Categories
ರಚನೆಗಳು

ಶ್ರೀಶಪ್ರಾಣೇಶವಿಠಲರು

೩೨೩
ವರದೇಂದ್ರವಿಠಲರ ಹಾಡು
ಆಶೆಯ ಬಿಡಿಸಯ್ಯಾ | ಶ್ರೀಶ ಪ್ರಾ |ಣೇಶ ದಾಸರಾಯಾ ||ವಾಸುದೇವನ ಕಥೆ ಸೋಸಿಲಿ ಪಾಡುವ |ಲೇಸು ಭಕುತಿ ನೀಡೋ | ನೋಡೋ ಪ
ಹರಿ ಗುರುಗಳ ಪ್ರಿಯಾ ನೆನಿಸೀ |ಮೆರೆದಿಯೊ ಗುರುರಾಯಾ ||ಸರುವದ ಶ್ರೀ ಹರಿ ಸ್ಮರಣೆಯ ಮಾಡುತ |ಧರೆಯೊಳು ಚರಿಸಿದ | ಭರದಿ ೧
ಜ್ಞಾನ ಶೂನ್ಯನಾಗೀ ಜಗದಿ |ಮಾನವರಿಗೆ ಬಾಗಿ |ದಾನವಾ ಧ್ಯಾನ ಮಾಡದೇ |ಹೀನನಾದೆನು ನಾನು | ಇನ್ನೇನು ೨
ವರದೇಂದ್ರರ ಸದನಾ | ಬಳಿಯಾ |ಇರುತಿಹ್ಯ ಜಿತ ಮದನಾ ||ಮರುತ ಮತದ ಸದ್ಗ್ರಂಥದ ಸಾರವ |ತ್ಪರಿತದಿಂ ಪೇಳ್ದಿ | ಬಾಳ್ದಿ ೩
ಕಂದನೆಂದುಯೆನ್ನ | ಕಾಯ್ವದು |ಸುಂದರ ಗುರು ಮುನ್ನಾ ||ನಂದ ಕಂದನ ಅಂದ ಪಾದವಾ |ಚಂದದಿ ತೋರೋ | ಬಾರೋ ೪
ವರದೇಂದ್ರ ವಿಠಲನ್ನ | ಧ್ಯಾನದಿ |ನಿರುತದಿ ಇರಿಸೆನ್ನಾ ||ಪರಮ ಭಾಗವತ ಪದಧೂಳಿಯಲಿ |ಪೊರಳಾಡಿಸೋ ಯಂದೇ | ತಂದೇ ೫

 

೩೧೫
ಶ್ರೀಫಲಮಾರು ಕೃಷ್ಣಣ್ಣನವರಿಗೆ
ಅಂಕಿತಪದ
ಇಂದಿರೇಶ ವಿಠಲರಾಯ ಆ |ನಂದದೀಯೋ ಭಕುತಗೆ ಜೀಯ್ಯಾ ಪ
ನಿನ್ನ ನಾಮ ಸ್ರ‍ಮತಿ ಒದಗಲಿ ಪಾ |ವನ್ನ ಮತದೀ ನಡೆಯಲೀ |ನಿನ್ನ ಕಥೆಗಳ ಕೇಳಲಿ ಪ್ರ |ಪನ್ನರ ಸಹವಾಸವಾಗಲಿ ೧
ಅನ್ಯ ದೈವಂಗಳ ನೋಡದೆ ಮ |ತ್ತನ್ಯ ಶಾಸ್ತ್ರಂಗಳೋದದೇ ||ಅನ್ಯರನು ಕೊಂಡಾಡದೇ ಹರಿ |ನಿನ್ನನೇ ನೋಡಿ ಹಿಗ್ಗುವದೇ ೨
ಶ್ರೀಶ ಪ್ರಾಣೇಶ ವಿಠ್ಠಲರೇಯಾ ದು |ರಾಶಿ ಎಂಬುದು ನೀ ಬಿಡಿಸಯ್ಯಾ ||ಲೇಸಾಗಿ ಇವನೆ ಬೇಡುವನಯ್ಯಾ ನೀ |ಮೀಸಲ ಮನವಿತ್ತು ಸಲಹಯ್ಯಾ ೩

 

೩೧೩
ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಸ್ತೋತ್ರ
ಕಂಡು ಬಹಳ ಧನ್ಯನಾದೆನೋ |ಸಿರಿಮಂಗಳಾತ್ಮರ ಪ
ಕಂಡು ಬಹಳ ಧನ್ಯನಾದೆ |ಪುಂಡರೀಕಾಕ್ಷ ತೋಂಡರ ಪಾದ ||ಪುಂಡರೀಕ ವೀಕ್ಷಣ ಮಾತ್ರ ಘ |ತುಂಡುಗೈಸಿ ಪೊರೆವರನ್ನ ಅ.ಪ.
ಆ ಸುಕೃತ ಜಂಬುಖಂಡಿ ಶ್ರೀನಿ |ವಾಸಾರ್ಯಾಬ್ಧಿ ಸಂಭವ ||ಕೋವಿದಾಗ್ರಣಿಯ ಆದ |ಶ್ರೀ ವಾದಿರಾಜಾಚಾರ್ಯರನ್ನ ೧
ಭೂತದಯಾ ಶೀಲ ದಮನಮೋ |ಪೇತರಾಗಿ ಪೃಥ್ವಿಯೊಳು ಶ್ರೀ |ನಾಥನೊಲುಮೆಯನ್ನು ಪಡೆದು |ಖ್ಯಾತ ಭುವನ ಪಾವನ ಮಾಳ್ಪರಾ ೨
ಶ್ರೀಶ ಪ್ರಾಣೇಶ ವಿಠಲ ಹೃದಯಾ |ಕಾಶದಲ್ಲಿ ಸಿರಿಯು ಸಹಿತ ||ವಾಸವಾಗಿ ತೋರಿ ಪೊಳೆವ |ಭಾಸುರ ಕೀರ್ತಿಲಿ ಮೆರೆವರನ್ನೆ ೩

 

೩೦೫
ಚಿಲಕರಾಗಿ ಶ್ರೀ ಪ್ರಾಣೇಶನ ಸ್ತೋತ್ರ
(ಲಿಂಗಸುಗೂರಿನ ಹತ್ತಿರ ಚಿಲಕರಾಗಿ ಗ್ರಾಮದಲ್ಲಿರುವ ಗೇಣರಾಯನೆಂಬ ಪ್ರಾಣದೇವರು)
ಗೇಣುರಾಯ ನಿನ್ನಾಮಹಿಮಿಯ |ಸ್ಥಾಣು ಅರಿಯ ಮುನ್ನಾ |ದೀನ ರಕ್ಷಕನೆಂಬೋ ಬಿರುದು ಕೇಳಿತವ |ಧ್ಯಾನವ ಕೊಡು ಎಂದೇ, ತಂದೇ ಪ
ರವಿಜನ ಭಯದಿಂದ ಕಪಿಗಳು |ಲಯ ಚಿಂತೆಗಳಿಂದಾ ||ಪವನ ಕುವರ ಕಂಡಾಕ್ಷಣ ಈ ಭಯ |ತವಕನಚ್ಚಿ ಪೊರದೀ, ಮೆರದೇ ೧
ಭೂಸುರ ಚಿಂತಿಸೆ ಬರಿದೀ ಈ |ಮೊರಿ ಕೇಳಿ ಆ ಶಿಶುವಿನ ಉಳಾಹಿದೇ ||ಘಾಸಿಗೊಳಿಸುವ ಘಳಬಕನೊರಸಿ |ಭಾಸುರ ಕೀರ್ತನೆಯ ಪೊರದಿ ಇಷ್ಟಾರ್ಥವ ಕರದೀ ೨
ಪರಿಯೊಳು ಚಿಲಕರಾಗಿ ಗ್ರಾಮದೊಳು |ಮೆರೆಯುವ ಯತಿಯೋಗೀ ||ಗುರುಶ್ರೀಶ ಪ್ರಾಣೇಶ ವಿಠಲನ |ಚರಣ ಪೊಕ್ಕವರ ಸಲಹುವ ಕರುಣೀ | ಯೇಧಣಿ ೩

 

೨೯೮
ಶ್ರೀ ವೆಂಕಟೇಶ ದೇವರ ಸ್ತೋತ್ರ
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ
ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು ೧
ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ ೨
ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ ೩

 

೩೨೨
ವರದೇಶವಿಠಲರ ಹಾಡು
ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ
ದಾಸರಾಯರ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ ೧
ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ ೨
ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ ೩
ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ ೪
ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ ೫
ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ ೬
ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ ೭

 

೩೨೦
ತಿರುಪತಿವಿಠಲರ ಹಾಡು
ದಾಸರಾಯರ ನೋಡಿದ್ಯಾ | ಶ್ರೀಶ ಪ್ರಾಣೇಶ |ದಾಸರಾಯರ ನೋಡಿದ್ಯಾ ||ದಾಸರಾಯರ ಪಾದಾಶ್ರಯವ ಮಾಡಲು |ದೋಷಗಳೋಡಿಸಿ ಶ್ರೀಶನೊಲಿಸಿ ಕೊಡುವ ಪ
ಸ್ನಾನದಿ ಮಹಮಂತ್ರವ | ನಿತ್ಯದಿ ಮಾಡಿ |ಜ್ಞಾನಪೂರ್ವಕ ಜಪವು ||ದ್ಯಾನದಿ ಬಿಂಬನ ಹವಣಿ ಮನದಿಂದ |ಮೌನದಿ ಪೂಜಿಸ್ವಾನಂದದೊಳಿರುವಂಥ ೧
ಸತತ ಶ್ರೀ ಹರಿಯ ನಾಮ | ಸ್ಮರಣೆಯೊಳು |ರತರಾಗಿಕೊಂಡು ಪ್ರೇಮ ||ಗತಿಗೆ ನೀನೆ ಜಗತ್ಪತಿಯೆಂದು ನಿಶ್ಚಯ |ಮತಿವುಳ್ಳ ಮಹಿಮನ ತುತಿಸುವ ಗುರುಗಳ ೨
ಮೊದಲರ ಪದ್ಧತಿಯ | ತಿಳಿದು ಮಾಡೆ |ಪದುಮನಾಭನ ಸೇವೆಯು ||ಪದ ಸುಳಾದಿಗಳರ್ಥ | ಮುದದಿ ಕೇಳುತ ಜಗ |ದುದರ ತಿರುಪತಿ ವಿಠಲನ್ನೆನದು ನಲಿವ ಮುದ್ದು ೩

 

೩೧೦
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ
ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ ೧
ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ ೨
ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ ೩

 

೩೨೫
ಶ್ರೀವರದ ವಿಠಲರ ಹಾಡು
ದೋಷರಾಶಿಯ ಕಳೆದು ಪಾಲಿಸುವದು |ಶ್ರೀಶ ಪ್ರಾಣೇಶ ದಾಸಾರ್ಯನೇ ಒಲಿದು ಪ
ಹರಷಮುನಿ ಮತ ತತ್ವಪರಮ ಹರುಷದಲಿಂದ |ಗರೆದು ಸುಜನರಿಗೆ ಸರಿಮಾರ್ಗತೋರಿ ||ಸಿರಿರಾಮನಾಮದ ಸವಿಯನುಣಬಡಿಸಿದೆ |ಕರಪಿಡಿದು ರಕ್ಷಿಪ ಭಾರ ನಿನ್ನದುಯೆಂದೆ ೧
ದಾಸಕುಲರತ್ನ ಗುರು ಪ್ರಾಣೇಶದಾಸರಲಿ |ವಾಸುದೇವನ ಸ್ಥಿರದಾಸ್ಯ ಪಡೆದು ||ಶ್ರೀಶ ಪ್ರಾಣೇಶ ವಿಠಲನ ಕುಣಿಸಿದ ಧೀರ |ಆಶಪಾಶವ ಬಿಡಿಸು ಎಂದು ನಾ ಬಂದೆ ೨
ನಂದ ವತ್ಸರದ ಭಾದ್ರಪದ ಮಾಸದಲ್ಲಿ |ಚಂದ್ರಪಕ್ಷವು ಅಷ್ಟಮಿ ತಿಥಿ ಭೌಮ್ಯದಿನದಿ ||ಮುಂದ ಕಾಲದಿ ನರಹರಿಯ ಧೇನಿಸಿ ನಲಿದು |ಇಂದಿರಾಧವ ವರದ ವಿಠಲನೂರಿಗೆ ನಡೆದೆ ೩

 

೩೦೦
ದಶಾವತಾರ ಸ್ತೋತ್ರ
ನಾರಾಯಣ ಗೋವಿಂದ | ಹರಿ |ನಾರಾಯಣ ಗೋವಿಂದ |ಪಾರಾಶರ ಸುತನಂದ | ಹರಿ |ನಾರಾಯಣ ಗೋವಿಂದ ಪ
ವೇದವ ಕದ್ದೊಯ್ಯಲು ಆತಮನಾ |ಬಾಧಿಸಿ ನಿಗಮವ ತಂದ ೧
ದಿವಿಜರು ಚ್ಯುತಬಲರಾಗಿರಲಮೃತವ |ದಿವಿಜರಿಗುಣಿಸಿದ ನಂದಾ ೨
ಖಳನು ಭೂಮಿಯ ಕದ್ದೊಯ್ಯಲುತಾ |ಪೊಳೆವ ಕೋರಿಯಲಿ ತಂದಾ ೩
ತರುಳನ ಪರಿಪರಿ ಬಾಧಿಸುತಿರಲಾ |ದುರುಳ ದೈತ್ಯನ ಕೊಂದ ೪
ಬಲಿಯಪರಾಧವ ನೊಂದೆಣಿಸದೆ ತಾ |ವರಿದು ಬಾಗಿಲಲಿ ನಿಂದ ೫
ಕ್ಷತ್ರಿಯ ಬಲವನೆಲ್ಲ ಸವರಿ ನಿ |(ಶ್ಚ) ಕ್ಷತ್ರರ ಮಾಡಿದ ನಂದಾ ೬
ವರಮುನಿ ಶಾಪದಿ ಶಿಲೆಯಾಗಿರಲು |ದ್ಧರಿಸಿದ ಪರಮಾನಂದಾ ೭
ಮಡದಿ ಗೋಪಿಯರ ಒಡನಾಡಿದ |ಪಾಲ್ಗಡಲ ಶಯನ ಮುಕ್ಕುಂದಾ ೮
ತ್ರಿಪುರದ ಸ್ತ್ರೀಯರ ವೃತಗೆಡಿಸಿದ | ವಟು |ವಪು ಮೃಡಮುಖ ಸುರವಂದ್ಯಾ ೯
ಪುರುಷೋತ್ತಮ ಯವನರ ಸಂಹರಿಸಿ |ತುರಗವನೇರಿ ನಿಂದಾ ೧೦
ಶ್ರೀಶ ಪ್ರಾಣೇಶ ವಿಠಲ ಈ ಸರ್ವರ |ಪೋಷಕ ನಾನಹುದೆಂದಾ ೧೧

 

೨೯೯
ಶ್ರೀ ಅನಂತಶಯನನ ಸ್ತೋತ್ರ
(ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು)
ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ
ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ.
ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ ೧
ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ ೨
ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ ೩

 

೩೦೧
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ
ಪಾಲಿಸಯ್ಯಾ ಶ್ರೀ | ಪ್ರಾಣರಾಯ | ಪಾಲಿಸಯ್ಯಾ ||ಪಾಲಿಸಯ್ಯಾ ಶ್ರೀ ಲೋಲನ ಭೃತ್ಸನೆ |ವಾಲಯದಲಿ, ಮಹದುರಿತವ ತರಿದು ಪ
ಶರಣು ಪೊಕ್ಕವರ ಸಲಹುವನೆಂದು |ವರವೇದಂಗಳು ಸಾರುತಲಿಹವೊ ೧
ಶಿಶುವಿನ ತಪ್ಪೆಣಿಸದೆ ಆ ಜನನಿಯು |ಬಿಸುಟದೆ ತ್ಪರದಿಂ ಕರುಣ ಮಾಳ್ಪವೋಲ್ ೨
ಶ್ರೀಶ ಪ್ರಾಣೇಶ ವಿಠಲನ ದಾಸಾಗ್ರಣಿ |ನೀ ಸದಾ ಕರುಣ್ಯುಪೇಕ್ಷ ಮಾಡದೇ ೩

 

೩೧೧
ಪೋಷಿಸೆನ್ನ ಜೀಯಾ | ಗುರು |ಪ್ರಾಣೇಶ ದಾಸರಾಯಾ |ಶ್ರೀಶನ ಗುಣ ಸಂತೋಷದಿ ಪಾಡುವ |ದಾಸ ಕುಲಾಗ್ರಣಿಯೇ | ಎಣಿಯೆ ಪ
ಹರಿಸ್ಮರಣೆಯ ಮರೆದೂ | ಸರ್ವದ |ಪದದನ್ನಕೆ ಬೆರಿದೂ |ದುರುಳ ಜನರ ಸಹವಾಸವನ್ನು ಮಾಡಿ |ಬಂದೆ ದಿನವ ಕಳೆದೇ ಉಳದೇ ೧
ಪವನ ಮತದೊಳಿಟ್ಟೂ | ಶ್ರೀ ಹರಿ |ಸ್ತವನವನ್ನೆ ಕೊಟ್ಟೂ |ಕವಿಗಳ ಮುಖದಿಂ ತತ್ವವಿಚಾರದಿ |ಕವಲ ಮತಿಯ ಪಾಲಿಸೀ, ಉದ್ಧರಿಸೀ ೨
ಮನ್ನ ಭಿನ್ನಪವನ್ನು ಕೇಳಿ |ಮನ್ನಿಸು ಸುರಧೇನೂ |ಘನ್ನ ಶ್ರೀಶ ಪ್ರಾಣೇಶ ವಿಠಲನ ಧ್ಯಾನ |ವನ್ನು ಮಾಳ್ವ ಶಕ್ತಾ ವಿರಕ್ತಾ ೩

 

೩೦೪
ಪ್ರಾಣರಾಯ ನೀನಲ್ಲದೆ ಮತ್ತನ್ಯ |ಪ್ರಾಣರು ಜಗದೊಳುಂಟೇ ||ದೀನರಕ್ಷಕನೆಂಬ ಬಿರುದಿಗೆ | ಪ್ರೇಮಾದಿ (ಪ್ರೇಮದಿ)ನೀನೆ ರಕ್ಷಿಸಬೇಕೈ ಪರಾಕೈ ಪ
ಹಿಂದೆ ಭಕುತರನು ಪೊರೆದನಂಬುದು ಕೇಳಿ |ಬಂದು ವಂದಿಸುವೆ ನನ್ನ ||ಕಂದನ ಅಪರಾಧ ನೀನೆಣಿಸದೆ ಭವ |ಬಂಧನ ಪರಿಹರಿಸೋ ಉದರಿಸೋ ೧
ವಂದಿಪ ಶರಣರ ಪೊರೆಯಬೇಕೆನುತಲಿ |ಬಂದು ಬಾಗಿಸೋಪಿಲಿ ||ಛಂದದಿ ವನದೊಳು ನಿಂದಾದಲತ ಗೋ |ವಿಂದರಾಯವಲದೀ ನೀ ನಲಿದೀ ೨
ಈಸು ಮಹಿಮೆಯನು ತುತಿಸಲು ಖಗಪಾರ್ವ |ತೀಶರಿಗಸದಳವೈ ||ಶ್ರೀಶ ಪ್ರಾಣೇಶ ವಿಠಲದ ದಾಸಾಗ್ರಣಿ |ಈ ಸಮಯದಿ ಪಾಲಿಸೋ, ಲಾಲಿಸೋ ೪

 

೩೦೩
(ಲಿಂಗಸುಗೂರಿನ ಹತ್ತಿರ ಇರುವ ಬಾಗಿಸೋಪಿನ ಗ್ರಾಮದ ಶ್ರೀ ಪ್ರಾಣೇಶನ ಸ್ತೋತ್ರ)
ಬಾಗಿ ಸೋಪಿಲಿ ವಾಸವಾಗಿಹ |ಯೋಗಿ ಪ್ರಾಣರಾಯಾ ||ಚಾಗುಮಾಡದೆ ಭಕ್ತರ ದುರಿತವ |ನೀಗಿ ಸಲಹಯ್ಯಾ ಪ
ಕಪಿಗಳೆಲ್ಲಾ ಸುಗ್ರೀವನ ಭಯದಿಂ |ತಪಿಸುತಲಿರೆ ಅವರಾ ||ಲಪನ ಕಾಣುತಲೆ ಅಭಯವನಿತ್ತು |ನಿಪೊರೆದೆ ಕಪಿವರಾ ೧
ಹಿಂದೆ ಭೂಸುರನು ಚಿಂತಿಸುತಿರಲಾ |ನಂದದಿಂದ ಏನಾ ||ಬಂಧನಾ ಬಿಡಿಸಿದೆ ಬಕನನು ಕೊಂದು |ತಂದೇ ಶ್ರೀಪವನಾ ೨
ಈಶನೆ ತಾನೆಂತೆಬುವ ಖಳರಾ ಸೋಸಿನಲ್ಲಿ ಮುರಿದೇ ||ಶ್ರೀಶ ಪ್ರಾಣೇಶ ವಿಠಲರಾಯನೇ |ಪರದೈವವೆಂದೊರದೇ ೩

 

೩೦೮
ಶ್ರೀ ಜಗನ್ನಾಥದಾಸರ ಸ್ತೋತ್ರ
ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ
ಭೂಮಿಯೊಳಗೆ ಜನಿಸಿದ, ಪ್ರಥಮದಿಸುಲ್ಹಾದ |ಜನರಿಗೆ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ ೧
ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ ೨
ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ ೩
ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು ೪
ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ ೫

 

೩೦೬
ಶ್ರೀ ರಾಘವೇಂದ್ರ ಗುರುರಾಜರ ಸ್ತೋತ್ರ
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ
ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ ೧
ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ ೨
ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ ೩
ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) ೪
ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ ೫

 

೩೨೪
ವರದೇಂದ್ರವಿಠಲರ ಹಾಡು
ನಿರ್ಯಾಣ ಸ್ತೋತ್ರ
ವಾಸುದೇವನ ಪುರ ಪ್ರವೇಶಿಸಿದರು |ಈಶ ಭಜಕ ಶ್ರೀಶ ಪ್ರಾಣೇಶದಾಸಾರ್ಯ ಪ
ಉತ್ತಂಕ ಋಷಿಯಂತೆ ಉತ್ತಮ ಗುರುಪಾದ |ಅತ್ಯಂತ ಭಕ್ತಿಯಿಂ ಸ್ತುತಿಸಿ ಯಜಿಸಿ ||ಉತ್ತಮ ಶ್ಲೋಕ ಶ್ರೀ ಪುರುಷೋತ್ತಮನ ಗುಣವ |ನೃತ್ಯ ಗೀತದಿ ಪಾಡಿ ಮೃತ್ಯಲೋಕವ ತ್ಯಜಿಸಿ ೧
ವಾಸ ವಾಸರದಲಿ ವಾಸುದೇವನ ಕಥೆಯ |ಭೂಸೂರರಿಗೆ ಪೇಳಿ ತೋಷದಿಂದ ||ವಾಸವಾದ್ಯಮರ ವಂದಿತನ ಪಾದದಿ ಭಕ್ತಿ |ಲೇಸಾಗಿ ತೋರಿ ಭವಕ್ಲೇಶವನು ಪರಿಹರಿಸಿ ೨
ಅಬ್ಧನಂದನ ಭಾದ್ರಪದ ತಿಥಿ ಅಷ್ಟಮಿಯ |ಶುದ್ಧ ಭೌಮ್ಯವಾಸರದ ಉಷಃಕಾಲದಿ ||ಮುದ್ದು ಪ್ರಲ್ಹಾದನ್ನ ಪೊರೆದ ನರಹರಿರೂಪ |ಹೃದ್ಗುಹಾದಲಿ ನೋಡಿ ಹರುಷವನು ಬಡುತಲಿ ೩
ದಾಸ ಕುಲ ಶ್ರೇಷ್ಠ ಗುರು ಪ್ರಾಣೇಶದಾಸರಿಂ |ಶ್ರೀಶ ಪ್ರಾಣೇಶ ವಿಠಲೆಂಬಂಕಿತಾ ||ಸೋಸಿನಿಂದಲಿ ಪಡೆದು ಶ್ರೀಶ ಮಹಿಮೆ ಉ- |ಲ್ಲಾಸದಿಂದಲಿ ಭಜಿಸಿ ಬೇಸರವನಳಿಯುತಾ ೪
ಮರುತನೆ ಪರಮ ಗುರು, ಹರಿಯೆ ಪರದೇವತೆ |ಪುರಂದರರೆ ದಾಸರೆಂದರುಹಿ ಧರೆಗೆ ||ವರದೇಂದ್ರ ವಿಠಲನ ಚರಣವನು ಪೂಜಿಸಿ |ದರಣಿ ಸಾಧನವನ್ನು ತ್ವರಿತದಿಂದಲಿ ಮುಗಿಸಿ ೫

 

೩೧೨
ನಿರ್ಯಾಣ ಸ್ತೋತ್ರ
ವಾಸುದೇವನ ಪುರಕೆ ತೆರಳಿದಾರು |ಶ್ರೀಶನಾ ಪ್ರಿಯ ಗುರು ಪ್ರಾಣೇಶ ದಾಸಾರ್ಯ ಪ
ಸ್ನಾನ ಊಧ್ರ್ವಪುಂಡ್ರಗಳ ವಿಧಿಯಿಂಧರಿಸೀ ಸಂ |ಧ್ಯಾನ ಗಾಯತ್ರಿ ಜಪವನ್ನು ಮಾಡಿ ||ಮನುರಾಗದಿ ಬಿಂಬ ಮೂರ್ತಿ ಧ್ಯಾನಮಾಡೀ ತತ್ವ |ಮಾನಿಗಳೊಳೊಂಮ್ಮಿಂದೊಮ್ಮೆ ಆನಂದದಿಂದಲೀ ೧
ಹರಿಯೆ ಸರ್ವೋತ್ತಮಾ ತದ್ರಾಣಿ ಶಿರಿಬೊಮ್ಮ |ಮರುತ ದೇವರೆ ಗುರುವು, ತಾರತಮ್ಯ ||ವರಪಂಚಭೇದ ಜ್ಞಾನವನರಿತು ಮನದಿ ಹರಿ |ಪುರದೊಳಿಹ ಪರಮ ಭಕ್ತರ ಕಾಣಬೇಕೆನುತ ೨
ಮೋಕ್ಷರೌದ್ರೀ ಅಬ್ಧಮಾಘದರ್ಶಾ ಪೂರ್ವಭಾದ್ಧರಾ |ನಕ್ಷತ್ರ ಸೋಮವಾರದಿದ್ದವ ದ್ವಿತಿಯ ಯಾಮದೀ |ಲಕ್ಷಿ ಇಟ್ಟೂ ಲಯದ ಚಿಂತನೆಯ ಗೈಯುತಲಿ |ಪಕ್ಷಿವಾಹನ ಶ್ರೀಶಪ್ರಾಣೇಶ ವಿಠಲೆನುತ ೩

 

೩೧೪
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ
ವೆಂಕಟ ವಿಠಲರೇಯ ನಿನ್ನಯಪದ |ಪಂಕಜ ಸ್ಮರಣಿಯಿತ್ತು ||ಕೊಂಕು ಮತಿಯ ಕಳೆದು |ಸಂಕಟ ಪರಿಹರಿಸಿ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ.
ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ ೧
ತರತಮ ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ ೨
ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ ೩

 

೩೦೭
ಶ್ರೀ ಗುರು ರಾಜರಿಗೆ ಆರುತಿ ಬೆಳಗಿರೆ ಪ
ಶ್ರೀ ರಾಘವೇಂದ್ರರಾಯಾ ಸೂರಿ ಪರಾಕೂ |ಪರಿಮಳ ವಿರಚಿಸಿದವನೆ ಪರಾಕು |ಧರೆಯೊಳು ಮಂತ್ರಾಲಯ ನಿಲಯ ಪರಾಕು |ಗುರು ವಸುಧೇಂದ್ರರ ಕುವರ ಪರಾಕೆಂದು |ಹರದೇರಾರುತಿಯಾ ಬೆಳಗಿರೆ ೧
ದಂಡಕಮಂಡಲಧರ ಪರಾಕು |ಪಂಡಿತರೊಡೆಯ ವಿಕ್ರಮನೆ ಪರಾಕು |ಚಂಡ ದುರ್ವಾದಿ ಮತ ಮುರಿದ ಪರಾಕು |ಗಂಡುಗಲಿ ಹರಿಯಾ ಪರಾಕೆಂದು |ಪುಂಡಲೀಕದಾರುತಿಯಾ ಬೆಳಗೀರೆ೨
ಶ್ರೀಶ ಪ್ರಾಣೇಶ ವಿಠಲದೂತ ಪರಾಕೂ |ಶ್ರೀಶನ ಗುಣಗಳ ತುತಿಪ ಪರಾಕೂ |ಆಶೇಶು ಹೇಮಂತ ಮೆರೆವ ಪರಾಕೂ |ದೇಶಿಕ ಶ್ರೇಷ್ಠ ನಿರ್ದುಷ್ಟ ಪರಾಕೆಂದು |ಸಾಸಿರ ಆರುತಿಯ ಬೆಳಗಿರೆ೩

 

೩೧೬
ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ
ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ ೧
ಹರಿಯೆ ಸರ್ವೋತ್ತಮಾ ತದ್ರಾಣಿ ಸಿರಿ ಬೊಮ್ಮ |ಮರುತ ದೇವರೆ ಗುರು ತಾರತಮ್ಯ |ವರ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು ೨
ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ ೩

 

೩೧೭
ಶ್ರೀ ವೇ. ನರಸಿಂಹಾಚಾರ್ಯ ಜೋಶಿ, ಕುಷ್ಟಗಿಯವರಿಗೆ ನೀಡಿದ ಅಂಕಿತಪದ
ಶ್ರೀಕರ ವಿಠಲರಾಯ ಕರವ ಪಿಡಿಯೋ |ಮಾ ಕಮಲಭವ ವಂದ್ಯ | ಭಕ್ತರುದ್ಧರಿಸೋ ಪ
ನಿನ್ನ ನಾಮಾಮೃತವು ಜಿಂಹ್ವೆಗೆಪೊದಗಲೀ |ನಿನ್ನ ಕಥಾಶ್ರವಣ ಕಿವಿಗಾಗಲೀ ||ನಿನ್ನ ಚಾರಿತ್ರಗಳ ನಿರುತಕೊಂಡಾಡಲಿ |ನಿನ್ನ ದಾಸರು ಕೇಳಿ ಶಿರದೊಗಲೀ ೧
ತಾರತಮ್ಯ ಪಂಚಭೇದ ಜ್ಞಾನವೇ ತಿಳಿಯಲಿ |ಮಾರುತಾ ಮತವನ್ನು ಅನುಸರಿಸಲಿ ||ಆರೆರಡು ನಾಮ ಊಧ್ರ್ವಪುಂಡ್ರವನೆ ಧರಿಸಲಿ |ಧೀರ ಗುರು ಮಧ್ವರಾಯರೇ ಮುಖ್ಯರೆನಲಿ ೨
ಏಸುಪರಿ ತುತಿಸಿ ವಾಣೀಶಗಸದಳವೋ ಶ್ರೀ |ವಾಸುದೇವನನು ತುತಿಸಲೊಶವೇ |ಶ್ರೀಶ ಪ್ರಾಣೇಶ ವಿಠ್ಠಲರಾಯ ದಯದಿನ್ನು |ದಾಸರ ದಾಸನೆಂದೆನಿಸಿ ಪೊರಿಯೊ ೩

 

೩೧೯
ಶ್ರೀನಿವಾಸವಿಠಲರ ಹಾಡು
ಶ್ರೀಶ ಪ್ರಾಣೇಶ ದಾಸರಾಯರ |ಬ್ಯಾಸರದಲೆ ಕೊಂಡಾಡೆಲೋ |ಏಸು ಜನ್ಮದ ದೋಷರಾಶಿಯು |ಲೇಶಿತಿಲ್ಲದೆ ಕಳೆವರು ಪ
ಉದಯ ಕಾಲಸ್ತಮಯ ಪರಿಯಲಿ |ಹೃದಯದೊಳು ಹರಿಯ ಮೂರ್ತಿಯಾ |ಮುದದಿ ಸ್ಮರಿಸುತ ಪದುಮನಾಭನ |ಪದಗಳರ್ಚಿಪ ಗುರುಗಳಾ ೧
ನಾನು ನನ್ನದು ಎಂಬ ದುರ್ಮತಿ |ಹೀನ ಜನರನು ಸೇರದೆ ||ಜ್ಞಾನಿಗಳವೊಡಗೂಡಿ ಹರಿಕಥೆ |ಸಾನುರಾಗದಿ ಪೇಳುವಾ ೨
ಅದ್ವೈತರುಸರಾಡದಂದದಿ |ಶುದ್ಧ ಗ್ರಂಥವ ಪಠಿಸುವಾ ||ಅಧ್ವರತಿ ಶ್ರೀನಿವಾಸ ವಿಠಲನ ಪರ |ಪದ್ಮಾರಾಧಕರಿವರೆಲಾ ೩

 

೩೧೮
ಗುರು ಶ್ರೀಶಪ್ರಾಣೇಶವಿಠಲರ ಹಾಡು
ಶ್ರೀಶ ಪ್ರಾಣೇಶ ವಿಠಲ ದಾಸಾರ್ಯನೆ |ಹ್ರಾಸಿಸೋ ದೋಷ ಕುಟಿಲ |ಭಾಷಾವರ್ಜಿತ ಗುಪ್ತಘೋಷ ನಂಬಿದೆ ನಿನ್ನ |ದಾಸರೊಳಗೆಣಿಸೆನ್ನ ಪೋಷಣ ಕರ್ತೆನೆ ಪ
ಕಠಿಣ ದುಸ್ಫುರುಣ ನೋಡಿ | ತ್ರಿರೂಪಾತ್ಮ |ಪಟುತಂತಃಕರುಣ ಮಾಡಿ | ನಟಿಸಿದನಿವರೆ ಉ |ದ್ಘಟ ಕರುಣಿಗಳೆಂದ | ಸ್ಫುಟದಿ ನಂಬಿದೆ ಪಾದ |ಘಟಸೆನಗಭಯವ | ಪಟುತರಂಕಿತ ಗುರುಪ್ರಾಣೇಶ |ವಿಠಲದಾಸವರ್ಯರ ದ್ವಾರದಿ ||ಧಟದಿ ಪಡೆದಲೆಲೋಕ ಖ್ಯಾತದಿ |ಚಟುಲ ಜ್ಞಾನಾನಂದ ಭೂಷಣ ೧
ಅನ್ಯ ಬಯಕೆಯ ಬಿಡಿಸಿ | ನಿನ್ನಯ ಸ್ಮರಣೆ |ಪುಣ್ಯ ಪಥವ ಪಿಡಿಸಿ | ಧನ್ಯನ ಮಾಡೊ ಸಂ |ಪನ್ನ ಗುಣಾರ್ಣ ಸೌ | ಜನ್ಯ ಪರಾತ್ಪರ ಪೂರ್ಣ ಸುಲಕ್ಷಣ ||ಪೀಡಿಸುವ ದುವ್ರ್ಯಸನ | ಕಳದೆ ನ್ನಾಡಿಸೈ ಸರ್ವಜ್ಞ ಮತದಲಿ |ಬೇಡಿಸೈ ಗುರುದಾಸ ಭಾಗ್ಯವು |ಕೊಡಿಸೈ ತವ ಶಿಷ್ಯ ವರ್ಗದಿ ೨
ತ್ರಿಕಾಲದಲಿ ಕರ್ನವು | ವಾಕಿಸುವ ತೆರದಿ ನೀವು |ಲೋಕೋಪಕಾರಲೋಸುಗದಿ | ಲೋಗರನ್ನೆಲ್ಲ |ಸಾಕಂತ ಸೇವಿಪೆ | ವಾಕ್ಪತಿ ಜನಕನ |ಗಣ್ಯಗಾಣಿನು ನಿನ್ನ ಅನುಗುಣ್ಯ ಗುಣಕತಿ |ಘನ್ನ ಗುರು ಶ್ರೀಶ, ಪ್ರಾಣೇಶ ವಿಠಲ ಕಿಂಕರನಾಗಿ ಬಾಳ್ದೆ |ಪುಣ್ಯ ಶಿಲಾಗ್ರಗಣ್ಯಧೀರ ೩

 

೩೨೧
ವಾಮನ ವಿಠಲರ ಹಾಡು
ಶ್ರೀಶ ಪ್ರಾಣೇಶರಾಯಾ | ದಯದಿ ಎಮ್ಮ |ಪೋಷಿಸು ಶುಭಕಾಯ್ಯಾ ||ಭೂಸುರಾಗ್ರಣಿ ಗುರುಪ್ರಾಣೇಶರಾಯರಿಂದ ಭಾಸುರ ಮಂತ್ರೋಪದೇಶವಕೊಂಡೆ ಪ
ಗುರುವೆ ನಿಮ್ಮ ಪಾದಾಯುಗಾ |ಸರಸಿರುಹ ನೆರೆನಂಬಿದೆ ಭಾಗ್ಯ ||ಕರೆಕರಿ ಸಂಸ್ರ‍ಕತಿ ಶರಧಿಯೊಳಗೆ ಬಿದ್ದು |ಹೊರಳುವೆ ವೇಗದಿ ಕರಪಿಡಿದುದ್ದರಿಸೊ ೧
ಮಂಗಳ ಮಹಿಮ ಸಿರಿವರನವೊಲಿಮಿ |ಸಂಗ ಪಡೆದ ಧೀರರು |ರಂಗವೊಲಿದ ಆರ್ಯಂಘ್ರಿಯ ಕಮಲತೆಭೃಂಗನಂತಿರುಪ್ಪ ಲಿಂಗಸುಗೂರವಾಸ ೨
ಯ್ಯೋಮಗವರಕೇತನಾ ಮಾರಮ ಶ್ರೀ |ವಾಮನ ವಿಠಲನ್ನಾ |ಸೋವಥರಾಧಿ ಸುತ್ರಾಮ ವಂದಿತ ಸು |ನಾಮ ಸುಧೆಯಿತ್ತು ಪ್ರೇಮದಿ ಸಲಹೆಮ್ಮ ೩

 

೩೦೨
ಸಂತಿಯ ಕೆಲವುರ ವಾಸನ ಸ್ತೋತ್ರ
(ಲಿಂಗಸುಗೂರಿನ ಹತ್ತಿರವಿರುವ ಸಂತಿಕೆಲೂರ ಗ್ರಾಮದಲ್ಲಿಯ ಪ್ರಾಣದೇವರು)
ಸಂತಿಯ ಕೆಲವುರವಾಸ ಭಾರತಿ |ಕಾಂತನು ಶ್ರೀ ಹರಿದಾಸಾ ||ಸಂತಸ ಸೇವಿಪರಘ ಓಡಿಸಿ | ನೀ |ಶ್ಚಿಂತರಮಾಡಿ ಪೊರೆವ ದಯಾಳೋ ಪ
ದಾಶರಥಿಯ ಪದಕೆರಗೀ | ನಿಂದುಲೇಸಾಗಿ ತುತಿಸುವ ಯೋಗೀ ||ಸಾಸಿರ ನಾಮನ ರಾಣಿಯಕಂಡು |ತೋಷದಿ ಸ್ವಾಮಿಗೆ ವಾರ್ತಿಯ ಪೇಳಿದ ೧
ಕುಂಚಿ ಕುಮಾರಕ ನೆನಸೀ | ಮಹಹಂತ ಕೌರವರನೊರಸೀ ||ಕಾಂತಿಗೆ ಸೌಗಂಧಿಕ ಪುಷ್ಪವ ಮುಡಿಸಿ | ಶ್ರೀಕಾಂತನ ಪ್ರಿಯ ಭೂಭಾರವನಿಳುಹಿದ ೨
ಆನಂದ ತೀರಥರಾಗಿ | ಪರಮಾನಂದದಿ ಕುಮತವನೀಗಿ ||ನಂದನ ಸುತ ಶ್ರೀಶ ಪ್ರಾಣೇಶ ವಿಠಲಾ |ನಂದನೆ ಪರನೆಂದು ಡಂಗುರ ಸಾರಿದ ೩

 

ದಯಮಾಡೊ ದಯಮಾಡೋ
೨೯೮
ಶ್ರೀ ವೆಂಕಟೇಶ ದೇವರ ಸ್ತೋತ್ರ
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ
ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು ೧
ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ ೨
ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ ೩

 

ಹಾಡಿನ ಹೆಸರು :ದಯಮಾಡೊ ದಯಮಾಡೋ
ಹಾಡಿದವರ ಹೆಸರು :ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ
ರಾಗ :ತಿಲಂಗ್
ತಾಳ : ಆದಿ ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *