Categories
ರಚನೆಗಳು

ಓರಬಾಯಿ ಲಕ್ಷ್ಮೀದೇವಮ್ಮ

ಶ್ರೀಹರಿಯೆ ಕೂರ್ಮನಾಗಿ ನಿಂತು ಮಂದರ
ಸಂಪ್ರದಾಯ
೧೪
ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ
ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ
ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ
ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ ೧
ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ
ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ ೨

ವಿಶೇಷ ಸಂದರ್ಭ
೧೭
ಕಂಡೆ ಸ್ವಾದಿ ಪುರರÀನ | ಕೊಂಡಾಡುವೆ
ವಾದಿರಾಜ ಗುರುಗಳನಾ ಪ
ಭೂತಪ್ರೇತವ ಬಿಡಿಸುವವನಾ | ಅನಾಥರಿಗೆ
ಪ್ರೀತಿ ತೋರುವವನಾ
ಮಾತಿಗೆ ಮಾತು ಮಾಡುವವನಾ | ಗುರುನಾಥನ
ದೂತ ವಾದಿರಾಜನಾ ೧
ಧವಳ ಗಂಗೆಯ ದಿವ್ಯ ಸ್ನಾನ | ಅಲ್ಲಿ ಹೊಳೆಯುವಂಥಾ
ಸಾಲು ಬೃಂದಾವನಾ
ಕೊಳಲ ಕ್ರಿಷ್ಣನ ದರುಶನಾ | ಚಂದದೊಳು
ಅನಂತೇಶ್ವರನ ಸನ್ನಿಧಾನಾ ೨
ವಾತಸುತನಿಗೆ ಸಮನೀತ ಅದ್ಭುತ ಖ್ಯಾತ |
ಲೋಕಜನರಿಗೆ ಪ್ರೀತ
ಪ್ರಖ್ಯಾತ ಮಹಿಮ ಯಮರಾಜನ ದೂತ | ಜಗಖ್ಯಾತ
ಗುರುವರನಾ೩
ಪಂಚ ಬೃಂದಾವನವ ನೋಡಿ ಮನದ
ಸಂಚಿತಾಗಮ ಈ ಡ್ಯಾಡಿ
ಮುಂಚೆ ನಮಸ್ಕಾರ ಮಾಡಿ | ಪ್ರಪಂಚದಲ್ಲೆ |
ಅಧಿಕ ವಾದಿರಾಜರ ನೋಡಿ೪
ಭೂಸುರನಂತ್ಹೊಳಿಯುವದ | ಬಂದು ನೋಡಲು
ಜನಕೆ ಉಲ್ಲಾಸ
ಲೇಸಾದ ಮಹಿಮೆ ಉಳ್ಳವರನಾ | ಸ್ವಾದಿಲ್ವಾಸ
ಮಾಡುವ ವಾದಿರಾಜರ ೫
ಚಕ್ರ ಶಂಖª Àಧರಿಸಿದಾ | ನಮ್ಮರುಕ್ಮಿಣಿ ಸಹಿತ ಬಂದು ನಿಂತಿಹ
ಶಕ್ರನಾಗರ್ವಮುರಿದನ | ಅಮಿತ ವಿಕ್ರಮ ಚರಿತ |
ತ್ರಿವಿಕ್ರಮದೇವನಾ೬
ಎಂತು ಹೇಳಲಿ ಧ್ವಜಸುತ್ತಿ ಅಲ್ಲಿ | ಸಂತಾನವನು
ಬೇಡುವವರನು | ಬೆನ್ಹತ್ತಿ
ನಿಂತು ಹರಸಿದರು | ಎತ್ತಿ ಅದರಲಿ ಸಂತಾನ
ಬೀಜಗಳನು ಬಿತ್ತುವರು ೭
ಚವಕಿ ಮಠದಿ ದಿವ್ಯಪ್ರಸ್ತ | ಓಡಾಡಿ ಬಡಿಸುವ ಜನಗಳ ಸಿಸ್ತಾ
ನಿಂತು ನೋಡಿದೆನು ಪ್ರಶಸ್ತಾ ಅಲ್ಲಿ ಕೂತು ನೋಡುವ
ಯತಿಗಳ ಸಿಸ್ತಾ ೮
ಭೋಗತನದ ಫಳಾರ ಅಲ್ಲಿ ಹೋಗಿ ಕುಳಿತು
ಜನರ ಅಲಂಕಾರ
ಕೂತು ನೋಡಿದೆನು ಶೃಂಗಾರ | ಓಡ್ಯಾಡುತಿಹ
ಯತಿಗಳ ಗಂಭೀರಾ ೯
ಭೂತಬಲಿಗಳ ನೋಡಿ | ನಮ್ಮ ಭೀತಿ-ಭಯಗಳನ್ನು ಬೀಸಾಡಿ
ಪ್ರೀತಿಲಿ ನಮಸ್ಕಾರ ಮಾಡಿ | ಪ್ರಖ್ಯಾತ ಮಹಿಮೆ
ಭೂತರಾಜನ ನೋಡಿ ೧೦
ರಥದುತ್ಸವ ಅಲಂಕಾರ ಅಲ್ಲಿ | ಅನೇಕ ಜನರಾ
ಪೀಳಿಗೆ ಪೂಜೆ ಚಂದ
ಕಣಕದ್ವಾಲಗವು ಬಹು ಚೆಂದ | ಮನಕೆ ಆಯಿತು
ನೋಡಲು ನಂದ ೧೧
ಮುತ ಕೆತ್ತಿಹ ಕಿರೀಟ | ಬಹು ಚಿತ್ರವಾಗಿಹಗದ್ದುಗೆ ಮಾಟ
ಸುತ್ತ ಜನರು ನಿಂತು ನೋಟ | ಜೀವೋತ್ತಮ
ವಾದಿರಾಜರ ದೊಡ್ಡ ಆಟಾ ೧೨
ಈಕ್ಷಿಸಲಳವೆ ಮಠವಾ ಎನ್ನಕ್ಷಿಗಳಿಂದ ನೋಡಲು
ಸಾಕ್ಷಾತ ವೈಕುಂಠದವನಾ | ನಮ್ಮ ಲಕ್ಷ್ಮೀ ಅರಸಾ
ನರಸಿಂಹ ವಿಠಲನ್ನಾ ೧೩

ಧೃವನನ್ನು ನೂಕಲು

ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ
ಶ್ಯಾಮಾ ವಿಶಾಲನಯನೇ ಪ
ಹಸುರು ಕಂಚುಕಧರೆ ಆನಂದ ರಸಿಕೇ
ಶಶಿ ಬಿಂಬಸಮ ಸುಂದರಮುಖೇ
ಉಸಿರುಬಿಡದೆ ನಿನ್ನ ಕೊಸರುವೆ ವರಗಳ
ಹಸನಾಗಿ ಕೊಡುವೆನೀ ಅತಿಶಯದಿಂದಲಿ ೧
ಬಣ್ಣಾದ ಸರಪಳಿ ಹಾಕಿದ ಕೊರಳೇ
ಬಟ್ಟ ಮುತ್ತಿನ ಹರಳೇ
ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ
ಪನ್ನಂಗ ಶಯನಗೆ ಮಾಡಿದೆ ಮರುಳೇ ೨
ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ
ಕಡಗಾ ಕಂಕಣ ಹೊಳಿಯುವ ಜಾಣೆ |
ನಡೆದು ಬಾರೆ ಶ್ರೀ ನರಸಿಂಹವಿಠಲನ
ಹಿಡಿದು ನಿನ್ನ ಪಾದ ಬಿಡದೆ ಭಜಿಪೆನಮ್ಮ ೩

೨೧
ತಪ್ಪೆಣಿಸುವರೇನೋ | ತಾಮರದಳಾಕ್ಷ
ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ
ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ
ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ
ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ
ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ ೧
ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ
ಅಂತರದಿ ನಿನ್ನೊಮ್ಮೆ ನೆನೆದನೇ ನೋ
ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ
ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ ೨
ನಾಮಾಡಿದಪರಾಧ ನೀಕ್ಷಮಿಸದಿದ್ದರೆ
ಯಾರು ಪೊರೆವರೊ ಎನ್ನ ವಾರಿಜಾಕ್ಷ
ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ
ಇನ್ನೇನು ಮಾಡಿದರು ಮಾಡೋ ನೀನು ೩

ಅಂತ್ಯಜಳ ಕೂಡಿ ಅನಂತ ಕರ್ಮವ ಮಾಡಿ

ಲಕ್ಚ್ಮೀದೇವಿ
ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ ಪ
ಸಲ್ಲಲಿತಾಂಗೇ | ಸುಂದರವದನೆ | ಮಲ್ಲಿಮರ್ದನ
ಹೃದಯ ಸದನೇ
ಮಲ್ಲಿಕಾದಿ ಪುಷ್ಪವದನೇ | ಫುಲ್ಲಲೋಚನೇ | ಸುನಯನೇ |
ಬಲ್ಲಿದ ಭಕ್ತಿ ಸಮುದಾಯನೇ | ಕೊಲ್ಲಾಪುರ, ಅವಧಾರಣೇ
ಆಹ್ಲಾದಕರಸುವದನೇ, ಕೊಲ್ಲಾಪುರವಾಸಿನೇ | ಶ್ರೀ ಲಕ್ಷ್ಮಿದೇವಿ ೧
ಮೋಕ್ಷದಾಯಿಕೇ | ಮಂದಗಮನೇ | ಅಕ್ಷಯ
ಫಲ ಪ್ರದಾಯಿನೇ
ರಕ್ಷಿಸೇ ಹಂಸಗಮನೇ | ಅಕ್ಷಯ ಫಲ ಪ್ರದಾಯಿನೇ |
ಪಕ್ಷಿವಾಹನ ವಕ್ಷವಾಸಿನೇ | ಲಕ್ಷಕೋಟಿ ನಿಭಾನನೇ,
ರಕ್ಷಮಾಂ ಲಕ್ಷ್ಮಿದೇವಿ ೨
ನರಸಿಂಹ ವಿಠಲ ಪ್ರೀಯೇ ನಾರೀಮಣೀ ಹೃದಯ ಸೇವೆ
ಹಾರ ದೇಹಾಲಂಕಾರಿಯೇ | ಮಾರಜನನಿ | ಜಯ
ಚಾರುಚಂದ್ರ ಸಹೋದರಿಯೇ | ಕರವೀರ
ಪುರವಾಸಿನೇ ಲಕ್ಷ್ಮೀದೇವಿಯೇ ೩

ಹಯಗ್ರೀವನೆಂಬ ರಾಕ್ಷಸನು ಬ್ರಹ್ಮನ

ನರಸಿಂಹಾ ಲಕ್ಷ್ಮೀನರಸಿಂಹ ಪ
ನಮಿಸುವೆ ಲಕ್ಷ್ಮೀನರಸಿಂಹ ಅಹಾ ಕನಕಕಶ್ಯಪನಳಿದು
ಜನಕೆ ಸುಖವನಿತ್ತು ಘನಪುರುಷನೆ ಕ್ಷಣ ಕ್ಷಣ ನಮಿಸುವೆ ಅ.ಪ
ಪುಟ್ಟ ಪ್ರಹ್ಲಾದನ ಮೊರೆಯ | ಕೇಳಿ
ಅಟ್ಟಹಾಸದಿ ಕಂಭಸಿಡಿದೂ | ಬಲು
ಸಿಟ್ಟಿನಿಂದಲಿ ಹಲ್ಲು ಕಡಿದೂ | ಅಹಾ
ಕಟ್ಟುಗ್ರತನದ ಕೆಟ್ಟ ಹಿರಣ್ಯನ
ಹೊಟ್ಟೆಯ ಬಗೆದಂಥ ಶ್ರೇಷ್ಠಮಹಿಮನೆ ೧
ಕಂಡು ಹಿಡಿದು ಅವನ ರೆಟ್ಟೆ ಎಳೆತಂದೂ
ತೊಡೆಯ ಮೇಲಿಟ್ಟಿ ಬಹು
ಕೆಂಡ ಕೋಪದಿ ಅವನ ಹೊಟ್ಟೆಯಸೀಳಿದ
ಸೊಂಡೂರು ಪುರಮಧ್ಯ ಗುಂಡಿ ನರಸಿಂಹನ
ಕಂಡೆ ಈ ದಿನ ೨
ಸೂರಿಗಳರಸ ಒಡೆಯಾ | ಮೋಲೆ
ಸುರಸೋದರರೊಳುಮೆರೆಯ | ಆಹಾ
ಕ್ರೂರ ದೈತ್ಯನ ಕೊರಳಹರಿದ ಅ-
ಪಾರ ಮಹಿಮಸಿರಿವರ ಸಿಂಹವಿಠಲ ೩

ಅಕ್ಕರದ ಅಜಾಮಿಳನು ಅಕ್ಕನಾ ಮಗನೇನೋ

ನಾರಸಿಂಹ ನಿನ್ನ ಭಜಿಸುವೆನು ಶ್ರೀ ಮಾರಜನಕನೆ
ಸೂರಿಗಳರಸ ಬಳ್ಳಾರಿಲಿ ಮೆರೆವಂಥ
ನಾರಸಿಂಹ ನಿನ್ನ ಭಜಿಸುವೆ ಪ
ಸುರಪವೈರಿಯ ಸೂರಿಮಾಡಿದ | ಸೂರಿಗಳ ಭಯ ಘೋರಬಿಡಿಸಿದ
ಕ್ರೂರ ದೈತ್ಯನ ಕೊರಳ್ಹಾರ ಹರಿದಶಿರಿ೧
ಶ್ರೀಶ ನಿನ್ನಯದಾಸತ್ವಕೆ ಆಶಿಸುವೆ | ಎನ್ನ ಪೋಷಿಸುವುದೊ
ದೋಷದೂರಿನೆ ನರಸಿಂಹ ವಿಠಲ ೨
ಎನ್ನ ಬಿನ್ನಪವನ್ನು ಮನ್ನಿಸಿ ಇನ್ನು ಈ ಪುರಕಿನ್ನು ಸಾರಿದೆ
ಘನ್ನ ಮಹಿಮೆ ಶಿರಿ ನರಸಿಂಹ ವಿಠಲನೆ ೩

೨೦
ತರಕಾರಿ ಹಾಡು
ನಿನ್ನ ದಾಸರ ಬಿಟ್ಟನಾ ಬಾಳೆ ಕಾಯೋ ಪ
ಸಣ್ಣ ಮೂರುತಿ ನೀ ನೆಂಬೆ ಕಾಯೋ
ಮಾರ ಜನಕನೆ ಅಳಿದ ಮಾವನ್ನ ಕಾಯೋ
ಸಾರಿ ಕರೆದರೆ ನೀ ಬಾರೆ ಕಾಯೋ
ಮಾರ ಜನಕ ನರಸಿಂಹ ವಿಠಲ ನೀ
ಮಾಡಿದ್ದೆಲ್ಲವು ಎನಗೆ ಸಮತೆ ಕಾಯೋ ೧

ದ್ರೌಪದೀ ದೇವಿಗೆ ಅಕ್ಷಯಾಂಬರವಿತ್ತೆ

ನಿನ್ನ ನೋಡಿದೆ ಕನ್ಯಕುಮಾರಿ | ನಿನ್ನ ನೋಡಿದೆ
ಎನ್ನ ಪಾಪಗಳ ನೀಡ್ಯಾಡಿದೆ ಪ
ಹಿಮರಾಜಪುತ್ರಿ | ಹೇಮಾಭರಣಗಾತ್ರಿ
ಆ ಮಹಾ ಪವಿತ್ರಿ | ಆನಂದ ನೇತ್ರೆ ೧
ಉಡುರಾಜನಂತೆ ತಿಲಕದಾಕಾಂತಿ
ನೋಡುತಾಲಿ ನಿಂತೆ | ಓಡುತಾಲಿ ಬಂದೆ ೨
ಕೋಟಿಸೂರ್ಯಕಿಂತ ಮೇಟಿ ಆ ದಂಥ
ಮಾಟವಾದ ಮುಖವ ನೋಡುತ್ತಾ ನಿಂತೆ ೩
ತಂದೆ ನಾರಸಿಂಹ ವಿಠಲನ್ನದಯದಿ
ಬಂದೆ ಈ ದಿನದಿ ನಿಂದು ಕರುಣಿಸಿದೆ ೪

೧೮
ನೋಡಿದೆನು ಭದ್ರಾಚಲವಾಸನ | ನೋಡಿದೆನು ಜಗದೀಶನಾ
ನೋಡಿದೆನು ಶ್ರೀ ಸೀತಾರಮಣನ | ನೋಡಿದೆನು ಸರ್ವೇಶನಾ ಪ
ಅಂಗನೇಯರ ಕೂಡಿ ನಾನು ಮಂಗಳಗಿರಿನೋಡಿದೆ
ಮಂಗಳಾಂಗಾ ನಾರಸಿಂಹಗೆ ತಂದು ಪಾನಕ ನೀಡಿದೆ ೧
ಸಜ್ಜನರಿಂದ ಕೂಡಿ ನಾನು ಬೆಜ್ಜವಾಡವ ನೋಡಿದೆ
ಮೂರ್ಜಗ ಪಾವನಿಯ ಕೃಷ್ಣೆಯ ಮಜ್ಜನವು ನಾ ಮಾಡಿದೆ ೨
ಮಾಧವನ ದಯದಿಂದ ನಾನು ಗೋದಸ್ನಾನವು ಮಾಡಿದೆ
ಮೋದದಿಂದಲಿ ಬಂದು ವಿಮಾನರಾಮನ ನೋಡಿದೆ ೩
ನೇಮದಿಂದಲಿ ಬಂದು ನಾನಾ ರಾಮದಾಸನ ನೋಡಿದೆ
ವಾಮಭಾಗದಿ ಕುಳಿತ ಲಕ್ಷ್ಮಣ ಸ್ವಾಮಿ ದರುನ ಮಾಡಿದೆ ೪
ಸಪ್ತಋಷಿಗಳು ದಶರಥಾದಿ ಉತ್ತಮರ ನಾ ನೋಡಿದೆ
ಸುತ್ತು ಮುತ್ತು ದೇವತೆಗಳನಾ ಮತ್ತೆ ಮತ್ತೆನಾ ನೋಡಿದೆ ೫
ದೋಷದೂರ ಭದ್ರಾಚಲದಿವಾಸ ರಾಮಚಂದ್ರನ
ಸೋಸಿನಿಂದಲಿ ಬಂದು ನಾ ವಿಶೇಷ ದರುಶನ ಮಾಡಿದೆ ೬
ಕಡುಹರುಷದಿಂದಲಿ ರಾಮನ ತೊಡೆಯಮ್ಯಾಲೆ ಒಪ್ಪಿದ
ಮಡದಿ ಸೀತಾದೇವಿಯನ್ನು ಸಡಗರದಿ ನಾ ನೋಡಿದೆ ೭
ಇಷ್ಟದಿಂದಲಿ ಭಜನೆಗೊಳ್ಳುವ ಶ್ರೇಷ್ಠ ರಾಮನ ನೋಡಿದೆ
ಉಷ್ಣಕುಂಡದ ಸ್ನಾನವನ್ನು ಥಟ್ಟನೇ ನಾ ಮಾಡಿದೆ೮
ಉನ್ನತವಾಗಿರುವ ಸುವರ್ಣಗೋಪುರ ನೋಡಿದೆ
ಮುನ್ನ ಮಗ್ನವಾಗಿರುವ ಅನ್ನ ಛತ್ರದ ನೋಡಿದೆ ೯
ಪರ್ಣಶಾಲೆಯನ್ನು ನೋಡಿ ಪರಮ ಹರುಷವ ತಾಳಿದೆ
ನಿರ್ಮಲ ಚರಿತ್ರ ರಾಮನ ವರ್ಣಿಸಲಳವಲ್ಲವೆ ೧೦
ಲಕ್ಷ್ಮೀವಲ್ಲಭ ರಾಮನ ಪ್ರತ್ಯಕ್ಷಮದಿವೆಯ ನೋಡಿದೆ
ಮುತ್ತು ಮಾಣಿಕ್ಯ ದಹಾರವು ನವರತ್ನದಾಕಿರೀಟವನು
ನಾ ನೋಡಿದೆ ೧೧
ಚಂದ ಚಂದಾ ಜನರು ಎಲ್ಲಾ ಆನಂದದಿಂದಲಿ
ತಂದು ತಂದು ಹಾಕುವಂತಹ ಚಂದವನು ನೋಡಿದೆ ೧೨
ಇಂತಹ ರಾಮನವಮಿ ಉತ್ಸವ ಲೋಕದಲಿ ನಡೆವುದು
ಹತ್ತುವದನ ಶೇಷನಿಗೂ ಸಹಾ ತಪ್ಪದೇ ಎಣಿಸಲಾಗದು ೧೩
ನಮ್ಮವಾಯು ಸುತನ ಪಾದಕೆ ಸುಮ್ಮನೇನಾನೆರಗಿದೆ
ಘನ್ನ ಮಹಿಮನ ಪ್ರಸನ್ನ ಸೀತಾರಾಮನನು ನಾ ನೋಡಿದೆ ೧೪
ತೇರನೇರಿ ಬರುವ ರಾಮನ ವೈಯಾರವನು ನಾ ನೋಡಿದೆ
ಮೇರು ನಂದನ ಭದ್ರಾಚಲದಿ ವಿಚಾರ ಮಾಳ್ಪುದ ನೋಡಿದೆ ೧೫
ಪ್ರಹ್ಲಾದವರದ ನಾರಸಿಂಹ ವಿಠಲನ
ಎಲ್ಲ ಉತ್ಸವ ನೋಡಿ ಮನಕೆ ಆಹ್ಲಾದವನೆ ನಾ ಪಾಡಿದೆ ೧೬

೧೯
ನೋಡಿದೆನು ಶ್ರೀ ಶೈಲವಾಸನ | ನೋಡಿದೆನು
ಪಾರ್ವತಿರಮಣನಾ
ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ ೧
ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ
ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ ೨
ಶುದ್ಧ ಸ್ನಾನವ ಮಾಡಿನಾನು | ವಿಧ್ಯುಕ್ತದಿಂದಲಿ |
ಅಲ್ಲಿದ್ದ ಜನರ ಸಹಿತಾಗಿ
ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ
ಕೃಷ್ಣಧ್ಯಾನವ ಮಾಡುತ
ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ ೩
ನಿಸ್ಸೀಮಗುಣಗಣಧಾಮ | ಅರಿಯದಮನ | ಸಾರ್ವಭೌಮ
ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ೪
ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ
ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು೫
ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ
ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ೬
ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ
ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ ೭
ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು
ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ ೮
ರಂಗ ಸಂಗದಿ ಜನಿತ ಪಾತಾಳಗಂಗಿ ಉದಕವು ತಂದು
ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ ೯
ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ
ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು ೧೦
ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ
ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ ೧೧
ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ
ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ ೧೨
ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು
ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ೧೩
ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ
ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು ೧೪

ದುಷ್ಟ ಕಂಸನ್ನ ಮೆಟ್ಟಿಯಾಳಿದ ಕೃಷ್ಣ

ನೋಡಿದ್ಯಾ ನೋಡಿದ್ಯಾ ಪ
ನೋಡಿದ್ಯಾ ಶ್ರೀ ಗುರುಗಳನ್ನು | ಈ ಡಾಡಿ ಕೊಂಡಾಡಿದ್ಯಾ
ಆಹಾ ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ
ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ
ನಿಂತರೆದುರಲ್ಲೆ ಮುಖ್ಯ ಪ್ರಾಣಾ | ಜಗ
ದಂತ ರೊಳಗೆಲ್ಲಿ ಅತಿ ಪ್ರಾಣಾ
ಅಂತರಂಗದಲ್ಲಿ ಶಾಂತ ಮೂರುತಿಗಳು
ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ ೧
ಹೊದ್ದ ಕಾವೀಶಾಟಿಯಿಂದಾ ಶ್ರೀ
ಮುದ್ರೆ ಹಚ್ಚಿದ ದೇಹ ದಿಂದಾ
ಮಧ್ಯದಿ ಕೇಸರಿ ಗಂಧಾ | ಬಲು
ಮುದ್ದು ಸುರಿವನಾಮದಿಂದಾ
ತಿದ್ದಿದ ಅಂಗಾರ ಮುದ್ರೆಯೊಳಕ್ಷತೆ
ಎದ್ದು ಬರೂವಂಥ ಮುದ್ದು ಗುರೂಗಳಾ ೨
ಮುದ್ದು ಬೃಂದಾವನದ ಮಾಟಾ
ಅಲ್ಲಿದ್ದು ಜನರ ಓರೆನೋಟಾ
ಪ್ರಸಿದ್ದ ರಾಯರ ಪೂರ್ಣನೋಟ
ನಮ್ಮಲ್ಲಿದ್ದ ಪಾಪಗಳೆಲ್ಲ ಓಟ
ಹದ್ದು ವಾಹನ ನರಸಿಂಹ ವಿಠಲಾ | ಅ
ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ ೩

ಭಂಡಾರ ಒಡೆಯುವುದು

ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು |
ಎಲ್ಲಿ ಜನರೆಲ್ಲನೋಡುವರು
ನೋಡುವರು ಗುರುಗಳನಾ | ಪ್ರಹ್ಲಾದನೆಂದು ಹೊಗಳುವರು ೧
ಭೂಸುರರು ಬಂದು ವೇದ ಘೋಷಣೆಯ ಮಾಡುವರು |
ದಾಸಜನರೆಲ್ಲ ನೋಡುವರು
ನೋಡುವರುಗುರುಗಳನಾ | ವ್ಯಾಸ
ಮುನಿಯೆಂದು ಹೊಗಳುವರು ೨
ಅಂಥವರೆ ಇಂಥವರೆ ಎಂಥವರೆ ಗುರುಗಳು |
ಮಂತ್ರಾಲಯದ ದೊರೆಗಳು
ದೊರೆಗಳು ಕೈಮುಗಿದ ಜನರಿಗೆ | ಚಿಂತೆಯನು
ಬಿಡಿಸಿ ಕಳುಹುವರು ೩
ಮಂತ್ರಾಲಯಕ್ಕೆ ಹೋಗಿ | ನಿಂತು ಕೈಮುಗಿಯಲು |
ಎಂಥ ಕÀರುಣಾಳು
ಎಂಥ ಕರುಣಾಳು | ಕೈ ಮುಗಿದ ಜನರಿಗೆ |
ಸಂತಾನಕೊಟ್ಟುಸಲಹುವರು ೪
ಬೃಂದಾವನ ದಲಿನಿಂದು ಮೆರೆಯುವರು |
ಬಂದ ಜನರನ್ನು ಪೊರೆಯುವರು
ಪೊರೆಯುವರು | ಜನರು ಶ್ರೀ ರಾಘವೇಂದ್ರ
ನೆಂತೆಂದು ಕರಿಯುವರು ೫
ಯಾರಯ್ಯ ಗುರುಗಳು ತೇರಿನಲಿ ಕುಳಿತಿಹರು |
ತೋರಮುತ್ತಿನ ಹಾರವನು
ಮುತ್ತಿನ ಹಾರವನು | ಹಾಕಿದ್ದ ಉತ್ಸವ ಕಂಡು ರಾಯರಿಗೆ
ಕೈಯ ಮುಗಿವೇನು ೬
ಸೃಷ್ಟಿಮೇಲಿನ ಜನರು | ಎಷ್ಟು ವರ್ಣಿಸಲಮ್ಮ |
ಮೃತ್ತಿಕಿ ಅಂಗಾರ ಧರಿಸುವರು
ಮಂತ್ರಾಕ್ಷತೆಯಿಂದ | ಕುಷ್ಟ ರೋಗಗಳನೆಲ್ಲ ಕಳೆಯುವರು ೭
ತಂದೆ ರಾಘವೇಂದ್ರರ | ನಿಂದು ಸೇವಿಸಲಾಗ |
ವಂಧ್ಯುರಿಗೆ ಕಂದರಾಗುವರು
ಆಗುವರು ಗುರುಗಳು | ಜನರು ಆನಂಧದಿಂದ ಭಜಿಸುವರು ೮
ಮಂತ್ರಾಲಯವು ಇನ್ನೆಂತು ವರ್ಣಿಸಲಮ್ಮ |
ಆನಂದಕ್ಕೆ ಅಳವಲ್ಲ
ಅಳವಲ್ಲ ಗುರುಗಳನ | ನಿಂತು ನೋಡುವರ ನೆಲೆಯಿಲ್ಲ ೯
ಪ್ರಹ್ಲಾದವರದ ನಿಲ್ಲಾದೆನೆನೆಯುವನೆ |
ಎಲ್ಲದುರಿತಗಳ ಪರಿಹಾರ
ಪರಿಹರಿಸುವ ಲಕ್ಷ್ಮೀ ವಲ್ಲಭ | ನರಸಿಂಹ ವಿಠಲನ ನೆನೆವೇನೆ ೧೦