Categories
ರಚನೆಗಳು

ಭೂಪತಿ ವಿಠಲರು

ಅಪರಾಧವೆಣಿಸದಲೆ ಕೃಪೆಮಾಡು ತಂದೆಅಪಣಾರ್ಯಕೃತ ಸ್ತೋತ್ರಪ್ರಿಯ ರಾಘವೇಂದ್ರ ಪ
ವರ್ಣಾಶ್ರಮಕೆ ಉಚಿತ ಧರ್ಮಕರ್ಮವ ಬಿಟ್ಟುಹೊನ್ನು ಹೆಣ್ಣು ಮಣ್ಣಿಗಾಗಿ ಧಡಪಡಿಸಿಮನ್ನಿಸದೆ ಗುರು’ರಿಯರನು ಹೀಯಾಳಿಸಿಕಣ್ಣು ನೆತ್ತಿಯ ಮೇಲೆ ಬಂದು ನಾ ಮೆರೆದೆ ೧
ಹಂದಿಯಂದದಿ ಕಂಡ ಕಂಡಲ್ಲಿ ಬಾಯೊಳಗೆತಿಂಡಿ ತಿನಿಸು ತುರುಕಿ ಹೆಂಡಮದವೇರಿಖಂಡವನು ಬೆಳಸಿ ಮುಸಗಾಡುತ ಕೋಣನ ತೆರದಿಕಂಡದ್ದು ಮಾಡಿ ನಾ ದಣಕೊಂಡೆ ನಾ ತಂದೆ ೨
ದೇಹ ಕುಗ್ಗಿತು ಈಗ ದೇಹ ಹಾಳಾುತುಆ ಹರೆಯ ಮಬ್ಬಳಿದು ಮುದಿ ಮಂಗನಾದೆಶ್ರೀಹರಿ ಭೂಪತಿ’ಠ್ಠಲನು ನೆನಪಾದಕರುಣದಿಂದ ಕೈಪಿಡಿದು ಉದ್ಧರಿಸು ತಂದೆ ೩

 

ಈ ಪರಿಯ ಸೊಬಗು ಇನ್ನಾವ ಗುರುಗಳಿಗುಂಟುಈ ಪರಿಮಳಾರ್ಯ ಗುರುರಾಜಗಲ್ಲದೆ ಪ
ಅರ್ಜುನಪ್ರಿಯ ಸೇವಕನು ಶಂಕುಕರ್ಣನು ಮೊದಲುಅಜನ ಶಾಪವ ತಾಳಿ ದೈತ್ಯರೊಳು ಜನಿಸಿಈ ಜಗದಿ ಸರ್ವತ್ರ ಹರಿಯ ವ್ಯಾಪ್ತಿಯ ತೋರಿನಿಜ ಭಕ್ತನೆನಿಸಿದನು ಪ್ರಹ್ಲಾದನಾಗಿ ೧
ದ್ವಾಪರಾಂತ್ಯದಿ ಇವನ ಬಾ’್ಲೀಕನೆಂದೆನಿಸಿಶಾಪಫಲ ಪರಿಹಾರವಾಗಬೇಕಾಗಿ’ಪರೀತ ಬುದ್ಧಿುಂ ಯುದ್ಧವನು ಮಾಡಿ ತಾ-ನಪೇಕ್ಷಿಸಿದ ಭೀಮನಿಂ ಮರಣವನ್ನು ೨
ಕಲಿಯುಗದಿ ಭೀಮಸೇನ ಮಧ್ವ ಮುನಿಯಾಗಿಅವತರಿಸಿ ತತ್ವಮತ ಸ್ಥಾಪಿಸಿದನುಬಾ’್ಲೀಕ ಬಾಲಯತಿ ವ್ಯಾಸಮುನಿಯಾಗಿಕರುಣಿಸಿದನು ಕೃಷ್ಣ ಸದ್ಗ್ರಂಥಗಳ ರಚಿಸಿ ೩
ವ್ಯಾಸರಾಯರ ಮುಂದೆ ಅವತರಿಸಿ ಗುರುವರ್ಯಶ್ರೀರಾಘವೇಂದ್ರನೆಂದೆನಿಸುತಮಧ್ವಮತ ದುಗ್ಧಾಬ್ಧಿ ಚಂದ್ರಮನು ತಾನಾಗಿಕಲಿಯುಗದ ಕಲ್ಪತರು ಎಂದೆನಿಸಿದ ೪
ಅಜನಪ್ರಿಯ ಅಜನ ತಾತನ ಭಕ್ತಅಜಪದಕೆ ಅರ್ಹನೆ ಇವನಂತ (?) ಅಜನ ತಾತನ ಕುಣಿಸಿ ಅಜಕರಾರ್ಚಿತಪೂಜಿಸಿದ ಭೂಪತಿ’ಠ್ಠಲನ ದಾಸ *೫

 

ಎಂಥ ಗುರುಶಿಷ್ಯರ ಜೋಡಿಯು ನೋಡಿರಿಇಂಥವರ ಸ್ಮರಿಸಿದರೆ ಚಿಂತೆ ದೂರಾಗುವದು ಪ
ಧ್ರುವರಾಜವಂಶದಿಂದಿಳೆಯೊಳಗೆ ಅವತರಿಸಿಸರ್ವದುರ್’ಷಯದಲಿ ವೈರಾಗ್ಯ ಬೆಳೆಸಿ
ಬಾಲ್ಯದಲಿ ಪರಮಹಂಸಾಶ್ರಮ ಸ್ವೀಕರಿಸಿಶ್ರೀಪಾದ-ರಾಜರೆಂದೆನಿಸಿ ಮೆರೆವರು ನೋಡು ೧
ಶ್ರೀಶನನು ಕಂಬದಿಂದ ತಂದ ಪ್ರಲ್ಹಾದನೆವ್ಯಾಸಮುನಿಯಾಗಿ ಅವತರಿಸಿ ಬಂದು
ದೇಶಾಧಿಪತಿಗೆ ಬಂದಾಪತ್ತು ಪರಿಹರಿಸಿಶ್ರೀ ಪಾದರಾಜರಿಗೆ ಶಿಷ್ಯರಾದರು ನೋಡು ೨
ಜ್ಞಾನ ವೈರಾಗ್ಯ ಭಕ್ತಿಯು ತುಂಬಿರುವುದುದೀನಜನ ಮಂದಾರ ಭಕ್ತ ಪುರಧೇನು’ಜುೀಂದ್ರ ವಾದಿರಾಜರಿಗೆ ಗುರು ಪರಮಗುರುಭೂಮಪತಿ’ಠ್ಠಲನ ಕುಣಿಸಿದ ಮಹಾತ್ಮರು ೩
ಸೋದೆ ವಾದಿರಾಜರು

 

ಎಂಥ ಪಾವನ ಪಾದವೊ ರಂಗಯ್ಯ ನಿಂ-ದೆಂಥಾ ಚಲುವ ಪಾದವೊ ಪ
ಎಂಥ ಪಾವನ ಪಾದ ಎಂಥ ಸುಂದರ ಪಾದಎಂಥೆಂಥವರಿಗದರ ಅಂತ ತಿಳಿಯದಂಥಾ ಅ.ಪ
ಸರ್ವದಾ ಸಿರಿದೇ’ಯು ತೊಡೆಯಮೇಲೆಇಟ್ಟು ಮೆತ್ತಗೆ ಒತ್ತುತಾ ದಿಟ್ಟಿಸಿ ನೋಡುತಾ
ದ್ಟೃತಾಕೀತೆಂದು ಗಟ್ಟಿ ಹಣೆಯ ಹಚ್ಚಿಬಚ್ಚಿಟ್ಟುಕೊಂಡಂಥಾ ೧
ಹುಡಗರ ಕೂಡಿಕೊಂಡು ಗಡಿಗೆಯ ಒಡೆದುಕುಡಿದು ಕೆನೆಪಾಲ್ ಮೊಸರು
‘ಡಿತುಂಬ ಬೆಣ್ಣೆಯ’ಡಕೊಂಡು ಓಡುತ ‘ಡಿಯಬಂದರೆ ದೊಡ್ಡಗಿಡವೇರಿ ಅಡಗು’ ೨
ಚಲುವ ಗಂಗೆಯ ಪಡೆದ ಪಾವನಪಾದಶಿಲೆಯು ಸತಿಯ ಮಾಡಿತು
ಪ್ರಲಯಕಾಲದ ಆಲ-ದೆಲೆ ಮೇಲೆ ಮಲಗುತ ಬಲಪಾದಾಂಗುಟಚೀಪುವ ಭೂಪತಿ’ಠ್ಠಲ ೩

 

ಎಂಥ ಸುಂದರವಾದ ವೃಂದಾವನಾನಿಂತು ನೋಡಲು ಮನಕೆ ಸಂತೋಷವಾಗುವದು ಪ
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ದಿವ್ಯಧೀರ ಗಂಭೀರ ಸುಮನೋಹರ ಸುಮೂರ್ತಿರಾರಾಜಿಸುತಿಹುದು ಮುಗಳುನಗೆ ಮುಖದಿಂದಾಶರಣಾಗತರಿಗೆಲ್ಲ ಅಭಯ ಹಸ್ತವ ನೀಡಿ ೧
ಪ್ರೇರಕರು ತಾವಾಗಿ ಪ್ರೇರ್ಯರೊಬ್ಬನ ಮಾಡಿಕಾರಾಗಿರನ ಕನಸು ಮನಸಿನಲಿ ಪೋಗಿಇರಬೇಕು ‘ೀಗೆಂಬ ವೃಂದಾವನದಿ ಚಿತ್ರತೋರಿಸುತ ಅಂತರಂಗದಿ ನಿಂದು ಮಾಡಿಸಿದ ೨
ಅಡಿಗಡಿಗೆ ಮ’ಮೆಯನು ತೋರಿಸುತ ಗಲಗಲಿಗೆನಡೆತಂದು ಶ್ರೀ ಮಠವ ಹ’್ಮುಕೊಂಡಿಹರುಸಡಗರದಿ ಭಕುತರಿಂ ಸೇವೆಕೊಳ್ಳುತಲಿಹರುಬಡವರಿಗೆ ಭಾಗ್ಯ ನಿಧಿಯು ಬಂದಂತೆ ಆಯ್ತು ೩
ಅಲ್ಲಿ ಮಂತ್ರಾಲಯವು ಇಲ್ಲಿ ಗಾಲವಕ್ಷೇತ್ರಅಲ್ಲಿ ತುಂಗಾ ಇಲ್ಲಿ ಕೃಷ್ಣವೇಣಿಅಲ್ಲಿ ಪ್ರಹ್ಲಾದರಾಜ ಯೋಗ ಮಾಡಿದನು ಇಲ್ಲಿತಪವ ಗೈದಿಹರು ಗಾಲವ ಮರ್ಹಗಳು ೪
ಅಲ್ಲಿ ರಾಯರಬಂಡಿ ಇಲ್ಲಿ ಋಗಳ ಬಂಡಿಅಲ್ಲಿ ಮಂಚಾಲೆಮ್ಮಾ ಇಲ್ಲಿ ಜಗದಂಬಾಅಲ್ಲಿ ಹೊಳೆದಾಟಿದರೆ ಪಂಚಮುಖಿಪ್ರಾಣೇಶಇಲ್ಲಿ ಹೊಳೆ ದಾಟಿದರೆ ಸಂಜೀವ ಪ್ರಾಣೇಶ ೫
ಕಲಿಯುಗದ ಸುರಧೇನು ಕಲ್ಪತರು ಗುರುರಾಯಗಲಗಲಿಯ ಭಾಗ್ಯ’ದು ಬಂದು ನಿಲಿಸಿಹನುಕಲುಷವರ್ಜಿತರಾಗಿ ದರುಶನವ ಮಾಡಿದರೆಕರೆದು ಈಪ್ಸಿತವ ಕೊಡುವ ಪರಮ ಕರುಣಾಳು ೬
ಪಾಪಿ ಕೋಪಿಷ್ಠರಿಗೆ ಸೇವೆ ದಕ್ಕುವದಿಲ್ಲಮಾಂ ಪಾ’ ಪಾ’ ಎಂಬುವ ಭಕುತರಾತಾಪತ್ರಯವ ಕಳೆದು ಸುಪ’ತ್ರರನು ಮಾಡಿಭೂಪತಿ’ಠ್ಠಲನ ಅಪರೋಕ್ಷ ಮಾಡಿಸುವ ೭
ಏನುಕೌತುಕವೊ ಮ’ಪತಿರಾಯರದು ಘನಮ’ಮೆ ತಿಳಿಯದುಮೋಹಶಾಸ್ತ್ರಗಳ ರಚಿಸಲು ಬೇಕೆಂದು ಹರಿಯಾಜ್ಞೆಯನರಿದುಈ ಮ’ಯೊಳವತರಿಸಿ ಬಂದನೆಂದು ರುದ್ರಾಂಶನೆ ಅಹುದುಪದ್ಯ ಪದ್ಯಗಳಲಿ ಅತಿಗೂಢ ಅರ್ಥ ‘ಹುದು ಮೂಢರಿಗೆ ತಿಳಿಯದದು 8
ಮ ಎನ್ನಲು ಮನ ಪ್ರಸನ್ನವಾಗುವದು ಮ’ಮೆಯ ತಿಳಿಯುವದು’ ಎನ್ನಲು ‘ಡಿಸುವದು ‘ತದಹಾದಿ ಸುಜನರ ಕೈವಾರಿಪ ಎನ್ನಲು ಪರಿಪರಿಯ ಕಷ್ಟದೂರಾ ಪರಮಾದರಕೆದ್ವಾರಾತಿ ಎನ್ನಲು ತಿಳಿಯಾಗುವದೈ ಬುದ್ಧಿ ಸರ್ವಾಂಗಶುದ್ಧಿ 9
ಮ’ಪತಿರಾಯರು ತಪವಗೈದಸ್ಥಾನಾ ಅಲ್ಲಿಯ ವೃಂದಾವನಾಮೂರುಕ್ಷೇತ್ರ ಶಾಲಿಗ್ರಾಮದ ಸವನಾ ಮ’ಮೆಯು ಪರಿಪೂರ್ಣಾತೀರ್ಥ ಭಾ’ಯೊಳು ಸುರನದಿ ಅವತರಣಾ ಮ’ಪತಿ ಸುತಕೃಷ್ಣಾಕರುಣಾನಿಧಿ ಭೂಪತಿ’ಠ್ಠಲ ಪ್ರಿಯನಾ ಸಂತತ ‘ಡಿಚರಣಾ 10

 

ಏನೆಂದು ಕೊಂಡಾಡಲಿ ಮಾರುತಿರಾಯ ಪಹುಟ್ಟಿದಾಕ್ಷಣ ಕೆಂಪು ಕಿತ್ತಳೆ ಹಣ್ಣೆಂದು
ಸೂರ್ಯಮಂಡಲಿಕೆ ನೀ ಹಾರಿ ‘ಡಿದ ‘ೀರಾ ೧
ಶರಧಿಯ ಜಿಗಿದು ಸೀತೆಗೆ ಮುದ್ರಿಕೆ ಕೊಟ್ಟುಲಂಕಾ ಪಟ್ಟಣ ಸುಟ್ಟು ಜೀವೋತ್ತಮನು ನೀನು ೨
ಕಪಿವೇಷದಿಂದ ಮೆರೆದ ಗದೆಪಿಡಿದ ಸನ್ಯಾಸಿಭೂಪತಿ’ಠ್ಠಲನ ದಾಸಾಗ್ರೇಸರನು ನೀನು ೩
ಗಲಗಲಿಯ ಪ್ರಾಣದೇವರು

 

ಕೃಷ್ಣತಾತ ಮ’ಪತಿರಾಯರ ಭಜಿಸೊಅಭಿಮಾನವ ತ್ಯಜಿಸೊ ಅನುಮಾನವ ತ್ಯಜಿಸೊ ಪ
ರಾಜವೈಭವದ ಭೋಗಗಳನುಭ’ಸಿ ಶ್ರೀ ಹರಿಯ ಸ್ಮರಿಸಿಭೋಗದೊಳಗೆ ತ್ಯಾಗದ ಪಾಠವ ಕಲಿಸಿ ಕೊಡುಗೈದೊರೆಯೆನಿಸಿಯೋಗಬಂದತಕ್ಷಣ ವೈಭವ ತ್ಯಜಿಸಿ ಯೋಗಿಯನಾಶ್ರೈಸಿಯೋಗಾಭ್ಯಾಸದಿ ಬೇಗ ಹರಿಯ ಒಲಿಸಿ ಅವನೊಳು ಮನಬೆರೆಸಿ ೧
ಹರಿಯಧ್ಯಾನಕನುಕೂಲವಾದ ಮೆಟ್ಟಾ ಹುಡಕುತುತಾಹೊರಟಾವರಕಾಖಂಡಿಕಿ ಕ್ಷೇತ್ರದಿ ಕಾಲಿಟ್ಟಾ ‘ಶ್ರಾಂತಿಗೆ ಕುಳಿತಾಅರೆನಿ’ುಷದಿ ಹರಿಧ್ಯಾನದಿ ಮೈಮರೆತಾ ಸಮಾಧಿ ಇಳಿಯುತಾವರೃಮುನಿಗಳು ತಪವಗೈದಮೆಟ್ಟಾ ಎನುತಲಿಯೆ ನಿಂತಾ ೨
ಹಗಲು ಇರಳು ಹರಿಧ್ಯಾನದಿ ತಾ ಮುಳುಗಿ ಅಲ್ಲಿರುತಿರಲಾಗಿ ನಗೆ ಮುಖದಲಿ ಝಗಝಗ ಕಾಂತಿಯು ಬೆಳಗಿ ಸುತ್ತಲು ಬೆಳಕಾಗಿಜಗದಜನಕೆ ಅದು ಅತಿ ಅಚ್ಚರಿಯಾಗಿ ಯೋಗಿಗೆ ಶಿರಬಾಗಿಬಗೆ ಬಗೆ ಭಕುತರು ಬಂದರು ತಾವಾಗಿ ಮ’ಪತಿಮಹಾಯೋಗಿ ೩
ಅಷ್ಟಸಿದ್ಧಿಗಳು ನೆಲೆಸಿದವಾಗಲ್ಲಿ ಆಶ್ರಮ ಬಾಗಿಲಲಿಎಷ್ಟು ಭಕುತಿಜನ ಬಂದರು ಸ’ತಲ್ಲಿ ಇಷ್ಟಾರ್ಥ ಕರದಲಿಮೃಷ್ಟಾನ್ನ ಭೋಜನ ಪ್ರತಿದಿನದಲ್ಲಿ ನಡೆುತು ಸಮತೆಯಲಿಇಷ್ಟವಾದ ಆಧ್ಯಾತ್ಮಿಕ ಮಾರ್ಗದಲಿ ಉಪದೇಶ ಪಡೆಯುತಲಿ ೪

 

ಕೊಡಬೇಕು ದಾನಗಳ ಸತ್ಕಾರ್ಯಕೆಬಿಡಬೇಕು ಕೈಸಡಿಲು ಮೋಕ್ಷಸಾಧನೆಗೆ ಪ
ಬೇಡದಲೆ ಕೊಡುವವರು ರೂಢಿಯೊಳಗುತ್ತಮರುಬೇಡಿದರೆ ಕೊಡುವ ದಾನಿಯು ಮಧ್ಯಮಬೇಡಿದರು ಕಾಡಿದರು ಕೊಡದವರು ಅಧಮರುಕೊಡೆದೆ ಬಡಬಡಿಸುವವರು ಮೂರ್ಖ ಅಧಮಾಧವುರು ೧
ದುಡ್ಡು ಇದ್ದರೆ ಮಾತ್ರ ದೊಡ್ಡವರು ಅನಬೇಡದುಡ್ಡಿದ್ದು ದಾನ ಧರ್ಮವು ನಡೆಯಬೇಕುದುಡ್ಡು ಕಾಯುವ ಸರ್ಪಕ್ಕೆ ಇಹ’ಲ್ಲ ಪರ’ಲ್ಲಬಿದ್ದು ಹೋದರೆ ಅವರ ಬಾಯೊಳಗೆ ಮಣ್ಣು ೨
ಧನಿಕರಿಗೆ ಭೂಷಣವು ದಾನಧರ್ಮವು ಸದಾಧನ’ದ್ದ ಜಿಪುಣತಾ ಜೀವಂತ ಹೆಣವುಧನ’ದ್ದು ದಾನಮಾಡುವ ಪುಣ್ಯವಂತರಿಗೆಘನಮ’ಮ ನಮ್ಮ ಭೂಪತಿ’ಠ್ಠಲನೊಲಿಯುವನು ೩
ತಾುಯ ಹರಕೆ

 

ಗಣಾಧೀಶ ಗೌರೀಶ್ ವಾಗೀಶ ಶ್ರೀಶಾನ’ುಸಿ ಬೇಡುವ ಪ್ರಸಾದವನು ಜಗದೀಶಾನೆಲಸಿ ಹೃದಯದಿ ಬಂದು ನುಡಿಸು ದಯದಿಂದಾನೀ ನುಡಿಸಿದಂತೆ ನುಡಿಯುವೆ ಸ್ಪೂರ್ತಿುಂದಾ ೧
ದೇಹ ದೇವಾಲಯವು ದೇವರೊಳಗಿಹನುಮನದ ಗರ್ಭಾಲಯದಿ ಮಲಗಿಕೊಂಡಿಹನುನಾಲಿಗೆಯ ನಾಮಗರ್ಜನೆಯ ಬಲದಿಂದಾಮನದ ಕದ ತೆಗೆಯೆ ಕಾಣುನನು ಗೋ’ಂದಾ ೨
ಮನವೆ ಕಾರಣವು ಬಂಧಮೋಕ್ಷಗಳಿಗೆಮನವೆ ಕಾರಣ’ಲ್ಲಿ ಸುಖದುಃಖಗಳಿಗೆಮನಸು ಬಿಗಿ’ಡಿದ್ಹಿಡಿದು ‘ಷಯಗಳ ತ್ಯಜಿಸುಮನತು ನಾಮಸ್ಮರಣೆಯೊಳು ಸದಾ ಇರಿಸು ೩
ಯಾವಾಗಲೂ ರಾಮ ನಿನ್ನೊಳಗೆ ಇರುವಾಭಾವದಿಂದಲಿ ಕರೆಯೆ ‘ಒ’ ಎಂದು ಬರುವಾದೇವರನು ನಂಬಿದರೆ ಸರ್ವದಾ ಕಾವಾಯಾವ ಅಂಜಿಕೆಯು ನಿನಗಿಲ್ಲ ತಿಳಿ ಜೀವಾ ೪
ನಿನ್ನೊಳಗೆ ನೀ ನಿನ್ನ ರಾಮನನು ನೋಡುನಿನ್ನ ಬೇಡಿಕೆಗಳನು ರಾಮನಲಿ ಬೇಡುಅನ್ಯರನು ಅಲಕ್ಷಿಸದೆ ಭಜನೆಯನು ಮಾಡುಪುಣ್ಯವಂತರ ಸಂಗದೊಳು ಸದಾ ಕೂಡು ೫
ಶ್ರವಣ ಭಕ್ತಿಯು ಬೇಕು ಮೊದಲು ಚೆನ್ನಾಗಿಶ್ರವಣವಾಗುವವರೆಗೆ ನಾದತಾನಾಗಿಭವ ಸಮುದ್ರವನು ದಾಟುವಡೆ ಸುಖವಾಗಿಶ್ರವಣವೇ ಮುಖ್ಯ ಸಾಧನವು ನಿಜವಾಗಿ ೬
ನಾದ ಹುಟ್ಟಿದ ಮೇಲೆ ನಾಮ ಕೀರ್ತನವುನಾಮ ಕೀರ್ತನದಿ ಅಸ್ಪಷ್ಟ ದರುಶನವುನೇಮ ಹೆಚ್ಚಾದಂತೆ ಸ್ಮರಣೆ ಶಾಶ್ವತವುಸ್ಮರಣೆಯೊಳು ಸಂಪೂರ್ಣ ವಸ್ತುದರುಶನವು ೭
ಅನನ್ಯ ಭಕ್ತಿಯ ಬಲವ ಬಣ್ಣಿಸುವದೇನುಕಣ್ಮುಂದೆ ಸರ್ವದಾ ಹರಿಯು ಕುಣಿಯುವನುಕಣ್ಣು ಮುಚ್ಚಣಿಕೆಯಾಟವನು ಆಡುವನುಅಣುರೇಣು ಪರಿಪೂರ್ಣನಾಗಿ ತೋರುವನು ೮
ಕುಣಿಯುವನು ಕುಣಿಸುವನು ನಗುತ ನಲಿಸುವನುದಣಿಯುವನು ದಣಿಸುವನು ಉಣುತ ಉಣಿಸುವನುಜನರಿಗದ್ಭುತ ಚಮತ್ಕಾರ ತೋರುವನುಕ್ಷಣ ಬಿಡದೆ ಕೆಳಗಿಳಿಯದಂತೆ ಕಾಯುವನು ೯
ದೇವರನು ನಂಬಿ ಕೆಡಕಾದವರು ಇಲ್ಲಜದೇವರನು ಬಿಟ್ಟು ಸುಖಹೊಂದಿದವರಿಲ್ಲಾದೇವರನು ಒಲಿಸುವೆಡೆ ಭಾವ’ರಬೇಕುಭಾವ’ಲ್ಲದ ಢೋಂಗಿನರ್ಚನೆಯು ಸಾಕು ೧೦
ಚಿನ್ನ ಬೆಳ್ಳಿಗಳ ಮಂಚಪವು ಬೇಕಿಲ್ಲಾಸಣ್ಣಕ್ಕಿ ಅನ್ನ ಪಕ್ವಾನ್ನ ಬೇಕಿಲ್ಲಮಣ್ಣು ಕುಳ್ಳಿಯೊಳು ಒಣ ಅಂಬಲಿಯು ಸಾಕುಘನ್ನ ಮ’ಮನಿಗೆ ನಿರ್ಮಲ ಭಕುತಿ ಬೇಕು ೧೧
ಶ್ರವಣ ಭಕ್ತಿಯ ದಾಟದವನು ‘ಸಾಧಕ’ ನುಪಾದಸೇವನದಿಂದ ‘ಸಾಧು’ ಆಗುವನುದಾಸ್ಯ ಭಕ್ತಿಯ ಮುಂದೆ ‘ಸಿದ್ಧ’ ನಾಗುವನುಸಖ್ಯಭಕ್ತಿಯ ಮುಂದೆ ‘ಗುರು’ವು ಆಗುವನು ೧೨
ಭಕ್ತಿ ಮಾರ್ಗವು ಬಹಳ ಸುಲಭ ಸಾಧನವುಭಕ್ತಿ ಸರ್ವರಿಗೆ ‘ಷಯದೊಳು ಪರಿಚಿತವು’ಷಯದೊಳಗಿನ ಪ್ರೀತಿ ಎಳೆದೆಳೆದು ತೆಗೆದುಪರಮಾತ್ಮನೊಳು ಇಡಲು ಭಕ್ತಿಯಾಗುವದು ೧೩
ಉಂಡದ್ದು ಶ್ರೀ ಹರಿಗೆ ನೈವೇದ್ಯವೆನ್ನುಕಂಡದ್ದು ಶ್ರೀ ಹರಿಯ ಪ್ರತಿರೂಪವೆನ್ನುಮಲಗಿದ್ದು ಶ್ರೀ ಹರಿಗೆ ಸಾಷ್ಟಾಂಗವೆನ್ನುಸುಲಭ ಪೂಜೆಯ ಮರ್ಮವೆನು ತಿಳಿದು ನೀನು ೧೪
ಸಾಲವನು ಮಾಡಿ ಹೋಳಿಗೆ ಹೊಡಿಯಬೇಡಾಜೇಲಿಗಂಜುತ ದೇಶಕಾರ್ಯ ಬಿಡಬೇಡಾಆಲಸ್ಯದಲಿ ಕಾಲವನು ಕಳಿಯಬೇಡಾಕೆಲಸದಲಿ ಕೀಳು ಮೇಲೆಂದು ಅನಬೇಡಾ ೧೫
ಸ್ವಚ್ಛ’ರಬೇಕು ಮನಬುದ್ಧಿ ದೇಹದೊಳುಅಚ್ಚುಕಟ್ಟಿರಬೇಕು ಸರ್ವಕಾರ್ಯದೊಳುಎಚ್ಚರಿರಬೇಕು ಜನಪಾತ್ರೆ ರಾತ್ರಿಯೊಳುಬಿಚ್ಚು ಮನ’ರಬೇಕು ಸ್ವಜನ ‘ುತ್ರರೊಳು ೧೬
ಬಡತನವು ಬಂದಾಗ ಧೈರ್ಯ ಬಿಡಬೇಡ’ಡಿದು ನೆಂಟರ ಮನೆಯ ನೀ ಕೂಡಬೇಡದುಡಿದು ತಿನ್ನಲು ಸ್ವಲ್ಪ ಸಹ ನಾಚಬೇಡಮಡದಿ ಹುಟ್ಟಿದ ಮನೆಯ ನೀ ಸೇರಬೇಡಾ ೧೭
ಗಾಜಕಾರಣದೊಳು ‘ ಮುಚ್ಚುಮನ’ ಬೇಕುಧರ್ಮಕಾರಣದೊಳಗೆ ‘ಸ್ವಚ್ಛಮನ’ ಬೇಕುಅರ್ಥಕಾರಣದೊಳಗೆ ‘ ಮೆಚ್ಚುಮನ” ಬೇಕುಕಚ್ಚೆಕೈಗಳು ಸದಾ ಸ್ವಚ್ಛ’ರಬೇಕು ೧೮
ಸಂಸಾರ ಮಾಡುವಡೆ ಧನವ ಸಂಗ್ರ’ಸುಸನ್ಯಾಸಿಯಾಗುವೆಡೆ ವೈರಾಗ್ಯ ಬೆಳೆಸುಸರ್ವಕರ್ಮಗಳಲ್ಲಿ ಶ್ರೀಹರಿಯ ಸ್ಮರಿಸುಸರ್ವದಾ ಸಂತ ಸಂಗದೊಳು ಸಂಚರಿಸು೧೯
ಸಂತ ಸಂಗದೊಳು ಸಂಚರಿಸುವುದು ಸ್ನಾನಾಸಂತ ವಚನಾಮ್ರತದ ಪಾನವೇ ಸ್ನಾನಾಸಂತರನು ಸಂತೋಷಪಡಿಸುವುದು ಸ್ನಾನಾಶಾಂತಮನದಿಂ ಹರಿಯ ಚಿಂತಿಪುದ ಸ್ನಾನಾ ೨೦
ಬಾಲ್ಯದಲಿ ಬ್ರಹ್ಮಚರ್ಯದಿ ಬಲವ ಬೆಳೆಸುತಾರುಣ್ಯದಲಿ ದುಡಿದು ಧನವ ನೀ ಗಳಿಸುವೃದ್ಧಾಪ್ಯದೊಳು ಸದಾ ಶ್ರೀಹರಿಯ ಸ್ಮರಿಸುಶ್ರೀಹರಿಯ ಸ್ಮರಣೆಯೊಳು ಆಯುಷ್ಯ ಸವೆಸು ೨೧
ಮೊದಲು ನಿನ್ನ ಪ್ರಯತ್ನ ತಪ್ಪದೆಲೆ ಮಾಡುಅದು ನೀಗದಿರೆ ಮುಂದೆ ದೈವವನು ನೋಡುಮದುವೆಯಾಗುವ ಮೊದಲು ತಿಳಿತಿಳಿದು ನೋಡುದುಡಿದು ಧನ ಗಳಿಸಿ ಸುಖದಿಂದ ಬಾಳುವೆ ಮಡು ೨೨
ಧನ’ಲ್ಲದವನ ಸಂಸಾರ ಸುಖವಲ್ಲಾಮನೆಯೊಳಗೆ ನಿತ್ಯ ಕಿರಿಕಿರಿಯು ತರವಲ್ಲಾದನದಂತೆ ಹೆಣ್ಣು ನುಡಿಯುವುದು ಸರಿಯಲ್ಲಾಎಣಿಕೆುಲ್ಲದೆ ಮಕ್ಕಳಾಗುವುದು ಸಲ್ಲಾ೨೩
ನೆಂಟರೊಳು ಬಹುದಿನ ಕೆಳಗಿರಬೇಡಾ’ಫ್ರಂಟಸೀಟಿ’ನ ಮೇಲೆ ನೀ ಕೂಡಬೇಡಾಒಂಟಿಯಲಿ ಹೆಂಡತಿಯ ಬಿಟ್ಟು ಇರಬೇಡಾಗಂಟು ಒಬ್ಬರ ಕೈಗೆ ಕೊಟ್ಟು ಆಳಬೇಡಾ ೨೪
ನಿನ್ನಂತೆ ತಿಳಿ ಪರರ ಸುಖ ದುಃಖಗಳನುಅನ್ಯಥಾ ನೋಡದಿರು ಅಣ್ಣ ತಮ್ಮರನುಸರ್ವಥಾ ಸ’ಸದಿರು ಅನ್ಯಾಯಗಳನುತಿಳಿಯದೇ ಹಳಿಯದಿರು ಭಿನ್ನ ಮತಗಳನು ೨೫
ಅತಿ ಮತುಗಳು ಬೇಡ ಅತಿ ಮೌನ ಬೇಡಾಅತಿ ತಿನಸು ಬೇಡ ಅತಿ ಉಪವಾಸ ಬೇಡಾಅತಿ ‘ಹಾರವು ಬೇಡ ಅತಿ ‘ನಯ ಬೇಡಾಅತಿ ಉದಾರತೆ ಬೇಡ ಜೀನತನ ಬೇಡಾ ೨೬
ಭೂ’ುಂಗೆ ಭಾರವಾಗುತ ತಿರುಗಬೇಡಾಕೂಳಿಂಗೆ ಕಾಳಾಗಿ ನೀ ಕೂಡಬೇಡಸಾಲ ಸಿಗುವಾಗ ಸಂತೋಷ ಪಡಬೇಡಾಸಾಲವೇ ಶೂಲವೆಂಬುದು ಮರೆಯಬೇಡಾ ೨೭
ಹನಿಗೆ ಹನಿ ಕೂಡಿದರೆ ಹಳ್ಳದಾಗುವುದುತೆನಿಗೆ ತೆನಿ ಕೂಡಿದರೆ ರಾಶಿಯಾಗುವುದುಕ್ಷಣಬಿಡದೆ ಕಂಡಲ್ಲಿ ‘ದ್ಯೆಯನು ಗಳಿಸುಕಣಬಿಡದೆ ಧನ ಧಾನ್ಯಗಳನು ಸಂಗ್ರ’ಸು ೨೮
ಮಾತು ಕೃತಿಗಳಿಗೆ ಬಲು ಮೇಳ’ರಬೇಕುನೀತಿಯೊಳು ತನ್ನ ಮನಸಾಕ್ಷಿ ಇರಬೇಕುಮಾತು ಬಲು ಸ’ುದ್ದು ಸತ್ಯ’ರಬೇಕುಸತ್ಯ’ಲ್ಲದ ಸುಳ್ಳು ಸ’ ಮಾತು ಸಾಕು ೨೯
ಐಕ್ಯ’ದ್ದರೆ ಸೌಖ್ಯ ಭೇದದೊಳು ಬೇದಾಐಕ್ಯ’ದ್ದರೆ ಬಲವು ಕ್ಷಯಬೇನೆ ಭೇದಾಐಕ್ಯ’ದ್ದರೆ ‘ಗ್ಗು ಭೇದದೊಳು ಕುಗ್ಗುಐಕ್ಯದಿಂದ ಸ್ವಾತಂತ್ರ್ಯ ರಥವನ್ನು ಜಗ್ಗು ೩೦
ತನ್ನ ಅಭಿಮಾನ ತನ್ನವರ ಅಭಿಮಾನತನ್ನ ಕುಲಗೋತ್ರ ಜಾತಿಯ ಸ್ವಾಭಿಮಾನತನ್ನ ಭಾಷಾರಾಷ್ಟ್ರ ಧರ್ಮಾಭಿಮಾನಮಾನವನಿಗಿರಬೇಕು ಇಲ್ಲದವ ‘ಶ್ವಾನಾ’ ೩೧
ತನ್ನತನ ಬಿಡಬೇಕು ತನ್ನವರಿಗಾಗಿತನ್ನವರ ಕುಲಗೋತ್ರ ಜಾತಿಗಳಿಗಾಗಿ ಕುಲಗೋತ್ರ ಜಾತಿಗಳ ತಾಯ್ನಾಡಿಗಾಗಿತಾಯ್ನಾಡು ನುಡಿಧರ್ಮ ಪರಮಾತ್ಮಗಾಗಿ ೩೨
ತನ್ನ ಉದ್ಯೋಗ ಮನಮುಟ್ಟಿ ಮಾಡುವರುಉಣಲು ಅಧಿಕಾರ ಆಮೇಲೆ ದೊರಕುವದುಉಣುವಾಗ ಶ್ರೀಹರಿಯ ಸ್ಮರಣೆ ಮಾಡುವದುಮನೆಯೊಳಗೆ ಶಿಸ್ತು ಶಾಂತಿಗಳ ಕಾಯುವದು೩೩
ಹರಿಕಥಾ ಕೀರ್ತನ ಪುರಾಣ ಪಠಿಸುವದುಸರಸ ವಾಙ್ಮಯದ ಅಭ್ಯಾಸ ಮಡುವದುತರು ಬರುವ ತನ್ನ ವ್ಯವಹಾರ ನೋಡುವದುಪರ ಪರಿಸ್ಥಿತಿಗಳನು ತೂಗಿ ನೋಡುವದು ೩೪
‘ಶ್ರಾಂತಿ ಅಭ್ಯಾಸಿ ಸರಸ ಸಲ್ಲಾಪನಿಶ್ಚಿಂತೆುಂದ ನಿದ್ರೆಯು ಸೌಖ್ಯರೂಪನಿತ್ಯ ಮಾನವನ ದಿನಚರಿಯ ಈ ರೂಫನಿಶ್ರೇಯಸಕೆ ಸುಲಭ ಸಾಧನವು ಭೂಪಾ ೩೫
ಸ್ವಚ್ಛ ಹವೆ ನೀರು ವ್ಯಾಯಾಮ ‘ಶ್ರಾಂತಿಸಾತ್ವಿಕ ಸಸತ್ವಾನ್ನ ಪಾನಗಳ ಪ್ರೀತಿಉಚ್ಚತಮ ಧ್ಯೇಯ ಆಚರಣೆಗಳ ರೀತಿಮೋಕ್ಷಕ್ಕೆ ಸಾಧನವು ಇಹದಿ ಸಂತೃಪ್ತಿ ೩೬
ದೇಹ ಬಿದ್ದರೆ ‘ಂದೆ ಕೀರ್ತಿುರಬೇಕುಕೀರ್ತಿ ಬರುವಂಥ ಕಾರ್ಯವ ಮಾಡಬೇಕುಕಾರ್ಯದೊಳು ಕುಶಲತನ ದಕ್ಷತೆಯು ಇರಬೇಕುಫಲವು ಪರಮಾತ್ಮನಾಧೀನವೆನಬೇಕು ೩೭
ಸರ್ವದಾ ಸುಖವೆ ಇದ್ದವರು ಯಾರುಂಟುಅವರವರ ಕರ್ಮ ಫಲವೇ ಅವರ ಗಂಟುಬೆಳತು ಕತ್ತಲೆಯಂತೆ ಚಕ್ರ ಆರುಗುವದುಸುಖ ದುಃಖ ಬರುವಾಗ ಬಂದು ಹೋಗುವುದು ೩೮
ಅನುಭವದಿ ಹೆಚ್ಚು ಸಾಧನ ಬೆಳೆಯಬೇಕುಅನುಭವದ ಮಾತುಗಳು ಬಚ್ಚಿಡಲು ಬೇಕುಅನುಭವವು ಬಂತೆಂದು ಗರ್ವ ಪಡಬೇಡಾಗರ್ವದಿಂದಲಿ ಮತ್ತೆ ಕೆಳಗಿಳಿಯ ಬೇಡಾ ೩೯
ಅಡಗಿ ಅಂಬಲಿ ಅರ’ ಅಂಚಡಿಯ ಕಡೆಗೆಹುಡುಗರ ಬಲಾರೋಗ್ಯ ನಡೆನುಡಿಯ ಕಡೆಗೆಕಡು ಚಾಣ್ಮೆುಂದ ನೋಡುವದು ಸತಿ ಕೆಲಸಾಅವಳಿಗನುಕೂಲ ಮಾಡುವದು ಪತಿ ಕೆಲಸಾ ೪೦
ಪತಿುಂದಲೇ ಸತಿಯು ಸತಿುಂದ ಪತಿಯುಸತಿಪತಿಯ ಪ್ರೇಮದಿಂದಾತ್ಮದುನ್ನತಿಯುಪತಿಯ ಕೋಪದಿ ಕಲ್ಲು ಆಗುವಳು ಸತಿಯುಸತಿಯ ಶಾಪದಿ ಕತ್ತೆಯಾಗುವನು ಪತಿಯು ೪೧
ಸಾ’ಗಂಜಲು ಬೇಡ ಸಾ’ಗಳಬೇಡಾಸಾವು ಅಂದರೆ ಭಯಂಕರ ತಿಳಿಯಬೇಡಾದೇಹಕ್ಕೆ ಬಾಲ್ಯ ಯೌವನ ಮುಪ್ಪಿನಂತೆದೇಹಾಂತರ ಪ್ರಾಪ್ತಿಯೇ ಮರಣಗೀತೆ ೪೨
‘ದ್ಯಾರ್ಥಿ ಬಡವನಿದ್ದರೆ ಭಿಕ್ಷೆನೀಡುಅಶನಾರ್ಥಿ ಟೊಣಪನಿದ್ದರೆ ದೂರ ಮಾಡುಹಸಿವೆ ಚೆನ್ನಾಗಿ ಇದ್ದರೆ ಊಟ ಮಾಡುಹಸಿಯು ಸಾಕಷ್ಟು ಇದ್ದರೆ ಬಿತ್ತಿನೋಡು೪೩
ಶುದ್ಧ ಆಚರೆಣೆುದ್ದರೆ ಮಾತನಾಡುಬುದ್ಧಿ ಬಲು ಚುರುಕು ಇದ್ದರೆ ವಾದ ಮಡುದುಡ್ಡು ರಗಡಿದ್ದರೆ ಘಡಾಮೋಡ ಮಾಡುಜಡ್ಡು ಇದ್ದರೆ ಪಥ್ಯದುಪವಾಸ ಮಾಡು ೪೪
ಹಾಳುಹರಟೆಯ ಬಿಟ್ಟು ಶ್ರೀ ಹರಿಯ ಸ್ಮರಿಸುಕಾಲುವನು ನೋಡಿ ಸತ್ಕರ್ಮ ಆಚರಿಸುನಾಳೆ ಮಾಡುವೆನೆಂಬ ಮಾತು ದೂರಿರಿಸುನಾಳೆ ಮಾಡುವ ಧರ್ಮ ಇಂದು ನೀ ಮುಗಿಸು ೪೫
ಮನ ಮುಟ್ಟಿ ಸ್ಮರಣೆ ಸಂತತ ಮಾಡಬೇಕುಮನಸು ಓಡಲು ಮತ್ತೆ ಜಗ್ಗಿ ತರಬೇಕುಅನುಭವವು ಬಂದಂತೆ ಮನಸು ಕರಗುವದುಮನಸು ಕರಗಿದರೆ ವಾಸನೆಯು ಅಳಿಯುವದು ೪೬
ಎಲ್ಲ ಕಡೆಯಲಿ ಇರುವನೊಬ್ಬನೇ ದೇವಎಲ್ಲ ನಾಮಗಳಿಂದಲೂ ಕರೆಸಿಕೊಳುವಾಯಾವ ಬೇಕಾದ ಹೆಸರಿನ ದೇವರನ್ನುಭಕ್ತಿುಂ ಭಜಿಸಿದರೆ ಬಂದು ಪೊರೆಯುವನು೪೭
ಧನಕನಕದಾಶೆಯನು ತೊರೆದವನು ಸಂತವನಿತೆಯರ ಬಲೆಯೊಳಗೆ ಸಿಗದವನು ಸಂತಮನದಿ ಮಹಾದೇವನನು ಕಂಡವನು ಸಂತಜನರೊಳು ಜನಾರ್ಧನನ ನೋಡುವನು ಸಂತ ೪೮
ಘೋರ ಯುದ್ಧದಿ ನರನ ರಥವ ನಡೆಸಿಹನುಸೀರೆಯಾಗುತ ಸತಿಯ ಮಾನ ಉಳಿಸಿದನುನೀರಿನವನಾಗಿ ಎಂಜಲವ ಬಳಿದಿಹನುಪರಮ ಪುರುಷನ ಕರುಣೆಗೆಣಿಯು ಉಂಟೇನು ೪೯
ಹೃದಯ ದೊಳಗಿದ್ದ ಶ್ರೀಹರಿಯ ಮರೇತುಕಡುದ್ಯೆನ್ಯ ಬಿಡಬೇಡ ‘ಷಯದೊಳು ಬೆರೆತುಕಾಮಧೇನು’ನ ಕೆಚ್ಚಲೊಳಿದ್ದ ನೀನುಅಮೃತವನು ಬಿಟ್ಟು ರತ್ನವನು ಕುಡಿವೆಯೇನು ೫೦
ಸರ್ವ ದುಃಖಗಳು ನಿರ್ಮೂಲವಾಗುವದುಸಂಸಾರ ಪರಮಾರ್ಥ ಕೂಡಿ ನಡೆಯುವವುಪ್ರಭು ರಾಮಚಂದ್ರನ ಪ್ರಸಾದ ಮ’ಮೆಯನುಪಠಿಸಿ ಆಚರಿಸಿದರೆ ಸುಖದಿ ಬಾಳುವನು ೫೧
ಜಯಜಯತು ಆರ್ಯ ಭೂಮತೆ ‘ಖ್ಯಾತೆಜಯತು ಭಾರತಮಾತೆ ಸರ್ವಜನ ತ್ರಾತೆಜಯಜಯತು ಜಯ’ಂದ ಜನನಿ ಕಡು ಕರುಣಿಜಯ ಜಯತು ಸರ್ವ ಸಂಸ್ರ‍ಕತಿಯ ಮುಕುಟಮಣಿ ೫೨
ಅತಿಥಿ ಬಂದರೆ ಮನ ದೊಡ್ಡದಿರಲಿಒಣಹೆಮ್ಮೆ ಬೇಡ ಆದರದ ಮಾತಿರಲಿಮಾತು ಕೃತಿ ನಿಜ ಪ್ರೇಮ ತುಂಬಿರಲಿಊಟ ಉಪಚಾರದಿಂದ ಸಂತೋಷಗೊಳಲಿ ೫೩
ಗುಡಿಯೇಕೆ ಬೇಕು ಮನದೊಳಗೆ ಹರಿಯುಂಟುಅದರ ಕದ ತೆಗೆಯ ಪ್ರತಿಬಂಧವೇನುಂಟುಗುಡಿಯೊಳಗೆ ಹೊಗಿಸಬೇಕೆಂಬುವುದು ಛಲವುಛಲ ‘ದ್ದರೇನದಕೆ ಆಧ್ಯಾತ್ಮ ಬೆಲೆಯು೫೪
ಮನ ಪ’ತ್ರ’ದ್ದರೆ ದೇವ ಒಲಿವಾಮನಸು ಅಪ’ತ್ರ’ದ್ದರೆ ದೇವ ಕುದಿವಾಮನ ಸುಪ್ರಸನ್ನ’ದ್ದರೆ ದೇವ ಒಲಿವಾಮನಸು ಧುಸುಮುಸು ಇದ್ದರೆ ದೇವ ಕುದಿವಾ ೫೫
ಮನಸು ನಿರ್ಭಯ’ದ್ದರಾ ದೇವ ಒಲಿವಾಮನಸು ನಿರ್ಮಲ’ದ್ದರಾ ದೇವ ಒಲಿವಾಮನಸು ನಿರಹಂಕಾರವಾದಾಗ ಬರುವಾಮನಸು ನಿಷ್ಕಪಟವಾದರೆ ಬಂದು ಪೊರೆವಾ ೫೬
ಅನ್ಯರಿಗೆ ನಿನ್ನ ಭಾರವ ಹಾಕಬೇಢನಿನ್ನ ಯೋಗ್ಯತೆ’ುೀರಿ ಭಾರ ಹೊರಬೇಡನಿನ್ನ ಮನೆತನದ ಜಗಳ ಬೈಲಿಗಿಡಬೇಡಹೆಣ್ಣು ಮಕ್ಕಳ ಮೇಲೆ ಕ್ಕೆ-ಎತ್ತಬೇಡ ೫೭
ನಿನ್ನ ‘ರಿಮೆಯನು ನೀ ಹೇಳಬೇಡಅನ್ಯರನು ಕೀಳೆಣಿಸಿ ಮಾತಾಡಬೇಡಕಣ್ಮುಚ್ಚಿ ಇನ್ನೊಬ್ಬರನುಕರಣೆ ಬೇಡನಿನ್ನ ಸಂಸ್ರ‍ಕತಿಯ ವೈಶಿಷ್ಟ್ಯ ಬಿಡಬೇಡ ೫೮
ಸು’ಚಾರದಿಂದ ಧ್ಯೇಯವ ಗೊತ್ತುಪಡಿಸುಗೊತ್ತುಪಡಿಸಿದ ಧ್ಯೇಯವನ್ನು ನಿತ್ಯಸ್ಮರಿಸುಮುಟ್ಟಲಾ ಧ್ಯೇಯವನು ಶಕ್ತಿ ಸಂಗ್ರ’ಸುಶಕ್ತಿಯನು ಚಾತುರ್ಯದಿಂದ ನೀ ಬಳಿಸು ೫೯
ಸಮಯ ಪ್ರತಿಕೂಲ’ರೆ ವೈರಿಗಳ ನ’ುಸುನ’ುಸಿ ಒಳಹೊಕ್ಕವರ ಬಲವ ಹದಗೆಡಿಸುಶ್ರಮಪಟ್ಟು ಅ’ುತಬಲ ಗುಪಿತದಿಂ ಬೆಳಿಸುಸಮಯ ಸಾಧಿಸಿ ದುಷ್ಟಜನರನು ಸಂಹರಿಸು೬೦
ದೇಹದೊಳು ನೀನುಂಟು ದೇಹ ನೀನಲ್ಲನಾ ಎಂಬ ಜ್ಞಾನ ನಿನಗುಂಟು ಆದಕಿಲ್ಲನೀನು ಈ ದೇಹದಿಂದ ಹೊರಬೀಳಲಾಗಹೆಣವೆಂದು ಕರೆಯುವರು ದೇಹವನು ಬೇಗ ೬೧
ಹುಟ್ಟುವವ ನೀನಲ್ಲ ಹುಟ್ಟುವದು ದೇಹಬೆಳೆಯುವವ ನೀನಲ್ಲ ಬೆಳೆಯುವದು ದೇಹಸಾಯುವವ ನೀನಲ್ಲ ಸಾಯುವದು ದೇಹರೂಢಿಯೊಳು ನಿನಗಿದನು ಹಚ್ಚುವದು ಮೋಹ೬೨
ಖೋಡಿ ಮನವನು ‘ಡಿದು ಸಾಧು ಮಡುವದುಸಾಧು ಮಾಡುತ ನಾಮ – ಘೋಷ ಹಚ್ಚುವದುಓಡಿ ಹೋಗಲು ಮತ್ತೆ ಎಳೆದೆಳೆದು ತಂದುಬೋಧಿಸುತ ನಾಮ ಜಪದೊಳು ಸೇರಿಸೆಂದು ೬೩
ಒಮ್ಮೆ ಹರಿನಾಮದೊಳು ಮನಸು ಸೇರಿದರೆಅದಕೆ ಆಗುವ ಸುಖವು ಆ ರುಚಿಯು ಬೇರೆಆ ರುಚಿಯ ಆ ಸುಖವು ಹತ್ತಿದರೆ ಮನಕೆತಿರುಗಿ ಎಂದಿಗೂ ಅದು ಹೋಗದದು ‘ಷಯಸುಖಕೆ೬೪
ಚಿತ್ತ ಸ್ಥಿರ’ಲ್ಲದಿರೆ ಬುದ್ಧಿ ಸ್ಥಿರ’ಲ್ಲಬುದ್ಧಿ ಸ್ಥಿರ’ಲ್ಲದಿರೆ ಭಾವನೆಯು ಇಲ್ಲಭಾವನೆಯು ಇಲ್ಲದಿದ್ದರೆ ಶಾಂತಿುಲ್ಲ ಶಾಂತಿಯೇ ಇಲ್ಲದವ ಸುಖವೇನು ಬಲ್ಲ ೬೫
ಅನುಕೂಲ ಮತ ಮಾತ್ರ ನೀ ಎಣಿಸಬೇಡಪ್ರತಿಕೂಲ ಮತ ಉಪೇಕ್ಷೆಯ ಮಾಡಬೇಡಅನುಕೂಲ ಪ್ರತಿಕೂಲಗಳನು ತಿಳಿ ತಿಳಿದುಏನಾದರೊಂದು ಸಾಹಸ ಕಾರ್ಯ ಮಾಡು ೬೬
ಉದ್ಯೋಗದೊಳು ಸದಾ ಆನಂದ ಉಂಟುಉದ್ಯೋಗದೊಳಗೆ ಲಕ್ಷ್ಮಿಯ ವಾಸವುಂಟುಉದ್ಯೋಗವನು ಮಾಡಿ ದೇವರನು ಬೇಡುಉದ್ಯೋಗ ಬಿಟ್ಟು ಕುಳಿತರೆ ನಿನಗೆ ಕೇಡು ೬೭
ದೀರ್ಘ ಯೋಚನೆಯ ಮಾಡುತ ನೀ ಕೂಡಬೇಡಯೋಗ್ಯ ಮುಂಬೆಳಕು ಇಲ್ಲದೆ ಧುಮುಕಬೇಡ’ಗ್ಗಿ ಮೈಮರೆಯದಿರು ದೈವ ತೆರೆದಾಗಕುಗ್ಗಿ ಎದೆ ಒಡೆಯದಿರು ‘ಧಿ ಕಾಡುವಾಗ ೬೮
ದೈವವನಕೂಲ’ದ್ದಾಗ ಎಚ್ಚರಿಕೆಗರ್ವ ಸೇರುವದು ತಿಳಿಯದಲೆ ಎಚ್ಚರಿಕೆಗರ್ವದಿ ಸ್ರ‍ಮತಿಗೆ ಸಮ್ಮೋಹವೆಚ್ಚರಿಕೆಸಮ್ಮೋಹದಿಂದ ಸರ್ವನಾಶ ಎಚ್ಚರಿಕೆ ೬೯
ದೈವ ಯತ್ನಗಳ ಗತಿ ಗಹನವಾಗಿಹುದುಒಬ್ಬೊಬ್ಬರನುಭವವು ಒಂದೊಂದು ಇಹುದುವಾದದಿಂ ಬಗೆಹರಿಯದಂಥ ‘ಷಯ’ದುಇದರ ಹದ ತಿಳಿದು ಯತ್ನವಂ ಮಾಡುವದು ೭೦
ಜೋಲು ಮೋರೆಯ ಹಾಕಿ ನೀ ಕೂಡಬೇಡಕಾಲು ಅಪ್ಪಳಿಸಿ ಕೆಲಸಕೆ ಹತ್ತಬೇಡಸ್ಟೈಲು ಉಡುಗೆಯ ಉಟ್ಟುಕೊಂಡೋಡಬೇಡಮೈಲಿಗೆಯ ಮನದಿಂದ ಜಪ-ಮಾಡಬೇಡ ೭೧
ಕಾರ್ಯ ಮಾಡುವ ಜನಕೆ ಮರ್ಯಾದೆ ಮಡುಬಾಯಬಡುಕ ಜನರ ಕೃತಿಯನು ತಿಳಿದು ನೋಡುಧೈರ್ಯದಿಂ ದುರ್ಜನರ ಕೂಡ ಹೋರಾಡುಆರ್ಯ ಸಂಸ್ರ‍ಕತಿಯ ಸಂರಕ್ಷಣೆಯ ಮಾತು ೭೨
ಗುಣ ಕರ್ಮಗಳ ನೋಡಿ ಮಾನವನು ಮಾಡುಒಣ ಜನ್ಮ ಜಾತಿ ತುಸು ದುರ್ಲಕ್ಷ ಮಾಡುಗುಣ ಕರ್ಮದಿಂದ ಅತಿ ನೀಚನಾದವನುಜನುಮ ಮಾತ್ರದಿ ಹೇಗೆ ಶ್ರೇಷ್ಠನಾಗುವನು೭೩
ತಪ್ಪು ಇಲ್ಲದೆ ಕ್ಷಮೆಯ ಬೇಡುವವ ಮೂರ್ಖತಪ್ಪಿದರು ಒಪ್ಪಿದವನು ಕಡುಮೂರ್ಖತಪ್ಪು ಆಗುವದು ಮಾನವನ ಸಹಜಗುಣತಪ್ಪು ಒಪ್ಪುತ ತಿದ್ದಿಕೊಳ್ಳುವದು ಸುಗುಣ ೭೪
ನಿನ್ನ ಬಂಧುಗಳೆ ನಿನಗಾಗುವರು ಕೊನರೆಗೆಅನ್ಯರಿಗೆ ಆ ಕರುಳು ಬರುವದು ಹೇಗೆನಿನ್ನ ಬಂಧುಗಳೆಲ್ಲ ಮೂರ್ಖರೆನಬೇಡಅನ್ಯರಿಂದ ನೀ ಮೂರ್ಖನೆನಿಸಿಕೊಳಬೇಡ ೭೫
ಜನರ ಮನೆಗಳು ಬಹಳ ದಿವಸ ಇರಬೇಡಇರುವದೇ ಆದರವರಿಗೆ ಭಾರ ಬೇಡಅರಿತವರ ಕೆಲಸಗಳ ಮನೆಯಂತೆಮಡುಗೃಹದ ರೀತಿರಿವಾಜು ಕೆಡದಂತೆ ನೋಡು ೭೬
ದುಡ್ಡು ಇದ್ದಾಗ ಎಲ್ಲರ ಪ್ರೀತಿಯುಂಟುದುಡ್ಡು ಕಳಕೊಂಡು ಹೋದರೆ ಮೋರೆಗಂಟುದುಡ್ಡಿನಿಂದಲೆ ಜನರ ಬೆಲೆ ಕಟ್ಟಬೇಡದೊಡ್ಡ ಗುಣಗಳನರಿತು ನ’ುಸದಿರಬೇಡ ೭೭
ಧನದ ‘ಷಯದಿ ಖಂಡ ತುಂಡ ಇರಬೇಕುಮನಬಿಚ್ಚಿ ಮೊದಲಿಗೆ ಮಾತಾಡಬೇಕುಒಣ ಮಬ್ಬುತನ ಮನದಮಂಡಿಗೆಯು ಬೇಡಕೊನೆಗೆ ಗುಣಗುಟ್ಟುತಲಿ ಹಳಹಳಿಸಬೇಡ ೭೮
ಯಂತ್ರಮಯ ಜೀವನದ ಯುಗವು ನಡೆದಿಹುದುಸ್ವಾತಂತ್ರ್ಯವೆಲ್ಲಿ ಬಡವರಿಗೆ ಉಳಿದಿಹುದುದ್ರವ್ಯಮಯವಾದ ವ್ಯವಹರ ಸಾಗಿಹುದುದೇವ ಧರ್ಮಕೆ ಅರ್ಧಚಂದ್ರ ಬಂದಿಹುದು ೭೯
ತಾಯ್ತನದ ಸುಖಕೆ ಸರಿಯಾದ ಸುಖ’ಲ್ಲತಾಯ್ತನದ ಕರುಳಿಂಗೆ ಬೆಲೆಯಂಬುದಿಲ್ಲತಾುಗಿಂದಧಿಕ ದೈವತವು ಬೇರಿಲ್ಲತಾಯ್ – ಸೇವೆಗಿಂದಧಿಕ ಪುಣ್ಯಾವೆ ಇಲ್ಲ ೮೦
ಚನ್ನಾಗಿ ಸಂಸಾರ ಮಾಡಬಲ್ಲವನುಸುಲಭದಿಂ ಪರಮಾರ್ಥವನು ಸಾಧಿಸುವನುಸಂಸಾರದೊಳಗಿದ್ದು ಸನ್ಯಾಸಿಯೆನಿಸುಸನ್ಯಾಸಿಯಾಗಿ ಸಂಸಾರದೊಳು ಈಸು೮೧
ಮನೆಯಲ್ಲಿಯೇ ಸ್ವರ್ಗ ಮನೆಯಲ್ಲಿಯೇ ನರಕಜಾಣರಿಗೆ ತಿಳಿಯುವದು ನೋಡಿದರೆ ಗಮಕಜಾಣ ಪ್ರೇಮಳ ಪತಿಯಮನೆ ಸತಿಗೆ ಸ್ವರ್ಗಕೋಣ ಕರ್ದಮ ಕಟುಕ ಪತಿುರಲು ನರಕ ೮೨
ಪತಿಯ ಮನ ಒಲಿಸಿ ಕೋತಿಯ ತೆರದಿ ಕುಣಿಸಿಅತ್ತೆ ಮಾವರು ಬಂಧುಬಳಗವನು ಹೊರನುಗಿಸಿಸ್ವೇಚ್ಛೆುಂ ಎದೆಮೆಟ್ಟಿ ಬೇರಿರುವ ಸೊಸೆಸೊಸೆಯಲ್ಲ ರಕ್ಕಸಿಯು ಕಿ’ಹೊಕ್ಕ ತೊಣಸಿ೮೩
ಸರ್ವದಾ ಸತ್ವಗುಣಿ ಶಾಂತ ನಿರುತಿಹನುರಾಜಸನ ಶಾಂತಿುಂ ಧಡಪಡಿಸುತಿಹನುಕಿರಿಕಿರಿಯು ತಾಮಸಿಗೆ ಬಿಟ್ಟುರುವದಿಲ್ಲಾತ್ರಿಗುಣಗಳ ದಾಟದಿದ್ದರೆ ಮೋಕ್ಷ’ಲ್ಲಾ ೮೪
ಅನ್ನದೊಳು ಮುಖ್ಯ ಸಾತ್ವಿಕ ಗುಣವು ಬೇಕುಸಂಪಾದನೆಯ ಮಾರ್ಗ ಸರಳ’ರಬೇಕುಸಂಸರ್ಗ ಸಂಸ್ಕಾರ ಸುಷ್ಟ’ರಬೇಕುಸಾತ್ವಿಕಾನಂದ ಮನದಿಂದ ಉಣಬೇಕು ೮೫
ಮೂಲ ಮನ’ಹುದು ಮೂರರೊಳೊಂದು ಪಾಲುಸನ್ನಿವೇಶಗಳಿಂದ ಮತ್ತೊಂದು ಪಾಲುತಿನ್ನುವಾ ಅನ್ನದಿಂದ ಉಳಿದೊಂದು ಪಾಲುಮೂರು ಕೂಡಿದ ಮನವೆ ನಿನಗೆ ಹರಿಗೋಲು೮೬
ಪ್ರಾರಬ್ಧವನುಭ’ಸಿ ತೀರಿಸಲು ಬೇಕುಅಪರೋಕ್ಷದಿಂದ ಸಂಚಿತ ಕಳಿಯಬೇಕುಸರ್ವದಾ ನಿರಪೇಕ್ಷ ಸತ್ಕರ್ಮ ಬೇಕುನಿರಭಿಮಾನದಿ ಕರ್ಮದ ಬೀಜ ಸುಡಬೇಕು೮೭
ದಯೆಯು ಧರ್ಮದಮೂಲ ದಯವಂತನಾಗುಭಯವು ದುಃಖದಮೂಲ ನಿರ್ಭಯನು ಆಗುಲೋಭ ಪಾಪದ ಮೂಲ ನಿರ್ಲೋಭಿಯಾಗುತ್ಯಾಗ ಪುಣ್ಯದ ಮೂಲ ತ್ಯಾಗಿ ನೀನಾಗು ೮೮
ನಿನ್ನ ಉದ್ಧಾರವನು ನೀ ಮೊದಲ ಮಾಡುಮನೆತನದ ಉನ್ನತಿಯಕಡೆಗೆ ನೀ ನೋಡುನಿನ್ನ ನೆರೆಹೊರೆ ಜನರ ಕಲ್ಯಾಣಮಾಡುಆಮೇಲೆ ‘ಶ್ವದದ್ಧಾರ ಮಾತಾಡು ೮೯
ಹಳೆಯದಿದ್ದರೆ ಎಲ್ಲ ಒಳಿತು ಎನಬೇಡಹೊಸದೆಂಬ ಮಾತ್ರದಿಂದಲೆ ಹಳಿಯಬೇಡಒಳಿತು ಕೆಡಕುಗಳು ಎಲ್ಲದರಲ್ಲಿ ಇಹವುತಿಳಿದು ಉಪಯೋಗಿಸಿದರದು ಜಾಣತನವು ೯೦
ಕಾಲಮ’ಮೆಯ ಕಷ್ಟ ಬಂದಿತೆನಬೇಡಕಾಲಕ್ಕೆ ಹೆಚ್ಚಿನ ಮಹತ್ವ ಕೊಡಬೇಡಕಾಲ ನಿರ್ಮಾಣ ‘ರಿಯರ ಕೈಯ್ಯೊಳಿಹುದುಎಂಥ ‘ರಿಯರು ಅಂಥ ಕಾಲ ಬರುತಿಹುದು ೯೧
‘ರಿಯರಾಚರಣಿಯಂ ಮನೆತನದ ಬೆಳಕು’ರಿಯರಾಚರಣೆುಂ ಮನೆತನಕೆ ಹುಳುಕು’ರಿಯರೇ ಕಾರಣರು ಮನೆಯ ಸುಸ್ಥಿತಿಗೆ’ರಿಯರೇ ಕಾರಣರು ಮನೆಯ ದುಸ್ಥಿತಿಗೆ ೯೨
ದೇಹವೇ ರಥವು ಸಾರಥಿಯು ಪರಮಾತ್ಮಜೀವ ಅರ್ಜುನ ಧರ್ಮ ಸಮ್ಮೂಡ ಆತ್ಮಸರ್ವ ಭಾವದಿ ಶರಣುಹೊಗು ಸಾರಥಿಗೆಸಾರಧಿಯು ಮುಟ್ಟಿಸುವ ನಿನ್ನ ಸದ್ಗತಿಗೆ ೯೩
ಜ್ಞಾನಪೂರ್ವಕ ”ತ ಕರ್ಮಗಳ ಮಾಡುಚಿತ್ತಶುದ್ಧಿಗೆ ಕರ್ಮಸಾಧನವು ನೋಡುಉದ್ದೇಶ ಪರಿಣಾಮಗಳ ತೂಕ ಮಾಡುಮೂಢತನ ರೂಢಿಗಳನರಿತು ಬಿಟ್ಟುಬಿಡು ೯೪
ಬಾಲಭಾವದಿ ದೇವರೊಳು ಹಟವಮಾಡುಬಾಲಭಾವದಿ ದೇವರೊಳು ಮಮತೆಮಾಡುಬಾಲಭಾವದಿ ದೇವರಿಗೆ ಬೇಡಿಕಾಡುಬಾಲಭಾವದಿ ನಿನ್ನ ಸರ್ವಸ್ವ ನೀಡು ೯೫
ಮಾತೃಭಾವದಿ ಅವನ ತೊಡೆಯ ಮೇಲಾಡುಮಾತೃಭಾವದಿ ನೀನು ವಾತ್ಸಲ್ಯ ಮಾಡುಮತೃಭಾವದಿ ತೂಗಿ ತೊಟ್ಟಿ ಮುದ್ದಾಡುಮಾತೃಭಾವದಿ ಬಿದ್ದು ಕಿರಿಕಿರಿಯಮಾಡು ೯೬
ಸಖ್ಯಭಾವದಿ ಹಾಲು ಮೊಸರೆರೆಯ ಬೇಕುಸಖ್ಯಭಾವದಿ ಬೆಣ್ಣೆ ಬಾಯ್ತುಂಬ ಬೇಕುಸಖ್ಯಭಾವದಿ ಕೊಳಲಿನೊಳು ಕುಣಿಯಬೇಕುಸಖನೆಂದು ಗೋಪಿಯಂದದಿ ಕುಣಿಸಬೇಕು ೯೭
ನಿನ್ನೊಳಗೆ ಆತನನು ನೀ ನೋಡಬೇಕುಅವನೊಳಗೆ ಸರ್ವವನು ನೀ ಕಾಣಬೇಕುತನ್ನತನ ಮರೆತು ಅವನೊಳು ಬೆರೆಯಬೇಕುಅವನ ಸೂತ್ರದ ಬೊಂಬೆ ನೀನಾಗಬೇಕು ೯೮
‘ುೀನನಾದರೆ ಅವನ ಕಣ್ಣು ನೀನಾಗು ಕೂರ್ಮನಾದಾಗವನ ಬೆನ್ನು ನೀನಾಗುವರಾಹರೂಪದ ಹರಿಯ ಕೋರೆ ನೀನಾಗುನರಹರಿಗೆ ನೀ ಹದನವಾದ ನಖವಾಗು ೧೦೦
ವಟುವಾಮನಗೆ ಪಾದರಕ್ಷೆ ನೀನಾಗುದುಷ್ಟ ಸಂಹಾರಕನ ಪರಶು ನೀನಾಗುಅಟ’ವಾಸಗೆ ಬಿಲ್ಲುಬಾಣ ನೀನಾಗುದಿಟ್ಟ ಗೊಲ್ಲನ ಕರೆದ ಕೊಳಲು ನೀ ನಾಗು ೧೦೧
ಬುದ್ಧನಾದರೆ ಬುದ್ಧಿವಂತ ನೀನಾಗುಕಲ್ಕಿಯಾದರೆ ಚಲುವ ಕುದುರೆ ನೀನಾಗುಎಲ್ಲಿದ್ದರೂ ಅವನ ನೆರಳು ನೀನಾಗುಪ್ರಹ್ಲಾದ ದ್ರುವ ಅಂಬರೀಷ ನೀನಾಗು ೧೦೨
ಧನದೊಳಗೆ ಧನ ತವೋಧನನು ನೀನಾಗುಭಾಗ್ಯದೊಳು ವೈರಾಗ್ಯ ಭಾಗ್ಯವಂತನಾಗುಇಂದ್ರಿಯಂಗಳ ಜಯದಿ ನೀ ಶೂರನಾಗುಪಂಡಿತನು ತತ್ವದಾಚರಣೆಯೊಳು ಆಗು೧೦೩
ಸ್ವಾತಂತ್ರವೇ ಸ್ವರ್ಗ ಪರತಂತ್ರ ನರಕಮಾತೃಭೂ’ುಯ ಸೇವೆ ಮಡದವ ಶುನಕಪತಿತರುದ್ಧಾರ ಮಾಡುವದು ಸದ್ಧರ್ಮಪತಿತರನು ತುಳಿಯುವದು ಸೈತಾನಕರ್ಮ ೧೦೪
ಸಂಸಾರ ಸಾಗರವ ದಾಟಿಸಲು

 

ಗರುವ ರ’ತನ ಮಾಡು ಗುರುರಾಯನೇಸರ್ವದಾ ಮನದೊಳಗೆ ನಿಲ್ಲು ಮ’ಪತಿರಾಯ ಪ
ಅಹಂಕಾರವನು ಅಳಿಸು ಮಮಕಾರವನು ಮರೆಸುಸಕಲಕ್ಕು ಶ್ರೀ ಹರಿಯ ಪ್ರೇರಣೆ ಎಂದೆನಿಸುಲಕು’ುವಲ್ಲಭನ ಕರೆತಂದು ಹೃದಯದಲಿ ನಿಲಿಸುಭಕುತಿಯನು ಹರಿಗುರುಗಳಲಿ ಸ್ಥಿರವಾಗಿ ಇರಿಸು ೧
ಆರು ಅರಿಗಳಗೆಲಿಸು ಮೂರುದಿನದಿನಬೆಳೆಸುಮೂರುರಾಶಿಯ ಬಿಡಿಸಿ ಮೂರು ವ್ರತ ‘ಡಿಸುಮೂರಾರು’ಧ ಭಕುತಿ ಮೂರು ಕಾಲಕೆ ಕೊಟ್ಟುಮುರಾರಿ ಮೂರುತಿಯ ಮನದೊಳಗೆ ನಿಲಸು೨
ಮನಪ’ತ್ರವ ಮಾಡು ಮನದೊಳಗೆ ನೀಕೂಡುಮನದ ವ್ಯಕ್ತಿಗಳನು ಅಂತರಮುಖವ ಮಾಡುಜನುಮ ಜನುಮದಿ ಹರಿಯ ದಾಸರ ಮನೆಕಾಯ್ವಶುನಕನೆಂದೆನಿಸಿ ಭೂಪತಿ’ಠ್ಠಲನ ತೋರು ೩

 

ಗೋಪಾಲದಾಸರಾಯರ ಪಾದ ನಂಬಿದರೆತಾಪತ್ರಯವ ಕಳೆವರು
ಭೂಪಾಲಮಧ್ಯ ಪಾದಾಬ್ಜಸದ್ಗುರು ಜಗನ್ನಾಥದಾಸರಿಗೆ ತಮ್ಮಾಯುಷ್ಯ ನೀಡಿದ ಪ
‘ಜಯದಾಸರ ಪರಮ ಪ್ರೀತಿ ಪಾತ್ರರು ಇವರುಪರಮ ಭಗವದಭಕ್ತರು ‘ಭಕ್ತಿಯಲಿ ಭಾಗಣ’್ಣ ನೆಂಬ ಗೌರವ ಪಡೆದಭಾಗ್ಯಶಾಲಿಗಳು ಇವರು ಸುಖದ ಪ್ರಾರಬ್ಧ’ವರದು ರಾಜಯೋಗಿಗಳುದುಃಖವೆಂಬುದೆ ಅರಿಯರು ನಿತ್ಯಾ ಉತ್ಸವ ನಿತ್ಯ ಮಂಗಲವು ಇವರು ಇದ್ದಲ್ಲಿ ನಿತ್ಯ ಸುಖವೇ ಸುಖವು ೧
ಜ್ಞಾನ ಗಂಗಾ ನದಿಯು ವೈರಾಗ್ಯ ಯಮುನೆಯು ಸದ್ಭಕ್ತಿ ಸರಸ್ವತೀ ಈ ಬಗೆಯ ತ್ರಿವೇಣಿಸಂಗಮವು ಇವರಲ್ಲಿ ಎದ್ದು ಕಾಣುವದು ನಿತ್ಯ ‘ಜಯರಾಯರ ನೆರಳಿನಿಂದಲಿ ಸರ್ವದಾ ಅವರಲ್ಲಿ ಇವರವಾಸಗುರುಭಕ್ತಿಯಲಿ ಇವರ ಸರಿ’ುಗಿಲು ಯಾರಿಲ್ಲಭಾಗಣ್ಣದಾಸರಿವರೇ ಅವರು ೨
ಪಂಢರಾಪುರದ ಶ್ರೀ ಪಾಂಡುರಂಗನು ಇವರ ಭಕ್ತಿಭಾವಕೆ ಮೆಚ್ಚಿದಾಬಹುದಿವಸ ತನ್ನದರುಷನಕೆ ಬರಲಿಲ್ಲೆಂದು ಕಳವಳದಿ ಪಾಂಡುರಂಗಾಕುದುರೆಯನು ಏರಿ ತಾನೆ ಅವರಬಳಿ ಪೋಗಿ ‘ಆಲೆ ನಾ” ಎಂದು ಕರೆದಾಮರುದಿನವೆ ಪಂಢರಿಗೆ ತ್ವರದಿ ಓಡುತ ಹೋಗಿಭೂಪತಿ’ಠ್ಠಲನ ಬಿಗಿದೊಪ್ಪಿಕೊಂಡಾ ೩

 

ಜುೀಂದ್ರಾಜುೀಂದ್ರಾಸುಜನ ಭಜಕಮನ ಚಕೋರಚಂದ್ರಾ ಪ
ಶೈವಾದ್ವೈತದಪ್ಪಯ್ಯ ದೀಕ್ಷಿತರ ಸದ್ದು ಅಡಗಿಸಿದ’ದ್ಯಾ – ಸಮುದ್ರು ೧
ಎಮ್ಮೆ ಬಸವನ ಹೆಮ್ಮೆ ಮುರಿದುಆ ಕುಂಭೇಶ್ವರನನು ಒಲಿಸಿದ ಧೀರಾ ೨
ವ್ಯಾಸ ಮುನಿಕುವರ ‘ಷ್ಣುತೀರ್ಥ ನೀಕೃಷ್ರ್ಣಾರ್ಪಣವೆಂದರು ಶ್ರೀಮಠಕೆ ೩
ರಾಶಿ ರಾಶಿ ಗ್ರಂಥಗಳ ‘ರಚಿಸಿದದೇಶಕಾರ್ಯ ‘ದ್ವಾಂಸರ ಪ್ರೀಯಾ ೪
ಮೂಲ ವೇಣುಗೋಪಾಲಕೃಷ್ಣ ನಿನ್ನಮೂಲರಾಮನ ಸೇವೆಗೆ ಕಳಿಸಿದ ೫
ಸರ್ವಕಲೆಗಳಲಿ ಪರಿಪೂರ್ಣನು ನೀ ಸರ್ವಶಾಸ್ತ್ರ ಸಂಪನ್ನ ಪ್ರಸನ್ನ ೬
ಶೈವಾದ್ವೈತರ ಗೆದ್ದು ಓಡಿಸಿಕಾವೇರಿತಟ ಪಾವನ ಮಾಡಿದಿ ೭
ಮಧ್ವ-ಮತಾಬ್ಧಿಗೆ ಪೂರ್ಣ ಸುಚಂದ್ರಾವಾದಿತಿ’ುರಮಾರ್ತಂಡ ಪ್ರಚಂಡಾ ೮
ತಾಪತ್ರಯ ಪರಿಹರಿಸಿ ಕೈಪಿಡಿಯೋಭೂಪತಿ’ಠ್ಠಲನ ಭಕ್ತಿವರ್ಯಾ ೯
ಶ್ರೀ ರಾಘವೇಂದ್ರರ ಸ್ತುತಿಪರ ಕೀರ್ತನೆಗಳು

 

ಜೋ ಜೋ ಜೋ ಜೋ ಗೋಪಿಯ ಕಂದಾಜೋ ಜೋ ಜೋ ಜೋ ಸಚ್ಚಿದಾನಂದಾಜೋ ಜೋ ಜೋ ಜೋ ಮಲಗೋ ಮುಕುಂದಾಜೋ ಜೋ ಇಂದಿರಾರಮಣ ಗೋ’ಂದಾ ಜೋ ಜೋ ಪ
ಅಣುರೇಣು ತೃಣಕಾಷ್ಠ ಪರಿಪೂರ್ಣ ಜೋ ಜೋಪ್ರಣತಕಾಮದ ಪದ್ಮಜಾರ್ಜಿತ ಜೋ ಜೋಜಾಣೆರುಕ್ಮಿಣಿಯರಸಿ ಶ್ರೀಕೃಷ್ಣ ಜೋ ಜೋಜಾನಕಿ ಜೀವನ ಶ್ರೀರಾಮ ಜೋ ಜೋ ೧
ಸ್ಟೃಸ್ಥಿತಿಲಯ ಕಾರಣ ಜೋ ಜೋಇಟ್ಟಿಗೆ ಮೇಲ್ನಿಂತ ‘ಠ್ಠಲ ಜೋ ಜೋಬೆಟ್ಟದ ತಿಮ್ಮಪ್ಪ ಶೆಟ್ಟಿಯೆ ಜೋ ಜೋದಿಟ್ಟ ಶ್ರೀ ಉಡುಪಿಯ ಕೃಷ್ಣನೆ ಜೋ ಜೋ ೨
ಜೋ ಜೋ ಶ್ರೀರಾಮದೂತ ಹನುಮಂತಾಜೋ ಜೋ ಜೋ ಭೀಮ ದ್ರೌಪದಿಕಾಂತಾಜೋ ಜೋಯತಿವರ ಆನಂದತೀರ್ಥಾಜೋ ಜೋ ಮೂರಾವತಾರ ‘ಖ್ಯಾತ ಜೋ ಜೋ ೩
ಜೋ ಜೋ ಮಧ್ವ ಸಂತಾನ ಮುನಿವೃಂದಾಜೋ ಜೋ ಪ್ರಲ್ಹಾದ ವ್ಯಾಸ ರಾಜೇಂದ್ರಾಜೋ ಜೋ ಗುರುಸಾರ್ವಭೌಮಯತೀಂದ್ರಾಭೂಪತಿ’ಠ್ಠಲನ ಮೋಹದಕಂದಾ ಜೋ ಜೋ ೪

 

ತೋರಮ್ಮಯ್ಯ ಯತಿಕುಲ ಸರ್ವಭೌಮನ್ನ ಪ
ಮೂರವತಾರದ ಪುಣ್ಯರಾಶಿಯನು ತೂರಿಸುಜನರ ಪೊರೆವ ಉದಾರನ ಅ.ಪ
ಅಸುರ ಬಾಲನಂತೆ ಹರಿಯಲಿ ಅಸಮ ಭಕ್ತಿಯಂತೆ
ಅಸುರಾರಿಯ ನರಸಿಂಹರೂಪವನು ಅಸುರತಾತನಿಗೆ ತೋರ್ದನಂತೆ ೧
ಪರಮಹಂಸನಂತೆ ಪುರಂದರದಾಸರ ಗುರು ಅಂತೆ
ಅರಸನ ರಕ್ಷಿಸಿ ಅರಸನಾಗಿ ಕ್ಷಣ ಉದ್ಗ್ರಂಥಗಳನು ರಚಿಸಿದನಂತೆ ೨
ಕಡುಬಡತನವಂತೆ ಸುದಾಮನ ಮರಸಿ ಬಿಟ್ಟಿತಂತೆ
ಸಡಗರದಿಂದ ಸನ್ಯಾಸಿಯಾಗಿ ದರ್ಮಸಾಮ್ರಾಜ್ಯವನಾಳಿದನಂತೆ೩
ಕಾಮಧೇನುವಂತೆ ಕಲಿಯುಗ ಕಲ್ಪವೃಕ್ಷವಂತೆ
ನೇಮದಿಂದ ಸೇವೆಯನು ಮಾಡಿದರೆ ಕಾ’ುತಾರ್ಥಗಳನೀಯ್ವನಂತೆ ೪
ಸಾಲವಪುರದಂತೆ ಭಕ್ತರಿಗೊಲಿದು ಬಂದನಂತೆ
ಮೂಲಸ್ಥಾನ ಮಂತ್ರಾಲಯವಂತೆ ಭೂಪತಿ’ಠಲನ ತೋರುವನಂತೆ ೫

 

ದಯಮಾಡಿ ಪಿಡಿ ಎನ್ನಕೈಯ್ಯಾ ಗುರುರಾಯಾ ಪ
ಕರುಣಾಸಾಗರನೆಂಬ ಬಿರುದು ನಿನಗೆ ಉಂಟು ಅ.ಪ
ನಾನು ನನ್ನದು ಎಂಬ ‘ೀನ ಬುದ್ದಿಯ ಬಿಡಿಸುಸಾನುರಾಗದಿ ಮನಸನು ಧರ್ಮದಲ್ಲಿರಿಸುಮಾನಾಪಮಾನಕ್ಕೆ ‘ಗ್ಗದೆ ಕುಗ್ಗದೆಧ್ಯಾನಾನಂದದೊಳೆನ್ನ ಇರಿಸಯ್ಯಾ ಸ್ವಾಮಿ ೧
ದೇಹ ನನ್ನದು ಎಂಬ ದುರಭಿಮಾನವ ಬಿಡಿಸುದೇಹಾನುಬಂಧುಗಳ ಮೋಹಬಿಡಿಸುದೇಹಗೇಹಗಳೆಲ್ಲ ದೇವರ ಸ್ವತ್ತೆಂಬಸುಜ್ಞಾನವನು ಕೊಟ್ಟು ಸಲುಹಯ್ಯಾ ಸ್ವಾಮಿ ೨
ದುಷ್ಟ ಬುದ್ಧಿಯು ಎನಗೆ ಹುಟ್ಟದಂತೆ ಮಾಡುಕೆಟ್ಟಜನರ ಗಾಳಿ ತಟ್ಟದಿರಲಿಎಷ್ಟು ಬೇಕಾದಷ್ಟು ಕಷ್ಟಬಂದರು ಸಹಗಟ್ಟ್ಯಾಗಿ ನಿನ್ನಲ್ಲಿ ಭಕ್ತಿಹುಟ್ಟಲಿ ಸ್ವಾಮಿ ೩
ಭೇದ ಅಭೇದದ ಮರ್ಮವ ತಿಳಿಸಯ್ಯಾಸಾಧು ಸಜ್ಜನರ ಸಂಗದೊಳೆನ್ನ ಇರಿಸುಮೋದತೀರ್ಥರ ಮತದ ಸುಜ್ಞಾನವನು ಕೊಟ್ಟುಭೂದೇವ ವಂದ್ಯ ಭೂಪತಿ ‘ಠ್ಠಲನ ತೋರು ೪

 

ದಾಸರಾಜಾ ಪುರಂದರ ದಾಸರಾಜಾ ಪ
ದಾಸರಾಜ ಹರಿದಾಸಪೀಠ ಸಂ-ಸ್ಥಾಪಿಸಿ ಘೋಸಿ ಬೆಳೆಸಿದ ಧೀರಾ ೧
ವ್ಯಾಸರಾಯರಿಂದ ದಾಸದೀಕ್ಷೆಯನುನೀ ಸ್ವೀಕರಿಸಿದಿ ಭೂಸುರವಂದ್ಯಾ ೨
ಶ್ರೀನಿವಾಸ ನವಕೋಟಿ-ನಾರಾಯಣದಾನ ಧರ್ಮದಲಿ ಬಲು ಜಿಪುಣಾ ೩
ಭೂಸುರ ವೇಷದಿ ದೇಶಾವರಿಗೆಶ್ರೀಶ ಬಂದರೆ ಷಣ್ಮಾಸ ಕಾಡಿದೆಯ ೪
ಸಾಪಾದ ಪೈಸಾಗಳ ರಾಶಿ ಸುರು’ ನೀಒಂದು ಪೈಸೆ ಆರಿಸಿಕೊ ಎಂದಿ ೫
ಸೋತು ಶ್ರೀಹರಿಯು ನಿನ್ನ ಸತಿಗೆ ಮೊರೆುಡೆಪತಿವ್ರತೆ ಕೊಟ್ಟಳು ರತ್ನದ ಮೂಗುತಿ ೬
ಭೂಪತಿ’ಠಲನು ಚಮತ್ಕಾರ ತೋರಿಸಿದಾಕ್ಷಣ ನೀ ಹರಿದಾಸನಾದೆಯೊ ೭

 

ಧನ್ಯ ಧನ್ಯ ದತ್ತಾ ದಿಗಂಬರಧನ್ಯ ಮಾನ್ಯ ದತ್ತಾ ಪ
ಧನ್ಯ ಧನ್ಯ ಜಗಮಾನ್ಯ ದಿಗಂಬರಪುಣ್ಯ ಪುರುಷ ಕಾರುಣ್ಯನಿಧೇ
ಅನ್ಯನಲ್ಲ ನಾ ನಿನ್ನವನಯ್ಯಾಎನ್ಯ ಕೈಪಿಡಿದು ಧನ್ಯನ ಮಾಡೋ ೧
ಗಾಲವಕ್ಷೇತ್ರ ನಿವಾಸ ‘ಶೇಷಾಬಾಲ ಸೂರ್ಯ ಸಮಕಾಂತಿ ಪ್ರಕಾಶ
ಕಾಷಾಯಾಂಬರ ಭೂತ ವೇಷಾಜಟಾಧಾರಿ ಪ್ರಭೊ ನಾ ತವದಾಸಾ ೨
ದತ್ತ ದಿಗಂಬರ ಶ್ರೀಪಾದವಲ್ಲಭಭೃತ್ಯ ನಾನು ಮೇಲೆತ್ತಿ ಉದ್ಧರಿಸೊ
ಸತ್ಯಸಂಧನು ನೀನೆ ಮಹಾತ್ಮಚಿತ್ತದಿ ಭೂಪತಿ’ಠ್ಠಲನ ನಿಲಿಸೊ ೩

 

೪. ಯತಿವರ್ಯರುಶ್ರೀ ಜಯತೀರ್ಥರು
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ ‘ಠ್ಠಲನ ಕಂಡು ೧ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ ‘ಠಲನಾದ ೨ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ ‘ಠಲನಾದ ೩ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ ‘ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ ೪ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ’ಠಲಗೆ ೫ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ

 

ನಮೋ ನಮೋ ನರಹರಿಪ್ರಿಯಾನರಸಿಂಹಾರ್ಯ ಪಗಲಗಲಿ ಶ್ರೀ ನರಸಿಂಹಾರ್ಯ ಕರುಣದಿಪೊರೆಸದ್ಗುರುವರ್ಯಾ ಶರಣು ಬಂದೆನು ತಂದೆಮಾಡೊ ದಯಾ ತಂದೆ ಮಾಡೊ ದಯಾಪುನರ್ಜನ್ಮ’ತ್ತ ಮಹಾರಾಯಾ ೧ನಿಮ್ಮ ಚರಿತ್ರವೆನಗೆ ಸ್ಪೂರ್ತಿನಿಮ್ಮ ಸ್ಮರಣೆ ಜ್ಞಾನದ ಜ್ಯೋತಿನಿಮ್ಮ ಅನುಗ್ರಹವೆ ಕೀರ್ತಿನಿಮ್ಮ ಪಾದವೇ ಎನಗೆ ಗತಿ ೨ನಿ’್ಮುಂದಲೇ ಗಾಲವ ಕ್ಷೇತ್ರನಿಮ್ಮ ಮನೆಯು ಸದಾ ಅನ್ನಛತ್ರನಿಮ್ಮ ಆಶ್ರಯವೇ ಜ್ಞಾನ ಸತ್ರನಿಮ್ಮ ಸಂಚಾರವೇ ಮಹಾಯಾತ್ರಾ ೩ಅಷ್ಟೋತ್ರ ಶತಕುಂಭ ಸ್ನಾನಾ ನಿತ್ಯ ಅಷ್ಟೋತ್ರರ ಶತ ಕುಂಭಸ್ನಾನಾಕೃಷ್ಣಾ ಭಾಗೀರಥಿ ನನ್ನಿಧಾನಾ ಸೀತಾರಾಮ ಪ್ರತಿಮಾರ್ಚನಾನಿತ್ಯ ರಾತ್ರಿ ಸುಭೋಜನಾ ೪ಮುದ್ಗಲಾರ್ಯ ಬಾಬಾರ್ಯನಮೋ ಸದ್ಗುರು ನರಸಿಂಹಾರ್ಯ ನಮೋಸದ್ಭಕ್ತಪ್ರಿಯ ಭೂಪತಿ’ಠ್ಠಲ ಗಲಗಲಿ ನರಹರಿತೊರ’ಯ ನರಹರಿ ಶೂರ್ಪಾಲಿಯ ನರಹರಿ ನಮೋ ನಮೋ ೫

 

ನಿನ್ನವನು ನಾನಯ್ಯ ಅನ್ಯರವನಲ್ಲಾನಿನ್ನ ಕರುಳಿನ ಬಳ್ಳಿ ‘ುಡಿಯು ಮ’ಪತಿರಾಯ ಪನಿನ್ನ ಪೌತ್ರನ ಮಗಳ ಬಳ್ಳಿಯೊಳು ಜನಿಸಿ ನಾನಿನ್ನ ಮ’ಮೆಯ ಗುರುತ ಅರಿಯಲಿಲ್ಲಾಸಣ್ಣವನು ನಾನೀಗ ತಪ್ಪು ಒಪ್ಪಿದ ಮೇಲೆಇನ್ನು ದಯಮಾಡು ಮುತ್ತಜ್ಜ – ಅಜ್ಜರ ಅಜ್ಜ ೧ನಿನ್ನ ಕರುಳಿನ ಬಳ್ಳಿ ಎಲ್ಲಿ ಹುಟ್ಟಿದರೇನುಮೂಲದಿಂದಲ್ಲವೇ ‘ುಡಿಗೆ ಆಹಾರಮೂಲ’ುಡಿಗಳ ಮರೆತು ಆಹಾರ ಕೊಡದಿರಲು’ುಡಿಯು ಬಾಡುವದಿಲ್ಲವೇನೊ ತಾತಯ್ಯ ೨ನಿನ್ನವನು ನಾನೆಂದು ಒಪ್ಪಿಸಿದ ಗುರುರಾಯಇನ್ನು ಸಲಹುವ ಭಾರ ನಿನ್ನದಯ್ಯಾನಿನ್ನ ಘನತೆಗೆ ಕೂಂದು ತರದಂತೆ ಕಾಪಾಡುಘನ್ನ ಭೂಪತಿ ‘ಠ್ಠಲನ ತೋರು ದಯಮಾಡು ೩

 

ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡುಬಂದ ಕಾರಣ ತಿಳಿಯದೋಹೆಂಡತಿಯ ಕಾಟವೊ ಇದು ನಿನ್ನ ಆಟವೊಭಕ್ತಭೂ’ುಗೆ ಓಟವೊಪಂಢರಿಯ ಬಿಟ್ಟಿಲ್ಲಿ ಬಂದ ಕಾರಣವೇನುಪೇಶಯ್ಯ ಪಾಂಡುರಂಗಾಸ್ಚಂದ್ರಭಾಗಾ ತೀರ ಸುಂದರ ಮಂದಿರವುಇಂದಿರಾರಮಣ ನಿನಗಲ್ಲಿ ೧ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನನವನೀತ ಬಾು ತುಂಬಾಸ್ಜರತಾರಿ ಮುಂಡಾಸು ಭರ್ಜರಿ ನಿಲುವಂಗಿಸೊಂಪಿನಂಚಿನ ಮಡಿಯು ನನಗೆತರತರದ ಪುಷ್ಪಗಳು ಎಳೆ ತುಳಸಿ ವನಮಾಲಿಕೊರಳೊಳಗೆ ವೈಜಯಂತಿಪರಿಮಳದ ಗಂಧ ಕಸ್ತೂರಿ ಫಣಿಯಲಿಟ್ಟುವೈಭವದಿ ಪೂಜಿಸುವರು ೨ಅಂದಚೆಂದದ ರತ್ನ ಮುತ್ತಿನಾಭರಣಗಳುತರತರದ ಸೊಗಸಾದ ಪಂಚಪಕ್ವಾನ್ನಗಳುಸರಿಯಾಗಿ ಮಧ್ಯಾಹ್ನ ಮಾಪೂಜೆ ನಡೆಯುವದುಭಕ್ತರಿಗೆ ಲೆಕ್ಕ’ಲ್ಲಾ ಸ್ಪಾದಕ್ಕೆ ಹಣೆ ಹಚ್ಚಿ ತಿಕ್ಕುವರು ಮೇಲೆದ್ದುನಿಂತುಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆಭಕ್ತವತ್ಸಲ ‘ಠ್ಠಲಾಸ್ ೩ಗೋಧೂಳಿ ಕಾಲಕ್ಕೆ ಪಾದಪೂಜೆಯು ಮಹಾಧೂಪ ದೀಪೋತ್ಸವಗಳುಸ್ಆಪಾದಮೌಳಿ ಪರ್ಯಂತ ದರ್ಶನ ಪಾದಸ್ಪರ್ಶದಾ ಆನಂದವೋಸ್ರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವುನೋಡಿದವರೇ ಧನ್ಯರುಸ್ಸಚ್ಚಿದಾನಂದಮೂರ್ತಿ ಅಲ್ಲಿ ಪ್ರತ್ಯಕ್ಷಭಕ್ತರಿಗೆ ಕಾಣುತಿಹನು ೪ಸತ್ಯವಾದೀ ಜಗಕೆ ಪಂಚಭೇದವು ನಿತ್ಯಸರ್ವತ್ರ ತಾರತಮ್ಯಸೃಷ್ಟ್ಯಾದಿ ಅಷ್ಟ ಕರ್ತೃತ್ವ ‘ಠ್ಠಲಗುಂಟು’ಠ್ಠಲನೆ ಸವೋತ್ತಮಾಸ್ಹರಿಯು ಸರ್ವೋತ್ತಮನು ವಾಯು ಜೀವೋತ್ತಮನುಮೂಲಗುರು ಮುಖ್ಯ ಪ್ರಾಣನುಮಧ್ವಮತವೇ ಮತವು ಸಕಲಶ್ರುತಿಸಮ್ಮತವುನಿತ್ಯ ತತ್ತ್ವಜ್ಞಾನವುಸ್ ೫ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನನಿರ್ದೋಷ ನಿರ್’ಕಾರಾಸ್ಸರ್ವತಂತ್ರ ಸ್ವತಂತ್ರ ಸರ್ವಾಂತರ್ಯಾ’ುಸರ್ವಜ್ಞ ಸರ್ವಸ್ವಾ’ುಸ್ಸಚ್ಚಿದಾನಂದಾತ್ಮ ಪೂರ್ಣಾತ್ಮ ಪರಮಾತ್ಮನಿತ್ಯತೃಪ್ತನು ಶ್ರೀಹರಿಸ್ನಿರ್ಗುಣ ನಿರಾಕಾರ ಅ’ುತಗುಣ ಆಕಾರತ್ರಿಗುಣವರ್ಜಿತ ತ್ರಿಧಾಮಾಸ್ ೬ಕಾರ್ಯಕಾರಣ ಅಂಶಿ ಅಂಶಾವತಾರಅಂತರ್ಯಾ’ುಯಾಗಿ ಇಹನುಸ್ಪ್ರೇರ್ಯಪ್ರೇರಕನಾಗಿ ಬಾದ್ಯ ಬಾಧಕನಾಗಿವ್ಯಾಪ್ಯ ವ್ಯಾಪಕನು ತಾನುಸ್ಯಾರು ತನ್ನನೆ ನಂಬಿ ಸರ್ವಸ್ವವನು ನೀಡಿದಾಸರಾಗುವರೊ ಅವರನ್ನುಸ್ಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿಶ್ರೀಶ ಕೈಪಿಡಿದು ಪೊರೆವಾಸ್ ೭’ಷ್ಣು ಸರ್ವೋತ್ತಮತ್ವ ತಿಳಿಯದ ಜ್ಞಾನಶೂನ್ಯರಿಗೆಬೇಸತ್ತು ಇಲ್ಲಿ ಬಂದ್ಯಾ ಸ್ಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿಬಂದದ್ದು ಕೇಳಿ ಬಂದ್ಯಾ ಸ್ಮಧ್ವಸಿದ್ಧಾಂತ ಪದ್ಧತಿಗೆ ಅನುಸರಿಸಿಪೂಜೆಗೊಂಬಲು ಬಂದೆಯಾಸ್ಮುದ್ದುಭೂಪತಿ’ಠಲ ಬಿದ್ದೆ ನಿನಪಾದಕ್ಕೆಉದ್ಧಾರ ಮಾಡೊ ಸ್ವಾ’ು ೮ಫಲಶ್ರುತಿಚಿತ್ತನಿರ್ಮಲರಾಗಿ ಭಕ್ತಿಭಾವದಿ ನಿತ್ಯ’ಠ್ಠಲಾಷ್ಟಕ ಪಠಿಸಲು’ಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿಇಷ್ಟಾರ್ಥಗಳ ಕೊಡುವನುಸ್ಸತ್ಯ’ೀ ಮಾತಿದಕೆ ಸಾಕ್ಷಿ ಬೇಕಾದರೆಪ್ರತ್ಯಕ್ಷ ಪಾಂಡುರಂಗಾಸ್ಕಾವೇರಿ ಶ್ರೀರಂಗ ಕಂಬೆವರದರಾಜಗಲಗಲಿಯ ನರಸಿಂಗನೋಸ್ ೯

 

ಪ್ರಣಾಮ ಗಣರಾಯಾ ಪ್ರ’ೀಣಾ ಪಪ್ರಥಮ ಪ್ರಣಾಮವ ಮೂಡಿ ಬೇಡುವೆ’ಘ್ನರಾಜ ನೀ ನೀಡೆಮಗಭಯಾಅ.ಪಪಾಶಾಂಕುಶಧರ ಮೂಷಕವಾಹನಕೇಶರಗಂಧ ‘ಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ ೧ಏಕ’ಂಶತಿ ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು ೨ಸಿದ್ಧಿ ‘ನಾಯಕಾ ‘ದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿ’ಠ್ಠಲಪ್ರಿಯಾ ೩

 

ಬಂದ ನೋಡಮ್ಮಾ ಇಂದಿರೆ ರಮಣಾ ಪಬಂದನೋಡು ಆನಂದದಿಂದ ಗೋ’ಂದಗೋಕುಲಾನಂದ ಮುಕುಂದಾ ಅ.ಪಶ್ರೀ ಕೇಶವ ನಾರಾಯಣಮಾಧವಶ್ರೀಧರ ಗಿರಿಧರ ಗೋವರ್ಧನಧರಶ್ರೀ ದಾಮೋದರ ಪದ್ಮನಾಭಮುಚಕುಂದವರದ ಮುರಹರ ಶ್ರೀಕೃಷ್ಣ ೧ಸರ್ವೋತ್ತಮ ಸರ್ವಜ್ಞ ಶಿಖಾಮಣಿಸರ್ವಪ್ರೇರಕ ಸರ್ವವ್ಯಾಪಕಸರ್ವಾಧಾರಕ ಸರ್ವ ನಿಯಾಮಕಸರ್ವತಂತ್ರ ಸ್ವತಂತ್ರ ಸಮರ್ಥಾ ೨ಗೋಪಾಲಾಚ್ಯುತ ಗೋಪ ಕಿಶೋರಾಗೋಪಿ ಜನಮನ ಚಂದ್ರ ಚಕೋರಾಆಪದ್ಬಾಂಧವ ಭೂಪತಿ’ಠ್ಠಲಕೈಪಿಡಿದೆಮ್ಮನು ಕಾಪಾಡಲು ಬಾ ೩ಪಾದ ಮ’ಮೆ

 

ಬಂದಳಮ್ಮಾ ಇಂದು ಇಲ್ಲಿಗೆ ಗೆಣ್ಣುರವ್ವಾ ಪಬಂದಳಮ್ಮಾ ಇಂದು ಇಲ್ಲಿ ಚಂದ್ರವದನೆ ಇಂದಿರಾದೇ’ಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ ೧ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ ೨ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ ೩ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ೪ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ೫’ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ ೬ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿ’ಠ್ಠಲ ನಗುವನಂತೆ ೭ಹನುಮಂತದೇವರು

 

ಬಂದಾನು ರಾಘವೇಂದ್ರ ಬೀಳಗಿಗೆ ಇಂದು ಪಬಂದಾನು ರಾಘವೇಂದ್ರ ಎಂದೂ ಗೊತ್ತಿರದೆವೃಂದಾವನ ರೂಪದಿಂದಅ.ಪ’ಂದಿನ ‘ರಿಯರ ಪುಣ್ಯ ಫಲಿಸಿತೆಂದುತಂದೆ ರಾಘವೇಂದ್ರ ಬಂದು ನೆಲೆಸಿದನಿಲ್ಲಿ ೧ಸಂದೇಹಬೇಡ ಈ ವೃಂದಾವನದಿರಾಘವೇಂದ್ರರಾಯರು ಸ್ವಯಂವ್ಯಕ್ತರೂಪದಿ ಇಹರು ೨ಭೂಪತಿ’ಠ್ಠಲನ ಕರುಣದಿಂದಲಿ ಇಲ್ಲಿಅಪರೂಪವಾದ ವೃಂದಾವನ ದೊರಕಿತು ೩

 

ಬಣ್ಣಿಸುತ ಮಕ್ಕಳನು ಹರಸುವಳು ತಾುಎಣ್ಣೆ ಉಣಿಸುತ ತನ್ನ ಚಿನ್ನ ಚಿಕ್ಕರುಗಳಿಗೆ ಪಆಯುಷ್ಯವಂತನಾಗು ಆಸ್ತಿಕನು ನೀನಾಗುಭಕ್ತವತ್ಸಲ ಹರಿಯಭಕ್ತನಾಗುನಿತ್ಯನಿರ್ಮಲನಾಗು ನೀತಿವಂತನು ಆಗುಸತ್ಯನಿಷ್ಠನಾಗು ಸಿರವಂತನಾಗೆಂದು ೧ಶೂರನೀನಾಗು ಬಲುಧೀರ ನೀನಾಗಯ್ಯಾಧೈರ್ಯದಿಂದ ಸತ್ಕಾರ್ಯ ನಿರತನಾಗುದುರುಳರನು ದೂರಿರಿಸು ಪರರ ಪೀಡಿಸದಿರುಕಾರುಣ್ಯ ನಿಧಿಯಾಗಿ ಸುಜನರನು ಪೊರೆಯೆಂದು೨ದೇಶವನು ಪ್ರೀತಿಸು ದುರಾಶೆಗೊಳಗಾಗದಿರುಕರ್ಯಠನು ಆಗದಿರು ಧರ್ಮ ಬಿಡಬೇಡಾಉದ್ಯೋಗಪತಿಯಾಗು ಜಿಪುಣ ನೀನಾಗದಿರುಭೂಪತಿ’ಠ್ಠಲನ ಭಕ್ತ ನೀನಾಗೆಂದು ೩

 

ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪಬಾರಯ್ಯಾ ಶ್ರೀಹರಿ ‘ಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ ೧ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ ೨ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿ’ಠ್ಠಲ ಸ್ವಾಮಿ ೩

 

ಬರಬೇಕು ಬರಬೇಕು ಸಕಲ ಸಜ್ಜನಭಕ್ತರುಗುರುಸಾರ್ವಭೌಮರ ಆರಾಧನೆಗೆ ಗಲಗಲಿಗೆ ಪಪಂಚರಾತ್ರೋತ್ಸವವು ವೈಭವದಿ ನಡೆಯುವದುಚಂಚ’ುತ ಸುಪ್ರಸಾದವು ಇರುವದುವಂಚಿಸದೆ ಸೇವೆಯನು ಮಾಡಿದರೆ ಗುರುರಾಯವಾಂಛಿತಾರ್ಥವನಿತ್ತು ಸಂತೋಷಪಡಿಸುವನು ೧ನಿತ್ಯ ಅಷ್ಟೋತ್ತರ ಅಲಂಕಾರ ಮಹಾಪೂಜೆಕ್ಷೇತ್ರ ಭೋಜನ ಕೀರ್ತನೆ ಪುರಾಣನೃತ್ಯಗೀತಗಳಿಂದ ಪಲ್ಲಕ್ಕಿ ಸೇವೆಯುಉತ್ತರಾರಾಧನೆಗೆ ರಥೋತ್ಸವದ ವೈಭವವು ೨ಸಹಸ್ರಕುಂಭಾಭಿಷೇಕೋತ್ಸವವು ಕೊನೆಯದಿನಸತ್ಯನಾರಾಯಣನ ಮಹಾಪೂಜೆಯುಪವಮಾನಹೋಮ ಸಂಭಾವನಾ ‘ತರಣೆಮುಕ್ತಾಯವಾಗುವದು ಪಂಚರಾತ್ರೋತ್ಸವವು ೩ಕೃಷ್ಣವೇಣಿಯ ಪುಣ್ಯಕ್ಷೇತ್ರ’ದು ಗಲಗಲಿಯುಪ್ರಲ್ಹಾದವರದ ಶ್ರೀನರಹರಿಯ ಕ್ಷೇತ್ರವುಶ್ರೀವೆಂಕಟೇಶ’ಠ್ಠಲ ದತ್ತ, ಎಲ್ಲಮ್ಮ ‘ೀರಮಾರುತಿ ಪರ್ವತೇಶ್ವರನ ಕ್ಷೇತ್ರ೪ಗಾಲವ ಮರ್’ಗಳು ತಪವಗೈದಿಹ ಕ್ಷೇತ್ರಎಲ್ಲದರಲ್ಲಿಯೂ ಮುಂದಿರುವ ಕ್ಷೇತ್ರದೇವ ಭಕ್ತರ ಕ್ಷೇತ್ರ ದೇಶಭಕ್ತರ ಕ್ಷೇತ್ರಭೂಪತಿ’ಠ್ಠಲನ ಪ್ರೀತಿಯ ಕ್ಷೇತ್ರ೫

 

ಬಾರಪ್ಪ ನೀ ಬಾರಪ್ಪಾ ಭಾರತಿರಮಣಾ ಮುಖ್ಯಪ್ರಾಣಾಗೋ’ನದಿನ್ನಿ ಹಣ್ಣಮಪ್ಪಾ ನೀ ಗಾಲವ ಕ್ಷೇತ್ರಕೆ ಬಾರಪ್ಪಾ ಪಗಾಲವಕ್ಷೇತ್ರಕ್ಕೆ ಬಾರಪ್ಪಾ ನೀ ಹೋಳಿಗೆತುಪ್ಪಾ ಹೊಡೆಯಪ್ಪಾಕೃಷ್ಣವೇಣಿಯ ತಟದ ಶಿಲೆಯೊಳು ಒಡಮೂಡುತ ನೀ ಇದ್ದೆಪ್ಪಾ೧ಶಿಷ್ಟರಾದ ಶ್ರೀ ಉಮರ್ಜಿ ಆಚಾರ್ಯರ ನಿಷ್ಠೆಗೆ ಒಲಿದು ಬಂದೆಪ್ಪಾಶರಧಿಗೆ ಜಿಗಿದು ಸೀತಾದೇ’ಗೆ ರಾಮಮುದ್ರಿಕೆಯ ಕೊಟ್ಟೆಪ್ಪಾದುರುಳ ರಾವಣನ ಲಂಕಾಪಟ್ಟಣ ಸುಟ್ಟ ಕಪಿವರನು ನೀನಪ್ಪಾದುಷ್ಟ ಕೌರವನ ತೊಡೆಯ ಒಡೆದು ಗದೆಪಿಡಿದ ಭೀಮ ನೀ ಹೌದಪ್ಪಾ ೨ದುಃಶಾಸನನ ಕರುಳ ಬಗೆದು ನರಸಿಂಹನ ಪ್ರೀತಿ ಪಡೆದೆಪ್ಪಾಹರಿಯದ್ವೇಗಳ ದುರ್ಮತಗಳನು ಮುರಿದು ಮಧ್ವಯತಿ ಆದೆಪ್ಪಾರಾಶಿ ರಾಶಿ ಸದಗ್ರಂಥ ರಚಿಸಿ ನೀ ವ್ಯಾಸರ ಸನ್ನಿಧಿ ಪಡೆದೆಪ್ಪಾಕೃಷ್ಣವೇಣಿತಟ ನರಾಹರಿ ಇರುವನು ರಾಯರು ಇರುವರು ಬಾರಪ್ಪಾ ೩ಎಲ್ಲಿ ನರಹರಿ ಎಲ್ಲಿ ರಾಯರು ಅಲ್ಲಿ ನೀ ಇರಬೇಕಪ್ಪಾಪಾಪಿಷ್ಠರ ಗತಿಭಯಂಕರನು ನೀಪುಣೈವಂತರಿಗೆ ಸುಲಭಪ್ಪಾಭೂಪತಿ’ಠ್ಠಲನ ಭಕ್ತರ ಪೊರೆಯಲು ನೀ ಗಾಲವ ಕ್ಷೇತ್ರಕೆ ಬಾರಪ್ಪಾ ೪ರುದ್ರದೇವರು

 

ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ೧ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ ೨ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ ‘ಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ ೩

 

ಮಂಗಲಂ ಮುಚಕುಂದ ವರದ ಹರಿಗೆಮಂಗಲಂ ಪ್ರಲ್ಹಾದ ವರದ ನರಹರಿಗೆ ಪಮಂಗಲಂ ಮಾಧವಗೆ ವಂಗಲಂ ಶ್ರೀಧರಗೆಮಂಗಲಂ ಗಿರಿಧರ ಕಾವೇರಿರಂಗನಿಗೆಮಂಗಲಂ ಶ್ರೀಪಾಂಡುರಂಗನಿಗೆ ಭವಭಂಗಸಂಗೀತ ಪ್ರಿಯನಾದ ಪಾಂಡುರಂಗನಿಗೆ ೧ಮಂಗಲಂ ಅಕ್ರೂರವರದ ಶ್ರೀಕೃಷ್ಣನಿಗೆಮಂಗಲಂ ಪುಂದಲೀಕ ವರದ ‘ಠ್ಠಲಗೆಮಂಗಲಂ ದ್ರುವರಾಜ ವರದನಾರಾಯಣಗೆಮಂಗಲಂ ಮಧ್ವಮುನಿಗೊಲಿದ ವ್ಯಾಸರಿಗೆ ೨ಪುರಂದರ’ಠ್ಠಲಗೆ ಸಿರಿ’ಜಿಯ’ಠ್ಠಲಗೆಗೋಪಾಲ’ಠ್ಠಲ ಮೋಹನ’ಠಲಗೆಜಗನ್ನಾಥ’ಠಲಗೆ ಪ್ರಾಣೇಶ’ಠ್ಠಲಗೆಶ್ರೀಪತಿ’ಠ್ಠಲ ಭೂಪತಿ’ಠ್ಠಲಗೆ ೩

 

ಮ’ಪತಿ ಸುತ ಕೃಷ್ಣರಾಯ ಕೃಪೆಯಮಾಡೊ ಮಹರಾಯಾಸ’ಸಲಾರೆ ತಾಪತ್ರಯ ಕರುಣದಿ ಪಿಡಿಕೈಯ್ಯಾ ಪನಿನ್ನ ಕರುಳ ಬಳ್ಳಿಯಲಿ ಜನಿಸಿ ನಿನ್ನ ಮರತೆನೆಂದುನೀನು ಮರೆಯಬೇಡಾ ತಾತಾ ಶಿರದಲಿ ಇಡು ವರದಹಸ್ತಾ೧ನಿಮ್ಮ ಕೀರ್ತನೆ ಕೇಳುವಾಗ ಮೈ ಮರೆತರು ಸತ್ಯಪೂರ್ಣರುಚಕ್ರಧರನ ನಕ್ರಹರನ ತಂದು ತೋರಿದ ಮಹಾಮ’ಮನೆ ೨ಜ್ಞಾನ ಭಕ್ತಿ ವೈರಾಗ್ಯ ತ್ರಿವೇಣಿ ನಿಮ್ಮ ವಾಣಿಶ್ರೀನಿಧಿ ಭೂಪತಿ’ಠ್ಠಲನ ಒಲಿಸಿದ ಹರಿದಾಸ ಸುಮಣಿ ೩

 

ಮೊದಲಿಗೆ ಶ್ರೀ ಯಮಧರ್ಮ ತನಯೆಶ್ರೀ ಕೃಷ್ಣನಂಗದಿಂದ ಜನಿಸಿದಳುಕಮಲಸಂಭವನ ಲೋಕದೊಳಗಿದ್ದುಕೃಷ್ಣ ಕೃಷ್ಣೆ ಎಂದೆನಿಸಿದಳು ೧ಸುಮನಸರೆಲ್ಲರು ಪ್ರಾರ್ಥನೆ ಮಾಡಲುಕೈಲಾಸಕೆ ದಯಮಾಡಿದಳುಆ ಮಹಾದೇವನ ಜಟಾಜೂಟದಿಂಸಹ್ಯಾದ್ರಿಗೆ ಬಂದಿಳಿದಿಹಳು ೨ಮುಂದೆ ಮುಂದೆ ತಾ ಸಾಗಿಬರತಿರಲುವೇಣಿನದಿಯು ಬಂದು ಕೂಡಿದಳುಕೃಷ್ಣ ವೇಣಿಗಳ ಸಂಗಮವಾಗಲುಕೃಷ್ಣವೇಣಿ ಎಂದೆನಿಸಿದಳು ೩ಕೃಷ್ಣವೇಣಿ ಹರಿದಂಥ ಸ್ಥಳಗಳುಋಮುನಿಗಳು ತಪವ ಗೈದಿಹರುಋಮುನಿಗಳು ತಪವ ಗೈದಕ್ಷೇತ್ರಗಳುಪುಣ್ಯಕ್ಷೇತ್ರ ವೆಂದೆನಿಸಿದವು ೪ಗಾಲವೃಗಳು ತಪವಗೈದಸ್ಥಳಗಾಲವಕ್ಷೇತ್ರವು ಗಲಗಲಿಯುಗಲಗಲಿಯಲ್ಲಿಯ ಚಕ್ರತೀರ್ಥರ ಋಬಂಡಿಗಳೇ ಗಾಲವರ ಆಶ್ರಮವು ೫ಗಾಲವಕ್ಷೇತ್ರದ ಪಂಚಕೋಶವುಪುಣ್ಯಭೂ’ು ಎಂದೆನಿಸುವದುಗಾಲವಗಳ ಪುಣ್ಯದ ಬಲವೇಗಲಗಲಿಯ ಕೀರ್ತಿಗೆ ಕಾರಣವು ೬ಗಾಲವೃಗಳ ನಂಬಿದ ಜನರಿಗೆಭೂಪತಿ’ಠ್ಠಲ ಒಲಿಯುವನುಗಾಲವೃಗಳ ಮರೆತುಬಿಟ್ಟರೆನಷ್ಟವಾಗುವದು ಗಲಗಲಿಯು ೭

 

ರಧವವೇರಿದ ಚಂದ್ರಾ ರಾಘವೇಂದ್ರನೋಡು ಪಾಡು ಕುಣಿದಾಡಿ ಭಜನೆಮಾಡುಬೇಡಿದ ವರವ ಕೊಡುವಾ ಪಖಂಬದಿ ನರಹರಿ ಬರಿಸಿದ ಕಂಡಾಕುಂಭಿಣಿಪತಿ ಕುಹಯೋಗವ ಕಳೆದಾನಂಬಿದವರ ಪೊರೆವಾ ೧ಆದ್ಯ ಸತ್ಯಾಗ್ರ’ ಭಕ್ತ ಶಿರೋಮಣಿಉದ್ಗ್ರಂಥಗಳನು ರಚಿಸಿದ ದಿನಮಣಿಮಧ್ವಮತೋದ್ಧಾರಾ೨ಭೂಪತಿ – ‘ಠ್ಠಲಗೆ ಪ್ರೀತಿ ‘ಖ್ಯಾತಾಆಪದ್ಬಾಂಧವ ಅನಾಥನಾಥಾರಥೋತ್ಸವದಿ ಮೆರೆವಾ ೩

 

ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ’ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು’ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು ೧ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ ೨ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ’ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ’ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ ‘ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು ೩ಗಲಗಲಿ ನರಸಿಂಹಾಚಾರ್ಯರು

 

ರಾಮಲಿಂಗ ಶಿವಶಂಕರ ಪಾರ್ವತಿರಮಣಾ ನಿನಗೆ ನಮೊ ನಮೊ ಪರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ ಅ.ಪಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾ’ಜಯಸಾರಥಿಸಖ ನಮೊ ನಮೊ ೧ನೀಲಕಂಠ ತ್ರಿಶೂಲ ಡಮರು ಧರಫಾಲನಯನತೇ ನಮೋ ನಮೋಪ್ರಳಯಕರ್ತ ಕೈಲಾಸವಾಸ ಶ್ರೀಶೈಲಾಧಿಪತೆ ನಮೋ ನಮೋ ೨ಕಾಶಿ ‘ಶ್ವೇಶ್ವರ ಕೇದಾರೇಶ್ವರಮಹಾಬಲೇಶ್ವರ ನಮೋ ನಮೋದ್ವಾದಶ ಜೋತಿರ್ಲಿಂಗಾಂತರ್ಗತಉಮಾಮಹೇಶ್ವರ ನಮೋ ನಮೋ ೩ಕೃಷ್ಣವೇಣಿ ತಟ ಚಿಕ್ಕಗಲಗಲಿವಾಸರಾಮೇಶ್ವರ ನಮೋ ನಮೋಮೃತ್ಯುಂಜಯ ಭೂಪತಿ’ಠಲಪ್ರಿಯಚಂದ್ರಮೌಳಿ ತೇ ನಮೋ ನಮೋ ೪ಪಾರ್ವತಿ ದೇ’

 

ರಾಯರ ನೋಡಿರೈ ಮ’ಪತಿರಾಯರ ಪಾಡಿರೈ ಪರಾಯರ ನೋಡುತ ಪಾಡುತ ಭಕುತಿಯಮಾಡಲು ಬೇಡಿದ ವರಗಳ ಕೊಡುವಾ ೧ತಂದೆಯ ನೋಡಿರೈ ಮ’ಪತಿಕಂದನ ಪಾಡಿರೈಕುಂದಗಳೆಣಿಸದೆ ಬಂದು ಭಕುತಜನ ವೃಂದವ ಪೊರೆಯುವ ತಂದೆ ಮ’ಪತಿ ೨ಭೋಗಿಯ ನೋಡಿರೈ ತಾಪಸಯೋಗಿಯ ಪಾಡಿರೈತ್ಯಾಗರಾಜ ಭೂಪತಿ’ಠ್ಠಲಪ್ರಿಯ ಭೋಗಿಭೂಷಣಾಂಕ ವೈಷ್ಣವಾಗ್ರಣಿ ೩

 

ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು ಬಳಗವ ಕೂಡಿಕೊಂಡು ಸದ್ಭಕ್ತಿಯಲಿ ಪಹರಿಕಥಾಮೃತಸಾರ ಉದ್ಗ್ರಂಥವನು ರಚಿಸಿಧರೆಗೆ ಮಹದುಪಕಾರ ಮಾಡಿದವಗೆವರಮಧ್ವಸಿದ್ದಾಂತ ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ ೧ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ’ಜಯ ಗೋಪಾಲ ದಾಸರು ಅನುಗ್ರ’ಸಿದರು ೨ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ ೩ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ ‘ಜಗನ್ನಾಥ’ಠಲ’ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ ೪ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿ’ಠ್ಠಲನು ಕುಣಿದ ೫

 

ವಂದಿಸುವೆ ಗುರು ರಾಘವೇಂದ್ರಾರ್ಯರಾವೃಂದಾವನದಿ ‘ೀಣೆ ನುಡಿಸುತಲಿ ಕುಳಿತವರಾ ಪನಂದಗೋಪನಕಂದ ಗೋ’ಂದ ಗೋಪಾಲಇಂದಿರಾರಮಣ ಮುಚಕುಂದವರದಾ’ಂದರ್ಪಜನಕ ಇಂದೆನಗೆ ನಿನ್ನ ಪಾದಾರ-ವೆಂದವನು ತೋರಯ್ಯ ಎಂದು ಪಾಡುತಲಿಹರ ೧ನರಹರಿ ಶ್ರೀಕೃಷ್ಣ ರಾಮ ವೇದವ್ಯಾಸಮೂರೊಂದು ಮೂರ್ತಿಗಳುಪಾಸನೆಯನುಚಾರು ವೃಂದಾವನದಿ ಕುಳಿತು ಸಂತತ ಮಾಳ್ವಧೀರ ಶ್ರೀ ವೇಣುಗೋಪಾಲನನು ಕುಣಿಸುವವರ ೨’ೀಣೆಯನು ನುಡಿಸುತಲಿ ಗಾಯನವ ಮಾಡುತ್ತಆನಂದ ಬಾಷ್ಪಗಳ ಉದುರಿಸುತಲಿಆನಂದಕಂದ ಭೂಪತಿ-‘ಠಲನ್ನ ಸದಾಕಣ್ಮುಂದೆ ನಿಂದಿರಿಸಿಕೊಂಡ ಗುರುಗಳ ಕಂಡು ೩

 

ವಂದಿಸುವೆ ಶ್ರೀ ಸುಶೀಲೇಂದ್ರಾರ್ಯರತಂದೆ ಗುರುರಾಘವೇಂದ್ರರ ಪಾದ ತೋರೆಂದು ಪಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ ೧ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮ’ಮೆ ತೋರಿದ ಗುರು೨ಶ್ರೀ ಸ’ುೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ ೩ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ ೪ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿ’ಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ ೫

 

ವೈದಿಕ ಧರ್ಮಧ್ವಜ ಫಡಫಡಿಸಲ ಗಗನದೊಳೆತ್ತರದಿವೈದಿಕ ತತ್ವಜ್ಞಾನ ಪ್ರಕಾಶವು ಪಸರಿಸಲೀ ಜಗದಿ ೧ಜ್ಞಾನ ಭಕ್ತಿ ವೈರಾಗ್ಯ ಧೈರ್ಯ ಔದಾರ್ಯ ತಪಶ್ಚರ್ಯದಿನ ದಿನ ಬೆಳೆಯಲಿ ದಾನಧರ್ಮಗಳು ದಯಾ ಸತ್ಯ ಶೌರ್ಯ ೨ದುಷ್ಟ ಶತ್ರುಗಳ ಸದ್ದು ಅಡಗಲಿ ಜಗನಿರ್ಭಯ’ರಲಿಭ್ರಷ್ಟಾಚಾರವು ನಿರ್ಮೂಲಾಗಲಿ ಸತ್ಯಕ್ಕೆ ಜಯ’ರಲಿ ೩ವರ್ಣಾಶ್ರಮಗಳ ಧರ್ಮದ ಮರ್ಮವು ತಿಳಿಯಲಿ ಜಗಕೆಲ್ಲಾಕರ್ಮಾ ಕರ್ಮ ‘ಕರ್ಮ ಮರ್ಮವನು ಅರಿಯಲಿ ಜನರೆಲ್ಲಾ ೪ಜಯ ಜಗದೀಶ್ವರರೆಂಬ ನಿನಾದವು ತುಂಬಲಿ ಜಗದಲ್ಲಿಜಯ ಭೂಪತಿ’ಠ್ಠಲ ಸರ್ವೋತ್ತಮ ಜಯಹರಿ ಎಂದೆನಲಿ ೫

 

ಸತ್ಯಂಬೋಧರ ಸ್ಮರಣೆ ನಿತ್ಯಮಾಡುಅತ್ಯಂತ ಕರುಣಾಳು ಅ’ುತ ಮ’ಮಾವಂತ ಪಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ’ಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ ೧ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ’ಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ ೨ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ’ಠ್ಠಲನ ಅಪರೋಕ್ಷ ಪಡೆದವರು ೩

 

ಸತ್ಯಜ್ಞಾನ ಮುನಿರಾಯಾ ತವಸ್ಮರಣೆ ಸತತ ಕೊಡು ಜೀಯಾ ಪಜ್ಞಾನಭಕ್ತಿ ವೈರಾಗ್ಯದ ಕಣಿಯೆ ಧ್ಯಾನ ಮೌನ ಜಪ-ತಪಗಳ ನಿಧಿಯೆ ಅ.ಪಸರ್ವತ್ರದಿ ಶ್ರಿ ಹರಿಯನು ಕಾಣುತಸರ್ವಭೂತ ‘ತರತನಾಗಿಸರ್ವೋತ್ತಮನು ಶ್ರೀರಾಮನ ಪೂಜಿಸಿಸರ್ವಜ್ಞಮತ ಸುದಾಂಬುಧಿಗೆ ಚಂದ್ರಮನಾದೆ ೧ಭರತಾರುಣ್ಯದಿ ಪರಮಹಂಸನಾಗಿಧರ್ಮ ಸಾಮ್ರಾಜ್ಯದ ಧುರವ’ಸಿಧರ್ಮ ಸಂರಕ್ಷಣೆ ಮಾಡುತ ಧರೆಯೊಳುಪೂರ್ಣಜ್ಞರ ಧ್ವಜ ಮೆರೆಸಿದ ಧೀರಾ ೨ಲೌಕಿಕವನು ಸಂಪೂರ್ಣ ತ್ಯಜಿಸಿ ನೀ-ಪರಲೋಕ ಸಾಧನ ಲೋಕಕೆ ತಿಳಿಸಿಟೀಕಾರಾಯರ ಸನ್ನಿಧಾನವ ಹೊಂದಿದಶ್ರೀಕಾಂತ ಭೂಪತಿ’ಠ್ಠಲನ ದೂತಾ ೩

 

ಸಾರಿ ಭಜಿಸಿರೋ ವಾದಿ ರಾಜ ಗುರುಗಳಾಘೋರ ಸಂಕಟದಿಂದಾ ಪಾರು ಮಾಳ್ಪರಾ ಪಭುಜಗುಣಸ್ಥರಾ ಅಜನ ಪದಕೆ ಅರ್ಹರಾಸುಜನವಂದ್ಯರಾ ವಾಜಿವದನ ದಾಸರಾ ೧ವಕ್ರತರ್ಕದಾ ವಾದಿ ಸೊಕ್ಕು ಮುರಿದರಾಯುಕ್ತಮಲ್ಲಿಕಾ ರಚಿಸಿ ಮುಕ್ತಿ ತೋರ್ಪರಾ ೨ಕುದುರೆ ಮೋರೆಯಾ ದೇವ ಮುದದಿ ಮೆಲುವನುಕಡಲೆ ಹೂರಣಾ ನೀವು ಕೊಡಲು ಅನುದಿನಾ೩ಭೂತರಾಜನು ಸೋತ ದಾಸನಾದನುಅತಿ ಮಹತ್ವದಾ ಸೇವೆ ಸತತ ಮಾಳ್ವನು ೪ಭಕ್ತಿುಂದಲಿ ಇವರ ಸ್ತುತಿಯ ಮಾಡಲುಭೂಪತಿ’ಠ್ಠಲಾ ಒಲಿದು ವರವಾ ಕೊಡುವನು ೫’ಜುೀಂದ್ರರು

 

ಸಾರಿಭಜಿಸಿರೋ ‘ಜಯರಾಯರಂಘ್ರಿಯಪಾರುಮಾಳ್ಪರಾ ಸಂಸಾರಸಾಗರಾ ಪದೇಶ ದೇಶವಾ ಪರದೇಶಿಯಂದದಿಬ್ಯಾಸರಿಲ್ಲದೆ ತಿರುಗಿ ಕಾಶಿಗ್ಹೋದರು ೧ಸಪ್ನದಲ್ಲಿ ಶ್ರೀ ಪುರಂದರದಾಸರಾಯರುವ್ಯಾಸಕಾಶಿಯಲ್ಲಿ ದಾಸ ದೀಕ್ಷೆಕೊಟ್ಟರು೨ಬಾು ತೆರೆುತು ನಾಲಿಗೆ ಮೇಲೆ ದಾಸರು’ಜಯ’ಠ್ಠಲಾ ಎಂದು ಬರೆದು ಬಿಟ್ಟರು ೩ಎಚ್ಚರಾುತು ದಿವ್ಯ ಜ್ಞಾನ ಹುಟ್ಟಿತು ಧೈನ್ಯ ಓಡಿತು ಹರಿಯ ಧ್ಯಾನ ಹತ್ತಿತು ೪ದಾಸರಾದರು ಹರಿಯ ದಾಸರಾದರು ಕೂಸೀಮಗ ದಾಸ ‘ಜಯದಾಸರಾದರು ೫ಹರಿಯ ಶ್ರೇಷ್ಠತೆ ‘ಂದೆ ಒರೆಗೆ ಹಚ್ಚಿದಾಭೃಗುಮರ್ಹಯೇ ನಮ್ಮ ‘ಜಯದಾಸರು೬ಪಾಪಕಳೆವರು ಭಕ್ತರ ತಾಪಕಳೆವರುಭೂಪತಿ’ಠ್ಠಲನ ಅಪರೋಕ್ಷ ಮಾಳ್ಪರು ೭

 

ಸುಂದರ ಮೂರುತಿ ಮುಖ್ಯಪ್ರಾಣನು ಬಂದಾಬಂದಾ ಗಲಗಲಿಗೆ ಕಲಾದಿಗೆುಂದಾ ಪಕಾಯರ ಹೃದಯದಿ ಶ್ರೀರಾಮನಿರುವಾಶ್ರೀರಾಮನಿದ್ದಲ್ಲಿ ಶ್ರೀಹುನಂತ ಬರುವಾಈ ಮಾತು ನಿಜವೆಂದು ಎಲ್ಲಾ ಜನರಿಗೆತಿಳಿಸಿಕೊಡಲು ಬಂದಾ ಶ್ರೀರಾಯರ ಮಠಕೆ೧ಹನುಮ ಭೀಮ ಮಧ್ವನಾನೇ ನೋಡೆಂದಕೊರರೊಳು ಶ್ರೀತುಳಸಿ ಮಾಲೆ ಹಾಕಿಕೊಂಡಾಬಲಗೈಯೊಳು ಭೀಮಗದೆ ನೋಡಿರೆಂದಾಬಾಲ ಹಾರಿಸಿ ‘ೀರ ಹನುಮನಾನೆಂದಾಭೂಪತಿ ‘ಠ್ಠಲನ ಮೋಹದ ಕಂದಾ ೩ಗೋ’ನದಿನ್ನಿ ಹನುಮಪ್ಪ

 

ಹರನ ಪಟ್ಟದ ರಾಣಿ ಪರಮ ಕಲ್ಯಾಣಿಕರುಣದಲಿ ಕರ್ಣೇರದು ನೋಡು ಪನ್ನಗವೇಣಿ ಪಮತಿಪ್ರೇರಕಳು ನೀನು ಪತಿಯ ಮನದ ಅಭಿಮಾನಿಸುತರು ಷಣ್ಮುಖನು ಗಜಮುಖ ಈರ್ವರುಪತಿಯು ನೆತ್ತಿಯಮೇಲೆ ಗಂಗೆಯನ್ನು ಹೊತ್ತಿಹನುಅತಿ ‘ಚಿತ್ರವು ನಿನ್ನ ಸಂಸಾರಸೊಬಗು ೧ತಂದೆಯ ಅಪಮಾನಹೊಂದಿ ಸ’ಸದೆ ಯಜ್ಞಕುಂಡದೊಳಗೆ ಹಾರಿ ನೀ ದೇಹಬಿಟ್ಟೆಗಂಡನಿಗೆ ಈ ಸುದ್ದಿ ಮುಟ್ಟಿದಾಕ್ಷಣ ನಿನ್ನತಂದೆಯ ರುಂಡವನು ಚೆಂಡಾಡಿದನು ಶಿವನು ೨ಶಿವಶಂಕರನು ಅವನು ಬನಶಂಕರಿಯು ನೀನುಭಸಿತ ಭೂತನವನು ಶಶಿಮುಖಿಯು ನೀನುರಾಮಭಕ್ತನು ಅವನು ಪೇಮಪುತ್ಪಳಿ ನೀನುಕಮಲಾಕ್ಷಿ ಭೂಪತಿ ‘ಠ್ಠಲಗೆ ಅತಿಪ್ರಿಯರು ನೀವು ೩ಶ್ರೀ ದತ್ತಾತ್ರೇಯ

 

ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕುಬೇಗ ಜ್ಞಾನ ಭಕ್ತಿ ವೈರಾಗ್ಯ ಬರುವಂತೆ ಭಜನೆಮಾಡಬೇಕು ಪಆಧ್ಯಾತ್ಮಿಕ ‘ಷಯದಲಿ ಮೊದಲು ಬಲು ಶುದ್ಧಜ್ಞಾನ ಬೇಕುಮಹಾತ್ಮ್ಯದ ಸುಜ್ಞಾನ ಪೂರ್ವಕ ಸುಧೃಡ ಸ್ನೇಹಬೇಕುದೇಹದೌಲತ್ತಿನ ಸ್ವರೂಪವರಿತು ವೈರಾಗ್ಯ ಹುಟ್ಟಬೇಕುಈ ಮೂರು ಮನಸಿನಲಿ ಮೂಡುವಂತೆ ನಾವು ಭಜನೆ ಮಾಡಬೇಕು ೧ನಾನು ನನ್ನದೆಂಬ ಅಹಂಕಾರ ದಿನದಿನಕೆ ಅಳಿಯಬೇಕುಮಾನಾಪಮಾನವು ಆದರೆ ‘ಗ್ಗದೆ ಕುಗ್ಗದೆ ಇರಬೇಕುಹೆಣ್ಣು ಹೊನ್ನು ಮಣ್ಣುಗಳ ‘ಷಯದಲಿ ತ್ಯಾಗ ವೈರಾಗ್ಯ ಬುದ್ಧಿಬೇಕುಪುಣ್ಯ ಪಾಪಗಳನರಿತ ಸದ್ಭಕ್ತರ ಸಂಗತಿ ಇರಬೇಕು ೨ಮಧ್ವಮತದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಶುದ್ಧಮನದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಬುದ್ಧಿಗೇಡಿ ದುರ್ದೈ’ ದುಷ್ಟರನು ದೂರದಲಿ ಇಡಬೇಕುಶ್ರದ್ಧೆುಂದ ಭೂಪತಿ’ಠ್ಠಲನನು ಭಜಿಸಿ ಕುಣಿಯಬೇಕು ನ

 

ಕೊಡಬೇಕು ದಾನಗಳ ಸತ್ಕಾರ್ಯಕೆ
ಕೊಡಬೇಕು ದಾನಗಳ ಸತ್ಕಾರ್ಯಕೆಬಿಡಬೇಕು ಕೈಸಡಿಲು ಮೋಕ್ಷಸಾಧನೆಗೆ ಪಬೇಡದಲೆ ಕೊಡುವವರು ರೂಢಿಯೊಳಗುತ್ತಮರುಬೇಡಿದರೆ ಕೊಡುವ ದಾನಿಯು ಮಧ್ಯಮಬೇಡಿದರು ಕಾಡಿದರು ಕೊಡದವರು ಅಧಮರುಕೊಡೆದೆ ಬಡಬಡಿಸುವವರು ಮೂರ್ಖ ಅಧಮಾಧವುರು ೧ದುಡ್ಡು ಇದ್ದರೆ ಮಾತ್ರ ದೊಡ್ಡವರು ಅನಬೇಡದುಡ್ಡಿದ್ದು ದಾನ ಧರ್ಮವು ನಡೆಯಬೇಕುದುಡ್ಡು ಕಾಯುವ ಸರ್ಪಕ್ಕೆ ಇಹ’ಲ್ಲ ಪರ’ಲ್ಲಬಿದ್ದು ಹೋದರೆ ಅವರ ಬಾಯೊಳಗೆ ಮಣ್ಣು ೨ಧನಿಕರಿಗೆ ಭೂಷಣವು ದಾನಧರ್ಮವು ಸದಾಧನ’ದ್ದ ಜಿಪುಣತಾ ಜೀವಂತ ಹೆಣವುಧನ’ದ್ದು ದಾನಮಾಡುವ ಪುಣ್ಯವಂತರಿಗೆಘನಮ’ಮ ನಮ್ಮ ಭೂಪತಿ’ಠ್ಠಲನೊಲಿಯುವನು ೩ತಾುಯ ಹರಕೆ

 

ಹಾಡಿನ ಹೆಸರು :ಕೊಡಬೇಕು ದಾನಗಳ ಸತ್ಕಾರ್ಯಕೆ
ಹಾಡಿದವರ ಹೆಸರು : ವಿಜಯಲಕ್ಷ್ಮಿ ಬಾಲಾಜಿ
ರಾಗ : ತಿಲಂಗ
ತಾಳ :ಆದಿ
ಸಂಗೀತ ನಿರ್ದೇಶಕರು :ಡಾ. ವಾಗೀಶ
ಸ್ಟುಡಿಯೋ :ಅರ್ಚನಾ

ನಿರ್ಗಮನ

Leave a Reply

Your email address will not be published. Required fields are marked *