Categories
ರಚನೆಗಳು

ನರಸಿಂಹವಿಠಲರು

೧೫೧
(ಇ) ದಶಾವತಾರ
ಅಂಜಿ ಬಿಡಲಿ ಬ್ಯಾಡೋ ಮುಂದಕೆ ಮುಂದೆ
ಅಂಜಿ ಕೂಡಲಿ ಬೇಕೋ ಹಿಂದಕೆ ಪ
ಅನಿಮಿಷಾಗತ ರೂಪ ನೋಡಿದ್ಯಾ ಮತ್ತೆ
ಘನ ಕಮಲೇಶನೆಂದಾಡಿದ್ಯಾ ಒಳ್ಳೆ
ವನಚದರೆಪಿ [?] ಯೆಂದೋಡಿದ್ಯಾ ಮತ್ತೆ
ಮನುಜ ಮೃಗನ ಕಂಡಂಜಿದ್ಯಾ ನರ-
ಸನುಮತದೀಕ್ಷಿಸು ಮತ್ಸ್ಯಕಚ್ಛಪ ರೂಪಾ
ಧನುಜ ಸಂಹಾರಕಾಗಿ ವರನರಸಿಂಹರೂಪ ೧
ವಟುರೂಪದಿ ದಿಟವೆಂದಾಡಿದ್ಯಾ ಮತ್ತೆ
ಕಠಿಣಪರಷು ಕಂಡೋಡಿದ್ಯಾ ನರ-
ವಟುರಾವಣಾದಿ ಕಂಡಂಜಿದ್ಯಾ ಮತ್ತೆ
ಭಟ ಮುಷ್ಠಿಹರನಂದಾಡಿದ್ಯಾ ನರ-
ಧಟ ಹರವಾಮನ ಪರಶುರಾಮರೂಪ
ಸಟೆಯಿಲ್ಲ ತಿಳಿ ಶ್ರೀ ರಾಮಕೃಷ್ಣರೂಪ ೨
ನನ್ನ ರೂಪವ ಕಂಡಂಜಿದ್ಯಾ ಮತ್ತೆ
ಸುಜ್ಞ ಹಯವದನನೆಂದಾಡಿದ್ಯಾ ಕರಿ
ವಿಘ್ನನಾಶಕ ಬೌದ್ಧಕಲಿಕೆಯು ಧ್ಯಾನ
ಮಗ್ನನಾಗೆವರನ್ನು ಕಂಡಿದ್ಯಾ ನರ
ಪ್ರಜ್ಞವಿರಲಿ ಪತ್ತುಪಾವನ ರೂಪನ
ಸುಜ್ಞ ನರಸಿಂಹವಿಠ್ಠಲನಾಣೆ ಸಾರುವೆ ೩

೧೨೨
ಶ್ರೀಹರಿಯ ಸ್ತುತಿ
ಅಂತರಂಗದಿ ರಕ್ಷಿಸೊ ನಿಂತು ಭಜಿಪೆನು ನಾ ನಿನ್ನ
ಕಡಲಶಾಯಿ ಪ
ರುಧಿರ ಮೂಲ ಸಾಸ್ಥಿಯ ಕಾಯಾ ಒಳ್ಳೆ
ಮೃದು ನರ ಜಾಲಗಳ ಸುತ್ತಿಹ ಮೈಯಾ
ಅದರೊಳು ನಿನ್ನಾದಿ ಕಾರ್ಯಾ ಮತ್ತೆ
ಸದಮಲ ಪ್ರಾಣೇಶ ನಿನಗೆ ತಾ ಸಹಾಯ ೧
ಸಂತತ ಹರಿಯ ಕೊಂಡಾಡಿ ಮಧ್ವ
ಪಂಥವ ಪಿಡಿದು ದುವ್ರ್ಯಸನವನೀಡಾಡಿ
ಕಂತುಪಿತನ ನಾಮಾ ಪಾಡಿ ಎನ್ನ
ಚಿಂತೆ ತಾರಕನೆಂದು ನಂಬಿದೆ ಕೂಡಿ ೨
ನರದೇಹ ಕೊಡುವವನು ನೀನು ನಿನ್ನ
ಮರೆದಧಮದ ಶಾಸನ ಕರ್ತಾ ನಾನು
ನರಸಿಂಹವಿಠಲನು ನೀನು ನಿನ್ನ
ಕರುಣೆ ತಪ್ಪಿದ ಮೇಲೆ ಜೀವನವೇನು ೩

ಅವತಾರತ್ರಯ
೧೬೯
ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ
ಅಕ್ಷಯಾಂತಕನೀಕ್ಷಿಪುದು ಸುಜನರು ಪ
ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ
ರಕ್ಷಕನೆಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ
ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ
ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ
ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ ೧
ಯದುಕುಲದೊಳುದಯಿಸೆ ಹರಿಯು
ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ
ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು
ಕೀಚಕನ ಸದೆದು ಅಧಮಕಾರವ ಕುಲವನಳಿದು
ವಧಿಸಿಞ್ಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ
ಯಶವ ಗಳಿಸಿದವನ ಇಹಕೆ ಚರಕೆ೨
ಗುರುವಾಗವತರಿಸಿ ಧರೆಯ ಸುಜನರು
ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ
ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು
ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು
ಹರಿಮತವ ಪಿಡಿಯ ಬೋಧಿಸಲು
ನರಸಿಂಹವಿಠಲನ ಸ್ಮರಣೆಯಗೈದು
ನರಜನ್ಮ ಸಾರ್ಥಕವು ಪರಮಪದವ ಗೈದು ೩

೧೨೩
ಅಗಣಿತ ಗುಣ ನಾ ಮುಗುವೆ ಕರ ಪ
ಪಾಪ ವಿಮೋಚಕ ತಾಪವಿದೂರಕ
ತಾಪತ್ರಯಗಳನೇಕ ಪರಿಹಾರಕ ೧
ದೋಷನಿವಾರಕ ತೋಷಪ್ರದಾಯಕ
ದಾಸಜನರ ಚಿತ್ತವಾಸನಾಯಕ ೨
ಗಗನದೊಳಿರುವಂಥ ಜಗದೊಡೆಯನೇ ನೀನು
ನಿಗಮಗೋಚರ ಶ್ರೀ ನರಸಿಂಹವಿಠ್ಠಲಾ ೩

೧೮೭
ಶ್ರೀ ರಾಘವೇಂದ್ರರು
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ಪ
ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ.
ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ
ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ
ಬಂದ ಬಂದ ಜನರಿಗೆಲ್ಲ ಆನಂದ ನೀಡುತ
ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ ೧
ಬಂದ ಬಂದ ಜನರಿಗೆ ಅಭೀಷ್ಟವ ನೀಡುತ
ಛಂದಾಗಿ ಅಭಯವ ನೀಡುತಿಹರಮ್ಮ
ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ
ಅಂದಿನ ಆನಂದನ ಕಾಣಮ್ಮ ೨
ಬಂದ ಬಂದ ಜನರು ಪ್ರದಕ್ಷಿಣೆ ನಮಸ್ಕಾರ
ತಾಂವ ದಿಂಡು ಉರುಳುವರಮ್ಮಾ
ಬಂದ ಬಂದ ಜನರಿಗೆಲ್ಲಾ ಅಭಯವ ನೀಡುತ
ತಾಂವ ತುಂಗಾ ತಟದೊಳು ಇರುತಿಹರಮ್ಮಾ ೩
ಮೈಯೊಳು ಕೇಸರಿಗಂಧಾ ಪೋಷಿಸಿದಾರಮ್ಮಾ
ಎದುರಲಿ ಶ್ರೀ ಕೃಷ್ಣನ ಪೂಜಿಪರಮ್ಮಾ
ಢಾಳ ಅಕ್ಷಂತಿ ತಿದ್ದಿದ ಅಂಗಾರವು
ಮುದ್ರಿಯು ತಾಂವ್ ಧರಿಸಿಹರಮ್ಮ ೪
ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್
ಧರಿಸಿಹರಮ್ಮಾ ಬಿಡದೆ ನಿರಂತರ
ನರಸಿಂಹವಿಠಲನ ಜಪಿಸುತ
ತಾಂವರಿಂದಾವನದೊಳ್ ಇರುಹರಮ್ಮಾ ೫

೧೨೪
ಅಷ್ಟಮಿ ನಿಶಿಯೊಳಾದರೂ ಉಷ್ಣನಲ್ಲವೆ ಕೃಷ್ಣಾ ಪ
ಕೇತಕಿ ಕಂಜಜ ಪರಿವೃತನಾದರೂ
ಖ್ಯಾತವಾದಾ ಮೋಹ ಬೀರುವವಲ್ಲದೆ ಪ್ರೀತವು ದೇವಗೆ ೧
ಶತಪತ್ರ ಕೈವಲ ವೇಷಿತವಾದರೊ
ಕ್ಷಿತಿಪತಿ ಶಿರದೊಳು ಭೂಷಣವಲ್ಲದೆ
ರತಿಯು ಶ್ರೀಲಕುಮಿಗೆ ೨
ನರಸಿಂಹವಿಠಲ ತಾ ಕೃಷ್ಣನಾದರು
ಸುರವೈರಿ ನಿಶಿಯನು ಕುಡಿವವನಲ್ಲದೆ
ಸ್ಮರಿಪರ ಸುರತರು ೩

೧೭೦
ಆಂಜನೇಯಾ ರಾಮ ಆಂಜನೇಯಾ
ಅಂಜದಾಕ್ಷಣ ಕಂಜನೇತ್ರನೆ
ಸಂಜೀವಿನಿಯಾ ತಂದು ನೀಡಿದಾ ಪ
ಪಸುಳನೈಯಾ ವಪುವೆಸೆವ ರಾಯ
ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ ೧
ಭೀಮಸೇನಾ ಭಕ್ತಕಾಮಪೂರ್ಣಾ
ಕಾಮಕೀಚಕಾ ಬಾರ ಪಾಮರರಿದಾ
ಆ ಮಹಾತ್ಮರಾ ನಾಕ ನಾನು ಮೆರೆದಾ ೨
ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ
ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ
ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ ೩
ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ
ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ
ವಾಸನ ರಹಿತಾ ಗುಣಗಣಗಡಣಾ ಗರಿಮಾ ೪
ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ
ವಿಠಲನರಸಿಂಹಾ ಎದೆಯಾರವಿಂದ ನಯನಾ
ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ ೫

೧೨೫
ಆದಿಕೇಶವಗರ್ಥಿಯಲಿ ನಾನಾರ್ತಿ ಮಾಡುವೆನು
ಆರ್ತಿ ಮಾಡುವೆ ನಾ ಮಂಗಲಾರ್ತಿ ಮಾಡುವೆನು ಪ
ಶೀಳಿ ದೈತ್ಯನ ಲೀಲೆಯಲಿ ಮಂಗಳೋಲೆ ತಂದವಗೆ
ವ್ಯಾಲತಪ್ಪಿದ ಶೈಲವನು ಬೆನಮ್ಯಾಲೆ ಪಿಡಿದವಗೆ
ಖೂಳಗೆ ತೋರಿದ … ಪದಗೋಲ ತಂದವಗೆ
ಬಾಲಗೆ ಪಿತ ಗೋಳು ಮಾಡಿದ ಕೇಳಿ ಆ ದೈತ್ಯನ ಶೀಳ್ದವಗೆ ೧
ಭೂಮಿಯ ಬೇಡಿ ನಿಸ್ಸೀಮ ಬಲಿನೃಪನಾ
ಹಮ್ಮು ಕರಗಿಸಿ ಪಾತಾಳಕಟ್ಟಿದವಗೆ
ನೇಮದಲಿ ಕ್ಷಾತ್ರಸ್ತೋಮವ ನಿರ್‍ನಾಮ ಮಾಡ್ದವಗೆ
ಕಾಮಿ ದಶಶಿರ ನಾಮವಳಿದ ಶ್ರೀರಾಮ ಚಂದಿರಗೆ
ಸೋಮಕುಲದ ಸುನಾಮಿ ವರ್ಗಕೆ
ಪ್ರೇಮರಸ ಸತ್ಯಭಾಮಾವರಗೆ ೨
ಹರನ ಬಲಪಿಡಿದರೀ ತ್ರಿಪುರಸಂಹರೀಸಿದ ಶಿರಿವರಗೆ
ಹರಿಯನೇರಿ ದನುಜಾರನ್ನೆಲ್ಲ ಸವರೀದ ಭೂವರಗೆ
ಶರಣಜನರೊಳು ಕರುಣವಿರಿಸಿ ನಿರುತ ಪೊರೆದವಗೆ
ಪರಮಗುರು ಪವಮಾನಗೊಲಿದಾ ಸುರರೊಡೆಯ
ಶ್ರೀ ನರಸಿಂಹವಿಠಲನಿಗೆ ೩

೨೨೩
ಆದಿಕೇಶವನ ಪಾಡಿ ಸುಜನರು ಮೋದದಿಂದಲಿ ಕೂಡಿ
ಸಾದರದಲಿ ಹರಿಪೂಜೆಯನು ಮಾಡಿ ತವಿಸಿರಿ ಭವ ಬೇಡಿ ಪ
ಅಸ್ಥಿರ ಸಂಸಾರ ಮೇಲು ದುಃಖಪಾರವಾರ ಇಲ್ಲಿ ವಸ್ತಿ ತ್ರಿವಾಸರಾ
ಸ್ವಸ್ಥ ಚಿತ್ತದಿಂದ ಹರಿಯ ನೆನೆಯದಾಗ ಬ್ಯಾಡಿರಿ ಭೂಭಾರ ೧
ನಾರುವ ದೇಹಕ್ಕೆ ಈ ಪರಿ ಹೋರಾಡುವದ್ಯಾಕೆ ಬಿಡದೆ
ಜಾರಿ ಬೀಳುವುದಕ್ಕೆ
ನೀರೊಳು ತೊಳೆದು ಪರಿಮಳತೊಡೆ ಮಲಸೋರದೆ ಪೇಳಿದರೆ ೨
ಮಡದಿ ಮಕ್ಕಳು ಬಂದು ನಿನ್ನ ಕಡೆ ಹಾಸೋಕೆ ಬಂದು ನಿಮಗೆ
ಕಡುತಾಪವು ಮುಂದು ಜಡಮತಿಯಿಂದಲಿ
ಕೆಡಬ್ಯಾಡಿರಿ ಹರಿಪರಮ ದಯಾಸಿಂಧು ೩
ಎಷ್ಟು ಪೇಳಲಿ ನಾನು ನಿಮ್ಮ ಇಷ್ಟ ಮಿತ್ರರೇನು
ಸಂಗಡ ಬಂದು ರಕ್ಷಿಪರೇನು
ಕಷ್ಟಬಟ್ಟು ನೀವು ಘಳಿಸಿ ಹೂಳಿದರೆ ಹುಟ್ಟಿದ್ದಾಯಿತೇನು ೪
ಜಗದೊಳು ನೀ ಕೆಟ್ಟಿ ಮನವಾ ವಿಷಯಕ್ಕೆ ಹರಿ ಬಿಟ್ಟು
ನಗೆಗೇಡು ನಿಮ್ಮ ಬಟ್ಟಿ
ತಗಲು ಮೋಸಗಳಿಗೆ ಹಾದಿಯ ಕೊಟ್ಟಿ ನಿಮ್ಮದಾಯ್ತು
ಮೂರಾಬಟ್ಟಿ ೫
ಬೆಳೆದೀತು ನಿಮ್ಮ ಕಾಯಾ ಅದರೊಳು ತುಂಬಿತು
ಅರಮಾಯಾ ಇನ್ನು
ಕಳದೀತು ನಿಮ್ಮ ಶ್ರೇಯ ತೊಳಲಿ ಬಳಲಿ ಬಲಿ ಬಿದ್ದ
ಕೀಚಕ ಪರಿ ಆದೀತು ನಿಮ್ಮ ಕಾಯಾ ೬
ಹುಟ್ಟಲಿಲ್ಲಾ ಮತಿಯು ನಿಮಗೆ ತಟ್ಟೀತು ಉಪಹತಿಯು
ಇದು ಘಟ್ಟಿಯೆ ಸಂಸ್ರ‍ಕತಿಯು
ಬಿಟ್ಟಿಗಾರರು ನಿಮ್ಮ ಕಟ್ಟುವನಿತರೊಳು ಮುಟ್ಟಿ ಭಜಿಸೆ ಹರಿಯಾ ೭
ಹರಿಯೆ ಇತ್ತನಖಿಳಾ ಈ ಶಿರಿಸತಿ ಭೂ ಭೋಗಗಳಾ
ಮೇಲು ಸರಿಪರಿವಾರಗಳಾ
ನರಸಿಂಹವಿಠಲಗರ್ಪಿಸಿ ಸುಖಿಸುವ ನರವರ ಜನ್ನವೇ ಸಫಲಾ ೮

೧೮೮
ಆನಮಿಸುವೆ ಗುರುವಾ ಮಂತ್ರಾಲಯ ಸ್ಥಾನ ಮಾಡಿದ ಯತಿಯಾ ಪ
ದಾನವರೊಳವತರಿಸಿ ದೈನ್ಯರ ಮಾ£ನಿಧಿಯು ತಾನು
ಜ್ಞಾನಿಗಳಿಗೆ ಕಾಮಧೇನುವೆನಿಸಿದೀ
ಮಾನಿಯತೀಂದ್ರ ವಿಜ್ಞಾನಪೊಯ್ಯವನು ಅ.ಪ
ಸದಯ ಸರ್ವದಾಯೆನಿಸಿ ಹೃದಯದಿ ಮುದವಾಂಕುರಿಸುವನು
ವಿಧು ಜೋತಿಯ ಪರಿ ಸದಮಲ ಕೀರ್ತಿಯ
ವಿದಿಶಮಾಗಿ ಭೂತಳದಿ ಉದಯಿಸಿದ ೧
ದೋಷದೂರ ನೆನಿಸೀ ದಾಸರಿಗೀಶನಡಿಯ ತೋರ್ಪಾ
ವಾಸುದೇವನಿಗೆ ನಿಜ ದಾಸನೆನಿಸಿ ಭವ-
ವಾಸದೊಳಿಹ ಪರತೋವೀವನು ೨
ಕರುಣಸಾಗರನೆನಿಸಿ ಶರಣಗೆ ವರಗಳ ತಾನೀವಾ
ಗುರುವೆಂದೆಂಬ ಯಥಾರ್ಥ ಪದವಿ ತಾ
ನರಸಿಂಹವಿಠಲನ ಕರುಣದೊಳಿಹನು ೩

ಚಂದಿರನಗ್ರಜೆ ಲಕ್ಷ್ಮೀದೇವಿ.
(ಈ) ಮಹಾಲಕ್ಷ್ಮಿ
೧೬೫
ಇಂದೀವರನಯನ ಕೃಷ್ಣಾನಂದಕಾರಿಣಿ ಪ
ಎಂದೆಂದಿಗು ಹೊಂದಿ ನೀನಾನಂದ ಕೊಡುವ ಕಾರಣದಿಂದ ಅ.ಪ.
ಸಿಂಧುಮಥನ ಕಾಲ ಜನಿಸಿ ಸಿಂಧುರಾಜಗೆ ಪುತ್ರಿ ಎನಿಸಿ
ಚಂದಿರನಗ್ರಜೆ ಎನಿಸಿ ಸಿಂಧುಶಾಯಿ ಮಂದಿರಳೆನಿಸಿ ೧
ಕಮಲವದನೆ ಕಮಲಾಕ್ಷಿಯೆ ಕಮಲಪಾಣಿ ಕಮಲ ಚರಣೆ
ಕಮಲಗಂಧೆ ಕಮಲವಾಸನೆ ಕಮಲಾಕ್ಷಣೆ ಕಮಲಾಂಗಿಯೆ ೨
ನರಸಿಂಹವಿಠಲನ ಹೊಂದಿದೆ ಪರಮಭಕ್ತರಘ ಕಳೆದು
ಹರಿಯ ನಾಮ ಜಿಹ್ವೆಗಿತ್ತು ನಿರುತದಿ ಯುದ್ಧ… ದೇವಿ ೩

ಆತ್ಮನಿವೇದನೆ
೧೯೬
ಇಂದೀವರಾಕ್ಷ ಬಾ ಮುಕುಂದ ಮರಹರ ಗೋವಿಂದಾ
ಸುಂದರಾಂಗನೆ ಬಂದು ರಕ್ಷಿಸೋ ಚೆನ್ನಿಗರ ಚಂದಾ ಪ
ತಂದೆ ತಾಯಿ ಬಂಧುಬಳಗ ಇಂದೆನಗೆ ನೀನೇ
ಚಂದದೆನ್ಮನ ಮಂದಿರದಿ ನೀ ನಿಂದಿರು ದಯಾಮಯನೆ ೧
ನಿನ್ನ ಪಾದವನ್ನು ಪಿಡಿದನೆನ್ನ ರಕ್ಷಿಸೋ
ಸನ್ನುತ ವಿಚ್ಛಿನ್ನ ಭಕುತರನ್ನು ಸೇರಿಸಿಕೋ ೨
ಬೆರಸ ಬ್ಯಾಡೆನ್ನರಸ ನಿನ್ನ ಸ್ಮರಿಸದಿರ್ಪರಾ
ಶಿರಿವರ ನರಸಿಂಹವಿಠ್ಠಲ ಪೊರೆಯೋ ಭೌಮಾ ೩

೧೯೭
ಇಂದು ಶ್ರೀರಮಣಾನೀಗೆ ಭವ ಬಂಧನೇಯನು ನಾ ಪೇಳ್ದೆ
ಇಂದೀವರಾಕ್ಷಗೆ ನಿನ್ನ ನಂಬಿದೆ ಕರದ್ವಂದ್ವ ಜೋಡಿಪೆ ಸಲಹೀಗ ಪ
ತಂದೆ ಪ್ರಪಲ್ಹಾದಗೊಲೀದೀ ಸಲೆ ಬಂದ ವಿಪತ್ತನ್ನ ಕೇಳ್ದಿ
ಅಂದು ಭೂಭಾರವನಿಳುಹಬೇಕೆಂದು ಬಂದು ಕಂಭದಿ ನಡೆತಂದೆ ೧
ಅರುಹೆಲೊ ಹರಿ ಇನ್ನೆಲ್ಲಿ ಪಂಧಿರಣ್ಯಕಶ್ಯಪ ನುಡಿಯಲ್ಲೆ
ನರಹರಿರೂಪದಿ ತಾಳಿ ಕ್ಷಣದಿ ನೀ ದುರುಳ ರಕ್ಕಸರ
ಹೃತ್ಪಟಲವ ಶೀಳಿದಿ
ತಾಮಸರಿಗೆ ನೀ ವೈರಿ ನೀನೇ ದೊರಿ ಎಂಬೋರುದ್ಧಾರಿ
ಪಾಮರನಾನೆಂದು ನೀ ಮರೆಯದೆ ಕಾಯೋ
ಧೂಮನರಸಿಂಹವಿಠಲ ಪಾಲಿಪುದೆನ್ನ ೩

೧೯೮
(ಲಾವಣಿ ಧಾಟಿ)
ಇಲ್ಲೆನುತಾ ಉದರ ಝಣತಾ ಅಕ್ಕಪ್ಪ ವಕ್ಕಪ್ಪ ಪ
ಇಕ್ಕಲ್ಯಾಂಗ ಸ್ವಾಮಿ ನಿನಗೆ ಮಕ್ಕಳ ಮನೆ ಇದು
ಚಕ್ಕಲಿ ಸಜ್ಜಿಗೆ ಗಂಜಿ ಮುತ್ಸೋರಿ ಪಾಯಸಾ
ದಕ್ಕದೀರೆ ತರಲ್ಹ್ಯಾಂಗ ಮುಕ್ಕೋ ಬೇಕು ಇದ್ಧಾಂಗ
ಸಕ್ಕರಿ ಪರಿ ಭಕುತಿ ಇಕ್ಕುವೆ ಸಮರ್ಪಣ ಮಾಡಿ ೧
ಭವವೆಂಬ ಕಿಚ್ಚನ್ಹಾರೆ ಸವಿತ ಭಕ್ತಿ ಭಾಂಡವಿಕ್ಕಿ
ಪವನಸೂನು ಹನುಮಮಧ್ವಧ್ಯಾನದಿ
ಜವದಿ ಎನ್ನ ಮನವ ಕುದಿಸಿ
ಸವಿಯ ಖಾದ್ಯ ಮಾಡಿಯದನು
ಭವದೂರ ಮಂತ್ರವ ಜಪಿಸಿ
ಸವಿಯಬೇಕು ಸಂತತ ಮುದದಿ ೨
ಎಲ್ಲರಂತೆ ಅಲ್ಲ ನೀನು ಇಲ್ಲದ್ದನ್ನು ಬೇಡ್ವೋನಲ್ಲ
ಸಲ್ಲಿಸಿಹನ್ನುವೀನೊಲ್ಲೆ ನಂಬುವಲ್ಲಾ[?]
ಬಲ್ಲಿದ ನರಸಿಂಹವಿಠಲ ಒಲ್ಲೆಂಬುದೀಗುಚಿತವೇ
ಸಲ್ಲಿಸಿದ್ದು ಒಪ್ಪಿಕೊಂಡು ನಿಲ್ಲಿಸೆನ್ನ ಮನದಿಯಂಘ್ರಿ ೩

೧೯೯
ಇಷ್ಟೇ ದಯ ಮಾಡಬಾರದೇ ಸೃಷ್ಟಿಕರ್ತಾ ಜಗದ್ರಕ್ಷಾ
ವಿಶ್ವನಾಥಾ ಇಷ್ಟೇ ದಯ ಮಾಡಬಾರದೇ ಪ
ದುಷ್ಟ ವಿಷಯದೊಳಗೆ ಬೆರೆತೆ ಸೃಷ್ಟೀಶ ನಿನ್ನನೆ ಮರೆತೆ
ಭ್ರಷ್ಟ ಮನವನಳಿದು ನಿನ್ನಿಷ್ಟ ಭಕ್ತರೊಳಗೆ ದುಡಿಸುನಿ ೧
ನಿನ್ನದೆಂಬಿ ಮರುಳು ಹಿಡಿದು ಅನ್ನಿಗರನು ಕಾಡಿ ತರಿದು
ಕುನ್ನಿಮನುಜನಂತೆ ಬಾಳ್ದೆ ಘನ್ನನೆ ರಕ್ಷಿಸು ನಾ ಬೇಡ್ವೆ ೨
ಪರರ ಹಾಡಿ ಕಾಲ ಕಳೆದೆ ಪರರ ಬೇಡಿ ಹೊಟ್ಟೆ ಪೊರೆದೆ
ನರಸಿಂಹವಿಠ್ಠಲನರಿಯದೆ ಕರುಣಾನಿಧಿ ಬೇಡದೆ ಪೋದೆ ೩

೨೨೨
ಲೋಕನೀತಿ
ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ
ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ
ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ
ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ ೧
ಮರಕೆ ಗೊಂಬೆಗಳ ತೆರದಿ ಮರಿಗಳೂ ತಮ್ಮಾ
ತೆರಪೀರಾದೆ ಜನಿಸಿದಾವು ಸುತ್ತಲು
ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ
ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ ೨
ಯಮನವರು ಬರುವದು ಮರೆತೇಯ ತಮ್ಮಾ
ರಮಣೀ ಮೋಹಾ ಕೇಳಿರು ನೀನರಿಯಾ
ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ
ನಮೋ ನರಸಿಂಹವಿಠಲ ಎನ್ನಯ್ಯ ೩

ಇದೊಂದು ವಿಶಿಷ್ಟ ವಿಷಯಕವಾದ ಹಾಡು
೧೯೫
ಉದ್ಧರಿಸಿ ಸಲಹಿವನ ಮಧ್ವಪತಿ ವಿಠಲಾ
ಶುದ್ಧ ಬುದ್ಧಿಯನಿತ್ತು ಬಿಡಿಸುಮನ ಚಂಚಲಾ ಪ
ಪದಿನಾರ ಶತಕದೊಳು ಮೊದಲು ಜನ್ಮವ ತಾಳಿ
ಸದಮಲ ದಾಸರಾಯರ ಪುತ್ರನೆನಿಸಿ
ಪದುಮನಾಭನ ಪಾಡಿ ಮುದದಿ ಭವನುತ್ತರಿಸಿ
ಯದುಪತಿಯ ಪಾದಾರವಿಂದವ ಪಡೆದನು ೧
ಮತ್ತೆ ಕರ್ದಮ ಬಲದಿ ಉತ್ತುಮರ ಕುಲವಲ್ಲಿ
ಸ್ತುತ್ಯಗುರು ಪೂರ್ಣಪ್ರಜ್ಞರ ಮತದಿ ಜನಿಸಿ
ವತ್ತರದಿ ದಾಸರಾಯರು ಮಾರ್ಗ ಪೇಳಲು
ಮತ್ತೆ ಹರಿಭಕ್ತಿಯಿಂದಲಿ ಜನ್ಮ ತಳೆದಾ೨
ನಲನಾಮ ವತ್ಸರದ ಫಲಪುಷ್ಪದಮಾವಾಶ್ಯಾ
ಜಲಧಿ ಶಯನನ ದಾಸರಾಯರ ದಿನದಿ
ಸುಲಭ ನರಸಿಂಹ ವಿಠ್ಠಲ ಕರುಣಿ ಸಂತತವ
ಕಲುಷರಹಿತೇನರಗೆ ಬಲದಿ ಒಲಿದಿತ್ತನು ೩

೨೦೦
ಉದ್ಧರಿಸೆನ್ನ ಶುದ್ಧ ಮಧ್ವಮತದ ಧೊರೆಯೆ ಬಿದ್ದು ಪೇಳುವೆ ಪ
ನಾನಾ ಯೋನಿಗಳಲ್ಲಿ ಜನಿಸಿ ಮಾನವ ಜನ್ಮವ ವಹಿಸಿ
ಸಾನುರಾಗದಿ ನಿನ್ನ ಭಜಿಸಿ ಮಾನ್ಯನೆನಿಸಿದೇ ೧
ಎಷ್ಟು ಕಷ್ಟ ಬರಲಿ ಇನ್ನು ದುಷ್ಟ ಮನಸು ಕಳೆದು ಮುನ್ನಾ
ಸೃಷ್ಟಿಕರ್ತಾ ಭೃತ್ಯಘನ್ನ ತುಷ್ಟಿನೀಡ್ವುದೈ೨
ಸ್ಮರಿಸಿ ನರಸಿಂಹವಿಠಲನ ಭರದಿ ನಿನಗೆ ಮರೆ ಇಡುವೆನಾಗಿ
ದುರುಳ ನರರ ಸಂಗತಿಯನು ಮರಿಸಿ ಪೊರೆವುದೈ ೩

ವೈಷ್ಣವರಿಗೆ ಸಾಲಿಗ್ರಾಮವು ಅತ್ಯಂತ
೧೫೨
ಉರಗಪತಿಯ ಮೆಟ್ಟಾನೆ ರಂಗೈಯ್ಯ ಕರದಿ ವಾರಿಧಿ ನಿಚ್ಚನೆ ಪ
ನೀರೊಳು ಪೊಕ್ಕಹನೇ ರಂಗೈಯ್ಯ ಭಾರವ ಪೊತ್ತಿಹನೇ
ಪೋರಾಚೆÉಗೆ ಇದು ದಾರ ಕಲಿಸಿದರೆನೆ
ನೀರಜಭವರು ನಿರ್ಜರರು ನಗುತಿಹರು ೧
ಕಂದ ಮೂಲವ ಗೆಲುವಾ ರಂಗೈಯ್ಯ
ಬಂದ ಕಂಭವ ನೋಡಿದಾ
ಕಂದ ಇಂಥ ಬುದ್ಧಿ ಎಂದು ಕಲಿತಿಯೇನೇ
ನಿಂದು ಮೇದಿನಿ ಪ್ರಲ್ಹಾದ ನಗುತಿಹರು ೨
ತಿರುಕನಂತೆ ಬೇಡುವಾ ರಂಗೈಯ್ಯ
ಕರದಿ ಕೊಡಲಿವಿಡಿವಾ
ಹರಕುತನವು ತಂದೆ ಯಾಕೋ ನಿನಗೆ ಎನೆ
ಸುರಗಂಗೆ ವರ ಜಮದಗ್ನಿ ನಗುತಿಹರು ೩
ಜಟವ ಬೆಳೆಸಿ ಕಟ್ಟಿಹಾ ರಂಗಯ್ಯ
ಹಟದಿ ಮಾತುಳನಳ್ದೀಹಾ
ಹಟಮಾರಿತನ ನಿನಗ್ಯಾರು ಕಲಿಸಿದರೆನೆ
ದಿಟ ಪವಮಾನಾರ್ಜುನರು ನಗುತಿಹರು ೪
ಅರಿವೆ ತಾನುಡಲು ವಲ್ಲ ರಂಗೈಯ್ಯ
ತುರಗವೇರಲು ಬಲ್ಲಾ
ನರಸಿಂಹವಿಠ್ಠಲ ಸರಿಯಲ್ಲವಿದು ಎನೆ
ಹರಬೊಮ್ಮ ಸುರರು ಗಹಗಹಿಸಿ ನಗುತಿಹರು ೫

೨೦೧
ಎಂಥ ಕರುಣನಿಧಿಯೊ ನಮ್ಮನಂತ ರೂಪನು
ಎಂಥ ಕರುಣನಿಧಿಯೊ ನಮ್ಮನಂತ ರೂಪನು
ಕಂತುಪಿತನು ಸಂತತ ಭಕ್ತರ ಹೃದಯದಿ
ನಿಂತು ಕಾರ್ಯ ಮಾಡುತಿಹನು ಪ
ಏಕದಶಿಯ ನಿಶಿಯೊಳಾನು ತೋಕರುದರಕೆ
ಬೇಕಾದೀತು ನೀಡಿ ಹೊರಗೇಕ ಕಾಲಕೆ
ಕಡದಿದೇಕ ಸರ್ಪಪಾವಕೆ ಶೋಕಹರಣ ಹರಿಯ ನೆನೆ
ವಾ ಕಾಲಕೆ ಮನಕೆ ಆಗಿ ಏಕಮನದಿ ಹಾಡುತಿರಲು
ಶ್ರೀಕರನೆನಕೈಯ ಪಿಡಿದಾ ೧
ಕಡಲಶಯನನನುದಿನದೊಳು ಬಿಡದೆ ಭಜಿಸುತಾ
ಕಡಲ ಮಗಳ ಕರುಣವಿಲ್ಲದೆ ಬಡವನೆನಿಸುತಾ
ಇಡಲು ಹೆಜ್ಜೆ ಮಡದಿಯೆನ್ನನೊಡಸಿ ನುತಿಸುತಾ
ಸಡಗರ ದಿಗ್ವಿಜಯರಾಮ ನುಡಿಯವಿಡಿದ ಧ್ಯಾನತೀರ್ಥ
ರೊಡನೆ ಕಾಣಲು ಪಿಡಿದು ಮುದ್ರೆ ತೊಡಸೊ
ಮನದಿ ನಲಿವ ಹರಿಯು ೨
ಹರಿಗುರುಗಳ ಕರುಣದಿಂದ ಕಾಲ ಕಳೆಯುತಾ
ಇರಲು ಕಾಯಕೆ ವ್ಯಾಧಿ ತೊಡರಿ ಬಾಧೆಗೊಳಿಸುತಾ
ಹರಿ ಪೂಜೆಗೆ ಹರಿವ ಮನವ ಕಟ್ಟುಮಾಡುತ
ಹರಿಯ ಧ್ಯಾನದರಿವು ಹಾರಿ ಉರುಳುತಿರಲು ಧರೆಯ ಮೇಲೆ
ಕರುಣದಿ ನರಸಿಂಹವಿಠಲ ದಣುವನಳಿದು ತನುವ ಪೊರೆದಾ ೩

೨೨೪
ಎಂಥಾದರು ಬಂದರು ಚಿಂತೇ ಇಲ್ಲಾ ಪಂಥವು ಸರಿಯಲ್ಲಾ ಪ
ಚಿಂತೆ ಎಂದೆಂಬುದೆ ಮನಸಿನ ರೋಗಾ ಸಂತಸ ಸಂತ್ಯಾಗ
ಎಂಥೆಂಥ ಮಿಂಚುವ ದೇಹವಿದೀಗ ಕೃಂತನ ವಿಧಿಭಾಗ
ಎಂತಲ್ಲಿ ನೆಲೆಸಿ ಹವಣಿತ ರೋಗಾ ಸಂತತ ಜಡ ಬೀಗಾ
ಅಂತವಿಲ್ಲದ ದೇಹಗೇಹದಿ ತೋರೆ ಕಂತುಪಿತನ ಪದದಾಸ
ನೀ ನೆನ್ನೊ ೧
ಹಿತಾಹಿತವೆಂದಿಗೂ ಕೈಶೇರಿಲ್ಲಾ ಕೃತಿಪತಿ ತಾ ಬಲ್ಲಾ
ಮತಿಗೆಟ್ಟು ಸತಿಯೇ ಗತಿಯೆಂದೆಲ್ಲಾ ಸುತಮೋಹ ಬಿಡಲಿಲ್ಲಾ
ಮಿತಿಮೀರಿ ಪಣ ಭಂಡಾರದೊಳೆಲ್ಲಾ ರತಸುಖರೆ ಡಿಲ್ಲಾ
ಅತಿವೇತಾ ಕೇಸರಿ ಸುಖಗುರಿ ಮುರಿಯಲು ಧೃತಿಗೆಟ್ಟು ಬಳಲುವ
ಸಂಗತಲ್ಯಾರು ತಿಳಿಯೋ ೨
ನೀರಿನ ಬುದ್ಬುದ ಪರಿಸಂಸಾರಾ ದುಃಖದ ಆಗಾರಾ
ಶ್ರೀರಾಮ ಮಂತ್ರದ ಸಾರಾ ನಿಜ ಸೌಖ್ಯದ ದ್ವಾರಾ
ಶೇರಿ ಹಣ ಹೊನ್ನು ಹೆಂಣ ವಿಚಾರಾ ಗಂಜಾಸಮ ತಾರಾ
ಮಾರನೈಯ್ಯನ ಶ್ರೀ ನರಸಿಂಹನ ಶೇರಿ ಭಜಿಸಿ
ನಿಜಸುಖವನು ಪಡೆಯೇ ೩

೧೨೬
ಎಂಥಾದ್ದು ರಾಮನ ರೂಪಿನ್ನೆಂಥಾದ್ದು ಪ
ಎಂಥಾದ್ದು ಶ್ರೀರಾಮನ ರೂಪಾ
ನಿಂತು ಭಜಿಪತ್ಯಾನಂದಗೊಳಿಪಾ
ಸಂತ ಕುಮುದ ಮಿತ್ರನು ತಾನೆನಿಪಾ ಆಹಾ
ಚಿಂತಿಪರ ಜಗತ್ರತ್ತಿವಾಸರು ನಿರುತದಿ
ಅಂತರಂಗದ ಜ್ಞÁನ ಚಕ್ಷು ಗೋಚರ ರೂಪಿನ್ನೆಂಥದ್ದು೧
ಸುಷ್ಟವಾದನಿಷ್ಟಗಳು ಎಷ್ಟು ಬಳಲಿಪವು ಪಗಲಿರುಳು
ಕಷ್ಟಬಡುತಿಹವಷ್ಟಾಂಗಗಳು ಆಹಾ
ದೃಷ್ಟಗೋಚರ ಸ್ವಾಮಿ ಕಷ್ಟಕಳೆದು ನಮ್ಮ
ನಿಷ್ಟಪೊಯ್ದೋಡಿಸೆ ತುಷ್ಟಗೊಳಿಪ ರೂಪಿನ್ನೆಂಥಾದು ೨
ಸ್ಥಿರಮೂರ್ತಿ ನೀನಹುದಲ್ಲೆ ಸುರವೃಂದಕೆ ನೀ ಚೆಂದನಲ್ಲೆ
ನರಪೊಗಳಲು ಸುಳಿಯುವಲ್ಲೆ ಆಹಾ
ಮರುಳು ಮನುಜ ನಾನು ಮರೆದು ಬಳಲಿಪೆನು
ನರಸಿಂಹ ವಿಠಲ ಕರವ ಮುಗಿವೆ ತೋರಂಥಾದು ೩

೨೨೫
ಎತ್ತಣ ಸಂಸ್ರ‍ಕತಿ ಎಲ್ಲಿದೀ ಕಾಯಾ ಸುತ್ತಲೂ ಸಂಕಟವೋ
ಮತ್ತೆ ವೈರಿಗಳ ಮತ್ತೆರಡುಪಟಳ ಸುತ್ತೆ ಭೀತಿಮಯವೋ ಕೃಷ್ಣಾ ಪ
ಸುಂದರ ದೇಹವು ಬಂದುದು ಎಂದಾನಂದ ಭರಿತನಾಗಿ
ಬಂಧು ಬಳಗದ ಪೊಂದಿಕೆಯಿಂದಲಿ ಸಂದಣಿ ಹೆಚ್ಚಾಗಿ
ಚಂದದ ಮಂದಿರ ಕುಂದದ ಧನ ಸುಖದಿಂದ ಯುಕ್ತನಾಗಿ
ಬಂದೆಮದೂತರು ನಿಂದು ಯಳೆಯುವಾಗ
ಸುಂದರ ತನುವೆಲ್ಲಿ ಬಂಧು ಬಳಗವೆಲ್ಲಿ ೧
ಚತುರ ದೆಶೆಗಳಲಿ ಭರದಿ ಸಾಗುವವು ಗತಿಯ ಅರುಹು ಇಲ್ಲಾ
ಚತುರದ ಮೇಲೊಂದತಿ ಕ್ಲೇಶಗಳೀ ದೇಹ ಮುತ್ತಿದವಲ್ಲಾ
ಚತುರದೊಳುಣವಂದತಿ ತಾಪಗಳ್ಮಿತಿ ಮೀರಿ ಕಾಡಿದವಲಾ
ಚತುರಾನನ ಪಿತ ಗರಿಯಿಲ್ಲದನ್ನ ಹಿತರು ತೋರಲಿಲ್ಲಾ ೨
ಪರಿಪರಿ ವಿಷಯಗಳ ಮೆರೆವ ಶಿರಿಯ ಮೇಣರಿವರ್ಗಗಳೆರಗಿ
ಹರಿಯ ನೆನೆವ ಮನ ಕರವಳ ಹೊಯ್ದು ಬೆರಸಿ ಕಾಯವ ತೂಗಿ
ಮರದ ಮೇಲಿಂದ ಕರಬಿಟ್ಟ ತೆರದಂತೆ ಮೆರೆವ ದೇಹಕೆ ಆಗಿ
ನರಸಿಂಹವಿಠಲನ ಕರುಣೆ ಪಡೆಯದಲೆ ಕೊರಗಿ ಕರಗಿ
ಸೊರಗೀ ಕೃಷ್ಣಾ ೩

೨೨೬
ಎಲ್ಲಿಹನು ದೇವನೆಂದೆಲ್ಲು ಜನ ನುಡಿವರು
ಸಲ್ಲುವುದೆ ಆಲಿಸಲು ಬಲ್ಲಗೀ ನುಡಿಯು
ಇಲ್ಲೆಂದು ನುಡಿವರ್ಗೆ ಬಲ್ಲನಿತು ಪೇಳುವೆನು
ಪುಲ್ಲನಾಭನ ಚರಿತವಾ ಹಿತವಾ ಪ
ಕಲ್ಲಾಗಿ ಬಿದ್ದಿಪ್ಪಹಲ್ಯೆ ತಾ ಬಲ್ಲಳು
ಎಲ್ಲ ಜಗ ಪಾವನನ ಸುಳ್ಳೆನ್ನಬಹುದೇ
ಅಲ್ಲೆಂದರೀ ನುಡಿಗೆ ಹೊಲ್ಲ ಜಗವ ತುಂಬುವನು
ಕಲ್ಲು ಮುಳ್ಳನು ಉದರದಿ ಜವನಿ ೧
ತೋರೆಲವೊ ಹರಿಯನೆಂದೊದರಾಡೆ ರಕ್ಕಸನು
ಘೋರ ಕಂಭದಿ ತೋರೆ ಹಾರಿ ತಲ್ಹಣವು
ಘೋರ ರೂಪವ ತಾಳಿ ನಾರಸಿಂಹಾಖ್ಯದಿ
ಚೂರ ಮಾಡಿದವನÀನು ಪರನು ೨
ಧಸ್Éೀನಿಪರ ಮನದೊಳಗೆ ಸಾನುರಾಗದಿ ಹರಿಯು
ಸ್ಥಾನಗೊಳಿಪನು ಮನಕೆ ಆನಂದವೀವಾ
ದಾನವಾಂತಕ ಶ್ರೀ ನರಸಿಂಹವಿಠಲನು
ಆನತರ ನೆರೆ ಪೊರೆವನು ಬಿಡನು ೩

೧೫೩
ಏನು ಪೇಳಲಮ್ಮಯ್ಯಾ ರಂಗನ ಕ್ರೀಡಾ
ಏನು ದಂಡಿಸಲಮ್ಮಯ್ಯಾ ಶ್ರೀ ಕೃಷ್ಣನ್ನ ಪ
ಜಲದೊಳಗೋಡಿ ಪೋದಾ ಬೆನ್ನಲಿ ದೊಡ್ಡ ಚಲವನ್ನೆ
ಪಿಡಿದು ನಿಂದಾ
ಒಲಿದು ಕೋರೆಯ ತೋರಿದಾ ದುರುಳ
ದೈತ್ಯನ್ನೆಳದೊಡಲವೆ ಸೀಳಿದಾ
ಬಲಿಯಲ್ದೈನ್ಯದಿ ದಾನಬೇಡಿ ತಾಯ ಶಿರವ ಕಡಿದು ತೋರಿದಾ
ಕಲೆವೆಣ್ಣೈದ್ಮೊಲೆಯುಂಡು ಕಳದ್ವಟ್ಟೆ ಹಯವೇರಿದಾ ೧
ಕಾನನದಾ ವರಹನಾದಾ ಆಗಲು ಪಂಚಾನನ ರೂಪನಾದಾ
ದಾನಬೇಡಲು ವಾಮನನಾಗಿ ಸೂನು ಪರಶುರಾಮನಾಗಿ
ಜಾನಕಿವರನಾಗಿ ರಾವಣನಾಗಿ ಮಾನಬಿಟ್ಟು ವಾಜಿಯನೇರ್ದಾ ೨
ಹೊರಗೆ ನಿಗಮ ತೋರ್ದಾ ಬೆನ್ನಲಿ ಬೆಟ್ಟವಿರಿಸಿ ಸುರರಾ ಪೊರೆದಾ
ಧರಾಲಲನೆಯನೆತ್ತಿ ತಂದಾ ದೈತ್ಯನ ಶೀಳಿ ತರಳನಳಲನು ಕಳೆದಾ
ಸುರತಟಿನಿಯಂಗುಟದಿ ಜನಿಸೆ ಧರೆಯ ಪಾವನಗೊಳಿಸೆ
ನರಲೋಕವುದ್ಧಾರ ಜನಕ ಸಿರಿಪಾವನ ನರಸಿಂಹವಿಠಲನ ೩

೨೨೭
ಏನು ರಾಗವ ಮಾಡಲ್ಯಾ ನಾನು ಬ್ಯಾಗನೆ
ಸಾನುರಾಗದಿ ಹರಿಯು ತಾನೇ ಮಾಡಿಸುವಾ ಪ
ದಾನವ ದ್ವಿಪ ವೃಂದ ಮಾನನದಿ ಕರ್ಚಿದ
ಮಾನನಿಧಿ ಕೇಸರಿಯೋ ಶ್ರೀಹರಿಯೋ ಅ.ಪ.
ಅಜ್ಞಾನ ತಮದೊಳಗೆ ಸುಜ್ಞಾನಿಗಳು ಬಳಲೆ
ತಜ್ಞಾನಪೂರ್ಣ ಸರ್ವಜ್ಞರವತರಿಸಿ
ಅಜ್ಞಾನದಿಂದ ಗತಿಯಕ್ಕುದೆಂದರುಹಿಸಿದ
ಸುಜ್ಞಾನ ದರ್ಪಣವೋ ಶ್ರೀ ಧನವೊ ೧
ಕರ್ಮದಿಂದಲೆ ಭಕ್ತಿ ವೈರಾಗ್ಯ ವಿಜ್ಞಾನ
ಧರ್ಮವರಿಯಲು ಮುಕ್ತಿಪಥಕೆ ಸೋಪಾನ
ಮರ್ಮವರಿಯದೆ ವಿಷಯ ಕಾನನದಿ ಚರಿಸುವ
ನರರಿಗೆ…. ಶ್ರೀವರನೊ ೨
ವನರುಹಭವಾಂಡದೊಳು ಕುನರ ಸಸಿಗಳು ಬೆಳೆದು
ಸುನರ ಕಮಲವು ತೋರದಂತೆ ಮುಸುಕೆ
ವನಜದಂದವ ತೋರೆ ನರಸಿಂಹವಿಠಲಾಖ್ಯ
ಮುನಿದು ಸದೆ ಬಡೆÉದಗದವೋ ಶ್ರೀ ಮುದವೊ ೩

ಭಕ್ತರ ಹೃದಯದಲ್ಲಿ ಬಂದು ನೆಲೆಸುತ್ತಾನೆ
೧೨೭
ಏಸು ಪರಿ ನೆಲಸಿದೀ ಏ ಸ್ವಾಮಿ
ಏಸು ಪರಿ ನೆಲಸೀದಿ ಏಸುಪರಿ ನೆಲಸೀದಿ
ದಾಸಜನ ಹೃದಯದಿ ಭೂಸ್ವರ್ಗ ಪಾತಾಳ
ಬ್ಯಾಸರ ಮಾಡಿದಿ ಪ
ಎಸೆವ ಚಂಚಲ ಶಿರಿಯು ತವರ್ಕಣ್
ಮಸಕು ಮಾಡಿದಳೇನೋ
ಬಿಸಜಸಂಭವ ವೇದಪಠಣದಿ
ಕುಶಲ ನುಡಿಯನೇನೋ
ಅಸ್ವಧಿಪ ಪ್ರಾಣ ಸೊಸಿಯ ವಾಣಿಯು
ಸ್ವಸುತೆ ಭಾರತೀ ಉಸುರಿಬಿಟ್ಟಳೇನೋ ೧
ಮುಪ್ಪೊಳಲುರಿಗಾನು ಪೌತ್ರನು ವೊಪ್ಪುವ ಮೈಗಣ್ಣಾ
ತಪ್ಪದೆ ಸೇವಿಸುವ ಸುಮನಸರಪ್ಪಣಿತ್ತರೇನೋ
ತಪ್ಪದಾಸರನ ಮುಗಿಪ್ಪ ಗರುಡ ಶೇಷ-
ರೊಪ್ಪಿಗಿಯಿಲ್ಲದೆ ತಪ್ಪಿಸ್ಯೋಡಿ ಬಂದ್ಯಾ ೨
ಸುರಲೋಕವಾಸಾವು ಶ್ರೀಹರೆ ಪರಮಸೌಖ್ಯವಲ್ಲೆ
ಸುರತರುಧೇನುಗಳು ನಿನಗೆ ತಾವ್ ಕೊರತೆ ಮಾಡಿದವೇನೋ
ಸುರಮುನಿಗಂಧರ್ವರ ಗಾಯನ ಬಿಟ್ಟು
ಸರಸವೇನು ಕಂಡಿ ನರಸಿಂಹವಿಠಲ೩

೧೭೧
ಏಸುಪರಿ ಈಸಬೇಕೋ ಶ್ರೀಶದಾಸನೇ
ಮತ್ತೂರೇಶ ಭವಸಾಗರದಿ ಏಸುಪರಿ ಈಸಬೇಕೋ ಪ
ಕೂಸಿನಂಕದಿ ಬಾವು ಘಾಸಿಸುವ ಜ್ವರತಾಪನೋಸರಿಸಲೇಶ
ಸಮಯದಿಯೊದಗಲು ಲೇಶವಾದರು ಮಗುವಿನಾಸೆ ಇರದಿರೆ
ಪ್ರಾಣೇಶನೇ ಗತಿಯೆನಲು ಲೇಸುಮಾಡಿದೆ ಸ್ವಾಮಿ೧
ದಿನಸುಃಖ ಕ್ಷಣದುಃಖ ಅನುದಿನವೂ ದುಃಖ
ಎನಿತೆಂದು ಹೇಳಲ್ಯ ನಿನಗೆ
ಮನದಳಲು ನೀಗಲಸದಳವಾಗಿ ಬಳಲುವೆನು
ತನುವಿನೀ ಸಂಕಟವ ತೊಲಗಿಸೈ ಜವದಿ ೨
ಅರಗಳಿಗೆ ನಿನ್ನ ನೆನೆದರೆ ದುರಿತ ದೂರಪುದು
ಭರದಿ ಎನ್ನೊಡೆಯ ಶ್ರೀರಾಮ ಪೊರೆವಾ
ಉರಿವ ಭವ ಕಿಚ್ಚಿನಿಂದುದ್ಧರಿಸಿ ಎನ್ನನು
ನರಸಿಂಹವಿಠ್ಠಲನ ನೆನೆಯೆ ಜಿಹ್ವೆಗನಿಸೊ ೩

ಶ್ರೀ ಸತ್ಯಪರಾಯಣರು ಉತ್ತರಾದಿಮಠದ
೧೨೮
ಒಂದಾನೊಂದು ದಿನ ನಂದ ಯಶೋದೆಯು
ಕಂದನ ಪ್ರೀತಿಂದಾಡಿಸಲು
ಅಂದುಗೆ ಅರಳೆಲೆ ಬಿಂದಿಗೆ ಮಾಗಾಯಿ
ಚಂದದಿ ಮಗನನ ಮಾತಾಡಿಸಲು ೧
ಉಂಗುರ ಉಡಿದಾರ ರಂಗು ಮಾಣಿಕವು ನೀ-
ಲಾಂಗಗೆ ಎತ್ತಿ ಆಲಿಂಗನೆ ಮೋಹದಲಿ
ರಂಗನ ಎತ್ತಿ ಆಲಿಂಗನ ಮಾಡುತ್ತಾ
ಲಿಂಗನ ಸಹಿತ ಸಮೋಹದಲ್ಲಿ ೨
ಅಂಗನೆ ಗೋಪಿಯು ನರಸಿಂಗವಿಠಲಗೆ
ಮಂಗಳ ವಾಕ್ಯವು ಮೋಹರಿಸಿ
ರಂಗಕುರಂಗ ಚಾತಕ
ಸಂಗದಿ ಪಕ್ಷಿಗಳ ಕರೆಸಿ ೩

೨೨೮
ಒಂದೆ ಮಾತನು ಕೇಳು ಒಂದೆ ನುಡಿಯ ಕೇಳು
ಒಂದಿಪೆ ನಿನ್ನ ನಾನಿಂದು ಮಂದರಧರ
ಚಂದದಿ ನೀತೆನಗಿಷ್ಟವರಾ ಪ
ದುರಿತ ತನ್ಮಯವಾಗಿ ಇರುತಿರ್ಪ ಭವದೊಳು
ಪರಿಪರಿ ಕಂಟಕ ಹೋರಿ ಹೋರಿಯು
ಹರಿನಾಮ ಮಂತ್ರವ ಮರೆಯದೆ ಜಪಿಸಲು
ಉರಿದರ ತಕ್ಷಣದೊಳು ಗಮಿಸುವವು ೧
ವ್ಯಾಧನೊರ್ವನು ಭವ ಬಾಧೆಗೆ ಶಿಲ್ಕಿ ತಾ
ಶೋಧಿಸುತಿರೆ ನರ ಬಾದ್ಯವನು
ಆದಿಮುನಿಯು ರಾಮ ಬೋಧನೆ ಪೇಳಲು
ಬೂದಿಗೈದವಘರಾಶಿಗಳು ೨
ಸುರಗಣನಾಯಕ ನರಸಿಂಹವಿಠಲ ಪೊಗಲಳವೆ ನಿನ್ನ
ವರಲೀಲೆಯು ಮರೆಯದೆ ಪಿಡಿದಿಹೆ ನಿನ್ನಂಘ್ರಿಕಮಲವ
ನಿರುತದಿ ನೀಡೋ ನೀ ಸೇವೆಯನು೩

೧೨೯
ಒಂದೇ ಕರದೊಳು ಅಮ್ಮಯ್ಯಾ ನಿನಗುಣ್ಣಿಸುವೆನು ಕೇಳಮ್ಮಯ್ಯಾ ಪ
ಮಧುರ ಸುಧಾಘಟವಮ್ಮಯ್ಯಾ ಉದಭವಿಸೆ
ಜಲಧಿಯೊಳಮ್ಮಯ್ಯಾ
ಮಧುವೈರಿ ಜಲಧಿಯೊಳಮ್ಮಯ್ಯಾ ಮುದಬಿಂದು
ಉದುರಲು ಅಮ್ಮಯ್ಯಾ
ಸದಮಲ ತುಲಸಿ ನೀನಮ್ಮಯ್ಯಾ
ಉದಭಿಜಡರುಹುಗೊಂಡಮ್ಮಯ್ಯಾ ೧
ಶಿರಿಕೃಷ್ಣ ಮೆಚ್ಚಿದನಮ್ಮಯ್ಯಾ ಶಿರದೆಡೆಯೊಳಾಂತನು ಅಮ್ಮಯ್ಯ
ವರಗಳನಿತ್ತನು ಅಮ್ಮಯ್ಯ ಹರಿಯರ್ಚನೆಗಧಿಕಳು ಅಮ್ಮಯ್ಯ ೨
ಮಿಸುಪ ವ್ಯಕ್ತಿಯು ಅಮ್ಮಯ್ಯ ನೊಸಲೆಡೆವ ಭೂಷಣವಮ್ಮಯ್ಯ
ಅಸುಬಿಕ್ಷಣಾಳ್ಗಳು ಅಮ್ಮಯ್ಯ ಮಿಸುಕದೆಲೆ ಪೋಪರು ಅಮ್ಮಯ್ಯ ೩
ಮಂಗಳಬಲೆಯರು ಅಮ್ಮಯ್ಯ ಗಂಗಾಜಲವೆರೆಯಲು ಅಮ್ಮಯ್ಯ
ಲಿಂಗಪೂಜಿಸಲು ಅಮ್ಮಯ್ಯ ಇಂಗಿತದ ವರಗಳೀವೆಮ್ಮಯ್ಯ ೪
ನರಸಿಂಹವಿಠ್ಠಲ ನಮ್ಮಯ ಸರಿ ನೀನೆ ಬತ್ತಳೆಂದಮ್ಮಯ್ಯಾ
ಪರಿಪರಿಭಕ್ಷಗಳಮ್ಮಯ್ಯ ಆರಂಭಿಸುವೆ ಪರಾಕು ನೀನಮ್ಮಯ್ಯ ೫

೨೨೯
ಕಂಡ ಕಂಡದ್ದು ಅದು ಔಷಧವಲ್ಲವೋ
ಗಿಂಡಿ ಗಿಂಡೀದು ಅದು ತೀರ್ಥವಲ್ಲವೋ ಪ
ಮೂರು ವರ್ಗಂಗಳಿಗೆ ಆರು ವೈರಿಗಳು
ತೋರುತ್ತಿರುವರೆಂತೋ ಬೇರೆಯಾಗಿ ೧
ಈ ರೀತಿಯಿಲ್ಲದೆ ಬೇರೊಂದು ತಿಳಿವರೆ
ಮೂರು ವಿಧ ಬೇವರಿಗಾರು ಫಲಪ್ರದರು ೨
ಮಾರಜನಕ ಹರಿ ಪಾರ್ವತೀಧವರಿವರು
ಬೇರೆ ಎಂಬರಿತೆವೊ ಬಾರದೆ ಸರಿಯಾಗಿ ೩
ಇಳೆಯ ಮೇಲಿರುತಿಹ ಜಲಾಶಯಗಳು
ಬಳಿಕೆಗೋಸುಗ ತಾವಿಳದಿಹವಲ್ಲದೆ ೪
ನಳಿನನಾಭನ ಪೂಜಾಗಳಿಗೆ ಬಾಂಬೊಳೆಯ
ಮೈಲೆನಿಪದಲ್ಲದೆ ಮಿಕ್ಕಿಸಲು ಉಂಟೆ ೫
ಚಿತ್ತಶುದ್ಧಿಯನೈದಿ ಉತ್ತಮ ಜಲದಿ ಮಿಂದು
ಚಿತ್ತಜ್ಹನೈಯನ ಮಜ್ಜನಗೈಯಲು
ಹತ್ತಾವತಾರನ ಮತ್ತೆ ಪೂಜೆಯ ಗೈದು
ಉತ್ತಮ ಪದ ಸೇವಿಪುದೇ ತೀರ್ಥಾ ೬
ಶಿರಿವರ ಪದಜಲ ವರ ತುಲಸೀದಲ
ಬೆರೆÀಸಿ ಪಾವÀನ ಗೈಯೆ ಇರುವುದೆ ರೋಗವು
ಉರಗಶಯನ ಶ್ರೀ ನರಸಿಂಹ ವಿಠಲನು
ಪರಮ ವೈದ್ಯನು ತನ್ನ ಶರಣರಿಗೇ ೭

೧೭೨
ಕಂಡೆನು ಗುರುರಾಯಾ ನಿನ್ನುದ್ದಂಡ ಪರಾಕ್ರಮವಾ
ಕಂಡೆನಾ ಮನಗಾಡೆ ಪಾಂಡುಪಕ್ಷನ ಭೃತ್ಯ
ಮಂಡೆ ಬೋಳಾಗಿಮಾಡಿ ಹಿಂಡು ಖಂಡಿಸಿದ್ಯೋ ಪ
ರಾಮನ ಸೇವೆಗೆಂದೂ ನೀನು ಕಾಮಿಸಿ ಜನಿಸಿದೆಯೋ
ನೇಮದಿಂದಲಿ ಸುರಸ್ತೋಮವ ನೀಗಿ
ಭೂಮಿಜೆಯ ತಂದು ರಾಮನಿಗೊಪ್ಪಿಸಿದ್ಯೋ ೧
ಗೋವಳ ಭೃತ್ಯನಾಗಿ ನೀನು ಅವರಲ್ಲಿ ಪುಟ್ಟಿದ್ಯೋ
ಸಾವಿನ ಬಾಯಿಗೆ ಕುರುವಿಂಡು ಕಟ್ಟಿ ನೀ
ಭೂವನಿತೆಯ ಭಾರ ಪೋಗಲಾಡಿಸಿದ್ಯೋ ೨
ಹರಿಮತ ಏರುವುದಕೆ ನೀನೆ ಸರಿ
ಗುರುಮಧ್ವನೆನಿಸಿದೆಯೋ
ಸರಿಯಾಗಿ ಖಂಡಿಸಿ ಏಕವಿಂಶತಿ ಮತ
ನರಸಿಂಹ ವಿಠಲನ ದಾಸನೆನಿಸಿದ್ಯೋ ೩
ಗಂಧದ ಮರವೇನು ಗಂಧದ ಮರವೇ

ಯಶೋದೆ ಕಂದ ಕೃಷ್ಣನನ್ನು ಮಲಗಿಸುವ
೧೩೦
ಕಂದ ಕೃಷ್ಣ ನೀನು ಪವಡಿಸಲೆಂದು ನಾ-
ನೊಂದು ಕಥೆಯ ಪೇಳ್ವೆನೋ
ನಂದನನೇ ಒಂದು ಕಥೆಯ ಪೇಳ್ವೆನು ಪ
ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ
ಕಂದ ಕೌಸಲ್ಯಗಾದ
ಮುಂದೆ ಪೇಳು ಹುಂಕಾರದಿ ಕೇಳಿದೆ
ಚಂದವಾದೀ ಕಥೆಯ ಸುಧೇಯ ೧
ಆತನ ಪತ್ನಿ ಸುಶೀಲೆ ಸೀತೆಯೆಂದು
ಖ್ಯಾತಳಾದಳು ಜಗದಿ
ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು
ಸೀತಾರಾಮರ ಕಥೆಯು ಸುಶ್ರಾವ್ಯ ೨
ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು
ಕೊಂಚ ಮಾತ್ರ ಹುಂಕಾರವ ನುಡಿ ವಿ-
ರಿಂಚಿ ಪಿತನು ಮುನಿದಾ ಸದ್ದಾದ೩
ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ-
ನೆತ್ತಿ ಕೊಂಡೋದನಯ್ಯ
ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ
ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ ೪
ಪುಟ್ಟ ಕೂಸ ಆರ್ಭಟವೆಷ್ಟು ಮಾಡುವೆ
ನಿಟ್ಟಿಪುದಸದಳವು
ಥಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ
ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ ೫

೨೩೦
ಕತ್ತೆಲ್ಲ ಕಳೆದ್ಹೋತ್ಯು ಜತ್ತೆಲ್ಲ ಬಿದ್ಹೋತ್ಯು
ಬತ್ತಲೆ ಬತ್ತಲೆ ಮನುಜ ಬತ್ತಲೆ ಬತ್ತಲೆ ಪ
ಹಣವು ಎನಗಿಲ್ಲಾ ಗುಣವು ಎನಗಿಲ್ಲ ಬತ್ತಲೆ ಬತ್ತಲೆ
ಮನುಜ ಬತ್ತಲೆ ಬತ್ತಲೆ
ನೋಡುವರೆನಗಿಲ್ಲಾ ಮಾಡುವರೆನಗಿಲ್ಲಾ ಬತ್ತಲೆ
ಬತ್ತಲೆ ಮನುಜ ಬತ್ತಲೆ ಬತ್ತಲೆ
ಕನಸೋ ಕನಸೆಲ್ಲಾ ಉಣಿಸೋ ಉಣಿಸೆಲ್ಲಾ ಬತ್ತಲೆ
ಬತ್ತಲೆ ಮನುಜ ಬತ್ತಲೆ ಬತ್ತಲೆ
ಮಾಯಾ ಮಾಯವೆಲ್ಲಾ ಪ್ರೀಯಾ ಪ್ರೀಯಾವೆಲ್ಲಾ
ಬತ್ತಲೆ ಬತ್ತಲೆ ಮನುಜ ಬತ್ತಲೆ ಬತ್ತಲೆ
ಮಕ್ಕಳು ಮಕ್ಕಳು ವಕ್ಕಲು ಒಕ್ಕಲು ಬತ್ತಲೆ ಬತ್ತಲೆ
ಮನುಜ ಬತ್ತಲೆ ಬತ್ತಲೆ
ಇದ್ದದ್ದು ಹೋಯಿತು ಬಿದ್ದದ್ದು ನೀಗಿತು ಬತ್ತಲೆ
ಬತ್ತಲೆ ಮನುಜ ಬತ್ತಲೆ ಬತ್ತಲೆ
ನರಸಿಂಹವಿಠಲನ ಕರುಣವೆ ಸ್ಥಿರವೆಲ್ಲಾ ಬತ್ತಲೆ ಬತ್ತಲೆ
ಮನುಜ ಬತ್ತಲೆ ಬತ್ತಲೆ

ಮಂದಗೆ ಎಂದರೆ ಮಂದನಾದವಗೆ
೧೫೪
ಕದವ ತೆಗೆಯಲ್ಹ್ಯಾಂಗ ಮಧ್ಯರಾತ್ರಿಯಲಿ
ಚದುರ ನಿನ್ನ ಗುರ್ತು ಪೇಳು ಮೊದಲಿನಲಿ ಪ
ನೀರ ಪೊಕ್ಕು ವೇದವನ್ನು ತಂದಿಹೇನೇ
ಭಾರವನ್ನು ಬೆನ್ನಿನಲ್ಲಿ ಪೊತ್ತಿಹೇನೇ
ಕೋರೆಯ ಮ್ಯಾಲಿಳೆಯನ್ನಿಟ್ಟಿಹೇನೇ
ಕೋರೆದಾಡಿಯಿಂದ ದನುಜನಳ್ದಿಹೇನೇ ೧
ದಾನಬೇಡಿ ಬಲಿಯನ್ನೊತ್ತಿಹೇನೇ
ಮಾನ್ಯವೆಂದು ತಾಯಶಿರ ಛೇದಿಸಿಹೇನೇ
ದಾನವನ ಪತ್ತುತಲೆಯರದಿಹೇನೇ
ದಾನಮಾಡಿ ದೇಹವನ್ನು ಮೆರದಿಹೇನೇ ೨
ಬತ್ತಲ್ಯಾಗೆ ಬೌದ್ಧನೆನಿಸುವೇನೇ
ಕುದುರೆಯಾಗಿ ಧಕ ಧಕ ಕುಣಿಸುವೇನೇ
ಅಧರಪಾನವನ್ನು ನಾ ಬಯಸಿಹೇನೇ
ಚದುರ ನರಸಿಂಹವಿಠಲನೆನಿಸುವೇನೇ ೩

೧೫೫
ಕರಿರಾಜ ವರದ ಗುರುರಾಜ ವರದ ಸುರಾಜ
ನಿನ್ನ ನಾಮ ಕೇಳು ಪೇಳುವೆ ಗುಣಮಿತಿ ಮೀರಿ ದನುಜರ ವೈರಿ
ಗುಣಿಜ£ಕಾಧಾರಿ ನಿನ್ನ ನಾಮ ಕೇಳು ಪೇಳುವೆ ಪ
ಶಣಸೀದ ಸೋಮ ಕನ್ನರಿದಿ ಮೀನನಾಗಿ ವೇದವಾ ತಂದಿ
ಗುಣತಪ್ಪಿದ ಚಲವನು ಬಿಡದೆ ಮುಣಿಗ್ಯೊಳಗೆ ಕೂರ್ಮನಾಪಿಡಿದಿ
ನೊಣಶಣತಾಕ್ಷನ ಬಿಡದಳಿದಿ ಗುಣಿವರಹನಾ ಗಿಳಿಯ ತಂದಿ
ಒಣ ಹೆಮ್ಮೆಲೆ ಮೆರೆವ ಹಿರಣ್ಯಕನನೆ ಶೀಳಿ ಅಣು
ಪ್ರಲ್ಹಾದನ ಪೊರೀದಿ ೧
ವಟುರೂಪಿಲಿ ಬಲಯನು ತುಳಿದಿ ನಟಿಸುವ ವಾಮನನಾದಿ
ಕಟಹಾರದಿ ಕ್ಷತ್ರಿಯರಳಿದಿ ಹಟದಿಂದ ಪರಶುರಾಮಾದಿ
ಭಟ ರಾವಣನಸುವಾನಳಿದಿ ದಿಟರಾಮನೆಂದು ಪೆಸರಾದಿ
ಜಟಿಯ ಪಿಡಿದು ಭೂತಹಟಕೆ ಘಟ್ಟಿಸಿ ಕೃಷ್ಣನೆನಿಸಿದಿ ೨
ಯುವತೀಯರ ವ್ರತವನ್ನಳಿದಿ ಭುವನದಿ ಬೌದ್ಧನಾಗಿ ನಿಂದಿ
ದಿವ್ಯ ಹಯವನೇರಿ ನೀ ಬಂದಿ ಭುವಿ ದುಷ್ಟರಾಂತಕ ಕಲ್ಕ್ಯನೀಡಿ
ತವ ಶರಣರ ಪೊರೆಯುವ ನೆವದಿ ವಿಧವಿಧ ರೂಪ ನೀ ತಾಳ್ದಿ
ತವ ಶರಣ ನಾನು ಶ್ರೀ ನರಸಿಂಹವಿಠ್ಠಲ
ಭವದಿಂದೆನ್ನನು ಉದ್ಧರಿಸೊ ೩

೨೩೧
ಕರ್ಮವೆ ನಿತ್ಯನಿರ್ಮಲ ಮೂರುತಿ ಇರುವನು ಎಲ್ಲೆ
ಧರ್ಮವರೀದೆ ಕರ್ಮ ಮಾಡಲು ಬರುವನವೆಲ್ಲೆ ಪ
ಹೆಣ್ಣು ಹೊನ್ನು ಮಣ್ಣು ಘಳಿಪುದಲ್ಲದೆ ಕರ್ಮ
ಕಣ್ಣು ಕರ್ಣ ಜಿಹ್ವೆಂಗಳು ಮಾಳ್ಪವು ಕರ್ಮ
ಉಣ್ಣುವುದುಡುವುದಲ್ಲದೆ ಪ್ರತಿನಿತ್ಯದ ಕರ್ಮ
ಅಣ್ಣನ್ಯಾರು ಸಂಪ್ರೀರಕ ತಿಳಿಯಲು ಧರ್ಮ ೧
ದೇಹ ತೊಳೆದಲಂಕಿರುಪುದು ಕರ್ಮ ವಲ್ಲವೆ
ಮೋಹಿಪ ಹೆಂಡತಿಯ ರಕ್ಷಣ ಕರ್ಮವಲ್ಲವೆ
ದೇಹ ಜಾತರನ್ನೋದುವುದು ತಮವಲ್ಲವೆ
ಊಹಿಸಿ ಹರಿಸೇವೆ ಇದೇ ಧರ್ಮವಲ್ಲವೇ ೨
ಅಂಗಕೆ ಶಿರಿಗಂಧಲೇಪನ ಕರ್ಮ ತಿಳಿಂಇÀಇಲಾ
ಸಂಗ ನಿಜಾರ್ಧಾಂಗಿಯೊಡನೆ ಕರ್ಮವರಿಯಲಾ
ಮಂಗಳ ವಾದ್ಯಗಳ ಶ್ರವಣ ಕರ್ಮವಹುದಲಾ
ರಂಗಗರ್ಪಣವೆನ್ನೊಲಿವ ನರಸಿಂಹವಿಠ್ಠಲಾ ೩

೨೩೨
ಕಾವವನೆ ಕರ್ಮಜಯ ಬಳಿಕಂ
ಸಾವವನೆ ಉಣ್ಣುವರು ಜನರು
ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ
ದಾಸವೃಂದವು ತೋಷದಿಂದಲೆ
ಪೂಶರಯ್ಯನ ವಿಡಿದು ಘನ ಸಂ-
ತೋಷ ಬಡುತಿಹರೇ ಸುಜನ್ಮದ ಸುಕೃತ ಫಲವಿಹುದೋ
ಶ್ರೀಶನಲಿ ನಿಜದಾಸ ಭಕುತಿಯ
ಮೀಸಲಿರಿಸೀ ಮನವ ಮೋಹದೆ
ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು ೧
ಮೃಗಜಲಕೆ ನೀರೆಂದು ಭಾವಿಸಿ
ಪೊಗಲೆಳಿಸುವೆರಳೆಗಳ ಪರಿಯಲಿ
ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು
ಮಿಗಿಲಾಗಿದ ವಿಷಯಲನಲದಿ
ಧಗಧಗಿಸಿ ಜನಗಳು ಪೋಪರಲ್ಲದೆ
ಖಗಪತೀ ವಾಹನನ ನೆನೆಯರು ಜಗವ ಪಾವನನು ೨
ನೀರಜಾಸನ ಪಿತನೆ ಅಕ್ಷಯ
ಶ್ರೀ ರಮಾವಲ್ಲಭನೆ ತವ ಪರಿ
ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು
ಸಾರಸುಮತಿಯನಿತ್ತೆಮಗೆ ಹರೆ
ಸೇರಿಸೆಮ್ಮನು ನಿನ್ನ ಅಡಿಯಲಿ
ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು ೩

೧೩೧
ಕೃಷ್ಣರಾಯ ತಾ ಬಂದಾ ಕೃಷ್ಣರಾಯ ತಾ ಬಂದಾ
ಗೋಕುಲದಿಂದಾ ಬಿಡಿಸ್ಯಾನು ಬಂಧಾ ಪ
ಶಂಖ ಚಕ್ರ ದೋರ್ದಂಡ ಶಂಖ ಚಕ್ರದೋರ್ದಂಡ
ಕೋಟಿ ಮಾರ್ತಾಂಡ ಕಾಂತಿ ಉದ್ದಂಡ ಶಕ್ತಿ
ಖಲಕಂಡ ಕೃಷ್ಣರಾಯಾ ೧
ಆನಂದ ಗುಣಪರಿಪೂರ್ಣ ಆನಂದ ಗುಣಪರಿಪೂರ್ಣ
ವಪ್ಪುವಾಭರಣ ಲಿಂಗಸಂಪೂರ್ಣ ಭಕ್ತಜನ ಕರುಣಾ ಕೃಷ್ಣರಾಯಾ ೨
ಶರಣಜನ ಪರಿಪಾಲಾ ಶರಣಜನ ಪರಿಪಾಲಾ
ಗಾನವಿಲೋಲ ಭಕ್ತವತ್ಸಲ ನರಸಿಂಹವಿಠಲ ಕೃಷ್ಣರಾಯಾ ೩

ದಶಾವತಾರದ ಮೇಲಿನ ಹಾಡುಗಳೇ
೧೫೬
ಕೋಳಿ ಕೂಗಿತು ತಂಪು ಗಾಳಿ ಬೀಸಿತು
ಏಳಯ್ಯಾ ಬೆಳಗಾಯಿತು ಪ
ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು
ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ
ಕಾರ್ತವೀರ್ಯನ ಪೊಡೆದು ಹೋರಿ ರಾವಣ
ಕಂಸ ದಾನವರನಳಿದು
ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು
ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ೧
ವೇದವನು ತಂದೆ ಸುರವೃಂದಕಮೃತವನಿತ್ತೆ
ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ
ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ
ಮೋದದಿಂದಜಪದವಿಯ ಆಂಜನೇಯಗಿತ್ತೆ
ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ
ವೇದನುತ ನಿರ್ವಸನ ಸುಹಯಾರೂಢನೇ೨
ಶರಣಜನ ಬಂದು ಸುಸ್ವರದಿಂದ ಪಾಡುತಿರೆ
ತರವೆ ಶ್ರೀಹರಿಯೆ ಈ ಪರಿ ಕಣ್ಣಮುಚ್ಚುವುದೇ
ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ
ಉರಿಮೋರೆಯಿಂದ ತರಳಾಟ ಆಡುವುದೇ
ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ
ಭರದಿ ತುರಗವನೇರು ನರಸಿಂಹ ವಿಠ್ಠಲಾ ೩

೧೮೯
ಕ್ಲೇಶಂಗಳನೆಲ್ಲಾ ನೀಗಿ ಭಾಸಿಪರು ಸದ್ವಿಪ್ರರು
ದಾಸರಾದವರೆಲ್ಲರು ವ್ಯಾಸರಾಯರನ್ನ ಪಾಡಿ ಪ
ಡಿಂಭ ಪ್ರಲ್ಹಾದನೆನಿಸಿ ಕಂಭ ಜಾತನ ಆಯಾ ಪಿಡಿದಾ
ಡಂಭದಯ್ಯನ ಸುವಾನರಸಿ ಕಂಭಣಿಯೊಳ್ ಖ್ಯಾತನಾದಾ ೧
ಯತಿವರ ವ್ಯಾಸನೆನಿಸಿ ಕ್ಷಿತಿಪತಿ ಕೃಷ್ಣನ ಪಿಡಿದಾ
ಚ್ಯುತಿಗಳೆಲ್ಲವನಳಿಸಿ ಶೃತಿ ಸ್ರ‍ಮತಿ ಸ್ವಾದವ ಪೇಳ್ದಾ ೨
ಗುರು ರಾಘವೇಂದ್ರನೆನಿಸಿ ನರಹರಿ ಪೂಜೆಯ ಗೈದಾ
ದುರಿತಕಾನನ ದುರಿತಾನೆನಿಸಿ ನರಸಿಂಹವಿಠಲನ ನೆನೆದಾ ೩

೧೨೦
ಗಣೇಶಸ್ತುತಿ
ಗಣಪತಿ ಎನದೋಷ ಬಿಡಿಸುವುದೊ ಶ್ರೀ-
ಶಾನತಿ ದಾಸಾ ವೆಂಕಟೇಶವಿಠಲನಾ ಪ
ದ್ವಿಪತುಂಡ ಅಪರಾಧ ಎಣಿಸಾದಿರೋ
ಪಾಪಾ ಚತುರೀಪಾ ಗಂಗಾಪಾ ಸಜ್ಜನರ ೧
ಇಭಮುಖ ಅಭಯವನೀಯುವುದೋ
ಕಾಯಾಚಿತ ಮಾಯಮಾಡಯ್ಯ ಪಾಮರಸ ೨
ವರಜೇಶಾ ಶಿರಿಮೊಗ ತೋರುವದೊ
ಜಿರಹಾಕೃತ ಸ್ನೇಹಾ ನರಸಿಂಹವಿಠ್ಠಲನಾ ೩

೨೩೩
ಗರ್ವವು ಸುಜನವ್ರಾತದಲಿ ಸರ್ವವು ನನಗೆ ನಮ್ಮಪ್ಪಗಿಹಲಿ ಪ
ಕಾಸುಕಾಸಿನಿಂದ ಹಣ ಹೊನ್ನಹುದು
ದೇಶ ದೇಶದಿಂದ ರಾಜ್ಯವಾಗುವದು ೧
ಕ್ಲೇಶ ಕ್ಲೇಶದಿಂದ ಹಾಸನಾಗುವುದು
ದಾಸದಾಸರಿಂದ ಮುಕ್ತಿಮಾರ್ಗಹುದು೨
ಸಾರಾಸಾರದಿಂದ ತತ್ವವಾಗುವದು
ಧೀರ ನರಸಿಂಹವಿಠಲನರಿಯುವದು ೩

೨೦೨
ಗೀರ್ವಾಣಗೆ ಚಿಂತೆಯ ಬಿಡಿಸಲಿ ಎಂದು
ಚಿಂತಿಪೆನೊಂದೊಂದು
ತಂತ್ರಗಳನು ತದನಂತ ಧ್ಯಾನದಿಂ ಕಂತುಪಿತಗೆ
ನಾನಿಂತು ಬೇಡುವೆನು ಪ
ನರಜನ್ಮಕೆ ಬರುವುದು ತಾ ದುರ್ಲಭವು
ವರಕುಲ ದುರ್ಮಿಳವು ದೊರೆವುದೆ ಭಾಗ್ಯವು
ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ
ಗುರುವರಪೂಜ್ಯ ಪರಾತ್ಮನ ಪೂಜಿಪೆ ೧
ನಿಜರೂಪ ತೋರಿದಿ ಪ್ರಲ್ಹಾದನಿಗೆ
ಗಜವರನೆನಹೀಗೆ
ವಿಜಯನ ರಾಣಿಗೆ ದ್ರುಪದಾತ್ಮಜೆಗೆ
ಭಜಕರ ನಿಚಯಕ್ಕೆ
ಕುಜಪ್ರದ ಮೂರ್ತಿಗೆ
ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು ೨
ಗಂಗೋದಕದೊಳು ಮೀಯಲು ಪಾವನವು
ಮಂಗಲ ತುಲನೇಯು
ಸಿಂಗಾರದೊಳಧಿಕಾಚ್ಯುತ ಭೂಷಣೆಯು
ನಿನ್ನಾದೇ ವರವು
ಬಂಧುರದೇಹವ ತಾಳಿದೆನಗೆ ನೀ
ಸಂಗಸುಖವನೀಯೋ ನರಸಿಂಹವಿಠಲ೩

೧೭೪
ಗುರುಮಧ್ವಮುನಿರಾಯಾ ಎನಗೊಂಬೊದಗಿದಾನು ಸಹಾಯ ಪ
ಕತ್ತಲೆ ಕವಿದಿತ್ತು ಸುತ್ತಲೆ ಕಾಣದಂತೆ ಇತ್ತು
ಬತ್ತಲೆಯಾಗಿತ್ತು ಕತ್ತಲೆ ಬಟ್ಟೆ ದೃಶ್ಯವಿತ್ತು
ಮತ್ತುರೆ ಭವತಮ ಸುತ್ತಲೆ ಮುಸುಕಿರೆ
ಉತ್ತಮಾನಂದತೀರ್ಥ ಬಿಡು ಉದಯಸಿದಾ ೧
ಹರಿಬೀಜಾವರಿ ಅಲ್ಲಾ ಧರೆಯೊಳು ಸದ್ಗತಿ ದೊರಿಲಿಲ್ಲಾ
ಗುರುವೇ ಇರಲಿಲ್ಲಾ ಧರೆಯೊಳು ಹರಿಯನಾವ ಬಲ್ಲ
ಸುರರೊಳು ಸುರತರುವರ ವಾಡ ಸೂನು
ಧರೆಯೊಳವತರಿಸಿ ಹರಿಪಥ ತೋರಿದಾ ೨
ಎಲ್ಲ ರೋಗಕೆ ಮದ್ದು ಸಲ್ಲುವದಿವರ ನಾಮ ಮುದ್ದು
ಹುಲ್ಲಜನರ ಸದ್ದು ನಿಲ್ಲದೆ ಪೋದಿ ತಡವಿ ಬಿದ್ದು
ಬಲ್ಲಿದ ನರಸಿಂಹ ವಿಠಲನ ನೆನೆಯಲು
ಎಲ್ಲ ಕಾಮಿತಫಲ ನಿಜವೆಂದರುಹದಾ ೭

೧೨೧
ಗುರುವರ ಅಮೃತ ಗಜಾನನ ಯನ್ನಾಲಯದಿ ತಗದಾ ಆನನಾ ಪ
ತನುಜನ ತನ್ವೀ ತನುವಿನ ಘನತರ ಬಾಧೆಯು
ಅನುದಿನಾದವರಾ ತೊಳಲಿಸೆ ಅನಷ್ಟೇಕದಂತ
ತನು ರಕ್ಷಿಸಿ ತನ್ನ ಜನರೆಂದೆಣಿಸೆಮ್ಮ ಮನದಿ ನೆಲಸೀದಾ ೧
ಸಂತತಾನಂತ ಚೀಂತೆಯು ಅಂತರ ದುಗುಡವು
ಎಂತು ಕಂಗೆಡಿಸಿ ನೋಳ್ಪವು ಸುತಗಜಾನನ
ಸಂತ ಮಹಿಮ ಎನ್ನಂತ ತಿಳಿದು ತಾ ಚಿಂತೆಯ ತವಿಸಿದಾ ೨
ಶಿರಿಯನ್ನಾ ಗುರುತಾವರಿಯಳು ಮೆರದಿ ಹರನು ಬಂದು
ನಿರುತ ನಿನ್ನನಾ ಸ್ತುತಿಪೆನು ಪರಿಪರಿನುತಿಪುದ
ನರಿತು ಗಜಮುಖನು ನರಸೀಂಹವಿಠ್ಠಲಗೆರಗಿ ಹರಸೀದಾ ೩

೧೩೨
ಗೋಕುಲ ಬಿಟ್ಹ್ಯಾಂಗಿಲ್ಲಿಗೆ ಬಂದೆ ಶಿರಿಕೃಷ್ಣ ರಂಗಾ
ವ್ಯಾಕುಲದಲಿ ನೀ ಸಾಗರ ತ್ಯಜಿಸಿ
ಜೋಕೆಯಿಂದಲಿ ನಿಜಧಾಮಕೆ ಬಂದೆ ಪ
ಬನ್ನವ ಪಡುತಿಹ ಭಕುತನ ನೋಡಿ ಚಿಂತೆಯ ಮಾಡಿ
ಎನ್ನಂತರಂಗದ ಬಾಧೆಗಳು ಕಾಡೆ ಬಳಲುವುದಾ ನೋಡೆ
ಮನ್ನಿಸಿ ಶರಣನ ಬಾಧಿಸುವ ಪೀಡೆ ಪರಿಹಾರ ಮಾಡೆ
ಪನ್ನಗ ಶಯನ ಶ್ರೀಹರಿಯೇ ಓಡೋಡಿ ಬಂದೆ ೧
ಪೊಕ್ಕಿಹೆನು ಸಂಸಾರಾರ್ಣವದೊಳಗೆ ಬಹು ದುಃಖದ ಅಲೆಗೆ
ಲೆಕ್ಕವಿಲ್ಲದಾ ಜಂತುಗಳದರೊಳಗೆ ಇಂಬಿಲ್ಲಾ ಅಲ್ಲಿಡಿಂಬಕೆ
ಸಿಕ್ಕಿ ಬಳಲುವಂಥ ಭಕುತನ ನೋಡಿ ಬಿಡುಗಡೆ ಮಾಡೆ
ಅಕ್ಕರದಿಂದಲಿ ಭರದಿ ಕಾಪಾಡಲು ಬಂದೆ ೨
ಶರಣರ ಪೊರೆಯುವುದೇ ನಿನ ಗುಟ್ಟು ಬಣ್ಣಿಸಲಿನ್ನೆಷ್ಟು
ಕರುಣಿಸಿ ಬರುವಿ ಶಿರಿಯನು ಬಿಟ್ಟು ಭಕುತರೆ ನಿನಕಟ್ಟು
ನಿರುಪಮ ನಿನ್ನಯ ದಯಕೇನೆನ್ನಲಿ
ಶರಣರ ಪೊರೆಯುವಿ ನರಸಿಂºವಿಒಲಾ ಬಂದೆ ೩

ಇದೊಂದು ವಿನೂತನ ಕಲ್ಪನೆಯ
೧೫೭
ಘನತರ ದೂರದೊಳು ಸಮಮತದೊಳು
ವನಜನಾಭನತಿ ಮನಸಿಜಾನ್ವಿತನಾದ
ವನಿತೆ ನೀ ದಾರೆಂದಾ ನಿನ್ನೊಳು
ಮನಸೋತೆ ಕೇಳೆಂದಾ ಪ
ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ
ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ ೧
ಕೂರ್ಮ ಕಠೋರದ ಹೆರಳು ಭಂಗಾರವು
ಕೂರ್ಮಾವತಾರದ ಮರ್ಮವ ತೋರುವಿ೨
ಸರಸ ಮೌಕ್ತಿಕದ ಮುರವು ನಾಸದೊಳು
ವರಹವತಾರದ ಕುರುಹು ತೋರುವಿ ೩
ಹರಿಯ ಹಿಡಿಯ ತಂತಿ ಭರದಿ ಬಳುಕುತೆ
ನರಸಿಂಹರೂಪದೆ ಸ್ಮರಣೆ ತೋರುವಿ ೪
ವಾಮನ ಬಾಲೆ ನೀ ಸಾಮಜೆ ಗಮನೆ
ವಾಮನ ರೂಪದ ಸೀಮಾ ತೋರುವಿ ೫
ತಾಮಸಗಿಡಗಳ ಕಾಮಿಸಿ ತವಿಸುವಿ
ರಾಮನ ಕಾಲದ ನೇಮವ ತೋರುವಿ ೬
ಸ್ಮರಶರದಂದದಿ ಕರದಿ ಕೇತಕಿ ಪುಷ್ಪ
ಪರಶುರಾಮನ ಅರುಹ ತೋರುವಿ ೭
ಎದೆಯೊಳಚಲಸ್ತನ ಮುದದಿ ಧರಿಸಿರುವೆ
ಮಾಧವ ತಾರದ ಸದವು ತೋರುವಿ ೮
ಅಂಗಜ ಬಾಣದಿಂದಂಗದ ಪರವಿಲ್ಲ
ಮಂಗಲ ಬೌದ್ಧನ ರಂಗವ ತೋರುವಿ ೯
ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ
ಘನಕಲ್ಕಿಯ ಪರಿ ವನಪು ತೋರುವಿ ೧೦
ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ
ನರಸಿಂಹವಿಠಲನರಸಿ ಬಂದಿರುವೇ ೧೧

೧೫೮
ಘೋರವಾರಾ ದುಃಖ ಪಾರಾವಾರಾವಿಲ್ಲ ಸಾಧುತಾ ಸಂಸಾರ ಪ
ನೀರ ಪೊಕ್ಕು ಬಾರಾ ಬೆನ್ನಿನಲಿ ಧರಾ
ಧಾರಿ ನರಹರಿ ಎನಿಸೆ ಅಸಾರ ಸಂಸಾರ
ಧಿಕ್ಕಾರವೆಂಬೇನೇ ಸುರಾರಿ ವೃಂದದ ಸಂಹಾರ ಕಾರಣ ೧
ದಾನಾ ಬೇಡಿ ಮಾತಾ ಹಾನಿ ಮಾಡಿ ಸೀತಾ
ಮಾನಿ ಮಾನಿನಿಯುಳಿಸೆ
ಭೂನಾಥ ಶ್ರೀಯುತ ಭವದಾತನೆಂಬೆನೆ
ದಾನವರಾಂತಕ ದೀನರಪಾಲಕ ೨
ಅರಿವೆಗ¼ಲ್ಲ್ಲಾ ಹರಿಯೇರಬಲ್ಲ
ನರಸಿಂಹವಿಠಲೆನಿಸಿ
ಅರಿವಲ್ಲ ಭವಗುಲ್ಲ ತಾಳಲ್ಲಿ ಎಂದೇನೆ
ಅರಿಭವಮಾರಕ
ಸುರಲೋಕದರ್ಶಕ ಸಾಧುತಾ ಸಂಸಾರ ೩

೨೦೩
ಚಿಂತೆ ಬಿಡಲಿಲ್ಲಾ ಎನ್ನಂತ ತಿಳಿಯಲಿಲ್ಲಾ
ಕಂತುಪಿತನ ಪಾದ ಕಾಣದೇ ವ್ಯರ್ಥ ಸತ್ತೆನಲ್ಲಾ ಪ
ನೀರಮೇಲಣಗುಳ್ಳೆ ಸಂಸಾರವೆಂಬುವ ಬಳ್ಳಿ
ತೋರಿ ಯಡಗೋದಿಲ್ಲ ಆಧಾರ ಗತಿಗೆ ಅಲ್ಲಿ
ನೀರಜದೆನೆ ನೀರಿನ ಸಂಗ
ಶೇರದಿರುವ ಪರಿ ಇರುತಿಹೆ ೧
ಹೆಣ್ಣು ಹೊನ್ನು ಮಣ್ಣು ಜೀವ
ಸಣ್ಣ ಮಾಡುವರಿನ್ನು ಉಣ್ಣುವ ಭವ ಪೆಣ್ಣು
ಫಣಿಗಣ್ಣಗೆ ಬಿಡದಿನ್ನು ಬೆಣ್ಣೆ ಜಲವ ಉಣ್ಣದ ಪರಿ
ಕುನ್ನಿ ವಿಷಯಗಣ್ಣಿಸದಿಹೇ ೨
ಶುಭಗುಣಗಣ ಹೃದಯ ಎನಗಭಯವೀಯೋ ಸದಯಾ
ಪ್ರಭು ನರಸಿಂಹ ವಿಠಲಯ್ಯಾ ನಿನ-
ಗಭಿನಮಿಸುವೆನಯ್ಯಾ ಸುಭಗ ನಿನ್ನ ಪಿಡಿದೆನಯ್ಯಾ
ಶುಭಕರ ಸಿರಿಮೊಗ ತೋರಯ್ಯಾ ೩

೧೮೪
(ಶ್ರೀ ಜಯತೀರ್ಥರು)
ಜಯತೀರ್ಥರೇ ನಮ್ಮ ಸುಮತೋದ್ಧಾರಕರು
ಮಳಖೇಡ ನಿಲಯರು ಪ
ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ
ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ
ಪೂರ್ಣಬೋಧ ಗುರುಮತವಾರ್ವವ ಪೇಳಿ
ಶೀರ್ಣವಾಗಿಹುದೀ ವೈಭವ ಎಂದು ಹೇಳಿ
ಸುಜ್ಞರಾದರು ಮುದ ತಾಳಿ ೧
ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ
ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ
ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ
ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ ೨
ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು
ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು
ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು
ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು ೩

೧೭೯
ಜಯಮಂಗಳಂ ನಿತ್ಯ ಶುಭಮಂಗಳಂ ಪ
ಚಾರು ಮರಕಟರೂಪ ತಾಳಿದಾ ಮೂರ್ತಿಗೆ
ಚೋರ ದಶಕಂಠನನು ದಣಿಸಿದವಗೆ
ನೀರಜಾಮುಖಿಗೆ ಮುದ್ರೆಯಿತ್ತ ಕಪಿವರಗೆ
ಶ್ರೀರಾಮ ಧ್ಯಾನದೊಳು ತತ್ಪರಾದವಗೆ ೧
ನೀಚ ಠಕ್ಕನ ಹಿಡಿಂಬಕನೊರಸಿದಾ ಬಲಗೆ
ಕೀಚಕರ ಕಿರ್ಮೀರ ಬಕಕಾಲಗೆ
ನಾಚಿ ನೀರೊಳು ಪೊಕ್ಕು ಕುರುಪತೀಯಂತಕಗೆ
ಆ ಚಕ್ರ ಸೇವೆಯಲಿ ನಿರತನಾದವಗೆ ೨
ಜಗವನುದ್ಧರಿಪ ಬುದ್ಧಿಯ ತಾಳ್ದಯತಿವರಗೆ
ಮಗುವಾಗಿ ಮಧ್ಯಗೇಹದಿ ಜಾತಗೆ
ನಿಗಮ ಗೋಚರ ಶ್ರೀ ನರಸಿಂಹವಿಠಲನ
ಭಕುತಿಯನು ಬೇಡಿ ಅಜಪದ ಪಿಡಿದ ಹರಿಗೇ ೩

೧೯೪
ತತ್ವವ ಬೋಧಿಸಿದಾ ಶ್ರೀ ಗುರುರಾಯಾ ತತ್ವವ ಬೋಧಿಸಿದಾ
ತತ್ವವ ಬೋಧಿಸಿ ತತ್ವ ಕರುಣಿಸಿ
ಉತ್ತಮ ಜೀವಿಸಿ ಉತ್ತಮ ಗತಿಯೆಂದು ತತ್ವವ ಬೋಧಿಸಿದಾ ಪ
ಹಿಂದೆಯಾದರು ಸರಿ ಇಂದಾದರೂ ಸರಿ ಗೋ-
ವಿಂದನೇ ಗತಿ ಎಂದೆಂದು ಬಿಡನವನೆಂದು
ಸಂದೇಹವಿಲ್ಲದೆ ಮುಂದೆ ಆನಂದಾತ್ಮಾ ಎಂದು
ತಂದೆಯೇ ಮುಕುತಿಗೆ ಸಾಧನವೆಂದು ೧
ಕನಸು ಮನಸಿನಲಿ ಅನುಗಾಲ ಧ್ಯಾನದಿಂದಲಿ
ಘನಹರಿಯ ನೆನೆಯುತಲಿ
ಮನಕಾನಂದವನೀವನವನಿದಿರಲಿ
ಅನುಮಾನವಿನಿತು ಬಾರಲಾಗದೆನುತಲಿ ೨
ನರಸಿಂಹವಿಠಲನ ಶರಣರ ಸಂಗವು
ಹರಿವಾಯು ಕರುಣಕೆ ಕಾರಣವು
ಮರೆಯದೆ ಹರಿನಾಮ ಸ್ಮರಣೆಯ ಮಾಡಲು
ಹರಿಯೇ ಒಲಿದು ಕರಪಿಡಿವನು ಎಂದು ೩

೨೦೪
ತಪ್ಪಲಿಲ್ಲ ನೀನು ಬಂದೂ
ತಪ್ಪಲಿಲ್ಲ ನಿನಗೆ ನೈವಿದ್ಯವಿಡಲಿಕ್ಕೆ ತಪ್ಪಲಿಲ್ಲ ಪ
ಅಪ್ಪ ನೀನು ಜಗದಪ್ಪನೆಂದರಿದು
ತಪ್ಪದೆ ನೀನಿತ್ತುದನ್ನೆ ಒಪ್ಪಿಸುವೆನು ೧
ಹೊಳೆಯ ನೀರು ಹೊಳೆಗರ್ಪಿಸವಂದದಿ
ಒಲಿದೆನಗಿತ್ತುದೆ ಸಲಿಸುವೆ ನಿನಗೆ ೨
ಅಣುರೇಣು ತೃಣಕಾಷ್ಠ ವ್ಯಾಪ್ತನು ನೀನು
ನಿನಗಲ್ಲದರಿಯೆ ಅನ್ಯರಿಗುಂಟೆ ಅರ್ಪಣ೩
ನೀನಿತ್ತುದಲ್ಲೆ ಶ್ರೀಹರಿ ಹಣ ಹೊನ್ನು
ಏನೆನ್ನ ಗೌರವ ನಿನ್ನದು ನಿನಗೆ ೪
ಅಲ್ಪವರ್ಪಿಸೆ ನೀನಲ್ಪನೀವಿ[?]
ಕಲ್ಪತರುವಿನೊಲು ನರಸಿಂಹವಿಠ್ಠಲಾ ೫

೨೦೫
ತಾಳಲಾರೆನೆ ಜಗದಿ ಬಾಳಲಾರೆನೆ
ನಾಗೇಶಾಂಗಶಯನನ ಸುಖಭೋಗ ಪ
ಎಂದಿಗೆ ಆಗದಿರ್ದೊಡೆ
ತಾಳಲಾರೆನೆ ಜಗದಿ ಬಾಳಲಾರೆÀನೆ ಅ.ಪ
ಸವತಿ ರುಗ್ಮಿಣಿ ಭವನದಿ ಮು
ದವನೆ ತಾ ಮರೆತು ಕುಳಿತಾ ೧
ಇಂದಿರೇಶ ನಂದಧೀಶ
ಮಂದಿರದೀಗ ಬಾರದಿರಲು ೨
ನರಸಿಂಹ ವಿಠಲನೀಗ
ಭರದಿ ಮೊಗವ ತೋರದಿರಲು ೩

೧೩೩
ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ
ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ
ಶೀರಿ ದಾನವ ಮಾಡಿದೀ ಕೃಷ್ಣಾ
ಘೋರ ದೂರ್ವಾಸ ಮುನಿಯು ನಡುವಿರುಳೆ
ಹಾರೈಸಿ ಬರೆಯನ್ನವಾ ದೇವಾ
ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ
ಆ ರಾತ್ರಿ ಕಾಯ್ದ್ಯೋಬಲೆಯಾ ೧
ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು
ಭರದಿನೆಗಳಿಯು ಪಿಡಿಯಲು ಕಾಲನು
ಇರದೆ ನಿನ್ನನು ಸ್ಮರಿಸಲು ದೇವಾ
ಗರುಡವಾಹನನಾಗಿ ನೀನೈತಂದು
ಕರುಣಿಸಿದ್ಯೋ ಕೊನೆಯ ಗತಿಯ ೨
ದುರುಳ ಹಿರಣ್ಯಕನ ಶೀಳಿ ನರಹರಿಯೆ
ತರಳ ಪ್ರಲ್ಹಾದನ ಪೊರೆದ್ಯೋ ದೇವಾ
ಮರೆಯದಜಮಿಳ ನೆನೆಯಲು ಕೇಳ್ದು ನೀ
ಪರಿಹರಿಸಿದೆ ಯಮಬಾಧೆಯ ದೇವಾ
ನರಸಿಂಹವಿಠಲ ಸ್ವಾಮಿ ಧ್ರುವನನ್ನು
ಪೊರೆದಂತೆ ರಕ್ಷಿಸೆನ್ನಾ ೩

೨೩೪
ದಾಸನಾಗು ಹರಿಯ ದಾಸನಾಗು
ಮೋಸಹೋಗದೆ ಭವಕೆ ಬ್ಯಾಸರಾಗು ಪ
ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ
ಭೂನಾಥನಡಿವಿಡಿದು ಬಾಳ್ವೆ ನಿನಗೆ
ಹೀನಮಾನವ ಕಂಡಣಕೆ ನುಡಿದರು ಸರಿಯೆ
ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು೧
ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ
ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ
ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ
ಕೇಳುವವರಾರು ಹರಿಭಕುತಿ ಮಾಡುವವರು೨
ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ
ಘೊರ ಜವನನು ಮರೆತು ಕೊಬ್ಬುವವರಂತೆ
ಶೇರು ನರಸಿಂಹವಿಠ್ಠಲನಂಘ್ರಿಕಮಲವಾ
ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ ೩

೨೩೫
ದಾಸನಾದರರೂ ಆದ ಘಟಿಕನಾದ ಸೋಜಿಗಾ
ವಾಸುದೇವನ ಬಿಡದೆ ಭಜಿಸಿ ಸುಖಿಪ ಮತ್ತೀಗಾ ಪ
ಮಂದಿ ಒಳಗೆ ಶೇರದಾಗಿ ನೊಂದು ಬಳಲಿದಾ
ಬಂದ ಭವ ತಾಪಂಗಳ ಹೊಂದಿ ಅಳಲಿದಾ
ಮಂದಿರವೆಲ್ಲೆ ಗೃಹಿಣಿ ಸುತರೆಲ್ಲೆಂದ್ಹಲುಬಿದಾ
ಇಂದಿರೇಶನ ಪಾದ ಪಿಡಿದಾನಂದ ತಾಳಿದಾ ೧
ಪಿಡಿದ ಕಾರ್ಯ ಬಿಡದೆ …
ಒಡನೆ ಪೀಡೆ ರಾಶಿಯಾಗಿ ಒಡಲ ಮುಸುಕಿತು
ಕಡು ಬಡತನದುರಿಯು ಅಡರಿ ಒಡಲ ಸುತ್ತಿತು
ಜಡಜನಾಭನೊಲುಮೆಯಿಂದ ಎಡರು ಪೋಯಿತು ೨
ಭರದಿ ಸತೀ ಸುತರು ದುಃಖ ಶರದಿ ವಿಹ್ವಲಾ
ಇರದೆ ವ್ಯಾಧಿ ಜಲಂಗಳಾ ಉರಿಯ ಉಮ್ಮಳಾ
ತೆರೆಯ ಕಂಗಳಿಲ್ಲಾ ಗತಿಯು ಧರೆಯ ಕತ್ತಲಾ
ಪೊರೆದ ನರಸಿಂಹವಿಠಲಾ ನಿರುತ ನಿರ್ಮಲಾ ೩

೨೦೬
ದಾಸನಾದೆನು ಶ್ರೀಶ ದಾಸನಾದೆನು
ವಾಸುದೇವನಂಘ್ರಿ ಪಿಡಿದು
ಹೇಸಿ ವಿಷಯ ಸುಖವನಳಿದು
ದಾಸನಾದೆನು ಶ್ರೀಶ ದಾಸನಾದೆನು ಪ
ನೀರ ಪೊಕ್ಕು ಭಾರ ಪೊತ್ತು ಕೋರೆಯಿಂದಲಿಳಿಯ ಪಿಡಿದು
ಘೋರ ರೂಪವನ್ನು ತಾಳ್ದ ನಾರಸಿಂಹನನ್ನು ನುತಿಪ ೧
ತಿರಿದು ನೋಡಿ ಪರಶುವಿಡಿದು ಭರದಿ ಪತ್ತು ತಲೆಯನಳಿದು
ಮರಳು ಕಂಸನನ್ನೆ ತುಳಿದ ವರದ ಕೃಷ್ಣನನ್ನೆ ಭಜಿಪ ದಾಸ ೨
ಹುಟ್ಟು ರೂಪವನ್ನೆ ತೋರಿ ಪಟ್ಟಕುದಿರೆಯೇರಿ ಕುಳಿತ
ದಿಟ್ಟ ಶ್ರೀ ನರಸಿಂಹ ವಿಠ್ಠಲನ್ನ ಪಾಡುವಂಥ ದಾಸ ೩

೨೦೭
ದಾಸನು ನಾ ನಿನ್ನಯ ಬೇಸರಿಸದ ಸೇವಾ
ವಾಸುದೇವನೆ ಮಾಡುವ ಮನವಾ
ವಾಸುಕಿಶಯನ ನೀ ನೀಡು ದೃಢವಾ ಪ
ಭಾಸುರಾಂಗಿಯ ಶ್ರೀಶನೆ ಬಡ
ದಾಸನ ಸೇವೆಯು ಮನಕ್ಹ್ಯಾಂಗೆ ಬಂತು
ಶ್ರೀಶನ ಕೌಸ್ತುಭಕೆ ಆಶೆ ತಂತು ಅ. ಪ.
ಅನುಗಾಲದ ನಿನ್ನ ನಾಮದ ಸ್ಮರಣೆಯಾ
ಮನಸಿಜ ಪಿತಗೆ ಮೆಚ್ಚು ಬಾ
ಧ್ಯಾನ ಕೇಳಲು ಕಿವಿ ನಿಮಿರಿಸಿದಾ
ಘನ ಪ್ರಲ್ಹಾದನ ಸ್ಮರಣೆಗೆ ನಿಂತಿರ್ದಾ-
ಘನ ಸಂಪ್ರೀತನ ಎನ್ನೊಳ್ಯಾಂಗ ಕರುಣಿಸಿದಾ
ಮೇಣ್ ಕರಣದಿಂದ ಗಾಯನ ಎನ್ನಯ ಕಾಯಜ ಪಿತಾ
ನಿನಗೆ ಶ್ರಾವ್ಯವಾದುದು ಅರಿಯೆನು ನಾ ೧
ಮೇಣ್ ಪ್ರೀಯವಾದುದು ಹರಿಯೇ ಸುರ
ಮಾನಿಯೆ ಮಾಯೆಯ ಹರಿದು ರಕ್ಷಿಸೇಯಾ
ಗಾನಗೇಯನೆ ಮಮ ಗಾಯನವೆಂತು ಶ್ರಾವ್ಯಾ
ನಿನ್ನ ಮನಕಾನಂದವಾಗುವುದಯ್ಯಾ ೨
ಮತಿವಂತನೆ ನೀ ಮಾಡುವ ಹರಿಪೂಜೆ
ಚಿತ್ತಜಪಿತ ಹರಿಗಾಯ್ತು ಕೇಳ್ ಮುದದಿ ಹೃದಯ ತುಂಬೀತು
ಅತಿ ಮಾನಿನಿಯೆ ವಿಧಿಪೂಜಿತನಿಗೆ ಸರಿ
ಪಾತೆನ್ನ ಪೂಜೆಯಾಯ್ತು ಶ್ರೀ-
ಪತಿ ಶ್ರೀಹರಿಯ ಮನಕೆ ಬಂದೀತು ೩
ಮಾನವ ನಿನ್ನಯ ಹರಿಧ್ಯಾನವ ರಮಾಧ-
ವನು ತಾ ಕೈಕೊಂಡಾ
ತನ್ನ ಹೃದಯಾರವಿಂದದೆಡೆಗೆ ಸೆಳೆಕೊಂಡಾ
ಮುನಿಶುಕ ಮುಖ್ಯರ ಧ್ರುವಾದಿ ಭಕ್ತರಾ
ಮನಗೊಂಡ ಹರಿಯೆನ್ನ ಧ್ಯಾನಕಿಂಬುಗೊಂಡಾ
ಮನದೊಳಗೆಂತು ಆತುಕೊಂಡಾ ೪
ಪುರುಷೋತ್ತಮ ಹರಿ ಪರಮ ದಯಾರ್ಣವ
ಕರುಣದಿ ನಿನ್ನ ಕೈಪಿಡಿದಾ ನಿಜದಾಸನೆಂದೊಡಬಡಿದಾ
ವರಮಹಾಲಕುಮಿಯೆ ಸಿರಿಹರಿಸತಿಯೆ
ನರಸಿಂಹವಿಠಲನ ರಾಣಿಯೆ ಅನುದಿನ ಎನ್ನ ಮನದಿ ನೆಲೆಸೆ ೫

೧೩೪
ದೇಶ ತಿರುಗಿಸಿ ಪರದೇಶಿ ಮಾಡಲು ಬೇಡೋ
ಈಶ ನೀ ಘನ್ನಾ ಸಂಪನ್ನಾ ಪ
ಜನಕನಂಶದಿ ಧ್ರುವನು ಸನುಮತವ ಮಂಡಿಸಲು
ಘನರೋಷ ತಾಳಿ ಮಲಜನನಿ ಧೂರ್ತೆ ದೂಡಲು
ವನವಾಸ ಲೇಸೆಂದು ತಿಳಿದು ನಿನ್ನ ನೆನೆಯೆ ತಾ ನಡೆದ
ಘನಮಹಿಮ ಶ್ರೀಮನ್ನಾರಾಯಣ ಸ್ಥಿರಪಟ್ಟವ ನಾಡಿದ ೧
ಖಳ ಕುರುಪಗೊಡೆತನವು ಭಲೆ ಧರ್ಮಗೆ ವನವಾಸವು
ಬಲು ಮಾನವಂತೆ ದ್ರೌಪದಿಯು
ಜಲಜನಾಭನೆ ನೀನೆ ಗತಿಯೆನಲು
ಒಲಿದು ಬೆಂಬಲನಾಗಿ ಪಾಂಡವರ ಪೊರೆದೆ ೨
ವರಮುನಿಯ ಶಾಪದಿಂದರಸನಿಂ ಪ್ರದ್ಯುಮ್ನ
ಕರಿರಾಜನಾಗಿ ಮಡುವೊಳು ಕ್ರೀಡಿಸೆ
ಭರದಿ ನೆಗಳಿಯು ಪೀಡಿಸೆ ಶ್ರೀ-
ಹರಿಯೆಂದು ಮೊರೆಯಿಡಲು ಶ್ರೀ-
ಕರದಿಯುದ್ಧರಿಸಿದೆ ನರಸಿಂಹವಿಠ್ಠಲಾ ೩

೨೦೮
ದೋಷ ದೂರಿಸೈಯ್ಯಾ ಎನಗೆ ನೀ
ತೋಷವೀವುದಯ್ಯಾ ಪ
ಆಸವ ಶ್ರೀತುಲಸೀವಾಸನಿಲಯ ಸ-
ರ್ವೇಶಹರಿಯ ದುರ್ವಾಸ ವಿಠಲರಾಯ ಅ.ಪ.
ರಾಘವ ರಘುಕುಲ ಸೋಮನ ಸದಯ ಸ-
ರ್ವಾಘ ಹರಿದ ನಿಖಿಳಾಗಮಗಳೊಡೆಯ ೧
ಯಾದವ ಯದುಕುಲ ತಿಲಕಾವ್ಯಯ ಮಧು-
ಸೂದನ ತ್ರಿದಶನು ವೇದ್ಯದಾಸ ವಂದ್ಯಾ ೨
ನರಹರಿಕರುಣಾರ್ಣವ ಶರಣರ ಗುರು
ಕರುಣವಿರಿಸು ನರಸಿಂಹವಿಠಲರಾಯ ೩

೧೩೫
ಧರಣಿಪತಿ ನಿನ್ನಯ ಕರುಣವೆಂಬುದೆ ಸಾಕು ಪ
ಉರಗಾದ್ರಿನಿಲಯ ವಾಸಾ ಧರೆ ನರಾಧಮರೆನ್ನ
ಪರಿಪರಿ ಪೀಡಿಸಿ ಜರಿದುಗೈವರು ಪರಿಹಾಸ ಅ.ಪ.
ಹಿಂದೆ ದುರುಳರ ಸಭೆಯೊಳರವಿಂದ ವದನೆಯ
ಮಾನವನು ಬಿಡದೆ ಕಾಯ್ದ
ಕಂದು ಗೊರಳನ ಬೆನ್ನಟ್ಟಿಬರೆ ರಕ್ಕಸನು ಪೆಣ್ಣಾಗಿಯವನುರುಹಿದಿ
ಅಂದು ಸೈಂಧವನ ಕೊಲೆ ಶಪಥವನೆ ಕೇಳ್ದು ನೀ
ನರನನುಡಿ ನಿಜಮಾಡಿದಿ
ಇಂದು ನಾ ಭವತಾಪದಿಂದ ಬಲು ನೊಂದಿಹೆನು ಬಂದು ರಕ್ಷಿಸೋ
ಗೀತವಾದಿ ಕೃಷ್ಣ ೧
ಗಜವರನು ನೆಗಳ ಬಾಧೆಗೆ ಸಿಲುಕಿ ಕರೆಯಲು
ಭರದಿಯವನುದ್ಧರಿಸಿದೀ
ವಿಜಯಸಾರಥಿಯೆನಿಸಿ ಕೌರವನ ಕುಲವಳಿದು
ಪಾಂಡವರಿಗೊಲಿದು ಪೊಂದಿ
ನಿಜ ಬೆರಳಿನಲ್ಲಿ ಗೋವರ್ಧನವ ಪಿಡಿದೆತ್ತಿ ಗೋವಿಂಡು ಸಂತೈಸಿದಿ
ಭುಜಗಶಾಯಿಯೆ ನಿನ್ನ ಭಜಿಸುವೆನು ಮನಮುಟ್ಟಿ ಪಾಲಿಸೈ
ಕರುಣ ಶರಧೀ ಕೃಷ್ಣಾ೨
ಹರಿವಾಯುಗಳ ಮರೆದು ಪರಿಪರಿ ಭೋಜನಾ
ಉಣಿಸಿ ದೇಹವ ಬೆಳೆಸಿದೆ
ತರಣಿಸುತ ಬಳಗದಿಂದೊಡಗೂಡಿ ಭವಸೌಖ್ಯ
ಸುರಿದು ಆಯುಷ್ಯ ಗಳಿಸಿದೆ
ನಿರುತ ಲೌಕಿಕಕೆ ನಾ ಮರುಳಾಗಿ
ವಿಷಯದಲ್ಯಭಿಮಾನ ತಾಳಿ ಮೆರೆದೆ
ನರಸಿಂಹವಿಠಲ ನಿನ್ನಪರೋಕ್ಷಿತ್ತೆನಗೆ ಪರಿಹರಿಸು
ಕಲಿಯ ಬಾಧೆ ಕೃಷ್ಣಾ ೩

ಲಂಕೆಯಲ್ಲಿ ಸೀತಾದೇವಿ ಹನುಮಂತನನ್ನು
೧೭೫
ಧೀರನೋ ಚೋರನೋ ಹೇರನೋ
ದಾರಿರುವಿ ದೂರ ನಿಲ್ಲೋ ಪ
ಚಾರು ಮರಕಟ ರೂಪವ ತೋರಿ ಮಾಯ ದನುಜಾರಿ
ಚಾರಕನೆಂದು ಸಾರುತಿರುವೀ ಬಾರಿ ಬಾರಿಗೆ ಶ್ರೀರಾಮ
ಆರೈಸಿಸುವಿ ಎಂದೂ ತೋರದಿರು ದಿಟವೆನಗೆ೧
ರಕ್ಕಸರ ಮಾಯೆಯನು ಲೆಕ್ಕಿಸುವವಳಲ್ಲ ನಾ
ಅಕ್ಕರವ ತೋರದಿರಲು ಮಿಕ್ಕ ಮಾತುಗಳೇಕೆ
ಇಕ್ಕುವೆನು ಶಾಪವನೆನೆ ತಕ್ಷಣದಿ ಮುದ್ರಿಕೆಯನಿತ್ತಾ ೨
ಶ್ರೀರಾಮ ಮುದ್ರಿಕೆಯ ನೋಡಿ
ಪರಮ ನೀ ಭಕ್ತನಹುದು
ಪಿರಿದಾಗಿ ನಿನ್ನ ಕೀರ್ತಿ ನರಸಿಂಹ ವಿಠಲನು
ಭರದಿಂದ ಮಾಳ್ಪನು ಕರವಿಡುವ ಶಿರದೀ ೩

೧೬೬
ನಮಿಪೆ ಶ್ರೀ ಲಕುಮಿ ಸತಿ ಪ
ಪೊಳೆವುದು ಫಣಿಯಲಿ ರಂಜಿಪ ಕುಂಕುಮ
ಗಿಳಿಯ ವರ್ಣದ ಪಚ್ಚ ಪದಕ ಕಂಡೆ ೧
ಮಣಿಯುತ ಕಾಂಚನ ಮೇಖಲ ಕಟಿಯೆ
ನುಣ್ಣಮುತ್ತಿನ ನತ್ತೆಸೆವ ನಾಸಿಕೆಯಳೆ ೨
ಸರಸಿಜಮುಖಿಯಳೆ ಸ್ಮರಿಸುವೆನೀಗಳೆ
ನರಸಿಂಹ ವಿಠಲನರಸಿ ಪ್ರಸನ್ನಮುಖಿ೩

೧೮೨
ನಾನೊಬ್ಬಳ್ಭಾರತದಲ್ಲಿದ್ದೆ ಬಂದೆ ಪೂರ್ವದ ಹಿಂದೆ ಪ
ಬಂದೆ ಬೆಂಕಿಯಿಂದ ನಿಂದೆ ಕನ್ಯೆಯಾಗಿ
ಹೊಂದಿ ಐವರಿಗಾನಂದ ಸುಂದರಿ ೧
ಮಾರಿ ಕೌರವರಿಗೆ ಹಾರ ಪಾಂಡವರಿಗೆ
ಭಾರತಿ ಧಾತ್ರಿಗೆ ಕ್ಷೀರ ಮಾರಪಿತಗೆ ೨
ನರಸಿಂºವಿಠಲಗೆ ಕರುಣದ ಕರಡಿಗೆ
ಉರಿ ದುರುಳರಿಗೆ ಮರೆ ಶರಣರಿಗೆ ೩

೧೫೯
ನಾರಸಿಂಹನೆ ಘೋರರೂಪನೆ ತೋರು ಮೊಗವನು ಕರುಣದಿ
ಚಾರುಗಾತ್ರನೆ ಭೀರು ತ್ರಾತನೆ ಸೇರಿಹೆನು ತವ ಚರಣದಿ ಪ
ಘೋರತರ ಸಂಸಾರ ಶರಧಿಯ ತೀರ ಗಾಣೆನು ಧೀರನೆ
ಪಾರಗಾಣಿಪೊದ್ಯಾರ ಕಾಣೆನುಯಾ ಭವರುಜಹಾರನೆ ೧
ದಾನವನ ತಪಜ್ವಾಲೆಯಿಂದಲಿ ಮಾನುಷರು ಕಳವಳನೆಯಾ
ಸೂನುತಾರಣ ನೆವದಿ ದಿವಿಜರ ಮಾನವನು ನೆರೆ ಕಾಯ್ದೆಯಾ ೨
ದುಷ್ಟಸಂಹರ ಶಿಷ್ಟಪಾಲಕನೆಂಬ ಬಿರುದೆತ್ತಿಹುದಲಾ
ಸೃಷ್ಟಿಗೀಶನೆ ಕಷ್ಟ ತೊಲ%