Categories
ರಚನೆಗಳು

ತುಳಸೀರಾಮದಾಸರು

(ಆ) ಲಕ್ಷ್ಮೀಸ್ತುತಿಗಳು
೯೫
ಅಮ್ಮಾಯಮ್ಮಾಲಕ್ಷ್ಮೀನನಗೆ ಅಭಯವಕೊಡುಸೀತಮ್ಮಾ ಪ
ಬೊಮ್ಮನ ಜಗಂಗಳ ಪೆತ್ತ ಸುತಾಯೆ
ಸುಮ್ಮನೆ ಕಾಲವ ಕಳೆಯದೆ ಬೇಗನೆ ೧
ನಂಬಿದೆ ನಿನ್ನ ಚರಣಾಂಬುಜಯುಗಳವ
ಕಂಬುಕಂಧರನ ಕಾಂತೆಸುಶಾಂತೆ೨
ಧರ್ಮನಿಲಯ ದಾರಿದ್ರ್ಯನಿವಾರಿಣಿ
ಧರ್ಮವಲ್ಲ ತವದಾಸನುಪೇಕ್ಷೆಯು ೩
ಹೇಮ ಮಹೀಧರ ಸ್ವಾಮಿನಿ ತುಲಸೀ
ರಾಮದಾಸನ ಪ್ರೇಮದಿ ಪಾಲಿಸು ೪

(ಅ) ಶ್ರೀಹರಿಸ್ತುತಿ
೮೭
ಎಷ್ಟು ಆನಂದವೊ ಶ್ರೀಹರಿಯ ಭಜನೆ ಪ
ದುಷ್ಟತರ ದೋಷಗಳು ಬಳಲುವ
ಕಷ್ಟಗಳ ಪರಿಹರಿಸಿ ಸರ್ವೋ
ತ್ರ‍ಕಷ್ಟ ಪದವಿಯ ಕೊಡುವ ಲಕ್ಷ್ಮೀ
ಇಷ್ಟನಾರಾಯಣನ ಭಜನೆ ೧
ಪದ್ಮದಳನಯನ ಪ್ರತಿಷ್ಠೆಯ
ಪದ್ಮಶಾಲಿಯ ಭಕ್ತರೆಲ್ಲರು
ಪದ್ಮನಾಭನ ಪ್ರೀತಿಮಾಡಿ ಸು
ಭದ್ರಸಂಪದ್ಯುಕ್ತರಾದರು ೨
ಮಂದಿರವು ಕಟ್ಟಿಸಿಯು ಪರಮಾ
ನಂದದಿಂ ಉತ್ಸವವು ನಡಿಸಿದ
ರೆಂದು ಕೇಳಿದ ಭಾಗ್ಯಶಾಲಿಗಳು
ಇಂದಿರೇಶನ ಕೃಪೆಯ ಪಡೆದರು ೩
ಅಂಬುಜೋದರದಾಸರೆಲ್ಲರು
ತಂಬುರೆಯು ಕರತಾಳವಾದ್ಯವಿ
ಜೃಂಭಿಸಿ ಹರಿಸ್ಮರಣೆಯ ಮಾಡುತ
ಸಂಭ್ರಮದಿ ಬಂದವರು ನೋಡಲು೪
ವಾಸುಕೀನಗರೇಶ ದಾಸರ
ದಾಸರಾಗಿಯು ತುಲಸಿರಾಮ
ದಾಸ ಪರಮೋಲ್ಲಾಸದಿಂ ಶ್ರೀ
ವಾಸುದೇವನ ಚರಣನಂಬಿದೆ ೫

೯೪
ಕಮಲನಾಭ ವೆಂಕಟೇಶ ಭಕ್ತ ಕಲ್ಪಭೂರುಹ ಶ್ರೀ
ಕಮಲ ಪ್ರಾಣೇಶಾ ಪ
ವಿಮಲ ವೈಕುಂಠಪುರೀಶಾ ಶಿವ
ಕಮಲಸಂಭವನುತ ಕರ್ಬುರನಾಶಾ ಅ.ಪ
ನಿರುಪಮ ಸುಂದರ ಗಾತ್ರಾ ನಿತ್ಯ
ಪರಿಪೂರ್ಣ ವೈಭವ ಪರಮ ಪವಿತ್ರಾ
ಶರನಿಧಿ ತನಯ ಕಳತ್ರಾ ಶೇಷ
ಪರಿಜನಕೃತ ಘೋರ ಪಾಪಾಂಧ ಮಿತ್ರಾ ೧
ಸನಕ ಸನಂದನ ವಿನುತಾ ಶಶಿ
ದಿನಕರ ಶತಕೋಟಿ ದಿವ್ಯ ಸುಚರಿತಾ
ಜನನ ಮರಣ ಕ್ಲೇಶರಹಿತ ಶ್ರೀ
ವನಜ ಸುದರ್ಶನ ವನಮಾಲ ಧರಿತ ೨
ಜಲಜಮಿತ್ರ ವಂಶ ಭೂಷಾ ಕ್ಷಾರ
ಜಲಧಿ ಬಂಧನ ಪುಣ್ಯಜನ ಪ್ರಾಣ ಶೋಷಾ
ತುಲಸೀ ರಾಮದಾಸ ಪೋಷಾ ಶ್ರೀ
ತುಲಸೀ ಕಾನನಹಿತ ತುಂಬುರ ತೋಷಾ ೩

೮೮
ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ಪ
ಜಯ ದುರಿತನಿಧಿತರಣ
ಜಯ ಪದ್ಮಚರಣಾ ಜಯಜಯಾ ಅ.ಪ
ಜಯ ಪುಂಡರೀಕಾಕ್ಷ ಜಯ ತ್ರಿಭುವನಾಧ್ಯಕ್ಷ
ಜಯ ಪಾಂಡುಸುತ ಪಕ್ಷ ಜಯ ಜಗದ್ರಕ್ಷಾ ಜಯಜಯಾ ೧
ಜಯ ಲೋಕಭಯನಾಶ ಜಯ ದಳಿತಭವಪಾಶ
ಜಯ ವೇಂಕಟಾದ್ರೀಶ ಜಯಸುಪ್ರಕಾಶ ಜಯಜಯಾ ೨
ಜಯ ತುಲಸೀದಳ ದಾಮ ಜಯ ಶೇಷಗಿರಿಧಾಮ
ಜಯದೈತ್ಯರಿಪುಭೀಮ ಜಯಕೃಷ್ಣರಾಮಾ ಜಯಜಯಾ ೩
ಜಯ ಕೋಟಿರವಿಭಾಸ ಜಯ ಸಾತ್ವಿಕೋಲ್ಲಾಸ
ಜಯ ಜಯ ಭವದ್ದಾಸ ಜಯ ಶ್ರೀನಿವಾಸಾ ಜಯ ಜಯಾ೪

೧೧೧
(೨) ದರಿಶಕುಪ್ಪ (ಶ್ರೀರಂಗಪಟ್ಟಣದ ಸಮೀಪ)
ದರಿಶಕುಪ್ಪ ಶ್ರೀ ಅಂಜನಿ ತನಯ
ದರುಶನ ಕೊಡು ಬೇಗ ದಯದಿಂದಾ ಪ
ಸಿರಿ ರಘುಕುಲವರ ಸೇವಾನುಕೂಲ
ಸ್ಮರಿಸುವೆ ನಿಮ್ಮ ಪಾದಸರಸಿಜಯುಗಳ ೧
ಹರಿಹರ ಬ್ರಹ್ಮಾದ್ಯಮರ ಸುಪೂಜ
ಧರಣಿಜಾ ಪ್ರಾಣೋದ್ಧಾರ ಸುತೇಜ ೨
ಘೋರದುರಿತ ಪರಿಹಾರ ಕಪೀಶಾ
ಪಾರಿಜಾತ ತರು ಪ್ರಾಂತ್ಯನಿವೇಶಾ ೩
ಲವಣ ಜಲಧಿ ಪದಲಂಘನ ತುಂಗ
ಪವನಾತ್ಮಜ ರಿಪುಭಂಗ ಶುಭಾಂಗ೪
ರಾಮಾನುಜ ಪ್ರಾಣರಕ್ಷಣ ದೀಕ್ಷಾ
ಕಾಮಾದ್ಯವಗುಣ ಖಂಡನಾಧ್ಯಕ್ಷ ೫
ಮರಕತ ಮಣಿಮಯ ಮಂಜುಳ ಭೂಷಾ
ಧರೆಯೊಳ್ ತುಲಸೀದಾಸ ಸುಪೋಷಾ ೬

೯೬
ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ಪ
ಸುಮಶರಜನನೀ ಸೋಮ ಸಹೋದರಿ
ಕಮಲವಾಸಿನೀ ಸುಂದರೀ ಲಕ್ಷ್ಮೀ ಅ.ಪ
ವಿಮಲಾ ವಿಶ್ವಕುಟುಂಬಿನೀ ವೆಂಕಟಶೈಲ ನಿವಾಸಿನೀ
ಅಮರೇಂದ್ರಾರ್ಚಿತ ಪಾದ ಸರಸಿಜ
ಅಘವಿನಾಶಿನಿ ಅಖಿಲಾಪದಹರ ೧
ಅಮೋಘ ಸಂಪತ್ಪ್ರದಾಯನೀ ಆರ್ತರಕ್ಷ ದೀಕ್ಷಾಮಣೀ
ಪ್ರಮೋದಯಾ ಶ್ರೀರಮಾಭಾರ್ಗವೀ
ಮಮಾಪಚಾರ ಕ್ಷಮಸ್ವಶಾರ್ಚಿಣೀ೨
ಹೇಮಕುಧರ ಧಾಮೇಶ್ವರಿ
ತುಲಸಿರಾಮದಾಸನುತ ರಾಜೀವಾಕ್ಷಾ
ಹಿಮಾಂಶು ಮುಖ ಹರಿಹಿತಪ್ರಿಯ
ನಿಸ್ಸೀಮಾನದಾನಿನಿ ಸಜ್ಜನ ಪೋಷಿಣಿ ೩

೩. ತುಳಸಿರಾಮದಾಸರ ತೆಲಗುಮಿಶ್ರಿತ ಕೀರ್ತನೆಗಳು
೪೯೮
ನೀಪಾದ ಭಜನಚೇ ನಾಪಾಪಮತಮಾಯೆನ್
ಗೋಪಾಲ ಶ್ರೀ ರಂಗನಾಥಾ ಪ
ರಾಪು ಜೇಯುಟ ನೇಲನಾಪದÀಲನು ದೀರ್ಚು
ಗೋಪ ವೇಷಖುಡೈನ ಶ್ರೀಪತಿಯೆನುಟಾಯೆ ಅ.ಪ
ಪಿಚ್ಚಿವಾಡನೈ ನೇನೊಚ್ಚಿ ವೇಡಿತಿನಯ್ಯಾ
ಅಚ್ಚುತಾನಂತ ರೂಪ
ಹೆಚ್ಚೈನ ಮೀಧ್ಯಾನಂಬಿಚ್ಚಾಯಂಚಿನಾನೂ
ವೊಚ್ಚಿ ದಾಸುಡು ವೇಡಿಯಿಚ್ಚಿ ಬ್ರೋವರ ತಂಡ್ರಿ ೧
ಪಂಕಜಾಕ್ಷ ನಾಪೈ ಪಂತಮೇಲರ ಸಾಮಿ
ಕಿಂಕರುನಿಗನೇಲುಮಾ
ಶಂಕರವಿನುತ ನಾ ಸಂಕಟ ಮುಲು ದೀರ್ಚು
ಲಂಕಾಧಿಪತಿ ವೈರಿಗುರುಡೆ ತುಲಶಿರಾಮಾ ೨

೫೦೦*
ಪರಮದೇಶಿಕ ಮಾವಿನೋದಾ ದಿವ್ಯ
ಪರಮಾರ್ಥಮುನು ವೇಗಾ-ಬೋಧಿಂಚರಾದಾ ಪ
ಸುರಮುನೀಂದ್ರ ವಿಚಾರ-ಸೋಹಮಸ್ಮಿಧಿಯೇರಾ
ವರಮುಲಡಗಿತಿನಿಚ್ಚಿ-ದಾರಿದೇರ್ಚುಕೋರಾ ೧
ನೀದು ಶೇವಕುಡೈತಿ-ನಿಚ್ಚಯಿಂಚಿನ ಚಾಲೂ
ವಾದಿ ಭೀಕರು ಡೈನ-ವೈಷ್ಣವಾಗ್ರಜುಡೇ ೨
ಆಳ್ವಾರೆಂಬೇರುಮಾನಾರ್ ಜೀಯರ್ ಸ್ವಾಮುಲೆ ಗಾದಾ
ತಾಳ್ವೋಯ ಚೂಡಿದಿ ಯನುಚು ಪಾಲಿಂಚಲೇದಾ ೩
ಮಂತ್ರಜ್ಞಾನ ರಹಸ್ಯಮಂತ್ಯಮಾದಿಗ ಜೂಪೆ
ಅಂತರಂಗುಡೆ ಸ್ವತಂತ್ರಸ್ಯ ತಂತ್ರ ೪
ಯೇಲೆ ವಾಡನಿ ವಚ್ಚಿ-ಅಲಗಿಂಚಿನದಿಚ್ಚೆ
ಕೋಲುಪೇಟೇಶ ಮಾಂಪಾ ಅತುಲ ಶ್ರೀರಾಮಾ ೫

೯೭
ಪಾಲಯಮಾಂ ಶ್ರೀ ಭಾರ್ಗವಿ ಲಕ್ಷ್ಮೀ
ಭಕ್ತವಾತ್ಸಲ್ಯನಿಧಿ ಹೇ ಜನನಿ ಪ
ಫಾಲಲೋಚನ ಬ್ರಹ್ಮಾದ್ಯಮರಪೂಜಿತ ಪಾದ
ಪದ್ಮಯುಗಳ ಸೌಭಾಗ್ಯ ಪ್ರದಾಯನಿ ಅ.ಪ
ಚಂದ್ರರೂಪಿಣಿಚಂದ್ರಾಭರಣಾಲಂಕೃತ
ಸೌಂದರ್ಯಚಂದ್ರಮುಖಿ
ಇಂದ್ರವರಜ ಹೃನ್ಮಂದಿರ ವಾಸಿನಿ
ವಿಶ್ವಕುಟುಂಬಿ ಇಂದಿರೆ ಸತತಂ೧
ಧಾತ್ರಿ ತುಲಸಿರಾಮದಾಸಾವನ ಶೀಲ
ದಾರಿದ್ರ್ಯಾಪಹಾರಿಣೀ
ಅತ್ರೀಮಹಾಋಷ್ಯಾಪತ್ಯ ಸಹೋದರಿ
ಅಹಿಗಿರಿ ಶಿಖರಾನಂದನಿಲಯ ನಿತ್ಯ೨

೯೮
ಬಂದಳು ಸಿರಿಲಕುಮಿಯು ನಮ್ಮ ಮನೆಗೆ
ತಂದಳೈಶ್ವರ್ಯಂಗಳ ಪ
ಇಂದಿರೆ ಹರಿಯುರ ಮಂದಿರ ನಿತ್ಯಾ
ನಂದ ನಿಲಯ ಭವಬಂಧ ವಿಮೋಚನಿ ಅ.ಪ
ಸುಂದರಾಂಗಿ ಸುಗುಣಾ ಸಿಂಧು ಜಗಜ್ಜನನೀ
ಇಂದುಸೋದರಿ ಪೂರ್ಣೇಂದು ಬಿಂಬಾನನೆ ೧
ಯೆಂದಿಗೆ ಸಂಪದ ಕುಂದ ಬರವ ಹಾಂಗೆ
ನಿಂದು ಪಾಲಿಸುವನೆಂದು ದೀಕ್ಷೆಯು ಮಾಡಿ೨
ಬೃಂದಾರಕ ಸಂಕ್ರಂದನ ವಂದಿತೆ
ಮಂದಹಾಸದಿ ರಘು ನಂದನ ಸುಪ್ರಿಯೆ ೩
ಕಂದ ತುಲಸಿದಾಸನೆಂದು ಸಂಭ್ರಮದಿ ಮುಚು
ಕುಂದವರದ ಪಾದದ್ವಂದ್ವ ಭಕ್ತಿಯು ಕೊಡಲು ೪

೯೯
ಬಾರದೇತಕೋ ತವದಯ ಭಗವತಿ ಭಾರ್ಗವಿ ದೇವೀ ಪ
ಘೋರ ದುರಿತ ಪರಿಹಾರಿಣಿ ಭಕ್ತೋ
ದ್ಧಾರಿಣಿ ಭಾಗ್ಯ ವಿಹಾರಿಣಿ ಜನನೀ ೧
ವಂದಿಪೆ ಪಾದದ್ವಂಧ್ವ ಸರೋಜವ
ಇಂದಿರೆ ಹರಿಯುರಮಂದಿರ ವಾಸಿನಿ೨
ನಾರಿಶಿರೋಮಣಿ ನಂಬಿದೆ ನಿನ್ನನು
ನಾರಾಯಣೀ ಭವನಾಶಿನಿ ಶಾರ್ಙಣಿ ೩
ದಾರಿದ್ರ್ಯಾಪಹ ಧನಧಾನ್ಯಪ್ರದ
ಕ್ಷೀರಾರ್ಣವ ಸುತೇ ಶ್ರೀಮಹಾಲಕ್ಷ್ಮೀ ೪
ಹೇಮಗಿರೀಶ್ವರಿ ಭಾಮಾ | ತುಲಸೀ
ರಾಮದಾಸನುತ ಸುಕ್ಷೇಮವು ನಿನ್ನದು ೫

೧೦೦
ಬಾರಮ್ಮ ಶೇಷಾದ್ರಿ ಭಾರ್ಗವಿದೇವಿ ಪ
ತೋರಮ್ಮ ಮೃದುಪದ ತೋಯಜಕೇಳೆ ಜನನಿ ಅ.ಪ
ದುಷ್ಟನು ನಿನ್ನ ಕ ನಿಷ್ಟ ಕುಮಾರನೂ
ಕಷ್ಟವ ಪರಿಹರಿಸು ಇಷ್ಟು ಸಂಪದ ಕೊಡು ೧
ಕಾರುಣ್ಯ ರೂಪಿಣಿ | ಕಾಮಿತ ದಾಯಿನೀ
ಸಾರಸದಳ ನೇತ್ರಿ | ಸೌಂದರ್ಯ ಗಾತ್ರೀ ೨
ವಾಸವ ದುಃಖ ನಿವಾರಿಣಿ ಶ್ರೀತುಲಸೀ
ದಾಸ ಹೃತ್ಸರಸಿಜ | ವಾಸಿನಿ ರುಕ್ಮಿಣಿ೩

ಇವು ಶ್ರೀವೈಷ್ಣವ
೧೦೬
(೨) ರಾಮಾನುಜ ಸ್ತುತಿಗಳು
ಭಜರೇ ಗುರುಚರಣಂ | ದುಸ್ತರ
ಭವಸಾಗರತರಣಂ ಪ
ಸುಜನ ರಾಮಾನುಜ ಗುರುಪತಿ ಸ್ಮರಣಂ
ನಿಜಸೇವಕಜನ ಸಂಕಟ ಹರಣಂ ೧
ವರ ರಾಮಾನುಜ ಗುರುಪತಿ ಬೋಧಂ
ಪರಮ ಭಕ್ತಜನ ಕಲುಷ ವಿಚ್ಛೇದಂ ೨
ಧರ ರಾಮಾನುಜ ಗುರುಪತಿ ರೂಪಂ
ನಿರತಮು ದಾಸುಲನಿಜ ನಿಕ್ಷೇಪಂ ೩
ಅಲಶ್ರೀ ಪೆರಂಬುದೂರು ನಿವಾಸುಲು
ತುಲಸಿ ರಾಮದಾಸ ಹೃದಯ ನಿವೇಶುಲು ೪

೮೯
ಮಾಧವ ಭವಂತು ತೇ ಮಂಗಳಂ
ಮಧು ಮುರಹರ ತೇ ಮಂಗಳಂ ಪ.
ದಶರಥನಂದನ ತಾಟಕಿ ಭಂಜನ
ದಾನವ ಸಂಹಾರ ದಯಾನಿಧೇ
ಆದಿದೇವ ಸಕಲಾಗಮ ಪೂಜಿತ
ಯಾದವ ಕುಲಮೋಹನರೂಪಾ
ವೇದೋದ್ಧರ ತಿರುವೇಂಕಟನಾಯಕ
ನಾದಪ್ರಿಯ ನಾರಾಯಣತೇ ನಮೋ ನಮೋ ೧
ಗೋವಿಂದ ರಾಮಕೃಷ್ಣ ನಮೋ ನಮೋ
ಗೋವಿಂದ ಸೀತಾರಾಮ ನಮೋ
ಗೋವಿಂದ ಮಾಧವ ಗೋಪಾಲ ಕೇಶವ
ಗೋವಿಂದ ನಾರಸಿಂಹಾಚ್ಯುತ ನಮೋ ೨
ರಾಮಾಗೋವಿಂದ ರಾಮ ರಾಘವಾ
ರಾಮಾ ರಾಜೀವಲೋಚನ
ಕಾಮಿತ ಫಲದಾಯಕ ಕರಿವರದಾ
ರಾಮಕೃಷ್ಣ ತುಳಸಿವರದಗೋವಿಂದ೩

ರುಕ್ಮಿಣಿಯನ್ನು ಸ್ತುತಿಸುವ
೧೦೩
ಮಾನಾಭಿಮಾನವಿಲ್ಲವೇ | ಮಹಲಕ್ಷ್ಮೀ ನಿನಗೆ ಪ
ಹೀನ ಜನಂಗಳ ಬೇಡುತ ನಿರುತವು
ಹೀನ ವೃತ್ತಿಯಿಂದೋಡುತ ತಿರುಗುವೆ ೧
ದೀನಾವನ ಬಿರುದೇನಾಯಿತೋ ಶ್ರೀ
ದಾನಿ ನಿನ ನಂಬಿದ ದಾಸನ ವಿಷಯದಿ೨
ಜಾನಕಿ ಶ್ರೀ ರಘುನಾಯಕಿ ತವಪದ
ಧ್ಯಾನವು ನನಗೆ ನಿಧಾನವು ಲಕುಮೀ೩
ಹೇಮಕುಧರ ಧಾಮೇಶ್ವರಿ ತುಲಸಿ
ರಾಮದಾಸನ ಸಂರಕ್ಷಣೆ ಮಾಡುವ೪

೧೦೧
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇ
ಪೀತಾಂಬರಧರ ತರುಣಿಯೆ ಪ
ಪಾತಕಹಾರಿಣಿ ಭಾವಜನನೀ
ಭಕ್ತ ಕುಟುಂಬಿನಿಭವಭಯ ನಾಶಿನಿ ೧
ದಾರಿದ್ರ್ಯಾಂಬುಧಿ ತರುಣೋಪಾಯವು
ತೋರಿಸು ರಘುಕುಲದೊರೆ ಸುಪ್ರಿಯಳೆ ೨
ರತ್ನಾಭರಣಯುಕ್ತ ಸುಗಾತ್ರೇ
ರತ್ನಾಕರಸುತೇ ರಾಜೀವಾಲಯೇ ೩
ಹೇಮಭೂಧರ ಸ್ವಾಮಿನಿ ತುಲಸೀ
ರಾಮದಾಸ ಸುಕ್ಷೇಮವು ನಿನ್ನದು ೪

೪೯೯
ರಾಮನ ಮಹಿಮೆ ರಾಮನೆ ಬಲ್ಲ
ಪಾಮರಜನಲುಕು ತೆಲಿಯುಟತಲ್ಲ ಪ
ಸುಗುಣ ನಿರ್ಗುಣವೆಂದು ನಿಗಮಗಳ್ಕೂಗು
ಅಗಣಿತ ಕಲ್ಯಾಣ ಗುಣ ಮುಲುಬಾಗು ೧
ನಿರತಜನನಸ್ಥಿತಿ ಲಯಗಳ ಕರ್ತ
ಸಿರಯುರಮುನಗಲ ಧರಣಿಜ ಭರ್ತ ೨
ಒಳಗೆ ಹೊರಗೆ ವ್ಯಾಪೀ ಪರಿಪೂರ್ಣ ಮೂರ್ತಿ
ಸುರಮುನಿವರುಲಕು ಧೋರಯನು ಕೀರ್ತಿ೩
ಮೂರುನು ಬಿಡಿಸಿ ಮೂರನು ಕೆಡಿಸಿ
ಜೇರುನುನಮ್ಮಿ ಸವಾರಿನಿಕಲಸಿ ೪
ಸಿರಿಗಿರಿ ಶಿಖರದೊಳ್ ಇರುತಿಹದೇವ
ಧರನು ತುಲಸಿರಾಮದಾಸುನಿ ಬ್ರೋವಾ ೫

೧೦೨
ವನಜಾಲಯ ಮಾಂಪಾಲಯ ಶ್ರೀ
ವನಜಾಲಯ ಮಾಂಪಾಲಯ ವಾಸುದೇವ ಸುಪ್ರಿಯ ಪ
ವಸುಮತಿ ತನಯೆ ವರದಾಭಯಕರೆ
ಕುಸುಮಶರಾಬ್ಜಜ ಕುಶ ಲವ ಮಾತೇ ೧
ಮಣಿಮಯಾಲಂಕೃತೆ ಮಂಜುಳ ಭಾಷೇ
ಅಣಿಮಾ ಮಹಿಮಾದ್ಯಷ್ಟಭಾಗ್ಯಾನ್ವಿತೇ ೨
ಜಲರುಹ ನಯನೇ ಚಂದ್ರಗೀರಿಶ್ವರೆ
ತುಲಸೀರಾಮದಾಸ ದುರಿತನಿವಾರಣೆ ೩

೯೨
ವಸುದೇವ ಸುತಂ ಸನಾತನಂ ವಂದೇ ಕೃಷ್ಣಂ ಜಗದ್ಗುರುಂಪ
ನಾರದ ಗಜಪರಿಪಾಲನಂ
ನೀರದ ಸನ್ನಿಭ ದೇಹಿನಂ ೧
ಶೇಷ ಕೃಭೃತ್ಶಿಖರಾಲಯಂ
ದೋಷಸಹಿತ ಕುಜನಾಲಯಂ ೨
ಶಂಖ ಚಕ್ರ ಕರಧಾರಿಣಂ
ಕಿಂಕರಜನ ಭವಹಾರಿಣಂ ೩
ಅಜಹರ ಸನ್ನುತ ಶ್ರೀಧರಂ
ತ್ರಿಜಗದ್ವಂದಿತ ಭೂಧರಂ ೪
ತುಲಸೀದಾಮ ದಳ ಶೋಭಿತಂ | ಶ್ರೀ
ತುಲಸೀರಾಮ ಭವಿ ಸೇವಿತಂ ೫

ಈ ಮೂರು ಕೀರ್ತನೆಗಳು
೧೦೯
(ಲೋಕನೀತಿ)
ವೃಥಾಮಾಡಬೇಡ ಈ ಜನ್ಮವು ಸದಾಬರದು ಮೂಢಾ ಪ
ಅಧೋಕ್ಷಜನ ಮೃದು ಪಾದಾರವಿಂದಗಳ
ಯಥಾರ್ಥದಿಂ ಭಜಿಸಿ ಕೃತಾರ್ಥನಾಗದೆ ೧
ಸುಧಾರದನ ಗೃಹ ಪದಾರ್ಥದಾಶದಿಂ
ಮದಾಂಧದಿಂ ಗುರು ಬುಧಾಳಿ ಸೇರದೆ ೨
ಪಿತಾ ಮಾತಾ ಹಿತ ಸುತಾದಿ ಬಂಧುಗಳ್
ಹಿತಾರ್ಥರೆಂದು ಪರಗತೀ ನೀ ಕಾಣದೆ೩
ಹರೆ ದುರಿತ ಪರಿಹರೆ ತುಲಸಿರಾಮ
ಧೊರೆಯೆಂದು ನೀ ಮೊರೆಹೊಕ್ಕಡೆ ೪

ಒಂದು ತತ್ವಪದದಂತೆ
(ಈ) ಲೋಕನೀತಿ ಮತ್ತು ಕ್ಷೇತ್ರ ಸ್ತುತಿಗಳು
೧೦೮
(೧) ತಿರುಪತಿ
ಶರಣು ವಕುಳಾಭರಣ ಪೋಷಿತ
ಶರಣು ಯಾಮುನ ಪೂಜಿತ ಪ
ಶರಣು ಯತಿಪತಿ ನಿತ್ಯವಂದಿತ
ಶರಣು ಕ್ಷಮಾಭರಿತಾ ಅ.ಪ
ಶರಣು ದೇಶಿಕ ಹೃದಯ ಸದನಾ
ಶರಣು ಪರಿಪೂರ್ಣೇಂದು ವದನ
ಶರಣು ಸುಂದರ ಕೋಟಿ ಮದನಾ
ಶರಣು ಹಯವದನಾ ೧
ಶರಣು ಭಕ್ತಫಲಪ್ರದಾಯಕ ಶರಣು ತಿರುಮಲನಾಯಕಾ
ಶರಣು ಅಸ್ಮತ್ಪರಮದೇಶಿಕ ಶರಣು ಅಸ್ಮಾದ್ದೇಶಿಕಾ ೨

ಈ ಮೂರು ಕೀರ್ತನೆಗಳು
೧೧೦
ಶೇಷಾ ಭೂಧರನಿವಾಸಾ ಶ್ರೀ ಶ್ರೀನಿವಾಸಾ ಪ
ಶೇಷಶಯನ ಭವದೋಷರಹಿತ ಭಕ್ತಪೋಷಣ
ಕೌಸ್ತುಭ ಭೂಷಾ ಅಶೇಷಾತ್ಮ ಶೇಷಾ ೧
ಅರಿದರಕರ ಕನಕಾಂಬರಧರ ಶ್ರೀ ಯ
ಲಮೇಲ್‍ಮಂಗಾ ವಿಹಾರ ಉದಾರೀ ವಿಧೀರಾ ೨
ವಿಷಚರಯುಗಮೃಗವೇಷಾ ದ್ವಿನೃಷಚ
ವೇಷಾಪುರಿ ಕುಲದೂಷಾ ಮಾ ವಿಷಯ ಸಂತೋಷಾ ೩
ಕಾಮಜನಕ ತುಲಸೀರಾಮದಾಸ ಹಿತ
ಕಾಮಿತಾರ್ಥವನೀವ ಓ ಶ್ರೀನಿವಾಸ ೪

ರುಕ್ಮಿಣಿಯನ್ನು ಸ್ತುತಿಸುವ
೧೦೪
ಶ್ರೀ ರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ ಪ
ಶ್ರೀ ರುಕ್ಮದಾಯಿನೀ ಶ್ರೀಯಂ ದೇಹಿ ದೇಹೀ ಅ.ಪ
ಕ್ಷೀರವಾರಿಧಿ ಪುತ್ರಿ ಶಾರದೋತ್ಪಲ ನೇತ್ರಿ
ಮಾರಸತಿ ಜಿತಗಾತ್ರಿ ಮಾಂಪಾಹಿಪಾಹಿ ೧
ಘೋರ ಕಲುಷವಿದಾರಿ ದಾರಿದ್ರ್ಯ ಪರಿಹಾರಿ
ದ್ವಾರಕಾಪುರ ವಿಹಾರಿ ತ್ವಂ ತ್ರಾಹಿ ತ್ರಾಹಿ ೨
ದಾಸ ತುಲಸೀರಾಮ ದಾಸನುತ ಹಿತ ಪ್ರೇಮ
ವಾಸವಾರ್ಚಿತ ನಾಮ ವರಂ ದೇಹಿ ದೇಹೀ ೩

೯೩
ಶ್ರೀಕರ ಯದುಕುಲಶೇಖರ ದೇಹಿ
ಲೋಕನಾಥ ದಾಸಲೋಲ ಮಾಂ ಪಾಹಿ ಪ
ಶ್ರೀ ಮುರಳೀಧರ ಸಿಂಧು ಗಂಭೀರ
ಶ್ಯಾಮಸುಂದರ ಗೋಪೀಜಾರ ಯದುವೀರ ೧
ರುಕ್ಮಾಂಬರಧರ ರುಕ್ಮಗಿರೀಶಾ
ರುಕ್ಮಿಣೀಧವ ಭವರೋಗ ವಿನಾಶಾ ೨
ಮಣಿಮಯ ಭೂಷಣ ಮಷಕಪುರೀಶಾ
ಗುಣನಿಧಿ ಶ್ರೀವೇಣುಗೋಪಾಲ ಶ್ರೀಶಾ ೩
ಮಾರಜನಕ ಸುಕುಮಾರ ದಶವೇಷಾ
ಧಾರುಣಿ ಶ್ರೀ ತುಲಸೀದಾಸ ಸುಪೋಷ ೪

ಇವು ಶ್ರೀವೈಷ್ಣವ
೧೦೭
ಶ್ರೀಮತೇ ಶ್ರೀರಾಮಸೋದರಾ ಶ್ರಿತಜನಮಂದಾರ ಪ
ಪಾಮರ ಪಾಪೌಘ ಪತಿತ ಬದ್ಧ
ಜೀವೋದ್ಧಾರ ಶುಭಕರ
ನಾಮ ನಿತ್ಯ ವಿಭೂತಿದಾಯಕ
ಪ್ರೇಮನಿಧಿ ಭವಭೀತಿ ಪರಿಹರ ೧
ದಿವ್ಯ ಕಾಷಾಯಾಂಬರಾನ್ವಿತ
ದೇವರಾಜ ಸುವಾಕ್ಯ ಮಾತು
ಸವ್ಯಸಾಚಿ ಸೂತ ನಿರ್ಮಿತ ಶಾಸ್ತ್ರ
ಭಾಷ್ಯ ಪ್ರೋಕ್ತ ಯತಿವರ ೨
ದಂಡಿತಾಖಿಲ ಖಂಡಿತಾ ಪರಿ
ಮಂಡಲ ತ್ರಿದಂಡ ಕರಗಳ
ಮಂಡಿತಾ ವನಮಾಲ ತುಲಸೀ
ಮೂಲದಾಸಯುತ ಶ್ರೀ ಭಾಷ್ಯಕಾರ ೩

(೩) ಆಳ್ವಾರಾಚಾರ್ಯ ಸ್ತುತಿಗಳು
(೧) ಆಂಜನೇಯ ಸ್ತುತಿ
೧೦೫
ಶ್ರೀಮದ್ರಾಮನೃಪಾಲ ಸೇವಕ ಕಾಮಿತ ಫಲದಾಯಕ ಪ
ಭೂಮಿ ಶೋಕ ವಿನಾಶಕ ಕಪಿಕುಲ
ಸೋಮ ಸದ್ಗುಣ ಸ್ತೋಮ ದಯಾಳೋ ೧
ಆಂಜನೇಯ ಸುರಂಜನ ರಿಪುಕುಲ
ಭಂಜನ ಮಣಿಮಯ ಮಂಜುಳ ಭಾಷಣ೨
ರಾಮಾನುಜಮುನಿ ಪ್ರಾಣೋದ್ಧಾರಕ
ರಾಮಕಾರ್ಯವರ ಪ್ರೇಮಸಾಗರ ೩
ವಾತಾತ್ಮಜ ಭವಪಾತಕದೂರ
ಸೀತಾನುಗ್ರಹ ಸೇವಧಿಯುಕ್ತ೪
ವಾಸುಕೀಶಯನ ನಿವಾಸ ಭಕ್ತಾ
ಗ್ರೇಸರ ತುಲಸೀದಾಸಾನವ ಹರಿ ೫

ಈ ಮೂರು ಕೀರ್ತನೆಗಳು
೯೦
ಶ್ರೀಮಾಧವ ದಾಮೋದರ ನಾಮಾರ್ಚಿತಕಾಮಾ
ಸೋಮಾನನದಾಮಾ ರಿಪುಭೀಮಾ ಎಚ್ಚರಿಕೆ ಪ
ಬೃಂದಾರಕ ಬೃಂದಾರ್ಚಿತ ವಂದಿತ ಮುಚುಕುಂದ
ಸುಂದರ ರಥ ವಂದಿತ ನವಕುಂದಾ ಎಚ್ಚರಿಕೆ೧
ಗಂಗಾಪದರಂಗೇಶ ಭುಜಂಗಾರಿ ತುರಂಗ
ಶೃಂಗಾರ ಶುಭಾಂಗ ಭವಭಂಗ ಎಚ್ಚರಿಕೆ ೨
ಮಾರಾರಿ ಸಮಾಧಿತ ವಾರಾಸಿ ಗಭೀರ
ಸೂರ ಸುಕುಮಾರಾ ರಣಧೀರಾ ಎಚ್ಚರಿಕೆ ೩
ಶೇಷಾಚಲ ಭೂಷಾಹತದೋಷಾ ಮೃದುಭಾಷಾ
ಭಾಷಾಪತಿಪೋಷಾ ದಶವೇಶಾ ಎಚ್ಚರಿಕೆ ೪
ಶ್ರೀಮದಖಿಲಾಂಡಕೋಟಿ ಬ್ರಹ್ಮಾಂಡ ನಾಯಕ
ಆದಿಮಧ್ಯಾಂತರಹಿತ ಘನಸಾರವಿಲಸನ್ ಭ್ರೂಮಧ್ಯ
ಕಸ್ತೂರಿ ತಿಲಕೋಜ್ವಲಾ ದಿವ್ಯ ಪೀತಾಂಬರಧಾರೀ
ಶ್ರೀಯಲಮೇಲ್‍ಮಂಗಾ ಮನೋಹರ
ಶ್ರೀಭಾರ್ಗವಾಸರ ಭಜನೋಲ್ಲಾಸಾ
ಶ್ರೀಚಾಮರಾಟ್ಪಾಲಿತ ಸತ್ಸಂಪ್ರದಾಯ ಸುಜ್ಞಾನ
ಬೋಧಿನೀ ಸಮಾಜೋದ್ಧಾರಕಾ ಎಚ್ಚರಿಕೆ ೫

ಅಮ್ಮಾಯಮ್ಮಾ ಲಕ್ಷ್ಮೀ ನನಗೆ
(ಆ) ಲಕ್ಷ್ಮೀಸ್ತುತಿಗಳು
೯೫
ಅಮ್ಮಾಯಮ್ಮಾಲಕ್ಷ್ಮೀನನಗೆ ಅಭಯವಕೊಡುಸೀತಮ್ಮಾ ಪ
ಬೊಮ್ಮನ ಜಗಂಗಳ ಪೆತ್ತ ಸುತಾಯೆ
ಸುಮ್ಮನೆ ಕಾಲವ ಕಳೆಯದೆ ಬೇಗನೆ ೧
ನಂಬಿದೆ ನಿನ್ನ ಚರಣಾಂಬುಜಯುಗಳವ
ಕಂಬುಕಂಧರನ ಕಾಂತೆಸುಶಾಂತೆ೨
ಧರ್ಮನಿಲಯ ದಾರಿದ್ರ್ಯನಿವಾರಿಣಿ
ಧರ್ಮವಲ್ಲ ತವದಾಸನುಪೇಕ್ಷೆಯು ೩
ಹೇಮ ಮಹೀಧರ ಸ್ವಾಮಿನಿ ತುಲಸೀ
ರಾಮದಾಸನ ಪ್ರೇಮದಿ ಪಾಲಿಸು ೪

ಹಾಡಿನ ಹೆಸರು :ಅಮ್ಮಾಯಮ್ಮಾ ಲಕ್ಷ್ಮೀ ನನಗೆ
ಹಾಡಿದವರ ಹೆಸರು :ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ ಮೂರ್ತಿ
ರಾಗ :ಅಭೋಗಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್, ಮೈಸೂರು

ನಿರ್ಗಮನ