Categories
ರಚನೆಗಳು

ಭೀಮಾಶಂಕರ

೨೨
ಆರತಿಗಾರತಿ ಬೆಳಗಿತು ತನ್ನಿಂದ ತಾನೆ |ಮಹಗುರುವಿಗೆ | ತನ್ನಿ |
ಅರವೂ ಮರವೂ ಎರಡಾದರುವಿಗೆ ಬೆಳಗುವ ತಾನೇ ಪ
ಸಹಸ್ರ ಸೂರ್ಯರ ಪ್ರಭೆಗಳ ಕಲೆತು ಕೋಟಿ ಶಶಿಕಿರಣಾ ಮಹತೇಜ ಫಾಕಿಸಿ ಮುಟ್ಟಿತು ಅಡಗಿತು ಗಗನಾ ೧
ಎತ್ತೆತ್ತ ನೋಡಿದರತ್ತ ಸ್ವಪ್ರಕಾಶವೇ |ನಿತ್ಯ ನಿರಂಜನ ನಿಃಶಬ್ದ ಮೂಲಕ ಬೆಳಗುವ ತಾನೇ ೨
ಪರಮ ಪ್ರಕಾಶ ಪರತರ ಪರಂಜ್ಯೋತಿ ಗುರುನಾಥಾ |ತೆರವಿಲ್ಲದಾರುತಿ  ಬೆಳಗುತ ೩

 

ಇಲ್ಲಿ ಶುದ್ಧ ಚೈತನ್ಯ ತತ್ತ್ವದ ಅಸ್ತಿತ್ವ ಮಾತ

ಏನು ಹೇಳಲಿ ನಿನಗಿನ್ನೂ ಗುರು ಧ್ಯಾನದ ಸುಖವನ್ನು ಪ
ಸ್ವಾನುಭವದಿ ನಿಂದು ಬೆಳಗಿನೋಳ್ ಬೆಳಗುವ | ತಾನೆಂದು ಕಾಂಬುವ ಘನ ನಿಜವಾಗಿಹ ಅ.ಪ
ಚಿತ್ತದ ತಾಪವು ನೀಗಿ ಮಾಯಾವೃತ್ತಿಯ ಗುಣಗಳು ಪೋಗಿ |
ಎತ್ತೆತ್ತ ನೋಡಲು ಅತ್ತತ್ತ ಪರಿಪೂರ್ಣ ಸಚ್ಚಿದಾನಂದ ಘನ ನಿಜವಾಗಿಹ ೧
ದ್ವೈತಾದ್ವೈತಗಳೆಲ್ಲ ಪೋಗಿ ಶುದ್ಧ ಚೈತನ್ಯವೇ ತಾನಾಗಿ |
ಮಾತು ಕಳೆದು ಮೌನವೆಂಬ ಏಕಾಂತದಿ | ಕೂತು ಲಕ್ಷಿಸುವ ಲಕ್ಷಣನೆ ತಾನಾಗಿಹ ೨
ಮನದ ಕಲ್ಪನೆಯನ್ನು ಮರೆದು ಹಮ್ಮು ತನುವಿನಮಮತೆಯ ಜರಿದು |
ಅನುದಿನದಲಿ ಗುರು ರಾಮ ಪದಾಂಬುಜ ತಾನೆಂದು ಕಾಂಬುವ ಘನ ನಿಜವಾಗಿಹ ೩

 

ನಾಮರೂಪ ವರ್ಣಕ್ರಿಯಾ
೧೨
ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ |
ಭೃಕುಟಿ ಮಧ್ಯದಲಿ ಪ್ರಕಟವಾಗಿದೆ ಉದಯವಾಗಿ ರೂಪ ಪ
ನಾಸಿಕಾಗ್ರದಲಿ ವಾಸವಾಗಿದೆ ಬೀಸುವ ಗಾಳಿಗೆ ಭಿನ್ನವಿಲ್ಲದೆ |
ಏಸೇಸು ದಿನ ತಪವ ಮಾಡಿದರೂ ಯೋ- ಗೇಶ್ವರ ಮುನಿಗೆ ದುರ್ಲಭ ೧
ಝೇಂಕರಿಸುವದಾ ನಾದ ನೆತ್ತಿಯೊಳು ಓಂಕಾರ ಶಬ್ದವು ಶೂನ್ಯವಾಗದೆ |
ಶಂಕರ ಸ್ವರೂಪ ತಿಳಿದ ದತ್ತನ ಬೀಜಮಂತ್ರ ಅಂಕುರದಿಂದೆ೨

 

೨೩
ಗಜವದನ ಗೌರೀನಂದನ ಸಾಮಗಾನ ಲೋಲಜನ ಮನನಧ್ಯಾನ ಹರಿಹರಾದಿಗಳ ಧನ ಸುಜನ ಜನ ವತ್ಸಲನ ಸೋಮ ಸೂರ್ಯರ ನಯನ ಸುಗುಣಿ ಗುಣ ಗಂಭೀರನ |
ಭುಜಗ ಭೂಷಣ ಕಂಕಣನ ಭುವನ ರಕ್ಷಕನ ಭುಜ ಚತುಷ್ಕಾಯುಧಗಳಿಂದೆಸೆವ
ಶುಭ್ರ ರದನ ವಿಜಯ ಮೂರುತಿ ವಿಘ್ನವಿಪಿನ ದಾಹಕನ ವಿಘ್ನೇಶ್ವರಗೆ ಸಹಸ್ರನಮನ ೧
ನೀನೆ ಶಾಶ್ವತ ರೂಪ ನಿನ್ನ ಕೀರ್ತಿ ಪ್ರತಾಪ ಖೂನ ಕಂಡು
ಉಸುರೆನೆಂದರೆ ಶ್ರುತಿಗಳಾಲಾಪ ಮೌನಗೊಂಡವು ಮಿಕ್ಕ
ಶೇಷಾದಿಕರ ಸ್ಫೂರ್ತಿ ನಿಂತು ಹೋಗಿರಲು ಗಣಪ |
……………………… ನಗೇಶನ ಮಾರ್ಗದ ಕೀಲ ಕೃಪೆ ಮಾಡಿ ತೋರಿದರು
ಶ್ರೀನಾಥ ಶ್ರೀಹರಿಯ ಚಾರಿತ್ರ್ಯ ಪೇಳಿಸಲಿಕೆ ಆಧಾರ ನೀನೇ ಸತ್ಯ ೨
ಇಂತು ವಿಘ್ನೇಶ್ವರನ ಬಲಗೊಂಡ ಬಳಿಕ ಸಮನಂತರದೊಳಾ
ಶಾರದಾಂಬಿಕೆ ಶ್ರೀಪಾದ ಅಂತರಂಗದ ಪೀಠದಾಸನಕೆ ಕರಕೊಳಲು ಬಂದೊದಗು ಜಿವ್ಹಾಗ್ರದಿ |
ನಿಂತು ನಡಿಸುವ ನಿನ್ನ ಶಕ್ತಿ………………………………. ವಂತೆ
ವಿಶ್ರಾಂತೆ ಪಾವನ ಮೂರ್ತೆ ಪ್ರಖ್ಯಾತೆ ವರದಾತೆ ಲೋಕ ಮಾತೆ ೩
ಅಜನ ಪಟ್ಟದ ರಾಣಿ ಸುಜನ ಜನ ಕಲ್ಯಾಣಿ ಭಜಕರ ವರದಾನಿ ಭುಜಗ
ಸಮವೇಣಿ ತ್ರಿಜಗ ಜೀವರ ಜನನಿ ತ್ರಿತಾಪ ಸಂಹಾರಿಣಿ ತ್ರಿದೇಹ ಸಂಚಾರಿಣಿ |
ದ್ವಿಜತುರಂಗ ಗಮನಿ ದಿವ್ಯಾಂಬರಾಭರಣಿ ರಜ …………………….ಗಜಗಮನಿ
ಗಂಧರ್ವಗಾನ ಲೋಲಿನಿ ವಾಣೀ ರತ್ನ ಕೃತಾಂಗಿ ಅನುಕೂಲಿನಿ ೪
ಆವರಣ ಪದಶ ಮಹಿಮಾರ್ಣವ ವರ್ಣಿಸುವದೇವ ಪುರುಷಗುಂಟು ಶಕ್ತಿ ಜಗಜೀವರೊಳ-ಗಾವನ ಕೃಪಾವಲೋಕನದಿಂದ ದೇಹ ಭಾವವ ಬಿಟ್ಟು ನೋಡುತಿರಲು |
ಗೋವು ಶುನಿ ಶ್ವಪಚಬ್ರಾಹ್ಮಣ ಹಸ್ತಿ ಕೃಮಿ ಕೀಟ ಭೃತ್ವಲಯದೊಳಗುಳ್ಳ
……………………………….. ಕೇವಲ ಪರಬ್ರಹ್ಮ ಸ್ಫುರಣಸ್ಫೂರ್ತಿಯು ತೋರದಾರಿಂದ ಗುರುವಿನ್ಹೊರತು ೫
ಗುರುವರನ ಸ್ತೌತ್ಯ ನಿಗಮಾಗಮಕಗಮ್ಯವದುಹರಿಹರಾದಿಕರು ಗುರುಧ್ಯಾನ ಪಾರಾಯಣದಿ
ಬೆರೆದು ನಿಜಸ್ವರೂಪದೊಳಗೋಲಾಡಿ ಸ್ವಸುಖದಿಂದಿಹರುಗುರು ಕರುಣದಿಂದ |
ಗುರುನಾಥ ಮರುಳು ಮಂಕರಿಗೆ ಇನ್ನಾರುಗತಿ ಕರುಣದ ಜಲಧಿ
ಎಂದು ಮೊರೆ ಹೊಕ್ಕೆ ನಿನ್ನ ಶ್ರೀ ಚರಣ ………. ಮಾಡಿ ರಚಿಸುವ ೬

 

ಏಕಪಂತರ ಮನಿಯೊಳು ನೀರ ತಂದೆ

ಗುರುವಿನ ಮರಿಲ್ಯ್ಹಾಂಗೆ |ಮರೆತು ನಾನಿರಲ್ಹ್ಯಾಂಗೆ ಪ
ಮರೆತು ಹೋದ ಗಂಟಾ |ತೆರೆದಿಟ್ಟಾ ಕರೆದು ಕೈಯಲಿ ಕೊಟ್ಟಾ ೧
ಬೋಧ ಗಜದ ಮೇಲೆ ಕೂಡಿಸಿದಾ |ಭೇದಾಭೇದ ಓಡಿಸಿದಾ ೨
ಸ್ಥಿರಚರ ಜಗವೆಲ್ಲ ವ್ಯಾಪಿಸಿದಪರಶಿವ ತಾನೇ ಆದ ೩

 

ದೇವತೆಗಳನ್ನು ಪ್ರಸನ್ನಗೊಳಿಸಲು
೧೫
ಜಯ ಮಂಗಳಂ ನಿತ್ಯ ಶುಭ ಮಂಗಳಂ | ದಯಾಂಬುಧಿ ಶ್ರೀ ಮಹಾ ಪಾದ ತೀರ್ಥಕ್ಕೆ ಪ
ಅಜ್ಞಾನ ಮಲನಾಶ ಮಾಡುವ ತೀರ್ಥಕ್ಕೆ | ಜನ್ಮ ಕರ್ಮಗಳ ಪರಿಹರಿಸುವ ತೀರ್ಥಕ್ಕೆ | ಜ್ಞಾನ ವೈರಾಗ್ಯವನು ಸಿದ್ಧಿಸುವ ತೀರ್ಥಕ್ಕೆ |ಘನ ಗುರುವಿನ ನಿಜ ಪಾದ ತೀರ್ಥಕ್ಕೆ || ಜಯ || ೧
ತಾಪತ್ರಯವನು ಪರಿಹರಿಸುವ ತೀರ್ಥಕ್ಕೆ | ಅಪರಿಮಿತವಾದ ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || ೨
ವಿಪ್ರಪಾದಾದಲ್ಲಿ ದಕ್ಷಿಣಾ ಭಾಗದಲಿ | ತಪ್ಪದೆ ವಾಸವಾಗಿಹ ತೀರ್ಥಕ್ಕೆ |ಒಪ್ಪುತೆ ಶಿರಸ್ಸಿನೊಳು ಧರಿಸಿಕೊಂಡಿಹ ಹರನ | ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || ೩
ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || ೪
ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ೫

 

ನಾದಬಿಂದುಕಲಾತೀತ
೧೩
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ
ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ ೧
ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || ೨
ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ ೩
ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ ೪
ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ ೫

 

ಮೊದಲು ಕರ್ಮ ಶಬ್ದದ ವಿವರಣೆ ಮಾಡೋಣ
೧೦
ಧನ್ಯ ಜಗಮಾನ್ಯ | ನಿತ್ಯ ನಿರಂಜನ ವಸ್ತುವಾದವ ಪ
ಉತ್ತಮ ದೇಹದಿ ಬಂದೂ | ವಯೋವ್ಯರ್ಥವಾಯಿತು ಹಾಯೆಂದೂ ||
ಮಿಥ್ಯಾ ವಿಷಯದಿ ಬೆಂದೂ |ನಿತ್ಯಾನಿತ್ಯ ವಿಚಾರಿಸಿ ತಿಳಿದವ ೧
ವೇದೋಪನಿಷದಗಳಿಂದ ಬಹು |ಸಾಧಿಸಿ ತಿಳಿಯದರಿಂದ ||
ಮೋದದಲ್ಲಿಹ ಸ್ವಾನಂದ |ತದ್ಬೋಧದಿ ಪರಮಾನಂದದಿ ರಮಿಪನು ೨
ಜನ್ಮ ಮರಣ ಭಯ ನೀಗಿ |ಘನ ಉನ್ಮನಿ ಸ್ಥಾನದಿ ತೂಗಿ ||
ತನ್ಮಯವೇ ತಾನಾಗಿ |ಚಿನ್ಮಯ ರಾಮನೊಳೈಕ್ಯವ ಪಡೆದವ ೩

 

ಸಂಚಿತ ಪ್ರಾರಬ್ಧ ಕ್ರಿಯಮಾಣ
೧೯
ನಾಥಾ ಸಮರ್ಥ ಗುರುನಾಥಗೆ ಮಂಗಳ |ಪ್ರೀತಾ ಭಕ್ತರ ನಿಜ ದಾತಾಗೆ ಮಂಗಳ ೧
ಜನನ ಮರಣ ದಾಂಟಿಸುವಗೆ ಮಂಗಳ |ಘನಕೆ ಘನವಾದ ಸ್ಥಾನ ನಿತ್ಯಗೆ ಮಂಗಳ ೨
ಗುರುಮೂರ್ತಿಗೆ ಮಂಗಳ |ಪ್ರೇಮಾ ಸ್ಫುರಿತ ನಿಜಗಿರಿಗೆ ಮಂಗಳ ೩

 

ನ್ಯಾಸವೆಂದರೆ ಶರೀರದಲಿ
೧೪
ಪರತರ ಪರವಸ್ತು ಸಗುಣಾವತಾರಗೆ ಪರಮೇಷ್ಟಿ ರೂಪಿಣೀ ಸ್ಥಿತಿಸುವಗೆ ||
ಹರಿಹರರೂಪಿಣೀ ವರದ ಸಂಹಾರಗೆ | ವಿರಹಿತವಾದ ಮಹದೇವಗೆ
ಮಂಗಳ ಮಂಗಳ ಜಯಮಂಗಳ ಮಹದಾತ್ಮ ಲಿಂಗಗೆ ೧
ಉತ್ಪತ್ತಿ ಸ್ಥಿತಿ ಲಯ ಕಾರಣರೂಪಗೆ | ಗುಪ್ತಗೂಢ ಗುಣತ್ರಯ ಸಾಕ್ಷಿಗೆ |
ವ್ಯಾಪ್ತನಾಗಿ ತನ್ನೊಳು ತಾನಾದಗೆ | ಪ್ರಾಪ್ತುಳ್ಳ ಪುರುಷರ ಪಾಲಿಪಗೆ ||ಮಂ||೨
ಹಂಸ ಪರಮಹಂಸಾಶ್ರಮದೊಳಿಹಗೆ | ಸ್ವಸಾಕ್ಷಿ ಸರ್ವ ದಂಭ ರಹಿತ ಸದೋದಿತಗೆ |
ವಾಸವಾಗಿಹನು ತುಂಗಭದ್ರ ನಿಲಯಗೆ | ದಾಸ ನ ಹೃದಯಾಬ್ಜದಾತ್ಮಗೆ || ಮಂ|| ೩

 

ಆರಕ್ಕೆ ಆರಿಟ್ಟು ಆರಳಿದು

ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ಪ
ತರಣಿ ಕೋಟಿ ಪ್ರಕಾಶ ಗುರು ಮೂರ್ತಿ ಪ್ರಭುವೆ ಅ.ಪ.
ಬಾರಯ್ಯ ಶಿರಸದಿ ಸುರನದಿ ತರುವೆ | ಮೆರೆವ ಅಗ್ನಿಯ ನೇತ್ರ ರವಿಶಶಿ ಹೊಳೆವೆ |
ಉರಗ ಕಂಕಣ ಕರಕಪಾಲ ಪಿಡಿವೆ | ಹರ ಹರ ಎಂಬ ಭಕ್ತರಿಗೆ ವರವೆ || ಬಾರಯ್ಯ ೧
ಕರ್ಣ ಕುಂಡಲವರ್ಣ ಪೂರ್ಣಚಂದ್ರಮನ | ಅರುಣ ಉದಯದ ಕಿರಣ ಹೊಳೆವ ಸುವರ್ಣ |
ತರಣಿ ಸೆಳೆದ ವಸನ ಮಿಂಚಿನ ವರ್ಣ |ಶರಣು ಮಾಡುವೆ ನಿಮ್ಮ ಎರಡೂ ಚರಣ || ಬಾರಯ್ಯ ೨
ಕಾಮಸಂಹಾರ ರಾಮನ್ನಾಮದ ಪ್ರೇಮಾ | ವಾಮಾಂಗದಲಿ ನಿಮ್ಮ ಅನ್ನಪೂರ್ಣಮ್ಮಾ |
ಧಾಮ ಮಾಡಿದಿ ನಿಮ್ಮ ಭೃಂಗಾವಳೀ ಗ್ರಾಮಾ | ಗೊಲಿದ ಸದ್ಗುರು ಆತ್ಮಾ || ಬಾರಯ್ಯ ೩

 

ಒಂಭತ್ತು ಛಿದ್ರಗಳು

ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ
ಮೋಕ್ಷ ಲಕ್ಷ್ಮಿಯುಂಟು | ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ |
ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ೧
ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ |
ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ ೨
ಶಾಂತಿ ಸತಿಯಳು ಉಂಟು ಮತಿಯು ಪುತ್ರರು ಉಂಟು | ಅಂತ್ಯಕಾಲಕ್ಕೆ ರಾಮನಾಮ ಉಂಟು |
ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ ೩
ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು |
ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು ೪
ಬ್ರಹ್ಮ ಪದವುಂಟು ವಾ ಬ್ರಾಹ್ಮಣರ ದಯವುಂಟು | ಬ್ರಹ್ಮಾಂಡದೊಳಗೆ ಸಂದೇಹವುಂಟು |
ಬ್ರಹ್ಮಾಹಮಸ್ಮಿಯುಂಟು | ಬ್ರಹ್ಮವೇ ತಾನುಂಟು |  ಭಿಕ್ಷೆ ಬೇಡಲುಂಟು ೫

 

೨೫
ಭೀಮಾ ಭವಭಯಕತಿದೂರಾ ನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ ೧
ಮಾಯಾಮಯ ಮುಸುಕಿದ ಬೆಟ್ಟಾ | ಮಾಯಾ ವಜ್ರಾಂಗವ ತೊಟ್ಟಾ | ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ ೨
ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ ೩
ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ ೪
ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ ೫

 

ಐದಕೈದು ಕೂಡಿ ಬಂದು

ಭೂತ ಬಡೆದಿತೊ | ಬ್ರಹ್ಮಭೂತವ ಬಿಡಿಸುವರಾರಮ್ಮ ಪ
ಪೃಥ್ವಿ ಆಪ ತೇಜಂಗಳನೆಲ್ಲ ನುಂಗಿತು |ಮತ್ತೆ ಸಮೀರ ಸಹ ಆಕಾಶವ |
ಚಿತ್ತ ಹಂಮಿನ ಮೂಲಕ ಹವಣಿಸುತಿದೆ |ಕರ್ತು ತಾನಾಗಿ ಸುಮ್ಮನೆ ಕೂತಿತಮ್ಮಾ ೧
ಕಳವಳ ಕಳೆದೀತು ಒಳ್ಳೆ ಬೆಳಗಾದೀತು |ಸುಳದ್ಹಾಂಗೆ ಸುಳದೀತು ಅಳಿವಿಲ್ಲದೆ |
ಮೂಲ ಪ್ರಕೃತಿಯ ಮೇಲೇರಿ ನಿಂತಿತು |ಸೊಲ್ಲದಿಂ ಸೋಂಕಲು ಬಲು ಭಯವಮ್ಮಾ ೨
ದಿಮ್ಮನೆ ಬಡದೀತು ಹಂಮನೆ ನುಂಗೀತು |ನಮ್ಮಗೆ ಎಲ್ಲಿಹುದು ಉಲಗಡೆಯಮ್ಮಾ |
ಬ್ರಹ್ಮಾಂಡದಾಚೀಲಿ ಭೂತ ಕುಣಿಯುತಿದೆ |ನ ಮನಿ ದೈವವಮ್ಮಾ ೩

 

ಚಕ್ರ ಎಂದರೆ ಮಿದುಳಿನಲ್ಲಿಯ
೧೬
ಮಂಗಳಾ ವರಯೋಗಿ ರಾಯಗೆ | ಮಂಗಳಾ ಪರಮ ಅವಧೂತಗೆ |ಮಂಗಳಾ ಪರಮಾತ್ಮ ಶ್ರೀ ಗುರು ಸಿದ್ಧ ಬಸವಂಗೆ | ಜಯ ಜಯ ಮಂಗಳಾ ಪ
ಆದಿ ಮಧ್ಯಾವಸಾನವಿಲ್ಲದ ನಾದ ಬಿಂದು ಕಲಾ ಶೂನ್ಯಗೆ |ಸಾಧಿಸುವ ಸಿದ್ಧಾಂತ ಅಗಣಿತವಾದ ಬ್ರಹ್ಮವನು | ವೇದ ವೇದಾಂತವ ವಿಚಾರಿಸಿ ನಾದ ಋಷಿ ಅಪಾರ ಚಿಂತ್ಯನು | ಮೇದಿನಿಯ ಭಕ್ತರನುಗ್ರಹಕಿತ್ತ ಬಂದ ಬಸವರಾಜಯೋಗದಲಿ ೧
ಆಗಳಾ ಕ್ಷೀರಾಬ್ಧಿ ಶಯನಗೆ ಯೋಗ ನಿದ್ರೆಯಲಿರಲು ಸುರಗಣಬೇಗದಿಂದಲಿ ಬಂದು ಪೊಗಳಲು ಬ್ರಹ್ಮನನು ಕೂಡೆ |ಭೋಗಿಶಯನಲಿ ದೇವದೇವರು ಜಾಗೃತಿ ಅವಸ್ಥೆಯಲಿ ನಿಂತನುರಾಗದಿಂದಲಿ ಮತ್ಸ್ಯ ಕೂರ್ಮ ವರಾಹನಾದ ಮಾಧವಗೆ ೨
ಇಲ್ಲಿಯ ಕತ್ತಲೆ ನಿವಾರಿಪನು ಜಲಜಮಿತ್ರನು ಇಳೆಗೆ ತೋರುವಅಳಿಯಲಾರದೇ ಕೃಷ್ಣನಾಮವು ದೋಷರಾಶಿಯನು |ತಿಳಿದು ನೋಡಲು ಯೋಗ ಧ್ರುವತರಳರೆಲ್ಲರು ಬಲ್ಲರು ಆದಿ ಮಾಧವ ಕಲಿಯೊಳಗವತರಿಸಿದ ಬಳಿಕಾ ಬಾಲಕೃಷ್ಣಂಗೆ ೩
ನೋಡಿದರೆ ದುರಿತವನು ಕೆಡುವನು, ಬೇಡಿದರೆ ಸಾಯೋಜ್ಯನೀವನು ಮಾಡಿ ಪಾದದ ತೀರ್ಥಕೊಂಡಡೆ ಮರಳಿ ಪುಟ್ಟಗಡ | ಖೇಡನಾಗದೆ ನಾಮಕೀರ್ತಿಯ ಮಾಡು ಮರುಳೆ ಆದಿಪುರುಷನರೂಢಿಯೊಳು ಈಡ್ಯಾಡಿ ಮೆರೆದ ಬಸವರಾಜಯೋಗದಲಿ ೪
ಇಂತು ಭಕ್ತರ ಭಕ್ತಿಗೋಸುಗ ಅಚಿಂತ್ಯ ಮಹಿಮನು ಶರೀರವತಾ- ನಂತು ಧರಿಸಿಹನಿಲ್ಲದಿದ್ದಡೆ ದೇಹ ತಾನೇ ತಾ |ಕಂತು ಹರನವತಾರವಲ್ಲದೆ ಭ್ರಾಂತಿ ಬಿಡಿಸಿದ ಕೊಳಕೂರದಲಿಸಂತತವೆ ನೆಲೆಸಿಹನು ಬಸವರಾಜಯೋಗದಲಿ ೫

 

ಷಟ್‍ಚಕ್ರಭೇದನವೆಂದರೆ ಆರೂ ಚಕ್ರಗಳನ್ನು
೧೭
ಮಂಗಳೆನ್ನಿರೀ ಸಂಗರಹಿತಗೆ ಮಂಗಳೆನ್ನಿ ಅಭಂಗಾದ್ವೈತಗೆ | ಮಂಗಳೆನ್ನೀ ಕೃಪಾಂಗ ಮೂರುತಿ ಲಿಂಗ ಬಸವೇಶಗೆ || ಮಂಗಳೆನ್ನಿ ಜಯ ಶುಭ ಪ
ಬ್ರಹ್ಮರೂಪದಿ ಜಗವನು ಪುಟ್ಟಿಸಿ ಬ್ರಹ್ಮಜನಕನ ನೆತ್ತಿಲಿ ರಕ್ಷಿಸಿ ಬ್ರಹ್ಮ ಮೂರುತಿ ಬಾಲಬ್ರಹ್ಮದಿ ಚರಿಸಿದಾತಂಗೆ ಮಹಾ | ಬ್ರಹ್ಮಾಂಡಕೋಟಿ ಉದರದೊಳಿರಿಸಿ | ಬ್ರಹ್ಮನ ಸ್ತುತಿಗೆ ನಿಲುಕದ ಅವಿನಾಶಿ ಬ್ರಹ್ಮಾದಿ ಸುರವಂದಿತ ರುದ್ರನಾಗಿ ಸಂಹರಿಸಿ ೧
ಜಗವನುದ್ಧರಿಸಲು ದೇಹವನು ಜಗದೀಶ್ವರನು ಅವತರಿಸಿ ಬಂದಿಹನು | ಜಗ ಮೃಗಜಲವೆಂದು ತಿಳಿದಿರೆ ಜಗದೊಳಾಡುವಗೆ || ಬಗೆ ಬಗೆಯಲಾಡುತ ಗಗನ ಗಟ್ಟಿಹನು | ನಿಗಮಕೆ ನಿಲ್ಕದೆ ನಿತ್ಯನೆನಿಸುವನು ಝಗಝಗಿಸುವ ಆರತಿಯ ಬೆಳಗಿರೆ ಜಗದ ಜನಕನಿಗೆ ೨
ಛಪ್ಪನ್ನ ದೇಶಕೆ ಶೋಭಿಸುವ ಒಪ್ಪುವ ಕೋಳಕೂರೆಂದೆನಿಸುವ ದಿಕ್ಕು ದಕ್ಷಿಣಾ ಭೀಮಾತೀರದಿ ಥಳಥಳದಿ ಹೊಳೆವ |ಶ್ರೀ ಮಹಾಗುರು ಇಪ್ಪತ್ತೊಂದು ಸಮಾಧಿಯೊಳಿರುವತಪ್ಪದೆ ರಾಮಾತ್ಮಜನಾಗಿರುವ | ಸೊಪ್ಪೆರಾಯನು ಸಹಜಾನಂದ ತಾ ಯೋಗಿಯಾಗಿ ಮೆರೆವ ೩

 

ನಾಕು ಕಾಯ
೧೧
ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ ||
ನೋಡೋ ನಿನ್ನೊಳು ನಿಜ ಖೂನಾ | ಪೂರ್ಣೈಕ್ಯದ ಜ್ಞಾನಾ ಪ
ಅಪರೂಪದ ನಿಜ ತನುವಿದು ನೋಡೋ ಸೆಡಗರದೀ ಪಾಡೋ ||
ಅಪಹಾಸ್ಯವ ಮಾಡದೆ ನೀ ಕೂಡೋ ಘನ ಚಿನ್ಮಯ ಗೂಡೋ ೧
ಆಜ್ಞಾ ಚಕ್ರದ ಬಳಿಯಲ್ಲೀ | ಎರಡೂ ಕಮಲದಲ್ಲೀ |
ಪ್ರಾಜ್ಞಾ ಝಗ ಝಗಿಸುವ ಬೆಳಕಲ್ಲೀ | ತಿಳಿ ನಿನ್ನೊಳಗಿಲ್ಲೀ ೨
ಮೇಲಿನ ಸ್ಥಾನದ ಸಹಸ್ರಾರ | ಗುರುತತ್ತ್ವದ ಸಾರಾ ||
ಪೇಳಲಳವಲ್ಲವು ಸುಖ ಪೂರಾ | ಶಂಕರ ಪದವಿವರಾ |
ಭೀಮಾ ಶಂಕರ ಪದವಿವರಾ ೩

 

೨೧
ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ || ವೃಷಭಸ್ವರೂಪದಿ ಮೆರೆವ ಆಕಾರದೇವಗೆ | ವೃಷಭ ಕನ್ನಿಕೆಯರಾರುತಿ ಎತ್ತಿರೆ ವೃಷಭಾಶಿವಗೆ ಸಂಗಮಗ ಜಗದೀಶ ಮಹೇಶ-ಗಾರುತಿಯನೆತ್ತಿರೆ ವೃಷಭ ಶಿವಗೆ ಸಂಗಮಗೆ ೧
ಭಾನು ಕೋಟಿ ದಿವ್ಯ ತೇಜ ಪ್ರಕಾಶಗೆ ಆನಂದಮಯಗೆ ಚಿನ್ಮಯಗೆ | ಮಾನಸದಿಂದಲಿಮೆರೆವೆನ್ನ ದೇವಗೆ ಮಾನ ಕನ್ನಿಕೆಯರಾರುತಿ ಎತ್ತಿರೆ |ವೃಷಭ ಶಿವಗೆ ಸಂಗಮಗೆ ೨
ಭಾಗೀರಥಿ ಪ್ರಿಯಗೆ ಭಾಲನೇತ್ರಗೆ ಶ್ರೀ ಗೌರಿಯ ಮನೋಹರಗೆ | ನಾಗಭೂಷಣನಾರಾಯಣ ಪ್ರಿಯಗೆ ನಾಗ ಕನ್ನಿಕೆಯರಾರುತಿ ಎತ್ತಿರೆ ೩
ದೇವರ ದೇವಗೆ ದೇವ ಜಗದೀಶಗೆ | ದೇವಸನ್ಮೋಹನಸ್ವಾಮಿಗೆ | ದೇವ ಸಿಂಧಾಪುರದ ಶ್ರೀ ವಿಶ್ವನಾಥಗೆದೇವ ಕನ್ನಿಕೆಯರಾರುತಿ ಎತ್ತಿರೆ ೪

 

೨೦
ಶಂಭು ಶಂಕರ ನಿಜಲಿಂಗಗೆ ಮಂಗಳಕುಂಭಿನೀಧರ ಭೂಷ ಲಿಂಗಗೆ ಮಂಗಳ ||
ಮಂಡೀಯನಾದಿ ವ್ಯೋಮಕೇಶಗೆ ಮಂಗಳ |ರುಂಡಮಾಲೆಧರ ಈಶಗೆ ಮಂಗಳ ೧
ತ್ರಿಪುಟ ತ್ರಿಪುರ ಸಂಹಾರಗೆ ಮಂಗಳ ವಿಪರೀತ ಪರಿಜ್ಞಾನ ಹರಗೆ ಮಂಗಳ ೨
ಜ್ಞಾನದಾತನು ಗುರುನಾಥಗೆ ಮಂಗಳ |ಏನೆಂಬೆ ಗುರುಕೃಪೆ ನಿತ್ಯಗೆ ಮಂಗಳ ೩

 

೨೬
ಶರಣೆಂಬೆ ನಾ ಶರ್ವಾಣಿ ವರನ | ಸಿರಿಪತಿ ಶಾಙ್ರ್ಗಧರನ ವರಸಿಂಧು ನಗರದೊಳು |ಸ್ಥಿರ ಭೋಗಗೊಂಬ ಸಂಗಮನ ಪ
ಬಾಲೇಂದು ಮುಡಿದ ಭಸಿತಾಂಗ | ಕಾಳಿಗರ್ಧಾಂಗಾ |ಪಾಲಿಸಿ ಕೊಡುವರೆ ದೊರೆಯ ಪೇಳಲಿಕಿನ್ನಾರನೈದಾರೆ |ಭಾಲಾಕ್ಷನ ಲೀಲಾ ವಿಲಾಸ ಭೋಳಾ ದೇವೇಶ | ಕಾಲಿ ಗೆರಗಿ ಬ್ರಹ್ಮಾದಿಕರು ಕಾಲಾಂತಕನ ವರ ಪಡೆವರು |ನೀಲಕಂಧರನ ನಿಗಮೋದ್ಧಾರನ ಸ್ಥೂಲ ಶರೀರನ ಸುಖಸಂಚಾರನ ಶೀಲಕ ದೂರನ | ಶಾಂತಾಕಾರನ |ಮಾಲಾಧರನ ಮಹಾ ಗುರುಹರನ೧
ಸುರನದೀ ಶಿರಧರನ ಶುಭಕರನ ಪರತರಪುರ ಹರನ | ತರುಣೇಂದು ಕೋಟಿಗಳೊಮ್ಮೆ ನೆರೆದಂತೆ ಕಳೇವರ ಕಳೆಪೊಳೆಯೆ | ನಿರವಧಿ ಸ್ವರೂಪ ನಿಜರೂಪ ಅರಿತವನ ತಾಪ |ಉರಿಯಪ್ಪಿದಾ ಕರ್ಪುರದಂತೆ ಕರಗದುಳಿವುದೇ ಅದರಂತೆ ಪರಮ ಪವಿತ್ರನ ಪಾವಕ ನೇತ್ರನ ಸುರಮುನಿ ಸ್ತೋತ್ರನ ಸುಂದರ ಗಾತ್ರನ ನರಹರಿ ಮಿತ್ರನಹಿಗಳ ಸೂತ್ರನ ಶಿರಕರ ಪಾತ್ರನ ಶಿವಸ್ವತಂತ್ರನ ೨
ಕಮಲಾಕ್ಷನ ಕಡುಭಕ್ತಿ ಕಂಡು ಕಮನೀಯ ಚಕ್ರ | ಸುಮನಾ ಸಾದು ಕೊಡಲು ನೋಡೆ ತಮ್ಮ ತಮಗೆಲ್ಲ ಕೊಂಡಾಡೆ ಶಮನಾಘ ಶಾಸನವ ಮಾಡಿದನು ಸುಮ್ಮನಿದ್ದೀಯಲ್ಲೋ ನೀನು | ಅಮಿತ ಭಕ್ತರು ಇಳೆಯೋಳ್ ಇಹರು ನಮಿಸಲು ಸಲಹಿಕಾವನು |ಅಮರರ ಹೊರೆವನ ಅಧಿಕ ಪ್ರಭಾವನ ತಿಮಿರವ ಕಳೆವನ ತೀರದಲಿವನ ಹಿಮಸುತೆ ಜೀವನ ಹಿಡಿದಿಹ ತ್ರಿಭುವನನ | ಶ್ರಮಗಳನಳಿವನ ಶಂಕರ ಭೀಮಾ ಶಂಕರನ ೩

 

ಅಧಿಷ್ಠಾನವೆಂದರೆ ಯಾವದಾದರೊಂದು ವಸ್ತುವಿನ

ಶಾಂಭವಿ ದಯಮಾಡೆ ಸಿಟ್ಟು ಬಿಡು | ಮುನಿಯದೆ ಎನ್ನ ಕೂಡ |
ಕೋಪವು ಮಾಡಬೇಡ ಎನಗಾರ |ಕರುಣ ದೃಷ್ಟಿಲಿ ನೋಡ ಪ
ವಿಷಯದ ಬಲೆಯೊಳಗೆ ನಾ ಸಿಲುಕಿ | ಮರೆತೆನು ಸರ್ವಾಶಂಕೀ |
ಪ್ರಾಯ ಪ್ರಾಯದ ಮದದಿಂದ ಬಹುಸೊಕ್ಕಿ ಬಿಟ್ಟೆನು ನಿನಗಿಂದು ಮೂರ್ತಿ ೧
ರಜ ತಮ ಸಂಗದಲಿ ನಾ ಕೆಟ್ಟೆ | ನಿನ್ನ ಸ್ಮರಣೆಯ ಬಿಟ್ಟೆ |
ಕಾಮ ಕ್ರೋಧದಲಿ ಬಹು ಸುಟ್ಟೆ |ತಿಳಿಯದು ನಿನ್ನ ಗುಟ್ಟೇ ೨
ಮನಸಿಗೆ ತರದಿರೆ ಎನ್ನ ದೋಷ |ಮಾಡೆನ್ನ ದುರಿತವಿನಾಶಾ |
ಕಲಿಕಾಲಸುತನಾ ಭವಪಾಶಾ | ಭಜಿಸುವೆ ನಿನ್ನ ಮಹೇಶಾ ೩

 

ಅಧ್ಯಾರೋಪವೆಂದರೆ ಒಂದು ವಸ್ತುವಿನ ಮೇಲೆ

ಸದ್ಗುರು ಮೂರ್ತಿ ರಕ್ಷಿಸೋ ನೀನು |ನಿನ್ನ ಪಾದವ ನಂಬಿದೆ ನಾನು ಪ
ಪೂರ್ವಾರ್ಜಿತ ಪ್ರಾರಬ್ಧದಿಂದೆ |ತಾಯಿ ಉದರದಲಿ ನಾ ಬಂದೆ ||
ಮಲಮೂತ್ರ ಜಠರಾಗ್ನಿಯಲಿ ನೊಂದೆ |ಒಂಬತ್ತು ತಿಂಗಳೊಳಗೆ ಬೆಂದೆ ೧
ಬಾಲತ್ವದಲಿ ದುರ್ಬಲನಾದೆ |ಯೌವನ ಕಾಲಕೆ ಅಹಂಮತನಾದೆ ||
ಮುಪ್ಪು ಬರಲು ಚಿಂತೆಯೊಳಗಾದೆ |ಸ್ವಾಮಿ ಭಜನೆಗೆ ಅಂತರನಾದೆ ೨
ಧರೆಯೊಳಗೆ ದೊಡ್ಡವನೆಂದು |ಭವಭಯಕಂಜಿ ಬೆನ್ನನೆ ಬಿದ್ದೆ ||
ದೀನೋದ್ಧಾರಕನೆಂದು ಶರಣು ಬಂದೆ |ನ ಧ್ಯಾನಕೆ ತಂದೆ ೩

 

ಬಾಹ್ಯವಸ್ತುಗಳ ಕಿವಿಗಳ ಮೇಲೆ ಆಘಾತವಿಲ್ಲದೆ

ಸದ್ಗುರುವಿಗೆ ನಾನೇನು ಮಾಡಿ ಉದ್ಧಾರಾಗುವೆ | ನಾನಿನ್ನುದ್ಧಾರಾಗುವೆ |
ದೇಹಾತೀತನಾಗಿ ಚರಣಕಮಲಕ್ಕೆರಗುವೆ ಪ
ತಾರಕ ಮಂತ್ರ ಉಪದೇಶ ಕರ್ಣದೊಳಿಟ್ಟಾ ಸದ್ಗುರುಕರ್ಣದೊಳಿಟ್ಟಾ |
ಮಾಯಾ ಮೋಹದ ಬೇಡಿ ಕಡಿದು |ಭ್ರಾಂತಿಯ ಸುಟ್ಟಾ ೧
ನೆತ್ತಿಯ ಮ್ಯಾಲೆ ಕರವನಿಟ್ಟು ನಿಜವೇ ನೀನೆಂದಾ |
ಅಂತರಂಗವ ತೋರಿಸಿಕೊಟ್ಟು ಭವ ಭಯ ಬಿಡಿಸಿದಾ ೨
ಸದ್ಗುರುನಾಥಾ ಭೃಂಗವಳ್ಳಿವಾಸಾ ಆತನ ದಯದಿಂದ |
ಸಗುಣರೂಪನಾಗಿ ಮೆರೆವ ಸಹಜಾನಂದಾ ೩

 

ಸಾಮಾನ್ಯವಾಗಿ ಆಗಮ ಮತ್ತು ನಿಗಮ

ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥
ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ ೧
ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ ೨
ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ ೩

 

೨೪
ಸ್ವಾಮಿ ನೃಸಿಂಹ ಸರಸ್ವತಿಗೆ ಮಂಗಳಾ |ಕಾಮಿತ ಕಾಮ ಫಲ ತೃಪ್ತಿಗೆ ಮಂಗಳಾ ಪ
ನಿರುಪಮ ನಿತ್ಯ ನಿರ್ಮಾಯಗೆ ಮಂಗಳಾ |ನಿರ್ವಾಣ ಸುಖ ಯತಿರಾಯಗೆ ಮಂಗಳಾ ೧
ಭಕ್ತಜನರ ಕಲ್ಪವೃಕ್ಷಗೆ ಮಂಗಳಾ |ಭಕ್ತಿಯಿಂದ ಭಜಿಸುವ ಮೋಕ್ಷಗೆ ಮಂಗಳ |ಭೀಮಾ ಗಂಧರ್ವಪುರ ವಾಸಗೆ ಮಂಗಳಾ |ಶ್ರೀ  ಗುರು ಈಶಗೆ ಮಂಗಳಾ ೩

 

ಮುಂದಿನ ಶ್ಲೋಕವು ಇವುಗಳನ್ನು ವಿವರಿಸುತ್ತದೆ
೧೮
ಹಲವಂಗದವನಿಗೆ ಬಲುವಂಗ ಮಾಲಿಗೆ | ಗುಲ್ಲು ಗುಲ್ಲಿಸಿದ ಎಲ್ಲರಿಗೆ | ಬಲ್ಲ ಮಹಾತ್ಮಗೆ ಬಲಸೀದ ಅಯ್ಯಗೆ ಶುರದರ ಸದ್ಗುರುನಾಥಗೆ ಪ
ಮಂಗಳ, ಮಂಗಳ ಜಯ ಮಂಗಳಾ ಶುಭ ಮಂಗಳಾ ಮಹಾ ಮಂಗಳ ಭೃಂಗವಳ್ಳಿಯ ಸದ್ಗುರುನಾಥಗೆ ೧
ಗಗನ ಗ್ರಾಸಿಗೆ ಸಾಗರವ ಶೋಷಿಪಗೆ |ಭೂಗೋಲವೆಲ್ಲವ ಭಕ್ಷಿಪಗೆ | ಯೋಗಿ ಜನರ ಹೃತ್ಕಮಲವಾಸಿಪಗೆ | ಭೋಗ ಮೂರು ಸದ್ಗುರುನಾಥಗೆ ೨
ಅಗಾಧ ಮಹಿಮಗೆ ಅಗಣಿತ ಗಣಿತಗೆ | ನಿಗಮಕೆನಿಲುಕದ ನಿರ್ಲೇಪಗೆ | ಭೃಂಗವಳ್ಳಿಯಲ್ಲಿ ನಿಂತಮಹಾತ್ಮಗೆ | ಮಗ ನ ಪಾಲಿಪಗೆ ೩

 

ಕಣ್ಣು ಮುಚ್ಚಿದರೂ ಕಾಣ
೧೨
ಕಣ್ಣು ಮುಚ್ಚಿದರೂ ಕಾಣ ಬರುತಿದೆ ಪ್ರಣವ ಸ್ವರೂಪ |ಭೃಕುಟಿ ಮಧ್ಯದಲಿ ಪ್ರಕಟವಾಗಿದೆ ಉದಯವಾಗಿ ರೂಪ ಪ
ನಾಸಿಕಾಗ್ರದಲಿ ವಾಸವಾಗಿದೆ ಬೀಸುವ ಗಾಳಿಗೆ ಭಿನ್ನವಿಲ್ಲದೆ |ಏಸೇಸು ದಿನ ತಪವ ಮಾಡಿದರೂ ಯೋ- ಗೇಶ್ವರ ಮುನಿಗೆ ದುರ್ಲಭ ೧
ಝೇಂಕರಿಸುವದಾ ನಾದ ನೆತ್ತಿಯೊಳು ಓಂಕಾರ ಶಬ್ದವು ಶೂನ್ಯವಾಗದೆ |ಶಂಕರ ಸ್ವರೂಪ ತಿಳಿದ ದತ್ತನ ಬೀಜಮಂತ್ರ ಅಂಕುರದಿಂದೆ೨

 

ಹಾಡಿನ ಹೆಸರು :ಕಣ್ಣು ಮುಚ್ಚಿದರೂ ಕಾಣ
ಹಾಡಿದವರ ಹೆಸರು :ಕಾರ್ತಿಕ್ ಹೆಬ್ಬಾರ್
ರಾಗ :ಆಹಿರ್ ಭೈರವ್
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಜೋ ಜೋ ಎನ್ನ ಗುರುವೆ
೧೩
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ
ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ ೧
ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || ೨
ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ ೩
ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ ೪
ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ ೫

 

ಹಾಡಿನ ಹೆಸರು :ಜೋ ಜೋ ಎನ್ನ ಗುರುವೆ
ಹಾಡಿದವರ ಹೆಸರು :ಚಂದ್ರಿಕಾ ಗುರುರಾಜ್
ರಾಗ :ಆನಂದ ಭೈರವಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಶೈಲಿ :ತತ್ವಪಾದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾಥಾ ಸಮರ್ಥ
೧೯
ನಾಥಾ ಸಮರ್ಥ ಗುರುನಾಥಗೆ ಮಂಗಳ |ಪ್ರೀತಾ ಭಕ್ತರ ನಿಜ ದಾತಾಗೆ ಮಂಗಳ ೧
ಜನನ ಮರಣ ದಾಂಟಿಸುವಗೆ ಮಂಗಳ |ಘನಕೆ ಘನವಾದ ಸ್ಥಾನ ನಿತ್ಯಗೆ ಮಂಗಳ ೨
ಗುರುಮೂರ್ತಿಗೆ ಮಂಗಳ |ಪ್ರೇಮಾ ಸ್ಫುರಿತ ನಿಜಗಿರಿಗೆ ಮಂಗಳ ೩

ಹಾಡಿನ ಹೆಸರು :ನಾಥಾ ಸಮರ್ಥ
ಹಾಡಿದವರ ಹೆಸರು :ಸಹನಾ ರಾಮಚಂದ್ರ, ಮಾನಸಿ ಪ್ರಸಾದ್, ಮಂಗಳಾ
ರಾಗ :ವಸಂತ
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *