Categories
ರಚನೆಗಳು

ಸರಗೂರು ವೆಂಕಟವರದಾರ್ಯರು

ಸರ್ವರಲ್ಲೂ ನಾರಾಯಣನೇ ನಿಂತು

ಈತ ನೀತನೇ ರಮಾನಿವಾಸನು ಕೇಳಿಜನರು
ಈತನೀಗಚಿದ್ವಿಲಾಸನು ಪ
ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ
ದಾತವೇದ ಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ.
ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ
ಕರ್ಮಫಲಗಳನ್ನೆ ಕೊಟ್ಟು ಶರ್ಮಪಡಿಸುವ
ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ
ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿ ತೇಲುತಿರುವ ೧
ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವರಾಜ್ಯಕರ್ತ
ಕಮಲಭವನ ಪಡೆದ ಹಿರಿಯನಮರರೊಡೆಯ
ಸುಮಶರನಪೆತ್ತ ಚೆಲುವ ನಮಲಗಂಗೆಯಿತ್ತು ನಲಿವ
ಸಮರವೈರಿಗಳನು ಕೊಲುವ ಕಮಲನಾಭ ವಾಸುದೇವ ೨
ಉರಗಶಯನ ಗರುಡಗಮನ ಪರಮಪದವನುಳಿದುಶೇಷ
ಗಿರಿಯೊಳಿರ್ದುಬಂದ ವ್ಯಾಘ್ರಗಿರಿಯ ಶಿಖರಕೆ
ಭರದಿ ನಿತ್ಯಮುಕ್ತರೊಡನೆ ಕರದಿ ಶಂಖಚಕ್ರಪಿಡಿದು
ಕರುಣದಿಂದ ಚರಣ ಸೇವಕರನು ಪೊರೆವ ವರದವಿಠಲ ೩

 

ಪರಮಾತ್ಮನ ವ್ಯಾಪ್ತತ್ವವನ್ನು

ಎಂತುನುತಿಪೆ ನಾನು-ಈ ಜಗ | ದಂತರ್ಯಾಮಿಯನು ಪ
ಅಂತರಹಿತನನು ಚಿಂತಿಸಿಪದನಖ ದಂತರಪರಿಯವು
ಸಂತತ ವಾಙ್ಮನ ಅ.ಪ.
ಸಾಸಿರ ಮುಖದವನ-ಅವಯವ-ಸಾಸಿರವುಳ್ಳವನ
ಸಾಸಿರ ಪೆಸರವನ-ರೂಪಿ ಸಾಸಿರವಾಗಿಹನ
ಮೀಸಲಳಿಯದಂತೀ ಸಚರಾಚರ
ವಾಸಿಯಾದ ಶ್ರೀ ವಾಸುದೇವನು ೧
ಜಗವನು ನಿರ್ಮಿಸುವ-ಬೊಮ್ಮನು-ಮಗನೆಂದೆನಿಸಿರುವ
ಬಗೆಯುವದೀಜಗವ-ಜಠರದಿ-ನುಸುಳಿಸಿಕೊಂಡಿರುವ
ಮಗುಳಿದ ನಳಿಯುವ
ನಗಚಾಪರಮೊಮ್ಮಗನೆಂಬುವರೀ | ಯಗಣಿತ ಮಹಿಮನ ೨
ನಿಗಮವ ಪೆತ್ತವನ-ಬೊಮ್ಮಗೆ-ನಿಗಮವನಿತ್ತವನ
ನಿಗಮೋದ್ಧಾರಕನ-ನಿತ್ಯದಿ-ನಿಗಮಗೋಚರನ
ಬಗೆಬಗೆಯೋಗಿಗಳ ಧ್ಯಾನಕೆನುಗಳಿದ ಶ್ರೀಪದ
ಯುಗಳಾಂಬುಜನನು ೩
ಮಾಯಾಧೀಶ್ವರನ-ದೇವನಿ-ಕಾಯಾರಾಧಿತನ
ಕಾಯಜ ಸುಂದರನಾ-ಜೀವನಿ-ಕಾಯಕೆ ಮಂದಿರನಾ
ಮಾಯಾಕಾರನಿವ ನಾಯವ ನರಿಯದೆ
ದಾಯಗೆಟ್ಟರ ನ್ಯಾಯದಿ ಮುನಿಗಳು ೪
ಪರಮಪದದೊಳಿಹನಾ
ಪುನರಪಿ- ತರಣಿಯೊಳಿರುತಿಹನ
ಶರನಿಧಿ ಮಂದಿರನಾ-ಶ್ರೀ ಪುಲಿಗಿರಿಯೊಳು ನಿಂದಿಹನ
ನಿರುತವು ತನ್ನಯ ಚರಣವ ನಂಬಿದ
ಶರಣರ ಪೊರೆಯುವ-ವರದ ವಿಠಲನಾ ೫

 

ಸ್ವಯಂಪೂರ್ಣನೂ

ಎಂತೋಪೂಜಿಪುದಂತರ್ಯಾಮಿಯಾ-ನಂತಾದಿರಹಿತನ
ಚಿಂತಾದೂರನ ಚಿನುಮಯ ರೂಪನಾ ದೆಂತೋಧ್ಯಾನಿಪೆ ನಾ ಪ
ಈಶ-ವೀಶ-ವಾಹನಗೀಸಚರಾಚರ ಮಿಸಲಿಗೊಳಗಲ್ಲಾ
ಆಸನವಿತ್ತರ ವಾಸುಕಿ ಭೋಗನಿವಾಸಿಗೆ ತರವಲ್ಲಾ ೧
ಚರಣದಿ ಗಂಗೆಯ ಧರಿಸುವಾತನ ಚರಣವ ತೊಳೆಯುವರೇ
ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ ೨
ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ
ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ ೩
ಕಲಶಾಂಬುಧಿಯೊಳು ನೆಲಸಿಹಮೂರ್ತಿಗೆ-ಸಲಿಲ ಸ್ಪರ್ಶನವೆ
ಜಲರುಹನೇತ್ರಗೆ ಜಲರುಹಗಾತ್ರಗೆ ಜಲದಲ್ಲಿ ಮಜ್ಜನವೆ ೪
ಸ್ವರ್ಣಾಂಬರಗಳ ಬಣ್ಣಿಸುಡುವಗೆ ಬಣ್ಣದವಸ್ತ್ರಗಳೆ
ಉನ್ನತ ಕೌಸ್ತುಭರನ್ನದ ತೊಡವಿಗೆ ಬಿನ್ನಣದೊಡವೆಗಳೆ ೫
ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂಪಡೆದವಗೆ
ಮಿಸುಪ ತುಲಸಿಯಿಂದೆಸವಗೆ ಪೂಗಳ ವಿಸರ ಮನೋಹರವೇ ೬
ಗಂಧವಾಹನ ಸುವಿಂದಲಿಸೃಜಿಸಿದ ಗಂಧವತೀಶನಿಗೆ
ಗಂಧಧೂಪಗಳು ಬಂಧುರಂಗಳೆ ಗಂಧರ್ವಾನತನಿಗೆ ೭
ವೇದ ಗೋಚರಿಸು ವೇದಾತ್ಮಕನು ವೇದೋದ್ಧಾರಕನು
ವೇದಲೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೆ ೮
ಪೊಕ್ಕರೆ ಜಲಮಂ ಕುತ್ತಿಗೆ ನೆರೆಯದವಸ್ತು ಪರಾತ್ಪರನಾ
ನಿತ್ಯತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತುಜನಾ ೯
ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ
ಮಂತ್ರ ಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ ೧೦
ಅಂತರ್ಬಹಿಯೊಳಗಂತರವಿಲ್ಲದ ನಂತ ಗುಣಾತ್ಮಕನಾ
ಎಂತು ಪ್ರದಕ್ಷಿಣೆಯಾಂತು ನಮಿಪೆ ಜಗದಂತ ಶರೀರಕನಾ ೧೧
ಸರ್ವಾಧಾರನ ಸರ್ವ ಶರೀರನ ಸರ್ವವ್ಯಾಪಕನಾ
ಸರ್ವನ ನಮಿಸುವಗರ್ವವೆಂತುಟೊ ಶಕ್ರನಮಸ್ರ‍ಕತನಾ ೧೨
ಧರೆಯೊಳು ಪುಲಗಿರಿವರದ ವಿಠಲನ ಚರಣವ ಭಜಿಸುವರ
ನಿರುತದಿ ಪೂಜಿಪ ಹರುಷವು ಸಾಲದೆ ಹರಿದಾಸೋತ್ತಮರಾ ೧೩

 

ದುರ್ಜನರು ಸಜ್ಜನರನ್ನು ಹೀಯಾಳಿಸಿ

ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ
ಮಾನಿತ ಜನರವಮಾನವನೋಡದೆ ಹೀನಜನರ
ನುಡಿನೀನೊಲಿದಾಲಿಪುದು ಅ.ಪ.
ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ
ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ
ನೀತಿಯನರಿಯದ-ಕೋತಿಗಳಂದವ
ಜಾತಿಯ ಜನರೊಳು ಮಾತಿನವಾಶಿಯಿಲ್ಲ ೧
ದುರ್ಜನರು ಬೆರೆದು-ದೋಷವಿ
ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು
ಗರ್ವದಿ ಗರ್ಜಿಸಿ ಮೊರೆದು
ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ ೨
ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು
ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು
ಭಂಡತನದಿ ಪರಗಂಡಸರೊಳು ಸಮದಂಡಿಯೆನಿಸಿ ಬಲು
ಚಂಡಿಸುತಿರ್ಪರೋ ೩
ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು
ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು
ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ
ಜನರೂಳಿಗ ಬಲುಘನ ೪
ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ
ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ
ಶರಣಾಭರಣ ನಿಜ ಕರುಣವ ತೋರಿಸು
ವರದ ವಿಠಲಧೊರೆ ವರದದಯಾನಿಧೆ ೫

 

ಪರಮಾತ್ಮನ ಅನೇಕ ವ್ಯಾಪಾರಗಳು

ಏನುಂಟು ನಿನ್ನೊಳಗೆ-ನಾಬೇಡಲು-ಏನು ಕೊಡುವೆ ಯನಗೆ ಪ
ಶ್ರೀನಿವಾಸನೇ ಬಲು ದೀನನೊಳವಲಕ್ಕಿಯೇನೆಂದು
ಬೇಡಿದೆಮಾನವನೋಡದೆ ಅ.ಪ.
ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ
ಹಾರುವನಿಗೆ ಗುರಿಮಾಡಿದೆ
ಸಿರಿಯನು ರಜಕನ ಪರಿವಾರದಿ ಬಿಟ್ಟು
ಗರಳನಹಾಸಿನೊಳೆರಗಿದೆ ಕೃಷ್ಣ ೧
ಧನಕನಕಂಗಳು ನಿನಗಿರೆ ಸತ್ರಾಜಿತನ ಮಣಿಯನ್ನು
ನೀಗಣಿಸುವೆಯಾ
ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆ
ಯುಳ್ಳರೆವನವಾಸ ವೇಕೆ ೨
ಕಾಮಧೇನುವು ಕಲ್ಪನಾಮಕ ತರುವು
ಚಿಂತಾಮಣಿಗಳನು ಸುತ್ರಾಮನಿಗಿತ್ತು
ಗೋಮಯರಸಗಳ ಕಾಮಿಸಿ ಕದ್ದು
ನೀ ದಾಮೋದರನಾದೆ ತಾಮರಸಾಕ್ಷ ೩
ಖ್ಯಾತಿನೋಡದೆ ರಣಭೀತಿಯೊಳೋಡಿದೆ
ಜಾತಿ ನೋಡದೆ ಜಾಂಬವತಿಗೂಡಿದೆ
ನೀತಿಯ ನೋಡದೆ ಕೋತಿಯೊಳಾಡಿದೆ
ಮಾತು ನೋಡದೆ ಬರಿಮಾಯೆಯ ಪಿಡಿದೆ ೪
ಗತಿಹೀನರಿಗೆ ವರ ಗತಿಯತೋರಿಪನಾಮ
ಸ್ರ‍ಮತಿಯೊಂದಿತ್ತರೆಸಾಕೆನೆಗೆ
ಅತಿಶಯವಿದುಯನ್ನಮತಿಯೊಳು ನಿನ್ನಯ ರತಿಯನ್ನು
ಪಾಲಿಸು ವರದ ವಿಠಲರಾಯ ೫

 

ಶ್ರೀನಿವಾಸನನ್ನೂ ಅವನ ಅಂಗಾಂಗ

ಕಣ್ಣಾರೆ ಕಂಡೆನವ್ಯಯನ-ಕೃತ-ಪುಣ್ಯರ
ಮಾನಸ-ಗಣ್ಯಚಿನ್ಮಯನ ಪ
ನೀಲಮೇಘಶ್ಯಾಮಳನ, ಮಣಿ, ಜಾಲರಂಜಿತ
ವನಮಾಲಿಕಾಗಳನ
ಘಾಲದಿ ತಿಲಕವೊಪ್ಪಿಹನ ಹೇಮ-ಚೇಲದಿ
ಮಿಂಚನು ಸೋಲಿಸುತಿಹನ ||ಕಣ್ಣಾರೆ|| ೧
ಪಂಕಜಪತ್ರಲೋಚನನ-ನಿಜ-ಕಿಂಕರ
ಹೃದಯಾತಂಕಮೋಚನನ
ಶಂಖ ರಥಾಂಗಾಂಚಿತನೆ ಮಕರಾಂಕಜನನೀಕು
ಚಕುಂಕುಮಾಂಕಿತನ ೨
ಬೃಂದಾರಕ ಪರಿವೃತನ-ಶ್ರಿತ-ಮಂದಾರನ
ಗುಣವೃಂದ ಪೂರಿತನ
ಇಂದಿರಾಹೃದಯ ಮಂದಿರನ-ಮುನಿವೃಂದ
ಚಕೋರನಂದ ಚಂದಿರನ ೩
ಮಕರ ಕುಂಡಲ ಮಂಡಿತನ ಮಣಿಮುಕುಟಾದಿ
ಭೂಷಣನಿಕರ ಭೂಷಿತನ
ಪ್ರಕಟಿತ ನಿಜಮಾಯಕನ-ಸೇವಕರಿಗೆ ನಿತ್ಯದಿ
ಸುಖದಾಯಕನ ||ಕಣ್ಣಾರೆ|| ೪
ಕರುಣದ ಖನಿಯೆನಿಸುವನ ನಿಜ-ಚರಣವೆ
ಶರಣೆಂದು ಕರದಿ ತೊರುವವನ
ಧರಣೀ ನೀಳೆಯರಿಹ ಕೆಲನ-ಪುಲಿಗಿರಿಯೊಳು
ನೆಲಸಿಹ ವರದ ವಿಠಲನ ೫

 

ತಾವು ಕನಸಿನಲ್ಲಿ ಕಂಡ

ಕನಸಿನಲಿ ಕಂಡೆನಾ-ಶ್ರೀನಿವಾಸನಾ
ಧ್ಯಾನಗೈವ ಮುನಿ ಮಾನಸದಲ್ಲಿ ನಿಧಾನಿಸಿ ನೋಡಲು
ಕಾಣದಾತನ ||ಕನಸಿನಲಿ|| ಪ
ಶರದಾಭಗಾತ್ರನ-ಶಂಪಾಭೋಜ್ವಲ ಕರಪೀತವಸ್ತ್ರನ
ಸಾರಸಾಕ್ಷನ ಶರದಿಂದುವಕ್ತ್ರನ
ಸಿರಿಯನುರದಿತಾನಿರಿಸಿಕರಗಳಿಂ
ದರಚಕ್ರಗಳನು ಧರಿಸಿರ್ಪಾತನ ೧
ಕಾಮನಂ ಪೆತ್ತನ ಕಾಕುಸ್ಥನಿಗೆ ಕಾಮಿತವಿತ್ತನ
ಕೌಸ್ತುಭಮಣಿ-ಧಾಮವಂ ಪೊತ್ತನ
ಹೇಮ ಸೂತ್ರಮಣಿ ದಾಮಭೂಷಣ
ಸ್ತೋಮ ದಿವ್ಯಗುಣರಾಮಣೀಯನ ||ಕನಸಿನಲಿ || ೨
ಸುರವೃಂದಾನಂದದಿ-ಸ್ತುತಿಸುತ್ತ ಬರುತಿರೆ ತೂರ್ಯಾರವದಿ
ಸಿತಛತ್ರಾದ್ಯುರುತರ ರಾಜ ಚಿಹ್ನದಿ
ಗರುಡನೇರಿ ನಿಜ ಶರಣರ ಪೊರೆಯುವ
ವರದಪುಲಿಗಿರಿ ವರದವಿಠಲನ ||ಕನಸಿನಲಿ|| ೩

 

ತಂದೆತಾಯಿ ಸರ್ವಸ್ವವೂ

ಕರುಣದಿ ಕಾಯೊ-ಕರುಣದಿ ಕಾಯೊ ಕಮಲನಯನ ಯನ್ನ ಪ
ಪರಮಪುರುಷ ಹರೆ ಸರಸಿಜನಾಭನೆ ಅ.ಪ.
ನೀನೇ ತಂದೆಯು ಎಂದು ಜ್ಞಾನದಿಂದಲಿ ಬಂದು
ಧ್ಯಾನಿಸುವೆನು ಈಗ ೧
ತಾಯಿ ನೀನೇಯೆಂದು ಬಾಯಿಗೆ ಬಂದಂತೆ ಜೀಯ
ನಿನ್ನನು ನೆನೆವೆ ೨
ಜಗದೊಳಗೆಲ್ಲ ನೀನೇ ಸುಗುಣ ಶೀಲನು
ಎಂದು ಮುಗಿಲು ಮುಟ್ಟುತಲಿದೆ ೩
ಸಂಗತ ಶ್ರಮವನ್ನು ಭಂಗವಗೈವ ಭುಜಂಗ ಗಿರಿಯವಾಸ ೪
ಲೀಲೆಯಿಂದಲಿ ವ್ಯಾಘ್ರ ಶೈಲದಲ್ಲಿರುವ ಶ್ರೀ ಲೋಲವರದವಿಠಲ ೫

 

ಪರಮಾತ್ಮನು ಭಕ್ತರಿಗೆ
೧೧
ಕರುಣದಿ ಕಾಯೋ-ಕರುಣಾಲ ವಾಲ ಪ
ಶಿರಿಯರಸನೆ ನಿನ್ನ ಚರಣವ ನಂಬಿದೆ
ಸುರಗಣ ಸೇವಿತ ಸುರರಾಜ ಪಾಲ ಅ.ಪ.
ಇಂದ್ರನ ಕೂಡಿ ಮುನೀಂದ್ರನ ಸತಿ
ಶಾಪದಿಂದರೆಯಾಗಿರಲಂದು ನೀದಯದಿ
ಸುಂದರ ಚರಣಾರವಿಂದಗಳಿತ್ತ ಧೂಳೀಯಿಂದ ಪಾವನಗೈದ
ಇಂದಿರೇಶನೆ ನೀ ||ಕರು|| ೧
ನಕ್ರನ ಮುಖದಲ್ಲಿ ಸಿಕ್ಕಿದ ಕರಿಕುಲ ಚಕ್ರವರ್ತಿಯು
ಮಾರೆಹೊಕ್ಕರೆ ನುತಿಸಿ
ಚಕ್ರದಿ ಮಕರಿಯನಿಕ್ಕಿ ಗಜೇಂದ್ರನರಕ್ಷಿಸಿದಾಪರಿಯಕ್ಕರೆ ತೋರಿಸಿ೨
ತರಣಿತನಯ ಫಣಿವರಶರವನು ನರವರ
ಶಿರಸರಿಸಕ್ಕೆಗುರಿಯಿಡಲು
ಚರಣದುಂಗುಟದಿಂದ ಧರಣಿಯನೂರಿ ನರನ-
ಶಿರವುಳುಹಿದ ಶಿರಿ ವರದವಿಠಲ ಹರಿ ೩

 

ಸತ್ಕರ್ಮವೇನನ್ನೂ ಮಾಡದ
೧೦
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ
ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ
ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ.
ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು
ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು
ಕಾಮವು ಹೊಮ್ಮುತಿದೆ ಪರ ಬೊಮ್ಮ ಮೂರುತಿ೧
ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು
ಮಾನಸ ಪೂಜಾ ವಿಧಾನ ವನರಿಯದೆ ದೀನಜನ
ಸುರಧೇನು ಭಕ್ತರ
ಮಾನನಿಧಿಯಹ ಶ್ರೀನಿವಾಸನೆ ೨
ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ
ಸರಸಿಜಸಂಭವ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ
ಭರಿತ ಪುಲಿಗಿರಿ ವರದ ವಿಠಲ ೩

 

ಪುರಾಣ ಪ್ರಸಿದ್ಧರಾದ
೧೨
ಕರುಣದಿ ರಕ್ಷಿಸುಯನ್ನನು-ಪುಲಿಗಿರಿ ಲೋಲ ನಂಬಿದೆ ನಿನ್ನನು
ಕರುಣದಿ ರಕ್ಷಿಸು ಚರಣಸೇವಕ ಭಯಹರಣ ಸೌಖ್ಯವಿತರಣ
ನಿನ್ನಯಚರಣ ಯುಗಳದಿ ಶರಣು ಹೊಕ್ಕೆನುಪ
ಯತಿಗಣ ನೇಮವನರಿಯದ-ಸ್ವರ-ಗತಿತಾಳ-
ಲಯಬಂಧ ತಿಳಿಯದ
ಶೃತಿನುತ ನಿಮ್ಮನು ಪೊಗಳದ-ನಿಮ್ಮ ಶ್ರುತಿಗಳ
ಮಹಿಮೆಯ ಕೇಳದ
ಮತಿಹೀನ ನಾದೆನ್ನಮತಿಗೆಗೋಚರನಾಗಿ
ಶೃತಿಗೋಚರ ನಿಮ್ಮಸ್ತುತಿಯು
ಅನುಭವವಿತ್ತು ಪತಿತ ಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ
ಗತಿಮತಿಗಳೇನೇನು ಅರಿಯದಪತಿತನೆನ್ನನು ಭವಜಲಧಿ ಮಧ್ಯದಿ ೧
ಕರುರಾಯ ಕೌರವಸಭೆಯಲ್ಲಿ-ಭೀಷ್ಮ-ಗುರುದ್ರೋಣ
ಕೃಪರಮುಂದೆಡೆಯಲ್ಲಿ
ಧುರಧೀರ ಪಾಂಡವರಿದಿರಲ್ಲಿ ಬಲು
ದುರುಳದುಶ್ಯಾಸನನ ಕೈಯಲ್ಲಿ
ತರುಣಿ ಪಾಂಚಾಲಿಯಕರಸಿ ಸೀರೆಯ ಸೆಳೆದು ಕರೆಕರೆ
ಪಡಿಸಲೆಂದೆನುತಲುಜ್ಜುಗಿಸಲು
ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇಮರೆಹೊಕ್ಕೆ
ಪೊರೆಯೆಂದು ಮೊರೆಯಿಡಲಾಕ್ಷಣ
ತರುಣಿಗಕ್ಷಯವಸವನಿತ್ತಾ ಶರಣಜನ
ಸಂಸಾರ ಶ್ರೀಹರಿ ||ಕರು|| ೨
ಕರಿರಾಜ ನಕ್ರನ ಬಾಯೊಳು-ಸಿಲುಕಿ-ನರಳಿಸಾವಿರ
ವರುಷ ಜಲದೊಳು
ಪರಮಪುರುಷ ಪುರುಷೋತ್ತಮ ನಿರುಪಮ ಪರಮೇಶವಂದ್ಯ
ಪರಾತ್ಮರ ಪುಲಿಗಿರಿ
ಧೊರೆಯೆ ಕರುಣಿಸೆನ್ನುತ ಕರಿ ಮೊರೆಯಿಡಲಾಗಬೇಗ
ಕರುಣದಿಂ ಮೊರೆಕೇಳಿ ಗರುಡನ ಪೆಗಲೇರಿಸಾರಿ
ಕರದ ಚಕ್ರದಿ ಸೀಳಿ ನಕ್ರನ ಕರಿಯ ಪೊರೆದಾ ವರದ ವಿಠಲ ೩

 

ಇದು ಒಂದು ಅನೇಕ ಸಂಸ್ರ‍ಕತ
೧೩
ಕಲಯಾಮಿ ಶ್ರೀನಿವಾಸಂ-ಕಲಭಾಷ ಮಿಂದುಹಾಸಂ ಪ
ಕಮನೀಯಹೇಮ ಚೇಲಂ-ಕಮಲಾಲಯಾನುಕೂಲಂ
ಕಮಲಾಭಿರಾಮ ಮಾಲಂ ೧
ಸುಮಬಾಣ ಸುಂದರಾಂಗಂ-ಸುಮನನಾರ್ಪಿತಾಂತರಂಗಂ
ನಮದಾರ್ತಿ ಸಂಗ ಭಂಗಂ ೨
ಜಲಜಾಪ್ತ ಪತ್ರನೇತ್ರಂ-ಜಲದೋಪಮಾನ ಗಾತ್ರಂ
ಜಲಜಾಪ್ತ ಪುತ್ರ ಮಿತ್ರಂ ೩
ಕುಂದೋಪಮಾನ ರದನಂ-ಚಂದ್ರೋಪಮಾನ ವದನಂ
ಬೃಂದಾರಕಾರಿ ದಮನಂ ೪
ಅಜವಂದ್ಯ ಚರಣಕಮಲಂ-ನಿಜ ಸೌಖ್ಯ ಕರಣ ಕುಶಲಂ
ಭಜನೀಯ ವರದ ವಿಠಲ-ಕಲಯಾಮಿ ಶ್ರೀನಿವಾಸ ೫

 

ಇದು ಒಂದು ಬಹಳ ಮಟ್ಟಿಗೆ
೧೪
ಕಲೆಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ
ಸುಲಲಿತ ಕರಧೃತ ಧರರಥ ಚರಣಂ
ಕಲಿಕಲುಹಾಪಹ ಕಮನೀಯ ಚರಣಂ
ಮಸ್ತಕ ನಿಹಿತ ಮಹಾರ್ಹಕಿರೀಟಂ ಕಸ್ತೂರಿ
ತಿಲಕಿತ ದಿವ್ಯಲಲಾಟಂ
ನಿಸ್ತುಲಸುಮದಮಾಂಚಿತ ಜೂಟಂ ಕೌಸ್ತುಭ
ಶೋಭಿತ ಮಣಿಸರಕೂಟಂ ೧
ಸುಮಶರಕೋಟಿ ಮನೋಹರವೇಷಂ
ಕಮಲಾಸಖಭಾಭರಣ ವಿಭೂಷಂ
ಸುಮಹಿತಭಣಿತ ಸದೃಶಮಂಜು ಭಾಷಂ
ವಿಮಲ ಹೃದಯ ಸೇವಕ ಪೋಷಂ೨
ಶ್ರೀ ರಮಣೀಪರಿ ಶೋಭಿತಗಾತ್ರಂ
ವಾರಿಜ ಭವಕೃತವಿವಿಧ ಸ್ತೋತ್ರಂ
ಸಾರಸದಳ ವಿಸ್ತಾರಸುನೇತ್ರಂ
ನಾರದ ಮುನಿಕೃತ ಪೂಜಾಪಾತ್ರಂ ೩
ಶರದಿಂದು ಮಂಡಲ ಸುಂದರ ವದನಂ
ವರಕುಂದ ಕುಟ್ಮಲ ಸನ್ನಿಭರದನಂ
ಕರಸಂದರ್ಶಿತ ವೈಕುಂಠ ಸದನಂ
ತರುಣ ತರಣಿಘೃಣಿ ರುಚಿದಂತ ಹಸನಂ ೪
ತರುಣ ಶ್ರೀ ತುಳಸೀ ಶೋಭಿತ ಮಾಲಂ
ಸರಸಿಜಗರ್ಭ ರುಚಿರ ದಿವ್ಯ ಚೇಲಂ
ವರವ್ಯಾಘ್ರಭೂಧರ ವಿಹರಣ ಶೀಲಂ
ವರದ ವಿಠಲ ಮಖಿಲಾಗಮಪಾಲಂ ೫

 

ತಮ್ಮನ್ನೆಂದಿಗೂ ಕೈಬಿಡದೆ
೧೫
ಕೊಡು ಕೊಡುವರವನು ತಡವುಮಾಡದೆಯನ್ನೊಡೆಯ
ಶ್ರೀಹರಿ ಕೃಪೆಮಾಡಯ್ಯ ಪ
ಬಿಡದಿರೆನ್ನನು ಜಗದೊಡತಿಯಾಣೆ
ನಿನ್ನಡಿಗಳನೆಂದಿಗೂ ಬಿಡೆನಯ್ಯ ಅ.ಪ.
ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀಪತಿ
ನೀಗತಿಯೆನುತಿಹೆನಯ್ಯ
ರತಿಪತಿ ಪಿತನೆ ಸು ಮತಿಯನು ಪಾಲಿಸಿ ಗತಿಯನು
ತೋರಿಪುದೆನಗಯ್ಯ ೧
ನಿನ್ನ ಪದವನಂಬಿ-ನಿನ್ನವನೆನಿಸಿದ-ಯೆನ್ನನು ಪೇಕ್ಷಿಪರೇನಯ್ಯ
ಸನ್ನುತ ನಿನ್ನದು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ ೨
ಎಲ್ಲರ ಹೃದಯದೊಳಲ್ಲಿ ನೆಲಸಿರುವ ಪುಲ್ಲನಯನನೀ ಪೇಳಯ್ಯ
ಕಲ್ಲುಮನದಿನೀ ನೊಲ್ಲದೊಡೀ ಜಗ-ದಲ್ಲಿ ಪೋಪುದಿನ್ನೆಲ್ಲಯ್ಯ೩
ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ
ಗತಿಪತಿಯೆಲ್ಲರ ಪತಿನೀನೆನ್ನುತ ಶ್ರುತಿ
ನುತಿಪುದು ಪುಶಿಯೇನಯ್ಯ ೪
ಜಗದೊಳು ನಿನ್ನಗೆ ಸುಗುಣಿಯುಯೆನ್ನತ
ನಿಗಮವು ಪೊಗಳುತಲಿಹುದಯ್ಯ
ಖಗಪತಿಗಮನನೆ ಬಗೆಬಗೆಯಲಿ ರತಿ
ಸೊಗಯಿಸುನಿನ್ನೊಳುಯನಗಯ್ಯ ೫
ಸೃಷ್ಠಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಯನಗಯ್ಯ
ಇಷ್ಟರಮೇಲಿನ್ನು ಲಕ್ಷಕೊಟ್ಟರೂಯನಗಿಷ್ಟವಿಲ್ಲಶ್ರೀ ಕೃಷ್ಣಯ್ಯ ೬
ಚರಣ ಕಮಲಗಳಿ ಗೆರಗುವೆ ಪುಲಗಿರಿವರದವಿಠಲ
ದಯೆಯಿರಿಸಯ್ಯ
ಚರಣ ಶರಣನಿಗೆ ಕರುಣಿಸದಿರ್ದರೆ ಕರುಣಿಗಳರಸರಿನ್ನಾರಯ್ಯ ೭

 

ಅನೇಕ ಪಾಪಾಚರಣೆಗಳಿಂದ
೧೬
ಕ್ಷಮಿಸೆನ್ನ ದೋಷಗಳ-ಕ್ಷಿಪ್ರದಿ ಹರಿ ಪ
ಕ್ಷಮೆಯನ್ನು ಧರಿಸಿದ ಕಮಲಾ ನಿವಾಸನೆ ಅ.ಪ.
ಕರಣ ತ್ರಯದಿ ಕಾಲ-ಹರಣವಿಲ್ಲದೆ ಪಾಪಾ
ಚರಣೆಯಿಂದೋಷದ ಭರಣಿಯಾದೆನು ಹರಿ ೧
ಮಾಡಬಾರದ ಪಾಪ ಮಾಡುವೆನನುದಿನ
ಮೂಢನ ಸುಕೃತವ ನಾಡಿ ತೋರಿಸಲೇಕೆ ೨
ಹರಿಗುರುಹಿರಿಯರ-ಜರಿದು ಸಜ್ಜನರನು
ತೊರೆದು ದುರ್ಜನರೊಳು ಬೆರೆದು ಪಾಮರನಾದೆ ೩
ಸರ್ವಂಸಹಾಧಿಪ ಸರ್ವಚೇತನ ದೀಪ
ಸರ್ವಾಪರಾಧವ ನಿರ್ವಹಿಸುವ ಭೂಪ ೪
ದುರಿತ ವೈರಿಯೆ ನಿನ್ನ-ಮೊರೆಹೊಕ್ಕಮನುಜಗೆ
ದುರಿತದುಃಖಗಳುಂಟೆ-ವರದ ವಿಠಲರಾಯ ೫

 

ಶ್ರೀನಿವಾಸನ ರೂಪವನ್ನೂ
೧೬
ಚಿಂತಿಸು ಮನವೆ ಶ್ರೀಹರಿಯ-ನಿಶ್ಚಿಂತೆಯೊಳಗೆ
ಪುಲಿಗಿರಿ ಧೊರೆಯ ಪ
ಶ್ರೀರಮಣೀ ನಿಜವಲ್ಲಭನ-ಮಾರ ಚತುರ್ಮುಖರಿಗೆ ಪಿತನ
ನಾರದ ಶರ್ವ ಪಿತಾಮಹನ-ಮದ-
ವಾರಣಮುಖ ಪ್ರಪಿತಾಮಹನ ೧
ಉರದಲ್ಲಿ ಸಿರಿಯನ್ನು ಧರಿಸಿಹನ-ನಿಜ-ಶಿರದಿ
ಕಿರೀಟವ ನಿರಸಿಹನ
ಕರದಲ್ಲಿ ಚಕ್ರವ ಪಿಡಿದಿಹನಾ-ನಿಜ-ಕರುಣದಿ ಭಕ್ತರಿಗೊಲಿದಿಹನ೨
ನೀಲ ಜಲದಸಮ ವಿಗ್ರಹನ ವನಮಾಲೆಯ
ಕೊರಳೊಳು ಪೊತ್ತಿಹನ
ಬಾಲಕ ಸುಕೃತಾನುಗ್ರಹನ-ನಿಜ ಲೀಲೆಯೊಳಾಸುರ ನಿಗ್ರಹನ ೩
ಅಂಗಜನಿಭ ಸುಂದರನ-ಸುರ-ಗಂಗೆಯ
ಪಡೆದ ಪಾದಾಂಬುಜನ
ತುಂಗ ವಿಹಂಗ ತುರಂಗಮನ-ಶುಭ-ಮಂಗಳ
ಗುಣಗಣ ಸಂಗತನ ೪
ಸರಸಿಜ ಸನ್ನಿಭಲೋಚನನ-ನಿಜ ಶರಣರ
ಭವಭಯ ಮೋಚನನ
ವರವ್ಯಾಘ್ರಾಚಲ ನಾಯಕನ-ನಮ್ಮ-
ವರದವಿಠಲ ವರದಾಯಕನ ೫

 

ಕೃಷ್ಣನ ರೂಪ
೧೮
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ
ಜಯವಿನುತ ವಾಣೀಶ ಜಯ ರುಕ್ಮಿಣೀಶ |ಜಯಜಯ ಪ
ಕಮಲಭವನುತಿಪಾತ್ರ ಕಮಲಸಖನಿಭಗಾತ್ರ
ಕಮಲರಿಪು ಸಮವಸ್ತ್ರ ಕಮಲದಳ ನೇತ್ರ
ಕಮಲ ಕರಧೃತಗೋತ್ರ ಕಮನೀಯ ಸುಚರಿತ್ರ
ಕಮಲಾರಿ ಧರ ಮಿತ್ರ ಕಮಲಾಕಳತ್ರ ೧
ನಂದಗೋಪ ಕುಮಾರ ನವನೀತ ದಧಿ ಚೋರ
ಸುಂದರೀ ಕುಲಜಾರ ಸ್ಮರಸಮರ ಶೂರ
ಕಂದರ್ಪಸಹಕಾರ ಕಾಮಿನೀ ಪರಿವಾರ
ಬೃಂದಾವನ ವಿಹಾರ ಭಕ್ತ ಮಂದಾರ ೨
ಧರಣೀ ಧರಾಸ್ಫಾಲ ದಮನಕರ ನಿಜಲೀಲ
ನರಪೌತ್ರ ಪರಿಪಾಲ ನವ್ಯ ವನಮಾಲಾ
ಮುರನರಕ ಶಿಶುಪಾಲ ಮುಖದನುಜ ಕುಲ ಕಾಲ
ವರವ್ಯಾಘ್ರಗಿರಿಲೋಲ ವರದಾರ್ಯವಿಠಲಾ ೩

 

ವಶವಲ್ಲದ ಇಂದ್ರಿಯಗಳ
೧೯
ತನುವೆನ್ನದು ಚೇತನವೆನ್ನದು ಎಂದು ಅನುದಿನ
ಪೋಷಣೆಯನು ಮಾಡಿದೆ ಹರಿ ಪ
ಚಿನುಮಯ ನಿನ್ನನು ನೆನೆವೆಂನೆಂಞ್ರಮನ
ತನುಮಧ್ಯೆಯರತನು ವಿನೊಳಿರುತಿಹುದು
ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ
ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ ೧
ಚರಣದ ಪೂಜೆಯೊಳಿರುವೆನೆಂದರೆ
ಕರವೆರಡು ಕೋಮಲೆಯರ ನರಸುವುವು
ಹರಿಕಥಾಶ್ರವನದೊಳಿರದೆ ಈ ಕಿವಿಗಳು
ಹರಿಣಾಕ್ಷಿಯರ ಕಂಠ ಸ್ವರಕೆಮೋಹಿಪವಯ್ಯ ೨
ದುರಿತದೂರನ ನಾಮಸ್ಮರಿಸದು ನಾಲಿಗೆ
ಸರಸಿಜಾಕ್ಷಿಯರೊಳು ಸರಸ್ತೋಕ್ತಿಪಡೆದು
ಚರಣ ಶ್ರೀ ತುಳಸಿಯ ನರಿಯದೆ ನಾಸಿಕ
ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ ೩
ನಿನ್ನಂಘ್ರಿಗೆರಗದೆ ಕುನ್ನಶರೀರ
ವಿದುನ್ನತಸ್ತನವುಳ್ಳ ಕನ್ನೆಯರೋಳ್
ತನ್ನ ಸುರತಸುಖವನ್ನ ಚಿಂತಿಸುವದು
ಯನ್ನಾಧೀನದೊಳಿಲ್ಲ ನೀನೇ ಬಲ್ಲಿ ೪
ಎರವಿನ ಸಿರಿಯಂತೆ ಕರಣಕಳೇವರ
ಬರಿದೆ ನನ್ನದು ಎಂದು ಮೆರೆದೆ ನಾನು
ಹರಿ ನಿನ್ನದೇಸರಿ ದುರಿತ ಕೃತಕೆನ್ನ
ಗುರಿಮಾಡದೆ ಕಾಯೋ ವರದ ವಿಠಲ ಕೃಷ್ಣ ೫

 

ಇದು ಬಹಳಮಟ್ಟಿಗೆ ಸಂಸ್ರ‍ಕತ
೨೦
ತವದಾಸೋಹಂ ತವದಾಸೋಹಂ
ತವದಾಸೋಹಂ ದಾಶರಥೆ ಪ
ದಶರಥಪುತ್ರಾ-ಪಶುಪತಿಮಿತ್ರ-ಶಶಿರವಿನೇತ್ರಾ-ದಾಶರಥೆ೧
ವಿಧೃತ ಕೋದಂಡ-ವಿಪುಲದೋರ್ದಂಡ
ಕದನಪ್ರಚಂಡ ದಾಶರಥೆ ೨
ತಾಟಕಾಹನನ ತಾಡಿತಕುಜನ ಹಾಟಕವಸನಾ-ದಾಶರಥೆ ೩
ಮನಸಿಜವೇಷ ಮಂಜುಳಭಾಷ ಮನುಜವಿಶೇಷ ದಾಶರಥೆ೪
ಶರದಾಭಗಾತ್ರ ಶರನಿಧಿಯಾತ್ರಾ ಕರಧೃತಗೋತ್ರ ದಾಶರಥೆ ೫
ರಾವಣಹರಣ-ಪಾವನಚರಣ-ಶ್ರೀವಧೂರಮಣ-ದಾಶರಥೆ ೬
ರಕ್ಷಿತಲೋಕ ರಚಿತಸು ಶ್ಲೋಕ ಶಿಕ್ಷಿತಕಾಕ ದಾಶರಥೆ ೭
ವ್ಯಾಘ್ರಾಗಶಮನ-ವ್ಯಾಘ್ರಾರಿಗಮನ ವ್ಯಾಘ್ರಾದ್ರಿಸದನ ದಾಶರಥೆ ೮
ಪರಿಹೃತ ಕುಟಿಲ-ಸರಸಿಜನಿಟಿಲ ವರದಾರ್ಯವಿಠಲ ದಾಶರಥೆ ೯

 

ವಿಷಯಾಸಕ್ತಿಯನ್ನು ತಿಗಣೆಯ
೨೧
ತಿಗಣೆಯ ಕಾಟವೇ ಕಾಟ-ಚಲ್ವ-ಸುಗುಣೆಯ ಕೂಟವೇ ಕೂಟಪ
ಹಗಲಿರುಳೆನ್ನದೆ ಬಗೆಬಗೆ ರತಿಯೊಳು-
ಸೊಗಯಿಸಿದೇಹಧಾತುಗಳನು ಕೆಡಿಸುವ ಅ.ಪ.
ಮನೆಯೊಳು ತಿಗಣೆಯು ಹೆಚ್ಚಿತು-ಮನಸಿಜನಸ್ತ್ರಕೆ
ಮನಸೋತು ಕಾಮುಕ ಜನದಂತೆ
ನಿಶಿಯೊಳಗನುದಿನ ಬಾಧಿಪ ೧
ಗೋಡೆ ಕಂಬಗಳ ಸಂದುಗಳಲಿ ಮನೆಮಾಡಿ
ಹಾಸಿಗೆ ಮಂಚಾದಿಗಳಲಿ
ರೂಡಿಸಿ ಕಾಮಿನಿ ಕೂಡುವ ತೆರದೊಳೋಲಾಡಿ
ಶರೀರದ ನಾಡಿಯನಿಲ್ಲಿಸುವ ೨
ಸದ್ದಡಗಲು ಜತೆಗೂಡುತ-ಸುಖ-ನಿದ್ರೆಯ ಸಮಯವನೊಡುತ
ಹೊದ್ದಿ ಸಮೀಪವ ಮುಗ್ದೆಯ ರಂದದಿ ಮುದ್ದಾಡುತ
ನಮ್ಮ ನೊದ್ದಾಡಿಸುತಿಹ ೩
ಹೆಗಲಿನ ಮೂಲದೊಳೇರಿ-ನಮ್ಮಬಗಲಿನ ಸಂದಿಗೆ ಸೇರಿ
ತೊಗಲಿನ ನರಕಕ್ಕೆ ತಗಲೆ ನಿದ್ರೆಯನಗಲಿಸಿ
ಬೇಗದಿನುಗುಳಿಕದ್ದೋಡುವ ೪
ಚಿಗಟದ ಹಿಂದೊಡಗೂಡಿ-ನಮ್ಮ-ತೊಗಟೆ ರಕ್ತದ ಸವಿನೋಡಿ
ತಿಗಟೆಯ ಸಂಧಿಸಿ ಚಿಗಟದ ಪರಿಯಲಿ
ಬುಗುಟಿದ್ದಗಾಯವ ವಿಗಟವಮಾಡುವ ೫
ನೋಟಕ ನೀನಾಗ ಬಹುದೆ-ಕಪಟ-ನಾಟಕಧಾರನೆ ಬರಿದೆ
ಕಾಟ ಕರ್ಮದ ಬಲು ಕೋಟಲೆಯಂಬೆ
ನಿಶಾಟದಲ್ಲಣ ನಿನ್ನಕೂಟದ ಜನರಿಗೆ ೬
ದುರಿತ ಕೋಲಾಹಲನೆಂದೆ-ನಿನ್ನ ಬಿರುದನು ಪೊಗಳುತ ನಿಂದೆ
ಧರೆಯೊಳುತ್ತಮ-ಪುಲಿಗಿರಿಯೊಳು ನೆಲಸಿಹವರದವಿಠಲ
ನಿನ್ನ ಶರಣರಾದವರಿಗೆ ೭

 

ಹರಿಸ್ಮರಣೆ ಮಾಡಿದ ದಿನವೇ ಸುದಿನ
೨೨
ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ
ಘನತರ ಹರುಷದಿ ಮನದಣಿಮಂದದಿ ಮನಸಿಜನೈಯನ
ಮಹಿಮೆಯ ಪಾಡುವ ಅ.ಪ.
ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ
ಭಕ್ತಿಗಾಗಲಿ ಭವಮುಕ್ತಿಗಾಗಲಿ
ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ ೧
ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ
ಹಾಳು ಹರಟೆಯಿಂದ ಕಾಲವಕಳೆಯದೆ ಶ್ರೀಲಲಾಮನ
ಕಥೆಪೇಳವ ಕೇಳುವ ೨
ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ
ಆರ್ಥಿಪರಿಗೆ ಪರಮಾರ್ಥವ ನೀಯುವ ಪಾರ್ಥಸಾರಥಿಯನ್ನು
ಪ್ರಾರ್ಥನೆ ಮಾಡುವ ೩
ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ
ಪ್ರೇಮದಿಂಪಾಡುತ್ತ ರೋಮಾಂಚದೊಡಗೂಡಿ
ನೇಮದಿಂದ ಭವ ತಾಮಸ ಕಳೆಯುವ ೪
ಹರಿವಾಸರವನು ಸಾಧಿಸಿ ಮುರುಹರ ನಾಮಗಳನು
ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ ೫

 

ಅನೇಕ ನಡವಳಿಕೆಗಳನ್ನು ಸೂಚಿಸಿ
೨೩
ದೀನನ ಸೇರಿದರೇನು ಫಲ (ರಾಮ) ಗುಣಹೀನನ
ಸೇರಿದರೇನು ಫಲ ಪ
ಅಕ್ಕರೆಯಿಲ್ಲದ ರಕ್ಕಸಿ ಯುದರದಿ ಮಕ್ಕಳು ಜನಿಸಿದರೇನು ಫಲ
ದುಃಖಿಪಜನರನು ಲೆಕ್ಕಿಸದಾತನ ಒಕ್ಕಲುತನದಿಂದೇನು ಫಲ ೧
ಜನಿಸಿದ ಮಕ್ಕಳುಜೀವಿಸದಿದ್ದರೆ ಜನನೀಜನಕರಿಗೇನು ಫಲ
ಕನಸಿಲಿ ಕಾಣುವ ಧನಕನಕಂಗಳ ನಂಬಿದ ಜನರಿಗೇನು ಫಲ ೨
ಕರೆಯದ ಪಶುವನು ನೆರೆಯದ ಸೊಸೆಯನು
ಅರಿಯದೆಕೊಂಡವಗೇನು ಫಲ
ಹಿರಿಯರ ನಡತೆಯನಡೆಯಿಸದಾತನು
ಹಿರಿಯವನಾಗಿರಲೇನು ಫಲ ೩
ಗಂಡನ ದೂರುತ ಮಿಂಡನ ಸೇರುವ ಹೆಂಡತಿಯಿರಲೇನು ಫಲ
ಹೆಂಡಿರ ಮಕ್ಕಳ ದಂಡಿಸದಾತನ ಗಂಡಸುತನದಿಂದೇನು ಫಲ ೪
ವರನಿಲ್ಲದ ವರತರುಣಿಯ ನಾನಾತೆರದಲಿ
ಸಿಂಗರಿಸಿದರೇನು ಫಲ
ವರದ ವಿಠಲ ಪುಲಿಗಿರಿ ಪತಿಗಲ್ಲದ ಪರಿಪರಿ
ಪುಣ್ಯದಿಂದೇನು ಫಲ ೫

 

ಇದು ಅಲಮೇಲಮಂಗಾಮಣಿ
ಲಕ್ಷ್ಮೀದೇವಿ
೧೦೦
ನಂಬಿದೆ ನಿನ್ನ ಪಾದಾಂಬುಜಯುಗಳವ- ಶಂಬರಾರಿ ಜನನಿಪ
ಬೆಂಬಿಡದೆನ್ನಹೃದಂಬುಜದೊಳಗವಲಂಬಿಸಿ-
ಸಲಹುಮದಂಬೆ ಸನಾತನಿ ಅ.ಪ
ಅಂಬುಜಮುಖಿ….ಚಿಕುರೆ ಶರ ದಂಬುಜದಳನಯನೆ
ಕಂಬುಕಂಠಿಕನಕಾಂಬರೆ ಮದಕರಿ ಕುಂಭಪಯೋಧರೆ
ಬಿಂಬಫಲಾಧರೆ ೧
ಕರ್ಣದೊಳೆಸೆವಸು ವರ್ಣವಿಡಿದ ಪೊಸರನ್ನದೊಡವೆಗಳ
ಮನ್ನಿಸುವಂತಿದೆ ಪೂರ್ಣಕಟಾಕ್ಷವು ಕನ್ನಡಿಕದಪಿನ
ರನ್ನೆ ಗುಣಾರ್ಣವೆ ೨
ಮಾಲತಿಮಲ್ಲಿಗೆ ಮಾಲೆಯಿಂದೊಪ್ಪುವ ನೀಲಭುಜಗವೇಣಿ
ಲೀಲೆಯಂದ ಶಾರ್ದೂಲ ಮಹೀಂದ್ರದೊಳಾಲಯ
ಗೈದಲಮೇಲಮಂಗಾಮಣಿ ೩

 

ಲಕ್ಷ್ಮೀಪತಿಯಾದ ನಾರಾಯಣನನ್ನು ಸ್ತೋತ್ರ
೨೪
ನಮೋಸ್ತುತೇ ಕಮಲಾಪತೇ || ಪ
ನಮೋಸ್ತು ತೇ ಶತಧೃತಿ ಶಂಕರ ಮುಖ
ವಿಮಾನ ಚರಗಣ ವಂದಿತ ಚರಣ || ಅ.ಪ.
ವಾರಣಭೀತಿನಿವಾರಣ ಭವಜಲಪಾರಣ
ದೈತ್ಯವಿದಾರಣ ಶುಭಗುಣ೧
ಪಂಕಜಲೋಚನ ಪಂಕವಿಮೋಚನ
ಪಂಕಜಾಲಯಾಲಂಕೃತ ಗಾತ್ರ ೨
ಶರಣಾಗತಜನ ಭರಣಾಧೃತ ರಥ ಚರಣ ಫಣಿಗಿರಿ ವರದ ವಿಠ್ಠಲ ೩

 

ತಮಗೆ ಇಹಲೋಕದ ಸಂಪತ್ತಿನ ಅಬಿಲಾಷೆ
೨೫
ನಾರಾಯಣ ನಿನ್ನ ಪಾರಾಯಣಗೈವ
ಧೀರತನವ ಪಾಲಿಸೋ ಪ
ಪಾರವಿಲ್ಲದ ಭವ ಪಾರಾವರದೊಳೊಂದು
ತೀರಕ್ಕೆನ್ನನು ಸೇರಿಸೋ ಅ.ಪ
ನಿನ್ನಕಿಂಕರ ಭಾವವನ್ನು ಮರೆತು ನಾನಾ ಜನ್ಮದಿ
ತೊಳಲುತ ಖಿನ್ನನಾಗಿ
ನಿನ್ನ ದಯದಿ ನರಜನ್ಮದಿ ಜನಿಸಿದೆ
ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ
ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ
ಘನ್ನ ಮಹಿಮನೆ ನಿನ್ನ ಸೇವೆಯೊಳುನ್ನತದರತಿಯನು
ಪಾಲಿಸಿ ||ನಾರಾ|| ೧
ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು
ಕೆಟ್ಟರ್ಮವ ಮಾಡಿ ಕಷ್ಟಪಟ್ಟು ಎಷ್ಟು ನಿನಗೆ
ಮೊರೆಯಿಟ್ಟು ಬೇಡಲಿ
ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ
ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ
ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ೨
ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ
ಸುರರು ಭೋಗಿಪ ಸುರಪುರವಾನೊಲ್ಲೆ
ಪರಮೇಷ್ಟಿಪುರದೊಳಗಿರಲಾ ನೊಲ್ಲೆನು
ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು
ನಿರುತ ನಿನ್ನಯ ಚರಿತೆಯಲಿ ಮನವಿರಲಿ
ನಾನಾ ತೆರದಿ ಭಕ್ತಿಯೊಳಿರಲಿ
ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ ೩

 

ನಾನೇ ದೇವರೆಂಬ ಮೋಹಕ್ಕೆ
೨೭
ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ
ಪಾರರಹಿತಭವ ಪಾರಾವಾರದಿಬಲು
ಘೋರತಾಪವು ಮೀರಿತೋ ಭವ
ದೂರ ನಿತ್ಯೋದಾರ ಕರುಣದಿ ಅ.ಪ.
ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ
ಕೋಶ ಕಳತ್ರ ನಿವೇಶ ತನುಜ ಮಾಯಾ
ಪಾಶದೊಳಗೆ ಶಿಲ್ಕಿಗಾಸಿಯಾದೆನು ಜಗದೀಶ
ನಿಖಿಲಸುರೇಶ ಕಮಲ
ಪಲಾಶ ನಯನ ದಿನೇಶ ಶತ ಸಂಕಾಶ
ವ್ಯಾಘ್ರಗಿರೀಶ ಭವ ಭಯ
ಪಾಶ ಹರಪರಮೇಶ ವಂದಿತ||ನಾರಾಯಣ|| ೧
ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ
ಸೋಹಮೆಂಬುವ ಬಲು ಮೋಹದಿ
ಸಿಲುಕಿ ದಾಸೋಹಮೆನ್ನದೆ ದೈವ
ದ್ರೋಹಿಯಾದೆನು ವಿದೇಹ
ಜಾವರಿಗೂಹನೋಚಿತದೇಹ ವಿಜಿತವಿದೇಹ
ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ
ಮೋಹನಾಚ್ಯುತ ||ನಾರಾಯಣ|| ೨
ಗುರು ಹಿರಿಯರ ಮರೆದು-ಗರ್ವದಿ
ಧರ್ಮಾಚರಣೆಯನೆರೆತೊರೆದು
ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ
ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ
ಚರಣ ಸುಗುಣಾಭರಣದೀನೋದ್ಧರಣ ಭವ ಸಂಹರಣ
ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| ೩

 

ಅನೇಕ ಉದಾಹರಣೆಗಳ ಮೂಲಕ
೨೬
ನಾರಾಯಣಯೆಂಬ ನಾಮವ ನೇಮದಿ
ಪಾರಾಯಣ ಮಾಡಿರೋ
ಪಾರವಿಲ್ಲದ ಭವ ಪಾರಾವಾರದೊಳುತ್ತಾರಕವಿದು ನೋಡಿರೋಪ
ನೀರಬೊಬ್ಬುಳಿಕೆಯು ತೋರುವ ರೀತಿ
ಶರೀರನೆಚ್ಚಿರಬೇಡಿರೋ
ಸಾರುವ ಮೃತ್ಯುವ ದಾರಿಗೆ ಗೋಚರ ಧಾರಿಣಿಯಲಿ ಪೇಳಿರೋ೧
ದೇಹಕ್ಕೆ ನೆಲೆಯಿಲ್ಲ ಮೋಹಕೆ ಕೊನೆಯಿಲ್ಲ
ಸಾಹಸ ಪಡಬೆಡಿರೋ
ದೇಹಗೇಹಂಗಳನೂಹಿಸಿ ಸಂಗಡ ಬಾಹವೆಂದಿರ ಬೇಡಿರೊ೨
ದೇಹರಕ್ಷಣೆಗೆಂದು ಗೇಹವನಿರ್ಮಿಸಿ ನೇಹದಿ ನಾರಿಯೊಳು
ಗೇಹಿನಿಯೆಂದತಿ ಮೋಹದಿ ಕೆಡುವನು ದೇಹಿಸಂಸಾರದೊಳು೩
ನಾರಿಯು ಮೋಹನಾಕಾರಿಯು ಲೋಕಕೆ
ಮಾರಿಯಲ್ಲವೆ ಕೇಳಿರೋ
ನಾರಿಯಾರಿಗೆ ಮಕ್ಕಳಾರಿಗೆ ಜೀವಿತದಾರಿಯೆಲ್ಲಿಗೆ ಪೇಳಿರೋ೪
ಮಂಚಬಾರದು ತನ್ನ ಮಡದಿಯು
ಬಾರಳು ಕಂಚುಕನ್ನಡಿಬಾರದೀ
ಸಂಚಿತ ದ್ರವ್ಯದಿ ಕೊಂಚವು ಬಾರದು ವಿಸಂಚಿಗೆ ದೇಹವಿದು೫
ಹಲವು ಸಾಹಸದಿಂದ ಘಳಿಸಿದರ್ಥಗಳೆಲ್ಲ ಬಳಸಿನ ಬಾಂಧವರು
ನಿಳಯದೊಳುಂಡುಟ್ಟು ನಲಿದು ನಂಟರು ಎಂದು
ಒಲಿದುಕೊಂಡಾಡುವರು೬
ಅರ್ಥವಿದ್ದವನ ಸಮರ್ಥನೀತನ ಜನ್ಮಸಾರ್ಥಕವೆಂಬುವರು
ಅರ್ಥವ ಕಳಕೊಂಡು ಸಾರ್ಥನಾಗಲು
ಜನ್ಮವ್ಯರ್ಥವೆಂದುಸುರುವರು ೭
ರೊಕ್ಕವಿದ್ದರೆ ಕೈಲಿ ಸಕ್ಕರೆ ಮಾತಿನೊಳಕ್ಕರೆ ಪಡಿಸುವರು
ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು ೮
ಧರಣಿಗೋಸುಗ ತಮ್ಮ ಹರಣವ ಕಳಕೊಂಡು
ಮರಣವ ಪೊಂದುವರು
ಮರಳು ಜಗಳಕೆ ತರಳರು ಚಾಚುತೆ ಕೊರಳನು ಕೊಯ್ಯುವರೋ ೯
ತಂದೆಯ ಬಿಡುವರು ಕಂದನ್ನ ಬಡಿವರು
ಬಂಧುಗಳನ್ನು ಕೊಲ್ವರು
ಒಂದಿಗೆ ಜನಿಸಿದರೆಂದು ನೋಡರುನಿಜ ದಂದುಗಕ್ಕೊಳಗಹರು೧೦
ನಂಟರು ನಮಗಿವರುಂಟೆಂದು ಮೋಹದ ಗಂಟುಕಟ್ಟಿರೆ ಮನದಿ
ಕಂಟಕ ಯಮಬಂದು ಗಂಟಲಬಿಗಿವಾಗ ನಂಟರಿಲ್ಲವು ಜಗದಿ೧೧
ಅಪತ್ತುಬಂದಾಗ ಪಾಪಿಯು ಮನದನು ತಾಪದಿ ನೆನೆಯುತಿರೆ
ಕಾಪಾಡುವನಾಗ ಶ್ರೀಪತಿ ಪುಲಿಗಿರಿ ಭೂಪನು ನಮ್ಮದೊರೆ೧೨
ನೊಂದ ಗಜೇಂದ್ರನ ಕಂದ ಪ್ರಹ್ಲಾದನ ಬಂದವಿಭೀಷಣನ
ಚಂದಿರಮುಖಿ ನೃಪನಂದನ ಧ್ರುವರನು ಚಂದದಿ ಸಲಹಿದನ ೧೩
ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ
ಭಜಕರದಾತನ ತ್ರಿಜಗಕ್ಕೆ ನಾಥನ ವಿಜಯನ ರಥಸೂತನ೧೪
ಅಂಗಜಜನಕನ ಮಂಗಳ ಮಹಿಮನ ಗಂಗೆಯ ಪಡೆದವನ
ರಂಗನ ಸುಗುಣ ತರಂಗನ ಶಂಖರಥಾಂಗವ ಪಿಡಿದಿಹಿನ೧೫
ಗೌತಮ ಭಾರ್ಯೆಯ ಪೂತೆಯ ಮಾಡಿದ
ಖ್ಯಾತ ಪಾದಾಂಬುಜನ
ವಾತನ ಮಗನೊಳು ಪ್ರೀತಿಯ ಬೆಳಸಿದ ಸೇತು ವಿಧಾತನ೧೬
ರಾಮನ ಜಗದಭಿ ರಾಮನ ದೈತ್ಯವಿರಾಮನ ಭಜಕಜನಾ
ರಾಮನ ದಶರಥರಾಮನ ಸೀತಾರಾಮನ ಗುಣಧಾಮನ೧೭
ಪಂಕಜನೇತ್ರನ ಪರಮ ಪವಿತ್ರನ ಶಂಕರನುತಿಪಾತ್ರನ
ವೆಂಕಟರಮಣನ ಕಿಂಕರ ಶರಣನ ಸಂಕಟ ಹರನಾಮನ೧೮
ಧರೆಯೊಳುತ್ತಮ ಪುಲಿಗಿರಿಯೊಳು ನೆಲಸಿದ
ವರದ ವಿಠಲ ದೇವನ
ಶಿರಿನಾಮವೆ ತನ್ನ ಮರೆಯದೆ ನೆನೆಯಲು
ಪೊರೆಯುವದಾನರನ ೧೯

 

ಈ ಪದದಲ್ಲಿ ಗೋವುಗಳಿಗೆ
೨೮
ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ
ಸದಯನೀನಾದರೆ-ಬದುಕಿಸಿ ಪಶುಗಳ
ಮುದವನು ತೋರಿಸು ಮಧುಸೂಧನ ಈಗ ೧
ಇದಿರಿಗೆ ನೋಡಲಾರದೆ ನಿನ್ನ ದೂರಿದೆ
ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು ೨
ವಿಷದ ನೀರನು ಕುಡಿ-ದಸುವನ್ನು
ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ ೩
ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು
ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ ೪
ಗುರುಸುತನನು ಯಮ ಪುರದಿಂದ ಕರೆತಂದ
ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ ೫

 

ತಾವು ಪರಮಾತ್ಮನ ದಾಸಾನುದಾಸರೆಂದೂ
೨೯
ನಿನ್ನ ದಾಸರ ದಾಸ ನಾನಯ್ಯ-ಹರಿ-
ಯನ್ನನುಪೇಕ್ಷಿಪರೇನಯ್ಯ ಪ
ಕಾಮಕ್ರೋಧಗಳಿನ್ನೂ ಬಿಡಲಿಲ್ಲ-ನಿನ್ನ-
ಪ್ರೇಮವೆನ್ನೊಳುಕಾಲಿಡಲಿಲ್ಲ
ನೇಮನಿಷ್ಠೆಗಳನು ಕೊಡಲಿಲ್ಲ-ಭವ-
ತಾಮಸಬೀಜವ ಸುಡಲಿಲ್ಲ೧
ಆಚಾರದಲಿ ಕಾಲಗತಿಯಿಲ್ಲ-ಬಲು-ನೀಚರ ಸಂಗಕೆ ಮಿತಿಯಿಲ್ಲ
ಪ್ರಾಚೀನ ಕರ್ಮಕ್ಕೆ ಚ್ಯುತಿಯಿಲ್ಲ-ಇದ-
ಗೋಚರಪಡಿಸುವ ಮತಿಯಿಲ್ಲ ೨
ದೇಹದಿ ಬಲವಿಲ್ಲವಾದರೂ-ವ್ಯಾ-
ಮೋಹವು ಬಿಡದಲ್ಪವಾದರೂ
ಗೇಹದಿ ಸುಖವಿಲ್ಲದಿದ್ದರು-ಈ ಸೋಹಮೆಂಬುದಕಿಲ್ಲ ಬೆಸರು ೩
ದಾಸರ ಸಂಗದೊಳಾಡಿಸು-ಹರಿ-ವಾಸರವ್ರತದೊಳು ಕೂಡಿಸು
ವಾಸುದೇವನೆ ನಿನ್ನ ಪಾಡಿಸು-ಸಿರಿವಾಸನಾಮದ ಸವಿ ಯಾಡಿಸು೪
ಶರಣವತ್ಸಲನಹುದಾದರೆ-ಘನ-ಕರುಣಾರಸನಿನಗುಳ್ಳರೆ
ಕರುಣಿಸು ಪುಲಿಗಿರಿ ವಾಸಹರೆ-ಸಿರಿ-ವರದ
ವಿಠಲ ನೀನೆ ನಮ್ಮದೊರೆ ೫

 

ಈ ಜಗತ್ತಿನಲ್ಲಿ ಶ್ರೀನಿವಾಸನಲ್ಲದೆ
೩೦
ನೀನುಳಿಯೆ ರಕ್ಷಕರ ಕಾಣೆನೀ ಜಗದೊಳಗೆ
ಶ್ರೀನಿವಾಸ ಜಗನ್ನಿವಾಸ ಪ
ದೀನ ರಕ್ಷಕ ನಿಖಿಲ ಮಾನವರಮಾನಾಭಿಮಾನ
ದೊಡೆಯನು ನೀನೇಯಲ್ಲದಿಲ್ಲಾ ಅ.ಪ.
ನಕ್ರಮುಖದಲ್ಲಿ ಸಿಕ್ಕಿ ದುಃಖಿಸುವ ಕರಿರಾಜ
ಚಕ್ರವರ್ತಿಯು ಶರಣು ಹೊಕ್ಕೆನನಲು
ಚಕ್ರವನು ಪಿಡಿದು ನೀನಕ್ಕರೆಯೊಳೈತಂದು
ನಕ್ರವದನವಸೀಳಿ ರಕ್ಷಿಸಿದೆ ಗಜವಾ-ದೇವ ೧
ಹಿಂದೆ ನಾನಾನ್ನಗಿರಿಯಿಂದ ಬಹದಾರಿಯೊಳು
ಸಂದುಗೆಳೀಚಲು ಭಂಡಿ ಸಂಜೆಯೊಳಗೆ
ಮುಂದಾಗ ಜೊತೆಯೊಳಗೆ ಬಂದು ಜನಕೆಲ್ಲಿನೀ
ಬಂದು ಬೆಳಕನು ತೋರಿ ಮಂದೆಗೂಡಿದೆ ಕೃಷ್ಣಾ ೨
ಇಂದು ನಿಜ ಸತಿಯುನೊಂದಳುಬ್ಬಸರೋಗದಿಂದ
ಗಾಳಿಯದೀಪದಂದಮಾಗಿ ನಂದಿಪೋಗದ ಮುನ್ನ
ಬಂದು ನೀಮರೆಯಾಗು ಎಂದು
ಮೊರೆಯಿಡಲೀಗ ಬಂದು ಸಲಹಿದೆ ತಂದೆ ೩
ಗುರುಸುತನ ಸಂಯಮಿನೀ ಪುರದಿಂದ ತಂದಿತ್ತೆ
ತುರುಗಾಯ್ವರಸುಗಳನು ಮರಳಿಪಡೆದೆ
ನರಪೌತ್ರನನು ಬಾಣದುರಿಯಿಂದ ರಕ್ಷಿಸಿದೆ
ಸರಿಯಾರು ನಿನಗೆ ಸುರನರಭುಜಂಗರಲ್ಲಿ೪
ತರಳಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ
ಕುರು ವರವಿಭೀಷಣ ತಾಪಸರನುಪೊರೆದೆ
ಶರಣರನು ಪಾಲಿಸುವ ಬಿರುದು ಧರಿಸಿಹ
ವ್ಯಾಘ್ರಗಿರಿಯೊಳಗೆ ನೆಲಸಿರುವ ವರದ ವಿಠಲ ರಾಯ ೫

 

ತಮ್ಮ ಕೊರತೆಗಳನ್ನು ಶ್ರೀನಿವಾಸನ
೩೧
ನೀನೇಗತಿಯೆನಗೆ ನೀರಜನೇತ್ರ ನಿನ್ನ
ಪಾದಂಗಳ ನಂಬಿದೆ ಕೊನೆಗೆ ಪ
ಶೃತಿಹಿತಧರ್ಮವಿಶ್ರುತನಾನಲ್ಲ ಸತತವು
ಜ್ಞಾನಿಯ ಜೊತೆ ಸೆರಲಿಲ್ಲ ೧
ಭಕ್ತಿಪಥದಿಮನ ವರ್ತಿಸಲಿಲ್ಲ ಯುಕ್ತಿಯಿಂ ವಿಷಯವಿರಕ್ತನಾನಲ್ಲ ೨
ಗುರುಕುಲವಾಸದಗುರುತೆನಗಿಲ್ಲ ಪರಮ
ಭಾಗವತರ ಪರಿಚರ್ಯವಿಲ್ಲ ೩
ಮಂತ್ರಾರ್ಥದಭೋಧೆ ಮನದೊಳಗಿಲ್ಲ
ತಂತ್ರದೊಳಗೆ ಜಾಣ್ಮೆಯನಗಿನಿತಿಲ್ಲ ೪
ಸಜ್ಜನ ಸಹವಾಸ ದುಜ್ಜುಗವಿಲ್ಲ-ದುರ್ಜನರ
ಸಂಗತಿ ವರ್ಜಿಸಲಿಲ್ಲ ೫
ಹರಿಕಥೆ ಮಾಡುವ ಪ್ರಜ್ಞೆನನಗಿಲ್ಲ ದುರುಳ
ಕಾಮುಕಸಂಗ ಕಿರಿದಾಗಿಲ್ಲ ೬
ಪರಿಪರಿಕಷ್ಟವ ಪರಿಹರಿಸುವನೆ ಪರಮ
ಶ್ರೀಪುಲಿಗಿರಿ ವರದ ವಿಠಲನೆ ೭

 

ಸಂಸಾರವೆಂಬ ದಟ್ಟ ಕಾಡಿನಲ್ಲಿ
೩೨
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ
ಘೋರವಾದ ಸಂಸಾರವೆಂಬ ಕಾಂತಾರದಿ
ತೊಳಲುವೆ ದಾರಿಯ ಕಾಣದೆ ಅ.ಪ.
ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು
ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು
ಹಮ್ಮಿನ ಗುಂದಿಯ ಹೆಮ್ಮೆಯಕಂಟಕವೆಮ್ಮನು ಕಾಲಿಡ
ಲಮ್ಮಗೊಡವುಹರಿ ೧
ನಾರಿಯ ಮೋಹದ ಭಾರಿಯದುರ್ಗವು ದಾರಿಯೊಳಡಸಿಹುದು
ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು
ಮೂರುತೆರದೊಳಿಹ ಘೋರ ತಾಪಗಳು ಸಾರಿ
ಸಾರಿ ಬಾಯಾರಿಸುತಿರ್ಪವು ೨
ಮನೆ ಮನೆ ವಾರ್ತೆಗಳೆನಿಪ ಮಹಾನದಿಯನು
ದಾಂಟುವೊಡರಿದು
ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು
ತನು ಸಂಬಂಧದ ಜನಗಳು ದುರ್ಮೃಗವನು
ಪೋಲುತ ನಮ್ಮನು ಬಾಧಿಸುತಿರುವರು೩
ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು?
ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ
ನಿದ್ರೆಯೊಳೆಮ್ಮನು ಮುದ್ರಿಸಿಗೈವಳುಪದ್ರವ
ಜರೆಯೆಂಬುದ್ರಿಕ್ತಾಂಗನೆ೪
ಸುರನರವರರೊಳು ತರಣೋಪಾಯವನರಸಿದೆ ಮನವಿರಿಸಿ
ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ
ಶರಣಾಗತರನು ಪೊರೆಯುವ ಪುಲಿಗಿರಿ
ವರದ ವಿಠಲನಿಜ ಚರಣವೆ ನಂಬಿದೆ ೫

 

ಹುಲಿಗಿರಿ ನಿವಾಸನಾದ ವರದನನ್ನು
೩೩
ಪಚ್ಚೆಯು ಬಂತೀಗ-ಶ್ರೀಪುಲಿಗಿರಿ ಪಚ್ಚೆಯ ನೋಡಿ ಬೇಗ ಪ
ಸಚ್ಚಿದಾನಂದರೂಪಚ್ಚರಿಯಾದಂಥ
ಮುಚ್ಚುಮರೆಯಿಲ್ಲದಚ್ಚುತ ನೆಂಬುವ ಅ.ಪ
ಕೈಗೆ ಸಿಕ್ಕುವದಲ್ಲವೈತ-ಕ್ಕಡಿಯಲ್ಲಿ-ತೂ ಗಿನೋಡುವದಲ್ಲವೈ
ಆಗಮಾಂತಗಳಲ್ಲಿ ಯೋಗಿ ಹೃದಯದಲ್ಲಿ
ಭಾಗವತರೊಳನುರಾಗದಿಮೆರೆಯುವ ೧
ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯಕಂಡವರಿಲ್ಲವೈ
ನಲಿದು ಧ್ಯಾನಿಪರಿಗೆ-ಒಲಿದು ತೋರುವ ದಿವ್ಯ
ಜಲಧರವರ್ಣದ ಜಲಜಾಕ್ಷನೆಂಬುವ ೨
ಧರೆಯೊಳುತ್ತಮವಾಗಿಹ-ಶ್ರೀ ಪುಲಿಯೆಂಬ-
ಗಿರಿಯೊಳು ನೆಲೆಯಾಗಿಹ
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ಧೊರೆವರದನೆಂದೆಸರಾದ ೩

 

ವೆಂಕಟೇಶನ ಮಹಿಮಾತಿಶಯಗಳನ್ನು ವರ್ಣಿಸಿದ್ದಾರೆ.
೩೪
ಪರಮ ಪುರುಷ ಪರೇಶ ಪಾವನ ಪರಮ ಮುನಿಜನ ಪಾಲನ
ಶರಧಿ ಶಯನೆ ವಿಹಂಗವಾಹನ ಶಾರದಾಂಬುಜಲೋಚನಾ ೧
ವಾಸುದೇವ ವಿರಿಂಚಿ ವಂದಿತ ವಾಸವಾದಿ ಸುರಾರ್ಚಿತ
ವಾಸುಕಿ ಪ್ರಿಯ ಭೂಷಭಾವಿತ ವಾಸರೇಶಕುಲೋದಿತ ೨
ಶರಣ ಜನರ ಸೌಖ್ಯವಿತರಣ ಶುಭಗುಣಸಾಗರ
ವರದ ಪುಲಿಗಿರಿವಾಸ ವೆಂಕಟ ವರದ ವಿಠಲ ದಯಾಕರ ೩

 

ತಮ್ಮಲ್ಲಿ ಅಸೂಯೆ
೩೫
ಪರಮ ಪುರುಷ ಬಾರೋ-ಪಾವನ-
ಚರಣಯುಗವ ತೋರೋ ಪ
ಶರಣರ ಪೊರೆಯುವ ಕರುಣಿಗಳರಸನೆ
ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ.
ದಿಕ್ಕು ನೀನೆ ಎಂದು-ನಂಬಿದನಕ್ಕರಿಂದ ಬಂದು
ಟಕ್ಕಿನಿಂದ ನೀ ನಕ್ಕಜ ಮಾಡಲು ತಕ್ಕುದೇನ
ಘನ ರಕ್ಕಸ ವೈರಿಯೆ ೧
ಇಷ್ಟದೇವನಾರೋ-ಮನಸಾಭೀಷ್ಟವ ಕೊಡುಬಾರೋ
ಅಷ್ಟರೊಳಗೂ ಬಹಳಿಪ್ಪದೆನೆಲಸಿದ ಕೃಷ್ಣಮೂರ್ತಿ
ನೀಂದೃಷ್ಟಿಸು ನಮ್ಮನು೨
ಕೇಣವ್ಯಾಕೋಹರಿಯೇ-ಕಣ್ಣಿಲಿ-ಕಾಣ ಬಾರೋ ಧೊರೆಯೇ
ಪ್ರಾಣದೊಡೆಯ ನೀ ಕಾಣಿಸುಹರ್ಷವ ಕಾಣೆ ನಿನಗೆ
ಸರಿ ಜಾಣತನದಿಹರಿ೩
ವಾರಿಧಿಕೃತಶಯನ-ವಿಕಸಿತ-ವಾರಿಜದಳನಯನ
ಕ್ಷೀರದೊಳದ್ದುನೀ ನೀರೊಳಗದ್ದು ಕಂಸಾರಿ ನಿನ್ನನೆ
ಸಾರಿದೆ ನರಹರಿ೪
ಧರೆಯೊಳಧಿಕವಾದ-ಶ್ರೀ ಪುಲಿಗಿರಿಯೊಳು ನೆಲೆಯಾದ
ಶರಣಾಭರಣ ನಿಜ ಕರುಣವ ತೋರಿಸು
ವರದವಿಠಲಧೊರೆ ವರದ ದಯಾನಿಧೆ ೫

 

ಅನೇಕ ಪ್ರಸಂಗಗಳನ್ನು
೩೮
ಪಾದಸೇವೆಯ ಪಾಲಿಸೋ ಪಂಕಜನಾಭ ಪ
ಪಾದಸೇವೆಯ ತೋರೋ ವೇದಗೋಚರವ್ಯಾಘ್ರ
ಭೂಧರ ವಿಹರಣ ಶ್ರೀಧರ ಹರಿ ನಿನ್ನಪಾದ ಅ.ಪ.
ಶೇಷವಾಯುಗಳತಿ ದೋಷವರ್ಜಿಸಿ
ತನು ಶೋಷಿಸಿ ತಪನವಿಶೇಷವಾಚರಿಸೆ
ದೋಷರಹಿತ ಗುಣ ಭೂಷಾಶೇಷನಿಗೊಲಿದು
ಶೇಷಪರ್ವತಶಿರೋ
ಭೂಷಣವೆನಿಸಿದ ಪಾದಸೇವೆಯ ೧
ಬಲಿ ಚಕ್ರವರ್ತಿಯು ಬಲವೈರಿಯನು
ಬಲು ಬಳಲಿಸಿ ರಾಜ್ಯವ ಛಲದಿಂದಾ ಕ್ರಮಿಸೆ
ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ
ಈರಡಿ ಮಾಡಿ ಬಲಿಯಮೆಟ್ಟಿದ ಧಿಟ್ಟ ಪಾದ ೨
ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ
ಕುಲಸತಿಗೊಲಿದು ನಿರ್ಮಲತಪೋವನಕೆ
ಸುಳಿದು ಆ ಲಲನೆಯ ಕಲುಷವಖಂಡಿಸಿ ಲಲನಾರೂಪವನಿತ್ತು
ಸಲಹಿದ ಪಾವನ ||ಪಾದಸೇವೆಯ|| ೩
ತರಣಿ ತನಯನೆಚ್ಚ ಗರಳ ಶರವು ಬೇಗ
ನರನುತ್ತಮಾಂಗಕ್ಕೆ ಗುರಿಯಾಗಿ ಬರಲು
ಚರಣ ದುಂಗುಟದಿಂದ ಧರಣೀತಳವನೂರಿ
ನರನ ಶಿರವಕಾಯ್ದ ನರನಾರಾಯಣ ನಿನ್ನ ||ಪಾದ|| ೪
ಪುಲಿನಾಮದಸುರನು ಛಲದಿ ಮಾಂಡವ್ಯನ-ಗಳವ
ಪಿಡಿದು ಬಾಧೆಗೊಳಿಸೆ ವೇಗದಲಿ
ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ
ಮಾಂಡವ್ಯಗೆ ಒಲಿದ ವರದ ವಿಠಲ ||ನಾರಾಯಣ||೫

 

ತಾಪತ್ರಯ
೩೬
ಪಾಲಿಸೆನ್ನ ಶ್ರೀಲೋಲ ಕೃಪಾಳೋ
ಬಾಲಕನುಕ್ತಿಯ ಲಾಲಿಸಿ ಕೇಳೋ ಪ
ಕಾರಾಗಾರ ಶರೀರದಯುಗಳ ದಾರಾಪತ್ಯದ ದಾರಿಯನಿಗಳ ೧
ಆರುಮಂದಿ ಬಲು ಶೂರರು ಖಳರು ಚೋರರು
ಚಿತ್ತವ ಹಾರಿಸುತಿಹರು ೨
ತನುಸಂಬಂಧದ ಜನರರ್ಥಿಯಲಿ |
ಕೊನೆವರು ದುರ್ಮೃಗವನು ಪೋಲುತಲಿ ೩
ತಾಪತ್ರಯ ಪರಿತಾಪದ ಬೇಗೆ | ಈ ಪರಿಮೋಚನ ಶ್ರೀಪತಿ ಹೇಗೆ ೪
ಕರುಣದಿ ಶ್ರೀಪುಲಿಗಿರಿಯೊಳಿರುವನೆ |
ಶರಣರ ಪೊರೆಯುವ ವರದವಿಠಲನೆ ೫

 

ಲಕ್ಷ್ಮೀದೇವಿಯ ರೂಪಾತಿಶಯವನ್ನು
೧೦೧
ಪಾಲಿಸೆನ್ನಪರಿ ಪಾಲನಶೀಲೆ ಪಾಲಿತಸುರನರ ಜಾಲಸುಶೀಲೆ ಪ
ಕ್ಷೀರ ಶರಧಿ ಸುಕುಮಾರಿಣಿ ಲಕ್ಷೀ
ವಾರಿಜಮುಖಿಸಿತವಾರಿರುಹಾಕ್ಷಿ ೧
ಅಂಬೆ ಭುವನ ಕುಟುಂಬೆ ರಮಾಂಬೆ
ನಂಬಿಭಜಿಸುವುದು ಡಾಂಬಿಕಮೆಂಬೆ೨
ಯುಕ್ತಿಯು ಶಕ್ತಿವಿರಕ್ತಿಗಳಿಲ್ಲ ಉಕ್ತಿಮಾತ್ರದಿಂದ ಭಕ್ತಿಕೊಡೆಲ್ಲ೩
ಜಯಕರುಣಾಲಯೆ ಜಯಮಣಿವಲಯೆ
ಜಯನಿಸ್ತುಲಯೆ ಜಡಮತಿ ಗೊಲಿಯೆ ೪
ದರೆಯೊಳುತ್ತಮ ಪುಲಿಗಿರಿ ಯೊಳಿರುವನೆ
ಶರಣರ ಪೊರೆಯುವ ವರದ ವಿಠಲನೆ ೫

 

ದಶಾವತಾರಗಳನ್ನು
೩೭
ಪಾಲಿಸೋಯನ್ನ ಪರಾತ್ಪರಾ ಹರಿ ಪ
ಪಾಲಿಸೊ ಬುಧಹಿತ ಫಾಲನಯನನುತ
ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ.
ಜಲಜಭವನ ನಿಜಕುಕ್ಷಿಯೊಳಿದ್ದ ಸುಲಲಿತ
ವೇದಾಪಹಾರಿಯಕಂಡು
ಜಲಚರ ರೂಪಿನಿಂದಾ ಖಳನ ಸಂಹರಗೈದು
ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ ೧
ಅಂದು ದೂರ್ವಾಸನಶಾಪದಿ-ಜಗವು-ಇಂದಿರೆ
ಕರುಣಾವಿಹೀನದಿ ಬಲು
ನೊಂದು ಕಂಗೆಡುತಲಿರೆ ಸಿಂಧುಮಥನಗೈದು
ಇಂದಿರೆಯನು ತಂದ ಮಂದರಧರ ಕೂರ್ಮ ೨
ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ
ಪಹಾರಗೈಯಲು ಬೇಗ
ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ
ಧರಣೀಚೋರನ ಕೊಂದ ಸರಸೀರುಹಾಂಬಕ ೩
ಸರಸಿಜಜನ ವರದರ್ಪದಿ ಜಗವನುರುಹಿ-ತರಳನಭಾದೆ
ಗೈಸಿದ ಬಲು
ದುರುಳ ಹಿರಣ್ಯಕನುರವ ನಖದಿಂದ ಸೀಳಿ
ಕರುಳಮಾಲೆಯನಿಟ್ಟ ಧುರಧೀರ ನರಹರಿ೪
ಬಲಿಯ ಮೂರಡಿ ಭೂಮಿದಾನವ ಬೇಡಿ
ಅಳೆದು ಈರಡಿಮೂಡಿಲೋಕವ ಮತ್ತೆ
ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ
ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ ೫
ಚಕ್ರಾಂಶನಾದ ಕಾರ್ತಿವೀರ್ಯನ-ಭುಜ
ಚಕ್ರದೊಡನೆದುಷ್ಟಭೂಪರಅತಿ
ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ
ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ ೬
ಕ್ರೂರರಾವಣ ಕುಂಭಕರ್ಣರ-ಬಲು-ಘೋರತನಕೆ
ತ್ರಿದಿವೇಶರದೊಡ್ಡ
ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ
ವೀರರ ಮಡುಹಿದ ಶ್ರೀ ರಾಮ ಮೂರುತಿ ೭
ಬಲಭದ್ರನೆಂಬುವ ನಾಮದಿ-ಧುರದಿ-ಹಲ
ನೇಗಿಲುಗಳನು ಹಸ್ತದಿಪಿಡಿದು
ಬಲವಂತರಾದ ದೈತ್ಯಕುಲವತರಿದು ದಿವಿಜ
ಕುಲವ ಸಂರಕ್ಷಿಸಿದ ಜಲಧರ ನಿಭಚೇಲ ೮
ದುಷ್ಟಕ್ಷತ್ರಿಯರ ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ
ಬಲು ಭ್ರಷ್ಟಕೌರವ ಯುಧಿಷ್ಟಿರರಿಗೆ ವೈರಿ ಪುಟ್ಟಿಸಿ
ಭೂಭಾರ ಮಟ್ಟುಮಾಡಿದ ಕೃಷ್ಣ೯
ಕಲಿಯಿಂದ ಕೆಡೆ ನಿಜಧರ್ಮವು ಬಹುಖಳರಿಂದ
ವ್ಯಾಪಿಸೆಲೋಕವು ಆಗ
ಲಲಿತತೇಜಿಯನೇರಿ ಕಲುಷಾತ್ಮಕರಕೊಂದು
ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ ೧೦
ಗಿರಿಜಾವಿವಾಹದಿ ತೃಷ್ಟ್ರನ-ಶಾಪ-ಶರಧಿಯಿಂಟಿದ
ಮುನಿಗೈದಲುಬೇಗ
ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ
ವರವಿತ್ತು ಸಲಹಿದ ವರದ ವಿಠಲ ಹರಿ೧೧

 

ಇದು ಒಂದು ಬಹುಮಟ್ಟಿಗೆ
೩೯
ಪಿತಾಂಬರಧರ ನಮೋ ನಮೋ
ವನಜಾತಾಂಬಕತೇನಮೋನಮೋ ಪ
ಖ್ಯಾತಚರಿತ್ರವಿಧಾತೃಜನಕ ಪುರುಹೂತ
ಸಹೋದರ ನಮೋನಮೋ ಅ.ಪ
ಜಾತರಹಿತ ಜಲಜಾತಭವಾರ್ಚಿತ ಪಾಥೋನಿಧಿಶಯ
ನಮೋನಮೋ
ಪೀತದನುಜ ಭವಭೀತಿದರಾನತ ಶ್ರೀ ತರುಣೀಪ್ರಿಯ
ನಮೋನಮೋ ೧
ಶಾಮಳ ನೀರದ ಕೋಮಳ ದೇಹನಿ
ರಾಮಯ ನಿರ್ಮಲ ನಮೋನಮೋ
ಕಾಮಜನಕ ಬಲರಾಮ ಸಹಜ ಸಂಗ್ರಾಮ
ಮುಜ್ವಲ ನಮೋನಮೋ ೨
ನಂದಗೋಪ ವರನಂದನ ಲಲನಾನಂದನ
ಸುಂದರ ನಮೋನಮೋ
ಕುಂದರದನಶರದಿಂದು ವದನ ಗೋವಿಂದಜನಾರ್ದನ
ನಮೋ ನಮೋ ೩
ಹಂಸಡಿಂಬಕ ಬಕಕಂಸಪ್ರಮುಖ ನೃಶಂಸ ವಿಹಿಂಸಕ
ನಮೋನಮೋ
ಸಂಸರದಘವಿಧ್ವಂಸಕ ಪರಮಹಂಸೋತ್ತಂಸಕ
ನಮೋನಮೋ ೪
ಶರಣಜನಾವನ ಶಶಿಕುಲಪಾವನ ಗರುಡಗಮನತೇ
ನಮೊನಮೋ
ತರುಗಣಸಂಕುಲ ವರವ್ಯಾಘ್ರಾಚಲ ವರದ ವಿಠಲತೇ
ನಮೋನಮೋ ೫

 

ಶ್ರೀನಿವಾಸನ ನಾನಾ ಲೀಲೆಗಳನ್ನು
೪೦
ಫಾಲನಯನ ನುತೆ ಪಾಲಿಸು ಸತತೆ
ಪಾಲಿತ ಸುರನರ ಜಾಲಸುಚರಿತ ಪ
ಲೀಲಾನಟನ ಫಣಿ ಶೈಲನಿಳಯ ಭಕ್ತ ಪಾಲವಿದೈತವನ
ಮಾಲಶ್ರೀಲೋಲ ೧
ಬಾಲತನದಿ ನಿಜ ಲೀಲಾಚರಿತಗುಣ
ಜಾಲವಿಮೋಹಿತ ಬಾಲಾನು ಕೂಲ ೨
ಧಾರಾಧರಾಭ ಶರೀರ ತಿರಸ್ರ‍ಕತದೂರ ವಿಹಗಸಂ ಚಾರವುದಾರ೩
ಘೋರ ದನುಜ ಸಂಹಾರ ಸುಜನಪರಿವಾರ
ನಿಗಮ ವಿಚಾರ ವಿಹಾರ ೪
ಕರುಣಾವರಣ ನಿಜ ಶರಣಾ ಭರಣ ಭಯ ಹರಣಸಕಲ
ಸುಖಕರಣ ಶ್ರೀರಮಣ ೫
ಶೇಷಶಯನ ಕಲಿ ದೋಷದಮನ ಮೃದು ಭಾಷ
ಮನೋಹರಭೂಷ ಸುವೇಷ ೬
ಹರಿದಾಸರನು ಬಲು ಹಿರಿದಾಗಿಮೆರೆಸುವ
ದ್ವಿರದವರದ ಶ್ರೀವರದ ವಿಠಲ ೭

 

ಭಕ್ತರ ದುಷ್ಕರ್ಮಗಳನ್ನು
೪೧
ಬಂದೆ ಗೋವಿಂದ ನಿನ್ನ ಸನ್ನಿಧಿಗೆ-ಮುದದಿಂದ
ಕಾಣಿಕೆಯನು ತಂದೆ ನಿನ್ನಡಿಗೆ ಪ
ನಾರಾಯಣನೆಂಬ ಚೋರ ದುಷ್ರ‍ಕತಗಳ
ಹಾರಿಸಿಕೊಂಬುವ ಶೂರನೆಂದು
ದೂರಕೇಳುತ ಬಹು ಭಾರಿಪಾಪಂಗಳ ಸೇರಿಸಿ
ತಂದೆ ಮುರಾರಿ ವಿಚಾರಿಸಿ ೧
ಇಲ್ಲದ ವಸ್ತುವಿಗಲ್ಲವೆ ಲೋಕದೊಳೆಲ್ಲರ ಮಾನಸರುಲ್ಲಾಸವೂ
ಪುಲ್ಲನಾಭನೆ ನಿನ್ನೊಳಿಲ್ಲದೋಷಗಳೆಂದು
ನಿಲ್ಲದೆ ದುರಿತಗಳೆಲ್ಲ ಸೇರಿಸಿಕೊಂಡು ೨
ಪರಮ ಪುರುಷನಿನ್ನ ಚರಣದ ಸೇವೆಗೆ
ಬರಿಕೈಯೊಳೆಂದಿಗು ಬರಲಾಗದೆಂದು
ಪರಿಪೂರ್ಣನಿನ್ನೊಳಗಿರದ ವಸ್ತುಗಳನ್ನು ಪರಿಕಿಸಿ
ತಂದೆನೈ ವರದ ವಿಠಲ ಹರಿ೩

 

ಗೋವುಗಳಿಗೆ ರೋಗ ತಗುಲಿದಾಗ
೪೨
ಬದುಕಿಸೀ ಪಶುಗಳನೂ ಭಗವಂತ ನೀನು ಪ
ಬದುಕಿಸೀ ಪಶುಗಳ ಭವರೋಗವೈದ್ಯನೆ
ಕದಲಿಸೀರೋಗವ-ಕರುಣಿಗಳರಸನೆ ಅ.ಪ.
ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು
ಮೇವನುಬಿಟ್ಟ ವಿದಾವರೊಗವೋ ಕಾಣೆ ೧
ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ
ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ ೨
ನಾಲಿಗೆ ನೀಡವು ಕಾಲು ಕೆಟ್ಟವು ಕಂ
ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು೩
ಗೋವುಗಳಿಗೆ ಭೂದೇವರುಗಳಿಗೆಲ್ಲ
ದೇವ ನೀನಲ್ಲವೆ-ದೇವಕೀ ತನಯನೆ ೪
ಸತ್ತವರಿಗೆ ಜೀವವಿತ್ತು ಬದುಕಿಸಿದೆ
ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ ೫
ದಾಸನು ನಾನೆಂಬ ವಾಸಿಯುಳ್ಳರೆ ಬೇಗ
ವಾಸಿಯ ಮಾಡಯ್ಯ ನೀ ಮೋಸವ ಮಾಡದೆ ೬
ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ
ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ ೭

 

ಪರಿವಾರ ಸಹಿತ ತಮ್ಮ ಮನೆಗೆ ಬರಬೇಕೆಂದೂ
೪೬
ಬಾರೊ ಮನೆಗೆ ಶ್ರೀದಾರನೆ ನಿಜಪರಿವಾರದೊಡನೆ
ಗುಣವಾರಿಧಿಯೆ ಪ
ಮಾರಜನಕಸುಕುಮಾರಾಂಗ ಪರಮೋ |
ದಾರಾ ಕೃತಿಯನೀ ತೊರಿಸೆನೆಗೆ ೧
ಎಷ್ಟು ಜನ್ಮದ ತಪ ವೊಟ್ಟಾಗಿ ಸೇರಲು |
ದೃಷ್ಟಿಸುವೆನೊ ಶ್ರೀಕೃಷ್ಣನಿನ್ನನು ೨
ಚಿನ್ನದ ಪೀಠದಿ ರನ್ನದ ಕಲಶದಿ |
ಚೆನ್ನಾಗಿ ತೊಳೆಯುವೆ ನಿನ್ನಡಿಗಳ ೩
ಗಂಧವ ಹಚ್ಚಿ ಸುಗಂಧ ತುಳಸೀದಳ |
ದಿಂದಾಲಂಕರಿಸುವೆ ಸುಂದರಾಂಗನೆ ೪
ಜಾಜಿಯು ಮೊದಲಾದ ಹೂಜಾತಿಗಳತಂದು |
ಮೂಜಗದೊಡೆಯನನು ಪೂಜಿಸುವೆನೊ೫
ಲೋಪವಿಲ್ಲದೆ ದಿವ್ಯ ಧೂಪವನರ್ಪಿಸಿ |
ದೀಪಂಗಳನು ಬಹುದೀಪಿಸುವೆನು ೬
ಪಾಲು ಸಕ್ಕರೆ ಘೃತ ಮೇಲಾದ ಭೋಜ್ಯವ |
ಮೇಳೈಸುವೆನು ಶ್ರೀಲೋಲನಿಗೆ ೭
ಕರ್ಪೂರ ವೀಳ್ಯವನರ್ಪಿಸಿ ಮೋದದಿ |
ಕರ್ಪೂರದಾರತಿಗಳರ್ಪಿಸುವೆನು ೮
ಮಣಿದು ನಿನ್ನಂಘ್ರಿಗೆ ಹಣೆಯ ಚಾಚುತ |
ಮನದಣಿಯುವಂದದಿನಾ ಕುಣಿದಾಡುವೆ ೯
ಸದಯ ನಿನ್ನಂಘ್ರಿಯ ಹೃದಯಾರ ವಿಂದದ |
ಸದನದೊಳಿಂಬಿಟ್ಟು ಮುದಹೊಂದುವೆ ೧೦
ಶರಣಾಗತರನೆಲ್ಲ ಕರುಣದಿ ಸಲಹುವ | ವರದ ವಿಠಲ
ಪುಲಿ-ಗಿರಿ ಧಾಮನೆ ೧೧

 

ಸರ್ವಗುಣ ಸಂಪನ್ನನಾದ
೪೪
ಬಾರೋ ಬಾರೋ ಭವಸುತ ಚರಣನೆ
ಸಾರಸುಗುಣ ಪರಿಪೂರಿತ ಕರುಣನೆ ಪ
ಚರಣ ಕಮಲಗಳಿಗೆರಗುವೆ ಭಕ್ತಿಯಲಿ
ಭರದಲಿ ಯನ್ನನು ಪೊರೆಯಲು ಮುದದಲ್ಲಿ ೧
ಅರಿದರ ವರಗಳ ಕರದಲಿ ಪಿಡಿಯುತ
ಕರಿಯನು ಪೊರೆಯುವ ತ್ವರೆಯಲಿ ಬಹುವೋಲ್ ೨
ಪರಮ ಪುರುಷಫಣುಗಿರಿ ಶಿಖರಾಲಯ
ವರದ ವಿಠಲ ಸುಖಕರಕಮಲಾಲಯ ೩

 

ಭಾಗವತರ ಭಾಗ್ಯನಾದ
೪೫
ಬಾರೋಮನೆಗೆ ಭಾಗವತರ ಭಾಗದೇಯನೆ
ಚಾರುವದನ ತಾಮರಸವ ತೋರು ಪ್ರೀಯನೆ ಪ
ಹಗಲುಯಿರಳು ನೆನಹುಬಿಡದು ಸುಗುಣಸುಂದರ
ಬಗೆಯೊಳೆನ್ನ ಮರೆಯಬಹುದೆ ನಿಗಮಗೋಚರ ೧
ಕಣ್ಣಿನಿಂದ ನಿನ್ನ ನೊಡಿಧನ್ಯನಾಗುವೆ
ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ ೨
ನಿತ್ಯ ತೃಪ್ತನಿನಗೆ ನಾನೇ ಭೃತ್ಯನಾಗುವೆ
ನೃತ್ಯಗೈದು ಪಾಡಿಕೃತಕೃತ್ಯನಾಗುವೆ ೩
ಶ್ರೀನಿವಾಸ ನಿನ್ನ ದಾಸನಾನೇನಲ್ಲವೆ
ಮಾನಪ್ರಾಣಗಳಿಗೆ ಧೊರೆಯು ನೀನೇಯಲ್ಲವೆ ೪
ಶರಣ ಜನರ ಭರಣಗೈವ ಕರುಣಿಯಾರೆಲಾ
ಹರಿಣಹರಧರದೊಳಿರುವ ವರದವಿಠಲಾ ೫

 

ಶಿವ-ಗೌರಿ ಮೊದಲಾದವರು
೪೭
ಬಿಡಲಾರೇ ಬಿಡಲಾರೇ ಪ
ಕಡಲೊಳು ಪವಡಿಪ ಮೃಡನುತ ನಾಮನ ಅ.ಪ.
ಕಾಶಿಯೊಳಗೆ ವಿಶ್ವೇಶನು ಬೋಧಿಪ |
ದಾಶರಥಿಯವರ ಸಾಸಿರನಾಮದ ೧
ಗೌರವದಿಂದಲಿ ಗೌರಿಯು ಜಪಿಸುವ |
ಗೌರವೆನಿಪ ದುರಿತಾರಿಯ ನಾಮವ ೨
ಭಕ್ತರು ಸಕಲ ವಿರಕ್ತರು ನಿತ್ಯದಿ |
ರಕ್ತಿಪಡುವ ಗುಣಯುಕ್ತನ ನಾಮವ ೩
ಇಷ್ಟದಿ ನೆನೆªರ ಕಷ್ಟವಳಿದುಮನ |
ದಿಷ್ಟಕೊಡುವ ಪರಮೇಷ್ಠಿಯ ನಾಮವ ೪
ಚರಣವ ನಂಬಿದ ಶರಣರ | ಪೊರೆಯುವ ವರದ
ವಿಠ್ಠಲ ಧೊರೆ ವರದನ ನಾಮವ ೫

 

ವಸ್ತ್ರಾಭರಣಾದಿ
೪೩
ಬೃಂದಾವನವೇರಿ-ಬಹುನಲವಿಂದ ಬಂದ ಶೌರಿ ಪ
ಬೃಂದಾರಕವರದಿಂದ ಶೌರಿಯಾನಂದವ ಸೇವಕ ಬೃಂದಕೆ ತೋರಿ ಅ.ಪ.
ಕುಂದಮುಕುಳದಿಂದಾ ಕುಮುದಸು ಗಂಧಿಯಗಳಿನಿಂದಾ
ಕೆಂದಾವರೆ ಶ್ಯಾವಂತಿಗೆ ಜಾಜಿಯಿಂದ
ರಚಿಸಿಸೊಗಸಿಂದಲಿ ಮೆರೆಯುವ ೧
ಸುತ್ತಿರೆ ಹಸ್ತಿಗಳೂ-ಕೂರ್ಮನು ಪೊತ್ತಿರೆ ಮಧ್ಯದೊಳು
ಮತ್ತೆಫಣೀಂದ್ರನ ಮಸ್ತಕದಲ್ಲಿರೆ ಸ್ವಸ್ತಿಕಾದಿಬಹು ಚಿತ್ರದಿ ಶೋಭಿಪ ೨
ಪಂಕಜ ಚಿಹ್ನೆಗಳಾ-ಸೂರ್ಯಶ-ಶಾಂಕ ಸುರೇಖೆಗಳಾ
ಶಂಖಚಕ್ರ ಬಿರುದಾಂಕಿತ ದಿವ್ಯ ವಿಟಂಕದಿಂದ
ಬಹುಬಿಂಕದೊಳೆಸೆಯುವ೩
ಕೋಟೆಯ ತೆನೆಗಳಲಿ ದಿವ್ಯವಧೂಟಿಯರೊಲವಿನಲಿ
ನಾಟಕರಚನೆಯ ಪಾಠಕರಂದದಿ ನೋಟಕರಿಗೆ
ಬಹುದೀಟಿಲಿ ತೋರುವ ೪
ಶಾರದಾಭ್ರನೀಲ-ಶರೀರದಿ- ಹೈರಣ್ಮಯಚೇಲಾ
ಹಾರಮಕುಟ ಕೇಯೂರ ಕಟಕಮಂ
ಜೀರಭೂಷಣೋದಾರ ವಿಹಾರ ೫
ಮಂಗಳರವದೊಳಗೆ-ಶಂಖಮೃದಂಗ-ಧ್ವನಿಮೊಳಗೆ
ಸಂಗತ ಸುರವಾರಂಗನೆಯರು ಗಾನಂಗಳಿಂದ
ನಾಟ್ಯಂಗಳರಚಿಸಲು೬
ವರ ವಿಪ್ರರು ಪೊಗಳೆ-ಛತ್ರಚಾಮರಗಳ ನೆಳಲೊಳಗೆ
ಪರಿಪರಿ ಜ್ಯೋತಿಗಳೆಸೆಯಲು ಪುಲಿಗಿರಿ
ವರದವಿಠಲನು ವರಗಳ ಬೀರುತ ೭

 

ಬಹಳಮಟ್ಟಿಗೆ ಸಂಸ್ರ‍ಕತ
೪೮
ಭಜತಿ ಭುಜಗಶಯನಂ ಸದಾಹೃದಿ ಪ
ಸಜಲ ಜಲದಶಾರೀರ ಮುಕುಂಡಿತ ಭುಜಗಶೈಲ
ಶಿಖರಾಲಯಮನಿಶಂಅ.ಪ
ಶೇಷ ಪವನ ಸಂವಾದವದೇನ ವಿಶೇಷ
ಕರುಣಾಯಾತ್ರಾಗತಮೀಶ ೧
ರಾಮ ಲಕ್ಷಣಾರಾಧಿತಮಜಭವ ಕಾಮಜನಕ
ಮಕಳಂಕ ಚರಿತ್ರಂ ೨
ಪಾಂಡುತನಯ ಮಾಂಡವ್ಯಾರಾಧಿತ ಪುಂಡರೀಕ
ದಿವ್ಯಾದ್ರಿವಿಹಾರಂ ೩
ಚಂಡಕಿರಣರಥ ಮಂಡನಾಂಗಮಜ
ಮಂಡಜಾತಾವರವಾಹನ ಗಮನಂ ೪
ಪರಮ ಪುರುಷ ಮಖಿಳಾಗಮವೇದ್ಯಂ
ವರದ ವಿಠಲ ಮನುಚಿಂತಯದಾದ್ಯಂ ೫

 

ಶರಣರನ್ನು ಕಾಪಾಡುವ
೪೯
ಭಜನೆಯ ಮಾಡಬಾರದೆ-ಭಕ್ತಿಮೀರದೆ ಪ
ಭುಜಗಶಯನ ಗೋದ್ವಿಜಕುಲದೇವನ ಅ.ಪ.
ಅಜಭವ ಮುಖಸುರ ವ್ರಜವಂದ್ಯನಪದ
ಭಜಕ ಸುಜನರಿಗೆ ನಿಜಸುಖದಾತನ೧
ಪಂಕಜನೇತ್ರನ ಪರಮ ಪವಿತ್ರನ
ಶಂಕರನುತ ನಿಷ್ಕಲಂಕನ೨
ಚರಣವ ನಂಬಿದ ಶರಣರ ಪೊರೆಯುವ
ವರದ ವಿಟಲ ಧೊರೆ ವರದನ ೩

 

ಬಹಳಮಟ್ಟಿಗೆ ಸಂಸ್ರ‍ಕತ
೫೦
ಭಾವಯ ಭವಭಾವಿತ ಚರಣಂ ಭವಭಯಾಪರಿಹರಣಂ ಪ
ಭಾವನೋಚಿತ ಭಾಗ್ಯ ವಿತರಣ ಕೊವಿದಂನಿಜ
ಭಾವದಂ ಹೃದಿ ಅ.ಪ
ವ್ಯಾಘ್ರಭೂಮಿಧರಾಗ್ರ ವಿಹರಣ ಮಗ್ರಜನಶರಣ್ಯಂ
ಶೀಘ್ರಫಲದಮುದಗ್ರಪೌರುಷ ವಿಗ್ರಹಂ ಸುರಾಗ್ರಗಣ್ಯಂ ೧
ಕುಂಡಲೀ ಫಣ ಮಂಡಲಾಶೃತ ಮಂಡಜಾತಗಮನಂ
ಪುಂಡರೀಕ ಸುಮ ಮಂಡಿತ ಹಾರಮ ಖಂಡಿತ
ಹಿಮಕರ ಮಂಡಲ ವದನಂ೨
ರಾಮಮಿನಕುಲ ಸೋಮಮಾಶ್ರಿತ ಪ್ರೇಮಮಾಂಜಿಭೀಮಂ
ಶ್ಯಾಮಜಲಧರ ಕೋಮಲಂ ಗುಣ ಧಾಮಮೀಸ ಪ್ರೇಮನಾಮಂ ೩
ನಂದನಂದನ ಮಿಂದಿರಾ ಹೃದಳಿಂದ ಲೋಲ ಮಿಳಿಂದಂ
ಕುಂದರದನ ಮಮಂದ ಕರುಣಾನಂದಿತಾ ಶಿಲಲೋಕವೃಂದಂ ೪
ಸಾರನಿಗಮವಿಹಾರ ಕುಶಲಮುದಾರ ವರದ ವಿಠಲಂ
ಭೂರಮಾಕುಚಕೊರ ಕಾಂಚಿತ ಚಾರುಮುಕ್ತಹಾರ ಪಟಿಲಂ ೫

 

ತಮ್ಮ ಮೊರೆಯನ್ನು ಕೇಳಿ
೫೧
ಮಂದರಧರಗೋವಿಂದ ಮುಕುಂದ ಸುನಂದ
ವಂದ್ಯನೆ ಲಾಲಿಸೋ
ಕುಂದರದನ ಶರದಿಂದುವದನ ಮುಚುಕುಂದ
ವರದನೇ ಪಾಲಿಸೋ ಪ
ಸಾರಸಭವನುತ ಸಾರಚರಿತ ಸಂಸಾರ
ಪಯೋನಿಧಿ ಪಾರದನೆ
ವಾರಿಧಿಮದಹರ ವಾರಿಧಿನಿಭಶಾರೀರವಿಹಾರ ವಿಶಾರದನೆ ೧
ಶ್ರೀಶನಿಖಿಲ ಲೊಕೇಶಜನಕಭವ ಪಾಶವಿಮೋಚನ ಪಟುಚರಿತ
ಈಶವಿನುತ ಸರ್ವೇಶ ಪರಾತ್ಪರ ಕೇಶವ ಸದ್ಗುಣ ಗಣಭರಿತ ೨
ಧರೆಯೊಳು ಶ್ರೀ ಪುಲಿಗಿರಿಯೊಳು ನೆಲಸಿಹ
ಶರಣರ ಸಲಹುವ ಶ್ರೀಧರನೆ
ವರದ ವಿಠಲ ಸುಖಕರಣ ಕುಶಲ ಕರಿವರದ ಚಕ್ರಧರ ವರನೆ ೩

 

ಪರಮಾತ್ಮನಲ್ಲಿ ಏನು
೫೨
ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ
ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ
ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ ೧
ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ
ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| ೨
ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ
ಮಿಥ್ಯಾವಚನವಿಲ್ಲವೆಂಬೊಂದಿ
ದತ್ಯಧಿಕ-ಕೊರತೆಯೆಂಬ ||ಮಟ್ಟು|| ೩
ಜ್ಞಾನವಂತನೆಂದು ಬಹುಮಾನವಂತನಾದರೂ ಅ
ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ೪
ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ
ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ೫
ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ
ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||೬
ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ
ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||೭
ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ
ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||೮
ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ
ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ ೯
ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ
ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| ೧೦
ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ
ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||೧೧
ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ
ಸ್ಥಿರವಾಗಿ ಶ್ರೀ ವ್ಯಾಘ್ರ ಗಿರಿಯೊಳಿರುವ
ವರದವಿಠಲನೆಂಬ ||ಮಟ್ಟು|| ೧೨

 

ವ್ಯಾಘ್ರಾಚಲದಲ್ಲಿ ನಿಂತು
೫೩
ಮನವೇ ಚಿಂತಿಸು ಹರಿಯ-ಮುರಾರಿಯ ಪ
ಮನವೆ ಚಿಂತಿಸು ಮಾಯಾ ಮನುಜಾಕಾರವ ತಾಳ್ದ
ಸನಕಾದಿ ಸನ್ಮುನಿ ವಿನುತಪದ ವನಜಾತ
ಯುಗಳನು-ಮನವೇ ಅ.ಪ.
ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ
ರತಿದೇವಿ-ಸರಸತಿಯರ ಮಾವನ-ಶ್ರೀರಮಣನ
ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ
ವಿಶ್ವಂಭರೆಯ ದಾಡೆಯೊಳೆತ್ತಿ
ತರಳಗಭಯವನಿತ್ತು ಮೂರಡಿ ಧರೆಯ ಬೇಡುತ
ತರಿದುನೃಪರನು ದುರುಳ ರಾವಣಹರಣ ನೀಲಾಂ-
ಬರನ ಯದುವರ ತುರಗವಾಹನ೧
ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ
ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ
ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು
ಜಗವನುದ್ಧರಿಸಿ ನರಮೃಗದರೂಪವ ತಾಳಿ
ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ
ನೇಗಿಲನು ಪಿಡಿದುಗುರು ಕೊನೆಯಿಂ
ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ ೨
ಪುಲಿಯ ಸಂಹರಿಸಿದನ-ಮಾಂಡವ್ಯಗೆ-ಒಲಿದು
ಪೂಜೆಯಕೊಂಬನ
ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ
ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ
ಸಜ್ಜನ ಮನೋನಿಲಯ ಶ್ರೀನಿವಾಸನ
ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ
ಜಲಜ ಗಾತ್ರನ ವಿಲಸಿತಾಂಬುಜ
ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ ೩

 

ತಮ್ಮ ಮನಸ್ಸಿನಲ್ಲಿ
೫೪
ಮನೆಗೆ ಬಾರೋ ರಂಗ-ಮನಸಿಜನಯ್ಯನೆ
ಕಣ್ಣಿನೊಳಗೂ ನಿನ್ನನೆನಹು ಬಿಡದುಯನ್ನ ಪ
ಮನೆಗೆ ಬಾರೋ ರಂಗ-ಮನೆಗೆ ಬಾರೋ ಕೃಷ್ಣ
ಮನೆಗೆ ಬಾರೋ ರಾಮ ಅ.ಪ
ಮನೆಗೆ ಬಂದರೆನಿನ್ನ ಮಹಿಮೆಯ ಪಾಡುತ
ಮನದಣಿವಂದದಿ ಕುಣಿದೇನೊ ರಂಗಯ್ಯ ೧
ಮನೆಯು ನಿನ್ನದು ಯನ್ನ ತನುವು ನಿನ್ನುದು ಮುನ್ನ
ಧನವು ನಿನ್ನದುಯನ್ನ ಘನವು ನಿನ್ನದು ರನ್ನ ೨
ದರಹಸಿತಾನನ-ಸರಸಿಜನಯನ
ವರದವಿಠಲ ಪುಲಿಗಿರಿವರಸದನ ೩

 

ಪರಮಾತ್ಮನ ಅನೇಕ ಗುಣ
೫೫
ಮರೆತಿರಲಾರೇ-ಮನಸಾರೇ ಹರೇ ಪ
ಮರೆತಿರಲಾರೆನಾಮ ಹಿತ ಚಾರಿತ್ರನ
ಸರಸಿಜ ಪತ್ರನೆತ್ರನ ಅ.ಪ.
ಬಗೆ ಬಗೆರತಿಯಲ್ಲಿ ಜಗವನ್ನುಮೋಹಿಪ
ಸುಗುಣನ ಜಗತ್ಪ್ರಾಣನ ೧
ಚೇತನರಿಗೆ ಸುಖದಾತನ
ದುಃಖ ವಿಘಾತನ ಲಕ್ಷ್ಮೀನಾಥನ ೨
ದಾಸರ ಹೃದಯ ನಿವಾಸನ
ದೋಷನಿರಾಸನ ಶ್ರೀನಿವಾಸನ೩
ವೆಂಕಟರಮಣನ ಕಿಂಕರಶರಣನ
ಸಂಕಟಹರ ನಿಷ್ಕಲಂಕನ ೪
ಮಾನಿನಿಯ ಅಭಿಮಾನವ ಕಾಯ್ದನ
ದೀನರ ಹರ್ಷನಿಧಾನನ೫
ರಾಮನ ದೈತ್ಯವಿರಾಮನ ಪಾವನ
ನಾಮನ ಹೃದಯಾರಾಮನ ೬
ಧರೆಯೊಳುತ್ತಮ ಪುಲಿಗಿರಿಯೊಳು ನೆಲಸಿಹ
ವರದ ವಿಠಲವರದನ ದೇವನ೭

 

ಮಳೆಯನ್ನು ಪಾಲಿಸಬೇಕೆಂದು
೫೬
ಮಳೆಯ ಪಾಲಿಸ್ಯಯ್ಯ-ಮಂಗಳ-ನಿಳಯ ಲಾಲಿಸಯ್ಯ ಪ
ಇಳೆಯೊಳು ಮಳೆಯನು ತಳೆಯದೆ ತೃಣಗಳು ಬೆಳೆಯದೆ
ಗೋವುಗಳಳಿವುವಯ್ಯಾ ಅ.ಪ.
ಗೋವಿಪ್ರರ ಕುಲವ-ಕಾಯುವ-ದೇವನು
ನೀನಲ್ಲವೆಮೇವುಗಳಿಲ್ಲದೆ ಗೋವುಗಳೆಲ್ಲವು
ಸಾವುವುನಿನ್ನುಳಿದಾವನು ಕಾವನು೧
ಕೆರೆಯೊಳು ನೀರಿಲ್ಲಾ-ಭಾವಿಗಳೊರತೆಯ ಸೊರಿಲ್ಲಾ
ತುರುಗಳು ಜೀವನದಿರವನು ಕಾಣದೆ
ಹರಣವ ಬಿಡುವುವು ಕರುಣದಿ ಬೇಗನೆ ೨
ಬಲರಿಪುಖಾತಿಯಲಿ ಬಾಧಿಸೆ ಜಲಮಯ ರೀತಿಯಲಿ
ಚಲಿಸದೆ ಕರದೊಳಾಚಲವನು
ಕೊಡೆವಿಡಿದುಳುಹಿದೆ ಗೋವ್ಗಳ ಬಳಗವ ನೀಗಳುಂ ೩
ಜಲನಿಧಿಕೃತ ಶಯನ ಶಾರದ ಜಲರುಹದಳನಯನ
ಜಲಧೀದಿತಿ ಜಲಚರಮಾರುತಿ ಜಲಜಕರಗಳಿಂ ಜಲದಾಗರದಿಂ೪
ದಾರಿಯಜನರೆಲ್ಲ-ಬಹುಬಾಯಾರಿ ಬರುವರಲ್ಲಾ
ದೂರದಿಂತಂದಿಹ ನೀರನು ಲೋಭದಿ ನಾರಿಯರೆಲ್ಲ
ವಿಚಾರಿಸುತಿರ್ಪರು ೫
ಬೆಳಿದಿಹ ಸಸ್ಯಗಳು ಬಿಸಲಿನ ಝಳದಲಿ ಬಾಡಿಹವು
ನಳಿನನಯನ ನಿನ್ನೊಲುಮೆಯ ತೋರಿಸಿ
ಘಳಿಲನೆ ಪೈರುಗಳುಳಿಯುವ ತೆರೆದೊಳು೬
ಕರುಣಾನಿಧಿಯೆಂದುನಿನ್ನನು ಶರಣುಹೊಕ್ಕೆನಿಂದೂ
ಶರಣಾಭರಣ ಪುಲಿಗಿರಿಯೊಳು ನೆಲಸಿಹ
ವರದ ವಿಠಲದೊರೆವರದ ದಯಾನಿಧೆ ೭

 

ಅನೇಕ ಸಂಸ್ರ‍ಕತ ಪದಗಳಿಂದ ಕೂಡಿದ ಕೃತಿ
೫೭
ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ
ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ
ದುರಿತಚರಿತ ಮಹಿ ಮಾಮ ಅ.ಪ.
ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ
ನೀಲ ಜಲದ ಮದಹೇಳನ ಸುಭಗಶರೀರ
ಕುಟಿಲದನುಜ ಕುಲಶಿಖರಿ ಕುಲಿಶಧರ ಕುಂದ ಕುಟ್ಮಲ
ಸಮಾನ ಶುಭರದನ ೧
ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ
ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ
ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ
ಸತತ ಶುಭ ಚರಿತ||ಮಾಮವ|| ೨
ಸಕಲದಿವಿಜ ನುತ ಚರಣ ಕಮಲ ನಿರಪಾಯ-ಮೇಯ
ಸಂತತಾರ್ತಾದರ ಚಕ್ರ ವಿಬುಧಗೇಯ
ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ
ದುರಿತಾರಿ ವರದನುತ ||ಮಾಮವ|| ೩

 

ಬಹಳಮಟ್ಟಿಗೆ ಸಂಸ್ರ‍ಕತ ಪದಗಳಿಂದ
೫೮
ಮಾಮವದೇವ-ಮಹಾನುಭಾವ-ಶ್ರೀಮನೋಹರ
ನಿರಾಮಯ ಚಿನ್ಮಯ ರಾಮರಮ್ಯ- ಗುಣಧಾಮ ತಾವಕಂಪ
ಪಂಕಜನೇತ್ರ ಪರಮ ಪವಿತ್ರ ಶಂಖಚಕ್ರಧರ
ಕಿಂಕರಾರ್ತಿಹರ ಪಂಕಜಾಲಯಾಲಂಕೃತ ಗಾತ್ರ ೧
ನಿಲಾಂಬುದಾಭ ನೀರಜನಾಭ ಬಾಲ ಭಕ್ತಪರಿಪಾಲ
ಹೇಮಮಯ | ಚೇಲನವ್ಯವನ ಮಾಲ ಸುಶೋಭ ೨
ಕರುಣಾಲವಾಲ-ಖಳಕುಲಕಾಲ
ಹರಿಣಹರಣಧರವರ ಶಿಖರಾಲಯ ವರದವಿಠಲ
ಸುಖಕರ ಕಮಲಾಲಯ ೩

 

ಪರಮಾತ್ಮನನ್ನು ಒಂದು
೫೯
ಮುತ್ತು ಬಂದಿದೆ-ದಿವ್ಯ ಮತ್ತು ಕೊಳ್ಳಿರೋ ಪ
ಮುತ್ತು ಬಂದಿಹುದೀಗನೀವೆತ್ತಿರೊಳ್ಳಿರೆಲ್ಲಬಂದು
ಉತ್ತಮವ್ಯಾಘ್ರಾದ್ರಿಪುರುಷೋತ್ತಮನೆಂಬುವ ದಿವ್ಯ ೧
ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದದುರ್ಲಭ ಮುತ್ತು
ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ ೨
ಧನವಂತಗೆ ದೊರಕುವುದಲ್ಲ ಜನರ ಕೈಗೆ ಸಿಕ್ಕುವದಲ್ಲ
ಮನದಲ್ಲಿ ಧ್ಯಾನಮಾಳ್ವಮುನಿಗಳ ಸ್ವಾಧೀನವಾದ ೩
ಕ್ಷೀರಪಾರಾವಾರದಲ್ಲಿ-ತೋರಿ ಮೆರೆವ ಮುತ್ತು
ಶ್ರೀರಮಾಮನೋಹರನುದಾರ ವರದ ವಿಠಲನೆಂಬ ೪

 

ಪರಮಾತ್ಮನಲ್ಲಿರುವ ಗುಣಗಳನ್ನು
೬೦
ಯನಗೆ ನಾನೇ ಸರಿ-ನಿನಗೆನೀನೆ ಹರಿ
ಎಣಿಗಾಣೆ ನೀರ್ವರ್ಗೆ ವನಜನಯನ ಪ
ಧರೆಯನಾಳುವ ಸಿರಿಯರಸ ನೀನು
ಈ ಧರೆಯೊಳು ನಿರ್ಭಾಗ್ಯರೆರೆಯ ನಾನು ೧
ಪರಮೇಷ್ಠಿಯನ್ನು ಪಡೆದ ಪರಮ ನೀನು
ಬಲು ದುರಿತಂಗಳಪ್ಪಿದ ದುರುಳನು ನಾನು ೨
ಪುಣ್ಯವಂತರ ಹೃದಯ ಗಣ್ಯ ನೀನು
ಕೃತಪುಣ್ಯ ಹೀನರಿಗಗ್ರಗಣ್ಯ ನಾನು ೩
ಪತಿತಪಾವನ ನೀನು ಪತಿತ ನಾನು
ಸದ್ಗತಿದಾತ ನೀನು ನಿರ್ಗತಿಕನಾನು ೪
ವರವ್ಯಾಘ್ರಗಿರಿಯ ವರದ ವಿಠಲನು ನೀನು
ನಿಜ ಶರಣರ ಚರಣ ಧೂಳೀಪಟಲನಾನು ೫

 

ತನ್ನ ಮಾಯೆಯನ್ನು ಸಾಕು ಮಾಡಿ
೬೧
ಯಾಕೆ ಕಷ್ಟ ಪಡುವೆ ನೀನು
ಲೋಕನಾಯಕ ಸಾಕು ನಿನ್ನ ಮಾಯಾ ಜೋಕೆಯಿಂದ
ಸಲಹು ನಮ್ಮಪ
ಸಿರಿಯೆ ಪಟ್ಟದರಸಿ ನಿನಗೆ ಕಿರಿಯಮಡದಿ ಧರಣಿಯಾಗೆ
ಹಿರಿಯ ಮಗನು ಸರ್ವ ಜನರೊಳಿರುತ ಕಾಮಿಸುವನು ಜಗವ ೧
ಮಗನು ಜಗವ ನಿರ್ಮಿಸುವನು ಮಗುಳೆ ಲಯವಗೈವ
ಮೊಮ್ಮಗನು
ನಿನ್ನದಾಸಿಯಾ-ಜಗವ ಮೋಹಿಸುತ್ತಲಿರುವಳು ೨
ನೀರೊಳಿರುತ ಮೋರೆ ಮುಚ್ಚಿಕೊರೆ ಮಸೆದು ಕಂಬದಿಂದ
ಹಾರಿಯೆಳೆದು ಧಾರಿಣಿಯ ಧೀರ ನೃಪರನೆಲ್ಲಕೊಂದು ೩
ಊರುಬಿಟ್ಟು ಸಾರಿ ವನವ ಜಾರನಾಗಿ ಭಂಗಪಡಿಸಿ
ನಾರಿಯರನು ದಾರತೇಜಯೇರಿಮೆರೆದು ಬಾರಿ ಬಾರಿ ೪
ಪರಮಪದವನಗಲಿ ಚಂಡ ಕಿರಣರಥವ ನುಳಿದು ಕ್ಷೀರ
ಶರಧಿಯನ್ನು ಬಿಟ್ಟು ವ್ಯಾಘ್ರಗಿರಿಯೊಳಿರುವ ವರದ ವಿಠಲ ೫

 

ಅನೇಕ ಸಂಸ್ರ‍ಕತ ಪದಗಳಿಂದಾಗಿರುವ ಕೃತಿ
೬೨
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ
ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ.
ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ
ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ ೧
ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ
ಪಾಲಿಸಿದವ ಸಿರಿಲೋಲನಲ್ಲವೇ ೨
ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ
ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ ೩

 

ಲೋಕವನ್ನೇ ರಕ್ಷಿಸುವ
೬೩
ಯಾಕೆ ಕೃಪೆ ಬಾರದೋ-ಲೋಕರಕ್ಷಕ ನಿನಗ್ಯಾಕೇ ಪ
ಲೋಕ ರಕ್ಷಕ ದುಷ್ಟಕಾಕ ಶಿಕ್ಷಕ ನಿನಗ್ಯಾಕೇ ಅ.ಪ.
ಪಕ್ಷಿವಾಹನನೆಸಿ ಲಕ್ಷಿಸದಿರಲು ಲೋಕದಿ
ಲಕ್ಷಣವಲ್ಲವೊ ಶುಭ ಲಕ್ಷಣ ಮೂರುತಿ ನಿನಗ್ಯಾಕೆ ಕೃಪೆ ೧
ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ
ದಕ್ಷಿಣಶೇಷಾದ್ರಿವಾಸ ರಕ್ಷಿಸುವ ನಿನಗ್ಯಾಕೇಕೃಪೆ ೨
ವಾಸವ ಸನ್ನುತ ಶ್ರೀನಿವಾಸ ನಿನ್ನ ದಾಸನೊಳು
ದೋಷವೆಣಿಸದೆ ಕಾಯೊದೋಷರಹಿತನೆ ನಿನಗ್ಯಾಕೇ ೩
ಸೃಷ್ಟೀಶ ನಿನ್ನ ಶುಭ ದೃಷ್ಟಿಯಿಂದ ನೋಡಿಯನ್ನ
ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು ೪
ವಾರಣ ವರದ ಭವ ತಾರಣ ಚರಣಗುಣ
ಪೂರಣ ವರದ ವಿಠಲ ಕಾರುಣಿಕರರಸನಿನಗೆ ೫

 

ರಾಮಾಯಣದ ಪ್ರಸಂಗಗಳನ್ನು
೬೪
ರಾಮನ ನೆನ ಮನವೇ-ಹೃದಯಾ-ರಾಮನನೆನೆ ಮನವೇ ಪ
ರಾಮನ ಜಗದಭಿರಾಮನ ಮೇಘಶ್ಯಾಮನ
ಸದ್ಗುಣ ಧಾಮನಾ ಸೀತಾ ಅ.ಪ.
ದಶರಥ ನಂದನನಾ-ಧರಣಿಯೊಳಸುರರ ಕೊಂದವನ
ಪಶುಪತಿ ಚಾಪವ ಖಂಡಿಸಿಮುದದಿಂ
ವಸುಮತಿ ಸುತೆಯಂ ಒಲಿದೊಡಗೂಡಿದ-ರಾಮನ ೧
ತಂದೆಯ ಮಾತಿನಲಿ-ವನಕೈತಂದು ಸರಾಗದಲಿ
ಬಂದ ವಿರಾಧನ ಕೊಂದು ನಿಶಾಚರಿ
ಯಂದವಳಿದು ಖಳವೃಂದವ ಸವರಿದ ೨
ಸೀತೆಯನರಸುತಲಿ-ಕಬಂಧನ ಮಾತನು ಸರಿಸುತಲಿ
ವಾತನಮಗನೊಳು ಪ್ರೀತಿಯಿಟ್ಟು ಪುರುಹೂತನ
ಸುತನಂ ಘಾತಿಸಿ ದಾತನ-ರಾಮನ ೩
ತರಣಿ ತನಯನಿಂದ-ಕಪಿಗಳ ಕರೆಸಿ ವಿಲಾಸದಿಂದ
ತರುಣಿಯನರಸಲು ಮರುತನ ಮಗನಿಗೆ
ಬೆರಳುಂಗುರವನು ಗುರುತಾಗಿತ್ತನ-ರಾಮನ೪
ಧರಣಿಜೆಯನು ಕಂಡು-ವನವನು ಮುರಿದು
ಗುರುತು ಕೊಂಡು
ಅರಿಪುರವನು ಸುಟ್ಟುರುಹಿದ ವಾನರ-
ವರನಿಗೆ ಸೃಷ್ಠಿಪಪದವಿತ್ತಾತನ-ರಾಮನ ೫
ಶರನಿಧಿಯನು ಕಟ್ಟಿ-ಶತ್ರುನಿಕರವನು ಹುಡಿಗುಟ್ಟಿ
ಶರಣನ ಲಂಕೆಗೆ ಧೊರೆಯನು ಮಾಡಿ
ಸಿರಿಯನಯೋಧ್ಯಗೆ ಕರೆತಂದಾತನ-ರಾಮನ ೬
ಧರಣಿಯಪಾಲಿಸುತ-ಧರ್ಮದ
ಸರಣಿಯ ಲಾಲಿಸುತ
ಶರಣಾಭರಣ ಪುಲಿಗಿರಿಯೊಳು ನೆಲೆಸಿದವರದವಿಠ್ಠಲ ಧೊರೆ ಪರಮೋದಾರನ-ರಾಮನ ೭

 

ಇದು ಒಂದು ಸಂಸ್ರ‍ಕತ
೬೫
ರಾಮಭಜೇ ತೇ ಪದಯುಗಳಂ-ಸಿತಾರಾಮಭಜೇತೇ
ಪದಯುಗಳಂ ಪ
ರಾಮಸುಂದರ ಘನ ಶ್ಯಾಮರಘೂದ್ವಹ ಅ.ಪ.
ದಶರಥ ಹೃದಯಾನಂದಕರಂ ತ್ರಿದಶಗಣಚಿತ್ತಾಮೋದಕರಂ ೧
ಪೂರಿತ ಕೌಶಿಕಯಜನಂ ಸಂತಾರಿತಗೌತಮ ಲಲನಾಂ ೨
ಖಂಡಿತ ಶಂಕರ ಚಾಪಂ ಪರಿ-ದಂಡಿತ ಭಾರ್ಗವ ಕೋಪಂ ೩
ಸ್ವೀಕೃತ ಜಾನಕಿ ಹೃದಯಂ-ದೂರೀಕೃತ ಪಾತಕ ನಿಚಯಂ ೪
ಪಾಲಿತಮಾತಾಪಿತೃವಚನಂ-ಸಂಲಾಲಿತ
ಮುನಿಜನ ಸ್ತುತಿರಚನಂ೫
ಭರತ ಸಮರ್ಪಿತ ನಿಜರಾಜ್ಯಂ ಮುನಿವರ
ಭಾರದ್ವಾಜಾರ್ಪಿತ ಭೋಜ್ಯಂ ೬
ದಂಡಕಾರಣ್ಯಪಾವನ ಚರಣಂ ಉದ್ದಂಡ
ವಿರಾಧಪಾತಕ ಹರಣಂ ೭
ಕುಂಭಜಾರ್ಪಿತ ಶರಕೋದಂಡಂ ಸಂರಂಭ
ನಿರ್ಜಿತರಾಕ್ಷಸಷಂಡಂ೮
ಪಂಚವಟೀತಟ ಕೃತವಾಸಂ ದೃಗಂಚಲ
ಧೃತಜಗದುಲ್ಲಾಸಂ ೯
ಶೂರ್ಪನಖೀವಚನಾಲೋಲಂ ಸಹಜಾರ್ಪಿತ
ವಿವಿಧಾಯುಧಜಾಲಂ ೧೦
ರೂಪನಿರ್ಜಿತ ಸುಮ ಬಾಣಾಂಗಂ ವಿರೂಪಿತದುಷ್ಟ
ಶೂರ್ಪನಖಾಂಗಂ ೧೧
ಖರತರ ಖರದೂಷಣಕಾಲಂ ಸುರ
ನರವರಮುನಿಗಣ ಪರಿಪಾಲಂ೧೨
ಮಾಯಾಮೃಗಾರ್ಪಿತ ಬಾಣವರಂ-
ಜಟಾಯುಸಂಪಾದಿತ ಲೋಕವರಂ ೧೩
ರಾವಣಹೃತ ನಿಜ ಪತ್ನೀಕಂ ಲೋಕಾವನಗತ ಕೋಪೋದ್ರೇಕಂ ೧೪
ಸಾಧಿತಶಬರೀ ಮೋಕ್ಷಕರಂ-ಕಬಂಧ
ಬಂಧನ ಮೋಚನ ಚತುರಂ ೧೫
ವಾತತನೂಭವ ಕೃತಸ್ತೋತ್ರಂ-ಪಂಪಾತಟಿನಿರ್ಮಿತ ಸುಕ್ಷೇತ್ರಂ೧೬
ಶಿಕ್ಷಿತ ಸಂಕ್ರಂದನ ತನುಜಂ-ಸಂರಕ್ಷಿತ ಚಂಡ ಕಿರಣ ತನುಜಂ೧೭
ಸೀತಾಲೋಕನ ಕೃತಕಾಮಂ-ನಿಜಧೂತಾಮೋದನ ಸುಪ್ರೇಮಂ೧೮
ನಿಜಕರಭೂಷಣ ದಾತಾರಂ-ಧುರವಿಜ
ಯವನಾಲಯ ಪರಿವಾರಂ೧೯
ಧೂತಾಹೃತ ಶುಭದೃಷ್ಟಾಂತಂ-ವಿಜ್ಞಾತನಿಜಸ್ತ್ರೀ ವೃತ್ತಾಂತಂ೨೦
ಭೀಷಣ ಜಲನಿಧಿ ಬಂಧಕರಂ-ವಿಭೀಷಣ ಸಂರಕ್ಷಣ ಚತುರಂ೨೧
ಶೋಷಿತ ರಾವಣ ಜಲದಿಂ-ಸಂತೋಷಿತ ದೈವತ ಪರಿಧಿಂ೨೨
ಸೀತಾಸಮಾಶ್ರಿತ ವಾಮಾಂಕಂಪರಿಭೂತ ಪಾತಕ
ನಿಜ ನಾಮಾಂಕಂ ೨೩
ಸ್ವೀಕೃತ ಸಾಕೇತವಾಸಂ-ಅಂಗೀಕೃತ ಮಾನುಷ್ಯ ವಿಲಾಸಂ೨೪
ವರವ್ಯಾಘ್ರಭೂಧರ ಕಲ್ಪತರುಂ-ಶ್ರೀ ವರದ
ವಿಠಲಮತಿಶಯರುಚಿರಂ ೨೫

 

ಬಹಳಮಟ್ಟಿಗೆ ಸಂಸ್ರ‍ಕತ ಪದಗಳಿಂದಲೇ
೬೬
ವಂದೇಹಂ ಕಮಲಾದ್ರಿನಿವಾಸಂ-ಪಲ್ಲವೀಶಂ-ಇಂದೀವರಭಾಸಂಪ
ಬೃಂದಾವನ ಪರಿಶೀಲನಮನುಗತ ಬೃಂದಾರಕ
ಗಣಾನಂದ ವಿಲಾಸಂ ಅ.ಪ
ಅಷ್ಟತೀರ್ಥಲಸದಷ್ಟು ಶೈಲ ಪರಿ ಶಿಷ್ಟಶಿಖರಿವಿಹಾರಂ
ಅಷ್ಟಮೂರ್ತಿಪರಮೇಷ್ಟಿಸಮರ್ಚಿತ-
ಮಷ್ಟಸಿದ್ಧಿದಾತಾರಮುದಾರಂ ೧
ಅಂಬುಜಭವಪಿತ ಮಂಬುಜ ಪತ್ರ ವಿಡಂಬಿನಯನ ಯುಗಳಂ
ಜಂಭನಿಸೂದನ ಡಂಭರಹಿತ ಘಟ ಸಂಭವನುತ
ಚರಣಾಂಬುಜಯುಗಳಂ ೨
ನಂದ ಗೋಕುಲಾನಂದ ಕಾರಣ ನಂದೋಪವರ ಕರುಣಂ
ಮಂದಹಾಸ ವಿಜಿತೇಂದು ಕಿರಣಮತಿ-
ಸುಂದರಾಂಗಮಾನಂದ ವಿತರಣಂ ೩
ಕಲಮಧುರಸ್ವನ ಚಲಿತಹೃದಯ ಗೋಕುಲ
ಮೋಹನ ವೇಣುನಿನಾದಂ
ಚಲುವಲಯ ಕ್ವಣ ವಿಲಸಿತಪಲ್ಲವ
ಲಲನಾಜನಸಂಮಿಳಿತವಿನೋದಂ ೪
ಧರಣೀಭರ ಪರಿಹರಣೋಚಿತವರ ಕರುಣಾಯತನಿಜವೇಷಂ
ಹರಿಣಾರಿಮಹೀಧರಣಾಲಯ ಶ್ರೀ ವರದ
ವಿಠಲಾ ನತಪದ ಶರಣ ಸುಪೋಷಂ ೫

 

ಸಂಸ್ರ‍ಕತ ಪದಗಳಿಂದಲೇ
೬೭
ವಂದೇಹಂ ವ್ಯಾಘ್ರಾದ್ರಿ-ನಿವಾಸಂ ವೆಂಕಟೇಶಂ
ನಿರ್ಮಲ ವಿಧುಹಾಸಂ ಪ
ವೃಂದಾರಕಗಣ ವಂದಿತ ಪದ ಮರವಿಂದನಯನ
ಮಾನಂದ ವಿಲಾಸಂಅ.ಪ.
ಶ್ರೀ ವೇದಪುಷ್ಕರಣೀ ತಟ ಶ್ರೀ ಕರೋದ್ಯಾನ ವಿಹಾರಂ
ಪಾವನ ವೃದ್ಧಿ ವಿಮಾನಾಂತರ ಪದ್ಮಾಸನ ಕೃತ ನಿಜಪರಿಚಾರಂ ೧
ಸಕಲ ಲೋಕ ಸಂರಕ್ಷಣ ಶೀಲನ
ಸಂಪದಮಾತ್ರಿತ ಸುರಭೂಜಂ
ಅಕುಟಿಲ ಭಕ್ತಿಮಾಂಡವ್ಯಮುನೀಂದ್ರ ಆಕಲಿತ
ನಿಜ ಸಂಸ್ತುತಿ ಭಾಜಂ ೨
ಸಾರಸಭವ ಸಂಕ್ರಂದನಮುಖ ತ್ರಿದಶಾಧಿಪಜನ ಪರಿವಾರಂ
ವಾರಜನಿಲಯಾ ವಾಸಮಕುಠಿಂತ
ವರದ ವಿಠಲ ಮುಕ್ತಿ ಸುಗುಣಮುದಾರಂ ೩

 

ಅವನ ಪಾದಸೇವೆಯ
೬೮
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ
ಶಂಕರಾರ್ಚಿತ ಚರಣ ಪಂಕಜಾಸನ ಪಿತ
ಪಂಕಜಲೋಚನ-ಕಿಂಕರ ಜನ ಶರಣ ಪ
ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ
ಸಿರಿ ರಮಣನೆ ನಿನ್ನ ಕರುಣೆಯುಳ್ಳವ ಪರ ಸಿರಿಯ ಬಯಸುವನೆ ೧
ಧರಣೀಯನಾಳುವ ಧೊರೆಯ ಕುಮಾರನು
ತಿರುಕೆಯಬೇಡುವನೆ
ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ ೨
ಸಾರ ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ
ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ ೩
ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ
ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ ೪
ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ
ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ ೫
ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ
ಯೊಳುನೆನೆಯುವುದೆ
ಇಳೆಯೊಳು ಪುಲಿಗಿರಿ ನಿಳಯನ ದಾಸರ
ಬಲುಹುಕುಂದಕವಹುದೆ ೬
ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ
ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ ೭
ನಿಗಮಗೋಚರಕೇಳು ಜಗವ ತೂಗುವ
ನಿಗೆಮಗುವತಿ ಘನವಹುದೆ
ಜಗದಘಹರಣಯನ್ನ ಘವನೀಗಲು ನಿನ್ನ ಬಗೆಗೆ
ದುರ್ಘಟವಹುದೆ ೮
ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು
ಮೊರೆಹೊಕ್ಕೆ ಕಾಯೊ ಯನ್ನ
ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ ೯

 

ಶೇಷಾದ್ರಿಯ ಸೊಬಗನ್ನು ವರ್ಣಿಸಿ
೬೯
ಶೇಷಾದ್ರಿಯನು ನೋಡಿರೊ-ಸೇವಕ ಪರಿ-
ತೋಷಾದ್ರಿಯಿದು ಕಾಣಿರೋ ಪ
ಶೇಷಾದ್ರಿಯನು ನೋಡಿ-ದೋಷಾದ್ರಿಹುಡಿಮಾಡಿ
ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ.
ಚಿನ್ನದ ಗಿರಿಯಂದದಿ ರಂಜಿಸುವುದು ಬಣ್ಣದೊಳತಿದೂರದಿ
ಸಣ್ಣದಾದರು ಗಿರಿ ರನ್ನವ ಪೊಲುವ-
ದರ್ಣವಶಯನನ ಕಣ್ಣಿಲಿ ಕಾಣಿಪ ೧
ಬಗೆಬಗೆ ವೃಕ್ಷಗಳು-ಬನಂಗಳು-ಬಗೆಬಗೆ ¥ಕ್ಷಿಗಳು
ಬಗೆಬಗೆಮೃಗಗಳು ಸೊಗಸಿನೊಳಿರೆಬಹು
ಬಗೆಬಗೆ ಧಾತುಗಳಿಗೆ ನೆಲೆಯಾಗಿಹ ೨
ಯುಗಗಳ ಸಂಖ್ಯೆಯೊಳು-ನಾಮಂಗಳು-
ಯುಗಳದ್ವಯಮೆನಲು
ಯುಗಮೊದಲೊಳಗೆ ಪನ್ನಗಗಿರಿಯೆನೆ ತ್ರೇತಾ ಯುಗದಲ್ಲಿ
ಹೇಮದ ನಗವೆಂಬ ಪೆಸರಿನ ೩
ದ್ವಾಪರಯುಗದೊಳಗೆ-ವೆಂಕಟನಾಮ- ವೀಪರ್ವತಕ್ಕೊದಗೆ
ಶ್ರೀ ಪುಲಿಗಿರಿಯೆಂಬ ರೂಪವೀಯುಗದೊಳು
ಶ್ರೀಪತಿಯಿತ್ತನಿರೂಪದೊಳೊಪ್ಪುವ ೪
ದೂರದಿ ಶೋಭಿಸುವ ದುರ್ಜನರಿಗೆ-ದೂರನಮಂದಿರವ
ಚಾರು ವಿಮಾನ ಪ್ರಾಕಾರವ ತೋರಿಪ ವಾರಿಜಾಸನ ಪಿತ
ವರದ ವಿಠಲ ನಿಹ ೫

 

ಪರಮಾತ್ಮನ ಸರಿಸಮಾನರಾರೂ
೭೦
ಶೌರಿ ನಂದನ ಪರಿವಾರಟಂದನ-ಸರಿಯಾರೋ ಹರಿನಿನಗೆ ಪ
ನಿನಗೆ ಸರಿಯಾರೋ ಶ್ರೀಧರನೆ ಅ.ಪ.
ನೋಟ ಮಾತ್ರದಿ ಜಗತ್ ಕೋಟಿ ನಿರ್ಮಿಸಿ ಪರಿ
ಪಾಟಿಯಿಲ್ಲದ ಸೂತ್ರ ನಾಟಕಧಾರಿ ||ಸರಿ|| ೧
ಬಗೆಬಗೆ ರತಿಯಲಿ ಜವನು ಮೋಹಿಪ
ನಿಗಮಾಂತ ಗೋಚರ ನಗಧರ ಹರಿ-ಸರಿ ಯಾರೋ ೨
ಸುರವರ ಪೂಜೆಯ-ನರಕೆ ಮಾಡದೆ ಬಂದ
ಶಿರಿಯ ಮೋಹಿಸುತಿರ್ಪ ವರದ ವಿಠಲ ||ಸರಿ|| ೩

 

ಇದೂ ಸಹ ಸಂಸ್ರ‍ಕತ ಪದಗಳಿಂದಲೇ
೯೦
ಶ್ರೀ ವೆಂಕಟೇಶ ಪಾಹಿ-ತಾವಕ ಭಕ್ತಿಂದೇಹಿ ಪ
ವಾರಿಜನೇತ್ರಾ-ವಾರಿದಗಾತ್ರಾ
ನಾರದಸನ್ನುತ ಪಾತ್ರ ನರಮಿತ್ರ ಸುಚರಿತ್ರ ೧
ಅಂಡಜಯಾನ-ಕುಂಡಲಿ ಶಯನ | ಖಂಡಪರಶು
ಪರಿಪಾಲನ ಮುನಿಲಾಲನ ಸುರಖೇಲನ ೨
ವೆಂಕಟರಮಣ ಪಂಕಜಚರಣ
ಸಂಕಟಮೊಚನಕಾರಣ ಭವತಾರಣ ಗುಣಪೂರಣ ೩
ದಶರಥ ಬಾಲಾ ದಶಮುಖ ಕಾಲ
ದಶಶತ ಲೋಚನ ಪಾಲಾ-ಭೂಪಾಲಾ-ಸುರಮುನಿಲೋಲ೪
ನಂದ ಕುಮಾರ-ನವನೀತ ಚೋರ
ಬೃಂದಾವನ ವಿಹಾರ-ಬಹುದಾರಾ-ಧುರಧೀರ೫
ಅಜನುತ ಪಾದ-ಅಪಹೃತ ಖೇದ
ಸುಜನಕಲುಷ ನಿರ್ಭೇದ ನುತದೇವ ಸುರಮೋದ ೬
ವರವ್ಯಾಘ್ರಾಚಲವಿಹರಣ ಶೀಲ ವರದ ವಿಠಲ ಗೋಪಾಲ-ಶ್ರೀ ಲೋಲ-ಬಹು ಲೀಲಾ ೭

 

ಈ ಕೃತಿಯು ಸಂಸ್ರ‍ಕತ ಪದಗಳಿಂದಲೇ
೯೧
ಶ್ರೀ ವೆಂಕಟೇಶಮಾಂ ಪಾಲಯ ಸುಗುಣಾಲಯ ಪ
ದೇವ ದೇವ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ.
ಕಮಲಲೋಚನ ಭಕ್ತ ಶಮಲ ಲೋಚನ ಶಕ್ತ
ವಿಮಲ ಚರಿತಪೂರ ಕಮನೀಯಶರೀರ ೧
ಧೀರ ದಶರಥಕುಮಾರಾ ಬುಧಜನವಿಹಾರ
ವೀರಹರಿ ಪರಿವಾರ ಕ್ರೂರಾಸುರವಿದಾರ ೨
ಸರಸಿಜಾಸನನುತ ಸುರಮುನಿಸೇವಿತ
ಹರಿಣಾರಿಧರಾಗಾರ ವರದ ವಿಠಲಾಕಾರ ೩

 

ಸಂಸ್ರ‍ಕತ ಪದಗಳಿಂದಲೇ
೭೧
ಶ್ರೀ ವ್ಯಾಘ್ರಗಿರಿವಾಸ-ಶ್ರೀ ಶ್ರೀನಿವಾಸ
ದಿವ್ಯ ಸೂರಿ ಸಮಾಜ ಸೇವ್ಯ ಪಾದಾಬ್ಜ ಪ
ಕಮಲಸಂಭವ ಜನಕ ಕಮಲಾಪ್ತಕುಲತಿಲಕ
ಕಮಲ ಸನ್ನಿಭಚರಣ ಕಲುಷಗಣ ಹರಣ
ಕಮನೀಯ ಗುಣಹಾರ-ಕಲ್ಯಾಣಗುಣ ಪೂರ
ಕಮಲಾ ಮನೋಹರ ಕಲಿತಶೃಂಗಾರ ೧
ಲೋಕ ಮೋಹನ ರೂಪ ಲೋಕರಕ್ಷಣ ಚಾಪ
ಶೋಕಮೋಹವಿದೂರ ಸುಕೃತಿಪರಿವಾರ
ನಾಕನಿಳಯ ಸಮಾಜ ನಮಿತ ಪಾದಾಂಭೋಜ
ಪಾಕರಿಪು ಮಣಿನೀಲ ಪದ್ಮಾನುಕೂಲ ೨
ಮಾಂಡವ್ಯ ಮುನಿಸೇವ್ಯ ಮಾನಸಾಂಬುಜ ಭವ್ಯ
ಪಾಂಡುಸುತ ಪರಿಪಾಲ ಪಾವನ ಸುಶೀಲ
ಭಾಂಡಜಾರ್ತಿಚ್ಛೇದ ಭಾಗವತ ಸನ್ಮೋದ
ಗಾಂಡೀವಿ ಸುಶ್ಯಾಲ-ಗಾನರಸಲೋಲ ೩
ತವಚರಣ ಪಂಕಜಂ-ತೃಪ್ತಜನ ಸುರಕುಜಂ
ಭವಜಲಧಿತಾರಣಂ ಭವತುಮಮ ಶರಣಂ
ತವನಾಮ ಕೀರ್ತನಂ ತಾಪಪರಿಮೋಚನಂ
ಶ್ರವಣಯೋರ್ದೇಹಿಮಮ-ಶಮಿತಾಘಮಹಿಮಾ೪
ಸಕಲ ಲೋಕ ಶರಣ್ಯ ಸರ್ವದೇವ ವರೇಣ್ಯ
ನಿಖಿಲ ಭೂತವಾಸ-ನಿರ್ಮಲಸುವೇಷ
ಅಕಲಂಕ ಚರಿತ-ನಿತ್ಯಾನಂದ ಗುಣ ಭರಿತ
ಶಿಖರಿಷವಿಹರಣ ಕುಶಲ-ಶ್ರೀವರದವಿಠಲ ೫

 

ಇದೂ ಸಹ ಸಂಸ್ರ‍ಕತ ಪದಗಳಿಂದಲೆ
೮೬
ಶ್ರೀ ಶ್ರೀನಿವಾಸ-ಶ್ರೀ ಭೂವಿಲಾಸ-ಶ್ರೀತಜನಪೋಷ
-ಪಾಹಿಸುವೇಷ ಪ
ಅಚ್ಯುತಮಾನ ಮದಚ್ಯುತವಿ ಪಚ್ಚಿನ್ಮನೋರಥ ನಿಚ್ವಿತ ಪಾಹಿ ೧
ಅಂತರಹಿತ ನಿತ್ಯಾನಂತ ಮಹಿಮ
ದುರಂತವಿಕ್ರಮ ದನುಜಾಂತಕ ಪಾಹಿ ೨
ಗೋವಿಂದ ನತಸುಮ ನೋವೃಂದ ದಳಿತ ತಮೋವೃಂದ
ಪೋಷಿತ ಗೋಬೃಂದ ಪಾಹಿ ೩
ಕೇಶವ ಸಕಲ ಲೋಕೇಶ ಗೌರೀಶ ವಾಗೀಶಸನ್ನುತ
ಕೊಶಮಾಂಪಾಹಿ ೪
ನಾರಾಯಣ ಭಕ್ತ ಪರಾಯಣ ಪರಿವಾರಾಯಿತ
ಸುರವಾರಮಾಂಪಾಹಿ ೫
ಮಂದರಧರ ಮುಚುಕುಂದವರದ ಆನಂದ ಸದನ
ಗೋವಿಂದಮಾಂಪಾಹಿ೬
ವಿಷ್ಣೋಸುಜನವರ್ಧಿಷ್ಣೋಸಂತೋಷಿತಜಿಷ್ಣು
ಸುರಜೀಷ್ಣೋಮಾಂಪಾಹಿ ೭
ಮಧುಸೂದನ ದುರ್ಮದಭೇದನ ಬಹುವಿದಭೇದನ
ನುತ ಬುಧಜನಪಾಹಿ ೮
ಆಕ್ರಮನುಪಿತ ನಿಜಕ್ರಮ ಜಿತವಿಶ್ವಶಕ್ರಸಹಜ ತ್ರಿವಿಕ್ರಮ ಪಾಹಿ ೯
ವಾಮನ ದೈತ್ಯ ವಿರಾಮ ನಮಿತ
ಸುರಕಾಮನ ಮುನಿಜನಪ್ರೇಮಮಾಂಪಾಹಿ ೧೦
ಶ್ರೀಧರ ಕರಧೃತ ಭೂಧರ ಚಕ್ರಗದಾಧರ
ಕೌಸ್ತುಭಕಂದರ ಪಾಹಿ ೧೧
ನಾಕೇಶವಂದ್ಯ ಹೃಷೀಕೇಶ ಮುನಿ ಹೃದಯಾಕಾಶ
ಗೋಚರರಾಕೆಂದು ಪಾಹಿ ೧೨
ಪದ್ಮನಾಭ ನತಪದ್ಮಜಮಾನಸ ಪದ್ಮಗೋಚರ
ಪದಪದ್ಮಮಾಂಪಾಹಿಂ ೧೩
ದಾಮೋದರ ಸುಜನಾಮೋದನ ಧೃತ ಕೌಮೋದಕ
ಜಿತಕಾಮಮಾಂಪಾಹಿ ೧೪
ದೊಷರಹಿತಗುಣ ಭೂಷಣ ನತಜನಪೋಷ-
ಸಂತೋಷಿತ ಶೇಷಮಾಂಪಾಹಿ ೧೫
ವಾಸುಕಿ ಶಯನ ವಿಕಾಶ ಕಮಲನಯ-
ನಾಸುರದಮನ ಶರಾಸನ ಪಾಹಿ ೧೬
ದುಷ್ಟಮರ್ದನ ಜಗದಿಷ್ಟವರ್ದನಸುರ ಕಷ್ಟಕೃಂತನ-
ಪರಿತುಷ್ಟಮಾಂಪಾಹಿ ೧೭
ವರದ ವಿಠಲವ್ಯಾಘ್ರಧರಣೀಧರಾಗ್ರ
ವಿಹರಣ ಸಕಲ ಗುಣಾಭರಣಮಾಂಪಾಹಿ ೧೮

 

ರಾವಣನ ತಂಗಿಯಾದ
೭೩
ಶ್ರೀಕರ ಮಾಗಿಹ ಗೋಕುಲದಲಿಕರುಣಾಕರ
ಕೃಷ್ಣನು ನೆಲಸಿರಲು
ನಾಕದ ಸಿರಿಯ ನಿರಾಕರಿಸುವ ಸಿರಿತಾಹರ್ಷದೊಳು೧
ರಾವಣನನುಜೆಯು ರಾಘವ ದೇವನ ಲಾವಣ್ಯಕೆ
ಮೋಹಿಸಿ ಮನದಿ
ಭಾವಜನಸ್ತ್ರದ ಬಾಧೆಯಿಂದ ಪತಿ ಭಾವದಿ ನೋಡುತ ಭರದಿ ೨
ಕಾಮಿಸಿ ಕಾಡಲು ಕಾಕುತ್ಸ್ಥನು ಬಲರಾಮ ಸಹಜನವತಾರದಲಿ
ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ ೩
ಒಂದಾನೊಂದಿನ ನಂದಾದಿಗಳಾ ನಂದಾನ್ವಿತಮತಿ ವೃತ್ತಿಯಲಿ
ಒಂದಾಗಿ ಧರಾ ವೃಂದಾರಕರನುವಿಂದಾರಾಧಿಪ ಭಕ್ತಿಯಲಿ ೪
ಬಂದರು ವರಕಾಳಿಂದಿಯ ತೀರದಿ ನಂದನದಂತಿಹ ವನದೆಡೆಗೆ
ಬಂಧುಗಳೊಂದಿಗೆ ಭಂಡಿಯನೇರಿ
ಮುಕುಂದನ ಧ್ಯಾನಿಸುತಡಿಗಡಿಗೆ ೫
ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿಯಿಲ್ಲದೆ
ಗೋಧನ ದಾನದಲ್ಲಿ
ಬಲ್ಲಿದ ಭೋಜನದಲ್ಲಿ ದಣಿಸಿ ಸುಖದಲ್ಲಿರುತಿರಲಾಸಮಯದಲಿ ೬
ಅಸ್ತಮಹೀಧರ ಮಸ್ತಕವನು ಸುಜನ ಸ್ತುತದಿನಕರ ನೈದಿರಲು
ನಿಸ್ತುಲತಮದಿ ಸಮಸ್ತರದೃಷ್ಟಿಗಳಸ್ತಗೊಳಿಸೆ ಜನಭಯಗೊಳಲು ೭
ನಂದನು ತನ್ನಯ ನಂನನನಂಜುವನೆಂದು
ರಾಧೆಯತಾನೋಡಿ
ಕಂದನ ನೀನೇ ಮಂದಿರಕೈದಿಸು ಎಂದರೆ ಬಂದಳು ನಗೆಗೂಡಿ ೮
ಕಂದ ಬಾರೋ ಗೋವಿಂದ ಬಾ ಯದುನಂದನ
ಬಾ ಕಮಲಾಸನನ
ತಂದೆ ಬಾರೋನಿಜಮಂದಿರದೊಳಗಾ ನಂದವ
ತೊರುವೆ ಶಶಿವದನಾ ೯
ಆಡಿಸುವೆನು ನೀನಾಡುವಾಟಗಳ ನೋಡಿಸುವೆನು
ನೀನೊಲಿದುದನು
ಬೇಡಿದುದೆಲ್ಲವ ನೀಡುವೆ ಸಂಶಯ
ಬೇಡನಿನ್ನನೆ ಕೂಡಿಹೆನು ೧೦
ರಾಧೆಯನುಡಿಗಳನಾದರಿಸುತ ಮಧುಸೂದನ
ತನ್ನಯಮನದೊಳಗೆ
ಮೋದ ಪಡಿಸಲನುವಾದನು ಭಕ್ತಾಮೋದ
ಚರಿತ್ರನು ಕಾಮಿನಿಗೆ೧೧
ಮುತ್ತನಿತ್ತು ಬಲುಮುದ್ದಿಸಿ ಬಾಲಕನೆತ್ತಿಕೊಂಡು
ಬಲು ಸಡಗರದಿ
ವೃತ್ತಕುಚಗಳಿಂದೊತ್ತಿಮನೊಭವನರ್ಥಿಗೆ ಸೊಕ್ಕುವ ಕಾತರದಿ ೧೨
ವರಪುಲಿಗಿರಿದೊರೆ ವರದ ವಿಠಲನು
ಕರುಣನಾದೊಡೀಗಲೇ ಬೆರೆದು
ಸ್ಮರಶರದಾರ್ತಿಯ ಪರಿಹರಿಸುವೆನೆಂಧರುಷದಿ
ಬರುತಿರ್ದಳು ನಲಿದು ೧೩

 

ಇದೂ ಸಹ ಸಂಸ್ರ‍ಕತ
೮೪
ಶ್ರೀನಿವಾಸ ತವಚರಣ ಸರೊರುಹ-ಮಾನತೋಸ್ಮಿ ಸತತಂ
ಸಾನುರಾಗ ಮನಸಾವಚನಾ ಶಿರಸಾನುಕೂಲ
ಫಲದಂ ಶುಭಚರಿತಂ ಪ
ವಾಸವ ಸನ್ನುತ ವಾಸುಕಿ ಶಯನ
ಶ್ರೀಶವಾಸ ಹಿರಣ್ಮಯವಾಸ ಸಮಸ್ತ
ವಾಸತರುಣಿಶತ ಬಾಸಸುಮನೋಲ್ಲಾಸ ವಿಜಿತ ರೊಷ
ವಾಸರೇಶ ಶತ ಭಾಸುರ ಭೂಷಣ
ಭೂಷಿತಾಂಗವಿಶೇಷಕರುಣಮೃದುಭಾಷಣ
ಸಜ್ಜನ ಪೋಷಣ ನಿರ್ಜಿತ ದೂಷಣ
ಭವಜಲಶೋಷಣ ಪೂಷಣ ೧
ಪುಂಡರೀಕಾಸನ ಖಂಡಪರಶು ಆಖಂಡಲಮುಖ
ಸುರಮಂಡಲಸೇವಿತ
ಚಂಡನಿಶಾಚರ ಮಂಡಲ ಖಂಡನ ಪಂಡಿತರಣ ಶೌಂಡ
ಪುಂಡರೀಕ ನಯನಾಂಡಜವಾಹನ
ಖಂಡಿತಕೇಶ ಕೋದಂಡ ಕೃತಾರ್ಚನ
ಪುಂಡರೀಕಗಿರಿ ಮಂಡನ ಹಿಮಕರಮಂಡಲ
ಸನ್ನಿಭಕುಂಡಲಾಭರಣ ೨
ವಾರಿದ ನೀಲ ಶರೀರ ಧರಾರಧೀರ
ಸುಮಂದರಧಾರಣ ಚತುರುತಲಾಗ್ರವಿ
ದಾರಿತ ಶೂರ ಹಿರಣ್ಯಕ ವೀರನರ
ಮೃಗೇಂದ್ರಾ ವಾರಿಜನಿಲಯಾವರ
ಕರುಣಾಕರ ಮಾರಜನಕ ಸುರವಾರವಂದ್ಯಪದ ಸಾರಸುಗುಣ
ಪರಿ ಜಲದಿ ಗಂಭೀರ ವ್ಯಾಘ್ರಗಿರಿವರದ ವಿಠಲಹರಿ ೩

 

ದೇವಾದಿ ದೇವತೆಗಳಿಂದ ಸೇವ್ಯನಾದ
೮೭
ಶ್ರೀನಿವಾಸ ನಿನ್ನ ನಂಬಿದ ದಾಸನ
ಶ್ರೀನಿವಾಸುಕಿಶಯ ಕಾಯೋ ಯನ್ನನು ಪ
ರೂಪರಹಿತ ಬಹುರೂಪಧರಿಸಿಹ ಶ್ರೀಪತಿಯೆನ್ನನು
ನೀಪರಿಪಾಲಿಸು ೧
ಕಾಲರೂಪ ಬಹು ಲೀಲೆಯತೋರುವ
ಮೂಲಪುರುಷಸುರ ಪಾಲಕ ಶ್ರೀಹರಿ ೨
ಶಕ್ತಿಗಳನು ಅವ್ಯಕ್ತದೊಳಿರಿಸಿ ಸಮಸ್ತವಸ್ತುವ ಸುವ್ಯಕ್ತಪಡಿಸಿದ ೩
ಕಲ್ಪಕೋಟಿ ನಿನಗಲ್ಪಕಾಲ ಪರಿಕಲ್ಪಿತಸುರನರ ಕಲ್ಪಭೋಜಹರಿ೪
ಖಂಡಪರಶು ಆಖಂಡಲಾದಿಸುರ ಮಂಡಲಸೇವಿತ
ಪುಂಡರೀಕಪದ ೫
ಮಂದರಧರ ಗೋವಿಂದ ಮುಕುಂದ ಸನಂದನಾದಿ-
ಮುನಿಬೃಂದಸುವಂದಿತ ೬
ಸಾರಸುಗುಣ ಪರಿವಾರ ಸಜ್ಜನಾ ಧಾರಧೀರವರದ ವಿಠಲಹರಿ೭

 

ಅನೇಕ ಪುರಾಣ ಪ್ರಸಂಗಗಳನ್ನು
೭೬
ಶ್ರೀನಿವಾಸ ನಿನ್ನ ಪಾದ ಧ್ಯಾನವ ಪಾಲಿಸಿ ಎನ್ನ
ಮಾನಸಾನಂದಿಸೋ ಶತ ಭಾನುತೇಜನೇ ಪ
ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವಕಾನನಾದ
ಹನ ಚಿತ್ರಭಾನು ದನುಜಾರಿ ಹರಿ ಅ.ಪ
ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ ವಂದನೆ
ಮಾಡುವೆನಯ್ಯ ಇಂದುವದನಾ
ಇಂದುಧರ ನುತ ಮುಚುಕುಂದವರದನೆ ಗುಣ ಬಂಧುರಾ
ಶ್ರೀ ಪುಲಿಗಿರಿ ಮಂದಿರ ಮಂದರಧರ ೧
ಇಷ್ಟು ದಿನ ನಿನ್ನ ಮನ ಮುಟ್ಟಿಭಜಿಸದೆ ಬಲು
ದುಷ್ಟಮನುಜರ ಕೂಡಿ ಭ್ರಷ್ಟನಾದೆನು
ಇಷ್ಟಫಲ ದಾಯಕ ತ್ರಿವಿಷ್ಟಪಾಧಿಪಾನುಭವ್ಯ ಅಷ್ಟಸಿದ್ಧಿಪ್ರದ
ನಿನ್ನ ಗಟ್ಟಿಯಾಗಿ ನಂಬಿದೆನು ೨
ಲೋಕಪತಿ ಪಿನಾಕಿಯನ್ನು ವೃಕನೆಂಬ ಭೀಕರಾಸುರನು
ಉರಿಹಸ್ತ ಬೇಡಲು
ಆ ಕಪಾಲಿಯಿತ್ತು ಅವಿವೇಕದಿಂದಲೋಡುತ್ತಿರೆ
ಲೋಕಮೋಹಿನಿಯ ರೂಪು ಸ್ವೀಕರಿಸಿ ಶಿವನಕಾಯ್ದೆ ೩
ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ
ಕೀರ್ತಿ ನೋಡಿಸೋ ನಿನ್ನಯಮೂರ್ತಿ ಬೇಡಿಸದಿರು
ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ ನೊಡಿ
ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ೪
ವಾಸುಕಿ ಶಯನ ಪೀತ ವಸನ ದಿವ್ಯ ಭೂಷಣ
ವಿಭೂಷಿತ ಲಲಿತ ಶುಭ ವೇಷವಿಪುಲ
ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತಪೋಷಣ
ದುರಿತಗಣ ಶೋಷಣ ಶ್ರೀವರದವಿಠಲ ೫

 

ಇದು ಒಂದು ಅನೇಕ ಹಿಂದೂಸ್ಥಾನೀ
೮೫
ಶ್ರೀನಿವಾಸ ಪದ ಧ್ಯಾನಕರೋರೆ ಸಾನುರಾಗ
ಯತಮಾನಸ ಮೇರೆ ಪ
ಮದಪರಿಪೂರಿತ ಹೃದಯ ಸುನೋರೆ ಸದಯ
ಹೃದಯಪರಿಪದ ಮಿಳನಾರೆ ೧
ಕಾಮಕ್ರೊಧ ವುಪರಾಮ ಕರೋರೆ ರಾಮನಾಮ
ಜಪಕಾಮುಕರೋರೆ೨
ದೇಹಗೇಹಧನ ಮೋಹನ ಲೇರೆ ಶ್ರೀಹರಿ ಸ್ಮರಣ ಕಾಂಹಿ ಚಲೇರೆ೩
ಪುತ್ರ ಮಿತ್ರ ಬಹು ಶತ್ರುಕುಮಾರವೃತ್ರ ವೈರೀಸುತ ಮಿತ್ರನಗಾರೆ೪
ಭಂಗ ಕರಣ ಜನಸಂಗ ನಕೊರೆ ಮಂಗಳಾಂಗ
ನರಸಿಂಹ ಭಜೊರೆ ೫
ಸೂಕ್ಷ್ಮಬುದ್ಧಿ ನಿರಪೇಕ್ಷಭಲಾರೆ ಮೋಕ್ಷದಾತ
ಕಮಲಾಕ್ಷಕುಲಾರೆ ೬
ದಾಸಲೋಕ ಸಹವಾಸ ಕರೊರೆ ವಾಸುದೇವ
ನಿಜ ದಾಸಕು ಹೊರೆ ೭
ಶ್ರೀ ಪುಲಿಗಿರಿವರ ಭೂಪಮುರಾರೆ-ಶ್ರೀಪತಿಘನ
ಚಿದ್ರೂಪಕ ಹೋರೆ ೮
ಪರಮ ಪುರುಷ ನರಹರಿ ಕರುಣೀರೆ-
ವರದವಿಠಲ ಕರಿವರ ಧಣೀರೆ ೯

 

ಬಹಳಮಟ್ಟಿಗೆ ಸಂಸ್ರ‍ಕತ ಪದಗಳಿಂದಲೇ ಆದ
೮೩
ಶ್ರೀನಿವಾಸ ಪಾಹಿಮಾಂ ಸದಾ-ಶ್ರಿತಜನಮೋದ
ಮೌನಿಜನಜಾತಕಾಂಬೋದ ಪ
ಸಾನುರಾಗ ಯುಗಮುನಿ-ಮಾನಿತಾವರಾರವಿಂದ |
ಭಾನುಕೋಟಿ ತೇಜ
ಸಾಮಗಾನ ಲೋಲ ಶ್ರೀಮುಕುಂದ ಅ.ಪ
ವಾರಿಜಾಸನಾರ್ಚಿತ ಪ್ರಭೋ-ವಂದಾರುಜನ
ಪಾರಿಜಾತ ಧೃತಕೌಸ್ತುಭ
ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ
ಸಾರ ಸನ್ಮಣಿ ಕೇಯೂರ ಹಾರ-ಭೂಷಿಸುಪವಿತ್ರ ೧
ಸರ್ವಲೊಕಪಾಲಕೇಶ್ವರ-ಸೇವಿತಸುಪರ್ವಗಣಸದ್ಗುಣಾಕರ
ಶರ್ವ ಸುರಪತಿಮುಖ್ಯ ಸರ್ವದೇವವರವರ್ಯ
ಗರ್ವಿತದೈತ್ಯಾಂಧಃಸೂರ್ಯ-ಪರ್ವತಾಧಿರಾಜಧೈರ್ಯ ೨
ಸೃಷ್ಟಿರಕ್ಷಣಾಂತಕಾರಕ-ಸರ್ವಾತ್ಮಕ-ಶಿಷ್ಟದೇವ ದ್ವಿಜರಕ್ಷಕ
ಅಷ್ಟಸಿದ್ಧಿಪ್ರದಾ ಸರ್ವೋತ್ರ‍ಕಷ್ಟ ಕಷ್ಟನಿವಾರಣ
ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ ೩
ಶ್ರೀಕರ ಶೃಂಗಾರ ಶೇಖರ-ಶ್ರೀಕರಗೃಹ-ಶ್ರೀಕರ
ಧಾರಿತ ಮಂದರ
ಪಾಕವೈರಿಮಣಿನೀಲ ಪಾವನ ಸುಗುಣ ಶೀಲ
ಶೋಕಮೋಹಸುವಿವೇಕ ನಿತ್ಯೋದಾರ ಶೂರ ೪
ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ
ಸಾರವಸ್ತುಚಯಪರಿ ಪೂರವ್ಯಾಘ್ರಾದ್ರಿ ವಿಹಾರಧೀರ ವರದ ವಿಠಲ ಸುರಾಸುರಾರ್ಚಿತಾಂಘ್ರಿಕಮಲ ೫

 

ಇದೂ ಸಹ ಸಂಸ್ರ‍ಕತ
೮೧
ಶ್ರೀನಿವಾಸ ಪಾಹಿಮಾಂ-ಶ್ರೀಯಮಯನ್ಮನೋರಮಾಂ ಪ
ದೀನಲೋಲ ಕಾಮನ-ಧೀರಮುನಿವಿಭಾವನ ೧
ಪೂರ್ಣಚಂದ್ರಾನನ-ಪುಣ್ಯವೃಕ್ಷಕಾನನ ೨
ಸೇವಕಾನಂದನ-ದೇವಕೀನಂದನ ೩
ಶಂಖಚಕ್ರ ರಂಜನ-ಕಿಂಕರಾರ್ತಿಭಂಜನ ೪
ದೂರಕೋಟಿ ಸುಮದರ-ಶ್ರೀರಮಾಮನೋಹರ ೫
ದೂರಿತಾಘ ಸಂಕುಲ-ದುಷ್ಟಕುಲಾನಲ ೬
ಪುಂಡರೀಕ ಲೋಚನ-ಚಂಡ ಪಾಪಮೋಚನ ೭
ಭವ ಭಯೋತ್ತಾರಣ-ಭವ್ಯ ಸುಗುಣ ಪೂರಣ೮
ವ್ಯಾಘ್ರಾದ್ರಿ ನಾಯಕ-ವ್ಯಕ್ತ ಸೌಖ್ಯದಾಯಕ ೯
ತವಪದಾಂಬೋರುಹಂ ಭವತು ಹೃತ್ಸುಖಾವಹಂ ೧೦
ವರದ ವಿಠಲ ಶ್ರೀಧರ-ಶರಣ ಜನ ದಯಾಕರ ೧೧

 

ಶ್ರೀನಿವಾಸನ ರೂಪ ಗುಣಗಳನ್ನು
೭೯
ಶ್ರೀನಿವಾಸ ಮುನಿಮಾನಸ ಹಂಸ ಮಹಾನು ಭಾವ ದೇವ ಪ
ಗಾನಲೊಲ ಶರಣಾನು ಕೂಲ ಖಗ ಯಾನ ವಾಸುದೇವ ಅ.ಪ.
ಸೃಷಿಕರ್ತ ಸಂತುಷ್ಟಹೃದಯ ಪರಮೇಷ್ಠಿಜನ್ಮಮಾಲಾ
ಅಷ್ಟಭೂತಿದರಕಷ್ಟಹರಣ ವಿಬುಧೇಷ್ಟ ದಿವ್ಯಲೀಲಾ ೧
ದೇವ ದೇವ ಭೂದೇವ ವಂದ್ಯ ವಸುದೇವ ಜಲಧಿಸೋಮ
ದೇವ ವೈರಿ ವನದಾವ ಸುಂದರೀ ಭಾವ ಜನಿತ ಕಾಮ ೨
ರಾಮ ರಾಮ ಕರುಣ ಮಹೋದಧೆ ಶ್ರೀ ಮನೋಭಿರಾಮ
ರಾಮಣೀಯ ಸುಗುಣ ಧಾಮ ಪುಣ್ಯತಮನಾಮ ಪೂರ್ಣಕಾಮ ೩
ಕಿಂಕರ ಜನಗತ ಸಂಕಟಹರ ಧೃತ ಶಂಖಚಕ್ರ ಪದ್ಮ
ಪಂಕಜಲೋಚನ ಪಂಕವಿಮೋಚನ ಪಂಕಜಹಿತ ಸದ್ಮಾ ೪
ದಿವ್ಯರೂಪಸುರಸೇವ್ಯ ಚರಣ ಮುನಿ ಭಾವ್ಯಮಾನಚರಿತ
ಅವ್ಯಯಾತ್ಮಬಹು ಭವ್ಯ ಸುಗುಣ ಮಾಂಡವ್ಯ ಪುಣ್ಯಭರಿತ ೫
ಪಾಹಿಮಾಮನಘದೇಹಿ ಭಕ್ತಿಮಪಿಮೇ ಹಿತೋಸಿ ನಿತ್ಯಂ
ಕಾಹಿಮೇಗತಿರ್ಮಾಹಿಸತ್ಯ ತಾಂಬ್ರೂಹಿ ದೇವ ಸತ್ಯಂ೬
ಚರಣಯುಗಳ ಮಿಹ ಶರಣಮೇಹಿ ಭವ
ತರಣಿ ಧಿಷಣಯಾಹಂ
ಕರುಣಯಾವ ಶ್ರೀ ವರದ ವಿಠಲ ಸುಖಕರಣ ವಿಗತಮೋಹಂ೭

 

ಇದು ಒಂದು ಶ್ರೀನಿವಸನ ಸ್ತೋತ್ರ ಪದ
೮೨
ಶ್ರೀನಿವಾಸ ಶ್ರೀ ವಾಸ ಪ
ಭಜಿಸಿದೆ ನಿನ್ನನು, ತ್ಯಜಿಸಿದಿರೆನ್ನನು
ಭಜಕಾಮರತರು ಕುಜನ ವಿದೂರ ಅ.ಪ.
ತಂದೆ ತಾಯಿನಿಜ ಬಂಧುಸಹೋದರ
ನಂದನಾಪ್ತನೀನೆಂದು ನಂಬಿದೆ ೧
ನಿನ್ನ ಮರೆತು ಬಹು ಜನ್ಮ ಜನ್ಮದೊಳು
ಖಿನ್ನನಾಗಿ ನಿಜವನ್ನೆ ಕಾಣದೆ ೨
ಕರುಣದಿಂದ ನಿಜ ಚರಣಸೇವಕರ
ಪೊರೆವ ವ್ಯಾಘ್ರಗಿರಿ ವರದವಿಠಲ ೩

 

ಶ್ರೀನಿವಾಸನನ್ನು ಸಲಹೆಂದು ಪ್ರಾರ್ಥಿಸಿದ್ದಾರೆ.
೮೮
ಶ್ರೀನಿವಾಸ ಸಲಹೋ ನಮ್ಮ ಶ್ರೀನಿಧಾನ ಚರಣನೆ ಪ
ಧ್ಯಾನ ನಿರತಮೌನಿಜನರ ಮಾನಸಾಬ್ಜಹಂಸನೆ ಅ.ಪ.
ನಕ್ರಮುಖದಿ ಸಿಕ್ಕಿದಿಭನನಕ್ಕರಿಂದ ಪೊರೆದನೆ
ಚಕ್ರಧರ ತ್ರಿವಿಕ್ರಮಾದಿ ಚಕ್ರಭೊಗಿ ಶಯನನೇ ೧
ಬಿಟ್ಟು ನಿನ್ನ ಭ್ರಷ್ಟನಾಗಿ ಕೆಟ್ಟೆಜನ್ಮ ಜನ್ಮದೆ
ಹುಟ್ಟಿ ಹುಟ್ಟಿ ಕಷ್ಟಪಟ್ಟೆ ಕೃಷ್ಣ ನಿನ್ನ ನಂಬಿದೆ ೨
ಶರಣ ಜನರ ಪೊರೆವನೆಂಬ ಬಿರುದು ಧರಿಪನಲ್ಲೆಲಾ
ಹರಿಣ ಹರಣಧರದೊಳಿರುವ ಕರುಣಿ ವರದ ವಿಠಲ ೩

 

ಇದು ಒಂದು ಸಂಸ್ರ‍ಕತ
೭೮
ಶ್ರೀನಿವಾಸ ಸುಗುಣೈಕ ನಿಧೆ ಶ್ರೀಮಾನಸಹಂಸ ದಯಾಜಲಧೆ ಪ
ತೋಯಸನ್ನಿಭಕಾಯ-ಮನೋಜನಿಕಾಯ
ಮಾಪಮಧುರಾಲಾಪ
ತೋಯಜಾಕ್ಷ ಪೃಥುಳಾಯತಪಕ್ಷ
ನಿಧಾಯಹೃದಿಧ್ಯಾಯಾಮಿಹರೆ ೧
ವಿಗ್ರಹ ಮಖಿಳಶುಭಗ್ರಹಣಂ ಮದನುಗ್ರ
ಹಾರ್ಥಮದಿ ತಿಷ್ಠವಿಭೋ
ಉಗ್ರಮುಖವಿಬುಧಾಗ್ರ್ಯಪೂಜಿತ ಸಮಗ್ರ
ಸಮರ್ಯಾಂ ಸ್ವೀಕುರುಭೋ ೨
ಪಾದ್ಯಾಘ್ರ್ಯಾಚಮನಾದ್ಯಮಖಿಳ ಜಗ-
ದಾದ್ಯಕಲ್ಪಿತಂ ಭವದರ್ಥಂ
ಹೃದ್ಯಸುರಭಿಸಂಪದ್ಯುತ ಮುತ್ತಮ ಸದ್ಯಂಬುನಿಮೇಜ್ಯ
ಸುಖೋಷ್ಣಮಿದಂ ೩
ನಿಸ್ತುಲಕಾಂಚನವಸ್ತ್ರಮಲಂಕುರು ಕಸ್ತೂರಿತಿಲಕಂ ಸುಮುಖೋ
ಕೌಸ್ತುಭರತ್ನ ಮಜಸ್ತುತಮಂಡನ ಮಸ್ತುತನೌಗುಣ ಭೂಷಣತೇ ೪
ಕುಂದಬಕುಳ ಕುರುವಿಂದ ಮಹೋತ್ಪಲ
ಮಂದಾರಕಾ ಮಾಲ್ಯಾಕಲಿತಂ
ಗದ ಬಂಧುರ ಸುಗಂದಿ ತುಳಸಿ ಕಾಬೃಂದ
ಮಲಂಕುರುಸನ್ನಿಹಿತಂ ೫
ಗಂಧರ್ವಾಮರ ವಂದಿತ ಮಲಯಾ
ಗಂಧಲೇಪನ ಮಾಕಲಯಾ
ಗಂಧವಾಹನುತ ಗಂಧೀವತೀಗುಣ ಬಂಧುರ
ಧೂಪಂ ಜಿಘ್ರಹರೇ ೬
ತಾಪತ್ರಯ ಪರಿತಾಪನಿವಾರಣಂ-
ತಾಪಸಮಾನಸದೀಪ ಹರೇ
ಸೋಪಬಾರ ಘೃತದೀಪಮತೀಂದ್ರಿಯ
ರೂಪಾಲೋಕಯ ಶ್ರೀನೃಹರೇ ೭
ಮಂತ್ರರೂಪ ನ್ಮಂತ್ರವಿದಾಂವರ
ಮಂತ್ರತಂತ್ರ ಯಂತೃಣಮೂರ್ತೇ
ಮಂತ್ರಪೂತಮುಖ ಯಾತ್ರಾಧಾರ
ಸುಮಂತ್ರಪುಷ್ಪಂ ಸ್ವೀಕುರುಹೇ ೮
ಛತ್ರಮಿದಂ ಭುವನತ್ರಯ ನಾಥ
ವಿಚಿತ್ರದಂತ ಚಾಮರಯುಗಳಂ
ಶ್ರೋತ್ರಮಿತ್ರ ತೋರ್ಯತ್ರಿಕಮಾಕಲಯಾತ್ರ
ಭೋಗಾಮಧಿರಾಜ ಕಳಂ ೯
ಮಧುಪರ್ಕಾರ್ಹಣ ಮಧರೀಕೃತ ಮಧುಮಧುರಿಮ
ಪಾಯಸಮತಿಹೃದ್ಯಂ
ಅಧಿಕ ಪಯೋಘೃತದಧಿಸೂಪಾನ್ವಿತ
ಮಧುನಾಸ್ವೀಕುರು ನೈವೇದ್ಯಂ ೧೦
ಬಿಂಭಾಧರ ಮಿಧು ಬಿಂಬವದನ
ಶಿಶಿರಾಂಬುಪಿಬಾಮಲ ಘನಸಾರಂ
ತಾಂಬೂಲಂ ಜಗದಂಬಾಕರ ಕಲಿತಂ
ಬಹುಮನ್ವಸ ಕರ್ಪೂರಂ ೧೧
ತಾರಾಧಿಪಕುಮುದಾರಿ ನಿಭಾಲಂಕಾರ ನಿಭೃತ
ಪರಿವಾರ ವಿಭೋ
ನೀರಾಜನಮತಿ ತಾರಾಯಿತ
ಕರ್ಪೂರಾರ್ತಿಕಮಂಗೀಕುರುಭೋ ೧೨
ಕುಕ್ಷಿಭುವನ ಸಂರಕ್ಷಿತ ಸೇವಕ ಪಕ್ಷಪ್ರದ ಕ್ಷಿಣಮನುವಾರಂ
ಪಕ್ಷಿಗಮನನಿಜ ವಕ್ಷೋಧೃತ ಶುಭಲಕ್ಷಕರೋಮ ನಮಸ್ಕಾರಂ೧೩
ಸಾಗರತನಯಾಯಾಗವಿಹಿತ ಭೂಭಾಗದೇಯ ನೀಳಾ ಸಹಿತಂ
ಭೋಗಿಶಯನ ಮನುರಾಗ ಪರಿಷ್ರ‍ಕತ ಮಾಗಮಗೋಚರ
ಕುರುಲಸಿತಂ೧೪
ಆರಾಧನಮ ಪಜಾಯತಮುಪಚಾರಮಿಷೇಣ ಮಯಾ ಚರಿತಂ
ನಾರಾಯಣ ಚರಣಾರಾಧನಮಿತಿ ಕಾರುಣ್ಯೇನ ಕ್ಷಮಸ್ಸೇದಂ ೧೫
ಚರಣಾಗತ ಜನಭರಣಾಲಂಕೃತ ಹರಿಣಾರ್ಯದ್ರಿ ನಿಕೇತನ ತೇ
ಚರಣಾರಾಧನ ಕರಣಾಂಚಿತಮಿತಿ ವರದ ವಿಠಲಗೀತಂ ತನುತೇ ೧೬

 

ಪುಲಿಗಿರಿಯ ಶ್ರೀನಿವಾಸನ
೭೭
ಶ್ರೀನಿವಾಸನ ಸೇವೆ ಗೈಯುವ ಜಾಣರೆಲ್ಲರು ಬನ್ನಿರೈ ಪ
ಧ್ಯಾನಲಭ್ಯನ ಕಾಣಲಿಚ್ಛಿಪ ಮಾನಿಪರ ಕರತನ್ನಿರೈಅ.ಪ.
ಪರಮಪದ ದೊಳಗಿರದೆ- ವೆಂಕಟಗಿರಿಯೊಳಿದರ್ನು ಪೂರ್ವದಿ
ಭರದಿ ವಿಪ್ರಗೆ ವರವನಿತ್ತೀ ಗಿರಿಗೆ ಬಂದನು ಪ್ರೇಮದಿ ೧
ದೂರವಲ್ಲ ವಿಚಾರಿಸಲು ಹರಿಣಾರಿ ಭೂಧರಮಿಲ್ಲಿಗೆ
ಚಾರುಮೂರ್ತಿಯ ಚರಣಸೇವೆಗೆ ಸಾರುವೆವು ನಾವಲ್ಲಿಗೇ ೨
ಚರಣ ಸೇವಕರನ್ನು ಮರೆಯದೆ ಪೊರೆಯು ವನು ಮೋದದಿ
ಪರಮ ಪುಲಿಗಿರಿವಾಸ ವೆಂಕಟ ವರದವಿಠಲನೆಲೋಕದಿ ೩

 

ನಶ್ವರವಾದ ಐಹಿಕ ಸಂಪತ್ತನ್ನು
೭೪
ಶ್ರೀನಿವಾಸನಂಘ್ರಿ ಕಮಲ ಧ್ಯಾನಮಾಡಿರೋ
ಅನುಮಾನ ಬೇಡಿರೋ ಪ
ಹಮ್ಮನುಳಿದು ಬೊಮ್ಮ ಪಿತನ ನೆಮ್ಮಿ ಭಜಿಸಿರೋ
ದುಷ್ಕರ್ಮತ್ಯಜಿಸಿರೋ೧
ಹೆಣ್ಣು ಮಣ್ಣು ಹೊನ್ನು ಸ್ಥಿರವಿದೆನ್ನ ಬೇಡಿರೋ
ನಿಜವನ್ನು ನೊಡಿರೋ ೨
ಈತ ಜಗನ್ನಾಥ ಸೌಖ್ಯದಾತ ಕಾಣಿರೋ
ಪ್ರಖ್ಯಾತ ಕೇಳಿರೋ ೩
ಕಾಟಕರ್ಮ ಲೂಟಿಗೈವ ತೋಟಗಾರನಾ
ಈಸಾಟಿಗಾಣೆನಾ ೪
ಶಿಲೆಗೆ ದಿವ್ಯ ಲಲನಾ ರೂಪ ವೊಲಿದು ಕೊಟ್ಟನಾ
ಶಾಪವಳಿದು ಬಿಟ್ಟನಾ ೫
ಮಾನಿನಿಯಾ ಮಾನ ಜೋಪಾನ ಗೈದನಾ
ಸ್ವಾಧೀನನಾದನ ೬
ಪಿಡಿದ ಮುನಿಯ ಬಿಡಿಸಿ ಪುಲಿಯ
ಬಡಿದ ಧೀರನಾ ಕೈಪಿಡಿಗೆ ಬಾರನಾ ೭
ಮತ್ರ್ಯರಿವನ ಭಕ್ತಿ ಯಲ್ಲಿ ರಕ್ತಿಪಡು-
ವರು ಭಕ್ತಿ ಮುಕ್ತಿ ಪಡೆವರು ೮
ಶರಣಜನರ ಪೊರೆದ ಧೊರೆಯು
ವರದವಿಠ್ಠಲನೆ-ಶ್ರೀಧರಣೀ ಜಟಿಲನೇ ೯

 

ಶ್ರೀನಿವಾಸನ ನಾಮವನ್ನು
೭೫
ಶ್ರೀನಿವಾಸನಮಲನಾಮನ ಸೊಗಸಿನಿಂದ
ಗಾನಮಾಳ್ವ ಧೀರನಾವನೋ ಪ
ತಾಳತಂಬೂರಿಗಳನು ಮೇಳವಿಸಿ ಸರಾಗದಿಂದ೧
ಹಿಂದೆ ಮೃದಂಗದಿಂದ ಸಂಗಡಿಸಿ ಸುಲಲಿತವಾಗಿ ೨
ಗುಂಭವಾದ್ಯವನ್ನು ಪರಮ ಸಂಭ್ರಮದಲ್ಲಿ ಬಾರಿಸುತ್ತ೩
ಜತೆಗೆ ಸೇರಿದವರ ಕೂಡಿ ಶ್ರುತಿ ಲಯಗಳಿಂದ ಪಾಡಿ ೪
ಪರಮಪುರುಷ ವ್ಯಾಘ್ರಗಿರಿಯ ವರದ ವಿಠಲನೆಂದು ಮುದದಿ ೫

 

ಇದು ಸಹ ಸಂಸ್ರ‍ಕತ
೮೦
ಶ್ರೀನಿವಾಸ-ಶ್ರೀಮನೋಲ್ಲಾಸ-ಶ್ರೀನಿವಾಸ ಪ
ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ.
ದೀಪಿತ ಭವದಾವ-ದೇವದೇವ
ದೇವ ದೇವ ವಸುದೇವತನಯ ಭೂದೇವ
ನಿವಹಸಂಭಾವಿತಭಾವ ೧
ರಾಮ ರಾಮರಘುವಂಶಲಲಾಮ ರಾಮ ರಾಮ
ರಮ್ಯ ಗುಣಧಾಮ ಮುನಿಜನ ಪ್ರೇಮ
ದನುಜ ಸಂಗ್ರಾಮ ಭೀಮ ೨
ಕಂಜನಾಭಕಲಾಂಬುಧಾಭ ಕಂಜನಾಭ ರಿಪು
ಭಂಜನಾತ್ತ ವರ ಕಂಜ ಚಕ್ರವಿಧು ಮಂಜುಳ ವಕ್ತ್ರ ೩
ಸುಂದರಾಂಗ ಸುಕೃತಾಂತರಂಗ ಸುರಸುಂದರೀ ನಿಚಯ
ನಂದಗೋಕುಲಾನಂದ ಮುಕುಂದ ೪
ಭವ್ಯರೂಪ ಭಕ್ತಾಲಯ ದೀಪ
ಭವ್ಯರೂಪಧೃತ ದಿವ್ಯಚಾಪಸುರ ಭವ್ಯಮಹಿಮ
ಮಾಂಡವ್ಯ ಸುಸೇವ್ಯ ೫
ವ್ಯಾಘ್ರಶೈಲಾವಾಸ ಸುಶೀಲಾ ಶೈಲ ಶಿಖರಾಗ್ರಲೋಲ
ದೇವಾಗ್ರಗಣ್ಯ ಭಕ್ತಾಗ್ರ್ಯಶರಣ್ಯ ೬
ದುರಿತದೂರಾ-ದುಃಖಾಭ್ರಸಮೀರಾ
ದುರಿತದೂರ ಘಣಿಗಿರಿವಿಹಾರ ಶ್ರೀವರದ ವಿಠಲಾ ೭

 

ನಾನೇ ದೇವರೆಂದು ಹೇಳಿಕೊಳ್ಳುವವರಿಗೆ
೭೨
ಶ್ರೀನಿಳಯನನು ಕೊಂಡಾಡು-ಮಾನಸ
ಶುಭಸಂಧಾನನ ನೋಡು ಪ
ಸಾರವಿಲ್ಲದಿಹ ಸಂಸಾರದಿ ಬಲು ಘೋರ
ತಾಪಗಳು ತೋರಿದಾಗ
ಭೂರಿ ಸೌಖ್ಯಗಳ ಬೀರುತಿರ್ಪ ಕಾರುಣೀಕನ್ನು ವಿಚಾರ ಮಾಡು ೧
ಸೋಹಮೆಂಬ ಘನ ಮೋಹಾಂಧತೆಯಲ್ಲಿ
ದೇಹಿಗಳ್ಗೆ ಕಡು ದ್ರೋಹವ ಗೈವ
ಬಾಹಿರಂಗೆ ಯಮ ಬಾಧೆಯಲ್ಲಿ ತ್ರಾಹಿ
ತ್ರಾಹಿಯನೆ ತಾಳ್ವರೇನು ೨
ಸಾಪರಾಧಿಗಳ ಕಾಪಾಡುವ ಧೊರೆ ಶ್ರೀಪುಲಿ
ಬೆಟ್ಟದ ಭೂಪನೇಸರಿ
ಆಪದ್ರಕ್ಷಕನ ಶ್ರೀಪಾದಗಳನು ಜ್ಞಾಪಕಗೊಂಡೆನು ತಾಪಗೂಡಿ ೩

 

ಸಂಸ್ರ‍ಕತ ಪದಗಳಿಂದಲೇ ರಚಿತವಾಗಿರುವ
೮೯
ಶ್ರೀವಾಸಾನತಮಾಕಲಯಾಚ್ಯುತ ಶ್ರೀವಾಸುಕಿಶಯ
ಮಾಮನಿಶಂಹೃದಾ ಪ
ಪುಂಡರೀಕನಯನಾಂಡಜವಾಹನ-ಕುಂಡಲಶಯ
ಮಾಂಡವ್ಯಸೇವ್ಯಪದ ೧
ಪುಂಡರೀಕ ಸುಮಂಡಿತಾಂಗಪದ ಪುಂಡರೀಕ
ಶ್ರಿತ ಪಾಂಡುತನಯ ಭೋ ೨
ನಂದಗೋಪವರ ನಂದನ ಸುಮನೋನಂದನ ಮುನಿಜನ
ವಂದಿತ ಪದಯುಗ ೩
ಧರ್ಮತನಯ ಸಹಧರ್ಮಚಾರಿಣಿ ವರ್ಮಪಾಲ
ಸದ್ಧರ್ಮಶೀಲಹರಿ ೪
ವ್ಯಾಘ್ರನಾಮ ದೈತ್ಯಾಗ್ರನಿಗ್ರಹಣೋತ್ರಸೇನ ತನಯಾಗ್ರವಿದಾರಣ೫
ಬಾಲಭಕ್ತ ಪರಿಪಾಲಹೇಮಮಯ ಚೇಲವಿಧೃತ
ವನಮಾಲನರಹರೆ ೬
ಮಾರಜನಕ ಸುರವಾರವಂದ್ಯ ಮಂದಾರಹಾರ
ಸುಕುಮಾರ ಶರೀರ ೭
ಮಂದರಧರ ಪೂರ್ಣೇಂದುವದನ ಗೋವಿಂದಮುಕುಂದ
ಸನಂದವಂದಿತ ೮
ಖಂಡಪರಶು ಕೊದಂಡವೇತಂಡ ಹಸ್ತಭುಜದಂಡರಘೂದ್ವಹ ೯
ಅಂಬರೀಷವರದಂಬುಜಾಸನಾ
ಲಂಬಮಾನಚರಣಾಂಬುಜಕೇಶವ ೧೦
ಸಾರವಸ್ತುಪರಿಪೂರವ್ಯಾಘ್ರನಗ
ಪಾರಿಜಾತವರದಾರ್ಯವಿಠಲ ಶ್ರೀ ೧೧

 

ಪರಮಾತ್ಮನ ಶರಣಾಗತ
೯೨
ಸರ್ವಾಂತರ್ಯಾಮಿ-ನೀನೇಸರಿ-ಸರ್ವಜ್ಞನು ಸ್ವಾಮೀ ಪ
ಸರ್ವಕಾರಣ ಸರ್ವಾಧಾರನು ಸರ್ವಶರಿರೇಕ ಸರ್ವನಿಮಾಯಕ ಅ.ಪ.
ಹರಿತನಯನಿಗಂದೂ ಸ್ವಶಕ್ತಿಯ ಹರಿಕೊಡುವನು ಬಂದು
ಹರಿತನುಜನಿಗದು ಹರಿಯದು ಯೆನ್ನುತಹರಿಸುತನನು
ಗುರಿಮಾಡಿದೆ ಹರಿ೧
ದ್ರೋಣನಸುತ ಬಂದು ನಿಶಿಯೊಳುಮನೆ
ಕಾಣಿಸುವನು ಎಂದೂ
ಪ್ರಾಣಪದಕರನು ಕಾಣದಂತೆ ಬಲುಜಾಣತನದಿ
ಸಪ್ರಾಣರಮಾಡಿದೆ ೨
ಮರುತನ ಸುತನೆಂದು ಧೃತರಾಷ್ಟ್ರನು ಕರದಪ್ಪುವನೆಂದು
ಭರದಿಂ ಲೋಹದೊಳೆರಕದ ಭೀಮನ ವಿರಚಿಸಿ
ಶರಣನಹರಣವನುಳಹಿದೆ ೩
ಶೈಲದ ಗುಹೆಯೊಳಗೆ-ಮಲಗಿದ್ದನೃ ಪಾಲನ ಖತಿಯೊಳಗೆ
ಕಾಲಯವನನಂ ಕಾಲನ ಕಾಣಿಸಿ ಮೇಲೆ
ಶರಧಿಯೊಳಾಲಯ ಮಾಡಿದೆ ೪
ಪರಮ ಋಷಿಯನಂದು-ತಾಪಿಡಿಯಲು
ದುರುಳ ಪುಲಿಯು ಬಂದು
ಕರದಖಡುಗದಿಂ-ಹರಿಯನು ಖಂಡಿಸಿ ಶರಣನ ಸಲಹಿದ ವರದವಿಠಲಹರಿ ೫

 

ಅನೇಕ ದೈಹಿಕ ಮಾನಸಿಕ ವೇದನೆಗಳನ್ನು
೯೩
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ
ಒಲಿದು ಸಕಲಗೋಕುಲವನು ಸಲಹಿದ
ಜಲಜಾಂಬಕ ನೀನಲಸದೆ ಯೆನ್ನನು ಪ
ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ
ಧಾತುಗಳೆಲ್ಲ ವಿಘಾತಿಸಿ ಕಫಸಂಘಾತವು
ಹೆಚ್ಚಿದ ಹೇತುವನೋಡಿ೧
ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ
ಕೇಶರಂಧ್ರದವಕಾಶದೊಳೊಧ್ರ್ವ ಶ್ವಾಸ
ಹೆಚ್ಚಿ ಬಲು ಘಾಸಿಪಡಿಸುತಿದೆ ೨
ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ
ದಾಯತಪ್ಪಿ ದುರ್ವಾಯುವಿಂದ ತಲೆನೋಯುತ
ದೇಹದೊಳಾಯಸ ಹೆಚ್ಚಿತು ೩
ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ
ಮದ್ದು ತಿಂದವನ ಬುದ್ಧಿಯಂತೆ ಮೈಗುದ್ದಿಕೊಂಡು
ಬಿದ್ದಾದ್ದಾಡಿಸುತಿದೆ ೪
ಅನ್ನವರೊಚಕವು ಆಪ್ತರೊಳನ್ಯತೆಗೊಚರವು
ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ೫
ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ
ನೀಗಲಾಡು ಈ ರೋಗವನ್ನು ಭವ-ರೋಗವೈದ್ಯ
ನೀನೇ ಗತಿಯೆಂದಿಗು ೬
ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ
ಶರಣಾಭರಣ ಪುಲಿಗಿರಿಯೊಳು ನೆಲಸಿಹ
ವರದ ವಿಠಲ ದೊರೆ ವರದಯಾನಿಧೇ ೭

 

ಲಕ್ಷ್ಮೀದೇವಿಯ ರೂಪಲಾವಣ್ಯದಿಗಳನ್ನು ವರ್ಣಿಸಿ
೧೦೨
ಸಾರಸದಳ ನಯನೆ-ಸಲಹೆಮ್ಮನು ತೋರುವ ಜಗದಯನೆ ಪ
ಕ್ಷೀರ ಶರಧಿ ಸುಕುಮಾರಿಣಿ ಹರಿ ಸಹ
ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ.
ಮಂದಹಾಸ ವಿಜಿತೇಂದು ಕಿರಣಿ
ಗಜ ಮಂದಗಮನೆ ಸಂಕ್ರಂದನ ವಂದಿತೆ ೧
ನೀರಜಸಮಪಾಣಿ ನೀ ಲಾಲಿಸು ಕೀರಮಧುರ ವಾಣಿ
ತಾರಹಾರ ಶೃಂಗಾರತರಂಗಿಣಿ-
ಮಾರಜನನಿ ಕಂಸಾರಿಯ ರಾಣಿ ೨
ನೀಲಭುಜಗವೇಣಿ-ನೀನೇಗತಿ ಪಾಲಿಸು ಕಲ್ಯಾಣಿ
ಲೀಲೆಯಿಂದ ವನಮಾಲಿಯುರದಿ ನಿತ್ಯಾಲಯಗೈದಿಹ
ಬಾಲೆ ವರದ ವಿಠಲ ರಮಣಿ ೩

 

ಶ್ರೀನಿವಾಸನ ಗುಣ ರೂಪಾತಿಶಯಗಳನ್ನು
೯೪
ಸುರಾಸುರಾರ್ಚಿತ ಸರೋಜಲೋಚನ
ಸರಾಗದಿಂದೆನ್ನ ನೀಕ್ಷಿಸೈ
ಪರಾಪರೇಶನೆ ಪರಾತ್ವರನೆ ನೀ-ಪರಾಕು ಮಾಡದೆ ಪಾಲಿಸೈ ಪ
ವಿರಾಜಮಾನ ಸುವೀರಾಜವಾಹನ ವಿರಾಟ್ಪುರುಷ ವಿಶ್ವಂಭರ
ಕರಾರವಿಂದದಿ ಕರಾದಿಗಳ ಪಿಡಿದರಾತಿ ಮರ್ದನ ಧುರಂಧರ ೧
ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ
ಧರಾಮರರ ಬಹು ಪರಾಭವವ ಬಲು ಸರಾಗದಲಿ ನಿರ್ವಾಪಣ ೨
ಜರಾಮರಣಗಳ ನಿರಾಕರಿಸಿ ವಸುಂಧರಾ ಭರಣ ಗುಣಭೂಷಣ
ಸುರಾರಿ ಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ ೩
ಶಿರೀಷ ಕುಸುಮದ ಸರೀಸುಕೋಮಲ ಶರೀರ ನಿನ್ನದು ಈಪರಿ
ಸಿರಿಯು ದರದೊಳೇ ಶಿರಿಯ ಧರಿಸಿಹ
ಪರಿಯದೆಂತುಟೋ ಕೇಳ್ಹರಿ ೪
ಪಯೋಧಿತನಯಾ ವಯೋ ಸುರೂಪನೆ
ಧಯಾನಿಧಿಯೇಧರ್ಮಾತ್ಮನೆ
ದಯಾರಸದಿ ಹೃತ್ಪಯೋಜ ಮಧ್ಯದಿ
ನಿಯಾಮಿಸುವ ನಿರ್ಮಾಯನೆ ೫
ವರೇಣ್ಯಸಜ್ಜನ ಶರಣ್ಯಪುಲಿಗಿರಿಯರಣ್ಯಮಧ್ಯ ವಿರಾಜಿತ
ಹಿರಣ್ಯಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ೬
ವ್ಯಾಘ್ರನೆಂಬುವತ್ಯುಗ್ರದೈತ್ಯನಂ ನಿಗ್ರಹಗೈದ ಮಹಾತ್ಮನೆ
ಶೀಘ್ರದಿ ಭಕ್ತಾನುಗ್ರಹಮಾಳ್ಪಸುರಾಗ್ರಗಣ್ಯ ಪುಣ್ಯಾತ್ಮನೆ ೭
ಸುರರು ನರರು ನಿನ್ಹಿರಿಮೆಯನರಿಯದೆ
ನಿರುತವು ಸನ್ನುತಿಗೈವರೆ
ಪರಮ ಪುರುಷ ಸುಖಕರ ನೀನೆನ್ನುತ
ಪರಿಪರಿ ನಿನ್ನನೆ ಪೊಗಳ್ವರೆ ೮
ಮೂಜಗ ಮಾಡುವ ಪೂಜೆಯಿಂದ ನೀ
ನೀಜಗದಲ್ಲಿ ಒಲಿದಿರ್ಪೆಯ
ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ
ನೀ ಕೈಗೊಂಬೆಯ ೯
ನಿಜಪರದೊಲುನೀ ನಜಭವಮುಖಸುರವ್ರಜ-
ಗೋಚರನಾಗಿಲ್ಲವೈ
ಸುಜನರ ಪೊರೆಯುವ ನಿಜಮತಿಯಿಂದಲಿ
ತ್ರಿಜಗಕ್ಕೆ ಗೋಚರನಾಗಿಹೈ ೧೦
ನಿತ್ಯತೃಪ್ತನೀನತ್ಯುತ್ತಮ ನಿಜ ಭೃತ್ಯನಮತ್ರ್ಯನು ಮೋದದಿ
ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ ೧೧
ಧರಣಿಯೊಳುರುತರ ಮೆರೆಯುವ
ಫಣಿಭೂಧರದೊಳು ನಿರುತವು ಭಕ್ತರ
ಕರುಣದಿ ಪೊರೆಯುವ ಧೊರೆ ಸಿರಿವಲ್ಲಭವರದ ವಿಠಲ ಕರುಣಾಕರ ೧೨

 

ಸಂಸ್ರ‍ಕತ ಪದಗಳಿಂದಲೇ ರಚಿತವಾಗಿರುವ ಕೃತಿ
೯೫
ಸೇವೇ ಶ್ರೀರಮಣಂ-ಸದಾ-ಸೇವಕಾರ್ತಿಹರಣಂ ಪ
ಪಾವಕ ಶತರುಚಿ ರುಚಿರಾಭರಣಂ ಪಾವನವ್ಯಾಘ್ರಾಚಲವಿಹರಣಂ ಅ.ಪ.
ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿ ಪತ್ರಂ
ಖಂಡಪರಶುಕೃತ ಸನ್ನುತಿ ಪಾತ್ರಂ ಚಂಡಕಿರಣ
ಶತ ಸನ್ನಿಭಗಾತ್ರಂ೧
ಕುಲಿಶಧರಾತ್ಮಜಮಿತ್ರಂ-ಸುಲಲಿತ ಕರಧೃತ ಗೋತ್ರಂ
ಕಲಿತರಥಾಂಗಧರಾಸಿತನುತ್ರಂ ಕಲಿಮಲಖಂಡನ
ನಿಜ ಚಾರಿತ್ರಂ೨
ಭಾವಿತ ಜನ ಮಂದಾರಂ-ಭಾವಜ-ಜನಕ ಮುದಾರಂ
ಸೇವಕ ರಕ್ಷಣ ಧೃತ ಶರೀರಂ ದೇವ
ಸಮೂಹಾಕಲಿತ ವಿಹಾರಂ೩
ಶಂಕರ ಹೃದಯಧ್ಯೇಯಂ ಕಿಂಕರ ಜನ ಸಮುದಾಯಂ
ಪಂಕಜ ನಿಲಯಾಲಿಂಗಿತ ಕಾಯಂ ಸಂಕಟಮೋಚಕ
ನಿಜನಾಮಧೇಯಂ ೪
ಪರಮ ಪುರುಷಮನವದ್ಯಂ ಸರಸಗುಣಾಕರ ಮಾದ್ಯಂ
ವರಯೋಗಿ ಜನಹೃದಯಾರಾಧ್ಯಂ-ವರದ
ವಿಠಲ ಮಖಿಳಾಗಮ ಬೋಧ್ಯಂ ೫

 

ಪರಮಾತ್ಮನನ್ನು ಒಂದು ಹಣ್ಣಿಗೆ ಹೋಲಿಸಿ
೯೬
ಹಣ್ಣುಬಂದಿದೆ-ಜನರು-ಹಣ್ಣಕೊಳ್ಳಿರೊ
ಗಣ್ಯಮಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ
ಬೀಜವಿಲ್ಲದಾ-ಬೆಳೆದ ಭೂಜವಲ್ಲದ ಬೀಜಭೂಜಗಳಿಗೆ ತಾನೇ
ಬೀಜವಾಗಿ ಮೆರೆಯುತಿರುವ ೧
ಹುಟ್ಟಿ ಬೆಳೆಯದಾ-ಜನರು-ಮುಟ್ಟಿತೊಳೆಯದಾ
ಎಷ್ಟುದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದ ೨
ಬೆಲೆಗೆ ಬಾರದಾ-ತನ್ನ-ನೆಲೆಯ ತೊರದ
ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ೩
ಅರಿಯದವರಿಗೆ-ರುಚಿಯ-ನರಿತಜನರಿಗೆ
ಅರಿತ ಮೇಲೆ ನಿರುತ ವಿರುತ ಸರಸಮಧುರ ಭರಿತ ಬರಿತ೪
ಸಿರಿಮನೋಹರ-ವ್ಯಾಘ್ರ-ಗಿರಿಯ ಮಂದಿರ
ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ ೫

 

ಹರಿಯ ಕೃಪೆಯಿಂದ
೯೮
ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ
ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ.
ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ
ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ ೧
ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ
ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ ೨
ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ
ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ ೩
ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ
ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ ೪
ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ
ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ ೫
ಲೋಕದಜನರಿಗನೇಕ ಸುಕೃತ ಪರಿಪಾಕದ ತಂಬೂರಿ
ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ ೬
ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ
ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ ೭

 

ಇದೂ ಸಹ ಸಂಸ್ರ‍ಕತ
೯೭
ಹರಿನೀಲ ಸದೃಶ ನೀಲ ಕನಕ ಚೇಲ ಲೀಲಯಾ
ಪುಲಿಶೈಲರಚಿತಲೀಲರಮಾಲೋಲ ಪಾಲಯಾ ಪ
ಶರದಿಂದುವದನ-ಕುಂದರದನ ನಂದ ನಂದನಾ
ಅರವಿಂದ ನಯನ ಸಿಂಧುಶಯನ ವಂದಿ ಚಂದನಾ೧
ಯದುರಾಜಕಲ್ಪಭೂಜದೇವ ರಾಜಪೂಜಿತ
ಕರಿರಾಜರಾಜ ರಾಜ ಸಮ ವಿರಾಜ ರಾಜಿತ ೨
ಘನದುರಿತ ಪಟುಲಹರಣ ಚಟುಲಚರಣ ಪಾಟಲಾ
ಕರಿವರದ ವಿಮಲ ಚರಿತ ವಿಪುಲ ವರದ ವಿಠಲ ೩

 

ಸೃಷ್ಟಿ, ಸ್ಥಿತಿ ಲಯಗಳಿಗೆ
೯೯
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ
ಮರೆಯದೆನ್ನ ಪೊರೆಯೊ ವ್ಯಾಘ್ರಗಿರಿಯೊಳಿರುವ
ಸಿರಿಯರಮಣ ಪ
ಸಕಲ ಲೋಕಗಳನುನೀನೇ ಸೃಜಿಸುವಾತನು
ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು
ಪ್ರಕಟವಾದ ಜಗವ ನೀನೆ-ಪ್ರಳಯಗೈವನು
ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು ೧
ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು
ಲೀಲೆಯನ್ನು ಪ್ರಕಟಗೈವ ಕಾಲರುಪನು
ನೀಲ ಲೋಹಿತಾದಿ ವಿಬುಧಜಾಲ ವಂದ್ಯನು
ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ ೨
ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ
ಶರಧಿಶಯನ ಸಕಲಲೋಕ ಸಂವಿಭಾವನ
ವರಗುಣಾಢ್ಯ ವಿಗತ ಮಾಯ ವಿಶ್ವ ಮೋಹನ
ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ ೩

 

ಈ ಪುಟ್ಟ ಪದದಲ್ಲಿ
ಹರಿಸಂಕೀರ್ತನೆ

ಇದನಾದರು ಕೊಡದಿದ್ದರೆ ನಿನ್ನ-ಪದದ
ಸೇವೆಗೆ ಜನರೊದಗುವರೆ ಪ
ದೊರೆತನವಾಗಬೇಕೆನಲಿಲ್ಲ-ಬಲು ಸಿರಿತನವನು ವಾಂಛಿಸಲಿಲ್ಲ
ಪರಿಪರಿಭೋಗದ ಸ್ರ‍ವಹೆಯನಗಿಲ್ಲ-ನಿನ್ನ ಸ್ಮರಣೆ
ಯೊಂದಿತ್ತರೆ ಸಾಕಲ್ಲ ೧
ಅನ್ನವಸ್ತ್ರವಕೇಳುವುದಿಲ್ಲ ಒಳ್ಳೆ-ಚಿನ್ನ ಬಣ್ಣವ ಕೊಡುಎನಲಿಲ್ಲ
ಹೆಣ್ಣುಮಣ್ಣಿನೊಳಾಸೆ ಯನಗಿಲ್ಲ-ಪರಿ-ಪೂರ್ಣ
ನೀನೊಲಿದರೆ ಸಾಕಲ್ಲ ೨
ಸುರರ ಭೋಗದಿ ಮನವೆನಗಿಲ್ಲ-ಪುಲಗಿರಿ ದೊರೆ
ವರದ ವಿಠಲ ಬಲ್ಲೆ ನೀನಿದನೆಲ್ಲ ೩

 

ಪಚ್ಚೆಯು ಬಂತೀಗ
೩೩
ಪಚ್ಚೆಯು ಬಂತೀಗ-ಶ್ರೀಪುಲಿಗಿರಿ ಪಚ್ಚೆಯ ನೋಡಿ ಬೇಗ ಪ
ಸಚ್ಚಿದಾನಂದರೂಪಚ್ಚರಿಯಾದಂಥ
ಮುಚ್ಚುಮರೆಯಿಲ್ಲದಚ್ಚುತ ನೆಂಬುವ ಅ.ಪ
ಕೈಗೆ ಸಿಕ್ಕುವದಲ್ಲವೈತ-ಕ್ಕಡಿಯಲ್ಲಿ-ತೂ ಗಿನೋಡುವದಲ್ಲವೈ
ಆಗಮಾಂತಗಳಲ್ಲಿ ಯೋಗಿ ಹೃದಯದಲ್ಲಿ
ಭಾಗವತರೊಳನುರಾಗದಿಮೆರೆಯುವ ೧
ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯಕಂಡವರಿಲ್ಲವೈ
ನಲಿದು ಧ್ಯಾನಿಪರಿಗೆ-ಒಲಿದು ತೋರುವ ದಿವ್ಯ
ಜಲಧರವರ್ಣದ ಜಲಜಾಕ್ಷನೆಂಬುವ ೨
ಧರೆಯೊಳುತ್ತಮವಾಗಿಹ-ಶ್ರೀ ಪುಲಿಯೆಂಬ-
ಗಿರಿಯೊಳು ನೆಲೆಯಾಗಿಹ
ಚರಣವ ನಂಬಿದ ಶರಣರ ಪೊರೆಯುವ
ವರದವಿಠಲ ಧೊರೆವರದನೆಂದೆಸರಾದ ೩

 

ಹಾಡಿನ ಹೆಸರು :ಪಚ್ಚೆಯು ಬಂತೀಗ
ಸಂಗೀತ ನಿರ್ದೇಶಕರು : ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

 

ಯಾಕೆ ಕೃಪೆ ಬಾರದೋ
೬೩
ಯಾಕೆ ಕೃಪೆ ಬಾರದೋ-ಲೋಕರಕ್ಷಕ ನಿನಗ್ಯಾಕೇ ಪ
ಲೋಕ ರಕ್ಷಕ ದುಷ್ಟಕಾಕ ಶಿಕ್ಷಕ ನಿನಗ್ಯಾಕೇ ಅ.ಪ.
ಪಕ್ಷಿವಾಹನನೆಸಿ ಲಕ್ಷಿಸದಿರಲು ಲೋಕದಿ
ಲಕ್ಷಣವಲ್ಲವೊ ಶುಭ ಲಕ್ಷಣ ಮೂರುತಿ ನಿನಗ್ಯಾಕೆ ಕೃಪೆ ೧
ಕುಕ್ಷಿಯೊಳೀ ಜಗವನಿಟ್ಟು ರಕ್ಷಿಸುವ ಲಕ್ಷ್ಮೀಪತಿ
ದಕ್ಷಿಣಶೇಷಾದ್ರಿವಾಸ ರಕ್ಷಿಸುವ ನಿನಗ್ಯಾಕೇಕೃಪೆ ೨
ವಾಸವ ಸನ್ನುತ ಶ್ರೀನಿವಾಸ ನಿನ್ನ ದಾಸನೊಳು
ದೋಷವೆಣಿಸದೆ ಕಾಯೊದೋಷರಹಿತನೆ ನಿನಗ್ಯಾಕೇ ೩
ಸೃಷ್ಟೀಶ ನಿನ್ನ ಶುಭ ದೃಷ್ಟಿಯಿಂದ ನೋಡಿಯನ್ನ
ಕಷ್ಟವ ಬಿಡಿಸಿ ಮನದಿಷ್ಟವ ಪಾಲಿಸು ೪
ವಾರಣ ವರದ ಭವ ತಾರಣ ಚರಣಗುಣ
ಪೂರಣ ವರದ ವಿಠಲ ಕಾರುಣಿಕರರಸನಿನಗೆ ೫

 

ಹಾಡಿನ ಹೆಸರು :ಯಾಕೆ ಕೃಪೆ ಬಾರದೋ
ಹಾಡಿದವರ ಹೆಸರು :ಶೈಲಜಾ ಶ್ರೀರಾಮ ಭಟ್
ರಾಗ : ಸಾರಮತಿ
ತಾಳ :ಮಿಶ್ರಛಾಪು ತಾಳ
ಸಂಗೀತ ನಿರ್ದೇಶಕರು :ರಾಘವೇಂದ್ರ ಎಂ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹಣ್ಣುಬಂದಿದೆ ಜನರು
೯೬
ಹಣ್ಣುಬಂದಿದೆ-ಜನರು-ಹಣ್ಣಕೊಳ್ಳಿರೊ
ಗಣ್ಯಮಾಗಿ ಬಣ್ಣಿಸುತ್ತ ಪುಣ್ಯವಂತರುಣ್ಣತಿರುವ ಪ
ಬೀಜವಿಲ್ಲದಾ-ಬೆಳೆದ ಭೂಜವಲ್ಲದ ಬೀಜಭೂಜಗಳಿಗೆ ತಾನೇ
ಬೀಜವಾಗಿ ಮೆರೆಯುತಿರುವ ೧
ಹುಟ್ಟಿ ಬೆಳೆಯದಾ-ಜನರು-ಮುಟ್ಟಿತೊಳೆಯದಾ
ಎಷ್ಟುದಿವಸವಿಟ್ಟಿರಲು ಕೊಳೆತು ಕೆಟ್ಟು ಹೋಗದ ೨
ಬೆಲೆಗೆ ಬಾರದಾ-ತನ್ನ-ನೆಲೆಯ ತೊರದ
ಒಲಿದವರಿಗೆ ಸುಲಭವಾಗಿ ಹಲವು ವಿಧದಿ ಹೊಳೆಯುತಿರುವ೩
ಅರಿಯದವರಿಗೆ-ರುಚಿಯ-ನರಿತಜನರಿಗೆ
ಅರಿತ ಮೇಲೆ ನಿರುತ ವಿರುತ ಸರಸಮಧುರ ಭರಿತ ಬರಿತ೪
ಸಿರಿಮನೋಹರ-ವ್ಯಾಘ್ರ-ಗಿರಿಯ ಮಂದಿರ
ಶರಣ ಜನರ ಪೊರೆವ ನಮ್ಮ ವರದ ವಿಠಲನೆಂಬದಿವ್ಯ೫

 

ಹಾಡಿನ ಹೆಸರು:ಹಣ್ಣುಬಂದಿದೆ ಜನರು
ಹಾಡಿದವರ ಹೆಸರು :ರಮಾಕಾಂತ್ ಆರ್. ಎಸ್.
ಸಂಗೀತ ನಿರ್ದೇಶಕರು :ಶ್ರೀಕಂಠನ್ ಆರ್. ಕೆ.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹರಿ ಕೃಪೆಯಿಂದಲಿ ದೊರಕಿತು
೯೮
ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ
ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ.
ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ
ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ ೧
ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ
ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ ೨
ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ
ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ ೩
ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ
ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ ೪
ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ
ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ ೫
ಲೋಕದಜನರಿಗನೇಕ ಸುಕೃತ ಪರಿಪಾಕದ ತಂಬೂರಿ
ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ ೬
ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ
ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ ೭

 

ಹಾಡಿನ ಹೆಸರು :ಹರಿ ಕೃಪೆಯಿಂದಲಿ ದೊರಕಿತು
ಹಾಡಿದವರ ಹೆಸರು :ರವೀಂದ್ರ ಹಂದಿಗನೂರ್, ಸುಜಾತಾ ದತ್ತ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ