Categories
ರಚನೆಗಳು

ಶ್ರೀಶ ಕೇಶವದಾಸರು

ಇವು ಉಡುಗಣಿಯಲ್ಲಿರುವ
ರಾಘವೇಂದ್ರ ಸ್ವಾಮಿಗಳು

ಅಂತರಂಗದಿ ಹರುಷವಾಂತೆವೈ ಗುರುವೆ ಪ
ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ
ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು |
ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ ||
ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ |
ಸಿಂಗರದಿ ನಿಂದಿಹರೊ ಗುರುರಾಘವೇಂದ್ರ ೧
ಧಾರುಣೀಸುರರೆಲ್ಲ ಧೀರಯತಿವರ ನಿನಗೆ |
ಚಾರುವಿಭವದಿ ಕವಚ ಧಾರಣೆಯ ಗೈಸೆ ||
ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ |
ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ ೨
ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು|
ಮಂದಹಾಸದಲವರ ಸೇವೆಯನು ಕೊಂಡೆ ||
ಇಂದು ಬೃಂದಾವನದಿ ನಿಂದು ದರ್ಶನವಿತ್ತೆ |
ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ ೩
ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ |
ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ ||
ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ |
ಎಡರುಗಳ ಪರಿಹರಿಸೊ ಗುರುರಾಘವೇಂದ್ರ೪
ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ |
ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ ||
ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ |
ಕರುಣದಲಿ ತೋರೀಗ ಶ್ರೀಶಕೇಶವನ೫

 


ಕರುಣಾಸಾಗರ ಬಾ ಗುರುವೆ |
ಚರಣ ಕಮಲವನು ಸಾರಿದೆನೈ ಸ್ವಾಮಿ ಪ
ಏನೆಂದು ಬಣ್ಣಿಪೆ | ದೀನವತ್ಸಲಪ್ರಭುವೆ |
ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ೧
ಗುರುರಾಘವೇಂದ್ರನೆ | ಶರಣರ ಸುರತರುವೆ |
ನಿರುತ ಎಮ್ಮೊಳು ಕೃಪೆಯ ತೋರಿದಿರೈ ಸ್ವಾಮಿ ೨
ಶ್ರೀ ಸುಧೀಂದ್ರಾರ್ಯರ | ಭಾಸುರಪ್ರಿಯತನಯ |
ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ ೩

 

ಇದು ಕಡೂರಿನಲ್ಲಿ ಭೀಮಸೇತು

ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ |
ಶರಣಜನರಿಷ್ಟವನೆ ಸುರತರುವಿನಂತೀವೆ ಪ
ತರಳಪ್ರಹ್ಲಾದನಾಗಿರಲು ವರಭಕುತಿಯಿಂ |
ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ ೧
ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ |
ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ ೨
ಶ್ರೀರಾಮಚಂದ್ರಪದಸರಸೀರುಹಾಭೃಂಗ |
ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ ೩
ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ |
ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ ೪
ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ |
ಭರದಿ ನಾರಾಯಣಪುರಕೈದಿದಿಯೊ ಮುದದಿ ೫
ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ |
ದೇ ಮಹಾಸೇವೆಯ ಕೈಗೊಂಡೆಯೋ ಮುದದಿ ೬
ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ |
ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ ೭

 

ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರ

ಚರಣಕಮಲಯುಗಕೆ ನಮಿಪೆ ನಿರುತವನುದಿನ |
ಶ್ರೀ ರಾಘವೇಂದ್ರ ಪ
ಪರಿಪರಿ ಶರಣರ ಪೊರೆಯುವ
ಕರುಣಾಸಾಂದ್ರ ಯತಿಕುಲೇಂದ್ರ ಅ.ಪ
ವೇನಮತವಿದಾರ ಸುಂದರ ಜ್ಞಾನದಾತ ಗುರುವರ |
ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ ೧
ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ |
ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ ೨
ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು |
ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ೩
ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ |
ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ ೪
ಶ್ರೀಶಕೇಶವಾಂಘ್ರಿದೂತ ದಾಸಜನನುತ |
ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ ೫

 

ಇದು ಶ್ರೀ ಪಾಂಡುರಂಗ ವಿಠ್ಠಲನ ಭಜನೆ.
ಶ್ರೀಹರಿಸ್ತುತಿ

ಜೈ ಜೈ ವಿಠ್ಠಲ ಪಾಂಡುರಂಗ |
ಜೈ ಹರಿ ವಿಠ್ಠಲ ಪಾಂಡುರಂಗ ೧
ಮಕರಕುಂಡಲಧರ ಪಾಂಡುರಂಗ |
ರಕುಮಯೀಧವ ಪಾಂಡುರಂಗ ೨
ರಾಧಾರಾಧಿತ ಪಾಂಡುರಂಗ |
ಸಾಧುಜನಾರ್ಚಿತ ಪಾಂಡುರಂಗ ೩
ನೀಲಶರೀರ ಪಾಂಡುರಂಗ |
ಕಾಲಾಂತಕಪ್ರಿಯ ಪಾಂಡುರಂಗ ೪
ಸರಸಿಜವದನ ಪಾಂಡುರಂಗ |
ಕರಿರಾಜವರದ ಪಾಂಡುರಂಗ ೫
ವನಜಲೋಚನ ಪಾಂಡುರಂಗ |
ವನಜಾಸನನುತ ಪಾಂಡುರಂಗ ೬
ಕಟಿಕರದ್ವಯ ಪಾಂಡುರಂಗ |
ಕುಟಿಲಾಂತಕಹರೆ ಪಾಂಡುರಂಗ ೭
ಪಾವನಚರಣ ಪಾಂಡುರಂಗ |
ಭಾವಜಪಿತಹರೆ ಪಾಂಡುರಂಗ ೮
ಮಣಿಮಕುಟಧರ ಪಾಂಡುರಂಗ |
ಫಣಿಪತಿಶಯನ ಪಾಂಡುರಂಗ೯
ಸಿರಿವತ್ಸಾಂಕಿತ ಪಾಂಡುರಂಗ |
ದುರಿತವಿದೂರ ಪಾಂಡುರಂಗ ೧೦
ವನಮಾಲಾಂಕಿತ ಪಾಂಡುರಂಗ |
ವನಜನಾಭಹರೆ ಪಾಂಡುರಂಗ ೧೧
ಪೀತಾಂಬರಧರ ಪಾಂಡುರಂಗ |
ವಾತಾತ್ಮಜನುತ ಪಾಂಡುರಂಗ ೧೨
ಖಗಪತಿವಾಹನ ಪಾಂಡುರಂಗ |
ಜಗದೋದ್ಧಾರ ಪಾಂಡುರಂಗ ೧೩
ಪಂಡರಾಪುರಾಧಿಪ ಪಾಂಡುರಂಗ |
ಪುಂಡರೀಕವರದ ಪಾಂಡುರಂಗ ೧೪
ಮೀನಶರೀರ ಪಾಂಡುರಂಗ |
ದೀನಮಂದಾರ ಪಾಂಡುರಂಗ ೧೫
ಮಂದರಧರ ಶ್ರೀ ಪಾಂಡುರಂಗ |
ಸಿಂಧುಶಯನಹರೆ ಪಾಂಡುರಂಗ ೧೬
ಸೂಕರರೂಪಕ ಪಾಂಡುರಂಗ |
ಶ್ರೀಕರಸೇವಿತ ಪಾಂಡುರಂಗ ೧೭
ನರಕಂಠೀರವ ಪಾಂಡುರಂಗ |
ನರಕಾಂತಕಹರೆ ಪಾಂಡುರಂಗ ೧೮
ವಾಮನವೇಷ ಪಾಂಡುರಂಗ |
ಸಾಮಗಾನಪ್ರಿಯ ಪಾಂಡುರಂಗ ೧೯
ಕ್ಷಾತ್ರಕುಲಾಂತಕ ಪಾಂಡುರಂಗ |
ಧಾತ್ರೀರಮಣ ಪಾಂಡುರಂಗ ೨೦
ರಾಮಚಂದ್ರಹರೆ ಪಾಂಡುರಂಗ |
ಕಾಮಿತಫಲದ ಪಾಂಡುರಂಗ ೨೧
ದೇವಕಿನಂದನ ಪಾಂಡುರಂಗ |
ಪಾವನಚರಿತ ಪಾಂಡುರಂಗ ೨೨
ಬತ್ತಲೆನಿಂದಿಹ ಪಾಂಡುರಂಗ |
ಉತ್ತಮದೇವನೆ ಪಾಂಡುರಂಗ ೨೩
ತೇಜಿಯನೇರಿದ ಪಾಂಡುರಂಗ |
ಸೋಜಿಗಪುರುಷನೆ ಪಾಂಡುರಂಗ೨೪
ಗಾನವಿನೋದಿ ಪಾಂಡುರಂಗ |
ಭಾನುಪ್ರಕಾಶ ಪಾಂಡುರಂಗ ೨೫
ಸುರನರವಂದಿತ ಪಾಂಡುರಂಗ |
ಸುರಭಿನಿವಾಸ ಪಾಂಡುರಂಗ ೨೬
ಮುಕುತಿದಾಯಕ ಪಾಂಡುರಂಗ |
ಭಕುತಪೋಷಕ ಪಾಂಡುರಂಗ೨೭
ಅಗಣಿತಗುಣಗಣ ಪಾಂಡುರಂಗ |
ತ್ರಿಗುಣಾತೀತಾ ಪಾಂಡುರಂಗ ೨೮
ಚಂದ್ರಭಾಗನುತ ಪಾಂಡುರಂಗ |
ಚಂದ್ರಮೌಳಿಹಿತ ಪಾಂಡುರಂಗ೨೬
ಸುರನದಿಜನಕ ಶ್ರೀ ಪಾಂಡುರಂಗ |
ಸುರಮುನಿಸನ್ನುತ ಪಾಂಡುರಂಗ೩೦
ಜ್ಞಾನಿಗಳರಸನೆ ಪಾಂಡುರಂಗ |
ದಾನವಾಂತಕ ಪಾಂಡುರಂಗ ೩೧
ಭಾಸುರಾಂಗ ಶ್ರೀ ಪಾಂಡುರಂಗ |
ಭೂಸುರವಂದಿತ ಪಾಂಡುರಂಗ೩೨
ಅಷ್ಟಕರ್ತೃಪ್ರಿಯ ಪಾಂಡುರಂಗ |
ಸೃಷ್ಟಿಗೊಡೆಯ ಶ್ರೀ ಪಾಂಡುರಂಗ ೩೩
ಸರ್ವವ್ಯಾಪಕ ಪಾಂಡುರಂಗ |
ಉರ್ವಿರಮಣ ಪಾಂಡುರಂಗ ೩೪
ಕೃತಿರಮಣಹರೆ ಪಾಂಡುರಂಗ |
ಶೃತಿತತಿವಿನುತ ಪಾಂಡುರಂಗ ೩೫
ಜೀವನಿಯಾಮಕ ಪಾಂಡುರಂಗ |
ಜೀವೋತ್ತಮನುತ ಪಾಂಡುರಂಗ೩೬
ಲೋಕನಾಯಕ ಪಾಂಡುರಂಗ |
ನಾಕಾಧಿಪನುತ ಪಾಂಡುರಂಗ ೩೭
ವೇದವೇದ್ಯವಿಭೋ ಪಾಂಡುರಂಗ |
ಮೋದದಾಯಕ ಪಾಂಡುರಂಗ೩೮
ಯೋಗಿರಾಜ ಶ್ರೀ ಪಾಂಡುರಂಗ |
ಭಾಗವತಪ್ರಿಯ ಪಾಂಡುರಂಗ೩೯
ಪುರಾಣಪುರುಷ ಪಾಂಡುರಂಗ |
ಕರುಣಿಗಳರಸನೆ ಪಾಂಡುರಂಗ೪೦
ಪಾಪನಾಶಕ ಪಾಂಡುರಂಗ |
ತಾಪತ್ರಯಹರೆ ಪಾಂಡುರಂಗ೪೧
ಧರ್ಮಸ್ಥಾಪಕ ಪಾಂಡುರಂಗ |
ಕರ್ಮಾಧಿಪತೆ ಪಾಂಡುರಂಗ೪೨
ಕಪಿಲವತಾರ ಪಾಂಡುರಂಗ |
ಕಪಟನಾಟಕ ಪಾಂಡುರಂಗ೪೩
ಆದಿರಹಿತಹರೆ ಪಾಂಡುರಂಗ |
ಬಾದರಾಯಣ ಪಾಂಡುರಂಗ೪೪
ನೊಂದೆನೋ ಭವದೊಳು ಪಾಂಡುರಂಗ |
ಮುಂದೆ ದಾರಿಯೇನೋ ಪಾಂಡುರಂಗ ೪೫
ದಾಸಜನಪ್ರಿಯ ಪಾಂಡುರಂಗ |
ಪಾಶಪರಿಹರಿಸೊ ಪಾಂಡುರಂಗ ೪೬
ಎಷ್ಟು ಮಹಿಮೆಯೋ ಪಾಂಡುರಂಗ |
ಎಷ್ಟು ಪೊಗಳಲೋ ಪಾಂಡುರಂಗ ೪೭
ಕಷ್ಟ ಬಿಡಿಸೋ ನೀ ಪಾಂಡುರಂಗ |
ಇಷ್ಟದಾಯಕ ಪಾಂಡುರಂಗ ೪೮
ಜನಿಸಲಾರೆನೊ ಪಾಂಡುರಂಗ |
ಜನುಮ ನೀಗಿಸೊ ಪಾಂಡುರಂಗ ೪೯
ನಿನ್ನ ನಂಬಿಹೆನೋ ಪಾಂಡುರಂಗ |
ಘನ್ನಮಹಿಮನೆ ಪಾಂಡುರಂಗ ೫೦
ನೀನೆ ಗತಿಯೋ ಹೇ ಪಾಂಡುರಂಗ |
ದೀನವತ್ಸಲನೆ ಪಾಂಡುರಂಗ ೫೧
ಬೇಡುವೆನನುದಿನ ಪಾಂಡುರಂಗ |
ನೀಡೋ ನಿನ್ನಯ ಪಾದ ಪಾಂಡುರಂಗ೫೨
ಜಯಮಂಗಳಹರೆ ಪಾಂಡುರಂಗ |
ಶುಭಮಂಗಳಹರೆ ಪಾಂಡುರಂಗ ೫೩
ದೋಷದೂರಹರೆ ಪಾಂಡುರಂಗ |
ಶ್ರೀಶಕೇಶವ ಪಾಂಡುರಂಗ ೫೪

 

ದಾವಣಗೆರೆಯಲ್ಲಿರುವ ಶ್ರೀ ರಾಘವೇಂದ್ರ

ತುಂಗಾತೀರದಿ ನೆಲಸಿಹಗೆ |
ಮಂಗಳ ಗುರು ರಾಘವೇಂದ್ರನಿಗೆ |
ಗಂಗಾಜನಕನ ಭಕುತ ಶ್ರೇಷ್ಠ ಯತಿ |
ಪುಂಗವನೆನಿಸುತೆ ಮೆರೆವವಗೆ ||ಮಂಗಳಂ ಜಯ ಮಂಗಳಂ|| ಪ
ದಾವಣಗೆರೆಯೊಳು ನಿಂದವಗೆ|
ಕೋವಿದ ಭೂಸುರ ಸೇವ್ಯನಿಗೆ|
ಧಾವಿಸಿ ಬರುತಿಹ ದೀನಜನಾಳಿಗೆ|
ದೇವ ತರುವಿನಂತೀವನಿಗೆ ||ಮಂಗಳಂ ಜಯ ಮಂಗಳಂ|| ೧
ಮಧ್ವಶಾಸ್ತ್ರ ಪಠಿಸಿರುವವಗೆ |
ಶುದ್ಧ ಟೀಕೆಗಳ ರಚಿಸಿದಗೆ|
ಸದ್ವೈಷ್ಣವ ಸುಪ್ರೀತನಿಗೆ ಪರಿ |
ಶುದ್ಧ ಮೂರ್ತಿ ರಾಘವೇಂದ್ರನಿಗೆ ||ಮಂಗಳಂ ಜಯ ಮಂಗಳಂ|| ೨
ಶ್ರೀ ಸುಧೀಂದ್ರ ಕರಾಜಾತನಿಗೆ |
ಭಾಸುರ ರಘುವೀರಾರ್ಚಿಪಗೆ|
ಶ್ರೀಶಕೇಶವ ಪಾದಾರಾಧಕಗೆ ಸುರ|
ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ||೩

 

ಈ ಕೀರ್ತನೆಯು ಶಿವಮೊಗ್ಗದಲ್ಲಿರುವ
೧೦
ಧನ್ಯನಾದೆನಾ ಗುರು ಪ
ಸನ್ನುತಾಂಗ ಗುರುರಾಜರ ನೋಡಿಅ.ಪ
ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು |
ಮುನ್ನ ಮಾಡಿದಪರಾಧಗಳೆಣಿಸದೆ| ಉನ್ನತ
ಸುಖಗಳನೀವರ ನೋಡಿ ೧
ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ|
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು|
ಅಧಮರ ಮುರಿದಿಹ ಧೀರರ ನೋಡಿ೨
ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು |
ಭಾಸುರಾಂಗ ಯತಿರಾಘವೇಂದ್ರರನು| ಈ ಸಮಯದಿ
ಕೊಂಡಾಡುತೆ ನೋಡಿ೩

 

ಇದು ಶ್ರೀ ಕೃಷ್ಣನ

ನೊಂದೆನೊ ಭವದೊಳಗೆ | ಗೋಪಾಲ |
ಇಂದು ನೀ ಕಾಯಬೇಕು | ಗೋಪಾಲ ಪ
ಸಿಂಧುಶಯನಯನ್ನ | ಕುಂದುಗಳೆಣಿಸದೆ |
ಬಂದು ನೀ ಸಲಹಬೇಕೋ | ಗೋಪಾಲಅ.ಪ
ನಾನಾಜನುಮದಿ | ನಾನಾರೂಪವ |
ನಾನೆನಿತಾಂತೆನೋ | ಮಾನನಿಧೇ ||
ಹೀನಜನರ ಕೂಡಿ | ನಾನರಿಯದೆ ನಿನ್ನ |
ಶ್ವಾನನಂತಾದೆನಲ್ಲೋ | ಗೋಪಾಲ ೧
ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ |
ಇಳೆಯಭೋಗಕೆ | ಮನವೆಳೆದಿತೊಪ್ರಾಯ ||
ಕಳೆಯಲು ಪ್ರಾಯವು | ಗಳಿತುದು ಕಾಯ |
ಬಳಲುವೆನಿಳೆಯೊಳಗೆ | ಗೋಪಾಲ ೨
ಸಿರಿಯತನದಿ ನಾ | ಮರೆಯುತ ನಿನ್ನನು |
ಪರಿಪರಿವಿಭವದಿ | ಮೆರೆದೆನೊ ಜೀಯ ||
ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ |
ಪೊರೆಯುವರಾರಿಹರೋ | ಕೃಪಾಳೋ ೩
ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ |
ಉನ್ನತಮಹಿಮನೆ | ಘನ್ನಸಂಪನ್ನ ||
ಮುನ್ನಮಾಡಿದ | ಪರಾಧಗಳೆಣಿಸದೆ |
ಮನ್ನಿಪರಾರಿಹರೋ | ಮುರಾರೆ೪
ಆಶಪಾಶಂಗಳು | ಬೀಸಿದ ಬಲೆಯೊಳು |
ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ ||
ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ |
ದಾಸನೆಂದೆನಿಸೊ ನಿನ್ನಾ | ಗೋಪಾಲ ೫

 

೧೧
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ
ಕರುಣಾಳೋ ಮುನಿ | ವಂಶಸುಧಾಕರ |
ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ
ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು |
ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ ||
ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ |
ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ ೧
ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ |
ವಡನೆ ಗಂಧವ ತೇದೆ | ಅನಲನ ಜಪಿಸುತೆ ||
ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು |
ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ೨
ಬಾದರಾಯಣಮುನಿ | ಭೇದಮತವ ಬಿತ್ತೆ |
ಮೋದತೀರ್ಥರು ತರುವ | ಸಾದರಗೈದರೊ ||
ಸ್ವಾದಫಲಂಗಳು | ನಿನ್ನಿಂದ ತೋರ್ದವು |
ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ ೩

 

ಇದು ಶಿಕಾರಿಪುರ
ವಾಯುದೇವರು

ಬಾರಯ್ಯ ಬಾರೋ ಮಾರುತಿ ಪ
ಅಕ್ಷಯಕುವರನ | ಕುಕ್ಷಿಯನೋಡಲು |
ಪಕ್ಷಿವಾಹನರಾಮ | ಈಕ್ಷಣ ಕರೆವ ಬಾ ೧
ದುರುಳ ದುಶ್ಶಾಸನನ | ಉದರವ ಭಂಗಿಸೆ |
ತರಳೆದ್ರೌಪತಿ ದೇವಿ | ಕರೆದಳೊ ಬೇಗ ೨
ಮಧ್ವಮುನಿಯೆ ನಿನ್ನ | ಶುದ್ಧತತ್ವದಿ ನಮ್ಮ |
ಉದ್ಧರಿಸಲು | ಅನಿರುದ್ಧನು ಕರೆವ ಬಾ ೩
ಜಗದಿ ಭ್ರಾಂತೇಶನೆ | ಮೃಗಯಾಪುರದೊಳು |
ಮಿಗಿಲು ರಥವನೇರಿ | ಸೊಗಸಿಲಿ ಬೇಗ ಬಾ ೪
ಶ್ರೀಶಕೇಶವದೂತ | ಭೂಸುರವಿನುತ |
ದಾಸರ ಸಲಹಲಿನ್ | ಈ ಸಮಯದಿ ಬೇಗ೫

 

ಇದು ದಾವಣಗೆರೆಯಲ್ಲಿ ಪ್ರತಿಷ್ಠಿತವಾಗಿರುವ
೧೨
ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ |
ಇಂದು ಬಿನ್ನೈಸುವೆವು ನಿನ್ನಡಿಗೆ ಪ
ಬಂದಿಹದು ಖರವರುಷ ಜೇಷ್ಠದಿ |
ಇಂದು ದಿನವಂಭತ್ತು ವದ್ಯದಿ |
ಇಂದು ನಿಮ್ಮಾಗಮನವತಿಶಯ |
ವೆಂದು ತೋರುವ ಸುದಿನವೆಮಗೆಅ.ಪ
ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ |
ನಾಲಿಗೆಯು ಒಣಗುತ್ತಲಿಹುದು |
ಕಾಲಕಾಲಕೆ ಮಳೆಯು ಬಾರದೆ |
ಮೇಲೆನಿಪ ಶಾಲ್ಯಾನ್ನವೀದಿನ |
ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ ೧
ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ |
ಬಂದ ರಾಜನ ಮೊರೆಯ ಕೇಳುತಲಿ |
ಅಂದು ಧಾನ್ಯಾಗಾರದೊಳು |
“ಶ್ರೀ” ಬೀಜಮಂತ್ರವ ರಚಿಸಿ ಭಕುತರ |
ಕುಂದುಗಳ ಕಳೆಯುತ್ತಲಕ್ಷಯ |
ದನ್ನ ವುಣಿಸಿದೆ ಜನಕೆ ಗುರುವೇ ೨
ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ |
ಧರ್ಮಕೃತಿಗಳೆ ಕಂಡುಬರುತಿಹವು |
ಕರ್ಮದಲ್ಲಾಸಕ್ತಿ ತೊರೆಯುತೆ |
ಮರ್ಮವರಿಯಲು ಇಂದು ಜನಪದ
ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ೩
ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು |
ಭಕುತರಿಷ್ಟಾರ್ಥವನು ನೀಡುತಲಿ |
ಸಕಲಜನ ತವ ಸೇವೆಗೈಯಲು |
ಲಕುಮಿಯರಸನ ದಯದಿ ಶರಣರ |
ಕಕುಲತೆಯ ಕಳೆಯುತ್ತಲೆಲ್ಲರ |
ಮುಕುತರಾಗುವ ತೆರದಿ ಹರಸೈ೪
ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು |
ದೇಶದೊಳು ಸುಖಶಾಂತಿ ಸ್ಥಾಪಿಸಲಿ |
ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ |
ಎಸೆವ ರಘುವೀರರ ಸುಸಮ್ಮುಖ |
ದಾಶೆಯಲಿ ಬಿನ್ನಹ ಗುರುವೇ ೫

 

೧೩
ಶ್ರೀಯತಿವರ ನಮಿಪರ ಸುರತರುವೆ | ಮಮಗುರುವೆ |
ನಿರುತದಿ ಭಕುತರ ಪೊರೆವೆ ಅ.ಪ
ದಯಾಸಾಂದ್ರ ರಾಘವೇಂದ್ರ | ಸುರುಚಿರಮಂತ್ರಾಲಯೇಂದ್ರ |
ಭಕುತವೃಂದ | ಕುಮುದಚಂದ್ರ
ಜಯಯತಿವರ ನಮಿಪರ ಸುರತರುವೆ ೧
ಭಾಸುರಾಂಗ ಜಿತಾನಂದ | ರಘುವರಪದಮಲಭೃಂಗ |
ಕಾವಿವಸನಭೂಷಿತಾಂಗ
ಜಯಯತಿವರ ನಮಿಪರ ಸುರತರುವೆ ೨
ಶ್ರೀಸುಧೀಂದ್ರವರಕುಮಾರ | ಶ್ರೀಶಕೇಶವಾಂಘ್ರಿರುಚಿರ |
ದೋಶನಾಶ ಮುನಿಕುಲೇಶ
ಜಯಯತಿವರ ನಮಿಪರ ಸುರತರುವೆ ೩

 

ಇದು ಸೊರಬದಲ್ಲಿ ದಂಡಾವತಿ ನದಿ

ಸಿರಿವರಾ | ಬಾ ಸುಂದರಾ ||
ಸುರಭೀಶ ಸುರನುತ | ಸಿರಿವತ್ಸಭೂಷಿತ ಪ
ದಂಡಾವತಿಯವರ | ದಂಡೇಯೋಳ್ ನೆಲಸಿದ |
ಪುಂಡರೀಕಾಕ್ಷ ಕೋ | ದಂಡಪಾಣಿ ಹರೇ ಬಾ ಸುಂದರಾ ೧
ನಂದಗೋಪನ ಕಂದ | ನಂದಭದ್ರೆಯರಿಂದ |
ನಿಂದು ಕ್ಷೀರದಿ ಮಿಂದು | ಸಿಂಧುಶಯನ ಹರೇ ಬಾ ಸುಂದರಾ ೨
ಮಂಗಳ ಮಹಿಮ ಶ್ರೀ | ರಂಗನಾಥನೆ ಪೊರೆ |
ಅಂಗಜಪಿತ ಯದು | ಪುಂಗವ ಶ್ರೀಶಕೇಶವ ಬಾ ಸುಂದರಾ ೩

 

ನೊಂದೆನೊ ಭವದೊಳಗೆ

ನೊಂದೆನೊ ಭವದೊಳಗೆ | ಗೋಪಾಲ |
ಇಂದು ನೀ ಕಾಯಬೇಕು | ಗೋಪಾಲ ಪ
ಸಿಂಧುಶಯನಯನ್ನ | ಕುಂದುಗಳೆಣಿಸದೆ |
ಬಂದು ನೀ ಸಲಹಬೇಕೋ | ಗೋಪಾಲಅ.ಪ
ನಾನಾಜನುಮದಿ | ನಾನಾರೂಪವ |
ನಾನೆನಿತಾಂತೆನೋ | ಮಾನನಿಧೇ ||
ಹೀನಜನರ ಕೂಡಿ | ನಾನರಿಯದೆ ನಿನ್ನ |
ಶ್ವಾನನಂತಾದೆನಲ್ಲೋ | ಗೋಪಾಲ ೧
ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ |
ಇಳೆಯಭೋಗಕೆ | ಮನವೆಳೆದಿತೊಪ್ರಾಯ ||
ಕಳೆಯಲು ಪ್ರಾಯವು | ಗಳಿತುದು ಕಾಯ |
ಬಳಲುವೆನಿಳೆಯೊಳಗೆ | ಗೋಪಾಲ ೨
ಸಿರಿಯತನದಿ ನಾ | ಮರೆಯುತ ನಿನ್ನನು |
ಪರಿಪರಿವಿಭವದಿ | ಮೆರೆದೆನೊ ಜೀಯ ||
ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ |
ಪೊರೆಯುವರಾರಿಹರೋ | ಕೃಪಾಳೋ ೩
ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ |
ಉನ್ನತಮಹಿಮನೆ | ಘನ್ನಸಂಪನ್ನ ||
ಮುನ್ನಮಾಡಿದ | ಪರಾಧಗಳೆಣಿಸದೆ |
ಮನ್ನಿಪರಾರಿಹರೋ | ಮುರಾರೆ೪
ಆಶಪಾಶಂಗಳು | ಬೀಸಿದ ಬಲೆಯೊಳು |
ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ ||
ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ |
ದಾಸನೆಂದೆನಿಸೊ ನಿನ್ನಾ | ಗೋಪಾಲ ೫

 

ಹಾಡಿನ ಹೆಸರು :ನೊಂದೆನೊ ಭವದೊಳಗೆ
ಹಾಡಿದವರ ಹೆಸರು :ಸದಾಶಿವ ಪಾಟೀಲ್
ರಾಗ :ಮಧುವಂತಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು
ನಿರ್ಗಮನ

Leave a Reply

Your email address will not be published. Required fields are marked *