Categories
ರಚನೆಗಳು

ರಾಜಗೋಪಾಲದಾಸರು

೧೮೮
ಶ್ರೀ ರಾಘವೇಂದ್ರರು
ಈ ಪದಾರಾಧಾನಾ, ಪಾವನ ಮಹಾ ಪಾವೇಭ ಸಂಚಾನನಾ ಪ
ತಾಪತ್ರಯ ಹರ, ರಾಘವೇಂದ್ರರ ಬಹುಪದವ್ಯಾಪಾರನಾ, ಅನುದಿನಾ ಅ.ಪ.
ಕ್ಷಣಲವ ಬಿಡಲೊಂದಿಪೆ, ದುರಿತ ಬೆಟ್ಟ ತೃಣ ಮಾಡಿ ಹಾರಿಸುವಾ ಅಣು ರೇಣು ಮುಂತಾದ ತೃಣಪ ರಕ್ಷಿಪಗಿಡು ತೃಣ ಪರಿಹಾರವಿದೆ, ನಾಘಾದೆ ೧
ಅಂಧ ಬದಿರ ಮೂಕರು ಸೇವಿಸುತ ನಂದಾಗಳೇರುವರು ವೃಂದಾವನ ಸೇವೆ, ಗೈದು ವಂದಿಸಿ ದಿವ್ಯ ಕಂದನ್ನೆತ್ತಾಡಿಸಿರೋ, ಜೋ ಎನ್ನಿರೊ ೨
ಕುಪ್ಠ ಭಗೇಂದ್ರಕ್ಷಯಾ, ಬಾಲಗ್ರಹ ದುಷ್ಟ ಪಿಶಾಚಭಯ ಕಷ್ಟ ಓಡಿಸಿ ದಯ ದಯದೃಷ್ಟಿಯಿಂದ ನಿಖಿ- ಳಾಷ್ಠ ವಿಟ್ಟು ಕರೆವಾ, ತಾ ಮೆರೆವಾ ೩
ಆರಾಧಿಸುತಲಿ ಬಂದ, ನವಲಗುಂದ ಸಾರಸಿಂದಾರ್ಯರಿಂದ ಕ್ಷೀರ ಸೇಚನ ಮೂವತ್ತಾರು ವರುಷ ಗುರುವಾರ ಮೃಷ್ಠಾನ್ನದಿಂದ, ಆನಂದ ೪
ಬಹಳ ಗುಣಗಳ ನೋಡಿ, ಒಲಿದು ಒಲಿದು ಮಂತ್ರಾ ಲಯದೊಳು ನಿಂತು ಶೀಲ ಸಂಪತ್ತಿಗೆ ಒಲಿದಿಹ ರಾಜ ಗೋಪಾಲ ಭಕ್ತರ ಚಯಾ ಆಶ್ಚರ್ಯ ಶ್ರೀರಸ್ತು ೫

 

೧೮೯
ದಶಾವತಾರ
ನೀರೊಳಗೆ ನಿಂತು ನಡುಗಿ ನಾರುವಂಗೆ ಗಂಬೂರಿಕಸ್ತೂರಿ ಲೇಪನದ ಮದುವೆಭಾರ ನಿನ್ನಲಿ ಪೊಳಲು ಕಲ್ಲು ಕೈ ಮುಸುಡಿದಂಗೆಧೀರ ಶೇಷನ ಶಯನದ ಮದವೋಮೋರೆಯಲ್ಲಿ ಯಲ್ಲಾ ಕೆದರಿ ಬೇರು ಮೆಲುವನಿಗೆಸಾರಷಡ್ರಸನ್ನ ಭೋಜನದ ಮದವೋಕರುಳ ವನಮಾಲೆ ಹಾಕಿದವಂಗೆ ಹಾರಪದಕ ಹಾಕಿದ ಮದವೋಮೂರಡಿಯ ಭೂದಾನ ಬೇಡಿದವನಿಗೆ ಸಾರಿದವಂಗಭೀಷ್ಟಗಳ ಪೂರೈಪ ಮದವೋಧರಣಿ ವಿಪ್ರರಿಗಿತ್ತು ಕುಳಿಪುದಕೆ ಸ್ಥಳವಿಲ್ಲವಗೆ ಭುವನಕೀಳುವ ಮದವೋಊರ ಬಿಟ್ಟು ವನ ಚರಿಸುವಂಗೆ ಮೂರು ಧಾಮದಮನೆಯ ಭೋಗದ ಮದವೋಪುರನಾರಿಯ ಬಯಸಿ ಕೊಂಬುವಂಗೆ ವಾರಿಜಭವ ಸುರರವಂದ್ಯಾನೆ ಮದವೋಘೋರ ತುರಗವನೇರಿ ಹಾರಿಸ್ಯಾಡುವಂಗೆ ವೀರಸಿಂಹಾಸನದಲ್ಲಿಕುಳಿತ ಮದವೋಮೂರು ದಿನ ಅರಸುತನ ಸ್ಥಿರವೆಂದು ನೆಚ್ಚಿ ಸಾರಿದವನ್ನಮರೆವದುಚಿತವೆಬಾರದೆ ತಪ್ಪದು ಹಿಂದಿನ ಭವಣೆ ನಿನಗೆ ದೂರ ವಿಚಾರಿಸಿನೋಡೊ ಕರುಣಾ ನಿಧಿಶ್ರೀರಂಗ ರಾಜಗೋಪಾಲ ವಿಠಲ ನಿನ್ನ ಪಾರಿದವರ ಪೊರೆದು ಕೀರ್ತಿಪಡಿಯೊ

 

೧೯೦
ಭೀಮಸೇನನ ಸ್ತ್ರೀವೇಷ
ಭೀಮನು ಸರ್ವಜನಾ ಮೋಹಿಸುವಂಥಕಾಮಿನಿ ರೂಪವ ತೊಟ್ಟನು ಪ
ಸೋಮ ಸಮಾನನ ತಾಮರಸಾಂಬಕಹೇಮಾಂಬರ ಕಂಠೀಮಣಿ ಗಣ ಸು -ತ್ರಾಮ ಕಾಮಿನಿಯಾ ಮೋಹಿಪ ಅಬಿ -ರಾಮರೂಪ ನಿಸ್ಸೀಮ ಬಲಾಢ್ಯ ಅ.ಪ.
ಬಟಕುಚಪಟ ಕರಪುಟದಿಂದ ಹಿಗ್ಗಿಸಿ ತೀಡುತ ಅಂ-ಗುಟ ತುದಿಲೆಳೆದೆಳೆದುಟಿ ರಕ್ತಿಮೆಯನು ನೋಡುತಕುಟಿಲಾಳಕನ್ಯಾವರಿಸುತ ಪಟುಮಾತಾಡುತವಿಟರಿಗೆ ಸ್ಮರಸಂಕಟವನು ಹೃದಯದಲೂಡುತ ಪುಟ್ಟಚಂಡ ಹಾರಿಸಿ ನಟನೆ ಮಾಡುವಾ -ರ್ಭಟಕಂಜಿಹ ವಿಟಪಟಲ ಹಾಂಗಿರಲದುವಟುರಿದ್ದರು ಯತಿ ಮಠಮಂದಿರ ಲಂ -ಪಟವ ಬಿಟ್ಟ ಮಿಟಿಮಿಟಿ ನೋಡುವರೋ ೧
ಕರಿಕಲಭಗಮನ ಸೊರಗಿದ ಕಟಿಕಂಠೀರವುವಿಠಲ ನಯನಜತ ಎರಳೆಗಳ್ ಮನೆಯನು ಸೇರವುಸರಸ ಸ್ವರದಿಂದ ಪರಿಭ್ರಮಿಸಿತು ಕಲಕಿರವುಸುರನರವರ ಸುಂದರಿಯರ ಚಲುವಿಕೆ ಮಾರವು ಹೆರಳ್ ಬಂಗಾರವು ಮಲ್ಲಿಗೆ ಸರಗೀ ಸರಹರಳ್ ಕಂಕಣ ಬಳೆ ಸರಳ್ ಬೆರಳುಂಗುರಅರಳ್ ಮಲ್ಲಿಗೆ ಸರ ಕೊರಳ್ ಗಂಧವ ಕಂಡುಮರುಳ್‍ಗೊರಡ ಜನ ಹಗಲಿರುಳು ಧೇನಿಪರೊ ೨
ಮೃಗಮದತಿಲಕವು ಮುಗುಳ್ ನಗೆಮೊಗ ಬಿಂಬಾಧರಖಗಯುಗದಂದದಿ ಝಗಝಗಿಸುತಿಹ ಪಯೋಧರಅಘಹರ ರಾಜಗೋಪಗ ಸಖ ಪಾರ್ಥ ಸಹೋದರಬಗೆ ಬಗೆಯಲಿ ಮನದಗ ಅಘಹರನ ಕೃತಾದರಮುಗುಳ್ ಮಲ್ಲಿಗೆ ಸರ ತೆಗೆತೆಗೆದ್ಹಾಕುತಸೊಗಸು ಸುಗುಣರೂಪ ತಗುಬುಗಿಲೆನುತಿರೆಜಗದ ಜನರ ಮನ ಭುಗಿಭುಗಿಲೆನುತಿರೆಬಗೆ ಬಗೆಯಲಿ ಒಂದ್ಹಗಲ್ಯುಗವಾಗೆ ೩