Categories
ರಚನೆಗಳು

ಸರಸಾಬಾಯಿ


ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ
ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ.
ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ
ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ
ಕಿಂಕರಳು ನೀನಾಗಿ ಹರಿಸೇವೆಗೆ
ಪಂಕಜಾನಾಭನ್ನ ಸೇವಿಸುತಲಿರುವಿ ೧
ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ
ಈ ಜುತ ಹರಿಯ ಪರಮ ಸಂತೋಷದಿಂದ
ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ
ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ ೨
ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ
ಕಾಮನಯ್ಯನ ಕಾರುಣ್ಯದಿಂದ
ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು
ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ ೩

 


ಕೃಷ್ಣ ನಿನ್ನ ಸ್ಮರಣೆ ಎನಗೆ ಮರೆಸಬೇಡವೋ
ಎನಗೆ ಮರೆಸಬೇಡವೊ ಯನಗೆ ಮರಿರೆಸಬೇಡವೊ ಪ.
ಒಂದು ಅರಿಯದ ಮಂದ ಮತಿಯಳ ಬಂದು ಕಾಯೋ ನೀ
ಬಂದು ಕಾಯೋ ನೀ ಮಂದರೋದ್ಧರ ಸಿಂಧುಶಯನ
ಇಂದಿರೆ ರಮಣ ೧
ಹಗಲು ಇರಳು ನಿನ್ನ ಸ್ಮರಣೆ ಎನೆಗೆ ಮರೆಸ ಬೇಡವೋ
ಹಗರಣ ಮಾಡಿಸಿ ಎನಗೆ ನಿನ್ನ ಸ್ಮರಣೆ ಮಾಡಿಸೋ ೨
ರಮಾ ವಲ್ಲಭ ವಿಠಲ ನಿನ್ನ ನಾಮ ನಿರಂತರ
ನುಡಿಸೋ ಯನೆಗೆ ಸ್ವಾಮಿ ನಿರಂತರ ನುಡಿಸೋ ೩

 

ಜಗನ್ನಾಥದಾಸರಿಗೆ ಗುರುವು ನೀನೆಂದೆನಿಸಿದೆ

ಗಣಪತಿ ಸ್ತುತಿ
ಗಜವದನ ನಿನ್ನ ಚರಣಕೆ ನಮಿಸುವೆ
ಅಜನ ಐತನ ನಾನು ಮರೆಯದೆ ನುಡಿಸೈ ಪ.
ವೇದವ್ಯಾಸರಿಗೆ ದಾಸನೆಂದೆನಿಸಿ ವೇದಗಳೆಲ್ಲಾ
ಅತಿಮೋದದಿ ಬರೆದೇ ೧
ಜಗನ್ನಾಥ ದಾಸರಿಗೆ ಗುರುವು ನೀನೆಂದೆನಿಸಿ
ಜಗದೊಳಗೆ ಹರಿಕಥಾಮೃತ ಸುರಿಸಿದೆ ೨
ವಿಶ್ವಂಭರನೇ ಎನ್ನ ವಜ್ಞೆಗಳ ಪರಿಹರಿಸಿ
ಯಜ್ಞವ್ಯಾಪಕನ ನಾಮವ ನುಡಿಸೈ ೩
ರಮಾವಲ್ಲಭ ವಿಠಲನ ನಾಮವ
ಅನುಗಾಲ ನುಡಿವಂಥ ವರಗಳ ನೀಡೈ ೫

 


ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ
ಸ್ವಾಮಿ ನಿಂತು ಕಾಯೋ ಎನ್ನ ಪ.
ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ.
ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ
ನಾಗಶಯನನೆ ಯೋಗಿಗಳರಸನೆ
ಬೇಗದಿ ಬಂದು ಕಾಯೋ ಎನ್ನನು ೧
ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ
ವಾಸುದೇವ ನಿನ್ನ ಲೇಸು ಕರುಣವ ತೋರಿ
ನಿನ್ನ ದಾಸರ ಸಂಗದೊಳು ಇರಿಸೋ ಎನ್ನ ೨
ರಾಮ ರಾಮ ಎಂಬೋ ನಿನ್ನ ನಾಮನೇಮದಿ
ನುಡಿಸೆನೆಗೆ ರಮಾವಲ್ಲಭವಿಠಲ
ಭಾಮೆಯರರಸನೆ ಪ್ರೇಮವ ತೋರೋ ೩

 

೧೦
ಬಂದಳು ನೋಡೆ ಇಂದಿರ ದೇವಿ ಪ.
ಬಂದಳು ನೋಡೆ ಗೋವಿಂದನ ಸತಿಯು
ಸುಂದರ ಪಾದದಿಂದ ಒಂದೊಂದು ಹೆಜ್ಜೆಯನಿಡುತಾ ಅ.ಪ.
ಉಲ್ಲಾಸದಿಂದಲೀ ಚೆಲ್ವೆ ಬಂದಳೀಗ ೧
ವಜ್ರದಂತೆ ಕಾಂತಿ ಪ್ರಜ್ವಲಿಸುತ್ತಲೀ
ಗೆಜ್ಜೆಪಾದದಿಂದ್ಹೆಜ್ಜೆಯನಿಡುತಲೀಗ೨
ಮಾರನಮಾತೆಯು ಮುಂಗುರುಳನೇ ತಿದ್ದಿ
ಮುಡಿಯ ಮೇಲಿನ ಮಲ್ಲಿಗೆ ಉದುರುತ್ತ ೩
ಕಡಗ ಕಂಕಣವು ಬೆಡಗಿನಿಂದಾಲಿಟ್ಟು
ನಡಮುಡಿಮೇಲೆ ಅಡಿಯನಿಡುತಲೀಗ ೪
ಕುಕ್ಷಿಯೊಳೀರೇಳು ಜಗವಪೊತ್ತುವನಾ
ವಕ್ಷಸ್ಥಳದ ಲಕ್ಷ್ಮಿ ಬಂದಾಳೀಗ ೫
ಹರಿಯ ಮಂದಿರಕ್ಕೆ ಸರಸದಿಂದಲೀಗ
ಓರೆನೋಟದಿಂದ ಮುಗುಳು ನಗೆಯ ನಗುತ ೬
ಚಂದದಿಂದಲೀಗ ಬಂದು ಕುಳಿತುಕೊಂಡು
ಮಂದ ಭಾಗ್ಯಳಿಗಾನಂದವ ಕೊಡುವಳು ೭
ಇಂದಿರೆ ದೇವನ್ನ ಬಂಧನವಾ ಬಿಡಿಸಿ
ತಂದೆಗೋವಿಂದನ್ನ ಕಂಡು ತೋರೆ ತಾಯಿ ೮
ರಮಾವಲ್ಲಭವಿಠಲನ ಸ್ಮರಣೆಯು
ನಿರುತ ಮಾಡುವಂಥ ವರವ ಕೊಡು ತಾಯೆ ೯

 

ಈ ದೇವರ ನಾಮದಲ್ಲಿ ತಿರುಪತಿ ಕ್ಷೇತ್ರದಲ್ಲಿರುವ

ಬಂದಾನೋ ಧಯಾನಿದಿ ಬಂದಾನೋ ಪ.
ಬಂದಾನೊ ನಿನ್ನ ದರುಶನ ಮಾಡಿಸಿ ಆನಂದ ಪಡಿಸಿ
ಆನಂದ ಭಾಗ್ಯ ಸುರಿಸಿದೀ ಹರಿಯೆ ಅ.ಪ.
ನೀನು ಬಿಡದೆ ಎನ್ನನು ಕರೆಸಿ
ನಿನ್ನ ಭಕ್ತರ ಸಂಘದೊಳು ಬೆರೆಸಿ
ನಿನ್ನ ದ್ವಾರದೆದುರಿಗೆ ಸ್ಥಳವ ಕೊಡಿಸಿ
ನಿನ್ನ ಪುಷ್ಕರಣಿ ಪ್ರೋಕ್ಷಣೆ ಮಾಡಿಸಿ
ವರಹದೇವರ ದರುಶನ ಮಾಡಿಸಿ ೧
ನಿನ್ನ ಧರ್ಮ ದರ್ಶನ ಎನಗೆ ಕೊಡಿಸಿ
ನಿನ್ನ ಪುಷ್ಕರಣಿ ಸ್ನಾನವ ಮಾಡಿಸಿ
ನಿನ್ನ ಭಕ್ತರ ಮಠದಿ ಊಟವ ಮಾಡಿಸಿ
ನಿನ್ನ ಕಲ್ಯಾಣೋತ್ಸವ ತೋರಿಸಿ ಆನಂದಪಡಿಸಿ೨
ನಿನ್ನ ವಸಂತೋತ್ಸವ ಎನಗೆ ತೋರಿಸಿ
ನಿನ್ನ ಉತ್ಸವದೊಳೆನ್ನ ದಣಿಸಿ
ನಿನ್ನ ಏಕಾಂತ ಸೇವೆ ಎನ್ನಿಂದ ಮಾಡಿಸಿ
ರಮಾವಲ್ಲಭವಿಠಲನ ಮನದಲಿ ನಿಲಿಸಿ ನಲಿಸಿ ೩

 

ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ

ಬಾರಯ್ಯ ಎನ್ನ ಹೃದಯ ಮಂದಿರಕ್ಕೆ
ತೋರೈಯ್ಯ ಚರಣವ ಕ್ಷೀರಾಬ್ಧಿಶಯನಾ ಪ.
ಒಂದೂ ಅರಿಯದ ಮಂದಮತಿಯ
ಬಂದೂ ನೀ ಕಾಯೋ ಸಿಂಧುಶಯನನೇ ೧
ವಾರಿಧಿ ತಂದೆ ಕ್ಷೀರಾಬ್ಧಿ ಶಯನಾ
ಪಾರು ಕಾಣಿಸಯ್ಯ | ಮಾರಾನಾಪಿತನೇ ೨
ಶೇಷಾದ್ರಿ ವಾಸಾ ವಾಸುಕೀಶಯನಾ
ರಮಾವಲ್ಲಭ ವಿಠಲ ಪೊರೆಯನ್ನ೩

 


ಮುರಳಿಧರನು ಕೊಳಲನೂದುವ ಸೊಬಗ
ನೋಡಿದ್ಯಾ ಮನವೇ ಪ.
ನಾರಿಯರ ಮನವಾ ಸೆಳೆದು ಊದುತಲಿರುವನು ಅ.ಪ.
ಇಂದು ಈ ಗೋವಿನ ಆನಂದವ ನೋಡಿದ್ಯಾ
ಇಂದಿರೇಶನ ಪಾದಾಮೃತ ಸವಿಯುತಿರುವುದು ೧
ಕಾಮಧೇನು ಕಲ್ಪವೃಕ್ಷದ ಕಾಯ ಜನಕನ
ಕೊಳಲ ಧ್ವನಿಯು ಕೇಳುತಲಿರುವುದು ೨
ರಮಾವಲ್ಲಭ ವಿಠಲನು ಮುರಳಿಸ್ವರದಿಂದ
ಮಾರ ಜನಕ ರಾಗದಿಂದ ಊದುತಲಿರುವನು ೩

 

ಯಂತ್ರೋದ್ಧಾರಕ ಪ್ರಾಣಸಾಯಿ
೧೨
ಯಂತ್ರೋದ್ಧಾರಕ ಪ್ರಾಣರಾಯ ಎನ್ನ ಚಿಂತೆ ಹರಿಸೋ ಪ.
ಅಂತರಂಗದಿ ಹರಿಯ ಧ್ಯಾನವ ಮಾಡಿಸೋ ಅ.ಪ.
ನಿನ್ನ ನೋಡಿ ಧನ್ಯಳಾದೆನೊ ಹೊನ್ನು ಹನುಮನೆ
ಎನ್ನ ಪಾಪ ಹರಿಸಿ ಕಾಯೊ ಘನ್ನ ಹನುಮನೆ ೧
ಒಂದು ಅರಿಯದ ಮಂದಮತಿಯಳ ಬಂದು ಕಾಯೋ
ಬಂಧನವ ಬಿಡಿಸಿ ಕಾಯೋ ಸುಂದರಾಂಗನೆ ೨
ತುಂಗಾತೀರದಿ ನಿಂತಿರುವಿ ಮಂಗಳಾಂಗನೆ
ಮಂಗಳ ರಾಮನ ಧ್ಯಾನವ ಮಾಡಿಸು ಎನಗೆ ೩
ಹಂಪಿಯಲಿ ನಿಂತಿರುವಿ ಸೊಂಪಿನಿಂದಲಿ
ಸಂಪಿಗೆ ನೆರಳಲಿ ನೋಡಿದಿ ರಾಮರ ಧ್ಯಾನ ಮಾಡುತ ೪
ರಾಮ ದೂತನೆ ಎನ್ನ ಮೊರೆಯ ಲಾಲಿಸಿ
ರಮಾವಲ್ಲಭವಿಠಲನ ಪಾದ ಬೇಗ ತೋರಿಸೊ ೫

 

ವೃಂದಾವನ ದಂಡೆಯ ಮಂತ್ರಾಲಯ ನಿಲಯ
೧೩
ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ
ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ ಪ.
ಮೂಢಮತಿಯು ನಾನು ಎನ್ನಗಾಢ ನಿದ್ರೆಯಲಿ
ಮಾಡುತ ಪೂಜೆಯ ಎನಗಾನಂದ ಪಡಿಸಿದನು ೧
ಗುರುನಾರದ ದಿನದಿ ಸ್ವಾಮಿ ಹರಿದಾಸರ ಗೃಹದಿ
ಕರುಣ ತೋರಿ ದರುಶನವಿತ್ತು ಎನಗಾನಂದ ಪಡಿಸಿದರು ೨
ಕರಿರಾಜವರದಾ ಗುರುರಾಜರಿಗೊಲಿದು
ಪರಮಭಕ್ತರ ಮಂದಿರದಿ ಎನಗಾನಂದ ಪಡಿಸಿದರು ೩
ತುಂಗಾತೀರದಲಿ ತಾವು ಚಂದದಿ ನಿಂತು
ಮಂಗಳ ರಾಮನ ಪೂಜೆಯ ಮಾಡಿ
ಎನಗಾನಂದ ಪಡಿಸಿದರು ೪
ರಾಮ ಪೂಜೆಯ ಮಾಡಿ ರಾಮಧ್ಯಾನದಿ ನಿರಂತರ
ರಮಾವಲ್ಲಭವಿಠಲ ಭಜಿಸುವ ಪ್ರಿಯರಿವರು ೫

 

ಸಂಜೀವನವ ತಂದ ಶೂರ
೧೧
ಸಂತೆಯ ಬಿದನೂರು ಹನುಮಂತ
ಎನ್ನ ಅಂತರಂಗದಲಿ ಹರಿಯ ತೋರು ಹನುಮಂತ ಪ.
ಎನ್ನ ಮೇಲೆ ಪಂಥ ಬೇಡ ನಿಂತು ಬೇಡುವೆ ಹನುಮಂತ ಅ.ಪ.
ಅಂಜನಾದೇವಿಯ ಕುಮಾರ ಅಂಜಿಸುವ ಈ ಘೋರ ಸಂಸಾರ
ಅಂಜಿಕೆಯ ಬಿಡಿಸೆನ್ನ ಕಾಯೊ ಬಲು ಧೀರ ಸುಗುಣ ಗಂಭೀರ
ಸಂಜೀವನನ ಕಂಡ ಶೂರ ಅಂಜನಾದೇವಿಯ ಕುಮಾರ ೧
ಕುಂತಿಯಾ ಸುತನಾಗಿ ನೀ ಜನಿಸಿ ಬಂದೇ
ಪಂಥದಲಿ ಕೀಚಕನ ಸೋಲಿಸಿ ನಿಂತು
ಕಂತುಪಿತನಿಗೆ ದುರ್ಯೋದನನ ಶಿರವ ಒಪ್ಪಿಸಿದೆ ೨
ಮದ್ದಿಗೆ ಭಟ್ಟರಲಿ ನೀ ಜನಿಸೀ
ಮಧ್ವಮತವನೆ ಉದ್ಧರಿಸಿ ನೀ ಬದರಿಯಲಿ ನಿಂದಿ
ಮುದ್ದು ಕೃಷ್ಣನ ಪೂಜಿಸಿ ಉಡುಪಿಲಿ ಸ್ಥಾಪಿಸಿ ೩
ಸಂತೆಬಿದನೂರಿನಲಿ ನಿಂತು ಬಂದ ಜನಕೆ ಆನಂದ ಪಡಿಸಿ
ಸಂತೋಷದಿಂದ ವರಗಳ ಬೇಡಿದವರಿಗೆ ನೀಡುತ್ತ
ಕಂತುಪಿತನ ಧ್ಯಾನದಲಿ ಅನವರತ ಸೇವಿಸುತ ೪
ರಾಮ ಸೇವೆ ನೀ ಸಂಭ್ರಮದಲಿ ಮಾಡಿ
ರಾಮರ ಧ್ಯಾನ ಮಾಡುತ ಪೂಜಿಸುತಿರುವಿ
ರಮಾವಲ್ಲಭವಿಠಲನ ಧ್ಯಾನದಿ ಪಟ್ಟಕೆ ಬರಲಿರುವಿ ೫

 


ಹರಿ ಕುಣಿದ ನಮ್ಮ ಹರಿ ಕುಣಿದ
ಹರಿ ಕುಣಿದ ನಮ್ಮ ಹರಿ ಕುಣಿದ
ಹರಿ ಕುಣಿದ ನಮ್ಮ ಕೃಷ್ಣ ಕುಣಿದ ಪ.
ಹರಿದಾಸುರಗಳ ನೆರೆದಿಹ ಸಭೆಯಲಿ
ಭಜನೆಯ ಸಮಯದಿ ಹರಿ ಕುಣಿದ ಅ.ಪ.
ಅತಿಭಕ್ತಿಯಿಂದ ಪತಿತ ಪಾವನನ ಪೂಜೆ
ಅತಿ ಸಂತೋಷದಿ ಮಾಡುವ ಸಮಯದಿ ೧
ವೇದಮಂತ್ರದಿಂದಾ ವೇದಘೋಷದಲ್ಲಿ
ವೇದ ವ್ಯಾಸರೆಂಬೋ ನಾಮದಿಂದಿರುವ ೨
ಅಂದಿಗೆ ಕಿರುಗೆಜ್ಜೆ ಚಂದದಿ ಪೊಳೆಯುತಾ
ಗೋವಿಂದ ದಾಸರ ಮಂದಿರದೊಳಗೆ ೩
ಪುರಂದರ ದಾಸರ ಆರಾಧನೆ ದಿನ ಪುರದೊಳಗೆಲ್ಲಾ
ಮೆರವಣಿಗೆ ದಿನ ಯತಿಗಳೀರ್ವರು ಪೂಜಿಸಿ ೪
ವರದ ಅತಿ ಸಂಭ್ರಮದಿ ಗತಿ ಕೊಡುವವ ಬಂದ
ರಮಾವಲ್ಲಭವಿಠಲನ ಪೂಜೆಯ ಸಮಯದಿ ೫

 


ಹರುಷ ಪಡಿಸಿದನೋ ಸರಸಿಜನಾಭ ಪ.
ಉರುಗಾದ್ರಿವಾಸನೆ ಹರುಷಪಡಿಸಿದೆ
ಉಡುಪಿಯ ಕೃಷ್ಣನೇ ಅ.ಪ.
ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ
ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ ೧
ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ
ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ ೨
ಏನು ಬೇಡಲಿ ನಿನ್ನ ಅಧೀನಳೋ ನಾನು ನೀನು
ಮಾಡಿಸೊ ಧ್ವಂದ್ವಕಾರ್ಯ
ನಿನ್ನದೆಂಬ ಸೊಲ್ಲ ಪಾಲಿಸು ೩
ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ
ನಿನ್ನ ದಾಸರ ದಾಸರ ಸಂಗಕೊಟ್ಟು ಚರಣವ ತೋರೋ
ಕರುಣಾನಿಧಿಯೇ೪
ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ
ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ ೫

 

ಏನು ಭಾಗ್ಯವೋ ತಾಯೆ

ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ
ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ.
ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ
ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ
ಕಿಂಕರಳು ನೀನಾಗಿ ಹರಿಸೇವೆಗೆ
ಪಂಕಜಾನಾಭನ್ನ ಸೇವಿಸುತಲಿರುವಿ ೧
ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ
ಈ ಜುತ ಹರಿಯ ಪರಮ ಸಂತೋಷದಿಂದ
ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ
ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ ೨
ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ
ಕಾಮನಯ್ಯನ ಕಾರುಣ್ಯದಿಂದ
ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು
ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ ೩

 

ಹಾಡಿನ ಹೆಸರು :ಏನು ಭಾಗ್ಯವೋ ತಾಯೆ
ಹಾಡಿದವರ ಹೆಸರು :ದೀಪ್ತಿ ಶ್ರೀನಾಥ್
ಶೈಲಿ :ಸುಗಮ
ಸಂಗೀತ ನಿರ್ದೇಶಕರು : ಗೀತಾ ಬಿ. ಆರ್.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಗಜವದನ ನಿನ್ನ ಚರಣಕೆ

ಗಣಪತಿ ಸ್ತುತಿ
ಗಜವದನ ನಿನ್ನ ಚರಣಕೆ ನಮಿಸುವೆ
ಅಜನ ಐತನ ನಾನು ಮರೆಯದೆ ನುಡಿಸೈ ಪ.
ವೇದವ್ಯಾಸರಿಗೆ ದಾಸನೆಂದೆನಿಸಿ ವೇದಗಳೆಲ್ಲಾ
ಅತಿಮೋದದಿ ಬರೆದೇ ೧
ಜಗನ್ನಾಥ ದಾಸರಿಗೆ ಗುರುವು ನೀನೆಂದೆನಿಸಿ
ಜಗದೊಳಗೆ ಹರಿಕಥಾಮೃತ ಸುರಿಸಿದೆ ೨
ವಿಶ್ವಂಭರನೇ ಎನ್ನ ವಜ್ಞೆಗಳ ಪರಿಹರಿಸಿ
ಯಜ್ಞವ್ಯಾಪಕನ ನಾಮವ ನುಡಿಸೈ ೩
ರಮಾವಲ್ಲಭ ವಿಠಲನ ನಾಮವ
ಅನುಗಾಲ ನುಡಿವಂಥ ವರಗಳ ನೀಡೈ ೫

 

ಹಾಡಿನ ಹೆಸರು :ಗಜವದನ ನಿನ್ನ ಚರಣಕೆ
ಹಾಡಿದವರ ಹೆಸರು :ಕಿರಣ್ ಹಾನಗಲ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *