Categories
ರಚನೆಗಳು

ಶ್ರೀಪಾದರಾಜರು

ಈ ಸಂಸಾರವನ್ನು ನೆಚ್ಚಿ ಕೆಡಬೇಡ.
೩. ನೀತಿಬೋಧೆ
೬೭
ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ.
ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ ೧
ಸಾವಿರ ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ ೨
ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ೩
ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ ೪
ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ ೫

 

ಆ) ಶ್ರೀಕೃಷ್ಣ ಲೀಲೆ
೨೫
ಇಂದಿನಿರುಳಿನ ಕನಸಿನಲ್ಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ ಪ
ಅಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನಾ ೧
ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳಗೋಪಿಯರ ಮೇಲೆ ಕಡೆಗಣ್ಣಚೆಲ್ಲುತೊಯ್ಯನೆ ನಡೆದ ಗೋವಳನ ೨
ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿತುತ್ತುರೂ ತೂರು ತೂರೆನುತಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿಮೊತ್ತದ ಗೋಪಿಯರನೆಲ್ಲ ಗೋವಳನ ೩
ಎಸಳು ಕಂಗಳ ಢಾಳ ಶಶಿ ನೊಸಲ ತಿಲಕಎಸೆವ ಬಿಂಬಾಧರದಪೊಸ ಮುತ್ತಿನೋಲೆ ಮೂಗುತಿ ಹೊನ್ನುಡಿ ಘಂಟೆಎಸೆವ ನೂಪುರ ಹಾಹೆಯ ಗೋವಳನ ೪
ಉಂಗುಟದಲಿ ಗಂಗೆಯಂಗಾಲಲವುಂಕೆತುಂಗವಕ್ಷದ ಲಕ್ಷುಮೀಮಂಗಳ ಮಹಿಮ ಭುಜಂಗಶಯನ ಸಿರಿರಂಗವಿಠ್ಠಲ ನೆರೆದ ಗೋವಳನ ೫

 

ಶ್ರೀಹರಿಯ ಪಾದವನ್ನು ನೆನೆಯುವುದರ ಮೂಲಕ
೧. ದೇವದೇವತಾ ಸ್ತುತಿ
ಅ) ಶ್ರೀ ಹರಿಯ ಗುಣಗಾನ

ಇಕ್ಕೋ ನೋಡೆ ರಂಗನಾಥನ ಚಿಕ್ಕ ಪಾದವ ಪ
ಸಿಕ್ಕಿತೆ ಶ್ರೀಲಕ್ಷ್ಮೀಪತಿಯ ದಿವ್ಯ ಪಾದವಅ.ಪ
ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವಸಂಕಟಹರಣ ವೆಂಕಟೇಶನ ದಿವ್ಯ ಪಾದವ೧
ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ೨
ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವಬಂಡಿಲಿದ್ದ ಶಕಟಾಸುರನ ಒದ್ದ ಪಾದವಅಂಡಜ ಹನುಮರ ಭುಜದೊಳೊಪ್ಪುವ ಪಾದವಕಂಡೆವೇ ಶ್ರೀರಂಗವಿಠಲನ ದಿವ್ಯ ಪಾದವ ೩

 

೫೬
ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಪ
ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇ ಅ.ಪ.
ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪಚಿನ್ನದ ಹರಿವಾಣದಲಿ ಭೋಜನಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-ದನ್ನ ಕಾಣದೆ ಬಾಯ್ಬಿಡಿಸುವೆಯೋ ಹರಿಯೇ ೧
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿಸೊಂಪಿನಂಚಿನ ಶಾಲು ಹೊದಿಸುವಿಯೋಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆಕಪರ್ದಕ ಕೌಪೀನವು ದೊರೆಯದೋ ಹರಿಯೇ ೨
ಚಂದ್ರಶಾಲೆಯಲ್ಲಿ ಚಂದ್ರಕಿರಣದಂತೊಪ್ಪುವಚಂದದ ಮಂಚದೊಳ್ಮಲಗಿಸುವಿಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮಮಂದಿರದೊಳು ತೋಳ್ತಲಗಿಂಬು ಹರಿಯೇ ೩
ನರಯಾನದೊಳು ಕ್ಷಣ ನರವರನೆನಿಸುವಿವರಛತ್ರ ಚಾಮರ ಹಾಕಿಸುವಿಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆಚರಣರಕ್ಷೆಯು ದೊರೆಯದು ಶ್ರೀಹರಿಯೇ ೪
ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರಸಂಗವಿರಲಿ ದುಷ್ಟರ ಸಂಗ ಬ್ಯಾಡಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ ೫

 

೫೭
ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ಪ
ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನಬೇಸರಿಸಿ ಬೇಡ ಬಂದುದಿಲ್ಲವಾಸುದೇವನೆ ನಿನ್ನ ದಾಸರ ದಾಸರದಾಸರ ದಾಸ್ಯವ ಕೊಡು ಸಾಕೆಂದರೆ ೧
ಸತಿಸುತರುಗಳ ಸಹಿತನಾಗಿ ನಾಹಿತದಿಂದ ಇರಬೇಕೆಂಬೊದಿಲ್ಲಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನಕಥಾಮೃತವನೆ ಕೊಡು ಸಾಕೆಂದರೆ ೨
ಸಾಲವಾಯಿತೆಂದು ಸಂಬಳ ಎನಗೆಸಾಲದೆಂದು ಬೇಡ ಬಂದುದಿಲ್ಲನಾಲಗೆಯಲಿ ನಿನ್ನ ನಾಮದುಚ್ಚರಣೆಯಪಾಲಿಸಬೇಕೆಂದು ಬೇಡಿದೆನಲ್ಲದೆ೩
ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದುಬಡವನೆಂದು ಬೇಡ ಬಂದುದಿಲ್ಲಒಡೆಯ ನಿನ್ನಡಿಗಳಿಗೆರಗುವುದಕೆ ಮನಬಿಡದಿಹದೊಂದನು ಕೊಡು ಸಾಕೆಂದರೆ೪
ಆಗಬೇಕು ರಾಜ್ಯಭೋಗಗಳೆನಗೆಂದುಈಗ ನಾನು ಬೇಡ ಬಂದುದಿಲ್ಲನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ೫

 

‘ಶಿಷ್ಯಾದಿಚ್ಛೇಚ್ ಪರಾಜಯಂ’
ವ್ಯಾಸರಾಜರು
೫೩
ಇದಿರದಾವನು ನಿನಗೀ ಧರೆಯೊಳುಪದುಮನಾಭನ ದಾಸ ಪರಮೋಲ್ಲಾಸಾ ಪ
ವಾದಿತಿಮಿರ ಮಾರ್ತಾಂಡನೆಂದೆನಿಸಿದೆವಾದಿಶರಭ ಭೇರುಂಢ ವ್ಯಾಸರಾಯಾ ೧
ಯತಿಗಳೊಳಗೆ ನಿಮ್ಮಿಂದದವರುಗಳಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ೨
ಹಮ್ಮನಳಿದು ಶ್ರೀಪತಿ ರಂಗವಿಠಲನ್ನಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ೩

 

೨೬
ಇನ್ನಿವನು ಈಗ ಬರಲಿದಕೆ ಬಗೆಯೇನುಚೆನ್ನಾಗಿ ಪೇಳೆ ರಮಣಿ ಪ
ಮನ್ನಿಸಿ ಮಮತೆಯಲಿ ಮನವ ಸೆಳಕೊಂಡೊಯ್ದುಅನ್ಯರನು ಕೂಡುವನೆ ಕೆಳದಿ ಅ.ಪ.
ಬಣ್ಣದ ಗಿಣಿ ಬರೆದ ಸಣ್ಣ ಕುಪ್ಪಸವುಳ್ಳಚಿನ್ನದ ಶ್ರೀರೇಖೆ ಸೀರೆಬಿನ್ನಣವುಳ್ಳ ಬಿಳಿಯೆಲೆ ಅಡಿಕೆ ಕೆನೆಸುಣ್ಣಕರ್ಪೂರ ಕಾಚಿನುಂಡೆಕಣ್ಣಿಗಿಂಪಾದ ಕಡು ಚೆಲ್ವ ಮಲ್ಲಿಗೆ ಮೊಗ್ಗೆ ಉನ್ನತವಾದ ದಂಡೆಇನ್ನು ಈ ಪರಿಮಳವು ಬಗೆಬಗೆಯ ಆಭರಣರನ್ನ ಕೆತ್ತಿಸಿದ ಗೊಂಡೆಮುನ್ನ ಸಿಂಗರ ಮಾಡಿ ಎದೆಹಿಡಿದು ಬಿಗಿಯಪ್ಪಿನಿನ್ನ ಈ ವೇಳೆ ಕೂಡಿದೆ ದೃಢದೆ ೧
ಈಗಾಗು ಬಾಹನೆಂತಿರುವೆ ತಾನೂರಿದ್ದಉಗುರು ಗುರುತನು ನೋಡುತಸೋಗೆಗಣ್ಣಿನ ಕಾಡಿಗೆಯ ಕಲಕಿದನೆಂದುಬೇಗ ನಟನೆಯ ಮಾಡುತರಾಗದಿಂದದಲಿ ರವಿಕೆ ನೆರಿಯನು ಬದಲುಟ್ಟುಭೋಗಕ್ಕೆ ಅನುವಾಗುತಹಿಂಗೆ ಸಿಂಗರಿಸಿಕೊಂಡಿಷ್ಟು ಹೊತ್ತನು ಕಳೆದೆಹೇಗೇ ಸೈರಿಪೆ ಕೂಡದೆ ಮುಂದೆ ೨
ಇಂದಲ್ಲದಿರೆ ನಾಳೆ ಬಹನೆಂದು ಇದ್ದರೆಕಂದರ್ಪ ಕಾಡುತಿಹನೆತಂದು ತೋರಿಸು ತನ್ನ ತಂದೆಯನೆಂದು ಪೂ-ವಿಂದ ಬಾಣವ ಎಸೆವನೆಇಂದುಬಿಂಬವು ಮಂದ ಮಾರುತವು ಸುಮದ ಮಳೆ-ಯಿಂದ ಸೆಕೆಗಾನಾರೆನೆಒಂದು ನಿಮಿಷದಲಿ ಶ್ರೀರಂಗ ವಿಠ್ಠಲನನ್ನುಹೊಂದಿಸೆನ್ನಗಲದಂತೆ ಕಾಂತೆ ೩

 

೫೮
ಉತ್ತಮರಸಂಗಯೆನಗಿತ್ತು ಸಲಹೋ ಪ
ಚಿತ್ತಜಜನಕ ಸರ್ವೋತ್ತಮ ಮುಕುಂದಅ.ಪ.
ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣ ಜನನಗಳೆರಡು ಪರಿಹರವ ಮಾಡಯ್ಯ ೧
ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ ೨
ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆಪನ್ನಗಾಧಿಪಶಯನ ಮನ್ನಿಸಯ್ಯಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದಎನ್ನೊಡೆಯ ರಂಗವಿಠಲ ಎನ್ನದೊರೆಯೇ ೩

 

೨೮
ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀಎಲ್ಲ್ಯಾಡಿ ಬಂದ್ಯೋ ಎನ್ನ ಕಣ್ಣಮುಂದಾಡದೆ ಪ
ಆಲಯದೊಳಗೆ ನೀನಾಡದೆ ಚಿನಿ-ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕಬಾಲರೊಡನೆ ಕೂಡ್ಯಾಡದೆ ಮುದ್ದುಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ೧
ಬಟ್ಟ್ಟಮುತ್ತಿನ ಬೊಗಸೆ ಕಂಗಳು ಪಣಿಯೊ-ಳಿಟ್ಟ ಕಸ್ತೂರಿ ತಿಲಕದಂದವುದಿಟ್ಟತನದಿ ಕೂಡ್ಯಾಡಲುಪುಟ್ಟ ಕೃಷ್ಣಯ್ಯ ನೀ ಎನ್ನ ಕಣ್ಣ ಮುಂದಾಡದೆ೨
ಅಷ್ಟ ದಿಕ್ಕಲಿ ಅರಸಿ ಕಾಣದೆ ಬಹಳದೃಷ್ಟಿಗೆಟ್ಟೆನು ನಿನ್ನ ನೋಡದೆ ಇ-ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-ವಿಠಲ ನೀ ಎನ್ನ ಕಣ್ಣ ಮುಂದಾಡದೆ೩

 

೨೯
ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ ಪ
ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿಹೊಸಪರಿ ಸುದ್ದಿಯು ಹುಟ್ಟಿದೆಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ೧
ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನಕೊರಳ ಪದಕವೆಲ್ಲಿ ನೀಗಿದೆಸರಕೆಲ್ಲ ಅವಳಲ್ಲಿ ಸಾಗಿದೆ ಆತರುಣಿ ಮಹಿಮೆ ಹೀಂಗಾಗಿದೆ ೨
ಕಳ್ಳತನವ ಹೀಗೆ ಮಾಡಿದೆ ನಿನ್ನಸುಳ್ಳು ಕಡೆಗೆ ನಾ ನೋಡಿದೆಎಲ್ಲರಿಗೂ ಠಕ್ಕು ಮಾಡಿದೆಚೆಲುವ ರಂಗವಿಠಲ ನಗೆಗೀಡಾದೆ ೩

 

೩೦
ಏಕೆ ದೂರುವಿರೇ ರಂಗಯ್ಯನಏಕೆ ದೂರುವಿರೇ ಪ
ಸಾಕು ನಿಮ್ಮ ದೂರ ಬಲ್ಲೆನುಈ ಕುವರನಾಕೃತ್ಯ ಮಾಳ್ಪನೆಅ.ಪ.
ದಟ್ಟಡಿಯಿಡಲರಿಯ ಗೋವತ್ಸವಬಿಟ್ಟು ಚಲಿಸಬಲ್ಲನೆಘಟ್ಟಿಯಾಗಿ ಗೊತ್ತಿನಲ್ಲಿಕಟ್ಟಿನೊಳು ಕಟ್ಟಿದ್ದ ಕರುಗಳಬಿಟ್ಟನೇ ಈ ಕೃಷ್ಣನ ಮೇ-ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ೧
ಕೆನೆಹಾಲು ಬೆಣ್ಣೆಯನು ಇತ್ತರೆ ಆದಿನವೊಲ್ಲನು ಊಟವಮನೆಮನೆಗಳನು ಪೊಕ್ಕುಬೆಣ್ಣೆ ಪಾಲ್ಮೊಸರನ್ನು ತಿನ್ನುತವನಿತೆಯರ ಕೂಡಾಡಿದನೆಂ-ದೆನಲು ನಿಮಗೆ ನಾಚಿಕಿಲ್ಲವೆ ೩

 

೬೮
ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿಮೀನು ಗಾಳವÀ ನುಂಗಿ ಮೋಸಹೋದ ತೆರನಂತೆ ಧ್ರುವ
ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿಹೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದುಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ ೧
ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತಹಲವು ಬುದ್ಧಿಯಲ್ಲಿ ಹಿರ್ರನೆ ಹಿಗ್ಗುತಮಲಿನ ಮನಸಿನಜ್ಞಾನದಲಿ ತಾನರಿಯದೆ ೨
ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿಹೊಗದಲ್ಲಿ ಹೊಗುವರು ಹೂ ಬಿಟ್ಟು ತಿಳಿಯರುಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲುವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ ೩

 

೩೧
ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ ಪ
ಶುದ್ಧ ನೀಲವರ್ಣದ ಮೈಯಕಪ್ಪಿನವನಿಗೆ ಹ್ಯಾಗೆ ಅ.ಪ.
ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ ಚಟ್ಟಿ ಸಹಿತ ಹಾಲು ಕುಡಿದ- ಅಲ್ಲಿದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ ೧
ಗೊಲ್ಲರ ಮನೆಗಳ ಪೊಕ್ಕು- ಅಲ್ಲಿಗುಲ್ಲು ಮಾಡದೆ ಮೊಸರೆಲ್ಲ ಸವಿದಮೆಲ್ಲನೆ ಸವಿಮಾತನಾಡಿ-ಅಲ್ಲಿಎಲ್ಲ ಸಖಿಯರ ಅಭಿಮಾನಗೇಡಿಗೆ ೨
ಮಾವನ ಮರ್ದಿಸಿದವಗೆ -ಅಲ್ಲಿಸೋಳ ಸಾಸಿರ ಗೋಪೇಯರ ಮದುವೆ ಆದವಗೆಹಾವಿನ ಮ್ಯಾಲೊರಗಿದವಗೆಕಾವೇರಿ ತೀರದ ರಂಗವಿಠಲಗೆ ೩

 

೩೨
ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆತನುಹೊರೆಯನೊಲ್ಲೆನವ್ವಾ ಪ
ಹಾರ ಕೊರಳಿಗೆ ಭಾರ ಹುವ್ವಿನಭಾರ ಸೈರಿಸಲಾರೆನೆಮಾರನಯ್ಯನು ಬಾರದಿದ್ದರೆಮಾರನಂಬಿಗೆ ಗುರಿಯ ಮಾಡಿ ೧
ಎಲ್ಲ ದೇವರ ವಲ್ಲಭನೆಂದುಒಲಿದ ಮನ ನಿಲ್ಲದೆನಿಲ್ಲದೆ ರಂಗ ಪೋದ ಮಧುರೆಗೆಬಿಲ್ಲ ಹಬ್ಬದ ನೆವನ ಮಾಡಿ ೨
ಮಂದಾನಿಲನ ಸಹಿಸಲಾಗದುನೊಂದೆ ಶುಕಪಿಕ ರವಗಳಿಂದಚಂದ್ರಕಿರಣದಿ ಬೆಂದೆ ಇನ್ನೀವೃಂದಾವನವೇಕನನಗಲಿ ೩
ಮುನ್ನ ಆಡಿದ ಮಾತ ಮರೆತುಎನ್ನ ಮನದೊಳಗೀಡಾಡಿವನ್ನಜಾಕ್ಷನು ಬಾರ ಪುರದವನ್ನಿತೆಯರನು ಮೆಚ್ಚಿ ಪೋದ ೪
ಪೊಂಗೊಳಲ ಧ್ವನಿಗೆ ಸಿಲುಕಿಭಂಗಗೆಟ್ಟೆನಂಗಜನಿಂದಲಿಪೆಂಗಳಿಗುಚಿತವಲ್ಲ ಇದುರಂಗವಿಠಲನ ತೋರದಿದ್ದಡೆ ೫

 

ಅತ್ಯಂತ ಜನಪ್ರಿಯವಾದ ಹಾಡು.

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ಪ.
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ ಅ.ಪ
ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-ನಂದದಿಂದಲಿ ರಂಗನ ನೋಡದ ೧
ಹರಿ ಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ ೨
ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಧರಿಸಿತೇರನೇರಿ ಬೀದಿಲಿಮೆರೆವ ರಂಗವಿಠಲನ್ನ ನೋಡದ ೩

 

ಶ್ರೀಕೃಷ್ಣನಿಗೆ ಯಾರು ಹೆಚ್ಚು ಪ್ರಿಯರು?
೩೩
(ರುಕ್ಮಣಿ ಹಾಗೂ ಸತ್ಯಭಾಮಿನಿ ಇವರ ಸಂವಾದ-ಜಗಳದ
ಮೂಲಕ ಶ್ರೀಕೃಷ್ಣನ ವರ್ಣನೆ)ಕಂಜನೇತ್ರೇ ಶುಭ ಮಂಜುಳಗಾತ್ರ್ರೆಕುಂಜರದಂತೆ ಗಮನೆ ರಂಜಿತಾಂಗಿ ನಿರಂಜನಾಂಗಿ ಪ
ಧರೆಯ ಮ್ಯಾಲೆ ಹಿರಿಯಳು ನಾ-ನಿರಲು ಲಜ್ಜೆ ತೊರೆದು ನೀನುಸರಸವಾಡೋದೆ ಮುರಹರನಕರೆದು ಭಾಮಿನಿ ಸುಗುಣೆ ಕಾಮಿನಿ ೧
ಪತಿಯ ಪ್ರೀತಿ ಎನ್ನ ಮ್ಯಾಲೆಅತಿಶಯದಿ ಇರಲು ಜ್ಯೇಷ್ಠಸತಿಯಳೇನೇ ನೀನು ನೋಡುಮತಿಯ ರುಕ್ಮಿಣಿ ಸುಪದ್ಮಗಂಧಿನಿ೨
ಒಂದು ಕಾಲದಲ್ಲಿ ದಾಸಿ-ಯಿಂದ ಪತಿಯು ಸರಸವಾಡಲುಬಂದಳೇನೇ ಅರಸಿ ಸಮ-ಳೆಂದು ಭಾಮಿನಿ ಸುಗುಣೆ ಕಾಮಿನಿ ೩
ದಾಸಿ ಸಮಳು ನಾನು ಅಲ್ಲ ದೋಷ ಮಾತನಾಡಬೇಡಶ್ರೀಶನ ದಯರಾಶಿ ಇರಲುದಾಸಿಯೆ ರುಗ್ಮಿಣಿ ಸುಪದ್ಮಗಂಧಿನಿ ೪
ಸಾರೆ ಕೃತ್ಯವಾರೆ ಹೂಡಿದ್ವಾರಾವತಿಯಿಂದ ಎನ್ನಸಾರೆ ಬಂದ ಪ್ರೀತಿಯು ಅ-ಪಾರೆ ಭಾಮಿನಿ ಸುಗುಣೆ ಕಾಮಿನಿ೫
ಕಡಲಶಾಯಿ ತಡೆದರಿನ್ನುದಿಡುಗು ದೇಹ ಬಿಡುವೆನೆಂಬೊನುಡಿಯ ಕೇಳಿ ಪಿಡಿದನೆಬಿಡದೆ ರುಗ್ಮಿಣಿ ಸುಪದ್ಮಗಂಧಿನಿ ೬
ಮಂದರಧರನು ಪ್ರೀತಿ-ಯಿಂದ ನಿನ್ನ ಪಡೆದನೇನೆಒಂದು ಮಣಿಯ ಕಾರಣದಿಬಂದೆ ಭಾಮಿನಿ ಸುಗುಣೆ ಕಾಮಿನಿ೭
ಸುಮ್ಮನೆ ಬಂದವಳಿಗೆಬ್ರಹ್ಮ-ಲಗ್ನದಿ ಬಂದೆನಗೆಸಾಮ್ಯವೇನೆ ಯಾಕೆ ನಿನಗೆಹೆಮ್ಮೆ ರುಗ್ಮಿಣಿ ಸುಪದ್ಮಗಂಧಿನಿ. ೮
ಮಾನಾದಿ ಭಕ್ತಿಯು ಕನ್ಯಾ-ದಾನವು ಲೋಕದೊಳಗುಂಟುಏನು ನಿನ್ನ ತಾತ ಕೊಟ್ಟದೀನ ಭಾಮಿನಿ ಸುಗುಣೆ ಕಾಮಿನಿ ೯
ಎನ್ನ ಹಂಗದೆಂದುಪ್ರಸನ್ನ ಕೇಳಿ ಶತಧನ್ವನಬೆನ್ನಟ್ಟಿ ಕೊಂದನೇ ನೀ-ಚೆನ್ನ ರುಗ್ಮಿಣಿ ಸುಪದ್ಮ ಗಂಧಿನಿ ೧೦
ವೀರ ಅರಸರ ಸ್ವಭಾವಚೋರರ ಕೊಲ್ಲಬೇಕೆಂಬೋಸಾರ ಪ್ರೀತಿಯದರಿಂದತೋರಿ ಭಾಮಿನಿ ಸುಗುಣೆ ಕಾಮಿನಿ೧೧
ಇಂದ್ರಾದಿ ದೇವತೆಗಳೊಳುಸಾಂದ್ರಯುದ್ಧವನ್ನೆ ಮಾಡಿವೀಂದ್ರ ಎನಗೆ ಪಾರಿಜಾತತಂದ ರುಗ್ಮಿಣಿ ಸುಪದ್ಮಗಂಧಿನಿ೧೨
ವರದ ರಂಗ ಕರದೊಳೆನ್ನಸುರಪುಷ್ಪವಿರಲು ನಿನ್ನ ತ್ವರೆ ಕ್ಲೇಶ ನೋಡಿ ತಂದತರುವ ಭಾಮಿನಿ ಸುಗುಣೆ ಕಾಮಿನಿ೧೩
ನಿಜಳೆಂದು ರಂಗನು ಎನ್ನವಿಜಯಯಾತ್ರೆಯಲ್ಲಿ ತನ್ನಭುಜಗಳಿಂದಾಲಂಗಿಸಿದಸುಜನೆ ರುಗ್ಮಿಣಿ ಸುಪದ್ಮಗಂಧಿನಿ ೧೪
ಅರಸರ ಸ್ವಭಾವ ತಮ್ಮಅರಸೇರ ಮನೆಯೊಳಗಿಟ್ಟುಸರಸ ದಾಸೇರಿಂದ್ಹೋಗೋದುಸ್ಮರಿಸೆ ಭಾಮಿನಿ ಸುಗುಣೆ ಕಾಮಿನಿ ೧೫
ಸಾರವಚನ ಕೇಳಿ ಭಾಮೆಮೋರೆ ಕೆಳಗೆ ಮಾಡುತಿರಲುನಾರಿ ರುಕ್ಮಿಣಿ ಭಾಮೆಯರನ್ನುವೀರ ಕರೆದನು ತಾ ಸೇರಿ ಮೆರೆದನು೧೬
ಮಂಗಳಾಂಗ ಮಹಿಮ ಕೇಶವಾ-ಲಿಂಗಿಸಿದ ಭೈಷ್ಮಿಯನ್ನುತುಂಗಗುಣ ಗೋಪೀರಮಣರಂಗವಿಠಲನು ಅನಂಗಜನಕನು ೧೭

 


ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ
ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ
ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ೧
ಜಂಭವೈರಿ ಮುಖ್ಯ ಸುರ ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ೨
ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ ೩

 

ಇದೇ ಭಾವವು ‘ಅನ್ನಂತ ಕಾಲದಲ್ಲಿ…….’
೬೯
ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ
ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ೧
ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ೨
ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು ೩
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು೪
ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ೫

 


ಕೀರ್ತಿಸಿ ಜನರೆಲ್ಲ ಹರಿಯ ಗುಣ ಪ
ಕೀರ್ತಿಸಿ ಜನರು ಕೃತಾರ್ಥರಾಗಿರೊ ಅ.ಪ
ಆವನು ವನದೊಳಗೆ ನಿತ್ಯದಿಬಾಹ ಜನರ ಬಡಿದುಜೀವನ ಮಾಳ್ಪ ಕಿರಾತನು ಕೀರ್ತಿಸೆತಾ ಒಲಿದಾತನ ಕೋವಿದನೆನಿಸಿದ ೧
ಆವನ ಪಾದರಜ ಸೋಕಲುಆ ವನಿತೆಯ ಜಡಭಾವವ ತೊಲಗಿಸಿ ಆ ವನಿತೆಯನುಪಾವನ ಮಾಡಿದ ದೇವಾಧಿದೇವನ ೨
ಅಂದು ಶಬರಿ ತಾನು ಪ್ರೇಮದಿತಿಂದ ಫಲವ ಕೊಡಲುಕುಂದು ನೋಡದೆ ಆನಂದದೆ ಗ್ರಹಿಸಿಕುಂದದ ಪದವಿಯನಂದು ಕೊಟ್ಟವನ೩
ದುಷ್ಟ ರಾವಣ ತಾನು ಸುರರಿಗೆಕಷ್ಟಬಡಿಸುತಿರಲುಪುಟ್ಟಿ ಭವನದೊಳು ಕುಟ್ಟಿ ಖಳರ ಸುರ-ರಿಷ್ಟವ ಸಲಿಸಿದ ಸೃಷ್ಟಿಗೊಡೆಯನ ೪
ತನ್ನ ನಂಬಿದ ಜನರ ಮತ್ತೆ ತಾ-ನನ್ಯರಿಗೊಪ್ಪಿಸದೆಮುನ್ನಿನಘವ ಕಳೆದಿನ್ನು ಕಾಪಾಡುವಘನ್ನ ಮಹಿಮ ಶ್ರೀರಂಗವಿಠಲನ ೫

 

೩೪
ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ
ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ.
ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ ೧
ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ ೨
ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ೩

 

ಶ್ರೀಕೃಷ್ಣನು ಮಧುರೆಗೆ ಹೋದ ಮೇಲೆ
೩೫
ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ಪ
ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲಬೆಡಗುಗಾರನ ಕೂಡೆ ನುಡಿ ತೆರಳಿತೆÀ್ತಯವ್ವಾ೧
ಮಾತು ಮನಸು ಬಾರದವ್ವ ಸೋತೆವವ್ವಾ ಕೃಷ್ಣಗಾಗಿಆತನ ಕಾಣದ ಮನ ಕಾತರಿಸುತಿದೆಯವ್ವಾ೨
ಅನ್ನೋದಕ ಒಲ್ಲೆಯವ್ವಾ ಕಣ್ಣಿಗೆ ನಿದ್ರೆ ಬಾರದುಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ೩
ಮನೆ ಮನೆ ವಾರುತೆಗೆ ಮನವೆಳಸದೆಯವ್ವಾಮನಸಿಜಪಿತನೊಡನೆ ಮನ ತೆರಳಿತೆಯವ್ವಾ೪
ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾಗೋಪಜನರ ಕೂಡಿದ ಶ್ರೀಪತಿ ರಂಗವಿಠಲನಾ ೫

 


ಗುಮ್ಮ ಬಂದನೆಲೊ ದುರ್ಜನ ಬೇಡಸುಮ್ಮನಿರೆಲೊ ರಂಗಯ್ಯ ಪ
ಉಟ್ಟ ಪುಲಿತೊವಲು ತೊಟ್ಟ ಮುತ್ತಿನಹಾರಇಟ್ಟ ಕಾಮಾಕ್ಷಿ ಕಪಾಲ ತ್ರಿಶೂಲಬಟ್ಟು ಹಣೆ ಮೆರೆಯೆ ಚರಣದಲಿ ಮೆಟ್ಟಿದ ಹಾವುಗೆಯದಿಟ್ಟ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ ೧
ಕಡಗ ಕಂಕಣ ಬಾಹುಪುರಿ ಭುಜಕೀರ್ತಿಯುಉರದಲ್ಲಿ ಧರಿಸಿದ ರುಂಡಮಾಲೆಯು ತನ್ನಸಿರದ ಜಟಾಜೂಟೆಯು ತಾಂ ಧರಿಸಿದ ಉರಗನಾ-ಭರಣಗಳು ಪರಮ ಮೂರುತಿ ನಿಮ್ಮ ಚರಣಸೇವೆಗೆ ನಿತ್ಯ೨
ಕಾಮನ ರೂಪಕ್ಕೆ ಜರಿವಾ ಚೆನ್ನಿಗನಾಗಿಕೋಮಲಾಂಗೇರು ಭಿಕ್ಷವ ನೀಡಲು ಪ್ರೇಮದಿಂದವರಿಗೆಲ್ಲಮುಕ್ತಿಯನೀವ ಸೋಮಶೇಖರನ ಚೆಲ್ವರಾಮನಾ ಭಾವ ಮೃದುವಾಕ್ಯವಿದು ಮುದ್ದು ೩
ಕೋಟಿ ಸೂರ್ಯರ ಕಾಂತಿ ನೇಟಾದ ತನುವಿನಪೂಸಿದ ಭಸ್ಮವು ನೊಸಲ ಮುಕ್ಕಣ್ಣಿನ ನೋಟದಕಿಡಿಯುದುರೆ ಭೂತಗಣಂಗಳು ಕುಟಕಿಚ್ಛಕ ಬೆದರೆನಾಟ್ಯವನಾಡುತ ನಗುತ ಮೋಹನ ಮುದ್ದು ೪
ಅಂಜೆ ಕಾಣಮ್ಮ ನಾ ಅಗಲಿದು ಜೋಗಿಜಂಗಮ ವೇಷವು ಕೈಕೊಂಡು ಮಲೆಯಾಳಕೊಂಗ ಗುಜ್ಜರ ಭಾಷೆಯ ಭಾಷಿಸುತಲಿರಂಗವಿಠಲನೆ ಚೆಲ್ವ ಮಂಗಳ ಮೂರತಿ
ನಿಮ್ಮ ಚರಣ ಸೇವೆಗೆ ನಿತ್ಯಾ೫

 

೩೬
ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ಕಳ್ಳನೆಂದು ದೂರುತಾರೆ ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯ ಪ
ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆಕೆರೆಯೇನೆ ಹೇಳಮ್ಮಯ್ಯಕರೆದು ಅಣ್ಣನ ಕೇಳಮ್ಮ ಉಂಟಾದರೆಒರಳಿಗೆ ಕಟ್ಟಮ್ಮಯ್ಯ ೧
ಮೀಸಲು ಬೆಣ್ಣೆಯನು ಮೆಲುವುದು ಎನಗೆದೋಷವಲ್ಲವೇನಮ್ಮಯ್ಯಆಸೆ ಮಾಡಿದರೆ ದೇವರು ಕಣ್ಣಮೋಸದಿ ಕುಕ್ಕೋನಮ್ಮಯ್ಯ ೨
ಅಟ್ಟವನ್ನೇರಿ ಹಿಡಿವುದು ಅದು ಎನಗೆಕಷ್ಟವಲ್ಲವೆ ಹೇಳಮ್ಮಯ್ಯ ನೀಕೊಟ್ಟ ಹಾಲು ಕುಡಿಯಲಾರದೆ ನಾನುಬಟ್ಟಲೊಳಗಿಟ್ಟು ಪೋದೆನೆ ೩
ಪುಂಡುತನವ ಮಾಡಲು ನಾನು ದೊಡ್ಡಗಂಡಸೇನೆ ಪೇಳಮ್ಮಯ್ಯ ಎನ್ನಕಂಡವರು ದೂರುತಾರೆ ಗೋಪಮ್ಮ ನಾ ನಿನ್ನಕಂದನಲ್ಲವೇನೆ ಅಮ್ಮಯ್ಯ ೪
ಉಂಗುರದ ಕರದಿಂದ ಗೋಪಮ್ಮ ತನ್ನಶೃಂಗಾರದ ಮಗನೆತ್ತಿರಂಗವಿಠಲನ ಪಾಡಿ ಉಡುಪಿಯ ಉ-ತ್ತುಂಗ ಕೃಷ್ಣನ ತೂಗಿದಳು ೫

 


ಚಿಂತೆಯ ಮಾಡದಿರು ಚದುರೆ ನಿನಗೆ ನಾನು
ಕಂತುಪಿತನನು ತೋರುವೆ ಪ
ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ.ಅ.ಪ
ಒಂದು ಕ್ಷಣ ಪಾದಾರವಿಂದ ತೊಳೆದು ಕುಡಿದುಮಂದಹಾಸದಲಿ ನಲಿದುಒಂದು ಮನದಲಿ ದಿವ್ಯಗಂಧವನು ತಂದ್ಹಚ್ಚಿನಂದದಿಂದವನ ಮೆಚ್ಚಿಅಂದವಾದ ಕುಸುಮ ಹಾರವನು ಸುಖನಿಧಿಗೆಕಂದರದಿ ನೀಡಿ ನೋಡೆಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿಎಂದೆಂದಿಗಗಲದಿರೆನ್ನ ರನ್ನ ೧
ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-ಯೂಟಗಳನುಣ್ಣಿಸಿಲೇಸಾಗಿ ತಾಂಬೂಲ ತವಕದಲಿ ತಂದಿಟ್ಟುವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕುಶ್ರೀಶನ್ನ ಮರೆಯ ಹೊಕ್ಕುಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿವಾಸವಾಗು ಬಿಡದೆ ಎನ್ನ ರನ್ನ ೨
ಇಂತು ಈ ಪರಿಯಲ್ಲಿ ಶ್ರೀಕಾಂತನನು ಕೂಡಿ ಏ-ಕಾಂತದಲಿ ರತಿಯ ಮಾಡಿಸಂತೋಷವನು ಪಡಿಸಿ ಸಕಲ ಭೋಗವ ತಿಳಿಸಿಸಂತತ ಸ್ನೇಹ ಬೆಳೆಸಿಅಂತರಂಗಕ್ಕೆ ಹಚ್ಚಿ ಅವನಾಗಿ ತಾ ಮೆಚ್ಚಿಪ್ರೀತಿಯಿಂದಧರ ಕಚ್ಚಿಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲಇಂತು ನಿನ್ನಗಲ ಕಾಣೆ-ಜಾಣೆ.೩

 

೭೦
ಚಿತ್ತಜನಯ್ಯನ ಚಿಂತಿಸು ಮನವೇಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ಪ
ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿಕಾಲಪಾಶದೊಳಿಟ್ಟು ಶೂಲದಿಂದಿರಿವಾಗಪಾಲಿಸುವರುಂಟೆ ಜಾಲವ ಮಾಡದೆ ೧
ದಂಡಧರನ ಭಟರು ಚಂಡಕೋಪದಿ ಬಂದುಕೆಂಡದ ನದಿಯ ತಡಿಗೆ ಕೊಂಡೊಯ್ದುಖಂಡಖಂಡವ ಕಿತ್ತು ಕೆಂಡದೊಳಿಡುವಾಗಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ ೨
ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡುಕಂಗಳಿಗೆ ಸೀಸವ ಕಾಸಿ ಪೊಯ್ಯಲುತಂಗಿ ಅಕ್ಕ ಬಂದು ಭಂಗವ ಬಿಡಿಸುವರೆಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ ೩

 

ಮಧ್ವನಾಮವು ಶ್ರೀಪಾದÀರಾಜರ ಸುವಿಖ್ಯಾತ ಕೃತಿ.
ಶ್ರೀ ಮಧ್ವನಾಮ
೯೩
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ಪ
ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು ೧
ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು ೨
ಕರುಣಾಭಿಮಾನಿ ಸುರರು ದೇಹವ ಬಿಡಲುಕುರುಡ ಕಿವುಡ ಮೂಕನೆಂದೆನಿಸುವಪರಮ ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ ೩
ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ ನಿಯಾಮಿಸಿ ನೆಲಸಿಹಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳುಗುರು ಕುಲತಿಲಕ ಮುಖ್ಯ ಪವಮಾನನು ೪
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದುವಾತಸುತ ಹನುಮಂತನೆಂದೆನಿಸಿದಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದಈತಗೆಣೆಯಾರು ಮೂರ್ಲೋಕದೊಳಗೆ ೫
ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿಉರವಣಿಸಿ ಹಿಂದು ಮುಂದಾಗಿ ನಡೆದಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ ೬
ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿನಿಖಿಳ ವ್ಯಾಕರಣಗಳ ಇವ ಪಠಿಸಿದಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದುಮುಖ್ಯಪ್ರಾಣನನು ರಾಮನನುಕರಿಸಿದ ೭
ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿಧರಣಿಸುತೆಯಳ ಕಂಡು ದನುಜರೊಡನೆಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳಉರುಹಿ ಲಂಕೆಯ ಬಂದ ಹನುಮಂತನು ೮
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಬಲು ರಕ್ಕಸರನುಒರಸಿ ರಣದಲಿ ದಶಶಿರನ ಹುಡಿಗುಟ್ಟಿದಮೆರೆದ ಹನುಮಂತ ಬಲವಂತ ಧೀರ ೯
ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆತರಣಿ ಕುಲತಿಲಕನಾಜ್ಞೆಯ ತಾಳಿದಗಿರಿಸಹಿತ ಸಂಜೀವನವ ಕಿತ್ತು ತಂದಿತ್ತಹರಿವರಗೆ ಸರಿಯುಂಟೆ ಹನುಮಂತಗೆ ೧೦
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆಭಜಿಸಿ ಮೌಕ್ತಿಕದ ಹಾರವನು ಪಡೆದಅಜಪದವಿಯನು ರಾಮ ಕೊಡುವೆನೆನೆ ಹನುಮಂತನಿಜಭಕುತಿಯನೆ ಬೇಡಿ ವರವ ಪಡೆದ ೧೧
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದಆ ಮಹಿಮನಮ್ಮ ಕುಲಗುರು ರಾಯನು ೧೨
ಕರದಿಂದಶಿಶುಭಾವನಾದ ಭೀಮನ ಬಿಡಲುಗಿರಿವಡೆದುಶತಶೃಂಗವೆಂದೆನಿಸಿತುಹರಿಗಳ ಹರಿಗಳಿಂ ಕರಿಗಳ ಕರಿಗಳಿಂಅರೆವ ವೀರನಿಗೆ ಸುರ ನರರು ಸರಿಯೇ ೧೩
ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿಹಸಿದುರಗಗಳ ಮ್ಯಾಲೆ ಬಿಡಲದನೊರಸಿದಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರಧರಿಸಿ ಜಾಹ್ನವಿಗೊಯ್ದ ತನ್ನನುಜರ೧೪
ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕಕಂಟಕರನುಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದುಎಲ್ಲ ಸುಜನರಿಗೆ ಹರುಷವ ತೋರಿದ ೧೫
ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿರಾಜಸೂಯ ಯಾಗವನು ಮಾಡಿಸಿದನುಆಜಿಯೊಳು ಕೌರವರ ಬಲವ ಸವರುವೆನೆಂದುಮೂಜಗವರಿಯೆ ಕಂಕಣ ಕಟ್ಟಿದ ೧೬
ಮಾನನಿಧಿ ದ್ರೌಪದಿಯ ಮನದಿಂಗಿತವನರಿತುದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದುಮಾನಿನಿಗೆ ಸೌಗಂಧಿಕವನೆ ತಂದ ೧೭
ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆಮರುಳಾಗಿ ಕರೆÀಕರೆಯ ಮಾಡಲವನಾಗರಡಿ ಮನೆಯಲ್ಲಿ ವರೆಸಿ ಅವನನ್ವಯದಕುರುಪನಟ್ಟಿದ ಮಲ್ಲಕುಲವ ಸದೆದ ೧೮
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿಓರಂತೆ ಕೌರವನ ಮುರಿದು ಮೆರೆದವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿವೀರ ನರಹರಿಯ ಲೀಲೆಯ ತೋರಿದ ೧೯
ಗುರುಸುತನು ಸಂಗರದಿ ನಾರಾಯಣಾಸ್ತ್ರವನುಉರವಣಿಸಿ ಬಿಡಲು ಶಸ್ತ್ರವ ಬಿಸುಟರುಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ೨೦
ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡುನಿಲ್ಲುವರಾರು ತ್ರಿಭುವನದೊಳು೨೧
ದಾನವರು ಕಲಿಯುಗದೊಳವತರಿಸಿ ವಿಬುಧರೊಳುವೇನನ ಮತವನರುಹಲದನರಿತುಜ್ಞಾನಿ ತಾ ಪವÀಮಾನ ಭೂತಳದೊಳವತರಿಸಿಮಾನನಿಧಿ ಮಧ್ವಾಖ್ಯನೆಂದೆನಿಸಿದ ೨೨
ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನುಓರ್ವ ಮಧ್ವಮುನಿ ತೋರ್ದ ಸುಜನರ್ಗೆ೨೩
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬದುರ್ವಾದಿಗಳ ಮತವ ನೆರೆ ಖಂಡಿಸಿಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾಶರ್ವಾದಿ ಗೀರ್ವಾಣ ಸಂತತಿಯಲಿ ೨೪
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿಪದಕೆರಗಿ ಅಖಿಳ ವೇದಾರ್ಥಗಳನುಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ ೨೫
ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡಜಯಜಯತು ವಾದಿಗಜ ಪಂಚಾನನಜಯಜಯತು ಚಾರ್ವಾಕಗರ್ವಪರ್ವತ ಕುಲಿಶಜಯ ಜಯ ಜಗನ್ನಾಥ ಮಧ್ವನಾಥ೨೬
ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿಭಂಗವಿಲ್ಲದೆ ಸುಖದ ಸುಜನಕೆಲ್ಲಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕರಂಗವಿಠಲನೆಂದು ನೆರೆ ಸಾರಿರೈ ೨೭
“ಮಧ್ವನಾಮ” ಕೃತಿಗೆ
ಶ್ರೀ ಜಗನ್ನಾಥದಾಸರ ಫಲಶ್ರುತಿ
ಸೋಮ ಸೂರ್ಯೋಪರಾಗದಿ ಗೋಸಹಸ್ರಗಳಭೂಮಿದೇವರಿಗೆ ಸುರನದಿಯ ತೀರದಿಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ ೧
ಪುತ್ರರಿಲ್ಲದವರು ಸತ್ಪುತ್ರರೈದುವರುಸರ್ವತ್ರದಲಿ ದಿಗ್ವಿಜಯವಹುದು ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದುಸೂತ್ರನಾಮಕನ ಸಂಸ್ತುತಿ ಮಾತ್ರದಿ ೨
ಶ್ರೀಪಾದರಾಯ ಪೇಳಿದ ಮಧ್ವನಾಮ ಸಂತಾಪಕಳೆದಖಿಳ ಸೌಖ್ಯವನೀವುದುಶ್ರೀಪತಿ ಜಗನ್ನಾಥವಿಠಲನ ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು ೩

 

ಇದೊಂದು ಜೋಗುಳ ಪದ.
೯೬
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ
ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ.
ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ೧
ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು ೨
ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ ೩
ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ
ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ ೪ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ ೫
ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ ೬
ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ ೭

 


ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಯೆಂದು ಕುಣಿಯುತ ಪ
ನಿಗಮವ ತಂದು ನಗವ ಬೆನ್ನಲಿ ಪೊತ್ತುಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು ೧
ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ ೨
ಅಂಗನೆಯರ ವ್ರತಭಂಗವ ಮಾಡಿ(ದೆ)ತುಂಗ ಕುದುರೆಯೇರಿದ ರಂಗವಿಠಲನೆ೩

 

೩೭
ತುರುಗಾಯ ಬಂದ ಗೋಪಿಯ ಕಂದಆನಂದದಿಂದ ಪ
ಸುರನರ ತರು ಮೃಗ ಜಲಚರ ಮೋಹಿಸೆತರಳೇರ ಮನ ಸೂರೆಯಾಗೆ ಕೊಳಲಿನಿಂದ ಅ.ಪ.
ತಂದೆಯ ಕಂದನೆಂದು ಕೊಂಕುಳೊಳಿಟ್ಟುಕಂದನ ಕೆಳಗಿಟ್ಟುಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟುಮುತ್ತಿನ ಬಟ್ಟುಹೊಂದಿಸಿ ಗಲ್ಲದಲ್ಲಿ ತಾನಿಟ್ಟುಕಸ್ತೂರಿಯ ಬಟ್ಟುಮುಂದಾಗಿ ಮೂಗಿನ ಮೇಲಳವಟ್ಟುಮನೆಬಾಗಿಲ ಬಿಟ್ಟುಕಂದರ್ಪನ ಶರದಿಂದ ನೊಂದು ಬಹುಕಂದಿ ಕುಂದುತಲಿಂದುವದನೆಯರುಇಂದಿರೇಶನಾನಂದದ ಗಾನಕೆಚಂದ್ರಮುಖಿಯರೊಂದಾಗುತ ಬರುತಿರೆ ೧
ಮುರಳಿಯ ಸ್ವರಕೆ ಮೋಹಿತರಾಗೆಕರುಗಳನು ತಂದುಕರದಿಂದಲೆತ್ತಿ ತೊಟ್ಟಿಲೊಳಗೆಇರಿಸುತ್ತ ಹಾಲಬೆರಸುತ್ತ ಮಜ್ಜಿಗೆ ಮೊಸರಿನೊಳಗೆಪರಮಾತ್ಮನ ನೆನೆದುಹೊರಟರು ಬಿಸಿಲು ಚಳಿ ಮಳೆಯೊಳಗೆಮನೆಮನೆಯೊಳಗೆತರಳರ ಬೆದರಿಸಿ ಮಾರ್ಜಾಲಕೆ ಮೊಲೆತ್ವರಿತದಿ ಉಣಿಸುತ ಸರಿಸರಿಯೆನುತಲಿಪರಿಪರಿ ಭ್ರಾಂತರಾಗಿ ನೋಡುತಪುರಮಾರ್ಗಕೆ ಬರುವರು ನಿರುಕಿಸುತ ೨
ಮದನ ಶತಕೋಟಿ ತೇಜನು ಬಂದಸ್ತ್ರೀರೆದುರಲಿ ನಿಂದಅಧರಾಮೃತ ಪಾನವ ಮಾಡಿರೆಂದಬಾಯಾರಿದಿರೆಂದಬದಿಯಲ್ಲಿ ಬಂದು ಕುಳ್ಳಿರಿಯೆಂದಅವರಿರವನೆ ನೋಡ್ದಚದುರೇರ ಮೋಹಕನೆ ನಾನೆಂದವಾದ್ಯದ ರವದಿಂದಸದಯನೆದುರ ರಂಭೆ ಊರ್ವಶಿ ಮೇನಕೆಒದಗಿ ನಾಟ್ಯಗಳ ಚದುರತನದಲಾಡೆಮಧುಸೂದನ ಭಕ್ತರ ಕಾಯ್ವುದಕೀವಿಧದೊಳಗಾಡಿದ ರಂಗವಿಠಲ ತಾ ೩

 

೩೮
ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ
ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ.
ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ ೧
ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ೨
ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ ಜ್ಞಾನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ ೩
ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ೪
ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ೫

 

೫೯
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ.
ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ ೧
ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ ೨
ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ ೩

 

೬೦
ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ಪ
ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ ೧
ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ ೨
ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ೩
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ೪
ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ೫
ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ೬
ಮಾನಾಭಿಮಾನದೊಡೆಯ ರಂಗವಿಠಲಜ್ಞಾನಿಗಳರಸನೆ ಕಾಯೋ ಗೋವಿಂದ ೭

 

೩೯
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ
ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು ೧
ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ ೨
ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ ೩
ಎಳಮಾವಿನ ಸೊಬಗಿನ ತಳಿರುಪೋಲುವ ಕೆಂದುಟಿಸುಳಿಪಲ್ಲು ಮಂದಹಾಸವು ನಳಿನದಳಾಕ್ಷಥಳಿಥಳಿಪ ಕುಂಡಲವು ಪೊಳೆವ ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ ೪
ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು ೫
ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ ೬
ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ ೭

 

ಓರ್ವ ಗೋಪಿಯು ತನ್ನ ಗೆಳತಿಗೆ

ನಂದನಂದನ ಪಾಹಿ ಗುಣವೃಂದಸುಂದರ ರೂಪ ಗೋವಿಂದ ಮುಕುಂದ ಪ
ದಿನಕರಭವಪಾಲ ಕನಕಾಂಕಿತ ಚೇಲಜನಕಜಾಲೋಲ ಜನಕಾನುಕೂಲ ೧
ಪವನಜ ಪರಿವಾರ ಯವನವಿದಾರನವರತ್ನಹಾರ ನವನೀತಚೋರ೨
ತುಂಗ ವಿಹಂಗತುರಂಗ ದಯಾಪಾಂಗ ರಂಗವಿಠಲ ಭವಭಂಗ ಶುಭಾಂಗ೩

 

೬೧
ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ
ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ ೧
ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ ೨
ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ ೩

 

೬೨
ನಾನೇ ಸಜ್ಜನನಾದಡೆ ಇಂಥ ಹೀನ ವಿಷಯಗಳಿಗೆರಗುವೆನೇನಯ್ಯ ಪ.
ನಿರುತದಿ ಪರರ ನಿಂದಿಸುತಿಹೆನೆಗುರುಹಿರಿಯರು ಸಜ್ಜನರೆನ್ನದೆಹರಿ ಪರದೈವವೆಂದರಿತು ಭಜಿಸದೆಪರರ ವಡವೆಗಳ ಬಯಸುವೆನೇನಯ್ಯ ೧
ಚಿತ್ತವ ಪುರುಷೋತ್ತಮನ ಮನದಲ್ಲಿಡದೆಉತ್ತಮರಾದವರೊಡನಾಡದೆತತ್ವ ವಿಚಾರವ ಮಾಡದೆ ನಾನು ನ್ಮತ್ತರ ಸಂಗವ ಮಾಡುವೆನೇನಯ್ಯ ೨
ಹೇಯ ಶರೀರವ ಪೋಷಿಸಿಕೊಂಡುಪಾಯವ ಚಿಂತಿಸಿ ಬಳಲುವೆನುರಾಯರ ಶರಣರ ಸಲಹುವರಂಗವಿಠಲನ ಬಿಡುವೆನೇನಯ್ಯ ೩

 


ನಾರಾಯಣ ನಿನ್ನ ನಂಬಿದೆ ಲಕ್ಷ್ಮೀ-ನಾರಾಯಣ ನಿನ್ಹೊರತು ಪೊರೆವ ದೈವವೆಲ್ಲಿದೆ ಪ
ನಾ ಮೀರಿ ದುಷ್ಕರ್ಮವ ಮಾಡಿದೆಅಪಾರಮಹಿಮ ದಯಾನಿಧೇ ಅ.ಪ
ನಾನಾ ಯೋನಿಗಳಿಂದ ಬಂದೆನೋಮಾನತಾಳಲಾರದೆ ಬಲು ನೊಂದೆನೋದೀನರಕ್ಷಕ ಎನ್ನ ಗತಿ ಮುಂದೇನೋಮಾನದಿಂದಲಿ ಪಾಲಿಸುವಂಥ ದೊರೆ ನೀನೋ೧
ದಾಸರ ಮನ ಉಲ್ಲಾಸನೆಶ್ರೀಶ ಆಶ್ರಿತ ಜನರ ಪೋಷನೆಸಾಸಿರ ಅನಂತಮಹಿಮನೆಕ್ಲೇಶನಾಶ ಮಾಡಿಸೋ ಶ್ರೀನಿವಾಸನೆ ೨
ರಂಗನಗರ ಉತ್ತುಂಗನೆಗಂಗಾಜನಕ ಗರುಡತುರಂಗನೆ ಉ-ತ್ತುಂಗ ಗುಣಗಳಂತರಂಗನೆ ಅ-ನಂಗನ ಪೆತ್ತ ರಂಗವಿಠಲನೆ ೩

 

ಈ ಕೀರ್ತನೆಯ ಮೊದಲ ನುಡಿಯಲ್ಲಿ
೧೦
ನಿನ್ನ ಪೂಜೆಯೊ-ರಾಮ ಪ
ನಿನ್ನ ಪೂಜೆ ಹೊರತಿಲ್ಲಎನ್ನ ವ್ಯಾಪಾರವೆಲ್ಲ
ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಥ ವ್ಯಾ-ಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನನಾನಾ ರಸ ನೈವೇದ್ಯ ಭೋಜನ ತಾಂಬೂಲಚರ್ವಣಮಾನಿನಿ ಮೊದಲಾದ ಸ್ಯಂದನ ಗಾನದ ಭೋಗಗಳೆಲ್ಲ೧
ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿಸರ್ವ ಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನುಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ ೨
ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿಉಂಗುಷ್ಠದಿ ಲೋಕಪಾವನೆ ಗಂಗಾದೇವಿಯುಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ೩

 

ಇದೊಂದು ಸುಂದರವಾದ ವ್ಯಾಜನಿಂದಾಸ್ತುತಿ.
೪೦
ನಿನ್ನ ಮಗನ ಲೀಲೆಯ ತಾಳಲಾರೆವೆ ನಾವುತರಳನ ದುಡುಕು ಹೇಳಬಾರದೆ ಗೋಪಾಲಕೃಷ್ಣಗೆಬುದ್ಧಿ ಅಮ್ಮ ಪ
ಇಂದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೇ ಯಶೋದೆ ಅ.ಪ.
ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದುಕೋಲಲ್ಲಿ ನೀರ ಕೊಡವ ಒಡೆದನೇಅಸಲ ವರ್ಣನವ ದಿಟ್ಟ ನಿತ್ಯಾ ಇವನ ಹೋರಾಟಹೆಬ್ಬಾಲೆಯರಲ್ಲಿ ನೋಟ ಬಹಳ ಬಗೆಯಲಿಪಿಡಿದೇವೆಂದರೆ ಮೇಲಿಯಂಜಲುಗಳವೋಡಿದಾಅಮ್ಮ ಇದು ಚೆನ್ನಾಯಿತು ೧
ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನಲಿ ಜಲಕ್ರೀಡೆಯಾಡಲುಚಿತ್ತಚೋರ ಸೀರೆಗಳನೆಲ್ಲವ-ನೆತ್ತಿಕೊಂಡು ಮರವನೇರಿದನವ್ವಾಬೆತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಈ ಯುಕ್ತಿಗಳೇ ಬಹುಬಲ್ಲಹತ್ತಿಲಿ ಬಂದು ಕರವೆತ್ತಿ ಮುಗಿದರೆವಸ್ತ್ರಗಳೆಲ್ಲವ ಕೊಡುವೆನೆಂದನೇ ಅಮ್ಮ ೨
ಸದ್ದು ಮಾಡದೆ ಸರುಹೊತ್ತಿನಲಿ ನಾವುನಿದ್ದೆಗಣ್ಣಿನಲಿ ನಾವಿರಲುಮುದ್ದುಕೃಷ್ಣ ನಮ್ಮನೆಯವರಂತೆಮುದದಿಂದೆನ್ನ ಕೂಡಿದನವ್ವಾಎದ್ದು ನೋಡಿದೆವಲ್ಲ ಅಹ ಏನೇ ನಮ್ಮವರಲ್ಲಬುದ್ಧಿ ಮೋಸ ಬಂತಲ್ಲಪೊದ್ದು ಸಲ್ಲಿಸಿದೀ ಜಾರ ನೀನೆಂದರೆಪರಿಹಾಸ್ಯವ ಮಾಡಿದ ರಂಗವಿಠಲನ ಅಮ್ಮ೩

 

ನೀನೆ ಬಲ್ಲಿದನೋ ರಂಗಾ ?
೧೧
ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ
ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ
ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ ೧
ಖ್ಯಾತಿಯಿಂದ ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ ೨
ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ ೩
ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ ೪
ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ ೫

 

‘ನೀನಿಟ್ಟ ತೆರದಲ್ಲಿ ನಾನಿರುವೆ’ ಎಂಬ ಮೊರೆ
೧೨
ಪಾಲೊಳಗದ್ದು ನೀರೊಳಗದ್ದು ಹರಿನಾ ನಿನ್ನ ನಂಬಿದೆನೋ ಪ
ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯ ಅ.ಪ
ಸುಖದುಃಖದೊಳಗಿಡು ಸುಕೃತ ದುಷ್ರ‍ಕತ ಮಾಡುನಿಖಿಳ ದುರಿತದೊಳೆನ್ನನೋಲ್ಯಾಡಿಸುಅಖಿಳ ಖಿಳನೆನಿಸು ಅಭಯ ಭಯವ ಸೂಸುಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ೧
ಜ್ಞಾನಾಜ್ಞಾನದೊಳಗಿಡು ಮಾನಾಪಮಾನವೆ ಮಾಡುಅನಾಥ ನಾಥರೊಳೆನ್ನ ಅನವರತಾಗಿರಿಸುದೀನಾದೀನತೆಯೊಳಗೆನ್ನ ನೀನೀಡ್ಯಾಡುಶ್ರೀನಾಥ ನಿನ್ನಯ ಮತ ಮತವೆ ಸನ್ಮತವಯ್ಯ ೨
ಪ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸುಘನ ದಾರಿದ್ಯ್ರದಿ ನೂಕು ಸುಖವೆ ಸುರರೊಳಗ್ಹಾಕುಮುನಿಜನರ ಸಂಗ ಪೊರೆವ ರಂಗವಿಠಲನಿನ್ನಯ ಮತ ಮತವೆ ಸನ್ಮತವಯ್ಯ ೩

 

ಮಕ್ಕಳ ಮುಗ್ಧ ಭಾವವನ್ನು
೧೩
ಪೋಪು ಹೋಗೋಣ ಬಾರೋ ರಂಗಪೋಪು ಹೋಗೋಣ ಬಾರೋ ಪ
ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ೧
ಕುಂಡಲೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ೨
ಪಾಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆರಾಜ್ಯವನು ಬಿಡಬೇಕಂತೆ ರಂಗವಿಠಲ ಬರಬೇಕಂತೆ ೩

 

ಇಬ್ಬರು ಗೋಪಿಯರು ಮಧುರೆಗೆ
೪೧
ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ಪ
ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ ೧
ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟುಮಸ್ತಕದಲಿ ಪರವಸ್ತು ತೋರಿದ ಕೃಷ್ಣ ೨
ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟುಗೆಜ್ಜೆಯ ಕಟ್ಟಿ ತಪ್ಹೆಜ್ಜೆಯನಿಕ್ಕುತ ೩
ನಾರೇರು ಬಿಚ್ಚಿಟ್ಟ ಸೀರೆಗಳನೆ ವೊಯ್ದುಮ್ಯಾರೆ ಇಲ್ಲದೆ ಕರತೋರೆಂದ ಶ್ರೀಕೃಷ್ಣ ೪
ಅಂಗನೆಯರ ವ್ರತಭಂಗವ ಮಾಡಿದರಂಗವಿಠಲ ಭವಭಂಗವ ಪರಿಹರಿಸೋ ೫

 

೬೪
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ
ಚಾರುತರ ಶರೀರ ಕರುಣಾವಾರಿನಿಧಿ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರಮಾಪತೆ ಅ.ಪ.
ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು ೧
ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು ೨
ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ ೩

 

ಬ್ರಹ್ಮ, ಶಿವ, ವಿಷ್ಣು-ಈ ತ್ರಿಮೂರ್ತಿಗಳಲ್ಲಿ
೧೫
ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ
ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ೧
ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು ೨
ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ ೩
ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು ೪
ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು ೫
ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ ೬
ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ ೭
ಕಡಲ ದನುಜರು ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು ೮
ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ೯
ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು ೧೦
ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ ೧೧

 

೭೧
ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಪ
ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕುಮತಿವಂತನಾಗಬೇಕು ಮತ ಒಂದಾಗಿರಬೇಕು ೧
ಜಪದ ಜಾಣುವೆ ಬೇಕು ತಪದ ನೇಮವೆ ಬೇಕುಉಪವಾಸ ವ್ರತ ಬೇಕು ಉಪಶಾಂತವಿರಬೇಕು ೨
ಸುಸÀಂಗÀ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕುಶ್ರೀರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ೩

 

೧೬
ಭೂಷಣಕೆ ಭೂಷಣ ಇದು ಭೂಷಣಶೇಷಗಿರಿವಾಸ ಶ್ರೀವರ ವೆಂಕಟೇಶ ಪ
ನಾಲಿಗೆಗೆ ಭೂಷಣ ನಾರಾಯಣ ನಾಮಕಾಲಿಗೆ ಭೂಷಣ ಹರಿಯಾತ್ರೆಯುಆಲಯಕೆ ಭೂಷಣ ತುಲಸಿ ವೃಂದಾವನ ವಿಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು ೧
ದಾನವೇ ಭೂಷಣ ಇರುವ ಹಸ್ತಂಗಳಿಗೆಮಾನವೇ ಭೂಷಣ ಮಾನವರಿಗೆಜ್ಞಾನವೇ ಭೂಷಣ ಮುನಿಯೋಗಿವರರಿಗೆಮಾನಿನಿಗೆ ಭೂಷಣ ಪತಿಭಕ್ತಿಯು ೨
ರಂಗನನು ನೋಡುವುದೆ ಕಂಗಳಿಗೆ ಭೂಷಣಮಂಗಳಾಂಗಗೆ ಮಣಿವ ಶಿರ ಭೂಷಣಶೃಂಗಾರ ತುಲಸಿ ಮಣಿ ಕೊರಳಿಗೆ ಭೂಷಣರಂಗವಿಠಲ ನಿಮ್ಮ ನಾಮ ಅತಿ ಭೂಷಣ ೩

 

ಭಾಗವತದಲ್ಲಿ ಬರುವ ಭ್ರಮರಗೀತವನ್ನು
೫. ವಿಶಿಷ್ಟ ಗೀತೆಗಳು
ಭ್ರಮರಗೀತೆ
೯೨
ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ನಿಂದುಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ ಪ
ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಹನೇನೋಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದುತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿನಡುನೀರೊಳು ತೊರೆದ್ಹೋದನೆ ಹೇ ಕಿತವಾ ೧
ತಮ್ಮ ನಂದಗೋಪ ಯಶೋದಮ್ಮನ ಕಂಡುಬಾರೆಂದುರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆಹೊಮ್ಮೇಲಟ್ಟದಲಂಚೆಯಗಮ್ಮನೇರ ಕುಚದ ಕುಂ-ಕುಮ್ಮ ಕಸ್ತೂರಿಯ ಕರದಿಮ್ಮನದಿ ಸಿಲುಕಿದಂಗೆಕಮ್ಮಗೋಲನ ಬಾಣಂಗಳುಮ್ಮಳಿ ನೋಯಿಸುತಿವೆಸುಮ್ಮನೆ ಬಾಹೋದು ಸುಲಭವೆ ಹೇ ಕಿತವಾ೨
ಮಧುಕುಂಜವನದಲ್ಲಿ ಮಧುವೈರಿ ಕೊಳಲನೂದಲುಮಧುರ ನಿಸ್ವನ ಕೇಳಿ ಮದಿರಾಕ್ಷಿಯರೆಲ್ಲ ಧಾಮದ ಧ್ಯಾನವ ಬಿಟ್ಟು ಮೃಗಮದಗಂಪವಿಡಿದೈದಿ ಮದನನಯ್ಯನ ಕಾಣುತ ಶ್ರೀ ಹರಿಯಮುದವೇರಿ ತಲೆಬಾಗಿ ಮೇದಿನಿ ನಿಟ್ಟಿಸಲಾಗಮೃದುವಾಕ್ಯದೊಳೆಮ್ಮಪ್ಪಿ ಅಧರಾಮೃತ ಭೋಜನಕ್ಕೊದಗುವ ಸತತ ಸನ್ನದ್ಧ ನಮ್ಮನಗಲಿ ಕಲ್ಲೆದೆಯಾದನೆಂತೋ ಕೃಪಾಳು ಹೇ ಕಿತವಾ ೩
ವಜ್ರಾಂಕುಶ ಧ್ವಜಾಂಕಿತ ಹೆಜ್ಜೆಯನ್ನೇ ತಿಳಿದ ನಮ್ಮಬ್ಜಾಕ್ಷಿಯರೊಡನೆ ರತಿಕಜ್ಜದುಪವನದಲ್ಲಿನಿರ್ಜನರೋತ್ತಂಸರೊಡನೆ ಮಜ್ಜನ ಕ್ರೀಡೆಯಾಡುವ ಸಾಯುಜ್ಯ ಸುಖವತ್ತಲಿಪ್ಪುದೂ ಶ್ರೀ ಹರಿಯಅಬ್ಜಭವ ಮುನಿಜನ ಪೂಜ್ಯನಗಲಿದ ಮ್ಯಾಲೆನಿರ್ಜೀವಿಗಳಾಗಿ ಕಣ್ಣ ಕಜ್ಜಲ ಕಲಕಿಕೊಂಡುಲಜ್ಜೆಗೆಟ್ಟು ತನುಲತೆ ಜರ್ಝರಿತದಿ ಜೀವಿಸೆವಜ್ಜರೆದೆಯಲ್ಲವೆ ನಮ್ಮದು ಹೇ ಕಿತವಾ ೪
ಕತ್ತೂರಿಯ ಬಟ್ಟನಿಟ್ಟು ಮುತ್ತಿನ ಜೊಲ್ಲೆದುರುಬಿಲಿಕಸ್ತೂರಿ ತಿಲಕ ಚಲತ್ಕುಂಡಲವೆಳಗುವೃತ್ತವದನದಿ ಮಂದಸ್ಮಿತ ತಿಂಗಳಿಂದಲೆಮ್ಮಹೃತ್ತಾಪ ಪರಿಹರಿಸುವ ಶ್ರೀಹರಿಯಮತ್ತೆ ವಕ್ಷದ ಶ್ರೀವತ್ಸ ಕೌಸ್ತುಭ ವೈಜಯಂತಿ ಮಾಲೆಶ್ರೀ ತುಲಸಿ ಘಮಘಮಿಸುತ್ತಲಿಹ ವನಮಾಲೆರತುನ ಕಂಕಣ ಭುಜಕೀರ್ತಿಯಿಂದೊಪ್ಪುವ ಪುರುಷೋತ್ತಮನ್ನ ಬಣ್ಣಿಪರುಂಟೇ ಹೇ ಕಿತವಾ ೫
ಉತ್ಪಲ ಶ್ಯಾಮಲ ಮುದವೆತ್ತ ಬಾವನ್ನವದೀಡಿಅತ್ಯಮಲ ಪೊನ್ನಂಬರ ಸುತ್ತಿದಮತ್ತಾ ನೂಪುರ ಝಣತ್ಕಾರದಿ ಮಿಂಚಿಯೆಮ್ಮಚಿತ್ತಶಿಖಿಗೆ ಪೀಯೂಷಸಿಕ್ತ ಮೇಘದಂತೆ ಒಪ್ಪುವ ಶ್ರೀಹರಿಯಹೆತ್ತ ತಾಯಿ ಆಪ್ತ ಬಂಧು ಗೋತ್ರ ಗತಿ ನೀನೆ ನಮ್ಮ ಚಿತ್ತವೆಂದು ನಂಬಿ ತನ್ನ ಹತ್ತಿಲಿ ಸಾರಿದವರಒತ್ತಿ ತಾಂ ರಥವನೇರಿ ಸತ್ವರ ಬರುವೆನೆಂದುಮತ್ತಕ್ರೂರನೊಡನೈದಿದ ಹೇ ಕಿತವಾ ೬
ಲಕ್ಷುಮಿರಮಣನವ ಸೂಕ್ಷುಮ ಗೊಲ್ಲತೇರಾವುಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವುಮೋಕ್ಷದರಸನು ಅವ ಗೋಕ್ಷೀರದಿ ತೃಪ್ತರಾವುಲಕ್ಷಿಸುವದೆಂತೋ ಎಮ್ಮನು ಶ್ರೀ ಹರಿಯುರಕ್ಷಿಸಲುದಿಸಿ ಜನರಕ್ಷಣೆಗೆ ಪಾಲÉ್ಬಣ್ಣೆಯಭಕ್ಷಿಸಿ ನಿರುತ ನಮ್ಮ ಅಕ್ಷಿಗೆ ಹಬ್ಬವನುಣಿಸಿಈ ಕ್ಷೋಣಿ ಚರಾಚರ ದೀಕ್ಷಿಗೆ ನರರ ಸಾಮ್ಯವಕ್ಷ(ಮ)ಣರಾದೆವೊ ಮೂರ್ಖರೋ ಹೇ ಕಿತವಾ ೭
ಹಿಂದೆ ಮಾಡಿದ ಸದ್ಧರ್ಮದಿಂದ ಮಧುರಾ ನಗರದಇಂದೀವರಾಕ್ಷಿಯರಾನಂದ ಸಿಂಧುವಿಗುದಿತ ಪೂರ್ಣಚಂದ್ರನಂತೊಪ್ಪುವ ಸಿರಿ ಮಂದರೋದ್ಧರನಂಘ್ರಿಯಪೊಂದುವ ಭಾಗ್ಯಕ್ಕೆಣೆ ಉಂಟೆ ಶ್ರೀಹರಿಯಅಂದೆಮ್ಮೊಳು ರಾಸಕ್ರೀಡೆಯಿಂದ ಬಂದಪರಾಧವ-ನೊಂದನೆಣಿಸದೆ ಸಲಹೆಂದು ಬಿನ್ನೈಸಿ ಸಾಷ್ಟಾಂಗದಿಂದವಂದಿಪೆವೋ ಭಕ್ತ ಬಂಧುವಿಗೆ ನಮ್ಮ ಹೃದಯ ಮಂದಿರದೊಳೆಂದೆಂದಿರೆಂದು ಹೇ ಕಿತವಾ ೮
ಹೆಂಗಳೇರೊಂದಾಗಿ ಅಂತರಂಗದರಸನಾಡಿದಮಂಗಳಚರಿತೆಯನ್ನು ಸಂಗೀತದಿಂ ಪೊಗಳುತ್ತಕಂಗಳಶ್ರುಗಳೆವುತ್ತ ಇಂಗಿತಜ್ಞ ದೇವ-ನಂಗಸಂಗದ ಸುಖವ ನೆನೆದು ಶ್ರೀಹರಿಯಮಂಗಳ ವೇದಸ್ತೇಯಾರಿ ಶೃಂಗಾರ ಕೂರವ ನಮ್ಮಪೊಂಗಣ್ಣನ ಸೀಳ್ದ ನರಸಿಂಗ ವಟು ಭಾರ್ಗವನೆಅಂಗದ ಪಾರ್ಥ ಕಂಬುತುರಂಗಪ ರಂಗವಿಠಲತುಂಗ ಮಹಿಮ ನಮೋ ಎಂಬೆವೋ ಹೇ ಕಿತವಾ ೯

 

ಇ) ಶ್ರೀಮನ್ಮಧ್ವಾಚಾರ್ಯರು
೫೦
ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ ಪ
ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ಅ.ಪ.
ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ ೧
ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ ೨
ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದಂತೆಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ ೩

 

೧೭
ಮರೆತೆಯೆನೋ ರಂಗಾ ಮಂಗಳಾಂಗತುರು-ಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ಪ
ಕೋಲು ಕೈಯಲ್ಲಿ ಕೊಳಲು ಜೋಲುಗಂಬಳಿ ಹೆಗಲಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿಕಾಲಕಡಗವನಿಟ್ಟು ಕಾಡೊಳಿಹ ಪಶುಹಿಂಡಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ೧
ಕಲ್ಲು ಮಣಿ ಕವಡಯನು ಕಾಡೊಳಿಹ ಗುಲಗಂಜಿಸಲ್ಲದೊಡವೆಯ ನೀನು ಸರ್ವಾಂಗಕೆಅಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆಅಲ್ಲಿ ಗೊಲ್ಲರ ಕೂಡ ಚೆಲ್ಲಾಟ ಮಾಡುತಲಿ ೨
ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿಸಿರಿ ಅರಸನೆಂದು ಸೇವಕರರಿವರೋಶರಣಾಗತರ ಪೊರೆವ ಶ್ರೀರಂಗವಿಠಲಯ್ಯನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು೩

 

೭೨
ಮರೆಯಬೇಡವೋ ಹರಿಯಮರೆಯಬೇಡವೋ ಪ
ಮರೆಯಬೇಡ ಹರಿಯನಾಮ ಮರೆತು ನೀನು ನಡೆಯಬೇಡದುರುಳಯಮನ ಪುರದಬಾಧೆ ಬರುವುದೆಂದು ಅರಿತು ಅರಿತು ೧
ದುರ್ಮನುಜರ ಸಂಗದಿಸುಕರ್ಮ ರಹಿತನಾದರೆ ಮನುಕರ್ಮನಿಷ್ಠೆಯಿಂದ ನಿನ್ನಚರ್ಮ ಸುಲಿಸುವನೋ ಮನುಜ೨
ಗಾಳಿಗಿಕ್ಕಿದ ದೀಪದಂತೆನಾಳೆ ನಾಡಿದ್ದು ಎನಲಿಬೇಡಕಾಲಕಾಲಕೀಗ ನಾಮ ನಾಲಿಗಿಂದ ನೆನೆಯೊ ಕಂಡ್ಯ೩
ಹಗಲು ಇರುಳು ಹಾಳು ಹರಟೆಬಗೆ ಬಗೆ ಉಲ್ಲಾಸತನದಿಸುಗುಣಿಯರೊಡನೆ ಸುರತ ಸುಖದಿನಗುತ ಕಾಲ ಕಳೆಯಬೇಡ ೪
ಅಂಗಜನ ಜನಕಮರಡಿ |
ರಂಗವಿಠಲರಾಯ ನಾಮ ಮಂಗಳ ಸುಸ್ಮರಣೆಯಿಂದ ಅಂತ |
ರಂಗದಿನೆನೆಯೋಕಂಡ್ಯ ೫

 

೪೨
ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆಏನು ಪಥವಮ್ಮ ನಮಗೆ ಪ
ಮಾನವೇನಿನ್ನಿದಕೆ ಮಾನಿನಿಯರೆಲ್ಲರುಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ಅ.ಪ.
ಕಳ್ಳತನವೇ ನಮ್ಮ ವಲ್ಲಭರು ಈ ಸುಳುವುಎಲ್ಲವನು ಬಲ್ಲರಮ್ಮಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ೧
ಇಂದುದಯದಿ ಮೊದಲು ಇಂದೀವರಾಕ್ಷಿಯರುಗೋವಿಂದನ ಬಳಿಗೈದುವಒಂದು ಕಡೆಯಲಿ ಕುಳಿತು [ವನಜಾಕ್ಷಿಯೋರ್ವ ಕೈಯಂದಲಲ್ಲಿಗೆ ಕಳುಹಿ] ಕೇಳ್ವೆವೇನು ಪೇಳುವನೋ ೨
ಹರಿಣಾಂಕವದನೆಯರು ನೆರೆದು ಬರುತಿರೆ ಕಂಡುಪರಮ ಹರುಷದಲಿ ಬಂದುಸರಿ ರಾತ್ರಿಯೊಳು ಹೀಗೆ ಬರುವುದೇನೆಂದೆನಲುಎರಗಿ ಬಿನ್ನೈಸಿದರು ಅಂಬುಜದಳಾಕ್ಷನಿಗೆ೩
ಶ್ಲೋಕ
ಹಲವು ಕಾಲವು ನಿನ್ನ ಸ್ನೇಹ ಸುಖವ ಹಾರೈಸಿಕೊಂಡಿರುತಿಹಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆಕಳೆಯಲಾಪವೇ ಕಾಂತ ಕೇಳು ದಿನವ ಈ ಕಂತುವಿನ ಬಾಧೆಗೆಘಳಿಗೊಂದು ಯುಗವಾಗಿ ತೋರುತಿÀಹುದೋ ಜಲಜಾಕ್ಷ ನೀನಿಲ್ಲದೆ
ಪದ
ಬ್ಯಾಡ ಮಧುರೆಗೆ ಪೋಗಬ್ಯಾಡೆಲವೊ ಶ್ರೀಕೃಷ್ಣಬೇಡಿಕೊಂಬೆವೋ ದೈನ್ಯದಿನೋಡು ನಮ್ಮ್ಯಾಲೆ ದಯಮಾಡು ಮದನಂಗೀಡುಮಾಡುವುದೇನುಚಿತವೆಲೋ ಮಾಧವ ಕೃಪಾಕರನೆ೪
ಶ್ಲೋಕ
ಬಾಲಭಾವದಲಿಂದಲಂಗಸುಖವ ಬಹುಬಗೆಯಲಿಂದುಳುಹಿದೆಲೋಲಲೋಚನೆ ನಿಮ್ಮ ಬಿಟ್ಟು ಪುರದ ನಾರೇರಿಗಾನೊಲಿದರೆನೀಲಕಂಠನು ಮೆಚ್ಚ ನೋಡು ನಿಜವ ನಿಮಗ್ಯಾತಕೀ ಸಂಶಯಕಾಲಕ್ಷೇಪವನಲ್ಲಿ ಮಾಡೆ ಕಿಂಚಿತ್ಕಾಲದೊಳಾನೈದುವೆ
ಪದ
ಪಾಲಿಸಿರೆನಗಪ್ಪಣೆಯ ಪಾಟಲ ಸುಗಂಧಿಯರೆಕಾಲಹರಣವ ಮಾಡದೆನಾಳೆ ಉದಯಕೆ ಪೋಗಿ ನಾಲ್ಕೆಂಟು ದಿನದೊಳುವ್ಯಾಳೆಗಿಲ್ಲಿಗೆ ಬರುವೆ ಕಾಳಾಹಿವೇಣಿಯರೆ ೫
ಶ್ಲೋಕ
ಮಾರನಯ್ಯನೆ ಕೇಳು ಅಲ್ಲಿರುತಿಹ ನಾರೇರು ಬಲು ನಿಪುಣರೋನೀರಜಾಂಬಕ ನೋಡು ನಿನ್ನ ಮನವ ನಿಮಿಷಾರ್ಧದೊಳುಸೆಳೆವರೋಮಾರಕೇಳಿಯ ಶಾಸ್ತ್ರಮರ್ಮವರಿದ ಆ ನಾರೇರು ನೆರೆಯಲುಗಾರು ಪಳ್ಳಿಯಲಿಪ್ಪ ಗೋಪಿಯರ ವಿಚಾರಂಗಳ ಸ್ಮರಿಪೆಯಾ
ಪದ
ಬಿಲ್ಲ ಹಬ್ಬವೆ ಸುಳ್ಳು ಬಿಸುರುಹಾಕ್ಷಿಯರಿಕ್ಷುಬಿಲ್ಲಿನುತ್ಸವಕೆ ನಿನ್ನಖುಲ್ಲ ಅಕ್ರೂರನನು ಕಳುಹಿ ಕರೆಸಿದರಲ್ಲಿವಲ್ಲಭೆಯರನ್ನು ನೆರೆವೆ ನಮ್ಮೆಲ್ಲರನು ಮರೆವೆ ೬
ಶ್ಲೋಕ
ನಾರೀಹಾರ ಕಿರೀಟ ಕುಂಡಲಯುಗ ಕೇಯೂರವಲಯಾದಿಗಳುಚಾರು ವಸ್ತ್ರ ಸುಗಂಧ ಪುಷ್ಪನಿಚಯ ಹಾರಂಗಳಂ ಧರಿಸದೆಮಾರ ಕೇಳಿಯ ಮಾತಿಲಿಂದಲವರ ಮನಸೆಮ್ಮೊಳೊಂದಾಗದೆನಾರೇರೊಲುಮೆಯುಂಟೆ ಲೋಕದೊಳಗೆ ನನ್ನ್ಯಾತಕೆ ದೂರ್ವಿರೇ
ಪದ
ಮಲ್ಲಯುದ್ಧವ ನೋಡಬೇಕೆನುತ ನಮ್ಮಾವಅಲ್ಲಿಗೆ ಕರೆಸಲದಕೆಇಲ್ಲದಪವಾದ ಈ ಸುಳ್ಳು ಸುದ್ದಿಗಳ ನೀ -ವೆಲ್ಲ ಸೃಜಿಸಿದಿರಿ ಸರಿಯಲ್ಲ ನಿಮಗಿಳೆಯೊಳಗೆ ೭
ಶ್ಲೋಕ
ವಾರಿಜಾಂಬಕ ವಾರಿಜಾರಿವದನ ವಾರಾಶಿಜಾವಲ್ಲಭವಾರಿವಾಹನಿಭಾಂಗ ವಾಸವನುತ ವಾಕೆಮ್ಮದೊಂದಾಲಿಸೋವಾರಿಜೋದ್ಭವನಯ್ಯ ನಿನ್ನ ವಿರಹ ವಾರಾಶಿಯೊಳು ಮುಳುಗಿಹನಾರೀನಿಚಯವ ಪಾರುಗಾಣಿಸು ಕೃಪಾನಾವೆಯಲಿಂದೆಮ್ಮನು
ಪದ
ಮಾರನೆಂಬುವನು ಬಲು ಕ್ರೂರ ನಮ್ಮಗಲಿ ನೀ ಊರಿಗ್ಹೋದುದನು ಕೇಳಿವಾರಿಜಾಸ್ತ್ರವನು ಎದೆಗೇರಿಸೆಮ್ಮನು ಬಿಡದೆಹೋರುವನು ಅಹÉೂೀ ರಾತ್ರಿಯಲಿ ತಪಿಸುತ ೮
ಶ್ಲೋಕ
ನೀಲಕುಂತಳೆ ಕೇಳು ನಿಮ್ಮ ಮನೆಯೊಳಾ ನೆಲುವಿನ ಮ್ಯಾಲಿನಪಾಲು ಬೆಣ್ಣೆಯ ಕದ್ದು ಮೆದ್ದು ಬಹಳ ಕಾಲಂಗಳಂ ಕಳೆದೆನೆಬಾಲೆ ಮನ್ಮಥಬಾಣದೆಚ್ಚು ತಪಿಸೆ ಬಹು ಬಗೆಯಲಿಂದುಳುಹಿದಲೋಲಲೋಚನೆ ನಿಮ್ಮೊಳಾನು ಬಹಳ ಜಾರತ್ವಮಂ ಮಾಳ್ಪೆನೇ
ಪದ
ಬಟ್ಟಗಂಗಳೆ ನಿಮ್ಮ ಬಿಟ್ಟು ಘಳಿಗಿರಲಾರೆದುಷ್ಟ ಕಂಸನು ಕರೆಸಲುಅಟ್ಟಿದರೆ ಪೋಗದಿರೆ ಸಿಟ್ಟಿನಿಂದಲಿ ವ್ರಜಕೆಅಟ್ಟುಳಿಯ ಮಾಡುವನು ಅಂಬುಜಸುಗಂಧಿಯರೆ ೯
ಶ್ಲೋಕ
ಪತಿ ಸುತ ಪಿತೃ ಮುಖ್ಯ ಭ್ರಾತೃ ಬಾಂಧವರು ಎಂಬಅತಿಶಯ ನಮಗಿಲ್ಲ ಆಲಿಸೋ ಮಾತನೆಲ್ಲರತಿಪತಿಪಿತ ನೀನೇ ರಾತ್ರಿಯೊಳು ಕೊಳಲನೂದೆಕ್ಷಿತಿಪತಿ ನಿನ್ನೆಡೆಗೆ ಕ್ಷಿಪ್ರದಿಂ ಬಂದೆವಲ್ಲೊ
ಪದ
ಬಾಲತನದಲಿ ಯಮುನಾ ತೀರದಲಿ ನೀ ವತ್ಸ-ಪಾಲನೆಯ ಮಾಡುತಿರಲು ಆಕಾಲ ಮೊದಲಾಗಿ ಈ ವ್ಯಾಳೆ ಪರಿಯಂತರವುಕಾಲುಘಳಿಗಗಲದಿಹ ಕಾಂತೆಯರ ತ್ಯಜಿಸುವರೆ೧೦
ಶ್ಲೋಕ
ಪರಿಪರಿಯಲಿ ನಿಮ್ಮ ಪಾಲಿಸಿ ನೋಡೆ ಮುನ್ನಕರುಣಕೆ ಕೊರತಿಲ್ಲ ಕಾಂತೆ ಕೇಳೆನ್ನ ಸೊಲ್ಲತ್ವರಿತದಿ ಬಾರದಲೆ ತಡೆದು ನಾ ನಿಂತರಲ್ಲೆಸರಸಿಜಭವ ಮಾರರಾಣೆ ಕಾಣೆ ಪ್ರವೀಣೆ
ಪದ
ಹರಿಣಾಂಕ ವದನೆಯರೆ ಹರುಷಪೂರಿತರಾಗಿಕರೆದು ತಾಂಬೂಲವಿತ್ತುಕಳುಹಿರೆನ್ನನು ನಿಮ್ಮ ಕ್ಲುಪ್ತ ಕಾಲಕೆ ಬಂದುನೆರೆಯದಿದ್ದರೆ ನಾನು ಪರಮ ಪುರುಷೋತ್ತಮನೆ೧೧
ಶ್ಲೋಕ
ಮಾರನೆಂಬುವನಂದೆ ಮಡಿದನು ಶಿವನ ಮೂರನೆ ಕಣ್ಣಿಲಿನಾರೇರಿಲ್ಲದೆ ನಾಭಿಯಿಂದ ಪಡೆದ ಆ ಬ್ರಹ್ಮನೆಂಬಾತನ ನಾರಿ ಈರ್ವ ಕುಮಾರರಾಣೆ ಹರಿಯು ತಾನಿಟ್ಟನೇನೆಂಬೆವೆಮಾರಿ ಹೊರಗಿನ ಹೊರಗೆ ಹೊಯಿತೆಂಬೊ ತೀರಾಯಿತೆ ಭಾವುಕಿ
ಪದ
ಹಲವು ಮಾತುಗಳ್ಯಾಕೆ ಜಲಜಾಕ್ಷ ನಿನ್ನ ಪದನಳಿನಗಳ ನೆರೆ ನಂಬಿಹಒಲುಮೆಯಲ್ಲಿರುತಿಪ್ಪ ಲಲನೆಯರನೆಲ್ಲರನುಸಲಹೊ ಸಲಹದೆ ಮಾಣು ರಂಗವಿಠಲರೇಯ೧೨

 

ಇಲ್ಲಿ ಅದ್ವೈತ ಮತದ ಮಾಯಾವಾದ,
೭೩
ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ
ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ ೧
ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ ೨
ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ೩
ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ೪
ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ ೫

 

೬೫
ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲಭಾಸುರಾಂಗ ಶ್ರೀವಾಸುಕಿಶಯನನಸಾಸಿರ ನಾಮವ ಲೇಸಾಗಿ ಪಠಿಸದೆ ಪ
ದುಷ್ಟ ಜನರ ಕೂಡಿ ನಾನತಿಭ್ರಷ್ಟನಾದೆ ನೋಡಿಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ ೧
ಕಾಯವು ಸ್ಥಿರವಲ್ಲ ಎನ್ನೊಳುಮಾಯೆ ತುಂಬಿತಲ್ಲಪ್ರಾಯಮದದಿ ಪರಸ್ತ್ರೀಯರ ಕೊಂಡಾಡಿಕಾಯಜಜನಕನ ಗಾಯನ ಮಾಡದೆ೨
ಕಂಗಳಿಂದಲಿ ನೋಡೋ ದೇವ ನಿ -ನ್ನಂಗಸಂಗವ ನೀಡೋಮಂಗಳಮಹಿಮ ಶ್ರೀರಂಗವಿಠಲ ಮುಂ-ದಂಗಬಾರದಂತೆ ನೀ ದಯಮಾಡೋ ೩

 

೪೩
ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನಗೇಕೆ ಇಂಥ ದುಡುಕು ಪಾಕಶಾಸನಮಧ್ಯ ಪೋಕತನಗಳನ್ನುಸಾಕುಸಾಕಯ್ಯ ಕೃಷ್ಣ ಪ
ಗೊಲ್ಲ ಬಾಲಕರು ನೀವೆಲ್ಲರು ಕೂಡಿಕೊಂಡುಗುಲ್ಲ ಮಾಡದೆ ಮೊಸರೆಲ್ಲ ಸವಿದೆಯಂತೆ ಕೃಷ್ಣ ೧
ಪೂತನಿ ಮೊಲೆಯನ್ನು ಭೀತಿಯಿಲ್ಲದೆ ಉಂಡುಘಾತವ ಮಾಡಿದೆ ಮಾತನಾಡಯ್ಯ ಕೃಷ್ಣ೨
ದುಷ್ಟ ಕಂಸನ ನೀನು ಕಷ್ಟವಿಲ್ಲದೆ ಮಡುಹಿಮುಷ್ಟಿಕನ ಕೊಂದೆ ದೃಷ್ಟಿ ತಾಕೀತಂದು ೩
ನಿರ್ಜನ ಸ್ಥಳದಿ ಯಮಳಾರ್ಜುನರನ್ನು ಮಡುಹಿದುರ್ಜನರ ಕೊಂದೆ ಅರ್ಜುನ ಸಾರಥಿ ೪
ಅಂಗಿಟೊಪ್ಪಿಗೆ ಉಂಗುರ ಉಡಿದಾರಶೃಂಗರಿಸಿಕೊಂಡು ರಂಗವಿಠಲ ಬಾರೋ ೫

 

ಭಗವಂತ ತನ್ನನ್ನು ಕಡೆಗಣಿಸಿದನೆಂಬ
೬೬
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ
ಏಕೋವಿಷ್ಣುಯೆಂಬೋ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ.
ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ ೧
ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ ೨
ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ ೩
ಎಂದೆಂದು ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ ೪
ಪೃಥಿವಿಯೊಳಗುದಿಸಿ ಮುವ್ವತ್ತಾರು ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ ೫
ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ ೬
ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ೭
ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ ೮
ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ ೯
ಉರಿಯೊಳಗೆ ಬಿದ್ದು ಶರೀರವನು ಕಳೆಯಲೊಪರುವತವನೇರ್ಯುರುಳಲೋ ಕೃಷ್ಣಗರಳಮಡುವನೆ ಧುಮುಕಿ ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ ೧೦
ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ ೧೧

 

೪೪
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ
ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳವಾಗಲು ಕಳಕಳಿಸುತ ಅ.ಪ.
ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ೧
ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ ೨
ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು೩

 

ಇದು ಶ್ರೀರಂಗದ ರಂಗನಾಥನನ್ನು
೧೮
ರಂಗನಾಥನ ನೋಡುವ ಬನ್ನಿ ಶ್ರೀ- ಪ
ರಂಗನ ದಿವ್ಯ ವಿಮಾನದಲ್ಲಿಹನ ಅ.ಪ.
ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ ೧
ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ ೨
ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ ೩

 

೧೪
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ
ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ
ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ ೧
ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ ೨
ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ ೩

 

೧೯
ರಕ್ಷಮಾಂ ರಂಗೇಶ ಪ
ರಕ್ಷಮಾಂ ರಂಗೇಶ ರವಿಕೋಟಿಸಂಕಾಶಪಕ್ಷಿವಾಹನ ಶ್ರೀಶ ಭವ್ಯಗುಣಕೋಶಅಕ್ಷರಾದಿ ಪಿಪೀಲಿಕಾಂತ ಸಂ-ರಕ್ಷಕಾಮಯಹರಣ ಸರ್ವಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ಅ.ಪ.
ಕಮಲದಳ ನೇತ್ರ ಕಮಲಾರಿ ಸಮವಕ್ತ್ರಕಮಲಾವಿರಚಿತ ಸ್ತೋತ್ರ ಕರಧೃತ ಗೋತ್ರಕಮಲಜ ನುತಿಪಾತ್ರ ಕರಿರಾಜಯಾತ್ರಕಮಲಧರ ಕರಕಮಲ ಸಮಪದಕಮಲ ಸಂನಿಭವಿನುತ ಕಂಧರಕಮಲ ಸಂನಿಭ ಸುಗಾತ್ರ-ಕಮಲಾಕಳತ್ರ ೧
ಅನಿಮಿಷ ಸುಪ್ರೀತಾಖಿಳ ದೋಷ ನಿರ್ಧೂತಸನಕಾದಿ ಶೃತಿಗೀತ ಅರ್ಜುನಸೂತದಿನಮಣಿಕುಲಜಾತ ದೇವಕೀ ಪೋತಕನಕವಸನ ಕೀರೀಟಧರ ಕೋ-ಕನದ ಹಿತ ಕಮಲಾಪ್ತ ನಯನವನದವಾಹನವೈರಿಕುಲಘಾತ ವನಜಭವ ತಾತ೨
ಅಂಗನಾಂಬರಹರಣಾನುಪಮ ಸಪ್ತಾವರಣಮಂಗಳ ಕರಚರಣ ಭಕ್ತ ಸಂರಕ್ಷಣಗಾಂಗೇಯಕೃತಸ್ಮರಣ ಕರುಣಾಭರಣರಂಗವಿಠಲ ಭುಜಂಗಶಯನ ತು-ರಂಗಧರ ಕಾವೇರಿ ತೀರ ಶ್ರೀ-ರಂಗನಿಲಯ ತುರಂಗ ಸಂಚರಣ-ಗಂಗಾಚರಣ೩

 

೨೦
ರಾಮಾವರಂತೆ (ರಾಮಾ+ಅವರಂತೆ) ರಕ್ಷಿಸೋ ಎಂದರೆರಕ್ಷಿಸಲೊಲ್ಲ್ಯಾ ಪರಾಕು ಪ
ಕಾಮಿತ ಫಲವೀವ ಕರುಣಾಂಬುಧಿ ಎಂದು ನಾ ಮೊರೆಹೊಕ್ಕೆನಲ್ಲೋ ರಾಮರಾಮಾ ಪ್ರಫುಲ್ಲ ಅ.ಪ.
ಎಡವಿದ್ದ ಮಾತ್ರದಿ ಪೆಣ್ಣಾದ ಗೌತಮಮಡದಿಯು ನಿನ್ನವಳೇನೋಕಡುಪ್ರೀತಿಯಿಂದ ಕಾಯಿದಿ ಕರಿರಾಜನು ನಿನ್ನಒಡಲಲ್ಲಿ ಜನಿಸಿದನೇನೋನಡುಗುತ ಮಗನ ನಾರಗನೆನ್ನಲುನುಡಿ ಕೇಳಿ ಪೊರೆದೆಲ್ಲೊ ರಾಮರಾಮಾ೧
ಹಿಂದ್ವೈರಿ ದೆಸೆಯಿಂದ ಬಂದ ವಿಭೀಷಣನುತಂದೆಯ ಕಡೆಯವನೇನೋಕಂದು ಕುಂದೆಣಿಸದೆ ಕಾಯಿದಿ ಘಂಟಾಕರ್ಣಾಎಂದಾ ಮಾತಿನ ಬಗೆಯೇನೋಬಂದು ಕಂಬದಿ ಶಿಶುವ ಬಾಧೆಯ ಬಿಡಿಸಿದಿ ಆಪದ್ಬಾಂಧವ ನೀನಲ್ಲೋ ರಾಮರಾಮಾ ೨
ಉಲ್ಲಾಸದಿಂದ ಶಬರಿ ಉಂಡೆಂಜಲಿಗೊಡ್ಡಿದವಲ್ಲಭ ನೀನಲ್ಲವೇನೋಎಲ್ಲಿಯ ಬಲ್ಲಿದ ಪಿಡಿಯವಲಕ್ಕಿಗೆ ನೀ ಪೋಗಿವಲ್ಲ್ಯೊಡ್ಡಿದ್ದು ಮರೆತ್ಯೇನೋಎಲ್ಲಿಯ ಮಾತಿದು ಪೇಳಲಂಜುವೆ ರಂಗ ವಿ-ಠಲ ನೀನಲ್ಲೋ ರಾಮರಾಮಾ ೩

 

೯೭
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ಪ
ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ಅ.ಪ.
ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು೧
ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ ೨
ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದುಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ ೩
ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದುಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ೪
ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲುವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ ೫
ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ೬
ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದುಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ೭
ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದುವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ೮
ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ ೯
ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ ೧೦
ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ ೧೧
ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲುವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು ೧೨
ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು ೧೩
ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು೧೪
ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು ೧೫
ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು ೧೬
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ೧೭
ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡುಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ ೧೯
ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ ೨೦
ನೀಲಘನ ನೀಲ ಜೋ ಜೋ ಕರುಣಾಲವಾಲ ಶ್ರೀಕೃಷ್ಣ ಜೋ ಜೋಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ ೨೧
ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ ೨೨
ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ ೨೩

 

ಇಲ್ಲಿ ವರ್ಣಿತರಾದ ಯತಿಗಳು
ಉ) ಯತಿವರರು
ಜಿತಾಮಿತ್ರ ತೀರ್ಥರು
೫೨
ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ಪ.
ಬಂದ ದುರಿತಗಳ ಹಿಂದೆ ಕಳೆದು ಆ- ನಂದ ಪಡುವ ವಿಭುದೇಂದ್ರ ಕರೋಧ್ಭವನಅ.ಪ.
ರಘುಕುಲವರಪುತ್ರ ರಾಮನ ಚರಣ ಕರುಣಾಪಾತ್ರನಿಗಮೋಕ್ತಿಯ ಸೂತ್ರ ಪಾಠವ ಪಠಿಸುವಸುಗುಣ ಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣಪೊಗಳುವ ಅಪಾರ ಅಗಣಿತ ಮಹಿಮರ೧
ವರಮಹಾತ್ಮೆ ತಿಳಿಸಿ ಮೊದಲಿಂದೀ ಪರಿಯಂದದಿಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿದರೆ ಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದ ತರವಲ್ಲಿರುವವರ೨
ಮುದದಿ ಕೃಷ್ಣಾ ತಟಿಯ ಮಧ್ಯದಿ ಸದನದ ಪರಿಯಸದಮಲ ಯತಿವರ್ಯ ತಪಮೌನದಲಿಇದ್ದು ದ್ರುತ ಕರಿಯಕಾರ್ಯ ಒದಗಿ ನದಿಯು ಸೂ -ಸುತ ಬರಲೇಳು ದಿನಕುದಯಾದವರ ಸುಪದ ಕಮಲಂಗಳ೩
ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ ಅಮಾವಾಸ್ಯ ದಾಸರು ಪ್ರತಿವರುಷ ಮಾಳ್ಪರುಲೇಸೆನಲು ಶ್ರಿತಿಗೋಷ ಕಾಶಿಯ ಕ್ಷೇತ್ರ ಈ ಸ್ಥಳ ಮಿಗಿಲೈದಾಸರಿಗೆ ಭೂಸುರ ಪದಗಳ ೪
ಮಧ್ವಶಾಸ್ತ್ರ ಗ್ರಂಥಸಾರದ ಪದ್ಧತಿ ತಿಳಿಸಿದಂಥರುದ್ರವಂದ್ಯ ಮೂರುತಿ ರಂಗವಿಠಲ ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ೫

 

೪೫
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ
ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು ೧
ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ೨
ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ ೩
ಇವನ ವಚನದ ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು ೪
ಪತಿಸುತರ ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ ೫
ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ೬
ತುಂಗಗುಣನಿಲಯ ಅಂಗಜನ ಪಿತನೆಂದುರಂಗನಿಗೆ ಮನಸೋತು ಮರುಳಾದೆವೋಹಿಂಗಿ ಬದುಕುವುದೆಂತೋ ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ ೭

 

೪೬
ವಾಸುದೇವ ನಿನ್ನ ಮರ್ಮಕರ್ಮಂಗಳದೇಶದೇಶದಲ್ಲಿ ಪ್ರಕಟಿಸಲೊ ಪ
ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದೀಯೊ ಅ.ಪ.
ತರಳತನದಲಿದ್ದು ದುರುಳನಾಗಿ ಬಂದುಒರಳಿಗೆ ಕಟ್ಟಿಸಿಕೊಂಡುದನುತುರುವ ಕಾಯಲಿ ಹೋಗಿ ಕಲ್ಲಿಯೋಗರವನುಗೊಲ್ಲರ ಕೂಡೆ ನೀ ಉಂಡುದನುನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯಅರಿಯದಂತೆ ಕದ್ದು ಮೆದ್ದುದನುಕೇಳಿಸಿದೆಯಾದರೆ ಒದರುವೆ ಎಲೊ ನರ -ಹರಿ ಎನ್ನ ಬಾಯಿಗೆ ಬಂದುದನು ೧
ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿಬೆಟ್ಟವ ಪೊತ್ತದ್ದು ಹೇಳಲೊಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿಹೊಟ್ಟೆಯ ಹೊರೆದದ್ದು ಹೇಳಲೊದುಷ್ಟ ಹಾವಿನ ಹೆಡೆಯನು ತುಳಿದಾಡಿದದುಷ್ಟತನವನು ಹೇಳಲೊನೆಟ್ಟುನೆ ಅಂಬರಕೆತ್ತಿದನ ಹೊಯ್ದುಹಿಟ್ಟುಕಟ್ಟಿಟ್ಟುದ ಹೇಳಲೊ ೨
ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟಬೆಡಗತನವನಿಲ್ಲಿ ಹೇಳಲೊಹಿಡಿಯ ಬಂದ ಕಾಲಯವನಿಗಂಜಿ ಕಲ್ಲಪಡೆಯ ಹೊದ್ದುದ ಹೇಳಲೊಮಡಿದ ಮಗನ ಗುರುವಿಗೆ ಕೊಡಬೇಕೆಂಬಸಡಗರತನವಿಲ್ಲಿ ಹೇಳೆಲೊಮಡದಿ ಮಾತಿಗೆ ಪೋಗಿ ನೀ ಪಾರಿಜಾತವತಡೆಯದೆ ತಂದದ್ದು ಹೇಳಲೊ ೩
ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲಮಾನವ ಕೊಂಡದ್ದು ಹೇಳಲೊತಾನಾಗಿ ಮೊಲೆಯನೂಡಿಸ ಬಂದವಳನ್ನುಪ್ರಾಣವ ಕೊಂಡದ್ದು ಹೇಳಲೊಕಾನನದೊಳು ತುರುವಿಂಡುಗಳನು ಕಾಯ್ದಹೀನತನವನಿಲ್ಲಿ ಹೇಳಲೊಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯಹಾನಿಯ ಮಾಡಿದ್ದು ಹೇಳಲೊ ೪
ಧರಣಿಮಗನ ಕೊಂದು ತರುಣಿಯರನುದುರುಳತನವನಿಲ್ಲಿ ಹೇಳಲೊಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿಶರಧಿಯ ಪೊಕ್ಕದ್ದು ಹೇಳಲೊಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿಸ್ಥಿರವಾಗಿ ನಿಂತದ್ದು ಹೇಳಲೊಶರಣಾಗತರ ಕಾವ ರಂಗವಿಠಲನ್ನಪರಮ ದಯಾಳೆಂದು ಹೇಳಲೊ ೫

 

೪೭
ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ.
ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ ೧
ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ ೨
ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ ೩

 

ಇದೊಂದು ಸೊಗಸಾದ ಶಿವಸ್ತುತಿ.
ಈ) ರುದ್ರದೇವರು
೫೧
ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ
ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ.
ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ ೧
ಬಾಲೆ ದಾಕ್ಷಾಯಿಣಿ ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ೨
ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ ೩
ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ೪
ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ ೫

 

೭೪
ವ್ಯರ್ಥವಲ್ಲವ ಜನ್ಮ ವ್ಯರ್ಥವಲ್ಲವ ಪ
ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮಅ.ಪ.
ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ೧
ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದುಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ೨
ಮುಗುಳುತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ೩
ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದುಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ೪
ಜಂಗಮರೊಳಗಧಿಕವೆನಿಪ ಭಂಗುರ ಮನುಷ್ಯದೇಹ ಪಡೆದುರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ೫

 

೯೮
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ಪ
ಶಿರದಲ್ಲೊಪ್ಪುವ ನೀಲಕುಂತಳಕೆ ಶರಣುಸಿರಿಸಹೋದರನರ್ಧದವಳಿಗೆ ಶರಣು ಅ.ಪ.
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣುಸಂಪಿಗೆಯ ಕುಸುಮ ಸಮನಾಸಿಕಕೆ ಶರಣುಗುಂಪುರತ್ನದ ಕರ್ಣಕುಂಡಲಗಳಿಗೆ ಶರಣುಇಂಪುದರ್ಪಣನಿಭ ಕಪೋಲಗಳಿಗೆ ಶರಣು ೧
ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣುಅಂದವಾಗಿರುವ ಬಿಂಬೋಷ್ಠಕೆ ಶರಣುಚಂದ್ರಿಕಾನಿಭ ಮುದ್ದುಮಂದಹಾಸಕೆ ಶರಣುನಂದಗೋಪನ ಮುದ್ದು ಕಂದನಿಗೆ ಶರಣು೨
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣುಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣುಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣುಅಬ್ಜಜಾಸನನ ಪೆತ್ತ ನಾಭಿಗೆ ಶರಣು೩
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣುಪೊನ್ನ ಕದಳೀಪೋಲ್ವ ತೊಡೆಗಳಿಗೆ ಶರಣುಪುನ್ನಾಗಕರಗೆತ್ತ ದ್ವಯನಿತಂಬಕೆ ಶರಣುಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ೪
ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣುತುಂಗ ಕುಚಗಳ ಪಿಡಿದ ಕರಗಳಿಗೆ ಶರಣುಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು ರಂಗವಿಠಲನ ಸರ್ವಾಂಗಕೆ ಶರಣು ೫

 

ಇದೊಂದು ದೀರ್ಘ ದಂಡಕ.
೯೪
ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ
ಶ್ರೀರಮಾ ಮಾನಿನೀ ಮಾನಸೇಂದೀವರೋತ್ಫುಲ್ಲ ಸಂಫುಲ್ಲ ಚಂದ್ರಾ ಚಿದಾನಂದ ಸಾಂದ್ರಾ ಸದಾ ಸನ್ನುತೇಂದ್ರಾ ನಮೋಪೇಂದ್ರ ನಿಸ್ತಂದ್ರ ನೀ ಕೇಳು, ಆ ರೀತಿ ಪ್ರಹ್ಲಾದನಲ್‍ಸಜ್ಜನಾಹ್ಲಾದನಲ್ ದೈತ್ಯ ಸತ್ಪುತ್ರರಾವೇಳೆ ಶ್ರೀಕಾಂತನ ಜ್ಞಾನ ಭಕ್ತಿ ಕ್ರಿಯಾಗಾಧೆಗಳ್ ಬೋಧೆಗಳ್ ಕೇಳಿ ತಾವೆಲ್ಲರಾಮಾರ್ಗದಲ್ಲೇ ಸುನಿರ್ದಿಷ್ಟ ಸನ್ಮಾರ್ಗದಲ್ಲೇ ಪರಾಭೂತ ಷಡ್ವರ್ಗದಲ್ಲೇ ಮನಸ್ಸಿತ್ತು ಧರ್ಮಾರ್ಥ ಕಾಮಸ್ರ‍ಪಹ ಗ್ರಂಥಗಳ್ ೧೦
ಸಿದ್ಧ ಸಂಸಾರ ಸಂಬಂಧಗಳ ಹತ್ತುವೂದಾಗದೇ ದಾನವಾಚಾರ್ಯರಾಶ್ಚರ್ಯದಿಂದಾಗ ತಾವೇಸುರೀತಿಂದಲಾಯಾಸುರೀವಿದ್ಯೆಗಳ ಗದ್ಯಗಳ್ ಪದ್ಯಗಳ್ ಪಾಠ ಪೇಳ್ತಿದ್ದರಾ ಪಾಠಗಳ್ ಒಪ್ಪದೇ ತಪ್ಪದೇನಿಂತು ಮಾರಾಟಗಳ್ ಮಾಡುತಾ ವಿಷ್ಣುಭಕ್ತಿ ಕ್ರಿಯಾಪಾಠಗಳ್ ಪಾಡುತಾ ಎಲ್ಲರೊಂದಾಗೆ ತಾವ್‍ನೋಡಿ ಅಂಜ್ಯಾಡಿ ಇನ್ನೇನು ಈಸೂನುಗಳ ದೈತ್ಯರಾಟ್ ಸೂನನಲ್ ಬುದ್ಧಿ ಭೇದೈಸಿ ದುರ್ಬೋಧಗಳ್ ಕೇಳಿ ದುಸ್ಸಾಧ್ಯರಂ ೨೦
ತಿಪ್ಪರೆಂದಾಗಲೆ ಬೇಗಲೇ ದಾನವಾರಾಗ್ರನಲ್ ಕೋಪ ಸಂಶೀಘ್ರನಲ್ ಸೇರಿ ಪ್ರಹ್ಲಾದನಾ ಚೇಷ್ಟೆಗಳ್ ನಿಷ್ಠೆಗಳ್ ನುಡಿದರು.ಆ ವಾಣಿಗಳ್ ಕೇಳಿದಂ ಕರ್ಣ ಕಾಠೋರ್ಯ ಬಾಣಾಳಿಗಳ್ ರೀತಿ ಅಪ್ರೀತಿಯಾಸೂತಿ ದುರ್ನೀತಿ ತಾ ಸೈಸದೇ ಕೋಪಸಂದೀಪನಾವೇಶದಿಂದಲ್ ಚಲದ್ಗಾತ್ರನಾಗೆದ್ದು ಪ್ರೋದ್ಯದ್ದಯಾಪಾತ್ರನಂತಿಪ್ಪ ತತ್ಪುತ್ರ ಸಂಹಾರದಲ್ ಚಿತ್ತವಂ ಪೆತ್ತವಂ ಪಾಪÀಸಂವೃತ್ತನೇತ್ರ ಪ್ರಮಾಕ್ಷೇಕ್ಷನಾಗಲ್ ಸಮ ೩೦
ಕ್ಷೈಸಿ ದುಷ್ಟೋಕ್ತಿಗಳ್ ಬಾಗುತಾ ಕೂಗುತಾಸಾಧು ಸಧ್ಭಕ್ತಿಯಿಂದಲ್ ಮಹದ್ಭಕ್ತಿಯಿಂದಲ್ಲಿ ತನ್ನಲ್ಲಿ ಚೆನ್ನಲ್ಲಿ ಬದ್ಧಾಂಜಲಿಯಾಗಿ ಸಿದ್ಧಾಂತ ಸದ್ಭಕ್ತಿಯಿಂದಲ್ಲಿ ನಿಂದಿದ್ದ ಪ್ರಹ್ಲಾದ ಧೀಮಂತಗೇ ನಿರ್ಮಲಸ್ವಾಂತಗಾವೇಳೆ ಪಾದಾಹತವ್ಯಾಳಿಯಂತೇ ಭುಜಶ್ವಾಸಗಳ್ ಬೇಸಿಗಳ್ ಬೀಸುತಾಕಂದಗಾ ತಂದೆ ಸುಭಾಷಿಪಂ. ಹೋಯೆಲೋ ದುರ್ವಿನೀತಾಯೆಲೋ ಮಂದಬುದ್ಧೇಯೆಲೋಇಂತು ನೀ ಸ್ತಬ್ಧನಾದೇತಕೋ ವಂಶಘಾ೪೦
ತೀಯೆಲೋ ಪಾಪಜಾತೀಯೆ ನೀ ಹೀಗೆ ಮಚ್ಛಾಸನಾತೀನಾಗಪ್ಪೊಡೇ ನಿನ್ನ ನಿನ್ನಾ ಯಮದ್ವಾರಕೇ ಕಳುಹುವೆಂ ನೋಡೆಲಾನಾನು ಕೋಪಿಷ್ಠನಾಗಿಪ್ಪೊಡೇ ಅಂಜಿ ಮೂರ್ಲೋಕಗಳ್ ಲೋಕಪಾನೀಕಗಳ್ ಕಂಪ ಕಾಣುತ್ತವಿಂಥಾ ಬಲಿಷ್ಠನ್ನ ನೀನೆನ್ನ ಸಂಪದ್ಬಲ ಶ್ರೀಯನಾಶ್ರೈಸದೇ ಬಿಟ್ಟರಿನ್ನಾವನಲ್ ನೀಂ ಬಲಶ್ರೀಯನಾಶ್ರೈಸುವೇಯೋ ಎಲಾ ಏಕೆ ಮಚ್ಛಾಸನಾತೀತನಾಗೂವಿಯೋ ಕಂದ ಪೇಳೆಂದರೇ, ತಂದೆಗಾ ೫೦
ಕಂದಸಂಭಾಷಿಪಂ
ತಂದೆ ಕೇಳಯ್ಯ ಬ್ರಹ್ಮಾದಿ ಆಸ್ತಂಭಪರ್ಯಂತವುಂ ಜಂಗಮಸ್ಥಾವರಾತ್ಮ ಪ್ರಪಂಚೋಚ್ಚ ನೀಚ ಪ್ರಜಾನೀಕ ಯಾವತ್ತದಾವಾತನಾಧೀನದಲ್ಲಿಪ್ಪುದೋ ಆತನೇ ಎನ್ನಗೇ ನಿನ್ನಗೇಇನ್ನು ಮಿಕ್ಕಾದ ಚೈತನ್ಯಕೆಲ್ಲಾ ಬಲಶ್ರೀಯು ತಾನಾದನೇ ಕಾದನೇ ಕಾಲರೂಪೀಶ್ವರೋರುಕ್ರಮಾಕಾರನೆಂಬಾತನೇಆತನೇ ಆತನೇ ತೇಜ ಓಜಸ್ಸಹಾಸತ್ವ ಸಂಪದ್ಬಲ ಶ್ರೀಂದ್ರಿಯಾತ್ಮನ್ ಸ್ವಯಂ೬೦
ಶಕ್ತಿಯಿಂದಲ್ ಜಗತ್ಸರ್ವವಂ ಪುಟ್ಟಿಸೂವಂ ಸದಾ ಪುಷ್ಟಿ ಮಾಡೂವನೇ ನಷ್ಟಗೈಸೂವನಾ ದೇವನಂ ಪೊರ್ತು ನಮ್ಮಲ್ ಬಲಾದೀಗಳುಂಟೆಂಬ ನಿನ್ನಾಸುರೀ ಭಾವವಿನ್ನಾದರೂ ನೀ ಬಿಡೋ ನೋಡೊ ಶ್ರೀಕಾಂತನಲ್‍ಕಾಂತನಲ್ ಸ್ವಾಂತ ನೀನಿತ್ತು ಸರ್ವತ್ರ ಸಮಚಿತ್ತನಾಗಯ್ಯ ಎನ್ನಯ್ಯನೇ ನಿನ್ನಗಾಮೇಲೆ ವಿದ್ವೇಷ ಮಾಡೂವರಾರಿಲ್ಲವಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗವೆಂಬಾ ಮಹಾವೈರಿಗಳ್ ಕಳ್ಳರಂತೆಲ್ಲರುಂ ೭೦
ದೇಹವೆಂಬೋ ಮಹಾರಾಜಧಾನೀ ವೃಥಾಹಾನಿ ಮಾಡೂವರಂಥಾವರಂ ಗೆಲ್ಲದೇಕೆಲ್ವರೀ ದಿಕ್ಕುಗಳ್ ಸರ್ವವಂ ಗೆದ್ದವೆಂತೆಂದು ಹಿಗ್ಗೂವರಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗ ಗೆದ್ದಾತಗೇ ಜ್ಞಾನಸಂಪೂತಗೇ ಸಾಧು ಸಂಭೂತ ಸರ್ವಂಸಮಂಚೇತಗಾಮೇಲೆ ತನ್ಮೋಹ ಸಂಜಾತವೆಂತಪ್ಪುದೋ ಶಾತ್ರವವ್ರಾತವೆಲ್ಲಿಪ್ಪುದಯ್ಯಾ ಸದಯ್ಯಾತ್ಮನೇ ತಿಳಿದು ನೋಡೆಂದು ತಾನಿಂದು ಮಾತಾಡಲು,
ಶತ್ರುವಂತಿಪ್ಪ ಪು ೮೦
ತ್ರಾಕೃತಿಂ ಕಾಣುತಾ ಕೆಂಡಗಳ್ ಕಾರುತಾವಹ್ನಿಯೋಳಾಜ್ಯಧಾರಾಹುತಿಂ ಇಟ್ಟಿತಂ ತಾಗೆ ಭಗ್ಗಂತ ದಿಗ್ಗಂತ ಸಿಂಹಾಸನ ಸ್ಥಾನದಿಂದೆದ್ದು ನಿಂದಿದ್ದು ಸಂಭಾಷಿಪಂ ತಂದೆ, ಹೋಹೋಯೆಲಾ ಪುತ್ರನೇ ಇಂದು ನಾವೊಂದು ಪೇಳುತ್ತಿರುತ್ತಿದ್ದರೊಂದಕ್ಕೆ ಹತ್ತಾಗಿ ನೀನೇವನೋ ವಿಷ್ಣುವೆಂಬಾತ ಬೇರೊಬ್ಬ ತಾನಿಪ್ಪನೆಂದೂಹಿಸೂವೇಯ ಹೋ ಹೋಯೆಲಾಸಾವಿಗೀ ಬುದ್ಧಿ ನೀ ಸಿದ್ಧ ಮಾಡೀದಿ ಎಂಬೋದಿದಂ ವ್ಯಕ್ತವಂತೆಲ್ಲ ನಾಂ ಬಲ್ಲೆ ಇಂ ೯೦
ತಲ್ಲದೇ ನಿನ್ನಗೀರೀತಿ ದುರ್ಬುದ್ಧಿ ಪುಟ್ಟೂವುದೇ ಮೃತ್ಯುಸಿದ್ಧರ್ಗೆ ವಿಷ್ಣುತ್ವ ಸಂಭಾಷೆಯಲ್ಲಿಚ್ಛೆ ಬೇಕಾಗಿ ಹೋದಲ್ಲದೇಬಲ್ಲೆನೆಲ್ಲಾ ಎಲೋ ಮಂದನೇ ಮಂದಭಾಗ್ಯೋಕ್ತಿಗಳ್ ಏಕೆ ನೀನಾಡುವೇ ಅಕ್ಕಟಾಎನ್ನಗಿನ್ನಾ ಜಗನ್ನಾಥನಿನ್ನಾವನೋಆತನೆಲ್ಲಿಪ್ಪ, ಸರ್ವತ್ರದಲ್ಲಿಪ್ಪ ನೀನೆಂದಡೇ ಡಿಂಭಕಾಡಂಭಕಾಡೋಣಗಳ್‍ಸಾಕು ಮಾಡಿನ್ನು ಮೇಲೀ ಸಭಾಸ್ತಂಭದಲ್‍ಶೀಘ್ರ ಸಂರಂಭದಲ್ ತೋರು ನೀ ತೋರದೇ ೧೦೦
ಪೋದೆಯಾ ಇನ್ನು ನೀ ಮಾರುಮಾತಾಡದ್ಹಾಗೇ ಶಿರಚ್ಛೇದ ಮಾಡೂವೆನೋ ನಿನ್ನಗೀವೇಳೆಯಲ್ ವಿಷ್ಣುವೆಂತೆಂದದಾವಾತ ತಾನಡ್ಡ ಬಂದಾನೋ ನಾ ನೋಡುವೆಂ ವಿಷ್ಣುವೇಬೇಡಬೇಕಾದ ದಿಕ್ಕಾಗಿ ನಿನಗಿಪ್ಪಡೇಬೇಡಿಕೋ ಮೂರ್ಖನೇ ಎಂದು ಕ್ರೋಧಾಗ್ನಿಯಿಂದುರ್ಪಿ ದುರ್ಭಾಷೆಯಲ್ ತನ್ನ ಪುತ್ರನ್ನ ತಾದೂರುತಾ ಹಾರುತಾ ಕೈಲಿ ಖಟ್ ಪೆಟ್ಕವಂಖಡ್ಗವಂ ಕೊಂಡು ದುಷ್ಟಂ ಮಹಾದೋರ್ಬಲಿಷ್ಠಂ ಸ್ವಯಂ ಮುಷ್ಟಿಯಿಂದಲ್ಲಿ ಪೆಟ್ಟಿತ್ತನು. ೧೧೦
ಆ ಭೀಕರಧ್ವಾನ ಸಂಭಿನ್ನ ದುಷ್ಟಾಸುರೀಗರ್ಭಸಂರಂಭವುಂ ಶುಂಭದಂಭೋದ ವೀಥೀ ಸಮಾರಂಭಿತೋ ಜೃಂಭವುಂ ವೈಷ್ಣವೋತ್ರ‍ಕಷ್ಟ ವಿಶ್ರಂಭವುಂ ಶಾತಕುಂಭೊಲ್ಲಸದ್ರತ್ನಚಿತ್ರಪ್ರಭಾಗುಂಭವುಂ ತತ್ಸಭಾಸ್ತಂಭವಂ ಆಗಲೇ ಬೇಗಲೇ ಘಳಾಘಳಾರಾವ ಉದ್ಭೂತವಾಗೆದ್ದು ಬ್ರಹ್ಮಾಂಡವೆಲ್ಲಾ ಪರಿಸ್ಫೋಟವಂ ಮಾಡುವಂತೊಪ್ಪೆ ಬ್ರಹ್ಮಾದಿಗಳ್ ತಮ್ಮ ಧಾಮಕ್ಕೆ ವ್ಯಾಘಾತವೇನಾದರುಂ ಬಾಹೋದೇನೋ ಇದೇನೆಂದು ವಿ ೧೨೦
ಭ್ರಾಂತ ಚೇತಸ್ಕರಾಗಿಪ್ಪರಂತೇ ದುರಂತೇಕ್ಷಣಂಗಳ ಕುವರಾಗ್ರನಲ್ ತುಂಬುತಾಕತ್ತಿ ಕೈಹತ್ತಿ ಪುತ್ರನ್ನ ತಾ ಚಿತ್ರಹಿಂಸಿತ್ತು ಕೊಲ್ಲೂವೆನೆಂದಾಗ್ರಹೋಗ್ರ ಗ್ರಹಗ್ರಸ್ತನಾಗೇನು ಮೈತಿಳಿಯದೇ ಕೂಡಿಓಡ್ಯಾಡಿ ಬಾಹೋ ಹಿರಣ್ಯಾಖ್ಯಗಾ ವೇಳೆ ಕಾಲಾಡದದ್ಹಾಗೇ ಸಭಾಸ್ತಂಭದಲ್ ತನ್ಮಹಾರಾವ ತಾನಡ್ಡಕಟ್ಟಿಪ್ಪದಂತಾ ಮಹಾಧ್ವಾನ ಕೇಳುತ್ತಲೇ ನಿಂತನಾ ಹೇತುವಂ ಕಾಣದೇ ಆಗ ಆಯಾಸುರೀ ಹಿಂಡುಗಳ್ ೧೩೦
ಭೂತ ಭೇತಾಳಿಕಾ ತಂಡಗಳ್ ಶಾಕಿನೀಡಾಕಿನೀ ದಂಡುಗಳ್ ಅಂಜಿ ಬೆಂಡಾದವಾಸ್ತಂಭವಾ ವೇಳೆ ಫಟ್ ಫಟ್ ಫಟಾರಾವದಿಂಸೀಳಿಯಾ ಲೇಲಿಹಾನೋಜ್ವಲ ಜ್ವಾಲೆಗಳ್‍ಮಾಲೆಗಳ್ ತುಂಬಿ ಕಾಳ್ಗಿಚ್ಚುಗಳ್ ಚೆಂದದಿಂಜಂತು ಸಂಘಕ್ಕೆ ಸಂತಾಪಗೈಸೇ ಛಿಟಾಛಿಟ್ ಛಿಟಾಂಗಾರಗಳ್ ಬೀಸೆ ಇದೇವುದೋಭೂತ ಉದ್ಭೂತವಾಗೊಪ್ಪಿತೆಂದಾಗ ಮೂರ್ಲೋಕವೆಲ್ಲಾ ಸಮುಲ್ಲೋಕವಾಗಿಪ್ಪುದಾವೇಳೆ ತದ್ರ‍ಭತ್ಯವಾಕ್ ಸತ್ಯವಂ ಮಾಡಬೇ ೧೪೦ ಕಾಗಿ ಸರ್ವತ್ರ ತಾನ್ ತನ್ನ ವ್ಯಾಪ್ತತ್ವವಂಪಥ್ಯವಾಗಿಪ್ಪವೋಲ್ ಅದ್ಭುತಾಕಾರ ಪೊತ್ತಂ ಜಗದ್ಭರ್ತ ತಾನೊಂದೆ ಸಿಂಹಾಕೃತೀಯಾಗದೇ ಮತ್ರ್ಯಮೂತ್ರ್ಯಲ್ಲದೇ ತತ್ಸಭಾಸ್ತಂಭದಲ್ ಡಿಂಬ ಸಂಭಾವನಕ್ಕಾಗಿ ಸಂಭೂತನಾದಂ.ದಿತೀಪುತ್ರನಾ ರೂಪವಂಕಂಡಿದೇನೋ ಮಹಾ ಚಿತ್ರವಾಗಿಪ್ಪುದೇಸಿಂಹದಂತಲ್ಲದೇ ಮತ್ರ್ಯನಂತಲ್ಲದೇಯಾವುದೀ ಭೂತವೆಂತೆಂದು ಮೀಮಾಂಸಮಾನಾತ್ಮನಾದಂ.ಜಗತ್ಸ್ಯಾಮಿ ತಾನಾಗಲೇ ೧೫೦
ತಪ್ತಭಾಂಗಾರ ಶೃಂಗಾರವಲ್ಯಂತೆ ಕಂಗಳ್ ಸಮುದ್ಯತ್ಸಟಾ ಕೇಸರಂಗಳ್‍ವಿಜೃಂಭತ್ಕರಾಳಾಸ್ಪದಂ ಉಗ್ರನಾಸಾಸಮುಚ್ಚಾಸ್ವ ನಿಶ್ವಾಸಗಳ್ ಸಂಚಲದ್ವಸ್ತವ್ಯಾಳ ಕ್ಷುರಾಂತೋಗ್ರ ಜಿಹ್ವಾಗ್ರ ಲೇಲೀಹನಂಗಳ್ ಭ್ರಮದ್ಭ್ರೂಲ್ಪಲಂಗಳ್ ಹನೊರೋಷಭೀಷ್ಣಂಗಳುಂ ಊಧ್ರ್ವಕರ್ಣಂಗಳುಂ ಭೂಮಿ ಭೃ
ತ್ಕಂದರಾಶ್ಚರ್ಯವವ್ಯಾತ ಘೋರಾಸ್ಯನಾಸಾಪುಟಂಗಳ್ ಅದೀರ್ಘೊನ್ನತಗ್ರೀವವುಂದೀರ್ಘದಂತೊಪ್ಪುವೋ ದೇಹವಂ ವಿಸ್ರ‍ತತೋ೧೬೦
ರಸ್ತಲವ್ಯಕ್ತ ಶ್ರೀವತ್ಸ ಸತ್ಕೌಸ್ತುಭಾಲಂಕೃತ ಶ್ರೀರಮಾ ಲಾಲಿತ ಶ್ರೀ ತುಳಸ್ಯಾಪ್ತ ಮುಕ್ತಾವಳೀ ಚಿತ್ರ ರತ್ನಾವಳೀಪ್ರಾಂಚದುಕ್ಕಾಂಚನೀ ಮಾಲಿಕಾಗಂಧ ಕಸ್ತೂರಿಕಾ ಲೇಪವುಂ ಹೀರ ಗಂಭೀರ ವಿದ್ಯುತ್ಪ್ರಭಾ ಕುಂಡಲೋದಾರ ಕೇಯೂರ ಸತ್ಕಂಕಕಣಾಂಗುಳ್ಯ ಹಾರಾಧಿಕಾ ಭೂಷಣೋದ್ದೀಪವುಂ ಉದ್ಯದುತ್ಫುಲ್ಲ ಚಂದ್ರಾಂಶುವರ್ಣಪ್ರಭಾ ಪ್ರಸ್ಫುರದ್ದೇಹ ರೋಮಚ್ಛಟಾಪುಲ್ಕವುಂ ಮತ್ತ ಶುಂಡಾಲ ಶುಂಡಪ್ರಕಾಂ೧೭೦
ಡ ಪ್ರಚಂಡೋಲ್ಲಸದ್ದೋಹ ಸಾಹಸ್ರ ದೀಪ್ತಾಯುಧಾಭೋ ನಖಾನೀಕವುಂ ಚಕ್ರ ಶಂಖಾದಿ ನಾನಾಯುಧ ಶ್ರೇಷ್ಠ ವಿದ್ರಾವಿತಾಸ್ಭದ್ರ ರಕ್ಷಃ ಪಿಶಾಚಾಸುರೋದ್ರೇಕವುಂಪ್ರೋನ್ನಿತಂಬೋರು ಸತ್ಸಾನು ಜಂಘಪ್ರದೇಶಾವೃತ ಪ್ರೋಲ್ಲಸತ್ಪೀತ ಕೌಶೇಯವುಂಬದ್ಧಕಾಂಚೀಕಟಿಸ್ಥಾನವುಂ ಮಂಜುಮಂಜೀರ ಸಂಚಿನ್ನನಾದಾಂಘ್ರಿಕಂಜಾತ ವಿನ್ಯಾಸವುಂ ಕೋಟಿ ಮಾರ್ತಾಂಡ ಸಂಕಾಶವುಂಪೋಲ್ವುದಂಥಾ ದುರಾಲೋಕವಂತಿಪ್ಪ ಜ್ವಾ೧೮೦
ಲಾ ನೃಸಿಂಹಾಕೃತಿ ಸ್ವಾಮಿನಂ ನೋಡುತಾದೃಷ್ಟಿಗಳ್ ಬಾಗೆ ತಾ ನಿಂತು ನನ್ನ ವರಜಾರಾತಿಯಾದ ಸ್ವಯಂ ಜ್ಯೋತಿ ಈ ರೀತಿ ತಾನಿಂದಿಗೇ ನಾರಸಿಂಹಾಕೃತೀಯಾಗಿ ನಾಂಪುತ್ರಂ ಸಂಹಾರಕುದ್ಯುಕ್ತನಾಗಿಪ್ಪೊಡೇಎನ್ನ ಸಂಹಾರಕಾಗಿಲ್ಲಿಗೇ ಬಂದನೋಇನ್ನು ಮೇಲೀತನಿಂದೆನ್ನಗೇ ಮೃತ್ಯು ತಾಸಿದ್ಧವಾಂತಿಪ್ಪುದೇನೋ ಪುರಾಣ ಪ್ರಸಿದ್ಧೋಕ್ತ್ಯಭಿವ್ಯಕ್ತಿಗೈತೇನಹೋ ಎಂದು ಮಾತಾಡುತಾ ನಿಂತು ಉದ್ಯದ್ಗದಾಧಾರಿ ತ ೧೯೦
ತ್ತೇಜ ಲಕ್ಷೈಸದೇ ಕಲ್ಪನಾ ಕಕ್ಷಭುಕ್‍ಜ್ವಾಲೆಯೋಳ್ ಬಿದ್ದುದೆನ್ನೇ ಸಮುದ್ಯುದ್ಧ ಸನ್ನದ್ಧನಂತಾಗಿ ನೃಸಿಂಹನಲ್ ಹಾರಿದಂ
ಪೂರ್ವದಲ್‍ಅಸ್ಯತೇಜೋಂಶದಿಂದಲ್ ಜಗಧ್ವಾಂತ ಯಾವತ್ತುಮಿಂ ತಾ ಸ್ವಯಂ ಪಾನಮಾಡಿಪ್ಪ ಸತ್ಯಾತ್ಮಗೀ ನಾರಸಿಂಹಾತ್ಮಗೇ ಈ ಹಿರಣ್ಯಾಸುರ ಶ್ರೇಷ್ಠ ಸಂಹಾರ ಹೆಚ್ಚಲ್ಲವಂತಾದರುಂ ಲೋಕದೃಷ್ಟ್ಯಾನುಸಾರ ಕ್ರಿಯಾಕಾರಿಯಾಗಿಪ್ಪ ನೃಸಿಂಹನುದ್ಯದ್ಗದಾಧಾರಿ ತಾನಾಗಿ ಸದ್ವಿದ್ಯುದಾಭ್ಯೋದ್ಯದು ೨೦೦
ದ್ವೇಗವೇಗೋರು ಸಂಪದ್ಗದಾ ದಂಡವಂಕೊಂಡು ಯುದ್ಧಕ್ಕೆ ಬಾಹೋ ಮಹಾದೈತ್ಯವರ್ಯನ್ನ ತಾ ನೋಡಿ ರೋಷೋಜ್ವಲ ಜ್ವಾಲೆಗಳ್‍ಲೇಲಿಹಾನೋಲ್ಲ್ಲಸಜ್ಜಿಹ್ವೆಯಿಂದಲ್ ಪ್ರಕಾಶೈಸುತಾ ಚೀರುತಾಗಾಟ್ಟಹಾಸಕ್ರಮನ್ಯಾಸದಿ ಹಾರುತಾ ಕೋಟಿ ಸೂರ್ಯಪ್ರಭಾಬೀರುತಾ ಆ ಗರುತ್ಮಂತ ಕಾಳಾಹಿಂಪಿಡಿವನಂತೊಪ್ಪಿ ತಾನಾ ದಿತೀಪುತ್ರನಲ್‍ನೂಕಿದಂ ಶೀಘ್ರದಲ್ ಪಿಡಿದನಾ ದೈತ್ಯರಾಜೇಂದ್ರನಾವೇಳೆ ತದ್ಧಸ್ತದೋಳ್ ಸಿಕ್ಕದೇ ೨೧೦
ಸುಕ್ಕದೇ ಘಕ್ಕನೇ ಬಿಡಿಸಿಕೊಂಡಾ ಗದಾದಂಡವಂ ಕೊಂಡು ಸನ್ನದ್ಧ ಸದ್ಯುದ್ಧವಂಮಾಡುವೋನಂತೆ ಯಾವಾಗ ನೃಸಿಂಹನಲ್‍ಸಿಕ್ಕಿ ಮತ್ತೇಬಿಡೂವಾದನಾ ವೇಳೆಯಲ್‍ಶರ್ವ ಶಕ್ರಾದಿ ದಿಕ್ಪಾಲಕಾನೀಕವುಂಸೂರ್ಯಚಂದ್ರಾದಿ ಸರ್ವಗ್ರಹಕ್ರ್ಷಾವಳೀಲೋಕವುಂ ಮೇಘಸಂತಾನದೋಳ್ ಲೀನವಾಗಿದ್ದು ಇನ್ನೇನು ಈ ದೇವತಾರಾತಿ ಈನಾರಸಿಂಹಾತ್ಮನಲ್ ಸಿಕ್ಕದೇ ದಕ್ಕದಂತಿಪ್ಪನೇ ಈತನೀ ದುಷ್ಟ ದೈತ್ಯನ್ನ ಗೆ ೨೨೦
ಲ್ಲಾರನೋ ಗೆಲ್ವನೋ ಎಂದು ತದ್ವೀರ್ಯವಂತಿಳಿಯದೇ ಭ್ರಾಂತಚಿಂತಾಂತರಂಗೋದ್ಯದುದ್ವೇಗದಿಂ ಕಾಂಬಂತಿಪ್ಪುದು.ಆಮೇಲೆ ಢಾಲ್ ಕತ್ತಿ ಕೈಗೊಂಡು ಆಯಾಸದಿಂದಲ್ಲಿ ಆ ದೈತ್ಯನಾನಾರಸಿಂಹಾತ್ಮನಲ್ ಸಂಗರ ಶ್ರಾಂತಿ ಮತ್ತೇನು ತಾ ಕಾಣದೇ ದೂಕಿದಂ ತಾಕಿದಂಸೋಕಿದಂ ಅಂಘ್ರಿವಿನ್ಯಾಸಗಳ್ ಕೂಡಿ ತಾಮೇಲೆಯುಂ ಕೆಳಗೆಯುಂ ಶ್ಯೇನಪಕ್ಷಂತೆ ಸುತ್ತಾಡುತಾ ಛಿದ್ರವಂ ಕಾಣದೇ ತನ್ನನೇಪಿಡಿವುದಕ್ಕಾತನಂತೋಡುತಾ ಬಾಹೊ ಬ ೨೩೦
ಲ್ಲಿಷ್ಠನಾ ಅಟ್ಟಹಾಸೈಸಿಯುಕ್ಕೇಸರಂಗಳ್ ಪ್ರಸಾದೈಸಿ ಕ್ರೂರಾಹಿತಾನಂದಘಗ್ರಾಹಿಯಂತೇ ಸ್ವಭಾ ಸಾಸಿರಂ ಸೂಸಿ ಜಂಘಾಲ ಲೀಲಾ ಸಮುಲ್ಲಂಘನಾ ಗೋಪದಿಂಹಾರಿಯಾ ನಾರಹರ್ಯಕ್ಷನಾ ದೈತ್ಯದಕ್ಷನ್ಪಿಡಿರ್ದಂ ಫಟಾಫಟ್ ತಲಾಘಾತವಂಗೈಲ್ಬಡಿರ್ದಂ ಥಟಾಥಟ್ ಪದಾಘಾತದಿಂ
ದಲ್ ಹೊಡೆರ್ದಂ ಗದಾಘಾತದಿಂದಲ್ ಮಹೋರಸ್ಕಿಡಿರ್ದಂ ಸಭಾದ್ವಾರದಲ್ ಹಾಕಿ ಭಾಸ್ವನ್ನಖ ಶ್ರೇಣಿಯಿಂದಲ್ ಫಟಾಫಟ್ ಗುರು೨೪೦
ತ್ಮಂತಕಾಲಾಹಿನಂ ಸೀಳುವೋ ರೀತಿ ಜಂಭಾರಿದಂಭೋಳಿಯಂತಾಗಲುಂ ಸೀಳುತಿರ್ದಾಮಹಾದೇವನ್ನಾ ಹಗಲ್ ರಾತ್ರಿಯೊಂದಲ್ಲದ್ಹಾಗೇ ದಿವಾಸಂಧಿಯಲ್ ಸೀಳಿದಂ.ಘೋರ ಸಂರಂಭ ದಂಷ್ಟ್ರೇಕ್ಷವ್ಯಾವೃತ್ಕರಾಳಾಕ್ಷನಾಗಿ ಸ್ವಜಿಹ್ಪಾಗ್ರದಿಂದಲ್ ಲಸದ್ವ್ಯಾತ್ತ ವಕ್ತ್ರಾಂತ ಶೋಣಿಯ ಮಾನಾಧರಾದ್ಯಂತವಂ ಲೇಲಿಹಾನೋಗ್ರವಂ ತೋರುತಾರಾಕ್ಷಸ ಶ್ರೇಷ್ಠನಂ ಪಿಡಿದು ವಕ್ಷೋನ್ನತಸ್ಥಾನವಂ ತೋಡಿ ಕಾಸಾರವಂ ಮಾಡುತಾ ೨೫೦
ರಕ್ತದಂತೊಪ್ಪುವೋ ತತ್ತಪಸ್ಸಾರ ಯಾವತ್ತು ತಾ ಪೀರುತಾ ಬಾರಿಬಾರೆದ್ದು ತದ್ದುಷ್ಟ ರಕ್ತಂಗಳಂ ಬೊಗಸೆಯಲ್ ತುಂಬಿ ಭೇತಾಳ ಭೂತಾಳಿಗೇ ಚಿಮ್ಮುತಾ ಖಂಡಗಳ್‍ಗೊಂಡು ಹಾರೈಸುತ ಮತ್ತ ಶುಂಡಾಲ ಸಂಹಾರದಲ್ ಮುಂಚುವೋ ಘೋರ ಪಂಚಾನನೋದಾರ ಲೀಲೆಂಗಳಂ ಬೀರುತಾ ರಾಕ್ಷಸಾಧ್ಯಕ್ಷ ವಕ್ಷಸ್ಸಿನೋಳ್ ಕಿತ್ತುತಾ ಹಾರಗಳ್‍ಮಾಡಿಕೊಂಡೊಪ್ಪಿ ತದ್ರಕ್ತ ಸಿಕ್ತಾನನೋದ್ಯಚ್ಛಟಾ ಕೇಸರಂಗಳ್ ಪ್ರಕಾಶೈಸುತಾ ೨೬೦
ದೈತ್ಯರಾಜೇಂದ್ರನಾ ಪ್ರಾಣಗಳ್‍ಗೊಂಡನಾಮೇಲೆ ಸುತ್ತಿದ್ದ ತದ್ಭಂಧು ಸಂದೋಹದಲ್ಲಿದ್ದನೇಕಾಸುರೀನೀಕವಂ ಸಾಯುಧೋದ್ರೇಕವಂ ಅಲ್ಲಕಲ್ಲೋಲವಂ ಮಾಡಿ ಚಂಚನ್ನಖಶ್ರೇಣಿಯಿಂ ಸಂಹರಂ ಮಾಡಿದಂ.ಆಗ ತದ್ಭೀಕರಾಕಾರವಂ ಕಾಂಬ ಶಕ್ತ್ಯಾವುದಂ ಕಾಣದೇ ತತ್ಸಟಾ ಕೇಸರೋದ್ಭೂತ ಸಂಘಾತಗಳ್ ಘೋರ ಜೀಮೂತಗಳ್‍ಸರ್ವವಂ ನೋಡುತಾ ಮತ್ರ್ಯಸಿಂಹೋಗ್ರದೃಷ್ಟಿಜ್ವಲಜ್ವಾಲೆಗಳ್ ಸೈಸದೇ ಸೂರ್ಯಚಂ೨೭೦
ದ್ರಾದಿ ಸರ್ವಗ್ರಹಕ್ರ್ಷಾವಳೀ ಕಾಂತಿಗಳ್‍ತಪ್ಪಿರೇ ತನ್ಮಹೋಚ್ಛಾಸದಿಂದಬ್ಧಿ ಸಂದೋಹ ಸಂಕ್ಷೋಭಗೊಂಡೆಲ್ಲ ಒಂದಾಯ್ತು. ಆದಿಗ್ಗಜಾನೀಕಗಳ್ ಹಿಗ್ಗುತಾ ಕುಗ್ಗುತಾದೇವನಾನೀ ವಿಮಾನಾಳಿಯಾಕಾಶದಲ್‍ತತ್ಸಟೋ ಕ್ಷಿಪ್ತ ಯಾನಾಳಿಯಾಗೆಲ್ಲಿ ನಿ ಲ್ಲಾಡದೇ ಸರ್ವವಂ ಸುತ್ತಿತಾ ಪಾದ ಸಂಘಟ್ಟದಿಂದಲ್ ಧರಾಚಕ್ರವಲ್ಲಾಡಿತಾಘೋರ ತೇಜಸ್ಸಿಗವಕಾಶಂಗಳಾಕಾಶವೂಬಾಡಿತಾ ಶಾಕಿನೀ ಡಾಕಿನೀ ಮುಖ್ಯ ದು ೨೮೦
ಷ್ಟಗ್ರಹಾನೀಕವುಂ ಭೀತಿಗೊಂಡೋಡಿತಾಮೇಲೆ ಉದ್ಯತ್ಸಭಾ ಮಧ್ಯೆ ದೈತ್ಯೇಂದ್ರ ಸಿಂಹಾಸನಸ್ಥಾನದಲ್ ನಾರಸಿಂಹಂ ಸಮಾಸೀನನಾಗಿಪ್ಪನಾ ತೇಜ ಓಜ ಪ್ರಭಾಪುಂಜರಂಜನ್ನ ಭಾಸ್ವತ್ಕರಾಳೋಗ್ರ ಜಿಹ್ವ ಸ್ಫುರದ್ದಂಷ್ಟ್ರ ವಕ್ತ್ರನ್ನ ಬಿಭ್ರಲ್ಲಸದ್ಭ್ರೂತನಂ ಆ ಮಹಾಕೋಪ ಸಂರಂಭ ಗಂಭೀರ ನೇತ್ರನ್ನ ಕಣ್ಣೆತ್ತಿ ಕಾಂಬೋದರಲ್‍ಬ್ರಹ್ಮ ರುದ್ರಾದಿಗಳ ಶಕ್ತಿಯುಂ ಸಾಲದೇದೂರದಲ್ ಪಾಶ್ರ್ವ ಭಾಗಸ್ಥರಾಗಿಪ್ಪರಂತೇ.೨೯೦
ಆಗ ಮೂರ್ಲೋಕ ಸಂತಾಪಿಯಾಗಿಪ್ಪ ದೈತ್ಯನ್ನ ನಾರಾಯಣಂ ನಾರಸಿಂಹಾಕೃತೀಯಾಗಿ ಸಂಹಾರವಂ ಮಾಡಿದಂ ಎಂಬುದಾವಾರ್ತೆ ಕೇಳುತ್ತಲೇ ದೇವನಾರೀಜನಂಗಳ್ ಪ್ರಹರ್ಷಾನನೋತ್ಪುಲ್ಲರುಲ್ಲಾಸದಿಂವಾಸಿತಾಮೋದ ಮಂದಾರ ಕುಂದಾರವಿಂದಾದಿ ಸತ್ಪುಷ್ಟ ಸಂತಾನ ವರ್ಷಂಗಳಂವರ್ಷಿಸುತ್ತಿಪ್ಪರಾಕಾಲಾವಾಕಾಶದಲ್‍ನಿಂತು ಕಾಣೂವರಾ ದೇವದೇವೀ ಸಮೂಹಂಗಳಾಯಾವಿಮಾನಂಗಳೆಲ್ಲಾ ಮಹಾ ೩೦೦
ಸಂಕುಲೀ ಭೂತವಾಗಿಪ್ಪವಾ ದೇವತಾದುಂದುಭಿಧ್ವಾನ ಇಂಬಾಗಿ ತಾ ದೇವಗಂಧರ್ವ ಸಂಗೀತ ನಾಟ್ಯಂಗಳಿಂದಪ್ಸರಾಕಾಮಿನೀ ತಾನ ಗಾನಂಗಳಿಂದಾಗ ಆಕಾಶವುಂ ತುಂಬಿತಾ ಬ್ರಹ್ಮರುದ್ರೇಂದ್ರ ಮುಖ್ಯಾಮರ ಶ್ರೇಣೀಗಳ್ ಪಿತೃಗಳ ಮನ್ವುಗಳ್‍ಸಿದ್ಧ ವಿದ್ಯಾಧರಾನೀಕಗಳ್ ಅಪ್ಸರಾ ಕಾಮಿನೇರಾ ಪ್ರಜಾಪಾಲ ಗಂಧರ್ವರಾಯಕ್ಷ ಕಿಂಪುರುಷರಾ ಚಾರಣಾನೀಕವಾಕಿನ್ನರಸ್ತೋಮ ನಂದಾ ಸುನಂದಾದಿ ತ ೩೧೦
ತ್ಪಾರ್ಷದಾನೀಕವೆಲ್ಲಾ ಶಿರೋಭಾಗದಲ್‍ಪಾಣಿಗಳ್ ಜೋಡಿಸೀತೆಲ್ಲ ಮುನ್ನಾತಿ ದೂರಸ್ಥರಾಗಿದ್ದು ನಿಂತಾಮೃಗೇಂದ್ರಾಸನಾಸೀನನಾಗಿಪ್ಪ ಅತ್ಯುಗ್ರ ತೇಜಸ್ವಿನಂಮೆಲ್ಲನೇ ಬೇರೆ ಬೇರಾಗಿ ಕೊಂಡಾಡುತಾನಿಂತರಾವೇಳೆಯಲ್ ಬ್ರಹ್ಮ ತಾ ಭಾಷಿಪಂನಿನಗೆ ವಂದೀಸುವೆಂ ತಂದೆ ನೀನೆ ಅನಂತಂ ದುರಂತ್ಯೋರು ಶಕ್ತ್ಯುಳ್ಳವಂ ಲೋಕಪಾವಿತ್ರ್ಯ ಕಮ್ರ್ಯಂ ಮಹಾಶ್ಚರ್ಯ ವೀರ್ಯ ಜಗತ್ರ‍ಸಷ್ಟಿ ಸಂರಕ್ಷ ಸಂಹಾರಗಳ್ ಲೀಲೆಯಿಂ೩೨೦
ದಲ್ ಸದಾ ಮಾಳ್ಪೆಯೋ ಅವ್ಯಯಾತ್ಮನ್ನೆ ನೀ ನೆಂದನು.ಈಶ ತಾ ಬಂದೆಲೋ ತಾತನೇನಿನ್ನಗೀ ಕೋಪ ಬಾಹೋದಕಿಂದಾ ಯುಗಾಂತಾಖ್ಯ ವೇಳ್ಯಲ್ಲವೋ ಕ್ಷುಲ್ಲನೀ ದೈತ್ಯನೀವೇಳೆ ನಿನ್ನಿಂದ ತಾನ್ ಮೃತ್ಯುಪಾಲಾದನಂತಿನ್ನುಮೇಲ್ ಕೋಪ ಸಂಕ್ಷೇಪ ಮಾಡಯ್ಯ ಈದೈತ್ಯ ಪುತ್ರನ್ನ ಪ್ರಹ್ಲಾದನಂ ಸರ್ವದಾನಿನ್ನ ಭಕ್ತನ್ನ ಸಂರಕ್ಷಿಸೋ ಭಕ್ತವಾತ್ಸಲ್ಯದಿಂದೆಂದನು.ಇಂದ್ರ ತಾ ನಿಂತೆಲೋ ಸ್ವಾಮಿಯೇ ಅಣ್ಣತಮ್ಮಂದ್ರ ದೀಟಾಗಿ ನೀನೇ ಸದಾ ನಮ್ಮ ಸಂ೩೩೦
ರಕ್ಷಿಸೂವೇಯೊ ನಿನ್ನಿಂದಲಾ ಯಜ್ಞ ಭಾಗಂಗಳುಂ ನಮ್ಮಗೇ ಮತ್ತೆ ಉಂಟಾದವಯ್ಯಾ ಹಿರಣ್ಯಾಸುರಂಗಾದುದೀಗೆಮ್ಮ ಸುಸ್ವಾಂತಗಳ್ ನಿನ್ನಗಾವಾಸಯೋಗ್ಯತ್ವ ಪೊಂದಿಪ್ಪುವಂತೆ ವಿಕಾಸ್ಯೆಸಿತೋ ನಿನ್ನ ಶುಶ್ರೂಷೆ ಬೇಕೆಂಬ ಲೋಕಾಳಿಗೇ ಕಾಲಸಂಗ್ರಸ್ತವಂತಿಪ್ಪ ಲೋಕಾಳಿಯಲ್ ಯಾವದೂಲಕ್ಷ್ಯವಿಲ್ಲಂತೆ ಮುಕ್ತ್ಯಾದರುಂ ಹೆಚ್ಚು ನಿಶ್ಬೈಸುವಂತೇ ನೃಹರ್ಯಾತ್ಮನೇ ಮಿಕ್ಕ ಸಂಭೂತಿಯಿಂದಾಗಬೇಕಾದುದೇ ನಿಪ್ಪುದೆಂದಂ.೩೪೦
ಋಷಿಸ್ತೋಮವುಂ ನಿಂತೆಲೋ ಬೊಮ್ಮ ನೀನೆಮ್ಮ ಶ್ರೇಯಸ್ಸಿಗೆ ಮುನ್ನ ನಿನ್ನ ಸ್ವತೇಜಾಂಶವನ್ನೇ ತಪೋಯೋಗವಂ ನಮ್ಮಗೇಕೊಟ್ಟೆಯೊ ಆ ತಪಸ್ಸಿಂದ ನಿನ್ನಲ್ಲಿಹೋವಿಶ್ವವೆಲ್ಲಾ ಬಹೀರಂಗ ಮಾಡೀದೆಯೋನಮ್ಮದಂಥಾ ತಪಸ್ಸಂ ಹಿರಣ್ಯಾಸುರಶ್ರೇಷ್ಠತಾ ಕದ್ದನಂತಿದ್ದನೇ ಈಗ ನೀನೀ ಜಗದ್ರಕ್ಷಣಕ್ಕಾಗಿಯೇ ಭಕ್ತ ಸಂರಕ್ಷನೇ ನಾರಹರ್ಯಕ್ಷನಾಗಿನ್ನು ರಕ್ಷೋಗಣಾಧ್ಯಕ್ಷ ವಕ್ಷಸ್ಕವಂ ಸೀಳಿ ನೀ ೩೫೦
ನಮ್ಮಗೆಲ್ಲಾ ತಪೋಯೋಗವಂ ಮತ್ತೆ ತಂದಿತ್ತೆಯಂತೆಂದರು.ಪಿತೃಗಳ್ ನಿಂತೆಲೋಧರ್ಮರೂಪೀಯೆ ಇಂಥಾ ಕ್ರಿಯಾಲಾಪಗಳ್‍ಪುತ್ರರಿಂದಲ್ ತಿಲೋದಂಗಳಿಂದಲ್ ಮಹಾಪುಣ್ಯ ತೀರ್ಥಂಗಳಲ್ ಕ್ಷೇತ್ರ ಪಾತ್ರಂಗಳಲ್‍ನಮ್ಮ ನಮ್ಮಲ್ಲಿ ಇಂತಿತ್ತ ಶ್ರಾದ್ಧಂಗಳಂತನ್ನ ಪ್ರೀತ್ಯರ್ಥವೆಂತಿರ್ದನೈ ನಾಥ ಸಂಪೂರ್ಣ ಸೌಭಾಗ್ಯ ಸಂಸ್ಥಾನಿಯೋ ನೀನು ಭಾಸ್ವನ್ನಖ ಶ್ರೇಣಿಯಿಂದಲ್ ಮಹಾ ದೈತ್ಯವಕ್ಷಸ್ಕವಂ ಸೀಳಿ ಇತ್ತಾವ ಪಾಂತ್ರಾತ್ಮಿಕಾ ೩೬೦
ಶ್ರಾದ್ಧ ನಮ್ಮಲ್ಲಿ ತಾ ಸೇರಿತೈ ನಾರಹರ್ಯಾತ್ಮನೇ ನಿನ್ನಗೇ ನಾವು ಸಾಷ್ಟಾಂಗ ಪ್ರಣಾಮಗಳ ಮಾಡುವೇವೆಂದರು.ಸಿದ್ದರೆಲ್ಲಾಂಜಲೀಬದ್ಧರಾಗೆದ್ದೆಲೋಅಷ್ಟಸಿದ್ಧಾತ್ಮನೇ ನಮ್ಮಲಿದ್ದಾ ಮಹಾಯೋಗ ಸಿದ್ಧಿಂಗಳೆಲ್ಲಾ ತಪೋಯೋಗಸಾಮರ್ಥ್ಯದಿಂ ಕದ್ದನೇ ಗೆದ್ದೆನೆಂತಿದ್ದ ದೈತ್ಯ ಪ್ರಬುದ್ಧನ್ನ ವಕ್ಷಸ್ಕ ಸಂಭಿನ್ನವಂಮಾಡಿಯಾ ನಮ್ಮಗಾಧಾರವಾಗಿದ್ದ ಸದ್ಯೋಗ ಸಿದ್ಧಿಂಗಳಂ ಮತ್ತೆ ನೀನಿತ್ತೆಯೋ ೩೭೦
ನಾರಸಿಂಹಾತ್ಮ ನಾವೆಲ್ಲರುಂ ನಿನ್ನಗೇವಂದನಂಗಳ್ ಸಮರ್ಪೀಂಸುವೇವೆಂದರು.ಆಮೇಲೆ ವಿದ್ಯಾಧರಾನೀಕಗಳ್ ನಿಂತೆಲೋಸರ್ವ ವಿದ್ಯಾತ್ಮನೇ ನಮ್ಮಲಿದ್ದಾ ಪೃಥಕ್‍ಧಾರಣಾಯೋಗ ಸಂಪಾದ್ಯಗಳ್ ವಿದ್ಯೆಗಳ್‍ನಷ್ಟಗೈಸಿದ್ದನತ್ಯಂತ ದರ್ಪಿಷ್ಠನೀಅಜ್ಞ ದೈತ್ಯೇಂದ್ರನಾ ಯಜ್ಞದೋಳ್‍ಬದ್ಧ ಪಶ್ವಂತೆ ತಾನಿಂದು ನಿನ್ನಿಂದಲಾ ಮೃತ್ಯುಪಾಲಾದನೇ ನಮ್ಮ ಸದ್ವಿದ್ಯೆಗಳ ಮತ್ತೆ ನಮ್ಮಲ್ಲೆ ಬಂದಿಪ್ಪುದಯ್ಯಾ ನೃಹರ್ಯಾತ್ಮ ತು ೩೮೦
ಭ್ಯಂ ನಮೋ ಎಂದರು.
ನಾಗರಾವೇಳೆಲೋಸ್ನಂತನೇ ನಮ್ಮಲಿದ್ದಾ ಮಹಾರತ್ನಗಳ್‍ಮಾನಿನೀ ರತ್ನಗಳ್ ತಾ ಬಲಾತ್ಕಾರದಿಂಗೊಂಡನೀ ಪಾಪಿ ದೈತ್ಯನ್ನ ವಕ್ಷಸ್ಕವಂಸೇದಿ ಈ ರತ್ನಗಳ್ ಮತ್ತೆ ನೀ ನಮ್ಮಗೇಸೇರುವಂತೇ ದಯಾಮಾಡಿದೀಯೈ ನಮಸ್ತೇ ನಮೋ ಎಂದರು.ಮನ್ವುಗಳ್‍ನಿಂತೆಲೋಧರ್ಮ ಸಂರಕ್ಷನೇ ನಾವು ನಿನ್ನಾಜ್ಞೆಯಿಂದೀ ಪ್ರಜಾನೀಕಕೇರ್ಪಾಟು ಮಾಡಿದ್ದ ಮರ್ಯಾದೆಗಳ್ ಸರ್ವವೀ ದೈತ್ಯ ತಾ ಕೆಡಿಸಿ ಕ೩೯೦
ಲ್ಲೋಲವಂ ಮಾಡಿ ನಿನ್ನಿಂದಲೀ ಈಗ ಸಂಹಾರಿಸಲ್ಪಟ್ಟನೇ ಇನ್ನು ಮೇಲ್ ನಾವು ನಿಮ್ಮುಟ್ಟಕ್ತಿಗಳ್ ನಡೆಸುವೇವೆಮ್ಮಗಾಜ್ಞಾಪಿಸೋನಾವು ತ್ವದ್ದಾಸ್ಯವಂ ಬಯಸಿದೇವೆಂದರು.ಆ ಪ್ರಜೇಶ್ಯಾಳಿಗಳ್ ನಿಂತು ಕೇಳೋ ”ಪ್ರಜೇಶಾ ವಯಂ ತೇ ಪರೇಶಾಭಿಸೃಷ್ಟಾ ನ ಯೇನ ಪ್ರಜಾ ವೈ ಸೃಜಾಮೋ ನಿಷಿದ್ಧಾಃ ಸ ಯೇಷ ತ್ವಯಾ ಭಿನ್ನವÀಕ್ಷಾನು ಶೇತೇ ಜಗನ್ಮಂಗಲಂ ಸತ್ವಮೂರ್ತೇವತಾರಃ’’ ಪ್ರಭೋಎಂದರು. ಆಗ ಗಂಧರ್ವರೆಲ್ಲಾ ಎಲೋ ೪೦೦
ಸ್ವಾಮಿಯೇ ನಾವು ನಿಮ್ಮ ಪ್ರಸನ್ನಾವತಾರೈಕ ಲೀಲಾ ಕಥಾಸೂಕ್ತಿಗಳ್ ನಾಟ್ಯ ಶೃಂಗಾರ ಚೇಷ್ಟಾ ಕಳಾದರ್ಶನಾದ್ಯಭಿನಯಾವ್ಯಕ್ತಿಗಳ್ ತಾನ ಗಾನಾನುಸಂಧಾನ ಸಮ್ಮೋಹಿನೀ ಶಕ್ತಿಗಳ್ ಕೂಡಿ ಆಶ್ರಾಂತವುಂನಿನ್ನ ಕೊಂಡಾಡುತಾ ಗಾಯಕಶ್ರೇಷ್ಠರಂತಿಪ್ಪೆವೇ ತನ್ನ ಸದ್ವೀರ್ಯ ತೇಜೋಬಲೋಜಸ್ಕದಿಂದಲ್ ಪ್ರಭೋ ನಮ್ಮ ಸಾಮಥ್ರ್ಯಗಳ್‍ತನ್ನಗಾಧೀನ ಮಾಡಿಟ್ಟುಕೊಂಡಿದ್ದನೀದೈತ್ಯನೀ ವೇಳೆ ನಿನ್ನಿಂದ ಪಂಚತ್ವವಂ ೪೧೦
ಕೂಡನೇ ಪೊಂಗಲಿಕ್ಕಿಚ್ಛೆ ತಾ ಕುಂಗಲಿಕ್ಕಲ್ಲದೇ ಉತ್ಪಥಸ್ಥಾಯಿ ಯಾವಾತನುಂಕ್ಷೇಮ ತಾನೇನು ಕಾಣೂವನೋ ಎಂದರು.ಚಾರಣಾನೀಕವುಂ ನಿಂತೆಲೋನಾಥನೇಸಾಧು ಸಂತಾಪಿಯಾಗಿದ್ದನೀ ಪಾಪಿ ದೈತೇಯ ನಿನ್ನಿಂದ ತಾಂ ಬಿದ್ದನೇ ನಾವು ಕದ್‍ಕಳ್ಳರಂತಿದ್ದೆವೇ ಇನ್ನು ಮೇಲ್ ನಾವು ನಿನ್ನಂಘ್ರೀಕಂಜಾತವಂ ಘೋರ ಸಂಸಾರವಾರಾಶಿಸಂಪೋತವಂ ಸರ್ವವಾಶ್ರೈಸುವೇವೆಂದು ಕೊಂಡಾಡಿತು.
ಆ ಯಕ್ಷರೆಲ್ಲಾ ಎಲೋ- ೪೨೦
ಧ್ಯಕ್ಷನೇ ತ್ವನ್ಮನೋಭಿಜ್ಞ ಕರ್ಮಂಗಳಿಂದಲ್ ಸದಾ ನಿನ್ನಗೇ ಭೃತ್ಯರಾಗಿಪ್ಪ ನಾವೆಲ್ಲರುಂ ದೈತ್ಯಗೇ ಪಾಲಕೀ ಹೊರ್ವರಂತಾದೆವೇ ನಮ್ಮ ಸಂತಾಪಗಳ್ ಬಲ್ಲ ನಿನ್ನಿಂದಲೀ ದೈತ್ಯನೀ ವೇಳೆ ಪಂಚತ್ವವಂಹೊಂದಿದಂ ನಾವು ಸಂತೋಷವಂ ಕಂಡೆವಯ್ಯಾ ನೃಪಂಚಾಸ್ಯನೇ ಪಂಚವಿಂಶಾಖ್ಯ ನೀ ನೆಂದರು. ಆಮೇಲೆ ಕಿಂಪೂರುಷಾನೀಕವುಂಬಂದೆಲೋ ಪುರುಷನೇ ನಾವು ಕಿಂಪೂರುಷರ್‍ನೀಂ ಮಹಾಪೂರುಷಂ ಈಶ್ವರಂ ನಿನ್ನ ಕೈ ೪೩೦
ಯಲ್ಲಿ ಕುಪೂರುಷಂ ಅಸುರ ಶ್ರೇಷ್ಠ ತಾನಷ್ಟವಾದಂ ಸದಾ ಸಾಧು ಸಂತಾಪಮಾಡೂವನಾವಾತ ಮುಂದಕ್ಕೆ ಬಂದಾನು ತಾನೆಂದು ಮಾತಾಡಿತು.ಆಮೇಲೆ ಭೇತಾಳ ಭೂತಾಳಿಗಳ್ ನಿಂತೆಲೋ ದೇವನೇ ನಾವು ಮುನ್ನಾ ಸಭಾಸತ್ರ ಸಂಸಗದಲ್ ನಿನ್ನ ದಿವ್ಯಾಮಲ ಶ್ಲೋಕಗಳ ನಿತ್ಯ ಕೊಂಡಾಡುತಾಭೂರಿಯೂಟಂಗಳಂ ಉಣ್ಣುತಾಲಿದ್ದೆವೇತಾನಿವೆಲ್ಲಾ ಪರಿಗ್ರಾಹಿಸೀ ದೈತ್ಯ ನಿನ್ನಿಂದ ಪೆಟ್ಟಾಂತು ತಾ ಪೋದನೇ ದೈವದಿಂ೪೪೦
ದೊಡಲಿನಲ್ ವೇಗ ತಾ ಪೋದ ದೀಟೆಂದರುಕಿನ್ನರ ಶ್ರೇಣಿಗಳ್ ಬಂದೆಲೋ ಈಶನೇಕೇಳು ನಾವೆಲ್ಲರಾ ಕಿನ್ನರ ಪ್ರಾಣಿಗಳ್‍ಪೂರ್ವದಲ್ ನಿನ್ನ ದಾಸಾನುದಾಸರ್ಗಳಾಗಿಪ್ಪೆವೀ ದೈತ್ಯ ನಮ್ಮಿಂದ ತಾ ಬಿಟ್ಟಿಕಾರ್ಯಂಗಳೆಲ್ಲಾ ಸದಾ ಮಾಡಿಸೂವಂ ವಇಹಾದು:ಖಗೋಣಿಸುವಂ ಇಂಥ ಪಾಪಿಷ್ಠ ದೈತ್ಯನ್ನ ಸಂಹಾರ ವಂ ಮಾಡಿದೀ ಇನ್ನು ನೀನಮ್ಮಗೆಲ್ಲಾ ಸಮುಲ್ಲಾಸಗಳ ಶ್ರೇಯಗಳಕೊಟ್ಟು ಸಂರಕ್ಷಿಸೋ ನಾರಹರ್ಯಕ್ಷನೇ ಎಂದರು. ೪೫೦
ಅಚ್ಯುತದ್ವಾರಪಾಲಾಳುಗಳ್‍ನಿಂತೆಲೋ ಭೂಮನೇ ಕಂಡೆವೋ ಇಂದಿಗೇನಾರಹರ್ಯದ್ಭುತಾಕಾರವಂ ಲೋಕಕೆಲ್ಲಾ ಸುಖಾನಂದವಂ ನಮ್ಮಗಾಧಾರ ನೀನಲ್ಲದಿನ್ನಿಲ್ಲವೋ ಈಗ ವೈಕುಂಠದಲ್‍ನಿನ್ನ ದ್ವಾರಸ್ಥನಾಗಿಪ್ಪನಾ ವಿಪ್ರರಿಂದಲ್ ಮಹಾದೈತ್ಯಜನ್ಮಕ್ಕೆ ತಾ ಬಂದನೇ ಬಂದನಂತಿಂದಿಗೇ ವೈರಮಾರ್ಗಕ್ಕೆ ನೀನಿಂದು ಗೈದಂಥ ಈ ದೈತ್ಯಸಂಹಾರ ವ್ಯಾಪಾರವೆಮ್ಮಲ್ ಮಹಾನುಗ್ರಹಕ್ಕಾಗಿ ನೀ ಬಂದೆ ನಾವ್ ೪೬೦
ಬಲ್ಲೆವಯ್ಯಾ ನಮಸ್ತೆ ನಮೋ ಎಂದರುಈ ರೀತಿಯಿಂ ಸಪ್ತಮಸ್ಕಂದದೊಳಷ್ಟಮಾಧ್ಯಾಯ ಸುಶ್ಲೋಕಿಗಳ ನಾಕಿಗಳ ಬ್ರಹ್ಮರುದ್ರಾದಿಕಾನೇಕಗಳ ನಾರಸಿಂಹನ್ನ ಸುಸ್ತೋತ್ರವಂ ಮಾಡಿ ತತ್ಕೋಪ ಸಂಕ್ಷೇಪಗೈಸೂವ ಸಾಮರ್ಥ್ಯಗಳ್ ಕಾಣದೇ ಬಂದು ಶ್ರೀದೇವಿ ಸಾನಿಧ್ಯದಲ್ ಸೇರಿ ಅಮ್ಮಾ ಜಗನ್ನಾಥನಂ ಸ್ವಾಂತ ಸಂತೋಷ ಮಾಡೆಂದು ಬಿನ್ನಾಹಗಳ ಮಾಳ್ಪರು.ಆಮೇಲೆ ಆ ಬಾಲೆ ಸಾಕ್ಷಾಜ್ಜಗನ್ಮೋಹಿನೀ ಲೀಲೆಗಳ್ ಮಿಂಚುತಾ ೪೭೦
ಪೂಂಚುತಾ ಬಂದು ಸಿಂಹಾಸನಸ್ಥಾನದಲ್‍ಉಗ್ರನಂತಿಪ್ಪನೃಸಿಂಹ ಮೂತ್ರ್ಯುಗ್ರವಂಕಂಡತಿವ್ಯಗ್ರಳಂತಾಗಿ ಆ ತಾಯಿ ಹಿಂದಕ್ಕೆ ತಾ ಬಂದಳಮ್ಮಮ್ಮ ಏಂ ಗುಮ್ಮನಂತಪ್ಪÀನೇ ಸ್ವಾಮಿ ಮುನ್ನಿಂತು ಆಶ್ಚರ್ಯವಂಈಸು ವಿಕ್ರಮ್ಯವಂ ಎಂದಿಗಾನೆಲ್ಲಿ ಕಂಡಿಲ್ಲವಲ್ಲಾ ಕಿವಿಲ್ಯಾದರುಂ ಕೇಳಲೇ ಇಲ್ಲವಲ್ಲಾ ಇದೇನೋ ವಿಚಿತ್ರಾಕÀೃತೀಯಂತೆ ತೋರೂವನೆಂದಂಜಿಕೇಗೊಂಡ ರೀತಿಂದ ತಾ ಹೆಜ್ಜೆ ಕಾಲ್ಗೆಜ್ಜೆಗಳ್ ಸಪ್ಪುಳಂ೪೮೦
ಮಾಡದೇ ಮೆಲ್ಲನೇ ಪಾಶ್ರ್ವದಲ್ ನಿಂತಳುಆಮೇಲೆ ಪ್ರಹ್ಲಾದನಂ ಕಂಡು ಸಂಭಾಷಿಪಂಬ್ರಹ್ಮ ಬಾರೈ ಎಲೋ ವತ್ಸ ನೀನೀ ನೃಸಿಂಹಾತ್ಮನಲ್ ಮೆಲ್ಲನೇ ಸೇರಿ ನಿಮ್ಮಪ್ಪಗಾ ಗಿಂದು ನಮ್ಮಪ್ಪನಲ್ಲಿಪ್ಪ ತತ್ಕೋಪ ಸಂಕ್ಷೇಪ ಗೈಸೆನ್ನೆ ತದ್ವಾಣಿಗಳ ಕೇಳುತಾಮೆಲ್ಲನೇ ಪಿಲ್ಲೆ ಪ್ರಹ್ಲಾದನಾಹ್ಲಾದದಲ್‍ವೈಷ್ಣವಶ್ರೇಷ್ಠ ತಾನಾಗ ಬಂದಂ ಮಹಾಭಕ್ತಿಯಿಂದಲ್ ಮಹೀಮಂಡಲೀ ಮೇಲೆ ಸಾಷ್ಟಾಂಗ ಬಿದ್ದಂ ನಮೋ ಎಂದು ದಂಡಪ್ರಣಾ ೪೯೦
ಮಂಗಳಂ ಮಾಡುವೋ ವೇಳೆ ತನ್ನಂಘ್ರಿಕಂಜಾತದಲ್ ಬಿದ್ದ ಬಾಲನ್ನ ಬಾಳಾ ಸುಶೀಲನ್ನ ಕಂದನ್ನ ದೃಷ್ಟಿಂದ ತಾ ಕಾಣುತಾಚಕ್ರ ಶಂಖಾಂಕಿತಾ ಶ್ರೀಲಸದ್ಬಾಹುಗಳ್‍ಚಾಚಿ ಭಕ್ತನ್ನ ತಾನೆತ್ತಿ ತನ್ಮಸ್ತಕಸ್ಥಾನದಲ್ ಪೋಕಲಾಗಿನ್ನು ಸಂಸ್ರಸ್ತ ಚೇತೋಭಯಧ್ವಸ್ಥವಂ ಸ್ವಸ್ತಿದಾನ ಕ್ರಿಯಾಭ್ಯಸ್ತವಂ ಶ್ರೀ ಸತೀ ಸ್ತಂಬಕವಿನ್ಯಸ್ತವಂಹಸ್ತವನ್ನಿತ್ತನವ್ಯಾಹತ ಸ್ಪರ್ಶದಿಂದಲ್ ವಿಧೂತಾ ಶುಭವ್ರಾತನಾಗೀಯಭಿ ೫೦೦
ವ್ಯಕ್ತ ಲಕ್ಷ್ಮೀವಿಲಾಸಾತ್ಮ ಸಂದರ್ಶನೈಶ್ವರ್ಯವಂ ಕೂಡಿ ತತ್ಪಾದ ಪದ್ಮಂಗಳಂಚಿತ್ತದಿಂದಿತ್ತನಾನಂದದಿಂದಲ್ ಪ್ರಹೃಷ್ಯತ್ತನು ಕ್ಲಿನ್ನ ಚಿತ್ತಾಶ್ರುನೇತ್ರಾಬ್ಜನಾಗಿದ್ದು ಪ್ರಹ್ಲಾದನುಂ ನಾರಸಿಂಹಾತ್ಮನಲ್‍ನಿಂತು ಸಂಸ್ತೋತ್ರಗಾರಂಭಿಪಂ.
ಶ್ರೀರಮಾದೇವಿ ತಾನಾಗ ಸಮ್ಮೋಹಿನೀ ಸಂಪುಗಳ್‍ಕೂಡಿ ಬಂದಾ ನೃಸಿಂಹಾಂಕದಲ್ ನಿಂತಳಾಬ್ರಹ್ಮನಾವೇಳೆಯಲ್ ನಾರಸಿಂಹಾತ್ಮನಲ್‍ಸೇರಿ ಸುಕ್ಷೀರ ನೀರಾಭಿಷೇಕಂಗಳಂ ೫೧೦
ಚೀನಿ ಚೀನಾಂಬರಂಗಳ್ ಮಹಾನಘ್ರ್ಯ ರತ್ನಾವಳೀ ಭೂಷಣಂಗಳ್ ಲಸನ್ಮೌಕ್ತಿಕಾಹೀರ ಹಾರಂಗಳಂ ಗಂಧ ಕಸ್ತೂರಿಕಾಲೇಪಗಳ್ ಶ್ರೀ ತುಳಸ್ಯಾಪ್ತ ಶಾಮಂತಿಕಾ

 

೪೮
ಸದ್ದು ಮಾಡಲು ಬೇಡವೋ-ನಿನ್ನ ಕಾಲಿಗೆಬಿದ್ದು ನಾ ಬೇಡಿಕೊಂಬೆ ಪ
ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂದಿದ್ದದ್ದು ಕಂಡರೇನೆಂಬುವರೋ ರಂಗಅ.ಪ.
ಬಳೆ ಘಲ್ಲುಕೆನ್ನದೇನೋ-ಕೈಯ ಪಿಡಿದುಎಳೆಯದಿರೋ ಸುಮ್ಮನೆಮೊಲೆಗಳ ಮೇಲಿನ ಸೆರೆಗನೆಳೆಯಲು ಕೊ-ರಳ ಪದಕಗಳು ಧ್ವನಿಗೆಯ್ಯುವವೊ ರಂಗ ೧
ನಿರುಗೆಯ ಪಿಡಿಯದಿರೊ-ಕಾಂಚಿಯ ದಾಮಕಿರುಗಂಟೆ ಧ್ವನಿಗೆಯ್ಯದೆಕಿರುದುಟಿಗಳ ನೀನು ಸವಿದು ಚಪ್ಪರಿಸಲುತರವಲ್ಲ ಗಂಡ ಮತ್ಸರವ ತಾಳುವನಲ್ಲ ೨
ನಾಡಮಾತುಗಳೇತಕೊ-ಸಂಗೀತವಪಾಡುವ ಸಮಯವೇನೊಗಾಡಿಕಾರ ಶ್ರೀ ರಂಗವಿಠಲನಪಾಡಿಪಂಥಗಳೊಡಗೂಡುವ ಸಮಯದಿ ೩

 

೨೧
ಸರಸಿಜನಾಭನೆ ಸೆರಗೊಡ್ಡಿ ಬೇಡುವೆ,ದುರಿತಗಳೆಲ್ಲ ತರಿದು ವರವಿತ್ತು ಕರುಣಿಸೊ ಪ
ಕರುಣಾಸಾಗರ ನಿನ್ನ ಚರಣವ ನಂಬಿದೆಪರಮ ಪಾವನ ನಿನ್ನ ಶರಣನ ಪೊರೆಯೆಂದು ೧
ಈಶವಿನುತ ನಿನ್ನ ವಾಸಿಯ ಪೊಗಳುವೆದಾಸ ಎಂದೆನ್ನನು ಗಾಸಿಮಾಡದೆ ಕಾಯೊ ೨
ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖದದೂರಗೈಸುವಂಥ ದಾರಿ ತೋರಿಸೆಂದು ೩
ಕಂತುಪಿತನೆ ಎನ್ನ ಅಂತರಂಗದಿ ನಿನ್ನಸಂತತ ನೆನೆವಂತೆ ಚಿಂತನೆ ನಿಲಿಸೆಂದು ೪
ಮಂಗಳಾತ್ಮಕನೆ ಶ್ರೀರಂಗವಿಠ್ಠಲ ಭು-ಜಂಗಶಯನ ನಿನ್ನ ಹಿಂಗದೆ ಭಜಿಪೆನು೫

 

೪೯
ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ಪ
ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದಅ.ಪ.
ಧೀರ ಶರಧಿ ಗಂಭೀರ ವರಘನಸಾರ ಕಸ್ತೂರಿ ತಿಲಕಧರಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತಚೋರ ಬಂದ ೧
ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದಅಂದದಿಂದ ಸೌಂದರಿಯರ ಗೋವಿಂದ ಮುಕುಂದ ೨
ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ೩

 

೨೨
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ
ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ.
ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನಂದದಿಂದತಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ ೧
ತ್ರೇತಾಯುಗದಿ ನಿನ್ನ ಮಾತೆಯಾಜ್ಞೆಯ ಕೊಂಡು ಪ್ರೀತಿಯಿಂದಲೆವನಕೆ ನೀ ಪೋಗಲುಆತುರದಿ ಸೀತೆ ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ
ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ ೨
ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ ೩

 

‘ಶಿಷ್ಯಾದಿಚ್ಛೇಚ್ ಪರಾಜಯಂ’
೫೪
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕುವ್ಯಾಸಮುನಿರಾಯರ ಸಂನ್ಯಾಸದಿರವ ಪ
ಆಸೆಯಿಂದ ತಮ್ಮುದರ ಪೋಷಣೆಗಾಗಿ ಛಪ್ಪನ್ನದೀಶವ ತಿರುಗಿ ಸಂಚಾರ ಮಾಡುತಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನಮೋಸಮಾಡಿ ಕಳೆವ ಸನ್ಯಾಸಿಗಳ ಸರಿಯೆ೧
ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂಸುರರೊಂದು ಲಕ್ಷ ಕುಟುಂಬಗಳಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾಯರ ಗುಣಗಣ ಗಾಂಭೀರ್ಯಾದಿಗಳ ೨
ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮಯುಗಳವನರ್ಚಿಸಿ ಭಕುತಿಯಿಂದರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರರಂಗವಿಠಲನನ್ನು ಬಿಡೆಬಿಡೆನು ಎಂಬ ೩

 

ಸದ್ವೈಷ್ಣವನಾದವನು ಆನಂದತೀರ್ಥರ
೭೫
ಸುಮ್ಮನೆ ವೈಷ್ಣವನೆಂಬಿರಿ ಪರ ಬೊಮ್ಮ ಸುಜ್ಞಾನವನರಿಯದ ಮನುಜನ ಪ
ಮುಖವ ತೊಳೆದು ನಾಮವನಿಟ್ಟೆನಲ್ಲದೆಸುಖತೀರ್ಥಶಾಸ್ತ್ರವನೋದಿದನೆಸುಖಕೆ ಶೃಂಗಾರಕೆ ಮಾಲೆ ಹಾಕಿದನಲ್ಲದೆಭಕುತಿ ರಸದಲ್ಲಿ ಮುಳುಗಿದೆನೇನಯ್ಯ ೧
ಊರು ಮಾತುಗಳಾಡಿ ದಣಿದೆನಲ್ಲದೆನಾರಾಯಣ ಕೃಷ್ಣ ಶರಣೆಂದೆನೆನಾರಿಯ ನುಡಿ ಕೇಳಿ ಮರುಳಾದೆನಲ್ಲದೆಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ೨
ನರೋತ್ತಮರಿಗಧಿಕ ಗಂಧರ್ವರಿಗಧಿಕಸುರೇಂದ್ರಗಧಿಕ ಹರಗಧಿಕವಿರಿಂಚಿಗಧಿಕ ಸಿರಿಗಧಿಕಹರಿ ಸರ್ವೋತ್ತಮನೆಂದು ತಿಳಿದೆನೇನಯ್ಯ೩
ಜಗತು ಸತ್ಯವೆಂದು ಪಂಚಭೇದವ ತಿಳಿದುಮಿಗೆ ರಾಗದ್ವೇಷಂಗಳನು ವರ್ಜಿಸಿಭಗವಂತನ ಲೀಲೆ ಶ್ರವಣ ಕಥೆಗಳಿಂದನಿಗಮಗೋಚರನೆಂದು ತಿಳಿದೆನೇನಯ್ಯ ೪
ಗಂಗೆಯಲಿ ಮೈ ಬಣ್ಣ ತೊಳೆದೆನಲ್ಲದೆ ಭವಹಿಂಗುವ ಸ್ನಾನವ ಮಾಡಿದೆನೆರಂಗವಿಠಲನ ನಿಜವಾದ ದಾಸರಸಂಗ ಸುಖವೆಂದು ತಿಳಿದೆನೇನಯ್ಯ ೫

 

೯೯
ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ಪ
ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ೧
ಜ್ಞಾನಿಗಳ ಗೋಚರನೆ ತನ್ನಧ್ಯಾನಿಪರ ಮನೋಹರನೆದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆಆನಂದಮಯನೆ ಅನೇಕಾವತಾರನೆಅನುದಿನ ನೆನೆವರ ಹೃದಯ ಮಂದಿರನೆಘನಮಾಣಿಕ ಭೂಷಣ ಶೃಂಗಾರನೆತನುವಿನ ಕ್ಲೇಶ ದುರಿತ ಸಂಹರನೆ೨
ಜಯತು ದೋಷವಿನಾಶ ಜಯಮಹಿಮಾ ವಿಶೇಷಜಯತು ಲಕುಮೀ ಪರಿತೋಷ ಜಯ ಶ್ರೀವೆಂಕಟೇಶಜಯ ಕಮಲಜನಕನೆ ಜಯಜಗದೀಶಜಯ ಗಜವರದ ಪಾಲಿತ ಪುಣ್ಯಘೋಷಜಯತು ಜನಾರ್ಧನ ಜಗÀನ್ಮೋಹನ ವೇಷÀಜಯ ರಂಗವಿಠಲ ಕರುಣಾವಿಲಾಸ ೩

 

ಹರಿ, ಹರರು, ಸಮಾನರಲ್ಲ-ಎಂಬ
೨೩
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ
ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ ೧
ಹರನ ಕುರಿತಸುರ ಮಹತಪವ ಮಾಡಲು ಮೆಚ್ಚಿವರವನವಗಿತ್ತು ಹರ ಬಳಲಿ ಓಡಿಬರಲುಹರಿ ಬಂದವನ ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ ೨
ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ ೩
ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ ೪
ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ ೫
ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ ೬
ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ ೭
ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ ೮
ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ ೯
ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ ೧೦
ಗಂಗಾಜನಕನ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ ೧೧

 

೨೪
ಹರೇ ವೆಂಕಟಶೈಲವಲ್ಲಭಪೊರೆಯಬೇಕು ಎನ್ನಪ ದುರಿತದೂರ ನೀನಲ್ಲದೆ ಧರೆಯೊಳುಪೊರೆವರನ ಕಾಣೆ ನಿನ್ನಾಣೆ ಅ.ಪ. ಆರು ನಿನ್ನ ಹೊರೆತೆನ್ನ ಪೊರೆವರುನೀರಜಾಕ್ಷ ಹರಿಯೆ ಅ-ಪಾರ ಮಹಿಮ ಪುರಾಣ ಪುರುಷಘೋರ ದುರಿತಗಳ ದೂರ ಮಾಡಿಸೋ ೧ ಇಂದಿರೇಶ ಅರವಿಂದನಯನ ಎನ್ನತಂದೆ ತಾಯಿ ನೀನೆಹೊಂದಿದವರ ಅಘವೃಂದ ಕಳೆವಮಂದರಾದ್ರಿಧರನೇ ಶ್ರೀಧರನೇ೨ ಮಂಗಳಾಂಗ ಮಹನೀಯ ಗುಣಾರ್ಣವಗಂಗೋದಿತ ಪಾದಅಂಗಜಪಿತ ಅಜರಾಜಶಯ್ಯ ಶ್ರೀ-ರಂಗವಿಠ್ಠಲ ದೊರೆಯೇ ಶ್ರೀ ಹರಿಯೇ ೩

 

೪. ಉಗಾಭೋಗಗಳು
೭೬
ಅಂಬರದಾಳವನು ಇನಶಶಿಗಳಲ್ಲದೆಅಂಬರತಳದಲಾಡುವ ಪಕ್ಷಿ ತಾವು ಬಲ್ಲವೆ?ಜಲದ ಪ್ರಮಾಣವ ತಾವರೆಗಳಲ್ಲದೆಮೇಲಿದ್ದ ಮರ ಗಿಡ ಬಳ್ಳಿಗಳು ತಾವು ಬಲ್ಲವೆ?ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆಚೀರ್ವ ಕಾಗೆಗಳು ತಾವು ಬಲ್ಲವೆ?ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು ಮತ್ತನ್ಯರೇನು ಬಲ್ಲರಯ್ಯ?ಭಕ್ತರಾಧೀನನೆ ಭಕ್ತರೊಡೆಯನೆಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ

 

೭೭
ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ ಎನ್ನ ಮನ ನಿನ್ನಲ್ಲಿ ಎರಗಿಸೊಎನ್ನ ಮನವನು ನಿನ್ನ ಚರಣದೊಳೊಮ್ಮೆಇಟ್ಟು ಸಲಹೊ ರಂಗವಿಠಲ

 

೭೮
ಎನ್ನ ಮನ ವಿಷಯಂಗಳಲಿ ಮುಣುಗಿತೊಎನ್ನ ತನುವು ವೃದ್ಧಾಪ್ಯ ಐದಿತೊಅಂತಕರ ಕರೆ ಬಾಹೊ ಹೊತ್ತಾಯಿತೊಕಾಲ ವಿಳಂಬವಿನಿತಿಲ್ಲವಯ್ಯವ್ಯಾಳ ಅರಿತು ಬಿನ್ನಹ ಮಾಡಿದೆಹೀಗೆ ತರಳರ ಬಿಡುವ ತಾಯಿಗಳುಂಟೆ-ನೀಕರುಣಾನಿಧಿಯೆಂಬ ಬಿರುದು ಸಲ್ಲಿಸುವ ದೇವಕರುಣಾಕರ ಸಿರಿರಂಗ ವಿಠಲರೇಯ-ನೀಕರುಣಾನಿಧಿಯೆಂಬ ಬಿರುದು ಸಲ್ಲಿಸು ದೇವ

 

೭೯
ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆಅಂಬುಜೋದರನ ನೆಲೆ ಅರಿಯದ ದುರಾತುಮರುಬೆಂಬಿಡದೇ ಸುಖನರಸುವರುಂಟೆ ಉದರಂಭರದಿ ಡಂಭಕರು ಇಹಪರಕೆ ಬಾಹ್ಯರೆಂದುಶಂಬರಾಂತಕ ಪಿತ ರಂಗವಿಠಲರೇಯನ್ನ ಪಾದಾಂಬುಜೋದ್ಭ್ರಮರದೊಳುಮಿಗೆ ದೂರರಾದವರುಬೆಂಬಿಡದೆ ಸುಖವನರಸುವರುಂಟೆ

 

೮೦ಕರುಣದಿ ತನುಮನಧನಂಗಳೆಲ್ಲವುನಿನ್ನ ಚರಣಕಮಲಕೊಪ್ಪಿಸಿದ ಬಳಿಕಮರಳಿ ಎನ್ನ ಮರುಳು ಮಾಡುವರೆಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೋ ರಂಗವಿಠಲ

 

೮೧
ಕಲಿಕಾಲಕೆ ಸಮ ಯುಗವಿಲ್ಲವಯ್ಯಕÀಲುಷ ಹರಿಸಿ ಕೈವಲ್ಯವೀವುದಯ್ಯಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯಸ್ಮರಿಸಲು ಸಾಯುಜ್ಯ ಪದವೀವುದಯ್ಯಬಲವಂತ ಶ್ರೀರಂಗವಿಠಲನ ನೆನೆದರೆಕಲಿಯುಗವೆ ಕೃತಯುಗವಾಗುವುದಯ್ಯ

 

೮೨
ಧ್ಯಾನವು ಕೃತಯುಗದಿಯಜನ ಯಜ್ಞವು ತ್ರೇತಾಯುಗದಿದಾನವಾಂತಕನ ದೇವತಾರ್ಚನೆ ದ್ವಾಪರಯುಗದಿಆ ಮಾನವರಿಗೆಷ್ಟು ಫಲವೊ ಅಷ್ಟು ಫಲವುಕಲಿಯುಗದಿ ಗಾನದಲಿ ಕೇಶವಯೆನಲುಕೈಗೂಡುವನು ರಂಗವಿಠಲ

 

೮೩
ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನುಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತುನಿತ್ಯ ಸಲಹೋ ವ್ಯಾಸಮುನಿ ವಂದ್ಯ ಗೋಪಿನಾಥನೆತುರುಬಿನ ಮ್ಯಾಲೆ ತುರುಬಿದ ಮೊಲ್ಲೆ ಮಲ್ಲಿಗೆ ಕುಸುಮಗಳ ರಂಗಾಕೊರಳಲ್ಲಿ ಕಂಠೀಸರ ವನಮಾಲೆ ವರಕಲ್ಪತರುವನೆನ್ನೀ ರಂಗಾಕರದಲ್ಲಿ ವೇಣು ಬೆರಳಲ್ಲಿ ಮೀಟುತ ಮರಿದುಂಬಿ ಝೇಂಕಾರ ರಂಗಾಸರಿಗಮಪದನಿಸ ಸನಿದಪಮಗರಿಸ ಅಧರದಲೂದುತಿರೆ ರಂಗಾಸಿರಿಯರಸನು ಸಿರಿಪತಿ ರಂಗವಿಠಲ ಸರಸದಿ ವೇಣುನಾದವ ಮಾಡಿದನು

 

೮೪
ಬರುವುದು ಬುದ್ಧಿಯು ಬಲವು ಕೀರುತಿಯುನಿರುತದಿ ಧ್ಯೆರ್ಯವು ನಿರ್ಭಯತ್ವವುಅರೋಗಾನಂದ ಅಜಾಡ್ಯ ವಾಕ್ಪಟುತ್ವವುಹರೇ ರಂಗವಿಠಲ ಹನುಮಾ ಎನಲು

 

೮೫
ಬಲ್ಲವನು ಉಳ್ಳವನು ನೀನಿರಲು ಭಜಿಸದೆಕ್ಷುಲ್ಲಕರ ಮತವಿಡಿದು ಸುಖವ ಬಯಸುವೆ ನಾನುಕಲ್ಲು ಗೋವಿನ ಹಾಲು ಕರು ಬಯಸಿದಂತೆ ನಾಹಲ್ಲು ಹೋಹುದನರಿಯೆ ಅಕಟಕಟ ಮಂದಮತಿಯುಕಳ್ಳ ಗೋವನು ಹುಲ್ಲು ಗಂಜಿಯನೆರೆದು ಸಲಹಿದಡೆ ಏನು ಫಲಬಲ್ಲಿದಾಸೆಯ ಬಿಡಿಸೋ ನಮೋ ರಂಗವಿಠಲ

 

೮೬
ಭವವೆಂಬ ಅಡವಿಯಲಿ ತಾಪತ್ರಯದಿ ಸಿಲುಕಿಭಯಗೊಳ್ಳದಂತೆ ಗೆಲ್ಲುವುದಕೆ ಶ್ರೀ ಹರಿನಾಮಹೊರತಾಗಿ ಮತ್ತುಂಟೆ ಎನ್ನ ಮನವ ನಿನ್ನಚರಣದಲ್ಲಿಟ್ಟು ಸಲಹೊ ನಮೋ ರಂಗವಿಠಲ

 

೮೭
ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿಇನಿತು ಸಂತೋಷ ಅವರವರಿಗಾಗಲಿ ನಿನ್ನನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ

 

೮೮
ಮಾರಿಕೋಣನಂತೆ ಥೋರ ಭಾಗ್ಯವ ಕೊಟ್ಟುನರಕಕ್ಕೆ ಇಡುವನೋ ದುರ್ಜನರುಗಳನುಸಾರ ಭಕುತರಿಗೆ ದಾರಿದ್ರ್ಯಾದಿಗಳನ್ನು ಕೊಟ್ಟುಪಾರುಗಾಣಿಸುವನು ರಂಗವಿಠಲರೇಯ

 

೮೯
ಮುಂದೆ ಕೆಟ್ಟು ಬಂದವರಹಿಂದಕೆ ಹಾಕಿಕೊಂಡ ಬಳಿಕಬಂದ ಗುಣದೋಷಗಳ ಎಣಿಸುವರೆ ಎಲೆ ದೇವಾ !ಅಂದವಲ್ಲ ನಿನ್ನ ಘನತೆಗೆತಂದೆತಾಯಿಗಳು ತಮ್ಮಕಂದನವಗುಣಗಳೆಣಿಸುವರೆ?ಎಂದೆಂದಿಗೆನ್ನ ಉದ್ಧರಿಸಬೇಕೆಲೆ ದೇವಸಂದೇಹವ್ಯಾತಕೆ ನಮೋ ರಂಗವಿಠಲಯ್ಯ

 

ಈ ಉಗಾಭೋಗದಲ್ಲಿ ‘ಪಂಡರಂಗೀಪುರೀಪತಿ’
೯೦
ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆಎನ್ನ ಮನವನು ಬಿಡದಿಹ ಹರಿ ಜನ್ನರ ಜನ್ನ ನರಹರಿ ಗೋವಿಂದಎನ್ನ ಮನವನು ಬಿಡದಿಹ ಪುಂಡರೀಕಮನಪಿರಿಯಾನೆಯಯ್ಯಪಂಡರಂಗಿಪುರೀಪತಿ ಸಿರಿರಂಗವಿಠಲ

 

೯೧
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲಶರಣು ಬಂದವನ ರವಿಯ ತನಯನ ನೋಡುಮರೆಯದೆ ಭಜಿಸೋ ರಂಗವಿಠಲರೇಯನ

 

ತಮ್ಮ ಆರ್ತಭಾವವನ್ನು
೨. ಆತ್ಮನಿವೇದನೆ
೫೫
(ಸುಳಾದಿ)
ಅನ್ನಂತ ಕಾಲದಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊಅನ್ನಂತ ಕಾಲದಲಿ ನಿನ್ನವನೆನಿಸದೆ ಮೂರುಖನಾದೆನೊಅನ್ನಂತ ಕಾಲದಲಿ ನಿನ್ನ ಚರಣಗತಿಯಿಲ್ಲದೆ ನೊಂದೆನೊಅನ್ನಂತ ಕಾಲದಲಿ ಅದಾವ ಪುಣ್ಯದಿಂದ ಬಂದು ಇಂದುನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನನಿನ್ನಲ್ಲೆರಗಿತೊ ನೋಯದಂತೆಎನ್ನ ಪೊರೆದು ಪಾಲಿಸೊ ದೀನನಾಥ ಶ್ರೀರಂಗವಿಠಲ ೧
ಮಠ್ಯತಾಳ
ಅನ್ನಕ ಭಯದ್ರವಿಣ ದೇಹನಿಮಿತ್ತಅನ್ನಕ ಶೋಕಾಶಯ ಮಾರಿಅನ್ನಕ ಲೋಭ ಅಶುಭದ ಲಾಭಅನ್ನಕ ನನ್ನದು ನಾನೆಂಬ ಹಮ್ಮಿಕೆಆವನ್ನಕ ನಿನ್ನ ಚರಣರತಿ ದೊರೆಕೊಳ್ಳದೊಉನ್ನಂತ ಗುಣಪರಿಪೂರ್ಣ ರಂಗವಿಠಲ೨
ತ್ರಿಪುಟ ತಾಳ
ತೊಳಲಿ ಸಂಸಾರ ಚಕ್ರದಲಿಬಳಲಿದ ಜೀವಗಣಕೆ ಸಂತಸನಳಿನನಾಭಾ ನಿನ್ನ ಪದಾಂಭೋಜನೆಳಲುನೆಮ್ಮುಗೆಯಲ್ಲವೆಒಳವೆ ಜಗದೊಳು ಸಕಲ ಸುಖಂಗಳುಕಳವಳಿಸುವರು ರಂಗವಿಠಲ ೩
ರೂಪಕ ತಾಳ
ನೀ ಕರುಣಿಯೆಂದು ನಿನ್ನ ನಾ ಮರೆಹೊಕ್ಕೆನಿರಾಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತನ್ಯವನರಿಯೆನುನಿನ್ನವನೆಂಬೆ ನಾನು ಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ೪
ಪರರ ಬಾಗಿಲು ಕಾಯಿದು ಹೋಯಿತೀ ಸಂಸಾರ
ಪರರ ಗುಣಗಳ ತುತಿಸಿ ಹೋಯಿತೀ ನಾಲಗೆ
ಪರರ ಹಾರಿ ಹಾರಿ ಹೋಯಿತ್ತಿಂತೆನ್ನ ಮನ
ಪರಮ ಕಾರುಣಿಕನೆ ನಮೋ ರಂಗವಿಠಲಯ್ಯ ೫
ಅಟ್ಟತಾಳ
ಎನ್ನ ಮನ ಹರಿ ನಿನ್ನ ಚರಣದೊಳೊಮ್ಮೆಎರಗದು ದುರಿತ ದುಷ್ರ‍ಕತವೆಂತು ಸೈರಿಪೆನೊನಂದನಂದನ ಮುಕುಂದ ಎಂತು ಸೈರಿಪೆನೊಮಂದಹಾಸ ಗೋವಿಂದ ಎಂತು ಸೈರಿಪೆನೊಎನ್ನ ಮನವನು ನಿನ್ನ ಚರಣದೊಳೊಮ್ಮೆಎರಗಿಸೊ ರಂಗವಿಠಲ ಎಂತು ಸೈರಿಪೆನೊ೬
ತ್ರಿಪುಟ ತಾಳ
ವ್ರತ ಜಪತಪ ಯಾಗಂಗಳ ಮಾಡುವೆನೆಂದುಮನೆಮನೆದಪ್ಪದೆ ತಿರುಗಿ ಬಳಲಿದೆಬೆಲೆಗೆ ಹೋಗದು ಸರಕು ಸಡಿಲದಯ್ಯಾ ಹರಿಯೆಕೊಂಬುವರಿಲ್ಲ ಬೆಲೆಗೆ ಹೋಗದು ಸರಕುಸಡಿಲುವಂತೆ ಮರೆಗೆ ತೆಗೆದು ನಿನ್ನಚರಣದಡಿಯಲ್ಲಿಟ್ಟು ಕಾಯೊ ರಂಗವಿಠಲ ೭
ಏಕತಾಳ
ಭವವೆಂಬಟವಿಯಲ್ಲಿ ಭಯಕೊಳದಲಿ ಸಿಕ್ಕಿತಾಪತ್ರಯವೆಂಬ ದಾವಾನಲ ತಪ್ತ ನರರಿಗೆಹರಿ ನಿನ್ನ ನಾಮಾಶ್ರಯವಲ್ಲದೆ ಮತ್ತುಂಟೆಯಮಲೋಕದಲ್ಲುಂಟೆ ತನುಪರಿಣ ವಲ್ಲಭಅಮೃತ ವಸರುವ ಪದಪದುಮದನೆಳಲ ನೆಲೆಮನೆಯಲಿ ಎನ್ನನಿರಿಸೊ ರಂಗವಿಠಲ ೮
ಜತೆಬೆಂದ ಸಂಸಾರದಿ ಬಂದು ನೊಂದು ಬಳಲಿದೆನಯ್ಯನಂದ ನಂದನ ಕಾಯೊ ರಂಗವಿಠಲ

 

ಇದು ಮಧುರೆಗೆ ಹೋದ ಕೃಷ್ಣನನ್ನು
೨೭
ಸುಳಾದಿ
ಧ್ರುವತಾಳ
ಈ ವನದೆಡೆಗಳು ಈ ವನಲತೆಗಳುಈ ನದಿಪುಳಿನಗಳೀ ಶಶಿಶಿಲೆಗಳುಈ ಸುರತರು ನೆಳಲು ಶುಕಪಿಕರವಯಾಕೆ ಮಾಧವನ ಮರೆಯಲೀಯದಿವೆ ಕೆಳದಿಈ ಮುಗುಳುನಗೆಯ ಸೊಬಗಈ ಸುರತರು ನೆಳಲೀ ರತಿಯಈ ಸುರತವನರಿದ ಬಾಲೆಯರೆಂತೊಈ ಸುಗುಣಮಯ ರಂಗವಿಠಲನೆ ಕೆಳದಿ ೧
ಮಠ್ಯತಾಳ
ಇನ್ನು ರಂಗನ ಸಂಗವು ಎತ್ತಣದು ಗೋಪಿಯರಿಗೆಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನಮಧುರೆಯ ಮಾನಿನಿಯರು ರತಿವಿದಗ್ಧರಾವಧುಗಳು ರಸಿಕ ನಮ್ಮ ರಂಗವಿಠಲ ೨
ತ್ರಿಪುಟತಾಳ
ಇನ್ಯಾತಕೆ ರಂಗ ಇಲ್ಲಿಗೆ ಬಾಹಾಮಧುರಾಪುರಿಯರಸನಾದಮಲ್ಲರ ಕೊಂದ ಮಾವನ್ನ ಮಡುಹಿದಮಧುರಾಪುರಿಯರಸನಾದಅವನ ನೆನಹೆ ಸಾಕು ರಂಗವಿಠಲನಾ ೩
ರೂಪಕತಾಳ
ಬಿಡುವರು ಅಧನರ ಗಣಿಕೆಯರು ನೆರೆಬಿಡುವದು ವಿಫಲ ತರುವ ದ್ವಿಜಗಣಬಿಡುವವು ಮೃಗ ದಳ್ಳುರಿಗೊಂಡಡವಿಯಬಿಡುವನು ಜಾರ ಪರವಧುವನು ನೆರೆದಿನ್ನುಇವು ದಿಟವಾಯಿತು ನಮ್ಮ ವಲ್ಲಭನೊಳುಅಕಟಾಕಟ ರಂಗವಿಠಲನು ಕರುಣಿಯೆ೪
ಅಟ್ಟತಾಳ
ಕುಂದಕುಸುಮ ಶಶಾಂಕ ರಂಜಿತವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ-ವಿಂದ ನಯನನು ಹಾ ಹಾಕಂದಿದೆವು ಕುಂದಿದೆವು ನಾವುಕಂದರ್ಪನ ಶರದಟ್ಟುಳಿಗೆ ಹಾಇಂದುಮುಖಿಯರ ವೃಂದದೊಳಗೆ ಕೃಷ್ಣಾಅಂದು ನಮ್ಮೊಡನಾಡಿದ ಪರಿಯನು ತಾನುಇಂದೊಮ್ಮೆಯಾದರೂ ನೆನೆವನೆ ಹಾ ಹಾಎಂದಿಗಾದರೂ ರಂಗವಿಠಲನಿಲ್ಲಿಗೆ ಬಹನೆ ೫
ಝುಂಪೆತಾಳ
ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆಅಂದಿನಕ್ರೂರನೆಂಬ ಕ್ರೂರನು ಮರಳಿ ಬಂದನಾನಮ್ಮ ಕರೆದೊಯ್ಯಲಿಬೇಕೆಂದುಅಂದೆಮ್ಮ ಕೊಂದಇಂದ್ಯಾರ ಕೊಲ್ಲಲು ಬಂದಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗಅಂದೆಮ್ಮನಗಲಿಸಿದ ರಂಗವಿಠಲನಾ ೬
ಏಕತಾಳ
ಹೆತ್ತ ತಾಯಿ ತಂದೆಯರ ನೋಡಲೆಂದುಇತ್ತಲಟ್ಟಿದನೆ ಉದ್ಭವ ನಿನ್ನ ಗೋವಳಾಮತ್ತ್ಯಾರುಂಟು ವ್ರಜದಲ್ಲಿ ನೆನೆವರುಹತ್ತಿರಕೆ ತನ್ನವರಲ್ಲಿ ತಾ ಬಿಡುವನೆಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣಮತ್ತಳಿಗೆ ಕುಸುಮದ ನೇಹದಂತೆಶಕ್ತಿ ಎಮ್ಮಳುಂಟು ರಂಗವಿಠಲಗೆ ೭
ಝಂಪೆತಾಳ
ಪರಮ ಸುಖದಾಸೆ ಈತನ ಸೇವೆ ಅಲ್ಲವೆಒರೆದಳೆ ಪಿಂಗಳೆ ಜನರಿಗೆ ಹಿತವನುಅರಿದರಿದು ಬಿಡುವ ನಾವು ನರಪಶುಗಳಲ್ಲವೆಸಿರಿಮಣಿ ಬಿಡನು ನಮ್ಮ ರಂಗವಿಠಲನ್ನ ೮
ಏಕತಾಳ
ಎಮ್ಮ ತನುಮನ ತನ್ನಧೀನವಲ್ಲೆಅನ್ಯವರಿಯೆವು ತನ್ನರಿದಂತೆ ಮಾಡಲಿಎಮ್ಮನವು ತನ್ನಧೀನವಲ್ಲೆಅನ್ಯವರಿಯೆವು ತನ್ನರಿದಂತೆ ಮಾಡಲಿನಮ್ಮ ರಂಗವಿಠಲರೇಯಗೆಇನ್ನು ಸಲೆ ಮಾರುಹೋದೆವೆ ಕೆಳದಿ೯
ಜತೆ ಅವನ ಹಂಬಲವೆಮಗೆ ಜೀವನವವ್ವಾ ಭುವನಮೋಹನ ರಂಗವಿಠಲನು ಕರುಣಿಯೆ

 

೬೩
(ಸುಳಾದಿ)
ಧ್ರುವತಾಳ
ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂದ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ರ‍ಕತ ಫಲವು
ನಿನ್ನಾಧೀನ ಚರಾಚರವೆಂದು ಶೃತಿ ಸಾರುತಲಿವೆಇಂತು ಪುಣ್ಯ ಪಾಪವೆಲ್ಲ ನಿನ್ನ ಲೇಪಿಸವೊ ದೇವಎಂತು ಜೀವರನು ಪುಣ್ಯ ಪಾಪಂಗಳನುಣಿಸುವೆಅಂತರಾತ್ಮನೆ ನಿನ್ನ ಮಹಿಮೆಗೆ ನಮೋ ಎಂಬೆ ೧
ಮಠ್ಯತಾಳ
ಮುನ್ನ ನಿನ್ನ ಚರಣ ಕಮಲವ ನಂಬಿದೆಭವಭವಂಗಳಲಿ ಬಂದೆನೋಪನ್ನಗೇಶಶಯನ ಶ್ರೀಹರೇಇನ್ನು ಬಿಡೆನೊ ಬಿಡೆನಯ್ಯಾ ಸಂಪನ್ನಎನ್ನ ಗುಣ ದೋಷವರಸದೆಇನ್ನು ಕಾಯೊ ರಂಗವಿಠಲ ೨
ರೂಪಕ ತಾಳ
ಕರಣಗಳು ಬಿಡದೆ ತಮ್ಮ ತಮ್ಮವಿಷಯಂಗಳಿಗೆ ಎಳವುತಲಿವೆಎನ್ನ ಹರಣ ನಿನ್ನದು ಕರುಣಾಕರನೇಈ ಧರೆ ರವಣ ಮಾಣಿಸೋ ಹರಿಯೇನಿನ್ನ ಚರಣ ಭಕುತರ ಶರಣನಾದೆನುಹೊರೆವುದು ಎನ್ನ ರಂಗವಿಠಲರೇಯ ೩
ಅಟ್ಟತಾಳ
ಬಂದು ಬಂದು ನಾನಾ ಭವದಲ್ಲಿ ಬೆಂದೆನಯ್ಯನಂದನಂದನ ಇಂದಿರಾನಂದಕುಂದ ಶುದ್ಧ ಧವಳದಂತೆ ಮಂದಹಾಸನಂದನ ಕಂದ ಇಂದಿರಾನಂದಇಂದೆನ್ನ ಸಲಹಯ್ಯ ರಂಗವಿಠಲ ೪
ಏಕತಾಳ
ಹರಿಯೇ ನಿನ್ನ ಒಮ್ಮೆ ನೆನೆದವನರಕವ ಹೊಗನಂತೆಆನು ಒಮ್ಮೆ ಇಮ್ಮೆ ನೆನೆವೆನಯ್ಯಆನು ನಿನ್ನ ನಂಬಿದೆ ಕರುಣಿಗಳರಸಹೊರೆದೆನ್ನ ಕಾಯೊ ರಂಗವಿಠಲ ೫
ಜತೆಮಂಗಳ ಮಹಿಮ ಭುಜಂಗಶಯನ ನಮೋ ಜಂಗುಳಿ ದೈವದ ಗಂಡ ರಂಗವಿಠಲ

 

ಇಕ್ಕೋ ನೋಡೆ ರಂಗನಾಥನ
೧. ದೇವದೇವತಾ ಸ್ತುತಿ
ಅ) ಶ್ರೀ ಹರಿಯ ಗುಣಗಾನ

ಇಕ್ಕೋ ನೋಡೆ ರಂಗನಾಥನ ಚಿಕ್ಕ ಪಾದವ ಪ
ಸಿಕ್ಕಿತೆ ಶ್ರೀಲಕ್ಷ್ಮೀಪತಿಯ ದಿವ್ಯ ಪಾದವ ಅ.ಪ
ಶಂಖ ಚಕ್ರ ಗದಾ ಪದ್ಮ ಅಂಕಿತ ಪಾದವಅಂಕುಶ ಕುಲಿಶ ಧ್ವಜರೇಖಾ ಅಂಕಿತ ಪಾದವಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವಸಂಕಟಹರಣ ವೆಂಕಟೇಶನ ದಿವ್ಯ ಪಾದವ ೧
ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ ೨
ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವಬಂಡಿಲಿದ್ದ ಶಕಟಾಸುರನ ಒದ್ದ ಪಾದವಅಂಡಜ ಹನುಮರ ಭುಜದೊಳೊಪ್ಪುವ ಪಾದವಕಂಡೆÀವೇ ಶ್ರೀರಂಗವಿಠಲನ ದಿವ್ಯ ಪಾದವ ೩

 

ಹಾಡಿನ ಹೆಸರು :ಇಕ್ಕೋ ನೋಡೆ ರಂಗನಾಥನ
ಹಾಡಿದವರ ಹೆಸರು :ಸುಕನ್ಯಾ ಪ್ರಭಾಕರ್
ರಾಗ :ಶ್ರೀರಾಗ
ತಾಳ :ಆದಿ ತಾಳ ತ್ರಿಶ್ರನಡೆ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ
ಸ್ಟುಡಿಯೋ :

ನಿರ್ಗಮನ

 

ಉತ್ತಮರಸಂಗಯೆನಗಿತ್ತು
೫೮
ಉತ್ತಮರಸಂಗಯೆನಗಿತ್ತು ಸಲಹೋ ಪ
ಚಿತ್ತಜಜನಕ ಸರ್ವೋತ್ತಮ ಮುಕುಂದಅ.ಪ.
ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣ ಜನನಗಳೆರಡು ಪರಿಹರವ ಮಾಡಯ್ಯ ೧
ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ ೨
ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆಪನ್ನಗಾಧಿಪಶಯನ ಮನ್ನಿಸಯ್ಯಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದಎನ್ನೊಡೆಯ ರಂಗವಿಠಲ ಎನ್ನದೊರೆಯೇ ೩

 

ಹಾಡಿನ ಹೆಸರು :ಉತ್ತಮರಸಂಗಯೆನಗಿತ್ತು
ಹಾಡಿದವರ ಹೆಸರು :ಅಮೃತ ದೇಶಪಾಂಡೆ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

 

ಭಕ್ತಿ ಬೇಕು ವಿರಕ್ತಿ ಬೇಕು
೭೧
ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ಪ
ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕುಮತಿವಂತನಾಗಬೇಕು ಮತ ಒಂದಾಗಿರಬೇಕು ೧
ಜಪದ ಜಾಣುವೆ ಬೇಕು ತಪದ ನೇಮವೆ ಬೇಕುಉಪವಾಸ ವ್ರತ ಬೇಕು ಉಪಶಾಂತವಿರಬೇಕು ೨
ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕುಶ್ರೀರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು ೩

 

ಹಾಡಿನ ಹೆಸರು :ಭಕ್ತಿ ಬೇಕು ವಿರಕ್ತಿ ಬೇಕು
ಹಾಡಿದವರ ಹೆಸರು :ಶೈಲಾ ಭಂಡಾರ್‍ಕರ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *