Categories
ರಚನೆಗಳು

ತಂದೆವರದಗೋಪಾಲವಿಠಲರು

ಆ. ಶ್ರೀಹರಿಯ ಸ್ತುತಿ
೧೯೫
ಅಂಗಾರವನೆ ನೀಡು ಯನ್ನಂತರಂಗದ ಧೊರಿಯೇ ಪ
ಅಮಂಗಳಗಳ ನೀಡುವೋ ಪರಮನೀಚ ಅಂಗನಿಯಳಿಗೆ ಅ.ಪ.
ಮಂಗಳಾತ್ಮಜ ನಿನ್ನ ಅನುಗಾಲ ಕಂಗಳಿಂದಲಿ ನೋಡಿ ಸುಖಿಸುವೋಡಿಂಗನಾ ಭಂಗಪಡಿಸುತಿಹಳಿ ೧
ಪರಮ ಅದ್ಭುತ ಮೂಗುತಿಯೆ ನಿನ್ನ ಅದ್ಭುತ-ಚರಿಯವ ತೋರು ಭೂತನಾಥಾ ೨
ಭಕ್ತವತ್ಸಲನೆಂಬ ಬಿರುದು ಬೇಕಾದರೆ ನಂಬಿದ ಭಕುತರನು ಪಾಲಿಸಿ ಬಿರುದು ಪಡಿಯೋ ೩
ಶಕುತಿ ಇಲ್ಲದ ಕಾರಣದಿ ವಿಷಕೂಪದೊಳು ಬಿದ್ದು ಘನ ಪಾಪಕೊಳಗಾದೆನೋ ವಿಷಕಂಠನೇ ೪
ಹಂಸರೂಢನಾದ ದಾಸ ನಿನ್ನ ದಾಸರನು ಕ್ಲೇಶಪಡಿಸುವರ ಧ್ವಂಸಗೈಯೋ ತಂದೆವರದಗೋಪಾಲನಭಜಕಾ ೫

೨೩೬
ಶ್ರೀ ವಾದಿರಾಜರು
ಆವಕಾರಣ ಮೂಗು ತಿರುಹಿದೆಯೋ ಶ್ರೀ ವಾದಿರಾಜೇಂದ್ರ ಪ
ಆವಾವ ಬಗೆಯಿಂದ ನಾ ನೋಡೆ ನಿನ್ಹೊರತು ಗತಿಕಾಣೆನೊ ನಿನ್ನಾಣೆಗೊ ಅ.ಪ.
ಸತಿಯು ತಾ ತನ್ನ ಪತಿಯ ಕೂಡ ಹಿತವ ಬಯಸಿ ಪತಿ ಬಂದು ಕರಪಿಡಿದು ಹಿತಿಸುವಾತೆರದಿ ಹಿತಿಸದೇ ಮತ್ತಾವ ೧
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರಾರು ನಿನ್ಹೊರತು ಪೇಳೋಅಸಮ ಕರುಣಾಬ್ಧಿ ಶಿರಿಹಯವದನ ನಿನ್ನಾಧೀನನಾದ ಬಳಿಕ ಎನ್ನುದಾಶಿಸುವರೇ ೨
ದಾನವಾದರೆ ಸಲಹೊ ಬೇಗ ಇರದಿರೆ ಬ್ಯಾಡೋ ಈಗ ಶಿರಿ ಅರಸ ನಮ್ಮ ತಂದೆವರದಗೋಪಾಲವಿಠಲನ ಸಹ ಬಾ ಬಂದ ಕಾಯದೆ ಮತ್ತಾವ ೩

ಊ. ಆತ್ಮನಿವೇದನೆ
೨೬೧
ಇಂದು ನಿನಗಿಷ್ಟ ವಂದಿಸಿ ಬಾಯ್ತೆರದು ಬೇಡಿದೆ ಪ
ಮುಂದೆ ನೀ ಮನ ಬಂದಂತ್ಯದ ಮಾಳ್ಪುದು ಕಂದು ಕಂಠನ ಪದ ತೀವ್ರಗಮನ ಬಾಲಾ ಅ.ಪ.
ಆರು ಅರಿಯದೆ ಇದು ಒಂದು ಬಾರಿ ಸೇವೆಮಾಡಲು ನಿನ್ನ ಘೋರ ದಾರಿಯಲಿಂದ ಪಾರುಗಾಣಿಸುವಾ ೧
ಹಿಂದೆ ಪೇಳಿದನು ಕಳುಹಿ ಪೂರ್ಣಾನಂದ ಪಡಿಸೊ ಇಂದುಧರ ಪಿತನಾಣೆ ಸುಖ ಸಿಂಧುವಿನೊಳಗಿಟ್ಟು ಪೊರೆವಾ ೨
ಪುಸಿಯಲ್ಲ ಪುಶಿಯಲ್ಲ ಈಶನಾಣೆ ಮಧ್ವದಾಸನೆ ಕೇಳು ತಂದೆವರದಗೋಪಾಲವಿಠಲನಾಣೆ ೩

೧೯೬
ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ಪ
ರತಿಪತಿಪಿತ ನಿನ್ನತಿಶಯ ಹಿತವಾಗುವ ಸುಖಸವಿಯದ ಮ್ಯಾಲೆ ಸಖಿಯರ ಬಾಳೇ ಅ.ಪ.
ಮದನನಯ್ಯನೇ ಮುದದಿ ಬಂದು ಮದನ ಕದನವ ಮಾಡಿ ಎಮ್ಮೊಳುಮಧು ರಸಾಯನ ಸಾರ ಸುರಿಸೋ ಸರಸಿಜಾಕ್ಷಾ ೧
ಜಾಣೆ ನೀಯೆನ್ನ ಪ್ರಾಣದಾಣೆಯೆ ಗೇಣು ವಳಗಡೆ ಜೀವದೊಳಗಿದ್ದುಪೂರ್ಣಸುಖವಿತ್ತು ಪಾರುಗಾಣಿಪೆ ಪ್ರಾಣಕಾಂತೆಯೆ ೨
ಎಂತು ಪೇಳಲಿ ನಿನ್ನ ಮಹಿಮೆಯ ಪ್ರಾಂತಗಾಣದೆ ಶ್ರಾಂತರಾಗುವರೈ ಹನುಮಂತ ಮೊದಲಾದ್ಯನಂತ ಗುಣಿಗಳು ದಿಗ್ಭ್ರಾಂತರಾದರು ತಂದೆವರದಗೋಪಾಲಕಂತುಪಿತ ೩

ಇ. ದೇವತಾ ಸ್ತುತಿ
೨೦೭
ವಾಯುದೇವರು
ಇನ್ನಾದರೂ ಸುಮುಖನಾಗೊ ಧ್ವರಿಯೇ ಪ
ಪರಿ ಪರಿ ವಿಧದಿಂದ ನೊಂದು ಕರಮುಗಿದುಬಾಯ್‍ತ್ಯರದು ಕೂಗಿ ಕರಿವೆ ಸದ್ಗುರುರಾಜನೆಂದು ಅ.ಪ.
ಪಾದ ನಂಬಿದ ಭಕ್ತರಿಗಾನಂದಗರಿವೆನೆಂಬ ಬಿರುದಾಂಕಿತನಾಗಿ ಸದ್ರ‍ವಂದದೊಳಗಿಪ್ಪೆ ರಾಜಾಚಾರು ಗುರು ಬೃಂದಾವನಾರ್ಯರ ಪೊರೆದ ಮಂದಾಕಿನಿಧರ ಧವಳಾಖ್ಯವಾಸಾ ಭೋಜಾ ೧
ಭುವನದೊಳು ಸರಿಗಾಣೆ ನಿನಗಿನ್ನು ಪರಮಾಪ್ತ ಶಿರೋಮಣಿಗಳೊಳು ಸರ್ಜಿಸಿದ ಕಾರಣ ವಜ್ರಲೇಪನ ಮಾಡಿ ಊರ್ಜಿಸುವತ್ಯರ ಮಾಡು ಎನ್ನಾ ೨
ಪರಮ ಪಾಮರನು ನಾನಯ್ಯ ಪವಮಾನರಾಯಾಪಾರುಗಾಣದೆ ಶರಧಿಯೊಳು ಮುಳುಗುವ್ಯನೋಕರವಿಡಿದು ತಡಿಗೆತ್ತಿ ಕಾಪಾಡು ತಂದೆವರದಗೋಪಾಲವಿಠಲನ ಮರಿಯೇ ೩

೨೧೯
ಒಂದು ಕೈಯಲಿ ಖಡ್ಗ ಮತ್ತೊಂದು ಕೈಯಲಿ ಖೇಟ
ಒಂದೊಂದೆರಡನೇ ಕೈಯಲ್ಲಿ ಡಮರು ಶೂಲಾ
ನಾಲ್ಕು ಕೈಯಲಿ ಶಂಖ ಚಕ್ರಗದಾಬ್ಜಿ ಧರಿಸಿ
ನೊಸಲ ನಯನ ಯುಕ್ತ ಶಂಖಸುತನ ವೈರಿಯ
ಆಯುಧದಿಂದ ವಧಿಸಿ ಬಂದು ಮುಂದೆ ಕುಣಿವಾ
ಗರುಡವಾಹನ ತಂದೆವರದಗೋಪಾಲವಿಠಲರೇ
ಯಾನ ಪಾದ ನಂಬಿದವರಿಗೆ ಗರುಡಾಯುಧ ಜಗದೊಳು

೨೫೭
ಗೋಪಾಲದಾಸರು
ಕರದಾಗ ಬಾರದೇ ವೈದುಗ ಬಂದು ಬೋಧಿಸಿ ಮಾರ್ಗವ ತೋರಿಸಿ ಹೃದಯದಿ ಪಾದನಿಲ್ಲಿಸಿ ಮಂದನ ಪೋಷಿಸಿ ಭಂಗವ ಬಿಡಿಸುತಾ ಮಂಗಳ ಮೂರುತಿ ನಿನ್ನ ಮಹಿಮೆಗೆಣೆಗಾಣೆ ಧವಳ ಗುಣವಂತ ತಂದೆವರದಗೋಪಾಲವಿಠಲರೇಯನ ದಾಸನೆಂದೆನಿಸದೆಯನ್ನ ೧
ಮಾವಿನ ವನದೊಳು ಪಾವಿನ ಪಾಶದಿ ಮೀನುವೊ ನರನಪನ್ನಗ ವೈರಿ ಬಂದು ಬನ್ನ ಬಿಡಿಸುವಂತೆ ಘನ್ನ ಭವ ಕೂಪದೊಳು ಬಿದ್ದು ಬನ್ನ ಪಡುತಿರೆ ಕಣ್ಣು ಕಾಣದೆ ಕರುಣವ ಬೀರುತ ಪಾಣಿಯ ಪಿಡಿದು ವೀಣಾವನಿತ್ತು ಗಾನವ ಪೇಳಿ ಗುಣವಂತನೆಂದೆನಿಸಿದೇ ಎನ್ನ ಅಣ್ಣಾ ಅಣ್ಣಾ ಭಾಗಣ್ಣ ಗಜಮುಖ ರೂಪದಿ ಬಂದು ಪಾಲಿಸಿದೈನಿನ್ನಾ ಕರುಣಾರಸಕೆಣೆಯುಂಟೆ ಯೆಣೆಯುಂಟೆ ನಿನ್ನ ದೇನಿಪರೊಳಗಿಟ್ಟುಶಿರಿಯರಮಣ ತಂದೆವರದಗೋಪಾಲನ ತೋರೋ ೨
ನೂರಾರು ಸಾವಿರ ನಾರಿಯರೊಡಗೂಡಿ ಬೆಡಗು ಮಾಡೆ ನಾರಿಯಾಗಿ ನಿನ್ನಡಿಗಳ ಪೂಜಿಸಿ ಗರುಡನಂತೆ ನನ್ನ ಹೆಗಲೀನ ಕೂಡಿಸಿಕೊಂಡುತಿರುಗುವೆ ನೀತಿ ಕಪಿಯಂತೆ ನಿನ್ನ ಕಪ್ಪಾದಿ ವಲಿಸುವೆ ಕಮತವ ಮಾಡಿಸಿ ಮರ್ಮವ ಘಾಡಿಸಿ ಶರ್ಮವ ಗೂಡಿಸಿ ಚರ್ಮವ ತೊಡಿಸಿ ಕರ್ಮವ ಕೆಡಿಸಿಮೃಡನೊಡೆಯ ವಂದಿತ ತಂದೆವರದಗೋಪಾಲವಿಠಲನಡಿಗಳ ಧೇನಿಸುವಂತೆ ಮಾಡೋ ೩
ಸುಂದರವದನನೆ ಮಂಗಳನಯನನೆ ಕಂದನ ಬಂಧಿಸಿ ದ್ವಂದ್ವವ ಪೊಂದಿಸಿ ಬಂದಿಖಾನೆಯೊಳಗೆ ಯಿಟ್ಟಾನಂದವ ಬಡಿಸುತ ಕರ್ಣಕುಂಡಲಧಾರಿ ಕಿರೀಟಾಂಕಿತ ಮುತ್ತುರತ್ನ-ಮಯೋಪೇತ ಚಿರಂಗ ಚಾಕಿಲಿರಂಗರಾಗರಸ ಸಾರಂಗ ರಸಪೂರಿತ ನವರಂಗ ಮೈಯ್ಯವ್ವ ವಜ್ರಾಂಕ ಭೂಷಿತ ಪದ್ಮಾಂಕಶೋಭಿತ ಪಾಶಾಂಕುಶಧರ ಗೋಪಾಲ ರಾಜನೆ ಅಂಬರ ಭೋಜನೆ ಕಂಬುಕಂಧರನಿಂದ ಡಿಂಗರಪಾಲಿಪ ಡಿಂಬದಿ ಪೊಳೆಯುವಅಂಬಾರಮಣಸುತ ಭೀಮಾಂತರ್ಯಾಮಿ ತಂದೆವರದಗೋಪಾಲ ವಿಠಲನ ನಿಜ ಕೊಂಡಾ ೪
ಭಂಗಾರ ದೇಹದಿ ಶೃಂಗಾರ ಮಂದಿರ ಮಂಗಳ ಮಂಟಪಪಂಕಜ ಕರ್ಣಿಕಘುಂಘರು ಶ್ಯಂದನ ಘನಘನ ಶಬ್ದದಿಂ ರಂಭಾದಿ ವೇಶ್ಯೇರುನಂದಾದಿಂ ಬೆಳಗುವ ಮಂಗಳ ಆರತಿ ಕಂಗಳ ಬೆಳಕಲಿ ನೋಡುವ ನೋಟವೆಪಾಡುವ ಪಾಟವೇ ಆಡುವ ಆಟವೇ ಉಂಬುವ ಊಟವೇ ಕಾಡೂವೊ ಘೂಟವೇ ಪರಿಪರಿಯಿಂದಲಿಮಾಡುವುದೆಲ್ಲ ನಿನ್ನ ಮಹಾಪೂಜೇಗೇಳೈಯ್ಯ ಇರುವಂತೆ ಮಾತ್ರ ನಿನ್ನ ಕಾಡಿಬೇಡುವೆನೈ ಯಾಮಯಾಮಕೆ ನಿನ್ನ ಕರ್ಮಗಳೆಲ್ಲ ನೀನಾಗಿ ಕೊಂಡುನವನಿಧಿಗಿತ್ತು ಸುಪ್ರೀತನಾಗಿ ನಿಗಮ ನಿಧಿ ಕೃಷ್ಣಾಂತರ್ಯಾಮಿ ಲಕುಮಿ ಅರಸತಂದೆವರದಗೋಪಾಲವಿಠಲನ ವಾರಿಜದಲ್ಲಿ ತೋರೋ ೫
ಜತೆ :ಆವಾಗ ಬಂದು ನೀ ಕಾವದಿರೇ ಸೇವಕನಾಗಲ್ಯಾಕೋ ಭಾವಜಪಿತ ತಂದೆವರದಗೋಪಾಲವಿಠಲರೇಯನ ದೂತ

ಅ. ಗಣೇಶ ಸ್ತುತಿ
೧೯೧
ಕರಿಮುಖನೇ ನಮಿಸುವೆ ಕರೆಕರೆ ಪಡಿಸದೆಕರಪಿಡಿದು ಸಲಹೊ ಪ
ಕೋಮಲಾಂಗನೆ ನಿನ್ನ ಕೋಮಲ ಚರಣಕೆರಗಿ ಬಿನ್ನೈಸುವೆಅ.ಪ.
ಕಾಮನುಜನೇ ಎನ್ನ ಕಾಮರೂಪದಿಂದ ಕಡೆಹಾಯಿಸು ೧
ಕಾಮಗೆದ್ದ ನಿಷ್ಕಾಮತನದಿಂದ ಕಾಮನಯ್ಯನ ಜಪಿಸುವ ೨
ಕಾಮಹರನ ಸಖ ತಂದೆವರದಗೋಪಾಲವಿಠ್ಠಲನ ತೋರಿಸು ಎಂದು೩

೨೬೪
ಕರುಣ ಬಾರದೇ ಗುರುವೇ ಕರುಣ ಬಾರದೇ ಪ
ಅಕಟ ನಿನ್ನ ಚರಣ ನಂಬಿದ ಶರಣನ ಮೇಲೆ ಅ.ಪ.
ಕಷ್ಟ ಸಹಿಸಲಾರೆ ಭವ ಕಷ್ಟದಿಂದ ಕಡಿಗೆ ಮಾಡಿ ಕೃಷ್ಣ ಪದ್ಮವನ್ನು ತೋರುತುತ್ರ‍ಕಷ್ಟ ಪದವಿ ಪಾಲಿಸೊ ಗುರುವೇ ೧
ಸಾಲೆ ಸಾಲದು ಸಾಲಮಾಡಿ ಸಾಲದು ನಾಳಿಗೆಂಬೊ ಪಾಶ ಸಾಲುಗೆಡದೆ ಬರಲುಪಾಯ ನಿನ್ನ ಶೀಲ ಮೂರುತಿ
ಸ್ಮರಣೆ ಒಂದೇ ೨
ಸಕಲ ಲೋಕಧರನೆ ಬಲೂ ಭಾರನಾದೆನೇ ಅಖಿಳ ಸುರರ ಸಲಹುವ ಸೀಲ ತಂದೆವರದಗೋಪಾಲವಿಠ್ಠಲಪ್ರೀಯಾ ೩

೨೭೬
ಕರುಣಿಸೋ ಶಾಸ್ತ್ರಾರ್ಥ ಮದ್ಗುರು ಶ್ರೀ ವಿಷ್ಣುತೀರ್ಥಾ ಪ
ಭವರೋಗ ಭೇಷಜನೆ ಬಹುಬಾಧೆ ಬಡುವೆನೊ ಭಾರತೀಶನ ಮುಖ್ಯ ಪ್ರೀತಿಪಾತ್ರಾ ೧
ಶ್ರೀನಾಥ ನಿನ್ನಂಥ ದಾತರನು ನಾಕಾಣೆ ಅವನಿಯೊಳಗೆಲ್ಲ ಅರಸಿ ನೋಡಲು ೨
ಪರಮ ಭಾಗವತರಿಗೆ ಮುಖ್ಯ ಹಿತಕರ್ತ ನೀನೆ ಧ್ವರಿಯೇ ಧರಿಯ ರಮಣ ತಂದೆವರದಗೋಪಾಲವಿಠಲನ ಮರಿಯೇ ೩

೨೨೭
ಪಾರ್ವತಿ
ಕರೆದರೆ ಬರಬಾರದೆ ಹರಿದಾಸರು ಪ
ಕರವೀರ ನಿವಾಶಿಯಾ ಸುತನ ಕಿರಿಯ ಸ್ವಸಿ ಬಾಯ್ತೆರೆದುಅ.ಪ.
ಸತಿ ಬರೋತನಕ ಪತಿಯ ಸೇವಿಸಿದ ಕಾಲಕುಬರೋ ಯೋಚನೆ ಕಾಣೆ ಸರಸಾದಿ ಬರುವಂತಾದರು ಕರಮುಗಿದು ೧
ಏಸೇಸು ಕಲ್ಪಕ್ಕು ದಾಸ ನಾನಲ್ಲವೇಪರಿಹಾಸ ಮಾಡಿ ಎನ್ನಾ ನಗುವರೇ ಕಾಸುಕಾಸಿಗೆ ಮೋಸಗೊಳಿಪದೇನೇಆಶಾ ತೋರಿಸಿ ಪರಮೀಸಲು ಮಾಡೋದು ೨
ದಕ್ಷನ ಸುತೆ ನೀನು ಪರ ದಾಕ್ಷಿಣ್ಯವಿಲ್ಲದೆ ನೀನು ಘನ ನಿಟಿಲಾಕ್ಷನ ಸತಿ ನೀನು ವರ ಪಕ್ಷಿವಾಹನ ತಂದೆ-ವರದಗೋಪಾಲವಿಠ್ಠಲನ ಪ್ರೀಯೇ ೩

೨೬೩
ಕಲುಷಗಳ ಪರಿಹರಿಸು ಕಲುಷಕಂಠಾ ಪ
ಸುಮ ಶರಗಳಿಂದಲಿ ಬೆಂದು ನೊಂದು ತವ ದ್ವಂದ್ವಗಳಿಗಭಿವಂದಿಸುವೆನೊ ರಾಜ ಅ.ಪ.
ತಾಪಗಳಿಗೊಳಗಾಗಿ ಪರರ ತಾಪವನು ಕಾಣದೆ ಆಲಾಪನೆಯ ಮಾಡುತಲಿ ಕೂಪದೊಳು ಪೋಪ ನೋಡುವೆನಯ್ಯ ಜೀಯ್ಯಾ ೧
ಬರುವದೆಂತೆಂದು ಬಯಸಬಾರದ ವಿಷಯಗಳ ಬಯಸಿ ಭವದೊಳಗೆ ಬವಣೆ ಬಡುವೆನು ಪರಿಹರಿಸು ಭವಕೆ ಭೀಮಾ ೨
ಕಾಮನಯ್ಯನೆ ಕೇಳು ಕಾಮಗಳ ಪೂರೈಸು ಕಾಮಿನಿಯರಾ ಕಂಡು ಮೋಹಿಸಿದ ಕಾರಣದಿ ಪೂರೈಸು ಮನಾಧಿಪ ತಂದೆವರದಗೋಪಾಲವಿಠಲನ ದೂತಾ ೩

೧೯೨
ಕಾಮನುಜ ಸುರಸೋಮ ಶತ್ರುವಿನಾಯಕ ಪರಿಪಾಲಿಸೊ ಪ
ಕಾಮ ಇಲ್ಲದ ಕಾಲ ಎನಗೊಂದು ಕ್ವಾರಿ ಕರಿಮುಖ ತೋರಿದಿ ನೀಅ.ಪ.
ಎಂದಿಗೂ ನಿನ್ನ ದ್ವಂದ್ವ ನಂಬಿದ ಕಂದನೆಂದು ಮುಂದೆ ಕರೆದು ಚಂದದಿಂದಲಿ ಬಿಂಬ ಬಿಂಬದೊಳಗಿಹ ಬಿಂಬ ಮೂರುತಿ ಪಾದ ಹೊಂದಿಸಿ ೧
ಭಾಸದಿಂದಲಿ ವಿಷ ಧರಿಸಿ ಆ-ಭಾಸತನದಲಿ ದಾಸನೆನಿಸಿ ಕಾಸು ಕಾಸಿಗೆ ಮೋಸಹೋಗಿ ವಿಶೇಷ ಮಮಕರ ಪಾಶ ಕ್ಷಳಿಸಿದೆ ೨
ಚಂದ್ರ ಧರಿಸುತ ಛಂದದಿಂದಲಿ ನಿನ್ನ ಸುಂದರ ಚಾರು ಚರಣವ ಬಂದು ತೋರಿ ಇಂದು ಪೊರೆಯೋಕಂಬುಕಂಧರ ಶಾಮಸುಂದರ ತಾತನೆನಿಸುವ ತಂದೆವರದಗೋಪಾಲವಿಠಲನ ಪ್ರೇಮ ಪಾತ್ರನೆ ೩

೨೬೫
ಕಾರಣವು ತಿಳಿಯದೊ ಕರುಣ ನಿಧಿಯೇ ಪ
ಬಹು ಪರಿಯಿಂದ ಕರಮುಗಿದು ಪ್ರಾರ್ಥಿಸಿದರೂ ಈ ಪರಿ ಮೌನವಾಗಿಪ್ಪ ಅ.ಪ.
ಅನ್ಯರಿಗೆ ತಲೆವಾಗಿ ಬಾಯ್ತೆರೆದು ಬೇಡುವಂಥಾ ಸಮಯ ಬಂದೊದಗಿರಲಾಗಿ ನೋಡುವುದುಚಿತವೇ ಅನಿಮಿತ್ತ ಬಂಧೊಈ ವಿಧದ ದುಷ್ಕರ್ಮ ತಂದೊದಗಿಸುವುದಕೆ ಅನ್ಯ ಜೀವರೇ ಕಾಯಾ ಹೇ ಜೀಯಾ ೧
ರೋಗ ಸಾಗರದೊಳಗೆ ಮುಳುಗಿ ತಾಪ ಬಡುವುದು ನೋಡಿ ಸಹಿಸಲಾರದೇ ನಿನ್ನ ಸುಖ ಸಾರ ಚರಣಕ್ಕೆ ಮೊರೆ ಪೊಕ್ಕುದೊಕಂಡು ನಿನ್ನ ಉದ್ದಂಡ ತೊಂಡನ ಡಿಂಗನೆಂತೆಂದು ಕಣ್ತೆರೆದುನೋಡದಿರೆ ಹೆಂಡತಿಗೆ ಗತಿ ಗಂಡನಲ್ಲದೇ ಪರಮಿಂಡನೇ ಪಂಚ
ಪಾಂಡವ ಪ್ರೀಯಾ ಹೇ ಜೀಯಾ ೨
ಅಂಗನಿಯಳಿಗೆ ಬಂದು ಭಂಗ ಬಿಡಿಸುವ ರೋಗಂಗಳಿಗೆ ಮಗ್ಗಂಗಳುಂ ಕೊಟ್ಟು ಅಂಗದೊಳು ಪೊಳಿಯೊರಂಗರಾಜನ ಪಾದ ಅದುಮದ ಭೃಂಗನೆನಿಸುವೊ ಧವಳ ಗಂಗೆಯ ದಾಸಾ ತಂದೆವರದಗೋಪಾಲವಿಠಲನ ದಾಸಾ೩

೨೬೬
ಕುಟಿಲವನು ಕಳಿಯೋ ನಿಟಿಲ ನಯನಾ ಪ
ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ.
ಚಂಚಲವಗೊಂಬಂಥ ಮನದೊಳಗೆ ನೀ ನಿಂತು ನಿಶ್ಚಿಂತನಾ ಮಾಡು ಜೀಯಾ ಪಂಚಶಿರಪಿತನೆ ಪ್ರಪಂಚದೊಳು ವಂಚಿಸಿದರೊ ವಿರಿಂಚಿತನಯಾ ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ ೧
ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ ೨
ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ ೩

೨೫೨
ಶ್ರೀ ಸತ್ಯಬೋಧರು
ಕುರುಡನಿಗೆ ಕರವಿತ್ತು ಕೈಪಿಡಿದು ಕಾಯೋ ಪ
ದೃಢಮತಿಯಿತ್ತು ತವ ಪಾದದಲಿ ಅ.ಪ.
ಗರುಡಾರಿ ಭೂಷಣನ ಚರಣದಡಿಯೊಳಗಿದ್ದು ಘನ ತಪವ ಗೈವ ಮಹತ ಪರಿಯೊ ೧
ಬೋಧತೀರ್ಥಾರ್ಯರ ಮತಕನುಸರಿಸಿಸದ್ಭಕುತ ಜನಕೆ ಭೇದಗಳ ಬೋಧಿಸುತ ಸತ್ಯಬೋಧಾಖ್ಯಯದೀ ಧರೆಯೊಳಗಮರವೇ ೨
ಮ್ಲೇಚಪುರದಲಿ ಕುಳಿತು ಸಂಚಿತಾಗಾಮಿಗಳ ಕೊಂಚಮಾಡುತ ನಿಷ್ಕೆಂಚಿನರ ಪ್ರೀಯಾತಂದೆವರದಗೋಪಾಲವಿಠಲನ ಮಂಚ ಪದನಿಂದ ಪೋಷಿತನಾದ ಪ್ರಭುವೇ ೩

೨೬೭
ಕೃತ್ಯವನು ತಿಳಿಸಯ್ಯ ಕೃತ್ತಿವಾಸನ ಪ್ರೀಯಾ ಪ
ಭೃತ್ಯವತ್ಸಲ ಭಾಗ್ಯ ಸಂಪನ್ನ ಮೋಹನ್ನಾ ಅ.ಪ
ಹಾಸರಲಿ ನಿಂತು ಕ್ಲೇಶಪಡಿಸುವ ವಾಕ್ಯ ಅಕ್ಲೇಶಪಡಿಸುವಾ ೧
ಭಾವದಿಂದೊಮ್ಮೆ ಭಯನಿತ್ತಭಯ ಪಾಲಿಪ ಭಕ್ತ ಬಂಧೊ ೨
ಕಾಲಕಾಲಕೆ ಕಾಲೋಚಿತದ ಮರ್ಮ ಸೂಚಿಸೆನಗೆ ೩
ವಚನ ಸತ್ಯವ ಮಾಡು ವಾಚನಸ್ವತಿಯ ಸಖಚಾಚುವ್ಯನೋಕರ ೪
ವಾಚಾಮಗೋಚರ ತಂದೆವರದಗೋಪಾಲವಿಠಲನ ಚರಣ ಭಜಕ ಸುಖೇಚರೇಂದ್ರಾಧಿಪ ೫

೨೫೩
ಸತ್ಯ ಪರಾಕ್ರಮರು
ಕೃಷ್ಣಾತೀರದಿ ಕುಳಿತಿಷ್ಟವ ಸಲಿಸುವನ್ಯಾರೇ ಪೇಳಮ್ಮಯ್ಯ ಪ
ಕಷ್ಟರಹಿತ ಸಂತುಷ್ಟರೆನಿಪ ಸತ್ಯೇಷ್ಟತೀರ್ಥ ಕರಜಪರಾಕ್ರಮರೇ ಅ.ಪ.
ಭಾಸುರ ಪದರಜ ಭಾವಿ ಸಮೀರ ಭೂಷಿತನ್ಯಾರೇ ಪೇಳಮ್ಮಯ್ಯಾ ಭೇದಮತಿಯುತಾ ಸತ್ಯದಿ ಬೋಧಿಪನ್ಯಾರೆ ಪೇಳಮ್ಮಯ್ಯಾ ಭೇದ ಪೇಳದ ಮತ ದುರ್ಬೋಧವ ಭೇದಿಪನ್ಯಾರೆ ಪೇಳಮ್ಮಯ್ಯ ಬೋಧ ಮುನಿಯು ಮತ ಶುಭವಾರಿಧಿ ತಾರಕೆ ತಾರೆನೆನಿಪ ಜೀವತಾರ ಶಶಿಕಾಣಮ್ಮ ೧
ಚಂದ್ರಪೋಲುವ ಮುಖಕಮಲಗಳಿಂದೊಪ್ಪುವನ್ಯಾರೆ ಪೇಳಮ್ಮಯ್ಯ ಚಂದ್ರನಂತೆ ಶುಭ ತಿಲುಕಾಂಕಿತದಿಂದೊಪ್ಪುವನ್ಯಾರೆ ಪೇಳಮ್ಮಯ್ಯಚಂದ್ರಕಂಠಮಾಲೆ ಕರದಿ ದಂಡವ ಧರಿಸಿಹನ್ಯಾರೆ ಪೇಳಮ್ಮಯ್ಯ ಚಂದ್ರಚರಣ ನಖಶಿಖ ಪರಿಪೂರ್ಣದಿಂದೊಪ್ಪುವ ಗುರುವರ್ಯ ಕಾಣಮ್ಮ ೨
ವೃಂದಾವನವರ ಮಂದಿರ ಮಧ್ಯದಿ ರಾಜೀವನ್ಯಾರೇ ಪೇಳಮ್ಮಯ್ಯ ವೃಂದಾರಕ ವರವೃಂದ ವಿನುತನ್ಯಾರೆ ಪೇಳಮ್ಮಯ್ಯ ವೃಂದಾವನ ಸುಂದರ ಗುಣಗಳಿಂಧೊಳೆ ಯುವನ್ಯಾರೆ ಪೇಳಮ್ಮಯ್ಯ ವೃಂದಾವನದೊಳಗಾಶ್ರಿತ ತಂದೆವರದಗೋಪಾಲವಿಠಲನಸೇವಿಪರೇ ೩

೨೬೮
ಕೈಲಾಸದ ಹುಲಿಯೇ ಕಲಿಕಲುಶವ ಕಳೆಯೊಕಾಳಿಯಾಗಿಳಿಯೇ ಪ
ಕಾಲಕಾಲಕೆ ನಿನ್ನ ಕಾಲಿಗೆರಗುವೆ ಕರುಣಾಲಯತೋರೋ ಕರುಣಾಳುಗಳರಸನೆ ಅ.ಪ.
ತುಳಸಿಗೆ ಕಳಸೀದರೆನ್ನ ತುಳಸಿಯ ತಾರದೆ ನಾ ಹೊಲಸಿನೊಳಳುತಿರೆ ಘಳಿಗೆಯಾ ತಾಳದೆ ಘಳಿಸಿದೆ ತುಳಸಿಯಾ ಕಳಸವ ಕಳ್ಳ ನಾ ಗೆಳೆಯನೆ ಕಳವಳಿಗಳು ಕಳುಹಿಸಿ ಕಾಳ್ವಗೈಸುವ ಕಾಳಿರಮಣ ನಿನ್ನ ಧೂಳಿ ಧರಿಸುವಂತೆ ಖೂಳನಾ ಮಾಡದೆ ೧
ಚಲುವ ಚನ್ನಿಗ ನೀನಹುದೋ ಚಂಚಲ ನಯನಾ ಕರುಣಾ ಚಲ ನೀನಹುದೊ ಚಾಲೂವರಿಯಲು ಎನಗೆ ಕಾಲವು ತಿಳಿಯದು ಶೂಲಿ ಚಂಚಲ ಎನ್ನ ಸಂಚಿತಗಾಮಿ ವಂಚಿಸದೆ ಕಾಯ್ವುದೊ ಇದೇ ಕೊಡುವುದೋಕಂಬು ಕಂಧರಮಣಿ ಹಂಚುವುಗಾಣದೆ ಚಂಚಲೂ ನಯನದಿ ಸುರವಂಚಕನಾಗಿ ಪ್ರಪಂಚದಿ ಶರಪಂಚನ ಚಿಂತಿಸಿಸಂತೆಯಾನರುಹಿದ ೨
ಅಕಳಂಕ ಮಹಿಮನೆ ದೋಷದೂರ ನೀ ಗುಣವಂತನೇ ಸಹಸ ಬಲವಂತನೆ ಕಾಂತಿಯ ತಂದನೆ ಕಾಂತಿಯುಳ್ಳ ಕಂತಿಯು ಧರಿಸಿದ ದಿಗಂತ ನಿಷ್ಕಿಂಜನರ ಕಾಂತನೆ ಭುಜಬಲ ಮಹಬಲವಂತನೆ ಕುರುಕಂತನೆ ಅಂತು ಇಂತು ತಂತು ಬಿಡದೆ ನಿಜ ಕುಂತಿಯ ಮಗನನ ಕಂತೆಯುಪೂಜಿಪ ಮಂತ್ರಿಯೆನಿಸಿ ಸುಖತಂತ್ರ ಪಠಿಸಿ ಶೃತಿಪಂಶವಿಂಶತಿ ದ್ವಿಪಿಂಚಕಲ್ಪವ ಮಿಂಚಿನಂದದಿ ತಪವಗೈದು ಪಂಚಪದವಿಯ ಪೊ೦ದುಕೊಂಡು ಪಂಚ ಬಾಣನ ಪಿತನು ಯನಿಸಿದ ಮಾಂಗಲ್ಯ ಲಕುಮಿಯ ರಮಣ ಯೆನ ತಂದೆವರದಗೋಪಾಲವಿಠ್ಠಲನ ಆತಂಕವಿಲ್ಲದೇ ಚಿಂತಿಸುವ ನಾರಾಯಣಾಚಾರ್ಯನೇ೩

೨೩೭
ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ
ಕೋಲೂ ಶ್ರೀ ಗುರುನಿನ್ನ ಬಲಗೊಂಬೆ ನಿನ್ನ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ.
ರಂಗರಾಜನ ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ ೧
ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ ೨
ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ ೩
ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ ೪
ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ ೫
ನಂದಿವಾಹನ ಕಂದ ಪದಕೆ ಬರೊವಂಥ ಧೀರ ವೃಂದಾವನಾರ್ಯರ ವಂದಿಪೆ ಕೋಲಧೀರ ವೃಂದಾವನಾರ್ಯರ ಚಾರು ಚರಣವ ಬಲಗೊಂಬೆಕೋಲ ೬
ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ ೭

೧೯೩
ಗುಣಿಸುವೆ ಗಣನಾಥಾ ಪ
ಗುಣಗಣ ಚರಿತನೆ ಗುಣದೊಳು ಮೊದಲಿಗನೆಂದು ಸಾರಿ ಸಾರಿ ನಿನ್ನ ಅ.ಪ.
ಎಂದಿಗು ನಿನ್ನ ಪದದ್ವಂದ್ವ ನಂಬಿದ ಕಂದನ ಮಾತ ಲಾಲಿಸೊಇಂದುವರಿಯ ಎನ್ನ ಮಂದಿರದೊಳು ಬಂದು ತಂದೆ ಕರುಣದಿ ಪಾಲಿಸೊ ೧
ಮಾರ ತಾಪಕೆ ಶಿಲುಕಿ ಮಾರಿ ಮೋರೆಯ ನೋಡಿ ಮರುಳಾದೆನೊಮಾರನನುಜನೆ ಎನ್ನ ಗಾರುಮಾಡದೆ ಪೊರೆಯೊ ನಿನ್ನ ಪಾದಕೆರಗಿದೆನಯ್ಯ ೨
ಉಜ್ಜಿ ಕೂಪವ ನೋಡಿ ಮೆಚ್ಚಿ ಬಲುಪರಿ ಹುಚ್ಚನಾದೆನೊ ದೇವಾ ಇಚ್ಛೆ ಪೂರೈಸೊ ನಮ್ಮಸ್ವಚ್ಛ ತಂದೆವರದಗೋಪಾಲವಿಠಲನರ್ಚಕ ೩

೨೦೯
ಘಟನೆಯನು ಮಾಡಿಸೈ ಘಟೋತ್ಕಚ ಜನಕಾ ಪ
ಘಟದೊಳಗೆ ಸುಧೆಯಿಟ್ಟು ಮದ್ಯವೆಂತೆಂದು ಪೇಳಿದರೆ ಮಧ್ವದೂತರು ಒಡಂಬಡುವರೇ ಮಧ್ಯಮಾಧಮರಿಗಿದುಅಲ್ಲದೇ ೧
ಪರಮ ಪುರುಷನೆ ಕೇಳು ಪರಮತದ ಮತಿಯ ಕೆಡಿಸು ನಿನ್ನ ಪ್ರೇಮಾಖ್ಯ ಕರುಣಕವಚ ತೊಡಿಸು ಜನುಮ ಜನುಮಕ್ಕೆ ಇದೇ ಬೇಡಿಸು ೨
ಕಾಯನೇ ನಾನೆಂಬಂಥ ಅಜ್ಞಾನ ಪಟು ಬಿಡಿಸೊಸುಜ್ಞಾನವಿತ್ತು ಸಲಹೊ ತಂದೆವರದಗೋಪಾಲವಿಠ್ಠಲನಪ್ರೀಯಾ ೩

೧೯೮
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ
ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ.
ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು ೧
ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ ೨
ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ ೩
ವಾಣೀ ಕರಧೃತ ವೀಣಾಪಾಣೀಷಣ್ಮಹಿಷೆರು ಸಹ ಸಮ ಶಿವರಾಣೀಬಂದಿಹರು ಶಚಿ ಶಾಮಲಾ ಸೋಮನರಮಣಿಮತ್ತೆ ಬಂದಿಹರು ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ ೪
ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು ೫

೨೬೯
ಚಲಿಸದಂದದಿ ಮಾಡು ಎನ್ನನು ಶೈಲೇಂದ್ರವರ್ಯಾ ಪ
ನಿನ್ನಾಣೆ ನಿನ್ನಾಣೆ ಸಹಿಸಲಾರದೆ ನಿನ್ನ ಶರಣು ಬಂದೆನೊರಾಯಾ ಅ.ಪ.
ಕಾಲವನು ತಿಳಿಯದಲೆ ಕಾಲಿಗೆರುವೆನೆಂದರೂಬಿಡದೆ ಕರಕರೆಯ ಬಿಡಿಸಿದಳುಅರಿತು ವಿಚಾರಿಸೋ ನಿನ್ನ ಮರಿಯಾದ ಬಳಿಕ ಈ ಪರಿ ನಗುತಿಪ್ಪುದು ಥರವೇ ೧
ಸರಸಾದ ಬೇಟಿಯು ಕರಬಿಟ್ಟು ಪೋಗಲು ನೋಟಗಾರರಿಗೆ ನೀಟವೇಸೂತ್ರವಿಹುದು…..ಗ್ರಹದಲಿ ಸೂತ್ರ ಏನು ಸರಿಯಾದ ಕಾಲದಲಿ ಹರಿಯಲು ಸರಿದೋರುವುದೇ ರಸಿಕರಿಗೆ೨
ಯೇನಾದರಾಗಲಿ ಅಪರಾಧ ಶತಕೋಟಿವಿದ್ದರೂ ಸರಿ ಶೀಘ್ರದಿಂ ಪಾಲಿಸಯ್ಯ ಸಾಲದಾ ಭಾರ ತಾಳೆನೊಬೇಗ ಬರುವಂತೆ ಮಾಡಿ ಪಾಂಡುರಂಗ ಪ್ರಾಯ ಗುರುಕೃಷ್ಣತಂದೆವರದಗೋಪಾಲವಿಠ್ಠಲನಾಣೆ ಪೊರೆಯದಿರೆ ೩

೨೨೮
ಚಿಂತೆಯನು ಪರಿಹರಿಸು ಚಂದ್ರವದನೇ ಪ
ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ.
ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ ೧
ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ೨
ಮತ್ತಗಜದ ಪಿತ್ತ ಹೆಚ್ಚಾಗಿ ಹುಚ್ಚುಚ್ಚು ಬೊಗಳುವೆನು ಹುಚ್ಚನಂತೆಇಚ್ಛೆ ಪೂರ್ಣವ ಮಾಡಿ ಮಚ್ಛೋದರಿ ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ ೩

೨೩೫
ಶ್ರೀ ಜಯತೀರ್ಥರು
ಜಯತು ಜಯತು ಜಯರಾಯಾ ಶುಭ ಜಯತು ಶುಕಪ್ರೀಯಾಕಾಯಯ್ಯ ಕವಿಗೇಯ ಮಹರಾಯಾ ಪ
ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡುಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ ೧
ಸರ್ವೇಶ ಗುಣ ಮಣಿ ಸರ್ವಜ್ಞರಾಯರು ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ ಸುಜ್ಞಾನವನು ತೋರಿ ಸುಜ್ಞಾನಿಗಳವಾಗ್ಬಾಣದಿಂದರಿದ್ಯೋ ತರಿದ್ಯೊ ೨
ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿಸತ್ಸುಖಾ ತೆಗೆದು ಸಾಧುಗಳಿಗಿತ್ತೇಮಳಾಪುರಿನಿಲಯ ಪವನೇಶತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ ೩

೨೧೧
ಜ್ಞಾನವನೆ ಕೊಟ್ಟು ಸಲಹೊ ಶ್ರೀ ಪ್ರಾಣರಾಯಾ ಪ
ವಿಜ್ಞಾನ ಮಸ್ತಕ ಘನ ಗಿರೀಶಗೆ ರಾಜನೇ ಅ.ಪ.
ಅಂದು ಅಂಜನೆ ಕಂದನೆನಿಸಿ ರಘುಕುಲೇಂದ್ರನ ನಾಮದುಂಗುರ ಇಂದುಮುಖಿಯಳಿಗಿತ್ತು ಖಳನಂದನನ ಮಡುಹಿದ ಧೀರವಿಜ್ಞಾನ ೧
ಭವಭಯಕೆ ನಿರ್ಭೀಕರಾನೆನಿಸಿ ಭಾನುಸುತನಾಶ್ರಯಿಸಿದವ ಭೇದವಿಲ್ಲದೆ ಬಹುಬಾಧೆ ಬಿಡಿಸಿ ಭೂಭಾರನಿಳುಹಿದೇ ಭಾವಿ ಬ್ರಹ್ಮ ಸುಜ್ಞಾನ ೨
ದಾಸರೆಲ್ಲರೂ ಮಹಿಮ ದಾಸರಾಗುತಿರೆ ಸಮಯ ಸೂಸುತ ಶಶಿಯಂತೆ ವಸುಧಿಗಿಳಿದು ಪೋಷಿಸಿದೆ ತಂದೆವರದಗೋಪಾಲವಿಠಲನ ದಾಸಾ ೩

೨೭೦
ತಾಯಿ ಅಲ್ಲವೇ ನೀನು ಹೆತ್ತ ಪ
ತಾಯಿಯಾದ ಮೇಲೆ ಕತ್ತೆಮರಿಯಾದರೂ ಪೊರೆಯಬೇಕುಎನ್ನ ಅ.ಪ.
ಸಾರ್ಥಕಾಗಲಿಲ್ಲ ಜನುಮವು ವ್ಯರ್ಥವಾಯಿತಲ್ಲಾಸಾಗುತಿದೆ ಆಯು ಸಹಿಸಲಾರೆ ಬಡಿಸೆ ಭವದ ನೋವು ೧
ಸಾರವೆಲ್ಲಿದೆ ಸಂಸಾರ ಶರಧಿಯೊಳಗೆ ಮುಣುಗಿದೆ ಅಸಾರ ಸುಖವ ಸವಿದು ಘನ ಸಂಸಾರಿ ಎನಿಸಿ ಮೆರೆದೆ ೨
ನಿಷ್ಠೆಯಿಂದ ನಿನ್ನ ಭಜಿಸಿದೆ ಭ್ರಷ್ಟನಾದೆ ಇನ್ನು ಶಿಷ್ಟರೊಡಯ ತಂದೆವರದಗೋಪಾಲವಿಠ್ಠಲನ ಮುಟ್ಟಿ ಭಜಿಪ ಎನ್ನ ೩

೨೩೮
(ಶ್ರೀ ವಾದಿರಾಜರು)
ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ
ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ
ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ ೧
ಬಾಲನ ವ್ಯಾಕುಲ ಪಲಾಯನಗೈಸಿದೆ ಕೃಷ್ಣರಾಯಾಕಾಲಕಾಲಕೆನ್ನ ಮನಾಲಯದೊಳು ನಿನ್ನ ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ ೨
ತರಳನು ಮರಳಿ ಖಳರೆ ಕೂಡಿ ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ೩
ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ೪
ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ ೫
ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ ೬
ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ೭
ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ ೮
ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ ೯
ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ ೧೦
ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ ೧೧
ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ ೧೨
ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ ೧೩
ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ೧೪
ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ ೧೫
ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ೧೬
ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ ೧೭
ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ ೧೮
ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ ೧೯
ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ ೨೦
ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ ೨೧

೧೯೯
ದೀನಜನ ಮಂದಾರನೇ ಪ
ಮಂದಭಾಗ್ಯವ ಕೂಡ ಮಂದಹಾಸವೇಅ.ಪ.
ಸರ್ವತ್ರದಲಿ ನೀನಿದ್ದು ಸಲಹುವಿ-ಸ್ರ‍ಮತಿ ಕೊಡುವುದುಚಿತವೇ ೧
ಪಾಪದೊಳು ಶಿಲ್ಕಿಸಿ ಮಹಾಪಾಪಿ ಎಂದೆನಿಸಿ ವಳಹೊರಗೆ ಪರಿಪೂರ್ಣನಾಗಿ೨
ಮಂದರನು ಪೊರೆವದಕೆ ಸಂಧಿಕಾಲವು ಬಂದೊದಗಿದೆ ತಂದೆವರದಗೋಪಾಲವಿಠ್ಠಲನ ಪ್ರೀಯಾ ೩

೨೭೧
ದೂತನಾ ಮನೆಗೆ ಬಂದ ಕಾರಣ ಪೇಳೋ ದಾತಾ ಪ
ಪಾತಕವ ಪರಿಹರಿಸಿ ಪರಿಪಾಲಿಸುವುದಲ್ಲದೇ ಮತ್ತಾವಕಾರಣ ಅ.ಪ.
ಸಂಸಾರಿಗೆ ಇನ್ನು ಘೋರ ದುರಿತಕೊಳಗಾಗಿರುವ ಶರಣರಿಘರುಷ ವರ್ಷಗರೆಯುವುದಲ್ಲದೇ ೧
ತವ ಚರಣದಲಿ ಕುಳಿತು ನೀರು ಕುಡುವೆನೆಂದರೆ ದಾರಿಗಾಣೆಯೋ ರಾಯಾ ೨
ಸುಮನಸರ ಪ್ರೀಯಶ್ವಾಸ ಜಾಪಕ ಪ್ರಾಶ ವಿಷನನುಜ ತಂದೆವರದಗೋಪಾಲವಿಠಲನ ದಾಸಾ ೩

೨೦೦
ದೂರ ಮಾಡುವರೇ ರಂಗಯ್ಯ ರಂಗಾ ಪ
ದೂರ ಮಾಡುವರೇನೊ ಶಿಖರಪುರದ ಧೊರಿಯೆಶ್ರೀ ಶ್ರೀನಿವಾಸ ದಯಾಶರಧಿ ಅ.ಪ.
ದಾಸ ಜನರು ಕ್ಲೇಶ ಪಡುತ ಬಾಯಿ ಬಿಡಲು ಕಂಡು ದುಷ್ಟ ಜನರು ನೋಡಿ ಕಷ್ಟಬಿಡಿಸುತಿರಲು ಕಂಡು ೧
ಏಸು ಜನ್ಮದ ಕರ್ಮ ಬಂದು ಒದಗಿತೋ ದೇವ ಈಸು ಬವಣೆಬಟ್ಟು ಬಿಡುತಿರಲು ಕಂಡು ೨
ದಾಸಜನರ ದೋಷವೆಣಿಸಬಹುದೆ ರಂಗ ಈಶನೆನಿಸಿಕೊಂಡುಮನ್ನಿಸಿ ಕೇಳೋ ಎನ್ನ ಬಿನ್ನಪ ಫಣಿಶಯನ ತಂದೆವರದಗೋಪಾಲವಿಠಲ ೫

೨೦೧
ನಗುವರಲ್ಲೋ ಕೃಷ್ಣಾ ನಿನ್ಹಾಸಕೆ ನೋಡಿ ಪ
ಸುತನಾ ಸತಿಯರು ಸಹಿಸದೆ ವಿರಸವಾಗುತಿರೆಸುಮ್ಮನಿಪ್ಪುದು ನೋಡಿ ಅ.ಪ.
ಕಂದ ನಾನಲ್ಲವೇ ನಿನ್ನ ರಾಜಾ ಹಿಂದೆ ಮುಂದೆಬಲು ನಿಂದಿಪರೈ ಭೋಜಾಇಂದು ಮುಂದು ಎಂದೆಂದಿಗೂ ನಂಬಿದ ನರನಾಪಾಲಿಸದಿಪ್ಪುದು ಕಂಡು೧
ಸಹಿಸಲಾರೆ ಸಹಿಸಲಾರೆ ಈ ತಾಪವ ಸಹಿಸಲಾರೆನೋಘನತಾಪಕೆ ಒಳಮಾಡಿ ಕ್ಲೇಶಪಡಿಸೋದಕೆ ೨
ಆರು ಕಾಯ್ವರಿಲ್ಲೋ ಗುರುರಾಜ ನಿನ್ಹೊರತು ಪೇಳೋಪುರುಷ ಸೂಕ್ತನುತ ತಂದೆವರದಗೋಪಾಲವಿಠ್ಠಲನ ಪ್ರೀಯಾ

೨೧೨
ನಿಂತ ಕಾರಣ ಪೇಳು ಹಣುಮಂತರಾಯಾ ಪ
ಶಾಂತನಾಗಿ ವಿಶ್ರಾಂತಿಯಗೋಸುಗಕಂತುಪಿತನ ಮಹಮಂತ್ರವ ಜಪಿಸುತಅ.ಪ.
ದಾಶರಥಿಯ ದೂತಾ ದಶಮುಖಪುರವಸ್ವಾಹೇಶಗೆ ದಾತಾ ಗುರುತು ಕೊಟ್ಟು ದಾತನ ಎದುರಿಗೆ ಬಂದು೧
ಶಂಖ ಕುಲದಲಿ ಜನಿಸಿ ನಿಃಶಂಖದಿ ಖಳರನು ವರಿಸಿ ಶಂಕರಾದಿನುತ ಪದ ಶಂಬಧರನ ಕಾಜಲ್ಕದಿ ಸ್ಮರಿಸುತ ೨
ಮೂರನೇ ರೂಪವ ಧರಿಸಿ ಧರೆಯೊಳು ಬಂದು ಅವತರಿಸಿ ಬೋಧಿಸಿ ಮಾರ್ಗವ ತೋರಿಸಿ ತಂದೆವರದಗೋಪಾಲವಿಠ್ಠಲನಸೇವಿಸಿ ೩

೨೨೯
ನಿಂದಾಳೋ ಸತಿ ಸರಸದಿ ಶಾಲೆಯೊಳು ಬಂದು ಪ
ಪಿತನಿಂದಲಿ ಪತಿನಿಂದ್ಯವ ಕೇಳಿದನೆಂದು ಬಂದು ಅ.ಪ.
ಘುಡು ಘಡಿಸುತ ಶಿಡಿಲಬ್ಬರದಂದದಿ ಕುಂಡದ ಧಡಿಗೆ ಬಿಡುಬಿಡುತಲಿ ಕಣ್ಣೀರಿಡುತಲಿ ಕೆಂಡದಿ ಧುಮುಕಲುಜಡೆಧರ ಕೇಳಿದಾಕ್ಷಣ ಜಡೆ ಅಪ್ಪಳಿಸಲು ಮೇದಿನಿಗೆ ಸಂದುದಿತ ಸದಾಶಿವನೆ ಬಂದು ಭಂಜಿಸಲು ಮತ್ತೆಮೇಲು ಬಂದು ೧
ಮಾವನ ಶಿರವಳಿದಾ ಮತ್ತೆ ಮಾವನಿಂದಲಿ ತುತಿಸಿಕೊಂಡ ಮಂದಜಾಸನ ಬಂದು ಬಹುಪರಿ ಪೇಳಿದಾಮಂದ ಜನರ ಪೊರೆದಾ ಮಾರನಯ್ಯನಾ ಕರುಣವ ಪಡೆದಾಮತ್ತೆ ಮಾರನ ಮದ ಮುರಿದಾ ಮಾರನ ಬದುಕಿಸಿಮಾರಿಗೆ ವರವಿತ್ತು ನಾರಿಗೆ ತೋರಿಸೆ ಬಂದು೨
ನಸುನಗುತಲಿ ಬಸವನು ಭೃಗು ಋಷಿಗಳ ಮೀಸೆಗಳ್ಳುದಾ ಬಸುಮಾದರ ಬಹುಪರಿಯಾಗದ ಬಸುಮಗೈದಾಳಳಿದಾ ಭಾರ್ಯಳ ಮೊರೆಕೇಳಿ ಭಾರವನಿಳುಹಿಪ ಪರಭಾರೆಪುರಕೆ ಪೋದಾಭಾರತೀಶ ಪಿತ ತಂದೆವರದಗೋಪಾಲವಿಠಲನಭಜಿಸುತ ಬಂದು ೩

೨೦೨
ನಿನಗೆ ಅಂಜುವಳಲ್ಲೋ ಮುರಾರೆ ಮಧುರಿಪು ಪ
ಮಲ್ಲರ ಗೆಲಿದಿಹ ಗೊಲ್ಲ ಗೋಪಾಲ ಬಾ ಪರಿಪಾಲಿಸು ಅ.ಪ.
ಪುಲ್ಲಲೋಚನೇರಾ ಗಲ್ಲವ ಪಿಡಿ ಅಂಜುವಳಲ್ಲೊಖುಲ್ಲ ಮಾನವ ಮಡುಹಿದ ಮಲ್ಲನ ಕಂಡು ಅಂಜುವಳೆ ರಂಗ ನಾ ಅಂಜುವಳೇ ೧
ಥಂಡ ಥಂಡದಾ ಬಲು ಭಂಡ ಮಾತಾಡುವ ಪುಂಡನಿಗೆ ನಾ ಅಂಜುವಳೇ ಪುಂಡ ಜರಾಸಂಧನಿಗಂಜಿ ನಗೇಂದ್ರನ ಭಂಡಿ ಪೊಡೆದ ಈ ಭಂಡನಿಗೇ ರಂಗಾ ನಾ ಅಂಜುವೆನೇ ೨
ಹಿಂಡು ಜೀವರಾ ನಾ ಅಂಬುಜದೊಳಿಟ್ಟು ಸಲಹುವತೊಂಬನಿಗೆ ನಾ ಅಂಜುವಳೇ ಪುಂಡ ಖಳರ ಚಂಡಾಡುವತಂದೆವರದಗೋಪಾಲವಿಠ್ಠಲ ರಂಗಾ ೩

೨೨೧
ನಿಶಿಕಾಂತನು ತೆರಳಿದ ಸುಸೀಲ ಪುರದಿಂದ ಪುರಕೆ ಪ
ಶಿವಸ್ಮರಣೆಯ ಮಾಡುತ ಸದಾಶಿವ ಪತಿ ಪಿತನ ಪದಸನ್ನಿಧಿಗೆ ಅ.ಪ.
ಮಂಗಳಾಂಗ ಮಹ ಮಂಗಳ ಮಹಿಮನು ಮಂಗಳಾಂಗ ಕೊಂಡು ಮಂಗಳವರವನುಮಂಗಳವಾರದಿಗರೆಯುತಮಂಗಳ ಪುರವನು ಬಿಟ್ಟು ಮಂದಗಮನದಿಂದ ೧
ರಘುಕುಲ ಯತಿವರ ಪಾದದ್ವಯ ರಾಗದಿಂದಲಿ ಸರನದಿ ಪತಿಪುರ ವರದಾತಟ ಅನುರಾಗದಿ ಹರಣವ ತ್ಯಜಿಶ್ಯಕ್ಷಹರ ಫಲಶರಣರಿಗೀವುತ ೨
ಸುಮನಸರೆಲ್ಲರು ಸುಮಮಳೆಗರೆಯುವ ಸಮಯ ಕುಸುಮರ ರಥವೇರಿ ಸೋಮಧರನ ಪದ ಸುಮ್ಮನದಲಿ ಅರ್ಚಿಸುತಲಿ ಸುಸ್ವರ ಮ್ಯಾಳಂಗಳಿಂದಲಿ ಸೋಮವಾರದಿ ತಂದೆವರದಗೋಪಾಲವಿಠಲನ ಸೇವೆಗೆ ೩

೨೩೦
ಪಾಲಿಸೆನ್ನ ಪಾರ್ವತಿ ರನ್ನಾ ಪ
ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ.
ನೊಸಲನಯನನ ಪ್ರೀತಿಲಿನೊಲಿಸಿದ ಸತ್ಕುಸುಮ ಬಾಣನ ಪೆತ್ತಬಾಣವದನನ ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ ೧
ಅಂಬುಜೋದ್ಭವನ ಪ್ರತಿಬಿಂಬನ ರಾಣಿಯೊದಿಗಂಬರನುಟ್ಟು ಚಲಿಸುವ ಸತಿಶಂಬರಾರಿನುತ ಗಂಭೀರ ಕರುಣಿಗಳರಸನ ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ ೨
ಕಲುಶಕಂಠ ಮಹಾದೇವ ಶಿವಾ ಶುಂಠರಿಗೊಲಿವ ಶಿವಾ ವಿಕುಂಠರೆನಿಸುವದಾಸರಿಗೆ ಶಿವ ವೈಕುಂಠಸಮ ಶಿಖರ ಶಿವಾಪುರದೊಳಗಿಪ್ಪ ಶಿವಾ ಶಕಟಮರ್ದನ ತಂದೆವರದ (ಶಿವಾ)ಗೋಪಾಲವಿಠಲನ ಪಾದ ಶಿವಾ ಆರ್ಭಟಿಸುತ ಪಠಿಸುವನ ಸತಿ ೩

೨೨೨
ಪಾಲಿಸೆನ್ನ ಪಾಲಿಸೋ ಎನ್ನಾ ಪ
ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ.
ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ ೧
ಕಾಲನಾಮಕ ಕವಿ ಕಾಳಿ ವಿನುತ ಪರರಾಳಿಯ ಪ್ರಿಯಬಾಲಾ ೨
ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ ೩

೨೩೯
ಬಯಕೆಗಳ ಪೂರೈಸು ಭವ ಭೀಮ ಪ
ಭಯಗಳನು ತಡೆದು ಪೊರಿಯೊ ಭಾವಿ ಭಾರತೀಪ್ರೇಮಾ ಅ.ಪ.
ನಿನ್ನವನೆಂತೆಂದು ಮನದಭಿಲಾಷೆಗಳ ಸಲಿಸೋಪರಮ ಕರುಣೀ ದಾನಿ ೧
ಇಂದಿನಾಪರಿಯಂತ ಬಹುವಿಧದಿಂದ ಪ್ರಾರ್ಥಿಸಲುಕರುಣ ಬಾರದಾಯಿತೆ ಬಿರುದು ಪೋಯಿತೇ೨
ಕೀರ್ತಿ ಅಪಕೀರ್ತಿ ಎರಡೂ ನಿನ್ನಾಧೀನವೇ ಸ್ವಾಮಿ ತಂದೆವರದಗೋಪಾಲವಿಠ್ಠಲನ ದಾಸಾಗ್ರಣಿಯೇಸೌಭಾಗ್ಯನಿಧಿಯೇ೩

೨೩೧
(ಪಾರ್ವತಿ)
ಬಾರಮ್ಮ ಬಾ ಬಾ ಬೊಮ್ಮನ ಮಗನಾಂಗೀ ಪ
ತೋರೆ ತೋರೆ ತವ ಕರುಣಾಪಾಂಗೀ ಅ.ಪ.
ಮನವೆಲ್ಲಾ ತಿರುತಿರುಗಿದೆ ಮದನಾಂಗೀಮಾವನ ಮಗನಿಗೆ ಪೇಳೆ ಶುಭಾಂಗೀಮನೋಹಾರನ ತಾಪವ ಹರಿಸು ಕೃಪಾಂಗೀ ಮಧ್ಯದಯಾಂಗೀಮದಪಿತ ಪತಿಯ ಮೋಹಿತಳಾಗಿ ಮರೆಪೊಕ್ಕುದು ಪದೋಪದಿಗೆ ಸ್ಮರಿಸುತ ಬೇಗಾ ೧
ಗತಿಯಾರು ಪೇಳಮ್ಮಾ ನಿನ್ಹೊರತು ಮತ್ತೊಬ್ಬನ ನಾ ಕಾಣೆನಮ್ಮಾಬೊಮ್ಮನ ಮಗನಿಹನಮ್ಮಾ ಮದುವ್ಯಾದೆಯಮ್ಮಾಮದುವಿಯ ಮಾಡಿಕೊಂಡು ಮರುಳುಮಾಡಿ ನಿನ್ನ ಕರಪುಟದೊಳಗಿಟ್ಟು ಬಾಯ್ಬಾಯ್ಬಿಡಿಸಲು ೨
ಯಷ್ಟೆಂದು ಪೇಳಲಮ್ಮಾ ಇನ್ನೆಷ್ಟೆಂತು ತುತಿಸಾವೆಮ್ಮ ಕಷ್ಟಪಡಲಾರೆ ನಮ್ಮಾ ಬಲು ಭ್ರಷ್ಟನಾದೆನಮ್ಮಾಇಷ್ಟನ ಕರಪುಟ ಜೇಷ್ಠ ಸುರರ ಗೆಲಿದಗುರುಕೃಷ್ಣವಂದಿತ ತಂದೆವರದಗೋಪಾಲವಿಠಲನ ಪಠಿಸುವ ೩

೨೦೩
ಬಾರೆ ಸಖಿ ಪೋಗೋಣ ಬಾಯೆದ್ದು ಪೋಗೋಣ ಬಾ ಪ
ಶೆಳೆಯ ಬ್ಯಾಡ ಸೀರೆನುಡುವೆ ಕರವಬಿಡೊ ಕೈಯ್ಯ ಮುಗಿವೆ ಪ್ರಾಣ ಪ್ರೀಯಾ ಅ.ಪ.
ಚಪಲಮುಖಿಯೆ ಚಪಲವಾಗಿದೆ ನಿಲ್ಲದೆ ಹೋಗೋಣ ಪ್ರಿಯಚಾಪಲ್ಯರಹಿತ ಪೂರ್ಣ ಚಲ್ವ ನಿಲ್ಲೋ ನಿಲ್ಲೋ ನಿಲ್ಲದೇ ಪ್ರಿಯಾ೧
ಮದನ ಬಾಣಕೆ ಬೆದರಿ ಬಂದೆ ಕುದುರೆನೇರಿ ಬೇಗ ಮದನನಯ್ಯ ಬದರಿವಾಸಿ ಪದರಬಿಡೊ ಪ್ರಿಯಾ೨
ದುಂಡುಮುಖಿಯೆ ಗುಂಡುಕುಚವ ಕಂಡು ಮನವ ನಿಲ್ಲದು ಬೇಗ ಕೋದಂಡಪಾಣಿ ತಂದೆವರದಗೋಪಾಲವಿಠ್ಠಲದಂಡ ಪುರುಷ ೩

೨೪೦
ಬಾರೋ ಮನ್ಮನಕೆ ಭಾವಿ ಭಾರತಿವರನೆ ಪ
ಬಾರೋ ಬಾರೋ ಪರಭಾರೆ ನಿಭವ ಭೀಮನ ಮನದಿಂದ ಅ.ಪ.
ಭೂತೇಶಾದೀನುತ ಭಾವಿ ಭೀಮಾ ಭಯಕುಲ ಸುರಸೋಮಾ ಭೂಭಾರಾಧರ ಶೇಷನ ಪ್ರೇಮಾ ಸುರಕುಲ ಸುರಕಾಮಾ ಭೀಮ ಭವ್ಯವೀ ನಾಮ ಪೂಜಿತ ಭಾಮಿನಿಗೆಶುಭಕಾಮಿತಾರ್ಥಗಳಿತ್ತು ಸಲಹಿದೆಯಾಮಯಾಮಕೆ ಸ್ಮರಿಸುವೆನೊ ಸುರಕಾಮಧೇನು ಸಕಲ ತರುವೇ ೧
ತಡಮಾಡುವುದ್ಯಾತಕೊ ಹಂಸಾ ಬಡಿ ಅಸುರರ ಧ್ವಂಸಾಗಡಿನಾನಲ್ಲವೇ ನಿನ್ನ ಖಾಸಾ ಗರುಡಾದ್ಯರ ತೋಷಾ ಪೊಡವಿಯೊಳಗೆ ನಿನ್ನ ಪುಡುಕಿದ ನರನಿಗೆ ಬಿಡಿ ಮಾಡುವರೇ ದಡಸೇರಿಸು ಕಡುಕರುಣಿಯೆ ಬೇಗ ೨
ನಾನಾಲಂಕಾರದ ಚಮರಂಗಾ ಅದರೊಳಗೆ ಶುದ್ಧಾಂಗಾ ಬಂದು ಕುಣಿಯುವ ಪಾಂಡುರಂಗಾ ಪಾದ್ಗಾಶ್ರಿತ ಭೃಂಗಾ ಲಿಂಗದಿಂದ ಎನ್ನ ಅಂಗಸಹಿತವಾಗಿ ಅಂಗದೊಳಗೆ ಇಟ್ಟು ರಂಗನ ಪೂಜಿಪಮಂಗಳಾಂಗ ಶುಭತುಂಗ ಮಹಿಮ ತಂದೆವರದಗೋಪಾಲವಿಠ್ಠಲ ಪ್ರಿಯ ಬೇಗ ೩

ಉ. ದಾಸವರ್ಯ ಸ್ತುತಿ
೨೫೬
ವಿಜಯದಾಸರು
ಬಾಲೆಯರ ಪಾಲಿಸೈ ದೀನಜನ ಪಾಲ ವಿಜಯಾಖ್ಯ ರಾಯಾ ಪ
ಫಾಲನಯನನ ಬಾಲಗೋಪಾಲದಾಸರಿಗೊಲಿದದ್ದು
ಅಚ್ಚರವಲ್ಲ ಜೀಯಾ ಅ.ಪ.
ಘನ ವ್ಯಾಧಿಯಂ ಪೀಡಿತಳಾಗಿ ಸೇವಿಸೆ ನೀನಾಗಿ ವಲಿದು ಅಭಯವನಿತ್ತು ನಿನ್ನ ದಾಸನೆಂದುಪದೇಶಿಶಿ ಜರಿದು ದೂರ ನೋಡುವರೇ ಪರಮ ಕರುಣಾಶರಧಿ ನಿನ್ನ ದ್ವಂದ್ವಗಳಿಗಭಿವಂದಿಪೆ ೧
ಅನ್ಯಳಲ್ಲವೋ ರಾಯಾ ನಿನ್ನ ಪರಮ ಪ್ರೀತ್ಯಾಸ್ಪದನ ತನುಜಳೋ ಸದ್ಭಕುತಿಯುಳ್ಳವಳು ಸಲ್ಲೇಲ ಸಂಪನ್ನೆ ಸತ್ಯಭೇದ ಜ್ಞಾನ ಸಚ್ಚಿತ್ತಪುರಿರಾಜನಿಂದ ಪಡೆದು ನಿನಗೆ ಸರಿಯಾಗಿ ತೋರಿದ ಬಳಿಕ ೨
ಬಹೂಪರಿಯಿಂದ ಬೇಡುವೆನೊ ತವಚರಣ ನಂಬದ ಶರಣೆಯೆಂತೆಂದು ಕಣ್ತೆರೆದು ಕರುಣಿಸೊನಿನ್ನ ಶರಣರೊಳು ಶರಣಾಧಮನಯ್ಯ ಉದಾಶಿಸದೆ ಸಲಹು ತಂದೆವರದಗೋಪಾಲವಿಠ್ಠಲನ ಪ್ರೀಯಾ ೩

೨೧೩
ಬಾಲೆಯಾದಾನು ಬಲಭೀಮ ಪ
ಬಾಲೇಂದು ಮುಖ ಸೋಲಿಪ ವದನದಿಂದೊಪ್ಪುತಅ.ಪ.
ಖುಲ್ಲ ಕೀಚಕ ತಾ ಚಲ್ವಗೆ ಮರುಳಾಗಿ ಸೊಲ್ಲು ಸೊಲ್ಲಿಗೆ ಬಲು ಕಳವಳಿಸುವನಾ ತರುಣಿ ದ್ರೌಪದಿ ತಾ ತಾಳದೆ ತನ್ನೊಳು ತಿಳುಪಿದಳು ಪತಿಯೊಡನೆಕೇಳಿದ ಮಾತ್ರದಿ ಸೀಳುವೆನೆನುತಲಿ ಕೋಪದಿಂದೊಮ್ಮೆಗೆ ೧
ಶೇಷ ಮುಖ್ಯ ಶಶಿ ಶೇಖರ ಸನ್ನುತ ಶಶಿಮುಖಯೆಂಬೋದು ಸರಿಯಾ-ಶ್ವಾಸನ ಸತಿಯಳ ಸರಸಾಟ ಸಹಿಸದೆ ಮೀಸೆಯ ತಿರುವುತ ಸಾರಿ ಸರಿ ಯಾರೆನ್ನುತ ಸತಿಯಾಗಿರು ಸುಖಸತಿಯಳ ಮಾಡಿ ನಿನ್ನಾಳುವೆನೆಂಬೋದು ಕೇಳಿ ಭರದಿ ೨
ಸುಮಶರ ಶೋಷಕೆ ಹಿಮಕರ ವ್ಯಾಪಿಸಿ ಹರುಷವಗೊಳುತಾ ಸರಸಿಜಮುಖಿಯೆಂದು ಸರಸರ ಸಾಗಲು ಶಿರದೊಳು ಚರಣವ ಸೇರಿಸಿದಾ ಶಾಮರೂಪ ತಂದೆವರದಗೋಪಾಲವಿಠ್ಠಲನ ಸ್ಮರಿಸುತ ೩

೨೦೪
ಬಿನ್ನೈಪೆ ನಿನಗಾನು ಭಕ್ತ ಬಂಧೋ ಪ
ಘೋರ ದುರಿತಗಳು ಬಂದು ಬಹು ಬಾಧಿಸುವುದುಚಿತವೇ ಅ.ಪ.
ಏಸು ಕಾಲಾದವು ಬಾಧೆ ಬಿಡುತಿಹಳು ಬಲ್ಯಲ್ಲಾಶ್ವಾಸ ಮಂತ್ರದಿ ದಾಶಿಯಳ ಕ್ಲೇಶವಳಿಯೊ ಪ್ರಭುವೆ ೧
ಭುವನ ಭಿಕ್ಷುಕಧಾರಿ ಪ್ರತ್ಯಕ್ಷನೀನಿರಲಾಗಿ ಮಾತೃಭಿಕ್ಷವ ನೀಡೋ ಸುಖದ ಕ್ಷಾರಿ ತಲೆಬಾಗಿ೨
ಇನ್ನಿಲ್ಲ ಇನ್ನಿಲ್ಲ ನಿನ್ಹೊರತು ಕರುಣ ಮಾಳ್ಪರು ಬಲ್ಯಲ್ಲಾಇದು ನಿನಗೆ ತರವಲ್ಲ ಸೊಲ್ಲು ಲಾಲಿಸಬೇಕು ತಂದೆವರದಗೋಪಾಲವಿಠ್ಠಲನ ಪ್ರೀಯಾ ೩

೨೧೭
ಭಾರತಿ
ಬುದ್ಧಿಯನು ತಿದ್ದಮ್ಮ ಮಧ್ವರಮಣಿ ಪ
ಸದ್ದು ಇಲ್ಲದೆ ಶಿದ್ಧಿಯನು ಕೊಟ್ಟು ಉದ್ಧರಿಸು ಮಾತೇ ಅ.ಪ.
ಯೇನು ಅರಿಯದಾ ಕಂದ ನಿನ್ನನು ನಂಬಿದ ಕಾರಣದಿ ೧
ಪರಮ ಕರುಣಾಸಿಂಧುಯಂದುನೀನೆ ಗತಿಯೆಂದು ಬಂದೆ ೨
ಸಫಲ ಮಾಡಲೇಬೇಕು ಬಯಕೆಯನು ತಂದೆವರದಗೋಪಾಲವಿಠಲನ ಪ್ರೀಯ ೩

೨೭೨
ಭಕ್ತನಲ್ಲವೇ ನಾನು ಹರಿ ಪ
ಭಕ್ತನಾದ ಬಳಿಕ ವಿಷಯಸಕ್ತನಾಗೋದುಚಿತವೇ ಅ.ಪ.
ಶಕ್ತಿಹೀನನಾದ ಮನವು ಬಯಸುತಿಪ್ಪ ಬಯಕೆ ಪೂರೈಸು ಗುರುವೇ ೧
ಕಾಮತಾಪದಿ ಮುಳುಗಿ ಪರ ಕಾಮಿನಿಯಳ ನೆನೆವೆ ಕೇಳೋಬಿನ್ನಪ ಕಾಮಹರನೆ ೨
ರಾಮನಾಮ ಸುಖದ ಸವಿಯು ಮರೆತೆನೊ ಶಾಮಕಂಧರ ತಂದೆವರದಗೋಪಾಲವಿಠ್ಠಲನಪ್ರೀಯಾ ೩

೨೩೩
ಭಕ್ತಿಯಿಂದ ಭಜಿಸೋಣಧ್ವರಿಯನಮ್ಮ ಮುಕ್ತಿಪಥವ ನೀಡುವ ಕೃಷ್ಣವರ್ಯ ಪ
ಭಕ್ತಿ ಮುಕ್ತಿ ಸಹ ಯೋಜಿಸಿ ಅಶಕ್ತವ ಕಳೆದುಸಶಕ್ತರ ಮಾಡುವ ಶಕ್ತಿವಂತನವ ಅ.ಪ.
ಆರು ಮೂರು ದಾರಿ ತ್ಯಜಿಸುತ ಮತ್ತೆ ಮೂರೆರಡರ ಕೂಡಿ ಮೂರು ಮೂರು ಮೂರ್ತಿ ಮೂರು ಸ್ಥಾನದಿ ಮೂರೂ ಕಾಲದಿ ಮೂರು ಜನರು ಸೇರಿ ೧
ಮಧ್ವಶಾಸ್ತ್ರದೊಳಗೆ ಮುಳುಗಿ ಮತ್ತೆ ಶ್ರೀ ಮಧ್ವಪುರಕೆ ಪೋಗಿ ಮದ್ ಹೃದ್ವನಜದೊಳಗೆ ಯೋಗೀ ಮಧ್ವ ಮುನೀಶರಪಾದಕೆ ಬಾಗಿ ೨
ವಲಿದು ಬಂದ ಯೋಗಿ ವ್ಯಾಸದಾಸನೆಂದೆನಿಪ ವೇದವ್ಯಾಸಮಧ್ವ ಭೀಮಪನ ಗಿರೀಶಾ ತಂದೆವರದಗೋಪಾಲವಿಠಲೇಶಾ ೩

೨೭೩
ಭಜಿಪೇನೆ ನಿನ್ನ ಭಕುತಿಯಿತ್ತು ಪೊರೆ ಎಮ್ಮಾ ಪ
ಭಾರ ನಿನ್ನದು ಭರತರಾಯನ ಪ್ರೀತಿ ವಿಷಯಳೆ ಅ.ಪ.
ಬಂದ ಕಾರ್ಯವಾಗುವಂತೆ ಮಾಡೆನಿನ್ನ ದ್ವಂದ್ವಕೆ ನಮಿಪೆ ಅನ್ಯರ ಬೇಡೇಬನ್ನ ಬಡುತಿಹ ಧಮ್ಮ ಭಕುತನ ನೋಡೆ ಸುಜ್ಞಾನವಿತ್ತು ಕರಪಿಡಿದು ಕಾಪಾಡೆ ೧
ತರಳನ ಮತಿಯನ್ನು ಸರಳಮಾಡಿ ಉರುಳಿಸು ಸುಧೆಯಾಂಬುಧಿಯೊಳಗೆನ್ನ ಗರಳವಾಗಿದೆ ಮನವೆಲ್ಲಾ…ಪಾಶಾದಿ ಸುತ್ತಿ ಇನ್ನು ಅರಳಿಸಿದೆ ಮೋಹಸತಿಯೊಡನೆ ಪಾದಾ ೨
ದಾಸಾನಿಗೆ ನಿನ್ನ ದಾಸನಾಗುವದೆಂಬೊ ಆಶಾಪುಟ್ಟಿದ್ದಕ್ಕೆ ದಾಸನ ಮಾಡಿಕೊ ಉದಾಶಿಸದೆ ಏಸು ಮಾತುಗಳಾಡಿದರೂ ಕಾಸು ಬಾಳದು ಸಾಸಿರ ಮಾತಿಗೆ ಒಂದೇ ತಂದೆವರದಗೋಪಾಲವಿಠ್ಠಲನತೋರೆ ೩

೨೪೭
ಭೂತರಾಜರು
ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ಪ
ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ ೧
ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ೨
ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ ೩
ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ ೪
ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ ೫
ಏನು ಪೇಳಲಿ ಇನ್ನೇನು ಹೇಳಲೀಜ್ಞಾನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ ೬
ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ ೭
ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ ೮
ಭೂತ ಹರಣವಾ ತಾಳೋ ಭೀತಿಗೊಳಿಸುತಾ ಪಾಪ ಪೋಪುದೂ ಯನ್ನ ಪಾದ ಸೋಂಕಲೂ೯
ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು ೧೦
ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ ೧೧
ಪಂಚವೃಂದದೀ ಸದ್ರ‍ವಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ ೧೨
ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ ೧೩
ಪ್ರಾಣ ಪತಿಯನಾ ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ೧೪
ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ೧೫
ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು ೧೬

೨೪೮
ಭೂತರಾಜನೆ ಕೇಳು ಯನ್ನ ಭಾವಿ ಲಿಖಿತಾವನ್ನು ಸೂಚಿಸು ಭವದಿ ಬಹು ಭೀತಿಗೊಳಿಪ ಭೌತಿಕ ಜೀವಿಗಳಾ ನೀ ದೂರಮಾಡಿ ಯನ್ನ ಗಾರುಮಾಡದೆ ಸಲಹಾಬೇಕುಕಾರುಣ್ಯ ನಿಧಿಯೇ ನಿನ್ನ ವನಜಪಾದದಲ್ಲಿ ನವವಿಧಾ ಭಕುತಿ ಕೊಟ್ಟು ನವನಿಧಿ ಚರಣ ಸರೋಜವನ್ನು ಹೃತ್ಸರಸೀದಾಲ್ಲ ಪೊಳೆವಂತೆ ಮಾಡೊಪಾಪಿ ಜನರ ತಾಪಾ ಸಹಿಸಲಾರೆನೋ ದೇವಾ ಶ್ವಾಸ ನಿಯಾಮಕ ಪ್ರೀಯಾ ಸ್ವಾದಿ ಪುರವಾಸಿ ತಂದೆವರದಗೋಪಾಲವಿಠ್ಠಲನ ದೂತಾ ೧
ಪಾಪಿ ಜನರ ಕೂಡಾ ಸ್ನೇಹವ ಮಾಡಿ ಪಾಪಕೂಪದೊಳಗೆ ಮುಳುಗಿ ಅಪಾರಪಾತಕಕೆ ಒಳಗಾಗಿ ತಾಪ ಬಡುವ್ಯನೊ ಯನ್ನಾ ಬಾಪನೆ ಮನ್ನೀಸಿ ಪಾಲಿಪರ ನಾ ಕಾಣೆನೊ ದೇವಾ ಕೈಪಿಡಿದು ಮುಂದಕೆ ಕರೆದು ಮನ್ನಿಪ ಧೊರಿ ಅಂದರೆ ನೀನಲ್ಲದೆ ಇನ್ನುಂಟೆ ಬಾಧೆ ಬಿಡಿಸಿ ನಿನ್ನ ದಾಸರ ವ್ಯೂಹದೊಳಿಡು ದಾಶ್ಯವನಿತ್ತು ದಾತ ಜನಕೆ ತಂದೆವರದ-ಗೋಪಾಲವಿಠ್ಠಲನ ನಿಲ್ಲಿಸುವಂತೆ ಕೃಪೆ ಮಾಡೈ ೨
ಕಷ್ಟದೊಳಿದ್ದವರ ಕಷ್ಟದಿಂದೆತ್ತಿ ಪಾಲಿಸುವಿ-ತುಷ್ಟಿಯಾದವನ ಉತ್ರ‍ಕಷ್ಟ ಮಾಡುವಿ ದುಷ್ಟಿಯಾದವನ ಕಷ್ಟದೊಳಿಟ್ಟು ಸುಖಾಪಡಿಸುವಿ ದೃಷ್ಟಿ ಹೀನರಿಗೆ ದಿವ್ಯ ದೃಷ್ಟಿಯಾ ನೀವಿ ಯಷ್ಟು ಮಾಡಿದರೇನು ನಿನ್ನ ಪಾದಪದ್ಮವನ್ನು ಮನಮುಟ್ಟಿ ಭಜಿಸೋ ತನಕಾ ಸೃಷ್ಟಿಯೊಳಗೆ ಅತಿ ಸ್ಪಷ್ಟವಾದ ಜ್ಞಾನ ಪುಟ್ಟದು ಕಾಣೋ ನಿರ್ದಿಷ್ಟ ಶಿಖಾಮಣಿ ತಂದೆವರದಗೋಪಾಲವಿಠಲನ ಆಪ್ತಾ ೩
ದೂಷಿಯಾದವನ ನಿರ್ದೋಷ ಮಾಡುವಿ ದಾಸನೆಂದವನ ಪೋಷಿಸುವಿ ದೂಷಿಪರ ಘಾಸಿಗೊಳಿಸುವಿ ಹಂಸವಾಹನ ಪದ ಪೊಂದುವರ ಸಂಶಯಮಾಡದೆ ಸಮ್ಮೋದವಿತ್ತು ಸಲಹುವಿ ಶೂಲಧಾರಿಯೆ ನಿನ್ನ ಹಾಸಕೆ ನಮೋ ನಮೋಪಾಶದಿಂದ ಪಾಶಿಸಾದೆ ಸಲಹೋ ಪಾಶುಧರ ಪಾಲಾ ಪಶುಪತಿಯೋಗ್ಯಾ ಶಿರಹಾರ ಧಾರಿ ಮೃಗರಾಜ ಸೇವಕ ನದಿಧರಲಾಶಾಮಾನಿಲಯಾ ತಂದೆವರದಗೋಪಾಲವಿಠ್ಠಲನ ಪ್ರೀಯಾ ೪
ಕಾಮಜನಕನದಿ ಕಾಮಹರನೆ ಪರಿಪೂರ್ಣಕಾಮಾ ಯನ್ನ ಕಾಮನಾ ವಶಮಾಡಿ ಕಾಮಪಡಿಸುವುದುಚಿತವೇ ಪರ ಕಾಮಿನೀಯಳ ಕಾಮುಕತನದಿಂದ ಕಾಮಿಸೇ ಕಾಮಾರಿಗಳೆಲ್ಲ ನೋಡಿ ಕಾಮಿಸುವರೈಕಾಮನಯ್ಯನಾ ಪ್ರೇಮದಿ ಕಾಂಬುವ ಯಾಮ ಯಾಮಕೆ ನಿನ್ನ ನಾಮ ಸ್ಮರಿಸುವಂತೆ ಮಾಡು ಕಾಮವಂದಿತ ತಂದೆವರದಗೋಪಾಲವಿಠ್ಠಲನ ತೋರೋ ೫
ಜತೆ :ಭೀತಿಯಾ ಬಿಡಿಪಾ ದಾತಾನು ನೀನಯ್ಯ ಭೂತ ವಂದಿತ ತಂದೆವರದಗೋಪಾಲವಿಠಲನ ಭಜಕಾ ೬

೨೪೧
ಭ್ರಮೆಯ ಪುಟ್ಟಿಸಬೇಡ ಭಾವಿ ಭಾರತೀಶಾ ಪ
ಭೂತರಾಜರ ದಾತ ಭವದಿ ಪ್ರಖ್ಯಾತ ಅ.ಪ.
ಕೃತ ಪ್ರತೀಕದಿ ನಿಂದು ನಾಮರೂಪವ ಧರಿಸಿ ನಿರುತತ್ವದ್ದಾಸರಿಂದ ಪೂಜೆಯಾ ಗೊಂಬೀಮನ ಪಾಶದಿಂ ಬಿಗಿದೆನ್ನ ಮನಶೆಳೆಯುತಿಹರೈ ಕೃತಿರಮಣನ ಪ್ರೀಯನಿನ್ನ ಕೃತ್ಯಗಳಿಗೆ ನಮೋ ನಮೋ ಎಂಬೆನಲ್ಲದೆ ೧
ಭೂರಮಣ ಭಜಕ ನಿನ್ನ ಭಾಗ್ಯಕ್ಕೆಣೆಯುಂಟೆ ಭಸ್ಮಧರ ಸುರಪರೆಲ್ಲಾ ಪಾದ ಭಸಮಾಗಿ ಬಿದ್ದಿಹರೈಅಸ್ಮದಾದಿ ಜೀವರಿಗೆ ಗೋಚರಿಸೋದುಂಟೆ ಕುಸುಮ ಶರವೈರಿ ಪದ ಪಿತನೆ ೨
ಜ್ಞಾನವಿಲ್ಲದೆ ಮಧ್ಯಜ್ಞಾನ ಶರಧಿಯೊಳು ಮುಳುಗಿ ದೂರಾದೆನೋ ರಾಯಾನಿನ್ನ ವಿಷಯ ವಿರಕ್ತಿ ಅನ್ಯ ವಿಷಯ ಸುಭಕ್ತಿಯಿಂದ ನಿಜಭಕ್ತಿಗಾಣೆನೋಭಕುತಿರಮಣನೇ ನಿನ್ನ ಯುಕುತಿಗಳಿಗಭಿವಂದಿಪೆ ತಂದೆವರದಗೋಪಾಲವಿಠಲನ ತೋರಿಸೋ ಜೀಯಾ ೩

೨೪೨
ಮಂಗಳ ಶ್ರೀ ಸ್ವಾದಿ ನಿಲಯನಿಗೆ ಜಯ ಮಂಗಳ ಶ್ರೀ ಗುರುವಾದಿಗಳರಸನಿಗೆ ಪ
ಪಂಚ ವೃಂದಾವನದೊಳು ತಾ ಸಂತೆಯ ನೆರಹಿದ ಭಾವಿ ಪಂಚ ರೂಪಾತ್ಮನಿಗೆ ಮಿಂಚಿನಂದದಿ ಭಾವಿ ವಿರಿಂಚಿನ ಸಹಿತ ತನ್ನ ಜನಕನ ರಾಜಿತ ಕವಿ ಮುನಿಗೆ ೧
ಅರ್ಥಿಯಿಂದ ಪ್ರತಿ ತೀರ್ಥ ಪ್ರಬಂಧವ ಕೀರ್ತಿಸುವವರ ಅಪ್ರತಿ ತೀರ್ಥನಿಗೆ ಸುತ್ತಮುತ್ತ ಸರ್ವತತ್ವ ಪತಿಗಳಿಗೆ ತಾ ಉತ್ತರ ಹೇಳುವ ಜೀವೋತ್ತುಮನಿಗೆ೨
ಕಾಲ ಕಾಲಗಳಿಗೆ ಮಹಕಾಲನಿಯಾಮಕ ಕಲಿ ಮಾರುತಗೆ ಫಾಲವದನ ತಂದೆ-ವರದಗೋಪಾಲವಿಠ್ಠಲನ ಆಳು ಕೃಪಾಳುಗೆ೩

೨೨೬
ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ ಪ
ಛಂದದಾರುತಿ ತಂದು ಬೆಳಗಿರೆ ಇಂದುಧರಸುತ ಮಂದಜಾಸನಗೆ ಅ.ಪ.
ಮೋದಬಡುತಲಿ ಮೋದಪುರ ನಿವಾಸ ಜನರಭಿಲಾಷೆ ಸಲಿಸುವ ಚಾರುನವಕುಶ ತೀರನದಿ ಧರ ಧೀರ ಸುಗುಣ ಸುಶಾಸ್ತ್ರ ಪೇಳ್ವಸುತನಾರ್ಯರಿಗೆ ಬಂದು ಬೇಗನೆ ೧
ದೋಷದೂರ ವಿಶೇಷ ಮಹಿಮನು ದಾಸ ಜನರಿಗೆ ತೋಷಗರೆಯುತ ಶೇಷಗಿರಿಯೊಳು ವಾಸಮಾಡಿದವೀರಗಮನಸುರೇಶ ಸನ್ನುತ ಬ್ರಹ್ಮೇಶತಂದೆವರದಗೋಪಾಲವಿಠ್ಠಲನ ದಾಸನೆನಿಪಗೆ ಬಂದು ಬೇಗನೆ ೨

ಈ. ಯತಿವರ್ಯ ನಮನ
೨೩೨
ಗುರು ಪರಂಪರೆ
ಮಧ್ವರಾಯರಿಗೆ ನಮೋ ನಮೋ ಗುರು ಮಧ್ವಸಂತತಿಗೆನಮೋ ನಮೋ ಪ
ಸಂತತ ಶುಭವಾದೆನುತ ದಾಸಜನರಿಗೇಕ ಚಿತ್ತದಿಂದವಂದಿಸಿ ಬೇಡುವೆ ಅ.ಪ.
ಕುಸುಮನಾಭರ ಸಮ ನಾಲ್ವರುಯೆಂದೆನಿಪಹಸನಾದ ಗುರುಗಳ ಸ್ಮರಿಸುತಾನ್ಯಾಯಸುಧಾಕಾರರಿಗೆ ನಮೋ ನಮೋ ೧
ರಘುಕುಲನಂದನ ಸುಬ್ರಮಣ್ಯತೀರ್ಥ ಕರದಿ ಪಾಲಿತಗೆಬಿಡದೆ ಬೋಧಿಸಿದ ತಲೆಗೆ ನಮೋ ನಮೋ ೨
ರಘೋತ್ತುಮಾಖ್ಯರ ಕಾರುಣ್ಯಪರೆಂದೆನಿಪರಿಗೆಸೂರಿತಾರೇಶ ಜಾತ ವಿಜೇಂದ್ರತನಯನೆನಿಪಶ್ರೀ ಸುಧೀಂದ್ರ ಪೋಷಿತ ಸದ್ಗುರು ರಾಘವೇಂದ್ರತಾತಗೆನಮೋ ನಮೋ ೩
ಗುರುಪುರಂದರ ದಾಸರ ಸುಜಾತರ್ಗೆ ನಮೋ ವೈಕುಂಠದಾಸರಿಗೆ ನಮೋ ನಮೋ ಚನ್ನ ಚಿಕ್ಕಬದರಿನಿಲಯನ್ನ ಕಂಡರ್ಗೆ ಕರುಣಾಪಾತ್ರರುಯೆನಿಪವರದಗುರುಗೋಪಾಲ ಸು ಜಗನ್ನಾಥರಾಯರಿಗೆನಮೋ ನಮೋ ೪
ತತ್ವಮಸಿ ವ್ಯಾಸ ಶ್ರೀಧರ ಶ್ರೀಗುರು ಶ್ರೀಪತಿ ಪ್ರಾಣೇಶಗುರು ವಿಜಯ ರಾಮಚಂದ್ರದಾಸರಿಗೆ ನಮೋ ನಮೋಬಾದರಾಯಣಗುರು ವೆಂಕಟ ಶ್ರೀನಿವಾಸ ಜಯಜಯೇಶತಂದೆವರದಗೋಪಾಲವಿಠಲನ ದಾಸರಿಗೆ ನಮೋ ನಮೋ೫

೨೭೭
ಕೃಷ್ಣಾರ್ಯರು
ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ ೧
ಆವ ಜನುಮದ ಪುಣ್ಯ ಫಲಿಸೀತು ಇಂದು ನಿನಗೆ ಕಾವುತನಾಗಿದ್ದೆ ಕೃಷ್ಣಾರ್ಯರ ಕಂಡೆ ಈ ಮುನಿಯು ನಿಜವಾಗಿ ದೇವಾಂಶರಾರು ಎಂಬೊ ಜ್ಞಾನ ಪುಟ್ಟಿದುದಕೆ ಸಾಧಿಸಿಕೋ ನಿನಗೆ ಇದೇ ಘನ್ನವಾದ
ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ-
ವಿಠಲರೇಯಾನವಲಿಸು ಬಿಡದೆ ೨
ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ ೩
ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ೪
ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ ೫
ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ ೬

೨೦೫
ಮುರಲೀಯನೂದುವ ಮುರಹರನ್ಯಾರೇ ಪೇಳಮ್ಮಯ್ಯಾ ಪ
ಮಾರನ ಕುಶಲವ ಮೋದದಿ ಬೀರುತ ಮನಮೋಹಗೊಳಿಪ ಮಾರನಯ್ಯ ಕಾಣೆ ಅ.ಪ.
ಸುಂದರೀ ಸಖಿ ಸುಕುಮಾರಿ ಇಂದೀನ ವೈಭವ ಭಾರಿನಂದಾವೃಜನದೊಳಗಿಹ ನಾರೀ ವೃಂದಗಳೆಲ್ಲಾ ಪರಿಪರಿ ಸೇರಿ ನಂದನ ಸುತನಾ ಕಂದನ ಬಾಧೆಯ ತಾಳದೆ ತನ್ನೊಳು ಪೊಗಳುವ ಘನಶೌರಿ೧
ಮದನಾ ಜನಕನು ಮೌನದಿ ನಿಂತಾಮಾನಿನಿಯರು ಮಾಡುವ ಚಿಂತಾ ಮನವಾತುರಗೊಳಿಪುದು ಶ್ರೀಕಾಂತಾ ಮಾವನರಿಪು ಸುಧೆನುಣಿಸು ಬಾ ಪ್ರಾಣಕಾಂತಾಮಾನರಹಿತಳಾಗಿ ಗಾನ ಮಾಡುವೆ ಘನ ಪ್ರಾಣಮಳಹೋ ಶ್ರೀಕೃಷ್ಣನೆಂದು ೨
ಅಂಗದೊಸನವ ತೂರುತ ಮಂದಾಮಾರುತ ಪಡಿಸುವ ಮುಕುಂದಾ ಭಂಗಬಡಲಾರೆವು ಶ್ರೀಗೋವಿಂದಾ ಮದಮುರಿ ಮದಕುಲ ನಂದಾ ತುಂಗಮಹಿಮ ತಾ ಬಂದು ಪೊರೆದ ತಂದೆವರದಗೋಪಾಲವಿಠಲನ ಸಖ ೩

೨೨೩
ಮೃತ್ಯುವಿನ ಪರಿಹರಿಸೊ ಮೃತ್ಯುಂಜಯನೆ ಪ
ಜಯ ಜಯಾ ಜಯವೆಂಬೊ ಅಸ್ತ್ರಗಳನಿತ್ತು ಪಾಲಿಸಿದಿ ಅ.ಪ.
ಪರೀಪರಿಯಿಂದ ಪರಿಜನರು ಬಾಧಿಸಲು ಪರಿಹಾಸ ಮಾಡುವುದುಚಿತವೇ ನಿನಗೆ ೧
ಶರಣರಾ ಸುರಧೇನು ತವ ಶರಣೆಯಳ ವ್ರಣವ ಪರಿಹರಿಸೊ ರಣವಾಸಿಯೇ ೨
ಸಾಸಿರಾ ಮಾತಿನೊಳು ಇದೇ ಸಾರವಾದದ್ದು ಸತೀ ದೇವೀರಮಣ ಸುಖ ಸುರಿಸೋತಂದೆವರದಗೋಪಾಲವಿಠಲನ ಸಖ ೩

೨೭೫
(ಶ್ರೀ ವಿಷ್ಣುತೀರ್ಥರು)
ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ
ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ.
ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ರ‍ಮತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ ೧
ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ ೨
ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ ೩

೨೫೧
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ
ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ.
ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ ೧
ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ ೨
ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ ೩

೨೫೯
ಲೇಸಾಗಿ ಭಜಿಸುವೆ ಗೋಪಾಲದಾಸರ ರಾಶಿ ದುರಿತಂಗಳಾ ಪ
ವಾಸವಾ ಪಿಡಿದ ವಜ್ರವೀಗಿರಿಯಂತೆ ನಿಶ್ಶೇಷದಿ ಭೇದಿಪರೊಇವರು ಅ.ಪ.
ಮುರಹರ ನಾಮಕ ವರದ್ವಿಜೋತ್ತಮ ಸತಿ ಗಿರಿವಾಸ ನಾಮಕಳಾ ಸುರುಚಿರೋದರವೆಂಬೊ ಶರನಿಧಿಯಲ್ಲಿ ಚಂದಿರನಂತೆ ಉದಿಸಿಹರೋ ಇವರು ೧
ಸದಮಲಮನದಲ್ಲಿ ಪದುಮನಾಭನ ನಾಮ ಪದೋಪದಿಯಲ್ಲಿ ಬಿಡದೇ ಪದರೂಪದಲ್ಲಿ ಪೊಗಳುವೊ ಸುಜನರಿಗೆ ಮೋಹವನುಣಿಸುತಿಹರೊ ಇವರು ೨
ವಿಜಯದಾಸರೇ ತಮ್ಮ ನಿಜಗುರುಗಳೂ ಎಂದು ಭಜಿಪರೋ ಭಕುತಿಯಲ್ಲಿ ದ್ವಿಜವರ್ಯ ಜನಕಿಷ್ಟ ಸೃಜಿಸೋರು ಕಲ್ಪ ಭುಜದಂತೆ ನಿರುತದಲ್ಲಿ ಇಲ್ಲಿ ೩
ಕುಂಡಲೀ ಗಿರಿವಾಸ ಪಾಂಡುರಂಗನ ಕ್ಷೇತ್ರ ತೊಂಡ ಪ್ರಹ್ಲಾದ ಪ್ರಿಯನ ಮಂಡಲ ಯತಿಗಳ ಬೆಳೆಪ ಯಾತ್ರೆಗಳ ಕೈಕೊಂಡು ಸೇವಿಸುತಿಹರೊ ಇವರು ೪
ಭಕುತಿ ಪ್ರಾಚುರವಾಗೆ… ಹರಿನಾಮಪ್ರಕಟಿಸಿ ಕವನದಿಂದಾ ನಿಖಿಳಾಭೀಷ್ಟವನೀವ ಲಕುಮೀಪತಿಯೇ ಎಂದು ಭಕುತಗೆ ಬೋಧಿಪರೊ ಇವರು ೫
ಆವಾವ ಕ್ರಿಯೆಗಳಲ್ಲಾವಾವ ಕಾಲದಿ ತಾವದಗಿನ್ನು ಹರಿಕಾವ ಸುಜೀವರ ಈ ವಿಧವೆಂದು ತನ್ನವರಿಗುಪದೇಶಿಪಾ೬
ಓಂ ಓಂ ಭಾವಿಂತೆಂದೊಲಿಸಲು ಭಕುತಿ ಭಕುತಿ ಪುಟ್ಟಿಸುವನೊ ಶ್ರೀ ಅರಸನ ಪಾದದೀಗಾ ಎಂದು ಎಚ್ಚರಿಸೆ ಗಂಗಾಜನಕ ಭವ ತೋಯದಿ ಕಡೆಗೆತ್ತುವಾ . ೭
ಣಾ ಎಂದುಪಾಸನೆ ಮಾಡುವ ಸುಜನ ಜನರ ಕಾಯಕ್ಲೇಶವ ಕಳೆದು ಮಾಯಾರಮಣನ ವಲಿಸುವಂಥ ದಿವ್ಯ ಉಪಾಯವ ತೋರಿಪರೊ ಇವರು ೮
ಮಂದ ಮನುಜ ನಾನು ಒಂದೊಂದಿವರ ಗುಣವೃಂದ ಪೊಗಳಲೊಶವೇ ತಂದೆ-ವರದಗೋಪಾಲವಿಠ್ಠಲನ ಹೊಂದಿ ಸೇವಿಪ ಗುರುವೇ ೯

೧೯೪
ವಂದಿಪೆ ನಿನಗೆ ಗಣನಾಥ ಮೊದಲೊಂದಿಪೆ ನಿನಗೆ ಗಣನಾಥ ಪ
ಬಂದ ವಿಘ್ನ ಕಳೆ ಗಣನಾಥ ಅ.ಪ.
ಸಿಂಧುರವದನರವಿಂದ ನಯನ ಘನ ಸುಂದರ ಸತಿಯರ ಮಂದಿರ ನಿಲಯನೆ ೧
ಹೂಡಿದ ಆಟಕೆ ಮಾಡಿದ ಯೋಚನೆ ಕಡೆಗಾಣಿಸು ಘಟ್ಟಿಕಾಣಿಕೆ ಕೊಡುವೆ ೨
ಮಂಗಳಾಂಗ ಮಹಮಾದಗಮನಿಯಳ ತಂದು ತೋರೋ ತಂದೆವರದಗೋಪಾಲವಿಠ್ಠಲಪ್ರಿಯ ೩

೨೧೪
ವಾತವನು ಪರಿಹರಿಸೊ ವಾತನೊಡಿಯಾ ಪ
ಈ ಪರಿ ಬಾಧೆಬಡುವುದುಚಿತವೇ ರಂಗಾ ಅ.ಪ.
ನಿನ್ನ ದಾಸನೊ ದೇವಾ ಸಾಕು ಸಾಕು ಈ ಬವಣೆ ಬಿಡಿಸಿನ್ನು ೧
ಅನ್ಯನನು ಇವನಲ್ಲ ನಿನ್ನವನು ಕೇಳೋಶಿರಿನಲ್ಲಾ ಲಾಲಿಸೊ ಎನ್ನ ಸೊಲ್ಲಾ ೨
ವಾತಪದ ಯೋಗ್ಯನ ದೂತನಂತೆಂದು ಬಿನ್ನೈಪೆ ತಾತ ತಂದೆವರದಗೋಪಾಲವಿಠಲಾ ೩

೨೪೫
ವಾಸುದೇವನ ದಾಸ ವಾಸುಕೀಭರಣನೇ ಭೂಷಾ ಪ
ವಾಸವಾದ್ಯಮರರಿಗೆ ತೋಷವ ಸುರಿಸುವ ಭಾವೀ ಭಾರತೀಶ ಅ.ಪ.
ಬಯಸಬಾರದ ಬಯಕೆಗಳಿಂದ ಬಾಧೆಗೊಳಗಾದೆನೊ ಬಾಧೆಗಳ ಬಿಡಿಸಿ ಭವದಿ ಭಕ್ತರೊಳು ಕೂಡಿಸೋ ೧
ಕೊಟ್ಟವರ ಸಾಲವನು ಕೊಟ್ಟು ಮುಟ್ಟಿಸದೆ ದಿಟ್ಟತನದಿ ಬೆಂಬಿಟ್ಟು ಅಗಲದಲಿಟ್ಟು ಕೊಟ್ಟು ತೀರಿಸುವಂತೆಮಾಡೋ ಪ್ರೇಷ್ಯಾ ೨
ಏಸೇಸು ಕಲ್ಪಕ್ಕೂ ದಾಸನೆಂಬುದು ಬಲ್ಯಲ್ಲಾ ಈಶ ನೀ ಗತಿಯೆಂಬುದು ಚೆನ್ನಾಗಿ ಬಲ್ಲೆ ಕಾರಣದಿ ಮೊರೆ ಪೊಕ್ಕ ತಂದೆವರದಗೋಪಾಲವಿಠ್ಠಲನಶರಣಾಗ್ರೇಸರಾ೩

೨೪೯
ಶತ್ರುಭಯ ಪರಿಹರಿಸೊ ಭೂತರಾಜ ಪ
ಭವಕೆ ಭೀಕರ ಭಾವಿ ಭೀಮನ ಭಜಿಪ ಭೋಜಾ ಸುತೇಜಾ ಅ.ಪ.
ಒಂದು ಅರಿಯದೆ ಇಂದು ನೀನೆ ನಾನೆಂದು ಕಮರಿ ಕೂಪದಿ ನೊಂದೆನೊ ಭಾವಿ ನಂದಿವಾಹನ ಮಂಗಳ ಪ್ರದ ನೀಲಕಂಠಾ ೧
ಇಲ್ಲೆಲ್ಲಿ ಸರ್ವಸ್ಥಳದಲ್ಲಿ ವ್ಯಾಪ್ತವಾಗಿಹ ನಿನ್ನ ಲೋಲ ಮೂರುತಿಯ ನೆನೆವೆ ಫಾಲನಯನಾ ಪಾಲಿಗೇ ಪಾಲನೆಂತೆಂದು ಕಾಲಮೀರದೆ ಚಲಿಸದೆಲೆ ಬಾರೊ ಗರಳಧಾರಿ ೨
ಶ್ರೀಕೃಷ್ಣದಾಸನೆ ನಿನ್ನ ಇಷ್ಟನೆಂತೆಂದು ಮನಮುಟ್ಟಿ ಭಜಿಸುವೆನೊ ಚಾರುದೇಷ್ಣೆಪಾಲಾ ದಿಟ್ಟ ಗುರು ಕೃಷ್ಣವಂದಿತ ತಂದೆ-ವರದಗೋಪಾಲವಿಠ್ಠಲನ ಸಹಜ ಬಂದು ೩

೨೨೪
ಶೂಲವನು ಪರಿಹರಿಸೊ ತ್ರಿಶೂಲಧಾರಿ ಪ
ಬಹುವಿಧದಿಂದ ಬಾಧೆಬಡುತಿಹ ಅಂಗನೆಯಳ ಶಿರ ಅ.ಪ.
ಎರಡು ವಾಶ್ಯ ವತ್ಸರದಿ ಬಹುಕ್ಲೇಶಪಡುತಿರುವಳೋ ೧
ಏಸೇಸು ದಿನವಾದರೂ ಪರರಿಗೊಶವಾಗದಯ್ಯ ನಿನ್ಹೊರತು ೨
ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆತಂದೆವರದಗೋಪಾಲವಿಠಲನ ಮರಿಯೇ ೩

೨೨೫
ಸಂಗವಿತ್ತು ಸಲಹೋ ರಾಯಾ ಸುಖ ಸಂಗಿಗಳಾ ಪ
ಸದಾಶಿವ ಶರಣರ ಕರುಣ ಕವಚ ತೊಡಿಸಿ ಜೀಯಾ ಅ.ಪ.
ನೀಲಕಂಧರಧರ ರುಂಡಮಾಲೆ ಕುಂಡಾಲ ಚರ್ಮ ಪೆತ್ತವನಪ್ರೀಯಾಮುಗಿದೆನೋ ಕರಮುಗಿದು ಕಳೆಯೊ ತಾಪತ್ರಯ ೧
ಮದ್ದು ಹಾಕಿ ಮಣಿಸೋ ಮತ್ತೆ ಮಧ್ವಚಾಲನ ಪಾಲಿಸೋ ತವ ಶುದ್ಧಮತದೊಳಗಾಡಿಸೋ ಗುರುಮಧ್ವರಾಜ ತವದಾಸನೆನಿಸೊ೨
ಶತ ಪತ್ರಾರಿಯ ಥಂಪನ ಸುತನೋ ಮತ್ತೆ ಶತ್ರಾನುಜನೆನಿಸುವನೊಪಾಶುಧರಿಪಾಗ್ರಜನೊ ಮತ್ತೆ ಪಶುವೇರುವನ ತಂದೆವರದಗೋಪಾಲ ವಿಠ್ಠಲನ ಭಜಿಸುವನೋ ೩

೨೧೬
ಸರಿಯಾರು ನಿನಗೆ ಸರಸಿಜಾಮುಖಿ ಪ
ಕರಮುಗಿವೆನು ಗಾರುಮಾಡದೆ ಎನ್ನ ಪೊರೆಯಬೇಕಿನ್ನು ಧರೆಯೊಳಗೆ ಅ.ಪ.
ಕರೆಕರೆಬಡುತಿಹ ಪೋರನ ಅಂಕೆಗಳನು ಅರಿತು ವಿಚಾರಿಸದಿಪ್ಪುದು ಥರವೇ ೧
ಸುತನಾಗೀಪರಿ ಪರರನು ಸ್ತುತಿಸುತ ಮೆರೆವುದು ಸರಿಯಾ ಮ್ಯಾಲ್ ಧರಿಯಾ ೨
ಆರಿಂದರಿಯದೆ ನಾನರಿಗಳ ಬೆರದೆ ಮೆರೆಯದೆ ತಂದೆವರದಗೋಪಾಲವಿಠ್ಠಲನ ತೋರುಶ್ರೀಶಾರದಾದೇವಿ ೩

೨೭೪
ಸಾಕು ಸಾಕು ಈ ಜನಸಂಗ ಪ
ಅದರಿಂದ ಆಗೋದು ವಿಚಾರ ಭಂಗಾ ಅ.ಪ.
ನಾಲ್ಕಾರು ತತ್ವಮಾತಿಗೆ ಮರುಳ್ಯಾಗಬ್ಯಾಡ ನಿನ್ನೊಳು ನೀನಾಗಿ ತಿಳಿದುಕೋ ಗಾಢಾನಿನಗೆ ನಾನರುಹುವೆ ಅವರ ಮನೋವೃತ್ತಿ ಗೂಢಾಅನಿಮಿತ್ತವಾಗಿ ಸರಸದಿ ಬಂದು ವಿರಸವ ಮಾಡೋರು ಮೂಢಾ ೧
ಪಿರಿಯರು ಪೇಳಿದ ವಾಕ್ಯವನ್ನು ಗ್ರಹಿಸಿ ತ್ಯಜಿಸೋದು ಸತ್ಕರ್ಮ ಬಾಹ್ಯ ವಳಗೆ ನೋಡಲು ತುಂಬಿದೆ ವಿಷಯರಾಶಿ ಜೀಯಾ ಆದ್ದರಿಂದ ನಿನಗೆ ಬೇಡಿಕೊಂಡು ಮುಗಿವೆ ನಾ ಕೈಯ್ಯಾ೨
ಸಂತರ ಸಂಗ ಮಾಡಬೇಕು ಅದು ಹ್ಯಾಗೆಂದರೆ ಕಂತೆಯೊಳಗೆ ಉಳ್ಳವರಾಗಬೇಕು ಸಂತೆ ಜನರ ಭಂಗಾ ತಾಳಲು ಬೇಕು ನಮ್ಮ ಸಂತತ ಸುರ ತಂದೆವರದಗೋಪಾಲವಿಠಲನ ದಯಬೇಕು ೩

೨೫೫
ಸುತೀರ್ಥರು
ಸಾರಲೆನ್ನಳವಲ್ಲ ಗುಣಶಾಲಿ ಸುರಪ ಸುತೀರ್ಥ ಯತಿವರ ಪ
ತವ ಸಂಚಾರ ಚರಣ ಸಮೀರಯುತ ವಿಸ್ತಾರ ಮಹಿಮೆಯ ಅ.ಪ.
ಇಂದು ದಾರಿಯಲಿಂದ ಬರುತಿರೆ ಸುಂದರಂದಣವೇರಿ ಯದರಿಗೆ ಬಂದು ಶರಣರ ಸೇವೆಗೊಂಡು ಶೃಂಗಾರ ಕವಚವನಿತ್ತು ನವಸುಖ ಮಾರಮರ್ಮನ ಬಯಸಿ ದ್ಯುತಿವರನಂಘ್ರಿಕಮಲವ ೧
ಧನ್ಯನಾದೆನೊ ನಿನ್ನ ನೋಡಿ ಮಾನ್ಯನಾಗುವೆ ಮೌನಿ ಜನರೊಳು ಗಾನ ಮಾಡುವೆ ಜ್ಞಾನಗಯ್ಯನ ಧ್ಯಾನ ಮಾಡಭಿಮಾನ ತೊರೆಯುತ ನಂಬಿ ನಿನ್ನಯ ೨
ಸಂಗಮಾಡಿಸು ಡಿಂಗಿಯರ ಕಡೆ ಕಂಗಳಿಂಗದಲಿ ಶೋಭಿಪಡುವ ಸುಶಾಮಗೊರಳನ ಪೊಡದ ತಂದೆವರದಗೋಪಾಲವಿಠಲನ ಪ್ರೇಮಗುರುಮಣ ೩

೨೧೫
(ಸರಸ್ವತಿ)
ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ ೧
ಗಹನ ಮಹಿಮಳೆ ಘನ ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ ೨
ಆವ ಜನುಮದ ಪುಣ್ಯ ಪ್ರಭಾವವೋ ಕಾಣೆ ನಿನ್ನ ಪಾದಾಶ್ರಯಿಸಿದ ಕಾರುಣ್ಯನಿಧಿಯ ಪರಮ ಹರುಷವಾಯ್ತು ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ ೩
ಸಾರಮತದ ವಿಚಾರವನ್ನು ತಾರತಮ್ಯಗನುಸಾರವಾಗಿ ಅರುಪು ಸರಸಿಜಮುಖಿಯೆ ನಿನ್ನ ಸರಸಿಜ ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ ೪
ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ ೫
ಜತೆ :ಮಾತೆ ನಿನ್ನ ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ ೬

೨೪೪
ಸೋದಾಪುರದಲ್ಲಿ ವಾಸಿಪ ಯತಿವರನ್ಯಾರೇ ಪೇಳಮ್ಮಯ್ಯಾ ಪ
ಹರಸುರಪತಿ ಸ್ಮರವರನುತ ನಮ ಸಮೀರ ಸದ್ವಾದಿರಾಜಕಾಣಮಾ ಅ.ಪ.
ಭೂತ ವಿನುತ ಪತಿನಾಥನೆಂದೆನಿಸುವನ್ಯಾರೆ ಪೇಳಮ್ಮಯ್ಯ ಭೇಶ ಜನಕೆ ಬಲು ಭೀತಿಗೊಳಿಪರಾರೆ ಪೇಳಮ್ಮಯ್ಯಭೇದವಿಲ್ಲದೆ ಭಕ್ತಿ ಭೇದ ಬೋಧಿಪರಾರೆ ಪೇಳಮ್ಮಯ್ಯ ಭಾನುಕೋಟಿ ತೇಜ ಬೋಧ ಮುನೀಶ್ವರ ಮತಾಂಭೋನಿಧಿಚಂದ್ರ ಕಾಣಮ್ಮ ೧
ಸತ್ವಾದಿತ್ರಯ ಗುಣಜ ಕರ್ಮರಹಿತರಾರೆ ಪೇಳಮ್ಮಯ್ಯಾ ಶುದ್ಧ ಸತಿಸ್ವರೂಪದಿಂದ್ರಮಿಸುವರಾರೆ ಪೇಳಮ್ಮಯ್ಯಸಾರ ಶಾಸ್ತ್ರ ಶೃತಿಸಾರವಿನುತ ಖಳಾರಿಯೆಂದೆನಿಸುವರಾರೆ ಪೇಳಮ್ಮಯ್ಯಾರಾಶಿ ಪೂರ್ಣ ಸಪ್ತನಾಮಹರ ನೇತ್ರ ದ್ವಯಾಂಶ ಸಹಿತರೇ ಪೇಳಮ್ಮಯ್ಯಾ ೨
ಪಂಚಸುವೃಂದಾವನದಲಿ ಮಿಂಚಿಪರಾರೇ ಪೇಳಮ್ಮಯ್ಯ ಪಂಚಭೇದ ಶೂನ್ಯ ಸದ್ವಂಚಕರಿಂದಿರುತಿಹರಾರೇ ಪೇಳಮ್ಮಯ್ಯ ಪಂಚಾಸನ ಪರ ವಂಚಕರಿಗೆಯಂದೆನಿಸುವರಾರೇ ಪೇಳಮ್ಮಯ್ಯ ಪಂಚ ಪಂಚ ತತ್ವ ಪಂಚರೂಪ ತಂದೆವರದಗೋಪಾಲವಿಠಲನಪೂಜಿಪರೇ ೩

೨೬೦
ಸ್ಮರಿಸಿ ಸುಖಿಸೆಲೊ ಮಾನವಾ ಪ
ಸ್ವಾನುಭಾವದಿಂದ ಸುಖವಬಡಿಪ ಗೋಪಾಲದಾಸ ರಾಜರಡಿಗಳನುದಿನಾ ಅ.ಪ.
ಅಪಾರ ಜನುಮದ ದಾಸ್ಯಹರಿಸಿ ಸುಖಸಾರ ಸುರಿಪರನುದಿನಾ ೧
ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ ೨
ಸರ್ವ ವಿಧದಿ ತೋಷಬಡಿಪ ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ ೩

೨೩೪
ಶ್ರೀ ಮಧ್ವಾಚಾರ್ಯರು
ಸ್ಮರಿಸು ಸಂತತ ಗುರುಗಳಾ ಬಿಡದೆ ಅನುದಿನಾ ಪ
ವಾತ ಭೀಮನ ಒಡೆಯ ವೇದವ್ಯಾಸಯುತ ಸಾರಂಗಧರನಆ ಪ್ರೇಮದಿಂದಲಿ ಭಜಿಪೆನಡಿಗಳ ಬಿಡದೆ ಅ.ಪ.
ಮಂದ್ರಜಾಸನ ಸುತನ ವಚನ ಕೊಂಡು ಧರೆಯೊಳು ಬಂದು ಭಜಿಸುತ ಪೊಂದಿಪವರ ವೃಂದ ಹರಿಸಿ ಸುಗುಣ ಸುವೃಂದಗಳಿಗೆ ಬಂಧುಪರ ಗೋವಿಂದನೆಂಬುದ ಬೋಧಿಸಿದನ ೧
ಮಂಗಳಾಂಗನ ಕೊಂಡು ತುಂಗಕುಲ ತೀರ್ಥರ ಶರದೀ ಬಂದೂ ಭೂಮಿಯೊಳು ಅನಂಗಪಿತನ ಒಲಿಸಿರಂಗರಾಜನ ದೂತನಿಂದಾ ವಿದ್ಯವಾ ಕೊಂಡು ಬಂದು ಪರಮಾದರದಿ ವ್ಯಾಸತ್ರಯಯುತ ಸುಧೆಯನಗರದನಂಘ್ರಿಯಾ ೨
ರಘುಕುಲಾ ಜಲಧೀಗೆ ಜಲಜವೈರಿಯಂತೊಪ್ಪುವಾಮಾರನಯ್ಯ ಶಿರಿ ಪರಶು ಪಾಣೀ ಯಾತ ಜಡೆಧಾರ ತುರೀಯನಾಶ್ರಯಿಸೀ ಬಾಣರೂಪವಾ ಬಿಡದೆಬಾಣವಾ ಗುರಿ ಮಾಡಿಬಾಣವರದನ ಸರಿಯೆಂದೆನಿಸಿ ಬಾಣ ಭೇದವನೆ ಬೋಧಿಸಿಬೋಧತೀರ್ಥರ ಮತಾಧಿಪನ ತಂದೆವರದಗೋಪಾಲವಿಠಲನಭಜಕಾ ೩

೨೦೬
ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇವೆಂಕಟೇಶಾ ಪ
ಕರುಣಾನಿಧಿ ಮಹಾಮಹಿಮ ನೀನೆಂದು ನಾ ನಂಬಿದೆವೆಂಕಟೇಶಾ ಅ.ಪ.
ಬರಿದು ದಂಡಿಸಿ ನಿನ್ನ ಪದ ಹೊಂದುವ ಬಗೆ ತೋರೋವೆಂಕಟೇಶಾ ಬಾಧೆಯ ತಾಳದೆ ಹಾದಿಯ ತಪ್ಪಿದೆ ವೆಂಕಟೇಶಾ ೧
ಮಾರಿ ಮುಸುಕಿ ಎನ್ನ ಗಾರು ಮಾಡದೆ ವೆಂಕಟೇಶಾಘೋರ ಜಾರದ ವಾರಿಧಿಯಲಿ ನಾ ಮುಳುಗಿದೆ ವೆಂಕಟೇಶಾ ೨
ಪಾರುಗಾಣದೆ ನಿನ್ನ ಮರೆಹೊಕ್ಕೆನೋ ವೆಂಕಟೇಶಾನಾನಾಗಿ ನಿನ್ನ ಗಣ್ಮ್ರತಗರಿಯೊ ವೆಂಕಟೇಶಾ ೩
ಚೋರರ ಬಾಧೆಗೆ ಚೀರಿ ಚೀರುತಲಿಹೆನೊ ವೆಂಕಟೇಶಾದೂರ ನೋಡದಿರು ದಾಸರ ದೂತ ವೆಂಕಟೇಶಾ ೪
ಹತ್ತು ಒಂಬತ್ತು ವತ್ಸರದಿಂದ ಕುಂಭಿಯೊಳಿದ್ದೆ ವೆಂಕಟೇಶಾಇನ್ನೆಂತು ಪೊಗಳಲಿ ನಿನ್ನ ಕರುಣವು ಬಾರದೆ ವೆಂಕಟೇಶಾ ೫
ಕುಂಕುಮ ಅಂಕಿತ ಪದಪಂಕಜ ಶೋಭಿತ ವೆಂಕಟೇಶಾಕಂದನೆಂದು ಪೊರೆಯದಿರೆ ಬಿರಿದುಂಟೆ ವೆಂಕಟೇಶಾ ೬
ಜ್ಞಾನದಿ ನಿನ್ನ ಧ್ಯಾನಿಪಲೊಲ್ಲೆ ವೆಂಕಟೇಶಾತೇಜ ತಂದೆವರದಗೋಪಾಲವಿಠಲ ವೆಂಕಟೇಶಾ ೭

೨೪೬
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ
ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ.
ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ ೧
ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ೨
ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ ೩
ಕಲಿಕುಲಜೈಸಿ ಸತ್ಕವಿಕುಲ ಪೋಷಿಸಿಯತಿಕುಲಭೂಷಿಪ ವರಶುಕ್ಲ ಶೋಣಿತ ಶೂನ್ಯರಿವತೆಂದ್ಹೊಡಿ೪
ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ ೫
ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ ೬
ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ ೭
ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ ೮
ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ ೯

೧೯೭
ಉಗಾಭೋಗಗಳು
ಕರಿವರದಾನೆ ಕೇಳು ಕರಿಕರಿಯನ್ನು ಪಡಿಸುತಿಹ ದಾನವರ ಉಪಟಳ ಬಿಡಿಸೆನ್ನ ನಿನ್ನ ದಾಸರೊಳಗೆ ಇಟ್ಟುಧ್ಯಾನಿಸುವಂತೆ ಮಾಡೊ ಜನುಮ ಜನುಮಕ್ಕೆ ಇದನೆ ಬೇಡುವೆನಯ್ಯ ಮಾರನಯ್ಯನೆ ಕೇಳು ಮುದದಿಂದಲೇ ಎನ್ನ ಬಿನ್ನಪವನ್ನುಋಜು ಪುಂಗವ ಪ್ರೀಯ ತಂದೆವರದಗೋಪಾಲವಿಠಲರೇಯಾ ಬಿನ್ನೈಸಿದಕ್ಕೆ ಪಾಲಿಪೆನೆಂದು ನಂಬಿದೆ
ಕಾಳಗ ಮಾಡಿಕೊಂಡು ಕೇಳದೆ ತೆರಳುವೊಖೂಳರನ್ನು ಕಾವಳನಿತ್ತು ಪರಿಹಾಸ ಬೇಕಯ್ಯ ಜಾಲಮೋಹದಿ ಬಿಗಿದು ಮೇಲೆ ಅಪ್ಪಳಿಸಬೇಕಯ್ಯತೆರಳುವಂತೆ ಮಾಡೊ ಕಾಲಿಗೆ ಬಿದ್ದು ಬೇಡುವೆ ಕೃಪಾಳು ಕಾಳಿರಮಣನ ಪ್ರೀಯಾಕಾಳಿಮರ್ದನ ತಂದೆವರದಗೋಪಾಲವಿಠಲರೇಯಾ ಆಲಿಕೆಯನ್ನು ಕೇಳಿದರೆ ಬಿರುದುಗಳ್ಯಾ

೨೦೮
(ಸುಳಾದಿ)
ಏಸೇಸು ಬಗೆಯಿಂದ ಬಹುವಿಧವಾಗಿ ಕರಮುಗಿದುಬಾಯ್ತೆರೆದು ಬಿನ್ನೈಸಿದರು ಕರುಣಪುಟ್ಟದ ಮ್ಯಾಲೆನಿನ್ನನೆ ವಾಲೈಸುವುದ್ಯಾಕೊ ಸಹಿಸಲಾರೆನೊ ದೇವಾ ಶತ್ರುಗಳ ವಾಕ್ ಶಸ್ತ್ರದೊಳಗೆನ್ನ ಬಿಗಿದು ಕ್ಲೇಶಬಿಡಿಸಿ ಪರಿಹಾಸ ಮಾಡುತ ನೋಡುತಿಪ್ಪೋದು ಏನು ಸುಖವೊಮನವ್ಯಲ್ಲಾ ಬ್ಯಂದು ಬ್ಯಂದು ಕಂದಿ ಕುಂದಿ ನೊಂದೆನಯ್ಯಾಅಂಜನಿ ದೇವಿಯ ಕಂದ ಬಂಧನ ಬಿಡಿಸಿ ನಿನ್ನ ದ್ವಂದ್ವವ ಪೊಂದಿದಕಂದನೆಂದು ಸಲಹೊ ತಂದೆವರದಗೋಪಾಲವಿಠಲನಪ್ರೀಯಾ ೧
ಕಾಮನಯ್ಯನ ದೂತಾ ಕಾಮನ ಪೂರೈಸು ಕಾಮಿನಿ ಸಂಬಂಧಿತರು ಬಾಧಿಸುತಿಪ್ಪ ಬಾಧೆಯನಿಂ ಸಹಿಸಲಾರದೆ ನಿನ್ನ ಪಾದಕೆ ನಮಿಸಿ ಬಿನ್ನೈಪೆಭವಪಾಶಾದಿ ಸುತ್ತಿ ಭೋಗ ಪಡಿಸೋದು ಭಾಗ್ಯವೆ ನಿನಗೆ ಭಾಗವತರ ಗುಣಮಣಿಯೆ ಭಾರವ ಹರಿಸಿ ಪೊರೆಯೋಭಾರತ ರಣದೊಳು ಬಲಭರಿತನಾಗಿ ಭೀಕರರಾಗಿ ಭೇಜಕನೆ ಮತ್ತೆ ಬಕ ಕೀಚಕ ಮೊದಲಾದವರ ಹೀಚಿ ಬಿಸಾಡಿದ ಮಹಾಭಯಂಕರ ಭೋಗಿಶಯನನ ಕಿಂಕರ ಮದಗಜ ವೈರಿಯೆ ಭಂಡ ದುರ್ಯೋಧನನ ಶಿರ ಭೂಮಂಡಲದೊಳು ಚಂಡನಾಡಿದ ಉದ್ದಂಡ ಲಂಡ ಪಾಷಂಡಿಯಮಿಂಡನೆನಿಸಿದೆ ಗಂಡುಗಲಿ ಪ್ರಚಂಡಾ ತಂದೆವರದಗೋಪಾಲವಿಠ್ಠಲನ ತೊಂಡಾ ೨
ನಿನ್ನ ಮಹಿಮೆಗೆ ಅನಂತ ನಮೋ ನಮೋ ನಿನ್ನ ಕ್ರಿಯಕೆ ಅನಂತ ನಮೋ ನಮೋ ನಿನ್ನ ರೂಪಕೆ ಅನಂತ ನಮೋ ನಮೋನೀನೇವೇ ಘನ ಮುಖ್ಯ ಪ್ರತಿಬಿಂಬಾ ಹರಿಗೆ ಪ್ರಥಮಾಂಗಾದ್ವಿತೀಯ ಈಶಾ ಘನ ತರುಣಿ ಜಗದಿ ನಿನ್ನ ಪೋಲುವರಿನ್ನಿಲ್ಲಾ ಸುರಾಸುರ ಗಣದೊಳು ಪೂರ್ಣತ್ವದಿ ಸರ್ವ ವಿಷಯದಿಂದಹರ ಮುಖ್ಯ ದಿವಿಜರಿಗೆ ಪ್ರಾಣವನಿತ್ತು ಸಲಹುವ ಆಧಾರ ಮೂರುತಿಆರು ಬಲ್ಲವರಿಲ್ಲಾ ಅನಂತ ಕಲ್ಪಸ್ಥೆಮುಕ್ತ ವಾಗ್ಯಾಣ್ಯಾದಿಗಳುನಿನ್ನ ಸದ್ಗುಣ ಶರಧಿಯಲಿ ಮುಣುಗಿ ಮುಣುಗಿ ತೇಲುತ ಪ್ರಾಂತ್ಯಗಾಣದೆ ಬಹು ಶ್ರಾಂತರಾಗಿಹರಯ್ಯ ದಿಗ್ಭ್ರಾಂತರಾದರು ದಿಗಂಬರನಾದ ಶಂಭುಮೊದಲಾದ ವೃಂದ ವಂದ್ಯಾ ಸಿಂಧು ಶಯನ ಅರವಿಂದನಾಭಾ ತಂದೆವರದಗೋಪಾಲವಿಠಲನ ಕಂದಾ ೩
ಜೀವೇಶಾ ಜೀವಾಕಾರಾ ಜೀವಾಧಾರಾ ಜೀವ ನಿವೃತ್ತಕ ಜೀವ ಪ್ರವೃತ್ತಕ ಜೀವಾಂತರ್ಬವ್ರ್ಯಾಪ್ತಾ ರಾಜೀವ ಪೀಠದ ಯೋಗ್ಯಾ ಪೂರ್ಣ ಲಕ್ಷಣ ಶುಭಕಾಯಾಸುಂದರ ಭಾರತಿ ಮೋಹಿಪ ಜಗಜ್ಜನಕಾ ಜಡೆಧರನೊಡೆಯನೆ ನುಡಿಯಲಾಲಿಸಿ ಬಿಡದೆ ಪಾಲಿಸಯ್ಯ ದೃಢದಿ ನಿನ್ನಡಿಗಳ ನಂಬಿದೆ ಯಡಬಿಡದೆ ಮಹಾ ಮಡುವಿನೊಳಗೆಕೈಯ ಬಿಡದಿರೊ ಖೋಡಿ ದೈತ್ಯರು ಬಂದು ಬಾಧಿಸುತಿಹರೈ ಕಾಡಿನೊಳಗೆ ಮಧ್ಯೆ ಘನ ಗಿರಿವಾಸ ಮೂಲ ಮೂರುತಿ ತಂದೆವರದಗೋಪಾಲವಿಠಲನ ದಾಸಾ ೪
ಮೂರು ರೂಪಧಾರಿ ಮಹಾವೀರ ಪ್ರತಾಪ ಶೂರ ಸದ್ಗುಣ ರತ್ನಾಕರಮೂರು ಲೋಕದಿ ವ್ಯಾಪ್ತಾ ಹೊರಗೆ ಮೂರುಕೋಟಿ ರೂಪ ಧರಿಸಿ ಘನೋದಕ ಆಡೆದಿಪ್ಪ ಮೂರು ಬಗೆ ಜೀವರೊಳುಮೂರೇಳು ಸಾವಿರದಾರು ನೂರು ಜಪ ಬ್ಯಾರೆ ಬ್ಯಾರೆ ಮಾಡಿ ಮಡದಿಯೊಡನೆ ನಾಗದ್ವಯದೊಳಗಿದ್ದುಅಧೋ ಊಧ್ರ್ವಶ್ವಾಸ ಬಿಡಿಸಿ ಜೀವರ ಪೊರೆವೆ ಶ್ರೀಹರಿಗೆ ಅರ್ಪಿಸಿ ಮೂರು ವಿಧ ಫಲಅವರವರ ಯೋಗ್ಯತಾನುಸಾರ ಕೊಟ್ಟು ಪಾರುಗಾಣಿಪಮಹಾಕರುಣಾ ಶರಧಿಮೂರು ಹತ್ತು ಎರಡು ಲಕ್ಷಣ ಮೂರುತಿ ಮೂಲ ಮುವ್ವತ್ತೇಳು ಗ್ರಂಥ ರತ್ನಗಳ ಪೋಣಿಸಿಹಾರವ ಮಾಡಿ ಶ್ರೀಹರಿಗೆ ಅರ್ಪಿಸುವ ನಿನ್ನ ಕರುಣಕ್ಕೆ ಯೆಣೆಗಾಣೆ ಯೆಣೆಗಾಣೆ ಪೊರೆವರ ನಾ ಕಾಣೆ ನಿನ್ನಾಣೆ ತಂದೆವರದಗೋಪಾಲವಿಠಲನ ಘನ ಪ್ರೇಮಾ ೫
ಜತೆ :ಘನ ಸಂಸಾರದ ಮೋಹಾ ಮಡುವಿನೊಳಗೆ ಶಿಲ್ಕಿಬಾಯ್ ಬಿಡುವೆ ತಂದೆವರದಗೋಪಾಲವಿಠಲನ ತೋರೋ ೬

೨೬೨
(ಅಹಂಕಾರ ಖಂಡನ ಸುಳಾದಿ)
ಕಪಟನಾಟಕ ಸೂತ್ರಧರನೇ ಕೇಳು ಕುಟಿಲರೊಳಗೆ ನಾನು ಆಗರನಯ್ಯ ನಿಷ್ಕುಟಿಲ ಜನರೊಳು ನೀನಿದ್ದು ದಾಸನೆಂದು ಕರಿಯೋದು ನಾ ಕೇಳಿ ತನುಮನಧನ ಮಾನಿಗಳೆಲ್ಲ ನಾಚುತಲಿಹರಯ್ಯ ಎಳ್ಳಿನಿತು ದಾಸತನದ ಭಾವವನ್ನಲ್ಲಿ ನಾ ಕಾಣೆ ನಿನ್ನಾಣೆ ಶಿರಿ ಅರಸ ಧರಣಿ ದೇವಿಯ ರಮಣಿ ದುರ್ಗಿಯ ವಲ್ಲಭ ಧರಣಿ ಸುರರೊಳು ನೆರೆದು ಮೆರೆಯಲು ಲಜ್ಜೆ ಬರುತಲಿದೆ ಜ್ಞಾನಿಗಳರಸನೇ ಸುಜ್ಞಾನಿಗಳೊಳಗಿಷ್ಟು ಜ್ಞಾನಿಯೆಂದೆನಿಸುವಿ- ಅಜ್ಞಾನಿಗಳಿಗೆಲ್ಲ ವಿಜ್ಞಾನ ತತ್ವದೊಡೆಯನ ಪ್ರೀಯ ತಂದೆವರದಗೋಪಾಲವಿಠಲರೇಯಾ ಜ್ಞಾನಿ ಎಂದೆನಿಸಿದಕ್ಕೆ ಜ್ಞಾನವಿತ್ತು ಪರಿಪಾಲಿಸಬೇಕಯ್ಯ ೧
ತಾರತಮ್ಯ ಪಂಚಭೇದ ವರ್ಗವ ಕಾಣದೆ ಸಾರಿಸಾರಿಗೆ ಇನ್ನು ಹರಿಕೃಷ್ಣಾ ವಾಸುದೇವಾ ಅಚ್ಯುತಾನಂತನೆಂತೆಂದು ಚೀರಿ ಚೀರುತಲೊದರುವೆ ಚೋರ ದಾಸನ ಮೇಲೆ ವರಗಿ ಮುಗಿಲು ಹರಿದು ಮ್ಯಾಲೆ ಬಿದ್ದು ಭಾರವನು ತಾಳದೆ ಮೊರೆಯ ಬಿದ್ದೆ ನಿನ್ನ ಪಾದ ದ್ಹ್ರುದ್ಯದೊಳಗೆ ಬಂದು ತಿದ್ದಿ ಯನ್ನ ಬುದ್ಧಿ ಮದ್ದುಹಾಕಿ ಯದ್ದು ನಿಲ್ಲುವಂತೆ ಮಾಡೊ ಹದ್ದು ವಾಹನನಾದ ಮಧ್ವ ಮುನಿಗೆ ಒಲಿದ ಮುದ್ದು ಮೊಗದನಯ್ಯರಂಗ ಚೆಲ್ವ ಅರಸ ಗೊಲ್ಲ ತೆರಗಲ್ಲ ಪಿಡಿದ ತಂದೆವರದಗೋಪಾಲವಿಠ್ಠಲ ಸುಧಿಯ ರಸವ ಸುರಿಸಿಬಂದು ನಿಲ್ಲೊ ೨
ಕಾಕಜನರೊಳು ಕೋರ ತನದಿಂದನೇಕ ಬಗೆಯಲಿ ಕೂಡಿ ಕುಹಕ ಚೇಷ್ಟೆ ಮಾಡುತ ಶೋಕ ರಹಿತರ ಶಾಪಕೊಳಗಾಗಿ ಕೋಕನದ ರಸ ಸವಿಯದೇ ಏಕಮೇವಾದ್ವಿತೀಯ ಈ ಶೃತಿ ಪಾದ್ಯ ಶ್ರೀ ಶುಕಮುನಿ ಸೇವ್ಯ ಸದ್ಗುಣ ತಂದೆವರದಗೋಪಾಲವಿಠಲ ಸಲಹೊ ೩
ಅಶದಿಂದಭಿಲಾಷೆ ಪರಿತೋಷವಾಗದೆ ಕ್ಲೇಷ ಪಡುವೆನೊ ವಾಸುದೇವ ಅಭಿಲಾಷೆ ಪೂರ್ತಿ ಘಾಸಿ ಪಡಿಸಿದೆ ನಾಶಗೈಸೊ ನಾಗಶಯನನೆ ನಾಕು ರೂಪದಿ ಗಾತ್ರ ನಾಮಕಗೋತ್ರ ವಂದಿತ ಸೂತ್ರ ಜಾತ ಸುಸೇವ್ಯ ಸದ್ಗುಣ ತಂದೆವರದಗೋಪಾಲವಿಠ್ಠಲ ಗಾತ್ರದೊಳು ಬಂದು ಸೂತ್ರ ತಿರುವೊಸೂತ್ರಧಾರಿ ೪
ಇಷ್ಟ ಜನರಿಗೆ ದೃಷ್ಟಿಗೋಚರನಾಗಿ ಕಷ್ಟ ಹರಿಸುತ ಪುಷ್ಟಿಗೈಸುವ ಜಗಜಟ್ಟಿ ವಿಠ್ಠಲ ದಾಸರೆನಿಸುವ ವಿಜಯ ವಿಠ್ಠಲ ಪ್ರೀಯನಷ್ಟಗೈಸು ವಿಶಿಷ್ಟ ಮನದ ದುಷ್ಟ ಭಾವನೆ ಕುಷ್ಠರೋಗಕೆ ಉತ್ರ‍ಕಷ್ಟಯೌಷಧ ಕೊಟ್ಟುಪೊಟ್ಟೆಯೊಳಗಿಟ್ಟು ಪೊಳಿಯೋತಂದೆವರದಗೋಪಾಲವಿಠ್ಠಲನೇ ೫
ಜತೆ :ಸಾರಥಿ ನಿನ್ನಯ ಚರಣ ನಂಬಿದಕೆ ಸಾರ ಶಾಸ್ತ್ರವನರಿ ಹೋ ತಂದೆವರದಗೋಪಾಲವಿಠ್ಠಲನೇ

೨೨೦
ರುದ್ರದೇವರ
(ಸುಳಾದಿ)
ಕಮಲ ಲೋಚನೆ ನಿನ್ನ ವಿಮಲ ಮೂರುತಿಯಾ ನೋಡಿ ಮರುಳಾದನೋ ದೇವಾ ಹೃತ್ಕಮಲದೊಳಗಿಪ್ಪ ರೂಪದ ಚತುದ್ರ್ವಾರವ ಸೇರೋ ತನಕ ಕರವಾ ಮುಗಿದು ಬಿನ್ನೈಪೆತ್ರಿಗುಣಾತ್ಮಕ ತ್ರಿಕಾಲವ್ಯಾಪ್ತಾ ಅತ್ಯಪ್ತಾ ಮನದೊಳು ವ್ಯಾಪಕನಲ್ಲದೆಬೊಮ್ಮಾಂಡಾಂತರ ವ್ಯಾಪ್ತಾ ಅಲ್ಲಿಗಿಲ್ಲಿ ದ್ವಾರಾದಿಂದ ಬಂದು ಪೋಗಿ ಪೋಗಿ ಬಂದು ಕಾರ್ಯಾ ಸಿದ್ಧಿಸಿವೋ ಮಹಾಕರುಣಿ ಕಮಲಮುಖಿಯ ಲೋಚನದೊಳು ವಾಮನಿ ಭಾಮಿನಿ ನಾಮಧಾರಿ ರುದ್ರನಾಮಕನ ಹರಿ ತಂದೆವರದಗೋಪಾಲವಿಠ್ಠಲನಮೋಹಕೆ ವಳಗಾದ ಪರಮಪುರುಷನೇ ೧
ಮಾತನಾಡಿ ಪೋದಾತದುಳಿಯಶಳದುಮನದೊಳಗೆ ತೋರಾಲು ಪೇಳಿದೆ ಸ್ವಪ್ನಾದಿ ಪೋಗಿ ಅರುಹಾಲು ಸುಲಭದಿಂದ ಸರ್ವಸಿದ್ಧಿಸುವಾದು ಸ್ವಪ್ನಾಭಿಮಾನಿನಿಯಾಮಕತೈಜಸ ತತ್ವಕ್ಕೆ ಮುಖ್ಯ ಸ್ವಾದಿ ಪುರವಾಸಿ ತಂದೆವರದಗೋಪಾಲವಿಠ್ಠಲ ಪ್ರೀಯಾ ೨
ಸ್ವಾಮಿಯಾದ ಕಾರಣದಿ ಶಿರವಾಗಿ ಬೇಡಿಕೊಂಡುದಕೆಅಭಯವನಿತ್ತು ಕರವಾ ನೀಡಿದಂತೆ ಮಾಡಿ ಪೊಡವಿಯೊಳಗೆ ಬರದು ಪಡಿಯಾದಿರೆ ಕಡೆಗಾಣದುತಡಿಗೆ ನೋಡಿದಾರೊ ನೀನೇ ಗತಿ ಗಡಿಯೊಳಗೆ ವಂದು ವಡವೆನಿಟ್ಟು ಮೋಹಪಡಿಸೀದಂತೆ ಮೋಹಪಡಿಸಿ ದಣಿಸುವರೇ ಅತ್ಯುತ್ತಮ ಮೋಹಕ ವಸ್ತುವಾದ ಸುಂದರ ಮೂರುತಿ ಚೆಲ್ವತಂದೆವರದಗೋಪಾಲವಿಠ್ಠಲನ ತೋರೋ ೩
ಸಾರಿಸಾರಿಗೆ ಬಂದೂ ಬಿನ್ನೈಸಿದೆ ನಿನ್ನ ಪಾದಕ್ಕೆ ಒಂದು ತೋರಲಿಲ್ಲಾಕಂದೀ ಕುಂದೀ ಕಳೆಗುಂದೀವೆಂದು ಬೆಂಡಾದೆ ಬಂಧನದಲ್ಲಿ ಇದ್ದು ನಂದ ಬಡುವೋದುಚಿತವೇ ಇಂದು ಮುಂದು ಎಂದೆಂದಿಗೂನೀನೇ ಗತಿಯೆಂದು ನಂಬಿದೆ ಗರುಡಗಮನ ತಂದೆವರದಗೋಪಾಲವಿಠ್ಠಲರೇಯಾನ ತಂದುತೋರೋ ೪
ಕಾಮಹರನೇ ಕೇಳು ಕಾಮಿನಿಯಳಾ ತಂದು ನೇಮದಿಂದಲಿ ನಿಂದು ಶೆಳೆದರೆ ಪರಿಮಳ ಪಸರುವಂತೆವಾಗುವೋದಯ್ಯಾತಂದೆವರದಗೋಪಾಲವಿಠ್ಠಲ ಬರುವಂತೆ ಮಾಡೋ ೫
ಜತೆ :ಮನದಿಂದಾ ಮನಕೆ ಬಂದೂ ಕಾರ್ಯವ ಮಾಡೋತಂದೆವರದಗೋಪಾಲವಿಠ್ಠಲನ ಪ್ರೀಯಾ ೬

೨೫೮
ಗೋಪಾಲದಾಸರು
(ಸುಳಾದಿ)
ಕೃಪಣವತ್ಸಲನೆ ನಿನ್ನ ಚರಣ ಶರಣಾನೆಂದು ಕರುಣದಿ ಪಾಲಿಸು ಮತ್ತಾ ಕಾಯ್ವರ ಕಾಣೆ ಕರುಣಾನಿಧಿಯೆಂದು ಮೊರೆಪೊಕ್ಕ ಮ್ಯಾಲಿನ್ನುಭಾಪುರೆ ಭಾಪುರೆ ನಿನ್ನ ಬಿರುದು ಸಾರುತಿದೆ ಲೋಕಾಲೋಕಾಧಿಪನೆ ಬಾಲ ಚೇಲನ ಲಾಲಿಸು ಪರಮ ಪಾಮರನೆಂದು ಕರೆಸುವ ದಾಸನು ರೋಗ ಸಾಗರದೊಳು ಮುಳುಗಿ ಈಸಲಾರದೆ ನಿನ್ನ ಸ್ಮರಿಸೆ ವಾಸಿ ಮತ್ತೇನು ರಕ್ಕಸ ಜನರನ್ನು ಉದ್ಧರಿಸೊಸಾಸಿರ ಮಾತುಗಳಿನ್ಯಾಕೆ ಸತಿಯೆಂದು ಸಾಕೋ ಬಿಡದೆ ಸೋಮಪುರಿವಾಸ ವೇಣಿಯೆಂಬೊ ಕೋಪಿ ಶ್ರೀನಿವಾಸದಾಸರ ಭಾಸ ಭಾಗಣ್ಣ ಭೂಪ ಮುಕ್ಕಣ್ಣ ಕೂಸಾ ಮೂರ್ಜಗ ಸೋಸ ಸಾಕು ಸಾಕು ನಿನ್ನ ಸೃಜಿಸೊ ಘೋಷ ದೋಷರಹಿತರೇ ಭೂಮಕೇಶವಾದಿ ಚತುರ್ವಿಂಶತಿ ನಾಮ ವಾಸುದೇವ ವ್ಯಾಸದಿತ್ತಕಪಿಲ ಹಿಯಾಸ್ಯ ಮಹಿವಾಸ ತಂದೆವರದಗೋಪಾಲವಿಠ್ಠಲರೇಯನದಾಸ ೧
ಭಾಯೆಂದು ಭಜಿಸಲು ತ್ಯಜಿಸೋದು ಭವರೋಗಗಾಯೆಂದು ಗುಣಿಸಾಲು ಗೆದಿಯುವ ಘಾಸಿ ಣಯೆಂದು ನೆನೆಸಾಲು ನಾರಾಯಣ ಧ್ಯಾನ ಸಿದ್ಧಿಸುವದೆಂದು ಇನಿತು ಈ ಪರಿ ವರವನಿತ್ತು ಸುಳಿಸುಳಿಸುಳಿಯುತಾ ಬಂದಾ ಪಾಶದಿ ಸಿಲ್ಕಿಸಿ ಕಾಸು ಕಾಸಿಗೆ ನೀಯೆನ್ನ ಮೋಸಮಾಡಿ ಶಾಸಕನಂತೆ ಶಯನಾದಾಸೆ ಕೋರಿ ಸರಸಾವ ಸರಸಾವ ಪಡಿಸಾದೆ ಪೀಡಿಸೋದು ನಿನಗೇನು ಲೇಸೋ ಹೇಸಿ ರೋಗವ ಛೇದಿಸಿ ತೋಷ ನೀಗರಿಯೋ ಶರಣಪಾಲ ರಾಜ ನಿನ್ನ ಪಲಾಯನ ಸರಿಯೇಪೋಷಿಸಬೇಕೆಂದು ಪಾದಕ್ಕೆ ಸುತ್ತಿದೆ ಯನ್ನ ಮನೋಭೀಷ್ಟವ ಸಲಿಸೋ ಪಾಲಸಾಗರ ಮಧ್ಯೆ ಪಂಕಜ ಪಂಕಜ ಪಾಣಿಯಿಂದ ಆಲದೆಲೆ ಮೇಲೆ ಬಾಲರೂಪನಾಗಿ ಲಾಲಿ ತೂಗಿಸಿಕೊಂಬೊ ಕಾಳಿರಮಣನೊಡಿಯ ಮಧ್ಯರಾಯಳ ವರಹಾದ್ಯವತಾರ ಧರಿಸಿದ ಹೇಯ ಕಶ್ಯಿಪು ಶತೃ ಕಾಶ್ಯಪಿಯಾಚಕ ಕ್ಷತ್ರಿಯರ್ವೈರಿವನವನ ಸಂಚಾರಿ ಶಕಟಾದಿ ಭಂಜಕಾ ಯುವತೀರ ವ್ರತಗೇಡಿ ವಸನಾದಿರಹಿತ ಶ್ರೀ ಶ್ರೀನಿವಾಸ ತಂದೆವರದಗೋಪಾಲವಿಠಲ ದ್ಯಾತಾಪ್ರಖ್ಯಾತಾ ೨
ಆಳಿನ ಮೇಲೊಂದು ಕಾಳಗ ಮಾಡಲು ಬಾಳುವ ಬಾಳುವ ತೆರಳೆಂದು ಬಾಳಿಸೋ ಗೆಳಿಯಾ ಖೂಳರು ಬಂದು ಮರಳೀಸೆ ಗರಳಾದಿ ತರಳಾದ ತಾಳ್ವಿಕೆಯೆಂತೊ ಪೇಳೋಸುಳ್ಳೆಂದು ತಿಳಿದರೆ ಸುಳ್ಳಾರಿಗಿನ್ನುಂಟೆ ಮರ ಮೂಲಿಕಾ ಕಾಲಕಾಲಕೆ ನೀನು ಹೃದಯಾಲಯದೊಳಗಿದ್ದು ಸಕಲ ಕರ್ಮಗಳಾಚರಿಸಿ ಚರಿತೇಯ ತೋರುತಾ ಚರಮ ಕಾಲ ನೀನು ಕೆರಳುವರೇ ನೀನಾಡಿಸಿದಾಟ ಪಾಡಿದಾ ಪಾಟ ಪೇಳಿ ಪೇಳುತ ತಿರುಗಲು ಮಾನ ಮುಕ್ಕದೇನೋ ದೀನ ಜನರ ಪಾಲ ವಿಜಯದಾಸರ ಬಾಲ ಫಾಲನಯನನ ಗೋಪಾಲೀಸಿ ಫಲಮಳೆಗರಿಯೋಕೇಶವಾ ಅಚ್ಯುತ ವಿಶ್ವ ತೈಜಸ ಪ್ರಾಜ್ಞ ಘೊಟಕಾಸ್ಯ ಮೃಗರೂಪಿ ನಗಧರ ಮಚ್ಛಾದ್ಯವತಾರಾಯ್ರ್ಯಾಮಿ ವಾಯು ಕೂರ್ಮ ನಾಮಕವಾದಿರಾಜರಿಗೊಲಿದ ನಿಗಮ ವೇದ್ಯನುತ ಕೃಷ್ಣಾಂತರ್ಯಾಮಿ ತಂದೆವರದಗೋಪಾಲವಿಠಲನ ನಿಲ್ಲಿಸೋ ಬಿಡದೆ ೩
ನಡದಾರಿ ನಡಿವೇನೋ ಡಾಲು ನೋಡುವ ಪಾಡಾಲು ಪಾಡುವೆಕೇಳಾಲು ಕೇಳೂವೆ ವೋಡಾಲು ವೋಡುವೆ ಗ್ರಹಿಸಾಲು ಗ್ರಹಿಸೂವೆಕುಣಿಯಾಲು ಕುಣಿಯೂವೆ ರೋಧಿಸೆ ರೋಧಿಸುವೆ ನಗೆಯಾಲು ನಗೆವೆ ಮಣಿಯಾಲು ಮಣಿಯೂವೆ ಹಣಿಯಾಲು ಹಣಿಯೂವೆ ದಣಿಯಾಲುದಣಿಯೂವೆಬೀಳಾಲು ಬೀಳೂವೆ ಕೂಡಾಲು ಕೂಡೂವೆ ಬರಿಯಾಲು ಬರಿಯೂವೆ ಪೇಳಾಲು ಪೇಳುವೆ ನಿರುತ ಈ ಪರಿ ಸರ್ವಕಾಲದಲಿ ಬಂದು ವದಗಿ ಪಾಲಿಸುವ ಧೀರ ಗುರು ಗೋಪಾಲವರ್ಯನೆ ಈ ಪರಿ ಆಟವನಾಡಿಸಿ ಸಲಹೋ ಬಿಡದೆ ನಾಗಮರ್ದನ ಕೃಷ್ಣ ರುಜುವಿನುತ ತಂದೆವರದಗೋಪಾಲವಿಠಲನ ಬಂದು ತೋರೋ ೪
ಪರಿಸರಾನೊಬ್ಬನು ಹರಪರನೆಂದು ಪರಿಪರಿಯಲಿ ವದರುವ ಜನರೊಳು ಉದಿಸಿ ಬಂದು ಪಾಶಕೆ ವಳಗಾಗಿ ಕ್ಲೇಶವ ಪಡೂತಿರೆ ವಿಷವೆ ಸುಧಿಯೆಂದು ಕುಡಿಸುವೊ ದ್ವೇಷಕರನು ಘಾಸಿಪಡಿಸಿ ಮೇಲೆ ನಿನ್ನ ಪಾಶದಿ ಪಾಶಿಸಿ ಹಸ್ತಿದಂತಗಳೆಂಬೊ ರುಜುವರದನಿಂದ ಅಂಕುಶದಿಂದ ಶಂಖಚಕ್ರಧಾರಿ ಪಂಕದಿ ಕೂಡಿಸಿ ಶಂಕೆಯಿಂದಲಿ ವಂಚಿಸಿಕೊಂಡನೋ ನಿನ್ನ ಕೆಂಡಗಣ್ಣಿನ ಪಡದೀಹ ಪವಮಾನನನುಜನಾಗಿ ಕರವಿಡಿಂದುದಕೆ ಯೆನ್ನ ಗುಂಡೀಗಿ ಶಿಲಿಕೀಸಿ ಭಂಡತನ ಮಾಡುವರೆ ಸುಮ್ಮನೆ ಬಿಡೆ ನಿನ್ನ ಗಂಡುಗಲಿಪ್ರಚಂಡಅನ್ಯ ದೈವರ ಮಿಂಡಾ ಭಜಿಸುವ ದನುಜರ ಗಂಡಾ ಅಂಶೂಲ ನಿನ್ನಯ ಚರಣಕಮಲವನ್ನು ನೆರೆನಂಬಿದ ಜನರನ್ನು ದೂರನೋಡದೆಕಾಯೋಕರುಣೀ ಜಲಧಿಯೊಳು ಬಂದು ಜನಿಸೀ ಮೇರುಧರ ಧರಣೀವರ ಪ್ರಹ್ಲಾದ ವರದ ಬಲಿಯ ಚಪ್ಪ ಕೊಡಲಿಧಾರಿ ಶಿಲೆಯ ಪಾಲ ಬಾಲೇರಿಗೊಲಿದ ವ್ರತನಳಿದ ಹಯನೇರಿದ ಹಯಮುಖ ಮದ್ಗುರು ರಾಜಾಂತರ್ಗತ ಹಯವದನ ತಂದೆವರದಗೋಪಾಲವಿಠಲರೇಯನದೂತ ೫
ಜತೆ :ಅನುಕೂಲವಿದ್ದರೂ ಬಂದು ಕಾಯಾದಿರೇ ಶಂಭುಪುತ್ರನೆ ತಂದೆವರದಗೋಪಾಲವಿಠ್ಠಲ ಪ್ರೀಯಾ

೨೪೩
(ಸುಳಾದಿ)
ಮಧ್ವರಾಜರಂಘ್ರೀ ಮುದದಿಂದ ಭಜಿಸುತ ಮೇದಿನಿಯೊಳು ಬಂದು ಕಾಮಧೇನುವಿನಂತೆ ಭಜಕರ ಪಾಲಿಪ ಕಿಂಕರಿಗೆಲ್ಲ ಅಂಕಿತವಿತ್ತು ಮಂಕುಗಳೋಡಿಸಿ ಪಂಕಜನಾಭನಪಂಕಜದೊಳು ನಿಲ್ಲಿಸುವಾ ಬಿಡದೆ ಓಂಕಾರ ಮೂರುತಿತಂದೆವರದಗೋಪಾಲವಿಠಲನ ತೋರಿದಾ ೧
ಋಜುಗಳ ಸಹಿತಾಗಿ ಪಂಕ್ತಿಯೊಳಗೆ ಕುಳಿತು ಭರದಿಂದ ಸಾಧಿಸಿ ಋಜವೆಂಬ ಪೆಸರಿಂದ ಮೆರವು ಕಲಿಶಿ ಸುರಪಾದಿ ಸುರರೆಲ್ಲ ಶಂಕಿಸೆ ಸರ್ವಜನಪಾಲ ಸುರರಿಗೆ ತಾ ಘನ್ನ ಜ್ಞಾನವಿತ್ತು ನಿರುತ ಪೂಜೆಗೊಂಬುವ ವಾದಿರಾಜನ ಸ್ವಾದಿಭೋಜವೀರರಾಜನೆ ಹಯವದನನ್ನ ಪೂಜಿಪ ಯೋಗಿ ಆರ್ಯನ ಬಾಲನೆ ಪ್ರೀಯ ಭೂರಿ ಕರುಣಿ ತಂದೆವರದಗೋಪಾಲವಿಠ್ಠಲನ್ನ ಭಜಕಾ ೨
ಆರು ಎರಡು ಶಕ ಷಣ್ಣ ವರಿಯ ಮೇಲೆ ಸಂಖ್ಯೆಯುಳ್ಳಲಾತವ್ಯನೆ ಬಂದು ಭೂತಳದೊಳು ಬಲು ಬೆಡಗು ತೋರಿದ ಶ್ವಾಸ ಜಪ್ನ ಗುಪ್ತ ಮಹಿಮಾ ಪೂರ್ಣ ತೃಪ್ತತೃಣಾದಿ ಚೇತನ ವ್ಯಾಪ್ತಾ ವಾರಿಜಾಸನೇಶ ವಾಸುದೇವಾನೆ ಇವನ ಶ್ವಾಸ ಜಪಕೆ ನಿರ್ಮಿಸಿಹನಯ್ಯಾ ಸ್ವಾದಿಪುರವಾಸಿ ತಂದೆವರದಗೋಪಾಲವಿಠ್ಠಲನ ದಾಸಾ ೩
ಮಮದೈವವೆಂದರೆ ಮಮಕಾರ ಪರಿಹಾರ ಮಮೇಚ್ಛಯಂದವರಿಗೆ ಮೇದಿನೀ ತಾಪ ದೂರ ಮಮಗುರು ಎಂದವರಿಗೆ ಮುರವೈರಿ ತೋರುವಾ ಮಹಘೋರ ಅರಣ್ಯನಾಥನೆ ಇವನು ಸರ್ವಗುಣದಿಂದ ಪೂರ್ಣನೆಂದುವರವೇದ ಪೇಳುವದು ಸತ್ಯವಯ್ಯ ಬೊಮ್ಮವಿಡಿದು ಹರಸುರಪಾದಿಗಳ ಮನಸಮ್ಮತವಾಗಿರೆ ಇದರೊಳು ಶಂಕಿಸೆ ಶಂಕರಾಭರಣಶಾಯಿತಂದೆವರದಗೋಪಾಲವಿಠ್ಠಲ ಪಾಶದಿ ಸುತ್ತುವ ಬಿಡದೆ೪
ಸಾರಿಸಾರಿಗೆ ಇನ್ನು ವಾಣಿವಾಗ್ದೇವಿಯರುಮಹಗುಣ ಸಾಗರದೊಳು ನಿಂದು ಸೂಸುವ ಜಲಧಿಯೊಳು ಬಂದು ಸೀಮೆಗಾಣದೇ ನಿಂದೆವೆಂದು ತೊದಲು ನುಡಿಗಳಿಂದ ಆನಂದ ಅಶ್ರುಭರಿತರಾಗಿ ಮಮಸ್ವಾಮಿ ಮಹಿಮೆಯಂತುಂಟೆಂದವಗಡಿಸಿ ನಮಿಸುವರೈಬಲು ಸಾರವಾದ ಮಾತಿದು ನರರಿಗೆ ಪೇಳಲು ಪರಿಹಾಸ ತೋರುವುದು ನರಪಶುಗಳಿಗೆಲ್ಲ ಏನಾಹೋದೋ ಭಾನುಮರೆಮಾಡಿ ಸರ್ವವು ನೋಡಿದಂತೆ ಆಗುವುದು ಪರಿಪರಿಯಿಂದಲಿ ನೋಡೆ ಇವರ ಬಿಟ್ಟರೆ ಗತಿಯಿಲ್ಲವೊ ಭಾರತ್ಯಾದಿಗಳಿಗೆ ನಿಷ್ಟೆಗೆ ಅನುಕೂಲವಾದ ತಾಪಸೋತ್ತುಮನಯ್ಯ ಮುಖ್ಯ ಪ್ರೇರಕನಯ್ಯ ಏನೆಂಬೆ ಇವರ ಕರುಣವಾದರೆ ಚೇತನಾಂತರ್ಯಾಮಿ ನಿಲ್ಲಿಸಬಹುದು ಗೇಣು ಮುಂದಕ್ಕೆ ಸಾಗದೆ ಸಾಧನವಾಗದಯ್ಯ ಸತ್ವಾಭಿಮಾನಿಗಳಯ್ಯಾ ದ್ವಿಗುಣವರ್ಜನು ತ್ರಿಗುಣ ವ್ಯಾಪಾರಗಳಲ್ಲಿ ಅಜ್ಞಾನ ಮೊದಲಲ್ಲಿ ಯುಗಾದಿಪತಿಯ ಭೇದಿಪಬಲ್ಲನೋ ಸತಿ ಸಮ್ಮಂಧ ಇವರಿಗಿಲ್ಲಇವರ ವಿಷಯ ದೃಢವಾಗಿ ಮನದಿಂದ ತನ್ನೊಳು ಚಿಂತಿಸದ ಮನುಜರಆನಂದ ಮಾತ್ರ ಪೋಪವಲ್ಲದೆ ವ್ಯೋಮದೊಳೊಂದೊಂದು ಕ್ರಿಮಿರಾಶಿಗಳುದುರುವದಯ್ಯ ಅನಂತವಾಗಿ ಪುನಃ ಪುನಃಈ ನುಡಿ ಸಿದ್ಧವಯ್ಯ ಸಿದ್ಧರಿಗೆ ಸಿದ್ಧಿಸುವುದು ಸಾಧ್ಯರಿಗೆ ಸಾಧಿಸದಯ್ಯಾಪ್ರಾಣನಾಮಕ ತಂದೆವರದಗೋಪಾಲವಿಠ್ಠಲನಾಣೆ ೫
ಜತೆ :ವಾದಿರಾಜನೆ ಭಾವಿ ವಾಯುರಾಜನೆಂದರೆ ಆಪರೀಸೂವ ತಂದೆವರದಗೋಪಾಲವಿಠ್ಠಲಾ

೨೭೮
ಮನವೆ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಕನಸಿನ ಫಲವನ್ನು ಕನಸಿನೊಳಗೆ ನಿನ್ನ ನೈಜಧೊರೀ ಬಂದು ಸರಿಯಾಗಿ ತೋರಿಸಿ ಸುಖವನ್ನು ಬಡಿಸಿ ಸುಸ್ಥಿರವಾದ ಧೈರ್ಯವಿತ್ತು ಅಗಣಿತ ಮಹಿಮನ ಅನಂತ ಬಗೆಯಿಂದ ಪಾಡಿ ಪೊಗಳಾಡುವೋ ಜಯ ಜಯ ವಿಜಯಾ ಎಂದು ಅವನಿಯೊಳಗೆ ಪೆಸರಪೆತ್ತರಾಯನ ಚಾರು ಚರಣವ ತೋರಿದಾ ಶಿರಿ ಅರಸನ ತಂದೆವರದಗೋಪಾಲವಿಠ್ಠಲನ ದಯದಿಂದಾ ೧
ಇಂದಿನ ದಿನ ಪರಿಯಂತ ಬಲು ಬನ್ನ ಬಡುತಲಿದ್ದೆಹೊನ್ನ ಕಾಣದೆ ಹೆಣ್ಕುನ್ನಿಯಂದದಿ ದೀನ ಜನರ ಕೂಡಿ ಹಾನಿಯಾಗಿ ಘನಕಾನನ ಪೋಗುವ ನರ… ವಾಗುತಲಿರೆ ಪೊರಟು ಬಂದು ಕನಸಿನೊಳಗೆ ಸುಖಗರದ ತಂದೆವರದಗೋಪಾಲವಿಠ್ಠಲನ ಸುರ ಭಕ್ತರ ಮಣಿಚಿಂತಾಮಣೆಯೇ ೨
ಇಂದಿನ ದಿನದಾರಭ್ಯ ಸರಿದು ಪೋದುವು ಕುಂದುಗಳೆಲ್ಲಾ ಸುಖ ಸಿಂಧುವಿನೊಳಗೆ ಬಂದು ನಿಂದೆನಯ್ಯ ಖಳವೃಂದ ರಿಪುಗಳು ಬಂದು ಹೋದವು ಕಂಡು ಕಂಠನುತ ಗುರು ಸುರೇಂದ್ರನ ದಯದಿಂದಾ ಅರಿ ಆರರ್ಥ ತಾಪಗಳೆಂಬೊ ವೈರಿಗಳನು ಗೆದ್ದು ಭೂ ಪದ್ಮಿಯರಮಣಾ ತಂದೆವರದಗೋಪಾಲವಿಠ್ಠಲನ ದಯದಿಂದಾ೩
ಶರೀರದೊಳಗುಳ್ಳ ಸುರನದೀ ಮೊದಲಾದ ಸರ್ವ ತೀರ್ಥಸ್ನಾನ ಮಾಡುವೊಫಲ ಬಂದುವಪ್ಪುದೋದಯ್ಯ ಕಾಲಕಾಲದಿ ಎದ್ದು ಮಾಡುವೊ ಜಪತಪಾನುಷ್ಠಾನಾ ಮಾಡಿದಾ ಫಲ ಮತ್ತು ಜೀವನ್ಮುಕ್ತ ಸ್ಥಿತಿ ಬಂದೊದಗಿತು ಯನ್ನ ಕುಲಕೋಟಿ ಪಾವನ್ನವಾದೀತು ಸರ್ವದೋಷದಿಂದ ಮುಕ್ತನಾದೆ ಸದ್ಗುರುವರನ ಕೃಪೆಯನ್ನು ಪಡೆದ ಮ್ಯಾಲೆ ಇನ್ನುಂಟೆ ಭವ ತಾಪತ್ರಯ ತಾಪಹರ ತಂದೆವರದಗೋಪಾಲವಿಠಲನು ಬಂದು ತೋರುವಾ ೪
ದಯದೃಷ್ಟಿಯಿಂದಲಿ ನೋಡಲು ಅರಿಷ್ಟ ಪರಿಹಾರ ಅಷ್ಟ ಸಂಪತ್ತು ಮತ್ತಿಷ್ಟು ಬಂದು ವದಗೋದಯ್ಯಾ ಅಷ್ಟ ಮಾಸದಿ ಉತ್ರ‍ಕಷ್ಟ ವಾರದಿ ಅಷ್ಟಮೀಯೋಗಶುದ್ಧ ಶುತ್ಕಾರ ವಾರದಿ ಸಿದ್ಧ ಶ್ರೀ ಪದ್ಮನಾಭನ ದಾಸನ ಮದ್ಗುರುರಾಜನ ಪಾದಕಮಲವನ್ನು ಕನಸಿನಲಿ ನೋಡಿ ಧನ್ಯನಾದೆ ಲಕುಮಿರಮಣ ತಂದೆವರದಗೋಪಾಲವಿಠಲನ ಪದಪೊಂದಿದೆ ೫
ಜತೆ :ಮುಕ್ತನಾದೆನೊ ನಾನು ಜೀವನ್ಮುಕ್ತರ ಕಂಡು ತಂದೆವರದಗೋಪಾಲವಿಠಲನ ದಯದಿಂದಾ ೬

ಕೋಲು ಕೋಲೆನ್ನ ಕೋಲೆ
೨೩೭
ಕೋಲೋ ಕೋಲೆನ್ನ ಕೋಲೆ ಕೋಲು ಮುತ್ತಿನ ಕೋಲುಶ್ರೀ ಗುರು ನಿನ್ನ ಬಲಗೊಂಬೆ ಕೋಲ ಪ
ಕೋಲೂ ಶ್ರೀ ಗುರುನಿನ್ನ ಬಲಗೊಂಬೆ ನಿನ್ನ ಪಾದ ಏಕಚಿತ್ತಾದಲ್ಲಿ ಬಲಗೊಂಬೆ ಕೋಲಅ.ಪ.
ರಂಗರಾಜನ ಪಾದ ಭೃಂಗಾನೆಂದೆಸುತಾ ಪಂಚರೂಪಾದಿ ಮೆರೆವೋನು ಕೋಲಪಂಚರೂಪಾದಿ ಮೆರೆವೋನು ಭಾವೀಪಂಚಪ್ರಾಣಾನಾ ಬಲಗೊಂಬೆ ಕೋಲ ೧
ಮಂದಜಾಸನ ಪದ ಪೊಂದುವನಾಕಂಡವಾದೀರಾಜಾಖ್ಯನ ಬಲಗೊಂಬೆ ಕೋಲವಾದೀರಾಜಾಖ್ಯನ ಭೂತಾ ಪತಿಯೆಂದು ಆರ್ಯನ್ನ ಮೊದಲೇ ಬಲಗೊಂಬೆ ಕೋಲ ೨
ಕಂದುಕಂಠನ ಕೊರಳಿಗ್ಹಾರ ಪದಕವ ಹಾಕಿ ಪರಿಪರಿಯಿಂದ ಮೆರೆಸೋಣ ಕೋಲ ಪರಿಪರಿಯಿಂದ ಹಾರ ಪದಕವ ಹಾಕಿ ಧೀರನ್ನ ಮೊದಲೇ ಬಲಗೊಂಬೆ ಕೋಲ ೩
ಕೆಂಡಗಂಣನ ಕಂಡು ರುಂಡ ಹಾರವ ಹಾಕಿ ಪರಿಪರಿಯಿಂದಾ ಭಜಿಸೋಣ ಕೋಲಪರಿಪರಿಯಿಂದಾ ರುಂಡಹಾರವ ಹಾಕಿ ಮಂಡೇ ನದೀ ಧರನ ಬಲಗೊಂಬೆ ಕೋಲ ೪
ಅಮರೇಂದ್ರ ಲೋಕದಿ ಶಿವರಾಜ ಧೊರಿಗೆ ಪರಿಪರಿಯಿಂದ ಸೇವಿಪರು ಕೋಲಪರಿಪರಿಯಿಂದ ಸೇವೆಯಾಗೊಂಬಂಥ ವಾದಿರಾಜರ ದಾಸ ವಾದಿರಾಜಾಖ್ಯನ ಬಲಗೊಂಬೆ ಕೋಲ ೫
ನಂದಿವಾಹನ ಕಂದ ಪದಕೆ ಬರೊವಂಥ ಧೀರ ವೃಂದಾವನಾರ್ಯರ ವಂದಿಪೆ ಕೋಲಧೀರ ವೃಂದಾವನಾರ್ಯರ ಚಾರು ಚರಣವ ಬಲಗೊಂಬೆಕೋಲ ೬
ಮೂರು ಮಂದಿ ಮಧ್ಯೆ ಮಾತಾಡುತಿಪ್ಪದಿಟ್ಟತನದಿ ತಂದೆವರದಗೋಪಾಲವಿಠ್ಠಲನದಿಟ್ಟಾತನದಿ ಬಲಗೊಂಬೆ ಕೋಲ ೭

ಹಾಡಿನ ಹೆಸರು :ಕೋಲು ಕೋಲೆನ್ನ ಕೋಲೆ
ಹಾಡಿದವರ ಹೆಸರು :ಶ್ರೀದೇವಿ ಮತ್ತು ಸಂಗಡಿಗರು
ಸಂಗೀತ ನಿರ್ದೇಶಕರು :ಇಂದೂ ವಿಶ್ವನಾಥ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಚದುರೇ ವೃಂದಾವನದೊಳು
೧೯೮
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ
ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ.
ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು ೧
ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ ೨
ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ ೩
ವಾಣೀ ಕರಧೃತ ವೀಣಾಪಾಣೀಷಣ್ಮಹಿಷೆರು ಸಹ ಸಮ ಶಿವರಾಣೀಬಂದಿಹರು ಶಚಿ ಶಾಮಲಾ ಸೋಮನರಮಣಿಮತ್ತೆ ಬಂದಿಹರು ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ ೪
ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು ೫

ಹಾಡಿನ ಹೆಸರು :ಚದುರೇ ವೃಂದಾವನದೊಳು
ಹಾಡಿದವರ ಹೆಸರು :ರೋಹಿಣಿ ಪ್ರಭುನಂದನ್
ಶೈಲಿ :ಸುಗಮ ಸಂಗೀತ
ಸಂಗೀತ ನಿರ್ದೇಶಕರು :ಗೀತಾ ಬಿ. ಆರ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಚಿಂತೆಯನು ಪರಿಹರಿಸು
೨೨೮
ಚಿಂತೆಯನು ಪರಿಹರಿಸು ಚಂದ್ರವದನೇ ಪ
ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ.
ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ ೧
ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ೨
ಮತ್ತಗಜದ ಪಿತ್ತ ಹೆಚ್ಚಾಗಿ ಹುಚ್ಚುಚ್ಚು ಬೊಗಳುವೆನು ಹುಚ್ಚನಂತೆಇಚ್ಛೆ ಪೂರ್ಣವ ಮಾಡಿ ಮಚ್ಛೋದರಿ ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ ೩

ಹಾಡಿನ ಹೆಸರು :ಚಿಂತೆಯನು ಪರಿಹರಿಸು
ಹಾಡಿದವರ ಹೆಸರು :ರಘುವೀರ್ ಆರ್.
ಶೈಲಿ :ಸುಗಮ ಸಂಗೀತ
ಸಂಗೀತ ನಿರ್ದೇಶಕರು :ಗೀತಾ ಬಿ. ಆರ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಜಯತು ಜಯತು ಜಯರಾಯಾ
೨೩೫
ಶ್ರೀ ಜಯತೀರ್ಥರು
ಜಯತು ಜಯತು ಜಯರಾಯಾ ಶುಭ ಜಯತು ಶುಕಪ್ರೀಯಾಕಾಯಯ್ಯ ಕವಿಗೇಯ ಮಹರಾಯಾ ಪ
ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡುಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ ೧
ಸರ್ವೇಶ ಗುಣ ಮಣಿ ಸರ್ವಜ್ಞರಾಯರು ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ ಸುಜ್ಞಾನವನು ತೋರಿ ಸುಜ್ಞಾನಿಗಳವಾಗ್ಬಾಣದಿಂದರಿದ್ಯೋ ತರಿದ್ಯೊ ೨
ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿಸತ್ಸುಖಾ ತೆಗೆದು ಸಾಧುಗಳಿಗಿತ್ತೇಮಳಾಪುರಿನಿಲಯ ಪವನೇಶತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ ೩

ಹಾಡಿನ ಹೆಸರು :ಜಯತು ಜಯತು ಜಯರಾಯಾ
ಹಾಡಿದವರ ಹೆಸರು :ಶ್ರೀಕೃಪಾ ಎಂ. ಎಸ್.
ರಾಗ :ಧರ್ಮವತಿ
ತಾಳ :ಆದಿ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಪಾಲಿಸೆನ್ನ ಪಾರ್ವತಿ ರನ್ನಾ
೨೩೦
ಪಾಲಿಸೆನ್ನ ಪಾರ್ವತಿ ರನ್ನಾ ಪ
ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ.
ನೊಸಲನಯನನ ಪ್ರೀತಿಲಿನೊಲಿಸಿದ ಸತ್ಕುಸುಮ ಬಾಣನ ಪೆತ್ತಬಾಣವದನನ ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ ೧
ಅಂಬುಜೋದ್ಭವನ ಪ್ರತಿಬಿಂಬನ ರಾಣಿಯೊದಿಗಂಬರನುಟ್ಟು ಚಲಿಸುವ ಸತಿಶಂಬರಾರಿನುತ ಗಂಭೀರ ಕರುಣಿಗಳರಸನ ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ ೨
ಕಲುಶಕಂಠ ಮಹಾದೇವ ಶಿವಾ ಶುಂಠರಿಗೊಲಿವ ಶಿವಾ ವಿಕುಂಠರೆನಿಸುವದಾಸರಿಗೆ ಶಿವ ವೈಕುಂಠಸಮ ಶಿಖರ ಶಿವಾಪುರದೊಳಗಿಪ್ಪ ಶಿವಾ ಶಕಟಮರ್ದನ ತಂದೆವರದ (ಶಿವಾ)ಗೋಪಾಲವಿಠಲನ ಪಾದ ಶಿವಾ ಆರ್ಭಟಿಸುತ ಪಠಿಸುವನ ಸತಿ ೩

ಹಾಡಿನ ಹೆಸರು :ಪಾಲಿಸೆನ್ನ ಪಾರ್ವತಿ ರನ್ನಾ
ಹಾಡಿದವರ ಹೆಸರು :ಸುಜಾತಾ ದತ್ತ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಾಲೆಯಾದಾನು ಬಲಭೀಮ
೨೧೩
ಬಾಲೆಯಾದಾನು ಬಲಭೀಮ ಪ
ಬಾಲೇಂದು ಮುಖ ಸೋಲಿಪ ವದನದಿಂದೊಪ್ಪುತಅ.ಪ.
ಖುಲ್ಲ ಕೀಚಕ ತಾ ಚಲ್ವಗೆ ಮರುಳಾಗಿ ಸೊಲ್ಲು ಸೊಲ್ಲಿಗೆ ಬಲು ಕಳವಳಿಸುವನಾ ತರುಣಿ ದ್ರೌಪದಿ ತಾ ತಾಳದೆ ತನ್ನೊಳು ತಿಳುಪಿದಳು ಪತಿಯೊಡನೆಕೇಳಿದ ಮಾತ್ರದಿ ಸೀಳುವೆನೆನುತಲಿ ಕೋಪದಿಂದೊಮ್ಮೆಗೆ ೧
ಶೇಷ ಮುಖ್ಯ ಶಶಿ ಶೇಖರ ಸನ್ನುತ ಶಶಿಮುಖಯೆಂಬೋದು ಸರಿಯಾ-ಶ್ವಾಸನ ಸತಿಯಳ ಸರಸಾಟ ಸಹಿಸದೆ ಮೀಸೆಯ ತಿರುವುತ ಸಾರಿ ಸರಿ ಯಾರೆನ್ನುತ ಸತಿಯಾಗಿರು ಸುಖಸತಿಯಳ ಮಾಡಿ ನಿನ್ನಾಳುವೆನೆಂಬೋದು ಕೇಳಿ ಭರದಿ ೨
ಸುಮಶರ ಶೋಷಕೆ ಹಿಮಕರ ವ್ಯಾಪಿಸಿ ಹರುಷವಗೊಳುತಾ ಸರಸಿಜಮುಖಿಯೆಂದು ಸರಸರ ಸಾಗಲು ಶಿರದೊಳು ಚರಣವ ಸೇರಿಸಿದಾ ಶಾಮರೂಪ ತಂದೆವರದಗೋಪಾಲವಿಠ್ಠಲನ ಸ್ಮರಿಸುತ ೩

ಹಾಡಿನ ಹೆಸರು :ಬಾಲೆಯಾದಾನು ಬಲಭೀಮ
ಹಾಡಿದವರ ಹೆಸರು :ಶೀಲಾ ಎಂ. ಎಸ್.
ಸಂಗೀತ ನಿರ್ದೇಶಕರು : ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸ್ಮರಿಸು ಸಂತತ ಗುರುಗಳಾ ಬಿಡದೆ
೨೩೪
ಶ್ರೀ ಮಧ್ವಾಚಾರ್ಯರು
ಸ್ಮರಿಸು ಸಂತತ ಗುರುಗಳಾ ಬಿಡದೆ ಅನುದಿನಾ ಪ
ವಾತ ಭೀಮನ ಒಡೆಯ ವೇದವ್ಯಾಸಯುತ ಸಾರಂಗಧರನಆ ಪ್ರೇಮದಿಂದಲಿ ಭಜಿಪೆನಡಿಗಳ ಬಿಡದೆ ಅ.ಪ.
ಮಂದ್ರಜಾಸನ ಸುತನ ವಚನ ಕೊಂಡು ಧರೆಯೊಳು ಬಂದು ಭಜಿಸುತ ಪೊಂದಿಪವರ ವೃಂದ ಹರಿಸಿ ಸುಗುಣ ಸುವೃಂದಗಳಿಗೆ ಬಂಧುಪರ ಗೋವಿಂದನೆಂಬುದ ಬೋಧಿಸಿದನ ೧
ಮಂಗಳಾಂಗನ ಕೊಂಡು ತುಂಗಕುಲ ತೀರ್ಥರ ಶರದೀ ಬಂದೂ ಭೂಮಿಯೊಳು ಅನಂಗಪಿತನ ಒಲಿಸಿರಂಗರಾಜನ ದೂತನಿಂದಾ ವಿದ್ಯವಾ ಕೊಂಡು ಬಂದು ಪರಮಾದರದಿ ವ್ಯಾಸತ್ರಯಯುತ ಸುಧೆಯನಗರದನಂಘ್ರಿಯಾ ೨
ರಘುಕುಲಾ ಜಲಧೀಗೆ ಜಲಜವೈರಿಯಂತೊಪ್ಪುವಾಮಾರನಯ್ಯ ಶಿರಿ ಪರಶು ಪಾಣೀ ಯಾತ ಜಡೆಧಾರ ತುರೀಯನಾಶ್ರಯಿಸೀ ಬಾಣರೂಪವಾ ಬಿಡದೆಬಾಣವಾ ಗುರಿ ಮಾಡಿಬಾಣವರದನ ಸರಿಯೆಂದೆನಿಸಿ ಬಾಣ ಭೇದವನೆ ಬೋಧಿಸಿಬೋಧತೀರ್ಥರ ಮತಾಧಿಪನ ತಂದೆವರದಗೋಪಾಲವಿಠಲನಭಜಕಾ ೩

ಹಾಡಿನ ಹೆಸರು :ಸ್ಮರಿಸು ಸಂತತ ಗುರುಗಳಾ ಬಿಡದೆ
ಹಾಡಿದವರ ಹೆಸರು :ಸುರೇಖ
ರಾಗ :ದೇಶ್
ತಾಳ :ಮಿಶ್ರ ಛಾಪು
ಶೈಲಿ :ವಿಶ್ವಚಾಪು
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸ್ಮರಿಸುವೊ ಜನರಿಗೆ ಸಲಹುವ
೨೦೬
ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇವೆಂಕಟೇಶಾ ಪ
ಕರುಣಾನಿಧಿ ಮಹಾಮಹಿಮ ನೀನೆಂದು ನಾ ನಂಬಿದೆವೆಂಕಟೇಶಾ ಅ.ಪ.
ಬರಿದು ದಂಡಿಸಿ ನಿನ್ನ ಪದ ಹೊಂದುವ ಬಗೆ ತೋರೋವೆಂಕಟೇಶಾ ಬಾಧೆಯ ತಾಳದೆ ಹಾದಿಯ ತಪ್ಪಿದೆ ವೆಂಕಟೇಶಾ ೧
ಮಾರಿ ಮುಸುಕಿ ಎನ್ನ ಗಾರು ಮಾಡದೆ ವೆಂಕಟೇಶಾಘೋರ ಜಾರದ ವಾರಿಧಿಯಲಿ ನಾ ಮುಳುಗಿದೆ ವೆಂಕಟೇಶಾ ೨
ಪಾರುಗಾಣದೆ ನಿನ್ನ ಮರೆಹೊಕ್ಕೆನೋ ವೆಂಕಟೇಶಾನಾನಾಗಿ ನಿನ್ನ ಗಣ್ಮ್ರತಗರಿಯೊ ವೆಂಕಟೇಶಾ ೩
ಚೋರರ ಬಾಧೆಗೆ ಚೀರಿ ಚೀರುತಲಿಹೆನೊ ವೆಂಕಟೇಶಾದೂರ ನೋಡದಿರು ದಾಸರ ದೂತ ವೆಂಕಟೇಶಾ ೪
ಹತ್ತು ಒಂಬತ್ತು ವತ್ಸರದಿಂದ ಕುಂಭಿಯೊಳಿದ್ದೆ ವೆಂಕಟೇಶಾಇನ್ನೆಂತು ಪೊಗಳಲಿ ನಿನ್ನ ಕರುಣವು ಬಾರದೆ ವೆಂಕಟೇಶಾ ೫
ಕುಂಕುಮ ಅಂಕಿತ ಪದಪಂಕಜ ಶೋಭಿತ ವೆಂಕಟೇಶಾಕಂದನೆಂದು ಪೊರೆಯದಿರೆ ಬಿರಿದುಂಟೆ ವೆಂಕಟೇಶಾ ೬
ಜ್ಞಾನದಿ ನಿನ್ನ ಧ್ಯಾನಿಪಲೊಲ್ಲೆ ವೆಂಕಟೇಶಾತೇಜ ತಂದೆವರದಗೋಪಾಲವಿಠಲ ವೆಂಕಟೇಶಾ ೭

ಹಾಡಿನ ಹೆಸರು :ಸ್ಮರಿಸುವೊ ಜನರಿಗೆ ಸಲಹುವ
ಹಾಡಿದವರ ಹೆಸರು :ಗೀತಾ ಬಿ. ಆರ್.
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ