Categories
ರಚನೆಗಳು

ಮುದ್ದುಮೋಹನವಿಠಲದಾಸರು

ಏಕೋನಾರಾಯಣಸೀತ್

ಉಗಾಭೋಗ
ಏಕೋನಾರಾಯಣಾಸೀತೆಂಬ ಶ್ರುತಿ ಪ್ರತಿಪಾದ್ಯನಾಗಿ
ಮಾಕಮಲಾಸನ ಮೊದಲಾದವರಲ್ಲಿನಿಂತು
ಸಾಕಿಸಲಹಿ ಸಂಹಾರ ಮಾಡುತ್ತ ಜೀವರಾಶಿಯೊಳಗೆನ್ನ
ಸ್ವೀಕಾರ ಮಾಡದೆ ನೂಕಿ ಬಿಸಾಟು ಈಕುಂಭಿಣಿ ಮಧ್ಯದಲ್ಲಿ
ಕಾಕುಮನುಜಾರಿಗಿಂತ ಕನಿಷ್ಠನ್ನಮಾಡಿ
ಸಾಕಲಾರದೆ ಕೈಬಿಡುವಾರೇನೊ
ನಾಕಜಜನಕ ಮುದ್ದುಮೋಹನವಿಠಲ
ಲೌಕೀಕ ಮಾರ್ಗ ಬಿಡಿಸಿ ಹೃತ್ಕರ್ಣಿಕೆಯಲ್ಲಿ ಪೊಳೆಯೋ

 

ಇದು ಉಡುಪಿ ಕೃಷ್ಣನನ್ನು

ಉಗಾಭೋಗ
ಉಡುಪಿಯಲ್ಲಿಪ್ಪನೆ ಸಡಗರ ನಿನಗ್ಯಾಕೆ
ಬಡವನಾದವನ ಭವಮಡುವಿನೊಳಗೆನೂಕಿ
ಮಿಡುಕಿಸೀನೋಡುವುದು ಥರವೇನೋ
ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ
ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ
ಕಡಲಶಯನ ನಮ್ಮ ಮುದ್ದುಮೋಹನವಿಠಲ
ಗಾಢರತಿಯ ಪಾಲಿಸು ಸುಲಭದಿಂದಾ

 

ಪರಮಾತ್ಮನ ಪಾದಸ್ಮರಣೆಯಿತ್ತು

ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ
ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ
ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು
ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು ೧
ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ
ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ ೨
ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ
ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು ೩
ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ
ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ ೪
ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ
ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ ೫

 

ಶ್ರೀರುದ್ರದೇವನ ರೂಪಾದಿಗಳನ್ನು

ಪಾರ್ವತೀಪತಿಯೆ ಎನ್ನಪಾಲಿಸುವುದು ಪ
ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ
ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ
ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು ೧
ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ
ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ ೨
ದೂರ್ವಾಸಮುನಿಯೇ ಇಂದು ಗರ್ವವ ಬಿಡಿಸಿ
ಕಾರಣಕರ್ತಹರಿಯೆ ಶ್ರೀರಮಣನ ತೋರೋ ೩
ಭೂತನಾಥನೆ ನೀನು ಮಾತನು ಲಾಲಿಸುವುದು
ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ ೪
ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ
ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು ೫

 

ಇದು ವಿಠಲನನ್ನು ಕುರಿತು

ವಿಠಲಾ ಎನ್ನಿರೊ ಸುಜನರೆಲ್ಲಾ ಪ
ವಿಠಲಾ ಎಂದಾರೆ ಸುಟ್ಟುಹೋಗೊದು ಪಾಪ ಅ.ಪ
ಪ್ರಾತಃ ಕಾಲದೊಳು ಸ್ನಾನಾದಿಕರ್ಮ ಮುಗಿಸೀವಿಠಲಾ….
ವಾತದೇವನ ದ್ವಾರ ಅರ್ಪಿಸುತ್ತಾ ನೀವು | ವಿಠಲಾ….೧
ಗುರುಗಳಲ್ಲಿಗೆ ಪೋಗಿ ವಂದಿಸಿ ಮೆಲ್ಲಾನೆ ವಿಠಲಾ….
ಮರÀುತಮತದ ಸಚ್ಛಾಸ್ತ್ರಗಳ ನೋಡುತಾ ವಿಠಲಾ…. ೨
ಪಂಚÀಭೇದ ಪ್ರಾಪಂಚ ಸರ್ವವು ತಿಳಿದು ವಿಠಲಾ…
ಪಂಚಬಾಣನಯ್ಯ ಪಂಚರೂಪದಿ ತೋರುವಾ ವಿಠಲಾ…. ೩ ಪ್ರಾರಂಭಮಾಡಿ ಪರಮೇಷ್ಠಿ ಪರಿಯಂತ ವಿಠಲಾ….
ಶ್ರೀಪ್ರಣವ ಪ್ರತಿಪಾದ್ಯಗಿವರು ಪ್ರತಿಬಿಂಬರೆಂದು ವಿಠಲಾ…. ೪ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು ವಿಠಲಾ….
ಆತುಮಾಂತಾರಾತ್ಮನೆಂದು ಕೂಗುತ ಒಮ್ಮೆ ವಿಠಲಾ…. ೫
ತೀರ್ಥಕ್ಷೇತ್ರಗಳಿಗೆ ಪೋಗಿ ಬರುವಾಗ ವಿಠಲಾ….
ಪಾರ್ಥಸಖನ ಪ್ರೇರಣೆಯಿಂದ ಮಾಡಿದೆವೆಂದು ವಿಠಲಾ…. ೬
ನಂಬೀದ ಜನರೀಗೆ ಬೆಂಬಲನಾಗುವ ವಿಠಲಾ….
ಸಂಭ್ರಮದಿಂದಾ ಸಂರಕ್ಷಿಸುವನೆ ಇವನೂ ವಿಠಲಾ…. ೭
ಕಂಚಿಕಾಳಾಹಸ್ತಿ ಶ್ರೀರಂಊ ಮೊದಲಾಗಿರುವ ವಿಠಲಾ…
ವಂಚನೆಯಿಲ್ಲಾದೆ ಭಜಿಸಿದವರ ಪೊರೆವಾ ವಿಠಲಾ…. ೮
ಪಂಚಪ್ರಾಣಾರಲಿನಿಂತು ಕಾರ್ಯಮಾಳ್ಪ ವಿಠಲಾ….
ಸಂಚಿತಾಗಾಮಿ ಕರ್ಮ ಇವನಿಂದ ನಾಶವೆಂದು ವಿಠಲಾ…. ೯
ಊಧ್ರ್ವಪುಂಡ್ರಗಳು ದ್ವಾದಶನಾಮ ಇಡುವಾಗ ವಿಠಲಾ….
ಶುದ್ಧನಾಗೀ ಶುಭ್ರಹೊಸ ವಸ್ತ್ರ ಹೊದುವಾಗ ವಿಠಲಾ….. ೧೦
ಪಂಚಮುದ್ರೆಗಳಲಿ ಪಂಚರೂಪದಿ ಇರುವ ವಿಠಲಾ…
ನಿರ್ವಂಚನಾಗಿ ಧರಿಸಿದವರಿಗೊಲಿವಾ ವಿಠಲಾ… ೧೧
ವಾದ್ಯತುಂಬಿಸಿ ಶಿರಸಿನ ಪರಿಯಂತ ವಿಠಲಾ…
ವೇದೈಕವೇದ್ಯ ವಿಶ್ವಾಮೂರ್ತಿ ಕಾರ್ಯಗಳೆಂದು ವಿಠಲಾ…. ೧೨
ಚೇತನಾ ಚೇತನ ಜಡದೊಳಗೆ ನೀವು ವಿಠಲಾ…
ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ ಒಲಿವ ವಿಠಲಾ…. ೧೩
ಈ ರೀತಿಂಇÀಇಲಿ ಅನಂತಾನಂತ ಪರಿ ಚಿಂತಿಸಿ ವಿಠಲಾ…
ಶಾರೀರದೊಳಿÀರುವ ಪ್ರಾಜ್ಞನಲಿ ಕೂಡಿಸಿ ವಿಠಲಾ…. ೧೪
ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ ನಿಂತ ವಿಠಲಾ…
ಮುದ್ದುಮೋಹನ್ನ ವಿಠಲನೆ ಜಗಕೆ ಕರ್ತು ವಿಠಲಾ….. ೧೫

 


ವೃಂದಾವನ ದರುಶನವಾಯಿತು
ಇಂದು ಪೋದವುಭವ ವೃಂದಗಳೆಲ್ಲ ಪ
ಕುಂದು ಕೊರತೆಯಿಲ್ಲದ ಜ್ಞಾನಗಳೂ
ಬಂದು ಘಟಿಸಿತು ಭಕುತಿ ವೈರಾಗ್ಯ
ಇಂದಿನದಿನ ಆನಂದಪುಟ್ಟಿ ಹರಿ
ದ್ವಂದ್ವ ಪದಗಳನು ತೋರಿಸುವಂಥ೧
ಹಾಟಕರತ್ನ ಖಚಿತವಾದಂಥಾ
ಮಾಟಮಾದವು ಆಭರಣಗಳೂ
ಸಾಟಿಯಿಲ್ಲದ ಪಷ್ಪಮಾಲವ ಧರಿಸಿದ
ಕೋಟಿ ಸೂರ್ಯಪ್ರಭೆ ಸೋಲಿಸುವಂಥ೨
ನೋಡಿದನಯನ ಅನ್ಯತ್ರನೋಡವೂ
ಪಾಡಿದ ಜಿಹ್ವಾ ಅನ್ಯತ್ರಪಾಡವೂ
ನಾಡಿನೊಳಿಂಥಾ ಶ್ರೀಪಾದ ರಾಜರಿಗೆ
ಈಡುಗಾಣೆ ಮುದ್ದುಮೋಹನವಿಠಲ ೩

 

ಇದು ತಿರುಪತಿ ಸ್ವಾಮಿ ಪುಷ್ಕರಣಿ

ಸುಳಾದಿ
ಧ್ರುವತಾಳ
ಶ್ರೀನಿವಾಸನೆ ನೀನು ಬ್ಯಾಗನೆ ಬಂದು
ಸಾನುರಾಗದಿ ಸಂಸಾರ ಬಿಡಿಸೋ
ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ
ಮಾನವ ಕಾಯ್ವುದು ಮಂಗಳಾಂಗನೆ
ಏನೇನು ಕಾರ್ಯಗಳು ನಿನ್ನಾಧೀನವಾಗಿರಲು
ನಾನುನನ್ನದು ಎಂದು ಮಮತೆಯನೆ ಕೊಟ್ಟು
ಅನ್ಯಾಯದಿಂದ ಎನ್ನಞ್ಣಿಸುವುದು
ದಾನವಾಂತಕರಂಗ ಮುದ್ದುಮೋಹನವಿಠಲ
ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ ೧
ಮಠ್ಯತಾಳ
ಎನ್ನಪರಾಧಗಳು ಅನಂತವಿರುವದನ್ನು
ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ
ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು
ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ ೨
ತ್ರಿವಿಡಿತಾಳ
ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ
ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ
ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ
ಸಂಭ್ರಮದಿಂದ ಕಾಯೊ ಕರುಣಾನಿಧೆ
ಶಂಬರಾರಿಯಜನಕ ಮುದ್ದುಮೋಹನವಿಠಲ
ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ ೩
ಅಟ್ಟತಾಳ
ಏನೇನುದಾನ ಅನಂತ ಮಾಡಲೇನು
ಕಾನನದಲಿ ಪೋಗಿ ತಿರುಗಿತಿರುಗಿದಂತೆ
ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ
ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ
ವಾನರ ವಂದ್ಯ ಮುದ್ದುಮೋಹನವಿಠಲ
ನಾನಾವಿಧದಿಂದ ನಂಬಿದೆನೊ ಹರಿಯೇ೪
ಆದಿತಾಳ
ನೀನೆ ಅನಾಥಬಂಧು ನೀನೆ ಅದ್ಭುತಮಹಿಮ
ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ
ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ
ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ
ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ
ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ
ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ
ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು ೫
ಜೊತೆ
ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ
ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ

 

ಉಡುಪಿಯಲ್ಲಿಪ್ಪನೆ

ಉಗಾಭೋಗ
ಉಡುಪಿಯಲ್ಲಿಪ್ಪನೆ ಸಡಗರ ನಿನಗ್ಯಾಕೆ
ಬಡವನಾದವನ ಭವಮಡುವಿನೊಳಗೆನೂಕಿ
ಮಿಡುಕಿಸೀನೋಡುವುದು ಥರವೇನೋ
ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ
ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ
ಕಡಲಶಯನ ನಮ್ಮ ಮುದ್ದುಮೋಹನವಿಠಲ
ಗಾಢರತಿಯ ಪಾಲಿಸು ಸುಲಭದಿಂದಾ

 

ಹಾಡಿನ ಹೆಸರು :ಉಡುಪಿಯಲ್ಲಿಪ್ಪನೆ
ಹಾಡಿದವರ ಹೆಸರು :ಸತ್ಯವತಿ ಟಿ. ಎಸ್.
ಸಂಗೀತ ನಿರ್ದೇಶಕರು :ಶ್ರೀಕಂಠನ್ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ