Categories
ರಚನೆಗಳು

ಓರಬಾಯಿ ಲಕ್ಷ್ಮೀದೇವಮ್ಮ

ಆಂಧ್ರ ಪ್ರಾಂತದಲ್ಲಿರುವ ಒಂದು ಮಹಾನ್
ಕಥನಾತ್ಮಕ
೧೨
ಬಾಗಿಲಿಕ್ಕಿದ ಬಗಿಯೇನೆ | ಬೇಗ ಬ್ಯಾಗದಿಂದ ಪೇಳೆ ನೀನೆ |
ನಾಗವೇಣಿಯೆನ್ನ ಕೂಡ ಜಾಗುಬ್ಯಾಡ ಬಾಗಿಲುತೆಗೆಯೆ ಪ
(ಬಂದೆಯಾದರಿಂದಿನದಿನದಿ) | ಛಂದದಿಂದ ಪೇಳೊ ಮದದಿ
ಬಂದದೇನು ಗಾಡಾಧಕಾರದಿ | ನಿಂದು
ನಾಮವುಸಾರೊ ಮುದದಿ ೧
ಅಚ್ಯುತಾನ ಇಚ್ಛೆಯಿಂದ | ಸ್ವೇಚ್ಛ ದೈತ್ಯರಾಳಿದೇನೆ
ಮತ್ಸ್ಯರೂಪಗೈದುನಾನೆ | ಭೀಭತ್ಸು ರಾಯ ನಲ್ಲವೇನೆ ೨
ಯೇಸು ಪೇಳಿದ್ರಿಗುಣವನ್ನು | ಈಸು ಮಂದಿಯೊಳು ನೀನು
ಬೂಸುರಾಗೆ ಭಾಷೆಕೊಟ್ಟು | ಕೂಸೀನ ಕೊಡದಾವ ನೀನು ೩
ಪಾರ್ವತಿಯ ಪತಿಯನೊಲಿಸಿ | ಪಾಶು ಪತಾಸ್ತ್ರವ ಗೆಲಿಸಿ
ಪರಮ ಕೂರ್ಮಗೆ ಪಾದಸೇವಕ |
ಪಾರ್ಥರಾಯನೆ ಪಾಂಚಾಲಿ ೪
ಪಾರ್ಥರಾಯ ನೀನಾದರೇನು, ಕೀರ್ತಿಯೆಲ್ಲಾ ಬಲ್ಲೆನಾನು
ಸ್ತೋತ್ರ ಮೂರುತಿ ತಂಗಿಗೀಗ | ತೀರ್ಥಯಾತ್ರೆಲಿ ಗೆಲಿಹೋಗೊ ೫
ಫುಂಡತೊರೆವ ಗಂಡನಾನೆ | ಖಾಂಡವನ ದಹಿಸಿದೆನೆ
ಗಂಡುಗಲಿ ವರಹನ ದಾಸಾ | ಗಾಂಡೀವರ್ಜುನ ನಲ್ಲವೇನೆ ೬
ಧೀರ ನೀನಾದರೆ ಏನು ಭಾರಿ ಗುಣವೆಲ್ಲಾ ಬಲ್ಲೆನಾನು
ದ್ವಾರಾವತಿಯಲ್ಲಿ ದೊರೆತನದಲ್ಲಿ ಧೀರ
ಯತಿಯಾಗಿರು ಹೋಗೋ ೭
ಕೋಟಿರಾಯಗೆ ಮೇಟಿ ನಾನು | ಮಾಟವಾದ ಮುಖದವನು|
ವಟುರೂಪನ್ನ ವಲಿಸಿದೆನೆ ಕಿರೀಟಿ ಅಲ್ಲವೆ ಕೃಷ್ಣಿನಾನೆ ೮
ಕೋಟಿರಾಯಗೆ ಮೇಟಿ ನೀನು | ಮಾಟವಾದ ಮುಖದವನು |
ಬೂಟಿತನದಿ ವಿರಾಟನಲ್ಲಿ | ಆಟವಾ ಕಲಿ ಸ್ಹೋಗೊ ನೀನು ೯
ಘಾತುಕ ಕರ್ಮಗಳನ | ಖ್ಯಾತಿಯಿಂದ ಚೈಸಿದ್ದೇನೆ
ಮಾತೆ ಅಳಿದಗೆ ದೂತನಾನು ಶ್ವೇತವಾಹನ ದ್ರೌಪದಿನಾ ೧೦
ಶ್ವೇತ ವಾಹನ ನೀನಾದರೇನು | ಖ್ಯಾತಿಯೆಲ್ಲ ಬಲ್ಲೆ ನಾನು
ಜೂತದಲ್ಲಿ ಸೋತವ ನೀ | ಅಗ್ನಾತವಾಸದಲ್ಲಿರು ಹೋಗೋ ೧೧
ವಿಪಿನಾವಾಸದಿಯುದ್ಧ | ವಿಪರೀತ ಮಾಡಿದೇನೇ ಶ್ರೀ
ಪತಿ ಶ್ರೀ ರಾಮದೂತ, ಭೂಪ ವಿಜಯನಾ ವಿಮಲಾಂಗೀ ೧೨
ಭಾಳ ಪೇಳಿದಿ ಗುಣವನ್ನು ಕೇಳಲಿಕೆ ಅಶಕ್ಯವಿನ್ನು
ಬೋಳರಾಯರೊಳ್ ಕಾಳಗವನು |
ಭಾಳ ಹರುಷದಿಗೆಲಿ ಹೋಗೋ ೧೩
ಉಕ್ಕುವ ಯೆಣ್ಣೆಯೊಳ್ ನೋಡಿ |
ಮೀನು ಫಕ್ಕನೆ ಖಂಡಿಸಿದೆನೇ
ರುಕ್ಮಿಣಿ ಪತಿ ಶ್ಯಾಲ ನಾನು | ಹೆಚ್ಚಿನ ಸವ್ಯಸಾಚಿ ನಾನು ೧೪
ದುಷ್ಟ ಕುರುಪಕಿಗೆ ಭಯವ ಬಿಟ್ಟು | ಶ್ರೇಷ್ಟ ಸ್ತ್ರೀ ವೇಷ ಬಿಟ್ಟು
ಅಷ್ಟು ಜನರೊಳು ಗುಟ್ಟುತೋರದೆ | ಧಿಟ್ಟದ್ವಿಜನಾಗಿ ಹೋಗೊ ೧೫
ಯುದ್ಧದಲಿ ಪ್ರಸಿದ್ಧನಾನು | ಭದ್ದವಾಗಿ ಮಾಡುವೆನು
ಬೌದ್ದ ರೂಪಗೆ ಬಂಧು ನಾನು | ಪ್ರಸಿದ್ಧ ಕೃಷ್ಣ ನಾನಲ್ಲವೇನು ೧೬
ಯುದ್ಧದಲ್ಲಿ ಪ್ರಸಿದ್ದನೆಂದು | ಸಿದ್ದಿಗಳನು ಹೇಳಿದಿಂದು
ಮುದ್ದು ಬಬ್ರುವಾಹನನಲ್ಲಿ | ಬಿದ್ದ ಸುದ್ದಿಯ ಪೇಳೊ ಇಲ್ಲಿ ೧೭
ಕಂಜ ಮುಖಿಕಲಿ ಭಂಜನಾನ ಮಾಯಾ
ಪಂಜರದೊಳಿರುವೆನೆ | ಮಂಜುಳ ವಾಣಿ
ಕೇಳೆ ನಾರಾಯಣನಲ್ಲವೇನೆ ೧೮
ವಜ್ರದಬಾಗಿಲು ತೆಗೆದು | ಅರ್ಜುನನಪ್ಪಿದಳ್ ಬಿಗಿದು
ಸೆಜ್ಜೆಯೊದೊಳು ಬಾರೆ ಎಂದು ಕರೆದು | ಮೂರ್ಜಗ
ದೊಡೆಯಗೆ ಕೈಮುಗಿದು ೧೯
ನಿರುತವೀ ಸಂವಾದ ಪಠಿಸಲು ಭರಿತವಾದ ಸುಖವೀವೊದು
ತ್ವರಿತ ದಿಂದಲಿ ದುರಿತಕಳಿಯೋದು|ನರಸಿಂಹ
ವಿಠಲನ್ನ ನೆನೆಯೋದು ೨೦

ಸೋದೆ ಅಥವಾ ಸೋಂಧ ಉತ್ತರ ಕರ್ಣಾಟಕದ
೧೫
ಮಂಗಲಾರತಿಯ ಪಾಡಿರೇ | ರಂಗನಾಥರುಕ್ಮಿಣೀಗೆ ಪ
ಸಿಂಧು ಸುತೆಗೇ | ಸೀತಾರಾಮಚಂದ್ರಗೇ | ಉಪೇಂದ್ರಗೇ ಅ.ಪ
ನೀರೊಳಾಡಿದಾ ಮತ್ಸ್ಯ ಕೂರ್ಮವರಹಾವತಾರಗೇ
ಕರುಳ ಮಾಲೆಧರಿಸಿದಾ ಲಕ್ಷ್ಮಿನಾರಸಿಂಹಗೇ ೧
ಬಲಿಯ ದಾನವನ್ನೇ ಬೇಡಿ ಮಾತೆ ಶಿರವನಳಿದವಗೇ
ಛಲದಿ ದೈತ್ಯನ ಕೊಂದು | ತಾಯಿಗೆ ಬಾಯಲ್ಲಿ
ಜಗವತೋರ್ದವಗೇ ೨
ಬೆತ್ತಲಾಗಿ ನಿಂತಿದ್ದ ಉತ್ತಮ ಬೌದ್ಧ ಕಲ್ಕಿಗೇ
ಸೃಷ್ಟಿಗೊಡೆಯ ಬಳ್ಳಾರಿ ಲಕ್ಷ್ಮೀನಾರಸಿಂಹವಿಠಲಗೇ ೩

ಲಕ್ಷ್ಮಿ ಇಲ್ಲದೆ ನಾನಿರೆನೆಂದು ವೈಕುಂಠವ

ಸೀಸ ಪದ್ಯ
ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ
ರಾಘವಾ ಕೈಪಿಡಿದು ಸಲಹನ್ನನು ಪ
ಸೀತಾ ಮನೋಹರಾ | ಶ್ರೀ ರಾಮಚಂದಿರಾ
ಪಾತಕಾಮೃಗವಳಿದು | ಪರಮಧೀರಾ ೧
ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು
ಅಗಣಿತಾಗುಣಧಾಮ | ಆನಂದ ರಾಮ ೨
ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ
ಸೀತೆಯನು ತಂದ ಪ್ರಖ್ಯಾತಮಹಿಮಾ ೩
ಲೋಕದೊಳು ನೇಮ ನಿನ್ನ | ಪಾಪಹರ ನಾಮ
ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ ೪
ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ ೫

ಕನಕ ಕಶ್ಯಪನಳಿದು

ರಾಘವೇಂದ್ರನೆಂದು ನುಡಿದವರಿಗೆ | ಅನುರಾಗದಿಸಲಹುವರಾ
ಭಾಗವತಾ ಪ್ರಿಯ ಯೋಗಿ ಜನನುತ |
ಶ್ರೀ ರಾಘವೇಂದ್ರರಾಯಾ ಪ
ರಾಮಧ್ಯಾನವನು ಮಾಡುತಲನುದಿನ | ಜಯಿಸಿದಿ ರಾಕ್ಷಸರಾ
ರಾಘವೇಂದ್ರನಂಘ್ರಿಗಳನು ಅನುರಾಗದಿ |
ರಾಯರಾವ್ಯಾಧಿಗಳಳಿದು ಸೇವಾ ಕೊಡುತಿಹರಾ
ರಮಾವಲ್ಲಭನಾಶ್ರಯ ಮಾಡಿ | ರಾಜ್ಯವಾಳಿದರೆ ರಾಘವೇಂದ್ರ ೧
ಘಾತುಕ ದನುಜನ ಕಾಲವಿದೆಂದು ಎಣಿಸದೆ ಕಲಿಯುಗ
ಘನ ಪರಾಕ್ರಮದಿಂದ ಮೆರೆಯುವಿ | ಸುಯತೀಂದ್ರ ನೀ
ಘನ ಜಾಡ್ಯಗಳ ಕಳೆದು ಜನರಿಗೆ ಸುರಿಸಿದಿ ಸುಖಮೇಘ
ಘಾ ಬುರಿಯಿಂದಲಿ ಬಂದ ಆತುರರಿಗೆ ಕಳದಿರೊ ನೀ ಅಘವಾ ೨
ವೇದಶಾಸ್ತ್ರ ಪಾರಾಯಣ ಮಾಡುತ | ವೃಂದಾವನ ದೊಳಿರುವೇ
ವ್ಯಥೆಯಿಂದಲಿ ಬಂದಾ ತುರರಿಗೆ | ಅತಿಸುಖವನು ಸುರಿವೇ
ವೇದವ್ಯಾಸರು ಮೊದಲಾದರೊಳು | ಆಧಾರದೊಲಿರುವೇ
ವೇಷತಾಳಿ ನೀ ಯತಿಯಾಗಿ ಈ ಜಗದೊಳುನೀ ಮೆರೆವೆ ೩
ಭ್ರಮ ತಪ್ಪೀದಂತೆ ಭವದೊಳು ಬಿದ್ದು |
ಬಿಡುವೆನುರಾಘವೇಂದ್ರಾ
ದ್ರಾವಿಡ ಬಡಗ ಮತ್ಸ್ಯ ಮೊದಲಾದವರೊಳು |
ದ್ರಾಕ್ಷಾಫಲದಂತೆ
ಮಧುರವು ತೋರಿಸಲಹೊಗುಣಸಾಂದ್ರಾ ದ್ರವ್ಯ ಪತಿಸಿರಿ
ನರಸಿಂಹ ವಿಠಲನ ತೋರೋದಯದಿಂದ ನೀರಾಘವೇಂದ್ರಾ ೪

ಶಿವಮೊಗ್ಗ ಜಿಲ್ಲೆಯಲ್ಲಿರುವ ಮಹಿಷಿಯು
೧೬
ಲಾಲಿ ಕಶ್ಯಪಗೋತ್ರ ಪರಮ ಪವಿತ್ರ |
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ
ನೀರೊಳಗೆ ಮನೆಯು ಮಾಡಿಓಡ್ಯಾಡೀ |
ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ
ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ
ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ ೧
ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ
ಮಡದಿಗೋಸ್ಕರ ದಶಶಿರನ ಶಿರವತರಿದೂ
ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ
ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ ೨
ಹಯವನೇರಿದ ಹರಿಯು ಬಹುಜನರ ಪೊರೆಯೇ
ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ
ಪರಮ ಪುರುಷ ಸದ್ಭಕ್ತರ ಸಿರಿಯೇ
ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ ೩

ಆಂಧ್ರ ಪ್ರದೇಶದ ಹೈದರಾಬಾದಿನ ಸಮೀಪದ
೧೦
ವರ ಮಂತ್ರಾಲಯ ವಾಸಾ | ನಿನ್ನ ಚರಣವ
ನಂಬಿದೆನು ಸರ್ವೇಶಾ
ಕರುಣದಿಂದಲಿ ಕಾಯೊ ಯನ್ನಧೀಶಾ | ನಿನ್ನ
ಸ್ಮರಣೆಯೆ ಉಲ್ಲಾಸಾ ೧
ಹೆಚ್ಚು ಬೇಡುವುದಿಲ್ಲ ನಿನ್ನಾ | ಜಗದಿರಚ್ಚು
ಮಾಡಲಿಬೇಡ ಇನ್ನಾ
ಇಚ್ಛಿಸುವೆ ಭಕ್ತಿರನ್ನಾ | ಯನಗೆ ಪ್ರತ್ಯಕ್ಷನಾಗೂಯತಿರನ್ನಾ ೨
ಎಂಥೆಂಥವರನು ಪೊರೆದೇ | ಯನ್ನಂಥವರು ನಿನಗೆ ಹಿರಿದೇ
ಪಂಥದಿಂದಲಿ ನಾನಿನ್ನ ಕರದೇ | ಮನದ
ಚಿಂತೆಯನೀ ತರಿದೇ ೩
ನಿನ್ನ ಮೆಚ್ಚಿಸಲೆನಗೆ ಶಕ್ತಿ | ಘನ್ನ ಮಹಿಮನೇಕೊಡು ಭಕ್ತಿ
ಇನ್ನು ಬೇಡುವುದೆಲ್ಲ ವಿರಕ್ತೀ | ಎನಗೆ
ಚೆನ್ನಾಗಿ ಪಾಲಿಸು ಮುಕ್ತೀ ೪
ಪ್ರಥಮದಲಿ ಪ್ರಹ್ಲಾದನಾಗೇ | ಅಲ್ಲಿದಿತಿವಂಶದಲಿ ನೀ ಪೋಗೇ
ಹತ ಮಾಡದೆ ಅವನೀಗೇ | ಪಿತಗೆ ಸದ್ಗತಿಯಿತ್ತೆಯೋಗೀ ೫
ಘೋಷಿಸಲೇ ನಿನ್ನ ವ್ಯಾಸ ಮೂರ್ತಿ | ಹದಿನಾಲಕ್ಕು
ಲೋಕದಲಿ ಪ್ರಖ್ಯಾತಿ
ಏನೆಂಧೆÉೀಳಲಿ ವಾರ್ತೀ | ರಾಶಿರಾಶಿತುಂಬಿದವು ನಿನ್ನ ಕೀರ್ತೀ ೬
ಶ್ರೀರಾಘವೇಂದ್ರ ಮುನಿರಾಯಾ | ಸದ್‍ಯೋಗಿಗಳ
ಮನಸಿಗೆ ಪ್ರೀಯಾ
ಮೂಲರಾಮನಿಗೆ ನೀ ಪ್ರೀಯಾ | ಬೇಗ ಎದ್ದು
ಬಂದು ಪಿಡಿಕೈಯಾ ೭
ಸತ್ಯ ಸಂಧರು ನೀವೆನಿಸೀ | ದೊಡ್ಡ ಉತ್ತರಾದಿ ಮಠದಿ ಜನಿಸೀ
ಭಕ್ತರನೆಲ್ಲಾ ಸ್ವೀಕರಿಸೀ | ಮಧ್ವಮತವನುದ್ಧರಿಸೀ ೮
ಬಿದ್ದೆ ನಿನ್ನ ಪಾದಕೈಯಾ | ಎನ್ನ ವುದ್ಧಾರ ಮಾಡುಜೀಯಾ
ವಿದ್ವಾಂಸರಿಗೆ ನೀ ಘೇಯಾ | ಬೇಗ ಎದ್ದು ಬಂದು ಪಿಡಿಕಯ್ಯಾ ೯
ನರಸಿಂಹ ವಿಠಲನ ಪ್ರೀಯಾ | ಕರೆಸಿದ್ದು ನೀ ಎನ್ನ ಖರೆಯಾ
ಮನಸಿನೊಳಿದ್ದದ್ದು ಅರಿಯಾ | ನಮಸ್ಕರಿಸಿ ಬೇಡುವೆನು
ಮಹರಾಯಾ ೧೦

ಸಂಜೀವನವ ತಂದೆ ನಾನು
೧೩
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ
ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ
ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ
ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ
ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು
ಪರಿ ಪರಿವಿಧದಿಂದ ರಾಜರು ಹರುಷಗರೆದರೂ ೧
ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ
ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ
ಮೂರ್ಛೆಗೈದು ಮೃತನಾದನು ೨
ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ
ಸತತ ದ್ರವ್ಯಗಳ ಕೊಡುವೆನೆಂದು ಸಾರಿಸಿದ
ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ
ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ
ಕೊಡುವೆನೆಂದು ನುಡಿದಾನು ೩
ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ
ಕನ್ನಿಕೆಗೆ ಮಾಂಗಲ್ಯ ಬಂಧನ
ಮಾಡಿಹೋದಾರು ೪
ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು
ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು
ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ
ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ ೫
ಒಂದು ದಿನ ಸುಂದರಿ ಬಂದವರ ಕೇಳಿದಳು
ಮಂದಗಮನೆ ಇಂದು ದಿವಸಿ ವ್ರತವು ಅಂದರು
ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು
ಬಂಧು ಬಳಗೆ ಇಲ್ಲದಲೆ ಮಾಡುವುದೇನು ೬
ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು
ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು
ಹರತಾ ಭಂಡಾರ ಒಡೆದು ಹರುಷಗರೆದನು
ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು
ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು
ಸತತ ನಾರಸಿಂಹನ ಸ್ಮರಣೆ ಮಾಡಿದರು ೭

ಹಂಪೆಯ ದಾರಿಯಲ್ಲಿ ಒಂದು ಅರಳೀ
೧೧
ಸುಂದರಾ ಶ್ರೀರಾಮ ಚಂದ್ರರಾ | ಪಾದಾರವಿಂದಗಳೀಗೆ
ನಾ ವಂದಿಸುವೆ
ವಂದಿಸೂವೆ ಆನಂದಿಸೂವೆ | ಬಹು ಚಂದದಿಂದಲಿ
ನಲಿದಾಡುವೇ ಪ
ಉತ್ತರಾದಿಮಠದ ವಿಚಿತ್ರಗಳು | ಯನ್ನ ನೇತ್ರದಿಕಂಡು
ಪವಿತ್ರಳಾದೇ
ಶ್ರೀ ಸತ್ಯಧ್ಯಾನ ತೀರ್ಥರು ನಿತ್ಯ ಪೂಜಿಸೂವೋ
ಪರಮಾತ್ಮನ ಕಂಡು ಕೃತಾರ್ಥಳಾದೇ ೧
ಮೂರ್ಜಗದೊಳಗೆಲ್ಲಾ ಪ್ರಜ್ವಲಿಸುವೊ | ವಜ್ರ
ಮಂಟಪ ವೈಭವನೋಡಿದೆ
ಮಧ್ಯದಲಿ ಮೂಲ ಸೀತಾ ರಾಮ ಕೂತದ್ದು
ನೋಡಿ ಉಧೃತಳಾದೇ ೨
ಸತ್ಯಧ್ಯಾನರು ಎತ್ತಿ ಮಾಡುವಂಥ | ಮಂಗಳಾರ್ತಿಯನೆ ಕಂಡೆನೇ
ಮುತ್ತು ಮಾಣಿಕ್ಯದಾ ನವರತ್ನದಾ ಚಾಮರ ಎತ್ತಿ ಬೀಸುವ
ವಿಸ್ತರ ನೋಡಿದೆ೩
ವುಂಡುವುಂಡು ಲೋಕದೊಳಗೆಲ್ಲ ಜನರು
ಕೊಂಡಾಡುವುದ ನಾ ಕೇಳಿದೆ
ಪಂಡಿತರೆಲ್ಲಾ ಹಿಂಡು ಹಿಂಡಾಗಿ ಅಖಂಡ ದಕ್ಷಿಣೆ
ಪಡೆವುದ ನೋಡಿದೆ ೪
ಸತ್ಯಬೋಧರು ಸತ್ಯಸಂಧರು ಮೊದಲಾಗಿ
ಮುಟ್ಟಿಪೂಜಿಸಿದ ಮೂರ್ತಿಯು
ಮತ್ತೆ ಕುಬೇರನ ಅಳಕಾ ಪಟ್ಟಣವೇ ಪ್ರತ್ಯಕ್ಷ ಬಂದಿರುವುದಿಲ್ಲಿ ೫
ಬೆಳ್ಳಿ ಭಂಗಾರದ ಮಿಳ್ಕೆ, ತಂಬಿಗಿ ಢಾಲಿಯನು ಕೈಯಲಿ
ಜನರು ಕೊಂಡೊಯ್ವರು
ಸುಳ್ಳಲ್ಲಿ ಈ ಮಾತು ಒಳ್ಳೇ ಜನರು ಕೇಳಿ ಬಲ್ಲಷ್ಟು ಪೇಳುವೆನು
ಭಾಳಿರುವುದು ೬
ಧಿಟ್ಟ ಶ್ರೀರಾಮರ ದಯದಿಂದಲೀಗ
ಪ್ರತ್ಯಕ್ಷವೈಕುಂಠವೆನಿಪುದೂ
ದುಷ್ಟಜನರಸೂಯೆ ಬಟ್ಟರೆ ಯಮಪಟ್ಟಣದ
ದಾಯಪಿಡಿವರೂ ೧೦
ದೋಷರಹಿತ ವೇದವ್ಯಾಸದೇವರ ಸಂಪುಟ ಲೇಸಾಗಿ
ನೋಡಿ ಸಂತುಷ್ಟಳಾದೇ
ಕಾಶಿಮೊದಲಾದ ಸುಕ್ಷೇತ್ರಗಳು ವಾಸವಾಗಿರುವುವು
ಈ ಮಠದಲಿ ೧೧
ಮರುತನಧೀಷ್ಟಾನರಾಗಿ ಮಾಡುವರು ಈ ಪೂಜೆ
ಮತ್ಯಾರಿಗೀಡಿಲ್ಲನೋಡು
ಹೆಚ್ಚಿನ ಶಾಸ್ತ್ರ ವಿಚಾರ ಮಾಡುವರು
ಸೃಷ್ಟಿವೊಳಗಿನವರಿಗೀಡಿಲ್ಲನೋಡು ೧೨
ವಾದಿಮತದ್ವಾದಿನೀ ಸೋಲಿಸುವರು | ಮಾಯಮತಿಗಳ
ಮಾಯಮಾಡುವರೂ
ನ್ಯಾಯ ವ್ಯಾಕರಣ ವೇದಾಂತ ಸಿದ್ದಾಂತಗಳನ್ನು ಬಾಯಿ
ಪಾಠದಿಬೋಧಿಸುವರೂ ೧೩
ನರಸಿಂಹ ವಿಠಲನದಯದಿಂದಲೀ ನರಲೋಕ
ಸುರಲೋಕ ಪೂಜ್ಯರಿವರೂ
ವರ ಪೀಠದಲಿ ಕುಳಿತು ಮೆರೆಯುವರು | ಜಗದ್ಗುರು
ಶಿರೋಮಣಿಯೆಂದು ಕರೆಸಿಕೊಳ್ಳುವರೂ ೧೪

ತಪ್ಪೆಣಿಸುವರೇನೋ
೨೧
ತಪ್ಪೆಣಿಸುವರೇನೋ | ತಾಮರದಳಾಕ್ಷ
ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ
ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ
ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ
ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ
ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ ೧
ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ
ಅಂತರದಿ ನಿನ್ನೊಮ್ಮೆ ನೆನೆದನೇ ನೋ
ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ
ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ ೨
ನಾಮಾಡಿದಪರಾಧ ನೀಕ್ಷಮಿಸದಿದ್ದರೆ
ಯಾರು ಪೊರೆವರೊ ಎನ್ನ ವಾರಿಜಾಕ್ಷ
ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ
ಇನ್ನೇನು ಮಾಡಿದರು ಮಾಡೋ ನೀನು ೩

ಹಾಡಿನ ಹೆಸರು :ತಪ್ಪೆಣಿಸುವರೇನೋ
ಹಾಡಿದವರ ಹೆಸರು :ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ
ರಾಗ :ದರ್ಬಾರಿ ಕಾನಡಾ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ