Categories
ರಚನೆಗಳು

ವೆಂಕಟವರದಾರ್ಯರು

(ಇ) ಆತ್ಮನಿವೇದನೆಯ ಕೃತಿಗಳು
೧೭೬
ಇದನಾದರು ಕೊಡದಿದ್ದರೆ ನಿನ್ನ
ಪದಸೇವೆಗೆ ಜನರೊದಗುವರೆ ಪ
ದೊರೆತನವಾಗಬೇಕೆನಲಿಲ್ಲ ಬಲು
ಸಿರಿತನವನು ವಾಂಛಿಸಲಿಲ್ಲ
ಪರಿಭೋಗದ ಸ್ರ‍ಪಹೆ ಎನಗಿಲ್ಲ ನಿನ್ನ
ಸ್ಮರಣೆಯೊಂದಿತ್ತರೆ ಸಾಕಲ್ಲ ೧
ಅನ್ನವಸ್ತ್ರವ ಕೇಳುವದಿಲ್ಲ ಒಳ್ಳೆ
ಚಿನ್ನ ಬಣ್ಣವ ಕೊಡು ಎನಲಿಲ್ಲ
ಹೆಣ್ಣು ಮಣ್ಣಿನೊಳಗಾಸೆ ಎನಗಿಲ್ಲ ಪರಿ
ಪೂರ್ಣ ನೀನೊಲಿದರೆ ಸಾಕಲ್ಲ ೨
ಸುರರ ಭೋಗದಿ ಮನವೆನಗಿಲ್ಲ ಪುಲಿ
ಗಿರಿದೊರೆ ಬಲ್ಲೆ ನೀನಿದನೆಲ್ಲ ೩

 

ಇವೆರಡೂ ಶ್ರೀವೈಷ್ಣವ ತತ್ವವಾದ
೨೧೦
ಈತನೀತನೆ ರಮಾನಿವಾಸನು ಕೇಳಿ ಜನರು
ಈತನೀಗ ಚಿದ್ವಿಲಾಸನು ಪ
ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ
ದಾತವೇದಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ
ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ
ಕರ್ಮಫಲಗಳನ್ನೆಕೊಟ್ಟು ಶಮನಪಡಿಸುವ
ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ
ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿತೇಲುತಿರುವ ೧
ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವ ರಾಜ್ಯ ಕರ್ತ
ಕಮಲಭವನ ಪಡೆದ ಹಿರಿಯನಮರರೊಡೆಯ
ಸುಮಶರನ ಪೆತ್ತ ಚೆಲುವನಮಲ ಗಂಗೆಯಿತ್ತು ನಲಿವ
ನಮರ ವೈರಿಗಳನು ಕೊಲುವ ಕಮಲನಾಭ ವಾಸುದೇವ೨
ಉರಗಶಯನ ಗರುಡಗಮನ ಪರಮಪದನುಳದು ಶೇಷ
ಗಿರಿಯೊಳಿರ್ದು ಬಂದ ವ್ಯಾಘ್ರಗಿರಿಯ ಶಿಖರಕೆ
ಭರದಿನಿತ್ಯಮುಕ್ತರೊಡನೆ ಕರದಿ ಶಂಕ ಚಕ್ರ ಪಿಡಿದು
ಕರುಣದಿಂದ ಚರಣ ಸೇವಕರನು ಪೊರೆವ ವರದ ವಿಠಲ ೩

 

ಶ್ರೀಹರಿಯನ್ನು ಪುರುಷಸೂಕ್ತದ
೧೪೬
ಎಂತುನುತಿಪೆ ನಾನು ಈ ಜಗದಂತರ್ಯಾಮಿಯನು ಪ
ಅಂತರಹಿತನನು ಚಿಂತಿಸಿ ಪದನಖದಂತೆ
ಪರಿಯವು ಸಂತತ ವಾಙ್ಮನ ಅ.ಪ
ಸಾಸಿರಮುಖದವನ ಅವಯವಸಾಸಿರವುಳ್ಳವನ
ಸಾಸಿರ ಪೆಸರವನ ರೂಪಸಾಸಿರವಾಗಿಹನ
ಮೀಸಲಳಿಯದಂತೀ ಸಚರಾಚರ
ವಾಸಿಯಾದ ಶ್ರೀ ವಾಸುದೇವನನು ೧
ಜಗವನು ನಿರ್ಮಿಸುವ ಬೊಮ್ಮನು ಮಗನೆಂದೆನಿಸಿರುವ
ಬಗೆಯುವಡೀ ಜಗವ ಜಠರದಿ ನುಸುಳಿಕೊಂಡಿರುವ
ಮಗುಳಿದನಳಿಯುವನಗಜಾಪರ
ಮ್ಮೊಗನೆಂಬುವರೀಯಗಣಿತ ಮಹಿಮನ ೨
ನಿಗಮವ ಪೆತ್ತವನ ಬೊಮ್ಮಗೆ ನಿಗಮವನಿತ್ತವನ
ನಿಗಮೋದ್ಧಾರಕನ ನಿತ್ಯದಿ ನಿಗಮಗೋಚರನ
ಬಗೆ ಬಗೆಯೋಗಿಗಳ ಧ್ಯಾನಕೆ ನುಗುಳಿದ
[ಸುಗುಣ]ಶ್ರೀಪದಯುಗಳಾಂಬುಜನನು ೩
ಮಾಯಾಧೀಶ್ವರನ ದೇವನಿಕಾಯಾರಾಧಿತನ
ಕಾಯಜ ಸುಂದರನಾ ಜೀವನಿಕಾಯಕೆ ಮಂದಿರನಾ
ಮಾಯಕಾರನಿವನಾಯವನರಿಯದೆ
ದಾಯಗೆಟ್ಟರನ್ಯಾಯದಿ ಮುನಿಗಳು ೪
ಪರಮಪದದೊಳಿಹನಾ ಪುನರಪಿ ತರಣಿಯೊಳಿರುತಿಹನ
ಶರನಿಧಿ ಮಂದಿರನಾ ಶ್ರೀಪುಲಿಗಿರಿಯೊಳು ನಿಂದಿಹನಾ
ನಿರುತವು ತನ್ನಯ ಚರಣವನಂಬಿದ ಶರಣರ
ಪೊರೆಯುವ ವರದವಿಠಲನ ನಾ ೫

 

ಇವೆರಡೂ ಶ್ರೀವೈಷ್ಣವ ತತ್ವವಾದ
೨೧೧
ಎಂತೋ ಪೂಜಿಪುದಂತರ್ಯಾಮಿಯನನಂತಾದಿರಹಿತನ
ಚಿಂತಾದೂರನ ಚಿನುಮಯರೂಪನನೆಂತೋ ಧ್ಯಾನಿಪುದು ಪ
ಈಶ ವೀಸ ವಾಹನಗೀಸನ ಚರಾಚರ ಮೀಸಲಿಗಳವಲ್ಲಾ
ಆಸನಿತ್ತರೆ ವಾಸುಕಿ ಭೋಗ ನಿವಾಸಿಗೆ ತರವಲ್ಲಾ ೧
ಚರಣದಿ ಗಂಗೆಯ ಧರಿಸಿತುವಾತನ ಚರಣವ ತೊಳೆಯುವರೇ
ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ ೨
ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ
ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ ೩
ಕಲಶಾಂಬುಧಿಯೊಳು ನೆಲೆಸಿಹ ಮೂರ್ತಿಗೆ ಸಲಿಲ ಸ್ವರ್ಶನವೆ
ಜಲರುಹ ನೇತ್ರಗೆ ಜಲರುಹಗಾತ್ರಗೆ ಜಲದಲಿ ಮಜ್ಜನವೆ ೪
ಸ್ವರ್ಣಾಂಬರಗಳ ಬಣ್ಣಿಸುತುಡುವಗೆ ಬಣ್ಣದ ವಸ್ತ್ರಗಳೆ
ಉನ್ನತ ಕೌಸ್ತುಭ ರನ್ನದ ತೊಡವಿಗೆ ಬಿನ್ನಣದೊಡವೆಗಳೆ ೫
ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂ ಪಡೆದವಗೆ
ಮಿಸುಪ ತುಲಸಿಯಿಂದೆಸೆವಗೆ ಪೂಗಳ ವಿಸರ ಮನೋಹರವೇ ೬
ಗಂಧವಾಹನ ಸುವಿಂದ ಅಸೃಜಿಸಿದ ಗಂಧವತೀತನಿಗೆ
ಗಂಧಧೂಪಗಳು ಬಂಧುರಂಗಳೆ ಗಂಧರ್ವಾತನಿಗೆ ೭
ವೇದಗೋಚರಿಸುವೇದಾತ್ಮಕನು ವೇದೋದ್ಧಾರಕನು
ವೇದವೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೇ ೮
ಕುತ್ತಿಗೆನೆನೆಯದ ವಸ್ತು ಪರಾತ್ಪರ ಪೊಕ್ಕರೆ ಜಲವನ್ನ
ನಿತ್ಯ ತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತು ಜನಾ ೯
ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ
ಮಂತ್ರಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ ೧೦
ಅಂತರ್ಬಹಿಯೊಳಗಂತರ ವಿಲ್ಲದನಂತರ ಗುಣಾತ್ಮಕನ
ಎಂತು ಪ್ರದಕ್ಷಿಣಿಯಾಂತು ನಮಿಪೆ ಜಗದಂತರೀಕನ ೧೧
ಸರ್ವಾಧಾರನ ಸರ್ವಶರೀರನ ಸರ್ವವ್ಯಾಪಕ ನಾ
ಸರ್ವನ ನಮಿಸುವ ಗರ್ವವೆಂತುಟೊ ಶಕ್ರ ಸಮಸ್ರ‍ಕತನಾ೧೨
ಧರೆಯೊಳು ಪುಲಿಗಿರಿವರದ ವಿಠಲನ ಚರಣವ ಭಜಿಸುವರ
ನಿರುತದಿ ಪೂಜಿಪ ಹರುಷವು ಸಾಲದೆ ಹರಿ ಸರ್ವೋತ್ತಮ ೧೩

 

ಜೀವ-ಪರಮಾತ್ಮನಿಗಿರುವ ಅಂತರವನ್ನು
೨೧೨
ಎನಗೆ ನಾನೇ ಸರಿ ನಿನಗೆ ನೀನೆ ಹರಿ
ಎಣೆಗಾಣೆನೀರ್ವರ್ಗೆ ವನಜನಯನ ಪ
ಧರೆಯನಾಳುವ ಸಿರಿಯರಸ ನೀನು ಈ
ಧರೆಯೊಳು ನಿರ್ಭಾಗ್ಯರೆರೆಯನಾನು ೧
ಪರಮೇಷ್ಠಿಯನು ಪಡೆದ ಪರಮ ನೀನು ಬಲು
ದುರಿತಂಗಳಪ್ಪಿದ ದುರುಳನು ನಾನು ೨
ಪುಣ್ಯವಂತರ ಹೃದಯ ಗಣ್ಯನೀಯ ಕೃತ-
ಪುಣ್ಯಹೀನಗರಿಗ್ರಗಣ್ಯ ನಾನು ೩
ಪತಿತಪಾವನ ನೀನು ಪತಿತ ನಾನು
[ನುತ]ದಾತ ನೀನು ನಿರ್ಗತಿಕ ನಾನು ೪
ವರ ವ್ಯಾಘ್ರಗಿರಿಯ ವರದ ವಿಠಲ ನೀನು ನಿಜ-
ಶರಣರ ಚರಣ ಧೂಳಿಪಟಲ ನಾನು ೫

 

ಸಮಾಜದಲ್ಲಿರುವ ಜಾತಿ-ಧರ್ಮ-ಶೀಲಗಳನ್ನು
(ಈ) ಲೋಕನೀತಿಯನ್ನು ಕುರಿತ ಕೃತಿಗಳು
೨೦೪
ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ
ಮಾನಿತ ಜನರವಮಾನವ ನೋಡದೆ
ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ
ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ
ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ
ನೀತಿಯನರಿಯದ ಕೋತಿಗಳಂದದ
ಜಾತಿಯ ಜನರೊಳು ಮಾತಿನವಾಶಿಯಿಲ್ಲ ೧
ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು
ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು
ಈ ಜಗದೊಳಗಿಹ ಸಜ್ಜನರಗಿಎ ಕುಲ
ಕಜ್ಜಳರವಮತಿಗುಜ್ಜುಗಿಸುತ್ತಿಹ ೨
ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು
ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು
ಭಂಡತನದಿ ಪರಗಂಡಸರೊಳು ಸಮ-
ದಂಡೆಯೆನಿಸಿ ಬಲು ಚಂಡಿಸುತಿರ್ಪರೋ ೩
ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು
ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು
ಕಾಳಮೂಳಿಯರ ಮೇಳದಿ ಹಿಗ್ಗುವ
ಬಾಳುಗೇಡಿ ಜನರೊಳಿಗ ಬಲುಘನ ೪
ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ
ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ
ಶರಣಾಭರಣ ನಿಜಕರುಣವ ತೋರಿಸು
ವರದವಿಠಲ ದೊರೆ ವರದದಯಾನಿಧೆ ೫

 

(೧) ನಿಂದಾಸ್ತುತಿಗಳು
೨೦೧
ಏನುಂಟು ನಿನ್ನೊಳಗೆ ನಾ ಬೇಡಲು
ಏನು ಕೊಡುವೆ ಎನಗೆ ಪ
ಶ್ರೀನಿವಾಸನೇ ಬಲು ದೀನನೊಳವಲಕ್ಕಿ
ಯೆನೇಂದು ಬೇಡಿದೆ ಮಾನವ ನೋಡದೆ ಅ.ಪ
ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ
ತಿರುಕ ಹಾರುವನಿಗೆ ಗುರಿಮಾಡಿದೆ
ಸಿರಿಯನು ರಜಕನ ಪರಿವಾರದಿ ಬಿಟ್ಟು
ಗರಳ ಹಾಸಿನೊಳೊರಗಿದೆ ಕೃಷ್ಣ ೧
ಧನಕನಕಂಗಳು ನಿನಗಿರೆ ಸತ್ರಾಜಿ
ತನ ಮಣಿಯನು ನೀಗಣಿಸುವೆಯಾ
ಅನುವಾದ ಮನೆಯಿರೆ ಮುನಿಮನವೇತಕೆ
ಮನೆವಾರ್ತೆಯುಳ್ಳರೆ ವನವಾಸಬೇಕೆ ೨
ಕಾಮಧೇನುವು ಕಲ್ಪನಾಮಕ ತರುವು ಚಿಂ
ತಾಮಣಿಗಳನು ಸುತ್ರಾಮಗಿತ್ತು
ಗೋಮಯರಸಗಳ ಕಾಮಿಸಿ ಕದ್ದು ನೀ
ದಾಮೋದರನಾದೆ ತಾಮರಸಾಕ್ಷ ೩
ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ
ಜಾತಿ ನೋಡದೆ ಜಾಂಬವತಿಗೂಡಿದೆ
ನೀತಿಯ ನೋಡದೆ ಕೋತಿಯೊಳಾಡಿದೆ
ಮಾತು ನೋಡದೆ ಬರಿ ಮಾಯೆಯ ಪಿಡಿದೆ ೪
ಗತಿಹೀನರಿಗೆ ವರ ಗತಿಯ ತೋರಿಪನಾಮ
ಸ್ರ‍ಮತಿಯೊಂದಿತ್ತರೆ ಸಾಕೆನಗೆ
ಅತಿಶಯವಿದು ಎನ್ನ ಮತಿಯೊಳು ನಿನ್ನಯ
ರತಿಯನ್ನು ಪಾಲಿಸು ವರದವಿಠಲರಾಮ ೫

 

(ಅ) ಶ್ರೀಹರಿಸ್ತುತಿಗಳು
೧೨೯
ಕಣ್ಣಾರೆ ಕಂಡೆನವ್ಯಯನ ಕೃತಪುಣ್ಯರ
ಮಾನಸಗಣ್ಯ ಚಿನ್ಮಯನ ಪ
ನೀಲಮೇಘಶ್ಯಾಮಲನ ಮಣಿಜಾಲರಂಜಿತ
ವನಮಾಲಿಕಾಗಳನ
ಫಾಲದಿ ತಿಲಕವೊಪ್ಪಿಹನ ಹೇಮಚೇಲದಿ
ಮಿಂಚನು ಸೋಲಿಸುತಿಹನ ೧
ಪಂಕಜಪತ್ರಲೋಚನನ ನಿಜಕಿಂಕರ
ಹೃದಯಾತಂಕಮೋಚನನ
ಶಂಖ ರಥಾಂಗಾಚಿತನ ಮಕರಾಂಕ
ಜನನೀ ಕುಚಕುಂಕುಮಾಂಕಿತನ ೨
ಬೃಂದಾರಕ ಪರಿವೃತನ ಶ್ರಿತಮಂದಾರನ
ಗುಣವೃಂದಪೂರಿತನ
ಇಂದಿರಾ ಹೃದಯಮಂದಿರನ ಮುನಿವೃಂದ
ಚಕೋರಾನಂದ ಚಂದಿರನ ೩
ಮಕರಕುಂಡಲ ಮಂಡಿತನ ಮಣಿಮಕುಟಾದಿ
ಭೂಷಣನಿಕರ ಭೂಷಿತನ
ಪ್ರಕಟಿತ ನಿಜಮಾಯಕನ ಸೇವಕರಿಗೆ
ನಿತ್ಯದಿ ಸುಖದಾಯಕನ ೪
ಕರುಣದಖನಿಯೆನಿಸುವನ ನಿಜ ಚರಣವೆ
ಶರಣೆಂದು ಕರದಿ ತೋರುವನ
ಧರಣೀನೀಳೆಯರಿಹ ಕೆಲನ ಪುಲಿಗಿರಿಯೊಳು
ನೆಲಸಿಹ ವರದವಿಠಲನ ೫

 

೧೭೭
ಕನಸಿನಲಿ ಕಂಡೆನಾ ಶ್ರೀನಿವಾಸನ ಧ್ಯಾನಗೈವಮುನಿ
ಮಾನಸದಲಿ ನಿಧಾನಿಸಿ ನೋಡಲು ಕಾಣದಾತನ ಪ
ಶರದಾಭಗಾತ್ರನ ಶಂಪಾಭೋಜ್ವಲ
ಕರಪೀತವಸ್ತ್ರನ ಸಾರಸಾಕ್ಷನ
ಶರದಿಂದುವಕ್ತ್ರನ ಸಿರಿಯನುರದಿ ತಾನಿರಿಸಿ
ಕರಗಳಿಂ [ಶಂಖ] ಚಕ್ರಗಳನು ಧರಿಸಿರ್ಪಾತನ ೧
ಕಾಮನಂ ಪೆತ್ತನ ಕಾಕುತ್ಸ್ಥನಿಗೆ
ಕಾಮಿತವಿತ್ತನ ಕೌಸ್ತುಭಮಣಿ ಪೊತ್ತನ
ಹೇಮಸೂತ್ರಮಣಿಧಾಮಭೂಷಣ
ಸ್ತೋಮ ದಿವ್ಯಗುಣರಾಮಣೀಯನ ೨
ಸುರವೃಂದಾನಂದದಿ ಸ್ತುತಿಸುತ್ತ ತೂರ್ಯಾರವದಿ
ಬರುತಿರೆ ಸಿತ ಛತ್ರಾದ್ಯುರುತರ ರಾಜಚಿಹ್ನದಿ
ಗರುಡನೇರಿ ನಿಜ ಶರಣರ ಪೊರೆಯುವ
ವರದಪುಲಿಗಿರಿ ವರದವಿಠಲನ ೩

 

೧೭೯
ಕರುಣದಿ ಕಾಯೊ ಕರುಣದಿ ಕಾಯೊ ಕಮಲನಯನ ಎನ್ನ ಪ
ಪರಮಪುರುಷ ಹರೆ ಸರಸಿಜನಾಭನೆ ಅ.ಪ
ನೀನೆ ತಂದೆಯು ಎಂದು ಜ್ಞಾನದಿಂದಲಿ ಬಂದು
ಧ್ಯಾನಿಸುವೆನು ಈಗ ೧
ತಾಯಿ ನೀನೇಯೆಂದು ಬಾಯಿಗೆ ಬಂದಂತೆ
ಜೀಯ ನಿನ್ನನು ನೆನೆವೆ ೨
ಜಗದೊಳಗೆಲ್ಲ ನೀನೆ ಸುಗುಣ ಶೀಲನು ಎಂದು
ಮುಗಿಲು ಮುಟ್ಟುತಲಿದೆ೩
ಸಂಗತಶ್ರಮವನು ಭಂಗವಗೈದ ಭು-
ಜಂಗ ಗಿರಿಯ ವಾಸ ೪
ಲೀಲೆಯಿಂದಲಿ ವ್ಯಾಘ್ರಶೈಲದಲಿರುವ ಶ್ರೀ
ಲೋಲ ವರದವಿಠಲ ೫

 

೧೭೮
ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ
ಕರುಣದಿ ಕಾಯೋ ಎನ್ನ ಪ
ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ
ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ
ಕರ್ಮತಂತ್ರವನುಳಿದು ಕಾಮಿಸಿ ಮ£ವ
ನಿರ್ಮಲತ್ವವ ತೊರೆದು
ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು
ಹೊಮ್ಮುತಿದೆ ಪರಬೊಮ್ಮ ಮೂರುತಿ ೧
ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು
ಮಾನಸಪೂಜಾ ವಿಧಾನವನರಿಯದೆ
ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ೨
ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ
ಸರಸಿಜ ಸಂಭವ ಪುರಹರ ಸನ್ನುತ ಚರಿತಪೂರಿತ
ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ ೩

 

೧೩೦
ಕರುಣದಿ ಕಾಯೋ ಕರುಣಾಲವಾಲ ಪ
ಸಿರಿಯರಸನೆ ನಿನ್ನ ಚರಣವ ನಂಬಿದೆ
ಸುರಗಣ ಸೇವಿತ ಸುರರಾಜಪಾಲ ಅ.ಪ
ಇಂದ್ರನಕೂಡಿ ಮುನೀಂದ್ರನ ಸತಿಶಾಪ
ದಿಂದರೆಯಾಗಿರಲಂದು ನೀ ದಯದಿ
ಸುಂದರ ಚರಣಾರವಿಂದಗಳಿತ್ತ ಧೂಳಿ
ಯಿಂದ ಪಾವನಗೈದ ಇಂದಿರೇಶನೆ ನೀ ೧
ನಕ್ರಮುಖದಲ್ಲಿ ಸಿಕ್ಕಿದ ಕರಿಕುಲ
ಚಕ್ರವರ್ತಿಯು ಮರೆಹೊಕ್ಕರೆ ನುತಿಸಿ
ಚಕ್ರದಿ ಮಕರಿಯನಿಕ್ಕಿ ಗಜೇಂದ್ರನ
ರಕ್ಷಿಸಿದಾಪರಿಯಕ್ಕರೆ ತೋರಿಸಿ ೨
ತರಣಿತನಯ ಫಣಿವರ ಶರವನು ನರವರ
ಶಿರಸರಿಸಕ್ಕೆ ಗುರಿಯಿಡಲು
ಚರಣದುಂಗುಟದಿಂದ ಧರಣಿಯನೂರಿ
ನರನ ಶಿರವುಳುಹಿದ ಸಿರಿವರದವಿಠಲ ಹರಿ೩

 

ಇದು ಹರಿಏಕನಿಷ್ಠೆಯನ್ನು
೧೮೦
ಕರುಣದಿ ರಕ್ಷಿಸು ಎನ್ನನು ಪುಲಿ
ಗಿರಿಲೋಲ ನಂಬಿದೆ ನಿನ್ನನು ಪ
ಕರುಣದಿ ರಕ್ಷಿಸು ಚರಣಸೇವಕಭಯ
ಹರಣ ಸೌಖ್ಯ ವಿತರಣ ನಿನ್ನಯ
ಚರಣಯುಗಳದಿ ಶರಣು ಹೊಕ್ಕೆನು ಅ.ಪ
ಯತಿಗಣ ನೇಮವನರಿಯದ ಸ್ವರ
ಗತಿ ತಾಳ ಲಯ ಬಂಧ ತಿಳಿಯದ
ಶ್ರುತಿನುತ ನಿಮ್ಮನು ಪೊಗಳದ ನಿಮ್ಮ
ಶ್ರುತಿಗಳ ಮಹಿಮೆಯ ಕೇಳದ
ಮತಿಹೀನನಾದೆನ್ನ ಮತಿಗೆ ಗೋಚರನಾಗಿ
ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು
ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ
ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ
ಗತಿಮತಿಗಳೇನೇನು ಅರಿಯದ
ಪತಿತನೆನ್ನನು ಭವಜಲಧಿ ಮಧ್ಯದಿ ೧
ಕುರುರಾಯ ಕೌರವ ಸಭೆಯಲಿ ಭೀಷ್ಮ
ಗುರುದ್ರೋಣ ಕೃಪರ ಮುಂದಡೆಯಲ್ಲಿ
ಧುರಧೀರ ಪಾಂಡವರಿದಿರಲ್ಲಿ ಬಲು
ದುರುಳ ದುಶ್ಯಾಸನನ ಕೈಯಲ್ಲಿ
ತರುಣಿ ಪಾಂಚಾಲಿಯ ಕರೆಸಿ ಸೀರೆಯ ಸೆಳೆದು
ಕರೆಕರೆ ಪಡಿಸಲೆಂದೆನುತಲುಜ್ಜುಗಿಸಲು
ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ
ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ
ತರುಣಿಗಕ್ಷಯವಸನವಿತ್ತಾ
ಶರಣಜನ ಸಂಸಾರ ಶ್ರೀಹರಿ ೨
ಕರಿರಾಜ ನಕ್ರನ ಬಾಯೊಳು ಸಿಲುಕಿ
ನರಳಿ ಸಾವಿರವರುಷ ಜಲದೊಳು
ಶರಣರ ಕಾಣದೆ ಜಗದೊಳು ನಿನ್ನ
ಸ್ಮರಣೆ ಮಾಡುತ ದೃಢಮನದೊಳು
ಪರಮಪುರುಷ ಪುರುಷೋತ್ತಮ ನಿರುಪಮ
ಪರಮೇಶವಂದ್ಯ ಪರಾತ್ಪರ ಪುಲಿಗಿರಿ
ದೊರೆಯೆ ಕರುಣಿಸೆನ್ನುತ ಕರಿ ಮೊರೆಯಿಡಲಾ
ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ
ಕರದಚಕ್ರದಿ ಸೀಳಿ ನಕ್ರನ
ಕರಿಯಪೊರೆದಾ ವರದವಿಠಲ ೩

 

೧೬೧
(ಈ) ಶ್ರೀನಿವಾಸಸ್ತುತಿಗಳು
ಕಲಯಾಮಿ ಶ್ರೀನಿವಾಸಂ ಕಲಭಾಷಮಿಂದುಹಾಸಂ ಪ
ಕಮನೀಯ ಹೇಮಚೇಲಂ ಕಮಲಾಲಯಾನುಕೂಲಂ
ಕಮಲಾಭಿರಾಮ ಮಾಲಂ ೧
ಸುಮಬಾಣ ಸುಂದರಾಂಗಂ ಸುಮನಾರ್ಪಿತಾಂತರಂಗಂ
ನಮದಾರ್ತಿಸಂಗಭಂಗಂ ೨
ಜಲಜಾಪ್ತಪತ್ರ ನೇತ್ರಂ ಜಲದೋಪಮಾನಗಾತ್ರಂ
ಜಲಜಾಪ್ತಪುತ್ರಮಿತ್ರಂ ೩
ಕುಂದೋಪಮಾನರದನಂ ಚಂದ್ರೋಪಮಾನವದನಂ
ಬೃಂದಾರಕಾರಿದಮನಂ ೪
ಅಜವಂದ್ಯ ಚರಣಕಮಲಂ ನಿಜಸೌಖ್ಯ ಕರಣಕುಶಲಂ
ಭಜನೀಯ ವರದವಿಠಲಂ ೫

 

೧೩೧
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ
ಸುಲಲಿತ ಕರಧೃತ ಧರರಥಚರಣಂ
ಕಲಿಕಲಹಾಪಹ ಕಮನೀಯ ಚರಣಂ ಅ.ಪ
ಮಸ್ತಕ ನಿಹಿತ ಮಹಾರ್ಹ ಕಿರೀಟಂ
ಕಸ್ತೂರೀ ತಿಲಕಿತ ದಿವ್ಯಲಲಾಟಂ
ನಿಸ್ತುಲ ಮದಮಾಂಚಿತ ಜೂಟಂ
ಕೌಸ್ತುಭ ಶೋಭಿತ ಮಣಿಸರ ಕೂಟಂ ೧
ಸುಮಶರಕೋಟಿ ಮನೋಹರ ವೇಷಂ
ಕಮಲಾಸಖ ಭಾ ಭರಣ ವಿಭೂಷಂ
ಸುಮಹಿತಭಣಿತ ಸದೃಶ ಮಂಜುಭಾಷಂ
ವಿಮಲಹೃದಯ ಸೇವಕ ಪೋಷಂ ೨
ಶ್ರೀರಮಣೀಪರಿಶೋಭಿತಗಾತ್ರಂ
ವಾರಿಜಭವಕೃತ ವಿವಿಧ ಸ್ತೋತ್ರಂ
ಸಾರಸದಳ ವಿಸ್ತಾರ ಸುನೇತ್ರಂ
ನಾರದಮುನಿಕೃತ ಪೂಜಾಪಾತ್ರಂ ೩
ಶರದಿಂದುಮಂಡಲ ಸುಂದರವದನಂ
ವರಕುಂದಕುಟ್ಮಲ ಸನ್ನಿಭ ರದನಂ
ಕರಸಂದರ್ಶಿತ ವೈಕುಂಠಸದನಂ
ತರುಣ ತರಣಿ ಘೃಣಿ ರುಚಿದಂತ ಹಸನಂ ೪
ತುರುಣ ಶ್ರೀತುಳಸೀ ಶೋಭಿತಮಾಲಂ
ಸರಸಿಜಗರ್ಭರುಚಿರ ದಿವ್ಯಚೇಲಂ
ವರವ್ಯಾಘ್ರಭೂಧರ ವಿಹರಣಶೀಲಂ
ವರವಿಠಲಮಖಿಲಾಗಮ ಪಾಲಂ ೫

 

೧೮೧
ಕೊಡುಕೊಡು ವರವನು ತಡವು ಮಾಡದೆ ಎ
ನ್ನೊಡೆಯ ಶ್ರೀಹರಿ ಕೃಪೆ ಮಾಡಯ್ಯ ಪ
ಬಿಡದಿರೆನ್ನನು ಜಗದೊಡತಿಯಾಣೆ ನಿ
ನ್ನಡಿಗಳನೆಂದಿಗೂ ಬಿಡೆನಯ್ಯಾ ಅ.ಪ
ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀ
ಪತಿ ನೀಗತಿ ಎನುತಿಹೆನಯ್ಯ
ರತಿಪತಿಪಿತನೆ ಸುಮತಿಯನು ಪಾಲಿಸಿ
ಗತಿಯನು ತೋರಿಪುದೆನಗಯ್ಯ೧
ನಿನ್ನ ಪದವ ನಂಬಿ ನಿನ್ನವನೆನಿಸಿದ
ಎನ್ನನುಪೇಕ್ಷಿಪರೇನಯ್ಯ
ಸನ್ನುತ ನಿನ್ನನು ಮನ್ನಿಸಿ ಕೇಳುವ
ಬಿನ್ನಪವಿನಿತೆ ಕೇಳಯ್ಯ ೨
ಎಲ್ಲರ ಹೃದಯದೊಳಲ್ಲಿ ನೆಲೆಸಿರುವ
ಫುಲ್ಲನಯನ ನೀ ಪೇಳಯ್ಯ
ಕಲ್ಲುಮನದಿ ನೀನೊಲ್ಲದೊಡೀ ಜಗ
ದಲ್ಲಿ ಪೋಪುದಿನ್ನೆಲ್ಲಯ್ಯ ೩
ಪತಿಯಗಲಿದ ಪತಿವ್ರತೆಗೆ ಇತರರಲಿ
ರತಿ ಸಂಜನಿಸುವದೇನಯ್ಯ
ಗತಿಪತಿಯೆಲ್ಲರಪತಿ ನೀನೆನ್ನುತ
ಶ್ರುತಿನುತಿಪುದು ಪುಸಿಯೇನಯ್ಯ ೪
ಜಗದೊಳು ನಿನ್ನನೆ ಸುಗುಣಿಯು ಎನ್ನುತ
ನಿಗಮವು ಪೊಗಳುತಲಿಹುದಯ್ಯ
ಖಗಪತಿಗಮನನೆ ಬಗೆ ಬಗೆಯಲಿ ರತಿ
ಸೊಗಯಿಸು ನಿನ್ನೊಳು ಎನಗಯ್ಯ ೫
ಸೃಷ್ಟಿನಾಥಪದ ವಿಷ್ಟರ ಭಕ್ತಿಯ
ಕೊಟ್ಟರಭೀಷ್ಟವು ಎನಗಯ್ಯ
ಇಷ್ಟರ ಮೇಲಿನ್ನು ಲಕ್ಷ ಕೊಟ್ಟರೂ ಎನ
ಗಿಷ್ಟವಲ್ಲ ಶ್ರೀ ಕೃಷ್ಣಯ್ಯ ೬
ಚರಣಕಮಲದೊಳಗೆರಗುವೆ ಪುಲಿಗಿರಿ
ವರದವಿಠಲ ದಯೆಯಿರಿಸಯ್ಯ
ಚರಣಶರಣನಿಗೆ ಕರುಣಿಸದಿದ್ದರೆ
ಕರುಣಿಗಳರಸರಿನ್ನಾರಯ್ಯ ೭

 

೧೮೨
ಕ್ಷಮಿಸೆನ್ನ ದೋಷಗಳ ಕ್ಷಿಪ್ರದಿ ಹರಿ ಪ
ಕ್ಷಮೆಯನ್ನು ಧರಿಸಿದ ಕಮಲಾನಿವಾಸನೆ ಅ.ಪ
ಕರಣತ್ರಯದಿಕಾಲಹರಣವಿಲ್ಲದೆ ಪಾಪಾ
ಚರಣೆಯಿಂ ದೋಷದ ಭರಣಿಯಾದೆನು ಹರಿ ೧
ಮಾಡಬಾರದ ಪಾಪ ಮಾಡುವೆನನುದಿನಸ
ಮೂಢನ ಸುಕೃತವನಾಡಿ ತೋರಿಸಲೇಕೆ ೨
ಹರಿಗುರುಹಿರಿಯರ ಜರಿದು ಸಜ್ಜನರನು
ತೊರೆದು ದುರ್ಜನರೊಳು ಬೆರೆದು ಪಾಮರನಾದೆ೩
ಸರ್ವಸಹಾಧಿಪ ಸರ್ವಚೇತನದೀಪ
ಸರ್ವಾಪರಾಧವ ನಿರ್ವಹಿಸುವ ಭೂಪ ೪
ದುರಿತವೈರಿಯೆ ನಿನ್ನ ಮರೆಹೊಕ್ಕ ಮನುಜಗೆ
ದುರಿತ ದುಃಖಗಳುಂಟೆ ವರದವಿಠಲರಾಯ ೫

 

೧೩೨
ಚಿಂತಿಸು ಮನವೆ ಶ್ರೀಹರಿಯ ನಿ-
ಶ್ಚಿಂತೆಯೊಳಗೆ ಪುಲಿಗಿರಿದೊರೆಯ ಪ
ಶ್ರೀರಮಣೀ ನಿಜವಲ್ಲಭನ
ಮಾರ ಚತುರ್ಮುಖರಿಗೆ ಪಿತನ
ನಾರದ ಶರ್ವ ಪಿತಾಮಹನ ಮದ
ವಾರಣಮುಖ ಪ್ರಪಿತಾಮಹನ ೧
ಉರದಲ್ಲಿ ಸಿರಿಯನ್ನು ಧರಿಸಿಹನ
ನಿಜಶಿರದಿ ಕೀರಿಟವನಿರಿಸಿಹನ
ಕರದಲ್ಲಿ ಚಕ್ರವ ಪಿಡಿದಿಹನಾ
ನಿಜಕರುಣದಿ ಭಕ್ತರಿಗೊಲಿದಿಹನ ೨
ನೀಲಜಲದಸಮ ವಿಗ್ರಹನ ವನ
ಮಾಲೆಯ ಕೊರಳೊಳು ಪೊತ್ತಿಹನ
ಬಾಲಕ ಸುಕೃತಾನುಗ್ರಹನ ನಿಜ
ಲೀಲೆಯೊಳಾಸುರ ನಿಗ್ರಹನ ೩
ಅಂಗಜನಿಭ ಸುಂದರನ ಸುರ
ಗಂಗೆಯ ಪಡೆದ ಪಾದಾಂಬುಜನ
ತುಂಗ ವಿಹಂಗಮ ರಂಗಮನ ಶುಭ
ಮಂಗಳ ಗುಣಗಣ ಸಂಗತನ ೪
ಸರಸಜಸನ್ನಿಭಲೋಚನನ ನಿಜ
ಶರಣರ ಭವಭಯ ಮೋಚನನ
ವರವ್ಯಾಘ್ರಾಚಲ ನಾಯಕನ ನಮ್ಮ
ವರದ ವಿಠಲ ವರದಾಯಕನ ೫

 

೧೫೫
(ಇ) ಶ್ರೀಕೃಷ್ಣಸ್ತುತಿಗಳು
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ
ಜಯ ವಿನುತ ವಾಣೀಶ ಜಯಣೀಶ ಜಯ ಜಯ ಪ
ಕಮಲಭವನುತಿಪಾತ್ರ ಕಮಲಸಖನಿಭಗಾತ್ರ
ಕಮಲರಿಪುಸಮವಕ್ತ್ರ ಕಮಲದಳನೇತ್ರ
ಕಮಲಕರಧೃತಗೋತ್ರ ಕಮನೀಯ ಸುಚರಿತ್ರ
ಕಮಲಾರಿಧರಮಿತ್ರ ಕಮಲಾಕಲತ್ರ ೧
ನಂದಗೋಪಕುಮಾರ ನವನೀತದಧಿಚೋರ
ಸುಂದರೀ ಕುಲಜಾರ ಸ್ಮರಸಮರ ಶೂರ
ಕಂದರ್ಪಸಹಕಾರ ಕಾಮಿನೀವಾರ
ಬೃಂದಾವನವಿಹಾರ ಭಕ್ತ ಮಂದಾರ ೨
ಧರಣೀಧರಾಸ್ಫಾಲ ಮನಕರ ನಿಜಲೀಲ
ನರಪೌತ್ರ ಪರಿಪಾಲ ನವ್ಯವನಮಾಲಾ
ಮುರನರಕ ಶಿಶುಪಾಲ ಮುಖದನುಜ ಕುಲಕಾಲ
ವರವ್ಯಾಘ್ರಗಿರಿಲೋಲ ವರದಾರ್ಯವಿಠಲ ೩

 

ಈ ಶರೀರದ ಮೇಲಿನ ವ್ಯಾಮೋಹವನ್ನು
೧೮೩
ತನುವೆನ್ನದು ಚೇತನವೆನ್ನದು ಎಂದು
ಅನುದಿನ ಪೋಷಣೆಯನು ಮಾಡಿದೆ ಹರಿ ಪ
ಚಿನುಮಯ ನಿನ್ನನು ನೆನೆವೆನೆಂದರೆ ಮನ
ತನುಮಧ್ಯೆಯರ ತನುವಿನೊಳಿರುತಿಹುದು
ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ
ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ೧
ಚರಣದ ಪೂಜೆಯೊಳಿರುವೆನೆಂದರೆ
ಕರವರೆಡು ಕೋಮಲೆಯರನರಸುವುವು
ಹರಿಕಥಾಶ್ರವಣದೊಳಿರೆ ಈ ಕಿವಿಗಳು
ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ ೨
ದುರಿತದೂರನ ನಾಮ ಸ್ಮರಿಸದು ನಾಲಿಗೆ
ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು
ಚರಣಶ್ರೀತುಳಸಿಯನರಿಯದೆ ನಾಸಿಕ
ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ ೩
ನಿನ್ನಂಘ್ರಿಗೆರಗದೆ ಕುನ್ನಿಶರೀರವಿ
ದುನ್ನುತಸ್ತನವುಳ್ಳ ಕನ್ನೆಯರೊಳ್
ತನ್ನ ಸುರತಸುಖವನೆ ಚಿಂತಿಸುವದು
ಎನ್ನಾಧೀನದೊಳಿಲ್ಲ ನೀನೆ ಬಲ್ಲೆ ೪
ಎರವಿನ ಸಿರಿಯಂತೆ ಕರಣಕಳೇವರ
ಬರಿದೆ ನನ್ನದು ಎಂದು ಮೆರೆದೆ ನಾನು
ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ
ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ ೫

 

೧೫೨
ತವದಾಸೋಹಂ ತವದಾಸೋಹಂ
ತವದಾಸೋಹಂ ದಾಶರಥೆ ಪ
ದಶರಥಪುತ್ರಾ ಪಶುಪತಿ ಮಿತ್ರ
ಶಶಿರವಿನೇತ್ರಾ ದಾಶರಥೆ ೧
ವಿಧೃತಕೋದಂಡ ವಿಪುಲದೋರ್ದಂಡ
ಕದನಪ್ರಚಂಡ ದಾಶರಥೆ ೨
ತಾಟಕಾಹನನ ತಾಡಿತ ಕುಜನ
ಹಾಟಕವಸನಾ ದಾಶರಥೆ ೩
ಮನಸಿಜ ವೇಷ ಮಂಜುಳ ಭಾಷ
ಮನುಜವಿಶೇಷ ದಾಶರಥೆ ೪
ಶರದಾಭಗಾತ್ರ ಶರನಿಧಿಯಾತ್ರಾ
ಕರಧೃತಗೋತ್ರ ದಾಶರಥೆ ೫
ರಾವಣಹರಣ ಪಾವನಚರಣ
ಶ್ರೀವಧೂರಮಣ ದಾಶರಥೆ ೬
ರಕ್ಷಿತಲೋಕ ರಚಿತಸುಶ್ಲೋಕ
ಶಿಕ್ಷಿತಕಾಕ ದಾಶರಥೆ ೭
ವ್ಯಾಘ್ರಾಘಶಮನ ವ್ಯಾಘ್ರಾರಿಗಮನ
ವ್ಯಾಘ್ರಾದ್ರಿಸದನ ದಾಶರಥೆ ೮
ಪರಿಹೃತಕುಟಿಲ ಸರಸಿಜನಿಟಿಲ
ವರದಾರ್ಯವಿಠಲ ದಾಶರಥೆ ೯

 

ತಿಗಣೆಯ ಕಾಟವನ್ನು
೨೦೫
ತಿಗಣೆಯ ಕಾಟವೆ ಕಾಟ ಚೆಲ್ವ
ಸುಗುಣೆಯ ಕೂಟವೆ ಕೂಟ ಪ
ಹಗಲಿರುಳೆನ್ನದೆ ಬಗೆ ಬಗೆ ರತಿಯೊಳು
ಸೊಗಯಿಸಿ ದೇಹ ಧಾತುಗಳನು ಕೆಡಿಸುವ ಅ.ಪ
ಮನೆಯೊಳು ತಿಗಣೆಯು ಹೆಚ್ಚಿತು
ಮನಸಿಜ ವಸ್ತ್ರಕೆ ಮನಸೋತ ಕಾಮುಕ ಜನದಂತೆ ನಿಶಿಯೊಳ
ಗನುದಿನ ಬಾಧಿಪ ೧
ಗೋಡೆ ಕಂಬಗಳ ಸಂದುಗಳಲಿ ಮನೆ
ಮಾಡಿ ಹಾಸಿಗೆ ಮಂಚಾದಿಗಳಲಿ
ರೂಢಿಸಿ ಕಾಮಿನಿ ಕೂಡುವ ತೆರದೊಳೋ
ಲಾಡಿ ಶರೀರದ ನಾಡಿಯ ನಿಲ್ಲಿಸುವ ೨
ಸದ್ದಡಗಲು ಜತೆಗೂಡುತ ಸುಖ
ನಿದ್ರೆಯ ಸಮಯವ ನೋಡುತ
ಹೊದ್ದಿ ಸಮೀಪದ ಮುಗ್ದೆಯರಂದದಿ
ಮುದ್ದಾಡುತ ನಮ್ಮ ನೊದ್ದಾಡಿಸುತಿಹ ೩
ಹೆಗಲಿನ ಮೂಲದೊಳೇರಿ ನಮ್ಮ
ಬಗಲಿನ ಸಂಧಿಗೆ ಸೇರಿ
ತೊಗಲಿನ ನರಕ್ಕೆ ತಗಲೆ ನಿದ್ರೆಯ
ನಗಲಿಸಿ ಬೇಗದಿನುಸುಳಿ ಕದ್ದೋಡುವ೪
ಚಿಗಟದ ಹಿಂದೊಡಗೂಡಿ ನಮ್ಮ
ತೊಗಟೆ ರಕ್ತದ ಸುವಿನೋಡಿ
ತೆಗಟೆಯ ಸಂಧಿಸಿ ಚಿಗಟದ ಪರಿಯಲಿ
ಬುಗುಟೆದ್ದ ಗಾಯವ ವಿಗಟವ ಮಾಡುವ ೫
ನೋಟಕ ನೀನಾಗಬಹುದೆ ಕಪಟ
ನಾಟಕಧಾರನೆ ಬರಿದೆ
ಕಾಟಕರ್ಮದ ನಿಸರ್ಗದಲ್ಲಿನ ಬಲು
ಕೋಟಲೆಯುಂಬೆ ನಿನ್ನ ಕೂಟದ ಜನರಿಗೆ ೬
ದುರಿತ ಕೋಲಾಹಲನೆಂದೆ ನಿನ್ನ
ಬಿರುದನು ಪೊಗಳುತ ನಿಂದೆ
ಧರೆಯೊಳುತ್ತಮ ಪುಲಿಗಿರಿಯೊಳು ನೆಲೆಸಿಹ
ವರದವಿಠಲ ನಿನ್ನ ಶರಣರಾದವರಿಗೆ ೭

 

೨೦೬
ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ
ಘನತರ ಹರಷದಿ ಮನದಣವಂದದಿ
ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ
ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ
ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ
ಭಕ್ತರ ನೋಡಗೂಡಿ ರಕ್ತಿಲಿ ಪಾಡುವ ೧
ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ
ಹಾಳು ಹರಟೆಯಿಂದ ಕಾಲವ ಕಳೆಯದೆ
ಶ್ರೀಲಾಲಮನ ಕಥೆ ಪೇಳುವ ಕೇಳುವ ೨
ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ
ಅರ್ಥಿಪರಿಗೆ ಪರಮಾರ್ಥವನೀಯುವ
ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ ೩
ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ
ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ
ನೇಮದಿಂದಲಿ ಭವ ತಾಮಸ ಕಳೆಯುವ ೪
ಹರಿವಾಸರವನು ಸಾಧಿಸಿ ಮುರಹರ ನಾಮಗಳು
ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು
ವರದ ವಿಠಲ ನರಹರಿಯೆಂದು ಪಾಡುವ ೫

 

೨೦೯
ಧರೆಯೊಳು ಪುಲಿಗಿರಿಯೊಳು ನೆಲಸಿದ
ವರದವಿಠಲ ದೇವನ
ಸಿರಿನಾಮವೆ ತಾ ಮರೆಯದೆನೆನೆಯಲು
ಪೊರೆಯವುದಾನರನ ಪ
ನೊಂದ ಗಜೇಂದ್ರನ ನೊಂದ ಪ್ರಹ್ಲಾದನ
ಬಂದ ವಿಭೀಷಣನ
ಚಂದಿರಮುಖಿ ನೃಪನಂದನ ಧ್ರುವರನು
ಚಂದದಿ ಸಲಹಿದನು ೧
ಅಜಮಿಳಗೊಲಿದನ ಕುಜನರ ತರಿದನ
ಸುಜನರನಾಳಿದನ
ಭಜಕರದಾತನ ತ್ರಿಜಗಕ್ಕೆ ನಾಥನ
ವಿಜಯನ ರಥಸೂತನ ೨
ಅಂಗಜಜನಕನ ಮಂಗಳ ಮಹಿಮನ
ಗಂಗೆಯ ಪಡೆದವನ
ರಂಗನ ಸುಗುಣ ತರಂಗನ ಶಂಖ
ರಥಾಂಗವ ಪಿಡಿದವನ ೩
ಗೌತಮಭಾರೈಯ ಪೂತೆಯ ಮಾಡಿದ
ಖ್ಯಾತ ಪಾದಾಂಬುಜನ
ವಾತನ ಮಗನೊಳು ಪ್ರೀತಿಯ ಬೆಳಸಿದ
ಸೇತುವಿಧಾತನ ೪
ರಾಮನ ಜಗದಭಿರಾಮನ ದೈತ್ಯ ವಿ
ರಾಮನ ಭಜಕನಾ
ರಾಮನ ದಶರಥ ರಾಮನ ಸೀತಾ
ರಾಮನ ಗುಣಧಾಮನ ೫
ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ
ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ ೬

 

(ಆ) ಲಕ್ಷ್ಮೀಸ್ತುತಿಗಳು
೧೭೨
ನಂಬಿದೆ ನಿನ್ನ ಪಾದಾಂಬುಜಯುಗಳವ
ಶಂಬರಾರಿ ಜನನಿ ಪ
ಬೆಂಬಿಡದೆನ್ನ ಹೃದಂಬುಜದೊಳಗವ
ಲಂಬಿಸಿ ಸಲಹು ಮದಂಬೆ ಸನಾತನಿ ಅ.ಪ
ಅಂಬುಜಮುಖಿ ಚಿಕುರೆ ಶರ
ದಂಬುಜದಳ ನಯನೆ
ಕಂಬುಕಂಠಿ ಕನಕಾಂಬರೆ ಮದಕರಿ
ಕುಂಭಪಯೋಧರೆ ಬಿಂಬಫಲಾಧರೆ ೧
ಕರ್ಣದೊಳೆಸೆವ ಸುವರ್ಣವಿಡಿದ ಪೊಸ
ರನ್ನದೊಡವೆಗಳ ಮನ್ನಿಸುವಂತಿದೆ
ಪೂರ್ಣಕಟಾಕ್ಷವು ಕನ್ನಡಿ ಕದಪಿನ
ರನ್ನೆ ಗುಣಾರ್ಣವೆ ೨
ಮಾಲತಿ ಮಲ್ಲಿಗೆ ಮಾಲೆಯಿಂದೊಪ್ಪುವ
ನೀಲಭುಜಗವೇಣಿ
ಲೀಲೆಯಿಂದ ಶಾರ್ದೂಲ ಮಹೀಂದ್ರದೊ
ಳಾಲಯಗೈದಲಮೇಲಮಂಗಾಮಣಿ ೩

 

೧೩೩
ನಮೋಸ್ತುತೇ ಕಮಲಾಪತೇ ಪ
ನಮೋಸ್ತುತೇ ಶತಧೃತಿ ಶಂಕರ ಮುಖ
ವಿಮಾನಚರಗಣ ವಂದಿತ ಚರಣ ಅ.ಪ
ವಾರಣಭೀತಿನಿವಾರಣ ಭವಜಲ
ತಾರಣ ದೈತ್ಯವಿದಾರಣ ಶುಭಗುಣ ೧
ಪಂಕಜಲೋಚನ ಪಂಕವಿಮೋಚನ
ಪಂಕಜಾಲಯಾಲಂಕೃತಗಾತ್ರ ೨
ಶರಣಾಗತಜನ ಭರಣಾಧೃತರಥ
ಚರಣಾ ಫಣಿಗಿರಿ ವರದವಿಠಲ ೩

 

ಲಕ್ಷ್ಮೀ ಸಮೇತ ನಾರಾಯಣನನ್ನು
೧೮೪
ನಾರಾಯಣನಿನ್ನಪಾರಾಯಣಗೈವ
ಧೀರತನವಪಾಲಿಸೋ ಪ
ಪಾರವಿಲ್ಲದ ಭವಪಾರಾವಾರದೊಳೊಂದು
ತೀರಕೆನ್ನನು ಸೇರಿಸೋ ಅ.ಪ
ನಿನ್ನ ಕಿಂಕರಭಾವವನ್ನು ಮರೆತು ನಾನಾ
ಜನ್ಮದಿ ತೊಳಲುತ ಖಿನ್ನನಾಗಿ
ನಿನ್ನ ದಯದಿ ನರಜನ್ಮದಿ ಜನಿಸಿದೆ
ವರ್ಣಶ್ರೇಷ್ಠಕುಲದಿ ಬಹುಪುಣ್ಯದಿ
ಇನ್ನು ಪುನರಪಿ ಜನ್ಮವಿಲ್ಲ
ನಿನ್ನ ಕಿಂಕರನನ್ನು ಸೇರಿಸಿ
ಘನ್ನ ಮಹಿಮನೆ ನಿನ್ನ ಸೇವೆಯೊ
ಳುನ್ನತದ ರತಿಯನ್ನು ಪಾಲಿಸಿ ೧
ಅಷ್ಟಯೋನಿಗಳಲ್ಲಿ ಹುಟ್ಟಿ ಸಾಯುತ ಬಲು
ಕೆಟ್ಟಕರ್ಮವ ಮಾಡಿ ಕಷ್ಟಪಟ್ಟು
ಎಷ್ಟು ನಿನಗೆ ಮೊರೆಯಿಟ್ಟು ಬೇಡಲು ಎಳ್ಳಿ
ನಷ್ಟು ಕಾರುಣ್ಯವು ಪುಟ್ಟದೇನೋ
ಸೃಷ್ಟಿಗೈಯ್ಯುವೆ ಪುಷ್ಟಿಗೈಯ್ಯುವೆ
ಕಟ್ಟಕಡೆಯೊಳು ನಷ್ಟಪಡಿಸುವೆ
ಸೃಷ್ಟಿಯೊಳು ಜೊತೆಗಟ್ಟಿ ನೋಡುವ
ದಿಟ್ಟರಾರೈ ಇಷ್ಟ ಮೂರುತಿ ೨
ಧರೆಯ ರಾಜ್ಯವನೊಲ್ಲೆ ಸಿರಿಯ ಸಂಪದವೊಲ್ಲೆ
ಸುರರು ಭೋಗಿಪ ಸುರಪುರವಾನೊಲ್ಲೆ
ಪರಮೇಷ್ಟಿ ಪುರದೊಳಗಿರಲಾನೊಲ್ಲೆನು ನಿನ್ನ
ಹೊರತಾದ ಕೈವಲ್ಯಸ್ಥಿರವೊಲ್ಲೆನು
ನಿರುತ ನಿನ್ನಯ ಚರಿತೆಯಲಿ ಮನ
ವಿರಲಿ ನಾನಾತೆರದ ಭಕ್ತಿಯೊಳು
ಇರಲಿ ಎನ್ನಯ ಕರಣವೃತ್ತಿಯು
ಪರಮ ಪುಲಿಗಿರಿ ವರದವಿಠಲ ೩

 

ಲಕ್ಷ್ಮೀ ಸಮೇತ
೧೮೫
ನಾರಾಯಣ ರಕ್ಷಿಸೋ ನಮ್ಮನು ಲಕ್ಷ್ಮೀ
ನಾರಾಯಣ ರಕ್ಷಿಸೋ ಪ
ಪಾರರಹಿತ ಭವಪಾರಾವಾರದಿ ಬಲು ಘೋರತಾಪವು
ಮೀರಿತೋ ಭವದೂರ ನಿತ್ಯೋದಾರ ಕರುಣದಿ ಅ.ಪ
ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖ
ದಾಶೆಯನೇ ತೊರೆದೆ ಕೋಶ ಕಳತ್ರ ನಿವೇಶ ತನುಜ ಮಾಯಾ
ಪಾಶದೊಳಗೆ ಶಿಲ್ಕಿ ಗಾಸಿಯಾದೆನು ಜಗದೀಶ ನಿಖಿಲಸು
ರೇಶ ಕಮಲಫಲಾಶನಯನ ದಿ
ನೇಶಶತ ಸಂಕಾಶ ವ್ಯಾಘ್ರಗಿರೀಶ ಭವಭಯ
ಪಾಶ ಹರಪರಮೇಶ ವಂದಿತ ೧
ದೇಹಾಭಿಮಾನದಲ್ಲಿ ತೀವಿದ ಭೂತ
ದ್ರೋಹವನಾಚರಿಸುತಲಿ
ಸೋಹಮೆಂಬುವ ಬಲು ಮೋಹದಿ ಸಿಲುಕಿ ದಾ
ಸೋಹಮೆನ್ನದೆ ದೈವ ದ್ರೋಹಿಯಾದೆನು ವಿದೇಹಜಾವರಿ
ಗೂಹ ನೋಚಿತದೇಹ ವಿಜಿತ ವಿ
ದೇಹ ಖಗವರವಾರಶುಭಪರಿವಾಹ ನಿಖಿಲ ನಿ
ರೀಹ ಲೋಕವಿಮೋಹನಾಚ್ಯುತ ೨
ಗುರುಹಿರಿಯರ ಮರೆದು ಗರ್ವದಿ ಧರ್ಮಾವ
ಚರಣೆಯ ನೆರೆತೊರೆದು
ದುರುಳರ ಸಂಗದಿ ಜರಿದು ಸಜ್ಜನರನು
ಜರಿದು ದುರ್ಗತಿಗೆ ನಾ
ಗುರಿಯಾದೆನು ಹರಿ ಪರಮಪುರುಷ ಪಾವನ
ಚರಣ ಸುಗುಣಾ ಭರಣ ದೀನೋ
ದ್ಧರಣ ಭವ ಸಂಹರಣವಿಶ್ವಂ
ಭರಣ ಪುಲಿಗಿರಿ ವರದವಿಠಲ ೩

 

(ಉ) ತಾತ್ತ್ವಿಕ ಕೃತಿಗಳು
೨೦೮
ನಾರಾಯಣಯೆಂಬ ನಾಮವ ನೇಮದಿ
ಪಾರಾಯಣ ಮಾಡಿರೋ
ಪಾರವಿಲ್ಲದ ಭವ ಪಾರಾವಾರದೊಳು
ತಾರ ಕವಿದು ನೋಡಿರೋ ಪ
ನೀರ ಬೊಬ್ಬುಳಿಕೆಯು ತೋರುವ ರೀತಿ ಶ
ರೀರ ನಚ್ಚಿರಬೇಡಿರೋ
ಸಾರುವ ಮೃತ್ಯುವದಾರಿಗೆ ಗೋಚರ
ಧಾರಣಿಯಲಿ ಪೇಳಿರೋ ೧
ದೇಹಕೆ ನೆಲೆಯಿಲ್ಲ ಮೋಹಕೆ ಕೊನೆಯಿಲ್ಲ
ಸಾಹಸ ಪಡಬೇಡಿರೋ
ದೇಹಗೇಹಂಗಳನೂಹಿಸಿ ಸಂಗಡ
ಬಾಹವೆಂದಿರ ಬೇಡಿರೋ ೨
ದೇಹರಕ್ಷಣೆಗೆಂದು ಗೇಹವ ನಿರ್ಮಿಸಿ
ನೇಹದಿ ನಾರಿಯೊಳು
ಗೇಹಿನಿಯೆಂದತಿ ಮೋಹದಿ ಕೆಡುವನು
ದೇಹಿ ಸಂಸಾರದೊಳು ೩
ನಾರಿಯು ಮೋಹನಾಕಾರಿಯು ಲೋಕಕೆ
ಮಾರಿಯಲ್ಲವೆ ಕೇಳಿರೋ
ನಾರಿಯಾರಿಗೆ ಮಕ್ಕಳಾರಿಗೆ ಜೀವಿತ
ದಾರಿಯೆಲ್ಲಿಗೆ ಪೇಳಿರೋ ೪
ಮಿಂಚಬಾರದು ತನ್ನ ಮಡದಿಯ ಬಾಲರ
ಕಂಚು ಕನ್ನಡಿ ಭಾರದೀ
ಸಂಚಿತ ದ್ರವ್ಯದಿ ಕೊಂಚವು ಬಾರುದು ಉಗಿ
ಸಂಚಿಗೆ ದೇಹವಿದ ೫
ಹಲವು ಸಾಹಸದಿಂದ ಗಳಿಸಿದರ್ಥಗಳೆಲ್ಲ
ಬಳಸಿನ ಬಾಂಧವರು ನಿಳಯದೊಳುಂಡುಟ್ಟು
ನಲಿದು ನಂಟರು ಎಂದು
ಒಲಿದು ಕೊಂಡಾಡುವರು ೬
ಅರ್ಥವಿದ್ದವನ ಸಮರ್ಥನೀತನ ಜನ್ಮ
ಸಾರ್ಥಕವೆಂಬುವರು
ಆರ್ಥವ ಕಳಕೊಂಡು ಸಾರ್ಥನಾಗಲು ಜನ್ಮಸು
ವ್ಯರ್ಥವೆಂದುಸುರುವರು ೭
ರೊಕ್ಕವಿದ್ದರೆ ಕೈಲಿ ಸಿಕ್ಕರೆ ಮಾತಿನೊಳಕ್ಕರೆ ಪಡಿಸುವರು
ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು೮
ಧರಣಿಗೋಸುಗ ತಮ್ಮ ಹರಣವ ಕಳಕೊಂಡು
ಮರಣ ಪೊಂದುವರು
ಮರುಳುರು ಜಗಳಕೆ ತರಳರ ಚಾಚುತೆ
ಕೊರಳನು ಕೊಯ್ಸುವರೋ ೯
ತಂದೆಯ ಬಿಡುವರು ಕಂದನ್ನ ಬಿಡುವರು
ಬಂಧುಗಳನು ಕೊಲ್ವರು
ಒಂದಿಗೆ ಜನಿಸಿದರೆಂದು ನೋಡರು ನಿಜ
ದಂದುಗಕ್ಕೊಳಗಹರು ೧೦
ನಂಟರು ನಮಗಿವರುಂಟೆಂದು ಮೋಹದ
ಗಂಟು ಕಟ್ಟಿರೆ ಮನದಿ
ಕಂಟಕ ಯಮ ಬಂದು
ಗಂಟಲ ಬಿಗಿವಾಗ ನಂಟರಿಲ್ಲವು ಜಗದಿ ೧೧
ಆಪತ್ತು ಬಂದಾಗ ಪಾಪಿಯು ಮನದಲನು
ತಾಪದಿ ನೆನೆಯುತಿರೆ
ಕಾಪಾಡುವನಾಗ ಶ್ರೀಪತಿ ಪುಲಿಗಿರಿ
ಭೂಪನು ನಮ್ಮ ದೊರೆ ೧೨

 

ಈ ಮೂರು ಕೃತಿಗಳು
(ಋ) ವಿಶೇಷಸಂದರ್ಭದ ಹಾಡುಗಳು
೨೨೮
ಬರಗಾಲವನ್ನು ಕುರಿತ ಹಾಡುಗಳು
ನಿನಗಿದು ಘನವೆ ನಿತ್ಯಾತ್ಮಕ
ವನಜಭವಾದಿಗಳನು ಪಾಲಿಪ ದೇವ ಪ
ಸದಯ ನೀನಾದರೆ ಬದುಕಿಸಿ ಪಶುಗಳ
ಮುದವನು ತೋರಿಸು ಮಧುಸೂಧನ ಈಗ ೧
ಇದಿರಿಗೆ ನೋಡಲಾರದೆ ನಿನ್ನ ದೂರಿದೆ
ಇದು ಒಂದು ತಪ್ಪು ಎನ್ನದು ಎಂದು ಮನ್ನಿಸು ೨
ವಿಷದ ನೀರನು ಕುಡಿದಸುವನ್ನು ಕಳಕೊಂಡು
ಪಶುಪಾಲರಿಗೆ ನೀನಸುವಿತ್ತು ಪೊರೆದೆ ೩
ಹೊಟ್ಟಯೊಳಗೆ ಸತ್ತು ಹುಟ್ಟಿದ ಶಿಶುವನು
ಮುಟ್ಟಿ ಜೀವವನಿತ್ತೆ ಕೃಷ್ಣಾಕೃಪಾಕರ ೪
ಗುರುಸುತನನು ಯಮಪುರದಿಂದ ಕರೆತಂದ
ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ ೫

 

ಈ ಮೂರೂ ಕೃತಿಗಳು
೧೮೬
ನಿನ್ನ ದಾಸರದಾಸ ನಾನಯ್ಯ ಹರಿ ಎನ್ನನುಪೇಕ್ಷಿಪರೇನಯ್ಯ ಪ
ಕಾಮಕ್ರೋಧಗಳಿನ್ನೂ ಬಿಡಲಿಲ್ಲ ನಿನ್ನ
ಪ್ರೇಮವೆನ್ನೊಳು ಕಾಲಿಡಲಿಲ್ಲ
ನೇಮ ನಿಷ್ಠೆಗಳನು ಕೊಡಲಿಲ್ಲ ಭವ
ತಾಮಸ ಬೀಜವ ಸುಡಲಿಲ್ಲ ೧
ಆಚಾರದಲಿ ಕಾಲಗತಿಯಿಲ್ಲ ಬಲು
ನೀಚರ ಸಂಗಕೆ ಮಿತಿಯಿಲ್ಲ
ಪ್ರಾಚೀನಕರ್ಮಕೆ ಚ್ಯುತಿಯಿಲ್ಲ ಇದ
ಗೋಚರಪಡಿಸುವ ಮತಿಯಿಲ್ಲ ೨
ದೇಹದಿ ಬಲವಿಲ್ಲವಾದರೂ ವ್ಯಾ
ಮೋಹವು ಬಿಡದಲ್ಪವಾದರೂ
ಗೇಹದಿ ಸುಖವಿಲ್ಲದಿದ್ದರು ಈ
ಸೋಹಮೆಂಬುದಕಿಲ್ಲ ಬೇಸರು೩
ದಾಸರ ಸಂಗದೊಳಾಡಿಸು ಹರಿ
ವಾಸರವ್ರತದೊಳು ಕೂಡಿಸು
ವಾಸುದೇವ ನಿನ್ನ ಪಾಡಿಸು ಸಿರಿ
ವಾಸನಾಮದ ಸವಿಯೂಡಿಸು ೪
ಶರಣವತ್ಸಲನಹುದಾದರೆ ಘನ
ಕರುಣಾರಸನಿನಗುಳ್ಳರೆ
ಕರುಣಿಸು ಪುಲಿಗಿರಿವಾಸ ಹರೆ
ಸಿರಿವರದವಿಠಲ ನೀನೆ ನಮ್ಮ ದೊರೆ ೫

 

೨೧೪
ನೀ ವೆಂಕಟೇಶ ಪರಿಪಾಲಯ ಸುಗುಣಾಲಯ ಪ
ದೇವ ದೇವ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ
ಕಮಲಲೋಚನ ಭಕ್ತ ಕಮಲಲೋಚನ ಶಕ್ತ
ವಿಮಲ ಚರಿತಪೂರ ಕಮನೀಯ ಶರೀರ೧
ಧೀರ ದಶರಥ ಕುಮಾರ ಬುಧ ಜನವಿಹಾರ
ವೀರ ಹಂ ಪರಿವಾರ ಕ್ರೂರಸುರ ವಿಹಾರ ೨
ಸರಸಿಜಾಸನನುತ ಸುರಮುನಿಸೇವಿತ
ಹರಿಣಾರಿಧಾರಾಗಾರ ವರದ ವಿಠಲಾಕಾರ ೩

 

ಈ ಮೂರೂ ಕೃತಿಗಳು
೧೮೭
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ
ಶ್ರೀನಿವಾಸ ಜಗನ್ನಿವಾಸ ಪ
ದೀನರಕ್ಷಕ ನಿಖಿಲ ಮಾನವರ ಮಾನಾಭಿ
ಮಾನದೊಡೆಯನು ನೀನೆಯಲ್ಲದಿಲ್ಲಾ ಅ.ಪ
ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ
ಚಕ್ರವರ್ತಿಯು ಶರಣುಹೊಕ್ಕೆನೆನಲು
ಚಕ್ರವನು ಪಿಡಿದು ನೀನಕ್ಕರೆಯೊಳೈತಂದು
ನಕ್ರವದನವ ಸೀಳಿ ರಕ್ಷಿಸಿದೆ ಗಜವಾ ದೇವಾ ೧
ಹಿಂದೆ ನಾನಾ ನಗರಿಯಿಂದ ಬಹದಾರಿಯೊಳು
ಸಂದುಗಳೀಚಲು ಭಂಡಿ ಸಂಜೆಯೊಳಗೆ
ಮುಂದಾಗ ಜೊತೆಯೊಳಗೆ ಬಂಧುಜನದಲ್ಲಿ ನೀ
ಬಂದು ಬೆಳಕನು ತೋರಿ ಮುಂದೆಗೂಡಿದೆ ಕೃಷ್ಣಾ ೨
ಇಂದು ನಿಜಸತಿಯು ನೊಂದಳುಬ್ಬಸರೋಗ
ದಿಂದ ಗಾಳಿಯದೀಪದಂದಮಾಗಿ
ನಂದಿ ಪೋಗದ ಮುನ್ನ ಬಂದು ನೀಮರೆಯಾಗು
ಎಂದು ಮೊರೆಯಿಡಲಾಗ ಬಂದು ಸಲಹಿದೆ ತಂದೆ ೩
ಗುರುಸುತನ ಸಂಯಮದೀ ಪುರದಿಂದ ತಂದಿತ್ತೆ
ತುರುಗಾಯ್ವರಸುಗಳನು ಮರಳಿ ಪಡೆದೆ
ನರಪೌತ್ರನ ಬಾಣದುರಿಯಿಂದ ರಕ್ಷಿಸಿದೆ
ಸರಿಯಾರು ನಿನಗೆ ಸುರನರಭುಜಂಗರಲ್ಲಿ ೪
ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ
ಕರು ವರವಿಭೀಷಣ ತಾಪಸರನು ಪೊರೆದೆ
ಶರಣರನು ಪಾಲಿಸುವ ಬಿರುದು ಧರಿಸಿಹ ವ್ಯಾಘ್ರ
ಗಿರಿಯೊಳಗೆ ನೆಲೆಸಿರುವ ವರದವಿಠಲರಾಯ ೫

 

ಈ ಮೂರೂ ಕೃತಿಗಳು
೧೮೮
ನೀನೆಗತಿ ಎನಗೆ ನೀರಜ ನೇತ್ರ
ನಿನ್ನ ಪಾದಂಗಳ ನಂಬಿದೆ ಕೊನೆಗೆ ಪ
ಶ್ರುತಿಹಿತ ಧರ್ಮವಿಶ್ರುತ ನಾನಲ್ಲ
ಸತತವು ಜ್ಞಾನಿಯ ಜೊತೆ ಸೇರಲಿಲ್ಲ ೧
ಭಕ್ತಿಪಥದಿ ಮನವರ್ತಿಸಲಿಲ್ಲ
ಯುಕ್ತಿಯಿಂ ವಿಷಯ ವಿರಕ್ತನಾನಲ್ಲ ೨
ಗುರುಕುಲವಾಸದ ಗುರುತೆನಗಿಲ್ಲ
ಪರಮ ಭಾಗವತರ ಪರಿಚರ್ಯವಿಲ್ಲ ೩
ಮಂತ್ರಾರ್ಥದ ಬೋಧೆ ಮನದೊಳಗಿಲ್ಲ
ತಂತ್ರದೊಳಗೆ ಜಾಣ್ಮೆ ಎನಗಿನಿತಿಲ್ಲ ೪
ಸಜ್ಜನ ಸಹವಾಸದುಜ್ಜುಗವಿಲ್ಲ
ದುರ್ಜನರ ಸಂಗತಿ ವರ್ಜಿಸಲಿಲ್ಲ ೫
ಹರಿಕಥೆ ಮಾಡುವ ಪ್ರಜ್ಞೆ ನನಗಿಲ್ಲ
ದುರುಳ ಕಾಮುಕಸಂಗ ಕಿರಿದಾಗಿಲ್ಲ ೬
ಪರಿಪರಿ ಕಷ್ಟವ ಪರಿಹರಿಸುವನೆ
ಪರಮಶ್ರೀಪುಲಿಗಿರಿ ವರದವಿಠಲನೆ ೭

 

ಶ್ರೀವೈಷ್ಣವ ಸಿದ್ಧಾಂತದಲ್ಲಿ
೨೧೩
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ
ಘೋರವಾದ ಸಂಸಾರವೆಂಬ ಕಾಂತಾರದಿ ತೊಳುಲುವೆ
ದಾರಿಯ ಕಾಣದೆ ಅ.ಪ
ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು
ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು
ಹಮ್ಮಿನ ಗುಂಡಿಯು ಹೆಮ್ಮೆಯ ಕಂಟಕ
ವೆಮ್ಮನು ಕಾಲಿಡಲಮ್ಮಗೊಡವು ಹರಿ೧
ನಾರಿಯ ಮೋಹದ ಭಾರಿಯದುರ್ಗವು
ದಾರಿಯೊಳಡಸಿಹುದು
ಮೀರಿಬರಲು ಘನ ಚೋರರು ಕಾದಿಹ
ರಾರು ಮಂದಿ ಮುಳಿದು
ಮೂರು ತೆರದೊಳಿಹ ಘೋರ ತಾಪಗಳು
ಸಾರಿ ಸಾರಿ ಬಾಯಾರಿಸುತಿರ್ಪವು ೨
ಮನೆ ಮನೆ ವಾರ್ತೆಗಳೆನಿಪ ಮಹಾನದಿ
ಯನು ದಾಂಟುವೊಡರಿದು
ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು
ತನು ಸಂಬಂಧದ ಜನಗಳು ದುರ್ಮೃಗ
ವನು ಪೋಲುತ ನಮ್ಮನು ಬಾಧಿಸುತಿರುವರು ೩
ಕ್ಷುದ್ರವಿಷಯಗಳುಛಿದ್ರವಹುಡುಕುವ
ವಧ್ರುವದೇಹದೊಳು
ಕದ್ರುಸುತರವೊಲುಪದ್ರವ ಗೈವ
ಭದ್ರದ ಭೀತಿಗಳೂ
ನಿದ್ರೆಯೊಳೆಮ್ಮನು ಮುದ್ರಿಸಿಗೈವಳು
ಪದ್ರವ ಜರೆಯೆಂಬುದ್ರಿಕ್ತಾಂಗನೆ ೪
ಸುರನರವರರೊಳು ಶರಣೋಪಾಯವರ
ನರಿಸದೆ ಮನವಿರಿಸಿ ನರಿಗಳ ಪರಿಯಲಿ ನರುಳುವರೆಲ್ಲರು
ನರಕಗಳನುಭವಿಸಿ ಶರಣಾಗತರನು ಪೊರೆಯುವ ಪುಲಿಗಿರಿ
ವರದವಿಠಲ ನಿಜ ಚರಣವ ನಂಬಿದೆ ೫

 

೨೧೫
ಪಚ್ಚೆಯ ಬಂದೀಗ ಶ್ರೀ ಪುಲಿಗಿರಿ
ಪಚ್ಚೆಯ ನೋಡಿ ಬೇಗ ಪ
ಸಚ್ಚಿದಾನಂದರೂಪಚ್ಚರಿಯಾದಂಥ
ಮುಚ್ಚುಮರೆಯಿಲ್ಲದಚ್ಚುತನೆಂಬುವ ಅ.ಪ
ಕೈಗೆ ಸಿಕ್ಕುವುದಲ್ಲವೈ ತಕ್ಕಡಿಯಲ್ಲಿ
ತೂಗಿ ನೋಡುವುದುಲ್ಲ ವೈ
ಆಗಮಾಂತಗಳಲ್ಲಿ ಯೋಗಿ ಹೃದಯದಲ್ಲಿ
ಭಾಗವತರೊಳನುರಾಗದಿ ಮೆರೆಯುವ ೧
ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ
ನೆಲೆಯ ಕಂಡವರಿಲ್ಲವೈ
ನಲಿದು ಧ್ಯಾನಿಪರಿಗೆ ಒಲಿದು ತೋರುವ ದಿವ್ಯ
ಜಲಧರವರ್ಣದ ಜಲಜಾಕ್ಷನೆಂಬುವ ೨
ಧರೆಯೊಳುತ್ತಮವಾಗಿಹ ಶ್ರೀ ಪುಲಿಗಿರಿಯೆಂಬ
ಗಿರಿಯೊಳು ನೆಲೆಯಾಗಿಹ
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ದೊರೆ ವರದೆನಂದೆಸರಾದ ೩

 

೧೪೭
ಪರಮಪುರುಷಪರೇಶಪಾವನಪರಮಮುನಿಜನಪಾಲನ
ಶರಧಿಶಯನ ವಿಹಂಗವಾಹನ ಶಾರದಾಂಬುಜಲೋಚನ ೧
ವಾಸುದೇವ ವಿರಂಚಿವಂದಿತ ವಾಸವಾದಿ ಸುರಾರ್ಚಿತ
ವಾಸುಕಿಪ್ರಿಯ ಭೂಷಭಾವಿತ ವಾಸರೇಶಕುಲೋದಿತ ೨
ಶರಣಜನರಘಹರಣ ಸೌಖ್ಯವಿತರಣ ಶುಭಸಾಗರ
ವರದ ಪುಲಿಗಿರಿವಾಸ ವೆಂಕಟವಿಠಲ ದಯಾಕರ ೩

 

೧೫೬
ಪರಮಪುರುಷ ಬಾರೋ ಪಾವನ
ಚರಣಯುಗವ ತೋರೋ ಪ
ಶರಣರ ಪೊರೆಯುವ ಕರುಣಿಗಳರಸನೆ
ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ
ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು
ಟಕ್ಕಿನಿಂದ ನೀನಕ್ಕಜಮಾಡಲು
ತಕ್ಕುದೇನು ಘನ ರಕ್ಕಸವೈರಿಯೆ ೧
ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ
ಅಷ್ಟರೊಳಗೂ ಬಹಳಿಷ್ಟದೆ ನೆಲಸಿದ
ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು೨
ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ
ಪ್ರಾಣದೊಡೆಯ ನೀ ಕಾಣಿಸು ಹರ್ಷವ
ಕಾಣೆನಿನಗೆ ಸರಿ ಜಾಣತನದಿ ಹರಿ ೩
ವಾರಿಧಿಕೃತಶಯನ ವಿಕಸಿತ ವಾರಿಜದಳನಯನ
ಕ್ಷೀರದೊಳದ್ದುನೀ ನೀರೊಳಗದ್ದು ಕಂ
ಸಾರಿ ನಿನ್ನನೆ ಸಾರಿದೆ ನರಹರಿ ೪
ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ
ಶರಣಾಭರಣ ನಿಜ ಕರುಣವ ತೋರಿಸು
ವರದವಿಠಲ ದೊರೆ ದಯಾನಿಧೆ ೫

 

೧೮೯
ಪಾದಸೇವೆಯ ಪಾಲಿಸೋ ಪಂಕಜನಾಭ ಪ
ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ
ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ
ಶೇಷವಾಯುಗಳತಿದೋಷವರ್ಜಿಸಿ ತನು
ಶೋಷಿಸಿ ತಪನ ವಿಶೇಷವಾಚರಿಸೆ
ದೋಷರಹಿತ ಗುಣಭೂಷಾ ಶೇಷನಿಗೊಲಿದು
ಶೇಷಪರ್ವತ ಶಿರೋಭೂಷಣನೆನಿಸಿದ ೧
ಬಲಿಚಕ್ರವರ್ತಿಯು ಬಲವೈರಿಯನು ಬಲು
ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ
ನಲಿದು ವಾಮನನಾಗಿ ಬಲಿಯ ದಾನವ ಬೇಡಿ
ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ೨
ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ
ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ
ಲಲನೆಯ ಕಲುಷವ ಖಂಡಿಸಿ
ಲಲನಾರೂಪವನಿತ್ತು ಸಲಹಿದ ಪಾವನ ೩
ತರಣಿತನಯನೆಚ್ಚ ಗರಳಶರವು ಬೇಗ
ನರನುತ್ತಮಾಂಗಕೆ ಗುರಿಯಾಗಿ ಬರಲು
ಚರಣದುಂಗುಟದಿಂದ ಧರಣೀತಳವನೂರಿ
ನರನ ಶಿರವ ಕಾಯ್ದ ನರನಾರಾಯಣ ನಿನ್ನ ೪
ಪುಲಿನಾಮದಸುರನು ಛಲದಿ ಮಾಂಡವ್ಯನ
ಗಳವಪಿಡಿದು ಬಾಧೆಗೊಳಿಸೆ ವೇಗದಲಿ
ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ
ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ೫

 

೧೭೩
ಪಾಲಿಸೆನ್ನ ಪಾಲನಶೀಲೆ
ಪಾಲಿತ ಸುರನರಜಾಲ ಸುಶೀಲೆ ಪ
ಕ್ಷೀರಶರಧಿ ಸುಕುಮಾರಿಣಿ ಲಕ್ಷ್ಮೀ
ವಾರಿಜಮುಖಿ ಸಿತವಾರಿರುಹಾಕ್ಷಿ ೧
ಅಂಬೆ ಭುವನಕುಟುಂಬೆ ರಮಾಂಬೆ
ನಂಬಿ ಭಜಿಸುವದು ಡಾಂಬಿಕಮೆಂಬೆ ೨
ಯುಕ್ತಿಯು ಶಕ್ತಿ ವಿರಕ್ತಿಗಳಿಲ್ಲ
ಉಕ್ತಿ ಮಾತ್ರದಿಂದ ಭಕ್ತಿಕೊಡೆಲ್ಲ ೩
ಜಯಕರುಣಾಲಯೆ ಜಯಮಣಿವಲಯೆ
ಜಯನಿಸ್ತುಲಯೆ ಜಡಮತಿಗೊಲಿಯೆ ೪
ಧರೆಯೊಳುತ್ತಮ ಪುಲಿಗಿರಿಯೊಳಿರುವನೆ
ಶರಣರ ಪೊರೆಯುವ ವರದವಿಠಲನ [ರಾಣಿಯೆ] ೫

 

೧೯೦
ಪಾಲಿಸೆನ್ನ ಶ್ರೀಲೋಲ ಕೃಪಾಳು ಪ
ಬಾಲಕನುಕ್ತಿಯ ಲಾಲಿಸಿ ಕೇಳೀ ಅ.ಪ
ಕಾರಾಗಾರ ಶರೀರದಾಯಗಳ
ದಾರಾ[ಧಿ]ಪತ್ಯದ ದಾರಿಯನಿ[ತು]ಗಳ೧
ಆರುಮಂದಿ ಬಲುಶೂರರು ಖಳರು
ಚೋರರು ಚಿತ್ತವ ಹಾರಿಸುತಿಹರು ೨
ತನುಸಂಬಂಧದ ಜನರರ್ಥಿಯಲಿ
ಕೊನೆವರು ದುರ್ಮೃಗವನು ಪೋಲುತಲಿ ೩
ತಾಪತ್ರಯ ಪರಿತಾಪದ ಬೇಗೆ
ಈ ಪರಿಮೋಚನ ಶ್ರೀಪತಿ ಹೇಗೆ ೪
ಕರುಣದಿ ಶ್ರೀಪುಲಗಿರಿಯೊಳಿರುವನೆ
ಶರಣರಪೊರೆಯುವ ವರದ ವಿಠಲನೆ ೫

 

ದಶಾವತಾರವನ್ನು ಹೇಳುವ ಕೃತಿ
೧೩೪
ಪಾಲಿಸೋಯನ್ನ ಪರಾತ್ಪರಾ – ಹರಿ ಪ
ಪಾಲಿಸೊ ಬುಧಹಿತ ಫಾಲನಯನನುತ
ಲೀಲಾನಟನ ಘಣಿಶೈಲ ನಿಲಯ-ಹರಿ ಅ.ಪ
ಜಲಜಭವನ ನಿಜಕುಕ್ಷಿಯೊಳಿದ್ದ
ಸುಲಲಿತ ವೇದಾಪಹಾರಿಯ ಕಂಡು
ಜಲಜರೂಪಿನಿಂದಾ ಖಳ ಸಂಹರ ಗೈದು
ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ ೧
ಅಂದು ದೂರ್ವಾಸನ ಶಾಪದಿ ಜಗವು
ಇಂದಿರೆ ಕರುಣಾವಿಹೀನದಿ ಬಲು
ನೊಂದು ಕಂಗೆಡುತಲಿರೆ ಸಿಂಧುಮಥನಗೈದು
ಇಂದಿರೆಯನುತಂದ ಮಂದರಧರ ಕೂರ್ಮ ೨
ದುರುಳ ಹಿರಣ್ಯಾಕ್ಷನೆಂಬುವ ದೈತ್ಯ
ಧರಣಿಯನಪಹಾರಗೈಯ್ಯಲು ಬೇಗ
ಪರಮೇಷ್ಠಿಗೊಲಿದು ಸೂಕರ ರೂಪವ ತಾಳಿ
ಧರಣೀಚೋರನ ಕೊಂದ ಸರಸೀರುಹಾಂಬಕ೩
ಸರಸಿಜಜನ ವರದರ್ಪದಿ ಜಗವನುರುಹಿ
ತರಳನ ಬಾಧೆಗೈಸಿದ ಬಲು
ದುರುಳ ಹಿರಣ್ಯಕನುರವ ನಖದಿಂದ ಸೀಳಿ
ಕರುಳಮಾಲೆಯನಿಟ್ಟ ಧುರಧೀರ ನರಹರಿ ೪
ಬಲಿಯ ಮೂರಡಿಭೂಮಿ ದಾನವ ಬೇಡಿ
ಅಳೆದು ಈರಡಿಮಾಡಿ ಲೋಕವ ಮತ್ತೆ
ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ
ನಲಿದು ಗಂಗೆಯ ಪೆತ್ತ ಚೆಲುವ ವಾಮನರೂಪ೫
ಚಕ್ರಾಂಶನಾದ ಕಾರ್ತಿವೀರ್ಯನ ಭುಜ
ಚಕ್ರದೊಡನೆ ದುಷ್ಟ ಭೂಪರ ಅತಿ
ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ
ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ ೬
ಕ್ರೂರ ರಾವಣ ಕುಂಭಕರ್ಣರ ಬಲು
ಘೋರತನಕೆ ತ್ರಿವೇಶರ ದೊಡ್ಡ
ದೂರ ಕೇಳುತ ಮನುಜಾಕಾರವ ಧರಿಸಿ ದೈತ್ಯ
ವೀರರ ಮಡುಹಿದ ಶ್ರೀರಾಮ ಮೂರುತಿ ೭
ಬಲಭದ್ರನೆಂಬುವ ನಾಮದಿ ಧುರದಿ
ಹಲ ನೇಗಿಲುಗಳನು ಹಸ್ತದಿ ಪಿಡಿದು
ಬಲವಂತರಾದ ದೈತ್ಯಕುಲವ ತರಿದು ದಿವಿಜ
ಕುಲವ ಸಂರಕ್ಷಿಸಿದ ಜಲಧರನಿಭಚೇಲ ೮
ದುಷ್ಟಕ್ಷತ್ರಿಯರ ಭಾರ ತಾಳದೆ ಧರಣೀ
ಸೃಷ್ಟೀಶನಲ್ಲಿ ದೂರಿಡೆ ಬಲು
ಭ್ರಷ್ಟ ಕೌರವ ಯುಧಿಷ್ಠಿರಗೆ ವೈರ
ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ ೯
ಕಲಿಯಿಂದ ಕಿಡೆ ನಿಜಧರ್ಮವು ಬಹು
ಖಳರಿಂದ ವ್ಯಾಪಿಸೆ ಲೋಕವು ಆಗ
ಲಲಿತ ತೇಜಿಯನೇರಿ ಕಲುಷಾತ್ಮಕರ ಕೊಂದು
ವಿಲಸಿತ ಧರ್ಮವನು ಸಲಹಿದ ಕಲ್ಕಿರೂಪ ೧೦
ಗಿರಿಜಾವಿವಾಹದಿ ತ್ವಷ್ಟ್ರನ ಶಾಪ
ಶರಧಿಯೀಂಟಿದ ಮುನಿಗೈದಲು ಬೇಗ
ವರವ್ಯಾಘ್ರ ಗಿರೀಶನೆ ಶರಣೆಂದ ಮುನಿಪಗೆ
ವರವಿತ್ತು ಸಲಹಿದ ವರದವಿಠಲಹರಿ೧೧

 

೧೫೭
ಪೀತಾಂಬರಧರ ನಮೋನಮೋ ವನ
ಜಾತಾಂಬಕ ತೇ ನಮೋ ನಮೋ ಪ
ಖ್ಯಾತ ಚರಿತ್ರ ವಿಧಾತೃಜನಕ ಪುರು –
ಹೂತ ಸಹೋದರ ನಮೋ ನಮೋ ಅ.ಪ
ಜಾತರಹಿತ ಜಲಜಾತಭವಾರ್ಚಿತ
ಪಾರ್ಥೋನಿಧಿಶಯ ನಮೋ ನಮೋ
ಪೀತದನುಜ ಭವಭೀತಧರಾನತ
ಶ್ರೀ ತರುಣೀಪ್ರಿಯ ನಮೋ ನಮೋ ೧
ಶ್ಯಾಮಳನೀರದ ಕೋಮಳದೇಹ ನಿ
ರಾಮಯ ನಿರ್ಮಲ ನಮೋ ನಮೋ
ಕಾಮಜನಕ ಬಲರಾಮ ಸಹಜ ಸಂ
ಗ್ರಾಮಮುಜ್ವಲ ನಮೋ ನಮೋ ೨
ನಂದಗೋಪ ವರನಂದನ ಲಲನಾನಂದನ
ಸುಂದರ ನಮೋ ನಮೋ
ಕುಂದರದನ ಶರದಿಂದುವದನ ಗೋ
ವಿಂದ ಜನಾರ್ಧನ ನಮೋನಮೋ ೩
ಹಂಸ ಡಿಂಬಕ ಬಕ ಕಂಸ ಪ್ರಮುಖ ನೃ
ಶಂಸ ವಿಹಿಂಸಕ ನಮೋ ನಮೋ
ಸಂಸರದಘ ವಿಧ್ವಂಸಕ ಪರಮ
ಹಂಸೋತ್ತಂಸಕ ನಮೋ ನಮೋ ೪
ಶರಣಜನಾವನ ಶಶಿಕುಲಪಾವನ
ಗರುಡಗಮನ ತೇ ನಮೋ ನಮೋ
ತರುಣಗಣ ಸಂಕುಲ ವರವ್ಯಾಘ್ರಾಚಲ
ವರದವಿಠಲ ತೇ ನಮೋ ನಮೋ ೫

 

೧೩೫
ಫಾಲನಯನ ನುತ ಪಾಲಿಸು ಸತತ
ಪಾಲಿಸು ಸುರನರ ಜಾಲಸುಚರಿತ ಪ
ಲೀಲಾನಟನ ಫಣಿಶೈಲನಿಳಯ ಭಕ್ತ
ಪಾಲವಿಧೃತ ವನಮಾಲ ಶ್ರೀಲೋಲ ೧
ಬಾಲತನದಿ ನಿಜ ಲೀಲಾ ಚರಿತಗುಣ
ಜಾಲವಿಮೋಹಿತ ಬಾಲಾನುಕೂಲ ೨
ಧಾರಾಧರಾಭ ಶರೀರ ತಿರಸ್ರ‍ಕತ
ಮಾರ ವಿಹಗಸಂಚಾರ ಉದಾರ ೩
ಘೋರದನುಜ ಸಂಹಾರ ಸುಜನ ಪರಿ
ವಾರ ನಿಗಮ ವಿಚಾರ ವಿಹಾರ ೪
ಕರುಣಾವರಣ ನಿಜಶರಣಾಭರಣ ಭಯ
ಹರಣ ಸಕಲ ಸುಖಕರಣ ಶ್ರೀರಮಣ ೫
ಶೇಷಶಯನ ಕಲಿದೋಷದಮನ ಮೃದು
ಭಾಷ ಮನೋಹರಭೂಷ ಸುವೇಷ ೬
ಹರಿದಾಸರನು ಬಲು ಹಿರಿದಾಗಿ ಮೆರೆಸುವ
ದ್ವಿರದ ವರದ ಶ್ರೀವರದವಿಠಲ ೭

 

೧೯೧
ಬಂದೆ ಗೋವಿಂದ ನಿನ್ನ ಸನ್ನಿಧಿಗೆ ಮುದ
ದಿಂದ ಕಾಣಿಕೆಯನು ತಂದೆ ನಿನ್ನಡಿಗೆ ಪ
ನಾರಾಯಣನೆಂಬ ಚೋರ ದುಷ್ರ‍ಕತಂಗಳ
ಹಾರಿಸಿಕೊಳ್ಳುವ ಶೂರನೆಂದು
ದೂರ ಕೇಳುತ ಬಹುಬಾರಿಪಾಪಂಗಳ ಸೇರಿಸಿ
ತಂದೆ ಮುರಾರಿ ವಿಚಾರಿಸಿ ೧
ಇಲ್ಲದವಸ್ತುವಿಗಲ್ಲದೆಲೋಕದೊ
ಳೆಲ್ಲರಮಾನಸರುಲ್ಲಾಸವೂ
ಫುಲ್ಲನಾಭನೆ ನಿನ್ನೊಳಿಲ್ಲ ದೋಷಗಳೆಂದು
ನಿಲ್ಲದೆ ದುರಿತಗಳೆಲ್ಲ ಸೇರಿಸಿಕೊಂಡು ೨
ಪರಮಪುರುಷ ನಿನ್ನ ಚರಣದ ಸೇವೆಗೆ
ಬರಿಕೈಯೊಳೆಂದಿಗು ಬರಲಾಗದೆಂದು
ಪರಿಪೂರ್ಣ ನಿನ್ನೊಳಗಿರದ ವಸ್ತುಗಳನ್ನು
ಪರಿಕಿಸಿ ತಂದೆನೈ ವರದವಿಠಲ ಹರಿ೩

 

ಈ ಮೂರು ಕೃತಿಗಳು
೨೨೯
ಬದುಕಿಸೀ ಪಶುಗಳನ್ನು ಭಗವಂತ ನೀನು ಪ
ಬದುಕಿಸೀ ಪಶುಗಳ ಭವರೋಗ ವೈದ್ಯನೆ
ಕದಲಿಸೀ ರೋಗವ ಕರುಣಿಗಳರಸನೆ ಅ.ಪ
ಗೋವುಗಳೆಲ್ಲಾ ಹೊಟ್ಟೆ ನೋವಿಂ ಕಂಗೆಟ್ಟು
ಮೇವನು ಬಿಟ್ಟವಿದಾವ ರೋಗವೋ ಕಾಣೆ ೧
ಹೊಟ್ಟೆ ಕಳೆದು ಕೆಂಗೆಟ್ಟಧಾತುಗಳೆಲ್ಲಾ
ಕೆಟ್ಟು ಜೀವಂಗಳ ಬಿಟ್ಟ ಬಿಡದ ಮುನ್ನ ೨
ನಾಲಿಗೆ ನೀಡವು ಕಾಲು ಕೆಟ್ಟವು ಕಂ
ಣ್ಣಾಲಿ ಕೆಂಪಾದವು ಮೂಲವೆ ತಿಳಿಯದು ೩
ಗೋವುಗಳಿಗೆ ಭೂದೇವರುಗಳಿಗೆಲ್ಲ
ದೇವ ನೀನಲ್ಲವೆ ದೇವಕೀ ತನಯನೆ ೪
ಸತ್ತವರಿಗೆ ಜೀವವಿತ್ತ ಬದುಕಿಸಿದೆ
ಮೃತ್ಯು ದೇವತೆ ನಿನ್ನ ತೊತ್ತಹಳಲ್ಲವೆ ೫
ದಾಸನು ನಾನೆಂಬ ವಾಸಿಯುಳ್ಳರೆ ಬೇಗ
ವಾಸಿಯ ಮಾಡಯ್ಯ ನೀ ಮೋಸವ ಮಾಡದೆ ೬
ಇಷ್ಟದಿ ನೆನೆವರ ಕಷ್ಟವ ಕಳೆವ ಪುಲಿ
ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ ೭

 

೧೩೬
ಬಾರೋ ಬಾರೋ ಭವನುತಚರಣನೆ
ಸಾರಸುಗುಣ ಪರಿಪೂರಿತ ಕರುಣನೆ ಪ
ಚರಣಕಮಲಗಳಿಗೆರಗುವೆ ಭಕ್ತಿಯಲಿ
ಭರದಲಿ ಎನ್ನನು ಪೊರೆಯಲು ಮುದದಲಿ ೧
ಅರಿದರ ವರಗಳ ಕರದಲಿ ಪಿಡಿಯುತ
ಕರಿಯನು ಪೊರೆಯುವ ತ್ವರೆಯಲಿ ಬಹವೋಲ್೨
ಪರಮಪುರುಷ ಫಣಿಗಿರಿಶಿಖರಾಲಯ
ವರದವಿಠಲ ಸುಖಕರ ಕಮಲಾಲಯ ೩

 

೧೯೨
ಬಾರೋ ಮನೆಗೆ ಭಾಗವತರ ಭಾಗದೇಯನೆ
ಚಾರುವದನ ತಾಮರಸವ ತೋರು ಪ್ರೀಯನೆ ಪ
ಹಗಲು ಇರುಳು ನೆನಹು ಬಿಡದು ಸುಗುಣ ಸುಂದರ
ಬಗೆಯೊಳಿನ್ನ ಮರೆಯಬಹುದೆ ನಿಗಮಗೋಚರ ೧
ಕಣ್ಣಿನಿಂದ ನಿನ್ನ ನೋಡಿ ಧನ್ಯನಾಗುವೆ
ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ ೨
ನಿತ್ಯತೃಪ್ತನಿನಗೆ ನಾನೇ ಭೃತ್ಯನಾಗುವೆ
ನೃತ್ಯಗೈದು ಪಾಡಿ ಕೃತಕೃತ್ಯನಾಗುವೆ ೩
ಶ್ರೀನಿವಾಸ ನಿನ್ನ ದಾಸ ನಾನೇನಲ್ಲವೆ
ಮಾನಪ್ರಾಣಗಳಿಗೆ ದೊರೆಯು ನೀನೆಯಲ್ಲವೆ ೪
ಶರಣ ಜನರ ಭರಣಗೈವ ಕರುಣಿಯಾರೆಲಾ
ಹರಣ ಹರಧರದೊಳಿರುವ ವರದ ವಿಠಲಾ ೫

 

ಪೂಜಾ ವಿಧಾನದ ಕೀರ್ತನೆಯ
೧೪೮
ಬಾರೋ ಮನೆಗೆ ಶ್ರೀಧರನೆ ನಿಜಪರಿ
ವಾರದೊಡನೆ ಗುಣವಾರಿಧಿಯೆ ಪ
ಮಾರಜನಕ ಸುಕುಮಾರಾಂಗ ಪರಮೋ
ದಾರಾಕೃತಿಯ ನೀ ತೋರಿಸೆನಗೆ ೧
ಎಷ್ಟು ಜನ್ಮದ ತಪ ಒಟ್ಟಾಗಿ ಸೇರಲು
ದೃಷ್ಟಿಸುವೆನೊ ಶ್ರೀ ಕೃಷ್ಣ ನಿನ್ನನು ೨
ಚಿನ್ನದ ಪೀಠದಿ ರನ್ನದ ಕಲಶದಿ
ಚನ್ನಾಗಿ ತೊಳೆಯವೆ ನಿನ್ನಡಿಗಳ ೩
ಗಂಧವ ಹಚ್ಚಿ ಸುಗಂಧ ತುಳಸೀದಳ
ದಿಂದಾಲಂಕರಿಸುವೆ ಸುಂದರಾಂಗನೆ ೪
ಜಾಜಿಯು ಮೊದಲಾದ ಹೂಜಾತಿಗಳ ತಂದು
ಮೂಜಗದೊಡೆಯನನು ಪೂಜಿಸುವೆನೊ೫
ಲೋಪವಿಲ್ಲದೆ ದಿವ್ಯ ಧೂಪವನರ್ಪಿಸಿ
ದೀಪಂಗಳನು ಬಹು ದೀಪಿಸುವೆನು ೬
ಪಾಲು ಸಕ್ಕರೆ ಘೃತ ಮೇಲಾದ ಭೋಜ್ಯವ
ಮೇಳೈಸುವೆನು ಶ್ರೀಲೋಲನಿಗೆ ೭
ಕರ್ಪೂರವೀಳ್ಯವನರ್ಪಿಸಿ ಮೋದದಿ
ಕರ್ಪೂರದಾರತಿಗಳರ್ಪಿಸುವೆನು ೮
ಮಣಿದು ನಿನ್ನಂಘ್ರಿಗೆ ಹಣೆಯ ಚಾಚುತ ಮನ
ದಣಿಯುವಂದದಿ ನಾ ಕುಣಿದಾಡುವೆ ೯
ಸದಯ ನಿನ್ನಂಘ್ರಿಯ ಹೃದಯಾರವಿಂದದ
ಸದನದೊಳಿಂಬಿಟ್ಟು ಮುದಮೊಂದುವೆ ೧೦
ಶರಣಾಗತರನೆಲ್ಲ ಕರುಣದಿ ಸಲಹುವ
ವರದವಿಠಲ ಪುಲಿಗಿರಿಧಾಮನೆ ೧೧

 

೧೯೩
ಬಿಡಲಾರೇ ಬಿಡಲಾರೇ ಪ
ಕಡಲೊಳು ಪವಡಿಪ ಮೃಡನುತನಾಮನ ಅ.ಪ
ಕಾಶಿಯೊಳಗೆ ವಿಶ್ವೇಶನು ಬೋಧಿಪ
ದಾಶರಥಿಯ ವರ ಸಾಸಿರ ನಾಮವ ೧
ಗೌರವದಿಂದಲಿ ಗೌರಿಯು ಜಪಿಸುವ
ಗೌರನೆನಿಪದುರಿತಾರಿಯ ನಾಮವ ೨
ಭಕ್ತರು ಸಕಲ ವಿರಕ್ತರು ನಿತ್ಯದಿ
ರಕ್ತಿಪಡುವ ಗುಣಯುಕ್ತನ ನಾಮನ ೩
ಇಷ್ಟದಿ ನೆನೆವರ ಕಷ್ಟವಳಿದು ಮನ
ದಿಷ್ಟ ಕೊಡುವ ಪರಮೇಷ್ಟಿಯ ನಾಮವ ೪
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ದೊರೆ ವರದನ ನಾಮವ ೫

 

ಕೃಷ್ಣನನ್ನು ಕುರಿತು
೧೫೮
ಬೃಂದಾವನವೇರಿ ಬಹುನಲವಿಂದ ಬಂದ ಶೌರಿ ಪ
ಬೃಂದಾರಕವರದಿಂದ ಶೌರಿಯಾ
ನಂದವ ಸೇವಕ ಬೃಂದ ತೋರಿ ಅ.ಪ
ಕುಂದಮುಕುಳದಿಂದಾ ಕುಮುದ ಸುಗಂಧಿಯಗಳಿನಿಂದಾ
ಕೆಂದಾವರೆ ಶ್ಯಾವಂತಿಗೆ ಜಾಜಿಯಿಂದ ರಚಿಸಿ ಸೊಗ
ಸಿಂದಲಿ ಮೆರೆಯುವ ೧
ಸುತ್ತಿರೆ ಹಸ್ತಿಗಳೂ ಕೂರ್ಮನು ಪೊತ್ತಿರೆ ಮಧ್ಯದೊಳು
ಮತ್ತೆ ಫಣೀಂದ್ರನ ಮಸ್ತಕದಲ್ಲಿರೆ
ಸ್ವಸ್ತಿಕಾದಿ ಬಹು ಚಿತ್ರದಿ ಶೋಭಿಪ ೨
ಪಂಕಜ ಚಿಹ್ನೆಗಳಾ ಸೂರ್ಯ ಶಶಾಂಕ ಸುರೇಖೆಗಳಾ
ಶಂಖ ಚಕ್ರ ಬಿರುದಾಂಕಿತ ದಿವ್ಯ ವಿಟಂಕದಿಂದ ಬಲು
ಬಿಂಕದೊಳೆಸೆಯುವ೩
ಕೋಟೆಯತೆನೆಗಳಲಿ ದಿವ್ಯವಧೂಟಿಯರೊಲವಿನಲಿ
ನಾಟಕ ರಚನೆಯ ಪಾಠಕರಂದದಿ ನೋಟಕರಿಗೆ ಬಹು
ದೀಟಿಯಲಿ ತೋರುವ ೪
ಶಾರದಾಭ್ರನೀಲ ಶರೀರದಿ ಹೈರಣ್ಮಯ ಚೇಲಾ
ಹಾರಮಕುಟ ಕೇಯೂರ ಕಟಕಮಂ
ಜೀರಭೂಷಣೋದಾರ ವಿಹಾರ ೫
ಮಂಗಳರವದೊಳಗೆ ಶಂಖ ಮೃದಂಗ ಧ್ವನಿಯೊಳಗೆ
ಸಂಗತ ಸುರವಾರಾಂಗನೆಯರು ಗಾನಂಗಳಿಂದ ನಾ
ಟ್ಯಂಗಳ ರಚಿಸಲು ೬
ವರವಿಪ್ರರು ಪೊಗಳೆ ಛತ್ರಚಾಮರಗಳ ನೆಳಲೊಳಗೆ
ಪರಿಪರಿ ಜ್ಯೋತಿಗಳೆಸೆಯಲು ಪುಲಿಗಿರಿನ
ವರದವಿಠಲನು ವರಗಳ ಬೀರುತ ೭

 

೧೩೭
ಭಜತಿ ಭುಜಗಶಯನಂ ಸದಾಹೃದಿ ಪ
ಸಜಲಜಲದಶಾರೀರಮಕುಂಠಿತ
ಭುಜಗಶೈಲ ಶಿಖರಾಲಯಮನಿಶಂ ಅ.ಪ
ಶೇಷ ಪವನ ಸಂವಾದವದೇನ ವಿ
ಶೇಷ ಕರುಣಾಯಾತ್ರಾಗಮೀಶಂ೧
ರಾಮ ಲಕ್ಷ್ಮಣಾರಾಧಿತಮಜಭವ
ಪುಂಡರೀಕ ದಿವ್ಯಾದ್ರಿವಿಹಾರಂ೨
ಪಾಂಡುತನಯ ಮಾಂಡವ್ಯಾರಾಧಿತ
ಪುಂಡರೀಕ ದಿವ್ಯಾದ್ರಿವಿಹಾರಂ ೩
ಚಂಡಕಿರಣ ರಥಮಂಡನಾಂಗಮಜಮಂಡಜಾತಾ
ವರ ವಾಹನಗಮನಂ ೪
ಪರಮಪುರುಷಮಖಿಳಾಗಮವೇದ್ಯಂ
ವರದವಿಠಲ ಮಮಚಿಂತಯದಾದ್ಯಂ ೫

 

೨೧೬
ಭಜನೆಯ ಮಾಡಬಾರದೆ ಭಕ್ತ ಮೀರದೆ ಪ
ಭುಜಗಶಯನ ಗೋದ್ವಿಜ ಕುಲದೇವನ ಅ.ಪ
ಅಜಭವಮುಖ ಸುರವ್ರಜ ವಂದ್ಯನಪದ
ಭಜಕ ಸುಜನರಿಗೆ ನಿಜಸುಖದಾತನ ೧
ಪಂಕಜನೇತ್ರನ ಪರಮಪವಿತ್ರನ
ಶಂಕರನುತ ನಿಷ್ಕಂಲಕನ೨
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ದೊರೆ ವರದನ ೩

 

೧೩೮
ಭಾವಯೆ ಭವಭಾವಿತಚರಣಂ ಭವಭಯಾಪರಿಹರಣಂ ಪ
ಭಾವನೋಜಿತ ಭಾಗ್ಯವಿತರಣ
ಕೋವಿದಂ ನಿಜ ಭಾವದಂ ಹೃದಿಅ.ಪ
ವ್ಯಾಘ್ರಭೂಮಿಧರಾಗ್ರವಿಹರಣಮಗ್ರಜನ ಶರಣ್ಯಂ
ಶೀಘ್ರ ಫಲದಮುದಗ್ರಪೌರುಷವಿಗ್ರಹಂ ಸುರಾಗ್ರಗಣ್ಯಂ೧
ಕುಂಡಲೀಫಣಮಂಡಲಾಕೃತಮಂಡಜಾತಗಮನಂ
ಪುಂಡರೀಕಸುಮಮಂಡಿತಹಾರಮಖಂಡಿತ
ಹಿಮಕರಮಂಡಲವದನಂ ೨
ರಾಮಮಿನಕುಲಸೋಮಮಾಶ್ರಿತ ಪ್ರೇಮಮಾಜಿಭೀಮಂ
ಶ್ಯಾಮಜಲಧರಕೋಮಲಂಗುಣಧಾಮಮೀಶಪ್ರೇಮನಾಮಂ೩
ನಂದನಂದನಮಿಂದಿರಾ ಹೃದಳಿಂದ ಲೋಲಮಿಳಿಂದಂ
ಕುಂದರದನಮಮಂದಕರುಣಾನಂದಿತಾಖಿಲಲೋಕವೃಂದಂ೪
ಸಾರನಿಗಮವಿಹಾರ ಕುಶಲಮುದಾರ ವರದವಿಠಲಂ
ಭೂರಮಾಕುಚಕೋರಕಾಂಚಿತ ಚಾರುಮುಕ್ತಾಹಾರ ಪಟಲಂ ೫

 

೧೫೯
ಮಂದರಧರ ಗೋವಿಂದ ಮುಕುಂದ ಸ
ನಂದವಂದ್ಯನೆ ಲಾಲಿಸೋ ಪ
ಕುಂದರದನ ಶರದಿಂದುವದನ ಮುಚು
ಕುಂದ ವರದನೆ ಪಾಲಿಸೋ ಅ.ಪ
ಸಾರಸಭವನುತ ಸಾರಚರಿತ ಸಂ
ಸಾರಪಯೋನಿಧಿ ಪಾರದನೆ
ವಾರಿಧಿ ಮದಹರ ವಾರಿಧಿ ನಿಭ
ಶಾರೀರ ವಿಹಾರ ವಿಶಾರದನೆ ೧
ಶ್ರೀಶ ನಿಖಿಲಲೋಕೇಶ ಜನಕಭವ
ಪಾಶ ವಿಮೋಚನ ಪಟುಚರಿತ
ಈಶ ವಿನುತ ಸರ್ವೇಶ ಪರಾತ್ಪರ
ಕೇಶವ ಸದ್ಗುಣ ಗಣಭರಿತ ೨
ಧರೆಯೊಳು ಶ್ರೀ ಪುಲಿಗಿರಿಯೊಳು ನೆಲೆಸಿಹ
ಶರಣರ ಸಲಹುವ ಶ್ರೀಧರನೆ
ವರದವಿಠಲ ಸುಖಕರಣ ಕುಶಲ
ಕರಿವರದ ಚಕ್ರಧರ ವರನೆ ೩

 

ದಶಾವತಾರವನ್ನು ಹೇಳುವ
೧೫೧
ಮನವೇ ಚಿಂತಿಸು ಹರಿ ಮುರಾರಿಯ ಪ
ಮನವೇ ಚಿಂತಿಸು ಮಾಯಾ ಮನುಜಾಕಾರವ ತಾಳ್ದ
ಸನಕಾದಿ ಸನ್ಮುನಿವಿನುತಪದ ವನಜಾತಯುಗಳನನು ಅ.ಪ
ಸ್ಮರವಿರಿಂಚಿಯ ಪಿತನ ಗೌರೀವರ
ಪುರುಹೂತರಿಗೆ ತಾತನ ರತಿದೇವಿ
ಸರಸತಿಯರ ಮಾವನ ಶ್ರೀರಮಣನ
ಸರಸಿಜಾಸನನಿಗೆ ಕರುಣಿಸಿವೇದವ
ಗಿರಿಯನೆಗಹಿ ವಿಶ್ವಂಭರೆಯ ದಾಡೆಯೊಳೆತ್ತಿ
ತರಳಗಭಯವನಿತ್ತು
ಧರೆಯ ಮೂರಡಿ ಬೇಡುತ
ತರಿದು ನೃಪರನು ದುರುಳರಾವಣ
ಹರಣ ನೀಲಾಂಬರ ಯದುವರ ತುರಗವಾಹನ ೧
ನಿಗಮಾಂತಗೋಚರನ ನಿತ್ಯಾನಂದ
ಸುಗುಣ ಗಣಾರ್ಣವನ ಸಜ್ಜನರಿಗೆ
ಸುಗತಿಯಪಾಲಿಪನ ಸುರಪಾಲನ
ನಿಗಮಚೋರನಕೊಂದು
ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ
ಮೃಗನರವ ರೂಪವ ತಾಳಿ
ಜಗವನಳೆದನ ಭೃಗುಜ ಶಾಖಾ
ಮೃಗವ ವಧಿಸಿ ಹಲನೇಗಿಲನು ಪಿಡಿ
ದುಗುರುಕೊನೆಯಿಂ ನಗವನೆಗಹಿದ
ನಿಗಮನುತ ಕಲಿಯುಗದ ವೈರಿಯ ೨
ಪುಲಿಯ ಸಂಹರಿಸಿದನ ಮಾಂಡವ್ಯಗೆ
ಒಲಿದು ಪೂಜೆಯ ಕೊಂಬನ ಕುಂಭಜಶಾಪ
ಕಲುಷವ ಕಳೆದವನ ವ್ಯಾಘ್ರಾಚಲದಲಿ ನಿಂತು ಭಕ್ತರ
ಸಲಹುವ ಕಾರುಣ್ಯನಿಲಯ ಸಜ್ಜನಮನೋ
ನಿಲಯ ಶ್ರೀನಿವಾಸನ
ಜಲಜ ಬಾಂಧವಕುಲಪವಿತ್ರನ
ಜಲಜನೇತ್ರನ ಜಲಜಗಾತ್ರನ
ವಿಲಸಿತಾಂಬುಜ ಮಾಲ ಭಕ್ತರಿ
ಗೊಲಿವ ಶ್ರೀ ವರದಾರ್ಯವಿಠಲನ ೩

 

೧೯೪
ಮನೆಗೆ ಬಾರೋ ರಂಗ ಮನಸಿಜಯ್ಯನೆ
ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ
ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ
ಮನಗೆ ಬಾರೋ ರಾಮ ಅ.ಪ
ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ
ಮನ ದಣಿವಂದದಿ ಕುಣಿದೇನೊ ರಂಗಯ್ಯ ೧
ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ
ಧನವು ನಿನ್ನದು ಎನ್ನ ಘನವು ನಿನ್ನದು ರನ್ನ ೨
ದರಹತಿತಾನನ ಸರಸಿಜನಯನ
ವರದವಿಠಲ ಪುಲಿಗಿರಿ ವರಸದನ ೩

 

೧೩೯
ಮರೆತಿರಲಾರೆ ಮನಸಾರೇ ಹರೇ ಪ
ಮರೆತಿರಲಾರೆ ನಾ ಮಹಿತಚಾರಿತ್ರನ
ಸರಸಿಜಪತ್ರ ನೇತ್ರನ ಅ.ಪ
ಬಗೆಬಗೆ ರತಿಯಲಿ ಜಗವನು ಮೋಹಿಪ
ಸುಗುಣನ ಜಗತ್ಪ್ರಾಣನ ೧
ಚೇತನರಿಗೆ ಸುಖದಾತನ ದುಃಖ ವಿ
ಘಾತನ ಲಕ್ಷ್ಮೀನಾರಾಯಣನ ೨
ದಾಸರ ಹೃದಯನಿವಾಸನ
ದೋಷನಿರಾಸನ ಶ್ರೀನಿವಾಸನ ೩
ವೆಂಕಟರಮಣನ ಕಿಂಕರಶರಣನ
ಸಂಕಟಹರ ನಿಷ್ಕಳಂಕನ ೪
ಮಾನಿನಿಯ ಅಭಿಮಾನವ ಕಾಯ್ದನ
ದೀನರ ಹರ್ಷನಿಧಾನನ ೫
ರಾಮನ ದೈತ್ಯವಿರಾಮನ ಪಾವನ
ನಾಮನ ಹೃದಯಾರಾಮನ ೬
ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ
ವರದ ವಿಠಲವರದನ ದೇವನ ೭

 

ಈ ಮೂರು ಕೃತಿಗಳು
೨೩೦
ಮಳೆಯ ಪಾಲಸಯ್ಯ ಮಂಗಳ-
ನಿಳಯ ಪಾಲಿಸಮ್ಮ ಪ
ಬಿನೆಯೊಳು ಮಳೆಯನು ತಳೆಯದೆ ತೃಣಗಳು
ಬೆಳೆಯದ ಗೋವುಗಳಳವುವಯ್ಯ ಅ.ಪ
ಗೋವಿಪುರ ಕುಲವ ಕಾಯುವ
ದೇವನು ನೀನಲ್ಲವೇ
ಮೇವುಗಳಿಲ್ಲದೆ ಗೋವುಗಳೆಲ್ಲವು
ಸಾವುವು ನಿನ್ನೊಳಿದಾವನು ಕಾವನು ೧
ಕರೆಯೊಳು ನೀರಿಲ್ಲ ಬಾವಿಗ-
ಳೊರತೆಯ ಸೋರಿಲ್ಲ
ತುರುಗಳು ಜೀವನದಿರವನು ಕಾಣದೆ
ಹರಣವ ಬಿಡವುವು ಕರುಣದಿ ಬೇಗನೆ ೨
ಬಲರಿಪುಖತಿಯಲಿ ಬಾಧಿಪೆ
ಜಲಮಯ ರೀತಿಯಲಿ
ಚಲಿಸದೆ ಕೊಡೆವಿಡಿದಳುಹಿದೆ ಕರದೊಳು
ಚಲವನು ಗೋವ್ಗಳ ಬಳಗವನೀಗಳು ೩
ಜಲನಿಧಿ ಕೃತ ಶಯನ ಶಾರದ
ಜಲರುಹದಳನಯನ
ಜಲಧೀಪತಿ ಜಲಜರ ಮೂರುತಿ
ಜಲಜಕರಗಳು ಜಲದಾಗರದಿಂ ೪
ದಾರಿಯ ಜನರೆಲ್ಲ ಬಹು ಬಾ-
ಯಾರಿ ಬರುವರಲ್ಲ
ದೂರಗಿಂ ತಂದಿಹ ನೀರನು ಲೋಭದಿ
ನಾರಿಯರೆಲ್ಲ ವಿಚಾರಿಸುತಿರ್ಪರು ೫
ಬೆಳೆದಿಹ ಸತ್ಯಗಳು ಬಿಸಿಲಿನ
ಜಳದಲಿ ಬಾಡಿಹುವು
ನಡಿನ ನಯನ ನಿನ್ನೊಲುಮೆಯ ತೋರಿಸಿ
ಘಳಲನೆ ಪೈರುಗಳಳಿಯುತ ತೆರದೊಳು ೬
ಕರುಣಾನಿಧಿಯೆಂದು ನಿನ್ನನು
ಶರಖಹೊಕ್ಕೆನಿಂದು
ಶರಣಭರಣ ಪುಲಿಗಿರಿಯೊಳು ನೆಲೆಸಿಹ
ವರದ ವಿಠಲ ದೊರೆ ವರದ ದಯಾನಿಧೆ ೭

 

೧೪೧
ಮಾಮವ ಮೃಗರಿಪು ಗಿರಿರಮಣ ಮಹಿತಗುಣಾಭರಣ ಪ
ಕಾಮಕಲುಷಭವಭೀಮ ಜಲಧಿಗತ
ತಾಮಸಾತ್ಮಕಂ ದುರಿತಮಹಿ ಅ.ಪ.
ನಿಟಿಲನಯನ ಮಕುಟಲಸಿತವದನ ನೀರಾಪೂರಾ
ನೀಲಜಲದ ಮದಹೇಳನ ಸುಭಗಶರೀರ
ಕುಟಿಲ ದನುಜಕುಲಶಿಖರಿ ಕುಲಿಶಧರ
ಕುಂದಕುಟ್ಮಲ ಸಮಾನ ಶುಭರದನ ೧
ವದನವಿಜಿತ ಶರದಮೃತಕಿರಣ ಸುಕುಮಾರಾಕಾರಾ
ವತ್ಸಲಸಿತ ಶುಭಲಕ್ಷಣ ಲಕ್ಷ್ಮೀಧಾರಾ
ಸದಯ ಹೃದಯ ಪರಿತೋಷಿತ ನತಜನ
ಸಾಮಗಾರತ ಸತತಶುಭ ಚರಿತ ೨
ಸಕಲದಿವಿಜನತ ಚರಣಕಮಲ ನಿರಪಾಯಾಮೇಯ
ಸಂತತಾರ್ತಾದರಚಕ್ರ ವಿಬುಧಗೇಯ
ಪ್ರಕಟಮಹಿಮ ಮಾಂಡವ್ಯ ಮನೋರಥ
ಪಾರಿಜಾತ ದುರಿತಾರಿ ವರದನುತ ೩

 

೧೪೦
ಮಾಮವದೇವ ಮಹಾನುಭಾವ ಶ್ರೀಮನೋಹರ ನಿ
ರಾಮಯ ಚಿನ್ಮಯರಾಮ ರಮ್ಯಗುಣಧಾಮ ತಾವಕಂ ಪ
ಪಂಕಜನೇತ್ರ ಪರಮಪವಿತ್ರ ಶಂಖಚಕ್ರಧರ
ಕಿಂಕರಾರ್ತಿಹರ ಪಂಕಜಾಲಯಾಲಂಕೃತಗಾತ್ರ ೧
ನೀಲಾಂಬುದಾಭ ನೀರಜನಾಭ ಬಾಲಭಕ್ತ ಪರಿ
ಪಾಲ ಹೇಮಮಯಚೇಲ ನವ್ಯ ವನಮಾಲ ಸುಶೋಭಸ್ ೨
ಕರುಣಾಲವಾಲ ಖಳಕುಲಕಾಲ ಹರಿಣಹರಣ ಧರ
ವರಶಿಖರಾಲಯ ವರದವಿಠಲ ಸುಖಕರಕಮಲಾಲಯ ೩

 

ಇದು ವೀಶೆಷವಾದ ನಿಂದಾಸ್ತುತಿ.
೨೦೨
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ
ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ
ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ
ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ
ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ೧
ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ
ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ ೨
ಜ್ಷಾನವಂತನೆಯ ಬಹುಮಾನವಂತನಾದರೂ ಅ
ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ೩
ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ
ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ ೪
ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ
ಪಾಪಗಳನಪಹರಿಪ ದೀಪನಾ ಬಿಡದು ಎಂಬ ೫
ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ
ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ೬
ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ
ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ೭
ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ
ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ ೮
ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ
ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ ೯
ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ
ಜಾರನಾಗಿರಲಿ ಸಂಸಾರವೈರಿಯು ನೀನೆಂಬ ೧೦
ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ
ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ೧೧

 

೨೧೭
ಮುತ್ತು ಬಂತಿದೆ ದಿವ್ಯ ಮುತ್ತು ಕೊಳ್ಳಿರೋ ಪ
ಮುತ್ತು ಬಂದಿಹುದೀಗ ನೀವೇತ್ತಿಕೊಳ್ಳಿರೆಲ್ಲ ಬಂದು
ಉತ್ತಮ ವ್ಯಾಘ್ರಾದ್ರಿ ಪುರುಷೋತ್ತಮನೆಂಬುವ ದಿವ್ಯ ೧
ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದ ದುರ್ಲಭ ಮುತ್ತು
ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ ೨
ಧನವಂತರಿಗೆ ದೊರಕುವದಲ್ಲ ಜನರ ಕೈಗೆ ಸಿಕ್ಕುವದ್ಲ
ಮನದಲ್ಲಿ ಧ್ಯಾನಮಳ್ಪ ಮುನಿಗಳ ಸ್ವಾಧೀನವಾದ ೩
ಕ್ಷೀರಪಾರಾವಾರದಲ್ಲಿ ತೋರಿ ಮೆರೆವ ಮುತ್ತು
ಶ್ರೀರಮಾ ಮನೋಹರನುದಾರ ವರದ ವಿಠಲನೆಂಬ ೪

 

೨೦೩
ಯಾಕೆ ಕಷ್ಟ ಪಡುವೆ ಲೋಕನಾಯಕ
ಸಾಕು ನಿನ್ನ ಮಾಯಾ ಜೋಕೆಯಿಂದ ಸಲಹು ನಮ್ಮ ಪ
ಸಿರಿಯೆ ಪಟ್ಟದರಸಿ ನಿನಗೆ ಕಿರಿಯ ಮಡದಿ ಧರಣಿಯಾಗೆ
ಹಿರಿಯ ಮಗನು ಸರ್ವಜನರೊಳಿರುತ ಕಾಮಿಸುವನು ಜಗವ ೧
ಮಗನು ಜಗವ ನಿರ್ಮಿಸುವನು ಮಗುಳೆಲಯವಗೈವ ಮೊ-
ಮ್ಮಗನು ನಿನ್ನ ದಾಸಿ ಈ ಜಗವ ಮೋಹಿಸುತ್ತಲಿರವಳು ೨
ನೀರೊಳಿರುತ ಮೋರೆ ಮುಚ್ಚಿ ಕೋರೆ ಮಸೆದು ಕಂಬದಿಂದ
ಹಾರಿಯೆಳೆದು ಧಾರಿಣಿಯ ಧೀರ ನೃಪರನ್ನೆಲ್ಲ ಕೊಂದು ೩
ಊರುಬಿಟ್ಟು ಹಾರಿ ವನವ ಜಾರನಾಗಿ ಭಂಗಪಡಿಸಿ
ನಾರಿಯರನು ದಾರ ತೇಜಿಯೇರಿ ಮೆರೆದು ಬಾರಿ ಬಾರಿ೪
ಪರಮಪದವನಗಲಿ ಚಂಡ ಕರಣರಥವ ನುಳಿದು ಕ್ಷೀರ
ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದವಿಠಲ೫

 

೧೯೫
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ
ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ
ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ
ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು ೧
ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ
ಪಾಲಿಸಿದವ ಸಿರಿಲೋಲನಲ್ಲವೆ ೨
ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ
ಭೂಪ ವರದವಿಠಲಾಪದ್ರಕ್ಷಕನಿರಲು ೩

 

೧೯೬
ಯಾಕೆ ಕೃಪೆ ಬಾರದೋ ನಿನಗ್ಯಾಕೆ ದಯಬಾರದೊ ಪ
ಲೋಕರಕ್ಷಕ ದುಷ್ಟಕಾಲಶಿಕ್ಷಕ ನಿನಗ್ಯಾಕೆ ಅ.ಪ
ಪಕ್ಷಿವಾಹನನೆನಿಸಿ ಲಕ್ಷಿಸದಿರಲು ಲೋಕದಿ
ಲಕ್ಷಣವೆಲ್ಲವು ಶುಭಲಕ್ಷಣ ಮೂರುತಿ ನಿನಗ್ಯಾಕೇ ೧
ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ
ದಕ್ಷಿಣ ಶೇಷಾದ್ರಿವಾಸ ರಕ್ಷಿಸು ನಿನಗ್ಯಾಕೇ ಕೃಪೆ ೨
ವಾಸವಸನ್ನುತ ಶ್ರೀನಿವಾಸ ನಿನ್ನದಾಸನೊಳು
ದೋಷವನೆಣಿಸದೆ ಕಾಯೊ ದೋಷರಹಿತನೆ ನಿನಗ್ಯಾಕೆ ೩
ಸೃಷ್ಟೀಶ ನಿನ್ನ ಶುಭ ದೃಷ್ಟಿಯಿಂದ ನೋಡಿ ಎನ್ನ
ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು ೪
ವಾರಣವರದಭವ ತಾರಣ ಚರಣ ಗುಣ ಪು
ರಾಣ ವರದವಿಠಲ ಕಾರುಣಿಕರರಸ ನಿನಗ್ಯಾಕೇ ೫

 

೧೫೩
(ಆ) ಶ್ರೀರಾಮಸ್ತುತಿಗಳು
ರಾಮನ ನೆನೆ ಮನವೆ ಹೃದಯಾರಾಮನ ನೆನೆ ಮನವೆ ಪ
ರಾಮ ಜಗದಭಿರಾಮನ ಮೇಘಶ್ಯಾಮನ
ಸದ್ಗುಣಧಾಮನ ಸೀತಾ ಅ.ಪ
ದಶರಥ ನಂದನನಾ ಧರಣಿಯೊಳಸುರರ ಕೊಂದವನ
ಪಶುಪತಿಚಾಪವ ಖಂಡಿಸಿ ಮುದದಿಂ
ವಸುಮತೀಸುತೆಯಂ ಒಲಿದೊಡಗೂಡಿ ೧
ತಂದೆಯಮಾತಲಿವನಕೈತಂದುಸರಾಗದಲಿಬಂದವಿರಾಧನ
ಕೊಂದು ನಿಶಾಚರಿಯಂದವಳಿದು ಖಳವೃಂದವ ಸವರಿದ ೨
ಸೀತೆಯನರಸುತಲಿ ಕಬಂಧನ ಮಾತನನುಸರಿಸುತ
ಲಾತನಮಗನೊಳು ಪ್ರೀತಿಯಿಟ್ಟು ಪುರಹೂತನ
ಸುತನ ಘಾತಿಸಿ ದಾತನ ೩
ತರಣಿತನಯನಿಂದ ಕಪಿಗಳಕರಸಿ
ವಿಲಾಸದಿಂದ ತರುಣಿಯನರಸಲು
ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ ೪
ಧರಣಿಜೆಯನುಕಂಡುವನವನುಮುರಿದುಗುರುತುಗೊಂಡು
ಅರಿಪುರವನು ಸುಟ್ಟುರುಹಿದ ವಾನರವರನಿಗೆ ಸೃಷ್ಟಿಪ ಪದವಿತ್ತಾತನ ೫
ಶರನಿಧಿಯನು ಕಟ್ಟಿ ಶತ್ರುಕರವನು ಹುಡಿಗುಟ್ಟಿ
ಶರಣನ ಲಂಕೆಗೆ
ದೊರೆಯನು ಮಾಡಿ ಸಿರಿಯನಯೋಧ್ಯೆಗೆ ಕರೆತಂದಾತನ೬
ಧರಣಿಯ ಪಾಲಿಸುತ ಧರ್ಮದ ಸರಣಿಯ ಲಾಲಿಸುತ
ಶರಣಾಭರಣ ಪುಲಿಗಿರಿಯೊಳು ನೆಲಸಿದ
ವರದವಿಠಲದೊರೆ ಪರಮೋದಾರನ ೭

 

೧೫೪
ರಾಮಭಜೇ ತೇ ಪದಯುಗಳಂ ಸೀತಾ ಪ
ರಾಮಭಜೇ ತೇ ಪದಯುಗಳಂ
ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ
ದಶರಥ ಹೃದಯಾನಂದಕರಂ ತ್ರಿ
ದಶಗಣ ಚಿತ್ತಾಮೋದಕರಂ ೧
ಪೂರಿತ ಕೌಶಿಕಜನಂ ಸಂ
ತಾರಿತ ಗೌತಮ ಲಲನಾಂ ೨
ಖಂಡಿತ ಶಂಕರಚಾಪಂ ಪರಿ-
ದಂಡಿತ ಭಾರ್ಗವ ಕೋಪಂ ೩
ಸ್ವೀಕೃತ ಜಾನಕೀಹೃದಯಂ ದೂ
ರೀಕೃತ ಪಾತಕನಿಚಯಂ ೪
ಪಾಲಿತ ಮಾತಾಪಿತೃ ವಚನಂ ಸಂ
ಲಾಲಿತ ಮುನಿಜನ ಸ್ತುತಿರಚನಂ ೫
ಭರತ ಸಮರ್ಪಿತ ನಿಜರಾಜ್ಯಂ ಮುನಿ
ವರಭಾರದ್ವಾಜಾರ್ಪಿತ ಭೋಜ್ಯಂ ೬
ದಂಡಕಾರಣ್ಯಂ ಪಾವನಚರಣಂ ಉ-
ದ್ದಂಡ ವಿರಾಧಾ ಪಾತಕಹರಣಂ ೭
ಕುಂಭಜಾರ್ಪಿತ ಶರಕೋದಂಡ ಸಂ
ರಂಭ ನಿರ್ಜಿತ ರಾಕ್ಷಸದಂಡಂ ೮
ಪಂಚವಟೀತಟ ಕೃತವಾಸಂ ದೃ
ಗಂಚಲ ಧೃತಗಜದುಲ್ಲಾಸಂ ೯
ಶೂರ್ಪನಖೀ ವಚನಾಲೋಲಂ ಸಹ
ಜಾರ್ಪಿತ ವಿವಿಧಾಯುಧ ಜಾಲಂ ೧೦
ರೂಪನಿರ್ಜಿತ ಸುಮಬಾಣಾಂಗಂ ವಿ
ರೂಪಿತ ದುಷ್ಟ ಶೂರ್ಪನಖಾಂಗಂ ೧೧
ಖರತರ ಖರದೂಷಣಕಾಲಂ ಸುರ
ನರವರ ಮುನಿಗಣ ಪರಿಪಾಲಂ ೧೨
ಮಾಯಾಮೃಗಾರ್ಪಿತ ಬಾಣವರಂ ಜ-
ಟಾಯು ಸಂಪಾದಿತ ಲೋಕವರಂ೧೩
ರಾವಣಹೃತ ನಿಜಪತ್ನೀಕಂ ಲೋ-
ಕಾವನಗತ ಕೋಪೋದ್ರೇಕಂ೧೪
ಸಾಧಿತ ಶಬರೀ ಮೋಕ್ಷಕರಂ ಕ-
ಬಂಧ ಬಂಧನ ಮೋಚನ ಚತುರಂ ೧೫
ವಾತ ತನೂಭವ ಕೃತಸ್ತೋತ್ರಂ ಪಂ
ಪಾತಟ ನಿರ್ಮಿತ ಸುಕ್ಷೇತ್ರಂ ೧೬
ಶಿಕ್ಷಿತ ಸಂಕ್ರಂದನ ತನುಜಂ ಸಂ-
ರಕ್ಷಿತ ಚಂಡಕಿರಣ ತನುಜಂ ೧೭
ಸೀತಾಲೋಕನ ಕೃತಕಾಮಂ ನಿಜ
ದೂತಾಮೋದನ ಸುಪ್ರೇಮಂ ೧೮
ನಿಜಕರ ಭೂಷಣ ದಾತಾರಂ ಧುರ
ವಿಜಯ ವನಾಲಯ ಪರಿವಾರಂ ೧೯
ಧೂತಾಹೃತ ಶುಭದೃಷ್ಟಾಂತಂ ವಿ-
ಜ್ಞಾತ ನಿಜಸ್ತ್ರೀ ವೃತ್ತಾಂತಂ ೨೦
ಭೀಷಣ ಜಲನಿಧಿ ಬಂಧಕರಂ ವಿ
ಭೀಷಣ ಸಂರಕ್ಷಣ ಚತುರಂ೨೧
ಶೋಷಿತ ರಾವಣ ಜಲಧಿಂ ಸಂ-
ತೋಷಿತ ದೈವತಪರಿಧಿಂ ೨೨
ಸೀತಾ ಸಮಾಶ್ರಿತ ವಾಮಾಂಕಂ ಪರಿ-
ಭೂತ ಪಾತಕ ನಿಜನಾಮಾಂಕಂ ೨೩
ಸ್ವೀಕೃತ ಸಾಕೇತಾವಾಸಂ ಅಂ-
ಗೀಕೃತ ಮಾನುಷವಿಲಾಸಂ ೨೪
ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ
ವರದವಿಠಲಮತಿಶಯ ರುಚಿರಂ ೨೫

 

೧೬೦
ವಂದೇಹಂ ಕಮಲಾದ್ರಿ ನಿವಾಸಂ ಪಲ್ಲವೀಶಂ
ಇಂದೀವರಭಾಸಂ ಪ
ಬೃಂದಾವನ ಪರಿಶೀಲನಮನುಗತ
ಬೃಂದಾರಕ ಗಣಾನಂದ ವಿಲಾಸಂ ಅ.ಪ
ಅಷ್ಟತೀರ್ಥಲಸದಷ್ಟ ಶೈಲಪರಿ
ಶಿಷ್ಟ ಶಿಖರಿ ವಿಹಾರಂ
ಅಷ್ಟಮೂರ್ತಿ ಪರಮೇಷ್ಠಿ ಸಮರ್ಚಿತ
ಮಷ್ಟ ಸಿದ್ಧಿದಾತಾರ ಮುದಾರಂ ೧
ಅಂಬುಜಭವಪಿತಮಂಬುಜ ಪತ್ರ ವಿ
ಡಂಬಿ ನಯನಯುಗಳಂ
ಜಂಭನಿಸೂದನ ಡಂಭರಹಿತ ಘಟ
ಸಂಭವನುತ ಚರಣಾಂಬುಜ ಯುಗಳಂ ೨
ನಂದಗೋಕುಲಾನಂದ ಕಾರಣ
ನಂದೋಪವರ ಕರುಣಂ
ಮಂದಹಾಸ ವಿಜಿತೇಂದು ಕಿರಣಮತಿ
ಸುಂದರಾಂಗಮಾನಂದ ವಿತರಣಂ ೩
ಕಲಮಧುರಸ್ವನಚಲಿತ ಹೃದಯ ಗೋ
ಕುಲ ಮೋಹನ ವೇಣುನಿನಾದಂ
ಚಲವಲಯಕ್ಷಣ ವಿಲಸಿತ ಪಲ್ಲವ
ಲಲನಾಜನ ಸಂಮಿಳಿತ ವಿನೋದಂ ೪
ಧರಣೀಭರ ಪರಿಹರಣೋಚಿತ ವರ
ಕರುಣಾಯತ ನಿಜವೇಷಂ
ಹರಿಣಾರಿ ಮಹೀಧರಣಾಲಯ ಶ್ರೀ
ವರದಾನತಪದಶರಣ ಸುಪೋಷಂ ೫

 

ಈ ಕೀರ್ತನೆಗಳಲ್ಲೂ
೨೨೬
ವಂದೇಹಂ ವ್ಯಾಘ್ರಾದಿನಿವಾಸಂ ವೆಂಕಟೇಶಂ
ನಿರ್ಮಲವಿಧಹಾಸಂ ಪ
ವೃಂದಾರಕ ಗಣವಂದಿತ ಪದಮರವಿಂದನಯನ
ಮಾನಂದ ವಿಲಾಸಂ ಅ.ಪ
ಶ್ರೀವೇದಪುಷ್ಕರಿಣೇ ತಟ ಶ್ರೀ ಕರೋದ್ಯಾನ ವಿಹಾರಂ
ಪಾವನವೃದ್ಧಿ ವಿಮಾನಾಂತರ ಪದ್ಮಾಸನಕೃತ ನಿಜಪಾರಿಚಾರಂ ೧
ಸಕಲಲೋಕಸಂರಕ್ಷಣಶೀಲನಸಂಪದಮಾತ್ರಿತಸುರಭೂಜಂ
ಅಕುಟಿಲ ಭಕ್ತಿ ಮಾಂಡವ್ಯ ಮುನೀಂದ್ರ ಆಕಲಿತ
ನಿಜ ಸಂಸ್ತುತಿ ಭಾಜಂ ೨
ಸಾರಸಭವ ಸಂಕ್ರಂದನ ಮುಖತ್ರಿದಶಾಧಿಪ ಜನ ಪರಿವಾರಂ
ವಾರಿಜನಿಲಯಾ ವಾಸಮಕುಂಠಿತ ವರದವಿಠಲ
ಮುಕ್ತಿಸುಗುಣ ಮುದಾರಂ ೩

 

೧೭೦
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ
ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ
ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ
ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ ೧
ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ
ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ ೨
ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ
ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ ೩
ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ
ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ ೪
ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ
ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ ೫
ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ
ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ ೬
ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ
ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ ೭
ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ
ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ ೮
ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ
ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ ೯

 

ದಾಸರ ಆರಾಧ್ಯದೈವ
(ಊ) ಕ್ಷೇತ್ರವರ್ಣನೆ
೨೨೩
ಹುಲಿಗನಮೊರಡಿ
ಶೇಷಾದ್ರಿಯನು ನೋಡಿರೋ ಸೇವಕಪರಿ
ತೋಷಾದ್ರಿಯನು ಕಾಣಿರೊ ಪ
ಶೇಷಾದ್ರಿಯನು ನೋಡಿ ದೋಷಾದ್ರಿ ಹುಡಿಮಾಡಿ
ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ
ಚಿನ್ನದಗಿರಿಯಂದದಿ ರಂಜಿಸುವುದು
ಬಣ್ಣದೊಳತಿ ದೂರದಿ
ಸಣ್ಣದಾಸರು ಗಿರಿ ರನ್ನಪೋಲು
ವರ್ಣಹ ಶಯನನ ಕಣ್ಣಲಿ ಕಾಣಿಪ ೧
ಬಗೆ ಬಗೆ ವೃಕ್ಷಗಳು ಬನಂಗಳು
ಬಗೆ ಬಗೆ ಪಕ್ಷಿಗಳು
ಬಗೆ ಬಗೆ ಮೃಗಗಳು ಸೊಗಸಿನೊಳಿರೆ ಬಹು
ಬಗೆ ಬಗೆ ಧಾತುಗಳಿಗೆ ನೆಲೆಯಾಗಿಹ ೨
ಯುಗಗಳ ಸಂಖ್ಯೆಯೊಳು ನಾಮಂಗಳು
ಯಗಳದ್ವಯ ಮೆನಲು
ಯುಗಮೊದಲೊಳಗೆ ಪನ್ನಗಗಿರಿಯನೆ ತ್ತೇತಾ
ಯುಗದಲ್ಲಿ ಹೇಮದ ನಗವೆಂಬ ಪೆಸರಿನ ೩
ದ್ವಾಪರಯುಗದೊಳಗೆ ವೆಂಕಟನಾಮ
ವೀ ಪರ್ವತತಕ್ಕೊದಗೆ
ಶ್ರೀಪುಲಗಿರಿಮುಖ ರೂಪನೀಯುಗದೊಳು
ಶ್ರೀಪತಿಯುತ್ತ ನಿರೂಪದೊಳೊಪ್ಪುವ ೪
ದೂರದಿ ಶೋಭಿಸುವ ದುರ್ಜನರಿಗೆ
ದೂರವೆ ಮಂದಿರವು
ಚಾರುವಿಮಾನ ಪ್ರಾಕಾರವ ತೋರಿಪ
ವಾರಿಜಾಸನ ಪಿತ ವರದ ವಿಠಲನಿಹ ೫

 

೧೪೯
ಶೌರಿನಂದನ ಪರಿವಾರನಂದನ ಸರಿಯಾರೋ ಪ
ನಿನಗೆ ಸರಿಯಾರೋ ಶ್ರೀಧರನೆ ಅ.ಪ
ನೋಟ ಮಾತ್ರದಿ ಜಗತ್‍ಕೋಟಿ ನಿರ್ಮಿಸಿ ಸರಿ
ಸಾಟಿಯಿಲ್ಲದ ಸೂತ್ರ ನಾಟಕಧಾರಿ ೧
ಬಗೆ ಬಗೆ ರತಿಯಲಿ ಜಗವನು ಮೋಹಿಪ
ನಿಗಮಾಂಕ ಗೋಚರ ನಗಧರ ಹರಿ ೨
ಸುರವರಪೂಜೆಯನರಕೆಮಾಡದೆ ಬಂದ
ಸಿರಿಯ ಮೋಹಿಸುತಿರ್ಪ ವರದವಿಠಲ ೩

 

೨೨೫
ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ
ದಿವ್ಯಸೂರಿ ಸಮಾಜ ಸೇವ್ಯ ಪಾದಾಜ್ಜ ಪ
ಕಮಲಸಂಭವಜನಕ ಕಮಲಾಪ್ತ ಕುಲತಿಲಕ
ಕಮಲ ಸನ್ನಿಭಚರಣ ಕಲುಷಗಣಹರಣ
ಕಮನೀಯ ಗುಣಹಾರ ಕಲ್ಯಾಣಗುಣ ಪೂರ
ಕಮಲಾ ಮನೋಹರ ಕಲಿತ ಶೃಂಗಾರ ೧
ಲೋಕಮೋಹನರೂಪ ಲೋಕರಕ್ಷಣ ಚಾಪ
ಶೋಕ ಮೋಹವಿದೂರ ಸುಕೃತಿ ಪರಿವಾರ
ನಾಕನಿಲಯ ಸಮಾಜ ನಮಿತ ಪಾದಾಂ ಭೋಜ
ಪಾಕರಿಪು ಮಣಿನೀಲ ಪದ್ಮಾನುಕೂಲ೨
ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ
ಪಾಂಡುಸುತ ಪರಿಪಾಲ ಪಾವನ ಸುಶೀಲ
ಭಾಂಡ ಜಾರ್ತಿಚ್ಛೇದ ಭಾಗವತ ಸನ್ಮೋದ
ಗಾಂಡೀವಿ ಸುಶ್ಯಾಲ ಗಾನರಸಲೋಲ ೩
ತವಚರಣ ಪಂಕಜಂ ತೃಪ್ತಜನ ಸುರಕುಜಂ
ಭವಜಲಧಿಕಾರಣಂ ಭವತು ಮಮ ಶರಣಂ
ತವನಾಮಕೀರ್ತನಂ ತಾಪಪರಿಮೋಚನಂ
ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ ೪
ಸಕಲಲೋಕ ಶರಣ್ಯ ಸರ್ವದೇವವರೇಣ್ಯ
ನಿಖಿಲಭೂತವಾದ ನಿರ್ಮಲ ಸುವೇಷ
ಅಕಲಂಕ ಚರಿತ ನಿತ್ಯಾನಂದ ಗುಣಭರಿತ
ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ ೫

 

ರಾಧೆಯನ್ನು ಕುರಿತ
೧೭೫
ಶ್ರೀಕರಮಾಗಿಹ ಗೋಕುಲದಲಿ ಕರು
ಣಾಕರ ಕೃಷ್ಣನು ನೆಲೆಸಿರಲು
ನಾಕದ ಸಿರಿಯ ನಿರಾಕರಿಸುವ ಸಿರಿ
ತಾ [ಕರೆಯುವ] ಹರ್ಷದೊಳು ೧
ರಾವಣನನುಜೆಯು ರಾಘವದೇವನ
ಲಾವಣ್ಯಕೆ ಮೋಹಿಸಿ ಮನದಿ
ಭಾವಜನಸ್ತ್ರದ ಬಾಧೆಯಿಂದ ಪತಿ
ಭಾವದಿ ನೋಡುತ ಭರದಿ ೨
ಕಾಮಿಸಿ ಕಾಡಲು ಕಾಕುತ್ಸ್ಥನು ಬಲ
ರಾಮ ಸಹಜನವತಾರದಲಿ
ಕಾಮಿತವಹದೆನೆ ಕಾಮಿನಿ ರಾಧಾ
ನಾಮದಿ ಜನಿಸಿರೆ ಗೋಕುಲದಿ ೩
ಒಂದಾನೊಂದಿನನಂದಾದಿಗಳಾ
ನಂದಾನ್ವಿತಮತಿವೃತ್ತಿಯಲಿ
ಒಂದಾಗಿ ಧರಾವೃಂದಾರಕರನು
ವಿಂದಾರಾಧಿಪ ಭಕ್ತಿಯಲಿ ೪
ಬಂದರು ವರ ಕಾಳಿಂದಿಯ ತೀರದಿ
ನಂದನದಂತಿಹ ವನದೆಡೆಗೆ
ಬಂಧುಗಳೊಂದಿಗೆ ಬಂಡಿಯನೇರಿ ಮು
ಕುಂದನ ಧ್ಯಾನಿಸುತಡಿಗಡಿಗೆ ೫
ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿ
ಯಿಲ್ಲದೆ ಗೋಧನ ದಾನದಲಿ
ಬಲ್ಲಿದ ಭೋಜನದಲ್ಲಿ ದಣಿಸಿ ಸುಖ
ದಲ್ಲಿರುತಿರಲಾ ಸಮಯದಲಿ ೬
ಅಸ್ತಮಹೀಧರ ಮಸ್ತಕವನು ಸುಜ
ನಸ್ತುತ ದಿನಕರನೈದಿರಲು
ನಿಸ್ತುಲಮದಿ ಸಮಸ್ತರ ದೃಷ್ಟಿಗಳ
ಸ್ತಗೊಳಿಸೆ ಜನ ಭಯಗೊಳಲು೭
ನಂದನು ತನ್ನಯ ನಂದನನಂಜುವ
ನೆಂದು ರಾಧೆಯ ತಾ ನೋಡಿ
ಕಂದನ ನೀನೇ ಮಂದಿರಕೈದಿಸು
ಎಂದರೆ ಬಂದಳು ನಗೆಗೂಡಿ ೮
ಕಂದ ಬಾರೋ ಗೋವಿಂದ ಬಾ ಯದು
ನಂದನ ಬಾ ಕಮಲಾಸನನ
ತಂದೆ ಬಾರೋ ನಿಜ ಮಂದಿರದೊಳಗಾ
ನಂದವ ತೋರುವೆ ಶಶಿವದನಾ ೯
ಆಡಿಸುವೆನು ನೀನಾಡುವಾಟಗಳ
ನೋಡಿಸುವೆನು ನೀನೊಲಿದುದನು
ಬೇಡಿದುದೆಲ್ಲವ ನೀಡುವೆ ಸಂಶಯ
ಬೇಡ ನಿನ್ನನೆ ಕೂಡಿಹೆನು ೧೦
ರಾಧೆಯ ನುಡಿಗಳನಾದರಿಸುತ ಮಧು
ಸೂದನ ತನ್ನಯ ಮನದೊಳಗೆ
ಮೋದಪಡಿಸಲನುವಾದನು ಭಕ್ತ
ಮೋದಚರಿತ್ರನು ಕಾಮಿನಿಗೆ ೧೧
ಮುತ್ತನಿತ್ತು ಬಲು ಮುದ್ದಿಸಿ ಬಾಲಕ
ನೆತ್ತಿಕೊಂಡು ಬಲು ಸಡಗರದಿ
ವೃತ್ತಕುಚಗಳಿಂದೊತ್ತಿ ಮನೋಭವ
ನರ್ಥಿಗೆ ಸೊಕ್ಕುವ ಕಾತರದಿ ೧೨
ವರಪುಲಿಗೆರೆದೊರೆ ವರದವಿಠಲನು
ಕರುಣನಾದೊಡೀಗಲೆ ಬೆರೆದು
ಸ್ಮರಶರದಾರ್ತಿಯ ಪರಿಹರಿಸುವೆನೆಂದು
ಹರುಷದಿ ಬರುತಿರ್ದಳು ನಲಿದು ೧೩

 

೧೬೨
ಶ್ರೀನಿವಾಸ ತವಚರಣಸರೋರುಹಮಾನತೋಸ್ಮಿ ಸತತಂ
ಸಾನುರಾಗ ಮನಸಾ ವಚಸಾ ಶಿರ
ಸಾನುಕೂಲಫಲದಂ ಶುಭಚರಿತಂ ಪ
ವಾಸವಸನ್ನುತ ವಾಸುಕಿಶಯನ
ಶ್ರೀಶವಾಸ ಹಿರಣ್ಮಯ ವಾಸ ಸಮಸ್ತಾವಾಸ ತರಣಿಶತ
ಭಾಸ ಸುಮನೋಲ್ಲಾಸ ವಿಜಿತರೋಷ
ವಾಸರೇಶ ಶತಭಾಸುರ ಭೂಷಣ
ಭೂಷಿತಾಂಗ ವಿಶೇಷ ಕರುಣ ಮೃದು
ಭಾಷಣ ಸಜ್ಜನ ಪೋಷಣ ನಿರ್ಜಿತ
ದೂಷಣ ಭವಜಲ ಶೋಷಣ ಪೂಷಣ ೧
ಪುಂಡರೀಕಾಸನ ಖಂಡಪರಶು ಅ
ಖಂಡಲ ಮುಖ ಸುರಮಂಡಲ ಸೇವಿತ
ಚಂಡ ನಿಶಾಚರಮಂಡಲ ಖಂಡನ
ಪಂಡಿತ ರಣಶೌಂಡ ಪುಂಡರೀಕನಯ-
ನಾಂಡಜವಾಹನ ಖಂಡಿತಕೇಶ ಕೋ
ದಂಡ ಕೃತಾರ್ಚನ ಪುಂಡರೀಕಗಿರಿ ಮಂಡನ ಹಿಮಕರ
ಮಂಡಲ ಸನ್ನಿಭಕುಂಡಲಾಭರಣ ೨
ವಾರಿದನೀಲಶರೀರ ಧರಾರ
ಧೀರ ಸುಮಂದರಧಾರಣ ಚತುರ ಕರಾಗ್ರವಿ
ದಾರಿತ ಶೂರ ಹಿರಣ್ಯಕವೀರ ನರಮೃಗೇಂದ್ರಾ
ವಾರಿಜನಿಲಯಾವರ ಕರುಣಾಕರ
ಮಾರಜನಕ ಸುರವಾರ ವಂದ್ಯಪದ
ಸಾರಸುಗುಣ ಪರಿ ಜಲಧಿಗಂಭೀರ
ವ್ಯಾಘ್ರಗಿರಿ ವರದವಿಠಲ ಹರಿ ೩

 

೧೬೪
ಶ್ರೀನಿವಾಸ ನಿನ್ನ ನಂಬಿದ ದಾಸನ
ಎನ್ನನು ಕಾಯೋ ಶ್ರೀವಾಸುಕಿಶಯನ ಪ
ರೂಪರಹಿತ ಬಹುರೂಪ ಧರಿಸಿಹ
ಶ್ರೀಪತಿ ಎನ್ನನು ನೀಪರಿಪಾಲಿಸು ೧
ಕಾಲರೂಪ ಬಹುಲೀಲೆಯ ತೋರುವ
ಮೂಲಪುರುಷ ಸುರಪಾಲಕ ಶ್ರೀಹರಿ ೨
ಶಕ್ತಿಗಳನು ಅವ್ಯಕ್ತದೊಳಿರಿಸಿ ಸ
ಮಸ್ತ ವಸ್ತುವ ಸುವ್ಯಕ್ತ ಪಡಿಸಿದ ೩
ಕಲ್ಪಕೋಟಿ ನಿನಗಲ್ಪಕಾಲ ಪರಿ
ಕಲ್ಪಿತ ಸುರನರ ಕಲ್ಪಭೋಜ ಹರಿ ೪
ಖಂಡಪರಶು ಅಖಂಡಲಾದಿ ಸುರ
ಮಂಡಲ ಸೇವಿತ ಪುಂಡರೀಕ ಪದ ೫
ಮಂದರಧರ ಗೋವಿಂದ ಮುಕುಂದ ಸ
ನಂದನಾದಿ ಮುನಿಬೃಂದ ಸುವಂದಿತ ೬
ಸಾರಸುಗುಣ ಪರಿವಾರ ಸಜ್ಜನಾಧಾರ
ಧೀರವರದವಿಠಲ ಹರಿ ೭

 

೧೯೭
ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ
ಮಾನಸಾನಂದಿಸೋ ಶತಭಾನುತೇಜನೆ ಪ
ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ
ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ
ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ
ವಂದನೆಯ ಮಾಡುವೆನಯ್ಯಾ ಇಂದುವದನಾ
ಇಂದುಧರ ನುತ ಮುಚುಕುಂದವರದನೆ ಗುಣ
ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ ೧
ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು
ದುಷ್ಟಮನುಜರ ಕೂಡಿ ಭ್ರಷ್ಟನಾದೆನು
ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ
ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು ೨
ಲೋಕಪತಿ ಪಿನಾಕೆಯನ್ನು ವೃಕನೆಂಬ
ಭೀಕರಾಸುರನು ಉರಿಹಸ್ತ ಬೇಡಲು
ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ
ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ ೩
ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ
ನೋಡಿಸೋ ನಿನ್ನಯ ಮೂರ್ತಿ ಬೇಡಿಸದಿರು
ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ
ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ ೪
ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ
ಭೂಷಿತ ಲಲಿತಶುಭ ವೇಷವಿಪುಲ
ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ
ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ ೫

 

೪. ವೆಂಕಟವರದಾರ್ಯರ ಹಿಂದಿಮಿಶ್ರಿತ ಕೃತಿ
೫೦೧
ಶ್ರೀನಿವಾಸ ಪದ ಧ್ಯಾನಕರೋರೆ
ಸಾನುರಾಗಯುತ ಮಾನಸ ಮೇರೆ ಪ
ಮದಪರಿಪೂರಿತ ಹೃದಯ ಸುನೋರೆ
ಸದಯ ಹೃದಯ ಪರಿಪದಮಿಳನಾರೆ ೧
ಕಾಮಕ್ರೋಧ ಉಪರಾಮ ಕರೋರೆ
ರಾಮಾನಾಮ ಜಪಕಾಮು ಕರೋರೆ ೨
ದೇಹಗೇಹಧನ ಮೋಹನಲೇರೆ
ಶ್ರೀಹರಿಚರಣ ಕಾಂಹಿ ಚಲೇರೆ ೩
ಪುತ್ರ ಮಿತ್ರ ಬಹು ಶತ್ರು ಕು ಮಾರೆ
ವೃತ್ರ ವೈರೀಸುತ ಮಿತ್ರನಗಾರೆ ೪
ಭಂಗ ಜನ ಸಂಗ ನ ಕರೋರೆ
ಮಂಗಳಾಂಗ ನರಸಿಂಹ ಭಜೋರೆ ೫
ಸೂಕ್ಷ್ಮಬುದ್ಧಿ ನಿರಪೇಕ್ಷ ಭಲಾರೆ
ಮೋಕ್ಷದಾತ ಕಮಲಾಕ್ಷಕು ಲಾರೆ ೬
ದಾಸ ಲೋಕ ಸಹವಾಸ ಕರೋರೆ
ವಾಸುದೇವ ನಿಜದಾಸಕು ಹೋರೆ ೭
ಶ್ರೀಪುಲಿಗಿರಿವರ ಭೂಪ ಮುರಾರೆ
ಶ್ರೀಪತಿಘನ ಚಿದ್ರೂಪಕ ಹೋರೆ೮
ಪರಮಪುರುಷ ನರಹರಿ ಕರುಣೀರೆ
ವರದವಿಠಲ ಕರಿವರ ಧಣೀರೆ ೯

 

೧೬೫
ಶ್ರೀನಿವಾಸ ಪಾಹಿಮಾಂ ಶ್ರೀಯಮನ್ಮನೋರಮಾಂ ಪ
ದೀನಲೋಲ ಕಾವನ ಧೀರ ಮುನಿ ವಿಭಾವನ ೧
ಪೂರ್ಣಚಂದ್ರಾನನ ಪುಣ್ಯವೃಕ್ಷಾನನ ೨
ಸೇವಕಾನಂದನ ದೇವಕೀನಂದನ ೩
ಶಂಕಚಕ್ರ ರಂಜನ ಕಿಂಕರಾರ್ಥಿ ಭಂಜನ ೪
ಮಾರಕೋಟಿಸುಂದರ ಶ್ರೀರಮಾ ಮನೋಹರ ೫
ದೂರಿತಾಘ ಸಂಕುಲ ದುಷ್ಟಕುಲಾನಲ ೬
ಪುಂಡರೀಕ ಲೋಚನ ಚಂಡಪಾಪ ಮೋಚನ ೭
ಭವ ಭಯೋತ್ತಾರಣ ಭವ್ಯ ಸುಗುಣ ಪೂರಣ ೮
ವ್ಯಾಘ್ರಾದ್ರಿನಾಯಕ ವ್ಯಕ್ತ ಸೌಖ್ಯದಾಯಕ ೯
ತವಪದಾಂಭೋರುಹಂ ಭವತು ಹೃತ್ಸುಖಾವಹಂ೧೦
ವರದವಿಠಲ ಶ್ರೀಧರ ಶರಣಜನ ದಯಾಕರ ೧೧

 

೧೬೬
ಶ್ರೀನಿವಾಸ ಪಾಹಿಮಾಂ ಸದಾ ಶ್ರಿತಜನಾಮೋದ
ಮೌನಿಜನ ಚಾತಕಾಂಭೋದ ಪ
ಸಾನುರಾಗ ಯುಗಮುನಿ ಮಾನಿತಾವರಾರವಿಂದ
ಭಾನುಕೋಟಿ ತೇಜ ಸಾಮಗಾನಲೋಲ ಶ್ರೀಮುಕುಂದ ಅ.ಪ
ವಾರಿಜಾಸನಾರ್ಚಿತ ಪ್ರಭೋ ವಂ
ದಾರುಜನ ಪಾರಿಜಾತ ಧೃತಕೌಸ್ತುಭ
ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ
ಸಾರ ಸನ್ಮಣಿ ಕೇಯೂರ ಹಾರ ಭೂಷಾ ಸುಪವಿತ್ರ ೧
ಸರ್ವಲೋಕಪಾಲಕೇಶ್ವರಸೇವಿತಸುಪರ್ವಗಣಸದ್ಗುಣಾಕಾರ
ಶರ್ವ ಸುರಪತಿ ಮುಖ್ಯ ಸರ್ವದೇವವರವರ್ಯ
ಗರ್ವಿತ ದೈತ್ಯಾಂಧಃ ಸೂರ್ಯ ಪರ್ವತಾಧಿರಾಜ ಧೈರ್ಯ ೨
ಸೃಷ್ಟಿ ರಕ್ಷಣಾಂತಕಾರಕ ಸರ್ವಾತ್ಮಕ ಶಿಷ್ಟದೇವ ದ್ವಿಜರಕ್ಷಕ
ಅಷ್ಟಸಿದ್ಧಿಪ್ರದಾ ಸರ್ವೋತ್ರ‍ಕಷ್ಟ ಕಷ್ಟನಿವಾರಣ
ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ ೩
ಶ್ರೀಕರ ಶೃಂಗಾರಶೇಖರ ಶ್ರೀಕರಗೃಹ ಶ್ರೀಕರಧಾರಿತ ಮಂದರ
ಪಾಕವೈರಿ ಮಣಿನೀಲ ಪಾವನ ಸುಗುಣಶೀಲ
ಶೋಕ ಮೋಹ ಸುವಿವೇಕ ನಿತ್ಯೋದಾರ ಶೂರ ೪
ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ
ಸಾರವಸ್ತುಚಯಪರಿಪೂರ ವ್ಯಾಘ್ರಾಧ್ರಿವಿಹಾರ
ಧೀರ ವರದವಿಠಲ ಸುರಾಸುರಾರ್ಚಿತಾಂಘ್ರಿಕಮಲ ೫

 

೧೬೭
ಶ್ರೀನಿವಾಸ ಮುನಿಮಾನಸಹಂಸ ಮಹಾನುಭಾವ ದೇವ ಪ
ಗಾನಲೋಲ ಶರಣಾನುಕೂಲ ಖಗಯಾನ ವಾಸುದೇವ ಅ.ಪ
ಸೃಷ್ಟಿಕೃರ್ತ ಸಂತುಷ್ಟಹೃದಯ ಪರಮೇಷ್ಠಿ ಜನ್ಮಮಾಲಾ
ಅಷ್ಟಭೂತಿವರ ಕಷ್ಟಹರಣ ವಿಬುಧೇಷ್ಟ ದಿವ್ಯಲೀಲಾ೧
ದೇವದೇವ ಭೂದೇವ ವಂದ್ಯ ವಸುದೇವ ಜಲಧಿಸೋಮ
ದೇವವೈರಿವನದಾವ ಸುಂದರೀ ಭಾವಜನಿತ ಕಾಮ೨
ರಾಮರಾಮ ಕರುಣಾಮಹೋದಧೆ ಶ್ರೀ ಮನೋಭಿರಾಮ
ರಾಮಣೀಯ ಸುಗುಣಧಾಮ ಪುಣ್ಯತಮನಾಮ ಪೂರ್ಣಕಾಮ೩
ಕಿಂಕರಜನಗತ ಸಂಕಟಹರ ಧೃತ ಶಂಖಚಕ್ರಪದ್ಮ
ಪಂಕಜಲೋಚನ ಪಂಕವಿಮೋಚನ ಪಂಕಜಹಿತ ಸದ್ಮಾ ೪
ದಿವ್ಯ ರೂಪಸುರಸೇವ್ಯ ಚರಣಮುನಿಭಾವ್ಯಮಾನಚರಿತ
ಅವ್ಯಯಾತ್ಮ ಬಹುಭವ್ಯಸುಗುಣಮಾಂಡವ್ಯಪುಣ್ಯಭರಿತ ೫
ಪಾಹಿಮಾಮನಘದೇಹಿ ಭಕ್ತಿಮಪಿ ಮೇ ಹಿತೋಸಿ ನಿತ್ಯಂ
ಕಾಹಿಮೇಗತಿರ್ಮೋಹಿತಸ್ಯತಾಂಬ್ರೂಹಿ ದೇವ ಸತ್ಯಂ ೬
ಚರಣಯುಗಳಮಿಹ ಚರಣಮೇಹಿ ಭವತರಣಿದಿಷಣಯಾಹಂ
ಕರುಣಯಾವ ಶ್ರೀವರದವಿಠಲ ಸುಖಕರಣ ವಿಗತಮೋಹಂ೭

 

೧೬೮
ಶ್ರೀನಿವಾಸ ಶ್ರೀಮನೋಲ್ಲಾಸ ಶ್ರೀನಿವಾಸ ಪ
ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ
ದೀಪಿತಭವದಾವ ವಸುದೇವತನಯ ದೇವ ದೇವ
ಭೂದೇವನಿವಹ ಸಂಭಾವಿತ ಭಾವ ೧
ರಾಮರಾಮ ರಘುವಂಶ ಲಲಾಮ ರಾಮ ರಾಮ
ರಮ್ಯಗುಣಧಾಮ ಮುನಿಜನಪ್ರೇಮ ದನುಜಸಂಗ್ರಾಮಭೀಮ೨
ಕಂಜನಾಭ ಕಾಲಾಂಬುಧಾಭಾ ಕಂಜನಾಭ ರಿಪು
ಭಂಜನಾತ್ತವರ ಕಂಜಚಕ್ರವಿಧು ಮಂಜುಳ ವಕ್ತ್ರ ೩
ಸುಂದರಾಂಗ ಸುಕೃತಾಂತರಂಗ ಸುರಸುಂದರೀನಿಚಯ
ನಂದಗೋಕುಲಾನಂದ ಮುಕುಂದ ೪
ಭವ್ಯರೂಪ ಭಕ್ತಾಲಯ ದೀಪ ಭವ್ಯರೂಪ ಧೃತ
ದಿವ್ಯಚಾಪ ಸುರಭಾವ್ಯಮಹಿಮ ಮಾಂಡವ್ಯಸುಸೇವ್ಯ ೫
ವ್ಯಾಘ್ರಶೈಲಾವಾಸ ಸುಶೀಲಾಶೈಲಶಿಖ-
ರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ ಶರಣ್ಯ ೬
ದುರಿತದೂರಾ ದುಃಖಾಭ್ರಸಮೀರಾ
ದುರಿತದೂರ ಘಣಿಗಿರಿವಿಹಾರ ಶ್ರೀವರದವಿಠಲಾ ೭

 

೧೯೮
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ
ಧ್ಯಾನ ನಿರತ ಮೌನಿ ಜನರ ಮಾನಸಾಬ್ಜಹಂಸನೆ ಅ.ಪ
ನಕ್ರಮುಖದಿ ಸಿಕ್ಕಿದಿಭನನಕ್ಕಿರಿಂದ ಪೊರೆದನೆ
ಚಕ್ರಧರ ತ್ರಿವಿಕ್ರಮಾದಿ ಚಕ್ರಭೋಗಿ ಶಯನನೆ ೧
ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟ ಜನ್ಮ ಜನ್ಮದೆ
ಹುಟ್ಟಿ ಹುಟ್ಟಿ ಕಷ್ಟಪಟ್ಟಿ ಕೃಷ್ಣ ನಿನ್ನ ನಂಬಿದೆ ೨
ಶರಣಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ
ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ ೩

 

೧೬೯
ಶ್ರೀನಿವಾಸಸುಗುಣೈಕನಿಧೆ ಶ್ರೀ
ಮಾನಸಹಂಸ ದಯಾಜಲಧೇ ಪ
ತೋಯಸನ್ನಿಭಕಾಯ ಮನೋಜ ನಿ
ಕಾಯ ಮಾಪಮಧುರಾಲಾಪ
ತೋಯಜಾಕ್ಷ ಪೃಥುಳಾಯತಪಕ್ಷ ನಿ
ಧಾಯ ಹೃದಿಧ್ಯಾಯಾಮಿ ಹರೆ ೧
ವಿಗ್ರಹಮಖಿಳಶುಭಗ್ರಹಣಂ ಮದ
ನುಗ್ರಹಾರ್ಥಮದಿತಿಷ್ಠವಿಭೋ
ಉಗ್ರಮುಖ ವಿಬುಧಾಗ್ರ್ಯಪೂಜಿತ ಸ
ಮಗ್ರ ಸಮರ್ಯಾಂ ಸ್ವೀಕುರುಭೋ ೨
ಪಾದಾಘ್ರ್ಯಾಚಮನಾದ್ಯಮಖಿಳಜಗ
ದಾದ್ಯ ಕಲ್ಪಿತಂ ಭವದರ್ಥಂ
ಹೃದ್ಯಸುರಭಿ ಸಂಪದ್ಯುತಮುತ್ತಮ
ಸದ್ಯಂಬುನಿಮೇಜ್ಯ ಸುಖೋಷ್ಣಮಿದಂ೩
ನಿಸ್ತುಲ ಕಾಂಚನ ವಸ್ತ್ರಮಲಂಕುರು
ಕಸ್ತೂರಿತಿಲಕಂ ಸುಮುಖೋ
ಕೌಸ್ತುಭರತ್ನಮಜಸ್ತುತಮಂಡನ
ಮಸ್ತುತನೌಗುಣ ಭೂಷಣತೇ ೪
ಕುಂದಬಕುಳ ಕುರುವಿಂದ ಮಹೋತ್ಪಲ
ಮಂದಾರಕಾ ಮಾಲ್ಯಾಕಲಿತಂ ಗದ
ಬಂಧುರ ಸುಗಂಧಿ ತುಳಸಿಕಾ
ಬೃಂದಮಲಂಕುರು ಸನ್ನಿಹಿತಂ ೫
ಗಂಧರ್ವಾಮರ ವಂದಿತ ಮಲಯಾ
ಗಂಧಲೇಪನಮಾಕಲಯಾ
ಗಂಧವಾಹನುತ ಗಂದವತೀ ಗುಣ
ಬಂಧುರ ದೂಪಂ ಜಿಘ್ರಹರೇ ೬
ತಾಪತ್ರಯ ಪರಿತಾಪ ನಿವಾರಣಂ
ತಾಪಸ ಮಾನಸ ದೀಪಹರೇ
ಸೋಪಚಾರ ಘೃತದೀಪಮತೀಂದ್ರಿಯ
ರೂಪಾಲೋಕಯ ಶ್ರೀನೃಹರೇ ೭
ಮಂತ್ರರೂಪಸನ್ಮಂತ್ರವಿದಾಂವರ
ಮಂತ್ರ ತಂತ್ರ ಯಂತೃಣಮೂರ್ತೇ
ಮಂತ್ರಪೂತಮುಖ ಯಾತ್ರಾಧಾರ ಸು
ಮಂತ್ರಪುಷ್ಪಂ ಸ್ವೀಕುರುಹೇ ೮
ಛತ್ರಮಿದಂ ಭುವನತ್ರಯನಾಥಸ ವಿ
ಚಿತ್ರದಂತ ಚಾಮರಯುಗಳಂ
ಶೋತ್ರಮಿತ್ರ ತೋರ್ಯತ್ರಿಕಮಾಲಕಲ
ಯಾತ್ರ ಭೋಗಾ ಮದಿರಾಜಕಳಂ ೯
ಮಧುಪರ್ಕಾರ್ಹಣಮಧರೀಕೃತ
ಮಧುಮಧುರಿಮ ಪಾಯಸಮತಿಹೃದ್ಯಂ
ಅಧಿಕಪಯೋಘೃತ ದಧಿಸೂಪಾನ್ವಿತ
ಮಧುನಾಸ್ವೀಕುರು ನೈವೇದ್ಯಂ ೧೦
ಬಿಂಬಾಧರಮಿಂದುಬಿಂಬವದನ ಶಿಶಿ
ರಾಂಬುಪಿಬಾಮಲಘನಸಾರಂ
ತಾಂಬೂಲಂ ಜಗದಂಬಾಕರ ಕಲಿ
ತಂಬಹುಮನ್ವಸ ಕರ್ಪೂರಂ ೧೧
ತಾರಾಧಿಪ ಕುಮುದಾರಿ ನಿಭಾಲಂ
ಕಾರ ನಿಭೃತ ಪರಿವಾರ ವಿಭೋ
ನೀರಾಜನಮತಿತಾರಾಯಿತ ಕ
ರ್ಪೂರಾರ್ತಿಕಮಂಗೀಕುರು ಭೋ ೧೨
ಕುಕ್ಷಿಭುವನ ಸಂರಕ್ಷಿತ ಸೇವಕ
ಪಕ್ಷ ಪ್ರದಕ್ಷಿಣಮನುವಾರಂ
ಪಕ್ಷಿಗಮನನಿಜವಕ್ಷೋಧೃತಶುಭ
ಲಕ್ಷಕರೋಮನಮಸ್ಕಾರಂ೧೩
ಸಾಗರತನಯಾಯಾಗವಿಹಿತ ಭೂ
ಭಾಗಧೇಯನೀಳಾಸಹಿತಂ
ಭೋಗಿಶಯನಮನುರಾಗ ಪರಿಷ್ರ‍ಕತ
ಮಾಗಮಗೋಚರ ಕುರುಲಸಿತಂ೧೪
ಆರಾಧನಮಪಜಾಯತಮುಪ
ಚಾರಮಿಷೇಣ ಮಯಾಚರಿತಂ
ನಾರಾಯಣ ಚರಣಾರಾಧನಮಿತಿ
ಕಾರುಣ್ಯೇನ ಕ್ಷಮಸ್ಸೇದಂ ೧೫
ಶರಣಾಗತಜನ ಭರಣಾಲಂಕೃತ
ಹರಿಣಾರ್ಯದ್ರಿ ನಿಕೇತನ ತೇ
ಚರಣಾರಾಧನ ಕರಣಾಂಚಿತಮಿತಿ
ವರದವಿಠಲಗೀತಂ ನುತೇ ೧೬

 

ಈ ಕೀರ್ತನೆಗಳಲ್ಲೂ
೨೨೪
ಶ್ರೀನಿವಾಸನ ಸೇವೆಗೈಯ್ಯುವ ಜಾಣರೆಲ್ಲರು ಬನ್ನಿರೈ
ಧ್ಯಾನಲಭ್ಯನ ಕಾಣಲಿಚ್ಚಿಪ ಮಾನಿಸರ ಕರತನ್ನಿರೈ ಪ
ಪರಮಪದದೊಳಗಿರದೆ ವೆಂಕಟಗಿರಿಯೊಳಿರ್ದನು ಪೂರ್ವದಿ
ಭರದಿವಿಪ್ರಗೆ ವರವನಿತ್ರ್ತಿಗಿರಿಗೆ ಬಂದನು ಪ್ರೇಮದಿ ೧
ದೂರವಲ್ಲ ವಿಚಾರಿಸಲು ಹರಿದಾಂ ಭೂಧರಮಿಲ್ಲಿಗೆ
ಚಾರುಮೂರ್ತಿಯ ಚರಣಸೇವೆಗೆ ಸಾರುವೆವು ನಾವಲ್ಲಿಗೆ ೨
ಚರಣಸೇವಕರನ್ನು ಮರೆಯದೆ ಪೊರೆಯುವನು ಮೋದದಿ
ಪರಮಪುಲಿಗಿರಿವಸವೆಂಕಟ ವರದ ವಿಠಲನೆ ಲೋಕದಿ ೩

 

೨೧೮
ಶ್ರೀನಿವಾಸನಂಘ್ರಿಕಮಲ ಧ್ಯಾನ ಮಾಡಿರೋ
ಅನುಮಾನ ಬೇಡಿರೋ ಪ
ಹಮ್ಮನುಳಿದು ಬೊಮ್ಮಪಿತನ ನೆಮ್ಮಿ ಬಜಿಸಿರೊ
ದುಷ್ಕರ್ಮ ತ್ಯಜಿಸಿರೋ೧
ಹೆಣ್ಣು ಮಣ್ಣು ಹೊನ್ನು ಸ್ಥಿರವಿದೆನ್ನ ಬೇಡಿರೋ
ನಿಜವನ್ನು ನೋಡಿರೋ೨
ಈತಜಗನ್ನಾಥಸೌಖ್ಯದಾತಕಾಣಿರೋಪ್ರಖ್ಯಾತ ಕೇಳಿರೋ೩
ಕಾಟಕರ್ಮಲೂಟಿಗೈವ ತೋಟಿಗಾರನ ಈ ಸಾಟಿ ಕಾಣೆ ನಾ೪
ಶಿಲೆಗೆ ದಿವ್ಯ ಲಲನಾರೂಪವೊಲಿದು ಕೊಟ್ಟನ
ಶಾಪವಳಿಸಿ ಬಿಟ್ಟನ ೫
ಮಾನಿನಿಯಾ ಮಾನ ಜೋಪಾನಗೈದನ ಸ್ವಾಧೀನನಾದನ೬
ಪಿಡಿದ ಮುನಿಯ ಬಿಡಿಸಿ ಪುಲಿಯ ಬಡಿದ ಧೀರನ
ಕೈಪಿಡಿಗೆ ಬಾರನ ೭
ಮತ್ರ್ಯರಿವನ ಭಕ್ತಿಯಲ್ಲಿ ರಕ್ತಿಪಡುವರು
ಭುಕ್ತಿ ಮುಕ್ತಿಪಡೆವರು ೮
ಶರಣಜನರ ಪೊರೆವ ದೊರೆಯು ವರದವಿಠಲನೆ
ಶ್ರೀಧರನೆ ಜಟಿಲನೆ ೯

 

೧೬೩
ಶ್ರೀನಿವಾಸನಮಲನಾಮವ ಸೊಗಸಿನಿಂದ
ಗಾನಮಾಳ್ಪ ಧೀರನಾವನೋ ಪ
ತಾಳ ತಂಬೂರಿಗಳನು ಮೇಳವಿಸಿ ಸರಾಗದಿಂದ ೧
ಹಿಂಗದೆ ಮೃದಂಗದಿಂದ ಸಂಗಡಿಸಿ ಸುಲಲಿತವಾಗಿ೨
ಗುಂಬವಾದ್ಯವನು ಪರಮಸಂಭ್ರಮದಲ್ಲಿ ಬಾರಿಸುತ್ತ ೩
ಜೊತೆಗೆ ಸೇರಿದವರ ಕೂಡಿ ಶ್ರುತಿಲಯಗಳಿಂದ ಪಾಡಿ೪
ಪರಮಪುರುಷ ವ್ಯಾಘ್ರಗಿರಿಯ ವರದವಿಠಲನೆಂದು ಮುದದಿ ೫

 

೨೧೯
ಶ್ರೀನಿಳಯನನು ಕೊಂಡಾಡು
ಮಾನಸ ಶುಭ ಸಂಧಾನ ನೋಡು ಪ
ಸಾರವಿಲ್ಲದಿಹ ಸಂಸಾರದಿ ಬಲು
ಘೋರ ತಾಪಗಳು ತೋರಿದಾಗ
ಭೂರಿ ಸೌಖ್ಯಗಳ ಭೀರುತಿರ್ಪ
ಕಾರುಣಿಕನ್ನ ವಿಚಾರಮಾಡು ೧
ಸೋಹಮೆಂಬ ಘನ ಮೋಹಾಂಧತೆಯಲ್ಲಿ
ದೇಹಿಗಳ್ಗೆ ಕಡುದ್ರೋಹವಗೈವ
ಬಾಹಿರಂಗ ಯಮ ಭಾದೆಯಲ್ಲಿ ತ್ರಾಹಿ
ತ್ರಾಹಿಯನೆ ತಾಳ್ವರೇನು ೨
ಸಾಪರಾಧಿಗಳ ಕಾಪಾಡುವ ದೊರೆ
ಶ್ರೀ ಪುಲಿಬೆಟ್ಟದ ಭೂಪನೇ ಸರಿ
ಆ ಪ್ರದರ್ಶಕನ ಶ್ರೀ ಪಾದಗಳನು
ಜ್ಞಾಪಕಗೊಂಡನು ತಾಪಗೂಡಿ ೩

 

೧೯೯
ಶ್ರೀವಾಸ ಶ್ರೀವಾಸ ಭಜಿಸಿದೆ ನಿನ್ನನು ಪ
ತ್ಯಜಿಸಿದಿರೆನ್ನನು ಭವತಾಮರತರು ಕುಜನವಿದೂರ ಅ.ಪ
ತಂದೆತಾಯಿ ನಿಜ ಬಂಧು ಸಹೋದರ
ನಂದನಾಪ್ತ ನೀನೆಂದು ನಂಬಿದೆ ೧
ನಿನ್ನ ಮರೆತು ಬಹು ಜನ್ಮ ಜನ್ಮದೊಳು
ಖಿನ್ನವಾಗಿ ನಿಜವನ್ನೆ ಕಾಣದೆ ೨
ಕರುಣದಿಂದ ನಿಜ ಚರಣ ಸೇವಕರ
ಪೊರೆವ ವ್ಯಾಘ್ರಗಿರಿವರದ ವಿಠಲ ೩

 

೧೫೦
ಶ್ರೀವಾಸಾನತಮಾಕಲಯಾಚ್ಯುತ
ಶ್ರೀವಾಸುಕಿಶಯಮಾಮನಿಶಂಹೃದಾ ಪ
ಪುಂಡರೀಕ ನಯನಾಂಡಜವಾಹನ
ಕುಂಡಲಶಯ ಮಾಂಡವ್ಯಸೇವ್ಯಪದ ೧
ಪುಂಡರೀಕ ಸುಮಂಡಿತಾಂಗಪದ
ಪುಂಡರೀಕಶ್ರಿತ ಪಾಂಡುತನಯ ಭೋ ೨
ನಂದಗೋಪವರ ನಂದಸುಮನೋ
ನಂದನಮುನಿಜನ ವಂದಿತಪದಯುಗ ೩
ಧರ್ಮತನಯ ಸಹಧರ್ಮಚಾರಿಣಿ
ವರ್ಮಪಾಲ ಸದ್ಧರ್ಮ ಶ್ರೀಲಹರಿ ೪
ವ್ಯಾಘ್ರನಾಮ ದೈತ್ಯಾಗ್ರನಿಗ್ರಹ-
ಣೋಗ್ರಸೇನ ತನಯಾಗ್ರವಿದಾರಣ ೫
ಬಾಲಭಕ್ತ ಪರಿಪಾಲ ಹೇಮಮಯ
ಚೇಲ ವಿಧೃತ ವನಮಾಲ ನರಹರೆ ೬
ಮಾರಜನಕ ಸುರವಾರವಂದ್ಯ ಮಂ
ದಾರ ಹಾರ ಸುಕುಮಾರಶರೀರ ೭
ಮಂದರಧರ ಪೂರ್ಣೇಂದು ವದನ ಗೋ
ವಿಂದ ಮುಕುಂದ ಸನಂದವಂದಿತ ೮
ಖಂಡಪರಶು ಕೋದಂಡ ವೇ
ತಂಡ ಹಸ್ತಭುಜದಂಡ ರಘೂದ್ವಹ ೯
ಅಂಬರೀಷ ವರದಂಬುಜಾಸನಾ
ಲಂಬಮಾನ ಚರಣಾಂಬುಜ ಕೇಶವ ೧೦
ಸಾರವಸ್ತು ಪರಿಪೂರ ವ್ಯಾಘ್ರನಗ
ಪಾರಿಜಾತ ವರದಾರ್ಯವಿಠಲ ಶ್ರೀ ೧೧

 

೧೭೧
ಶ್ರೀವೆಂಕಟೇಶ ಪಾಹಿ ತಾವಕ ಭಕ್ತಿಂ ದೇಹಿ ಪ
ವಾರಿಜನೇತ್ರಾ ವಾರಿದಗಾತ್ರಾ
ನಾರದಸನ್ನುತಪಾತ್ರ ನರಮಿತ್ರ ಸುಚರಿತ್ರ ೧
ಅಂಡಜಯಾನ ಕುಂಡಲಿಶಯನ
ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ ೨
ವೆಂಕಟರಮಣ ಪಂಕಜ ಚರಣ
ಸಂಕಟಮೋಚನ ಕಾರಣ ಭವತಾರಣ ಗುಣಪೂರಣ ೩
ದಶರಥಬಾಲಾ ದಶಮುಖಕಾಲ
ದಶಶತಲೋಚನಪಾಲಾ ಭೂಪಾಲಾ ಸುರಮುನಿಲೋಲ೪
ನಂದಕುಮಾರ ನವನೀತ ಚೋರ
ಬೃಂದಾವನವಿಹಾರ ಬಹುದಾರಾ ಧುರಧೀರ ೫
ಅಜನುತಪಾದ ಅಪಹೃತ ಖೇದ
ಸುಜನ ಕಲುಷ ನಿರ್ಭೇದ ನುತವೇದ ಸುರಮೋದ ೬
ವರವ್ಯಾಘ್ರಾಚಲ ವಿಹರಣ ಶೀಲ
ವರದವಿಠಲ ಗೋಪಾಲ ಶ್ರೀಲೋಲ ಬಹುಲೀಲಾ ೭

 

೨೨೭
ಶ್ರೀಶ್ರೀನಿವಾಸ ಶ್ರೀಭೂವಿಲಾಸ ಶ್ರೀತಜನ
ಪೋಷ ಪಾಹಿ ಸುವೇಷ ಪ
ಅಚ್ಚುತಮಾನಮದಚ್ಚುತದಿ
ಪಚ್ಚಿನ್ಮನೋರಥ ನಿಶ್ಚಿತ ಪಾಹಿ ೧
ಅಂತರಹಿತ ನಿತ್ಯಾನಂತ ಮಹಿಮ ದು
ರಂತ ವಿಕ್ರಮ ದನುಜಾಂತಕ ಪಾಹಿ೨
ಗೋವಿಂದ ನತಸುಮನೋವೃಂದ ದಳಿತತ
ಮೋವೃಂದ ಪೋಷಿತ ಗೋಬೃಂದ ೩
ಕೇಶವ ಸಕಲ ಲೋಕೇಶ ಗೌರೀಶ ವಾ
ಗೀಶಸನ್ನುತ ಕೋಶ ಮಾಂ ಪಾಹಿ ೪
ನಾರಾಯಣ ಭಕ್ತಪರಾಯಣ ಪರಿವಾರಾಯಿತ
ಸುರವಾರ ಮಾಂಪಾಹಿ ೫
ಮಂದರಧರ ಮುಚುಕುಂದ ವರದ ಆ
ನಂದ ಸದನ ಗೋವಿಂದ ಮಾಂಪಾಹಿ ೬
ವಿಷ್ಣೋಸುಜನವರ್ಧಿಷ್ಣೋ ಸಂತೋಷಿತ
ಜಿಷ್ಣು ಸುರುಜಿಷ್ಣೋ ಮಾಂ ಪಾಹಿ ೭
ಮಧುಸೂಧನ ದುರ್ಮದ ಬೇಧನ ಬಹು
ವಿಧ ಬೇಧನ ನುತಬುಧಜನ ಪಾಹಿ ೮
ಅಕ್ರಮನುಪಿತನಿಜಕ್ರಮಜಿತವಿಶ್ವ
ಶಕ್ರಸಹಜ ತ್ರಿವಿಕ್ರಂ ಪಾಹಿ೯
ಪಾವನ ದೈತ್ಯ ವಿರಾಮನಮಿತ ಸುರ
ಕಾವನ ಮುನಿಜನರ ಪ್ರೇಮ ಮಾಂಪಾಹಿ೧೦
ಶ್ರೀಧರ ಕರಧೃತ ಭೂಧರ ಚಕ್ರಗ
ದಾಧರ ಕೌಸ್ತುಭ ಕಂಧರ ಪಾಹಿ ೧೧
ನಾಕೇಶವಂದ್ಯ ಹೃಷಿಕೇಶ ಮುನಿಹೃದ
ಯಾಕಾಶ ಗೋಚರಾಕೇಂದು ಪಾಹಿ ೧೨
ಪದ್ಮನಾಭ ನತಪದ್ಮಜ ಮಾನಸ
ಪದ್ಮಗೋಚರ ಪದಪದ್ಮಮಾಂಪಾಹಿ ೧೩
ದಾಮೋದರ ಸುಜನಾಮೋದನ ಧೃತ
ಕಾಮೋದಕ ಜಿತಕಾಮ ಮಾಂಪಾಹಿ ೧೪
ದೋಷರಹಿತಗುಣ ಭೂಷಣ ಸತಜನ
ಪೋಷ ಸಂತೋಷಿತ ಶೇಷಮಾಂ ಪಾಹಿ ೧೫
ವಾಸುಕಿಶಯನ ವಿಕಾಶ ಕಮಲನಯ
ನಾಸುರಮದನ ಶರಾಸನ ಪಾಹಿ ೧೬
ದುಷ್ಟಮರ್ಧನ ಜಗದಿಷ್ಟುವರ್ಧನ ಸುರ
ಕಷ್ಟ ಕೃಂತನ ಪರಿತುಷ್ಟ ಮಾಂ ಪಾಹಿ ೧೭
ವರದವಿಠಲ ವ್ಯಾಘ್ರ ಧರಣೀಧರಾಗ್ರ ವಿ
ಹರಣ ಸಕಲ ಗುಣಾಭರಣ ಮಾಂ ಪಾಹಿ ೧೮

 

೨೨೦
ಸರ್ವಾಂತರ್ಯಾಮಿ ನೀನೆ ಸರಿ ಸರ್ವಜ್ಞನು ಸ್ವಾಮಿ ಪ
ಸರ್ವಕಾರಣ ಸರ್ವಾಧಾರನು
ಸರ್ವಶರೀರಕ ಸರ್ವನಿಯಾಮಕ ಅ.ಪ
ಹರಿತನಯನಿಗಂದೂ ಸ್ವಶಕ್ತಿಯ
ಹರಿ ಕೊಡುವನು ಬಂದು
ಹರಿತನುಜನಿಗದು ಹರಿಯದು ಎನ್ನುತ
ಹರಿಸುತನನು ಗುರಿಮಾಡಿದೆ ೧
ದ್ರೋಣಸನುತ ಬಂದು ನಿಶಿಯೊಳು
ಮನೆ ಕಾಣಿಸುವನು ಎಂದೂ
ಪ್ರಾಣಪದಕರನು ಕಾಣದಂತೆ ಬಲು
ಜಾಣತನದಿ ಸಪ್ರಾಣರ ಮಾಡಿದೆ ೨
ಮರುತನ ಸುತನೆಂದು ಧೃತರಾಷ್ಟ್ರನು
ಕರದಪ್ಪುವನೆಂದು
ಭರದಿಂ ಲೋಹದೊಳೆರಕದ ಭೀಮನ ವಿರಚಿಸಿ
ಶರಣರ ಹರಣವನುಳುಹಿದೆ ೩
ಶೈಲದ ಗುಹೆಯೊಳಗೆ ಮಲಗಿದ್ದ ನೃ
ಪಾಲನ ಖತಿಯೊಳಗೆ
ಕಾಲಯಮನಂ ಕಾಲನ ಕಾಣಿಸಿ
ಮೇಲೆ ಶರಧಿಯೊಳಾಲಯ ಮಾಡಿದೆ ೪
ಪರಮಋಷಿಯನಂದು ತಾ ಪಿಡಿಯಲು
ದುರುಳ ಪುಲಿಯು ಬಂದು
ಕರದ ಖಡುಗದಿಂ ಹರಿಯನು ಖಂಡಿಸಿ
ಶರಣನ ಸಲಹಿದ ವರದವಿಠಲಹರಿ ೫

 

ಶ್ರೀಹರಿಯನ್ನು ‘ಭವರೋಗ
೨೦೦
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ
ಒಲಿದು ಸಕಲ ಗೋಕುಲವನು ಸಲಹಿದ
ಜಲಜಾಂಬ ನೀನಲಸದೆ ಎನ್ನನು ಅ.ಪ
ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ
ಧಾತುಗಳೆಲ್ಲ ವೀಘಾತಿಸಿ ಕಫಸಂ
ಘಾತವು ಹೆಚ್ಚಿದ ಸೇರುವ ನೋಡಿ ೧
ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ
ಕೇಶರಂಧ್ರವಕಾಶದೊಳೂಧ್ರ್ವ ಬಲು
ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ ೨
ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ
ದಾಯತಪ್ಪಿ ದುರ್ವಾಯುವಿಂದ ತಲೆ
ನೋಯುತ ದೇಹದೊಳಾಯಾಸ ಹೆಚ್ಚಿತು ೩
ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ
ಮದ್ದು ತಿಂದವನು ಬುದ್ಧಿಯಿಂತೆ ಮೈ
ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ೪
ಅನ್ನವರೋಚಕವು ಅಪ್ತರೊಳನ್ಯತೆಗೋಚರವು
ಮುನ್ನ ವೈದ್ಯಗಳನ್ನು ಕಾಣಿ ನೀ
ಕಣ್ಣತೆರೆದು ನೋಡೆನ್ನ ಕಟಾಕ್ಷದಿ೫
ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ
ನೀಗಲಾಡು ಈ ರೋಗವನ್ನು ಭವ
ರೋಗ ವೈದ್ಯ ನೀನೇಗತಿಯೆಂದಿಗು ೬
ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ
ಶರಣಾಭರಣ ಪುಲಿಗಿರಿಯೊಳು ನೆಲಸಿಹ
ವರದವಿಠಲದೊರೆ ವರದದಯಾನಿಧೆ ೭

 

೧೭೪
ಸಾರಸದಳನಯನೆ ಸಲಹೆಮ್ಮನು
ತೋರುವ ಜಗದಯನೆ ಪ
ಕ್ಷೀರಶರಧಿ ಸುಕುಮಾರಿಣಿ ಹರಿಸಹ
ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ
ಮಂದಹಾಸ ವಿಜಿತೇಂದುಕಿರಣೆ ಗಜ
ಮಂದಗಮನೆ ಸಂಕ್ರಂದನ ವಂದಿತೆ ೧
ನೀರಜಸಮಪಾಣಿ ನೀ ಲಾಲಿಸು
ಕೀರ ಮಧುರವಾಣಿ ತಾರಹಾರ ಶೃಂಗಾರ ತರಂಗಿಣಿ
ಮಾರಜನನಿ ಕಂಸಾರಿಯ ರಾಣಿ ೨
ನೀಲಭುಜಗ ವೇಣಿ ನೀನೆ ಗತಿ
ಪಾಲಿಸು ಕಲ್ಯಾಣಿ ಲೀಲೆಯಿಂದ ವನಮಾಲಿಯುರದಿ ನಿ
ತ್ಯಾಲಯಗೈದಿಹ ಬಾಲೆ ವರದನುತೆ ೩

 

ಶ್ರೀಹರಿಯನ್ನು ಪರಾತ್ಪರ
೧೪೨
ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ
ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ
ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ
ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ ೧
ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ
ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ ೨
ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ
ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ ೩
ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ
ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ ೪
ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ
ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ ೫
ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ
ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ ೬
ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ
ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ ೭
ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ
ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ ೮
ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ
ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ ೯
ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ
ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ೧೦
ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ
ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ ೧೧
ಧರಣಿಯೊಳುರುತರ ಮೆರೆಯುವ ಫಣಿಭೂ
ಧರದೊಳು ನಿರುತವು ಭಕ್ತರ
ಕರುಣದಿ ಪೊರೆಯುವ ದೊರೆ
ಸಿರಿವಲ್ಲಭ ವರದ ವಿಠಲ ಕರುಣಾಕರ ೧೨

 

೧೪೩
ಸೇವೇ ಶ್ರೀರಮಣಂ ಸದಾ ಸೇವಕಾರ್ತಿಹರಣಂ ಪ
ಪಾವಕಶತರುಚಿ ರುಚಿರಾಭರಣಂ
ಪಾವನ ವಾಘ್ರಾಚಲವಿಹರಣಂ ಅ.ಪ
ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿಪತ್ರಂ
ಖಂಡಪರಶುಕೃತಸನ್ನುತಿಪಾತ್ರಂ ಚಂಡಕಿರಣಶತಸನ್ನಿಭಗಾತ್ರಂ೭ ೧
ಕುಲಿಶಧರಾತ್ಮಜ ಮಿತ್ರಂ ಸುಲಲಿತ ಕರಧೃತ ಗೋತ್ರಂ
ಕಲಿತರಥಾಂಗಧರಾಸಿತನುತ್ರಂ ಕಲಿಮಲಖಂಡನ ನಿಜಚಾರಿತ್ರಂ೨
ಭಾವಿತಜನ ಮಂದಾರಂ ಭಾವಜಜನಕಮುದಾರಂ
ಸೇವಕರಕ್ಷಣ ಧೃತಶರೀರಂ ದೇವಸಮೂಹಾಕಲಿತ ವಿಹಾರಂ೩
ಶಂಕರಹೃದಯಧ್ಯೇಯಂ ಕಿಂಕರಜನ ಸಮುದಾಯಂ
ಪಂಕಜನಿಲಯಾಲಂಗಿತಕಾಯಂ ಸಂಕಟಮೋಚಕ
ನಿಜನಾಮಧೇಯ ೪
ಪರಮಪುರುಷಮನವಂದ್ಯಂ ಸರಸಗುಣಾಕರಮಾದ್ಯಂ
ವರಯೋಗೀಜನಹೃದಯಾರಾಧ್ಯಂ
ವರದವಿಠಲಮಖಿಲಾಗಮಬೋಧ್ಯಂ ೫

 

ಹೆಣ್ಣಿನ ಪ್ರತಿಮೆಯಲ್ಲಿ
೨೨೧
ಹಣ್ಣು ಬಂದಿದೆ ಜನರು ಹಣ್ಣುಕೊಳ್ಳಿರೋ
ಗಣ್ಯವಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ
ಬೀಜವಿಲ್ಲದೆ ಬೆಳೆದ ಭೂಜವಿಲ್ಲದ ಬೀಜ
ಭೂಜಗಳಿಗೆ ತಾನೆ ಬೀಜಮಾಗಿ ಮೆರೆಯುತಿರುವ ೧
ಹುಟ್ಟಿ ಬೆಳೆಯದಾ ಜನರು ಮುಟ್ಟಿ ತೊಳೆಯುದಾ
ಎಷ್ಟು ದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದಾ ೨
ಬೆಲೆಗೆ ಬಾರದಾ ತನ್ನ ನೆಲೆಯ ತೋರದ
ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ೩
ಅರಿಯದವರಿಗೆ ರುಚಿಯನರಿತ ಜನರಿಗೆ ಅರಿತ ಮೇಲೆ
ನಿರುತವಿರುತ ಸರಸ ಮಧುರ ಭರಿತ ಬರಿತ ೪
ಸಿರಿ ಮನೋಹರ ವ್ಯಾಘ್ರಗಿರಿಯ ಮಂದಿರ
ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ ೫

 

೧೪೪
ಹರಿ ನೀಲಸದೃಶ ನೀಲ ಕನಕಚೇಲ ಲೀಲಯಾ ಪ
ಪುಲಿಶೈಲರಚಿತಲೀಲಾ ರಮಾಲೋಲ ಪಾಲಯಾ ಅ.ಪ
ಶರದಿಂದುವದನ ಕುಂದರದನ ನಂದನಂದನಾ
ಅರವಿಂದನಯನ ಸಿಂಧುಶಯನ ವಂದಿ ಚಂದನಾ ೧
ಯದುರಾಜ ಕಲ್ಪಭೂಜದೇವರಾಜಪೂಜಿತ
ಕರಿರಾಜರಾಜರಾಜ ಸಮವಿರಾಜ ರಾಜಿತ ೨
ಘನದುರಿತ ಪಟುಲಹರಣ ಚಟುಲಚರಣಪಾಟಲಾ
ಕರಿವರದ ವಿಮಲಚರಿತ ವಿಪುಲವರದವಿಠಲ ೩

 

‘ತಂಬೂರಿ’ಯನ್ನು
೨೨೨
ಹರಿಕೃಪೆಯಿಂದಲಿ ದೊರೆತಿತು ಎನಗೀ ಸಿರಿ ತಂಬೂರಿ ಪ
ನರಹರಿ ನಾಮಸ್ಮರಣೆಯಗೈಯುವ ನರರಿಗೆ ಸಹಕಾರಿ ಅ.ಪ
ತಾಪತ್ರಯವನು ಲೋಪಗೈವ ಸುಖರೂಪಿನ ತಂಬೂರಿ
ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ ೧
ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ
ವಾಸುಕಿಶಯನ ವಿಲಾಸದ ಕೀರ್ತಿ ವಿಕಾಸದ ಜಯಭೇರಿ ೨
ಅಂಬುಜಭವನ ಕುಟುಂಬಿನೆಯ ಕರಾಲಂಬನ ತಂಬೂರಿ
ತುಂಬುರು ನಾರದರಂಬುರುಹಾಕ್ಷನ ಹಂಬಲಿಗನು ಸಾರಿ೩
ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ
ಸುಂದರಿಯರು ನಲವಿಂದಲಿ ನುಡಿಸುವಾನಂದ ಸುಗುಣಧಾರಿ ೪
ಶ್ರುತಿಯುತಮಾಗಲು ಮತಿಯುತರಿಗೆ ಸಮ್ಮತವಹ ತಂಬೂರಿ
ಶ್ರುತಿ ಹೀನತೆಯಿಂದತಿಶಯಮಾಗದು ಕೃತಿ ಶತವದು ಸಾರಿ೫
ಲೋಕದ ಜನರಿಗನೇಕ ಸುಕೃತ ಪರಿಪಾಕದ ತಂಬೂರಿ
ಈಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖದಾರಿ ೬
ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ
ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ ೭

 

೧೪೫
ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ
ಮರೆಯದೆನ್ನ ಪೊರೆಯೊ
ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ
ಸಕಲ ಲೋಕಗಳನು ನೀನೇ ಸೃಜಿಸುವಾತನು
ಸುಖದಿ ಪ್ರಾಣಿಗಳನು ನೀನೇ ಸಲಹುವಾತನು
ಪ್ರಕಟವಾದ ಜಗವ ನೀನೆ ಪ್ರಳಯಗೈವನು
ನಿಖಿಲ ಜೀವಸಾಕ್ಷಿಯಾಗಿ ನಿತ್ಯ ನೀನೆ ನಿಯಮಿಸುವನು ೧
ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು
ಲೀಲೆಯನ್ನು ಪ್ರಕಟಗೈವ ಕಾಲರೂಪನು
ನೀಲಲೋಹಿತಾದಿ ವಿಬುಧಜಾಲವಂದ್ಯನು
ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ ೨
ಪರಮಪುರುಷ ಪಂಕಜಾಕ್ಷ ಪತಿತಪಾವನ
ಶರಧಿ ಶಯನ ಸಕಲಲೋಕ ಸಂವಿಭಾವನ
ವರಗುಣಾಢ್ಯ ವಿಗತಮಾಯ ವಿಶ್ವಮೋಹನ
ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ ೩

 

ಮಳೆಯ ಪಾಲಿಸಯ್ಯ ಮಂಗಳ
೨೩೦
ಮಳೆಯ ಪಾಲಸಯ್ಯ ಮಂಗಳ-
ನಿಳಯ ಪಾಲಿಸಮ್ಮ ಪ
ಬಿನೆಯೊಳು ಮಳೆಯನು ತಳೆಯದೆ ತೃಣಗಳು
ಬೆಳೆಯದ ಗೋವುಗಳಳವುವಯ್ಯ ಅ.ಪ
ಗೋವಿಪುರ ಕುಲವ ಕಾಯುವ
ದೇವನು ನೀನಲ್ಲವೇ
ಮೇವುಗಳಿಲ್ಲದೆ ಗೋವುಗಳೆಲ್ಲವು
ಸಾವುವು ನಿನ್ನೊಳಿದಾವನು ಕಾವನು ೧
ಕರೆಯೊಳು ನೀರಿಲ್ಲ ಬಾವಿಗ-
ಳೊರತೆಯ ಸೋರಿಲ್ಲ
ತುರುಗಳು ಜೀವನದಿರವನು ಕಾಣದೆ
ಹರಣವ ಬಿಡವುವು ಕರುಣದಿ ಬೇಗನೆ ೨
ಬಲರಿಪುಖತಿಯಲಿ ಬಾಧಿಪೆ
ಜಲಮಯ ರೀತಿಯಲಿ
ಚಲಿಸದೆ ಕೊಡೆವಿಡಿದಳುಹಿದೆ ಕರದೊಳು
ಚಲವನು ಗೋವ್ಗಳ ಬಳಗವನೀಗಳು ೩
ಜಲನಿಧಿ ಕೃತ ಶಯನ ಶಾರದ
ಜಲರುಹದಳನಯನ
ಜಲಧೀಪತಿ ಜಲಜರ ಮೂರುತಿ
ಜಲಜಕರಗಳು ಜಲದಾಗರದಿಂ ೪
ದಾರಿಯ ಜನರೆಲ್ಲ ಬಹು ಬಾ-
ಯಾರಿ ಬರುವರಲ್ಲ
ದೂರಗಿಂ ತಂದಿಹ ನೀರನು ಲೋಭದಿ
ನಾರಿಯರೆಲ್ಲ ವಿಚಾರಿಸುತಿರ್ಪರು ೫
ಬೆಳೆದಿಹ ಸತ್ಯಗಳು ಬಿಸಿಲಿನ
ಜಳದಲಿ ಬಾಡಿಹುವು
ನಡಿನ ನಯನ ನಿನ್ನೊಲುಮೆಯ ತೋರಿಸಿ
ಘಳಲನೆ ಪೈರುಗಳಳಿಯುತ ತೆರದೊಳು ೬
ಕರುಣಾನಿಧಿಯೆಂದು ನಿನ್ನನು
ಶರಖಹೊಕ್ಕೆನಿಂದು
ಶರಣಭರಣ ಪುಲಿಗಿರಿಯೊಳು ನೆಲೆಸಿಹ
ವರದ ವಿಠಲ ದೊರೆ ವರದ ದಯಾನಿಧೆ ೭

ಹಾಡಿನ ಹೆಸರು :ಮಳೆಯ ಪಾಲಿಸಯ್ಯ ಮಂಗಳ
ಹಾಡಿದವರ ಹೆಸರು :ನಿತಿನ್ ರಾಜಾರಾಮ ಶಾಸ್ತ್ರಿ
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *