Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಅಕಾರಾದಿ ತತ್ವಪದಗಳು

ಅಂಗವಿಕಾರಕೆ
ಅಂಗವಿಸಿ ಕೈಲಾಸದಾ
ಅಂಗಾಂಗದಲ್ಲಿ ನಿಜವಾಗಿ
ಅಂಗೈಸಿ ಪರಬ್ರಹ್ಮವ ಗೆಲಿದರು
ಅಂಜುವೆನಯ್ಯ ಅಂಜುವೆ
ಅಂತಕನು ಮೊದಲಾದ
ಅಂದದಿಂದೆ ನಿನ್ನ ಪಾದವ
ಅಂಬೆ ನೀನಲ್ಲದನ್ಯರ ನಂಬೆ
ಅಕ್ಕಟ ಗುರುವೆ
ಅಡಿಯಲಾಧಾರವ ಕಾಣೆ
ಅಣ್ಣ ನೀ ಧರಿಸೊ
ಅಣ್ಣ ನೀ ಧರಿಸೊ
ಅನುಗಾಲವು ದುಃಖ
ಅನುದಿನದಿ ಶಿವಯೋಗ
ಅನ್ಯಕಾಸಿ ಮನವೆ
ಅನ್ಯಾಯದೊಡಲ
ಅನ್ವಹಂ ಪಾಲಯ ಮಹೇಶ
ಅಮೃತ ಗಾನವನೋದಿ
ಅಮ್ಮ ನೋಡೆ ಇವನ
ಅಮ್ಮ ನೋಡೆ ಇವನದೊಂದು
ಅಮ್ಮ ಸುಧರ್ಮದ
ಅಯ್ಯ ನೀನೆನ್ನ ಹುಯ್ಯಲ
ಅಯ್ಯೋ ಅಯ್ಯೋ ಪಾಪಿ
ಅರಸಂಚೆ ನಡೆಯುವಳೆ
ಅರಿ ಅರಿ ಅರಿ ಅರಿ
ಅರಿಯಬಹುದೇ
ಅಲ್ಲ ಅಲ್ಲನೆಂದು ಗುರುವೆ
ಅಲ್ಲಮಪ್ರಭುಲಿಂಗನನುಪಮದಿ
ಅವನ್ಯಾರವಳ್ಯಾರೆ ಪರ
ಅವ್ವೋ ನಾನಮ್ಮೆನಯ್ಯ
ಆಚಾರ ಮನಕೆ ಸಂತೋಷ
ಆನೆಯನೇರಿ ಬಪ್ಪನ ಶ್ವಾನ
ಆರತಿಯನು ಬೆಳಗುವೆ
ಆರು ಹಾರೈಸಿದರೇನುಂಟು
ಆವ ಮೃಗವೋ ಕಾಣೆ
ಆವುದು ಮಾದಡೆ ಸಾವುದು
ಆಶ್ಚರ್ಯವಾಯಿತಲ್ಲ
ಇಂತು ಪೇಳುವುದೆನ್ನಳವೆ
ಇಂದು ಕರೆದು ತಂದು
ಇಂದುವದನೆ ಕೇಳೆ
ಇಂದುವದನೆ ಗೌರಿ
ಇಂದುಶೇಖರ ಮನ್ನಿಸೊ
ಇಂದುಶೇಖರ ಸಲಹಾ
ಇಕ್ಕಿದೆನಿದೆಯೆಡೆದ ಪಾದುಕೆಯ
ಇಕ್ಕಿದೆನಿದೆಯೆತ್ತೆಲೆಲೆವಾದಿ
ಇದಕೊ ಸಿಕ್ಕಿದನು ಕಳ್ಳ
ಇದು ಅನಾದಿ ಲಿಂಗವೆನ್ನ
ಇದೆ ಕಂಡೆನಿದೆ
ಇದೇನೋ ವಿಪರೀತವು ಇನಿಯ
ಇಮ್ಮನವಿಲ್ಲದೆನಗೆ ಒಮ್ಮನದಿ
ಇರದಿರದು ಗುರು ಕರುಣವಡೆದ
ಇಷ್ಟಲಿಂಗ ಲಿಂಗಪ್ರಾಣ
ಇಳೆಯೊಳು ಕಾರ್ಯಾರ್ಥಿ
ಉತ್ಸವವು ನಮಗೇತಕೋ
ಉಬ್ಬಬೇಡ ಮನವೆ
ಉಲುಹಿಗಮ್ಮೆನು ಕುಸ್ತಿ
ಎಂತಾಯಿತೆಂತಾಯಿತು
ಎಂತು ಬಾಳಬಹುದೆಂತು
ಎಂಥ ಕನಸ ಕಂಡೆ
ಎಂಥ ಯಂತ್ರವ ಮಾಡಿದ
ಎಂಥವನೆ ಏಗುವೆ
ಎಚ್ಚತ್ತಿರೆಚ್ಚತ್ತಿರಾ
ಎಚ್ಚತ್ತಿರೆಚ್ಚತ್ತಿರೆಲೆ ನಿನ್ನಾಯುಷ
ಎತ್ತಿರೆ ಆರತಿಯ
ಎತ್ತುವೆನಾರತಿಯೆತ್ತುವೆ
ಎನ್ನ ಕರಪೀಠಕೊಲವಿಂದಂ
ಎಮ್ಮ ಮೈಲಾರನ
ಎಮ್ಮಯ್ಯ ದಮ್ಮಯ್ಯ
ಎಲೆ ಬೊಮ್ಮ ನಿನ್ನದಾವುದು
ಎಲ್ಲರೊಳು ಶಿವಭರಿತನಂತೆ
ಎಸೆವ ತನುತ್ರಯದಿ
ಏಕಮುಖ ರುದ್ರಾಕ್ಷಿ
ಏಕಾಂತ ಸೇರಲಿ ಬೇಕು
ಏಕೆ ಚಿಂತಿಸುತಿರ್ಪೆ
ಏಕೆ ದಯವನು ಮಾಡೆ
ಏಕೆ ಭ್ರಮಿಸಿ ಕೆಟ್ಟೆಯೆಲೆ
ಏಕೆ ಮನವೆ
ಏಕೆ ಮಯಿಮರೆದಿಹೆ
ಏಕೆ ಮರೆದಿಹೆ ಮನವೆ
ಏಕೆ ಮರೆಯಾದಂತೆ ತೋರ್ಪೆ
ಏತಕಿನಿತು ರೋತೆ ಬಾಳು
ಏತರ ಭಯವಣ್ಣ
ಏನದೋ ನಿನ್ನ ವಿಡಾಯ
ಏನನುಸುರವೆನು
ಏನನೆಂಬೆ ಈತನಿರವನು
ಏನನೋದಿದೊಡೇನ
ಏನಮಾಡುವೆನೀ ಮನಂ
ಏನಯ್ಯ ಗುರುವೆ
ಏನಾಗಲು ಬೇಕು
ಏನಿದ್ದು ಏನನೆಮ್ಮಿದೆಯಕಟ
ಏನೆನ್ನಬಹುದೆ ಎನ್ನವನ
ಏಯೇ ರಾಮಿ ತಮ್ಮ
ಏಳು ಕರಿವೃಷಭೇಂದ್ರ
ಐದು ಬಣ್ಣದ ಪಕ್ಷಿ
ಒಂದು ಭಾಂಡದಲ್ಲಿ ಮಾಡಿ
ಒಂದೆ ಒಂದೆ ಪರಮತತ್ವವೊಂದೆ
ಒರಟುತನವ ಬಿಡು
ಒಲ್ಲೆ ಗುರುವೆ ನರರ
ಒಳಗಾದುದಾವುದು ಹೊರಗಾದುದಾವುದು
ಒಳಹೊರಗೆ ಥಳಥಳಿಸಿ
‘ಓಂ’ ‘ಓಂ’ ನಿಲ್ಲಿಸು
ಓಂ ನಮಃ ಶಿವ
ಓಂ ನಮೋ ನಮಃ ಶಿವಾಯ
ಓಂಕಾರ ಶರೀರನೆ
ಓಪ ನೀನಮಮ ಜಗಕೆ
ಕಂಗೆಡಿಸಿ ಕಾಡುತಿದೆ
ಕಂಡೆನತಿ ವಿಚಿತ್ರವಿದನು
ಕಂಡೆನಮ್ಮ ಕರಪೀಠದೊಳಖಂಡ ಜ್ಯೋತಿ
ಕಂಡೆನಾನೊಂದು ಚೋದ್ಯ
ಕಂಡೆನಿದಕೊ ಕರಕಮಲದೊಳಖಂಡ
ಕಂಡೆನು ಗುರುವರನ
ಕಟ್ಟಿಗೆಹಳ್ಳಿಯ ಕರುಣಾಳು
ಕಡೆಯಾಣಿಯವ ಸುವರ್ಣ
ಕಣಿಯ ಹೇಳ ಬಂದೆ
ಕಪಟನಾಟಕನ ಕೈಯೊಳ ಗೊಂಬೆ
ಕಮಲಲೋಚನೆ ಎನ್ನ
ಕರತಂದು ತೋರೆ
ಕರತಾರೆ ಬೇಗ ಕಾಂತನ
ಕರದು ತಂದು ತೋರಿಸಮ್ಮ
ಕರದು ತಂದು ತೋರೆ
ಕರದು ತಂದು ತೋರೆ
ಕರುಣವಿರಲಿ ಎನ್ನ ಮೇಲೆ
ಕರುಣಿಸೊ ಕಾಮಿತ
ಕರ್ಮಬಂಧವ ಕಳೆದು
ಕಲ್ಲು ಮೆತ್ತಗೆ ಮಾಡಬೇಕಣ್ಣ
ಕಳ್ಳ ಚಿಳ್ಳ ಕೊಳ್ಳಿ
ಕಾಂತನ ಕರದು ತಾರಮ್ಮ
ಕಾಂತೆ ಪೋಗಿ ಕರೆದು
ಕಾಡಲಾರೆನೊ ನರರ
ಕಾಣದಿರಲಾರೆನು ಶ್ರೀಗುರುವನು
ಕಾಣದೆ ನಾನಿರಲಾರೆ
ಕಾಣಬಾರದಂಥ ಲಿಂಗವ
ಕಾಮಾದಿ ಅರಿವರ್ಗದಿಂದ
ಕಾಯ ನೆಲೆಯೆಂದು
ಕಾಯವಳಿದ ಮೇಲೆ
ಕಾಯವಿರಲಿ
ಕುಂದಕೋರಕರದನ ಪಾಲಯ
ಕುಕ್ಕುಟ ಕೂಗಲು
ಕುಶಲ ಕೈಲಾಸ ಈಶ
ಕೂಡಿದೆನು ನಿಮ್ಮ
ಕೂಸ ಕಂಡಿರ ಜ್ಞಾನಿಗಳೆಲ್ಲ
ಕೆಟ್ಟೆನೆನಗಿನ್ನೇನು ಬಟ್ಟೆ
ಕೈಯ್ಯ ನೀಡು ಕರುಣ
ಕೊಡು ಎನಗೆ ವರವ
ಕ್ಷಯವುಂಟೆ ಜೀವರಂತೆ
ಖಂಡಿತನಹನೆ ಗುರು
ಗತಿಯ ಮತಿಯ ಕಾಣೆ
ಗಮ್ಮನೆ ತಿಳಿ ನಿನ್ನನೆ
ಗರುಡನ ನೆನೆದರೆ
ಗಾಢ ತಿಳಿಯೊ ನೀನು
ಗಿರಿರಾಜ ಸುಕುಮಾರಿ
ಗುಡಿಯ ನೋಡಿರಣ್ಣ
ಗುರು ದಯಮಾಡಿದನಮ್ಮ
ಗುರು ಪಾದೋದಕವೆ
ಗುರು ಲಿಂಗ ಜಂಗಮವನು
ಗುರು ಪುತ್ರರನು ಕಂಡು
ಗುರು ಮುಟ್ಟಿ ಗುರುವಾಗಿ
ಗುರುಲಿಂಗಜಂಗಮದೊಳು
ಗುರುವ ನೆನೆ
ಗುರುವರ ನಿಮ್ಮನು
ಗುರುವಿನ ಪ್ರಸಾದ
ಗುರುವೆ ನಿಮ್ಮಯ
ಗುರುಸಾರ್ವಭೌಮರಿಗೂ
ಘಟವೇ ಇರಬೇಕೆಂದು
ಘುಡುಘುಡಿಸುತೆ ಕಿಡಿಯೆಸಗುತೆ
ಚಂಡನಾಡೊ ಬನ್ನಿರಣ್ಣ
ಚಂದಿರಾನನೆ ಪಾಲಯ
ಚಂದ್ರಧರನೆ ಎನ್ನ
ಚಂದ್ರವದನೆಯೊಳು
ಚಂಪಕಗಂಧಿನಿ ಪೇಳಿದ
ಚಕ್ಕನೆ ಕರದುತಾರೆ
ಚಕ್ಕನೆ ಬಾರೋ ದಮ್ಮಯ್ಯ
ಚದಿರನಾಗರು ನೀನು
ಚೆಂಡನಾಡುವಾನು ಬನ್ನಿರಣ್ಣ
ಜಗವೆಲ್ಲ ಭಜಿಪುದದೊಂದು ಲಿಂಗ
ಜಡದೈವಗಳ ಬೇಡುವವನಲ್ಲ
ಜಪಿಸು ಜಪಿಸು
ಜಯ ಜಯ ಜಯ ಜಯ
ಜಯ ಜಯ ತುಭ್ಯಂ
ಜಯ ಜಯ ಮಂಗಳ
ಜಯ ಜಯ ಮಹಾದೇವ
ಜಯ ಜಯತೆಂದು ಬೆಳಗುವೆ
ಜಯತು ಜಾಹ್ನವಿಧರನ ಕಾಂತೆ
ಜಯದೇವ ಜಯದೇವ
ಜಯಮಂಗಳಂ ನಿತ್ಯ
ಜಯಮಂಗಳಂ ನಿತ್ಯ
ಜಯಮಂಗಳಂ ಸತತ
ಜಯಮಂಗಳಂ ಸದಾ
ಜರೆವುತಿಹರೊ ಎನ್ನ
ಜೀವನೊಳು ಶಿವಸೂತ್ರ
ಜೋ ಎನ್ನಿರವ್ವಗಳಿರಾ
ಜೋ ಜೋ ಜೋ ಎಂದು
ಜೋಗವನು ಬೇಡಿರೆಲ್ಲಮ್ಮನಡಿವಿಡಿದು
ಜ್ಯೋತಿ ಬೆಳಗುತಿದೆ
ತಂದು ತೋರಿಸೆ ತಾಳಲಾರೆ
ತಕತಕನಾಡಿದನೆ ನಾಟ್ಯವ
ತಡೆದನೇತಕೆ ನಲ್ಲನು
ತರಳೆ ಬೇಗದಿ ತಂದು
ತಲೆಬಾಗಿ ನಲ್ಲತನಕಲಿ
ತಿರುಗಲಾರೆವೋ ನಾವು
ತಿಳಿದು ನೋಡಿರಣ್ಣ
ತಿಳಿದುದನು ಪೇಳ್ವೆ
ತಿಳಿಯಲರಿಯದೆ ಮೋಕ್ಷಕೆಳಸಿ
ತಿಳಿಸುವ ಮಾತಲ್ಲ ತಿಳಿಸದೆ
ತೋರ ಕರಸ್ಥಲದಿ ದೇವನ
ತೋರಿಸೆ ಶ್ರೀ ಗುರುದೇವನ
ತೋರಿಸೆ ಶ್ರೀ ಗುರುದೇವನ
ತೋರಿಸೆ ಶ್ರೀಗುರುದೇವನ
ತ್ಯಜತೇ ಪ್ರಾಣೇಶ
ತ್ರಿಕರಣವು ಶುದ್ಧವಾಗಿದೆ
ದೂರಿ ದೂರಿಯು
ದೇವ ನೀನಹುದೊ
ದೇವರರ್ಚನೆಯ ವಿರಚಿಸಿರೆ
ದೇಹವಿರಲಿರದೆ ಮಾಣಲಿ
ದೊರೆಗಳ ಭಕ್ತಿಯು
ಧರಣಿಧರ ಶಯನ
ಧರಿಸಿಕೊಳ್ಳಿರೊ ಚಿದ್ವಿಭೂತಿಯ
ಧರೆಯೊಳರಿದಲ್ಲದಾಚರಣೆಯೊಳು
ಧರ್ಮವೆ ಲಾಲಿಸುವದು
ಧೀರ ಪಾಲಿಪುದು ಫಕೀರ
ಧ್ಯಾನ ಮಾಡು ನೀನು
ನಂದನಂದನಾನಂದನಮಿಂದಿರವರದ
ನಂದಿವಾಹನನ ವೈಯಾಳಿಯ
ನಂಬದಿರು ನಾರಿಯರ
ನಂಬಿದೆ ನಿನ್ನ ಚರಣವನು
ನಂಬು ಜಂಗಮದ ಪಾದ
ನಗೆ ಬರುತಿದೆ
ನಗೆ ಬರುತಿದೆ ನೋಡಿ
ನಚ್ಚದಿರು ಕಾಯವನು
ನಡಸೆ ನಡೆವೆ ನುಡಿಸೆ
ನನ್ನಿರವನಾನರಿದೆ ಇತರ
ನಮಹೆ ನಂದೀಶಂ
ನಮೋ ನಮೋ ಎನುತಲಿ
ನಮೋ ನಮೋ ಎನ್ನುತ
ನಮೋ ನಮೋ ಬಸವ
ನಲ್ಲನ ಕಾಣದೆ ಮನ
ನಾಗಕಂಕಣ ಜಯ
ನಾನಾತೆರದೊಳೆನಗೆ
ನಾನಾವ ಪ್ರಪಂಚವನರಿಯೆ
ನಾನೇನು ಬಾತೆ ಹೇಳಾ
ನಾರಿಯಲ್ಲವೇನೆ
ನಾವರಿಯೆವರಿಯೆವಿದು
ನಾವಾದರೊ ಹೋಗುತ್ತೇವೆ
ನಿದ್ರೆಯ ಮಾಡಿದನೇ
ನಿದ್ರೆಯ ಮಾಡು ನೀ
ನಿನ್ನ ನೀನೇ ತಿಳಿದು ನೋಡ
ನಿವಾಳಿ ಆರತಿ ನಿವಾಳಿಯೆ
ನೀ ಕರೆದು ತಂದು
ನೀಗಿದೆನೆ ಎನ್ನ ಭವಮಾಲೆ
ನೀನೆ ಕೈವಶವಾಗಿರೆ
ನೀನೆ ಪರತರ ಪರಂಜ್ಯೋತಿ
ನುಡಿದ ನುಡಿಯೆಲ್ಲ ಮಂತ್ರ
ನುತಿಸುವೆನನುದಿನ ಶಶಿಕಂಠನ
ನೆರೆ ಜಂಗಮದ ಸೇವೆಯನು
ನೆಲಕೊಕ್ಕಸರದ ಮುತ್ತಿನೊಲು
ನೊಂದೆನಯ್ಯ ಬೆಂದೆನಯ್ಯ
ನೊಸಲಕಣ್ಣನು ಕಂಡವನೆ
ನೋಡಬೇಡ ಭೇದಬುದ್ಧಿಗಳಿಂದಿಷ್ಟಲಿಂಗವ
ನೋಡಿ ತಿಳಿವುದು ನೀನೆ
ನೋಡಿರೆ ನೀವಿಂದ್ರಜಾಲವ
ನೋಡೋಣ ಬಾರೆ ಸಖಿ
ಪಂಚಬ್ರಹ್ಮಗೆ ಪರಮೇಶಗೆ
ಪಂಚಮುಖವಿರ್ದವನೆ ಶಿವ
ಪಂಚವದನ ಪಾಲಿಪುದೆನ್ನ
ಪಕ್ಕನೆ ನೀವು ನೋಡುವ
ಪರಮ ಗುರುವಿನ ಚರಣ
ಪಲವು ಬಗೆಯಾದ ಶೀಲವನೊಲಿದು
ಪಾಕವ ಮಾಡಿರೊ ಮನವ
ಪಾಡಿರಮ್ಮ ತೂಗಿ
ಪಾದತೀರ್ಥ ಪ್ರಸಾದವೆ
ಪಾದನೇತ್ರನೆ ಪರಾಕು
ಪಾರ್ವತಿರಮಣ ಪಾಲಿಪುದು
ಪಾಲಯ ಮಾಂ ಶಂಕರ
ಪಾಶವೆಂದಡದೇನು
ಪಾಹಿಸರ್ವಮಂಗಳೇ
ಪುಷ್ಪದ ವೃಷ್ಟಿ ಕರೆವೆನೋ
ಪೂರ್ವಾರ್ಜಿತಂಗಳನು
ಪೂರ್ವಾರ್ಜಿತಂಗಳನು ಮೀರಿ
ಬಂದಡೆನಗೆ ಬಡಿದೊಡೆ
ಬಂದು ಮನ್ನಿಸೊ
ಬಂದು ಮೊಗವ ತೋರಿಸೆಮಗೆ
ಬಗಸೆಗಂಗಳೆ ಬರಿಸೆ
ಬಟ್ಟಮೊಗದ ನೀರೆ
ಬಣ್ಣಿಸಿ ಭಾವಿಸಿ ಕೀರ್ತಿಸಿ
ಬದುಕಿದೆ ನಾಂ
ಬನ್ನಬಡದೆ ಕೆಡದೆ
ಬನ್ನಿರಿ ಪರಮ ಗುರುವೆ
ಬನ್ನಿರಿ ಸ್ವಾಮಿ ಗುರುವೆ
ಬಲದ ಕನ್ನಿಕೆ ಎಡಕೆ
ಬಲ್ಲ ಮಹಾತ್ಮರು
ಬಸವ ಮುಕ್ತಿಗೆ ಹಾದಿ
ಬಸವನ ಪೆಸರನುಸುರುವ
ಬಾ ಕಾಂತ ಏಕೆ ಇಂಥ ಪಂಥ
ಬಾ ಬಾ ಗುರುವೆ
ಬಾರಮ್ಮ ನಾವಿಬ್ಬರಾಡುವಾ
ಬಾರಯ್ಯ ತ್ರಿಪುರ ಸಂಹಾರ
ಬಾರಯ್ಯ ಬಾರೆನ್ನ ಗುರುವೆ
ಬಾರೆ ನೀರೆ ಭಜಕ
ಬಾರೆ ಬಾರೆ ಭಾವಕಿ
ಬಾರೈಯ್ಯ ಬಾರೊ
ಬಾರೊ ಬಾರೊ ಬಾಲ
ಬಾರೊ ಮನಿಗೆ ನಲ್ಲ
ಬಾರೋ ಎನ್ನ ಮನ ಸಾರೊ
ಬಾರೋ ಬಾರೋ ಚೆನ್ನಿಗ
ಬಾಲಚಂದ್ರ ಕಿರೀಟ
ಬಿಂಕವೇತಕೆ ನಿಮಗೆ
ಬಿಂಕವೇತಕೆ ನಿಮಗೆ
ಬೆಡಗು ಬೆಡಗೆಂದೊಡಾವುದು
ಬೆಳಗುವೆನೂ ಶಿವಲಿಂಗನಿಗಾರತಿ
ಬೇಕೆಂದು ಬಯಸದುದೆ ವೈರಾಗ್ಯವು
ಬೇಡ ಸಂಸಾರ ಸುಖ
ಬೇಡನ ಮಗಳನು ಬೇಡದೆ
ಬ್ರಹ್ಮವಾಗುವೆವೆಂದು ಬಳಲುವರು
ಭಕ್ತನಪ್ಪೊಡೆ ಸದಾಚಾರಿಗಳು
ಭಲರೇ ಭಲರೇ ನೀ
ಭಳಿರೆ ಭಲರೆ ನಿಮಗೆಣೆಯಾವ
ಭಿಕ್ಷವನೆ ಬೇಡುಂಬ
ಭೂಪತಿಯದಾಗಿ
ಭೋರಿಡುತಿದೆ ಮೇರೆಯಿಲ್ಲದೆ
ಮಂಗಳ ಮಯತೆ ಜಂಗಮ
ಮಂಗಳಂ ಜಯಮಂಗಳಂ
ಮಂಗಳಂ ಮಂಗಳಂ ಮದ್ಗುರು
ಮಂಗಳರೂಪ ಚಿದಂಗ
ಮಂಗಳವಗಜಾತ್ಮಜೆಗೆ
ಮಂಗಳಾರತಿಯನು ಬೆಳಗಿರೆ
ಮಂಗಳೆಯರಸಗೆ ಮಂಗಳಂ
ಮಂದರಾದ್ರಿನಿಲಯ ಮುಕುಂದ
ಮಕ್ಕಳಾಟಿಕೆಯಿದೇಕೆ
ಮತ್ತ ಗಜಯಾನೆ
ಮದಗಜಗಮನೆ ಮಲಗುವ
ಮದನಹರನ ಪದವ
ಮನಲಯವಿಲ್ಲದೆ ಮುಕ್ತಿಯಿಲ್ಲೆಂಬರು
ಮನವ ನಿಲ್ಲಿಸುವುದೇ ಯೋಗ
ಮನಸಿನಲಿ ವಾಕು
ಮನುಕುಲ ಸಂಕುಲ
ಮರುಳು ಮನವೆ
ಮರೆತು ಹೋಗಬೇಡ
ಮರೆಯ ಬೇಡವೆ ರಮಣಿ
ಮಾಡಲಿಲ್ಲವೆ ಮನವೆ
ಮಾಡು ಶಿವಪೂಜೆಯನು
ಮಾತೆ ಪೊರೆ ಗಿರಿಜಾತೆ
ಮಾಮಾವಾವಮುಂದವಾಮ
ಮಾಯಕಾರ ನನ್ನಿಯನೆ
ಮಾಯಾ ಸಂಸಾರಕೆ ಸಿಲುಕಿ
ಮಿಡಮಿಗಗೈಯ್ಯ ರಕ್ಷಿಪುದಯ್ಯ
ಮೀರದೆ ಕರತಾರೆಯಿನೆಯನ
ಮುಕುತಿಗಿದೊಂದೆ ಪಯಣ
ಮುಟ್ಟದಿರೆನ್ನ ಕೈಯ್ಯ
ಮುನ್ನ ನಾನೆಂಥ ಕರ್ಮಿಯೊ
ಮುನ್ನ ನಾನೇನು ಸುಕೃತವ
ಮೂವಿಧಿ ಮಾವಣ್ಣ
ಮೃಡಪಾದಸೇವೆಗಲಸುವ ನರನ
ಮೆಚ್ಚಿ ಬಂದೆನೊ ನಾ
ಯಂತ್ರ ನಾನು
ಯಾಕಹಂಕರಿಸಿ ಕೆಡುವೆ
ಯಾಕಿನ್ನು ಬಳಲಿಸುವೆ
ಯಾಕೆ ಕುದುಕುಳಿಮನಸು ನಿನಗೆ
ಯಾಕೆ ನಿನಗಕಟ ವೈರಾಗ್ಯ
ಯಾಕೆ ಮನೆಗೆ ಬಾರನೆ
ಯಾಕೆ ಹಂಕರಿಸಿ ಕೆಡುವೆ
ಯಾಕೆ ಹದೆದು ಕದಿದು
ಯಾತಕೆ ಮರುಳಾದೆನೆ ಲಿಂಗಯ್ಯ
ಯಾರೊಡನೆ ಮುನಿದೀಗ
ರಜತಾದ್ರಿನಿಲಯಂಗೆ
ರಾಚೋಟಿ ಲಿಂಗ ಬಾರೋ
ರಾಜಸದ ತಾಮಸದ
ರಾಮ ರಾಮ ಪಾಲಯ
ರಾಮಲಿಂಗವ ನೋಡಿರೋ
ರಾರಾಟಿಮಿ ನಿರಂತ
ರೂಪು ವಸ್ತು ಪದ
ಲಹರಿಗೊಂಡಿದೆ ಮನವು
ಲಿಂಗ ಬಂದವನೆ
ಲಿಂಗ ಲಿಂಗವಾರುಮುಖದ
ಲಿಂಗಕ್ಕೆ ಜಂಗಮದ ಪಾದತೀರ್ಥ
ಲಿಂಗದ ಲಿಂಗದ ನೆಲೆಯ
ಲಿಂಗದಪ್ಪಣೆಯಿಂದಲಿ ಬಂದುದನು
ಲಿಂಗದೇವ ನಿಮ್ಮ ಸೂತ್ರ
ಲಿಂಗಪೂಜೆಯೊಳನಿಶ
ಲಿಂಗಯ್ಯ ಬಾ ಇಷ್ಟಲಿಂಗಯ್ಯ
ಲಿಂಗವೆ ಚಿಲ್ಲಿಂಗವೆ
ಲಿಂಗಾ ಲಿಂಗಾ ಲಿಂಗ
ಲೋಕದ ನರನೇನ ಬಲ್ಲಿರು
ವರ ವೇದಾಗಮ ವಂದಿತ
ವರಮೂರ್ತಿ ಜಂಗಮಯ್ಯನ
ವೃಕ್ಷವನು ಕಂಡೆ ನಾನು
ಶಂಕರೆನ್ನನುಭವದ ಶಂಕೆ
ಶತಸಹಸ್ರ ಲಕ್ಷ ಕೋಟಿ
ಶರಣು ಗಜಮುಖ ಜನಕ
ಶರಣು ಗುರುಸಿದ್ಧ ಶಿವಯೋಗಿ
ಶರಣು ಶರಣು ಶಾಶ್ವತೆ
ಶರಣು ಶಾಶ್ವತ ದಯಾಪಂಗ
ಶರಣು ಸೋಮೇಕಟ್ಟೆಯೀಶ
ಶಿವನ ನೆನೆ
ಶಿವನಿಗೆ ಶಿವೆಗೆ ವಂದಿಸುವೆ
ಶಿವಯೋಗಿಗಳಿಗೆ ಸಾಧ್ಯ
ಶಿವಲಿಂಗ ಶಂಕರ ಕೃಪಾಕರ
ಶಿವಶಕ್ತಿಯಿಂದಾದ ಮಾಯೆ
ಶಿವಾಧನವೆಂದು ಪಿಡಿವೆ
ಶುಭಕರವಾಂತಿರು ತಾಯೆ
ಶುಭವೆ ಮಂಗಳಂ
ಶೋಭನವೆ ಶೋಭನವೆ
ಶೋಭಾನವೆ ಶೋಭಾನವೆ
ಶ್ರೀ ಗುರುವೆ ನೀವೆ
ಶ್ರೀ ಗುರುಶಾಂತ ವೀರಾಧಿವೀರ
ಶ್ರೀ ಮಹಾಲಕ್ಷೀನ್ಮಿರಮಣಗೆ
ಶ್ರೀ ಸದಾಶಿವಗೆ ಶಂಕರಗೆ
ಶ್ರೀಗುರು ಚಿದಾನಂದಮೂರ್ತಿ
ಶ್ರೀಗುರು ಪೂಜೆಯ ಮಾಡಿದೆ
ಶ್ರೀಗುರು ಬಸವಲಿಂಗ
ಶ್ರೀಗೌರಿ ಪೊರೆಯಮ್ಮ
ಶ್ರೀರಂಗದಂಗ ನಮಃಶಿವಾಯ
ಶ್ರುತದರಿವು ಕೆಲಬರಿಗೆ
ಸಂಸಾರ ಸೆರೆಯ
ಸಕಲ ಭುವನಗಳ ತಲೆ
ಸಕಲರಹುದಹುದೆನಲು
ಸಗುಣಮೂರುತಿಯಾಗಿ
ಸಚ್ಚಿದಾನಂದದೊಳ್ ಸದಾ
ಸಟೆ ಸಟೆ ನೋಡಾ
ಸದ್ಗುರು ಬೋಧೆಯನು
ಸರಸ ವಿದ್ಯಾರಮಣಿಯಿರೆ
ಸಲೆ ಜೀನನಾಗದಿರೊ
ಸಲೆ ನಿನ್ನ ಪಾದವನು
ಸಲೆ ನೀನೆ ಜಗವಾದೆ
ಸಹಜ ಸಜ್ಜನ
ಸಾ ನಲ್ಲ ನಿನಗೆನ್ನ
ಸಾಂಬ ಶಿವಾಯ ತೇ
ಸಾಧಕನ ಮಾಡೆಲೆ
ಸಾಮಜವದನಾಭಿರಾಮ
ಸಾರ ಸಹಜ ಶರಣರ
ಸಾರಂಗಪಾಣಿ ಸಲಹೊ
ಸಾರಿ ಶಪಿಸುವೆ ನಿನ್ನನು
ಸಾಲು ಜಗವನೆಲ್ಲ ಲೀಲೆಯಿಂ
ಸಾಸ ಮುಟ್ಟದಿರೆನ್ನನು
ಸುಖವು ಗೊಂಡಿದೆ ಮನವು
ಸುಖವೆ ನಿಜಸುಖವೆ
ಸುಮ್ಮನೆ ದೊರೆವುದೆ ಮುಕ್ತಿ
ಸುಮ್ಮನೆ ಮುನಿವರೇನೊ
ಸುರಚಾಪ ನಿರ್ಧರವಾದ ಕಾಲಕ್ಕೆ
ಸುರುಚಿರದ ಲಿಂಗಾಂಗಿಯಾಗಿ
ಸೇರಿರೊ ಗೊತ್ತ ಸೇರಿರೊ
ಸೇವೆಯೊಳು ಗುರುಸೇವೆ
ಸೊಗಸಿ ತೂಗಿರೆ
ಸೋತೆನವಗೆ ಸೊಗಸಿ
ಸೋಮಶೇಖರ ಪಾಲಿಪುದು
ಸೋಮೇಕಟ್ಟೆ ಈಶ
ಸೋಮೇಕಟ್ಟೆ ಬಸವೇಶ
ಸೋಹಂ ಸಿದ್ಧಿಯದೆಂಥಾದ್ದೋ
ಸ್ತುತಿ ಮಾಡಿದರೀಗ
ಸ್ಥಿರವಲ್ಲವೀ ಕಾಯ
ಸ್ವಾಮಿ ನಿಮ್ಮೊಳು ನಾನು
ಹಂಗು ಹರಿದಮೇಲಿನ್ನು
ಹಣದ ಹಮ್ಮಿನಿಂದ
ಹಬ್ಬಿಗೆ ಸುಕ್ಷೇತ್ರಕಿಂದು ಹೋಗಿ
ಹರ ಹರ ಎನ್ನ ಜನ್ಮ
ಹರಪೂಜೆಯನು ಮಾಡು
ಹರಹರ ದಯವಿಲ್ಲವೆ
ಹಲವೇಕೆ ಹದಿನೆಂಟು
ಹಾದರವ ನಾನರಿಯದಿದ್ದೆ
ಹಾರಿಬಂದೆನಯ್ಯ
ಹಿರಿಯಕ್ಕನೋಜೆಯು
ಹುಸಿಯೊ ಹುಸಿಯೊ
ಹೆಚ್ಚಿತೊ ಕಲಿ ಹರ ಹರ
ಹೆದರದಿರು ಮನವೆ
ಹೇಳಯ್ಯ ವಿವರವಾಗಿ
ಹೊಕ್ಕು ಹೋದನವಳ ಮನೆಗೆ
ಹೊತ್ತ ಹಾರು ಮನವೆ
ಹೊನ್ನು ಹೆಣ್ಣು ಮಣ್ಣು
ಹೊಸಾಳು ಬಂದ ನೋಡುವ
ಹೋಗಿ ನೋಡುವ ಬನ್ನಿರಿ
ಹೋಗುತಿದೆ ಹೊತ್ತು.

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಗುಬ್ಬಿ ಕಿಡಿಗಣ್ಣಪ್ಪನವರ ತತ್ವಪದಗಳು

ಬಾರೋ ಎನ್ನ ಮನ ಸಾರೊ
ಬಾರೋ ಎನ್ನ ಮನ ಸಾರೊ
ನಿನ್ನ ಸರಿಯಾರೋ ಕರಿವೃಷಭಾರ್ಯನೆ ||ಪಲ್ಲವಿ||
ಅಂಧಕಾಸುರ ಭಂಜನ ಬಂಧನ ದುರಿತ ವಿಮೋಚನ
ಚಂದದಿ ಭಕ್ತರ ವೃಂದದ ಪೊರೆಯುವ ಚಂದ್ರಕಳಾಧರ ಸುಂದರ ||1||
ಹರಿಬ್ರಹ್ಮಾಸುರ ವಂದಿತ ವರಗಣ ಮುನಿಜನ ಸೇವಿತ
ಸೂರಿಜನ ವಿಹಾರ ಭಜಕ ಮಂದಾರ ಕರ್ಮವಿದೂರನೆ ||2||
ಕಂಗಳಾಲಯ ದೇವನೆ ಮಂಗಳಮಯ ಸ್ವಭಾವನೆ
ತಿಂಗಳ ಸೂಡಿದ ಗಂಗೆಯ ರಮಣನೆ ಅಂಗಜಮದ ಸಂಹರನೆ ||3||
ವರ ಚಟಕಪುರಿವಾಸನಾಗಿರುವ ಪಾವಕ ನೇತ್ರನ
ಕರೆದು ಹರುಷದಿ ಶಿರವನು ತಡಹುತ ಪರಿಪರಿಲಾಲನೆ ಮಾಳ್ಪನ ||4||
ವರ ಮಕ್ಷಿಕ ಪುರಿವಾಸನಾಗಿರುವ ಸೋಮೇಕಟ್ಟೆ ಈಶನ
ಪರಿಪರಿಯಿಂದಲಿ ಚರಣವ ಪೂಜಿಪ ಪರಮ ಭಕ್ತರಿಗ್ವರವೀವನ ||5||

ಬಾರಯ್ಯ ತ್ರಿಪುರ ಸಂಹಾರ
ಬಾರಯ್ಯ ತ್ರಿಪುರ ಸಂಹಾರ ಸುಕುಮಾರಜನಕ
ಮೇರುಧೀರ ವಾರಿಜಭವನುತ ಶೌರಿಸೋದರಿಪ್ರಿಯ
ಘೋರದುರಿತ ಸಂಹಾರ ಮನೋಹರ ||ಪಲ್ಲವಿ||
ವಾರಣಚರ್ಮವಿಭೂಷ ಭೂರಿದಾನವಜನಶಿಕ್ಷ ಗೌರೀಮನೋಹರ
ಗರಳಕಂಧರ ಗುರುತರ ಮೌನಿವಂದಿತಪರಮ ಪಾವನ ಶಿವ ||1||
ಖಂಡೇಂದುಧರ ಪರಮೇಶ ಅಖಂಡ ಭೂಮಂಡಲ
ಪೋಷಕುಂಡಲಿ ತುದಿಯಗ್ರ
ಪುಂಡರೀಕದೊಳು ಮಂಡಿತ ಪರಶೀವ ಚಂಡಪ್ರಕಾಶನೆ ||2||
ವರಮಕ್ಷಿಕಪುರಿವಾಸ ಚಂದ್ರಧರ ಸೋಮೇಕಟ್ಟೆ ಈಶ
ಪರಮ ಪಾವನ ಗುರು ಕರಿವೃಷಭಾರ್ಯನ
ಕರಕಮಲದೊಳಿಹ ಸುರುಚಿರ ಶಿವಲಿಂಗ ||3||

ಬನ್ನಿರಿ ಸ್ವಾಮಿ ಗುರುವೆ
ಬನ್ನಿರಿ ಸ್ವಾಮಿ ಗುರುವೆ ನಾ ನಿಮಗೊಂದು
ಬಿನ್ನಹವ ಮಾಡಿಕೊಳುವೆ
ನಿನ್ನ ಕೃಪೆಯಿಟ್ಟು ನಿತ್ಯಾನಿತ್ಯ ವಸ್ತು ವಿವೇಕವನು
ಚೆನ್ನಾಗಿ ಬೆಸಸೊ ಗುರುವೆ ||ಪಲ್ಲವಿ||
ಮತ್ರ್ಯ ಲೋಕದ ಕರ್ತೃವು ನೀನು ನಾನಾರ್ಥ ವಿಗ್ರಹ ರೂಪವು
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣನಿಗೆ ಗೊತ್ತು ದಯಪಾಲಿಸಯ್ಯ ||1||
ಆಶ್ರಮದ ರೀತಿಯಲ್ಲ ಇದು ಒಂದು ಕೋತಿಯಂತೆ ನುಡಿವುದಲ್ಲ
ಆಶ್ರಮದ ಮುದ್ರೆಯ ಗದ್ದುಗೆಯ ಪಾವುಗೆಯ ನೀನಿರ್ದುದನು ಪಾಲಿಸಯ್ಯ ||2||
ಮುಕ್ತ ಬಿನ್ನೈಸಿ ಇರುವೆ ಸೋಮೇಕಟ್ಟೆ ಯುಕ್ತ ಕರಿವೃಷಭೇಂದ್ರನೆ
ತ್ಯಕ್ತ ಮಾಡದೆ ನಿನ್ನ ತೋಳ್ತೊಡೆಯ ಮೇಲಿರಿಸಿ ರಕ್ಷಿಪುದು ಗುರುರಾಯನೆ ||3||

ಬನ್ನಿರಿ ಪರಮ ಗುರುವೆ
ಬನ್ನಿರಿ ಪರಮ ಗುರುವೆ ನಿಮಗೊಂದು ಬಿನ್ನಹವ ಮಾಡಿಕೊಳುವೆ
ಚೆನ್ನಾಗಿ ಈ ವಸ್ತು ಆದಿ ಅಂತ್ಯವನೆನಗೆ ನಿರ್ಣಯಿಸಿ ಬೆಸಸಿ ಗುರುವೆ ||ಪಲ್ಲವಿ||
ಯಾರ್ಯಾರು ನೋಡಲಿಲ್ಲ ನೀ ಕೇಳ್ವ ಪರಿಪೂರ್ಣತ್ವ ತೋರದಲ್ಲ
ಬಲ್ಲಂತ ಹಿರಿಯರೊಳು ಸೊಲ್ಲಿಗಾಸ್ಪದವಲ್ಲ ಅಲ್ಲವರೊಳಿರುತಿಹುದು ನೋಡಿ ||1||
ತಾಯಿ ತಂದೆಗಳಿಲ್ಲವು ಇದಕ್ಕಿನ್ನು ನಾಮಸೀಮೆಗಳಿಲ್ಲವು
ರೂಪು ಕ್ರಿಯೆಗಳೆಂಬ ವ್ಯಾಪಾರವದಕಿಲ್ಲ ಕಾಲನೇಮಗಳಿಲ್ಲವು ||2||
ದಿಕ್ಕುದೆಸೆ ತೋರದೆನಗೆ ಭಾವಕ್ಕೆ ಮಿಕ್ಕು ಮೀರಿಯೆ ನಿಂತಿದೆ
ಆ ವಿಧಿಯು ಹರಿರುದ್ರರರಸಿ ಕಾಣರು ಎಂದು ನಿಗಮಶ್ರುತಿ ನುಡಿವುತಿಹುದು |3||
ಏನೇನು ಏನಿಲ್ಲದ ನಿಜವಿದನು ಏನೆಂದು ನುಡಿಗಶಕ್ಯ
ಊರ ಮುಂದಣ ಕಣವು ಸೂರೆನಲು ಅವರವರ ಸೇರುವ ಲಭ್ಯದಂತೆ ||4||
ರತ್ನ ಬಿದ್ದಿರೆ ಬೀದಿಲಿ ಆ ರತ್ನವನು ಮತ್ತೆ ಜನರೆಲ್ಲ ಕಂಡು
ರತ್ನ ತನ್ನದು ನನ್ನದೆಂದು ಹೊಯ್ದಾಡುವೋಲ್ ವಿಸ್ಮಯವು ತೋರಿತಲ್ಲ ||5||
ಎಲ್ಲಕಾಧಾರಮಾಗಿ ಮತ್ತೆಲ್ಲಕಂತ್ಯಮಾಗಿ ಎಲ್ಲ ದೇವರ ದೇವ
ಅಲ್ಲಮ ಪ್ರಭುವೆಂದು ಸೊಲ್ಲಿಸುತಿಹುದು ನೋಡಿ ||6||
ಇಂತಪ್ಪ ವಸ್ತುವಿನ ಗದ್ದುಗೆಯ ಎಂತೆನಲು ನಗುವರಯ್ಯ
ಅಂತರಂಗದ ಗುರುವು ಬಿಳಿಯ ಕಂಬಳಿಯ ಕಪ್ಪು ನೀಲ ಉದ್ಯುರ್ಲೇಖವು ||7||
ಅಷ್ಟದಳ ತೊಟ್ಟಿಲೆನಿಸಿ ಈರೇಳು ಸೃಷ್ಟಿಯೆಲ್ಲವನಡಗಿಸಿ
ಮುಟ್ಟಿ ಕುರುಹಿಡಿಸಿದನು ಗುರುರುದ್ರ ಸೋಮೇಕಟ್ಟೆ ಪಟ್ಟದ ಕರಿವೃಷಭೇಂದ್ರನ ||8||

ಚಂದ್ರಧರನೆ ಎನ್ನ
ಚಂದ್ರಧರನೆ ಎನ್ನ ಬಂಧನ ಹರಿಸೆಂದು ಇಂದು ನಾ ಬೇಡಿಕೊಂಬೆ
ಮಂದಮತಿಯೊಳು ಮಾಡಿದಪರಾಧವನು ನೀನು ನೋಡದೇ ನಿನ್ನಯ
ಕಂದನೆನುತಲಿ ಎನ್ನ ರಕ್ಷಿಸು ಮಂದರಾಚಲವಾಸ ಈಶ ||ಪಲ್ಲವಿ||
ಗಜ ಚರ್ಮಾಂಬರ ಈಶ ಭಜಕ ಜನರ ಪೋಷ ತ್ರಿಜಗವಂದಿತ ಮಹೇಶ
ಭಕ್ತರಾವಾಸ ಭುಜಗಭೂಷಣ ಸುಜನಪೋಷಣ ಕುಜನ ಶಿಕ್ಷಕ ||1||
ಲೋಕೇಶನೆಂತರಿದನು ಬೇಕೆಂಬ ಕೋರಿಕೆ
ಕಾಕು ಮಾಡಿತು ಎನ್ನನು ಸೊರಗಿದೆ ನಾನು
ನೀ ಕರುಣದಲಿ ನೋಡಿ ಭವವನು ನೂಕಿ
ಜನನವ ಸಾಕು ಮಾಡುತ
ಲೋಕಪಾವನ ಬೇಡಿಕೊಂಬೆನು ಪಾಕಶಾಸನವಂದ್ಯ ಸಲಹೈ ||2||
ಎಷ್ಟೊಂದು ಬೇಡಲಿ ದೃಷ್ಟಮೂರುತಿ ಕೃಪೆ ಹುಟ್ಟಿ ಸಲಹೈ ಎನ್ನನು ಸಾರಿಹೆ ನಾನು
ಸೃಷ್ಟಿಯೊಳಗೆಲ್ಲ ಅಧಿಕವಾಗಿಹ ಶ್ರೇಷ್ಠ ಸೋಮೇಕಟ್ಟೆ ಗುರುವರ
ಪಟ್ಟದ ಕರಿವೃಷಭ ನೀ ಕೃಪೆಯಿಟ್ಟು ಸಲಹೋ ಜೀಯ ||3||

ಕೊಡು ಎನಗೆ ವರವ
ಕೊಡು ಎನಗೆ ವರವ ಕರಿವೃಷಭೇಂದ್ರನೇ
ಬೇಡುವೆ ನಾ ನಿಮ್ಮ ವರವನು ||ಪಲ್ಲವಿ||
ಆಡೋದಬದ್ಧ ಮಾತಾಡೋದೆಲ್ಲ ಕುಟಿಲ
ನೋಡಿದರೇನು ಹುರುಳಿಲ್ಲವು
ಬೇಡಿಕೊಂಬೆನು ನಿಮ್ಮ ಕೂಡಿಯಗಲದೆನ್ನ
ನೋಡು ನಿಮ್ಮ ಕರುಣದೃಷ್ಟಿಯಲಿ ||1||
ಕರ ಮುಗಿವೆನು ಮನ್ನಿಸಯ್ಯ ಶ್ರೀಗುರುನಾಥ
ನೆರೆಹೊರೆಯವರೆಲ್ಲ ನಗುತಿಹರು
ಮರೆವೆಯಿಂದಲಿ ಮಾಡಿದ ತಪ್ಪಗಳನು ಚರಣಕೆ
ವಂದಿಪೆನು ಸಲಹೋ ಪ್ರಿಯ ||2||
ಇಷ್ಟೊಂದು ಕೋಪವು ನಿಮ್ಮೊಳಗಿರ್ದೊಡೆ
ನಷ್ಟವಾಗದೆ ನಾನುಳಿವೆನೆ
ಶ್ರೇಷ್ಠ ಸೋಮೇಕಟ್ಟೆ ಕರಿವೃಷಭೇಂದ್ರನೆ ಬಿಟ್ಟು
ಹೋಗದೆ ಎನ್ನ ಸಲಹೋ ಜೀಯ ||3||

ನನ್ನಿರವನಾನರಿದೆ ಇತರ
ನನ್ನಿರವನಾನರಿದೆ ಇತರ ಸಂಗವ ತೊರೆದೆ
ಕುನ್ನಿ ದೇಹವಿದು ನನ್ನದೆಲ್ಲಂದರಿದೆ ||ಪಲ್ಲವಿ||
ಅಂಬಲಿಯಾದರೂ ಸಮನೆ ಹಾಲು ಸಕ್ಕರೆ ಸಮನೆ
ಕಂಬಳಿಯಾದರೂ ಸಮನೆ ಕಾಶ್ಮೀರ ಶಾಲಾದರೂ ಸಮನೆ ||1||
ಶರಣು ಮಾಡಿದರೊಂದೆ ಸೇರದಿರ್ದರೂ ಒಂದೆ
ಶರಗಿಡಿದೆಳೆದರೂ ಒಂದೆ ಶ್ಯಾನೆ ಉಪಚರಿಸಿದರೂ ಒಂದೆ ||2||
ಮಠದಲಾದರೂ ಒಂದೆ ನದೀ ತಟದಲಾದರೂ ಒಂದೆ
ಮಂಚದ ಮೇಲಾದರೂ ಒಂದೇ ಕಾದ ಹಂಚಿನ ಮೇಲಾದರೊಂದೆ ||3||
ಸಂಚಿತವಿದ್ದಂತೆಯಾದರೂ ನಡೆಯಲೆಂದು ಶಾಬಾಸಾದರೂ ಒಂದೆ
ಆಭಾಸಾದರೂ ಒಂದೆ ಶಾಭಾಸಾಭಾಸಿಗೆ ನಿಲುಕ ಈ ಭಾಸ ನಾವೆಯಾಗಿ||4||
ಶ್ರೇಷ್ಠನಾದರೂ ಎನಲಿ ಬಹು ಕನಿಷ್ಠನೆಂದರೂ ಎನಲಿ
ಇಷ್ಟ ಸೋಮೆಯ ಕಟ್ಟೆ ಕರಿವೃಷಭಗೇನಿಲ್ಲವಾಗಿ ||5||

ಲಿಂಗದೇವ ನಿಮ್ಮ ಸೂತ್ರ
ಲಿಂಗದೇವ ನಿಮ್ಮ ಸೂತ್ರ ಹೇಗೆ ಹಾಗೆ ನಟಿಸುತಿರ್ಪೆ
ಮಂಗಮನುಜ ನಾನೇನರಿಯೆ ಮಂಗಳಾತ್ಮಕ ನೀನೆ ಬಲ್ಲೆ ||ಪಲ್ಲವಿ||
ಇರುವೆ ಮೊದಲು ಆನೆ ಅಂತ್ಯ ಇರುವ ಜೀವ ಬಸುರಿನಲ್ಲಿ
ತೊಳಲಿ ತೊಳಲಿ ಬಳಲಿ ಬಂದೆನು ನಿಮ್ಮ ಕಾಣದೆ ||1||
ಎನ್ನ ಅಂತರಂಗದಲ್ಲಿ ಇರುವ ಚಿಂತೆಯನೆಲ್ಲ ಬಲ್ಲೆ
ಕಾಂತ ನೀನೇ ಬಂದು ಕೂಡೇಕಾಂತ ವಾಸಿಯೆ ||2||
ವಿರಹ ತಾಳಲಾರೆನಯ್ಯ ಪರಮ ಸೋಮೇಕಟ್ಟೆ ಪ್ರಿಯ
ಶರಣು ಹೊಕ್ಕೆನಯ್ಯ ಜೀಯ ಕರಿವೃಷಭಲಿಂಗಯ್ಯ ||3||

ಎಂತಾಯಿತೆಂತಾಯಿತು
ಎಂತಾಯಿತೆಂತಾಯಿತು ಶ್ರೀ ಗುರುಬೋಧೆ
ಯೆಂತಾಯಿತೆಂತಾಯಿತು
ಎಂತಾಯಿತೆಂತಾಯಿತೆಂತಾಯಿತೆನ್ನೊಳು
ಅನಂತ ಬೆಳಗು ತುಂಬಿತು ||ಪ||
ದೂರದಿ ಕರೆದನಲ್ಲೆ ಎನ್ನನು ಬಾರೆಂದು
ಬೆರೆದನಲ್ಲೆ ದೂರದಿ ಕರೆದೆನ್ನ
ಬಾರೆಂದು ಬೆರೆಯಲು ಮೆರೆದಪ್ಪಿರು
ವಂತಾಯಿತು ತನ್ನೊಳಗೆ ತಾನು ||1||
ನಿರಿವಿಡಿದು ಸೆಳೆದನಲ್ಲೆ ಎನ್ನೊಳು ಕೂಡಿ
ಇರು ಎಂದು ಒರೆದನಲ್ಲೆ ನಿರಿವಿಡಿದೆಳೆದುತಾ
ಒರೆಯಲು ಎನ್ನಯ ಅರಿವು ಉಕ್ಕಿತು
ಎನ್ನಹರಿದು ಹೋಯಿತು ಪಾಪ ||2||
ಬೇಗ ಹೋಗಗೊಡದೆ ಎನಗೊಂದು
ರಹಸ್ಯವ ತೋರಿದನೆ ರಹಸ್ಯದೊ
ಳಗೊಂದು ಕಪ್ಪೆ ಸರ್ಪ ನುಂಗಿ ಮೋಸ
ಹೋಗದ ಮುನ್ನ ರಹಸ್ಯವ ಬೆಸಸಿದ ||3||
ಕರಕಮಲ ಮಧ್ಯದಲಿ ಶ್ರೀಗುರು ಕೊಟ್ಟ
ವರ ಇಷ್ಟವನು ಪೂಜಿಸಿ ಕರಕಮಲದೊಳಿರ್ದ
ವರ ಇಷ್ಟವನು ಪೂಜಿಸಿ ನರರಿಗೆ
ಒರೆಯದಂತಿರುವ ನಾನೇನೆಂದು ||4||
ನಾನಾರ್ಥದ ತತ್ವವು ಇದನು ನೀ ಜ್ಞಾನಾರ್ಥದಿ
ನೋಡಲು ನಾನಾರ್ಥವು ಎಲ್ಲಾ
ಜ್ಞಾನಾರ್ಥವೆಯಾಗಿ ಬೋಧಮಯನು
ಸೋಮೇಕಟ್ಟೆ ದೇವನೊಳಾಯ್ತು ||5||

ಸ್ತುತಿ ಮಾಡಿದರೀಗ
ಸ್ತುತಿ ಮಾಡಿದರೀಗ ಅತಿನಿಂದ್ಯಖತಿಗೊಂಬೆ
ಹೇ ಮನವೇ ಮನವೇ
ಸ್ತುತಿ ಮಾಡಿದವರು ಎನ್ನಿತರರೆಂದೆನಬೇಡ
ಹೇ ಮನವೇ ಮನವೇ ||ಪ||
ಕೊಂಡಾಡುವರ್ಕೆಲರ್ನಿಂದೆ ಮಾಡುವರ್ಕೆಲರ್
ಹೇ ಮನವೇ ಮನವೇ
ಅಖಂಡ ತತ್ವವೆಂದು ನೀ ಮಂಡಲ ತ್ರಯ ತಿಳಿ
ಹೇ ಮನವೇ ಮನವೇ ||1||
ಕಂಡಿ ಎಲ್ಲವ ಮುಚ್ಚಿ ಉದ್ದಂಡನ ಧ್ಯಾನಿಸು
ಹೇ ಮನವೇ ಮನವೇ
ತಂಡ ತಂಡದಿ ಪ್ರಭೆ ಕಂಡು ನೀ ಸುಖಮಿರು
ಹೇ ಮನವೇ ಮನವೇ ||2||
ಕರಮನ ಭಾವದೊಳಿರುವಂಥ ಲಿಂಗವೇ
ಹೇ ಮನವೇ ಮನವೇ
ಗುರುಮುಖದೊಳು ಕರಸ್ಥಲದ ಲಿಂಗವ ಕಂಡು
ಹೇ ಮನವೇ ಮನವೇ ||3||
ಸ್ಥಿರವಾಗಿ ಭಜಿಸು ನೀ ಪರಿವುದು ಭವಮಾಲೆ
ಹೇ ಮನವೇ ಮನವೇ
ಶರಣರ ನಡೆಗಳ ಜರಿದು ನೀ ನಡೆಯದಿರು
ಹೇ ಮನವೇ ಮನವೇ ||4||
ಮತ್ರ್ಯಲೋಕದ ಬಾಳು ನಿತ್ಯವಲ್ಲದು ಜಳ್ಳು
ಹೇ ಮನವೇ ಮನವೇ
ಕರ್ತೃತ್ವವಿದ್ದಲ್ಲಿ ಭೃತ್ಯನಾಗಿರು ನೀನು
ಹೇ ಮನವೇ ಮನವೇ ||5||
ಜನಮೆಚ್ಚಿ ನಡೆದರೆ ಗುರುಮೆಚ್ಚುವನಲ್ಲ
ಹೇ ಮನವೇ ಮನವೇ
ಗುರು ಮೆಚ್ಚಿ ನಡೆದರೆ ಜನ ಮೆಚ್ಚುವುದಿಲ್ಲ
ಹೇ ಮನವೇ ಮನವೇ ||6||
ಇಷ್ಟಲಿಂಗದಿ ಭಕ್ತಿ ದೃಷ್ಟಿಯ ಬಲಿದಿರು
ಹೇ ಮನವೇ ಮನವೇ
ದಿಟ್ಟ ಸೋಮೇಕಟ್ಟೆ ದೇವ ನೀನಾಗುವೆ
ಹೇ ಮನವೇ ಮನವೇ ||7||

ಸುಮ್ಮನೆ ದೊರೆವುದೆ ಮುಕ್ತಿ
ಸುಮ್ಮನೆ ದೊರೆವುದೆ ಮುಕ್ತಿ ಪರ
ಬ್ರಹ್ಮದ ನಿಜವನು ತಿಳಿವುದೆ ಮುಕ್ತಿ ||ಪ||
ಎರಡೊಂದುಗೂಡುವ ತನಕ
ಎರಡರ ಮಥನದಿ ಶಿಶುಹುಟ್ಟುವತನಕ
ಶಿಶುವನು ಭಕ್ಷಣೆ ಮಾಡುವತನಕ
ಅಲ್ಲಿ ಖಂಡಿತವಾಗಿ ಅಖಂಡನಾಗುವ ತನಕ ||1||
ಮೊಸರು ಗಡಿಗೆ ಮಂತನಿಡದೆ ಒಳ್ಳೆ
ಹಸನಾಗಿ ಕಡೆವ ಸಮಯಕೆ ಕೈಗೊಡದೆ
ಜಠರಾಗ್ನಿಯೊಳಗದನಿಡದೆ
ನಿಟಿಲ ಭ್ರೂಮಧ್ಯದೊಳಡಗಿಸಿ ಕೊಳದೆ ||2||
ಕೆಟ್ಟ ಮನುಜರಿದ ಬಿಟ್ಟು ತಮ್ಮ
ದೃಷ್ಟಿಗೆ ಬಿದ್ದ ಅರ್ಥಕೆ ಎದೆಗೊಟ್ಟು
ಕೆಟ್ಟು ಹೋಹರು ತಾವು ಭ್ರಷ್ಟು
ಸೋಮೇಕಟ್ಟೆದೇವನ ಪಾದವರಿಯದೆ ಬಿಟ್ಟು ||3||

ಸೋಮೇಕಟ್ಟೆ ಬಸವೇಶ
ಸೋಮೇಕಟ್ಟೆ ಬಸವೇಶ ಕರಿಬಸವೇಶ ||ಪ||
ಫಾಲನಯನ ಕರಿಬಸವ ಗಾನಲೋಲ ವಾಹನನೆ
ಮುಕ್ತಿ ಕೀಲಿಕೈಯನು ಕೊಟ್ಟವನೆ
ಅನುಕೂಲ ಧರ್ಮವಪೇಳಿ ಲೀಲೆಯ ತೋರಿದ
ಮೂರ್ಲೋಕದ ಭಾಗ್ಯಶಾಲಿ ಕಲ್ಯಾಣದ ಬಸವೇಶ | ಕರಿಬಸವೇಶ ||1||
ಜಾತಿ ಭೇದವ ತುಚ್ಛೀಕರಿಸಿ
ಮನುಜಾತರೆಲ್ಲರನೇಕೀಕರಿಸಿ
ಮಹಿಮರೆಲ್ಲರನು ಕರೆಸಿ
ಒಂದೇ ಗೋಪುರದಲಿ ಸತ್ಕರಿಸಿ
ಅವರಾಟ ಮಕ್ಕಳನೇ ಒಲಿಸಿ
ಚೈತನ್ಯವಿಲ್ಲದ ದಲಿತರ ಲಿಂಗವಂತರೆನಿಸಿ
ಮುಕ್ತಿಕಾಂತರ ಮಾಡಿದ ಬಸವೇಶ | ಕರಿಬಸವೇಶ ||2||
ಹೇಯ ವರ್ತನೆಗಳ ಸುಟ್ಟು
ತಾನುಪಾಯದಿ ಹೃದಯವ ಮುಟ್ಟು
ಮೇಲೈದು ಸಂಸಾರ ಸಮಬಿಟ್ಟು
ಕೊಟ್ಟೇ ಕಾಯಕದ ಕಟ್ಟು
ದಯವೇ ಧರ್ಮದ ಮೂಲ ವೆಂಬುವ ಮಂತ್ರದ ಗುಟ್ಟು
ನಯವಾಗಿ ಪೇಳುತ ಜಯಭೇರಿ ಹೊಡೆಸಿದ ಬಸವೇಶ | ಕರಿಬಸವೇಶ ||3||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಹೊನ್ನುಡಿಕೆ ಗಂಗಾಧರಸ್ವಾಮಿಗಳ ತತ್ವಪದಗಳು

ರಾಮಲಿಂಗವ ನೋಡಿರೋ
ರಾಮಲಿಂಗವ ನೋಡಿರೋ
ನಿಮ್ಮಯ ಭವ ನಿರ್ನಾಮವಾಯಿತು ಕಾಣಿರೋ
ಆ ಮಹಾತಾರಕ ಸ್ವಾಮಿ ಪೂಜಿಸಿದನು
ಕಾಮ ನಿಷ್ಕಾಮವೆಂಬುಭಯವಿಧಿಗಳಿಂದ ||ಪಲ್ಲವಿ||
ಮೂರು ಲಕ್ಷ್ಯದ ಮಧ್ಯದಿ ತಾರೆಗಳಿಂದ ಮೀರಿ ಪಶ್ಚಿಮ ಭಾಗದಿ
ತೋರುತಲಿದೆ ಸೂರ್ಯ ಕೋಟಿ ಪ್ರಭೆಗಳಂತೆ
ದಾರುವನದ ಋಷಿಗಳು ಕಾಣರಿದನಂತೆ ||1||
ಪಂಚಾಕಾರವನು ಮೀರಿಯೆ ನೋಡೆ ಪಂಚ ಲಕ್ಷಣವಿದನು
ಸಂಚಿತ ಕರ್ಮವು ಕಳೆದು ನಿರ್ಮಲವಾಗಿ
ಮಿಂಚಿನಂದದಿ ತೇಜದಿರವೆ ಆಗುವರಾಗಿ ||2||
ಜಗವೆಲ್ಲವಿದರೊಳಗೆ ಸೊಗಸಿ ಕಾಣುವ ಬಗೆಯು ತೋರದು ನಿಮಗೆ
ಹಗಲಿರುಳಳಿದ ನಿರ್ಮಲದಾಗಸದಂತೆ
ಮಿಗೆಮೀರಿ ಮೆರೆದು ಸೋಹಂಭಾವಿ ಎದುರಿಗೆ ||3||
ರಘುರಾಮನಿದ ಪೂಜಿಸಿ ಬ್ರಹ್ಮಹತ್ಯದ ಅಘವನೆಲ್ಲವನೊರಸಿ
ಮಿಗಿಲಾದ ಭಸಿತ ರುದ್ರಾಕ್ಷಿಯ ಧರಿಸಿ
ತಾ ಜಗದೊಳು ಪೂಜ್ಯ ಪೂಜಕ ಭಾವದಿ ||4||
ಸೋಮೇಕಟ್ಟೇಶ್ವರನ ಕರದೋಳಿರ್ಪ ಆ ಮಹಾಶಿವಲಿಂಗವೇ
ಭುವಿಯೊಳು ಪುಲಿಗೆರೆ ಪರ್ವತದೊಳು ನೆಲಸಿ
ಸ್ವಾಮಿ ಶರಣ ಗಂಗಾಧರನೊಳು ಬೆರಸಿದ ||5||

ಶಿವಯೋಗಿಗಳಿಗೆ ಸಾಧ್ಯ
ಶಿವಯೋಗಿಗಳಿಗೆ ಸಾಧ್ಯ ರಾಗಿಗಳಿಗೆ ಚೋದ್ಯ | ಏ ಗಿಣಿ ಏ ಗಿಣಿಯೇ
ಭೋಗಿಯ ಪಡೆಯೊಳು ಕೂಗುವ ಪಣ್ಣಿದು | ಏ ಗಿಣಿ ಏ ಗಿಣಿಯೇ ||ಪಲ್ಲವಿ||
ತೊಟ್ಟುಗಳಿಲ್ಲದೆ ಹುಟ್ಟಿದೆ ಗಗನದಿ | ಏ ಗಿಣಿ ಏ ಗಿಣಿಯೇ
ಇದ ಮುಟ್ಟಿ ಭುಂಜಿಸಿದರೆ ಮೃದುವಲ್ಲ ಕಟುವಲ್ಲ | ಏ ಗಿಣಿ ಏ ಗಿಣಿಯೇ ||1||
ಕೊಟ್ಟು ಕೊಂಬವರಿಲ್ಲ ಸೃಷ್ಟಿಯೊಳಗೆಲ್ಲ | ಏ ಗಿಣಿ ಏ ಗಿಣಿಯೇ
ನೆಟ್ಟ ದೃಷ್ಟಿಗೆ ಎದುರಿಟ್ಟು ಕಾಣುತಲಿದೆ | ಏ ಗಿಣಿ ಏ ಗಿಣಿಯೇ ||2||
ಬಣ್ಣಿಪರಿಲ್ಲದೆ ತಣ್ಣದೆ ಇರುತಿದೆ | ಏ ಗಿಣಿ ಏ ಗಿಣಿಯೇ
ಕಣ್ಣಿನಾಚೆಯ ಭೂಮಿ ಕಡಲೊಳಗಿರುವುದು | ಏ ಗಿಣಿ ಏ ಗಿಣಿಯೇ ||3||
ಹುಣ್ಣಿಮೆ ಚಂದಿರ ಉದಿಸಿತು ಇದರೊಳು | ಏ ಗಿಣಿ ಏ ಗಿಣಿಯೇ
ಚಿಣ್ಣವಸ್ತೆಗೆ ಚಿತ್ತು ಚಿಗುಳಿಯ ಸವಿದಂತೆ | ಏ ಗಿಣಿ ಏ ಗಿಣಿಯೇ ||4||
ಪಂಚಮುಖದ ಪಣ್ಣು ಹಂಚುವರಿಲ್ಲವು | ಏ ಗಿಣಿ ಏ ಗಿಣಿಯೇ
ವಂಚಿಸಿ ಬಿಟ್ಟು ನಿನ್ನೊಡತಿಗೆ ಈ ಪಣ್ಣ | ಏ ಗಿಣಿ ಏ ಗಿಣಿಯೇ ||5||
ಪ್ರೇಮಾಸ್ತಿ ಭಾತಿಯ ಸೀಮೆಯ ಪಣ್ಣಿದು | ಏ ಗಿಣಿ ಏ ಗಿಣಿಯೇ
ರಾಮತಾರಕವೆಂಬ ನಾಮಕ್ಕೆ ಗುರುವಿದು | ಏ ಗಿಣಿ ಏ ಗಿಣಿಯೇ ||6||
ಶ್ವಾಸಗಳಾಡದೆ ಸವಿದರೆ ನೀನೀಗ | ಏ ಗಿಣಿ ಏ ಗಿಣಿಯೇ
ಈಶ ಪದವಿ ಆಚೆ ದೇಶಕ್ಕೆ ಹೋಗುವೆ ಏ ಗಿಣಿ ಏ ಗಿಣಿಯೇ ||7||
ಚತುರಾಚಾರ್ಯರಿಗೆಲ್ಲ ಗತಿಯಕೊಡುವ ಪಣ್ಣು | ಏ ಗಿಣಿ ಏ ಗಿಣಿಯೇ
ಮತಿವಂತ ನಿಜಗುಣ ಯತಿಗಳ ಜೀವನ | ಏ ಗಿಣಿ ಏ ಗಿಣಿಯೇ ||8||
ವ್ರತನೇಮ ಉಪವಾಸ ವಿಧಿಯಿಲ್ಲ ಇದಕೆಯು | ಏ ಗಿಣಿ ಏ ಗಿಣಿಯೇ
ಶತಯುಗ ಕಲ್ಪವು ಕ್ಷಣಮಾಗಿ ತೋರ್ಪುದು | ಏ ಗಿಣಿ ಏ ಗಿಣಿಯೇ ||9||
ಆದಿಯೊಳಗೆ ಕಲಿಗಣನಾಥ ಇದರಿಂದ | ಏ ಗಿಣಿ ಏ ಗಿಣಿಯೇ
ಬೋಧಿಸಿ ದೀಕ್ಷೆಯನಿತ್ತ ಮಹೇಶಗೆ | ಏ ಗಿಣಿ ಏ ಗಿಣಿಯೇ ||10||
ಮೇದಿನಿಯೊಳು ಬಸವಾದಿ ಪ್ರಮಥರೆಲ್ಲ | ಏ ಗಿಣಿ ಏ ಗಿಣಿಯೇ
ಸಾಧಿಸಿ ಸಾಯುಜ್ಯ ಪದವಿಯ ಪಡೆದರು | ಏ ಗಿಣಿ ಏ ಗಿಣಿಯೇ ||11||
ಮೂಸಿ ಮುಟ್ಟಲು ಇದ ನಾಶವಹುದು ಜನ್ಮ | ಏ ಗಿಣಿ ಏ ಗಿಣಿಯೇ
ಲೇಸಿನಿಂ ನೋಡಲು ಆಶೆಯನಳಿವುದು | ಏ ಗಿಣಿ ಏ ಗಿಣಿಯೇ ||12||
ಸೋಮೇಕಟ್ಟೇಶನ ಸುಲಭ ಪ್ರಸಾದವು | ಏ ಗಿಣಿ ಏ ಗಿಣಿಯೇ
ಕಾಮಿಸಿ ಪಡೆಯೆ ಕರ್ಮಕ್ಕೆ ದೂರನು | ಏ ಗಿಣಿ ಏ ಗಿಣಿಯೇ ||13||

ತಿಳಿಸುವ ಮಾತಲ್ಲ ತಿಳಿಸದೆ
ತಿಳಿಸುವ ಮಾತಲ್ಲ ತಿಳಿಸದೆ ತಿಳಿಯುವ ಮಾತಲ್ಲ
ತಿಳಿಸದೆ ತಿಳಿಯದು ತಿಳಿಯದೆ ಹೊಳೆಯದು
ಹೊಳೆಯದೆ ಇಳಿಯದು ಇಳಿಯದೆ ಉಳಿಯದು ||ಪಲ್ಲವಿ||
ಭೇದವಳಿಯಬೇಕು ಮನದ ವಿವಾದ ಕಳೆಯಬೇಕು
ಸಾಧು ಶರಣರ ಸಂಗಸಾಧಿಸಿ ತತ್ವದ
ಹಾದಿಯ ತಾವ್ ಮೋದದಿ ಪಿಡಿಯದೆ ||1||
ಸಾಧಿಸುವುದು ಯುಕ್ತಿ ನಿಜಾನಂದ ಬೋಧದೊಳಗೆ ಮುಕ್ತಿ
ಆದಿ ಮೂರುತಿ ಭವತಾರಕ ದೇವನ
ಪಾದಪೂಜಿಸಿ ಸದ್ಗುರುವನು ಭಜಿಸದೆ ||2||
ಕರ್ಮವಳಿಯಬೇಕು ತಾ ನಿಜಧರ್ಮ ತಿಳಿಯಬೇಕು
ವರ್ಮ ಮೂರುತಿ ಕರಿವೃಷಭೇಂದ್ರನ ಸ
ದ್ಧರ್ಮವ ತಿಳಿದು ಕರುಣವ ಪಡೆಯದೆ ||3||

ಇದು ಅನಾದಿ ಲಿಂಗವೆನ್ನ
ಇದು ಅನಾದಿ ಲಿಂಗವೆನ್ನ ಎದುರಲಿರುತಿದೆ
ಸದಸದಾದಿಯಿಂದ ಸರ್ವ ಪೂರ್ಣವಾಗಿದೆ ||ಪಲ್ಲವಿ||
ಇಷ್ಟಲಿಂಗವಾಗಿ ತನುವ ಶ್ರೇಷ್ಠ ಮಾಡಿದೆ
ಅಷ್ಟವರ್ಣ ಸಿದ್ಧಿಯಿತ್ತು ದೃಷ್ಟಿಯೊಳಗಿದೆ
ನೈಷ್ಠೆ ಭಕ್ತಿ ಒಲಿದು ಭಜಿಸೆ ಎಷ್ಟೋ ಸುಖವಿದೆ
ಕಷ್ಟಕರ್ಮ ಕಳೆದು ನಿಜವು ಇಷ್ಟು ನೆಲಸಿದೆ ||1||
ಪ್ರಾಣಲಿಂಗವೆಂಬುದಾಗಿ ಪವನವೆರಸಿದೆ
ತ್ರಾಣಬಿಂದು ಕಳೆಯುನಾದ ಶ್ರೇಣಿಯಾಗಿದೆ
ಘ್ರಾಣಮುಖದಿ ಹಂಸ ಜಪವ ಕೇಣಿಕೊಂಡಿದೆ
ಮಾಣದೆನ್ನ ಹೃದಯ ಕಮಲ ಮನೆಯ ಮಾಡಿದೆ ||2||
ಭಾವಲಿಂಗವೆಂಬುದಾಗಿ ಬಯಲ ಬಳಸಿದೆ
ಕೇವಲದ ನಿರ್ಗುಣದಿ ಸಾವಧಾನಿದೆ
ಜೀವಪರಮರೈಕ್ಯಗೊಳಿಸಿ ದೇವರೆನಿಸಿದೆ
ಪಾವನಾತ್ಮನೆಂಬೊ ನಾಮ ಹೆಸರು ಪಡೆದಿದೆ ||3||
ಮಹಲಿಂಗವೆಂಬುದಾಗಿ ಮಹಿಯೊಳಿರುತಿದೆ
ಸೋಹಂಭಾವದೊಳಗುಹೊರಗು ಸಾಹಸವಿದೆ
ಓಹೋ ಎಂದು ಉನ್ಮನಿಯ ಗೇಹಮಾಡಿದೆ
ನಾಹಂ ನಷ್ಟವೆನಿಸಿ ಶಿವೋಹಂ ಎನುತಿದೆ ||4||
ಸೋಮೇಕಟ್ಟೆ ಈಶನೆಂದು ಸೀಮೆ ಮೀರಿದೆ
ಭೂಮಿಮೇಲ್ಕಕುದ್ಗಿರಿಯ ಒಳಗೆ ಇರುತಿದೆ
ರಾಮಭೀಮರುಗಳ ಪೂಜೆ ಕಾಮ್ಯವೆನುತಿದೆ
ನಾಮ ಗಂಗಾಧರನ ಭಜನೆ ಪ್ರೇಮಗೊಂಡಿದೆ ||5||

ಬಾರೊ ಬಾರೊ ಬಾ
ಬಾರೊ ಬಾರೊ ಬಾಲ
ನಿನಗೆಯು ತೋರುವೆ ಶಿವಲೀಲಾ ||ಪಲ್ಲವಿ||
ಶಿಂಶುಮಾರಚಕ್ರೆ ಅದರೊಳು ಓಂ ಶಿವ ಸವಿಸಕ್ರೆ
ಹಂಸನಿರವಯಲ ಜಿಹ್ವೆಯೊಳಾಡುವೆ
ಧ್ವಂಸ ಮಾಡು ಭವಭವಗಳ ಕಿಲ್ಬಿಷ ||1||
ಪ್ರಣವದ ನೆಲೆಯ ಮನೆಯೋಳ್
ತ್ರಿಣಯನ ಅಣಿಮದಾದಿ ಅದರೋಳ್ ಜೋಗುಳ
ಗಣನೆ ದಶಕಫಣಿ ಫಣಿಮಣಿ ಬೆಳಕಿನ
ಕಣಿಯ ಗುಪ್ತದೊಳಗಾನಂದಿಸು ನೀಂ ||2||
ಬಯಲ ಬಯಲ ಬಟ್ಟೆ ಅದರೊಳು
ಪ್ರಿಯವೆ ಸೋಮೇಕಟ್ಟೆ
ನಯವಿಧನಾಗಿಯೆ ಸ್ವಯವನೊಂದಿ ನೀಂ
ಕಯಕೋಡಿಲ್ಲದ ಮಹಿಮ ಮಹಂತ ನೀಂ ||3||

ರಾಚೋಟಿ ಲಿಂಗ ಬಾರೋ
ರಾಚೋಟಿ ಲಿಂಗ ಬಾರೋ ನೀ
ಎನ್ನ ವಾಜ್ಯ ಮಾನಸದಿ ಕೂಡೊ
ಸೂಚಿಸಿ ನೀ ಎನಗೆ ತತ್ ತ್ವಂ ಅಸಿಯ
ಬೇರ್ಪಡಿಸಿ ಮಹದಾದಿ ಮರ್ಮ ಪೇಳೋ ||ಪಲ್ಲವಿ||
ಮೊದಲು ಏನಿರ್ದುದಯ್ಯಾ ನಾನೋ ನೀನೋ
ಅದರ ಮೊದಲಾವುದಯ್ಯ ವಿಧವಿಧದಿ ಪೇಳಿ ನೀಂ
ಮುದವ ತೋರಿಸಿ ಸಲಹೊ ಸದಮಲಾತುಮನೆ ನೀನು ||1||
ನಾನು ನೀನು ಇಲ್ಲದಂದು ಮುನ್ನವೇ ತಾನು ತಾನಾಗಿರ್ಪನೆ
ವದವಿ ನಿನ್ನಾಮವನು ಬೊಮ್ಮ ತಿಮ್ಮನು ಎಂದು
ವಿಧವಿಧದಿ ನುಡಿಯುತಿಹರು ||2||
ಅವರವರ ಮತಕೆ ತಕ್ಕ ಭಾವನೆಯ ಅವರವರು ಮಾಡು
ತಿಹರು ಅವರು ಇವರಿಗೂ ಸಿಲ್ಕದಾ
ಚಿನ್ಮಾತ್ರದರಿವು ನೀನೆಂದು ತಿಳಿಯೋ ||3||
ಆದಿ ಪರಶಿವನೆಂಬರು ಕೆಲರಾದಿ ವಿಷ್ಣುವೆಂತೆಂಬರು
ಮೇಲೆ ಪ್ರಕೃತಿಯು ಗಣಪ ಜಿನ ಭೈರವನಲ್ಲಾ
ಖುದಾ ಸರ್ವೇಶನೆಂತೆಂಬರು |4||
ಆದಿ ಅಂತ್ಯಗಳಿಲ್ಲದಾ ಮಹಘನವ ಏನೆಂದು
ಪೇಳಲಳವೇ ದೇವ ಸೋಮೇಕಟ್ಟೆ
ಕರಿವೃಷಭಲಿಂಗೇಂದ್ರ ನೀನೆಂದು ತಿಳಿವುದಯ್ಯ ||5||

ಸೋಹಂ ಸಿದ್ಧಿಯದೆಂಥಾದ್ದೋ
ಸೋಹಂ ಸಿದ್ಧಿಯದೆಂಥಾದ್ದೋ ದಾಸೋಹಂ ಭೂಮಿಲಿ
ಬೆಳೆಯಾದ್ದೋ ಕೋಹಂ ಎಂಬುದು ನಿಜವಾದ್ದೋ
ಶಿವೋಹಂ ಎಂಬನ ಒಳಗಾದ್ದೋ ||ಪಲ್ಲವಿ||
ನಾಶಿಕ ಪುರಿಯೊಳು ಸುಳಿಯುವುದೋ
ಶಿಖಸಾಸಿರ ದಳದೊಳು ಹೊಳೆಯುವುದೋ
ಈಶ ಶಕ್ತಿಗಳ ನಿಜವಿಡಿದಿಹುದೋ
ಚಿದರಾಶಿಯ ಮಹಿಮೆಯ ತೋರುವುದೋ ||1||
ಆಧಾರದೊಳು ಇದು ಹುಟ್ಟಿಹುದೋ
ಆಜ್ಞೇಯದ ತುದಿ ಮುಟ್ಟಿಹುದೋ
ಬೋಧಾನಂದದ ನಿಜವಹುದೋ
ಶಿವಸಾಧಕರಿಗೆ ಸವಿ ದೋರುವುದೋ ||2||
ಸಚ್ಚಿದಾನಂದವೆ ನಿಜವಹುದೋ
ಗುರುಮಚ್ಚಿನ ಜ್ಞಾನದ ಕುರುವಹುದೋ
ಎಚ್ಚರ ವಿದ್ದರೆ ಸಿದ್ಧಿಪುದೋ
ಮಹದಚ್ಚರಿ ಮಹಿಮೆಯ ತೋರುವುದೋ ||3||
ಅಷ್ಟವರ್ಣಕಿದು ಮೊದಲಹುದೋ
ನಿಜದೃಷ್ಟಿ ಮಧ್ಯ ಮನೆ ಮಾಡಿಹುದೋ
ಸೃಷ್ಟಿಯೊಳಗೆ ತಾ ಬೆಳಗುವುದೋ
ನಿನ್ನ ಕಷ್ಟ ಭ್ರಮೆಗಳನು ಕಳೆಯುವುದೋ ||4||
ಕಾಲಕರ್ಮವನು ಕೆಡಿಸುವುದೋ
ನಿನ್ನ ಸೋಮಧರನ ನಿಜ ಮಾಡುವುದೋ
ಸೋಮೇಕಟ್ಟೆ ಗುರು ತಾನಹುದೋ
ನಿಃಕಾಮಿ ನಿರಂಜನ ನೀನಹುದೋ ||5||

ಪರಮ ಗುರುವಿನ ಚರ
ಪರಮ ಗುರುವಿನ ಚರಣ ಕಮಲವ ಬಿಡದೆ ನೀಂ ಪಿಡಿದಾಡೆಲೋ
ಪರಮಭಕ್ತ ನೀನಾಗಿ ಸುಖದೊಳು ಇರುತಿಹೆ ನೀನೋಡೆಲೊ ||ಪಲ್ಲವಿ||
ಆರು ನೆಲೆಗಳು ಮೂರು ಮಂತ್ರದಿ ಕಾರಣಿಕವ ನೋಡೆಲೋ
ಕಾರಣಿಕದ ಗುರುವಿನಂಘ್ರಿಯ ಸೇರಿ ನೀಸುಖ ಬಾಳೆಲೋ ||1||
ಗಂಗೆ ಗೋದಾ ಯಮುನೆ ತೀರದಿ ಸಂಗಮೇಶ್ವರ ನೋಡೆಲೊ
ಅಂಗಲಿಂಗ ಭವಂಗಸರಸಿಜ ಲಿಂಗ ಪೂಜೆಯ ಮಾಡೆಲೋ ||2||
ವೇದ ನಾಲ್ಕನು ಪಾದವನು ಮಾಡಿ ಆದಿ ಸೋಮೇಕಟ್ಟೆಯಾ
ಸೋಜಿಗದ ಕರಿಬಸವನಂಘ್ರಿಯ ಸೇರಿ ನೀ ಸುಖ ಬಾಳೆಲೋ ||3||

ಗುರು ಮುಟ್ಟಿ ಗುರುವಾಗಿ
ಗುರು ಮುಟ್ಟಿ ಗುರುವಾಗಿ ಅರುಹಿನೋಳ್ ಅರುವಾಗಿ
ಪರಮ ನಾದ ಬಿಂದು ಕಳೆಯೇ ಭರಿತಳಾದೆ ತಂಗ್ಯಮ್ಮ ||ಪಲ್ಲವಿ||
ಇಷ್ಟಲಿಂಗಕ್ಕೆ ತನುವ ಪ್ರಾಣಲಿಂಗಕ್ಕೆ ಮನವ
ಭಾವಲಿಂಗಕ್ಕೆ ಧನವ ಅರ್ಪಣೆ ಮಾಡು ತಂಗ್ಯಮ್ಮ ||1||
ಶ್ರೋತ್ರದೋಳ್ ಪ್ರಸಾದಲಿಂಗ ನೇತ್ರದೋಳ್ ಶಿವಲಿಂಗ
ನಾಸಿಕದೋಳ್ ಆಚಾರಲಿಂಗ ವಿಚಾರ ಮಾಡು ತಂಗ್ಯಮ್ಮ ||2||
ತ್ವಕ್ಕಿನೋಳ್ ಚರಲಿಂಗ ಜಿಹ್ವೆಯೋಳ್ ಗುರುಲಿಂಗ
ಮಿಕ್ಕ ಭ್ರೂಮಧ್ಯದೋಳ್ ಮಹಲಿಂಗವ ನೋಡು ತಂಗ್ಯಮ್ಮ ||3||
ಬಸವದಿ ಪ್ರಮಥರು ಉಸುರಿದ ವಾಕ್ಯದಿ ನಡೆದಂಥ
ಮಾರ್ಗವ ಹಿಡಿದು ಹಸನ ಮಾಡು ತಂಗ್ಯಮ್ಮ ||4||
ಆರು ಲಿಂಗಕ್ಕಾರು ಭಕ್ತಿ ಆರು ಅಕ್ಷರ ಮಂತ್ರದಿಂದ
ಆರು ಪ್ರಸಾದವನು ಲಿಂಗಕ್ಕರ್ಪಿಸು ತಂಗ್ಯಮ್ಮ ||5||
ಹನ್ನೆರಡಕ್ಷರ ಮಂತ್ರ ಒಂಭತ್ತು ವೇಳೆ ಜಪಿಸಿ
ಭಿನ್ನವಿಲ್ಲದೆ ನೂರ ಎಂಟು ಜಪವ ಮಾಡು ತಂಗ್ಯಮ್ಮ ||6||
ಇಪ್ಪತ್ತೊಂದು ಸಾವಿರದ ಆರುನೂರು ಜಪವನ್ನು
ಆಚಾರದಿಂದ ಹಿಡಿದು ಮಾಡೆ ಸೂರ್ಯೋದಯದಿ ತಂಗ್ಯಮ್ಮ ||7||
ನೀಲಮಂಟಪದೊಳು ಆಲಿ ಎರಡ ನಿಲ್ಲಿಸಿ
ಕಾಲಹರನ ಸ್ಮರಿಸಿ ಪ್ರಾಣ ಮೇಲಕ್ಕೆಳಯೇ ತಂಗ್ಯಮ್ಮ ||8||
ಸೋಮೇಕಟ್ಟೆ ಕರಿಬಸವಾರ್ಯನು ಬೋಧಿಸಿದಂಥಾ
ಸೋಹಂ ಮಂತ್ರವ ಬಿಡದೆ ಜಪಿಸಿ ಮುಕ್ತಳಾಗು ತಂಗ್ಯಮ್ಮ ||9||

‘ಓಂ’ ‘ಓಂ’ ನಿಲ್ಲಿಸ
‘ಓಂ’ ‘ಓಂ’ ನಿಲ್ಲಿಸು ಕಾಯದಿ ಮಧ್ಯದಿ
ಸೋಹಂ ಸಿದ್ಧಿಯ ಪ್ರಣಮವಿದೆ
ಆಹಾ ಆಹಾ ಹಂಸಧ್ವನಿಯೊಳು ಅ ಉ ಮಾ
ಕ್ಷರಗಳನುಸುರುತಿದೆ ||ಪಲ್ಲವಿ||
‘ನ’ ‘ನ’ ಎಂಬುವ ನಗಾರಿ ಹೊಡೆಯುತೆ
ಜ್ಞಾನದ ರತ್ನವು ಹೊಳೆಯುತಿದೆ
ನಾ ನೀ ನೆಂಬುವದೇನೊಂದಿಲ್ಲದೆ
ತಾನೇ ತನ್ನೊಳು ತಿಳಿಸುತಿದೆ ||1||
‘ಮಃ’ ‘ಮಃ’ ಎಂಬುವ ಮಕಾರಪ್ರಣಮವು
ಮಹಮನೆಯೊಳುತಾಚರಿಸುತಿದೆ
ರಾಮ ತಾರಕ ನಾಮದ ಸೀಮೆಗೆ
ಹೇಮದಂತೆ ಸಾಕ್ಷಿರುತಲಿದೆ ||2||
‘ಶಿ’ ‘ಶಿ’ ಎಂಬುವ ಶಿಕಾರ ಪ್ರಣಮವು
ಶಿವಲಿಂಗದೊಳು ಬೆಳಗುತಿದೆ
ನಾಶಿಕ ತುದಿಯೊಳು ಸೂಸುವ ಅಕ್ಷರ
ಹಂಸನೊಳೈವತ್ತು ತೋರುತಿದೆ |3||
‘ವಾ’ ‘ವಾ’ ಎಂಬುವ ವಕಾರ ಪ್ರಣಮವು
ಒಳಗು ಹೊರಗು ತಾ ಚರಿಸುತಿದೆ
ಭಾವಾಭಾವಕೆ ಕೇವಲ ಬೆಳಕಿದು,
ಭಾವಿಸೆ ಬಾಗಿಲೊಳಿರುತಲಿದೆ ||4||
‘ಯ’ ‘ಯ’ ಎಂಬುವದೆಲ್ಲವು ಆಗಿ
ಕಾಯದ ಕರ್ಮವ ಕಳೆಯುತಿದೆ
ರಾಯ ಚಿದಾತ್ಮಕ ಸೋಮೇಕಟ್ಟೇಶನು
ಧ್ಯೇಯದಿ ಅರುಹಿದ ಅರಿವು ಇದೇ ||5||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಮಲ್ಲೇನಹಳ್ಳಿ ಚನ್ನಬಸವಯ್ಯನವರ ತತ್ವಪದಗಳು

ಇಂತು ಪೇಳುವುದೆನ್ನಳವೆ
ಇಂತು ಪೇಳುವುದೆನ್ನಳವೆ ಗುರು ಕರುಣದ ಬಲವೆ ||ಪಲ್ಲವಿ||
ಮೊದಲಾಧಾರವೆ ಅದು ಭೂವರವೆ
ಪದುಮದ ಚಂದಚೌದಳದಂದವೆ
ಅದರಕ್ಷರವೆ ‘ವಾದಿಸಾಂತ’ದುವೆ ಇದು
ತಳ ಧೌತ ವರ್ಣದ ಇರವೆ
ಸಿದ್ಧಿ ವಿನಾಯಕನಿದ್ದಪನಿಜವೆ
ಸಾದರದಲ್ಲಿ ಸುಸ್ವರ ಮಂತ್ರಂಗಳೆ
ಮೊದದಿ ಮೂರಾರತಿ ಬಲಗೊಂಡಿವೆ
ಬಾಧಕಹರಿಪನ ತಾರಲ್ಲಿಹುದು
ಬೋಧದ ಪೆಣ್ದುಂಬಿಯ ಸ್ವರವಹುದು
ಆದಿಯ ಆಚಾರದ ಲಿಂಗವಹುದು
ಸದ್ಯೋಜಾತದಮುಖವದು ಆದುದು
ಇದ್ದಳು ಕ್ರಿಯಾಶಕ್ತಿ ಒಲವಿಂದ
ಬದ್ಧವಾದ ಪೀತದು ಬಹುಚಂದ
ಸಿದ್ಧ ಸುಚಿತ್ತದ ಹಸ್ತಗಳಿಂದದು ಶುದ್ಧ
ನಿವೃತ್ತಿಕಲೆ ಋಗ್ವೇದ ನಿರ್ಧರವನಾದಿ ಸಂಜ್ಞೆಯ ಘ್ರಾಣದ
ಸದ್ಗುಣಗಂಧದ ವಿಷಯ ಮುಖದ
ಚಿದ್ಘನತಾರಕಾಕೃತಿ ರೂಪಿಂದದು
ಮದ್ಗುರು ಭಕ್ತಾಂಗದ ಸೊಬಗೆಂದಿದ
ನಿರ್ಧರ ಬಿಡದಲೆ ತಿಳಿಮೊದಲಿಂದ ||1||
ಸಲಿಲಕಳೇವರದುನುವಿನ ಗತಿಯೋಳ್
ಸಲೆ ಸ್ವಾಧಿಷ್ಠಾನ ಜಲಜದರುದಲದೋಳ್
‘ಬಾದಿಲಾಂತ’ಕ್ಷರನಿಲಯದಿ ಬ್ರಹ್ಮಷಟ್ಸಾಸಿರವ
ಪುಳಕದ ಮಂತ್ರ ಬಲಗೊಂಡೆಸೆಯಲ್ಕಲ್ಲಿ
ಮಕಾರವು ರತ್ನದ ಕಾಂತಿಯೋಳೆಸೆವ ವೀಣಾಸ್ವರ
ಗುರುಲಿಂಗದಲಿ ವಾಮದೇವಾಸ್ಯಪ್ರತಿಷ್ಠದಾಕಲೆ
ಸಲೆನಾಮದಿ ಧವಳಾಕಾರ
ಲಲಿತದಿ ಒಪ್ಪುವ ಜ್ಞಾನಶಕ್ತಿ ಕೇಳೊಲವಿಂ
ಸುಬುದ್ಧಿ ಹಸ್ತಂಗಳೊಳು ಸುಲಲಿತ ರಸದ್ರವ್ಯವ
ಜಿವ್ಹೆಗೊಲವಿಂ ನೈಷ್ಠಿಕ ಭಕ್ತಿಲಿ ನೀಡುತ
ಸೊಲ್ಲಿಸುತಲ್ಲಿ ಯಜುರ್ವೇದವ ತಾ ನಿಲ್ಲುತ
ಲಿಂಗಕ್ಷೇತ್ರ ಸಂಜ್ಞೆಯಲಿ ಎಲ್ಲ ಕರ್ತೃಸಾದಾಖ್ಯದಿ
ಬೆರಿಯುತ ಬಲ್ಲವರಿಂದ ತಿಳಿದಂಡಕಾಕೃತಿಯಿಂತೆಲ್ಲ
ಮಹೇಶಾಂಗದ ಪರಿ ತಿಳಿ ನೀನೆಲ್ಲರಿಯಲು ಅಘನಿಲ್ಲದು
ಇಂತಿದೆಲ್ಲವನೊರೆದನು ಗುರುದಯ ಬಂದು ||2||
ಮಣಿಪೂರಕದೊಳು ಅಗ್ನಿಯ ಕಾಯ
ಎಣಿಸಲ್ ದಶದಳ ಪದ್ಮದಗೇಯ
ಮಣಿನೀಲದ ಮಿಕ್ಕು ಮಾಯದುಗೊಪ್ಪಿ
ಗಣಿಸಲು ‘ಡಾದಿಪಾಂತ್ಯ’ ಕ್ಷರದಾಯ
ಪಣಿಶಯನನವಾಸಕ್ಕಿದು ನ್ಯಾಯ
ಕ್ಷಣಭಜಿಸುವ ಷಟ್ಸಾವಿರ ಮಂತ್ರ
ಬಣಗ್ಹರಿಪ ಶಿಕಾರ ಸ್ವತಂತ್ರ
ಗಣಗಣ ಗಂಟೆಯ ನಾದದವಾಂತ್ರ
ತೃಣಜಗವೆಂಬ ಅಘೋರಾನನದ
ತ್ರಿಣಯನಂತೆ ಶಿವಲಿಂಗ ಶರೀರ
ದಾರುಣಕಾಂತಿಯೋಳಿಚ್ಛೆಯ ಶಕ್ತಿಸದಾ
ಘೃಣಿಯಾಗುತ ವಿದ್ಯಾಕಲೆ ಮುದದ
ಶೋಣಿತ ವರ್ಣಾಂಬರ ಮುಖದಲ್ಲಿ
ಮಾಣದೆ ನಿರಹಂಭಾವ ಕರದಲ್ಲಿ
ವೂಣಯ ವಿರದೆ ಸ್ವರೂಪಿಕ್ಕುತಲಿ
ಜಾಣತ್ವದಿ ಸಾಮಪಠಿಸುತಲಿ
ಕೇಣಿಗೊಂಡು ಕುಂಡಲಾಕೃತಿಯಿಂತಿದು
ತ್ರಾಣವು ಪ್ರಸಾದಸ್ಥಲ ವಿಂತಹುದು
ಕಾಣದಂಧಕರಿಗುಸುರುವುದು
ನೇಣಾಘ್ಹಳಿದರೆ ಇದು ತಿಳಿಯುವುದು ||3||
ವಾಯುವೆ ಭೂತ ಮಾಂಜಿಷ್ಟ ವರ್ಣದ
ರಾಯತ ಷಟ್ಕೋಣನಾಹತ ಚಕ್ರದ
ಛಾಯ ಕುಂಕುಮದಳ ಪನ್ನೆರಡದ
ಶ್ರೇಯದ ‘ಕಾದಿಟಾಂತ್ಯ’ ಕ್ಷರಮಧ್ಯದ
ಲಾಯದಿ ಸಾವಿರ ಅಜಪಮಂತ್ರದ ಸ್ತೂಯವಿಡಿದು
ಶ್ರೀರುದ್ರನು ಒಪ್ಪಿದ
ಕಾಯರಹಿತ ವಕಾರಲ್ಲಿಹುದು
ಜೀಯ ಶಬ್ದ ಭೇರಿಯ ಬಿಳಿರೂಪದ
ಮಾಯವಿರದೆ ಜಂಗಮ ಲಿಂಗೊಪ್ಪಿದ
ನಿಯತ ಕೆಂಪು ತತ್ಪುರುಷಾನನದ ಪ್ರಿಯತ
ಶಾಂತಿಕಾಲದಿ ಶಕ್ತಿ ಸದಾ ಆಯಮಾದ
ಮಾರುತಿಯ ಸಾದಾಖ್ಯದಾಯವರಿತು ಸಂಜ್ಞೆಲಿ
ಗೂಢದ ನ್ಯಾಯ ಉತ್ತರದಿಕ್ಕಸವರ್ಣದ ಹಸ್ತಾದಿ
ಸ್ಪರ್ಶನದ ವಾಯದಿತ್ವಕ್ಮುಖಕಾಲನು ಭಾವದ
ಬೀಯ್ಯವಿಲ್ಲದರ್ಪಿಸುವುದೆ ಭಕ್ತ್ಯದ ಸ್ವಾಯದೆ
ಅರ್ಧಚಂದಿರನಾಕಾರದ ನೋಯುವಳಿದು
ಪ್ರಾಣಲಿಂಗಿ ಜಾಗದ
ಬಾಯಿಮಾತಿರದು ಸಾಧಿಸಿ ತಿಳಿಯೆಂದ ||4||
ಅಸಮಾಂಬರವು ಕಪ್ಪಿನ ವರ್ಣವು
ವಿಶುದ್ಧಿ ಚಕ್ರದು ವರ್ತುಳಾಕಾರವು
ಬಿಸಜದೆಸಳ್ಗಳಲ್ಪದಿನಾರಿರ್ಪವು
ವಸುಸ್ವರ ಆದ್ಯಂತಕ್ಷರ ತೋರ್ಪವು
ಕುಸುಮ ದೀಪ್ತಿಯು ಧವಳಾಕಾರವು
ಒಸೆದುಸುರುವ ಸಾವಿರದ ಮಂತ್ರವು
ಪಸರಿಸಿ ಈಶ್ವರ ನಿರ್ಪುದಾಠಾವು
ಎಸೆವ ಯಕಾರ ಸ್ಫಟಿಕ ವರ್ಣವು
ಉಸುರಲ್ಕಸ ದಳಮೇಘ ನಾದವು
ಪ್ರಸಾದಲಿಂಗ ಶಾಸನ ನಾಮವು
ಅಸಮಾನವಾದ ಶ್ವೇತವಸ್ತ್ರವು
ಮಸಳಿಸಿದಂಥ ಶಾಂತಿಯ ಕಲೆಯು
ಮಿಸುಪ ಕಪೋತ ಮಾಯದ ಶಕ್ತಿಯು
ಭಾಸಮಾನದ ಶಿವನ ಸಾದಾಖ್ಯವು
ನಾಶವಿರದ ಗಾಯತ್ರಿಯ ಮಂತ್ರವು
ದೋಷರಹಿತ ಸುಜ್ಞಾನದ ಹಸ್ತವು
ಮೋಸವಿರದೆ ಶಬ್ದದ ಶ್ರೋತ್ರಕೆಯು
ಮೀಸಲಾಗಿ ಅರ್ಪಿಸುವುದೆ ಭಕ್ತಿಯು
ಲೇಸುವಡೆದ ದರ್ಪಣದಾಕಾರವು
ಇಂತೆಸೆಗೊಳೆ ಶರಣನಸ್ಥಲವೆಂದ ||5||
ಮನವದು ಮೂರ್ತಿತಮಂಧಾಕಾರವು
ಕೊನೆಯ ದ್ವಿದಳವು ಆಜ್ಞಾ ಸ್ಥಾನವು
ಅನಂತ ವಿದ್ಯುತವರ್ಣದೊಳಿಪ್ಪವು
ಮಿನುಗುವ ಹಂಸಂ ಅಕ್ಷರಮಧ್ಯದಿ
ಘನಲಾವಣ್ಯದ ಗುರು ತಾನಿರ್ಪನು
ಕೊನರುವ ಈ ಮಂತ್ರವು ಸಾವಿರವೀ
ಮನೆಯಲಿ ಝೇಂಕಾರವು ನಾನಿರ್ಪುದು
ಜಿನುಗದೆ ಸುಸ್ವರಗೈಯುತ ತಾನಾ
ಅನುನಯದಿಂ ಮಹಲಿಂಗವೆಯಾಗಿ
ಜನರರಿಯದ ಪಾತಾಳಮುಖದಿ
ತಾನಿರುತಲಿ ಶಾಂತಿಕಲಾದಿನಾಮ
ವಿನ್ನರುಪುವೆ ಚಿಚ್ಛಕ್ತಿಗೆ ಒಪ್ಪುವ ದಿನಪ
ಕೋಟಿಪ್ರಭೆ ರೂಪಿಲಿ ಇರ್ದವನುತಿಯು ಮುಕ್ತಿ
ಸಾದಾಖ್ಯದಲಿ ಪುನರಪಿ ಪೊರ್ದದ
ಸಂಜ್ಞೆಗಳಿಂದ ತೊನೆಯುತ ಸದ್ಭಾವದ ಹಸ್ತದೊಳು
ಸಾನುರಾಗದಿ ಸಮರಸಭಕ್ತಿಲಿ
ಮೌನದಿ ತೃಪ್ತಿಯರ್ಪಿಸುತಲ್ಲಿ
ನ್ಯೂನವಿರದೆ ಜ್ಯೋತಿಯ ಆಕಾರವು
ನೀನರಿ ಐಕ್ಯನ ಸ್ಥಲವಿದು ಎಂದ ||6||
ಗುರುದಯವಾಗಲ್
ಮರೆದಿರದ್ಹೋಗಲ್ಕರಿಷಡ್ವರ್ಗಗಳಿರದ್ಹಾಳಾಗಲ್
ಪರತರಕೆಳಸಲ್ಕುರುಹಿದು ತೋರಲ್
ಬೆರೆದ್ಹೊಕ್ಕರಸಲ್ ನರಭಾವರಿಯಲ್
ಪರಿಭವಕೆಡಿಸಲ್ಕರಿವುರೆ ನಿಲಲ್ಸುರೋಲೈಸಲ್ಸುಖ
ಚಿರವಾಗಲ್ಸಸಿ ಮಿಗಿಲಿಲ್ಲದವನೇ
ವರಗುರುವೆಂದರಿಯುತ ನಂಬಲ
ಸ್ಥಿರವಿಂತಾಗಲ್ಪರಿಕಿಸಿ ದೇಹದೊಳರಸುತ
ನೋಡಲ್ಪರದಿ ಚಕ್ರಗಳಿರವಿಂತೆನುತೆ
ಪರಮುಮುಕ್ಷುಗಳರಿವರು ಎಂಬೀ
ಭರವಸೆಯಿಂದಾನರಿತಷ್ಟುಸುರಿದೆ ಗುರಿಯಲಿ
ಮಗ್ನರಾಗುವೆನೆಂಬುವರಿದನರಿಲ್ಬೇರಿಲ್ಲವೆಂದು
ಬಹುಯೋಗಗಳರಿಯಲ್ಕರಿದೆಲ್ಲವು ಇದು
ಸಿದ್ಧಿಸೆ ಕರಕರಕಾಡುವ ಮಾಯೆಯ ನೀಗುವ
ಕುರುಹಿದು ಎನ್ನುತ ಸೋಮೇಕಟ್ಟೇ
ಗುರುವರ ಪೇಳಿದ ಪರಿಯಿದು ಅದರಿಂ
ಒರೆದೆನು ಮಲ್ಲನ ಪುರದೊಳಗಿದನು ||7||

ಶಿವನಿಗೆ ಶಿವೆಗೆ ವಂದಿಸುವೆ
ಶಿವನಿಗೆ ಶಿವೆಗೆ ವಂದಿಸುವೆ
ಶಿವಶರಣರೊಳೆಮಗೊಲಿದವರ ವರ್ಣಿಸುವೆ ||ಪಲ್ಲವಿ||
ಹರಿಯಜರರಿಯದ ಉರುತರ ಮೂರ್ತಿಯ
ಕರಮನ ಭಾವದೊಳರ್ಚಿಸುತ
ಸಿರಿಗೊಲ್ಲದಿರೆ ತನ್ನ ಗುರುತನವನೆಯೀವ
ಪರಮ ಪರಾತ್ಪರಗೆರಗುವೆನು ||1||
ಯೋಗಿಣಿಯಾಗಿ ತಾ ಭೋಗ ಭಾಗ್ಯವನಿತ್ತು
ರಾಗವಿರಾಗ ತೇಜವನಾನುತೆ
ಭೋಗಿಭೂಷಣ ವಾಮಭಾಗಿಯೆನಿಸಿ ಭಯ
ನೀಗಿಪ ಮಾತೃಪದಕೆ ಮಣಿದೆ ||2||
ಗೋತ್ರದ ಕರ್ತರ ಸ್ತೋತ್ರಕೆ ಇಂಬಿಲ್ಲ
ಪಾತ್ರವರಿತು ಹುದುಗಿಸಿದಲ್ಲಿ
ರಾತ್ರೀಶಧರವಂಶ ರೇಣುಕ ವಂಶದ
ಗೋತ್ರವಲ್ಲಭನೆಂದು ನಮಿಸುವೆ ||3||
ಮರುಳಾಚಾರ್ಯರಿಗೆ ವರಪಂಡಿತಾರ್ಯಗೆ
ಯೆರದಿಲ್ಲದಾತ್ಮೇಕೋರಾಮಯ್ಯಗೆ
ಸುರರರಿಯದ ಸುರಚಿರ ವೀರಶೈವೋ
ದ್ಧರರೆಂದು ಧರಣಿಲಿ ಪೊಡಮಡುವೆ ||4||
ಚತುರ ಸಿಂಹಾಸನ ಪತಿಗಳಿವರು ಪರ
ಗತಿಗೊಡೆಯರು ಎಂದು ಪ್ರಾರ್ಥಿಸುವೆ
ಕ್ಷಿತಿಯೊಳಾರಾಧ್ಯ ಸಂತತಿ ಶುಭವೆನಲೆನ
ಗತಿಶಯವೆಂದು ಭಜನೆಗೊಂಡೆ ||5||
ಭಕ್ತಿಯಂಗನೆಯನುರಕ್ತಿಯಿಂದಲಿ ಕೂಡಿ
ಮುಕ್ತಿಗೊಡೆಯನಾದ ಬಸವೇಶ
ಚಿಕ್ತನದೊಳಗೆ ಚಿನ್ಮಯನಾದ ಷಟ್ಸ್ಥಲ
ವ್ಯಕ್ತಿ ಚನ್ನಣ್ಣನಿಗೆ ಶರಣೆಂಬೆ ||6||
ಅಜಗಣ್ಣನಂಘ್ರಿಗೆ ನಿಜಗುಣ ದೇವಗೆ
ತ್ರಿಜಗಪೂಜ್ಯ ಪ್ರಭುರಾಯನಿಗೆ
ಸುಜನ ಶಿರೋಮಣಿ ಮಡಿವಾಳ ಮುಖ್ಯರ
ನಿಜಪಾದಪದ್ಮಕಾನತನಪ್ಪೆ ||7||
ಅಷ್ಟಾಂಗ ಯೋಗದಿ ದೃಷ್ಟಗಳನು ತಾಳಿ
ಅಷ್ಟಸಿದ್ಧಿಗಳೆಲ್ಲ ಸಹಾಯವಾಗಿ
ಕಷ್ಟವಳಿದು ಕರದಿಷ್ಟದಿ ನೆಲೆಗೊಂಡ
ಶ್ರೇಷ್ಠ ಸಿದ್ಧರಾಮ ಸಲಹಲಿ ||8||
ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಮೋಕ್ಷದಾಯಕರಿಗೆ ಮಗನೆಂಬೆ
ಅಕ್ಷಯರೊಳು ಅಧಿಕರು ಅರವತ್ತು ಮೂ
ರಕ್ಷರಾತ್ಮಕರಡಿ ಹೊರಳುವೆ ||9||
ಜಂಗಮ ರೂಪಿಲಿ ಜಗದೊಳು ಚರಿಸಿತಾ
ಜಂಗುಳಿ ದೈವದ ಧವನಾಗಿ
ಅಂಗಜನುರುಹಿದ ಮಂಗಳಮಯ ಸಿದ್ಧ
ಲಿಂಗನ ಬಲಗೊಂಡು ಬದುಕುವೆ ||10||
ಭಾಸುರ ವಿದ್ಯದಿ ಭೂಸುರಾಗ್ರಣಿ ಸರ್ವ
ದೋಷಗಳೆದು ಸಾಸಿರದಳದ
ಕೇಸರದೊಳು ಪರಮೇಶನ ಬೆರಸಿದ
ಆ ಸುನಂಜುಂಡಯನ್ನೊಳಗಿರಲಿ ||11||
ಹರ ತನ್ನ ಶರಣರ್ಗೆ ಸರಿ ಬಾರನೆನ್ನುತ
ಕರೆದು ಬೋಧಿಸಿಕೊಂಡ ಕಲಿಗಣನ
ಇರವೆಂತೊ ಆತನ ಚರಣರಕ್ಷೆಯೊಳೆನ್ನ
ಶಿರವನೊರಸಿದರೆ ಸುಖಿಯಾದೆ ||12||
ತರಣಿ ಕಿರಣಗಳಿಗೆರವಿಲ್ಲದಂತೆಯೆ
ಪರಿಪರಿ ಪ್ರಮಥರು ಹರಲೀಲೆ
ಧರಿಸಿ ಲೋಕದೊಳವತರಿಸಿ ಮುಕ್ತಿಯ ಬೀಜ
ಇರಿಸಲೈತಂದ ಆಭವರು ಎಂಬೆ ||13||
ಬಗೆಬಗೆಯಿಂದಲಿ ಬಣ್ಣಿಸೆ ಬಗೆದವ
ರುಗುಳಿದ ತಂಬುಲ ಸವಿಯಿಂದ
ಚಿಗುರದು ಭವವಿನ್ನು ಚಿದ್ಘನ ಮಹಿಮರ
ಪೊಗಳುವಂತಾಗಿ ಪಾವನನಾದೆ ||14||
ಎಲ್ಲರ ಕೃಪೆಯಿಂದ ಮಲ್ಲನ ಪುರದೊಳು
ಸೊಲ್ಲಿಸಿದೆನು ಸೋಮೆಯಕಟ್ಟೆ
ನಲ್ಲನೊಲಿದು ಮನದೊಲ್ಮೆಯನಾಂತಿರೆ
ಇಲ್ಲೆ ಸಾಷ್ಟಾಂಗ ಪ್ರಣಾಮೆಂಬೆ ||15||

ಏಕೆ ಮರೆಯಾದಂತೆ ತೋರ್ಪೆ
ಏಕೆ ಮರೆಯಾದಂತೆ ತೋರ್ಪೆ ಲೋಕನಾಥೆ ಮೌನಿವಾಕ್ ಪ್ರೀತೆ
ಏಕಮೇವ ಎನಲು ನಾ ನೀನೇಕಭೂತೆ ಜನ್ಮ ಸಾಕು ಮಾತೆ ||ಪ||
ಆರು ಮೂರರಿಂದ ನೀನೆ ಮಾರಿಯಾದೆ ಗುಣದಿ ನಾರಿಯಾದೆ
ಸಾರಸುಖದ ಸಿದ್ಧಿಗಳ ಸಾಕಾರಿಯಾದೆ ಮಂತ್ರಧಾರಿಯಾದೆ ||1||
ಮೂರು ಮೂರ್ತಿಗಳೆಂದು ಬೇರೆ ತೋರಿದಲ್ಲೆ ಮೂಲವಾದೆಯಲ್ಲೆ
ತೋರುವಷ್ಟು ಫಲಪದಗಳ ಕಾರಿದೆಲ್ಲೆ ತಿಳಿಯೆ ಮಾಯವಲ್ಲೆ ||2||
ಪಂಚಪಂಚಕಗೂಡಿ ಬಹು ಪ್ರಪಂಚ ಮಾಡಿ ನಿತ್ಯದಲ್ಲಿ ತೋಡಿ
ಸಂಚಿತವೆಂತಿರಲು ಬೇರೆ ವಂಚ ಮಾಡಿ ಹಾಕಿದಲ್ಲೆ ಮೋಡಿ ||3||
ಬಳ್ಳಿ ಮಿಂಚಿನಂತೆ ಭೋಗ ಭವದ ಬೀಜ ಬಿಡಿಸಿಲ್ಲಿ ಗೋಜ
ಉಳ್ಳ ಆತ್ಮನಿಲ್ಲವೆನಿಸಿ ಸುಳ್ಳು ತೇಜ ಉಳಿಮೆಯಾದೆ ತಾಜ ||4||
ಓದುವೇದಕೆಲ್ಲಾ ನೀನೆ ಆದಿಯಾದೆ, ಶಬ್ದಭೇದವಾದೆ
ನಾದದೊಳಗೆ ಸರ್ವಸುಖದ ಮೋದವಾದೆ ಸತ್ಯಬೋಧಳಾದೆ ||5||
ಮರದ ಕೊನೆಯಹಣ್ಣ ಸವಿಸಿ ಮರೆಸಿದಲ್ಲೆ ಭವದಿ ಬರಿಸಿದೆಲ್ಲೆ
ತಿರುಗಿ ಬುಡದ ಫಲಕೆ ಕೂಗಿ ಕರೆದೆಯಲ್ಲೆ ನಿಜವ ಎರೆದೆಯಲ್ಲೆ ||6||
ಐದು ಲಕ್ಷಣ ಬ್ರಹ್ಮಕೆಂದು ತೋರಿತಲ್ಲ ಅರದೊಡೇಸೊಬಲ್ಲ
ಸಾಧುಸರ್ವನಾಸ್ತಿ ಎಂದೆ ಸಂಗವಿಲ್ಲ ಸತ್ತು ಭಂಗಸಲ್ಲಾ ||7||
ಒಳಗು ಹೊರಗು ಭಿನ್ನವಿರದೆ ಬೆಳಗೆ ಎಂದು ಜೀವ ಪ್ರಳಯಸಂದು
ಅಳುಕದಿರ್ಪ ಆದಿಶಕ್ತಿ ಕಳೆಯೆ ಬಿಂದು ಪೂರ್ಣ ಭಾತಿನಿಂದು ||8||
ಜ್ಯೋತಿಗತ್ತಲಿರುವ ಮಹಿಮನ ಮಾತು ಏಕೆ ಭಾವಕಾತ್ಮಳೀಕೆ
ಪ್ರೀತಿ ಅಸ್ತಿಭಾತಿ ವಿಷಯ ರತುಸೋಕೆ ಜನ್ಮ ಜನನಿ ಜೋಕೆ ||9||
ಜಗದಜನನಿಯಾದ ನಿನ್ನ ಮಿಗುವದೆಂತು ವಸ್ತು ಬಗೆಯದೆಂತು
ಗಗನಕುಸುಮದಂತೆ ಭ್ರಾಂತಿ ತೆಗೆಯಲಿಂತು ಅಹುದು ನಿನ್ನೊಳಂತು ||10||
ಮಲ್ಲನಪುರನಸೊಲ್ಲಿನಲ್ಲಿ ನಿಲ್ಲುಯಿಲ್ಲೆ ಸೋಮೇಕಟ್ಟೆಯಲ್ಲೆ
ನಲ್ಲನೊಲುಮೆ ಬಳಗವೆಲ್ಲ ನೀನೇ ಬಲ್ಲೆ ಮುಕ್ತದ್ವಾರದಲ್ಲೆ ||11||

ಏನನೆಂಬೆ ಈತನಿರವನು
ಏನನೆಂಬೆ ಈತನಿರವನು ಏಣಾಂಕಧರನು
ತಾನಘಹರಸ್ವಾಮಿಯಾದನೂ ||ಪ||
ಧ್ಯಾನ ಮೌನ ಜಪಸಮಾಧಿ ನ್ಯೂನವಿಲ್ಲದಮಲ ಯೋಗ
ಸಾನುರಾಗ ಶಮೆದಮಾದಿ ಜ್ಞಾನಪೂರ್ಣ ನಿತ್ಯನಮಮ ||1||
ಪಾಹಿಮಾಂ ಎಂದು ಸತತ ಆ ಹಿಮಾಂಶುಧರನ ನೆನೆಯ
ಲೂಹಿಸಲ್ಕಸಾಧ್ಯ ನಿಜದ ಸೋಹಂಭಾವದರಿವಿನಿರವ ||2||
ಪೊಡವಿಯಲ್ಲಿ ಅಂಕಲಿಯ ಒಡೆಯನಾದ ಶಿದ್ಧಗುರುವಿ
ನಡಿಯ ಮಹಿಮೆ ನಾಮರೂಪ ಪಿಡಿಯಲಾದ ದೃಢ ವಿರಕ್ತ ||3||
ಮೂರು ಕಾಲ ಲಿಂಗಪೂಜೆ ಆರುಸ್ಥಲದ ಸಾವಧಾನ
ಸೇರಿಸುಪ್ತಿಯೊಳಗೆ ಕಳೆಯ ಮೀರಿತೋರ್ಪ ಯೋಗಿಬೆಡಗ ||4||
ಬಡವನಿಗೆ ಭಾಗ್ಯರೂಪ ಕೊಡುವ ಭುಕ್ತಿ ಮುಕ್ತಿಯೆಂಬ
ಸಡಗರದಿ ಗಣಸಮೂಹ ಎಡಬಲ ಓಲೈಪ ಹದನ ||5||
ದೇಶಕಧಿಕ ಗುಬ್ಬಿ ಸ್ಥಲದಿ ವಾಸನಾದ ಚನ್ನವೃಷಭ
ದೇಶಿಕೋತ್ತಮನೊಳು ಭಾವ ಲೇಸಿನಿಂದ ಬೆರೆಸಿತೋರ್ಪ ||6||
ಮಲ್ಲಪುರನಿಗಭಯವಿತ್ತ ನಲ್ಲ ಸೋಮೇಕಟ್ಟೆ ಗುರುವಿ
ನಲ್ಲಿ ಬೇರೆ ಎನಿಸ ದಭವನಲ್ಲದಿವನು ಮನುಜನಲ್ಲ ||7||

ಪಾಹಿ ಸರ್ವಮಂಗಳೇ
ಪಾಹಿ ಸರ್ವಮಂಗಳೇ ದೇಹದೊಳಗೆ ಚಿತ್ಕಳೆ
ಓಹೋ ಎಂದು ಉನ್ಮನಿಯ ಗೇಹಮಾಡಿ ಇರ್ಪಳೇ ||ಪ||
ಶುಂಭಾಸುರನ ಸಂಹಾರೀ ಕುಂಭಕದೊಳು ಝೇಂಕಾರೀ
ಶಂಭು ಶಿವನ ಮೋಹ ಮಡದಿ ಸಂಭ್ರಮದ ಸುಂದರೀ ||1||
ಶ್ರೇಯಚಿತ್ರ ನಗರದ ಶ್ರೇಯ ಶಂಭು ಕಾಮ್ಯದ
ಪ್ರಿಯವಾಗಿ ಶಿವನ ಮೈತ್ರೇಯದೊಳಗೆ ಹೊಂದಿದ ||2||
ಆರು ಚಕ್ರವಾಸಿನಿ ಚಾರುತೀರ್ಥ ಸಿದ್ಧಿನೀ
ಮೂರು ಶೇಷಪೂರ ಸವಿವರ್ಯಾರೊ ಅವರೆ ಮುಕ್ತಿನೀ ||3||
ಏಕಮೇವ ಶ್ರುತಿಯನು ಲೋಕಪತಿ ಪೇಳ್ದನು
ಈಕೆ ಸತಿ ಹಿತತಾನೆಯಾಗೆ ವಾಕ್ಯ ಮಂತ್ರವೆಂದನು ||4||
ಭೂತಭುವನವೆಲ್ಲವೂ ಜಾತಜಾಯ ಸರ್ವವೂ
ಮಾತೆ ಇವೆಲ್ಲವೆಂದು ಖ್ಯಾತಿವೇದ ಪೇಳ್ವವೂ ||5||
ಸಾಧು ಸರ್ವಸೇವಿತೆ ಬೋಧರೂಪಿಣಾಯತೆ
ವೇದದಾದಿಯಾಗಿ ವಾದವಶ್ಯ ಕಲ್ಪಿತೆ |6||
ಬಯಲ ಬಣ್ಣದ ಹೊಟ್ಟೆಯ ಸ್ವಯದ ಸೋಮೇಕಟ್ಟೆಯಾ
ಶ್ರಯವ ಮಾಡಿ ನಾನು ನಿನ್ನೊಳ್ಹೊಂದಿ ಮಾಯವಾದೆಯಾ ||7||
[/fusion_toggle][fusion_toggle title= “ಬಾರಯ್ಯ ಬಾರೆನ್ನ ಗುರುವ
ಬಾರಯ್ಯ ಬಾರೆನ್ನ ಗುರುವೆ ನೀನು ಬಾರದೆ
ಓರೆಯಾಳಿರುವುದು ತರವೇ ||ಪ||
ಸತಿಸುತರಾಶೆಯು ಸತತ ಮತಿಗತಿ ಕೆಡಿಸುವ ಧನ ಧರೆ ಮನೋ
ವ್ಯಥೆ ತಾ ಕುಹಕ ಬುದ್ಧಿಯು ಕುಹಕೆನುತಾ
ಇಂಥ ಪತಿತಗೆ ಪಾವನ ಜೊತೆಯಿಲ್ಲೆಂದುಳಿದ್ಯಾ ||1||
ಮನ ಲಿಂಗನೆನಹಿನೊಳಿಲ್ಲ ತನ್ನ ತನುವಿದು ಗುರುವಿಗೆ ತಗ್ಗಿದುದಿಲ್ಲ
ಕೊನೆಗೂ ಲೋಭದಿ ಕಟ್ಟಿತಲ್ಲ
ಈ ಬಿನುಗಗೆ ಬೋಧೆಯಿನಿತಿಂತುವಲ್ಯಾ ||2||
ಮಲಮೂರ ಕಳೆಯಲಿಲ್ಲವನು ಕುಲಛಲ ಡಂಭದರ್ಪ ಚಂಚಲ
ದೃಷ್ಟಿಯುತನು ಕಲಹಿಂಸೆಯ ಕಾರ್ಯದವನು
ಈ ಹೊಲೆಯನ ಪಾಲಿಪ ಬಲು ಯಾಕೆಂದುಳಿದ್ಯಾ ||3||
ಜಪತಪ ನಿಜನಿಷ್ಟಿಕಿಲ್ಲ ತೂರ್ಯವುಪರತಿ ಜ್ಞಾನವೈರಾಗ್ಯವೆಂಬುದಿಲ್ಲಾ
ಕುಪಿತಕ್ರೂರತ್ವ ಕೇಡೆಲ್ಲಾ
ಈ ಶ್ವಪಚನ ಸಾರಲು ಆಪತ್ತೆಂದೊಲ್ಯಾ ||4||
ಇಲ್ಲಿಗೆ ಬರಲಿಲ್ಲೆಂದೆನುತಾ ನೀನನಲ್ಲೇ ಸೋಮೇಕಟ್ಟೆ
ಪುರದೊಳಗಿರುತಾ ಮಲ್ಲನ ಪುರದೊಳಗಿರುತಾ
ನಿನ್ನ ಮೆಲ್ಲಡಿ ಸ್ಮರಣೆಯೊಳಿರೆ ಬರ್ಪೆವುಚಿತಾ |5||

ಗುರು ದಯಮಾಡಿದನಮ್ಮ
ಗುರು ದಯಮಾಡಿದನಮ್ಮ ನಮ್ಮದುರಿತದ
ಕರಕಷ್ಟ ಹರಿದ್ಹೋಯಿತಮ್ಮ ||ಪ||
ಪಾದದಿ ಪಾವುಗೆ ಧರಿಸಿ ನಿತ್ಯ ಮೋದದ
ಗುಡಿಗುಡಿ ಮರಿಯ ಕೈಲಿಡಿಸಿ
ಬೋಧಕ ಬಂಗಿಯ ತೊಳೆಸಿ
ದಶನಾದಕಿನ್ನರಿಸ್ವರಕೊಬ್ವನಕರಿಸೀ ||1||
ಕಪನಿ ಕಾಷಾಯಾಂಬರಧರಿಸೀ ಬಲುಗುಪಿತದಿ
ಮಂತ್ರವ ಜಿಹ್ಹೆಯೋಳ್ ಸ್ತುತಿಸಿ
ಅಪರೂಪ ಸಿದ್ಧನಿವನೆನಿಸಿ ಜನ್ಮಸಫಲಮಾಡಲ್ಕೀತ
ಒಡೆಯನೆಂದೆನಿಸಿ ||2||
ಕೊರಳೊಳು ರುದ್ರಾಕ್ಷಿ ಸರವು ಕೈಬೆರಳೊಳು
ಜಪಸರ ಮುದ್ರೆ ಪಂಚಕವು
ವರಭಸಿತಾಂಗದ ಇರವು
ಈತ ಗುರುಕುಲ ಸನ್ಯಾಸಿ ಎಂಬುದು ನಿಜವು ||3||
ಶಾಂತಿಲಹರಿಯನೊಪ್ಪಿರುವ
ಲೋಕಭ್ರಾಂತಿಯನಳಿದು ವೈರಾಗ್ಯ ತಾಳಿರುವ
ತಿಂಥಿಣಿ ಅತಿಥಿಗಳಪೊರೆವ
ಜಗಕಂತಕಾಂತಕ ರೂಪ ತಾಳಿ ಬಂದಿರುವ ||4||
ವ್ಯಾಘ್ರಾಜಿನದ ಗದ್ದುಗೆಯು ಅಂಥ ಉಗ್ರ ತಪಸಿನಲ್ಲ
ಶಿವಭಕ್ತ ದೊರೆಯೊ
ಅಗ್ರಭಾಗದ ಮೇಲ್ಕಲೆಯು ಇಂಥ
ವಿಗ್ರಹ ಚಲುವನ ನಾವೆಲ್ಲ ಅರಿಯವೊ ||5||
ಮುಡಿಜಡೆ ಕೊಡೆಯು ಇಹುದಮ್ಮ
ಈತನೆಡಬಲದೊಡೆಯರ ಗಡಣ ನೋಡಮ್ಮ
ಪೊಡವಿ ಪಾವನವಾಯಿತಮ್ಮ
ಇಂಥ ದೃಢಯತಿಪೆಸರೆನೆ ಅಡವೀಶನಮ್ಮ ||6||
ಬಲ್ಲವರು ಬಲ್ಲರೀಹದನ ಇದು ನಲ್ಲ
ಸೋಮೇಕಟ್ಟೆ ವಲ್ಲಭ ಸದನ
ಮಲ್ಲನಪುರವೆಂಬರಿದನ ಅವನಲ್ಲದೆ
ಪೆರತಿಲ್ಲ ಗುರು ವಂದೇ ಸ್ಮರಣ ||7||

ಶುಭವೆ ಮಂಗಳಂ
ಶುಭವೆ ಮಂಗಳಂ ಸದಾವಿಭುವೆ ಮಂಗಳಂ
ಅಭವನೊಲಿದು ಜಗಕೆ ಬಂದ ಪ್ರಭುವೆ ಮಂಗಳಂ ||ಪ||
ಗುರುವೆ ಮಂಗಳಂ ಪರಾತ್ಪರವೆ ಮಂಗಳಂ
ಕರುಣಾಭರಣ ಕರಣಲಿಂಗ ಹರಣ ಮಂಗಳಂ ||1||
ಇಷ್ಟ ಮಂಗಳಂ ಪ್ರಾಣ ಶಿಷ್ಟಮಂಗಳಂ
ನೈಷ್ಠೆ ಭಕ್ತಿ ಒಲಿದ ಭಾವವೆಷ್ಟೊ ಮಂಗಳಂ ||2||
ಅಸಮ ನಯನನೆ ಭವದ್ವಿಷಮ ವೈದ್ಯನೆ
ಕುಶಲ ಜಂಗಮಾಖ್ಯ ನೀಲಬಸವ ಮಂಗಳಂ ||3||
ಅಂಗ ಮಂಗಳಂ ಶರಣ ಸಂಗ ಮಂಗಳಂ
ತುಂಗ ಭಸಿತ ತೂರ್ಯವಾಂತರಂಗ ಮಂಗಳಂ ||4||
ರುದ್ರ ಮಂಗಳಂ ಅಕ್ಷಿ ಭದ್ರ ಮಂಗಳಂ
ಕ್ಷುದ್ರದಘವ ಹರಿಪ ಮನುಸಮುದ್ರ ಮಂಗಳಂ ||5||
ವೇದ ಮಂಗಳಂ ಸುಪ್ರಭೇದ ಮಂಗಳಂ
ನಾದ ಮೋದ ಬೋಧಸಹಿತನಾದಿ ಮಂಗಳಂ ||6||
ಬಿಂದು ಮಂಗಳಂ ಕಳೆಯೊಳೊಂದಿ ಮಂಗಳಂ
ಕುಂದದಮಲ ಪೂರ್ಣ ಜ್ಞಾನವೆಂದು ಮಂಗಳಂ ||7||
ಸತ್ತು ಮಂಗಳಂ ಮಹಾ ಚಿತ್ತು ಮಂಗಳಂ
ಮತ್ತೆ ಪಾದತೀರ್ಥ ದಶಖವೆತ್ತು ಮಂಗಳಂ ||8||
ಈಶ ಮಂಗಳಂ ಭಜಕಪೋಷ ಮಂಗಳಂ
ನಾಶರಹಿತ ಏಕ ದಶದಿವಾಸ ಮಂಗಳಂ ||9||
ಶುದ್ಧ ಮಂಗಳಂ ಓಂ ಪ್ರಸಿದ್ಧ ಮಂಗಳಂ
ಸಿದ್ಧಲಿಂಗ ತ್ವಂ ಪ್ರಸಾದ ಸಾಧ್ಯಮಂಗಳಂ ||10||
ಅರಿವೆ ಮಂಗಳಂ ಭಾವದಿರವೆ ಮಂಗಳಂ
ವರದ ಮಲ್ಲನಪುರಕೆ ಕಲ್ಪತರುವೆ ಮಂಗಳಂ ||11||
ನುತಿಸಿ ನಮಿಸುವೆ ಜ್ಯೋತಿ ಸತತ ಬೆಳಗುವೆ
ಅತಿಶಯದ ಸೋಮೇಕಟ್ಟೆ ಪತಿಗೆ ಮಂಗಳಂ ||12||

ನಮೋ ನಮೋ ಎನ್ನುತ
ನಮೋ ನಮೋ ಎನ್ನುತ ನಮಿಸುತಲಿರ್ಪೆನು
ಕ್ರಮ ಗುರುವಿನ ಶ್ರೀಪಾದದಲಿ
ತಮದುರಿತವ ಪರಿಹರಿಸುವ ದ್ಯುಮಣಿಯ
ಸಮದ ವಿರಕ್ತನ ಚರಣದಲಿ ||ಪ||
ನಿಗಮ ಶಾಸ್ತ್ರಗಳ ಅಗಣಿತ ಕಲಿತೊಡೂ
ಜಗದ್ವಾಸನೆ ಬಗೆಯಾಂತಿಹುದು
ಒಗುಮಿಗೆ ಭಕ್ತಿಯನಗಲದೆ ಇರ್ದೊಡೆ
ಜಗದೀಶ್ವರಗತಿಮೆಚ್ಚು ಇದು ||1||
ಸಂಕಲ್ಪವು ಸಿದ್ಧಿಗಳೆಂಬಿವುಗಳ
ಭೋಂಕನುಳಿದು ಮನ ಕೊಂಕದಲೆ
ಅಂಕ ರಹಿತ ಶಶಾಂಕನ ತೇಜದಿ
ಶಂಕೆಯ ಮರೆದುರೆ ಶಾಂತಿಯಲಿ ||2||
ಯಾಗ ದಾನ ಜಪ ನೀತಿಯು
ಯೋಗದ ಭೇದವು ಪೂಜೆಯು ಫಲವಿರಲಿ
ಈಗ ನಿಜದಿ ನಿರ್ಮಲನಾಗದೆಯಿರೆ
ರೋಗಿ ಭೋಗಿ ಬರಿ ಕರ್ಮದಲಿ ||3||
ನಾನೇ ಬ್ರಹ್ಮವು ಎನಲಹಂಕಾರವು
ನಾನಲ್ಲೆನಲದು ದೀನತ್ವ
ನೀನೆ ಸಗುಣ ನಿಶ್ಚಿಂತನು ಎನಲು
ತಾನೇ ಸಾಧ್ಯವು ನಿಜತತ್ವ ||4||
ಆಲಿಯನಿಲ್ಲಿಸಿ ಗಾಳಿಯ ಗೆಲ್ವುದು
ಮೇಲೆ ಮನಸು ಮನೆಗೂಡುವುದು
ಜಾಲ ಮೂಲ ಕಳೆದ್ಹೋಗಲು ಮಾಜದೆ
ಲೋಲ ಚಿತ್ತು ನಿಜ ಬೆಳಗುವುದು ||5||
ಭಕ್ತಿಯಿಲ್ಲದಿರೆ ಮುಕ್ತಿಯು ದೊರಕದು
ಸತ್ಯವಾಕ್ಯ ಸಟೆಯಲ್ಲವಿದು
ಯುಕ್ತಿ ಶಕ್ತಿಗತ್ತತ್ತ ಮೀರಿ ಸದ್ಭಕ್ತರ
ಭಕ್ತಿಯೊಳಿರುಹುದು ||6||
ಸುಟ್ಟುದುರಿತವನು ದಿಟ್ಟನಾದ ಬಳಿ
ಕೆಷ್ಟು ದಿವಸ ಏತಕೆ ಮರೆವೆ
ಭ್ರಷ್ಟನಾಗದತಿ ಕೆಟ್ಟ ಭವಕೆಹಿ
ಮ್ಮೆಟ್ಟದಂತೆ ಸಾಧಿಸು ನಿಜವ ||7||
ಸೋಮೇಕಟ್ಟೆಯ ನಾಮಕರ್ತೃ
ಚಿದ್ವ್ಯೋಮಕಾಯ ಸದ್ಗುರುವರನು
ಈ ಮಲ್ಲನಪುರ ನೇಮಕ
ಮನದಭಿರಾಮನಾಗಿರೆ ಒರೆದಿದನು ||8||

ಬಾರೆ ನೀರೆ ಭಜಕ
ಬಾರೆ ನೀರೆ ಭಜಕ ಪೊರೆ ತೋರು ಶುಭವನು
ಗುರು ಪಾದಾರವಿಂದ ಬಯಸಿ ತುಂಬೆ ಬೋರು ಗುಟ್ಟುವಂತೆ ಮತಿಗೆ ||ಪಲ್ಲವಿ||
ಚಂಚಲಾಕ್ಷಿಯನ್ನೊಳು ಪ್ರಪಂಚವಳಿಸುತ ಪೂರ್ವ
ಸಂಚಿತವನು ಸುಖವಮಾಡಿ ಮಿಂಚಿ ಹೊಳೆಸುತ ನಿನ್ನ
ಪಂಚವರ್ಣವನ್ನು ಕಾಯಕ್ಹಂಚಿ ಹಾಕುತ ನಿಷ್ಪ್ರ
ಪಂಚಳಾಗಿ ಆರು ಚಕ್ರ ಮಂಚವೆಂದು ಮಲಗು ಬಾರೆ ||1||
ಪೂರ್ವ ಪಶ್ವಿಮದೊಳು ಸುಳಿದು ತೋರ್ವ ಅಜಪೆಯೆ ನಿನ್ನ
ಉರ್ವಿಯೊಳಗೆ ಅರಿಯರೈಸೆ ಗರ್ವ ಮರೆವೆಯೆ ನಿನಗೆ
ಪರ್ವಕಾಲವಿರದೆ ಹೋಯಿತೆ ಸರ್ವರೊಳುದಯೆ ನೀನು
ಸಾರ್ವಭೌಮಳಾಗಿ ನಿಂತು ಓರ್ವಳಾದೆ ಲೋಕಮಾತೆ ||2||
ನಾಲ್ಕು ಹಾದಿ ನಡುವೆ ನಿಂತು ಹಲ್ಕು ಮಾಡುವೆ ನಿನ್ನ
ಪಲ್ಕು ಗಮಕಕಂಚಿ ವರ್ಗ ಮೆಲ್ಕಮರದಿವೆ ಕರಣ
ನಿಲ್ಕನರಿವಳೆಂದು ತಿರುಗಿ ನಿಜದಿ ನಿಂತಿದೆ ಇಂತಾ
ಹಲ್ಕ ಮಾತಿದ್ಯಾಕೆ ನೀನೆ ಶಿಲ್ಕು ಎನ ಆಜ್ಞೆಯಲ್ಲಿ ||3||
ವಾತಕರಿವಳಂತೆ ತನುವ ರೀತಿ ಕೆಡಿಸಿದೆ ನಿನ್ನ
ಮಾತ ಮನ್ನಿಸಲ್ಕೆ ಜಗದ ಪ್ರೀತಿ ತೊರೆಸಿದೆ ಸತ್ಯ
ರೀತಿಯೆಂದು ಮನವ ಮುರಿದು ಖ್ಯಾತಿ ನಿಲಿಸಿದೆ ಇಂಥ
ಘಾತಕತ್ವ ತರವೆ ನೀರೇ ಆತುಮನೊಳು ಬೆರಸು ಬಾರೆ ||4||
ನಲ್ಲನೋರ್ವನೆಂದು ಎಲ್ಲರಲ್ಲು ಪೇಳಿದೆ ಅವನು
ಎಲ್ಲಿ ಯಾರು ಎನಲು ಸೋಮೇಕಟ್ಟೆ ತೋರಿದೆ ಅವನ
ಬಲ್ಲತನವದೇನೋ ಮೆಲ್ಲಡಿಗೆ ತೋರಿದೆ ಈಗ
ಮಲ್ಲಪುರನೊಳಿರುವೆನೆಂಬ ಸೊಲ್ಲು ಬೆಲ್ಲವಾಯಿತೆ ||5||

ಶುಭಕರವಾಂತಿರು ತಾಯೆ
ಶುಭಕರವಾಂತಿರು ತಾಯೆ ನೀ
ನಭಯವಿತ್ತು ಹರುಷದೊಳೆಮ್ಮ ಕಾಯೆ ||ಪಲ್ಲವಿ||
ಭೋಗಿ ಭೂಷಣನವಾಮಾಂಗಿ ದಯಾ
ಸಾಗರ ಪೂರ್ಣೇಂದುವದನೆ ಶುಭಾಂಗಿ
ಯೋಗಿಯ ಹೃದಯಾಬ್ಜ ಸಂಗಿ ಭಕ್ತ
ರಾಗಿರ್ಪರಾದಿ ಮಧ್ಯಾವಸಾನ ಲಿಂಗಿ ||1||
ಕುಂಡಲಿ ಶಕ್ತಿಯೆಂದೆನಿಸಿ ಭೂ
ಮಂಡಳ ನಾಮರೂಪುಗಳಾಳವಳಿಸಿ
ಚಂಡ ಚಿದ್ಘನದಿ ಚರಿಸಿ ಉ
ದ್ದಂಡ ತೇಜದಿ ಪರಿಪೂರ್ಣತ್ವ ಬೆರೆಸಿ ||2||
ವೇದಾಗಮ ಮಂತ್ರ ಮೂಲೆ ಸಿದ್ಧ
ಸಾಧಕರೆದಬಿಡದಿರ್ಪ ಉಯ್ಯಾಲೆ
ಬೋಧಾನಂದ ಸುಶೀಲೆ ಮಹ
ದಾದಿ ವಸ್ತುವಿನೊಳು ಕೂಡಿರ್ಪ ಬಾಲೆ ||3||
ನಿಟಿಲನಯನೆ ನೀಲವೇಣಿ ಓಂ
ಪಟುಝೇಂ ಸೋಹಂ ಆಜ್ಞೇಲಿ ರಾಣಿ
ಛಟಛಟ ಘೋರಾಸ್ತ್ರಪಾಣಿ ಹ್ರೀಂ
ದಿಟದೀ ಪ್ರಸಾದ ಹೆಮ್ಮೆನೆ ಸಿದ್ಧವಾಣಿ ||4||
ಸಿದ್ಧಾರಿ ಚಕ್ರಸ್ವರೂಪೆ ಪ್ರ
ಸಿದ್ಧ ಶಾಂಭವಿ ಚಕ್ರದೊಳಗೆ ಕಲಾಪೆ
ಶುದ್ಧ ಷಟ್ಚಕ್ರ ಸಲ್ಲಾಪೆ ಮಹಾ
ಸಾಧ್ಯತಿ ಷಟ್ತತ್ವ ಪಳಸಿ ಚಿದ್ರೂಪೆ ||5||
ಅಜಗರಿ ರುದ್ರರೆಂಬವರ ಬೇರೆ
ಭಜಿಸಲೇತಕೆ ಅ ಉ ಮಾ ಕ್ಷರವಿದರ
ನಿಜವಾದ ಬಸವಸಂಯುತರ ಭವ
ರುಜೆಗಾದಿ ವೈದ್ಯನೆಂದಿಟ್ಟೆ ನೀ ಪೆಸರ ||6||
ಗುರುವೆ ಪರಾತ್ಪರವೆಂದು ಸುರು
ಚಿರ ಸೋಮೇಕಟ್ಟೆಯ ಸ್ಥಲದಿಂದೈತಂದು
ವರ ಮಲ್ಲಪುರದೊಳು ನಿಂದು ಸುಖ
ಭರಿತವೆನ್ನಿರ ವೋಂ ನಮಶ್ಶಿವಾಯೆಂದು ||7||

ಜಯತು ಜಾಹ್ನವಿಧರನ ಕಾಂತೆ
ಜಯತು ಜಾಹ್ನವಿಧರನ ಕಾಂತೆ
ಜಯದ್ಭರಿತೆ ಹರಿಗಾತ್ರೆ ಸುಪವಿತ್ರೆ ಶುಭೆಶಾಂತೆ ||ಪಲ್ಲವಿ||
ನಿರ್ಜರ ಕದಂಬ ಮಣಿಮಯ ಮಕುಟ
ದರ್ಭದೋಳ್ ಒಭರದ ತಾರಕಿಯರಮಲಶೋಭನದಿ
ಪಜ್ಜಳಿಪ ಪಾದನಖದಶಕೇಂದು
ಸುಧೆಯಿಂತಲೂ ಭೋಗಿಪ ಭಕ್ತ ನಿಜಮಾತೆ ನಿನಗೆ ನಮೋ ||1||
ಶ್ರುತಿಶಿರವದೊರೆಯದಾಕೃತಿ ಅದರೊಳು ಪ್ರಣವ
ಸ್ತುತಿಸುತ್ತಿರೆ ಗತಿಗಮಕವಿಡಿದು ಹೆಜ್ಜೆಗಳು
ಶ್ರುತಿಗೊಡುವರವರೆ ಅಜಹರಿಗಳೇ ಹೋ ಎನಲು
ಕ್ಷಿತಿಗೈದಿ ಕಾಳಿದಾಸನಿಗೊರೆದೆ ಪೊರೆದೆ ||2||
ಮುನಿ ಮನದ ಮುಕುರವೆಂದೆನಿಪಯೋಗಾಷ್ಟಕದ
ಘನಸಿದ್ಧಿ ಬಗೆಯನೊಳಗೊಂಡು ಸಂಸೃತಿಯ
ಮನೆದೊರೆದಂತಮಲ ಜ್ಯೋತಿ ರೂಪವನಾಂತು
ಚಿನುಮಯಾತ್ವಂಶದೊಳು ಶಿರವಿತ್ತೆ ಜನನಿ ||3||
ಲಲಿತ ಲಾವಣ್ಯ ರಸಜಲದಿ ತೆರೆಗಳ ವಿಬುಧ
ರಲಸ ದೀಕ್ಷಿಸಿ ಎಣಿಸಲರಿಯದರಿದು
ಕಲಹಂಸಗಮನೆ ಕಾತ್ಯಾಯನಿ ಕರುಣಿಸೆನೆ
ಫಲಪದವನೊಲಿದು ಪಾಲಿಸಿದೆ ಪಾರ್ವತಿಯೆ ||4||
ಅಹಿತ ವರ್ಗದ ಗಹದ ದಹನ ಸೋಮೇಕಟ್ಟೆ
ಸಹಜಗುರುವರನ ಸಾಯುಜ್ಯ ಸಂಪದದ
ಲಹರಿ ಮಲ್ಲನ ಪುರಾಶ್ರದಿ ಸಹಿತ್ತಿರೆ ನಿನ್ನ
ಮಹಿಮೆ ಬಣ್ಣಿಸಲಾಯ್ತು ಭಜಕನುತೆ ಜಯತೆ ||5||

ಭಲರೇ ಭಲರೇ ನೀ
ಭಲರೇ ಭಲರೇ ನೀ ನೀ ಹದನ ಕೇಳ್
ಅಲಲಲ ಅಚ್ಚರಿಯಹುದೀಗ
ಕುಲಿಲಿಲಿ ಎಂದು ಕೂಗಲು ಪ್ರಣಮವು
ಗೆಲುವರುಭವಬಂಧದ ಪೂಗ ||ಪಲ್ಲವಿ||
ಝೇಂಕು ಝೇಂಕು ಝೇಂ ಝೇಂ ಝೇಂ ಎನುತಿರೆ
ನೂಂಕುತೈತೆ ನಭಕನು ರಾಗ
ಕೊಂಕು ಕೊಸರಿಕೆಯದುಳಿದು ಮನಸು ನಿ
ಶ್ಶಂಕೆಲಿ ನಿಂದರೆ ತಿಳಿವಾಗ
ಸೋಂಕುತರಿವ ಸೋಹಂ ಸೋಹಂ ಎನು
ತೆಂಕೆಯಲ್ಲಿ ನೆಲೆ ಯಾವಾಗ
ಭೋಂಕನೆದ್ದು ಫಣಿಫಣ ಮಣಿಗಣರುಚಿ
ಪಂಕಜದೊಳು ಪಸರಿಸಿದಾಗ ||1||
ಲಕ್ಷವೇರಿ ನಿಟಿಲಾಕ್ಷಿಯಲ್ಲಿ ಅಉ
ಮಾಕ್ಷರಗಳ ಮಹಿಮಾವಾಗ
ಪಕ್ಷಿಗಳಳಿದುಳಿದಕ್ಷರ ಮಧ್ಯದಿ
ರಕ್ಷಿಪ ಸೊಡರನು ಕಂಡಾಗ
ಪೇಕ್ಷೆಯುಟ್ಟಿ ಹಂ ಕ್ಷಂ ಎನುತುರೆ
ಅಕ್ಷರಮಯ ತಾನಾಗ
ಸಾಕ್ಷಾತ್ಪರಶಿವ ಪ್ರತ್ಯಗಾತ್ಮ ಶುಭ
ಲಕ್ಷಣ ಭಾವದಿ ಬೆರೆದಾಗ ||2||
ಸುಪ್ತಿಯೊಳಗೆ ನಿಜಜ್ಞಪ್ತಿಯಿರಲು ಮಹ
ದೀಪ್ತಿಯ ಕಳೆಬೆಳಗುವದಾಗ
ಕ್ಲುಪ್ತವೆಂಬ ಉರ ಶಿರ ಭಾಗಕೆ ಆಗೋ
ಮುಕ್ತಿಯ ಮನೆಯದು ತಿಳಿಬೇಗ
ತೃಪ್ತಿಯಾಗಿ ಪೂರ್ಣಾನಂದದಿ
ಲಿಪ್ತಿಯಾಗಿ ಕಾಣುವದಾಗ
ಗುಪ್ತವೆಂದು ಮಲ್ಲನಪುರನಿಗೆ ಗುರು
ವಾಪ್ತನೀನೇ ಪೇಳಿದ ಯೋಗ ||3||

ಗುರು ಸಾರ್ವಭೌಮರಿಗೂ
ಗುರು ಸಾರ್ವಭೌಮರಿಗೂ ಗುರು ವಂಶಜಾತರಿಗೂ
ಗುರು ಭಕ್ತಿಶೀಲರಿಗೂ ಗುರು ತರದತತ್ವದಿರವರಿದು
ಇರ್ಪರಿಗೂ ಚರಣ ಸೇವಕನಾಗಿ ಗುರುವೆ
ಇವರಹುದೆಂದು ಭರದಿ ವಂದಿಪುದು ||ಪಲ್ಲವಿ||
ಜಗದ ಭೋಗವ ತ್ಯಜಿಸಿ ಮಿಗಿಲು ಭಸ್ಮವ ಧರಿಸಿ
ಹಗರಣದ ಮಾಯೆಯನು ಬಗೆಯದಲೆ ಸತತ
ನಿಗಮ ಸಮ್ಮತಿಯಾದವೊಗುಮಿಗೆಯ ವಿದ್ಯೆಯನು
ಅಗಲದಲೆ ಇರುವ ಜಗಪೂಜ್ಯರೆಂದು ||1||
ಕಾಲಕರ್ಮಗಳೆಂಬ ಮೇಲು ಪಾವುಗೆ ಧರಿಸಿ
ಲೀಲಾತ್ಮ ಯೋಗ ಜಾಲಂಗಳನು ನಟಿಸಿ
ಲೋಲ ಪ್ರಣಮದ ಮನಸ ಕೀಲಿಸತ್ಯಯೆ
ನಿಲಿಸಿ ಕಾಲನನುಗೆಲುವುದರ ಶೂಲಿ ಇವರೆಂದು ||2||
ಆಸನವು ಬಂಧುಗಳು ಘಾಸಿಯೆಂದಿದನುಳಿದು
ಸೂಸುವರಿವರ್ಗಕ್ಕೆ ಮೋಸ ಹೋಗದಲೆ
ಏಸು ಪುಣ್ಯವು ಕೂಡಿ ಓಸರೆಸಿತೆಂದೆನುತಿಹ
ಈಶರೂಪಿನ ಸೊಬಗಲೀಯತಿಗಳೆಂದು ||3||
ಪರಸತಿಯ ಅನ್ಯಧನ ಪರಹಿಂಸೆ ದೂರದಲಿ
ಪರಿಹರಿಸಿ ನಿಜದ ನಿರುಪಾಧಿಕತ್ವದಲಿ
ಗುರುವಿತ್ತ ಮಂತ್ರದಾಚರಣೆಯನು ಎಡೆಬಿಡದೆ
ಪರಮ ಸಾತ್ವಿಕರಾಗಿ ಇರುವ ಮಹಿಮರಿಗೂ ||4||
ಶ್ರುತಿಯರ್ಥವನು ಸ್ಮೃತಿ ಬಿಡದಿರ್ಪ ತೆರನೆಂತು
ಸತತ ಶಿವನರ್ಚಿಸುತ ಅರ್ಥಿಯಲಿ ತಾವು
ಗತಿಗೊಡುವರಾಗಿ ಜಗಕೆಲ್ಲ ಹಿತರೂಪನಿಂತು
ಗತಿಯುತರಾಗಿರ್ಪ ಅತಿಶಯಾದ್ಯರಿಗೂ ||5||
ನ ಗುರೋರಧಿಕಂ ವಿದಿತವೆಂದು ನಿಗಮಗಳುಸಿರ್ದ
ಬಗೆಯರಿದು ಗುರುವಿನಿಂದಧಿಕವಿಲ್ಲೆಂದು
ಪುಗುವ ಭಕ್ತಿಯೊಳು ಹೊರದೆಗೆಯದಲೆ
ಹಗಲಿರುಳು ಭಗಪೂಜ್ಯರಾದ ಬಹುಬಗೆಯ ಭಕ್ತರಿಗೂ ||6||
ಆವ ಮತವಾಗಿರಲಿ ಬಾಹ್ಯ ಸಾಕ್ಷಿಕನಾಗಿ
ಸೇವ್ಯ ಸೇವಕ ತನದ ಭಾವ ತೋರದಲೆ ಜೀವಶಿವರೈಕ್ಯದಲಿ
ತೀವ್ರಗತಿಯಾಂತಿರಲು ದೇವನಹುದವನು
ಭವಮಾಲೆ ಗೆದ್ದವನು ||7||
ವೇದಗಳು ಸರ್ವಾತ್ಮ ಭೇದನಾಸ್ತಿ ಎಂದೆನಲಿ
ವಾದವೇಕಿದಕೆ ಭವ ಭೇದ ಬಗೆಯಹುದು
ಬೋಧಮಯನಾಗದಾಮೋದ ಸಿದ್ಧಿಸಬಹುದೆ
ಆದಿ ಆರ್ಯರ ವಾಕ್ಯದಾದಿ ಬಿಡಬಹುದೆ ||8||
ಅಲ್ಲವೆನಬೇಡಿತರದೆಲ್ಲ ಫಲಬಗೆಬೇಡ
ಸೊಲ್ಲಿಸಿದನೆಂತೊ ಸೋಮೇಕಟ್ಟೆಯ
ನಲ್ಲ ಎಲ್ಲವರ ಮನದಿರ್ಪ ನಿಜದಿಂದ
ಮಲ್ಲನಪುರವಾಸನಲ್ಲಿ ಭಕ್ತಿಯೊಳು ||9||

ಏನಾಗಲು ಬೇಕು
ಏನಾಗಲು ಬೇಕು ಈ ಜಗದೊಳಿನ್ನೇನಾಗಲು ಬೇಕು
ಸಾನುರಾಗದಿ ಸುಮ್ಮಾನವಳಿದು ಮನ ಮೌನದಿ ನಿಂದವಗೆ ||ಪಲ್ಲವಿ||
ಭೂತ ಪಂಚಕ ವಿಷಯ ಪ್ರವೃತ್ತಿಯ
ಜಾತ ಮೋಹನದೆಸೆಯ ನೇತಿಗಳೆದು
ನಿತ್ಯಾತುಮಪದ ಸಂಪ್ರೀತಿಯಾಂತು ತನು
ಭೀತಿಯ ತೊರೆದವಗೆ ||1||
ರವಿ ಶಶಿಗಳ ಮದ್ಬದಿ ರಾಜಿಪ ರತ್ನ
ನಿವಹದ ಮಂಟಪದಿ ಭುವನೇಶ್ವರಿಯೆಂಬ
ಭೂತ ನುಂಗುತ ಬರೆ ಪವನಗಾಣದೆ
ಪಾವಕನೊಳಗಾಯ್ದವಗೆ ||2||
ಗಗನದೊಳಗೆ ಸುಳಿವ ನೀರೆಯ ಸೀರೆಯುಗಿದು
ಬೇಗದಿ ನೆರೆವ ಬಗೆಯೋಳು ಕುಪ್ಪುಸ
ತೆಗೆದು ಆಲಿಂಗನ ದೊಗುಮಿಗೆಯೊಳು ಸುಖ
ಮೊಗೆದು ಮೈಮರೆದವಗೆ ||3||
ಅಷ್ಟದಳದ ಗತಿಯೊಳಾಡುವ ಹಂಸ
ನ್ಹುಟ್ಟಗೆಡಿಸಿ ಮತಿಯೋಳ್ ದೃಷ್ಟಿಯೊಳಗೆ ಮೂರು
ಪಟ್ಟಣವನು ಜಯಿಸಿ ಪಟ್ಟವಾಳದಲೆ ತಾ
ಬಟ್ಟಬಯಲಿಡಿದವಗೆ ||4||
ನೀರ ಮೇಲಣ ತಾವರೆ ಮಧ್ಯದೊ
ಳೆರಡಾರು ವರ್ಣದ ಭಾಸುರೆ
ಸೇರಿ ಸುಷುಪ್ತಿಯ ಮೀರಿ ಮಲ್ಲನ ಪುರ
ಸಾರಿನಿಂದು ಕರಿವೃಷಭನೊಳ್ ಬೆರೆದವಗೆ ||5||

ಬಾ ಕಾಂತ ಏಕೆ ಇಂಥ ಪಂಥ
ಬಾ ಕಾಂತ ಏಕೆ ಇಂಥ ಪಂಥ ||ಪಲ್ಲವಿ||
ಸೇರದೇ ಹೀಗೆ ಓರಗೆ ಪೋಗೆ
ನೀರನೆ ನಿನ್ನನಾ ಕರೆಯುವದ್ಹೇಗೆ ||1||
ಕಾಯವು ನಿನ್ನದಾಯಿತು ಮುನ್ನ
ನ್ಯಾಯವೇಕೆನ್ನೊಳು ಪ್ರಿಯದ ಚಿನ್ನ ||2||
ಮನಸು ನಿಂತು ನೆನೆಸಿಯಿಂತು
ಕನಸಿನೊಳಗು ನಿನ್ನ ನೆನಹದೇ ಭ್ರಾಂತು ||3||
ಮಲ್ಲನಪುರದಿ ನಲ್ಲನೆ ಸ್ಥಿರದಿ
ನಿಲ್ಲು ಸೋಮೇಕಟ್ಟೆವಲ್ಲಭ ದಯದಿ ||4||

ಬಾರೆ ಬಾರೆ ಭಾವಕಿ
ಬಾರೆ ಬಾರೆ ಭಾವಕಿ ರನ್ನೆ
ಭವಸಾಗರದೊಳು ಬಿದ್ದೆನೆ ಚನ್ನೆ ||ಪಲ್ಲವಿ||
ಮೈ ತೋರು ನಿನ್ನಯ ದಯಾಪೂರ
ನಾವೆಯೊಳಗೇರಿಸಿ
ತಡಿಯನು ಸೇರಿಸು ಬೇಗದಿ ||1||
ಆಧಾರನೆ ಆಜ್ಞೆಯೊಳಿಹುದು ಬಲು
ಸಾಧಕರಿಗೆ ಸರಿದೋರುವುದು
ಭೇದವನರಿಯದೆ ಬಾಧೆಯಗೆಲ್ವೊಡೆ ಬೋಧಮಯಳೆ
ನಿಜದ್ಹಾದಿಯ ತೋರಿಸು ||2||
ಪುಸಿಯ ದಿಟದ ಸಂಸಾರವಿದ ನಾ
ನಾಶಿಸಲರಿಯೆ ಕೇಳಸಿಪದದಲೆಸೆದು ತೋರುತಿಹ
ಅಸಮಾಂಬರವನು ಪಸರಿಸುತೆನ್ನೊಳು
ವಶವಾಗಿರು ನೀ | |3||
ಕಂಟಕಿಹುದು ಕಾಲನದೊಂದು ಮನ
ಕಂಟಕಹುದು ಕರ್ಮವೆ ಬಂದು
ಟೆಂಟೆಣಿಸುವ ಜಗಶಂಟ ಮಾಳ್ಪವೋಲ್
ಜಂಟಿಯಾಗಿ ಜಯದೃಷ್ಟಿಲಿ ಕೂಡುತ ||4||
ಮಲ್ಲನಪುರದ ಸೊಲ್ಲಿದು ಸಿದ್ಧಿ ನೀ
ನಿಲ್ಲೆಯೊರುತ ನಿಜಕರಣ ಸಿದ್ಧಿ
ಪಲ್ಲಟಗೊಳಿಸದೆ ಪರಮಾಮೃತರಸ
ಚಲ್ಲುತ ಗುರುಪದ ಪಲ್ಲವದೊಂದಿಸು ||5||

ಅಂಬೆ ನೀನಲ್ಲದನ್ಯರ ನಂಬೆ
ಅಂಬೆ ನೀನಲ್ಲದನ್ಯರ ನಂಬೆ ಯನ್ನನೆ ಪರಶಿವರೆಂಬೆ
ವರ್ಣಿಸುವೆ ತಾಯೆ ಮದಂಬೆ ತುಂಬಿಗುರುಳೆ
ತಾರಕ ವಿದ್ವತ್ಪ್ರಭೆಗಿಂಬನಾಂತ ನಯನಾಂಬರ
ದೊಳು ಶಶಿಬಿಂಬಮುಖದಿ ನಗೆಯೆಂಬ ಕಿರಣ
ಸೂಸೆಂಬ ಯನ್ನಮನ ನಂಬಿಸು ತಾಯೆ ||1||
ನಾಸಾ ಭ್ರಮರಾಳಿಗಿದು ಬಲು ಮೋಸ ಮೂಕುರೆಯೊಳು
ಲೇಸ ಏಸನುಸುರಲಿ ಮುಕ್ತಿಕವಾಸ ವಾಸವ
ನೊಳು ಅಭಿಲಾಷೆಯುಳಿದು ಗುರು ಈ ಸುಮಂಗ
ಲೆಯ ರಾಸಿಯೆ ತೇಜದ ಆಸ್ಯದೊಳಗೆ ತಾ
ಭಾಸ್ಯನಾದನೆನೆ ಭೂಷಣಾಂಕ ಶಿವೆದೋಷವ ಹರಿಸೆ ||2||
ರದನಾ ನಿರ್ಜರಪನಾಯುಧ ಸದನಾ
ಮದನಾ ಕದನಾ ಕಲಾದಶರವೆಂದಿದನಾ
ಕದುಬಿ ನುಡಿದೆ ಕಾಳೋರಗ ವೇಣಿಯೇ
ಮೃದುರವ ಕೋಕಿಲ ಕೀರವಾಣಿ ಮೈ
ಬೆದರಲೆನ್ನ ಭಯಬೇಡೆನುತ ನೀ
ಸದರದೊಡನೆ ಸುಖಸಿದ್ಧಿಯ ಪಾಲಿಸೆ ||3||
ಕನ್ನಡಿ ಕಾಂತೆ ಕದಪಿನೊಳಾಂತೆ
ನಿನ್ನಧರದಕೆಣೆಯಗಿನ್ನೆನೆನಲಿವಿದೃಮದಂತೆ
ಕೆನ್ನೆ ಪುರ್ಪು ಕಾಮನ ಸಿಂಗಾಡಿಯೊ
ಸನ್ನುತಾಂಗ ಶುಭಸಾಗರಗಳ ಶಂ
ಕೆನ್ನಲಿಹುದೋ ಸ್ವರ್ಣಾಂಬರ ವಿರೆ ಯೀ
ರನ್ನದೊಡವೆ ಯೇಕೆಂದೆನೆ ಜನನಿ ||4||
ತೋಳು ಕರಿಸುಂಡಿಲಿರದದ ಕೇಳು
ಬಾಳೆಸುಳಿಗಳು ಬಾಲೆಬಡಬಾಸೆ ಭಾವಕೆ ಕೀಳು
ನಾಳವಿಡಿದ ನೈದಿಲೆ ಕುಷ್ಮಲ ವೆಂದೇಳಲಹುದೆ
ದೇವಿಯ ಕುಚದೇಳ್ಗೆಯ ಕಾಳುಮತಿಗೆ ಕರುಣಿಸು
ನಿನಗೆಯು ನಾಬಾಲನಾಗಲಿದ ಬಣ್ಣಿಪೆ ಮಾತೆ ||5||
ನಡುವೆ ನಗಾರಿ ಮಧ್ಯದು ಜಡವೆ ಇಡಿ ದೃಢ ವಿದಬಿಡುವೆ
ಕಡದರೋಕಮಲಗಂಧಿಯಾ ನಡುವೆ ತಡಿಯ ಕಾಣದಲೆ
ಹುಡುಕಲೆನುತ ಆ ಜಡಸಖನ ಕರಕಡೆದಲೆ ನೋಡಲು
ಕಡೆಗೂ ಕಾಣೆ ಕರ್ಣದ ತಾಟಂಕದ ನಡುರಂಧ್ರಕೆ ಸರಿ ನುಡಿದೆನೆ ಗೌರಿ ||6||
ಜಾನು ಜಂಘೆಗಳು ಝಳುಪಿಸಿ ಹೊಳೆಯೆ
ಆನರಿಯೆನು ಜಘನ ಆನೆಕುಂಭಸ್ಥಳಕೆ ಸರಿವರಿಯೆ
ನ್ಯೂನವಿರದ ರಂಭಾಸ್ತಂಭವೋಯೆನೆ ಮಾನವಂತ
ಮಂದದ ನಡೆ ಹಂಸಗಳಿಗಳವೆ ಸೂನಿಗೆ ತಿಳಿಹೇಳೌ ||7||
ರತ್ನದಿಧಿತಿಯುರೆ ರೇವತಿದುಸತಿಯ
ಮಾಂಗಲ್ಯದ ಜ್ಯೋತಿಯಾಗಿತ್ತಾ ಸರ್ವಸ್ವ ಶಿವ ಸಂಪತ್ತಿಯ
ಕರ್ತೃವಾಗಿ ಜಗವೆತ್ತಲಿಕೆ ನಿಜ ಭೃತ್ಯರನ್ನು
ಭಂಗಕೆ ತರಲಾರದೆ ಸ್ತುತ್ಯಗೊಂಡು ಸುಖಗೊಡುತಲಿರ್ಪ
ಶುಭಹಸ್ತಕೆನಲು ಅರಿದಾಯಿತೆ ಅಗಜೆ ||8||
ಉಗುರು ಕೇತಕಿಯೋ ಮಾವಿನ ಚಿಗುರೋ
ಅಂಗುಲಿಗಳೋ ಕರದ ಬೊಗಸೆಭಾಗ್ಯದ ಬರದೇನ್ಖರ
ದೋ ಸೊಗಸನಾಂತು ಸುರ ವಧುಗಳು ಶುಭದ
ಮಾಸದಿ ಪುಟ್ಟಿ ಮೈಯಿಕ್ಕಲು ತುರುಬುಗಲಿನಲಿ ಹಾರಿ
ಆರಡಿಯಂತೊಪ್ಪಿರೆ ಸುಗುಣಪಾದ ಪದ್ಮೆನೆ ಸಾಕಿರದೆ ||9||
ಗುರುವೆ ಸರ್ವಾತ್ಮ ಶಂಕರನೆಂದು ಮಲ್ಲನ ಪುರದೊಳು
ಒರೆವೆ ಶಾಂಭವಿಯ ಮಂತ್ರಿದುನಿಂದು ಸ್ಮರಿಸಲಾಗಿ
ಸುಖಭರಿತನಾದೆ ಇನ್ನರುಪಲೇನು ನಿಜನಿರ್ಮಲ ಜ್ಞಾನದ
ಪರಿಯನಿತ್ತು ಪೊರೆವರೆ ನೀನಲ್ಲದೆ ಗುರುವಂದುಂಟೆ ಗುರು ತೋರಿಸಿ ಬೆರೆಸೆ ||10||

ಜಯ ಜಯ ಮಹಾದೇವ
ಜಯ ಜಯ ಮಹಾದೇವ ಭಯ ನಿವಾರಣನೆ ಭಜಕರಕಾವ
ಜಯ ಜಯ ಮಹಾದೇವ ||ಪಲ್ಲವಿ||
ಮೂರವಸ್ಥೆ ಗೆಲಿದು ಮೂವತ್ತಾರು ತತ್ವ ತಿಳಿದು ಸು
ಖರಸ ವಾರೆಪೋಗದಂತಾರೈಯು ಗುಣ
ಮೀರಿ ಪಶ್ಚಿಮವ ಸಾರಿದ ಮಹಿಮಾ ||1||
ಕರಣಗಳನು ತಡೆದು ಕಾಲನ ಉರವಣೆಯನು
ಮುರಿದು ಕುಂಭಕದರಿವನು ಮೀರಿರೆ ತವಂಗವನು
ಮರದ ಸರಿಮಿಗಿಲಿಲ್ಲದ ಪರತರ ಮಹಿಮ ||2||
ಅರಿಗಳಾರ ಕಟ್ಟಿ ಚಕ್ರಗಳಿರವನೆಲ್ಲ ಮುಟ್ಟಿ ಮೇಲೈ
ತರಲು ತರಳೆ ಬರಸೆಳೆಯೆ ಕನಕಮಯ
ದರಿವನು ಮಂಚದಿ ಮೆರೆದ ಮಲಾಪ ||3||
ಹಂಸನನ್ನು ಮುರಿದು ನೀ ಪರ ಹಂಸನಾಗಿ ಸುಳಿದು ನಿತ್ಯದ
ಹಂಸನಾದ ಬ್ರಹ್ಮಾಂಡದೊಳಾ ಓಂ ಶಿವ ಕೂಟದಿನಿಂದ ನಿಜಾತ್ಮ
ನಾದ ಬಿಂದು ನುಂಗಿ ಮೋದದ ಕಳೆಯೊಳು ಮನಪಿಂಗಿ ||4||
ಇಹಪರದಾದಿ ಅಂತ್ಯಗಳದಾದಿವಸ್ತು ತಾ
ನಾದ ಭಾವ ಬಯಲಾದ ಚಿದಾತ್ಮ ||5||
ಹತ್ತನು ಹನ್ನೊಂದ ಬಳಿಕೈವತ್ತರ ಮೇಲೊಂದುಗೂಡಿಸಿ
ಸತ್ತು ಚಿತ್ತುವಿನ ಗೊತ್ತಿನ ಜ್ಯೋತಿಯ
ಬಿತ್ತನು ಸತ್ಯರಿಗಿತ್ತ ಮಹಾತ್ಮ ||6||
ಗುರುವೆ ಜಗವಪೊರೆದೀಮಲ್ಲನ
ಪುರಕೆ ಚಿತ್ತವರಿದೆ ನೀನೈತರಲಾಯ್ತು ಎಡೆ
ಯೂರು ಶಿವಾದ್ವೈತರ ಶಿಷ್ಯರ ಪರಿಣಾಮಿ ||7||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಸೋಮೇಕಟ್ಟೆ ಕರಿವೃಷಭೇಂದ್ರರ ತತ್ವಪದಗಳು

ಉತ್ಸವವು ನಮಗೇತಕೋ
ಉತ್ಸವವು ನಮಗೇತಕೋ
ನಮಗಿನ್ನು ಹುಚ್ಚಾಗಿ ತೋರುತಿಹುದು
ಇಚ್ಛೆಯಿಲ್ಲದ ಮನಕೆ ಉತ್ಸವವು ಬೇಕೆಂಬ
ಹುಚ್ಚಣ್ಣಗಳು ಕೇಳಿರೋ ||ಪಲ್ಲವಿ||
ಕಾಲುಕೈ ಕಣ್ಣಿಲ್ಲವೋ ನಮಗಿನ್ನು
ಮೂಗು ಕಿವಿ ಬಾಯಿಲ್ಲವೋ
ವಾಸನೆಯು ಎಂತೆಂಬ ಘಾಸಿ ನಮಗೇನಿಲ್ಲ
ಜೀವದಾಶ್ರಯವು ಇದುವೆ ||1||
ತಪ್ಪು ಇದರೊಳಗಿಲ್ಲವೋ
ಇದ್ದಾಗ್ಯೂ ಅಪ್ಪೈಸಿಕೊಳಲೊಲ್ಲದೆ
ಇಪ್ಪ ಬೀದಿಗಳೊಳಗೆ ಮೆರೆ ಮೆರೆಸುವಾ ಪ್ರಾರ್ಥನೆಗೆ
ಒಪ್ಪಿಕೊಳ್ಳುವರದಾರೋ ||2||
ಎಷ್ಟು ದಿನವಿಹುದು ಕಷ್ಟ | ಭುವಿಯೊಳಗೆ
ಎಷ್ಟು ದಿನವಿಹುದು ಅದೃಷ್ಟ
ದಿಟ್ಟ ಸೋಮೇಕಟ್ಟೆ ಕರಿವೃಷಭಲಿಂಗೇಂದ್ರ
ನಿನ್ನೊಳಿಟ್ಟುಕೊಳ್ಳೈ ತನುವನು ||3||

 

ಜೋ ಜೋ ಜೋ ಎಂದು
ಜೋ ಜೋ ಜೋ ಎಂದು ಜೋಗುಳ ಪಾಡಿರೆ
ಸತ್ಯ ಸೋಮೇಕಟ್ಟೆ ಕರ್ತೃ ಕರಿವೃಷಭನ || ಜೋ ಜೋ ||ಪಲ್ಲವಿ||
ಚತುರ್ವಿಧ ಭಕ್ತಿಯೆಂಬ ಅತುಳ ಕಂಭದ ಮೇಲೆ
ವಿತರಣೆ ಎಂತೆಂಬ ಚದರ ತೊಲೆಯ ಹೂಡಿ
ಅತಿಶಯಾನಂದವೆಂಬ ಹಲಗೆಗಳನೆ ಹಾಸಿ
ಮತಿಯುಪರತಿಯೆಂಬ ಜೋಡಿ ಕೊಂಡಿಯ ಬಲಿದು|| ಜೋ ಜೋ ||1||
ಅರಿವೆಂಬ ಸರಪಣಿ ಸರಸದಿಂದ್ಹೂಡತ
ಸ್ಥಿರವೆಂಬ ತೊಟ್ಟಿಲೊಳು ಪರವೆಂಬ ಶಿಶುವಿಗೆ
ವರವಿವೇಕಗಳೆಂಬ ಹಾಸಿಗೆಯನೆ ಹಾಸಿ
ಚಿರತರ ಸುಖವೆಂಬ ಒರಗು ದಿಂಬುಗಳಿಟ್ಟು|| ಜೋ ಜೋ ||2||
ಆದಿಯನಾದಿಯಿಂದಲತ್ತತ್ತಲನುಪಮ
ವಾದ ಶಿಶುವ ನೋಡಿ ನಲಿನಲಿದಾಡುತ
ಸಾಧು ಸಜ್ಜನರೆಲ್ಲ ನೆರೆದು ಕೊಂಡಾಡುತ
ಬೋಧಮಯನ ಕರಿವೃಷಭರಾಜೇಂದ್ರನ || ಜೋ ಜೋ ||3||

 

ಜೋ ಎನ್ನಿರವ್ವಗಳಿರಾ
ಜೋ ಎನ್ನಿರವ್ವಗಳಿರಾ | ನೀವೀಗ ಜೋ ಎನ್ನಿರಕ್ಕಗಳಿರಾ
ಜೋ ಎಂದು ಕೂಗಿರೆ | ಜ್ಯೋತಿ ಸ್ವರೂಪನ ಜ್ಞಾನಶಕ್ತಿಯರು ನೀವು ||ಪಲ್ಲವಿ||
ಆನಂದಮಯನು ನೀನು |
ಸರ್ವರೊಳು ಓಲೈಸಿಕೊಳಲೊಲ್ಲದೆ
ಹೀನ ನೆರೆಯೊಳು ನೀನು ಬರಬಹುದೆ
ಎಂತೆಂದು ಹೊಕ್ಕುಳವ ಕೊಯ್ಯಿರವ್ವ ||1||
ಸಚ್ಚಿದಾನಂದ ನೀನು ಪ್ರಕೃತಿಯ
ಇಚ್ಛೆಗೋಸುಗವಾಗಿಯೆ ಅಚ್ಚೊತ್ತಿದಂದದಲಿ
ಇಚ್ಛೆಯೊಳು ಬಂದುದೇ ತಪ್ಪೆಂದು
ಬೆಚ್ಚಗೆಯ ಮಾಡಿರವ್ವ ||2||
ಹುಚ್ಚು ಮಾಯೆಯ ಸಂಗದಿ|
ಜಗವಿದುವೆ ಹುಚ್ಚಾಗಿ ಮುಳುಗಿ ಇಹುದು
ನೀ ಬೆಚ್ಚಿ ಬೆದರಲಿ ಬೇಡ ನಿನ್ನನೀ
ತಿಳಿಯೆಂದು ಬೆಚ್ಚು ನೀರ್ಹಾಕಿರವ್ವ ||3||
ಶ್ರೇಷ್ಠವಿದು ಬಂಗಾರವು ಟೆಂಕದಿಂ
ನಷ್ಟವಾಗಿರುವುದೆಂದು ನೆಟ್ಟಗೆಯ
ಮುರಿದು ತೂಪಿರಿದು ದೃಷ್ಟಿಯನಿಟ್ಟು
ತಟ್ಟನೆ ಜೋ ಎನ್ನಿರವ್ವ ||4||
ಮಾತು ಮಾತ್ರದ ಶಿಶುವಿದು ಜಗಕೊಂದು
ರೀತಿಯಾಗಿ ತೋರಿತಲ್ಲಾ ಪು
ನೀತ ಸೋಮೇಕಟ್ಟೆ ಕರಿವೃಷಭ ಲಿಂಗೇಂದ್ರ
ನೇತಿಗಳೆದಿಹ ಜಗವನು ||5||

ದೂರಿ ದೂರಿಯು
ದೂರಿ ದೂರಿಯು ದೂರಿ ದುರಿತನಾಶಾಯ
ಬಾಲೇಂದುಧರ ಈಶ ಭವ ವಿನಾಶಾಯ ||ಪಲ್ಲವಿ||
ಎತ್ತಣ ಶಿಶುವಿದು ಎತ್ತ ಪೋಗುತಲಿದೆ
ಹೆತ್ತವಳ ಹೆಸರೇನು ಮತ್ತೆ ತಾತನದಾರು
ಗೊತ್ತಿಲ್ಲ ಶಿಶುವಿದು ಆರ್ಥಿಯಿಂದಾಡುತಿದೆ ||1||
ಆರು ಹುಲಿಯ ನುಂಗಿ ಆರೆರಡಾನೆಯ ಪಿಂಗಿ
ಮೂರು ಗ್ರಾಮವ ಸುಟ್ಟು ಮೂಲಿಗನಾಗಿದೆ
ಪಂಚರೈವರ ಕೊಂದು ಸಂಚಿತ ಮೂರ ಮೀರಿ
ಪಂಚಮುಖನ ಧ್ಯಾನ ನಿರಂತರದೊಳಗಿದೆ ||2||
ದಕ್ಷಿಣ ಕಾಶಿಯೆಂಬ ಮಕ್ಷುಕ ಪುರಿಯೊಳು
ಈಕ್ಷಿಸಿ ಭಕ್ತರಿಗೆ ಇಷ್ಟಾರ್ಥ ಮೋಕ್ಷವಿತ್ತು
ಶ್ರೇಷ್ಠ ಸೋಮೇಕಟ್ಟೆ ಕರಿವೃಷಭೇಂದ್ರ ಶಿಶು
ದೃಷ್ಟಿ ಅಂತರವಿಟ್ಟು ನಲಿನಲಿದಾಡುತಿದೆ ||3||

ನಿದ್ರೆಯ ಮಾಡು ನೀ
ನಿದ್ರೆಯ ಮಾಡು ನೀ ಭದ್ರ ಮಂಟಪದೊಳು
ಕ್ಷುದ್ರ ಗುಣಗಳೇನು ತೋರದಂತೆ ||ಪಲ್ಲವಿ||
ಸ್ಥೂಲ ತನುವಿನ ಜಾಲವ ಕಳೆದು ನೀ
ಆಲಿಗಳೆರಡೆವೆ ಅಳಚದಂತೆ ಅಲುಗದಂತೆ
ಮೂಲ ಸ್ಥಾನದ ತುದಿಯೊಳು ತೋರುತಿಹ
ಕಳೆ ಭೇದಿಸಿ ನೋಡಿ ನೀ ಬೆರಗಾಗುತ ||1||
ನಾಸಿಕಾಗ್ರದ ದೃಷ್ಟಿ ಸೂಸಲೀಯದೆ ಮನ
ವಾಸನೆಗಳು ಏನೂ ತೋರದಂತೆ
ಸಾಸಿರ ದಳಪೀಠ ವಾಸವಾಗಿರುತಿಹ
ಭಾಸುರ ಕಳೆಯೊಳು ಲೇಸಿನಿಂದ ||2||
ತಳಮೇಲು ಚಕ್ರದಿಂದೊಳಹೊರಗಾದ್ಯಂತ
ಥಳಥಳಿಸುವ ಕಳೆ ಬೆಳಗಿನೊಳು
ಹೊಳೆವ ಸೋಮೇಕಟ್ಟೆ ತಿಳಿವೆ ಕರಿವೃಷಭನೆಂಬ
ಉಳಿಮೆಯನೊಳಗೊಂಡ ಇರವಿನೊಳು ||3||

ಏಳು ಕರಿವೃಷಭೇಂದ್ರ
ಏಳು ಕರಿವೃಷಭೇಂದ್ರ ಏಳು ಯತಿಕುಲ ಚಂದ್ರ
ಭಾಳಾಕ್ಷ ಶಿವಶರಣರೋಲೈಸಿ ನಿಂದಿಹರು ||ಪಲ್ಲವಿ||
ದಳನಾಲ್ಕು ದಳವಾರು ದಳಹತ್ತು ಹನ್ನೆರಡು
ದಳ ಹದಿನಾರು ದ್ವಿದಳದೊಳಗಾಡುತ ||1||
ಸಾಸಿರ ದಳ ಪೀಠವಾದ ತೊಟ್ಟಿಲೊಳು
ಭಾಸುರ ಬೆಳಕನು ಲೇಸಿನಿಂ ನೋಡುತ ||2||
ಮೂರು ದಳದ ಪೀಠ ಮೀರಿ ಪಶ್ಚಿಮದೊಳು
ಸಾರ ತರದ ಸುಖವ ಸೂರೆಗೊಂಡಾಡುತ ||3||
ನವಚಕ್ರ ನವಲಿಂಗ ನವಶಕ್ತಿ ನವಭಕ್ತಿ
ನವವಿಧ ಕಳೆಯೊಳು ನಲಿನಲಿದಾಡುತ ||4||
ಆದಿಮಧ್ಯಾವಸಾನ ಭೇದರಹಿತನು ನೀ
ನಾದ ಸೋಮೇಕಟ್ಟೆ ಅನಾದಿ ಕರಿವೃಷಭೇಂದ್ರ ||5||

ಲಹರಿಗೊಂಡಿದೆ ಮನವು
ಲಹರಿಗೊಂಡಿದೆ ಮನವು ಐಮೊಗನ ಧ್ಯಾನದೊಳು
ಸಹಿ ಸಹಿ ಸಹಿ ಎಂಬ ಸಹಜಾನಂದದೊಳು ||ಪಲ್ಲವಿ||
ಎಷ್ಟು ಜನ್ಮದ ಜಾಡ್ಯ ಕಷ್ಟ ಹರಿಯಿತು ಇಲ್ಲಿ
ಇನ್ನೆಷ್ಟು ಜನ್ಮದ ಸುಕೃತ ಗುಟ್ಟ್ಯಾಯ್ತೊ ಶಿವನೆ
ಸತಿಯ ಮರೆದಿಹ ಪುರುಷನತಿ ಬೇಗ ಬಂದಂತೆ
ಗತಿಯು ತಪ್ಪಿದ ನರನು ಪಥವ ಕಂಡಂತೆ ||1||
ಅರಿವು ಮರವೆಗೆ ಸಾಕ್ಷಿ ಇರುವ ವಸ್ತುವಿನೊಳಗೆ
ಪರವಶಾನಂದಪರನಾಗಿ ನಿಂದು
ಚಿರತರಾನಂದ ಸುಖರಸದೊಳಗೆ ಮುಳುಗುತ್ತ
ಪರಮಾನಂದ ಪೂರ್ಣನಾಗಿ ||2||
ಅರಿವು ಮರವೆಗೆ ಆದಿ ಇರವು ತಾನೆ ತನ್ನ
ಕುರುಹನರಿಯದೆ ಪರನ ಮರೆದು
ಇರುವ ಸೋಮೇಕಟ್ಟೆ ಕರಿವೃಷಭಲಿಂಗ
ದಿರವೆ ತಾನಾಗಿ ಈ ಪರಿಯೊಳಿರುತ ||3||

ಏಕೆ ಮರೆದಿಹೆ ಮನವೆ
ಏಕೆ ಮರೆದಿಹೆ ಮನವೆ ನೀನಾರು ಪೆಸರೇನು
ರೂಪಿಸಿದ ಠಾವೆಲ್ಲಿ ನೀ ಲಯಿಪುದೆಲ್ಲಿ ||ಪಲ್ಲವಿ||
ಪಿತ್ತ ಹತ್ತಿದ ನರನು ಮತ್ತೆ ಈ ಮನೆಯೆಲ್ಲ
ಸುತ್ತ ತಿರುಗುತಿದೆ ಎಂತೆಂಬೋಲು
ಗೊತ್ತು ತಿಳಿಯದೆ ನೀನು ಮತ್ರ್ಯಲೋಕವು ಎಂಬ
ಕತ್ತಲೆಯೆ ನಾನೆಂಬೆ ನಿರರ್ಥ ಮನವೆ ||1||
ತೃಷೆಯಾದ ಮನುಜ ತಾ ಹಸಿದು ಬಿಸಿಲೊಳು ಬಂದು
ಎಸೆವ ಚೌಳು ಭೂಮಿಯೊಳು ಜಲವಿರ್ಪುದೆಂದು
ದೆಸೆದೆಸೆಯ ತಿರುಗಿ ತಾ ಬಸವಳಿದು ಬಿದ್ದಂತೆ
ಹಸನಾಯಿತಲ್ಲ ನೀ ಪುಸಿಯ ಪಿಡಿದಿಹುದು ||2||
ಎಲ್ಲ ಮರವೆಯ ಬಿಟ್ಟು ನಿನ್ನ ನಿಜವಳವಟ್ಟು
ಫುಲ್ಲ ಶರನನು ಸುಟ್ಟು ಭಸಿತವಿಟ್ಟು
ಬಲ್ಲ ಸೋಮೇಕಟ್ಟೆ ಕರಿವೃಷಭಲಿಂಗೇಂದ್ರ
ನಲ್ಲದೇ ನಿಲ್ಲುವೆನೆ ಮನ ಮುಕ್ತಿವಟ್ಟು ||3||

ಸುಖವುಗೊಂಡಿದೆ ಮನವು
ಸುಖವುಗೊಂಡಿದೆ ಮನವು ನಿಖಿಳ ಕೃತಿಗಳ ಮರೆದು
ಅಕಳಂಕ ಪರಬ್ರಹ್ಮದರಿವಿನೊಳಗೆ ||ಪಲ್ಲವಿ||
ಹಸಿದ ಪಶು ತಾ ಪೋಗಿ ಎಸೆವ ಗರುಕೆಯ ಮೇದು
ಹೊಸ ಪರಿಯ ಸುಖದಲ್ಲಿ ಮುಳುಗಿ ಮಲಗಿ
ಪಸರಿಸುತ ಮೆಲುಕಿಡುತ ಮುಂದೆಸೆಯ ಕಾಣದೆ ಇರುವ
ಪಶುವಿನಂದದೊಳು ಮನ ನಸಿದು ಸುಖದೊಳಗೆ ||1||
ನಿದ್ರೆಯೊಳಗಿಹ ಮನುಜ ಎದ್ದು ಉಪಾಧಿಯೊಳು ತನ್ನನುವ
ತಿದ್ದಿಕೊಳದಲೆ ತಾನಿರುವೆಡೆಯೊಳು
ಅದ್ದಿ ತೋರುವ ಸುಖದ ಮುದ್ದೆಯಾಗಿರುವಂತೆ
ಬದ್ಧವಾಗಿ ಮನವು ಬ್ರಹ್ಮ ಸುಖದಿ ||2||
ಇಷ್ಟವಾಗಿಹ ವಸ್ತು ನೆಟ್ಟಗೆಯು ತಾನಿರ್ದ
ಬಟ್ಟೆಯನೆ ಪಿಡಿದು ತನ್ನಲ್ಲಿಗೈದಿದೊಲು
ನೆಟ್ಟಗೆಯು ಈ ಮನವು ದೃಷ್ಟಿಯನು ಚದುರಿಸದೆ
ಮುಟ್ಟಿ ಸೋಮೇಕಟ್ಟೆ ಕರಿವೃಷಭ ಲಿಂಗದೊಳು ||3||

ನೋಡಿ ತಿಳಿವುದು ನೀನೆ
ನೋಡಿ ತಿಳಿವುದು ನೀನೆ ನಿಜವೆಂದು
ತತ್ವಗೂಢದಿ ನಿಂದ ಸಾಕ್ಷಿಕನೆಂದು
ಪಂಚವಿಶಂತಿ ತತ್ವಗಳಿವು ಎಲ್ಲಾ
ನಿನ್ನ ಅಂಶದಿ ಆದವು ಅವು ಎಲ್ಲಾ ||ಪಲ್ಲವಿ||
ತ್ರಿಂಶತಿ ಕೋಟಿ ದೇವತೆಯೆಲ್ಲಾ
ಪರಾಂಶದಿ ಆದವು ತಾವೆಲ್ಲಾ
ಹಂಸೋ ಹಂಸೋ ಹಂಸೆಂದು
ಜೀವಾಂಶಿಯ ಮೀರಿದ ನಿಜವೆಂದು ||1||
ತೋರುವ ಜಗವದು ಮೃಷೆಯೆಂದು
ಈ ಭಾರಕತ್ವವು ತನಗೆ ಪುಸಿಯೆಂದು
ತೋರುವ ಕಲ್ಪಿತ ಇದು ಎಂದು
ನಾ ಮೀರಿದ ವಸ್ತುವು ದಿಟವೆಂದು ||2||
ಸೋಮೇಕಟ್ಟೆಯ ಕರಿವೃಷಭನೆಂದು
ಭೂಮಿಯೊಳವತಾರದಂತೆ ಕಂಡು
ಸಾಮೀಪ್ಯ ಫಲಗಳ ಮೀರಿ ನಿಂದು
ಪ್ರೇಮಾಸ್ತಿ ಭಾತಿಗತೀತವೆಂದು ||3||

ನೋಡೋಣ ಬಾರೆ ಸಖಿ
ನೋಡೋಣ ಬಾರೆ ಸಖಿ ಪ್ರಾಣಕಾಂತನ
ಕೂಡೋಣ ಬಾರೆ ಕರಿವೃಷಭೇಂದ್ರನ
ಮುಕ್ತಿ ಸಾಂದ್ರನ ಯತಿ ಕುಲಚಂದ್ರನ ||ಪಲ್ಲವಿ||
ಆಗಮಾತೀತನಭೇದ್ಯನ
ನಿಗಮಾಗಮಂಗಳಿಗೆ ಸಿಲುಕದಾತನ
ಭೋಗರಹಿತ ಸ್ವಪ್ರಕಾಶನ
ಜನನದಾಗುಹೋಗುಗಳಿಲ್ಲದಾತನ ||1||
ಮೂರು ಮೂರ್ತಿಗೆ ಮೂಲಾದಾತನ
ಮೂರಾರು ಲಿಂಗದಿ ಬೆರೆದಾತನ
ವಾರಿಜಭವತಾತ ಪ್ರೀತನ
ಗುರು ಈರೇಳು ಲೋಕಕತೀತನ ||2||
ನಾಮರೂಪಗಳಿಲ್ಲದಾತನ
ಪ್ರೇಮಾಸ್ತಿ ಭಾತಿಗತೀತನ
ಸಾಮಗಾನ ಸಂಪ್ರೀತನ
ಶ್ರೀಮತ್ಸೋಮೇಕಟ್ಟೆ ಕರಿವೃಷಭೇಂದ್ರನ ||3||

ಕಾಣದಿರಲಾರೆನು ಶ್ರೀಗುರುವನು
ಕಾಣದಿರಲಾರೆನು ಶ್ರೀಗುರುವನು ಕಾಣದಿರಲಾರೆನೆ
ಕಾಣದೆ ನಿಲಲಾರೆನೆ ಪ್ರಾಣಕಾಂತನ ನೀರೆ
ಜಾಣತನದಿ ಫಣಿವೇಣಿ ನೀ ಕರೆತಾರೆ ||ಪಲ್ಲವಿ||
ಮಾಯ ಸಂಸಾರವೆಂಬ ಮೋಹಕೆ ಸಿಲ್ಕಿ ಆಯಾಸಪಡುತಲಿರೆ
ಕಾಯಜನನು ಸುಟ್ಟು ಬೂದಿಯ ಫಣೆಗಿಟ್ಟ
ಮಾಯಾರಹಿತ ಗುರುರಾಯನ ಪಾದವ ||1||
ಅಂತರಂಗದಿ ಕರೆದು ಎನ್ನೊಳಗಿರ್ಪ ಚಿಂತೆಯೆಲ್ಲವ ಪರಿದು
ಸಂತೋಷದಿಂದೆನ್ನ ತನುಮನದೊಳು
ನಿಂತು ಸೂರೆಯಗೊಂಡ ಕಾಂತನ ಪಾದವ ||2||
ಕರುಣಾಮೃತ ಹಸ್ತವ ಶಿರದೊಳಿಟ್ಟು ಪರಮ ಪಂಚಾಕ್ಷರಿಯ
ಒರೆದೆನ್ನ ಕರ್ಣದಿ ಪರಮಲಿಂಗವಯೆನ್ನ
ಕರದೊಳಗಿಂಬಿಟ್ಟ ಗುರುವಿನ ಪಾದವ ||3||
ಹರುಷವೆಂಬ ತೊಡೆಯ ಮೇಲೆ ಕೂಡ್ರಿಸಿ ಸರಸವಾಡುತಲೆನ್ನಯ
ವರಜಿಹ್ವೆ ತುದಿಯೊಳಗಧರ ಪಾನವಹೂಡಿ
ಬೆರದೇಕಮಯನಾದ ಗುರುವಿನ ಪಾದವ ||4||
ಪರನಾದವೆಂಬ ಹಾಲು ಅದಕೆ ತಕ್ಕ ಪರಮ ಚಿತ್ಕಳೆ ಸಕ್ಕರೆ
ಪರಬಿಂದು ರುಚಿ ಎಂಬ ಪಣ್ಣುಗಳನು ಹೂಡಿ
ಎರೆದೆನ್ನ ಜಿಹ್ವೆಗೆ ಕರೆದು ನೆರೆದು ಪೋದ ||5||
ಮರವೆ ಎಂಬುವ ಸೀರೆಯ ಸೆಳೆದು ನಿಜದರಿವೆಂಬ ಅಂಬರವ
ಸರಸದಿಂದುಡಿಸಿ ಮೈದಡಹಿ ಕರೆದು ಯೆನ್ನ
ಉರವನಪ್ಪಿದ ಗುರುವರನ ಬೇಗದಿ ನೀರೆ ||6||
ಭಾವಾ ಭಾವವನೆಲ್ಲವ ತೀವಿದ ಗುರುದೇವ ಸೋಮೇಕಟ್ಟೆಯ
ರಾಯ ಕರಿಬಸವಗುಪಾಯಗಳನು ಹೇಳಿ
ಭಾವಜ ವೈರಿಯ ನೀರೆ ನೀ ಕರತಾರೆ ||7||

ಧ್ಯಾನ ಮಾಡು ನೀನು
ಧ್ಯಾನ ಮಾಡು ನೀನು | ಮಾನಸ ಧ್ಯಾನ ಮಾಡು ನೀನು
ಸ್ವಾನುಭವದ ಸುಜ್ಞಾನ ನಿರಂತರ ಭಾನು ಪ್ರಕಾಶನ ||ಪಲ್ಲವಿ||
ಅಂಗದ ಗುಣ ಹಿಂಗಿ | ಲಿಂಗದ ಸಂಗದಿ ಮನ ನುಂಗಿ
ಕಂಗಳು ಮೂರುಳ್ಳ ಮಂಗಳ ಮಹಿಮನ
ಗಂಗೆಯ ಧರಿಸಿದ ಘನಮುನಿ ವಂದ್ಯನ ||1||
ಅಂತರಂಗದೊಳಗೆ | ಅನುದಿನ ಸಂತತ ನಿನ್ನೊಳಗೆ
ಚಿಂತೆಯ ನೀಗಿ ನಿರಂತರ ಬ್ರಹ್ಮನ
ಚಿಂತೆಯೊಳನುದಿನ ಸಂತತವಿರುತಿರು ||2||
ನಾಚಿಕಿಲ್ಲವೇನೋ | ಜನ್ಮದ ರೋಸಿಕಿಲ್ಲವೇನೋ
ಈಶನ ಧ್ಯಾನಕೆ ಬೇಸರ ಮಾಡದೆ
ಭಾಸುರ ಲಿಂಗದ ವಾಸವ ಮಾಡುತ ||3||
ಇನ್ನಾದರೂ ಮುನ್ನ | ನಾನಾರೆನ್ನುತ ಸಂಪನ್ನ
ಚೆನ್ನಾಗಿ ಗುರು ಮುಖದಿಂದ ತಿಳಿದುನೀ
ನಿನ್ನನೆ ನಿಜವೆಂದೆನ್ನುತ ಮನದೊಳು ||4||
ಧರೆಯೊಳಧಿಕವಾದ | ಮೂರು ಸಾವಿರದೊಳಗಾದ
ಪರಮ ಸೋಮೇಕಟ್ಟೆ ಕರಿವೃಷಭಾರ್ಯನ
ಚರಣ ಕಮಲವನ್ನು ಮರೆಯದೆ ನಿನ್ನೊಳು ||5||

ಪುಷ್ಪದ ವೃಷ್ಟಿ ಕರೆವೆನೋ
ಪುಷ್ಪದ ವೃಷ್ಟಿ ಕರೆವೆನೋ ಭಾವನಿಷ್ಠೆಯೊಳಿರುವಂಥ
ಶ್ರೇಷ್ಠರ ಪಾದಕ್ಕೆ ಪುಷ್ಪದ ವೃಷ್ಟಿ ಕರೆವೆನೋ ||ಪಲ್ಲವಿ||
ನಾಲ್ಕುದಳದ ಚೌಕ ಮಧ್ಯ ‘ನ’ಕಾರದಿ | ಭೇದಿಸಿ ಇರುವಂಥ ಭಕ್ತನೊಳು
ಪೀತವರ್ಣದ ಪುಷ್ಪ ಬ್ರಹ್ಮಪಿಡಿದು ಬೇಕಾಗಿ ಚೆಲ್ಲಿದ
ಆಧಾರದೊಳು ನಿಂದು ||1||
ಆರೆಸಳಿನ ಮಧ್ಯ ‘ಮ’ಕಾರದಿ | ಜೋಕೆಯೊಳಿರುವ ಮಹೇಶನೊಳು
ಶ್ವೇತವರ್ಣದ ಪುಷ್ಪವ ವಿಷ್ಣು ಪಿಡಿದು ಪ್ರೀತಿಯಿಂದ ಚಲ್ಲಿದ
ಸ್ವಾದಿಷ್ಠದೊಳು ನಿಂದು ||2||
ದಶದಳ ಮಧ್ಯ ‘ಶಿ’ಕಾರದಿ | ಮಿಸುನಿಯಂತಿರುವ ಪ್ರಸಾದಿಯೊಳು
ಹರೀತ ಪುಷ್ಪವ ರುದ್ರಪಿಡಿದು ಶೀಘ್ರದಿ ಚೆಲ್ಲಿದ
ಮಣಿಪೂರಕದಿ ನಿಂದು ||3||
ಹತ್ತೆರಡೆಸಳೊಳು ಒತ್ತು ‘ವ’ಕಾರವ | ಅರ್ಥಿಯಿಂ ಪ್ರಾಣಲಿಂಗಿಯೊಳು
ಮಾಂಜಿಷ್ಟ ಪುಷ್ಪವ ಈಶ್ವರ ಪಿಡಿದು ನೇಮದಿ ಚೆಲ್ಲಿದ
ಅನಾಹತದೊಳು ನಿಂದು ||4||
ಹದಿನಾರುದಳಮಧ್ಯ ವಿಧಿಸಿ ‘ಯ’ಕಾರವ ಪರಮಶ್ರೀ ಶರಣಸಹಿತ ನಿಂದು
ಕಪೋತಪುಷ್ಪವ ಸದಾಶಿವನು ಬೇಕಾಗಿ ಕಳೆದನು
ವಿಶುದ್ಧಿಯೊಳು ನಿಂದು ||5||
ದ್ವಿದಳಕಮಲಮಧ್ಯ ಝೇಂಕಾರವ ಹರುಷದಿಂದೈಕ್ಯ ಸಹಿತನಿಂದು
ಷಡ್ವಿಧ ಪುಷ್ಪವ ಮಹಾಲಿಂಗಕ್ಕೆ
ಆಜ್ಞಾ ಚಕ್ರದಿ ನಿಂದು ||6||
ಆರುಲಿಂಗಂಗಳ ಮೂರುಪಾಲು ಮಾಡಿ ಗುರುಲಿಂಗ ಜಂಗಮದೊಳು ತಿಳಿದು
ಪರಮ ಸೋಮೇಕಟ್ಟೆ ರುದ್ರರಾಚಯ್ಯಗೆ
ಅರ್ಥಿಯಿಂ ಭಕ್ತರೆಲ್ಲರೂ ನಿಂದು ||7||

ಕಾಂತೆ ಪೋಗಿ ಕರೆದು
ಕಾಂತೆ ಪೋಗಿ ಕರೆದು ತಾರೆ ಕಾಂತ ಕರಿ ವೃಷಭೇಂದ್ರನ
ಮಮಚಿಂತಾ ಮುಕ್ತಿಕಾಂತನ | ಏಕಾಂತ ಕರಿ ವೃಷ್ಣಭೇಂದ್ರನ ||ಪಲ್ಲವಿ||
ರಿಪುಗಳೆಲ್ಲರ ಗೆದ್ದು ತಪದೊಳು ಅಪರಿಮಿತ ಸ್ವರೂಪನ
ಗುಪಿತ ಮುಕ್ತಾಂಗನೆಯ ಕೂಡಿದ ಸಫಲ ಬ್ರಹ್ಮ ಸ್ವರೂಪನ ||1||
ಹೃದಯಮಣಿ ಮಂಚದೊಳು ಕುಳಿತು ಚದುರೆ ಬಾರೆಂದು ಕರೆದನ
ಒದಗಿ ಬಂದು ಕುಚವ ಪಿಡುದ ಅಧರಾಮೃತವನು ಸವಿದನ ||2||
ಷಣ್ಮುಖಿಯು ಶಾಂಭವಿಯು ಖೇಚರಿ | ಸನ್ನುತದಿ ಗುರು ತೋರಿದ
ಚಿನ್ಮಯಾತ್ಮಕ ಸನ್ನೆವರೆಸುತ ಉನ್ಮನೆಯೊಳೋಲಾಡಿದ ||3||
ಭೇದಿಸೆನ್ನವಗುಣಗಳಳಿದು | ಬಾಧೆಯೆಲ್ಲವ ಬಿಡಿಸಿದ
ಓದು ಶಿವನ ನಾಮವೆಂದು ಬೋಧ ರೂಪನು ಪೇಳಿದ ||4||
ದ್ರವಿಸುವಂಥ ಮನಕೆ ಬುದ್ಧಿಯ ಧರ್ಮ ರೂಪನು ಪೇಳಿದ
ಚಿನುಮಯಾತ್ಮಕ ಚಿತ್ತು ಆಗಿ ಘನವ ಎನ್ನೊಳು ತೋರಿದ ||5||
ಸ್ವಾನುಭಾವದ ಸುಖದ ತೋರೆನ್ನ ಸ್ವಸ್ವರೂಪಳ ಮಾಡಿದ
ತಾನು ತಾನೆ ತಾನೆಯಾಗೆ ನಾನು ನೀನೆಂದರುಹಿದ ||6||
ಮೀರಿದಾನಂದಾಬ್ಧಿ ಸುಧೆಯೊಳು ನೀರೆ ಮುಳಗೆಂದರುಹಿದ
ಕಾರಣೀಕದ ಗುರುವು ತನ್ನಯ ಕರುಣ ರಸದೊಳು ಕೂಡಿದ ||7||
ನಷ್ಟ ಮಾಡಿದ ಅಷ್ಟಮದಗಳ ದುಷ್ಟರೆದೆಯನು ಮೆಟ್ಟಿದ
ಸೃಷ್ಟಿಗಧಿಕ ಸೋಮೇಕಟ್ಟೆಯ ದಿಟ್ಟ ಕರಿವೃಷಭೇಂದ್ರನ ||8||

ಮಂಗಳಂ ಮಂಗಳಂ ಮದ್ಗುರು
ಮಂಗಳಂ ಮಂಗಳಂ ಮದ್ಗುರು ಮೂರ್ತಿಗೆ | ಮಂಗಳಂ ಮಂಗಳಂ
ಮಂಗಳಂ ಮಹಿಮಾತ್ಮ ಲಿಂಗ ಸನ್ಮುನಿಸಂಗ
ಶೃಂಗ ರಂಗ ವಿರಹಿತ ಆನಂದ ||ಪಲ್ಲವಿ||
ಶಿವರೂಪ ಶಿವಲೇಪ ಶಿವಪೂಜೆ ನಿಷ್ಪಂತೆ
ಪ್ರವಿಮಲ ರೂಪ ಪ್ರಕಾಶತೆ ಲಸತೆ
ಅವಿರಳ ಜ್ಯೋತಿ ನಿರಾಕಾರಮಯ ಶಿವ
ಭವರಹಿತಾಂಶು ಸುಧಾಂಶುತೆ ಸುಮನಂ ||1||
ಚಾರು ನಿರಾಕಾರ ಸಾಕಾರ ವಂದಿತ
ಸಾರಸಾಧಾರ ಸಮವಾರ ಧೀರಂ
ಪಾರಾವಾರ ಗಂಭೀರ ಸನ್ಮುನಿಗಣ
ಕಾರಣ ಪುರುಷ ನಿಧಾನ ಸಂಧಾನಂ ||2||
ಶರಣು ಜಂಗಮಲಿಂಗ ಶರಣು ಸದ್ಭಾವಾಂಗ
ಶರಣು ವಿಷಕಂಠ ಕವಿ ಮನೋಬ್ಜ ಭೃಂಗ
ಶರಣು ಕರಿವೃಷಭಾರ್ಯ ಷಟ್ಸ್ಥಲದೀಶ್ವರ
ಪರಮ ಸೋಮೇಕಟ್ಟೆ ವರದಗ್ರಗಣ್ಯಂ ||3||

ಮುನ್ನ ನಾನೇನು ಸುಕೃತವ
ಮುನ್ನ ನಾನೇನು ಸುಕೃತವ ಮಾಡಿದ್ದೆನೋ
ಚೆನ್ನ ಕರಿಬಸವ ದೇಶಿಕ ಬಂದ ಮನೆಗೆ ||ಪಲ್ಲವಿ||
ಈಡಪಿಂಗಳವೆಂಬ ಜೋಡು ಪಾವುಗೆ ಮೆಟ್ಟಿ
ನಾಡೊಳಗೆಲ್ಲಾ ಸಂಚಾರ ಮಾಡುತಲಿ
ಬೇಡಿದ ಭಕ್ತರ್ಗೆ ನೀಡುತ ಕರುಣವ
ರೂಢಿಗಧಿಕವಾದ ಗುರು ಬಂದ ಮನೆಗೆ ||1||
ಜ್ಞಾನವೆಂಬುವ ದಂಡ ನೇಮವೆಂಬುವ ಪಾತ್ರೆ
ಸ್ವಾನುಭವದ ಕಾವಿಯಂಬರವ ಹೊದೆದು
ತಾನು ತನ್ನೊಳಗೆ ವಿನೋದದಿಂದಾಡುತಲಿ
ಭಾವ ಭಜಕರ ಬಾಂಧವ ಬಂದ ಮನೆಗೆ ||2||
ತನುಲಿಂಗವಳಿದು ತಾ ಘನಲಿಂಗ ಕಳೆಯನೆ
ವಿನಯದಿಂ ತೋಳಿಗಾಧಾರ ಮಾಡಿ ಧರಿಸಿ
ಅಂಗವೆ ಗುರು ಇಷ್ಟಲಿಂಗವ ಧರಿಸಿ
ಜಂಗಮರೂಪಿನ ಲಿಂಗ ಬಂದ ಮನೆಗೆ ||3||
ಅನುಪಮ ಚಿತ್ತ ಚಿನುಮಯ ಭೂತಿಯ
ವಿನಯದಿಂದಂಗದೊಳನುದಿನ ಧರಿಸಿ
ಪರ ತತ್ವಮಯನಾದ ಪರಲೋಕದರಸಾಗಿ
ಸ್ಥಿರಮುಕ್ತಿ ನೆಲೆಯಾಗಿ ಪರವೇ ತಾನಾಗಿ ||4||
ಬಿಂದುವೆ ರೂಪಾದ ಆನಂದ ರುದ್ರಾಕ್ಷಿಯ
ಚಂದದಿಂದಂಗ ಮುಖಂಗಳೋಳ್ ಧರಿಸಿ
ಇಂದು ಈ ಜಗದೊಳು ನಿಂದು ಚರಿಸಾಡುತ
ಬಂದ ಎಮ್ಮಯ ಗುರು ತಂದೆ ನಮ್ಮ ಮನೆಗೆ ||5||
ಕರುಣಾ ರಸವೇ ತೀರ್ಥ ಪರವೆಂಬ ಪ್ರಸಾದ
ನಿರುತ ಪಂಚಾಕ್ಷರಿಯಿರವೆ ತಾನಾಗಿ
ಧರಣಿಯೊಳಿರುವಂಥ ಶರಣ ಜನಂಗಳ
ಪೊರೆದು ರಕ್ಷಿಪ ಶ್ರೀಗುರು ಬಂದ ಮನೆಗೆ ||6||
ಪರಿಪೂರ್ಣಮಯನಾಗಿ ಪರಬ್ರಹ್ಮದಿರವಾಗಿ
ಸ್ಥಿರಮುಕ್ತಿ ನೆಲೆಯಾಗಿ ಪರವೇ ತಾನಾಗಿ
ಪರಮ ಸೋಮೇಕಟ್ಟೆ ಕರಿವೃಷಭಾರ್ಯ ತಾ
ಪೊರೆದು ರಕ್ಷಿಸುವ ಶ್ರೀಗುರು ಬಂದ ಮನೆಗೆ ||7||

ಸಚ್ಚಿದಾನಂದದೊಳ್ ಸದಾ
ಸಚ್ಚಿದಾನಂದದೊಳ್ ಸದಾ ಬೆರೆಯುವ ವಿಧವ ತಿಳಿಯದೊಡೆ
ಒದವಿದ ಯೌವನ ವಿಧವೆಗೆ ಆದರೆ ಅದರಂತಿಹುದು ||ಪಲ್ಲವಿ||
ಎಷ್ಟು ಓದಿದರೇನು ಶಾಸ್ತ್ರದ ಗುಟ್ಟು ತಿಳಿಯದಿರೆ
ಕಷ್ಟವಲ್ಲದೆ ಪರಿಭವ ಕೆಡಿಸುವ ಎಷ್ಟು ಮಾತ್ರವಿಲ್ಲ ||1||
ಮುದ್ರೆ ಮೂರನು ಪಿಡಿದು ನವದ್ವಾರವ ಭದ್ರ ಮಾಡಿದರಿಲ್ಲ
ಸಿದ್ಧದಿ ಯಮ ಮೊದಲಾದಷ್ಟಾಂಗ ಯೋಗ ನಿದ್ರೆ ಮಾಡಿದರಿಲ್ಲ ||2||
ದೇಶ ದೇಶವ ತಿರುಗಿ ಕಾಶೀವಾಸವ ಮಾಡಿದರಿಲ್ಲ
ಬೇಸರವಿಲ್ಲದೆ ನೆಲ ಬಿಲ ಸಮಾಧಿಯೊಳುಪವಾಸ ಮಾಡಿದರಿಲ್ಲ ||3||
ಇನ್ನೇಸು ಜನ್ಮದ ಸುಕೃತದ ಬೆಳಸು ರಾಸಿಯಾಗಬೇಕು
ಭಾಸುರ ಗುರುವಿನ ಕರುಣ ಕಟಾಕ್ಷವು ಈಸು ಮಾಡಬೇಕು ||4||
ದಿಟ್ಟ ಸೋಮೇಕಟ್ಟೆ ಕರಿವೃಷಭಾರ್ಯನ
ದೃಷ್ಟಿ ಪಡೆಯಬೇಕು ||5||

ಜ್ಯೋತಿ ಬೆಳಗುತಿದೆ
ಜ್ಯೋತಿ ಬೆಳಗುತಿದೆ ಜ್ಯೋತಿ | ಅತ್ಯತಿಷ್ಠತಿದ್ವಾದ್ದಶಾಂಗು
ಲಧಿಪ ಭಾತಿ | ಜ್ಯೋತಿ ಬೆಳಗುತಿದೆ ||ಪಲ್ಲವಿ||
ತಾಲುಮೂಲ ಫಣೆಯಲ್ಲಿ
ತತ್ನೀಲ ತೋಯದ ಮಧ್ಯದಲ್ಲಿ
ಬಾಲಾರ್ಕಕಳೆ ಬೆಳಕಲ್ಲಿ
ತ್ವಂ ಮೂಲ ಜ್ಯೋತೋಳ್ ನೀ ಬೆರೆದಲ್ಲಿ ||1||
ಇಂದ್ರಿಯ ಪ್ರಧಾನದಲ್ಲಿ ಅಸಿ
ಚಂದ್ರನ ಕಳೆ ಕಪ್ಪಿನಲ್ಲಿ
ರಂಧ್ರ ಮಾಣಿಕ ಮುತ್ತಿನಲ್ಲಿ
ನವರಂಧ್ರ ಜ್ಯೋತಿ ಮುದಿದಲ್ಲಿ ||2||
ಕುಂಡಲಿಯ ನಾಳದಲ್ಲಿ ತುದಿ
ಪುಂಡರೀಕದ ಪತ್ರದಲ್ಲಿ
ದಂಡಿಕೋಲಿನ ನಾಳದಲ್ಲಿ
ಕರಿವೃಷಭಿರ್ದನು ಆಪಜ್ಯೋತಿಯಲ್ಲಿ ||3||

ಮರೆಯ ಬೇಡವೆ ರಮಣಿ
ಮರೆಯ ಬೇಡವೆ ರಮಣಿ ಗುರುವಿನರಿವನು
ಮರೆಯಬೇಡ ಗುರುವಿನರಿವ
ಕರಿವೃಷಭರಾನೆನಗೆ ವರ ಕುರುಹ ತಿಳುಹಿದ ನೀನು
ಸರಿಯಳಾಗು ಸುಗುಣಿ ಎಂದ ||ಪಲ್ಲವಿ||
ಸ್ವಾಮಿ ಕಂಡೆನು ಎನ್ನ ಸಲಹು ಎಂದೆನು
ಸ್ವಾನುಭವದ ಸುಖವ ತೋರಿ ಸನ್ನೆವೆರಸಿ ಪೋದ ಸಖಿಯೇ ||1||
ಹಂಸ ರೂಪನ ಎನ್ನ ಸಂಶಯವಳಿದನ
ವಂಶ ವಂಶ ಎತ್ತಿ ಬಂದ ಸಂಸಾರ ಕೆಡಿಪನ ||2||
ಸತ್ತು ಚಿತ್ತು ನಿತ್ಯಾನಂದವು ಗೊತ್ತ ತೋರಿ ಎನ್ನ ತನ್ನ
ಭೃತ್ಯಳನ್ನು ಮಾಡಿಕೊಂಡ ಕರ್ತೃ ಸೋಮೇಕಟ್ಟೆ ಗುರುವ
ನಿತ್ಯದಲ್ಲಿ ಪಾಡು ಕಂಡೆಯಾ ||3||

ನಮೋ ನಮೋ ಎನುತಲಿ
ನಮೋ ನಮೋ ಎನುತಲಿ ನಮಿಸುತಲಿರ್ಪೆನು
ಶಿವಶರಣರ ಪಾದಾಂಬುಜಕೆ ||ಪಲ್ಲವಿ||
ಕುರುಹಿನುಪಾಧಿಯ ಪರಿದೆನ್ನ ಸಲಹಿದ
ಗುರು ಶಾಂತವೀರ ನಡಿಗಳಿಗೆ
ಗುರುವಿನ ಗುರು ಪರಮಗುರು
ತಾನುರುತರ ಗುರು ಶಾಂತವೀರನಿಗೆ
ಮರೆವೆ ವಲ್ಲರಿ ಮೂಲ ಕುರುಹಿಲ್ಲದೆ ಕಿತ್ತು ಉರುಬೆತ್ತಲೆ
ಆದಿವಾಳಾ ರೂಢರಿಗೆ ||1||
ಹೊಸವೆಂಟೆಸಳಿನ ಬಿಸರುಹದೊಳು ತಾ
ನೊಸೆದು ರಾಜಿಪ ಕರಿಯಾಖ್ಯನಿಗೆ
ಹಸುಳೆಯ ಶಿರದೊಳು ವಸುಧೆ ಭಾರವನಿಟ್ಟಸಮ
ತಪೋರಾಜೇಂದ್ರನಿಗೆ
ಪಶುಪತಿಯವತಾರ ಮಿಸುನಿ ವರ್ಣದಹಾಂ
ಗೆಸೆದ ತಪೋರಜನಿಗೆ ||2||
ಗೊಲ್ಲರ ಹಳ್ಳಿಯೊಳುದಿಸಿದ ಶಿವಶರಣರ
ಮೆಲ್ಲಡಿಗಳಿಗೆಯೆ ನಮಿಸುವೆನು
ಕನ್ನಡವಲ್ಲದೇ ಇನ್ನೇನರಿಯೆನು ಸೊಲ್ಲಿಸಿದೆನು
ತೊದಳ್ನುಡಿಯೊಳಗೆ
ಬಲ್ಲ ಮಹಾತ್ಮರು ಇನ್ನೊಂದೆಣಿಸದೆ
ಎಲ್ಲಾ ಸೋಮೇಕಟ್ಟೆ ಸ್ತುತಿಯೆನುತ ||3||

ಸಾರಿ ಶಪಿಸುವೆ ನಿನ್ನನು
ಸಾರಿ ಶಪಿಸುವೆ ನಿನ್ನನು | ತಪೋರಾಜ
ದೂರ ಮಾಡಿದೆಯೆನ್ನನು ||ಪಲ್ಲವಿ||
ಪೊಡವಿಯೊಳಗೆ ನಾನು ಬಡವರ ಹುಡುಗನಂತೆ
ಗೊಡವೆಯಲ್ಲಡಗಿರೆ ಅಡವಿಗಿಕ್ಕಿದೆಯಾಗಿ ||1||
ಮನವು ಮಹದೊಳಗಾಗಿ ತನುವು ಸೂರ್ಹೋಗಲಿ
ಕುಲಛಲ ಮುಳುಗಲಿ ಕುತ್ಸಿತ ಹಾಳಾಗಲಿ ||2||
ಮದಗಳು ಮುಳುಗಲಿ ಅರಿಗಳು ಹಾರಲಿ
ಕರಣೇಂದ್ರಿಯಗಳು ಎಲ್ಲಾ ಕಾಡ ಸೇರಲಿ
ಗುರುವೆ ಅಳಲುತೀರದು ಎನ್ನ ಬಾಯಿ ಮಾತಿಂದೇನು ||3||
ಹೋದ ಬಟ್ಟೆಯು ಬಳಿಕ ಬಾರದಂತಾಗಲಿ
ನಾಮ ರೂಪುಗಳಳಿದು ಸೀಮೆ ಬಿಟ್ಹೋಗಲಿ
ಸೀಮೆ ಭೂಮಿಯ ಬಿಟ್ಟು ನಿಸ್ಸೀಮನಾಗಲಿ ಎಂದು ಶಪಿಸುವೆ ||4||
ಧೂಪವಗ್ನಿಯ ಕೂಡಿ ರೂಪಳಿದು ಹೋದಂತೆ ವಿರೂಪ
ಸೋಮೇಕಟ್ಟೆ ಪಾಪನಾಶನ ಪಾಡು
ದೀಪಿಸಿರಲಿ ನಿನಗೆಂದೀಪರಿ ಶಪಿಸುವೆ ||5||

ಶಂಕರೆನ್ನನುಭವದ ಶಂಕೆ
ಶಂಕರೆನ್ನನುಭವದ ಶಂಕೆ ಹರಿಸುವೆನೆಂದು |
ಕಿಂಕರನ ಮೇಲೆ ದಯೆ ಬಂದೀಗಳು||
ಝೇಂಕರಿಸಿ ಮುಸುಕಿರ್ದ ತನುಮನಂಗಳ ಗುಣದ |
ಬಿಂಕಗಳ ಬಿಡಿಸಿದನು ವಚನ ಮಾತ್ರದಲಿ ||ಪಲ್ಲವಿ||
ತಪವಿದ್ಯ ವಿರತಿ ಸುಖ ಅಪರೋಕ್ಷ ಜ್ಞಾನ ಬಲು
ಗುಪಿತ ರಹಸ್ಯಗಳ ನರುಪಲೆಂದು
ಜಪಮೂರ್ತಿ ಜಗದೊಡೆಯರಾಕಾರದಲಿ
ತಪಸಿದ್ಧಿಯಾಂತ ಶಿಷ್ಯರ ಮೇಳದಿ ||1||
ವಿಘ್ನಂಗಳೇನಿರದೆ ಭಗ್ನವಾಗಲಿ ಮನವು
ಮಗ್ನವಾಗಿರಲಿ ಮನ ತನ್ನೊಳೊಂದಿ
ಸುಜ್ಞಾನವಿಂತಿರಲಿ ಎಂಬ ಕರುಣದ ಪದ್ಯ
ಪ್ರಜ್ಞೆಗೊಳಿಸಿತು ಎನಗೆ ಕರ್ತನಹುದೆಂದು ||2||
ರಮ್ಯತರಮಾದ ನಿಗಮಾಂತ್ಯ ಮಾರ್ಗಂಗಳೊಳು
ಸೌಮ್ಯ ಸದ್ಗುಣ ಗಣ ಶಿವಾನುಭವದ
ಪೇರ್ಮೆಯಿಂತೆಂದೆನ್ನ ನಿರ್ಮಲನ ಮಾಡಿದರು
ನಿಮ್ಮ ಬರವ ಹಾರೈಪ ತವಕವೆಡೆ ಬಿಡದು ||3||
ದೇವ ನೀ ಕೃಪೆಯಿಂದ ಪಾವನವ ಮಾಡಿದರೂ
ಯಾವಾಗ ದರುಶನವು ಎಂತೆಲ್ಲಿ ತನಕ
ಭೂವಳಯ ಜಂಜಡದ ದೇಹ ಬೇರಿರಲೆನಗೆ
ಧಾವತಿಯು ತೋರುತಿದೆ ಪಾವನಾತ್ಮಕನೆ ||4||
ಸಿಲುಕಿಹೆನು ತತ್ಪದದ ತ್ವಂ ಪದದ ಸಾಧ್ಯದಲಿ
ಬಲು ಸುಖದ ಸುಗ್ಗಿ ಚಿತ್ಸುಖವರಿಯದೆ
ನೆಲೆಯಾದ ಭಾವದೊಳು ಬೆರಸಿ ಬೇರಾಗದ
ಉಳುಮೆ ಲೀನಂಗೊಳಿಸಿ ಪೊರೆವನೆಂದು ||5||
ಕೇಳಿ ನೋಡುವತನಕ ಮೀರಿ ಗೀಳಿನೊಳಿರ್ಪ
ದೇಳಿಗೆಯದೆಂತುಟೈ ನಿಮ್ಮ ಕರುಣ
ಮೇಳನದ ಮೇಲೆ ಮತ್ತೇನುಂಟು ತಿಳಿವನದ ಅದ
ರೂಳಿಗವದೇನಿಹುದೊ ಕೇಳುವೆನು ನಾನು ||6||
ದ್ರವಿಡ ಮಂಡೂಕ ನ್ಯಾಯದಂತಿರ್ದ
ಕಾಲಗತಿಗಳಿಗೆನ್ನ ಬೇರಿರಿಸಿ ಕವಿವ ಕರ್ಮಗಳ
ಭವಣೆಯೊಳು ಸಿಲ್ಕಿಸದೆ ಸವೆಯದಾನಂದ ಸುಧೆಯ
ಸವಿದೆನಗೊಲಿದಿತ್ತೆ ವಚನಾನುಭವದಿ ||7||
ಸ್ವಾನುಭವ ಸುಜ್ಞಾನ ಮೌನ ಮುದ್ರೇಲಿ ನಿಂದು
ನಾನು ನೀನೆಂಬ ಭಾವವು ತೋರದೆ
ಭಾನುಕೋಟಿಯ ತೇಜ ಪೂರ್ಣದೊಡ ವೆರಸುವೊಡೆ
ನೀನಲ್ಲದಾರುಂಟು ಸೂನು ಮೋಹದಲಿ ||8||
ಮಿಕ್ಕ ಬಹು ಸಾಧನದ ವೆಕ್ಕಸಗಳಲಬಿರಲಿ
ತಕ್ಕ ಈ ಪದ್ಯದ ಮೊದಲಾಗುವ
ಅಕ್ಕರದ ಮೂರುತಿಯೊಳಿಕ್ಕಿ ತನುಮನವೆಲ್ಲ
ಗಕ್ಕನೊಡೆವೆರೆಯುವದು ಕಕ್ಕುಲಿಂದೆನಗೆ ||9||
ನಂಬಿಹೆನು ಸತತ ನಿನ್ನ ಹಂಬಲೆಡೆ ಬಿಡದೆನಗೆ
ಕುಂಭಿನಿಯೊಳು ಸೋಮೇಕಟ್ಟೆಚರದ
ಸಂಭ್ರಮವದಂತಿರಲಿ ಶಂಭು ರೂಪನೆ ತವ
ಪದಾಂಬುಜವ ಎನ್ನ ಹೃದಯಾಂಬುಜದಿ ನಿಲಿಸೈ ||10||

ನುತಿಸುವೆನನುದಿನ ಶಶಿಕಂಠನ
ನುತಿಸುವೆನನುದಿನ ಶಶಿಕಂಠನ ಸಮವೆಸೆವು ಜ್ವಲಕಂಠಾಗ್ರಣಿಯ
ಅತಿಶಯ ಪಾದದ ಬಿಸರುಹಕೊಂದಿಸೆ ಗತಿಗೊಡುವಗಣಿತನಾದವನ ||ಪ||
ಸತ್ತು ಚಿತ್ತು ಆನಂದದ ಬೋಧವು ನಿತ್ಯವಾಗಿ ಶಾಂತಿಯನೈದಿ
ಮೃತ್ಯು ಮಾಯೆ ಜಗವೆಲ್ಲವ ಗೆಲಿದುರೆ ನಿತ್ಯವಾದ ವೀರತ್ವದಲ್ಲಿ
ಆರ್ತರಾದ ಸದ್ಭಕ್ತರ ಪಾಲಿಸುತಿತ್ತುವರವ ತಾನರ್ಥಿಯಲಿ
ಕರ್ತನಾದ ಈ ಪೃಥ್ವಿಯಲ್ಲಿ ಒಪ್ಪಿತ್ತು ಮತ್ತೆಯು ಶಾಂತವೀರಾಖ್ಯನಲ್ಲಿ ||1||
ಕೋಪರಹಿತ ತಪಸ್ಸಿದ್ಧಿಯೊಳಗೆ ಜಗಪಾಪಗಳ್ಹರಿಸುವ ಶಕ್ತಿಯಲಿ
ಓಪ ಗುರುವಿನಾಜ್ಞೆಯನೆಡಬಿಡದಲಿ ಈ ತಪೋರಾಜಭಿಧಾನದಲಿ
ಈ ಪರಿಯಿಂದಲಿ ರೂಪದಳೆದು ಜಗದೀಪಕನೆಸೆವ ಭೂವಳಯದಲಿ
ಪಾಪವ ಹರಿಸುವ ತುಂಗಭದ್ರ ತಟದಾಪುರಹರಿಹರನಾಮದಲಿ ||2||
ಬಸವನ ಭಕ್ತಿಯ ಬಿಸರುಹ ಜಾಂಡದಿ ಹೊಸದಾಗಿಯೆ ತೋರಲಿಕ್ಕೆಂದು
ಪಶುಪತಿ ರೂಪಿನ ಪರಸೇವೆಯೊಳಗೆ ಬಹು ಕುಶಲತ್ವವ ತಾ ಕೈಕೊಂಡು
ಮುಸುಳಿಸಿದಂಥ ಸುಖವ ಸಾಧ್ಯವಿರೆ ಘಸಣಿಜಗ ಕರೆಕರೆಯೆಂದು
ಅಸಮವಾಗಿಯೆ ಭಕ್ತರೊಳಗೆ ಬಹು ಜಸವೆತ್ತೆಸೆವ ಕರಿವರನೆಂದು ||3||
ಈ ಮಹಾಗುರು ಶಿಷ್ಯರ ಈ ಪದ್ಯದಿ ಪ್ರೇಮದಿ ಪೊಗಳಿದೆವಾವಿಂದು
ತಾಮಸಗುಣಗಣವಳಿದುರೆ ಸತ್ವನಿರಾಮಯನೊಳು ಬೆರಸುವರೆಂದು
ಸೋಮೇಕಟ್ಟೆ ಚರವರನಿಗೆ ನಿಸ್ಸೀಮ ಭಕ್ತಿ ಇದು ಬೇಕೆಂದು
ಕಾಮಿಸಿ ನಿಮ್ಮನು ಬೇಡುವೆ ಭವವ ವಿರಾಮವ ಮಾಡಿರಿ ನಮಗೆಂದು ||4|

ಸೋಮೇಕಟ್ಟೆ ಈಶ
ಸೋಮೇಕಟ್ಟೆ ಈಶ ತಾಮಸದ ಮನ ನಾಶ
ಸ್ವಾಮಿ ಭಜಿಸುವ ಶರಣ ಹೃದಯವಾಸ ||ಪಲ್ಲವಿ||
ಕಾಮಕಾಲರ ಪುರವ ಕಾಯಿಸಿದೆ ಕಾಯವನು
ವ್ಯೋಮ ಅಂತರದಲ್ಲಿ ಇರ್ಪೆಯಲ್ಲಾ
ಆ ಮಹಾ ಸೋಮ ಸೂರ್ಯಂ ಮನ್ಮನೆಯೊಳಿರುತಿರ್ದ ಕಾರಣದಿ
ಸೋಮೇಕಟ್ಟೆಯ ಈಶನಾದೆ ||1||
ಅಷ್ಟತನು ಪಟ್ಟಣದಿ ಅಷ್ಟ ಚಕ್ರವ ಮಾಡಿ
ಅಷ್ಟಮೂರ್ತಿಯು ನೀನೆ ಆಗಿ ಇರ್ದು
ಶಿಷ್ಯ ಭಕ್ತರ ನೋಡಿ ಭ್ರಷ್ಟಮನವನು ಕೆಡಿಸಿ
ಇಷ್ಟಾರ್ಥಗಳನಿತ್ತೆ ಶ್ರೇಷ್ಠ ಗುರುವರನೆ ||2||
ನವವಿಧದ ಭಕ್ತಿಯನು ಸವಿಸವಿದು ನೋಡುತ್ತ
ಭವವ ಕೆಡಿಸುವೆನೆಂದು ತವೆ ಹರಷದಿ
ನವಿಲಗರಿ ತೆರೆದೊಳಿಹ ತ್ರಿವಿಧ ಮಂಡಲದಲ್ಲಿ
ಭುವಿಗೆ ಸಾಕ್ಷಿಗನಾದ ಪರಮಹಂಸ ||3||

ಶರಣು ಸೋಮೇಕಟ್ಟೆಯೀಶ
ಶರಣು ಸೋಮೇಕಟ್ಟೆಯೀಶ ಆನು ಪರಿಭವಯುತನೆಲೆ
ಕರಿವೃಷಭೇಶ ಶರಣು ಸೋಮೇಕಟ್ಟೆಯೀಶ ||ಪಲ್ಲವಿ||
ಬರಲಾರೆ ಸರ್ವ ಯೋನಿಯೊಳು ಬಂದು
ತಿರುಗಲಾರೆನು ಯಮಪುರದ ದಾರಿಯೊಳು
ಕೊರಗಲಾರೆನು ಸಂಸೃತಿಯೊಳು ಮೂರು
ತೆರನಾದ ಮಲದೊಳಗೆ ಇರಲಾರೆನಿನ್ನು ||1||
ಆರು ಮೂರರೊಳಾಡಲಾರೆ ಮತ್ತೀರೈದು
ಇಂದ್ರಿಯದೋಳ್ತಿನಿಸಿ ಕೊಳಲಾರೆ
ಮೂರು ತಾಪದೋಳ್ ಬೇಯಲಾರೆ
ತೋರುವೆರಡು ಕರಿಯೊಳು ಮುರಿಸಿಕೊಳಲಾರೆ ||2||
ಮೂರಾರು ಭಕ್ತಿಯ ಮಾಡಿ ಅದಮೀರಿ
ಮೂರರೊಳಿನ್ನು ಮೇಲಕ್ಕೆ ಹಾರಿ
ಸಾರಿ ಉನ್ಮನೆಯೊಳು ತೂರಿ ನಿನ್ನ ಸೇರಿ
ಪೂಜೆಯ ಮಾಳ್ಪ ಧೀರತ್ವ ತೋರಿ| ಶರಣು ಸೋಮೇಕಟ್ಟೆಯೀಶ ||3||

ಆವ ಮೃಗವೋ ಕಾಣೆ
ಆವ ಮೃಗವೋ ಕಾಣೆ ಹಾರಿತು
ಗಗನಕ್ಕೆ ಮೀರಿದ ಶಬ್ದವಲ್ಲಾಗುತಿದೆ
ಸಾರಿ ನೋಡಲು ಸರ್ವ ಜಗವೆಲ್ಲವೊಳಕೊಂಡ
ಧೀರತ್ವವನು ತಾನೆ ಬೀರುತಿದೆ ||ಪಲ್ಲವಿ||
ಎಂಟು ಆನೆಯ ನುಂಗಿ ಬಂಟರೈವರ ಕೊಂದು
ಕುಂಟರ ಮೂವರ ಮುರಿಯುತಿದೆ ಟಿಂಟಿಣಿಸಿಯೆ ನಾ
ನೀಂಟಿಸಿ ನೋಡಲು ಉಂಟಾದ ಗವಿಯೊಳಗಿರುತಲಿದೆ ||1||
ಮೂರು ಕಾಲುಗಳುಂಟು ಆರು ಬಣ್ಣದ ಮೃಗ ಹಾರಿ ನಿಂದಿತು
ಆರು ಚಕ್ರವನ್ನು ಬೇರೆ ಈರೈದು ತೆರದ ಧ್ವನಿಯನ್ನು ಮಾಡಿ
ಸಾರಿ ಪ್ರಣವ ನಾದವ ತೋರುತ ||2||
ತ್ರಿಪುಟಿ ಸ್ಥಾನಕೆ ಹಾರು ತಾಪಹರ ಅಂಶನ ಜಪವ ಮಾಡೆಂದು
ತಾ ಝೇಂಕರಿಸಿ ಗುಪಿತ ಸೋಮೇಕಟ್ಟಿ ಕರಿವೃಷಭಾರ್ಯನು
ಸಫಲ ಮಾಡುವೆನೆಂದು ಸಾರುತಲಿ ||3||

ಎಂಥ ಯಂತ್ರವ ಮಾಡಿದ
ಎಂಥ ಯಂತ್ರವ ಮಾಡಿದ ಶ್ರೀಗುರುರಾಯ
ಎಂಥ ಯಂತ್ರವ ಮಾಡಿದ
ಎಂಥ ಯಂತ್ರವ ಮಾಡಿ ಭ್ರಾಂತು ಬಿಡಿಸಿದನೆ
ಚಿಂತಾಯತಾಕ್ಷನೀ ಚಿತ್ತದಿ ಲಾಲಿಸು ||ಪಲ್ಲವಿ||
ಮರೆಯೆಂಬ ಸೆಜ್ಜೆ ಮನೆಯ ಕಿರಿಯ
ಬಾಗಿಲೊಳೊರಗಿ ನಾನಿರುತಲಿರ್ದೆ
ಕರೆದು ಕುಳ್ಳಿರು ಎಂದು ಕರವನೆತ್ತಿಯೊಳಿಟ್ಟು
ಅರುಹಿದ ಕರ್ಣದಿ ಒರಲಿದೊ ತನುಗುಣ ||1||
ಆರುಮೂರಳಿದ್ಹೋದವೆ ಧಾರಣದಿಂದ
ಮೂರು ತಾಪವು ಬೆಂದವೆ
ಅರಿವಿಕೆದೋರಲು ಕರಣಾದಿಗಳು ಎಲ್ಲಾ
ಕರನಿಧಾತ್ರಿಯೊಳಿನ್ನು ಒರೆದವಲ್ಲ ||2||
ಸಂಸೃತಿ ಹರಿದ್ಹೋಗಲು ಹಸುಳೆಯೆಂದು
ಹಂಸನ ತೋರಿದನು
ಸಂಶಯಗೊಳ್ಳದೆ ಹಂಸನ ಹಾರಿಸೆ
ವಂಶ ಬೀಜದ ನಾದ ವಶವಾಯಿತಲ್ಲಾ ||3||
ಆಸನ ಬಲಿಯುತಲಿ ಸೂಸುವ ವಾಯು
ಲೇಸಿನಿಂದ ನಿಲಿಸುತಲಿ
ಈಶ ಷಣ್ಮುಖಿಯೊಳು ಬೇಸರಿಸದೆ ಕೂಡೆ
ಭಾಸುರ ಪ್ರಭೆ ಬಂದು ಬಲಗೊಂಡಿತಲ್ಲಾ ||4||
ಮಿಸುನಿಯ ಪಟ್ಟಣದ ಹಸುಳೆಯೆಂದು
ಕುಶಲದಿಂ ಬೋಳೈಸುತ
ಪಶುಪನ ಭಕ್ತಿಯು ವಶವಾಗಲಿ ಎಂದು
ಬೆಸನ ಕೊಟ್ಟವ ಕರಿವೃಷಭನು ಕಾಣೆ ||5||

ಸದ್ಗುರು ಬೋಧೆಯನು
ಸದ್ಗುರು ಬೋಧೆಯನು ನಿರ್ಧರಿಸಿ ಪಡೆದವಗೆ
ಬದ್ಧ ಸಂಸಾರವಳಿದು ಸಿದ್ಧ ಮುಕ್ತಿ ||ಪಲ್ಲವಿ||
ಆರ ಜರಿಯಲು ಬೇಡ ಆರರೊಳು ನಿಲಬೇಡ
ಆರು ಮೂರರೊಳಾಡಿ ಕೆಡಲುಬೇಡ
ಬೇರೆದಾರಿಯ ನೋಡಿ ಮೂರರೊಳು ಹಾರುತ್ತ
ಈರೈದು ನಾದವನು ಕೇಳು ಎಂಬ ||1||
ಮೂರು ಮಲಗಳ ಬಿಟ್ಟು ಮೂರು ತಾಪವ ಸುಟ್ಟು
ಮೂರಾರು ಭಕ್ತಿಯೊಳು ಮನವು ನೆಟ್ಟು
ಮೂರು ಸಾವಿರದ ವರ್ಷ ಸೇರಿ ಪೂಜೆಯ ಮಾಡಿ
ಮೂರು ಮೂರು ಮುದ್ರೆಯ ಪಿಡಿದು ಧೀರನಾಗೆಂಬ ||2||
ಅಷ್ಟಮದಗಳ ಮೆಟ್ಟಿ ಭ್ರಷ್ಟರೈವರ ಕೊಂದು
ಶ್ರೇಷ್ಠ ಸೋಮೇಕಟ್ಟೆ ಗುರುವರೇಣ್ಯ
ಅಷ್ಟದಳ ಕಮಲದೊಳು ದೃಷ್ಟಿಗೆಯು ಕಾಣಿಸುವ
ನಿಷ್ಠೆಯಿಂದಲಿ ಪೂಜಿಸಿ ಸುಖಿಯಾಗು ಎಂಬ ||3||

ಕೂಡಿದೆನು ನಿಮ್ಮ
ಕೂಡಿದೆನು ನಿಮ್ಮ ಕರುಣಾಮೃತದ ಪಾತ್ರದೊಳು
ಮಾಡುವೆನು ತವ ಚರಣ ಸ್ಮರಣ ಭಜನೆಯನು ||ಪಲ್ಲವಿ||
ಮಲ ಮೂರರೊಳು ಶಿಲ್ಕಿ ಹಲವು ಜನ್ಮಂಗಳೊಳು
ತೊಳಲಿ ಬಳಲಿದೆನೆಂದು ಕರವ ಪಿಡಿದು
ಮಲದ ಸಂಕೋಚವನು ಕಳೆದು ಲಿಂಗ ತ್ರಯವ
ನೆಲೆಗೊಳಿಸಿ ನಿರ್ಮಲನ ಮಾಡಿದುದರಿಂದ ||1||
ಪಶುವಿನಂಗದ ಘೃತವು ಪಶುವಿನಿಂ ಪೊರಮಟ್ಟು
ಪಶುವಿನಂಗದ ರುಜೆಯ ಕೆಡಿಸುವಂತೆ
ದಶವಿಧದ ಕಲೆಬಿಂದುನಾದವೊಂದಾಗಿರ್ದ
ಅಸಮಪ್ರಸಾದವೆಂತೆಂಬ ಮುಖದಿಂದ ||2||
ಧರೆಯ ಪಾವನವ ಮಾಡುವರೆ ಸೋಮೇಕಟ್ಟೆ
ಕರಿವೃಷಭಯೋಗೀಂದ್ರನವತಾರದಿಂ
ಪರಶಿವನೆ ತಾ ಬಂದು ಶಾಂತವೀರನ ಮೇಲೆ
ಪರಿಪೂರ್ಣ ಭಾವದೊಳು ಪಾಲಿಸಿದ್ದರಿಂದ ||3|

ಹಾದರವ ನಾನರಿಯದಿದ್ದೆ
ಹಾದರವ ನಾನರಿಯದಿದ್ದೆ
ಸಿದ್ಧಪುರುಷರ ಕಣ್ಣಲ್ಲಿ ನೋಡದಿದ್ದೆ ||ಪಲ್ಲವಿ||
ಒಡಲೆ ನಾನೆಂತೆಂದು ನಂಬಿಕೊಂಡಿದ್ದೆ
ನೋಡದೆ ಮೂರು ಮುದ್ದೆಯುಂಡುಕೊಂಡಿದ್ದೆ ||1||
ಏಳು ಬಗೆಯ ಅಕ್ಕಿಯನ್ನ ಉಣ್ಣುತ್ತಿದ್ದೆ
ಏಳೊಂದು ಬಗೆಯೂರಗಾಯ ನಂಬಿದ್ದೆ
ಮೇಲಾದ ದಶಭಕ್ಷ್ಯ ಸವಿಯುತಲಿದ್ದೆ
ಒಳ್ಳೆ ತ್ರಿಬಗೆ ತುಪ್ಪ ಉಂಡುಕೊಂಡಿದ್ದೆ ||2||
ಮಾರಿಯ ತೆರದೊಳು ಮಲೆತುಕೊಂಡಿದ್ದೆ
ನಾರಿಯರೊಳಗೆಲ್ಲ ನಲಿಯದೆ ಇದ್ದೆ
ಚಾರುಪುರುಷರ ಬಳಿಗೆ ಚರಿಸದೆ ಇದ್ದೆ
ಧಾರುಣಿಯೊಳು ನಾನೆ ಧೀರಳೆನುತಿದ್ದೆ ||3||
ಗಂಡುಳ್ಳ ಮಹಾದೇವಿ ಸಂಗವ ಮಾಡಿ
ಕಂಡಿಯಿಲ್ಲದ ಮಾನಭಂಗವ ಮಾಡಿ
ಚಂಡ ಪ್ರಕಾಶನ ಮನೆಯನ್ನು ಕೂಡಿ
ತಂಡ ವಿಕ್ರಮವಾದ ವ್ರತಭಂಗ ಮಾಡಿ ||4||
ಆರೂ ಇಲ್ಲದ ಮನೆಗೆ ಕರೆದ
ಬೇರೆ ಮುಸುಕಿರ್ದ ಕುಪ್ಪಸವ ತಾನಳಿದ
ಗುರು ಕುಚವೆರಡನು ಜಾಗ್ರದಿ ಪಿಡಿದ
ಭರದಿಂದ ಕುಚ ಮಧ್ಯದೊಳು ತಾ ನಲಿದ ||5||
ಆಗ ಮೋಹವು ತನಗೆ ಹೆಚ್ಚಿ
ಬೇಗ ತಾ ಬಂದು ಉಟ್ಟಿದ್ದ ಸೀರೆಯ ಬಿಚ್ಚಿ
ಹಿಗ್ಗುತ ಮುದದೊಳು ಅಧರವಕಚ್ಚಿ
ತಗ್ಗದೆನ್ನಯ ರತಿಗೆ ವಿಟನಾಗ ಮೆಚ್ಚಿ ||6||
ಆರುವರಹದ ಓಲೆ ಕೊಟ್ಟ ಬೇರೆ
ಮೂರು ವರಹ ತೂಕದ ಮೂಗತಿ ಇಟ್ಟ
ಪರಂಜ್ಯೋತಿಯಂಥ ರತ್ನ ಮಡಗೆಂದು ಕೊಟ್ಟ
ಗುರು ಸೋಮೇಕಟ್ಟೇಶ ಭಜಿಸೆಂದು ಬಿಟ್ಟ ||7||

ಯಾಕೆ ನಿನಗಕಟ ವೈರಾಗ್ಯ
ಯಾಕೆ ನಿನಗಕಟ ವೈರಾಗ್ಯ ಜನಿಸದು
ಮುನ್ನ ಶೋಕ ಜನ್ಮಗಳು ಸಾಕಿಲ್ಲವೆ ||ಪಲ್ಲವಿ||
ಹಿಂದೆ ಜನ್ಮಗಳೊಳಗೆ ಹೊಂದಿರ್ದ ಸತಿಸುತರು
ಬಂಧು ಬಳಗಗಳು ಏನಾದರು
ತಂದೆ ತಾಯಿಗಳೆಲ್ಲ ಹೊಂದಿ ಕಳುಹಿದರಿಂತು
ಚಂದದಲಿ ನಿನ್ನ ಹಿಂದೆ ಬಂದಿರ್ಪರೆ ||1||
ನಾಳೆಗಿರಬೇಕೆಂದು ಮೋಹದಲಿ ಮಡುಗುತ್ತ
ಬಾಳುವೆಯ ನೀ ಮಾಡುತಿರ್ಪೆ
ಮೂಳನಂದದಿ ಹಿಂದೆ ಹೂಳಿರ್ದ ಧನಕನಕ
ಮೇಳನದಿ ನಿನ್ನ ಹಿಂದೆ ಬಂದಿರ್ಪುದೆ ||2||
ಶರೀರ ನಾನೆನ್ನುತಲಿ ಪರಿಪರಿಯೆ ತೊಳೆದು
ಪರಿಮಳಾಂಬರವನ್ನು ಧರಿಸುತ್ತಲಿರುವೆ
ಮರುಳುತನದಿಂ ಮೊದಲು ಪೋಷಿಸಿದ ದೇಹಗಳು
ತೆರಳಿ ನಿನ್ನ ಹಿಂದೆ ಬಂದಿರ್ಪುವೆ ||3||
ಮತದೇವರೆಂದೆಂದು ಪ್ರತಿಮೆಗಳ ಪೂಜಿಸುತ
ಗತಿಯೆ ನೀನೆಂತೆಂದು ನಂಬಿಯಿರುವೆ
ಗತವಾದ ಜನ್ಮಗಳ ತಿಮ್ಮ ಬೊಮ್ಮಪ್ಪಗಳು
ಹಿತದಿಂದ ನಿನ್ನೊಡನೆ ಬಂದಿರ್ಪುವೆ ||4||
ಜಾತಿ ಘನವೆಂತೆಂಬ ನೀತಿಯಲಿ ನೀನಿರುತ
ಸೂತಕಾದಿಗಳಿಂಗೆ ಬೆದರುತಿರುವೆ
ಮಾತೆ ರಜದೊಳು ನೀನು ಸೂತಕದಿ ಬೆಳೆವಾಗ
ಜಾತಿ ಸೂತಕಗಳೆಲ್ಲಿರ್ದುವು ||5||
ಸಂತಸದಲಿ ಅನಿತು ಸಂಸಾರವ ನೀ ಮಾಡಿ
ಇಂತು ಸುಖ ಕಿಂಚಿತ್ತು ದೊರೆಯಲಿಲ್ಲ
ಮುಂದೆ ಭ್ರಾಂತನು ಬಿಟ್ಟು ಚಿಂತೆಯನು ನೀನರಿದು
ಅಂತಕಾಂತಕನ ನೀ ಹೊಂದು ಸುಖಿಸದಲೆ ||6||
ಸಾಧುಗುಣವನು ಧರಿಸಿ ಕ್ರೋಧವನು ನೀ ಮುರಿದು
ವೇದಾಂತದರ್ಥವನು ಬೇಗನರಿತು
ಆದಿ ಅಂತ್ಯವ ತಿಳಿದು ಭೇದವನು ನೀ ಮರೆದು
ಬೋಧೆಯನು ಸಮನಿಸಲು ಮೋಕ್ಷವಹುದು ||7||
ಆರು ನಾನೆಂದೆಂಬ ವಿಚಾರವನು ಮಾಡಿ
ಚಾರುಸಖರೊಡನೆ ಕೂಡುತಿರಲು
ಮೀರಿದಾ ಗುರುವಿಂದಲನುಭವವ ನೀ ತಿಳಿದು
ಭೋರೆಂಬ ನಾದದೊಳು ಬೆರೆಯೆ ಸುಖವಹುದು ||8||
ಜಂಗಮಾರ್ಚನೆ ಮಾಡಿ ಲಿಂಗದೊಳು ಒಡಗೂಡಿ
ಮಂಗಮನವನು ಬೇಗ ಹಿಡಿದು ನಿಲಿಸಿ
ತುಂಗ ಸೋಮೇಕಟ್ಟೆ ಕರಿವೃಷಭನಡಿವಿಡಿದು
ಭಂಗವನು ಕಳೆಯೆ ಸುಖವಹುದು ಮನುಜ ||9||

ಯಾಕಿನ್ನು ಬಳಲಿಸುವೆ
ಯಾಕಿನ್ನು ಬಳಲಿಸುವೆ ಭವದ ಶರಧಿಯೊಳೆನ್ನ
ಸಾಕು ಮಾಡೆನ್ನ ಭವ ನೂಕಲಾರೆ ಶಿವನೆ ||ಪಲ್ಲವಿ||
ನಾನಾ ಜನ್ಮದಿ ಬಂದು ನಾನಾವಸ್ಥೆಯಲಿ ಬೆಂದು
ನಾನಾ ಆಹಾರಗಳ ನಲಿದುಂಡೆನು
ಹೀನ ಕರ್ಮಗಳಿಂದ ‘ನಾನತ್ವ’ವೆಡೆಗೊಂಡು
ಶುನಿಯ ತಲೆ ಹುಳಿತಂತೆ ತಿರುಗುದಿರ್ಪೆ ಶಿವನೆ ||1||
ಸ್ವರ್ಗ ಸುಖವನು ಪಡೆದು ಭರ್ಗನನು ನಾ ಮರೆದು
ದುರ್ಗಣದ ಸಂಕುಳದಿ ಎಡೆಯಾಡುತ
ಆಗ ಪಿತ ಮಲದಿಂದ ಬೇಗ ತಾಯ್ಮಲದೊಳು ಕೂಡಿ
ಬೇಗೆಯನು ಪಡಲಾರೆನೋ ಶಿವನೆ ||2||
ಮಾತೆ ಸೂತಕ ಬಲಿತು ರೋತೆ ಮಲದೊಳು ಹೊರಳಿ
ಜಾತ ಕೀಟಕಗಳಿಂದ ನರಳುತಿರಲು
ಖತಿಯಿಂದಲಿ ಸೂತಿ ವಾಯುವುಪಟಳದಿಂದ
ಮಾತೆ ಭಗದೊಳು ನಾನು ಬರಲಾರೆನೋ ಶಿವನೆ ||3||
ಧರಣಿಯೊಳು ಉದ್ಭವಿಸಿ ಸ್ಮರಣೆಯೆಂಬುದು ಪೋಗಿ
ತರುಣಿಯರು ಸೂಡೆನ್ನ ಹಾಕುತಿಹರು
ಮರೆವ ಗಾಳಿಯು ಬೀಸಿ ಭರದಿ ರೋಗಗಳ್ ಬಂದು
ಶರೀರ ಭಾದೆಗಳಿಂದ ನರಳಲಾರೆ ಶಿವನೆ ||4||
ಬಾಲಾವಸ್ಥೆಯು ಎಂಬ ಹದಿನಾರು ಸಂವತ್ಸರವು
ಕಾಲವನು ಕಳೆಯುತ್ತ ತಿರುಗುತಿರಲು
ಮೇಲೆ ಯೌವನ ಬಂದು ಸಲ್ಲೀಲೆ ಸತಿಗೂಡಿ
ಬಲು ಮೋಹದಲಿ ನಾ ಬಳಲಲಾರೆ ||5||
ವರುಷ ನಾಲ್ವತ್ತರಲಿ ವೃದ್ಧಾಪ್ಯ ತೋರಿ
ಸಿರಿಪೋಗಿ ಬಡತನವು ಒದಗುತಿರೆ
ಕರದಿ ದಂಡವ ಪಿಡಿದು ಜ್ವರ ಕೆಮ್ಮು ಉಬ್ಬಸವು
ಭರವಾದ ರೋಗದಲಿ ಬಳಲಲಾರೆ ||6||
ಈ ಮೇರೆ ಇರುವಾಗ ಯಮಭಟರು ತಾ ಬಂದು
ಭಾಮೆಗೆ ಹೇಳದ ತೆರದಿ ಎಳೆಯುತಿರಲು
ಕಾಮಹರ ನಿಮ್ಮಡಿಯ ಪ್ರೇಮ ಮರೆಯಹುದೆಂದು
ಸೋಮೇಕಟ್ಟೆ ಈಶನ ಮರೆ ಹೊಕ್ಕೆನು ||7||

ಏತರ ಭಯವಣ್ಣ
ಏತರ ಭಯವಣ್ಣ ನಮಗಿ | ನ್ನೇತರ ಭಯವಣ್ಣ
ಆತ ಶ್ರೀಗುರು ಕರುಣದಿ ಕರೆದು
ಜ್ಯೋತಿರ್ಲಿಂಗವ ಕರದೊಳಗಿಟ್ಟನು | ಯೇತರ ಭಯವಣ್ಣ ||ಪಲ್ಲವಿ||
ಕಾಮನ ಗೆದ್ದವ ಕರದೊಳಗಿರುತಿರೆ
ಕಾಮಿನಿ ಭಯಗಳು ನಮಗೇಕೆ
ಸೋಮಧರನು ಎನ್ನ ಪ್ರೇಮದಿ ನೋಡಲು
ಆ ಮಹಾಕಾಲನ ಭಯವೇಕೆ ||1||
ಧರೆಯ ಜನರು ಎಲ್ಲಾ ಪೂಜಿಪ
ಪರಿಪರಿ ಕಲ್ಲಲ್ಲ ಗುರುಮಥದಿಂದಲಿ
ಕರತಳಾಮಲಕದ ಪರಿಯಂತೆ
ಕರದೊಳು ಕಾಣಿಸಿತಲ್ಲಾ ||2||
ಜಾತಿ ಧರ್ಮದಿಂದ ಪೂಜಿಪ
ಪ್ರೀತಿಯ ಲಿಂಗಲ್ಲಾ
ಜ್ಯೋತಿಮಯನು ಜಗದೊಳ ಹೊರಗಿರುತಿಹ
ಆತ ಬ್ರಹ್ಮವೇ ತಾನಿರ್ದ ಬಳಿಕ ||3||
ದೊಡ್ಡ ಗುರುವೆ ಸೇರಿ ಅವಗುಣ
ಗೊಡ್ಡುಗುರಿಯ ಮಾಡಿ
ಅಡ್ಡ ಗುಡ್ಡದ ನಟ್ಟಡುವೆಯು
ದೊಡ್ಡ ಗುಹೆಯೊಳು ಸೇರಿದ ಮೇಲೆ ||4||
ದ್ವಾರ ನಾಲ್ಕು ಕೂಡಿ ಇರುತಿಹ
ದ್ವಾರದ ಮಧ್ಯದೊಳು
ಧೀರ ಸೋಮೇಕಟ್ಟೆ ಗುರು ಯತಿರಾಜನು
ಪಾರಮಾರ್ಥವ ಮಾಡಿದ ಮೇಲೆ ||5||

ಶ್ರೀಗುರು ಪೂಜೆಯ ಮಾಡಿದೆ
ಶ್ರೀಗುರು ಪೂಜೆಯ ಮಾಡಿದೆ
ತಾಗುವ ಭವವನು ನೀಗಿದೆ
ಯೋಗವು ಆಗಿ ಭೋಗ ಲಿಂಗದೊಳ್ ಕೂಡಿದೆ ||ಪಲ್ಲವಿ||
ಮೂರಾರು ಭಕ್ತಿಯನು ಮಾಡಿದೆ
ಸಾರಿ ಉನ್ಮನೆಯೊಳು ತೂರಿದೆ
ಮೂರು ನದಿಯ ಸ್ನಾನ ಮಾಡಿದೆ
ಈರೈದು ನಾದವ ಕೇಳಿದೆ ||1||
ಆರು ಬಾಗಿಲ ಮುಚ್ಚಿ ನೋಡಿದೆ
ತೋರುವ ಕಳೆಯೊಳು ಕೂಡಿದೆ
ಮೂರು ಮುದ್ರೆಗಳೊಳಾಡುತ ಬೇಗದಿ
ಮೂರೊಂದು ಯೋಗವ ಮಾಡಿದೆ ||2||
ಸಾಸಿರ ದಳ ಪೀಠವೇರಿದೆ
ನಾಸಿಕ ತುದಿಯನು ಸೇರಿದೆ
ಸೂಸುವ ವಾಯು ಮನ ದೃಷ್ಟಿಯು ಕೂಡಿ
ಭಾಸುರ ಲಿಂಗವ ಕೂಡಿದೆ ||3||
ತಳಮೇಲು ಚಕ್ರವ ನೋಡಿದೆ
ದಳಗಳು ಎಂಟನು ಕೂಡಿದೆ
ಥಳಥಳಿಸುವ ನಾಗನೇರಿದೆ
ಕಳೆಯುಳ್ಳ ಜ್ಯೋತಿಯ ಸೇರಿದೆ ||4||
ನಾಲ್ಕು ಹಾದಿಯ ಮಧ್ಯ ತೂರಿದೆ
ನಾಲ್ಕೊಂದು ತತ್ವವ ನೀಗಿದೆ
ಸಿಲುಕನಳಿದು ಸೋಮೇಕಟ್ಟೆ ಗುರುವ ಸೇರಿ
ನಾಲ್ಕೊಂದು ಮುಖದೊಳು ನಲಿದಾಡಿದೆ ||5||

ಬ್ರಹ್ಮವಾಗುವೆವೆಂದು ಬಳಲುವರು
ಬ್ರಹ್ಮವಾಗುವೆವೆಂದು ಬಳಲುವರು ಜಗವೆಲ್ಲ
ಬ್ರಹ್ಮವಿಲ್ಲದೆ ಜಗದೊಳನ್ಯವಿಲ್ಲ ||ಪಲ್ಲವಿ||
ವಾರಿಯೊಳು ವಾರಿ ತಾ ಕೂಡುವಂತೆ
ಪರಮನೊಳು ಜೀವ ತಾ ಲಯಿಪನೆನಲು
ವಾರಿ ವಾರಿಗೆ ಭೇದವಿಲ್ಲವಾ ಪರಿಯಂತೆ
ಪರಮನಿಗೂ ಜೀವನಿಗೂ ಭೇದಮುನ್ನಿಲ್ಲಾ ||1||
ಘಟಮಠದ ಬಯಲ್ಲೆಲ್ಲ ಒಟ್ಟುಗೂಡುವೆನೆಂದು
ಥಟ್ಟನೆ ಬಳ್ಳವನು ತಾಯೆಂಬೋಲು
ಸೃಷ್ಟಿ ಹೊರಗೊಳಗೆಲ್ಲ ಒಟ್ಟಾದ ಬಳಿಕಿನ್ನು
ದಿಟ್ಟ ಮುಕ್ತಿಯ ಎಡೆಗಳಿಲ್ಲದುಂಟೆ ||2||
ತನ್ನ ತಾನೇ ಪಿಡಿದು ಸುರಲೋಕಕ್ಹಾರೆಂದು
ಬನ್ನ ಬಡುತಿರ್ಪ ಮಾನವನಂದದಿ
ಅನ್ಯವಿಲ್ಲದೆ ಪೂರ್ಣದಿರವೆ ನೀನಾಗಿನ್ನು
ನಿನ್ನ ಬೇರೆಲ್ಲಿ ತರುತಿಹೆ ಇದನು ಪೇಳೈ ||3||
ಜಗಭರಿತ ಬಂದ ಜಾಗ್ರತೆ ಕದವ ತೆಗೆಯೆನಲು
ಜಗಭರಿತ ನಾದವನು ಒಳಗಿಲ್ಲವೆ
ಜಗದೇಕ ಬ್ರಹ್ಮವಾಗುವೆನೆನಲು
ನೀನೀಗ ಜಗದ ಏಕತ್ವದೊಳೆ ಜನಿಸಿರ್ಪೆ ತಿಳಿಯೈ ||4||
ಕಪ್ಪು ಹಚ್ಚಿ ದರ್ಪಣವ ನೋಡಲು
ಕಪ್ಪು ಬಿಳುಪದು ಮುಖವು ಕಾಣಲಿಲ್ಲ
ಒಪ್ಪದಿ ಬೆಳಗಲಿರ್ಪ ಜೀವನ ಗುಣವು
ಸೊಪ್ಪಳಿದು ಸೋಮೇಕಟ್ಟೆ ಈಶನಾದೆ ||5||

ಗುರು ಪುತ್ರರನು ಕಂಡು
ಗುರು ಪುತ್ರರನು ಕಂಡು ನರರ ಮಾತುಗಳನು ಆಡಬಾರದು
ಧರೆಯೊಳಗಿರುತಿಹ ತರುಗುಲ್ಮ ಕಲ್ಲಿಗೆ ಎರಗಬಾರದು ||ಪಲ್ಲವಿ||
ನರನಾಗಿ ಜನಿಸಲು ಗುರುವನು ಸೇರದೆ ಇರಲುಬಾರದು
ಗುರು ಕರುಣವಿಲ್ಲದೆ ಬರಿಯ ತಪಗಳ ಮಾಡಬಾರದು ||1||
ಮೋಕ್ಷದಪೇಕ್ಷೆಯಲಿ ಮರಳುತ್ತ ಹಿಮ್ಮೆಟ್ಟಿ ನಿಲ್ಲಬಾರದು
ರಾಕ್ಷಸನಂದದಿ ಭಕ್ಷ್ಯಾದಿಗಳ ನೋಡಿ ಬಯಸಬಾರದು ||2||
ಹೆಣ್ಣು ಹೊನ್ನು ಮಣ್ಣು ಮೂರನ್ನು ಮನದೊಳು ಕಚ್ಚಬಾರದು
ಹುಣ್ಣಿಮೆ ಚಂದ್ರನ ಹಾಂಗೆ ಹೊಳೆಯುವ ಹೆಣ್ಣ ನೋಡಬಾರದು ||3||
ಅರಿಷಡ್ವರ್ಗಂಗಳ ಉರುಳಿನೊಳಗೆ ಸಿಕ್ಕಿ ಸಾಯಬಾರದು
ದುರುಳ ಪಂಚೇಂದ್ರಿಯದಿರವಿನೊಳಗೆ ಮನವಿಕ್ಕಬಾರದು ||4||
ಬೋಧವು ಇಲ್ಲದೆ ವೇದವನೋದಬಾರದು
ಮೋದದಿ ದಶನಾದ ಕಿವಿಯೊಳು ಕೇಳದಿರಲು ಬಾರದು ||5||
ಸಾಧಿಸಿ ಗುರುವನು ಮನದೊಳು ಸ್ಮರಿಸದೆ ಇರಲುಬಾರದು
ಗಾದೆಯ ಮಾತಿಲಿ ವೇದಾಂತಿಗಳ ಕೂಡೆ ವಾದಿಸಬಾರದು ||6||
ಸಾಧನೆಯಿಲ್ಲದೆ ಬರಿಯ ವೈರಾಗ್ಯವನಾಡಬಾರದು
ಓದಿದ ಅರ್ಥವು ತಿಳಿಯದೆ ಬಾಯೊಳು ಬೊಗಳಬಾರದು ||7||
ಬರಿಯ ಸತ್ಕರ್ಮದಿ ಮನವನು ಇಕ್ಕುತ ಸಾಯಬಾರದು
ತಿರುಗಿ ತಿರುಗಿ ಯಮಪುರದೊಳು ಕೊರಗುತ ಇರಲುಬಾರದು ||8||
ಸೋಮೇಕಟ್ಟೆ ಈಶಸ್ವಾಮಿಯ ಪಾದವ ಮರೆಯಬಾರದು
ನಾಮ ವಿದೂರ ನೀನೆಂದು ನಂಬದೆ ಇರಲುಬಾರದು ||9||

ಗಾಢ ತಿಳಿಯೊ ನೀನು
ಗಾಢ ತಿಳಿಯೊ ನೀನು ಇರುತಿಹ ಗೂಢ ಬ್ರಹ್ಮವನ್ನು
ಕಾಡುವ ಮಾಯೆಯ ಝಾಡಿಸಿ ಒದೆದು
ರೂಢಿ ಸೋಮೇಗುರುವನು ಹಿಡಿದು ||ಪಲ್ಲವಿ||
ಆರು ಮೂರು ಮೀರಿ ಇರುತಿಹ ಮೂರು ದಾರಿ ಯೇರಿ
ಸಾರಿ ಉನ್ಮನೆಯೊಳು ತೂರುತ ಬೇಗದಿ ಈರೈದು ನಾದವ ಸೇರಿ ||1||
ಆರು ನಾನು ಎಂದು ಬೇಗದಿ ಚಾರು ಗುರುವನಂದು
ಸೇರುತ ಷಣ್ಮುಖಿ ತೋರುವ ಕಳೆಯೊಳು ಸಾರಿಯು ಮನವದುನಿಂದು ||2||
ಅಷ್ಟಮದಗಳಟ್ಟೆ ಇರುತಿಹ ಷಷ್ಠಿ ಚಕ್ರ ಮೆಟ್ಟಿ
ಭ್ರಷ್ಟ ಇಹ ಪರವೆರಡನು ಬಿಟ್ಟು ಅಷ್ಟದಳದ ಮಧ್ಯಮನವದು ನೆಟ್ಟು ||3||
ಪಂಚ ಪಂಚಕವಳಿದು ಇರುತಿಹ ಪ್ರಪಂಚವೆಲ್ಲವನಳಿದು
ಪಂಚತತ್ವವು ಗೊಂಚಲಿನಲ್ಲಿ ಮಿಂಚಿನ ಮನೆಯೊಳು ಕಂಚಿನ ತೆರದಿ ||4||
ತತ್ವವೆಲ್ಲ ಕಳೆದು ಉಳಿಮೆಯ ತತ್ವವಾವುದೆನಲು
ಕರ್ತೃ ಸೋಮೇಕಟ್ಟೆ ಕರಿವೃಷಭಾರ್ಯನೆ ತತ್ವಸಾಕ್ಷಿ ತತ್ವವ ತಿಳಿಯೈ ||5||

ತಿಳಿದು ನೋಡಿರಣ್ಣ
ತಿಳಿದು ನೋಡಿರಣ್ಣ
ತತ್ವದ ಇರವ ಕೂಡಿರಣ್ಣ ||ಪಲ್ಲವಿ||
ಕಪ್ಪುರಾಗ್ರದಲ್ಲಿ ಇರುತಿಹ ಮುಪ್ಪುರದೊಡೆಯನನು
ಒಪ್ಪದಿಂದ ಗುರು ಕರುಣವ ಪಡೆದು ಇಪ್ಪಸ್ನಾನವ ಮಾಡುತ ಬೇಗದಿ ||1||
ಅಷ್ಟದಳದ ಮಧ್ಯೆ ಇರುಇಹ ಸೃಷ್ಟಿಗೊಡೆಯನನ್ನು
ಅಷ್ಟತನುವು ಕೂಡಿ ಪಟ್ಟಣವಾಗಿಹ ಅಷ್ಟವರ್ಣದ ದ್ವಾರಕಿ ಪುರದಿ ||2||
ಮೂರು ಮುದ್ರೆಯಲ್ಲಿ ತೋರುವ ಸೂರ್ಯಚಂದ್ರರಲ್ಲಿ
ನಾರಿಯರಿಬ್ಬರು ತೋರುವ ಸ್ಥಳದೊಳು ಮೀರಿದ ಜ್ಯೋತಿಯ ಸೇರುತ ನೀವು | |3||
ನೀರಿನ ಕೊಳದಲ್ಲಿ ಇರುತಿಹ ಪೂರ್ಣ ಜ್ಯೋತಿಯಲ್ಲಿ
ಸೇರುತ ಮನದವರು ಓರೆ ಆಗದಿರೆ ನಾರಿ ರತ್ನದ ಹಾಂಗೆ ತೋರುವುದು ||4||
ಮರವೆ ಕಳೆದು ಅರಿವೆ ಆಗುತ ಪರಮ ಸೋಮೇಕಟ್ಟೆ ಕರಿವೃಷಭಾರ್ಯನ
ಚರಣ ಕಮಲವ ಬರಿಯ ಬಯಲೊಳು ಬೆರೆಯುತ ನೀವು ||5||

ಏತಕಿನಿತು ರೋತೆ ಬಾಳು
ಏತಕಿನಿತು ರೋತೆ ಬಾಳು | ಪ್ರೀತಿಯಿಂದ ಆತಗುರುವ
ನೀತಿವಿಡಿದು ತಿಳಿದು ನೋಡು ಖ್ಯಾತನಾಗುವೆ ||ಪಲ್ಲವಿ||
ಕಾಶಿಯಾತ್ರೆ ಮಾಡಬೇಡ ವೇಷವನ್ನು ಧರಿಸಬೇಡ
ದಾಸಿಯಂದದಿ ಕಾಸಿಗೆಲ್ಲ ದೇಶ ದೇಶ ತಿರುಗಬೇಡ ||1||
ನೀರ ಮುಳುಗಿ ಗಾರು ಆಗಿ ಧಾರುಣಿಯೊಳ್ ಪ್ರತಿಮೆ ಪೂಜೆ
ಸೇರಿ ಯಮನ ಪುರದಿ ನೀನು ಸಾರಿಸಾರಿ ತಿರುಗಬೇಡ ||2||
ಯಜ್ಞ ಕರ್ತೃ ನೀನೆಯಾಗಿ ಭಗ್ನ ಭವದ ಯಾಗ ಮಾಡಿ
ಸ್ವರ್ಗದಲ್ಲಿ ಸುಖವ ಪಡೆದು ಮಗ್ನವಾಗಿ ಕೆಡುವೆ ಮೂಢ ||3||
ಮೂರು ಮಲಗಳೊಳಗೆ ಸಿಲ್ಕಿ ನಾರಿಯೊಡನೆ ಕೂಡಿ ಇರ್ದು
ಧಾರುಣಿಯನೆಲ್ಲ ತಿರುಗಿ ಧೀರರೋಗದಿ ಕೆಡಲು ಬೇಡ ||4||
ಮೇಕೆಯಂದದಿ ಗಿಡವಹತ್ತಿ ಆಕೆವಾಳ ಪತ್ರೆಯೆತ್ತಿ
ಏಕೋನಾಥನ ಮರೆದು ನೀನು ಈಕೆ ಮಾಯೆಯೊಡನೆ ಕೂಡಿ ||5||
ಮತ್ತೆ ಮೂರು ವೇಳೆಯುಂಡು ಅಸ್ತಮಯದಿ ಪೂಜೆ ಮಾಡಿ
ಕತ್ತೆಯಂತೆ ಇಹಕೆ ಪರಕೆ ಸುತ್ತಿಸುತ್ತಿ ಕೆಡಲಿಬೇಡ ||6||
ಕರ್ಮವನ್ನು ಕಳೆಯಲಿಲ್ಲ ಮರ್ಮವನ್ನು ತಿಳಿಯಲಿಲ್ಲ
ಕರ್ಮಿ ನೀನು ಕೂರ್ಮನಂದದಿ ಉರ್ವಿಗಾತ್ರ ಪಡೆದೆ ಗಾಢ ||7||
ನಾಡ ಮಾತನೆಲ್ಲ ಕಲಿಯು ಗೂಢ ಬ್ರಹ್ಮವ ಮರತೆ ನೀನು
ಖೋಡಿ ಭವದಿ ಬರುವೆಯಲ್ಲ ಮಾಡು ಆತ್ಮಪೂಜೆ ಗಾಢ ||8||
ವೇದವನ್ನು ಓದಿ ಪಾಡಿ ಬಾಧೆ ಭವವ ನೀಗಿ ನೋಡಿ
ಆದಿ ಸೋಮೇಕಟ್ಟೆ ಗುರುವ ಬೋಧವನ್ನು ಬೇಡಿಬೇಡಿ ||9||

ಕಂಡೆನು ಗುರುವರನ
ಕಂಡೆನು ಗುರುವರನ
ಎನ್ನಭವ ದಂಡಲೆ ಪರಿಹರನ ||ಪಲ್ಲವಿ||
ಹರಿಯಜ ಸುರರೆಲ್ಲರು ಕಾಣದ
ಗುರು ಪರಮಪಾವನ ಮೂರ್ತಿಯ
ಪರಮ ವೈರಾಗ್ಯವೆನ್ನೊಳು ನೆಲೆಗೊಂಡು
ಗುರುವರನಡಿಯನ್ನು ಕಂಡೆ ||1||
ಭಕ್ತಿ ಮೂರಾರ ಮೀರಿ ತೋರುವ
ಮಹಾಯುಕ್ತಿ ಮರ್ಮವನು ತೋರಿ
ಮುಕ್ತಾಮುಕ್ತಿ ಮುಕ್ತನಾದ ವಿರಕ್ತನ
ಚರಣವ ಶಕ್ತಿರಹಿತ ಮುಮುಕ್ಷತ್ವದಿ ಕಂಡೆ ||2||
ಜ್ಞಾನಪಾವುಗೆ ಮೆಟ್ಟಿದ ಸುಜ್ಞಾನದ
ಸ್ವಾನುಭಾವವ ತೋರಿದ
ಜ್ಞಾನಾಜ್ಞಾನ ನಾನು ನೀನೆಂಬುವ ಭಾವವು
ತೋರದೇ ತಾನು ತಾನೇ ತಾನಾದ ಗುರುವ ||3||
ಕಂಡೆ ಕಂಡೆನು ಉದ್ದಂಡ ಗುರುವನ ಖಂಡ ಬ್ರಹ್ಮವೆ
ನಿಜಗೊಂಡ ಮೂರುತಿಯ
ಮಂಡಲ ಮೂರರ ಮಧ್ಯದಿ ತೋರುವ ಕೆಂಡಗಣ್ಣೊ
ಡೆಯನ ಕಂಡೆ ನಾ ಕಂಡೆ ||4||
ಮನ್ನಿಸಿ ಕರೆದೆನ್ನನು ‘ನಿನ್ನ ನೀನೇ ಚೆನ್ನಾಗಿ ತಿಳಿ’ ಎಂದನು
ಉನ್ನತ ಸೋಮೇಕಟ್ಟೆ ಈಶನ ಎನ್ನೊಳು ಭಿನ್ನವಿಲ್ಲದೆ
ಕಂಡು ನಿಬ್ಬೆರಗಾದೆನು ||5||

ಹೋಗಿ ನೋಡುವ ಬನ್ನಿರಿ
ಹೋಗಿ ನೋಡುವ ಬನ್ನಿರಿ ಶ್ರೀಗುರುವರನ
ಹೋಗಿ ನೋಡುವ ಬನ್ನಿರಿ ||ಪಲ್ಲವಿ||
ಹೋಗಿ ನೋಡುವ ಬನ್ನಿರಿ ಯೋಗಿಯ ಚರಣವ
ರಾಗ ರಹಿತ ಗುರು ನಾಗಭೂಷಣನನು ||1||
ಪಾದ ಬಾಹ್ಯದಿ ಪವಳ ವೇದಾದಿ ಬ್ರಹ್ಮವು
ಬೋಧಮಯನು ಗುರು ಆದಿಯ ರುದ್ರನ ||2||
ಗುರು ಎಂಬ ವಾಕ್ಯವು ಹರನ ಮಂತ್ರದ ಮೂಲ
ಗುರುಪಾದ ಧ್ಯಾನವೆ ಪರಮ ಪದವಿ ಮೂಲ ||3||
ಗುರು ಪಾದವನು ಕಂಡು ಅರಿವಿನಿಂ ಕೂಡಲು
ಸ್ಥಿರ ಮುಕ್ತಿ ಪದವಿ ಬೆರೆದು ನೋಡುವ ಬನ್ನಿರಿ ||4||
ಧ್ಯಾನ ಧಾರಣವೆಂಬ ಮೌನ ಸೋಮೇಕಟ್ಟೆ
ಜ್ಞಾನಿಯ ಕೂಡಲ ನೂನದಿ ಸಾಮದಿ ||5||

ಕುಶಲ ಕೈಲಾಸ ಈಶ
ಕುಶಲ ಕೈಲಾಸ ಈಶ
ಎನ್ನಸುವಿನೊಳು ವಾಸ ||ಪಲ್ಲವಿ||
ಅಸಮ ಭಕ್ತರ ಮನದ ವಾಸನೆ ಕುಶಲ ಭಕ್ತಿಯ ತೋರಿ ಎನ್ನನು
ವಸುಮತಿಯೊಳು ಸುವರ್ಣಪುರದಿ ಜಸವಡೆದಿಹ ಈಶಾಧೀಶ ||1||
ಅಷ್ಟ ತನುವದು ಕೂಡಿದ ಮಹಾ ಪಟ್ಟಣದಿ ನೀನಿರ್ಪೆ ದೇವ
ಅಷ್ಟ ಮದಗಳ ನಷ್ಟ ಮಾಡಿದ ಶ್ರೇಷ್ಠ ಗುರುವರ ಶೇಷ ವಾಸ ||2||
ಅಜ ಹರಿಯು ಸುರಪದಿವಿಜರು ಗಜಮುಖನು ನರನಾಗ ಕಿನ್ನರ
ಭಜಿಸಿ ತಾ ಪಾಡುತ ವರವ ಬೇಡುತ ಅಜಗಣಾದಿಗಳೆಲ್ಲ ಭಜಿಪರು ||3||
ಮೂರು ಮಂಡಲ ಮಧ್ಯೆ ತೋರುವ ಮೂರು ಕಣ್ಣದೇವ ನಿಮ್ಮಯ
ಮೂರು ಆತ್ಮರ ಮೂಲ ಕರ್ತನೆ ಮೂರು ರೂಪು ತೋರು ತೋರು ||4||
ಆ ಮಹಾ ಉನ್ಮನೆಯ ವಾಸನೆ ಸೋಮಶೇಖರ ಸಲಹು ಈಶನೆ
ಸೋಮೇಕಟ್ಟೆ ವಾಸ ವಾಸಪ್ರೇಮ ಸದ್ಗುರು ಸಲಹು ಸಲಹು ||5||

ಶ್ರೀಗುರು ಬಸವಲಿಂಗ
ಶ್ರೀಗುರು ಬಸವಲಿಂಗ ಧಾಮ ನುತಜನಸಂಗ
ಸ್ವಾಮಿ ನೀ ಎನ್ನ ವಾಙ್ಮನದಿ ನಿಂದು
ಪ್ರೇರಣೆಯ ಮಾಡಿ ನೀಂ ಬಾಲಕರ ತೊದಲ್ನುಡಿ
ಯ ಲಾಲಸಿ ಪಾಲಿಪುದು ಶರಣು ಶರಣು ||ಪಲ್ಲವಿ||
ತಂದೆ ಗುರು ರಾಚಪ್ಪ ಇಂದುಧರ ರುದ್ರೇಶ
ಹೊಂದಿದಾ ಜಂಗಮವು ಪ್ರಭು ಚೆನ್ನಬಸವ
ಇಂದಿವರ ಬಲವಿರಲು ಮುಂದೆನಗೆ ಜನ್ಮದ
ದಂದುಗಗಳೇನಿಲ್ಲವೆಂದಿರ್ಪೆನು ||1||
ಬಲ್ಲವರು ಬಾಲ್ನುಡಿಗಳಲ್ಲೇ ತಪ್ಪಿರ್ದೊಡಂ
ತಳ್ಳಿ ಹಾಕದೆ ಮತ್ತೆ ಒಳ್ಳೆನಿಸಿ
ಮೆಲ್ಲಡಿಯ ಕರುಣವನು ನಿಲ್ಲದೇ ಪಾಲಿಪುದು
ಎಂದೆಲ್ಲ ಶಿವಶರಣರಿಗೆ ಎಗಿ ಬಾಳ್ವೆ ||2||
ಹಿಂದಣ ಭವಗಳು ಸಂದು ಹೋದುವು ಬಹಳ ಮುಂದೆ
ನಿಮ್ಮಯ ಕಂದನೆಂದು ತಿಳಿದು
ಇಂದು ಸೋಮೇಕಟ್ಟೆ ಕರಿವೃಷಭ ಲಿಂಗದೋಳ್
ಹೊಂದಿದ ಪದವಿತ್ತು ಸಲಹುದೆನ್ನ ||3||

ಆಶ್ಚರ್ಯವಾಯಿತಲ್ಲ
ಆಶ್ಚರ್ಯವಾಯಿತಲ್ಲ ನಮಗೊಂದು ನಿಶ್ಚಯವು ತೋರಿತಲ್ಲ
ಸಚ್ಚಿದಾನಂದೈಕರಸವೆ ವಿಗ್ರಹಮಾಗಿ ಎಚ್ಚರವ ಕೊಟ್ಟಿತಲ್ಲ ||ಪಲ್ಲವಿ||
ಯಾಕಿನ್ನು ಮರವೆ ನಿಮಗೆ ವ್ಯವಹಾರ ಲೋಕದಂತಾಯಿತೆಂದು
ಈ ಶುಕ್ಲ ಸಂವತ್ಸರದ ಪುಷ್ಯೋತ್ತರ ನಾಲ್ಕನೆಯ ಶುಕ್ರವಾರದ ರಾತ್ರಿಲಿ ||1||
ರಾಚೋಟಿ ದೇವ ಬಂದು ವಾಚಕ್ಕಗೋಚರಮಾಗಿ ಸೂಚಿಸಿದ ಕಥದಿಂದ
ನಮಗಾಯಿತೀ ಹುಚ್ಚು ಈಚೆ ಜನ ಬಲ್ಲರೇನೋ ||2||
ಪರಮ ಪ್ರಕೃತಿಯ ಸ್ಪರ್ಶದಿ ಅಂಧಕನು ಕುರುಹು ತೋರಿದ ತೆರದಲಿ
ಅರಿವು ಮರವೆಯ ಸಂಗದಿಂದೊಗೆದ ಶರೀರವಿದನರಿದ ಮಾತ್ರವೆ ನಾಶವು ||3||
ಮರವೆ ಮೋಡಗಳೆಲ್ಲವು ತಾವ್ಕೂಡಿ ಅರಿವು ರವಿ ಕಾಣಗೊಡದಾ ತೆರನಂತೆ
ಪರಿಪರಿಯ ವಿಧವಾದ ಸಂಸಾರಪರಿಹರವ ಮಾಡೆನುತಲಿ ||4||
ಯಾಕಿನ್ನು ಸಾವಕಾಶವು ಲೌಕಿಕದ ಬಾಕಿ ಇನ್ನೇನು ನಮಗೆ ಸ್ವೀಕರಿಸಿ
ನೀ ಸೋಮೇಕಟ್ಟೆ ಕರಿವೃಷಭೇಂದ್ರ ಲಿಂಗದೊಳೇಕವಾಗೆಂದೊರೆದನು ||5||

ಏಕಾಂತ ಸೇರಲಿ ಬೇಕು
ಏಕಾಂತ ಸೇರಲಿ ಬೇಕು ನಾವಿನ್ನು ಮೂಕರಾಗಲಿಬೇಕು
ಏಕಾತ್ಮ ಧ್ಯಾನದೊಳು ಬಾಲಲೀಲೆಯ ಧರಿಸಿ ಭವಾರಣ್ಯ ದಹಿಸಬೇಕು | |ಪಲ್ಲವಿ||
ಇಷ್ಟವನು ಪೂರೈಸಿರೋ ಲೌಕಿಕದ ಗೋಷ್ಠಿಯನು ಬಿಡಿಸಿರಯ್ಯ
ಶ್ರೇಷ್ಠ ಪರಶಿವ ನಿಮಗೆ ಭಕ್ತಿ ಜ್ಞಾನೈಶ್ಚರ್ಯ ಎಷ್ಟು ಬೇಡಿದರೀವನು ||1||
ನಿಮ್ಮ ಭಕ್ತಿಯ ಪಾಶವು ಚರಣಗಳ ಚನ್ನಾಗಿ ಬಿಗಿದಿರ್ಪುದು
ಇನ್ನೆಲ್ಲೂ ಅತ್ತಿತ್ತ ಚರಿಸದಂತೆ ನಿಮಗೆ ಸಂಚಿತ ರೂಪಾದವು ||2||
ಮುಕ್ತ ಬಂದಲ್ಲಿ ನಿಮಗೆ ಪೇಳುವೊಡೆ ವಿರಕ್ತಿಮುಂದರಿವುದೆಮಗೆ
ನೋಡುವೊಡೆ ಬಾಲ್ಯದಲಿ ಬಹಳ ಭ್ರಮೆಯಿರುವಂತೆ ತೋರದೇಹವು ಕಾಣ್ಬುದು ||3||
ಕಾಯಾವಾಚವು ಮಾನಸ ಮೂರರೊಳು ತಾನೇ ಶಿವನಿರ್ಪನಾಗಿ
ಬಾಯ ಮನ್ನಣೆಯಿಲ್ಲ ಲೋಕದ್ಹಂಗಿಗನಲ್ಲ ಪರಶಿವನು ತಾನೆ ಬಲ್ಲ ||4||
ಒಂದು ತಿಂಗಳು ವಾಯಿದೆ ನಮ ನಿಮಗೆ ಎರಡು ತಿಂಗಳು ಆಗಲು
ಬಂಧರಹಿತನು ಸೋಮೇಕಟ್ಟೆ ಕರಿವೃಷಭೇಂದ್ರ ಎಂದಿಗೂ ದೊರೆಯ ನೋಡಿ ||5||

ನಾವಾದರೊ ಹೋಗುತ್ತೇವೆ
ನಾವಾದರೊ ಹೋಗುತ್ತೇವೆ ನೀವಾದರೀ ದೇ
ಹವೇನಾದರೂ ಮಾಡಿಕೊಳ್ಳಿ ನಮಗೇತಕಿದರ ಸಂಗ ||ಪಲ್ಲವಿ||
ದೇಹ ಬಿಟ್ಟು ಹೋದರೆಂಬ ಭಾವವ ಮಾಡಬೇಡಿ
ದೇಹಗೇಹವು ಬ್ರಹ್ಮಾಂಡದೊಳ ಹೊರಗೆಲ್ಲ ||1||
ಎಲ್ಲವೂ ನಾವೆಯಾಗಿ ಎಲ್ಲಕ್ಕೂ ಸಾಕ್ಷಿಯಾಗಿ
ಎಲ್ಲೆಲ್ಲಿ ನೋಡಿದರಲ್ಲಲ್ಲಿ ನಾವೆಯಾಗಿ ||2||
ಸ್ವರ್ಗ ಮರ್ತ್ಯವು ಭರ್ಗಲೋಕಾಪೇಕ್ಷಿತರಲ್ಲ
ಭರ್ಗೋದೇವನ ಸಾಕ್ಷಿ ನಿರ್ಗುಣಾನಂದದೊಳು ||3||
ಧರೆಯೊಳು ಮಕ್ಷಿಕಪುರಿ ಪರಮ ಸದ್ಭಕ್ತರಿಷ್ಟ
ಇರುವ ನಿಮಿತ್ತದಿಂದ ಪರಶಿವ ಸಮಾಧಿಯೊಳು ||4||

ತಿರುಗಲಾರೆವೋ ನಾವು
ತಿರುಗಲಾರೆವೋ ನಾವು ಸೊರಗಲಾರೆವೊ ||ಪಲ್ಲವಿ||
ತಿರುಗಿ ತಿರುಗಿ ಪರರ ಬೇಡಿ ಕರಗಿ ಕೊರಗಿ ಸಾಯಲಾರೆ
ಪರಮ ಗುರುವೆ ನಿಮ್ಮ ಕರುಣದಿರವಿನೊಳಗೆ ಇರಿಸಿ ಸಲಹೋ ||1||
ಎಷ್ಟು ಜನ್ಮವಾಯ್ತೊ ಹುಟ್ಟೆ ಸೃಷ್ಟಿಯೆಲ್ಲವನ್ನು ತಿರುಗಿ
ಹೊಟ್ಟೆ ಹೊರೆದುದಲ್ಲದಿಹದೊಳಿಷ್ಟು ಸುಖವು ಕಾಣಲಿಲ್ಲ ||2||
ಧರೆಯೊಳೀ ಮಕ್ಷುಕಪುರದಲಿರುವ ಸೋಮೇಕಟ್ಟೆ
ಕರಿವೃಷಭಲಿಂಗದಲ್ಲಿ ಬೆರಸಿ ಹೋಗುತೇವೆ ||3||

ತಿಳಿದುದನು ಪೇಳ್ವೆ
ತಿಳಿದುದನು ಪೇಳ್ವೆ ಬಲ್ಲವರು ಲಾಲಿಸಿ ನೀವು
ಇಳೆಯೊಳಾದಿಗೆ ಆಧಾರವಾದುದನು ||ಪಲ್ಲವಿ||
ಸತಿಪತಿಗಳಿಲ್ಲದೆಯೆ ಉತ್ಪತ್ತಿಯೊಂದಾಯ್ತು
ಮತಿಗಶಕ್ಯವು ಆದರೋಳ್ಮೊಳೆಕೆ ಮೂರಾಯ್ತು
ಅತಿಯಾಗಿ ಬೆಳೆದಂಥ ಮೊಳಕೆ ವಿವರವ ಪೇಳ್ವೆ
ಗತಿಯ ಬಯಸುವರೆಲ್ಲ ಲಾಲಿಸಿ ತಿಳಿದು ನೋಡಿ ||1||
ಮೊದಲ ಮೊಳಕೆಗೆ ಐದು ವಿಧವಾದ ಕೊನೆಯಾಯ್ತು
ಅದರೊಳಗೆ ಹುಸಿಕಾಯಿ ವಿಧಿಸಿದರೆ ದಿಟವಾಯ್ತು
ಮುದವಲರಿ ಮೋಕ್ಷ ಪಡೆಯುವರೆಲ್ಲ ಇದನರಿತು
ಒದೆದು ಕಳೆಯಿರಿ ಭವದ ಬಂಧವನು ||2||
ನಡುವಣ ಮೊಳಕೆಗೆ ಬುಡದಂತೆ ಎಲೆ ನಾಲ್ಕು
ಕಡೆಯ ಮೊಳಕೆಗೆ ನಾಲ್ಕು ಬುಡವಾಗಿ ಇರುತಿಹುದು
ನಡುವಣ ಮೊಳಕೆಯೆ ಕಡೆದಿಹುದು ಇವು ಮೂರ
ಒಡೆಯನಾದವ ಸೋಮೇಕಟ್ಟೆ ಕರಿವೃಷಭ ||3||

ತರಳೆ ಬೇಗದಿ ತಂದು
ತರಳೆ ಬೇಗದಿ ತಂದು ತೋರೆ ತಾರಕವ ಬೋಧಿಸಿದನ
ತಾರಕವ ಬೋಧಿಸಿದನ ಶ್ರುತಿ ಸಾರದಮೃತವ ಎರೆದನಾ ||ಪಲ್ಲವಿ||
‘ಪರಮ ಅನುಭವ ಬೋಧೆ’ ಬೋಧಿಸಿ ಕರಣದೊಳಹೊರಗಿರ್ಪನ
ಶರಣ ಜನರ ಹೃದಯ ಕಮಲದಿ ನಿರುತ ಗೀತವ ಪಾಡುವನ ||1||
‘ಅನುಭವದ ಸಾರ’ವನು ಎರೆದು ಮನದ ಮಲಿನವ ತೊಳೆದನಾ
ಅನವರತ ‘ವಿವೇಕ ಚಿಂತಾಮಣಿ’ಯನ್ನೊಳಗಿಟ್ಟನ ||2||
‘ಪಾರಮಾರ್ಥ ಪ್ರಕಾಶಿಕೆ’ಯೊಳೆನ್ನ ಪರಮಜೀವರ ಕೂಡಿದನ
ಧೀರ ಕೈವಲ್ಯವನು ಪಡೆಯುವ ಸಾರ ಪದ್ಧತಿ ಪೇಳ್ದನ ||3||
ಶಂಭು ರೂಪವ ನಿಂಬುಗೊಂಡು ಕುಂಭಿಣಿಯೊಳು ನಿಂದಿರುವನ
ಹಂಬಲಿಸುತಿಹ ಯೋಗಿಜನಕೆ ಚಿದಂಬರವೆ ತಾನಾದನ ||4||
ಸೋಮೇಕಟ್ಟೆ ನೇಮಸ್ಥಲದೊಳು ಕಾಮಿಸೆನಗೆ ಒಲಿದನ
ನಾಮ ರೂಪು ಕ್ರಿಯೆಗಳಿಲ್ಲದ ನಿಸ್ಸೀಮ ‘ನಿಜಗುಣ’ಧಾಮನ ||5||

ಘಟವೇ ಇರಬೇಕೆಂದು
ಘಟವೇ ಇರಬೇಕೆಂದು ಹಟವ ಮಾಡಲು ಬೇಡಿ
ಘಟದ ಮೇಗಳ ಆಸೆ ಬಿಡಿರೋ ಕೈಯಾ ನೀವ್ ಹಿಡಿರೋ ಕೈಯಾ ||ಪಲ್ಲವಿ||
ಘಟ ಮಾನಸದೊಳಗೆಲ್ಲ ಸುಟಿಯಾಗಿರುತಿದೆ ಜ್ಯೋತಿ
ನಿಟಲ್ ಭ್ರೂಮಧ್ಯದಿ ನೀವ್ ಹಿಡಿರೋ ಕೈಯ, ನೀವ್ ಬಿಡಿರೋ ಕೈಯ ||1||
ನೀವೇ ಇರಬೇಕೆಂದು ನ್ಯಾಯ ಮಾಡಲು ಬೇಡಿ
ನಮ್ಮ ಮಾರ್ಗವು ಬಹು ದೂರವಯ್ಯ ಬಹು ದೂರವಯ್ಯ ||2||
ಸೋಮೇಕಟ್ಟೆ ಕರಿಬಸವರಾಜೇಂದ್ರನು
ಇನ್ನು ಈ ದಾರಿಯ ಬಿಟ್ಟಾನಯ್ಯ ತಾನ್ ಮೆಟ್ಟಾನಯ್ಯ ||3||

ಗುರುವರ ನಿಮ್ಮನು
ಗುರುವರ ನಿಮ್ಮನು ಸ್ಮರಿಸುವೆನನುದಿನ
ವರವನೆ ಪಾಲಿಸು ಪರಮ ಕೃಪಾಕರ ||ಪಲ್ಲವಿ||
ಕಂಗಳ ನೋಟಕೆ ಜಂಗಮ ರೂಪನೆ
ಅಂಗಜ ತಾಪವನುರುಹಿದ ಭೂಪನೆ ||1||
ಜಗದಭಿರಾಮನೆನಗಧರ ವಂದ್ಯನೆ
ಮೃಗಧರ ರೂಪನೆ ಜಗದೊಳು ಪೂಜ್ಯನೆ ||2||
ಸೋಮೇಕಟ್ಟೆಯ ಸ್ವಾಮಿಯ ಸ್ಮರಿಸುವೆ
ಕಾಮಿತ ಫಲಗಳ ಕೊಡು ಕರಿವೃಷಭನೆ ||3||

ಹಬ್ಬಿಗೆ ಸುಕ್ಷೇತ್ರಕಿಂದು ಹೋಗಿ
ಹಬ್ಬಿಗೆ ಸುಕ್ಷೇತ್ರಕಿಂದು ಹೋಗಿ ಯಾತ್ರೆ ಮಾಡಿ ಬಂದೆ
ಹಬ್ಬಿಗೆಯು ದಿಂಬದೊಳಗುಂಟು ಓ ಕರಿವೃಷಭಲಿಂಗ
ಶಂಭು ಭಕ್ತರಿಗೊಬ್ಬ ಬೇರುಂಟು ||ಪಲ್ಲವಿ||
ಆರು ಗಿರಿಯ ಹತ್ತಿ ಮೇಲೆ ಮೂರು ಕೊಳದ ಮಧ್ಯದಲ್ಲಿ
ಏರಿ ಕಂಡೆನು ಪಶ್ಚಿಮ ದ್ವಾರವ, ಓ ಕರಿವೃಷಭಲಿಂಗ
ಸರಿ ನೋಡಿದೆ ಈಶಾನ್ಯ ಪಟ್ಟಣವ ||1||
ಏಳು ನದಿಗಳುಂಟು ಅಲ್ಲಿ ಬಾಳಲೋಚನನಿರುವ ಸ್ಥಲದಿ
ತಾಳಮದ್ದಳೆ ಭೇರಿ ನಗಾರಿಯು ಓ ಕರಿವೃಷಭಲಿಂಗ
ವೇಳೆ ವೇಳೆಗೆ ತಾವೇ ನುಡಿವುವು ||2||
ಗಿರಿಯ ಶಿಖರದ ಮೇಲೆ ಮತ್ತೆ ಇರುವುವೈದು ಕಲಶವಲ್ಲಿ
ಬರುವ ಹೋಗುವ ಬೀದಿಗಳ್ನಾಲ್ಕುಂಟು ಓ ಕರಿವೃಷಭಲಿಂಗ
ನಾರಿಯರಿಬ್ಬರು ಸಾರುತಿರ್ದರು ||3||
ಹಿರಿಯ ಹುಲಿಗಳಾರ ಕಡಿದೆ ಬರುವ ಗಜಗಳೆಂಟ ತಡೆದೆ
ಹರಿಯ ಮೆಟ್ಟಿ ಮೇಲೆ ನಾ ನಿಂದೆ, ಓ ಕರಿವೃಷಭಲಿಂಗ
ನೀರಬೊಂಬೆಯ ಬಿಗಿದು ಕಟ್ಟಿದೆನು ||4||
ಪೂರ್ವದಲ್ಲಿ ಎದ್ದ ಸೂರ್ಯ ತಾರೆಗಳೆಲ್ಲರ ದಾಂಟಿ
ಸಾರಿ ಹಂಸಿನ ಮನೆಯ ಕಂಡೆನು ಓ ಕರಿವೃಷಭಲಿಂಗ
ಧೀರನದಲಿ ಒಬ್ಬನೆ ಹೊಕ್ಕೆನು ||5||
ಸರ್ಪನ ಹೆಡೆಯ ಮೇಲೆ ಮತ್ತೆ ಕರ್ಪುರವ ಹಚ್ಚಿರಿ
ಸಿರ್ಪ ಶಿವನ ಘನದೋಳ್ಬೆರೆದೆನು, ಓ ಕರಿವೃಷಭಲಿಂಗ
ಮುಪ್ಪುರವ ಮೊದಲೇ ತೊರೆದೆನು ||6||
ಆರು ಮೂರು ಬಾಗಿಲ ನಡುವೆ ತಾರಾ ಮಿಂಚಿನ ಬಯಲ ಒಳಗೆ
ಉರಿವ ಜ್ಯೋತಿಯನೊಂದ ಕಂಡೆನು ಓ ಕರಿವೃಷಭಲಿಂಗ
ಸ್ಮರಿಸಿ ಭಾವದಾರತಿ ಎತ್ತುವೆನು ||7||
ಇಂತು ಹಬ್ಬಿಗೆಯ ಸ್ಥಲವ ನಿಂತು ನೋಡಿದೆನಯ್ಯ ಗುರುವೆ
ಅಂತಕಾಂತನ ಪಥವ ಕೂಡಿದೆನು ಓ ಕರಿವೃಷಭಲಿಂಗ ನಿ
ಶ್ಚಿಂತ ಮಲ್ಲನು ನೀನೆಯಾಗಿರ್ದು ||8||
ಮೂರು ವರ್ಣದ ಮಧ್ಯದಲ್ಲಿ ಸೇರಿ ಇರುವ ಸೋಮೇಕಟ್ಟೆ
ಪ್ರೇಮದೊಡೆಯ ನೀನೆಯಾಗಿರ್ದೆ ಓ ಕರಿವೃಷಭಲಿಂಗ
ಸಾರಸುಧೆಯನು ಸವಿದು ಸುಖಿಸಿದೆ ||9||

ಸ್ವಾಮಿ ನಿಮ್ಮೊಳು ನಾನು
ಸ್ವಾಮಿ ನಿಮ್ಮೊಳು ನಾನು ನೇಮವಿಲ್ಲದೆ ಇರ್ಪ
ಆ ಮಹಾಸುಖದ ಕಾಮಿತನಾದೆ ದೇವ ||ಪಲ್ಲವಿ||
ಭೂತ ಪಂಚಕದೇಹ ಖ್ಯಾತಿ ಮಾತೆ ನಿಜ
ಜಾತಿಯಾಚಾರ ವ್ರತಗಳ್ಹಮ್ಮು ತೊರೆದು
ಆತಳೋದರಿಯರ ಪ್ರೀತಿಯ ಸ್ವರ್ಗವ
ನೇತಿಗಳೆದು ನಿತ್ಯಾನಂದ ಮಯದಿ ||1||
ಕ್ಷುತ್ ಪಿಪಾಸೆ ಉನ್ಮತ್ತಾವಸ್ಥೆ ಗಳಿರ
ದತ್ಯಾಶ್ರಮ ಮುಖ್ಯ ಮೊತ್ತ ಕೆಳೆಸದೆ
ನಿತ್ಯ ಸತ್ಯ ಜಗದುತ್ತಮನೆಂಬುವ
ಬಿತ್ತರಂಗೀ ಮಹತ್ತು ತೋರದಲೆ ||2||
ಅಜಹರಿ ರುದ್ರರ ನಿಜಪದ ಬಯಸದೆ
ಅಜರಂದ್ರದೆಡೆಯ ರಾಜಿಪ ಆಕಾಶದೊಳು
ರಜನೀಕರಕೋಟಿ ತೇಜವ ಹೊಂದುತ್ತ
ಭಜನೆಯನುಳಿದು ಭಾವಕೆ ಗಮ್ಯನಾಗಿ ||3||
ಮನ ಮಿನುಗುವ ಜಗದನುವೇನು ತೋರದೆ
ಘನ ಚಿತ್ಪ್ರಭೆಯನಗಲದೈಕ್ಯನಾಗಿ
ಸುನಿಮಿಷದಳೆದ ಸೋಹಂಭಾವವನು ಮೀರಿ
ಅನುಪಮ ಅವಿರಳ ನೆಂತ ಪೂರ್ಣದಲಿ ||4||
ಸೋಮೇಕಟ್ಟೆಯ ಧಾಮನ ಸ್ಮರಿಸಲು
ಈ ಮಹಾಸುಖವನು ಇಂತೀಯದಲೇ
ತಾ ಮನದಗ್ರದಿ ತಾರಕ ರೂಪಿಲಿ
ನೇಮವಾಂತಿರಲು ನಿತ್ಯತ್ವವಹುದೆಂದು ||5||

ಮನವ ನಿಲ್ಲಿಸುವುದೇ ಯೋಗ
ಮನವ ನಿಲ್ಲಿಸುವುದೇ ಯೋಗ
ಚಿತ್ತ ಚಲಿಸದೆ ಇರುವುದು ಅದು ರಾಜಯೋಗ
ಮನವ ನಿನ್ನೊಳು ಬೆರಸೋ ದೇವ
ಬೇಗ ಘನಪದವಿತ್ತೆನ್ನ ಪೊರೆಯೋ ಸದ್ಭಾವ ||ಪಲ್ಲವಿ||
ಹಲವು ಜನ್ಮಗಳೆತ್ತಿ ಬಂದೆ ನಾ
ಹಲಬಗೆ ರೂಪಾಂತು ಮಹಿಯೊಳು ನಿಂದೆ
ಕುಲ ಛಲಂಗಳ ನೀನೇ ಕೊಂದೆ ಎನ್ನ
ಸುಲಭೀಪಾಯದೊಳ್ ಸಲಹೆನ್ನ ತಂದೆ ||1||
ವಾಚಕದೊಳು ನೀನು ನಿಂತು ಎನ್ನ
ಲೋಚನಾಗ್ರದೊಳ್ ನೀ ರೂಪಾಗಿ ನಿಂತು
ಸೂಚಿಸಿ ತೋರೆನಗಿಂತು ತಾನೆ
ಗೋಚರಿಸೆನ್ನ ಮನ ದಣಿವಂತೆ ||2||
ಹೇಮ ಕಬ್ಬಿಣ ಬೆರೆದಂತೆ ಮ
ತ್ತಾ ಮಹಾಜ್ಯೋತಿಯೋಳ್ ಕರ್ಪುರ ಬೆರೆದಂತೆ
ಭೂಮಿಗೆ ನಾ ಬಾರದಂತೆ ಎನ್ನ
ಸೋಮೇಕಟ್ಟೆ ಕರಿವೃಷಭಾರ್ಯನಂತೆ ||3||

ಮಂಗಳ ಮಯತೆ ಜಂಗಮ
ಮಂಗಳ ಮಯತೆ ಜಂಗಮ ಪುಂಗವ
ಅಂಗಜ ಮದಹರ ಮಂಗಳಂ ಭವತು ||ಪಲ್ಲವಿ||
ನತನುತಪದ ಪರೀ ಪಾಲನ ಶೀಲ
ಯತಿತತಿ ಮಾನಸ ವಿಮಲ ಮರಾಳ ||1||
ಚರಸಂತಾರ್ಪಣ ನಿರುಪಮಧೀಶ
ಗುರುವರ ಶಮದಮ ಗುಣಮಣೀ ಭೂಷ ||2||
ಭೂರಿ ಜನಾಂಬುಧಿ ವರ್ಧನ ಚಂದ್ರ
ಧೀರ ಸೋಮೇಕಟ್ಟೆ ಕರಿವೃಷಭೇಂದ್ರ ||3||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಇಮ್ಮಡಿ ಮುರಿಗಾ ಗುರುಸಿದ್ಧರ ತತ್ವಪದಗಳು

ಶರಣು ಗಜಮುಖ ಜನಕ
ಶರಣು ಗಜಮುಖ ಜನಕ ಶಶಿಕಲಾಧರ ಕನಕ
ಗಿರಿಸದನ ಗೀರ್ವಾಣ ನತಚರಣ ಶರಣು
ಹರಿ ಸುದರಿಶನ ವರದ ಹಸಿತಮುಖ ಕುಂದರದ
ಪರತರಾನಂದಮಯ ಪಸುಪ ಪುರವಿಜಯ ||ಪಲ್ಲವಿ||
ಶಂಕರ ಕೃಪಾನಿಚಯ ಶಾಂತ ಫಣಿಪತಿ ವಲಯ
ಪಂಕವಿರಹಿತ ಚರಿತ ಪಂಚಶರ ನಿರತ
ಕಿಂಕರಸ್ತುತಿ ಪಾತ್ರ ಕಿನ್ನರೇಶ್ವರ ಮಿತ್ರ
ಸಂಕಲಿತ ಗುಣಹಾರ ಸಾಂಬ ಸುಖಸಾರ ||1||
ನೀಲಕಂಧರ ರುಚಿರ ನಿರ್ಮಳ ಜಗತ್ಪ್ರಚುರ
ಕಾಲಕರ್ಮವಿದೂರ ಕಾಂತಿ ರಸಪೂರ
ಫಾಲಲೋಚನ ನಿಗಮಪಾಳಿ ಪಾವನ ವಚನ
ಮೂಲ ಮಂತ್ರಶರೀರ ಮುಕ್ತಿವರ ಧೀರ ||2||
ಪಿಂಗಳ ಜಟಾಮಕುಟ ಪೀಠ ಗಂಗಾಂಬುತಟ
ತುಂಗ ವೃಷಭಪತಾಕ ತುಷ್ಟ ಮುನಿಲೋಕ
ಮಂಗಳಾಕರ ಸತ್ಯ ಮಹಿತ ಸಾಮ ವಿನುತ್ಯ
ರಂಗಧವನಿಶತಂಗ ರಚನ ಶಿವಲಿಂಗ
ಶರಣು ಗಜಮುಖ ಜನಕ ||3||

ಶರಣು ಗುರುಸಿದ್ಧ ಶಿವಯೋಗಿ
ಶರಣು ಗುರುಸಿದ್ಧ ಶಿವಯೋಗಿ ಹೃದಯಾವಾಸ
ಶರಣಗಣ ಸುರಮಹೀರುಹ ಮಂತ್ರದೇಹ
ಪರಮ ಮಹಿಮಾಧಾರ ಪಾವನ ಗುಣಾಗಾರ
ವರದಕರ ಮುರಿಗೆಯಾಚಾರ್ಯ ಜಗದಾರ್ಯ ಶರಣು ||ಪಲ್ಲವಿ||
ಭೇದಸಮಯಾರಣ್ಯ ದಾವಾಗ್ನಿಯದ್ವೆನಿನ್ಮಿತ
ವಾದ ವಾರಿಧಿ ವಡಬಾನಲ ಸುಶೀಲ
ಚೋದಿತಾಭೇದ ಭೇದಾತೀತ ಮತ ಮಹಾ
ಮೋದ ವೇದಾಗಮ ಪುರಾಣ ಪ್ರವೀಣ ||1||
ನವರಸಭರಿತ ಕಾವ್ಯ ನಾಟಕಾಲಂಕಾರ
ವಿವಿಧ ಗೂಡಾರ್ಥ ಚಿತ್ರಾರ್ಥ ವಿಸ್ತಾರ
ಸವೆಯದುಪಭಯ ವ್ಯಾಕರಣ ಮುಖ್ಯ ಸಾಹಿತ್ಯ
ಭವನ ಭುವನಸ್ತುತ್ಯ ನಿತ್ಯ ಘನಸತ್ಯ ||2||
ಗಂಗೆ ಸರಸತಿ ಯಮುನೆಯೆಂಬ ನದಿಗಳ ನಡುವೆ
ಚೆಂಗದಿರನಿಂಗದಿರನಿಂಗಳದ ಕಳೆಯ
ರಂಗುಗಳನೊಳಕೊಂಡ ಶೃಂಗಾರ ಮಂಟಪದಿ
ಹಿಂಗದಿಹ ಶಿವಲಿಂಗ ಶಾಂತವೀರೇಂದ್ರ ||3||

ಅನ್ವಹಂ ಪಾಲಯ ಮಹೇಶ
ಅನ್ವಹಂ ಪಾಲಯ ಮಹೇಶ ಮಾಂ ತ್ವಾಂ ಮೇರು
ಧನ್ವಾಂಚಿತಕರಾಂಭೋಜನೈಜಾ
ತನ್ವದಲಾಂಕೃತ ಪನ್ನಗೇಂದ್ರ ಮಣಿಫಣಿಮೂಲ
ಮನ್ವಧಿಪತೆ ಮದನ ದಾಹ ಸದ್ಗುಣತರೆ ||ಪಲ್ಲವಿ||
ನಿಗಮತುಂಗತ್ತುರಂಗಮ ನೀಲಗಳ ರಜತ
ನಗ ಸದನ ನಂದಿಮುಖ ಗಣವರೇಣ್ಯ
ಮೃಗಧರ ಕಲಾಭರಣ ಮೃತ್ಯುಮದ ಸಂಹ್ವರಣ
ಜಗಧೀಶ ಜನಿಮೃತಿ ಮಹಿಧ್ರ ಭೇದನ ಪದೆ ||1||
ಅಚ್ಚುತಾಂಬಕ ಪದಾಂಬುಜ ನಮಿತ ಜನಲೋಲ
ಸಚ್ಚರಿತ ಸಾಮ ಶುಭಗಾನ ಲೋಲ
ಮುಚ್ಚಟುಲಿತರ ಹøದಯ ಮುನಿಕುಲದ ಸಹಾಯ ನಯ
ಸಚ್ಚಿದಾನಂದಮಯ ಸರ್ವಾಗಮ ಮಹಾಮತೇ ||2||
ಅಂಬಿಕಾಮನ ಸಿಂದು ಫಲ ಸುಧಾರುಚೆ
ಶಂಬರಜಮಿತ್ರ ದಶಶತಮರೀಚೆ
ಚುಂಬಿತ ಕುಮಾರ ಹೇರಂಬಮಂಜುಲವದನ
ಬಿಂಬ ಶಿವಲಿಂಗೇಶ ಬಿರುದಾಂಕಿತ ಪ್ರಭೋ ||3||

ಏನನೋದಿದೊಡೇ
ಏನನೋದಿದೊಡೇನ ಕೇಳಿದೊಡೇನು
ಜ್ಞಾನವಿಲ್ಲದೆ ಮುಕ್ತಿಪದವಿಲ್ಲವಿಲ್ಲ
ಸಲೆ ವೇದ ಶಾಸ್ತ್ರವ ಬಲ್ಲ ಬೊಮ್ಮನು ತನ್ನ
ತಲೆಯನೀಗಿದನಾತನ ಸತಿ ತನ್ನ
ಚೆಲುವ ನಾಸಿಕನೀಡಾಡಿಕೊಂಡಳು ನಾಗ ||1||
ಕುಲರಾಜನೆರಡು ನಾಲಿಗೆಯವನಾದ
ವರ ದಕ್ಷನುರೆ ಕುರಿದಲೆಯನೆಂದೆನಿಸಿದ
ನರರೆ ನಸತ್ಕುಮಾರಕನೊಟ್ಟೆಯಾದ
ಸುರಪತಿ ಸರ್ವಾಂಗಯೋನಿಯಾದನು ಮಿಕ್ಕ
ನರರ ಮಾತೇನು ಮೂಜಗ ಬಲ್ಲುದು ||2||
ಸಾಂಗದಿಂದಲೆ ತತ್ತನ್ವಿಮಸಿಯೆಂಬ ವಚನವ
ಹಿಂಗದೆಯಂಗೀಕರಿಸಿ ಗುರುಮುಖದೆ
ಸಂಗಸುಖಾದಿಗಳನು ಕಣ್ಣೊಳಿಹ ಶಿವ
ಲಿಂಗಕರ್ಪಿಸಿಯಾಲಿಂಗದ ಕಾಯವಾಗದೆ ||3||

ಯಾಕಹಂಕರಿಸಿ ಕೆಡುವೆ
ಯಾಕಹಂಕರಿಸಿ ಕೆಡುವೆ ತಿಳಿದು ನೋ
ಡೀ ಕಪಟ ಕಾಯ ನಿಜರೆ ಆತ್ಮ ||ಪಲ್ಲವಿ||
ತರುಗಲ್ಮ ಲತೆಗಳಾದಿಯಾಗಿ ಮ
ತ್ತಿರದೆ ಖಗಮೃಗಕೀಟಕ ಯೋನಿಯೊಳು
ತಿರುಗಿ ಪೂರ್ವದ ಸುಕೃತದ ಫಲದಿಂದೆ
ದೊರಕಿತೀ ನರಜನ್ಮವು ನಿನಗೆ ||1||
ಎಳೆಗೂಸಿನಲ್ಲಿ ಮರಹು ಕುವರತನ
ದೊಳು ಲೆಗ್ಗೆ ಚೆಂಡಿನಾಟ ಯವ್ವನದೆ
ಗಿಳಿದೇರನಂಬಿನಹತಿಯು ಮುಪ್ಪಿನೊಳ
ಗೆಳತಟವು ಕಡೆಗೆ ಮರಣಯಿದಕೆ ||2||
ಮಡದಿ ಮಕ್ಕಳು ನಂಟರು ಬಲು ಹೊನ್ನು
ಪೊಡವಿ ಮೊದಲಾದವೆಲ್ಲ ನಿನ್ನೊಡನೆ
ನಡೆಗೊಂಬುದಿಲ್ಲವಾಗಿ ಶಿವಲಿಂಗ
ದೊಡವೆರೆವ ಬುದ್ಧಿಗಲಿಯ ಮರುಳೆ ||3||

ಒಳ ಹೊರಗೆ ಥಳಥಳಿಸಿ
ಒಳಹೊರಗೆ ಥಳಥಳಿಸಿ ತೊಳಗಿ ಬೆಳಗುವ ನಿನ್ನ
ತಿಳಿವನೊಳಕೊಂಡ ಜ್ಯೋತಿಯೆ ಲಿಂಗ ನೋಡು ||ಪಲ್ಲವಿ||
ಸ್ಫಟಿಕದುರು ಕುಂಭದೊಳು ಸ್ಫುಟರಾಗಿ ತೋರಿ ಸಂ
ಘಟಿತವಹ ರನ್ನದೀವಿಗೆಯಂದದೆ
ಘಟನ ಮೂಲಸ್ಥಾನ ಪೀಠವನೊಡೆದು ಮೂಡಿ
ನಿಟಿಲದೊಳು ಮೊಗದೋರಿಯಜನಮನೆತನಕ ||1||
ಆರು ಕೋಣೆಗಳಲ್ಲಿ ಆರುವರ್ನವನಾಂತು
ಬೇರೆ ಮತ್ತೊಂದು ನಡುವಣ ಮಂಟಪದೊಳು
ಮೂರು ವರ್ನದೊಳಾರನವಗವಿಸಿವೊಂದಾಗಿ
ಜಾರದುರೆ ತಾನು ತಾನಾಗಿಯನುದಿನವು ||2||
ಜಲಬಲಿದು ಸಿಲೆಯಾಗಿ ಕಡೆಗೆ ಜಲವಾದಂತೆ
ಸಲೆ ತಿಳಿಯ ತುಪ್ಪವದೆ ಗಟ್ಟಿಗೊಂಡು
ನೆಲೆಗೇಕರಸವಾಗುವಂತೆ ಚಿದ್ರಸವೆ ತಾ
ನೊಲಿದು ಶಿವಲಿಂಗ ನಾಮದೆ ರೂಪುದಳೆದು ||3||

ನಂಬಿದೆ ನಿನ್ನ ಚರಣವನು
ನಂಬಿದೆ ನಿನ್ನ ಚರಣವನು ಬೆಂಬಿಡದೆನ್ನ
ಸಾಂಬ ಶಾಂತವೀರೇಶ ಸಲಹೊ ಸುಗುಣ ಕೋಶ ||ಪಲ್ಲವಿ||
ರವಿಕೋಟಿ ತೇಜ ರಾಜಾಧಿರಾಜ ಕವಿಸುರಭೂಜ
ದಿವಿಜಸಂತತಿ ನತ ದಿನಪಸುತಾಹಿತ
ಶಿವ ಮುನಿಜನಪಾಲಶೀಲ ಸಿರೋಮಾಲ ||1||
ಪಂಕವಿದೂರ ಪಾವನ ಚಲದಂಕ ಗಂಭೀರ
ಪಂಕಜಾಸನ ನುತಿಪಾತ್ರ ಪನ್ನಗಸೂತ್ರ
ಶಂಕರ ಕಾಲಭಯಂಕರ ಸುಖಕರ ||2||
ಚಂದ್ರಕಲಾಪ ಚತುರ ಚಾರು ರುಂದ್ರ ಸಲ್ಲಾಪ
ಸಾಂದ್ರಕರುಣ ವೃಷಭೇಂದ್ರವಾಹ ಸುತೋಷ
ಮಂದ್ರತರದ ಘನಮಹಿತ ಬುಧಮೋಹನ ||3||
ಅಂಗಜಾಹರಣ ಅಂಧಸಕಾಸುರ ಭಂಗ ನಿರ್ಮರಣ
ಮಂಗಳಮಯಮೂರ್ತಿ ಮಂಜುಲತರ ಕೀರ್ತಿ
ತುಂಗಮಹಿಮ ಗಣಪುಂಗವ ವಿತರಣ ||4||
ಸುಂದರ ನಟನ ಸುರಾಧಿಪನಂದನ ಘಟನ
ಮಂಧರಧರ ಭವ ಸಿಂಧುರ ರಿಪುನಾಶ
ನಂದಿಕೇತನ ಸದಾನಂದ ಶಿವಲಿಂಗಾಂಕ ||5||

ಸಗುಣ ಮೂರುತಿಯಾಗಿ
ಸಗುಣಮೂರುತಿಯಾಗಿ ಸಕಲಜಗವ ಪೆತ್ತು
ನಿಗಮ ಶಿರದಿ ಕೀರ್ತಿವಡೆದು ರಾ
ಜಿಸುವವ ನೀನೋ ನಾನೋ ಶಿವಲಿಂಗೇಶ ||ಪಲ್ಲವಿ||
ಬಟ್ಟಲಲ್ಲಿ ಪಾಲ ತಂದ ಬಾಲೆಯ ನೆರೆದು ಲಜ್ಜೆ
ಗೆಟ್ಟು ಚರಿಸಿ ಕಾವಗೆಡೆಗೊಡನೆನಿಪನ ||1||
ಬಿಲ್ಲ ಕೊಪ್ಪಿನಿಂದೆ ಕೋದು ಬ್ಯಾಡನೆಂದು ಬೈದವಂಗೆ
ಸಲ್ಲಲಿತದೆ ಬಾಣವನು ಸರಸದೆ ಕೊಟ್ಟ ದಾನಿ ||2||
ಮುಪ್ಪುರದವರ ಬದುಕ ಮೂಜಗವರಿಯೆ ಕೆಡಿಸಿ
ಒಪ್ಪವುಳ್ಳವನಂತೆ ವೋಜೆಯಲ್ಲಿ ನಡೆವನ ||3||
ಜೂದನಾಡಿ ಸೋಲಲಾಗ ಜೂದುಗಾರಚ್ಯುತನಿಂದೆ
ಮೇದಿನಿಯರಿಯೆ ಪೆಟ್ಟಮೇದು ಮೇರೆಯಿಲ್ಲದಾತ ||4||
ರಂಗನನು ಹೆಣ್ಣಮಾಡಿ ರಮಿಸಿ ಗಂಡ ಭೈರವನ
ಹಿಂಗದೆ ಪುಟ್ಟಿಸಿ ಶಿವಲಿಂಗೇಶನೆಂದೆನಿಪನ ||5||

ಬಾರೋ ಬಾರೋ ಚೆನ್ನಿಗ
ಬಾರೋ ಬಾರೋ ಚೆನ್ನಿಗ ಮನೆಗೆ ಬಾರೋ ಬಾರೋ
ಬಾರೋ ಚೆನ್ನಿಗ ಮನೆಗೆ ವಾರಿಜಾಂಬಕಿಯೊಳು ಮ್ಯರೆಯಾಗಿರೆ
ನೀರೆ ಸೈರಿಪಳೆಂತೊ ಚದುರ ||ಪಲ್ಲವಿ||
ಚಿಕ್ಕಂದು ಮೊದಲಾಗಿ ಸೊಕ್ಕು ಜವ್ವನೆಯವಳ
ತೆಕ್ಕೆಯನಗಲದಿರ್ದು ಠಕ್ಕುಗೈವುದಿದೇನೊ ||1||
ತುಂಬುಗುರುಳೆ ನಮ್ಮ ಕಂಬುಕಂಧರೆ ನಿನ್ನ
ಹಂಬಲಿಸುತ ನೊಂದು ಕಂಬನಿಗರೆವಳೊ ||2||
ಕಾಯಜನಿಂದವಳ ನೋಯಿಸ ಸಲ್ಲದೀಗ
ಕಾಯ್ದು ನೆರೆಯೊ ದೇವರಾಯ ಶಿವಲಿಂಗೇಶ ||3||

ಕರುಣವಿರಲಿ ಎನ್ನ ಮೇಲೆ
ಕರುಣವಿರಲಿ ಎನ್ನ ಮೇಲೆ ಕಾಯಜ ವೈರಿ
ಮುರಿಗೆಯ ಶಾಂತವೀರೇಶ ಮುನಿಜನ ವಂದ್ಯ ಮಹೇಶ ||ಪಲ್ಲವಿ||
ನಿಗಮಾಗಮ ಪೌರಾಣ ನಿಪುಣ ನೀತಿ ಭೂಷಣ
ಅಗರಾಜ ಸನ್ನಿಭ ಧೈರ್ಯ ಅರಿವರ್ಗ ಜಯ ಶೌರ್ಯ
ಸುಗುಣ ಮಣಿಗಣಕೋಶ ಸುಜನಜನ ವಿಲಾಸ
ಸೊಗಸುವ ಮಂತ್ರ ಹøದಯ ಸತತ ಪಾವನ ಕಾಯ ||1||
ವಿನಯ ಸಹಿತ ಸುವಾಕ್ಯ ವಿಮಳ ದಿವ್ಯ ಜ್ಞಾನೈಕ್ಯ
ಘನ ಪಾರಾವಾರ ಗಂಭೀರ ಗತಮಾಯ ಮೋಹ ದೂರ
ವನಜಾರಿ ಭಾಸುರ ಕೀರ್ತಿ ವರ ಸದಾಚಾರವರ್ತಿ
ಅನುಪಮ ಭಸಿತಲೇಪ ಅನಘಸಂಕುಳ ವಿಲೋಪ ||2||
ಭವಭೂಜ ಮೂಲಕುಠಾರ ಭಾವಿಪ ಭಕ್ತ ಮಂದಾರ
ಜವನ ಮದವಿಭಂಗ ಜಂಗಮಲಿಂಗ ಸುಸಂಗ
ಶಿವತತ್ವ ವಿಚಾರ ಧೀರ ಶ್ರೀವೀರಮಾಹೇಶ್ವರೋದ್ಧಾರ
ಶಿವಲಿಂಗದೇವ ಸ್ವರೂಪ ಶಿಷ್ಟ ಮೋಕ್ಷಾಂಗನೆಯೋಪ ||3||

ಮದಗಜಗಮನೆ ಮಲಗುವ
ಮದಗಜಗಮನೆ ಮಲಗುವ ಮನೆಯ ಮುದ್ದು
ಕದವ ತೆಗೆಯೆ ಬಂದು ಬೇಗದೆ
ಸದರದೆ ನಡುವಿರುಳೊಳಗೆ ಬಂದವನ್ಯಾರೊ
ಕದನವೇತಕೆ ಹೋಗು ಸುಮ್ಮನೆ ||ಪಲ್ಲವಿ||
ಸುರರ ಸುಡುವ ವಿಷವನು ಕೊರಲೊಳಗಿಟ್ಟ
ವರ ನೀಲಕಂಠನು ಕಾಣೆ ರಮಣಿ
ಗರುವತನವಿದೇಕೆ ನೀಲಕಂಠನಾದೊಡೆ
ಗಿರಿಯ ಮೇಲಿರು ಹೋಗು ಹೋಗಯ್ಯ ||1||
ಸಕಲ ಚಚಾಚರ ಜೀವಿಗಳನು ಕಾಯ್ವ
ಸುಕರ ಭೂತೇಶ ನೋಡೆ ಸಖಿಯೆ
ಅಕಲಂಕ ಕೇಳು ಭೂತೇಶನಾದೊಡೆ ಲೇಸು
ಪೆಕಲದೆ ಮಸಣಕೆ ಹೋಗಯ್ಯ ||2||
ಧರೆಯ ಪೀಡಿಪ ನರಸಿಂಹನ ಹತಿಸಿದ
ಶರಭ ಕೇಳೆಲೆ ಚಂದ್ರವದನೆ
ಕರಕರೆಯಾತಕೆ ಕಾಡಿಸದಿರು ಹೋಗು
ಪರಸತಿಯೊಡನಿದು ನೀತವೆ ||3||
ತಂಡತಂಡದ ದಿಂಡೆಯ ರಕ್ಕಸರ ಕೊಂದ
ಖಂಡಪರಶು ತಿಳಿಯೆ ಕಾಮಿನಿ
ಪುಂಡತನವಿದೇಕೆ ಹೋಗು ಹೋಗಯ್ಯ ಮರ
ಹಿಂಡಿಲುಗಳ ತಾಣದೆಡೆಗೆ ||4||
ಆನೆ ಪುಲಿಯ ಕೊಂದು ಶಾನೆ ಸಮ್ಮವ ಪೊದೆದ
ಮಾನಿನಿ ಕೃತ್ತಿವಾಸನೆ ನಾನು
ಸಾನುರಾಗದೆ ಸಮಗಾರರ ಮನೆಗೆ ಹೋಗು
ಹೀನರ ನಡೆ ನಡೆ ಯಾತಕೋ ||5||
ಮಾರನೊಡಲನುರುಹಿ ಬೂದಿಯನೆಸಗಿದ
ನಾರಿ ಕೇಳುರಿಗಣ್ಣನೆ ನಾನು
ಚಾರು ಯೋಗೀಶ್ವರರೊಳಗಿದ್ದು ವೈದ್ಯರ
ಸೇರಿ ಬದುಕು ಹೋಗು ಹೋಗಯ್ಯ ||6||
ಮಂಗಳರೂಪೆ ಶøಂಗಾರ ಕಾಯದ ಶಿವ
ಲಿಂಗೇಶ ಕಾಣೆ ನಿನ್ನ ರಮಣ
ಹಿಂಗೆ ಹೇಳಿದೊಡೆಯಾಗಲೇ ನಂಬುವೆನು ಯೆನ್ನ
ಸಂಗ ಸುಖದೊಳಿರು ಬಾರಯ್ಯ ||7||

ನೋಡಿರೆ ನೀವಿಂದ್ರಜಾಲವ
ನೋಡಿರೆ ನೀವಿಂದ್ರಜಾಲವ ಬಲು
ಗಾಡಿಯ ಗಾರುಡಿ ಘನ ವಿಲಾಸವ ||ಪಲ್ಲವಿ||
ಬಚ್ಚ ಬಯಲುಗಾರನೆನಿಸಿದ ತನ್ನೊ
ಳಚ್ಚಳಿಯದ ಮಾಯೆ ತೋರಲದೆ ಲೀಲೆ
ಬಿಚ್ಚಿ ಬೇರಾಗಲದನು ಕೂಡಿ ಕಡು
ನುಚ್ಚುನುರಿಯದಾಗಿ ಬಿತ್ತರವಾದ ||1||
ಬಿಳಿಗೆಂಪುವರ್ನದ ನೀರ್ಗಳು ಕೂಡಿ
ಗಳಿಲಲೆ ಗುಳ್ಳೆಯಾಕಾರವಾಗಿರ್ದದು
ಥಳಳಿಸುತೆಯೊಡಲಾಗಲುಯದ
ರೊಳು ತನ್ನ ಬಿನ್ನಾಣವನು ಪಸರಿಸುವ ||2||
ನಾನು ನೀನೆಂದೆರಡನು ಮಾಡಿ ಮತ್ತ
ದೇನುವ ಯಿದಿರಿಟ್ಟು ಕಾಣದಂತೆಸಗಿ
ಜಾನಿಸೆಯದುವೊಂದೆಯಾಗಲು ಬಹು
ಮಾನವ ಕುಟಿಲಶಕ್ತಿಯನುಳ್ಳ ಬೆಡಗಿನ ||3||
ಸಣ್ಣ ಚಿತ್ತಿನೊಳು ಮರವ ಹುದುಗಿಯದ
ನುಣ್ಣಿಸಿಯಾ ಚಿತ್ತಿನೊಳೆಯಡಗಿಸುತೆ
ಕಣ್ಣೊಳಜಾಂಡವನಡಗಿಸಿ ಮತ್ತೆ
ಹೆಣ್ಣು ಗಂಡೆನಿಸಿ ಗಂಡನು ಹೆಣ್ಣೆನಿಸುವ ||4||
ಧ್ವನಿಯೆ ಬಲಿದು ಹನಿಯಾದುದು ಸಲೆ
ವಿನಯದಿಂದದರ ಬೆಳಗಿನೊಬ್ಬುಳಿಯೆ ಕಳೆ
ಯೆನಿಸಲು ಮೂರೊಂದುಗೂಡುತೆ ಚಿತ್ತ
ಘನವರ್ನಶಿವಲಿಂಗವಾದುದಾದಿ ||5||

ಭೋರಿಡುತಿದೆ ಮೇರೆಯಿಲ್ಲದೆ
ಭೋರಿಡುತಿದೆ ಮೇರೆಯಿಲ್ಲದೆಯಿದ
ನಾರು ಮಾಣಿಸುವರಿಲ್ಲವಯ್ಯಯ್ಯೋ ||ಪಲ್ಲವಿ||
ತಾವರೆಯೆಲರ್ಗಂಪಿಗೆರಗಿದ ವರ
ಭಾವದ ಪೆಣ್ದುಂಬಿಯೆಂಬೆನೆ ಯಿದು
ಸಾವಧಾನವ ಮೀರಿಯಾವರ್ಗ ಸರ್ವ
ಜೀವರೊಳಗೆ ಯಿದ್ದುಯಿಲ್ಲದಂದಲಿ ||1||
ಮೊದಲೊಳು ಚಿಣಿಯೆಂದು ತೋರುತೆ ಮತ್ತೆ
ಯದಿರದೆ ಚಿಣಿ ಚಿಣಿಯೆಂದು ತಾನಿರದೆ
ನದರಿಟ್ಟು ಕೇಳಲು ಪಲಬಗೆಯಾದ
ಮುದವಲರಲು ಸವಿಗೆ ಸವಿಯಾಗಿ ||2||
ಕೊಡನ ತುಂಬಿದ ನೀರ ಸೂಸದೆ ತನ್ನ
ಗಡಣದೆ ತಪಸಿಗಳೆಲ್ಲ ಕೇಳುವರು
ಬಿಡು ಬಿಡವರ ಬಹುಚಾಳಿಯ ನಿತ್ಯ
ಮೃಢ ಶಿವಲಿಂಗ ತನಗೆ ತಾನೆ ತಲೆದೋರಿ ||3||

ಕಾಂತನ ಕರದು ತಾರಮ್ಮ
ಕಾಂತನ ಕರದು ತಾರಮ್ಮ ಗುಣ
ವಂತನ ವಾರಿಜನಯನೆ ಕೋಕಿಲಗಾನೆ ||ಪಲ್ಲವಿ||
ಜಲವುಬ್ಬಿ ತೆರೆಯಾದ ತೆರನಂತೆನ್ನ
ವಿಲಸಿತ ಕಲ್ಪನಶಕ್ತಿಯಿಂದಿರದೆ
ಪಲಬಗೆಯಾಗಿಹ ಜಲವೆಯಾಗಿ
ತಲೆದೋರಿ ತನ್ನೊಳಗೆ ತಾನೆ ಹುದುಗುವನ ||1||
ತುಪ್ಪವ ರೂಪಾಂತರವನು ಸಲೆ
ವೊಪ್ಪದಿಂದಿರಿಸಿ ಮೊದಲ ಭಾವವಿರದಂತೆ
ಕಪ್ಪುದಾರಿಗನಿಂದ ಬಳಿಕ ನಿಜ
ವಪ್ಪ ತನ್ನಿಂದೆ ತಾ ತಿಳಿವುತ ||2||
ಅಕ್ಕ ತಂಗಿಯರೀರ್ವರನು ಕೂಡಿ
ಮಕ್ಕಳಾಟಿಕೆಯನು ಬಿಟ್ಟು ತಾ ನೋಡಿ
ಮಿಕ್ಕ ಸಕಲಸುಖಗಳ ಕೊಟ್ಟು
ಚೊಕ್ಕನೆನಿಪ ಶಿವಲಿಂಗರಾಜೇಂದ್ರನ ||3||

ಚಕ್ಕನೆ ಬಾರೋ ದಮ್ಮಯ್ಯ
ಚಕ್ಕನೆ ಬಾರೋ ದಮ್ಮಯ್ಯ ಚೆಲುವ ಚೆನ್ನಿಗರಾಯ
ದಕ್ಕಿದವಳು ನಿನಗೆ ನಾನು ದಯವಿಲ್ಲವೇನೋ ||ಪಲ್ಲವಿ||
ಮನ್ನಣೆಯ ಮಾತನಾಡಿ ಮಂಚಕೆ ಕರೆದೊಯ್ದು
ನೋಡಿ ಚಿನ್ನದ ತೊಡರ ತೊಡಿಸಿ ಚಿಂತೆಯ ಬಿಡಿಸಿ
ಮುನ್ನ ನೀನೊಲಿದು ನಲಿದು ಮುದ್ದು ಮನದ ಮುನಿಸ ತೊರೆದು
ಬಿನ್ನಪವ ಕೇಳಿ ಹೀಗೆ ಬೀಗುವದು ಹೇಗೆ ||1||
ರಾಜಿಸುವ ಕೇಳಿವನದ ರಾಜಹಂಸ ನೆರವಾದ
ಸೋಜಿಗದ ನೆರವಿಯಲ್ಲಿ ಸೊಗಸಿರ್ದುವಲ್ಲ
ಮೂಜಗದೆರೆಯ ನಿನ್ನ ಮೂದಲಿಸಿ ನುಡಿಯಲೆನ್ನ
ಮಾಜದೆ ನೆರೆದಿರ್ದುಯಿಂದು ಮರೆವುದೆ ಬಂಧು ||2||
ಆದಿಯಂತ್ಯವ ತೋರದೆ ಅಂಗನೆಯನಗಲಿರಲುಬಹುದೆ
ಮೋದದಿ ನಾಲ್ವರ ನಡುವೆ ಪೊಸತೆನಿಸುವೆ
ಹಾದಿ ಬೀದಿಯ ಜನರ ಹಸರದ ಮಾತೇನವರ
ಮಾದುವೆನ್ನ ನೆರೆಯೊ ತುಂದಮಹಿಮ ಶಿವಲಿಂಗ ||3||

ಹಂಗು ಹರಿದ ಮೇಲಿನ್ನು
ಹಂಗು ಹರಿದ ಮೇಲಿನ್ನು ಹಸರದ ಮಾತೇಕೆ ಹೊನ್ನು
ಹೆಂಗಳವನಿಯ ಬಿಟ್ಟಗೆ ಹೆಚ್ಚಿನದಾಗಿ ||ಪಲ್ಲವಿ||
ತಲೆಯಡಿಯಾಗಿ ಹುತ್ತವ ತಡೆಯದೈದಿದ ಹಾವು
ಹೊಲಬುಗಾಣದ ತೆರದೆ ಹೊರೆಯಾಗದೆ
ಸಲೆ ಮೇಲುಮೊಗಮಾಡಿ ಸರಸನೋಟದೆ ನೋಡಿ
ನೆಲೆ ನೆಲಗಳನೊಕ್ಕು ನೆತ್ತಿಯೊಳ್ಮಿಕ್ಕು ||1||
ಸಾಸಿರೆಸಳುಗಳ ಚೆಲ್ವ ಸಾರಸದಳದೊಳೊ
ಳ್ವಾಸನೆಯ ನುಣ್ಣನೆಳಸಿ ವಾಸಿಸಿ ಝೇಂಕರಿಸಿ
ಆಸೆಯಳಿದ ಕಳೆಯ ಆಡುವ ಬಿಳಿಯಳೆಯ
ಲೇಸಿನಿಂಚರದೊಳೊರಗಿ ಲೇಪನವಾಗಿ ||2||
ಕಡು ಕಡಂದುರುವಿನ ಕಳೆದಾಳಿದ ಪುಳುವಿನ
ಬೆಡಗಿನಂತಿಹ ಭಾವದೆ ಬೇರುದೋರದೆ
ಮೃಢ ಶಿವಲಿಂಗೇಶನ ಮೃದುಮಧುರ ವಚನ
ದೊಡನೊಂದಿನಿಂದ ಯೋಗಿ ದೋಷವ ನೀಗಿ ||3||

ನೀನೆ ಕೈವಶವಾಗಿರೆ
ನೀನೆ ಕೈವಶವಾಗಿರೆ ಮತ್ತಿನ್ನೇನ
ನಿನ್ನನು ಪೂಜಿಸಿ ಬೇಡುವೆನೀಶ ||ಪಲ್ಲವಿ||
ಸುರರತ್ನವಿರೆ ಮಿಕ್ಕ ಧರೆಯ ರನ್ನಗಳೆಲ್ಲ
ತರವಿಲ್ಲದಿಹ ಪಿಕ್ಕಮಣಿಗಳಂತೆ
ಹರಿವಿಧಿ ಸುರಪಾದಿ ದೇವಸಂತತಿಯನು
ಪರಿವಿಡಿವಿಡಿದರ್ಚಿಸಿ ಫಲವೇನು ||1||
ಜಗವಾಗಿ ತೋರುವ ನಿನ್ನ ಸುಶಕ್ತಿಯ
ನಗಲದೆಬಿಡದಿಹ ಕಲ್ಪನೆಯ
ತಗಿಲಿಕೊಂಡಿಹ ಸುಖದುಃಖ ಸಮುದಯವು
ನಿಗಮಸನ್ನುತನೆ ನಿನ್ನಯ ಬೆಳಗದುವೆ ||2||
ಅನಲಾಪುರವಾಸ ಅಸಮ ಶಿವಲಿಂಗೇಶ
ಇನ ಚಂದ್ರ ಶಿಖಿ ಬಿಂಬಾಂತರದ ಚೌದಳದ
ವನಜಕನ್ರ್ನಿಕೆಯ ಮಧ್ಯ ಹಂಸಪೀಠದಿ
ಯನಘ ಮೂರುತಿಗೊಂಡಿರುತೆ ನಿರಂತರವು | |3||

ಇದಕೊ ಸಿಕ್ಕಿದನು ಕಳ್ಳ
ಇದಕೊ ಸಿಕ್ಕಿದನು ಕಳ್ಳ ಈ ಜಗವನು
ಹೆದರದೆ ತನ್ನೊಳಗೆ ಚೆದಿರುತ
ನದೆ ಕದ್ದು ಕಡೆಗಾಗದಂದದಿ
ಸುದತಿ ಮಡಗಿಕೊಂಡಿಹ ||ಪಲ್ಲವಿ||
ಸರಸದೆ ಮೂವತ್ತಾರು ನಗದೊಳೊಂದ
ನಿರಸದೆಲ್ಲವನು ಕೊಂಡು
ಸರಸಿಜಾನನೆ ಬಾಯರಿದೊಡೆ ಬಿಡುವೆನೆ ನಾ
ನರಸುತೆ ಕಂಡಮೇಲೆ ||1||
ಮನೆಯ ಜನರೆಲ್ಲರ ಕುತತಿಗೆಗೊಯಿದು
ಘನಜೀವರತ್ನವನು
ಜಿನುಮಯರನು ಮಾಡಿ ತೆಗದೊಯಿದು ತನ್ನೂರ
ನೆನಹಿನೆಡೆಯೊಳಿಂಬಿಟ್ಟ ||2||
ಲಲನೆ ಕೇಳಿದಕೆ ಸಾಕ್ಷಿಯರ್ಕನಹಾಳ
ನೆಲೆ ಇಂದುವಾಡಿಯು ಬೆ
ಗೆಲವಾದ ಕಿಚ್ಚುವಾಡಿಯ ಹೆಣ್ಣುಗಂಡುಗ
ಳಲಸದೆಯಿಹರು ನೋಡೆ ||3||
ಸೋಗೆಮುಡಿಯಳೆ ನಾಲ್ಕು ಬಾಗಿಲೊಳಿರ್ದ
ಸೋಗಿನ ಮಡದಿಯರ
ಬೇಗದೆ ಸೆರೆವಿಡಿದವರು ತನ್ನ ಬಾಲೆಯ
ರಾಗಿರೆ ಕೂಡಿಹನು ||4||
ಹೆಂಗಳರಸಿಯೀತನ ಹೆಸರ ಶಿವ
ಲಿಂಗನೆಂದೆನುತಿಹರು
ಹಿಂಗುವುದುಚಿತವಲ್ಲವನ ಸೆರೆಯ ಮಾಡೆ
ಸಾಂಗವಪ್ಪುದು ಮಾನಿನಿ ||5||

ಇದೇನೋ ವಿಪರೀತವು ಇನಿಯ
ಇದೇನೋ ವಿಪರೀತವು ಇನಿಯ ಅನವರತವು
ಚದಿರುತನದೆ ನಿನ್ನ ಛಲವ ಬಿಡಯ್ಯ ಚನ್ನ ||ಪಲ್ಲವಿ||
ಮುಚ್ಚು ಮರೆಯಾಕೆ ಕೇಳು ಮುದ್ದಿನ ಪೆಣ್ಣುಗಳೊಳು
ಬಿಚ್ಚಿ ಬೇರೆದೋರದಂತೆ ಬಿಗಿದಪ್ಪಿರ್ದು ಯಿರ್ದಂತೆ
ರಚ್ಚೆಗೆ ಬರಲು ಸಲ್ಲ ರಮಣಿ ಕೇಳೆನ್ನ ಸೊಲ್ಲ
ಅಚ್ಚು ಮೆಚ್ಚಿನ ಮಾತಿಗೆ ಆಗಳೆ ಮರುಳಾದೆ ಹೀಗೆ ||1||
ಕೆಲವು ಮೂವತ್ತೆರಡು ಕೇರಿಯ ಮನೆಗಳ ಬೀಡು
ಚೆಲುವಾಗಿಲಲ್ಲಿಯ ಚೆನ್ನೆಯರೊಡನೆ ಪ್ರಿಯ
ಸಲುವುದೇನೊ ಪೇಳಾಗ ಸವಿಗದಿರನ ಭಾಗ
ನೆಲೆಯಾದವರ ಕೂಡ ನೇಮವಾಯ್ತು ನಿನಗೆ ಬೇಟ ||2||
ಉರು ದಶಾವಸ್ಥೆಗಳನು ಉತ್ತಮ ನೀನೈದಿದವನು
ತರುಣಿಯರ ನಾಲ್ವರ ತಳುವದೆ ನೆರೆಯಲವರ
ಪರಿ ನಿನ್ನೊಳು ಕಾಣಿಸಿತು ಪದುಮಬಾಣ ಮೋಹಿಸಿತು
ಸರಸಿಜಾಗ್ರ ಭಾಸ್ವರ ಸಾಂತ ಶಿವಲಿಂಗೇಶ್ವರ ||3||

ಇದೆ ಕಂಡೆನಿದೆ
ಇದೆ ಕಂಡೆನಿದೆ ಕಂಡೆನಿದೆ ಕಂಡೆನಚ್ಚರಿಯ
ಸುದತಿ ಕೇಳೌ ಕರತಳಾಮಳಕವಾಗಿ ||ಪಲ್ಲವಿ||
ಚಂದ್ರಮನ ರವಿನುಂಗೆ ರವಿಯ ಪಾವಕ ನುಂಗೆ
ಸಾಂದ್ರ ಪಾವಕವ ಕಟ್ಟಿರುವೆ ನುಂಗೆ
ರುಂದ್ರನಳಿನಾಕ್ಷಿ ಕಟ್ಟಿರುವೆ ಚುರಿಕಿನೊಳೆಯಿದಿ
ಇಂದ್ರವಾಹನವಾದುದತಿ ವಿಚಿತ್ರ ||1||
ಹಿಮಗಿರಿಯ ತಪ್ಪಲೊಳು ನೆರೆದ ದಿಕ್ಪಾಲಕರ
ರಮಣಿಯರು ನೆಲೆಗಟ್ಟು ತಿರುಗುತಿರಲು
ಕ್ರಮೆದೆಯವರೆಲ್ಲರನು ಕೈ ಸೆರೆವಿಡಿದ ಬ್ಯಾಡರ
ನಮಮ ಭಕ್ಷಿಸಿ ಕೂಗಿತೊಂದು ಕುಕ್ಕುಟನು ||2||
ನಾಡ ತಳವಾರನಣುಗಿಯ ಗಂಡರೊಂಬತ್ತ
ನಾಡುತಾಡುತ ಬಂದು ನಿಂದು ನೋಡಿ
ಪಾಡುಪಂಥವ ಬಿಟ್ಟು ತನ್ನೊಳೇಕೀಕರಿಸಿ
ಸೂಡಿದುದು ಕೀರ್ತಿಯನು ಶಿವಲಿಂಗ ಹಂಸ ||3||

ಕರತಾರೆ ಬೇಗ ಕಾಂತನ
ಕರತಾರೆ ಬೇಗ ಕಾಂತನ ರಮಣಿ ನೀ ಬೇಗ
ಸ್ಮರನು ತಾನಾಗ ಕಂಡರೆಯರಿಯದೆ ಹೋಗ ||ಪಲ್ಲವಿ||
ಕನಕಗಿರಿವಾಸನ ಕಾಮಿತ ವರದನ
ಸನಕಾದಿವಂದ್ಯನ ಚಂದ್ರಚೂಡನ ಸಾರ
ದಿನಕರತೇಜನ ಧೀರನ ಗಂಭೀರನ
ವನಜನಯನನ ಶಯನ ಪದವ ವಾರಿಜಾಕ್ಷಿನಲ್ಲನ ||1||
ನೀಲವೇಣಿ ನಿರುಪಮನ ನಿತ್ಯನ ನಿರ್ಲೇಪನ
ಬಾಲಕೃಷ್ಣಪಾಣಿಯ ಭಾಸುರ ಮೃದುವಾಣಿಯ
ಪಾಲಿತಲೋಕತ್ರಯನ ಪಾವನಚರಿತ್ರನ
ಕಾಲನನುರುಹಿದನ ಕರುಣ ಸಮುದ್ರನ ||2||
ಮಂಗಳಾಂಗಿ ಮಂಜುಳನ ಮದರಾಗ ರಹಿತನ
ಹಿಂಗಿರಲಾರೆನೆಯವನ ಹಿರಿಯತನದ ಗರುವನ
ಹೊಂಗಿ ಶಿವಲಿಂಗೇಶನ ಹೊಸಹರೆಯದವನ
ಸಂಗಸುಖದೊಳಿರುವಂತೆ ಸಾಗಿಸೆ ಮಾಹೇಶನ ||3||

ಗಮ್ಮನೆ ತಿಳಿ ನಿನ್ನನೆ
ಗಮ್ಮನೆ ತಿಳಿ ನಿನ್ನನೆ ಗಮ್ಮನೆ ತಿಳಿ ನಿನ್ನನೆ
ಬೊಮ್ಮವೆಯಾಗಿ ಯೋಗಿ ನೀನೆ ಯಿರದು ಶಾನೆ ||ಪಲ್ಲವಿ||
ನೀರ ಬೊಬ್ಬುಳಿಕೆ ನೋಡಿ ಕಾಯ ವಾಯ ಗುರುರಾಯ
ಸಾರಿ ಹೇಳಿದ ತತ್ತನ್ವಿವನೆ ನಂಬು ನಂಬು ನಿನಗಿಂಬು
ವಾರೆಯೆರವಿನ ದಾರಿಯು ಸಲ್ಲ ಹೊಲ್ಲ ಫಲವಿಲ್ಲ
ಕ್ರೂರವಾಗಿಹ ಕರ್ಮವನು ಬಿಡಲದೆ ಧರ್ಮ ||1||
ಇಂದು ನಾಳೆಯುಯೆಂದು ದಿನವನು ನೀನು ಕಳೆವುದೇನು
ಸಂದೇಹವಳಿವುದಾವಾಗ ಹೇಗ ಬಹುರಾಗ
ಎಂದಿದೆ ತೀರುವದದು ನೋಡೆ ಈಗ ಕೂಡೆ
ಚೆಂದಿರದಲೆಯನ ಭಜಿಸು ನಿನಗೆ ಲೇಸು ||2||
ಆವುದನರಿಯದವರ ಸಂಗ ಭಂಗವಂತರಂಗ
ಭಾವಜಹರ ಶಿವಲಿಂಗದ ಮೋದ ರೂಪವಾದ
ಭಾವನೆಯೊಳು ನಿಲಲದೆ ಮುಕ್ತಿ ರಕ್ತಿ ಜ್ಞಾನಶಕ್ತಿ
ಕೋವಿದ ಗುಣಮಣಿಹಾರ ಕೋಪವಿದೂರ ||3||

ಕರದು ತಂದು ತೋರಿಸಮ್ಮ
ಕರದು ತಂದು ತೋರಿಸಮ್ಮ ಕಾಂತನ ಬೇಗ
ತರಳನೇತ್ರೆ ತಾಳಲಾರೆ ತರುಣ ಚಂದ್ರಚೂಡನ ||ಪಲ್ಲವಿ||
ಅಂಗದೇಶವನೈದಿದ ಅಗಲಿಜೀವಿಸಲೆಂತು
ಕಂಗೊಳಿಪೈದೊಂದು ನೆರೆಕಾಮಿನಿಯ ನಾಡೊಳಗೆ
ಹಿಂಗಿ ಬರರಾ ಕಾಣೆಕಾಣೆ ಹಿರಿಯ ಸತಿಯರನು
ಬಿಂಗಗುರುಳಂಬುಜಾಕ್ಷಿ ಬಿನದದೆ ಬೋಧಿಸೀಗ ||1||
ಸೊಗಸುವ ಸಾಸಿರೆಸಳ ಸೊಂಪಿನ ಮಲ್ಲಿಗೆಯಿಂದೆ
ಮಘಮಘಿಪಮಿದುವಾಸು ಮಂಚದಿನತಿ ಶೋಭಿಸಿ
ಝಗಝಗಿಪೇಳು ನೆಲೆಯ ಜಲಜಭವಾಲಯವ
ಪೊಗುವಾಗ ಪೊಕ್ಕನದೇನು ಪೊಸಬಗೆಯಾಗಿದೆನಗೆ ||2||
ಎರಡು ರೂಪುಂಟೆ ತನಗೆ ಎತ್ತಲಾದರೊಂದು ದೇಹ
ಇರದೆ ಪೊಗರನು ತನ್ನ ವಿರಹದೆ ಜೀವಿಪನೆಂತು
ಸರಸಕಲೆಗಳಿಂದೆ ಸಂತತಕೂಡಿದ ಜೀವ
ಪರಶಿವಲಿಂಗರಾಜನ ಪಾವನ ಜ್ಯೋತಿರಂಗನ ||3||

ಹಿರಿಯಕ್ಕನೋಜೆಯು
ಹಿರಿಯಕ್ಕನೋಜೆಯು ಮನೆಮಂದಿಗೆ ಕಾಣ
ದುರವಣಿಸುತ ಬಂದು ಕಟ್ಟಿನ ಹುಟ್ಟಿನ ||ಪಲ್ಲವಿ||
ಗಂಡನೊಡನೆ ಕೂಡಿ ಕೂಡದಿಹ ಬಲು
ದಿಂಡೆಯತನದ ಸಮತೆಯನು ಮೀರಿದ
ಪಂಡಾರಿ ಪಟ್ಟಾಗಿ ತಿರುಗುತಿಹ ದುಸ್ಮ
ದಂಡಲೆಯೊಳಗಾಗಿ ಬಳಲದಿಹ ||1||
ಊರ ಕೇರಿಗಳನು ಸುತ್ತಿ ಮತ್ತೆ ಕ
ರ್ಪೂರ ವಾಸನೆಯಂದದಿ ಸುಳಿದು
ಕ್ರೂರಕರ್ಮದ ಹಂಗ ಹರಿದು ಮಹಾ
ವೀರರನಿಕರದೆ ಪೂಜಿಸಿಕೊಂಬ ||2||
ಕೊತ್ತಿಯ ಮರಿಯನು ಕೊಂದಲ್ಲದೆ ಹೇಳ
ದತ್ತಲಿತ್ತಲೆಡೆಯಾಡದೆ ನಡೆವ
ಚಿತ್ತವಲ್ಲಭ ಶಿವಲಿಂಗೇಶನೆಂಬ
ಮುತ್ತಿನ ಜಾಣರನ ಮೆಚ್ಚಿ ತಾ ಬಿಡದ ||3||

ಮದನಹರನ ಪದವ
ಮದನಹರನ ಪದವ ನೀನು ಪದುಳದೆ ನಂಬು
ಕದನಿಸಿ ಹರಿವಿಧಿಗಳು ಕಾಣದೆ ಕಂ
ಗಜಗವ ತಿರುಗಿದರು ||ಪಲ್ಲವಿ||
ಶ್ವೇತನೆನಿಪ ವಿಟನ ಪಿಡಿದಪರೇತ ನಾಯಕನ
ಕೌತುಕದೆದೆಯನು ತುಳಿದ ಶೂಲದೆ ಬಲು
ಖ್ಯಾತಿ ಮಿಗಲು ಕೋಲಾಹಲ ಶಬ್ದದಿ
ಘಾತಿಸಿದನು ಘನಮಹಿಮ ಶರಣ
ಜಾತ ದಿನೇಶನ ದೀನ ಕರುಣನ ||1||
ಧರೆಯ ಮೇಲೆ ತುದಿವೆರಲಿಂದೆ ಬರೆದ ಚಕ್ರದಲಿ
ದುರುಳ ಜಲಂಧರ ಶಿರವನರಿದು ಬಂದುರು
ತರ ದಶಕಂಧರವನು ಮೆಟ್ಟಿದ
ಕರಿದನುಜನ ತಲೆಯೊಳು ಕುಣಿದಜಿನವ
ನರರೆ ಸುಲಿದು ಪೊದೆದುರಗಭೂಷಣನ ||2||
ಕಮಲನಾಭನಕ್ಷಿಸರಸಿಜಕಮನ ಚರಣನ
ಕ್ಷಮೆ ದಮೆಗಳಾಂತನ ಸುಮನದೆಯರ್ಚಿಸುವ
ವಿಮಲಭಕ್ತರಿಗೊಲಿದಮಿತಸಂತೋಷದಿ
ಹಿಮಕರಧರ ಶಿವಲಿಂಗ ಮಹೇಶ್ವರ
ನಮಮ ಕೊಡುವನಿದು ವಿದಿತ ಲೋಕದೊಳು ||3||

ಕಂಡೆನಿದಕೊಕರಕಮಲದೊಳಖಂಡ
ಕಂಡೆನಿದಕೊ ಕರಕಮಲದೊಳಖಂಡ ತೇಜವನು
ಮಂಡಿತ ಬಹುಮಹಿಮೆಗಳನಿರದೆಯೊಳು
ಗೊಂಡ ಚಿದದ್ವಯಮಂಡಲದಿಂದೆ ||ಪಲ್ಲವಿ||
ಅರುಣಾಚಲದಂತ್ಯದ ಶ್ವೇತಗಿರಿಯ ಪ್ರಾಂತದಲಿ
ಸುರುಚಿರ ನೀಲಪರ್ವತದಗ್ರದ ಗ
ಹ್ವರ ಮಧ್ಯದಿ ಮಿಂಚಿನ ಗೊಂಚಲುಗಳ
ತರತರದಿಂ ದೆಸೆದೆಸೆಗೆ ಪಸರಿಸುವ
ನಿರುತ ನಿಜಾನಂದಾಮೃತದಿರವ ||1||
ನೆಲದ ಮೇಲೆ ನೆಲಸಿ ರಾಜಿಸುವ ಜಲಧಿಯ ನಡುವೆ
ವಿಲಸಿತ ಕೃಷ್ಣಾಲಯವೆನಿಸುವ ನಿ
ಶ್ಚಲ ಸುಕ್ಷೇತ್ರದಿ ವಾಗ್ದೇವಿಯ ಕೂ
ಡಲಸದೆ ಸತತ ವಿರಾಜಿಪ ಬೊಮ್ಮನ
ನಿಲವೆನಿಸುತೆಯುಜ್ವಲಿಸುವ ಕುರುಹ | |2||
ಮೆರೆವರಮನೆಯ ಮೇಲುಪ್ಪರಿಗೆಯ ಮೇರೆಯ ಪೀಠದಲಿ
ನೆರೆ ಸತಿಪತಿಗಳೆನಿಸಿ ಸೆಜ್ಜೆಗಳೊಳು
ಮರೆಯಿಲ್ಲದೆ ತೋರುತೆ ನಿರಂತರ
ದರಿವಿಂದುಪರಿಯನೆಯ್ದುತಖಂಡಿತ
ದರಿಕೆಯ ರಥ ಶಿವಲಿಂಗದ ನೆಲೆಯ ||3||

ಸುಮ್ಮನೆ ಮುನಿವರೇನೊ
ಸುಮ್ಮನೆ ಮುನಿವರೇನೊ ಸುಗುಣಹಾರವಿದೇನೊ
ಗಮ್ಮನೆ ಮನ್ನಿಸೊ ಬಂದೀಗ ಗಾನ ವಿಭೋಗ
ಗಮ್ಮನೆ ಮನ್ನಿಸೊ ಬಂದೀಗ ||ಪಲ್ಲವಿ||
ತನುಮನೋಭಾವಗಳನು ತಡೆಯದೆಯೆಲ್ಲವನು
ಅನುದಿನವಂಗೀಕರಿಸಿ ಅಮರ್ದುವೆರಸಿ
ಕನಸು ನೆನಸಿನೊಳು ಕಾಣಿಸಿರ್ದು ಕಡೆಯಲ್ಲಿ
ಅನುಚಿತವ ಗೆಲುವದು ಅರಸರಿಗಿದು ||1||
ತಾವರೆಯ ವನದೊಳು ತಳುವದೆ ನಿನ್ನನವಳು
ಸಾವಧಾನದೆಯರಸಿಸರಸವಹಿಸಿ
ಜಾವದೊಳಗೆ ಕಂಡು ನಿನ್ನ ಜಾರದೆ ನೆರದಳೊ ಮುನ್ನ
ಮೂವರರಸನ್ನುತನೆ ಬಾರೋ ಮಾರ ಸಂಹಾರ ||2||
ಇಂಗಿತವರಿದು ನಿನ್ನಿಯಳ ಕೊಡೆ ಮುನ್ನ
ಹಿಂಗದಿರ್ದ ಕಲೆ ನೆಲೆಯ ಬಗೆಬಗೆಯ
ಹೊಂಗಿ ಹೊರೆಯೇರಿ ತೋರಿ ಹೊರೆಯಿಲ್ಲದಂತೆ ಶಿವ
ಲಿಂಗ ಮಾಹೇಶ ಪಾಲಿಸ ಪಾವನ ವೇಷ ||3||

ಚಕ್ಕನೆ ಕರದುತಾರೆ
ಚಕ್ಕನೆ ಕರದುತಾರೆ ಚದುರೆ ಹೋಗಿ
ಚೊಕ್ಕ ಬೊಟ್ಟಿನ ಮುಖದ ಚೋಳಿಯಕ್ಕಗೊಲಿದನ ||ಪಲ್ಲವಿ||
ಅಪರಂಜಿಯನು ಹಳಿವ ಅಗ್ಗದ ಕಾಂತಿ
ಉಪಮೆಯ ಮೀರಿದ ಚೆಲ್ವಿನುರುವಿಲೋಚನೆ ಬೇಗ
ಸುಪವಿತ್ರ ಗಾತ್ರನನು ಸುಲಭದಿಂದೆ
ಕಪಟವಿಲ್ಲದೆ ತಿಳುಹಿ ಕರುಣವನುಂಟುಮಾಡಿ
ಯೊಳಗೆ ಮೆರೆವ ವಿಭುದನುತ
ಅಪಗತದೋಷನ ಅಗಪತಿ ಜಾಪನ
ತಪಸಿಗಳರಸನ ತತಗುಣ ರಸರಸನ
ಕಪಿಬಲ ವರದನ ಕಟುದನುಜಾರ್ದನ
ಜಪಕೆ ನಿಲುಕದನ ಜನನ ವಿರಹಿತನ
ನಿಪುಣನ ತುಂಗನ ನಿಗಮತುರಂಗನ
ಸುಪಥ ಸುರೇಶನ ಸುರಪಥ ಕೇಶನ
ಚಪಲ ವಿರೋಚನ ಚಂದ್ರಕಲಾಪನ
ವಪುರಕ ಭಸಿತವ ವದನ ವಿಲಸಿತನ
ಕುಪರಿಯ ಮಾತನುಲಿದು ಕುಶಲದಿಂದಿಲ್ಲೀಗವನ ||1||
ಮಲಯಜಗಂಧಿನಿ ಕೇಳೇ ಮಾತಿಗೆ ಮಾತ
ನಲಸದೆ ನುಡಿಯಲು ತಾ ನಾಚಿ ಸುಮ್ಮನೆಯಾದ
ಕಲಿತದೇನು ತಾನು ಕಾತುರದವನು
ಕಲಕಂಠಗಾನೆ ನೀನೇ ಕರವ ಮುಟ್ಟಿ ಭಾಷೆಯ
ನೊಲಿದಿತ್ತು ನಾಡೆ ಕೂಡೆ
ಸಲೆ ಪರಿಹರಿಸುತೆ ಸಂತವ ಮಾಡುತೆ
ಪಲಬಗೆಗಣ್ಣಿನ ಪಳುಕಿನ ಬಣ್ಣನ
ತಲೆಯಲಿ ಗಂಗೆಯ ತರಳ ತರಂಗೆಯ
ನೆಲೆಯಿಂದಾಲ್ದನ ನೇಮದೆ ಬಾಳ್ದನ
ಚಲದಳಿಕುಂತಳೆ ಚಟುಳ ಗುಣೋಜ್ವಳೆ
ಲಲನೆಯರೆನ್ನನು ನಗದವೊಲೀತನು
ಚಲವನಿರಿಸಿತನ್ನ ಚರಣವ ತೋರಿಸಿ
ಒಲಿದಿತಿ ಮೋಹದೆ ಬಂದು ನೆರೆಯಲದೆ
ಕಲೆವಂತ ಕಾಣೆ ಜಾಣೆ ತಾನೆ ಕಾವನನುರುಹಿದನೆ ||2||
ಮಲ್ಲಿಗೆ ಬಾಣನಾಣೆ ಮಾನಿನಿಯವ
ನಿಲ್ಲಿ ಸಿಕ್ಕಿದನು ಕಾಣೆ ಕಡು ತವಕದಿ ಜಾಣೆ
ನಿಲ್ಲದೆನ್ನೆಯ ಮನವು ನಿಟ್ಟೆಗೆ ಸಂದು
ಪಲ್ಲವಾದರೆ ಕೇಳೆ ಪರರೊಳಗಾಸೆಯೆನ
ಗಿಲ್ಲವಿ ನಡೆಯ ತಾನು ಬಲ್ಲವನೆನ್ನ
ನಲ್ಲನ ನೈಜನ ನತಸುರಭೂಜನ
ಸಲ್ಲಲಿತೇಷ್ಟನ ಸತತ ವಿಶಿಷ್ಟನ
ಖುಲ್ಲರ ಹೊಂದದ ಕುಸುಮದ ಚೆಂದದ
ಗಲ್ಲದ ನುಣ್ಣಿನ ಗುರುವದ ನಣ್ಣಿನ
ಸೊಲ್ಲಿನ ಸೊಬಗನ ಸೊದೆಯುಣಿಯರೆಯನ
ತಲ್ಲಣಿಸರು ಮತಿ ತರಹಿಸದು ಮತಿ
ಚೆಲ್ಲಿದ ಕರ್ಣವ ಚಲಿಸದ ತಿರ್ದುವ
ಬುಲ್ಲವಣೆಯೊಳಿಹ ಭುಜಬಲಯುತನಹ
ವಲ್ಲಭೆ ಜಗದೇಕಮಲ್ಲ ಶಿವಲಿಂಗೇಶನ. ||3||

ಕುಕ್ಕುಟ ಕೂಗಲು
ಕುಕ್ಕುಟ ಕೂಗಲು ಬೆಳಗಹುದಲ್ಲದೆ
ಕುಕ್ಕ ನಕಗಳು ಕೂಗಿದೊಡೇನು ಬೆಳಗೆ ||ಪಲ್ಲವಿ||
ಗಂಗೆಯ ತಡಿಯಲ್ಲಿ ಖರನಿರುತಿರಲು ಸು
ರಂಗವಾದಪುದೆ ಮಾವಿನ ಕೊನೆಯಲ್ಲಿ
ಭಂಗಿತ ಕಾಕನಿರಲು ಕೋಗಿಲೆಯ ಹಾಂಗೆ
ಸಾಂಗವಾದಪುದೆ ಕೇಳೆಲೇ ಸಾಧು ಜನವೆ ||1||
ನಾತಕೆ ಮುಕುರವ ನೊಣದ ಗೊಂದಣವು ಕಂ
ಜಾತದ ಮೇಲೆ ಕುಳ್ಳಿರಲದೇನಳಿಯೆ
ಪಾತಕ ಜೀವರು ಸತ್ಯಸಂಧಾನರ
ಮಾತುಕಥೆಯೊಳಿಹರೆ ಸುಜನರಹರೆ ||2||
ಕನ್ನಡಿಯಲ್ಲಿ ಮೊಗವ ನೋಳ್ಪರಲ್ಲದೆ
ಭಿನ್ನವಾಗಿಹ ಕಾರೋಡಿನೊಳು ನೋಡುವರೆ
ಕುನ್ನಿಯ ಬಾಲದಿ ನೇರವನರಸಲು
ನನ್ನಿಯಾದಪುದೆ ಪೇಳೆಲೆ ಗುಣಮಣಿಯೆ ||3||
ಹುಚ್ಚು ಹತ್ತಿದ ಮನುಜನು ಬಾಯ್ಗೆ ಬಂದಂತೆ
ಕುಚ್ಚಿತವಾಗಿ ನುಡಿದರೆ ಕೋವಿದರು
ಬೆಚ್ಚುವರೆ ಸಲೆ ಸುಜನ ಭುವನದೊಳು
ತುಚ್ಫರೇನನಾಡಿದೊಡದು ಕುಂದೆ ||4||
ಬೆಣ್ಣೆಯ ಸವಿಯ ಸಾರಕೆ ಮನವೊಲಿದಚ್ಚ
ಸುಣ್ಣವ ಮೆಲಲದರಂತೆ ಮಾಧುರವೇ
ಕಣ್ಣಿಲ್ಲದ ಚೆಲುವ ಚಿತ್ರವ ನೋಡಿ
ಬಣ್ಣಿಸುವನೆ ಶಿವಲಿಂಗ ಕೃಪಾಂಗ ||5||

ನಗೆ ಬರುತಿದೆ
ನಗೆ ಬರುತಿದೆ ನೆನೆನೆನೆದೆನ್ನ ಮನದಲ್ಲಿ
ನಿಗಮವಚನ ದೂರವಾದ ಮಾತನು ಕೇಳಿ ||ಪಲ್ಲವಿ||
ಬೆಂಕಿ ಹತ್ತಿದ ಮನೆಯಲ್ಲಿ ಹೇರುರಿಯಾಗಿ
ಶಂಕೆಯಿಲ್ಲದೆ ಮೊದಲಭಾವವಿರದಂತೆ
ಶಂಕರನಹ ಪರಮನೊಳೊಡವೆರದಕ
ಲಂಕನೊಳಗೆ ಭೇದಮತಿದೋರದಹಹ ||1||
ಉಪ್ಪಿನ ಗರಣೆಯನಪ್ಪಿನೊಳಿಟ್ಟಂತೆ
ತಪ್ಪದೆ ತನ್ನನು ಗುರುಬೋಧೆಯಲ್ಲಿ
ಒಪ್ಪದಿಂದಿರಿಸಿಯೆ ಬೋಧೆಯೆ ತಾನಾದ
ನಿಪ್ಪತಿಯಾದ ಶಿಷ್ಯನೊಳೆರವಿಲ್ಲವಿಲ್ಲ ||2||
ಹಸಿರ ಹುಳವನು ಕಡಜ ತನ್ನ ಗೂಡಿನೊ
ಳೆಸಕದೆ ತಂದು ಮಡಗಿದನಿತರೊಳು
ವಸುಧೆಯರಿಯೆ ತನ್ನ ನಾಮ ರೂಪುಗಳಿಂ
ದೆಸಗಿದ ಬಳಿಕ ಪೂರ್ವದದಾವ ವಾಸನೆಯದುಂಟೆ ||3||
ಸ್ವಾತಿಯ ಮಳೆಯ ಜಲದ ಬಿಂದು ಚಿಪ್ಪಿನೊ
ಳೋತು ಪತನವಾಗಿ ತೋರ ಮುತ್ತಾದ
ನೀತಿಯಿಂ ಪತನವಾಗಿ ತೋರ ಮುತ್ತಾದ
ನೀತಿಯಿಂ ಗುರುಬೋಧೆ ಶಿಷ್ಯ ಕರ್ನದಿ ಬಿದ್ದು
ಕೌತುಕವಾದ ಮುಕ್ತಿಯ ಮಣಿಯಾದುದು ||4||
ಪರುಷ ಲೋಹದ ಹಾಂಗಲ್ಲದೆ ಶಿವಲಿಂಗವೆ
ಗುರುವಾಗಿ ಶಿಷ್ಯನ ಶಿರದ ಮೇಲೆ
ಕರವನಿರಿಸಿ ಬೋಧಿಸಿದ ಮಾತ್ರವೆಯಾತ
ಗುರುವೆಯಾಗಿಹನಿದು ನಿಜವು ||5||

ಬಾರೊ ಮನಿಗೆ ನಲ್ಲ
ಬಾರೊ ಮನಿಗೆ ನಲ್ಲ ಬರಿದೆ ಮುನಿಯ ಸಲ್ಲ
ಸೇರದವರ ಮುಂದೆ ಪಂಥವೆ ಕೂಡಿ
ವಾರೆಯಾಗುವದಿದು ಸಂತವೆ ||ಪಲ್ಲವಿ||
ಕನ್ನೆವರೆಯದೊಳು ಕೈವಿಡಿದಮರ್ದಪ್ಪಿ
ಎನ್ನ ಸಂಗಸುಖವ ಭೋಗಿಸಿ ಬಲು
ಮನ್ನಣೆಯಿಂದನುರಾಗಿಸಿ ಚೆನ್ನಿಗರೆರೆಯ
ನೀ ನಿರುತಲಿರುತಲಿರ್ದು
ಬನ್ನಬಡಿಸುವುದು ಛಂದವೆ ಈಗ
ನಿನ್ನ ಮರಸುವುದು ಛಂದವೆ ||1||
ಮಕ್ಕಳಾಟಿಕೆಯಲ್ಲ ಮನವರಿಯದೆ ಕಳ
ವಿಕ್ಕಿದರಲಲೇನೊ ಸಾರವು ನಿನ್ನ
ಟಕ್ಕಿ ಮಿಕ್ಕು ಮೀರದೆ ನಿನಗಾಗಿ ಮನವನೀಗ
ಲಿಕ್ಕೆ ಬಂದವಳಲ್ಲಿ ಕೇಣರೆ ನಸು
ನಕ್ಕು ನೋಡು ನೋಡುವದಿದು ಪ್ರಾಣವೆ ||2||
ಲಂಪಟತನದಲ್ಲಿ ಒಳಗೆಯರಕವಿರ್ದು
ಝಂಪಿಸಿ ಹೊರಗಿಗಂಗವೆಯಿದು
ದಿಂಪೆ ಪರರ ಮುಂದೆ ಚುನ್ನವೆ
ಸಂಪಿಗೆಯ ಕುಸುಮದ ಶೋಭಿಪ ನರು
ಗಂಪಿಗೆರಗುವಳಿಯೆಂದದೆ ಮನ
ಹಂಪುಗಟ್ಟಿತು ನಿನ್ನೊಳಂದದೆ ||3||
ವಾಲೆ ಮೂಗುತಿ ಸಣ್ಣಶಾಲೆ ಕಜ್ಜಳವ ತಾಂ
ಬೂಲವನಂದಿತ್ತು ವೊಲಿಯಿಸಿ ಅರಳ
ಮಾಲೆಯ ತುರುಬಿಗೆ ಮುಡಿಯಿಸಿ
ಲೀಲೆಯಿಂದಲಿಯುಪ್ಪರಿಗೆಯ ಮಣಿಮಂಚ
ದಾಲಯದೊಳಗೇನ ಹೇಳಿದೆ ನೆನೆಯೊ
ಬಾಲೆಯದೊ ||4||
ಅಂಗನೆಯರ ಮುಂದೆ ದೂರಿ ಎನ್ನನು ನಿನ್ನ
ಇಂಗಿತವೆಲ್ಲವ ತೋರಿಸಿ ಈಗ
ಹಿಂಗಲುಚಿತವೆ ವಿಚಾರಿಸಿ
ಸಾಂಗದಿಂದವೆ ಬಂದು ಸಲಹೊ ನೆರದು ದಯಾ
ಪಾಂಗ ಸುಗುಣ ಸರಧಿ ತಂದ್ರನೆ ಶಿವ
ಲಿಂಗಮಹೇಶ ಸುಖಾಸಾಂದ್ರನೆ ||5||

ತಂದು ತೋರಿಸೆ ತಾಳಲಾರೆ
ತಂದು ತೋರಿಸೆ ತಾಳಲಾರೆ ಬಾಲ ಚಂದಿರನನು ನೀರೆ ||ಪಲ್ಲವಿ||
ಶತಕೋಟಿ ಸೂರ್ಯ ಸಂಕಾಶ ಸಾಮ
ನುತಿಲೋಲ ದುರಿತವಿನಾಶ
ವಿತತ ಪಂಚಜನೇತ್ರ ವರದ ಭಕ್ತಿ
ರತಿಲೋಲ ತಾನೆನ್ನ ತೊರೆದ ||1||
ಲಸಿತ ಸಕಲ ಲೋಕಪಾಲ ಕವಿ
ವಿಸರ ಸನ್ನುತ ದಿವ್ಯಲೀಲ
ಸಸಿನೆಯಿಂದಿರುತಲಿರ್ದು ತಾನೆ ಮುನಿ
ದುಸುರದೆ ಪೋದ ಪಿಕಗಾನೆ ||2||
ಶರಣಸಮೂಹದಂತರಂಗ ಕಾಲ
ಹರ ಕರುಣಾಮೃತಪಾಂಗ
ಪರಶಿವಲಿಂಗೇಶ ಬಂದು ಎನ್ನ
ನೆರವಂತೆ ಮಾಡೆ ನೀನಿಂದು ||3||

ನೊಸಲಕಣ್ಣನು ಕಂಡವನೆ
ನೊಸಲಕಣ್ಣನು ಕಂಡವನೆ ಪರಬ್ರಹ್ಮ
ಶಶಿದಲೆಯನವತಾನೆ ತಿಳಿಯೆ ಬೇರಿಲ್ಲ ||ಪಲ್ಲವಿ||
ಕೆಂಗದಿರ ಬಳಸಿ ಪಸರಿಸುತದರ ನಡುವೆ ಬೆಳು
ದಿಂಗಳ ಹವೆಯ ಬೀರುತದರ ಮಧ್ಯದೊಳು
ತುಂಗಲಹ ಕಾರ್ಮೋಡದೊಡ್ಡಿನೊಳು ಝಗಝಗಿಸಿ
ಪೊಂಗುವ ತಟಿಲ್ಲತೆಗಳ ಬೆಳಗನೊಳಕೊಂಡ ||1||
ಒಂದೆ ಎರಡಾಗಿ ಮತ್ತೆರಡೆ ಒಂದೆನಿಸುತ್ತೆ
ಚಂದದಿಂದೊಂದೆರಡುವೊಂದೆನಿಪ ಬೆಳಗು
ಸಂದಳಿದುಳುಮೆಯಾಗಿ ತೋರುತಿಹ ಮೂರೂರ
ಮುಂದೆ ಮೈಮರೆಸಿ ಸುಲಿದಾಡಿಸುವ ಚದುರ ||2||
ಎಚ್ಚರದೊಳಿಲ್ಲ ಮರವೆಯೊಳಿಲ್ಲ ದುಭಯವನು
ಮುಚ್ಚಿ ಮೂಗಿನ ಕೊನೆಯ ಮೊನೆಯ ದಿಟ್ಟಿಯೊಳು
ಸಚ್ಚಿದಾನಂದಮಯ ಶಿವಲಿಂಗ ಪಾವಕನ
ಬೆಚ್ಚಿ ಬೇರಗಲದಿಹ ಪರಮಕಾಷ್ಠೆಯೊಳು ||3||

ಯಾಕೆ ಹದೆದು ಕದಿದು
ಯಾಕೆ ಹದೆದು ಕದಿದು ಕೋಟಲೆಗೊಳುವೆ ಮನುಜ ಕೇಳು ನಿನ್ನ
ಕಾಕು ಗುಣವನಲಿದು ಹರನೊಳೇಕಮನದಿ ನಿಲ್ಲೆಲೊ ||ಪಲ್ಲವಿ||
ನೆರೆಯ ಹೊರೆಯ ಜನರ ಬದುಕ
ನಿರದೆ ಕಂಡು ಸೈರಿಸಿರದೆ
ಅರೆಯಗಂಜಿಯ ಕುಡಿದು ಉಳಿದ ನರನ ಸಿರಿಯ ಮಾಟದೆ
ಪರರ ಬಾಳುವೆಯನು ನೋಡಿ
ತರಹರಿಸದೆ ಕರುಬಿ ಕರುಬಿ
ಬರಿದೆಯಾದೊಡೇನು ಫಲವು ಗಿರಿಶನೊಲುಮೆಯಿಲ್ಲದೆ ||1||
ಯೋಗಿಯಾದೊಡೇನು ಚೆಲುವ
ಚಾಗಿಯಾದೊಡೇನು ಸಲೆ ವಿರಾಗಿಯಾದೊಡೇನಲೆ
ನಾಗ ನರ ಸುರಾದಿಗಳನು
ಬೇಗದಿಂದ ಕೊಂದು ತಿಂದು
ತೇಗಿ ಕಾಡಿ ನೋಡಿ ಬಿಡದೆ ಕೂಗಿ ಕುಣಿವುದಾಸೆಯು ||2||
ಶಿಷ್ಟ ಜನರನಾಳಿಗೊಂಡು
ಕಷ್ಟದೇಹವಿದನು ಪೊರೆಯೆ
ನಷ್ಟವಾಗದುಳಿವುದೇನೊ ಭ್ರಷ್ಟಲೋಕ ಬಾಂಧವ
ಕ್ಲಿಷ್ಟ ಬುದ್ಧಿಯುಳಿದು ಬಾಳು
ದುಷ್ಟ ಸಂಗತಿಯನು ಬಿಡು ನಿ
ಜೇಷ್ಟ ಶಿವಲಿಂಗೇಶನಲ್ಲಿ ದೃಷ್ಟಿಯಿಟ್ಟು ಪೂಜಿಸ ||3||

ಇಳೆಯೊಳು ಕಾರ್ಯಾರ್ಥಿ
ಇಳೆಯೊಳು ಕಾರ್ಯಾರ್ಥಿ ಜನಸಂಗವು
ಹೊಳೆಯ ದಾಂಟಿದ ಮೇಳಿಂಬಿಗರ ಗಂಡ ||ಪಲ್ಲವಿ||
ಬರ ಬರ ಮೀದೊಮ್ಮೇದೊ ಸೊಮ್ಮೆಂದೆನೆಯಾ ತಾ
ನಿರದೆ ಮಾಸೊಮ್ಮೆ ಹೇ ಹೇ ಯೆಂಬ ತೆಲುಗ
ನರನಂತೆ ನಂಬಿದವರ ನಂಬಿ ನಂಬದ
ದುರುಳರ ಮಾಟ ನಾಗರ ಕಾಟವು ||1||
ಎಮ್ಮೆನಿೈಯ್ಯ ದಮ್ಮೆನಿೈಯ್ಯ ನಿಮ್ಮವ ನಾನೆಂದು
ದಿಮ್ಮಿತವಾದ ಮಾತುಗಳನಾಡಿ
ತಮ್ಮ ಕಾರ್ಯವು ಕೈಗೆ ಬಂದ ಬಳಿಕ ಬಲು
ಹೆಮ್ಮೆಯ ಮೂಳಾಟಗಳ ತೋರ್ಪರು ||2||
ಅಪಕೀರ್ತಿ ಬರುವ ನಡೆಯು ಬೇಡವೆನೆ ತಮ್ಮ
ಚಪಲತನದ ಮಾರುತ್ತರವನಿತ್ತು
ಕಪಟಿಗಳೊಡನಾಡಿ ತಲೆಗೆ ಕಲ್ಲನು ಕೊಂಬ
ಕಪಿಯಾಟದವರ ಸಂಗತಿಯುಳ್ಳರ ||3||
ಗುರುವು ನೀವೆಮಗೆ ಪರವು ನೀವೆಮಗೆಂದು
ಪರಿಪರಿಯ ಭೂತಾಟದ ನುಡಿಗಳನು
ಸ್ವರಹಿ ಗಾಂಪರನು ಮೆಚ್ಚಿಸಿ ಮಮಕರಿಸುತೆ
ಸುರೆಗುಡಿದವರಂತೆ ಬಗುಳಾಟವಂತೆ ||4||
ಜೀವರ ಕೊಯಿಕವು ಭಾವಿಸೆ ತಮಗೆ ಕೇಡು
ಕೋವಿದರಿದನಹುದೆನ್ನರಾಹ
ಭಾವಜಹರ ಶಿವಲಿಂಗೇಶನೊಳಕೊಳ್ಳ
ಗಾವಿಲತನವಿದು ಸಾರದದು ||5||

ಕರತಂದು ತೋರೆ
ಕರತಂದು ತೋರೆ ಸೈರಿಸಲಾರೆ ಸರಸಿಜನಯನೆ
ಹರಿವಿಧಿಸುರವಂದ್ಯ ಗುರುಕುಲತಿಲಕನ
ವರ ಮುನಿಗಳ ಮನೋವನಜ ದಿನೇಶನ ||ಪಲ್ಲವಿ||
ಚಿಕ್ಕ ಪ್ರಾಯದೊಳು ಎನ್ನನು ತನ್ನ ತೆಕ್ಕೆಯೊಳಮರ್ದು
ಚೊಕ್ಕ ಸಕಲ ಕಲೆಗಳು ಉಕ್ಕಿ ಸೂಸುತೆ
ಅಕ್ಕರಿಂದಲಿ ತಾಂಬೂಲ ಗುಟಕೀವನ ||1||
ರಾಜಾಧಿರಾಜ ನಮಿತ ಸುರಭೂಜನೆನಿಪನ
ವೋಜೆಯಿಂ ಕರತಾರೆ ನಾ ಸೈರಿಸಲಾರೆ
ಸೋಜಿಗವಾಗಿದೆ ಸುಗುಣ ಸಂಪನ್ನನ ||2||
ಪರಸತಿಯರನು ಮುಟ್ಟದ ಪಂಥಗಾರನೆಂದೆನಿಪ
ಮರೆಹೊಕ್ಕರನು ಕಾಯ್ವ ಮಾರಾಂತರನು ಗೆಲ್ವ
ಪರವಾದಿ ಗಿರಿ ವಜ್ರದಂಡ ಪ್ರಚಂಡನ ||3||
ಪಂಥವೆ ತನಗೆ ನಂಬಿದಂಥ ಹೊಂತಕಾರಿಯೊಳು
ಕಾಂತೆ ನೀ ಕರತಾರೆ ನಾ ಸೈರಿಸಲಾರೆ
ಅಂಚರಾಂತರದಜರಂಧ್ರ ನಿವಾಸಕೆ ||4||
ಸತ್ಯದಾಚರಣೆಯನನವರತದಲಿ ನಿತ್ಯರೆಂದರಿದು
ಕೃತ್ಯದಕೃತ್ಯಂಗಳ ನೋಡಿ ಮುರಿದ ವಿ
ರಕ್ತ ಮುರಿಗೆ ಗುರು ಸಿದ್ಧೇಶ ಚಿತ್ಕೋಶನ ||5||

ಶ್ರೀರಂಗದಂಗ ನಮಃಶಿವಾಯ
ಶ್ರೀರಂಗದಂಗ ನಮಃಶಿವಾಯ ಶ್ರೀರಂಗದಂಗ ||ಪಲ್ಲವಿ||
ಸೋಮ ಸನ್ನುತಧಾಮ ಕರ್ಮ ನಿ
ರಾಮಯಪ್ರತಿಮ ಮುದಾವಹ
ಭೀಮ ನಿರ್ಜಿತ ಕಾಲ ಕಾಮ ಸು
ಧಾಮ ಸು ನೇಮಧಾರಣ ||1||
ಪಾಂಡವಸ್ತ್ರದ ಮಂಡಿತಾಮುದ
ಚಂಡಿಕಾವರ ಕುಂಡಲೀಶ್ವರ
ಮಂಡನಾಸುರ ಮುಂಡಧರ ಗುಣ
ಷಂಡ ರತ್ನಕರಂಡ ನಿರ್ಗುಣ ||2||
ಕಾರಣಾತ್ಮಕ ಧೀರ ತೋಷಕ
ವೀರ ವಿಕ್ರಮಪೂರ ಶಮದಮ
ವಾರಣಾಸ್ಯ ಕುಮಾರ ಭಾಷ್ಯವಿ
ಕಾರ ಸಂತತಿ ದೂರ ಚಿತ್ಕರ ||3||
ಅಂತರಾಂತರ ಶಾಂತ ಜನಹಿತ
ಕಾಂತ ಭುವನ ಶಾಂತ ಶಾಶ್ವತ
ಚಿಂತನೀಯ್ಯ ನಿರುತ ಪವಿಮಣಿ
ದಂತ ಶುಚಿ ಹರಿವಂತ ವಸ್ತ್ರಕ ||4||
ತುಂಗ ನಿಗಮ ತುರಂಗ ರಿಪು ಪುರ
ಭಂಗ ಸತ್ಕವಿಪುಂಗವಸ್ತುತ
ಮಂಗಳಾಕರ ಜಂಗಮೋತ್ಕರ
ಸಂಗ ಪರಶಿವಲಿಂಗ ಸತ್ಕೃಪ ||5||

ಲಿಂಗದ ಲಿಂಗದ ನೆಲೆಯ
ಲಿಂಗದ ಲಿಂಗದ ನೆಲೆಯ ತಿಳೆಯೆ ಯಾರ
ಹಂಗು ನಿನಗೆ ಹೇಳು ಲಿಂಗವಂತ ||ಪಲ್ಲವಿ||
ನುತ ಪೀಠ ಕಟಿಗಳೊಳರೆಯಕ್ಕಿಯನಿತು ವಿ
ತತ ವೃತ್ತ ಗೋಮುಖಂಗಳೊಳಾದರರೆಯು
ಸಿತ ನಾಳ ಗೋಳಕಂಗಳೊಳೆಳ್ಳೆನಿತು ಹೊಗೆ
ಗತ ದೋಷರದು ಲಿಂಗದಾರು ತಾಣದೊಳು ||1||
ತಲೆ ಆದಿಯಾಗಿ ಬುಡತನಕಲಿ ನೀಳಕೂ
ದಲ ಪಿಡಿವನಿತಾಗಿ ಸೀಳೆ ದೋಷ
ವಿಲಸಿತ ಸರ್ಜರಸವು ಸಡಿಲಲು ಮತ್ತೆ
ಬಲಿದು ಧರಿಸಲದು ಹಸೆಯಿಲ್ಲ ||2||
ಗೋಳಕ ನಾಳಕ ರೂಪ ಶಿವಲಿಂಗ ಶಕ್ತಿಗಳ
ಮೇಳವೀ ಯೋಗ ಸುಯೋಗಗಳೆ
ಪೇಳಲೇನದೆ ಜಗದುದಯ ಲಯಕಾರಣ
ಕೇಳೆ ತಿಳಿಯದೊಡಲ ಬಿಡಲಾಗದು ||3||

ಕಳ್ಳ ಚಿಳ್ಳ ಕೊಳ್ಳಿ
ಕಳ್ಳ ಚಿಳ್ಳ ಕೊಳ್ಳಿ ಕುಂಭ ಚೂರಿ ಪಾಕ ನಿನಗೆ
ಪಳ್ಳು ಪೊಳ್ಳು ಬಳ್ಳು ಬಗುಳದ್ಯಾಕೆ ಪೇಳು ||ಪಲ್ಲವಿ||
ಅತ್ತಲಿತ್ತ ಸುತ್ತಿ ಸುಲಿಯೆ ಫಲವದೇನು ಪೇಳಾ
ಗತ್ತೆ ಮತ್ತೆ ಸತ್ತೆ ನಿನಗೆ ಗತಿಯಿದೇನು ||1||
ಕಾಯ ಮಾಯ ಬಾಯ ಮಾತದ್ಯಾಕೆ ಕೇಳುಯಿನ್ನು
ಪಾಯ ಬೇಯ ದಾಯವಿದನು ನಂಬವೇನು ||2||
ಬಾಲ ಕೀಲ ಕಾಲ ನಿನ್ನ ಮನ್ನಿಪಾನೆ ಸತ್ತ
ಮೇಲೆ ಮೂಲೆ ಶಾಲೆಯು ತಾ ದೊರೆಯದೈಯ್ಯ ||3||
ಬೇಗ ರೋಗ ಪೂಗ ಬಂದು ಪೀಡಿಪಾಗ ನಿನ್ನ
ಸೋಗುಗೀಗು ಬೀಗುವೆಡೆಯೊಳಾರು ಹೋಗ ||4||
ಚುಮ್ಮ ಬೊಮ್ಮ ವಿಮ್ಮನರೊಳು ನೆನೆಯದಿರೋ ನೀನು
ಗಮ್ಮನೆಮ್ಮ ಸೊಮ್ಮದೆಂದು ಪೇಳ್ದೆವಿಂದು ||5||
ಕಾಕ ಪೋಕ ಲೋಕದೊಡನೆ ಸಂಗವ್ಯಾಕೆ ಬಲು
ಜೋಕೆಯಾಕೆ ಈಕೆಯೆಂಬ ಮಾತಿದ್ಯಾಕೆ ||6||
ಮಡ್ಡ ಗುಡ್ಡ ದೊಡ್ಡವರನು ಸೇರು ಕಡೆಯವರ
ಸಡ್ಡೆ ಹೊಡ್ಡೆ ಗಡ್ಡೆ ನಿನಗೆ ಸಟೆಯಿದಲ್ಲ ||7||
ಅಂತುವಿಂತುವೆಂತುವೆಂಬ ಚಿಂತೆಬೇಡ ಗೌರಿ
ಕಾಂತ ಶಾಂತನಂತರಂಗದೊಳಗೆ ನೋಡ ||8||
ಜಂಗಮಾಂಗಸಂಗ ಶಿವಲಿಂಗದೇವ ನಿನ್ನ
ಹೊಂಗಿ ಸಂಗಿಸಿಂಗಿತದೊಳು ಕಾಯ್ವ ನಂಬು ||9||

ನಾನಾವ ಪ್ರಪಂಚವನರಿಯೆ
ನಾನಾವ ಪ್ರಪಂಚವನರಿಯೆ ಮಹಾ
ಜ್ಞಾನಾವಧಾನ ಸರ್ವೇಶ ನೀನೆ ಬಲ್ಲೆ | |ಪಲ್ಲವಿ||
ಧರಣಿಯ ಮೇಲತಿ ಘಾತಕ ಕುಜನರು
ಪರಿಪರಿನಿಂದೆಯನಾರೋಪಿಸಿ
ಸ್ವರಹುತಿಹರು ನಿನ್ನ ಕರುಣವೊಂದಿರೆಯದು
ಗಿರಿಯತಾಗಿದ ಮಣ್ಣ ಮಿಟ್ಟಿಯಂತಹದು ||1||
ಒಡಲವಿಡಿದು ನಿನ್ನ ಕೈವಸವಾಗಿ ನಾ
ನಡವುತಿರಲು ಬಹು ತೊಡರುಗಳು
ಬಿಡದೆ ಮೋಹಿಸಿ ಬರುತಿರಲವನಾಗ
ಕಡಿದು ಖಂಡಿಸುವ ದೇವ ನೀನಿರೆ ||2||
ರಾಜ ತಾನಾವುದ ಮಾಡುವನವಗದು
ಸೋಜಿಗವಲ್ಲವನಿಚ್ಫೆಯಾಗಿ
ಮೂಜಗದೆರೆಯ ಶ್ರೀ ಶಿವಲಿಂಗೇಶ್ವರ ನಿನ್ನ
ಪೂಜಕರುಗಳೆಡರನು ನೀನೆ ಪರಿವೆ ||3||

ಒಂದಒಂದೆ ಪರಮ ತತ್ವವೊಂದೆ
ಒಂದೆ ಒಂದೆ ಪರಮತತ್ವವೊಂದೆ ||ಪಲ್ಲವಿ||
ಬಿತ್ತಿದ ಬೀಜವು ಬಿರಿದು ಮತ್ತೆ ಮರನಪ್ಪಂತೆ
ಗೊತ್ತಿನರಿವೆ ಜಗ ಗೋಪ್ಯವಿದಲ್ಲವಲ್ಲ ||1||
ಹಲವು ಬಣ್ಣದ ಮಾಯೆ ಹಸರಿ ತೋರಿದೊಡೇನು
ಸಲೆ ಚಿತ್ತಾರದ ಶಾಲೆಯಂತೆ ಭಾವಿಸಿ ನೋಡೆ ||2||
ಚಿನ್ನವೆ ತೊಡವೆನಿಸಿ ಚಿರಕಾಲವಿರುತಿರ್ದು
ನನ್ನಿಯ ಮಿಸುನಿ ತಾನೆ ನಾಡೆ ತೆರಪಿಲ್ಲವಲ್ಲ ||3||
ಹಗ್ಗವೆ ಹಾವೆನಿಪಂತೆ ಅಳಿವಿಲ್ಲದಿಹ ಪರವೆ
ಹಿಗ್ಗಿ ವಿಶ್ವವದಾಗೆ ಹಿರಿದು ಕಿರಿದುವಿಲ್ಲ ||4||
ತ್ರಿಪುಟಿಯನೊಳಕೊಂಡು ತ್ರಿವಿಧವರ್ನವೆನಿಸಿ
ಸುಪವಿತ್ರ ಶಿವಲಿಂಗ ಸುಜನ ಸನ್ನುತವಾಗಿ ||5||

ಬಂದು ಮೊಗವ ತೋರಿಸೆಮಗೆ
ಬಂದು ಮೊಗವ ತೋರಿಸೆಮಗೆ ನೀನೊಲಿದು
ತಂದೆ ಮಕ್ಕಳೊಳು ಮುನಿದು ಪೋಪುದುಚಿತವೆ ||ಪಲ್ಲವಿ||
ಎಲ್ಲರ ಬಗೆಗಳೊಳು ನಿಲ್ಲದೆ ನಿಮ್ಮಯ
ಮೆಲ್ಲಡಿಗಳ ನೆನೆನೆನೆದು ಕಂಬನಿಯ
ನಲ್ಲಲ್ಲಿ ನಿಂದು ಸೂಸುತೆ ಬೆರಲಿಂದ
ಚೆಲ್ಲಿತಲ್ಲಣಿಸುವಂದವನೆಸಗುವದೇನೊ ||1||
ತಾಯನಗಲಿದ ಕರುವಿನಂತೆ ನಾವೀಗ
ಸಾಯಸದಿಂದಿರುತಿರೆ ನಿನಗೆ
ಕಾಯಜವಿಜಯ ಕರುಣವಿನಿತಿಲ್ಲ ಉ
ಪಾಯವದಾವುಸಿರು ಮಹಾಮಹಿಮ ||2||
ಪಸಿವಡರ್ಚಿದ ಮರಿದುಂಬೆಗಳಿರದೆ ನಾ
ಲ್ದೆಸೆಯನೆಲ್ಲವನರಸುತೆ ಬಾಯಾರಿ
ನಸುವಿರಿದಿಹ ಜಾಜಿಯಲರ ಸಾರವ ಕಂಡು
ಮುಸುರಿ ಮೋಹಿಸುವಂತೆ ಸೇವಿಪೆವನುದಿನ ||3||

ಸಾ ನಲ್ಲ ನಿನಗೆನ್ನ
ಸಾ ನಲ್ಲ ನಿನಗೆನ್ನ ಸಂಗವೇತಕೆ ಮುನ್ನ
ನೀನಿತ್ತ ಭಾಷೆಯೇನು
ಮಾನಿನಿ ಕೇಳೆನ್ನೊಳಿನಿತು ತಪ್ಪಿಲ್ಲವ
ದೇನು ಕಾರಣವಿಂತು ಮುನಿವುದುಚಿತವೇ ||ಪಲ್ಲವಿ||
ಮುಡಿಯ ನಡುವೆಯೊರ್ವ ಮಡದಿಯ ಮರಸಿ ನೀ
ಮಡಗಿಕೊಂಡಿಹುದಿದೇನು
ಜಡಜಲೋಚನ ಕೇಳು ಕಿಡಿಗಣ್ಣ ಸೆಕೆಯ
ತಡೆಯಲಾರದೆ ಪೊತ್ತ ಪೊಳೆಯಲ್ಲವೇನೇ ||1||
ಪೊಳೆಗಾವನಾಡಲ್ಲಿ ತೊಳೆಪ ಮುಖ ಕಣ್ಪುರ್ಬು
ವಿಳಸಿತವಾದುದಲ್ಲಿ
ತಿಳಿದು ನೋಡಲ್ಲಿರ್ಪ ಪೊಳೆವ ತಾವರೆ ಮೀನ್ಗ
ಳೆಳೆಗಾಳಿಗೊಗೆದ ತೆರೆಗಳಲ್ಲವೇನೇ ||2||
ನೊಸಲ ಜಡೆಯ ಸೊಬಗೆಸೆವುದೆ ನದಿಯಲ್ಲಿ
ಹಸನಾಗಿ ಪೇಳೆನಗೆ
ಅಸಿಯಲೆ ಶಶಿರೇಖೆ ಪೊಸ ಪೂಗೆರಗುವಳಿ
ವಿಸರವೆಂದೊಲಿಸಿ ನೆರದ ಶಿವಲಿಂಗೇಶ ||3||

ಏನದೋ ನಿನ್ನ ವಿಡಾಯ
ಏನದೋ ನಿನ್ನ ವಿಡಾಯ ಎನ್ನೊಳು ಪ್ರಿಯಾ
ಮನ್ನಿಸಿ ಮೊದಲೊಲಿಸಿ ಮತ್ತೆ ಮುನಿವುದಿದೇನೋ ||ಪಲ್ಲವಿ||
ಇನಿದಿನ ಸೋನೆಯಂತೆ ಇನಿತಿನಿತು ನೂರೊಂದ
ನನುಕರಿಸುತೆ ಮಾತನಾಡಿ ನೀ ಕೂಡಿ
ಸನುಮತವಾಗಿರುತ ಸಾರಸುಖವನೀವುತ
ಮನದೊಳು ಮನ ಊರಿ ಮತಿಯಮಾರಿ
ಅಲ್ಲದಿರಲಾನಿದನರಿಯೆ ಪಂಜರದೊಳು ||1||
ನಿಲ್ಲದೋದುವರಗಿಳಿನೀರೆಪೇಳಲು
ಸೊಲ್ಲುಗೇಳಿಯಾದರೊಂದು ಸೋಜಿಗಕ್ಕೆ ಬಗೆದಂದು
ಮೆಲ್ಲನೆ ನಿಂದು ನೋಡದೆ ಮರೆದಪುದೆ ||2||
ಮಚ್ಚಿ ಎನ್ನ ಮೈ ಕೈ ಸೋಂಕಿ ಮೇಲುವೆಂಗಳೊಳು ಸಿಲ್ಕಿ
ವೊಚ್ಚತ ನಂಬುಗೆಯಿತ್ತು ವಾರೆಯಾತಕೋ
ನಿಚ್ಚ ಮನೆದೇವರಾಗಿ ನೀನೆ ಮೀಸಲನಳಿಯೋ
ನೆಚ್ಚಿದೆ ಶಿವಲಿಂಗೇಶ ನಾಡೆ ನೆರೆಯೊ ||3||

ಎಂಥವನೆ ಏಗುವೆ
ಎಂಥವನೆ ಏಗುವೆ ಬಾವಕಿಯೀತನೆಂಥವನೆ ಏಗುವೆ
ಸಂತವಿರದೆ ಸರಸದೆ ಮುಂದುವರಿವುತ
ಹೊಂತಕಾರಿತನವನು ತೋರಿ ಕೈ ಮೈಗೆ
ತಾಂ ತವಕವನೆಸಗುತೆ ತುಡುಕುವನು ನಾ
ನೆಂತು ಸೈರಿಪೆನೆ ನಲ್ಲನ ಬಗೆಬಗೆಯ
ಮುಂತೆ ತನ್ನಾಯ ಮನದ ಮೆಚ್ಚಿನ
ಕಾಂತೆಯೊರ್ವಳ ನೆರದು ಕೂಡಿಹ ||ಪಲ್ಲವಿ||
ಮೂಗುತಿದೆಗೆದು ಮುತ್ತನು ಬಾಯ್ಗೆ ನೀಡುವ
ಸೋಗೆಗಂಗಳಿಗಂಜನವನೆಚ್ಚ ಬಹನು
ಹೋಗದೊಡಲ ಸಮ್ಮವನುಗುರು ಕೊನೆಯಿಂದೆ
ಬೇಗ ಬೆದಕುವ ಕೊಡಂಕೆಗತಿ ನುಡಿವೆ
ಹೇಗೆ ಮಾಡುವೆನೆದೆಯಸೆರಗುದೆರೆ
ದಾಗಸಕೆ ಗುರಿಯಾಗಿ ನಿಲಿಸುವ ||1||
ಕೈಯಿಲ್ಲದಪ್ಪಿ ಕಾಲಿಲ್ಲದೆ ನಡೆವನು
ಹುಯ್ಯಲಿಲ್ಲದೆಯರಿಗಳತಲೆಗೊಯಿವನು
ಸುಯ್ಯಲಿಲ್ಲದೆ ಜೀವಿಸುವ ಕಣ್ಣಿಲ್ಲದೆ
ವೈಯ್ಯಾತನಾಗಿ ಕಾಣುವ ಕಿವಿಯಿರದೆ
ನಯ್ತರದಿ ಲಾಲಿಸುವನೆಲ್ಲವ
ನಿಯ್ಯಮವಿಲ್ಲದಿವಂಗೆ ಸಿಲ್ಕದೆ ||2||
ಕೇಳು ನೀನಾನುತಾನೆಂಬರಿವನಿಗೆಈ
ರೇಳು ಜಗದೊಳೆಣೆಯಾದರ ಕಾಣೆ
ಕೇಳು ಮೇಲಿಲ್ಲದ ಹರವರಿಗಾರನು
ಭಾಳಲೋಚನ ಶಿವಲಿಂಗೇಶನಿವನು
ಕೋಳು ಹೋಗದ ತೆರದೊಳೆನ್ನ
ನಾಳುವದಕೆಳಸುವನು ನಿಚ್ಚಯ ||3||

ಮಾಯಕಾರ ನನ್ನಿಯನೆ
ಮಾಯಕಾರ ನನ್ನಿಯನೆ ಮರೆಮಾಜದಿರೊ ನೀನು
ಅಯಗಾರತನವಿದೇನೋ ||ಪಲ್ಲವಿ||
ಜಗವಿದಾರಯಲು ನಿನ್ನೊಳು ಜನಿಸಿ ತೋರುತಿರಲು
ಹಗಲೆ ದೀವಿಗೆಯಾಕೆ ಹಸರಿಸಿದಿ ಸಕಲಕೆ
ನಿಗಮಾಗಮಾಂತರದಲ್ಲಿ ನಿನ್ನನೆ ಸಾರುತಿರಲು
ನಗೆಗೆಡೆಯಲ್ಲವೇನೋ ನಾನೆಂಬುದುಂಟಾದರೆ ||1||
ಬೀಜವಿರದಿರೆ ಪೈರು ಬಿತ್ತರವಹುದೆ ಚಾರು
ರಾಜಮೌಲಿ ನೀನಿಲ್ಲದೆ ರಚನೆಯಾಗಬಲ್ಲುದೆ
ಪೂಜಕಾರಿಯಖಿಳರು ಪೂಜ್ಯ ನೀನೋರ್ವನೆ ಕಾಂತ
ಸೋಜಿಗದುರುಮಹಿಮಾ ಸೋತೆನೊ ಕೈಲಾಸಧಾಮ ||2||
ಜನನ ಮರಣ ದೂರ ಜಯಗುಣ ಮಣಿಹಾರ
ವಿನಯ ವಚನಯುಕ್ತ ವಿಮಲ ಶರಣರಕ್ತ
ಮನಸಿಜವೈರಿ ಮಾಯಾರ್ಧನ ವೈಯಾರಿ
ಅನುಪಮ ಶಿವಲಿಂಗೇಶ ಅಂಚಿತ ಗಗನಕೇಶ ||3||

ಯಾರೊಡನೆ ಮುನಿದೀಗ
ಯಾರೊಡನೆ ಮುನಿದೀಗ ಹೋದೆ ನೀ ಹೇಳಭವ
ದೂರಲಹುದೆ ಬರಿದೆ ಜಗದಗಲಕೆ ||ಪಲ್ಲವಿ||
ಅಂಗವಿದು ನಿನ್ನ ಪಟ್ಟಣವಾಗಲದರಂತ
ರಂಗವದು ನಿನ್ನ ದೊರೆವನೆಯಾಗಿರೆ
ಹಿಂಗದಿಹ ವಾಯುಗಳು ನಿನ್ನ ಸಹಚರರಿಂದ್ರಿ
ಯಂಗಳವು ನಿನ್ನ ಮನೆವಾರ್ತೆಯವರು ||1||
ಎಸವ ಬಹು ಕರಣ ಸಂತತಿ ನಿನ್ನ ಪರಿವಾರ
ಮಿಸುಪ ಜೀವನು ನಿನ್ನ ತಾಣದಾರ
ಸಸಿನದರಿವೆ ನಿನ್ನ ರಾಣಿವಾಸವದಾಗೆ
ಯಸಮನೇತ್ರನೆ ನಿನಗೆ ಸಮನಾವನು ||2||
ನಿನ್ನ ನಾನಗಲುವೆನೆ ಎನ್ನ ನೀನಗಲುವೆಯ
ಇನ್ನಿದೇತಕೆ ಬಯಲಬೇಟ ನಿನಗೆ
ಗನ್ನ ಗದುಕನು ಬಿಟ್ಟುವೆನ್ನ ಕರಪೀಠಕೆ
ಮನ್ನಣೆಯ ಗರುವ ಶಿವಲಿಂಗೇಶ ಬಾರಾ ||3||

ಕಂಡೆನತಿ ವಿಚಿತ್ರವಿದನು
ಕಂಡೆನತಿ ವಿಚಿತ್ರವಿದನು ಕ
ನ್ನಡಜಾಣೆ ನೀ ಪೇಳೆ ಕಂಜಾತವದನೆ ||ಪಲ್ಲವಿ||
ಕುಂದರದ ಗಿರಿಯ ಕೊಳದ ಕುಶಲದಂಚೆಯ ಪಕ್ಕ
ಬೆಂದು ಬಿಳಿದಾಗಿ ನಿಂದುದು ಕಂಜಾತವದನೆ ||1||
ಹರಿವ ನದಿಯ ತೀರದಲ್ಲಿ ಹರುಗೋಲನೇರಿದವರ
ನಿರದೆ ನುಂಗಿ ಗೋಲೆ ಕಂಜಾತವದನೆ ||2||
ಹೆತ್ತ ಮಗುವು ತನ್ನ ತಾಯ ಹೆದರದೆ ತಿಂದು ತೇಗಿ
ಉತ್ತಮನೆಂದೆನಿಸಿ ಬದುಕಿತ್ತು ಕಂಜಾತವದನೆ ||3||
ಆರು ಮಂದಿ ನಾರಿಯರು ಆನಂದದೈರಣೆಯ ಹೊರಲು
ನೀರ ಮದುವಣಿಗ ಸತ್ತನು ಕಂಜಾತವದನೆ |4||
ಉರಿಯ ಬೀಜದಿಂದ ಮರನು ಉದಯವಾಗಿ ಅಮೃತರಸವ
ನೆರೆದು ಶಿವಲಿಂಗವಾಯಿತು ಕಂಜಾತವದನೆ ||5||

ಅಮ್ಮ ನೋಡೆ ಇವನದೊಂದು
ಅಮ್ಮ ನೋಡೆ ಇವನದೊಂದು ಮಾಯದಾಟವನು
ಹಮ್ಮಿನ ಭಿಕ್ಷುಕನು ಕಾಣೆ ಹರಯದ ಜಂಗಮೈಯ್ಯನೆ ||ಪಲ್ಲವಿ||
ಹುಲಿಯ ಚರ್ಮವನುಟ್ಟು ಹುಲ್ಲೆಯ ಬೆರಳೊಳಿಂಬಿಟ್ಟು
ಕೆಲಬಲದ ಮರುಳುತಂಡದ ಕೆಂಜೆಡೆಯವನು
ಎಲುಮಾಲೆಯುರದೊಳಾಂತು ಎತ್ತಣಿಂದ ಬಂದನೊ ಇಂತ
ಬಲು ಬೂದಿ ಮೈಯ್ಯ ಜಂಗಮ ಬಲ್ಲವನಮಮ ||1||
ಎಡದ ಹಸ್ತದಿ ಗುಂಡಿ ಕರ್ಪರಯಾತಕೆ ಬಲಗೈಯ ತಿಸುಳವು
ಉಡಿಯ ಸರ್ಪನಸೂತ್ರವೆಸೆಯಲು ಉತ್ತಮನಹ
ಅಡಿಯಲೊಂದು ನಯನವದೆ ಅಳಿಕದೊಳೊಂದದೆ ನೇತ್ರ
ಮೃಡನು ತಾನು ಜಂಗಮವು ಹೇಳೆ ಮೃಗಾಕ್ಷಿ ಕೇಳೆ ||2||
ಆನೆಯ ಸಮ್ಮದ ಕಂಥೆ ಅನುಕೂಲವೀತನಿಗಂತೆ
ಮಾನಿತ ತ್ರಿಪುಂಡ್ರದವನು ಮನ್ಮಥಹರನು
ಆನತ ಜನರ ಕಾಯ್ವ ಅಸಮ ಶಿವಲಿಂಗದೇವ
ತಾನೆ ಬಂದೆನ್ನ ಪಿಡಿದನೆ ತವಕದವನೆ ||3||

ನಾನಾತೆರದೊಳೆನಗೆ
ನಾನಾ ತೆರದೊಳೆನಗೆ ನೀನೆ ಗತಿ ಬೇರಿಲ್ಲ
ಕಾನಕನಗಚಾಪ ಕಾಂತ ಚಂದ್ರಕಲಾಪ ||ಪಲ್ಲವಿ||
ಮಾರನಟ್ಟುಳಿಯ ನಿವಾರಿಸೊ ಬೇಗದಿ
ಸಾರಿ ಮೋಹವ ಬೀರಿ ಜಾರದೆ ಹೊಂತಕಾರಿ ||1||
ಓತು ನಿನಗೆ ಮನಸೋತು ಬಂದೆನೊ ನೀನೆನಗೆ
ಕೌತುಕ ರತಿಯೊಳು ಕಾತುರವಿರೆ ಲೇಸು ||2||
ಅಂಗಸಂಗವನೆಲ್ಲ ಹಿಂಗದೆ ಕೈಕೊಂಡು
ಹೊಂಗಿ ಹೊರೆಯೊ ಶಿವಲಿಂಗ ಕರುಣಾಪಾಂಗ ||3||

ಭಳಿರೆ ಭಲರೆ ನಿಮಗೆಣೆಯಾವನೀ
ಭಳಿರೆ ಭಲರೆ ನಿಮಗೆಣೆಯಾವನೀ ಲೋಕ
ದೊಳು ಮಹಾಗುರು ಷಡಕ್ಷರಿದೇವ ದೇವ ||ಪಲ್ಲವಿ||
ಸುವಿವೇಕಶಾಲಿ ಸೂನøತ ಚಂದ್ರಮೌಲಿ ಸ
ತ್ಕವಿಚಕ್ರವರ್ತಿ ಸನ್ನುತ ಶುಭಕೀರ್ತಿ
ಪ್ರವಿಮಳಕಾಯ ಪ್ರಚುರ ಸಾಮಗೇಯ ನಿ
ರ್ಭವ ಭಾವಜಾರಿಯತುಳ ಸುಖಕಾರಿ ||1||
ನಿನ್ನ ಕಣ್ಣೊನೆಯಿನಿಗಡಲೊಳುದಯಿಸಿದ
ಚೆನ್ನ ಮಾಲಕುಮಿ ಲೋಕವನು ಕಾಯ್ದಿಹಳೊ
ಚಿನ್ನಬಸಿರನರಸಿಯನೇಳಿಸುವ ನಿನ್ನ
ನನ್ನಿವಾತಿನೊಳುಪ್ಪುತಿಹರೀ ಸಕಲರು ||2||
ವಿನಯ ಪಾಣಿನಿ ಸೋಮ ಭೀಮ ಶಂಕರ ನಾಮ
ವನು ತೆಳೆದವನಿಗೆಯ್ತಂದು ಸಾದರದೆ
ಗನ ಬಸವೇಶಪುರಾಣವನೊರೆದ ಸ
ದನುಪಮ ಶಿವಲಿಂಗದೊಳು ಬೆರದನಘ ||3||

ಬಂದು ಮನ್ನಿಸೊ
ಬಂದು ಮನ್ನಿಸೊ ಬಾಲಕಿಯನು
ಬಂದು ಮನ್ನಿಸೊ ಸುಪ್ರಸನ್ನ ಬರಿದೆಯಾತಕೊ ಗನ್ನ ||ಪಲ್ಲವಿ||
ಚೆಲುವೆಯರೊಲಿದೊಲೆಯಲು ಸೇನೆಯಲ್ಲ
ಕಲಕಲಿಸುತೆ ನಾಡೈತರೆಯಲರ್ವಿಲ್ಲ
ನಲಿಯಲೀಗಾಗಳೆಯಿದುವನೆಂಬ ಸೊಲ್ಲ
ನಲಸದೆ ಕೇಳಿ ತಳುವ ಮಾಡ ಸಲ್ಲ ||1||
ಮದಿಯ ಕಣ್ಣ ಕನ್ನೆನೈದಿಲು ಕಳೆಗುಂದಿ
ಮೃಢನಿನ್ನ ಮೊಗ ನೆರೆವೆರೆಯನು ಹೊಂದಿ
ಬಿಡದೆ ಜೀವಿಪ ಬಗೆಯನು ಬಹುಮಂದಿ
ನುಡಿವ ಮಾತನು ಪೇಳಿದನು ಸದಾನಂದಿ ||2||
ಝಗಝಗಿಸುವ ಚಂದ್ರಗಿರಿಯಗ್ರದಲ್ಲಿ
ಹೊಗರೊಗುವಮಳತೇಜದ ಕಲ್ಪವಲ್ಲಿ
ಮಿಗೆ ಹಬ್ಬಿದಿನಿ ಘಿವಿನ ನೆಳಲಲ್ಲಿ
ಸೊಗಸಿಕೂಡು ಶಿವಲಿಂಗೇಶ ನಿನ್ನಲ್ಲಿ ||3||

ಮಾಮಾವಾವಮುಂದವಾಮ
ಮಾಮಾವಾವಮುಂದವಾಮ ವಿಜಿತಕಾಮ
ಸೋಮ ಸನ್ನುತ ಶಂಕರ
ಕಾಮಿತವರದಾಯಕ ಕಮಲಾಧಿಪತಿ ನಾಯಕ
ಭೀಮವೇದ ತುರಂಗ ಭಿಕ್ಷುಕ ನಟನಾತರಂಗ ||ಪಲ್ಲವಿ||
ಅಧುನಾಜೆನಿಸಂತಾನೆ ಆ ಮಹಸುಗುಣಯಾನೆ
ಮಧುರಭೋಗ ನಿಕಾಮನುಭೂಯು ವಿಗತಮಾಯ
ವಿಧಿನಯೋಜಿತೋಸ್ಮೀಶ ವಿಪದವನೀಧರ ಕುಲಿಶ ||1||
ಕನಕಾಚಲ ಚಾಪಕಮನುಚಂದ್ರ ಕಲಾಪ ಮಾನಿತ
ಜಗದಾಧಾರ ಮಂಜುಲತರ ಶರೀರ ಬಾಲಚಂದಿರಚಿತ್ರ
ಭಾನುಭಾಸುರ ನೇತ್ರ ||2||
ಕರಿದನುಜಸಂಹಾರ ಕಾಲಕರ್ಮವಿದೂರ
ಪುರದಾವದವ ಪಾವಕ ಪುಣ್ಯಜನ ಸಹಾಯಕ
ಪರಶಿವಲಿಂಗ ಮಹೇಶ ಪಾವನ ವಿತರಣ ಕೋಶ ||3||

ಸಾರಂಗಪಾಣಿ ಸಲಹೊ
ಸಾರಂಗಪಾಣಿ ಸಲಹೊ ಸತ್ಯವಾಣಿ ||ಪಲ್ಲವಿ||
ಹರಿವಿಧಿ ಸುರಪತಿ ಹರಿಣಾಂಕ ದಿನಪತಿ
ವರಮುನಿಜನ ವಂದ್ಯ ಪದನೆ ಅನಿಂದ್ಯನೆ ||1||
ಭಕ್ತವತ್ಸಲನೆಂದು ಬಾಳ ಬಗೆಯೊಳಿಂದು
ಯುಕ್ತಿಯಿಂದವೆ ಬಂದುಯುತನಾದೆ ಸಂದು ||2||
ಎನ್ನವಗುಣಗಳು ಎನಿತಾನೆಣಿಸೆ ಕೇಳು
ನಿನ್ನ ಪಾದಕೆ ದೂರ ನೀ ನೋಡಿ ಚೆದುರ ||3||
ಹಸುಳೆಯ ನಡೆಯಲ್ಲಿ ಹಸನ ನೋಡಿದಡಲ್ಲಿ
ಸಸಿನವಿಹುದೆ ದೇವ ಸರಸ ಸಂಜೀವ ||4||
ನಂಬಿದೆನೈಯ್ಯ ನಗಜೆಯ ಮನದ ಪ್ರಿಯ
ಶಂಭು ಶ್ರೀ ಶಿವಲಿಂಗ ಸಕಲಾಂತರಂಗ ||5||

ರಾರಾಟಿಮಿ ನಿರಂತ
ರಾರಾಟಿಮಿ ನಿರಂತ ರಾರಾಜಿತ ಪಾದೌತೆ
ಸೂರ ಶರೀರಭಾವ ಮಾರಮದಾಪಹಾರಿಂ
ಸಾರಸಾರಸ ಸುತಾರ ತಾರ ತಾರಾಸಾರಾ ಸಾರರತ ಭೂರಿ ಭೂರಿಧರಾ ||ಪಲ್ಲವಿ||
ಜನ್ಮಜನ್ಮಾನಿ ಮಸ್ತು ಜೆಂತು ನಾಮಾನುಗತಿ
ರುನ್ಮದಾಂಧಕಾರ ವಿಹಾರಿಣಾಮಗುಣಾನಾಂ
ಹನ್ಮ ಹನ್ಮ ಮರುದುನ್ಮರುನ್ಮಖಮ
ರುನ್ಮರುನ್ಮ ಜನ್ಮಮನ್ಮಮನ್ಮತಿದ ||1||
ಕಾಯವಿಕಾರಮಾಪನೀಯ ಕೃಪಾಣ ಸಾಮೋ
ದಾಯಾಧಿಪ ಮೃಕಂಡು ಜಾಯ ಕಂಟಿಕಾವೈರಿಂ
ಸಾಯಸಾಯಜಿತ ಮಾಯ ಮಾಯ ನಿರ
ಪಾಯ ಪಾಯ ಸನಹಾಯ ಹಾಯ ರಥ ||2||
ದೇಹಿಜೆ ಸುರಾಟವಿದಾಹಿಲೋಚನ ಶುಭ
ವಾರ್ಹಿ ಶ್ರೀ ಶಿವಲಿಂಗ ಮಾಹಿಮಾಂ ವರಮುಕ್ತಿಂ
ದೇಹಿದೇಹಿ ಸಹಿತಾಹಿತಾಹಿತಜ
ದೇಹಿ ದೇಹಿ ಗತ ಪಾಹಿ ಪಾಹಿ ಹರ ||3||

ನಲ್ಲನ ಕಾಣದೆ ಮನ
ನಲ್ಲನ ಕಾಣದೆ ಮನ ನಿಲ್ಲದು ನಿನ್ನಾಣೆ ಜಾಣೆ
ಮೆಲ್ಲನೆ ಬೋಧಿಸಿಯವನನಿಲ್ಲಿಗೆ ಕರದು ತಾರೆ ||ಪಲ್ಲವಿ||
ನಲ್ಲನ ಕಾಣದೆ ಚಿಕ್ಕಂದು ಮೊಜದಲುವೆನ್ನ ತಕ್ಕೆಯೊಳಗಲದಿರ್ದು
ಘಕ್ಕನುಯೊಂದೆ ವೇಳೆ ತಾ ಸಿಕ್ಕದೆ ಹೋದನಿದೇನೆ ||1||
ಮಾತು ಮಾತಿಗೆ ಬಂದುದುವೀತಗೆನ್ನ ಕೂಡೆ ಮುನಿಸು
ಸೋತೆನೆಂದ ಮೇಲೆ ಬಳಿಕಿನ್ನೇತಕೆ ಕೊಂಕಿನ ಬಿಂಕ ||2||
ಕಡೆಯ ಮಾತೇನೋ ರಾಯರೊಡೆಯ ಮೂರಂಗದಲ್ಲಿ
ತೊಡರಿ ಬಿಡದಿರ್ದೀಗಾ ಸೆಡವದ್ಯಾತಕೆ ಹೇಳ ||3||
ಇಮ್ಮನವ ಬಿಟ್ಟು ನಾನು ಒಮ್ಮನದೆ ಪಾಕವನು
ಗಮ್ಮನೆ ಮಾಡಿ ನೀಡಲು ಸುಮ್ಮನೆ ಉಂಡಿರುವನು ||4||
ರಂಗದಂಗ ಪರಶಿವಲಿಂಗನ ನುತವೇದ ತು
ರಂಗನು ನೆರದುವೆನ್ನ ಹಿಂಗದೆಯಿರಲಿ ತಾನು ||5||

ನಾಗಕಂಕಣ ಜಯ
ನಾಗಕಂಕಣ ಜಯ ನಮಿತ ಸುರ
ಪೂಗ ಶಂಕರ ಜಯ ಜಯ ||ಪಲ್ಲವಿ||
ಅನಲ ದಿನರಾಜರಾಜ ನಯನ ವಿಧಿ
ವನಜಲೋಚನ ಸೇವಿತ
ಕನಕನಗರಾಜರಾಜರಾಜ ಸಖ
ಘನ ಗುಣಾವಳಿ ರಾಜಿತ ||1||
ಗೋಪಸುತ ವರದ ಗೋಪ ತನುಜ ರಿಪು
ಗೋಪರಥ ಗೋಪಲೋಕ
ಗೋಪಯೋಪಾಂಡುಚರಿತ ಗೋಪಜ
ಗೋಪದ ಚಂಡಕಿರಣ ||2||
ಹರಿಣಿಧರಭರಣ ಹರಿಣಪಾಣಿ ಶುಭ
ಕರಣ ಹರಿಣಾರಿ ಹರಿಣ
ಶರಣ ಸುರಮಣಿ ಮಹೇಶ ವಿಜಿತ ಭವ
ಮರಣ ಶಿವಲಿಂಗ ತುಂಗ ||3||

ಕಾಣದೆ ನಾನಿರಲಾರೆ
ಕಾಣದೆ ನಾನಿರಲಾರೆ ಕಾಮಿನಿ ನೀ ಕರತಾರೆ
ಪ್ರಾಣನಾಥಗೆನ್ನ ಕೂಡೆ ಪಂಥವೆ ತನಗೆ ||ಪಲ್ಲವಿ||
ಎಳೆವರೆಯದಲ್ಲಿ ಬೆರದು ಎಳ್ಳನಿತು ಭೇದವಿರದೆ
ಸೆಳೆಮಂಚದ ಮೇಲೆ ಸೆಳೆದಪ್ಪಿ ಮುದ್ದಿಪ ||1||
ತನುವನೆಲ್ಲ ಸೂರೆಗೊಂಡು ಮನದೊಳು ಬೇರೂರಿ ನಿಂದು
ವಿನಯದಿಂದೆ ಭಾವದೊಳು ಸುಳಿದನಂದು ||2||
ಹೆಚ್ಚು ಕುಂದುಗಳನರಿಯೆ ಹೆರೆನೊಸಲ ಬಾಲೆ ನಾ
ಸಚ್ಚಿದಾನಂದ ರೂಪಗೆ ಸಲೆ ಮೆಚ್ಚಿದೆ ||3||
ಮಾರುತನಪ್ಪಿದ ಕಂಪ ಬೇರು ಮಾಡುವವರುಂಟೆ
ವಾರಿಜಾಕ್ಷಿಯೆನ್ನ ಮೋಹ ತನ್ನೊಳಿಹುದು ||4||
ಎಣ್ಣೆ ತುಪ್ಪಗಳನುಂಡು ಎರೆಯದ ನಾಲಿಗೆಯಂತು
ಕಣ್ಣೊಳಿಕ್ಕಿ ತನ್ನ ನೆರದಗಲುವದೆಂತು ||5||
ಕರ್ಪುರದ ಗಿರಿಯನೇರಿದ ಕಾಡುಗಿಚ್ಚಿನಂತೆ ಎನ್ನ
ನಪ್ಪಿ ಬಿಡದು ತನ್ನ ಚಿಂತೆಯನಿತಿರದೆ ||6||
ತಿಂಗಳ ಬಿಟ್ಟು ಬಿಡದು ತಿಳಿವೆಳಗೆಂತು ಶಿವ
ಲಿಂಗನಂಗಸಂಗದಲ್ಲಿ ಹಿಂಗದಿರಿಸೊ ||7||

ಗಿರಿರಾಜ ಸುಕುಮಾರಿ
ಗಿರಿರಾಜ ಸುಕುಮಾರಿ ಪೊರೆವುದೆನ್ನನು ಗೌರಿ
ತರುಣ ತರಣಿಯುರಕುತರ ಕಿರಣವ ನಗು
ವರುಣ ಚರಣೆ ಶರಣರ ಸುರಮಣಿಯೆ ||ಪಲ್ಲವಿ||
ಚಕಿತಲೋಚನೆ ರತ್ನ ಮುಕುರ ಭಾಸುರ ವದನೆ
ಅಕುಟಿಲ ಸಕಲರಸಿಕ ಕವಿ ಪಿಕ ಕೌ
ತುಕಕರ ಮಧುರವ ನಿಕರ ವಿಲೋಲೆ ||1||
ಕುಂದ ಕೋರಕ ರದನೆ ಮಂದರಾಚಲ ಸದನೆ
ಮಂದಯಾನೆಯರವಿಂದಗಂಧಿನಿ ಶತಾ
ನಂದ ಮುಕುಂದ ಪುರಂದರ ವರದೆ ||2||
ನವ ನೀಲೋರಗವೇಣಿ ಶಿವಲಿಂಗೇಶನ ರಾಣಿ
ಅವಿರತ ನತಪಾದ ಭುವನಜ ಪದನಖ
ಸುವಿರಾಜಿತ ಸಚ್ಫವಿಚಂದ್ರಿಕೆಯೆ ||3||

ನೀನೆ ಪರತರ ಪರಂಜ್ಯೋತಿ
ನೀನೆ ಪರತರ ಪರಂಜ್ಯೋತಿ ನಿನ್ನೊಳು ತೋರ್ಪ
ಹೀನ ಸಂಸಾರ ಕಲ್ಪಿತವರಿವುದಣ್ಣ ||ಪಲ್ಲವಿ||
ಗಗನದೊಳು ಗಂಧರ್ವ ನಗರ ಸರವಿಯಲಿಪ್ಪ
ನ್ನಗ ಶುಕ್ತಿಯಲಿ ರಜತ ಕೊರಡಿನಲ್ಲಿ
ಹಗರಣಿಗ ಕಳೆ ಬಿಸಿಲೊಳು ಮರೀಚಿಕೆ
ವಗೆವಂತೆ ಬಯಲ ಭ್ರಮೆಯ ಕುರುಹು ||1||
ಮರದ ಶಾಖೋಪ ಶಾಖಾದಿಗಳವನವರತ
ತರುವಿನಭಿಧಾನದಿಂದೆಸೆವತೆರದೆ
ಪರಮಾತ್ಮನಹ ನಿನ್ನೊಳಿರದೆ ತೋರುವ ತೋರ್ಕೆ
ನಿರುತದಿಂ ನಿನ್ನೊಳೆರೆವಳಿದಿರ್ಪುದು ||2||
ದೀಪವಿಲ್ಲದೆ ಮನೆಯ ಕತ್ತಲೆಯ ಪೋಗುವದೆ
ವೀಪರಿಯ ಸುಜ್ಞಾನವದು ದೊರೆಯದೆ
ಓಪನೆ ಕೇಳು ಚಿತ್ತದ ಮೋಹವಳಿಯದು ಪ
ರಾಪರವೆಯಾದ ಶಿವಲಿಂಗವನು ತಿಳಿಯೆ ||3||

ಕಮಲಲೋಚನೆ ಎನ್ನ
ಕಮಲಲೋಚನೆ ಎನ್ನ ಕಾಂತನ ಮೊಗದೋರೆ
ಕಮಲೆ ನಾರಿ ಗೋಪಾಲನ ||ಪಲ್ಲವಿ||
ರಾಜಧರಣ ರಾಜರಾಜಮಿತ್ರನ ಪ್ರವಿ
ರಾಜಮಾನ ಶರೀರನ ರಜತಾಚಲ ನಿಜ
ರಾಜಧಾನಿಯ ಗುಣರಾಜಿಯ ವೇದವಾಜಿಯ ||1||
ಕೃಷ್ಣನುತಿ ಪಾತ್ರನ ಕೃಷ್ಣ ವರದನ ಶ್ರೀ
ಕೃಷ್ಣ ಕಂಧರನ ಜಿತ ಕೃಷ್ಣ ಕಾಯನ ರಿಪು
ಕೃಷ್ಣ ಕಂಠತಾಕ್ಷನ್ರ್ಯಿನಾ ಕೃಷ್ಣ ಭೂಷಿತ ಪಾಣಿಯ ||2||
ಮಾರಪಾತಕನ ಮಾರ ವಿದೂರನ
ಮಾರ ಸಂಹಾರನ ಸುಕುಮಾರನ ಪರಮ ಕು
ಮಾರ ಜನಕನ ಕುಮಾರ ಶಿವಲಿಂಗೇಶನ ||3||

ನಮೋ ನಮೋ ಬಸವ
ನಮೋ ನಮೋ ಬಸವ ಕುಮಾರ
ನಮೋ ನಮೋ ಭಕ್ತಮಂದಾರ
ಪ್ರಮುದಿತ ಶರಣ ಪ್ರಣವಾವರಣ
ಯಮಮದಹರಣ ಯತಿವರ ದರಣ
ಹಿಮಕರ ಕಿರಣ ಹಿತವಾಗ್ಭರಣ
ಸಮಿತ ಕುಕರಣ ಶರಣ ವಿಹರಣ ||ಪಲ್ಲವಿ||
ಬಲದೇವ ನಂದ ಕಾಂತಾ ಭಾಸುರ ಗಾತ್ರ ನಿಶ್ಚಿಂತ
ನಿಲಯ ವಿರಹಿತ ವಿಲಸಿತ ಚರಿತ
ಸುಲಲಿತ ನಾಮ ಸುಮಹಿತ ಮಹಿಮ
ದಲಿತ ವಿಪಕ್ಷ ದಾನ ಸುದಕ್ಷ
ಕಲಶಜ ವಿನುತ ಕರುಣಾಕಲಿತ ||1||
ವಾರಿಜಾಸನ ನುತಿ ಪಾತ್ರ
ವಾಸವ ಹಿತ ಮುದ ಚೈತ್ರ
ಚಾರು ಚಿದಂಗ ಚರ ಗುರು ಸಂಗ
ಸಾರ ಗಣೇಂದ್ರ ಸತತ ವಿತಂದ್ರ
ಸೂರಜ ಭಂಗ ಸುಜನೋತ್ತುಂಗ
ಭೂರಿ ಸುರೇಶ ಭುಜಗ ವಿಭೂಷ ||2||
ಶಿವಲಿಂಗದೇವ ಸ್ವರೂಪ
ಶೀತಾಂಶು ಶಕಲ ಕಲಾಪ
ನವ ಗುಣಶಾಲಿ ನತ ವನಮಾಲಿ
ಭವನ ಸಧಾತ ಭಾವಿತದೇವ
ಪವನ ಸಖಾಕ್ಷ ಪರಮತ ಶಿಕ್ಷ
ವಿವಿಧ ವಿಳಾಸ ವಿಭು ವೃಷಭೇಶ ||3||

ತೋರಿಸೆ ಶ್ರೀ ಗುರುದೇವನ
ತೋರಿಸೆ ಶ್ರೀ ಗುರುದೇವನ ಚೆಲ್ವ
ನೀರೆ ನೀನೆನ್ನಯಾ ಪ್ರಾಣವ
ವಾರಿಜವದನೆ ವೈಯಾರಿ ಮುನಿದು ಮೊಗ
ದೋರದೆ ಮಾತನಾಡದೆ ಹೋದ ತಂದು ||ಪಲ್ಲವಿ||
ಹøದಯ ಸರಸಿಯೊಳಾಡುವ ದಿವ್ಯ
ಸದಮಳ ಹಂಸನ ನೋಡುವ
ವಿದಿತಾನಂದದೊಳು ವೋಲಾಡುವ ಎಮ್ಮ
ಪದುಳದೆ ಮುಕುತರ ಮಾಡುವ
ಹದಿರು ಚದಿರ ನುಡಿಯದರೊಡನಾಡುವ
ಮದವಿರಹಿತ ಭಕ್ತಿರಸದೊಳು ಕೂಡುವ ||1||
ಉರಿವ ಜ್ಯೋತಿಯ ನೋಡಿ ಪಾಡುವ ಬಲು
ಬೆರಗಿನೊಳಗೆ ಮೂಡಿ ಮುಳುಗುವ
ತಡೆಯಿಲ್ಲದೆಡೆವಿಡಿದಾಡುವ ಲಜ್ಜೆ
ವೊಡೆಯದೆನ್ನೊಳು ನಗೆಯಾಡುವ
ತಡಿಯ ಸೇರಿಸಿ ಸೇರಿದನುಪಮ ಶಿಷ್ಯರ
ಗಡಣದ ನಡುವೆ ರಾಜಿಪ ದೇಸಿಕೇಂದ್ರನ ||2||
ನೀಲಸ ಜ್ಯೋತಿಯ ಬೆಳಗನ್ನು ನೋಡಿ
ಲೀಲೆಯೊಳದೆಯಾದ ಗುರುಸಿದ್ಧಲಿಂಗನ
ಕಾಲಕರ್ಮಗಳನು ಪರಿವ ಸಭಕ್ತ
ಜಾಲದ ಮನದ ಕೊನೆಯೊಳು ನಿಂದವನ
ಬಾಲೆ ಮೂರಾರೊಂದುಗೂಡುತೆ ವಸ್ತುವ
ಲೋಲ ದಯದೆ ತೋರ್ಪ ಶಾಂತವೀರೇಶನ ||3||

ತೋರಿಸೆ ಶ್ರೀ ಗುರುದೇವನ
ಮುಂಗೈಯ್ಯ ಕಡಗಕೆ ಕನ್ನಡಿ ಯಾಕೆ
ಹಂಗಿಲ್ಲದಚಲ ದೀಪದ ಹಾಂಗಿದಕೊ ||ಪಲ್ಲವಿ||
ನೀರಗುಳ್ಳೆಯ ನಟ್ಟನಡುವೆ ಲೊಷ್ಟಿಟ್ಟಂತೆ
ವಾರೆಯಾಗದೆ ಸಾವಿನ ತೆರದಿಂದೆ
ಪೂರಿತ ದೇಹಿಗಲೆಲ್ಲರೊಳಗೆ ಹೊರ
ಗಾರೈದು ಗುರುವಿನಡಿಯನು ಪಿಡಿದು ನೋಡೆ ||1||
ಹಾಳ ಮೇಲಣ ರನ್ನದ ತೆರದಿಂದೆ ವಿ
ಶಾಲ ಲೋಕದೊಳು ತೋರುವ ತೋರಿಕೆಗಳು
ಪೇಳಲೇನಲ್ಲಿಯೆ ತೋರಿಯಡಗುವವು
ಭಾಳಲೋಚನ ತಾನೆಯದು ಪೆರತಲ್ಲ ||2||
ನಡುನಾಡಿಯಲ್ಲಿ ತಾವರೆಯ ತಂತುವಿನಂತೆ
ನಿಡುವಳ್ಳಿ ಮಿಂಚಿನ ತೇಜದಂತೆಸೆವ
ಕಡು ಚೆಲ್ವಕಳೆಯುಚ್ಚಳಿಸಿ ಲೋಚನದಲ್ಲಿ
ಮೃಡ ಶಿವಲಿಂಗವೆನಿಪ ಬೆಡಗಿನೊಳಿಹುದು ||3||

ಶ್ರೀಗುರು ಚಿದಾನಂದಮೂರ್ತಿ
ಶ್ರೀಗುರು ಚಿದಾನಂದಮೂರ್ತಿ ವಿಶ್ರುತ ಕೀರ್ತಿ
ಬೋಗಿಭೂಷಣ ಭಕ್ತ ಪೋಷಣ ಗುಣಾಭರಣ
ಸಾಗರನಿಷಂಗ ಸಕಲೇಶ್ವರ ನಿವಾರಮಣ ಬೇಗ ನೀನುಪ್ಪವಡಿಸಾ ದೇವಾ ||ಪಲ್ಲವಿ||
ಅಜ ಹರಿ ಪುರಂಜರಾದ್ಯಮರ ಸಂಕುಳವೆಲ್ಲ
ಗಜಭಜೆಯನಲಿದು ತಪವನು ಮಾಡೆ ನಿನ್ನ ಪದ
ಭಜಕನೆಂದೆನಿಪಗಸ್ತನ್ಯಿನ ಕಾಣದಾದರೆಂದುಸಿರುರ್ವುದು ರಾಮಾಯಣ
ತ್ರಿಜಗತ್ತಿನೊಳು ನಿನ್ನ ಭಕ್ತರನು ಕಾಣರದ
ರಜನೀಕರಾರ್ಕ ಶಿಖಿ ನಯನ ನೀನೇ ತಿಳಿದು
ನಿಜ ಭಕ್ತರನು ಸಲಹಲೆಂದು ಬಗೆದಂದು ಕೃಪೆಯಿಂದೆ ಮೊಗದೋರಿಸಭವ ||1||
ಹರಿ ಸುದರಿಶನ ಚಕ್ರವನು ಪಡೆಯಲಿಚ್ಚಯಿಸಿ
ವರ ಬದರಿಕಾರಣ್ಯದಲ್ಲಿ ನಿನ್ನಡಿಗಳನು
ಸರಸಿಜ ಸಹಸ್ರದಿಂ ಪೂಜಿಸುತ್ತಿರಲೊಂದುವೆಸಳು ಸಾಲದೆ ಪೋಗಲು
ದೊರೆಯಾಡ ತನ್ನ ನೇತ್ರವ ನಿಮ್ಮ ಚರಣದೊಳ
ಗಿರಿಸಿ ಚಕ್ರವನು ಪಡೆದುದನು ಪದ್ಮಪುರಾಣ
ವಿರದೆ ಪೇಳಲು ವಿಷ್ಣು ಸರಸಿಜಾಂಬಕನಾದನರರೆ ಮೂಜಗವರಿಯಲು ||2||
ವಾರಣದೆ ನೀನು ಕಾಶಿಯೊಳು ರಾಮಾಂಕಿತದ
ತಾರಕಬ್ರಹ್ಮೋಪದೇಶವನು ಜೀವಿಗಳ
ಪಾರಕರ್ನದ್ವಾರದೊಳು ಪೇಳಲವರೆಲ್ಲ ಚಾರು ಲಿಂಗಾಂಗಳಹರು
ಭೂರಿ ಭೂಜನರು ವೇದಗಳು ಸಾರುತ್ತಿರಲು
ಕ್ರೂರತರ ವಾದಿಗಳು ರಾಮಮಂತ್ರವ ಹರಿಯ
ಸಾರನಾಮವದೆಂದು ಪೇಳುವರದಂತಿರಲಿ ಶ್ರೀ ರಾಮನುಪ್ಪನಡಿಸ ||3||
ಮುಪ್ಪುರದವರ ಬಾಳ ಕೆಡಿಸಲೋಸುಗ ಬುದ್ಧ
ವಪ್ಪಳಿದುಳಿದನರ್ಥಕವ ಬೋಧಿಸಿ ತನ್ನ
ದಿಷ್ಟವನು ಪೇಳ್ದನದನೆಯ್ದೆ ಪರವಾದಿಗಳು ಸಪ್ಪೆನುಡಿಯಿಂದುಸಿರ್ವರು
ಉಪ್ಪರಿಸಿ ನೀನೆ ಭಕ್ತರ ಮನವ ನೋಳ್ಪುದಕೆ
ತೆಪ್ಪಗಿಹ ಗೌತಮಾದಿಗಳಿಚ್ಚುತನಘನವ
ನೊಪ್ಪಿಸಲಿಕಾ ಮುನಿಪ ನಿನ್ನ ಸೋಲಿಸಲವನನೊಪ್ಪಿದನೆಯುಪ್ಪನಡಿಸ ||4||
ವಿಷ್ಣುವೇ ಯೋನಿಯೆಂಬುದು ನಿಗಮ ಬಳಿಕವಾ
ವಿಷ್ಣುವೇ ಪ್ರಕೃತಿಯೆಂಬುದವದೇ ಮತ್ತೆಯಾ
ವಿಷ್ಣುವೇ ವಿಶ್ವವೆಂಬುದು ನೀನೆ ಲಿಂಗವು ಪುರುಷ ನೀನೀಶ್ವರನಲೆ
ವಿಷ್ಣುವೇ ನಿನ್ನ ಘನತರ ಶಕ್ತಿಯೆಂಬುದಕೆ
ದೃಷ್ಟವಿದೆ ಹರಿಹರವು ದೂರವಲ್ಲೆಲೆ ಮಹಾ
ವಿಷ್ಣುಸುಖ ಶಂಕರ ಸು ನಾರಾಯಣನುವೆನಿಪ ವಿಷ್ಣು ಶಿವಲಿಂಗೇಶ್ವರ ||5||

ಹರಹರ ದಯವಿಲ್ಲವೆ
ಹರಹರ ದಯವಿಲ್ಲವೆ
ಧರಗೆನ್ನ ನೀ ಕಳುಹಿ ದಾನಶೀಲನಾಗದೆ ||ಪಲ್ಲವಿ||
ಮಾನವನ ಸೇರಿದರೆ ಮನವಿಕ್ಕಿ ಕೈವಿಡಿದು
ದೀನತನವ ಬಿಡಿಸಿ ದಿಟ್ಟನಾಗಿಸಿ
ಸಾನುರಾಗದಿಂದೆ ಪೊರೆದು ಸವಿವಾತುಗಳ ನುಡಿದು
ನೀನೆ ಸದರಿಡದಿಹುದು ನೀತವೆ ದೇವರದೇವ ||1||
ಕಹಳೆ ಕಂಚಾದೊಡೇನು ಕಡು ಬಿರಿದೊಡೆಯನದು
ಮಹಿತ ಗುಣನೆ ಎನ್ನ ಮಾನಾಪಮಾನ
ಬಹಳವಾಗಿ ನಿನ್ನದು ಬಲಹೀನವಾದೆನ್ನನು
ಸಹವಾಸಿಯಾಗಿ ಈಗ ಸಲಹೊ ಮರೆಹೊಕ್ಕೆ ||2||
ತರಣಿಯ ಕುದುರೆಗೆ ತಮದ ಬಾಧೆಯದುಂಟೆ
ಗರಡು ಮಂತ್ರಿಯ ಪಾವು ಘಾಸೆಮಾಳ್ಪುದೆ
ಪರಶಿವಲಿಂಗ ನಿನ್ನ ಪದವನೊಂದಿದವರ್ಗೆ
ಜರೆ ಜನ್ಮ ಮರಣಮುಂಟೆ ಜಯ ವರಪ್ರದಾಯಕ ||3||

ಅಂದದಿಂದೆ ನಿನ್ನ ಪಾದವ
ಅಂದದಿಂದೆ ನಿನ್ನ ಪಾದವನೊಂದಿದೆನೆಂದೂ ಅಂದಿಂದ
ಕುಂದ ಮಂದಾರೇಂದುವರ್ನಾನಂದಿಯಾದೆ ನಾನಹೋ ||ಪಲ್ಲವಿ||
ಚಿಲ್ಲಾಲಮಾವನೊಸಲ್ಗೆ ಮೆಲ್ಲ ಮೆಲ್ಲನೆ ತಿರ್ದಿ
ಖುಲ್ಲ ಕಾವನ ಫುಲ್ಲಬಾಣವ ನಿಲ್ಲವೆನಿಸದೆ ನಾನಹೋ ||1||
ಸಂಚಲ ತನು ವಿಕೃತೆಯ ಗೊಂಚಲನಂಟದೆ ನಿಷ್ಪ್ರಪಂಚನಾಗುತೆ
ಸಂಚಿತಾದಿಯ ವಂಚನೆಯನೆಸಗಿದೆನೊ ||2||
ಅಚ್ಚುತಾದಿ ದೈವತ ಸಮುಚ್ಚಯಂತರಂಗದಿ
ಬೆಚ್ಚ ಬೆಳಗುವ ಬಚ್ಚಬರಿಯ ಮಹಾಸಚ್ಚಿದಾತ್ಮನೆ ನಾನಹೋ ||3||
ಹುತ್ತದ ನಾಗರ ನಡುನೆತ್ತಿಯನು ಮೆಟ್ಟಿ ನಿಂದು
ಗೊತ್ತ ಸಾರದೆ ಮತ್ತನಾಗದೆ ಬಿತ್ತರದೆ ಎಡೆಯಾಡಿದೆ ನಾನಹೋ ||4||
ಫಾಲನೇತ್ರ ಶಿವಲಿಂಗ ಮೂಲಮಂತ್ರ ಗಾತ್ರ ನತ ಗೋಪಾಲ ನಿರ್ಜಿತ
ಕಾಲ ಗಾನವಿಲೋಲ ಕೀರ್ತಿ ವಿಶಾಲ ಸಲೀಲ ||5||

ನೀ ಕರೆದು ತಂದು
ನೀ ಕರೆದು ತಂದು ತೋರೆ ನಿನ್ನವನನು
ಮೀರೆನೆಯಗಲಿರಲಾರೆನೇತಕೆ ತೋರೆ
ಬೇರೆ ಬೇರೆ ಮರೆ ಸೂರೆ ತೋರೆ
ಗಾರೆ ಗಾರೆ ಹೇರೆ ತಾರೆ ತಾರೆಯುರೆ ||ಪಲ್ಲವಿ||
ಸಾಕೆಯೆನಗೆ ಬಾಳು ಬೇಕೆ ನಾಡಾಡಿಯವನ
ಸೋಕೆ ಕಾಯವ ಬಿಡುವಾಕೆಯೆಂದೆ ನೀ ತಿಳಿ
ಜೋಕೆ ಜೋಕೆಯಿದು ಹೋಕೆ ಹೋಕೆಯೆನೆ
ಆಕೆ ಈಕೆಯೊಲು ಯಾಕೆ ಯಾಕಿಹರೆ ||1||
ಬಾಲೆಯಿವಳು ಸತ್ಯ ಶೀಲೆ ಎನ್ನ ಸುಚಿತ್ತ
ಲೋಲೆಯೆನುತ ಸಲೆ ಓಲೆ ಭಾಗ್ಯವ ಬೇಡಿ
ಮೇಲೆ ಮೇಲೆನಿಸುವಳೆಂದು ಬಹು
ಲೀಲೆ ಲೀಲೆ ಮಿಗೆ ಹೋಲೆ ಹೋಲೆ ನೆರೆ ||2||
ಆದರೇನವಗೆ ನಾ ಮಾಡದುಳಿದುದೇನು
ಕೂಡವೆಯಿರುತಿರ್ದು ಮೂಢ ತಾನಾದೆ ಎನ್ನ
ನೋಡ ನೋಡ ಸಖಿ ಬೇಡ ಬೇಡನವ
ಕೂಡ ಕೂಡ ನುಡಿಯಾಡಯಾಡದಿರೆ ||3||
ಅಕ್ಕ ಕೇಳಿವನ ನಾ ಮಿಕ್ಕವಳಲ್ಲವೆ ತಾ
ನಕ್ಕರುಳ್ಳವನಂತೆ ಪೊಕ್ಕು ನಡೆದೀಗಳು
ಚಕ್ಕ ಚಕ್ಕನವ ಪಕ್ಕ ಪಕ್ಕನೆಯು
ನಕ್ಕ ನಕ್ಕ ನೀರೆ ಜಕ್ಕ ದಕ್ಕ ನೋರೆ ||4||
ರಂಗುವಡೆದೆನ್ನನು ಹಿಂಗುವುದುಚಿತವೆ
ಹೊಂಗುವ ಶಿವಲಿಂಗನುಂಗುರವ ನೀನಲ್ಲಿ
ತಂಗು ತೆಗೆ ನುಂಗು ನುಂಗುಕೊಡು
ವಿಂಗುರಿಂಗು ಹರಿ ಹಂಗು ಹಂಗುವಿರೆ ||5||

ಏನೆನ್ನಬಹುದೆ ಎನ್ನವನ
ಏನೆನ್ನಬಹುದೆ ಎನ್ನವನ ನೀ ನೆರೆದೆ ||ಪಲ್ಲವಿ||
ಕಲೆ ನೆಲೆಗಳ ನೋಡಿ ಕಾಮರಸದಿ ಕೂಡಿ
ಗಲಬಲೆಯಾಗಿ ಗಾಡಿ ಗರುವತನದೆ ಪಾಡಿ ||1||
ನೋಡಿ ಬಾರೆನಲು ತಾನೋವದೆ ಸುಟ್ಟು ಬಂದ
ಪಾಡಿನವನ ತೆರದೆ ಪಂಥದೆ ಬೆರದೆ ||2||
ಗಗನ ಮಂಟಪಕೆ ನೀ ಗಮಿಸಿ ಕಾಂತನೊಲಿಸಿ
ಸೊಗಸಿತಂದಪಳೆಂದು ಸೋತಿರ್ದೆ ನಾನು ||3||
ಇಮ್ಮನವನು ಬಿಟ್ಟು ಈಗ ನೀ ನದರಿಟ್ಟು
ಗಮ್ಮನೆ ಬರಿಸದೆ ಗಮಕದೆ ತಡೆದೆ ||4||
ಮಾನಿನಿ ನೀ ನಾನು ಮಾಜುವುದುವಿ
ನ್ನೇನು ರಾಗಿ ಶಿವಲಿಂಗೇಶ ದಯವಾದನೆ ||5||

ಎಮ್ಮ ಮೈಲಾರನ
ಎಮ್ಮ ಮೈಲಾರನನಘಲಿಂಗವಿರುತಿರೆ ಮತ್ತೆ
ನಿಮ್ಮ ತಮ್ಮ ಹಾಂಗೆ ಬಳಲುವರಲ್ಲ ನಾವು ||ಪಲ್ಲವಿ||
ನೀಲಗಿರಿ ಮಧ್ಯ ಮಂದಿರನು ನಿಗಮಸ್ತುತನು
ಕಾಲಕರ್ಮವನುಳಿದ ಕರುಣಾರ್ನವ
ಸಾಲು ಮನ್ನೆಯರ ಕೈಯಲಿ ಪೂಜೆಗಳನು ಕೊಂಡು
ಲೀಲೆ ಮಿಗಲರಿವಿನುರೆ ಭಂಡಾರವನೆ ತಳೆದ ||1||
ಮಾಲತಿ ಮಾಲೋಪಮಾ ಶಕ್ತಿಯೊಡಗೂಡಿ
ಕಾಲಮಲ್ಲನ ಕೊಂದ ಕರಿಯಾಲದ
ಮೂಲದಲಿ ನೆಲಸಿ ಮುನಿಜನರ ಬೋಧಿಸಿ ಕಾಯಿದ
ಸೋಲು ಗೆಲವುಗಳೆರಡುವಿಲ್ಲದ ಮಹಾಮಹಿಮ ||2||
ಇವನೊಲಿಸಿ ಭವಕೆ ನಾವೆಲ್ಲವಗ್ಗರು ನೋಡೆ
ಭುವನತತಿಗಳಿಗೆ ನಾವೆ ಗೊರವರು
ಶಿವಲಿಂಗವೇ ಗೊರವ ಗೊರವನೇ ಶಿವಲಿಂಗ
ತವೆ ಏಳು ಕೋಟೆಯುಘೆಯುಘೆಯೇಳು ಕೋಟಿ ||3||

ಜೋಗವನು ಬೇಡಿರೆಲ್ಲಮ್ಮನಡಿವಿಡಿದು
ಜೋಗವನು ಬೇಡಿರೆಲ್ಲಮ್ಮನಡಿವಿಡಿದು ಧೋ
ಮಾಗಳದ ಜೋಗಿಗಳು ಚೌಡಿಕೆಯ ನುಡಿಸೆ ||ಪಲ್ಲವಿ||
ಹಡಲಿಗೆಯನೆಡಗೈಯೊಳಾಂತು ಬಲಗೈಯಿಂದ
ಪಿಡಿದು ಕಾಯಿ ಕೋಲನುರೆದರಿಶನವನು
ಪೊಡವಿಯೊಳು ತಳೆದು ನೊಸಲಲ್ಲಿ ಬಿಡದರಿವಾದ
ಕಡು ಚಲ್ವ ಭಂಡಾರವನು ಭಕ್ತಿಯಿಂದ ||1||
ಸೊಕ್ಕು ಗೋಣಗಳ ದೇವಿಯ ಮುಂದೆ ತರಿದೊಟ್ಟಿ
ಮಿಕ್ಕ ಮರವೆಯ ಕುರಿಯ ಹಿಂಡುಗಳನು
ಕೆಕ್ಕರಿಸಿ ನೋಡಿ ಕುಲಿಲಿರಿದಿರಿದು ರಂಗದಲ್ಲಿ
ತಕ್ಕ ಘಟೆಯನು ಪೊತ್ತು ನಲಿನಲಿದು ತಿರಿಗಿ ||2||
ಹಾರುಗೋಳಿಯನಂಬಂಬರಕ್ಕೊಗೆದು ಸಲೆ ಬೆನ್ನ
ಬಾರಿನೊಡ್ಯಾಣ ಬಂಧದ ಕುಂಡಲವನು
ಧೀರತನದಿಂ ಪಿಡಿದು ಸಿಡಿಯನಾಡುತೆ ಮಹಾ
ವೀರತ್ವದಿಂದ ಶಿವಲಿಂಗದೊಳಗಾದ ||3||

ಸಾಧಕನ ಮಾಡೆಲೆ
ಸಾಧಕನ ಮಾಡೆಲೆ ಕುಮಾರ ಬಿಡದೆ ಮಹಾ
ಬಾಧಕಂಗಳು ನಿನ್ನಪೀಡಿಸಿದ ತೆರದೆ ||ಪಲ್ಲವಿ||
ಪರಮ ಶಿವಧರ್ಮವೆಂದೆನಿಪ ಗರಡಿಯ ಪೊಕ್ಕು
ಗುರುಮೂರ್ತಿಯೆನಿಪ ಮೈಗಾರನಡಿವಿಡಿದು
ಚರಲಿಂಗವೆಂಬ ವೇತಾಳನರ್ಚನೆಗೆಯಿದು
ಶರಣರಿಗೆ ಸಾಷ್ಟಾಂಗವೆರಗುಹವೆ ದಂಡೆ ||1||
ಚೆನ್ನೆಯರ ರತಿಗೆಳಸದಿಹವೆಂಬ ಚಲ್ಲಣವ
ಮನ್ನಣೆಯ ವೈರಾಗ್ಯವೆಂಬ ದಟ್ಟಿಯನು
ಭಿನ್ನವಿಲ್ಲದೆ ತಳೆದು ಬಿಡುತೆಯಿಲ್ಲದೆ ಸುಪ್ರ
ಸನ್ನ ಸಿತದರಿವೆಂಬ ಬಂದಿಯನು ಮೊನೆದೋರಿ ||2||
ಭೂತಿ ರದ್ರಾಕ್ಷಮಾಲೆಗಳೆನಿಪ್ಪ ಗೊಣತರವೊತ್ತಿ
ಭದ್ರ ಸಮೆದಮೆಯೆನಿಪ ಸಂಗ್ರಹಣವಿದನು
ಕ್ಷುದ್ರ ಬುದ್ಧಿಯ ಬಿಟ್ಟು ತಿರುಹಿ ಬಲಯುತನಾಗಿ
ಸದ್ರುಚಿಯ ಭಸಿತ ಧೂಳಿಯನಡಲಿಗೊರೆದು ||3||
ಏಕನಿಟ್ಟೆಯ ಬಗೆಯೆನಿಪ್ಪ ಕಂಬವ ಕಟ್ಟಿ
ಭೀಕರ ಭಯಧ್ವಂಸವೆಂಬ ಕೊಣತವನು
ನೀಕರಿಸದಾವಾಗ ತೊಡರಿಯೆಸಗುವದು ಹರ
ನೇ ಕಮಲನೇತ್ರಾದಿ ಸುರರೊಡೆಯನೆಂದಾರ್ದು ||4||
ಏರಿಳಿದು ನಿಂದು ತಿರುಗುವ ಮಾರುತನೆ ಲೋಡು
ಧೀರ ಕೇಳದುಗೂಡಿ ಸೋಹಮೆಂದು
ಪೂರಿತೋಂಕಾರಾತ್ಮ ಶಿವಲಿಂಗವದು ತಾನೆ
ಸಾರಶಕ್ತಿಯು ನಿನಗೆ ಸಾಧಿಸುವುದಿದುವೆ ದಿಟ್ಟ ||5||

ನಂದನಂದನಾನಂದನಮಿಂದಿರವರದ
ನಂದನಂದನಾನಂದನಮಿಂದಿರವರದ ಸುರ
ವೃಂದವಂದಿತ ಮಂದರಾಚಲಮಂದಿರ ಜಯ ನಂದಿಪತಾಕ ||ಪಲ್ಲವಿ||
ಸಂತತ ಸುಗುಣಗಣ ನಿಶಾಂತ ಸಾಂಬ ಸಸಿ ಬಿಂಬ
ಕಾಂತ ಕಾಯ ನಿರಂತರ ವೈಭವ
ಭ್ರಾಂತಿ ವಿದೂರ ಭವಾಮಯ ವೈರಿ ||1||
ಸನ್ನುತ ಭಕ್ತ ಮಂದಾರ ಸಾರ ವೇದಾಂತ ವಿಹಾರ
ಪನ್ನಗಾಶನ ಪಾಕಶಾಸನ
ಸನ್ನುತಾಂಘ್ರಿ ಪಯೋಜ ವಿರಾಜ ||2||
ರಾಘವ ಪಾಶುಪಥ ರಾಜರಾಜ ಮಿತ್ರ ಭೇದ
ಪಾದಭಕ್ತಿ ವಿನೋದ ಕವಿ ಸೂರ
ಪಾದಪಾಲಿತ ಲೋಕವಿಶೋಕ ||3||
ಶಂಬಯ ವಿರಹಿತ ದಯಾಂಕಿತಾಂಬುಜಾತ
ಕಿಂಕರಾರಿಭಯಂಕರರಾರಿಯಕ
ಲಂತ ಮಂಜುಳ ಶಂಕರ ಶುಭಕರ ||4||
ಮಂಗಲವಿಭವ ಭವಭಂಗ ಭಾಸುರ ಚಾರಿತ್ರ
ತುಂಗಸಿಂಧು ನಿಷಂಗ ಶಿವ
ಲಿಂಗಪುಂಗವಾಹ ನಿರೂಹ ||5||
[/fusion_toggle][fusion_toggle title= ಅನುದಿನದಿ ಶಿವಯೋಗ
ಅನುದಿನದಿ ಶಿವಯೋಗ ಸುಖ
ವನಗಲಲುಚಿತವದಲ್ಲ ಮುನಿವರ
ವನಜ ಪರಿಮಳಕಿರದೆರಗಿದ ಪರಮಧುಕ
ರನ ತೆರದೆ ನಿಜದೊಳು ||ಪಲ್ಲವಿ||
ಎಡದ ಮಡವದನೊಡಲ ನಡುವಣ
ಯೆಡೆಯೊಳಡಗಿಸಿ ಬಲದಡಿಯ ಹಿಂ
ಮ್ಮಡನ ಮೋಹನದುಪರಿಯ ಭಗದೆ
ಮಗಿಯೆರಡುವನೊತ್ತಿ ಬಂಧಿಸಿ
ಬಿಡದೆ ಮೈದಲೆಗಳನು ಸಸಿನದೆ
ಬಿಗಿದು ಮೂರ್ತಿಗೊಳುತ್ತೆ ಕಂಗಳ
ಸಡಗರದ ನೋಟವನು ಮೂಗಿನ ಸಲುವ
ತದಿಯೊಳು ನೆಲೆಗೊಳಿಸಿ ನೆರೆ ||1||
ಮೊದಲ ನೆಲೆಯ ನವಾಂಗುಲದಿ ಸಲೆ
ಮೋಸವಿಲ್ಲದೆ ನಾಭಿ ಕಂಧರ
ವಿದಿತ ಪಶ್ಚಿಮ ಭಾಗದೊಳಗಿಹ ವೀಣೆ
ಯುರು ದಂಡದವಿರಳದಲಿ
ಸೊದೆವೆಳಗು ಮಿನುಗಿನ ಸುಷುಮ್ನೆಯ
ಸೊಬಗಿನನುಪಮವಾಡಿಮಧ್ಯದಿ
ಹುದುಗಿ ಕೋಟಿ ತಟಿತ್ತಪೋಲುವ
ಹುಲುಸಿನಬುಜದ ಮಾಲೆಗೆಣೆಯಹ ||2||
ಲಲಿತತರಜರಂಧ್ರ ತನಕಲಿ ಲ
ವಲವಿಸಿ ಕೊನೆಸಾಗಿ ಹಬ್ಬಿದ
ಚೆಲುವ ಬಿಂದು ಸುಶಕ್ತಿಯನು ನಿಚಿತ
ದೊಳು ನಡೆ ನೋಡು ಸರಸದೆ
ಮಲಿನವಲ್ಲದ ನೊಸಲಮೇಲುರೆ ಮ
ಸುಳಿಸಿದ ಗೋಲಾಟ ಪಡೆಯೊಳು
ಬಲುಮೆಯಹ ತಾರಕಿಯ ತೆರನಹ
ಬಲಿದ ತೇಜವ ಬಗೆಯೊಳೀಕ್ಷಿಸ ||3||
ಮಿಂಚುಬುಳು ಪೋಗೆ ಬೆಳಗಲರಿಲುಗಳು
ಮಿಂಚಿನುದಕಮ ನೀಲರತ್ನವು
ಕೊಂಚೆಯಲ್ಲದ ಸೂರ್ಯ ಚಂದ್ರರು
ಕೋಮಲದ ವೈಡೂರ್ಯ ವಜ್ರವು
ವಂಚಿಸದ ರತ್ನಗಳು ಮೊದಲಹ
ವಸುಧೆಯೊಳಗಿಹನೂತ್ನವರ್ನವು
ಅಂಚಿತದೆ ಅಯಿವತ್ತುವೆನಿಸುವ
ಅಕ್ಕರಗಳಾಕೃತಿಗಳಿವನುರೆ ||4||
ತಳೆದು ತೊಳಗುತೆ ದಿನಪ ಶಶಿ ಶಿಖಿ
ತತ ಮಹಾರುಚಿಮಂಡಲತ್ರಯ
ನಿಳೆಯವೆನಿಸುತೆಯುಪರಿಹೃದಯದ
ನಿಲವೆಯಾದ ನಯನ ಸುವರ್ನದ
ನಲಿನ ಕೇಸರ ನಾಶ ರೂಪದಿ ನಾಡೆ ಮೆರೆ
ಯಲು ಹಿಂದೆ ಹೇಳಿದ
ತೊಳೆಪ ಕಳೆಗಲಿವೆಲ್ಲ ತ
ನ್ನೊಳು ತೋರೆ ಪರಶಿವಲಿಂಗವೆಯಹ ||5||

ಪಂಚವದನ ಪಾಲಿಪುದೆನ್ನ
ಪಂಚವದನ ಪಾಲಿಪುದೆನ್ನ ಪಂಚವದನ
ಪಂಚವದನ ಫಣಿಭೂಷ ಪವಿರದನ
ಇಂಚರ ಗಾನಲೋಲ ಈಶ ಜಗದಧಿಪಾಲಾ ||ಪಲ್ಲವಿ||
ಗಗನಪುರ ಸಂಹಾರ ಗರುಡವಾಹನ ಶೂರ
ಮುಗಿಲನೇರಿದವನ ಮುದ್ದಿನ ಸುತ ಕಾದನ ||1||
ದಶಭವದೊಳು ಬಂದು ದಶಲಿಂಗಗಳನಂದು
ವಶವಮಾಡಿ ಪೂಜಿಸಿದ ವಸುದೇವ ಪುತ್ರ ವರದ ||2||
ಹರಿ ಗುಹಾಸುರನನು ಹತವ ಮಾಡಲು ತಾನು
ವರ ತುಂಗಾತೀರದಿ ತಪಿಸಿ ವಸಿಸಿದೆ ಬಲದಿ ಲೇಸೆ ||3||
ತಿಸುಳಗೈಯ್ಯನೆ ನಿನ್ನ ತಿಳಿದು ಮುಂದಿಟ್ಟ ತನ್ನ
ಹಸನಾದ ಭಕ್ತಿಯಲ್ಲಿ ಹರಯಿಹ ತಿರುಮಲೆಯಲ್ಲಿ ||4||
ಕಮಲಜ ಹರಿ ರುದ್ರ ಕಮಲೇಶ ಸದಾಶಿವ
ವಿಮಲಪೀಠನಿವಾಸ ವಿಭುವೇ ಶಿವಲಿಂಗೇಶ ||5||

ಸೊಗಸಿ ತೂಗಿರೆ
ಸೊಗಸಿ ತೂಗಿರೆ ಸತಿಯರುಯ್ಯಲೆಯ
ನಗತನೂಜೆಯ ರಮಣನ ||ಪಲ್ಲವಿ||
ಮಿಸಿಸುನಿವಲಗೆಯ ನಾಲ್ಕು ದಿಕ್ಕಿನೊಳು
ಪಸರಿಸಿದ ಸರಪಣಿಗಳ
ರಸಿಕತನದಿಂದೆ ಪಿಡಿದು ಪಾಡುತಲಿ
ಸಸಿದಲೆಯನೊಳು ಮಹಿಮೆಯ ||1||
ಚಂಡಕರಕೋಟಿ ತೇಜ ಜಯ ಜಯ ಮೃ
ಕಂಡುವರದಾದಿ ಭಜೆ
ಖಂಡವಿದುಧರನೆಯೆನುತೆ ಪಾಡಿ ಗುಣ
ಮಂಡಿತನನುರೆ ಪರಸುತೆ ||2||
ದಶಭುಜದ ಪಂಚಮುಖದ ತೊಳಪ ತ್ರಿ
ದಶಸೇವ್ಯಮಾನನಾದ
ಪಶುಪ ಶಿವಲಿಂಗದೇವ ಸಲಹೆಂದು
ಶಶಿವದನೆಯರು ಸ್ವಯಂಭುವ ||3||

ಪಾಡಿರಮ್ಮ ತೂಗಿ
ಪಾಡಿರಮ್ಮ ತೂಗಿ ಪಾಡಿರಮ್ಮ ಗಾಡಿಕಾರ ಗರುವ ಚಂದ್ರ
ಚೂಡನೆ ಜೋ ಜೋಯೆಂದು ಪಾಡಿರಮ್ಮ ||ಪಲ್ಲವಿ||
ಮುತ್ತಿನ ತೊಟ್ಟಿಲೊಳಗೆ ಮುದ್ದಿನ ಮೊಗವನಿಟ್ಟು
ಸುತ್ತಮುತ್ತಿಕೊಂಡು ನಿಂದು ಉಯ್ಯಲ ಸರಪಣಿಯ ಪಿಡಿದ ||1||
ವೇಣು ವೀಣೆ ಚೆಂಗು ತಾಳವೆಸೆವ ಮದ್ದಳೆಗಳ
ಜಾಣರೋತು ರಾಗವಿಡಿದು ರಚನೆದೋರುತ್ತೆ ನಲಿದು ||2||
ಚಿನ್ನರನ್ನದ ತೊಡವ ಚೀನಿ ಚೀನಾಂಬರವ
ಬಿನ್ನಣೆಯಿಂದೆ ತಲೆದು ಬಗಸೆಗಣ್ಣರೆದೆರದು ||3||
ರವಿ ಶಶಿ ಶಿಖಿಬಿಂಬರಾಜಿತ ಕಾಂತಿ ಕದಂಬ
ಸುವಿಚಾರಮತಿಗಮ್ಯ ಸುರವರ ರಮ್ಯನೆಂದು ||4||
ತಾವರೆನೂಲ ಪೋಲುವ ತಟಿದಂಕುರವ ನಗುವ
ಭಾವದೊಳಗೆ ಸುಳಿವ ಭಾಸುರ ಜೋ ಜೋಯೆಂದು ||5||
ಕಾಂತೆಯಮ್ಮವ್ವೆಯ ಕರದಲಿಂಗದಿ ಸ್ವಯ
ವಾಂತ ಸಿಸುವೆ ಜೋ ಜೋ ವೊಡೆಯ ಜೋ ಜೊ ಯೆಂದು ||6||
ಸಿಂಧುಬಲ್ಲಾಳನ ಸಿಸುವಾಗಿ ವರದಾನ
ವಂದು ಕರುಣಿಸಿ ಕೊಟ್ಟವವನೆ ಜೋ ಜೋಯೆಂದು ||7||
ಬಸವೇಶ ರಾಣಿಗೆ ಬಾ ನಾದನೆ ಮಿಗೆ ಜಸದೆ ರಾ
ಜಿಸಿದನೆ ಜಯ ಗುಣನೆ ಜಯಯೆಂದು ||8||
ಎಲ್ಲರ ಸಿರದಲ್ಲಿ ಎರವಿಲ್ಲದಿಹ ಎಲ್ಲ
ಬಲ್ಲಹ ಶಿವಲಿಂಗ ಭಲರೇ ಭಾಪುರೇಯೆಂದು ||9||

ಪಕ್ಕನೆ ನೀವು ನೋಡುವ
ಪಕ್ಕನೆ ನೀವು ನೋಡುವ ಬನ್ನಿರೆ
ಅಕ್ಕರಿಂದಲಿ ಮನವೇಕವಾಗಲು
ಸಿಕ್ಕುವನಿದೆ ಪುಸಿಯಲ್ಲಿ ಕಣ್ಣಾಣೆ
ಅಕ್ಕಗಳಿರ ಆನಂದದ ರಮಣನ
ಚೊಕ್ಕ ನುಡಿಗಳ ನುಡಿವುತೆ ಪಾಡುತೆ ||ಪಲ್ಲವಿ||
ತಿಳಿನಂಬರವನು ತಿರವಾಗಿ ತಳೆದನು
ವಿಳಸಿತ ಗುಣವಹ ವಿಚಕಿಲಮಾಲೆಯ
ಗಳಿಲನೆ ಧರಿಸಿಹ ಗರುವರರಸನು
ನಳಿನಹಾಸಂಗಳ ನಡುವನೆಗಳೊಳು ||1||
ಕೋಗಿಲೆಗಳು ಕೂಗೆ ಕೊನೆಯ ಚೂತನವೇರಿ
ರಾಗದೆಯಳಿಗಳು ರಚನೆಯಿಂ ಮೊರೆಯೆ
ಸೋಗೆಗಳಿರದೆ ಗರಿಗಳ ಪಸರಿಸುತೆ
ಸೋಗಿನಿಂದಡೆ ಸೊಗಸುವ ವಿನೋದಿಯ ||2||
ತುಂಬಿತುಳುಂಕುವ ತುಂಬುರು ಮಸಗವ
ಅಂಬುನಿಧಿಯ ಮಧ್ಯದ ಕುರುಜಿನೊಳು
ಶಂಬರರುಹದ ಶಾಶ್ವತ ವಿದ್ಯಾಪೀಠದಿ
ಇಂಬುಗೆಗೊಂಡೆಸೆವ ನಯನಕೋಟಿ ತೇಜನ||3||
ತೆರೆಯಿಲ್ಲದಿಹ ಕಡಲ ತೆರಪಿನೊಳಗೆ ಸೂರ್ಯ
ನಿರದೆ ಪಾತಾಳತನಕಲಿ
ಉರಿವ ತೆರದಿ ತಾನೆ ಉರವಣೆಯಿಂದಲಿ
ಧರೆಯಾಗಸವ ಮುಟ್ಟಿ ದಣುವಿಲ್ಲದೆ ಶಿವನ ||4||
ಏರಿಳಿವಂಚೆಯ ಎರಡು ಪಕ್ಕಗಳನು
ಕೀರಿ ತನ್ನೊಳಗೆ ಹುದುಗಿಕ್ಕಿಕೊಂಡು ತಾನು
ಸೇರುವೆಯಾಗಿಹ ಸೆಳೆಮಂಚದಗ್ರವ
ನೇರಿದವಳ ಕಾಂತಿಯಿಂದೆ ರಾಜಿಸುವ ||5||
ಒಳ ಹೊರಗೆಲ್ಲಿಯು ಓಸರವಿಲ್ಲದೆ
ಪಳುಕಿನ ದಂಡದಂತರದ ಸರಿಗೆಯ
ತೆಳಪಿನಂದದಿ ನಾಡೆ ತೋರುವ ಬೆಳಗಿನ
ಬಳಯುತನೆನಿಸುವ ಬಾಲೇಂದುಮೌಲಿಯ ||6||
ಕರಗಿದ ತುಪ್ಪವೆ ಕಠಿಣವಾದಂದದೆ
ಗುರುವಿನ ಮುಖದಿಂದೆ ಗುರುವಾಗಿಯೆಮ್ಮ
ಕರಗಳ ಪಿಡಿಯುತೆ ಕಲ್ಯಾಣವಾಗುತೆ
ನೆರೆದೇಕವಾಗಿಸ ಪರಶಿವಲಿಂಗನ ||7||

ಇಂದುಶೇಖರ ಸಲಹಾ
ಇಂದುಶೇಖರ ಸಲಹಾ ನೀನಿಂದುಶೇಖರ ಮಂದರಧರ
ವಂದಿತಪಾದನೆ ಮದನಸಂಹ್ವರ ಮರಣವಿದೂರನೆ ||ಪಲ್ಲವಿ||
ಪಾರ್ವತೀಪ್ರಾಣೇಶ ಜಿತದಶ ಪಾವನಕಾಯ ಮಾಹೇಶ
ಪೂರ್ವದಿವಿಜ ಪುರಾರಿ ಪುಣ್ಯಪುಂಜ ವಿಜಯಭೇರಿ ||1||
ಬಾಲನೆಯಮ್ಮವ್ವೆಗೆ ಬಗೆಯೊಳೊಗೆದು ಮಿಗೆ
ಕಾಲ ಕೂಟವನು ತಳೆದು ಕಾಯ್ದೆಯಮರರನೊಲಿದು ||2||
ನಿನ್ನ ಶಿವನಾಮವನು ನಿರ್ಮಲ ಸಾನಂದ ತಾನು
ನನ್ನಿಯಿಂದುಶ್ಚರಿಸುತೆ ನರಕಿಗಳ ಪೊರೆದನೆತ್ತುತೆ ||3||
ಕೋಪದಿಂದೆ ಶ್ವೇತನನು ಕೊಂಡುವೈವ ಯಮನನು
ಭಾಪು ಶೊಲದಿಂದಿರಿದೆ ಭಕ್ತಜನಾನಂದ ಪೊರೆದೆ ||4||
ಬಿಡುಗಣ್ಣನೊರಜುಗಳ ಬಿಂಕದಜೆ ಮೂಗುಸುರಿಂದೆ
ಎಡೆಯಾಡಿಸಿದ ನಂದಿಯಾಯೇರಿದ ಮಹಾನುಭಾವ ||5||
ವಿಷ್ಣುವಿಗೆ ಚಕ್ರವರವವಿರದಿತ್ತ ಮಹಾದೇವ
ಉಷ್ಣಲೋಚನವದನ ಉಕ್ಷರಾಜಿತ ಕೇತನ ||6||
ಪಾವುಕಪುರನಿವಾಸ ಪರಮ ಶಿವಲಿಂಗೇಶ
ಭೂವಳಯಧೀಶ ತುಂಗಭೂತಿ ಸಾಗರನಿಷಂಗ ||7||

ಅಮ್ಮ ನೋಡೆ ಇವನ
ಅಮ್ಮ ನೋಡೆ ಇವನ ಚೆಲುವನಮ್ಮ ನೋಡೆ
ಗಮ್ಮನೆ ಬಂದಿವನೆಮ್ಮವನಲ್ಲವೇ ||ಪಲ್ಲವಿ||
ಎಡ ಭಾಗದ ಕರಯುಗಳದೊಳೊಪ್ಪುವ
ಕಡುಬಿಳುಪಾದ ಶಂಖವನು ಚಕ್ರವನು
ಪಿಡಿದು ಮಕರಕುಂಡಲವು ವಿರಾಜಿಸೆ
ಬೆಡಗಿನ ಪೀತಾಂಬರದ ವನಮಾಲಿಯ ||1||
ಬಲದ ಭಾಗದಿ ಡಮರುಗ ಜಪಸರಗಳು
ನೊಲವಿಂದೆರಡು ಕೈಗಳೊಳು ತಳೆದು
ವಿಲಸಿತ ಸರ್ಪಕುಂಡಲವದು ತೊಳಗಲು
ಪುಲಿದೊವಲುಡೆಯಸುರರ ಶಿರೋಮಾಲೆಯ ||2||
ಕುಂಕುಮರಸ ಲೇಪಿತ ವಾಮಭಾಗ
ಪೊಂಕದ ಭಸಿತಾಂಗವು ಬಲದ ಭಾಗ
ಅಂಕಿತ ಮಣಿ ಕಿರೀಟವೆಡದಕಡೆ
ಪಂಕಜನೇತ್ರೆ ಜೆಡೆಮುಡಿ ಬಲನು ||3||
ನೊಸಲೊಳು ಕಸ್ತೂರಿತಿಲಕಾಗ್ನಿ ನಯನ
ಲಸಿತನಾಗಿ ನೀಲಧವಳ ಕಾಂತಿಗಳ
ಪಸರಿಸಿ ಕಾಮಪಿತನ ಕಾಮಹರನ
ಬಿಸಜ ನೇತ್ರ ಸೂರ್ಯನೇತ್ರನನೊಲಿದು ||4||
ವಿಶ್ವವೆನಿಸಿದನ ವಿಶ್ವೇಶ್ವರನ
ವಿಶ್ವಭಾದಕ ಗುಹಾಸುರನ ಕೊಂದವನ
ಶಾಶ್ವತ ಹರಿಹರನಾಮವಾಂತವನ
ಅಶ್ವವಾಹನಸಖ ಶಿವಲಿಂಗೇಶನ ||5||

ಶ್ರೀಗೌರಿ ಪೊರೆಯಮ್ಮ
ಶ್ರೀಗೌರಿ ಪೊರೆಯಮ್ಮ ಶ್ರೀವಾಗ್ದೇವಿಯರಮ್ಮ
ಸೋಮವದನೆ ನೀನೆ ಸೊಗಸಿ ಕೋಕಿಲಗಾನೆ ||ಪಲ್ಲವಿ||
ಶೈಲರಾಜಕುಮಾರಿ ಶೌರಿ ವಿಜಯಭೇರಿ
ಮೂಲಶಕ್ತಿ ಮಾರಾರಿ ಮೂಲ ಗುಣಮಂಜರಿ ||1||
ಪರಮೇಶಿ ಸಿಂಹವಾಹನೆ ಪರಿಪೂರ್ನೆ ಮೃದುಯಾನೆ
ಸುರಚಿರ ಕುಂದರದನೆ ಸುರಜನನುತಮಾನೆ ||2||
ಮಹಿಷದಾನವ ಭಂಗೆ ಮಹಿಳಾಸಂಕುಳ ತುಂಗೆ
ಸಹಿತ ಭಕ್ತಾಂತರಂಗೆ ಸಹನ ಕರುಣಾಪಾಂಗೆ ||3||
ಸೂರ್ಯಮಂಡಲವಾಸೆ ಸೂರ್ಯಕೋಟಿಸಂಕಾಶೆ
ಆರ್ಯೆ ನಿಗಮಭಾಷೆ ಆರ್ಯಸನ್ನುತ ತೋಷೆ ||4||
ಮಂಗಳಾಯತ ಕೀರ್ತಿಮಂಗಳೆ ವಿಜಿತಾರಿ
ಸಂಗತಾಖಿಳಮೂರ್ತಿ ಸಂಗ ಶಿವಲಿಂಗಮೂರ್ತಿ ||5||

ಬಗಸೆಗಂಗಳೆ ಬರಿಸೆ
ಬಗಸೆಗಂಗಳೆ ಬರಿಸೆ ಬ್ಯಾಗದಿ ಸೊಗಸಿನವನ ಸೋತೆನವನಿಗೆ
ಹಗಲುಗತ್ತಲೆಯಾಯಿತು ಕಾಣದೆ ಹರಹರಾ ದಯವಿಲ್ಲವೇ ||ಪಲ್ಲವಿ||
ಸಲಿಗೆ ಮಾತನು ನುಡಿಯಲ್ಯಾತಕೆ ಸಾರೆ ತನ್ನುವನು ರತಿಯೊಳು
ಗಲಸದಿರ್ದುದಕಿದುವೆ ಫಲವೆಲೆ ನಲಿನನಯನೆ ||1||
ರವೆಯನಿತು ತಪ್ಪಿರಲುವೆನ್ನೊಳು ರಮಣತಾನೆ ತಿರ್ದುತೆ
ಸವಿಗಲೆಯೊಳಮರ್ದಪ್ಪಿ ಮುದ್ದಿಪ ಸರಸವೆರಸಿ ||2||
ಕನ್ನೆವರೆಯದಿ ತೊಡಗಿ ತಾನೊಲಿದೆನ್ನ ಕರವ ಪಿಡಿವುತೆ
ಮನ್ನಿಸುತೆ ಸಕಲೋಪಚಾರವ ಮಾಡಿ ಕೂಡಿ ||3||
ಎಂತು ಜೀವಿಸಬಹುದೆಯಗಲಿವನಂ ತಡೆಯದೆ ತಿಳಿಪುತೆ
ಸಂತವಿಡು ನೀ ಬೇಡಿದುದನಾನಂತರಿಸೆನೆ ||4||
ಹಾಲಹಾಲನು ಬೆರಸಿದಂದದಿ ಲೀಲೆಮಿಗಿಲುವೆನ್ನೊಳು
ಲೋಲನಾಗಿಹಮರ್ತಿಶಿವಲಿಂಗೇಶ್ವರನನು ||5||

ಕರದು ತಂದು ತೋರೆ
ಕರದು ತಂದು ತೋರೆ ಕಾಂತನ ನವ್ಯ ಸರಸಿಜಾಕ್ಷಿ ನೀರೆ
ಪುರವಿಜಯನ ಕಾಲಹರನ ಹರಿಣಶಿಶು
ಕರಪಲ್ಲವನ ಮದಕರಿಯನು ಸೀಳ್ದನ ||ಪಲ್ಲವಿ||
ಚೆದಿರುತನದೊಳೆನ್ನ ಮೆಚ್ಚಿಸಿ ತನ್ನ ಪದವ ಮುಟ್ಟಿಸಿ ಮುನ್ನ
ಪದುಳದೊಳಿರುತಿರ್ದುಪಂಥಗಾರಿಕೆಯೀಗ
ವಡಗಲುಚಿತವಿದಲ್ಲದಾಡಿ ಮ
ರದನ ಸುಂದರವದನನಭವನ ||1||
ಎಲ್ಲರಂತೆಯಲ್ಲ ಇವನ ಕಾವ ಮಲ್ಲಿಗೆಬಾಣ ಬಲ್ಲ
ಚಲ್ಲೆಗಂಗಳೆ ನೀನೆ ಲಲ್ಲೆವಾತುಗಳಿಂದೆ
ಬುಲ್ಲವಿಸಿ ಸುರವಲ್ಲಭನ ಸಲೆ
ಮೆಲ್ಲಮೆಲ್ಲನೆ ತಿಳುಹಿ ಚಕ್ಕನೆ ||2||
ಬಲವಂತನೆನಿಸಿದನ ಬಲ್ಲಿದ ನೇಹಗಲೆಗಳ ತೋರಿದನ
ಮಲನವಿದೂರನ ಮಂಜುಲ ಚರಿತನ
ವಿಲಸಿತಾಂಗನ ವಿನುತ ರಂಗನ
ಲಲಿತ ಪರಶಿವ ಲಿಂಗದೇವನ ||3||

ನಾರಿಯಲ್ಲವೇನೆ
ನಾರಿಯಲ್ಲವೇನೆ ಅಲ್ಲವನಧನಾರಿಯಲ್ಲವೇನೆ
ವಾರಿಜನೇತ್ರೆ ಕುಶಲಗುಣಪಾತ್ರೆ ವೈ
ಯ್ಯಾರಿಯುಭಯರೂಪನಾದ ಬಗೆ ನೋಡೆ ||ಪಲ್ಲವಿ||
ಮುತ್ತಿನೋಲೆ ಮೂಗುತಿ ಕತ್ತುರಿ ಬೊಟ್ಟು
ಮೊತ್ತದ ನೀಲವೇಣಿ
ಬಿತ್ತರದೆಡದ ಭಾಗದ ಸರ್ಪ ಕುಂಡಲ
ವೊತ್ತಿದಗಿನಿಗಣ್ಣು ಭಸಿತವು ಬಲದ ||1||
ನೀಲವರ್ನವು ಚಿನ್ನದತಾಗಟಿನಚ್ಫ
ಶಾಲೆ ರತುನದೊಡ್ಯಾಣ
ಲೋಲೆಯೆಡದ ಭಾಗ ಧವಳಾಂಶು ಕರಿಚರ್ಮ
ಚೇಲವು ಪುಲಿದೊವಲುಡೆಯು ಬಲದ ಕಡೆ ||2||
ಮಣಿಮಕುಟವು ಚಕ್ರ ವರದಹಸ್ತ
ಬಣಿತೆಯ ಬಳೆ ಕಡಗ
ಪ್ರಣುತ ಕುರಂಗನಂಬುಗೆಯು ಕೆಂಜೆಡೆ ಬಲ
ದಣಿಯರವಹ ಶಿವಲಿಂಗನಾನಂದ ದಿವ್ಯ ||3||

ಹೆಚ್ಚಿತೊ ಕಲಿ ಹರ ಹರ
ಹೆಚ್ಚಿತೊ ಕಲಿ ಹರ ಹರ ಹೆಚ್ಚಿತೊ ಕಲಿ
ಕಿಚ್ಚು ಕಿಡಿಯನುಗುಳತೆ ಧರಣಿಯ ಮೇಲೆ
ಬಚ್ಚಬರಿಯ ಹುಸಿಗಳ ಪಸರವನಿಕ್ಕಿ ||ಪಲ್ಲವಿ||
ಕಾಶಿಗೆ ಹೋಗುತಿಹ ಪಾರ್ವರ ಮಹಾ ರಾಸಿಯೊಳೊರ್ವ ದ್ವಿಜ
ಆಶೆಯಿಂ ಸೌತೆಯ ಬುಡದಿ ರೊಕ್ಕವನಿಕ್ಕೆ
ಮೋಸವಿಲ್ಲದ ಕಾಯ ಮೆಲಲು ಕಾಡಿತು ಕಲಿ ||1||
ಗುರುವಿನಾಜ್ಞೆಯನು ಮೀರಿ ಜನನಿ ಜನಕರಿಗೆ ಘಾತವೆಣಿಸಿ
ಪರಮಪುರುಷರೊಳು ದೋಷಕಲ್ಪನೆಗಳ
ನಿರದೆಸಗುತೆ ಬಹುಮುಖದೆ ಸಂಚರಿಸುತೆ ||2||
ಇಕ್ಕಿದದುಂಡು ಸಲೆ ಕೊಟ್ಟೊಡೆ ಹೊದೆದಕ್ಕರಿಂದಿರುತ ನಡೆ
ಪಕ್ಕನೆ ಕುಹಕವ ಯೋಚಿಸುವ ರೂವಿದು
ದಕ್ಕಡಿಗತನವಲ್ಲವೆ ಶಿವಲಿಂಗ ||3||

ಯಾಕೆ ಕುದುಕುಳಿ ಮನಸು ನಿನಗೆ
ಯಾಕೆ ಕುದುಕುಳಿಮನಸು ನಿನಗೆ ಜೋಕೆ ಮಾನವ
ಶೋಕರಹಿತ ಮೃಢನನೇಕಭಾವದೆ ಭಜಿಪ ||ಪಲ್ಲವಿ||
ಹರನಪ್ಪಣೆಯನಾರು ಹಸಗೆಟ್ಟು ಮೀರುವರು
ಧರಣಿಯೊಳಗವರು ದಕ್ಕಡಿಗ ರಕ್ಕಸರು ||1||
ಹನುಮನ ಮುಂದೆಸೆಯು ಹಾರುಗಪ್ಪೆಯೆಯೆಂಬಂತೆ
ಘನ ಶಿವಾತ್ಮನ ನೀನು ಘಾಸಿ ಮಾಡುವೆನೆಂಬೆ ||2||
ಹಂಗು ಹರದಿಹ ಶಿವಲಿಂಗದೊಡವೆರದಿಹ
ಮಂಗಳ ಸ್ವಾತಂತ್ರ್ಯವನು ಮಾಜುವೆನೆಂಬವನೆ ಕೆಡುವ ||3||

ಸಾಮಜವದನಾಭಿರಾಮ
ಸಾಮಜವದನಾಭಿರಾಮ ಸೋಮ ಕ
ಘಿಮಕುಟರಕ್ಷಕ ಭೀಮ
ಶ್ಯಾಮಲಗಳ ನುತ ಸೋಮನಿಗಮ ಜಿತ
ಕಾಮ ಶಿವಾಮುಖ ತಾಮರಸ ||ಪಲ್ಲವಿ||
ಉಕ್ಷವಾಹನ ನಿಟಿಲಾಕ್ಷ ಖಳದಕ್ಷವಿಪಕ್ಷ ವಳಕ್ಷ
ಪಕ್ಷಪಾತಕ ದೂರ ಪರಮ ದಯಾಕರ
ಯಕ್ಷ ನಾಯಕಪಕ್ಷ ಯಮಿವರ ನುತದಕ್ಷ ||1||
ಜಯಗುಣಶೀಲ ವಿಲೋಲಕಾಲ
ಭಯಹರ ನತಜನ ಪಾಲ
ನಯತರ ಭಾಷಣ ನಾಗವಿಭೂಷಣ
ಲಯ ವಿಜಯಾನಂದಶಾಲಿನಮರವರ ||2||
ತುಂಗಮಹಿಮ ಶಿವಲಿಂಗ ಮಹೇಶ್ವರ
ಸಂಗತ ಶರಣಾಂತರಂಗ
ಭಂಗವಿರಹಿತ ಭಾಸುರ ಭವ್ಯ ಚರಿತ್ರ ನಿ
ರಂಗ ಕೈಲಾಸಾದ್ರಿ ಶೃಂಗ ನಿಕೇತನ ||3||

ಸಲೆ ನೀನೆ ಜಗವಾದೆ
ಸಲೆ ನೀನೆ ಜಗವಾದೆ ಸಕಲೇಶ್ವರ
ಸಲುವಳಿಯಿದಲ್ಲದಿರೆ ಸರಸಗುಣವಿಹುದೆ? ||ಪಲ್ಲವಿ||
ಕಡಲೊಳಗೆ ತೋರಿ ಕಡೆಗಾಣದಿಹ
ಬಲು ತೆರೆಯವೊಲು ನೀನೇ ನಿನ್ನ ಶಕ್ತಯು ಈ
ಬೆಡಗಿನಿಂದೀಯಖಿಳ ಬೇರೆ ಕಾಣಿಸದಂತೆ
ತೊಡಕಿ ನಿನ್ನೊಳಗೆ ಎಡವಿಡದಿಹುದು ನಿಜವು ||1||
ರವಿ ತನ್ನ ಜಲ ಕಿರಣವನು ಕರೆದುವದರಲ್ಲಿ
ತವೆ ತಾನೆ ಪೊಳೆದು ಪಡಿಬಿಂಬವೆನಿಪ
ನೆವದಂತೆ ನಿನ್ನ ಶಕ್ತಿಯೊಳೆ ನೀ ಮಾಪೆರೊಳೆದು
ರವೀಶ ಕಳೆಗದಿರಿಂದೆ ಜಲವನುಂಡಂತೆ ||2||
ಸಸಿನೆ ದೇವಾತ್ಮ ಶಕ್ತಿಯುವೆಂಬುದಾ ನಿಗಮ
ಲಸಿತ ಸ್ವಶಕ್ತಿ ಪ್ರಾಶಯೀ ವಿಶ್ವವು
ಪುಸಿಯಲ್ಲವೆಂದು ಶಿವಸೂತ್ರ ಮೊರೆಯಲು ಶಕ್ತಿ
ರಸವಲ್ಲಭನೆ ಶಿವಲಿಂಗ ಅದೆ ನೀನೆ ||3||

ನಿನ್ನ ನೀನೇ ತಿಳಿದು ನೋಡ
ನಿನ್ನ ನೀನೇ ತಿಳಿದು ನೋಡ ಸಕಲ ಜನ ನಿಂದೆಯು ಬೇಡ
ಭಿನ್ನ ಭಾವವನು ಬಿಟ್ಟು ಬಿನ್ನಣವಳವಟ್ಟುವೀಗ ||ಪಲ್ಲವಿ||
ದೇಹವನಾರೈಯೆ ತಾನು ದೇಗುಲದಂತೆ ಯೆಲ್ಲರಿಗೆ
ಮೋಹದ ಕರಣಗಳು ತಾವು ಮೋಸದಾ ತೋರಿಕೆಗಳಯಿಸೆ ||1||
ಬೈದರು ಪರರೆನ್ನನೆಂದು ಬೈರೂಪಾದ ಮಾತನಾಡದಿರು
ಹದನೆ ನೀ ಬಯ್ವ ಮರವೆಯ ಹಾದಿಯನವರೆ ಬೈದಪರು ||2||
ಮಾರಿಯ ಮನೆಯೌತಣವು ಮರಿಯದ ಸಂಸಾರವು
ಕೂರಿತಹ ಕರ್ಮಾವಳಿಯೋ ಕುಶಲಿ ಶಿವಲಿಂಗದಿ ಬೆರೆಯೊ ||3||

ಯಾಕೆ ಮನೆಗೆ ಬಾರನೆ
ಯಾಕೆ ಮನೆಗೆ ಬಾರನೆ ಯೆನ್ನಿನಿಯನು
ಜೋಕೆಯಿಂದಿಲ್ಲಿಗವನ ನೀ ಕರತಾರೆ ನೀರೆ ||ಪಲ್ಲವಿ||
ತನ್ನನಲ್ಲದೆ ಹೆರರ ಮನ್ನಿಸಿ ಮಾತಾಡಲರಿಯೆ
ಚೆನ್ನಿಗ ತಾನೆ ಬಲ್ಲನೆ
ಚೆಲ್ಲೆಗಂಗಳೆ ಯಿನಿತು
ಸೊಲ್ಲದೆ ಸುಮ್ಮನಾದನೆ ಸೋಜಿಗವಿದು ||1||
ಪ್ರಾಣಪದಕವೆನಗೆ ಏಣಲೋಚನೆಯಾತ
ಕೇಣವಿಲ್ಲದಿರುತಿರ್ದನೆಈಗಳದೇನೊ
ಕಾಣನೆ ತಾನೆ ಮುನಿದನೆ ನೀನೆ ನೋಡಮ್ಮ
ನಾಣುಗೇಡಿಯನು ತೋರೆ ನಾನಿರಲಾರೆ ||2||
ಗಗನಗಿರಿಯ ಮೇಲೆ ಸೊಗಯಿಪ ಬನದೊಳಗೆ
ಝಗಝಗಿಸುವ ಚಿನ್ನದ ಮಂಟಪದಲ್ಲಿ
ಮಿಗೆಯೊಪ್ಪುತಿಹ ಮಂಚದಿಯಗಲದೆನಗೆ
ಬಗಸಿ ಶಿವಲಿಂಗೇಶನ ಬರಿಸೆಯವನ ||3||

ನಂದಿವಾಹನನ ವೈಯಾಳಿಯ
ನಂದಿ ವಾಹನನ ವೈಯಾಳಿಯ ನಟನೆಯಿದನು ನೋಡಿರೆ
ಮಂದರಧರ ಪುರಂದರ ವಿಧಿಗಳು
ಚಂದದಿ ಚತುರಂಗ ಬಲದೊಳು ನಡೆತರೆ ||ಪಲ್ಲವಿ||
ಪರಶು ಡಮರುಗ ಶೂಲ ಕನಕಚಾಪ ಪಟು
ತರಾಯುಧ ಪಾಣಿಯ
ಕರಿಚರ್ಮ ವಸನವು ಕರ ಶೋಭಿಸುತಿರೆ
ಉರಗಕುಂಡಲ ರತ್ನ ಕಿರಣವು ಪಸರಿಸಿ ||1||
ಎಡ ಬಲದೊಳು ಪ್ರಮಥ ರುದ್ರರ ಸೇನೆ
ಎಡೆವಿಡದೆಯ್ತರಲು
ತುಡುತುಡುವಾಗಿ ಕಿನ್ನರರು ಕಿಂಪುರುಷ ಗ
ರುಡರು ಪಾಡಲು ಪೂಮಳೆಯನಮರರು ಸೂಸೆ ||2||
ಚಂಚಿ ಪಡುಗ ಕಡುಗ ಪಾವುಗೆ ಚೆಲ್ವ
ಕುಂಚ ಸೀಗುರಿಗಳನು
ಸಂಚಯದಿಂ ಪಿಡಿತರೆ ಸುರರಮರಿಯ
ರುಂಚೆ ದುರಿತೋಂಗವೆಂದು ನಟಿಸೆ ಮುಂದೆ ||3||
ವಿಲಸಿತ ಕಸ್ತೂರಿಯ ತಿಲಕವದು
ಕಲಕದೆ ತೋರುತಿರೆ
ಗಲವಿಂದೆ ವೃಷಭನ ಚರಣದಂದುಗೆ ಗೆಜ್ಜೆ
ಘಲಿರ್ಘಲಿರ್ಝಲರ್ಝಣರೆಂದುಲಿಯಲಾಗ ||4||
ಸುರರ ದುಂದುಭಿ ಮೊಳಗೆ ದಿಕ್ಕುಗಳಲ್ಲಿ
ಮೊರೆಯೆ ಬಹಳ ವಾದ್ಯವು
ಅರರೆ ಬಸವನ ಠೆಕ್ಕೆಯು ಬಾಣ ತುಡುಕಲು
ಬಿರುದಾವಳಿಯ ಘೋಷಣದೆ ಶಿವಲಿಂಗನ ||5||

ಸಲೆ ಜೀನನಾಗದಿರೊ
ಸಲೆ ಜೀನನಾಗದಿರೊ ಸಾರಿದೆ ಮನಜ ಸಲೆ ಜೀನನಾಗದಿರೊ
ನೆಲದಲ್ಲಿ ದಾನನಿಶ್ಚಲನಾಗು ಪಾತ್ರದಿ | |ಪಲ್ಲವಿ||
ಕಬ್ಬಿಗೆ ನೀರ ಕಿರ್ದಲು ಕಡು ಸಿಹಿಯಾಗುವಂತೆ
ನಿಬ್ಬರದ ಬೇವಿನ ನೀರು ನಿವೇದಿಸಲು
ಕೊಬ್ಬಿದ ರಸವು ಕಹಿಯು ಕೊನೆಗೆ ತಾನಾದ ತೆರದಿ
ಹಬ್ಬಿಯ ಪಾತ್ರಕೆ ಕೊಡಲು ಹಸನಲ್ಲವೆಲ್ಲವೊ ||1||
ಹರಿವಿ ತುಂಬ ಹಾಲ ಕರೆದು ಹಾವಿಗೆ ಎರೆಯಲದು
ಗರಳವಾಗಿ ತೋರುವುದಲ್ಲದೆ ಗತವಾದಪುದೆ
ವರಗೋವಿಗದೆ ಪಾಲ ವಸುಧೆಯೊಳೆರೆಯಲು
ನರಸುರಾದಿಗಳನು ನಾಡೆ ಪಾಲಿಪುದು ನೋಡು ||2||
ಒಲಿದ ಪಾತ್ರಕೆ ಕೊಡಲು ಬಹದು ದಾರಿದ್ರತೆಯು
ಸಲುವದರಿಂದೆಪಾಪವುಸಮನಿಸುವುದು
ಮಲಿನದುರ್ಗತಿಯದರಿಂದಮಾಡೆಬಹುದು ನಿನಗೆ
ಒಲಿದು ಶಿವಲಿಂಗೇಶನವಾರೆಯಾಗದೆ ಭಜಿಸೋ ||3||

ಸೋಮಶೇಖರ ಪಾಲಿಪುದು
ಸೋಮಶೇಖರ ಪಾಲಿಪುದು ನಿಸ್ಸೀಮ ಶರಣ ||ಪಲ್ಲವಿ||
ಗರಧರ ಕಂಕಣ ಗರಿಮಾಭರಣ
ಹರಿಣ ಕರಾಂಬುಜ ಹರಿತ ಸಿರೋಜ
ಚರಣ ವಿಲೋಚನ ಚರಿತ ಸುವಚನ
ಮರಣಜನ್ಮ ವಿಜಯ ಮರುದತಿ ಹೃದಯ ||1||
ಸಾಮಗಾನ ವಿಲೋಲ ಸಾಮಜಲೀಲ
ಭೀಮ ನಿರುತರ ಭೀಮ ಸಂಹಾರ
ರಾಮಪೂಜಿತ ಪಾದ ರಾಮ ವಿನೋದ
ಕಾಮಿತವರದಾತ ಕಾಮ ವಿರಹಿತ ||2||
ಘನ ಮೂಲ ಮನುವೇಷ ಘನಮಾರ್ಗ ಕೇಶ
ಕನಕರೇತೊಯುತ ಕನದತಿ ಮಹಿತ
ಧನಪತಿ ವರಮಿತ್ರ ದನುಭವ ಜಯಿತ್ರ
ವನಧರಧರ ವನಧಿ ಗಂಭೀರ ||3||
ಅತಿಶಯ ಕಾರುಣ್ಯ ಅತಿಥಿ ಶರಣ್ಯ
ನತ ಸುರಪಾದಪ ನತ ಮೇರು ಚಾಪ
ಗತಮಾಯ ನಿರುಪಾಯ ಗತ ಸಿತಕಾಯ
ಶತಪತ್ರ ಸಖ ರಾಜ ಶತಕೋಟಿ ತೇಜ ||4||
ತ್ರಿಪುರ ಕೈರವ ಸೂರ ತ್ರಿಪುಟಿ ವಿಹಾರ
ಕಪಟಗುಣಾಪಪಕಪಿವರವಾಹ
ಸುಪವಿತ್ರಕಾಯ ಕಶಪರಾಮಲೋಕ
ವಿಪುಳಾತ್ಮ ಶಿವಲಿಂಗ ವಿಪುಲ ಶತಾಂಗ ||5||

ಓಪ ನೀನಮಮ ಜಗಕೆ
ಓಪ ನೀನಮಮ ಜಗಕೆ ಹರಿಲೋಪ ಗಿರಿಜೇಶ
ಪಾಪವಿದೂರ ಪರಮ ಹಿಮಗಿರಿವರ
ಚಾಪ ಶರಣಜನಗೋಪದಭವ ||ಪಲ್ಲವಿ||
ಪೊಡವಿ ಜನರ ಸುಡುವ ವಿಷವ ಕೊರಳೆಡೆಯೊಳು ತಳೆದೆಸೆವ
ಕಡುಕಲಿ ಜವನನಿರಿದು ತಿಸುಳದೊಳಂದು
ಬಿಡದೆ ಮೃಕಂಡುಸುತ ಶ್ವೇತರನು ಕಾಯ್ದ ||1||
ಮದನಂಗೆ ಹೆದರಿ ಬಂದು ಮರೆಯ ಹೊಕ್ಕ ಮುನಿಗಳಿಗಭಯವನು
ಮುದದೆ ಪಾಲಿಸಿ ಮನಸಿಜನನುರುಹಿ ಬೂದಿ
ಯೊದವಿಸಿ ಪೂಸಿ ಮೈಯ್ಯೊಳು ಮೆರೆದನುಪಮ ||2||
ಹುಟ್ಟು ಹೊಂದುಗಳಿಲ್ಲದ ಹುರಿದ ಬೀಜದೊಟ್ಟಿಲೊಯೆನೆ ತೋರುವ
ದಿಟ್ಟ ಮುಕುತರನು ಬಿಟ್ಟೆಡೆಯಾಡದ
ನೆಟ್ಟಿಗೆ ಪರಬೊಮ್ಮವೆನಿಸುತ ಪೆಸರಾದ ||3||
ಸತ್ಯ ರೂಪನುವೆನಿಸಿ ನಿಗಮದಲ್ಲಿ ನಿತ್ಯ ಕೀರ್ತಿಯ ಪಡೆದು
ಅತ್ಯಧಿಕತೆಯಿಂದೆ ರಾಜಿಸಿ ನಿಜ ಮುಕ್ತಿ
ಕೃತ್ಯವನೆಸಗುವ ಕ್ರೂರಭವಾಪಹ ||4||
ಕಾಶಿಯಪತಿಯೆನಿಸಿ ನಿಖಿಳ ಜೀವರಾಸಿಗಲನು ರಕ್ಷಿಸಿ
ಕೌಶಲ ತಾರಕ ಮನುಮೂರ್ತಿ ಶಿವಲಿಂಗ
ನಾಶರಹಿತ ನಾಕಕೇಶ ನರೇಷ್ಟಧಾ ||5||

ತಕತಕನಾಡಿದನೆ ನಾಟ್ಯವ
ತಕತಕನಾಡಿದನೆ ನಾಟ್ಯವ ತಕತಕನಾಡಿದನೆ
ತಕತಕತಕತಕಯೆಂದೆನುತಂ
ಸಕುಟಿಲಕಪಟಾಂಧಕನೆದೆಯೆನುತ
ವಿಕಲದೆ ಮೆಟ್ಟುತೆ ಪೇರಣೆದೋರುತೆ
ಶುಕರಥನನು ದಹಿಸಿದ ಪುರಹರನು ||ಪಲ್ಲವಿ||
ಅಚ್ಚುತನು ನಂದಿಯ ಮದ್ದಳೆಗಳ
ನೊಚ್ಚತ ಧಿಂಧಿಂಧಿಮಿಕೆನೆ ನುಡಿಸಲು
ಬಿಚ್ಚದೆ ಹಸ್ತಚಮತ್ಕೃತಿಯೊದಗಲು
ಮೆಚ್ಚುವಡೆದುವಜತಾಳವನೊತ್ತೆ ||1||
ವಾಯು ಉಪಾಂಗವನೂದಲು ಪಾವಕ
ವಾಯರದಿಂದಲಿ ಚೆಂಗನು ಬಾರಿಸೆ
ಕಾಯದೊಲಪುಕಾಣಿಸುತಿರೆಯಭಿನಯ
ದಾಯತಿ ಪೊಳೆಯಲು ಸಂಚುಗಳಿಂದೆ ||2||
ಸರಸತಿ ವೀಣೆಯ ನುಡಿಸಲು ಲಕುಮಿಯು
ಉರುಗಾನವ ಮಾಡಲು ದೇವೇಂದ್ರನು
ಪರುಠವಿಸುತ ಕೊಳಲನು ನಾದಿಸುತಿರೆ
ತರತರದಿಂನಿಂದಮರರುಘೆಯೆನೆ ||3||
ಝಲಿಝಲಿಝಲಿ ಝಲಿಯೆಂದುರೆ ಕಿರುಗೆಜ್ಜೆಗ
ಳಲುಗಲು ಕಾಲಂದುಗೆಗಳು ರವದಿಂ
ಘಲಘಲಘಲವೆನೆ ಘಂಟೆಗಳಬ್ಬರ
ಸಲೆ ಕಿಣಿ ಕಿಣಿ ಕಿಣಿಯೆಂದೊಗುಮಿಗೆ ಸೊಗಸೆ ||4||
ಪೊಡವಿಯಡಿಯ ಸರ್ಪನ ಸಾಸಿರವಹ
ಪೆಡೆಗಳು ಬಳುಕಲು ದಿಗ್ಗಜಗಳು ಘೀ
ಳಿಡೆ ಗ್ರಹಗಣರು ಝಲ್ಲನೆಯುದಿರುತಿರೆ
ನಡುಗಣ್ಣಗಿನಿಯ ಕಿಡಿಗಳು ಕೆದರೆ ||5||
ತಿರದೊಳು ಗಂಗೆಯು ದುಡುಮುಹ ದುಡುಮ್ಮೆಂ
ದುರುವಣಿಸಿ ತುಳುಂಕಲು ತಾವರೆಯ
ಹೊರಜಲೆಗಳ ಮೇಲುಗುವ ಜಲಸೀ
ಕರಗಳು ಮುತ್ತುಗಳಂತೆ ವಿರಾಜಿಸೆ ||6||
ರತ್ನಖಚಿತ ಭೂಷಣಗಳು ರವದಿಂ
ನೂತ್ನದೊಳೊಂದೊಂದರೊಳೊಂದುರಿಯಲು
ಯತ್ನದೆ ತಿಂಗಳ ಕಳೆಗಳು ಮಿಂಚಲು
ಪತ್ನಿಯು ದೇವಿಯರೊಡನೆ ನಿರೀಕ್ಷಿಸೆ ||7||
ಚಂದ್ರನ ದೆಸೆಯಿಂ ಜೀವನ ತುಂಬುತೆ
ಸಾಂದ್ರ ಶಿರೋಮಾಲೆಯು ಭೋರಿಡುತಿರೆ
ರುಂದ್ರ ಮಹ ಶೂಲದಲಿ ಪೆಣವದು ವೃಷ
ಭೇಂದ್ರವಾಹನ ಜಯವೆಂದು ತಿರುಗುತಿರೆ ||8||
ಸುರ ದುಂದುಭಿ ಮೊಳಗಲು ಪೊಮಳೆಗಳು
ಬರದಿಂ ಕರೆಯಲು ಸುರರಿಷ್ಟಾರ್ಥವ
ನೆರಪುತೆಯೆಂದಿನ ತೆರದೊಳು ಲೋಕವ
ಪರಿಪಾಲಿಸ ಶಿವಲಿಂಗೇಶ್ವರಾ | |9||

ಮಂದರಾದ್ರಿ ನಿಲಯ ಮುಕುಂದ
ಮಂದರಾದ್ರಿ ನಿಲಯ ಮುಕುಂದನೇತ್ರ ಪಾದಾರ
ವಿಂದ ಪಾಲಿಪುದೈಯ್ಯ ಶಂಕರ ಶಿವಶಿಂಕರ
ಚೆಂದಿರಕಲಾಕಲಾಪಚೆತುರವೇದಸಲ್ಲಾಪ
ದಯಸಾಗರ ಶಂಕರ ದಯಸಾಗರ ||ಪಲ್ಲವಿ||
ನನ್ನಿಯಾಗಿ ಮೂರುತೆರದಿ ನಿನ್ನ ಪಾದಾಂಬುಜವನು
ಮುನ್ನವೆ ನಂಬಿದೆನಯ್ಯ ಶಂಕರಾ ಶಿವಶಂಕರ
ಚಿನ್ನದಗಿರಿಕೋದಂಡ ಚಿನ್ನಿಧಿ ಸುಗುಣ
ದಯಸಾಗರ ಶಂಕರ ದಯಸಾಗರ ||1||
ಅಂಬಿಕಾ ಮುಖಪಂಕೇಜ ಅರುಣದುರಿತ ನಾಗ
ಶಂಬನೆ ನೋಡೆನ್ನ ನೀನು ಶಂಕರ ಶಿವಶಂಕರ
ಕಂಬಳಾಶ್ವತರಗಾನಾಕಲಿತ ಕಪರ್ದಿ
ದಯಸಾಗರ ಶಂಕರ ದಯಸಾಗರ ||2||
ನಿರುಪಮ ಭಕ್ತಮಂದಾರ ನೀಲಗರಕಂಧರ ಮನಸಿಜನ ಸಂ
ಹ್ವರಕಾಯೊ ಶಂಕರ ಶಿವಶಂಕರ ಘನಶಿವಲಿಂಗೇಶ ನೀ
ಗಾಢ ಕೈವಿಡಿದು ದಯಸಾಗರ ಶಂಕರ ದಯಸಾಗರ ||3||

ನೆಲಕೊಕ್ಕಸರದ ಮುತ್ತಿನೊಲು
ನೆಲಕೊಕ್ಕಸರದ ಮುತ್ತಿನೊಲು ಕಾಂತೆಯೆನ್ನ
ಕಲಕಿದ ಕರಣಗಳನು ಗೆಲವುದೋರುತಿರ್ದೆ ನೀನು ||ಪಲ್ಲವಿ||
ಕದ್ದು ಮಾತನಾಡೆ ನಮ್ಮ ಕಣ್ಣ ತಪ್ಪಿನೊಳಗೆ ರಮಣ
ಸದ್ದ ಮಾಡೆ ನೋಡಲವನು ಸರಸದಿಂದಪ್ಪಿ ನೆರದ ||1||
ಮಿಕ್ಕು ಮೀರಿದವಸಿಯೊಳು ಮೀಸಲ ಮನವು ತನ್ನೊಳು
ಗಕ್ಕನೆ ಬಂದೆರಗಲಾನುಘಾಸಿಯಾದೆನದರಿಂದೆ ||2||
ಚುಂಬಿಸಿ ಮೋಹದೆ ತಾನು ಚೂಪುಗಾರಿಕೆತನವಿದೇನು
ಅಂಬುದಾಕಾರದ ನಡುವೆ ಅಳಿ ಪೊಗುವದೆ ಲೇಸು ||3||
ಅಯಿವವ ಸಾಕ್ಷಿಕ ನಾನು ಆಗಳೆ ಕೊಂದವನಿವನು
ಕವಲುದಾರಿಯವರ ನಂಬಿ ಕಂಡ ಬಾರ ಪೂವಿನಬಿಂಬ ||4||
ಚಕಚಕಾಯಮಾನವಾಗಿ ಚತುರ ಕಲೆಗಳ ಜಾಗಿ
ಅಕುಟಿಲ ಶಿವಲಿಂಗೇಶನು ಅಗಲದಿರಲು ಬಾಳುವೆನು ||5||

ಸಲೆ ನಿನ್ನ ಪಾದವನು
ಸಲೆ ನಿನ್ನ ಪಾದವನು ಬಲು ನಂಬಿದೆನೊ ನಾನು
ಚೆಲುವರಾಯ ಕಾಯೊ ಪ್ರೀಯ ಸಲಿಗೆವೆರಸಿ ನಾಮವಿರಿಸಿ ||ಪಲ್ಲವಿ||
ಸಕ್ಕರೆ ಸವಿಯ ಮಾತನಾಡಿ ಸಲುವಳಿಯ ನೇಹದೊಳು ಕೂಡಿ
ಪಕ್ಕನೊಂದೇ ವೇಳೆಯೊಳಗೆ ಪಲವಹ
ತಕ್ಕ ಕಲೆಯ ನೆಲೆಯನೆನಗೆ ತಳುವದೀಗ ತೋರೋ ನಿನಗೆ
ದಕ್ಕಿದವಳು ದಾನಶೀಲ ದಯದೆ ನದರಿಡು ||1||
ಅಂದಗಾರತನದ ಸೋಗು ಆಳವಡಲು ಪರವನಿತೆಯ
ನಿಂದು ಬಗೆವೆ ಯಾಕೆ ಯಂತಹ ನೀಟುಗಾರಿಕೆ
ಸಂದ ಸಾರ ಸರಸಿಜಾಕ್ಷಿ ಸಾರೆ ತಡೆದು ನೆರೆದು ನಿನ್ನ
ನೊಂದಿ ಬಿಡದಲಿಹಳೊ ಪೇಳು ನೋಡದೆ ನೀ ನೆಲನ ||2||
ಮಶ್ಚಮತ್ಕರವನು ತಿಳಿದು ಮನವದೋರೆಯಾಗದಂತೆ
ಬಿಚ್ಚದಮಳರತಿಯನಿತ್ತು ಬೀಗದೆ ಎಂದೆಂದಿಗು
ಸಚ್ಚಿದಾನಂದರೂಪ ಸರಸದಿಂದಲಿ ಬಂದು ಕರವ
ಮೆಚ್ಚಿ ಪಿಡಿದು ಕೂಡಿ ಮೆರೆಯಲಿ ಶಿವಲಿಂಗೇಶ್ವರ ||3||

ನೀಗಿದೆನೆ ಎನ್ನ ಭವಮಾಲೆ
ನೀಗಿದೆನೆ ಎನ್ನ ಭವಮಾಲೆಗಳನು ಮತ್ತೆ
ಸಾಗಿದೆ ಮುಕುತಿಯ ಪದಕೆ ನಾನು ||ಪಲ್ಲವಿ||
ಕಣ್ಣ ಕಾಣುತೆ ಬೆರಗಾದೆನಮ್ಮ ಚೆಲ್ವ
ಚಿಣ್ಣನ ಮೈ ಮರಸಿದೆನಮ್ಮ ||1||
ಐದು ಮೈಜೋಡುಗಳನು ಕಳೆದೆನಮ್ಮಯೀ
ರೈದು ಗಾಳಿಗಳ ನಿರ್ವೈಸಿದೆನಮ್ಮ ||2||
ಕೂಸಿನ ತಾಯ ನೇಹವ ಬಿಟ್ಟೆನಮ್ಮ ಬಲು
ವಾಸೆ ಪಂಥಗಳ ಸುಟ್ಟೆನಮ್ಮ ||3||
ಬುತ್ತಿಯ ಗಂಟನು ಬಿಚ್ಚಿ ಬಿಸುಟೆನಮ್ಮ ಹೊಟ್ಟೆ
ಹತ್ತಿ ಬತ್ತಿ ನೆತ್ತಿ ಬಾಯ ತೆರದೆನಮ್ಮ ||4||
ಆರು ಮೂರೂರುಗಳ ತಿರುಗಿದೆನಮ್ಮ ಬಳಿ
ಕಾರು ಮೂರೊಂದುಗೂಡಿ ನೋಡಿದೆನಮ್ಮ ||5||
ಬಣ್ಣ ಬಂಗಾರಗಳ ತೊರೆದೆನಮ್ಮ ತಲೆ
ಎಣ್ಣೆಯ ಕಾಣದೆ ಬತ್ತಿಗಟ್ಟಿತಮ್ಮ ||6||
ಹಂಗನಳಿದು ಮಂಗಳಾಂಗಿಯಾದೆನಮ್ಮ ಶಿವ
ಲಿಂಗ ಕೈಗೂಡಿ ಬಯಲಾದೆನಮ್ಮ ||7||

ಸೇರಿರೊ ಗೊತ್ತ ಸೇರಿರೊ
ಸೇರಿರೊ ಗೊತ್ತ ಸೇರಿರೊ ಕ್ರೂರ ಕಾಲನೆಂಬ ಹುಲಿ ಬಂದು
ತಿನದಂತೆ ಸಾರಿ ದೇಶಿಕಬೋಧೆಯೆಂಬ ದಾರಿಯ ಹತ್ತಿ ||ಪಲ್ಲವಿ||
ಒಡಲಡವಿಯನು ಸಾರಿ ಚರಾಚರದೆಡೆಯ ಪೊದರ ನುಸುಳಿ
ಬಿಡದೆಲ್ಲರು ನೋಡುತಿರಲು ನೋಯದ ಹಾಂಗೆ
ಕಡಿ ಖಂಡವನು ಮಾಡಿ ಜಡಿದು ನುಂಗುವದಿದು ||1||
ಅರಿಗಳೆನಿಪ ತನ್ನಯ ಮರಿಗಳನು ಸರಸದೆ ಕೂಡಿಕೊಂಡು
ತಿರುಗಿ ಮೂಲೋಕವ ಸುರನರೋರಗರೆಂಬ
ಪರಿಪರಿಪುರಗಳನಿರದೆ ಭಕ್ಷಿಸುತಿದೆ ||2||
ಹಸುಳೆ ಕುವರ ಜವ್ವನ ಮುಪ್ಪಿನ ದೆಸೆದೆಸೆಗಳ ಮರೆಯೊಳಗೆ
ಪಸರಿಸಿ ಕಾಲುಗಳೈಮೊಗಗಳ ತಳೆ
ದಸವಸದಿಂ ಘಾಯವ ಮಾಡದುಣುತಿದೆ ||3||
ಶುಭವಶುಭವೆನಿಪ ವರ್ನವು ತಾನೆ ಗಭೀರರಚನೆಯದಾಗೆ
ಅಭಯದಿಂದಲಿ ಚರಿಸುತೆ ಕುರುಹಿಲ್ಲದೆ
ವಿಭುವಾಗಿ ಹರಿವಿಧಿಗಳ ಬೆದರಿಸಿತಿದು ||4||
ಮಸುಳಸದಿಹ ಪುಲಿಯ ಸೀಳುತೆಯದರಸಮ ಚರ್ಮವಪೊದೆದ
ಮಿಸುಪ ಮಹಾಕಾಲ ಶಿವಲಿಂಗದೇವನ
ಪಸರದ ತತ್ತನಿತ್ವದ ನೆಲೆಯೊಳಿರಲು ಜಯ ||5||

ಎಲೆ ಬೊಮ್ಮ ನಿನ್ನದಾವುದು
ಎಲೆ ಬೊಮ್ಮ ನಿನ್ನದಾವುದು ಬಲ್ಲತನವಹುದು
ಸಲೆ ಸೃಷ್ಟಿಯೆಸಗಿಯಪವಾದಗಳ ಪಡೆದೆ ||ಪಲ್ಲವಿ||
ಮೂಳೆಗಳ ಪಂಜರವ ಮಾಡಿ ಬಣ್ಣದ ತೊವಲ
ನೋಳಿಯಿಂದವೆ ಪೊದಿಸುವೆಯದರೊಳು
ಕಾಳು ಮಲ ಮೂತ್ರಗಳ ತುಂಬಿ ಮಾಂಸದ ಕರುಳ
ಜಾಳುಗಳನಿಟ್ಟು ನರದಿಂದ ಬಂಧಿಸಿದೆ ||1||
ನೀರಗುಳ್ಳೆಗಳ ಬೊಂಬೆಗಳೊಂದನೊಂದುವನು
ಸಾರಿ ಅತಿಮೋಹದಿಂದಿರದೆ ಕೂಡಿ
ಚಾರು ಸುಖವನು ಪಡೆದೆವೆಂದು ಹಮ್ಮೆನಿೈಸಿಯತಿ
ಘೋರ ಕರ್ಮದ ದಾರಿವಿಡಿದಳುವರಕಟ ||2||
ಬಲು ಹೊನ್ನು ಹೆಣ್ಣು ಮಣ್ಣುಗಳೆಂಬ ಮಲಗಳನು
ನೆಲೆಯಾಗಿಯುಂಡು ಕಡೆಗಣಿಸದದನೆ
ಚೆಲುವ ಸುಖವೆಂದು ನಚ್ಚುತೆ ಪಿಡಿದು ಬಿಡದೆ ತಾ
ವಲಸದುರೆ ಸ್ವಗೃಹಾದಿಗಳ ನೆಲೆಯೆನುವರು ||3||
ಮಂಜು ಮುಗಿಲೊಡ್ಡವಣೆ ಗಾಳಿಗೆತ್ತಿದ ಸೊಡರು
ಸಂಜೆಗೆಂಪಿಂದ್ರ ಜಾಲದ ತೋರ್ಪ ತೋರ್ಕೆ
ಸಂಜೆಗಳಿದನು ನಂಬಿ ದಿಟವೆಂದಿಹರು ನಾಡೆ
ನಂಜುಗುಡಿದಿಳೆಯೊಳಗೆ ಜೀವಿಸುವರುಂಟೇ ||4||
ವಿದಿತ ಶಿವಲಿಂಗೇಶನಿದು ಕಾರಣದೆ ತಲೆಯ
ಮಿದಿಳುಗಳೆವಂತೆಯುಗುರಿಂದೆ ಚಿವುಟಿ
ಬೆದಿರುತನವಳಿದು ಸರಿಮೊಗನೆನಿಸಿ ಜೀವಿಸುತೆ
ಪದುಳದಿಂದಿನ್ನಾದರೆಯು ಬುದ್ಧಿಗಲಿಯೊ ||5||

ತಲೆಬಾಗಿ ನಲ್ಲತನಕಲಿ
ತಲೆ ಬಾಗಿ ನಲ್ಲತನಕಲಿ ತಲೆಮಲೆಯೊಳಿಹ ಕಾಂತನ
ತಲಪಿ ಬಾರೆಲೆ ರಮಣಿ ಬೇಗದಿ ತಲೆಯರತುನವನೀವೆನೆ ||ಪಲ್ಲವಿ||
ಹಾರಿ ಮೂವತ್ತೆರಡು ಕೇರಿಯ
ಸಾಲುಮನೆ ಪದಿನಾರುಗಳ ನಯ
ವೇರಿ ಹುಡುಕುತೆ ಎಂಟು
ಮನೆಗಳ ವೇದಗಣೆಯ ನೆಲೆಯೊಳು ||1||
ಚಿನ್ನದುಪ್ಪರಿಗೆಯ ನಡುವಿನ
ಚಿರತರದ ಮಂದಿರದಿಯಾವಗ
ರನ್ನ ಗದ್ದುಗೆಯಲ್ಲಿ ಮೆರೆವನೆ
ರಾಜಮುಖ ನೀ ಬೇಗದಿ ||2||
ಕಲೆಯಾಕಲೆಗಳ ನೆಲೆಯನೆಲ್ಲವ
ಕಾಣಬಹತೆರದಿಂದೆ ಪಾಲಿಪ
ಮಲಿನಹರ ಶಿವಲಿಂಗದೇವನ
ಮಾನಿನೀಮಣಿ ಕರದು ತಾರೆ ||3||

ಶೋಭನವೆ ಶೋಭನವೆ
ಶೋಭನವೆ ಶೋಭನವೆ ಶೌರಿ ವಿನುತ ವಿಭವ ಕುಮಾರಗೆ ||ಪಲ್ಲವಿ||
ತಾರಕಗಜ ಮೃಗರಾಜನಿಗೆ
ತಾರೆಗಳರಸನ ಸೂಡಿದಗೆ
ವಾರಣಮುಖ ಸಹೋದರನಿಗೆ ವರ
ಗೌರಯಮೋಹದ ತನಯನಿಗೆ ||1||
ನವಿಲನೇರಿದನಿಗೆ ನವರಸಗೆ
ಭುವನನಿಕರ ಪರಿಪಾಲನಿಗೆ
ಜವನಮದವ ಮುರಿದವಿರಳ ಶೀಲಗೆ
ಕವಿಕುಲ ಕಮನೀಯ ಸುರಭೂಜಗೆ ||2||
ದೇವಸೇನಾ ಪ್ರಾಣವಲ್ಲಭಗೆ
ಕೋವಿದ ಸುರಪತಿಯಳಿಯನಿಗೆ
ಪಾವನಚರಿತಗೆ ಪಶುಶಿಖಿಭವನಿಗೆ
ಮೂವವ ಮುಖ ಸೇನಾಧಿಪಗೆ ||3||
ಶರಧಿಗಭೀರಗೆ ಶಾಶ್ವತಗೆ
ಶರವಣಜಾತಗೆ ಶಬರೇಶಗೆ
ಜರೆಯಿಲ್ಲದಾತಗೆ ಜನನವಿದೂರಗೆ
ಕರುಣಕಟಾಕ್ಷಗೆ ಕಳರವಗೆ ||4||
ಮಂಗಳ ಮಹಿಮಗೆ ಮಾನಿಪಗೆ
ಪುಂಗವಮಿತ್ರಗೆ ಪಟುರುಚಿಗೆ
ತುಂಗ ಪರಮ ಶಿವಲಿಂಗೇಶ್ವರನಿಗೆ
ಪೊಂಗುವ ಲವಲಿಯ ರಮಣನಿಗೆ ||5||

ಇಂದುವದನೆ ಗೌರಿ
ಇಂದುವದನೆ ಗೌರಿ ಇಭರಾಜಮುಖ ಮಾತೆ
ಬಂದು ಪಾಲಿಪುದೆನ್ನನು ||ಪಲ್ಲವಿ||
ಬಿಸಿಗಣ್ಣನ ರಮಣಿ ಬಿಸರುಹಲೋಚನೆ
ಎಸೆವ ಕನ್ನಡಿಗದಪಿನವಳೆ ಸುಸೀಲೆ
ಪಸರಿಸಿದನುಪಮ ಮಹಿಮೆ ಸುಗುಣಸೀಮೆ
ರಸಿಕನ ನುತಿಪಾತ್ರೆ ರಾಜಿತ ಕೋಮಲಗಾತ್ರೆ ||1||
ಗಿರಿರಾಜ ತನುಜಾತೆ ಗಿರಿಶ ವಾಮ ವಿಖ್ಯಾತೆ
ಸುರುಚಿ ರೆಭಾಸುರೆ ಧೀರೆ ಸುಜನಾಧಾರೆ
ಕರಿವರ ಮಂದಯಾನೆ ಕಲಿತ ಕೋಕಿಲಗಾನೆ
ವರ ಚಂಪಕನಾಸಿಕೆ ವರದಾನೆ ಕುಂದರದನೆ ||2||
ನಿಗಮಸಾರ ಸಲ್ಲಾಪೆ ಸಗುಣ ಕಾರ್ಯ ಕಲಾಪೆ
ಬಗಸೆಗಂಗಳೆ ಚೆಲುವ ಸೊಬಗಿನ ಭಾವೆ
ಸೊಗಸುವ ಶಿವಲಿಂಗನಗಲದನಘ ತ್ರಿ
ಪಗವೆರೆಯನ ಬಿಂಬವಾಸೆ ಶ್ರೀಕೇಶಪಾಶೆ ||3||

ಇಮ್ಮನವಿಲ್ಲದೆನಗೆ ಒಮ್ಮನದಿ
ಇಮ್ಮನವಿಲ್ಲದೆನಗೆ ಒಮ್ಮನದಿ ನಾನಾರನುಣಿಸುವೆ
ನಿಮ್ಮನವು ಬಂದಂದಿಗೆ ಗಮ್ಮನೆ ಬನ್ನಿ ನೀವೆಲ್ಲ ||ಪಲ್ಲವಿ||
ಆಣತೆಯಳಿದು ದುಗ್ಗಾಣಿಯೊಂದು ಕೈಸಾರದೆ
ಜಾಣತನದೆಯೂರವರನು ಮಾಣದೆ ಕೇಳಲು ಕೊಡರು ||1||
ಅತ್ತಿಗೆ ನಾದಿನಿಯರು ಜೊತ್ತು ಮಾಡಿಕೊಂಡು ತಾವು
ಕುತ್ತಿಗೆಯೊಂದಾಗಿ ಎನ್ನನೊತ್ತರಿಸಿಯಾಳ್ವೆವೆಂಬರು ||2||
ಅಂದಿಗುಯೆನಗಾರುವಿಲ್ಲ ಇಂದಿಗೂ ಮುನ್ನವೆಯಿಲ್ಲ
ಬಂದು ಹೋಗುವರು ಹಲರು ಮುಂದೆ ತಡೆಯಲೊಂದುವಿಲ್ಲ ||3||
ಮುಚ್ಚು ಮರೆಯ ಮಾತಲ್ಲ ಹೆಚ್ಚುಕುಂದುಗಳನರಿಯೆನು
ಬಚ್ಚಬರಿಯ ಮನೆಯ ಸೇರಿ ನಿಚ್ಚಳದಿಂದ ಬಾಳ್ವೆನು ||4||
ಮಂಗಳ ಶಿವಲಿಂಗೇಶನಂಗವಿಸಿಕೈಗೂಡುತೆ
ಹಿಂಗದೆ ಮನೆಮಾರನೀಕ್ಷಿಸಲಿಂಗಿತವಳಿದು ನಡೆವ ||5||

ರಾಮ ರಾಮ ಪಾಲಯ
ರಾಮ ರಾಮ ಪಾಲಯ ಸಿದ್ಧರಾಮ ರಾಮ
ಕಾಮಮದ ವಿಭಂಗ ಕರುಣಾರಸ ತರಂಗ ||ಪಲ್ಲವಿ||
ನಾರಕ ಲೋಕ ವಿಲೋಪ ನಮಿತ ತಾರಕರೂಪ
ಚಾರು ಲಲಾಟನೇತ್ರ ಚತುರವೈಭವ ಗಾತ್ರ ||1||
ಪಿಂಗಳ ಜಟ ವಿಶಾಲ ಪೀತಾಂಬರಾದಿ ಕಪಾಲ
ಜಂಗಮ ವೈಭವ ಪ್ರಿಯ್ಯ ಜಗದಂತರಂಗ ಶೈಯ್ಯ ||2||
ಭಸಿತಭೂಷಿತ ದೇಹ ಭವವನಕುಲ ದಾಹ
ಹಸಿತವದನ ಚಂದ್ರ ಹರಿಣಾದಿಚರ್ಮ ರುಂದ್ರ ||3||
ಭೂರಿಭಕ್ತಮಂದಾರ ಭುಜಗನಾಯಕ ಹಾರ
ವೀರಶೈವಾಭಿರಾಮ ವಿನುತಬುಧಲಲಾಮ ||4||
ಎಳೆನಡುಪುರವಾಸ ಏಣಾಂಕಧರ ವಿಲಾಸ
ನಿಳಯ ನಿಗಮ ನಿರಂಗ ನಿಶ್ಚಳ ಶಿವಲಿಂಗ ||5||

ಮಂಗಳಾರತಿಯನು ಬೆಳಗಿರೆ
ಮಂಗಳಾರತಿಯನು ಬೆಳಗಿರೆ ಸರ್ವ
ಮಂಗಳೆಗತುಳ ಮಹಾದೇವಿಗೆ ||ಪಲ್ಲವಿ||
ಕರಿಮುಖ ಜನನಿಗೆ ಕಾಳಿಗೆ ಕಾರುಣ್ಯ
ಶರಧಿಗೆ ಸಾರ ಸುಗುಣನಿಧಿಗೆ
ಪರತರ ಮಹಿಮೆಗೆ ಪಾವನ ಸದನೆಗೆ
ಸರಸಿಜಮುಖಿಯರೊಲಿದು ನಲಿದು ||1||
ವಿನಯ ಕಲಾಪೆಗೆ ವಿತರಣ ರೂಪೆಗೆ
ವನಜಾಕ್ಷ ರಾಣಿಗೆ ವಂದಿತಪಾದೆಗೆ
ಮನಸಿಜಪಾಲೆಗೆ ಮಂಜುಳಲೀಲೆಗೆ
ಘನಸಾರಗಂಧಿಯರನನುನಯದೆ ||2||
ಶರಣ ಸುಪ್ರೀತೆಗೆ ಶಾಂತ ವಿಖ್ಯಾತೆಗೆ
ಜರೆಯಿಲ್ಲದವಳಿಗೆ ಜಗನ್ಮಾತೆಗೆ
ಹರಿನೀಲವೇಣಿಗೆ ಹಸಿತಾಬ್ಜಪಾಣಿಗೆ
ಕರಿರಿಪುಗಮನೆಗೆ ಕಾಂತೆಯರು ||3||
ಮೂಲ ಮಂತ್ರಾಂಗಿಗೆ ಮುನಿಜನ ಪೂಜ್ಯೆಗೆ
ಸಾಲುಮೊಗನ ಪೆತ್ತ ಸಕಲಾತ್ಮೆಗೆ
ಕಾಲಸಂಹಾರಿಗೆ ಕಾಮಿತವರದಗೆ
ಬಾಲನಿಶಾಕರ ನಿಟಿಲೆಯರು ||4||
ಸುವಿಶಾಲ ನೇತ್ರೆಗೆ ಸುರುಚಿರಗಾತ್ರೆಗೆ
ಕವಿವರ ಕುಲ ಕಾಮಧೇನುವಿಗೆ
ತವೆ ಕರವನರುಹಪುರ ನಿಜವಾಸೆಗೆ
ಶಿವಲಿಂಗೇಶ್ವರನ ರಮಣಿಗೆ ಸತತಂ ||5||

ಮೃಢಪಾದ ಸೇವೆಗಲಸುವ ನರನ
ಮೃಢಪಾದ ಸೇವೆಗಲಸುವ ನರನ ಜೀವನ
ಸುಡು ಸುಡವಗೇಕೆ ದೊರೆದುದು ಮನುಜ ಜನನ ||ಪಲ್ಲವಿ||
ಹರಣನೇತ್ರಯರಂಗ ಸಂಗಕ್ಕೆ ಹಿಗ್ಗುವನು
ಪರಮಾತ್ಮ ಯೋಗವೆಂದೆನಲು ತಗ್ಗುವನು
ಗುರು ಮಾರ್ಗದೊಳು ನಡೆಯೆನಲು ವಿಷವನುಗುಳ್ವ
ದುರುಳರೊಡನಾಟವೆನೆ ಲವಲವಿಸುತಿಹನು ||1||
ಕೊಳ್ಳಿ ತುಂಬರ ಮಾತ ಕೇಳಿ ಕುಣಿದಾಡುವನು
ಒಳ್ಳಿದರ ಬೋಧೆಗಳನಾಳುವಾಡುವನು
ಬಳ್ಳು ಬಗುಳಾಟವೆನೆ ಕಾಲ ಕೆರೆವುತ್ತಿಹನು
ಸುಳ್ಳು ನುಡಿಗಳ ನಂಬಿ ಸೂನೃತವನುಳಿವ ||2||
ಹದ್ದುಕಾಗೆಗಳಂತೆ ಹರಿವರಿಯ ತಿರುಗುವನು
ಮುದ್ದು ನಡವಳಿಯೆನಲು ಮುಂತುಕೊಂಡಿಹನು
ಗದ್ದು ಗುದ್ದಿಗೆ ಕುಶಬ್ದಗಳನುಚ್ಚಿರಿಸುವನು
ಬಿದ್ದ ಮಾತನು ಪಿಡಿದು ಬಿಗಿದುಕೊಂಡಿಹನು ||3||
ಸುಖವೆ ಸಗ್ಗವು ದುಖವದುವೆ ಯಮ ಯಾತನೆಯು
ಪೆಕಲದುಂಡೂಟವದೆ ಹಿಂಡೆಗೂಳು
ಸಕಲದೊಳು ಸಾಯೆ ಕಡೆಗೇನಹನೋ ನಾನೆಂಬ
ಮಕರಮಾನಿಸಿನೆಮನುಜರೊಳಧಮನೆನಿಪ ||4||
ಬಂಗಿನೀರ್ಗುಡಿದಂತೆ ಬಾಯ್ಗೆ ಬಂದಂತುಸಿರ್ವ
ಕೊಂಗಿತನದಿಂಕೂಟಕರ್ಮಿಯೆನಿಪ
ಮಂಗಳಾಯತದ ಶಿವಲಿಂಗವನು ಮರೆದು ಭವಭಂಗ
ಸಾಗರದಲ್ಲಿ ಮುಳುಗಿ ಗತಿಗೆಟ್ಟು ||5||

ಮುಟ್ಟದಿರೆನ್ನ ಕೈಯ್ಯ
ಮುಟ್ಟದಿರೆನ್ನ ಕೈಯ್ಯ ಮುಡಿಯೊಳು ನೆಲಸಿದ
ದಿಟ್ಟೆಯದಾರು ಹೇಳು ಹಾಗಿರು ತಾಳು ||ಪಲ್ಲವಿ||
ಮಡದಿರನ್ನಳೆ ಕೇಳು ಮಡುವಾದ ನದಿಯೆನ್ನ
ಜಡೆಯೊಳಗಿಹುದುಲಿದು ಪೋಪುದುಮದು ||1||
ಕಾಲುಗಳನು ನಾನು ಕಾಣೆನು ಹೊಳೆಯೊಳು
ಬಾಲಕಿಯೆಂದು ಮಾಜಿದೆ ಬಹುವನದೆ ||2||
ಆವೆಗಳಲ್ಲವೇನೆ ಅಧಿಕ ಕೋಕಿಲಗಾನೆ
ಭಾವಿಸೆ ತೋಳು ತೊರೆಗೆ ಬಗೆವುದು ಹೇಗೆ ||3||
ತಡಿಗಳಲ್ಲವೆ ನೋಡೆ ತರುಣಿ ಕೇಣವ ಬಿಡೆ
ಕೊಡ ಮೊಲೆಗಳುವಳವೆ ಕೊಸರು ತರವೇ ||4||
ಸೊಕ್ಕು ಜವ್ವನದ ಸೊಬಗಿನ ತೀರದ ಜೋಡು
ವಕ್ಕಿಗಳಲ್ಲವೇನೆ ವಲ್ಲಭ ನೀನೆ ||5||
ಹೇಳು ನದಿಗೆ ನಾಭಿ ಹೆಸರಿಗಿಲ್ಲದು ಅಭಿ
ಗಾಳಗವೇತಕಯ್ಯ ಗರುವಪ್ರಿಯ ||6||
ಸುಳಿಯ ನೋಡೆ ವಿಲಾಸೆ ಸುಲಜಲ ಬಡಭಾಸೆ
ಪೊಳೆಗೆಲ್ಲ ನಾಡೊಳಗೆ ಪೊಸತು ಮಿಗೆ ||7||
ಹಾವಸ ಕಾಣೆ ದಾಣೆ ಹಸನದ ಕಾವನಾಣೆ
ಕೋವಿದ ಕಿವಿ ನದಿಗೆ ತೋರುವದು ಹೇಗೆ ||8||
ಕಾಂತೆ ತಡಿಯ ಚಿಪ್ಪು ಕಾಣುತಲದೆವೊಪ್ಪು
ಕಾಂತ ನದಿಗೆ ಕಂಗಳು ಕಂಡರೆ ಹೇಳು ||9||
ಮೀನುಗಳಲ್ಲವೇನೆ ಮಿಗಗಣ್ಣ ಸುಖದ ಸೋನೆ
ಮಾನಿತ ಹುಟ್ಟುಗಳು ಮಾಜುವದೆ ಹೇಳು ||10||
ತೆರೆಗಳಲ್ಲವೆ ರಮಣಿ ತೆಳುವಸಿರ ಶುಕವಾಣಿ
ವರನೆ ನೊಸಲನು ನೋಡುವರಟು ಬೇಡ ||11||
ತಿಂಗಳ ಹೆರೆಯದು ತಿಳಿವುದು ನಿನಗದು
ಸಂಗಮುಖವದೊರದು ಸ ನುಡಿವುದು ||12||
ಮಂಗಳೆ ತಾವರೆ ಮರೆಯ ಮಾತಲ್ಲ ನೀರೆ
ಹೊಂಗುವ ಜಡೆಯು ತಾನು ಹೊಳೆವುದದೇನು ||13||
ತುಂಬೆವಿಂಡುಗಳವು ತುಡರಿಹಾರ್ಯಾಡುವವು
ನಂಬು ನೀನೆನ್ನ ಸೊಲ್ಲ ನಾಚುವನಲ್ಲ ||14||
ಎಂದು ನಿಜವ ಪೇಳೆ ಏಣಾಕ್ಷಿಯಾಗಳೆ
ಬಂದು ಶಿವಲಿಂಗೇಶನ ಬಗೆದಪ್ಪಿದಳವನ ||15||

ಚದಿರನಾಗರು ನೀನು
ಚದಿರನಾಗರು ನೀನು ಚಂದಿರದಲೆಯನ ಪದದಿ
ಮುದದಿ ಮುಕುತಿಯನೀನ ಮುನಿಕುಲವು ನೆನವ ||ಪಲ್ಲವಿ||
ಹರಿ ವಿಧಿ ಸುರೇಂದ್ರ ಮುಖ ಸುರರು ವಂದನೆಗೆಯ್ವ
ಸರಸಿಜಾಂಬಕ ನಯನ ಕಮಲವದನು
ಕರ ಸೊಗಸಿನಿಂ ತಳೆದ ಕಾವನನುರುಹುತೆ ತುಳಿದು
ದುರುಳನಾದ ಜಲಂಧರನ ಸಿರವನರಿದ ||1||
ಯಮನೆದೆಯನಿರದೆ ತಿಸುಳದೆ ಇರಿದು ತಾಟಿಸಿದ
ವಿಮಳವಹ ಭೂರಥವ ತುಳಿಯಲಾಗ
ಕ್ಷಮಿಸದದು ಪಾತಾಳಕಿಳಿಯೆ ಲೋಕತ್ರಯ
ಕ್ರಮದೆ ಸಲಹಲು ಪುರವ ದಹಿಸಿ ಕುಣಿದ ||2||
ದಶಶಿರನ ತಲೆಯನುಂಗುಟದಿಂದೆ ವೊತ್ತುತಿರೆ
ವಶವಲ್ಲದವನು ಮೊರೆಯಿಡಲು ಬಳಿಕ
ಪಶುಪ ಶಿವಲಿಂಗೇಶ ಪಾಲಿಸಲು ತೋರಿಸಿದ
ದಶಶತರವಿಯಕಿರಣವನು ನಗುವ ಚಲುವ ||3||

ದೇವರರ್ಚನೆಯ ವಿರಚಿಸಿರೆ
ದೇವರರ್ಚನೆಯ ವಿರಚಿಸಿರೆ ನೀವು
ಭಾವದೊಳು ಮಿಗೆ ಭಾವಿಸುತೆ ಸಾರ ಭಕ್ತಿಯೊಳು ||ಪಲ್ಲವಿ||
ಸರಸ ಕಾರಣ ತನು ಸುಗರ್ಭ ಮಂದಿರದೊಳಗೆ
ಇರದೊಡದು ಮೂಡಿದ ಸ್ವಯಂಭುಲಿಂಗವ
ನಿರುತ ಸೂಕ್ಷನ್ಮಿ ಶರೀರ ಸುಕನಾಸಿಯೊಳು ನೀ
ಸುರುಚಿರದ ತೋರೊಡಲ ರಂಗಮಂಟಪದಲ್ಲಿ ||1||
ಸಕಲ ಕಲೆಗಳನೆಲ್ಲ ಪೂರಿಸಿ ಸತತ ಮೆರೆವ
ಸುಖದ ಸೋನೆಯ ಕರೆವ ಸಗುಣಾತ್ಮದ
ಮುಕುರಬಿಂಬದ ತೆರದೆ ಕರಣಾದಿಗಳನೆಲ್ಲ
ವೆಕಲದೊಬ್ಬುಳಿಯಾಗಿ ತೋರುವ ಬೆಳಗಿನೆಸೆವ ||2||
ಮಿಸುಪ ಕೋಣೆಯೊಳಿರುತೆ ನಡುಮನೆಯೊಳಗೆ ತಾನು
ಪಸರಿಸುತೆಯಂಗಣದ ವಸ್ತುಗಳನು
ಸಸಿನೆ ಕಾಣಿಸುವಚಲ ದೀಪದ ತೆರದೆ ತೋರ್ಪ
ಹಸಿತಮುಖ ಕರದಿಷ್ಟ ಪರಶಿವಲಿಂಗೇಶನೆನಿಪ ||3||

ಪಾರ್ವತಿ ರಮಣ ಪಾಲಿಪುದು
ಪಾರ್ವತಿ ರಮಣ ಪಾಲಿಪುದು ಸುಪರ್ವಾರ್ಚಚರಣ
ಸರ್ವ ಲೋಕಾಧಾರ ಸಾಮಗೀತಾಧಾರ
ಗರ್ವಿತ ಗಜಾಸುರ ಗಾಡಾಂಧಕಾರ ಸೂರ ||ಪಲ್ಲವಿ||
ತರುಣೇಂದುಮೌಲಿ ತಾಪಸ ವಂದ್ಯ ವರವೃಷಪಾಲಿ
ಹರಿಣಕರಾಂಬುಜ ಹರಿಶತಕೋಟಿ ತೇಜ
ಕರಿಮುಖ ವೀರ ತಾತ ಕಾಮಿತಾರ್ಥ ವಿಖ್ಯಾತ ||1||
ನತಜನ ಪಕ್ಷ ನಳಿನಪುಷ್ಪಸುತ ಪುತ್ರ ಸಿಕ್ಷ
ರತಿಪತಿ ಮದಭಂಗ ರಾಜಿತ ಗಣಸಂಗ
ಜಿತ ನಗರತ್ರಯ ಜೀಮೂತ ರಥಪ್ರಿಯ ||2||
ವಿನಯ ಕಲಾಪ ವಿಜಿತ ತಾಪ ಘನ ಮಹಿಮಾಂಕ
ಕನಕಾದ್ರಿ ಕೋದಂಡ ಕಮನೀಯ ಪಂಚತುಂಡ
ಜನನ ಮರಣ ಭಂಗ ಜಯ ಜಯ ಶಿವಲಿಂಗ ||3||

ನಗೆ ಬರುತಿದೆ ನೋಡಿ
ನಗೆ ಬರುತಿದೆ ನೋಡಿ ನೋಡಿ ಬಲು
ವಿಗಡಗಾರಿಕೆ ಹಹ್ಹಾ ಜಗದಾಟವಿದುವೆ ||ಪಲ್ಲವಿ||
ಪೊಡವಿಯೊಳಗೆ ನರಜನ್ಮವಿದ
ಪಡೆವುದರಿದು ಪೂರ್ವವಾಸನೆಯಿಂದೆ
ಪಡೆಯದೆ ದೊರೆದುದು ತಮ್ಮ ಬಲು
ಕಡುಸೊಕ್ಕಿನಿಂದೆ ನಡೆವ ಮದಚರನು ||1||
ಬಾಲ ಕುಮಾರ ಜವ್ವನಿಗ ವೃದ್ಧ
ಮೇಲವರಿಂದಧಿಕತೆಯು ತಾನಿಲ್ಲ
ಕಾಲಕಾಮರು ಹಿತರಲ್ಲ ಪೆಣ್ಣ
ಜಾಲಕ್ಕೆ ಸಿಲ್ಕಿ ಕಣ್ಗಾಣದವರನು ||2||
ಹರ ಹರ ಕರ್ಮವದೆನಿತೊ ಪುರ
ಹರನೂಳಿಗಕೆ ಮನವಿಚ್ಫೆನೈಸದಿದೇಕೊ
ದುರುಳ ಪ್ರಪಂಚಿನ ನೆಲೆಗೆ ನಿಂದು
ಹರಿಹರಿದಾಡುವದೂರಗರಾದವರ ||3||
ಗುರುಸೇವೆಯಲ್ಲಿ ಜಂಗಮದ ಪಾದ
ಸರಸಿಜದೊಳು ಮಹ ಮಹಾಲಿಂಗ ಪೂಜೆಯಲಿ
ಸರಿಸವದಾಗಲು ಬಗೆಯು ಸುರ
ಚಿರ ಮುಕ್ತಿ ಸುಖವನು ಘಳಿಸದವರನು ||4||
ಮಿಂಚಿ ತೆರದಲ್ಲಿ ತೋರಿ ಹರಿ
ಹಂಚೆನಿಸುವ ಶರೀರವನು ತಾ ಸೇರಿ
ಪಂಚಮುಖದ ಶಿವಲಿಂಗದೇವ
ನಂ ಚತುರತೆಯಿಂದೆ ಬೆರೆಯದವರನು ||5||

ಒಳಗಾದುದಾವುದು ಹೊರಗಾದುದಾವುದು
ಒಳಗಾದುದಾವುದು ಹೊರಗಾದುದಾವುದು
ತಿಳಿದೊಡೆ ಪೇಳರಿಯದೊಡೆ ನೀ ಕೇಳು ||ಪಲ್ಲವಿ||
ಬೀಜದಿಂದೊಗೆದ ಮರನು ನೋಡ ಜಗದೊಳಾ
ಬೀಜದಿಂದೊಳಗೊ ಅದರಿಂದೆ ತಾ ಹೊರಗೊ
ಸೋಜಿಗ ಮಿಸುನಿಯ ತೊಡವುಗಳದರಿಂದೆ
ಮಾಜದೆ ಬೇರೆಯೊ ಒಳಗೊ ಹೊರಗೊ ಬಲ್ಲವನೆ ||1||
ಕಡಲೊಳು ಪುಟ್ಟಿದ ತೆರೆ ನೊರೆ ಗುಳ್ಳೆಯು
ಕಡಲ ಹೊರಗೊ ಅದರೊಳಗೊ ಭಾವಿಸಲು
ಸುಡುವ ಕಿಚ್ಚಿನೊಳುದಿಸಿದ ದೀಪವದು ತಾನು
ಪೊಡವಿಯರಗ್ಗಿಯೊಳಗೊ ಹೊರಗೊ ||2||
ತನ್ನ ತಾ ತಿಲಿದು ಮರೆದು ಮತ್ತೆ ಕಲ್ಪಿತ
ವನ್ನಾಡೆ ನಡಸಿದೊಡದು ಕೇಡು ತನಗೆ
ಮೆನ್ನಲೊದಗಿದ ದಿವ್ಯಜ್ಞಾನವ ಬಿಟ್ಟು
ಸನ್ನುತ ಶಿವಲಿಂಗೈಕ್ಯರ ಕೆಡೆನುಡಿವೆ ||3||

ಲಿಂಗಪೂಜೆಯೊಳನಿಶ
ಲಿಂಗಪೂಜೆಯೊಳನಿಶ ಲೀನ ನೀನಾಗೊ
ಸಂಗಸುಖರಸದೊಳಗೆ ಸತತ ಮುಳಿಗಾಡು ||ಪಲ್ಲವಿ||
ಒಡಲೊಳಗುವನೆಯಲ್ಲಿ ಒಂಬತ್ತು ಬಾಗಿಲನು
ಎಡವಿರದೆ ಮುಚ್ಚುತ್ತೆ ಎರವಿನಿತುವಿರದೆ
ನಡುನಾಡಿವಾಗಿಲನು ನಾಡೆ ತೆರೆದದರೊಳಗೆ
ಬಿಡದರಿವು ಚಂದಿರನು ಬೀರುತಿರೆ ಕಳೆಯ ||1||
ಅನಿಲವಿತತಿಯೆ ಪರದಿ ಅತುಳವಹ ಮೆಲುಕಟ್ಟು
ಘನದೇಶಿಕನ ಬೋಧೆ ಘಟಿಸಿದುರು ದೀಪ
ಮನದ ಕಮಲಾಸನವು ಮಗಮಗಿಸುತಿರಲಲ್ಲಿ
ವಿನುತ ಜ್ಯೋತಿಯದು ವಿದಿತವಾಗೆಸೆವ ||2||
ಅಮಳ ಮೂರುತಿಗೆ ಅಮರ್ದ ಸೈರಣೆಯೇ ಜಲ
ಕಮನ ಸುವಿವೇಕವದೆ ಕರ ಚಲುವ ದುಕೂಲ
ಪ್ರಮದ ಸತ್ಯವೆ ತೊಡವು ಪ್ರಣುತ ವೈರಾಗ್ಯವದು
ಸುಮ ಮತಿ ವರಸಮಾಧಿಯೆ ಸು ರುಚಿ ಗಂಧ ||3||
ಲಲಿತ ನಿರಹಂಕಾರ ಲಸಿತಾಕ್ಷತೆಯು ಶ್ರದ್ಧೆ
ಜ್ವಲಿಸುತಿಹ ಧೂಪ ಉಜ್ವಲಪರಿವೆ ಸೊಡರು
ಪಲಬಗೆಯ ಜಗವಿದುವೆ ಪರಮ ನೈವೇದ್ಯವುರೆ
ಒಲವೆನಿಪ ವಿಷಯಸುಖವೋತು ವೀಟಿಕೆಯು ||4||
ವಿಷಯರಹಿತವೆ ಸುತ್ತು ವಿತತ ಮೌನವೆ ಘಂಟೆ
ವೃಷಮತಿಯೆ ಶರಣಾಗಿ ವೃಜಿನಹರನಾದ
ವಿಷಮ ಶಿವಲಿಂಗನ ವಿಜಯಗುಣ ಶೀಲನ
ತುಷ ಸುರರ ಗಣಿಸದನ ತುರಗರಥ ಸಖನ ||5||

ಕರುಣಿಸೊ ಕಾಮಿತ
ಕರುಣಿಸೊ ಕಾಮಿತ ವರದಾನಶೀಲ
ಸುರನದಿಧರ ಶಂಕರ ಲೋಕಪಾಲ ||ಪಲ್ಲವಿ||
ಕಾಲನಸುವ ಕೊಂಡು ಕಲಿತ ಮೃಕಂಡು
ಬಾಲನ ಸಲಹಿದೆ ಬಗೆದಂದು ಬಿಡದೆ
ಜಾಲಿತ ಮದನನ ಜಯ ಸಂಹನನ
ಫಾಲವಿಲೇಚನ ಪರಮೇಶನ
ಜ್ವಾಲಾಮಾಲಾಭೀಲಕ್ಷ್ಮೇಲ
ಶಾಲಿಕಂಧರ ಶಾಶ್ವತ ಸುಖಾಗರ
ಸಾಲುಮೊಗನ ಪಿತ ಸಾರಸಭವ ನುತ
ಶೂಲಿ ಕರಾಯುಧ ಸೂರಿ ಸುಬೋಧ ||1||
ಅಚ್ಚುತ ಪೂಜೆಗೆ ಆಗಳೊಲಿದು ಮಿಗೆ
ಮೆಚ್ಚಿ ಚಕ್ರವನಿತ್ತೆ ಮೇಲೆನಿಸುತ್ತೆ
ಮುಚ್ಚುಮರೆಯ ಬಿಟ್ಟು ಮುದವ ಮನದೊಳಿಟ್ಟು
ಬೆಚ್ಚ ಶರಣರಲ್ಲಿ ಬೇರಾಗದಲ್ಲಿ
ನಿಚ್ಚ ಯಚ್ಚ ಪಚ್ಚ ಲಜ್ಜಾ
ವಚ್ಚತವಾಗಿ ಮೆರೆಯೆ ವಾಗರ ಸರಿಯೆ
ಬಚ್ಚ ಬರಿಯ ತಿಳಿವೆಚ್ಚವ ಮಾಡುವ
ಸಚ್ಚಯ ಸಮ್ಮತಿಗಚ್ಚರಿಯಾದ ||2||
ನಂಬಿದವರ ಕೈಯ್ಯ ನಾಡೆ ಬಿಡದಿರಯ್ಯ
ತುಂಬುರಜ ಜ ಗೀತ ತೂರ್ಯ ಸಂಪ್ರೀತ
ಕಂಬಲಾಶ್ವತಕರ್ನಕಮನೀಯವರ್ನ
ಶಂಭು ಶ್ರೀ ಶಿವಲಿಂಗ ರಸಾಂತರಂಗ
ಸಾಂಬ ಶಂಬ ಬಿಂಬಾಲಂಬ
ಕಂಬು ಸನ್ನಿಭಕಾಯ ಕರಿಮುಖ ಪ್ರಿಯ
ಅಂಬರ ಚಿಕುರ ದಿಗಂಬರ ಸುಕವಿಕ
ದಂಬ ವಿನುತ ಸ ಚಿದಂಬರ ರೂಪ ||3||

ಇಂದುವದನೆ ಕೇಳೆ
ಇಂದುವದನೆ ಕೇಳೆ ಇನೆಯನಿಗೀಗಳೆ
ಬಂದದೇತಕೆ ಮುನಿಸು ಬಾಲೆಯದೆನ್ನೊಳಿನಿಸು ||ಪಲ್ಲವಿ||
ನಸುನಗೆಯ ಬೆಳಗದು ನವಿರಾಸ್ಯದೊಳೊಗೆದು
ಪಸರಿಸುತೆನ್ನುವನು ಪಾಲಿಪ ಬಗೆಯ ತಾನು
ಸಸಿನೆದೋರಿದಾಗಳೆ ಸಾಕಾದುದದೇನು ಪೇಳೆ
ಭಸಿತವ ತಳಿದೆನ್ನ ಬರದಿಂದಪ್ಪಿದನು ಮುನ್ನ ||1||
ನಾರಿಯರಿವರೈವರ ನಾನೊಡಗೂಡುತ್ತ
ಊರ ಕೇರಿ ಕೇರಿಗಳ ಪೊಕ್ಕು ಕೇಣವನುಳಿದು ಮಿಕ್ಕು
ಸೇರುವೆಯಾಗಿಹ ರಾಸಿ ಸೇನೆ ನೇಹವ ಮೋಹಿಸಿ
ಸಾರಿ ಕಾ ಬರೆ ಬಂದು ಸರಸದೆ ಕೂಡಿಯಿಂದು ||2||
ಮುಪ್ಪುರಗಳನುರುಹಿ ಮೂಜಗವನು ಸಲಹಿ
ತೆಪ್ಪಗಿರ್ದವನೆಂದೆನೆ ತೆಗೆಯುತ್ತ ಹೋಗೆಂದನೆ
ಒಪ್ಪವನುಳಿವುತೀಗ ವಾಸರವಿದ್ಯಾಕೆ ಬೇಗ
ಕಪ್ಪುಗೊರಲಿನಿಗೇಕಮನ ಶಿವಲಿಂಗನಿಗೆ ||3|

ಮಕ್ಕಳಾಟಿಕೆಯಿದೇಕೆ
ಮಕ್ಕಳಾಟಿಕೆಯಿದೇಕೆ ಮನೆಗೆ ಬಾರೋ
ಎಕ್ಕಲಾ ದುಃಖವಾಗಲು ಏಣಾಕ್ಷಿ ತಡೆವಳಲ್ಲ ||ಪಲ್ಲವಿ||
ತಿಳಿವೆಳುದಿಂಗಳೊಳು ತಿಲಕವ ತಿರ್ದುತವಳು
ಘಳಿಲನೆ ನಿನ್ನ ನೆನೆದು ಬಳಲುವಳಯ್ಯಯ್ಯೋ ಚದುರ ||1||
ಕೋಗಿಲೆ ಕೊನೆಯನೇರಿ ಕೂಗೆ ಕೂಡೆ ಕೇಳಿಯವಳು
ಸಾಗಿ ಬಂದು ಹರಣವ ನೀಗುವಳಕಟಕಟ ಪ್ರಿಯ ||2||
ಏಳು ನೆಲೆಯುಪ್ಪರಿಗೆಯ ಮಾಳಿಗೆಯೊಳಗೆ ಹಂಸ
ತೂಳದ ತಳ್ಪದೊಳವಳ ಮೇಳವಿಸೊ ಶಿವಲಿಂಗೇಂದ್ರ ||3||

ಅರಸಂಚೆ ನಡೆಯುವಳೆ
ಅರಸಂಚೆ ನಡೆಯುವಳೆ ಅಳಿಗುರುಳೆ
ತರಳಲೋಚನೆ ಬಾಲೆ ||ಪಲ್ಲವಿ||
ಇನೆಯನೆನ್ನೊಳೊಲಿದಿರ್ದುಇದೇತಕೆ
ಮುನಿದು ಪೋದನೆ ಪೋರ್ದು
ಮನಸಿಜನಟ್ಟುಲಿಗೆನ್ನನನುಗೊಳಿಪರೆ ಮುನ್ನ ||1||
ಎಳೆವರೆಯದೊಳೊಲಿಸಿ
ಸಲಿಗೆಯಿಂದೆ ಸೆಳೆಮಂಚದೊಳು ಬೆರಸಿ
ಬಳಿವಿಡಿದ ಮೋಹದೆ ಘಳಿಲನೆ ಭೋಗಿಸದೆ ||2||
ಕರೆದು ತಂದು ತೋರೆ ಬೇಗ ಕಾಮಿನಿ ನಾ
ನಿರಲಾರೆನಮ್ಮ ಈಗ
ಪರಶಿವಲಿಂಗನ ಪರುಠವಣೆಯಿಂದವನ ||3||

ಸಾಸ ಮುಟ್ಟದಿರೆನ್ನನು
ಸಾಸ ಮುಟ್ಟದಿರೆನ್ನನು ಸಾಕು ರಮಣ ನಿನ್ನ
ಭಾಸುರ ಮಸ್ತಕದೊಳು ಭಾಮಿನಿಯಳಾರು ಪೇಳು ||ಪಲ್ಲವಿ||
ಪಾವನಗಾತ್ರೆ ನಾ ಮುನ್ನ ಫಣಿಗಣ್ಣುಷ್ಣಕೆ ತಾಳ್ದ ದೇವನದಿಯದಲ್ಲವೆ
ಹೊಳೆಗೆ ಮುಖವಾವುದೀಮಾತು ನಿಜವೆ ಕಾಂತೆ ಕೇಳದು ತಾವರೆಯಲರಲ್ಲವೆ
ನೇತ್ರಂಗಳುಂಟೆ ಭಾವಿಸೆ ಫೆÇಳೆಗೆ ಪೇಳು ನಲಲ ಮೀನ್ಗಳು ಕಾಣೆ ಭಾವಜನಾಣೆ
ಪುಸಿಯಿಲ್ಲಯಿನೆಯ ಪುಬ್ಬು ಯಾವಡೆಯೊಳು ತೊರೆಗಿಲ್ಲ
ಕೇಳು ಗಾಳಿಯಾವರಸಿ ತೀಡಲುದಯವಾದ ತೆರೆಗಳಲ್ಲವೆ
ಪೊಳೆಗೆ ನೂನವಿಲ್ಲವೆ ಚಂದ್ರಕಳೆಯದಲ್ಲವೆ
ದೇವನದಿಗೆ ಜಡೆಯಾವಲ್ಲಿಹುದು ತಡೆ ||1||
ತವಕವೇತಕೆ ಕೇಳು ತಾವರೆಗಂಪಿಗೆ ಬಂದ ಭ್ರಮರವಿಂಡುಗಳಲ್ಲವೆ
ಚೆಲುವ ತೋಳ್ಗಳವನಿಯೊಳು ನದಿಗಿಹವೆ
ಮೀರಿಯು ತೊರೆಯವದಿ ತೀರಗಳಲ್ಲವೆ
ಕುಚಗಳುಂಟೆ ವಿವರಿಸಿ ಹೇಳೆನಗೆ ಮನದನ್ನ
ಎಣೆವಕ್ಕಿಗಳವಳ ನೋಡಿಲ್ಲ ಬೇರೆ ಘನ
ಹೊಳೆಗೆ ನಡುಭುವಿಯೊಳಿಲ್ಲವಿದೇಕೋ ಚನ್ನ
ಭುವನದೊಳೊಪ್ಪುವಂಥ ನಳಿನನಾಳವೆಲೆಗೆ
ನಾಭಿಯುಂಟೆ ನದಿಗೆ ಸುಳಿಯಲ್ಲವೆ ಸುಭಗೆ
ನವ ಜಘನವದೇನು ಮಾಜದೆ ನುಡಿಯೊ ನೀನು ||2||
ಸಲ್ಲಲಿತ ನದಿಯನು ಸಾರಿದ ಮರಲರಾಶಿಯಲ್ಲವೆ ಚಂದ್ರವದನೆ
ಹೊಳೆಗೆ ಪಾದವೆಲ್ಲುಂಟೆ ಪೇಳೆನ್ನೊಡನೆ
ನೋಡಾವೆ ತಾನಲ್ಲವೆ ಮಂದಗಮನೆ ಉಡುಗೆ ಹೊಳೆಗಿಲ್ಲ
ಲೋಕದೊಳದು ಕಾಂತ ತಿಂಗಳ ಬೆಳಗಲ್ಲವೆ
ನೋಡು ಕಾಂತೆ ಪಂಥವೇತಕೆನ್ನೊಳು
ನಿಲ್ಲಯ್ಯ ನದಿಕುಳ್ಳಿಹುದೆಯಂಥ ಮಾತು ನಿನಗೆ
ನಲ್ಲೆ ನೀರ್ಮಡು ತಾನೆಂದಾಗ ತನ್ನ ಸತಿಯ ಸಾರ ಗುಣಮತಿಯ
ಮಚ್ಚಿದನು ಪ್ರಿಯ ಫುಲ್ಲಬಾಣ ವಿನಾಶ ಫೊತುರೆ ಶಿವಲಿಂಗೇಶ ||3||

ದೇವ ನೀನಹುದೊ
ದೇವ ನೀನಹುದೊ ಮಹಾದೇವ ದೇವ ನೀನಹುದೊ
ದೇವ ನೀನಹುದೊ ಭಾವಜನನುರುಹಿ ಕಾಯ್ದ ||ಪಲ್ಲವಿ||
ಹರಿಯವತಾರಗಳ ಪರಿಹರಿಸಿಯಾತನ ಪಾಪ
ದುರುವಣೆಯಳಿದ ಪಶುಪ ಸರಸಿಜಭವನ
ಶಿರನರಿದು ಸಲಹಿದೋಪ ದುರುಳ ಕಾಲನ
ನಿರದೆ ದಹಿಸುತ್ತೆ ಸತ್ಕೃಪಾಶರಥಿ ಮೇಲು
ವರಿಯಲವನ ನೋಡಿ ಪೊರೆಜ ಸರಸ ಸತ್ಯ ಸಲ್ಲಾಪ ||1||
ಮುಪೊ್ಪಳಲವರಿಗೆಲ್ಲ ವೊಪ್ಪವುಳಿದು ಪೇಳಿ ಸೊಲ್ಲಿ
ದಿಪ್ಪದಿಂದೆಯಿದ್ದ ಬುದ್ಧನ ಹೊರಗು ಮಾಡಿ
ತಪ್ಪಿ ನಡೆದ ದುಷ್ಟ ದಕ್ಷಣ ತಲೆಯನರಿದು
ಕುಪ್ಪಳಿಸಿದ ವೀರಭದ್ರನ ನೊಸಲ ಕಣ್ಣಿನ
ರೆಪ್ಪೆದೆರೆದು ಮುದ್ದಿಸುತ್ತವನ
ನಪ್ಪಿ ಮುದ್ದುಗೆಯ್ದು ಜೇನತುಪ್ಪದಂತೆ ವಚನರಚನ ||2||
ಜಗವ ನುಂಗುವ ನಂಜನುಗಿಸದೆ ಗೋಣೊಳಂಜ
ದಗಲದಿಂಬಿಟ್ಟ ವಿಬುಧನುತ
ನಿಗಮದೊಳಳವಟ್ಟ ಶರಣಜನ
ಕೊಗುಮಿಗಿಲನು ಕೊಟ್ಟು ಭುಜಂಗಗ
ಳಗಣಿತಗಳ ತೊಟ್ಟ ಶಿವಲಿಂಗ
ಸೊಗಸುವ ಪೊಂಬೆಟ್ಟ ತನಿಲಿ ಕರದೊಳಿಟ್ಟ ||3||

ಪಂಚಬ್ರಹ್ಮಗೆ ಪರಮೇಶಗೆ
ಪಂಚಬ್ರಹ್ಮಗೆ ಪರಮೇಶಗೆ ಚಾರು
ಚಂಚಲಾಕ್ಷಿಯರಾರಯೆತ್ತಿರೆ ||ಪಲ್ಲವಿ||
ಹಿಮಕರ ಕೋಟಿ ತೇಜಗೆ ಭಸಿತಾಂಗಗೆ
ಕಮಲಜ ಹರಿಮುಖ ಸುರವಂದ್ಯಗೆ
ಸುಮಹಿತ ಋಗ್ವೇದ ನುತ ಘನಲಾಕ್ಷಗೆ
ಕಮನ ಪಶ್ಚಿಮ ಭಾಸುರಗೆ ಸದ್ಯೋಜಾತಗೆ ||1||
ತರುಣಾರುಣ ಪ್ರಕಾಶಗೆ ದಿವ್ಯ ಕುಂಕುಮ
ವಿರಚಿತ ತಿಲಕ ಸನ್ನಿತ ಮುಖಗೆ
ಸುರಚಿರ ನೀಲಕುಂತಳ ಯಜುರ್ವೇದಗೆ ವಿ
ಸ್ತರಿಪೋತ್ತರಾಶರಾಜಿತ ವಾಮದೇವಗೆ ||2||
ನೀಲೋರು ರತ್ನ ತೇಜೋಕಿರಣಲೋಚನ
ಬಾಲೇಂದುರೇಖ ದಂಷ್ಟ್ರೋರಗಫಾಲಾಸ್ತಿ
ಮಾಲಾದಿ ಭೂಷಿತಥರ್ವಣ
ಲೋಲಘೋರಗೆ ಸುದಕ್ಷಿಣ ದಿಗ್ವಿರಾಜಗೆ ||3||
ಕನಕ ಪ್ರಭಾಂಗ ವಿದ್ರುಮರುಚಿರಾಧರ ತ್ರಿನ
ಯಾನ ಶಶಿ ಗಂಗಾಂಕಿತ ಪಿಂಗಳ
ಘನ ಜಟಿಲ ಪ್ರವಿರಾಜಗಮನಲ ಸಾಮ
ವಿನುತ ಪೂರ್ವಾಶ ತತ್ಪುರುಷ ಮಹೇಶಗೆ ||4||
ಸಕಲ ನಿಷ್ಕಲ ಗುಣಾತೀತಗೆ ಮನುರಾಜ
ಗಕಳಂಕಗತುಳತತ್ತಾನ್ವಿಧಿಪಗೆ
ಸುಕವಿ ಸನಾನುತ ಶಿವಲಿಂಗೇಶನಿಗೆ ಯೋಗಿ
ನಿಕರ ಮಾನಸನಿಳಯಗೆ ಚಿತ್ಸನ್ವಿರೂಪಗೆ ||5||

ಮಂಗಳೆಯರಸಗೆ ಮಂಗಳಂ
ಲಿಂಗ ಮಹೇಶಗೆ ಮಂಗಳಂ ||ಪಲ್ಲವಿ||
ಗಣನೆಗತೀತಗೆ ಗಾನಸಂಪ್ರೀತಗೆ
ಘಣಿಕುಂಡಲಗೆ ಪಾವನಶೀಲಗೆ
ಗುಣಮಮಿ ಭೂಷಗೆ ಗೋಪಪತಾಕಗೆ
ಪ್ರಣಮ ಸ್ವರೂಪಗೆ ಮಂಗಳಂ ||1||
ಹರಿನುತ ಚರಣಗೆ ಹರಿಣ ಕರಾಗ್ರಗೆ
ಕರುಣಸಾಗರಗೆ ಕಾಮವಿದೂರಗೆ
ಮರಣವಿರಹಿತಗೆ ಮದನಸಂಹಾರಗೆ
ತರುಣೇಂದುಮೌಲಿಗೆ ಮಂಗಳಂ ||2||
ನಿಗಮತುರಂಗಗೆ ನಿರುತ ಚಿದಂಗಗೆ
ನಗಪತಿ ಚಾಪಗೆ ನತಫಲಗೆ
ಗಗನ ಸರೋಜಗೆ ಗಣಕುಲರಾಜಗೆ
ಖಗಕೋಟಿ ತೇಜಗೆ ಮಂಗಳಂ ||3||

ಶ್ರೀ ಮಹಾಲಕ್ಷೀನ್ಮಿರಮಣಗೆ
ಶ್ರೀ ಮಹಾಲಕ್ಷೀನ್ಮಿರಮಣಗೆ ಭಕ್ತ
ಪ್ರೇಮಿಗೆ ಮಂಗಳಾರತಿಯೆತ್ತಿರೆ ||ಪಲ್ಲವಿ||
ಇಂಗಡಲಳಿಯನ ಕಂಗಳ ಪೂಜೆಗೆ
ಹಿಂಗದೆ ಮೆಚ್ಚಿ ಚಕ್ರವನೆ ಕೊಟ್ಟ
ತಿಂಗಳೆರೆಯನುತ್ತಮಾಂಗದೊಳಿಂಬಿಟ್ಟ
ಬೆಂಗದಿರಣುಗನ ಸಂಗವ ಸುಟ್ಟು ಬೊಟ್ಟಿಟ್ಟ ||1||
ಈರೇಳು ಪೊಡರಿಯನಾರೈದು ಪೊಡೆಯೊಳು
ಪೂರೈಸಿದ ಪುಸಿಗೆಡೆಗೊಡದ
ಮಾರಾಯನೆನಿಸಿ ನಾಡೊಳು ಬೆಳುಜಸವನು
ಬೇರೂರಿ ಮೆರೆವ ಬಿರುದಿನ ಬಿನ್ನಾಣ ||2||
ಕಡವವದೊಡೆಯನ ಬಿಡದೊಡನಾಡುವ
ಕಡೆಗಣಿಸದ ಕಡು ಸೊಬಗಿನ
ನಡೆಯ ನಾಲ್ಮೊಗನೊಳು ನುಡಿಗಡಣಕೆ ಚೆ
ಲ್ವೆಡೆಯಾದಖಂಡಿತ ಮೃಢಶಿವಲಿಂಗಗೆ ||3||

ಜಯಮಂಗಳಂ ಸದಾ
ಜಯಮಂಗಳಂ ಸದಾ ನಿತ್ಯ ಶುಭಮಂಗಳಂ
ಲಯಕಾಲ ಕಲ್ಪನಾದಿ ವಿದೂರಗೆ ||ಪಲ್ಲವಿ||
ತ್ರಿಪುರ ಸಂಹಾರನಿಗೆ ತ್ರಿಭುವನಾಧಾರನಿಗೆ
ವಿಪುಳವರ ವೈಭವಗೆ ವಿಗತಭವಗೆ
ತಪನದಶಶತರುಚಿಗೆ ತತಪವಿರದನ ರುಚಿಗೆ
ನಿಪುಣ ನಿಗಮವಸ್ತುತಗೆ ನಿಜಭರಿತಗೆ ||1||
ಆರ್ನವ ಕಲಾಪನಿಗೆ ಆಗಮಾಲಾಪನಿಗೆ
ದುರ್ನಯ ವಿಲೋಪನಿಗೆ ದುರಿತಹರಗೆ
ಕರ್ನಭೂಷಿತ ಫಣಿಗೆ ಕಮನೀಯ ಸುರಮಣಿಗೆ
ಸ್ವರ್ನಗಿರಿಚಾಪರನಿಗೆ ಸ್ವಯಂಜ್ಯೋತಿಗೆ ||2||
ಪಂಚವದನಾಂಚಿತಗೆ ಪರಮತತ್ತಾನ್ವಿಂಚಿತಗೆ
ಸಂಚಲವಿರಹಿತನಿಗೆ ಸರ್ವಗತಗೆ
ವಂಚಿತಗುಣತ್ರಯಗೆ ವಂದಿತ ಜನಪ್ರಿಯಗೆ
ಚಂಚದವಧಾತನಿಗೆ ಚರಣಾಕ್ಷಗೆ ||3||
ಅರ್ಜುನಶರಪ್ರದಗೆ ಅನವರತ ನಿರ್ಗದಗೆ
ವರ್ಜಿತ ಜರಾಮೃತಗೆ ವಸುವಿದ್ಯಗೆ
ನಿರ್ಜಿತ ಕೃತಾಂತನಿಗೆ ನಿರ್ಮಲ ನಿರಂತನಿಗೆ
ದುರ್ಜನ ವಿಪಕ್ಷನಿಗೆ ಧುರಧೀರಗೆ ||4||
ವಿತ್ತಪತಿ ಮಿತ್ರನಿಗೆ ವಿಬುಧನುತಿಪಾತ್ರಗೆ
ಕೃತ್ತಿಕೃತವಾಸನಿಗೆ ಕೃತಚರಿತಗೆ
ಚಿತ್ತಭವ ಚೈತ್ರನಿಗೆ ಚಿತ್ರತಮ ಗಾತ್ರನಿಗೆ
ಉತ್ತಮಗುಣಾನ್ವಿತಗೆ ಊರ್ಜಿತನಿಗೆ ||5||
ರದನವರಮುಖ ಪಿತಗೆ ರಘುಸುತ ಸಮರ್ಚಿತಗೆ
ವಿದಿತ ಮನುರೂಪನಿಗೆ ವಿಲಸಿತನಿಗೆ
ವಿದಿತ ವೇದೋತ್ಕರಗೆ ಗಗನ ಗಂಗಾಧರಗೆ
ಮೃದುಳ ಸಂಭಾಷಗೆ ಮೃಗಪಾಣಿಗೆ ||6||
ವಿದಿತ ಹರಿಮೃಗ್ಯನಿಗೆ ವಿವಿಧ ಸೌಭಾಗ್ಯನಿಗೆ
ವಿಧುಜಟಾಮಕುಟನಿಗೆ ವಿಷಕಂಠಗೆ
ಅಧವರಭಯದನಿಗೆ ಅಣಿಮಮುಖಸದನನಿಗೆ
ಕುಧರಜಾರಮಣನಿಗೆ ಕುಮುದಜಯಗೆ ||7||
ಮುನಿಜನ ವಿಚಿಂತ್ಯನಿಗೆ ಮುಕ್ತಿಪದ ಕಾಂತನಿಗೆ
ಕನದಳಿಕಲೋಚನ ಕರುಣಾಬ್ಧಿಗೆ
ವಿನುತ ಶಿವಲಿಂಗನಿಗೆ ವಿಕೃತ ತತಿ ಭಂಗನಿಗೆ
ಅನಘ ಗಣನಾಥನಿಗೆ ಅನುಪಮನಿಗೆ ||8||

ಮಂಗಳಂ ಜಯಮಂಗಳಂ
ಮಂಗಳಂ ಜಯಮಂಗಳಂ
ಜಂಗಮರೂಪಗೆ ಜಗದಂತರಾತ್ಮಗೆ
ಮಂಗಳಂ ಜಯಮಂಗಳಂ ||ಪಲ್ಲವಿ||
ಭಕ್ತ ಸಹಾಯಗೆ ಭವದೂರಗೆ
ಮುಕ್ತಿದಾಯಕನಿಗೆ ಮುನಿವಂದ್ಯಗೆ
ಸೂಕ್ತಿ ಸುಧಾರಸ ಪೂರಿತ ವದನಗೆ
ರಕ್ತಿರಹಿತ ಚಾರು ಚರಿತನಿಗೆ ||1||
ಇಂದುಶೇಖರನಿಗೆ ಇನತೇಜಗೆ
ಕಂದರ್ಪ ಹರನಿಗೆ ಕವಿನುತಗ
ಮಂದರ ಸದನಗೆ ಮನುಕೋಟಿ ರಾಜಗೆ
ನಂದಿವಾಹನನಿಗೆ ನಗಚಾಪಗೆ ||2||
ನರ್ತನಶೀಲಗೆ ನರನುತಗೆ
ಕೀರ್ತಿ ವಿಶಾಲಗೆ ಕಿಡಿಹರಗೆ
ಮೂರ್ತಿವಿರಾಜಿತ ಭುವನಕದಂಬಗೆ
ಮೂರ್ತಿಪಾವನವಿದ್ಯಾಕಲಿತನಿಗೆ ||3||
ಶಸ್ತಗುಣಾಗ್ರಗೆ ಶಾಶ್ವತಗೆ
ಮಸ್ತಕಪಾಣಿಗೆ ಪುರಹರಗೆ
ನಿಸ್ತುಳ ಮಹಿಮಗೆ ನಿಗಮಾಂತ ವೇದ್ಯಗೆ
ಹಸ್ತಿದನುಜ ಚರ್ಮವಸ್ತ್ರನಿಗೆ ||4||
ಎಡೆಯೂರ ಮಧ್ಯ ನಿವಾಸನಿಗೆ
ಎಳೆಯ ಹುಲ್ಲೆಯ ಕರದೊಳಾಂತನಿಗೆ
ಮೃಡಗುರು ತೋಂಟದ ಸಿದ್ಧೇಶ್ವರನಿಗೆ
ಕಡಿದಿನ ಶಿವಲಿಂಗರೂಪನಿಗೆ ||5||

ಬಾಲಚಂದ್ರ ಕಿರೀಟ
ಬಾಲಚಂದ್ರ ಕಿರೀಟ ಮುನಿಕುಲಲಲಾಮಂ ಜೋ ಜೋ ಬ್ರಹ್ಮಕ
ಪಾಲಪಾಣಿ ಪರಾಪರಾಂಚಿತ ಶೀಲ ಜೋಜೋ ||1||
ಚಿತ್ರ ನರ್ತನದಿಂದೆ ರಾಜಿಪ ಪುತ್ರ ಜೋ ಜೋ ಮುತ್ತಿನ
ಛತ್ರ ಭಾಸುರಗಾತ್ರ ಪನ್ನಗಸೂತ್ರ ಜೋಜೋ ||2||
ಅಂಗಜಾಂಗ ವಿಭಂಗ ಭಸ್ಮಸಿತಾಂಗ ಜೋ ಜೋ ಎನ್ನಂತ
ರಂಗ ಪದ್ಮಪತಂಗ ಗುಣಕುಲ ಸಂಗ ಜೋಜೋ ||3||
ಲೋಕಮಂ ಕುಕ್ಷಿಯೊಳು ತಾಳ್ದ ಪಿನಾಕಿ ಜೋ ಜೋ ದೇವತಾ
ನೀಕ ವಂದಿತ ಪಾದ ನಿರ್ಜಿತ ಶೋಕ ಜೋಜೋ ||4||
ಉಣ್ಣದೂಟವನುಂಡು ಬಾಳ್ದ ಮುಕ್ಕಣ್ಣ ಜೋಜೋ ಮುದ್ದಿನ
ಚಿಣ್ಣ ಚಿರಸುಖಿಯಾಗಿ ನಿಂದೆನ್ನಣ್ಣ ಜೋಜೋ ||5||
ಸಾರ ಸದ್ಗುಣಹಾರ ವಿಮಲಾಕಾರ ಜೋಜೋ ಎನ್ನ ಕು
ಮಾರ ಮಾರ ವಿದೂರ ಸನ್ನುತ ಧೀರ ಜೋಜೋ ||6||
ಮಂಗಳಾಕರ ಚಾರು ವೇದ ತುರಂಗ ಜೋಜೋ ಸಿಂಧುನಿ
ಷಂಗ ಶಾಶ್ವತ ಕೀರ್ತಿ ಕಾಂತಿತರಂಗ ಜೋಜೋ ||7||

ಬಾರೈಯ್ಯ ಬಾರೊ
ಬಾರೈಯ್ಯ ಬಾರೊ ಬಾರೊ ಬಾಲೇಂದುಮೌಲಿ
ಬಾರೊ ಬಾರೈಯ್ಯ ||ಪಲ್ಲವಿ||
ಹಸುಳೆಗೊಲಿದನೆ ಬಾರೊ ಹಾಲಸವಿದವನೆ ಬಾರೊ
ಮಸುಳದಿಹ ಕೀರ್ತಿಮಾನಿತ ದಿವ್ಯ ಮೂರ್ತಿ ಬಾರೊ ಬಾರಯ್ಯ ||1||
ತ್ರಿಪುರ ಸಂಹರ ಬಾರೊ ತ್ರಿಭುವನಧರ ಬಾರೊ
ವಿಪುಳ ಮಹಿಮ ಬಾರೊ ವಿಜಯಶೀಲನೆ ಬಾರೊ ||2||
ಚರಣ ಲೋಚನ ಬಾರೊ ಚತುರ ಸನ್ನುತ ಬಾರೊ
ಶರಣ ಸಂತಾನ ಬಾರೊ ಶಮನಮರ್ದನ ಬಾರೊ ||3||
ನಂದಿಕೇತನ ಬಾರೊ ನಾಗಮಂಡನ ಬಾರೊ
ಕಂದಗೋರಲ ಬಾರೊ ಕನಕರೇತನೆ ಬಾರೊ ||4||
ಮಂಗಳಮಂದಿರನೆ ಬಾರೊ ಮಂಜುಳನಾಮನೆ ಬಾರೊ
ತುಂಗ ಶಿವಲಿಂಗ ಬಾರೊ ತುಹಿನಜಾರ್ಧಾಂಗ ಬಾರೊ ||5||

ಸಾಲು ಜಗವನೆಲ್ಲ ಲೀಲೆಯಿಂ
ಸಾಲು ಜಗವನೆಲ್ಲ ಲೀಲೆಯಿಂ ನಿರ್ಮಿಸಿದ
ಲೋಲ ಶ್ರೀ ಬ್ರಹ್ಮ ತನುಭವ
ಲೋಲ ಶ್ರೀ ಬ್ರಹ್ಮ ತನುಭವ ದಕ್ಷೇಂದ್ರನ
ಬಾಲೆ ದಾಕ್ಷಾಯಿಣಿ ಜಯ ಜಯ ||1||
ನೆಲೆಯಿಲ್ಲದೀಶನ ನೆಲೆಗೆ ತಂದಿರಿಸಿದೆ
ಪಲಬಗೆಯವರ ಮನೆಯಲ್ಲಿ
ಪಲಬಗೆಯವರ ಮನೆಯಲುಂಡೀಶನ
ಕುಲವಂತನೆನಿಸಿದಬಲೆಗೆ ||2||
ಹೆಸರಿಲ್ಲದಭವನ ಹೆಸರ ಮಾಡಿಸಿ ಲೋಕ
ವಿಸರದೊಳಧಿಕನೆನಿಸಿದ
ವಿಸರದೊಳಧಿಕನೆನಿಸಿದ ದಾಕ್ಷಾಯಣಿಯ
ಮಿಸುಪ ಮಹಿಮೆಯ ಪೊಗಳುವೆ ||3||
ಮಂಡೆ ಮಾಲೆಯನಾಂತು ಕೆಂಡಕ್ಕೆ ನೊಸಲನು
ಕೊಂಡವೆಂದೆನಿಸಿ ಜಗದೊಳು
ಕೊಂಡವೆಂದೆನಿಸಿ ಜಗದೊಳು ಪೆಸರಾದ
ದಿಂಡೆಯನೊ ಶಿವನೆಂದೆನಿಸಿದಳೆ ||4||
ಮುದಿಯೆತ್ತ ನೇರಿದ ಮದನನುರುಹಿದ
ಬಿದಿಗೆಯ ಶಶಿಯ ತಲೆಯಲ್ಲಿ
ಬಿದಿಗೆಯ ಶಶಿಯ ತಲೆಯಲ್ಲಿ ತಳೆದಭವನ
ಚದುರನೆಂದೆನಿಸಿದಮಳೆಗೆ ||5||

ಮಿಡಮಿಗಗೈಯ್ಯ ರಕ್ಷಿಪುದಯ್ಯ
ಮಿಡಮಿಗಗೈಯ್ಯ ರಕ್ಷಿಪುದಯ್ಯ ನಿ
ನ್ನಡಿದಾವರೆಗಳ ನಂಬಿದೆ ಜೀಯ
ಒಡಲಿಚನೊಡಲನುರುಹಿ ಕಾಯ್ದ
ಕಡುಜನದೆಡೆಯಹ ಜಡೆಮುಡಿಯೊಳಗಿಂ
ಗಡಲಮಗುವನೊಲಿದುಡುಗದೆ ತಳೆದ ||ಪಲ್ಲವಿ||
ಅರಿಲಲರಚ್ಚಿ ತನ್ನೆಯ ಕಣ್ಣ ಬಿಚ್ಚಿ
ಹರಿಸದೆ ನಿನ್ನ ಕಾಲೊಳಗಮರ್ಚಿ
ದೊರೆವಡೆದೊಳು ಬಟುಗೆಯ್ದು ಪಡೆದ
ಕರಿಗೊರಲರೆವಡಲಿರವಿನ ಸೈಪನು
ಪರುಠವಣೆಯೊಳೆಡೆವರಿಯದೆ ಕೊಡುವ ||1||
ಪೊನ್ನೆಲದಾಳಿವಿಲ್ಲ ದುಗ್ಗಿಯನಲ್ಲ ದಚ್ಚ
ಜನ್ನವಗೆಯ ಜವರಾಯನೆರ್ದೆಯ
ಮುನ್ನ ತಿಸುಳದಿನಿರಿದ ಪೊರೆದ
ಚೆನ್ನೆಲರುಣಿಗಳ ಕನ್ನಗಳೊಳು ತೊ
ಟ್ಟನ್ನರಿಗನ್ನನೆ ಮನ್ನಣೆಯರಸ ||2||
ಅರಸಂಚೆದೇರ ತುಳಿಲತಾಣ ಜಾಣ
ಹರಕಲಿಸಿದ ಜಸವಂತ ಸಾಂತ
ಗರಿವಸರಿದಮೊರನೇರಿದವನ
ಹೆರುತವನಿಂ ಬರ್ದಿಲರ ಸಲಹಿದಾತನ
ಪರಮಯಿರಸ ನೆರೆ ಪರಶಿವಲಿಂಗ ||3||

ಕಟ್ಟಿಗೆಹಳ್ಳಿಯ ಕರುಣಾಳು
ಕಟ್ಟಿಗೆಹಳ್ಳಿಯ ಕರುಣಾಳು ಸಿದ್ಧಲಿಂಗನ
ಮುಟ್ಟಿ ಪೂಜಿಪ ಭಕ್ತನವನೆ ಕೃತಾರ್ಥನು ||ಪಲ್ಲವಿ||
ವೀರ ಮಾಹೇಶ್ವರಾಚಾರ ಬೋಧಾಮೃತ
ಸಾರ ವಚನವನರುಹಿ ಶಿಷ್ಯತತಿಗೆ
ಧಾರುಣಿಯಲ್ಲ ಪ್ರಸಿದ್ಧರ ಮಾಡುವ
ಸೂರಿ ಸನ್ನುತ ಪಾತ್ರನಾದ ತ್ರಿಣೇತ್ರನ ||1||
ಪತಿ ಪಶು ಪಾಶ ತ್ರಯವನು ಮುನೀಶ್ವರ
ತತಿಗೆ ದಕ್ಷಿಣಮೂರ್ತಿಯಾಗಿ ಬೋಧಿಸುವ
ಹಿತದಿಂದವರಿಗೆ ಜೀವನ್ಮುಕ್ತಿಯನು ಕೊಟ್ಟು
ಶ್ರುತಿಗಳ ಮಸ್ತಕಾಗ್ರದೊಳೆಡೆಯಾಡುವ ||2||
ಪರಮ ಕಾಷ್ಠಕೆ ಕಟ್ಟಿಗೆ ತಾಂ ಪ್ರಾಕೃತದಲ್ಲಿ
ನಿರುತದಿಂದದೆತಿಳಿವಳ್ಳಿಯೆಂದೆನಿಸಿ
ಪರಿಪೂರ್ಣಜ್ಞಾನವಾಗಿರಲದರಲ್ಲಿ ಸು
ಸ್ಥಿರ ಶಿವಲಿಂಗಾಂಗ ಯೋಗದೊಳಿಹನ ||3||

ಬೇಡನ ಮಗಳನು ಬೇಡದೆ
ಬೇಡನ ಮಗಳನು ಬೇಡದೆ ಕೈವಿಡಿದು
ನಾಡೊಳಗವಳ ಕುಲಜೆಯ ಮಾಡಿದ
ರೂಢಿಯರಮೊಗಗೆ ಜಯ ಜಯ ||ಶೋಭವನೆ|| ||1||
ಬೇಡನೆಂಬುದು ದಿಟವು ಕಾಡನೆಂಬುದು ದಿಟವು
ಬೇಡಿ ಕಾಡುವರ ಬರುವನು
ಬೇಡಿ ಕಾಡುವರ ಬರುವನು ಹರಿಸಿದ
ಪಾಡಿ ನಲಿವಲಿ ಜಯ ಜಯ ||ಶೋಭವನೆ|| ||2||
ಬೇಡದವರು ನಾವೆ ಕಾಡದವವು ನಾವೆ
ಬೇಡಿ ಕಾಡುವರ ಬರುವನು
ಬೇಡಿ ಕಾಡುವರ ಬರುವನು ಹರಿಸಿದ
ಗಾಡಿಯವರು ನಮಗೆಣೆಯಾರು ||ಶೋಭವನೆ|| ||3||
ಕುಲವಿಲ್ಲದಾತನ ಸಲಿಗೆಯ ಮಗನಿಗೆ
ಗೆಲವಿತ್ತು ಕೈಯ್ಯನುರೆ ಪಿಡಿದು
ಗೆಲವಿತ್ತು ಕೈಯ್ಯನುರೆ ಪಿಡಿದು ಲೋಕದೊಳು
ನೆಲೆಗೆ ತಂದಬಲೆ ಜಯ ಜಯ ||ಶೋಭವನೆ|| ||4||
ಕುಲವನು ಗೆಲವನು ಸಲುವಳಿಯನು ತನ್ನ
ನೊಲಿಸಿದ ಪತಿಗೆ ಕೊಡುತಿಹ
ನೊಲಿಸಿದ ಪತಿಗೆ ಕೊಡುತಿಹ ಲವಲಿಯ
ಚೆಲುವ ರಮಣಗೆ ಜಯ ಜಯ ||ಶೋಭವನೆ|| ||5||
ಕುಲ ಛಲಂಗಳನೆಲ್ಲ ನಮಗಾರು ಕೊಟ್ಟವರು
ಸಲೆಯೆಮ್ಮ ಮನೆಯ ವರಸ್ವಾಮಿ
ಸಲೆಯೆಮ್ಮ ಮನೆಯ ವರಸ್ವಾಮಿ ಕೊಟ್ಟರೆ
ಕುಲ ಛಲವೆಲ್ಲವೆಮಗಿಹವು ||ಶೋಭವನೆ|| ||6||
ಗುಡ್ಡದ ಬೇಡನ ಮಡ್ಡತನವ ನೋಡೆ
ದೊಡ್ಡ ಮನ್ನೆಯನ ಮಗನಿಗೆ
ದೊಡ್ಡ ಮನ್ನೆಯನ ಮಗನಿಗರುಮೊಗನಿಗೆ
ಸಡ್ಡೆಯೆ ಅವರು ಜಗದೊಳಗೆ ||ಶೋಭವನೆ|| ||7||
ಆರಾದೊಡೇನವರು ಗೌರಿ ಕುಮಾರನ
ನಾರಿ ಲವಲಿಯ ರಮಣನ
ನಾರಿ ಲವಲಿಯ ರಮಣನ ಮೃದುಪಾದ
ನೀರೇಜದಲ್ಲಿ ಕುಲಜರು ||ಶೋಭವನೆ|| ||8||

ಕುಂದಕೋರಕರದನ ಪಾಲಯ
ಕುಂದಕೋರಕರದನ ಪಾಲಯ ಗೌರಿ ಚಂದಿರನಿಭವದನೆ
ಸುಂದರಾಂಗಿ ಸುರಾಸುರಹಿತೆ ಮಂದಯಾನೆ ಮಹಾನುಭಾವನೆ
ಸ್ಕಂದಮಾತೆ ಮುಕುಂದ ಸೇವಿತೆ ಇಂದಿರವರದಾಯಕಿ ||ಪಲ್ಲವಿ||
ಮೃಗರಾಜ ವರ ವಾಹನೆ ಮೃತ್ಯುಂಜಯೆ
ನಿಗಮವಚನ ಸದನೆ ಅಗಿಲು ಕುಂಕುಮಾನುಲೇಪನೆ
ಜಗಧವನೆ ತತ್ಪರೆ ಸುಖಾಕರೆ
ಬಗಸೆಗಂಗಳೆ ಭಾನುತೇಜಳೆ
ಪೊಗರೊಗುವ ಕಿರುನಗೆಯಳೆ ||1||
ವಿತತ ಕೃಪಾಪಾಂಗೆ ವಿಶ್ರುತ ಗುಣತತಿ ವಿರಾಜಿತೆ ತುಂಗೆ
ಶತದಳಾಂಬಕಿ ಶಾಂತೆ ಭಾವಕಿ ರತಿಪತಿಸ್ತುತೆ ರಕ್ತಿ ಸಂಯುತೆ
ಮತಿ ಮನೋಹರೆ ಮಾನ್ಯೆ ಚಿತ್ಕಲೆ ಧøತ ಸುಧಾಕರ ಸತ್ಕಲೆ ||2||
ಮಂಗಲತರ ಮಹಿಮೆ ಪರಮ ಶಿವಲಿಂಗ ಭೂಷಿತ ವಾಮೆ
ಪೆಂಗಳರಸಿ ಸುಹಾವಸರಸಿ ಕು
ರಂಗಪಾಣಿ ಮುದತರಂಗಿಣಿ
ಭಂಗವಿರಹಿತೆ ಭಕ್ತ ಸಂಗತೆ ರಂಗಿತಾರತಿ ಪಾರ್ವತಿ ||3||

ಶರಣು ಶರಣು ಶಾಶ್ವತೆ
ಶರಣು ಶರಣು ಶಾಶ್ವತೆ ಶಾಂಕರಿ ಹಿಮಗಿರಿ ವರತನುಜಾತೆ
ತರುಣಕಿರಣಮಂಡಲಮಂದಿರೆ ಶುಭಕರಣೆ ಜಗನ್ಮಾತೆ | |ಪಲ್ಲವಿ||
ಕಮಲವದನೆ ಕೈರವಲೋಚನೆ ಸುರಮಣಿಯರಧಿನಾಥೆ
ಸುಮಶರಪಾಲಿನಿ ಸುರಚಿರಮಾನಿನಿ ವಿಮಲಮ್ನಗೇಂದ್ರ ರಥೆ
ನಮಿತಜನಾಮರಭೂಜೆ ನಿಗಮ ಸಂಕ್ರಮಿತೆ ಮಹಾಮಹಿಮೆ
ಯಮಿಜನ ಮಾನಸ ತಾಮಸ ನಾಶಿನಿ ಮಮ ಭಯಹರಣೆಯುಮೆ ||1||
ಎಳೆವೆರೆನೊಸಲೊಳೊಪ್ಪುವ ಕಸ್ತುರಿಯ ತಿಳಕವ ಗಜಮುಖನು
ನಳಿನದಮಧ್ಯದಿ ನೆಲಸಿದ ತುಂಬೆಯ ಮರಿಯೆಂದೊಲಿದದನು
ಕಳಕಳಿಸುತೆ ಪಿಡಿಯಲು ಸುಂಡಿಲವನು ತಳುಹದೆ ನೀಡುತರೆ
ಬೆಳಗುವ ನಗೆಯಿಂದೀಶಗೆ ತೋರುವ ವಿಳಸಿತ ಮತಿ ಚದುರೆ ||2||
ನಿಡುಜಡೆಯೆಡೆ ಮುಡಿಯೊಳು ಸೂಡಿದ ಮಡುವೆನಿಸಿದ ಗಂಗೆ
ಸಡಿಲಿ ಕಡೆಗೆ ಹೋಗದವೊಲು ಸುತತಿದ ಹೆಡೆಗನ ಹೆಡೆವಣಿಯ
ಬಿಡದೆ ಜಡಿದು ನೋಡಲು ನೋಡುತೆ ಕಣ್ಣಡಿಯೆಂದದಲೊಲಿದದನು
ಪಿಡಿಯಲು ಹೆದರುವ ಕುವರನ ಮುದ್ದಿಪ ಮೃಢ ಶಿವಲಿಂಗ ಸತಿ ||3||

ತಡೆದನೇತಕೆ ನಲ್ಲನು
ತಡೆದನೇತಕೆ ನಲ್ಲನು ತಳುಹಿ ನೀನೆ
ಮುದದಿನೆರೆದೆಯೋಯೇನು
ಕಡೆಗಣ್ಣ ಕೆಂಪಿದೇನು ಕರ್ಣ ನಾಸಿಕಾಗ್ರದ
ತೊಡಿಗೆಯಂದವಿದೇನು
ಕಡೆಗೆ ರಂಗುದುಟಿಯೆಡೆಗೆ ಕಳಂಕಿದೇನು ||ಪಲ್ಲವಿ||
ಮೊಲೆಯುಗುರ್ಗೊನೆಗಲೆಯುಮೈಸಮ್ಮದಸ್ವೇದ
ಜಲವಿದೆತ್ತಣಿನಾದುದೆ
ಸಲೆ ಮೂರಂಗದ ನಿನ್ನ
ನೆಲೆಯೆನಗರಿದಿರರೊಲವತಿಳಿವಕ್ರಮದ
ಚೆಲುವ ಪೇಳುವೆನ್ನೊಳು ಹಟವದೇತಕೆ ಭಾವಕಿ ||1||
ಮನವು ನಿರಾಳವೆ ನಿನ್ನನಿಂದುತನಕ
ಘನ ಪಾರವರಿಯದಾನು ವನಿತೆ ಸುರಾಳವಾಗಿ
ವಿನುತ ನಿಷ್ಕಲವೆಂದು ನೆನೆಯ
ಲಣುಮಾತ್ರಕೆ ಮುನಿಯದಿರು ಗುರು
ವಿನಯವೆನ್ನಲ್ಲಿ ತೋರ್ಪುದು ||2||
ನುಡಿಗಳೇನಾದವಕ್ಕ ನೀನು ಬಿಂದಿಗೆ
ಯೊಡವೆಯನೆನಗಿತ್ತೊಡೆ
ತಡೆಯದೆ ಕಳುಹಲಿನ್ನು
ನುಡಿವೆನಿದಕಾನು ಕೊಡುವೆ ನಂಬುಗೆಯನು
ಬಿಡುವೆ ಕಪಟವನು ಸೆಡವೆ ನೀನೇಕೆ ಭಾಮಿನಿ ||3||
ಸತಿ ಕೇಳೆ ಕೋಟಿ ಮಹಾ
ಕ್ಷಿತಿಯರ್ಬುದ ನುತ ಲಕ್ಷ ತ್ರಿಶಂಖವಾಗಿ
ಅತಿಶಯ ಮಹಾಪದ್ಮ ಕ್ಷಿತಿ ಖರ್ವ ಮಹಾಕ್ಷಿತಿ
ವಿತತ ಪದ್ಮಗಳಷ್ಟು ಸತತ ನಿನ್ನಲುಂಟು
ಪತಿತವೆನ್ನಲ್ಲಿ ತೋರ್ಪುದೇ ||4||
ನುಂಗಿದ ತುತ್ತಿನ ರುಚಿಯನರಿಯಲಿನ್ನುಂಟೆ
ಹೆಂಗಳರಸಿ ನಾ ಮುನ್ನ ತುಂಗ ಶಿವಲಿಂಗೇಶನ
ಹಿಂಗದೆ ಕರೆದುತಂದು
ಸಂಗ ಸಮರಸದಾಲಿಂಗನವನು ಬಿಡ
ದಂಗವಪ್ಪಂತೆ ಮಾಡಿದೆ ||5||

ಜಯ ಜಯ ಜಯ ಜಯ
ಜಯ ಜಯ ಜಯ ಜಯ ಗಿರಿಜಾತೆ
ಜಯ ಜಯ ಜಯ ಜಗನ್ನಾಥೆ
ಹಯಮುಖ ವರದೆ ಹರಿ ನಮಿತಪದೆ
ಜಯಭಯ ಹನನೆ ಪಾಲಿತ ವಚನೆ
ರಯಗಜ ವಿನುತೆ ರಚನಾಕಲಿತೆ
ನಿಯುತ ಮಹತ್ವೆ ನಿರುಪಮ ಸತ್ತೆನ್ವಿ ||ಪಲ್ಲವಿ||
ತರುಣ ತರಣಿ ಬಿಂಬವಾಸೆ ತಥ
ಸುರುಚಿರ ಮಂದಹಾಸೆ
ಕರಿವರಯಾನೆ ಕಲರವಗಾನೆ
ಪರಿಹøತದುರಿತೆ ಪಟುಸುಖಭರಿತೆ
ಸರಸತರಗುಣೆಸದಮಲಕರಣೆ
ಪರತರರೂಪೆ ಪಲಿತಾರೂಪೆ ||1||
ಮೃಗರಾಜವಾಹನರೋಹೆ
ಮೃದುಮಧುರಾಮ್ನಾಯ ಗೇಹೆ
ಅಗಣಿತ ಕೀರ್ತಿ ಆಗಮ ಮೂರ್ತಿ
ಸುಗಮ ಚರಿತ್ರೆ ಸೂನøತ ಪಾತ್ರೆ
ಭಗಣಪ ವದನೆ ಭಾಸ್ವರ ರದನೆ
ವಿಗಳಿತ ಮಾಯೆ ವಿಳಸದುಪಾಯೆ ||2||
ಶಿವಲಿಂಗ ವಿಭು ಪಟ್ಟರಾಣಿ
ಶಿಖಿವಾಹನ ಪಾಲನ ವಾಣಿ
ಭುವನಿತ ಕುಕ್ಷೆ ಭುಜಬಲ ದಕ್ಷೆ
ಕವಿಗುರು ಮಹಿತೆ ಕರುಣಾಸಹಿತೆ
ಸವಿನಯ ದಾನ ಸಾರಸ ನಯನೆ
ಪವಿಮಣಿ ಕಾಂತೆ ಪಾವನ ಚೆರಿತೆ ||3||

ರಜತಾದ್ರಿನಿಲಯಂಗೆ
ರಜತಾದ್ರಿನಿಲಯಂಗೆ ಭುಜಗೇಂದ್ರ ವಲಯಂಗೆ
ಗಜದಾನವೇಂದ್ರ ಹರಣಂಗೆ
ಗಜದಾನವೇಂದ್ರ ಹರಣಂಗೆ ನತಜನ
ವೃಜಿನ ವನ ಶಿಖಿಗೆ ಶುಭಮಸ್ತು ಶೋಭನವೆ ||1||
ನುತ ಪಂಚವದನಂಗೆ ಜಿತಕಾಲ ಮದನಂಗೆ
ಯತಿರಾಜ ಹøದಯ ಸದನಂಗೆ
ಯತಿರಾಜ ಹøದಯ ಸದನಂಗೆ ವೇದಾಂತ
ಗತಿ ಸುಂದರಂಗೆ ಶುಭಮಸ್ತು ಶೋಭಾನಮಸ್ತು ||2||
ನಿರವದ್ಯ ಚರಿತಂಗೆ ಬಾಣ ವರದಂಗೆ
ಸುರಶೈಲಚಾಪ ಧರಣಂಗೆ
ಸುರಶೈಲಚಾಪ ಧರಣಂಗೆ ದಿವಿಜ ವಿಧಿ
ಹರಿಗಳೆರೆಯಂಗೆ ಶುಭಮಸ್ತು ||3||
ಚಂದ್ರಕಲಾಪಂಗೆ ಸಾಂದ್ರ ಮಹತ್ವಂಗೆ
ರುಂದ್ರ ಕಲ್ಯಾಣ ಸದನಂಗೆ
ರುಂದ್ರ ಕಲ್ಯಾಣ ಸದನಂಗೆ ತುಂಗ ವೃಷ
ಭೇಂದ್ರವಾಹಂಗೆ ಶುಭಮಸ್ತು ||4||
ವೇದಸಪ್ತಿಗೆ ಗತಿಭೇದಂಗೆ ನಿಶ್ಚಲ
ವಾದಲೋಲಂಗೆ ಸುಖನಿಧಿಗೆ
ವಾದಲೋಲಂಗೆ ಸುಖನಿಧಿಗೆ ಸತ್ಯ ಶುಭ
ವಾದ ರೂಪಂಗೆ ಶುಭಮಸ್ತು ||5||
ಮೀನಾಕ್ಷಿ ರಮಣಂಗೆ ಗಾನಾಬ್ಧಿ ಚಂದ್ರಂಗೆ
ಭಾನುದಯಾದ್ರಿ ಕಲಿಶಂಗೆ
ಭಾನುದಯಾದ್ರಿ ಕುಲಿಶಂಗೆ ವಂದಿತ
ಮೌನೀಶ್ವರಂಗೆ ಶುಭಮಸ್ತು | |6||
ನಿರುತ ಹಾಲಾಸಾಖ್ಯ ಪುರದ ಮಲಯಧ್ವಜನ
ಪರತರ ಪುತ್ರಿಯೆನಿಸಿದ
ಪರತರ ಪುತ್ರಿಯೆನಿಸಿದ ತಟಾತಕೆಯ
ವರ ಸುಂದರಂಗೆ ಶುಭಮಸ್ತು ||7||

ಬೆಡಗು ಬೆಡಗೆಂದೊಡಾವುದು
ಬೆಡಗು ಬೆಡಗೆಂದೊಡಾವುದು ಬೆಡಗು ಹೇಳಿ
ಕಡಲನೀಂಟಿದುದೊಂದು ಕಪ್ಪೆ ತವಕದಲಿ ||ಪಲ್ಲವಿ||
ಕುಂಟ ಕುರುಡರು ಕೂಡಿ ನಂಟುತನವನು ಮಾಡಿ
ಗಂಟಿಕ್ಕಿಯವರವರಿಗಾ ಕದನವನು
ಅಂಟಿಸುತೆಯಾ ಜಗಳವ ತಾನೆ ತಿರ್ದಿ ಬಲುತಿರ್ದಿ ಬಲು
ತುಂಟನವರುಭಯತರ ಗಂಟಲನೆ ಮುರಿದ ||1||
ಐದು ಹೆರೆಗಳ ಹೊದೆದ ಹಾದಿಗಾಣದೆ ತಿರುಗಿ
ಕೂದಲಳು ನೂರುಪಾಲೊಳಗೊಂದನು
ಆಧರಿಸಿದಾ ನಾಗರನು ತಿಂದು ಹಾರಿದುದು
ಮೇದಿನಿ ರೊಳಮಮ ನೊಣನೊಂದು ಸಾಹಸದೆ ||2||
ಮುಪೊ್ಪಳಲವನರನಿರದೆ ದಪ್ಪಗುಂದಿಸಿ ಬಳಿಕೆ
ನಿಪ್ಪಸಿರರೆನಿಸುತವರುಗಳನೊಲಿದು
ಅಪ್ಪುತವರಭಿಧಾನಗಳನು ಮಸುಳಿಸಿ ತನ್ನೊ
ಳೊಪ್ಪುಗೆಯ್ದುದು ಪರಮ ಶಿವಲಿಂಗವು ||3||

ಜಯಮಂಗಳಂ ಸತತ
ಜಯಮಂಗಳಂ ಸತತ ಶುಭಮಂಗಳಂ
ಜಯ ಜಗತ್ಪತಿಗೆ ಜಂಗಮ ರೂಪಗೆ ||ಪಲ್ಲವಿ||
ತುಂಗಗಂಗಾಧರಗೆ ತುಹಿನಾದ್ರಿಜಾವರಗೆ
ಮಂಗಲಮಹೋದಯಗೆ ಮಹನೀಯ್ಯಗೆ
ಅಂಗಜವಿಭಂಗ ಲಸದಂಗ ಕರುಣಾರಸ ತ
ರಂಗಿತಾಪಾಂಗ ಪುಂಗವವಾಹಗೆ ||1||
ಕಾಂತಿಯುತ ದಿಕ್ತಟಗೆ ಕಮನ ಪಿಂಗಳ ಜಟಗೆ
ಅಂತಕಮಹಾಪಹಗೆ ಅಗಣಿತನಿಗೆ
ಶಾಂತಂಗೆ ನಿರಾಂತಕಗೆ ಮಹಂತಗೆ ಮುನಿ ಸ್ವಾಂತ
ಚಿಂತಿತ ಸುವಿಗ್ರಹಗೆ ಚಿನ್ಮಯನಿಗೆ ||2||
ನಂದಿಮುಖಗಣಾನಂದ ವಾರಿಧಿ ಶಶಿಗೆ
ಸ್ಕಂದ ಜನಕನಿಗೆ ಕಾಮಿತದಾಯಿಗೆ
ಸುಂದರ ಪುರಂದರ ಮುಕುಂದ ಲಸದರ
ವಿಂದ ನಂದನಾಧಿಕ ವಂದ್ಯ ಶಿವಲಿಂಗಗೆ ||3||

ಮಂಗಳವಗಜಾತ್ಮಜೆಗೆ
ಮಂಗಳವಗಜಾತ್ಮಜೆಗೆ ಜಯಮಂಗಳಂ
ತುಂಗಕುಚೆಗಂಗಜನ ಪೊರೆದಾಕೆಗೆ ||ಪಲ್ಲವಿ||
ಗಜಮುಖನ ಪೆತ್ತಳಿಗೆ ಗಜವೈರಿ ವಾಹನಗೆ
ರಜತಾದ್ರಿ ನಿಲಯಳಿಗೆ ರಾಜಮುಖಿಗೆ
ಭುಜಗವೇಣಿಗೆ ಭೂರಿ ಸುಜನನುತಿಪಾತ್ರೆಗೆ
ತ್ರಿಜಗದಂಬೆಗೆ ತ್ರಿಪುರವನ ವಹ್ನಿಗೆ ||1||
ಆರ್ಯೆಗನುಪಮ ಮಹಾಕಾರ್ಯೆಗೆ ಸುರಸ್ತ್ರೀಯರ
ವರ್ಯೆಗೆ ಸುಧಾಬ್ಧಿ ಗಾಂಭೀರ್ಯಗುಮೆಗೆ
ತೂರ್ಯತರ ವೈಭವಗೆ ತುಹಿನರುಚಿ ಧೂಮಕರ
ಸೂರ್ಯಲೋಚನೆ ಸುರುಚಿರ ಧೈರ್ಯೆಗೆ ||2||
ವಾಲ್ಯನಿಗಮೋಕ್ತೆಗಮಾಲ್ಯಸದ್ಗುಣಮಣಿಗೆ
ತಾಲ್ಯವಿರಹಿತ ಸತಿಗೆ ಕಲ್ಯಾಣಿಗೆ
ಮಾಲ್ಯಯುತ ಕಬರಿಗೆ ಮಹಾತ್ಮ ಶಿವಲಿಂಗೇಶ
ಲೌಲ್ಯೆಗೆ ನಿರಂಜನೆಗೆ ವರ ಗೌರಿಗೆ ||3||

ಜಯಮಂಗಳಂ ನಿತ್ಯ
ಜಯಮಂಗಳಂ ನಿತ್ಯ ಶುಭ ಮಂಗಳಂ
ಜಯ ಕೀರ್ತಿ ವಾರಾಶಿಗೆ ಜಗನ್ಮಾತೆಗೆ | |ಪಲ್ಲವಿ||
ಪಿಂಗದøಗ್ವಾಹನೆಗೆ ಪೀನತುಂಗ ಸ್ತನೆಗೆ
ರಂಗದಮಳಾಂಗಿಗೆರತಿಸ್ತೂಯೆಗೆ
ಭಂಗಲಸದಂಗ ಶುಭಗಾಂಗಜಲ ಸಂಗತ ಕೃ
ಪಾಂಗಯುತ ಮಂಗಲೆಗೆ ಸಾಂಗ ಗುಣೆಗೆ ||1||
ಇಂದಿರಾನತ ಪದೆಗೆ ಇಷ್ಟಮುಕ್ತಿಪ್ರದೆಗೆ
ಕುಂದಕೋರಕ ರದೆಗೆ ಕುಮುದಾಕ್ಷಿಗೆ
ಅಂದದರವಿಂದ ಮಕರಂದ ಸುಂದರ ಸುಖಿ
ಬಂಧುರಸದಿಂದುಮುಖಿಗೊಂದಿ ನಿನಗೆ ||2||
ಸೂರ್ಯಕೋಟಿಪ್ರಭೆಗೆ ಸೂನøತ ವಚೋಶ್ಯುಭೆಗೆ
ಕಾರ್ಯಕೋವಿದೆ ಕಮನ ಶಿವಲಿಂಗನ
ಭಾರ್ಯೆಗತುಳಾರ್ಯೆಗೆವಿಚಾರ್ಯೆಗಮರಾಂಗನಾ
ವರ್ಯೆಗೆ ಸಶೌರ್ಯೆಗೆ ಜಿತಾರ್ಯಮಜೆಗೆ ||3||

ಶ್ರೀ ಗುರುವೆ ನೀವೆ
ಶ್ರೀ ಗುರುವೆ ನೀವೆ ದಯವಾಗಿರಲು ಕೈವಿಡಿದು
ತಾಗುವದೆಂತು ಕಂಟಕ ನಿಚಯವು
ಶ್ರೀ ಗುರುವೆ ನೀವೆ ದಯವಾಗಿರಲು ಕೈವಿಡಿದು ||ಪಲ್ಲವಿ||
ಪಗಲೊಡೆಯನಿದಿರೆ ತಮ ಮಿಗದೇರನಿಗೆ ಮಲೆತ
ಮುಗಿಲು ಮುಂಗಲಿಗೆ ಮಾರಾಂತ ಪಾವು
ಹಗರಣವ ಪಡೆಯದುಳಿವವೆ ಧರೆಯೊಳವರಂತೆ
ಬಗೆಯ ನಿಮ್ಮಡಿಯ ಸೇರಿದನೆಡರದು ||1||
ನಂಜುಂಗುಡಿದನವರತ ಸಂಜೀವನವನೆಯ್ದೆ
ನಂಜಿಸುವನಸುವ ಮಾಂಜಿಪುದೆ ಶೇಷರು
ಕುಂಜರಾಸನ ಸಿಂಹನಂಜುವುದೆ ಮದಗಜಕೆ
ಮಂಜುರನ ಗಿಳಿಯ ಭುಂಜಿಸಲಾರ್ಪುದೆ ||2||
ವರದ ಚಿದ್ಗುರು ಬಸವನಾಮಧೇಯವ ತಳೆದ
ಪರಮ ಶಿವಲಿಂಗದೆರಡನೆಯ ರೂಪ
ಸುರುಚಿರಾನಂದಮಯ ಮದರಹಿತ ಮನ್ನಾಥ
ಶರಣು ಶುಭ ಬಸವಲಿಂಗೇಶ ಗುಣವಾಸ ||3||

ಬಿಂಕವೇತಕೆ ನಿಮಗೆ
ಬಿಂಕವೇತಕೆ ನಿಮಗೆ ಬಿನುಗುಗಳಿರಾ ಬರಿದೆ
ಕೊಂಕುರಿಲ್ಲನ ಗೆಲಿದ ಕೋವಿದರ ಕೂಡೆ ||ಪಲ್ಲವಿ||
ಹೋತನಿಗೆ ಗಡ್ಡವಿರೆ ಹಿರಿಯತನವದಕಹುದೆ
ಭೂತಕ್ಕೆ ಜಡೆಗಳಿರೆ ಋಷಿಯದಹುದೆ
ಕೋತಿಗರಿಹನುವಿರಲು ಹನುಮಂತನಿಗೆಣೆಯಹುದೆ
ಜಾತಿಸೂತಕರು ನಿರ್ಜಾತರಿಗೆ ಸಮವೆ ||1||
ಕಾಮದೂಟವನುಂಡು ಕ್ರೋಧಮಂಚದೊಳೊರಗಿ
ಯಾ ಮಹಾಲೋಭ ಮಾನಿನಿಯನಪ್ಪಿ
ತಾಮಸದ ಮೋಹ ತಾಂಬೂಲವನುಭವಿಸಿ ಮದ
ನಾಮಲಹರಿಯ ಮತ್ಸರಾನುಮಂತ್ರರಿರ ||2||
ಕನಕ ವನಿತಾವನಿಗಳ ಪ್ರಾಣವಾಗಿರ್ದು
ದಿನಪನೊಳು ಮಿಂಚುಂಬುಳು ಪುರುಡಿಪಂತೆ
ಘನ ವಿರತರೊಳು ನಾವಧಿಕವೆಂದೆನಲು ಬುಧ
ವಿನುತ ಶಿವಲಿಂಗೇಶನಳಿಸದಿಹನೆ ||3||

ಬಟ್ಟ ಮೊಗದ ನೀರೆ
ಬಟ್ಟ ಮೊಗದ ನೀರೆ ಬರಹೇಳೆ ನಲ್ಲನ
ನೆಟ್ಟನೆ ನೇಹವ ತೋರಿ ನೇಮಗಲೆಗಳ ಬೀರಿ ||ಪಲ್ಲವಿ||
ಚೆಲುವೆ ಚೆನ್ನಿಗನೊಲಿದು ಚದಿರುತನದಲೆನ್ನ
ಲಲನೆ ಸೆರಗ ಪಿಡಿದು ಲಾಲನೆಯನು
ಸಲಿಗೆವೆರಸಿ ಮಾಡಿ ಸರಸದೆ ಕೂಡುವನ ||1||
ಮೃಗವಿಲೋಚನೆ ತಾನು ಮೃದು ವಚನಗಳನು
ಸೊಗಸಿ ನುಡಿದು ಜವದೆ ಸೋಗಿನವನು
ಝಗಝಗಿಸುವ ಸೆಜ್ಜೆ ಜತನದ ಮಂಚಕೆ ||2||
ಬರಿದೆ ಮುನಿದನೇಕೆ ಬಗಸೆಗಂಗಳೆ ಕೇಳೆ
ಕರೆದು ಸೇಸೆಯನಿತ್ತು ಕಾಡುವರೇನೆ
ಪರಶಿವಲಿಂಗನ ಪಾವನ ಚರಿತನ ||3||

ಅರಿ ಅರಿ ಅರಿ ಅರಿ
ಅರಿ ಅರಿ ಅರಿ ಅರಿ ಅರುಹಿನ ಕುರುಹನು
ನೆರೆ ತೂರೆ ಮರೆ ಮರೆ ನಿನ್ನ ಮರುಳು ಮಾನವನೆ ||ಪಲ್ಲವಿ||
ಎಲೆ ಸಲೆ ನೆಲೆ ಕಲೆ ನಿನಗಳವಡದಿರೆ
ಗೊಲೆಯಲೆಯದೆಯಿದಿರೊಳಿಹುದದನು
ಗೆಲುಸಲು ಬಲು ಮೆಲು ಮುಕುತಿ ಯುಕುತಿಯನು
ಕಲಿ ಬಲಿ ನಲಿ ಛಲಿ ಯಿದು ಸುಖವಹುದು ||1||
ನಡೆ ತಡೆ ಕಡೆ ಯೆಡೆ ಯೆಡೆಯೆಡರುಗಳನು
ಸುಡು ಬಿಡು ಕಡು ಚಪಲತೆಯ ನುಡಿಯನು
ಪಿಡಿ ಮುಡಿಯಡಿಗಡಿಗೆರಡಿಲ್ಲದಿಹುದನು
ತೊಡರೊಡನೊಡಗಲಸದೆ ಕೇಳು ಮುದದಿ ||2||
ಮತಿ ನುತಿ ರತಿ ಗತಿ ಸತತವಿವೆಲ್ಲವ
ಹಿತ ನುತ ಜತನದೆ ಶಿವಲಿಂಗದಲ್ಲಿ
ತತಯುತ ಜಿತ ಸಿತ ಯುತ ನಿಜರೂಪನು
ಜಿತ ಹತಿ ಯೆತಿ ಕ್ರಮದೋರದಂತೆಸೆಗು ||3||

ಇಂದು ಕರೆದು ತಂದು
ಇಂದು ಕರೆದು ತಂದು ತೋರಿಸೆ ಕಾಂತನ ಮು
ಕುಂದನಯನಪದಾರವಿಂದನೇತ್ರೆ ಗಮ್ಮನೆ ||ಪಲ್ಲವಿ||
ಕುಂಕುಮ ಗಂಧಿ ನಿರಂಕನ ಕುಶಲದಿಂದೆ
ಶಂಕೆದೋರವಂತೆ ಸವಿಯ ಸಾರವನು ಬೀರುತೆ
ಮಂಕುಗೊಳಿಪ ಮಾತನಾಡುತೆ
ಸೋಂಕಿನ ಬಗೆಗವಶಂಕೆಯ ಮಾಡದೆ
ಪೊಂಕದೆ ನಡೆತರುವಂತವ ಕಾಣಿಸಿ
ಬಿಂಕದೆ ಬೀಗದೆ ಕೊಂಕದೆ ಕೋಡದೆ
ಯಂಕೆಗೆ ಅಳುಕದೆ ಪಂಕಜವದನೆ ||1||
ಶಂಬರಾರಿಯಾಣೆ ಜೀವವು ನಿಲ್ಲದೆನೆಗೆ
ನಂಬಿದೆ ನಾನವನ ಪದವ ಬೆಂಬಿಡದೆ ಭಾವಕಿ
ಚುಂಬಿತಪ್ಪ ಭಾವಭಾವನ
ತಂಬಿಸಿದೀಮನ ಹಂಬಲಿಸುತ್ತಿದೆ
ಕಂಬನಿ ಕಂಗಳು ತುಂಬಿ ತುಳುಕಲು
ರಂಬೆಯರೆಲ್ಲರು ತರುಂಬಿ ಬಳಸಿನಿಲೆ
ರಂಬುಳಿಗಳಿಗೆಲರಂಬುಗಳದಕೆ ||2||
ಹೆಂಗಳರಸಿ ನಿನಗೆ ಮೆಚ್ಚಲುಗೊಡುವೆನೆ ಯ
ನ್ನಂಗವನಿದಕೆ ತಪ್ಪೆನಿದಕೆ ಲಿಂಗಸಾಕ್ಷಿ ಆರೈಯ್ಯ
ತಿಂಗಳ ಕಳೆ ಸೂಡಿದ ಮಂಗಳಮಹಿಮನ
ಕಂಗಳ ಸೊಬಗನ ಹಿಂಗದ ನೇಹನ
ಪೊಂಗುವ ಪೊಗರನ ಇಂಗಿತವರಿವನ
ಸಿಂಗರದೊಡಲನ ರಂಗಿಪ ಪರಶಿವಲಿಂಗನನೊಲಿದು ||3||

ಶರಣು ಶಾಶ್ವತ ದಯಾಪಂಗ
ಶರಣು ಶಾಶ್ವತ ದಯಾಪಂಗ
ಶರಣು ಶಾಶ್ವತ ದಯಾಪಂಗ
ಪರಶಿವಲಿಂಗ ಜನಿ ಸಂತಾಪಹರಣ ಶುಭಕರಣ ||ಪಲ್ಲವಿ||
ಶ್ವೇತ ಮಾರ್ಕಂಡೇಯ ಭೀತಿ ದುಃಖಪ್ರದವ
ರೇತಪತಿಗರ್ವ ಹರ ಭೂತಗಣ ರಕ್ಷಣ ಪು
ನೀತ ಸಕಲೇಷ್ಟವರ ಜಾತಿದಾಯಕ ಭುವನ
ತಾತ ಪರಿಪೂರ್ನರೂಪ ಕೌತುಕ ಗತತಾಪ ಸಾಮ
ಗೀತರಸಾಕರ್ನ ಸುಕಲಾಪ ಸುರ
ವ್ರಾತ ಮಸ್ತಕ ರತ್ನದೀಪ ದಿವ್ಯಪಿತ ವನ
ನಾಸ್ತ್ರಕಾಂಚನ ಕುಧರಚಾಪ ||1||
ನಿಸ್ತುಳ ಮಹತ್ತನ್ವಿ ಪ್ರಶಸ್ತ ಧವಳಾಂಗ ದಶ
ಹಸ್ತ ಪಂಚಾಸ್ಯ ಹರಿಸ್ತವ ವಿಲೋಲ ವಿಜಿ
ತಾಸ್ತಮಯ ಚಿತ್ರ ಭಾಸ್ವಸ್ತ ಭುವನ ಪ್ರಚಯ
ವಿಸ್ತರ ಯಶ ಪ್ರಬಾವ ದೇವ
ಸ್ವಸ್ತಿ ಕರ ಭಾಷಣ ವೀರ ವಸು ಪರ
ವಸ್ತು ಲಕ್ಷಣ ಭಕ್ತ ಸಂಜೀವ ಸದ್ಗ
ಭಸ್ತಿ ಪೂರಿತ ದೇಹ ಭಾವಸಾರ
ಹಸ್ತಿಮುಖ ಶಿಖಿವಾಹ ಲಾಲನ ದೈವ ||2||
ಸೂರಿಜನ ಸಂತೋವಾರಿಧಿ ಸುಧಾಂಗ ಗಣ
ವಾರ ವಿಶ್ರುತ ಭಕ್ತಿ ಕಾರಣ ಮಹಾವೇಷ
ಭೂರಿರೇತ ನಿರಾಕುಳಾರಸಿಕ ವೇದತತಿ
ಚಾರು ಹಯ ವಿಜಯ ಶೀಲಲೋಲ
ಮಾರ ಮದವನ ಶಿಖಿ ಜ್ವಾಲ ಸಕಲ
ಭಾರವಹ ವಿದ್ವಕ್ತ್ರ ಕಾಲಚಂದ್ರಾ
ಧಾರ ನಯನತ್ರಯ ವಿಶಾಲ ಚರಾ
ಕಾರ ತೋಂಟದಸಿದ್ಧಲೀಲ ಮನುಮೂಲ ||3||

ಪಾದನೇತ್ರನೆ ಪರಾಕು
ಪಾದನೇತ್ರನೆ ಪರಾಕು ಪಾರ್ವತಿರಮಣ
ನಾದಮೂರ್ತಿ ನಾರಾಯಣ ನಮಿತ ಕೀರ್ತಿ ಕಾರಣ ||ಪಲ್ಲವಿ||
ಜಡೆಮುಡಿಯೊಳಗುಡುಪತಿಯ ಸೂಡಿದನೆ
ಪೊಡವಿ ತೇರನೆಸಗಿ ನಡಸಿದನೆ
ಕಡಲ ಕಡೆಯಲು ಪುಟ್ಟಿದ ಗರಳವನೆ
ಬಿಡದೆ ಕೊರಲೊಳು ತೊಡೆದ ಘನ ಮೃಢನೆ ||1||
ಹರಿವಿಧಿಗಳನು ಪಡೆದು ಪೆಸರಾದ
ಹರಿಣನ ಶಿಶುವನು ಕರದೊಳು ತಳೆದ
ಕರಿದಾನರನ ಕೊಂದ ಕಲಿಯೊಳು ಸಂದ
ಸುರುಚಿರ ಗುಣವೃಂದ ಸೂನøತಾನಂದ ||2||
ವಿತತ ಕೃಪಾಕರ ವೀರಾವತಾರ
ಸತತ ಸನ್ನುತನಾಮ ಸಕಲಾಭಿರಾಮ
ಯತಿಪತಿ ಮಾನಸಾಯತ ಶುಭವಾಸ
ರತಿಪತಿ ಮದಹರ ರಾಜಗಂಭೀರ ||3||
ಕನಕಾದ್ರಿ ವರ ಚಾಪ ಕಮನೀಯ ರೂಪ
ದಿನಕರ ಕೋಟಿ ತೇಜ ದಿಠದುರುಬೀಜ
ಮನು ಸಮುದಯ ಪಾಲ ಮಾನಿತ ಶೀಲ
ಜನನ ಮರಣ ದೂರ ಜಗದಾಧಾರ ||4||
ಶಮನಮದ ವಿಜಯ ಶರಣ ಸಹಾಯ
ವಿಮಲ ವೃಷಭವಾಹ ವಿಗತ ಪ್ರಮೋಹ
ಪ್ರಮಥ ಸನ್ನುಕಿಪಾತ್ರ ಪ್ರಕಟಿತ ಸೂತ್ರ
ಸುಮಹಿತ ಶಿವಲಿಂಗ ಸುರಗಣ ತುಂಗ ||5||

ಮೆಚ್ಚಿ ಬಂದೆನೊ ನಾ
ಮೆಚ್ಚಿ ಬಂದೆನೊ ನಾ ನಿನಗೆ ಮರೆಯಾತಕೊ
ಸಚ್ಚಿದಾನಂದ ಸ್ವರೂಪ ಸಾರ ಸುಗುಣ ಕಲಾಪ ||ಪಲ್ಲವಿ||
ಚೊಕ್ಕ ಮಾತುಗಳನಾಡಿ ಚೋರತನವ ನೀಗಾಡಿ
ಪೊಕ್ಕು ನಡೆದು ಕೂಡಿರ್ದು ಪೊರೆಯದಿಹುದೇನಮರ್ದು ||1||
ಗನ್ನಗದುಕನು ಬಿಟ್ಟು ಗಾಢ ಬಂದು ನದರಿಟ್ಟು
ಮನ್ನಿಸೊ ನಿನ್ನವಳನು ಮೆರೆಯ ಕನ್ನಡವೇನೊ ||2||
ಸಂತವಿಡದಿರೆ ನೀನು ಸಾವುದೆಲೇಸು ಇಂದೇನು
ಚಿಂತೆಯ ತೊಡರ ಬಿಡಿಸೊ ಚಿತ್ತದ ತಾಪವ ತವಿಸೊ ||3||
ತನುಮನೋಭಾವಗಳನು ತಳುವದಾವರಿಸಿ ನೀನು
ಘನಹನೆನಿಪ ಜೋಕೆ ಗಾಡಿಕಾರತನವಿದೇಕೆ ||4||
ಅಂಗನೆಯರ ಮುಂದೆನ್ನ ಅಗಲಿರಸಲ್ಲ ನಿನ್ನ
ಹಂಗೇನೊ ಶಿವಲಿಂಗೇಶ ಹಿತದಿಂದೀಯೆನಗೆ ಲೇಸ ||5||

ಸೋತೆನವಗೆ ಸೊಗಸಿ
ಸೋತೆನವಗೆ ಸೊಗಸಿ ಸೋಗೆಗಂಗಳೆ ಚೆಲ್ವನ
ನೇತೆರದಲ್ಲಿ ತಂದು ತೋರಿಸೀಗಳೆ ||ಪಲ್ಲವಿ||
ಹೆರೆಯ ಸೂಡಿದ ಹೇಮಗಿರಿ ಚಾಪಗೆ ಜಗ
ದೆರೆಯಗೆ ದೆಸೆದೆಸೆಯೊಳಗೆ ತುಂಬಿ
ಮೆರೆವ ತೇಜದ ಮೇಲು ಜಸವಂತಗೆ ಬೊಮ್ಮ
ಕರೆಮೈಯರಿಗೆ ಕಾಮಿತವನಿತ್ತಗೆ ||1||
ನೊಸಲ ಕುಂಕುಮದ ತಿಲಕದಂದದೆ ನೋಡ
ಲೆಸೆವ ಲಲಾಟ ನಯನವೆರಸಿ
ಪೊಸಮಲ್ಲಿಗೆಯ ನಿಡುಜಡೆಯಿದನೆ ಪೊತ್ತ
ರಸಿಕ ಮಂಡೆಯೊಳು ಧವಳಗಂಗೆಯ ||2||
ಬಣ್ಣದ ಧೋತ್ರವೊಯೆನೆ ಬಗ್ಗದೊವಲನುಟ್ಟು
ಸಣ್ಣ ಕರಿಯ ಪಟ್ಟುವಚ್ಚಡವಾಗಿ
ಬಣ್ಣಿಗೆಯಿಂದಿಹ ಕರಿಚರ್ಮವ ಪೊದೆದ ಎನ್ನ
ಕಣ್ಣ ಪುಣ್ಯದ ಶಿವಲಿಂಗನ ನೆರಹು ||3||

ಧೀರ ಪಾಲಿಪುದು ಫಕೀರ
ಧೀರ ಪಾಲಿಪುದು ಫಕೀರ ಚೆನ್ನ
ವೀರ ಮುಕ್ತಾನ್ಯಿಂಗನಧರ ಬಿಂಬ ಕೀರ |ಪಲ್ಲವಿ||
ಜಗಣನಂಗವಮಾಡಿಯದಕೆ ನೀನೆ
ಸೊಗಸುವ ಚೈತನ್ಯವಾಗಿಹುದಿದಕೆ
ನಿಗಮಾಗಮಾವಳಿ ಸಾಕ್ಷಿ ನಾಗ
ನತ ಸುರ ನಾಮರೂಪಾದಿ ವಿರಹಿತ ||1||
ತ್ರಿಪುಟಿಯನೇಕವಮಾಡಿ ಬಹು
ಕಪಟ ನಾಟಕಧಾರಿ ಕಾಮಸಂಹಾರಿ
ವಿಪುಳ ವಿಬುಧ ನುತಪಾತ್ರ ಮಹ
ತಪನೀಯನಿಭಕಾಯಭಕ್ತಿಸಂಪ್ರೀಯ ||2||
ಭುವನಪ್ರಸಿದ್ಧ ಮಹಾತ್ಮ ಭೂಮಿ
ಧನವಂದ್ಯ ಪಾದಾರವಿಂದ ಸಾನಂದ
ತವೆಯಂಗಣ ತ್ರಿಪುರದೊಳು ನಿಂದ
ಸುವಿಲಾಸ ಶಿವಲಿಂಗರಾಜ ಸುತೇಜ ||3||

ಅಯ್ಯ ನೀನೆನ್ನ ಹುಯ್ಯಲ
ಅಯ್ಯ ನೀನೆನ್ನ ಹುಯ್ಯಲ ಕೇಳು
ವಯ್ಯ ನೀಗಳೆ ಪಾಲಿಸಭಯದ
ಕೈಯ್ಯ ನೀಡಿ ಮಹೇಶನೆ ||ಪಲ್ಲವಿ||
ಅಟ್ಟಿ ಮದಗಜದೊಡ್ಡು ಬೇಗದೆ
ಮೆಟ್ಟಿ ಸಿಕ್ಕನೆ ಸೀಳುತಿದೆ ಕಂ
ಗೆಟ್ಟೆ ಶರಣ ವರಪ್ರದಾ ||1||
ಆರು ಹಗೆಗಳು ಗಾರು ಮಾಡುತ್ತೆ
ಸೂರೆಯಾಡಿದರಂತರಂಗದ
ಮೇರೆಯರಿವಿನ ವಿತ್ತವ ||2||
ವೃತ್ತಕುಚೆಯರ ಚಿತ್ತಾರಕೆ ಮನ
ವೊತ್ತಿ ಪರಿವುದೆ ನಿಮ್ಮೊಳಿರದು
ನ್ಮತ್ತ ಚಿತ್ತಜಭಂಜನ ||3||
ಎಷ್ಟು ಸುಖವಾದೊಡಷ್ಟು ದುಃಖವು
ಕಷ್ಟ ಸಂಸ್ಕೃತಿ ಬೀಜವದರಿಂ
ನಷ್ಟವಾದೆನು ಯಮರಿಪು ||4||
ಇಂತು ಜಗದೊಳನಂತ ಭಯವಾದೊ
ಡೆಂತು ಬಾಳ್ವೆನು ಕಾಯೊ ಕರುಣಿ ನಿ
ರಂತರ ಶಿವಲಿಂಗೇಶ್ವರ ||5||

ನಮಹೆ ನಂದೀಶಂ
ನಮಹೆ ನಂದೀಶಂ ಮಾನಸ ನಮ ನಂದೀಶಂ
ನಮಹೆ ನಂದೀಶಂ ನಮದಮರೇಶಂ
ಅಮಲವೇಷಂ ಅಪಗತ ಪಾಶಂ ||ಪಲ್ಲವಿ||
ವೃಜಿನ ಸಂಹಾರ ವೃಷಭಾವತಾರಂ
ಸುಜನೋದ್ಧಾರಂ ಸುಖಪಾರವಾರಂ ||1||
ಹತ ಸುಮಬಾಣಂ ಹರಿ ನಿಧಿ ತ್ರಾಣಂ
ವಿತತ ಕಲ್ಯಾಣಂ ವಿನುತ ಪೌರಾಣಂ ||2||
ನಿಗಮ ಸುಪಾದಂ ನಿಚಿತ ವಿನೋದಂ
ವಿಗತ ಪವಾಡಂ ವಿನಯ ಪ್ರಮೋದಂ ||3||
ಗುಣರತ್ನ ಮಾಲಂ ಗುರುತರ ಲೀಲಂ
ಗಣಕುಲ ಲೋಲಂ ಗಳಿತರಿಜಾಲಂ ||4||
ಪರಶಿವಲಿಂಗಂ ಪಶುಪಮ ಭಂಗಂ
ನಿರತ ಕಾರುಣ್ಯಂ ನಿರುಪಮ ಪುಣ್ಯಂ ||5||

ದೊರೆಗಳ ಭಕ್ತಿಯು
ದೊರೆಗಳ ಭಕ್ತಿಯು ಹೊರಗಳ ಪೂಜ್ಯವು
ಹುರುಳಿಲ್ಲ ಒಳಗೆ ನೋಡಿದಡೈಯ್ಯೋ ಸಾಕು ಸಾಕು ||ಪಲ್ಲವಿ||
ತಮ್ಮ ವೇಳೆಯವನು ಕಾಯ್ದರೆ ಕರಲೇಸು
ತಮ್ಮ ವೇಳೆಯಕೊದಗದಿರೆ ಕಿನಿಸು
ಹೆಮ್ಮೆಯ ನುಡಿವುತ ಸುಮ್ಮನೆವರೆವುತ
ಹಮ್ಮಿನಿಂದಿಹರಕಟಕಟಕಟ ||1||
ಹಗ್ಗವಿಲ್ಲದ ಕಟ್ಟು ಕೊಲಲಿಲ್ಲದ ಕೊಲೆ
ಬಗ್ಗ ಕನ್ನಿವಿ ಹೊರತಹ ಭೀತಿಯು
ಅಗ್ಗಿಯಿಂದತಿ ವಿರಹಿತ ಕಿಚ್ಚು ಬೇನೆಯಿಂ
ದಗ್ಗಳಿಸಿದ ಮನಸಿನ ತಾಪವು ||2||
ಹಂಗಿನ ಹಾಲಿಂದ ತಂಗಳಂಬಲಿಯಾದೊ
ಡಿಂಗಿತದಿಂದೊದಗಿದ ಭಿಕ್ಷೆಯ
ಹಿಂಗದೆ ಸವಿವ ಸುಖವನೆ ಪಾಲಿಸೊ ಶಿವ
ಲಿಂಗ ಮಹೇಶ ವಿಜಿತ ಪಂಚಪಾಶ ||3||

ಕಂಡೆನಾನೊಂದು ಚೋದ್ಯ
ಕಂಡೆನಾನೊಂದು ಚೋದ್ಯವನವನಿಮಂಡಲದೊಳಗೆಯಿಂದು
ಗಂಡುರೂಪಿನ ಹೆಣ್ಣು ಗಂಡನ ಕೂಡೆ ಬಾಳುವದ ||ಪಲ್ಲವಿ||
ಮೀಸೆಯ ಮೇಲಧಿಕ ಕುಂಕುಮ
ಲೇಸಾದ ಗಂಧ ಕಸ್ತುರಿಯ
ಪೂಸಿದ ಬಟ್ಟನಮೊಲೆವಾಸೆಯಾಗಿ ತೋರುತಿದೆ ||1||
ಬಿಗಿದ ಕೌಪೀನದ ಮೇಲೆ ಬಿತ್ತರದಿಂದೆ
ಸೊಗಸುವ ಸೀರೆಯನುಟ್ಟು
ತೊಗಲದಂಗಿಯ ಕಳೆದು ತವಕದಿಂದ ರವಕೆಯಾಂತ ||2||
ಚಿತ್ರಸಾಲೆಯಸೆಜ್ಜೆಯ ಮೇಲುಮನೆಯ
ಚಿತ್ತ ಜಮಂಚದ ಮೇಲೆ
ನೇತ್ರ ಶಿವಲಿಂಗೇಶನ ನೆರೆದು ಪುತ್ರರ ಪಡೆದ ||3||

ತ್ಯಜತೇ ಪ್ರಾಣೇಶ
ತ್ಯಜತೇ ಪ್ರಾಣೇಶ ಮೈ ಚಾತುರ್ಯ
ಜಗತೀಜನಾನಾಂ ರಜನಿಸಮಾನ ಮೋಹಕಾರ್ಯಂ
ಸುಜನೇನ ಸುರಸಮಶಿರಂ ಭುಜಗೇನ ಭೂಮೌಹಿತಂ ನ ||ಪಲ್ಲವಿ||
ಮಮಮಾನಸಂಭಾತೈವವಿದಿತಂಮಿದಂ
ರಮಣಲೋಕಯಸ್ವೀಕರೇವದತ್ತ ಸುಭಾಷ
ಮಮಿಹಿತಸಂತೋಷಮಮಲಮೂರ್ತಿ
ಸುಮನೋಜನಾಸಿ ಶುಭಕೀರ್ತೆ
ಪ್ರಮುದಾದ್ಯ ಪ್ರಾತಿವೇದ್ಯ ಕ್ರಮತಾಚೈತನ್ಯ ಭೇದ್ಯ ||1||
ಜನತೋಮೆಭವತೋ ಹಸ್ತೇ ಮಮಾನಿಶದಯ
ವನಧೆ ದಧಾನ ಉರುಮಹಿಮ
ವಿನಯ ಭವದಿತಿ ಸರ್ವಲೋಕ ವದಂತಿ ಭವತಿ ಮಹ
ಘನಗುಣವಲಯೋಪಿ ಸಂತಿ
ಮನುರೂಪ ಮದಲೋಪ ವನರುಹಲೋಚನ ರೂಪ ||2||
ಪರ ನಾರಿ ಪೂರ್ನ ಸಂಗೋಯಂ ತ್ವಂ ಪಾವನ ಚಾರು
ಚರಿತತ್ರಮಿದಮಹೋಸತ್ತನ್ವಿಂಕನ್ಯಭಾವಾಯ
ಪರ ಪಾಣಿಪಾತ್ರ ನವ್ಯಕ್ಷೀರಂ ನಿಪೇಯಲಜ್ಜಾ
ತುರಮನಸೇನ ತಮೋಧೀರಂ
ಶರದಂಗ ಶಿವಲಿಂಗ ಸ್ವರಭಂಗ ರಮತೇಸ್ಮತುಂಗ ||3||

ಮೀರದೆ ಕರತಾರೆಯಿನೆಯನ
ಮೀರದೆ ಕರತಾರೆಯಿನೆಯನ
ನೀರಲೋಚನೆ ನಿಪುಣೆ ಸುಗಾನೆ ಸಖಿಯೆ ||ಪಲ್ಲವಿ||
ಚೆಲುವೈಸರಲನ ಚತುರಸೇನೆಯು ತಾ
ನಲೆಯಲಿಗಾಗಳೆಯ್ದುವದದನಿರದೆ
ತೊಲಗಿಪ ಬಗೆಯನುಸಿರೆ ಚಂದ್ರವದನೆ
ಚಿಲುಪಾಲು ಸಕ್ಕರೆ ಕೂಡಿದಂತಿಹನ ||1||
ಒಳು ಗುಂಪುವಳನ ಮಂಜುಳ ತಳನೆಯನ
ನಿಳೆಯೊಳು ಸೈರಿಸಲಾರೆನೆ ನೀರೆ
ಕಳಕಂಠನುರುರವ ಕಳಕಳಿಸುತಿರೆ
ಅಳಿವೆದೆಯದು ಝೇಂಕರಿಸುತಲಿದೇಕೊ ಸಖಿಯೆ ||2||
ಸದಮಳ ಶಿವಲಿಂಗದೇವ ರಾಜೇಂದ್ರನ
ನೊದವಿತಿಳುಪಿಯಡಿಗೆರಗಿ ಕೈಮುಗಿದು
ಸುದತಿ ಸೆಜ್ಜೆಯ ಶಕುನಿಯಮಂಚದ ಮೇಲೆ
ಮುದದಿವೆರಸಿ ಸುಖದಿಂದಿರಿಸಮ್ಮ ಸಖಿಯೆ ||3||

ಒರಟುತನವ ಬಿಡು
ಒರಟುತನವ ಬಿಡು ವಾರೆದಾರಿಯನುಳಿ
ತರುಣ ನೀ ತಿಳಿ ಯಮಲ
ಗುರು ಮಾರ್ಗದ ನೀತಿಯೊಳೆಡೆಯಾಡಲು
ಪರಮುಕ್ತಿ ನಿನಗಹುದೊ ||ಪಲ್ಲವಿ||
ಪೊಡವಿಯೊಳಧಿಕವೆನಿಪ ನರ ಜನ್ಮವ
ಪೊಡವುದರಿದು ನಿನ್ನ
ಹುಡುಗತನದ ಬಲು ಹುಚ್ಚು ಬುದ್ಧಿಯೊಳಿರ್ದು
ಕೆಡದಿರು ಸಾರಿದೆನು ||1||
ಜಗದೊಳು ಚೆಲ್ಲೆದ್ದು ತಿರುಗಲು ಜನರೆಲ್ಲ
ನಗುವರು ಕೈಯ್ಯ ಹೊಯಿದು
ಬಗೆಬಗೆ ನುಡಿಗಳು ಕಂಡೂವೆ ಕಾಣದೆ
ಮಿಗೆ ಬೈವರು ಕೆಲರು ||2||
ಅಂಗವಿಕಾರಕೆ ಹರಿವ ಮನವ ಶಿವ
ಲಿಂಗದ ನೆನಹಿನಲಿ
ಸಂಗಿಸಿ ಪರಮ ವಿರಕ್ತನಾಗಿರು ಗಣ
ಪುಂಗವರೊಳ್ಬೆರೆವೆ ||3||

ಶಿವಲಿಂಗ ಶಂಕರ ಕೃಪಾಕರ
ಶಿವಲಿಂಗ ಶಂಕರ ಕೃಪಾಕರ ಶಶಾಂಕಧರ
ಪ್ರವಿಮಳಾತ್ಮನೆ ಪಾಲಿಪುದು ಜಗವನು ||ಪಲ್ಲವಿ||
ಚೋಳನಿಗೆ ನಿಂಬಿಗೆಯು ಕರಯಿಸಿದೆ ಹೊಮ್ಮಳೆಯ
ಠೌಳಿಯಲ್ಲಿದು ಲೋಕದೊಳು ಪ್ರಸಿದ್ಧಿ
ಪೇಳಲಾನೆನಿತರವನೆಲ್ಲವನು ಬಲ್ಲವಗೆ
ಕೇಳದಾದರು ನಿನ್ನವನಬಿನ್ನಪವನು ||1||
ತಂಪಿಲ್ಲದೆ ಸಕಲ ಜೀವಿಗಳನಿಟ್ಟುಸಿರ್ಗೆ
ಕುಂಪಟೆಯದಾಯ್ತು ಧರೆ ಬೇಗೆ ಪಡೆದು
ಸೊಂಪಳಿದು ಬೆಳೆ ಬಿತ್ತುಗಳು ಕೆಡದ ಮುನ್ನ ಮೃಢ
ನೀಂ ಪಡೆದು ಮುಡಿಯ ಗಂಗೆಯ ಮಡುಹನಿಳುಹ ||2||
ಬೆಳೆಯಲಿಳೆ ಗೋಮಹಿಷಿಗಳು ಸುಧಾರಸಂಗಳನು
ಹಿಳಿಯಲಿಖಿಳರು ಸುಖಸಮುದ್ರದಲ್ಲಿ
ಮುಳುಗಿ ಮೂಡಲಿ ತೋಂಟದೀಶ ನಿಮ್ಮಿಂ ಮುಕ್ತಿ
ಯಳವಟ್ಟು ಬಾಳಲಿ ಭುವನದೊಳಗೆ ||3||

ಅವನ್ಯಾರವಳ್ಯಾರೆ ಪರ
ಅವನ್ಯಾರವಳ್ಯಾರೆ ಪರ
ಶಿವಶಕ್ತಿಯರು ಕಾಣೆ ಸಿರಿವಂತೆ ಜಾಣೆ ||ಪಲ್ಲವಿ||
ಕೆಂಜೆಡೆ ನೀಲವೇಣಿಯ ಮಿಗೆ ಸೊಗಸುವ
ಮಂಜುಳಕಾಯದವರು ಯಾರೆ ರಮಣಿ
ಕಂಜವದನೆ ಕೇಳು ಕಾವನನುರುಹಿದ
ಮಾಂಜದೆ ಮದನಪಾಲಿನ ಗೌರಿ ನೋಡೆ ||1||
ಗಜ ಚರ್ಮವಸನನು ಗಜಕುಂಭ ಕುಚೆಯಳು
ಭಜಕರ ಸಲಹುವರಿವರೇಕೆ ತರುಣಿ
ಗಜದಾನವನ ಕೊಂದ ಗಜಮುಖತಾತನು
ಗಜವೈರಿ ವಾಹನೆ ಗಿರಿಜೆ ನೋಡಮ್ಮ ||2||
ಹಗಲಿರುಳುಗಳೊಂದೆ ನಾರಿಯೊಳೆಸೆವಂತೆ
ಜಗದೊಳೊಪ್ಪುವರಿವರಾರೆಲೆ ಸಖಿಯೆ
ಮೃನೇತ್ರೆ ಧವಳಕಾಯದ ಕಪ್ಪುವೆಳಗಿನ
ಸುಗತಿದಾಯಕ ಶಂಭು ಅಗಜಾತೆ ತಿಳಿಯೆ ||3||
ಚರಣಲೋಚನನಾರೆ ಸಹಚರಿಣಿಯಾರೆ
ಸರಸಿಜಗಂಧಿ ನೀ ಪೇಳೆನಗೆ
ತರಳೆ ನಾರಾಯಣ ಪೂಜಿತ ಪಾದನು
ಹರಿಯ ಸಹೋದರಿ ಪಾರ್ವತಿದೇವಿ ||4||
ಮಂಗಲಮಯನಿವನಾರೆಯಾತನ ವಾ
ಮಾಂಗವನಪ್ಪಿದ ಶುಭುರೂಪೆಯಾರೆ
ತುಂಗ ಸದಾಶಿವಲಿಂಗೇಶ್ವರನು ಸರ್ವ
ಮಂಗಳೆ ಶಿವೆಯೆ ನಿರೀಕ್ಷಿಸೆ ಸುದತಿ ||5||

ಸಕಲ ಭುವನಗಳ ತಲೆ
ಸಕಲ ಭುವನಗಳ ತಲೆ ಹೊರೆ ವಿಕರಿಸುತಿರೆ ಜನನಿಕರವು
ಸುಕರ ಶಂಕರನ ಸುತನಿಗೆ
ಸುಕರ ಶಂಕರನ ಸುತನಿಗೆ ಮೊರೆಯಿಡಲವರ
ಸೊಕದೆ ಕಾಯ್ದನಿಗೆ ಜಯ ಜಯ ಶೋಭನವೆ ||1||
ಗಜಮುಖದನುಜನ ಹತಿಸಿದ ಭುಜಬಲಯುತನೆನಿಸಿದಗೆ
ಸುಜನ ಕಮಲ ದಿವಾಕರನಿಗೆ
ಸುಜನ ಕಮಲ ದಿವಾಕರನಿಗೆ ಕಪಟ ವಿದೂರಗೆ
ಮಜರೆ ಭಳಿರೆ ಭಾಪು ಜಯ ಜಯ ||2||
ಸುರವರ ನಾಗರುಗಳ ಪರಿಪಾಲಿಸಿಯವರುಗಳ
ಸರಸಿಜಾಕ್ಷಿಯರೋಲೆಭಾಗ್ಯಗಳನು
ಸರಸಿಜಾಕ್ಷಿಯರೋಲೆಭಾಗ್ಯಗಳನು ಕರುಣಿಸಿದ
ಗಿರಿಜೆಯ ಸುತಗೆ ಜಯ ಜಯ ||3||
ಉದಯಿಸಿದೇಳುದಿನಕತಿ ಮದತಾರಕ ಮುಖ್ಯರನು
ಸದೆಬಡಿದು ಸುರರಪತಿಗೊಲಿದು
ಸದೆಬಡಿದು ಸುರರಪತಿಗೊಲಿದು ದಾತನ ತನುಜೆಯ
ಮದುವೆಯಾಗುವಗೆ ಜಯ ಜಯ ||4||

ಬಲದ ಕನ್ನಿಕೆ ಎಡಕೆ
ಬಲದ ಕನ್ನಿಕೆ ಎಡಕೆ ಬರುವನ ಕಸುಮ್ಮನಿರಿ
ಲಲನೆಯರೆಂದು ನಗುನಗುತೆ
ಲಲನೆಯರೆಂದು ನಗುನಗುತೆ ನಾಣ್ನುಡಿಯ
ಸುಲಭದಿಂದೆ ಪಾಡೆಯದಕೇಳಿ ||1||
ನುಡಿದು ತಪ್ಪುವನಲ್ಲ ಬಿಡುಗಣ್ಣರೊಡೆಯನು
ಕಡಲಕಡೆದಿನಿದಪಡೆದಂತೆ
ಕಡಲಕಡೆದಿನಿದಪಡೆದಂತೆ ಗಂಡಿನವ
ರೊಡನೆ ಮಂಜರಿನ್ನು ಕೊಡುವೆವು ||2||
ತಾರಕಾಸುರನಿಗೆ ಭೋರನೆ ಹೆದರುತ್ತ
ಭಾರಿ ದೇವೇಂದ್ರ ಮರೆಹೊಗಲು
ಭಾರಿ ದೇವೇಂದ್ರ ಮರೆಹೊಗಲು ಸಲಹಿದ ಪು
ರಾರಿಯ ತನುಜ ಜಯ ಜಯ ||3||
ತಿರುಕನ ಕುವರನಿಗೆ ವರಕನ್ನಿಕೆಯನಿತ್ತ
ಧರೆಯೊಳಗವನ ಹಿರಿಯನ
ಧರೆಯೊಳಗವನ ಹಿರಿಯನ ಮಾಡಿದ
ಸುರರಾಜತನುಜೆ ಜಯ ಜಯ ||4||
ಮುನಿವರನ ಶಾಪದೆ ಮನೆತನವ ನೀಗುತ್ತೆ
ಮನಸಿಜ ಹರನ ದಯದಿಂದೆ
ಮನಸಿಜಹರನ ದಯದಿಂದೆ ಪಡೆದವಗೆ
ಘನವಿತ್ತ ಕುವರ ಜಯ ಜಯ ||5||
ಆನೆ ಮೊಗದ ಸನ್ಮಾನನೊಡಹುಟ್ಟಿದಗೆ
ಮಾನಿನಿಯರ ದೆಸೆಯಿಂದೆ
ಮಾನಿನಿಯರ ದೆಸೆಯಿಂದೆ ಸಿಕ್ಕಿದೆ
ಹೀನವೆಂಬುದ ತಿಳಿಯದೆ ||6||
ಮುನಿಪನ ಶಾಪದಿಂ ತನುವೆಲ್ಲ ಭಗವಾಗೆ
ವಿನಯದಿಂದವನ ವರದಿಂದೆ
ವಿನಯದಿಂದವನ ವರದಿಂದೊಡಲ್ಗಣ್ಣ
ನೆನಿಸಿದನಣುಗಿ ಜಯ ಜಯ ||7||
ಆವ ತೆರದಿಂದೆಯೂ ದೇವಿಗೆ ಬಂದಾತ
ಭೂವಳೆಯದೊಳು ಸಲೆಯೆಮಗೆ
ಭೂವಳೆಯದೊಳು ಸಲೆಯೆಮಗೆ ಭಾವಿಸಲು
ಭಾವ ನೀನೇಕೆ ಕದನವು ||8||
ಬಡವನ ಮಗಳಾನು ಪೊಡವಿಯೊಡೆಯ ತರಲು
ಕಡುಚಲ್ವ ಪಟ್ಟದರಸಿಯು
ಕಡುಚಲ್ವ ಪಟ್ಟದರಸಿಯುಮೆನಿಪಂತೆ
ಮೃಢನುತ ಪತ್ನಿ ಜಗದಂಬೆ ಶೋಭವನೆ ||9||
ಎನಿತನೆತ್ತಣಿಸಲು ಮನಕೆ ಬಂದಂತಿಹುದು
ಚಿನುಮಯನಾದ ಪರಶಿವನು
ಚಿನುಮಯನಾದ ಪರಶಿವನು ತನುಜನ
ಘನದಿಂದೆ ನಾವು ಬದುಕಿದೆವು ||10||
ಇಂತು ಪಾಡಲು ನೀವು ಸಂತಸದಿಂ ನಾವು
ಪಂಥವನುಳಿದು ಪರಶಿವನ
ಪಂಥವನುಳಿದು ಪರಶಿವನ ಬೀಗನೆಂ
ದಂತರಿಸದೆಲ್ಲ ನುಡಿದೆವು ||11||

ಇಕ್ಕಿದೆನಿದೆಯೆಡೆದ ಪಾದುಕೆಯ
ಇಕ್ಕಿದೆನಿದೆಯೆಡೆದ ಪಾದುಕೆಯ ಮುಂಡಿಗೆ
ಸೊಕ್ಕಿ ಗುರುಮಾರ್ಗವನು ಮಿಕ್ಕವರ ಮೇಲೆ ಇಕ್ಕಿದೆನಿದೆ ||ಪಲ್ಲವಿ||
ಗುರುವೆ ಹರನೆನಿಸಿ ಹರನೇ ಗುರುವೆನಿಸಿ ಮೆರೆವು
ದುರುತರವಿದೆಂದು ನಂಬದ ದುರಾತ್ಮಕರು
ಗುರು ಹರರಿಗಿರದೆ ಭೇದವ ನುಡಿದೊಡನೆ ನಡೆದು
ಬೆರಸುವುದರಿಂದೆ ನಿರಯದೊಳಳಿವರೆಂದು ||1||
ಸುರೆಯಮೃತವೆರಡು ಸಮವೆಂದು ನೀಡುವ ತೆರದೆ
ದುರುಳರ ವಿಚಾರ ಸುವಿಚಾರಂಗಳಿವರ
ನಿರುತವರಿಯದೆಯೊಂದೆ ಎಂದು ಬಗೆಯೊಳು ಬಗೆದು
ನರಕಾಗ್ನಿಯೊಳು ಬೀಳ್ವರಿದು ಸತ್ಯವೆಂದು ||2||
ಲಿಂಗವನು ಜರಿದು ಲಿಂಗದ ನಿಶಾನಿಯ ಪರಿದು
ಲಿಂಗಮುದ್ರೆಯ ಮುರಿದು ಪುಸಿಯನುಸುರಿ
ಲಿಂಗವಂತರ ಕೊರಲ ಕೊರೆದು ದುರ್ಗತಿಗಿಳಿವ
ಭಂಗಿತರು ಶಿವಲಿಂಗ ಪದಕೆ ಹೊರಗೆಂದು ||3||

ಇಕ್ಕಿದೆನಿದೆಯೆತ್ತೆಲೆಲೆವಾದಿ
ಇಕ್ಕಿದೆನಿದೆಯೆತ್ತೆಲೆಲೆವಾದಿ
ಮುಕ್ಕಣ್ಣ ವೀರಶರಭನ ಮುಂಡಿಗೆಯನು ||ಪಲ್ಲವಿ||
ಬೊಮ್ಮನ ತಲೆಯಲ್ಲಿ ಗಿಡಬಿಡ ಸೊಡ್ಡನೊತ್ತಿ
ತಿಮ್ಮನ ಬೆನ್ನ ಚರ್ಮವನುಗಿದು
ಬೊಮ್ಮತಿಮ್ಮರ ಸತಿಯರ ಮೂಗು ಮೊಲೆಗಳ
ನೊಮ್ಮೆಯೆ ಅರಿದ ರುದ್ರನಿಗಿದಿರಿಲ್ಲೆಂದು ||1||
ಅಗ್ಗಿಯನಾಲಿಗೆಗಳನುತ್ತರಿಸುತ
ಅಗ್ಗದ ಸೂರ್ಯರಿರ್ವರ ಕಲ್ಪಲ್ಲುಗಳ
ವೆಗ್ಗಳದಿಂದಕಿತ್ತುದಿರ್ಗುಟ್ಟಿದಸದಳ
ಸಗ್ಗಿಗರದವುಳಿದುಗ್ರನೊರ್ವನೆಯೆಂದು ||2||
ತನ್ನಿಂದಧಿಕ ವೀರರುಂಟೆಂದು ಕೂಗುವ
ಕುನ್ನಿವಾನಸರೆದೆಗೊಂತನೆಂದೆನಿಸಿ
ಮನ್ನಣೆಯತುಳ ಕೀರ್ತಿ ಪ್ರತಾಪದೊಳಿಹ
ಪನ್ನಗಧರ ಶಿವಲಿಂಗಗೆ ಘನವೆಂದು | |3||

ರೂಪು ವಸ್ತು ಪದ
ರೂಪು ವಸ್ತು ಪದ ಸ್ನಾನ ಮನುಗಳೆಂಬಿವನು ಕ್ರಿ
ಯಾಪರರರಿದಾಚರಿಪುದುಕ್ರಮದೊಳು ||ಪಲ್ಲವಿ||
ವರಭೋಜ್ಯಪೇಯ ಭಕ್ಷನ್ಯಿಚೋಹ್ಯ ಲೇಹ್ಯ ಸರ್ವವಿ
ತ್ತರ ಕಠಿಣ ಮೃದುಷ್ಣು ಶೀತ ಮಿಶ್ರ ತೃಪ್ತಿ
ವರ ಗಂಧ ರಸ ರೂಪು ಸ್ಪರ್ಶ ಶಬ್ದ ಸುಖ ಸು
ಸ್ಥಿರ ದುಗ್ಧ ದಧಿ ಘøತೈಕ್ಷುವ ನಾಳಿಕೇರವಾರಿ ||1||
ಓಂ ಹ್ರಾಂ ನಮಃಶಿವಾಯೋಂ ಹ್ರೀಂ ನಮಶ್ಶಿವಾ
ಯೋ ಹ್ರೂಂ ನಮಃಶಿವಾಯೋಂ ಹ್ರೇ ನಮಶ್ಶಿವಾ
ಯೋ ಹ್ರೋಂ ನಮಃಶಿವಾಯೋಂ ಹ್ರೌಂ ನಮಶ್ಶಿವಾ
ಯೋಂ ಹ್ರದೆಯೊಳು ಮೂಡಿ ಮುಳುಗಿ ಜಪಿಸುತೆ ||2||
ಲಲಿತೇಷ್ಟ ಶಿವಲಿಂಗದ ಪೀಠ ಕಟಿ ವ
ರ್ತುಳ ಗೋವದನ ನಾಳ ಗೋಳಕಂಗಳೊಳು
ವಿಳಸಿತಾಚಾರಲಿಂಗಮುಖದಿ ನೋಡಿ
ತಿಳಿದರ್ಪಿಸೂದು ತತ್ವಾತ್ಮಕವಿದೆಂದೆಲ್ಲವ ||3||

ಚಂಪಕಗಂಧಿನಿ ಪೇಳಿದ
ಚಂಪಕಗಂಧಿನಿ ಪೇಳಿದ ಚದುರನೇತಕೆ ಮುನಿದ
ಪೊಂಬನಿನಿನುಡಿಯಿಂದೆ ಸೊಗಸಿರ್ದು ರತಿಯಿಂದೆ
ಚಂಪಕಗಂಧಿ ನೀ ಪೇಳಿದನು ಕಾಂತನ ಬಗೆಯ ||ಪಲ್ಲವಿ||
ಅಲ್ಲದೊಂದನಾಡಿದೆನೊ ಅನುಕೂಲವಾಗದಿದ್ದೆನೊ
ಹೊಲ್ಲತನವ ಮಾಡಿದೆನೊ ಹೊರೆಯನೇನಾನುಕೊಂಡನೊ ||1||
ಕನಸು ನೆನಸಿನೊಳಗಾನು ಕಂಡೆನೊ ತನ್ನಿಂದನ್ಯವನು
ಇನೆಯನೆನ್ನಂತರಂಗವ ಇನಿಸನು ತಾನೆ ಬಲ್ಲವ ||2||
ಊರು ಕೇರಿಗಳೊಳು ದೂರಿ ಉಳುಹುವನೆಂತು ವೈರಿ
ದಾರಿಗಳನು ಮೀರಿದವನು ದಸರಿದೊಡಕನು ಪರಿವನು ||3||
ಕಡೆಯ ಮಾತಿನ್ನೇನು ಕೇಳು ಕಾಣದುದೆ ಈ ಲೋಕದೊಳು
ಮಡದಿಯರೈವರ ಕೂಡಿ ಮಾನವನು ತಾ ನೀಗಾಡಿ ||4||
ಸತಿಯರಲ್ಲಿ ತಿಳಿದು ನೋಡಲು ಸಕಲವು ತಪ್ಪದಾಗಿರಲು
ಮತಿವಂತ ಶಿವಲಿಂಗೇಶನು ಮಾಣದೆನ್ನ ಕೂಡಿಹನು ||5||

ಚಂದ್ರವದನೆಯೊಳು
ಚಂದ್ರವದನೆಯೊಳು ಛಲವದೇತಕೆ ಹೇಳು
ಚಂದ್ರಶೇಖರ ನಿನಗೆ
ಚಂದ್ರಭೂಧರಚಾಪ ಚಾರು ವಿಕ್ರಮ ರೂಪ ||ಪಲ್ಲವಿ||
ತಾವರೆಗಣ್ಣವ ತನಯ ಮುನಿದು ನಿಂದು
ತಾವರೆವಗೆಯ ನೋಡೆ ನೀರೆ
ತಾವರೆಗಣೆಗಳ ತವಕದಿಂದೆಸೆಯಲು
ತಾವರೆಯಾಗವೀಗ ಕೇಳು ||1||
ಮಂದಸಮೀರನ ಮಾರ್ಗದಿ ನಡೆತಂದು
ನಂದವನವ ಹೊಕ್ಕು ತಾನಲ್ಲಿ
ಚಂದಿರಕಾಂತದ ಚೆಲುವ ಮಂಟಪವನು
ಹೊಂದಿ ನೋಡಿದಳೊ ನಿನ್ನ ಕಾಂತೆ ||2||
ಅಂಗಸಂಗವನೆಲ್ಲ ಅಗಲದೆ ಕೈಕೊಂಡು
ಅಂಗನೆಯನು ಮನ್ನಿಸೊ ಬಂದು
ಪುಂಗವವಾಹನ ಪುರಮರ್ದನ ಶಿವ
ಲಿಂಗ ಮಹೇಶ ಬಾರ ನೀ ಬೇಗ ||3||

ಚಂದಿರಾನನೆ ಪಾಲಯ
ಚಂದಿರಾನನೆ ಪಾಲಯ ಶೈಲನಂದನಂದನೆ
ಇಂದಿರ ವರಪ್ರದಾನೆ ಇಷ್ಟ ಮುಕ್ತಿಸೂಚನೆ ||ಪಲ್ಲವಿ||
ನೀಲಕುಂತಳೆ ನಿಗಮ ನುತಿಲಲನೋಜ್ವಳೆ
ಮೂಲಮಂತ್ರ ರೂಪೆ ಮುದಿತ ಮುಕ್ತ ಲೋಕಸಲ್ಲಾಪೆ
ಮಾಲಾತಿಮಾಲೋಪಮಾಂಗಿಮಾರಮರ್ಧನರ್ಧಾಂಗಿ
ಕಾಲಗರ್ವಹಾರಿಣೆ ಕರಾಳದಾನಮರ್ದಿನೆ
ಶೂಲಹಸ್ತೆ ಶುಭದೆ ಶಸ್ತೆ ಸೂರ್ಯಮಂಡಲಾಶ್ರಿತೆ ||1||
ತಾರಕಾಹಿತ ಜನನಿ ಸುರವರ ಪೂಜಿತ
ಚಾರುಪಾದೆ ಕಮಲೆ ವಿಮಲೆ ಶಂಖ ಚಕ್ರಧಾರಿಣಿ
ಶಾರದ ಶ್ರೀದತ್ತ ಪಾಣಿವಲ್ಲವೆ ಸದಾಶಿವೆ
ಹಾರಭಾರಕಾಂತಿ ರಾಜರಾಜಿತ ಪಯೋಧರೆ
ವಾರಿಧಿಗಭೀರೇ ಶೂರೆ ವಾರಣಾಸ್ಯ ತತ್ಪರೆ ||2||
ಮಂಗಳಾಕರೆ ಮಂದರಗಿರಿ ಶೃಂಗ ಮಂದಿರೆ
ತುಂಗತರ ಮೃಗೇಂದ್ರ ವಾಹೆ ತುಷ್ಟಿ ಪುಷ್ಟಿ
ಸಂಗ್ರಹೆ ರಂಗದಂತರಂಗಪೂರ್ನೆ ಭಕ್ತಲೋಲೆ ನಿಶ್ಚಲೆ
ಭಂಗರಹಿತೆ ಭಾವವಿಹಿತೆ ಭಾಸುರೆ ಜಿತಾಸುರೆ
ಸಾಂಗಲೀಲ ಸಾರ ಶಿವಲಿಂಗ ನಾಮಭೂಷಿತೆ ||3||

ಮತ್ತ ಗಜಯಾನೆ
ಮತ್ತ ಗಜಯಾನೆ ಸನ್ಮಾನೆ ಕೋಕಿಲಗಾನೆ
ವೃತ್ತಪಯೋಧರೆ ಗಂಭೀರೆ ನೋಡಕ್ಕಯ್ಯ
ಚಿತ್ತಜರೂಪವ ಪಳಿವನ ಕರತಾರೆ ನಿನಗೆ
ಎತ್ತಿ ಕೈಮುಗಿವೆ ನಾನು ಅಲ್ಲದಿರಲು
ಮತ್ತೆ ನಿನ್ನಡಿಗೆ ಬೀಳುವೆನೆ ನೋಡಮ್ಮಯ್ಯ ||1||
ಏಳು ನೆಲೆಯುಪ್ಪರಿಗೆಯ ನಡುವೆಯೆಸೆವ
ಮೇಳದ ಶಕುನಿಯ ಮಂಚದಿ ನೋಡಕ್ಕಯ್ಯ
ತೋಳತೆಕ್ಕೆಯೊಳು ಬೆರೆದು ಕೂಡುವ ನೇಹ
ದೇಳುಗೆಯ ಮಾಡು ಬೇಡವೆನೆ ಅಲ್ಲದಿರಲು
ಕೇಳಲೇನ ನಿನಗೆ ಮಾಳ್ಪನೆ ನೋಡಮ್ಮಯ್ಯ ||2||
ಕನ್ನೆ ವರೆಯದಲಿ ಕೈವಿಡಿದು ಕಾಂತನ ತಾನು
ಮನ್ನಿಸಿರ್ದು ಮುನಿವುದುಚಿತವೆ ನೋಡಕ್ಕಯ್ಯ
ತನ್ನನಲ್ಲ ದನ್ಯವರಿಯೆನೆ ಈಗಳಿದೇಕೆ
ಗನ್ನಗದುಕ ಮಾತು ತನಗೆ ಅಡಲ್ಲಿದುದಕೆ
ಚೆನ್ನಿಗನೊಡನೆ ಬಾಳ್ವೆನೆ ನೋಡಮ್ಮಯ್ಯ | |3||
ಪಂಜರದೊಳೆಡೆವಿಜಿದು ಓದುವ ಗಿಳಿಯ
ರಂಜಿಪ ನುಡಿಯನು ಕೇಳಿ ನಾನಮ್ಮಯ್ಯ
ಸಂಜೆಮುಂಜಾವಗಳನುಳಿದು ತನ್ನೊಳು ಕೂಡಿ
ಮಂಜುಳಾಂಗಿಯಾಗಿ ಜೀವಿಪೆನೆ ಅದಲ್ಲದುದಕೆ
ಮಾಂಜದೆನ್ನ ಬಿನ್ನಪರೆ ಸಾಕ್ಷಿ ನೋಡಮ್ಮಯ್ಯ ||4||
ಇಂಗಿತದ ನಡೆಯ ತಿಳಿದು ತಾನೆ ಬಂದೆನ್ನ
ಹಿಂಗದಂತೆ ಯೆಂದೆಂದಿಗೆಯು ನೋಡಕ್ಕಯ್ಯ
ಮಂಗಳಾತ್ಮ ಪರಶಿವಲಿಂಗನ ಕೂಡಿ
ಹೊಂಗಿ ಹೊರೆಯದೆ ಬದುಕುವೆನೆ ಹೀಂಗಲ್ಲದಿರೆ
ಹಂಗು ಹರಿದು ಹೋಗಿ ಸಾವೆನೆ ನೋಡಮ್ಮಯ್ಯ ||5||

ಮಂಗಳ ರೂಪ ಚಿದಂಗ
ಮಂಗಳ ರೂಪ ಚಿದಂಗ ಪರಾಕು
ಗಂಗಾಜಟಾಂತೋತೇತಮಾಂಗ ಪರಾಕು
ಭಂಗರಹಿತ ಸುರತುಂಗ ಪರಾಕು
ಜಂಗಮ ಜಲಜಪತಂಗ ಪರಾಕೆಂದು
ಅಂಗನೆಯರು ಹಸೆಗೆ ಕರೆದಾರು ಸೋಬಾನವೆ ||1||
ಕಪಟನಾಟಕ ಸೂತ್ರಧಾರಿ ಪರಾಕು
ಸುಪವಿತ್ರತರ ಸುಶರೀರಿ ಪರಾಕು
ಅಪರಿಮಿತಾನಂದಶಾಲಿ ಪರಾಕು
ವ್ಯಪಗತ ಜನಿಮೃತಿಮಾಲಿ ಪರಾಕೆಂದು
ಚಪಲೆಯರು ಹಸೆಗೆ ಕರೆದಾರು ಸೋಬಾನವೆ ||2||
ಕಾಮಿತಫಲದಾಯಕನೆ ಪರಾಕು
ಕಾಮಜನಿಕ ಸುಸಾಯಕನೆ ಪರಾಕು
ಸೋಮ ಸಕಲಶಾಲಿವತಾಲಿ ಪರಾಕು
ನೇಮರಹಿತ ನಿಜರೂಪ ಪರಾಕೆಂದು
ಕಾಮಿನಿಯರು ಹಸೆಗೆ ಕರೆದಾರು ಸೋಬಾನವೆ ||3||
ದಂಡಿತ ದನುಜರ ಷಂಡ ಪರಾಕು
ಮಂಡಿತ ಹಿಮರುಚಿ ಖಂಡ ಪರಾಕು
ಚಂಡಕರಾಯುತ ತೇದ ಪರಾಕೆಂದು
ಪುಂಡರೀಕಾನನೆಯರು ಮನದೊಲವಿಂದೆ
ಕೊಂಡಾಡಿ ಹಸೆಗೆ ಕರೆದಾರು ಸೋಬಾನವೆ ||4||
ವೇದಸನ್ನುತ ಶುಚಿಕೀರ್ತಿ ಪರಾಕು
ಮೋದದಾಯಕ ವಿಜಿತಾರ್ತಿ ಪರಾಕು
ವೇದಾಂತಜನ ಮಧ್ಯವರ್ತಿ ಪರಾಕು
ಶೋಧಿತ ಕನಕಾಭಮೂರ್ತಿ ಪರಾಕೆಂದು
ಆದರದಿಂ ಹಸೆಗೆ ಕರೆದಾರು ಸೋಬಾನವೆ ||5||
ಮಾರಮದಾಟವಿ ದಾವಿ ಪರಾಕು
ನಾರೀಕೃತೋರಗ ದೇವ ಪರಾಕು
ಸಾರ ನಿಗಮ ಕುಲವಂದ್ಯ ಪರಾಕೆಂದು
ನೀರಜಮುಖಿಯರು ಮುದದಿಂದೆ ನುತಿಸಿ ಶುಭ
ಕಾರಿಯನು ಹಸೆಗೆ ಕರೆದಾರು ಸೋಬಾನವೆ ||6||
ಅಂಬಿಕಾಧರ ಬಿಂಬ ಕೀರ ಪರಾಕು
ಕಂಬಲಾಶ್ವತ ಗೀತಾಧಾರ ಪರಾಕು
ಕುಂಭಿಮುಖಾಂಬುಜ ಸೂರ ಪರಾಕೆಂದು
ಕುಂಭಕುಚದ ಭರದಿ ಬಳುಕುವ ಸುನಿ
ತಂಬಿನಿಯರು ಹಸೆಗೆ ಕರೆದಾರು ಸೋಬಾನವೆ ||7||
ಪರತರ ಗುಣಮಣಿ ಬೂಷ ಪರಾಕು
ಗುರುಸಿದ್ಧಲಿಂಗ ದೇವೇಶ ಪರಾಕು
ಸರವಣ ಸಂಭವ ತಾತ ಪರಾಕು
ಸರಸಸಂಗೀತ ಸಂಪ್ರೀತ ಪರಾಕೆಂದು
ತರುಣಿಯರು ಹಸೆಗೆ ಕರೆದಾರು ಸೋಬಾನವೆ ||8||

ಘುಡುಘುಡಿಸುತೆ ಕಿಡಿಯೆಸಗುತೆ
ಘುಡುಘುಡಿಸುತೆ ಕಿಡಿಯೆಸಗುತೆ
ಪೊಡವಿಯೊಳೆಡೆವಿಡದೆಯ್ದುತೆ
ಮೃಢನಪ್ಪಣೆಯನು ಶಿರದೊಳು
ತಡೆಯದೆ ತಾಳ್ದಂಗೆ
ಗಡಣದೊಳಾರತಿಯ ಬೆಳಗಿರೆ ಸೋಬಾನವೆ ||1||
ಗಜಮುಖನೊಡಹುಟ್ಟಿದನಿಗೆ
ತ್ರಿಜದನ್ನುತ ಭರತನಿಗೆ
ರಜನಿ ಸಂಹಾರ ದಿವಾಕರನಿಗೆ
ನಿಜಕರುಣಾಬ್ದಿಗೆ ಶುಭವ
ವಿಜಯಗಾರತಿಯ ಬೆಳಗಿರೆ ಸೋಬಾನವೆ ||2||
ಮುಡಿ ಜಡಿವುತೆ ನಡುಬಳುಕುತೆ ಮೆ
ಲ್ಲಡಿವಿಡುತೆಡೆವಿಡದೆ ಬಂದು
ಸಡಗರಿಸುತೆ ಮಡದಿಯರು
ಸಡಗರಿಸುತೆ ಮಡದಿಯರಿಡಿಕಿರಿವುತೆ ಜಗ
ದೊಡೆಯಗಾರತಿಯ ಬೆಳಗಿರೆ ಸೋಬಾನವೆ ||3||
ನಿರುಪಮನೆಂದೆನಿಸುವ ಮಹಿಮೆಯ
ಪರತರ ಪೆರೆದಲೆಯಗೆ ವಿಧಿ
ಹರಿವಂದ್ಯ ಪಾದಕಮಲನಿಗೆ
ಸುರರೆರೆಯಂಗೆ ಗುಣ
ಶರಧಿಗಾರತಿಯ ಬೆಳಗಿರೆ ಸೋಬಾನವೆ ||4||
ಮದಯುತ ದಕ್ಷಮಖಷನ ಶಿಖಿ
ಗದಿರದೆ ಗನಶೌರ್ಯದಿ ಮೆರೆದಗೆ
ಮದಗಜಗತಿಯ ಸುದತಿಯರು
ರತಿಮುದತಿಯರುರೆ
ಪದುಳದೊಳಾರತಿಯ ಬೆಳಗಿsರೆ ಸೋಬಾನವೆ ||5||
ಸಿತಕರ ದಶತಕರ ಸಂಸ್ತುತ
ಹುತವಹ ನೇತ್ರನಿಗೆ ನಿರ್ಜಿತ
ರತಿಪತಿ ಶಂಭುಸುತನಿಗೆ
ಯತಿನುತಗೆ ಧøತಯುತ
ಮತಿಗಾರತಿಯ ಬೆಳಗಿsರೆ ಸೋಬಾನವೆ ||6||
ಜ್ವಲನಾಕ್ಷಗೆ ಖಲಶಿಕ್ಷೆಗೆ ವಿಲಸಿತನಿಗೆ
ನಿಲಯರಹಿತನಿಗೆ
ಮಲಿನಾತ್ಮದಕ್ಷಹರನಿಗೆಶಿ
ವಲಿಂಗೇಶನ ಚೆಲುವಾತ್ಮಭಾವ
ಕಲಿವೀರನಿಗೆ ಸೋಬಾನವೆ ||7||

ಬದುಕಿದೆ ನಾಂ
ಬದುಕಿದೆ ನಾಂ ಬದುಕಿದೆ ನಾಂ ಸತ್ಯ
ಸದಮಲದಮಲದರುವಿನ ಮೊದಲೆ ಲಿಂಗವ ಕಂಡು ||ಪಲ್ಲವಿ||
ಕರಿದಿಷ್ಟಮೂರ್ತಿ ಕಾರುಣ್ಯ ಪ್ರಸಾದವ
ಅರುವಿನ ಘನ ಪರಮಲಿಂಗವ ಕಂಡು ||1||
ಅತ್ಯತಿಷ್ಠದ್ದಶಾಂಗುಲನೆನದೆನಿಪ
ನೆಟ್ಟನೇಕೋದೇವನದ್ವೆನೈತನ ಕಂಡು ||2||
ಸ್ಫಟಿಕದ ಘಟದ ಪಾವನ ಪರಂಜ್ಯೋತಿಯ
ನಿಟಿಲ ಭ್ರೂಮಧ್ಯದಿ ಸ್ಫಟಿಕ ಲಿಂಗವ ಕಂಡು ||3||
ಮಾನಸ ವಚನ ಕಾಯ ಬಾಹ್ಯಾಂತರ
ಸ್ವಾನುಭಾವದಿ ದಿವ್ಯಕಲೆಗಳ ಕಂಡು ||4||
ಭ್ರಾಂತಳಿದಮಲ ಪಶ್ಚಿಮದ ಮಂಟಪದೊಳು
ಕಾಂತನ ನಿಜಗುರು ಶಾಂತಲಿಂಗನ ಕಂಡು ||5||

ತಿಳಿಯಲರಿಯದೆ ಮೋಕ್ಷಕೆಳಸಿ
ತಿಳಿಯಲರಿಯದೆ ಮೋಕ್ಷಕೆಳಸಿ ಬಳಲುವರು ತ
ಮ್ಮೊಳು ಹೊಳೆವ ಷಟ್ತಾರೆಗಳ ಬಗೆಯನು ||ಪಲ್ಲವಿ||
ಎಸೆವ ಸರ್ಪಾಕಾರವಾಗಿ ರಾಜಿಸುತಿರ್ಪವು ಸ
ದøಶ ಸುವರ್ಣಮಯ ತಾರಕಾಗ್ರದೊಳು
ಮಿಸುಪ ವಸುಮಯ ತಾರೆಗಳನು ನೆಲೆಗೊಳಿಸಿ ನೋಡಿ
ಲಸತ್ ಇಷ್ಟಲಿಂಗ ತನ್ನ ವಶವಪ್ಪುದು ||1||
ವರುಣೇಂದು ಶಿಖಿಮಂಡಲ ತ್ರಯಂಗಳ ಹೊರಗೆ
ವರ ನೀಲಮಯ ತಾರೆಗಳ ಮಧ್ಯದಿ
ಪರಮಾಣುರೂಪಾದ ಪ್ರಾಣಲಿಂಗದ ಪರಿಯ
ನರಿದಿದರೊಳಗೆ ತಾ ಸುಖಮಿರುತಿರ್ಪುದು ||2||
ಮನುಗುತಿಹ ರತ್ನ ಸುಹರಿತಮಯ ತಾರೆಗಳ
ನನುಪಮಧುರ ಏಕರೂಪಮಾದ
ಅನಘ ಸಮುದ ವೀರದೇಶಿಕೋತ್ತಮನೆನಿಪ
ಘನ ಭಾವಲಿಂಗ ತಾನಾಗಿರುತಿರ್ಪುದು ||3||

ನಿವಾಳಿ ಆರತಿ ನಿವಾಳಿಯೆ
ನಿವಾಳಿ ಆರತಿ ನಿವಾಳಿಯೆ
ಶಿವಲಿಂಗ ಮಹೇಶಗೆ ನಿವಾಳಿಯೆ ||ಪಲ್ಲವಿ||
ಹರಿನುತಪ್ರಿಯಗೆ ಪುರಸಂಹರನಿಗೆ
ದುರಿತವಿದೂರಗೆ ನಿವಾಳಿಯೆ
ಕರಿಮುಖನಯ್ಯಗೆ ಸುರಮುನಿ ತಾತಗೆ
ಕರುಣಸಾಗರನಿಗೆ ನಿವಾಳಿಯೆ ||1||
ಕಾಲಾರಿ ಕರುಣಿಗೆ ಕಾಮವಿದೂರಗೆ
ಬಾಲೇಂದುಮೌಳಿಗೆ ನಿವಾಳಿಯೆ
ಸಾಲುಮುಖನ ಪಿತ ಶೂಲಂಕದೇವಗೆ
ನೀಲಕಂಧರನಿಗೆ ನಿವಾಳಿಯೆ ||2||
ಷಟ್ಸ್ಥಲದಾಚಾರ್ಯ ಸಿದ್ಧಲಿಂಗೇಶಗೆ
ಕಟಿಪ ಕುಂಡಲನಿಗೆ ನಿವಾಳಿಯೆ
ಸೃಷ್ಟಿಗೆ ನಿಲುಕದ ನಿಟಿಲಾಕ್ಷಭವಗೆ
ಶ್ರೇಷ್ಠ ಬೆರಟೂರಪತಿ ಗುರುವಾರ್ಯಗೆ ನಿವಾಳಿಯೆ ||3||

ಯಾತಕೆ ಮರುಳಾದೆನೆ ಲಿಂಗಯ್ಯ
ಯಾತಕೆ ಮರುಳಾದೆನೆ ಲಿಂಗಯ್ಯ ನಿನಗೆ ನಾನು
ಯಾತಕೆ ಮರುಳಾದೆನೆ
ಯಾತಕೆ ಮರುಳಾದೆನೆಲೆ ಅಯ್ಯಾ ನಾನು
ಮಾತಿಗೆ ಮೋಹಿತನಾದೆನು ಮಧುರ ನುಡಿಗಳಿಗಿನ್ನು ||ಪಲ್ಲವಿ||
ಚೆಲುವ ಚೆನ್ನಿಗನಿವನೆಂದು
ಒಲಿವೆನೆ ತನ ಸುಲಭದಿಂದಲಿ ನಾನು
ಕುಲಕಾಣಬರದಲ್ಲಿ ಕೊ ಸುಳ್ಳಾಡಿದ ನಲ್ಲೆ
ನೆಲೆಯ ಹೇಳೆನಕೂಡ ಯಜಗಂಧಿ ಕೇಳು ||1||
ಕಳವಳ ವೆಗ್ಗಳವಾಯಿತೆ ನಳಿನಾಕ್ಷಿ ಕೇಳು
ಸುಳಿವುದೋರಿದ ಸ್ವಪ್ನದಿ
ಕಳಮಂಚದೊಳು ಮಲಗಿ ಬೆಳಗು ಹೇಗೆ ನಾಳೆಯೆಲೆ
ಹೊಳೆವ ಓಲೆಯ ಪ್ರಭೆ ಬೆಳಗುದೋರಿದ ನಲ್ಲೆ ||2||
ಬಟ್ಟಕುಚದ ಪ್ರಾಯವು ದಿಟ್ಟಿಸಿ ನೋಡಿ
ರಟ್ಟೆ ಹಿಡಿದು ಎಳೆದನೆ
ದಿಟ್ಟನು ಈ ಶಾಂತ ಕರಪುರದಿಷ್ಟಲಿಂಗೇಶ
ಮುಟ್ಟಿ ಮೋಹಿಸಿ ಮುದಮಾಡಿ ನೆರೆದನು ನಲ್ಲೆ ||3||

ಕರದು ತಂದು ತೋರೆ
ಕರದು ತಂದು ತೋರೆ ಸೈರಿಸಲಾರೆ ಸರಸಿಜನಯನೆ
ಹರಿ ವಿಧಿ ಸುರ ವಂದ್ಯ ಗುರುಕುಲತಿಲಕನ
ವರ ಮುನಿಗಳ ಮನೋವನಜ ದಿನೇಶನ ||ಪಲ್ಲವಿ||
ಚಿಕ್ಕ ಪ್ರಾಯದೊಳು ಎನ್ನನು ತನ್ನ ತೆಕ್ಕೆಯೊಳಮರ್ದು
ಚೊಕ್ಕ ಸಕಲಕಲೆಗಳು ಉಕ್ಕಿ ಸೂಸುತೆ
ಅಕ್ಕರಿಂದಲಿ ತಾಂಬೂಲವ ಗುಟುಕೀವನ ||1||
ರಾಜಾಧಿರಾಜ ನಮಿತ ಸುರಭೂಜನೆನಿಪನ
ವೋಜೆಯಿಂ ಕರತಾರೆ ನಾ ಸೈರಿಸಲಾರೆ
ಸೋಜಿಗವಾಗಿದೆ ಸುಗುಣ ಸಂಪನ್ನನ ||2||
ಪರ ಸತಿಯರನು ಮುಟ್ಟದ ಪಂಥಗಾರನೆಂದೆನಿಪ
ಮರೆಹೊಕ್ಕರನು ಕಾಯ್ವ ಮಾರಾಂತರನುಗೆಲ್ವ
ಪರವಾದಿಗಿರಿವಜ್ರದಂಡ ಪ್ರಚಂಡನ ||3||
ಪಂತವೆ ತನಗೆ ನಂಬಿದಂಥ ಹೊಂತಕಾರಿಯೊಳು
ಕಾಂತೆ ನೀ ಕರತಾರೆ ನಾ ಸೈರಿಸಲಾರೆ
ಅಂತರಾಂತರದಜರಂಧ್ರ ನಿವಾಸಕೆ ||4||
ಸತ್ಯದಾಚರಣೆಯ ನನವರತ ನಿತ್ಯವೆಂದರಿದು
ಕೃತ್ಯದಕೃತ್ಯಗಳ ನೋಡಿ ಮುರಿದ ವಿ
ರಕ್ತ ಮುರಿಗೆ ಗುರುಸಿದ್ಧೇಶ ಚಿತ್ಕೋಶನ ||5||

ಜಯ ಜಯ ಮಂಗಳ
ಜಯ ಜಯ ಮಂಗಳ ಮಹಿಮಗೆ ಗೌರೀ
ಪ್ರಿಯ ವರ ವರ ಮುರಿಗೆಯ ಸಿದ್ಧೇಶ್ವರನಿಗೆ ||ಪಲ್ಲವಿ||
ಪಂಚ ಬಾಣನ ಸುಟ್ಟು ತಿಲಕವನೊಲಿದಿಟ್ಟು
ಪಂಚ ವರ್ಣದ ಮಂತ್ರದೊಳಳವಟ್ಟು
ಪಂಚಮುಖದೊಳೈದು ಸತ್ತ್ವಂಗಳ ಪೆತ್ತು
ಪಂಚ ಮಹಾಬ್ರಹ್ಮವೆನಿಸಿದಗೆ ||1||
ಚಂದ್ರಕಳಾಪಗೆ ಚಂದ್ರಾದ್ರಿ ಚಾಪಗೆ
ಚಂದ್ರಧವಳ ಶುಭ ಕೀರ್ತಿಗೆ
ಚಂದ್ರಮಾತುಳ ಹೋಮ ಸಂಹರನಿಗೆ ರಾಮ
ಚಂದ್ರಗೆ ಶಿವಗೀತೆಯನರುಹಿದಗೆ ||2||
ಕೃಷ್ಣನಿಗೀಶ್ವರಗೀತೆಯ ತಿಳುಪಿದ
ಕೃಷ್ಣ ಪುರೋಗಮ ಮುನಿವಂದ್ಯಗೆ
ಕೃಷ್ಣಗರಳ ಬಂಧುರ ಕಂಧರನಿಗೆ ಬಾಲ
ಕೃಷ್ಣ ನೀರಾಜಿತ ಕರಕಂಜಗೆ ||3||
ನಾಗಭೂಷಣನಿಗೆ ನಗೆಮೊಗದೈಯ್ಯಗೆ
ನಾಗಚರ್ಮಾಂಬರಧರನಿಗೆ
ನಾಗವದನ ಶಿಖಿವಾಹನ ಜನಕಂಗೆ
ನಾಗಶಯನ ನೇತ್ರ ಪಾದನಿಗೆ ||4||
ದಕ್ಷಿಣ ಕೈಲಾಸವೆನಿಪ ಚಿಮ್ಮುಲಗಿರಿ
ಸುಕ್ಷೇತ್ರದಲ್ಲಿ ನೆಲಸಿ ಶರಣ
ರಕ್ಷ ಕಣ್ಣಪ್ಪನ ಕುಲದೀಪ ಜಂಗಮ
ಪಕ್ಷ ಶ್ರೀ ಬ್ರಹ್ಮಭೂಪಾಲ ವರದನಿಗೆ ||5||

ಮಾತೆ ಪೊರೆ ಗಿರಿಜಾತೆ
ಮಾತೆ ಪೊರೆ ಗಿರಿಜಾತೆ ನೀನೆನ್ನ
ಜಾತಿ ಲಲನಾಜನ ಶಿರೋಮಣಿ
ನೂತನಾತುಳ ರೂಪಿಣಿ ||ಪಲ್ಲವಿ||
ಕುಂದದತಿಶಯದಿಂದ ರಾಜಿಪ
ಮಂದಗಮನೆ ಮುಕುಂದ ವಂದಿತೆ
ಮಂದರಾಚಲ ಮಂದಿರೆ ||1||
ಸೀಮಾರಹಿತೆ ಸುತ್ರಾಮ ಸೇವಿತೆ
ಕಾಮಹರ ಕಮನೀಯ ಶಂಕರ
ವಾಮಭಾಗ ವಿರಾಜಿತೆ ||2||
ಬಿಂಬಾಧರೆ ನೆರೆ ನಂಬಿದೆ ನಾ ನಿನ್ನ
ಕಂಬುಕಂಧರೆ ಕಮಲಲೋಚನೆ
ತುಂಬೆಗುರುಳ ನಿತಂಬಿನಿ ||3||
ಧೀರೆ ವರ ಗುಣಹಾರೆ ನಿರುಪಮ
ನೀರಜಾನನೆ ನಿಗಮ ಸನ್ನುತೆ
ಸೂರಿಜನ ಸುರವಲ್ಲರಿ ||4||
ಶಾಂತವೀರ ನಿಶ್ಚಿಂತ ಕಾಂತನ
ಕಾಂತೆ ಕೋಕಿಲವಾಣಿ ಕರುಣಿಯ
ನಂತರಸ ಪರಿಪೂರಿತೆ ||5||

ಕೂಸ ಕಂಡಿರ ಜ್ಞಾನಿಗಳೆಲ್ಲ
ಕೂಸ ಕಂಡಿರ ಜ್ಞಾನಿಗಳೆಲ್ಲ ಕೂಸ ಕಂಡಿರ
ಸಾಸಿರನಾಮದ ಶತಕೋಟಿತೇಜದ
ಸೂಸುವ ಜ್ಞಾನದ ಸುಖದಲಿದ್ದನ ||ಪಲ್ಲವಿ||
ಜ್ಞಾನ ಸಮುದ್ರದೊಳಾಡುವ ಕೂಸು
ಜ್ಞಾನಿ ಹೃದಯದೊಳಡಗಿದ ಕೂಸು
ಏನೆಂದರಿಯದ ಮೋನದ ಕೂಸು
ತಾನೆ ಬಲ್ಲುದು ತನ್ನ ಮಹಿಮೆಯ ಕೂಸು ||1||
ಲೋಕ ತ್ರಯವನೆಲ್ಲ ನೋಡುವ ಕೂಸು
ಬೇಕಾದ ಮನೆಯೊಳಗಾಡುವ ಕೂಸು
ಆಕಾರ ಬಿಟ್ಟ ನಿರಾಕಾರ ಕೂಸು
ಸಾಕಾರ ದೃಷ್ಟಿಗೆ ನಿಲುಕದ ಕೂಸು ||2||
ಅನುದಿನ ಮನೆಯೊಳು ಕುಳಿತಿದ್ದ ಕೂಸು
ಘನವಾದ ಹೆಚ್ಚಿನ ಚೆಲುವಿನ ಕೂಸು
ಬಿನುಗುಬುದ್ಧಿಗಳಿಗೆ ನಿಲುಕದ ಕೂಸು
ಘನ ಗುರು ಶಾಂತ ವೀರೇಶನೆಂಬ ಕೂಸು ||3||

ತೋರಿಸೆ ಶ್ರೀಗುರುದೇವನ
ತೋರಿಸೆ ಶ್ರೀಗುರುದೇವನ ಚೆಲ್ವ ನೀರೆ ನೀನೆನ್ನಯ ಪ್ರಾಣನ
ವಾರಿಜವದನೆ ವೈಯಾರಿ ಮುನಿದು ಮೊಗ
ದೋರದೆ ಮಾತನಾಡದೆ ಹೋದ ಕಂಡಾ ||ಪಲ್ಲವಿ||
ಹೃದಯಸರಸಿಯೊಳಗಾಡುವ ದಿವ್ಯ
ಸದಮಳ ಹಂಸನ ನೋಡುವ
ವಿದಿತಾನಂದದೊಳುವೋಲಾಡುವ ಎಮ್ಮ
ಹದುಳದೆ ಮುಕುತರ ಮಾಡುವ
ಹದಿರು ಚದಿರು ನುಡಿಯದವರೊಡನಾಡುವ
ಮದವಿರಹಿತ ಭಕ್ತಿ ರಸದೊಳು ಕೂಡುವ ||1||
ಉರಿವ ಜ್ಯೋತಿಯ ನೋಡಿ ಪಾಡುವ ಬಲು
ಬೆರಗಿನೊಳು ಮೂಡಿ ಮುಳುಗುವ
ತಡೆವಿಲ್ಲದೆಡೆಯಾಡುವ ಲಜ್ಜೆ
ವೊಡೆಯದೆನ್ನೊಳು ನಗೆಯಾಡುವ
ತಡಿಯ ಸೇರಿಸಿ ಸೇರಿದನುಪಮ ಶಿಷ್ಯರ
ಗಡಣದ ನಡುವೆ ರಾಜಿಪ ದೇಶಿಕೇಂದ್ರನ ||2||
ನೀಲ ಸುಜ್ಯೋತಿಯ ಬೆಳಗನು ನೋಡಿ
ಲೀಲೆಯೊಳೆಡೆಯೂರ ಗುರು ಸಿದ್ಧಲಿಂಗನೆ
ಕಾಲಕರ್ಮಗಳನು ಪರಿವ ಸುಭಕ್ತ
ಜಾಲದ ಮನೆಯ ಕೊನೆಯೊಳು ನಿಂದವನೆ
ಬಾಲೆ ಮೂರಾರೊಂದುಗೂಡುತೆ ವಸ್ತುವ
ನೆಲ್ಲ ದಯದೆ ತೋರ್ಪ ಶಾಂತವೀರೇಶನೆ ||3||

ವರ ವೇದಾಗಮ ವಂದಿತ
ವರ ವೇದಾಗಮ ವಂದಿತ ವಾರಿಜಗಂಧಿ ಪೊರೆ
ಗಿರಿರಾಜನಂದನೆ ಗುರುಕುಚೆ ಗಾನವಿಲೋಲೆ ಗುಣಾ
ಕರೆ ಸರಸಿಜಲೋಚನೆ ಸತಿಕುಲ ರನ್ನೆ ||ಪಲ್ಲವಿ||
ಮದಗಜವರಗಾಮಿನಿ ಮಂದಹಾಸಿನಿ
ಸುದತಿ ನಿಕರ ಸೇವಿತೆ
ಮುದದೊಳೆಸೆವ ಶಶಿವದನೆ ದಯಾಕರೆ
ಚದುರೆ ಸರಸ ಮೃದುವಾಣಿ ಕಲ್ಯಾಣಿ ||1||
ಸನ್ನುತ ಘನನಾಯಕಿ ಸತ್ಯಕೀರ್ತಿ ಸಂ
ಪನ್ನೆ ಪುಣ್ಯ ಪ್ರಕಾಶದ
ಕನ್ನೆ ವಿರಾಜಿಪ ರನ್ನದುಟಿಯ ವರ
ಪನ್ನಗವೇಣಿ ಪಾವನತರ ರೂಪೆ ||2||
ವಾರಣರಿಪುವಾಹನೆ ವಿಮಳೆ ವಿಶ್ವಾ
ಧಾರೆ ಶಾಂತ ವೀರೇಶನ
ನೀರೆ ನಿಜವದವತಾರೆ ಮಂಜುಲ ಮಣಿ
ಹಾರೆ ಭಯದೊರೆ ಗಂಭೀರೆ ||3||

ಸರಸ ವಿದ್ಯಾರಮಣಿಯಿರೆ
ಸರಸ ವಿದ್ಯಾರಮಣಿಯಿರೆ ಬುಧರಿಗಜನು ಜಡ
ತರುಣಿಯರೊಳೇಕೆ ಮೋಹನ ಪುಟ್ಟಿಸಿದನೊ ||ಪಲ್ಲವಿ||
ಮಿಸುಪ ಶಬ್ದಗಳೆಂಬ ಮೋಹನಾಂಗದ ನಿಜದೊ
ಳೆಸೆವ ನಿಗಮಗಳೆಂಬ ಚೆಲ್ವಮೊಗದ
ರಸಿಕ ಸತ್ಕಾವ್ಯವೆನಿಸುವ ರಂಗುದುಟಿಯ ರಾ
ಜಿಸುವ ತರ್ಕಗಳೆಂಬ ಕುಂಭ ಕುಚದ ||1||
ಸಲೆ ವಿರಾಜಿಪ ಪುರಾಣಗಳೆಂಬ ಮೆಲ್ಲಡಿಯ
ಲಲಿತಾಗಮಗಳೆಂಬ ನಳಿತೋಳ್ಗಳ
ವಿಲಸಿತಾಲಂಕಾರವೆನಿಪಲಂಕಾರಂಗಳ ವಿ
ಮಳ ಕವಿತೆಗಳೆಂಬ ವಿರಳ ಪುರ್ಬುಗಳ ||2||
ಗಜಗಮನದೆಸೆವ ಛಂದಂಗಳೆಂಬ ಮೆಲ್ಲಡಿಯ
ನಿಜ ನಿಘಂಟುಗಳೆಂಬ ನಿಡುಗಂಗಳ
ಭುಜಗಕುಂಡಲ ಶಾಂತವೀರೇಶನ ಪಾದ ಪಂ
ಕಜ ನುತಿಗಳ ನೂತನ ತಿಲಕದ ||3||

ಭಿಕ್ಷವನೆ ಬೇಡುಂಬ
ಭಿಕ್ಷವನೆ ಬೇಡುಂಬ ಮೋಕ್ಷ ಸುಖವನೆ ಕೊಟ್ಟು
ರಕ್ಷಿಸೆನ್ನನು ದಯಾಲೋಲ ಧನಂಜಯಾಕ್ಷ ||ಪಲ್ಲವಿ||
ಅಂಗ ಸುಖವೆಲ್ಲ ಶಿವಲಿಂಗ ಸುಖವೆಂದರಿದು
ಮಂಗಳಾತ್ಮಕನಾಗಿ ಹರಭಕ್ತರ
ಅಂಗಳಕೆ ಹೋಗಿ ಘನಲಿಂಗಕರ್ಪಿತ ಯೆಂದು
ಹಿಂಗದಾನಂದದಿಂದಿಹಪರದೊಳು ||1||
ಕರಚೆಲ್ವ ತಾಯಿಗಳ ಅಕ್ಕಗಳ ಮನೆಯಲ್ಲಿ ಭಿಕ್ಷ
ಹರಿಣಲೋಚನದ ಚಂದಿರವದನದ
ಪರಮಪಾವನ ಕಾಂತೆಯರ ಲಿಂಗವಂತೆಯರ
ವರಪುಣ್ಯಗೃಹದೊಳು ಭಿಕ್ಷವೆಂದು ||2||
ಅಕ್ಕನಾಗಮ್ಮ ನೀಲಮ್ಮ ಚಂಗಲೆ ಚೋಳಿ
ಯಕ್ಕ ಮುಕ್ತಾಯಿಗಳ ಮಂದಿರದೊಳು
ಮುಕ್ಕಣ್ಣ ಶಾಂತವೀರೇಶ್ವರಗೆ ಭಿಕ್ಷವನು ಸ
ತ್ಯಕ್ಕಗಳ ಸದನದೊಳು ಭಿಕ್ಷವೆಂದು ||3||

ಜಯಮಂಗಳಂ ನಿತ್ಯ
ಜಯಮಂಗಳಂ ನಿತ್ಯ ಶುಭಮಂಗಳಂ ಜಯ
ಜಯತು ಶಿವಲಿಂಗ ಧವಲಾಂಗ ನಿಮಗೆ ||ಪಲ್ಲವಿ||
ಶ್ರೀ ಭಸಿತಗಾತ್ರರಿಗೆ ಸಂತತ ಪವಿತ್ರರಿಗೆ
ತ್ರೈಭುವನ ಕರ್ತರಿಗೆ ಧೀರರಿಗೆ
ಶೋಭನ ಚರಿತ್ರರಿಗೆ ಸದುಜನದ ಮಿತ್ರರಿಗೆ
ಶಂಭುರೂಪಿನ ಶರಣ ಜಂಗಮಕೆ ||1||
ಮಂಗಳಂ ಶಿವಭಕ್ತ ಮಂದಿರ ನಿವಾಸರಿಗೆ
ಮಂಗಳಂ ಸರ್ವಾಂಗ ಲಿಂಗಿಗಳಿಗೆ
ಮಂಗಳಂ ಷಟ್ಸ್ಥಲದ ಮೂರು ಸಾವಿರಕೆ ಜಯ
ಮಂಗಳಂ ವಿರತಮೂರ್ತಿಗಳಿಗೆ ||2||
ಮೂರು ಗುಣಗಳ ಮುರಿದು ಈರೈದು ಇಂದ್ರಿಯವ ತೊರೆದು
ಆರುವರ್ಗವ ಗೆಲಿದ ಧೀರರೆನಿಸಿ
ಚಾರುತರ ಮೂವತ್ತಾರುತತ್ತ್ವವ ತಿಳಿದ
ನೂರೊಂದುಸ್ಥಲದ ವಿರತರಿಗೆ
ಜಯಮಂಗಳಂ ನಿತ್ಯ ಶುಭಮಂಗಳಂ ||3||
ಭವತಿಮಿರ ಅರ್ಕರಿಗೆ ಭಾವಜನ ಗೆಲಿದರಿಗೆ
ಭವಗಿರಿಗೆ ವಜ್ರವೆಂದೆಂಬವರಿಗೆ
ಭವಜಲಾಂಭೋನಿಧಿಗೆ ವಡಬಾಗ್ನಿ ಎಂದೆನಿಪ
ಭವವಳಿದ ಶಿವಯೋಗಪುಂಗವರಿಗೆ ||4||
ಶರಣು ಹೊಕ್ಕರೆ ಕಾಯ್ವ ಬಿರುದಿನ ಮಹಾತ್ಮರಿಗೆ
ಕರುಣಾಸಾಗರರೆನಿಸಿ ಚರಿಸುವರಿಗೆ
ವರ ವೀರಶೈವದೊಳು ಮೆರೆವ ಯತಿಮಾನ್ಯರಿಗೆ
ಪರತತ್ವದೊಳು ಬೆರೆವ ಭಾಸುರರಿಗೆ ||5||
ಮಮಕಾರ ಭೂಪನಿಗೆ ಮಾನಿನಿಯು ಮೋಹಿನಿಗೆ
ಅಮಿತ ಜಪದಿಂ ಜನಿಸಿದ ಮಾಯೆಯ
ಅಮರವರ ಮಧುಕೇಶನಾಲಯದಿ ಗೆಲಿದಂಥ
ದ್ಯುಮಣಿತೇಜದ ಪರದೇಶಿಗಳಿಗೆ ||6||
ಬಲ್ಲಿದನು ಬಸವೇಶ ಭವದಲ್ಲಿ ನಿರ್ಮಿಸಿದ
ಸಲ್ಲಲಿತ ಶೂನ್ಯ ಸಿಂಹಾಸನದಲಿ
ಎಲ್ಲ ಶರಣರು ಹೃದಯದಲಿ ಸ್ಮರಿಸಿದ ಗುರು
ಅಲ್ಲಮಾಪ್ರಭುವಾದ ಅಯ್ಯಗಳಿಗೆ ||7||

ಮನುಕುಲ ಸಂಕುಲ
ಮನುಕುಲ ಸಂಕುಲದಧಿಪತಿಯನಿಪನ
ಘನಕನಕಾದ್ರಿಪ ನಿಲಯನ
ತನುಭವ ವೀರ ವರನಿಗೆ ವನರುಹನಯನಗೆ
ವನಿತೆಯರಾರತಿಯ ಬೆಳಗಿರೆ ಸೋಬಾನವೆ ||ಪಲ್ಲವಿ||
ಘುಡಿಘುಡಿಸುತ ಕಿಡಿಮಸಗುತೆ
ಪೊಡವಿಯೊಳೆಡೆವಿಡದೆಯ್ದುತೆ
ಮೃಡನಪ್ಪಣೆಯನು ಶಿರದೊಳು ತಡೆಯದೆ ತಳದಗೆ
ಗಡಣದೊಳಾರತಿಯ ಬೆಳಗಿರೆ ಸೋಬಾನವೆ ||1||
ಗಜಮುಖದೊಡಹುಟ್ಟಿದಗೆ
ತ್ರಿಜಗನುತ ಚರಿತ ಭವ
ರಜನಿಸಂಹಾರ ದಿವಾಕರನಿಗೆ
ನಿಜ ಕರುಣಾಬ್ಧಿಗೆ ಶುಭ
ವಿಜಯಗಾರತಿಯ ಬೆಳಗಿರೆ ಸೋಬಾನವೆ ||2||
ಮುಡಿ ಜಡಿವುತೆ ನಡು ಬಳುಕುತೆ ಮೆ
ಲ್ಲಡಿವಿಡುತೆಡವಿಡದೆ ಬಂದು
ಸಡಗರಿಸುತೆ ಮಡದಿಯರು
ಸಡಗರಿಸುತೆ ಮಡದಿಯರಿಡಿಕಿರಿವುತೆ ಜಗ
ದೊಡೆಯಗಾರುತಿಯ ಬೆಳಗಿರೆ ಸೋಬಾನವೆ ||3||
ನಿರುಪಮನೆಂದೆನಿಸುವ ಪರತರ ಮಹಿಮೆಯ
ಪೆರೆದಲೆಯಗೆ ವಿಧಿ
ಹರಿವಂದ್ಯ ಪಾದಕಮಲನಿಗೆ ಸುರರೆಳೆಯಂಗೆ ಗುಣ
ಶರಧಿಗಾರತಿಯ ಬೆಳಗಿರೆ ಸೋಬಾನವೆ ||4||
ಮದಯುತ ದಕ್ಷಮಖವನಶಿಖಿ
ಗದಿರದೆ ಘನ ಶೌರ್ಯದಿ ಮೆರವಗೆ
ಮದಗಜಗತಿಯ ಸುದತಿಯರುರತಿಮುದತಿಯರುರೆ
ಪದುಳದೊಳಾರತಿಯ ಬೆಳಗಿರೆ ಸೋಬಾನವೆ ||5||
ಸಿತಕರ ದಶಶತಕರ ಸನ್ನುತ
ಹುತಹವನೇತ್ರಗೆ ನಿರ್ಜಿತ
ರತಿಪತಿ ಶಂಭುಸುತನಿಗೆ
ಯತಿನುತಗೆ ಧೃತಿಯುತ
ಮತಿಗಾರತಿಯ ಬೆಳಗಿರೆ ಸೋಬಾನವೆ ||6||
ಜ್ವಲನಾಕ್ಷಗೆ ಖಲಶಿಕ್ಷಗೆ ವಿಲಸಿತನಿಗೆ
ವಿಲಯವಿರಹಿತಗೆ
ಮಲಿನಾತ್ಮ ದಕ್ಷಹರನಿಗೆ ಶಿ
ವಲಿಂಗೇಶನ ಚೆಲುನಾತ್ಮಭಾವ
ಕಲಿ ವೀರನಿಗೆ ಸೋಬಾನವೆ ||7||

ಶ್ರೀ ಗುರುಶಾಂತ ವೀರಾಧಿವೀರ
ಶ್ರೀ ಗುರುಶಾಂತ ವೀರಾಧಿವೀರ ||ಪಲ್ಲವಿ||
ಶ್ರೀಗುರು ಶಾಂತವೀರಲಿಂಗ ವೇದತುರಂಗ
ಭೋಗಿಭೂಷಣ ಸತ್ಯಭಾಷಣ ಜಯತೋಷಣ ||1||
ದಕ್ಷಿಣಾಮೂರ್ತಿಯಾಗಿ ದಾನ ಗುಣದ ಚಾಗಿ
ಪಕ್ಷಪಾತವನೀಗಿ ಪರಮಾತ್ಮ ಸಮ್ಮತ ಯೋಗಿ ||2||
ರಾಮಚಂದ್ರಗೆ ಶಿವಗೀತೆಯ ಬೋಧಿಸಿ
ಪ್ರೇಮದಿ ಮುಕ್ತನ ಮಾಡಿದ ಭವ ಮಹಾನುಭಾವ ||3||
ಹರಿಗೆ ದೀಕ್ಷೆಯನಿತ್ತು ವ್ಯಾಸನೆಂಬ ಪೆಸರ
ಕರುಣಿಸಿ ಪುರಾಣತತಿಯನು ಪೇಳಿಸಿದಸಮ ||4||
ಕಮಲನೇತ್ರನ ದಶಭವಗಳ ತೊಲಗಿಸಿ
ವಿಮಲಬೋಧೆಯನರುಹಿ ಪೊರೆದ ದೇಶಿಕಮೂರ್ತಿ ||5||
ಕೃಷ್ಣನಗ್ರಜನಾದ ದೇವೇಂದ್ರನಿಗೆ ಸಾ
ಸಿಷ್ಣುದೀಕ್ಷೆಯನಿತ್ತ ಹಿಮಕರಮೌಲಿ ಪಾಹಿ ||6||
ನಡುಗಣ್ಣ ಕಿಚ್ಚಿನಿಂದ ಬೆಂದ ಹರಿಯಾತ್ಮಜನ
ನೆಡದ ನೇತ್ರದಿ ಸೃಷ್ಟಿಸಿದ ಶಿವೆಯಧಿಪತಿ ||7||
ತಾರಕದನುಜನನುಜೆಯಜಮುಖಿಯಿಂದೆ
ಸೊರೆಯಾಗುವ ಹರಿ ರಮಣಿಯ ಸಲುಹಿದ ||8||
ಘನ ಮುರಿಗೆಯ ಶಾಂತವೀರನಾಮವನಾಂತ
ಮನುರಾಜ ಕಾಯೋ ಶಿವಲಿಂಗೇಶ ಗತಮಾಯ ||9||

ಕಂಡೆನಮ್ಮ ಕರಪೀಠದೊಳಖಂಡ ಜ್ಯೋತಿ
ಕಂಡೆನಮ್ಮ ಕರಪೀಠದೊಳಖಂಡ ಜ್ಯೋತಿಯನು
ತಂಡದ ಕರಣಗಳಂಡಲೆಯನು ಸುಟ್ಟು
ಪಿಂಡದ ಚೇತನವೆನಿಪ ಚಿದಗ್ನಿಯ
ಮಂಡಲತ್ರಯಗಳ ಮೀರಿ ಮೀರಿ ತ್ರಿಕೂಟದ
ಖಂಡಿತವೆರಡೊಂದಾದ ಲಿಂಗವನು ||ಪಲ್ಲವಿ||
ಕಾಯವೆನಿಪ ಕಾಶಿಯೊಳು ನಿರ್ಮಾಯ ಲಿಂಗವನು
ಸಾಯದ ಪೂಜೆಯ ನಡಸುವ ನಿತ್ಯದಿ ಮೋಹೋ
ಪಾಯಗಳೆನಿಸುವ ಸೌಜ್ಞೆಯ
ನಾಯಕನೆನಿಪ ಚಿ ಚಂದ್ರೋದಯ
ಮಾಯಾರಹಿತ ಮಹಲಿಂಗ ಘನ ಲಿಂಗವನು ||1||
ಚಂದ್ರೋದಯದ ಚಲುವಿನೊಳೆ ಸದಾನಂದ ರೂಪವನು
ಹೊಂದಿದ ಪ್ರಭೆ ತಾನೆಂದೆನಿಸುತ ಮನ
ಒಂದೆರಡೇಕವು ವಾಚಕ ಮಾನಸ
ಸಂಧಿಸಿ ನಿಜವೆಂದೆನಿಸುವ ಭಕ್ತರ
ಬಂಧು ಪರಶಿವ ಚಂದ್ರಶೇಖರನ ||2||
ಮೀಟೆನಿಸುವ ಮಿಂಚಿನ ಬೆಳಗು ಲಲಾಟ ನೇತ್ರಗಳು
ಕೂಟದ ಸಮರಸವಾಗಿಹ ಶಾಂತನ
ಬೇಟದಿ ಬೆರದಿಹ ನಿಟಿಲಾರೂಢನ
ಮಾಟದ ಚೇತನದಿಂದೊದಗಿದ ನಿಜ
ದಾಟವ ಪರಮ ಶಿವಲಿಂಗದ ನೆಲೆಯ ||3||

ಪಾಕವ ಮಾಡಿರೊ ಮನವ
ಪಾಕವ ಮಾಡಿರೊ ಮನವ ಪಾಕವ ಮಾಡಿರೊ
ಪಾಕವ ಮಾಡಿರೊ ಪರಮವಿರಕ್ತ
ನಿರ್ಲೇಪ ನಿರಂಜನ ಗುರು ಸಿದ್ಧರಾಮಗೆ ||ಪಲ್ಲವಿ||
ತನುವೆಂಬೊ ಮಡಿಯ ತಂದು
ಮನವೆಂಬೊ ನೀರೆಸರನಿಟ್ಟು
ಅಕ್ಕರವೆಂಬ ಅಕ್ಕಿಯ ಹಾಕಿ
ಮಚ್ಚರವೆಂಬೊ ಮುಚ್ಚಳ ಮುಚ್ಚಿ
ಜ್ಞಾನವೆಂಬೊ ಅಗ್ನಿಯನಿಟ್ಟು
ಕ್ರೋಧವೆಂಬ ಕಟ್ಟಿಗೆ ಹಚ್ಚಿ
ಕುಹಕವೆಂಬೊ ಕುರುಳನಿಟ್ಟು
ಸೊಯಸರುಗಳಿಂದುರುವಿವುರುವಿ ||1||
ಸ್ವಾನುಭವದ ಸೊಪ್ಪನೆ ತಂದು
ತನು ಮಡಿಯ ತುಂಬಿ
ಹುಸಿ ಎಂಬ ಹುಳಿಯ ಹಿಂಡಿ
ಕಾಮವೆಂಬೊ ಕಾರವ ಅರೆದು
ಭೇದವೆಂಬೊ ಬೆಳ್ಳುಳ್ಳಿಯ ಜಜ್ಜಿ
ಜೀವವೆಂಬೊ ಜೀರಿಗೆ ಸುಟ್ಟು
ಆಸೆ ಎಂಬೊ ಸಾಸ್ವೆಯ ಹಾಕಿ
ಏಕತೆ ಎಂಬೊ ಎಣ್ಣೆಯ ಬಿಟ್ಟು
ಸೊಯಸರುಗಳಿಂದುರುವಿವುರುವಿ ||2||
ಅಸ್ತಿ ಚರ್ಮಾಂಬರ ಅಡಿಯಕೆ ಹಾಸಿ
ಮಸ್ತಕದ ಮೇಲ್ಮಡಿಯ ಮಾಡಿ
ತನುಮನವೆಂಬೊ ಸಮರ್ಜನೆಯ ಮಾಡಿ
ಅಷ್ಟಮದದ ಅಡ್ಡಣಿಗೆಯಿಟ್ಟು
ನಡುವಣ ತೋರಣ ಕಮಲಗಳಿಟ್ಟು
ದುರ್ಗುಣವೆಂಬೊ ದೂಪಾರತಿಯಿಟ್ಟು
ನಯನಗಳೆರಡು ಜ್ಯೋತಿಯನಚ್ಚಿಟ್ಟು
ಸದಮಲಾರ್ಪಿತ ದಿಗಂಬರ ಸದ್ಗುರು ಶಿವಲಿಂಗೇಶಗೆ ||3||

ಶಿವಾಧನವೆಂದು ಪಿಡಿವೆ
ಶಿವಾಧನವೆಂದು ಪಿಡಿವೆ ಶ್ರೀಚರಪಾದ | ಎನ್ನ |
ಭವನಿವಾರಣವ ಮಾಡುವ ಪಾದ || ಶಿ || ||ಪಲ್ಲವಿ||
ಧರಣಿಗಾಧಾರವಾಗಿಹ ಪಾದ | ಹರ |
ಶರಣರ ಹೃದಯದೊಳಿಹ ಪಾದ
ಸ್ಮರಣ ದೇಹದ ದಹನ ಪಾದ | ಅಹಂ |
ಕರಿಸಿದಂತವರ ಸಂಹಾರ ಪಾದ || ಶಿ || ||1||
ಭಾಪತಿಯನು ಧರಿಸಿದ ಪಾದ | ಎನ್ನ |
ತಾಪತ್ರಯವ ಕಳವ ಪಾದ
ಕೋಪ ವಿರಹಿತ ಪಾದ | ರತ್ನ |
ದೋಪಾದಿ ಪ್ರಜ್ವಲಿಸುವ ಪಾದ || ಶಿ || ||2||
ಹರಿಯಜರರಸೆ ಸಿಲ್ಕದ ಪಾದ | ಎನ್ನ |
ಕರಕಮಲದೆ ನೆಲಸಿಹ ಪಾದ
ಮರಣವಿರಹಿತವಾಗಿಹ ಪಾದ | ತನ್ನ |
ಮರೆಹೊಕ್ಕವರ ಪೊರೆವ ಪಾದ || ಶಿ || ||3||
ಚಂದ್ರಶೈಲದಿ ಮಂಡಿತ ಪಾದ | ಶರ
ಶ್ಚಂದ್ರ ಸ್ವರೂಪವಾಗಿಹ ಪಾದ
ಇಂದ್ರಾದಿ ಸುರವಂದಿತ ಪಾದ
ಇಂದ್ರಿಯ ನಿಗ್ರಹ ಸಾಕ್ಷಾದ ಪಾದ || ಶಿ || ||4||
ತ್ರಿವಿಧರೂಪವನರುಹಿದ ಪಾದ | ಮಾ |
ನವರಿಗೆ ವರಗಳ ಕೊಡುವ ಪಾದ
ರವುಪುರಸ್ಥಲದಿ ಮೆರವ ಪಾದ | ಗುರು |
ಶಿವಲಿಂಗೇಂದ್ರರ ನಿಜಪಾದ || ಶಿ || | |5||

ಬಸವನ ಪೆಸರನುಸುರುವ
ಬಸವನ ಪೆಸರನುಸುರುವ ಭಕ್ತರ
ವಸವಾಗದು ದೋಷವದೆಂದು
ಪಸರಿಸಿ ಪೇಳುವೆ ಬಸವನ ಸ್ತುತಿಯನು
ವೊಸೆದು ಕೇಳ್ವುದತಿ ಮುದದಿಂದ ||ಪಲ್ಲವಿ||
ಆದಿಗನಾದಿಯೆಂದೆನಿಸಿದ ವೃಷಭನ
ನಾದರದಿಂ ಧ್ಯಾನಿಸುವರಿಗೆ
ನಾದ ಬಿಂದು ಕಳೆರೂಪಿನ ಬಸವನು
ಮೋದದಿಂದ ಮೋಕ್ಷವ ಕೊಡುವ ||1||
ಪಶುಪತಿಯೆರಡನೆಯವತಾರೆನಿಸಿದ
ಬಸವನ ಮಹಿಮೆಯ ವಿಸರವನು
ಕುಶಲದೊಳರಿವುದು ಭಕ್ತರಲ್ಲದೆ
ಪಶುಮಾನವರರಿವರೆ ಮನದಿ ||2||
ಚುನ್ನವಾಡುತಿರುವನ್ಯ ಮತಸ್ಥರ
ಕುನ್ನಿಗಳಂದದೊಳಿರಿಸಿದನು
ಸನ್ನುತ ಮಹಿಮೆಯ ತೋರಿದ ಬಸವನು
ಉನ್ನತ ಬಿಜ್ಜಳನಿದಿರಿನೊಳು ||3||
ಜಂಗಮಮದಿಂಗಿತವರಿದು ಭಕ್ತಿಯನು
ಮಂಗಲಪುರದೊಳಗೆಸಗಿದನು
ಸಂಗಮನಾಥನ ಜಂಗಮರೂಪದಿ
ಪೊಂಗುತೆ ಸಮರಸವಾಗಿಹನು ||4||
ಮಹಿಯೊಳಧಿಕ ರೌಪುರಸ್ಥಳದೊಳತಿ
ಮಹಿಮೆಯಿಂದೆ ಶೋಭಿಸುತಿರುವ
ಅಹಿಭೂಷಣನೆನಿಸಿದ ಶಿವಲಿಂಗನ
ಮಹ ವಾಹನರೂಪವಾಗಿಹನು ||5||

ಲಿಂಗದಪ್ಪಣೆಯಿಂದಲಿ ಬಂದುದನು
ಲಿಂಗದಪ್ಪಣೆಯಿಂದಲಿ ಬಂದುದನು
ಲಿಂಗಕರ್ಪಿಸಿ ಸುಖಿಸೆಲೆ ಮನವೆ ||ಪಲ್ಲವಿ||
ಪರರು ಸುಖಿಸುವುದ ಕಂಡು ಎನಗೇಕೆ
ಪರಮಸುಖ ದೊರಕಲಿಲ್ಲವೆಂದು
ಮರುಗಿ ಕಳವಳಗೊಂಡಡೆ ನಿನಗಿನ್ನು
ಪರಲೋಕಗತಿ ದೊರಕದೊ ಮನವೆ ||1||
ಅನ್ನ ವಸ್ತ್ರಾಭರಣದಿ ಜಂಗಮವ
ಮನ್ನಿಸುತೆ ಸುಖಬಡಿಸುವ ಭಕ್ತರನು
ಚುನ್ನವಾಡುತಲಿರುತಿರೆ ನಿನಗೆ ಬಹು
ಮನ್ನಣೆಯು ದೊರಕೊಳ್ಳದು ಮನವೆ ||2||
ಪೊಡವಿಯೊಳಗುದ್ಭವಿಸುತೆ ಮುನ್ನ ತಾ
ಪಡೆಯದಿರ್ದತಿ ಭೋಗವ ಬಯಸಿ
ನಡುವೆ ಭೋಗಿಪೆನೆಂದೊಡೆ ನಿನ್ನಂಥ
ಕಡುಮೂರ್ಖತನವ ಕಾಣೆ ಮನವೆ ||3||
ದೃಢದಿಂದೆ ಮೃಢನನರ್ಚಿಸಿ ಎಡೆವಿಡದೆ
ಪಡೆಯಬಹುದೆಲೆ ಸುಖವನು ಇದಕಿಂದ
ಪಡೆವ ಯುಕ್ತಿಗಳಿಲ್ಲವು ತಿಳಿಯದಿರೆ
ಪಡೆದಷ್ಟರಲಿ ಸುಖಿಸಲೆ ಮನವೆ ||4||
ಭೂಮಿಗತ್ಯಧಿಕವಾದ ರೌಪುರದ
ಸ್ವಾಮಿ ಶಿವಲಿಂಗೇಶ್ವರನ ಒಡವೆರವ
ಪ್ರೇಮವನು ಕಾಣುವಂಥಾ ಸುಖಕಿಂದ
ಕಾಮಿಸುವ ಪದವಿಲ್ಲವೊ ಮನವೇ | |5||

ಆರತಿಯನು ಬೆಳಗುವೆ
ಆರತಿಯನು ಬೆಳಗುವೆ ನಾ
ವರಗುರು ಮರಿಗೇಂದ್ರನಿಗೆ
ಸಾರ ವಿರಕ್ತಿಯಸ್ಥಲಕೆ ಗುರುವಾದನಿಗೆ ||ಪಲ್ಲವಿ||
ಕೈಲಾಸದೊಳಿರುತಿರುವ
ಶೂಲಿಯ ಪರಮಾವತಾರ
ಭೂಲೋಕದೊಳವತರಿಸಿ ಲೀಲೆಯನು ನಟಿಸುತಲಿ
ಬಾಲೇಂದುಮೌಲಿ ತ್ರಿ
ಮಲ ವಿರಹಿತ ತಾನಾಗಿ
ಕಾಲಾರಿ ಶಾಂತ್ವೀರೇಶರೆಂದೆಸವಾತನಿಗೆ ||1||
ನೆರೆ ಭಕ್ತಿ ಜ್ಞಾನ
ವೈರಾಗ್ಯ ಮುಪ್ಪುರಿಗೂಡಿ
ಶಿರದೊಳು ಮುರಿ ಮಾಡಿ ಮಾರೊರ್ನದಲಿ ಸುತ್ತಿ
ಮೆರವುತಲಿಹ ಕಾರಣದಿ
ಕರುಣಾಕರ ಪೆಸರ್ವಡೆದ
ಮುರಿಗಾಶಾಂತ್ವೀರಸ್ವಾಮಿಯೆಂಬವರಡಿಗಳಿಗೆ ||2||
ಸ್ವಾಮಿಯೆಂಬಭಿಧಾನದಿ
ಪ್ರಮಥರಿಗಧಿಪತಿಯಾಗಿ
ಕಾಮಿತ ಫಲಗಳ ಕೊಡುವ ಮಹಿಮೆಯ ತೋರುತಲಿ
ಕ್ಷೇಮದಿ ರೌಪುರಸ್ಥಳದೊಳು
ರಾಮಣೀಯಮಾಗಿರುತಿರ್ದ
ಪ್ರೇಮದಿ ಶಿವಲಿಂಗೇಶನಿಗೆ ಗುರುವಾಗಿರ್ದನಿಗೆ ||3||

ಜಯ ಜಯತೆಂದು ಬೆಳಗುವೆ
ಜಯ ಜಯತೆಂದು ಬೆಳಗುವೆ ಮಂಗಲಂ
ಜಯ ಜಯತು ಶ್ರೀ ಶಿವಲಿಂಗೇಶನಿಗೆ ||ಪಲ್ಲವಿ||
ಗುರು ಲಿಂಗ ಜಂಗಮ ರೂಪನಿಗೆ | ಸುರು |
ಚಿರವೆನಿಸುವ ನಿರಂಜನಗೆ
ಕರಿವರ ಚರ್ಮಾಂಬರಧರಗೆ | ವರ |
ಕರಿಮುಖ ಶರಜನ್ಮರಯ್ಯನಿಗೆ || ಜ || ||1||
ಎನ್ನಭೀಷ್ಟೆಯ ಕೊಡುವಾತನಿಗೆ | ತನ್ನ |
ಪನ್ನತಿಕೆಯ ತೋರಿಸುವನಿಗೆ
ಸನ್ನುತ ಪೂಜ್ಯದಿಂದಿರುವನಿಗೆ | ಮುನ್ನ |
ಚೆನ್ನ ಷಡಕ್ಷರ ರೂಪನಿಗೆ || ಜ || ||2||
ಅತಿಶಯ ವಿರತಿಯೊಳೆರಕನಿಗೆ | ರತಿ |
ಪತಿಯನು ಮರ್ದಿಸಿದಾತನಿಗೆ
ಕ್ಷಿತಿಯೊಳು ರೌಪುರದಾತನಿಗೆ | ಯತಿ |
ಪತಿಯು ಶ್ರೀ ಗುರು ಶಿವಲಿಂಗನಿಗೆ ||3||

ಎತ್ತುವೆನಾರತಿಯೆತ್ತುವೆ
ಎತ್ತುವೆನಾರತಿಯೆತ್ತುವೆನಾರತಿಯೆತ್ತುವೆನಾರತಿಯ
ನಿತ್ಯನೆಂದಿಸುವ ಮೃತ್ಯುಂಜಯನಿಗೆ | ಎ | ||ಪಲ್ಲವಿ||
ಸುಗುಣ ಸಂತತಿಯುಳ್ಳ ಅನಘ ಸ್ವರೂಪಗೆ | ಎ |
ತ್ರಿಗುಣಂಗಳಿಗೆ ತ್ರಿಮಲಕೆ ವಿರಹಿತನಿಗೆ | ಎ |
ನಿಗಮಕ್ಕಗೋಚರನಾದ ಮಹಾತ್ಮಗೆ | ಎ |
ಝಗಝಗಿಸುವ ಪರಂಜ್ಯೋತಿ ಸ್ವರೂಪಗೆ | ಎ | ||1||
ಜಡವನಿತೆಯನು ಮಸ್ತಕದೊಳು ಪೊತ್ತಗೆ | ಎ |
ಉಡುಪತಿಯನು ಮುಡಿಯೊಳಗೆ ಸೂಡಿದಗೆ | ಎ |
ಎಡದೊಡೆಯೊಳು ಗೌರಿಯ ಮಡಗಿಕೊಂಡಿರ್ದಗೆ | ಎ |
ದೃಢವುಳ್ಳ ಭಕ್ತರ ಭಕ್ತಿಗೊತ್ಸಲನಿಗೆ | ಎ | ||2||
ಪೃಥ್ವಿಯ ಪಂಚಕರ್ತೃತ್ವವನುಳ್ಳಗೆ | ಎ |
ಪೃಥ್ವಿಯ ಪೊತ್ತಂಥ ಶೇಷೋಪವಿತ್ರಗೆ | ಎ |
ಪೃಥ್ವಿಗಧಿಕ ರೌಪುರೊಡೆಯನೆಂದೆಸುವಗೆ | ಎ |
ಪೃಥ್ವಿಯೊಳ್ವರದ ಶ್ರೀ ಶೀವಲಿಂಗ ದೈವಗೆ | ಎ | ||3||

ಜಯ ಜಯ ತುಭ್ಯಂ
ಜಯ ಜಯ ತುಭ್ಯಂ ಮಂಗಲಂ
ಜಯ ಜಯ ತುಭ್ಯಂ ಮಂಗಲಂ
ಮಂಗಲಕರಸೆ ಮನ್ಮನೋಹರಗೆ || ಜ || ||ಪಲ್ಲವಿ||
ಪುಂಡರೀಕಾಕ್ಷನ ಗಂಡನೆಂದೆನಿಸಿದ
ದಂಡಪಾಣಿಯ ಹರ ಕೆಂಡಗಣ್ಣೊಡೆಯ
ಕೆಂಡಗಣ್ಣೊಡೆಯ ಶ್ರೀ ಕೆಂಡಗಣ್ಣೊಡೆಯಗೆ || ಜ || ||1||
ಅಂಬಿಕಾನಾಥ ಹೇರಂಬತಾತ ದಿ
ಗಂಬರನೆನಿಸಿದ ಶಂಭು ಶಂಕರನ
ಶಂಭು ಶಂಕರನ ಶ್ರೀ ಶಂಭು ಶಂಕರಗೆ || ಜ || ||2||
ಭುವನದೊಳ್ ರೌಪುರಧವನೆಂದೆನಿಸಿದ
ನವರಸಿಕತ್ವದ ಶಿವಲಿಂಗೇಂದ್ರಾರ್ಯ
ಶಿವಲಿಂಗೇಂದ್ರಾರ್ಯ ಶ್ರೀ ಶಿವಲಿಂಗೇಂದ್ರಾರ್ಯಗೆ || ಜ || ||3||

ಜಯದೇವ ಜಯದೇವ
ಜಯದೇವ ಜಯದೇವ ಭವವಿರಹಿತನೆ
ಜಯ ಭವವಿರಹಿತನೆ
ಜಯತೆಂದು ಸ್ತುತಿಸಿದೆ ಪರಬ್ರಹ್ಮಾತ್ಮಕನೆ || ಜ || ||ಪಲ್ಲವಿ||
ಹರಿಯಜಸುರೇಂದ್ರಾದಿಗಳಿಂದ ವಂದಿತನೆ
ವರ ಮುನಿಗಳ ಧ್ಯಾನದ ಹೃತ್ಕಮಲದೊಳಿರುತಿಹನೆ
ಪರಮಗತಗಜ ಕಂಠೀರವನಾಗಿ ಮೆರದಿಹನೆ
ಗಿರಿರಾಜನ ಪುತ್ರಿಯ ವರಪತಿಯೆಂದೆನಿಸಿದನೆ || ಜ || ||1||
ಗಗನವೆ ಕುಂತಳ ನಿಗಮ ವಾಜಿಗಳೆಸಗಿದನೆ
ಭಗಣದ ಕಲೆಯನು ತಲೆಯೊಳು ಸೂಡಿಕೊಂಡಿಹನೆ
ಅಗಣಿತ ಮಹಿಮೆಯನ್ನುಳ್ಳ ಸುಗುಣ ಸೌಂದರನೆ
ಜಗದೊಳು ಕರುಣಿಗಳರಸ ಪರಮ ಹರುಷಿತನೆ || ಜ || ||2||
ಜವನ ಮದವನು ಮುರಿದ ಶೂಲ ಹಸ್ತಕನೆ
ಪವನಭುಗ್ಭೂಷಣನಾಗಿರುವ ಪರಶಿವನೆ
ಭುವನಕ್ಕಧಿಕ ರೌಪುರಸ್ಥಲದಿ ನೆಲಸಿಹನೆ
ಶಿವಲಿಂಗೇಂದ್ರಾಖ್ಯಾನದಿಂದೆ ಶೋಭಿಪನೆ || ಜ || ||3||

ಬೆಳಗುವೆನೂ ಶಿವಲಿಂಗನಿಗಾರತಿ
ಬೆಳಗುವೆನೂ ಶಿವಲಿಂಗನಿಗಾರತಿ
ಬೆಳಗುವೆನೊ ಶಿವಲಿಂಗನಿಗಾರತಿ
ಬೆಳಗುವೆ ಬೆಳಗುವೆ
ಬೆಳಗುವೆನೊ ಶಿವಲಿಂಗನಿಗಾರತಿ
ಬೆಳಗುವೆನೊ ಶಿವಲಿಂಗನಿಗಾರತಿ ||ಪಲ್ಲವಿ||
ಆರ್ಥಿಯಿಂದಲಿ ಪೂಜಿಸುವರ ಹೃದಯದಿ
ನರ್ತಿಸುತಿಹ ಸದಮಲರೂಪಗೆ || ಬೆ || ||1||
ಇದಿರಿಟ್ಟು ಪೂಜಿಸಿ ಫಲಪದವಿಗಳ
ಮುದದಿ ಬೇಡುವರಿಗೆ ಒದಗಿಸಿ ಕೊಡುವಗೆ || ಬೆ || ||2||
ಇಷ್ಟಲಿಂಗವನರ್ಚಿಸುವ ಏಕತ್ವದೆ
ನಿಷ್ಠೆಯುಳ್ಳವರೊಡವೆರಸಿಕೊಂಡಾತಗೆ || ಬೆ || ||3||
ನಾನು ನೀನೆಂಬುಭವಯವನಳಿದರ್ಚಿಸಿ
ಧ್ಯಾನಿಸುವವರೊಳು ತಾನು ತಾನಾದಗೆ || ಬೆ || ||4||
ಧರೆಯೊಳಧಿಕ ರೌಪುರದೊಳು ನೆಲಸಿ
ಮೆರವ ಶ್ರೀಗುರು ಶಿವಲಿಂಗ ದೇವೇಶಗೆ || ಬೆ || ||5||

ಎತ್ತಿರೆ ಆರತಿಯ
ಎತ್ತಿರೆ ಆರತಿಯ ಕಾಂತೆಯರೆಲ್ಲ ಸತ್ತು ಚಿತ್ತಾನಂದಗೆ
ಮುತ್ತೂದೆಯರು ಬಂದು ಚಿತ್ತ ಶುದ್ಧದಿ ನಿಂದು
ಮುತ್ತಿನಾರತಿ ಪಿಡಿದೆತ್ತಿ ಮಾರಾಂತಕನಿಗೆ ||ಪಲ್ಲವಿ||
ಬಡನಡವಿನ ಬಾಲೇರು ಮೃಡನ ಪೂಜೆಗೆಡವಿಡದಡಿಯಿಡುತೆ
ಸಡಗರದಿಂದಲಿ ಕಡು ತವಕದಿ ಬಂದು
ದೃಢದಿಂದೆ ಪಿಡಿದೆತ್ತಿ ಸೊಡರಿನಾರತಿಯ ||1||
ಸುಂದರಾಂಗಿಯರೆಲ್ಲರು ಬಂಧುರದಿಂದೆ
ಮಿಂದು ಮಡಿಯನುಡುತೆ ಹೆಂದದಾಭರಣಗಳಂದದೊಳಿಡುತಲಿ
ಇಂದುಧರನಿಗೆತ್ತಿ ಕುಂದಣದಾರತಿಯ ||2||
ಎಸೆವ ಮೂಗುತಿಯನಿಟ್ಟು ಫಣೆಯೊಳಗೆ ಶ್ರೀ ಭಸಿತಧಾರಣೆಗೈವುತೆ
ಕುಸುಮ ಮಾಲೆಗಳ ಕೇಶದೊಳಳವಡಿಸುತೆ
ಪಶುಪತಿಗೆತ್ತಿ ಸೂಸಕದಾರತಿಯ ||3||
ಕನ್ಯೆ ಸ್ತ್ರೀಯರು ಕೂಡುತೆ ಬನ್ನಣೆಯಿಂದೆ
ಚೆನ್ನಾಗಿ ಪಾಡುತಲಿ ಉನ್ನತದಿಂದಲಿ ಸೋಗೆಗಂಗಳೆಯರು
ಪನ್ನಂಗಧರಗೆತ್ತಿ ರನ್ನದಾರತಿಯ ||4||
ಇಳೆಯೊಳಧಿಕವಾದ ರೌಪುರ ಸ್ಥಳದೊಳಗೆ ಶೋಭಿಸುತಲಿಹ
ಅಳಿಕಲೋಚನ ಶಿವಲಿಂಗ ದೇವೇಶಗೆ
ಕಳಸಕುಚೆಯರೆತ್ತಿ ಪಳುಕಿನಾರತಿಯ ||5||

ಯಾಕೆ ಹಂಕರಿಸಿ ಕೆಡುವೆ
ಯಾಕೆ ಹಂಕರಿಸಿ ಕೆಡುವೆ ತಿಳಿದು ನೋ
ಡೀ ಕಪಟ ದೇಹ ನಿಜವೆ ಮರುಳೆ
ಯಾಕೆ ಹಂಕರಿಸಿ ಕೆಡುವೆ ||ಪಲ್ಲವಿ||
ತರುಗುಲ್ಮಲತೆಗಳಾಗಿ ಆಗಿ ಮ
ತ್ತಿರದೆ ಖಗ ಮೃಗ ಕೀಟಕ ಯೋನಿಯೊಳು
ತಿರುಗಿ ಪೂರ್ವದ ಸುಕೃತದ ಫಲದಿಂದ
ದೊರಕಿತೀ ನರಜಲ್ಮವು ಮರುಳೆ ಯಾಕೆ ||1||
ಎಳೆಗೂಸಿನಲ್ಲಿ ಮರವು ಕುವರತನ
ದಲ್ಲಿ ಲೆಗ್ಗೆ ಚಂಡಿನಾಟ ಯವ್ವನದಿ
ಕೆಳದಿಯರ ಕೂಡೆ ನಲಿಕೆ ಮುಪ್ಪಿನೊಳ
ಗೇಳದಾದಿ ಕಡಿಗೆ ಮರಣ ಮರುಳೆ ಯಾಕೆ ||2||
ಮಡದಿ ಮಕ್ಕಳು ನೆಂಟರು ಬಲು ಹೊನ್ನು
ಪೊಡವಿ ಮೊದಲಾದವೆಲ್ಲ ಮರುಳೆ
ಎಡೆಗೊಂಬದಿಲ್ಲವಾಗಿ ಶಿವಲಿಂಗ
ದೊಡೆವೆರೆವೊ ಬುದ್ಧಿಗಲಿಯೊ ಮರುಳೆ ||3||

ಬಿಂಕವೇತಕೆ ನಿಮಗೆ
ಬಿಂಕವೇತಕೆ ನಿಮಗೆ ಬಿನುಗುಗಳಿರಾ
ಕೊಂಕುವಿಲ್ಲದ ಗೆಲಿದ ಕೋವಿದರ ಕೂಡೆ ||ಪಲ್ಲವಿ||
ಹೋಗುವಿಗೆ ಗಡ್ಡವಿರೆ ಹಿರಿಯತನ ವದಕಹುದೆ
ಭೂತಕೆ ಜಡೆಗಳಿರೆ ಋಷಿಯದಹುದೆ
ಕೋತಿಗೆ ಹನುವಿರಲು ಹನುಮಂತಗೆಣೆಯಹುದೆ
ಜಾತಿ ಸೂತಕರು ನಿರ್ಜಾತರಿಗೆ ಸಮವೆ ||1||
ಕಾಮದೂಟವನುಂಡು ಕ್ರೋಧ ಮಂಚದೊಳೊರಗಿ
ಆ ಮಹ ಲೋಭ ಮಾನುನಿಯನಪ್ಪಿ
ತಾಮಸ ಮೋಹ ತಾಂಬೂಲಮಂ ಸವಿದು ಮದ
ನ ಮೋಹದೊಳು ಮತ್ಸರನು ಮಂತ್ರರಿರಾ ||2||
ಕನಕ ವನಿತಾವನಿಗಳೆ ಪ್ರಾಣವಾಗಿರ್ದು
ದಿನಚರಿಯ ಮಿಂಚುಬುಳು ಪುರಿಡಿಪಂತೆ
ಘನ ವಿರತರೊಳಗಾವಧಿಕವೆಂದೆನಲು ಬುಧ
ವಿನುತ ಶಿವಲಿಂಗೇಶನಳಿಸದಿಹನೆ ಬಿಂಕವೇತಕೆ ||3||

ನಿದ್ರೆಯ ಮಾಡಿದನೇ
ನಿದ್ರೆಯ ಮಾಡಿದನೇ ಪರತರ ಮುದ್ರೆಯ ನೋಡಿದನೇ
ಸಿದ್ಧವಾಗಿ ಶಿವಲಿಂಗದ ಮನೆಯೊಳು
ನಿರ್ಧರ ಪ್ರಣಮದ ಮಣಿಯ ಪೀಠದಿ ನಿದ್ರೆಯ ||ಪಲ್ಲವಿ||
ಆಧಾರದ ಮೇಲೆ ಅರುವಿನ ವೇದಿಕೆಗಳ ನೋಡಿ
ಹಾದಿಯಿಲ್ಲದ ಹವಣಿನ ಮನೆಯೊಳು
ಶೋಧಿಸಿ ಪುಷ್ಪದ ಮಣಿಮಯ ಪೀಠದಿ ನಿದ್ರೆಯ ||1||
ನೀಲಮೇಘದ ನಡುವೆ ಮಿಂಚಿನ ಸಾಲಿನ ಸರಪಳಿಯು
ಜ್ವಾಲನೇತ್ರಗೆ ಧರಿಸುವೆನೆನುತಲಿ
ಬಾಲ ಕೋಟೆಯ ಕೀಲಿನ ಕೊನೆಯೊಳು ನಿದ್ರೆಯ ||2||
ಹವಳದ ಮಂಟಪದಿ ದ್ವೀಪಿಪ ಪ್ರವಿಮಳದಗ್ರದೊಳು
ಧವಳಿನ ಕರ್ನಿಕೆ ಮಧ್ಯದ ಕೊನೆಯೊಳು
ಶಿವ ಸೋಹಂಮೆಂಬ ಅವಿರಳ ಪದದೊಳು ನಿದ್ರೆಯ ||3||
ಮಾನಸ ನಭೆಯೊಳು ತಿರೆಯು ಪಸರಿಸೆ ಭಾನುಮಂಡಲ ಉದಿಸೆ
ತಾನೆಂದೆಂಬುವ ಲತೆಗಳ ಸುಡುತಲಿ
ಗ್ನಾನದ ಮಾವಿನ ವೃಕ್ಷದ ಕೊನೆಯೊಳು ನಿದ್ರೆಯ ||4||
ಆರು ಕಾಲಿನ ಮಂಚ ಅದಕೆ ಸೇರಿದ ಸರಪಳಿಯು
ಧೀರತನದಿ ಪಿಡಿದು ಪೀತಾಂಬ್ರದ
ಪರ ವಸ್ತುವ ಹೊದೆದು ಆ ಸುಖ ನಿದ್ರೆಯ ||5||

ಸಾಂಬ ಶಿವಾಯ ತೇ
ಸಾಂಬ ಶಿವಾಯ ತೇ ಮಂಗಳ ರವಿ
ಬಿಂಬ ವಿರಾಜ ತೇ ಮಂಗಳಂ ||ಪಲ್ಲವಿ||
ಕನಕಾದ್ರಿ ವರ ಚಾಪ ಕಮನೀಯ ರೂಪ
ಭವದಿ ನಿಶ್ಶಂಕಾಯವಮಾಧೇಯ
ಸನಕಾದಿ ವಂದ್ಯಾಯ ತತ ಮುನಿವಂದ್ಯಾಯ
ದಿನಕರಜೆ ಹಿತಾಯ ಮಂಗಳಂ ||1||
ಪಾದನೇತ್ರನೆ ಪಶುಪಾಶ ಲವಿತ್ರಾಯ
ಚಂದ್ರ ಚೋಜಿತ ಚರಿತಯುತೇ
ನಾದ ವಿನೋದಾಯ ನಗಜಾಮನೋಹರಾಯ
ಶ್ರೀ ವೈಶ್ಯಕಾಯ ಜಯಮಂಗಳಂ ||2||
ಚಂದ್ರಕಲಾಪಾಯ ಚರೂನಲಪಾಯ
ರುಂದ್ರಸುಖವಹಾಯ ಭುಗಪಹಾಯ
ತಂದ್ರ ವಿರಹಿತಾಯ ಶತವೇಷ ರೂಪ
ಚಂದ್ರಪಥಕಾಯ ಮಂಗಳಂ ||3||
ಗಜಮುಖ ಜನಕಾಯ ಗನಕುಲ ತಿಲಕಾಯ
ಭುಜಗೇಂದ್ರ ಭೂಷಾಯ ಪುರೋಹಿತೋಶಾಯ
ತ್ರಿಜಗದಮನ ಕಾಯ ತ್ರಿಪುರದಹನ ಕಾಯ
ಸುಜನ ಸು ಸುಖಾಯ ಜಯಮಂಗಳಂ ||4||
ಪಿಂಗಳ ಜಟಾಲಯ ಪೀನ ನಿಟಿಲಾಯ ಮಂಗಳ
ಶರನಾಮ ಮಂಜುಳಾಯ
ಅಂಗಜಹರಣಾಯ ಅತಿ ಕರಣ ಶಿವ
ಲಿಂಗ ಚಿದಂಗಾಯ ಮಂಗಳಂ ||5||

ಶೋಭಾನವೆ ಶೋಭಾನವೆ
ಶೋಭಾನವೆ ಶೋಭಾನವೆ ಶೌರಿವಿನುತ ವಿಭವ ಕುಮಾರಗೆ
ತಾರಕ ಗಜ ಮೃಗರಾಜನಿಗೆ ||ಪಲ್ಲವಿ||
ತಾರೆಗಳರಸನ ಸೂಡಿದಗೆ
ವಾರಣಮುಖ ಸಹೋದರನಿಗೆ ವರ
ಗೌರಿಯ ಮೋಹದ ತನುಜನಿಗೆ ||1||
ನವಿಲನೇರಿದನಿಗೆ ನವರಸಗೆ
ಭುವನ ನಿಕರ ಪರಿಪಾಲನಿಗೆ
ಜವನ ಮದವ ಮುರಿದವಿರಳ ಸೀಲಗೆ
ಕವಿಕುಲ ಕಮನೀಯ ಸುರಭೂಜಗೆ ||2||
ದೇವಸೇನಾ ಪ್ರಾಣವಲ್ಲಭಗೆ
ಕೋವಿದ ನರಪತಿಯಳಿಯನಿಗೆ
ಪಾವನ ಚರಿತಗೆ ಪಟು ಶಿಖಿಭವನಿಗೆ
ಮಾವರ ಮುಖಸೇನಾಪತಿಗೆ ||3||
ಶರಧಿ ಗಂಭೀರಗೆ ಶಾಶ್ವತಗೆ
ಶರವಣಜಾತಗೆ ಶಬರಾರಿಗೆ
ಒರೆಯಿಲ್ಲದಾತಗೆ ಜನನವಿದೂರಗೆ
ಕರುಣಕಟಾಕ್ಷಗೆ ಕಳರವಗೆ ||4||
ಮಂಗಳ ಮಹಿಮಗೆ ಮಾನಿತಗೆ
ಪುಂಗವ ಮಿತ್ರಗೆ ಪಟುರುಚಿಗೆ
ತುಂಗ ಪರಮ ಶಿವಲಿಂಗೇಶ್ವರನಿಗೆ
ಪೊಂಗುವ ಲವಲಿಯ ರಮಣನಿಗೆ ||5||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಹೊನ್ನಕವಿಯ ತತ್ವಪದಗಳು

ಭೂಪತಿಯದಾಗಿ
ಭೂಪತಿಯದಾಗಿ ಪುಟ್ಟವದರಿಂದೇನು ಸ್ವ
ರೂಪ ಜ್ಞಾನವಿಲ್ಲದುದೇನು ಗುರುವೇ ||ಪಲ್ಲವಿ|
ಸುಗುಣ ಕೇಳುವುದಿನ್ನು ಜಗವರಿಯೆ ಪೇಳುವೆನು
ಮಿಗೆ ತಮೋಗುಣದಿ ಮಾಡಿದ ಪೂಜೆಯಿಂದಾದ
ವಿಗಡ ತಾನೆನಿಸಿ ರಾಜ್ಯವನಾಳಿ
ನು ತಮವೆರೆದ ಜ್ಞನೆನಿಸೀ ||1||
ಭೂಮಿಪತಿಯಹೆನೆಂದು ಕಾಮದಿಂದಲಿ ತಾನು
ಆ ಮಹೇಶನ ರಜೋಗುಣದಿಂದ ಪೂಜಿಸಲು
ಈ ಮಹಿಯನಾಳುತಿಹ
ಮಹಾ ಜ್ಞಾನವಜ್ಞಾನದೊಡಗೂಡಿ ||2||
ಪಿರಿದಾದ ಸತ್ವಗುಣವೆರೆದು ಪೂಜೆಯ ಮಾಡೆ
ಧರೆಯ ಸಾಮ್ರಾಜ್ಯ ವಿಭವದಲಿ ಸುಖಿಯೆನಿಸಿ
ಸರಿಯಿಲ್ಲವಿವನ ಗುಣಕೆಂದು ವಿಭವದಿಂದಲಿ
ಪರಮ ಪಾವನನಾಗಿ ತಾನೆ ಗಂಗೇಶನಾಗಿಹನು ||3||

ಗುರುವೆ ನಿಮ್ಮಯ
ಗುರುವೆ ನಿಮ್ಮಯ ಕರುಣವಡೆದ ಸುವಿಚಾರಿಗಳಿ
ಗರಿವು ದಿನದಿನವು ಪೆಚ್ಚುತಿರೆ ಪೂರ್ಣರಹರು ||ಪಲ್ಲವಿ||
ಪರಮ ಪುರುಷನೆ ಕೇಳು ಕರುಣವು
ಡ ನೊಡ ನೊಣಗುವಂತೆ
ವರಗುರುವಿನುಪದೇಶದರ್ಕನುದಯಿಸಲಾಗ
ಕರಣಗುಣ ಪಂಕಜಕೆ ಹರುಷವಿಹುದು ಕ್ರಮದಿ ||1||
ಬಿದಿಗೆಯ ದಿನದ ಚಂದ್ರನುದಯವಾಗಲು ತಮವು
ಮುದದಿ ಗುರುಜನವೆಂಬಿಂದು ಉದಯಿಸಲಾಗ
ಹೃದಯದಜ್ಞಾನತಮ ಪರೆಪರೆವುತ್ತಿಹುದು ||2||
ಭ್ರಮೆಯಿಂದಲಿರುವ ಮಾನವನಿಗುವುಷದಲಿಯೆ
ಕ್ರಮದಿಂದ ತಿಳಿದು ತಾನೆಯಾತ್ಮಜ್ಞಾನದಿಂದ
ಭ್ರಮೆಯಳಿದು ಮುದದಿ ಗಂಗೇಶನಾಗಿಹನು |3||

ಅಲ್ಲ ಅಲ್ಲನೆಂದು ಗುರುವೆ
ಅಲ್ಲ ಅಲ್ಲನೆಂದು ಗುರುವೆ ನಿಮ್ಮ ಬರಿದೆ
ಬಲ್ಲಿದ ಮುಸಲಮಾನರು ಕರೆವರದೇಕೊ ||ಪಲ್ಲವಿ||
ಜಗವ ಪುಟ್ಟಿಸುವ ಜಗದೊಳಗೆ ಬೆರೆವನಲ್ಲ
ಬಗೆಬಗೆಯ ಭಜನೆಯ ಬಲೆಗೆ ಸಿಕ್ಕುವನಲ್ಲ
ಗಗನಾದಿ ಪಂಚಭೂತದ ರೂಪು ತಾನಲ್ಲ
ಮಿಗೆ ತನ್ನನರಿವರ ಮನಕೆ ಗೋಚರನಲ್ಲ
ಸುಗುಣಾದಿ ರೂಪನಲ್ಲ ಸಕಲರೊಳು ಬೆರಸಿಪ್ಪನಲ್ಲ
ನಿಗಮ ವಿದೂರನಲ್ಲ ವಿಚಾರಿಸೆ ಅನ್ಯನಲ್ಲ ||1||
ಭೇದವಾದಿಗಳ ತರ್ಕಕೆ ನಿಲುಕುವನಲ್ಲ
ಮೇದಿನಿಯೊಳು ಬಿಂದು ಕಳೆಗಳ ರೂಪು ತಾನಲ್ಲ
ಭೇದಿಸಿದಜಹರಿಗಳಿಗೆ ಕಾಣಿಪನಲ್ಲ
ಚೋದ್ಯದಿಂ ಭಾವಿಪರಿಗೆ ವೇಧಿಸಿ ತೋರ್ಪನಲ್ಲ
ಬೋಧರೂಪಕ ನೀನಲ್ಲ ಬೋಧಿಪಗುರುವಿರಲು ನೀನಲ್ಲ
ಮೇದಿನಿಯೊಳು ಬೆಳಕಿನಾ ಬಗೆಗೆ ನಿಲ್ಕುವಲ್ಲ ||2||
ಕರಣೇಂದ್ರಿಯಂಗಳ ಕಾಲಾಟದವನಲ್ಲ
ಪರಿದಾಡುತಿಹ ದಶವಾಯು ರೂಪನಲ್ಲ
ಮೆರೆವಷ್ಟಮದಗಳ ಹಮ್ಮಿನವನೇ ಅಲ್ಲ
ಪೊರೆಯಾಗಿ ತೋರುವ ಸಪ್ತವ್ಯಸನವವನಲ್ಲ
ಅರಿಷಡುವರ್ಗನಲ್ಲ ತಾಪತ್ರಯಭ್ರಮಿತನಲ್ಲ
ನೆರೆಏಕವಾಗಿಹಪೀಠತ್ರಯದೊಳು ಗಂಗೇಶ ನೀನಲ್ಲ ||3||

ವೃಕ್ಷವನು ಕಂಡೆ ನಾನು
ವೃಕ್ಷವನು ಕಂಡೆ ನಾನು ಘನಾನಂದವೃಕ್ಷವನು ಕಂಡೆ ನಾನು
ಅಕ್ಷಯದ ಗುರುವರ್ಣ ಬೀಜದಿಂದೊಗೆದ
ಮಹಾ ಕಲ್ಪವೃಕ್ಷವನು ಕಂಡೆ ನಾನು ||ಪಲ್ಲವಿ||
ವರ್ಣನಾಲ್ಕಕ್ಕುಂ ವೃಕ್ಷಮೊದಲೆನಿಸಿ ತೋರುತಿಹ
ವರ್ಣದಶವೆಂಟು ಶಾಖೆಗಳಾಗಿ ಎಸೆವುತಿಹ
ವರ್ಣಶತವೊಂದರಿಂ ಪತ್ರಪುಷ್ಪವು ಕಾಯಿ
ವರ್ಣಪಣ್ಣುಗಳಿಂದೊಪ್ಪುತಿಹ
ವೃಕ್ಷವನು ಕಂಡೆ ನಾನು ||1||
ಕಾಯಿಗಳ ರುಚಿಗೆ ಸಿಲುಕಿದುದು ತ್ರೈಜಗವೆಲ್ಲ
ಕಾಯಿಗಳ ರುಚಿಯ ಪೊಗಳಿದವು ಶ್ರುತಿತತಿಯೆಲ್ಲ
ಕಾಯರುಚಿಯಿಂದವೆ ಮದ ಮೋಹ ಜರೆ ಮರಣ
ಕಾಯನೇಕಂಗಳಿಂದ ಶೋಭಿಸುವ
ವೃಕ್ಷವನು ಕಂಡೆ ನಾನು ||2||
ತನಿವಣ್ಣರುಚಿಯನರಿವವರಾರು ಆ ರುಚಿಯ
ನನುದಿನವು ಸೇವಿಸಲು ಮನ ಜ್ಞಾನಭಾವಗಳ
ಘನಮಹಿಮ ಗಂಗೇಶನೊಳಗೇಕವನೆ ಮಾಳ್ಪ
ಚಿನುಮಯದ ಫಲವನುಳ್ಳ ನಿಜಾನಂದ
ವೃಕ್ಷವನು ಕಂಡೆ ನಾನು ||3||

ಇರದಿರದು ಗುರು ಕರುಣವಡೆದ
ಇರದಿರದು ಗುರು ಕರುಣವಡೆದ ಕರುಣದಿ ಮಲಿನ
ಪರೆಪರೆದು ಪೋಗುವುದು ದಿನದಿನಕೆ ತಾನೆ ||ಪಲ್ಲವಿ||
ಅರಸೊಲಿದ ಮನುಜರಲ್ಲಿ ದಾರಿದ್ರ್ಯ ಬಿಡುವಂತೆ
ಪರುಷ ಸೋಂಕಲು ಲೋಹಗುಣವಡಗುವಂತೆ
ಉರಿಮುಟ್ಟಲರಳೆಯೊಂದಿರವು ತಾ ಕೆಡುವಂತೆ
ಪಿರಿದು ಮಳೆ ಪೊಯ್ಯೆ ಧೂಳಡಗುತಿರ್ಪಂತೆ ||1||
ಖಗಮಂತ್ರಕಾಗ ಸರ್ಪವಿಷವದಿಳಿವಂತೆ
ಮಿಗೆ ಉದಕದೊಳು ಬೆರೆದ ಮಧುವದೆಂತಂತೆ
ಸೊಗಯಿ ಪೆಚ್ಚರದೋರೆ ನಿದ್ರೆಯೊಳಸರಿವಂತೆ
ನೆಗಳ್ದಾಗಸದೊಳಿರ್ದ ಮೇಘ ಪರೆವಂತೆ ||2||
ತವೆ ಉದಕಸಂಯೋಗವಾದಗ್ನಿ ಪೋಪಂತೆ
ಪವನನೊಳಗೊಂಡಿರ್ದ ಗಂಧವಿರದಂತೆ
ಭುವನದೊಳು ತುಂಬಿ ತೋರಿದ ಧೂಮವಳಿವಂತೆ
ಶಿವಗಂಗಾಧರನಾಗೆ ಎಮಗೆ ಭವವಿಲ್ಲವಂತೆ ||3||

ಜಗವೆಲ್ಲ ಭಜಿಪುದದೊಂದು ಲಿಂಗ
ಜಗವೆಲ್ಲ ಭಜಿಪುದದೊಂದು ಲಿಂಗ
ಮಿಗೆ ಹರಿಯಜರು ಭಾವಿಪುದೊಂದೆ ಲಿಂಗ ||ಪಲ್ಲವಿ||
ಆರು ಮತಗಳೊಳು ಬೇರೆ ಬೇರೆಯಾಗಿ
ಸೇರಿ ಮುಕ್ತಿಯ ನೀವುದೊಂದೆ ಲಿಂಗ
ತೋರುವೀ ಮಹಿಯೊಳು ಸ್ತುತಿಸಿ ಫಲವ ಬೇಡ
ಲಾರೈದು ಫಲವೀವುದೊಂದೆ ಲಿಂಗ ||1||
ವರ ಕಾಶಿ ಮೊದಲಾದುರುತರ ಕ್ಷೇತ್ರದಿ
ನೆರೆ ಪೂಜೆವಡೆದಿಹುದೊಂದೆ ಲಿಂಗ
ಸುರನರನಾಗರ್ಕಳೊಳಗಾದವರಿಗೆಲ್ಲ
ಪರಿಪರಿಯ ವರವೀವುದೊಂದೆ ಲಿಂಗ ||2||
ಗುರು ರೂಪು ತಾನಾಗಿ ಪಿರಿದಾದ ಬೋಧೆಯಿಂ
ದರುಹಿಕೊಳ್ಳುತ್ತಿಹುದೊಂದೆ ಲಿಂಗ
ಮೊರೆಯಿಲ್ಲ ಯೋಗಿಗಳಿರವು ತಾನೆಯಾಗಿ
ಸ್ಥಿರವಾದ ಗಂಗಾಧರನೊಂದೆ ಲಿಂಗ ||3||

ನೆರೆ ಜಂಗಮದ ಸೇವೆಯನು
ನೆರೆ ಜಂಗಮದ ಸೇವೆಯನು ತಪ್ಪದನುದಿನ ಮಾಡಲಾಗಿ
ಅರಿವುತಾ ಜಂಗಮವೆನಿಸಿ ತೋರುವುದಾತ್ಮ ಭಕ್ತಿಗಾಗಿ ||ಪಲ್ಲವಿ||
ಪಿರಿದಾದ ಜ್ಞಾನಜಂಗಮಕಾರಾಧನೆಯನು ಮಾಡಬೇಕು
ವರ ಅಶನ ಭಿಕ್ಷವನಾರು ಮುಖದಿಂದ ನೀಡಬೇಕು
ಸುರುಚಿರ ಷಡ್ರುಚಿಗಳ ತಪ್ಪದಾವಾಗ ನೀಡಬೇಕು
ಪೊರೆಯಿಲ್ಲದೆ ತಾನು ಕಂಡದೆಲ್ಲವ ತಂದು ನೀಡಬೇಕು ||1||
ಚೆನ್ನಾಗಿ ಮುಟ್ಟಿ ತಂದುದ ವಂಚನೆಯಿಲ್ಲದೆ ನೀಡಬೇಕು
ಮುನ್ನ ತಾ ಕೇಳಿದಾಕ್ಷಣ ತಡಮಾಡದೆ ನೀಡಬೇಕು
ಭಿನ್ನವಳಿದು ತೃಪ್ತಿಯಾಗುವಂದದಿ ತಾನು ನೀಡಬೇಕು
ಉನ್ನತ ತ್ರಿಗುಣವಳಿದು ತಾಂಬೂಲವ ನೀಡಬೇಕು ||2||
ಪೊರತಪ್ಪ ಸುಖವಹ ವಸ್ತುವೆಲ್ಲವ ತಂದು ನೀಡಬೇಕು
ಎಸೆವಾಭರಣ ವಸ್ತುಗಳು ಬರೆ ಮರೆಯದೆ ನೀಡಬೇಕು
ಹಸನಾದ ನುಡಿಗಳಿಂದಾನಂದವಹ ಮಾತನಾಡಬೇಕು
ಶಶಿಧರ ಗಂಗೇಶ ಜ್ಞಾನಜಂಗಮ ಪೂಜೆ ಮಾಡಬೇಕು ||3||

ಗುರು ಪಾದೋದಕವೆ
ಗುರು ಪಾದೋದಕವೆ ಚಿದ್ರಸವೆಂದು ಪಾನವ ಮಾಡಲಾಗಿ
ಶರೀರವೆಲ್ಲ ತೀರ್ಥಮಯವಾಗಿದೆ ತಾನು ನೋಡಲಾಗಿ ||ಪಲ್ಲವಿ||
ಪಿರಿದಾದ ಅಂಗಣದೊಳೆಸೆವುತಲಿದೆ ಜ್ಞಾನತೀರ್ಥವಾಗಿ
ನೆರೆ ಸರ್ವಾಂಗದೊಳರಿವ ಅರಿವೆ ಜ್ಞಾನ ತೀರ್ಥವಾಗಿ
ಉರೆ ಬುದ್ಧಿ ನಿರ್ಮಲವಾಗಿರುತಲಿಹುದು ಜ್ಞಾನತೀರ್ಥವಾಗಿ
ಅರಿದಾದ ಸತ್ಯ ತಾನೊಂದೆ ನಿಷ್ಕಲ ಜ್ಞಾನ ತೀರ್ಥವಾಗಿ ||1||
ಘನವಾದ ಅರಿವರ್ಗಗಳ ಕೆಡಿಸುವುದು ಜ್ಞಾನ ತೀರ್ಥವಾಗಿ
ತನಗುಳ್ಳ ಹಮ್ಮು ಮಮತೆಯಳಿವುದು ಜ್ಞಾನ ತೀರ್ಥವಾಗಿ
ತನುವನಾವರಿಸಿರ್ಪ ಮದ ನಿಲುವುದು ಜ್ಞಾನ ತೀರ್ಥವಾಗಿ
ಇನಿತನಿತೆನಲೇಕೆ ಕರ್ಮಕ್ಷಯವು ಜ್ಞಾನ ತೀರ್ಥವಾಗಿ ||2||
ಕಾಲಕತೀತವೆನಿಸಿ ತೋರುತಿದೆ ಜ್ಞಾನ ತೀರ್ಥವಾಗಿ
ಬಾಲಚಂದಿರನಂತೆ ಹೆಚ್ಚುತಲಿದೆ ಜ್ಞಾನ ತೀರ್ಥವಾಗಿ
ಮೇಲೆ ಪ್ರಕಾಶದಿಂದೊಪ್ಪುತಲಿದೆ ಜ್ಞಾನ ತೀರ್ಥವಾಗಿ
ಲೀಲೆಯಿಂ ಗಂಗೇಶನಾಗಿರುತಿದೆ ಜ್ಞಾನ ತೀರ್ಥವಾಗಿ ||3||

ಗುರುವಿನ ಪ್ರಸಾದ
ಗುರುವಿನ ಪ್ರಸಾದ ವಾಕ್ಯದಲಿ ತಮವು
ಪರೆದು ಪೋಗಲು ಜ್ಞಾನ ಪರಮ ಪ್ರಸಾದ ||ಪಲ್ಲವಿ||
ಲಿಂಗಕರ್ಪಿಸಿ ಸವಿದ ಪ್ರಸಾದದಿಂದ
ಲಿಂಗ ಮೊದಲು ಸಪ್ತಧಾತುಗಳ ಪ್ರಸಾದ
ಸಂಗರಹಿತ ಕರುಣ ಪ್ರಸಾದವೆಸೆಯೆ
ಹಿಂಗದಿಂದ್ರಿಯ ಮುಖವೆಲ್ಲ ಲಿಂಗ ಪ್ರಸಾದ ||1||
ಕೊಂಡುದೆಯಾನಂದಪ್ರಸಾದ ಕೂಡೆ
ಕೊಂಡುದೆಲ್ಲ ನಿರ್ಗುಣವದಾದಿ ಪ್ರಸಾದ
ನಿಂದುದದೆ ಸತ್ಯಪ್ರಸಾದ ನುಡಿಯ
ಖಂಡಿತವಹ ಸೊಗಸೀವ ಕರುಣ ಪ್ರಸಾದ ||2||
ಹೊರಗೊಳಗಭೇದಪ್ರಸಾದಮಯವು
ಪರಿದಾಗಿ ತೋರುತಿಹ ಸಗುಣ ಪ್ರಸಾದ
ನೆರೆ ಸತ್ಯ ಸಿದ್ಧಿಪ್ರಸಾದ ನೋಡೆ ವರ
ಹರ ಗಂಗಾಧರನಾಗೆ ಪೂರ್ಣ ಪ್ರಸಾದ ||3||

ಧರಿಸಿಕೊಳ್ಳಿರೊ ಚಿದ್ವಿಭೂತಿಯ
ಧರಿಸಿಕೊಳ್ಳಿರೊ ಚಿದ್ವಿಭೂತಿಯ
ಪಿರಿದಾದ ಕಾಮ ಬಾಧೆಗಳಿನಿತಿಲ್ಲ ||ಪಲ್ಲವಿ||
ಅಂಗದೊಳಾವಾಗ ಇರುವ ವಿಭೂತಿಯ
ಲಿಂಗ ತಾನಾಗಿ ರಾಜಿಪ ವಿಭೂತಿಯ
ಸಂಗವಿಲ್ಲದ ನಿರಂಗ ವಿಭೂತಿಯ
ಭಂಗವಳಿದ ಜ್ಞಾನ ಹಸ್ತದಿಂ ಧರಿಸಿ ||1||
ಮೂಲಹಂಕಾರವ ಮುರಿವ ವಿಭೂತಿಯ
ಕಾಲಕರ್ಮವ ತೊಲಗಿಪ ವಿಭೂತಿಯ
ಲೀಲೆಯಿಂ ಧರಿಸಲವಿಭೇದ ಭೂತಿಯ
ಮೇಲಾದ ಸದ್ಭಾವ ಹಸ್ತದಿಂ ಧರಿಸಿ ||2||
ಧರಿಸೆ ವಿಭುತ್ವವ ಕೊಡುವ ವಿಭೂತಿಯ
ನಿರವಯ ನಿರ್ಗುಣವಜ ವಿಭೂತಿಯ
ಅರಿತೊಮ್ಮೆ ಧರಿಸಲು ಕೆಡದ ವಿಭೂತಿಯ
ವರ ಗಂಗೇಶನಾದ ನಿರಂಜನ ಹಸ್ತದೊಳು ||3||

ಏಕಮುಖ ರುದ್ರಾಕ್ಷಿ
ಏಕಮುಖ ರುದ್ರಾಕ್ಷಿ ತನ್ನೊಳಿರಲು
ಏಕಮುಖ ರುದ್ರಾಕ್ಷಿ ದೊರಕದೆನಲೇಕೊ ||ಪಲ್ಲವಿ||
ಮನವೆಳಸಿದಂತೆ ಪರಿದಾಡುವಗೆ ಪಲವು ಮುಖ
ಘನವರಿಯದಿರುವ ಮರುಳಗೆ ಪಲವು ಮುಖ
ತನುಮರಣಕಂಜಿ ಕಳವಳಿಸುವಗೆ ಪಲವು ಮುಖ
ಅನುವಾಗಿ ಅರಿವರ್ಗಕಳುಕದಿರಲೇಕಮುಖ ||1||
ಪಶು ಭಾವದಿಂ ತನ್ನನರಿಯದಿರೆ ಪಲವುಮುಖ
ಒಸೆದು ಫಲಪದವ ಬಯಸಲು ಪಲವು ಮುಖ
ವಿಷಯದೊಳು ಮುಳುಗಿ ಮಾಯೆಗೆಸಿಕ್ಕೆಪಲವು ಮುಖ
ಕುಶಲ ತಾನಾಗಿ ಗುರುಪದವಿಡಿಯಲೇಕಮುಖ ||2||
ನೆರೆ ಹಮ್ಮು ಮಮತೆಗೊಳಗಾಗಿರಲು ಪಲವು ಮುಖ
ತರುಣಿಯರ ಬಲೆಗೆ ಬೀಳಲು ಪಲವು ಮುಖ
ತಿರುತಿರುಗಿ ಬರುವ ಕರ್ಮವ ಮಾಡೆ ಪಲವು ಮುಖ
ವರಗಂಗೇಶನೊಳೇಕವಾಗಿರಲದೇಕಮುಖ ||3||

ನುಡಿದ ನುಡಿಯೆಲ್ಲ ಮಂತ್
ನುಡಿದ ನುಡಿಯೆಲ್ಲ ಮಂತ್ರಗಳಾಗಿ ತೋರುತಿವೆ
ನಡೆ ನುಡಿ ಚರಿತ್ರವೊಂದಾದ ಮಹಿಮನಿಗೆ ||ಪಲ್ಲವಿ||
ತನು ಮಂತ್ರವಾಗಿಹುದು ಸಂಶಯವದಿಲ್ಲದೆ
ಅನುನಯದ ಕರಣವಿಂದ್ರಿಯ ಮಂತ್ರವಹುದು
ತನಗೆ ತೋರಿದ ತೋರಿಕೆಗಳೆಲ್ಲ ಮಂತ್ರಮಯ
ಘನತರವ ಲಿಂಗಮುಖವರಿತು ನುಡಿವುದರಿಂದ ||1||
ಭವಬಂಧನಗಳನುಳಿದು ಶಿವನೊಳಡವೆರೆದಿರಲು
ಭುವನದೊಳಗರಿದೆನಿಸಿ ನಡೆವುತಿರಲಾಗ
ಹವಣಿರಿಸದ ಕಾಲಕರ್ಮವ ಗೆದ್ದು ನಿಂದಿರುತ
ಅವಿರಳದ ಲಿಂಗಮುಖವಾಗಿ ನುಡಿವುದರಿಂದ ||2||
ಸುಖ ದುಃಖವೆರಡಳಿದು ಸುಖವೆಯಾಗಿಹನಾಗಿ
ಸಕಲ ನಿಷ್ಕಲವೇಕವೆಂದು ತಿಳಿದಿರಲು
ಅಕಟ ಮಹದರಿವೆ ತನ್ನೊಳಗೆಸೆವುತಿರಲಾಗಿ
ಪ್ರಕಟವಹ ಗಂಗೇಶ ತಾನೆ ನುಡಿವುದರಿಂದ ||3||

ಅಮೃತ ಗಾನವನೋದಿ
ಅಮೃತ ಗಾನವನೋದಿ | ಯು ಮೃತ ಭಯಕಂಜುತ್ತ
ಅಮೃತರಾಗದರ ಪಂಡಿತರೆಂಬರೆ ||ಪಲ್ಲವಿ||
ಅಮೃತ ಗುರುವಿನಿಂದ | ಅಮೃತ ಬೋಧೆಯ ತಿಳಿ
ದಮೃತ ಲಿಂಗವ ಪಿಡಿದಾಡುತ್ತ |
ಅಮೃತ ತನ್ನೊಳಗಿರ್ದು | ಅಮೃತವ ಭಾವಿಸಿ
ಅಮೃತರಾದವರಂಜಲೇತಕೋ ||1||
ಅಮೃತ ಗಂಧವನರಿ | ದಮೃತವ ಸೇವಿಸಿ
ಅಮೃತಲಿಂಗವನು ನೋಡುತ್ತ
ಅಮೃತವ ಸೋಂಕುತ್ತ | ಅಮೃತವ ಕೇಳುತ್ತ
ಅಮೃತರಾದವರಂಜಲೇತಕೋ ||2||
ಅಮೃತ ತೃಪ್ತಿಗಳಿಂದ | ಅಮೃತವ ಪಾಡುತ್ತ
ಅಮೃತಾನಂದದೊಳು ಸಂಚರಿಸುತ್ತ
ಅಮೃತಗಂಗೇಶನೆಂಬ | ಅಮೃತವೆ ತಾನಾಗಿ
ಅಮೃತರಾದವರಂಜಲೇತಕೋ ||3||

ಮನಲಯವಿಲ್ಲದೆ ಮುಕ್ತಿಯಿಲ್ಲೆಂಬರು
ಮನಲಯವಿಲ್ಲದೆ ಮುಕ್ತಿಯಿಲ್ಲೆಂಬರು ಮನಲಯವಿದಲ್ಲವೆ
ಮನವಾಕು ಕಾಯಲಿಂಗವಾಗಿರೆ ಮನಲಯವಿದಲ್ಲವೆ ||ಪಲ್ಲವಿ||
ಘನವಾದ ಬಯಕೆಗಳಿಲ್ಲದಿರಲು ಮನಲಯವಿದಲ್ಲವೆ
ಬಿನುಗು ಬುದ್ಧಿಗೆ ಪರಿದಾಡದಿರಲು ಮನಲಯವಿದಲ್ಲವೆ
ತನುಗಾಗೆ ರುಜೆಗಳನು ನೋಡದಿರೆ ಮನಲಯವಿದಲ್ಲವೆ
ಚಿನುಮಯ ಗಂಗೇಶನಾಗಿ ರಾಜಿಸೆ ಮನಲಯವಿದಲ್ಲವೆ ||1||
ವೇದಬಾಹಿರನಾಗದರಿತು ನಡೆಯೆ ಮನಲಯವಿದಲ್ಲವೆ
ಆದಿ ಮಧ್ಯಾಂತರಗಳಳಿದುಳಿದರೆ ಮನಲಯವಿದಲ್ಲವೆ
ಬಾಧಿಸುತಿಹ ಪಗೆಗಳನಾರಗೆಲೆ ಮನಲಯವಿದಲ್ಲವೆ
ಬೋಧಾತ್ಮಕ ಗಂಗೇಶನಾಗಿ ರಾಜಿಸೆ ಮನಲಯವಿದಲ್ಲವೆ ||2||
ಸಕಲದೊಳಗಿರುತಿರ್ದು ಇಲ್ಲದಂತಿರೆ ಮನಲಯವಿದಲ್ಲವೆ
ಸುಖದುಃಖಗಳ ಸಮಗಂಡಿರುತಿರೆ ಮನಲಯವಿದಲ್ಲವೆ
ಅಕಳಂಕದಾನಂದ ಪಡೆದಿರುತಿರೆ ಮನಲಯವಿದಲ್ಲವೆ
ಕಕೋದ್ಗಿರಿ ಗಂಗೇಶನಾಗಿ ರಾಜಿಸೆ ಮನಲಯವಿದಲ್ಲವೆ ||3||

ಕಾಮಾದಿ ಅರಿವರ್ಗದಿಂದ
ಕಾಮಾದಿ ಅರಿವರ್ಗದಿಂದ ಕೆಟ್ಟವರನು ಪೇಳ್ವೆನಾನು
ಈ ಮಹಿಯೊಳಗೆ ಜಯಿಸಿನಿಂದವನೀಗ ಲಿಂಗ ತಾನು ||ಪಲ್ಲವಿ||
ದೇವತಾ ಪದವಿಯನೊದೆದು ಕೆಟ್ಟನು ಕಾಮದಿಂದ ನಹುಷ
ಭಾವಿಸಿ ಶಿವನ ತಾನರಿಯದೆ ಕ್ರೋಧದಿ ಕೆಟ್ಟಾ ದಕ್ಷ
ಈ ವಸುಧೆಗೆ ಲೋಭದಿಂದ ಕೆಟ್ಟನು ಕುರುಭೂಮಿ ಪಾಲ
ಆವನಾಗಲಿ ಕವರಿಚ್ಚೆಗೆಳಸದಿರೆ ಲಿಂಗ ತಾನು ||1||
ಸುತರಗಲಿಕೆಯ ಮೋಹದಿ ಕೆಟ್ಟ ದಶರಥರಾಯ ತಾನು
ಮತಿಗೆಟ್ಟು ಮದದಿಂದ ನುಡಿದು ಕೆಟ್ಟನು ಶಿಶುಪಾಲ ತಾನು
ಕ್ಷಿತಿಪಾಲ ನಿಕೃಷ್ಟನೆಂದು ಮಚ್ಚರದಿಂದೆ ಕೆಟ್ಟ ಮಗದಾ
ಹಿತವಲ್ಲವೆಂದಿವರೊಳಗಾಗದಿರ್ದರೆ ಲಿಂಗ ತಾನು ||2||
ಧರೆಯೊಳಗೊಂದೊಂದರಿಂದ ಕೆಟ್ಟರು ಭೂಮಿಪಾಲರಿಂತು
ನೆರೆಯಾದರುರವಣೆಗಳಲಿ ಕೆಡದರಾರು ಧಾತ್ರಿಯಲ್ಲಿ
ಪಿರಿದಾ ಗುರುವಾಕ್ಯದಿಂದಿವ ಲಿಂಗಮುಖವನು ಮಾಡೆ
ಅರಿವರ್ಗ ತನ್ನನುವಿನಲಿರೆ ಗಂಗೇಶಲಿಂಗ ತಾನು ||3||

ಕಾಯವಳಿದ ಮೇಲೆ
ಕಾಯವಳಿದ ಮೇಲೆ ಮುಕ್ತಿಯೆಂದೆಂಬರು ಪುಸಿಯದೆಲ್ಲ
ಕಾಯವಿರ್ದಾಗಲೆಮುಕ್ತನಾರೆಂಬುದ ಪೇಳು ಗುರುವೆ ||ಪಲ್ಲವಿ||
ನೆರೆ ಜೀವನ್ಮುಕ್ತನಾಗಿರುವ ಮಹಿಮನ ಪೇಳ್ವೆ ನೋಡು
ಪಿರಿದಪ್ಪ ಕಾಮ ತಾನಳಿದು ನಿಂದವನೀಗ ಮುಕ್ತ ನೋಡು
ಉರಿದೇಳ್ವ ಕ್ರೋಧ ತಾನಡಗೆ ನಿಂದನೀಗ ಮುಕ್ತನೋಡು
ನೆರೆ ಲೋಭವಿಲ್ಲದಿರುವನೀಗಲೆ ತಾನೆ ಮುಕ್ತ ನೋಡು ||1||
ಎಲ್ಲರೊಳಗೆ ಮೋಹವಿಲ್ಲದಿರುವನೀಗ ಮುಕ್ತ ನೋಡು
ಬಲ್ಲಿದ ಮದಕೊಳಕಾಗದಿರುವನೀಗ ಮುಕ್ತ ನೋಡು
ಚೆಲ್ವಾದ ಮಚ್ಚರದಲ್ಲಿ ತೊಳಲದವ ಮುಕ್ತ ನೋಡು
ಮೆಲ್ಲನೆ ಅರಿವರ್ಗವಾರ ಗೆಲಿದವನೆ ಮುಕ್ತ ನೋಡು ||2||
ಆವಾವ ಶಾಸ್ತ್ರದೊಳಗೆ ಪೇಳುತಿಹುದೆಲ್ಲ ಇನಿತೆ ನೋಡು
ಭಾವಜ್ಞರಿವ ತಾನೆ ದೇವನೆಂಬರು ತಿಳಿದು ನೋಡು
ಆವನಾಗಲಿ ಇವಕೊಳಗಾಗದಿರ್ದಡೆ ಮುಕ್ತ ನೋಡು
ಕಾವಹರನು ಕಕೋದ್ಗಿರಿಯ ಗಂಗೇಶನೆಂದವನ ನೋಡು ||3||

ಪಲವು ಬಗೆಯಾದ ಶೀಲವನೊಲಿದು
ಪಲವು ಬಗೆಯಾದ ಶೀಲವನೊಲಿದು ಮಾಡುವರು
ನಲಿದು ಗುರು ಕೊಟ್ಟ ಇಷ್ಟವನರಿಯದೆ ತಾವು ||ಪಲ್ಲವಿ||
ಅಂಗದಲಿ ಲಿಂಗವನು ಧರಿಸಿಕೊಂಡಿರೆ ಶೀಲ
ಲಿಂಗಾಂಗವೇಕವೆಂದರಿವುದೆ ಶೀಲ
ಅಂಗೇಂದ್ರಿಯವ ಲಿಂಗ ಮುಖವ ಮಾಳ್ಪುದೆ ಶೀಲ
ಲಿಂಗಮುಖವರಿದರ್ಪಿತವ ಮಾಡೆ ಶೀಲ ||1||
ಅರ್ಪಿತದ ತೃಪ್ತಿಯಲಿರ್ದಾನಂದಿಪುದೆ ಶೀಲ
ತೃಪ್ತಿಯಾಗಿರೆ ಕರಣ ವಿಮಲವೆ ಶೀಲ
ಅಪ್ರತಿಮ ಕರಣ ವಿಕರಿಸದೆ ನಿಂದುದೆ ಶೀಲ
ಸುಪ್ರಸಾದವೆ ಕರಣವಾಗಿರಲು ಶೀಲ ||2||
ಕರಣ ವಿಮಲವದಾಗೆ ಮದವಳಿದುದೆ ಶೀಲ
ಉರೆ ಮಡವಳಿಯಲು ಶಮೆ ದಮೆ ತಾನೆ ಶೀಲ
ನೆರೆವಂದವಳಿದುದೆ ಕಲಿಗಳ ವಿಜಯವದು ಶೀಲ
ಅರಿವಿಜಯ ತಾನೆ ಗಂಗೇಶನಹ ಶೀಲ ||3||

ನಾವರಿಯೆವರಿಯೆವಿದು
ನಾವರಿಯೆವರಿಯೆವಿದು ಪೊಸತಾಗಿ ತೋರುತಿದೆ
ಈ ವಸುಧೆಯೊಳು ಪೇಳ್ವ ನುಡಿಯ ಬೆಡಗುಗಳ ||ಪಲ್ಲವಿ||
ಗುರುಕೃಪೆವಡೆದು ತಮಗೆ ಪಶುಭಾವ ಬಿಡದಂತೆ
ಉರೆ ಲಿಂಗಧಾರಿಯಾಗಿ ತನುಗುಣಗಳಂತೆ
ವರ ಪ್ರಾಣವಿಷ್ಟವೆಂದು ಮರೆದು ರುಚಿಸಿದರಂತೆ
ಪಿರಿದು ಬಲ್ಲವರೆನಿಸಿ ಪೊರೆಯಳಿಯರಂತೆ ||1||
ಎಸೆವಾರುಲಿಂಗ ಮುಖವರಿದರ್ಪಿಸರಂತೆ
ಒಸೆದಂಗಲಿಂಗ ಭಾವನೆಯಿಲ್ಲವಂತೆ
ಪೊಸತಾದ ಕರಣ ಹಸಿಗೆಯ ಮಾಡುತಿಹರಂತೆ
ವಿಷಮವಹ ಮನದ ಲಯವನು ಅರಿಯರಂತೆ ||2||
ಅಚ್ಚ ಪ್ರಸಾದವ ಕೊಂಡು ತನುತಾನ ಶುದ್ಧವಂತೆ
ನಿಚ್ಚದುಃಖಗೊಳುತಿರ್ದು ವೀರಶೈವರಂತೆ
ಕುಚ್ಚಿತ ಕುಹಕಗಳಿರ್ದು ಕೂಡೆ ಶಮೆ ದಮೆಯಂತೆ
ಸಚ್ಚಿದಾನಂದನಹ ಗಂಗೇಶನಿವನೆಲ್ಲ ಬಲ್ಲ ||3||

ಪಂಚಮುಖವಿರ್ದವನೆ ಶಿವ
ಪಂಚಮುಖವಿರ್ದವನೆ ಶಿವನೆಂಬರು
ಪಂಚಮುಖ ದರ್ಪಣವನರಿವವನೆ ಶಿವನು ||ಪಲ್ಲವಿ||
ಎಸೆವ ಗಂಧವ ಕೊಂಬುದಾಚಾರ ಲಿಂಗವದು
ಮಿಸುಪ ಸದ್ಯೋಜಾತ ಮುಖವಲ್ಲವೆ
ಕುಶಲದಿಂ ರುಚಿಯನರಿವುದು ತಾನೆ ಗುರುಲಿಂಗ
ಪೊಸತಪ್ಪ ವಾಮದೇವ ಮುಖವದಾಗಿಹುದು ||1||
ಅಖಿಲವಹ ರೂಪನರಿವುದು ತಾನೆ ಶಿವಲಿಂಗ
ಅಕಟ ನೋಡಲಘೋರ ಮುಖವಲ್ಲವೆ
ಸರಲ ಸ್ಪರುಷನವರಿವುತ್ತಿಹುದು ಜಂಗಮಲಿಂಗ
ಸುವಖದಹ ತತ್ಪುರುಷ ಮುಖವೊಪ್ಪುತಿಹುದು ||2||
ಘನತರದ ಶಬ್ದವರಿವುದು ಪ್ರಸಾದಲಿಂಗ
ಸನುಮತದಲೀಶಾನ್ಯ ಮುಖವಲ್ಲವೆ
ಇನಿತಯದು ಮುಖದಲರಿವುದು ತಾನುಮಹಲಿಂಗ
ತನುವಿಡಿದು ಗಂಗೇಶನಾಗಿ ರಾಜಿಸಲು ||3||

ಎಸೆವ ತನು ತ್ರಯದಿ
ಎಸೆವ ತನು ತ್ರಯದಿ ನವಲಿಂಗಧಾರಣೆಯನಿಂ
ತೊಸೆದು ಪೇಳುವೆನು ಕ್ರಮದಿಂದ ಸಂತಸದಿ ||ಪಲ್ಲವಿ||
ಸುರುಚಿರದ ಇಷ್ಟಲಿಂಗವದೊಂದು ಕೇಳುವುದು
ಪಿರಿದಾದ ಆಚಾರಲಿಂಗ ತಾನೊಂದು
ಉರುತರದ ಗುರುಲಿಂಗ ಸಹಮೂರು ಲಿಂಗವನು
ಧರಿಸಿಹುದು ಸ್ಥೂಲತನು ಸಮರಸವದಾಗಿ ||1||
ಸನುಮತದಿ ಪ್ರಾಣಲಿಂಗವದೊಂದು ಕೇಳುವುದು
ಅನುನಯದಿನೋಳ್ಪ ಶಿವಲಿಂಗ ತಾನೊಂದು
ವಿನುತ ಜಂಗಮಲಿಂಗ ಸಹಮೂರು ಲಿಂಗವನು
ಘನ ಸೂಕ್ಷ್ಮತನು ಧರಿಸಲೇಕವಾಗಿಹುದು ||2||
ವಿವರದಿಂ ಭಾವಲಿಂಗವದೊಂದು ಕೇಳುವುದು
ಸುವಿವೇಕ ಪ್ರಸಾದಲಿಂಗ ತಾನೊಂದು
ಅವಿರಳದ ಮಹಾಲಿಂಗ ಸಹಮೂರು ಲಿಂಗವನು
ತವೆ ಕಾರಣತನು ಧರಿಸಿ ಗಂಗೇಶನಹುದು ||3||

ತ್ರಿಕರಣವು ಶುದ್ಧವಾಗಿದೆ
ತ್ರಿಕರಣವು ಶುದ್ಧವಾಗಿದೆ ಎನುತಿಹುದು ಲೋಕ
ತ್ರಿಕರಣದ ಶುದ್ಧವಿಂತೆಂದು ತಿಳುಹುವೆನು ||ಪಲ್ಲವಿ||
ಉರೆ ಮಾಂಸಪಿಂಡವೆಂಬುದ ಕಳೆದು ಗುರುರಾಯ
ವರ ಮಂತ್ರಪಿಂಡ ನೀನೆಂದು ಪೇಳಿ
ಪರತರ ಇಷ್ಟಲಿಂಗವ ಕೊಡಲು ಕ್ರಮದಲ್ಲಿ
ನೆರ ಪೂಜಿಸಿ ಶುದ್ಧವಡೆಯಿತು ಕಾಯ ತಾನು ||1||
ಈ ಲಿಂಗ ಪ್ರಾಣಲಿಂಗವೆಂದು ಸ್ತುತಿ ಮಾಡಿ
ಕಾಲತ್ರಯವು ತಪ್ಪದನುದಿನದೊಳು
ಲೀಲೆಯಿಂದಲಿ ಪಾಡಿ ಪೊಗಳಿ ಸಂತಸಬಟ್ಟು
ಮೇಲೆ ಮೇಲೆ ಜಪಿಸಿ ವಾಕು ಶುದ್ಧವಾಯಿತು ||2||
ಅಂತಾ ಇಷ್ಟಪ್ರಾಣವೆ ಭಾವವೆನ್ನುತಲೆ
ಸಂತತವು ಭಾವಿಸುತ ಚರಿಸುತಿರಲು
ಕಂತುಹರ ಗಂಗೇಶ ತಾನು ತಾನಾಗಿರಲು
ಇಂತಿದರ ದೆಸೆಯಿಂದ ಮನಶುದ್ಧವಾಯಿತು ||3||

ಲಿಂಗ ಲಿಂಗವಾರು ಮುಖದ
ಲಿಂಗ ಲಿಂಗವಾರು ಮುಖದ ಪ್ರಾಣಲಿಂಗ
ಸಂಗಿಯಲ್ಲದವಿರಳವಾಗಿ ತೋರ್ಪಲಿಂಗ ||ಪಲ್ಲವಿ||
ನಿರ್ವಿಕಾರಲಿಂಗ | ನಿಜದಲಾಡುವಲಿಂಗ
ಸರ್ವರೊಳಿಹ ಲಿಂಗ | ಶಾಂತಲಿಂಗ
ಉರ್ವಿಗಧಿಕ ಲಿಂಗ | ಉರುತರ ಮಹಾಲಿಂಗ
ನಿರ್ವಾಣವಹ ಲಿಂಗ | ನಿಗಮಕತೀತ ಲಿಂಗ ||1||
ಕರ್ಮರಹಿತ ಲಿಂಗ | ಕರಣ ಸುಸ್ಥಿರ ಲಿಂಗ
ಧರ್ಮರೂಪಾದ ಲಿಂಗ | ಆಧಾರ ಲಿಂಗ
ವರ್ಮಜ್ಞನಾದ ಲಿಂಗ | ವರ ಪ್ರಕಾಶದ ಲಿಂಗ
ನಿರ್ಮಲಾಕಾರ ಲಿಂಗ | ನಿರುಪಾಧಿಕ ಲಿಂಗ ||2||
ವರ್ಣಾತ್ಮಕದ ಲಿಂಗ | ಒಂದೆರಡಾದ ಲಿಂಗ
ನಿರ್ಣಯವಡೆದ ಲಿಂಗ | ನಿತ್ಯಲಿಂಗ
ಸ್ವರ್ಣಮಯವಾದ ಲಿಂಗ | ಸ್ವಯದಾನಂದ ಲಿಂಗ
ಪೂರ್ಣ ರೂಪಾದ ಲಿಂಗ | ವರಗಂಗೇಶ ಲಿಂಗ ||3||

ಬೇಕೆಂದು ಬಯಸದುದೆ ವೈರಾಗ್ಯವು
ಬೇಕೆಂದು ಬಯಸದುದೆ ವೈರಾಗ್ಯವು
ನಿಃಕರಿಸಿ ಸಕಲರನು ನುಡಿವುದೊಂದ್ವೈರಾಗ್ಯ ||ಪಲ್ಲವಿ||
ಬಂದುದನು ಲಿಂಗಾಣತಿಯೆಂದು ತಾ ಕೈಕೊಂಡು
ಸಂದಳಿದು ಲಿಂಗಾಂಗಿಯಾಗಿ ನಟಿಪರಿಗೆ ||1||
ಆರು ಮುಖದಲಿ ಲಿಂಗಕಾನಂದಿಸಬೇಕೆಂದು
ಸಾರೆ ಭಕ್ತರು ನಮಿಸಿ ಬಿನ್ನೈಸಲು
ತೋರಿದಂದದಿ ಗುರುವಚನದಿಂದ ಕೈಕೊಂಡು
ಬೇರಿಲ್ಲದರ್ಪಿಸುತಿಹ ಲಿಂಗಾಂಗರಿಗೆ ||2||
ಮಿಗೆ ಕೋಪ ತಾಪಗಳ ಕದಡದೆಲ್ಲವ ಪರಿದು
ಸೊಗಯಿಸುವ ಸುಖ ದುಃಖಗಳನು ಸಮಗಂಡು
ನೆಗಳ್ದ ಶಮೆ ದಮೆಯಿಂದ ಉರೆ ಶಾಂತಿವಡೆದಿರುತ
ಜಗವರಿಯೆ ಗಂಗೇಶಲಿಂಗಾಂಗವಾದವರಿಗೆ ||3||

ಸಕಲರಹುದಹುದೆನಲು
ಸಕಲರಹುದಹುದೆನಲು ನಡೆವವನೆ ಶಿವಯೋಗಿ
ಅಕಳಂಕ ಮಹಿಮನಾಗಿಹನೆ ಶಿವಯೋಗಿ ||ಪಲ್ಲವಿ||
ಸಕಲ ಧರ್ಮ ರಹಸ್ಯವರಿದವನೆ ಶಿವಯೋಗಿ
ಸಕಲ ಮರ್ಮಜ್ಞನಾದವನೆ ಶಿವಯೋಗಿ
ಸಕಲದೊಳಗೊಡವೆರೆದತಿಶಯನೆ ಶಿವಯೋಗಿ
ಸಕಲರ ಸ್ಥಿತಿಗತಿಯ ತಿಳಿಯೆ ಶಿವಯೋಗಿ ||1||
ಸಕಲ ಸನ್ಮಾರ್ಗವಿಡಿದಿರುವವನೆ ಶಿವಯೋಗಿ
ಸಕಲರಲಿ ಆನಂದಿಸುವವನೆ ಶಿವಯೋಗಿ
ಸಕಲ ಜನವಶ್ಯದಿಂದೆಸೆವವನೆ ಶಿವಯೋಗಿ
ಸಕಲರೊಳು ನಿರ್ಲೇಪ ಸುಖಿಯೆ ಶಿವಯೋಗಿ ||2||
ಸಕಲ ಬುದ್ಧಿಗಳಿಂದಲೊಸೆದಿರಲು ಶಿವಯೋಗಿ
ಸಕಲ ಸುಖವಡೆದು ಶೋಭಿಪನೆ ಶಿವಯೋಗಿ
ಸಕಲ ನಿಷ್ಕಲವೆನಿಸಿ ರಾಜಿಪನೆ ಶಿವಯೋಗಿ
ಸಕಲಾತ್ಮ ಗಂಗೇಶನಾಗೆ ಶಿವಯೋಗಿ ||3||

ಪಾಶವೆಂದಡದೇನು
ಪಾಶವೆಂದಡದೇನು ಪಾಶಬದ್ಧರದಾರು
ಪಾಶವನು ಪರಿದವರ ಪೇಳೆನಗೆ ಗುರುವೆ ||ಪಲ್ಲವಿ||
ನೆರೆ ಮೋಹ ದುಃಖ ಮೊದಲಾದ ಭ್ರಾಂತುಗಳೆಲ್ಲ
ಪಿರಿದಾದ ಪಾಶವು ತಾನೆ ಕೇಳು
ಉರೆ ಇವಕ್ಕೊಳಗಾಗಿ ತೊಳಲಿಯಾಡುತಿ
ಹರೆ ಮರುಳು ಮಾನವರು ಪಾಶದಿ ಬದ್ಧರು ||1||
ಸಕಲವಹ ಭೋಗ ವಸ್ತುಗಳ ಪಿಡಿದಿರುತಿರ್ದು
ಅಕಳಂಕರೆನಿಸಿ ಕುಶಲದಲೆಸೆವರು
ವಿಕಳಮೋಹವದಿಲ್ಲದಿಹ ನಿರ್ಮಲಾಂಗಿಗಳೇ
ಪ್ರಕಟರವರೀಗ ಪಾಶವ ಪರಿದವರು ||2||
ಇಂತು ನಿರ್ಮೋಹಿಗಳಾಗಿ ತೋರುವರು
ಸಂತಾಪವಳಿದಚ್ಚಸುಖವೆಯಹರು
ಅಂತು ದಿನದಿನಕೆ ಭೇದವದಾಗಿ ರಾಜಿಸುತ
ಕಂತುಹರ ಗಂಗೇಶನೆನೆ ನಟಿಪರು ||3||

ಸುರುಚಿರದ ಲಿಂಗಾಂಗಿಯಾಗಿ
ಸುರುಚಿರದ ಲಿಂಗಾಂಗಿಯಾಗಿ ರಾಜಿಸುವವನ
ಪಿರಿದು ತಾಪತ್ರಯಾದಿಗಳು ಪಿಡಿದಪವೇ ||ಪಲ್ಲವಿ||
ಘನವಾದ ಆಸೆಯ ಪರ್ವತವ ಲತೆ ಬಂಧಿಪವೆ
ವಿನುತ ಚಿನ್ಮರನನೊರಲೆ ಕೆಡಿಸುವುದೆ
ಜನವರಿಯೆ ಉರಗನನು ಬೆಕ್ಕುಗಳು ಪಿಡಿದಪುವೆ
ಅನುನಯದ ಸತ್ಯವನಸತ್ಯಗೆಲಿದುಪುವೆ ||1||
ಮಿಸುಪಗ್ನಿಯನು ಮಕ್ಷಿಕಗಳು ಪೊದ್ದಿರುತಿಹವೆ
ವಿಷದ ಮಡುವಿನಲಿ ಪಕ್ಷಿ ಪಾನಂಗೈದಪವೆ
ಒಸೆದು ಸಿಂಹವನು ಗಜವಿಂಡುಗಳು ಮುತ್ತುವವೆ
ಎಸೆವ ಸೂರ್ಯನ ಮುತ್ತಿ ತಮವು ಮುಸುಕುವುದೆ ||2||
ತವೆ ವ್ಯಾಘ್ರನಿಕ್ಕೆಯಲಿ ಪಶು ನಿದ್ದೆಗೈದಪುವೆ
ಲವಣರಾಸಿಯಲಿ ಬೀಜಗಳು ಮೊಳೆದಪವೆ
ದಿವದಲ್ಲಿ ಕನ್ನಗಳ್ಳರ ಭಯವಿನಿತಹವೆ
ಶಿವಗಂಗೇಶನಾದವಗೆ ಅರಿವರ್ಗವಿಹವೆ ||3||

ಶ್ರುತದರಿವು ಕೆಲಬರಿಗೆ
ಶ್ರುತದರಿವು ಕೆಲಬರಿಗೆ ಗುರುಮುಖದರಿವು ಕೆಲಬರ್ಗೆ
ಅತಿಶಯದ ಸ್ವಯಜ್ಞಾನ ಸಕಲರಿಗಿವ ಪೇಳ್ವೆ ||ಪಲ್ಲವಿ||
ಪಿರಿದಾದ ಶ್ರುತದಲುದಯಿಸಿದ ಜ್ಞಾನವದೀಗ
ನೆರೆ ಸಾರ ಕಾಷ್ಠವಿಡಿದಗ್ನಿಯಂದದಲಿ
ಉರುಪದಿರಲಗ್ನಿ ನಿಲ್ಲದೆ ಕೆಟ್ಟು ಪೋಪಂತೆ
ವರ ಶ್ರುತವಿಲ್ಲದಿರೆ ಜ್ಞಾನವನುಳಿಪುದು ||1||
ಎಸೆವ ಗುರು ಮುಖದಲುದಯಿಸಿದ ಜ್ಞಾನವದೀಗ
ಮಿಸುಪ ಜಠರದೊಳೊಂದಿದಗ್ನಿಯಿಂದದಲಿ
ಒಸೆದು ಕೊಂಡನವಪಚನಿಸುತ ತಾ ಕೆಡದಂತೆ
ಸಸಿನೆ ಕರ್ಮವ ಕೆಡಿಸಿ ಕೆಡದೆ ತಾನಿಹುದು ||2||
ಸ್ವಾನುಭವದಿಂದ ಉದಯಿಸಿದ ಜ್ಞಾನವದೀಗ
ಭಾನುವಿನೊಳುಪ್ಪುತಿರುವಗ್ನಿಯಂದದಲಿ
ತಾನು ರವಿಯೆಂಬ ಭೇದವದಿಲ್ಲದಿಪ್ಪಂತೆ
ಜ್ಞಾನಿ ಗಂಗೇಶನೆಂಬುಭಯವಳಿದಿಹುದು ||3||

ಲಿಂಗವೆ ಚಿಲ್ಲಿಂಗವೆ
ಲಿಂಗವೆ ಚಿಲ್ಲಿಂಗವೆ | ಲಿಂಗವೆ ಸದ್ರೂಪಲಿಂಗವೆ
ಲಿಂಗವೆ ಸರ್ವಾಂಗಲಿಂಗವೆ | ಲಿಂಗವೆ ಆತ್ಮಲಿಂಗವೆ ||ಪಲ್ಲವಿ||
ಲಿಂಗವೆ ಇಷ್ಟಲಿಂಗವೆ
ಲಿಂಗವೆ ಪ್ರಾಣಲಿಂಗವೆ
ಲಿಂಗವೆ ಭಾವಲಿಂಗವೆ
ಲಿಂಗವೆ ಆತ್ಮಲಿಂಗವೆ ||1||
ಲಿಂಗವೆ ಆಚಾರ ಲಿಂಗವೆ
ಲಿಂಗವೆ ಗುರು ಲಿಂಗವೆ
ಲಿಂಗವೆ ಶಿವಲಿಂಗವೆ
ಲಿಂಗವೆ ಆತ್ಮಲಿಂಗವೆ ||2||
ಲಿಂಗವೆ ಜಂಗಮ ಲಿಂಗವೆ
ಲಿಂಗವೆ ಪ್ರಸಾದ ಲಿಂಗವೆ
ಲಿಂಗವೆ ಮಹಾ ಲಿಂಗವೆ
ಲಿಂಗವೆ ಗಂಗೇಶಾತ್ಮ ಲಿಂಗವೆ ||3||

ನೋಡಬೇಡ ಭೇದಬುದ್ಧಿಗಳಿಂದಿಷ್ಟಲಿಂಗವ
ನೋಡಬೇಡ ಭೇದಬುದ್ಧಿಗಳಿಂದಿಷ್ಟಲಿಂಗವ
ನೋಡಿ ನೋಡು ಲಿಂಗವೆಂದು
ಸಂಧಾನದಿಂದಿಷ್ಟಲಿಂಗವ ||ಪಲ್ಲವಿ||
ನೋಡಿ ನೋಡು ಷಡಕ್ಷರ ರೂಪವೆಂದಿಷ್ಟಲಿಂಗವ
ನೋಡಿ ನೋಡು ನವಲಿಂಗಗಳೊಂದಿದಿಷ್ಟ ಲಿಂಗವ
ನೋಡಿ ನೋಡು ಸರ್ವಾಂಗಭರಿತವೆಂದಿಷ್ಟ ಲಿಂಗವ
ನೋಡಿ ನೋಡು ನಿಮ್ಮಾತ್ಮ ಲಿಂಗವೆಂದಿಷ್ಟಲಿಂಗವ ||1||
ನೋಡಿ ನೋಡು ಸ್ಥಲಕುಳಗಳೊಳೇಕವೆಂದಿಷ್ಟ ಲಿಂಗವ
ನೋಡಿ ನೋಡು ನಿರ್ಮಲ ಪರತರವೆಂದಿಷ್ಟ ಲಿಂಗವ
ನೋಡಿ ನೋಡು ನಿರ್ಗುಣ ನಿರವಯವೆಂದಿಷ್ಟ ಲಿಂಗವ
ನೋಡಿ ನೋಡು ನಿಮ್ಮಾತ್ಮಲಿಂಗವೆಂದಿಷ್ಟ ಲಿಂಗವ ||2||
ನೋಡಿ ನೋಡು ಕಾಲಕರ್ಮಕತೀತವೆಂದಿಷ್ಟ ಲಿಂಗವ
ನೋಡಿ ನೋಡು ಫಲಪದ ಬಯಕೆಗಳಿಲ್ಲದಿಷ್ಟ ಲಿಂಗವ
ನೋಡಿ ನೋಡು ತ್ರಿಪುಟಿಗಳ ನಿವಾರಿಸಿದಿಷ್ಟ ಲಿಂಗವ
ನೋಡಿ ನೋಡು ನಿಮ್ಮಾತ್ಮ ಗಂಗೇಶನೆಂದಿಷ್ಟ ಲಿಂಗವ ||3||

ಇಷ್ಟಲಿಂಗ ಲಿಂಗಪ್ರಾಣ
ಇಷ್ಟಲಿಂಗ ಲಿಂಗಪ್ರಾಣ ನಮೋ ನಮೋ
ಸ್ಪಷ್ಟಲಿಂಗ ಮಂತ್ರರೂಪ ನಮೋ ನಮೋ ||ಪಲ್ಲವಿ||
ಪಿರಿದು ಕಾಮ ಸಂಹರ ನಮೋ ನಮೋ
ಲಿಂಗಸ್ಥಿರದ ವರ್ಣರೂಪ ನಮೋ ನಮೋ
ನೆರೆ ಕ್ರೋಧ ಸಂಹಾರ ನಮೋ ನಮೋ
ಲಿಂಗ ಪರಮ ವರ್ಣರೂಪ ನಮೋ ನಮೋ ||1||
ಮಿಸುಪ ಲೋಭ ಸಂಹಾರ ನಮೋ ನಮೋ
ಲಿಂಗವೆಸೆವ ವರ್ಣರೂಪ ನಮೋ ನಮೋ
ಪೋಸ ಮೋಹ ಸಂಹಾರ ನಮೋ ನಮೋ
ಲಿಂಗ ಕುಶಲ ವರ್ಣರೂಪ ನಮೋ ನಮೋ ||2||
ಭವ ಮದಸಂಹಾರ ನಮೋ ನಮೋ
ಲಿಂಗ ವಿವರ ವರ್ಣರೂಪ ನಮೋ ನಮೋ
ತವೆ ಮತ್ಸರ ಸಂಹಾರ ನಮೋ ನಮೋ
ಲಿಂಗ ಶಿವಗಂಗೇಶ ಪ್ರಣವ ರೂಪ ನಮೋ ನಮೋ ||3||

ಸುಖವೆ ನಿಜ ಸುಖವೆ
ಸುಖವೆ ನಿಜಸುಖವೆ ಸುಖವೆ ಸುಖವೆ
ಅಕಳಂಕವಾಗಿ ಅದ್ವಯವ ತೋರಿ ರಾಜಿಸುವ ||ಪಲ್ಲವಿ||
ಘನವೆನಿಪ ತನು ಮನವಪಿಡಿದು ನಟಿಸುವ ಸುಖವೆ
ವಿನುತೇಂದ್ರಿಯಗಳಿಂದ ಫಲವೆನಿಪ ಸುಖವೆ
ಅನುನಯದ ಕಾಲಕರ್ಮಗಳಿಲ್ಲದಿಹ ಸುಖವೆ
ಚಿನುಮಯಾನಂದವಡೆದ ಮಹ ಸುಖವೆ ||1||
ನೆರೆ ಉಪಾಧಿಗಳಿಂದ ಪಿರಿದುದೋರದ ಸುಖವೆ
ಅರಿವು ಮರವೆಗಳಿಲ್ಲದವಿರಳದ ಸುಖವೆ ||2||
ತವೆ ನಿರ್ವಿಕಾರದಿಂದಲೊಲಿದು ತೋರುವ ಸುಖವೆ
ಪವಣಿಸಲಪಾರವದಿಲ್ಲದವಿರಳ ಸುಖವೆ
ಸುವಿವೇಕದಿಂ ತೊಳಗಿ ಬೆಳಗುವ ಸುಖವೆ
ಶಿವ ಗಂಗಾಧರನಾಗಿ ಎಸೆವ ಸುಖವೆ ನಿಜ ಸುಖವೆ ||3||

ಲಿಂಗಯ್ಯ ಬಾ ಇಷ್ಟಲಿಂಗಯ್ಯ
ಲಿಂಗಯ್ಯ ಬಾ ಇಷ್ಟಲಿಂಗಯ್ಯ
ಲಿಂಗಯ್ಯ ನವವಿಧ ಲಿಂಗಯ್ಯ
ಲಿಂಗಯ್ಯ ಆರಾದ ಲಿಂಗಯ್ಯ
ಲಿಂಗಯ್ಯ ಬಾರೆನ್ನ ಅಂಗಯ್ಯ ||ಪಲ್ಲವಿ||
ಲಿಂಗಯ್ಯ ಭಜಕರಂತರಂಗಯ್ಯ
ಲಿಂಗಯ್ಯ ಬಾರೋ ಅಭಂಗಯ್ಯ
ಲಿಂಗಯ್ಯ ಮನಭಾವ ಸಂಗಯ್ಯ
ಲಿಂಗಯ್ಯ ಬಾರೆನ್ನ ಅಂಗಯ್ಯ ||1||
ಲಿಂಗಯ್ಯ ಪ್ರಕಾಶ ಲಿಂಗಯ್ಯ
ಲಿಂಗಯ್ಯ ಭೆಂದದ ಲಿಂಗಯ್ಯ
ಲಿಂಗಯ್ಯ ಪರಮಾತ್ಮ ಲಿಂಗಯ್ಯ
ಲಿಂಗಯ್ಯ ಬಾರೆನ್ನ ಅಂಗಯ್ಯ ||2||
ಲಿಂಗಯ್ಯ ನಿಜವಾದ ಲಿಂಗಯ್ಯ
ಲಿಂಗಯ್ಯ ಸುಸ್ಥಿರ ಲಿಂಗಯ್ಯ
ಲಿಂಗಯ್ಯ ಗಂಗೇಶ ಲಿಂಗಯ್ಯ
ಲಿಂಗಯ್ಯ ಬಾರೆನ್ನ ಅಂಗಯ್ಯ ||3||

ಲಿಂಗ ಬಂದವನೆ
ಲಿಂಗ ಬಂದವನೆ ಮಹಲಿಂಗಯ್ಯ ಬಂದವನೆ
ಲಿಂಗ ಬಂದವನೆ ಸ್ವಯಂಭುಲಿಂಗಯ್ಯ ಬಂದವನೆ ||ಪಲ್ಲವಿ||
ನಿರವಯ ಲೀಲೆಗೆ ಹಸನಲ್ಲವೆನುತ
ಧರಿಸಿದ ಸಗುಣ ಲೀಲೆಯನು
ಉರುತರ ಲೋಕ ಲೌಕಿಕವ ರಚಿಸುತ
ಮೆರೆದು ತೋರಿದ ವಿಶ್ವ ರೂಪವ ||1||
ಅಂತಪ್ಪ ರೂಪಿನೊಳಗೆ ತನ್ನ ಭಕ್ತರು
ಸಂತತ ತನ್ನನರ್ಚಿಸಲು
ಭ್ರಾಂತು ಭಾವಗಳನುಳಿದು ತಾನಿಂದ ವಿ
ಶ್ರಾಂತಿಯನೈದಿ ಬೆಳಗುವ ||2||
ಎಸೆವ ಬೆಳಗಿನೊಳು ಪೊಸತೆಂದು ತೋರದೆ
ಕುಶಲವಾಗಿಹ ಬೆಳಗಿನೊಳು
ಮಿಸುಪ ದರ್ಪಣಬಿಂಬವೆರಡೊಂದಾದಂತೆ
ಶಶಿಧರ ಗಂಗೇಶನಾದ ||3||

ಕ್ಷಯವುಂಟೆ ಜೀವರಂತೆ
ಕ್ಷಯವುಂಟೆ ಜೀವರಂತೆ | ಅವಿರಳ ಜ್ಞಾನಿಗೆ
ಕ್ಷಯವೆಂದು ನುಡಿವರಿಗೆ ಕ್ಷಯವಲ್ಲದೆ ||ಪಲ್ಲವಿ||
ಗುರುಪಾದವಿಡಿದವಗೆ | ಕರಣ ನಿರ್ಮಲನಿಗೆ
ಉರುತರ ಪದಗಳ ತೊರದವನಿಗೆ
ಪರಮ ಲಿಂಗಾಂಗಿಗೆ | ಅರಿಗಳ ಗೆಲಿದವನಿಗೆ
ಸುರುಚಿ ಸುಖವೆ ತಾನಾಗಿ ನಿಂದವಗೆ ||1||
ಕಾಲಕತೀತಗೆ | ಲೀಲೆಯಿಂದಿರುವಗೆ
ಬಾಲಚಂದಿರನಂತೆ ವರ್ಧಿಪಗೆ
ಸೋಲದ ವಿರತನಿಗೆ | ಲೋಲತ್ವವಿಲ್ಲದವಗೆ
ಮಾಲಿನ್ಯಗಳ ಧೂಳು ಮಾಡಿಟ್ಟವಗೆ ||2||
ಪವಣಿಸದಾತ್ಮಗೆ | ಕಲಿಮದವಳಿದವಗೆ
ವಿವರದಿಂದೆಸನಗಳನೊರಸಿದವಗೆ
ಭವರೋಗ ವೈದ್ಯಗೆ | ತವೆಕೂಟಸ್ಥನಿಗೆ
ಶಿವಗಂಗಾಧರನಾಗಿ ರಾಜಿಸುವಗೆ ||3||

ಶಿವಶಕ್ತಿಯಿಂದಾದ ಮಾಯೆ
ಶಿವಶಕ್ತಿಯಿಂದಾದ ಮಾಯೆ ಬೇರೆನಿಸುವುದೆ
ಅವಿರಳದ ಸುಜ್ಞಾನಿಯಾದ ಮಹಾ ಮಹಿಮನಿಗೆ ||ಪಲ್ಲವಿ||
ಧರೆ ತನ್ನೊಳಾದ ವೃಕ್ಷದಿ ತಾನೆ ಬೆಳೆದಿರ್ದು
ಪಿರಿದು ಪೂಗಾಯಿ ಪಣ್ಣುಗಳ ತೋರಿ ಮೆರೆದು
ವರ ವೃಕ್ಷಗಳ ತನಗೆ ಬೇರೆ ಬೇರೆಂದೆನಿಸಿ
ನೆರೆಯವೆಲ್ಲವನು ತನ್ನೊಳಗೊಂದಿಪಂತೆ ||1||
ರವಿ ತನ್ನೊಳುದಿಸಿದುದ ಕದಿರ ತಾನಗಲದಿರ್ದು
ತವೆ ನದಿ ತಟಾಕ ಕೊಳಗಳು ಹಲವರಲ್ಲಿ
ಭುವಿಯರಿಯೆ ಪೊಳೆದಾವುದಕವ ಪೀರ್ದು
ಅವರ ಬಹುರೂಪ ತನ್ನೊಳಗೊಂದಿಪಂತೆ ||2||
ಇಂತು ತನ್ನಿಂದಾದ ಜಗದಿ ತಾನೆ ನಟಿಸೆ
ಅಂತು ಸಕಲದಿ ಬೆರೆದು ಬೇರೆನಿಸುತಿರ್ದು
ಸಂತತವು ತನ್ನರಿವಿನಿಂದ ಭೇದವದಾಗಿ
ಕಂತುಹರ ಗಂಗೇಶ ತಾನೆ ರಾಜಿಸನೆ ||3||

ಕಡೆಯಾಣಿಯವ ಸುವರ್ಣ
ಕಡೆಯಾಣಿಯವ ಸುವರ್ಣ ಕೈಯೊಳಿರುತಿರಲು
ಕಡುನೊಂದೆವಾವು ಅತಿಯಿಲ್ಲವೆನಲೇಕೋ | |ಪಲ್ಲವಿ||
ಒಂದಕ್ಷಯವು ಮೂರು ಆರೆಂದು ತಾ ಕಂಡು
ಒಂದು ನೂರಾಗಿ ಭಾವಿಸಿಕೊಂಡು ತಾನು
ಸಂದಿಲ್ಲದಪರಿಮಿತವೆಂದು ಪರಿಣಾಮಿಸುವನು
ಕುಂದದೆಲ್ಲರೊಳು ಗತಿಗೆಟ್ಟನೆನಿಸುವನೆ ||1||
ನೂರೊಂದನಾರ ಮಾಡಿ ಆರ ಮೂರನೆ ಮಾಡಿ
ಮೂರೊಂದ ಮಾಡಿ ಕೆಡಿಸುವ ನಿರಾಸಕನ
ದೂರುವರು ಜಗದೊಳಿವನೇತರವನಲ್ಲೆಂದು
ಮಾರಹರ ಬಲ್ಲನವ ಗತಿಗೆಟ್ಟಿರುವುದ ||2||
ಇಂತು ಗತಿಗೆಟ್ಟವಗೆ ಕುಲಚಲವೆಂಬುದಿಲ್ಲ
ಅಂತು ಪೊರ್ದಿಹುದರಿವೆನಿಸಿ ತೋರ್ಪನಿಲ್ಲ
ಸಂತತವು ಪರದೇಸಿ ಸುಖ ದುಃಖವವಗಿಲ್ಲ
ಚಿಂತಾರ್ಯಕನಾದ ಗಂಗೇಶಗತಿಯವಗೆ ||3||

ಖಂಡಿತನಹನೆ ಗುರು
ಖಂಡಿತನಹನೆ ಗುರು ತಿಳಿದು ನೋಡೆ
ಅಂಡ ಪಿಂಡವನೆಲ್ಲ ತಾನಾಗಿ ತೋರ್ಪನಿವ ||ಪಲ್ಲವಿ||
ಅರಿವರ್ಗದೊಳು ಮುಳುಗಿರುವರ್ಗೆ ಖಂಡಿತ
ನೆರೆ ಇಷ್ಟಮದದೊಳೆಸೆಯಲವರ್ಗೆ ಖಂಡಿತ
ಉರೆ ಮನದಿಚ್ಛೆಗೆ ಪರಿವರ್ಗೆ ಖಂಡಿತ
ಗುರುಕೃಪೆವಡೆದ ಮಹಿಮರ್ಗಖಂಡಿತ ||1||
ಅಂಗ ಲಿಂಗಕೆ ಪೆರೆತೆಂಬರ್ಗೆ ಖಂಡಿತ
ಭಂಗವಡೆದ ಮಾಯಾಸಂಗಿಗೆ ಖಂಡಿತ
ಹಿಂಗದ ಭವಭಾರಿಗಳಿಗಿವ ಖಂಡಿತ
ಮಂಗಳಾತ್ಮಕ ಶಿವಸಂಗಿಗಖಂಡಿತ ||2||
ಪಿರಿದಿಹ ಪರೆವೆಂದರಿಯದಿರೆ ಖಂಡಿತ
ವರ ಗುರುಪದವಿಯರಿದಗೆ ಖಂಡಿತ
ಸುರುಚಿರ ಲಿಂಗವಾಂತಿರದರ್ಗೆ ಖಂಡಿತ
ಉರುತರ ಗಂಗೇಶನಾಗಲಖಂಡಿತ ||3||

ಎಲ್ಲರೊಳು ಶಿವಭರಿತನಂತೆ
ಎಲ್ಲರೊಳು ಶಿವಭರಿತನಂತೆ | ಗುರುವೆ
ಚೆಲ್ವ ಮಹಿಮರೊಳು ತೋರ್ಪಂತೇಕೆ ತೋರ ||ಪಲ್ಲವಿ||
ಪಿರಿದಂಡದೊಳು ರವಿಪ್ರಕಾಶ | ತಾನು
ಪರಿಪೂರ್ಣವೆನಿಸಿ ತುಂಬಿಹುದಂತದಾಗಿ
ಉರೆ ಸಿಲೆಗಳೊಳಗುಷ್ಣ ಕಿರಣ | ವೆರೆದು
ಪೊರಸೂಸದಂತೆಂತು ಮಲಿನರೊಳಗಿಲ್ಲ ||1||
ಎಸೆವ ಪಳುಕಿನ ಸಿಲೆಗಳೊಳಗೆ | ಕಿರಣ
ಪಸರಿಸುತಿರಲಗ್ನಿ ಪ್ರಜ್ವಲಿಸುವಂತೆ
ಪೊಸತೆನಿಪ ನಿರ್ಮಲಾತ್ಮರೊಳು | ಶಿವನು
ಕುಶಲದಿಂದವರಲ್ಲಿ ಒಸೆದು ಕಾಣಿಪನು ||2||
ಸಕಲರೊಳಗರಿವರ್ಗವಿರಲು | ನೋಡು
ಸುಖವೀಯದದು ತಾನೇ ಮಲಿನವಾಗಿಹುದು
ಅಕಳಂಕವಾಗಲವನುಳಿದು | ಅಲ್ಲಿ
ಪ್ರಕಟವಹ ಗಂಗೇಶ ತಾನಾಗಿರುವನು ||3||

ಅರಿಯಬಹುದೇ
ಅರಿಯಬಹುದೇ ಜನರಿಗರಿಯಬಹುದೇ
ಕರಣ ಸಮಾಧಿಯೋಗವನು ಗುರು ಕರುಣಿಸದೆ ||ಪಲ್ಲವಿ||
ತವೆ ಪಂಚತನ್ಮಾತ್ರಗಳಲ್ಲಿ ಕಾಣಿಪ ಯೋಗ
ಕವಿವ ಕಾಮಾದಿವರ್ಗದಿ ತೋರ್ಪ ಯೋಗ
ಪವಣಿಲ್ಲದೀಶಣತ್ರಯದಲಗಲದ ಯೋಗ
ಶಿವಧ್ಯಾನ ಧಾರಣ ಸಮಾಧಿ ಮಹಯೋಗ ||1||
ನವವಿಧದ ಬೆಡಗು ಬಿನ್ನಣದಲೆಸಗುವ ಯೋಗ
ವಿವರದಿಂ ಮೂರವಸ್ಥೆಯೊಳಗಹ ಯೋಗ
ಜವದಿಂದ ಲೇಸು ಸೊಗಸಾಗೆ ಶೋಭಿಪ ಯೋಗ
ಶಿವಧ್ಯಾನ ಧಾರಣ ಸಮಾಧಿ ಮಹಯೋಗ ||2||
ಸವಿಕಲ್ಪದೊಳಗನಿತು ಭೇದವಡದಿಹ ಯೋಗ
ಅವಿರಳ ವಿಚಾರದಲಖಂಡವಹ ಯೋಗ
ಸುವಿವೇಕದಿಂದ ಗಂಗೇಶನೆನಿಸುವ ಯೋಗ
ಶಿವಧ್ಯಾನ ಧಾರಣ ಸಮಾಧಿ ಮಹಯೋಗ ||3||

ಮನಸಿನಲಿ ವಾಕು
ಮನಸಿನಲಿ ವಾಕು ಕಾಯದಲಿ ವರಮಂತ್ರವಿರೆ
ನಿನಗೇತಕೆಲವೋಮನಸಿನಲಿಮರವೆ ಸಂಶಯವು ||ಪಲ್ಲವಿ||
ಮಂತ್ರವೆ ಕ್ಷೇತ್ರ ಗೃಹ ಧನ ಧಾನ್ಯವಾಗಿರಲು
ಮಂತ್ರವೆ ಪಿತ ಮಾತೆ ಸತಿ ಪುತ್ರರಾಗೆ
ಮಂತ್ರವೆ ನಿನಗೆ ಅಷ್ಟಾವರಣವಾಗಿರಲು
ಮಂತ್ರವೆ ಲಿಂಗಾಂಗವೇಕವಾಗಿರಲು ||1||
ಮಂತ್ರವೆ ಸಪ್ತಧಾತುಗಳೆಯಾಗಿರುತಿರಲು
ಮಂತ್ರವೆ ಕಾಮಾದಿ ವರ್ಗವಾಗಿರಲು
ಮಂತ್ರವೆ ಶಬ್ದಾದಿ ತನ್ಮಾತ್ರವಾಗಿರಲು
ಮಂತ್ರವೆ ದಶೇಂದ್ರಿಯಗಳಾಗುತಿರಲು ||2||
ಮಂತ್ರವೆ ಸಾರೂಪ್ಯವಾಗಿ ತೋರಿಸುತಿರಲು
ಮಂತ್ರವೆ ಸಕಲ ನಿಷ್ಕಲವದಾಗಿರಲು
ಮಂತ್ರವೆ ಒಳ ಹೊರಗೆ ತೆರಹಿಲ್ಲದಿರಲು
ಮಂತ್ರವೆ ಗಂಗೇಶ ತಾನೆಯಾಗಿರಲು ||3||

ಅಂಗಾಂಗದಲ್ಲಿ ನಿಜವಾಗಿ
ಅಂಗಾಂಗದಲ್ಲಿ ನಿಜವಾಗಿ ಜನಿಸಿತಯ್ಯ ಮನ
ಲಿಂಗನಿವಾಸಿಯಾಗಿ ಚರಿಸುತಿಪ್ಪುದಯ್ಯ ಮನ ಚಂದಮಾಮ ||ಪಲ್ಲವಿ||
ಲಿಂಗವನು ಧರಿಸಿ ಅಗಲದಿಪ್ಪುದಯ್ಯ ಮನ
ಲಿಂಗವನು ಇಷ್ಟವೆಂದು ಭಜಿಸಿತಯ್ಯ ಮನ
ಲಿಂಗವನು ಪ್ರಾಣವೆಂದು ಭಜಿಸಿತಯ್ಯ ಮನ
ಲಿಂಗವನು ಭಾವವೆಂದು ಭಜಿಸಿತಯ್ಯ ಮನ ಚಂದಮಾಮ ||1||
ಲಿಂಗವನು ಆಚಾರವೆಂದು ಭಜಿಸಿತಯ್ಯ ಮನ
ಲಿಂಗವನು ಗುರುವೆಂದು ಭುಜಿಸತಯ್ಯ ಮನ
ಲಿಂಗವನು ಶಿವನೆಂದು ಭಜಿಸಿತಯ್ಯ ಮನ
ಲಿಂಗವನು ಚರವೆಂದು ಭಜಿಸಿತಯ್ಯ ಮನ ||2||
ಲಿಂಗವನು ಪ್ರಸಾದವೆಂದು ಭಜಿಸಿತಯ್ಯ ಮನ
ಲಿಂಗವನು ಮಹವೆಂದು ಭಜಿಸಿತಯ್ಯ ಮನ
ಲಿಂಗವನು ಭಜಿಸಿ ಅರ್ಚಿಸುತಿಪ್ಪುದಯ್ಯ ಮನ
ಲಿಂಗ ಗಂಗೇಶನಲಿ ತಾನಾಯಿತಯ್ಯ ಮನ ||3||

ಹೊಸಾಳು ಬಂದ ನೋಡುವ
ಹೊಸಾಳು ಬಂದ ನೋಡುವ ಬನ್ನಿರೆಲ್ಲರು
ಹೊಸಾಳು ಬಂದನೀಗ ||ಪಲ್ಲವಿ||
ಸುರುಚಿರ ಯಿಂಬಡಿಯಕಟ್ಟಿ
ಸ್ಥಿರ ಗುರುವಚನ ಕು
ಕರದಿ ದೊರಡಗೂಡಿ
ಉರುತರವನೆ ಕಠಾರವಡಿವುಚಿಲ್ಲ ||1||
ಮಿಸುಪ ಭಸ್ಮವ ತಿಲುಕವನಿಟ್ಟುಕೊಂಡು
ಹೊಸೆವ ರುದ್ರಾಕ್ಷಿಯಡಿಯ
ಎಸೆವ ಪ್ರಸಾದರಸವನುಂಡು ಬಿಗುವೇರಿ
ಅಸಮ ಷಡಕ್ಷರ ಮಂತ್ರಗಾರನಾದ ||2||
ನಟಿಸಿ ನಿಂತುದ ಕಂಡು ರೂಢಿಯಿವನೊಳು
ನೋಟ ಮಾತ್ರದಿ ಕಂಡು ಬಹು ಮಂದಿರ
ಸಾಟಿಯ ನೂರಾರು ನಗೆಗಳ ಗೆದ್ದು
ಕೂಟಸ್ಥ ಗಂಗೇಶ ನೋಡೆ ಆಚಾರವಿದ್ದು ||3||

ಲೋಕದ ನರನೇನ ಬಲ್ಲಿರು
ಲೋಕದ ನರನೇನ ಬಲ್ಲಿರು ಭಾವಿಸಿ
ನಡೆನುಡಿ ಒಂದಾಗಿ ರಾಜಿಸುವ ||ಪಲ್ಲವಿ||
ಎಸೆವ ದುಷ್ಕರ್ಮವಳಿದಂಗನೆಂದರಿತಿಹನಲ್ಲಿ
ಬೂದಿಗಳೆದ ಗಾಡಿ ಪನ್ನೀರ ಲೋಹಿಯನು ||1||
ತನೆ ನುಡಿಯೊಳು ಸತ್ಯಭಾವ ಖಗವಿಲ್ಲದ
ಡನಿಯೊಳಗೆ ನಾದವೊಲಿದಂತಿರುವವನ ||2||
ಶೋಕ ಮೋಹಗಳಿಲ್ಲದೆ ತಾಪಸಗಳ ಹೊಂದದ
ಏಕವಸ್ತು ತಾನೆ ಎಂದ ಭೇದವಿಲ್ಲನವನ ||3||
ಆರುಮುಖದಲವನಿಗೆ ತಾದೊರೆದಾನಂದದಿ
ತೋರಿಸುತ್ತ ನಿತ್ಯವಡೆದಿರುವನ ಕಂಡು |4||
ಮನಮಲಿನವಾಗದೆ ಬಯಸ ನಾವಪರಿಯ
ಚಿನುಮಯ ಗಂಗೇಶನೊಳು ಗಾಢವೆರೆದವನು ||5||

ಹೊಕ್ಕು ಹೋದನವಳ ಮನೆಗೆ
ಹೊಕ್ಕು ಹೋದನವಳ ಮನೆಗೆ ಗಂಗೇಶನು
ಸಿಕ್ಕಿದನು ನಳಿತೋಳ ಬಲೆಗೆ
ಅಕ್ಕಜನಾದ ನಿಡಿನ ಮೋಡಿಯಲರ್ತಿ ಮಾಡಿ
ಗಕ್ಕನೆ ಜಾಣ ಬರುವ ನೋಡಿ ||ಪಲ್ಲವಿ||
ಹದುಳದಿ ಸೆರಗ ಪಿಡಿದು ಮುಂದುವರಿದು
ಮದವಾದ ಸೆಜ್ಜೆಗೊಯಿದು ಸದರದೆ ಕುಚಗ
ಳಿಂದಿರಿದು ಅಂಗನೆರೆದು ಕದಲದಂತಿರುವನೆಂದು ||1||
ಮಾತಿನ ಜಾಣ್ಮೆಯ ಸವಿನುಡಿಯಿಂ ಸರಸವಾಡಿ
ಪ್ರೀತಿಯಲ್ಲಿ ಮದವ ಮಾಡಿ ಕಾತುರದಿಕಲೆಯ ತೋರಿ
ಗತು ಸೊಗಸು ಬೀರಿದಾತರಾಯನ ಬಿಡುವೆನೆ ನಾರಿ ||2||
ವರಕವಿ ಜನವ ಗೆಲಿಪ ಪಾಲಿಸೋ ಸಂತೈಸೋ
ಹರುಷದಿ ವಿಲಾಸ ಎಡವಿಡೆದೆನ್ನ ವಾಣಿಯ
ಹರಸು ಸುರತ ಸುಕವಿತೆಯನು ಗಂಗೇಶ ||3||

ಧರಣಿಧರ ಶಯನ
ಧರಣಿಧರ ಶಯನ ಸುರಮುನಿ ವಂದಿತ ಚರಣ
ಕರುಣಾಕರನೆ ಸಕಲ ಲೋಕೈಕನಾಥನೆ
ಕಿರಣ ಸಹಸ್ರಕೋಟಿ ತೇಜಃ ಸ್ಫುರಣ
ಅಹಿಭರಣನೊಲಿದುಪ್ಪವಡಿಸಾ ||ಪಲ್ಲವಿ||
ಸಂದಣಿಸುತಿರ್ದ ತಾರಾಹಾರ ರಾತ್ರೆಯಲಿ
ಇಂದು ಪರಿಯನ್ನು ಬಳಿವಿಡಿದು ಸೊಬಗನು ನೆರೆಯೆ
ಮುಂದುಗೆಟ್ಟವು ಚಕೋರಂಗೊಳಿಸಿಹ
ಹರುಷದಲ್ಲಿ ಹೊಂದಿದವು ಚಕ್ರಕುಲಕೆ
ಚಂದದಿಂ ಸೂರ್ಯ ಸುತನಂ ಉದಯವಾಗಲಾ
ನಂದದಿಂ ಪಕ್ಷಿ ವೃಕ್ಷವನೇರಿ ಉಲಿಯುತ್ತಿವೆ
ಮಂದಮಾರುತ ತನುತ್ರಯವನು ಕೂಡಿ ಬಂದನಲ್ಲೆ
ಬಾಲೇಂದುಧರನುಪ್ಪವಡಿಸಾ ||1||
ತಮ ಹರಿದು ಜಗಕೆ ಮಂಗಳವಾಗುತಿದೆ ದೇವಾ
ಕಮಲ ಸಖನುದಯವಾಗಲ್ಕೆ ಕಮಲದೊಳಿರ್ದ
ಭ್ರಮರಗಳು ಎದ್ದು ಝೇಂಕಾರವಂ ಮಾಡಿ
ನವ ಕುಸುಮಕೆರಗುತಿವೆ ಕೋ
ಕುಮುದವನು ಮುಗುಸಿ ಅಂಭೋಧಿಯನು ತಗ್ಗಿಸುತ
ದ್ಯುಮಣಿ ಕಿರಣಗಳು ದಿಕ್ಕುಗಳನೇಕ ಕ್ರಮದಿಂದ
ದಾಳಿ ಇಡುತಿವೆ ದೇವ ಪುಣ್ಯ ಪಾರ್ವತೀ
ರಮಣನೊಲಿದುಪ್ಪವಡಿಸಾ ||2||
ಸುರಪತಿಯು ಮೊದಲಾದ ದಿಕ್ಪಾಲಕರು ಬಂದ
ರುರಗೇಂದ್ರ ಶಯನ ಶಿಖಿಯೊಡನೆ ಬಂದನು ದೇವಾ
ಸರಸಿಜೋದ್ಭವವಾಣಿ ಸಹಿತ ಬಂದು ಪ್ರಮಥ ಗಣಂಗಳು ರುದ್ರರೂ
ವರಮುನಿ ಕುಂಭ ಸಂಭವ ವಶಿಷ್ಠ ಶ್ರೀ ಭಾರಧ್ವಾಜ
ಕಾಶ್ಯಪನು ಗೌತಮನು ಜಮದಗ್ನಿ ನೆರವಿ ನಿಮ್ಮಯ
ಭರದಿ ಹಾಡುತ್ತಲೈದಾರೆ ಗೌರಿವರನೆ ಒಲಿದುಪ್ಪವಡಿಸಾ ||3||
ರಂಭೆಯುರ್ವಸಿಯು ಮೇನಕಿಯು ಮೊದಲಾದವರು
ಹೊನ್ನ ಹರಿವಾಣದಿಂ ರತ್ನ ಮೌಕ್ತಿಕ ತುಂಬಿ ಆರತಿಗಳಂ ಬೆಳಗಿ
ಅತಿ ಹರುಷದಿಂ ತರತರದೊಳೊಪ್ಪುತ್ತಿರಲೂ
ತುಂಬುರು ನಾರದರು ಮಂಗಳವ ಪಾಡೆ
ಸಂಭ್ರಮದಿ ಪಂಚಮಹಾವಾದ್ಯ ಮೊಳಗುತ್ತಿರಲು
ಇಂಬುಗೊಳುತಿದೆ ಜಗವು ತೂರ್ಯತ್ರಯಂಗಳು
ತ್ರಿಯಂಬಕನೆ ಒಲಿದುಪ್ಪವಡಿಸಾ ||4||
ದೇವ ಪ್ರಭಾವದೋಲಗಕೆ ಬಂದಿಹ ಸಭೆಯನಾರು ವರ್ಣಿಸಬಹುದೆ
ವಾರುಧಿಗೆ ಅಳವಲ್ಲ ಆ ಮಹಾಸುರರು ವಿದ್ಯಾಧರರು
ಹರಿಯು ಬ್ರಹ್ಮಾದಿ ರುಷಿಗಳು ಸಹಿತ ನೀವಲ್ಲದನ್ಯತ್ರವಿಲ್ಲವೆಂದಲ್ಲ
ಸದಳವಾದಲ್ಲಿ ನಿಮ್ಮ ಚರಣವ ಭಜಿಸುತ್ತಲೈದಾರೆ
ಪಾವನಮೂರ್ತಿ ಜಗದ್ಭರಿತ ದೇವನೊಲಿದುಪ್ಪವಡಿಸಾ ||5||
ಮಂದಾಕಿನಿಯು ಮೊದಲಾದ ಸುರನದಿಯ ಉದಕವ ತಂದು
ಪೊಂಗಳಸದಲ್ಲಿ ಕೆಳದಿಯರು ಪಿಡಿದೊಪ್ಪಿ
ಚಂದ ಚಂದನ ಪೀತಾಂಬರ ಭೂಷಣಂಗಳನು
ಸಕಲ ಪರಿಮಳಯುಕ್ತವಾದ
ಸುಂದರಾಜ್ಯನದೇಕಾರತಿಯಿಂದೆಸೆವ ಕೆಂದಾವರೆಯು
ಜಾಜಿ ಮರುಗ ಮಲ್ಲಿಗೆ ಮೊಲ್ಲೆ ನಂದಿವಟ್ಟಲು
ಹೇಮ ಪುಷ್ಪಂಗಳಿವೇ ಕರುಣಾಕರನೆ ಒಲಿದುಪ್ಪವಡಿಸಾ | |6||
ಶೂಲಕರ ಶಶಾಂಕಧರ ಹರನೆ ಲೀಲೆಯಿಂದೆಲ್ಲ
ಉಪಚಾರಮಂ ಕೈಕೊಂಡು ವಾಲಗಕ್ಕೆ ಬಾಹತಿಪ್ಪ ಸಮಯದೊಳು
ಸುರರು ಕೈವಾರಿಸಲು ಸಭೆಯು ಎದ್ದು ಬಾಳಾಕ್ಷ ರಕ್ಷಿಸೆಂದೆರಗುತಿರಲು
ಭುಲೇಂದು ಚಾಂಗು ಭಲಿರೆನುತ ಆರತಿಯೆತ್ತಿ
ನೀಲಕಂಠನು ಪಂಚವದನ
ದಶಭುಜಂಗಳಿಂದೋಲಗದೊಳೊಪ್ಪುತಿರ್ದ ||7||
ಕಟಿಯಲ್ಲಿ ಮೆರೆವ ವ್ಯಾಘ್ರಜಿನಾಂಬರವು
ಸ್ಫಟಿಕ ಸಂಕಾಶ ಗಾತ್ರದಲ್ಲಿ ಭಸಿತವನಿಟ್ಟು
ಪಟುತರದ ಕೊರಳಗರಳವುರದ ಶಿರಮಾಲೆ ಮೊರದ ಅಹಿ ಕರದ ಶೂಲ
ಪುಟವಿಟ್ಟ ಮಿಸುನಿಯಂತೆಸವ ಕೆಂಜಡೆಗಳಲ್ಲಿ ನಟಸಿರ್ದ ಅರ್ಧಚಂದ್ರನು
ಕಡಲು ಮಿಗೆ ಗಟ್ಟಿಸುತ್ತಿದೆ ದೇವಾ ಮಂಗಳದಲ್ಲಿ
ಪುಣ್ಯ ಪಾರ್ವತಿ ರಮಣನೊಲಿದುಪ್ಪವಡಿಸಾ ||8||
ಕ್ಷಿತಿಯಲ್ಲಿ ದಕ್ಷಿಣ ಕೈಲಾಸವೆಂದೆನಿಪ
ಅತಿಶಯದ ಕಕುದ್ಗಿರಿಯ ಗುಂಹ್ಯದೊಳಗೆ ನೆಲಸಿಪ್ಪ
ಪೃಥ್ವಿಯ ಮೇಲಿಪ್ಪ ಭಕ್ತಜನಂಗಳಿಗೆ ಗತಿ ಮುಕ್ತಿದಾನಿಯಾಗಿ
ಜಿತೇಂದ್ರಿಯರಾದ ಮುನಿಗಳಿಗೆ ಸ್ಥಿರನಾಗಿ
ಶತಕೇತುವಿಂಗೆ ಅತಿ ಪೂಜಿತನೆ ತಾನಾಗಿ
ಶ್ರುತಿಗಳರಸುತಿಪ್ಪಾ ಶಿವಗಂಗೆನಾಥ
ಶುಭಮೂರ್ತಿಯಾಗೊಪ್ಪುತಿರ್ದಾ ||9||

ಮರೆತು ಹೋಗಬೇಡ
ಮರೆತು ಹೋಗಬೇಡ ಮುಂದೆ
ದೊರಕದು ಈ ಜನ್ಮ ಪರಿಪರಿ ದುಃಖದಿ
ಕೊರಗಿ ಮಾಲೆಯ ಹರಕೆ ಕಟ್ಟಿದಯಂತಾಯಿತು ಜನ್ಮ ||ಪಲ್ಲವಿ||
ಹಿಂದೆ ಕೊಲೆಗಳೆಲ್ಲ ಹೇಳಲು
ಇಂದುಧರಣೆ ಬಲ್ಲ
ಬಂದು ಇಲ್ಲಿಗೆ ಇಂದು ಮರೆತಾರೆ
ಹಿಂದಣ ಕೊಲೆ ನಿನಗೊಂದು ತಪ್ಪದು ||1||
ಹೇಡಿಯಾದ ಮೇಲೆ ರಣದೊಳು
ಕೇಡು ಬಂತು ಮೇಲೆ
ಬೇಡವೊ ಭ್ರಮೆಗಳು ಮಾಡೊ ಧೀರತನ
ಜೋಡು ಗುಂಡು ಎಸೆ ನೋಡು ಬಳ್ಳಿಗೆ ||2||
ಭವದ ಮಾಲೆ ಕೊಲ್ಲೊ ಕೋಟೆಯೊ
ಳವಣಿಸಿ ನೀ ನಿಲ್ಲೊ
ನವಭೂತಧ್ವನಿ ಧವಳ ನಿಶಾನಿಯು
ಭವಮಾಲೆಯ ನೂಕುವ ಗಂಗಾಧರ ||3||

ಕಲ್ಲು ಮೆತ್ತಗೆ ಮಾಡಬೇಕಣ್ಣ
ಕಲ್ಲು ಮೆತ್ತಗೆ ಮಾಡಬೇಕಣ್ಣ
ಬಲ್ಲವರ ಕೇಳಿ | ಕಲ್ಲು ಮೆತ್ತಗೆ ಮಾಡಬೇಕು
ಬಲ್ಲ ಗುರುವಿನ ಪಾದವಿಡಿದು
ಕಲ್ಲು ಕರಗಿ ಮೆತ್ತಗಾಗಿ | ಕಲ್ಲು ಸಕ್ಕರೆಯಾಗುತದೆ ||ಪಲ್ಲವಿ||
ಯಾವುದನ್ನು ತಂದು ಹಾಕಣ್ಣ | ಬೆಂಕಿಯು ತನ್ನ
ಭಾವದಂತೆ ತೋರುತದಣ್ಣ | ದೊಡ್ಡ ಗುರುವಿನ ಪಾದದಲ್ಲಿ
ಜೀವಗುಣವು ಹೋದಮೇಲೆ
ಭಾವದಲ್ಲಿ ಲಿಂಗವು ಆಗ ತಾನೆ ತೋರುತದೆ ||1||
ತಿಪ್ಪೆಯನ್ನು ತೊಳೆದು ಹಾಕಿದ | ಆ ಜಾಲಗಾರನು
ಒಪ್ಪುವಂತ ವಸ್ತು ನೋಡಿದ
ತಪ್ಪು ಒಪ್ಪು ನೋಡ ಬೇಡ ಸರ್ಪಭೂಷಣ ಶಿವನಿಗಿನ್ನು
ಒಪ್ಪಿಸಿರೊ ಕಾಯವನ್ನು ಕಪ್ಪುಗೊರಳನು ಮಾಡುತಾನೆ ||2||
ಮೊಳಕೆ ಬೀಜ ಮೊಳಕೆ ಹಾಕಣ್ಣ | ಅಂತಪ್ಪ ಗುರುವಿನ
ಬೆಳೆಯು ತನ್ನ ಒಳಗೆ ತೋರಿತು | ಥಳಥಳನೆ
ಹೊಳೆವುತದೆ ಸೂರ್ಯನಂತೆ ಪ್ರಣಮ ರೂಪು
ತಿಳಿದು ನೋಡಿರೊ ಗಂಗಾಧರನ
ಕಳೆಯ ಬೇಡಿರೊ ದಿನಗಳನ್ನು ||3||

ಗುಡಿಯ ನೋಡಿರಣ್ಣ
ಗುಡಿಯ ನೋಡಿರಣ್ಣ ದೇವರ ಗುಡಿಯ ನೋಡಿರಣ್ಣ
ಗುಡಿಯ ನೋಡಿರಿ ಪೊಡವಿಗೊಡೆಯನ
ಅಡಗಿ ಕೂಡಿಹದಿ ತಡೆಯದೆ ಮುನ್ನ ||ಪಲ್ಲವಿ||
ಮೂರು ಮನೆಯ ಕಲ್ಲು ಅದು ಬಹು
ಜಾರುವ ಮನೆಗಲ್ಲು
ಧೀರನಾದಡೆ ತೂರಿ ನೋಡಲು
ಭೇರಿ ಮೃದಂಗವು ದಾಮ್ಮಿಂಚಳವದು ||1||
ಆರು ಮೂರು ಕಟ್ಟೆಯ ಮೆಲ್ಲಕೆ
ಏರಿದವನೆ ಗಟ್ಟಿ
ಚೀರುವ ಕಹಳೆ ಭೋರನೇಳಂತ
ಮೂರುವಂದು ಮನೆ ಏರಿ ನೋಡಲು ||2||
ಸಾಗುತೈತೆ ದಿನವು ಬೇಗನೆ
ಪೋಗಿ ನೋಡು ನೀನು
ಆಗೀಗೆನ್ನದೆ ಆಗಲೆ ತೋರುವ
ಯೋಗಿ ಗಂಗಾಧರನಾಗಲೆ ಮುನ್ನಾ ||3||

ಪೂರ್ವಾರ್ಜಿತಂಗಳನು ಮೀರಿ
ಪೂರ್ವಾರ್ಜಿತಂಗಳನು ಮೀರಿ ಬಾಳುವರಾರು
ಪಾರ್ವತಿರಮಣ ಭಿಕ್ಷವ ಬೇಡಿ ತಿರುದುಂಡ
ಗೀರ್ವಾಣ ಋಷಿವರರ ಬಿಡದೆ ಕಾಡುವ ವಿಧಿಯ
ಇನ್ನಾವ ದೇವರು ಗೆಲುವರೈ ||ಪಲ್ಲವಿ||
ಹರಿಯು ಅವತಾರಗಳ ಬಹುವಾಗಿ ಎತ್ತಿದನು
ಸರಿಸಿಜೋದ್ಭವ ಶಿರವ ಹೋಗಾಡಿಕೊಂಡನು
ಸುರಪತಿಗೆ ಶಾಪದಿಂ ಯೋನಿಯಾಯಿತು ದೇಹ
ಶರಧಿಯನು ಋಷಿ ಈಂಟಿದಾ
ಶರಭಾವತಾರ ಯಜ್ಞದಲಿ ದಕ್ಷನ ಶಿರವ
ವೈರದಿಂ ಹತಿಸಿದ ಪ್ರತಿಶಿರವ
ಶರದೊಳಗೆಯೆಚ್ಚ ಶ್ರೀಕೃಷ್ಣನಂಗಾಲ
ಪರಿಹರಿಸುವರ ಕಾಣೆ ನಾನೀ ವಿಧಿಯೆ ಶಿವನೇ ||1||
ಸ್ಮಶಾನವನು ಕಾಯ್ದು ಹರಿಶ್ಚಂದ್ರ ಚಂದ್ರಮತಿಯು
ಶಿಶುವು ಸಹಿತಾ ಕಾಲಕಂಸನಿಗೆ ತೊತ್ತಾದರೂ
ಪಶುಪತಿಯ ಉರಿಗಣ್ಣಿನಲಿ ಭಸ್ಮವಾದನು ಮದನ
ವಸುದೇವ ಸತಿ ಸಹಿತ ಸೆರೆಯೊಳಿರ್ದೂ
ಮೊಸಳೆ ಗಜದಂಘ್ರಿಯನು ಪಿಡಿದು ಬಹುಬಾಧಿಸಿ
ಶಶಿಧರನು ಅರ್ಧನಾರಿಯಾದನು
ಅಸಮಾಕ್ಷನಾ ಸುತಗೆ ಮದುವೆಯಿಲ್ಲದೆ ಹೋಯ್ತು
ಶಶಿಗೆ ವೈರತ್ವದಿಂ ರಾಹು ಕೂಡುತೇ ||2||
ಖಗರಾಜನವ್ವೆಗೇ ದಾಸಿಯಾದಳು ಸವತಿ
ಸಗರ ಸುತರರುವತ್ತು ಸಾವಿರ ಮಡಿದರೂ
ಭಗೀರಥನು ಭಾಗೀರಥಿಗಾಗಿ ತಪಸಿರ್ದ
ಹಗೆಯಾಗಿ ಹರಿಯೊಡನೆ ಹತವಾದ ಕಂಸಾ
ನಗಪತಿಯ ತನುಜ ಭಯದಲ್ಲಿ ಶರಧಿಯ ಪೊಕ್ಕ
ಅಗಜೆಯುಗದಲ್ಲಿ ಕಾಲ ನಿಗ್ರಹಿಸಿದಳು
ಮೃಗದ ಬೇಂಟೆ ಬಲೆಗೆ ಸಿಲುಕಿದಳು
ದಮಯಂತಿ ಅಜ್ಞಾತವಾದ ನಳನೂ ||3||
ನಾರಾಯಣನ ವಾಹನಕೆ ನಾಶಿಕವು ಡೊಂಕಾಯ್ತು
ನಾರದನು ಸ್ತ್ರೀಜನ್ಮವೆತ್ತಿ ತೊಳಲಿದನು
ಮಾರುತನ ತನಯ ಬಾಲವ ಸುಡಿಸಿಕೊಂಡನು
ನಾರಿಯರಿಗೊಳಗಾದ ಶೃಂಗಮುನಿಯಂ
ಮೇರುವೆಯ ಸುತ್ತಿಬಹ ರವಿಯ ಸಾರಥಿಯು ಹೆಳವ
ವಾರುಧಿಯ ಕಟ್ಟಿನೊಳು ಬಂಧನಕ್ಕೊಳಗಾಯ್ತು
ಸೂರ್ಯಭಗ ಅಂಧಕನು ದಂತಹೀನನು
ಸುರಪುರದ ಭೃಗುಮುನಿಯ ಗಡ್ಡಗೆಡಸಿ ||4||
ಭೂಮಜನ ಸಹಿತ ಶ್ರೀರಾಮ ವನದೊಳಗಿರ್ದ
ಕಾಮಿಸಿ ರಾವಣನು ಸೀತೆಯನು ಕದ್ದೊಯ್ದ
ವಾಮನವತಾರದಲಿ ಬಂಧನವಾದ ನಿರ್ಧೂಮ ಹತನಾದ ವಾಲೀ
ಹೋಮವನು ಬಹು ಮಾಡಿ ಶರ್ವನಂತಾ ನೇಮದಲಿ
ಧರ್ಮರಾಯನು ಕಂಕನಾದನೂ ಭೀಮ ಬಾಣಸಿಯಾದ
ಪಾರ್ಥ ಹೆಣ್ಣಾದ ಆ ಮಹಾಸಹದೇವ ತುರುವ ಕಾಯ್ದ ||5||
ಪಾತಕನು ದುಶ್ವಾಸ ದ್ರೌಪತಿಯ ಬಾಧಿಸಿದ
ಸೀತೆಗೋಸ್ಕರ ರಾವಣನು ಹತನಾದ
ಕಾತುರದಿ ದ್ರೌಪತಿಗೆ ಅಳುಪಿ ಕೀಚಕ ಮಡಿದಾ
ಮಾತೆಯನು ಶಿರವರಿದು ಪರಶುರಾಮಾ
ನೀತಿಯಲಿ ಭೂಮಿಯನು ತೊಡೆದ ಕೌರವ ಕೆಟ್ಟ ||6||
ಘಾತಕನು ಶಿಶುಪಾಲ ಮಾಧವನ ಜರೆದು
ಅಳಿದ ಯೋಚನೆಗೆ ಒಳಗಾದ
ಹೊಲವಿಯೊಳಗಜಮಿಳನು ಆ ವಾತಾಪಿ ಜೀರ್ಣವಾದಾ
ವಸುಧೆಯೊಳು ಶಿಶುವ ಅಸುರ ಕೊಂಡೊಯ್ದನು
ದಶರಥ ಕೌಂಡಿಲ್ಯ ಶಾಪದಲಿ ಹೆದೆ ಬಿಟ್ಟ
ಅಸುವನಳಿದು ಸುತರ ಕಾಣದೇ ಹೊಸಸರಳ ಮಂಚದಲಿ ಮಲಗಿದನು
ಭೀಷ್ಮಾಂಕನೂ ಋಷಿಯು ದೂರ್ವಾಸನಿಗೆ ಅಪನಿಂದೆ ಬರಬಹುದೆ
ವಿಷದಿ ಅಳಿದನು ಪರೀಕ್ಷಿತರಾಯನೂ ||7||
ರೇಣುಕಾದೇವಿ ಗಂಡನ ಕೊರಳ ಕೊಯ್ಯಿಸಿದಳು
ತ್ರಾಣವಿಲ್ಲದೆ ಪುರುಷಮೃಗವು ಕಟ್ಟಿನೊಳಗಾಯ್ತು
ಬಾಣಾಸುರನ ತೋಳ ಚಕ್ರಧರ ಖಂಡಿಸಿದ
ದ್ರೋಣಸುತ ವ್ಯಾಧಿಯಲಿ ಕಷ್ಟಬಟ್ಟಾ
ಪ್ರಾಣವನು ಹೋಗಾಡಿಕೊಂಡ ನಾಗಾರ್ಜುನನು
ಏಣಾಂಕ ವಿರಹದಲಿ ಗುರುಪತ್ನಿಗಳುಪಿದನು
ಕ್ಷೋಣಿಯಲಿ ಮಾಂಡವ್ಯ ಶುನಕವನು ಏರಿದನು
ಕಾಣಬಾರದು ನಯನ ಧೃತರಾಷ್ಟ್ರಗೇ ||8||
ಧೃತರಾಷ್ಟ್ರನಾ ರಾಣಿ ಹೊಲೆಯಂಗೆ ಸತಿಯಾದಳು
ಪತಿಹೀನಳಾದ ಮಂಡೋದರಿ ದುಃಖಿಪಳು
ಪತಿವ್ರತೆಯು ತಾರಾದೇವಿ ಕಳೆಗುಂದಿದಳು
ಪತಿನಿಂದ್ಯವ ಕೇಳಿ ಸತಿ ಭಸ್ಮವಾದಳು
ಯತಿಶಾಪದಿಂದ ಗಂಗೆಯು ಶಂಕರನೊಡಗೂಡಿದಳು
ರತಿದೇವಿ ಶಂಭರಗೆ ಸುವ್ವಾಳಿಯಾದಳು
ಖತಿಯಿಂದ ಋಷಿ ಶಪಿಸೆ ಅಹಲ್ಯೆ ಶಿಲೆಯಾದಳು
ಪಿತಗೆ ಮೃತ್ಯುವಾದನೂ ಪ್ರಹ್ಲಾದನು ||9||
ಷಡುಚಕ್ರವರ್ತಿ ಷೋಡಶಮಹಾರಾಯರು
ಪೊಡವಿ ಅಸ್ಥಿರವೆಂದು ಮುಕ್ತರಾದರು ಹಿಂದೆ
ಒಡನೆ ದಿಕ್ಪಾಲಕರು ನವಗ್ರಹ ತಾರೆಗಳು
ಷಣ್ಮುಖನು ತಾಯ ಮಾತನು ಮೀರಿ ಶೇಷನಾದನನಿ
ಮಿಡುಕಿ ಜಡಭರತ ಕೃಷ್ಣಮೃಗದೊಳಗೆ ಜನಿಸಿದನು
ಕಡಲೊಳಗೆ ದಾರಕೆಯು ಕದಡಿತಾ ಕ್ಷಣಕೇ ||10||
ಅತ್ರಿ ಭಾರಧ್ವಾಜ ವಾಲ್ಮೀಕಿ ಗೌತಮರು
ಸತ್ಯನಿಧಿ ಗುರುಶುಕ್ರ ಕಶ್ಯಪನು ಕೌಂಡಲ್ಯ ಮುಕ್ತಿದಾಯಕ ಕಪಿಲ
ಮೌದ್ಗಲ್ಲಿವಂತನೊ ಕಣ್ವಋಷಿಯು
ಅತಿಶಯ ವಶಿಷ್ಠ ವಿಶ್ವಾಮಿತ್ರ ಪರಾಶರರು
ಶ್ರುತಕೀರ್ತಿ ವ್ಯಾಸ ಶುಕ ಸಂನಾಧಿಕರ
ಗತಿಗೆಡಿಸಿಬಿಟ್ಟಿತೊ ಈ ನರರ ಪಾಡೇನು
ಕ್ಷಿತಿಯೊಳಗೆ ವಿಧಿ ದೊಡ್ಡದೈ ಶಿವನೇ ||11||
ಹರಿಹರ ಬ್ರಹ್ಮ ತ್ರೈಮೂರ್ತಿ ಸ್ವರೂಪ ನೀನಾದೆ
ಹರುಷದಿಂ ಶ್ರೀಶೈಲಕ್ಕೆ ಕರ್ತು ನೀನಾದೆ
ಹರನೆ ಗತಿಯೆಂದಿರುವ ಭಕ್ತರಿಗೆ ಭಯವುಂಟೆ
ಚರಣ ಸೇವಕ ಹೊನ್ನನು
ಸ್ಮರಣ ಕೇಳಿಯೊಳಿರಲು ಉರುಗ ರೋಷದಿ ಕಡಿಯೆ
ಧರೆಯ ಮೇಲೊರಗಿದನ ಪರಿಹರಿಸಿ ಪ್ರಾಣವ ಕಾಯ್ದ
ವರ ಕಕೋದ್ಗಿರಿವಾಸ ಗಂಗಾಧರೇಶಾ ಶಿವನೇ
ಪೂರ್ವಾರ್ಜಿತಂಗಳನು ಮೀರಿ ಬಾಳುವರಾರು ||12||

ಅಲ್ಲಮಪ್ರಭು ಲಿಂಗನನುಪಮದಿ
ಅಲ್ಲಮಪ್ರಭು ಲಿಂಗನನುಪಮದಿ ಇರ್ಪತ್ತೈದು ಲೀಲೆಯ
ಬಲ್ಲಷ್ಟ ಪೇಳುವೆನಧಿಕ ಹರುಷದಿಂದಲಿ ಕೇಳಿ ನೀವು ||ಪಲ್ಲವಿ||
ನಿರಹಂಕಾರ ಸುಜ್ಞಾನದೇವಿಯರಿಗವ ವರದನಾಗಿಯಚಲ
ಪರಿಪರಿ ವಿಧದಲಿ ಮೆರೆದು ತಾನು ಬಾಲಲೀಲೆಯ
ಉರುತರ ಯೌವನ ರೂಪ ತಳೆದು ಮಧುಕೇಶನಲ್ಲಿಗೆ ಹೋಗಿ
ಪಿರಿದು ತೋರಿಸಿದ ಸಕಲರಹುದೆನಲು ಮೃದಂಗದ ಲೀಲೆಯ ||1||
ಮಾಯಾದೇವಿ ಮೋಹದಿಂದ ಬಂದಾಲಿಂಗನವ ಮಾಡೆ ಪುಸಿ
ಮಾಯೆಗೆ ಸಿಕ್ಕದೆವೊದಗಿ ತೋರಿದನು ನಿರ್ವಯಲ ಲೀಲೆಯನು
ಆಯಾಸದಿಂ ಕಳವಳದಿ ಮಾಯೆಯು ತನ್ನ ಬೆನ್ನಬಿಡದೆ ನಿಂದು
ಬಾಯಬಿಡೆ ಮಾಯೆ ವಿಮಲೆ ತೋರಿದ ಪ್ರತ್ಯಕ್ಷ ಲೀಲೆಯ ||2||
ಪಥವಿಡಿವಿಡಿದು ಬರುತ ಕಂಡನಲ್ಲಿ ಗೊಗ್ಗಯ್ಯಗಳನು ಸ
ನ್ಮತವಾಗುವಂತೆ ಕಾಣಿಸಿದ ಸಂಭಾಷಣದ ಲೀಲೆಯನು
ಅತಿಶಯವಾದನುಮಿಷದೇವರನು ನಿರೀಕ್ಷಿಸುತ್ತೆ ದೇವ
ಕ್ಷಿತಿಯೊಳು ತೋರಿದ ಇಷ್ಟಲಿಂಗ ಸ್ವೀಕಾರದ ಲೀಲೆಯ ||3||
ಎಸೆವ ಮುಕ್ತಾಯಿ ಮೋಹದಿ ಬಳಲುತಿರೆ ದಯದಿ ತಾನಂದು
ಕುಶಲಜ್ಞಾನವಿತ್ತು ತೋರಿದ ಶೋಕನಿರಸನ ಲೀಲೆಯ
ಒಸೆದು ಸೊನ್ನಲಾಪುರಿಗೈದಿ ತಟಾಕಗಟ್ಟುವಾ ಗುಡ್ಡ
ಶಿಶುಗಳುಂ ಕೈಕೊಂಡ ಶಿಲೆಯ ಕುಸುಮಪೂಜಾಲೀಲೆಯನು ||4||
ಸಿದ್ಧರಾಮನು ಕೋಪದಿಂದಲಿ ನೊಸಲಿನಗ್ನಿಯನು ಬಿಡಲು
ಸಿದ್ಧನಾದನು ನಿವೃತ್ತಿಯ ಮಾಡಿ ತೋರ್ದ ಕರುಣ ಲೀಲೆಯ
ಉದ್ಧರಿಸುವೆನೆಂದು ಮರುಳಶಂಕರನಿದ್ದೆಡೆಯ ತೋರಿ ನಿ
ದದ್ವಯಬೋಧೆಇಂದೊಲಿದಿತ್ತನು ಮೋಕ್ಷವರದ ಲೀಲೆಯ ||5||
ವಿನುತ ಬಸವ ಮೊದಲು ಪ್ರಮಥರಧಿಕಾರವನರಿತು ತೋರಿ
ದನು ಇಷ್ಟಲಿಂಗಗತಿಯ ಮಾರ್ಗದ ಸುವಿಸ್ತರದ ಲೀಲೆಯ
ಘನತರದ ಯೋಗವಿಂತಿದ ನೀವು ಮಾಡೆಂದು ಪೇಳ್ದು ತೋರು
ತನುನಯದ ಸಾಧಕಾಂಗದ ಗತಿಯುಪದೇಶದ ಲೀಲೆಯ ||6||
ಅಕಳಂಕ ಗುರುವನರಸಿ ಕಂಡ ಮಹಾದೇವಿಯಕ್ಕಗಳಿಗೆ
ಸುಖಮುಖದರಿವ ಕಾಣಿಸುವ ತೆರದ ಅನುಗ್ರಹಹ ಲೀಲೆಯ
ನಿಖಳ ವಿದ್ಯೆಗಳ ಸಾಧಿಸಿ ಸಿದ್ಧನಾದೆನೆಂದಿರ್ಪ ಗೋರ
ಕ್ಷಕನ ಹಮ್ಮನು ಕೆಡಿಸುವ ಪರೀಕ್ಷೆಯ ಪಾಲನದ ಲೀಲೆಯ ||7||
ತವೆ ಮುದವೆತ್ತು ಸಾರಿ ಋಷಿಗಳಾಶ್ರಮವನ್ನು ಪೊಕ್ಕು ಕೇಳಿ
ದವರವರನುವೆಂತಂತು ಸುರಿದ ಬೋಧಾಮೃತದ ಲೀಲೆಯ
ಭವದ ಕೆಡಿಪರಲ್ಲೀತನಲ್ಲವೆಂಬಂತೆ ಬಂದಾ ವ್ಯಾಧ
ಗವಿರಳ ಮುಕ್ತಿಯನಿತ್ತರರೇ ಉದ್ಧರಣದ ಲೀಲೆಯ ||8||
ಅಪರಿಮಿತ ದೇವಾಲಯ ತೀರ್ಥಕ್ಷೇತ್ರಾದಿಗಳ ತನ್ನ
ವಿಪುಳ ಪಾದದ ಸೋಂಕಿನಿಂದುದ್ಧರಿಸಿದ ನಿಜದ ಲೀಲೆಯ
ಚರಿಪರಿಗತಿ ಸಿದ್ಧಿಯನುಳ್ಳ ಸವಾಲಕ್ಷ ಪರ್ವದಲಿ ನೋ
ಳ್ಪರುಪಮೆಗೆ ನಿಲುಕದ ಸುಖದೊಳಿಪ್ಪ ಸುಸಮಾಧಿ ಲೀಲೆಯ ||9||
ಮಿಗೆ ತನ್ನ ದರುಶನಕಾಪೇಕ್ಷಿಪರೆಂಬುದನು ತಿಳಿದು ಮನ
ಸೊಗಯಿಪ ಬಸವಣ್ಣ ಗಣಕೆ ತೋರಿದ ವಿಕಟಾಂಗ ಲೀಲೆಯ
ಜಗದೊಳಚ್ಚರಿಯಾದ ಕಲ್ಯಾಣಕೆ ಪ್ರವೇಶವಾಗಿ ನೆರೆ
ದಗಣಿತ ಜನಕೆ ತೋರಿದಮಂಗಳದ ಉತ್ಸಾಹ ಲೀಲಕ ಮೂಜಗವರಿಯೆ ಕೆಡಿಸಿ
ಒಪ್ಪವುಳ್ಳವನಂತೆ ವೋಜೆಯಲ್ಲಿ ನಡೆವನ ||3||
ಜೂದನಾಡಿ ಸೋಲಲಾಗ ಜೂದುಗಾರಚ್ಯುತನಿಂದೆ
ಮೇದಿನಿಯರಿಯೆ ಪೆಟ್ಟಮೇದು ಮೇರೆಯಿಲ್ಲದಾತ ||4||
ರಂಗನನು ಹೆಣ್ಣಮಾಡಿ ರಮಿಸಿ ಗಂಡ ಭೈರವನ
ಹಿಂಗದೆ ಪುಟ್ಟಿಸಿ ಶಿವಲಿಂಗೇಶನೆಂದೆನಿಪನ ||5||

ಬಾರೋ ಬಾರೋ ಚೆನ್ನಿಗ
ಬಾರೋ ಬಾರೋ ಚೆನ್ನಿಗ ಮನೆಗೆ ಬಾರೋ ಬಾರೋ
ಬಾರೋ ಚೆನ್ನಿಗ ಮನೆಗೆ ವಾರಿಜಾಂಬಕಿಯೊಳು ಮ್ಯರೆಯಾಗಿರೆ
ನೀರೆ ಸೈರಿಪಳೆಂತೊ ಚದುರ ||ಪಲ್ಲವಿ||
ಚಿಕ್ಕಂದು ಮೊದಲಾಗಿ ಲದಲಿ ತಿಳುಪಿದ ಕಾಲಜ್ಞಾನ ನಿರುಪಮ ಲೀಲೆಯ
ಅಹುದಹುದಿಂತಲ್ಲವಿನ್ನು ತೋರುವನಂತ ಲೀಲೆಯಲಿ
ಮಹಿಮರೊಳೆಸೆದು ತೋರುವ ಪ್ರಭುಗಂಗೇಶ ಲಿಂಗಲೀಲೆಯ ||13||

Categories
Tatvapadagalu ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು

ಶಂಕರದೇವನ ತತ್ವಪದಗಳು

ಮರುಳು ಮನವೆ
ಮರುಳು ಮನವೆ ನೀ ಸ್ಥಿರ ಪಡೆದ ಹಾಂಗೆ
ಮದಡನಾಗಿರಬೇಡ ಉಳ್ಳಲ್ಲಿಯೆ ಶರೀರ
ಶಿವನ ಪೂಜೆಯ ಮಾಡು ||ಪಲ್ಲ||
ಹಂಸಗಮನೆಯ ಪತಿಯ ಶಿರ ಹೋಯಿತು
ವಿಂಶತಿಯರ್ಧ ಕಂಧರನಳಿದ
ಕಂಸನ ಜಾಮಾತನೆರಡೈದು ಭವದಲ್ಲಿ
ಸಂಶಯವಿಲ್ಲದೆ ಬಂದನೆಂದರೆಯ ||1||
ದಕ್ಷವಿರಿಂಚಿಗೆ ಕುರೆದಲೆಯಾಯಿತು
ಇಕ್ಷುಜಾಪನನುರಿಯೊಳಕೊಂಡಿತು
ಇಕ್ಷಾಕುಸಂಭವ ಸಂಗ್ರಾಮದಲ್ಲಿ ಬಿದ್ದ
ನಕ್ಷತ್ರರಾಜ ಕಳಾಹೀನನಾದ ||2||
ಷಡುಚಕ್ರವರ್ತಿಗಳಳಿದರು ಷೋಡಶ
ಪೊಡವಿಪತಿಗಳೆಲ್ಲ ಲಯವಾದರು
ಮಡಿದರು ನವನಾಥಸಿದ್ಧರು ದೇವರ್ಕ
ಳೊಡೆಯನ ತನುವೆಲ್ಲ ನಾಣು ರೂಪಾಯಿತು ||3||
ಎಣಿಸುವರದ್ರಿಗೆ ಸಮವಹ ದಾನವ
ಗಣ ದೇವಗಣವೆಲ್ಲ ಮೃತವಾದರು
ಅಣುವಿಗೆ ಸಮನಹ ನಿನ್ನ ಮರಣ ಒಂದು
ಕ್ಷಣವೊ ಕ್ಷಣಾರ್ಧವೊ ಮರಣವೆಂದರೆಯ ||4||
ಬಂದುದೆ ಸಾಕು ಬಾರದುದ ಬಯಸಬೇಡ
ಇಂದಿಗೆ ನಾಳಿಗಿನ್ನೆಂತೆನುತ
ದಂದುಗ ಧಾವತಿಗೊಳಗಾಗಿ ಕೆಡಬೇಡ
ತಂದೆ ಶಂಕರನ ಪೂಜಿಸಿ ದೈನ್ಯನಹುದಿನ್ನು ||5||

ಎಚ್ಚತ್ತಿರೆಚ್ಚತ್ತಿರಾ
ಎಚ್ಚತ್ತಿರೆಚ್ಚತ್ತಿರಾ ಕಾಲನ
ನಚ್ಚಿನ ಭಟರು ಜೀವವನೊಯ್ಯಲು ಬಂದ
ರೆಚ್ಚತ್ತಿರೆಚ್ಚತ್ತಿರಾ ಹುಚ್ಚು ಮನವೆ ||ಪಲ್ಲ||
ಇಂದು ಬಹರೊ ನಾಳೆ ಬಹರೊ ನಾ
ಡಿದ್ದು ಬಹರೆಂದೆಣಿಸದೆ ಬಯಲ
ದಂದುಗಕೊಳಗಹೆ ಅದೆ ನೋಡು ಹೊಗ
ಬಂದರೆ ಬಂದರೆ ಬಂದರೆಚ್ಚತ್ತಿರಾ ||1||
ಅಡವಿಯ ಕಿಚ್ಚಿನಂತೆ ವಡಬನಂತೆ ಬರ
ಸಿಡಿಲಂತೆ ಸಿಂಹದಂತೆ
ಹಿಡಿದ ಹೆಬ್ಬುಲಿಯಂತೆ ಗಿಡುಗನಂತೆ
ಘಡಿಸುತಲಾ ಬಂದರೆಚ್ಚತ್ತಿರೆಚ್ಚತ್ತಿರಾ ||2||
ಮೊಳಸಿಯಾಗಿ ಕಾಮತೆ ಹೂತಿ ಹುಣ್ಣು ಹು
ಗುಳಾಗಿ ಸೂಲೆ ಸಂಘ್ರಾಣಿಯಾಗಿ
ಮೂಲವ್ಯಾಧಿಗಳಾಗಿ ರೋಗರೂಪಿನ ಜವ
ನಾಳುಗಳಾ ಬಂದರೆಚ್ಚತ್ತಿರೆಚ್ಚತ್ತಿರಾ ||3||
ಬದುಕಬೇಕೆಂಬಾಸೆ ನಿನಗೆ ಯಮನವರಿಗೆ
ಎದೆಯನೊದೆದು ನಿನ್ನ ಜೀವವ
ಚದುರಿನಿಂದೊಯ್ಯಬೇಕೆಂದು ಕವಿದು ಬಂದು
ಕದುಕಿಸದಿರರು ಕಂಡ ಮನವೆ ||4||
ದೇಹವಿಡಿದ ಬಳಿಕಜನಾಗಲುರಗಾರಿ
ವಾಹನ ತಾನಾದಡೆಯಾಗಲಿ
ಮೋಹಿಯಂತಕ ಮುರೆಯದೆ ಬಿಡ ಭಜಿಸು ನಿ
ರ್ದೇಹಿ ಶಂಕರಲಿಂಗನ ||5||

ಎಚ್ಚತ್ತಿರೆಚ್ಚತ್ತಿರೆಲೆ ನಿನ್ನಾಯುಷ
ಎಚ್ಚತ್ತಿರೆಚ್ಚತ್ತಿರೆಲೆ ನಿನ್ನಾಯುಷ
ನಿಚ್ಚ ನಿಚ್ಚ ಸವೆಸವೆದು ಬರುತಿದೆ ||ಪಲ್ಲ||
ನಿನ್ನಿಂದ ನೀನೆ ಪರಮನ ಗಣವಾಗಿ
ನಿನ್ನಿಂದ ನೀನೆ ಜೀವನ ಗುಣವಾದೆ
ನಿನ್ನಿಂದ ನೀನೆ ಕುಸುಮ ಬಾಣನ ಬಲೆಗೆ
ಮುನ್ನವೆ ನೆರೈ ಹರಸಿದ ಕುರೆಯಾದೆ ||1||
‘ಕೀಲೋತ್ಪಾಟೇನ ವಾನರ’ನೆಂಬ ಶ್ರುತಿ
ಯಾಳಾಪದಂತೆ ನಿನ್ನೊಳು ನೀನೆ ಸೊಕ್ಕಿ
ಢಾಳಿಸಿ ಗೋಳುಂಡೆಗೊಳಿಸುವ ಸಂಸಾರ
ಕೋಳಕೆ ಬಿದ್ದು ಗತಿಗೆ ದೂರವಾದೆ ||2||
ಜಲಬುದ್ಭುದವಹ ದೇಹವೆನಲು ಶ್ರುತಿ
ಅಲಸುವದೇಕೋ ಶಿವನ ಸೇವೆಗೆ
ಎಲೆಲೆ ಮರ್ಕಟಮನವೆ ನಿನ್ನ ಪಾಡೇನು
ಬಲವಂತ ದೇವ ದಾನವರಲ್ಲ ಮಡಿದರು ||3||
ವರ ಮೋಕ್ಷವ ಸಾಧಿಸೆಲೆ ಮಗನೆಯೆಂದು
ಗುರುರಾಯ ಪೇಳ್ದನಲ್ಲದೆ ಜಡ ಜನನ
ಮರಣಂಗಳೊಳು ಬಿದ್ದು ಹೊರಳೆಂದು ಪೇಳ್ದನೆ
ಮರುಳುಮನವೆ ನಿನಗೇತಕೊ ಮರವೆ ||4||
ಇನ್ನಾದೊಡೆ ಶಿವಸೇನೆಯೊಳಿರ್ದೆಸೆ
ವುನ್ನತ ಭವರೋಗವ ಪರಿಹರಿಸಿ
ಎನ್ನ ವರಗುರು ಶಂಕರನಡಿಯೊಳ
ಭಿನ್ನವಾಗಿಹುದೆ ನೆಲೆ ಮೂಢ ಮನವೆ ||5||

ಬನ್ನ ಬಡದೆ ಕೆಡದೆ
ಬನ್ನಬಡದೆ ಕೆಡದೆ ಶಿವಶಿವಯೆನ್ನು
ಎನ್ನಲೆ ಪಾಪಿ ಮನವೆ ||ಪಲ್ಲ||
ಹೆಣ್ಣೊಂದು ರೂಪಾಗಿ ಹೊನ್ನೊಂದು ರೂಪಾಗಿ
ಮಣ್ಣೊಂದು ರೂಪಾಗಿ ಮರೆಮಾಡಿ
ಬಣ್ಣಬಚ್ಚಣೆಯ ರಂಜಕ ತೋರಿಸಿ ನಿನ್ನ
ಕಣ್ಣುಗೆಡಿಸಿ ನಿನ್ನ ಕೊಲಾಲಾ ಬಂದರದೆಯದೆ ||1||
ರಸ ಗಂಧ ರೂಪ ಸಬುದ ಪರುಷನವೆಂಬ
ಹೆಸರೆನಿಸಿದ ಕಳ್ಳರೈವರು
ಮುಸುರೆ ಮುತ್ತಿ ಹಿಸಿಹಿಸಿದು ತಿಂದು ನಿನ್ನ
ಅಸುವನಂತಕಗೀಯಲಾ ಬಂದರದೆಯದೆ ||2||
ಕಾಮವೆಂಬ ಕ್ರೋಧವೆಂಬ ಲೋಭವೆಂ
ಬಾ ಮದ ಮತ್ಸರವೆಂದೆಂಬ
ತಾಮ ಸರೂಪಿನ ಹಗೆಗಳಾರು ಮಂದಿ
ನಾಮಭೇದದಿ ಕೊಲಲಾ ಬಂದರದೆಯದೆ ||3||
ಕರಣ ನಾಲ್ಕು ಮಡನೆಂಟು ವ್ಯಸನವೇಳು
ನೆರೆದು ದೇಹವನಿಬ್ಬಗಿಯ ಮಾಡಿ
ಹರಣವ ಕೊಂಡೊಯ್ದು ಜನನ ಮರಣವೆಂಬ
ಸರಧಿಯೊಳಗದ್ದಲಾ ಬಂದರದೆಯದೆ ||4||
ಕಿಚ್ಚಹಾಯಿವವಳಂತೆ ಒಚ್ಚಿ ಹೊತ್ತಿನ ಭೋಗ
ದಿಚ್ಫೆಯನೆ ಮಚ್ಚಿ ಮರೆಯದೆ
ನಿಚ್ಫ ನಿಚ್ಚ ನಮ್ಮ ಶಂಕರಲಿಂಗನೊಳು
ಬೆಚ್ಚಂತಿರುಕೈಯದು ಹುಲ್ಲು ಸಾರಿದೆ ||5||

ಏಕೆ ಮಯಿಮರೆದಿಹೆ
ಏಕೆ ಮಯಿಮರಿದಿಹೆಯನೇಕ ನರಸುರರಳಿದ
ರೀ ಕಪಟ ಕಾಮವಿದು ನಿನಗೆ ಶಾಶ್ವತವೇ ಪಿ
ನಾಕಿಯ ಪದಾಂಬುಜವ ಮುಟ್ಟಿ ಪೂಜಿಸಿ
ಭವದ ವ್ಯಾಕುಲನನಳಿದು ಕಳೆಯ ||ಪಲ್ಲ||
ತನುವ ದಂಡಿಸಿ ತಪವ ಮಾಡು ತಪಕಾರದೊಡೆ
ಮನ ಮುಟ್ಟಿ ಈಶ್ವರಾರ್ಚನೆಯ ಮಾಡು ಈಶ್ವರಾ
ರ್ಚನೆಗೆ ನೀನಲಸಿದಡೆ ಧನ ಧಾನ್ಯ ವಸ್ತ್ರವಾಹನ ರಸ ರಸಾನ್ನಗಳ
ವಿನಯದಿಂ ಸತ್ಪಾತ್ರಜನಕೆ ಕೊಡು ಸತ್ಪಾತ್ರ
ಜನಕೆ ಕೊಡಲರಿಯದಡೆ ಗುರು ಹಿರಿಯರಿಗೆ ನಮಿಸು
ಇನಿತರೊಳಗೊಂದು ನಿನಗಿಲ್ಲದಡೆ ಮುಂದೆ ಕಾಲನ ಬಾಧೆ ಸಿರಿದಪ್ಪುದೋ ಆತ್ಮನೆ ||1||
ಇರಿ ಕರುಳನುಗಿ ಬಸುರ ಬಗಿ ಅಡ್ಡ ಹಿಡಿ ಕಾಸು
ಕೊರೆ ಕುಸುರಿದರಿ ಕೆತ್ತು ಒರಸು ಕಿವಿ ಮೂಗನರಿ
ಇರಿದೆದೆಯನೊದೆ ಬಸಿದಶೂಲದಲ್ಲಿ ತೆಗೆ ಬಾಯ ಸೀಳು ನಾಲಗೆಯ ಕೀಳು
ಅರೆಯಟ್ಟಿ ಮೆಟ್ಟಿ ಕೊಲು ತಿವಿ ಎಲುವ ಮುರಿ ತಲೆಯ
ದರಿಯ ಲೇಸು ಕೆಡಹಿ ದುರುದುರಿಪ ಕಿಸುಕುಳವ ಬಾ
ಯ್ಗೆರೆ ಮುಖವನರಿಯೆಂಬ ಜನನದೂತರ ಗೆಲುವ ತಿಳಿ ಬೇಗ ಬೇಗ ಮನವೆ ||2||
ಅಶನಕ್ಕೆ ಢಾವರಿಸುವಂತೆ ಲಲಿತಾಂಗಿಯರ
ವಿಷಯಕ್ಕೆ ತಲ್ಲಗಸುವಂತೆ ಅರ್ಥಾಪೇಕ್ಷೆ
ವ್ಯಸನಕ್ಕೆ ಮುಂದುವರಿವಂತೆ ಮದ ನಿದ್ರೆಗಳಿಗೊಸೆದು ಲವಲವಿಸುವಂತೆ
ಅಸಿತಗಳ ಹಸಿತಮುಖ ಭಸಿತಧರ ತಿಸುಳಕರ
ಸಸಿಕಳಾವತಾಳಿ ಗುರುಶಂಕರನ ಪದವನ
ರ್ಚಿಸು ನಿನ್ನನಲೆವ ಜನ್ಮದ ಜಾಡ್ಯ ಜಾರುವುದು
ಹುಸಿಯಲ್ಲವಿದು ದಿಟಂ ಕಾಣ ಮನವೆ ||3||

ಧರೆಯೊಳರಿದಲ್ಲದಾಚರಣೆಯೊಳು
ಧರೆಯೊಳರಿದಲ್ಲದಾಚರಣೆಯೊಳು ಸಂಚರಿಸಿ
ಮರಳಿ ಭವಂಗಳೊಳು ಬೀಳದೇ ಧಾತ್ರಿ
ಗರಿದೆನಿಪ ಮಾರ್ಗದೊಳು ನಡೆದು ಮೋಕ್ಷಾಂಗನೆಯ ಸೀಮೆಯೊಳು ಬೆರಸು ಮನವೆ ||ಪಲ್ಲ||
ನಿಂದಿಸೂದರಿದಲ್ಲ ಪರರನತಿ ಚಂದದಲಿ
ಕ್ರೀಡಿಸೂದರಿದಲ್ಲ ಪರಸತಿಯರಿಗೆ ಮನವ
ನಂದಿಸೂದರಿದಲ್ಲ ಸುಜ್ಞಾನಜ್ಯೋತಿಯನು ನಂದಿಸೂ ದರಿದಲ್ಲ ಹೋ
ವಂದಿಸೂದರಿದು ಹಿರಿಯರಿಗೆ ಕರಣೇಂದ್ರಿಯವ
ಬಂಧಿಸೂದರಿದು ಸಟೆ ಕುಟಿಲ ಕುಹಕನ ಕೊಡಹಿ
ಕುಂದಿಸೂದರಿದು ಮುನಿವರಿಗೆ ಕರುಣದ ಕಡಲ ಸಂಧಿ ಸೂದರಿದು ಮನವೆ ||1||
ಗೆಲುವುದರಿದಲ್ಲ ಸಾಧುಗಳ ನೆರೆ ನಂಬಿದರ
ಕೊಲುವಡರಿದಲ್ಲ ಮಿಗೆ ಬಾಯ್ಬಾತು ಬೇಡಿದುದ
ಮೆಲುವುದರಿದಲ್ಲ ಲೌಕಿಕರೊಡನೆ ನಲಿನಲಿದು ಕೆಲೆವುದರಿದಲ್ಲಲ್ಲ ಹೋ
ಒಲಿವುದರಿದಭವ ಪೂಜೆಗೆ ಮದನಸರಕೆ ಮಾ
ರ್ಮಲೆವುದರಿದೊಡವೆಯನು ಸತ್ಪಾತ್ರಕಿತ್ತು ಮನ
ನಲಿವುದರಿದಮಲ ಶಿವಶಾಸ್ತ್ರ ಪ್ರಸಂಗದೊಳು ಸಲುವುದರಿದಯಿಸೆ ಕಾಣ ||2||
ಅಪಹರಿಸಿ ಬಾಳ್ವುದರಿದಲ್ಲ ವಿತ್ತವ ಗಳಿಸಿ
ಕೃಪಣನಾಗಿರ್ಪದರಿದಲ್ಲ ಅರಿಷಡ್ವರ್ಗ
ಕಪಟದೊಳು ಕಂಗೆಡುವುದರಿದಲ್ಲ ಅತ್ಯಂತ
ಚಪಳತನವರಿದಲ್ಲ(ಲ್ಲ)
ತಪವ ಮಾಡೂದರಿದು ಬಿಡದೆ ಪಂಚಾಕ್ಷರಿಯ
ಜಪವ ಮಾಡೂದರಿದಿವೆಲ್ಲ ಗುರುಶಂಕರನ
ಕೃಪೆ ದೊರಕದಿಲ್ಲಾಗಿ ಶಿವಸೇವೆಯಲಿ ನಿಪುಣನಾಗಿರು ಸಾರಿದೆ ಮನವೆ ||3||

ಅಂಗವಿಕಾರಕೆ
ಅಂಗವಿಕಾರಕೆ ಮುಂದುವರಿವ ಮನ ಘನ
ಲಿಂಗದ ಸೇವೆಯನೊಲ್ಲದಿನ್ನೆಂತೊ ||ಪಲ್ಲ||
ಮೇದಿನಿಯೆಲ್ಲವ ತೊಳಲಿ ಬಹರೆನ್ನ
ಪಾದವೆರಡು ನಲಿದಾಡುತಿವೆ
ಸಾದರದಿಂ ಪತ್ರೆ ಪುಷ್ಪವ ತಹುದಕ್ಕೆ
ಹೋದೆನೆಂದರೆ ಕಾಲೇಳವೆಂತೊ ||1||
ನೋಡಿದರೆ ಚದುರಂಗ ನೆತ್ತ ಪಗಡೆಗಳ
ನಾಡುವರೆನ್ನಯ ಹಸ್ತಗಳು
ನೀಡಿ ನಿಲುಕುತಿವೆ ಪುರಹರನ ಪೂಜೆ
ಮಾಡಿಹೆನೆಂದರೆ ಕೈಯೇಳವಯ್ಯ ||2||
ಜಾಳ ಮಾತುಗಳನಾಡುವರೆ ಎನ್ನ
ನಾಲಗೆ ಮಾರುದ್ದ ಬೆಳವುದು
ಮೇಲೆ ಪಂಚಾಕ್ಷರಿಯ ಜಪಿಸೇನೆಂದರೆ
ನಾಲಗೆ ಹಿಂದಕೆ ಹೋಗುತಿದೆಂತೊ ||3||
ಕಾಲು ಜಾರಿ ಧರೆಯ ಮೇಲೆ ತಲೆಯೂರಿ
ಬೀಳುವರೆನ್ನ ಶಿರ ಮಣಿವುದು
ನೀಲಕಂಧರ ನಿಮ್ಮ ಚರಣ ಕಮಲಕೆ
ಬೀಳೆಂದರೀ ಶಿರ ಮಣಿಯದಿನ್ನೆಂತೊ ||4||
ಎನ್ನ ಪಾದ ಹಸ್ತ ನಾಲಗೆ ಶಿರಗಳ
ಭಿನ್ನ ಜಡತ್ವವ ತೊಲಗಿಸಿ
ನಿನ್ನ ಭಕ್ತಿಯ ಪ್ರಸಾದವನೊಲಿದಿಕ್ಕಿ
ಮನ್ನಿಸಬೇಕಯ್ಯ ಶಂಕರಲಿಂಗ ||5||

ಅನ್ಯಕಾಸಿ ಮನವೆ
ಅನ್ಯಕಾಸಿ ಮನವೆ ಸರ್ವ
ಸನ್ಯಾಸಿಯಾಗಿರು ಬೇಡ ನೀನರಿಯೆ
ಹರಿಯಾದಡಾಗಲಿ ಅಜನಾದಡಾಗಲಿ
ಸುರಪತಿ ತಾನಾದಡೆಯಾಗಲಿ
ಅರಿದು ಮರೆದು ಪರ ಸತಿಗಳುಪಿದ
ಡಿರಿದು ಸುಡದೆ ಬಿಡುವರೆ ಯಮದೂತರು ||1||
ಶರನಿಧಿಯೊಳಗಡಗಿರಲಷ್ಟದಿಕ್ಕಿನ
ಗಿರಿಯು ಗಹ್ವರದ ತಪ್ಪಲಿನೊಳಿರೆ
ಅರಿದರಿದಡೆಗೊಡ್ಡಿ ಕಡಿಯದೆ ಬಿಡುವರೆ
ಪರಧನ ಕಳುಪಿದ ನರರ ನಿರಂತರ ||2||
ಬಲ್ಲಿದನಾಗಲಿ ಸಕಲ ಪುರಾಣವ
ಬಲ್ಲ ವಿದ್ವಾಂಸನಾದಡೆಯಾಗಲಿ
ನಿಲ್ಲದೆ ಪರನಿಂದೆ ಪರಹಿಂಸೆ ಮಾಡುವ
ಖುಲ್ಲರ ಕೊಲ್ಲದಿಹರೆ ಯಮದೂತರು ||3||
ಕೀವಿನ ಕೊಂಡದೊಳದ್ದೆಂಬ ಹುಳುವಿನ
ಭಾವಿಯೊಳಗೆ ಕಟ್ಟಿ ಕೆಡೆಹೆಂದೆಂಬ
ತೀವಿದಮೇಧ್ಯವ ತಿನಿಸೆಂಬ ಕಾಲನ
ನಾವ ತಪಸ್ಸಿನ ಬಲುಹಿಂದ ಗೆಲುವೆ ||4||
ಹುಲ್ಲ ಹಿಡಿದು ಸಾರಿದೆ ನಾ ಸಾರಿದೆ
ಎಲ್ಲರರಿಯೆ ಸಾರಿದೆ ಸಾರಿದೆ
ಬಲ್ಲಡೆಮ್ಮಯ ಗುರುಶಂಕರಲಿಂಗನ
ಮೆಲ್ಲಡಿವಿಡಿದಪಹರಿಸು ಕೃತಾಂತನ ||5||

ಉಬ್ಬಬೇಡ ಮನವೆ
ಉಬ್ಬಬೇಡ ಮನವೆ ಉಬ್ಬಬೇಡ ನಿನ್ನ
ಗಬ್ಬಿತನವ ಮಾಣೆಯ ಮನವೇ ||ಪಲ್ಲ||
ಇದಿರ ನೋಯಿಸಿ ಬಂದುದರವು ಹೊರದರೆ
ಬದುಕುಂಟು ಮುಂದೆ ಕಾಲನಪುರದೊಳಗೇ ||1||
ಉಂಟಾದರುಂಡು ಇಲ್ಲದಿರೆ ನೀ ಹಸಿದಿರು
ಎಂಟೊಡಲಭವನನೊಲಿಸಿಕೊಳ್ಳುತ್ತಿರಾ ||2||
ಜಪವಿಲ್ಲದ ತಪವಿಲ್ಲದ ದಯವಿಲ್ಲ ಧರ್ಮವಿಲ್ಲ
ಸುಪದವ ಬರಿದೆ ಬಯಸಿದರೆ ಬಹುದೇ ||3||
ಒಂದರ ಲೇಸಿಲ್ಲ ನೀನಾವ ಮೋರೆಯ
ಮುಂದಿಟ್ಟುಕೊಂಡು ಕೈಲಾಸಕ್ಕೆ ಹೋಹೆ ||4||
ಶರೀರ ಸುಖವ ಬಿಟ್ಟು ಗುರುಶಂಕರೇಶನ
ಚರಣವಿಡಿದು ಭವ ಸರಧಿಯ ನೆಗೆಯಾ ||5||

ಹೊತ್ತ ಹಾರು ಮನವೆ
ಹೊತ್ತ ಹಾರು ಮನವೆ ನಾ ನಿನಗಾರೆ ಮನವೆ
ನೀನೆನ್ನ ಗಾರುಮಾಡಿಯೆ ಭವಕೆ ಬರಿಸಿದೆಯ ಮನವೆ ||ಪಲ್ಲ||
ವಿಷಯದೊಳು ವಿಸಟಂಬರಿವ ದುವ್ರ್ಯಸನಿ ಮನವೆ ನಾ ನಿನ್ನ
ದೆಸೆಯೊಳಂತಕನ ಬಲೆಗೆ ಸಿಕ್ಕಿದೆ ಹಿಸುಣಿ ಮನವೆ ||1||
ಡಂಬ ಮನವೆ ವೃಥಾ ಹೆರರನಲತಿಂಬ ಮನವೆ ನಾ ನಿನ್ನ
ಬೆಂಬಳಿಯೊಳಾಚರಿಸಿ ಕೆಟ್ಟೆನು ಶುಂಭ್ರ ಮನವೆ ||2||
ಹಲವ ನೆನನೆನದಲವರಿದು ಹಂಬಲಿಪ ಮನವೆ ನಾ ನಿನ್ನ
ನಿಲಿಸಲರಿಯದೆ ಮದಡನಾದೆನು ಮಲಿನ ಮನವೆ ||3||
ಆರನಾದಡೆ ಬಳಲಿಸುವೆ ಭೂಭಾರಿ ಮನವೆ ನಾ ನಿನ್ನ
ಸೇರಿ ಬಲು ಸಂಸಾರಿಯಾದೆನು ಚೋರ ಮನವೆ ||4||
ಜನನರಿಪು ಗುರು ಶಂಕರೇಶನ ಮಿಸುಪ ಚರಣಾಂಭೋಜನ
ನೆನಯಲೊಲ್ಲದೆ ಬರಿದೆ ಜಿನುಗುವ ಬಿನುಗು ಮನವೆ ||5||

ಏನ ಮಾಡುವೆನೀ ಮನಂ
ಏನ ಮಾಡುವೆನೀ ಮನಂ ಶತಕೋಟಿ ಪಾಪಕೆ ಹೇಸದು
ಏನ ಮಾಡುವೆನೀ ಮನಂ ಜಡಜನ್ಮವಾರ್ಧಿಯನೀಸದು ||ಪಲ್ಲ||
ಏನ ಮಾಡುವೆನೀ ಮನಂ ತ್ರಿವಿಧಪ್ರಸಾದವನೊಲ್ಲದು
ಏನ ಮಾಡುವೆನೀ ಮನಂ ಷಡಾಕ್ಷರಂಗಳನೊಲ್ಲದು
ಏನ ಮಾಡುವೆನೀ ಮನಂ ರಿಪುಕಾಮಬಾಣನ ಗೆಲ್ಲದು
ಏನ ಮಾಡುವೆನೀ ಮನಂ ಕುಲದರ್ಪಸರ್ಪನ ಕೊಲ್ಲದು ||1||
ಏನ ಮಾಡುವೆನೀ ಮನಂ ಷಡುವರ್ಗಮಂ ಕೆಡೆಮೆಟ್ಟದು
ಏನ ಮಾಡುವೆನೀ ಮನಂ ಅಧಿಕಾಸೆಯಂ ಅರೆಯಟ್ಟದು
ಏನ ಮಾಡುವೆನೀ ಮನಂ ಕರಣೇಂದ್ರಿಯಂಗಳ ಕಟ್ಟದು
ಏನ ಮಾಡುವೆನೀ ಮನಂ ಶಿವ ನಿಮ್ಮ ಪದವ ಮುಟ್ಟದು ||2||
ಏನ ಮಾಡುವೆನೀ ಮನಂ ಗುರುಪಾದ ಸೇವೆಯ ಹಾರದು
ಏನ ಮಾಡುವೆನೀ ಮನಂ ಹರಭಕ್ತರಿಚ್ಫೆಗೆ ಬಾರದು
ಏನ ಮಾಡುವೆನೀ ಮನಂ ದಯ ಧರ್ಮ ಗೊಟ್ಟಿಗೆ ಸೇರದು
ಏನ ಮಾಡುವೆನೀ ಮನಂ ಚರಲಿಂಗ ತುಷ್ಟಿಗೆ ಕೋರದು ||3||
ಏನ ಮಾಡುವೆನೀ ಮನಂ ಕುಟಿಲಪ್ರಪಂಚಿಗೆ ಬೆಚ್ಚದು
ಏನ ಮಾಡುವೆನೀ ಮನಂ ಮದಮತ್ಸರಂಗಳ ಮುಚ್ಚದು
ಏನ ಮಾಡುವೆನೀ ಮನಂ ಪರಮಾರ್ಥಬುದ್ಧಿಯ ನೆಚ್ಚದು
ಏನ ಮಾಡುವೆನೀ ಮನಂ ಸಹಜಾನುಭಾವವ ಮೆಚ್ಚದು ||4||
ಏನ ಮಾಡುವೆನೀ ಮನಂ ಪ್ರಮಥಪ್ರಸಂಗವ ಹಾಡದು
ಏನ ಮಾಡುವೆನೀ ಮನಂ ನಿಜಲಿಂಗನಿಷ್ಠರ ನೋಡದು
ಏನ ಮಾಡುವೆನೀ ಮನಂ ಶಿವನಲ್ಲಿ ಭಕ್ತಿಯ ಬೇಡದು
ಏನ ಮಾಡುವೆನೀ ಮನಂ ಗುರು ಶಂಕರಾರ್ಚನೆ ಮಾಡದು ||5||

ಓಂ ನಮೋ ನಮಃ ಶಿವಾಯ
ಓಂ ನಮೋ ನಮಃ ಶಿವಾಯ ಓಂ ನಮೋ ನಮಃ ಶಿವಾಯ
ಓ ನಮೋ ನಮಃ ಶಿವಾಯಯೆನ್ನು ಸಂತತಂ ||ಪಲ್ಲ||
ಮರುತ ಸಂಗದಿಂದ ಗಗನ ಗಂಗೆ ಧರಣಿಗಿಳಿದು ಬಂದು
ಮರಳಿ ನಭದ ಜಲವ ಬೆರಸಲಾರದಂದದಿ
ಕರಣ ಸಂಗದಿಂದ ಪರಮ ಜೀವಿಯಾಗಿ ಹಲವು ಪರಿಯ
ಶರಿರವಿಡಿದು ತೊಳಲಿ ಬಳಲುತಿರ್ದ ಕಾರಣ ||1||
ಆನೆ ಮದದೊಳುಕ್ಕಿ ಸೊಕ್ಕಿ ಮಿಕ್ಕು ಮೀರಿ ಕೆಸರ ಹೊಕ್ಕು
ಹೀನ ಸತ್ವವಾಗಿಯೇಳಲಾರದಂದದಿ
ತಾನೆ ತನ್ನ ಲೀಲೆಯಿಂದ ನಿರ್ಮಳಾತ್ಮ ತಾನೆ ಶರೀರ
ಕಾನನಕ್ಕೆ ಸಿಕ್ಕಿ ತೊಳಲುತಿರ್ದ ಕಾರಣ ||2||
ತನ್ನ ಸೇನೆ ತನ್ನ ಹಿಡಿದು ರಾಯ ಸಿಕ್ಕಿ ಮಹಿಮೆಗೆಟ್ಟು
ಮುನ್ನಿನಂತೆ ಧರೆಯನಾಳಲಾರದಂದದಿ
ಹೊನ್ನು ಹೆಣ್ಣು ಮಣ್ಣು ಮೂರು ತನ್ನವೆನಿಸಿ ತನ್ನೊಳಿರ್ದು
ತನ್ನ ಕೂಡಿ ತನ್ನ ಕಾಡುತಿರ್ದ ಕಾರಣ ||3||
ಹಸಿವಿನೊಳಗೆ ನಿದ್ರೆಯೊಳಗೆ ತೃಷೆಯದೊಳಗೆ ವಿಷಯದೊಳಗೆ
ಮುಸುಕಿ ಮುಂದುವರಿವ ಕಾಂಕ್ಷೆಯೊಳಗೆ ಸಂತತಂ
ಗಸಣಿಗೊಳುತ ಹಸಿಯ ಹುಸಿಯ ಮಸಿಯ ಹಾಸಿ ಹೊದ್ದು ಹಗಲ
ಸಸಿಯವೋಲು ಮಹದರಿದ್ರನಾದ ಕಾರಣಂ ||4||
ಮರದ ನೆಳಲ ಮರೆಯೊಳಿರ್ದ ನರನ ನೆಳಲ ಮರಸಿಕೊಂಬ
ತರುವಿನಂತೆ ತನ್ನ ಕರಸರೋಜ ರಾಜ್ಯದ
ಅರಸು ಶಂಕರೇಶ ತನ್ನ ನೆನದು ಸಾರಿದವರ ನಂತರ
ಮರಳಿ ಭವಕೆ ಬಾರದಿಂಬುಗೊಂಬ ಕಾರಣ ||5||

ಏನಿದ್ದು ಏನನೆಮ್ಮಿದೆಯಕಟ
ಏನಿದ್ದು ಏನನೆಮ್ಮಿದೆಯಕಟ ಸುಶ್ರುತಿಯ
ಹಾನಿಯೊಳು ಹಸಗೆಟ್ಟು ಏಳಲಿದೆಯೆಲ್ಲಾ ನಿನ್ನ
ನೀನೆ ತದ್ಧ್ಯಾನದಿಂ ನಿರುಪಮ ನಿಜಾನುಭವ ಸುಖವನೆಯ್ದಿದಾ ಮನವೆ ||ಪಲ್ಲ||
ನಿನ್ನಿಂದ ನೀ ಪ್ರಕೃತಿವಶನಾಗಿ ಬೊಮ್ಮವರ
ವಂ ನೀಗಿ ಬಂದು ಮಾನಂಗಿಯಂ ಪೊಕ್ಕ
ನೆರೆ ವಿಚಾರಿಸದೆ ತಾಯೂರ ಸಾರುತಂ ಗರ್ಭ ವಾಟಿಯೊಳು ನಿಂದು
ಉನ್ನತಿಗೆಟ್ಟು ಮಾ
ನಿನ್ನ ನೀ ಮರೆದುದಯಗಿರಿಗೆರಗಿ ನಾಮಗೊಡ
ಲಂ ನೆಮ್ಮಿ ಮಾಯಾಸಮುದ್ರದೊಳು ಸ ದೆಯಲ್ಲ ||1||
ಎಳವರೆಗೆ ಬಂದು ಪಾಲೂರನುಂಬಳಿಗೊಂಡು
ಬೆಳೆವುತಂ ಹರೆಯೂರಿಗೈತಂದು ನಾರವಂ
ಗಲ ಹೊನ್ನುಡಿಕೆ ಮಣ್ಣೆಯಳುಪಿ ನಂದಳಿಗೆರೆ ಯೊಳಮಲ ಛತ್ರನಹಳ್ಳಿಯ
ಘಳಿಸಿ ಸಿರಿಬಾಳವಾಡಿಯೊಳು ನಿಂದು ಭುಜ
ಬಲದ ಗರ್ವದಲಿ ಹುಸುಗೂರು ಹಾದರಿಯಪುರ
ಕಳವೂರು ಕೊಲ್ಲಾಪುರಂಗಳನು ಮಾಡುತ್ತ ಮದ ಸೊಕ್ಕಿದೆಯಲಾ ಮನವೇ ||2||
ಕಲುಮೊರಡಿಯೆತ್ತ ರಾಜಮರಾಳನೆತ್ತ ದು
ರ್ಬಲ ಜನನವೆತ್ತ ನೀನೆತ್ತ ಕಣನೂ
ಬಳಿಯ ಕಾಮನಹಳ್ಳಿಯಂ ಬಿಟ್ಟು ಸಂತತಂ ಶಾಂತಿಗ್ರಾಮದೊಳು ನಿಂದು
ಸಲೆ ಧರ್ಮವರ ಸತ್ಯವಂಗಲವನೆಯ್ದಿ ನಿ
ರ್ಮಲದಿ ನೀ ಮುನ್ನಿರ್ದ ಹಳೆಯಬೀಡಿಗೆ ಹೋಹ
ಡೆಲೆಲೆ ಗುರುಶಂಕರನ ಭಜಿಸು ಕೀಟೋಪಿ ಭ್ರಮರಾಯತೇ ಎನುತಿದೆ ಶ್ರುತಿ ||3||

ಅಂಗವಿಸಿ ಕೈಲಾಸದಾ
ಅಂಗವಿಸಿ ಕೈಲಾಸದಾ ಬಾಗಿಲೊಳು
ಲಿಂಗವಿಲ್ಲದ ಭವಿಗಳು ಹೊಗಬಾರದು ||ಪಲ್ಲ||
ಅವಾವ ಪರಿಯೊಳೊಲಿಸಿ ಅರುವತ್ತು
ಮೂವರೈತರಲು ನಿಲಿಸಿ
ಓವಿ ಪುನರಪಿ ದೀಕ್ಷೆಯ ನಂದೀಶ
ನೀವನದು ಕಾರಣದೊಳು ||1||
ಮೃಡಭಕ್ತ ಚೇರಮನ ನಂದೀಶ
ತಡೆದು ಬಾಗಿಲೊಳು ತರುಬಿ
ಒಡೆನೆ ಪುನರಪಿ ದೀಕ್ಷೆಯಾ ಮಾಡಿ ಶಿವ
ನೆಡೆಗೆ ಕಳುಹಿದನರಿಯಿರೆ ||2||
ಬಸವಣ್ಣ ಮುನ್ನಲೊಮ್ಮೆ ಅನುಮಿಷನ
ದೆಸೆಯಿಂದ ಕೈಲಾಸದ
ಮಿಸುಪ ಬಾಗಿಲೊಳು ಪುಗಲು ಹುಯಿದರಿದು
ಪುಸಿಯಲ್ಲ ನೋಡಿಕೊಳ್ಳಿ ||3||
ವೀರಶೈವಾನುಗ್ರಹವುಳ್ಳ ಲಿಂ
ಗಾರಾಧಕರು ಬಂದರೆ
ದ್ವಾರವಟ್ಟದೆ ತಡೆಯದೆ ನಂದೀಶ
ಭೋರನೊಳಯಿಕೆ ಕಳುಹುವ ||4||
ಭವಿಯ ಕೈಯಲ್ಲಿ ದೀಕ್ಷೆಯ ಕೊಂಡುಂಬ
ಭವದಲ್ಲಿ ಭವಿಯಾಗದೆ
ಶಿವಶಂಕರನ ಶರಣರು ಮರಳಿ ಲಿಂ
ಗವ ಪಡೆದು ಭಕ್ತರಹುದು ||5||

ಪಾದತೀರ್ಥ ಪ್ರಸಾದವೆ
ಪಾದತೀರ್ಥ ಪ್ರಸಾದವೆ ಭುಕ್ತಿಯೆಂಬೆ
ಪಾದತೀರ್ಥ ಪ್ರಸಾದವೆ ಮುಕ್ತಿಯೆಂಬೆ ||ಪಲ್ಲ||
ಶ್ರೀಗುರುವೆ ಅಷ್ಟಮದ ತಮವರ್ತಿಯೆಂಬೆ
ಶ್ರೀಗುರುವೆ ಅಪರಿಮಿತ ಪರಮಾರ್ಥಿಯೆಂಬೆ
ಶ್ರೀಗುರುವೆ ದಶದಿಶಾಮಯ ಕೀರ್ತಿಯೆಂಬೆ
ಶ್ರೀಗುರುವೆ ಪಾವನಮೂರ್ತಿಯೆಂಬೆ ||1||
ಲಿಂಗವೆ ಷಡುವರ್ಗ ಸಂಹರಣವೆಂಬೆ
ಲಿಂಗವೆ ಮಾಂಗಲ್ಯಮಯ ಕರುಣನೆಂಬೆ
ಲಿಂಗವೆ ನಿರುಪಮ ನಿರಾವರಣವೆಂಬೆ
ಲಿಂಗವೆ ನತಜನಸಮುದ್ದರಣನೆಂಬೆ ||2||
ಜಂಗಮವೆ ವೀರಶೈವವೆ ಗಂಡನೆಂಬೆ
ಜಂಗಮವೆ ನಿರ್ವಿಕಾರ ನಿಜಾಂಗವೆಂಬೆ
ಜಂಗಮವೆ ಶರಣನಳಿನಭøಂಗವೆಂಬೆ
ಜಂಗಮವೆ ಶಂಕರ ಮಹಾಲಿಂಗನೆಂಬೆ ||3||

ಗುರು ಲಿಂಗ ಜಂಗಮವನು
ಗುರು ಲಿಂಗ ಜಂಗಮವನು ಪೂಜೆ ಮಾಡಿಹ
ಪರಕೆ ಸುಖಿಯಪ್ಪೊಡೆ ||ಪಲ್ಲ||
ಹೊಚ್ಚ ಹೊಸ ಪುಷ್ಪವಾಗಿ ಕಾಯಾಗಿ
ಅಚ್ಚ ಹಣ್ಣಾಗಿ ನೆಲಕೆ
ನಿಚ್ಚ ಬೀಳುವದ ಕಂಡು ದಿಟವೆಂದು
ನಚ್ಚದಿರು ಸಟೆಯ ತನುವ ||1||
ಬಾಲರು ಸಾಯಬೇಕು ಯೌವನ ವಿ
ಶಾಲರು ಸಾಯಬೇಕು
ಮೇಲಪ್ಪ ಮುಪ್ಪಿನವರು ಸಾಯಬೇ
ಕೀ ಲೋಕ ಸತ್ಯವಲ್ಲ ||2||
ಸಾವ ನಿಂದಿಸಲು ಬೇಡ ಬಾ
ಳುವೆಯನಾವಾಗ ಸ್ತುತಿಸಬೇಡ
ಸಾವು ಬಾಳೆರಡು ಸರಿಯು ಶಂಕರನ
ಸೇವೆಯೊಳಿರು ಮರೆಯದೆ ||3||

ಮೂವಿಧಿ ಮಾವಣ್ಣ
ಮೂವಿಧಿ ಮಾವಣ್ಣ ಮುಕ್ಕ ಸಕ್ಕಸಗೊಂಡು
ಸಾವ ದೇಹವನೇಕೆ ಭೋಗಿಪರಣ್ಣ ||ಪಲ್ಲ||
ಕಿರುಖೂಳನಾಗಲಿ ಸಿರಿವಂತನಾಗಲಿ
ನೆರೆ ಬಾಲ ವೃದ್ಧ ಯೌವನನಾಗಲಿ
ಹೆರಿಹಿಂಗಿ ಅನ್ನ ಉದಕ ಕರಣ ಸಂಬಂಧ
ಹರಿದ ಬಳಿಕ ಸಾವುದು ಸತ್ಯವಣ್ಣ ||1||
ಮೊನ್ನೆ ಮದುವೆಯಾದೆ ಕರೆವರೊಂದೆಮ್ಮೆಯ
ನಿನ್ನೆ ಕೊಂಡೆನು ನಾಳೆ ಬೆಳೆಬಹುದು
ನನ್ನ ಮನೆಯ ಹಬ್ಬ ನಾನಿಂದು ಬಾರೆನೆಂ
ದೆನ್ನಲಂತಕನ ದೂತರು ಬಿಡರಣ್ಣ ||2||
ಏಸು ನಾಣೆಯದ ಸೀರೆಯನು ಉಟ್ಟು ಹೊದೆದರೆ
ಏಸು ವಾಸನೆಗಳ ಪೂಸಿದರೆ
ಏಸು ವೀಳೆಯವ ಮಾಡಿದರೆ ಹುದರು ಬಿಡ
ದಿ ಶರೀರವು ಸಾವುದು ಸತ್ಯವಣ್ಣ ||3||
ಊರ ಕೆಡಿಸಿ ನಾಡ ಕೆಡಿಸಿ ಗಳಿಸಿ ತಂದು
ನಾರಿ ಸುತರ ಸಲಹುವೆ ನಿನ್ನನ್ನು
ಭೋರನೆ ಯಮನದೂತರು ಕೊಂಡೊಯಿವಾಗ
ದಾರಿ ಸಂಗಡಕಾರು ನೆರೆ ಬಹರಣ್ಣ ||4||
ಸಾಗುದುರೆಗೆ ಹುಲ್ಲನಡಕಿ ಬಳಲುವಂತೆ
ಭೋಗಿಸದಿರು ಸಾವ ಶರೀರವನು
ಶ್ರೀಗುರು ಶಂಕರಲಿಂಗನ ಪದಪದ್ಮ
ಯೋಗದಲಿರು ಭವ ಹಿಂಗುವುದಣ್ಣ ||5||

ನಡಸೆ ನಡೆವೆ ನುಡಿಸೆ
ನಡಸೆ ನಡೆವೆ ನುಡಿಸೆ ನುಡಿವೆನೈಸೆ ಎನ್ನ ಬುದ್ಧಿಯಿಂದ
ನಡೆಯಲರಿಯೆ ನುಡಿಯಲರಿಯೆ ಕಪಟನಾಟಕ ಸೂತ್ರಧಾರಿ ||ಪಲ್ಲ||
ಅತಿ ವಿನೋದಿ ಬಡಗಿ ತನಗೆ ಹೊತ್ತು ಹೋಗಲಾಗದಂತೆ
ಶತ ಸಹಸ್ರ ಮರದಬೊಂಬೆಗಳನ್ನು ವಿರಚಿಸಿ
ಕೃತಕದಿಂದ ಜವಿಯ ಹೂಡಿ ಆಡಿಸುತ್ತ ಹಲವು ಪರಿಯಲಿ
ಗತಿಯ ನೋಡಿ ಸುಖವನೆಯ್ದುವಂತೆ ಸೂತ್ರಧಾರಿ ಎನ್ನ ||1||
ಅಳಿಸಿ ಕೆಲವು ಬೊಂಬೆಗಳನು ನಗಿಸಿ ಕೆಲವು ಬೊಂಬೆಗಳನು
ಕೊಲಿಸಿ ಕೆಲವು ಬೊಂಬೆಗಳನು ಬೊಂಬೆ ಬೊಂಬೆಯಿಂ
ಗೆಲಿಸಿ ಕೆಲವು ಬೊಂಬೆಗಳನು ಸೊಲಿಸಿ ಕೆಲವು ಬೊಂಬೆಗಳನು
ನಿಲಿಸಿ ನೆಮ್ಮಿ ಮಾಡಿಸುವ ಸಮರ್ಥ ವಿಶ್ವಕರ್ತನೆನ್ನ ||2||
ಒಂದು ಬೊಂಬೆ ಪಾಡಲೊಂದು ಬೊಂಬೆ ಕೊಡುವ ಪರಿಯ ರಚಿಸಿ
ಒಂದು ಬೊಂಬೆ ಹೊಗಳಲೊಂದು ಬೊಂಬೆ ಹಿಗ್ಗುವ
ಚಂದದದನು ರಚಿಸಿ ಮೀರಿ ಒಂದು ಬೊಂಬೆ ಹಳಿದುನುಡಿಯೆ
ಒಂದು ಬೊಂಬೆ ನೋಯೆ ಕಂಡು ನಗುವ ವಿಗಡರಾಯ ನೆನ್ನ ||3||
ಕೆಲವು ಶಕ್ತಿ ಬೊಂಬೆಗಳಿಗೆ ಕೆಲವು ಪುರುಷ ಬೊಂಬೆಗಳನು
ಒಲಿಸಿ ಕೆಲವು ಬೊಂಬೆಗಳಿಗೆ ಪುಣ್ಯ ಪಾಪದ
ಬೆಳಸಿ ಕೆಲವು ಬೊಂಬೆಗಳಿಗೆ ಅಷ್ಟಮದಗಳ
ಬಲೆಯ ಬೀಸಿ ಹಿಡಿವ ಫಣಿಯ ಹೆಡೆಯ ಜೆಡೆಯ ಒಡೆಯನೆನ್ನ ||4||
ಬೊಂಬೆಬೊಂಬೆಯೊಡನೆ ಮುಳಿದು
ಬೊಂಬೆಬೊಂಬೆಯೊಡನೆ ತಿಳಿದು
ಬೊಂಬೆಯೊಡನೆ ಬೊಂಬೆ ಮತ್ಸರಿಸುವ ಲೀಲೆಯು
ಬೊಂಬೆ ಸೂತ್ರದೊಳಗೆ ಜಗದ ಬೊಂಬೆ ಹಲವ ಕುಣಿಸಿ ನಗುವ
ಶಂಭು ಶಂಕರೇಶ ನಿಜವಿಲಾಸ ವಿಮಲವೇಶನೆನ್ನ ||5||

ಕಪಟ ನಾಟಕನ
ಕಪಟನಾಟಕನ ಕೈಯೊಳಗಳ ಬೊಂಬೆ ತನ್ನ
ಉಪಮೆಯಿಂದಾಡುವುದೆ ||ಪಲ್ಲ||
ಎರಡು ಕಾಮದ ನೂಲನಲುಗಿದೊಡಾ ಬೊಂಬೆ
ಸಿರಿದು ಕಾಮಿಸುತಿಹುದು
ಬೆರಸಿ ಕ್ರೋಧದ ಸೂತ್ರವ ಸೋಂಕಲಾ ಬೊಂಬೆ
ಹಿರಿದು ಕ್ರೋಧಿಸುತಿಹುದು
ನೆರೆದ ಲೋಭದ ನೇಣ ತುಡುಕಿದೊಡಾ ಬೊಂಬೆ
ಭರದಿ ಲೋಭಿಸುತಿಹುದು
ಅರರೆ ಮೋಹದ ದಾರವ ಮುಟ್ಟಲಾ ಬೊಂಬೆ
ಕರದಿ ಮೋಹಿಸುತಿಹುದು ||1||
ಆ ಬೊಂಬೆ ಮದಮತ್ಸರದೊಳಿರಬಲ್ಲುದೆ
ಆ ಬೊಂಬೆ ಸತ್ಯದಲಿ
ಆ ಬೊಂಬೆ ನಡೆಯಬಲ್ಲುದೆ ಧರಣಿಯ ಮೇಲೆ
ಆ ಬೊಂಬೆ ಸತ್ಯದಲಿ
ಆ ಬೊಂಬೆ ನುಡಿಯಬಲ್ಲುದೆ ಪುಣ್ಯಪಾಪವ
ನಾ ಬೊಂಬೆ ಮಾಡುವುದೆ
ನೀ ಬಲ್ಲೆ ಕಂಡ ತೊಗಲಹಾಹೆಯ ಲಾಭ
ಲೋಭವನರಸುವನೊ ||2||
ಅರಿವು ಮರವೆ ತøಪ್ತಿ ಹಸಿವು ಜಾಗರ ನಿದ್ರೆ
ನೆರಿ ಸತ್ಯ ಹುಸಿಗಳೆಂಬ
ಬೆರಗಿನ ಜವಿಯ ಜಗದ ಬೊಂಬೆಯ ಮಾಡಿ
ನಿರುಗೆಯ ಲೀಲೆಯೊಳು
ಮೆರೆವ ಚರಾಚರ ಜೀವ ಜವನಿಕೆಯ
ಮರೆಯಲಿದ್ದಾಡಿಸುವ
ಕರೆಕಂಠ ಶಂಕರಲಿಂಗನ ಮಹಿಮೆಯ
ನರಿವೊಡಾನೇಸರವ ||3||

ಯಂತ್ರ ನಾನು
ಯಂತ್ರ ನಾನು ಜಗಕೆ ನೀನು ಯಂತ್ರವಾಹಕಂ ಪರ
ತಂತ್ರ ನಾನು ಸರ್ವಕೆ ಸ್ವತಂತ್ರ ನೀನೆಲ್ಲೊ ಶಿವನೆ ||ಪಲ್ಲ||
ಬಣ್ಣವಳಿದ ಬಹು ವರ್ಣದ ಸೂತ್ರವ ತಂದು
ಹಣ್ಣಿ ಹಲವು ಪರಿಯ ಬೊಂಬೆಗಳ ನಿಲಿಸಿ
ತನ್ನ ತಾನಾಡಿಹವೆಂದು ಬಿನ್ನಣವ ಮಾಡಿ ಜಗಕೆ
ನಿನ್ನ ತಪ್ಪಿಸಿಕೊಂಡಿಪ್ಪ ವಿಗಡ ನೀನೆಲ್ಲೊ ಶಿವನೆ ||1||
ರೇತ ರಕ್ತವೆರಡರಲ್ಲಿ ಧಾತು ಸಪ್ತಕವ ಮಾಡಿ
ಭೂತವೈದರಿಂದ ನಾನಾ ಮೂರ್ತಿಯನು ಮಾಡಿ
ಓತು ಪಾಪ ಪುಣ್ಯವೆಂಬ ಮಾತಿನ ಕೋಳವ ಮಾಡಿ
ಚೇತನವನಿತ್ತಾಡಿಸುವಾತ ನೀನೆಲ್ಲೊ ಶಿವನೆ ||2||
ನಾದ ಬಿಂದು ಕಲೆಗಳನ್ನು ವೇಧಿಸಿ ಮೂರಕ್ಕೆ ಮಾಯ
ವಾದ ಚರಾಚರ ಜೀವಜಾಳಂಗಳ
ವೇದ ವಾದಿ ವಾಙ್ಮಯಕ್ಕೆ ಮೈದೋರದೆ ಜಗವ ಪ್ರ
ಮೋದದೊಳಾಡಿಸುವಲ್ಲಿ ನೋಡೆ ನೀನೆಲ್ಲೊ ಶಿವನೆ ||3||
ಒಡಲದಾರದನುವದಾರದೆಡೆಗೊಂಬ ಮರಹುದಾರ
ದಡಿಗಡಿಗೆ ಎಚ್ಚರಿಸುವ ಅರಿವದಾರದು
ಇಡಿದ ಅಹಮ್ಮತೆಯ ಮದದ ತೊಡಕು ತಾನದಾರದೆನ್ನ
ನಡೆಯ ನುಡಿಯ ಚೈತನ್ಯವೆಲ್ಲವು ನೀನೆಲ್ಲೊ ಶಿವನೆ ||4||
ಭಾನುವಾಡಿಸುವರಂತೆ ತಾನೆ ತನ್ನಿಚ್ಫೆಯಲಿ ಬಂದು
ಈ ನೆಲಕ್ಕೆ ಉಷ್ಣವನು ಮಾಡಬಲ್ಲುದೆ
ನಾನಾ ಚೇಷ್ಟೆಯಿಂದಲೆನ್ನ ಪ್ರಾಣಕೆ ಸತ್ರಾಣವಾದ
ಜಾಣ ಗುರು ಶಂಕರಲಿಂಗನು ನೀನೆಲ್ಲೊ ಶಿವನೆ ||5||

ಹೇಳಯ್ಯ ವಿವರವಾಗಿ
ಹೇಳಯ್ಯ ವಿವರವಾಗಿ ನಿಮ್ಮ
ಕೇಳುವ ಸಗುಣ ನಿರ್ಗುಣ ನೀನೊ ನಾನೋ ||ಪಲ್ಲ||
ಒಸೆದು ನಾಲಿಗೆಯ ತುದಿಯೊಳಡಗಿರ್ದು ಷಡು
ರಸವನರಿವವ ನೀನೊ ನಾನೋ
ಮಿಸುಗುವ ನಯನದಿ ಕೆಳೆಗೊಂಡು ಲೋಕದ
ರಸಿಕ ರಂಜನೆಯ ನೋಡುವ ನೀನೊ ನಾನೋ ||1||
ಹಲವು ಶಬ್ದವ ಕರ್ಣ ಕೋಟರದೊಳು ನಿಂದು
ನೆಲಸಿ ಕೇಳುವವ ನೀನೊ ನಾನೋ
ಒಲಿದು ನಾಸಿಕದ ಜವನಿಕೆಯ ಮೆರೆಗೊಂಡು
ಲಲಿತ ವಾಸನೆಯ ಕೊಂಬವ ನೀನೊ ನಾನೋ ||2||
ಮನದ ಕೊನೆಯ ಮೊನೆಯೊಳು ಗುಪ್ತಮುಖವಾಗಿ
ಕನಸ ಕಾಬವ ನೀನೊ ನಾನೋ
ಅನುದಿನ ಅರಿವು ಮರವೆಯೊಳು ಗುರಿಮಾಳ್ಪ
ವಿನುತ ಜಾಗರದೊಳಿರ್ಪವ ನೀನೊ ನಾನೋ ||3||
ಮರತನಡಗಿದ ಸಲಿಲದಂತೆ ನಿದ್ರೆಯ
ನೆರದು ನೆಮ್ಮಿಹ ನೀನೊ ನಾನೋ
ಇರಪರವೆರಡರ ಸುಖ ದುಃಖ ಭೋಗವ
ಧರಿಸಿ ವ್ಯವಹರಿಸುವ ನೀನೊ ನಾನೋ ||4||
ಹಾಲೊಳು ಗೋಪ್ಯವಾಗಿಹ ಘೃತದಂತೆ ಸ
ಮ್ಮೇಳದಂತೆನ್ನಯ ಕರಪೀಠದ
ಮೇಲೆ ಮೂರುತಿಗೊಂಡು ಗುರುಶಂಕರೇಶ್ವರ
ಲೀಲೆಯೊಳಾಡುತಿಹ ನೀನೊ ನಾನೋ ||5||

ಎಂತು ಬಾಳಬಹುದೆಂತು
ಎಂತು ಬಾಳಬಹುದೆಂತು ಬದುಕಬಹುದು ನರ
ಕಂಥೆಯ ತೊಟ್ಟವರಿಗೆ ಲಂಡದಿಂಡೆಯರ ಭಯ ||ಪಲ್ಲ||
ಬಾಲ ಬ್ರಹ್ಮಚಾರಿಗೆ ಬಾಲಕಿಯರ ಭಯ
ಧರ್ಮಶೀಲರಿಗೆ ದಯವಿಹೀನರ ಭಯ
ನೀಲಗ್ರೀವನ ಪೂಜಿಪರಿಗೆ ನಿಂದಕರ ಭಯ
ಬಾಳುವ ಮನುಜರಿಗೆ ಚಹಡಿಕಾರರ ಭಯ ||1||
ಅಪಮಾನಿಗಳಿಗೆ ಜಾರರ ಭಯ ಬಹಳ ಧ
ನಪತಿಗಳಿಗೆ ಭೂಮಿಪರ ಭಯ
ವಿಪುಳ ಜ್ಞಾನಿಗಳೀಗಜ್ಞಾನಿಗಳ ಭಯ ನಿ
ರಪರಾಧಿಗಳಿಗೆ ಸಂತತ ಕೊಂಡೆಯರ ಭಯ ||2||
ಮನುಜ ಲೋಕವೆಂಬ ಒರಳ ನಡುವಣ ಭತ್ತ
ಒನಕೆಯ ಗಾಯವ ತಪ್ಪಿಸಿಕೊಂಬಂತೆ
ಎನಗರಿವಾಗಿ ನಿಮ್ಮ ಚರಣ ಕಮಲದಲ್ಲಿ
ಮನೆ ಮಾಡಿ ಮಡಗಿಕೊಳ್ಳಯ್ಯ ಶಂಕರಲಿಂಗ ||3||

ಅಯ್ಯೋ ಅಯ್ಯೋ ಪಾಪಿ
ಅಯ್ಯೋ ಅಯ್ಯೋ ಪಾಪಿ ಬೆಂದ ಸಂಸಾರವೆ ಜಗ
ದಯ್ಯನ ಮನ ಮುಟ್ಟಿ ಪೂಜಿಸ ವೇಳೆಯಿಲ್ಲ ||ಪಲ್ಲ||
ತನುವಿಕಾರವ ಗೆಲಿದೆನೆಂದಡೆ
ಮನವೀಗ ಕೊಲ್ಲುತಿದೆ
ಮನವಿಕಾರವ ಗೆಲಿದೆನೆಂದಡೆ
ಧನವಿಕಾರ ಧøತಿಗೆಡಿಸುತಿದೆ ||1||
ಕಾಮದೊಳೊಚ್ಚಿ ಹೊತ್ತು ಕ್ರೋಧದಿಂದೊಚ್ಚಿ ಹೊತ್ತು
ವ್ಯಾಮೋಹ ಲೋಭದಿಂದೊಚ್ಚಿ ಹೊತ್ತು
ತಾಮಸ ಮದ ಮತ್ಸರದಿಂದೊಚ್ಚಿ ಹೊತ್ತು
ಸೋಮಾವತಂಸನ ಪೂಜಿಸೆ ವೇಳೆಯಿಲ್ಲ ||2||
ಸಾವನ್ನಕ್ಕ ಸನಿ ಕಾಡಿದರುಂಬ ಹೊತ್ತು ದಿನ
ವಾವುದು ಹೇಳೆನಗರಿವಂತೆ
ಜೀವ ವಿಕಾರವ ಪರಿಹರಿಸಿ ನಿಮ್ಮ
ಸೇವೆಯೊಳಿರಿಸಯ್ಯ ತಂದೆ ಶಂಕರಲಿಂಗ ||3||

ಸಂಸಾರ ಸೆರೆಯ
ಸಂಸಾರ ಸೆರೆಯ ಸಿಕ್ಕಿದೇನೆ ಬಿಡಿಸೋ
ಸಸಿಮೌಳಿ ನಮ್ಮಯ್ಯ ದಮ್ಮಯ್ಯ ||ಪಲ್ಲ||
ಹಸಿವೆಂಬ ಕಾಡುಗಿಚ್ಚುಗಳಿಂದ
ತøಷೆಯೆಂಬ ವಡಬಾನಳವಿಂದಲಿ
ವಿಷಯವೆಂದೆಂಬ ಘಟಸರ್ಪನ ಭಯದಿಂದ
ಕುಸಿವುತ್ತ ನೆಸವುತ್ತ ನಾಣ ಹೋಗಾಡುತ ||1||
ಆಸೆಯಾಮಿಷದ ಮೋಡಗಳಿಂದ
ರೋಷ ಹರುಷದ ಕತ್ತಲೆಯಿಂದ
ಈ ಷಣತ್ರಯವೆಂಬ ಸಿಡಿಲ ಗರ್ಜನೆಯಿಂದ
ಗಾಸಿಯಾಗುತ ಗತಿಪಥವನೀಗಾಡುತ ||2||
ತನು ವ್ಯಸನಗಳಿಂದೆ ತಗ್ಗುತ
ಮನ ವ್ಯಸನಗಳಿಂದೆ ಮುಗ್ಗುತ
ಧನ ವ್ಯಸನಗಳಿಂದೆ ಧಾವತಿಗೊಂಬುತ
ಜಿನುಗಿ ಜೀವಿಸಲಾರದೇಳುತ್ತ ಬೀಳುತ್ತ ||3||
ಕೆಲವು ದಿವಸ ಬಾಲತನದಿಂದ
ಕೆಲವು ದಿವಸ ಯೌವನದಿಂದ
ಕೆಲವು ದಿವಸ ಮುಪ್ಪಿನಲಿ ಮೂವಿಧಿಗೊಂಡು
ಹಲವ ಹಂಬಲಿಸುತ ತುಂಬುತ ಕೆಡಹುತ್ತ ||4||
ಮನೆ ಮನೆ ವಾರ್ತೆಗೆ ಹದವುತ
ಜನನಿ ಜನಕರಿಗೆ ಕುದಿವುತ
ದಿನ ಹೀಗೆ ಹೋದುದೆನ್ನ ಭವ ಬಂ
ಧನದ ಮೋಕ್ಷವ ಮಾಡು ತಂದೆ ಶಂಕರಲಿಂಗ ||5||

ರಾಜಸದ ತಾಮಸದ
ರಾಜಸದ ತಾಮಸದ ತಗಹಿನೊಳಗಾಗಿ ರವಿ
ರಾಜ ಹವಿನೇತ್ರ ನಿಮ್ಮ ಪದಾಬ್ಜಮಂ ಬಿಡದೆ
ಪೂಜಿಸುವ ಪುಣ್ಯ ದೊರಕದೆ ಜನನ ಮರಣಕ್ಕೆ ಬೀಜ ಮೊದಲಾಗುತಿಹೆನೆ ||ಪಲ್ಲ||
ಹುಲಿಯಗವಿಯೊಳು ಹುಲ್ಲೆ ಬಲೆಯೊಳು ವಿಹಂಗ ಕೆಸ
ರೊಳು ಪಶು ಮಹಾಬೇಸಗೆಯೊಳು ಚಾದಗೆ ಮಾಗಿ
ಯೊಳು ಪಿಕಂ ಕೃಷ್ಣಪಕ್ಷದೊಳು ಚಾರು ಚಕೋರ ಹೊರವಡುವ ಹೊಲಬಗಾಣದೆ
ಸುಳಿಗಾಳಿಯೊಳು ತರಗೆಲೆಗಳು ಸಿಡಿಮಿಡಿಗೊಂಡು
ಕಳವಳಿಸಿ ಕಂಗೆಡುವವೊಲು ಮಲತ್ರಯದ ಹೊದ
ರೊಳು ಹೊಕ್ಕು ಹೊರವಡುವಣದೆ
ಹಲವ ಹಂಬಲಿಸಿ ತಲೆಗರೆದು ನಲಿದು ನುಗ್ಗಾಗುತಿಹೆನೆ ||1||
ಅಡವಿಗಿಚ್ಚಿನೊಳು ಮೊಲ ಗಿಡುಗನಿಕ್ಕೆಯೊಳು ಗಿಳಿ
ಸಿಡಿಲ ಸೀಮೆಯೊಳು ಕಳಹಂಸೆ ಕಂಠೀರವದ
ಪಡೆಯೊಳು ಗಜೇಂದ್ರ ಗರುಡನ ಹೊಳಲೊಳುರಗ
ಭೇರುಂಡನೆಡೆಯೊಳು ಶರಭನು
ದಡಿಗ ದಾನವರ ಹೊಳಲೊಳು ಹಂದಿ ನರ ಸಿಕ್ಕಿ
ಸೆಡೆದು ಸೀಗಾಗಿ ತಲ್ಲಣಿಸಿ ಮಲ್ಲಣಿಗೊಂಡು
ಮಡಿವಂತೆ ಕೊಂದು ಕೂಗಿಡುವ ಕರಣೇಂದ್ರಿಯದ ಕಡಲೊಳಗೆ ಬಿದ್ದಿದೇನೆ ||2||
ಹಗಲ ಕೈರವದಂತೆ ಇರುಳ ತಾವರೆಯಂತೆ
ಮಿಗೆ ರಾಹು ತುಡುಕಿದ ಶಶಾಂಕಮಂಡಲದಂತೆ
ಮಾಗಿ ಮುಸುಕಿದ ಗಗನಮಣಿಯಂತೆ ಕವಿದು ಕಬ್ಬೊಗೆ ಸುತ್ತಿದಗ್ನಿಯಂತೆ
ಬೆಗಡುಗೊಳಿಸ ವ ಈಷಣತ್ರಯಾದಿಗಳೊಳಗೆ
ಬಗೆಗೆಡಿಸುತಿಹ ಅವಸ್ಥಾಂತ್ರಂಗಳೊಳಗೆ ನೆರೆ
ವಿಗಡಿಸುವ ತಾಪತ್ರಯಂಗಳೊಳು ಸಿಕ್ಕಿ ಇಹಪರಕೆ ನಗೆಗೆಡೆಯಾದೆನೇ ||3||
ಅಟ್ಟಡವಿಯೊಳು ಹೊಲಬುಗೆಟ್ಟ ಅಂಧಕನಂತೆ
ನಟ್ಟನಡುಗಡಲೊಳಗೆ ಹಡಗೊಡೆದ ನರನಂತೆ
ದಟ್ಟದಾರಿದ್ರದೊಳು ಸತಿಯಳಿದ ಪತಿಯಂತೆ ಮುಟ್ಟಿದವಸರಕೆ ಧನವ
ಕೊಟ್ಟು ನಡೆಸುವ ಧನಿಕ ಮೊಗವ ತೆಗೆಯಲು ಬಾಯ
ಬಿಟ್ಟು ಬಸವಳಿವ ಕಂಗೆಟ್ಟ ಯಾಚಕನಂತೆ
ಅಷ್ಟಮದದಿ ಸಪ್ತವ್ಯಸನ ಷಡುವರ್ಗದೊಳು
ಗಾಳಿಗಿಟ್ಟ ಸೊಡರಾ ದೆನೆ ||4||
ದಿನಪನಿಲ್ಲದ ಗಗನದಂತೆ ಅಮೃತಾಂಭೋಧಿ
ತನಯನಿಲ್ಲದ ರಾತ್ರೆಯಂತೆ ಪತಿಯಿಲ್ಲ ದಂ
ಗನೆಯಂತೆ ರಾಯನಿಲ್ಲದ ರಾಜ್ಯದಂತೆ ಲೋಚನ ವಿಲ್ಲದಾಸ್ಯದಂತೆ
ಮನ ಸಿಜಾಂತಕ ನಿಮ್ಮ ನೆನಹಿಲ್ಲದಜ್ಞಾನ
ತನುಮನವ ಮೆಚ್ಚಿ ಮದ ಮಾಯಾ ವಿಕಾರಂಗಳನೆ
ನೆಚ್ಚಿ ಭವದಂಧನಂಗಳೊಳು ಬರುತಿರ್ದೆ ಪರಮ ಗುರುವೇ ಶಂಕರಾ ||5||

ಗತಿಯ ಮತಿಯ ಕಾಣೆ
ಗತಿಯ ಮತಿಯ ಕಾಣೆ ನೀನೆ
ಗತಿ ಮಹೇಶ ನೀನೆ ಗತಿಯು
ಮತಿ ಸುಧರ್ಮಪಥವ ತೋರಿ ತಡಿಗೆ ಸಾರಿಸ ||ಪಲ್ಲ||
ಕರಣವೆಂಬ ನದಿಯ ನೊರೆಯ
ತೆರೆಯ ಹುಯಲು ತಾಗಿ ತಾಗಿ
ಉರಗ ನೆಳಲ ಕಪ್ಪೆಯಂತೆ ಕಂದಿ ಕುಂದತ
ಕರಗಿ ಕೊರಗಿ ಕೋಡಿ ಬಾಡಿ
ಹರಿದು ಜರೆದು ಹೀಡಿಗೊಂಡು
ಶರಣು ಹೊಕ್ಕೆನಯ್ಯ ನಿಮ್ಮ ಚರಣ ಕಮಲವ ||1||
ಹುಲಿಯ ನಡುವೆ ಹುಲ್ಲೆ ಗರುಡ
ಬಲದ ನಡುವೆ ಉರಗ ಸಿಂಹ
ಕುಲದ ನಡುವೆ ಹಸ್ತಿ ಬಾಳುವಂತೆ ಸಂತತಂ
ಸಲೆ ಷಡಾರಿ ವರ್ಗದೊಳಗೆ
ಕೊಲುವ ಪಂಚವಿಷಯದೊಳಗೆ
ಸಿಲುಕಿಯಳುಕಿ ಬದುಕಿ ತೊಳಲಿ ಬಳಲುತೈದೆನೆ ||2||
ಅಂಜದಿರು ಮಯೂರಗಮನನಾಣೆ ವೀರಭದ್ರನಾಣೆ
ಕಂಜಮುಖಿ ಭವಾನಿಯಾಣೆ ನಿನ್ನ ಜನ್ಮದ
ಜಂಜಡವ ನಿವಾರಿಸುವೆನೆನುತ್ತ ಬಂದು ಅಭಯವಿತ್ತು
ನಂದಿಸೆನ್ನ ಮನದ ನೋವ ತಂದೆ ಶಂಕರ ||3||

ಆವುದು ಮಾದಡೆ ಸಾವುದು
ಆವುದು ಮಾದಡೆ ಸಾವುದು ಮಾಣದು
ಧಾವತಿಗೊಳದೆ ದೇವಪೂಜೆಯ ಮಾಡಿ ||ಪಲ್ಲ||
ಜ್ವರ ಜಠರಶೂಲೆ ಶಿರದ ಬೇನೆ ಜಲ
ಗರವು ಗ್ರಂಥಿ ಸಂಘ್ರಾಣಿ ಉಪ್ಪು ಜೇನು
ಕೆರಕು ಬಾವು ಗುಲ್ಮ ಕುರುಕು ಶ್ಲೇಷ್ಮಗಳೆಂಬ
ಪರಿಪರಿಯ ಹಲಕೆಲವು ರೋಗವಾಗಿ ||1||
ಕ್ರೂರಮೃಗದ ಭಯ ಜಾರ ಚೋರರ ಭಯ
ಧಾರುಣೀಶರ ಭಯ ಫಣಿಯ ಭಯ
ಮರುತಸಖ ಭಯ ರಿಪುಭಯ ಆ
ಸ್ಮರವೋರಂತೆ ಹೊಯ್ವ ಸಿಡಿಲ ಭಯವಾಗಿ ||2||
ಕಾಲಮೃತ್ಯಗಳಿಂದ ಕ್ಷಾಮ ಡಾಮರದಿಂದ
ಹಾಳು ಎಡರು ಬಡತನಗಳಿಂದ
ಸಾಲ ಸೋಲಗಳಿಂದ ಲಗ್ಗೆ ವಿಲಗ ಸೆರೆ
ಕೋಳ ಸಂಕಲೆಯಿಂದ ಜೀವಿಸಲರಿದದಾಗಿ ||3||
ಈಸೊಂದು ಸಂಕಟದ ನಡುವೆ ಸಿಕ್ಕಿದ ಶರೀರ
ಏಸು ದಿವಸ ಉಳಿವುದು ಹೇಳು
ವಾಸವಚಾಪದಂತೆ ವೈಶಾಖ ಮಾಸದ
ಕಾಸರಿಕೆಯಂತೆ ಸಟೆಯ ಬದುಕಿದು ||4||
ಒಂದೆರಡು ದಿವಸ ಹೆಚ್ಚು ಕುಂದುಗಳೈಸೆ
ಮುಂದೆ ಮರಣ ತಪ್ಪದು ಸತ್ಯ
ಎಂದೆಲ್ಲರರಿವಂತೆ ಸಾರಿದ ನಮ್ಮ ಗುರು
ತಂದೆ ಶಂಕರಲಿಂಗನ ಪೂಜಿಸಿ ಮುಕ್ತರಾಗಿ ||5||

ಏನನುಸುರವೆನು
ಏನನುಸುರವೆನು ಮಾನವರ ಮನದ ಮರವೆ ಮುದೇನು ವಿಧಿಯಹುದೊ ಶಿವ ಶಿವಾ ||ಪಲ್ಲ||
ಫಣಿಯ ಅಣಲೊಳಗಳ ಕಪ್ಪೆ ಹಾರುವ
ನೊಣಕೆಯಂಗವಿಸಿ ನುಂಗುವೆನೆಂಬ ಪರಿಯಂತೆ
ಕ್ಷಣಿಕ ಜೀವರುಗಳು ತಮ್ಮಾಯುಷ್ಯದ
ಗಣನೆಯೆಂಬೊಗಟೆಗೆ ಅಣೆದು
ನೊಣೆದು ಬಾಯ ಟೊಣೆದು ಪರರ ಕೈಯ
ಹಣವ ಹರಿದುಕೊಂಡು ಬಂದುಂಡು ಗತಿಪಥ
ದೆಣಿಕೆಯಿಲ್ಲದೆ ಸಾವ ಬಣಗರ ಭಾವದ ಬಳಕೆಯದಿನ್ನೇನು ವಿಧಿಯೊ ಶಿವ ||1||
ದ್ವಾದಶದಂಗುಲದ್ದು ಶರೀರವ
ನಾದರದಿಂ ಹೊರವುದಕಾಗಿ ಅನ್ಯ
ವಾದವ ಮಾಡಿ ನಿರಂತರ ಧಾತುರ್ವಾದಿಗಳೊಡನಾಡಿ
ಓದನುಳಿದು ಪರಿವಾದಿನೆ ಬಾಧಿಸಿ
ಕೋಲೊದನಿರಯ
ದೊಳು ಮುಳುಗುವ ನರರಪರಾಧಕಿನ್ನೇನು ವಿಧಿಯೊ ಶಿವ ಶಿವ ||2||
ಅಗಸನೂರೂ ವೃದ್ಧರ
ಮಸಿ ಮಣ್ಣು ಮೈಲಗೆಗಳ ತೊಳದು ತ
ನ್ನಸುವನಳಿದುಕೊಂಬ ಪರಿಯಂತೆ ನಚ್ಚಿಸಿ ಮುಚ್ಚಿಸಿ ವಸಿಸಿ ವಂ
ಚಿಸಿಯುಂಬ ಹಳೆಯಕೆಳೆಯ ಬಂಟ ವಿಸ
ರ ಸಹೋದರ ಸಖರ ನ ವಿಧಿಗೆ ಬಿದ್ದು ಭವದೊಳಳಿವ ನರಪಶು ಗಳಿಗೇವಿಧಿಯ ||3||
ಕಳು ಡಸಿಕೊಂಬುದು ತಲೆ
ಅಳುಪಿ ತಿಂಬುದು ನೊಣ ಕೆಡಿಸಿಕೊಂಬುದು ವ್ರತ
ಇಳೆಯೊಳ ದಿಂಬ ಕೀಲಿಗೆ ದೇಗುಲವಳಿವ
ಹೊಲೆಮನದಜ್ಞರೊಳಿಡಿದ ತಾಮಸಗುಣ
ವಳಿದು ಸಳೆದ್ದು ನಿಯವರೊ
ತಿಳಿಯದೆನಗೆ ತಿಳಿವಂತೆ ವಿಪುಳಗುಣ ಜಳನಿಧಿ ಯಿದನರು ||4||
ಮಾಡಿ ಪರಿಷ್ಟಂದ ಪಥದೊಳು
ಬೇಡದೆ ಬೇಡಿ ಶರೀರಕೆ ಸೌಖ್ಯವ
ಮಾಡದೆ ಮಾಡಿ ಪದುಮಪತ್ರ ಜಲದಂತೆ ತಾನಾಗಿರುವ
ನೀಡಿ ನಿಲುಕಿ ಮೋಕ್ಷವಾದಿಯ ಪಠಿಸಿ
ಪಾಡಳಿಯದೆ ಪರಮಾನಂದರಸದೊಳು
ಮೂಡಿ ಮುಳುಗದರಾರು ಶಂಕರ ನಿಮ್ಮ ಬೇಡಿ ಕೊಂಬೆನು ಸತತ ||5||

ಏನಯ್ಯ ಗುರುವೆ
ಏನಯ್ಯ ಗುರುವೆ ಶಂಕರ ನಾನಾರ ಸಾರುವೆನು
ಮಾನ ಅಪಮಾನವು ನಿಮ್ಮದಾಗಿಯು ನಾನಾರ ಸಾರುವೆನು ||ಪಲ್ಲ||
ಮಾನವಜನ್ಮವೆಂದೆನ್ನದೀ ಧರೆಯಲ್ಲಿ ನೀನೆನ್ನ ಹುಟ್ಟಿಸಿದೆ
ನಾ ನಿನ್ನ ಬೇಡಿಕೊಂಡೆನೆ ಹುಟ್ಟಿಸಯ್ಯ ಎಂದು ಅನಾಥ ಜನ ಬಂಧುವೆ
ನಿನ್ನ ವಿನೋದಕೆ ಹುಟ್ಟಿಸಿ ಕಾಣದಂತಿರಲೇತಕೋ
ಏನಯ್ಯ ಬಿತ್ತಿದ ಬೆಳೆಯನಾರಯಿದ ದೆ ನಿಮಗೆ ||1||
ಮತ್ಸರ ಮದ ಮಾಯೆ ಮರಹೆಂಬ ಕಳೆ ಕಸ ಹೆಚ್ಚಿತೆನ್ನಂಗದಲಿ
ಕುಟಲ ಕುಹಕವೆಂಬ ಹಳುಬೆಳೆದಚ್ಚುಗಗೊಳಿಸುತಿದೆ
ದುಚ್ಚರಿತ್ರ ದುರಹಂಕಾರವೆ ಮುಚ್ಚಿ ಮುಸುಕಿತೆನ್ನನು
ನಿಚ್ಚ ಪಂಚೇಂದ್ರಿಯವೆಂಬಿಸಿಲುಕವಿದೆಚ್ಚರ ಲೀಯದೀಗ ||2||
ಹಳು ಹೆಚ್ಚಿದಿರಿಸಿಲನೆಲ್ಲವ ತೊಲಗಿಸಿ ನಿಮ್ಮ ಪದ
ಜಲವನೆರೆದು ಮಹದರಿವೆಂಬ ಸಸಿಯಲಿ ಸುಜ್ಞಾನವೆಂಬ
ಬೆಳಸ ಬೆಳೆದು ಬೆಳಸಿನೊಳಾದ ನಿಜಫಲವನೊ
ಬ್ಬುಳಿತೆಮಾಡಿ ಬಳಸದೆ ಬೈಚಿಟ್ಟ ನಿರುಪಮ ನಿಳಯ ಶಂಕರಲಿಂಗವೇ ||3||

ಹೊನ್ನು ಹೆಣ್ಣು ಮಣ್ಣು
ಹೊನ್ನು ಹೆಣ್ಣು ಮಣ್ಣು ನೆಚ್ಚ ಬೇಡ
ಪನ್ನಗಾಭರಣನ ವಾರಕದ ಸೊಮ್ಮುಗಳಣ್ಣ ||ಪಲ್ಲ||
ವಿನುತ ಗಜವನೇರಿ ಕವಡೆಯ ಮಿಡಿದಡೆ
ಎನಿತು ಮೇಲಕೆ ಹೋಹುದದರುದ್ದದ
ಧನವ ಗಳಿಸಿದ ಹರಿಶ್ಚಂದ್ರರಾಯಂಗೆ ಮುನಿ
ಮುನಿದು ಸೆಳೆಕೊಂಡುದು ಸತ್ಯವಣ್ಣ ||1||
ಹದಿನಾರುಸಾವಿರ ಸತಿಯರನಾಳಿದ
ಪದುಮನಾಭನು ತನ್ನ ಲೀಲೆಯಿಂದ
ಮದದಿಂದೆಲ್ಲರು ತನ್ನವರೆಂದೆನಲಾಗಿ
ಅಧಮ ಬೇಡರಪಡೆ ನೆರೆದೊಯಿದರಣ್ಣ ||2||
ಸೂಜಿಯಮೊನೆಯೂರುವನಿತು ಭೂಮಿಯ ಪಾಂಡು
ರಾಜಗೆ ಕೊಡದೆ ಸಂಗ್ರಾಮದೊಳು
ವ್ಯಾಜ್ಯವ ಮಾಡಿದ ಕೌರವನ ದೇಶವ ಜನ
ಮೇಜಯ ಸೆಳೆಕೊಂಡುದು ಸತ್ಯವಣ್ಣ ||3||
ಹೇಮ ಭೂ ಕಾಮಿನಿಯರೆಂಬ ವಾರಕವ
ನಮ್ಮ ಸ್ವಾಮಿ ಕೊಟ್ಟು ತೆಗೆದುಕೊಂಬುದನರಿದು
ಹೇಮ ಭೂಮಿ ಕಾಮಿನಿಯರೊಡನಿದ್ದು ಇರದ
ತಾಮರಸ ಜಲಪತ್ರಬಿಂದುವಿನಂತಿಹುದಣ್ಣ ||4||
ತಾರಕಾರಾತಿಯ ತಂದೆ ನಿಮಗೆ ಒಲಿದು ಕೊಟ್ಟು
ವಾರಕದ ತನು ಮನ ಧನ ಮೂರನು
ವಾರಕದೊಡೆಯಗೊಡನೆ ಇತ್ತು ಕಾಲ ಕಾಮರ
ವೈರಿ ಶಂಕರಲಿಂಗನ ಸಾರಿ ಸುಖಿಯಹುದಣ್ಣ ||5||

ನೊಂದೆನಯ್ಯ ಬೆಂದೆನಯ್ಯ
ನೊಂದೆನಯ್ಯ ಬೆಂದೆನಯ್ಯ ಬಂದೆನಯ್ಯ ಭವಭವದ
ಬಂಧನದ ಬಲೆಯೊಳು ಸಟೆಯ ಸಂಸಾರದಿಂದ ||ಪಲ್ಲ||
ಮನೆಗೆ ಮಕ್ಕಳಿಗೆ ಮಾನಿನಿಗೆ ದಾಯಾದ್ಯರಿಗೆ
ಜನನಿ ಜನಕರಿಗೆ ಸಖರಿಗೆ
ಆನುದಿನ ಕುದಿದು ಕೋಟಲೆಗೊಳಿಸುತ ನಿಮ್ಮ
ನೆನೆಯದೆ ಬಳಲಿಸುತಿರ್ಪ ಸಂಸಾರದಿಂದ ||1||
ಹೊತ್ತೇರಿಂದ ಬೈಗುತನಕ ಅತ್ತಹೋದೆನಿತ್ತಬಂದೆ
ಸುತ್ತಿ ಸುಳಿದಾಡಿದೆನುಟ್ಟೆನು ತೊಟ್ಟೆನು
ಉತ್ತರಕುತ್ತರವ ಕೊಟ್ಟೆನು ಬಲ್ಲವರ ಬಾಯ
ನೆತ್ತಲೀಯದಾದೆನೆಂದು ಹೆಚ್ಚುವ ಸಂಸಾರದಿಂದ ||2||
ನಾಡು ಬೀಡ ನೋಡಿದೆ ಕೃಷಿ ವ್ಯವಹಾರವ
ಮಾಡಿದೆ ಕೂಡಿದೆ ಕೊಟ್ಟ ಧನವನು
ಸೂಡಿದೆ ಸುಖವ ನೆತ್ತ ಚದುರಂಗ ಪಗಡೆಯ
ನಾಡಿದೆ ಸೋಲಿಸಿದೆನೆಂದುಲಿವ ಸಂಸಾರದಿಂದ ||3||
ಊರ ಮುಂದೆ ನಿಂದೆ ಕೇರಿಯ ಮುಂದೆ ನಿಂದೆ ವಿ
ಚಾರಿಸದೆ ನ್ಯಾಯ ನಿಕರವ ತಿದ್ದಿದೆ
ಹೋರಿದೆ ಕಾದಿದೆ ಸಲಲ್ಮುಂದೆ ಗೆಲಬಂದೆನೆನ
ಗಾರು ಸರಿಯೆಂದಹಂಕರಿಸುವ ಸಂಸಾರದಿಂದ ||4||
ಅಟಮಟ ಕುಟಿಲ ಕುಹಕದ ಸಂಸಾರದಲ್ಲಿ
ತಟ ತಟಕಾಗಿ ತೊಳಲಿಸಿದೆ
ನಿಟಿಲನಯನ ನಿಮ್ಮ ಚರಣ ಕಮಲವೆಂಬ
ಮಠದೊಳಿಂಬಿಟ್ಟುಕೊಳ್ಳೆನ್ನ ಶಂಕರಲಿಂಗ ||5||

ಸಟೆ ಸಟೆ ನೋಡಾ
ಸಟೆ ಸಟೆ ನೋಡಾ ಸಂಸಾರವೆಂಬುದು
ದಿಟವೆಂದು ನೀ ನಚ್ಚಿ ಕೆಡಬೇಡವಣ್ಣ ||ಪಲ್ಲ||
ಒಡಲು ಒಡವೆ ಮಡದಿ ಮಕ್ಕಳು
ತೊಡಿಗೆ ಸಕಲ ಸಂಪದವೆಲ್ಲವು
ಉಡುರಮಣನ ಸಂಪೂರ್ಣ ಕಳೆಯ
ಗಡಣದ ಸಿರಿಯಂತೆ ನೋಡಯ್ಯ ||1||
ಉಡದೆ ಉಣ್ಣದೆ ಸತ್ಪಾತ್ರ ಜನಕೆ
ಕೊಡದೆ ಗಳಿಸಿ ನೀ ಮಡಗಲು
ಪೊಡವಿಪ ಶಿಖಿ ಚೋರರ ಭಯದಿಂದ
ಕೆಡುವುದು ದಿಟ ಸಾರಿದೆವಣ್ಣ ||2||
ಬಿಲ್ಲು ಬೇಲದ ಕಾಯ ಹಿಡಿಯಬೇಡ
ಬಲ್ಲಿದ ಕಳ್ಳ ಮುಂದಯಿದನೆ
ಬಿಲ್ಲಗೊಲೆಗೈದು ಕಾಯೆನ್ನನು ಮಾಡಿ
ಮೆಲ್ಲನೆ ಪಥವ ಗೆಲುವುದಣ್ಣ ||3||
ಮಾಡುವುದೊಳ್ಳೆಯ ಶಿವಪೂಜೆಯನು
ನೀಡುವುದು ಗುರು ಜಂಗಮಕಯ್ಯ
ಮಾಡಿ ನೀಡಿ ನಮ್ಮ ಶರಣರೊಡನೆ ಕೂಡಿ
ಸದ್ಗತಿಯನೆಯಿದುವುದಣ್ಣ ||4||
ಕಾಯ ನಿನ್ನದೆಂದೆನೆ ಮಂಜಿನ ಪುತ್ಥಳಿ
ವಾಯವಹ ಜೀವ ಸ್ಥಿರವಲ್ಲ
ಈಯನುವನರಿದು ಗುರುಶಂಕರ
ರಾಯನ ನೀ ಭಜಿಸಿ ನಿತ್ಯ ನಾಗಣ್ಣ ||5||

ಓಂ ನಮಃ ಶಿವ
ಓಂ ನಮಃ ಶಿವ ನಮಃ ನಮಃ ಶಿವ
ಯೆಂಬುದೆ ನೆಲೆ ಮರುಳು ಮನವೆ ಮಾನ ಭಕುತಿಯಿಂದ ||ಪಲ್ಲ||
ಸಾವನ್ನಕ್ಕ ಸಂಸಾರದ ಕೋಟಲೆ
ಜೀವನೆ ನಿನಗುಂಟಾಗಿಹುದು
ಆವ ಪರಿಯಲಲಾದರೆ ಮರಹಿಲ್ಲದೆ
ದೇವರ ದೇವ ನಮೋ ಎಂಬುದೆ ನೆಲೆ ಮನವೆ ||1||
ಕನಸಿನ ಸಿರಿಯಂತೆ ವನಧಿಯ ತೆರೆಯಂತೆ
ಅನಿಮಿಷ ಧನುವಿನಂತೀ ಕೆಡುವ
ತನು ಧನ ರೂಪು ಯೌವನವಿದ ನಂಬದೆ
ಅನುದಿನ ಶಿವ ನಮಃ ಶಿವಯೆಂಬುದೆ ನೆಲೆ ಮನವೆ ||2||
ಇನಿಯನನಗಲಿದ ಸತಿಯಂತೆ ಮೋಹದ
ಜನನಿಯನಗಲಿದ ಸುತನಂತೆ
ಮನದೊಳು ಮಾಣದೆ ಮರೆಯದೆ ನೆನವುತೆ
ಜಿನುಗಿ ಜಿನುಗಿ ನಮಃಶಿವಯೆಂಬುದೆ ನೆಲೆ ಮನವೆ ||3||
ಮೈಮರೆದಿರಬೇಡ ಭವರೋಗವ ಗೆಲಿ
ದೈಮೊಗನೊಲುಮೆಗೆ ವಶವಹರೆ
ಕೈಮರೆಯದೆ ಶಿವಪೂಜೆಯ ಮಾಡುತೆ
ಬಾಯಿ ಮರೆಯದೆ ನಮಃ ಶಿವಯೆಂಬುದೆ ನೆಲೆ ಮನವೆ ||4||
ಎಲೆ ಜೀವನೆ ನೀನೆ ಕೇಳ್ ಕರ್ಪುರ ನಿ
ರ್ಮಳ ಪಂಚಾಕ್ಷರ ಜಪವೆ ಶಿಖಿ
ಬಲಿದೆರಡರ ಸಂಗದಿ ಗುರುಶಂಕರ
ನೊಳಗಪ್ಪುದು ಹುಸಿಯಲ್ಲ ನಂಬಿರು ಮನದಲ್ಲಿ ||5||

ಹೋಗುತಿದೆ ಹೊತ್ತು
ಹೋಗುತಿದೆ ಹೊತ್ತು ಬರಿದೆ ವೃಥಾಯದಿ
ಶ್ರೀಗುರುವೆ ಶಿವ ಶಿವಯೆನ್ನಲರಿಯದೆ ||ಪಲ್ಲ||
ನರರ ನಾನೂರಮೂವತ್ತೆರಡು ಕೋಟಿ
ವರುಷವದೊಂದೆ ದಿನವಾ ಬ್ರಹ್ಮಂಗೆ
ಪರಿಕಿಸಲಾ ಬ್ರಹ್ಮಕಲ್ಪ ಶತಸಹಸ್ರ
ನರಕಗತಿಯಲಿರ್ದು ಮರಳಿ ಧರೆಗೆ ಬಂದ ||1||
ಒಂದೊಂದಕಿಪ್ಪತ್ತೊಂದುಲಕ್ಷಯೋನಿಯೆಂದೆನಿಸುವ
ಅಂಡಜ ಸ್ವೇದಜ ಸಂದ ಜರಾಯುಜ
ಉದ್ಭಿಜವೆಂಬಿವರಿಂದಲೆಂಬತ್ತು
ನಾಲ್ಕುಲಕ್ಷದೊಳು ಹುಟ್ಟಿ ||2||
ಪೇಳುವೊಡರಿದೀ ಜೀವನ ಉಂಡ ಮೊಲೆ
ವಾಲು ಸಮುದ್ರವೇಳರ ಜಲಕೆ
ಹೋಲಿಸುವರೆ ಮಿಗಿಲೆನಿಸಿ ದುರ್ಭವದೊಳ
ಗಾಳುತ ಮುಳುಗುತಲೆಂತಕ್ಕೆ ನರನಾಗಿ ||3||
ಮಾಸವೊಂಬತ್ತು ಮಾತೆಯ ಗರ್ಭ ನರಕವ
ಹೇಸದೆ ಉಂಡು ತೀರಿಸಿ ಬಳಿಕ
ಶಾಶ್ವತ ನರಕದೊಳೊಂದಿ ಮುನ್ನಿನ ತನ್ನ
ಗಾಸಿಯ ಮರೆದು ಯೌವನ ಮದದೊಳು ಸಿಕ್ಕಿ ||4||
ಸುಣ್ಣದ ತುಯ್ಯಲು ಅಸಿಯ ಧಾರೆಯ ಮರೆದು
ಪನ್ನಗೇಂದ್ರನ ಕಲ್ಪವಟವೃಕ್ಷದ
ಹಣ್ಣಿಗೆ ಸಮವಹ ದೇಹಸುಖಕೆ ಮಚ್ಚಿ
ಕಣ್ಣುಗೆಟ್ಟು ಕಾಮವಿಷಯದೊಳಗೆ ಬಿದ್ದು ||5||
ಕೆಲ ಹೊತ್ತು ಚದುರಂಗ ನೆತ್ತ ಪಗಡೆಯಿಂದ
ಕೆಲ ಹೊತ್ತು ಆಲಸ್ಯ ನಿದ್ರೆಯಿಂದ
ಕೆಲ ಹೊತ್ತು ಕಾಕ ಪೋಕರ ಕಾವ್ಯ ಕಥೆಯಿಂದ
ಕೆಲ ಹೊತ್ತು ಪರನಿಂದೆ ಪರರಗೊಟ್ಟಿಗಳಿಂದ ||6||
ಮೆದೆಯ ಸುಟ್ಟರಳ ಮೆದ್ದಿಹೆನೆಂಬ ಮರುಳಂತೆ
ಸುಧೆಯನೊಲ್ಲದೆ ಪಳೆಯಂಬಿಲಕೆ
ಹದೆದು ಕುದಿವನಂತೆ ಮೋಕ್ಷ ಪದವ ಬಿಟ್ಟು
ಅಧಮವೆಂದೆನಿಸುವ ಮಾಯಾ ಮೋಹಕ್ಕೆ ಸಿಕ್ಕಿ ||7||
ಅಲ್ಪದಿವಸ ಧರಣಿಯ ಮೇಲೆ ತಾ
ನಿರುತಿರ್ಪ ಸಂಸಾರ ಸುಖಕೆ ಮೋಹಿನಿ
ಕಲ್ಪಸಹಸ್ರ ಪುನಃ ಪುನಃ ಕಾಲನ
ಬಲ್ಪಿನ ಕೊಲೆಗೊಳಗಾಗಿ ನಿರರ್ಥಕೆ ||8||
ಕಾಲವು ಕಡೆತನಕ ಹರ ನಿಮ್ಮ ಪೂಜಿಪ
ವೇಳೆಯಿಲ್ಲದೆ ದಿನ ಬಂಜೆಯಾಗಿ
ಜಾಳಿಸಿ ಹೋಗುತ ಇದ್ದೇನೆ ಎನಗೊಂದು ದಿಕ್ಕ
ಹೇಳಯ್ಯ ತಂದೆ ಶಂಕರಲಿಂಗ ||9||

ಅಡಿಯಲಾಧಾರವ ಕಾಣೆ
ಅಡಿಯಲಾಧಾರವ ಕಾಣೆ ಹಿಡಿವರೆ ಕೊಂಬಿಲ್ಲ ನಟ್ಟ
ನಡು ಸಮುದ್ರದೊಳಗೆ ಬಿದ್ದ ಹರುಗೋಲಿನಂತಾದೆನಯ್ಯ ||ಪಲ್ಲ||
ಚಿಕ್ಕ ಹರೆಯತೊಡಗಿಯಾಹಾರಕ್ಕೆ ಕುದಿದೆನೈಸೆ ದೇಹಾ
ರಕ್ಕೆ ಒಚ್ಚೆ ಹೊತ್ತು ಮನವ ನಿಲಿಸಲರಿಯದೆ
ಕಕ್ಕುಲಿತೆಗೊಂಡು ಹೆರರ ದುಃಖಬಡಿಸಿ ಒಡಲ ಹೊರೆದು
ಮಿಕ್ಕು ಮೀರೆ ಹಲವು ಭವದ ಸಿಕ್ಕಿನೊಳಗೆ ಬಿದ್ದೆನಯ್ಯ ||1||
ಉತ್ತು ತೆತ್ತು ಬಿಟ್ಟಿ ಬೆಸನ ಹೊತ್ತು ಮಾಡಿ ಎರಡು ಕರವ
ನೆತ್ತಿ ಮುಗಿದು ನøಪರ ಹಿಂದೆ ಹತ್ತಿವೋಲೈಸಿ
ಒತ್ತರಿಪ ಸಂಸಾರದ ಕತ್ತಲೆಗೆ ಸಿಕ್ಕಿ ನಿಮ್ಮ ನೆನೆಯೆ
ಹೊತ್ತ ಕಾವುದರಿವನೀಗಿ ಮತ್ತನಾಗಿ ಬಿದ್ದೆನಯ್ಯ ||2||
ಈಯಲರಿಯದವರ ಹೊಗಳಿ ಈಯಯ್ಯ ಈಯಯೆಂದು
ಕಾಯಲರಿಯದವರ ಸ್ತುತಿಸಿ ಕಾಯಯ್ಯಯೆಂದು
ಈಯ ಕಾಯಬಲ್ಲ ದೇವರಾಯ ಚಂದ್ರಧರನ ಮರೆದು
ಬಾಯಬಿಟ್ಟು ಲಜ್ಜೆಗೆಟ್ಟು ಮಾಯಪಾಶಕೆ ಬಿದ್ದೆನಯ್ಯ ||3||
ಒಂದು ನಿಮಿಷ ಮಾತ್ರದಲ್ಲಿ ಹೊಂದಿ ಹೋಹ ದಿನವು ನಿತ್ಯ
ವೆಂದು ಹಲವು ಕಡೆಗೆ ಹರಿದು ಹಣವನೊದವಿಸಿ
ಮಂದಮತಿಕನಾಗಿ ಕರುಣಸಿಂಧು ಶಿವನ ಮರೆದು ಬಯಲ
ದುದುಗದ ಬೇಗೆಯೊಳಗೆ ಮುಂದುಗಾಣದೆ ಬಿದ್ದೆನಯ್ಯ ||4||
ಉಳ್ಳದೊಂದು ಮನವ ಹಲವು ಕಡೆಗೆ ಹರಿಯಬಿಟ್ಟು ನಿಮ್ಮ
ನೊಳ್ಳಿತಾಗಿ ನಿಷ್ಠೆಯಿಂದ ನೆನೆಯಲರಿಯದೆ
ಕಳ್ಳನ ತಾಯಂತೆ ಹಲವ ಹಂಬಲಿಸುತೈದೆನೆ ಎ
ನ್ನಲ್ಲಿ ತಪ್ಪನರಸದೆ ಎತ್ತಿಕೊಳ್ಳಯ್ಯ ಶಂಕರಲಿಂಗ ||5||

ಕಂಗೆಡಿಸಿ ಕಾಡುತಿದೆ
ಕಂಗೆಡಸಿ ಕಾಡುತಿದೆ ಸಂಸಾರ ಹಲಬರಿಗೆ
ಹಂಗಿಗನ ಮಾಡುತಿದೆ ನೊಂದೆನಯ್ಯ ಕರುಣಿ ||ಪಲ್ಲ||
ಜೀವ ಪಶು ನಾನು ಪಶುಪತಿ ನೀನು ಕಟ್ಟಿದೆ ಮ
ಹಾ ವಿಗಡ ಸಂಸಾರ ಪಾಶದಲ್ಲಿ
ನೋವಿಗಾರದೆ ಶಿವ ಶಿವ ತ್ರಾಹಿ ಅಂಬೆ ದ
ಯಾವನಧಿ ಅಂಬೆಯೆನುತಿದೇನೆ ಕರುಣಿ ||1||
ನೀನೆನ್ನ ಕೊರಳ ಕಣ್ಣಿಯ ಬಂದು ಬಿಡುವನಕ
ನಾನಾ ವಿಕಾರ ಬಂಧನಕೆ ಸಿಕ್ಕಿ
ದೂನಿಸುತ ದುಃಖಬಡುತೈದೆನಯ್ಯ ಎನ್ನ
ಹಾನಿವೃದ್ಧಿಗೆ ಕರ್ತರಾರು ಹೇಳ ಕರುಣಿ ||2||
ಕೇಳಯ್ಯ ಇಂದಲ್ಲದೊಡೆ ನಾಳೆ ಬಿಡಿಸಿಹನು
ನಾಳೆಯಿಲ್ಲದೊಡೆ ನಾಡಿದ್ದು ಬಂದು
ಶೂಲಿ ಬಿಡಿಸಿಹನೆಂದು ನಂಬಿದೆ ದಂದುಗದ
ಬೇಳುವೆಯ ಬಿಡಿಸುವರ ಕಾಣೆನಯ್ಯ ಕರುಣಿ ||3||
ನೀರ ಮೇಲಣ ಹಾವಸೆಯ ತೆರದಿ ಬಂದು ಬಂ
ದೋರಂತೆ ಕವಿವುತಿದೆ ಮನಕೆ ಮರವೆ
ಆರೊಡನೆ ಮುದ್ದಿಸುವೆನಾರೊಡನೆಮುನಿವೆ ನಾ
ನಾರಿಗುಸುರುವೆನಾರ ಮರೆವೊಗುವೆನೋ ಕರುಣಿ ||4||
ಅಕ್ಕಟ ತುಪ್ಪವೊಕ್ಕು ಬಾಯಿ ಬೆಂದಂತೆ
ಕಕ್ಕುಲತೆಗೊಂಡು ಹೆರರೊಡನೆ ಎನ್ನ
ದುಃಖವನು ಹೇಳಿದರೆ ನಗುವರಲ್ಲದೆ ತಾಮ
ಸಕ್ಕೆ ತಕ್ಕವುಷಧಿಯ ಮಾಡರಯ್ಯೋ ಕರುಣಿ ||5||
ನಾ ಬಿಟ್ಟೆನೊಲ್ಲೆನೆಂದರೆ ತನುವನೆಡೆಗೊಂಡು
ತಾ ಬಿಡವು ಹಸಿವು ನೀರಡಿಕೆ ನಿದ್ರೆ
ನೀ ಬಿಡಿಸಿದರೆ ಬಿಡುವುದೈಸೆ ಮಿಕ್ಕಂತೆ ಬಿಡ
ದೀ ಬಟ್ಟೆಗುತ್ತ ಸಂಸಾರವಯ್ಯ ಕರುಣಿ ||6||
ಅಳಲದಿರು ಕಂದ ಬಳಲದಿರು ಬಾಯಾರದಿರು
ಕಳವಳಿಸದಿರು ಚಿಂತಿಸದಿರು ನಿನ್ನನ್ನು
ಸಲಹುವೆನು ಸಹವಾಗಿ ಬಹೆನೆಂಬುದೀಗೆನ್ನ
ಕುಲಗುರು ಮಹಾದಾನಿ ಶಂಕರಲಿಂಗವೇ ||7||

ಸ್ಥಿರವಲ್ಲವೀ ಕಾಯ
ಸ್ಥಿರವಲ್ಲವೀ ಕಾಯ ಸ್ಥಿರವಲ್ಲ
ಮರುತನಿದಿರ ದೀಪ ಸುರಚಾಪವಣ್ಣ ||ಪಲ್ಲ||
ತಲೆಕೆಳಕಾಗಿ ಒಣಗಿದ ವೃಕ್ಷದ ಕೊಂಬ
ನಿಲಿಸಿ ನೀರೆರೆವ ಮರುಳನಂತೆ
ಎಲುವಿನ ಪಂಜರದೀ ಕಷ್ಟ ಕಾಯವ
ಸಲಹುವೆನೆಂದು ಕೋಟಲೆಗೊಂಬಿರಣ್ಣ ||1||
ಕಡಲ ತೆರೆಗಳಂತೆ ಜಲದ ಬೊಬ್ಬುಳಿಯಂತೆ
ಅಡರಿದ ಮೇಘದೊಡ್ಡಣೆಯಂತೆ
ನಡೆವುತ ಮಡಿವ ದೇಹವ ನಚ್ಚಿ
ಮೃಡನಡಿಗೆರಗದೆ ಕೆಡುತಿಹಿರಣ್ಣ ||2||
ವಾಯಸ ಕೋಗಿಲೆಮರಿ ತನ್ನ ಶಿಶುವೆಂದು
ಬೀಯವನಲ್ಲಿಗಲ್ಲಿಗೆ ತಂದು
ಸಾಯಸಗೊಂಡು ಸಲಹುವಂತೆ ಸತಿ ಸುತ
ದಾಯಾದ್ಯರೆವರೆಮ್ಮಂದೆಂಬಿರಣ್ಣ ||3||
ಅರ್ಥವ ಗಳಿಸಿ ತಂದರ್ತಿಯಿಂದುಂಡುಟ್ಟು
ಮತ್ರ್ಯದೊಳಗೆ ಸುಖವಿಹೆನೆಂದು
ವ್ಯರ್ಥನಾಗಿ ಪರಮಾರ್ಥವನೊಲ್ಲದೆ
ಧೂರ್ತ ಕಾಲನ ಬಾಧೆಗೊಳಗಾಹಿರಣ್ಣ ||4||
ಎನ್ನಿಂದ ಮರುಳರು ಎನ್ನಿಂದ ತರಳರು
ಇನ್ನಿಲ್ಲವಯ್ಯ ಮೂಜಗದಲ್ಲಿ
ಎನ್ನವಗುಣವ ನೋಡದೆ ಕರುಣಿಪುದು ಪ್ರ
ಸನ್ನ ಮೂರುತಿ ಗುರು ಶಂಕರಲಿಂಗ ||5||

ಸುರಚಾಪ ನಿರ್ಧರವಾದ ಕಾಲಕ್ಕೆ
ಸುರಚಾಪ ನಿರ್ಧರವಾದ ಕಾಲಕ್ಕೆ ನಿನ್ನ
ಶರೀರ ನಿರ್ಧರವಹುದೆಚ್ಚತ್ತಿರಣ್ಣ ||ಪಲ್ಲ||
ಉತುಪತಿ ಸ್ಥಿತಿ ಲಯವೆಂಬಿವು ಮೂರು ನಮ್ಮ
ಸಿತಕಂಠನಾಧೀನವೆಂದಯರಿದೆ
ಉತುಪತಿ ಸ್ಥಿತಿಯೆಂಬಿವೆರಡಕೆ ಪರಿಣಾಮಿಸುವೆ
ಅತಿ ನೋವೆ ಲಯಕೆ ಇನ್ನೆಂತಹುದಣ್ಣ ||1||
ಅರಳಿಯ ಎಲೆಯ ತುದಿಯಲಿಪ್ಪ ಜಲದ ಬಿಂದು
ತರುವುಳ್ಳನಕ ಧರೆಗೆ ಬೀಳೆನೆಂಬ
ಪರಿಯಂತೆ ಹೊನ್ನು ಹೆಣ್ಣು ಮಣ್ಣುಳ್ಳನಕ ನಿನಗೆ
ಮರಣವಿಲ್ಲೆಂದಡಾರು ಮೆಚ್ಚುವರಣ್ಣ ||2||
ಅರಮಾನದಕ್ಕಿಯನುಂಬವೊಡಲಿಗೆ ಗಳಿಸಲೆ
ಗಿರಿಯನಿತಶನವ ಮಾಡುವಂತೆ
ಹರಿ ಹರಿದಾಡಿ ಕೂಡಿ ಒಡವೆಯ ನೆಲನನಗೆದು
ಇರಿಸಿ ಹೋದಲಿ ಏನನುಂಡಿಪ್ಪೆಯಣ್ಣ ||3||
ಸೀರೆಯ ನೆಯಿವಾತ ಕಂಡಿಕೆ ತುಂಬಿದ ನೂಲ
ತೀರಿಹೋಹುದನರಿಯದಿಪ್ಪಂತೆ
ಪೂರಕ ರೇಚಕ ಮಾರುತ ನಿನ್ನಾಯುಷ್ಯವ
ಹೀರಿಕೊಂಬುದವನೀ ವಿಚಾರಿಸೆಯಣ್ಣ ||4||
ಇರದೆ ನೆರಹಿದರ್ಥಕೆ ನಾಲೋರು ದಾಯದಿರು
ಧರ್ಮ ಚೋರರು ವಹ್ನಿ ಭೂಭುಜರು
ಹಿರಿಯನ ಮುನ್ನ ಮನ್ನಿಸದಿರ್ದಡೆ ಮಿಕ್ಕಿನ ಮೂ
ವರು ನಿನ್ನ ಅರ್ಥವ ಸಂಹರಿಸುವರಣ್ಣ ||5||
ಒಂದು ಗಾವುದವ ಹೋಹಾತನೆರಡು ಹೊತ್ತಿ
ಗೆಂದು ಕಟ್ಟೋಗರವ ಕಟ್ಟಿಕೊಂಬ
ಮುಂದಣೆಂಬತ್ತಾರುಸಾವಿರ ಯೋಜನ
ಕಿಂದೇಕೆ ಸಂಬಳವ ಜೋಡಿಸೆಯಣ್ಣ ||6||
ನಿರ್ಧರವಿಲ್ಲದ ತನುವಿನಾಸೆಯ ಬಿಟ್ಟು
ಊರ್ಧ್ವರೇತನ ಗುರುಶಂಕರರ
ಸಾರ್ದು ಪೂಜೆಯ ಮಾಡು ನಿನ್ನ ಹೊದ್ದಿದ ಭವ
ಕರ್ದಮದ ಸರಿ ಪರಿದು ಹೋಹುದಣ್ಣ ||7||

ಅಂತಕನು ಮೊದಲಾದರಿಷಡ್ವ
ಅಂತಕನು ಮೊದಲಾದರಿಷಡ್ವ
ರ್ಗ ಚೋರ ಪ್ರತತಿ ಭಯ ಕರ ಘನಂ
ಸತತ ಮಾನಸ ವೀರಸುಭಟರೆಚ್ಚತ್ತಿರೆಚ್ಚತ್ತಿರಿ ||ಪಲ್ಲ||
ಬಲಿದು ಸಮೆ ದಮೆಯೆಂಬ ಕೋಂಟೆಯ
ಬಲಿದು ಸತ್ಸದ್ಧರ್ಮವೆಂಬ
ಗ್ಗಳದ ತೆನೆಗಳ ಹೂಡಿ ದಯ ದಾಕ್ಷಿಣ್ಯವೆಂದೆಂಬ
ಅಲಗು ಕೊತ್ತಳಗಳ ರಚಿಸಿ ನಿ
ರ್ಮಳ ಶಿವ ಶ್ರುತಿಯೆಂಬ ಡೆಂಕಣಿಯ
ಹೂಡಿ ಮಾನಸ ತಳವಾರರು ಮಲಗದೆಚ್ಚತ್ತಿರಿ ||1||
ಚಾರುತರ ಗುರುಸೆಯೆಂಬೀ
ದ್ವಾರವಂದವನಿಕ್ಕಿ ತತ್ವವಿ
ಚಾರವೆಂಬಾ ಬೀಯಗವ ಬಲಿದಾರೈಕೆ ಮಿಗಲು
ಸೇರಿಯಕ್ಷರ ಪಂಚಕವನು
ಚ್ಚರಿಸುತ ಸಹಜಾನುಭಾವದಿ
ಹರಿಗೊಡುತಸಮಾನ ಧೀರರು ಮಲಗದೆಚ್ಚತ್ತಿರಿ ||2||
ಒದವಿದನ್ನ ಸುವರ್ಣ ಯೌವನ
ಮದದಿ ಮೈಮರೆದೊಗದಿರಿ ಒರ
ಗಿದರೆ ಭವರುಜೆ ಹೆದರಿಸುತ ಬೆದರಿಸುತ ಚೆದರಿಸುತ
ಅದದೋ ಬರುತಿದೆ ಮುಂದೆ ಪಂಚ
ವದನ ಗುರುಶಂಕರನ ನೆರೆ ಮರೆ
ಯದೆ ಸತತಂ ಮಾನಸ ಚದುರರೆ ನೆನೆವುತೆಚ್ಚತ್ತಿರಿ ||3||

ಮುನ್ನ ನಾನೆಂಥ ಕರ್ಮಿಯೊ ದೇವ
ನಿಮ್ಮ ನೆನಹು ನೆಲೆಗೊಳದು ||ಪಲ್ಲ||
ಆರ ಜಪವನಾಳೀಗೊಂಡೆನೊ ನಾ ಮುನ್ನ
ಲಾರ ತಪಕೆ ವಕ್ರವಾದೆನೊ
ಆರ ಶಿವಾರ್ಚನೆಗಳನಣಕಿಸಿದೆನೊ
ಆರ ನಿರರ್ಥ ನಿಂದಿಸಿದೆನೊ ದೇವ ||1||
ಯಾಚಿಸಿದೆನೊ ಹೀನ ದೀನರ ನೆರನೆತ್ತಿ
ನಾಚಿಸಿದೆನೊ ಗುರು ಹಿರಿಯರ
ಸೂಚಿಸಿದೆನೊ ಸುಜನರೊಳಪಶಬ್ದವ
ಯೋಚಿಸಿದೆನೊ ಜೀವಹಿಂಸೆಗೆ ||2||
ವ್ರತ ನೇಮ ನಿಷ್ಠರ ಶೀಲವ ಹಳಿದೆನೊ
ಯತಿಗಳೊಡನೆ ಬಂಡುಗೆಡೆದೆನೊ
ಶ್ರುತಿವಾಕ್ಯದಲಿ ತಪ್ಪಹಿಡಿದೆನೊ ಶಿವಗಣ
ತತಿಯ ಮನವ ನೋಯಿಸಿದೆನೊ ||3||
ಕರುಬಿದೆನೊ ಬಾಳ್ವರ ನೋಡಿ ಪುಷ್ಪವ
ತುರುಬಿದೆನೊ ಶಿವಗೀಯದೆ
ಉರುಬಿದೆನೊ ಸಾರಹೃದಯರ ತುರುಗಳ
ಕರುಗಳ ಬಿಡೆನೊ ಊರತಗಹಿಕ್ಕಿ ||4||
ಕೆರೆಯನೊಡೆದೆನೊ ಮಹಾ ಫಲವಕ್ಷವ
ತರಿದೆನೊ ಹೂವಿನಗಿಡುಗಳ
ಮುರಿದೆನೊ ಪರನಾರಿಗೆ ಮಚ್ಚಿ ಮನವನು
ತೊರೆದುಳಿದೆನೊ ಕುಲವನಿತೆಯ ||5||
ಬಲ್ಲವರೊಳು ಬಾಷ್ಕಳಗೆಡೆದೆನೊ ಕೃಪೆ
ಯಿಲ್ಲದವರ ಕೂಡಿ ನುಡಿದೆನೊ
ಖುಲ್ಲಿಕೊಂಡೆನೊ ಪರರೊಡವೆಯ ಗುರುಸಭೆ
ಯಲ್ಲಿ ಮದಾಂಧನಾಗಿದ್ದೆನೊ ||6||
ಹೇಳಿದೆನೊ ಕೊಂಡೆಯಗಳ ಕಿವಿಗೊಟ್ಟು
ಕೇಳಿದೆನೊ ಕಾಮಶಾಸ್ತ್ರವ
ತಾಳಿದೆನೊ ಆತ್ಮತೇಜವನಲ್ಲಿ
ಹೂಳಿದೆನೊ ಶಿವನಿಂದೆಯ ||7||
ಧರ್ಮವ ಮಾಡುವರ ಬೇಡವೆಂದೆನೊ
ಕರ್ಮಕೆ ನಾ ಸಹವಾದೆನೊ
ವರ್ಮವನೆತ್ತಿ ನುಡಿದೆನೊ ಸದೈವರ
ದುರ್ಮಾರ್ಗದಲ್ಲಿ ವರ್ತಿಸಿದೆನೊ ||8||
ಬೆಟ್ಟಕ್ಕೆ ಬೇಗೆಯಿಕ್ಕಿದೆನೊ ಪರರ ಕಣ್ಣ
ಕಟ್ಟಿ ಬಣಜಿಸಿ ಗಳಿಸಿದೆನೊ
ಸುಟ್ಟೆನೊ ಇಟ್ಟಿಗೆಗಳನನ್ಯದೈವಕೆ
ಕೊಟ್ಟೆನೊ ಮುಡುಹು ಮುಂದಲೆಗಳ ||9||
ಹೆಂಗೊಲೆಗೊಡಬಟ್ಟೆನೊ ದಾಸಿಯ
ಸಂಗಸುಖಕೆ ಮನವಿಟ್ಟೆನೊ
ಕಂಗಾಣದವರ ಕಾನನದಲ್ಲಿ ಬಿಟ್ಟೆನೊ
ಪಂಗುಳರಿಕ್ಕೆಯ ಸುಟ್ಟೆನೊ ||10||
ಕೊಟ್ಟ ನಂಬುಗೆಗಳುಪಿದೆನೊ ಜಲವ ಹೊಕ್ಕು
ಬೊಟ್ಟು ಕಚ್ಚಿದವರ ಕೊಂದೆನೊ
ಬಿಟ್ಟೆನೊ ಹಿಡಿದ ಮಹಾವ್ರತಶೀಲವ
ಬಟ್ಟೆಯೊಳಗೆ ಮುಳ್ಳನೆಳೆದೆನೊ ||11||
ತೊರೆದೆನೊ ಮಾತೆ ಪಿತರ ಪಂತಿಭೇದವ
ನರಿದು ಮಾಡಿದೆನೊ ಉಂಬೆಡೆಯಲಿ
ನೆರೆ ಸೊಕ್ಕಿ ಪರರ ಭೂಮಿಯನೊತ್ತಿಕೊಂಡೆನೊ
ಮೊರೆದಪ್ಪಿ ನಡೆದೆನೊ ಮದದಲ್ಲಿ ||12||
ಗುರು ಹಿರಿಯರ ಭೂಮಿದಾನವ ತಡೆದೆನೊ
ಉರಿಯ ಹತ್ತಿಸಿ ಜೇನಗಳೆದೆನೊ
ಕೆರಹುಗಾಲಲಿ ಶಿವಭವನವ ಹೊಕ್ಕೆನೊ
ಎರವಿನ ತನು ನಿತ್ಯವೆಂದೆನೊ ||13||
ಹರಗರ್ಪಿಸದೆ ಹಣ್ಣು ಕಾಯ್ಗಳ ಮೆದ್ದೆನೊ
ವರ ಗುರುವಿನ ಸೊಮ್ಮ ಕದ್ದೆನೊ
ಶರಣರುಗಳ ಕೂಡೆ ಹೋರಿ ಗೆದ್ದೆನೊ ಉಪ
ಕರಣ ಪುಸ್ತಕಗಳನೊದ್ದೆನೊ ||14||
ಎನ್ನಪರ್ಧವನೆಣಸಿಹೆನೆಂದರೆ
ಪನ್ನಗಪತಿಗೊಮ್ಮೆಯಸದಳ
ಎನ್ನುದನೆಲ್ಲವ ಮರೆದು ಸಲಹು ಗಿರಿ
ಕರ್ನಿಕೆಯೊಡೆಯ ಶಂಕರಲಿಂಗವೆ ||15||

ಸಹಜ ಸಜ್ಜನ
ಸಹಜ ಸಜ್ಜನ ಸತ್ಯವಿನಿತಿಲ್ಲ
ಕುಹಕ ಕುಟಿಲ ಹೆಚ್ಚಿತೆನ್ನೊಳು ||ಪಲ್ಲ||
ನಡೆವುದೆಲ್ಲ ತಪ್ಪು ನುಡಿವುದೆಲ್ಲ ತಪ್ಪು
ಕೊಡುವುದು ಕೊಂಬುದೆಲ್ಲ ತಪ್ಪು
ಉಡುವುದೆಲ್ಲ ತಪ್ಪು ತೊಡುವುದೆಲ್ಲ ತಪ್ಪು
ಕಡೆಗೆನ್ನಲುಳಿದೆಲ್ಲ ತಪ್ಪು ||1||
ಕಣ್ಣಲಿ ಕಾಬುದೆಲ್ಲ ತಪ್ಪು ನಾಸಿಕ
ಮುನ್ನ ವಾಸಿಸುವುದೆಲ್ಲ ತಪ್ಪು
ಕರ್ನದಿ ಕೇಳುವುದೆಲ್ಲ ತಪ್ಪು]ನಾಲಗೆ
ಭಿನ್ನರುಚಿಯನರಿವುದು ತಪ್ಪು ||2||
ಮನದೊಳು ನೆನವುದೆಲ್ಲ ತಪ್ಪು ಬುದ್ಧಿಯೊ
ಳನುಮಾನಿಸುವುದೆಲ್ಲ ತಪ್ಪು
ಇನಿತು ಚಿತ್ತದೊಳು ಚಿಂತಿಸುವುದೆಲ್ಲ ತಪ್ಪು
ಕನಸು ಜಾಗರ ನಿದ್ರೆ ನೆರೆ ತಪ್ಪು ||3||
ಅರಿವುದೆಲ್ಲ ತಪ್ಪು ಮರೆವುದೆಲ್ಲ ತಪ್ಪು
ಕುರುಹಿಟ್ಟು ಕಾಬೆನೆಂಬುದು ತಪ್ಪು
ಹೊರಗೊಳಗೆಂಬುದೆನ್ನದು ತಪ್ಪು ಎಲ್ಲಿಯ
ತೆರಹಿಲ್ಲದನೆ ತಿಳಿವುದು ತಪ್ಪು ||4||
ನಿನ್ನ ಮನಸು ಮೆಚ್ಚಿ ನಡೆವರೆ ನಾನೇನು
ಚೆನ್ನಬಸವ ಸಿದ್ಧರಾಮಯ್ಯನೆ
ಎನ್ನವಗುಣ ಕೋಟಿಯುಂಟವನೆಣಿಸದೆ
ಮನ್ನಿಪುದಯ್ಯ ಶಂಕರಲಿಂಗ ||5||

ಉಲುಹಿಗಮ್ಮೆನು ಕುಸ್ತಿ
ಉಲುಹಿಗಮ್ಮೆನು ಕುಸ್ತಿ ಕಲಹಕ್ಕಮ್ಮೆನು ಅತಿ
ಗಲಭೆಗಮ್ಮೆನು ಗಾವಳಿಗಮ್ಮೆನು
ಬಲುಹು ಮುಂದೆಮಬಾಧೆ ಕುಟಿಲ ಕುಶ್ಚಿತಕಮ್ಮೆ ಕುಲಛಲದಮದಕಮ್ಮೆನು ||ಪಲ್ಲ||
ಪರರ ದಂಡಿಸಲಮ್ಮೆ ಪರರ ಖಂಡಿಸಲಮ್ಮೆ
ಪರರ ಹಂಗಿಸಲಮ್ಮೆ ಪರರ ಭಂಗಿಸಲಮ್ಮೆ
ಪರರ ಕಾಡಿಸಲಮ್ಮೆ ಪರರ ಜಾಡಿಸಲಮ್ಮೆ ಪರರ ಝಂಕಿಸಲಮ್ಮೆನು
ಪರರ ತಗ್ಗಿಸಲಮ್ಮೆ ಪರರ ಬಗ್ಗಿಸಲಮ್ಮೆ
ಪರರ ಜಡಿಯಿಸಲಮ್ಮೆ ಪರರ ಬಡಿಯಿಸಲಮ್ಮೆ
ನರಕಬಾಧೆಯು ಮುಂದೆ ಗೆಲಲರಿದುದದರಿಂದ ಪರರ ನಾಚಿಸಲಮ್ಮೆನು ||1||
ಹೆಮ್ಮೆಕಾರರ ಗೊಟ್ಟಿಯೊಳಗೊಚ್ಚಿ ಹೊತ್ತಿರ
ಲ್ಕಮ್ಮೆಯಾನು ಜಂಗಮರೊಡನೆ ಜಗಳವಾಡ
ಲ್ಕಮ್ಮೆನು ಲಿಂಗಪೂಜೆಯ ಬಿಟ್ಟು ವರ್ತಿಸಲ್ಕಮ್ಮೆನು ಗುರುರಾಯನ
ಸೊಮ್ಮಿಗಾಸೆಯಮಾಡಿ ತನುವ ರಕ್ಷಿಸಿಕೊಳ್ಳ
ಲಮ್ಮೆಯಾನು ಶಿವಭಕ್ತರೊಳು ಸರಸವನಾಡ
ಲಮ್ಮೆಯಾ ದೇವಬೋಧೆ ಪಿರಿದಾಗಿ ನಿಂದೆಯ ನೆಮ್ಮಿ ಕೊಂಡಿರಲಮ್ಮೆನು ||2||
ನಿಹಿತವಿಲ್ಲದವರ ನೆರೆ ಹೊರೆ ಯೊಳಗಿರಲಮ್ಮೆ
ಸಹಜವಿಲ್ಲದವರ ಸದನವನುಸಾರಲಮ್ಮೆ
ಕುಹಕದುಪಚರಿಪ ಮಾನವರನೊಳಕೊಳಲಮ್ಮೆ ಅಹಿತರಾಜಸಕಮ್ಮೆನು
ವಹಮಾನದೂರರಾ ಮುಖದ ಮುಂದಿರಲಮ್ಮೆ
ಅಹುದಲ್ಲವೆನಲಮ್ಮೆನಲ್ಲದನ್ಯ ಮಾರ್ಗವ
ಅಹುದೆನ್ನಲಮ್ಮೆ ಕಾಲನ ಭಯಂ ಪಿರಿದಾಗಿ ಬಹಳ ಮತ್ಸರಕಮ್ಮೆನು ||3||
ಗುಡಿಯ ಒಳಗಿರ್ದು ಗುಡಿಯ ನೇಣಂ ಕೊಯ್ಯುವವ
ರೊಡನೆ ನುಡಿಯಲ್ಕಮ್ಮೆ ಮೊಲೆಯುಣುತಲ್ಲಿ ನಖ
ವಿಡಿದಿರಿವ ದುರಾತ್ಮಕರೊಡನೆ ನಡೆಯಲ್ಕಮ್ಮೆ ಕೆಡುಕರಾ ಕೆಳೆಗಮ್ಮೆನು
ಬಿಡು ಬಿಡೆಲ್ಲಿಯ ಪಾಪವೆಲ್ಲಿಯ ಪುಣ್ಯವೆಂಬ
ಬೆಡಗಿನಾ ಮಾತುಕಾರರ ನಡುವಿರಲ್ಕಮ್ಮೆ
ಕಡುಗಲಿಯ ಯಮಬಾಧೆ ಸಿರಿದಾಗಿ ಲೋಕದಾ ಜಡರ ಬೆರಸಲ್ಕಮ್ಮೆನು ||4||
ಹುಸಿಗಮ್ಮೆ ಕೊಲೆಗಮ್ಮೆ ಕಳವು ಹಾದಕರಕಮ್ಮೆ
ವಿಷಯ ವ್ಯಸನಕ್ಕಮ್ಮೆ ಕಷ್ಟ ನಿಷ್ಠೂರರಾ
ಹೆಸರ ಹಿಡಿಯಲ್ಕಮ್ಮೆ ಕಪಟಕ್ಕಮ್ಮೆ ಹೀನ ಹಿಸು ಣಾದಿಗಳಿಗಮ್ಮೆನು
ಅಸಮನಯನಂತಾಆದಿವೃಷಭಗಮನ ದರ
ಹಸಿತವದನಂ ಗುರುಶಂಕರನೆ ನಿನ್ನ ಭಕ್ತಿ
ರಸಕೆನ್ನ ಗುರಿಮಾಡು ಆಯುಷ್ಯ ಭೌಷೆಯಾ
ಹುಸಿ ಹಡಣಗಳಿಗಮ್ಮೆನು ||5||

ಅಂಜುವೆನಯ್ಯ ಅಂಜುವೆ
ಅಂಜುವೆನಯ್ಯ ಅಂಜುವೆ ದೇವ
ಅಂಜುವೆ ಹುಸಿ ಕೊಲೆ ಕಳವು ಹಾದರಕಾಂಕ್ಷೆ
ಗಂಜುವೆನಯ್ಯ ಅಂಜುವೆನಯ್ಯ ||ಪಲ್ಲ||
ಇಂದುಧರನ ನಿಜ ಮಕುಟವನು ಕಂಡು
ಬಂದೆಹೆನೆಂದು ಕಮಲೋದ್ಭವನು
ಕಂದುಕಂಠನ ಮುಂದೆ ಹುಸಿದು
ಹೆಂದದ ದೇವತ್ವನೀಗಿದನಾಗಿ ||1||
ಸುಲಲಿತ ಗುಣನಿಧಿ ಸೋಮದತ್ತನ ಸುತ
ಬಲವಂತ ಶೂದ್ರಕ ವೀರನು
ಕಳವೆಂಬ ಪುಸಿ ಹೊದ್ದಿ ಮೂಲೋಕವರಿಯಲು
ಸಲೆ ಕಾಂಚಿಯಾಲಕೆ ತಲೆಯಿತ್ತನಾಗಿ ||2||
ಮನದೊಳಹಲ್ಯಾದೇವಿಗೆ ಮೋಹಿಸಿ
ಮನೆಯ ನೆರೆ ಕುಕ್ಕುಟದಂತೆ
ದನಿಗೆಯ್ದು ಸುರಪತಿ ಮುನಿಯ ಶಾಪದಿಂದ
ಮನುಮಥಮುದ್ರೆಗೆ ತನುವನಿತ್ತನಾಗಿ
ನೋಡೆ ಪರ್ವತವನೆಲ್ಲ ||3||

ಕೆಟ್ಟೆನೆನಗಿನ್ನೇನು ಬಟ್ಟೆ
ಕೆಟ್ಟೆನೆನಗಿನ್ನೇನು ಬಟ್ಟೆ ಶಿವ ಶಿವ ಕಾಲ
ನಟ್ಟುಳಿಯ ಗೆಲುವ ಬುದ್ಧಿಯನರಿಯೆನು ||ಪಲ್ಲ||
ಹಸಿದು ಬಂದತಿಥಿಗನ್ನವನಿಕ್ಕಿ ನಾನರಿಯೆನು
ಶಶಿಶೇಖರನ ಪೂಜೆ ಮಾಡಲರಿಯೆನು
ನೊಸಲೊಳು ನೆನೆದು ಭಸಿತವ ಪೂಸೆ ನಾನರಿಯೆನು
ಅಸಮ ರುದ್ರಾಕ್ಷೆಯಂ ತೊಟ್ಟು ನಾನರಿಯೆನು ||1||
ಅಣುಮಾತ್ರ ಸತ್ಯವಾಕ್ಯವ ನುಡಿದು ನಾನರಿಯೆ
ಅಣುಮಾತ್ರ ಮನ ಮೆಚ್ಚಿ ನಡೆದರಿಯೆನು
ಅಣುಮಾತ್ರ ಲಿಂಗ ಜಂಗಮವ ಬಲಗೊಳ್ಳಲರಿಯೆ
ಅಣುಮಾತ್ರ ಶಿವನ ನಂಬಿದುದರಿಯೆನು ||2||
ಸಲ್ಲಲಿತ ಶರಣರಿಗೆ ನಮಿಸಲರಿಯೆನು
ಎಲ್ಲರೊಳು ಹಿತವ ಹಿಂಗಲರಿಯೆನು
ಅಲ್ಲದವಗುಣವನತಿಗಳೆಯಲರಿಯೆನು
ಎಲ್ಲರೊಳೊಳ್ಳಿಹನಿವನೆನಿಸಿಕೊಳ್ಳಲರಿಯೆನು ||3||
ಮೂರುಮಲವನು ಹರಿಯಲರಿಯೆ ಒಡಲೊಳಗಿರ್ದ
ಅರು ಭವಿಗಳ ಕಳ್ಳರನೂಳಲರಿಯೆನು
ವಿೂರಿದ ದಶವಾಯುಗಳ ಕಟ್ಟಲರಿಯೆನು ಜರೆದು
ತೋರದೈವಗಳ ಹಿಂಗಿಸಲರಿಯೆನು ||4||
ಪಾದೋದಕ ಪ್ರಸಾದ ಕೊಳ್ಳಲರಿಯೆನು ಮ
ಹಾದೇವ ನೀನೆ ಗತಿ ಎನಲರಿಯೆನು
ಆದಿ ಪಂಚಾಕ್ಷರವನು ಜಪಿಸಲರಿಯೆನು
ವಾದ ವಶ್ಯದ ಸೊಲ್ಲ ಅಡಗಿಸಲರಿಯೆನು ||5||
ಪರನಾರಿಸಹೋದರನೆನಿಸಿಕೊಳ್ಳಲರಿಯೆನು
ಪರರೊಡವೆಯಮೇಧ್ಯವೆನಲರಿಯೆನು
ಪರನಿಂದೆಯನು ತೊರೆದು ಹರನ ಕೀರ್ತಿಸಲರಿಯೆ
ಪರ ಜೀವ ಹಿಂಸೆಯಂ ಬಿಡಲರಿಯೆನು ||6||
ಗಳಿಸಲರಿಯೆನು ಸುಧರ್ಮದಲಿ ಕಾಂಚನವನು
ಒಲಿದು ಸತ್ಪಾತ್ರಕೆ ಕೊಡಲರಿಯೆನು
ನಲಿದು ಗುರುಸೇವೆಯಂ ಮಾಡಲರಿಯೆ
ಕಳ್ಳ ವಿಷಯವ ತೊಲಗಿಸಲರಿಯೆನು ||7||
ಸುಖ ದುಃಖ ಸಮವೆಂದು ಕಾಣಲರಿಯೆನು
ಮುಖದೊಳೆಲ್ಲರನೀಕ್ಷಿಸ ಲರಿಯೆನು
ಭಕುತಿ ಭಾವದೊಳರ್ಚಿಸಲರಿಯೆನು
ಸುಖದ ಸಂಗಾತಿಗಳ ಬಿಡಲರಿಯೆನು ||8||
ಹಾಡಲರಿಯೆನಘಹರನನೊಲಿದು ಶಿವಯೆನುತ ಕೊಂ
ಡಾಡಲರಿಯೆನು ನಿತ್ಯ ದಾಸೋಹವ
ಮಾಡಲರಿಯೆ ಅರಿಯೆ ಅರಿಯೆ ಎನ್ನವಗುಣವ
ನೋಡದಿರು ತಂದೆ ಶಂಕರಲಿಂಗವೆ ||9||

ಶಿವನ ನೆನೆ
ಶಿವನ ನೆನೆ ಶಿವನ ನೆನೆ ಶಿವನ ನೆನೆಯದಿರ್ದೊಡೆ
ಜವನದೂತರಟ್ಟಿ ಮೆಟ್ಟಿ ಕಟ್ಟಿ ಕವರುತಿರ್ಪರಂತೆ ||ಪಲ||
ಮಡಿ ದುಕೂಲ ನೋಡ ನೋಡ ಮಾಸಿ ಮಣ್ಣ ಹಿಡಿದು ಅಸಗ
ನೆಡೆಗೆ ಹೋಗಿ ಉಬ್ಬೆಯಿಕ್ಕಿ ಒಗಸಿಕೊಂಬ ಮಾಳ್ಕೆಯಿಂ
ನಡೆವ ಕಾಯಕದೊಳು ವಾಚಕದೊಳು ಮಾನಸದೊಳು ಕರ್ಮ
ವಡಸಿದಸುವನೆಮನಭಟರು ಕಡಿದು ಹರಡುತಿರ್ಪರಂತೆ ||1||
ಬಲಿದು ಕಿಲುಬು ನಟ್ಟ ಕನ್ನಡಿಯನು ಕಂಚುಗಾರ ಹಳಿದು
ಮುಳಿದು ಕೆತ್ತಿ ಕೀಸಿವೊತ್ತಿ ಒರಸುತಿಪ್ಪ ಮಾಳ್ಕೆಯಿಂ
ಹಲವು ಕಾಲ ಕನಸು ನಿದ್ರೆ ಜಾಗರಂಗಳಲ್ಲಿ ಅಘವ
ಗಳಿಸಿದಸುವ ಯಮನ ಭಟರು ಮುಳದು ಹಿಂಡಿ ಹಿಳಿವರಂತೆ ||2||
ಮರುತಮಿತ್ರ ಲೋಹ ಸಂಗಮ ಸರಾಗದಿಂದ ಮಾಡಿ
ಪಿರಿಯ ಚಮ್ಮಟಿಕೆಯೊಳಡಸಿ ಹೊಡಸಿಕೊಂಬ ಮಾಳ್ಕೆಯಿಂ
ನೆರೆದ ಹೊನ್ನಿನಲ್ಲಿ ಹೆಣ್ಣಿನಲ್ಲಿ ಮಣ್ಣಿನಲ್ಲಿ ಬಿದ್ದು
ಬೆರಸಿದಸುವ ಯಮನ ಭಟರು ಹರಿದು ಮುಕ್ಕುತಿರ್ಪರಂತೆ ||3||
ಉಯ್ಯ ನಡುವೆ ಹಿಂಕಿದಕ್ಕಿ ಒನಕೆವಿಡಿದ ಮಾನಿನಿಯರ
ಕಯ್ಯೊಳಕಟ ಕುದಿಸಿ ಹೊದಸಿ ತದಿಸಿಕೊಂಬ ಮಾಳ್ಕೆಯಿಂ
ಸಯ್ಯದೊಂದು ವಿಷಯವ್ಯಸನ ಮುಸುಕಿದಸುವ ಯಮನ ಭಟರು
ಒಯ್ಯನೊಯ್ಯನಿರಿದು ತರಿದು ಮುರಿದು ಮೋದುತಿರ್ಪರಂತೆ ||4||
ನೀತಿಹೋತ್ರನಿದ್ದ ಮನೆಗೆ ಸೀತ ಹೊದ್ದಲಮ್ಮದಂತೆ
ಆ ತರಣಿಗಂಧಕಾರ ಭೀತಿಗೊಂಬ ಮಾಳ್ಕೆಯಿಂ
ಓತು ಪರಮಗುರುವರೇಣ್ಯ ಶಂಕರನ ಸಮರ್ಚಿಸುವ ಪು
ನೀತ ಶಿವಯುತರ್ಗೆ ಜವನ ದೂತರಂಜುತಿರ್ಪರಂತೆ ||5||

ಅಮ್ಮ ಸುಧರ್ಮದ
ಅಮ್ಮ ಸುಧರ್ಮದ ಬಟ್ಟೆಯನೈದುವರ್ಗಿ
ಗಿಮ್ಮಡಿ ಮೂರುಮಡಿ ಸುಖವಂತೆ ||ಪಲ್ಲ||
ಕರ್ಮದ ಬಟ್ಟೆಯನೈದುವರಿಗೊಚ್ಚರಹೊತ್ತು
ನಿರ್ಮಳವಿಲ್ಲವಂತೆ ಪಾಪಕಂಜುವೆನಯ್ಯ
ಆರು ಧರ್ಮವ ಮಾಡಿದವರು ಹೋಹದಾರಿ
ನಡೆನಡೆನಡೆಯೆನುತ್ತ ಹಿಡಿತಂದು ನರಕಿಗಳ ||1||
ಒಡೆಯ ಜವನ ಮುಂದಿರಿಸಿ ಜನಕನ ಜಡಿದನಿವ
ನಡೆದನಿವ ಕಡಿದನೀಂ ಕಲ್ಪವೃಕ್ಷವನು ಕೆರೆಗಳನು
ಒಡೆದನಿವ ಗುರುಹಿರಿಯರನು
ಭೂಮಿಗಳ ತಡದನಿವನೆಂದು ಬೊಬ್ಬಿಡುತಿಹರಂತೆ ||2||
ಘುಡುಘುಡಿಸಿ ಕೊರೆದ
ಪೊರಮಡೆ ನೀಲಗಿರಿಗೆ ತೋಳು
ತೊಡೆಗಳೊಗೆದಂತೆ ಕಾಲಭೈರವಲೀಲೆವಡೆದಂತೆ
ಲನರಿ ಹುರಿ ಹಲ್ಲನುದರಹೊಡೆ
ಕೊಡಹಿ ಕುಸುಕಿರಿ ಕೆಡಹಿ ಬೆನ್ನ ಬದೆಯ
ಕಟ್ಟಿ ಎಳೆಹೂಟಿಯಾ ಹೂಡು ಕೊಡು ದಿಗುಬಲಿಯನೆಂ ದೆಂಬುತಿಹರಂತೇ] ||3||
ಜವನ ಬಂಟರ ಬಾಧೆ ಕೇಳಿ ಎದೆ ಒಡವುತಿದೆ
ಹøದಯ ತಲ್ಲಣಿಸುತಿದೆ ಗಡಗಡನೆ
[ನಡಗು]ತಿದೆ ಮನ ಹೆದರುತಿದೆ ಹರಣ
ಪುದಿದು ನೀ ನಿಮ್ಮ ಪದಪದ್ಮಕಮಲದೊಳು
ವೊದವಿದ ನೀನೆನ್ನ ಕಾದುಕೊಳ್ಳಯ್ಯ
ಮದನಹರ ವರಗುರು ಶಂಕರಲಿಂಗ ||4||

ಅವ್ವೋ ನಾನಮ್ಮೆನಯ್ಯ
ಅವ್ವೋ ನಾನಮ್ಮೆನಯ್ಯ ಕಾಲನ ಭಟ
ರಪ್ಪಳಿಸುತ ಮುತ್ತಿ ಮುರಿದು ಮೋದುವರಂತೆ ||ಪಲ್ಲ||
ಷಡುಸಿತಿಸಾವಿರಗಾವುದ ದಾರಿಯ
ನಡುವೆ ಉರಗ ನರ ಸುರರಸುವ
ಕಡಿದು ಖಂಡಿಸಿ ಖಂಡದಿಂಡೆಯನಾಡುತ
ಕಡುಗಲಿ ಜವನ ಕಿಂಕರರೊಯ್ವರಂತೆ ||1||
ಇರವುತ ತರಿವುತ ಕೊರೆವುತ ಈ ಪರಿಯಲ್ಲಿ
ಮುರಿವುತ ಯಮಕಿಸುತಲಿ ನಲಿದು
ಜರಿದೆಳೆದು ಮುಳ್ಳೊಳು ಕಂದರದೊಳು
ದೂರಿಡೆ ಮೊರೆಯಿಡಲೆಳದೊಯ್ಯುತಿಹರಂತೆ ||2||
ಉರಿವ ಮೇದಿನಿ ಕಾಲನರಿವ ಕುಪ್ಪಟಿ ಮೇಲೆ
ಸುರಿವ ಕೆಂಡದ ಮಳೆ ವಿಷದ ಗಾಳಿ
ಮೊರೆವ ಹೆಬ್ಬುಲಿ ಶಿರವನೊದೆವ ಗಜ
ಕರುಳನುಗಿವ ಭೂತವೇತಾಳರಿಹರಂತೆ ||3||
ಇಂತಪ್ಪ ದಾರಿಯೊಳೆಲ್ಲರ ಕೊಂಡೊಯ್ದು
ಮುಂತೆ ಮುನ್ನೂ ರರುವತ್ತುಗಾವುದ
ತಿಂಥಿಣೀಯೊಳಗೋಲಗವನಿತ್ತ ಕ್ರೂರ ಕೃ
ತಾಂತನ ಕಟ್ಟಿದಿರೊಳು ನಿಲಿಸುವರಂತೆ ||4||
ಅವಧರಿಸಲೆ ರವಿನಂದನ ಇವ ಪಾಪಿ
ಇವ ಧರ್ಮಗಂಟಕನು
ಇವ ಗರ್ವಿಯಿವ ಲೋಭಿಯಿವ ಪರನಿಂದಕ
ಇವ ಜೀವಹಿಂಸಕನೆಂದು ಹೇಳುವರಂತೆ ||5||
ಕೊಂಡೆಯನಿವ ದಿಂಡೆಯನಿವ ಲೋಗರ
ಹೆಂಡಿರುಗಳಿಗಳುಪಿದ ಹೀನನಿವ
ಭಂಡನಿವ ಲಂಡನಿವನನ್ಯರೊಡವೆಯ
ನುಂಡು ಕೊಬ್ಬಿದ ಕರ್ಮಿಯೆಂದು ||6||
ಕೇಳುತ್ತ ಯಮನುರಿದೆದ್ದು ಭೂ ಗಗನಕೆ
ಕೀಲಕೊಟ್ಟಂತೆ ಕೆಕ್ಕಳಿಸಿ ನೋಡಿ
ಹೋಳಿಸಿ ತಾಳಿಸಿ ಹುರುಮುಡು ಸಿಕ್ಕನೆ
ಸೀಳೆಂದು ತನ್ನ ದೂತರಿಗುಸುರುವನಂತೆ ||7||
ಕಟಿಲೆಂಬ ಖಣಿಲೆಂಬ ಢಂ ಯೆಂಬ ಧುಮ್ಮೆಂಬ
ಕಟಿಲೆಂಬ ನೆಟಿಲೆಂಬ ನೆಳಿಲೆಂಬ
ಕಟಿಲೆಂಬ ಭುಗಿಲೆಂಬ ಭುಸ್ಸೆಂಬ ಭೋರೆಂಬ
ಚಿಟಿ ಚಿಣಿ ರವದಿಂದ ಬಾಧಿಪರಂತೆ ||8||
ಕಟ್ಟುತ ಕಾಸುತ ಮುಖದೊಳುಳ
ಚಿಟ್ಟೆ.ಸವಸಿವುತ
ಕಟ್ಟುತ ಚಕ್ರದಾಕೃತಿಯಲ್ಲಿ ಕಾಲನು ಮೆಟ್ಟಿ
ನೆಟ್ಟೆಲುಗಳ ಕಿತ್ತಿಡುತಿಹುದ ಕಂಡೆನು ||9||
ಸರಸಿಜರುಹನ ಸಾವಿರಕಲ್ಪವರುಷವೀ
ಪರಿಯೆ ಬಾಧಿಸಿಕೊಂಡು ಮರಳಿಬಂದು
ಗುರುಕೃಪೆಯಾಗದೆಂಬತ್ತುನಾಲುಕುಲಕ್ಷ
ನರಕಯೋನಿಯಲಿ ಹುಟ್ಟುತ ಹೊಂದುತಿಹರಂತೆ ||10||
ಕಡೆಯಿಲ್ಲದೀ ಪರಿಯಲ್ಲಿ ಹುಟ್ಟಿ ಹೊಂದುವ
ಗೊಡೆವೆಗಾನಾರೆನು ಅಲಸಿ ಹೆನು
ಮೃಢ ನಿಮ್ಮ ಚರಣಕಮಲದಲ್ಲಿ ಮನೆ ಮಾಡಿ
ಮಡಗಿಕೊಳ್ಳಯ್ಯ ಮದೀಯ ಶಂಕರಲಿಂಗ ||11||

ಮುಕುತಿಗಿದೊಂದೆ ಪಯಣ
ಯುಕುತಿಗಿದೊಂದೆನೆ ಬೇಗ ಶಿವ
ಭಕುತಿ ಬಟ್ಟೆಯ ತೋರಿಸೈ ತಂದೆ ||ಪಲ್ಲ||
ಎಂಬತ್ತುಮೂರುಲಕ್ಷ ತೊಂಬತೊಂಬತ್ತನೆಯ ಸಾವಿರದ
ಒಂಭಯಿನೂರತೊಂಬತ್ತೊಂಬತ್ತು ಯೋನಿ ನಗರಿಯೊಳು
ಬೆಂಬಿಡದೊಂದೊಂದು ಪರಿಯಾಹಾರವ ಕೊಂಬತ ನಾನಾ ಪರಿಯು
ಡಂಬಿನ ವೇಷಕೆ ತಕ್ಕ ಭಾಷೆಯನಾಡುತ ಲೆಡೆಗೆಯುತ ಬಂದೆ ||1||
ಊರೂರಲಿ ಎಡೆಗೆಯ್ದುಪರಾಧಕೆ ಶರಿರವ ಸುಂಕವ ತೆತ್ತು
ಭೋರನೆ ಜೀವವ ಕೊಲುತಲಿ ಬಂದು ವಿಕಾರದ ನರಪಟ್ಟಣವ
ಸಾರಿದೆನಾಕ್ಷಣದೊಳು ಸುಜ್ಞಾನವೆಂಬ ಸೂರಿಯನಸ್ತಮಿಸಿದನು
ಜವೆಂ ಸಂಜೆಯಂಕುರಿಸಿತು ಮಮಕಾರ ವೆಂಬಂಧಕಾರ ಮೊಳೆದೋರಿತು ||2||
ಅರಿವೆಂಬ ತಾವರೆ ಮುಗಿಯಿತು ಮರವೆಂಬ ಮಬ್ಬು ಮುಸುಕಿತು
ನೆರೆ ಸತಿ ಸುತರೆಂಬ ಕತ್ತಲೆಗವಿಯಿತು ತೆರಹುಗುಡದ ಮಾಯೆಯೆಂಬ
ಬಿರುಗಾಳಿ ಬೀಸಿತಹಂಕಾರವೆಂಬ ಮೋಡ ತುರುಗಿತು ಒಡಲಾಸೆಯೆಂಬ
ಬರಸಿಡಿಲೆರಗಿತು ಸಂಸಾರವೆಂಬ ಸೋನೆ ಕರೆಯಿತು ಕಂಗೆಡಿಸಿತು ತನುವ ||3||
ಆ ರಾತ್ರೆಯಲಿ ಮರೆದೊಗಿದರೈವರುರರುಗಳ ಕೂಡಿಕೊಂಡು
ವೈರಿಗಳಾರುಮಂದಿ ಕ್ಷಮೆ ದಮೆಯೆಂಬ ಭಂಡಾರವ ಸೂರೆಮಾಡಿದರು
ದಾರಿದ್ರನಾದೆನು ಮುಂದಣ ಪಥದ ದಾರಿ ಸಂಬಳವನೀಡಾಡಿ
ದೂರಿಸಿ ಧೃತಿಗೆಟ್ಟು ನಾ ನಿಮ್ಮ ಮರೆಹೊಕ್ಕೆ ಪಾರವೈದಿಸು ಫಣೀಪತಿಕಟಕ ||4||
ಮುಂದಣ ಪಯಣವಿದೊಂದಕ್ಕಾರದೆ ಬಂದ ಬಟ್ಟೆಗೆ ತಿರುಗಿದರೆ
ಇಂದು ರವಿಗಳುಳ್ಳನಕ ನಿಮ್ಮ ಚರಣವನೆಂದಿಗೆ ನಾನಿನ್ನು ಕಾಬೆ
ಒಂದೆರಡಲ್ಲ ಹಲಕೆಲವು ಪರಿಯ ಭವ ಬಂಧನದಲಿ ಮುಳುಗಿದೆನು
ನೊಂದೆನೆನ್ನವಗುಣಕೋಟಿಯನೆಣಿಸದೆ ತಂದೆ ಸಲಹು ಶಂಕರಲಿಂಗ ||5||

ಕರ್ಮಬಂಧವ ಕಳೆದು ಕರುಣದಿ
ನಿರ್ಮಳ ನಿಜಪದವ ತೋರಿದ
ಧರ್ಮರೂಪಿ ಶ್ರೀಗುರುವೆ ||ಪಲ್ಲ||
ಆಣವಾದಿ ಮಲತ್ರಯಂಗಳ
ಕೇಣಿಗೊಂಡು ವಿಮತ್ಸರದ
ಗೋಣನೂಶಿವಯೋಗದೆ
ಜಾಣನಾದೆ ಶ್ರೀಗುರುವೆ ||1||
ಗರ್ವಿಸುವ ಕರಣಾದಿಗುಣಂಗಳ
ನಿರ್ವಹಿಸಿ ಲೋಭವ ತ್ಯಜಿಸಿ
ನಿರ್ವಿಕಾರದಬಗೆಯನರಿದು ನಿ
ಗರ್ವಿಯಾದೆ ಶ್ರೀಗುರುವೆ ||2||
ಅಂಗದಿಚ್ಫೆಯ ಮರೆದು ಪರ ಶಿವ
ಸಂಗಸುಖದೊಳೋಲಾಡಿ
ಅಂಗಜನ ಮೆಟ್ಟಿ ನಿಂದು ಅ
ಭಂಗನಾದೆ |3||
ಆಸೆಯಾಮಿಷದೊಳಗೆ ಸಿಕ್ಕದೆ
ರೋಷ ಹರುಷಗಳ ಹರಿದು
ಗಾಸಿಮಾಡುವ ಮದವನೊದೆದು ನಿ
ರಾಸನಾದೆ ಶ್ರೀಗುರುವೆ ||4||
ವ್ಯರ್ಥವಹ ಸಂಸಾರವ ಜರೆದು ನಿ
ರರ್ಥವಹ ಮೋಹವ ನುಡಿದು
ಅರ್ತಿಯಿಂದ ಪ್ರಸನ್ನಶಂಕರ
ಮೂರ್ತಿಯಾದೆ ಶ್ರೀಗುರುವೆ ||5||

ಕೈಯ್ಯ ನೀಡು ಕರುಣ
ಕೈಯ್ಯ ನೀಡು ಕರುಣಿ ಕೈಯ್ಯ ನೀಡು ಕಾಲ
ನೊಯ್ಯದ ಮುನ್ನ ||ಪಲ್ಲ||
ಬಾವಿಯ ತಡಿಯ ಬಾಲಕನಿಂತೈದೆನೆ
ಆವಾಗ ಬಿದ್ದಹೆನೆಂದು ನಾನರಿಯೆ ||1||
ಆಸೆಯಾಮಿಷವೆಂಬ ಸುಂಟರಗಾಳಿ
ಬೀಸಿ ಭವದೊಳೆತ್ತಿಹಾಕದ ಮುನ್ನ | |2||
ಹುಸಿ ಕೊಲೆ ಕಳವು ಹಾದರವೆಂಬ ಘನಪಾಶ
ಮುಸುರಿ ವೈತರಣಿಗೆ ನೂಕದ ಮುನ್ನ ||3||
ಅಡಸಿಯಾಣವ ಮಾಯ ಕಾರ್ಮಿಕವೆಂಬ ಮಲ
ತಡೆಗಾಲಹೊಡೆದೆನ್ನ ಕೆಡಹದ ಮುನ್ನ ||4||
ಕಾಣದಂತಿರಬೇಡ ಕೈಯ್ಯ ನೀಡು ಗಿರಿಜಾ
ರಾಣಿಯರಸ ಗುರುಶಂಕರಲಿಂಗ ||5||

ಬಾ ಬಾ ಗುರುವೆ
ಬಾ ಬಾ ಗುರುವೆ ಕರುಣದಿ ಬಾ
ಶಿಷ್ಯನ ಪಿಡಿದೆತ್ತುವೆ ಬೇಗ ||ಪಲ್ಲ||
ಕುಲಹದಿನೆಂಟರೊಳುನಾನೆ
ಕುಲವುಳ್ಳವನುತ್ತಮನೆಂದು
ನಲಿವುತ ಕೆಲೆವುತ ಬಿಬ್ಬನೆ ಬಿರಿವುತ
ಕುಲಮದ ಕೂಪದೊಳಗೆ ಬಿದ್ದೈದೆನೆ ||1||
ಮಲೆತವರನು ಕೊಲುವರೆ ಗೆಲುವರೆ ಒ
ಕ್ಕಲ ಕೆಡಿಸುವರಿಳೆಯೊಳು ನಾನೆ
ಚಲವಂತನು ಚಲವಂತನೆಂದುಲಿವುತ
ಚಲಮದ ಸಂಕಲೆಯೊಳು ಬಿದ್ದೈದೆನೆ ||2||
ಮನುಜರೊಳಗೆ ನಾನೆ ದೊಡ್ಡವ ನಾನೆ
ಧನಿಕನು ಪುಣ್ಯಾಧಿಕನೆಂದು
ತೊನೆವುತ ತೂಗುತ ಬಿಬ್ಬನೆ ಬಿರೆವುತ
ಧನಮದ ಕಿಸುಕುಳದೊಳು ಬಿದ್ದೈದೆನೆ ||3||
ಈ ಪೊಡವಿಗೆ ನಾನೇ ಚಲುವನು ನಾ
ನೇ ಪುರುಷನು ನನಗೊಲಿಯದ
ಪಲನಯರಿಲ್ಲೆಂದು ಗಳಹುನ
ರೂಪು ಮದದ ಬಲೆಯೊಳು ಬಿದ್ದೈದೆನೆ ||4||
ಯೌವ್ವನ ಹದಿನಾರರ ಹರೆಯದ ಪೊಸ
ಜವ್ವನಿಗರೊಳೆಣಿಸಲು ನಾನೆ
ಜವ್ವನಿಗನು ಭುಜಬಲ ವಿಕ್ರಮನೆಂದು
ಯೌವನಮದ ಕುಣಿಯೊಳು ಬಿದ್ದೈದೆನೆ ||5||
ಸಾಧಕರೊಳು ನಾನೆ ವಿದ್ಯಾಗ್ರಣಿ ಚೌಷಷ್ಟಿಕಳಾ
ವಿದ್ಯಂಗಳನೆಲ್ಲವನು ಬಲ್ಲನೆಂಬ
ವಿದ್ಯಾಮದದ ಕೆಸರೊಳು ಬಿದ್ದೈದೆನೆ ||6||
ಭೋಜ್ಯ ವಿಭೂಷಣ ಭೋಗಂಗಳ ಸಾ
ಮ್ರಾಜ್ಯಾಧಿಪರುಗಳೊಳು ನಾನೆ
ಪೂಜ್ಯನು ಬಲ್ಲಹರಿಗೆ ಬಲ್ಲಹನೆಂಬ
ರಾಜ್ಯಮದದ ಬಲೆಯೊಳು ಬಿದ್ದೈದೆನೆ ||7||
ಅಪರಿಮಿತಿಂದ್ರಿಯ ವಿಷಯಾದಿಗಳನು
ಅಪಹರಿಸಲು ನಿಲಿಸಲು ನಾನೆ
ನಿಪುಣನು ಹಿರಿಯನು ಕುಲಪತಿಯೆಂಬ
ತಪಮದ ಕಾನನದೊಳು ಬಿದ್ದೈದೆನೆ ||8||
ಈ ಪರಿಯಲಿ ಕಾಡುವ ಮದವೆಂಟನು
ನೀ ಪರಿಹರಿಸದಿರ್ದಡೆ ಶಿಷ್ಯ
ಪಾಪಗುರೋರ್ಲೆಪೆಯೆಂದುದಾಗಿ ಪುಣ್ಯ
ಪಾಪ ನಿಮ್ಮದು ಗುರು ಶಂಕರಲಿಂಗ | |9||

ದೇಹವಿರಲಿರದೆ ಮಾಣಲಿ
ದೇಹವಿರಲಿರದೆ ಮಾಣಲಿ
ಆಹೊ ರಾತ್ರೆ ಮಾಯೆ ಮೋಹ
ರಾ ಹಿತ ನಿಮ್ಮ ಬಿಡುವುದಿಲ್ಲವೆಲವೊ ಗುರುವೆ ||ಪಲ್ಲ||
ಕಣ್ಣ ಮುಂದೆ ತಂದು ತಂದು
ಹೊನ್ನ ತೋರಿ ಹೆಣ್ಣ ತೋರಿ
ಮಣ್ಣ ತೋರಿ ನೆನವ ಮನವ ಮತಿಯಗೆಡಿಸದೆ
ಗನ್ನ ಘಾತುಕವನು ಮಾಡಿ
ಎನ್ನನೇಕೆ ಚಾಳಿಸೂವೆ
ನಿನ್ನ ಭವ ಭವದೊಳು ಬಿಡುವುದಿಲ್ಲವೊ ಗುರುವೆ ||1||
ಸೂಸ ಲಾನು ತಳಿದು ಮೇಲೆ
ಹಾಸರೇಯ ಜಂಪನೊಡ್ಡಿ
ಮೂಸಕಾನ ಕುಲವ ಕೊಲುವ ಶಬರನಂದದಿ
ಈ ಶರೀರ ಸುಖವದೆಂಬ
ಆಸುರದ ಮೇಹನಿಕ್ಕಿ
ಮೋಸಮಾಡಬೇಡ ಬಿಡುವುದಿಲ್ಲವೊ ಗುರುವೆ ||2||
ನಿನ್ನ ಲೀಲೆಯಿಂದ ಹುಟ್ಟಿ
ನಿನ್ನ ಲೀಲೆಯಿಂದ ಬೆಳೆದು
ನಿನ್ನ ಲೀಲೆಯಿಂದ ನಿನ್ನ ಪದವನೆಯ್ದುವ
ನಿನ್ನವರಿಗೆ ನಿನ್ನನಿತ್ತು
ಎನ್ನ ನಿನ್ನವರಿಗೆ ಇತ್ತು
ಮನ್ನಿಸಯ್ಯ ಮದನವೈರಿ ಶಂಕರಲಿಂಗ ||3||

ಬಲ್ಲ ಮಹಾತ್ಮರು
ಬಲ್ಲ ಮಹಾತ್ಮರು ಬಲ್ಲರೈಸಲ್ಲದೆ
ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ||ಪಲ್ಲ||
ಉತುಪತಿ ಸ್ಥಿತಿ ಲಯವಿಲ್ಲದಂದು
ಪೃಥುವಿಯಾಕಾರಗಳಿಲ್ಲದಂದು
ನುತ ಗುಣತ್ರಯಗಳಿಲ್ಲದಂದೊಪ್ಪುವ
ಅತೀತ ಬೊಮ್ಮನ ನಾನೆತ್ತ ಬಲ್ಲೆ ||1||
ಮೂದೇವರಮೂರ್ತಿಯಿಲ್ಲದಂದು
ನಾದ ಬಿಂದು ಕಳೆಗಳಿಲ್ಲದಂದು
ಆದಿ ಅನಾದಿಯಿಂದತ್ತತ್ತಲೆನಿಸುವ
ನಾದಿಯ ಶೂನ್ಯನ ನಾನೆತ್ತ ಬಲ್ಲೆ ||2||
ಲಾಲಿತ ಸಲಿಲ ಬಲಿದಾಲಿಕಲ್ಲಾದಂತೆ
ಆಲಿಕಲ್ಲದು ಬಲಿದು ಸಲಿಲವಾದಂತೆ
ಲೀಲೆ ಬಲಿದು ವಿಶ್ವವಾಗಿ ತನ್ನಿಂದಾದ
ಲೀಲೆ ತಾನಾದುದ ನಾನೆತ್ತ ಬಲ್ಲೆ ||3||
ಧ್ಯಾನ ಧಾರಣ ಸಮಾಧಿಗೆ ನಿಲುಕದ
ಮಾನಸ ಕಾಯಕ ವಾಕ್ಯಕ್ಕೆ ನಿಲುಕದ
ಆನಂದ ಸತ್ತು ಚಿತ್ತುಗಳಿಗೈದದ
ಆ ನಿರಾಕಾರನ ನಾನೆತ್ತ ಬಲ್ಲೆ ||4||
ಕ್ಷೀರ ಬಲಿದು ಗಿಣ್ಣಾಗಿ ತನ್ನಿಂ ತಾನೆ
ಕ್ಷೀರವಾದಂತೆ ಬ್ರಹ್ಮವೆ ಬಲಿದು
ಕ್ರೂರಜೀವರ ನಿರ್ಜೀವರೆಂದೆನಿಸುವ
ಸಾರ ವಿಲಾಸವ ನಾನೆತ್ತ ಬಲ್ಲೆ ||5||
ಬೀಜದೊಳಗೆ ವೃಕ್ಷವರ ಭಾನುಕಾಂತದೆ
ತೇಜ ಚಂದ್ರಾಶ್ಮದೆ ಜಲವೆಂತಂತೆ
ವೇದಿಸಿ ಸಕಲತತ್ವಗಳನಂತವರೊಳು
ರಾಜಿಸುವೈಕ್ಯನ ನಾನೆತ್ತ ಬಲ್ಲೆ ||6||
ಜೀವ ಪರಮರೀರ್ವರ ಯೋಗದ
ಠಾವಿಗೆ ತಾನೆ ಸಾಕ್ಷಿಕನಾಗಿ
ಭಾವ ನಿರ್ಭಾವರ ಅವಧಿಯಿಂದತ್ತತ್ತ
ತೀವಿದಗಮ್ಯನ ನಾನೆತ್ತ ಬಲ್ಲೆ ||7||
ಮೂರುತನುವ ಮುಟ್ಟದೆ ಯೋಗಾಂಗವ
ಮೀರಿದ ಮೇಲಣ ನಿರ್ವಯಲಲ್ಲಿ
ಬೇರಾಗದೊಂದಾಗದುಂಟಾಗದಿಲ್ಲಾಗ
ದಾರೂಢ ಮಹಿಮನ ನಾನೆತ್ತ ಬಲ್ಲೆ ||8||
ಉಂಟೆನಲಿಲ್ಲಾಗಿ ಇಲ್ಲೆಂದರುಂಟಾಗಿ
ಉಂಟಾಗಿ ಜಗವ ನಡೆಯಿಸುತ
ಉಂಟಿಲ್ಲವೆಂದೆಂಬ ಸಂದೇಹಿಗಳಿಗೆ ಮ
ತ್ತುಂಟಾದ ದೇವನ ನಾನೆತ್ತ ಬಲ್ಲೆ ||9||
ಛತ್ತೀಸತತ್ವದಿಂದತ್ತತ್ತಲೆನಿಸುವ
ಉತ್ತಮ ಜ್ಞಾತೃ ಜ್ಞಾನ ಜ್ಞೇಯವೆಂಬ
ವೃತ್ತಿಯ ನೇಮದ ನಿರುಪಮ ನಿಜ ಸುಖಿ
ನಿತ್ಯ ನಿರಾಳನ ನಾನೆತ್ತ ಬಲ್ಲೆ ||10||
ಅಸಿಪದದೊಳು ಮಿಗೆ ವಶಿಯಿಸಿ ವಶಿಸುವ
ಮಿಸುಪ ತತ್ವದ ಶಬ್ದ ವಾಚ್ಯವಾದ
ಪೊಸತಾದ ತ್ವಂ ಪದ ವಾಚ್ಯದಿಂದತ್ತತ್ತ
ಉಸುರಲಶಕ್ಯನ ನಾನೆತ್ತ ಬಲ್ಲೆ ||11||
ಸತ್ಯರ ಸುಮನದಿ ನಿತ್ಯ ವಾಸವ ಮಾಡಿ
ಅತ್ಯತಿಷ್ಠರ್ದಶಾಂಗುಲನಾಗಿ
ತಥ್ಯ ಮಿಥ್ಯದಿ ತೋರ್ಪ ಜಗವನಾಡಿಸುತಿಂತು
ಹೊತ್ತುಗಳೆವನ ನಾನೆತ್ತ ಬಲ್ಲೆ ||12||
ಗಂಗೆಯೊಳಿಹ ದಿನಕರಬಿಂಬದಂತೆವದ ವೃ
ಕ್ಷಂಗಳೊಳಿಹ ಪಾವಕನಂತೆ
ಅಂಗದೊಳಿದ್ದಿಲ್ಲದಂತಿಹ ಶಂಕರ
ಲಿಂಗನ ಘನವನು ನಾನೆತ್ತ ಬಲ್ಲೆ ||13||

ಓಂಕಾರ ಶರೀರನೆ
ಓಂಕಾರ ಶರೀರನೆ ಅಹಂಕಾರ ದೂರನೆ ನಿಜ
ಕಿಂಕರ ಮೋಹಿ ಶಂಕರನೆ ಉಪ್ಪವಡಿಸಾ ||ಪಲ್ಲ||
ಎಚ್ಚರೆಂಬ ರವಿ ಮೂಡಣದಿಕ್ಕಿನಲಿ ಬಂದೊತ್ತಿ
ನಿಶ್ಚಳವಾಗಿ ತೋರುತಿದೆ
ಕುಶ್ಚಿತ ಮರವೆಯೆಂಬ ಅಂಧಕಾರ ನಿಲಲಂಜಿ
ಪಶ್ಚಿಮದೆಸೆಯ ಸಾರುತಿದೆ ಉಪ್ಪವಡಿಸಾ ||1||
ವಿಷಯಪಂಚಕವೆಂಬಾಚಾರಮಿಥುನದನು
ಬೆಸುಗೆ ಬಿಗುಹ ಬಿಟ್ಟು ಸಡಿಲುತಿದೆ
ವ್ಯಸನಸಪ್ತಕವೆಂಬ ಗಗನಕುಸುಮ ರುಚಿ
ಮಸುಳಿಸುತಿದೆ ಉಪ್ಪವಡಿಸಯ್ಯ ||2||
ತಗ್ಗುತಿದೆ ತಾಪತ್ರಯವೆಂಬ ಶರಧಿ ಷಡು
ವರ್ಗವೆಂಬ ಕುವಲಯ ಮುಗಿವುತಿದೆ
ಮುಗ್ಗುತಿದೆ ಅಷ್ಟಮದವೆಂಬ ಚಂದ್ರನ ಕಳೆ
ಭರ್ಗ ಭಾಳಾಂಬಕನೆ ಉಪ್ಪವಡಿಸಾ ||3||
ಪರಧನ ಪರನಿಂದೆಯೆಂಬ ಚಕೋರಿಗಳಿಗೆ
ಪಿರಿದು ಬಾಯಿಗೆ ಬಂಧನವಾಯಿತು
ಹರಿದು ಹಂಬಲಿಸುವ ಮನವೆಂಬ ಶಶಿಕಾಂತ
ನಿರಸ ನಿದ್ರ್ರವವಾಗುತಿದೆ ಉಪ್ಪವಡಿಸಯ್ಯ ||4||
ಸ್ಮರರಿಪುವೆಂಬ ಪಂಕಜವರಳುತಿದೆ
ಶರಣಸತಿ ಲಿಂಗಪತಿಯೆಂಬ
ವರ ಚಕ್ರಮಿಥುನಕ್ಕೆ ರತಿ ಪುಟ್ಟುತಿದೆ
ಸುರತರುವೆ ವರ ಗುರುವೆ ಉಪ್ಪವಡಿಸಯ್ಯ ||5||
ಪ್ರಮಥಗಣಂಗಳು ರುದ್ರಗಣ ಯೋಗಾಚಾರ್ಯರು
ಶಮೆದಮೆಯುಳ್ಳ ಅರುವತ್ತು ಮೂವರು
ವಿಮಳ ಷೋಡಷರು ತೇರಸರು ಸಹಿತ ಕರ
ಕಮಲಕ್ಕೆ ಬಹ ವೇಳೆಯಾಯಿತುಪ್ಪವಡಿಸಯ್ಯ ||6||
ಸೆಜ್ಜೆಯರಮನೆಯಿಂದ ಪಾಣಿಪಲ್ಲವಕೆ ಬಂದು
ಮಜ್ಜನ ಭೋಜನ ತಾಂಬೂಲವ ಕೈಕೊಂಡು
ಸಜ್ಜನ ಶರಣರ ಸಲಹುವ ವೇಳೆಯಾಯಿತ್ತು ಜ
ಗಜ್ಜನಕ ಶಂಕರಲಿಂಗ ಉಪ್ಪವಡಿಸಯ್ಯ ||7||

ಬಸವ ಮುಕ್ತಿಗೆ ಹಾದಿ
ಬಸವ ಮುಕ್ತಿಗೆ ಹಾದಿ ಬಸವ ನಿನ್ನ
ದೆಸೆಯಿಂದಲಾರು ಬದುಕರಾದಿಬಸವ ||ಪಲ್ಲ||
ಬಸವನಸಮಭಕ್ತಿರಸವ ತನ್ನವರ ಕೈ
ವಸವ ಮಾಡುತ ಭರವಸದಿಂ
ಬಸವ ದುವ್ರ್ಯಸನಕುಬ್ಬಸವನೀವುತ ಶಿವ
ಬಸವನೆಸೆದನೆನ್ನ ಮನದ ಕೊನೆಯ ಮೇಲೆ ||1||
ಅನುವನರಿದು ಮೂರಿತನುವ ಗುರುವಿಗಿತ್ತು
ಮನವ ಲಿಂಗಕೆ ಮಾರುಗೊಟ್ಟು
ಧನವ ಜಂಗಮಕೆ ಸಮರ್ಪಿಸಿ ದಾಸೋಹ
ವನಧಿಗೆ ಕಡೆ ನಡು ಮೊದಲಾದ ಬಸವ ||2||
ಬೆಳುದಿಂಗಳಂತೆ ಚಂದ್ರಮನಂತೆ ನವ ವಿಧ]ಪರಿ
ಮಳದಂತೆ ಪೊಸಪೂವಿನಂತೆ
ಇಳೆಗೆ ಮಹಾ ಗುರುಶಂಕರನಲಿ ಎರ
ಡಳಿದೊಂದಿ ಬೆರಸಿದ ಭವದೂರ ಬಸವ ||3||

ಸಾರ ಸಹಜ ಶರಣರ
ಸಾರ ಸಹಜ ಶರಣರ ಪಾದ
ನೀರಜ ರಜಕೆನ್ನ ನಿಟಿಲವನಾನುವೆ ||ಪಲ್ಲ||
ನಾಲಗೆಯುಂಟೆಂದು ಶೂಲಿಯ ಭಕುತ ಜ
ನಾಳಿಯ ನಿಂದಿಸಿ ನಿರಯದೊಳು
ಬೀಳುವವರ ನುಡಿಗೇಳದ ಶರಣರ
ಕಾಲಕಮಲಕೆನ್ನ ಭಾಳವನಾನುವೆ ||1||
ಶಿವಭಕ್ತರು ಶಿವನವತಾರವೆಂದುಸುರುವ ಮ
ತ್ತವರುಗಳನೆ ಹಳಿವ
ಅವಿಚಾರಿಗಳನು ಹೊದ್ದದವರ ಪಾದ
ಭುವನಜಕೆನ್ನ ನೊಸಲನಾನುವೆ ||2||
ವಿಶ್ವಾಸವೊಮ್ಮೆ ಅವಿಶ್ವಾಸವೊಮ್ಮೆ ಮಾ
ಹೇಶ್ವರರೊಳು ಸುಡಲಾಜಡರ
ವಿಶ್ವಾಸ ವರ ಶಂಕರೇಶ್ವರ ತಾನಾದ
ಶಾಶ್ವತನಡಿಗೆನ್ನ ಅಳಿಕವನಾನುವೆ ||3||

ಹಲವೇಕೆ ಹದಿನೆಂಟು
ಹಲವೇಕೆ ಹದಿನೆಂಟು ಕುಲದಲಾರಾದಡಂ
ಸಲೆ ಶಿವಾಯೆಂಬವರಿಗಾನೆರಗುವೆ ||ಪಲ್ಲ||
ಸಟೆಯಿಂದಾಲಾದೊಡಂ ಕುಟಿಲದಿಂದಾದೊಡಂ
ಅಟಮಟವ್ಯಾಪಾರದಿಂದಾದೊಡಂ
ಕಟಕಿಯಿಂದಾದೊಡಂ ನಿಟಿಲನಯನನ ನೆನೆವ
ಪಟು ಪುರುಷರಂಘ್ರಿಗಳಿಗಾನೆರಗುವೆ ||1||
ಮದಮುಖಂ ತಾನಾದಡಧಿಕ ದುವ್ರ್ಯಸನವಾ
ರುಧಿಯೊಳಗೆ ಮುಳುಗಿದವ ತಾನಾಗಲಿ
ಪದುಳದಿಂದೆಮ್ಮ ಶಿವಪದವ ನೆನೆವವರಡಿಗೆ
ಉದಯ ಮಧ್ಯಾಹ್ನ ರಾತ್ರೆಯೊಳೆರಗುವೆ ||2||
ಎಲ್ಲಿ ಶಮೆ ದಮೆ ಶಾಂತಿ ಎಲ್ಲಿ ಸಾತ್ವಿಕ ಸತ್ಯ
ಎಲ್ಲಿ ಸೈರಣೆ ಸಮಾಧಾನ ಚಿತ್ತ
ಎಲ್ಲಿ ದಯ ದಾಕ್ಷಿಣ್ಯ ಎಲ್ಲಿ ಭಯ ಭಕ್ತಿಯಿ
ದ್ದಲ್ಲಿ ಸಾಕ್ಷಾತ ಶಿವನೆಂದೆರಗುವೆ ||3||
ಮನ ವಚನ ಕಾಯದೊಳು ಮನಸಿಜಾರಿಯ ಬಿಡದೆ
ನೆನೆವವರ ನೆನೆವುದೇ ಮಂತ್ರವವರ
ನೆನೆವುದೇ ಜಪವವರ ನೆನೆವುದೇ ತಪವವರ
ನೆನೆವುದೇ ಮುಕುತಿಯೆಂದಾನೆರಗುವೆ ||4||
ನಡೆವಾಗ ಶಿವಯೆನುತ ನುಡಿವಾಗ ಶಿವಯೆನುತ
ಕೊಡುವ ಕೊಂಬಾಗ ಶಿವ ಶಿವಾಯೆನುತ
ಉಡುವಾಗ ಶಿವಯೆನುತ ತೊಡುವಾಗ ಶಿವಯೆನುತ
ಬಿಡದೆ ನೆನೆವರ ಚರಣಕಾನೆರಗುವೆ ||5||
ಆಗುಳಿಸುವಾಗ ಬಿಡದೋಗಡಿಸುವಾಗ ಮಿಗೆ
ತೂಗಡಿಸುವಾಗ ಮರೆದೊರಗುವಾಗ
ತೇಗುವಾಗಳು ಸೀನುವಾಗಳುರೆ ಬಿಕ್ಕಳಿಸು
ವಾಗ ಶಿವಯೆಂಬವರಿಗಾನೆರಗುವೆ ||6||
ಶಿವನ ನೆನೆವವನಾವನವನೆನ್ನ ಕುಲದೈವ
ನವನೆನ್ನ ಮನೆದೈವ ಇಷ್ಟದೈವ
ಅವನೆನ್ನ ಮಾತೆ ಪಿತ ಅವನೆನ್ನ ಪರಮಗುರು
ಅವನೆನ್ನ ದಾತನೆಂದೆರಗುವೆ ||7||
ಗುರುಲಿಂಗದೊಳು ಜನಿಸಿ ವರಲಿಂಗದೊಳು ಬೆಳೆದು
ಚರಲಿಂಗದೊಳು ಲಯವನೆಯಿದುವವರ
ದೊರಕೊಂಡ ಶರಣರಿಗೆ ಶರಣರಾಗಿರ್ಪವರ
ನೆರೆಹೊರೆಯ ಮನೆಯವರಿಗಾನೆರಗುವೆ ||8||
ನಿಟ್ಟಿಸಲು ಪಡುಗವಹೆ ನೆಟ್ಟನವರುಗುಳುವರೆ
ಉಟ್ಟುಮೀವರಿಗೆ ಒಲ್ಲಣಿಗೆಯಹೆನು
ಮುಟ್ಟಿ ಗುರುಶಂಕರನ ನಿಟ್ಟೆಯಿಂ ನೆನೆವವರು
ಮೆಟ್ಟಿ ನಡೆವರೆ ಕೆರಹಿನಟ್ಟೆಯಹೆನು ||9||

ಗರುಡನ ನೆನೆದರೆ
ಗರುಡನ ನೆನೆದರೆ ವಿಷ ಹೊದ್ದದಂತೆಮ್ಮ
ಶರಣರ ನೆನೆದರೆ ಭವ ಭಯವುಂಟೆ ||ಪಲ್ಲ||
ಬಿತ್ತದೆ ಬೆಳದವರ ನೆನೆವೆ ಹುರಿದು
ಮತ್ತೆ ಬಿತ್ತಿ ಬೆಳದವರ ನಾ ನೆನೆವೆ
ಸತ್ತ ಜೀವರನೆತ್ತಿದವರ ನೆನೆವೆ ನಡು
ನೆತ್ತಿಯ ಸೊಡರ ಬೆಳಗಿದವರ ನೆನೆವೆ ||1||
ಶಿಲೆಯನಂದಿಯ ಮೇಯಿಸಿದರ ನೆನೆವೆ
ನೆಲೆಮೊಲೆಯ ಲಿಂಗವ ಮಾಡಿದರ ನೆನೆವೆ
ತಲೆಯನರಿದು ಪಡೆದವರ ನೆನೆವೆ ಬೀಸಿ
ಬಲೆಯಲ್ಲಿ ಶಿವನ ಬರಿಸಿದರ ನೆನೆವೆ ||2||
ನಡೆವ ರವಿಯ ತಡೆದವರ ನೆನೆವೆ ನಮ್ಮ
ಮೃಢಗೆ ದೀಕ್ಷೆಯ ಮಾಡಿದರ ನೆನೆವೆ
ಬಿಡದೆ ಹೊಮ್ಮಳೆಗರೆಸಿದರ ನೆನೆವೆ ಜಗ
ದೊಡೆಯನ ಜನ್ನಕೆ ತಂದರ ನೆನೆವೆ ||3||
ತನುವ ದೇವಾಲ್ಯ ಮಾಡಿದರ ನೆನೆವೆ
ತನೆಯನನರಿದಿಕ್ಕಿದವರ ನೆನೆವೆ
ಮುನಿದು ಮುದ್ದಿಸಿ ಹಾಲನೆರೆದರ ನೆನೆವೆ ಶ
ರ್ವನ ನಾಂಟ್ಯವಾಡಿಸಿದರ ನೆನೆವೆ ||4||
ಹಾವ ಲೇವಳವ ಮಾಡಿದರ ನೆನೆವೆ ಬಂಜೆ
ಗೋವ ಕರೆಸಿದರ ನಾ ನೆನೆವೆ
ದೇವನ ಕಲ್ಲಲಿಟ್ಟವರ ನೆನೆವೆ ಜಗ
ಜೀವನನರೆಯಟ್ಟಿದವರ ನಾ ನೆನೆವೆ ||5||
ಜಗದೊಳು ಹೆಣ್ಣು ಗಂಡಾದರ ನೆನೆವೆ ಕ
ಟ್ಟಿಗೆಯ ಹೇಮವ ಮಾಡಿದರ ನೆನೆವೆ
ಮಗಳ ಮುಡಿಯನರ್ಪಿಸಿದರ ನೆನೆವೆ ಶಿವ
ನಗರಿಗೆ ದಾಳಿ ಮಾಡಿದರ ನೆನೆವೆ ||6||
ಛತ್ತೀಸಪುರವನೊಯಿದವರ ನೆನೆವೆ ಮೊಳೆ
ವಿತ್ತನಟ್ಟಿಕ್ಕಿದವರ ನೆನೆವೆ
ಮತ್ತಗಜವಮುರಿದವರ ನೆನೆವೆ ನತ
ಚಿತ್ತನ ಹೊರಗೆಂದು ನುಡಿದರ ನೆನೆವೆ ||7||
ನವಲಕ್ಕದೇಶವನೊಯ್ದರ ನೆನೆವೆ ಕ
ನ್ನವ ಹಗವಿಕ್ಕಿದರ ನೆನೆವೆ
ಶಿವನ ಬಿಟ್ಟಿಯ ಹೊರಿಸಿದರ ನೆನೆವೆ ನಮ್ಮ
ಭವನ ಬಾಗಿಲ ಕಾಯಿಸಿದವರ ನೆನೆವೆ ||8||
ಸಂಕೆಯ ಹರಿದರ ನೆನೆವೆ ಸಂಸಾರದ
ಬಿಂಕವ ಮುರಿದವರನು ನೆನೆವೆ
ರುüುಂಕಿಸಿ ಜಗವನು ಗೆದ್ದವರ ನೆನೆವೆ ಗುರು
ಶಂಕರಲಿಂಗನ ನೆನೆವರ ನೆನೆವೆ ||9||

ನಾನೇನು ಬಾತೆ ಹೇಳಾ
ನಾನೇನು ಬಾತೆ ಹೇಳಾ ಶಿವ ನಿಮ್ಮ
ನಾನಾ ಪರಿಯಿಂದಲೋಲಿಸಿದವರುಂಟು ||ಪಲ್ಲ||
ಸತಿಯನೊಲವಿಂದ ಪಶುಪತಿಗೆ ಕೊಟ್ಟವರುಂಟು
ಪಿತನ ಶಿರವನು ತರಿದು ಬಿಸುಟವರುಂಟು
ಸಿತಕಂಠನೊಡನೆ ಸರಸವನಾಡಿದವರುಂಟು
ನುತಿಸಿ ಬಳ್ಳವ ಶಿವನ ಮಾಡಿದವರುಂಟು ||1||
ಜಂಗಮವ ಜರೆದವರ ಶಿರವನರಿದವರುಂಟು
ಅಂಗಜಾರಿಯ ಕಲ್ಲಲಿಟ್ಟವರುಂಟು
ಹೆಂಗಸಿನ ಮೂಗ ಕೊಯಿದವರುಂಟು
ಲಿಂಗಕ್ಕೆ ಮುಂಗಯ್ಯ ಗಂಧವ ಸಮರ್ಪಿಸಿದವರುಂಟು ||2||
ಹಾದರವನಾಡಿ ಜಂಗಮಕೆ ನೀಡಿದವರುಂಟು
ಕಾದಿ ಗುರುವಿಂಗೆ ಧನವನಿತ್ತವರುಂಟು
ವೇದಮಂ ಶುನಕನಿಂದೋದಿಸಿದವರುಂಟು ಜಗ
ದಾದಿದೇವನ ಒಲವ ತಿದ್ದಿದವರುಂಟ ||3||
ವೈರಿಗಳ ಮೂದಲೆಗೆ ಶಿವನ ತಂದವರುಂಟು
ಘೋರಗರಳವ ಕೊಂಡು ಬಾಳ್ವರುಂಟು
ಮಾರವೈರಿಯನು ಬೆಂಬಳಿಯ ಬರಿಸಿದವರುಂಟು
ಈರೇಳು ಕೇರಿಯನು ಕೈಲಾಸಕೊಯಿದವರುಂಟು ||4||
ಸಿರಿ ಹೋಗಬೇಕೆಂದು ಹರಸಿಕೊಂಡವರುಂಟು
ಕೆರಹುಗಾಲಲಿ ಶಿವನ ಒದ್ದವರುಂಟು
ಹರಿಯೆಂದವನ ಬಾಯ ಹುಟ್ಟಲಿರೆದವರುಂಟು
ಹರನ ತರುವಲಿಯೆಂದು ಬೈದ ಘನ ಮಹಿಮರುಂಟು |5||
ನರಿಯ ಕುದುರೆಯ ಮಾಡಿದವರುಂಟು ಕಚ್ಚುಟಕೆ
ಸರಿಯಾಗಿ ಸತಿಯ ತೂಗಿದವರುಂಟು
ಪರಮ ಪಂಚಾಕ್ಷರಿಯ ಕೊಳಲಲೂದಿದವರುಂಟು
ಬೆರಳೊಳಮೃತವ ಕರೆದ ಶಿವಸುಖಿಗಳುಂಟು ||6||
ಶಿವನಾಣೆಗಂಜಿ ಹೆಂಡತಿಯ ಬಿಟ್ಟವರುಂಟು
ನವಪುರವ ಕೈಲಾಸಕೋಯಿದವರುಂಟು
ಅವಳಿಮಕ್ಕಳಳೊಂದು ಶಿಶುವ ಬಿಸುಟವರುಂಟು
ಪವನಸಖಲೋಚನೆಗೆ ತಾಯಾದವರುಂಟು ||7||
ಅಂಬಲಿಯನಿಕ್ಕಿಯಭವನ ತಣಿಸಿದವರುಂಟು
ಕುಂಭದಾಧ್ವನಿಗೆ ಕುಣಿಸಿದವರುಂಟು
ಅಂಬಿಕಾವಲ್ಲಭನ ನಗಿಸಿದವರುಂಟು ಹೇ
ರಂಬ ಜನಕನ ಕಾಲ ಬಂಧಿಸಿದವರುಂಟು ||8||
ಕದ್ದವರ ಕೊಡದೆ ಶೂಲವನೇರಿದವರುಂಟು
ಬಿದ್ದ ಲಿಂಗವ ಬಿಟ್ಟು ಹೋದವರುಂಟು
ಸಿದ್ಧಿಕೆಯ ಹೆಣಕಸುವನಿತ್ತವರುಂಟು ಹುಗು
ಳೆದ್ದಿತೆಂದಭವಂಗೆ ತೂಪಿರಿದರುಂಟು ||9||
ಅಣ್ಣಂಗೆ ತಂಗಿಯ ಮದುವೆ ಮಾಡಿದವರುಂಟು
ಸಣ್ಣವಸ್ತ್ರವ ಶಿವಗೆ ಕೊಟ್ಟವರುಂಟು
ಹೆಣ್ಣ ಎಡದಲಿ ಧರಿಸಿದವನ ಹರಸಿದವರುಂಟು
ಕಣ್ಣನೀರಿಂದ ಮಜ್ಜನಕೆರೆದವರುಂಟು ||10||
ಕಾಳ ಹಾರುವ ನರನ ತವೆದು ಹಾರುವರುಂಟು
ಮೇಲೆ ಹಿರಿಯರಿಗೆ ಹಿರಿಯರುಗಳುಂಟು
ಬಾಲೇಂದುಮೌಳಿ ಶಂಕರೇಶ್ವರ ನಿಮ್ಮ ಕಿಂಕರರ
ಆಳಿನಾಳಿಗೀ ಮಣಿಹಗಾರ ನಾನಾಗಿ ||11||

ಆಚಾರ ಮನಕೆ ಸಂತೋಷ
ಆಚಾರ ಮನಕೆ ಸಂತೋಷ
ಆಚಾರ ನಿಚ್ಚ ಕೈಲಾಸ ||ಪಲ್ಲ||
ಆಚಾರವೆ ಭಕ್ತಿಯಾಚಾರವೆ ಮುಕ್ತಿ
ಆಚಾರವೆ ನಿಜ ವಿರಕ್ತಿ
ಆಚಾರವೆ ಮಾಟ ಆಚಾರವೆ ಕೂಟ
ಆಚಾರವೆ ದುರಿದದೋಟ ||1||
ಆಚಾರ ಉತ್ಪತ್ಯ ಸ್ಥಿತಿ ಲಯ ಗೆಲಿವುದು
ಆಚಾರ ಗತಿಗೆ ನಿಲಿಸುವುದು
ಆಚಾರ ನಿತ್ಯಪದವಿಯೊಳು ನಿಲಿಸುವುದು
ಆಚಾರ ಶಿವನನೊಲಿಸುವುದು ||2||
ಲೋಚನತ್ರಯ ಗುರುಶಂಕರೇಶ್ವರ ಸ
ದಾಚಾರದೊಳಗೆನ್ನನಿರಿಸು
ಆಚಾರವಂತರೊಡಲೊಳಿನ ಸಸಿ ನಭ ಧ
ರಾಚಕ್ರವುಳ್ಳನ್ನಕ್ಕ ಬರಿಸು ||3||

ಒಂದು ಭಾಂಡದಲ್ಲಿ ಮಾಡಿ
ಒಂದು ಭಾಂಡದಲ್ಲಿ ಮಾಡಿ
ಒಂದು ಸರವೆ ಸಟ್ಟುಗದಲಿ
ತಂದು ಭವಿಗೆ ಭಕ್ತ ನೀಡುವಂದ ಚೆಂದಗೆಡಿಸಿತೊ ||ಪಲ್ಲ||
ಜಾರ ಬರಲು ಜಾರೆಯಾಗಿ ಪತಿ ಬರಲು ಪತಿವ್ರತಾ
ಶರೀರೆಯಾಹಳಂತೆ ಪಂಚಭೂತ ದೇಹ ಭವಿಗಳು
ಭೋರನೆಯ್ದುತಿರಲು ಅನ್ನವಿತ್ತು ಲಿಂಗದೇಹಿ ಬರಲು
ಸಾರ ಷಡುರಸಾನ್ನವಿಕ್ಕುವಂದ ಚೆಂದಗೆಡಿಸಿತು ||1||
ಅಸಗನಸನಕಸವನೊಸದು ಅಮಲವಸ್ತ್ರಕಿಕ್ಕುವಂತೆ
ಮಸಿ ದುಕೂಲ ಮನೆಗೆ ಬರಲು ಅಂಜಿಯಿಡುವನೆ
ಅಸಮಭಕ್ತ ಸತಿ ಸುವರ್ಣತತಿಯನಿಕ್ಕಿ ಮದಹ ಭವಿಯ
ಬಸುರ ಹವಿಯನಿಲಿಸುವಂದ ಮನದ ಚೆಂದಗೆಡಿಸಿತು ||2||
ಅವಿಗೊಳ್ಳಿದಪ್ಪ ಮೇವನಿಕ್ಕಿ ಅಮೃತರಸವ ಕರೆದು
ಹಾವಿಗೆರೆವನಂತೆ ಮಧುರವಪ್ಪ ಶಾಕ ಪಾಕವ
ದೇವ ದೇವರೊಡೆಯಗೆಂದು ಮಾಡಿ ಭವಿಗೆ ನೀಡಿ ಹುಳಿತು
ಸಾವ ಪದವ ಹಡೆವ ಹಂದಿಯಂದ ಚೆಂದಗೆಡಿಸಿತು ||3||
ಹರಿವೆಗೆರೆವ ತುಹಿನಜಲವ ತುರುಚೆಗಲಸದೆರೆವನಂತೆ
ಹೆರೆಯ ಧರಿಸಿದವನ ಭಕ್ತಗಿಕ್ಕುವನ್ನ ಪಾನವ
ಉರುವ ಹಳೆಯ ಕೆಳೆಯ ನಂಟ ಬಂಟ ಮನೆಗೆ ಬಂದನೆಂದು
ಬರಿಯ ಮುಖದ ಭವಿಗೆಯಿಕ್ಕುಂದವ ಚೆಂದಗೆಡಿಸಿತು ||4||
ಶತಸಹಸ್ರ ಮೋಟರೊಂದು ಕರುವ ಕಟ್ಟಲರಿಯರೆಂಬ
ಕ್ಷಿತಿಯ ಗಾದೆಯಂತೆ ಬದ್ಧ ಭವಿ ಮನುಷ್ಯಗಿಕ್ಕುವ
ಮತಿವಿಹೀನರೆಲ್ಲ ಭಕ್ತರಲ್ಲವಾಗಿ ಭವಿಗೆ ನೀಡ
ದತುಳ ಭಕ್ತನೊಬ್ಬನೇ ಕೃತಾರ್ಥನಯ್ಯ ಶಂಕರ ||5||

ಭಕ್ತನಪ್ಪೊಡೆ ಸದಾಚಾರಿಗಳು
ಭಕ್ತನಪ್ಪೊಡೆ ಸದಾಚಾರಿಗಳು ಮೆಚ್ಚೆ ಶಿವ
ಭಕ್ತನಾಗಲ್ಲದೊಡೆ ಭವಿಯಾಗಿರು
ಭಕ್ತರಿಸ್ಸೀಯೆಂಬ ನಡೆಯ ನಡೆದರೆ ಮುಂದೆ
ಮುಕ್ತಿಪಥ ದೊರಕೊಳ್ಳದು ||ಪಲ್ಲ||
ಕುಲದೈವ ಮನೆದೈವಗಳ ಬಿಡಿಸಿ ಗುರುರಾಯ
ನೊಲಿದು ಲಿಂಗವ ಕೊಟ್ಟ ಲಿಂಗವಿದು ಕುಲದೈವ
ಕುಲದೈವ ಮನೆದೈವಗಳನಳುಪಿ ಮಾಡಿದೊಡೆ ಬಿಲ್ಲು ಬೆಳವಲಕಾಯ ಹಿಡಿದು
ಎಲೆ ಮರುಳೆ ಎಸೆಯಬಹುದೇಯ ದನದಂತಿರಲಿ
ಕುಲದೈವ ಮನೆದೈವಕೆಲ್ಲ ಗುರುವಿತ್ತ ನಿ
ರ್ಮಳಲಿಂಗಕಲ್ಲಿ ಎರಡಕೆ ಬಿಟ್ಟ ಕರುವಾಗಿ ತೊಳಲದಿರು ಭವಭವದೊಳು ||1||
ಭವಿಯ ಮನೆಯಲಿ ಹೆಣ್ಣ ತರಬೇಡ ನಂದನೆಯ
ಭವಿಗೆ ಕೊಡಬೇಡ ಭವಿಗಳ ಗøಹದೊಳುಣಬೇಡ
ಭವಿಯ ಕರತಂದಿಕ್ಕಬೇಡ ಭವಿಯೊಡನೆ ಶಯನವನೊಲಿದು ಮಾಡಬೇಡ
ಭವಿಗಳರ್ಚಿಸುವ ದೈವಕ್ಕೆ ವಂದಿಸಬೇಡ
ಭವಿದೈವಕೆರಗುವರ ಭಕ್ತರೆಂದೆನಬೇಡ
ಭವಿ ನೀರ ಕೊಂಡ ಗಿಂಡಿಯ ನೀರ ಕೊಳಬೇಡ ಭಯಿಯುಂಡ ತಳಿಗೆ ಬೇಡ ||2||
ಭವಿಗೆ ಹಂಗಿಗನಾಗದಿರು ಗಳಿಸಿದರ್ಥಮಂ
ಭವಿಗೆ ನೀಗದಿರು ಭವಿಗಣುಮಾತ್ರ ಸೋಲದಿರು
ಭವಿಗೆ ಸೋಲದಿರು ಭವಿ ಭಾಂಡಗಳ ಬೆರಸದಿರು ಭವಿಯ ಬಾಂಧವನೆನ್ನದಿರು
ಭವಿಮತವ ತೊಡರದಿರು ಭವಿಪಥವನಡರದಿರು
ಭವಿಪಾಕಕೆಳಸದಿರು ಭವಿನುತಿಯ ತೊಳಸದಿರು
ಭವಿನಿವಹಕೆರಗದಿರು ಭವಿಗೃಹದೊಳೊರಗದಿರು ಶಿವನೊಳಗೆ ಬೆಚ್ಚಂತಿರು ||3||
ಕೆಡಬೇಡವೀ ದೇಹ ಒಂದಲ್ಲದಿನ್ನು ಮಾ
ರಡೆಯುಂಟೆ ಈ ದೇಹವಿದ್ದಲ್ಲಿಯೆ
ಬಿಡು ಪರಸ್ತ್ರೀಯ ಬಿಡು ಪರಧನವ ಬಿಡು ಜರೆದು ಬಡದೈವವ
ಬಿಡು ಪಾತಕದ ನಡೆಯ ಬಿಡು ಸೂತಕದ ನುಡಿಯ
ಬಿಡು ಮಾನಸದ ಹೊಲೆಯ ಬಿಡು ಹೀನದಸುಗೊಲೆಯ
ಬಿಡುಅಪಾತ್ರವ್ರತವ ಬಿಡು ದುರ್ಮಲತ್ರಯವ ಬಿಡು ಬಿನುಗು ನರರ ಕೆಳೆಯ ||4||
ಏನೇನ ಮಾಡಬೇಕಾದಡತಿ ಭಕ್ತಿಯಿಂ
ಮಾನನಿಧಿ ಗುರು ಲಿಂಗ ಜಂಗಮಕೆ ಮಾಡು ಮತಿ
ಹೀನ ಗೌತಮಯತೀಶ್ವರನಂತೆ ದೇಹಾಭಿಮಾನ ಕೀರ್ತಿಗೆ ಮೋಹಿಸಿ
ನಾನಾ ದರುಶನಕ್ಕೆ ಮಾಡದಿರು ಮಾಡಿದಡೆ
ಭೂನುತ ಸದಾನಂದ ಮೂರ್ತಿ ಗುರುಶಂಕರಗೆ
ನೀನನ್ಯನಹೆಯಾಗಿ ಅನವರತ ಲಿಂಗತ್ರಯಾನು ಭವ ಸುಖಿಯಾಗಿರು ||5||

ಬಂದಡೆನಗೆ ಬಡಿದೊಡೆ
ಬಂದಡೆನಗೆ ಬಡಿದೊಡೆ ಬೀದಿಯ ಬಸವ
ಗೆಂದೆಂಬ ಗಾದೆಯ ನುಡಿವ ಚಂದವಾದುದೆನ್ನ ಭಕ್ತಿ ||ಪಲ್ಲ||
ದಾಯಗಾರನಯ್ಯ ನೆನೆಗೆ ಸುಖವು ದೊರಕಿದೊಡೆ ನಿ
ರ್ಮಾಯ ನಿಮ್ಮ ಸ್ತುತಿಯಿಸುವೆ ಹಿತವನಂತೆ
ದಾಯ ತಪ್ಪಿ ದುರ್ಗತಿಯ ಡಸಿದಡೆಯಭವ ನಿಮ್ಮ
ಬಾಯಿಗೆ ಬಂದಂತೆ ನಿಂದಿಸುವಂತಾದುದೆನ್ನ ಭಕ್ತಿ ||1||
ಲೇಸ ಮಾಡಿದೊಡೆ ಶಿವನತ್ಯಂತ ಕರುಣಿಯೆಂದು
ಬೋಸರಿಸಿ ನಿಚ್ಚ ನಿಚ್ಚ ಭಜಿಸುವನಂತೆ
ಗಾಸಿ ಮಾಡಿದರೆ ಹರ ನಿಷ್ಕರುಣಿಯೆಂದು ನಿಮ್ಮ
ದೂಷಿಸಿ ದುರ್ಜನಿಸಿ ಜರೆವಂತಾದುದೆನ್ನ ಭಕ್ತಿ ||2||
ಅತಿ ಲಾಭಗಾರತನದೊಳು ನಿಮ್ಮ ಪೂಜಿಸುವ
ಗತಕಿನ ಭಕ್ತಿಗೆನ್ನ ಗುರಿಮಾಡದೆ
ಮತಿಗೆ ನಿರಪೇಕ್ಷೆಯ ಭಕ್ತಿಯನಿತ್ತು
ಪ್ರತಿಪಾಲಿಸಯ್ಯ ಪುರುಮಥನ ಶಂಕರಲಿಂಗ ||3||

ಆನೆಯನೇರಿ ಬಪ್ಪನ ಶ್ವಾನ
ಆನೆಯನೇರಿ ಬಪ್ಪನ ಶ್ವಾನ ಕಚ್ಚುವುದೆಂದಂಜುವಂತೆ ||ಪಲ್ಲ||
ನೆಟ್ಟನೆ ನಾಡನಾಳುವ ರಾಯನ
ಪಟ್ಟದರಾಣಿಯಾಗಿದ್ದು
ಬಿಟ್ಟಿಯ ಮಾಡಹೇಳಿಹರೆಂದು ಕಂ
ಗೆಟ್ಟು ತೋಟಿ ಹೊಲೆಯರಂಜುವಂತೆ ||1||
ಬಂಧುರವಪ್ಪ ವಜ್ರಪಂಜರದೊಳು
ಚಂದದಿಂದೊಪ್ಪುವರಗಿಳಿ
ಇಂದಿನ ದಿನದಲಿಡಿಯ ಬೆಕ್ಕು ಬಂದು
ಕೊಂದಪುದೆಂದಂಜುವಂತೆ ||2||
ಒಸೆದು ಕ್ಷೀರಸಮುದ್ರದ ನಡು ವಿಲಿಪ್ಪ
ವ ರಾಜಮರಾಳನು
ಮುಸುರಿ ಮುತ್ತಿ ಮಹಾ ಬಲು ಬರಬಂದು
ಹಸಿದು ಸತ್ತಹೆನೆಂಬಂತೆ ||3||
ಉನ್ನತವಹ ಸಂಜೀವನೌಷಧಿ
ತನ್ನ ಕೈವಸವಾಗಿರ್ದು
ಮುನ್ನೂರರುವತ್ತುವ್ಯಾಧಿಗಳೆಲ್ಲವು
ತನ್ನನೊಂದಿಹವೆಂದಂಜುವಂತೆ ||4||
ಅಂಗಯ್ಯ ಮೇಲೆ ಗುರುಶಂಕರೇಶ್ವರ
ಲಿಂಗವ ಪೂಜಿಸುವರೆ
ಕಂಗೆಟ್ಟು ಕಂಗಾಣದ ಮರುಳರಿರ
ಜಂಗುಳಿದೈವಕೆ ಎರಗುವಿರೇಕೋ ||5||

ಹರ ಹರ ಎನ್ನ ಜನ್ಮ
ಹರ ಹರ ಎನ್ನ ಜನ್ಮ ವ್ಯರ್ಥವಾಗಿ ಹೋಯಿತಲ್ಲದೆ
ಹರನೆ ನಿಮಗರ್ತಿಯಿಂದೆರಗಿತಿಲ್ಲ ||ಪಲ್ಲ||
ತಂದೆ ತಾಯುದರದಿಂದ ಬಂದ ಮೊದ
ಲಿಂದುತನಕವರನೆ
ನಿಂದಿಸುತಿರ್ದೆನೈಸೆ ಶಿವನೆ ನಿಮ
ಗೆಂದು ವಂದಿಸಿದುದಿಲ್ಲ ||1||
ಕೆಲವು ದಿನ ಜೂಜು ನೆತ್ತ ಲೆಗ್ಗೆ ಚಂಡು
ಕೆಲವು ದಿನವಾರಗುಪ್ಪೆ
ಕೆಲವು ದಿನ ಸೋಗುಳಿಯನಾಡಿಹೆನೈಸೆ
ಒಲಿದು ಪೂಜಿಸಿದುದಿಲ್ಲ ||2||
ಅವನ ಕೊಲುವೆ ಗೆಲುವೆ ಹಣವ ಗಳಿಸಿ
ಅವನಿಂದಲಧಿಕನಹೆ
ನವೆಯದೆ ನರರು ಮೆಚ್ಚೆ ಬಾಳುವೆನೈಸೆ
ಶಿವಪೂಜೆಯ ಮಾಡಿದುದಿಲ್ಲ ||3||
ಚಿಂತಿಸಿ ಕೆಲವು ದಿನವಿಂದಿಗೆ ನಾಳೆ
ಗೆಂತೆಂದು ಕೆಲವು ದಿನ
ಭ್ರಾಂತುಗೊಳುವೆನೈಸಲೆ ನಿಮ್ಮ
ಚಿಂತೆಯೊಳಿದ್ದುದಿಲ್ಲ ||4||
ಕರಣೇಂದ್ರಿಯಂಗಳ ಕಟ್ಟಿ ತಪವ ಮಾಡಿ
ಹರ ನಿಮ್ಮನೊಲಿಸಿತಿಲ್ಲ
ಹಿರಿಯರಿಗಮೃತಾನ್ನವ ನೀಡಿ ಎನ್ನ
ದುರಿತವ ಗೆದ್ದುದಿಲ್ಲ ||5||
ಇಹಪರವೆರಡನು ಮೆಚ್ಚಿ ನಾ ಬಂದ ಮ
ಣಿಹವ ಪೂರೈಸಿತಿಲ್ಲ
ಕುಹಕದ ತನುವ ನಚ್ಚಿ ಕೋಟಲೆಗೊಳು
ತಿಹೆನೈಸೆ ನೆನೆದುದಿಲ್ಲ ||6||
ಕರ್ಮವ ಶತಕೋಟಿಯ ಮಾಡಿದೆನೈಸೆ
ಧರ್ಮವ ಮಾಡಿದುದಿಲ್ಲ
ನಿರ್ಮಲ ನಿಜ ಮನದಿ ಶಂಕರಲಿಂಗನೆ
ನಿಮ್ಮನರ್ಚಿಸಿದುದಿಲ್ಲ ||7||

ಅಕ್ಕಟ ಗುರುವೆ
ಅಕ್ಕಟ ಗುರುವೆ ಸೀಗೆಯ ನಡುವೆ ಸಿಕ್ಕಿದ ಬಾಳೆಯಂತೆ
ಬಕ್ಕಟ ಬಯಲ ಸಂಸಾರದೊಳು ಸಿಕ್ಕಿ ದುಃಖಗೊಳುತೈದೆನೆ ||ಪಲ್ಲ||
ಮಳೆಗಾಲದ ಹಂಸೆಯಂತೆ ರಾತ್ರಿಯ ನಳಿನವನದಂತೆ
ಸಲೆ ಬೇಸಗೆಯ ಚಾತಕಿಯಂತೆ ಪಗಲ ಚಕೋರದಂತೆ
ಮಲೆಯ ಮಾಗಿಯ ಕೋಗಿಲೆಯಂತೆ ಹಲವ ಹಂಬಲಿಸಿ
ಹಲಬುತೈದೆನೆ ಭವರುಜೆಯೊಳು ಸಲಹುವರ ಕಾಣೆ ||1||
ಸತಿ ಸುತ ಮಾತೆ ಪಿತ ಮಾಯಾ ಮೋಹ ಗತಿಗೆಡಿಸುತಿವೆ
ಅತಿ ಹಸಿವು ನಿದ್ರೆ ನೀರಡಿಕೆ ಎನ್ನ ಧøತಿಗೆಡಿಸುತಿವೆ
ಕೃತಕದ ಕುಲ ಛಲ ವಿದ್ಯಾಮದ ವಿತತಿಯೆಂಟರೊಳು
ಮತಿಯೆನಿಸಿ ಎನ್ನೊಳಗೆ ನಾನು ಹುಟ್ಟುತೈದೆನೆ ||2||
ಅಡ ಸಿ ಕಾಮ ಕ್ರೋಧವೆಂಬ ರಕ್ಕಸಿ ಸುಡುತ ಬರುತಿದೆ
ಜಡಿದು ಲೋಭ ಮೋಹವೆಂಬ ಪೆರ್ಬುಲಿ ಘುಡಿಘುಡಿಸುತಿದೆ
ತೊಡಕಿ ಮದ ಮುಚ್ಚರವೆಂಬ ಹಸ್ತಿ ಕೆಡಹಿ ಸೀಳುತಿದೆ
ಒಡೆಯರಿಲ್ಲದೊಡವೆ ಯನಾರು ಬಿಡಿಸುವರ ಕಾಣೆ ||3||
ಮುಸುಕಿ ಪಂಚೇಂದ್ರಿಯವೆಂಬ ಶುನಕ ಹಸಿದು ತಿನ್ನುತಿದೆ
ಹಸಗೆಡಿಸಿ ಹೊನ್ನು ಹೆಣ್ಣು ಮಣ್ಣು ಹೊಸೆದು ಮುಕ್ಕುತಿವೆ
ವ್ಯಸನವೇಳಕೆ ಸಿಲ್ಕಿ ಒಳಗೆ ಬೆಂದಗಳಿನಂತೆ ನಿಚ್ಚ
ದೆಸೆಗೆ ಬಾಯಬಿಡುತೈದೆನೆ ಕರುಣಿಸುವರ ಕಾಣೆ ||4||
ಆವಿಗೆಯ ಕಿಚ್ಚಿನಂತೊಳಗೊಳಗೆ ಜೀವ ವಿಕಾರದಿಂದ
ಸಾವುತ ಹುಟ್ಟುತ ಬೇವುತ ಐದೆನೆ ಎನ್ನ
ನೋವನು ಆರಿಸಿ ನಿಮ್ಮಯ ಸಿರಿಯ ಸೇವೆಯೊಳಿರಿಸು
ಗಾವಿಲ ಸಂಸಾರ ಧಾವತಿಯ ಮಾಣಿಸಯ್ಯ ಮೂ
ದೇವರದೇವ ಶಂಕರಲಿಂಗ ||5||

ಅಣ್ಣ ನೀ ಧರಿಸೊ
ಅಣ್ಣ ನೀ ಧರಿಸೊ ತ್ರೆøಪುಂಡ್ರವ ನಾಡ
ಮಣ್ಣ ಮರದ ರಸಗಳನಿಟ್ಟು ಕೆಡಬೇಡ ||ಪಲ್ಲ||
ಉತ್ತು ಹೇರು ಮಾರಿ ಲೋಕವ ಸಲೆ ಸಲ
ಹುತ್ತಿಹ ವೃಷಭನ ಸಗಣವ
ಚಿತ್ತವಲಿದು ದಹನವ ಮಾಡಿ ಧರಿ
ಸುತ್ತಿರೆ ಗಣಪದವಹುದಣ್ಣ ||1||
ಆವಿನ ಪಂಚಾಮೃತವುಂಡು
ಸರ್ವಜೀವರು ಜೀವಿಸುತಿಹರಾಗಿ
ಗೋವಿನ ಗೋಮಯದಿಂದಾದ ಭಸ್ಮ
ವೀವುದು ಮೋಕ್ಷವ ಧರಿಸಣ್ಣ ||2||
ಮದುವೆ ಮುಂಜಿಗೆ ರಕ್ಷೆಯಾದುದು ಹೆತ್ತ
ಸದನಕ್ಕೆ ಕಾಹು ಕಟ್ಟಾದುದು
ಬೆದರಿಪ ಭೂತ ಕುಚ್ಚಾಟಮಂತ್ರ
ಕದು ಸಹವಾದುದ ಧರಿಸಣ್ಣ ||3||
ಅಸನ ಮೇಲೋಗರವಟ್ಟ ಭಾಂಡಂಗಳ
ವಿಸರಕ್ಕೆ ಭೂಷಣವೆಸವುದು
ಹೊಸ ಧಾನ್ಯರಾಶಿ ಲಚ್ಚಣಿಗಳ ಮೇ
ಲೆಸೆದಿಹ ಭಸಿತವ ಧರಿಸಣ್ಣ ||4||
ತಲೆನವಿರಿರುವೆ ಮಕ್ಷಕಗಳು ಅಗ
ಲೊಳು ಬಿದ್ದರದರೊಳು ಭಸಿತವ
ತಳೆದಡೆ ಶುದ್ಧವೆಂದಭವನು ಮುನಿ
ಗಳಿಗೆ ಪೇಳಿದನೆಂದು ಧರಿಸಣ್ಣ ||5||
ಋಷಿಗಳ ಮೂಲವ ಕೇಳಲು ಅತಿ
ನುಸಿ ಕುಲದಲಿ ಜನಿಸಿದರಾಗಿ
ಭಸಿತವ ಅಂಗಲೇಪನಮಾಡಿ ಜಗ
ಕೆಸೆದರು ಪುಸಿಯಲ್ಲ ಧರಿಸಣ್ಣ ||6||
ಭೂತಿರೈಶ್ವರ್ಯ ಕಾರಣದಿಂದ ಸ್ವರ್ಗ
ನೀತಿಗಳುಲಿವುತಿರ್ದಪವಾಗಿ
ಓತು ವಿಭೂತಿಯ ಧರಿಸಲು ಸರ್ವ
ಸೂತಕ ಪಾತಕ ಹರೆವವು ||7||
ಇಂದ್ರಾದಿ ವಾಣೀಪತಿ ಶ್ರೀಪತಿ ತ್ರಿ
ಸಂಧ್ಯಾ ಮೂರರೊಳು ವಿಭೂತಿಯ
ಕುಂದದೆ ನೊಸಲೊಳಿಡುವರಾಗಿ ಇದ
ರಿಂದ ತಿಲಕವಿಲ್ಲ ಧರಿಸಣ್ಣ ||8||
ಕೋಟಿ ತೀರ್ಥವ ಮಿಂದ ಫಲಕಿಂದ ಶತ
ಕೋಟಿ ಯಜ್ಞದ ಸುಕೃತಗಳಿಂದ
ಕೋಟಿ ಜಪಕೆ ಮಿಗಿಲೆಂದುದು ಶ್ರುತಿ
ಕೋಟಿ ಸಾರುತಿದೆ ಧರಿಸಣ್ಣ ||9||
ಬರು ಹಣೆಯೊಳು ಬ್ರಹ್ಮರಾಕ್ಷಸ ಭೂತ
ನೆರೆ ಮನೆ ಮಾಡಿಕೊಂಡಿಹುದಾಗಿ
ಉರುವ ವಿಭೂತಿಯ ಹಣೆ ತುಂಬಿ ನಿಚ್ಚ
ಮರೆಯದೆ ಮನಮುಟ್ಟಿ ಧರಿಸಣ್ಣ ||10||
ಒಲೆಯ ಬೂದಿಯ ತಲೆಯನು ಕಾಯ್ವುದೆಂದು
ಇಳೆಯೊಳಗಾಡುವ ಗಾದೆಯ
ನಲಿದು ವಿಭೂತಿಯ ಧರಿಸಲು ನಮ್ಮ
ಕುಲಗುರು ಶಂಕರನೊಲಿವನು ||11||

ಅಣ್ಣ ನೀ ಧರಿಸೊ
ಅಣ್ಣ ನೀ ಧರಿಸೊ ರುದ್ರಾಕ್ಷೆಯ ರನ್ನ
ಚಿನ್ನದ ತೊಡಿಗೆಯ ತೊಟ್ಟು ನೀ ಕೆಡಬೇಡ ||ಪಲ್ಲ||
ಚಿನ್ನದಾಭರಣವೆಲ್ಲವ ತೊಟ್ಟು ಬಹು
ಕನ್ನೆಯರಿಗೆ ಮುಖರಸಗೊಟ್ಟು
ಬನ್ನಬಡುವ ಅಘದೊಳು ಜಾರಿಬೀಳ
ದಣ್ಣ ನೀ ಧರಿಸು ರುದ್ರಾಕ್ಷೆಯ ||1||
ಹೊಸಮುತ್ತಿನಾಭರಣವ ತೊಟ್ಟು ಪಂಚ
ವಿಷಯ ವ್ಯಸನತತಿಗೊಡಂಬಟ್ಟು
ಹಸಗೆಡಿಸುವ ಪಾಪಕಳವಟ್ಟು
ಹೋಗದಸಮ ರುದ್ರಾಕ್ಷೆಯ ಧರಿಸಣ್ಣ ||2||
ಮುನ್ನೊಬ್ಬಶಬರ ರುದ್ರಾಕ್ಷೆಯ ಕಂಡು
ತನ್ನ ಮನೆಯ ಶ್ವಾನಗೆ ಕಟ್ಟಲ
ದುನ್ನತ ಪದವಿಯನೈದಿತೆಂದರಿದು ನೀ
ಚೆನ್ನಾಗಿ ಧರಿಸು ರುದ್ರಾಕ್ಷೆಯ ||3||
ಲಕ್ಷ ಗಂಗೆಯ ಮಿಂದಫಲಕಿಂದ ಶತ
ಲಕ್ಷ ಯಜ್ಞದ ಸೂತ್ರಗಳಿಂದ
ಅಕ್ಷಯಫಲವೆಂದಗಜೆಗೆ ನಿಟಿ
ಲಾಕ್ಷ ಪೇಳಿದನೆಂದು ಧರಿಸಣ್ಣ ||4||
ಕರ ಕಂಠ ಕರ್ಣ ಮಸ್ತಕದಲ್ಲಿ ತೋ
ಳುರದ ಮಧ್ಯದಲಿ ರುದ್ರಾಕ್ಷೆಯ
ಧರಿಸುವ ಪರಮಪುರುಷರಿಗೆನ್ನಯ
ವರ ಗುರು ಶಂಕರನೊಲಿವನು ||5||

ಅನ್ಯಾಯದೊಡಲ
ಅನ್ಯಾಯದೊಡಲ ಹೊಕ್ಕವರ ಮನೆಹಾಳು ಸರ್ವಸೌ
ಜನ್ಯವಿಹ ಸಾಚಿನೊಳು ಸುಣ್ಣಬೆರೆದಂತಿಹುದು ||ಪಲ್ಲ||
ಸಚ್ಚರಿತ ಮಂತ್ರಪಿಂಡದ ಮಾನ್ಯರಿದ್ದೆಡೆಗೆ
ದುಶ್ಚರಿತ ಮಾಂಸಪಿಂಡದ ಮನುಜರು
ಅಚ್ಚ ಹದಿಮೂರು ಬಣ್ಣದ ಹೇಮರಸದೊಳಗೆ
ಕುಚ್ಚಿತದ ಲೋಹ ಬಂದೆಡೆಗೊಂಡ ತೆರನಹುದು ||1||
ಗುಡಿಯೊಳಗೆ ಮೈಲಿಗೆ ಮಹಾಸತ್ಯವಾಣಿಗಳ
ನುಡಿಯೊಳಗೆ ಅನøತ ಬಂದಡಸಿದಂತೆ
ಷಡುರಸವನುಂಬ ಸಮಯದೊಳು ನೊಣ ಬಿದ್ದಂತೆ
ಕಡುಗಾಳಗದಿ ಕೈಯೊಳಗಿನಲಗನೆಸೆದಂತಹುದು ||2||
ಹರವಿ ತುಂಬಿದ ಹಾಲಿನೊಳಗೆ ಹುಳಿ ಹೊಕ್ಕಂತೆ
ಪರಮನೊಳು ಜೀವವದೆ ಹೊದ್ದದಂತೆ
ಸುರುಚಿರವೆನಿಪ ಭಾಗೀರಥಿಯ ಸಲಿಲದೊಳು
ಧರೆಯೊಳಗಪೇಯವಹ ಸುರೆ ಬೆರೆದಂತಹುದು ||3||
ಕುಲವಧುಗಳಿದ್ದೆಡೆಗ ಬೆಲೆವೆಣ್ಣು ಬಪ್ಪಂತೆ
ಕಲಭಂಗಳಿಗೆ ಕಂಠೀರವದ ಭೀತಿಯಪ್ಪಂತೆ
ಸುಳಿವ ಸುರಭಿಯ ಹಿಂಡಿನೊಳಗೆ ಪುಲಿಹೊಕ್ಕಂತೆ
ಸುಲಭ ಕಾಲದೊಳು ದುರ್ಭಿಕ್ಷ ಮೊಳೆತಂತಹುದು ||4||

ಅನುಗಾಲವು ದುಃಖ
ಅನುಗಾಲವು ದುಃಖ ಪಾಪಿಗೆ ತನ್ನ
ಮನ ಹೋಗಿ ಲಿಂಗಯ್ಯನ ಮಚ್ಚಿಹುದನಕ ||ಪಲ್ಲ||
ಸತಿಯಳಾದರು ದುಃಖ
ಸತಿಯಿಲ್ಲವೆಂಬ ದುಃಖ ಅತಿಹೀನ
ಸತಿ ದೊರಕಿದರೆ ದುಃಖ
ಕ್ಷಿತಿಯೊಳಗಾದರೆ ಸಾವು ಹುಟ್ಟಿಗಾದರೆ
ಮಿತಿವೀರ್ಯದೊಳ್ದುಃಖದೊಳ್ದುಃಖವಯ್ಯ ||1||
ಪುತ್ರನಾದರೆ ದುಃಖ
ಪುತ್ರನಿಲ್ಲವೆಂಬ ದುಃಖ
ಅತ್ತು ಅನ್ನವನಿಕ್ಕಿದರೆ ದುಃಖ
ತುತ್ತಿನಾಸೆಗೆ ಹೋಗಿ ತುರುಗಳ ಕಾಯ್ದರೆ
ಸಪ್ತೇಳು ಸಾಗರದ ಕಡೆಯಲಿರುವ ದುಃಖ ||2||
ಬಡವನಾದರೆ ದುಃಖ
ಬಲ್ಲಿದನಾದರೆ ದುಃಖ
ಕಡು ಹಣ ಕೈ ದೊರಕದಿರೆ ದುಃಖ
ಪೊಡವಿಯೊಳಗೆ ನಮ್ಮ ಗುರು ಶಂಕರೇಶನ
ಒಡವೆರದರೆ ಸುಖವಿಲ್ಲ ದುಃಖವಿಲ್ಲ ||3||

ಅಂಗೈಸಿ ಪರಬ್ರಹ್ಮವ ಗೆಲಿದರು
ಅಂಗೈಸಿ ಪರಬ್ರಹ್ಮವ ಗೆಲಿದರು ಶಿವ
ಲಿಂಗೈಕ್ಯರು ನೋಡೆಮ್ಮವರಣ್ಣ ||ಪಲ್ಲ||
ಕಾಲನ ಗೆಲಿದರು ಲೀಲೆಯಿಂದಾಡುವ
ಶೂಲಧರನ ಭಕ್ತರೆಮ್ಮವರು
ಹಾಳುಮಾಡಿ ಹುಲಿಗೆರೆಯಲ್ಲಿ ಜೈನರ
ಗೋಳುಗುಟ್ಟಿಸಿದವರೆಮ್ಮವವರಣ್ಣ ||1||
ಕಂಡಿರೆ ಶರಣರ ಗಂಡುತನಂಗಳ
ಕೊಂಡ ಶೂಲಗಳು ಕೊನರಿದವು
ಕೆಂಡಗಣ್ಣನ ಸಾಯುಜ್ಯವ ಪಡೆದರು
ಗುಂಡಬ್ರಹ್ಮಯ್ಯಗಳೆಮ್ಮವರಣ್ಣ ||2||
ಹಾಗಣನಿಕ್ಕರು ಮಾಘದಿ ಮೀಯರು
ಮೂಗಮುಟ್ಟರು ನೋಡೆಮ್ಮವರು
ಲೋಗರ ಒಡವೆಗೆ ಬಾಗರು ಬಯಸರು
ಯೋಗಿ ಮಹಾತ್ಮರೆಮ್ಮವರಣ್ಣ ||3||
ಹೋತನ ಕೊಲ್ಲರು ಹೋಮವನಿಕ್ಕರು
ಏತಕೆ ಶರಣೆನ್ನರೆಮ್ಮವರು
ಮಾತಿನಮಾತಿಗೆ ಶ್ವಾನನ ಕೈಯಲಿ
ವೇದವನೋದಿಸಿದರೆಮ್ಮವರಣ್ಣ ||4||
ಹೊತ್ತಿಲ್ಲ ಹೊಗಸಲ್ಲ ಮತ್ತೊಂದು ದಿನವಿಲ್ಲ
ಬತ್ತವ ಹರಡಿದರೆಮ್ಮವರು
ಬತ್ತುವ ಕುಟ್ಟಿಸಿ ಮಾರಿಯ ಕೈಯಲ್ಲಿ
ನೆತ್ತಿಯ ಮೇಲೆ ಅಕ್ಕಿಯ ಹೊರಿಸಿದರೆಮ್ಮವರಣ್ಣ ||5||
ಕಟ್ಟಿನ ಬಳ್ಳವ ನೆಟ್ಟ ಲಿಂಗವ ಮಾಡಿ
ಮುಟ್ಟಿ ಪೂಜಿಸಿದವರೆಮ್ಮವರು
ಕೆಟ್ಟಿತು ವ್ರತವೆಂದು ಭ್ರಷ್ಟರು ನುಡಿಯಲು
ದೃಷ್ಟವ ತೋರಿದವರೆಮ್ಮವರಣ್ಣ ||6||
ಅಗಿದರೆ ಇಳಿಯಿತು ಮಿಗಿಲೇಳಾಳುದ್ದ
ಜಲವ ಕಂಡರು ನೋಡೆಮ್ಮವರು
ನಗುವ ದೂಸಕರೆಲ್ಲ ಮಿಗೆ ಲೆಂಕರಾದರು
ಅಘಹರನ ಭಕ್ತರೆಮ್ಮವರಣ್ಣ ||7||
ಅಕ್ಕರಿಂದಲಿ ಗೊಲ್ಲಾಳ ಶರಣನು
ಹಿಕ್ಕೆಯನೊಲಿದು ಪೂಜಿಸಲು
ದುಃಖಗೇಡಿ ತಂದೆಯು ಬಂದೊದೆಯಲು
ಆಕ್ಷಣ ಕಡಿದವರೆಮ್ಮವರಣ್ಣ ||8||
ಇಟ್ಟು ಬಂದಲ್ಲದೆ ಮುಟ್ಟರು ಬೋನವ
ಅಟ್ಟಿ ಅಂಜರು ನೋಡೆಮ್ಮವರು
ಇಟ್ಟದ ಕಲ್ಲಿಗೆ ಶಿರಸವ ಸರಿ ಮಾಡಿ
ಕೊಟ್ಟು ಮೆರೆದ ಭಕ್ತರೆಮ್ಮವರಣ್ಣ ||9||
ಪಾಕದ ವೀಳ್ಯವ ಸಾಕೆಂದು ಗುಡಿಯಲ್ಲಿ
ಹಾಕಿ ಹೋದರು ನೋಡೆಮ್ಮವರು
ಲೋಕವರಿಯೆ ಮೈಲಾರನ ಕೈಯಲ್ಲಿ
ಆಕ್ಷಣ ತೆಗೆಸಿದರೆಮ್ಮವರಣ್ಣ ||10||
ಹರಕೆಯ ಕುರಿಯನು ಸರಸಕೆ ಬೆಲೆಮಾಡಿ
ಬರಸಿ ಬಿಟ್ಟರು ಲಿಂಗಮುದ್ರೆಯನು
ಅರಸಿದವರು ಬಂದು ವಿರಸವ ಮಾಡಲು
ಶಿರಸವ ಕೊಯ್ದಿಟ್ಟರೆಮ್ಮರಣ್ಣ ||11||
ಭೂಮಿಯಲಿ ಶ್ವಪಚಯ್ಯ ಬೋನವ ಮಾಡಲು
ಸಾಮವೇದಿ ಮೇಲೆ ಬರುತಿರಲು
ವಾಮಭಾಗದ ಪಾದರಕ್ಷೆಯ ತಕ್ಕೊಂಡು
ಪ್ರೇಮದಿ ಬೋನವ ಮುಚ್ಚಿದರೆಮ್ಮರಣ್ಣ ||12||
ಮಡುವಿನಲುಡೆಯನು ಹಿಡಿದು ಜಡೆಯಲಾಗ
ಸಡಲಿತು ಶಿವದಾರ ಚಂದಯ್ಯಗೆ
ಒಡೆಯನುಳ್ಳ ಬಂಟ ಕೆಡುವನೆಯೆನುತಲಿ
ಕಡೆಗೆ ನಡೆದ ಭಕ್ತರೆಮ್ಮವರಣ್ಣ ||13||
ಗೊಬ್ಬೂರೊಳು ನಮ್ಮ ಬಿಬ್ಬಿಬಾಚಯ್ಯ
ನುಬ್ಬಿ ಪ್ರಸಾದವ ತರುತಿರಲು
ಕೊಬ್ಬಿದ ವಿಪ್ರರು ಉಬ್ಬೆದ್ದು ಬೊಗಳಲು
ಗೊಬ್ಬರನು ಸುಟ್ಟವರೆಮ್ಮವರಣ್ಣ ||14||
ಹರಿಯೆಂದು ನುಡಿದರೆ ಸರಿಯೆಂದು ನೋಡರು
ಮರಳಿ ನುಡಿಯದವರೆಮ್ಮವರು
ಹರನು ಭಿಕ್ಷಕೆಬಂದು ಹರಿಯೆಂದು ನುಡಿಯಲು
ಎರಗಿ ಹೊಡೆದವರೆಮ್ಮವರಣ್ಣ ||15||
ಲೆಕ್ಕವಿಲ್ಲದ ಭಾಗ್ಯ ಸೌಖ್ಯವದೆಲ್ಲವ
ಲೆಕ್ಕಿಸದೆ ಕದಳಿಯ ಹೊಕ್ಕುರು
ಮುಕ್ಕಣ್ಣ ಶಿವನನು ಬೆರಸಿದ ಮಹದೇವಿ
ಅಕ್ಕಗಳೆಂಬುವರೆಮ್ಮವರಣ್ಣ ||16||
ಕಂಚಿನಲಿ ಉಣ್ಣರು ವಂಚನೆಯನರಿಯರು
ಮಿಂಚುವ ದಂತಕೆ ಎಲೆಮೆಲ್ಲರು
ಪಂಚಮುಖ ಶಂಕರನೊಳೈಕ್ಯ ಪಡೆದರು ಶಿವಲೆಂಕ
ಮಂಚಣ್ಣಗಳೆಮ್ಮವರಣ್ಣ ||17||

ಆರು ಹಾರೈಸಿದರೇನುಂಟು
ಆರು ಹಾರೈಸಿದರೇನುಂಟು
ನೀರಕಡದರಲ್ಲೇನುಂಟು ||ಪಲ್ಲ||
ಕೊಟ್ಟುದ ಕೊಂಡುದ ಲೆಕ್ಕವ ಮಾಡುವ
ಭ್ರಷ್ಠರ ಸೇರಿದರೇನುಂಟು
ಬಿಟ್ಟಿಯನೋಲೈಸಿಯೆ ಬೆದರಿಸಿ ಕೊಂಬ
ಕಷ್ಟರ ಸೇರಿದರೇನುಂಟು ||1||
ಅಂತರವರಿಯದ ಅಧಮನ ಬಾಗಿಲ
ನಂತಕಾಲವು ಕಾದರೇನುಂಟು
ಎಂತಾದರು ಒಂದು ತಪ್ಪ ಸಾಧಿಸಿ ಯಮ
ನಂತೆ ಕೊಲ್ಲುವರಲ್ಲೇನುಂಟು ||2||
ಪಿಸುಣಿನ ಕುದುರೆಯ ಹಿಂದು ಮುಂದೋಡಲು
ಬಿಸಿಲುಹಣ್ಣಲ್ಲದಲೇನುಂಟು
ವಸುಧೆಯೊಳಗೆ ನಮ್ಮ ಗುರುಶಂಕರೇಶನನೊ
ಲಿಸಿ ಪೂಜಿಸಿದರೆ ಗುಣವುಂಟು ||3||

ಇಂದುಶೇಖರ ಮನ್ನಿಸೊ
ಇಂದುಶೇಖರ ಮನ್ನಿಸೊ ದಯದಿಂದ ಶಂಕರ ||ಪಲ್ಲ||
ಪಂಚವಕ್ತ್ರನೆ ಪಾಲಿಪುದು ತ್ರಿಪಂಚನೇತ್ರನೆ
ಪಂಚಭೂತ ತನುವಿದೆನಗೆ ಪಗೆಯಾಗಿದೆ ನೋಡಯ್ಯ
ವಂಚಕ ನೀಯೆಂದು ಎನ್ನ ಓರೆಮಾಡದಿರಯ್ಯ
ಸಂಚರಿತ ಮನಕೆ ಮರವೆ ತೋರಿ ಕಾಡದಿರಯ್ಯ
ಪಂಚವದನ ಮದೀಶ ಕರುಣಿ ಕೃಪೆಯ ಮಾಡಯ್ಯಇಂದುಶೇಖರ ||1||
ಕಾಮನಾಶಾನಾಶನೆ ಕರುಣಿಪುದು ವ್ಯೋಮಕೇಶನೆ
ಹೇಂ ಭೂಮಿ ಹೆಣ್ಣಿಗಾಗಿ ಹೇಳದಲೆ ನಾ ನೊಂದೆನು
ಕಾಮಿನಿಯರೆಡೆಯೊಳೆನ್ನ ಕಾಡಬೇಡವೆಂದೆನು
ತಾಮಸಗುಣಗಳಿಂದ ತಾಪ ಹೆಚ್ಚಿತೆಂದೆನು
ನಾಮರೂಪರಹಿತ ಕ್ರೀಯ ಕಾಯೊ ನೀನೆಯೆಂದೆನು
ಇಂದುಶೇಖರ ||2||
ವ್ಯಾಳಭೂಷನೆ ಬಿನ್ನಪವನು ಕೇಳು ಈಶನೆ
ಏಳುವ್ಯಸನವಿಷಯವೆನ್ನ ಬಾಳಲೀಸದಯ್ಯ
ಧಾಳಿವರಿವ ಕರಣತತಿಗೆ ಧೈರ್ಯ ಕಲಿತನ ಮಾಡದಯ್ಯ
ಖೂಳಮದವು ಕೊಂದು ಮುನ್ನ ಕೂಗುತಿದೆ ನೋಡಯ್ಯ
ಭಾಳನೇತ್ರ ಬಿಡಿಸಿ ನಿಮ್ಮ ನೆನಹಿನೊಳಗಿರಿಸಯ್ಯ
ಇಂದುಶೇಖರ ||3||
ಆಸೆ ಎನ್ನನು ಮುಸುಕಿ ಕಾಳಲೀಸದೆಲ್ಲಯ್ಯ
ಕ್ಲೇಶವೆಂದು ತ್ರೆøಗುಣ ತೋರಿ ಕೇಳಯ್ಯ ಮಹೇಶನೆ
ಈಸಲಾರೆನೊಲಿದಿಂದ್ರಿಯಾದಿಯಾಮಿಷಗಳಿಗೆ ಈಶನೆ
ಕಾಮಾರಿ ಕಾಡಬೇಡವಯ್ಯ ಪಾಪನಾಶನೆ
ದೋಷರಹಿತ ಭವವಿದೂರ ಕಾಯೊ ಪ್ರಮಥೇಶನೆ
ಇಂದುಶೇಖರ ||4||
ನೊಂದೆನಲ್ಲಯ್ಯ ಸಂಸಾರ ಸುಖವು ಕುಂದಿತಲ್ಲಯ್ಯ
ದಂದುಗಕ್ಕೆ ನಿಮ್ಮದೊಂದು ದಯದಿ ಕೃಪೆಯ ಮಾಡಯ್ಯ
ಕುಂದಹಚ್ಚಿ ಯೋನಿಮುಖದಿ ತಂದು ಕಾಡದಿರಯ್ಯ
ಮಂದಮತಿಯ ಸೆಳೆದು ನಿಮ್ಮ ಮಮತೆಯೊಳಿರಿಸಯ್ಯ
ತಂದೆ ಸದ್ಗುರು ಶಂಕರ ನಿಮ್ಮಳೊಂದುಗೂಡಿಕೊಳ್ಳಯ್ಯ
ಇಂದುಶೇಖರ ||5||

ಎನ್ನ ಕರಪೀಠಕೊಲವಿಂದಂ
ಎನ್ನ ಕರಪೀಠಕೊಲವಿಂದಂ ಅರರೆ
ಪನ್ನಗಾಭರಣ ಕರುಣದಿಂದ ಬಂದಂ ||ಪಲ್ಲ||
ಊರ ಸಾರದನೆಡೆಗೆ ವಾರಿನಿಧಿ ಬಪ್ಪಂತೆ
ದಾರಿದ್ರನೆಡೆಗೆ ಧನ ಧಾನ್ಯ
ಭೋರನೈತಂದಂತೆನ್ನ ಕರಪೀಠಕ್ಕೆ
ವಾರಣಾಸಿಯಪುರಾಧೀಶ ಬಂದಂ ||1||
ತನುಜನಲ್ಲಿಗೆ ತಾಯಿ ವನಜನಲ್ಲಿಗೆ ಸೂರ್ಯ
ಇನಿಯಳಲ್ಲಿಗೆ ರಸಿಕ ರಮಣ
ಮನವೊಲಿದು ಪರಿದುಬಂದಂತೆ ಗುರು ಕರುಣದಿಂ
ಘನ ಮಹಾಲಿಂಗವೆನಗೊಲಿದು ಬಂದಂ ||2||
ವ್ಯಾಸ ವಸಿಷ್ಠ ನಾರದ ಭೃಗು ದಧೀಚಿ ದೂ
ರ್ವಾಸ ಗೌತಮಮುನಿ ನಿಕರಂ
ಲೇಸು ಲೇಸೆನುತಲೋಲೈಸಿ ಬರುತಿರೆ ಪಾರ್ವ
ತೀಶ ಫಣಿಭೂಷ ಪರಮೇಶ ಬಂದಂ ||3||
ಕಿನ್ನರರು ಪೊಗಳೆ ಕಿಂಪುರುಷರುಗ್ಘಡಿಸುತಿರೆ
ಪನ್ನಗರು ಪಾಡಿ ಕೊಂಡಾಡೆ
ಸನ್ನಿಹಿತ ಸಿದ್ಧ ವಿದ್ಯಾಧರರು ಪೊಗಳಿ ನಲಿಯೆ
ಎನ್ನ ಸರ್ವಜ್ಞ ಸಂಪನ್ನ ಬಂದಂ ||4||
ನರರುಗಳು ನಲಿವುತಿರೆ ಸುರರುಗಳು ಒಲಿವುತಿರೆ
ಗರುಡ ಗಂಧರ್ವರತಿ ಸಂಭ್ರಮಿಸುತಿರಲು
ವರ ನಂದಿ ಭೃಂಗಿ ವೀರೇಶ್ವರಂ ಮೊದಲಾಗಿ
ಗುರುರಾಯ ಎನ್ನ ಕರಸ್ಥಲಕೆ ಬಂದಂ ||5||
ಹರಿಯ ಮೇಲೆಡದಹಸ್ತವನಿರಿಸಿ ಕಮಲಜನ
ಶಿರದೊಳಗೆ ಬಲದ ಕರವನಿಟ್ಟು
ದುರುರೆ ದುರುರೇ ರಾವುರೇಯೆಂಬ ಭರವಸದಿ
ಗುರುರಾಯ ಎನ್ನ ಕರಸ್ಥಲಕೆಯ್ದಿ ಬಂದಂ ||6||
ಮಂಗಳ ರವಂಗಳ ಪಾಡಿ ಮಜ್ಜನ ಭೋಜ
ನಂಗಳ ಮಾಡಿ ಮುದದಿಂದ
ಗಂಗಾವರದ ರಮಣ ಗುರುಶಂಕರೇಶ ಎ
ನ್ನಂಗಯ್ಯ ಮೇಲೆ ಹೆರೆಹಿಂಗದಿರ್ದಂ ||7||

ಎಮ್ಮಯ್ಯ ದಮ್ಮಯ್ಯ
ಎಮ್ಮಯ್ಯ ದಮ್ಮಯ್ಯ ನಾ ನಿಮ್ಮ
ಸೊಮ್ಮಯ್ಯ ಎನ್ನ ಕರಪೀಠಕೆ ಬಾ ಬಾ ||ಪಲ್ಲ||
ಅರವಿಂದದ ಮಕರಂದದ ಮಾಲೆಯು
ಸುರಗಿಯನನೆ ಮರುಗದ ಕೊನೆಯು
ಇರವಂತಿಗೆ ಸೇವಂತಿಗೆಯರಳಿನ
ಪರಿಮಳನೀವೆ ಕರಪೀಠಕೆ ಬಾ ಬಾ ||1||
ಸುಕರವೆನಿಪ ಕೆಂದಳಿರಂದಣದಿಂ
ಅಕುಳ ಬಕುಳ ಮಾದಳದರಳಿಂ
ಶುಕ ಪಿಕ ಮಧುಕರ ನಿಕರದ ರವದಿಂ
ಅಕುಟಿಲ ಕರಪೀಠಕೆ ಬಾ ಬಾ ||2||
ಆರತಿಯಂಗನೆ ಸಾರಥಿ ಪಾರ್ಥನೆ
ಆರತಿ ಮಾಣಿಕದಾರತಿಯಿಂದ
ಈ ರತಿಯಿಂದಲಿ ಪಿಡಿದೈದೆನೆ ಶರ
ಣಾರತಿ ಮಮ ಕರಪೀಠಕೆ ಬಾ ಬಾ ||3||
ಹರಿಯಜರೆಡಬಲದಲಿ ನಡೆ ಸಾಹೋ
ದರುರೆ ಧೀರುರೆಯೆಂದುಗ್ಘಡಿಸೆ
ಸುರಪತಿ ಜಯ ಜಯ ನಮೋಯೆನೆ ಸಜ್ಜೆ
ಯರಮನೆಯಿಂ ಕರಪೀಠಕೆ ಬಾ ಬಾ ||4||
ಲಾಲಿಸಿ ಪಾಲಿಸಿ ಕರಕಮಲದೊಳೊ
ಡ್ಡೋಲಗವಿತ್ತು ಜಗತ್ರಯವ
ಆಳುತ ಬಾಳುತ ಶಂಕರಲಿಂಗವೆ
ಲೀಲಾ ನಿಜಸುಖಿಯಾಗಿಹ ಬಾ ಬಾ ||5||

ಎಂಥ ಕನಸ ಕಂಡೆ
ಎಂಥ ಕನಸ ಕಂಡೆ ಏಣಲೋಚನೆ
ಕುಂತಳದೇಶವು ಸೀಳಿ ಬಿರಿವುದ ಕಂಡೆನು ||ಪಲ್ಲ||
ಕೆಸರೊಳಗಿಹ ತಾವರೆ ಕೆಸರ ನುಂಗಿದುದ ಕಂಡೆ
ಶಶಿ ಗಗನವ ನುಂಗಿದುದನು ಕಂಡೆ
ಒಸರುವ ಮಳೆಹನಿ ಸೂಸುವಂಬುಧಿಯ ನುಂಗಿ
ಕಸ ಬೆಂಕಿಯ ನುಂಗಿ ಕಳೆದೋರಿತಕ್ಕಯ್ಯ ||1||
ಉಣಬಂದ ಐವರ ನೊಣ ನುಂಗಿದುದ ಕಂಡೆ
ಹೆಣನು ಜೀವವ ನುಂಗಿದುದನು ಕಂಡೆ
ಕಣಕೆ ಬಹ ಶೂರನ ರಣನುಂಗಿ ಕೂಗುತಿದೆ
ಫಣಿಯ ಹೆಡೆಯಜ್ಯೋತಿ ರವಿನುಂಗಿತಕ್ಕಯ್ಯ ||2||
ಇರುವೆ ಭೂಮಿಯ ನುಂಗಿ ಕರಿಯು ಕತ್ತಲೆ ನುಂಗಿ
ಮೊರೆವ ಗಾಳಿಯ ಹದ್ದು ನುಂಗಿತಕ್ಕಯ್ಯ
ಬರುವ ಮಾರಿಯ ನೊರಜು ನುಂಗಿದುದ ಕಂಡೆ
ಬೆರಗಾಗಿ ಬಯಲಿಗೆ ಭಯಬಟ್ಟೆನಕ್ಕಯ್ಯ ||3||
ಗಂಧ ಗಾಳಿಯ ನುಂಗಿ ಸಿಂಬೆ ಕೊಡನ ನುಂಗಿ
ಮಂದರಗಿರಿಯ ವಾನರ ನುಂಗಿತು
ಅಂದವಿಲ್ಲದ ರೂಪು ಅಂಬರವ ಸಲೆ ನುಂಗಿ ನಂಬಿ
ಬಂದವನ ಬಯಲು ನುಂಗಿತಕ್ಕಯ್ಯ ||4||
ಮಂಕು ಮರುಳ ನುಂಗಿ ಶಂಖು ಸಗರವ ನುಂಗಿ
ರಿಂಕಿಮರನ ಬೀಜವು ನುಂಗಿತು
ರುüುಂಕಿಸಿ ಹಾರುವ ಹಂಸನ ಗರಿ ಹೋಗಿ
ಶಂಕರನಂಘ್ರಿಯೊಳ್ಸೇರಿತಲ್ಲಕ್ಕಯ್ಯ ||5||

ಏಕೆ ಚಿಂತಿಸುತಿರ್ಪೆ
ಏಕೆ ಚಿಂತಿಸುತಿರ್ಪೆ ಎಲೆ ಪಾಪಿ ಮನವೆ ಅ
ನೇಕ ತೆರದೊಳು ಲಿಂಗವ ಭಜಿಸು ಇಂತೆಂದು ||ಪಲ್ಲ||
ಕಾಮದೊಳು ಕುದಿಕುದಿದು ಕ್ರೋಧದೊಳು ನಲಿನಲಿದು
ಈ ಮಹಾವಿಷಯದೊಳು ತೊಳಲಿ ಬಳಲಿ
ಸಾಮಗಾನಪ್ರಿಯ ಸರ್ವರನು ರಕ್ಷಿಸುವ
ಉಮಾಪತಿಯ ಪಾದವನು ನೆರೆ ನಂಬು ಮನವೆ ||1||
ಒಂದೊಂದ ನೆನೆನೆನೆದು ಸಂದೇಹಗೊಳಬೇಡ
ಬಂದುದನು ಅನುಭವಿಸಿಕೊಳದೆ ನೀನು
ಇಂದಿಂಗೆ ನಾಳಿಗೆಂದೆಂಬ ಬುದ್ಧಿಯನುಳಿದು
ಇಂದಿಂಗೆ ನೂರುತುಂಬಿತೆನ್ನು ಮನವೆ ||2||
ಆರನಾದರು ಕಾಡಿ ಬೇಡಿ ಕೊರಗುವುದೇನು
ದೂರಾಗುವುದೇನು ದುರ್ಗುಣದಲಿ
ಮಾರಾರಿ ಶಂಕರನ ಮನದಲ್ಲಿ ಭಜಿಸಿ ನೀ
ಕರುಣಾಮೃತವನುಂಡು ಸುಖದೊಳಿರದೆ ||3||

ಏಕೆ ದಯವನು ಮಾಡೆ
ಏಕೆ ದಯವನು ಮಾಡೆ ಪ್ರಸನ್ನ
ಶಂಕರಲಿಂಗ ಶ್ರೀನಂಜುಂಡೇಶ ನೀನೆ ||ಪಲ್ಲ||
ದೇಗುಲವನು ಕಂಡು ದೇವನೆಂದು ಪೋದೊಡೆ
ಲಿಂಗವಿಲ್ಲದೆ ಮನ ನಾಚಿತ್ತಲ್ಲಯ್ಯ ||1||
ಏರಿ ನೀರನು ಕಂಡು ನೀರೆಂದು ಪೋದೊಡೆ
ಉದಕವಿಲ್ಲದೆ ಮನ ನಾಚಿತ್ತಲ್ಲಯ್ಯ ||2||
ವಿಭೂತಿ ರುದ್ರಾಕ್ಷಿಯನು ಕಂಡು ಭಕ್ತನೆಂದು ಪೋದೊಡೆ
ಭಕ್ತಿಯಿಲ್ಲದೆ ಮನ ನಾಚಿತ್ತಲ್ಲಯ್ಯ ||3||

ಏಕೆ ಭ್ರಮಿಸಿ ಕೆಟ್ಟೆಯೆಲೆ
ಏಕೆ ಭ್ರಮಿಸಿ ಕೆಟ್ಟೆಯೆಲೆ ದುಷ್ಟ ಪಾಪಾತ್ಮ
ಲೋಕದೊಳಗಿಹರ ಪತಿವ್ರತೆಯರೆನ್ನದೆ ||ಪಲ್ಲ||
ತರಳೆಸಳ ಯೆನುತ ಪುರ್ಬೆರಡ ವರ್ಣಿಸಲೇಕೆ
ಅರರೆ ಸೂಕರನ ಕೋರೆ ಸಮಾನ
ಸರಿಯನಡಿ ನಯಿದಲ ಅರಳೆ ಅವಯವಗಳ
ಉರಿ ಬೇಗ ಕಿಸಿರು ಅದ ರೊಳಗುಂಟು ||1||
ನಾಸಿಕವ ಸಂಪಗೆಯ ಎಸಳಿಂಗೆ ಪೋಲಿಸುವರೆ
ರಾಸಿ ನರಕವು ಎರಡರಜನೆಯೊಳಗೆ
ಲೇಸಾದ ಅಮೃತದ ಕೇಸರಿ ಎನುವೆ ಜಿಹ್ವೆಯನು
ಹೂಸಿಕೆಯ ನರಕ ಕುಣಿಯದು ಯಥಾರ್ಥವು ||2||
ತಾವರೆಯೆಸಳೆನುತಾನನವ ಪೋಲಿಸುವರೆ
ಭಾವಿಸಿ ನೋಡೆ ತಿತ್ತಿಯ ಸಮಾನ
ನೋವಿಲ್ಲದವರಿಗೆ ನೋವತಂದಿಡುತಿಹುದು
ಈ ಭೇದ ಮಧ್ಯಕೆ ನೀನು ಬೆರಗಾಗದೆ ||3||
ನಾಡೆವಣ್ಣಿಸುತ ಕುಚವೆರಡ ವರ್ಣಿಸಲೇಕೆ
ಖಂಡಿಸಿದ ಗೊಣ್ಣೆಹುಳುವಿನ ಸಮಾನ
ಅಂಡಸಿಯರ ಕೂಟ ಅದು ಬಹು ಸವಿಯೆನುತ
ಮುಂಡಗಳ್ಳಿಯ ಮುರಿದ ತೆರನು ಕಂಡ ||4||
ಕರಿಗಮನೆಯೆನುತ ನೀ ಹರುಷದಿಂದಿರಬೇಡ
ಬರಿಯ ನಟಣೆಯ ನೋಡಿ ನೀ ಭ್ರಾಂತುಗೊಳದೆ
ಗುರು ಶಂಕರೇಶ್ವರನ ಪಾದಪಂಕಜವನನ
ವರತ ಬಿಡದೆ ಪೂಜಿಸಿ ಮುಂದೆ ಪಡೆ ಮುಕ್ತಿಯ ||5||

ಏಕೆ ಮನವೆ
ಏಕೆ ಮನವೆ ಶಿವಪದವ ಭಜಿಸಲೊಲ್ಲೆ ವಿ
ವೇಕಿಯಾದಡೆ ಪುಣ್ಯಜನ್ಮವಿದು ||ಪಲ್ಲವಿ||
ಜೂಜಿಗೆ ನೆತ್ತಕ್ಕೆ ಯೋಚಿಸಿ ಚದುರಂಗ
ದೋಜೆಗೆ ಮನವಿಕ್ಕುವ ತೆರದಿ
ಮೂಜಗದಯ್ಯಧೀಶಗೆ ನಮಿಸುತಿರಲು ಯಮ
ರಾಜ ನಿನಗೆ ಶರಣೆನ್ನದಿಹನೆ ||1||
ಆಶನಕ್ಕೆ ವ್ಯಸನಕ್ಕೆ ಹಸಿವು ತೃಷೆ ನಿದ್ದೆಗೆ
ವಿಷಯಕ್ಕೆ ಮನವನಿಕ್ಕುವ ತೆರದಿ
ಆಸಮಾಕ್ಷನಡಿಗೆರಗುತಿರಲು ಕಾಮ
ನೆಸೆಯಲಂಜಿ ಬಿಲ್ಲನೂರಿ ಬೆರಗಾಗನೆ ||2||
ನರನ ಶೃಂಗಾರ ಸಾಹಸ ಮೋಹಂಗಳಿಗೆ
ಸುರತಕ್ಕೆ ಮನವನಿಕ್ಕುವ ತೆರದಿ
ಗುರುಪಾದಸೇವೆಗೆ ನಮಿಸು
ತಿರಲು ನಿನಗಿಹಪರವಾಗದೆ ಮನವೆ ||3||
ಪರಧನ ಪರವಸ್ತುಗೆ ಬಪ್ಪಂತೆ
ಪರಸತಿಯರ ನೋಡುವ ತೆರದಿ
ಪರನಿಂದೆಗೈವಂತೆ ಕರ ಜಿಹ್ವೆ ನೇತ್ರದಿ
ಹರನ ಭಜಿಸಿದರೆ ಸುಖದೊರೆಕೊಳ್ಳದೆ ||4||
ನಡೆವಲ್ಲಿ ನುಡಿವಲ್ಲಿ ಕೊಡುವಲ್ಲಿ ಕೊಂಬಲ್ಲಿ
ಉಡುವಲ್ಲಿ ಕೂಡುವೆಡೆಗಳಲ್ಲಿ
ಮೃಡ ಗುರುಶಂಕರಲಿಂಗವ ಬಿಡದಿರೆ ತ
ನ್ನೊಡಗೂಡಿಕೊಂಬುದನರಿಯ ||5||

ಏಯೇ, ರಾಮಿ ತಮ್ಮ
ಏಯೇ ರಾಮಿ ತಮ್ಮ
ಬಾಯ ಬಿಡುತ ಬರುತಿದೆ ಬೆಕ್ಕು ||ಪಲ್ಲ||
ಪಂಜರವೆಂಬುದು ಮಂಜಿನಪುಂಜವು
ಪಂಜರದೊಳಗಿಪ್ಪ ನಾದಬಿಂದು
ಮಂಜರ ಕೊಲ್ಲುವ ಮುಂದಾಗುವ ಮುನ್ನ
ಅಂಜದೆ ಗೆಲು ಕಂಡಾ ರಾಮಿತಂದೆ ||1||
ಕೊರೆ ಕೂಳಿನಾಸೆಗೆ ಮರೆದು ನೀ
ನೊರಗಲು ಗರಿ ಸಹವಾಗಿ ನುಂಗುವುದು ಕಂಡಾ
ಬರಿದಹುದೋ ನೀನೋದಿದ ಓದೆಲ್ಲಾ
ಅರಿಕೆಯ ಮರೆಯದಿರೆಲೆ ರಾಮಾ ||2||
ಹತವಹ ವಿರಳದ ಗೂಡಿನ ಹಂಬಲ
ಮತಿಯ ನೀಗಿ ಬಲು ಬಲ್ಲಿದನಾಗಿ
ಅತಿಶಯ ಶಂಕರಲಿಂಗನ ಪಾದವ
ಮತಿವಂತ ಮರೆಯದಿರೆಲೆರಾಮ ||3||

ಐದು ಬಣ್ಣದ ಪಕ್ಷಿ ಮ
ಐದು ಬಣ್ಣದ ಪಕ್ಷಿ ಮೈದೊಳೆವುದ ಕಂಡೆ ಚಂದಮಾಮ
ಐದಕ್ಕೆ ನೈದಲೆ ಕುಮುದ ಪುಷ್ಪಗಳಾಗಿಹವು ಚಂದಮಾಮ ||ಪಲ್ಲ||
ಒಂದು ಮೂರುಯಿತ್ತು ಮೂರು ಆರುಯಿತ್ತು ಚಂದಮಾಮ
ಆರು ಆರು ಕೂಡಿ ಮೂವತ್ತಾರುಯಿತ್ತು ಚಂದಮಾಮ
ಮೂವತ್ತಾರು ಕೂಡಿ ಇನ್ನೂರಹದಿನಾರು ಚಂದಮಾಮ
ಅದು ಗುಣಿಸಿ ಭಾಗಿಸಿ ನೋಡಿ ಒಂದಕ್ಕೆ ತಂದರು ಚಂದಮಾಮ ||1||
ಆರು ಅಂಕಣದೊಳು ಆರು ಮಂಟಪವಿಹೆ ಚಂದಮಾಮ
ಆರು ಮಂಟಪದೊಳು ಆರು ಲಿಂಗವಿಹೆ ಚಂದಮಾಮ
ಆರು ಲಿಂಗವ ನೋಡಿ ಮಜ್ಜನಕೆರೆದರು ಚಂದಮಾಮ ಮುಂದೆ
ಮೀರಿದ ಘನವೆಂಬ ಕ್ರಮಗಳು ನಮಗುಂಟು ಚಂದಮಾಮ ||2||
ಅರಸ್ಥಾನದಲ್ಲಿ ಐವತ್ತು ಆಕಾರ ಚಂದಮಾಮ ಅವು
ಧಾರುಣಿಯೊಳಗೆಲ್ಲ ಸೋಹಮೆಂದೆನುತಾವೆ ಚಂದಮಾಮ
ಸ್ಥಿರವಲ್ಲವೀ ಕಾಯ ಕರಣೇಂದ್ರಿಯೊಳಗಲ್ಲಿ ಚಂದಮಾಮ ಅದು
ಕುರುಹಿಗೆ ಬಾರದು ಪರಿಪೂರ್ಣವಾಗಿದೆ ಚಂದಮಾಮ ||3||
ಇರುಳು ಹಗಲೆಂಬ ದಾಯಗಳಿಲ್ಲವು ಚಂದಮಾಮ
ಮಿಗಿಲು ಮಾತಿನ್ನೇಕೆ ನಿಶ್ಚಿಂತವಾಗಿದೆ ಚಂದಮಾಮ
ಕಾಣಬಾರದ ಕಣ್ಣು ಕಾಣಿಸಬರುತದೆ ಚಂದಮಾಮ
ಮುಂದೆ ನೋಡುವ ಕಂಗಳು ಎರಡು ಬಯಲಾದವು ಚಂದಮಾಮ ||4||
ತ್ರಿಕೂಟಗಿರಿಯೊಳು ಸೋಹಮೆಂದೆನುತದೆ ಚಂದಮಾಮ
ಅದು ಹರಿಸುರ ಬ್ರಹ್ಮಾದಿಮುನಿಗಳಿಗಳವಲ್ಲ ಚಂದಮಾಮ
ಪಿಂಡ ಬ್ರಹ್ಮಾಂಡದೊಳೆಡೆದೆರವಿಲ್ಲವು ಚಂದಮಾಮ
ಮುಂದೆ ಶಂಕರಲಿಂಗ ಬೆಳಗುದೋರುತಲಾನೆ ಚಂದಮಾಮ ||5||

ಒಲ್ಲೆ ಗುರುವೆ ನರರ
ಒಲ್ಲೆ ಗುರುವೆ ನರರ ಬೇಡ್ವುದ ಶ್ರೀ ಶಂಭುಲಿಂಗ
ಒಲ್ಲೆ ಗುರುವೆ ನರರ ಬೇಡ್ವುದ
ಎಲ್ಲ ಎಲ್ಲ ಬೇಡಿ ದಣಿದೆ ಬಲ್ಲ ಮಾನಭಾವಿ ನಿಮ್ಮ
ಮೆಲ್ಲನಡಿಯ ಪಿಡಿದು ಬಾಳುವೆ ಶ್ರೀ ಶಂಭುಲಿಂಗ ||ಪಲ್ಲ||
ಕುಂಭಿನಿಯ ಮೇಲೆ ಜನಿಸಿ ಹಂಬಲಿಂದ ನೆನಸಿ ನೆನಸಿ
ನಂಬಿ ಪರರ ಮನೆಯ ಕಾಯ್ವ ಡೊಂಬನಂತೆ ಹಾಡಿ ಕುಣಿದು
ಹಂಬಲಾಶೆಯಿಟ್ಟು ಮರುಗಿದೆ ರಂಭ ರೂಢಿಯಾಗಿ ಹೊರಳಿದೆ
ಶಂಭು ಸರ್ವೇಶ ಗುರುವೆ ಹುಯ್ಯಲಿಡುವೆ ರಕ್ಷಿಸಯ್ಯ ||1||
ತಂದೆ ತಾಯಿಯೆಂದು ಜನರ ಹಂಬಲಿಸಿ ತಿರುಗಿಯವರ
ವಂದನೆಯ ದೈನ್ಯಬಟ್ಟು ಚಂದನಾನಪರಿಗಳಿಂದ
ಹಾರೈಸಿ ಇನ್ನು ಒಂದೊಂದು ಪರಿಯ ಹಾಡಿ ಹೊಗಳಿ ಬೇಡುವೆ
ಈ ಪಾಪಿ ಕಾಯಕ್ಕೊಂದು ಸಾಸ್ವೆ ಕಾಳಿನಷ್ಟು ಸುಖವ ಕಾಣಲಿಲ್ಲ ಗುರುವೆ ||2||
ಚಿತ್ತವೃತ್ತಿ ಹಿಡಿದು ಜನರ ಹತ್ತಿರ್ಹೋಗಿ ಆಶೆಯಿಂದ
ತೊತ್ತಿನಂತೆ ಕಾದರವರು ಮತ್ತೆ ಕಡೆಗಣ್ಣಿನಿಂದ
ಇತ್ತ ನೋಡರೊಂದುನಿಮುಷದಿ ಮತ್ತೆ ಅಳಲಿ ಬಳಿಲಿ ಬೇಡುವೆ
ಕರ್ತು ಶಂಕರೇಶ ಗುರುವೆ ಹುಯ್ಯಲಿಡುವೆ ರಕ್ಷಿಸೆನ್ನ ||3||

ಕಣಿಯ ಹೇಳ ಬಂದೆ
ಕಣಿಯ ಹೇಳ ಬಂದೆ ನಾನು ತ್ರಿಣಯನಲ್ಲಿದಲ್ಲವೆಂದು
ಬಣಗು ದೈವದ ಭಜನೆಗಾಗಿ ಒಣಗಬೇಡವೊ ||ಪಲ್ಲ||
ಎಕ್ಕ ನಾರಿಯರು ಕಾಟ ಜಕ್ಕಿಯರು ಕನ್ಯೆಯರು
ಸೊಕ್ಕಿ ಹೋದ ಸೊಂಟ ಮುರುಕ ಭೈರವದೇವರು
ಮಿಕ್ಕ ಮೈಲಾರ ದುರ್ಗಿ ಚಾಮುಂಡಿ ಮೊದಲಾದ
ಚುಕ್ಕಿದೈವದ ಭಜನೆಗಾಗಿ ಸಿಕ್ಕಬೇಡವೊ ||1||
ತೂಳ ಢಾಳ ಮಾತ ಕೇಳಿ ಕೀಳುದೈವದ ಭಜನೆಗಾಗಿ
ಹಾಳುಮಾಡಬೇಡ ಕೈಯ ತಾರ ಹಣಗಳನ್ನು
ಬಾಳುತಿಪ್ಪ ಕೋಳಿ ಕುರಿಯ ಬೇಳು ಬೇಳನೆ ಕೊರಳ ಕೊಯ್ದು
ಬೀಳಬೇಡವೊ ನಿನಗೆ ನರಕ ತಪ್ಪದು ||2||
ಮುತ್ತಳ್ವ ಮಾತನೆ ಕೇಳ್ನಗುತ್ತಿ ಯಾಕೆ ಜಾಣೆಯೆಂದು
ಬತ್ತಲೆ ಬರುವ ಸಿರಿಯನಿತ್ತ ನೋಡಿರೊ
ಹೆತ್ತನಾಯಿ ಪರಿಯಂತೊತ್ತಿ ಕಚ್ಚಿ ಬೊಗಳುವಂತೆ
ದತ್ತ ಮನುಜರ ಹಿಂದೆ ಹಸ್ತ ಬೇಡವೊ ||3||
ಹಳ್ಳದ ಜೇಬರು ಮಾರ ಕುಳ್ಳರೆಲ್ಲ ಕೂಡಿಕೊಂಡು
ಬೆಳ್ಳಗಾದ ಕೆರೆಯೊಳು ನೀರು ತಡೆಯಲಿ
ಗುಳ್ಳೆ ಗೊರಸು ಗುಡಿಸಿ ತಿಂದು ಕಳ್ಳಕೊಡನ ಬರಿದು ಮಾಡಿ
ಸುಳ್ಳುದೈವದ ಭಜನೆಯೆಲ್ಲ ಬೇಡವೊ ||4||
ಹೊನ್ನು ಹಣವು ಹೆಚ್ಚಿ ಮನೆಯ ಚಿನ್ನ ಘಟ್ಟಿ ಘನವು ಎಂದು
ಕನ್ನೆಯರ ತಾಳಿಯ ಮುನ್ನೂರ ಮಾಡಿಸಿ
ತನ್ನ ಮನೆಯ ದೇವಿಯುನ್ನತ ವರವ ಕೊಟ್ಟಳೆಂದು
ತನ್ನ ಲಿಂಗವಾದಿಯಾಗಿ ಬಂದು ಸೇರದೆಂಬ ||5||
ಆಷಾಢದ ಗಾಳಿ ಬೀಸಿ ದವಸ ತಗ್ಗಿ ಮಾರುವಾಗ
ಆಸರಕ್ಕೆ ತಾಳಿಯ ಕಾಸಿ ಕರಗಿಸಿ
ರಾಸೆಂದು ಬೀಸಿ ಹೊಯ್ದು ತ್ರಾಸಿನಲ್ಲಿ ತೂಗುವಾಗ
ದೇಶದೊಳಗೆ ನಿಮ್ಮ ದೈವ ಹುಸಿಯವಾದವು ||6||
ಅಡಿಯ ನೋಡಿ ವಿಷ್ಣು ಕಾಣ ಮುಡಿಯ ನೋಡಿ ಬ್ರಹ್ಮ ಕಾಣ
ನುಡಿವ ನಾಲ್ಕುವೇದ ಪುರಾಣ ಕಾಣವು
ಜಡ ದೈವದ ಗಂಡ ಎನ್ನೊಡೆಯ ಶಂಕರೇಶ್ವರನೆ
ಪೊಡವಿಯೊಳಗೆ ನಿಮ್ಮ ಸಾರ ಬಂದೆನು ||7||

ಕಾಡಲಾರೆನೊ ನರರ
ಕಾಡಲಾರೆನೊ ನರರ ಬೇಡಲಾರೆನೊ ಪರರ
ಕಾಡಿ ಬೇಡಿ ಕೊರಗಲಾರೆ ಶಿವನೆ ||ಪಲ್ಲ||
ಸತ್ತಿಗೆಯ ಪಿಡಿದು ಮತ್ತೆ ಜೀವಿಸಬಹುದು
ಹೊತ್ತು ಕಾಲ್ವೆಗೆ ನೀರ ಡಸಬಹುದು
ಭøತ್ಯನಾಗಿಯೆ ಬಾಗಿಲನು ಕಾಯ್ದಿರಬಹುದು
ಮರ್ತ್ಯದೊಳು ಬೇಡುವದಕೆ ಆರೆ ಶಿವನೆ ||1||
ತುರಗವನೆ ತಂದಿರಿಸಿ ಬಂದು ಪಾವಡ ಪಿಡಿದು
ಅರರೆಮಜರೆದುಕೃವಾಲಿ
ಪರಿಚಾರಕನಾಗಿ ಕರವ ಮುಗಿದಿರಬಹುದು
ಧರೆಯೊಳಗೆ ಬೇಡುವದಕಾರೆನೊ ಶಿವನೆ ||2||
ಪಡುಗವನೆ ತಂದಿರಿಸಿ ಒಡಲ ಹೊರೆದಿರಬಹುದು
ಒಡೆಯನುಟ್ಟ ಚಲ್ಲಣವ ತೊಳೆಯಲುಬಹುದು
ಹಡಪ ಕಾಳಾಂಜಿಯನೆ ಕಡೆಗೆ ಪಿಡಿದಿರಬಹುದು
ಪೊಡವಿಯೊಳು ಬೇಡುವುದಕಾರೆನೊ ಶಿವನೆ ||3||
ಬೆಸದ ಬೋವುಗನಾಗಿ ಅಸುವ ಹೊರೆದಿರಬಹುದು
ಬೆಸಸಿದರೆ ಸಗ್ಗಳೆಯ ಪಿಡಿಯಬಹುದು
ತಸ್ಕರವನೆ ತೆಗೆದು ತೃಷೆಯ ಹಿಂಗಿಸಬಹುದು
ವಸುಧೆಯೊಳು ಬೇಡುವುದಕಾರೆನೊ ಶಿವನೆ ||4||
ನಿಮ್ಮ ದಾಸನು ಆಗಿ ಅನ್ಯರಿಗೆ ಕೈಯೆತ್ತಿ
ಚುನ್ನನಾದೆನು ಸ್ವಾಮಿ ಎನ್ನ ಗುರುವೆ
ಉನ್ನತಮತಿಯಿತ್ತು ನಿಮ್ಮಂತೆ ಮಾಡಯ್ಯ
ಚೆನ್ನ ಚಿನ್ಮಯನೆ ಶಂಕರಲಿಂಗವೆ ||5||

ಕಾಣಬಾರದಂಥ ಲಿಂಗವ
ಕಾಣಬಾರದಂಥ ಲಿಂಗವ ನಾ ಕಂಡೆ ಎನ್ನ
ಪ್ರಾಣಕಾಂತ ಗುರುವಿನಿಂದಲಿ ||ಪಲ್ಲ||
ಕಡಲ ನಡುವೆ ಆಳುತೇಳುತ ಅಲ್ಲೊಬ್ಬ ಚೋರ
ಹಡಗನೇರಿ ಹೋಗುತಿರಲು
ಹಡಗು ಮುರಿದು ಮುಳುಗುತಿರಲು ಶ್ರೀಗುರು ಕೈಯ
ಹಿಡಿದು ದಾಂಟಿಸುವುದ ಕಂಡೆನು ||1||
ಮೂಲಸ್ಥಾನದ ದೇಗುಲದೊಳೇಳೆಸಳ ಮಧ್ಯದಲ್ಲಿ
ಲೀಲೆಯಿಂದಲಿಪ್ಪ ಘನವು
ಮೇಲೆ ನಾಭಿಮಂಡಲದೊಳುದಯವಾದ
ಶೂಲಪಾಣಿಯನ್ನು ಕಂಡೆನು ||2||
ಅಂಬರದ ಮಧ್ಯದೊಳಗೆ ಕುಂಭದೊಳು
ತುಂಬಿ ಸೂಸುತಿರ್ಪ ಗಂಗೆಯ
ಮುಂಬರಿದು ತಂದು ಚಿಲ್ಲಿಂಗಕೆ ಮಜ್ಜನಗರೆವ
ಸಂಭ್ರಮವ ಕಂಡೆ ಸಂತತ ||3||
ಆಗಿ ಹೋಗುತಿರ್ಪ ತೋಟದಿ ಬೆಳೆವದೊಂದು
ನಾಗಸಂಪಿಗೆಯ ಮರನು
ಬಾಗಿ ಬಂದು ಕೊಡುವ ಪುಷ್ಪವ ಲಿಂಗಕೀವ
ಭೋಗವನ್ನು ಕಂಡೆ ಸಂತತ ||4||
ಅಂಧಕಾರಪಟ್ಟಣದಲ್ಲಿ ಕಿಚ್ಚು ಹತ್ತಿ
ಬೆಂದಿತು ಬ್ರಹ್ಮಾಂಡವೆಲ್ಲವು
ಒಂದೆ ಬೆಳಕಿನಲ್ಲಿ ನಿಂದು ಉರಿವುದ ನಾ
ಕಂಡೆ ಎನ್ನ ತಂದೆ ಶಂಕರೇಶಲಿಂಗವ ||5||

ಕಾಯ ನೆಲೆಯೆಂದು
ಕಾಯ ನೆಲೆಯೆಂದು ನೆಚ್ಚದಿರೆಚ್ಚರಿಕೆ ಸಚ್ಚಿ
ದಾನಂದ ಸ್ವರೂಪನೊಳಗೆ ಮನವೆಚ್ಚರಿಕೆ ||ಪಲ್ಲ||
ಹಿಂದೆಯನಂತ ಕಾಲಕೆ ನರಜನ್ಮವು ಬಂದಿತೆಚ್ಚರಿಕೆ
ಮುಂದೆ ಶ್ರೀಗುರು ಕಾರುಣ್ಯವ ಪಡೆಯಬೇಕೆಂಬುದಿದೆಚ್ಚರಿಕೆ
ಸಂದಣಿಸುವ ಸಕಲೈಶ್ವರಿಯದೊಳು ಮನ ಬಂಧಿಸದಿರೆಚ್ಚರಿಕೆ
ಬಂದಡಸಿದ ಬಡತನದೊಳು ಧೈರ್ಯವ ಗುಂದದಿರೆಚ್ಚರಿಕೆ ||1||
ಗುರು ಹಿರಿಯರ ಕಾಣುತಲೆದ್ದು ವಂದಿಸು ಜರಿಯದಿರೆಚ್ಚರಿಕೆ
ಪರವಶ ಭಕ್ತಿ ವಿನಯದೊಳವರನುಪಚರಿಸುವುದೆಚ್ಚರಿಕೆ
ಇರವಿದು ಪರವಿದಸ್ಥಿರವೆಂಬುದರಿವುದಿದೆಚ್ಚರಿಕೆ
ಪರಸತಿ ಪರಧನ ನಿಂದಲ್ಲ ಭವಿಯೊಳು ನೆರೆಯದಿರೆಚ್ಚರಿಕೆ ||2||
ಖುಲ್ಲ ಕುಹಕ ಭಕ್ತಿಹೀನರಿದ್ದೆಡೆಯಲ್ಲಿ ನಿಲ್ಲದಿರೆಚ್ಚರಿಕೆ
ಸಲ್ಲದು ಒಡನಾಟ ಶಿವಶರಣಮತವಲ್ಲದರೊಳೆಚ್ಚರಿಕೆ
ಎಲ್ಲ ಪ್ರಾಣಿಗಳನು ತನ್ನಂತೆ ಕಾಂಬುದು ಕೊಲ್ಲದಿರೆಚ್ಚರಿಕೆ
ಬಲ್ಲಮಹಾತ್ಮ ಸದೈವರೊಳಗೆ ಶಿವನಲ್ಲಿಹನೆಚ್ಚರಿಕೆ ||3||
ವನಿತೆ ವಾಹನ ವಸ್ತ್ರಧನ ಧಾನ್ಯ ಸಂಪತ್ತು ಕನಸೆಂಬುದೆಚ್ಚರಿಕೆ
ವಿನಯವು ವಿತರಣ ಪರಹಿತ ದಯ ಧರ್ಮ ಕನಸೆಂಬುದೆಚ್ಚರಿಕೆ
ಜಿನುಗುವ ಸಂಸಾರದೋಷಪಾಶಕೆ ಸಿಲ್ಕಿ ಕನಲದಿರೆಚ್ಚರಿಕೆ
ಅನುದಿನ ಶಿವಶರಣರ ಸಂಗವತಿ ಸುಖದನುಭಾವವೆಚ್ಚರಿಕೆ ||4||
ಕಣ್ಣಿವಿಡಿದು ಬಂದ ಕಾಲನ ಜಯಿಸುವ ಪುಣ್ಯವಿದೆಚ್ಚರಿಕೆ
ಇನ್ನು ಹಿಂದಕೆ ಬಂದ ಬಟ್ಟೆಗೆ ತಿರುಗದ ನಿರ್ಣಯವೆಚ್ಚರಿಕೆ
ಉನ್ನತಮಯ ನಂದಿನಾಥನ ನೆನೆವುದು ಓಂ ನಮೋ ಎಚ್ಚರಿಕೆ
ಸನ್ನುತ ಗುರು ಶಂಕರೇಶನ ನೆನೆವುದು ಪುಣ್ಯವಿದೆಚ್ಚರಿಕೆ ||5||

ಕಾಯವಿರಲಿ
ಕಾಯವಿರಲಿರ ದೆ ಮಾಣಲಿ
ಮಾಯಮೋಹರಹಿತ ನಿಮ್ಮ
ಮರೆವ ದಿಲ್ಲವಯ್ಯ ಗುರುವೇ ||ಪಲ್ಲ||
ಸೂಸಲನ್ನುತಳಿದು ಮುಂದೆ
ಪಸರಿ ಸದನು ಜಂಪನೊಡ್ಡಿ
ಮೂಷಕನ್ನ ಕುಲವ ಕೊಲುವ ಶಬರನಂದದಿ
ಈ ಶರೀರವಾಸೆಯೆಂಬ
ಮೋಹನೊಡ್ಡಿ
ಗಾಸಿ ಮಾಡಿ ಕೊಲುವುದಿದುವೆ ಉಚಿತವಲ್ಲವಯ್ಯ ಗುರುವೇ ||1||
ಕಣ್ಣ ಮುಂದೆ ತಂದು ತಂದು
ಹೊನ್ನ ತೋರಿ ಹೆಣ್ಣ ತೋರಿ
ಮಣ್ಣ ತೋರಿ ನೆನೆವ ಮನದ ಮತಿಯ ನೀಗಿಸಿ
ಗನ್ನ ಗದುಕತನವ ಮಾಡಿ
ಎನ್ನ ನಿಚ್ಚ ಲಳಲಿ ಸುವರೆ
ಇನ್ನು ಭವದಿ ಭವದಿ ನಿಮ್ಮ ಬಿಡುವನಲ್ಲವಯ್ಯ ಗುರುವೇ ||2||
ನಿಮ್ಮ ಲೀಲೆಯಿಂದ ಪುಟ್ಟಿ
ನಿಮ್ಮ ಲೀಲೆಯಿಂದ ಬೆಳೆದು
ನಿಮ್ಮ ಲೀಲೆಯಿಂದ ಮುಕ್ತಿ ಪಥವ ಹಾರೈಸಿ
ನಿಮ್ಮ ಚರಣವೆಮ್ಮೊಳಿರಲಿ
ಎಮ್ಮ ಹರಣ ನಿಮ್ಮೊಳಿರಲಿ
ಮನ್ನಿಸಯ್ಯ ಮದನವೈರಿ ತಂದೆ ಶಂಕರರಾಯ ಗುರುವೇ ||3||
ನಿಮ್ಮ ಲೀಲೆಯಿಂದ ಪುಟ್ಟಿ
ನಿಮ್ಮ ಲೀಲೆಯಿಂದ ಬೆಳೆದು
ನಿಮ್ಮ ಲೀಲೆಯಿಂದ ಮುಕ್ತಿಪಥವ ಹಾರೈಸಿ
ನಿಮ್ಮ ಚರಣವೆಮ್ಮೊಳಿರಲಿ
ಎಮ್ಮ ಹರಣ ನಿಮ್ಮೊಳಿರಲಿ
ಮನ್ನಿಸಯ್ಯ ಮದನವೈರಿ ತಂದೆ ಶಂಕರರಾಯ ಗುರುವೇ ||4||

ಗುರುಲಿಂಗಜಂಗಮದೊಳು
ಗುರುಲಿಂಗ ಜಂಗಮದೊಳು ಎರವಿಲ್ಲದ
ಪರಮಭಕ್ತರನು ತೋರು ಶಿವನೆ ||ಪಲ್ಲ||
ತನುವ ಗುರುವಿಗೆ ಮನವನು ಲಿಂಗಕ್ಕೆ
ಸನುಮಾನದಿಂದಲಿತ್ತು ಜಂಗಮಕೆ
ಧನವ ವಂಚಿಸದೆಯಿತ್ತು ನಡೆವಂಥ
ಘನವಿಜ್ಞಾನಿಗಳನು ತೋರು ಶಿವನೆ ||1||
ನೋಡಿ ಕಂಗಳು ದಣಿಯದೆ ಲಿಂಗವನು
ಪಾಡಿ ಜಿಹ್ವೆಯು ದಣಿಯದೆ ಮನಮುಟ್ಟಿ
ಷೋಡಶುಪಚಾರವರಿದು ಅರ್ಚಿಸುವಾ
ರೂಢರನು ಎನಗೆ ತೋರು ಶಿವನೆ ||2||
ಅಂಗಸೋಂಕಿದ ಸುಖವನು ಷಡುಲಿಂಗ
ದಿಂಗಿತವನರಿದರ್ಪಿಸಿ ಪ್ರಸಾದ
ದಿಂಗಡಲೊಳಿಡುವ ನಿಷ್ಠಾಭಕ್ತಿಯ ಬೆ
ಡಂಗನರಿದವರ ತೋರು ಶಿವನೆ ||3||
ಮದಮತ್ಸರಂಗಳಳಿದು ಶಿವಜ್ಞಾನ
ಹøದಯದೊಳು ತೊಳಗಿ ಬೆಳಗಿ ಲಿಂಗವನು
ಪುದಿದು ಪ್ರೀತಿಯೊಳು ನೋಳ್ವ ಮನಶುದ್ಧ
ಸದು ಭಕ್ತರುಗಳ ತೋರು ಶಿವನೆ ||4||
ಕರಣಗಳ ವಶವಾಗದೆ ಆವಾಗ
ಸ್ಮರಿಸಿ ಪಂಚಾಕ್ಷರಿಯನು ಮನಮುಟ್ಟಿ
ಗುರು ಶಂಕರನ ಪದವನು ಪಡೆದಂಥ
ನಿರಂಜನರ ಎನಗೆ ತೋರು ಶಿವನೆ ||5||

ಗುರುವ ನೆನೆ
ಗುರುವ ನೆನೆ ಗುರುವ ನೆನೆಯಣ್ಣ
ಹಿರಿಯನಹೆ ಗುರುವನಹೆ
ಗುರುವ ನೆನೆವವರೆಲ್ಲ ಕೈಲಾಸಪುರವ ಸಾರಿದರದು ಕಾರಣ ||ಪಲ್ಲ||
ಗುರುವೆ ಜನನಿ ಗುರುವೆ ಜನಕ ಗುರುವೆ ಕರ್ತಾರ
ಗುರುವೆ ಭರ್ತಾರ ಗುರುವೆಯರಿವು
ಗುರುವೆಯಾಚಾರ ಗುರುವೆಯನುಭಾವ
ಗುರುವೆಯಾನಂದ ಗುರುವೆಯಂಜನ
ಗುರುವೆ ನಿರಂಜನವೆಂದು ಸತತಂ
ಗುರುವೆ ನೆನೆವವರೆಲ್ಲ ಜನನ ಮರಣವ ಗೆಲಿದರದು ಕಾರಣ ||1||
ಲೇಸಾಗಿರೆ ನಗುರೋರಧಿಕಂ ನಗುರೋರಧಿಕಂ
ನಗುರೋರಧಿಕಂ ವಿದಿತಂ ವಿದಿತಂ ವಿದಿತಂ ಶಿ
ವಶಾಸನತಃ ಶಿವಶಾಸನತಃ ಶಿವಶಾಸನತಃ
ಎಂದು ಶಿವನೊರೆದನಾಗಿ
ಓಸರಿಸದೆ ಗುರುವೆ ಅಧಿಕವೆಂದು ಸಂತೋಷದೊಳೆಲ್ಲರು
ನೆನದು ನೆನದು ದೋಷರಹಿತರಾಗಿ ಸಾಯುಜ್ಯನಿವಾಸವನಡರಿದರದು ಕಾರಣ ||2||
ಭೃಂಗಕೀಟನ್ಯಾಯವಾಗಿ ಶಿವಗಣಂಗಳೆಲ್ಲರು ಗುರುವ ನೆನದು
ಮಂಗಳಮಯ ಸುಖವ ತಿಳಿದು ನಿ
ರಂಗ ನಿರತಿಶಯವಾ ನಿಜಾನಂದ ತ
ರಂಗಿಣಿಯೊಳು ಮನೆಯ ಮಾಡಿ ಶಂಕರಲಿಂಗನ ಬೆರಸಿದರದು ಕಾರಣ ||3||

ಚೆಂಡನಾಡುವಾನು ಬನ್ನಿರಣ್ಣ
ಚೆಂಡನಾಡುವಾನು ಬನ್ನಿರಣ್ಣ ಚೆಂಡನಾಡುವ ಇಂಥ
ಮಿಂಡಮಕ್ಕಳೆಲ್ಲ ಕೂಡಿ ಒಂದು ಆಟವಾಡುವ ||ಪಲ್ಲ||
ಮಾಯಾಪರಪಂಚುಯೆಂಬ ಕಲ್ಲಹಲ್ಲೆಯಾಡುವ
ಕಾಯವೆಂಬತನು ಸಾರಗೊಲ್ಲಿ ಮಾಡುವ
ಆಯದಿಂದ ಐದು ದುಂದಿ ಆಳ ಹಂಚುವ ಒಂದು
ನ್ಯಾಯದಿಂದ ಚೆಂಡಿನಾಟ ಆಡಿ ನೋಡುವ ||1||
ಮುಕ್ತಿ ಎಂಬೊ ಚೆಂಡ ನಾವು ಮುಟ್ಟಿ ಆಡುವ
ಶಕ್ತಿಯೆಂಬ ಸಾರಗೊಲ್ಲಿ ಮುರಿಯಲಾಡುವ
ಅತ್ತಲವರ ಆರುಮಂದಿ ಕಡೆಗೆಮಾಡುವ
ಲೆಕ್ಕದಿಂದೆ ಏಳುಮಂದಿ ಆಳ ಹಂಚುವ ಒಂದು
ಯುಕ್ತಿಯಿಂದ ಚೆಂಡಿನಾಟ ಆಡಿ ನೋಡುವ ||2||
ಸೊಕ್ಕಿನವರ ಎಂಟುಮಂದಿ ಸೊಲ್ಲಗೆಡಹುವ
ಮಿಕ್ಕಿನವರೊಂಬತ್ತುಮಂದಿ ಕಡೆಗೆ ಮಾಡುವ
ಲೆಕ್ಕದಿಂದೆ ಹತ್ತು ಮಂದಿ ಆಳ ಹಂಚುವ ನಾವು
ತೆಕ್ಕವಿಡಿದು ಶಂಕರಲಿಂಗನ ಕೂಡಿಕೊಂಬುವ ||3||

ಜಡದೈವಗಳ ಬೇಡುವವನಲ್ಲ
ಜಡದೈವಗಳ ಬೇಡುವವನಲ್ಲ ಜಡೆ ಮುಡಿ
ಉಡುಪತಿಧರ ನಿಮ್ಮ ಬೇಡುವೆನಭವ ||ಪಲ್ಲ||
ಇಂದ್ರನ ಬೇಡಲು ಮಾಯಾಮುದ್ರಿತನಾದ
ಚಂದ್ರನ ಬೇಡಲು ಕ್ಷಯರೋಗಿಯು ಮು
ಕುಂದನ ಬೇಡಲು ದಶಭವದೊಳು ಬಂದ
ನಂದಿವಾಹನ ನಿಮ್ಮ ಬೇಡುವೆನಭವ ||1||
ಕಂಜಸಖನ ಬೇಡಲು ಕುಷ್ಟನಾದನು
ಕಂಜೋದ್ಭವನ ಬೇಡಲು ಶಿರಹೋಯಿತು
ಕಂಜಶರನ ಬೇಡಲು ದಗ್ಧನಾದನು
ನಂಜುಗೊರಳ ನಿಮ್ಮ ಬೇಡುವೆನಭವ ||2||
ಅಷ್ಟದಿಕ್ಪಾಲಕರನು ಬೇಡಲು
ಹುಟ್ಟು ಹೊಂದಿನೊಳಗಾಗಿ ಕೆಟ್ಟರು
ಭ್ರಷ್ಟವಾಗುವ ದೈವವ ನಾನು ಒಲ್ಲೆ
ಸೃಷ್ಟಿಗೀಶ್ವರ ನಿಮ್ಮ ಬೇಡುವೆನಭವ ||3||
ಜಿನನ ಮನೆಗೆ ಭೈರವ ಹೋದಂದದಿ
ಉಣಲಿಲ್ಲ ಉಡಲಿಲ್ಲ ಕೊಡಲಿಲ್ಲ ಕೊಳಲಿಲ್ಲವೆರಡು
ಬತ್ತಲೆಯೆಂಬ ತೆರನಂತೆ ಅನುದಪ್ಪಿ
ಬಣಗುದೈವಗಳ ಬೇಡುವವನಲ್ಲ
ಅನಲನೇತ್ರ ನಿಮ್ಮ ಬೇಡುವೆನಭವ ||4||
ಸಾಲೋಕ್ಯಪದವಿ ಬೇಡುವವನಲ್ಲ
ಕಾಲಕಾಲದಿ ಕೆಡುವ ದೈವಗಳ ನಾನೊಲ್ಲೆ
ಹಾಲು ಸಕ್ಕರೆಯೊಳು ಮಧು ಬೆರದಂತೆ ಮುನಿಜನ
ಲೋಲ ಶಂಕರ ನಿಮ್ಮ ಬೇಡುವೆನಭವ ||5||

ಜಪಿಸು ಜಪಿಸು
ಜಪಿಸು ಜಪಿಸು ಪಂಚಾಕ್ಷರಿಯಂ
ವಿಪುಳ ಶಿವಜ್ಞಾನದ ಸಿರಿಯಂ ||ಪಲ್ಲ||
ವೇದಾಗಮಕುಲದಧಿಪತಿಯಂ
ನಾದಬ್ರಹ್ಮಮಾದ ಗತಿಮತಿಯಂ
ಸಾದಾಖ್ಯದ ಸುಖಮುಖ ರತಿಯಂ
ಆದಿಶಿವನ ಪದದುನ್ನತಿಯಂ ||1||
ಅವಿರಳಮಂತ್ರತ್ರಯಾಗ್ರಣಿಯಂ
ಪ್ರವಿಮಳ ತಂತ್ರ ಶಿಖಾಮಣಿಯಂ
ಸುವಿನುತ ಶಿವಮಂತ್ರದ ಕಣಿಯಂ
ಭವ ಭಯ ದುರಿತ ಗಜಸೃಣಿಯಂ ||2||
ಅರಿಷಡುವರ್ಗ ವಿನಾಶನಮಂ
ಪರಮರಹಸ್ಯದ ಶಾಸನಮಂ
ಗುರು ಚರ ಲಿಂಗವಿನಾಶನಮಂ
ಶರಣರ ವದನ ವಿಕಾಸನವಂ ||3||
ಹರಿ ಬೊಮ್ಮರ ಹರಣವ ಕಳೆಯಂ
ಪರಮಾಮೃತಸಾರದ ಮಳೆಯಂ
ವರ ಮುನಿಗಳ ಮೋಕ್ಷದ ಬೆಳೆಯಂ
ಹರಶರಣರ ತಂಪಿನ ತಳೆಯಂ ||4||
ಸುಜನ ನಿಕಾಯ ಮನೋಮುದಮಂ
ರಜ ತಮ ಸತ್ತ್ವಗುಣೌಷಧಮಂ
ನಿಜ ವರ ಗುರುಶಂಕರ ಪದಮಂ
ಭಜಿಸು ತ್ಯಜಿಸು ಭವ ಬಂಧನಮಂ ||5||

ಜರೆವುತಿಹರೊ ಎನ್ನ
ಜರೆವುತಿಹರೊ ಎನ್ನ ಜರೆವುತಿಹರೊ
ನಿರಾಳಸುಖವನರಿಯದ ಭ್ರಾಂತರುಯೆಲ್ಲ ಎನ್ನ ||ಪಲ್ಲ||
ಒಡಲ ಹಡಿಕೆಯ ಕಂಡು ಅಡಿಗಡಿಗೆ ಹೇಸಿ ನಾಂ
ಕೊಡಹಿ ಸಂಸಾರವನು ಜರೆದು ಕಳೆದು
ಮೃಡನ ನೆನಹಿಂದಲಾ ಮೃಡನಾಗಿಯಿಪ್ಪವಳ
ಜಡರು ನುಡಿಯರು ಎನ್ನ ಮರುಳಿಯೆಂದು ||1||
ಎಲುದೊಗಲು ಸಂಧಿಸಿದ ಹಲವು ಸಂಧಿನ ಜಂತ್ರ
ಮಲಮೂತ್ರ ಭಾಜನದ ಗುದಿಲ ಬಿಸುಟು
ಒಳಗಿರ್ದ ಆತ್ಮನನು ನಾನೆಂದು ತಿಳಿತಿಳಿದು
ಕೊಳಕವೇಷದ ಬಂಧವನು ಹೊದ್ದದನುಭವಿಯ ||2||
ಅಡವಿಯೊಳಗಣ ಸ್ಥಾಣು ಚೋರನೆಂಬಾ ಭೀತಿ
ಹಿಡಿವ ಬಿಲ್ಲಂಬಾಗಿ ಮೆರೆವ ತೆರದಿ
ಒಡಲಿಂಗೆ ಸಾಕ್ಷಿಯೆ ಪರಮಾತ್ಮನೆಂದರಿದು
ಒಡಲ ಬಿಟ್ಟಾಧಾರವಸ್ತು ನಾನಾದವಳ ||3||
ಹುಸಿಯ ಸಂತೆಯ ಹೊಕ್ಕು ನಾನು ನನ್ನವರೆಂಬ
ಪಸರದಾಸೆಗೆ ಸಿಕ್ಕಿ ನಿಜವ ಮರೆದು
ಅಸಮ ಗುರುಬೋಧೆಯಂದೆರಡು ಸಂತೆಯ ಬಿಟ್ಟು
ಎಸೆವ ಪೂರ್ಣಾನಂದಲಹರಿ ರಸವರಿದಳ ||4||
ದೇಹ ಪುಸಿಗಂಡ ಸಂಬಂಧಾದಿ ತನ್ನವರ
ಮೋಹವೆಂಬುದ ಗುರುವಿನಿಂದ ತಿಳಿದು
ದೇಹ ಪ್ರಾಣೇಶ ಗುರುಬೋಧೆಯಿಂ ನಿಜವರಿದು
ದೇಹ ಪ್ರಾಣಾದಿಗಳ ಹುಸಿಯೆಂದು ಜರೆದವಳ ||5||
ತತ್ವಮಸಿ ಎನ್ನದರ ಮಾತೆಲ್ಲ ಛೀ ಮಾಡಿ
ವ್ಯರ್ಥದ ನಡೆಯೈಸೆಯೆನಗುಬ್ಬಸ
ತತ್ವ ಸ್ವಯಂಜ್ಯೋತಿ ಪರಮಾತ್ಮನೆಂದರಿದು
ಕುಚ್ಚಿತದ ತನುಮನವ ಮೃಷೆಯಿಂದು ಜರೆದವಳಾ ||6||
ಜಾಗ್ರ ನಿದ್ರೆಯ ಮಧ್ಯದರುಹಿನಂತೆ ಮುನ್ನ ನಿಜ
ಮೂರಗರುದೂಟಿದಂತುಸುರಲಿಲ್ಲ
ಯೋಗ ಉಪ್ಪಿನಕಲ್ಲು ನೀರೊಳಗೆ ಬೆರದಂತೆ
ಶ್ರೀಗುರುವಿನೊಳ್ಮೂಡೆ ತಾನು ತಾನಾದವಳ ||7||
ಈ ತತ್ವಜ್ಞಾನಕ್ಕೆ ಬಹಳ ಕಂಟಕವುಂಟು
ನೀತಿ ಲೋಕದ ಮಾತಿನೊಳಗಾಗಿರೆ
ಭೀತರಾಗಿಹರೈಸೆವುಯ್ಯತುತ್ತಿನ ಹಾಂಗೆ
ಯಾತರೊಳಗೇನು ಪುರುಷಾರ್ಥವಿಲ್ಲ ||8||
ನಡೆವಾಗ ನುಡಿವಾಗ ಹಿಡಿವಾಗ ಬಿಡುವಾಗ
ಒಡಲಿಂದ್ರಿಯಂಗಳಾಟವ ಪೊರ್ದದೆ
ಬೆಡಗಿನಾತ್ಮನ ಕೂಡಿ ವೃತ್ತಿಲಯವಾಗಿರ್ದ
ಕೊಡನ ಹೊತ್ತಾಡುತಿಹ ಚಿತ್ತದಂತಿಪ್ಪವಳ ||9||
ಒಳಗಿನನುಭವದಿಂದ ಹೊರಗಿನಾಟವ ಮರೆದು
ಎಳೆನಿದ್ರೆಯಂತೆ ಇಂದ್ರಿಯಗಳಡಗಲು
ಒಳಗು ಹೊರಗೆನ್ನದೇ ಪೂರ್ಣರಸವೇ ತುಂಬಿ
ಬೆಳಗುತಿಹ ಚಿದ್ವಸ್ತು ನಾನೆಂದು ತಿಳಿದವಳ ||10||
ಸನ್ಮಾತ್ರ ಸುಖ ತುಂಬಿ ತನು ಭಾವವನು ಮರೆದು
ಸನ್ಮೋ ಹವನು ಗುರುವಿನಿಂದ ತಿಳಿದು
ಮುನ್ನುಳ್ಳ ಸುಖ ತುಂಬಿ ಮಧ್ಯದಾಟವ ಮರೆದು
ಚೆನ್ನ ಗುರುಶಂಕರನ ಪದದಲ್ಲಿ ನಿಂದವಳ ||11||

ಜೀವನೊಳು ಶಿವಸೂತ್ರ
ಜೀವನೊಳು ಶಿವಸೂತ್ರವಿಹುದೈಸೆ ಶಿವ ಸರ್ವ
ಜೀವರೊಳಗಿಹನೆಂಬುದೆಲ್ಲ ಸಟೆ ||ಪಲ್ಲ||
ಬೊಂಬೆ ಬೊಂಬೆಗೆ ಜವೆಯ ಹೂಡಿಯಾಡಿಸುತಿರ್ಪ
ಕಂಭಸೂತ್ರಿಕ ಕೆಲದೊಳಿಪ್ಪನೈಸೆ
ಬೊಂಬೆಯೊಳಗಿಹನೆ ಶಶಿಮೌಳಿ ಷಡುದರ್ಶನದ
ಬೆಂಬಳಿಯೊಳಿಹನೆಂಬುದೆಲ್ಲಾ ಸಟೆ ||1||
ರಾಜ್ಯದೊಳು ನೃಪನಾಜ್ಞೆಯಿಹುದೈಸೆ ಆನೃಪತಿ
ರಾಜ್ಯದೊಳಗಿಹನೆ ತನ್ನರಮನೆಯೊಳು
ಪೂಜ್ಯನಾಗಿಪ್ಪಂತೆ ಸಚರಾಚರದೊಳು ಸಾ
ಯುಜ್ಯನಾಗಿಹನೆಂಬುದೆಲ್ಲಾ ಸಟೆ ||2||
ಕುಂಭಜಲದೊಳು ಸೂರ್ಯ ಬಿಂಬಿಸುವುದಲ್ಲದೆ
ಕುಂಭಜಲದೊಳು ದಿನಾಧೀಶನಿಹನೆ
ಅಂಬರದೊಳಿಪ್ಪಂತೆ ಸಚರಾಚರಂಗಳೊಳು
ಶಂಭುಯಿಹನೆಂಬ ಮಾತೆಲ್ಲಾ ಸಟೆ ||3||
ಮೊರಡಿ ಮೊರಡಿಯೊಳು ಮಾಣಿಕವಹುದೆ ಗಜಗಜದ
ಶಿರದೊಳಿಹುದೆ ಕಟ್ಟಾಣಿಮುತ್ತು
ಗುರುಲಿಂಗಜಂಗಮದೊಳಿಪ್ಪಂತೆ ಶಿವ ಸರ್ವ
ನರರೊಳಿಹನೆಂಬುದೆಲ್ಲಾ ಸಟೆ ||4||
ಹೊನ್ನು ಹಣಗಳ ಟಂಕಸಾಲೆಯೊಳು ಮುಟ್ಟುತಿಹ
ಬಿನ್ನಾಣಿ ಹೊನ್ನು ಹಣದೊಳಗಿಪ್ಪನೆ
ಪನ್ನಗಾಧರ ಕಲ್ಪಿಸಿದನು ಶಿವ ಸರ್ವ ಚೈ
ತನ್ಯದೊಳಗಿಹನೆಂಬುದೆಲ್ಲಾ ಸಟೆ ||5||
ಈ ಸಕಲ ನಿಃಕಲಕೆ ಸಾಕ್ಷಿ ತಾನಾಗಿಪ್ಪ
ನಾ ಸಕಲ ರೂಪು ನಿರೂಪಿನೊಳಿಪ್ಪನೆ
ಈಶ ನಿಜಭಕ್ತರೊಳಗಿಪ್ಪಂತೆ ಶಿವ ಸರ್ವ
ವೇಷದೊಳಿಹನೆಂಬ ಮಾತೆಲ್ಲಾ ಸಟೆ ||6||
ಮೀಸಲ ಮಹಾ ವೀರಶೈವ ದೀಕ್ಷೆಯೊಳು ಗುರು
ವಾಸವಾಗಿರ್ಪಂತೆ ತಾಪಹತರ
ವಾಸನಾ ವಿಗ್ರಹದೊಳೆಮ್ಮ ನಿಜ ಗುರುಶಂಕ
ರೇಶನಿಹನೆಂಬ ಮಾತೆಲ್ಲಾ ಸಟೆ ||7||

ತೋರ ಕರಸ್ಥಲದಿ ದೇವನ
ತೋರ ಕರಸ್ಥಲದಿ ದೇವನ
ತೋರ ಕರಸ್ಥಲದಿ ಗೋಪತಿಯ ಗೋಪ್ರದನ
ತೋರ ಕರಸ್ಥಲದಿ ಲಿಂಗವ ತೋರ ಕರಸ್ಥಲದಿ
ತೋರ ಕರಸ್ಥಲದಿ ಬಸವ ತೋರ ಕರಸ್ಥಲದಿ ||ಪಲ್ಲ||
ಬಾಲಿ ಕೈ ಪಾಲುಂಡ
ಮ್ಯಾಲಧ್ಯಾತ್ಮ ಕರಂಡ
ಕಾಲ ಕರ್ಮನ ಗಂಡ
ವ್ಯಾಳ ಕರ್ಣಕುಂಡಲ ದೇವನ
ತೋರ ಕರಸ್ಥಲದಿ ||1||
ಭಕ್ತರ ಭಕ್ತಿಗೊಲಿವ
ಸತ್ಯರ ಹೃದಯದಿ ನಿಲುವ
ಹೆತ್ತಮ್ಮವ್ವೆಗೆ ನಲಿವ
ಮಿಥ್ಯದ ಮಾಯೆಯ ಗೆಲಿದವನ
ತೋರ ಕರಸ್ಥಲದಿ ||2||
ಸೌಂದರಗೊಲಿದು ಕೊಟ್ಟ
ಕಂದರ್ಪನನು ಸುಟ್ಟು
ಚಂದದ ಬೆಳ್ಳಿಬೆಟ್ಟ
ಚಂದ್ರನ ಜೆಡೆಯೊಳಗಿಟ್ಟ ದೇವನ
ತೋರ ಕರಸ್ಥಲದಿ ||3||
ಸಿಂಧುಬಲ್ಲಾಳರಾಯನ ನೋಡಿ
ಸಲ್ಲಲಿತಾಂಗಿಯ ಬೇಡೆ
ಸಲ್ಲಲೆಂದು ನೀಡೆ
ಚೆಲ್ವಶಿಶುವಾಗಾಡಿದ ದೇವನ
ತೋರ ಕರಸ್ಥಲದಿ ||4||
ವಿರೂಪಾಕ್ಷ ಸ್ಥಲದಿಂದ
ಕರಕಮಲಕ್ಕೆ ಬಂದ
ಗುರುಶಂಕರ ಕೇಳೆಂದ
ಪುರದೊಳು ಕೋಟಿ ಬಸವನೆಂದ
ತೋರ ಕರಸ್ಥಲದಿ ||5||

ಧರ್ಮವೆ ಲಾಲಿಸುವದು
ಧರ್ಮವೆ ಲಾಲಿಸುವದು ಧರ್ಮವೆ ಪಾಲಿಸುವದು
ಧರ್ಮವೆ ನಿಲಿಸುವದು ನಿರ್ಮಳಪದದೊಳು ||ಪಲ್ಲ||
ಧರ್ಮವೆ ಸದ್ಭಕ್ತಿ ಧರ್ಮವೆ ವರಜ್ಞಾನ
ಧರ್ಮವೆ ನಿಧಿ ನಿಧಾನ
ಧರ್ಮವೆ ಸಕಲ ಭೋಗ ಧರ್ಮವೆ ಸಕಲ ಯೋಗ
ಧರ್ಮವೆ ಆಯುಷ್ಯದಿಕ್ಕೆ
ಧರ್ಮವೆ ಭವಿಷ್ಯ ರಕ್ಷೆ ಧರ್ಮವ ಮಾಡುವ ಠಾವಿಗೆ
ಕರ್ಮ ಹೊದ್ದಲಮ್ಮವು ||1||
ಧರ್ಮದಿಂದ ಸಿರಿಯಕ್ಕು ಧರ್ಮದಿಂದ ಸಂಪದಮಕ್ಕು
ಧಮ್ರ್ಠದಿಂದ ಮಳೆ ಬೆಳೆ ಧಾನ್ಯದೊದವಕ್ಕು
ಧರ್ಮದಿಂದ ಭಕ್ತಿ ಯುಕ್ತಿ ಮುಕ್ತಿ ಶಕ್ತಿ ಫಲವಕ್ಕು
ಧರ್ಮವುಳ್ಳಾತನು ಶಿವಸಂಬಂಧವೆಂದರಿವುದು ||2||
ಸೋದರ ಸದೃಷ್ಟಮುಂ ಹಾದಿ ಸಂಬಳವೆ ಧರ್ಮ
ಮೂದೇವರ ಮುಖದ ಪುಣ್ಯ ದಯ ಧರ್ಮ ವೇ
ದಾಂತಮಾರ್ಗದ ಆದಿಬೀಜವಾಗಿ ಧರೆಗೆ
ಬೋಧೆಯನರಿವುದುಮಾದಿಪೂಜ್ಯನೆನಿಪುದು ||3||
ಅಂದಳ ಸತ್ತಿಗೆಯಾಗಿ ಮುಂದೆ ನಡೆ ಸೋಹೋಯೆಂಬ
ಸಂದಣಿಯ ಸಡಗರದಿಂದ ಕೊಂಡೊಯ್ವ
ಬಂಧುರದ ಭಕ್ತಿ ಯುಕ್ತಿ ಮಂದಿರವ ಕಾಣಿಸುವದು
ಎಂದೆಂದಿಗೆ ಧರ್ಮ ತಾಯಿ ತಂದೆಯಂದರಿವುದು ||4||
ಎಳ್ಳನಿತು ದಯ ಧರ್ಮವುಳ್ಳವರಿದ್ದೂರು ನಾಡು
ಪಲ್ಲವಿಸಿ ನಾನಾ ಧಾನ್ಯ ಬೆಳೆವವು
ಸಲ್ಲಲಿತ ಶಂಕರನ ಮೆಲ್ಲಡಿಗೆರಗುವ ಜನರು
ನಿಲ್ಲದೆ ಧರ್ಮವ ಮಾಡಿ ಎಲ್ಲವ ಬಲ್ಲವನು ||5||

ನಚ್ಚದಿರು ಕಾಯವನು
ನಚ್ಚದಿರು ಕಾಯವನು ವೆಚ್ಚವಾಗದ ಮುನ್ನ
ನಿಚ್ಚ ಭವಹರನ ಪೂಜೆಯ ಮಾಡಿರೋ ||ಪಲ್ಲ||
ಕಸ ಮಲದ ಕಾಯವಿದು ಅಸನವೆಯಾಧಾರ
ಮಸಣದಲಿ ಮನೆ ತನಗೆ ಸಹವಪ್ಪುದು
ಬಸವಳಿವುದೀ ಕಾಯ ಬಯಲಭ್ರಮೆ ನಿಜವಲ್ಲ
ಬಿಸಿಗಣ್ಣ ಶಿವನ ಪೂಜೆಯ ಮಾಡಿರೋ ||1||
ಸಿಡಿಲೊಡ್ಡಿ ಎರಗಿದಡೆ ಕೊಡೆ ಕಾಯಬಲ್ಲುದೆ
ಮೃಡನೊಲುಮೆ ತಪ್ಪಿದರೆ ಕೊಡುವರುಂಟೆ
ಬಿಡದೆ ಕಾಲನ ಭಟರು ಎಳೆದುಕೊಂಡೊಯಿವಾಗ
ತಡೆದುಕೊಂಬವರುಂಟೆ ಎಲೆ ಮಾನವ ||2||
ತೊಗಲಬೊಂಬೆಯ ಕಾಯ ನೆಗೆನೆಗೆದು ಕುಣಿಕುಣಿದು
ಜಗವೆಲ್ಲ ತನಗೆ ಬೇಕೆಂದೆಂಬುದು
ಹಗೆ ತನ್ನ ಕೊಂದವರ ಹುಗಿದು ಮಣ್ಣಲ್ಲಿ ತುಂಬಿ
ಹಗೆಯವನ ಕೂಡೇನು ನುಡಿ ಮಾನವ ||3||
ಕುಲವು ಕುಲವೆಂಬಿರಿ ಕುಲ ಛಲಕೆ ಹೋರುವಿರಿ
ಕುಲದಲ್ಲಧಿಕರಾರು ಎಲೆ ಮಾನವ
ಹೊಲೆ ಮಾಂಸವೆರಸಿರ್ಪ ತಾಯಗರ್ಭದಿ ಜನಿಸಿ
ಕುಲಕೆ ಹೋರುವ ಖೂಳರೆಲೆ ಮಾನವ ||4||
ಕೆಲವು ದಿನದಲಿ ಪಕ್ಷಿ ಫಲವನುಂಡೆನುಯೆಂದು
ಹಲವು ಕೊಂಬೆಗೆ ಹಾರಿ ಬಳಲುವಂತೆ
ಹೊಲೆದೈವಕೆರಗುವ ಮನುಜರ ನಾನೇನೆಂಬೆ
ಕುಲವಿಲ್ಲದವನ ಪೂಜೆಯ ಮಾಡಿರೊ ||5||
ಕಾಯವಿದು ಸ್ಥಿರವಲ್ಲ ಮಾಯೆ ಬಿತ್ತಿದ ಬೆಳೆಯು
ಕಾಯಿ ಹಣ್ಣಾಗಿ ತಾನುರುಳುವಂತೆ
ಸಾಯದವರಾರಿನ್ನು ಸಕಲಜೀವಂಗಳೊಳು
ಕಾಯವೆರವಿನ ಸೊಮ್ಮು ಎಲೆ ಮಾನವ ||6||
ಡಂಬಕದ ಕಾಯವಿದು ಕೊಂಬದಿದು ಕೊಡುವದಿದು
ತುಂಬಿ ಕೆಡುತಿಹುದು ತನ್ನ ದಿನವ ಕಳೆದು
ಬೆಂಬಿಡದೆ ಪ್ರಾಣವನು ಕೊಂಬವರು ಬರುತಹರೆ
ಶಂಭು ಶಂಕರನ ಪೂಜೆಯ ಮಾಡಿರೊ ||7||

ನಂಬದಿರು ನಾರಿಯರ
ನಂಬದಿರು ನಾರಿಯರ ಮನವನೆಲ್ಲರ ನೆಚ್ಚಿ
ಶಂಭು ಶಂಕರನ ನೆನೆಯೊ ಮನುಜ ||ಪಲ್ಲ||
ಒಬ್ಬನರಸಿಯೊಳಾಡಿ ಒಡಗೂಡುತಿಹಳು ಮ
ತ್ತೊಬ್ಬನೊಳು ವೈರಿ ಮಾತಾಡುತಿಹಳು
ಒಬ್ಬ ಬಾರದೊಡೆದ್ದು ನಿನ್ನ ಕಾಣದೆ ಮನವು
ಗರ್ಭ ಕರಗಿತೆಂದು ಕಂಬನಿದುಂಬುತ ಮ
ತ್ತೊಬ್ಬನೊಳು ಬೋಳೈಸಿ ಹೋದ ವನಿತೆಯ ಮಾತಿ
ಗುಬ್ಬಿ ಕೊಬ್ಬು ಆಗದಿರು ಮನುಜ ||1||
ಕನಸಿನೊಳೊಬ್ಬ ಪುರುಷನ ಬಿಗಿದಪ್ಪುವಳು
ಮನಸಿನೊಳಗೆ ಮೆಚ್ಚಿ ಮರುಗುವಳೊಬ್ಬಗೆ
ಘನ ಸಾರ ಗಂಧ ಪನ್ನೀರು ಕತ್ತುರಿ ಪುಷ್ಪ
ವಿನಯದಿಂ ತರಿಸಿ ಕಳುಹುವಳೊಬ್ಬಗೆ
ನೆನಹಿನ ನೆನಹದ ಭೇಟಿ ನೆನಸಿಹಳೊ
ಬ್ಬನೊಳು ಮನಸಿಜಹರನ ನೆನೆಯೊ ಮನುಜ ||2||
ಅತ್ತೆ ಮಾವನು ಗಂಡನತಿಶಯದ ತಳವಾರ
ತೊತ್ತು ನಾದಿನಿಯು ಮೈದುನಗೆ ಅಂಜಿ
ಉತ್ತುಮದ ಸತಿಯೆಂದೆನಿಸಿಕೊಂಬಳು ಹೆಣ್ಣು
ಚಿತ್ತವತ್ತಿತ್ತ ಹರಿವುತ್ತ ಹಬ್ಬುತ
ಹೊತ್ತುರುರೆಯಾಗಿ ಪುರುಷರು ದೊರಕದೆ
ಮೃತ್ಯುಕ ವನಿತೆಯರ ಮಾತ ನಂಬಿ ಕೆಡದಿರಿ
ನಿತ್ಯ ಶಂಕರನ ನೆನೆಯೊ ಮನುಜ ||3||

ನಂಬು ಜಂಗಮದ ಪಾದ
ನಂಬು ಜಂಗಮದ ಪಾದವನು ಸಲೆ ಮನ ಮುಟ್ಟಿ
ನಂಬಿದಡೆ ನಿಲಿಸಬಹುದಾವುದನು ಬಿಡದೆ ||ಪಲ್ಲ||
ಬಸವದಂಡಾಧೀಶ ಜಂಗಮವ ಕೊಂಡಾಡಿ
ಅಸಮಲೋಚನನ ದೇಹದೊಳಗಾದನು
ಒಸೆದು ಜಂಗಮವನರ್ಚಿಸಿ ಮೊರನ ವೆಮ್ಮಯ್ಯ
ರಸಿಕ ಪಶುಪತಿಯ ನಗರಿಗೆ ಹೋದನು ||1||
ಇಳೆಯಾಂಡಗುಡಿಮಾರಿ ಜಂಗಮನ ಬಲಗೊಂಡು
ಒಲಿದು ಕೈಲಾಸಕ್ಕೆ ತಾ ನಡದನು
ನುಲಿಯ ಚಂದಯ್ಯ ಜಂಗಮದಶೇಷವನುಂಡು
ಅಲೆವ ಬಂಧನದ ಲಿಖಿತವ ತೊಡದನು ||2||
ಹಾದರದಬೊಮ್ಮಯ್ಯನತಿಭಯದಿ ಜಂಗಮಾ
ರಾಧನೆಯಮಾಡಿ ಮುಕ್ತಿಯನಡರಿದ
ಕಾದಿ ತಂದೊಡೆಯರಿಗೆ ಉಣಲಿಕ್ಕಿ ಜಾಣನೇ
ಣಾದಿನಾಥಯ್ಯ ಲಿಂಗವ ತೋರಿದ ||3||
ಮೋಳಿಗೆಯ ಮಾರಯ್ಯ ಜಂಗಮದ ಮರೆಹೊಕ್ಕು
ಕಾಲ ಕಾಮರ ಭಯವನಪಹರಿಸಿದ
ಬಾಲೆ ಚಂಗಳೆಯ ಸಲೆ ಜಂಗಮಕೆ ಶರಣೆಂದು
ಸಾಲೋಕ್ಯ ಸಾಮೀಪ್ಯದೊಳು ಬೆರೆದಳು ||4||
ಆದಿಯ ಪುರಾತರೆಲ್ಲರು ಜಂಗಮವ ಭಜಿಸಿ
ಐದಿದರು ಜನನ ಮರಣಗಳ ತ್ಯಜಿಸಿ
ನಾದಮೂರುತಿ ಶಂಕರೇಶ್ವರನ ಕರುಣದಿಂ
ನಾ ಧನ್ಯನಾದೆ ಜಂಗಮವ ಭಜಿಸಿ ||5||

ಪಾಲಯ ಮಾಂ ಶಂಕರ
ಪಾಲಯ ಮಾಂ ಶಂಕರ ಕೃಪಾಕರ
ನೀಲಬಂಧುರಕಂಧರ ಕಾಲದಾರುಣ ಶೂಲಧಾರಣ
ಮೂಲಕಾರಣಲೀಲ ಗಿರಿಜಾಲೋಲ ನತಪರಿ
ಪಾಲ ಪಾವನಶೀಲ ಮನುಮುನಿಜಾಲವರದ ||ಪಲ್ಲ||
ವಾರಣಾಸುರಭಂಜನ ನಿರಂಜನ
ಮಾರಣಮಾಣ ನಾರದನುತಿತೋಷಣ ವಿಭೂಷಣ
ಮಾರುತಾಶನ ವಿಭೂಷಣ ಮೇರುಮಂದಿರ
ತಾರಕುಂದರ ಸಾರಸುಂದರ ಚಾರುಮಂದಿರ
ವೀರಗಣಪರಿವಾರ ವಿಮಲಾಕಾರ ವಿಶ್ವಾಧಾರ ದೇವ ||1||
ಕಾಮಿತ ಫಲದಾಯಕ ವಿನಾಯಕ
ಪ್ರೇಮಿ ಪ್ರಮಥರ ನಾಯಕ
ಸಾಮಗಾನ ಸುಹಿತ ವಿಮೋಹಿತ
ತಾಮಸಗುಣ ರಹಿತ
ವ್ಯೋಮಪುರವರ ಕಾಮಚರನಿ
ರ್ನಾಮ ಮಕರಪುರಭೀಮ ದೇವಲ
ಲಾಮ ಸುರಚಿರಧಾಮ ನಿರುಪಮ
ನಾಮ ಘನನಿಸ್ಸೀಮ ದೇವ ||2||
ಅವಿರಳಾನಂದಸಿಂಧು ಶರಣಬಂಧು
ಕವಿರಾಜಕೋಟಿತೇಜ
ಧವಳಾಂಗ ದುರಿತಭಂಗ ದೇವೋತ್ತುಂಗ
ಶಿವ ಗುರುಶಂಕರಲಿಂಗ ಭುವನರಕ್ಷಕ
ಧವವಿಪಕ್ಷಕ ನಿವಹ ಶಿಕ್ಷಕ ನವವಳಕ್ಷಕ
ದಿವಿಜಾರಿಗೋದ್ಭವ ತರಂಗ ವಿ
ಭವ ಸಮಾಕಲಿತೋತ್ತಮಾಂಗ ||3||

ಪೂರ್ವಾರ್ಜಿತಂಗಳನು
ಪೂರ್ವಾರ್ಜಿತಂಗಳನು ಆರು ಮೀರಲಿಬಹುದು
ಗೀರ್ವಾಣರಾದೊಡಂ ಬಿಡದು ಕಲ್ಪಿತವೆಂದು
ಸರ್ವಭವರೋಗವಮರರ ಕಾಡುವುದು ವಿಧಿಯನಾವ ದೇವರು ಗೆಲ್ವರೊ ||ಪಲ್ಲ||
ಹರ ಬರೆದ ಬರಹವನು ತೊಡೆಯಲಾರ್ಪವರುಂಟೆ
ಹರಿ ಹತ್ತುಭವ ಬಂದ ಸಿರಿ ತಿರುಗಿದಳು ಕೂಡೆ
ಸುರಪತಿಯ ತನುವಿನೊಳು ಸಹಸ್ರಕಂಗಳು ಮೂಡೆ ಶುಕ್ರಂಗೆ ಒಂದು ನಯನ
ತರಣಿ ಶಶಿಗಳಿಗೆ ರಾಹುವಿನ ಹಗೆ ಹಿಂಗದದು
ಉರಗ ಗರುಡಗೆ ಬದ್ಧವೈರ ಮಾಣದು ಕಾಮ
ನುರಿದು ಹೋದನು ವರುಣ ಹೆಳವನಾದನು ವಿಧಿಯನಾವ ದೇವರು ಗೆಲ್ವರೊ ||1||
ಹುಲುಬೇಡನಂಬು ತಾಗದೆ ಕೃಷ್ಣನಂಗಾಲ
ಬಲಿ ಬಂಧನಕೆ ಬಂದ ಫಲ್ಗುಣನು ಹೆಣ್ಣಾದ
ಜಲದೊಳಗೆ ಸಿಲುಕಿದನು ಕೋರಾಂಟಕನು ವ್ಯಾಳಿ ಬೆಳ್ಳಿಯಲಿ ಗುಂಡಾಗನೆ
ಛಲದಂಕ ಬಾಲಿ ತಾನೊಂದೆ ಬಾಣಕೆ ಮಡಿದ
ಶಿಲೆಯಾದಳಹಲ್ಯೆ ಸಹದೇವ ಕರುಗಾಯ್ದ
ನಳ ಧರ್ಮರು ರಾಜ್ಯದಿಂ ಭ್ರಷ್ಟರಾದರು ವಿಧಿಯನಾವ ದೇವರು ಗೆಲ್ವರೊ ||2||
ವಾಣೀಪತಿಯ ಶಿರವ ಚಿವುಟನೇ ಶಿವ ಮುನಿದು
ರೇಣುಕಾದೇವಿಯರಸನ ಕೊರಳ ಕೊಯಿಸಳೇ
ಬಾಣಾಸುರನ ಹಲವು ತೋಳುಗಳ ಖಂಡಿಸನೆ ಚಕ್ರಧರನೊಪ್ಪದಿಂದ
ಕ್ಷೋಣಿಯೊಳು ಕಟ್ಟುಗರುವಾಯಿತು ಪುರುಷಾಮೃಗವು
ಬಾಣಸಿಗನಾದ ಭೀಮನು ವಿರಾಟನ ಮನೆಗೆ
ಪ್ರಾಣ ಹೋಯಿತು ಕೀಚಕನಿಗೆ ಪರಸತಿಗಾಗಿ ವಿಧಿಯನಾವ ದೇವರು ಗೆಲ್ವರೊ ||3||
ದಶರಥನ ತೋಹಿನೊಳು ಅಸುಹೋಯ್ತು ಚಉಂಡಗೆ
ವಿಷದೊಳಳಿದನು ಪರೀಕ್ಷಿತರಾಯ ರಸಿಮಲ್ಲ
ಬಸುಗುತ್ತ ಭಟ್ಟಿ ಸತ್ತನು ಶೂದ್ರಕನ ತಲೆಯು ಕಾಂಚಿಯಾಲದಿ ಮೆರೆಯದೆ
ಕೆಸರೊಳಳ್ದಿದ ರಥವ ವಶ ಮಾಡಿ ಮಾಂಡ್ಯಋಷಿ
ಬಸಿದಸೂಲಕ್ಕೆ ಗುರಿಯಾಗಿ ಬಿದ್ದನು ತನ್ನ
ಸೊಸೆಯೆಂಬವಸೆಗೆ ಕಡಿದಾಡಿ ಸತ್ತನು ಪಕ್ಷಿ ವಿಧಿಯನಾವ ದೇವರು ಗೆಲ್ವರೊ ||4||
ನಾಗಾರಿಯವ್ವೆ ಸವತಿಗೆ ದಾಸಿಯಾಗಳೇ
ಯಾಗವನು ಮಾಡಿ ದಕ್ಷನ ಶಿರವು ಹೋಗದೇ
ಭಾಗೀರಥಿಯು ಮಾನವಂಗೆ ಹೆಂಡತಿಯಾಗಿ ಅಷ್ಟಪುತ್ರರ ಪಡೆಯಳೆ
ಸಾಗರದೊಳಗಿರ್ದಂಬುವನು ಮುನಿ ಕುಡಿಯನೇ
ನಾಗಾರ್ಜುನನು ತಲೆಯ ಹೋಗಾಡಿಕೊಳ್ಳನೇ
ಕಾಗೆಯಡಗಿಂಗೆ ಬಯಸಿದ ವಿಕ್ರಮನು ವಿಧಿಯನಾವ ದೇವರು ಗೆಲ್ವರೊ ||5||
ಜಡೆಮುಡಿಯೊಳಿರ್ದಳಭ್ರಾಪಗೆಯು ದಮಯಂತಿ
ನಡುವಿರುಳು ಸಿಲುಕಿದಳು ಬೇಂಟೆಗಾರನ ಬಲೆಗೆ
ಮಡದಿ ಮಕ್ಕಳುಗಳಿಲ್ಲದೆ ಅಂಬುಗುರಿಯಾಗಿ ಮಡಿದ ರಣದಲಿ ಭೀಷ್ಮನು
ಸುಡುಗಾಡ ಕಾಯ್ದ ಹರಿಶ್ಚಂದ್ರ ಚಂದ್ರಮತಿಯು
ಬಿಡದೆ ತೊತ್ತಾದಳಾಕೆಯ ಮಗನು ಹಾವಿಂದ
ಮಡಿದ ವಿಧಿಯನಾವ ದೇವರು ಗೆಲ್ವರೊ ||6||
ಜೆಡೆಗಟ್ಟಿ ಯತಿಯಾಗೆ ರಾಮನಾ ಸೀತೆಯನು
ಬಿಡದೆ ರಾವಳನು ಕೊಂಡೊಯ್ಯಲಾ ಹನುಮಂತ
ಹೆಡಗಟ್ಟಿಗೊಳಗಾಗಿ ಬಾಲಕ್ಕೆ ದೊಂದಿಯನು ಸುತ್ತೆ ಸಲೆ ಲೆಂಕೆಯೊಳಗೆ
ಮೃಡನ ವಶ ವಿಧಿ ತಾನು ವಿಧಿಯ ವಶವೀ ಲೋಕ
ಜಡಮತಿಗಳಿನ್ನಾದಡೂ ಶಿವನ ಪೂಜಿಸಿರೊ
ಒಡೆಯರುಳ್ಳಾಳಿಂಗೆ ಭಯಬೇಡ ಶಂಕರನ ಭಜಿಸಿರೋ ಭವ ಬಿಡುವುದು ||7||

ಬಣ್ಣಿಸಿ ಭಾವಿಸಿ ಕೀರ್ತಿಸಿ
ಬಣ್ಣಿಸಿ ಭಾವಿಸಿ ಕೀರ್ತಿಸಿ ನೆನೆ ಹೊಗ
ಳಣ್ಣ ನಿರಂತರ ಪಂಚಾಕ್ಷರಿಯ ||ಪಲ್ಲ||
ಮಂತ್ರಾರಾಧ್ಯನ ಮಂತ್ರಾಭೇದ್ಯನ
ಮಂತ್ರೋದ್ಧಾರಣ ಕಾರಣನ
ಮಂತ್ರಾಗ್ರಣಿ ಮಹ ಮಂತ್ರಶಿರೋಮಣಿ
ಮಂತ್ರಾಧೀಶನ ಪಂಚಾಕ್ಷರಿಯ ||1||
ಒಲಿದು ಗುರುವಿನಂದದಿಯುಪದೇಶವ
ಕಲಿಸುವ ತಾಯಂದದಿ ಮುದ್ದು
ಸಲಿಸುವ ಶಿವನಂದದಿ ಮದ ಮಾಯೆಯ
ಗೆಲಿಸುವ ಪಾವನ ಪಂಚಾಕ್ಷರಿಯ ||2||
ಸಕಲಾಗಮಶಾಸ್ತ್ರಾಂಭೋನಿಧಿಯನು
ಭಕುತಿಯ ಕಡೆಗೋಲೊಳು ಹೊಸೆದು
ಯುಕುತಿಯಿಂದೊಲಿದರ್ಚಿಸಿ ಶಿವಭಕ್ತಿಯ
ಮುಖ ಸಿರಿಯೆನಿಸುವ ಪಂಚಾಕ್ಷರಿಯ ||3||
ದುರಿತಾರ್ಣವವಡಬಾನಲ ವಿಕೃತ
ಗಿರಿವಜ್ರಾಯುಧವೆಂಬ ತಿಪುರ
ಸರಸಿಜಸಖ ಬಹು ರುಜಗಣ ಕಂಟಕ
ಕರಿ ಪಂಚಾನನ ಪಂಚಾಕ್ಷರಿಯ ||4||
ಹಿಂಗದ ಅಂಜನ ದಟ್ಟ ದಾರಿದ್ರಕೆ
ಹೊಂಗಳ ಕಾಣಿಸುವಂತೆ ಭವ
ಭಂಗದೊಳಳಿವವರಿಗೆ ಗುರುಶಂಕರ
ಲಿಂಗವ ತೋರುವ ಪಂಚಾಕ್ಷರಿಯ ||5||

ಮಾಡಲಿಲ್ಲವೆ ಮನವೆ
ಮಾಡಲಿಲ್ಲವೆ ಮನವೆ ಮಹಲಿಂಗ ಸಾಧನೆಯ
ರೂಢಿಯೊಳು ಭಕ್ತಿಯೆಂದೆಂಬ ಗರುಡಿಯೊಳು ||ಪಲ್ಲ||
ಸತ್ಯ ಸದಾಚಾರವೆಂಬ ಚಲ್ಲಣವ ತೊಟ್ಟು
ನಿತ್ಯ ನೇಮಗಳೆಂಬ ದಟ್ಟಿಯುಟ್ಟು
ಭಕ್ತಿ ವೈರಾಗ್ಯವೆಂದೆಂಬ ಬಂದಿಕೋಲ್ವಿಡಿದು
ನಿತ್ಯ ನಿಜತತ್ತ್ವ ಶಿವಭಕ್ತಿ ಸಾಧನೆಯ ||1||
ಗುರು ಲಿಂಗ ಜಂಗಮಕೆ ದೀರ್ಘ ದಂಡೆಗಳ ನೂಕಿ
ವರ ಭಸಿತ ಮೃತ್ತಿಕೆಯ ಮೈಗೆ ಪೂಸಿ
ಅರಿಷಡುವರ್ಗವನು ಎಳೆದೆಳೆದು ಇಳೆಗೊರಸಿ
ಪರಮ ಸುಜ್ಞಾನವೆಂದೆಂಬ ಕಂಬವನು ಕಟ್ಟಿ ||2||
ಪ್ರಣವ ಪಂಚಾಕ್ಷರಿಯೆಂದೆಂಬ ಸಾಂಗ್ರಾಣಿಯೆತ್ತಿ
ಅಣಿಮಾದಿ ಸಿದ್ಧಿಗಳ ಲೋಡು ತಿರುಹಿ
ತ್ರಿಣಯನ ಪದಜ್ಞಾನವೆಂಬ ಕೊಣತನ ತೊಡರಿ
ಮಣಿಯ ರುದ್ರಾಕ್ಷಿಯೆಂದೆಂಬ ಗೊಣತರವ ಪೊತ್ತು ||3||
ಅಷ್ಟಮದಗಳನೆಲ್ಲ ಅಡಿಮೆಟ್ಟಿ ಕುಪ್ಪಳಿಸಿ
ಇಷ್ಟಲಿಂಗವ ಕರದಿ ಪಿಡಿದು ಜಳ್ಪಿಸುತ
ದೃಷ್ಟಿ ಕರಣಾದಿಗಳ ಕೈವಶ ಮಾಡಿಕೊಂಡು
ತುಟ್ಟತುದಿ ಮೊದಲನೆಲ್ಲವ ಕಂಡು ನಲಿದು ||4||
ಇಂತಪ್ಪ ಸಾಧನೆಯ ಮಾಡುತಿಹ ಮಹಿಮಗ
ನಂತ ಜನ್ಮಜನ್ಮದಿನಾಳಿನಾಳಾಗೆ
ಚಿಂತೆಯಾತಕೆ ನಮ್ಮ ತಂದೆ ಶಂಕರಲಿಂಗ
ಮುಂತೆ ತಮ್ಮವರಂತೆ ಮಾಡಿಕೊಂಬರಂತೆ ||5||

ಮಾಡು ಶಿವಪೂಜೆಯನು
ಮಾಡು ಶಿವಪೂಜೆಯನು ಮರಣ ತಪ್ಪದು ಮುಂದೆ ಕೆಡ
ಬೇಡ ಸಂಸಾರ ದೊನ ಧಿಯೊಳು ಸಿಕ್ಕಿ ||ಪಲ್ಲ||
ಒಂದಲರ ಎರಿವೇರಿಸಿದ ಫಲವು ದೇ
ವೇಂದ್ರಪದವಿಯಹುದು ದಿಟ
ಸಂದೇಹವೇಕಿನ್ನು ಮರಣ ತಪ್ಪದು ಮುಂದೆ
ಕುಂದದೆ ಶಿವಪೂಜೆಯ ಮಾಡಿರೊ ||1||
ಸಿರಿ ಯುಗವಾದಡೇನು ಆಯುಷ್ಯ ಪಿರಿದಿಲ್ಲ
ಮರಣ ತಪ್ಪದು ಮುಂದೆ ಅದು ದಿಟ
ನಿರರ್ಥ ಹಲವ ಹಂಬಲಿಸಿ ಕೆಡಬೇಡ ನೀ
ಹರನ ಪೂಜೆಯ ಮಾಡು ಮುಕ್ತನಹಡೆ ನೀನು ||2||
ನಾಳೆ ನಾಳೆಂದೆಂದು ಹೇಳುವ ಮಾತು ಬೇಡ
ಖೂಳ ನೀನಾವಾಗ ಸಾವುದೆಂದರಿಯೆ
ಹೇಳಿದೆ ಹುಲ್ಲು ಹಿಡಿದು ಸಾರಿದೆ ಕೆಡಬೇಡ
ಭಾಳಲೋಚನನ ಗುರು ಶಂಕರನ ಭಜಿಸೋ ||3||

ಮಾಯಾ ಸಂಸಾರಕೆ ಸಿಲುಕಿ
ಮಾಯಾ ಸಂಸಾರಕೆ ಸಿಲುಕಿ
ಸಾಯಸಗೊಳುತೈದೆನೆ ತಂದೆ ಕರುಣಿಸು ||ಪಲ್ಲ||
ಉತ್ತಮದ ವಾರಣ ಚಂದ್ರಕಾಂತದ
ಭಿತ್ತಿಯೊಳಗೆ ತನ್ನ ನೆಳಲಿರೆ
ಮತ್ತೊಂದು ಗಜವೆಂದು ಯುದ್ಧವ ಮಾಡಿ ನಿ
ರರ್ಥಕ ಹೋರಿ ಹೊದಕುಳಿಗೊಂಬಂತೆ ||1||
ನೀರುಣ್ಣಬೇಕೆಂದು ಭೋರನೆ ಮೃಗಶಿಶು
ಹಾರೈಸಿ ಬಂದು ಮರೀಚಿಯ
ದಾರಿಯೊಳಗೆ ತುಹಿನಾಂಬುವನರಸಿ ವಿ
ಚಾರವಿಲ್ಲದೆ ಹರಿಹರಿದು ಬಳಲುವಂತೆ ||2||
ಸಲೆ ತನ್ನ ನೆರಳ ಹೂಣುವೆನೆಂದು ಕೋ
ಟಲೆಗೊಳುವಂತೆ ಸಂಸಾರದ ಭಾರವ
ಗೆಲಬಹುದೆಂದು ಬಳಲಿದೆ ಬಾರೆಂದು
ತಲೆದಡಹಿ ಎನ್ನ ಸಲಹೊ ಶಂಕರಲಿಂಗ ||3||

ಲಿಂಗಕ್ಕೆಜಂಗಮದಪಾದತೀರ್ಥ
ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾ
ದಂಗಳನು ಕೊಡಬಹುದೆಯೆಂಬ ಶೈವನ ಸೂತ
ಕಂಗಳನು ಬಿಡಿಸುವೆನದೆಂತೆನಲು ಚಿತ್ತೈಸಿ ವೀರಶೈವ ಪ್ರಮುಖರು ||ಪಲ್ಲ||
ಭೂರಮಣಿಯಂಗಮಂ ಹಾರಿಯಲಿ ತಿವಿತಿವಿದು
ಪೂರಾಯ ಗಾಯದಿಂದರತುಬಹ ಚೂಳಾದ
ನೀರನವರಿವರೆನ್ನದಷ್ಟಾದಶಪ್ರಜೆಯ ಕಾಲು ಸೋಂಕಿದ ತಟಾಕ
ವಾರಿಯಿಂ ಮಜ್ಜನಕ್ಕೆರೆಯಬಹುದೈ ನೇಮದ
ನಾರಿ ಜಂಗಮದಂಘ್ರಿತೀರ್ಥಮಂ ಲಿಂಗಕ್ಕೆ
ಮೇರೆಗಟ್ಟಭೀಷೇಕಮಂ ಮಾಡಬಹುದೆ ಯೆಂಬವನೆಯಧಮರಿಗಧಮನು ||1||
ಪವನಸಖ ಮುಖ ಮುಟ್ಟಿ ಪಾಕವಾದೆಂಜಲ
ನ್ನವನಿಷ್ಟಲಿಂಗಕ್ಕೆ ನಾಡೆ ಕೊಡಬಹುದೈಸೆ
ಭವರಹಿತ ವದನದಿಂ ಸವಿದು ಮಿಕ್ಕ ಪ್ರಸಾದವ ರಸ ರಸಾಯನಗಳ
ಅವಿರಳ ಮಹಾತ್ಮಲಿಂಗಕ್ಕೆ ಕೊಡಬಹುದೆಯೆಂ
ದವಿಚಾರದಿಂದಲನುಭವವ ಮಾಡುವ ಬದ್ಧ
ಭವಿ ನರನಿಗಿನ್ನೇಕೆ ಗುರುಲಿಂಗ ಜಂಗಮದ ಪಾದತೀರ್ಥಪ್ರಸಾದ ||2||
ಗುರುಪಾದತೀರ್ಥಪ್ರಸಾದಮಂ ಜಂಗಮದ
ವರ ಪಾದತೀರ್ಥಪ್ರಸಾದಮಂ ಲಿಂಗಕ್ಕೆ
ಹರುಷದಿಂ ಕೊಟ್ಟು ಕೊಂಡಡೆಯಗ್ನಿ ಕರ್ಪುರವ ಕೊಂಡ ತೆರನಂತಪ್ಪುದು
ಕರಪೀಠದರಸಂಗೆ ಕೊಡದೆ ಕೊಂಡಡೆ ಮುಂದೆ
ಸರಸ ಕರ್ಪುರತೈಲಮಂ ಕೊಂಡ ಮಾನವನ
ಇರವಿನಂತಹುದೆಂದು ಗುರುಶಂಕರೇಶ್ವರನು ಸಾರಿದನು ತ್ರೆøಭುವನಕೆ ||3||

ಲಿಂಗಾ ಲಿಂಗಾ ಲಿಂಗ
ಲಿಂಗಾ ಲಿಂಗಾ ಲಿಂಗ
ಲಿಂಗಾ ಲಿಂಗ ಎನ್ನಿರೊ ||ಪಲ್ಲ||
ನರನ ಜನ್ಮದಲ್ಲಿ ಹುಟ್ಟಿ
ಮರೆದು ಕರ್ಮಗಳನೆ ಮಾಡಿ
ಇರದೆ ತನುವು ಹೋಗುವಾಗ
ಸ್ಮರಹರನ ಧ್ಯಾನ ಬಾರದು ||1||
ಹಲವು ಜನ್ಮದಲಿ…ಟ್ಟಿ
ಒಲಿದು ಮಾಯೆಗೆ ಸಿಲ್ಕಿದಾಗ
ಚೆಲುವ ಗಂಗೆಯರಸನೆಂಬ
ಶುಲಿಯ ಧ್ಯಾನಕ್ಕೊದಗದು ||2||
ತಂದೆ ತಾಯಿ ಬಂಧು ಬಳಗ
ಚೆಂದವಾಗಿ ತಾವಿರುವಾಗ
ಬದಿ ಕಾಲನ ಭಟರು ಏಳೆಂದಾಗ
ಇಂದುಧರನ ಧ್ಯಾನಗೂಡದು ||3||
ಸ್ಮರರೂಪಿನ ಜ್ವರವು ಬಂದು
ಭರದಿ ತನುವನದನೆ ತಿಂದು
ಸೊರಗಿ ತನುವು ಹೋಗುವಾಗ
ಪುರಹರನ ಧ್ಯಾನ ಸ್ಮರಿಸದು ||4||
ಅಂದವಾದ ಅಂಗವೆಲ್ಲ
ಕಂದಿ ಕುಂದಿ ತಗ್ಗಿದಾಗ
ಚಂದ್ರಶೇಖರನ ಧ್ಯಾನ
ಮುಂದೆ ಬಾರಲರಿಯದು ||5||
ದುರಿತ ಜವನಭಟರು ಬಂದು
ಇರದೆ ಏಳೇಳೆಂದು ಕೊಂಡು
ಗರಳಕಾತ್ಮ ಒದಗಿದಾಗ ಈ
ಶ್ವರನ ಧ್ಯಾನದೋರದು ||6||
ಪರಮಾತ್ಮ ಜೀವನ ಕೂಡಿ
ಇರದೆ ಪ್ರಾಣ ಹೋಗುವಾಗ
ಗುರು ಶಂಕರಲಿಂಗವೆಂಬ
ಅರುಹು ಧ್ಯಾನ ಕರಿಗೊಳ್ಳದು ||7||

ವರಮೂರ್ತಿ ಜಂಗಮಯ್ಯನ
ವರಮೂರ್ತಿ ಜಂಗಮಯ್ಯನ ಪಾದಾಂಬುವಿಗೆ
ಸರ್ವತೀರ್ಥಜಲ ಸರಿಯಲ್ಲ ||ಪಲ್ಲ||
ಕಾವೇರಿ ತೀರ್ಥಜಲ ಸರಿಯಲ್ಲ ಮಾನಸಸ
ರೋವರತೀರ್ಥಜಲ ಸರಿಯಲ್ಲ
ಆ ವಿಮಲ ಕಾಸಿಯತೀರ್ಥಜಲ ಸರಿಯಲ್ಲ ಗೋ
ದಾವರಿಯ ತೀರ್ಥಜಲ ಸರಿಯಲ್ಲ ||1||
ಆ ತುಂಗಭದ್ರೆಯ ತೀರ್ಥಜಲ ಸರಿಯಲ್ಲ ಗಯ
ಗೌತಮೆಯತೀರ್ಥಜಲ ಸರಿಯಲ್ಲ
ಪಾತಾಳಗಂಗೆಯತೀರ್ಥಜಲ ಸರಿಯಲ್ಲ ಹಿಮದ
ಕೇತಾರದತೀರ್ಥಜಲ ಸರಿಯಲ್ಲ ||2||
ಬಾರಹಕೋಟಿ ಶ್ರೀ ಕೀರ್ತಿವಾಸ ಗೋಕರ್ಣ ಮ
ಲಪ್ರಹರಿಗಳ ತೀರ್ಥಜಲ ಸರಿಯಲ್ಲ
ಚಾರು ಪುಷ್ಕರ ಪ್ರಯಾಗಿನಿ ನೀಲಕಂಠ ಭಾ
ಗೀರಥಿಯತೀರ್ಥಜಲ ಸರಿಯಲ್ಲ ||3||
ಅಣಕದೊಳಾಗಲಿ ಅಟಮಟದೊಳಾಗಲಿ ದು
ರ್ಗುಣದೊಳಾಗಲಿ ಸಟೆಯೊಳಾಗಲಿ
ತ್ರಿಣೆಯ ಜಂಗಮದ ಪಾದೋದಕವ ಕಾಂಬವಗೆ ಮಾ
ರಣಭಯ ರೋಗ ಕಂಟಕವಿಲ್ಲ ||4||
ಶ್ರೀ ಸದ್ಯೋಜಾತ ವಾಮದೇವ ತತ್ಪುರುಷ ಅಘೋರ
ಈಶಾನ್ಯ ಮುಖಗಳದು ನಖದಲಿ
ವಾಸವ ಮಾಡಿಕೊಂಡಿಪ್ಪನಾ ಗುರುಶಂಕ
ರೇಶ ಜಂಗಮದಂಘ್ರಿಯೊಳು ನೆಲಸಿಹನಾಗಿ ||5||

ಶತಸಹಸ್ರ ಲಕ್ಷ ಕೋಟಿ
ಶತಸಹಸ್ರ ಲಕ್ಷ ಕೋಟಿ ಮತಿಗೆ ನಿಲುಕಿ ನಿಲುಕದ
ಪ್ರತಿಹತ ವಿರಹಿತ ಲಿಂಗ ಬಂದುದತಿಶಯ ಕರಸ್ಥಲಕೆ ||ಪಲ್ಲ||
ಬಡವನೆಡೆಗೆ ನಿಧಿ ನಿಧಾನ ಪೊಡವಿ ತುಂಬಿದಂಧಕಾರ
ದೆಡೆಗೆ ವನಜಸಖ ಚಕೋರಿಯೆಡೆಗೆ ಚಂದ್ರಮ
ಕಡು ವಿಯೋಗವಡಸಿದಬಲೆಯೆಡೆಗೆ ರಮಣ ಬಪ್ಪ ತೆರದಿ
ನಡೆದು ಲಿಂಗ ಬಂದುದೆನ್ನ ಜಡರಹಿತ ಕರಸ್ಥಲಕೆ ||1||
ಫಲಿತ ಪಕ್ವಫಲರಸಕೆ ಗಿಳಿಯು ಕುಸುಮ ಕುಲಕೆ ಭ್ರಮರ
ಲಲಿತ ವನಕೆ ಪೋಪ ವಸಂತ ಬಳಲ್ದ ಪಥಿಕಗೆ
ಮಲೆಯಮಾರುತನೊಲಿದು ಬಪ್ಪವೊಲು ಸಮಸ್ತ ದೇವತತಿಯ
ಸಲಹುವಾತ ಲಿಂಗ ಬಂದುದಲಘುತರ ಕರಸ್ಥಲಕೆ ||2||
ರೋಗವಡಸಿದೆಡೆಗೆ ವೈದ್ಯ ಮೂಗನೆಡೆಗೆ ಶಬ್ದ
ಭೋಗಹೀನಗಿಂದ್ರಪದ ಶಿವಾಗಮಾಂಧಗೆ
ಶ್ರೀಗುರುವಿನ ಕರುಣವಚನ ಬೇಗ ಬಪ್ಪವೋಲು ಧರ್ಮ
ಯೋಗ ಲಿಂಗ ಬಂದುದೆನ್ನ ರಾಗರಸ ಕರಸ್ಥಲಕೆ ||3||
ಬೇಸಗೆಯ ಬಿಸಿಲೊಳು ಬಂದು ಗಾಸಿಯಾದ ಚಾತಕಂಗೆ
ಶೇಷಕಾರತೊರೆವ ವಿಳಾಸದಿಂದಿಳಾನಿ
ವಾಸಕಿಳಿದು ಬಪ್ಪ ತೆರದಿ ಭಾಸುರ ಪ್ರ
ಕಾಶ ಮಂಗಳೇಶ ಲಿಂಗ ಬಂದುದೆನ್ನ ಲೇಸೆನಿಪ್ಪ ಕರಸ್ಥಲಕೆ ||4||
ಇನ್ನು ಬದುಕಿದೆಂ ಭವಾಬ್ಧಿ ಬೆನ್ನ ಬಿಟ್ಟು ಪೋದುದಟ್ಟಿ
ಬನ್ನ ಬಡಿಸುತಿರ್ಪ ತನುಗುಣವಡಂಗಿತು
ನನ್ನ ಬೆಳಗು ಬೆಳೆದುದಮಮ ಧನ್ಯನಾದೆ
ಪುಣ್ಯನಾದೆ ಭೀಮ ಶಂಕರೇಶ ಬಂದನೆನ್ನ ಮಮ ಕರಸ್ಥಲಕೆ ||5||

ಶ್ರೀ ಸದಾಶಿವಗೆ ಶಂಕರಗೆ
ಶ್ರೀ ಸದಾಶಿವಗೆ ಶಂಕರಗೆ ಜಗ
ದೀಶ ಮಹೇಶಗೆ ಅರತಿಯೆತ್ತಿರೆ ||ಪಲ್ಲ||
ಭಾಗೀರಥಿಯ ಪೊತ್ತಗೆ ಭಾಳನೇತ್ರಗೆ
ಶ್ರೀಗೌರಿಯ ಮನೋಹರಗೆ ಉರಗಕಂಕಣಗೆ ನಾರಾಯಣಪ್ರಿಯಗೆ
ನಾಗಕನ್ನಿಕೆಯರು ಅರತಿಯೆತ್ತಿರೆ ||1||
ಕಾಲಹರಗೆ ಕರ್ಮಹರಗೆ
ಬಾಲಚಂದ್ರನ ಸೂಡಿದಭವಗೆ
ಬಾಲೆಗೊಲಿದು ನೊರೆಹಾಲ ಸವಿದಗೆ
ವಾರಿಜಮುಖಿಯರು ಆರತಿಯೆತ್ತಿರೆ ||2||
ಭಾನುಕೋಟಿ ದಿವ್ಯತೇಜ ಪ್ರಕಾಶಗೆ
ಆನಂದಮಯನಿಗೆ ಚಿನ್ಮಯನಿಗೆ
ಮಾನಸದಲಿ ನೆನೆವರ ಕಾಯ್ವ ದೇವಗೆ
ಮಾನ್ಯರಂಗನೆಯರು ಅರತಿಯೆತ್ತಿರೆ ||3||
ಕಂಗಳು ಮೂರುಳ್ಳ ಮಂಗಳ ಮಹಿ
ಮಂಗೆ ಲಿಂಗ ಘನ ಶಾಂತನಿಗೆ
ಅಂಗದ ಭವಗಳ ಹಿಂಗಿಪ್ಪ ದೇವಗೆ
ಗಂಗೆ ಪಾರ್ವತಿಯರು ಆರತಿಯೆತ್ತಿರೆ ||4||
ದೇವರದೇವಗೆ ದೇವಶಿಖಾಮಣಿ
ದೇವ ಸಮ್ಮೋಹನ ಸ್ವಾಮಿಗೆ
ದೇವ ಸದಾಶಿವ ಶಂಕರಲಿಂಗಗೆ
ದೇವಕನ್ನಿಕೆಯರು ಆರತಿಯೆತ್ತಿರೆ ||5||

ಸೇವೆಯೊಳು ಗುರುಸೇವೆ
ಸೇವೆಯೊಳು ಗುರುಸೇವೆಯೇ ಸೇವೆ ಅಮಲತರ
ಭಾವದೊಳು ಭಕ್ತಿಭಾವವೆ ಭಾವ ಮಾಂಗಲ್ಯ
ಕೈವಲ್ಯದೊಳು ಗುರು ಲಿಂಗ ಜಂಗಮದ ಪಾದತೀರ್ಥ
ಸೇವನೆ ಕೈವಲ್ಯವೆಂದೊರೆದವು ರಹಸ್ಯಂಗಳು ||ಪಲ್ಲ||
ಗುರುಪಾದ ತೀರ್ಥ ಸೇವನೆ ದಾರಿದ್ರಮನಡಗಿಸುವದು
ಗುರುಪಾದತೀರ್ಥ ಸೇವನೆ ಕಂಟಕದ ಬೇರ ಗುದ್ದಲಿಸುವುದು
ಗುರುಪಾದತೀರ್ಥ ಸೇವನೆ ಋಣ ರುಜೆಗಳನಳಿವುದಪ ಮೃತ್ಯುಗಳನೊತ್ತಿ ತೊತ್ತಳದುಳಿವುದು
ಗುರುಪಾದತೀರ್ಥ ಸೇವನೆ ಸರ್ವಪಾಪಕ್ಷಯವ ಮಾಡೂದು
ಗುರುಪಾದತೀರ್ಥ ಸೇವನೆ ಗರ್ವಪರ್ವತವನೀಡಾಡೂದು
ಗುರುಪಾದತೀರ್ಥ ಸೇವನೆ ಕುಲಕೋಟಿಯಂ
ಸಮುದ್ಧರಿಸೂದೆನುತಲಿವೆ ಸಕಲಶಾಸ್ತ್ರ ||1||
ಗುರುಪಾದತೀರ್ಥ ಸೇವನೆಯಿಂದ ಸಿರಿಯಕ್ಕು ಸಂಪದಮಕ್ಕು
ಗುರುಪಾದತೀರ್ಥಸೇವನೆಯಿಂದ ಸುಖಮಕ್ಕು ಶುಭಮಕ್ಕು
ಗುರುಪಾದತೀರ್ಥಸೇವನೆಯಿಂದ ಗತಿಯಕ್ಕು ಮುಕ್ತಿಯಕ್ಕು ಮಂಗಳಮಹೋತ್ಸವಮಕ್ಕು
ಗುರುಪಾದತೀರ್ಥ ಸೇವನೆಯಿಂದ ನಿರ್ಮಳ ಧರ್ಮ ದಯಮಕ್ಕು
ಗುರುಪಾದತೀರ್ಥ ಸೇವನೆಯಿಂದ ಆಯುಷ್ಯ ಭವಿಷ್ಯಗಳಕ್ಕು
ಗುರುಪಾದತೀರ್ಥ ಸೇವನೆಯಿಂದ ನಾನಾ ಸಿದ್ಧಿಯ
ದೆಂದು ಸಾರಿದವು ಸಕಲಾಗಮ ||2||
ಗುರುಶಂಕರನ ಪಾದತೀರ್ಥ ಸೇವನೆಯಿಂದ
ಪಂಚೇಂದ್ರಿಯದ ಮದವ ಕೆಡಿಸಲ್ಬಹುದು
ಸಟೆ ಕುಟಿಲವಂ ಕೊಲಲಹುದು
ಗುರುಶಂಕರನ ಪಾದತೀರ್ಥ ಸೇವನೆಯಿಂದ ತನುಗುಣ
ತರುವ ಕಡಿಯಬಹುದಿಡಿಯಬಹುದು
ಗುರುಶಂಕರನ ಪಾದತೀರ್ಥಸೇವನೆಯಿಂದ ತಾ
ಪತ್ರಯದ ಶಿರವ ಕೊಯ್ದಿಡಬಹುದು
ಗುರುಶಂಕರನ ಪಾದತೀರ್ಥಸೇವನೆಯಿಂದ ಭವಸಾ
ಗರವ ದಾಂಟಬಹುದೀಂಟಬಹುದು ||3||

ಹಣದ ಹಮ್ಮಿನಿಂದ
ಹಣದ ಹಮ್ಮಿನಿಂದ ಬೆರವ ಮನುಜ ಕೇಳು ಮುನ್ನಿನಾ ಅ
ಗಣಿತ ಮಹಾರಾಯರುಗಳನಜ್ಜುಗುಜ್ಜಿ ಟೊಣೆದ ಸಿರಿಯನು ||ಪಲ್ಲ||
ಕರಿಯನೇರಿ ಕೈಯನೆತ್ತಿ ಹಿರಿಯದೊಂದು ಕವಡೆಯನ್ನು
ಭರದೆ ಮಿಡಿಯೆ ಪಾರಲದರ ಸರಿಯೆಂದೆನಿಪ ಹೊನ್ನನು
ಮರುಳು ಮುನಿಗೆ ಧನವ ಕೊಡಲು ಹರಿಶ್ಚಂದ್ರ ತನ್ನ ಸುತನ
ಉರುಹಿಸುತಲಿ ಹಾರವಿಲ್ಲ ಪರಿಯು ಕೇಳಿ ಅರಿಯಿರೇ ||1||
ವಿಪ್ರ ವಿಪ್ರರೇಳಿಗೆಯಲಿ ತಪ್ಪದೆ ಮೂರು ಕರಿಕೆಯೆಸಳ
ದರ್ಪ ಕೌರುವೇಂದ್ರವರಿಗೆ ವಿಪ್ರ ಜೋಯಿಸರಿಕ್ಕಲು
ತಪ್ಪದೇಳುಲಕ್ಷ ಕುದುರೆ ಒಪ್ಪದಿಂದ ಮೇಯೆನೆ
ದರ್ಪ ಮುರಿದಳಿದುಹೋದ ಪರಿಯ ಕೇಳಿ ಅರಿಯಿರೇ ||2||
ಏಳುದ್ವೀಪ ಏಳಂಬುಧಿಯನಾಳಿದ ನಳನೃಪಾಲ
ಮೇಳದಿಂದ ಜೂಜನಾಡಿ ಸಿರಿಯು ಹೋಗಲಾಗಲು
ಆಳು ಪರಿವಾರವನ್ನು ಬೀಳುಸೋತು ಗಂಡ ಹೆಂಡರು
ಸೀಳಿವೊಂದು ಸೀರೆಯನುಟ್ಟುದ ಹೇಳಲೇನು ಅರಿಯಿರೇ ||3||
ಆಳಿದಾನು ಅಷ್ಟಮದದಿ ಆನೆ ಕುದುರೆ ಸೇನೆಯಾನು
ಕೇಳಿ ನೆಲೆಯ ಬಲಿಯ ಸಿರಿಯ ದಾನವ ಬೇಡುವರಿಲ್ಲವೆನಲು
ಏಳಿಗೆಯಲಿ ವಿಷ್ಣು ಬಂದು ಮೂರುಹೆಜ್ಜೆ ಭೂಮಿ ಬೇಡಲು
ಹೇಳಲೇನು ಬಲಿಯ ಸಿರಿಯು ಬಂಧನಕೊಳಗಾದುದಾ ||4||
ಸಿರಿಯ ಮದದಿ ವಿಕ್ರಮಾನು ಹರಿದು ರಾಜ್ಯವಾಳುತಿರಲು
ಸ್ಥಿರವ ನಚ್ಚಿ ಶಾಲಿವಹನಪುರಕೆ ದಾಳಿ ಮಾಡಲು
ಹರನ ವರದಲಾಗ ಸೇನೆ ಭರದೆ ಊರ ಹೊರವಂಟು
ಮುರಿಯಲಿರಿದು ವಿಕ್ರಮಾನ ಶಿರವ ತರಿದುದರಿಯಿರೇ ||5||
ಹರನ ಮೇಲೆ ದಕ್ಷ ತಾನು ಹಿರಿದು ಕ್ರೋಧವನ್ನು ಮಾಡಿ
ಸುರರ ನೆರಹಿ ಯಜ್ಞವನವನಿಕ್ಕಲು ಭರದಿ ವೀರ ಜನಿಸಿದ
ಧರೆಯ ಭೂತವೆರಸಿ ನಡೆದು ಶಿರವನರಿದು ಉರಿಯೊಳಿಡಲು
ಕುರಿಯತಲೆಯದಾದ ಪರಿಯ ತೆರನ ಕೇಳಿ ಅರಿಯಿರೇ ||6||
ಆರ ಸಿರಿಯು ಆರ ಬಲುಹು ಆರ ಶರಿರ ನಿತ್ಯವೆಂದು
ಕೇಳಿ ನೆಲೆಯ ತಿಳಿದುದನ್ನು ಅರಿದ ಮೇಲೆ ಗರ್ವವೆ
ಮಾರವೈರಿ ಶಂಕರೇಶ ಚರಣಕಮಲವನ್ನು ಭಜಿಸಿ
ಸೇರಿ ಸಕಲ ಭಕ್ತರೆಲ್ಲ ನಿತ್ಯಮುಕ್ತರಪ್ಪುದೈ ||7||

ಹರ ಪೂಜೆಯನು ಮಾಡು
ಹರ ಪೂಜೆಯನು ಮಾಡು ಶರೀರವಿದು ಸ್ಥಿರವಲ್ಲ
ಗುರುಸೇವೆಗಲಸದಿರು ಜಂಗಮಾರ್ಚನೆ ಮಾಡು
ಪರಸತಿಗೆ ಪರಧನಕೆ ಹರಿಯ ಬಿಡದಿರು ಮನವ
ಗುರಿಯಾಗದಿರು ಯಮನಿಗೆ || ಪಲ||
ವರ ತಪಸಿಯಾಸತಿಗೆ ಸುರಪತಿಯು ಮನವೆಳಸಿ
ಸರಿರಾತ್ರೆಯೊಳಗೆ ಕುಕ್ಕುಟನಾಗಿ ಕೂಗೆ ಮುನಿ
ಹರುಷದಿಂದೆದ್ದು ಬೆಳಗಾಯ್ತೆಂದು ಪುಷ್ಪಕೋಗೆ ತರುಣಿಯೊರ್ವಳೆ ಮಲಗಿರೆ
ಪುರುಷನಾಗಂದದಿಂದೆಯಿತಂದು ದೇವೇಂದ್ರ
ಪರಸತಿಯ ಕೂಡಿರಲು ಮುನಿ ಕಂಡು ಕೋಪದಿಂ
ಕರೆದು ಶಾಪವ ಕೊಡಲು ಶರಿರ ಭಗವಾದುದನು ಹೇಳುವದ ಕೇಳಿಯರಿಯಾ ||1||
ಪತಿ ಬೇಂಟೆಗಂ ಪೋಗೆ ಸತಿಯೊಬ್ಬಳಿರೆ ಸೀತೆ
ಮತಿಗೆಟ್ಟು ರಾವಳನು ಲೆಂಕೆಯಿಂದೈತಂದು
ಪಥವನರಿಯದೆಯವಳ ರೂಪಿಂಗೆ ಮನಸೋತು ರಥವನೇರಿಸಿ ಒಯ್ಯಲು
ಅತಿಕೋಪದಿಂ ರಾಮ ಲಕ್ಷ್ಮಣರು ದಂಡೆತ್ತಿ
ಕೃತಕದಿಂ ಲೆಂಕೆಯಂ ಮುತ್ತಿ ಪುರವಂ ಸುಟ್ಟು
ಸತಿಯತರಬಹುದೆಲವೊಯೆಂದು ದಶಶಿರನ ಕೊಂದ
ಕಥನವನು ಕೇಳರಿಯೆಯ ||2||
ಪರಸತಿಗೆ ಅಳುಪಿದನ ಶಿರಹೋಯ್ತು ಜಗವರಿಯೆ
ಅರಮನೆಯೊಳಿರ್ದ ಸತಿಯರು ಸಿಕ್ಕಿ ಸೆರೆಹೋಗಿ
ಇರದೆ ಕೆಟ್ಟರು ಲೆಂಕೆ ಹಾಳಾಗಿಹೋಯಿತವನಸಿರಿ ಧನವು ನಿಮುಷದೊಳಗೆ
ಮಿಗೆ ಭಂಗವಾಯಿತ್ತು
ಸುರಪತಿಯೆನಿಸುವಂಗೆ ಯೋನಿ ಮೂಡಿದವೆಂದು
ಚರಿಸುತಿವೆ ಡಂಗುರವು ಹೊಯಿದು ಲೋಕದೊಳು
ಇದ ಕೆಟ್ಟುದನು ಕೇಳರಿಯೆಯ ||3||
ಪೊಡವಿಯೊಳು ದೇವರೆಂದೆನಿಸಿಕೊಂಡವರಿಂತು
ನಡೆದು ಕೆಟ್ಟರು ಪರರೊಡವೆ ಮಡದಿಯರಿಗಳುಪಿ
ಬಿಡು ಮನುಜ ಮುಂದೆ ಈ ಶರಿರವಿದು ಸ್ಥಿರವಿಲ್ಲ ನಡೆ ಪುಣ್ಯ ಪಾಪವರಿದು
ಬಿಡದಿರ್ದಡಂ ಮುಂದೆ ಬಲು ಬಾಧೆಯನು ಮಾಡಿ
ಹಿಡಿದೊಯಿದು ಯಮನವರ
ಕಡು ಕಾದ ಕಂಭವನು ತಕ್ಕೈಸು ನೀನೆಂದು ಬಿಡದೆ ಕೊಲ್ವರು ದೂತರು ||4||
ಶರಿರದೊಳು ಭಸಿತ ರುದ್ರಾಕ್ಷೆ ಲಿಂಗವ ಧರಿಸಿ
ಪರಸತಿಗೆ ಪರಧನಕೆ ಹರಿವುತಿರ್ಪನ ಭಕ್ತಿ
ಸುರೆಯ ಕೊಡನಿಗೆ ಬೂದಿಯಂ ಪೂಸಿದಂತಕ್ಕು ಇರಿದು ಕೊಲ್ವರು ದೂತರು
ಹೆರಿಹಿಂಗದಿಂತಪ್ಪ ವಂಚನಂಗಳ ಬಿಟ್ಟು
ಗುರು ಲಿಂಗ ಜಂಗಮವನರ್ಚಿಸುವನಾಥಂಗೆ
ಪುರಹರಂ ಶಿವನಪದವಿಯನಿತ್ತು ಪಾಲಿಪಂ ಗುರುಶಂಕರೇಶ್ವರನೊಲಿದು ||5||

ಹಾರಿ ಬಂದೆನಯ್ಯ
ಹಾರಿ ಬಂದೆನಯ್ಯ ನಿಮ್ಮ ಕಾರುಣ್ಯ ಪ್ರಸಾದವನ್ನು
ವೀರಶೈವ ಶರಣರೊಕ್ಕಮಿಕ್ಕಶೇಷವನ್ನು ಬಿಡದೆ ||ಪಲ್ಲ||
ಸತ್ಯ ಶುದ್ಧ ಕಾಯಕವ ನಿತ್ಯ ಬಿಡದೆ ಮಾಡಿ ತಂದು
ಮತ್ತೆ ಲಿಂಗ ಜಂಗಮಕ್ಕೆ ತುತ್ತ ಮಾಡಿ ನೀಡುವ
ಭಕ್ತರುಗಳ ಮನೆಯ ತೊತ್ತು ಭøತ್ಯನಾಗಿ ಬಂದ ಭವದ
ಕತ್ತಲೆಯ ಕಳೆದು ಬೆಳಗಿನೊಳಗೆ ನಿಮ್ಮ ಕರವನಾಂತು ||1||
ಇಂದಿಗೆ ನಾಳಿಗೆ ಮುಂದೆ ಮಡದಿಗೆ ಮಕ್ಕಳಿಗೆಂಬ
ದಂದುಗವನುಳಿದು ಲಿಂಗ ಜಂಗಮಕ್ಕೆ ಮಾಡುವ
ಅಂದಂದಿಂಗೆ ನೂರುತುಂಬಿತೆಂಬ ಭಾವಮುಳ್ಳ ಭಕ್ತ
ಸಂದ ಶರಣರುಗಳ ಮನೆಯ ದಂಪತಿಗಳ ಕಂದನಾಗಿ ||2||
ನಾನು ನೀನೆಂಬಹಂಕಾರವೇನುಯಿಲ್ಲವಾಗಿನೋಡಿ
ತಾನು ತನ್ನ ತಿಳಿದು ಶಿವನಿರೂಪದಿಂದಲಿ
ಸ್ವಾನುಭಾವದಿಂದ ಲಿಂಗ ಜಂಗಮಕ್ಕೆ ಮಾಡುತಿರ್ಪ
ಜ್ಞಾನವುಳ್ಳ ಶರಣರುಗಳ ಮನೆಯ ಡಿಂಗರಿಗನಾಗಿ ||3||
ಕಂಡು ಶರಣರುಗಳ ಪದವ ಕೊಂಡಾಡುತ್ತ ಹಾಡಿ
ಕೊಂಡು ಬಂದು ಕಾಯಕವನು ಬಿಡದೆ ಮನೆಯೊಳು
ಖಂಡಿತವನೆಮಾಡಿ ಲಿಂಗ ಜಂಗಮಕ್ಕೆ ಮಾಡುತಿರ್ಪ
ಖಂಡೇಂದುಧರನ ಶರಣರುಗಳ ಮನೆಯ ತೊಂಡನಾಗಿ ||4||
ಶರಣರ ಶೇಷವನೆ ಬೇಡಿ ಪರಿಣಾಮಿಸುವನೊಲಿದು ಸರ್ಪಾ
ಭರಣವುಳ್ಳ ವರ ಗುರುಶಂಕರೇಶನ
ಶರಣರುಗಳು ತಮ್ಮ ಶರಣರೊತ್ತಿನಲ್ಲಿ ನಿಲಿಸಿ ನಿತ್ಯದ
ಕರುಣಶೇಷವನ್ನು ನೀಡಿ ಹರಣವ ರಕ್ಷಿಪರಾಗಿ ||5||

ಹೆದರದಿರು ಮನವೆ
ಹೆದರದಿರು ಮನವೆ ನೀ ಹೆದರಿ ಹಿಮ್ಮೆಟ್ಟದಿರು
ಮದನಾರಿ ಬರೆದ ಬರೆಹವ ಮೀರಲರಿದು ||ಪಲ್ಲ||
ಆಯು ವಿದ್ಯದ ಕರ್ಮ ಮಾಯದ ಕರಣ ಭೂಮಿ
ಕಾಯಕಲ್ಪಿತ ಪಂಚಲಿಖಿತಂಗಳೆಲವೊ
ತಾಯ ಗರ್ಭದಿ ಬಂದು ಬರೆವನು ಶಿವಯೆಂದು ವೃ
ಥಾಯೇಕೆ ನೀನು ಚಿಂತಿಸಲೇಕೆ ಮನವೆ ||1||
ಹರಿ ಹತ್ತುಭವ ಬಂದ
ಸುರಪಗೆ ನೋಡಲ್ಭಗವಾಯಿತು
ಧರೆಯ ಸೃಷ್ಟಿಪ ಅಜನ ಶಿರಹೋಯಿತೆಲವೊ
ಶಿರಹೋಗಿ ಸುರರೆಲ್ಲ ಮೃಗವಾಗಿ ಚರಿಸಿದರು ||2||
ಬೇಕೆಂದಡಾಗದು ಬೇಡವೆನೆ ಮಾಣದು
ನೀ ಕಂದಿ ಕುಂದಿ ಚಿಂತಿಸಲೇಕೆ ಮನವೆ
ನೂಕು ಭವಸಾಗರವ ಗುರು ಶಂಕರೇಶ್ವರನ
ನೇಕ ಪರಿಯಿಂದಲರ್ಚಿಸು ಮರುಳು ಮನವೆ ||3||

ಚಂಡನಾಡೊ ಬನ್ನಿರಣ್ಣ
ಚಂಡನಾಡೊ ಬನ್ನಿರಣ್ಣ ಚಂಡನಾಡುವಾ ಇಂತು
ಮಿಂಡಿ ಮಕ್ಕಳು ಕೂಡಿಕೊಂಡು ಒಂದಾಟವಾಡುವಾ ||ಪಲ್ಲವಿ||
ಮಾಯ ಪ್ರಪಂಚಕೆಲ್ಲ ಹಲ್ಲೆ ನೋಡುವಾ
ಕಾಯವತಿಯೆಂಬ ತನಜ ಸ್ವರ ಗೋಲ ಮಾಡುವಾ
ಆಯದಿಂದ ಐದು ಮಂದಿ ಆಳ ಹಂಚುವಾ
ಒಂದು ನೇಯದಿಂದ ಚಂಡಿನಾಟ ಆಡಿ ನೋಡುವಾ ||1||
ಮುತ್ತಿನೆಂಬ ಚಂಡ ನಾವು ಮುಟ್ಟಿ ಆಡುವಾ
ಶಕ್ತಿಯೆಂಬ ಸ್ವರಗೋಲ ಮರೆಯಲಿಡುವಾ
ಅತ್ತಲವರ ಆರು ಮಂದಿ ಕಡೆಗೆ ಮಾಡುವಾ
ಯುಕ್ತಿಯಿಂದ ಚಂಡಿನಾಟ ಆಡ ನೋಡುವಾ ||2||
ಸೊಕ್ಕಿದವರ ಎಂಟು ಮಂದಿ ಸೋಲಗೆಡಹುವಾ
ಮಿಕ್ಕಿದವರ ಏಳು ಮಂದಿ ಕಡೆಗೆ ಮಾಡುವಾ
ಲೆಕ್ಕದಿಂದ ಹತ್ತು ಮಂದಿ ಆಳ ಹಂಚುವಾ
ಟೆಕ್ಕೆವಿಡಿದು ಶಂಕರಲಿಂಗನಾ ಕೂಡಿಕೊಂಬುವಾ ||3||

ಬಾರಮ್ಮ ನಾವಿಬ್ಬರಾಡುವಾ
ಬಾರಮ್ಮ ನಾವಿಬ್ಬರಾಡುವಾ
ಮುಕ್ತಿ ಸಾಧನವೆಂಬುದ ನೋಡುವಾ
ಹಾರುವ ಕಾಗೆ ಶ್ವಾನನ ಕೊಂದು
ನುರಿತ ಸುಜ್ಞಾನ ಮಂಟಪದೊಳು
ಜೋಡುಗೂಡುವಾ ಬಾರಮ್ಮಾ ನಾವಿಬ್ಬರಾಡುವಾ ||ಪಲ್ಲವಿ||
ಮೂರು ಮನೆಯ ಭೇದ ದಾಂಟುವಾ ಅ
ದರೇಳೆಂಟು ಮನೆಯ ಕಟ್ಟ್ಯಾಡುವಾ ಆ
ಧಾರ ಸ್ವಾಧಿಷ್ಟಾನ ಮಣಿಪೂರಗಳ ಮೇಲೆ ||1||
ನಿಜವೆಂಬೊ ಮೂರು ಮನೆ ನಿಲಿಸುವಾ
ರಜತಮ ಗುಣಗಳ ಬಾಧೆಗೆಡಿಸುವಾ
ಒಜೆನೆ ಯಳಿದು ಭಾವಶುದ್ಧ ಸಾತ್ವಿಕದ
ರಾಜಿಪ ಜ್ಯೋತಿ ಪ್ರಕಾಶದೊಳಾಡುವಾ ಬಾರಮ್ಮಾ ||2||
ಕುಂಡಲಿ ಎಂಬೊ ಸೀಸವ ನೆರೆ
ಭುವನ ಬ್ರಹ್ಮಾಂಡಗಳನೆಲ್ಲವ ಮೀರಿ
ಶಂಭು ಶಂಕರಾಂಕಿತ ಅದರ ಮಾಯೆಯ ಗೆಲಿದ
ತುಂಬಿದ ಕೊಣನೊಳು ಸುರಿತಾಂಬ್ರುತವನು ಬಾರಮ್ಮ ||3||

ಬೇಡ ಸಂಸಾರ ಸುಖ
ಬೇಡ ಸಂಸಾರ ಸುಖ ನೆಲೆಯಲ್ಲ ಮನುಜರಿದ
ನೋಡಿ ನಡೆವುದು ಮುಂದೆ ಪುಣ್ಯಪಾಪನರಿದು
ಮಾಡುವುದು ಶಿವಲಿಂಗ ಪೂಜೆಯನು ಮನ ಮುಟ್ಟಿ
ಕೂಡುವುದು ಶಿವನ ಪಾದವ ಶಂಕರಾ ||ಪಲ್ಲವಿ||
ಒಡಲೆಂಬುದು ಬರಿಯ ಹಡಿಕೆ ಹೊಲಸಿನ ಹಾಳು
ನಡುವೆ ಮಲಮೂತ್ರದ ಕೊಂಡ ಕ್ರಿಮಿಗಳ ರಾಶಿ
ಎಡೆ ನರಕೀ ಎಲುವು ಸುತ್ತಿದ ಅಸ್ಥಿ ಮಾಂಸಗಳಾ ನೆಡಸಿಕೊಂಡಿರೆ ಹೇಸಿಕೆ
ಒಡೆದ ಗೋಡೆಯ ಮೆತ್ತಿ ಹೂಸಿದಂತಹ ದೇಹ
ಉಡಿಗೆ ತೊಡಿಗೆಯ ಮೇಲೆಯಾದವರವಲ್ಲದರಿಂದ
ಪಿಡಿದು ನೋಡಲ್ಕೆ ತುರುಪುಗಳಿಲ್ಲ
ಸಂಸಾರ ಕಡು ನಾರಕೀಯವೆನಿಸಿಪ್ಪುದು ಶಂಕರಾ ||1||
ಕಣ್ಣಿನಲ್ಲಿ ಜೋರು ಕಿವಿಯಲ್ಲಿ ಕೊಗ್ಗಿ ಮೂಗಿನಲ್ಲು
ಬಣ್ಣಿಸಲು ಸುರಿವುತಿಹ ವ್ರಣಬಾಧೆ ಎಂಜಲಿನಾ
ಹುಣ್ಣು ಕುರ ತದ್ದುಗಳು ಮೂಡಿ ಮಿಗೆ ಹಣ್ಣಾಗಿ ಕೆಡುವ ತೆರದಿ
ಹೆಣ್ಣೆಂಬ ನಾಮಕ್ಕೆ ಉರದಲ್ಲಿ ಮಾಂಸವಿದೆ
ಚಿಣ್ಣ ತಾಗಿಯೆ ಮೂಡಿ ಬಾತು ತೆಗ್ಗುವ ತೆರದಿ
ಅಣ್ಣಗಳು ಮಾನ್ಯರೆಲ್ಲರು ಇದಕೆ ಮರುಳಾಗಿ
ಕಣ್ಣಿನಲ್ಲಿ ಸಿಲ್ಕಿಪ್ಪರೊ ಶಂಕರಾ ||2||
ನಿದ್ರೆಯೆಂಬ ಮರವೆ ಹೊದ್ದಿದರೆ ಈ ಜೀವ
ಎದ್ದು ಹೋಹುದು ತನ್ನ ತನುವ ಬಿಸಾಟಲಿಕೆ
ಸಿದ್ಧರಂದದಿ ತಿರುಗಿ ಆಡುತ್ತಿಹ ಅತಿಮನವ ಇರ್ದಿರವನಾರು ಬಲ್ಲರೊ
ಹೊದ್ದ ದೇವಾಂಗಾಭರಣ ಭೂಷಣಗಳ
ಕದ್ದು ಕೊಂಬುದನರಿಯದೆ ಸಾವೆಂಬದೆಂತಹುದು
ಎದ್ದು ನೋಡಲ್ಕಿದನೆಲ್ಲವನು ಕದ್ದು
ಇದ ಸಿದ್ಧರೆನಿಸಿಪ್ಪರೊ ಶಂಕರಾ ||3||
ಹುಟ್ಟಿ ದಾಗಲೆ ವಸಗೆಯ ಓಡೆಂದು ಮುಂಜಿಯಂ
ಕಟ್ಟಿ ಮದುವೆಯ ಮಾಡಲುಚ್ಚಹದ ಹರೆಯವೆಂದು
ಕಟ್ಟಕಡೆ ಯಲ್ಲಳಿದನೆನಲು ಹೂಯಿಸುವ ವಟ್ಟೆಯ ಸಲುವಟ್ಟೆಗಳೆಂಬರೊ
ನಟ್ಟನೆಯವಗೆ ಮಾಡಿದ ಬೀಯ ಸರಿಬೀಯ
ಹೊಟ್ಟೆ ಘನವಾಗಿ ಮನುಜನ ಹೂಳಿಟ್ಟ ಮಾಡಲು
ಮುಟ್ಟದಿರು ಪಣನ ತೆಗೆ ಯೆನುತ ಮಾಡಿದಾ
ಶಿವನ ಕಟ್ಟಳೆಯ ನಾರು ಬಲ್ಲರೊ ಶಂಕರಾ ||4||
ಅರ್ಥ ಪ್ರಾಣವು ಎಂಬ ಮುದ್ದಿನಂಥ ಸತಿಯು
ಹೊದ್ದಳಮ್ಮಳು ಜೀವ ಹೋಯಿತೆಂಬಾಗಳೆ
ಇದ್ದಂತೆ ಆಚೆ ಮನೆಯೊಳಗಿಪ್ಪಂತ ಬುದ್ಧಿವಂತರ ಕರಸುತಾ
ಹೊದ್ದ ವಸ್ತ್ರಾಭರಣವೆಲ್ಲವನು ಮುದ್ರಿಸಿ
ಇದ್ದ ಹಾಗೆ ಒಂದು ಅರುವೆಯನು ಮುಸುಕಿಟ್ಟು
ಉದ್ಯೋಗವುಂಟು ಪೆಣನಂ ತೆಗೆ ತೆಗೆ ಎಂಬರು
ಬಿದ್ದ ಬಳಿಕಾರು ಇಲ್ಲ ಶಂಕರಾ ||5||
ಅರ್ಥವಂ ಗಳಿಸಿ ನಿರರ್ಥಕ್ಕೆ ಕೆಡಬೇಡ
ವ್ಯರ್ಥವಪ್ಪುದು ನಿನಗೆ ಕಾಲನಿಗೆ ಕಾಯವಿದು
ಮೃತ್ಯು ಬಂದಳವಾಗ ಇಡು ಮಿಡನೆ ಮಿಡುಕುತ್ತ
ಮತ್ತೆ ಬಯಸಿದರುಂಟೆ
ಅರ್ಥವನು ಅರಮನೆಯ ಆಳು ಕೊಂಡೊಯ್ವರಾ
ಮಿತ್ರೆಯನು ಮತ್ತೊಬ್ಬ ಅತಿಕಾಮಿ ಸೆಳೆದೊಯ್ವ
ಹುತ್ತದೊಳಗಣ ಹಾವಿನಂತೆ ಕಾದಿರಬೇಡ
ಬಿತ್ತಿ ಬೆಳೆವುದು ಧರ್ಮವ ಶಂಕರಾ ||6||
ಮಾಡುವರು ದೇಗುಲದ ಪರಿಯಂತೆ ವಿಸ್ತರಿಸಿ
ಕೂಡಿ ಬಿಗಿವರು ಹಲವು ವಸ್ತ್ರವನಲಂಕರಿಸಿ
ಮೂಡಿ ಬಾಹ ರವಿಯಂತೆ ದರ್ಪಣಂಗಳ ಕಟ್ಟಿ
ಬೀದಿಯೊಳಗೆ ಒಯ್ಯುತಿಹರು
ಗೂಡಿನೊಳಗಣ ಪಕ್ಷಿ ಹೊರಟು ಹೋದರೆ ಹಾಳು
ಗೂಡಿಗ್ಯಾಕೊ ಇಷ್ಟೊಂದು ಸಂಭ್ರಮದ ಸಡಗರವು
ಬೇಡ ಬೇಕೆನ್ನಲಾಗದು ಹೊತ್ತು ಹೋಗುತಿದೆ
ನೋಡಿರೆಲ್ಲರತಿ ವಸ್ತುವನು ಶಂಕರಾ ||7||
ಉಡಿದೊಗಲು ಕೈಗರಗಸ ಕತ್ತಿ ಚವುಕಳಿ
ಹಿಡಿದ ವಂಟಿ ಬಾವುಲಿ ಕಾಲು ತೊಡರುಗಳು
ಎಡದೆ ಕ್ರೇಮನ ರೌದ್ರದ ಕೋಪದಿಂದ
ಯಮ ಭಟರು ಘುಡಿ ಘುಡಿಸುತಿಪ್ಪರೊ
ಪೊಡವಿಯೊಳು ಬಿದ್ದಿರ್ದ ನರನಾವ ಶಿವನೆಂದು
ಮಡದಿ ಮಕ್ಕಳು ಬಂಧುವರ್ಗ ಸುತ್ತುಗಟ್ಟಿರಲು
ನಡುವೆ ಯಾರು ಕಾಣದಂತೆ ಅವನಸುವ ಪಿಡಿದು
ಕೊಂಡೊಯ್ವರೊ ಶಂಕರಾ ||8||
ಒಡೆಯರೊಡವೆಯ ಕೊಳ್ಳಲು ಕಾಳಗಳಾದಂತೆ
ನಡುವೆ ಇವರು ತಮ್ಮ ತಾವರಿಯದಳುತಿಹರು
ಕಡು ಪಾಪಿ ತಮ್ಮ ಕೆಡಿಸಿದನೆಂದು ದೈವವನು
ಜರಿದು ಶಾಪಿಸಿ ಬಯ್ವರೊ
ನುಡಿದಾ ಹೊಲೆಯ ಹೋಹುದೈಸೆ ಮತ್ತೆ ಒಬ್ಬರ
ಕಡೆಯ ಬಾರಿಯ ಪಯಣ ತಮಗೆ ತಪ್ಪದು ಮುಂದೆ
ನಡುವೆ ನಾಲ್ಕೆರಡು ದಿನ ಅವಧಿಯೊ ಸಲ್ಲರಿದಕೆ
ಕಡುಗಲ್ಯಾತಕೆ ಮನದಲ್ಲಿ ಶಂಕರಾ ||9||
ಬೆಳ್ಳಿ ಬಂಗಾರ ಉಲ್ಲಾಯಕ್ಕೆ ಎಲ್ಲವನಿಕ್ಕಿ
ಹೂಳಿಯೊಳಗಿಟ್ಟು ಬಂದವರೆಲ್ಲರು ತಮತಮಗೆ
ಒಳ್ಳಿದನು ಗುಣವಾನ ರೂಪುಂಟು ಎಂದೆನುತ
ಹೊಳ್ಳು ನುಡಿಗಳ ನುಡಿವರೊ
ಎಳ್ಳು ಅಕ್ಷತೆ ಸಕಲ ಭಕ್ಷ್ಯ ಭೋಜನಂಗಳಂ
ಹಳ್ಳ ದಂಡೆಯಲ್ಲಿರಿಸಿ ಕೂಳ ಮುದ್ದೆಯ ಮಾಡಿ
ಕೊಳ್ಳೆಂದು ಕಾಗೆಗಳ ಗಮನವನ್ನು ಗಮನಿಸಿದರೆ
ಇಂಥ ದಳ್ಳುರಿಯನ್ಯಾರುಂಬರೊ ಶಂಕರಾ ||10||
ಇಂತು ಸಂಸಾರೆಂಬೊ ಬ್ರಾಂಹತಿಗೆ ಸಿಲ್ಕಿ
ಸಂತತಂ ನಾ ನಿಮ್ಮ ನೆನೆಯಲ್ಕೆ ಕಡೆಗಾಣೆ
ಅಂತಕನ ಬಾಧೆಯೊಳಗಾಗಿ ನರಕಾಂಬುಧಿಯೊಳೆಂಉ ಈಜಾಡುವೆ
ಸಂತತಂ ಮಿಗೆ ಸತ್ತು ಹುಟ್ಟುತ್ತಿರಲಪ್ಪೆ ಕಾ
ಲಾಂಕತಕನೆ ನೀನೆನ್ನ ಸಲಹುವ ದೇವರ ದೇವ
ಅಂತಕಾಂತಕನೆ ರಕ್ಷಿಪುದೆನ್ನ ನೀನೀಗ ಶಾಂತ ಶಂಕರಲಿಂಗವೆ | 11||

ಹುಸಿಯೊ ಹುಸಿಯೊ
ಹುಸಿಯೊ ಹುಸಿಯೊ ಹುಸಿ ಮನವೆ
ಹುಸಿದು ಹುಸಿದು ನೀನು ಮಸಿ ಮಣ್ಣಾದೆಲೊ ||ಪಲ್ಲವಿ||
ಗುರು ಹಿರಿಯರ ಕೂಡೆ ಸಾಧು ಸತ್ಯರ ಕೂಡೆ
ಪರಮ ಪತಿವ್ರತೆಯರ ಕೂಡೆ
ಶರಣರ ಕೂಡೆ ಸುರ್ಧಂ ಸೀಲರ ಕೂಡೆ
ಸ್ವರಹಿ ಸ್ವರಹಿ ನೀನು ಸೂರೆಯೊಡಲಾದೆಲೊ ||1||
ನಿನಗೇಕೆ ಗುರು ಸೇವೆ ನಿನಗೇಕೆ ಲಿಂಗಪೂಜೆ
ನಿನಗೇಕೆ ಜಂಗಮ ದಾಸೋಹ
ನಿನಗೇಕೆ ತ್ರಿವಿಧ ತೀರ್ಥ ಪ್ರಸಾದವು
ನಿನಗೇಕೆ ಸತ್ಯ ಸದಾಚಾರವು ||2||
ಒಂದಲ್ಲ ಎರಡಲ್ಲ ಎಂಬತ್ತು ನಾಲ್ಕು ಲಕ್ಷವೇನೆಂದು ಜನಿಸಿದೆ
ಯೋನಿ ಮುಖದೊಳಗೆ
ಬಂದೂದ ಸಾಲದೆ ಮತ್ತಿನ್ನೇಕೆ ಮರೆದೆಯಾ
ತಂದೆ ಶಂಕರಲಿಂಗವತಾರವ ||3||