Categories
ದಾಸ ಶ್ರೇಷ್ಠರು

ರಮಾಪತಿವಿಠಲರು

ದಾಸರ ಹೆಸರು : ರಮಾಪತಿವಿಠಲರು.
ಜನ್ಮ ಸ್ಥಳ : ನರೇಗಲ್ಲ.
ತಾಯಿ ಹೆಸರು : ಈಕೆ ಶ್ರೀದವಿಠಲರ ತಂಗಿ.
ಕಾಲ : 1830- ; ಅಂಕಿತನಾಮ : ವೆಂಕಟ ಎಂಬ ಮುದ್ರಿಕೆಯಲ್ಲಿಯೂ ಕೀರ್ತನೆಗಳನ್ನು ರಚಿಸಿದ್ದಾರೆ ನಂತರ ರಮಾಪತಿ ಎಂಬ ಮುದ್ರಿಕೆಯಲ್ಲಿಯೂ ರಚಿಸಿದ್ದಾರೆ.
ಲಭ್ಯ ಕೀರ್ತನೆಗಳ ಸಂಖ್ಯೆ : 6 ;
ಗುರುವಿನ ಹೆಸರು : ಕರ್ಜಗಿಯ ತೀರ್ಥಪಾದವಿಠಲ.
ಪೂರ್ವಾಶ್ರಮದ ಹೆಸರು : ನರೇಗಲ್ಲ ರಾಮಣ್ಣ (ಶ್ರೀದವಿಠಲರ ತಂಗಿಯ ಮಗ).
ವೃತ್ತಿ : ಹೈಸ್ಕೂಲ್ ಶಿಕ್ಷಣ ಪಡೆದು, ಕಾರಕೂನರಾಗಿದ್ದರು.
ಕೃತಿಯ ವೈಶಿಷ್ಟ್ಯ : ಒಂದು ಕೀರ್ತನೆಯಲ್ಲಿ ದೀಪದ ಅಣ್ಣಯ್ಯಾಚಾರ್ಯರನ್ನೂ ಸತ್ಯಪರಾಕ್ರಮರನ್ನೂ ಶ್ರೀ ಸತ್ಯವೀರನ್ನೂ ನೆನೆದಿದ್ದಾರೆ.
ಇತರೆ : ಇವರ ಸ್ವಹಸ್ತಿ ಪ್ರತಿಯಲ್ಲಿ ನರೇಗಲ್ಲ ರಾಮದಾಸ ನಾಮಕ ನರಕೀಟಕನ ಹಸ್ತಾಷಕ ಎಂದು ಬರೆದು,ಕಾಲವನ್ನು (1876) ಸೂಚಿಸಿದ್ದಾರೆ.