Categories
ರಚನೆಗಳು

ವೆಂಕಟೇಶವಿಟ್ಠಲ

೧೭೭
ವಾದಿರಾಜರ ಸ್ತೋತ್ರ
ಇದಿರ್ಯಾರೋ ಗುರುವೆ ಸಮರ್ಯಾರೋ ಶ್ರೀ ಹಯವದನ ಪದ ಪ್ರಿಯ ವಾದಿರಾಜ ಪ
ಸಿರಿನಿಲಯನ ಗುಣಗಳ ಸ್ಮರಿಸುತಗುರು ಮಧ್ವ ಮುನಿಪನ ಮಹಿಮೆಯ ಪೊಗಳುತನೆರೆದಿದ್ದ ಮಾಯ್ಮದ ಕರಿಗಳ ಶಿರವನುಭರದಿ ಛೇದಿಪ ಬಲಿ ವಿಬುಧ ಕೇಸರಿಯೆ ೧
ಹರಿ ತತ್ತ್ವ ಸಾರ ಸಜ್ಜನರಿಗೆ ತಿಳಿಯದೇಪರಿಪರಿ ಕುಸಮಯ ತಮ ಕವಿಯಲು ನೀಸರಸ ಭಾರತಿ ಮೊದಲಾದ ಗ್ರಂಥಗಳನುವಿರಚಿಸಿ ತಮ ಹರಿಸಿದ ದಿನಕರನೇ ೨
ಸೋದೆಯ ಪುರದಲ್ಲಿರುವ ಹಯವದನನಮೋದದಿ ಭಜಿಸುತ ಈ ಧರೆಯೊಳ್ ಪೂರ್ಣಬೋಧ ತೀರ್ಥರ ಪಾದಸೇವಕರಿಗೆಆದರ ಮಾಳ್ಪ ಯತಿಕುಲ ಶಿರೋಮಣಿಯೇ ೩
ಮುದ್ದು ಲಕ್ಷ್ಮೀಶ ವೆಂಕಟ ವಿಠ್ಠಲನಹೊದ್ದಿದ ಭಕ್ತರ ಸಂತಾಪ ಕಳೆಯುತ ಮಧ್ವಮುನಿಯ ಮತ ದುಗ್ಧವಾರಿಧಿಯೊಳುಉದ್ಭವಿಸಿದ ಪೂರ್ಣ ಶುದ್ಧ ಚಂದ್ರಮನೇ ೪

 

೧೭೫
ಲಕ್ಷ್ಮೀದೇವಿ ಸ್ತೋತ್ರ
ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ
ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ
ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ ೧
ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು ೨
ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು ೩
ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು ೪
ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ ೫
ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು ೬

 

ಆತ್ಮನಿವೇದನೆ
೧೮೨
ಏನು ಕಾರಣವೆನಗೆ ತಿಳಿಯಲಿಲ್ಲದೀನ ರಕ್ಷಕನಾದ ಹರಿಯೆ ತಾ ಬಲ್ಲ ಪ
ಕಾನನದೊಳಗೆ ಕಡುತಪಿಸಿ ತೃಷಿಯಾದವಂಗೆತಾನಾಗೆ ಮೋಡೊಡ್ಡಿ ಮೇಘ ಕವಿದುನಾನು ಧನ್ಯನೆಂದು ನರ್ತಿಸುವ ಸಮಯದಲಿಕಾಣದೇ ಪೋಯಿತು ಬಿಂದು ಮಾತ್ರ ೧
ವರುಷದಿಂದಲಿ ನಿಮ್ಮ ದರುಶನಾಕಾಂಕ್ಷಿಸಿಪರುಶರಾಮನ ಪಾದ ಭಜನೆಯನ್ನುಹರುಷದಲಿ ಪಾಡಿ ಹಗಲಿರುಳು ಪ್ರಾರ್ಥಿಸುವಂಗೆಪುರುಷಾರ್ಥ ಪೂರೈಸಿ ಬಾರದಿಪ್ಪ ಬಗಿಯು ೨
ಅನ್ನಾದಿಯಿಂದ ಅನ್ನಂತ ಜನ್ಮದಿ ಬಂದುಉನ್ನಂತ ಮಾಡಿದ ಪಾಪರಾಶಿ-ಯನ್ನು ಉಣದನಕ ಭೂವನ್ನದೊಳು ಮತ್ತೆ ಪಾ-ವನ್ನರಾ ಪಾದಗಳು ಪಡೆಯಲರಿಯದೊಯೇನೊ ೩
ಅನ್ನಾಥ ಬಂಧು ಹರೆಯೆನ್ನುವಾ ಬಿರುದಿಗೆನಿನ್ನಂಥ ಮಹಿಮನಾ ಕರೆದು ವೊಂದೂಎನ್ನಂಥ ಪರಮ ಪಾತಕಿಯನುದ್ಧರಿಸಿತಾ-ಸನ್ನಗೊಳಿಸಿ ಸತತ ಸಲಹದಿಹುದು ಏನು ೪
ಅರಸಿನಾಲೋಚನಿಯು ಸತತ ಸನ್ನಿಧಿಯೊಳನು- ಸರಿಸಿದ ಆಳುಗಳು ಬಲ್ಲ ತೆರದಿಸರಸಿಜ ನಯನ ವೆಂಕಟ ವಿಠಲನ ಪಾದಸರಸಿಜದಿ ಸರಸರೊಳು ನಲಿದು ನೀ ಬಾರದಿಹುದು ೫

 

ಬಿಡುವೆನೇನಯ್ಯಾ ಹನುಮ ನಿನ್ನ
೧೭೩
ಗಣೇಶ ಸ್ತೋತ್ರ
ಗಣಪತೇ ಎನ್ನ ಪಾಲಿಸೋ – ಗಂಭೀರಾ ಪ
ಪಾರ್ವತಿ ನಂದನ ಸುಂದರ ವದನಶರ್ವಾದಿ ಸುರವಂದ್ಯ ಶಿರಬಾಗುವೆನು ೧
ಆದಿ ಪೂಜಿತ ನೀನು ಮೋದ ಭಕುತರಿಗಿತ್ತುಮಾಧವನಲಿ ಮನ ಸದಾ ನಿಲಿಸು ನೀ ೨
ಪಂಕಜ ನಯನ ವೆಂಕಟ ವಿಠಲನಕಿಂಕಿರನೆನಿಸೆನ್ನ ಶಂಕರ ತನಯನೆ ೩

 

೧೭೪
ಭಗವಂತನ ಸಂಕೀರ್ತನೆ
ಚೆಂದವೇನೇ ಗೋಪಿ ಚೆಂದವೇನೇನಿನ್ನ ಮಗನ ದುಡುಕು – ಚೆಂದವೇನೇ ಪ
ಚೆಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು ಬೇಗದಿ ಕೃಷ್ಣ ಬಂದೋಡಿ ನಿಂತನೆ ೧
ಸದ್ದು ಮಾಡದೆ ಪಾಲು ಕದ್ದು ನಮ್ಮನೆಯೊಳಗಿದ್ದ ಸ್ತ್ರೀಯರನೆಲ್ಲ ಮುದ್ದಾಡಿ ಪೋದನೆ ೨
ಚೋರನೆನಿಸಿಕೊಂಬ ಧೀರ ವೆಂಕಟವಿಠ್ಠಲ*ವಾರಿಜಾಕ್ಷನ ಪಾದ ಸೇರಿದೆ ನಾನೀಗ ೩

 

೧೮೦
ವಿಜಯದಾಸರ ಸ್ತೋತ್ರ
ನಂಬಿದೆ ನಾ ನಿನ್ನ ಚರಣಕಮಲವನ್ನು ವಿಜಯರಾಯ ಪ
ಬೆಂಬಿಡದೆಲೆ ವಿಷಯ ಹಂಬಲ ಬಿಡಿಸಯ್ಯ ವಿಜಯರಾಯ ಅ.ಪ
ತಾಯಿ ಎಳೆಯ ಶಿಶುವನು ಬಿಟ್ಟಿರುವುದುಂಟೆ ವಿಜಯರಾಯಬಾಯ ಬಿಡುವೆ ನಾ ಭವದಲ್ಲಿ ಸಿಗಬಿದ್ದು ವಿಜಯರಾಯನೋಯಲಾರೆನೂ ಎನ್ನ ಕಾಯೊ ಕರುಣದಿಂದ ವಿಜಯರಾಯಕಾಯ ಮನವು ನಿನ್ನ ಚರಣಕ್ಕೊಪ್ಪಿಸಿದೆನೊ ವಿಜಯರಾಯ ೧
ಎತ್ತಗಾಣದೆ ಕರ್ಮ ಕತ್ತಲೆಯೊಳು ಸುತ್ತಿ ವಿಜಯರಾಯ ತತ್ತಳಗೊಳುತಿಪ್ಪೆ ಎತ್ತಿರೊ ಎನ್ನ ವಿಜಯರಾಯಪೆತ್ತ ತಂದೆಗೆ ಮಗ ಭಾರವಾಗುವುದುಂಟೆ ವಿಜಯರಾಯವಿತ್ತ ಭಾಗ್ಯವನೊಲ್ಲೆ ಎಂದೆಂದಿಗೂ ನಾನು ವಿಜಯರಾಯ ೨
ತುಂಬಿದ ಭಂಡಾರ ಸಂಪತ್ತು ಎನಗೆಂದು ವಿಜಯರಾಯಹಂಬಲಿಸುತ ಬಲು ಸಂಭ್ರಮದಿರುತಿಪ್ಪೆ ವಿಜಯರಾಯಸಂಬಳಕಾರ ಶಿಷ್ಯ ನಿನಗಲ್ಲ ಕೇಳಯ್ಯ ವಿಜಯರಾಯಬಿಂಬ ಶ್ರೀ ವೆಂಕಟ ವಿಠ್ಠಲನ ತೋರೊ ನೀ ವಿಜಯರಾಯ ೩

 

೧೭೬
ಹನುಮಂತದೇವರ ಸ್ತೋತ್ರ
ಬಿಡುವೇನೇನಯ್ಯಾ ಹನುಮ ನಿನ್ನಬಿಡುವೇನೇನಯ್ಯಾ ಪ
ಬಿಡುವೆನೇನೋ ಹನುಮ ನಿನ್ನಅಡಿಗಳಿಗೆ ಶಿರವ ಕಟ್ಟಿ (ಎರಗುವೆ ನಾನು)ದೃಢ ಭಕ್ತಿ ಸುಎ್ಞÁನವನ್ನುತಡಮಾಡದಲೆ ಕೊಡುವೋ ತನಕ ಅ.ಪ
ಹಸ್ತವ ಮ್ಯಾಲಕೆ ಎತ್ತಿದರೇನುಹಾರಗಾಲ ಹಾಕಿದರೇನುಭೃತ್ಯನು ನಿನ್ನವನು ನಾನುಹಸ್ತಿ ವರದನ ತೋರೋ ತನಕ ೧
ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲಫುಲ್ಲನಾಭ ಲಕುಮೀಲೋಲನಇಲ್ಲಿಗೆ ತಂದು ತೋರುವ ತನಕ ೨
ಡೊಂಕು ಮೋರೆ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಕಿಂಕರನು ನಿನ್ನವನೋ ನಾನುವೆಂಕಟವಿಠಲನ ತೋರುವ ತನಕ ೩

 

೧೭೯
ರಾಘವೇಂದ್ರ ಸ್ವಾಮಿಗಳ ಸ್ತೋತ್ರ
ವೃಂದಾವನ ನೋಡಿರೋ – ಗುರುಗಳವೃಂದಾವನ ಪಾಡಿರೋ ಪ
ವೃಂದಾವನ ನೋಡಿ – ಆನಂದ ಮದವೇರಿಚೆಂದದಿ ದ್ವಾದಶ ಪೌಂಡ್ರಾಂಕಿತಗೊಂಬ ಅ.ಪ
ತುಂಗಭದ್ರಾ ನದಿಯ ತೀರದಿ ಇದ್ದತುಂಗ ಮಂಟಪ ಮಧ್ಯದಿಶೃಂಗಾರ ತುಲಸಿ ಪದ್ಮಾಕ್ಷ ಸರಗಳಿಂದಮಂಗಳಕರ ಮಹಾ ಮಹಿಮೆಯಿಂದೊಪ್ಪುವ ೧
ದೇಶ ದೇಶದಿ ಮೆಚ್ಚುತ – ಇಲ್ಲಿಗೆ ಬಂದುವಾಸವಾಗಿ ಸೇವಿಪಭಾಷೆ ಕೊಟ್ಟಂದದಿ ಬಹುವಿಧ ವರಗಳಸೂಸುವ ಕರ ಮಹಾಮಹಿಮೆಯಿಂದೊಪ್ಪುವ ೨
ನಿತ್ಯ ಸನ್ನಿಧಿ ಸೇವಿಪ – ಭಕ್ತರಿಗೆಲ್ಲಮತ್ತಭೀಷ್ಟವ ಕೊಡುತ ಪತ್ಯಾಧಿಗುಣ ಸಿಂಧು ವೆಂಕಟವಿಠ್ಠಲನ ನಿತ್ಯ ಸನ್ನಿಧಿಯಿಂದ ನಿರುತ ಪೊಜೆಯಗೊಂಬ ೩

 

೧೭೮
ಪುರಂದರದಾಸರ ಸ್ತೋತ್ರ
ಶ್ರೀ ಪುರಂದರದಾಸರಾಯ ನಿಮ್ಮಶ್ರೀ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ
ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ ೧
ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ ೨
ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ ಎ್ಞÁನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ ೩
ಹರಿ ಸರ್ವೋತ್ತಮನೆಂದು ಧರೆಯೊಳಗೆ ನೀವು ಡಂ-ಗುರವ ಹೊಯ್ಸಿ ಮೆರೆವ ಶ್ರೀ ಗುರುವರ್ಯರೆತರತಮವು ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ ೪
ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ ೫
ಎರಡ್ಹೊತ್ತು ನಾಲ್ಕು ತತ್ತ್ವದ ವಿಚಾರವಅರುಹು ಹರಿಯೆ ದೈವ ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ ಎ್ಞÁನ ಕರುಣಿಸುವುದು ೬
ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ ೭

 

ಬಿಡುವೆನೇನಯ್ಯಾ ಹನುಮ
೧೭೬
ಹನುಮಂತದೇವರ ಸ್ತೋತ್ರ
ಬಿಡುವೇನೇನಯ್ಯಾ ಹನುಮ ನಿನ್ನಬಿಡುವೇನೇನಯ್ಯಾ ಪ
ಬಿಡುವೆನೇನೋ ಹನುಮ ನಿನ್ನಅಡಿಗಳಿಗೆ ಶಿರವ ಕಟ್ಟಿ (ಎರಗುವೆ ನಾನು)ದೃಢ ಭಕ್ತಿ ಸುಎ್ಞÁನವನ್ನುತಡಮಾಡದಲೆ ಕೊಡುವೋ ತನಕ ಅ.ಪ
ಹಸ್ತವ ಮ್ಯಾಲಕೆ ಎತ್ತಿದರೇನುಹಾರಗಾಲ ಹಾಕಿದರೇನುಭೃತ್ಯನು ನಿನ್ನವನು ನಾನುಹಸ್ತಿ ವರದನ ತೋರೋ ತನಕ ೧
ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲಫುಲ್ಲನಾಭ ಲಕುಮೀಲೋಲನಇಲ್ಲಿಗೆ ತಂದು ತೋರುವ ತನಕ ೨
ಡೊಂಕು ಮೋರೆ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಕಿಂಕರನು ನಿನ್ನವನೋ ನಾನುವೆಂಕಟವಿಠಲನ ತೋರುವ ತನಕ ೩

 

ಹಾಡಿನ ಹೆಸರು :ಬಿಡುವೆನೇನಯ್ಯಾ ಹನುಮ
ಹಾಡಿದವರ ಹೆಸರು :ಕೌಶಿಕ್ ಐತಾಳ್
ರಾಗ :ಮಿಶ್ರ ಮಾಂಡ್
ತಾಳ : ದೀಪ್‍ಚಂದಿ
ಸಂಗೀತ ನಿರ್ದೇಶಕರು :ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *