Categories
ರಚನೆಗಳು

ಕದರುಂಡಲಗೀಶರು

ಶ್ರೀ ವಿಜಯೀಂದ್ರರು ತಮ್ಮ ಗುರುಗಳಾದ
೧೦೫
ಶ್ರೀಹರಿ ಸ್ತವನ
ಅರ್ಜುನಗಾನಂದಾ ಮಾಡಿದ ಗೋವಿಂದಾ ಪ
ರಥದಿ ಮಂಡಿಸಿ ಚತುರತನದಲಿಂದಾ
ಚತುರ ಹಸ್ತದಿಂ ವಾಜಿಯಂ ಪಿಡಿದು
ರಥಕನ ಬೆನ್ಹಿಂದಿಟ್ಟುಕೊಂಡು ಸಾ-
ರಥಿಯು ತಾನೆ ಅಶ್ವವ ನಡಿಸುತಲಿ
ರತಿಪತಿಪಿತನತಿಚಮತ್ಕಾರದಿಂ
ಪೃಥಿವಿಯ ಮೇಲೆ ನರನಟನ ತೋರುತಲಿ
ಪತಿತ ಪಾವನನು ಫಲ್ಗುಣ ಸಖನು
ನುತಿಸಿದವರ ನೆರೆ ಪಾಲಿಸುತಿಹನು
ಅತುಳ ಶಂಖದಿಂ ಭೌಂ ಭೌಂ ಎನಿಸುತ
ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ
ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ
ನುತ ಸ್ಯಂದನವನು ಮುಂದಕೆ ದೂಡುತ
ಗೋವಿಂದನು ರಭಸದಿ ಭಕ್ತನೂಳಿಗಾ೧
ಮಂದಜಭವ ಮುಖ್ಯಾಮರ ವೃಂದವು
ನಂದತನುಜನಾರಂದಲೀಲೆಯಂ
ಛಂದದಿ ನೋಡುತ ನಭೋಮಾರ್ಗದೊಳ್
ಬಂದು ಕುಸುಮಗಳ ವೃಷ್ಟಿಯ ಸುರಿದು
ಸಿಂಧುಶಯನ ನಾಮಾಮೃತ ಸುರಿದು
ಬೃಂದಾರಕ ನಿಕರವು ಕೈಯೆತ್ತಿ
ಇಂದುಕಲಾಧಿಪ ಪ್ರಾರ್ಥನೆ ಸೈ ಸೈ
ಎಂದು ದೇವದುಂದುಭಿ ಧೋಂ ಧೋಂ ಕಂಸಾ-
ಳದರವ ಖಿಣಿಖಿಣಿ ಖಿಣಿ ಭೇರಿ
ನಾದ ಖಡ್ ಖಡ್ ಖಡಲ್ ಭಾರಿ ತಾ-
ಳದಿಂ ಡಿಮಿಡಮರುಗದಿಂ ತಿದ್ಧಿಮಿಧಿಂಕಿಟತಾ
ಹತಜಂತರಿಧೂಂ
ಹತಜಂತರಿ ಧೂಂಗತರಿ ಕಿಣಿಕಿಣಿಕಿಣಿ ಎನುತ
ನರ್ತನಗೈವುತ ತೆರಳುತ ೨
ಮಂಗಳ ರವದಿಂ ಜಯಜಯ ಎನಿಸುತ
ಮಂಗಳಾಂಗಿ ರುಕ್ಮಿಣಿ ವಲ್ಲಭನು
ರಂಗಿನಿಂದ ರಥವಿಳಿದು ಗೆಳೆಯನ
ಮುಂಗೈಯನೆ ಪಿಡಿದು ಅಂಗಜನಯ್ಯ
ರಂಗುಮಣಿಯ ಉಂಗುರದಿ ಒಪ್ಪುತಲಿ
ಭಂಗಾರಕೆ ಮಿಗಿಲೆನಿಪ ದುಕೂಲದಿ
ಶೃಂಗರದಲ್ಲಿ ಉತ್ತುಂಗ ಪರಾಕ್ರಮ
ಅಂಗಳದೋಳ್ ನಲಿದಾಡುತ ರಂಗನು
ತಿಂಗಳ ಕುಲದೀಪನ್ನ ನೋಡುತಲಿ
ಭೃಂಗಾಳಕ ರಖಮಾಪತಿ ಪಾಂಡು-
ರಂಗ ಕದರುಂಡಲಗೀಶನ ಒಡೆಯನು ತಾ ೩

೧೦೬
ಕದರುಂಡಲಗಿ ಹನುಮಂತದೇವರು
ಇಂಥಾ ಕೀರ್ತಿಯ ಮೂರ್ತಿನ್ನಾರೇ ನೋಡಮ್ಮಯ್ಯ ಪ
ಸಂತತ ಸೀತಾಪತಿಯ ಧ್ಯಾನರೊಳು
ಕಂತುವಿನಸ್ತ್ರವ ಖಂಡಿಸಿದೊಡೆಯಾ ಅ.ಪ.
ಕಾಶಿ ರಾಮೇಶ್ವರ ಮಧ್ಯದ ದೇಶದಿ ಸೂರಿ ಸುಲಿಗೆ ನೋಡಮ್ಮಯ್ಯ
ಸಾಸಿರ ಶತ ತುರಗಾವಿ ಪಲ್ಲಕ್ಕಿಯ ಸರದಾರರ
ನೋಡಮ್ಮಯ್ಯ ಭೂಸುರರಾಯರು ಸೀಮೆಯ ಸುತ್ತಲು
ಗಾಸಿಯ ಮಾಡದೆ ಗ್ರಾಮವ ಕಾಯ್ದ ೧
ತಾರಣ ನಾಮ ಸಂವತ್ಸರ ಶುದ್ಧ ವೈಶಾಖದಿ ನೋಡಮ್ಮಯ್ಯ
ಧರೆಯೊಳು ಕಲಹ ವಿಪರೀತವದರೊಳು ರಣಮಂಡಲ ನೋಡಮ್ಮಯ್ಯ
ಊರೆಲ್ಲ ಮೊರೆಯಿಡೆ ಈಕ್ಷಿಸಿ ಮಹಿಮೆಯ
ತೋರುವ ಅಭಯ ಪ್ರಸಾದವ ಕೊಡುವಾ ೨
ಸಕಲ ಜನರು ಎಲ್ಲಾ ಸ್ವಾಮಿಯಿಂದುಳಿದೆವು
ಜಯ ನಮೋ ಎನೆ ನೋಡಮ್ಮಯ್ಯ
ಅಕಲಂಕ ಶೇಷಾನೃಪ ಶ್ರೀ ರಾಮರ ಸೇವಕಮಣಿ ನೋಡಮ್ಮಯ್ಯ
ಲೋಕದಧಿಕ ಗುರು ಕದರುಂಡಲೀಶಾ
ಬೇಕೆಂದು ನಿಂತಾ ಶ್ರೀ ಹನುಮಂತ ೩

೧೦೭
ಶ್ರೀ ವ್ಯಾಸರಾಯರು
ಚಂದ್ರಾ ಧರೆಯೊಳು ಮೂಡಿದಾ
ಪ್ರಹ್ಲಾದನೆಂಬ ಚಂದ್ರಾ ಪ
ಹೊಂದಿದವರ ಹೃದಯಾಂಧಕಾರನೀಗುವ ಗುಣ-
ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ.
ವಿಕಸಿತಸತ್ಕುಮುದಕೆ ಬಂಧೂ ಖಳ
ಮುಖಾರವಿಂದವಳಿದು ಕೊಂದೂ
ಸುಖದಿ ಕುಳಿವ ಬುಧಚಕೋರ ತತ್ವ
ಪ್ರಕಾಶಕರ ಚಂದ್ರಿಕಾಪೂರ್ಣನೆಂಬ ೧
ಹೇಯಮತಗಳೆಲ್ಲವ ಮುರಿದೂ ಬಲು
ಬಾಯಿಬಾರದೆ ನಿಲ್ಲಲು ಜರಿದೂ
ಮಾಯಿಚೋರರು ಪಲಾಯನಗೈಯಲು
ನ್ಯಾಯಾಮೃತಮಯ ವೃಷ್ಟಿ ಕರೆಸಿದಾ ೨
ಕಂಡೂ ಗೋಪಾಲಕೃಷ್ಣನ ಪದವ ಕದ-
ರುಂಡಲಿಗೀಶ ಭಕ್ತನಾಮೋದವ
ಕೊಂಡು ಭೂಮಂಡಲವ ಪಂಡಿತ ಜನಮನ
ತಾಂಡವವಾಡಿದ ತರ್ಕತಾಂಡವ ಮಾಡಿದ ೩

ಶ್ರೀ ಸತ್ಯಪರಾಯಣರು ಉತ್ತರಾದಿಮಠದ
೧೦೮
ಶ್ರೀ ಸತ್ಯಪರಾಯಣರು
ನೋಡು ಮನವೆ ಸತ್ಯಪರಾಯಣರ ಪದಗಳ
ಬೇಡು ಬೇಡು ಬೇಡಿದಿಷ್ಟವೀವ ಯತಿಗಳ ಪ
ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾ
ಸಾರಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾ
ನಾರಾಯಣನ ಜಗತ್ಕಾರಣನೆನಿಸಿದಾ
ಧೀರ ಸತ್ಯಸಂತುಷ್ಟ ಕುವರನೆನಿಸಿದಾ ೧
ಭೀಮಸೇನ ಸನ್ಮತ ಸರಿಯಾಗಿ ನಡಿಸಿದಾ
ಪ್ರೇಮದಿಂದ ರಘುಜಿಗೆ ವನಮಾಲೆ ಮುಡಿಸಿದಾ
ತಾಮಸ ಮತದವರ ಮತವ ಮುರಿದು ಹಾಕಿದಾ
ರಾಮನ್ನಾಮ ನುಡಿಸಿ ನುಡಿಸಿ ಹರುಷಬಡಿಸಿದಾ೨
ವರ ಕದರುಂಡಲಗೀಶನ್ನೊಡೆಯ ರಾಮನ್ನ
ನಿರುಪಮಾನಂದ ತೀರ್ಥ ಸುಪ್ರೇಮನ್ನ
ಕರುಣದಿಂದ ಶಿಷ್ಯನಾಗಿ ಸಂದೋಹಪಾಲನ್ನ
ಸ್ಮರನ ಜನಕಾ ಪಾಂಡುರಂಗನ ಸ್ಮರಿಪ ಲೋಲನ್ನ ೩

ಇದೊಂದು ಲೌಕಿಕ ಸಂದರ್ಭದ ಹಾಡು
೧೦೯
ಲೌಕಿಕ ಸಂದರ್ಭದ ಹಾಡು
ಯಾತಕೆ ಹೋದೆವು ದುರುಳನ ಮನೆಗೆ
ಪಾತಕಿ ಇವನು ಛೇ ಛೇ ಛೇ ಪ
ಏಳು ಬಿಲ್ಲಿಯ ಕೊಡಲಿಕ್ಕೆ ಬಂದ
ಖೂಳನಿವನು ಈ ಮನೆಯೊಳಗೆ
ತಾಳಲಾರದೆ ಬೀಸಾಟಿ ಬಂದೆನು
ಶ್ರೀಲತಾಂಗಿಯ ರಮಣ ಗೋವಿಂದಾ ೧
ಗುಂಡಪ್ಪನು ಯಾಗುಂಡಪ್ಪನು ರುಬು
ಗುಂಡಪ್ಪನು ನಾನಿವನರಿಯೆ
ಮಂಡರಂತೆ ದಿನಗಳಿವುತಲಿ ನಮ
ಕಂಡು ಮಾನ್ಯ ಮಾಡದೆ ಹೋದನು ೨
ಹರಿಸರ್ವೋತ್ತಮನೆಂದು ಝಾಂಊಟಿ
ಬಾರಿಪ ದಾಸರು ನಾವ್ ಹೌದು
ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ-
ಡುರಂಗನ ದಾಸನೆಂದು ತಿಳಿಯದಲೆ ೩

ಚಂದ್ರಾ ಧರೆಯೊಳು ಮೂಡಿದಾ
೧೦೭
ಶ್ರೀ ವ್ಯಾಸರಾಯರು
ಚಂದ್ರಾ ಧರೆಯೊಳು ಮೂಡಿದಾ
ಪ್ರಹ್ಲಾದನೆಂಬ ಚಂದ್ರಾ ಪ
ಹೊಂದಿದವರ ಹೃದಯಾಂಧಕಾರನೀಗುವ ಗುಣ-
ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ.
ವಿಕಸಿತಸತ್ಕುಮುದಕೆ ಬಂಧೂ ಖಳ
ಮುಖಾರವಿಂದವಳಿದು ಕೊಂದೂ
ಸುಖದಿ ಕುಳಿವ ಬುಧಚಕೋರ ತತ್ವ
ಪ್ರಕಾಶಕರ ಚಂದ್ರಿಕಾಪೂರ್ಣನೆಂಬ ೧
ಹೇಯಮತಗಳೆಲ್ಲವ ಮುರಿದೂ ಬಲು
ಬಾಯಿಬಾರದೆ ನಿಲ್ಲಲು ಜರಿದೂ
ಮಾಯಿಚೋರರು ಪಲಾಯನಗೈಯಲು
ನ್ಯಾಯಾಮೃತಮಯ ವೃಷ್ಟಿ ಕರೆಸಿದಾ ೨
ಕಂಡೂ ಗೋಪಾಲಕೃಷ್ಣನ ಪದವ ಕದ-
ರುಂಡಲಿಗೀಶ ಭಕ್ತನಾಮೋದವ
ಕೊಂಡು ಭೂಮಂಡಲವ ಪಂಡಿತ ಜನಮನ
ತಾಂಡವವಾಡಿದ ತರ್ಕತಾಂಡವ ಮಾಡಿದ ೩

ಹಾಡಿನ ಹೆಸರು :ಚಂದ್ರಾ ಧರೆಯೊಳು ಮೂಡಿದಾ
ಹಾಡಿದವರ ಹೆಸರು :ಮುಕುಂದ ಹೆಚ್. ಎಸ್.
ರಾಗ :ಶುದ್ಧಕಲ್ಯಾಣ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ