Categories
ರಚನೆಗಳು

ಮಹಾನಿಥಿವಿಠಲ

೧೧೦
ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ
ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ.
ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ
ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ
ಲಾಲಿಸಿ ಎನ್ನನು ಕೇಳೋ ಎನ್ನ ವಾಕು
ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ ೧
ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ
ಈ ಜನ್ಮದಿ ನಿಂದೆ ಅರಿಯದವರಂತಿರುವರೆ
ಕಾಯುವ ಕರುಣಿ ನೀನು ದೀನಜನ ಸುರಧೇನು ೨
ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು
ದುರಂತ ಕರ್ಮಂಗಳ ಕಳೆದು
ಹಂಬಲಿಸುವ ಭಕುತರ ಬೆಂಬಲಿಗನೆನಿಸಿ
ಸಂತತ ನಿನ್ನ ಸುಖಸಿರಿಯ ಸುರಿಸೊ ೩
ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು
ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ
ನೀನಲ್ಲದಿನ್ಯಾರೋ ದೇವರ ದೇವಾ ೪

 

೧೧೧
ದಯದಿಂದಲಿ ನೋಡೊ ಎನ್ನಾ
ಹಯವದನ್ನಾ ಶ್ರೀಹರಿ ಪ
ಬೇಡಿಕೊಂಬೆನೋ ನಿನ್ನಾ ಆನಂದ ಘನ್ನಾ
ವರಗಳ ನೀಡಿ ಅ.ಪ.
ಭಕುತದಿ ಕೂಡಿ ಆಡುವೆ ನೀ ನಿತ್ಯ
ಸುಜನರಿಗೆ ಕಾಡಿ ಕೆಣಕುವ ಈ ಖೋಡಿ
ದುರಿತಂಗಳ ಓಡಿಸಿ ಅನುದಿನ ಸಾಮಗಾನ ಪ್ರೇಮಾ
ಬ್ರಹ್ಮಾದಿಗಳಿಗೆ ಕಾಮಿತಪ್ರದ ರಾಮಾ
ಜಯಜನರುಜಾಪತಿ ಭೂಮಾ ದೈತ್ಯವಿರಾಮಾ
ಪರಿಪೂರ್ಣ ರಾಮಾ ೧
ಶಾಮಸುಂದರ ಶಕಟಾಸುರಮರ್ದನ
ಸಾಮಜವರದನೆ ಮಾತುಳಾಂತಕ
ಮಾಮನೋಹರ ಮದನ ಜ£ಕÀನೆ ಕರುಣಿಸಿ ಎನ್ನನು ೨
ಏನು ಬಲ್ಲೆನು ನಾನು ನಿನ್ನ ಮಹಿಮೆಯನ್ನು
ದೀನ ಸುರಧೇನು ಬಣ್ಣಿಸಲಳವೆ ನಿನ್ನ ಮಹತ್ತನ್ನು
ಮುನಿಮೌನಿವರರಿಂದ ಅನಘನೆನಿನ್ನಮಿತ ಗುಣಗಣನ ಕಾಣದೆ
ಲಕುಮಿ ಮನದಲ್ಲಿ ಅನುವು ತಪ್ಪೆ
ದಿವಿಜ ಮನುಜ ಲತೆಗಳೆಲ್ಲಾ ನಮೋ ನಮೋ
ಎಂಬೋರಲ್ಲದೆ ಸ್ವಾಮಿ ನಿತ್ಯ ೩
ಹಾಟಕಾಂಬರಧರ ಶ್ರೀವತ್ಸಲಾಂಛನ
ಜಟಾಮಕುಟ ಕುಂಲ ಕೈಟಭಾಂತಕನೆ
ಕಡಲಮಂದಿರ ಕುಟಿಲ ಕಟುಮತಿ
ಖಳರನು ಶಿಕ್ಷಿಸಿ ಕೈಯ್ಯ ಬಿಡದೆ ಎನ್ನಾ
ಮಾನಿಧಿವಿಠಲ ಕಾಲಿಗೆ ಬೀಳುವೆ ೪

 

೧೧೨
ದಯಮಾಡೋ ಹನುಮಾ ದಯಮಾಡೋ ಪ
ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ.
ಅಂಜಾನಿಯ ಕಂದನೆ ಸಂಜೀವನ ತಂದನೆ
ಅಂಜಾದೆ ರಕ್ಕಸರ ಕೊಂದಾನೆ ೧
ಕೀಟಕಾಂತಕನೆ ಕಿರೀಟ ಸಖನೆ
ಪಾಂಚಾಲಿ ಹೃತ್ಕುಮುದ ಚಂದ್ರನೆ ೨
ಆನಂದತೀರ್ಥನೆ ಅಮ್ನಾಯಸ್ತುತನೆ
ಮಾನಿಧಿವಿಠಲನ ದೂತನೆ ೩

 

೧೧೮
ನಿನ್ನೊರತು ಇನ್ನಿಲ್ಲ ಹನುಮಾ
ಜಯ ಭೀಮಾ ಗುರುಮಧ್ವರಾಯಾ ಪ
ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ
ಅನುಗಾಲವೂ ಕಾಯೋ ಅನುಪಮ ಚಿಂತನ ೧
ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ
ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ ೨
ಕದರೂರು ಹನುಮೇಶ ಹಸನ್ಮುಖವಿಠಲನ
ಮುದದಿಂದಲಿ ಒಲಿಸಿದ ಚದುರ ಮೂರುತಿಯೆ ೩

 

೧೧೯
ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ಪ
ತ್ರೇತಾಯುಗದಲಿ ರಾಮನ ಸೇವೆಗೆ ನೇಮದಿ ಬಂದು
ಆ ಲಂಕೆಯ ಬೆಂಕಿಗೆ ಆಹುತಿ ಇತ್ತ ೧
ಹೃದಯವ ಹರಿಸಿದನವ ಮಾಡಿದ
ಹದನವ ತೋರಿಸೋ ಬುಧಜನ ನಮಿತನೆ ೨
ದ್ವಾಪರ ಯುಗದಲಿ ಪರಮಾತ್ಮನ ಪೂಜಿಸಿ
ತೋರಿಸಿದಂಥ ಅಪಾರ ಮಹಿಮನೆ ೩
ಕಲಿಯುಗದೊಳು ಮಹಾ ಖಳಮತಗಳನೆಲ್ಲಾ
ನಿನ್ನ ಸರಳಿಗಳಿಂದೊರಿಸಿದೆ ಅಕಳಂಕ ಮಹಿಮನೆ ೪
ತಂದೆ ಹಸನ್ಮುಖವಿಠಲನ ಚಂದದಿಂದಲಿ ಪಾಡುವ
ಸುಂದರಮೂರುತಿಯೆ ೫

 

೧೧೩
ಭಜಿಸೋ ಬೇಗ ಹರಿಯ ಅಜಭವಾಶ್ರಿತ ನಿಜ ದೊರೆಯ ಪ
ಕಾಮಕ್ರೋಧವ ಬಿಟ್ಟು ಮನಸಿನೊಳಗೆ
ರಾಮ ಮೂರುತಿಯಿಟ್ಟು ಪ್ರೇಮ ತಿಳಿದಷ್ಟು
ಆದಷ್ಟು ಕಾಮಿತಾರ್ಥವ ಕೊಟ್ಟು
ಹೇಮಗರ್ಭಭವ ಸೋಮ ಸೂರ್ಯರಿಗೆಲ್ಲ ೧
ನಿಯಮನ ಮಾಡುವ ಮಹಾ ದೈವವ ಬಿಟ್ಟು ಇರಸಲ್ಲ
ಜಗದೊಳಜಾಮಿಳ ಬಲ್ಲ ನಂಬಿ ಕೆಟ್ಟವರಿಲ್ಲ
ಧ್ರುವಬಲ ಇಂಬುಗೊಂಡರಲ್ಲ ತುಂಬಿದ ಸಭೆಯೊಳಾಂಬುಜಾಕ್ಷಿ
ಮಾನಗೊಂಬಾಗ ಅಂಬರ ದೃಷ್ಟಿ ಸುರಿಸಿದ೨
ಒಂದೇ ಮನದಿ ಭಜಿಸೆ ಭವವೆಂಬೋ ಬಂಧನವ ಬಿಡಿಸುವ
ಮುಂದೆ ಮುಕ್ತಿಯ ಹರಿಸಿ ಕೊಡುವನು ಚಂದದಿ ಅನುಕರಿಸಿ
ಬಂಧ ಮೋಕ್ಷಪ್ರದ ಮಾನಿಧಿವಿಠಲನ
ಇಂದಿಗೂ ಮುಂದಿಗೂ ಬಿಡದೆ ನೀನೆಂದೆಂದಿಗೂ ೩

 

೧೧೪
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ
ಸ್ವಾಮಿ ಹಯವದನರಾಯಾ ಪ
ಬಾರಿಬಾರಿಗೂ ಈತನ ಮಂದಿರದಲಿ ನಿನ್ನ
ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ.
ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ
ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ
ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ
ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು
ಸಲೆ ಮೀಸಲವ ಮಾಡೋ ದೇವರ ದಯಾಳೊ೧
ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ
ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ
ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ
ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ
ಶ್ರೀವತ್ಸಲಾಂಛನನೇ೨
ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ
ಬಿಗನು ಅಘನಾಶನವೆಂದೊ ನಾನಿಂದೂ
ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ
ಹೀಗೆ ಮುನಿಸೋರೇನೋ ಶ್ರೀಹರೆ
ಅನಿಲಾಂತರ್ಗತ ಮಾನಿಧಿವಿಠಲ ತನುಮನ
ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ
ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ ೩

 

೧೧೫
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು
ನಿಲ್ಲುವರಯ್ಯಾ ಈ ಜಗತ್ರಯದಿ ಪ
ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ.
ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ
ದನುಜಾಂತಕ ರಾಘವನ ಸೇವೆ ಮನದಣಿಯೆ
ಮಾಡಿ ದುರಂಧರನೆನಿಸಿದೆ ೧
ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ
ಧುರದಲಿ ಅಷ್ಟು ವೀರರಿದ್ದು ಬಿಡಿಸಿಕೊಳ್ಳಲಾರದೆ
ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ ೨
ಗುರುಮಧ್ವರಾಯಾ ದ್ವೈತವನು ಸಿದ್ಧಾಂತವ
ಮಾಡಿ ಅದ್ವೈತ ಮತವ ಗೆದ್ದು
ಮಾನಿಧಿವಿಠಲನ ಸೂಸಿ ಪೂಜಿಸಿ ಮೆರೆದೆಯಾ
ಮದ್ಗುರು ಮುನಿಮೌನಿರಾಮಾ ೩

 

೧೧೬
ಯಾರೇನು ಮಾಡುವರೋ ಹರಿಯೇ
ಯಾರಿಂದಲೇನಹುದು ಪ
ವಾರಿಜಾಂಬಕ ಮಾರಜನಕ
ಹಾರ ಕೌಸ್ತುಭ ವಕ್ಷ ಶ್ರೀಶಾ ಅ.ಪ.
ಅಜ ಈ ಜಗ ಸೃಜಿಸಿದನೆ
ಶ್ರೀದೇವಿಯು ನಿಜಗುಣ ನೆಲೆಗಂಡಳೆ
ಭುಜಗಭೂಷಣ ಆಯಕರ್ತನಾದರೆ
ಭಜಕನಾ ಬಯಕೆ ಬಾಯಬಿಡುವದೆ ೧
ಸುರಪ ಸುರರೊಡೆಯನೆ ಧರಣಿ
ಈ ಉರಗೇಂದ್ರ ಪೊತ್ತಿದನೆ
ದುರುಳನ ಭಯಕೆ ಪುರವ ಬಿಟ್ಟೋಡಿದ
ಧರಣಿಯ ದುರುಳನೊಯ್ಯೆ
ವರಾಹರೂಪದಿ ತಂದೆ ನೀ ತಂದೆ ಹರಿಯೇ ೨
ಶ್ರೀಪತಿ ಸುರತತಿಯ ಸೃಜಿಸಿ
ಈಪ್ಸಿತಾರ್ಥಗಳನೆಲ್ಲಾ ಅವರಿಗೆ
ಸ್ವಾಪ್ನಜಾಗೃತಿಯಲಿ ಪರಿಪಾಲಿಸೆ
ಮಹಾನಿಧಿವಿಠಲ ನೀನಲ್ಲದಿನ್ಯಾರೋ ೩

 

೧೧೭
ಶಾಮಸುಂದರ ಪೊರೆಯೊ ರಘುರಾಮಾ
ಕಾಮಿತ ಫಲವಿತ್ತು ಪ
ಸೋಮಧಾಮ ಸುತ್ತಾಮ ಸುರಾರ್ಚಿತ
ಕರುಣದಿ ದಯವಿತ್ತು ಅ.ಪ.
ತಟಿತ್ಕೋಟಿ ನಿಭ ಹಾಟಕಾಂಬರನೆ
ಘಟಿತವಾದ ಈ ಜಟಿಲ ಶರಧಿಯೊಳು
ನಟ ನಡುವೆ ಸಿಲುಕಿ ಗುಟಕ ನೀರು ಕುಡಿದ ಈ
ಪುಟ [ಟ್ಟ] ಪುರುಷನ ಮೇಲೆ ದೃಷ್ಟಿ ಇಟ್ಟು ನೋಡಿದರೆ
ಪಟುಲವೇನೋ ವಟಪತ್ರಶಯನನೆ
ನಟವಳಿಯೊಳು ಈ ಭಕುತ ಕಟಕಿಯ ಮಾಡೆ ೧
ಚಂಡ ವಿಕ್ರಮ ಕೋದಂಡ ದೀಕ್ಷಾ ಖಂಡ ಮಹಿಮಾರಾಮಾ
ಖಂಡ ಪರಶುಮಾರ್ತಾಂಡ ಸುರಾರ್ಚಿತ ಪಂಡಿತ ರಣಭೀಮಾ
ದುರಿತವೇಕೋ ಗಂಡ ಕಂಠೀರವನೆ ಡಿಂಗರಿಗಾತಿ ಪ್ರೇಮಾ
ಅಂಡಜವಾಹನ ಪಾಂಡವ ಮೂರುತಿ ಕುಂಡಲಗಿರಿಧಾಮಾ ೨
ಘನಚರಿತ ಪ್ರಸನ್ನ ದಯಾಂಬುಧಿ ಇನ್ನಾದರೂ ಈ ಚಿಣ್ಣಗೆ
ಚೆನ್ನಾಗಿ ದೃಷ್ಟಿಯಿಟ್ಟು ಕೃಪೆಮಾಡು ಸನ್ನುತಿಸುವೆ ಮುನ್ನಾ
ಕಣ್ಣೆತ್ತಿ ನೋಡದೆ ಅನ್ನ ದೈªಂಗಳ ಬಿನ್ನವಿಸುವೆ ನಿನ್ನಾ
ಮನ್ಮಥಪಿತ ಭೋ ಮಹಾನಿಧಿವಿಠಲ ಅಹರಹದಿ ನಿನ್ನಾ ಚನ್ನಾ ೩

 

ದಯಮಾಡೋ ಹನುಮಾ
೧೧೨
ದಯಮಾಡೋ ಹನುಮಾ ದಯಮಾಡೋ ಪ
ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ.
ಅಂಜಾನಿಯ ಕಂದನೆ ಸಂಜೀವನ ತಂದನೆ
ಅಂಜಾದೆ ರಕ್ಕಸರ ಕೊಂದಾನೆ ೧
ಕೀಟಕಾಂತಕನೆ ಕಿರೀಟ ಸಖನೆ
ಪಾಂಚಾಲಿ ಹೃತ್ಕುಮುದ ಚಂದ್ರನೆ ೨
ಆನಂದತೀರ್ಥನೆ ಅಮ್ನಾಯಸ್ತುತನೆ
ಮಾನಿಧಿವಿಠಲನ ದೂತನೆ ೩

 

ಹಾಡಿನ ಹೆಸರು :ದಯಮಾಡೋ ಹನುಮಾ
ಹಾಡಿದವರ ಹೆಸರು :ನೀಲಾ ರಾಮಗೋಪಾಲ್
ರಾಗ :ರೀತಿಗೌಳ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *