Categories
ರಚನೆಗಳು

ಮೋಹನದಾಸರು

ಸಂಪ್ರದಾಯದ ಹಾಡುಗಳು
೫೩
ಕೋಲು ಹಾಡು
ಆಕಾಶಕಭಿಮಾನಿ ಶ್ರೀಕಂಠ ವರಪುತ್ರಏಕದಂತನೆ ವಿಘ್ನೇಶ ಕೋಲೆ
ಏಕದಂತನೆ ವಿಘ್ನೇಶ ನಿನ್ನ ಪದಏಕ ಚಿತ್ತದಲಿ ಬಲಗೊಂಬೆ ಕೋಲೆ ೧
ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯ ಹಣ್ಣುಘನವಾದ ಚಿಗುಳಿ ತಂಬಿಟ್ಟು ಕೋಲೆ
ಘನವಾದ ಚಿಗುಳಿ ತಂಬಿಟ್ಟು ತಂದೀವೆಗಣಪತಿ ಮತಿಯ ಕರುಣಿಸು ಕೋಲೆ ೨
ಜಗದುತ್ಪತ್ತಿ ಸ್ಥಿತಿ ಲಯಕೆ ಕಾರಣನಾದಜಗದೀಶ ಜಾಹ್ನವಿ ಜನಕನೆ ಕೋಲೆ
ಜಗದೀಶ ಜಾಹ್ನವಿ ಜನಕ ನಾರಾಯಣನಗಧರನ ಮುನ್ನ ಬಲಗೊಂಬೆ ಕೋಲೆ ೩
ಮಚ್ಛ ಕೂರುಮ ವರಹ ನರಸಿಂಹ ವಾಮನಸ್ವಚ್ಛ ಭೃಗುರಾಮ ರಘುರಾಮ ಕೋಲೆ
ಸ್ವಚ್ಛ ಭೃಗುರಾಮ ರಘುರಾಮ ಕೃಷ್ಣ ಬೌದ್ಧಅಚ್ಛ ಕಲ್ಕಿಯ ಬಲಗೊಂಬೆ ಕೋಲೆ ೪
ಈಶ ಬ್ರಹ್ಮರಿಗೆ ನಿಯಾಮಕನಾಗಿದ್ದುಪೋಷಿಸುತಿಪ್ಪ ಪರಮಾತ್ಮ ಕೋಲೆ
ಪೋಷಿಸುತಿಪ್ಪ ಪರಮಾತ್ಮನಾದ ಶ್ರೀಕೇಶವನ ಮೊದಲೆ ಬಲಗೊಂಬೆ ಕೋಲೆ ೫
ನೀರಿಗಾಶ್ರಯನಾಗಿ ನೀರೊಳು ಮಲಗಿಪ್ಪನೀರಜ ನೇತ್ರ ನಿಗಮಾತ್ಮ ಕೋಲೆ
ನೀರಜ ನೇತ್ರ ನಿಗಮಾತ್ಮನಾದ ಶ್ರೀನಾರಾಯಣನ್ನ ಬಲಗೊಂಬೆ ಕೋಲೆ ೬
ಯಾದವ ಕುಲಜನೆ ಸಾಧುಗಳರಸನೆಮಾದೇವಿಗಾಶ್ರಯನಾಗಿಪ್ಪ ಕೋಲೆ
ಮಾದೇವಿಗಾಶ್ರಯನಾಗಿ ಪಾಲಿಸುವಮಾಧವನ್ನ ಮೊದಲೆ ಬಲಗೊಂಬೆ ಕೋಲೆ ೭
ಚಂದದಿಂದ ವೇದ ವೃಂದ ಪ್ರತಿಪಾದ್ಯನೆಇಂದಿರಾದೇವಿ ರಮಣನೆ ಕೋಲೆ
ಇಂದಿರಾದೇವಿ ರಮಣನಾದ ಗೋ-ವಿಂದನ್ನ ಮೊದಲೆ ಬಲಗೊಂಬೆ ಕೋಲೆ ೮
ಸೃಷ್ಟಿಯೊಳಗೆಲ್ಲ ವ್ಯಾಪ್ತನಾಗಿರುತಿಪ್ಪವೈಷ್ಣವಕುಲಕೆ ತಿಲಕನೆ ಕೋಲೆ
ವೈಷ್ಣವ ಕುಲಕೆ ತಿಲಕನಾದ ಶ್ರೀವಿಷ್ಣುವಿನ ಮೊದಲೆ ಬಲಗೊಂಬೆ ಕೋಲೆ ೯
ಅಧಮನಾಗಿದ್ದಂಥ ಅಸುರನ ಸಂಹರಿಸಿಮುದವ ಬೀರಿದನೆ ಸುರರಿಗೆ ಕೋಲೆ
ಮುದವ ಬೀರುತ ಸುರರ ಪಾಲಿಸುವಂಥಮಧುಸೂದನನ್ನ ಬಲಗೊಂಬೆ ಕೋಲೆ ೧೦
ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕವ ಕೋಲೆ
ಆಕ್ರಮಿಸಿ ತ್ರಿಲೋಕವನಳೆದ ತ್ರಿ-ವಿಕ್ರಮನ್ನ ಮೊದಲೆ ಬಲಗೊಂಬೆ ಕೋಲೆ ೧೧
ಭೂಮಿಯೊಳಗೆ ಅತಿ ಸಂಭ್ರಮನಾಗಿದ್ದಕಾಮಿತಾರ್ಥಂಗಳ ಕರೆವನೆ ಕೋಲೆ
ಕಾಮಿತಾರ್ಥಂಗಳ ಕರೆದು ಭಕ್ತರ ಪೊರೆವವಾಮನನ್ನ ಮೊದಲೆ ಬಲಗೊಂಬೆ ಕೋಲೆ ೧೨
ವೇದಾಭಿಮಾನಿಗೆ ಸಾದರವಾಗಿಪ್ಪಬೌದ್ಧ ಮೂರುತಿಯೇ ಭವದೂರ ಕೋಲೆ
ಬೌದ್ಧ ಮೂರುತಿಯೇ ಭವದೂರನಾದ ಶ್ರೀಶ್ರೀಧರನ್ನ ಮೊದಲೆ ಬಲಗೊಂಬೆ ಕೋಲೆ ೧೩
ಸಾಕಾರ ಮೂರುತಿ ಸರ್ವೇಂದ್ರಿ ನಿಯಾಮಕನಾಕೇಶ ವಂದ್ಯ ನಳಿನಾಕ್ಷ ಕೋಲೆ
ನಾಕೇಶ ವಂದ್ಯ ನಳಿನಾಕ್ಷನಾದ ಹೃಷಿ-ಕೇಶ ಹರಿಯ ಬಲಗೊಂಬೆ ಕೋಲೆ ೧೪
ಪದುಮ ಸಂಭವ ಪಿತ ಪದುಮಿನಿ ವಲ್ಲಭಪದುಮ ಪೊಕ್ಕುಳಲಿ ಪಡೆದನೆ ಕೋಲೆ
ಪದುಮ ಪೊಕ್ಕುಳಲ್ಲಿ ಪಡೆದು ಪಾಲಿಸುವಂಥಪದುಮನಾಭನ ಮುನ್ನ ಬಲಗೊಂಬೆ ಕೋಲೆ ೧೫
ಕಾಮಿನಿ ಯಶೋದೆ ಒರಳಿಗೆ ಕಟ್ಟಲುಶ್ರೀ ಮನೋಹರ ಶೆಳೆದೊಯ್ದ ಕೋಲೆ
ಶ್ರೀ ಮನೋಹರ ಶೆಳೆದು ಪಾಪವ ಕಳೆದದಾಮೋದರನ್ನ ಬಲಗೊಂಬೆ ಕೋಲೆ ೧೬
ಕಿಂಕರರ ಚಿತ್ತ ದುರ್ವಿಷಯಕ್ಕೆರಗಲುಪಂಕಜನಾಭ ಶಳೆದನೆ ಕೋಲೆ
ಪಂಕಜನಾಭ ಶಳೆದು ತನ್ನಲ್ಲಿಡುವಸಂಕರುಷಣನ್ನ ಬಲಗೊಂಬೆ ಕೋಲೆ ೧೭
ಏಸು ಬ್ರಹ್ಮಾಂಡದೊಳು ವಾಸವಾಗಿರುತಿಪ್ಪದಾಸವರ್ಗವನೆ ಪೊರೆವನೆ ಕೋಲೆ
ದಾಸ ವರ್ಗವನೆ ಪೊರೆವನೆ ನಮ್ಮ ಶ್ರೀವಾಸುದೇವನ್ನ ಬಲಗೊಂಬೆ ಕೋಲೆ ೧೮
ಮುದ್ದು ಮೊಗದ ದೈವ ಅದ್ವೈತ ಮಹಿಮನೆಸದ್ವೈಷ್ಣವರ ಪೊರೆವನೆ ಕೋಲೆ
ಸದ್ವೈಷ್ಣವರ ಪೊರೆವನೆ ಅಜನಯ್ಯಪ್ರದ್ಯುಮ್ನ ಹರಿಯ ಬಲಗೊಂಬೆ ಕೋಲೆ ೧೯
ಅನಿಮಿಷ ದೈತ್ಯರ ಮನಕೆ ಸಿಲುಕದಿಪ್ಪಸನಕಾದಿ ವಂದ್ಯ ಸಕಲೇಶ ಕೋಲೆ
ಸನಕಾದಿ ವಂದ್ಯ ಸಕಲೇಶನಾಗಿಪ್ಪಅನಿರುದ್ಧ ಹರಿಯ ಬಲಗೊಂಬೆ ಕೋಲೆ ೨೦
ಕ್ಷರಾಕ್ಷರದೊಳು ಪರಮೋತ್ತಮನಾದಕರಿರಾಜ ವರದ ಕವಿಗೇಯ ಕೋಲೆ
ಕರಿರಾಜ ವರದ ಕವಿಗೇಯನಾದ ಶ್ರೀಪುರುಷೋತ್ತಮನ್ನ ಬಲಗೊಂಬೆ ಕೋಲೆ ೨೧
ಅಕ್ಷಯ ಮೂರುತಿ ಮೋಕ್ಷದಾಯಕ ಸ್ವಾಮಿಕುಕ್ಷಿಯೋಳ್ ಜಗವ ರಕ್ಷಿಪ ಕೋಲೆ
ಕುಕ್ಷಿಯೋಳ್ ಜಗವ ಪಾಲಿಪ ನಮ್ಮ ಅ-ದೋಕ್ಷಜ ಹರಿಯ ಬಲಗೊಂಬೆ ಕೋಲೆ ೨೨
ಕ್ರೂರ ಖಳನುದರ ಸೀಳಿ ಪ್ರಹ್ಲಾದನಕಾರುಣ್ಯದಿಂದ ಕಾಯ್ದನ ಕೋಲೆ
ಕಾರುಣ್ಯದಿಂದ ಕಾಯ್ದನ ನಮ್ಮ ಶ್ರೀನಾರಸಿಂಹನ್ನ ಬಲಗೊಂಬೆ ಕೋಲೆ ೨೩
ಸಚ್ಚಿದಾನಂದನೆ ಸಕಲಗುಣ ಪರಿಪೂರ್ಣಮುಚುಕುಂದ ವರದ ಮುನಿನುತ ಕೋಲೆ
ಮುಚುಕುಂದ ವರದ ಮುನಿನುತನಾದ ಶ್ರೀಅಚ್ಯುತನ ಮೊದಲೆ ಬಲಗೊಂಬೆ ಕೋಲೆ ೨೪
ದುರ್ಧರ್ಷರಾಗಿದ್ದ ಖಳರ ಸಮುದಾಯವಮರ್ದನ ಮಾಡಿದ ಮಹಮಹಿಮ ಕೋಲೆ
ಮರ್ದನ ಮಾಡಿದ ಮಹಮಹಿಮನಾದ ಜ-ನಾರ್ದನ್ನ ಮೊದಲೆ ಬಲಗೊಂಬೆ ಕೋಲೆ ೨೫
ಇಂದ್ರಾನುಜನಾಗಿ ಸ್ವರ್ಗದೊಳಿರುತಿದ್ದುಸಾಂದ್ರ ಸುಖವೀವೆ ಸುರರಿಗೆ ಕೋಲೆ
ಸಾಂದ್ರ ಸುಖವಿತ್ತು ಸುರರ ಪಾಲಿಸುವ ಉ-ಪೇಂದ್ರನ ಮೊದಲೆ ಬಲಗೊಂಬೆ ಕೋಲೆ ೨೬
ಪರಮ ಭಕ್ತರ ಪಾಪ ಪರಿಹಾರವನೆ ಮಾಡಿಪರಮ ಪದವಿಯ ಪಾಲಿಪ ಕೋಲೆ
ಪರಮ ಪದವಿಯ ಪಾಲಿಪ ನಮ್ಮ ಶ್ರೀ-ಹರಿಯ ಮೊದಲೆ ಬಲಗೊಂಬೆ ಕೋಲೆ ೨೭
ಶಿಷ್ಟ ಪಾಲಕ ಉತ್ರ‍ಕಷ್ಟ ಜ್ಞಾನಾನಂದಕೃಷ್ಣೆಯ ಕಷ್ಟ ಬಿಡಿಸಿದ ಕೋಲೆ
ಕೃಷ್ಣೆಯ ಕಷ್ಟ ಬಿಡಿಸಿದ ನಮ್ಮ ಶ್ರೀ-ಕೃಷ್ಣನ್ನ ಮೊದಲೆ ಬಲಗೊಂಬೆ ಕೋಲೆ ೨೮
ಅನಿರುದ್ಧಾದಿ ರೂಪ ವಿಶ್ವಾದಿ ಅಜಿತಾದಿಸನತ್ಕುಮಾರಾದಿ ಅಜಾದಿ ಕೋಲೆ
ಸನತ್ಕುಮಾರಾದಿ ಅಜಾದಿ ರೂಪನಾದಘನ ಮಹಿಮನ್ನ ಬಲಗೊಂಬೆ ಕೋಲೆ ೨೯
ಹಯಗ್ರೀವ ದತ್ತ ಋಷಭ ಸಂಕರ್ಷಣಭಯರಹಿತ ಬಾದರಾಯಣ ಕೋಲೆ
ಭಯರಹಿತ ಬಾದರಾಯಣ ಮಹಿದಾಸವಯಿಕುಂಠ ಹರಿಯ ಬಲಗೊಂಬೆ ಕೋಲೆ ೩೦
ಆತ್ಮಾದಿ ವಾಸುದೇವಾದಿ ಮೂರುತಿಶ್ರೀ ತರುಣೇಶ ವಿಶ್ವೇಶ ಕೋಲೆ
ಶ್ರೀ ತರುಣೇಶ ವಿಶ್ವೇಶ ರೂಪನಾದಜ್ಯೋತಿರ್ಮಯನ ಬಲಗೊಂಬೆ ಕೋಲೆ ೩೧
ಮುನಿ ವೇದವ್ಯಾಸ ಸನತ್ಕುಮಾರ ಮೂರ್ತಿಮಿನಗುವ ದತ್ತಾತ್ರೇಯನೆ ಕೋಲೆ
ಮಿನಗುವ ದತ್ತಾತ್ರೇಯ ಹಯಗ್ರೀವದನುಜಾಂತಕನ್ನ ಬಲಗೊಂಬೆ ಕೋಲೆ ೩೨
ಕಂಗಳಾಪಾಂಗದಿಂ ಕಮಲಾಸನಾದಿಗಳಸಂಗಾತ ಸೃಷ್ಟಿಪ ಮಹಲಕ್ಷ್ಮೀ ಕೋಲೆ
ಸಂಗಾತ ಸೃಷ್ಟಿಪ ಮಹಲಕ್ಷ್ಮೀ ನಿನ್ನ ಪಾ-ದಂಗಳಿಗೆರಗಿ ಬಲಗೊಂಬೆ ಕೋಲೆ ೩೩
ಶ್ರೀ ಮಾಯಾ ಜಯಾಕೃತಿ ಶಾಂತಿ ಇಂದಿರಾದೇವಿಕಾಮನ ಜನನಿ ಜಯಂತಿ ಕೋಲೆ
ಕಾಮನ ಜನನಿ ಜಯಂತಿ ಜಾನಕಿ ಸತ್ಯ-ಭಾಮಾ ರುಕ್ಮಿಣಿಯ ಬಲಗೊಂಬೆ ಕೋಲೆ ೩೪
ಹದಿನಾಲ್ಕು ಲೋಕವ ಮುದದಿಂದ ಸೃಜಿಸುವಪದುಮ ಸಂಭವನೆ ಪರಮೇಷ್ಠಿ ಕೋಲೆ
ಪದುಮ ಸಂಭವನೆ ಪರಮೇಷ್ಠಿ ನಿನ್ನ ಪದಪದುಮವ ಮುನ್ನ ಬಲಗೊಂಬೆ ಕೋಲೆ ೩೫
ಹನುಮ ಭೀಮ ಮಧ್ವ ಮುನಿರಾಯ ಮಾರುತಿದನುಜಾರಿ ಭಕ್ತ ವಿರಕ್ತ ಕೋಲೆ
ದನುಜಾರಿ ಭಕ್ತ ವಿರಕ್ತ ನಿನ್ನ ಪಾದವನಜವ ಮುನ್ನ ಬಲಗೊಂಬೆ ಕೋಲೆ ೩೬
ವಾಣಿ ಅಜನ ಮುದ್ದು ರಾಣಿ ಪಲ್ಲವ ಪಾಣಿಜಾಣೆ ಕೊಡೆಮಗೆ ಮತಿಗಳ ಕೋಲೆ
ಜಾಣೆ ಕೊಡೆಮಗೆ ಮತಿಗಳ ನಿನ್ನ ಪಾದರೇಣುವಿನ ಮುನ್ನ ಬಲಗೊಂಬೆ ಕೋಲೆ ೩೭
ಭಾರತಿದೇವಿ ನಿನ್ನ ವಾರಿಜ ಚರಣವಬಾರಿ ಬಾರಿಗೆ ಭಜಿಸುವೆ ಕೋಲೆ
ಬಾರಿ ಬಾರಿಗೆ ಭಜಿಸುವೆ ಎಮಗೆ ಶ್ರೀನಾರಾಯಣನಲ್ಲಿ ರತಿ ಕೊಡು ಕೋಲೆ ೩೮
ಇಂದ್ರನ ಗೆದ್ದು ಸುಧೆ ತಂದು ಮಾತೆಯಬಂಧನ ಕಡಿದ ಬಲುಧೀರ ಕೋಲೆ
ಬಂಧನ ಕಡಿದ ಬಲುಧೀರನಾದ ಖ-ಗೇಂದ್ರನ್ನ ಮುನ್ನ ಬಲಗೊಂಬೆ ಕೋಲೆ ೩೯
ಸಾಸಿರ ಮುಖದಿಂದ ಶ್ರೀಶನ್ನ ತುತಿಸಿ ಶ್ರೀವಾಸುದೇವಂಗೆ ಹಾಸಿಕೆ ಕೋಲೆ
ವಾಸುದೇವಂಗೆ ಹಾಸಿಕೆಯಾದ ಮಹ-ಶೇಷನ್ನ ಮುನ್ನ ಬಲಗೊಂಬೆ ಕೋಲೆ ೪೦
ಅಪರಿಮಿತ ಕಾರ್ಯ ತ್ರಿಪುರ ದಹನನೆಚಪಲ ಮೂರುತಿ ಚಂದ್ರಚೂಡ ಕೋಲೆ
ಚಪಲ ಮೂರುತಿ ಚಂದ್ರಚೂಡ ಭಜಕರಅಪಮೃತ್ಯು ಹರನ ಬಲಗೊಂಬೆ ಕೋಲೆ ೪೧
ಜಾಂಬವತ್ಯಾದಿ ಶ್ರೀ ಹರಿಯ ರಾಣೇರ್ಗೆಸಂಭ್ರಮದಿಂದ ಶರಣೆಂಬೆ ಕೋಲೆ
ಸಂಭ್ರಮದಿಂದ ಶರಣೆಂಬೆ ಖಗ ಶೇಷಶಂಭು ರಾಣಿಯರ ಬಲಗೊಂಬೆ ಕೋಲೆ ೪೨
ಶಕ್ರ ಕಾಮಾದಿ ದೇವರ್ಕಳ ಚರಣಕ್ಕೆಅಕ್ಕರದಿಂದ ಅಭಿನಮಿಪೆ ಕೋಲೆ
ಅಕ್ಕರದಿಂದ ಅಭಿನಮಿಸಿ ಪೇಳ್ವೆ ದೇ-ವಕ್ಕಿ ನಂದನನ ಚರಿತೆಯ ಕೋಲೆ ೪೩
ಶ್ರೀಮಧ್ವಮುನಿ ಪದ್ಮನಾಭ ನರಹರಿತೀರ್ಥಶ್ರೀ ಮಾಧವಾರ್ಯ ಅಕ್ಷೋಭ್ಯ ಕೋಲೆ
ಶ್ರೀ ಮಾಧವಾರ್ಯ ಅಕ್ಷೋಭ್ಯ ಜಯತೀರ್ಥಸ್ವಾಮಿಗಳ ಮೊದಲೆ ಬಲಗೊಂಬೆ ಕೋಲೆ ೪೪
ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆನ್ಯಾಯ ಗ್ರಂಥಗಳ ರಚಿಸಿದ ಕೋಲೆ
ನ್ಯಾಯ ಗ್ರಂಥಗಳ ರಚಿಸಿದ ನಮ್ಮ ವ್ಯಾಸ-ರಾಯರ ಮುನ್ನ ಬಲಗೊಂಬೆ ಕೋಲೆ ೪೫
ಜನನಿ ಗರ್ಭದಿಂದವನಿ ಸ್ಪರ್ಶಿಸದೆಜನಿಸಿ ಬ್ರಹ್ಮಣ್ಯ ಮುನಿಗಳ ಕೋಲೆ
ಜನಿಸಿ ಬ್ರಹ್ಮಣ್ಯ ಮುನಿಗಳ ಮೃದು ಹಸ್ತವನಜ ಸಂಭವನ ಬಲಗೊಂಬೆ ಕೋಲೆ ೪೬
ಶ್ರೀಪಾದರಾಯರಲಿ ಸಕಲ ವಿದ್ಯವನೋದಿಶ್ರೀಪತಿ ಪ್ರೀತಿ ಪಡಿಸಿದ ಕೋಲೆ
ಶ್ರೀಪತಿ ಪ್ರೀತಿ ಪಡಿಸಿದ ವ್ಯಾಸಮುನಿಭೂಪನ ಮೊದಲೆ ಬಲಗೊಂಬೆ ಕೋಲೆ ೪೭
ದೇಶಾಧಿಪತಿಗೆ ಬಂದ ಕುಯೋಗವನೆ ನೂಕಿತಾ ಸಿಂಹಾಸನವೇರಿ ಮೆರೆದನೆ ಕೋಲೆ
ತಾ ಸಿಂಹಾಸನವೇರಿ ಮೆರೆದನೆ ವ್ಯಾಸ ಮು-ನೀಶನ್ನ ಮೊದಲೆ ಬಲಗೊಂಬೆ ಕೋಲೆ ೪೮
ದಂಡ ಕಮಂಡಲು ಧರ ಪಂಡಿತಾರಾಧಾರಕುಂಡಲಿಶಯನನ ಭಜಕರ ಕೋಲೆ
ಕುಂಡಲಿ ಶಯನನ ಭಜಕ ರಾಘವೇಂದ್ರರಕೊಂಡಾಡಿ ಪದನ ಗುಣಿಸುವೆ ಕೋಲೆ ೪೯
ತಂತ್ರ ಸಾರಗಳಿಗೆ ಅರ್ಥವನ್ನು ಸ್ವ-ತಂತ್ರದಿಂದಲಿ ರಚಿಸಿದ ಕೋಲೆ
ಸ್ವ-ತಂತ್ರದಿಂದಲಿ ರಚಿಸಿದ ರಾಘವೇಂದ್ರರಪಂಥವಿದ್ದಲ್ಲಿ ಬಲಗೊಂಬೆ ಕೋಲೆ ೫೦
ವೇದಶಾಸ್ತ್ರಾಮೃತ ಸಾರಬಲ್ಲ ರಾಮವೇದವ್ಯಾಸರ ಭಜಕರ ಕೋಲೆ
ವೇದವ್ಯಾಸ ಭಜಕ ರಾಘವೇಂದ್ರರಪಾದವಿದ್ದಲ್ಲಿ ಬಲಗೊಂಬೆ ಕೋಲೆ ೫೧
ತುಂಗಭದ್ರಾ ತೀರ ಮಂತ್ರಾಲಯದಲ್ಲಿಮಂಗಳ ಮಹಿಮರೆನಿಪರೆ ಕೋಲೆ
ಮಂಗಳ ಮಹಿಮರೆನಿಪ ರಾಘವೇಂದ್ರ-ರಂಘ್ರಿ ಕಮಲವ ಬಲಗೊಂಬೆ ಕೋಲೆ ೫೨
ಗುರು ರಾಘವೇಂದ್ರರ ಚರಣ ಪಂಕಜವನ್ನುಸ್ಥಿರ ಬುದ್ಧಿಯಿಂದ ಸ್ಮರಿಸುವೆ ಕೋಲೆ
ಸ್ಥಿರ ಬುದ್ಧಿಯಿಂದ ಸ್ಮರಿಸಿ ನಾ ಪೇಳ್ವೆನುಸರಸಿಜಾಕ್ಷನ್ನ ಚರಿತೆಯ ಕೋಲೆ ೫೩
ರಾಜರಾಜೇಶ್ವರ ಸತ್ಯಾಭಿನವ ತೀರ್ಥರಾಜಕರಾಬ್ಜ ಸಂಭೂತ ಕೋಲೆ
ರಾಜಕರಾಬ್ಜ ಸಂಭೂತ ಸತ್ಯಾಧಿ-ರಾಜರ ಮೊದಲೆ ಬಲಗೊಂಬೆ ಕೋಲೆ ೫೪
ಕ್ಷೀರನದಿಯ ತೀರ ವೇಲೂರ ಪುರವಾಸಸಾರ ಸಜ್ಜನರ ಪೊರೆವನೆ ಕೋಲೆ
ಸಾರ ಸಜ್ಜನರ ಪೊರೆವ ಸತ್ಯಾಧಿರಾಜಧೀರ ಯತಿಗಳ ಬಲಗೊಂಬೆ ಕೋಲೆ ೫೫
ಸತ್ಯಬೋಧರೆಂಬ ಸದ್ಗುರು ಚರಣವಚಿತ್ತದೊಳಿಟ್ಟು ಚರಿಸುವೆ ಕೋಲೆ
ಚಿತ್ತದೊಳಿಟ್ಟು ಸ್ಮರಿಸಿ ನಾ ಪೇಳ್ವೆನುಚಿತ್ತದೊಲ್ಲಭನ ಚರಿತೆಯ ಕೋಲೆ ೫೬
ಪರಮ ಗುರುಗಳಾದ ಪುರಂದರ ರಾಯರಪರಮ ಕೃಪಾಪಾತ್ರ ವಿಜಯರಾಯ ಕೋಲೆ
ಪರಮ ಕೃಪಾಪಾತ್ರ ವಿಜಯರಾಯರ ಪಾದಪರಮ ಭಕ್ತಿಯಲಿ ಸ್ಮರಿಸುವೆ ಕೋಲೆ ೫೭
ದೇವ ನಾರಾಯಣ ಭೂದೇವಿ ಮೊರೆ ಕೇಳಿದೇವಕಿಯಲ್ಲಿ ಜನಿಸಿದ ಕೋಲೆ
ದೇವಕಿಯಲ್ಲಿ ಜನಿಸಿ ಧಾರುಣಿದೇವಿ ಭಾರವನೆಲ್ಲನಿಳುಹಿದ ಕೋಲೆ ೫೮
ಶಕಟ ಪೂತನಿ ವತ್ಸ ಬಕಧೇನುಕ ಕಂಸಮುಖಾದ್ಯರನ್ನು ಮಡುಹಿದ ಕೋಲೆ
ಮುಖಾದ್ಯರನ್ನು ಮಡುಹಿ ವಸುದೇವ ದೇ-ವಕಿಯರ ಬಂಧನ ಬಿಡಿಸಿದ ಕೋಲೆ ೫೯
ಹೆತ್ತ ತಾಯಿಯ ಮೊಲೆಯರ್ತಿಲಿ ನಲಿದುಂಡುಮತ್ತೆ ಬಾಲಲೀಲೆ ತೋರಿದ ಕೋಲೆ
ಮತ್ತೆ ಬಾಲಲೀಲೆ ತೋರಿ ತೋಷವ ಪಡಿಸಿಮುತ್ಯಾಗೆ ಪಟ್ಟವ ಕಟ್ಟಿದ ಕೋಲೆ ೬೦
ಜರೆಯ ಸುತನು ತಾನು ಜಗಳಕ್ಕೆ ಬಹನೆಂದುಕರೆಸಿದ ವಿಶ್ವಕರ್ಮನ್ನ ಕೋಲೆ
ಕರೆಸಿದ ವಿಶ್ವಕರ್ಮನ್ನ ದ್ವಾರಕಪುರವ ನಿರ್ಮಿಸೆಂದಾಕ್ಷಣ ಕೋಲೆ ೬೧
ದ್ವಾರಕಪುರದ ಶೃಂಗಾರ ವರ್ಣಿಸಲುಮೂರು ಕಣ್ಣವಗೆ ವಶವಲ್ಲ ಕೋಲೆ
ಮೂರು ಕಣ್ಣವಗೆ ವಶವಲ್ಲ ನಾಲ್ಕಾರುಮೋರೆಯವರಿಗೆ ವಶವಲ್ಲ ಕೋಲೆ ೬೨
ದ್ವಾರ ದ್ವಾರಗಳಿಗೆ ತಳಿರು ತೋರಣಗಳುಮೇರುವಿಗೆ ಪೊನ್ನ ಕಲಶವು ಕೋಲೆ
ಮೇರುವಿಗೆ ಕಲಶ ಕನ್ನಡಿ ಮನೋ-ಹಾರವಾಗಿರುವುದು ಸಟೆಯಲ್ಲಿ ಕೋಲೆ ೬೩
ಹದಿನಾರು ಸಾವಿರ ಚದುರೇರ ಮಂದಿರವುಮದನನಯ್ಯನ ಮನೆ ಮಧ್ಯ ಕೋಲೆ
ಮದನನಯ್ಯನ ಮನೆ ಮಧ್ಯ ಪ್ರದೇಶಅದುಭುತವಾಗಿ ಬೆಳಗೋದು ಕೋಲೆ ೬೪
ನಾರಿ ರುಕ್ಮಿಣಿ ಸತ್ಯಭಾಮೆದೇವಿ ಮತ್ತೆವಾರಿಜಮುಖಿಯರ್ ನಾಲ್ಕೆರಡು ಕೋಲೆ
ವಾರಿಜಮುಖಿಯರ್ ನಾಲ್ಕೆರಡು ಸಹಿತಾಗಿವಾರಿಜನಾಭ ಕುಳಿತಿದ್ದ ಕೋಲೆ ೬೫
ಶ್ರೀ ಭೂರಮಣನಾದ ಶ್ರೀಕೃಷ್ಣನರಮನೆಗೆಸುಭದ್ರೆ ಮುಯ್ಯ ತರುತಾಳೆ ಕೋಲೆ
ಸುಭದ್ರೆ ಮುಯ್ಯ ತರುತಾಳೆ ಗಜಪುರಭೂ ಭುಜರೆಲ್ಲ ಬರುತಾರೆ ಕೋಲೆ ೬೬
ಧರ್ಮ ಭೀಮಾರ್ಜುನ ನಕುಲ ಸಹದೇವರುಪೆರ್ಮೆಯಿಂದಲಿ ಪೊರವಂಟು ಕೋಲೆ
ಪೆರ್ಮೆಯಿಂದಲಿ ಪೊರವಂಟು ದಿಕ್ಪಾಲರುಕೂರ್ಮೆಯಿಂದಲಿ ಬರತಾರೆ ಕೋಲೆ ೬೭
ಇಂದ್ರನು ತಾ ಗಜೇಂದ್ರನ್ನೇರಿಕೊಂಡುಮಂದಗಮನೆ ಶಚಿ ಸಹಿತಲಿ ಕೋಲೆ
ಮಂದಗಮನೆ ಶಚಿ ಸಹಿತ ವಜ್ರ ಧರಿಸಿ ಉ-ಪೇಂದ್ರನರಮನೆಗೆ ಬರುತಾರೆ ಕೋಲೆ ೬೮
ಹುತಭುಜ ತನ ಸತಿ ಸ್ವಾಹಾದೇವಿಯ ಕೂಡಿಅತಿಶಯದಿಂ ಮೇಷವೇರುತ್ತ ಕೋಲೆ
ಅತಿಶಯದಿಂ ಮೇಷವೇರಿ ಶಕ್ತಿಯ ಪಿಡಿದುಕ್ರ್ರತುಪತಿ ಮನೆಗೆ ಬರುತಾನೆ ಕೋಲೆ ೬೯
ಯಮನು ಮಹಿಷವೇರಿ ಗಮನದಿಂದಲಿ ಸತಿಶಾಮಲಾದೇವಿ ಸಹಿತಲಿ ಕೋಲೆ
ಶಾಮಲೆ ಸಹಿತ ದಂಡಾಯುಧ ಧರಿಸಿರಾಮನ ಮನೆಗೆ ಬರುತಾನೆ ಕೋಲೆ ೭೦
ನಿರರುತಿ ತಾನೊಂದು ನರನ ಪೆಗಲನೇರಿಪರಮಾಪ್ತ ಸ್ತ್ರೀಯನೊಡಗೂಡಿ ಕೋಲೆ
ಪರಮಾಪ್ತ ಸ್ತ್ರೀಯನೊಡನೆ ಕುಂತವ ಧರಿಸಿಧರಾಧರನ ಮನೆಗೆ ಬರುತಾನೆ ಕೋಲೆ ೭೧
ವರುಣ ತಾನೊಂದು ಮಕರಿಯನೇರಿಕೊಂಡುಸಿರಿ ಭಾಗೀರಥಿಯನೊಡಗೊಂಡು ಕೋಲೆ
ಸಿರಿ ಭಾಗೀರಥಿಯನೊಡನೆ ಪಾಶಧರಿಸಿಸಿರಿವತ್ಸನರಮನೆಗೆ ಬರುತಾನೆ ಕೋಲೆ ೭೨
ಮರುತದೇವನೊಂದು ಎರಳೆಯನೇರಿತರುಣಿ ಪ್ರಾವಹಿಯೊಡಗೂಡಿ ಕೋಲೆ
ತರುಣಿ ಪ್ರಾವಹಿಗೂಡಿ ಧ್ವಜ ಧರಿಸಿ ಶ್ರೀ-ಧರನ ಮನೆಗೇ ಬರುತಾನೆ ಕೋಲೆ ೭೩
ವಿತ್ತಪತಿಯೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೂಡಿ ಕೋಲೆ
ಚಿತ್ತದೊಲ್ಲಭೆಯ ಒಡನೆ ಖಡ್ಗ ಧರಿಸಿಕರ್ತನ್ನ ಮನೆಗೆ ಬರುತಾನೆ ಕೋಲೆ ೭೪
ಈಶಾನ ತಾನೊಂದು ವೃಷಭವೇರಿಕೊಂಡುಶ್ರೀ ಸತಿದೇವಿಯೊಡಗೂಡಿ ಕೋಲೆ
ಶ್ರೀ ಸತಿದೇವಿಯೊಡಗೂಡಿ ಶೂಲ ಧರಿಸಿ ನಾ-ರಸಿಂಹನ ಮನೆಗೆ ಬರುತಾನೆ ಕೋಲೆ ೭೫
ಹರಿಯೇ ಸರ್ವೋತ್ತಮ ಹರಿಯೇ ಪರದೇವತೆಹರಿದಾಸರೆಂಬೋ ಬಿರುದಿನ ಕೋಲೆ
ಹರಿದಾಸರೆಂಬೋ ಬಿರುದಿನ ಹೆಗ್ಗಾಳೆಹಿರಿ ಬಾಗಿಲೊಳು ಹಿಡಿಸಿಹರು ಕೋಲೆ ೭೬
ಒಬ್ಬನೆ ವಿಷ್ಣುವಿನ್ನೊಬ್ಬ ದೈವಗಳಿಲ್ಲೆಂ-ದಬ್ಬರದಿಂದ ನಾಗಸ್ವರ ಕೋಲೆ
ಅಬ್ಬರದಿಂದ ನಾಗಸ್ವರಂಗಳಹೆಬ್ಬಾಗಿಲೊಳಗೆ ನುಡಿಸೋರು ಕೋಲೆ ೭೭
ಖಳನ ಬೆನ್ನ ಚರ್ಮ ಸುಲಿದು ಭೇರಿಗೆ ಹಾಕಿಅಲವ ಬೋಧರೆ ಜಗದ್ಗುರು ಕೋಲೆ
ಅಲವ ಬೋಧರೆ ಜಗದ್ಗುರುಗಳೆಂತೆಂದುಛಲದಿಂದ ಭೇರಿಯ ಹೊಡಿಸೋರು ಕೋಲೆ ೭೮
ವಿಷ್ಣು ಸರ್ವೋತ್ತಮ ವಿಷ್ಣು ಪರದೇವತೆವಿಷ್ಣುದಾಸರೆಂಬ ಬಿರುದಿನ ಕೋಲೆ
ವಿಷ್ಣುದಾಸರೆಂಬ ಬಿರುದಿನ ಠೆಕ್ಕೆಯಘಟ್ಯಾಗಿ ಎತ್ತಿ ನಿಲಿಸೋರು ಕೋಲೆ ೭೯
ಮತದೊಳು ಮಧ್ವಮತ ವ್ರತದೊಳು ಹರಿದಿನಕಥೆಯೊಳು ಭಾಗವತವೆನ್ನಿ ಕೋಲೆ
ಕಥೆಯೊಳ್ ಭಾಗವತವೆನ್ನಿ ಇದರಂತೆಪ್ರತಿಮೆಯೊಳ್ ವಿಷ್ಣು ಪ್ರತಿಮೆನ್ನಿ ಕೋಲೆ ೮೦
ಈಚಲ ಬನದೊಳು ಗೋ ಕ್ಷೀರ ಕುಡಿದಂತೆನೀಚರ ಸಂಗ ಸುಜನರು ಕೋಲೆ
ನೀಚರ ಸಂಗ ಸುಜನರು ಮಾಡಲುಈಚೆ ನೋಡುವರಿಗೆ ಅನುಮಾನ ಕೋಲೆ ೮೧
ಸೂರಿ ಜನರ ಸಂಗ ಸುಧೆಯ ಪ್ರಾಶನೆಯಂತೆಹೋರಣೆ ಗುಣವುಳ್ಳ ಅಧಮರ ಕೋಲೆ
ಹೋರಣೆ ಗುಣವುಳ್ಳ ಅಧಮರ ಸಹವಾಸನೀರುಳ್ಳಿ ತಿಂದ ತೆರನಂತೆ ಕೋಲೆ ೮೨
ಒಳ್ಳೆ ಮನುಜರ ಸಂಗ ಮಲ್ಲಿಗೆ ಮುಡಿದಂತೆಖುಲ್ಲ ಕುಮತಿಯ ಸಹವಾಸ ಕೋಲೆ
ಖುಲ್ಲ ಕುಮತಿಯ ಸಹವಾಸ ಮಾಡಲುಮುಲ್ಲಂಗಿ ತಿಂದು ತೇಗಿದಂತೆ ಕೋಲೆ ೮೩
ಭಾವಜ್ಞರ ಸಂಗ ಶ್ಯಾವಿಗಿ ಉಂಡಂತೆಭಾವವನರಿಯದ ಬಲುಹೀನ ಕೋಲೆ
ಭಾವವನರಿಯದ ಬಲುಹೀನರ ಸಂಗಬೇವಿನಹಾಲ ಕುಡಿದಂತೆ ಕೋಲೆ ೮೪
ಬಾಳುವರ ಸಂಗ ಹಾಲೋಗರುಂಡಂತೆಬಾಳುವೆಗೆಟ್ಟ ಅಧಮರ ಕೋಲೆ
ಬಾಳುವೆಗೆಟ್ಟ ಅಧಮರ ಸಹವಾಸಹೇಳಬಾರದ್ದು ತಿಂದಂತೆ ಕೋಲೆ ೮೫
ಹರಿಗುರು ದ್ರೋಹಿ ಮರಳಿ ಮಾತೃ ದ್ರೋಹಿವರ ವೈಷ್ಣವ ದ್ರೋಹಿ ಪಿತೃ ದ್ರೋಹಿ ಕೋಲೆ
ವರ ವೈಷ್ಣವ ದ್ರೋಹಿ ಸ್ವಾಮಿ ದ್ರೋಹಿನೆರಳು ಬಿದ್ದವರ ನೆರೆಹೊಲ್ಲ ಕೋಲೆ ೮೬
ಕತ್ತೆ ಕುದುರೆ ಒಂದೆ ಅತ್ತೆ ಸೊಸೆಯು ಒಂದೆಹೆತ್ತಮ್ಮ ಒಂದೆ ಹೆಂಡ್ತೊಂದೆ ಕೋಲೆ
ಹೆತ್ತಮ್ಮ ಒಂದೆ ಹೆಂಡ್ತೊಂದಾದ ಮೇಲೆವ್ಯರ್ಥದ ಮದುವೆ ನಿನಗ್ಯಾಕೆ ಕೋಲೆ ೮೭
ಅಕ್ಕ ತಂಗಿಯು ಒಂದೆ ಮಕ್ಕಳು ಸೊಸೆ ಒಂದೆಚಿಕ್ಕಮ್ಮ ಒಂದೆ ಹೆಂಡ್ತೊಂದೆ ಕೋಲೆ
ಚಿಕ್ಕಮ್ಮ ಒಂದೆ ಹೆಂಡ್ತೊಂದಾದ ಮೇಲೆರೊಕ್ಕ ವೆಚ್ಚ ಮಾಡಿ ಮದುವ್ಯಾಕೆ ಕೋಲೆ ೮೮
ಹಿಟ್ಟು ಬೂದಿ ಒಂದೆ ರೊಟ್ಟಿ ಮುಚ್ಚಳ ಒಂದೆಕಟ್ಟಿಗೆ ಒಂದೆ ಕಬ್ಬೊಂದೆ ಕೋಲೆ
ಕಟ್ಟಿಗೆಯೊಂದೆ ಕಬ್ಬೊಂದಾದ ಮೇಲೆಕಟ್ಟಿಗೆ ಯಾಕೆ ಮೆಲುವೊಲ್ಲೆ ಕೋಲೆ ೮೯
ಹಾಲು ಮಜ್ಜಿಗೆಯೊಂದೆ ಕೋಳಿ ಕೋಗಿಲೆಯೊಂದೆಮಾಳಿಗೆ ಒಂದೆ ಬಯಲೊಂದೆ ಕೋಲೆ
ಮಾಳಿಗೆಯೊಂದೆ ಬಯಲು ಒಂದಾದರೆಹೇಳಬಾರದ್ದು ತಿನವಲ್ಯ ಕೋಲೆ ೯೦
ಗಂಗೆಯ ತಡಿಯಲ್ಲಿ ಲಿಂಗವನರ್ಚಿಸಿಅಂಗೈಯಲಿಟ್ಟು ಪೂಜಿಸುವೆ ಕೋಲೆ
ಅಂಗೈಯಲಿಟ್ಟು ಪೂಜಿಸುವೆ ಎಲೆ ಪಾಪಿಲಿಂಗನು ನೀನು ವಂದ್ಹ್ಯಾಗೆ ಕೋಲೆ ೯೧
ಶಿವನು ನೀನಾದರೆ ಶಿವೆಯು ನಿನಗೇನುಅವಿವೇಕಿ ಮನುಜ ಈ ಮಾತು ಕೋಲೆ
ಅವಿವೇಕಿ ಮನುಜ ಈ ಮಾತು ಕೇಳಿದರೆಕವಿಗಳು ನಗರೆ ಕೈ ಹೊಯ್ದು ಕೋಲೆ ೯೨
ವೇದ ಪ್ರಾಮಾಣ್ಯಂದು ಸುಜನರಿಗೆಲ್ಲಬೋಧಿಸುತಿಪ್ಪ ಬೌದ್ಧನ ಕೋಲೆ
ಬೋಧಿಸುತಿಪ್ಪ ಬೌದ್ಧನ ಎಳೆದೊಯ್ದುಕಾದೆಣ್ಣೆಯೊಳು ಕೆಡುಹೋರು ಕೋಲೆ ೯೩
ಇಲ್ಲಿ ಮಾತ್ರ ಭೇದ ಅಲ್ಲಿಯೊಂದೆ ಎಂಬಕ್ಷುಲ್ಲಕರ ಹಿಡಿದು ಹಲ್ಮುರಿದು ಕೋಲೆ
ಕ್ಷುಲ್ಲಕರ ಹಿಡಿದು ಹಲ್ಮುರಿದು ಯಮರಾಯಕಲ್ಲುಗಾಣಕ್ಕೆ ಹಾಕಿಸುವ ಕೋಲೆ ೯೪
ಅಪ್ಪ ನಾರಾಯಣನಿಪ್ಪಂಥ ಅರಮನೆಅಪ್ರಾಕೃತದ ವೈಕುಂಠ ಕೋಲೆ
ಅಪ್ರಾಕೃತದ ವೈಕುಂಠವೆಂಬೋದುಸ್ವ ಪ್ರಕಾಶದ ಪರಮಾತ್ಮ ಕೋಲೆ ೯೫
ಸುತ್ತ ವಿರಜಾನದಿ ಮತ್ತೆ ಆನಂದ್ವನಚಿತ್ತಜನೈಯ್ಯನರಮನೆಗೆ ಕೋಲೆ
ಚಿತ್ತಜನೈಯ್ಯನರಮನೆ ಎಂಬುದುಉತ್ತಮೋತ್ತಮ ವೈಕುಂಠ ಕೋಲೆ ೯೬
ಪಚ್ಚೆ ನೀಲ ವೈಢೂರ್ಯ ನಿಚ್ಚಳ ವಜ್ರಅಚ್ಚ ಮಾಣಿಕ್ಯದ ಅಳವಟ್ಟು ಕೋಲೆ
ಅಚ್ಚ ಮಾಣಿಕ್ಯದ ಅಳವಟ್ಟು ಹರಿಪುರಅಚ್ಯುತನಿಪ್ಪ ಅರವನೆ ಕೋಲೆ ೯೭
ಸಿರಿಯು ತಾ ಮುರಹರನ ಪಟ್ಟಣದಲ್ಲಿವಿರಜೆಯೆಂತೆಂದು ಕರೆಸೋಳು ಕೋಲೆ
ವಿರಜೆಯೆಂತೆಂದು ಕರೆಸಿ ವೈಕುಂಠಕ್ಕೆಪರಿಖಾ ರೂಪದಲ್ಲಿ ಮೆರೆವಳು ಕೋಲೆ ೯೮
ಉತ್ತರದಿ ನಾಲ್ಕು ತತ್ಥಳಿಸುವ ದ್ವಾರಮುತ್ತು ಮಾಣಿಕ್ಯ ನವರತ್ನ ಕೋಲೆ
ಮುತ್ತು ಮಾಣಿಕ್ಯ ನವರತ್ನ ಝಲ್ಲಿಯಎತ್ತಿ ಮೇಲ್ಕಟ್ಟು ಬಿಗಿದಿದೆ ಕೋಲೆ ೯೯
ಜಯ ವಿಜಯಾದ್ಯೆಂಟು ದ್ವಾರಪಾಲಕರುಜಯದೇವಿ ರಮಣನರಮನೆಗೆ ಕೋಲೆ
ಜಯದೇವಿ ರಮಣನರಮನೆ ಬಾಗಿಲೊಳ್‍ಜಯ ಜಯವೆನುತ ನಿಂದಾರೆ ಕೋಲೆ ೧೦೦
ಕಸವೆಲ್ಲ ಪರಿಮಳ ಕೆಸರೆಲ್ಲ ಶ್ರೀಗಂಧಬಿಸರುಹ ನೇತ್ರನ ಅರಮನೆ ಕೋಲೆ
ಬಿಸರುಹ ನೇತ್ರನ ಅರಮನೆಯೊಳಗೆಲ್ಲಕುಸುಮದ ಮಳೆಯು ಗರೆವುದು ಕೋಲೆ ೧೦೧
ಕಾಜಿನ ನೆಲೆಗಟ್ಟು ರಾಜ ಮಾಣಿಕ ಗೋಡೆಈ ಜಡ ದ್ರವ್ಯವಲ್ಲಿಲ್ಲ ಕೋಲೆ
ಈ ಜಡ ದ್ರವ್ಯವಲ್ಲಿಲ್ಲ ಪುಸಿಯಲ್ಲಶ್ರೀ ಜನಾರ್ದನನರಮನೆಯೊಳ್ ಕೋಲೆ ೧೦೨
ಸೂರ್ಯ ಚಂದ್ರಮ ಅಗ್ನಿ ಮೊದಲಾದವರಕಾರ್ಯಕ್ಕೆ ಅಲ್ಲಿ ತಳವಿಲ್ಲ ಕೋಲೆ
ಕಾರ್ಯಕ್ಕೆ ಅಲ್ಲಿ ತಳವಿಲ್ಲ ನಮ್ಮ ಸುರ-ವರ್ಯ ಅಚ್ಯುತನರಮನೆಯೊಳ್ ಕೋಲೆ

 

೪೮
ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ
ಭಗವಂತನಲ್ಲಿ ಭಕುತಿ ಉಳ್ಳ ಮಾ-ದಿಗನೆ ಉತ್ತಮ ಜಾತಿಯೋನಗಧರನ ನೆನೆಯದಿಪ್ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ ೧
ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ ೨
ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ೩
ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ ೪
ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ ೫
ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ ೬
ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ ೭

 

೫೪
ಹಸೆಗೆ ಕರೆಯುವ ಹಾಡು
ಇಂದಿರಾ ದೇವಿಯ ರಮಣ ಬಾವೃಂದಾರಕ ಮುನಿ ವಂದ್ಯ ಬಾ ಶೋಭಾನೇ ಪ
ಸಿಂಧು ಶಯನ ಗೋವಿಂದ ಸದಮಲಾನಂದ ಬಾತಂದೆಯ ಕಂದ ಬಾ ಮಾವನಾ ಕೊಂದ ಬಾ ಗೋಪಿಯಕಂದ ಬಾ ಹಸೆಯ ಜಗುಲಿಗೇ ಅ.ಪ.
ಕೃಷ್ಣವೇಣಿಯ ಪಡೆದವನೆ ಬಾಕೃಷ್ಣನ ರಥ ಹೊಡೆದವನೆ ಬಾಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣನೆ ಬಾ ||
ಯದುಕುಲ ಶ್ರೇಷ್ಠ ಬಾಸತತ ಸಂತುಷ್ಟನೆ ಬಾಉಡುಪೀಯ ಕೃಷ್ಣ ಬಾ ಹಸೆಯ ಜಗುಲಿಗೇ ೧
ಕ್ಷೀರವಾರಿಧಿ ಕುವರಿ ಬಾಸಾರಿದವರಿಗಾಧಾರ ಬಾಮಾರ ಜನನಿ ನಾಗಾರಿ ಮಧ್ಯಳೆ ಹೊಂತಕಾರಿ ಬಾ ||
ಬಲು ದುರಿತಾರಿ ಬಾಬಹು ವೈಯ್ಯಾರಿ ಬಾಸುಂದರ ನಾರೀ ಬಾ ಹಸೆಯ ಜಗುಲಿಗೇ ೨
ಶ್ರೀ ಭ್ರೂ ದುರ್ಗಾಂಭ್ರಣಿಯೆ ಬಾಶೋಭನ ಗುಣ ಮಣಿ ಖಣಿಯೇ ಬಾಸೌಭಾಗ್ಯದ ಪನ್ನಗವೇಣಿ ಬಾ ||
ಪರಮ ಕಲ್ಯಾಣಿ ಬಾನಿಗಮಾಭಿಮಾನೀ ಬಾಭಾಗ್ಯದ ನಿಧಿಯೇ ಬಾ ಹಸೆಯ ಜಗುಲಿಗೇ ೩
ಪತಿಯಲ್ಲಿ ಅವತರಿಸಿದವಳೆ ಬಾಪತಿಯ ಸಂಗಡ ಜನಿಸಿದವಳೇ ಬಾಸದ್ಗುಣವತಿಯೇ ಬಾ ||
ಪತಿತ ಪಾವನ ಸಿರಿ ಮೋಹನ ವಿಠಲನ ಸತಿಯೇ ಬಾವೇದಾವತಿಯೇ ಬಾಬಲು ಪತಿವ್ರತೆಯೇ ಬಾ ಹಸೆಯ ಜಗುಲಿಗೇ ೪

 

೧೮
ರುದ್ರದೇವರ ಸ್ತೋತ್ರ
ಇಂದುಧರನೆ ಬಾರೊ | ಸುರ | ವೃಂದವಂದ್ಯನೆ ಬಾರೊಕುಂದಾದೆನ್ನ ಮನಸಿಗೇ ಮುಕುಂದ ಪ್ರಿಯನೆ ಬಾರೋ ಪ
ರಜತಾದ್ರಿ ನಿವಾಸನೆ ಬಾರೋಗಜದೈತ್ಯ ವಿನಾಶನೆ ಬಾರೋ ||
ಅಜಸುತನಧ್ವರ ಭಜನೆಯ-ಗೆಡೆಸಿದ ಗಜಮುಖನಯ್ಯನೆ ಬಾರೋ ೧
ಕಪ್ಪುಗೊರಳಾನೆ ಬಾರೋ ಕಂ-ದರ್ಪ ಹರನೆ ಬಾರೋ ||
ಅಪಾರ ಮಹಿಮಾ ಅಗಣಿತ ಶೌರ್ಯನೆ ಬಾರೋಸರ್ಪ ಭೂಷಣನೆ ಬಾರೋ ೨
ಕಂದನ ತಲೆ ಕೆಡಹಿದವನೆ ಬಾರೋಇಂದ್ರ ಅಜಗೊರಳಗೊಲಿದನೆ ಬಾರೋ ||
ಅಂಧಕಾಂತಕ ಇಂದ್ರವಂದಿತನಂದಿವಾಹನನೆ ಬಾರೋ ೩
ಅಂಬರ ಪುರಹರನೆ ಬಾರೋ ತ್ರಿ-ಯಂಬಕ ಮಹದೇವನೆ ಬಾರೋ ||
ಅಂಬಿಕೆ ವಲ್ಲಭ ಸಿಂಧೂರ ಮುಖ ಪಿತಶಂಭು ಮೂರುತಿಯೆ ಬಾರೋ ೪
ಸುರ ನದಿಯ ಪೊತ್ತವನೆ ಬಾರೋವರ ಪಂಪಾಪುರ ನಿಲಯನೆ ಬಾರೋ ||
ಶಿರಿ ಮೋಹನ್ನ ವಿಠಲನ್ನಪರಮ ದಾಸನೆ ಬಾರೋ ೫

 

೨೪
ಸತ್ಯವರ ಯತಿಗಳ ಸ್ತೋತ್ರ
ಏನ ಪೇಳಲಿ ಇವರ ಕೀರ್ತಿಶ್ರೀನಾಥ ರಾಮ ಬಂದನು ಭವ್ಯ ಮೂರ್ತಿ ಪ
ಅಂದು ನರಹರಿ ಯತಿಯು ತಂದದ್ದು ನಾ ಕರ್ಣ-ದಿಂದ ಕೇಳಿ ಬಲ್ಲೆ ನಾ ಕಂಡದ್ದು ಇಲ್ಲ ||
ಇಂದೆಮ್ಮ ಗುರು ಸತ್ಯಸಂಧ ಸುತರಿಗೊಲಿದುಬಂದ ರಾಮನ ಕಣ್ಣಿಂದ ಕಂಡೇ ೧
ಅವರೊಯ್ದರಿವರೊಯ್ದರೆಂಬ ಮಾತುಗಳ್ ಪುಸಿಅವನ ಸತಿಯು ತನ್ನ ತವರು ಮನೆಗೆ ||
ತವಕದಿಂದಲಿ ಕರದೊಯ್ಯೆ ಗುರುಗಳ ತಪಕೇಭುವನ ತಲ್ಲಣಿಸಲು ಭುವನೇಶ ಬಂದ ೨
ಆಗ ಶ್ರೀ ರಘುನಾಥ ಯೋಗಿಗೊಲಿದುಸಾಗಿ ಬಂದುದು ನಾ ಕೇಳಿ ಬಲ್ಲೆ ಈ ನ- ||
ಮ್ಮ ಗುರು ಸತ್ಯವರ ಯೋಗಿಗೊಲಿದು ರಾಮಬೇಗ ಬಂದುದು ಚೆನ್ನಾಗಿ ಕಣ್ಣಿಲಿ ಕಂಡೆ ೩
ನಾಮಗೊಂಡಲು ಈ ಭೂಮಿದೇವಿ ಇಲ್ಲಿತಾ ಮಗಳ ಅಳಿಯನ್ನ ಕರೆದು ಒಯ್ದು ||
ಪಾಮರರಿಗೆ ಪೋದರೆಂದೆಂಬ ಭ್ರಮೆಯ ತೋರಿಈ ಮುನಿಯ ಮಾನಸ ಹಂಸನಾಗಿದ್ದ ೪
ಒಂದು ಮಾಸವುಪವಾಸ ಮಾಡಿದವರ್ಗೆಬಂದೊದಗುವ ಜಗದೊಳಗೆ ಖ್ಯಾತ ||
ಸಂದೇಹವಿಲ್ಲದೆ ಅನಶನ ವ್ರತವನ್ನುಒಂದು ತಿಂಗಳು ಮಾಡಿ ಇಂದಿರೇಶನ ತಂದ ೫
ನಳನಾಮ ಸಂವತ್ಸರ ಫಾಲ್ಗುಣ ಬಹುಳ ದ್ವಾದಶಿನಳಿನಾಕ್ಷ ರಾಮಸ್ವಾಮಿಯು ಹೊರಟು ||
ಖಳರ ಖಂಡಿಸಿ ತಾನು ಇವರ ಭಾವಕೆ ಮೆಚ್ಚಿಲಲನೆ ಸಹಿತವಾಗಿ ಭುವನೇಶ ಬಂದ೬
ಗಂಗಾದಿ ಸಕಲ ತೀರ್ಥಗಳಲ್ಲಿ ಮಿಂದು ಶ್ರೀರಂಗಾದಿಯಲ್ಲಿ ಮೋಹನ ವಿಠಲನ್ನ ||
ಸಂಗೀತೆಗೆ ಸರ್ವದಾಧಿಕ ಫಲಸಂಘಟಿಸುವದು ಸಜ್ಜನರು ಕೇಳಿ ೭

 

೪೪
ಕಂಡು ಕಂಡು ನಾನು ಹೇಗೆ ಸುಮ್ಮನಿರಲಿ ಪ
ಯಲ್ಲಮ್ಮ ಎಕನಾತಿ ಮೊದಲಾದ ಚಿಲ್ಲರೆ ದೇವರುಗಳಲ್ಲಿ ನಿಷ್ಠೆ ಇಟ್ಟು ||
ನಿಲ್ಲದೇ ಭಜಿಸಿ ಸಂತತಾಪುಲ್ಲನಾಭನ ಬಿಟ್ಟು ಕ್ಷುಲ್ಲಕರನ ೧
ದೇವರೆಲ್ಲಾ ಸಮ್ಮತವೆಂದುಬೇವಿನ ಉಡಿಗೆ ಊಟಾನಿಟ್ರು ||
ಜೀವ ಹರಿಗೆ ಐಕ್ಯವ ಪೇಳುವಕೇವಲ ತಾಮಸ ಜೀವಿಗಳನ ೨
ಅಹಂಕಾರದಿಂದಲಿ ಕೆಟ್ಟುದೇಹಿ ಎಂಬೋ ವಾಕ್ಯವ ಬಿಟ್ಟು ||
ರಹಸ್ಯದಿಂದಲಿ ಶ್ರೀ ಹರಿಯ ಬಿಟ್ಟುಮೋಹನ್ನ ವಿಠಲನ ಸೋಹಂ ಎಂಬರ ೩

 

೨೨
ರಾಘವೇಂದ್ರಸ್ವಾಮಿಗಳ ಸ್ತೋತ್ರ
ಕಂಡು ಧನ್ಯನಾದೆ ಗುರುಗಳ – ಕಣ್ಣಾರೆ ನಾಕಂಡು ಧನ್ಯನಾದೆ ಈ ಗುರುಗಳ ಪ
ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ – ನರಸಿಂಗನಂಘ್ರಿ ಭಜಕರಿವರ ೧
ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯ ಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ ೨
ಸೋ ಅಹಂ ಎನ್ನದೆ ಹರಿಯ ದಾಸೋ ಅಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ ೩

 


ಕರುಣಿಸಯ್ಯಾ ಕಂಜಜನಯ್ಯಾ | ಕರ್ಣರಹಿತ ಶಯ್ಯಾ ಕನಕಾದ್ರಿರಾಯಾ ಪ
ಕರಿವರದನೆ ನಿನ್ನ ಚರಣ ನಂಬಿದೆ ಎನ್ನಪರಿಪಾಲಿಸುವದು ಪರಮ ಕೃಪಾಳೊ ಅ.ಪ.
ಕೋಟಲೆ ಸಂಸಾರವೆಂಬೊ | ನೀಟು ಶರಧಿಯನ್ನುದಾಟಲಾರೆನೊ ನಾನೂ | ಇದೇನೊ ||
ನಾಟಕಾಧಾರ ನಿನ್ನ | ನಂಬಿದಾ ಮೇಲೆ ಎನ್ನಬೂಟಕನೆನಸುವರೇ | ಮುರಾರೇ ||
ಹಾಟಕಾಂಬರ ಧರ ಹರಿಯೇ ಕೇಳ್ವುದಿನ್ನು | ಕೋಟಿ ವ್ಯಾಳೆಗೆ ಭಕ್ತ ಕೋಟಿಯೊಳಗಿಟ್ಟು ಎನ್ನ | ನೀಟು ಮಾರ್ಗವ ತೋರಿ ಪಾಟುಪಡಿಪ ಯಮಕಾಟ ಕಳೆದು ದಿವ್ಯ ನೋಟದಿ ನೋಡು ೧
ಆರರ್ಧ ಗುಣದಿಂದ | ಆರು ಅರಿಗಳಿಂದಆರೆರಡು ಮದದಿಂದಾ | ಆನಂದಾ ||
ಆರು ಮೂರು ಕಾಣದೆ | ಆರು ನಾಲ್ಕು ತಿಳಿಯದೆಆರೈದು ನಿಲ್ಲಿಸದೆ | ಹೀಗಾದೇ ||
ಆರರ ಸೇವಿಸಲಾರದೆ ನಿನ್ನ ಪದಾರವಿಂದವ ಸರ್ವದ ಸೇರದೇ ಆರೆಂದು ಎನ್ನ ನೀ ದೂರ ನೋಡದೆ ಬಲುಸಾರೆಗರಿಯೋ ಕಂಸಾರಿ ಮುರಾರಿ೨
ತಂದೆ ಯೆನಗೆ ನೀನೇ | ಇಂದಿರೆ ಜನನಿ ಗೋ-ವಿಂದ ಇನ್ನೊಬ್ಬರಿಲ್ಲ | ನೀ ಬಲ್ಲೆಲ್ಲಾ ||
ಸುಂದರ ವಿಗ್ರಹನೆ | ಸುಗುಣ ಸಾಕಾರ ಶುಭಸಾಂದ್ರಾ ಭಕುತ ವತ್ಸಲ | ಗೋಪಾಲಾ ||
ಎಂದೆಂದಿಗೆ ಎನ್ನಿಂದ ಅಗಲದೆ ಮುಕುಂದ ಮುನಿ ವೃಂದವಂದಿತ ಚರಣನೇ | ಸಿಂಧುಶಯನ ಶಿರಿ ಮೋಹನ ವಿಠಲ ಬಾ ಲೇಂದು ವದನ ಸುಗುಣ ಸಾಂದ್ರಾ ಉಪೇಂದ್ರಾ ೩

 

೧೦
ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ ಗೇಯೆ ಪ
ತಾಯೇ ಎನ್ನಯ ಕಾಯ ನಿನ್ನದುಕಾಯೇ ಕರುಣಾಬ್ಧಿಯೇಅ.ಪ.
ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||
ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನ ಪದ್ಮಪಾದ ಹೃ-ತ್ಪದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ ೧
ಮೂಕ ದಾನವನ ಕೊಂದು ಅವನಕೊಂಕು ಮನ್ನಿಸಿದ ಮೂಕಾಂಬಿಕೆಯೇ
ಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ ||
ವಾಕೇಶ ಶಿವ ಪಾಕಶಾಸನ-ನೇಕ ಜನ ಪುಷ್ಪ ವೃಷ್ಟಿ ಗರೆಯಾಲು
ಈ ಕೊಲ್ಲೂರೊಳು ನೀ ಕರುಣದಿ ನಿಂದೀ ೨
ನಿನ್ನ ಪಾದಾಬ್ಜವನ್ನು ಅನುದಿನಸನ್ನುತಿಸುವೆ ಚೆನ್ನ ವಿಜಯ ರಾ-
ಯನ್ನ ಮನೆ ಮುಂದೆ ಕುನ್ನಿಯನ್ನೇ ಮಾಡಿ ಎನ್ನ ಪುಟ್ಟಿಪುದು ||
ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿ
ನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ ೩

 

೪೯
ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ
ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ.
ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ ೧
ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ ೨
ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ ೩

 

೫೨
ಜಂಗಮರು ನಾವು ಲಿಂಗಾಂಗಿಯಾರುಮಂಗಳಾವಂತರು ಭವಿಗಳಂತಲ್ಲಾ ಪ
ಶಿವ ಗುರುದೈವ ಕೇಶವ ನಮ್ಮ ಪರದೈವಭುವನ ಜೀವನ ನಮ್ಮ ಗುರು ಶಾಂತನೂ ||ಶಿವನ ದ್ರೋಹವ ಮಾಡುವನೆ ಅಪರಾಧಿಅವನೆ ಅದ ತಿಳಿಯುವನು ಶ್ರುತಿ ಸಮ್ಮತಾ ೧
ವಿಭೂತಿ ನಮಗುಂಟು ವಿಶ್ವೇಶ್ವರಾರುಂಟುಶೋಭನಾವಾದ ನಾಮ ಎಮಗುಂಟು ||ಶ್ರೀ ಭಾಗೀರಥಿಯ ಅಗ್ಗಣದ ಮಜ್ಜನ ಉಂಟುಸೌಭಾಗ್ಯವಿಹ ಮಹಾಂತನ ಮಠದವರೂ ೨
ವಿರಕ್ತರಾವು ಸುಶೀಲವಂತರು ನಾವುವೀರಭದ್ರನ ಪ್ರೀಯ ಭಕ್ತರಾವೂ ||ಕಾರಣಾ ಕರ್ತ ಶ್ರೀ ಮೋಹನ ವಿಠಲನೆಕಾರುಣ್ಯ ಮಾಡು ದಮ್ಮಯ್ಯ ಎಂಬುವರಾವು ೩

 

೫೬
ಉರುಟಣೆ ಪದ
ಜಯ ಜಯ ರಾಮ ಜಯಜಯ ಜಯ ನಮ್ಮ ಜಾನಕೀ ರಮಣಗೇ ಪ
ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ ೧
ಗುರು ವಿಜಯದಾಸರ ಚರಣಾಸರಸಿರುಹವ ಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ ೨
ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ ೩
ಸರಸ್ವತಿ ಭಾರತಿ ಮೊದಲಾದಸರಸಿಜ ಮುಖಿಯರೆಲ್ಲಾರು ನೆರೆದುಸರಸ ಉರುಟಣಿಯ ಮೊಡಬೇಕೆನುತಾಲಿಕರೆಸಿದರಾಗ ಮುತ್ತೈದೆರಾಗ ೪
ಹೇಮಮಯದ ಮಂಟಪದೊಳಗೆಪ್ರೇಮದಿಂದಲಿ ಹಾಸಿಕೆ ಹಾಕಿಸೋಮವದನನ ಗುಣವ ಕೊಂಡಾಡುತಕಾಮಿನಿಯರು ಕರೆದಾರು ಹಸೆಗೇ ೫
ಕೌಸಲ್ಯಾದೇವಿ ತನಯಾನೆ ಕೇಳುಹರ್ಷದಾಯಕ ರಕ್ಷಕನೇಳುಹಂಸವಾಹನನಯ್ಯನೆ ಹಸೆಗೆ ಏಳೇಳೆಂದುಹಂಸಗಮನೆಯರು ಕರೆದರು ಹಸೆಗೆ ೬
ನಿಗಮವ ತಂದಾ ಮಚ್ಚ್ಯಾನೇಳುನಗವ ಬೆನ್ನಿಲಿ ಪೊತ್ತ ಕೂರ್ಮನೇಳುಜಗವನುದ್ಧರಿಸಿದ ವರಹ ಮೂರುತಿ ಏಳುಮೃಗ ನರ ರೂಪ ಹರಿಗೇಳೆಂದಾರು ೭
ಸುರನದಿಯ ಪಡೆದ ವಾಮನನೇಳುಪರಶುರಾಮ ಮೂರುತಿ ಏಳುಶರಧಿಯ ದಾಟಿ ಸೀತೆಯ ತಂದಶಿರಿ ರಾಮಕೃಷ್ಣ ಹಸೆಗೇಳೆಂದರು ೮
ವ್ರತವನಳಿದ ಬೌದ್ಧನೇಳುಅತಿಬಲ ರಾಹುತನೇಳುಪೃಥಿವಿಗೊಡೆಯ ರಾಮನೇಳೆಂದುಅತಿ ಚಮತ್ಕಾರದಿ ಕರೆದರಾಗ ೯
ಇಂತು ಬಗೆಯಾಲಿ ತುತಿಸಿ ಕರೆಯೇಕಂತುಜನಕನು ಹರುಷದಾಲೆದ್ದುಕಾಂತೆ ಕೈ ಪಿಡಿದು ನಡೆ ತರಲಾಗಲುನಿಂತಾರು ನಾರಿಯರೆಲ್ಲರಾಗ ೧೦
ಎತ್ತಿಕೊಂಬುವದು ರಾಘವ ನಿಮ್ಮಪತ್ನಿಯ ನಡೆಸಲಾಗದು ಕೇಳಿನೀ ಪೃಥ್ವೀಶನಾದರೆ ನಮಗೇನೆನುತಾಲಿಸುತ್ತು ಕಟ್ಟಿದರು ವಾಮಾಕ್ಷಿಯರು ೧೧
ಮಂಗಳಾಂಗಿಯನು ಎತ್ತಿಕೊಂಡು ರಾಮಹಿಂಗಾದೆ ದ್ವಾರದಲ್ಲಿಗೆ ಬರಲುಮಂಗಳದೇವಿಯ ಹೆಸರು ಹೇಳೆನುತಾಲಿಅಂಗನೆಯರು ಅಡ್ಡಗಟ್ಟಿದರಾಗಾ ೧೨
ನಾಳೆ ಹೇಳುವೆನು ಇವಳ ಹೆಸರುತಾಳಲಾರೆನು ಭಾರವು ಎನಲುಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದುಬಾಲೆಯರೆಲ್ಲಾರು ಇಟ್ಟರು ಕದವಾ ೧೩
ಸತತ ಶ್ರೀರಾಮನು ನಸುನಗುತಾಸೀತೆಯೆನುತಾ ಹೇಳಿದನು ರಾಮಾಸೀತೆ ಪುತ್ಥಳಿ ಗೊಂಬೆ ಹೆಸರು ಹೇಳೆನೆ ರಘು-ನಾಥಾನು ಎಂದಾಳು ಜಾನಕೀ ೧೪
ಅಂಗಜನಯ್ಯಾ ಸತಿಯು ಸೀತೆಯ ಸಹಿತರಂಗು ಮಾಣಿಕದ ಹಾಸಿಕೆಯ ಮೇಲೆಶೃಂಗಾರದಿಂದಾಲಿ ಬಂದು ಕುಳ್ಳಿರಲಾಗಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ ೧೫
ಸಾಸಿರ ನಾಮದ ಒಡೆಯ ಬಂದಾಶೇಷಶಯನಾ ಮೂರುತಿ ಬಂದಾಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ ಬಂದಾನು ಎಂದಾರು ಕೇಳೆ ೧೬
ವಾನರಾಧೀಶನೊಡೆಯಾ ಬಂದಾದಾನವಾಂತಕ ರಾಘವ ಬಂದಾ ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ ಬಂದಾನು ಎಂದಾರು ಕೇಳೆ ೧೭
ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾಭೃತ್ಯ ಪಾಲಕ ದೊರೆಯು ಬಂದಾಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ ಸ-ರ್ವೋತ್ತಮ ಬಂದನೆಂದಾರು ಕೇಳೇ ೧೮
ಸುಗ್ರೀವನ ಪರಿಪಾಲಕ ಬಂದಾ ಕ-ರಿಗ್ರಾಹ ಸಂಹಾರಿಕ ಬಂದಾವ್ಯಾಘ್ರ ಚರ್ಮಾಂಬರ ಸಖ ಸುಂದರವಿಗ್ರಹ ಬಂದಾ ಎಂದಾರು ಕೇಳೇ ೧೯
ಇಂದ್ರನ್ನ ಪರಿಪಾಲಕ ಬಂದಾಚಂದ್ರನ್ನ ಪ್ರಭೆಯಾ ಸೋಲಿಪ ಬಂದಾಇಂದುವದನೆ ಸೀತೆ ಪ್ರಾಣದೊಲ್ಲಭ ರಾಮ-ಚಂದ್ರ ಬಂದನೆಂದಾರು ಕೇಳೇ ೨೦
ಚಂದನ ಗಂಧೆಯರು ಎಲ್ಲಾರು ಕೂಡಿಗಂಧ ಕುಂಕುಮ ಅರಿಷಿಣ ಕಲಿಸಿಇಂದುವದನೆ ಸೀತೆಯ ಕೈ ಒಳಗಿಟ್ಟು ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ ೨೧
ವಾರಿಜೋದ್ಭವ ಮೊದಲಾದವರುತಾರತಮ್ಯದಿಂದಾಲಿ ಕುಳಿತುವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿಸಾರಿದರಾಗ ಸಂದಣಿಯರೆಲ್ಲಾ ೨೨
ನಿಲ್ಲಾದೆ ನಿಮ್ಮ ಬಾಯಿಗಳಾಲಿನ್ನುಗಲಬಲೆ ಮಾಡಲಾಗದು ಜನರುಚೆಲ್ವಾ ಸೀತೆಯಾ ಗಿರಿ ವಾಕು ಕೇಳಬೇಕೆಂದುಜಲಜ ಸಂಭವನು ನುಡಿದಾನು ನಗುತಾ ೨೩
ಕಂಜವದನೆ ಜಾನಕೀದೇವಿಅಂಜಲಾಗ ನಿಮ್ಮ ಪುರುಷಾರಿಗೆಕುಂಜರ ವರದಾ ದಾಕ್ಷಿಣ್ಯ ಬ್ಯಾಡೆಂದುಅಂಜಾದೆ ನುಡಿದಾರು ನಸುನಗುತಾ ೨೪
ದೋಷ ವರ್ಜಿತನೇ ಹರಿ ನಿಮ್ಮದೂಷಣೆ ಮಾಡಿದಳೆನ ಬ್ಯಾಡಿಮೋಸದಿಂದಲಿ ಬಲು ದೈತ್ಯರ ಕೊಂದ ಜಗ-ದೀಶ ನಿಮ್ಮ ಮುಖವಾ ತೋರೆಂದಾಳು ೨೫
ದೇವಿ ಹಸ್ತದೊಳು ಅರಿಶಿನವ ಪಿಡಿದುಭಾವಜನಯ್ಯನ ನುಡಿದಾರಾಗದೇವರ ದೇವೋತ್ತಮ ಶಿಖಾಮಣಿದೇವಾ ನಿಮ್ಮಯ ಮುಖವಾ ತೋರೆಂದಾಳು ೨೬
ಭಸ್ಮಾಸುರನ ಕೊಂದಾ ಬಹು ಶೂರನಾರಿಕಂಸನಳಿದಾ ಧೀರ ಅಸುರ ಹಿರಣ್ಯಕನಅಸುವ ಹೀರಿದ ದೊಡ್ಡಅಸುರಾಂತಕ ಮುಖವಾ ತೋರೆಂದಾಳು ೨೭
ವಾಲಿಯ ಸಿಟ್ಟಿನಿಂದಾಲಿ ಕೊಂದುಕಾಲ ಯಮನಾನಸುವ ಯುಕ್ತಿಯಿಂದಾಭಳಿರೆ ಮಧುಕೈಟಭರ ಕೊಂದಾಕಾಲಾಂತಕ ಮುಖವ ತೋರೆಂದಾಳು ೨೮
ಶ್ರೀನಾಥ ದ್ವಾರಕಾಪುರ ಮಾಡಿಆ ನಂದಿ ಗೋಮಂತಾ ಗಿರಿಗೊಲಿದೆವಾನರಾಧೀಶನಾ ಬಲು ಕೊಂಡಾಡುತ್ತದಾನವಾಂತಕಾ ಮುಖವಾ ತೋರೆಂದಾಳು ೨೯
ಅರಿಶಿನವಾನು ಹಚ್ಚಿದಳು ಸೀತೆಅರಸನ ಫಣೆಗೆ ಕುಂಕುಮವಾ ಹಚ್ಚಿಸರಸದಿ ವದನಕ್ಕೆ ಗಂಧವಾ ಹಚ್ಚಲುಸುರರೆಲ್ಲಾ ನಕ್ಕಾರು ಕೈ ಹೊಡೆದು ೩೦
ಸರಸ್ವತಿ ಪತಿ ಮೊದಲಾಗಿ ಚಪ್ಪಾಳೆನಿಟ್ಟುಹರಸಿದರಾಗ ಜಾನಕಿದೇವಿಶಿರಿಯು ಗೆದ್ದಳು ಅಯೋಧ್ಯದಅರಸು ಸೋತನೆಂದು ನಗುತೆ ೩೧
ಬಾಹುಗಳಿಗೆ ಗಂಧವಾ ಹಚ್ಚಿಸಿಮ್ಯಾಲೆ ಪರಿಮಳಾ ಪೂಸಿದಳುಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿಸರಸಾದಿಂದಾಲಿ ನುಡಿದಾಳು ಜಾನಕೀ ೩೨
ಪಾಷಾಣ ಪೆಣ್ಣಾ ಮಾಡಿದಾ ಚರಣಶೇಷನಾ ಮ್ಯಾಲೆ ಮಲಗಿದ ಚರಣಭಾಸುರಾಂಗಿ ನಿನ್ನ ಲೀಲೆಯಾ ತೋರಿದಾಶೇಷಶಯನ ಚರಣಾ ಪಾಲಿಸೆಂದಾಳು ೩೩
ಆಕಾಶಗಂಗೆಯ ಪಡೆದಾ ಚರಣಾಶಕಟನ ಮುರಿದೊಟ್ಟಿದ ಚರಣಾಭಕುತ ಜನರ ಸೇವೆ ಕೊಂಬ ಚರಣರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು ೩೪
ಅಂಕುಶದೊಜ್ರ ರೇಖೆಯ ಚರಣಾಕುಂಕುಮಾಂಕಿತ ರಾಶಿಯ ಚರಣಾಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ ನಿನ್ನಯ ಚರಣಾ ಪಾಲಿಸೆಂದಾಳು ೩೬
ನಸುನಗುತ ಹರಿ ಚರಣ ವೀಕ್ಷಿಸಿಶಶಿಮುಖಿ ಸೀತೆ ಆನಂದದಿಂದಾಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾಎಸೆವ ಪಾದಕ್ಕೆ ಹಚ್ಚಿದಳಾಗ ೩೭
ಕೊರಳಿಗೆ ಪರಿಮಳ ಗಂಧವು ಹಚ್ಚಿಪರಿಪರಿ ಪೂಮಾಲೆ ಕೊರಳಿಗೆ ಹಾಕಿನೀಲವರ್ಣನ ಪಾದ ಪದ್ಮಕ್ಕೆ ಎರಗಿಪಾಲಿಸಬೇಕೆಂದಾಳು ಅಂಗನೆ ೩೮
ಕರಗಳ ಪಿಡಿದೆತ್ತಿದನು ರಾಮಾಹರಸಿದ ಮುತ್ತೈದಾಗೆಂದುಪರಮ ಪತಿವ್ರತೆಯೆನಿಸು ಎನುತಾಲಿಹರಿ ಹರಸೀದಾನು ಹರುಷದಲ್ಲಾಗ ೩೯
ಅಂಡಜವಾಹ ಭಗವಂತನುಹೆಂಡತಿಯ ಮುಖವ ನೋಡೆನುತಲಿಗಂಡು ಮಕ್ಕಳ ಘನವಾಗಿ ಪಡೆಯೆಂದುಪುಂಡರೀಕಾಕ್ಷ ಹರಸಿದನಾಗ ೪೦
ಮಂದಗಮನಿಯ ಕುಳ್ಳಿರಿಸಿಇಂದಿರೇಶ ಮುಂಗುರಳಾ ತಿದ್ದಿಎಂದೆಂದಿಗೆ ಅಗಲದಿರೆಂದು ರಾಮ-ಚಂದ್ರಾನು ಹರಸಿದನಾಗ ೪೧
ಭೂಲೋಕದೊಡೆಯ ರಾಘವರಾಯನಶ್ರೀಲತಾಂಗಿಯ ಕುಳ್ಳಿರಿಸಿದನುಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದುಫಾಲಾಲೋಚಾನು ನುಡಿದನು ನಗುತ ೪೨
ಕಂತುಜನಕ ರಾಘವಾ ನಿಮ್ಮಾಪಂಥ ಸಲ್ಲಾದು ಜಾನಕಿಯೊಡನೆಯಂತ್ರವಾಹಕ ಶ್ರೀರಾಮ ಏಳೇಳೆಂದುಕಾಂತೆಯರೆಲ್ಲರು ನುಡಿದಾರು ನಗುತಾ ೪೩
ಭಾಗೀರಥಿ ಪಾರ್ವತಿದೇವಿಬೇಗದಿ ಅರಿಷಿನ ಕೈಲಿ ಕಲಿಸಿಸಾಗರ ಶಯ್ಯನ ಕೈಯೊಳಗಿಟ್ಟುಬಾಗಿ ಸೀತೆಯ ಮುಖಕೆ ಹಚ್ಚೆಂದಾರು ೪೪
ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀಬಂಧು ಬಳಗವನಗಲಿಸುವ ತರಳೆತಂದೆ ಮಕ್ಕಳೊಳಗೆ ಕದನವ ನಿಡುವಂಥಮಂದಹಾಸೆ ಮುಖವ ತೋರೆಂದಾನು ರಾಮಾ ೪೫
ಅಣ್ಣನ ವಂಚಿಸಿ ಬೇಡಿದವಳೇಮನ್ನೆ ಮನ್ನೆಯರಾ ಕಳಿಸಿದವಳೇಚೆನ್ನಾಗಿ ಮನೆಯೋಳಿದ್ದು ಪೋಗುತಚೆನ್ನಾಯಿತೆ ಮುಖವ ತೋರೆಂದಾನು ೪೬
ಭಾಷೆಯನು ಕೊಟ್ಟು ತಪ್ಪಿಸುವಳೆಕಾಸುವೀಸಾಕೆ ವತ್ತಿ ಬೀಳುವಳೆಹೇಸಿಕಿಲ್ಲದೆ ಕುಲಹೀನನ ಮನೆಯೊಳುವಾಸವಾಗಿರುವಾ ಮುಖವ ತೋರೆಂದಾನು ೪೭
ರಾಮಚಂದ್ರಾನು ಅರಿಶಿನ ಗಂಧವಭೂಮಿಜಳಿಗೆ ಹಚ್ಚಿದನಾಗಾಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿಪ್ರೇಮದಿ ಪರಿಮಳ ಪೂಸಿದಾನು ೪೮
ಕುಸುಮ ದಂಡೆಯ ಮಾಡಿದರುಬಾಸಿಂಗವನು ಕಟ್ಟಿದಾರುಭೂಸುರರೆಲ್ಲರು ಮಂತ್ರಾಕ್ಷತೆ ತಳಿದು ನಿ-ರ್ದೋಷನಾಗೆಂದು ಹರಸಿದರು ೪೯
ಇಂದುಮುಖಿಯರೆಲ್ಲಾರು ಕೂಡಿನಂದದಿ ಜಾನಕಿಗೆ ವೀಳ್ಯವನಿತ್ತುಅಂದಮಾಣಿಕದ ಅಕ್ಷತೆಗಳ ತಳಿದುಮಂದರೋದ್ಧರನ ಹರಿಸಿದರು ೫೦
ದೇವಿಯನ್ನೆತ್ತಿಕೊಂಡು ರಾಮದೇವರ ಮನೆಗೆ ಬಾಹೋದು ಕಂಡುಭಾವುಕರೆಲ್ಲಾ ಹೆಸರು ಪೇಳೆಂದೆನುತದೇವಿ ರಘುನಾಥನೆಂದು ಪೇಳಿದಳಾಗ ೫೧
ಇಂದುಮುಖಿಯರೆಲ್ಲಾರು ಕೂಡಿಇಂದಿರೇಶಾನೆ ಹೆಸರು ಪೇಳೆನಲುಎಂದಾ ಮೇಲೆ ಜಾನಕಿಯೆಂತೆಂದುಮಂದರಧರನು ನುಡಿದನಾಗ ೫೨
ಸತಿಪತಿಯರಿಬ್ಬರು ಕೂಡಿಅತಿಶಯದಲಿ ನಮಸ್ಕರಿಸಿದಾರುಕ್ಷಿತಿಯ ಸುರರಿಗೆ ಲೀಲೆಯ ತೋರಿದ ದೇವಾಪತಿತ ಪಾವನ್ನ ಎನ್ನ ಸಲಹು ಎಂದಾನು ೫೩
ಈ ಕಥೆಯನು ಆದರದಿಂದಾ ಬರೆದು ಹೇ-ಳಿ ಕೇಳುವ ಜನರಾಶ್ರೀಕಾಂತನೊಲಿದು ಕರುಣಿಸುವ ತಾ ಸಿದ್ಧನೇಮದಿಂದಾ ಪಾಡಿರಿ ಜನರು ೫೪
ಕುರುಡಾನು ಈ ಕಥೆಯಾನು ಕೇಳಿದರೆಕರುಣದಿಂದಾಲಿ ಕಂಗಳ ಬರಿಸುವಶರಣವತ್ಸಲ ತನ್ನ ಶರಣರೊಳಿಟ್ಟುಪರಿಪಾಲಿಸುವನು ಶತಸಿದ್ಧ ೫೫
ದಾರಿದ್ರನಾದವನು ಕೇಳಿದರೆಮೇರೆಯಿಲ್ಲದಾ ಸಿರಿ ಒದಗುವದುದಾರ ಇಲ್ಲದ ಬ್ರಹ್ಮಚಾರಿ ತಾ ಕೇಳಲುನಾರಿಯ ಸಹಿತೆ ವಾಸಿಸುವನು ೫೬
ಉದ್ಯೋಗ ಇಲ್ಲದವನು ಕೇಳಿದರೆಸದ್ಯ ಐಶ್ವರ್ಯ ಒದಗುವದು ಸಿದ್ಧಮುದ್ದು ಸುತರಿಲ್ಲದ ಸ್ತ್ರೀಯು ಕೇಳಲುಬುದ್ಧಿವಂತ ಸುತರಾಗುವರು ಸಿದ್ಧ ೫೭
ವಿಭವ ಸಂವತ್ಸರ ಫಾಲ್ಗುಣ ಶುದ್ಧದಿದ್ವಿಜನಾಭಾ ದಿನದಾ ಗುರುವಾರಾಶುಭವಾರಾ ಈ ಕಥೆ ಕೇಳಿದ ಜನರಿಗೆಅಭಯ ಕೊಡುವ ಆನಂದ ಮೂರ್ತಿ ೫೮
ತಾವರೆ ಕಮಲ ಧರಿಸಿಪ್ಪಪಾವನ ಮೂರುತಿ ಹೃದಯಾದಲ್ಲಿದೇವಿ ಸಹಿತವಾಗಿ ಕಾವನು ಕರುಣಾದಿನೀವೆಲ್ಲಾರು ತಿಳಿರಿ ಜನರು ೫೯
ಜಯಜಯ ಲೋಕಪಾಲಕ ದೇವಾ ಜಯ ಜಯ ಮೋಹನ್ನ ವಿಠ್ಠಲರಾಯಾಜಯ ಜಯ ಪ್ರದ ಜಾಹ್ನವಿ ಜನಕನುಜಯ ಜಯವೆಂದು ಮಂಗಳವ ಪಾಡೇ ೬೦

 

೪೬
ಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆ ಪ
ಜರ ಇನ್ಯಾತಕೆ ಬಂತು ಪರಮೇಷ್ಠಿ ಜನಕಾನೆಪರನೆಂದು ತಿಳಿಸಾದೆ ಪರಗತಿಯ ತೋರದ ಅ.ಪ.
ಸ್ನಾನವ ಮಾಡಿಕೊಂಡು ಕುಳಿತು ಬಲುಮೌನದಿಂದಿರಲೀಸಾದೆ ||
ಶ್ರೀನಿವಾಸನ ಧ್ಯಾನ ಮಾಡಾದೆ ಮನಸುಶ್ವಾನನೋಪಾದಿಯಲ್ಲಿ ತಾ ಓಡುವಂಥ ೧
ಜಪ ಮಾಡುವ ಕಾಲದಲ್ಲಿ ಕರೆಯ ಬರೆವಿಪರೀತವಾಗುವದು ಮನಸು ||
ಸ್ವಪನದಂತೆ ಮನಸಿಗೆ ಪೊಳದು ಬಲುಸುಪಥವ ತಪ್ಪಿಸಿ ಅಪಗತಿ ಕೊಡುವಂಥ ೨
ಯಜಮಾನನು ಮಾಡಿದ ಪಾಪಂಗಳವ್ರಜವು ಬಿಡದೆ ಅನ್ನದೊಳಗಿಪ್ಪುದ ||
ದ್ವಿಜನು ಭುಂಜಿಸಲಾಗಿ ಅವನ ಉದರದೊಳುನಿಜವಾಗಿ ಇಪ್ಪಾವು ಸುಜನಾರು ಲಾಲಿಸಿ ೩
ಉದರದೊಳಗೆ ಬಿಚ್ಚದ ಸಾವಿರಾರುವಿಧವಾಗುವದು ಕೇಳು ||
ಅದೇ ದೇಹ ಪುಷ್ಟಿ ಮಲ ರೇತಸ್ಸುಅದೇ ಪಾಪಿಗೆ ತಿಳಿಯದೆ ಭುಜಿಸುವಂಥ ೪
ಕೆಳಗೆ ಕುಳ್ಳಿರಿಸಿದಾರೆ ಜ್ಞಾನಿ-ಗಳ ಬೊಗಳುವೆ ಕುನ್ನಿಯಂದದಿ ||
ಒಳಗೆ ಕರೆದು ಒಯ್ದು ಬೆಳಗಿಲಿಕುಳ್ಳಿರಿಸೆ ಸಾಯಂ ಪ್ರತಿ ಸ್ತುತಿ ಮಾಡುವಾ ೫
ಪ್ರಸ್ತದಾ ಮನೆಯೊಳಗೆ ಕರೆಯಾದಲ್ಲಿಗೆಸ್ವಸ್ಥಾದಿ ನೀ ಕುಳಿತುಕೊಂಡು ||
ವಿಸ್ತಾರದಿ ಹಾರೈಸಿ ಪ್ರ-ಶಸ್ತವಾಯಿತೆಂದೂ ಮಸ್ತಕ ತಿರುಹುವೆ ೬
ಮಾಡಿದ ಮಹಾ ಪುಣ್ಯದ ಓದನಕಾಗಿಕಾಡಿಗೊಪ್ಪಿಸಿ ಪೋದಂತಾಯಿತು ||
ಗಾಡಿಕಾರ ಮೋಹನ್ನ ವಿಠಲನಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ ೭

 

೪೫
ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ
ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ.
ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ ೧
ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ ೨
ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ೩
ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ ೪
ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ ೫
ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ ೬
ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ ೭
ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ ೮
ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ ೯
ಕಣ್ಣು ಕಾಣದ ಕುರುಡನಿಗೆ ಕನ್ನಡಿ ಯಾತಕೆಘನ್ನ ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ ೧೦
ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ ೧೧

 

ಆತ್ಮನಿವೇದನೆಯ ಹಾಡುಗಳು
೩೯
ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ
ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ.
ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ ೧
ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ ೨
ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ ೩

 

೨೮
ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ಪ
ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ ೧
ಅದೇ ಧೈರ್ಯ ನೋಡಿಸುದತಿ ತಾ ಹೃದಯ ಬದ್ಧ ಮಾಡಿ ||ಮಧುಸೂದನನೆ ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು ೨
ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ ೩

 


ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ
ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ.
ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ ೧
ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ ೨
ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ ೩
ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ ೪
ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ ೫

 

೫೦
ತುರುಕರಿಲ್ಲದ ಊರೊಳು ಇರಬಾರದು ಪ
ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ ಅ.ಪ.
ತುರುಕರು ಕರೆದರೆ ಉಣಬಹುದು ಉಡಬಹುದುತುರುಕರಿಂದಲಿ ಜಗಕೆ ಪರಮ ಸೌಖ್ಯಾ ||ತುರುಕರ ಸೇವೆ ಮಾಡಿದ ಮಾನವೋತ್ತಮನುಎರಡೊಂದು ಋಣದಿಂದ ಮುಕ್ತನಾಹಾ ೧
ತುರುಕರಾ ನಿಂದಕನು ಪರಮ ದುಃಖಿಯು ಸಿದ್ಧತುರುಕರ ಅರ್ಚಿಸಿದವಗೆ ಪರಮ ಪದವೀ ||ತುರುಕರಿಗೆ ಗ್ರಾಸವಿತ್ತವನ ಫಲಕೆಲ್ಲು ಸರಿಗಾಣೆಸರಿಗಾಣೆ ಧರೆಯೋಳು ಅವನೆ ಧನ್ಯಾ ೨
ತುರುಕರಾ ಪತಿ ಹರನು ತುರುಕರಿಂದಲಿ ಸಿರಿಯುತುರುಕರಿಂದಲಿ ಜಗಕೆ ಬೈಗು ಬೆಳಗೂ ||ತುರುಕರಾ ಪಾಲ ಶ್ರೀ ಗೋಪಾಲಕೃಷ್ಣನ್ನಸ್ಮರಣೆ ಮಾಡುತಲಿರೆ ಮೋಹನ್ನ ವಿಠಲ ಒಲಿವಾ ೩

 


ತೆರಳಿ ಬಾರಯ್ಯ ಭವ ಶರಧಿ ತಾರಕನೇ – ನಾಕರವಾ ಮುಗಿವೆ – ಎನ್ನ ಕರುಣದಲ್ಲಿ ನೋಡೋ ಪ
ಎರಡು ಭಾಗದಿ ಶ್ರೀ ಧರಣೇರಿಂದೊಪ್ಪುತತ್ವರಿತದಿ ದಯಮಾಡು ಉರಗಾಗಿರಿ ವೆಂಕಟ ಅ.ಪ.
ತೇರಿನೊಳಿಪ್ಪ ಶೃಂಗಾರ ಪುರುಷನೆ ಬಂ-ಗಾರ ಮಾಣಿಕದಲಂಕಾರವ ಧರಿಸಿದಮಾರಮಣನೆ ವನಜಾರಿವದನ ಬಲು-ಶೂರ ಸಮರಧೀರ ನಾರಾಯಣ ಕಂಸಾರೇ ||ನರ ಕಂಠೀರವ ಕಮಲನಾಭನಾರದ ಮುನಿ ಪ್ರಿಯ ಚಾರು-ಚರಿತ ಪನ್ನಗಾರಿಗಮನ ಮದ-ನಾರಿಯ ಸಲಹಿದ ಧೀರ ಮುರಾರಿ ೧
ನಿಂದರೆ ಬಪ್ಪುದು ಸಿಂಧುಶಯನ ದಯ-ದಿಂದ ಎನ್ನನು ನೋಡು-ಕಣ್ದೆರೆದೀಕ್ಷಿಸಿ |ಕಂದಗೊಲಿದು ಕಂಬದಿಂದ ಬಂದಸುರನಕೊಂದು ಕರುಳಹಾರ ಕಂಧರದಿ ತಾಳಿದೇ ||ಮಂದಮತಿವನೆಂದಲೇ ಗೋ-ವಿಂದ ಗೋವಳ ವೃಂದದೊಡನೆ ಕಾ-ಳಿಂದಿಯ ಧುಮುಕಿ-ಫಣೀಂದ್ರನ ಶಿರದಲಿಧಿಂ ಧಿಮಿ ಧಿಮಿಕೆಂದು ಕುಣಿದ ಹರಿ ೨
ಜಲದೊಳ ಪೊಕ್ಕು ಆ ಇಳೆಯ ತಸ್ಕರನು ದುಂ-ಬಲಗೊಂಡು ಮಡುಹಿ ನಂಬಿದ ಪ್ರಹ್ಲಾದ ಹಂ-ಬಲಿಸೆ ಧರ್ಮದಿ ಕಾಯ್ದೆ ಸಲೆ ಕ್ಷತ್ರಿಯಕುಲವನಳಿದೆ-ನಿನ್ನೊಳು ನೀನೇ ಕಾಯ್ದೆ ||ಮಲೆತ ಮಾವನ ಕೊಂದೆ ಸಲೆಖಳ ತ್ರಿಪುರನ ಗೆದ್ದು ಕಲಿಯ ಸಂಹರಿಸಿದೆಸುಲಭ ಮೂರುತಿ ಮೋಹನವಿಠ್ಠಲಚೆಲುವ ತಿರುವೇಂಗಳ ೩

 

೨೯
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ
ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ.
ಸಂದರುಶನ ಮಾತ್ರದಿಂದ ಬಾಹೊದು ನದಿಸಿಂಧು ಸ್ನಾನದ ಫಲವೊ ಭಾವಶುದ್ಧದಿಂದ ವಂದನೆ ನಿರುತ ಮಾಡಲು ಭವಬಂಧನವ ಪರಿಹರವು ||(ದುಡುಕು) ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ ೧
ನರಮಾತ್ರರಿವರೆಂದು ನೆರೆ ತಿಳಿಯದೆ ಸುಂ-ದರವಾದ ಗುಣಗಣಗಳಿಂದಲಿಸಿರಿವರನ ಚರಿತೆಯು ನಮಗೆ ಬಂದ ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ ||
(ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ೨
ಅವನಿಯೊಳಿವರನ ವೊಲಿಸಿದರೆಪಾವನವಾಗಿ ಪೋಗುವರುಭುವನದೊಳು ಕವಿಗಳೆನಿಸುತಿಪ್ಪರುಅವತರಿಸಿ ಮೂರು ||(ದುಡುಕು) ಭುವನ ಭವಕೆಪಾವಕರಾಗಿ ಭೂಸುರರಪಾವನವ ಮಾಡುವ ಭುವನ ನಿಧಿಸುತೆ ರಮಣಿ ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು ೩

 

೫೫
ಬಾಗಿಲು ತೆರೆಯುವ ಹಾಡು
ನಾರಿ ಶಿರೋಮಣಿ ವಾರಿಜ ಮುಖಿಯೆ ಗಂಭೀರಳೆ ಬಾಗಿಲು ತೆರೆಯೇ |ಗಂಭೀರಳೆ ಬಾಗಿಲ ತೆರೆಯೇ ಪ
ಆರು ನಿನ್ನಯ ಪೆಸರೆನಗೆ ಪೇಳದಲೆ ದ್ವಾರವ ತೆಗೆಯೆನು ನಾನು |ನಾ ದ್ವಾರವ ತೆಗೆಯೆನು ನಾನು ಅ.ಪ.
ನೀರೊಳು ಸಂಚರಿಸಿ ಕ್ರೂರ ತಮನ ಕೊಂದಧೀರ ಮತ್ಸ್ಯನು ಕಾಣೆ ನಾರೀ | ನಾಧೀರ ಮತ್ಸ್ಯನು ಕಾಣೆ ನಾರೀ ||ಧೀರ ಮತ್ಸ್ಯನು ನೀನಾದರೊಳಿತು ದೊಡ್ಡವಾರಿಧಿಯೊಳಗಿರು ಹೋಗಯ್ಯ | ದೊಡ್ಡವಾರಿಧಿಯೊಳಗಿರು ಹೋಗಯ್ಯ ೧
ಸುರರು ಅಸುರರು ಕೂಡಿ ಶರಧಿ ಮಥಿಸುತಿರಲುಗಿರಿಯ ತಾಳಿದ ಕೂರ್ಮ ಕಾಣೆ | ನಾಗಿರಿಯ ತಾಳಿದ ಕೂರ್ಮ ಕಾಣೆ ||ಗಿರಿಯ ತಾಳಿದ ಕೂರ್ಮನಾದರೊಳಿತು | ದೊಡ್ಡಮಡುವಿನೊಳಗೆ ಇರು ಹೋಗಯ್ಯ | ದೊಡ್ಡಮಡುವಿನೊಳಗೆ ಇರು ಹೋಗಯ್ಯ೨
ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದವರಹ ಕಾಣೆಲೆ ವಾರಿಜಾಕ್ಷಿ | ನಾವರಹ ಕಾಣೆಲೆ ವಾರಿಜಾಕ್ಷೀ ||ವರಹ ನೀನಾದರೊಳಿತು ನಡೆ ನಡೆ | ದೊಡ್ಡವನಾಂತ್ರದೊಳಗಿರು ಹೋಗಯ್ಯ || ದೊಡ್ಡವನಾಂತರದೊಳಗಿರು ಹೋಗಯ್ಯ ೩
ತರಳನ ಮೊರೆ ಕೇಳಿ ಹಿರಣ್ಯಕಶಿಪುವ ಕೊಂದನರ ಮೃಗ ರೂಪ ಕಾಣೆ ನಾರೀ | ನಾನರ ಮೃಗ ರೂಪ ಕಾಣೆ ನಾರೀ ||ನರ ಮೃಗ ನೀನಾದರೊಳಿತು ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ | ದೊಡ್ಡಗಿರಿ ಶಿಖರದೊಳಗಿರು ಹೋಗಯ್ಯ ೪
ಭೂಮಿ ಈರಡಿ ಮಾಡಿ ಬಲಿಯ ಪಾತಾಳಕಿಟ್ಟವಾಮನ ಕಾಣೇ ವಾರಿಜಾಕ್ಷೀ | ನಾವಾಮನ ಕಾಣೇ ವಾರಿಜಾಕ್ಷೀ ||ವಾಮನ ನೀನಾದರೊಳಿತು ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ | ನಿನ್ನಪ್ರೇಮ ಬಂದಲ್ಲಿರು ಹೋಗಯ್ಯ ೫
ತಂದೆ ಆಜ್ಞೆಯ ಪೊತ್ತು ತಾಯಿ ಸೋದರನ್ನಕೊಂದವ ನಾನೇ ಕೋಮಲಾಂಗೀ | ನಾಕೊಂದವ ನಾನೇ ಕೋಮಲಾಂಗೀ ||ಕೊಂದವ ನೀನಾದರೊಳಿತು ಮುನಿವೃಂದದಲ್ಲಿ ಇರು ಹೋಗಯ್ಯಾ | ಮುನಿವೃಂದಾದಲ್ಲಿ ಇರು ಹೋಗಯ್ಯ ೬
ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ | ಪ್ರ-ಚಂಡ ವಿಕ್ರಮ ರಾಮ ಕಾಣೇ | ನಾ ಪ್ರ-ಚಂಡ ವಿಕ್ರಮ ರಾಮ ಕಾಣೇ ||ಪ್ರಚಂಡ ವಿಕ್ರಮನಾದರೊಳಿತು ಕೋತಿಹಿಂಡುಗಳೊಳಗಿರು ಹೋಗಯ್ಯ | ಕೋತಿಹಿಂಡುಗಳೊಳಗಿರು ಹೋಗಯ್ಯ ೭
ಮಧುರಾಪುರದಿ ಪುಟ್ಟಿ ಮಾವ ಕಂಸನ ಕೊಂದಚದುರ ಕಾಣೆಲೆ ಶಾಮಲಾಂಗೀ | ನಾಚದುರ ಕಾಣಲೆ ಶಾಮಲಾಂಗೀ ||ಚದುರ ನೀನಾದರೊಳಿತು ನಡೆ ನಡೆ ಗೋಪೇ-ರಧರ ಚುಂಬಿಸುತಿರು ಹೋಗಯ್ಯ | ಗೋಪೇ-ರಧರ ಚುಂಬಿಸುತಿರು ಹೋಗಯ್ಯ ೮
ಶುದ್ಧ ಖಳನು ಆಗಿ ವ್ರತವನಳಿದು ಬಂದಬೌದ್ಧ ಕಾಣಲೇ ಮಂದಗಮನೇ | ನಾಬೌದ್ಧ ಕಾಣಲೇ ಮಂದಗಮನೇ ||ಬೌದ್ಧನು ನೀನಾದರೊಳಿತು ನಡೆ ನಡೆ ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ | ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ ೯
ತುರಗವನೇರಿ ಕಲಿಯ ಕಡಿದು ಶಾಂತನ ಸಹೋ-ದರಗೆ ರಾಜ್ಯವನಿತ್ತೆ ಕಾಣೇ | ಸಹೋ-ದರಗೆ ರಾಜ್ಯವನಿತ್ತೆ ಕಾಣೇ ||ಪರಮ ಪುರುಷನಹುದೋ ರಾಹುತರಿರುವಸ್ಥಳದಲ್ಲಿರು ಹೋಗಯ್ಯ | ನೀರಾಹುತರಿರುವ ಸ್ಥಳದಲ್ಲಿರು ಹೋಗಯ್ಯ ೧೦
ಕನ್ಯಾಮಣಿಯೆ ಕೋಮಲೆಯೇ ಗುಣಪೂರ್ಣ ಮೋ-ಹನ್ನ ವಿಠಲ ರಾಯ ಕಾಣೆ | ನಾ ಮೋ-ಹನ್ನ ವಿಠಲ ರಾಯ ಕಾಣೆ ||ಎನ್ನ ಅಪರಾಧ ಕ್ಷಮಿಸಬೇಕು ಎನುತಲಿಚೆನ್ನಾಗಿ ಪಾದಕ್ಕೆರಗಿದಳು ದೇವಿ ೧೧

 

೩೨
ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ಪ
ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ಅ.ಪ.
ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ ||ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ ||ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ ೧
ಅರಿಯೆ ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ ||ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು ||ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ ೨
ಅಜ ಭವರಿಂದೊಂದ್ಯನಾದ್ವಿಜಯ ಮೋಹನ ವಿಠಲಭಜಕರಿಗೊಲಿದಂತೆ ಉಪಾಯ ||ನಿಜವಾಗಿ ಮಾಡದಿರೆ ಬಿರುದಿಗೆ ಕುಂದುಗಜರಾಜವರದನ ಪ್ರಿಯಾ ||ಕುಜನರ ಮತ ಬಡಿದು ವಿಜಯ ವಿಠಲನೇ ಪರನೆಂದುತ್ರಿಜಗದೊಳು ಮೆರಸಿದ ಭಜಕಾಗ್ರೇಸರ ಗುರುವೆ ೩

 

೩೦
ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ
ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ.
ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ ೧
ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ ೨
ರಾಜಾಧಿರಾಜರು ಬಂದು ಪ್ರಾರ್ಥಿಸಲು ಗುರುರಾಜ ನೀನವರ ಮನೆಗೆ ಪೋಗಿ ದಿವ್ಯಭೋಜನವ ಮಾಡಿ ಫಲಗರೆವೆ ನಿತ್ಯರಾಜಧಾನಿಗೆ ಪೋಗಿ ಬರುವೆ ಉಡುರಾಜನಂದದಿ ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ ೩
ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ ೪
ಎನ್ನೊಬ್ಬನ ಪಾಲಿಸಿದ್ದು ಬಲು ಗುರುತಲ್ಲಚಿನ್ನ ವರದನ ಸಂತತಿಯೆಲ್ಲನಿನ್ನ ಪಾಲಿಗೆ ಬಿಟ್ಬದ್ದಲ್ಲ | ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ ೫

 

೨೫
ವಿಜಯದಾಸರ ಸ್ತೋತ್ರ ಪದಗಳು
ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ಪ
ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ಅ.ಪ.
ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ ||ಧೇನಿಸಿ ಅರಸಲಾಕ್ಷಣದೊಳಗವಳ ವತ್ಸತಾನು ಕೂಗಲು ಕಾಮಧೇನು ಒದಗಿದಂತೆ ೧
ತರಣಿಯ ಕಿರಣದಿಂದ ತಪಿಸಿನೆರ ಬಾಯ ಬಿಡವುತ ಬಪ್ಪರನ ||ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆ ದಿವ್ಯ ಸರಸಿಯನಿತ್ತಂತೆ ೨
ಧನವ ಪೋಗಾಡಿ ಕೊಂಡು ನರನು ಬಲುಮನ ಕ್ಲೇಶದಿಂದಿರಲು ||ಘನ ಮಹಿಮನೆ ನಮ್ಮ ಮೋಹನ ವಿಠಲ-ವನ ಕೈಯ್ಯೊಳಗ ಚಿಂತಾಮಣಿಯನುಯಿತ್ತಂತೆ ೩

 

೪೧
ಪಾಪೋಸು ಹೋದುವಲ್ಲಾ ಪ
ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ.
ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ ೧
ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ ೨
ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ ೩

 

೩೮
ಪುಟ್ಟಿದನು ಮಗನೂ ಮಾದಮ್ಮಗೇ ಪ
ಪುಟ್ಟಿದ ವೈಶ್ಯ ಮಾದಮ್ಮಗೆ ಮಗ ರಂಡೆವಿಠ್ಠಲ ಎಂತೆಂದು ಪೆಸರಿಟ್ಟು ಕರೆದರೂ ಅ.ಪ.
ನಗು ನಗುತಲೇ ನಾನು ಶ್ರೀಹರಿಗೆ ಕೈಮುಗಿದು ಬೇಡಿಕೊಂಡೇನು ||ನಗಧರ ಮಾಡಿದ ಮಾಡಿದ ಪ್ರಪಂಚವುಜಗದಿಂದಲೇನಹುದೆಂದು ನುಡಿದಳು ೧
ನದಿಯ ಮಳಲು ಸರೀ ಪ್ರಜೆಗಳು ಬದಿಯೊಳಗೆ ಕೈಕಾಲು ಮುರುಕೊಂ-ಬದರಿಯದೆ ಒದಗಿರಲು ಮುದದಿಂದಮಾದಮ್ಮ ಸುತ್ತ ಮುತ್ತಿತು ಲೋಫ್  ೨
ಆ ರಂಡೆ ವಿಠಲಾನ ಗುಡಿಯೊಳಗಿಟ್ಟುಶ್ರೀ ರಮಣಗೇ ಒಪ್ಪಿಸೇ ||ನೀರೆಣ್ಣೆ ನಾರು ಬತ್ತಿಯ ದೀಪ ಉರಿಯಲುಮೂರು ಲೋಕಕೆ ಆಶ್ಚರ್ಯವಾಯಿತು ೩
(ನಾಲ್ಕನೆಯ ನುಡಿ ಸಿಕ್ಕಿಲ್ಲ)
ಭ್ರಷ್ಟಳ ಆರುತಿಯ ಮೋಹನ್ನವಿಠಲ ಕೈಗೊಂಡ ||ದೃಷ್ಟಾಂತವಾದುದು ಶಿಷ್ಟ ಜನರಿಗೆಲ್ಲಶ್ರೇಪ್ಠಳಾದರು ಇಹಪರದಲ್ಲಿ ಎಂದರು ೫

 

ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳ

ಬಾರೋ ಹೋಗುವ ನಡಿ ಮನೆಗೆ ಇಂದಿರೇಶ ಪ
ಬಾರೋ ಎನ್ನ ಮನಸೆಂಬ ಮನೆಗೇ ಅ.ಪ.
ಕಣ್ಣಾ ಬಿಡಲು ಬ್ಯಾಡ ಜಲ-ವನ್ನು ಹೊಗಲಿ ಬೇಡ |
ಮಣ್ಣಿಗಾಗಿ ದೈತ್ಯನ ನೀಗಿಚಿನ್ನಗೊಲಿದು ಹೋಗುವರೇನೋ ೧
ತಿರಿಕಿ ಬೇಡಿದವನೇ ತಾಯಿ-ಶಿರವಾ ತರಿದವನೇ |
ಕರಡಿ ಕಪಿ ಅಳಲುತರುಣರೊಡನೆ ಹೋಗದಲಿರೋ ೨
ಬತ್ತಲೇ ನಿಂತಿದ್ದವನೆ ಹಯ-ಹತ್ತಿ ಓಡಿಸಿದವನೇ |
ಚಿತ್ತದೊಡೆಯ ಮೋಹನ್ನ ವಿಠಲಎತ್ತಿ ಕರವ ಮುಗಿವೆ ಲೇಸೆಂದೂ ೩

 

೪೭
ಬೇಡವೋ ಬ್ರಾಹ್ಮಣ ದ್ರೋಹ ಬೇಡವೋ ಪ
ಮಾಡಬೇಡವೋ ನಿನಗೆ | ಕೇಡು ತಪ್ಪದು ಕೊನೆಗೆನಾಡೊಳಗಪಕೀರ್ತಿ | ಗೀಡಾಗಿ ನೀ ಕೆಡ ಅ.ಪ.
ಹೊತ್ತಿದ್ದ ಬಹು ಭಾರ ನೀನು – ಅಂಥಅತ್ಯಂತವಲ್ಲವಿದೇನು – ನಿನ್ನ ||ಚಿತ್ತ ದೃಢ ಮಾಡು ಉತ್ತಮ ವಿಪ್ರರವೃತ್ತಿಯ ಸೆಳದು ಉನ್ಮತ್ತನಾಗಿ ಕೆಡ ೧
ಸೂಸುವ ನದಿಯೊಳು ಬಿದ್ದು – ಇನ್ನುಈಸಲಾರದೆ ಮುಳುಗೆದ್ದು – ಅಂಜಿ ||ಈಸು ಬುರುಡೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿಈಸುವ ತೆರನಂತೆ ಭೂಸುರ ದ್ರವ್ಯವು ೨
ನೃಗರಾಯನೆಂಬ ಭೂಪತಿಯು – ವಿಪ್ರ-ರಿಗೆ ಗೋದಾನವನಿತ್ತ ಬಗೆಯ ಕೇಳಿ ||ಅಗಲಿ ತಮ್ಮೊಳು ತಾವೆ ಜಗಳ ಪುಟ್ಟಿ ಆ ನೃ-ಪಗೆ ತೊಣ್ಣೆಯಾಗೆಂದ್ಹಗರಣವನೆ ಕೇಳು ೩
ರಾವಣನೆಂಬುವ ದುಷ್ಟ – ಅವ-ದೇವತೆಗಳ ಸೆರೆಯಿಟ್ಟ ||ದೇವನರಸಿ ಸೀತಾದೇವಿಯ ನೆಪದಿಂದರಾವಣನ ಕೊಂದು ದೇವತೆಗಳ ಕಾಯ್ದನೊ ೪
ಇನ್ನೆಷ್ಟು ಹೇಳಲೊ ಸಾಕ್ಷಿ – ಬ್ರಾಹ್ಮ -ರನ್ನವ ತೆಗೆದರೆ ಶಿಕ್ಷಿ ಮೋ-ಹನ್ನ ವಿಠ್ಠಲರಾಯ ತನ್ನಯ ಭಜಕರಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ ೫

೩೭
ಭಾಸ್ಕರನುದಿಸುತಿರಲು ದೋಷ ನಿಲ್ಲಲ್ಯಾಕೆ ಪ
ಭಂಗಾರ ದೊರಕಿರಲು ಬ್ಯಾಗಡಿಯ ಬಯಕ್ಯಾಕೆಗಂಗಾಂಬು ಇರಲು ಕೂಪೋದ(ಕ ?)ವ್ಯಾಕೆಶೃಂಗಾರ ಗುಣನಿಧಿ ಶ್ರೀನಿವಾಸಾರ್ಯರಾಅಂಗಾರವಿರಲನ್ಯ ಔಷಧಗಳ್ಯಾಕೆ೧
ತಾರಕ್ಷ ಮಂತ್ರವ ಜಪಿಸಿ ತಕ್ಷಕನ ಭಯವ್ಯಾಕೆ ಕಂ-ಠೀರವನ ಜೈಸೆ ಕರಿ ಭಯವ್ಯಾಕೆಸಾರ ಹೃದಯರು ನಮ್ಮ ಆಚಾರ್ಯ ರಾಯರತೀರಿಥಾವಿರೆ ದುರಿತ ತಿರುಗಿ ಬರಲ್ಯಾಕೆ ೨
ಲೌಕಿಕಾಚಾರ ವರ್ಜಿತರೆಂಬ ಬಿರದಿನಲಿ ವೈ-ದಿಕಾಚಾರದಲಿ ದಕ್ಷ ದೀಕ್ಷಾಭವರೋಗ ವೈದ್ಯ ಮೋಹನ್ನ ವಿಠಲನ್ನ ಪ್ರೀಯಕವಿಕುಲ ತಿಲಕನಿರೆ ಕಳವಳಿಸಲ್ಯಾಕೆ ೩

 

೨೦
ಭಿಕ್ಷವ್ಯಾತಕ್ಕೊ ಫಾಲಾಕ್ಷ ನಿನಗೆ ಪ
ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ಅ.ಪ.
ರಜತಾದ್ರಿ ಅರಮನೆಯು ಹೇಮನಿಗಿಯೇ ಧನುವುಗಜಗಮನ ಸುರನಿಕರ ಪರಿವಾರವು |ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇಗಜಮುಖನು ಕುಮಾರ ಗಂಡುಮಕ್ಕಳು ಇರಲು ೧
ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟುಮಾಡಬಾರದೆ ಮುಯ್ಯ ಅವನ ಕೋಣ |ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲಬೇಡಿದ್ದು ಬೆಳೆಯದೆ ಬರಿದೆ ಧಾವತಿಗೊಂಬಿ ೨
ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲತಕ್ಕೊಬಾರದೆ ಗೆಳೆಯ ಧನಪನಲ್ಲಿ |ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ ೩

 

೨೧
ಭುವನೇಂದ್ರತೀರ್ಥರ ಸ್ತೋತ್ರ
ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ಪ
ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ ಸಮೃದ್ಧಿ ಎಂದೆನಿಪ ಮುನಿಪ ||ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪಅದ್ವೈತ ತ್ರಯ ವರ ಪ್ರವರ್ತಕನೇ೧
ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-ರಂತರದಲಿ ಪೇಳಿ ಹರುಷದಿಂ ||ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತುಯಂತ್ರವಾಹಕನ ತೀರ್ಥವನೆರೆದ ಧೀರ ೨
ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥಕರಕಮಲ ಸಂಜಾತ ಭುವನ ವಿಖ್ಯಾತ ||ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ ೩

 

೪೦
ಮನವೇ ಇದೆ ಮರೆಯಾದೆನಮ್ಮಮನಸಿಜನಯ್ಯನ ನೆನೆಸಾದೆ ಹೋದೆ ಪ
ವೈಷ್ಣವ ಜನ್ಮವೆ ಬಯಸು ಏಕೋವಿಷ್ಣು ಸದಯದಿ ಷಡ್‍ವರ್ಗವ ಜಯಿಸು ||ಜಿಷ್ಣು ಸಖನ ದಾಸ್ಯ ವಹಿಸು ನೀನೆಶ್ರೇಷ್ಠನೆನ್ನದಲೇ ಶೀತೋಷ್ಣವ ಸಹಿಸು ೧
ನವ ವಿಧ ಭಕುತಿಯ ಮಾಡು ಪದ್ಮಭವಾದ್ಯರು ಶ್ರೀಹರಿಗೆ ಎಲ್ಲಿ ಈಡು ||ಪವನಾ ಮತಕೆ ಉಂಟೇ ಜೋಡು ಮಾ-ಧವನ ಮೂರ್ತಿಯ ಮನದಣಿಯ ನೀ ನೋಡು ೨
ಈಷಣ ತ್ರಯ ನಿರಾಕರಿಸು ಬಲುಭೂಷಣ ಬರುವದು ಕುಲವನುದ್ಧರಿಸು ||ದೋಷರಾಶಿಗಳ ಸಂಹರಿಸು ಶ್ರೀನಿ-ವಾಸ ಮೋಹನ ವಿಠಲನ ಅಂಘ್ರಿ ಭಜಿಸು ೩

 


ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ಪ
ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ ಲೋಕನಾಯಕ ನೀನಿರೆ ಕಾಯೆ ಕಂಡವರಾ ಅ.ಪ.
ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ ೧
ಇಂದಿರೆಯರಸ ಗೋವಿಂದ ನಿನ್ನಯ ಪಾದದ್ವಂದ್ವ ನಂಬಿದವನ ಕುಂದೆಣಿಸುವರೇ ೨
ಪನ್ನಂಗ ಶಯನ ಸುಪರ್ಣ ಗಿರೀಶಾ ಸು-ಪರ್ಣ ವಾಹನ ಮೋಹನ್ನ ವಿಠ್ಠಲನೇ ೩

 

೧೫
ಮಾರುತ ಒಲಿದವಗೆ ಮಾರಮಣನು ಒಲಿವಾ ಪ
ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ.
ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ೧
ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ೨
ತುಂಗಾ ತೀರ ನಿವಾಸ ಶೃಂಗಾರ ಗುಣಾಂಬುಧೇಹಿಂಗದೇ ಭಕುತರ ಪೊರೆವ ದಾತ ||ಮಂಗಳ ಮಹಿಮ ಮೋಹನ್ನ ವಿಠ್ಠಲನ್ನ ಪಾ-ದಂಗಳ ಭಜಿಸುವ ಮುನಿವರ್ಯ ದಾತ ೩

 

೧೭
ಭಾರತೀದೇವಿಯ ಸ್ತೋತ್ರ
ಮಾರುತನ್ನ ಜಾಯೆ – ಮೊರೆಯ ಹೊಕ್ಕೆನು ಕಾಯೆ ಪ
ಮಾರಾಂತಕ ಶಂಬರಾರಿ ಭಿದುರಧರತಾರೇಶ ಶರವಿನುತೇ ಅಮ್ಮಯ್ಯ ಅ.ಪ.
ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆಸುಮನಸೇಶನ ಪದಕಮಲ ಪೂಜಿಪುದಕೆವಿಮಲಮತಿಯನೀಯೇ ಅಮ್ಮಯ್ಯ ೧
ಶೃತಿದೇವಿಯಲ್ಲಿ ಸುತೆಯಾಗಿ ಜನಿಸಿದೆಸತತ ಎನ್ನಯ ದುರ್ಮತಿ ಖಂಡಿಸಿ ಸು-ಮತಿವಂತನ ಮಾಡೇ ಅಮ್ಮಯ್ಯ ೨
ಎರಡೇಳು ಭುವನ ಜಠರದೊಳಗಿಂಬಿಟ್ಟಪರಿಪೂರ್ಣ ಕಾಮ ಶ್ರೀ ಮೋಹನ ವಿಠ್ಠಲನಚರಣ ಭಕುತಿಯನೀಯೇ ಅಮ್ಮಯ್ಯ ೩

 

೨೩
ಸತ್ಯಬೋಧ ಯತಿಗಳ ಸ್ತೋತ್ರ
ಯಾವನೆದುರು ಮೂರ್ಜಗದೊಳು ಲೋಕಪಾವನ್ನ ಗುರು ಸತ್ಯಬೋಧ ಯತೀಂದ್ರಗಿನ್ನು ಪ
ಬಲು ಸುಂದರ ಸೀತಾ ರಘುಪತಿ – ಪಾದನಳಿನಯುಗ್ಮವ ಪೂಜಿಪ ಯತಿ – ಎಮಗೊಲಿದು ಪಾಲಿಸುವನು ಸನ್ಮತಿ – ಈಜಲಜ ಭವಾಂಡದೊಳ್ ತುಂಬಿರೆ ಕೀರುತಿ ೧
ಪೀಳಿಗೆ ರಾಮ ದಿಗ್ವಿಜಯ ರಾಮ – ಸಿರಿಲೋಲ ವಿಠ್ಠಲ ವ್ಯಾಸ ಕೂರ್ಮ – ಕಮಲಾಲಯ ದೇವಿಯ ಸಿರಿನಾಮ – ದಿಂದವಾಲಗವೀಯುವ ಗುರು ಸಾರ್ವಭೌಮಗೆ೨
ಯತಿವರ ಶ್ರೀ ಸತ್ಯಪ್ರಿಯರ – ಕರಶತಪತ್ರ ಭವ ಭಕ್ತರಾಧಾರ – ಮನ್ಮಥನ ಮಾರ್ಗಣ ಗೆದ್ದ ಗಂಭೀರ – ರತಿಪತಿ ಪಿತ ಮೋಹನ ವಿಠ್ಠಲ ಕಿಂಕರಗೆ ೩

 


ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ ಪ
ಮೋಕ್ಷದಾಯಕನೆ ಮಧುಸೂದನ ಪ-ದ್ಮಾಕ್ಷಗಾರುತಿಯ ಬೆಳಗಿರೇ ಅ.ಪ.
ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿ ಚೆಲುವಗಾರುತಿಯ ಬೆಳಗಿರೆ ಶೋಭಾನೆ ೧
ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ ೨
ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸ-ರ್ವಜ್ಞಗಾರುತಿಯ ಬೆಳಗಿರೇ೩

 

೧೧
ವಾಯುದೇವರ ಸ್ತೋತ್ರ
ಲಾಲಿ ಲಾಲಿ ತ್ರಿಭುವನ ಪಾವನ ಲಾಲಿ ಪ
ಅಂಜನದೇವಿಯ ಕಂದಗೆ ಲಾಲಿಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ||ಅಂಜದೆ ಅಸುರರ ಕೊಂದಗೆ ಲಾಲಿಸಂಜೀವನ ಗಿರಿ ತಂದಗೆ ಲಾಲಿ ೧
ಕುಂತಿಯುದರದಿ ಬಂದಗೆ ಲಾಲಿದಂತಿಯ ಗಗನಕ್ಕೆ ಒಗದಗೆ ಲಾಲಿ ||ಭ್ರಾಂತನ ಉದರವ ಬಗೆದಗೆ ಲಾಲಿಚಿಂತಾಮಣಿ ಭೀಮರಾಯಗೆ ಲಾಲಿ ೨
ಸೋಹಂ ಎಂಬರ ತರಿದಾಗೆ ಲಾಲಿ ದಾ-ಸೋಹಂ ಎಂಬರ ಪೊರೆದಗೆ ಲಾಲಿ ||ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿಸ್ನೇಹದಿ ಭಕತರ ಪೊರೆವಗೆ ಲಾಲಿ ೩

 

೩೩
ವಿಜಯದಾಸ ಧೀರರೆಂಬೊ ಅಂಬುಜ ಮಿತ್ರನುದಯಿಸಲುಭಜಕರಜ್ಞಾನ ತಿಮಿರ ಭರದಿ ಬಿಟ್ಟೋಡಿತು ಪ
ಶ್ರುತಿ ಶಾಸ್ತ್ರವೆಂಬ ಕಂಜಗಳತಿ ರಮ್ಯದಿಂದರಳಿದವುಕ್ಷಿತಿಯೋಳು ಕುಮುದದಂತೆ ದುರ್ಮತಗಳೆಲ್ಲ ಕುಗ್ಗಿದವು ||ಇತರ ದೇವಂಗಳಿಂತು ಭಜಿಸಿದೆ ರಘುಪತಿಯೆ ದೈವ ಮಧ್ವ ಮತವೆ ಸಿದ್ಧಾಂತವುಸತತವನು ಹರಿ ಸರ್ವೋತ್ತಮನೆಂದುತುತಿಸುವ ಕಾಂತಿಯು ತುಂಬಿತು ಜಗದೊಳು ೧
ಚೋರ ಮಾಯಾವಾದಿಗಳೆಂಬ ತಾರೆಗಳಡಗಿ ಪೋದವುಸಾರುವ ವಿಬುಧ ಜನರೆಂಬೊ ಚಕ್ರವಾಕ ಧ್ವನಿಗೈದವು ||ಸಾರಿ ಸಾರಿಗೆ ಹೊತ್ತು ಯೇರುವ ತೆರದಲಿಶ್ರೀರಮಣನ ಚರಣಾರವಿಂದವು ನಿತ್ಯಆರಾಧಿಸುವ ವಿಚಾರವಿದೆನುತಲಿತಾರತಮ್ಯ ಜ್ಞಾನ ತೋರಿದರಿಳಿಯೊಳು ೨
ಅಂದವಾದಲಾದಿನ್ನೆ ಹನುಮಂತನೊಡೆಯ(ಮುಂದಿನ ಪಾದಗಳು ಸಿಕ್ಕಿಲ್ಲ)

 

೨೭
ವಿಜಯದಾಸರ ಭಜನೆ ಮಾಡಿರೊ |ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ಪ
ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ ೧
ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ೨
ಪುರಂದರ ದಾಸರ ವರ ಕುಮಾ-ರರವಿಂದ ಪಾದ ಶಿರದಿ ಧರಿಸಿಹರಿ ನಾಮೋಚ್ಚರಣೆ ಮಾಡುತ್ತಹರುಷದಿಂದ ಪದ ರೂಪದಿ ||ಧರೆಯೊಳಗೆಲ್ಲ ದುರ್ಜನರರಿಯಂದೆನಸಿಮೆರೆವುತ್ತ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ ೩

 

೩೪
ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ಪ
ದ್ವಿಜಕೇತನ ಗುಣವ್ರಜವ ಕೊಂಡಾಡುವಾಸುಜನ ಮಂದಾರನೀತ – ಪ್ರಖ್ಯಾತ ಅ.ಪ.
ವಿ ಎಂದು ನುಡಿಯಲು ವಿಷಯ ಲಂಪಟ ದೂರಜ ಎಂದು ನುಡಿಯಲು ಜನನ ಹಾನಿಯ ಎಂದು ಕೊಂಡಾಡೆ ಯಮಭಟರು ಓಡುವರುರಾಯ ಎಂದೆನಲು ಹರಿಕಾವಾ – ವರವೀವಾ ೧
ಇವರ ಸ್ಮರಣೆಯೆ ಸ್ನಾನ ಇವರ ಸ್ಮರಣೆಯೆ ಧ್ಯಾನಇವರ ಸ್ಮರಣೆಯೆ ಅಮೃತಪಾನಇವರ ಸ್ಮರಣೆಯ ಮಾಡೆ ಯುವತಿಗಕ್ಷಯವಿತ್ತತ್ರಿವಿಕ್ರಮನು ಮುಂದೆ ನಲಿವಾ – ಒಲಿವಾ ೨
ವಾರಣಾಸಿಯ ಯಾತ್ರೆ ಮೂರು ಬಾರಿ ಮಾಡಿಮಾರಪಿತನೊಲುಮೆಯನು ಪಡೆದುಮೂರವತಾರದಾ ಮಧ್ವಮುನಿರಾಯರಾಚಾರು ಚರಣವನು ಭಜಿಪಾ – ಮುನಿಪಾ ೩
ಪುರಂದರದಾಸರಾ ಪರಮಾನುಗ್ರಹ ಪಾತ್ರಗುರು ವಿಜಯರಾಯನೀತಾಸಿರಿ ವಿಜಯ ವಿಠಲನ್ನ ಶ್ರೀನಿವಾಸಾರ್ಯರುಹರಿಯಾಜ್ಞೆಯಿಂದ ಕೊಟ್ಟರೂ – ದಿಟ್ಟರೂ ೪
ದಾನಧರ್ಮದಿ ಮಹಾ ಔದಾರ್ಯಗುಣದ ಶೌರ್ಯಶ್ರೀನಿವಾಸನ ಪ್ರೇಮಕುಮಾರಾಮಾನವೀ ಸೀಮೆ ಚೀಕನಪರಿ ನಿವಾಸ ಮೋ-ಹನ ವಿಠಲನ್ನ ನಿಜದಾಸಾ – ಉಲ್ಲಾಸಾ ೫

 

೩೧
ವಿಜಯರಾಯರ ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ
ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ.
ಮೊದಲು ಋಷಿಗಳು ಕೂಡಿ ಸತ್ರಯಾಗವ ನಾಕನದಿಯ ತೀರದಲಿ ರಚಿಸಿ ಯಿರಲು ||ಪದುಮ ಸಂಭವನಂಶ ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ ೧
ಆ ದೇವಮುನಿ ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ ೨
ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ ೩

 


ಮಹಾಲಕ್ಷ್ಮಿ ಸ್ತೋತ್ರ
ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ಪ
ವಸುದೇವ ದೇವಕಿ ಕಂದಾ – ನಮ್ಮಶಶಿಮುಖಿಯರೊಡನೆ ಆನಂದಾಪಶುಗಳ ಕಾಯ್ದ ಗೋವಿಂದ – ನಮ್ಮಬಿಸಜನಾಭ ಮುಕುಂದಾ ೧
ಸಾಮಜರಾಜ ವರದಾ – ಬಲುಪ್ರೇಮದಿ ಭಕುತರ ಪೊರೆದಾಆ ಮಹಾ ದಿತಿಜರ ತರಿದಾ – ನಿಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ೨
ಉರಗಗಿರಿಯಲಿಪ್ಪ – ಅಂದುಮರುತನ ಹೆಗಲೇರಿ ಬಪ್ಪಶರಣರಿಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ – ನಮ್ಮಪ್ಪನ ೩

 


ವೇದವ್ಯಾಸ ದೇವರ ಸ್ತೋತ್ರ
ಏನೋ ಈ ವೇಷ ವೇದವ್ಯಾಸ ಏನೋ ಈ ವೇಷ ಪ
ಭಾನುಕೋಟಿ ಪ್ರಕಾಶ ಬದರೀ ನಿವಾಸ ಅ.ಪ.
ದ್ರೌಪದಿ ಕರೆಯಲಪಾರ ವಸ್ತ್ರವನಿತ್ತೆಕೌಪೀನ ಧರಿಸಿದ ಕೌತುಕವೇನಯ್ಯ ೧
ಮುತ್ತು ಮಾಣಿಕ್ಯ ನವರತ್ನ ಮಕುಟವಿರೆನೆತ್ತಿಲಿ ಕೆಂಜೆಡೆ ಪೊತ್ತುಕೊಂಡಿಪ್ಪುದು ೨
ವರ ವೈಕುಂಠವ ಬಿಟ್ಟು ಮೋಹನ ವಿಠ್ಠಲಧರೆಯಾಳು ಬೋರೆಯ ಮರದಡಿಯಲಿರುವುದು ೩

 

ಲೋಕನೀತಿಯ ಹಾಡುಗಳು
೪೨
ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ
ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ.
ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ೧
ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ ೨
ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ ೩

 

೩೫
ತಿರುಪತಿ ದಿಗ್ಗಾವಿ ಶ್ರೀನಿವಾಚಾರ್ಯರ ಸ್ತೋತ್ರ
ಶ್ರೀನಿವಾಸ ಗುರು ಗುಣಾಧೀಶ | ಪಾಲಿಸೊ ಭಕ್ತರ ತೋಷ ನಾ ನಿನ್ನ ದಾಸ ಪ
ಏನಾದರು ಎನ್ನ ಹೀನತೆ ಎಣಿಸದೇಸಾನುರಾಗದಿ ನಿನ್ನ ಅಧೀನದೊಳಗಿರುವುದು ಅ.ಪ.
ನಾನು ನನ್ನದು ಎಂಬುದು ಬಿಡಿಸಿ | ಸುಜ್ಞಾನವ ಕೊಡಿಸಿ ಸು-ಜ್ಞಾನವಂತರ ಸಂಗದೊಳಿರಿಸಿ | ಸನ್ಮಾನದಿ ನೀ ಇಡಿಸಿ ಮಾನಸದೊಳು ಅನುಮಾನವಿಲ್ಲದೇ ನಿನ್ನ ಧ್ಯಾನವ ಕೊಡುವುದು ಉದಾಸೀನ ಮಾಡದೆ ನಿತ್ಯ ೧
ಅಗ್ನಿಹೋತ್ರವ ನಡೆಸುವ ತೆರದಿ | ಆಗ್ಯನ್ನನು ಮುದದಿಸುಜ್ಞಾನಿ ನೀನೇ ಕರಗಳ ಪಿಡಿದೀ | ಅಜ್ಞಾನವ ಬಿಡಿಸೀವಿಘ್ನವಗೊಳಿಸದೆ ಸರ್ವಜ್ಞ ಪಾದದೀಮಗ್ನನ ಮಾಡು ಪ್ರಾಜ್ಞ ಶಿರೋಮಣಿ೨
ನಿನ್ನ ನಂಬಿದ ಪಾಮರ ನಾನು | ಪಾವನ್ನ ನೀನುಎನ್ನ ಗುಣ ದೋಷಗಳನ್ನು | ಮನ್ನಿಸುವಾದೇನು ಅನ್ನಂತ ಪಾಪಿ ನಾನು ನೀನಾದರೊ ದಯವನ್ನು ಮಾಡುನಿನ್ನ ಪೊಂದಿದೆ ಮಹಾನುಭಾವ ೩
ಹರಿದಾಸನು ಎನಿಸಿದ ಬಳಿಕ ಎನ್ನ |ಗುರು ಶಿರೋರನ್ನ ||ಪರಮ ಪಾತಕಿ ನಾನಾದರೂ ನಿನ್ನಚರಣಕ್ಕೆ ಸುತ್ತಿದ ಬಿರಿದು ಬಿಡುವುದುಂಟೇ೪
ಅನ್ಯರಿಗಾನು ಎರಗುವನಲ್ಲ | ನೀ ಬಲ್ಲಿ ಎಲ್ಲಮನ್ನಿಸಿ ದಯದಿ ಎನ್ನಯ ಸೊಲ್ಲ ಶಿರಿ ಲ-ಕ್ಷ್ಮೀ ನಲ್ಲ ಎನ್ನ ಪಿಡಿಯೊ ಮೋ-ಹನ್ನ ವಿಠಲನ್ನ ತೋರಿ ಪಾವನನೆನಿಸುವುದು ೫

 

೩೬
ಶ್ರೀನಿವಾಸಾರ್ಯರ ಶೃಂಗಾರ ಗುಣಂಗಳಆನೆಂತು ವರ್ಣಿಸುವೆನು ಪ
ದಾನವಾಂತಕ ಹರಿಯ ಮಾನಸಾರ್ಚನೆ ಮಾಳ್ಪಮಾನಿಸಾ ವೇಷಧರರ ಇವರ ಅ.ಪ.
ನಿತ್ಯನ್ನ ದಾನದಲಿ ನಿರುತರಾಗಿದ್ದ ದಾಸೋತ್ತಮರೆನಿಸುತಿಹರ ಶತೃ ಮಿತ್ರರ ಸಮದೃಷ್ಟಿಯಿಂದಲಿ ನೋಡಿ ಪುರುಷೋತ್ತಮನ ತೋರಿಸುವರ ||ನಿತ್ಯ ನೈಮಿಕವ ಮಾಡಿ ನಿರ್ಜರ ಪತಿಯ ಚಿತ್ತ ಸಂಪಾದಿಸುವರಮತ್ತು ಗಜವೆಂಬ ದುರ್ವಾದಿಗಳನೇ ಮುರಿದು ಹತ್ತು ದಿಕ್ಕಿಲಿ ಮೆರೆವರ ಇವರ ೧
ಗುರುಗಳ ಪಾದುಕವ ಶಿರದಲ್ಲಿ ಧರಿಸಿನ್ನು ನರರ ವ್ಯಥೆಯನ್ನು ಕಳೆವರಾಸಿರಿವರನ ಪಾದ ತೀರ್ಥವನೆರೆದು ಅಂಗಾರ ಕರಮುಟ್ಟಿ ಪಾಲಿಸುತ್ತಿಹರ ||ವರ ಮಂತ್ರಾಕ್ಷತೆಯನ್ನಿತ್ತು ಮುದದಿಂದ ಪಾ-ಮರರನ್ನೆ ಪೊರೆವರ ಇವರ೨
ಲಕ್ಷ್ಮೀಪತಿ ಶ್ರೀನಿವಾಸಾರ್ಯರೆಮ್ಮನು ಬಿಡದೆ ರಕ್ಷಿಸಲೆಂತೆಂಬೆನೊಅಕ್ಷರ ಪುರುಷ ಅಪ್ರಾಕೃತನ ತೋರಿ ಮದ ಮತ್ಸರವ ಬಿಡಿಸೆಂಬೆನೊ ||ಸೂಕ್ಷ್ಮಾಂಬರಧರ ಮೋಹನ ವಿಠಲನಈ ಕ್ಷಣದಿ ತೋರಿಸೆಂಬೆನೊ ನಾನು ೩

 


ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ
ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ.
ಮಾರನ್ನ ಉಪಟಳಕ್ಕಾರದಲೆ ನಾ ಬಲುಪೋರ ಬುದ್ಧಿಯನು ಮಾಡಿ |ಬಾರಿ ಬಾರಿಗೆ ಮನದಿ ಬಯಸಿ ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ ೧
ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ ೨
ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ ೩
ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ ೪
ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ೫

 

೧೪
ಸಂಜೀವನ ಗಿರಿಧರ ಪಾಹಿಮಾಂ ಪ
ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶವಕ್ರಾನನ ಮೂರುತಿ ಪಾಹಿಮಾಂ ೧
ಮಂತ್ರ ಮೂಲ ಸ್ಥಿತ ಕಂಕುಪಿತನ ದೂತಯಂತ್ರೋದ್ಧಾರಕ ಪಾಹಿಮಾಂ ೨
ಮೋಹನ ವಿಠ್ಠಲ ದಾಸ ಪೋಷಕ ಮಾಯಾಮೋಹಕ ಭಂಜಕ ಪಾಹಿಮಾಂ ೩

 

೧೬
ಸತತ ಚಿಂತಾಮಣಿಯೆ | ಸುರರೊಳಗೆ ನಿನಗೆಣಿಯೆಸಂತರನ ಪೊರೆವಂಥ ಮುನಿಯೆ | ಸುಖ ಜ್ಞಾನ ಖಣಿಯೇ ಪ
ಭುವದಸುರ ಮರ್ದನನೆ | ತ್ರಿಭುವನಕಾಧಾರಕನೆಭುವನ ಸುತ ವಂದಿತನೆ | ಭವ ಭುವನ ನಿಧಿ ತಾರಕನೆ ೧
ಭಾರತಿ ಮನೆ | ಕುಂಬಾರನ ವುಳಹಿದನೆಭಾರತದೊಳು ನೀನೆ | ಭೂಭಾರ ನಿಳುಹಿದವನೆ೨
ಶಂಖ ಚಕ್ರಾಧರನೆ ನಿ- | ಶ್ಶಂಕ ಮಹಾಮಹಿಮನೆಶಂಕರ ಸುರಪಾಲಕನೆ | ಶಂಕ ಚಕ್ರವಿತ್ತವನೆ ೩
ಘಟಿಕಾಚಲ ವಾಸ | ಉತ್ರ‍ಕಷ್ಟ ನರಹರಿಯ ದಾಸಭಟ ಜನರಿಗೆ ಬಲು ಲೇಸಾ ಅ- | ಜಟವಾಗಿ ಕೊಡುವ ಸಂನ್ಯಾಸಾ ೪
ಪರಮ ಪಾವನ ಪಾವನ ಸರೋ- | ವರ ತೀರ ಸಿರಿ ಮೋಹನ್ನ ವಿಠ್ಠಲನ ನಿತ್ಯ ಸ್ಮರಿಸುವ ಗುರು ಶಿರೋರತ್ನಾ ೫

 

೨೬
ಸರಿಯುಗಾಣೆನೆಲ್ಲಿ ಜಗಲೊಳು ಕರವ ಮುಗಿಪರಘವ ತೆಗೆವ ಗುರು ವಿಜಯದಾಸರಿಗಿನ್ನು ಪ
ಭೇದವಿಲ್ಲಯೆಂಬ ಮಾಯವಾದಿ ರಾಮಶಾಸ್ತ್ರಿ ಬಂದುಪಾದಕೆರಗೆ ಅವನ ತಮವ ಛೇದಿಸಿ ಸುಜ್ಞಾನವಿತ್ತೆ ೧
ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮು-ದ್ರಾಧಾರಣಿಯ ಕೊಡಿಸಿ ಪರಮ ಆದರದಿಂದ ಅವನ ಕಾಯ್ದೆ೨
ಭಸುಮವನ್ನೆ ತೆಗಸಿ ಅವನ ನೊಸಲಲೂಧ್ರ್ವ ತಿಲಕ ಪಚ್ಚಿಸಿಎಸವ ಪಂಚಮುದ್ರಿ ದ್ವಾದಶ ನಾಮ ಧರಿಪಂತೆ ಮಾಡಿದೆ ೩
ಶ್ರೀ ಮನೋಹರ ಒಡೆಯ ವಿರಂಚಿಯ್ಯೋಮಕೇಶ ಸುರರು ಆತನತಾಮರಸ ಪದ ಧೂಳಿಗಯೆಂದು ಈ ಮರಿಯಾದಿಗಳ ಪೇಳಿದೆ ೪
ಧರೆಯೊಳಿದ್ದ ಭಕ್ತ ಜನರ ಪೊರೆವನೆಂಬ ಬಿರಿದು ವೊಹಿಸಿಸಿರಿ ಮೋಹನ್ನ ವಿಠಲನಂಘ್ರಿ ಸರಸಿರುಹವ ಎನಗೆ ತೊರ್ದೆ ೫

 

೫೧
ಹೊಲೆಯರಿಲ್ಲದ ಊರೊಳು ಇರಬಾರದು ಪ
ಹೊಲೆಯರು ಬೆಳೆದರೆ ಉಣಲುಂಟು ಉಡಲುಂಟು ಅ.ಪ.
ಹೊಲೆಯರ ಸೇವಿಸಲು ಶುಭ ಶೋಭನ ಉಂಟುಹೊಲೆಯರ ನಿಂದಕನು ನಿರ್ಭಾಗ್ಯನುಹೊಲೆಯರಿಗೆ ಉಣಲಿಕ್ಕಿದವನ ಫಲಕ್ಕೆನೆಲೆಗಾಣೆ ನೆಲೆಗಾಣೆ ಧರೆಯೊಳಗೆ ನಾನು ೧
ಹೊಲೆಯರು ಮುನಿದರೆ ನೆಲೆಯಿಲ್ಲ ನಿಭ ಇಲ್ಲಹೊಲೆಯರು ಒಲಿದರೆ ಕಷ್ಟವಿಲ್ಲಹೊಲೆಯರೇ ನಮ್ಮ ಸಲಹಲಿ ಸಾಕಲಿ ಎಂದುಫಲ್ಗುಣನ ಸಾರಥಿಯ ಪ್ರಾರ್ಥಿಸಿಕೊಳ್ವರು ೨
ಹೊಲೆಯರಿಂದಲಿ ಸಕಲ ದೇವತೆಗಳ ಪೂಜೆಹೊಲೆಯರಿಂದಲಿ ಸಕಲ ಬಂಧು ಬಳಗಹೊಲೆಯರಿಗೆ ಸ್ವಾಮಿ ಮೋಹನ್ನ ವಿಠ್ಠಲಧೊರಿಯೆ ಪಾಂಡವರ ಪ್ರಿಯನೆಂದೆನ್ನು ೩

 

೬೦
ಉಡುಪಿಯ ಕೃಷ್ಣನೆ ಸಡಗರ ನಿನಗ್ಯಾಕೆಬಡವನಾದವನ ಭವ ಮಡುವಿನೊಳಗೆ ನೂಕಿಮಿಡುಕಿಸಿಕೊಂಬುವದು ಥರವೇನು ಹರಿಯೇಒಡಲಿಗೋಸುಗ ನಿನ್ನ ಬೇಡ ಬಂದವನಲ್ಲದೃಢ ಭಕ್ತಿ ಜ್ಞಾನಕೊಟ್ಟು ರಕ್ಷಿಸು ಹರಿಯೇಕಡಲ ಶಯನ ನಮ್ಮ ಮೋಹನ್ನ ವಿಠಲಅಡದು ದಧಿಯ ದಾಟಿಸಿ ಕಡೆಗಾಣಿಸು ಸುಲಭದಿಂದ.

 

೬೧
ಮಧ್ವರಾಯರ ಭಾಗ್ಯ ಎಂಥದೋ ವರ್ಣಿಸಲುಶುದ್ಧ ಸತ್ವಾತ್ಮಕವಾದ ಶರೀರವುಅದ್ವೈತ ಮತವೆಂಬೊ ಅರಣ್ಯವಾ ಪೊಕ್ಕುನಿಧ್ವಂಸ ಮಾಡಿ ವಾದಿಗಳನೆ ಗೆದ್ದುಪದ್ಧತಿ ತಪ್ಪದಂತೆ ಮತವನ್ನುದ್ಧರಿಸಿವೃದ್ಧಿಗೈಸಿದರು ಸರ್ವ ಸಜ್ಜನರನ್ನುಸಿದ್ಧರಾವೆಂದು ಗೀರ್ವಾಣರೆಲ್ಲರುಎದ್ದೆದ್ದು ಕುಣಿದರು ಕರವ ಹೊಡೆದುವಿದ್ವಾಂಸ ನಾನೆಂದು ಅಹಂಕರಿಸದೆ ಇವರ ಪಾದಪದ್ಮದಲ್ಲಿ ಅತಿ ದೃಢ ಭಕುತಿ ಮಾಡಿಮಧ್ವರಾಯರೆ ನಮಗೆ ಉದ್ಧಾರಕರೆಂದುಪದ್ದೊಪದಿಗೆ ತಿಳಿದು ಕೊಂಡಾಡಿದರೆಸಿದ್ಧಿದಾಯಕ ಸಿರಿ ಮೋಹನ್ನ ವಿಠ್ಠಲಹೃದೃಶ್ಯದಲಿ ನಿಂತು ಸಲಹುವನು ವೇಗ.

 

೫೯
ಧ್ರುವತಾಳ
ಶ್ರೋತರ ನಿನ್ನ ಕತೆ ಕೇಳಲೊಲ್ಲದು ಪರ-ಮಾತುರದಿಂದ ದುರ್ವಾರ್ತಿ ಕೇಳುತಲಿದೆನೇತುರ ನಿನ್ನ ಮೂರ್ತಿಯ ನೋಡದಲೆ ಗಾಡಿ-ಕಾರ್ತಿಯರನು ಮನದಣಿಯ ನೋಡುತಲಿದೆಗಾತುರ ನಿನ್ನ ದಾಸರನಪ್ಪದೆ ಕಾ-ಮಾತುರದಿಂದ ಕಂಡವರ ನಪ್ಪುತಲಿದೆಪೂತ ಪದಾರ್ಥವ ಭುಂಜಿಸದಲೆ ಜಿಹ್ವೆಪಾತಕರ ದುಷ್ಟನ್ನ ಕೊಳುತಲಿದೆಶ್ರೀ ತುಳಸೀ ಆಘ್ರಾಣಿಸದಲೆ ಮೂಗುಬಾತಿ ಬಸಿದ ಕುಗಂಧಕೋಡುತಲಿದೆಯಾತರಿಂದಲಿ ನಿನ್ನ ಮನಕೆ ಬಪ್ಪೆನೆ ದೇವಕೋತಿ ಕೊರವಂಗೆ ಸಿಲ್ಕಿದಂತಾಯಿತುಜ್ಯೋತಿರ್ಮಯ ನಮ್ಮ ಮೋಹನ ವಿಠ್ಠಲ ಬೆ-ನ್ನಾತು ಸಲಹದಿರೆ ಗತಿ ಯಾವುದು ಎನಗೆ ೧
ಮಟ್ಟತಾಳ
ಸಂಸಾರವೆಂತೆಂಬೊ ಸಾಗರದೊಳು ಸಿಲ್ಕಿಹಿಂಸೆಬಡುತ ತೇಲಿ ಮುಳುಗುವವನ ಕಂಡುಕಂಸಾರಿ ನೀ ಕೈಯ ಆನದಿದ್ದರೆ ಇನ್ನು ಕಡೆಹಾಯುವದೆಂತೊಹಂಸ ವಾಹನನಯ್ಯಾ ಮೋಹನ್ನ ವಿಠ್ಠಲಸಂಶಯವೆಂತೆಂಬೊ ಸುಳಿಯೊಳು ಸಿಲ್ಕಿದನ ಕಡೆ ಹಾಯುವದೆಂತೊ ಕಡೆ ಹಾಯುವದೆಂತೊ ೨
ತ್ರಿವಿಡಿತಾಳ
ವಾಕು ನಿನ್ನನು ಕೊಂಡಾಡಲೊಲ್ಲದೆ ಕೆಟ್ಟಕಾಕು ಪೋಕರ ಕೂಡ ಕೆಲದಾಡುತಲಿದೆಬೇಕೆಂದು ನಿನ್ನ ಪೂಜೆಯ ಮಾಡದಲೆ ಪಾಣಿಕುಕರ್ಮಕೊಳಗಾಗಿ ಭ್ರಷ್ಟ ಮಾಡುತಲಿದೆಶ್ರೀಕಾಂತನ ಯಾತ್ರೆ ಮಾಡಲೊಲ್ಲದು ಪಾದಬೇಕೆಂದು ಧನದಾಶೆಗೆ ತುಕ್ಕುತಲಿದೆನೀ ಕೇಳೊ ಎರಡೈದೇಂದ್ರಿಯ ವ್ಯಾಪಾರವಾಕಾಮಗೋಚರ ವಶವಾಗದು ಎನಗೆಕಾಕೋದರ ಶಾಯಿ ಮೋಹನ್ನ ವಿಠ್ಠಲನೀ ಕೈಯ ಹಿಡಿಯದಿರೆ ಗತಿ ಯಾವುದೆನಗೆ ೩
ಅಟ್ಟತಾಳ
ಪಂಚ ಜ್ಞಾನೇಂದ್ರಿಯ ಪಂಚ ಕರ್ಮೇಂದ್ರಿಯಪಂಚಭೂತ ಪಂಚ ತನ್ಮಾತ್ರಗಳು ಪ್ರಪಂಚಕ ಎಳದೊಯ್ದು ಘಾತಿಸುತಲಿವೆಪಂಚ ಬಾಣನೈಯ್ಯ ಪಂಚ ಪ್ರಾಣ ಪ್ರೀಯಪಂಚ ಪಂಡವ ಪಾಲ ಪಾಂಚಾಲಿ ವರದನೆಪಂಚ ರೂಪಾತ್ಮಕ ಮೋಹನ ವಿಠ್ಠಲಮಿಂಚಿನಂದದಿ ಪೊಳೆಯೋ ದೋಷವ ಕಳೆಯೋ ೪
ಆದಿತಾಳ
ವೇದಶಾಸ್ತ್ರವ ಸಾಧು ಪುರಾಣಓದಿದವನಲ್ಲ ಕೇಳಿದವನಲ್ಲಮಾಧವನ ಪೂಜಿ ಮಾಡಿದವನಲ್ಲವಾದಿಸುವೆ ಕುತರ್ಕವನು ಮಾಡಿಬೋಧ ಮೂರುತಿ ನಮ್ಮ ಮೋಹನ ವಿಠ್ಠಲನೀ ದಯದಿ ಕೈ ಪಿಡಿಯದೆಂತೊ ೫
ಜತೆ
ತನುವೆ ತೀರಲಿ ನಿಚ್ಚಾ ಗುಣವೆ ತೀರಲಿ ಎನ್ನಮನ ನಿನ್ನಂಘ್ರಿಯಲಿಡೊ ಮೋಹನ್ನ ವಿಠ್ಠಲ ||

 

೫೮
ಸಾಧನ ಸುಳಾದಿ ವಿಚಾರ
ಧ್ರುವತಾಳ
ಹರಿದಾಸನು ನಾನಲ್ಲ ಹರಿಭಕುತಿ ಎನಗಿಲ್ಲಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನುತರುಣಿ ಮಕ್ಕಳು ಸಹೋದರ ಮೊದಲಾದವರಪೊರೆವೆನೆನುತ ಡಂಭ ವಿರಚಿಸಿ ಶರಣನೆಂತೆಂದುಕರೆಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲೆಸಿರಿಪತಿ ನಿನ್ನ ಪಾದ ಸ್ಮರಿಸದಲೆಪರಮ ದಯಾಳು ಮೋಹನ್ನ ವಿಠ್ಠಲ ರೇಯಾಕರಣ ಶುದ್ಧನಾಗದೆ ತಿರುಗಿದೆ ಪೊಟ್ಟಿಗಾಗಿ ೧
ಮಟ್ಟತಾಳ
ದೇಶ ದೇಶಕೆ ಧನದ ಆಶೆಗಾಗಿ ಪೋಗಿಕಾಶಿಗ್ಹೋಗುವೆನೆಂದು ಕಾಸು ಹಣವ ತಂದುಈ ಸಂಸಾರಕ್ಕೆ ನಾ ಸಮರ್ಪಿಸಿತೋಷ ಪಡುವೆ ದುರಿತ ರಾಸಿ ಯಂದರಿಯದಲೆಭೂ ಸುರರು ಎನ್ನ ವಾಸದಲ್ಲಿಗೆ ಬರಲುಗ್ರಾಸವೀಯದೆ ಅಪಹಾಸ ಮಾಡುವೇನುದೋಷ ವರ್ಜಿತ ನಮ್ಮ ಮೋಹನ ವಿಠ್ಠಲಘಾಸಿಯಾದೆನೊ ಯಮ ಪಾಶಕ್ಕೆ ಗುರಿಯಾಗಿ ೨
ತ್ರಿವಿಡಿತಾಳ
ವಿತ್ತವಿದ್ದವನ ಮನಿಯೊಳು ಪೋಗಿ ಕುಳಿತು ಬಲುಉತ್ತಮನೆಂದವನ ಸ್ತೋತ್ರವ ಮಾಡಿಹತ್ತೆಂಟು ಪುಸಿ ವಾರ್ತೆ ಪೇಳೆ ಅವನು ಈ ಹೊತ್ತು ಬನ್ನಿರಿ ಎನ್ನೆ ಹರುಷದಿಂದಹತ್ತೈದು ದೇವತಾರ್ಚನೆಯ ಸಾಮಗ್ರೀಯತತ್ಥಳಿಸುವಂತೆ ವಿರಚಿಸುವೆಸುತ್ತ ಧೂಪ ದೀಪವೆತ್ತಿ ನೈವೇದ್ಯವಹತ್ತಿಲಿರಿಸಿಕೊಂಡು ಮುಸುಕುನಿಟ್ಟುಚಿತ್ತ ಶುದ್ಧಿಯಿಲ್ಲದಲೆ ಬಹಿರದಲ್ಲಿ ಕರ-ವೆತ್ತಿ ಪಿಟಿ ಪಿಟಿ ಎಂದು ತುತಿಸುವೆನೊಮತ್ತೇನು ಮಂತ್ರ ತಂತ್ರವು ಬಾರದೆನ್ನೆಹತ್ತೀಲಿ ಸೇರಲೀಸನೋ ಸ್ವೋತ್ತುಮರಎತ್ತ ನೋಡಲು ಎನ್ನ ಹತ್ತಿಲಿ ಹೊದ್ದಿದವರುಮುತ್ತಿಕೊಂಡು ಕಾಗೆ ಬಳಗದಂತೆ ಚಿತ್ತಜನಯ್ಯಾ ಮೋಹನ ವಿಠ್ಠಲ ನಿನ್ನಭೃತ್ಯನೆನಿಸಿ ಸ್ವಸ್ಥ ಚಿತ್ತದಿಂದಿರದ್ಹೋದೆ ೩
ಅಟ್ಟತಾಳ
ಕಾಮ ಕ್ರೋಧ ಲೋಭ ಮದ ಮತ್ಸರಂಗಳುರೋಮ ರೋಮ ಕೂಪದೊಳು ತುಂಬಿಕೊಂಡುಭೂಮಿ ಸುರ ದೇಹ ಬಂದೀಹದೆಂತೆಂಬಈ ಮಹಾ ಗರ್ವದಿಂದಾಡುವೆ ಸುಜನರಶ್ರೀ ಮನೋಹರ ನಿನ್ನ ತಾಮರಸಾಂಘ್ರಿ ನಿ-ಷ್ಕಾಮದಿಂದಲಿ ಭಜಿಸಿ ಮರೆ ಪೋಗಲಿಲ್ಲವೊಭೂಮಿ ಭಾರಕನಾಗಿ ತನುವ ಪೊರೆದೆ ನಿನ್ನನಾಮಾಮೃತವನು ಪ್ರೇಮದಿ ಸವಿಯದೆಸಾಮಜವರದ ಮೋಹನ್ನ ವಿಠ್ಠಲ ಅ-ನಾಮಧೇಯನಾದೆ ಪಾಮರರೊಡಗೂಡಿ ೪
ಆದಿತಾಳ
ಅನ್ಯರ ಪದಾರ್ಥವ ತಂದು ನಿನ್ನ ಮುಂದೆ ಸಮರ್ಪಿಸಲುಎನಗೇನು ಬರುವದೊ ಬಲುಪುಣ್ಯ ಅದರಿಂದತನ್ನ ಕರದಿಂದಲಿ ಉದಕವನ್ನು ತಂದು ತುಲಸಿಯಿಂದನಿನ್ನ ಪೂಜೆ ಮಾಡಲು ಪ್ರಸನ್ನನಾಗಿ ಪಾಲಿಸುವಿಮುನ್ನೆ ಒಬ್ಬ ಕುಚೇಲಂಗೆ ಮನ್ನಿಸಿ ಪದವಿಯನಿತ್ತೆನಿನ್ನ ಮಹಿಮೆ ಎಣಿಪರಾರೊ ಘನ್ನ ಮಹಿಮ ಮೋ-ಹನ್ನ ವಿಠ್ಠಲರೇಯಾ ಅನ್ಯರಲಿ ಪೋಗಿ ಪಾಪ ಕೊಂಡು ಬರುವೆನೊ ೫
ಜತೆ*
ಕೆರೆ ನೀರು ಕೆರೆಗೆ ಚೆಲ್ಲಿ ವರಗಳು ಪಡೆದಂತೆಕರುಣಾಳು ಮೋಹನ್ನ ವಿಠ್ಠಲನರ್ಚಿಸು ಮನವೆ ೬

 

೫೭
ಧ್ರುವತಾಳ
ಹರಿಯ ಸರ್ವೋತ್ತಮ ಸಿರಿಯು ಆತನ ರಾಣಿಸರಸಿಜೋದ್ಭವ ಮಾರುತ ಪುತ್ರರಯ್ಯಾಸರಸ್ವತಿ ಭಾರತಿ ಗರುಡ ಶೇಷ ರುದ್ರಹರಿಯ ರಾಣಿಯರು ನಾಲ್ಕೆರಡು ಮಂದಿ ಸೌ-ಪರಣಿ ವಾರುಣಿ ಗಿರಿಜಾ ಸುರಪತಿ ಕಾಮಾದ್ಯರತರತಮ್ಯ ಜ್ಞಾನದಿಂದ ತಿಳಿಯಬೇಕುಸುರ ನದಿ ಪಿತ ನಮ್ಮ ಮೋಹನ್ನ ವಿಠ್ಠಲಶರಣು ನೆನಿಸಿದವಗೆ ಇನ್ನು ಸರಿಯು ಕಾಣೆ ೧
ಮಟ್ಟ ತಾಳ
ಜೀವ ಜೀವಕೆ ಭೇದ ಜಡ ಜಡಕೆ ಭೇದಜೀವ ಜಡಕೆ ಭೇದ ಹರಿಗೆ ಜಡಕೆ ಭೇದಜೀವ ಈಶಗೆ ಭೇದ ದೇವ ನಾರಾಯಣನಭಾವ ಕ್ರಿಯಗಳಿಗೆ ಅಭೇದವನ್ನು ತಿಳಿದುಶ್ರೀವಲ್ಲಭ ನಮ್ಮ ಮೋಹನ ವಿಠ್ಠಲನ್ನಪಾವನ ಚರಣ ನಾಮ ತೀವ್ರದಲಿ ಭಜಿಸು ೨
ತ್ರಿವಿಡಿತಾಳ
ಹರಿಯು ತನಗೆ ಬೇಕಾದವನ ಮನಸುಎರಗಲೀಸನು ಅನ್ಯ ಸತಿಯರಲ್ಲಿಎರಗಿಸಿದರೆ ಬೇಗ ತಿರಿಗಿಸುವನಯ್ಯತಿರುಗಿಸದಿದ್ದರೆ ಬೆರೆಯಲೀಸಾಬೆರೆದರೆ ಬೆರೆಯಲಿ ರತಿಯ ಪುಟ್ಟಲೀಸಾರತಿ ಪುಟ್ಟಿದರೆ ಏನು ಕಾಕು ಮಾಡಲೀಸನಯ್ಯಾಕರುಣಾಸಾಗರ ನಮ್ಮ ಮೋಹನ ವಿಠ್ಠಲನ ಪಾವನಚರಣವನು ತೀವ್ರದಲಿ ಭಜಿಸೊ ೩
ಅಟ್ಟತಾಳ
ಮಾರುತ ಮತವ ಪೊಂದಿ ಹರಿಗೆ ಪರನೆಂದುಗುರು ಹಿರಿಯರ ಚರಣಕ್ಕೆರಗು ಆವಾಗಲುಹರಿಕಥಾಮೃತವಕರ್ನದಿಂದಲಿ ಕೇಳುಹರಿ ನಿರ್ಮಾಲ್ಯವ ಶಿರದಲ್ಲಿ ಧರಿಸುತಿರುಹರಿ ನೈವೇದ್ಯವ ಹರುಷದಲಿ ಭುಂಜಿಸುಹರಿದಾಸರ ಕೂಡ ತಿರುಗು ಊಳಿಗನಂತೆಹರಿ ಅವತಾರ ಸಿರಿ ಮೋಹನ ವಿಠ್ಠಲಹರಿಯೆ ತ್ರಿಭುವನ ಧೊರೆ ಎಂದು ತಿಳಿಯೊ ೪
ಆದಿತಾಳ
ತನಗೆ ಬೇಕಾದವನು ಉನ್ನತ ಪಾಪವ ಮಾಡೆದಾನವರಿಗೆ ಕೊಡಿಸಿ ಪುಣ್ಯ ಭಕ್ತರಿಗೀವಘನ್ನ ಮಹಿಮ ಲಕುಮಿಯನ್ನು ಬಿಟ್ಟರೇನು ಪ್ರ-ಪನ್ನರ ಬಿಡೆನೆಂಬ ಚಿನ್ಮಯ ಮೂರುತಿಪನ್ನಗಾದ್ರಿ ನಿಲಯ ಮೋಹನ ವಿಠ್ಠಲನ್ನಸನ್ನುತಿಸುವನಿಗೆ ಇನ್ನು ಸರಿಯು ಕಾಣೆ ೫
ಜತೆ*
ತಾರತಮ್ಯ ಪಂಚಭೇದ ತಿಳಿಯದವಗೆಮಾರುತಿ ಪ್ರೀಯಾ ಮೋಹನ ವಿಠ್ಠಲವೊಲಿಯಾ ೬

 

ಆವ ಕುಲವಾದರೇನು
೪೮
ಆವ ಕುಲವಾದರೇನು ಶ್ರೀ ವಾಸು-ದೇವನೆಂದವನೆ ಧನ್ಯಾ ಪ
ಭಗವಂತನಲ್ಲಿ ಭಕುತಿ ಉಳ್ಳ ಮಾ-ದಿಗನೆ ಉತ್ತಮ ಜಾತಿಯೋನಗಧರನ ನೆನೆಯದಿಪ್ಪ ವಿಪ್ರ ಮಾ-ದಿಗಗಿಂತ ನಿಕೃಷ್ಟನೋ ೧
ಊಧ್ರ್ವ ಪುಂಡ್ರಗಳ ಧರಿಸೀ ಶಿರದಲ್ಲಿಪದ್ಮಾಕ್ಷಿ ತುಲಸಿ ಮಾಲೆ ಹಾಕಿಮಧ್ವ ವಲ್ಲಭನೆನ್ನದಾ ಆ ವಿಪ್ರಶುದ್ಧ ಚಾಂಡಾಲನೆನ್ನೋ ೨
ಪಂಚ ಮುದ್ರೆಗಳ ಧರಿಸೀ ಲೋಕ ಪ್ರ-ಪಂಚಕ್ಕೆ ದಾಸನೆನಿಸೀಪಂಚ ಭೇದವು ತಿಳಿಯದಾ ಆ ವಿಪ್ರಪಂಚ ಮಹಾ ಪಾತಕಿಯೋ೩
ನಾರದಾನೆಂಬವನನೂ ಕುಲದಲ್ಲಿಆರೆಂದು ತಿಳಿಯೊ ನೀನು ನಮ್ಮನಾರಾಯಣನ ಸ್ಮರಿಸಲು ನೀಚ್ಯೋನಿಮೀರಿ ಸುರಮುನಿಯಾದನೋ ೪
ವಿದುರ ವಾಲ್ಮೀಕರ ನೋಡು ಅವರ ತುದಿಮೊದಲು ನೀ ತಿಳಿದು ನೋಡು ನಮ್ಮಮದನನಯ್ಯನ ಭಜಿಸಲು ಅವರೆಲ್ಲಸದಮಲಾರಾದುದರಿಯಾ ೫
ಜಾತಿ ಕಾರಣವಲ್ಲವೋ ಶ್ರೀ ಹರಿಗೆಭೂತಿ ಕಾರಣವಲ್ಲವೋ ||ಸ್ವಾತಂತ್ರ್ಯವನ್ನು ಮರೆದು ಶ್ರೀ ಹರಿಯಪ್ರೀತ್ಯಾಗಲೆನ್ನಬೇಕೋ ೬
ಅನ್ಯ ಕರ್ತೃತ್ವ ಮರೆದು ಶ್ರೀ ಹರಿಗೆನಿನ್ನ ನಿನ್ನವನೆಂದಡೇತನ್ನ ದಾಸ್ಯವನೆ ಇತ್ತು ನಮ್ಮ ಮೋ-ಹನ್ನ ವಿಠ್ಠಲ ಸಲಹುವಾ ೭

 

ಹಾಡಿನ ಹೆಸರು :ಆವ ಕುಲವಾದರೇನು
ಹಾಡಿದವರ ಹೆಸರು :ಪಿಚ್ಚಳ್ಳಿ ಶ್ರೀನಿವಾಸ್
ರಾಗ :ಭೀಮ್‍ಪಲಾಸ್
ತಾಳ :ಮಿಶ್ರಛಾಪು ತಾಳ:
ಸಂಗೀತ ನಿರ್ದೇಶಕರು :ಪಿಚ್ಚಳ್ಳಿ ಶ್ರೀನಿವಾಸ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮಾಯಾವ್ಯಾತಕೋ ಮಾಧವನೆ

ಮಾಯಾವ್ಯಾತಕೋ ಮಾಧವನೆ ಮಾಯಾವ್ಯಾತಕೋ ಪ
ಮಾಯವ್ಯಾತಕೆ ಎನ್ನ | ಪ್ರೀಯ ಸಖನೆ ಲೋಕನಾಯಕ ನೀನಿರೆ ಕಾಯೆ ಕಂಡವರಾ ಅ.ಪ.
ಆರು ವರ್ಗಗಳೆಂಬ ಕ್ರೂರರಿಗೊಪ್ಪಿಸಿದೂರಾ ನೋಡುವದು ಉದಾರ ಉಚಿತವೆ ೧
ಇಂದಿರೆಯರಸ ಗೋವಿಂದ ನಿನ್ನಯ ಪಾದದ್ವಂದ್ವ ನಂಬಿದವನ ಕುಂದೆಣಿಸುವರೇ ೨
ಪನ್ನಂಗ ಶಯನ ಸುಪರ್ಣ ಗಿರೀಶಾ ಸು-ಪರ್ಣ ವಾಹನ ಮೋಹನ್ನ ವಿಠ್ಠಲನೇ ೩

 

ಹಾಡಿನ ಹೆಸರು :ಮಾಯಾವ್ಯಾತಕೋ ಮಾಧವನೆ
ಹಾಡಿದವರ ಹೆಸರು :ಸದಾಶಿವ ಪಾಟೀಲ್
ರಾಗ :ಸಿಂಧುಭೈರವಿ
ತಾಳ : ಕೆಹರವ ತಾಳ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ