Categories
ರಚನೆಗಳು

ಶ್ರೀನಿಧಿವಿಠಲರು

೬೫
ವಾಯುದೇವರು
ಶಾಂತ ಜನರಿಗೀಶಾ ರವಿಕುಲ
ಕಾಂತನ ನಿಜದಾಸ ಪ
ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ-
ದಾಂತವೇದ್ಯನಲಿ ಸಂತಸ ಕೊಡುವನ ಅ.ಪ.
ಕಡಲ ದಾಟಿ ಬಂದೂ ಒಡೆಯನ
ಮಡದಿಗುಂಗುರ ತಂದೂ
ಸಡಗರದಲಿ ತುಡುಗ ದೈತ್ಯವ ಕೊಂದು
ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ ೧
ಏಕಚಕ್ರದಲ್ಲೀ ಬಕಗೆಂ-
ದ್ಹಾಕಿದ ಗ್ರಾಸದಲೀ
ಶಾಖಡಿಸಲಬಿಡದೇಕತುತ್ತು ಮಾಡಿ
ಭೀಕರ ದೈತ್ಯನವಲೋಕಿಸದ್ಹೊಡದೆಲೋ ೨
ವಾಯು ಹನುಮ ಭೀಮ ಮಧ್ವಾ
ಕಾಯೋ ಪೂರ್ಣಕಾಮಾ
ಸಾಯ ಬಡಿದೀ ನೀ ಮಾಯಿಗಳೆಲ್ಲರ
ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ ೩

 

ದಾಸರು ಇಲಿ ‘ಜೀವಸತಿ, ಪರಮಾತ್ಮಪತಿ
೬೬
ಸೂರ್ಯಾಂತರ್ಗತ ನಾರಾಯಣ ಪಾಹಿ
ಆರ್ಯ ಮಾರುತಿ ಪಂಚಪ್ರಾಣ ಪ
ಭಾರ್ಯಳೆಂದೊಡಗೂಡಿ ಸರ್ವಜೀವರೊಳಿದ್ದು
ವೀರ್ಯ ಕೊಡುತಲಿರ್ದ ಶರ್ವಾದಿ ವಂದ್ಯಾತಿಅ.ಪ.
ದ್ರುಪದನ ಸುತೆ ನಿನ್ನ ಕರೆಯೆ ಅಂದು
ಕೃಪಣ ವತ್ಸಲ ಶೀರೆ ಮಳೆಯೇ
ಅಪರಿಮಿತವು ನೀರ ಸುರಿಯೆ ಸ್ವಾಮಿ
ಕುಪಿತ ದೈತ್ಯರ ಗರ್ವ ಮುರಿಯೇ
ಜನಸೋ ಜನರ ವಿಪತ್ತು ಕಳೆದೆ
ಈ ಪರಿಯ ದೇವರನೆಲ್ಲಿ ಕಾಣೆನೊ
ತಪನಕೋಟ ಪ್ರಕಾಶ ಬಲ ಉಳ್ಳ
ಕಪಿಲರೂಪನೆ ಜ್ಞಾನದಾಯಕ ೧
ಹೃದಯ ಮಂಟಪದೊಳಗೆಲ್ಲ ಪ್ರಾಣ-
ದದುಭುತ ಮಹಿಮೆಯ ಬಲ್ಲ
ಸದಮಲನಾಗಿ ತಾವೆಲ್ಲ ಕಾರ್ಯ
ಮುದದಿ ಮಾಡಿಸುವ ಶ್ರೀನಲ್ಲ
ಹದುಳ ಕೊಡುತಲಿ ಬದಿಲಿ ತಾನಿದ್ದು
ಒದಗಿ ನಿನಗೆಲ್ಲ ಮದುವೆ ಮಾಡಿದ
ಪದುಮಜಾಂಡೋದರ ಸುದತಿಯ
ಮುದದಿ ರಮಿಸೆಂದು ಒದಗಿ ಬೇಡುವೆ ೨
ಎನ್ನ ಬಿನ್ನಪವನ್ನು ಕೇಳೊ ಪ್ರಿಯ
ಮನ್ನಿಸಿ ನೋಡೊ ದಯಾಳೋ
ಹೆಣ್ಣಬಲೆಯ ಮಾತು ಕೇಳೂ ನಾನು
ನಿನ್ನವಳಲ್ಲವೇನು ಹೇಳೋ
ನಿನ್ನ ಮನದನುಮಾನ ತಿಳಿಯಿತು
ಕನ್ಯಾವಸ್ಥೆಯು ಎನ್ನದೆನ್ನದೆ
ಚೆನ್ನ ಶ್ರೀನಿಧಿವಿಠಲ ಪ್ರಾಯದ
ಕನ್ನೆ ಇವಳನು ದೇವ ಕೂಡಿಕೊ ೩

 

೬೭
ಸೇರಿ ಸುಖಿಸು ಮಾನವ
ಗುರು ಚರಣ ಸರೋಜವ ಪ
ಸೇರಿದ ಶರಣರ ಘೋರ ಪಾತಕವೆಂಬ
ವಾರಿಧಿ ಭವಕೆ ಸಮೀರ ಜಗನ್ನಾಥ
ಸೂರಿವರ್ಯ ದಾಸಾರ್ಯರಂಘ್ರಿಯನು ೧
ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ-
ದಾರಿಕಾಣದೆ ಭವದಿ ಬಿದ್ದ ಜ-
ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ
ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ
ಶ್ರೀರಮಾಪತಿಯ ಚಾರು ಕಥಾಮೃತ
ಸಾರವ ಧರೆಯೋಳು ಬೀರಿದಂಥವರ ೨
ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು
ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ
ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ
ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು
ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ ೩
ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು
ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ
ಸ್ಥಾಣುವಿನೊಳು ಮುದದಿ ಕಾರ್ಪರವೆಂಬ
ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ
ಶ್ರೀನಿಧಿ ನರಪಂಚಾನನಂಘ್ರಿಯುಗ
ಧ್ಯಾನದಿ ಕುಳಿತ ಮಹಾನುಭಾವರನು ೪

 

ಶಾಂತ ಜನರಿಗೀಶಾ
೬೫
ವಾಯುದೇವರು
ಶಾಂತ ಜನರಿಗೀಶಾ ರವಿಕುಲ
ಕಾಂತನ ನಿಜದಾಸ ಪ
ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ-
ದಾಂತವೇದ್ಯನಲಿ ಸಂತಸ ಕೊಡುವನ ಅ.ಪ.
ಕಡಲ ದಾಟಿ ಬಂದೂ ಒಡೆಯನ
ಮಡದಿಗುಂಗುರ ತಂದೂ
ಸಡಗರದಲಿ ತುಡುಗ ದೈತ್ಯವ ಕೊಂದು
ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ ೧
ಏಕಚಕ್ರದಲ್ಲೀ ಬಕಗೆಂ-
ದ್ಹಾಕಿದ ಗ್ರಾಸದಲೀ
ಶಾಖಡಿಸಲಬಿಡದೇಕತುತ್ತು ಮಾಡಿ
ಭೀಕರ ದೈತ್ಯನವಲೋಕಿಸದ್ಹೊಡದೆಲೋ ೨
ವಾಯು ಹನುಮ ಭೀಮ ಮಧ್ವಾ
ಕಾಯೋ ಪೂರ್ಣಕಾಮಾ
ಸಾಯ ಬಡಿದೀ ನೀ ಮಾಯಿಗಳೆಲ್ಲರ
ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ ೩

 

ಹಾಡಿನ ಹೆಸರು :ಶಾಂತ ಜನರಿಗೀಶಾ
ಹಾಡಿದವರ ಹೆಸರು : ನೀಲಾ ರಾಮಗೋಪಾಲ್
ರಾಗ :ಸಾಮ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *