Categories
ರಚನೆಗಳು

ನಾರಾಯಣದಾಸರು

ಇಂತಕಿ ವಚ್ಚಿನ್ನಾಡು ಸೀತಾರಾಮುಡಿಂಟಿಕಿ ವಚ್ಚಿನಾಡು ಪ
ಅಂಟಿ ಭಜಿಂಚಿತೆ ಅಭಯುಚ್ಚೇವಾಡುವೆಂಟಿ ತನ ಸೀತನುಗೂಡುಕೊನಿ ರಾಮುಡಿಂಟಿಕಿ ಅ.ಪ
ಋಣಮುಲ ದೀರ್ಚವಲೆನನುಕೊನಿಮನಸುಬೆಟ್ಟಿ ವಚ್ಚನುಕನಕಾಂಬರಧರ ಕೌಸಲ್ಯಾತನಯುಡುಅಣುರೇಣು ತೃಣಕಾಷ್ಠ ಪರಿಪೂರ್ಣುಡು ರಾಮುಡಿಂಟಿಕಿ ೧
ಇದಿ ಮಂಚಿ ಸಮಯಮನಿ ಶ್ರೀರಾಮುನಿ’ಧ’ಧಮುಗ ವೇಡಿತಿಪದಮನಾಭ ಶ್ರೀರಾಮುಡು ನಿರತಮುಮದಿಲೋ ಕೋರಿನ ಕೋರಿಕಲಿಚ್ಚೆಟಂದುಕಿಂಟಿಕಿ ೨
ಗುರು ವಾಸುದೇವಾರ್ಯುಲ ರೂಪಮು ತಾಳಿತರುಣ ನಾಗಪುರಮುಲೋತಿರುಪತೀಶ ಶ್ರೀ ವೆಂಕಟರಮಣುಡುಕರುಣಿಂಚಿ ನಾರಾಯಣದಾಸುನಿ ಬ್ರೋಚುಟಕಿಂಟಿಕಿ ೩

ಈ ಸುಖವ ಬಿಟ್ಟನ್ನು ಬೇರೆ ಸುಖವುಂಟೆ
ವಾಸುದೇವನ ಭಜಿಸಿ ಸುಖಿಯಾಗು ಮನವೆ
ಈ ಸುಖವ ಬಿಟ್ಟಿನ್ನು ಬೇರೆ ಸುಖವುಂಟೆ ಪ
ಕಾಮಕ್ರೋಧಾದಿಗಳ ಕಡೆಗೊತ್ತಿ ನಿರತ ನಿ
ಷ್ಕಾಮನಾಗಿಯೆ ತುಲಸಿ ಕುಸುಮಗಳ ತಂದು
ಪ್ರೇಮಪೂರಿತನಾಗಿ ಸರ್ವಪರಿಪೂರ್ಣ ಶ್ರೀ
ರಾಮಪೂಜೆಯಗೈದು ಸುಖಿಯಾಗು ಮನವೆ ೧
ಸೂನು ಮನೆ ಮೊದಲಾದ ಮಮಕಾರವನು ಬಿಟ್ಟು
ಧ್ಯಾನವನು ಶ್ರೀಹರಿಯ ಮೂರ್ತಿಯೊಳಗಿಟ್ಟು
ಸಾನುರಾಗದಿ ಹರಿಯ ನಾಮಸುಧೆಯನು ನೀನು
ಪಾನವನುದಿನ ಗೈದು ಸುಖಿಯಾಗು ಮನವೆ ೨
ಧರೆಯೊಳತ್ಯಧಿಕವೆಂದೆನಿಪ ಚಿಕ್ಕನಾಗಾಖ್ಯ
ಪುರದೊಳಗೆ ಮಹಿಮೆಯಿಂ ಭಕ್ತರನು ಪೊರೆವ
ಗುರು ವಾಸುದೇವಾರ್ಯರೂಪ ವೆಂಕಟಪತಿಯ
ಚರಣದಾಸ್ಯವ ಪಡೆದು ಸುಖಿಯಾಗು ಮನವೆ೩

ಒಂದೆ ಸಾಕೆನಗೆ ನಿನ್ನಯ ಸೇವೆಯೊಂದೆ ಸಾಕೆನಗೆ ಪ
ಒಂದೆ ಸಾಕು ನಿನ್ನಯ ಸೇವೆ ನಿರತವುಮಂದರಧರ ಶ್ರೀ ವೆಂಕಟರಮಣನೆ ಅ.ಪ
ದೇವಕಿನಂದನನೆ ಎನ್ನನು ನೀಕಾವ ಕೃಪಾಕರನೆ
ಭಾವಜನಯ್ಯನೆ ಭಾನುಪ್ರಕಾಶನೆದೇವರದೇವ ಶ್ರೀ ವೆಂಕಟರಮಣನೆ ೧
ವಾರಿಧಿರೂಪವಾದ ಭವದೊಳು ಮುಳುಗಿದಾರಿಗಾಣದೆ ುಹೆನು
ತೋರಿಸಿ ದಾರಿಯ ಜ್ಞಾನದ ನಾಮೆಂಸೇರಿಸು ತಡಿಯ ಶ್ರೀ ವೆಂಕಟರಮಣನೆ ೨
ತಿರುಪತಿುಂದ ಬಂದು ತರುಣನಾಗಪುರದೊಳು ಗುರು ರೂಪಲಿ
ಕರುಣದಿಂದ ನಾರಾಯಣದಾಸನಿಗೆ ಬೇಗಸ್ಥಿರಸುಖೀವ ಶ್ರೀ ವೆಂಕಟರಮಣನೆ ೩

ಗಿರಿಜಾಕಾಂತನೆ ನಿನ್ನ ಶುಭ
ಚರಣವ ನಂಬಿದೆ ಮುನ್ನ
ಕರವಿಡಿದೀಗಲೆ ಕಾಯಬೇಕೆನ್ನ
ಪರಿಪರಿ ವರಗಳ ಕೊಡುವ ಪ್ರಸನ್ನ ಪ
ಗಜ ಚರ್ಮಾಂಬರನೆ ನಿತ್ಯ
ಸುಜನರ ಪಾಲಿಸುತಿಹನೆ
ಅಜಹರಿಸನ್ನುತ ಅಮಿತ ಮಹಿಮನೆ
ತ್ರಿಜಗೋದ್ಧಾರನೆ ಭುಜಗಭೂಷಿತನೆ ೧
ನಂದಿಯನೇರಿಯೆ ಬಂದು ಎನ್ನ
ಮಂದಿರದೊಳ್ ನಿಂದು
ಕುಂದದಿರುವ ಆನಂದವ ಕೊಡು ಎಂದು
ವಂದಿಸುವೆನು ನಾ ನಿನಗೆ ಕೃಪಾಸಿಂಧು ೨
ವರ ಚಿಕ್ಕನಾಗರದಿ ನಿಂದು ಗರಪುರವಾಸನೆ ದಯದಿ
ವರದ ಶ್ರೀ ವೆಂಕಟರಮಣನ ರೂಪದಿ
ಪೊರೆವೆ ನಾರಾಯಣದಾಸನ ಮುದದಿ ೩

ಗುರುವರನನು ಭಜಿಪೆ ಶ್ರೀ ಶೃಂಗೇರಿ ಗುರುವರನನು ಭಜಿಪೆ ಪ
ಪರಮ ಪಾವನನಾದ ಗೂಢತತ್ವವನೊರೆವನರಸಿಂಹಭಾರತಿ ಗುರುವರನನು ಭಜಿಪೆ ಅ.ಪ
ಸ್ವರ್ಣಪೀಠದಿ ಕುಳಿತು ಸ್ವರ್ಣಾಂಬರವ ಪೊದ್ದುಚಿನ್ಮುದ್ರೆಯನು ಧರಿಸಿ ಪನ್ನಗಭೂಷಣ ಪರಶಿವನಂದದಿತನ್ನ ಭಕ್ತರ ಕರೆದು ಛಿನ್ನಸಂಶಯರಮಾಳ್ಪ ೧
ಮಣಿಮಯ ಮಕುಟವ ಮಸ್ತಕದೊಳಗಿಟ್ಟುಮಣಿಮಾಲಿಕೆಯ ಧರಿಸಿ ದಿನಮಣಿಶತತೇಜವನು ಬೆಳಗುತ್ತ ತಾನುಘನ ಶಾಸ್ತ್ರಮಾರ್ಗವನನುವದಿಸುತಲಿಹ ೨
ಚಂದ್ರಗಾ’ಯನುಟ್ಟು ಚಂದ್ರಮೌಳೀಶ್ವರನಛಂದದಿ ಪೂಜಿಸುತ ಸಿಂಧುಜಾ ಧವನಾದ ತಂದೆ ವೇಂಕಟಪತಿಯಂದದಿ ದಾಸಗಾನಂದವನಿತ್ತು ಪೊರೆವ ೩

ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪ
ಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾಣುತ ಫಲದಾಯಕಿ ಕಲ್ಯಾಣಿ ಅ.ಪ.
ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ ೧
ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ ೨
ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ ೩

ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು
ಪ್ರೇಮದಿಂ ರಕ್ಷಿಸಮ್ಮ ಪ
ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ
ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ.
ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ
ಸನ್ನಳಾಗಿ ನೃಪನ
ರನ್ನದ ಸಿಂಹಾಸನವೇರಿಸಿ ಎನ
ಗುನ್ನತೋನ್ನತವಾದಾನಂದವನಿತ್ತೆ ೧
ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ
ದಾನಂದವನೈದಿ
ನಾಯಕಮಣಿಯಂದದಿಂ ನರನಾಥರ್ಗೆ
ನಾಥನಾಗಿ ನಲಿಯುತ್ತಲಿರಲಿ ಸದಾ೨
ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು
ಕರುಣಾರಸವೆರಸಿ
ಪೊರೆವೆ ನಾರಾಯಣದಾಸನ ಬಿನ್ನಪವ
ತಿರುಪತೀಶನ ಸೋದರಿ ಶುಭವರ್ಧಿನಿ ೩

ಚಾಮುಂಡೇಶ್ವರಿ ಪಾಲಿಸು ಬೇಗದಿಂಚಾಮರಾಜೇಂದ್ರ ನೃಪನ ಪ
ಪ್ರೇಮದಿಂ ರಾಜ್ಯಾಭಿಷೇಕವ ಮಾಡಿಸಿಈ ಮ’ಯನ್ನೀತನಿಂದಾಳಿಸು ತಾಯೆ ಅ.ಪ
ನವರಾತ್ರಿಯು ಬಂತೆನ್ನುತ ಜನಗಳುತವಕಿಸುತಿಹರಮ್ಮಅವನೀಶಾಧಿಪನ ಸಿಂಹಾಸನವೇರಿಸಿನವರಾತ್ರಿಯುತ್ಸವವಂ ಮಾಡಿಸು ತಾಯೆ ೧
ಈ ಪಟ್ಟಣಕಭಿಮಾನಿ ನೀನಿರೆ ಜನತಾಪ ಪಡುವುದುಂಟೆಪಾಪ ಕೃತ್ಯಂಗಳ ಮಾಳ್ಪರ ಪರಿದು ನೀತಾಪವಳಿದು ತಂಪಿಸಿ ಜನವನು ಪೊರೆಯೆ ೨
ಧರೆಯೊಳುತ್ತಮ ಮಹಾಬಲಗಿರಿವಾಸಿನಿಗುರು ವಾಸುದೇವ ರೂಪಿಣಿಕರುಣದಿಂ ನಾರಾಯಣದಾಸನ ಮನಕೆಹರುಷವ ಕೊಡು ವೆಂಕಟಪತಿ ಸೋದರಿ೩

ಚಾಮುಂಡೇಶ್ವರಿ ಪಾಲಿಸೆ ನಮ್ಮಚಾಮರಾಜೇಂದ್ರ ನೃಪಾಲನ ನಿರುತವು ಪ
ಇಂದ್ರಾದಿ ದೇವರ್ಕಳೆಲ್ಲ ನಿನ್ನಂಘ್ರಿಯಕುಂದ ಮಂದರಾದಿ ಕುಸುಮರತ್ನಗಳನ್ನುತಂದು ಪೂಜಿಸಲಾಗ ಪರಿತುಷ್ಟಳಾಗಿ ನೀನಂದು ಕುಂದದ ವರಗಳನಿತ್ತು ಸಲ’ದೆ ೧
ಇಳೆಯೊಳು ಕೃಷ್ಣೇಂದ್ರ ನಿನ್ನ ಪೂಜೆಯ ಭಕ್ತಿಯಲಿ ಗೈದು ವರಪುತ್ರನನ್ನಾತ ಪಡೆದನುಒಲಿದು ನೀನಿತ್ತ ಪುತ್ರನು ಸುಖದಿಂದೀ ಭೂವಲಯವನಾಳಿಕೊಂಡಿರುವಂತೆ ವರ’ತ್ತು ೨
ಶರಣಾಗತಜನ ರಕ್ಷಣೆಗೈಯುತವರ ಮಹಾಬಲಗಿರಿಯೋಳು ನಿಂದು ಮೆರೆಯುವೆತರಳ ನಾರಾಯಣದಾಸನ ಬಿನ್ನಪವಕರುಣದಿಂ ಸಲಹು ವೆಂಕಟರಮಣ ಸೋದರಿ ೩

ಜಯಮಂಗಳಂ ನಿತ್ಯ ಶುಭಮಂಗಳಂ
ಭಯಕರದ ಭವಗಳನು ಪರಿವ ಪಾರ್ವತಿಗೆ ಪ
ಚಂದ್ರನನು ಧರಿಸಿರುವ ಚಾರುತರ ಮೌಳಿಗೆ
ಅಂದವಾದಳಕ ಕುಂಕುಮವೆಸೆವ ಫಣಿಗೆ
ಇಂದ್ರಚಾಪವ ಪೋಲ್ವ ಪುರ್ಬುಗಳ ಚೆಲುವಿಗರ
ವಿಂದ ದಳದಾಯತದ ಲೋಚನಂಗಳಿಗೆ ೧
ಅಕಳಂಕ ರತ್ನತಾಟಂಕ ಕರ್ಣದ್ವಯಕೆ
ಮುಕುರವನು ಪಳಿಯುತಿಹ ಕದಪುಗಳಿಗೆ
ವಿಕಸಿಸುವ ಚಂಪಕಾಕುಸುಮ ಸದೃಶದ ದಿವ್ಯ
ಮುಖವ ಶೋಭಿಪ ಮುದ್ದು ಮೂಗುತಿಯ ನಾಸಿಕಕೆ ೨
ಚೆಂದುಟಿಗೆ ಕುಂದ ಕುಟ್ಮಲ ದಂತಸಾಲ್ಗಳಿಗೆ
ಮಂದಸ್ಮಿತೋಲ್ಲಾಸಿ ಮುಖಕಮಲಕೆ
ಕುಂದಣದ ಬಂದಿ ಮುಕ್ತಾಹಾರವಳವಟ್ಟ
ಕಂಧರಕೆ ಪದಕಗಳು ಪೊಳೆವ ವಕ್ಷಸ್ಥಳಕೆ ೩
ಮರಕತಾಮಲ ವಜ್ರಖಚಿತ ವಲಯಾನ್ವಿತದ
ಸರಸಿಜೋತ್ಪಲ ವರಾಭಯ ಕರಂಗಳಿಗೆ
ವರ ಕಾಂಚಿದಾಮದಿಂ ಸ್ಫುರಿಸುತಿಹ ಕಟಿತಟಕೆ
ಮೊರೆವ ನೂಪುರವಿಟ್ಟ ಪಾದಪದ್ಮಂಗಳಿಗೆ ೪
ವರ ಮಹಿಷೂರಪುರ ನಿಲಯ ತ್ರಿನಯನ ಸತಿಗೆ
ಪರಮ ಸಿತವಸನಳಿಗೆ ಫಣಿವೇಣಿಗೆ
ಕರುಣದಿಂ ನಾರಾಯಣಾಖ್ಯ ದಾಸನ ಪೊರೆವ
ತಿರುಪತೀಶನ ಸೋದರಿಗೆ ಮನೋನ್ಮಣಿಗೆ ೫

ನಿನ್ನ ನಂಬಿದೆ ಕಮಲದಳಾಕ್ಷನೆಅನ್ಯದೈವವನ್ಯಾಕೆ ಮರೆಯೊಗಲಿ ಪ
ಪನ್ನಗಶಯನ ಕೃಪಾಂಗನೆ ನೀ ಯೆನ್ನಮನ್ನಿಸು ನತಜನಪಾಲ ಶ್ರೀಲೋಲನೆ ಅ.ಪ
ಆದಿಯೊಳ್ ವೇದವನು ತಂದ ಮತ್ಸ್ಯನೆಮೋದದಿಂ ನಗವನು ಪೊತ್ತ ಕೂರ್ಮನೆಆದರದಿ ಧರೆಯ ದಾಡೆಯೊಳಾಂತ ವರಾಹನೆಸಾಧು ಪ್ರಹ್ಲಾದರಕ್ಷಕ ನರಸಿಂಹನೆ ೧
ಬಲಿಯ ಭೂಮುಯ ಬೇಡಿದ ವಾಮನನೆಛಲದಿಂದಾ ಕೊಡಲಿ ‘ಡಿದ ಭೃಗುರಾಮನೆನೆಲದೊಳ್ ರಾವಣವ ಕೆಡ’ದ ಸೀತಾರಾಮನೆಬಲು ಬಲವಂತ ಕಂಸನ ಕೊಂದ ಕೃಷ್ಣನೆ ೨
ಸ್ತ್ರೀರ ಮಧ್ಯೆ ನಿರ್ವಾಣದಿ ನಿಂತ ಬುದ್ಧನೆಪಾರ’ಲ್ಲದ ದುಷ್ಟರ ಸೀಳ್ದ ಕಲ್ಕ್ಯನೆಘೋರ ದುರಿತಗಳ ಪರಿವ ಶ್ರೀರಮಣನೆಪಾರಮಾರ್ಥಿಕ ಸಚ್ಚಿದಾನಂದ ರೂಪನೆ ೩
ಋಣದ ಬಾಧೆಯೊಳಗೆ ಸಿಕ್ಕಿ ನಿರತವುಘನವಾಗಿ ಕೊರಗುತಲಿಹ ಯೆನಗೆ ನೀಕನಕದ್ರವ್ಯವನಿತ್ತು ಋಣವ ತೀರಿಸಿ ಬೇಗಮನವ ಸಂತೋಸು ಮನಸಿಜಪಿತ ದೇವ೪
ತರುಣ ನಾಗಾಖ್ಯಪುರದ ಮಧ್ಯದೊಳಿಹಗುರು ವಾಸುದೇವಾರ್ಯರ ರೂಪಲಿತರಳ ನಾರಾಯಣದಾಸನ ರಕ್ಷಿಪವರದ ಶ್ರೀ ತಿರುಪತಿ ವೆಂಕಟರಮಣನೆ೫

ಪಾಲಯಮಾಂ ಶ್ರೀ ಚಾಮುಂಡೇಶ್ವರಿ
ಫಾಲನಯನದಯಿತೆ ಪ
ಮೂಲಕಾರಣ ಶಿವೆ ಮೃಗರಾಜ ವಾಹನೆ
ನೀಲವೇಣಿ ಶ್ರೀ ರಾಜರಾಜೇಶ್ವರಿ ಅ.ಪ
ಪಂಕಜಾಕ್ಷಿ ಪರಾತ್ಪರೆ ಪಾವನೆ
ಪಂಕಜಭವವಿನುತೆ
ಪಂಕಜಾರ್ಚಿತೆ ಪರಮದಯಾನ್ವಿತೆ
ಕಿಂಕರಜನ ರಕ್ಷಿಣಿ ಕಾತ್ಯಾಯಿನಿ ೧
ಚಂಡ ಮುಂಡ ವಿಮರ್ದಿನಿ ಜಗದು
ದ್ದಂಡ ಮಹಿಮಪೂರ್ಣೆ
ಮಂಡಲೇಶ ಶ್ರೀಕೃಷ್ಣ ನೃಪಾಲಾ
ಖಂಡ ರಾಜ್ಯಪ್ರದೆ ಶ್ರೀ ಪಾರ್ವತಿ ೨
ಗುರು ವಾಸುದೇವಾರ್ಯ ರೂಪಿಣಿ ಮಹಿಷಾ
ಪುರ ಪರ್ವತವಾಸೆ
ಶರಣಾಗತ ನಾರಾಯಣದಾಸ ಪೋಷಿಣಿ
ತಿರುಪತಿ ವೆಂಕಟರಮಣ ಸೋದರಿ ಗೌರಿ ೩

ಬಾರಯ್ಯ ಭಕ್ತವತ್ಸಲ ನೀನು
ವಾರಿಜಾಂಬಕಿ ಪಾರ್ವತಿಗೂಡಿ ಬೇಗದಿ ಪ
ಗಜಚರ್ಮಾಂಬರ ನಿನ್ನನೆ ಭಜಿಸಬೇಕೆನ್ನುತ
ಭಜಿಸುತಲಿರುವೆನು ಭವಹರನೆ
ಭಜಗಭೂಷಣನೆ ಭುವನಾಧಾರನೆ
ಸುಜನಸೇವಿತ ಜಗತ್ಸುಖಕರ ಮೂರ್ತಿಯೆ ೧
ಕಾಲಾಗ್ನಿ ರುದ್ರನೆ ಕಲಿಕಲ್ಮಷಘ್ನನೆ
ಫಾಲಲೋಚನದಿಂದ ಪೊಳೆಯುವನೆ
ನೀಲಗ್ರೀವನೆ ನಿರ್ಮಲಕಾಯನೆ
ಶೂಲಾದ್ಯಾಯುಧಧರ ಸುರವಂದ್ಯನೆ೨
ತರುಣನಾಗಾಖ್ಯಪುರದ ಮಧ್ಯದೊಳಗಿಹ
ಗುರು ವೇಂಕಟೇಶ್ವರ ರೂಪಿನಲಿ
ಶರಣಾಗತ ನಾರಾಯಣದಾಸನ
ಪೊರೆಯುತಲಿಹ ಶ್ರೀಗರಳಪುರೀಶ್ವರ ೩

ಬಾರೊ ಬಾರೊ ಭಾಗ್ಯದ ನಿಧಿಯೆಬಾರೋ ಭಾಗ್ಯದ ನಿಧಿಯೆ ಪ
ಭರತಾಗ್ರಜನೆ ಭವಭಯಹರನೆಕರುಣಾಕರನೆ ಕಂದರ್ಪ ಜನಕನೆ ಅ.ಪ.
ದಿನಪಕುಲೇಶ ದಿ’ಜರ ತೋಷದೀನಜನೋದ್ಧಾರ %