Categories
ರಚನೆಗಳು

ವಿದ್ಯಾರತ್ನಾಕರತೀರ್ಥರು

ನುಡಿ-೨: ನಾಕರಾಜನ ಸುತನು
ಭಗವಂತನ ಸಂಕೀರ್ತನೆ
೯೫
ಇಂದಿರಾರಮಣ ಆನಂದಮೂರುತಿ ನಿನ್ನ
ವಂದಿಸಿ ಕರಗಳ ಬಂಧಿಸಿ ಬೇಡುವೆ ಪ
ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ
ನಂದಮುನ್ನೀಶ್ವರ ವಂದಿತ ಚರಣನೆ ಅ.ಪ
ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ
ಕೃತಿಯಾಗಿರಲು ಶ್ರೀಪತಿಯೇ ನೀ ಬಂದು
ರತಿಪತಿಪಿತನೆ ಯುವತಿಯನ್ನೆ ಮಾಡಿದ
ಪತಿತಪಾವನ ನೀನಲ್ಲವೇನೊ ಹರಿಯೆ ೧
ನಾಕರಾಜನ ಸುತನು ಕಾಕರೂಪದಿ ಬಂದು
ಏಕಾಂತದೊಳು ಅವಿವೇಕವ ಮಾಡಲು
ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು
ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ ೨
ಮತ್ತು ಗಜೇಂದ್ರನಾಪತ್ತು ಪರಿಹರಿಸಿ
ಉತ್ತಮ ಪದವವಗಿತ್ತು ರಕ್ಷಿಸಿದೆ
ಭಕ್ತವತ್ಸಲ ಎನ್ನ ಕುತ್ತುಗಳನು ನೀ
ಚಿತ್ತಕೆ ತರದೇ ಸದ್ರ‍ವತ್ತನೆಂದೆನಿಸೈ ೩
ನೇತ್ರವೆಂಬುದು ನಾರಿಗಾತ್ರದೊಳಿರುವುದು
ಶ್ರೋತ್ರವು ಗೀತವ್ರಾತದೊಳಿಹುದು
ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ
ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ ೪
ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ
ಚರಣಕಮಲಯುಗ ಸ್ಮರಣೆಯ ಎನಗೆ
ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ
ಪರಮಪುರುಷ ದಿನಕರಕುಲತಿಲಕನೆ ೫

 

ಲಕ್ಷ್ಮೀ ದೇವಿ
೧೧೦
ಇಂದಿರೆ ನಾ ನಿನ್ನ ವಂದಿಸಿ ಬೇಡುವೆ
ಬಂದು ನೀ ಪಾಲಿಸೇ ಚಂದಿರವದನೆ ಪ

ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ
ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ
ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ
ಭಾವಿ ಫಣೇಶ ಸುರಾಧಿಪರೆಲ್ಲರು
ಈ ವಿಧವಾದನುಭಾವವ ಪೊಂದಿರಲು
ಈ ವಿಷಯಕೆ ಶ್ರುತಿ ಸಾವಿರವಿರುವುದೆ ೧
ಪನ್ನಗವೇಣಿಯೆ ನಿನ್ನನೆ ನಂಬಿರಲು
ಸಣ್ಣ ಮನುಜರ ವರ್ಣಿಪುದೇಕೆಲೆ
ಎನ್ನಪರಾಧವ ಮನ್ನಿಸಿ ಕೃಪೆಯನು
ಎನ್ನೊಳು ತೋರಲು ಧನ್ಯ ನಾನಾಗುವೆ ೨
ತಾಮರಸಾಕ್ಷಿಯೆ ನಾಮಗಿರೀಶ ಶ್ರೀ
ಸ್ವಾಮಿ ನೃಸಿಂಹನ ಕಾಮಿನೀಮಣಿಯೇ
ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ
ಧಾಮವ ಬಿಡದಿರೆ ಸೋಮ ಸಹೋದರಿ ೩

 

೯೬
ಇಂದಿರೇಶನೆ ಸುಂದರಾಂಗನೆ
ಮಂದಹಾಸದಿಂದ ಬೇಗ ಬಂದು ರಕ್ಷಿಸೈ ೧
ಮರೆಯಬೇಡವೊ ಸಿರಿಯ ಅರಸನೆ
ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ ೨
ರಂಗ ರಮಣನೆ ಭುಜಂಗಶಯನನೆ
ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ ೩
ಮಾರಜನಕನೆ ಉದಾರಚರಿತನೆ
ಭಾರವೇನೊ ದೀನಜನರುದ್ಧಾರ ಮಾಡುವುದು ೪
ನಾಮಗಿರೀಶನೆ ನಿಸ್ಸೀಮ ಮಹಿಮನೆ
ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ ೫

 

೯೭
ಇನಕುಲಪತಿ ಕರುಣಿಸೊ
ಸಲಹುವರನ್ಯರನರಿಯೆ ಪ
ತಾಪಸರಮಣಿಯ ಶಾಪವ ತಪ್ಪಿಸಿ
ಶ್ರೀಪತೆ ಕಾಯಲಿಲ್ಲವೆ ರಾಘವ ೧
ಧೀರ ಮಹಿತಪದ ನೀರಜ ಕರುಣೆಯ
ತೋರಿಸು ಗುಣಧಾಮನೆ ರಾಮನೆ ೨
ನಾಮಗಿರಿ ಶ್ರೀ ಸ್ವಾಮಿನೃಸಿಂಹನೆ
ನೇಮಿಸು ನಿನ್ನ ಸೇವನೆ ದೇವನೆ ೩

 

ಇದು ಒಂದು ದಶಾವತಾರ ಸ್ತುತಿ
೯೮
ಏನು ಪೇಳಲಿ ನಿನ್ನ ತನಯನ ಚರ್ಯವ
ಮಾನಿನಿಮಣಿಯೆ ಯಶೋದೆಯ ಕೇಳೆ ೧
ವಾರಿಧಿಯೊಳು ಪೊಕ್ಕು ವಿಹರಿಸುವನೆ ಮತ್ತು
ಭಾರಿಯಾದ ಕ್ಷಿತಿಧರೆಯನೆ ಹೊರುವನೆ ೨
ಕುಂಭಿಣಿಯನೆ ಅತಿ ಸಂಭ್ರಮದಲ್ಲಿ ತಂದು
ಸ್ತಂಭವ ಭೇದಿಸಿ ಸಂಭವಿ%