Categories
ರಚನೆಗಳು

ರಮಾಪತಿವಿಠಲರು

೧೭೭
ಶ್ರೀ ರಾಘವೇಂದ್ರರು (೪)
ಈತನೆ ಶ್ರೀ ಪ್ರಲ್ಹಾದನು ಆಹ್ಲಾದಕರನು ಪ
ಈತನೆ ಪ್ರಲ್ಹಾದ ಜಗನ್ಮಾತಾಲಕುಮಿಪತಿಯ ಗುಣವಭೂತಳದಲ್ಲಿ ತೋರಿ ಬಹು ನಿರ್ಭಿತಿಯಿಂದ ಮೆರೆದ ಗುರು ಅ.ಪ.
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆಕಷ್ಟ ಬಡಿಸೆ ಸುತಗೆ ಜವದಲಿಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಅಸುರನಂದನಶ್ರೇಷ್ಠ ನಖದಿಂ ಬಗೆಯ ನಿಷ್ಠೆಯಿಂದ ನಮಿಸಿದ ಗುರು ೧
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣಮುನಿ ಪಾದಾರವಿಂದ ದಯದಿ ಭಜಿಸಿದಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾಸಾರಪಾನ ಮಾಡಿ ವಿಭುದಚಾರು ಚಂದ್ರಿಕಾ ರಚಿಸಿದ ಗುರು ೨
ಸಿಂಧುಶಯನ ಶ್ರೀ ರಮಾಪತಿ ವಿಠ್ಠಲನ ಭಕುತಿಯಿಂದ ಭಜಿಪ ರಾಘವೇಂದ್ರಯತಿಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು ೩

 

೧೭೬
ಶ್ರೀ ವಾದಿರಾಜರು
ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ
ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ.
ವಾಗೀಶಮುನಿ ಕರಪದ್ಮಸಂಜಾತ ಹೇಭಾಗವತಾಗ್ರಣಿ ಭರದಿಆಗಮ ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ ೧
ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ ೨
ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ ೩

 

೧೭೪
ಅವತಾರತ್ರಯ (೧)
ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ
ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು ೧
ಕುಂತಿ ಉದರದಿ ಜನಿಸಿದೆಯೊ ರಾಯಾ ಶ್ರೀ -ಶಾಂತಿ ರಮಣನ ಅಂತರಂಗದಿ ಅರ್ಚಿಸುತವೈಯಾಅಂತ ತೋರದೆ ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ ೨
ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ ೩

 

೧೭೫
ಶ್ರೀ ಮಧ್ವಾಚಾರ್ಯರು
ಮಧ್ವೇಶಾರ್ಪಣಮಸ್ತು ಮಹಾಪ್ರಭು ಮಧ್ವೇಶಾರ್ಪಣಮಸ್ತು ಪ
ಎದ್ದು ಕೂತು ಮಲಗೆದ್ದು ಮಾಡುವ ಕರ್ಮಮಧ್ವೇಶಾರ್ಪಣಮಸ್ತು ಅ.ಪ.
ಹುಟ್ಟಿದಾರಭ್ಯದಿ ಅಷ್ಟು ಮಾಡಿದ ಕರ್ಮ ಮಧ್ವೇಶಾರ್ಪಣಮಸ್ತುದುಷ್ಟರಾಡುತಿಹ ಕೆಟ್ಟ ನುಡಿಗಳು ಮಧ್ವೇಶಾರ್ಪಣಮಸ್ತುಮೆಟ್ಟಿ ಹೆಜ್ಜೆ ಇಟ್ಟದಾಡುವುದು ಮಧ್ವೇಶಾರ್ಪಣಮಸ್ತುಶಿಟ್ಟಿಲಿ ಜನರಿಗೆ ನಿಷ್ಠುರಾಡುವುದು ಮಧ್ವೇಶಾರ್ಪಣಮಸ್ತು ೧
ಬಾಲೇರ ಕೂಡಿ ವಿಲಾಸದ ಮಾತುಗಳು ಮಧ್ವೇಶಾರ್ಪಣಮಸ್ತುಕಾಲಕಾಲದಿ ನಾಲಿಗೆ ರುಚಿಸುವುದು ಮಧ್ವೇಶಾರ್ಪಣಮಸ್ತುಬಾಲಕರುಗಳನು ಲಾಲನೆ ಮಾಳ್ಪದು ಮಧ್ವೇಶಾರ್ಪಣಮಸ್ತುಶ್ರೀ ಲಕುಮಿಪತಿಯ ಓಲಗ ಮಾಳ್ಪದು ಮಧ್ವೇಶಾರ್ಪಣಮಸ್ತು
ನಾಸಿಕದಿಂದಲಿ ಶ್ವಾಸ ಬಿಡುವುದು ಮಧ್ವೇಶಾರ್ಪಣಮಸ್ತುಲೇಸು ದೋರಿ ಬಹು ತೋಷಪಡುವುದು ಮಧ್ವೇಶಾರ್ಪಣಮಸ್ತುಬ್ಯಾಸರದಿಂದಲಿ ಕ್ಲೇಶ ಬಡುವುದು ಮಧ್ವೇಶಾರ್ಪಣಮಸ್ತುಹೇಸಿಕೆ ವಿಷಯಗಳಾಶೆ ಮಾಡುವುದು ಮಧ್ವೇಶಾರ್ಪಣಮಸ್ತು ೩
ಬಗೆ ಬಗೆ ವಸ್ತ್ರಗಳಗಲದೆ ಹೊದಿವುದು ಮಧ್ವೇಶಾರ್ಪಣಮಸ್ತುಝಗ ಝಗಿಸುವ ಹೊಸ ನಗಗಳನಿಡುವುದು ಮಧ್ವೇಶಾರ್ಪಣಮಸ್ತುಸೊಗಸಿಂದುತ್ತರಗಳ ಸೇವಿಸುವುದು ಮಧ್ವೇಶಾರ್ಪಣಮಸ್ತುಹಗಲಿರುಳಲಿ ಮಾಳ್ಪಗಣಿತ ಕರ್ಮವು ಮಧ್ವೇಶಾರ್ಪಣಮಸ್ತು ೪
ರಮಣಿಯರಿಂದಲಿ ರಮಣ ಮಾಡುವುದು ಮಧ್ವೇಶಾರ್ಪಣಮಸ್ತುಕ್ರಮದಿಂ ದಶೇಂದ್ರಿಯ ಕರ್ಮಗಳೆಲ್ಲವು ಮಧ್ವೇಶಾರ್ಪಣಮಸ್ತುಭ್ರಮಿಸಿ ಗುರುಗಳ ಮನ ಸ್ತೋಷಿಸುವುದು ಮಧ್ವೇಶಾರ್ಪಣಮಸ್ತುರಮಾಪತಿ ವಿಠಲನ ಮನದಿ ಧ್ಯಾನಿಸುವುದುಮಧ್ವೇಶಾರ್ಪಣಮಸ್ತು ೫

 

೧೭೯
ಕಾಖಂಡಕಿ ಪ್ರಸನ್ನ ವೆಂಕಟದಾಸರು
ಸಿರಿವಿರಿಂಚಿ ಭವೇಂದ್ರಾದಿ ಸುರರಿಂದ ರ್ಚಿತನಾದ ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ
ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು ೧
ಹಸನಾಗಿ ಕಪಿಲ ತೀರ್ಥದಲಿ ಮಜ್ಜನಗೈದು ಶಶಿಧರನ ಅಡಿಗಳಿಗೆರಗಿಎಸೆವ ಪರ್ವತಾರೋಹಣವ ಮಾಡಿ ಸ್ವಾಮಿ ಪುಷ್ಕರಣಿ ತೀರ್ಥದಲಿಮುಳುಗಿಬಿಸಜದಾಳಾಕ್ಷ ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ ೨
ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು ಜ್ಞಾನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ ೩
ಹಿತದಿ ಮಾತಿಗೆ ಬಂದಚ್ಯುತನ ನಾಮಾವಳಿ ಅತಿಶಯ ಭಕುತಿ ಪೂರ್ವಕದಿಸತತ ಅನೇಕ ಗ್ರಂಥಗಳು ದಶಮಸ್ಕಂಧ ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ ೪
ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ ೫