
ನ್ನಗರಾಜ ವಿಷವ ತಾಳ್ದನು ಕೊರಳೊಳು ||ಪ||

ಎಲ್ಲರಂತವನಲ್ಲ
ಬಲ್ಲಿದನು ನಿನ್ನ ಮನ
ದೊಲ್ಲಭನು ಅಂಗವಿದ್ಯೆಗಳೆಲ್ಲವ
ಸಲ್ಲಿಸುತ್ತೊಳಗೊಳಗೆ
ಮೆಲ್ಲಗೆಡೆಯಾಡುತಿರು
ನಿಲ್ಲದಿರು ಹೊರಗೆ ರಚ್ಚೆಯ ಬಳಸದೆ ||1||

ಇನನುದಯ ಕಾಲಕ್ಕೆ
ಮನೆಯ ಕಸವನು ತೆಗೆದು
ಅಣಿಮಾಡು ಕರಣತಂಡುಲವ ತಳಿಸು
ಮನೆಯೊಳಗೆ ಕತ್ತಲೆಯ
ಇನಿತನೆಸಗಲು ಬೇಡ
ಮುನಿದಡವ ರಕ್ಕಸನು ನಿನ್ನಾಳ್ದನು ||2||

ನೀ ಮುಗ್ದೆ ನಿನ್ನಾಳ್ದ
ಕಾಮಾರಿ ಆತ್ಮಗಿಳಿ
ರಾಮನನು ಓದಿಸೌ ಹೊರಗಾಡದೆ
ನಾ ಮುನ್ನಲಂಜುವೆನು
5ನೀ ಮಾತುಗಳ ಕೇಳು5
ಸೋಮಧರ ಕೋಪಿಸಿದಡೆಲ್ಲಡಗುವೆ ||3||

ಕಾಲ ಪಿಡಿವೊಡೆ ಅವಗೆ
ಕಾಲಿಲ್ಲ ಮೇಲ್ವಾಯ್ದು
ಬಾಲೆ ನೀ ಹಿಡಿವಡವಗೊಡಲು ಇಲ್ಲ
ಎಳ್ಳನಿತು 1ಬೇ1ಸರವ
ತಾಳುವವನಲ್ಲ ಕಟು
ಶೂಲಿ ಮುನಿದಡೆ ತಿಳುಪಲರಿಯೆ ಮಗಳೆ ||4||

ಮತಿ ಮಸುಳದಿರು ಮಗಳೆ
ಪತಿ ಕೋಪಿಸುವನು ಪತಿ
ವ್ರತೆಯರೊಳು ಗೆಳೆತನವ ಮಾಡು ನೀನು
ಪತಿ ಕಾಮಜಿತ 2ನೀನು2
ಅತಿಕಾಮಿಯಾತನನು
ಸತಿ ಕೇಳು ನೀನಿಂತು ಅಗಲಬೇಡ ||5||

ಕಡುತವಕಿ ನಿನ್ನ ಪತಿ
ಬಿಡು ಬೇಸರಾಡದಿರು
ಒಡಗೊಡು ದಿವರಾತ್ರಿಗಳು ಎನ್ನದೆ
ತಡಮಾಡದಿರು ಮಗಳೆ
ಒಡನೆ ಮುನಿದರೆ ಬಳಿಕ
ಮಡದಿ ನೀನೆಂತವನ ತಿಳುಪಿ ನೆರೆವೆ ||6||

ಮನೆಯೊಳಗೆ ಹಚ್ಚಿಯುರಿ
ಯನೆ ಪಟುವನೆ ಮಾಡು
ಅನಿತರೊಳಗಾಗಿ ನಿನ್ನಾಳ್ದಗೊಲಿದು
ಮನಶುದ್ಧದಲಿ ಮಾಡು
ಘನಭಕ್ತಿಬೋನವನು
ಇನಿಯನಿಂಗೆಡೆಮಾಡು ಅದಕೊಲಿವನು ||7||

ಮೂರು ಕೋಣೆಗಳೊಳಗೆ
ಮೂರು ಜ್ಯೋತಿಯ ಬೆಳಗು
ಆರೈದು ಮಧ್ಯ ಕೋಣೆಯ ಮನೆಯೊಳು
ಮಾರಾರಿಯನು ನೀನ
ಪಾರ ಸುಖದೊಳು ಹೊಂದಿ
ನಾರಿ ನೀನಿರು ಇಹವ ಪರವರಿಯದೆ ||8||

ಇಂತು ಪತಿಯೊಳಗೊಂದಿ
ಸಂತತಂ ಇರುತಿರಲು
ಕಂತುಹರ ಶಿವಷಡಕ್ಷರಿಲಿಂಗವು
ಮುಂತೆ ನಿನ್ನುವನು ತ
ನ್ನಂತೆ ಮಾಡುವನೊಲಿದು
ಕಾಂತೆ ನೀನಂಬಿ ನಚ್ಚಿರು ಬೆದರದೆ ||9||

11
ನಮಗೆ ಸರಿಯದಾರು
ಕುಸುಮ ಷಟ್ಪದಿ

ಶಿವ ಶರಣರಾ ಮನೆಯ
ತವೆಸೇವೆಯನು ಮಾಡಿ
ಭವವ ಗೆದ್ದೆನು ಎನಗೆ ಸರಿಯದಾರು ||ಪ||

ಬಸವೇಶ್ವರನು ಚನ್ನ
ಬಸವೇಶ್ವರನು ಕರುಣಿ
ದಸರಯ್ಯ ಮೋಳಿಗೆಯ ಮಾರಯ್ಯನ
ಮಸಣಯ್ಯಗಳ ಮನೆಯ
ಕಸವ ಗುಡಿಸುವ ಮಹಾ
ಹೊಸಸೇವಕರು ನಮಗೆ ಸರಿಯದಾರು ||1||

ಚೆನ್ನಯ್ಯನಗ್ಗಣಿಯ
ಹೊನ್ನಯ್ಯ ಗಾಣದಾ
ಕನ್ನಯ್ಯ ಧೂಳಿದೇವರು ಬೇಡರ
ಕಣ್ಣಯ್ಯಗಳ ಮನೆ
ಉನ್ನತದ ಸೇವಕರು
ಇನ್ನು ಧರೆಯೊಳು ನಮಗೆ ಸರಿಯದಾರು ||2||

ಹಳ್ಳಯ್ಯ ಮಧುವಯ್ಯ
ಬಳ್ಳೇಶಮಲ್ಲಯ್ಯ
ಗೊಲ್ಲಾಳದೇವ ಹಾವಿನಹಾಳಿನ
ಕಲ್ಲಯ್ಯಗಳ ಮನೆಯ
ಹುಲ್ಲುಸೊಪ್ಪನೆ ತರುವ
ಬಲ್ಲಿದರು ನಮಗಿನ್ನು ಸರಿಯದಾರು ||3||

ಬಾವೂರು ಬೊಮ್ಮಯ್ಯ
ದೇವರಾ ದಾಸಯ್ಯ
ಭಾವಿಗಳು ಜಗದೇವ ಮೊಲ್ಲೆಬೊಮ್ಮ
ಆವಾವ ಜಗದೊಳಗೆ
ಆ ವಂದ್ಯರಾ ಮನೆಯ
ಸೇವಕರು ನಮಗಿನ್ನು ಸರಿಯದಾರು ||4||

ಚಿಕ್ಕಯ್ಯ ಡೋಹರಾ
ಕಕ್ಕಯ್ಯ ಸೊಡ್ಡಳಾ
ಯ್ದಕ್ಕಿಯಾ ಮಾರಯ್ಯ ರಾಮಯ್ಯನು
ಚಕ್ಕುಲಿಗೆ ನಾಗಯ್ಯ
ಅಕ್ಕರಿನ ತೊತ್ತಿನಾ
ಮಕ್ಕಳಪ್ಪೆವು ನಮಗೆ ಸರಿಯದಾರು ||5||

ಹಾದರದ ಬೊಮ್ಮಯ್ಯ
ಮಾದಾರ ಧೂಳಯ್ಯ
ಮೇದಾರ ಕೇತಯ್ಯ ವಹಿಲಯ್ಯನ
ಆದಯ್ಯಗಳ ಮನೆಯ
ಕಾದುಕೊಂಡಿರುವಂಥ
ಆದಿಕರು ನಮಗಿನ್ನು ಸರಿಯದಾರು ||6||

ಸಾಮವೇದಿಯ ಸಿದ್ಧ
ರಾಮಯ್ಯ ಮಯದುನಾ
ರಾಮಯ್ಯ ಏಕಾಂತರಾಮಯ್ಯನ
ಭೀಮಯ್ಯಗಳ ಮನೆಯ
ಆ ಮಹಾಸೇವಕರು
ಈ ಮಹಿಯೊಳೆಮಗಿನ್ನು ಸರಿಯದಾರು ||7||

ಮೊರನಾದ ವೆಮ್ಮಯ್ಯ
ಮೊರಟದಾ ಬಂಕಯ್ಯ
ತಿರುನೀಲಕಂಠಯ್ಯನಣುಮೂರ್ತಿಯು
ಗುರುಮಲ್ಲಿಕಾರ್ಜುನರ
ವರಪಂಡಿತರ ಮನೆಯ
ತರುಗಾಹಿಗರು ನಮಗೆ ಸರಿಯದಾರು ||8||

ಬಂಕಯ್ಯ ಶಿವರಾತ್ರಿ
ಸಂಕಯ್ಯ ಹೊಡೆಹುಲ್ಲ
ಬಂಕಯ್ಯ ಮರುಳುವೇಷದೊಳೊಪ್ಪುವ
ಶಂಕರೇಶ್ವರನ ವರ
ಕಿಂಕರರ ಕಿಂಕರರ
ಲೆಂಕರಪ್ಪೆವು ನಮಗೆ ಸರಿಯದಾರು ||9||

ಕುಂಬಾರ ಗುಂಡಯ್ಯ
ಅಂಬಿಗರ ಚೌಡಯ್ಯ
ಕೆಂಭಾವಿ ಭೋಗಯ್ಯ ಶ್ವಪಚಯ್ಯನ
ಮುಂಬಾಗಿಲನು ಕಾಯ್ವ
ನಂಬಿಗೆಯ ಸೇವಕರು
ಕುಂಭಿಯೊಳೆಮಗಿನ್ನು ಸರಿಯದಾರು ||10||

ಮಳೆಯ ರಾಜನು ಚೋಳ
ವಲಘಾಂಡ ನೈನಾರು
ಕಲಿನಾಥನಾ ಚಾರಮಾ ನಂಬಿಯರ
ಕಳೆವೆತ್ತ ಚಂಗಳೆಯ
ಒಳಬಾಗಿಲನು ಕಾಯ್ವ
ಸಲುಗೆವಾಳರು ನಮಗೆ ಸರಿಯದಾರು ||11||

ಸಿರಿಯಾಳ ಕಲಿಯಾರ
ಗುರುಭಕ್ತ ನವನಂದಿ
ಅರಿಯಮನುವಾಳು ನಮಿತಾಂಡಾರ್ಯರ
ಮೆರೆಮಿಂಡದೇವರಾ
ಚರಣ ರಕ್ಷೆಯ ಪಿಡಿದು
ವರವ ಪಡೆವರು ನಮಗೆ ಸರಿಯದಾರು ||12||

ಚೋಳಕ್ಕ ದುಗ್ಗಳೆಯು
ನೀಲಲೋಚನೆ ಚೆಲ್ವ
ಸೂಳೆ ನಂಬಿಯು ಕಮಳೆ ಸೋಮವ್ವೆಯಾ
ಕಾಳು ಜೈನನ ಬಿಟ್ಟ
ಲೋಲ ವೈಜವ್ವೆಯಾ
ಆಳುಗಳು ನಮಗಿನ್ನು ಸರಿಯದಾರು ||13||

ಅಕ್ಕನಾಗಮ್ಮನ ಸ
ತ್ಯಕ್ಕ ಚಂಗಳೆ ಚೆಲ್ವೆ
ಅಕ್ಕರೆಯ ಮಹದೇವಿ ಸುಗ್ಗವ್ವೆಯಾ
ಚಿಕ್ಕಕೊಡಗೂಸಿನ ವ
ರಕ್ಕರಿನ ತೊತ್ತಿನಾ
ಮಕ್ಕಳಪ್ಪೆವು ನಮಗೆ ಸರಿಯದಾರು ||14||

ಇಂತಪ್ಪುವರ ಬಂಟ
ನಿಂತು ಭವದಲಿ ಬಂದ
ನಂತೆಯೆಂದರೆ ನಿಮಗೆ ಕೊರತೆಯಯ್ಯ
ಮುಂತೆ ನಮ್ಮವನೆಂದು
ಸಂತೋಷದಿಂದಪ್ಪು
ಕಂತುಹರ ಶಿವಷಡಕ್ಷರಿಲಿಂಗವೆ ||15||

12
ಏನನೋದಿ ಏನು ಫಲ
ಭೋಗ ಷಟ್ಪದಿ

ಎನಿಸನೋದಿ ಫಲವದೇನು
ಎನಿಸಕೇಳಿ ಫಲವದೇನು
ಮನಸು ತನ್ನ ದುರ್ಗುಣಗಳ ಬಿಡದು ಶಿವಶಿವ ||ಪ||

ಇಂದುಧರನ ಚರಣದಲ್ಲಿ
ಹೊಂದಿ ಸುಖದೊಳಿರದು ಮನವು
ಕುಂದದನ್ಯ ವಿಷಯದತ್ತ ಹರಿವುದೆಂತೆನೆ
ಒಂದು ಶುನಿಯ ಹಿಡಿದುತಂದು
ಅಂದಣವನು ಏರಿಸಿರಲು
ಮುಂದೆ ಅಡಗ ಕಂಡು ನೆಗೆದ ಮಾಳ್ಕೆಯಾಯಿತು ||1||

ಸೊಗಸಿ ಶಿವನ ಮಂತ್ರವನ್ನು
ನೆಗಳುವದಕೆ ಎನ್ನ ಜಿಹ್ವೆ
ಸೊಗಡಿಸುವದು ಕಾಳುನುಡಿಗೆಯಲಸವೆಂತೆನೆ
ಹಗಲು ಇರುಳು ತನ್ನ ಬಾಯಿ
ಸಿಗುವುದರಿಯದಂತೆ ನಾಯಿ
ಜಗುಳುವುದಕೆಯಲಸದಂತೆ ಜಿಹ್ವೆಯಲಸದು ||2||

ಮಂಗಳಾತ್ಮ ಷಡಕ್ಷರಿಯ
ಲಿಂಗದಡಿಯ ಪೂಜಿಸುವಡೆ
ಕೊಂಗಿ ಮನವು ಸ್ವಸ್ಥಿರವನು ಐದದೆಂತೆನೆ
ಹಿಂಗದೊಲಿದು ಗಂಧಪುಣುಗು
ಸಂಗಡಿಸುತ ತೊಡೆಯೆ ಹಂದಿ
ಹಾಂಗೆಯಿರದೆ ಗಂಜಳಕ್ಕೆ ಓಡುವಂದದಿ ||3||

13
ಕಾಯಮೋಹವನ್ನು ಮರೆ
ಭೋಗ ಷಟ್ಪದಿ

ಕಾಯ ಮಾಯಾ ಜಾಯವೆಂದು
ಕಾಯಮೋಹವನ್ನು ಮರೆದು
ಮಾಯವೈರಿ ಶಿವನ ನೆನೆವುದೆಂದಿಗಪ್ಪುದೋ ||ಪ||

ಜಡವು ನಿದ್ರೆ ಆಕಳಿಕೆಯು
ಬಿಡದೆ ಹಸಿವು ತೃಷೆಯು ವ್ಯಸನ
ಒಡನೆ ಇದಕೆ ಸುಖವು ದುಃಖ ತಾಗುತಿರ್ಪುದು
ಒಡಲ ಮೆಚ್ಚಿ ಶಿವನ ಸುಖವ
ಕೆಡಿಸಿಕೊಂಬ ತನುವನಿದನು
ಒಡಕು ಓಡಿನಂತೆ ಕಾಂಬುದೆಂದಿಗಪ್ಪುದೋ ||1||

ಹಗಲು ಇರುಳು ಓಗರವನು
ಮಿಗಿಲು ತುಂಬಿ ಸುರಿವುತಿಹುದು
ತೊಗಲಚೀಲ ಶುಕ್ಲದೊರತೆ ಕರುಳುಜಾಳಿಗೆ
ಅಘದ ಬೀಡು ಮುಕುತಿಗೇಡು
ಜಗದಿ ಜನಿಸಿ ಕೆಡುವ ತನುವ
ರಗಟೆಗಿಂತ ಕಡೆಯ ಕಾಂಬುದೆಂದಿಗಪ್ಪುದೋ ||2||

ಬಿರಿತಕಿವಿಗಳಲ್ಲಿ ಗುಗ್ಗೆ
ವೊರತೆ ಕಣ್ಣಿನಲ್ಲಿ ಜಾರು
ಬರಿಯ ಶ್ಲೇಷ್ಮ ಉಗಳು ಬಾಯ ಗೊಣ್ಣೆ ಮೂಗಿನ
ಸುರಿವ ತನುವ ಮೆಚ್ಚಿ ಶಿವನ
ಮರೆದು ಕೆಡುವ ಶರಿರವಿದನು
ಕೆರವಿಗಿಂತ ಕಡೆಯ ಕಾಂಬುದೆಂದಿಗಪ್ಪುದೋ ||3||

ಚಳಿಯ ತಾಳಲಾರದೊಮ್ಮೆ
ಝಳವ ತಾಳಲಾರದೊಮ್ಮೆ
ಒಲಿದು ರಕ್ಷಣೆಯನು ಮಾಡಲೇನ ಕೊಡುವದು
ಗಳಿಸಿ ಪಾಪವನು ಯಮನ
ಬಳಿಗೆ ಒಯ್ವ ತನುವ ನಾಯ
ಹಳಗಿಗಿಂದ ಕಡೆಯ ಕಾಂಬುದೆಂದಿಗಪ್ಪುದೋ ||4||

ಅಂಗವಿರಲ ಇರ್ದೊಡೇನು
ಅಂಗದಿಚ್ಛೆಗಾದರೊಲಿದು
ಮಂಗಳಾತ್ಮ ಷಡಕ್ಷರಿಯ ಲಿಂಗ ನೆನೆವನು
ಹಿಂಗದಂತೆ ಹೃದಯದಲ್ಲಿ
ಸಂಗಿಸುತ್ತಲಿರಲು ಭವದ
ಭಂಗವಳಿದು ನಿತ್ಯಪದಕೆ ಕರ್ತನಪ್ಪನು ||5||

14
ಎನಗೆ ಭೋಗಭಾಗ್ಯ ಬೇಡ
ಭೋಗ ಷಟ್ಪದಿ

ಎನಗೆ ಭೋಗಭಾಗ್ಯ ಬೇಡ
ಎನಗೆ ಜಪವು ತಪವು ಬೇಡ
ಎನಗೆ ನಿಮ್ಮ ತೊತ್ತುಸೇವೆ ನಿತ್ಯವಾಗಲೈ ||ಪ||

ಎನ್ನ ಕಂದಿಸುತ್ತ ಬಹಳ
ಎನ್ನ ಬಾಧಿಸುತ್ತ ಬಿಡದೆ
ಎನ್ನನೊಂದು ನೆವಗಳಿಂದ ಕಾಡಿದವರಿಗೆ
ಎನ್ನ ಕೊಂದಡವರಿಗೆಲ್ಲ
ಎನ್ನ ಪೂಜೆ ಫಲಗಳೆಲ್ಲ
ಉನ್ನತದೊಳಗವರಿಗಾಗಿ ಸುಖದಿ ಬಾಳಲಿ ||1||

ಹಿಂದೆಯೆನ್ನ ಬೈದವರಿಗೆ
ಮುಂದೆಯೆನ್ನ ಬೈದವರಿಗೆ
ಕುಂದದೆಲ್ಲ ಜನರ ನಡುವೆ ಬೈದಡವರಿಗೆ
ಇಂದುಧರನ ಕರುಣದಿಂದ
ಅಂದಣವನು ಏರುವಂತೆ
ಕುಂದದೊಲೆದು ಅವರಿಗೆಲ್ಲ ಭೋಗವಾಗಲಿ ||2||

ಹಿಂಗದೆನ್ನ ನಿಂದಿಸಿದ ಜ
ನಂಗಳೆಲ್ಲ ಸುಖದೊಳಿರುವ
ಹಾಂಗೆ ಶಿವನು ಅವರಿಗೆಲ್ಲ ಭಾಗ್ಯವೀಯಲಿ
ಮಂಗಳಾತ್ಮ ಷಡಕ್ಷರಿಯ
ಲಿಂಗ ನಿನ್ನ ತೊತ್ತುಸೇವೆ
ಸಾಂಗಮಾಗಿ ಧರೆಯೊಳೆನಗೆ ನಿತ್ಯವಾಗಲಿ ||3||

15
ಡಿಂಭದೊಳಗೆ ಒಂದು ಪ್ರಾಣ *
ಭೋಗ ಷಟ್ಪದಿ

ಡಿಂಭದೊಳಗೆ ಒಂದು ಪ್ರಾಣ
ಕಂಭಸೂತ್ರ ಬೊಂಬೆಯಂತೆ
ಎಂದಿಗಾದರೊಂದು ದಿನವು ಸಾವು ತಪ್ಪದು ||ಪ||

ಹುಟ್ಟುತೇನು ತರಲು ಇಲ್ಲ
ಬಿಟ್ಟುತೇನು ಒಯ್ಯಲಿಲ್ಲ
ಸುಟ್ಟಸುಣ್ಣದರಳಿನಂತೆ ಆಯ್ತು ದೇಹವು
ಹೊಟ್ಟೆ ಬಹಳ ಕೆಟ್ಟುದೆಂದು
ಎಷ್ಟು ಕಷ್ಟ ಪಟ್ಟೆ ಪ್ರಾಣ
ಬಿಟ್ಟು ಹೋಗುವಾಗ ಒಂದು ಬಟ್ಟೆಯಿಲ್ಲವು ||1||

ಹೊನ್ನುಹೆಣ್ಣುಮಣ್ಣು ಮೂರು
ತನ್ನೊಳಿರ್ದು ಉಣ್ಣಲಿಲ್ಲ
ಅಣ್ಣತಮ್ಮತಾಯಿತಂದೆ ಬಗೆಯಲಿಲ್ಲವು
ಅನ್ನವಸ್ತ್ರಭೋಗಿಯಾಗಿ
ತನ್ನ ಸುಖವನರಿಯಲಿಲ್ಲ
ಮಣ್ಣುಪಾಲಾದ ಮೇಲೆ ಯಾರಿಗಾಯಿತು ||2||

ಹತ್ತು ಎಂಟು ಲಕ್ಷಗಳಿಸಿ
ಮತ್ತೆ ಸಾಲದೆಂದು ಪರರ
ಸೊತ್ತಿಗಾಗಿ ಆಶೆಮಾಡಿ ನ್ಯಾಯ ಮಾಡುವ
ಬಿತ್ತಿಬೆಳೆದು ಉಂಡೆನೆಂಬ
ವ್ಯರ್ಥಚಿಂತೆ ಮಾಡದಿರೊ
ಸತ್ತುಹೋದ ಮೇಲೆ ನಿನ್ನ ಅರ್ಥದಾರಿಗೆ ||3||

ಬೆಳ್ಳಿಬಂಗಾರಿಟ್ಟುಕೊಂಡು
ಒಳ್ಳೆ ವಸ್ತ್ರ ತೊಟ್ಟುಕೊಂಡು
ಒಳ್ಳೆ ಚಲುವ ಬೊಂಬೆಯಂತೆ ಆಡಿಹೋದೆಲೊ
ಹಳ್ಳ ಹರಿದ ಮೇಲೆ ನೀರ
ಗುಳ್ಳಿಯುರುಳಿ ಹೋದ ತೆರದಿ
ಸುಳ್ಳುರೂಪು ಸಂಸೃತಿಯನು ನೋಡಿರಕ್ಕಟ ||4||

ಸತ್ಯನೆನಿಸಿಕೊಂಡು ಜನರ
ತಥ್ಯವಾಕ್ಯದಲ್ಲಿ ನೀನು
ಮುಕ್ತಿಯಾದಮೇಲೆ ನಿನಗೆ ಸ್ತೋತ್ರ ಮಾಳ್ಪರು
ನಿತ್ಯ ಷಡಕ್ಷರಿಯ ಲಿಂಗ
ತೊತ್ತು ಆಗಿ ಭಜಿಸು ನಿನಗೆ
ಉತ್ತಮತ್ವಪದವಿ ದೊರಕಿ ಸುಖಿಪೆ ಸಂತತಂ ||5||

16
ದೇವತ್ವವಾವುದು

ದೇವತ್ವವೆಂಬುದದಾವುದೆಂದರಿಯರು ಕೇಳು ಮನವೆ
ಭಾವದೊಳು ಲಿಂಗ ನೆಲಸಿರೆ ದೇವತ್ವವಪ್ಪುದು ಕೇಳು ಮನವೆ ||ಪ||

ಉರಿವ ಕಿಚ್ಚನೆ ಹೊಕ್ಕು ಬೇಯದೆ ಹೊರಟರೆ ಕೇಳು ಮನವೆ
ನರರುಗಳದನು ದೇವತ್ವವೆಂದೆಂಬರು ಕೇಳು ಮನವೆ
ಭರದಿಂದ ಬಂದು ಹೊಳೆಯ ಮೇಲೆ ನಡೆದರೆ ಕೇಳು ಮನವೆ
ಅರರೆ ಅವರಾಚರಿಸಿದುದೇ ದೇವತ್ವವೆಂಬರು ಕೇಳು ಮನವೆ ||1||

ಚಿತ್ರದೊಳಿಹ ಮಾತು ಹೇಳಲು ಮತ್ರ್ಯರು ಕೇಳು ಮನವೆ
ಸತ್ಯವಿದತಿಶಯ ದೇವತ್ವವೆಂಬರು ಕೇಳು ಮನವೆ
ಹತ್ತಿ ಗಗನದಲ್ಲಿ ನಡೆದರೆ ಧರೆಯೊಳು ಕೇಳು ಮನವೆ
ಉತ್ತರೋತ್ತರ ದೇವತ್ವವೆಂಬರು ಕೇಳು ಮನವೆ ||2||

ದೂರದೃಷ್ಟಿ ದೂರಶ್ರವಣಗಳಿಂದಲಿ ಕೇಳು ಮನವೆ
ಸಾರಿ ದೃಷ್ಟನ ಹಳೇ ದೇವತ್ವವೆಂಬರು ಕೇಳು ಮನವೆ
ಆರೈವ ಮನದಿ ಷಡಕ್ಷರಿಲಿಂಗವ ಕೇಳು ಮನವೆ
ಬೇರಿಲ್ಲದೊಡಗೂಡಬಲ್ಲರೆ ದೇವತ್ವ ಕೇಳು ಮನವೆ ||3||

17
ತನ್ನ ನಾವು ಏನು ಬೇಡಿದೆವು

ಎನ್ನ ಕರದೊಳಗಿದ್ದು ಎನ್ನೊಳು ನುಡಿಯನು ಕೇಳು ಸಖಿಯೆ
ತನ್ನ ನಾವು ಏನು ಬೇಡಿದೆವವ್ವ ಕೇಳು ಸಖಿಯೆ ||ಪ||

ಸಾಲೋಕ್ಯ ಮೊದಲಾದ ನಾಲ್ಕು ಪದಂಗಳು ಕೇಳು ಸಖಿಯೆ
ಮೇಲೆ ನಮ್ಮವರ ಬಾಗಿಲ ಕಾಯ್ದಿರ್ಪವು ಕೇಳು ಸಖಿಯೆ
ಲೀಲೆಯಿಂದಲವನು ಬೇಡುವಳಲ್ಲ ತನ್ನನು ಕೇಳು ಸಖಿಯೆ
ಭಾಳಾಕ್ಷ ನಮ್ಮೊಳು ನುಡಿಯದನೆ ಕೇಳವ್ವ ಕೇಳು ಸಖಿಯೆ ||1||

ಅಣಿಮಾದಿ ಅಷ್ಟಸಿದ್ದಿಗಳ ನಮ್ಮವರೆಲ್ಲ ಕೇಳು ಸಖಿಯೆ
ತೃಣಮಾತ್ರ ಲೆಕ್ಕಿಸಿ ಬಗೆಯರು ಮನದೊಳು ಕೇಳು ಸಖಿಯೆ
ಅಣಿಮಾದಿ ಸಿದ್ಧಿಗಳನು ಬೇಡಿದೆವೆ ತನ್ನ ಕೇಳು ಸಖಿಯೆ
ತ್ರಿಣಯ ತಾ ನಮ್ಮೊಳು ನುಡಿಯದೇಕವ್ವ ಕೇಳು ಸಖಿಯೆ ||2||

ಅರವತ್ತು ನಾಲ್ಕು ವಿದ್ಯೆಯು ನಮ್ಮ ಶರಣ ಕೇಳು ಸಖಿಯೆ
ಚರಣ ರಕ್ಷೆಗೆ ಸರಿಯ ಬಾರದವೆಲ್ಲವು ಕೇಳು ಸಖಿಯೆ
ಅರವತ್ತು ನಾಲ್ಕು ವಿದ್ಯೆಯ ಬೇಡಿದೆವೆ ತನ್ನ ಕೇಳು ಸಖಿಯೆ
ಹರನು ತಾ ನಮ್ಮೊಳು ನುಡಿಯದಿರ್ಪುದೇಕವ್ವ ಕೇಳು ಸಖಿಯೆ ||3||

ಹೊಟ್ಟೆಗನ್ನವನಿಕ್ಕಿದಳು ನಮ್ಮ ಪಿಟ್ಟವ್ವೆ ಕೇಳು ಸಖಿಯೆ
ಉಟ್ಟುಕೊಂಬಡೆ ನಮ್ಮ ದಾಸಯ್ಯ ಬಟ್ಟೆ ಕೊಟ್ಟನು ಕೇಳು ಸಖಿಯೆ
ಕೊಟ್ಟರು ತನಗೆ ಬೇಡಿದುದನ್ನೆಲ್ಲ ಶರಣರು ಕೇಳು ಸಖಿಯೆ
ಕೊಟ್ಟನೋ ಹರ ನಮ್ಮವರಿಗೆ ನುಡಿಯನು ಕೇಳು ಸಖಿಯೆ ||4||

ಆದವರನು ಮರೆದನು ತನ್ನೊಳು ಕೇಳು ಸಖಿಯೆ
ಭೇದಿಸಿ ತನ್ನೊಳಗಿಲ್ಲದೆ ಕೇಳು ಸಖಿಯೆ
ನಾದಮಯನು ಶಿವಷಡಕ್ಷರಿಲಿಂಗವು ಕೇಳು ಸಖಿಯೆ
ವೇಧಿಸಿ ನಮ್ಮೊಳು ನುಡಿಯನದೇಕವ್ವ ಕೇಳು ಸಖಿಯೆ ||5||

18
ಮೋಹವಿಲ್ಲದ ಪೂಜೆ

ಮೋಹವಿಲ್ಲದ ಪೂಜೆ ಎನಿಸು ಕಾಲಗಳಿಂದ ಕೇಳು ಮನವೆ
ದೇಹಿಗೆ ತಾ ಮಾಡಿ ಫಲವೇನು ಅದರಿಂದ ಕೇಳು ಮನವೆ ||ಪ||

ಹಸಿಯ ಗೋಡೆಗೆ ಹರಳಿಂದಲಿಡಲು ಕೇಳು ಮನವೆ
ಮಸೆದ ಕೂರಲಗಿಂದ ಬಾಳೆಯನು ಎಚ್ಚಂತೆ ಕೇಳು ಮನವೆ
ಒಸೆದು ಲಿಂಗವ ನೋಡಿದಾಕ್ಷಣ ಚಿತ್ತವು ಕೇಳು ಮನವೆ
ಬೆಸುಗೆಗಳಿಲ್ಲದ ಮೋಹವದೇತಕೆ ಕೇಳು ಮನವೆ ||1||

ಪುರುಷನಂಗವಬಯಸುವ ಲಲನೆಯವೊಲು ಕೇಳು ಮನವೆ
ಪರಿಮಳದರಳಿಗೆ ಭ್ರಮರನೆಳಸುವಂತೆ ಕೇಳು ಮನವೆ
ಪರಮಚಿದ್ಘನಲಿಂಗ ಕರದೊಳಗಿರುತಿರೆ ಕೇಳು ಮನವೆ
ಉರವಣಿಸದ ಚಿತ್ತವೇತರ ಮೋಹವು ಕೇಳು ಮನವೆ ||2||

ಬಿಸಿಯಾದ ಹಾಲೊಳು ಮುಸುಡಿಕ್ಕಿದ ಬೆಕ್ಕು ಕೇಳು ಮನವೆ
ಸಸಿನೆ ಕಾಣುತ ಕೊಸರೋಡುವ ತೆರನಂತೆ ಕೇಳು ಮನವೆ
ನುಸುಳುವ ಚಿತ್ತವ ಬಲುಹಿಂದ ಪಿಡಿತಂದು ಕೇಳು ಮನವೆ
ಶಶಿಧರನೊಳಗಿಡದೇತರ ಮೋಹವು ಕೇಳು ಮನವೆ ||3||

ಸವತಿಯ ಶಿಶು ಹಸಿದಳುತಿರೆ ಸವತಿಯು ಕೇಳು ಮನವೆ
ತವೆ ಜನನುಡಿಗೆ ಮೊಲೆಯೂಡುವಂದದಿ ಕೇಳು ಮನವೆ
ಶಿವಲಿಂಗವನು ನೋಡಿ ಕರದಲ್ಲಿ ಚಿತ್ತಕ್ಕೆ ಕೇಳು ಮನವೆ
ಭವಕಂಜಿ ನೆನೆದರದೇತರ ಮೋಹವು ಕೇಳು ಮನವೆ ||4||

ಬಿಡದೆ ಜಾರನು ಜಾರೆ ಕಣ್ಮರೆಯಾದರೆ ಕೇಳು ಮನವೆ
ತಡೆಯದೋಡುವಾನಂದದೊಳು ಚಿತ್ತವು ಕೇಳು ಮನವೆ
ಮೃಡಷಡಕ್ಷರಲಿಂಗವನು ಕಾಣುತಾಕ್ಷಣ ಕೇಳು ಮನವೆ
ಬಿಡಿಸದಂದದಿ ತೊಡರದ ಮೋಹವೇತಕ್ಕೆ ಕೇಳು ಮನವೆ ||5||

19
ಬಂದನು ಮತ್ರ್ಯಕೆ

ಬಂದನು ಮತ್ರ್ಯಕಿನ್ನುದ್ಧಾರವನು ಮಾಳ್ಪ
ಇಂದುಧರ ಓಂ ನಮಃ ಶಿವಾಯನೆಂಬ ನಾಮದಲಿ ||ಪ||

ಮುಖವೈದನೆ ಏಕಮುಖವನೆ ಮಾಡುತಲಿ
ಶಿಖಿನೇತ್ರ ಗುಪ್ತತರವಾಗಿ ರಂಜಿಸಲು
ಆಕಳಂಕ ದಶಭುಜ ದ್ವಯಭುಜದೊಳುಂ ಮರೆಸಿ
ಮಕರಧ್ವಜನ ಸುಟ್ಟು ಭಸಿತವನೆ ಧರಿಸಿ ||1||

ರುಂಡಮಾಲೆಯ ಬಿಟ್ಟು ರುದ್ರಾಕ್ಷಿಗಳ ಧರಿಸಿ
ಚಂಡಶೂಲವನುಳಿದು ಸುಜ್ಞಾನವಿಡಿದು
ಮಂಡೆಯೊಳು ಪೊತ್ತ ಚಂದ್ರಮನ ಶಾಂತಿಯೊಳಿಟ್ಟು
ಕುಂಡಲದ ಫಣಿಯ ಧರೆಗಿಳುಹಿಯಳವಟ್ಟು ||2||

ಹರಿಗೆ ಹೇಳದೆ ಸರಸಿಜೋದ್ಭವಗೆ ಸೂಚಿಸದೆ
ವರವೀರಪ್ರಮಥರಿಗೆ ಸನ್ನೆ ಮಾಡಿ
ನರಲೋಕನಾಟಕವ ನೋಡಬೇಕೆಂದೆನುತ
ಸರಸದಿಂ ಬಂದಂ ಷಡಕ್ಷರಿಯ ದೇವ ||3||

20
ಆರು ಕಾಣರು ಪುಣ್ಯಕ್ಷೇತ್ರವನು

ಧಾರುಣಿಯನು ತಿರುಗುವರೈಸೆ-ಅಲ್ಲಿ
ಆರು ಕಾಣರು ಪುಣ್ಯಕ್ಷೇತ್ರವನು ||ಪ||

ಗಗನಗಿರಿಯ ಶಿಖರದ ಮೇಲೆ- ಅಲ್ಲಿ
ಸೊಗಸುವ ರತ್ನಮಂಟಪದೊಳು
ಝಗಝಗಿಸುವ ಶಶಿಸೂರ್ಯಪ್ರಭ -ಅಲ್ಲಿ
ಅಗಲದೆ ಬೆಳಗುವ ತೇಜ ||1||

ಶಂಖ ಕಿನ್ನರಿ ನಾಗಸರ ವೀಣೆ- ಅಲ್ಲಿ
ಝೇಂಕರಿಸುವ ಘಂಟೆಜಾಗಟೆ
ಕಿಂಕಿಣಿಭೇರಿದುಂದುಭಿಯೊಲು- ಅಲ್ಲಿ
ಓಂಕಾರನಾದವಾಗುತಲಿದೆ ||2||

ತೊಳಗುವ ಚಂದ್ರಾರ್ಕ ಮಿಂಚಿನ- ಅಲ್ಲಿ
ಬೆಳಗ ಕೀಳ್ಪಡಿಸುತ ಬೆಳಗುತ
ಒಲಿದ ಷಡಕ್ಷರಲಿಂಗವು – ಅಲ್ಲಿ
ನೆಲಸಿರ್ಪ ಭೇದವನರಿಯದೆ ||3||

21
ಕಾಯೈ ಕಾಯೈ

ಕಾಯೈ ಕಾಯೈ ಕರುಣದಿ ನಾನು
ಸಾಯಲಾರೆನು ಮಾಯೆ ಕೈಯಲ್ಲಿ ||ಪ||

ಹರಿಯಜ ಸುರ ಮನು ಮುನಿಗಳ – ಮಾಯೆ
ಗಿರಿಯ ಮರೆಯೊಳಿಕ್ಕಿ ಕೊಲ್ಲುತಿದೆ
ಗಿರಿಯ ಮರೆಯೊಳಿರಲಾರದೆ ನಿಮ್ಮ
ಚರಣರಕ್ಷೆಯ ಮರೆಯನು ಹೊಕ್ಕೆ ||1||

ಆಶೆಯ ಪಾಶದಿಂದಲಿ ಕಟ್ಟಿ – ಮಾಯೆ
ವಾಸವಾದಿಗಳನು ಕೊಲುತಲಿದೆ
ಆಶಾಪಾಶದೊಳಿರಲಂಜಿ ಜಗ
ದೀಶ ನಿಮ್ಮಯ ಮರೆಯನು ಹೊಕ್ಕೆ ||2||

ಬಲು ಹಿರಿಯರನ್ನು ಕೊಲುತಿದೆ – ಮಾಯೆ
ಗೆಲುವವರಿಲ್ಲ ತ್ರಿಜಗದೊಳು
ಅಲಸಿ ನಿಮ್ಮನು ಮರೆಯ ಹೊಕ್ಕೆ
ಎನ್ನ ಸಲಹು ಷಡಕ್ಷರಿಯ ಲಿಂಗವೆ ||3||

22
ನಮ್ಮ ದೇಶಕೆ ಹೋಹ ದಿನ ಬಂತು

ನಮ್ಮ ದೇಶಕೆ ಹೋಹ ದಿನ ಬಂತು ಮುಂದೆ
ಗಮ್ಮನೆಲ್ಲರನೊಬ್ಬುಳಿ ಮಾಡು ||ಪ||

ಅಂಗಭೋಗಂಗಳ ಮರೆ ನೀನು – ಮುಂದೆ
ಹೆಂಗಳ ಸುಖವನು ತೊರೆ ನೀನು
ಅಂಗಜಗುಣಗಳ ಹರಿ ನೀನು- ಮುಂದೆ
ಲಿಂಗನ ಮನದೊಳಗರಿ ನೀನು ||1||

ಮಲತ್ರಯದಾಸೆಯ ಬಿಡು ನೀನು – ಮುಂದೆ
ಹಲವು ಬುದ್ಧಿಗಳನು ತೊಡೆ ನೀನು
ಫಲಿಸದ ವೃಕ್ಷವನು ಕಡಿ ನೀನು – ಮುಂದೆ
ಸಲೆ ಲಿಂಗದೊಳು ಮನವಿಡು ನೀನು ||2||

ಬಿಡು ತನುವಿನ ಮೇಲಣಾಸೆಯನು – ಮುಂದೆ
ಹಿಡಿ ಶಿವಶರಣರ ಭಾಷೆಯನು
ಮೃಡಷಡಕ್ಷರಾಧೀಶನನು – ಮುಂದೆ
ಯೊಡಗೂಡು ಭವಪಾಶನಾಶನನು ||3||

23
ಸೆರಗನೊಡ್ಡಿ ಬೇಡಿಕೊಂಬೆನು

ಸೆರಗನೊಡ್ಡಿ ಬೇಡಿಕೊಂಬೆನು – ಶಿವ ಶಿವಾ
ಮರೆದು ಹೋಗಬೇಡವೆನ್ನನು – ಶಿವ ಶಿವಾ ||ಪ||

ಎನ್ನನೊಲಿದು ನಿನಗೆ ಕೊಟ್ಟರು – ಶಿವ ಶಿವಾ
ನಿನ್ನನೊಲಿದು ಎನಗೆ ಕೊಟ್ಟರೊ – ಶಿವ ಶಿವಾ
ಎನ್ನ ಮಾತ ಮೀರಬೇಡವೆಂದು – ಶಿವ ಶಿವಾ
ಎನ್ನ ನಿನ್ನನೊಂದುಗೂಡಿದ – ಶಿವ ಶಿವಾ ||1||

ತಪ್ಪನೆನ್ನ ಮೇಲೆ ಹೊಂದಿಸಿ – ಶಿವ ಶಿವಾ
ತಪ್ಪಿಸೆನ್ನ ಬಿಟ್ಟು ಹೋದರೆ – ಶಿವ ಶಿವಾ
ಒಪ್ಪರಯ್ಯಾ ಗುರುವಿನಾಜ್ಞೆಗೆ – ಶಿವ ಶಿವಾ
ತಪ್ಪಿ ನಡೆದರೆಂದು ನಮ್ಮನು – ಶಿವ ಶಿವಾ ||2||

ಎನ್ನನೊಲ್ಲದಿರ್ದೊಡೆ ನೀನು – ಶಿವ ಶಿವಾ
ಮುನ್ನದೇಕೆ ಎನ್ನ ಕೂಡಿದೆ – ಶಿವ ಶಿವಾ
ಎನ್ನ ಕೈಯ ಬಿಡುವೆನೆಂದರೆ ನೀನು – ಶಿವ ಶಿವಾ
ನಿನ್ನ ಬಿಡೆನು ಗುರುವಿನಾಜ್ಞೆಗೆ – ಶಿವ ಶಿವಾ ||3||
ನೋಡಬೇಡ ಎನ್ನ ಗುಣವನು – ಶಿವ ಶಿವಾ
ಕೂಡಿ ಅಗಲಬೇಡವೆನ್ನನು – ಶಿವ ಶಿವಾ
ಬೇಡಿಕೊಂಬೆ ನಾನು ನಿಮ್ಮನು – ಶಿವ ಶಿವಾ
ನೋಡು ನಿಮ್ಮ ಕರುಣದೃಷ್ಟಿಯಲ್ಲಿ – ಶಿವ ಶಿವಾ ||4||

ಕಂಗಳರತ ಕುರುಡನಂದದಿ – ಶಿವ ಶಿವಾ
ಭಂಗ ಬಡುತೆ ತಿರುಗುತೈದೆನೆ – ಶಿವ ಶಿವಾ
ಹಿಂಗದೆ ಷಡಕ್ಷರಾಂಕನೆ – ಶಿವ ಶಿವಾ
ಲಿಂಗ ನಿಮಗೆ ಕೊರತೆಯಿಲ್ಲವು – ಶಿವ ಶಿವಾ ||5||

24
ತಂದು ತೋರೆ

ತಂದು ತೋರೆ ಎನ್ನ ಮನ ಘನ ಪ್ರಿಯನ
ಇಂದುಧರ ಕಡು ಚಲ್ವ ಮನದತ್ತ ಸುಳಿಯನು ||ಪ||

ಪುಲಿಯ ಚರ್ಮದುಡಿಗೆಯವನ ಸುಲಿಪಲ್ಲ ಚಲುವನ
ಪೊಳೆವ ಫಣಿಕುಂಡಲದ ನೀರನ
ಒಲಿಸುವರಿಗೆ ಮುನ್ನ ಒಲಿವಂತ ತವಕಿಯು
ಒಲಿದೆನ್ನ ಮನದತ್ತ ಸುಳಿಯನು ಕೆಳದಿ ||1||

ಹೃದಯಕೋಣೆಗಳಲ್ಲಿ ಮನದ ಮಂಚವ ಹಾಸಿ
ಪದುಳದಿ ಭಾವದ ಗುಡಿಯ ಗಟ್ಟಿದೆ
ಸದಮಲಜ್ಞಾನ ಜ್ಯೋತಿಯ ಬೆಳಗಿನೊಳ್
ಉದಮದ ಭಕ್ತಿಯೌವನವಾದೆ ಕೆಳದಿ ||2||

ಎನ್ನಾತ್ಮ ಜ್ಯೋತಿ ತಾನೆನ್ನ ಹೃದಯದಲಿ
ಹೊನ್ನ ಹಾವುಗೆ ಮೆಟ್ಟಿ ಸುಳಿಯೆ ನಾನು
ಉನ್ನತದಿ ಹೆಚ್ಚಿ ಹಿಗ್ಗುವೆನು ಷಡಕ್ಷರ
ಚನ್ನಲಿಂಗದ ಸುಳುವಡಗಿದೆ ಕೆಳದಿ ||3||

25
ಹೇವವನಿಕ್ಕಲಾರೆ

ಹೇವವನಿಕ್ಕಲಾರೆ ಲಿಂಗವೆ ನಾನು ಹೇವವನಿಕ್ಕಲಾರೆ
ಭಾವಿಸಿ ಎನ್ನ ಮನವೆಂಬ ವಧುವನು
ಜಾವ ನೀನಾಳಲಾರೆ ||ಪ||

ಶಿಖಂಡಿಗಳಕೈಯಲ್ಲಿ ಕೊಲ್ಲಿಸಿಗೊಂಡು
ಮುಖಭಂಗಿತ ನೀನಾದೆ
ಸಖಿಯಳಂಜದೆ ನಿನ್ನ ಶಿರವನೇರಿದ ಮೇಲೆ
ಸುಖ ನಿನಗೆಲ್ಲಿಯದೊ ||1||

ಹಿರಿಯತನಗಳೆಂಬವು ನಿಮ್ಮೊಳು
ಕಿರಿದಾಗಿ ಹೋಯಿತಲ್ಲ
ಕೆರವುಗಾಲಲಿ ತಲೆಯನು ಬೇಡನೊರಸಲು
ಪರಿಹಾಸ್ಯವಾಯಿತಲ್ಲ ||2||

ಏಣಾಂಕಧರ ಲಿಂಗವೆ ನೀ ಹೋಗಿಯಾ
ಬಾಣಾಸುರನ ಬಾಗಿಲ
ಕೇಣಸರವನರಿಯದೆ ಕಾಯ್ದೆ ಧರೆಯೊಳು
ಊಣೆಯವು ಬಂದಿತಲ್ಲ ||3||

ಹೆಗಲ ಸಂಚಿಯನೆ ಹೊತ್ತು ಕುಂಟಣಿಯಾಗಿ
ಹಗಲಿರುಳೆಡತಾಕಿದೆ
ಜಗದೊಳು ಹಿರಿಯತನವು ನಿಮಗುಚಿತವೆ
ನಗೆಗೆಡೆಯಾಯಿತಲ್ಲಾ ||4||

ಜಿನುಗುವ ಮನಕಾರದೆ ನಿಮಗೆ ನಾನು
ಕನಲಿ ಹೇವವನಿಕ್ಕಿದೆ
ಮುನಿಸು ಬೇಡಯ್ಯ ಷಡಕ್ಷರಿಲಿಂಗವೆ
ಮನವ ನಿಮ್ಮೊಳಗಿರಿಸು ||5||

26
ಹಾರು ಕಂಡ್ಯಾ ಹಂಸ

ಹಾರು ಕಂಡ್ಯಾ ಹಂಸ ಹಾರು ಕಂಡ್ಯಾ – ನೀನು
ಮೂರು ಬಲೆಗಳೊಳಗೆ ನಿಲುಕದೆ ||ಪ||

ಆಶಾಪಾಶದೊಳಗೆ ಸಿಲ್ಕಿ – ಮಾಯಾ
ರೋಷ ಕಿಚ್ಚಿನಲಿ ಬೇಯದೆ
ವಾಸವ ಹರಿಯಜರುಗಳು ಸಿಕ್ಕಿ ಕೆಟ್ಟ
ಹೇಸಿ ಪಥವ ನೀನು ಮೆಟ್ಟಿದೆ ||1||

ನಿರಯದ ಸರಸಿಯೊಳಾಡದೆ – ನೀನು
ಇರದೆ ಘನದತ್ತ ಹಾರು ಕಂಡ್ಯಾ
ಗಿರಿಯ ಸರಸಿಯೊಳಗೊಪ್ಪುವ ನೀನು
ಉರುತರ ಕ್ಷೀರವ ಸವಿ ಕಂಡ್ಯಾ ||2||

ಸಾಸಿರದಳ ಕಮಲದ ಕರ್ನಿಕೆಯೊಳು – ಅಲ್ಲಿ
ಭಾಸುರ ಪ್ರಣಮದ ಪ್ರಭೆಯೊಳು
ವಾಸವಾಗಿರ್ಪ ಷಡಕ್ಷರವರ ಮಹಾ
ಧೀಶನ ನೀ ಹೋಗಿ ನೆರೆ ಕಂಡ್ಯಾ ||3||

27
ಎನ್ನ ಆಳ್ದ ಇಷ್ಟಲಿಂಗ
ಭೋಗ ಷಟ್ಪದಿ

ಎನ್ನ ಆಳ್ದ ಇಷ್ಟಲಿಂಗ
ನಿನ್ನ ಪಾದಪದ್ಮವನ್ನು
ಎನ್ನ ಮನವು ಮೆಚ್ಚುವಂತೆ ಎಂದಿಗಪ್ಪುದೊ ||ಪಲ್ಲವಿ||

ಬಡವಗೆ ಭಾಗ್ಯದ ಪ್ರೀತಿ
ಒಡಲ ಅಸುವಿಗನ್ನ ಪ್ರೀತಿ

ಕಡುಚಲುವ ಪುರುಷನ ಪ್ರೀತಿ ಮಡದಿಗಿರ್ಪಂತೆ
ಮೃಡನೆ ನಿಮ್ಮ ಪಾದಪ್ರೀತಿ
ಬಿಡದೆ ಚಿತ್ತಶುದ್ಧದಿಂದ
ಒಡನೆ ನಂಬುವಂತೆ ಮನವು ಎಂದಿಗಪ್ಪುದೊ ||1||

ನಲ್ಲನ ಮತ್ತೊಬ್ಬ ಸತಿಯು
ನಿಲ್ಲದೆ ಕಂದರ್ಪನ ಬಾಣ
ದಲ್ಲಿ ಭ್ರಮಿಸಿದಶದವಸ್ಥೆ ನೋಡುತಿರುವೊಲು
ಎಲ್ಲ ದೇವದೇವಗೆಲ್ಲ
ನಲ್ಲ ನಿಮ್ಮ ಪಾದಪದ್ಮ
ದಲ್ಲಿ ಮನವು ಮೆಚ್ಚುವಂತೆ ಎಂದಿಗಪ್ಪುದೊ ||2||

ದೂರದಲ್ಲಿ ಪತಿಯು ಇರಲು
ನಾರಿ ಪುರುಷ ಸಂಗ ನೆನೆದು
ಮಾರಬಯಕೆಯಲ್ಲಿ ಮನವನೊಪ್ಪಿಸುವೊಲು
ಮಾರಹರನ ನಿಮ್ಮ ಪಾದ
ವಾರಿಜಕ್ಕೆ ಎನ್ನ ಮನವು
ಸೂರೆಗೊಂಬುವಂತೆ ಬುದ್ಧಿ ಎಂದಿಗಪ್ಪುದು ||3||

ತಾಯ ತಪ್ಪಿ ಕರುಳ ಶಿಶುವು
ಸಾಯುತಿರಲು ದರ್ಪಗುಂದಿ
ಮಾಯೆ ಹುಟ್ಟಿ ಮಾತೆ ಬಂದು ಮೊಲೆಯ ಕೊಡುವೊಲು
ಕಾಯಜಾರಿ ದೇವ ನಿಮ್ಮ
ಪ್ರೀಯ ಕರುಣದಿಂದಲೆನ್ನ
ಕಾಯ್ದು ರಕ್ಷಿಪಂತ ಮನವು ಎಂದಿಗಪ್ಪುದೊ ||4||

ಹರನೆ ಎನ್ನ ಕರಕಮಲಕೆ
ಸ್ಥಿರವಾಗಿ ಬಂದು ನಿಂದು
ದುರಿತ ಭವದ ಬಾಧೆಗಳನು ಬಿಡಿಸಿದೊಂದನು
ಹರನೆ ನೀನು ಪಾಲಿಸಯ್ಯ
ಸೆರಗನೊಡ್ಡಿ ಬೇಡಿಕೊಂಬೆ
ಪರಮ ಷಡಕ್ಷರಿಯ ಲಿಂಗ ಪೊರೆದು ಸಲಹಯ್ಯಾ ||5||

28
ಎನ್ನ ತನುಗುಣಗಳ ಭ್ರಾಂತುಗೆಡಿಸು
ಭೋಗ ಷಟ್ಪದಿ

ಹೇವಗೈಯಾ ಎನ್ನ ಮನೋ
ಭಾವದೊಳಗೆ ಲಿಂಗವಿರದು
ತೀವಿ ತನುಗುಣಗಳು ಮುಸುಕಿ ಕೆಟ್ಟೆನಕ್ಕಟಾ ||ಪಲ್ಲವಿ||

ಎನ್ನ ಒಳಗೆ ಕಾಮ ಕ್ರೋಧ
ಎನ್ನ ಒಳಗೆ ಲೋಭ ಮೋಹ
ಎನ್ನ ಒಳಗೆ ಮದವು ಮತ್ಸರಂಗಳಿರ್ಪವು |
ಎನ್ನ ಒಳಗೆ ತಾಪತ್ರಯದ
ವಹ್ನಿ ಹೊತ್ತಿ ಉರಿವುತಿವುದು
ಎನ್ನೊಳೊಲಿದು ಶಿವನ ನೆನವು ಇಲ್ಲವಕ್ಕಟಾ ||1||

ಎನ್ನ ಒಳಗೆ ಜಾರರಿಹರು
ಎನ್ನ ಒಳಗೆ ಚೋರರಿಹರು
ಎನ್ನ ಒಳಗೆ ಘೋರಪಾಪ ಪೋರರಿಹರು
ಎನ್ನ ಒಳಗೆ ಕ್ರೂರದೃಷ್ಟಿ
ಎನ್ನ ಒಳಗೆ ಸೇರಿಕೊಂಡು
ಎನ್ನನೊಲಿದು ಶಿವನ ನೆನೆಯಲೀಯವಕ್ಕಟಾ ||2||

ಎನ್ನ ಒಳಗೆ ಸೆಟೆಯು ಡಂಬ
ಎನ್ನ ಒಳಗೆ ಹಟವು ಶಟವು
ಎನ್ನ ಒಳಗೆ ಆಟಮಾಟ ಇಂಬುಗೊಂಡವು
ಎನ್ನ ಒಳಗೆ ಪಟುಲ ಕ್ಷುದ್ರ
ಎನ್ನ ಒಳಗೆ ಮಠವ ಮಾಡಿ
ಎನ್ನನೊಲಿದು ಶಿವನ ನೆನೆಯಲೀಯವಕ್ಕಟಾ ||3||

ಎನ್ನ ಒಳಗೆ ಗರ್ವಪರ್ವ
ಎನ್ನ ಒಳಗೆ ವಿದ್ಯೆ ಡೊಂಕು
ಎನ್ನ ಒಳಗೆ ವಿಷಯಕೂಪ ವಿಷಯದಾಗರ
ಎನ್ನ ಒಳಗೆ ಕೋಪಸಿಡಿಲು
ಎನ್ನ ಒಳಗೆ ಆಸೆಮೇಘ
ಎನ್ನ ಮುಸುಕಿ ಶಿವನ ನೆನೆಯಲೀಯವಕ್ಕಟಾ ||4||

ಇಂತು ತನುಗುಣಂಗಳೆಲ್ಲ
ಸಂತ ತಾನೆ ಮುಸುಕಿಕೊಂಡು
ಕಂತುಹರನೆ ನಿಮ್ಮ ನೆನಯಲೀಯವಕ್ಕಟಾ
ಮುಂತೆ ಎನ್ನ ತನುಗುಣಗಳ
ಭ್ರಾಂತುಗೆಡಿಸು ನಿಮ್ಮ ಧರ್ಮ
ಚಿಂತೆರಹಿತ ಗುರುವೆ ಷಡಕ್ಷರಿಯ ಲಿಂಗವೆ ||5||

29
ಎನ್ನ ಏಕೆ ಕಾಯಲೊಲ್ಲೆ?
ಭೋಗ ಷಟ್ಪದಿ

ಎನ್ನ ಏಕೆ ಕಾಯಲೊಲ್ಲೆ
ಅನ್ಯರುಗಳ ಕಾವಿರಯ್ಯ
ನಿನ್ನ ಚರಣ ಚರಣರಕ್ಷೆ ನನ್ನದಲ್ಲವೆ ||ಪಲ್ಲವಿ||

ದುಷ್ಟ ಹರಿಯು ಸೊಕ್ಕಿ ತಾನು
ಶ್ರೇಷ್ಠ ದೇವರೆಂದು ನುಡಿಯೆ
ಸುಟ್ಟು ಕಳೆದಿರವನ ಹಣೆಯ ಕಣ್ಣಿನಿಂದಲಿ
ನಿಷ್ಠೆಯಿಂದ ನುತಿಸೆ ಕಾಮ
ಕೊಟ್ಟಿರವಗೆ ಪದವಿಗಳನು
ಸೃಷ್ಟಿಗೀಶ ಎನ್ನ ಏಕೆ ಕಾಯಲೊಲ್ಲಿರಿ ||1||

ಹಮ್ಮಿನಲ್ಲಿ ಸೊಕ್ಕಿ ಮೆರೆದು
ಬೊಮ್ಮ ತಾನೆ ದೇವರೆನಲು
ನಿಮ್ಮ ಜರಿಯಲವನ ಶಿರವ ಛೇದಿಸಿದಿರಾಕ್ಷಣ
ನಿಮ್ಮನವನು ನುತಿಸೆ ಒಲಿದು
ನೆಮ್ಮಿಸಿದಿರಿ ಸೃಷ್ಟಿಗವನ
ನಿಮ್ಮ ಭಂಟ ನನ್ನ ಏಕೆ ಕಾಯಲೊಲ್ಲಿರಿ ||2||

ಗರಳದುರಿಯ ಬೇಗೆಯಲ್ಲಿ
ಸುರರು ದಾನವರುಗಳು ಎಲ್ಲ
ಉರಿದು ಬೆಂದು ಓಡಿ ಬಂದು ನಿಮ್ಮ ನೆನೆಯಲು
ಗರಳವನ್ನು ಗರಳದಲ್ಲಿ
ಧರಿಸಿ ಕಾದಿರವರ ನೀವು
ಹರನೆ ನಿಮ್ಮ ಭಂಟನನೇಕೆ ಕಾಯಲೊಲ್ಲೆ ||3||

ದಕ್ಷ ಕಾಲ ಮದನ ಗಿರಿಜ
ರಾಕ್ಷಸರುಗಳೆಲ್ಲರನ್ನು
ಶಿಕ್ಷಿಸಿದಿರಿ ಅವರು ನಿಮ್ಮನೊಲಿದು ನುತಿಸಲು
ಆ ಕ್ಷಣದಲಿ ಮರಳಿ ನೀವು
ರಕ್ಷಿಸುವಿರಿ ಅವರ ಎನ್ನ
ರಕ್ಷಿಸುವೊಡೇತಕೊಲ್ಲೆ ರೂಕ್ಷವಾಹನ ||4||

ಸೂಕ್ಕಿದವರ ಶಿಕ್ಷಿಸಿದಿರಿ
ಸೊಕ್ಕದವರ ರಕ್ಷಿಸುವಿರಿ
ಸೊಕ್ಕಲಿಲ್ಲ ನಾನು ನಡೆಸಿದಂತೆ ನಡೆವೆನು
ದಿಕ್ಕುದೆಸೆಯು ಗತಿಯು ನೀವು
ಮಿಕ್ಕುದೆನಗದಾರುವುಂಟು
ಅಕ್ಕರಿಂದ ಸಲಹು ಷಡಾಕ್ಷರಿಯ ಲಿಂಗವೇ ||5||

30
ನಿಮ್ಮ ಮರೆಸಬೇಡ
ಭೋಗ ಷಟ್ಪದಿ

ಸಿರಿಯು ಸಂಪದಗಳನಿತ್ತು
ಹರನೆ ನಿಮ್ಮ ಮರಸಬೇಡ
ತಿರಿದುವುಂಡು ನಿಮ್ಮ ನೆನೆವ ಸುಖವ ಬಯಸುವೆ ||ಪಲ್ಲವಿ||

ಹೆಣ್ಣು ಮಣ್ಣು ಹೊನ್ನು ಚೆನ್ನ
ಅಣ್ಣ ತಮ್ಮ ಅಕ್ಕ ತಂಗಿ
ಹೆಣ್ಣು ಗಂಡು ಮಕ್ಕಳಾದಿ ಭಾಗ್ಯವೀಯದೆ
ಎನ್ನ ಕ್ಷುಧೆಗೆ ಅನ್ನವಿತ್ತು
ಎನ್ನ ಶೀತಕರುವೆಯಿತ್ತು
ನಿನ್ನ ಚರಣ ಧ್ಯಾನದಲ್ಲಿ ಇರಿಸು ಎನ್ನನು ||1||

ಅಂದಣಾತಪತ್ರ ಚಾಮ್ರ
ಹಿಂದೆ ಮುಂದೆ ರಥಪದಾತಿ
ಸಂದಣಿಸಿದ ಆನೆ ಕುದುರೆ ಶಾನೆಯೀಯದೆ
ಕುಂದದೊಂದು ಹಾಳುಗುಡಿಯ
ಗೊಂದಿಯೊಳಗೆಯಿರಿಸಿ ಶಿವನಾ
ನಂದ ರಸದ ಸಿಂಧು ತೆರೆಯೊಳೊಂದಿಸೆನ್ನನು ||2||

ಪರಡಿ ಕಡುಬು ದೋಸೆ ತರಗು
ಹಿರಿಯ ತುಪ್ಪ ಬೇಳೆ ಬೆಲ್ಲ
ಪರಿಪರಿಯಾ ಶಾಕಪಾಕದೂಟವೀಯದೆ
ಹರನ ಭಕ್ತರುಗಳ ಮನೆಯ
ತಿರಿದು ತಂದುವುಂಡು ನಿಮ್ಮ
ಇರುಳು ಹಗಲು ನೆನೆವ ಹಾಂಗೆ ಮಾಡು ಎನ್ನನು ||3||

ಛಂದ ಗಣಿತ ದಶನಿಘಂಟು
ಮುಂದೆ ಪಂಚಕಾವ್ಯ ಮಾಘ
ವೃಂದ ಮಾತು ಗೀತದಲ್ಲಿ ಜಾಣನೆನಿಸದೆ
ಒಂದನರಿಯ ಇವನು ಬಹಳ
ಮಂದಮತಿಯ ಮರುಳನೆನಿಸಿ
ಇಂದುಧರನೆ ನಿಮ್ಮ ಧ್ಯಾನದೊಳೊಂದಿಸೆನ್ನನು ||4||

ಸಕಲಭಾಗ್ಯಗಳನು ಒಲ್ಲೆ
ಸಕಲವಿದ್ಯೆಗಳನು ಒಲ್ಲೆ
ಸಕಲಫಲಪದಗಳ ನಾನದೇನ ಒಲ್ಲೆನು
ಸಕಲಸುಖವು ನೀನೆ ಎನಗೆ
ಸಕಲಮುಕ್ತಿ ನೀನೆ ಎನಗೆ
ಸಕಲ ನೀನೆ ಎನಗೆ ಷಡಕ್ಷರಿಯ ಲಿಂಗವೆ ||5||

31
ಎತ್ತು ತೊತ್ತು ತೊಂಡನಾಗಿ ಇರಿಸು
ಭೋಗ ಷಟ್ಪದಿ

ಮಿಥ್ಯವನ್ನು ಅಳಿದು ಸಹಜ
ಸತ್ಯವುಳ್ಳ ಶರಣರಲ್ಲಿ
ಎತ್ತು ತೊತ್ತು ತೊಂಡನಾಗಿ ಇರಿಸು ಎನ್ನನು ||ಪಲ್ಲವಿ||

ತಂದೆ ತಾಯಿ ಸತಿಯು ಸುತರು
ಬಂಧು ಬಳಗ ಮಿತ್ರರಾದಿ
ಅಂದು ಇಲ್ಲ ಇಂದು ಎನಗೆ ಸಟೆಗಳೆನುತಲಿ
ಇಂದುಧರನ ಸುತನು ನಾನು
ಎಂದು ತಿಳಿದ ಶರಣರುಗಳ
ಕಂದನಾಗಿ ಇರಿಸು ನಿಮ್ಮ ಧರ್ಮದಿಂದಲಿ ||1||

ಹೊನ್ನು ಎನಗದೇಕೆ ಕೃತಕ
ಹೆಣ್ಣು ಎನಗದೇಕೆ ಮಿತ್ತು
ಮಣ್ಣು ಎನಗದೇಕೆ ಎಲ್ಲ ಸಟೆಗಳೆನುತಲಿ
ಪನ್ನಗೇಂದ್ರಾಭರಣ ಪಾದ
ನನ್ನಿ ಎಂದು ನಂಬಿ ತಿಳಿದ
ಚನ್ನ ಶರಣರುಗಳ ತನುಜನೆನಿಸು ಎನ್ನನು ||2||

ಆಸೆ ಎನಗದೇಕೆ ಬಹಳ
ರೋಷವೆನಗದೇಕೆ ಭವದ
ಪಾಶ ಎನಗದೇಕೆ ಎಲ್ಲ ಸಟೆಗಳೆನುತಲಿ
ಈಶ ನಿಮ್ಮ ನಂಬಿ ನಚ್ಚಿ
ವಾಸರಿಸದ ಶರಣರುಗಳ
ವಾಸದಲ್ಲಿ ದಾಸನಾಗಿ ಇರಿಸು ಎನ್ನನು ||3||

ಎನಗೆ ಯಮನ ಭೀತಿ ಏಕೆ
ಎನಗೆ ಮದನ ಭಯವದೇಕೆ
ಎನಗೆ ಮಾಯೆ ಮರವೆಯೆಲ್ಲ ಸಟೆಗಳೆನುತಲಿ
ಎನಗೆ ಶಿವನೆ ಕರ್ತನೆಂದು
ಮನದೊಳರಿದ ಶರಣರುಗಳ
ಮನೆಯ ತನಯನೆನಿಸು ನಿಮ್ಮ ಕರುಣದಿಂದಲಿ ||4||

ಲಿಂಗದಲ್ಲಿ ಜನನವೆನಗೆ
ಲಿಂಗದಲ್ಲಿ ಮರಣವೆನಗೆ
ಲಿಂಗವೆನಗೆ ಸ್ವಸ್ತಿಧಾಮ ಎಂದು ತಿಳಿವುತ
ಹಿಂಗದಿರುವ ಶರಣರುಗಳ
ಲೆಂಗಿಯೆನಿಸು ಷಡಾಕ್ಷರಿಯ
ಲಿಂಗ ನಿಮ್ಮ ಧರ್ಮದಿಂದ ಬಿಡದೆ ಎನ್ನನು ||5||

32
ಶಿವನ ಪೂಜೆಯನ್ನು ಮಾಡು
ಭೋಗ ಷಟ್ಪದಿ

ಶಿವನ ಪೂಜೆಯನ್ನು ಮಾಡು
ಭವದ ವಾರುಧಿಯನು ದಾಂಟು
ವಿವರಗೇಡಿಯಾಗದಿಹದ ಸುಖಕೆ ಸಿಲ್ಕದೆ ||ಪಲ್ಲವಿ||

ಸವಿಸು ಗುರುವಿಗರ್ಥವನ್ನು
ಸವಿಯೊ ಸುಪ್ರಸಾದವನ್ನು
ಹವಣದಿಂದ ಹಾರು ಅತ್ತಯಿತ್ತಬಾರದೆ
ಕವಿದೆ ಮಾಯೆ ಜಾಲವನ್ನು
ಸವರಿ ಒಡೆದು ನುಚ್ಚು ಮಾಡಿ
ಪವನದಿಂದ ಗೆಲಲು ಬಲ್ಲಡಾತನುತ್ತಮ ||1||

ಅರಿವಿನೊಳಗೆ ಅರಿತು ಬೆರತು
ಇರಲಿಬೇಡ ಎಲ್ಲರೊಡನೆ
ಸರಸಗಾರನಾಗಿ ಬಾಳು ಬಲ್ಲತನದಲಿ
ಇರುವೆ ಮೊದಲು ಆನೆ ಕಡೆಯು
ಸರ್ವಜೀವರಾಸಿಯೊಳಗೆ
ಉರುಳಿ ಹೊರಳಿ ಉಳಿದು ಬಂದೆ ಶಿವನ ಕರುಣದಿ ||2||

ನಿತ್ಯವಲ್ಲ ಕಾಯವಿದ
ನಿತ್ಯವೆಂದು ತಿಳಿದು ನೋಡು
ತೊತ್ತಿನಂತೆ ಮರೆತು ಬೆರತು ಹೊತ್ತುಗಳೆಯದೆ
ಚಿತ್ತಶುದ್ಧನಾಗಿ ನೀನು
ಕತ್ತರಿಸು ಭವದ ಬೇರ
ತತ್ತ್ವಜ್ಞಾನದಿಂದ ತಿಳಿದು ನೋಡಿಕೊಳ್ಳಲಿ ||3||

ಮಂದಮತಿಯ ಮನುಜ ಕೇಳು
ಬಂದದೇನು ಉಣಲಿಬೇಕು
ಒಂದ ಒಂದ ಬಯಸಿ ನೀನು ಭ್ರಷ್ಟನಾಗದೆ
ಹಿಂದುಗಳೆಯಬೇಡ ದಿನವ
ಇಂದುಧರನ ಪೂಜೆಮಾಡು
ಅಂದವುಳ್ಳ ಜನ್ಮ ನಿನಗೆ ದೊರಕಿದಾಗಲೆ ||4||

ಗಾಳಿ ಬಂದ ಕೈಲಿ ರಾಸಿ
ಜೋಳವನ್ನು ತೂರಿಕೊಳ್ಳೊ
ಏಳುಜನ್ಮದಲ್ಲಿ ಮಾಡಿಬಂದ ಪಾಪವ
ಕೇಳಿದಾಕ್ಷಣ ಕಳೆಯಬೇಕು
ನಾಳೆ ನಾಡದೆನ್ನಬೇಡ
ಭಾಳಲೋಚನೆ ಇಷ್ಟಲಿಂಗ ಕರದೊಳಿರಲಿಕೆ ||5||

ಇಷ್ಟಲಿಂಗ ಕರದೊಳಿರಲು
ನೆಟ್ಟ ಪ್ರತುಮೆಗೆರಗಬಹುದೆ
ಭ್ರಷ್ಟನಾಗಿ ಕೆಡಲಿಬೇಡ ಬಾಧೆ ಬರ್ಪುದು
ಕಟ್ಟಿಕೊಂಡ ಕರ್ತ ನಿನ್ನ
ಮೆಟ್ಟಿ ಮೂಗ ಕೊಯ್ದು ಮೆಣಸ
ಹಿಟ್ಟ ಹೊಯ್ದು ಶರಗ ಹರಿದು ಬಿಟ್ಟು ಕೊಡುವನು ||6||

ಮಾಡಿದನ್ನು ಉಣುವರೆಂದು
ಹಾಡುತಿಹರು ಇಳೆಯ ಮೇಲೆ
ಗಾಢದಿಂದ ತಿಳಿದು ನೋಡು ಗರ್ವ ಬೇಡವು
ಪಾಡುವರನು ಮೇಲೆ ಬಿರಿದು
ಪಾಡಿಕೊಂಡು ಅಳಲಬಹುದೆ
ಮೂಢಮನುಜ ಮಾಡು ಬೇಗ ಶಿವನ ಪೂಜೆಯ ||7||

ಸಿರಿಯು ಬರಲು ಶಿರವು ತಗ್ಗು
ಗರುವ ಬೇಡ ಎಲ್ಲರೊಡನೆ
ಸರಸಗಾರನಾಗಿ ಬಾಳು ಭಕ್ತಿಯಿಂದಲಿ
ಗುರುಹಿರಿಯರೆಂದು ನೋಡು
ಪರಹಿತಾರ್ಥವನ್ನು ಮಾಡು
ಸ್ಥಿರವಿದಲ್ಲ ಭಾಗ್ಯ ನಿನಗೆ ಅರಿತು ನೋಳ್ಪುದು ||8||

ಮುನ್ನ ತಾನದಾರು ಎಂದು
ತನ್ನ ನಿಜವನರಿದ ಬಳಿಕ
ಚನ್ನ ಷಡಕ್ಷರಿಯ ಲಿಂಗ ತಾನೆಯಾಗಿಹ
ಇನ್ನು ಸರ್ವಜಗದ ಒಳಗೆ
ತನ್ನ ನಿಜವೆಯಾಯಿತಾಗಿ
ಅನ್ಯವಿಲ್ಲವಾಗಿ ಬಾಳುವಾತನೇ ಶಿವಾ ||9||

33
ಕೊಟ್ಟು ಹುಟ್ಟಿ ಪಡೆಯಲಿಲ್ಲ
ಭೋಗ ಷಟ್ಪದಿ

ಕೊಟ್ಟು ಹುಟ್ಟಿ ಪಡೆಯಲಿಲ್ಲ
ಮುಟ್ಟಿ ಶಿವನ ನೆನೆಯಲಿಲ್ಲ
ಭ್ರಷ್ಟಮನುಜ ನಿನಗೆ ಪದವಿ ಹೇಗೆ ದೊರೆವುದು ||ಪಲ್ಲವಿ||

ಸಿವನ ಪೂಜೆ ಮಾಡಲಿಲ್ಲ
ಗುರುವಿಗಿನ್ನು ಎರಗಲಿಲ್ಲ
ಶರಣರುಗಳ ಪಾದವನ್ನು ಸ್ಮರಿಸಲಿಲ್ಲವು
ಧರೆಯ ದಾತರುಗಳ ಕಂಡು
ಹರುಷದಿಂದೆ ನೋಡಲಿಲ್ಲ
ದುರುಳಮನುಜ ನಿನಗೆ ಪದವಿ ಹೇಗೆ ದೊರೆವುದು ||1||

ದಾನಧರ್ಮ ಮಾಡಲಿಲ್ಲ
ಜ್ಞಾನವಂತರ ಸಂಗವಿಲ್ಲ
ಮಾನಿನಿಯರ ಕಂಡು ಮನ ಸೈರಿಸಲಿಲ್ಲವು
ಧ್ಯಾನಮೌನ ವ್ರತವು ಇಲ್ಲ
ತಾನು ಪರರಿಗಿಕ್ಕಲಿಲ್ಲ
ಹೀನಮನುಜ ನಿನಗೆ ಪದವಿ ಹೇಗೆ ದೊರೆವುದು ||2||

ಸತ್ಯವಂತನಾಗಲಿಲ್ಲ
ಮತ್ತೆ ಒಂದು ಕ್ರಿಯಾವಿಲ್ಲ
ಉತ್ತಮರನು ಕಂಡು ಶಿರವು ಬಾಗಲಿಲ್ಲವು
ಪೃಥ್ವಿಯೊಳಗೆ ಕೆರೆಯುಭಾವಿ
ಮತ್ತೆ ನೀನು ತೆಗೆಸಲಿಲ್ಲ
ಕತ್ತೆಮನುಜ ನಿನಗೆ ಪದವಿ ಹೇಗೆ ದೊರೆವುದು ||3||

ಅನ್ನದಾನ ಮಾಡಲಿಲ್ಲ
ಹೊನ್ನುದಾನ ಮಾಡಲಿಲ್ಲ
ಅನ್ನದೈವಭಜನೆ ಬಿಟ್ಟು ನಡೆಯಲಿಲ್ಲವು
ಹೊನ್ನು ಹೆಣ್ಣು ನಚ್ಚಿ ನೀನು
ಚನ್ನ ಶಿವನ ನೆನೆಯಲಿಲ್ಲ
ಕುನ್ನಿಮನುಜ ನಿನಗೆ ಪದವಿ ಹೇಗೆ ದೊರೆವುದು ||4||

ಹರನ ಪೂಜೆ ಮಾಡಲಿಲ್ಲ
ಶರಣರುಗಳ ಪಾಡಲಿಲ್ಲ
ಮರಣಗಾಲದಲ್ಲಿ ಶಿವನ ನೆನೆಯಲಿಲ್ಲವು
ಶರೀರವನ್ನು ತೊರೆಯಲಿಲ್ಲ
ಪರಮ ಷಡಾಕ್ಷರನನಲ್ಲಿ
ಎರದು ಬೆರೆದು ಏಕವಾಗೆ ಪರಮ ಮುಕ್ತಿಯು ||5||

34
ಇದರ ತೆರನ ಕರುಣಿಸು
ಭೋಗ ಷಟ್ಪದಿ

ಗುರುವೆ ಎನಗೆ ಮೋಕ್ಷಮಾರ್ಗ
ದಿರವು ದೊರೆವ ಪರಿಯ ಹೇಳಿ
ಅರಿಯಬಾರದೆನಗೆ ಇದರ ತೆರನ ಕರುಣಿಸು ||ಪಲ್ಲವಿ||

ಗುರುವೆ ಜಯತು ಎನ್ನ ಕಲ್ಪ
ತರುವೆ ಜಯತು ಎನ್ನ ಭಾಗ್ಯ
ದಿರುವೆ ಜಯತು ಜಯತು ಎನ್ನ ಒಳಗಳರುಹಿನ
ತರುವೆ ಜಯತು ಎನ್ನ ಪರಮ
ಚರವೆ ಜಯತು ಎನ್ನೊಳಿರುವ
ಮರವೆಯನ್ನು ಪೊರಡಗುಟ್ಟಿ ದೇವ ರಕ್ಷಿಸು ||1||

ಮಗನೆ ಕೇಳು ಮೋಕ್ಷಮಾರ್ಗ
ಜಗದಿ ನಿನಗೆ ದೊರೆವ ಪರಿಯ
ಅಗಜೆಯಾಣ್ಮನಂಘ್ರಿಯುಗಳ ವಾರಿರುಹವನು
ಹಗಲು ಇರುಳು ಜಪಿಸುತಿರಲು
ವಿಗಡಮಾಯೆಯನ್ನು ಗೆಲಿದು
ಅಗಲಲೀಯದಿರ್ಪೆ ನಿನಗೆ ಮೋಕ್ಷ ದೊರೆವುದು ||2||

ದಾನಗುಣವ ಮರೆಯಬೇಡ
ದೀನತನವ ಮಾಡಬೇಡ
ಹಾನಿ ಮಾಡಬೇಡ ನಿನ್ನ ಜ್ಞಾನವೃತ್ತಿಯ
ಹೀನವಿಷಯಕೆಳಸಬೇಡ
ನಾನೆ ಎಂದು ಮೆರೆಯಬೇಡ
ನೀನು ಇದನು ತಿಳಿದು ನೋಡು ಮೋಕ್ಷ ಮಾರ್ಗವ ||3||

ಯತಿಗಳೊಳಗೆ ಮಥನ ಬೇಡ
ಮತಿಯ ಗತವ ಮಾಡಬೇಡ
ಕ್ಷಿತಿಯ ಭೋಗವನ್ನು ನಚ್ಚಿ ಮರೆಯಬೇಡವೈ
ವ್ರತವ ತಪ್ಪಿ ನಡೆಯಬೇಡ
ಪತಿಯರುಳ್ಳ ಸತಿಯರುಗಳ
ರತಿಯ ಕೇಳಿಗೆಳಸಬೇಡ ನಿನ್ನ ಮನವನು ||4||

ನೋಡು ನೀನು ಬಂದ ಪಥವ
ಮಾಡು ಮನವು ಮುಟ್ಟಿ ತಪವ
ಪಾಡು ನಿನ್ನ ಜಿಹ್ವೆ ತುಂಬಿ ಶಿವನ ಪಾದವ
ಬೇಡು ಮುಕ್ತಿಯನ್ನು ಮೃಡನ
ಲಾಡು ಎಲ್ಲಿ ನಿಲ್ಲದಘಕೆ
ಕೂಡು ಲಿಂಗದಲ್ಲಿ ಮನವ ಮಗನೆ ಸಂತತ ||5||

ಒರೆಸು ಅಜನು ಬರೆದ ಲಿಪಿಯ
ಸ್ಮರಿಸು ನೀನು ಪಂಚಾಕ್ಷರಿಯ
ತರಿಸು ಮನದ ವಿಷಯವನ್ನು ಬೇರು ಸಹಿತಲಿ
ಹರಿಸು ಬರ್ಪ ಪಾಪ ಲತೆಯ
ತೊರೆಸು ಮನದ ಕಾಂಕ್ಷೆಗಳನು
ಮುರಿದು ಬಿಸುಡು ಕಾಡುತಿಪ್ಪ ಮನದಬಾಣವ ||6||

ಬಿಡಿಸು ಮನದ ರೋಷಗಳನು
ನಡೆಸು ಹಿಡಿದ ಛಲಗಳನ್ನು
ಉಡಿಸು ಶಾಂತಿಯೆಂಬ ವಸ್ತ್ರವನ್ನು ಮನಸಿಗೆ
ನಡೆಸು ಸತ್ಯವೆಂಬ ವಾಕ್ಯ
ಕೆಡಿಸು ಪರ್ಬಿ ಬರುವ ಪುಸಿಯ
ಬಿಡಿಸು ಆಸೆಯೆಂಬದೊಂದು ಧರಣಿರುಹವನು ||7||

ಸಂಗ ಬೇಡ ಜೀವರುಗಳ
ಹಿಂಗ ಬೇಡ ಶರಣತತಿಯ
ಲಿಂಗದೊಳಗೆ ಸಾವಧಾನಿಯಾಗಿರಲಸದೆ
ನುಂಗ ಬೇಡ ಲೇಸ ಪರರ
ಭಂಗ ಬೇಡ ಮುಂದಲಾಗ
ಕಂಗಳೊಡನೆ ಮೋಸ ನಾಶ ಮೋಕ್ಷವಾಗದು ||8||

ಕುಂದು ಹೆಚ್ಚಿ ನುಡಿಯಬೇಡ
ನಿಂದ್ಯಕೋಡಿ ಹೋಗಬೇಡ
ಹೊಂದಬೇಡ ಮಾಯೆ ಭೋಗವನ್ನು ಪರಶಿವ
ಕಂದ ಎಡರಿಗಂಜಬೇಡ
ಸಂದ ಶರಣರಡಿಯ ನೆನಹ
ಕಂದ ನೀನು ಮರೆಯಬೇಡ ಮೋಕ್ಷ ದೊರೆವುದು ||9||

ಹಾರಬೇಡ ಅನ್ಯರುಗಳ
ಹೋರಬೇಡ ಹಿರಿಯರೊಡನೆ
ಮೀರಬೇಡ ದೇಶಿಕೇಂದ್ರ ವರದ ವಚನವ
ಆರ ಜರಿಯಬೇಡ ನೀನು
ಭೂರಿ ದೈವಕೆರಗಬೇಡ
ಊರ ಸೇರಿ ನಿಲ್ಲಬೇಡ ಯತಿಯು ಆದಡೆ ||10||

ತೋರಿ ಹಾರಿ ಕೆಡುವ ತನುವ
ಹಾರಬೇಡ ನಿತ್ಯವೆಂದು
ಊರಬೇಡ ಯೋನಿಮುಖದಿ ಬಿಂದು ಬ್ರಹ್ಮವ
ಧಾರುಣಿಯೊಳು ಸಕಲರೊಡನೆ
ಕ್ರೂರನೆನಿಸಿ ನಡೆಯಬೇಡ
ಗೌರಿಯರಸನಡಿಯ ಹೃದಯದಲ್ಲಿ ನೆನವುದು ||11||

ಸತಿಯರುಗಳ ಭಕ್ತಿಯನ್ನು
ಹಿತವಿದೆಂದು ನಂಬಬೇಡ
ಅತಿ ವಿಚಿತ್ರದನ್ನವಿಕ್ಕಿ ಕ್ರಮುಕ ಪರ್ನವ
ಹಿತದಿಂದಲಿಯಿತ್ತು ನಿಮ್ಮ
ಯತಿತನಕ್ಕೆ ಕೇಡ ತಹರು
ಕ್ಷಿತಿಯೊಳಿದರ ಬೆಡಗ ತಿಳಿದು ನಡೆವುದೈ ಮಿತ್ರ ||12||

ಕೆಲರು ನಿನ್ನ ಹಳಿದರೆಂದು
ಕಲಹ ಬೇಡ ಅವರ ಕೂಡೆ
ಹಲವು ಕಡೆಗೆ ಹಾಯಬೇಡ ಮನಸಿನಿಚ್ಛೆಗೆ
ಕುಲವನತ್ತಿ ನುಡಿಯಬೇಡ
ಚೆಲುವ ಶಿವನ ಶರಣರುಗಳ
ತೊಲಗದಿರು ಶಿವಾನುಭಾವಿಗಳನು ನಂದನಾ ||13||

ಕೊಡುವರೆಡೆಗೆ ಆಸೆಬಟ್ಟು
ನಡೆಯಬೇಡ ಒಡಲಿಗನ್ನ
ಮೃಡನು ಕೊಟ್ಟ ಪಡಿಯನುಣಲು ಅದು ಗುರುತ್ವವು
ಉಡುಪಧರನು ಕೋಪಗೊಂಬ
ಹಿಡಿಯಬೇಡ ವರ್ಗದವರ
ಜಡನು ನೀನು ಆಗಬೇಡ ಮೋಕ್ಷ ದೊರೆಯದು ||14||

ಕುವರ ಜಿಹ್ವೆ ಗುಹ್ಯ ಲಂಪ
ಟವನು ಒಮ್ಮೆ ನೆನೆಯಬೇಡ
ಶಿವನ ದೂಷಣೆಗಳ ಮಾಳ್ವ ನರರ ವಾಕ್ಯವ
ಕಿವಿಯಾಳಾಂತು ಕೇಳಬೇಡ
ಭವಿಯ ಸಂಗ ಬೇಡ ದೋಷ
ಶಿವನ ಶರಣರಡಿಗೆ ಭೃತ್ಯ ಭಾವದಿಂದಿರು ||15||

ಬಲ್ಲೆನೆಂದು ಬೆರೆಯಬೇಡ
ಎಲ್ಲರೊಳಗೆ ಕಲಹ ಬೇಡ
ನಿಲ್ಲಬೇಡ ಕುಟಿಲ ಕುಹಕರಿರ್ದ ಬಳಿಯಲಿ
ಅಲ್ಲದಾಟವಾಡಬೇಡ
ಕಳ್ಳತನವ ನೆನಸಬೇಡ
ಫುಲ್ಲಶರನ ದಹನನ ನೆನಹ ಮರೆಯದಿರುವುದೈ ||16||

ರಾಗವನ್ನು ತೊರೆಯಬೇಕು
ನೀಗಬೇಕು ವ್ಯಸನ ವ್ಯಾಪ್ತಿ
ಸಾಗಲೊದೆಯಬೇಕು ಅಷ್ಟಮದಗಳೆಲ್ಲವ
ಭೋಗವನ್ನು ಮಾಜಬೇಕು
ಬಾಗಬೇಕು ಪರಮಶಿವನ
ಯೋಗಿಗಳಿಗೆ ಎನ್ನ ಕಂದ ಗರ್ವವಿಲ್ಲದೆ ||17||

ತರಳಬುದ್ಧಿಯಿಂದ ಮಾಯೆ
ಉರುಳಿನೊಳಗೆ ಸಿಲ್ಕಿ ನಿನ್ನ
ಶರಿರಕೆಡರ ತರಲಿಬೇಡ ಅಂಗಭೋಗಕೆ
ಮರುಗಬೇಡ ಶಿವಕುಮಾರ
ಪರಕೆ ದೂರನಾಗಬೇಡ
ಅರಿದು ನೋಡು ನಿನ್ನ ಆದಿ ಮಧ್ಯ ಅಂತ್ಯವ ||18||

ಅರುಹುದೋರಿತೆಂದು ಮತ್ತೆ
ನರರ ಒಳಗೆ ಬೆರೆಯಬೇಡ
ಕರದೊಳಿರುವ ಲಿಂಗ ಮೆಚ್ಚನಾ ಚರಿತ್ರಕೆ
ಗುರುವಿನೊಳಗೆ ಇರುವನರಿದು
ಹರನ ಧ್ಯಾನ ಅಗಲದಿಹುದು
ಅರಿದು ಮೂರು ಲಿಂಗ ಒಂದೆಯೆಂದು ಭಜಿಪುದು ||19||

ಅಂಗಗುಣವನಳಿದು ಇಷ್ಟ
ಲಿಂಗವನ್ನು ಒಳಗೆ ಹೊರಗೆ
ಹಿಂಗದೆ ನೀ ಭಜಿಸು ಭಾವದಿಂದ ಮನದೊಳು
ಲಿಂಗ ಬೇರೆ ಮತ್ತೆ ನಿನ್ನ
ಅಂಗ ಬೇರೆ ಎನ್ನದಿಹುದು
ಲಿಂಗ ಅಂಗ ಒಂದೆಯೆಂಬ ಭಾವದಿಂದಿರು ||20||

ಲಿಂಗವಿತ್ತು ದುಂಡು ಮರಳಿ
ಲಿಂಗ ಕೊಟ್ಟುದುದನೆ ಹೊದೆದು
ಲಿಂಗ ತೋರಿದಲ್ಲಿ ಶಯನವನ್ನು ಮಾಡುತ
ಲಿಂಗ ನಡೆಸಿದಂತೆ ನಡೆದು
ಲಿಂಗ ನುಡಿಸಿದಂತೆ ನುಡಿದು
ಲಿಂಗದಲ್ಲಿ ಲೀಯವಾಗಿ ಬೆರೆದಡುತ್ತಮ ||21||

ಭವದಿ ಸುಖವು ದುಃಖ ಬರಲು
ದೇವಗಿತ್ತು ತಾನು ಸಲಿಸಿ
ಸಾವಧಾನದಿಂದಲಿದ್ದು ಜನರ ಕಾಡದೆ
ಕಾವನಿರುವ ಠಾವ ಗೆಲಿದು
ಜೀವ ಜೀವನ್ಮುಕ್ತಿಯಾದ
ಭಾವೆಯನ್ನು ನೆರೆವುದಯ್ಯಾ ಮಗನೆ ಸಂತತ ||22||

ಆರು ನಾನು ಎಂದು ನೋಡು
ಮಾರ ಶಿವನನ್ನು ಕೂಡು
ಸಾರಹೃದಯರೊಳಗೆ ಆಡು ನಿನ್ನ ರಕ್ಷಿಪ
ಮೂರು ಲಿಂಗವನ್ನು ಪಾಡು
ಸೇರು ನೀನು ಬಂದ ಠಾವ
ಮಾರಹರನು ತೋರ್ಪ ನಿನಗೆ ಮೋಕ್ಷಮಾರ್ಗವ ||23||

ಅಂತರಂಗ ಬಾಹ್ಯರಂಗ
ಇಂತಿವೆರಡನೊಂದುಮಾಡು
ಭ್ರಾಂತಿ ಭ್ರಮೆಗಳೆಲ್ಲವನ್ನು ಸುಟ್ಟು ನಿಲಿಸಿಯೆ
ಕಾಂತನೊಳಗೆ ಸಮರಸೈಕ್ಯ
ವಾಂತು ನಿಲ್ಲಲಾಗಿ ಮೋಕ್ಷ
ಕಾಂತೆಯನ್ನು ಮದುವೆಯಾಗಿ ಸುಖದೊಳಿರ್ಪುದು ||24||

ದೀಕ್ಷಮೋಕ್ಷವನ್ನು ಮಾಡಿ
ತ್ರ್ಯಕ್ಷನನ್ನು ಕರದಲಿಟ್ಟು
ಲಕ್ಷ್ಯದಿಂದ ಭಸಿತವಿಟ್ಟು ಗುರುವರೇಣ್ಯ ಪ್ರ
ತ್ಯಕ್ಷವಾಗಿಯಿರಲು ಮುಂದೆ
ಮೋಕ್ಷದೊರೆಯದೆನ್ನಬೇಡ
ಈಕ್ಷಿಸಯ್ಯ ಕಂದ ನೀನು ಗರ್ವವಿಲ್ಲದೆ ||25||

ಕರಣ ಗುಣಗಳೆಲ್ಲ ಬಿಟ್ಟು
ಬರಿಯವು ಮಾಯೆಗಳ ಮೆಟ್ಟು
ತ್ವರಿತದಿಂದ ದುರಿತ ಲತೆಯ ಹರಿಯ ಹೊಯ್ದಿಡು
ಹರಿವ ಮನವ ಹರನೊಳಿಟ್ಟು
ತುರಿಯ ಮೋಹವನ್ನು ಬಿಟ್ಟು
ಚರಿಸಲಿಂತು ಮುಕ್ತಿವನಿತೆ ಬಹಳು ನಿನ್ನೊಳು ||26||

ಹೃದಯ ಶಾಂತನಾಗಬೇಕು
ಪದುಳದಿಂದ ಚರಿಸಬೇಕು
ಮಧುರವಚನವಾಡಬೇಕು ಜಿಹ್ವೆಯಾಗ್ರದಿ
ಕದನವನ್ನು ತೊರೆಯಬೇಕು
ಕದಡದಿರಲುಬೇಕು ಚಿತ್ತ
ಮದನಹರನು ತೋರ್ಪು ನಿನಗೆ ಮೋಕ್ಷಮಾರ್ಗವ ||27||

ಕಾಯದೊಳಗೆ ಜೀವ ಸಿಲ್ಕಿ
ಮಾಯಪಾಶದೊಳಗೆ ಬಿದ್ದು
ಬಾಯ ಬಿಡುತಲಿರ್ಪವಂಗೆ ನಿಮ್ಮ ಪಾದದ
ತೋಯವನ್ನು ಜಿಹ್ವೆಗೆರೆದು
ಸಾಯಸಂಗಳನ್ನು ಕಳೆದು
ಕಾಯಜಾರಿ ಬೆರೆವನಯ್ಯಾ ಆ ಮಹಾತ್ಮನ ||28||

ಮರನ ವಟ್ಟಲುಗಳ ಬೊಂಬೆ
ಎರಡು ಪಾದ ಪಾಣಿ ವದನ
ಉರಗಳನ್ನು ಮಾಡಿ ಸೂತ್ರ ಹೂಡಿಯಾಡಿಪ
ತೆರದಿ ಗುರುವೆ ಎನ್ನ ನೀವು
ಕರದಿ ಪಿಡಿದು ಬುದ್ಧಿಗಲಿಸಿ
ಶರಣು ಹೊಗಿಸಿಕೊಳ್ಳಲಾನು ಕಂಡೆ ನಿಮ್ಮುವ ||29||

ಮತ್ತು ಮದದ ಮರುಳ ಕರುಳ
ಹೊತ್ತು ಪೊತ್ತ ಕ್ರೂರ ನರನ
ಚಿತ್ತಜಾರಿಯಲ್ಲಿ ಮನವು ಇಲ್ಲದಧಮನ
ಹತ್ತೆಗರೆದು ಹರುಷದಿಂದ
ಚಿತ್ತವನ್ನು ನೆಲೆಗೆ ನಿಲಿಸಿ
ಕರ್ತೃ ನೀವು ಪೊರೆದಿರೆನ್ನ ಕರುಣದಿಂದಲಿ ||30||

ಮರವೆಯೊಡನೆ ಮಂದನಾಗಿ
ಅರುವ ಮರವ ತರಳಗೊರೆದು
ಹರುಷದಿಂದ ಮೋಕ್ಷಮಾರ್ಗದಿರವ ತೋರಿಸಿ
ಇರದೆ ಇಹಪರಂಗಳೆರಡ
ನುರುಹಿ ಪರಮಪದವನಿತ್ತ
ಗುರುವೆ ನಿಮಗೆ ಸರಿಯೆ ಹರನು ತಿಳಿದು ನೋಡಲು ||31||

ಗುರುವೆ ಎನ್ನ ಬಯಸಿದಿಷ್ಟ
ದೊರಕಿತೆಂದು ಧನ್ಯನಾದೆ
ಶರಿರ ವಚನ ಮನವು ನಿಮ್ಮ ಪಾದಕಮಲದ
ಸ್ಮರಣೆಗೊಂಡು ನಿಂದುದೀಗ
ಕರಸರೋಜ ಬೇಸರಿಸದೆ
ಶರಣಗಣ್ಯ ನಿಮ್ಮ ಪುಣ್ಯ ಕರುಣಬೋಧೆಯಿಂ ||32||

ಶರಣು ಪಾಪನಾಶ ಶರಣು
ಶರಣು ಚಿತ್ಪ್ರಕಾಶ ಶರಣು
ಶರಣು ಮನ್ಮನಾಂಬುಜಾರ್ಕ ಶರಣು ಸಂತತಾ
ಶರಣು ಶರಣು ಭಕ್ತಸ್ತೋತ್ರ
ಶರಣು ಶರಣು ಘನಚರಿತ್ರ
ಶರಣು ಶರಣು ಷಟ್ಸ್ಥಲದ ಷಡಾಕ್ಷರಾಂಕನೆ ||33||

35
ಎಂತ ಕನಸ ಕಂಡೆ!
ಭೋಗ ಷಟ್ಪದಿ

ಎಂತ ಕನಸ ಕಂಡೆ ಸಖಿಯೆ
ಎಂತು ಇಂತ ಚೋದ್ಯವರಿಯೆ
ಕಂತುಹರನ ಕರಕೆ ಕೊಟ್ಟ ಶಾಂತಗುರುವನಾ ||ಪ||

ಅರುಹು ಲಿಂಗಸಂಗದಿಂದ
ಮಾರಹರನ ನಿಜವು ಬೆರದು
ಊರ ಮುಂದೆ ಒಂದ ಕಂಡೆ ಉದಯವಾದುದಾ
ನೀರಬೊಂಬೆ ನೆರಳ ಸೇರಿ
ಮೂರು ರತ್ನ ನುಂಗಿ ಬಯಲ
ದಾರಿಯಲ್ಲಿ ಧ್ವನಿಯ ಲಾಲಿಸುವುದ ಕಂಡೆನು ||1||

ಹರಿವ ಜಲದ ಮಧ್ಯದಲ್ಲಿ
ಉರಿವ ಜ್ಯೋತಿಪ್ರಭೆಯ ಕಂಡೆ
ಗಿರಿಯನೇರಿ ಸೊರವ ಕರವ ಪರಿಯ ಕಂಡೆನು
ಪರವ ಬೆರಸಿ ಇರುವ ಸಮಯ
ವರವ ಕೊಡುವ ದೇವರೆಮಗೆ
ಶರ್ವನರಿಯ ಸ್ವಪ್ನದಲ್ಲಿ ಏನು ಸೋಜಿಗ ||2||

ಪಂಚವರ್ಣ ವೃಕ್ಷದಲ್ಲಿ
ಪಂಚವರ್ಣ ಪಕ್ಷಿಯಿರಲು
ಪಂಚಭುವನದಲ್ಲಿ ಕಂಡೆ ಮಿಂಚುತಿರ್ಪುದಾ
ಪಂಚಬಾಣನರಿತು ಎನ್ನ
ಹೊಂಚು ಹಾಕಿ ಎಸೆದು ತಂದು
ಪಂಚಮುಖಕೆ ಅರ್ಪಿಸುವಾ ಸಂಚ ಕಂಡೆನು ||3||

ನಡೆಯಲಿಲ್ಲ ನುಡಿಯಲಿಲ್ಲ
ಹಡಗನೇರಿ ಹೋಗುತಿರಲು
ಒಡನೆ ಹುಟ್ಟಿದೈವರುಗಳ ಕೈಯ ಬಿಟ್ಟೆನು
ಕಡಲ ದಾಂಟೆ ಕಡೆಯಲೊಬ್ಬ
ಜಡೆಯ ತಲೆಯ ಮುನಿಯ ಕಂಡೆ
ಒಡಲ ಶಿಖಿಯ ಕರುಳ ಚಲ್ಲಿ ಉಣಿಸುತಿರ್ಪುದಾ ||4||

ಶೇಷಧರನ ಬಟ್ಟೆಯಲ್ಲಿ
ಸೂಸುತಿರ್ಪ ವಾಯು ಪಿಡಿದು
ರಾಶಿಮಾಡಿ ತೂರುತಿರ್ಪ ಕೇಶರತ್ನವಾ
ಘೋಷದಂತೆ ಗಗನದಲ್ಲಿ
ಈಶ ಷಡಾಕ್ಷರಿಯ ಲಿಂಗ
ವಾಸವಾಗಿ ಪೋಗುತಿರಲು ಕಣ್ಣು ತೆರೆದೆನು ||5||

36
ಶಿವನ ಪೂಜೆ ಮಾಡು ಮನವೆ
ಭೋಗ ಷಟ್ಪದಿ

ಶಿವನ ಪೂಜೆ ಮಾಡು ಮನವೆ
ಶಿವನ ಮಂತ್ರ ನೆನೆಯೊ ಮನವೆ
ಶಿವನ ಭಕ್ತರುಗಳ ಕೂಡಿ ಆಡುತಿರು ಕಂಡ್ಯಾ ||ಪಲ್ಲವಿ||

ಹಲವುಜನ್ಮಗಳಲಿ ಬಂದು
ತೊಳಲಿ ಬಳಲಿ ಬಹಳ ನೊಂದೆ
ಸ್ವಲ್ಪದಿಂದ ದೊರಕಿರುವೀ ಮನುಜ ಜನ್ಮವು
ಒಲಿದು ಗುರುವಿನಂಘ್ರಿವಿಡಿದು
ಬಲುಮೆಯಿಂದ ಸಾಧಿಸುವುದು
ಮಲತ್ರಯಗಳೊಳಗೆ ಸಿಲುಕಿ ಕೆಡಲು ಬೇಡ ಕಂಡ್ಯಾ ||1||

ಸಾಧಿಸುವುದು ಅವರ ಭೇದ
ಭೇದಿಸುವುದು ಅಂಗಸ್ಥಲವು
ನಾದಬಿಂದು ಕಳೆಗಳೊಳಗೆ ತಿಳಿದು ನೋಡುತಾ
ಆದಿ ಮಧ್ಯ ಅಂತ್ಯವಿಡಿದು
ಸಾಧಿಸುತಲಿ ಕಾಣಬಹುದು
ವಾದಹಿಂಗಿ ಲಿಂಗಸಂಗವಾಗಿ ಇರು ಕಂಡ್ಯಾ ||2||

ಇಂದು ರವಿಗಳೆರಡು ಪಥವು
ಒಂದೆಯಾಗಿ ಮೂಲಮಂತ್ರ
ಹೊಂದಿ ತನುವಿನೊಳಗೆ ತಾನು ಆಟವಾಡುತಾ
ಚಂದದಿಂದ ಮೂರು ಮಾಗಿ
ಸಂದುವಿಲ್ಲದಾಂಗೆಯಿರಲು
ಇಂದುಧರನು ಷಡಾಕ್ಷರಿಯ ಲಿಂಗನೊಲಿವನು ||3||

37
ಎಲ್ಲವು ತಾನು

ಎಲ್ಲವು ತಾನು ತಾನಲ್ಲದೆ ಬೇರಿಲ್ಲ
ಅಲ್ಲಿ ಇಲ್ಲಿ ಎಂಬ ಸೊಲ್ಲಿದೆ ಎಲ್ಲ ||ಪಲ್ಲವಿ||

ಆಧಾರ ಪೃಥ್ವಿ ಆಚಾರಲಿಂಗದಿ ಭಕ್ತಿ
ಆಧಾರದಿಂದ ನಾಸಿಕದಲ್ಲಿ ವೇಧಿಸಿ
ತಾಳಿ ಗಾಳಿ ಗಂಧವನಪ್ಪಿ ವಾಸಿಸುವ
ನಾದಿಲಿಂಗವು ತಾನೆ ಶಿವಶರಣನೆನ್ನಿ ||1||

ಕುಲಛಲಗಳಿಲ್ಲದ ಮಹೇಶ್ವರ ಸ್ವಾಧಿಷ್ಠಾನ
ಜಲಮಯದ ಗುರುಲಿಂಗ ಜಿಹ್ವೆಯಲ್ಲಿ
ನಲಿದು ಷಡುರುಚಿಯ ಸೇವಿಸುತಿರ್ಪ
ನೊಲವಿಂದ ಸ್ಥಲನೆಲೆಯ ತಾನೆ ಶಿವಶರಣನೆನ್ನಿ ||2||

ಅಗ್ನಿಯೆ ಅಂಗ ಮಣಿಪೂರಕದಿ ನೇತ್ರಮನ
ಪ್ರಸಾದಿಯೆ ಶಿವಶರಣನೆನ್ನಿ
ಲಿಂಗದಲ್ಲಿ ಪ್ರಾಜ್ಞತ್ವದಿಂದ ಚಿನ್ಮಯರೂಪ
ನಾವರಿಸಿ ಸುಜ್ಞಾನದಿಂದರ್ಪಿಸಿ ಶಿವಶರಣನೆನ್ನಿ ||3||

ಅನಾಹತದಲ್ಲಿಯ ಸಂಗಸುಖದೊಳಗಿನ
ವ್ರತವು ಪ್ರಾಣಲಿಂಗಿಯೆ ತ್ವಕ್ಕು ಜಂಗಮಲಿಂಗ
ಅನಾಹತದಲ್ಲಿಯೂ ಸಂಗ ಸ್ಪರುಶನವೆ
ಸರ್ವಾಂಗದೊಳು ಇಂಗಿತದಿ ಭೋಗಿಸುವ ಶಿವಶರಣನೆನ್ನಿ ||4||

ಆಕಾಶ ಕಾಯ ವಿಶುದ್ಧಿ ಶರಣನ ಶಬ್ದ
ಸಾಕಾರ ಸೂತ್ರ ಪ್ರಸಾದಲಿಂಗ
ಆಕಾರವಪ್ಪ ಸ್ವಯನಾದ ಸುನಾದಗಳು
ಸ್ವೀಕರಿಸಿಕೊಂಡಿಪ್ಪ ಶಿವಶರಣನೆನ್ನಿ ||5||

ಅನುಭಾವಿಯಾತ್ಮನ ಆಜ್ಞೆಯೊಳಗೈಕ್ಯನೆಂದೆನಿಸಿ
ಮನವೆ ಮಹಾಲಿಂಗವೆನಿಸುತಿರ್ಪ
ಘನಕೆ ಘನವಾಗಿ ಆವರಿಸಿಕೊಂಡಿರ್ಪ
ಶಿವಶರಣರುಗಳಿಂದ ಶಿವಶರಣನೆನ್ನಿ ||6||

ಆರು ಮುಖದಲಿರುತಿರ್ಪ
ಆರಾರು ತತ್ವಗಳ ಸಾರಿ ಷಡ್ವಿಧ
ದೊಳರ್ಪಣವ ಮಾಡಿ ಸೂರೆಗೊಂಡಿರ್ಪ
ಚಿದಾತ್ಮ ಷಡಾಕ್ಷರಿಯೆ ಆರಾರು ಲಿಂಗಕಧಿಕ ಶಿವಶರಣನೆನ್ನಿ ||7||

Categories
Tatvapadagalu ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿ ಮತ್ತು ಇತರ ತತ್ವಪದಗಳು

ಸಂಪಾದಕರ ನುಡಿ

ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಚಾಮರಾಜನಗರ ಪ್ರದೇಶಗಳ ಇಲ್ಲಿಯ ಜನಪದ ಕಾವ್ಯಗಳ ಪ್ರಕಾರ ಕತ್ತಲ ರಾಜ್ಯವೆಂದು ಪರಿಗಣಿಸಲಾಗಿದೆ. ಈ ಅರಣ್ಯಾವೃತ ಕತ್ತಲ ಪ್ರದೇಶಕ್ಕೆ ಉತ್ತರದಿಂದ ಬಂದವರು ಮಂಟೇಸ್ವಾಮಿ, ಮಲೆಯ ಮಹದೇಶ್ವರರು. ಈ ಉತ್ತರವು, ಉತ್ತರ ಕರ್ನಾಟಕವಾದರೂ ಸರಿ ಅಥವಾ ಉತ್ತರ ಭಾರತದ ಹಿಮಾಲಯವಾದರೂ ಆಗಬಹುದು. ಉತ್ತರ ಕರ್ನಾಟಕವಾದರೆ ಅದು ಅಸಂಖ್ಯಾತ ಶಿವಶರಣರೊಂದಿಗೆ ಬಸವಣ್ಣನವರು ಬದುಕಿದ ಕಲ್ಯಾಣ. ಇನ್ನು ಉತ್ತರದ ಹಿಮಾಲಯವೆಂದರೆ ಶಿವನ ಆವಾಸ ಸ್ಥಾನ.
ಉತ್ತರದಿಂದ ಬಂದ ಮಲೆಯ ಮಹದೇಶ್ವರ, ಮಂಟೇಸ್ವಾಮಿ ಈ ಸಂತರನ್ನು ಕುರಿತಾಗಿ ಪ್ರಚಲಿತದಲ್ಲಿರುವ ದೀರ್ಘ ಜನಪದ ಕಥಾನಕಗಳು ದಕ್ಷಿಣ ಕರ್ನಾಟಕದಾದ್ಯಂತ ಪ್ರಚಾರದಲ್ಲಿವೆ. ಅಸಂಖ್ಯಾತ ತಳವರ್ಗದವರು ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಇವರುಗಳ ಭಕ್ತರಾಗಿದ್ದಾರೆ. ಕರ್ನಾಟಕದಲ್ಲಿಯೇ ಅಪೂರ್ವವೆನಿಸುವ ಈ ಜನಪದ ಕಥಾನಕಗಳು ಅದರ ಹಾಡುಗಾರಿಕೆಯ ಕ್ರಮದಲ್ಲಿಯೂ ವಿಶಿಷ್ಟವೆನಿಸುತ್ತವೆ. ಸಂತರನ್ನು ಕುರಿತಾದ ಈ ದೀರ್ಘ ಕಥಾನಕಗಳನ್ನು, ಅದರ ಸುತ್ತ ಹಬ್ಬಿಕೊಂಡಿರುವ ದಂತಕಥೆ ಮತ್ತು ಪವಾಡಗಳನ್ನು ಜನಸಮೂಹ ನಿಜವೆಂತಲೇ ಪರಿಭಾವಿಸಿರುತ್ತದೆ. ಇದರ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಪ್ರದೇಶಗಳ ಸುತ್ತ ತತ್ವಪದಕಾರರು, ಕೀರ್ತನಕಾರರ ಪ್ರಭಾವವೂ ತುಂಬ ಕಡಿಮೆ.
ಹನ್ನೊಂದನೇ ಶತಮಾನದಲ್ಲಿ ರಾಮಾನುಜಚಾರ್ಯರು ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದಿದ್ದು ತಮಿಳುನಾಡಿನ ದಕ್ಷಿಣ ಭಾಗದ ಕೊಯಮತ್ತೂರು, ದಿಂಬಂ, ಸತ್ಯಮಂಗಲ ಮಾರ್ಗವಾಗಿ. ಇದರಿಂದ ಮಂಟೇಸ್ವಾಮಿ, ನಂಜುಂಡೇಶ್ವರರ ನಡುವೆ ವೈಷ್ಣವನಾಗಿದ್ದ ಬಿಳಿಗಿರಿರಂಗನ ಪ್ರಭಾವವೂ ಇರುತ್ತದೆ. ವೀರಶೈವ ಧರ್ಮಾನುಯಾಯಿಯೊಬ್ಬನನ್ನು ಬಿಳಿಗಿರಿರಂಗನು ಬಿಳಿಕಲ್ಲು ಬೆಟ್ಟದಲ್ಲಿ ಒಕ್ಕಲೆಬ್ಬಿಸಿ ತಾನು ಆ ಜಾಗವನ್ನು ಆಕ್ರಮಿಸಿಕೊಂಡ ಸಾಂಕೇತಿಕ ಪ್ರಸಂಗವು ಬಿಳಿಗಿರಿರಂಗ ಕುಸುಮಾಲೆಯರ ಕಥಾನಕದಲ್ಲಿ ಬರುತ್ತದೆ. ತಮಿಳುನಾಡಿನಿಂದ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದ ರಾಮಾನುಜಾಚಾರ್ಯರು ಇಲ್ಲಿನ ಕೆಲವು ಜನಸಮೂಹಕ್ಕೆ ವೈಷ್ಣವ ದೀಕ್ಷೆಯನ್ನು ಕೊಟ್ಟಂತೆ ಕಾಣುತ್ತದೆ. ಅಥವಾ ಯಾವಾಗಲೂ ವಿಭೂತಿ ಧರಿಸುವ ಜನ ಬಿಳಿಗಿರಿರಂಗನಿಗೂ ನಡೆದುಕೊಂಡು ಹಣೆಗೆ ನಾಮವನ್ನೂ ಇಡುವುದುಂಟು.
ತತ್ವಪದಗಳು ಉತ್ತರ ಕರ್ನಾಟಕದಲ್ಲಿರುವಂತೆ ಈ ಪ್ರದೇಶದಲ್ಲಿ ಹೆಚ್ಚು ಕೇಳಿ ಬರದಿರುವುದಕ್ಕೆ ಒಂದು ಮುಖ್ಯ ಕಾರಣವೂ ಇರುವಂತೆ ತೋರುತ್ತದೆ. ರಾಜಪ್ರಭುತ್ವ ಮತ್ತು ಮೇಲಿಂದ ಮೇಲೆ ನಡೆದ ಯುದ್ಧ ಪ್ರಸಕ್ತಿಗಳು ಉತ್ತರ ಕರ್ನಾಟಕದ ಸಾಮಾನ್ಯ ಜನಸಮೂಹದ ಬದುಕನ್ನು ತೀವ್ರಗತಿಯಲ್ಲಿ ಹೈರಾಣಗೊಳಿಸಿದ್ದವು. ಜನರ ಕಣ್ಣೆದುರಿಗೆ ಬಹಿರಂಗದಲ್ಲಿ ನಡೆಯುತ್ತಿದ್ದ ದುರಂತಗಳಿಗೆ ಉತ್ತರವೋ ಎಂಬಂತೆ ಅಧಿಕಾರ, ಐಶ್ವರ್ಯದ ಹೊಡೆದಾಟವನ್ನು ತುಚ್ಛವಾಗಿ ಕಂಡು ಅಂತರಂಗ ಬೆಳಗಿಸುವುದರ ಕಡೆಗಿನ ತತ್ವಪದಗಳು ಮತ್ತು ಕೀರ್ತನ ಪರಂಪರೆಯು ವ್ಯಾಪಕವಾಗಿ ಅಲ್ಲಿ ಹುಟ್ಟಿಕೊಂಡವು. ಹಿಂದೂ, ಮುಸ್ಲಿಂ ರಾಜಮಹಾರಾಜರ ಹೋರಾಟ ರಾಜ್ಯ ಸಂಪಾದನೆಗಾದರೆ ಜನಸಾಮಾನ್ಯರ ಪಡಿಪಾಟಲು ಅನ್ನ ನೀರಿಗಾಗಿದ್ದಿತು. ಇಂಥ ಕ್ಲಿಷ್ಟ ಸಮಯದಲ್ಲಿ ನೊಂದ ಮನಸ್ಸುಗಳ ಸಾಂತ್ವನದ ಸಾಹಿತ್ಯ ಮಾತೃಕೆಗಳಾಗಿ ತತ್ವಪದಗಳು ಕಾಣಿಸಿಕೊಂಡವು. ರಾಜ್ಯ ಸಾಮ್ರಾಜ್ಯಗಳ ತೀವ್ರ ತಿಕ್ಕಾಟ ನಡೆದದ್ದೇ ಉತ್ತರ ಕರ್ನಾಟಕದಲ್ಲಿ. ಪ್ರಭುತ್ವದ ಕಾಲ್ತುಳಿತಕ್ಕೆ ಸಿಕ್ಕ ನೋವಿನ ಚಹರೆಗಳನ್ನು ಈ ಹೊತ್ತಿಗೂ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಗುರುತಿಸಬಹುದು. ಈ ಬಗೆಯ ರಾಜಕೀಯ ಹೋರಾಟಗಳು ನಡೆಯದೆ, ಕತ್ತಲ ರಾಜ್ಯವೆನಿಸಿಕೊಳ್ಳುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಕೀರ್ತನೆ ಅಥವಾ ತತ್ವಪದಗಳ ಬಾಹುಳ್ಯವನ್ನು ಕಾಣಲಾಗದು. ಆದರೆ ಈ ಭಾಗದಲ್ಲಿ ರಾಜ ಮಹಾರಾಜರು ಬಂದುದಕ್ಕಿಂತ ಮಂಟೇಸ್ವಾಮಿ, ಮಹದೇಶ್ವರ, ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಪಂಡಿತಕವಿಷಡಕ್ಷರಿ ಇಂಥ ಭಕ್ತ ಕವಿಗಳ ಸಂಖ್ಯೆಯೇ ಹೆಚ್ಚು.
ನಿಜಗುಣ ಶಿವಯೋಗಿ ಮತ್ತು ಮುಪ್ಪಿನ ಷಡಕ್ಷರಿಗಳು ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲುಕವಾಡಿ ಮತ್ತು ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿದ್ದವರು. ಇವರು ಶಿವಭಕ್ತ ಸಂತರು. ತತ್ವಪದ ಮಾದರಿಯ ಗೀತೆಗಳನ್ನು ರಚಿಸಿದವರು. ಆಶ್ಚರ್ಯವೆಂದರೆ ಇವರ ತತ್ವಪದ ಮಾದರಿಗಳು ಚಿಲುಕವಾಡಿ ಮತ್ತು ಯರಗಂಬಳ್ಳಿಯಿಂದ ಹಿಡಿದು ಉತ್ತರ ಕರ್ನಾಟಕದ ಗುಲ್ಬರ್ಗಾ, ಬೀದರ್, ರಾಯಚೂರು ವರೆಗೂ ಪ್ರಚಾರದಲ್ಲಿವೆ. ಈ ಇಬ್ಬರೂ ಸಂತಕವಿಗಳ ಕಾಲ ತಿಳಿದುಬರುವುದಿಲ್ಲ. ಈ ಕವಿಗಳು ಕೊಳ್ಳೇಗಾಲ ಮತ್ತು ಯಳಂದೂರು ಭಾಗದಲ್ಲಿ ಹದಿನಾರು ಹದಿನೇಳನೆಯ ಶತಮಾನಗಳಲ್ಲಿ ಜೀವಿಸಿದ್ದಂತೆ ತಿಳಿದುಬರುತ್ತದೆ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೂರು ಜನ ನಿಜಗುಣ ಶಿವಯೋಗಿಗಳಿರುವರೆಂದು ಸಾಹಿತ್ಯ ಚರಿತ್ರೆಕಾರರು ಗುರುತಿಸುತ್ತಾರೆ. ಕೊಳ್ಳೇಗಾಲ ಶಂಭುಲಿಂಗನ ಬೆಟ್ಟದಲ್ಲಿದ್ದ ನಿಜಗುಣ ಶಿವಯೋಗಿಯು ಅನುಭವಸಾರ, ಅರುವತ್ತುಮೂವರ ತ್ರಿಪದಿ, ಕೈವಲ್ಯ ಪದ್ಧತಿ, ಪರಮಾನುಭವಬೋಧೆ, ಪರಮಾರ್ಥಗೀತೆ, ಪರಮಾರ್ಥ ಪ್ರಕಾಶಿಕೆ, ವಿವೇಕ ಚಿಂತಾಮಣಿ ಎಂಬ ಏಳು ಗ್ರಂಥಗಳನ್ನು ರಚಿಸಿರುತ್ತಾನೆ. ದರ್ಶನಸಾರಂ, ತರ್ಕ ಚಿಂತಾಮಣಿ ಎಂಬೆರಡು ಸಂಸ್ಕೃತ ಗ್ರಂಥಗಳನ್ನು ಬರೆದಿದ್ದು ಅವು ಉಪಲಬ್ಧವಿರುವುದಿಲ್ಲವೆಂದು ಸಾಹಿತ್ಯ ಚರಿತ್ರೆಕಾರರು ಪ್ರಸ್ತಾಪಿಸಿರುತ್ತಾರೆ. ನಿಜಗುಣ ಶಿಯೋಗಿ ಎಂಬುದು ಆತನ ನಿಜನಾಮಧೇಯವೋ, ಅಂಕಿತ ನಾಮವೋ ತಿಳಿಯುವುದಿಲ್ಲ. ಕಾವೇರಿ ತೀರದ ಸಣ್ಣ ಪಾಳೆಯಪಟ್ಟಿಗೆ ಈತ ಅಧಿಪತಿಯಾಗಿದ್ದಂತೆ ತಿಳಿದುಬರುತ್ತದೆ. ತದನಂತರ ವೈರಾಗ್ಯಪರನಾಗಿ ಚಿಲುಕವಾಡಿ ಬೆಟ್ಟದ ಗುಹೆಯಲ್ಲಿ ವಾಸಿಸಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿದನಂತೆ. ‘ಆಬಾಲ ಯವ್ವನ ವೃದ್ಧರಿಗೆ ಆಯಾಸವೆನಿತಿಲ್ಲದಂತೆ ಸಕಲ ವೇದಾಂತಾಗಮ ಸ್ಮøತಿ ಪುರಾಣೇತಿಹಾಸ ಸೂತ್ರಾದಿ ಶಾಸ್ತ್ರ ಸಮ್ಮತದಿಂ ಪುರಾತನ ಗೀತಾನುಗುಣ್ಯವೆನಿಸಿ ಮೃದು ಮಧುರ ಲಕ್ಷಣಯುಕ್ತವಾಗಿ’ ತಾನು ಬರೆದ ಗೀತೆಗಳಿವೆಯೆಂದು ಹೇಳಿಕೊಂಡಿದ್ದಾನೆ. ಭಕ್ತಿ, ಜ್ಞಾನ, ವೈರಾಗ್ಯ ಮುಪ್ಪುರಿಗೊಂಡ ಈತನ ಪದಗಳು ತತ್ವಪದಗಳಾಗಿ ಕರ್ನಾಟಕದಾದ್ಯಂತ ಪ್ರಚಲಿತವಿವೆ.
ಮುಪ್ಪಿನ ಷಡಕ್ಷರಿಯೂ, ನಿಜಗುಣ ಶಿವಯೋಗಿಯ ಸಮಕಾಲೀನನಾಗಿಯೇ ಬಂದಿದ್ದಿರಬೇಕು. ಈತನ ಬದುಕಿನ ವಿವರಗಳೂ ಕೂಡ ಉಪಲಬ್ದವಿಲ್ಲ. ಸುಬೋಧ ಸಾರ ಈತನ ಕೃತಿ. ಜಗತ್ತಿನ ಚೈತನ್ಯ ಶಕ್ತಿಯ ವ್ಯಾಪಕತೆಯನ್ನು ಮುಪ್ಪಿನ ಷಡಕ್ಷರಿಯು ‘ಅವರವರ ದರುಶನಕೆ ಅವರವರ ವೇಷದಲಿ | ಅವರವರಿಗೆಲ್ಲ ಗುರುವು ನೀನೊಬ್ಬನೆ | ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರಿಗೆಲ್ಲ ದೇವ ನೀನೊಬ್ಬನೆ | ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ | ಎಂದಿರುತ್ತಾನೆ. ಚೈತನ್ಯಶಕ್ತಿಯ ಸ್ವರೂಪವನ್ನು ಇದಕ್ಕಿಂತಲೂ ಬೇರಾಗಿ ನೋಡಲು ಸಾಧ್ಯವಿಲ್ಲ. ನಿಜಗುಣ ಶಿವಯೋಗಿ ದೈವ ಸ್ವರೂಪವನ್ನು ಜ್ಯೋತಿಯ ಬೆಳಕು ಎಂದೇ ಹೆಸರಿಸುತ್ತಾನೆ. ನಿಜಗುಣನ ‘ಜ್ಯೋತಿ ಬೆಳಗುತಿದೆ’ ಪದವು ದಕ್ಷಿಣ ಕರ್ನಾಟಕದ ಸಂತನೊಬ್ಬನದು, ಎಂಬುದರ ತಿಳಿವೂ ಇಲ್ಲದಂತೆ ಅದು ಕರ್ನಾಟಕದಾದ್ಯಂತ ಹಾಡಿಕೊಳ್ಳಲ್ಪಡುತ್ತಿದೆ. ಅದಲ್ಲದೆ ಈ ಗೀತೆಯು ಸಕಲ ತತ್ವಪದಗಳ ಮೂಲ ಮಾತೃಕೆಯಂತಿದೆ. ತತ್ವವೆಂಬುದು ಬೆಳಗುವ ಜ್ಯೋತಿ ಎಂದು ಇದು ಹೇಳುವಂತಿದೆ. ತತ್ವಪದಗಳ ಹಾಡುಗಾರಿಕೆಯೆಂದರೆ ಪ್ರತಿಯೊಬ್ಬನೂ ತನ್ನ ಅಂತರಂಗದಲ್ಲೇ ಇರಬಹುದಾದ ಬೆಳಕನ್ನು ಅರಿತುಕೊಳ್ಳುವುದು. ತನ್ನನ್ನೇ ತಾನು ಅರಿಯುವುದಾದರೆ ಹೊರಗಿನ ಅಸಂಖ್ಯಾತ ದೈವಗಳು ಅಗತ್ಯ ಎಂದೆನಿಸುವುದಿಲ್ಲ. ಅವುಗಳ ರೂಪ, ಆಕಾರ, ಬಣ್ಣ, ಪುರಾಣ ಸಂಗತಿಗಳಿಗೆಲ್ಲ ಅರ್ಥವೇ ಉಳಿಯುವುದಿಲ್ಲ. ಅದು ತೋರಿ ಉಂಬ ಲಾಭವಷ್ಟೇ! ನಿಜಗುಣ ಶಿವಯೋಗಿಯು ದೈವಸ್ವರೂಪ ಕುರಿತು ‘ಜ್ಯೋತಿ ಬೆಳಗುತಿದೆ, ವಿಮಲಪರಂಜ್ಯೋತಿ ಬೆಳಗುತಿದೆ, ಮಾತು ಮನಂಗಳಿಂದ ಅತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ ಜ್ಯೋತಿ ಬೆಳಗುತಿದೆ’ ಎನ್ನುತ್ತಾನೆ. ಈ ದೈವ ಸ್ವರೂಪಿ ಬೆಳಕು ಅಂತರಂಗದಲ್ಲಿಯೇ ಉರಿಯುತ್ತಿರುತ್ತದೆ. ಇದು ಸಾಧಾರಣವಾದ ಬೆಳಕಲ್ಲ. ಮಾತುಗಳ ವಿವರಕ್ಕೆ ಸಿಕ್ಕದೇ ಹೋಗುವಂಥದ್ದು. ಮನಕ್ಕೆ ಮಿಗದೆ ದೂರದೂರವೇ ಉಳಿಯುತ್ತದೆ. ಆ ದೂರ ದೂರದ ಹಾದಿ ಎಂದರೆ ಬೆಳಕನ್ನು ಕಾಣುವ ಸಾಧನೆಯ ಹಾದಿಯೇ ! ಸಾಧನೆಯ ಹಾದಿಯಲ್ಲಿ ಕಾಣುವ ಬೆಳಕು, ಅದು ನಿರ್ಮಲವಾದುದು, ನಿರುಪಾಧಿಕವಾದುದು. ಬ್ರಹ್ಮಾನಂದದ ಬೆಳಕು. ಹನ್ನೆರಡನೆ ಶತಮಾನದ ವಚನಕಾರರೂ ಕೂಡ ಈ ಬೆಳಕಿನ ಕಾಣ್ಕೆ ಶರಣನ ಅಂತಿಮಗುರಿ ಎನ್ನುತ್ತಾರೆ. ವಚನಕಾರರು ಆಗಿ ಹೋದ ಮೂರ್ನಾಲ್ಕು ಶತಮಾನಗಳ ನಂತರ ಬಂದ ನಿಜಗುಣ ಶಿವಯೋಗಿ ಆ ಬೆಳಕು ಅಂಗೈ ಮೇಲಿರುವಂಥದ್ದೇ ಎಂಬಂತೆ ವರ್ಣಿಸುತ್ತಾನೆ. ಅಕ್ಕಮಹಾದೇವಿಯು ಈ ಬೆಳಕನ್ನೂ ‘ಕೋಟಿ ರವಿ ಶಶಿಗಳಿಗೆ ಮೀಟಾದ ಬೆಳಕು’ ಎಂದಿದ್ದಾಳೆ. ಬಹುಶಃ ಕರ್ನಾಟಕದ ಎಲ್ಲ ತತ್ವಪದಗಳೂ ಕೂಡ ಈ ಬಗೆಯ ಬೆಳಕಿನ ಕಿಡಿಗಳು. ಮುಪ್ಪಿನ ಷಡಕ್ಷರಿ ಮತ್ತು ನಿಜಗುಣ ಶಿವಯೋಗಿಗಳ ತತ್ವಪದಗಳಲ್ಲಿ ಸರಳವಾಗಿ ಹಾಡಬಹುದಾದಂತಹ ಜನಪ್ರಿಯವೆನಿಸುವ ಕೆಲವು ರಚನೆಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಚಾಮರಾಜನಗರ ಜಿಲ್ಲೆಯ ಬೇರೆ ಬೇರೆ ಮಠಗಳಲ್ಲಿ ಮತ್ತು ಗ್ರಾಮಗಳಲ್ಲಿ ಸಂಗ್ರಹಿಸಿದ ಬಿಡಿತತ್ವಪದಗಳು ಸೇರಿವೆ.
ತತ್ವವೆಂದರೆ ಅದು ಬರೆಯುವುದೂ ಅಲ್ಲ, ಓದುವುದೂ ಅಲ್ಲ! ಅಂತರಂಗ ಪೂರ್ವಕವಾಗಿ ಸ್ವೀಕರಿಸಿ ಮೊದಲು ಏಕತಾರಿ ನುಡಿಸಬೇಕು. ಆಮೇಲೆ ಹಾಡಬೇಕು. ಇದೆಲ್ಲದಕ್ಕೂ ಮೊದಲು ದಮಡಿಯನ್ನು ಬಡಿಯಬೇಕು. ಇದು ಸಂಗೀತಬದ್ಧವಾದುದಲ್ಲ. ಸ್ವರ ಪ್ರಧಾನವಾದುದಲ್ಲ. ದಮಡಿ ಬಡಿಯುವುದು, ತಂತಿ ನುಡಿಸುವುದು, ಅಂತರಂಗದ ದನಿಯೆತ್ತಿ ಹಾಡುವುದು, ಇವು ಮೂರು ತಮ್ಮಿಂದ ತಾವೇ ಬೆಳಕಿನ ಕಡೆಗೆ ತುಡಿಯುವುದನ್ನು ಹೇಳುವಂತಿರುತ್ತವೆ.
ಕರ್ನಾಟಕದ ಎಲ್ಲ ತತ್ವಪದಗಳೂ ಇಹಲೋಕದ ಐಶ್ವರ್ಯವನ್ನು, ಆಡಂಬರವನ್ನು ನಿರಾಕರಿಸುತ್ತವೆ. ಈಹಲೋಕದ ತೀವ್ರ ಬಯಕೆ ಇರುವುದು ಅರಸೊತ್ತಿಗೆಗೆ. ಸಾಮ್ರಾಜ್ಯ ವಿಸ್ತರಣೆ ಮತ್ತು ಭಂಡಾರ ಸೂರೆಯ ಕಾರಣಕ್ಕಾಗಿ ಅದು ಯಾವಾಗಲೂ ಕೈಯ್ಯಲ್ಲಿ ಖಡ್ಗ ಹಿಡಿದಿರುತ್ತದೆ. ಆ ಖಡ್ಗ ಕಬ್ಬಿಣದ್ದು. ಏಕತಾರಿಯ ತಂತಿಯೂ ಕಬ್ಬಿಣದಿಂದಲೇ ಮಾಡಲ್ಪಟ್ಟಿದ್ದು. ಖಡ್ಗ ಕಡಿಯುವುದಕ್ಕೆ ಬಳಸುವಂಥದ್ದಾದರೆ ತಂತಿ ಅಂತರಂಗ ನುಡಿಸುವುದಕ್ಕಾಗಿರುತ್ತದೆ. ಹೀಗಾಗಿ ತಂತಿ ನುಡಿಸಿ ಹಾಡುವುದು ಬೆಳಕಿನ ಮಾರ್ಗದತ್ತ ಕೊಂಡೊಯ್ಯುವ ಬಗೆ. ಈ ಸರಳ ಸುಲಭ ಮಾರ್ಗವನ್ನು ಕರ್ನಾಟಕದ ಗ್ರಾಮೀಣ ಜನತೆ ಶತಶತಮಾನಗಳಿಂದ ಕಂಡುಕೊಂಡು ಬಂದಿದೆ. ವಚನ ಮತ್ತು ಕೀರ್ತನ ಸಾಹಿತ್ಯಕ್ಕಿಲ್ಲದ ವ್ಯಾಪಕತೆ ಈ ತತ್ವಪದಗಳಿಗೆ ಇರುತ್ತದೆಂಬುದು ಮುಖ್ಯ ಸಂಗತಿ. ಜನಭಾಷೆಯಲ್ಲಿ ಇರುವುದರಿಂದ ಈ ತತ್ವಪದಗಳ ಅರ್ಥವು ಹಾಡುವಲ್ಲಿಯೇ ಅಂತರಂಗವನ್ನು ಪ್ರವೇಶಿಸುತ್ತದೆ.
ಪಂಡಿತರದೇ ಎನಿಸುವ ಹಳಗನ್ನಡ ಸಾಹಿತ್ಯದ ಅಧ್ಯಯನಕ್ಕೆ ಪ್ರತ್ಯೇಕ ವಾತಾವರಣವೇ ಬೇಕು. ಅದನ್ನು ಕ್ರಮಬದ್ಧವಾಗಿ ಅಗ್ರಹಾರದಲ್ಲೇ ಅಭ್ಯಸಿಸಬೇಕಿದ್ದಿತು. ಈ ಅಗ್ರಹಾರದ ವಿದ್ಯಾಭ್ಯಾಸ ಕಠಿಣ ಹಾದಿಯದು. ಸಂಸ್ಕೃತದಿಂದ ಆರಂಭವಾಗಿ ಅದು ಅಲ್ಲೇ ನಿಲ್ಲುತ್ತಿತ್ತು. ಇಲ್ಲ ಹಳೆಗನ್ನಡದವರೆಗೆ ಬರುತ್ತಿತ್ತು. ಅಗ್ರಹಾರದಲ್ಲಿ ಹೋಮಧೂಮದ ಆಚರಣೆಗಳೂ ಇರುತ್ತಿದ್ದವು. ಈ ಬಗೆಯ ವಿದ್ಯಾಲಯಗಳಲ್ಲಿ ಸ್ನಾತಕ ಪದವಿಯನ್ನೂ ಅಭ್ಯಸಿಸಿ ಬಂದ ಪಂಡಿತ ಕವಿಯು ಬಳಸುತ್ತಿದ್ದ ಭಾಷೆ ಪ್ರಬುದ್ಧವಾಗಿದ್ದು ಅದು ಬಹುಜನ ತತ್ವವಾಗಿರುತ್ತಿರಲಿಲ್ಲ. ಪಂಪನ ವಿಕ್ರಮಾರ್ಜುನ ವಿಜಯ ಕೃತಿಯೇ ಇದಕ್ಕೆ ಉದಾಹರಣೆ. ಪಂಪನಂಥ ಶ್ರೇಷ್ಠ ಕವಿಯ ಕೃತಿಗೂ ಓದುಗರು ಇದ್ದಂತಿರುವುದಿಲ್ಲ. ಆತನ ವಿಕ್ರಮಾರ್ಜುನ ವಿಜಯ ದೊರಕಿರುವುದು ಎರಡುವರೆ ಪ್ರತಿಗಳು ಮಾತ್ರ. ಹೀಗಾಗಿ ಜನಸಾಮಾನ್ಯರು ಹೇಳುವ, ಕೇಳುವ ಪದ್ಯಗಳನ್ನು ಮಾತ್ರ ಅವಲಂಬಿಸಿದ್ದರು. ಕೀರ್ತನೆಗಳನ್ನು ರಚಿಸುತ್ತಿದ್ದ ದಾಸ ಪಂಥದವರು ಅವನ್ನು ತಾವೇ ಹಾಡಿಕೊಂಡು ಕರ್ನಾಟಕದಾದ್ಯಂತ ನಡೆದಾಡುತ್ತಿದ್ದರು. ಕೀರ್ತನೆಗಳು ವೈಷ್ಣವ ಪಂಥದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದರೆ, ತತ್ವಪದಗಳು ವೀರಶೈವ ಪಂಥದ ಹಿನ್ನೆಲೆಯಲ್ಲಿದ್ದು ಇವು ವೈದಿಕ ನೆಲೆಯ ಆಚರಣೆಗಳನ್ನು ತಳ್ಳಿ ಹಾಕುತ್ತವೆ. ಆದರೆ ತತ್ವಪದಕಾರರು ಪುರಂದರ, ಕನಕದಾಸರ ಕೀರ್ತನೆಗಳನ್ನು ಸೇರಿಸಿಕೊಂಡೇ ತಮ್ಮ ಪದಗಳನ್ನು ಹಾಡುವುದಿದೆ. ಈ ತತ್ವಪದಗಳು ಜಾತಿ, ಮತ, ಧರ್ಮಗಳನ್ನು ನಿರಾಕರಿಸುತ್ತವೆ. ಇದರೊಂದಿಗೆ ತತ್ವಪದಕಾರರಲ್ಲಿ ಸುಮಾರು ಐನೂರು ಜನ ಮುಸ್ಲಿಂ ಸೂಫಿ ಸಂತರೂ ಸೇರಿಕೊಂಡಿರುವುದನ್ನು ಗಮನಿಸಬೇಕು. ಆದರೆ ಈ ಬಗೆಯ ಸೂಫಿ ಸಂತರು ದಕ್ಷಿಣ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಮೊದಲೇ ಹೇಳಿದಂತೆ ದಕ್ಷಿಣ ಕರ್ನಾಟಕದಲ್ಲಿ ಮಹದೇಶ್ವರ, ಮಂಟೇಸ್ವಾಮಿ ಮತ್ತು ಸಂತಕವಿಗಳಾದ ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ ಇವರ ಪ್ರಭಾವದ ಹಿನ್ನೆಲೆಯಲ್ಲಿ ತತ್ವಪರಂಪರೆ ಬೆಳೆದುಕೊಂಡು ಬಂದಿದೆ. ಆದರೆ ತತ್ವಪರಂಪರೆಯ ಮೂಲ ಸಂಗತಿಗಳೆನಿಸುವಂತೆಕಂಸಾಳೆ ಮತ್ತು ತಂಬೂರಿಯ ಹಿನ್ನೆಲೆಯಲ್ಲಿ ಮಂಟೇಸ್ವಾಮಿ, ಮಹದೇಶ್ವರ ಕಾವ್ಯಗಳ ಹಾಡುಗಾರಿಕೆ ಅತಿ ಹೆಚ್ಚು ಪ್ರಚಾರದಲ್ಲಿರುತ್ತದೆ.
ಪ್ರಸ್ತುತ ಈ ಸಂಪುಟದಲ್ಲಿ ನಿಜಗುಣ ಶಿವಯೋಗಿಗಳ ಮತ್ತು ಮುಪ್ಪಿನ ಷಡಕ್ಷರಿಯ ಗೀತೆಗಳಲ್ಲಿ ಹೆಚ್ಚು ಶಾಸ್ತ್ರೀಯ, ಸಂಗೀತಬದ್ಧವೆನಿಸುವ ಮತ್ತು ಹಳಗನ್ನಡ ಭಾಷಾ ಪ್ರಯೋಗದ ಗೀತೆಗಳನ್ನು ಬಿಟ್ಟು ತತ್ವಪದ ಮಾದರಿಯ ಕೆಲವು ಪದಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತತ್ವಪದ ಸಂಪುಟ ಸಿದ್ಧಪಡಿಸುವಲ್ಲಿ ಸಂಪಾದಕ ಮಂಡಲಿಯ ಅಧ್ಯಕ್ಷರಾದ ಕೆ.ಮರುಳಸಿದ್ಧಪ್ಪ ಅವರೂ ಪ್ರಧಾನ ಸಂಪಾದಕರಾದ ನಟರಾಜ ಎಸ್. ಬೂದಾಳು, ರಹಮತ್ ತರೀಕೆರೆ ಅವರು ಮಾರ್ಗದರ್ಶನ ನೀಡಿರುತ್ತಾರೆ. ಈ ಗ್ರಂಥ ಸಿದ್ಧತೆಯಲ್ಲಿ ಕುಪ್ನಳ್ಳಿ ಎಂ.ಭೈರಪ್ಪ, ಬಿ.ಕೆ.ಶ್ರೀನಿವಾಸ, ಅಭಿರುಚಿ ಪ್ರಕಾಶನದ ಗಣೇಶ್, ಕೆ.ಲಕ್ಷ್ಮಿ ಅವರು ಸಹಕರಿಸಿರುತ್ತಾರೆ.

ಕೃಷ್ಣಮೂರ್ತಿಹನೂರು
ಮಹೇಶ್ ಹರವೆ ಬಿ.