Categories
ರಚನೆಗಳು

ಸರಸ್ವತಿ ಬಾಯಿ

ಉಂಗುಟದಿಂದ ಬಂದ ಗಂಗೆ

ಅಂಗವ ಶಿಂಗರಿಸೊ ಶ್ರೀ ರಾಮಗೆ ಪ.
ರಥವೆಂದು ಮಂಗಳ ಮಹಿಮನ
ಉಂಗುಟದಿಂದ ಬಂದ ಗಂಗೆಯ
ಸ್ನಾನದಿ ಹಿಂಗಿಸು ಭವವೆಂದು ಅ.ಪ.
ಗಂಗಾಜನಕನ ಸ್ಮರಿಸುತ ನಿನ್ನ
ಅಂಗವನುಜ್ಜಿ ಕಲಿಮಲ ತೊಳೆದು
ರಂಗನ ಸ್ತುತಿಗೆ ಭಂಗ ತರದ ಪರಿ
ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು ೧
ಗೋಪೀ ಚಂದನ ಲೇಪಿಸುತಂಗಕೆ
ಶ್ರೀಪ ವಲಿವನೆಂದ್ಹರುಷದೊಳು
ಧೂಪಾರತಿ ಅಂಗಾರದಕ್ಷತೆ ಸೊಬಗ
ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು ೨
ಶ್ರಿಂಗರ ಶ್ರೀ ಶ್ರೀನಿವಾಸಗರ್ಪಿಸಿ
ಮಂಗಳದನ್ನ ವೀಳ್ಯವ ಮೆದ್ದು ತನ್ನ
ಅಂಗನೆಯೊಳು ಅನಂಗಜನಕನ
ರಂಗನಲೀಲೆಯಂದದಿ ಹರುಷಿಸೀ ಇಂಥಾ ೩

 

೧೧೯
ಆತ್ಮನಿವೇದನೆ
ಅಂಬುಜೇಕ್ಷಣ ನಂಬಿದೇ ನಿನ್ನ ಪ.
ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ
ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ.
ಅನುಪಮ ಚರಿತ ಅಪ್ರಮೇಯನೆ ಕೃಷ್ಣ
ತನುಮನಧನಗಳಾ ನಿನಗರ್ಪಿಸುವೆ ಎನ್ನ
ಚಿನುಮಯ ರೂಪನೆ ಮನುಮಥ ಪಿತನೆ
ನಿನ್ನ ಸರಿಯಾರೋ ಹನುಮದೀಶ ಕೃಷ್ಣ ೧
ಉತ್ತಮರುಗಳನು ನಿತ್ಯದಿ ಸೇವಿಪ
ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ
ತೆತ್ತೀಸ ಕೋಟಿ ದೇವರ್ಕಳು ನಿನ್ನನು
ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ ೨
ಪದುಮ ಸಂಭವ ಪಿತ ಪದುಮಿಣಿಯರಸನೆ
ಒದಗುತ ಭಕ್ತರಾಪ್ತನು ನೀನಲ್ಲೆ
ಸದನದಿ ಕಾಯುತ ಮುದವನು ಬೀರುತ ನೀ
ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ ೩

 

ಶ್ರೀಹರಿಸ್ತುತಿ

ಅಕ್ಕಾ ನೋಡೆ ಚಿಕ್ಕ ಕೃಷ್ಣನೂ
ಪೊಕ್ಕಿಹ ರಿಂದಾವನಕೀಗ ಬಾ ಪ.
ಸಿಕ್ಕನೆ ಪೋಗದಿರೆ ಲಕ್ಕುಮಿಯರಸ
ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ.
ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ
ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ
ಹದ್ದು ವಾಹನ ಎದ್ದು ಅಭಯನೀವ
ಶುದ್ಧ ಕೋಲಾಟಕೆ ಸಿದ್ಧನಾಗುವನೆ ೧
ನವವಿಧ ಭಕುತಿಯೊಳ್ ನವನೀತ ಚೋರನ
ರವಿಶತಕೋಟಿ ಕಿರೀಟ ಪ್ರಕಾಶ
ಜವದಿ ಪೊಳೆವ ಗೋವಲಯಪಾಲನ
ಅವನೀಧವನೊಲಿಸಲು ಪೋಗುವ ಬಾ ೨
ಆರಿಗೂ ಸಿಗನೆ ನಾರದ ವಂದ್ಯನೆ
ತಾರಕೆಗಳ ಮಧ್ಯ ಚಂದ್ರನಂತಿಹನೆ
ನಾರಾಯಣ ಶ್ರೀ ಶ್ರೀನಿವಾಸನ
ಸೇರಿ ಸುಖವ ಸುರಿಸಲು ತವಕದಿ ೩

 

ಒಂದು ಪುಣ್ಯಸ್ಥಳ ಅಳಗಿರಿಯ ರಂಗ

ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ
ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ.
ಅಳಗಿರಿ ಹತ್ತಲು ಝಳ ಝಳ ಮನಸಲಿ
ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ
ಕಳೆದು ಪೊರೆವೆನೆಂದು ಅ.ಪ.
ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ
ಮುಂಗಡ ನಿನಗುಣಿಸೆನೆ ಉಂಡನು ಹರೆ
ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ
ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ ೧
ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ
ತಂದೆ ತೋರಿ ವೆಂಕಟನ್ನ ರನ್ನನ್ನ
ನಿಂದು ಶ್ರೀನಿವಾಸ ತಂದೆ ವರಹರಂತೆ
ಇಂದೆನ್ನ ಕುಲದೇವತೆ ತಂದು ತೋರಿದೆ
ನಿಮ್ಮ ಮೂವರ ರೂಹವ ೨
ನಾರದ ವಂದ್ಯನ ನಾರೇರಿಗೊಲಿದನ
ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ
ಸಾರಿರ್ಪೆ ಪೆಸರ್ವ ನಾಮದಲಿ
ನಾರಾಯಣನೆಂದ ಬಾಲನಿಗೆ ಒಲಿದನೆ
ಆರಿಗು ವಶವಲ್ಲ ದಾರುಣನಿನಾಮ ನರಸಿಂಹ೩

 


ಆಪನ್ನ ಆರ್ತ ಜನರ ಕಾವ ನೀನೆ ಹರಿ ಎಂಬರು
ಆಪತ್ತು ಬಂದರೂ ನಿನ್ನನೇ ನೆನೆವರು
ಸಂಪತ್ತು ಬಂದರೂೀ ನೀ ನಿತ್ತೆ ಎಂಬರು
ನಿನ್ನಾಪ್ತರು ಕೃಷ್ಣಾ ಎಂದೊದರುವರು
ಅನ್ಯ ದೇವರ ನೆನೆಯರೊ ನಿನ್ನವರು ನಿನ್ನರೂಹ
ಆ ಕರುಣಾ ಆ ಆಭರಣ ಆ ನಿನ್ನ ನಿಜರೂಪ
ಆ ಪರಮ ಪುರುಷ ನಿನ ಕಂಡು ನಲಿವರು
ನಿನ್ನಾಧೀನ ನಾನೆಂಬರು ನಿನ್ನ ಭಕ್ತರು ಶ್ರೀ ಶ್ರೀನಿವಾಸ

 

ಅನುಸೂಯ ಅತ್ರಿ ಋಷಿ ದಂಪತಿಗಳು
೮೦
ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ.
ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ
ಸೇರಿ ಲಕುನಿಯಿಂದ ಮೆರೆವೊ
ಮೂರುಲೋಕದೊಡೆಯ ಕೃಷ್ಣಾ ಅ.ಪ.
ಮೀನನಾಗಿ ವೇದ ತಂದು ದಾನವರ ವಂಚಿಸುತ್ತ
ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ ೧
ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು
ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ ೨
ನಾರಿಯೇರ ವ್ರತವನಳಿದು ತೆೀಜಿಯೇರಿ ಮೆರೆವ ಧೀರ
ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ ೩

 


ಆಲಿಸು ರಂಗನ ಮುರಳಿಯಾ ಕರೆ
ವನುತೆಯರೆ ಬೇಗ ತ್ವರೆ ತ್ವರೆ ಪ.
ಪಕ್ಕದ ನೆರೆಹೊರೆ ಅಕ್ಕ ತಂಗಿಯರೆ
ರಿಂಧಾವನಕೆ ತ್ವರೆ ತ್ವರೆ ಅ.ಪ.
ರಂಗನ ಮುರಳಿಯ ಧ್ವನಿಯಿದು ನೋಡಿ
ಕಂಗಳಿಗ್ಹಬ್ಬವು ತ್ವರೆ ತ್ವರೆ ನಮ್ಮ ೧
ಮಿಕ್ಕ ಕೆಲಸವೆಲ್ಲ ಲೆಕ್ಕದೊಳಿಡದೆ
ಲಕ್ಕುಮಿ ಪತಿಯೆಡೆ ತ್ವರೆ ತ್ವರೆ ೨
ಪರಮ ಪುರುಷ ಎಮ್ಮ ಕರೆದನು ನೋಡಿ
ಮುರಳಿಯ ಸ್ವರದೊಳು ತ್ವರೆ ತ್ವರೆ ೩
ಶ್ರೀ ಶ್ರೀನಿವಾಸನು ಪೋಷಿಪನೆಮ್ಮ
ದೋಷವೇನಿದ್ದರು ತ್ವರೆ ತ್ವರೆ ತಂಗಿ ೪

 

೧೨೦
ಆವ ಬಗೆಯಲಾದರು ಕರುಣದಿ
ದೇವ ಕೃಪೆದೋರೋ ಪ.
ಭಾವ ಭಕುತಿಯಲಿ ತೋಯಜಾಕ್ಷನೆ ನಿನ್ನ
ಕಾವ ಕರುಣಿಯೆಂದು ಭಾವಿಸಿ ಕರೆವೆನು ಅ.ಪ.
ವಿಪ್ರರಾಗಮವಾದರೂ ಸರಿ
ಕ್ಷಿಪ್ರದೊಳವನ ಸಂಗದಿ
ಅಪ್ಪಾ ನೀ ನೆರೆಯುವ ಸಪ್ಪಳಾ ತೋರುತ
ಬಪ್ಪೆ ಎಂದೆನೆವೆನು ಅಪ್ಪ ತಿಮ್ಮಪ್ಪನೇ ೧
ಮಕ್ಕಳೊಳಗಾದರೊ ನಿನ್ನಯ ಆಟ
ಪಕ್ಕನೆ ತೋರೋ ದೇವನೆ
ಚಿಕ್ಕ ಕೃಷ್ಣನೆ ನಿನ್ನ ರೂಪವ ನೆನೆಯುತ
ಪಕ್ಕನೇ ನಿನ್ನಯ ನಾಮ ಉಕ್ಕಿ ನೆನೆಯುವ ಪರಿ ೨
ಮನೆಗೆಲಸದೊಳು ನಿನ್ನಯ ಧ್ಯಾನ
ತನು ಮನ ನೆನೆಯುತಲಿ
ದಿನದಿನದಲಿ ಸುಖ ದುಃಖದೊಳು
ಮನಸಿಜಪಿತ ನಿನ್ನ ನೆನಸುವ ಪರಿಯಲಿ ೩
ಹಿರಿಯರಾಗಮವಾಗಲು ನಾನವರೊಳು
ಕಿರಿಯಳಂದದಿ ಇರುವ ಪರಿ
ಮನವನಿತ್ತೂ ಪೊರೆ ಕರುಣಾಳು
ಕರಣ ಶುದ್ಧಳಾ ಮಾಡಿ ಕರೆ ನಿನ್ನ ಬಳಿಗೆ ೪
ಕನಸಲಾದರೂ ನಿನ್ನ ಮನಸಿಜಪಿತನೆ
ಮನನ ಮಾಡುತ ನೆನೆಯುವ
ಘನಕೃಪೆಯಿತ್ತು ಎನ್ನ ಜನುಮ ಸಾರ್ಥಕಗೊಳೆ
ಈತನು ನಿನಗರ್ಪಿಸಿಹೆ ದಿನಮಣಿ ಶ್ರೀ ಶ್ರೀನಿವಾಸ ೫

 

೧೨೧
ಇದು ಥರವೇ ಥರವೇ ದೇವಾ ಥರವೇ
ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ.
ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ
ಪರಮ ಮಂಗಳ ಪಾದಗಾಣದೆ
ಮರುಗುತಿರುವಾ ವರ ಭಕುತರಿಗೆ
ಕರುಣದೋರದೆ ಇರುವೆ ವೆಂಕಟ ಅ.ಪ.
ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ
ತ್ರಿಜಗವಂದಿತ ಕೃಷ್ಣ ನಿನ್ನಪಾದ
ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ
ಸುಜನರೆಲ್ಲರು ಸ್ತುತಿಸಿ ಪಾಡುತಿರೇ
ತ್ರಿಜಗ ಪೂಜಿತನಾಗಿ ಭಕುತರ
ಭಜನೆ ನಿನಗರಿವಿಲ್ಲೇ ದೇವನೆ
ಸ್ವಜನರನು ಪಾಲಿಸುವ ಬಿರುದನು
ತ್ಯಜಿಸುವರೆ ಸಿರಿಯರಸ ವೆಂಕಟ ೧
ಮಚ್ಛಕೂರ್ಮವರಾಹನಾಗಿ ದೈತ್ಯರ
ಸ್ವಚ್ಛಭಕುತರ ಸಲಹೆ ಸಂಹರಿಸಿ
ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ
ಅಚ್ಛವಾಮನನಾಗಿ ಬಲಿಯತಲೆಯತುಳಿದು
ಸ್ವಚ್ಛಗಂಗೆಯ ಇಂಬಿಡದೇ
ದುಷ್ಟ ರಾಜರನಳಿದ ಭಾರ್ಗವ
ದುಷ್ಟ ತಾಟಕಿ ಸಂಹರಿಸಿದನೆ
ಕೃಷ್ಣರೂಪದಿ ಗೋಪೆರಿಗ್ವಲಿದನೆ
ಉತ್ರ‍ಕಷ್ಟ ಬೌದ್ಧ ಕಲ್ಕಿ ವೆಂಕಟ ೨
ಪರಮಪುರುಷ ಬಾ ವರದ ಮೂರುತಿ ಬಾ
ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ
ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ
ಶರಣಾಗತ ರಕ್ಷಾಮಣಿ ಬೇಗ ಬಾ
ಸಿರಿಗೆ ಪೇಳದೆ ಬಂದು ಕರಿಯ ಪೊರೆದ
ದೊರೆ ಶ್ರೀ ಶ್ರೀನಿವಾಸ ಬಾ
ಗರುಡ ಗಮನನೆ ಶರಣಜನರನು
ಮರೆಯದಲಿ ನೀ ಕರುಣ ವೆಂಕಟ ೩

 

೧೨೨
ಇಷ್ಟುದಯ ಮಾಡಿದ್ದೆ ಅತಿ ಸೋಜಿಗ
ಶೀಷ್ಟೇಷ್ಟದಾತ ಭ್ರಷ್ಟಮಾನವನಲ್ಲಿ ಪ.
ಉದಯಕಾಲದಲೆದ್ದು ಪದುಮಸಂಭವ ಪಿತನ
ವದನದಲಿ ನೆನೆಯದಲೆ ಮಾನುನಿಯರ
ಚದುರತೆಗೆ ಮೆಚ್ಚುತಲೆ ಉದರ ಪೊರೆದನ ಮೇಲೆ
ಚದುರ ಶ್ರೀಕೃಷ್ಣ ಬದಿಗನಾಗಿದ್ದು ೧
ಕರುಣಾಸಮುದ್ರನ ಸ್ಮರಣೆ ಸಾಲದೆ ಎಂಬ
ಪರಮ ಗುರುಗಳ ವಚನ ಮರೆತು ನಿನ್ನ
ಸ್ಮರಿಸದೆಲೆ ನಿರುತದಿ ಪರರ ಬಾಗಿಲಿಗ್ಹೋಗಿ
ಚರಣ ಧಣಿವುತ ಮನದಿ ಮರುಗಿದೆನೋ ಕೃಷ್ಣಾ ೨
ಇನ್ನಾದರೆನಮನದಿ ಪನ್ನಗಾದ್ರಿನಿವಾಸ
ನಿನ್ನ ಸ್ಮರಣೆಯ ಕೊಟ್ಟು ಮನ್ನಿಸೆನ್ನ
ಘನ್ನ ಅಪರಾಧಗಳ ವರ್ಣಿಸಲಳವಲ್ಲ
ಚೆನ್ನಿಗ ಶ್ರೀ ಶ್ರೀನಿವಾಸ ಘನ್ನ ಸಂಪನ್ನ ಸರಿಯಾರೋ ೩

 

೧೨೩
ಈ ದೇಹ ನಿನ್ನ ಒಳಗೊಂಡಿತೊ ಇಷ್ಟಾದ ಮೇಲೆ ಪ.
ದೇಹ್ಯ ಬಾಹ್ಯ ವ್ಯಾಪಾರವ ನೀ ಪರಿಹರಿಸಿದೇ ದೇವ ಅ.ಪ.
ದೇಹದೊಳಗಿದ್ದವರು ಬಾಹ್ಯ ವ್ಯಾಪಾರಕ್ಕೆಳೆಯೆ
ಈ ದೇಹ ಬಾಂಧವರು ಎಲ್ಲ ಎನ್ನ ದೇಹ ಕೀಳು ಮಾಡಿ ನೋಡೆ
ದಾಹ ಹತ್ತಿತೋ ನಿನ್ನಲ್ಲಿ ದೇಹ ಸಾರ್ಥಕವಾಗಲು ೧
ರಂಗ ನಿನ್ನ ಸ್ತುತಿಮಾಡೆ ಹಂಗಿಸುವರೆಂದು ಇದ್ದೆ
ಹಂಗಿಸಿ ಭಂಗಿಸಿ ರಂಗಕ್ಕೆಳಸಿ ಎನ್ನ ನಿನ್ನ
ಅಂತರಂಗಕ್ಕೆ ಎಳೆತಂದೆ ಹರಿ
ರಂಗಾ ನಿನ್ನ ಸಿರಿಯಾರೋ ಮಂಗಳ ಮಹಿಮ ೨
ಪಂಥದಿಂದ ನಿನ್ನ ತಿಳಿದೆ ಕಂತು ಜನಕನೆ ನಾ
ನೆಂದು ಸ್ತುತಿಸಲು ನಿನ್ನ ಅಂತರದಂತಿರಲಿ
ಪಂಥ ಬೇಡ ಎನ್ನ ಮೇಲೆ ಇಂತು ಕೃಪೆ ತೋರಿಸುತ ನಿಂತು
ಅಂತರಂಗಕೆ ಬಾ ಲಕ್ಷ್ಮೀಕಾಂತ ಶ್ರೀ ಶ್ರೀನಿವಾಸ ೩

 

೧೦
ಈ ರಂಗಧಾಮ ಈ ಸುಂದರನು ಈ ರಂಗಧಾಮ ಪ.
ಕಂಚಿವರದ ರಾಜನಂತಿಹ ಮಿಂಚಿನಂತ್ಹೊಳೆವ
ಸಂಚಿತಾರ್ಥವೀವ ದೇವ ೧
ಪರಮ ಪುರುಷ ಪಾವನಾಂಗ ಭರದಿ ಭಕ್ತರನು ಪೊರೆವಾ
ಕರವ ಪಿಡಿದು ಪೊರೆವ ೨
ಸರ್ವತೋಮುಖ ಸರ್ವರಂಗ ಸಂಗದಲ್ಲಿರುವಾ
ಗರ್ವಾರಹಿತ ಶ್ರೀ ಶ್ರೀನಿವಾಸ ೩

 

ಪುಟ್ಟಿದೇಳು ದಿವಸದಲ್ಲಿ ದುಷ್ಟ ಪೂತ
೧೧
ಎಂಥಾ ಠೌಳಿಗಾರನಮ್ಮ ಗೋಪಮ್ಮ ನಿನ್ನ ಮಗ
ನ್ನೆಂಥಾ ಠೌಳಿಗಾರನಮ್ಮ ಪ.
ಎಂಥಾ ಠೌಳಿಗಾರ ಪಂಥಾದಿ ಬೆನ್ನಟ್ಟಿ ಬಂದು
ನಿಂತಲ್ಲೆ ನಾನಾರೂಪವೆಂತು ತಾಳುವ ನೋಡೆ ಎಂಥಾ ಅ.ಪ.
ನೀರೊಳು ಮೀಯಲು ಪೋದೆನೆ ಗೋಪಮ್ಮ
ಹಾರುತ ಮೀನನಾದನೆ
ಸಾರಿ ಪಿಡಿಯಲು ಹೋದೆ
ಆರು ಅರಿಯರೆಂದು ಪೊತ್ತು ಮರೆಯಾದನೇ ಗೋಪಮ್ಮ ೧
ತಾಳು ತಾಳೆಂದೆನೆ ಗೋಪಿ ಧೂಳು ಕೆದರಿ
ಕೋರೆ ತೋರುವನ ಖೂಳ ದೈತ್ಯನ ಸೀಳೆ
ಕೇಳಿ ಕಂದನ ನುಡಿ ಭಾಳ ಕ್ರೂರ ಮೃಗ
ಕೇಳಿದೊಡಲು ಭಯ ತಾಳಿ ಬಂದೆ ಇಂಥ೨
ದೊರಕಿದನೆಂದೆ ತಿರುಕ ಬ್ರಹ್ಮಚಾರಿ
ತಿರುಗಿ ನೋಡೆ ಥೋರ ಕೊಡಲಿ
ಪಿಡಿದು ನಿಂತು ಮಾರುತಿ ಸೇವಿತನಾದ
ಗರುಡ ಗಮನ ದೇವನು ಎಂಥಾ ೩
ಚಿತ್ತಜನೈಯ್ಯನು ನಾನೆತ್ತ ಪೋದರು ಬಿಡ
ಸುತ್ತಿ ಬಹನೆ ಕೃಷ್ಣಾ ಮುತ್ತ ತಾರೆನುತ
ಕತ್ತಲೆಯೊಳು ಪೋದೆ ವಿಸ್ತರಿಸುವೆನೆಂತು
ಬತ್ತಲಾಗಿಸಿ ಕೆಣಕಿಪನೇ ಗೋಪಿ ಇಂಥಾ ೪
ಶ್ರೀಪತಿ ಶ್ರೀನಿವಾಸನ ಪಿಡಿದು
ಗೋಪಾಲನ ಎಳತಂದೆ ನಿನ್ನೆಡೆಗೆ
ತಾ ಪರಾರಿಯಾಗಿ ಗೋಪತಿ ಹಯನೇರಿ
ಏಪರಿ ಪೋದನೊ ತಾಪತಾಳಲಾರೆ ಎಂಥಾ ೫

 

೧೨
ಎಂಥಾ ಭಾಗ್ಯವೆ ಎಂಥಾ ಪುಣ್ಯವೆ
ಕಂತುಜನಕನಾಟ ನಿಂತು ನೋಡಿ ಸುಖಿಸೇ ಗೋಪಿ ಪ.
ಎಂತು ಸಾಕಲಿಂಥ ದುಷ್ಟನ
ಎಂತನಿಂತು ಚಿಂತೆಯಾಂತು ಅ.ಪ.
ಪುಟ್ಟಿದೇಳು ದಿವಸದಲ್ಲಿ ದುಷ್ಟಪೂತನಿ ಕೊಂದ ದೇವ
ದೃಷ್ಟಿವಂತನೆ ದಿಟ್ಟ ತೃಣ ಕೇಶೀಯರ
ಪುಟ್ಟಕಾಲಲಿ ಶಕಟನಳಿದ
ಕಟ್ಟಿ ಸಕಲ ದನುಜರನ್ನು
ಕಷ್ಟ ಪಟ್ಟನೆ ಪುಟ್ಟಕೃಷ್ಣ
ದೃಷ್ಟಿ ತಾಕಿತೆ ಕೃಷ್ಣಗೆನುತ ೧
ವಿಪ್ರನು ನಿನ್ನ ಮನೆಗೆ ಬಂದು
ಕ್ಷಿಪ್ರದಿ ಪೂಜೆ ಕೃಷ್ಣೆಗೆನಲು
ಅಪ್ರಮೇಯನು ವಿಪ್ರನ ಮುಟ್ಟೆ
ಕಟ್ಟಿ ಕಂಬಕೆ ಬರಲು ನಿಂದು
ಕೃಷ್ಣಗರ್ಪಿಸೆ ನೈವೇದ್ಯವಾಗ
ಸುಪ್ರಕಾಶದಿ ತೆಗೆದುಕೊಂಡ ಕೃಷ್ಣನನು ನೀನಪ್ಪಿ ಮುದ್ದಿಸೆ೨
ಚಂದಿರನ ನೀ ತೋರು ಎನಲು
ಇಂದುವದನ ಕೇಳಲಾಗ
ಮಂದಿರದಿ ಕನ್ನಡಿಯ ತಂದು
ಮಂದಯಾನೆ ತೋರಿಸೆ ನೀನು
ಸುಂದರಾನನನಂದದಿ ಗೋವ
ಚಂದದಿಂದ ಕಾದು ಕಾಳಿಂಗನಂದದಿ ೩
ಸುರರು ಶ್ರೀ ಶ್ರೀನಿವಾಸನ
ಶಿರದಿ ಪುಷ್ಪ ಮಳೆಗೆರೆಯಲು
ನೆರೆದು ಗೋಪೇರ ಸೀರೆ ಸೆರಗ ಸೆಳೆದು
ವರಳನೆಳೆದು ಮುರಿದು ಮರವ
ಗರೆದು ಅಮೃತಸದೃಶ ವಾಣಿ
ನೆರೆದು ಗೋಪಿಯರೊಡನೆ ನಾಟ್ಯಗರೆದು
ರಾಸವಾಡೆ ರಂಗನಕರೆದೆರೆವೆ ಮಗುವೆನ್ನುವ ೪

 

೧೨೪
ಎಚ್ಚರಿಕೆ ಎಚ್ಚರಿಕೆ ಅಚ್ಚುತ ಮೆಚ್ಚನು ಎಚ್ಚರಿಕೆ ಪ.
ಇಚ್ಛಿಸದಿಹ ಸುಖ ಸ್ವಚ್ಛ ಭಕುತಿಯಲಿ ಹರಿ ಇಚ್ಚೆಯಲಿರು ಮನವೆಅ.ಪ.
ಹಗಲು ಹಸಿ ಮುಂದಿರುಳು ನಿದ್ರೆ
ಹಗೆಯಹುದೆಂದು ಬಗೆಯದೆ ನೀ
ಜಗದೊಡೆಯನು ಸಿಗ್ಯಮಿಗೆ ಧ್ಯಾನಿಸದೆ
ಅಘ ಪೋಗುವುದೆ ಮನವೆಚ್ಚರಿಕೆ ೧
ಯಾಕೆಂತು ನೀ ಪರರ ಯೊಚಿಸುವೆ ನಿನ
ಸಾಕುವನ್ಯಾರೆಂದು ಯೋಚಿಸದೆ
ಆ ಕೈವಲ್ಯಾಧಿಪನೆಂದು ತಿಳಿ ಅ
ನೇಕ ರೂಪಿಲಿಹ ಎಚ್ಚರಿಕೆ ೨
ಪರಸಖನ ಎನಗೆ ಹರಿಯೆಂದ
ತರಳನ ಸಲಹಿತು ನಾರಾಯಣ ನಾಮ
ಗರುಡಗಮನ ಶ್ರೀ ಶ್ರೀನಿವಾಸನೆ
ನಿರುತ ಮರೆಯದಿರು ಮನವೆಚ್ಚರಿಕೆ ೩

 

೧೨೫
ಎನ್ನ ಪಾಲಿಸೋ ಆಪನ್ನ ರಕ್ಷಕ ಎನ್ನ ಪಾಲಿಸೊ ಪ.
ಪನ್ನಗಾದ್ರಿನಿವಾಸ ಸಂಪನ್ನ ಶ್ರೀಶಾ ಶ್ರೀನಿವಾಸ ಅ.ಪ.
ಆದಿ ಮೂರುತಿ ವೇದ ವಂದ್ಯ
ಮೋದದಿಂದ ನಿನ್ನ ಪಾದ ನಂಬಿದೆ
ಅಗಾಧರೂಪ ನಾರಸಿಂಹ ಆದರದಿಂದ
ಮೋದ ಕೊಡುತ ಎನ್ನ ಪಾಲಿಸು ೧
ನೊಂದೆನಯ್ಯ ಈ ಭವದಿ ಸಿಲುಕಿ
ತಂದೆ ಎನ್ನ ಕಾವರಿಲ್ಲ
ಬಂಧ ಬಿಡಿಸಿ ಈ ಭವದಿಂದ ನಿನ್ನ
ಸಂದರುಶನವಿತ್ತು ಸಲಹಿ ಎನ್ನ ೨
ನಿನ್ನ ನಂಬಿದ ಭಕ್ತರ ಪೊರೆಯೆ
ಇನ್ನು ಸಂಶಯವ್ಯಾಕೊ ದೇವಾ
ಚೆನ್ನಗಿರಿಯ ವೆಂಕಟೇಶಾ
ಮನ್ನಿಸೆನ್ನ ಶ್ರೀ ಶ್ರೀನಿವಾಸ ಎನ್ನ ೩

 

ಮಣ್ಣು ತಿಂದನೆಂದ್ಹೊಡೆದರೆ
೧೩
ಎಲ್ಲರಂತಲ್ಲ ಹರಿ ಜಗದೊಳಗೆಲ್ಲ ತಿಳಿಯಬೇಡಿರೊ ಪ.
ಪುಲ್ಲಲೋಚನ ತನ್ನಲ್ಲೇ ಮನವ ನಿಲ್ಲಿಸಿದಂಥ ತಾ
ಅಲ್ಲೆ ಆಟವಾತೋರಿದ ಅ.ಪ.
ಮಣ್ಣುತಿಂದನೆಂದ್ಹೊಡೆದರೆ ಗೋಪಿ
ಕಣ್ಣು ಮುಚ್ಚುತ ಅಳುವ
ಬೆಣ್ಣೆ ಬಾಯ್ತೆರೆಯೆನೆ ಸಣ್ಣ ಮೂರ್ ಲೋಕವೆ
ಕಣ್ಣಿಗೆ ತೋರಿದ ಗೋಪಿ ತಾ ಅಗ್ರಗಣ್ಯ೧
ದುಷ್ಟತನಕೆ ಹಿರಿಯ ವರಳಿಗೆ
ಕಟ್ಟಲು ಹರಿ ಪೋಗಿ
ಥಟ್ಟೆರಡು ಮರದೊಳಿಟ್ಟು ವರಳನೆಳೆದು
ಇಷ್ಟ ಮೂರುತಿ ಕೃಷ್ಣ ಸಿಟ್ಟು ಮಾಡಿದನೇ೨
ಶ್ರೀ ಶ್ರೀನಿವಾಸನನು ತನ್ನರಿ ವಾಸುದೇವನೆಂದು
ಘಾಸಿಮಾಡಲು ಕಂಸಾನೇಕ ಖಳರ ಅಟ್ಟಿ
ಶ್ರೀಶ ಸಂಹರಿಸಿ ಯಶೋದೆಯ
ತೋಷಪಡಿಸಿದನು ೩

 

೧೨೬
ಏನನಿತ್ತಪೆ ನಿನಗೆ ಶ್ರೀನಿವಾಸ
ಶ್ರೀನಿಧಿಯು ನೀನಾಗಿರಲು ಸರ್ವೇಶ ಪ.
ಅನುದಿನದಿ ನಿನ್ನ ಪದ ಅನುವಿನಲಿ ಸ್ತುತಿಪೆನೆನೆ
ಅನುದಿನದಿ ನಿನ್ನಾದಿಶೇಷ ಸ್ತುತಿಪ
ಘನಮಹಿಮ ನಿನ್ನನರ್ಚಿಪೆನೆಂದೊಡೆ ಆ
ಘನ ಮಹಾ ಶ್ರೀದೇವಿ ನಿನ್ನರ್ಚಿಸಿ ಮೆಚ್ಚಿಸಿಹಳರಿಯೆ ೧
ಭಕ್ತಿರಸವನು ಭಕ್ತ ಪ್ರಹ್ಲಾದ ನಿನಗಿಂತಧಿಕ
ಭಕ್ತಿಯನು ಮಾಡಲರಿಯನೋ ದೇವ ದೇವ
ಯುಕ್ತಿಯಲಿ ನಿನ್ನ ಸ್ತುತಿ ಮಾಳ್ಪೆನೆಂದರೆ ನಿನ್ನ
ಭಕ್ತ ನಾರದ ಮಾಳ್ಪ ಸ್ತುತಿಗಧಿಕವೇ ಕೃಷ್ಣ ೨
ನಿನ್ನ ಪದ ಸೇವಿಪೆನೆನೆ ನಿನ್ನ ಭಕ್ತ ಹನುಮ
ಇನ್ನು ನಿನ್ನಡಿ ಬಿಡನೊ ನಿನ್ನರಿವತನಕ
ಪನ್ನಗಾದ್ರಿನಿವಾಸ ಸಂಪನ್ನ ಶ್ರೀ ಶ್ರೀನಿವಾಸ
ನಿನ್ನ ಕೃಪೆಯನೆ ತೋರೋ ಶ್ರೀ ರಮೇಶ ೩

 

೧೪
ಏನು ಸುಕೃತವ ಮಾಡಿ ಜನಿಸಿದಳೊ ಯಶೋದೆ
ದೀನಪಾಲಕ ನಿನ್ನ ಮಗನೆಂದು ಮನದಣಿಯೆ ಸೇವಿಪೆಳೊ ಪ.
ಅನುದಿನ ಜಪತಪಾನುಷ್ಠಾನದಿಂದಿರುತಾ
ನಿನ್ನ ಪಾದ ಸೇವಿಪ ಮುನಿಗಳಿಗೆ ದೊರೆಯುವ
ವನಜನಾಭನೆ ನಿನ್ನ ವನರುಹಾನನ ನೋಡಿ
ದಿನದಿನದಿ ಸುಖಿಸುವ ಘನ ಪುಣ್ಯ ಗಳಿಸಿದಳೋ ೧
ದುಷ್ಟರನು ಸಂಹರಿಸಿ ಮೈ ಎಷ್ಟು ನೋವೊ ಎಂದು
ಶ್ರೇಷ್ಠತರ ತೈಲವನೊತ್ತಿ ದಿಟ್ಟೆ ಬಿಸಿನೀರೆರೆಯುವಳೊ
ಇಷ್ಟ ಮೂರುತಿ ನಿನ್ನ ಶ್ರೇಷ್ಠತರ ಆಭರಣ
ದಿಟ್ಟ ಕೃಷ್ಣ ನಿನಗಿಟ್ಟು ನೋಡುವಳೊ ೨
ಕಸ್ತೂರಿ ತಿಲಕವನು ಶಿಸ್ತಿನಲಿ ಶೃಂಗರಿಸಿ
ಕಸ್ತೂರಿರಂಗ ಶ್ರೀ ಶ್ರೀನಿವಾಸ ನಿನ್ನೆತ್ತಿ ತೊಡೆಯಲ್ಲಿ
ಸ್ವಸ್ಥದೊಳು ಮಲಗೆಂದು ಪೊಂಬಟ್ಟಲೊಳು ಕ್ಷೀರವನು
ಹಸ್ತಿವರದನೆ ಕುಡಿಯೆಂದು ಜೋಗುಳವ ಪಾಡುವಳೊ ೩

 

೧೫
ಏಳು ಶ್ರೀನಿವಾಸ ಏಳು ಲಕ್ಷ್ಮೀರಮಣ
ಏಳು ಬೆಟ್ಟದೊಡೆಯ ಏಳು ಭಕ್ತರ ಪ್ರೀಯ
ಏಳಯ್ಯ ಬೆಳಗಾಯಿತು ಹರಿಯೇ ಪ.
ಆದಿಶೇಷನ ಮೇಲೆ ಅಪ್ರಮೇಯನು ನೀನು
ಆದರದಿ ಮಹಲಕ್ಷ್ಮಿಯೊಡನಿರಲೂ
ಕಾದು ಕೊಂಡಿದ್ದಾರೆ ಸುರರು ಸನಕ ಸನಂದನರು
ಆದರಿಸೆ ಬಾ ಬೇಗ ಬಾಗಿಲನು ತೆಗೆದು
ಆದಿಮೂರುತಿ ನಿನ್ನ ಮುಖ ದರ್ಶನವ ಮಾಡಿ
ಮೋದ ಪಡುತಲೆ ಭಕ್ತ ಕೋಟಿ ಸ್ತುತಿ ಮಾಡಲು
ಮಾಧವನೆ ಹಾಸು ಮಂಚವನಿಳಿದು ಬಾ ಕತ್ತಲೆ ಹರಿಪಾ
ದಿವಾಕರನ ತೆರದಿ ಹರಿಯೇ ಏಳಯ್ಯ ಬೆಳಗಾಯಿತು ೧
ಕಾಸಿದ್ಹಾಲನೆ ತಂದು ಕಾವಡಿಯಲಿ ತುಂಬಿ
ಲೇಸಾಗಿ ನಿನ್ನ ಭಕ್ತರು ನಿಂತಿದಾರೆ
ವಾಸುದೇವನೆ ನಿನಗೆ ಮಲ್ಲಿಗೆ ಕುಸುಮ
ಭಾಸುರಾಂಗನೆ ತಂದು ಅರ್ಪಿಸಲು ಭಕ್ತರು
ಏಸು ಹೊತ್ತಿನಿಂದ ತುಳಸೀ ದಳ ತಂದು
ವಾಸುಕೀಶಯನಗೆಂದು ಭೂಸುರರು ನಿಂದಾರೆ
ವೇದ ಘೋಷದಿಂದ ಈಸು ನುಡಿಗಳು ನಿನ್ನ
ಕರ್ಣಕೇಳಲಿಲ್ಲವೆ ಏಸು ಮೆಚ್ಚಿಸಿಹಳೋ ಲಕ್ಷ್ಮೀ
ನಿನ್ನ ಸರಸದೊಳು ವಾಸುಕೀಶಯನ
ಹಾಸಿಗೆಯಿಂದೇಳೋ ದೊರೆಯೆ ಏಳಯ್ಯ ಬೆಳಗಾಯಿತು೨
ಕರುಣಾಸಾಗರ ನಿನಗೆ ಕರುಣೆ ಬರುವಾತೆರ
ಪರಿಪರಿಯ ಸ್ತೋತ್ರದೊಳು ನಾರಿಯೇರು
ಕರೆವರೋ ಕರಗತ ಕಾಮಧೇನು ನೀನೆಂದು
ಕರದೊಳಾರತಿಯ ಪಿಡಿದೂ
ತರತರದ ಉಡಿಗೆ ತೊಡಿಗೆ ನಿನಗೀಯಲು
ಸರಸರನೆ ದೇಶದೇಶದಿ ಬಂದು ನಿಂತಿದ್ದಾರೆ
ವರದ ಮೂರುತಿ ಕೈಯೊಳೆ ಶರಧಿ ಗಂಭೀರನೆ
ವರ ಶ್ರೀ ಶ್ರೀನಿವಾಸನೆ ಕರುಣೆ ತೋರುತ್ತ ನಿನ್ನ ಭಕ್ತರ ಮೇಲೆ
ವರ ನಾರಿಯರ ನಾಟ್ಯ ವೈಭವದಿ ವರದುಂದುಭಿ ವಾದ್ಯದಲಿ
ವರ ತಾಳ ಮೇಳದಿಂ ವರ ಶೇಷಾದ್ರಿವಾಸ ವೆಂಕಟೇಶನೆ
ಏಳಯ್ಯ ಬೆಳಗಾಯಿತು ೩

 

೧೬
ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ
ಒಂದೇ ಮನಸಿನಲಿ ತಂದೆ ನಾರಾಯಣನ ನೆನೆದ ಕಂದನ
ಸಲಹಿದ ನರಹರಿ
ಒಂದೇ ಮನದಂಬರೀಷನ ಕಾಯ್ದ ಹರಿ
ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ
ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ
ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು
ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ
ಶ್ರೀ ಶ್ರೀನಿವಾಸನ ನಿತ್ಯ ನೆನಯಿರಿ ಹರಿ ಭಕ್ತರು ೧
ನಾಲ್ಕು ವೇದದ ಸಾರ ನಾಲ್ಕು ಯುಗದಾಧಾರ
ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ
ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ
ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ
ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ
ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ
ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು
ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ
ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ
ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ
ಹರಿ ಭಕ್ತರೆ ಕೇಳಿ೨
ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ
ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ
ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ
ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು
ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ
ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ
ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ
ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ
ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು ೩
ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ
ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು
ತಾನೇ ನುಡಿಸಿದನಿಂದು
ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು
ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು
ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು
ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ
ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ
ಹರಿಯದೆಂದು ನುಡಿವುದು ಹರಿಭಗವದ್ಭಕ್ತರು ೪
ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು
ವರವ ತೋರಿ ಪಾಮರರ ಪುನೀತರನು ಮಾಡೆ ಹರಿ
ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ
ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ
ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು
ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ ೫
ಜತೆ
ಶರಣು ಭಕ್ತರ ಪಾಲ ಶರಣು ಶ್ರೀಲೋಲಾ
ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ

 

ಒಡೆದು ಬಂದೆಯಾ ಗೋಪಿ ಚಂದನದಿಂದ
೧೭
ಒಡೆದು ಬಂದೆಯ ಗೋಪಿ ಚಂದನದಿಂದ ಎ
ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ.
ಮೃಡಸಖ ನಿನ್ನಯ ರೂಹವ ತೋರೆ
ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ.
ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು
ಮಜ್ಜಿಗೆ ಕಡಗೋಲು ನೇಣು ಸಹ
ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ
ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ ೧
ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ
ಇಟ್ಟು ಕೌಸ್ತುಭಹಾರ ತುಳಸಿಮಾಲಾ
ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ
ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ ೨
ಮಕರಕುಂಡಲ ಕಿರೀಟ ಶೋಭಿಸುತಲಿ
ಅಕಳಂಕ ಚರಿತ ಶ್ರೀ ಶ್ರೀನಿವಾಸ
ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ
ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ ೩

 

೧೮
ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ.
ನೋಡಿ ನಿನ್ನ ಮುತ್ತನೀಡುವೆ
ಹಾಡಿ ಜೋಗುಳವ ಪಾಡುವೆ ಅ.ಪ.
ಮೊಸರು ಭಾಂಡ ಒಡೆದು ಬೆಣ್ಣೆ
ಹಸುಳೆ ಮೆದ್ದು ಬಾಯೆಲ್ಲಾ
ರಸಿಕಸಿಯಾಗಿರುವ ಮೈಗೆ
ಬಿಸಿ ನೀರೆರೆವೆನೊ ರಂಗ ೧
ಹೊಸ ಬೆಣ್ಣೆ ಕಾಸಿದ ತುಪ್ಪ
ಬಿಸಿ ದೋಸೆಯ ಕೊಡುವೆನೆ
ಮೊಸರೋಗರವ ಉಣಿಸಿ ನಿನಗೆ
ಹಸುರಂಗಿಯ ತೊಡಿಸುವೆ ಕೃಷ್ಣಾ ೨
ಮುದ್ದು ಮುದ್ದಾದ ಪಾದ
ಹೆಜ್ಜೆನಿಟ್ಟು ಬಾರೆಲೊ
ಮುದ್ದೆ ಬೆಣ್ಣೆ ಹಣ್ಣು ಕೊಟ್ಟು
ಮುದ್ರೆಯುಂಗುರವನಿಟ್ಟು ನೋಡುವೆ ೩
ಅಣ್ಣ ಬಲರಾಮನೊಡನೆ
ಚಿಣ್ಣ ಆಡಬಾರೆಲೊ
ಚಿಣ್ಣಿಕೋಲು ಚಂಡು ಬುಗುರಿ
ಚಿಣ್ಣ ಕೊಡುವೆನೋ ಕೃಷ್ಣಾ ೪
ಶೃಂಗಾರವ ಮಾಡುವ ಶ್ರೀ
ಶ್ರೀನಿವಾಸ ಬಾರೆಲೊ ಮುದ್ದು
ಕಂಗಳಿಗೆ ಕಪ್ಪನ್ಹಚ್ಚಿ
ರಂಗ ನಿನ್ನ ನೋಡುವೆದಣಿಯ ೫

 

೧೯
ಕಂಡಿರೆ ಶ್ರೀ ಕೃಷ್ಣನ ಪ.
ಪುಂಡರಿಕಾಕ್ಷ ಪುರುಷೋತ್ತಮನ
ಅಂಡಜವಾಹನ ಅಸುರಾಂತಕನ ಅ.ಪ.
ಅರುಣ ಕಿರಣ ಸೋಲಿಪ ಚರಣ
ವರ ಗೆಜ್ಜೆಯ ಧರಿಶಿಹನ
ಕಿರುನಗೆಯಿಂದಲಿ ಬೆರಳಲಿ ಮುರಳಿಯ
ಸ್ವರ ಊದಿದ ಮುರಹರನ ೧
ಕೋಟಿ ಸೂರ್ಯ ಕಿರೀಟ ಧರಿಸಿ
ಹಾಟಕಾಂಬರಧರ ನಮ್ಮ
ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ
ನೋಟದಿ ಮನ ಸೆಳೆಯುವನ೨
ಅಂಗಿಯ ತೊಡಿಸಿ ಉಂಗುರವಿಟ್ಟು
ಅಂಗಳದೊಳು ಬಿಟ್ಟೆನಮ್ಮ
ರಂಗ ಶ್ರೀ ಶ್ರೀನಿವಾಸನ ಕಾಣೆ ನಿ
ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ ೩

 

೨೦
ಕಡೆಗೋಲ ತಾರೆನ್ನ ಚಿನ್ನವೆ ಮೊಸ
ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ಪ.
ಅಣ್ಣ ಬಲರಾಮನು ಚಿಣ್ಣರ ಸಹಿತಾಗಿ
ಬೆಣ್ಣೆ ಹಣ್ಣನು ಮೆಲುವಿಯಂತೆ
ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ
ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ ೧
ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ
ಹೊಸಪರಿಯಾಭರಣಗಳನಿಡುವೆ
ಹಸನಾದ ಹಸುವಿನ ತುಪ್ಪದ ದೋಸೆಯ
ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ ೨
ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ
ಕಡೆಹಾಯಿಸೊ ಕಡೆಗೋಲನಿತ್ತು ಎನ್ನ
ವಡನೆ ಪಿಡಿದು ಗೋಪಿ ಕಡುಮುದ್ದು ರಂಗನ
ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ ೩

 

೧೪೮
ಕನ್ನಡಿಯ ಪೋಲುವೊ ಚೆನ್ನ ಕೆನ್ನೆಯ ತೋರು ಪ.
ಚನ್ನ ಚೆಲುವೆ ಬಣ್ಣದರಿಶಿಣವ ಪೂಸುವೆನು
ರನ್ನದ ಲಲಾಟಕೆ ಚನ್ನ ಕುಂಕುಮ ತಿಲಕ
ಚಿನ್ನದಾ ಬೊಂಬೆ ಪದ್ಮಾವತಿ ನಿನಗೆ ತಿದ್ದುವೆನೆ
ಚನ್ನಕೇಶವರಾಯ ನಿನ್ನ ಚೆಲುವಿಕೆಗೆ ಮೆಚ್ಚಿ ಬಂದಿಹೆನೆ ೧
ಅರವಿಂದದಳನಯನೆ ಅಡವಿಯಲಿ ಯನ ಮೇಲೆ
ಅರಸಿ ನೀ ಕಲ್ಲುಗಳ ಬೀಸಿದಾ ಕರಕೆ ಗಂಧ
ಸರಸದಲಿ ಹಚ್ಚುವೆನೆ ಸರಸಿಜಾಕ್ಷಿಯೆ ಕೊರಳ
ಹರುಷದಲಿ ತೋರೀಗ ನಿನ್ನ ಸರಸಿಜಾಕ್ಷಗೆ ಅರಸಿ ಪದ್ಮಿನಿಯೆ ೨
ಸರ್ಪವೇಣಿಯೆ ನಿನಗೆ ಕಂದರ್ಪಪಿತ ಮಲ್ಲಿಕಾ ಪುಷ್ಪ
ದಂಡೆಯನು ಮುಡಿಸುವೆನು ಕಮಲನಯನೆ
ಸರ್ಪಶಯನನು ನಿನಗೆ ಅರ್ಪಿಸುವೆ ಸುತಾಂಬೂಲ
ದರ್ಪವನು ಬಿಟ್ಟು ಕೈಕೊಳ್ಳೆ ವೀಳ್ಯವ ಅರಸಿ
ಸರ್ವರಿಗೆ ಅಪ್ಪ ಶ್ರೀ ಶ್ರೀನಿವಾಸಾನೆಂದು ತಿಳಿಯೆ ದೇವಿ ೩

 

೧೦೨
ಸರಸ್ವತಿದೇವಿ
ಕಮಲಜಭವ ರಾಣಿ ಫಣಿ ವೇಣಿ
ನಮಿಪೆ ನಿನ್ನ ಮನಶುಕವಾಣಿ
ಸುಮನಸರೊಡೆಯನ ಗಮನದೊಳಿಡುತೆ
ಪವನ ಮತದಲಿಡು ತಾಯೆ ಕಾಯೆ ಪ.
ವಾಣಿ ಬ್ರಹ್ಮನ ರಾಣಿಯೆನೀ
ಗಾಣಿಸು ಮನದಿ ಸುವಾಣಿಯನು
ಮಾಣದೆ ಜಪಸರ ಕಲ್ಯಾಣಿಯು ನೀನು
ಪ್ರಾಣದೇವನ ಸತಿ ಜಾಣೆ ಭಾರತಿಯೆ ೧
ವಾರಿಜಭವ ಸತಿಮತಿ ತೋರುತ ಮನದಿ
ನೀರೆ ಎನ್ನ ಮನ ಸೂರೆಗೊಳುತಲಿ
ಸಾರುತ ಹರಿನಾಮಾಮೃತವನು ಕೊಡು
ಮಾರಮಣ ಸ್ತುತಿ ಮಾಡಿಸುತ ೨
ಅಸುರ ಮರ್ದನ ಹರಿ ನಿನವಶದಲ್ಲಿಹನೆ
ಸುಸ್ವರದ ಮಧುರದಿ ಪಾಡುತಲಿರುವೆ
ವಶವಲ್ಲದಲಾನಂದದಿಂದ ಶ್ರೀ ಶ್ರೀನಿವಾಸನ
ಕುಸುಮಶರನಪಿತನ್ವಶದಲಿ ನಿಲಿಸೆ ೩

 

೨೧
ಕಮಲನಾಭ ಕ್ಷಮೆಯಳೆದ ಪಾದ
ರಮೆಯರಸನೆ ರಮ್ಯ ಚರಿತ
ವಿಮಲ ಕಮಲ ಪಾದವ ತೋರೋ ಅ.ಪ.
ಕೋಟಿ ಸೂರ್ಯ ತೇಜ ಪೊಳೆವ ಶೇಷಶಯನ ತಲ್ಪದಿ
ಹಾಟಕಾಂಬರಧರ ಕಿರೀಟ ಮಾಲ ಶೋಭ ಕೃಷ್ಣನೆ
ಸಾಟಿಯಿಲ್ಲದ ಕರದಿ ಲಕುಮಿ ಧಾಟಿಯಿಂದ ವೊತ್ತುವ ಪಾದ
ಸಾಟಿಯಿಲ್ಲದೆ ನಿನ್ನ ಭಕ್ತರ ಪೊರೆವ ದೇವ ನಿನ್ನ ಪಾದವು ೧
ದುಷ್ಟರನ್ನು ಮೆಟ್ಟಿ ತುಳಿದ ದಿಟ್ಟ ಕೃಷ್ಣನ ಪಾದವು
ಮೆಟ್ಟಿ ಕಾಳಿಂಗನ ಹೆಡೆಯ ದಿಟ್ಟ ರಂಗನ ಪಾದವು
ಕಟ್ಟಿದ ವರಳನೆಳೆದು ಮತ್ತಿ ಮರವ ಮುರಿದ ಪಾದವು
ಕೊಟ್ಟ ಅಭಯ ಭಕ್ತರ ಪೊರೆವಡಿಟ್ಟ ಪಾದವು ೨
ಮತ್ಸ್ಯ ಕೂರ್ಮ ವರಹ ನರಹರಿ ಅಚ್ಚವಾಮನ ಪಾದವು
ಸಯಿಚ್ಚೆ ಪರಶುಧರ ಶ್ರೀರಾಮ ಕೃಷ್ಣ ನಿನ್ನ ಪಾದವು
ಅಚ್ಚವರವನಳಿದು ತೇಜ ಹತ್ತಿ ಮೆರೆವ ಪಾದವು
ಅಚ್ಚುತ ಶ್ರೀ ಶ್ರೀನಿವಾಸ ಕೃಷ್ಣ ನಿನ್ನ ಪಾದವು ೩

 

ಆನೆಯ ತಲೆಯನ್ನು ಹೊಂದಿ

ಗಣೇಶ ಪ್ರಾರ್ಥನೆ
ಕರಿವರದನೆ ನಿನ್ನ ವರಗಳ ಬೇಡುವೆ
ವರ ಮತಿ ಪಾಲಿಸೆನ್ನ ಕಾಪಾಡು ಪ.
ಅಂಬಾಸುತ ನಿನ್ನ ನಂಬಿದವರಿಗಿನ್ನು
ಸಂಭ್ರಮ ದೊರಕದಿಹುದೆ
ನಂಬಿದೆ ನಿನ್ನ ಪಾದ ಶ್ವೇತಾಂಬರೆ ಮೊಮ್ಮಗನೆ
ಕಂಬುಕಂಠಸುತನೆ ಸಂಭ್ರಮದಲಿ ಬಾ ೧
ಕಾಲ್ಗೆಜ್ಜೆ ಪೈಝಣ ಘಲ್ಲುಘಿಲ್ಲೆನುತಲಿ
ನಿಷ್ಕಾಮದನೆ ಬಾ ನಗುತ
ಪ್ರೇಮದ ಪಾರ್ವತಿ ಸುತ ನೀನಲ್ಲವೆ
ಕಾಮಿಸಿ ನಿನ ಪದ ಭ್ರಮಿಸಿ ಪ್ರಾರ್ಧಿಸುವೆ ೨
ಕಾಯಿಸಿ ಹಾಲುತುಪ್ಪ ಸಕ್ಕರೆಯೀವೆನೊ
ಮೂಷಕವಾಹನನೆ
ಸೋಸಿಲಿ ಚಿಗುಳಿ ತಂಬಿಟ್ಟು ತೆಂಗಿನಕಾಯಿ
ಶ್ರೀಶ ಶ್ರೀಶ್ರೀನಿವಾಸ ಭಕ್ತನಿಗರ್ಪಿಸುವೆ ೩

 

೯೫
ಕರುಣ ಪಡೆಯಬೇಕು ಮನುಜ ಗುರುಗಳಾ ಪ.
ಕರುಣ ಪಡೆಯಿರೊ ಗುರು ಮಧ್ವರಾಯರ
ಹರುಷದಿ ಹರಿಯನು ನಿರುತದಿ ಸ್ಮರಿಸುವ ಗುರು ಅ.ಪ.
ಸ್ಮರಿಸಿದ ಮಾತ್ರದಿ ಶರಧಿಯ ದಾಟುತ
ವರಪ್ರದ ರಾಮನ ತರುಣಿಗುಂಗುರವಿತ್ತು
ಹರಿ ಕರುಣಾಮೃತವೆರಡು ರಾಮರ
ಚರಣ ಸ್ಮರಣೆಯನು ನಿರುತ ಕೊಡುವ ಗುರು ೧
ಕಂತುಜನಕನ ಅಂತರವರಿತು
ನಿಂತು ಕೌರವ ಕುಲ ಸವರುತಲೆ
ಅಂತಕಗಿತ್ತಾ ಕಾಂತೆ ದ್ರೌಪದಿಯ
ಪಂಥವ ಸಲಿಶಿದ ಕುಂತಿತನುಜ ಗುರು ೨
ಮಧ್ವ ಮುನಿಗಳಾಧ್ವರ ಪಾಲಕ
ಮುದ್ದು ಕೃಷ್ಣನ ಹೃದ್ಗಮಲದೊಳಿಟ್ಟ
ಅದ್ವೈತಿಗಳ ಸುವಾದಿಸಿ ಗೆದ್ದು
ಶುದ್ಧ ಶ್ರೀ ಶ್ರೀನಿವಾಸನ ಭಕ್ತರ ಗುರು ೩

 

೧೦೯
ಪಾರ್ವತಿದೇವಿ
ಕರುಣದಿ ಕಾಯೆ ತಾಯೆ ಕರುಣಾಭರಣೆ ವಿಶ್ವಂಭರಣೆ ಪ.
ಕರುಣಿಸಿ ಕಾಯೆ ತಾಯೆ ಮರೆಯದೆ ನಿನ್ನಯ
ಚರಣಸ್ಮರಣೆಯಿತ್ತು ಭರದಿ ಕಾಪಾಡೆ ಅ.ಪ.
ಅಂಬಾ ಲೋಕೇಶ್ವರಿ ಅಂಬಿಕೆ ನಿನಪಾದ
ನಂಬಿದವರಿಗೆ ಕಷ್ಟಗಳುಂಟೆ ತಾಯೆ ನಿನ್ನ
ಕಂಬುಕಂಠನರಾಣಿ ಬೆಂಬಿಡದಲೆ ಕಾಯೆ
ಸಂಭ್ರಮದಲಿ ನಿನ್ನ ಇಂಬ ತೋರಿಸುತ ೧
ಅಖಿಳಾಂಡನಾಯಕಿ ಸುಖಪ್ರದಾಯಕಿ
ಸಖ ಶಂಕರನೊಳು ಸುಖಿಪ ಕಲ್ಯಾಣಿ
ಅಕಳಂಕ ಮಹಿಮಳೆ ಸಕಲಕಾಲದಿ ನಿನ್ನ
ಭಕುತಿಯೊಳ್ ಪೂಜಿಪ ಸಖರೊಳಗಿರಿಸೆ ೨
ಭಕ್ತ ಮಂದಾರೆ ಭಕ್ತಿ ಮುಕ್ತಿಯನೀಯೆ
ಭಕ್ತವತ್ಸಲ ಶ್ರೀ ಶ್ರೀನಿವಾಸ ಸಹೋದರಿ ಕಾಯೆ
ಭುಕ್ತಿಗೋಸುಗ ನಿನ್ನ ಸ್ಮರಣೆ ನಾನೊಲ್ಲೆನೆ
ಶಕ್ತಿ ಸ್ವರೂಪಿಣಿ ಶಂಕರಿ ಶುಭಕರಿ ೩

 

೨೨
ಕರುಣಾನಿಧಿ ನೀ ಶ್ರೀರಾಮ ನಿನ್ನ
ಚರಣ ಸೇವಿಪರಾನತ ಪ್ರೇಮ ಪ.
ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ
ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ.
ಆಶ್ರಿತ ಜನರಿಗೆ ನೀನಲ್ಲದೆ ನಿ
ನ್ನಾಶ್ರಯಗೊಡದಿರೆ ಗತಿ ಕಾಣೆ
ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ
ಜಗತ್ರಯ ಸಲಹೊ ಕೋದಂಡಪಾಣಿ ೧
ಭವಭಯಭಂಜನ ಶ್ರೀರಾಮ ಎನ್ನ
ಭಯವ ಬಿಡಿಸೊ ಜಾನಕಿ ರಾಮ
ಕವಿಗೇಯ ನೀನೆ ಜಗದಭಿರಾಮ ಎನಗೆ
ಜವನ ಬಾಧೆಯ ಬಿಡಿಸೊ ರಘುರಾಮ ೨
ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ
ಬಂದ ಕಷ್ಟದಿ ಸಲಹುವ ನೀನೆ
ಮುಂದೋರಿ ಸಲಹೋ ತಾಯಿ ಗುರು ನೀನೆ
ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ ೩

 

೧೧೦
ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ.
ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ
ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ.
ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ
ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ
ಅಷ್ಟ ಅಪರಾದಗಳ ಎಣಿಸದಲೆ ನಿನ ಪಾದ ಎನ್ನ
ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ ೧
ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ
ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ
ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ
ಸ್ವಜನರೊಡನೆ ನಿನ ಪಾದ ಭಜಿಪ ಭಾಗ್ಯವ ನೀಡೆ ೨
ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ
ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ
ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ
ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು ೩

 

೧೧೧
ಕರುಣಿಸಮ್ಮಾ ಶಂಕರಿ ಮಾತೆ
ಕರುಣಾವಾರಿಧೆ ಶಂಕರನರಸಿ ಪ.
ಫಾಲನೇತ್ರನ ತೊಡೆಯನೇರಿ
ಲೀಲೆಯಿಂದ ಮೆರೆವೊ ದೇವಿ
ಪಾಲಿಸಮ್ಮ ನಿಮ್ಮ ಮುಡಿಯ
ಪಾರಿಜಾತವನ್ನು ಅಂಬಾ ೧
ಜರಿಯ ಪೀತಾಂಬರವ ಧರಿಸಿ
ವರ ರತುನದ ಕಂಚುಕ ತೊಟ್ಟು
ಸರಿಗೆ ಸರ ನಾಗಮುರಿಗೆನಿಟ್ಟು
ಕರದಿ ಕಂಕಣ ಧರಿಸಿ ಅಂಬಾ ೨
ಮರುಗ ಮಲ್ಲಿಗೆ ಸುರಗಿ ಸಂಪಿಗೆ
ವರ ಪಾದರಿ ಪಾಟಲಿ ಪುನ್ನಾಗೆ
ವರದ ಶ್ರೀ ಶ್ರೀನಿವಾಸ ಸೋದರಿ
ಹರುಷ ಬೆರೆಸಿ ವರವ ಅಂಬಾ ೩

 

೧೨೭
ಕರುಣಿಸು ಕಮಲೇಶ ಸರ್ವೇಶ
ಕರುಣಿಸು ಕಮಲೇಶ ಪ.
ಶರಣಾಗತ ರಕ್ಷಕ ವೆಂಕಟೇಶ
ನಿರುತದಿ ಪ್ರಾರ್ಥಿಪೆ ಲಕ್ಷ್ಮೀಶ ಅ.ಪ.
ವೇದ ಶಾಸ್ತ್ರ ಪುರಾಣವನರಿಯೆ
ಆದಿ ಮೂರುತಿ ಪ್ರಹ್ಲಾದವರದನೆ
ಆದರದಲಿ ನಿನ್ನ ಸ್ತುತಿಸುವೆ ದೇವ
ಮೋದದಿಂದಲಿ ಕಾಯೋ ಪಾದಸೇವಕರಾ ೧
ಜಪವ ನಾನರಿಯೆ ತಪವ ನಾನರಿಯೆ
ಉಪವಾಸ ವ್ರತಮೊದಲರಿಯೆ ದೇವಾ
ಅಪರಿಮಿತ ಪಾಪ ಗಳಿಶಿಹೆನೋ
ಸುಪವಿತ್ರನನು ಮಾಡೊ ಅಪಾರ ಮಹಿಮಾ ೨
ನಿನ್ನ ನಂಬಿಹೆನೊ ಅನ್ಯರನರಿಯೆನೊ
ಎನ್ನಪರಾಧವ ಮನ್ನಿಸೊ ದೊರೆಯೆ
ಚೆನ್ನಿಗ ಶ್ರೀ ಶ್ರೀನಿವಾಸನ ಸ್ತುತಿಪೆನೊ
ಇನ್ನು ಸಂಶಯವ್ಯಾಕೊ ಪನ್ನಗಾದ್ರಿವಾಸ ೩

 

೧೧೨
ಕರುಣಿಸು ವರಗೌರಿ ಭರದಿಂದ ವರವನ್ನೂ
ಶರಣಾಪ್ತ ಬೇಡುವೆ ನಿನ್ನಾ ಪ.
ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ
ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ ೧
ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ
ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ೨
ಶ್ರೀಶ ಶ್ರೀ ಶ್ರೀನಿವಾಸನ ಪಾದ ಸೋಸಿಲಿ ಭಜಿಪೆ
ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ ೩

 


ಕರುಣೆ ತೋರಿಸೊ ದೇವಾ ಕರಿವರದನೆ ಪ.
ಕರುಣ ತೋರಿಸೊ ದೇವ ಗರುಡಗಮನ ನಿನ್ನ
ಚರಣ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ.
ವೇದಾಂತ ವೇದ್ಯ ನೀನೆ ಆದಿನಾರಾಯಣ
ಸಾಧುವಂದಿತನು ನೀನೆ ದೇವೇಶನೆ
ವೇದವ್ಯಾಸನು ನೀನೆ ಬಾದರಾಯಣ ನೀನೆ
ಬಾಧೆ ಕೊಡುವ ಭವ ಭಯಹರ ನೀನೆ ೧
ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ
ಅಂತಕ ದೂತರಿಂದೆಳೆಸುವ ನೀನೆ ಸರ್ವ
ಅಂತರ್ಯಾಮಿ ಅಂತರಂಗದಿ ನಿಂತು ಪ್ರೇರಿಸಿ ನಿನ ಪಾದ
ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ೨
ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ
ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ
ಸಾನುರಾಗದಿ ಅಜಮಿಳನಿಗೆ ಮುಕ್ತಿಯ
ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ
ಗಾನಲೋಲನೆ ಭಕ್ತರ ಸಲಹುವೆನೆಂಬುವ
ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ ೩

 

೮೨
ಲಕ್ಷ್ಮೀ ದೇವಿ
ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ.
ತನ್ನ ಕರವ ಪಿಡಿವನೆಂದು ಅ.ಪ.
ವಿಪ್ರನ್ನ ಕಳುಹಿರುವೆನು
ಕ್ಷಿಪ್ರದೊಳು ಗುಡಿಯೊಳಿಹೆನು
ಅಪ್ರಮೇಯ ನಿನ್ನಡಿಗಳನ್ನು
ಸುಪ್ರಕಾಶ ನಂಬಿರುವೆನೆಂದು ೧
ಶಿಶುಪಾಲನೊಲ್ಲೆನೆಂದು
ವಸುಧೀಶ ನೀನೆ ಗತಿಯೆಂದು
ಹಸುಳೇಯ ಸಲಹು ಎಂದು
ಬೆಸಸಿಹೆನು ಪತ್ರವೆಂದು ೨
ರಥವೇರಿ ಬರುತಲಿಹನೊ
ಪಥದೊಳು ಕಾದಿರುವನೊ
ರತಿಪತೀ ಪಿತನ ಪದವ
ಅತಿಶಯದಲಿ ಕಾಣುವ ತವಕದಿ ೩
ಶಂಕಾತುರಂಗಳಿಂದ
ಶಂಕರೀಯಪೂಜೆಗೈದು
ಕಿಂಕಿಣಿಯ ನಾದದಿಂದ
ಶಂಕರಾದಿವಂದ್ಯ ಬರುವ ಪಥದಿ ಬಂದು ೪
ಬಂದಾನೋ ಬಾರನೋ ಎನುತಾ
ಇಂದಿರೆಯ ಅರಸನ್ಹೊರತು
ಪೊಂದಲಾರೆನನ್ಯರನೆನುತ
ಸುಂದರೀಮಣಿ ಕೃಷ್ಣನಾಗಮ ನೋಡುತ ೫
ದ್ವಾರಕಿಯಾ ನಾಥ ಬಂದು
ಪಾರುಗಾಣಿಸುವನೆಂದು
ಚಾರುಕರದೊಳೆತ್ತಿ ಎನ್ನ
ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು ೬

 

೧೩೩
ಲೋಕನೀತಿ

ಕಾಮಧೇನು ಕಲ್ಪತರು ಕಾಮಿತಾರ್ಥವನೀವ ಹರಿಯೇ ಎನಗಿರೆ
ಎನಗ್ಯಾತಕೆ ಚಿಂತೆ
ಕಾಮಿತಾರ್ಥವನೀವ ದೊರೆಯಿರಲು ಯನಗ್ಯಾತರ ಕೊರೆತೆ
ಹರಿಕಾವದೇವ ನೀನಿರಲು
ಕೋಳಿ ತನ್ನ ಮರಿಗೆ ಹಾಲುಕೊಟ್ಟು ಸಾಕುವದೆ
ಕಾಳ ರಾತ್ರಿಯು ಕಳೆದು ಹರಿ ಉದಿಸುವನೆಂದು
ಕೋಳಿಕೂಗಿದರೂ ಏಳದೆ ಮಲಗಿ ಕಾಲಕಳೆವರು ಮನುಜರುಹರಿಯೆ
ಕಾಲಕೂಟ ಸಮ ಕಾಮಿತಾರ್ಥವ ಬೇಡುವರು
ಕಾಲದೂತರು ಬರುವ ವ್ಯಾಳೆತನಕ ನಿನಧ್ಯಾನಿಸದೆ
ಕಾಲಕಳೆವರು ಮನುಜರು ಕಾಲಮೂರುತಿ ನೀನೆ ಎಂದರಿಯರು ಹರಿ
ಕಾಲ ಅಕಾಲ ನಿನಗುಂಟೆ ಎನಗುಂಟೆ ದೇವ ನೀ ಎನಗೆ ಇಂಥಾ
ಕೀಳು ಬುದ್ಧಿಯ ಕೊಡದಿರೊ, ಏಳು ಬೆಟ್ಟದ ಒಡೆಯ ಶ್ರೀ ಶ್ರೀನಿವಾಸ ೨
ಬೆಳಗೆದ್ದು ಹರಿ ನಿನ್ನ ಧ್ಯಾನಿಸದೆ ಪರಧ್ಯಾನ ಪರನಿಂದೆಯಲ್ಲಿಹರು
ಈ ಜಗದಿ ಪರಿಪರಿಯ ಬವಣೆಗೊಳಗಾಗುವರು ನಿತ್ಯ ನಿನ್ನ
ಧ್ಯಾನ ಬಿಟ್ಟು ಬೆಳಗಾಗೆ ನಿನ್ನ ಸೂರ್ಯರಶ್ಮಿ ಬಿದ್ದರೂ
ಏಳರು ಶಯನ ಬಿಟ್ಟು ಈ ಜಗದಿ
ದೇವ ಈ ಕಲಿ ಜನರು ಇಂಥಾ ಬೆಳಗ ಎನಗೀಯದೆ
ನೀ ಎನ್ನೊಳಗಿದ್ದು ಬೆಳಗಿನ ಜಾವದಿ ನಿನ್ನ ಕಳೆಕಳೆರೂಪ
ಎನಗೆ ತೋರೋ ಘಳಿರನೆ ಶ್ರೀ ಶ್ರೀನಿವಾಸ ೩
ಎರಡನೆ ಜಾವದಲಿ ಹುಂಜ ಹರಿಪೂರ್ವದಲಿ ಬರುವ
ಏಳಿರೆಂದು ಕೂಗಲು
ಎರಗಿ ಸತಿ ಸಹಿತ ಕಾಮಕೇಳಿಯಲಿಹರು
ಮೂರನೆ ಝಾವದಲಿ ಹರಿ ಉದಿಸಿ ಬ್ರಾಹ್ಮೀಮುಹೂರ್ತದೊಳು
ಹರಿ ಬೆಳಕೀವ ಲೋಕಕೆ ಎಂದು ಕೂಗುವುದು ಕೋಳಿ
ಕೇಳಿ ಕರ್ಣದಲಿ ಶಯನ ಬಿಟ್ಟೇಳರೊ ಈ ಜಗದಿ
ಮೂರೆರಡು ಶತಶ್ವಾಸ ಜಪ ಮಾಡಿಸುವ ಹರಿಭಕ್ತ
ಹನುಮನೆಂದರಿಯದೆ ಮಲಗಿ
ಕಾಲ ಎರಗಿ ಬರುವುದು ಆಯುಷ್ಯವೆಂದರಿಯದೆ
ಭಾರತೀಪತಿ ಅಂತರ್ಯಾಮಿ ನಿನ್ನಧ್ಯಾನಿಸದೆ ಇಹರಲ್ಲೋ ಈ ಜಗದಿ
ಶ್ರೀ ಶ್ರೀನಿವಾಸ ಎನ್ನ ನೀನವರ ಸಂಗ ಸೇರಿಸದೆ ಕಾಯೊ
ಹರಿಯೆ ಎನ್ನ ದೊರೆಯೆ ೪
ಸೂರ್ಯನಂತರ್ಯಾಮಿ ನೀನಲದೆ ಮತ್ಯಾರಿಹರು ಹರಿ
ಸೂರ್ಯಾಂತರ್ಗತ ಸೂರ್ಯನಾರಾಯಣ ಸೂರ್ಯಕೋಟಿ
ತೇಜದಿ ಮೆರೆವೆ
ಪ್ರತಿ ಸೂರ್ಯ ಸಹಸ್ರ ಉದಿಸಿದಂತೆ ಬರುವೆ
ಭಕ್ತರ ಮನದಿ ನಿಂದು ಸಕಲ ಕರ್ಮ ನೀ ಮಾಡಿಸಿ
ಪೆರ್ಮೆಯಿಂದವರ ಕಾಯ್ವ ಶರ್ವಾದಿವಂದಿತ ಗರ್ವರಹಿತ
ವೈಕುಂಠಪತಿ ನೀ ನಿನ್ನವರ ಕಾಯಲು ಸರ್ವದಾ ಅವರಿಗೆ
ವಲಿದು ಕಾವೆ ಆದಿನಾರಾಯಣ ಶ್ರೀ ಶ್ರೀನಿವಾಸ ಕಾಯೆನ್ನ
ಸೂರ್ಯಾಂತರ್ಗತ ವೆಂಕಟೇಶಾ ೫
ಹಗಲಿರುಳು ಎನ್ನದೆ ನಿನ್ನ ಸ್ತುತಿಪರು ಭಕ್ತರು
ಅಘಹರನೆ ನಿನ್ನ ಪ್ರೇರಣೆಯಿಂದಲವರಿರಲು
ಬಗೆಬಗೆಯ ರೂಪದಿ ಬಂದವರ ಸಲಹುವೆ
ನಗೆ ಮೊಗದ ಶ್ರೀ ರಮೆಯರಸ ಲಕ್ಷ್ಮೀಶ
ನಿನ್ನ ಬಗೆ ಅರಿತಿಹರಾರಿರೀಜಗದಿ
ಪಗಲಿರುಳೆನ್ನದೆ ನೀನವರಲ್ಲಿದ್ದು ಸಲಹಲು
ಬಗೆವರೆ ಅನ್ಯರಿಗೆ ಅಲ್ಪರಿವರೆ ನಿನ್ನವರು
ಜಗದಾಖ್ಯ ವೃಕ್ಷನೀನಿರಲು ನಿನ್ನ ಭಕ್ತರು ನಿನಗಲ್ಲದೆ
ಜಗದೊಡೆಯ ಶ್ರೀ ಶ್ರೀನಿವಾಸ ೬

 

೨೩
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ನಿನ್ನ ನೋಡುವೆ ಪ.
ವೈಷ್ಣುವಾರ ಹೃದಯವಾಸ ಉತ್ರ‍ಕಷ್ಟ ನಿನ್ನ ನಾಮ ಪಾಡುವೆ
ಹಾಡಿ ದಣಿಯುವೆ ಅ.ಪ
ಅನುದಿನದಿ ನಿನ್ನ ನಾಮ ನೆನೆಯುವಂತೆ ಜಿಹ್ವೆಯಲ್ಲಿ
ಯನಗೆ ಕರುಣಿಸೈಯ್ಯ ದೇವ ಅನುದಿನದಲಿ ನೆನವೆ ನಿತ್ಯ ೧
ಹರುಷದಿಂದ ನಿನ್ನ ನಾಮ ಸ್ಮರಿಸುವೆನೋ ದೇವ ದೇವ ಎನ್ನ
ಮರಣ ಸಮಯದಲ್ಲಿ ನಿನ್ನ ಸ್ಮರಣೆ ಇತ್ತು ಕಾಯೋ ೨
ಮೊದಲಿನಿಂದ ಭಜಿಸಿದೆನಾ ಹೃದಯದಲ್ಲಿ ನೋಯುತಿರುವೆ
ಮುದದಿ ಬಂದು ಎನ್ನ ಜಿಹ್ವೆಗೊದಗೊ ಆಗ ಶ್ರೀ ಶ್ರೀನಿವಾಸ ೩

 

೨೪
ಕೃಷ್ಣನ್ನ ಶ್ರೀ ಕೃಷ್ಣನ್ನ ಕೊಳಲಿನ ಧ್ವನಿಯ ಕೇಳಿ ನಾ
ಮರುಳಾಗಿಹೆನೇ ಕೇಳ್ ಸತಿ ಪ.
ಮಧುರ ಮಧುರ ಸ್ವರ ಸುದತಿಯೆ ಕೇಳೆ
ಚದುರನು ಊದುತಲಿಹನೆ
ಸದನದಿ ನಿಲ್ಲಲು ಹೃದಯವು ಒಲ್ಲದು
ಚದುರೆಯೆ ಕರೆದೊಯ್ ಎನ್ನಾ
ಮನಮೋಹನ ಮದಸೂದನ ಕೃಷ್ಣನ್ನೆಡೆಗೆ
ಪೋಗದೆ ನಿಲ್ಲಲು ತಾಳಲಾರೆನೆ ಕೇಳ್ ಸಖಿ
ಪೋಗುವ ಬಾರೆ ಚಂದ್ರಮುಖಿ ೧
ಕಂದ ಕರುಗಳ ಆನಂದದಿ ಕಾಯ್ವ
ಆನಂದವ ನೋಡುವ ಬಾರೆ
ಸುಂದರ ಕೊಳಲಿಗೆ ಚೆಂದದಿ ಸರ್ಪಾ
ನಂದದಿ ತಲೆತೂಗುವುದೆ
ಖಗ ಮೃಗ ಜಡತೆಯಿಂ ನಿಂತು ಕೇಳುವ ಗಾನ
ನೋಡುವ ಬಾರೆ ಎನ ಮನಸೆಲ್ಲಿಹುದೆ ಕೇಳ್ ಸಖಿ
ಶ್ರೀ ಶ್ರೀನಿವಾಸನೊಳ್ ಚಂದ್ರಮುಖಿ ೨

 

೨೫
ಕೊಟ್ಟರೂ ಸರಿ ನೀನು ಕೊಡದಿದ್ದರೂ ಸರಿ
ಕೆಟ್ಟ ಮನುಜರ ಕಾಲಕಟ್ಟರು ನಿನ್ನ ಭಕ್ತರು
ನೀ ಕೊಟ್ಟುದೆ ಎಮಗಧಿಕವೆಂದು ತಿಳಿದು
ನೀ ಕೊಟ್ಟಷ್ಟಕ್ಕೆ ಸಂತಸದಿ ಸ್ವೀಕರಿಸುವರು
ಕಟ್ಟಕಡೆಗವರು ನಿನ್ನ ಕಾಲ ಕಟ್ಟುವರು ಶ್ರೀ ಶ್ರೀನಿವಾಸ
ಏಳು ಬೆಟ್ಟದೊಡೆಯ ವೆಂಕಟೇಶ

 

ನೀರ ಪೊಕ್ಕೆರು ಬಿಡೆ ನಿನ್ನ
೨೬
ಕೊಡು ಕೃಷ್ಣನೇ ಎನ್ನ ಸಾಲವ ಬೇಗ
ಕೊಡದಿದ್ದರೆ ಬಿಡೆನೋ ದೃಢ ಭಕುತಿಯ
ಕೊಡದಿದ್ದರೆ ಬಿಡೆನೊ ಪ.
ತಡ ಮಾಡಿದೊಡೆ ನಿನ್ನಾಟದ ಬೆಡಗನು
ಪೊಡವಿಗೆ ತಿಳಿಸುವೆನು ಜೋಕೆ ಅ.ಪ.
ನೀರ ಪೊಕ್ಕರು ಬಿಡೆ ನಿನ್ನ ಭವ
ವಾರಿಧಿ ದಾಟಿಸುವೆಂಬೆ
ಭಾರ ಪೊತ್ತರೆ ನೀನೇ ಎನ್ನ ಸಂಸಾರ
ಭಾರಕೆಂಬೇ ದೇವ
ಕೋರೆ ತೋರಲು ಅಂಜುವೆನೆ ಭೂಮಿಯ
ಮೇರೆ ಸಿಲಿಕದೋಡಿದರೂ ದೃಢವನು
ಕೊಡದಿದ್ದರೂ ಬಿಡೆ ನಾ ೧
ಕಂಬದೊಳಡಗಲು ಬಿಡೆನು ನಿನ್ನ
ಡಿಂಬ ಭಜಿಪೆ ನರಹರಿಯೆ
ಸಂಭ್ರಮದೊಳು ಬ್ರಹ್ಮಚಾರಿಯಾಗಲು
ನಿನ್ನ ಹಂಬಲು ಬಿಡೆ
ಕೊಡಲಿಯನು ತೋರಲು ಕದಂಬ
ಬಾಹು ಛೇದಿಸಲು ರಾಮ
ಕೊಡದಿದ್ದರೆ ದೃಢನಾ ದೇವ ೨
ಒಂದು ಸ್ಥಳದಿ ಪುಟ್ಟಿ ತಿಳಿಸದೆ ಇ
ನ್ನೊಂದು ಸ್ಥಳಕೆ ಪೋಗೆ ಕೃಷ್ಣಾ
ಅಂದದ್ವಸನ ಬಿಟ್ಟು ಸುಂದರಿಯರ ವ್ರತ
ಛಂದದಿ ಕಳೆದುನೀ ತೇಜೀಯೇರಲು
ಸುಂದರ ಶ್ರೀ ಶ್ರೀನಿವಾಸ ನಿನ್ನಡಿ
ದೃಢ ಕೊಡದಿದ್ದರೆ ಬಿಡೆನಾ ೩

 

೮೩
ಕೊಡು ತಾಯೆ ವರವ ಧೃಡವಾಗಿರುವ
ಕೊಡು ತಾಯೆ ವರವಾ ಪ.
ಕೊಡೆ ವರ ತಡಮಾಡದೆ ಧೃಡ ಭಕ್ತಿ ಎಂಬ ಮಾಂಗಲ್ಯ ಭಾಗ್ಯ
ಧೃಡವಾಗಿರುವಂತೆ ಅ.ಪ.
ಪರಿಪರಿ ಧ್ಯಾನಿಸೆನ್ನ ಮನಮಂದಿರವೆಂಬ
ವರಗೃಹದಲಿ ಯೆನ್ನಯ ಭಕ್ತಿಮಂಟಪದಿ
ಹರದಿ ಲಕುಮಿ ನಿನ್ನ ಪೂಜಿಸಿ ನಮಿಸಲು
ವರ ಅಘ್ರ್ಯಪಾದ್ಯ ಆಚಮನವಿತ್ತು ನಲಿವೆ ೧
ನವವಿಧ ಭಕ್ತಿಯೆಂಬ ನವರತ್ನ ಮಂಟಪದಿ
ನವವಧು ಹರಿಗೆ ನೀನೆಂದು ಕುಳ್ಳಿರಿಸಿ
ನವವಿಧ ಪಂಚಾಮೃತ ಸ್ನಾನಗೈಸಿ
ನವನೀತಚೋರ ನಿನಗೆ ವಸ್ತ್ರಾಭರಣವನಿಟ್ಟು
ನವವಿಧ ಭಕುತಿಲಿ ಪೂಜಿಪೆ ೨
ಜಾಜಿ ಮಲ್ಲಿಗೆ ರೋಜ ಸಂಪಿಗೆ
ಮೂರ್ಜಗಜ್ಜನನಿಗೆ ಕೇತಕಿ ಜಡೆಹೆಣೆದು
ರಾಜಿಪಲಕ್ಷ್ಮಿಗೆ ಮಲ್ಲಿಗೆ ದಂಡೆ ಮುಡಿಸಿ ಜಡೆಗೆ
ರಾಜಿಪ ಕಮಲ ಕೆಂಪಿನ ತಿರುಪಿನ ಹೂವ ತಿರುಗಿಸಿ ೩
ಅರಿಶಿನ ಕುಂಕುಮ ಪರಿಮಳ ಗಂಧದಿ
ವರಮಹಾಲಕ್ಷ್ಮಿಗೆ ಪೂಜಿಸುವೆ
ವರಲಕ್ಷ್ಮಿಗೆ ಪರಿಪರಿ ಪುಷ್ಪ ಅಷ್ಟೋತ್ತರಗಳಿಂದರ್ಚಿಸೆ
ಕೊಡು ವರ ದೃಢಭಕ್ತಿಯೆಂದು ಬೇಡುವೆ ೪
ಷಡ್ರಾಸಾನ್ನ ಪಾಯಸ ಭಕ್ಷ್ಯಗಳ
ಷಡ್ವಿಧ ದದಿಘೃತ ಪಾಲು ಸಕ್ಕರೆ ಬಗೆಬಗೆ ಉಂಡೆಗಳ
ಷಡ್ವಿದ ಫಲಗಳನರ್ಪಿಸಿ ಧೂಪ ದೀಪದಿ
ವರ ಅಷ್ಡಲಕ್ಷ್ಮಿ ಶ್ರೀ ಶ್ರೀನಿವಾಸನ ಸಹ
ವರ ಅಷ್ಟ ಮಂಗಳಾರತಿ ಬೆಳಗಿ ಪಾಡುತ ನಮಿಸುವೆ ೫

 

೧೪೯
ಕೊಡುವೆ ವೀಳ್ಯವನು ಕಡಲ ಶಯನನೇ ನಾ ಪ.
ಬುತ್ತಿ ಚಿಗುರು ಎಲೆಯು ಕತ್ತರಿಸಿದ ಅಡಕೆ
ಮುತ್ತಿನ ಸುಣ್ಣವನ್ನು ನಾ ೧
ಯಾಲಕ್ಕಿ ಲವಂಗ ಬಾಲ ಮೆಣಸು ಸಹ
ಬಾಲೆ ನಾನು ಬೇಡುವೆನು ನಾ ೨
ಶ್ರೀ ಶ್ರೀನಿವಾಸನೆ ಶ್ರೀ ರಮಾಲೋಲನೆ
ಶಿರವನಿಂದು ಬಾಗುವೆನು ನಾ ೩

 

೧೦೫
ರುದ್ರದೇವರು
ಗಂಗಾಧರ ಮಹಾದೇವ ಶಂಭೊಶಂಕರ ಪ.
ಗಂಗಾಧರಾ ನಿನ್ನ ನಂಬಿದ ಭಕ್ತರಘ
ದ್ಹಂಬ ಕಡಿದು ಹರಿ ಇಂಬ ತೋರೆ ಜಗ
ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ.
ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ
ಸಾರಸ ತ್ರಿನೇತ್ರ ಚಾರು ಭೂತಗಣ ಸಂಚಾರ ಭಸ್ಮಧರಾ
ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ
ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ
ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ
ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ ೧
ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ
ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ
ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ
ಕರುಣದಿ ಮಾರ್ಕಂಡೇಯಗೆ ವರವಿತ್ತು
ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ
ಪೊರೆದಂತೆ ಪೊರೆಯೆನ್ನ
ಹರಿಸರಸಿಜ ಪರಮನ ಮರೆಯದ ಪರಿ ಇತ್ತು ೨
ಪಾಶಾಂಕುರಧರ ಪರಮಪವಿತ್ರನೆ
ಈಶ ಭಕ್ತರ ಭವಪಾಶದಿಂದುದ್ಧರಿಪೆ
ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ
ದೋಷರಹಿತ ಮನ ಭಾಸಿ ಪಂಥದಿ ಈವೆ
ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ
ದಾಸ ಸಂಗದೊಳಿರಲು ಲೇಸು ಮನವ ಕೊಡು
ವಾಸುಕಿಶಯನ ಸುತನ ಸುತನೆ ನಿನ್ನ
ಏಸು ದಿನದಿ ಸ್ತುತಿಸುತ ಹಾರೈಸುವೆ ೩

 

ಮಾನುನಿ ದ್ರೌಪದಿಯ ಮೊರೆಯಕೇಳಕ್ಷಯ

ಗಜಮುಖನೇ ನಿನ್ನ ಭಜಿಸುವೆ ನಾ ಮುನ್ನ
ತ್ರಿಜಗ ವಂದಿತನೆ ಸುಜನರ ಪೊರೆವಾ ಪ.
ಆಖುವಾಹನನೆ ಲೋಕ ಸುಪೂಜಿತ
ನೀ ಕರುಣಿಸಿ ಕೊಡು ಏಕಚಿತ್ತ ಹರಿಯೊಳು ೧
ಮಗುವೆಂದು ಭಾವಿಸಿ ನಗುತ ಬಂದೂ ಎನ್ನ
ಅಘವ ಕಳೆದು ನಿನ್ನಾಗಮನ ವರವ ಕೊಡೆನ್ನಾ ೨
ಎನ್ನಪರಾಧವ ಮನ್ನಿಸಿ ಗಣಪಾ
ಚನ್ನಿಗ ಶ್ರೀ ಶ್ರೀನಿವಾಸನ್ನ ತೋರೋ ಬೇಗಾ ೩

 

೧೧೮
ರಾಘವೇಂದ್ರಯತಿಗಳು
ಗುರುರಾಯರ ನಂಬಿರೋ ರಾಘವೇಂದ್ರ
ಗುರುರಾಯರ ನಂಬಿರೋ ಜಗದೊಳು ಪ.
ಗುರುರಾಯರ ನಂಬಿ ವರಗಳ ಬೇಡಿರೊ
ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ ೧
ಆದಿ ಪ್ರಹ್ಲಾದರು ಮೋದದಿ ಹರಿಪದ
ಆದರದಿಂದ ಜಗಕೆ ಸಾಧಿಸಿ ಬೀರಿದರೊ ೨
ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ
ಗತಪುರುಷೋತ್ತಮ ಗುಹ ಪಥದೊಳಗಿಪ್ಪರ ೩
ತೃತೀಯ ರಾಘವೇಂದ್ರ ಪತಿತ ಪಾವನ ನಾಮ
ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ ೪
ಭೂತ ಪ್ರೇತಗಳ ಪ್ರೀತಿಯೊಳಳಿದು
ಶ್ವೇತ ಕುಷ್ಠಗಳ ದೂರ ಮಾಳ್ಪವರ ೫
ಸ್ಮರಣೆ ಮಾಡುತ ನರಹರಿ ಪಾದ ಪಂಕಜ
ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು ೬

 

೨೭
ಗೋಕುಲನಂದಾ ಗೋಪಿಯ ಕಂದಾ
ಶ್ರೀಪತಿ ನಿಂದಾಡುವ ಚಂದ ನಮ್ಮ ಪ.
ರಿಂದಾವನದಿ ನಿಂದು ಮುಕುಂದಾ
ನಂದದಿ ಕೊಳಲೂದುವ ಚಂದಾ, ಕೃಷ್ಣಾ
ರಂಗಾನಂದದಿ ಎಮ್ಮಯ ಕರೆವುದು, ಬಲು ಚೆಂದಾ ೧
ಅರುಣನ ಕಿರಣ ಸೋಲಿಪ ಚರಣದಿ
ಕಿರುಗೆಜ್ಜೆಯ ಧರಿಸುತ ಭರದಿ ರಂಗಾ
ವರ ನಾಟ್ಯವ ತೋರುವುದಾನಂದಾ, ಬಲುಚೆಂದಾ ೨
ಕಸ್ತೂರಿ ತಿಲಕ ಶಿಸ್ತಿಲಿ ಪೊಳೆಯುತಾ
ಭಕ್ತವತ್ಸಲ ಶ್ರೀ ಶ್ರೀನಿವಾಸನ್ನ ನೋಡೆ ರಂಗನ
ಭಕ್ತರಿಗೆಲ್ಲ ಆನಂದ, ಬಲು ಚೆಂದಾ ೩

 

೨೮
ಗೋಪಾಲಕೃಷ್ಣ ಬಾರೊ ಗೋವಿಂದ
ಗೋಪಾಲಕೃಷ್ಣ ಬಾರೊ ಪ.
ಗೋಪಿಯ ಕಂದ ಬಾರೊ ಮಾಧವ
ಗೋಪಿಯ ಕಂದ ಬಾರೊ ಅ.ಪ.
ನಂದಕುಮಾರ ನವನೀತ ಚೋರ
ಸುಂದರ ಮೂರುತಿ ಬಾ ಕೃಷ್ಣ
ಸುಂದರ ಚಂದನ ಗಂಧ ಲೇಪಿತಾನಂದ
ಅಂದದಿ ಮೋಹಾಕಾರ ಮುಕುಂದ ೧
ಮುರಳೀಧರನೆ ಮುರಮರ್ಧನನೆ
ಚಂದ್ರವಂಶನೆ ಬಾ ಕೃಷ್ಣ
ಹರುಷವ ಬೀರಿ ಚರಣವ ತೋರಿ
ವರಗೆಜ್ಜೆ ನಾದದೊಳು ಸುಂದರ ೨
ಚಂದಿರ ಸದೃಶಾನಂದನೆ ಬಾ ಬಾ
ಕುಂದರದನೆ ಬಾ ಶ್ರೀಕೃಷ್ಣ
ಅಂದದ ಪದುಮಿಣಿವಲ್ಲಭ ಶ್ರೀ ಶಾ
ಶ್ರೀ ಶ್ರೀನಿವಾಸನೆ ಬಾ ಗೋವಿಂದಾ ೩

 

೨೯
ಗೋಪಿ ಕೇಳೆ ನಿನ್ನ ಮಗನಾ ಚರಿಯ ಪೇಳುವೆನು
ಕೃಷ್ಣನ ಚರಿಯ ಪೇಳುವೆವು ಪ.
ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ.
ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ
ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ
ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ ೧
ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ
ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ
ಮುರಾರಿ ಪರಾರಿಯಾದನೇ ಯಶೋದೆ ೨
ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ
ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ
ಯಶೋದೆ ಹಿರಿಯನೆಂಬುವನೆ ೩
ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ
ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ
ಯಶೋದೆ ಸರಸತೋರೆಂಬುವನೆ ೪
ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ
ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು
ಶ್ರೀ ಶ್ರೀನಿವಾಸ ೫

 

೩೦
ಜಯ ಜಯ ಜಯ ಜಯ ಜಯ ವಿಷ್ಣುಪಾದ
ಜಯ ಶೇಷಗಿರಿಯಲ್ಲಿ ಮೆರೆವಂಥಾ ಪಾದ
ಜಯ ಭಕ್ತಕೋಟಿ ಜೀವರ ಸಲಹುವ ಪಾದ
ಜಯ ಸಿರಿ ಅರಸನ ಪಾದ ೧
ಧ್ವಜ ವಜ್ರಾಂಕುಶ ಪದ್ಮ ಪಾದ
ನಿಜದಿ ಸಲಹುವ ಗಂಗಾಜನಕನ ಪಾದ
ಮದಗಜಗಮನನ ಪಾದ
ದಿವ್ಯ ಪದದಿ ನೂಪುರ ಗೆಜ್ಜೆ ಪಾಡಗವಿಟ್ಟ ಪಾದ ೨
ಪೀತಾಂಬರಧರನ ಪಾದ
ಪಾತಕಹರ ಜಾನುಜಂಫೆಯಲಿ ಮೆರೆವಂಥ ಪಾದ
ಸೀತಾಪÀತೆ ದಿವ್ಯಹನುಮಾನುತ ಪಾದ
ಅನಾಥ ರಕ್ಷಕ ಬ್ರಹ್ಮಪಿತನ ದಿವ್ಯ ಪಾದ ೩
ಹಾರ ಪದಕವಿಟ್ಟ ಪಾದ
ತನ್ನ ನಾರಿ ಲಕುಮಿ ಸಹ ಮೆರೆವಂಥ ಪಾದ
ಪಾರುಗಾಣಿಪ ದಿವ್ಯ ನೋಟದ ಪಾದ
ವಾರುಧಿಶಯನನ ಪಾದ ಭವವಾರುಧಿ ದಾಟಿಸುವ ದಿವ್ಯಪಾದ ೪
ಮಕರ ಕುಂಡಲಧರನ ಪಾದ
ತನ್ನ ಸಖ ಪಾಂಡವರಿಗೆ ಒಲಿದಂಥ ಪಾದ
ಶಿಖೆಯೊಳು ಮಾಣಿಕ್ಯ ಕಿರೀಟನ ಪಾದ
ಅಕಳಂಕ ಚರಿತ ಮಹಿಮ ದಿವ್ಯ ಪಾದ ೫
ಮತ್ಸ್ಯಾವತಾರನ ಪಾದ ಪಾದ
ಅಚ್ಯುತಾನಂತ ಮುಕುಂದ ಹೆಚ್ಚಿನ ಅಮೃತ ತಂದ ಪಾದ
ಅಚ್ಚ ಭೂಮಿಯ ತಂದ ಪಾದ
ಸಚ್ಛ ಭಕ್ತ ಪ್ರಲ್ಹಾದಗೊಲಿದ ನರಸಿಂಹ ಪಾದ ೬
ಭೂಮಿಯನಳೆದಂಥ ಪಾದ
ಭೂವ್ಯೋಮ ತ್ರಿವಿಕ್ರಮ ವಾಮನ ಪಾದ
ಸ್ವಾಮಿ ಪರಶುಧರನ ಪಾದ
ರಮಣೀಯವಾದ ಶ್ರೀ ರಾಮನ ಪಾದ ೭
ಗೋಕುಲನಂದನ ಪಾದ
ಶ್ರೀಪತಿ ಬೌದ್ಧನ ಪಾದ
ಈ ಪರಿ ನೆನಯಲಿ ಶ್ರೀಪ ಕಲ್ಕಿ ಪಾದ
ಭೂಪ ವೆಂಕಟ ಕರುಣದಿ ತೋರಿದ ಪಾದ ೮
ಹತ್ತಾವತಾರ ಎತ್ತಿದ ಪಾದ
ಭಕ್ತರನೆಲ್ಲಾ ಸಲಹುವ ಪಾದ
ಮುಕ್ತಿದಾಯಕ ಕೃಷ್ಣನ ಪಾದ
ನಿತ್ಯದಿ ಮುನಿಗಳು ಸ್ತುತಿಸುವ ಪಾದ ೯
ಮೂರು ಹೆಜ್ಜೆ ಭೂಮಿ ಬೇಡಿದ ಪಾದ
ತನ್ನ ಹಾರೈಸಿದ ಭಕ್ತರಿಗೋಸುಗ
ಊರಿ ವೆಂಕಟಗಿರಿಯೊಳ್
ಮೆರೆವಂಥಾ ಭಕ್ತ
ಆರು ಸ್ತುತಿಸಿದರೂ ಓಡಿ ಓಡಿ ಬರುವಂಥಾ ಪಾದ ೧೦
ಕಸ್ತೂರಿ ತಿಲಕನ ಪಾದ
ಮಸ್ತಕದಿ ರಾರಾಜಿಸುವ ಕಿರೀಟನ ಪಾದ
ಕಸ್ತೂರಿ ರಂಗನ ಪಾದ
ಭಕ್ತವತ್ಸಲ ಶ್ರೀ ಶ್ರೀನಿವಾಸನ ಪಾದ ೧೧

 

ಶಿಶುಪಾಲನೊಲ್ಲೆನೆಂದು
೮೧
ತ್ರಿಮೂರ್ತಿಗಳ ಲಾಲಿ
ಜೋಜೋ ಬಾಲಕೃಷ್ಣ ಜೋಗುಳವ ಹಾಡುತ್ತ ತೂಗುವೆ ನಾ ಪ.
ನವರತ್ನ ಖಚಿತದ ತೊಟ್ಟಿಲ ಕಟ್ಟಿ
ನಾಗಸಂಪಿಗೆ ಜಾಜಿ ಮಾಲೆಯನ್ಹಾಕಿ
ನಾಲ್ಕುವೇದದ ಸರಪಣಿ ಬಿಗಿದು
ನಾಗಶಯನನ ಮಲಗಿಸಿ ಬೇಗ
ರಾಗದಿ ಅನುಸೂಯ ಪಾಡಿ ತೂಗಿದಳು ಜೋ ೧
ಮುತ್ತು ಮಾಣಿಕ್ಯದ ತೊಟ್ಟಿಲ ಕಟ್ಟಿ
ಮುತ್ತು ಪವಳದ ಸರಪಣಿ ಬಿಗಿದು
ಮುದದಿ ಮಲ್ಲಿಗೆ ಜಾಜಿ ಪುಷ್ಪವ ಕಟ್ಟಿ
ಮುಕ್ತ ಬ್ರಹ್ಮನ ಮಲಗಿಸಿ ಬೇಗ
ಅರ್ತಿಲಿ ಅನಸೂಯ ತೂಗಿದಳಾಗ ೨
ನೀಲ ಮಾಣಿಕ್ಯದ್ವಜ್ರತೊಟ್ಟಿಲ ಕಟ್ಟಿ
ಮೇಲೆ ಕೆಂಪಿನ ಸರಪಳಿ ಬಿಗಿದು
ಮಾಲತಿ ಮಲ್ಲಿಗೆ ಮಾಲೆಯ ಕಟ್ಟಿ
ನೀಲಕಂಠನ ಮಲಗಿಸಿ ಬೇಗ
ಬಾಲನ ಅನಸೂಯ ತೂಗಿದಳಾಗ ೩
ಈ ಪರಿಯಿಂದಲಿ ತೂಗುತಿರೆ
ತಾಪಸ ಅತ್ರಿಋಷಿಯಾಗ ಬರೆ
ಭೂಪರ ತೊಟ್ಟಿಲು ಕಾಣ ಬರೆ
ಈ ಪರಿ ಶಿಶುಗಳು ಯಾರೆನ್ನುತಾ
ಶ್ಚರ್ಯದಲಿ ಸತಿಯ ಕೇಳುತಾ ೪
ನಮ್ಮ ಪುಣ್ಯದ ಫಲ ವದಗಿತೆಂದು
ಮುನ್ನ ತ್ರಿಮೂರ್ತಿಗಳು ಶಿಶುರೂಪದಿ ಬಂದು
ತನ್ನ ಪತಿಯ ಕೂಡ ಅರುಹುತಲೆ
ಚಿನ್ನರ ತೂಗುತ್ತ ಹರುಷದಿ
ಚೆನ್ನ ಶ್ರೀ ಶ್ರೀನಿವಾಸನ್ನ ತೂಗಿದಳು ೫

 

೧೨೮
ತಾಳು ತಾಳೆಲೆ ಮನವೆ ತಾಳ್ಮೆಯ
ತಾಳು ತಾಳೆಲೆ ಮನವೆ ಪ.
ತಾಳು ತಾಳು ನಿನ್ನಾಳುವ ದೊರೆಯಿಹ ಅವ
ಗಾಳಾಗಿ ನೀ ಬಾಳಲು ಕಾಳು ಮಾಡನು ಹರಿ ಅ.ಪ.
ದುರ್ಜನರಾಡಿದ ನುಡಿ ಮನಕದ
ಸಜ್ಜುಗೊಳಿಸಬೇಡ
ಅರ್ಜುನ ಸಖನೇ ನಿನ್ನ ಪರೀಕ್ಷಿಸೆ
ನಿರ್ಜರೇಶನೀಪರಿ ಮಾಡಿಹನೆಂದ ೧
ಅಳಕು ಮನವ ಬಿಡು ನಿ
ನ್ನಳದು ನೋಡುವ ಹರಿಯು
ಅಳವಲ್ಲವನ ಲೀಲೆ ಕಂಡ್ಯ
ಝಳ ಝಳ ಮನದಲಿ ಕಳೆ ಕಲೆ ಹರಿರೂಪ
ಪೊಳೆದು ನಿನ್ನ ಮನದಳಕನೆ ದೂಡುವ ೨
ಅಂಜದಿರಭಯವ ಅಂಜನಾಸುತ ಸೇವ್ಯ
ಶ್ರೀ ಶ್ರೀನಿವಾಸ ಶ್ರೀರಾಮ ನಿ
ನ್ನಂಜಿಸುವರನು ಅಂಜಿಸೆ ಕಾದಿಹ
ಸಂಜಯ ಪ್ರಿಯ ಕಂಜನಾಭ ಹರಿ ೩

 

೯೭
ತುಳಸಿ
ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ.
ಹಳದಿ ಕುಂಕುಮ ಪರಿಮಳದ ಗಂಧದಿ
ಅಂಗಳದಿ ಶೋಭಿಪ ಹರಿಸತಿ ಅ.ಪ.
ಆದಿಯಲಿ ತಾ ಮೋದದಿಂದಲೆ
ಮಾಧವ ಪ್ರಿಯೆಯನು ದ್ರೌಪದಿ ಪೂಜಿಸೆ
ಮೋದದಿಂದಕ್ಷಯ ಪಾತ್ರೆಯೊಳ್ ಪಾಕವ
ಸಾಧುವ ದಣಿಶಿದ ಆದಿ ಕೃಷ್ಣನ ಸತಿ ತುಳಸಿ ೧
ಪರಿಪರಿ ಭಾಗ್ಯಕೆ ಹಿರಿಮೆ ಶ್ರೀ ತುಳಸಿ ಯೆಂ
ದರುಹಿದ ನಾರದ ವರ ವಚನವು ಎಂದು
ಪರಮಾದರದೊಳು ಪೂಜಿಸಿ ತುಳಸಿಯ
ಹರಿಗೆ ಅರ್ಪಿಸೆ ಹರುಷವ ಕೊಡುವ ೨
ಉದಯ ಕಾಲದಿ ಮುದದಿ ಪೂಜಿಸಿ
ಮಧುರ ಸ್ವರದಿ ಮಾಘದ ಮಾಸದಲಿ
ಮುದದಲೊಂದಿಸೆ ವದಗಿದಾಪತ್ತನು
ಚದರಿಸಿ ಕಳೆದು ಶ್ರೀ ಶ್ರೀನಿವಾಸನ
ಮುದದಿ ತೋರುವ ಶ್ರೀ ತುಳಸಿ ೩

 

೩೧
ತೋರು ತೋರೆಲೊ ರಂಗಯ್ಯ ನಿನ್ನ ಪಾದ
ತೋರು ತೋರೆಲೊ ಕೃಷ್ಣಯ್ಯ ಪ.
ಇಂದಿರಾದೇವಿ ಆನಂದದಿ ಸೇವಿಪ
ಮಂದರಧರ ನಿನ್ನ ಸುಂದರ ಚರಣವ ೧
ಮತಿಹೀನಹಲ್ಯೆಯ ಪತಿವ್ರತೆಯೆನಿಸಿದ
ಪತಿತ ಪಾವನ ಶ್ರೀರಾಮ ನಿನ್ನ ಪಾದ ೨
ಎಳೆದಳಿರನು ಪೋಲ್ವ ಚೆಲುವ ಕೃಷ್ಣನ ಪಾದ
ತಿಳಿದು ಭಕ್ತರು ನಿನ್ನ ನಲಿದು ಪೂಜಿಪ ಪಾದ ೩
ಮಗುವೆಂದು ಗೋಪಿಗೆ ಜಗದ ಆಟಗಳಲ್ಲಿ
ನಗುತ ತೋರಿಸೆ ಬಂದ ನಗಧರ ನಿನ್ನ ಪಾದ ೪
ಅಂದಿಗೆ ಪಾಡಗದಿಂದಲೊಪ್ಪುವ ದಿವ್ಯ
ಅಂದದಿ ಪೊಳೆಯುವ ಶ್ರೀ ಶ್ರೀನಿವಾಸನ ಪಾದ ೫

 

೯೮
ದಯವ ತೋರೆ ತುಳಸಿ ಹರುಷವೆರಸಿ
ಪರಾಂಬರಿಸಿ ಹರಿಯ ಸ್ಮರಿಸಿ ಪ.
ನಿನ್ನ ಬಿಟ್ಟು ನಾನನ್ಯರ ಪೂಜಿಸೆ
ಬೊಮ್ಮನೈಯ್ಯನ ರಾಣಿ ನಮ್ಮ ಕಷ್ಟಗಳ ಹರಿಸಲು
ಬಾರಮ್ಮ ನಿರ್ಮಲ ಶ್ರೀ ತುಳಸಿ ಕರ್ಮಗಳನೆ ಕಳೆದು
ಭವ ದಯಾವೆರೆದು ಪ್ರೇಮಗರೆದು ತಾಯೆ ನೀ ೧
ಮಲ್ಲೆ ಮಲ್ಲಿಗೆ ಜಾಜಿ ಮರುಗ ಸೇವಂತಿಕೆ
ಎಲ್ಲ ಪೂಜೆ ಮಾಡೆ ಸಲ್ಲಲಿತದಲಿ
ನೀನಿಲ್ಲದ ಪೂಜೆಯ ವಲ್ಲನು ಶ್ರೀ ಹರಿಯು
ಎಲ್ಲರಿಗಧಿಕಳೆಂದು ಪೂಜೆಗೊಂಡು ದಯಾಸಿಂಧು ತಾಯೆ ನೀ ೨
ಶ್ರೀ ಶ್ರೀನಿವಾಸನೊಳು ವಾಸಿಪೆ ಸರ್ವದಾ ಪೋಷಿಪೆ ಭಕ್ತರನು
ವಾಸುದೇವನ ತೋರಿ ಪೋಷಿಸೆ ಬಾರಮ್ಮ
ವಾಸವಾಗಲು ಮನೆಗೆ ಸೂಸಿ ಭಕುತಿಯಿಂದ
ಪೂಜಿಪೆ ನಿಮ್ಮ ಚರಣವಮ್ಮಾ ತಾಯೆ ನೀ ೩

 

೧೩೭
ತತ್ತ ಪ್ರತಿಪಾದನೆ
ದೂಡಿಸುವ ಸಂಸಾರ ದೇವ
ರೂಢಿಯೊಳು ಭಕ್ತರೊಡನಾಡಿ ರಂಗ ಪ.
ಈ ನಾಡಿನೊಳ್ ಭಕ್ತರ ಭವ ನಾವಿಕನಾಗಿ
ಗಾಢನೆ ನಡೆಸುತ ಜೋಡು ಕುಂಡಲಧರ ಅ.ಪ.
ಭಕ್ತಿರಸವೆಂಬ ತೊಗಲನ್ನು ಹೂಡಿ
ಯುಕ್ತಿಲಿ ಮಣ್ಣಿನ ಬೊಂಬೆಯೊಳಗಾಡಿ ಪರ
ಶಕ್ತಿಯೆಂಬ ಹೊಲಿಗೆಯನ್ನು ಕೂಡಿ
ಭಕ್ತಿಲಿ ಸ್ತುತಿಸುವ ಭಕ್ತರೊಳಾಡಿ ೧
ಗುರುಹಿರಿಯರ ಸೇವೆಯೆಂಬ ಮನಕೊಟ್ಟು
ಸರಸದಿ ಮನೆಗೆಲಸವ ಗುಟ್ಟಿಲಿಟ್ಟು
ಸರಸಿಜನಾಭನÀ ಮನಸಿನೊಳಿಟ್ಟು
ಹರುಷದಿ ಸ್ತುತಿಪರ ಸಲಹುವನೆಂಬೊ ಬಿರುದಿಟ್ಟು೨
ಕರುಣಾಮಯನೆಂಬೊ ಪೆಸರನು ಇಟ್ಟು
ಹರುಷದಿ ಕೂಗುವ ಭಕ್ತರೊಳಗೆ ತಾ ಗುಟ್ಟು
ಕರುಣಾಸಾಗರ ವರ ಶೇಷಾಚಲವಾಸ
ಭರದಿ ಶ್ರೀ ಶ್ರೀನಿವಾಸ ಇಂಥಾ ಭವ ಸಂಸಾರವ ೩

 

೩೨
ದೇವಾದಿದೇವನಿಗೆ ಹರಸಿದಳು
ದೇವಿ ಯಶೋದೆಯು ದೇವ ಶ್ರೀ ಕೃಷ್ಣಗೆ ಪ.
ಅಷ್ಟು ಬ್ರಹ್ಮಾಂಡವ ಪೊಟ್ಟೆಯೊಳಿಂಬಿಟ್ಟ
ದಿಟ್ಟ ಶ್ರೀ ಕೃಷ್ಣಗೆ ಸೃಷ್ಟಿಯೊಳ್ ಸುಖಿಸೆಂದು ೧
ದಿಟ್ಟಡಿಯಿಡುತಲಿ ದಿಟ್ಟ ಲೀಲೆಗಳನ್ನು ನೀ
ನಷ್ಟು ತೋರಿಸು ಎಂದು ಪುಟ್ಟ ಶ್ರೀ ಕೃಷ್ಣನ ೨
ಸೃಷ್ಟಿಕರ್ತ ಗೋವಿಂದ ಮುಕುಂದ
ಅಷ್ಟೈಶ್ವರ್ಯದಿ ದಿಟ್ಟ ಶ್ರೀ ಶ್ರೀನಿವಾಸ ಸುಖಿಸೆಂದು ೩

 

೩೩
ನಂದ ಕುಮಾರ ಆನಂದ ಬಾ ಬಾ ಪ.
ಚಂದಿರ ಸದೃಶ ನಂದನೆ ಬಾ ಬಾ
ಎನ್ನಾನಂದ ಬಾ ಬಾ ಅ.ಪ.
ನಿನ್ನ ಕಾಣದೆ ನಾ ನಿಲ್ಲಲಾರೆ ಕೃಷ್ಣಾ
ನಿನ್ನ ಮುಖಬಿಂಬ ನೋಡಲೆಂತಾನಂದವೊ
ನಿನ್ನ ಸುಳಿಪಲ್ಲಿನ ನಗೆ ಬೀರೋ ಕೃಷ್ಣಾ
ನಿನ್ನ ನೋಡುವೆ ಪಾಡುವೆ ಆನಂದ ಬಾ ಬಾ ೧
ಕರುಣಾಕರ ನೋಟವ ಬೀರೋ ಕೃಷ್ಣಾ
ಕೊರಳ ವೈಜಯಂತಿ ಮಾಲಾ ಶೋಭಾ ಕೃಷ್ಣಾ
ಚರಣದಂದಿಗೆಯ ಗೆಜ್ಜೆ ನಾಟ್ಯದೊಳು ನಲಿದಾಡೊ ಕೃಷ್ಣಾ
ಕುಣಿದಾಡೊ ಕೃಷ್ಣಾ ೨
ಚೆಂದ ಮಾಮನ ನೀ ಕೇಳೆ ತೋರುವೆನು
ಅಂದ ಕನ್ನಡಿಯೊಳ ರೂಪ ನೋಡುವೆನು
ಸುಂದರಾಂಗ ಮುತ್ತನಿಟ್ಟು ನಲಿಯುವೆನು
ಚಂದ್ರಬಿಂಬಧರಾ ಶ್ರೀ ಶ್ರೀನಿವಾಸ ೩

 

೧೦೬
ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ.
ಚಂದ್ರಚೂಡ ಗಂಗಾಧರ ಶಂಕರ
ಸುಂದರ ಗೌರೀರಮಣ ಕಣಮ್ಮಾ ಅ.ಪ.
ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ
ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ
ಕರುಣವ ತೋರುತ ಸಕಲರ ಮನ ಮಂದಿರದಲಿ
ಪೊಳೆಯುವ ಗಿರಿಜಾ ರಮಣ ಕಣಮ್ಮ ೧
ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ
ತ್ರಿಜಊನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ
ಋಜುಗುಣದೊಡೆಯಗೆ ರಜತಾದ್ರಿನಿಲಯ
ನಿಜ ಪಾರ್ವತೀರಮಣ ಕಣಮ್ಮಾ ೨
ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ
ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ
ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ
ಶಂಭೋ ಶಂಕರನು ಕಣಮ್ಮಾ ೩

 

೮೪
ನಂಬಿದೆನೇ ನಿನ್ನ ಅಂಬುಜನಯನೆ
ನಂಬಿದೆ ನಿನ್ನ ಪ.
ನಂಬಿದೆ ನಿನ್ನನು ಅಂಬುಧಿಶಯನನೆನ್ನ
ಡಿಂಬದಿ ನಿಲುವಂಥ ಸಂಭ್ರಮ ಕೊಡು ತಾಯೆ ಅ.ಪ.
ಆರು ಮೂರೆರಡೊಂದು ಮೇರೆ ಇಲ್ಲದೈದು
ಜಾರರು ಸೇರಿದರೆ ತಾಯಿ
ತೋರುತ ಕರುಣವ ಬೀರುತ ವರ ಸಂಗ
ದೂರಮಾಡಿಸಿ ಪಾರುಗಾಣಿಸು ತಾಯೇ ೧
ಅಗಣಿತ ಮಹಿಮನ ಬಗೆಬಗೆ ಪೂಜಿಸಿ
ಜಗದಾಖ್ಯಾನ ನೀ ಮಿಗೆ ವಲಿಸಿಹೆ ತಾಯೆ
ಮಗುವೆಂದು ಭಾವಿಸಿ ಚಿಗಿದು ಕಂಬದಿ ಬಂದ
ನಗಧರ ನರಹರಿ ಸಿಗುವ ಪರಿಯ ತೋರೆ೨
ಕಲಿಯುಗದಲಿ ಶ್ರೀ ಶ್ರೀನಿವಾಸನ ಜ್ಹಾಯೆ
ವಲಿದು ಭಕ್ತರ ಕೊಲ್ಹಾಪುರ ಮೆರೆಸಿಹೆ ತಾಯೆ
ಕಲಿಮಲ ಕಳೆದು ನಲಿದು ಭಕ್ತರ ಕಾಯೆ
ಛಲವ್ಯಾಕೆ ಹರಿ ಸಹ ನಲಿಯುತೆ ಬಾರೆ ೩

 

ತುಂಬುರು ನಾರದರು
೮೫
ನಡೆದು ಬಾರೆ ಹರಿಯ ರಮಣಿ
ನಡಮುಡೀಯ ಹಾಸುವೆ
ನಡಮುಡೀಯ ಹಾಸಿ ನಿನಗೆ
ಕರವ ಮುಗಿದು ಬೇಡುವೇ ಪ.
ಚರಣಕೆ ಪಾದ್ಯವನಿತ್ತು
ವರ ಕ್ಷೀರದಧಿ ಘೃತ
ವರ ಮಧು ಶರ್ಕರಾದಿಂ
ಹರುಷದುಡಿಗೆ ತೊಡಿಸುವೆ ೧
ರನ್ನ ಪೀಠದಲ್ಲಿ ಇರಿಸಿ
ನಿನ್ನನರಿಶಿನ ಕುಂಕುಮ
ಚನ್ನ ಗಂಧ ಪುಷ್ಪದಿಂದ
ಸಂಪನ್ನೆ ನಿನ್ನ ಪೂಜಿಪೆ ೨
ಘನ್ನ ನೈವೇದ್ಯವರ್ಪಿಸಿ
ರನ್ನದಾರುತಿ ಬೆಳಗುವೆ
ಇನ್ನು ಎನ್ನ ತಪ್ಪ ಮನ್ನಿಸೆ
ನಿನ್ನ ರಮಣ ಶ್ರೀ ಶ್ರೀನಿವಾಸನರಸಿಯೇ
ಇನ್ನು ತೋರಲು ಬೇಗದಿ ೩

 

೮೬
ನಲಿನಲಿದರು ದ್ವಾರಕಾಪುರದಿ
ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ.
ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ
ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ.
ಅಂಬರದಲಿ ಭೇರಿ ವಾದ್ಯಗಳೆಸಗೆ
ತುಂಬುರು ನಾರದರು ಗಾನವ ಪಾಡೆ
ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ
ಅಂಬುಜೋದ್ಭವ ರುಕ್ಮಿಣಿ ಕಂಠದೊಳು ೧
ವಿಪ್ರರು ವೇದ ಮಂತ್ರವ ಪಠಿಸೆ
ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ
ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ
ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ ೨
ದೇವಕಿ ವಸುದೇವನಿಗ್ಹರುಷವನಿತ್ತು
ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ
ಕಾವ ಸಕಲ ಜೀವರ ಹೃದಯನಿವಾಸ
ದೇವ ಯಶೋದೆ ನಂದ ಕಂದನ ನೋಡಿ ೩

 

೩೪
ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ
ನವಮೋಹನ ರಘುರಾಮನೆ ನೀನು ಬಾ ಬೇಗ ಪ.
ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ
ಋಷಿಗಳ್ಯಾಗವ ಕಾಯ್ದದು ನೀನು ಋಷಿ ಪತ್ನಿಯರನು ಉದ್ಧರಿಸೀ
ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ
ಅತುಳ ಮಹಿಮ ಶ್ರೀರಾಮ ಬಾ ಬೇಗ ೧
ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿವಾ
ಜವದಿ ಪರಶುರಾಮನ ಗರ್ವವನು
ತವಕದಿ ಮುರಿದಾಯೋಧ್ಯಯಾಳಿದ
ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ ೨

 

ಕಾಳಿಂಗ ಭಂಗ: ಕಾಳಿಂಗವೆಂಬ ಸರ್ಪವು
೩೫
ನಾಟ್ಯವಾಡಿದನು ರಂಗ ಮಂಗಳಾಂಗ ಪ.
ನಾಟ್ಯವಾಡಿ ಶಕಟಾಂತಕ ಕೃಷ್ಣ
ನೋಟಕರಿಗೆ ತನ್ನಾಟ ತೋರಿ
ಕಾಳಿಂಗ ಭಂಗ ಜಗದಂಗ ಧಿಕಿಟದಿಂ
ತದಾಗಿಣ ತೋಂ ತರನಾನಂದದಿ ಸುಂದರನಾಟ್ಯ ಅ.ಪ.
ಅನುಪಮ ಚರಿತ ಅಪ್ರಮೇಯ ಹರಿ
ತನುಭವ ಬಲರಾಮರ ಜತೆ ಸೇರಿ
ಅನುನಯದಲಿ ಗೋವನು ಕಾಯುತಲಿರೆ
ಪೀತಾಂಬರಧರನಾಟವ ನೋಡುವೆನೆಂದು
ಸಾಟಿಯಿಲ್ಲದ ವಿಷಮಡುವಿಲಿ ಕಾಳಿಂಗ
ನೀಟಿಲಿ ಕುಳ್ಳಿರೆ ಓಟದಿ ಪಶುಗಳು
ನೀರಾಟದಿ ಕುಡಿಯಲು ನಾಟಿ ಗಾರಾದ
ನೆಲಕುರುಳಲು ರಂಗ ಕೋಟಿಪ್ರಕಾಶ
ಕಾಳಿಂಗನಾಟ ತೋರುವೆನೆಂದೂ ಧಿಕಿಟ೧
ದುಷ್ಟನ ವಿಷಮಯ ನೀರನು ಕುಡಿದು
ಉತ್ರ‍ಕಷ್ಟ ಗೋವು ಮೂರ್ಛೆಯ ಪೊಂದೆ
ಪುಟ್ಟ ಬಾಲಕರು ಕೃಷ್ಣಗೆ ಪೇಳಲಾ
ತಟ್ಟನೆ ಕಡಹದ ಮರವೇರುತ ಧುಮುಕೆ
ಪುಟ್ಟ ರಂಗನೆಂದು ಬಿಟ್ಟನೆ ದುಷ್ಟನು
ಸುತ್ತಿ ಬಾಲ ಕುಟ್ಟುಪ್ಪಳಿಶಿದನು
ಕಷ್ಟವೆ ರಂಗಗೆ ನಿಷ್ಟುರ ಭಕ್ತರು
ಶಿಷ್ಟಾಚಾರದಿ ಮೆಟ್ಟಿ ಬಾಲ ಕೈಗಿಟ್ಟು ತವಕದಿ
ದಿಟ್ಟ ಶ್ರೀ ಕೃಷ್ಣ ಥಕಥೈ ತದಿಗಿಣಝಂ ಆನಂದ ನಾಟ್ಯ ೨
ಅಂಬುಜೋದ್ಭವನ ನಾಟ್ಯವ ನೋಡೆ
ಕುಂಭಿಣಿ ತಳದಾಕಾಶದಿ ಸುರರು
ತುಂಬುರು ನಾರದ ಸಂಭ್ರಮಗಾನ
ರಂಭಾದ್ಯಪ್ಸರ ಸ್ತ್ರೀರಂಭರ ನಾಟ್ಯ
ಅಂಬರದಿಂ ಪೂಮಳೆ ರಂಗಗೆರೆಯೆ
ಜಗಂಗಳು ನೋಡೆ ಶ್ರಿಂಗರ ಶ್ರೀ ಶ್ರೀನಿವಾಸಗೆ ಗೋಪಿ
ರಂಗ ಬಾರೆನುತಲೆ ಮಂಗಳಾರುತಿ
ಹಿಂಗದಲೆತ್ತೆ ಮಂಗಳ ಮೂರ್ತಿ ಕಾಳಿಂಗಭಂಗ ನಾಟ್ಯ ೩

 

೧೩೮
ನಾನು ಎಂಬೊದೆ ದೊಡ್ಡದು
ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ.
ನಾನೆಂಬೊ ವ್ಯಾಪಾರ ನೀನೆ ಮಾಡಿಹೆ
ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ.
ಸರ್ವರೊಳಗೆ ನಾನೆಂಬೊದೇ ಇರಲಾಗಿ
ಸಾರ್ವಜನಿಕ ನೀನೆಲ್ಲಿಹೆಯೊ
ಸರ್ವಧಿಕಾರಿ ನೀನೇ ಎಂಬ ವಿಬುಧರ
ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು ೧
ಮಿಂಚಿದ ಪಾಪವ ಮಾಡುವ ಮನುಜರ
ವಂಚಕತನದಲಿ ದೇಹದೊಳಿಹೆ ನೀನು
ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ
ಮಿಂಚಿನ ಹುಳದಂತೆ ಕಂಚಿ ವರದ ಇಹೆ ೨
ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ
ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ
ಅಘಹರ ಗೋಪಿಗೆ ಮಿಗೆಯಾಟ ತೋರಿಹೆ
ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು ೩

 

ನಾಮಧರಿಸಿಹೆಯೊ ತಿರುಪತಿಯ ವೆಂಕಟರಮಣ
೩೬
ನಾಮ ಧರಿಸಿಹೆಯಾ ಮೂರು
ನಾಮ ಧರಿಸಿಹೆಯಾ ಶ್ರೀನಿವಾಸ ಪ.
ನೀನೆ ಕರ್ತನೆಂದಾ ಮನುಜರಿಗೆಲ್ಲಾ
ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ.
ಅಂಬೆಯ ವಕ್ಷದಿ ಇಂಬಿನೊಳಿಟ್ಟು
ಸಂಭ್ರಮದೊಳು ಕುಡಿ ನೋಟದಿಂದಾ
ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ
ಬೆಂಬಿಡದೆ ಕಾವೆನೆಂಬ ಬಿರುದ ೧
ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ
ಹೊರವೊಳಗಿದ್ದು ಜನವ ನಂಬಿಸಿ
ಥರಥರದಾಭರಣ ಸುಲಿಗೆಯಗೊಂಬ
ತಿರುಪತಿ ತಿರುಮಲರಾಯ ದೊರೆ ೨
ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ
ನಿನ್ನ ಪಾದಧ್ಯಾನವನ್ನೆ ಬಯಸುತ್ತ
ನಿನ್ನನೆ ಭಕ್ತಪಾಶದಿ ಕಟ್ಟಿ ೩
ಚಾರು ಚರಿತನೆ ಚಾರು ಮುಖನೆ ವಂದ್ಯ ನಿನ್ನ
ಹಾರೈಸುವ ಭಕ್ತರ ವೃಂದ
ಸಾರಿ ಬಂದು ನಿನ್ನ ನಾಮದ ಸ್ಮರಣೆಯ
ಹಾರ ಹಾಕಿ ಮನ ಸೂರೆ ಕೊಟ್ಟ ೪
ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ
ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ
ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ
ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ
ನಿನ್ನ ಭಕ್ತರಿಷ್ಟಾ ೫

 

೩೭
ನಾರಾಯಣ ಎನ್ನಿರೊ ನರಹರಿ
ನಾರಾಯಣ ಎನ್ನಿರೊ ಪ.
ನಾರದ ವಂದಿತ ನಗೆಮೊಗ ಚನ್ನಿಗ ಅ.ಪ.
ಆದಿ ಪ್ರಹ್ಲಾದನ ಮೋದದಿ ಪೊರೆದನ
ಸಾಧಿಸಿ ಅಂತ್ಯದಿ ಅಜಮಿಳನಂತೆ ೧
ಕರುಣವ ಬೀರುತ ಕರೆದು ಮಾರುತಿಯನ್ನು
ಶರಣನ ಮಾಡಿದ ನಿರುತ ಶ್ರೀರಾಮನ ೨
ಮುದ್ದು ಭೀಮಾರ್ಜುನರಲ್ಲಿದ್ದು ರಣದೊಳಾಗ
ತಿದ್ದಿ ತಾ ಹೃದಯದೊಳಗಿದ್ದ ಶ್ರೀ ಕೃಷ್ಣರನ್ನ ೩
ಮಧ್ವಮುನಿಯೊಳಗಿದ್ದ ಮನ ಮಧ್ವಮತವ ಗೆದ್ದ
ಮುದ್ದು ಮಧ್ವಪತಿಯ ನೀವು ೪
ಅಖಿಳಾಂಡನಾಯಕ ಸಖನಾದ ಪಾಂಡವರಿಗೆ
ನಿಖಿಳಲೋಕದ ಪ್ರಿಯ ಭಕ್ತರ ಸಖನಾಗುವ ಶ್ರೀ ಶ್ರೀನಿವಾಸನೆಂದು ೫

 

೩೮
ನಿಂತು ಸ್ತುತಿಸೆ ನೀ ಸಂತಸ ಪಡುತಿ
ನಿನ್ನವರ ಕಂಡು ಹರಿ
ಕಂತು ಜನರ ನೀನೆ ನಿಂತವರ ಪರಿಪಾಲಿಪೆ
ಶ್ರೀ ಶ್ರೀನಿವಾಸಾನಂತ ಮಹಿಮ ನೀನೆಂದು
ಸಂತಸದಿ ನೆನೆವ ಭಕ್ತರಿಗೆ ನೀ ಕಲ್ಪತರು
ಕಾಮಧೇನು ವೆಂಕಟೇಶಾ ಶ್ರೀಶಾ

 

ಖಡ್ಗ ತೋರಿ ಖಳ ಪ್ರಹ್ಲಾದನಂಜಿಸೆ
೩೯
ನಿಂದಿಸಿದ್ದು ಕುಂದಾದದ್ದೇನೊ
ಮಂದಮತಿಗಳು ನಿಂದು ಸುಜನರಿಗೆಲ್ಲ ಪ.
ಅಂದನುವಾಗಿಲ್ಲೆ ಇಂದಿರೇಶನು
ಮಂದಗಮನೆ ದ್ರೌಪದಿಗೆ ಅ.ಪ.
ಕಂದನೆಂದು ಕೌರವನ ಸೇವೆಗೆ ಆ
ನಂದದಿಂದ್ಯವರ ಬೇಡೆಂದ ಮುನಿ
ಬಂದರತ್ನವ ಬಿಟ್ಟನ್ನವ ಬೇಡಿಬಾರೆನೆ
ಇಂದು ಮುಖಿ ಕೈಯಿಂದಿಡಿಸಿದ ಕೃಷ್ಣ ೧
ಖಡ್ಗ ತೋರಿ ಬಳ ಪ್ರಹ್ಲಾದನಂಜಿಸೆ
ಗುಡ್ಡ ಪೊತ್ತ ನರಹರಿಯಾಗ
ಹೆಡ್ಡನೆ ತೋರುವೆನೆಂದು ಕಂಬದಿ
ದೊಡ್ಡ ಮೃಗರೂಪದಲಂಜಿಸಿದ ೨
ತೊಡೆಯನು ಬಿಡು ಎನುತೊಡನೆ ನೂಕಲು
ಪೊಡವಿಯಲ್ಲಿಹುದು ನಡೆ ಬಾಲಕನೆನೆ
ಕಡುಭಯದಲಿ ಧೃವ ಒಡನೆ ಹರಿಯ ಪಾದ
ಬಿಡದೆ ಧ್ಯಾನಿಸೆ ದೃಢವರವಿತ್ತ ಹರಿ (ಕಡೆ ಹಾಯಿಸಲು) ೩
ಕರಿಯ ಕಂಬದ ತೆರದಿ ನಿಲಿಸೆ ನಕ್ರ
ಪೊರೆದವನಾರೋ ಹರಿಯಲ್ಲದೆ
ಶರಣಾಗತ ಚಿಂತಾಮಣಿ ಎನೆ ಕರಿ
ಪರಿದು ಚಕ್ರನಿ ನಕ್ರನ ಬೇಗ ೪
ಏಕಾದಶಿವ್ರತ ಏಕಭುಕ್ತನ ನೀರೆಡಿಸೆ
ಮಾನುನಿ ಬರಲು ಹರಿತಾ ಕರುಣಿಪನೆಂದು
ತರಳನ ಶಿರಕೆ ಕೈಹಾಕೆ ಶ್ರೀ ಶ್ರೀನಿವಾಸನ
ಸುತತಾ ಕರುಣಿಸಿದ ೫

 

೧೨೯
ನಿನ್ನ ನಂಬಿದವರಿಗೆ ಇನ್ನು ಕೊರತೆಗಳುಂಟೆ
ಪನ್ನಗಾದ್ರಿನಿವಾಸ ಶ್ರೀ ವೆಂಕಟೇಶ ಪ.
ಬನ್ನ ಬಡಿಸದೆ ಎನ್ನ ಧ್ಯಾನವನ್ನು ಮರೆವರು ಭಕ್ತರಂದು
ಚನ್ನ ಸಂಪನ್ನ ಭಕ್ತರನ್ನು ಬನ್ನ ಬಿಡಿಸಿ ಪೊರೆವೆ ಕರುಣದಿ ಅ.ಪ.
ಅಧಿಕ ಸಂಸಾರದಿ ಪದೆಪದೆಗೆ ತೊಡರುಗಳ
ಬದಿಗನಾಗಿದ್ದವರಿಗೆ ಕೊಟ್ಟು
ಸದಮಲಾನಂದ ಪರೀಕ್ಷಿಸುವೆ ತವಕದಿ
ಚದುರಿಸುತ ಮನವನ್ನು
ಅದುಭುತನೆ ನಸುನಗುತ ನೀನೋಡುತ್ತ
ಹೆದರಿ ಬೆದರಿ ನಿನ್ನ ಧ್ಯಾನಕ್ಕೊದಗಲಿ ಮನವೆಂಬೆಯಲ್ಲದೆ
ಮಧುರವಾಣಿಯ ತೋರಿ ಸಲಹಲು
ವದಗಿ ಕಾಯುವೆ ಭಕ್ತರನ್ನು
(ಚದುರ ನಿನಗೆಣೆಗಾಣೆ ಜಗದೊಳು) ೧
ಜಾಣರೊಳತಿ ಜಾಣತನ ತೋರುತ್ತ
ಕಾಣಿಸಿ ಕಾಣದಂತಿರುತ ಭಕ್ತರೊಳು
ಗಾಣಕೆ ಸಿಲ್ಕಿದ ಎಳ್ಳು ಸಚ್ಛದೆಣ್ಣೆ
ಮಾಣದೆ ಬರುವ ತೆರ ತೋರುವೆ ಜನಕೆ
ಕಾಣದಿಹ ಕಾಮಕ್ರೋಧದ್ಹಿಂಡಿಯ
ಮಾಣದೆ ಬೇರ್ಪಡಿಪೆಯಲ್ಲದೆ ಇದು
ಕಾಣ್ವರು ನಿನ್ನ ಚರಣದಂಘ್ರಿಯ
ಕಾಣುತಲೆ ಸ್ತುತಿಮಾಡಿ ಹಿಗ್ಗುತಲಿಹರು ೨
ದಿಟ್ಟಮೂರುತಿ ಕೇಳೊ ಕೊಟ್ಟರೊಳ್ಳಿತು ಕಷ್ಟ
ಉತ್ರ‍ಕಷ್ಟವಾಗಲಿ ಹರಿಯೆ ಎನ್ನ ದೊರೆಯೆ
ಕಟ್ಟಕಡೆ ನಿನ ಧ್ಯಾನ ಕೊಟ್ಟು ಕಾಯುವ ಭಾರ
ಘಟ್ಟಿ ಕಂಕಣ ಕಟ್ಟಿ ನಿಂತಿಹೆ ಶ್ರೀ ಶ್ರೀನಿವಾಸ ಎನ್ನ
ದುಷ್ಟತನವೆಲ್ಲ ಕುಟ್ಟಿ ಕೆಡಹುವೆ
ಕಟ್ಟಕಡೆಗೆ ನಿನ್ನ ಪಾದಾಂಗುಷ್ಠ ಸೇರಲಿಯೆಂದಾ ಭಕ್ತರ
ಬೆಟ್ಟದೊಡೆಯನೆ ಸಲಹುತಿರುವೆ
ಉತ್ರ‍ಕಷ್ಟ ಮೂರುತಿ ಭಕ್ತರಿಷ್ಟದಾಯಕ ೩

 

೪೦
ನಿನ್ನ ನೆನೆಯುವುದೆ ಭಾಗ್ಯ ನಿನ್ನ ನೋಡುವುದೇ ಕಂಗಳಿಗೆ ಹಬ್ಬ
ನಿನ್ನ ಬಳಿ ನಲಿದಾಡುವುದೇ ಭಕ್ತರಿಗಿಷ್ಟ
ನಿನ್ನಗಲಿ ಇಹದೊಂದು ಘಳಿಗೆಯೂ ಅವರ ಮನಸಿನಲಿ
ಪÀನ್ನಗಾದ್ರಿನಿವಾಸ ಆಪನ್ನರಕ್ಷಕ ಅಖಿಳ ದೇವೇಶ
ನಿನ್ಹೊರತು ಗತಿಯಮಗಾರೆಂಬರೊ ನಿನ್ನ ಭಕ್ತರು ಶ್ರೀ ಶ್ರೀನಿವಾಸ

 

೪೧
ನಿನ್ನ ಪದ ಧ್ಯಾನಿಪರು ಪಗಲಿರುಳು ನಿನ್ನ ಭಕ್ತರು ಹರಿ
ನಿನ್ನ ರೂಪ ನೆನೆನೆನೆದು ಸ್ಮರಿಸಿ ಮನದಲಿ ನಿಲಿಸಿ ಸ್ತುತಿಸಿ
ನಿನ್ನ ಪಾದ ಧೂಳು ಶಿರದಲ್ಲಿ ಧರಿಸುವರು ಭಕ್ತರು
ನಿನ್ನ ರೂಹವ ಮನಸಿನ ಜಗಲಿಯಲಿ ನಿಲಿಸುವರು ಭಕ್ತರು
ನಿನ್ನ ನಂಬಿ ಸಕÀಲಕಾರ್ಯ ನಿರ್ವಹಿಸುವರು ಭಕ್ತರು ಹರಿ
ನಿನ್ಹೊರತು ಅನ್ಯರನು ನೆನೆಯರೊ ಪನ್ನಗಾದ್ರಿನಿವಾಸ ಶ್ರೀ ಶ್ರೀನಿವಾಸ
ನಿನ್ನ ಭಕ್ತರ ಸಂಗಕೊಡೊ ಎನಗೆ ಸರ್ವೇಶ

 

ಆರ್ಯರಾಮರಾಯರು ಮಡದಿಸೀತಾಬಾಯಿ
೪೨
ನಿನ್ನ ವಲಿಸುವ ಭಾಗ್ಯ ನಿನ್ನ ಭಕ್ತರಿಗೆ ನೀ ಕೊಟ್ಟು
ಮನ್ನಿಸುತಲವರಪರಾಧ ಸನ್ನುತ ಚರಿತರಿಗೀವೆಯಲ್ಲದೆ
ನಿನ್ನ ಮಹಿಮೆಯ ತೋರುವ ಅನ್ಯರಿಗೆ ಈ ಭಾಗ್ಯವುಂಟೆ
ನಿನ್ನ ವಲಿಸಲು ಸಂಪನ್ನ ಶ್ರೀ ಶ್ರೀನಿವಾಸ ೧
ಸೂರ್ಯ ತೇಜಕೆ ಪ್ರತಿ ಕೋಟಿಸೂರ್ಯ ತೇಜ ಧರಿಸಿ
ಆರ್ಯ ರಾಮರಾಯರಾ ಕರಗತದಿ ಮೆರೆದೊ ಜಗತ್ಸಿರಿಯೆ ಆ
ಆರ್ಯರಾ ಮಡದಿ ಸೀತಾಬಾಯಿ ಎಂಬುವರಾ ಆ
ಈರ್ವರಾ ಸೇವೆಯಲಿ ಮೆರೆದ ಸುರತರುವೆ ಶ್ರೀ ಶ್ರೀನಿವಾಸ ೨
ನಿನ್ನ ಸೇವಾಕಾರ್ಯ ಆವಾವುದೆಂದ್ಯೋಚಿಸದೆ
ನಿನ್ನ ಸೇವಾಕಾರ್ಯದಲಿ ನಿರುತ ತಪವನೆಗೈಯೆ
ಮಾನವ ವೇಷಧಾರಿಣಿಯರಾಗಿ ಪುಟ್ಟಿಹರೂ ಜಗದಿ
ಬಕುಳಾವತಿಯ ತೆರದಿ ನಿನ ಸೇವ ನಿರತದಿ ಶ್ರೀ ಶ್ರೀನಿವಾಸ ೩
ಸಕಲವೇದದ ಸಾರ ಗುರುಮುಖದಿಂದ ತಿಳಿದು ನಿ
ನ್ನಖಿಲ ಮಹಿಮೆನರಿಯೆ ಬಿಲ್ವದಳದ
ಲಕುಮಿ ಆವಾಹಿಸಿದ ಬಿಲ್ವರಸವ ನಿನಗರ್ಪಿಸಿ
ಅಕಳಂಕ ಮಹಿಮರು ಸೇವಿಸಿ ಸೌಳ ವರುಷ
ತಪವಗೈದಿಹರೊ ಗುರುವಾಜ್ಞೆಯಲಿ ನಿನ್ನ ಸೇವಿಸೆ ಶ್ರೀ ಶ್ರೀನಿವಾಸ ೪
ನಿನ್ನ ಸೇವಕರಾದ ಆ ಮಾನುನಿಯರನುದ್ಧರಿಶೆ
ನಿನ್ನ ಇಂಥ ಆಟಗಳ ಗೋಪಿಗೆ ಕೃಷ್ಣ ತೋರಿದಂದದಲಿ
ಸನ್ನುತಾಂಗನೆ ತೋರಿ ಭಕ್ತರಭೀಷ್ಟವನು
ಉನ್ನತದಿ ಸಲಿಸೆ ಜಗದಿ ಘನ್ನ ಸಂಪನ್ನ
ಬೆಟ್ಟವನಿಳಿದು ಬಂದಿಹೆಯೊ ನೀ
ಲೀಲೆನೋಡಲು ಶ್ರೀ ಶ್ರೀನಿವಾಸ ೫
ಗಂಗಾಜನಕನೆ ನಿನ್ನುಂಗುಟದಿಂ ಬಂದ ಗಂಗೆಯ
ನೆರೆಯೆ ನಿನ್ನ ಶಿರದಿಂದ ನಿನ್ನಂಗದಿಂ ಬಂದ
ಕೇಸರಿತೀರ್ಥದಾ ಸೊಬಗೇನೆಂದು ಬಣ್ಣಿಪೆನೊ
ಶ್ರೀ ರಂಗನಾಥಾ ಸರ್ವರಿಗೆ ದಾತಾ ರಂಗನಾಥನೇ ನಿನ್ನ
ಪಂಚಾಮೃತದ ಅಭಿಷೇಕ ಕಂಗಳಿಗ್ಹಬ್ಬವೊ
ಜಗದ ಜಂಗುಳಿ ಭಕ್ತರಿಗೆನುತೆ ಶ್ರೀ ಶ್ರೀನಿವಾಸಾ ೬
ತನ್ನ ತೊಡೆಯೊಳಗಿಟ್ಟು ಉನ್ನತದ ಆಭರಣ
ಸನ್ನುತಾಂಗನೆ ಗೋಪಿ ಇಡುವ ತೆರದಿ
ಇನ್ನು ನಿನಗಲಂಕಾರ ಮಾಡುವದೇನ ಬಣ್ಣಿಪೆನೋ
ಸನ್ನುತ ಚರಿತರವರೈಸೇ ನಿನ್ನ ನೇವೇದ್ಯ
ಘನ್ನ ಮಂಗಳಾರುತಿ ಬೆಳಗಿ ನಿನ್ನ ಸ್ತುತಿ ಮಾಡುತ್ತ
ನಿನ್ನ ತೀರ್ಥವನ್ಹಂಚುವರೊ ಭಕ್ತರಿಗೆಲ್ಲ ಶ್ರೀ ಶ್ರೀನಿವಾಸ ೭
ಏನು ಸುಕೃತವ ಮಾಡಿ ಈ ಮಾನುನೀಯರು ಪುಟ್ಟಿಹರೊ
ಗಾನಲೋಲನೆ ನಿನ್ನ ಲೀಲೆ ಜಗಕೆ ಬೇರೆ ತೋರೆ ಮನಸಾರೆ
ಸಾನುರಾಗದಿ ಬಂದು ನಿನ್ನ ಭಕ್ತರಾ ಮಂದಿರಕೆ
ದೀನನಾಥನೆ ನಿನ್ನ ಸಹಿತದಲಿ ಮಾನುನಿಯು
ದಾನವಾಂತಕ ನಿನ್ನ ಮಹಿಮೆ ತೋರುವರೊ
ಏನೆಂದು ಬಣ್ಣಿಸಲಿ ಎನ್ನಳವೇ ಶ್ರೀ ಶ್ರೀನಿವಾಸ ೮
ಒಬ್ಬೊಬ್ಬ ಭಕ್ತರಲಿ ಒಂದೊಂದು ಮಹಿಮೆಯನು
ಅಬ್ಬರದಿ ತೋರುವರೊ ನಿನ್ನ ಮಹಿಮೆಯ ದೇವ
ಮತ್ತೊಬ್ಬರಾ ಮನೆಯಲ್ಲಿ ಪ್ರಸಾದದಾ ಮಹಿಮೆಯನು
ಮತ್ತೊಬ್ಬರಾ ಮನೆಯಲಿ ತೀರ್ಥದಾ ಮಹಿಮೆ ತೋರಿ
ಅಬ್ಬರದಿ ಮೆರೆಸುವರೋ ಶ್ರೀ ಶ್ರೀನಿವಾಸ ೯
ಗಾನ ಪ್ರಿಯನೆ ನಿನ್ನ ಕಲ್ಯಾಣದುತ್ಸವವು
ಏನೇನು ಮಾಡುವ ಕಾರ್ಯ ನಿನ್ನದೇ ಎಂದು
ಆನಂದದಿಂದ ಮಾಡುವರೊ ಹರಿಯೆ ದೋರೆಯೆ
ದೀನನಾಥ ಎನ್ನ ಹೃದಯದಲಿ ನೀನಿಂತು ನುಡಿದಂತೆ
ನುಡಿದಿರುವೆ ಅನಾಥ ಬಂಧು ಶ್ರೀ ಶ್ರೀನಿವಾಸಾ ಶ್ರೀಶಾ ೧೦

 

೪೩
ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ.
ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ.
ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ
ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ ೧
ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ
ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ ೨
ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ
ಕರ್ಣಕುಂಡಲ ಬೆಳಕಾ ತೋರೊ ಕಣ್ಣ ತುಂಬಾ ನೋಡುವೆ
ಬಾರೋ ೩
ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ
ನಿನ್ನ ನೋಡಿ ಧನ್ಯಳಾದೆ ಎನ್ನಕಂದಾ ಮಾಧವ ಬಾರೋ ೪

 

ಲಕ್ಷ್ಮಿಯ ಅಂಶದಿಂದ ಹುಟ್ಟಿದವಳು
೯೬
ನೆನೆಮನವನುದಿನ ಹನುಮದೀಶನ
ಕನಸಿನಲಿ ತನುಸುಖವನು ಬಯಸದೆ ನಿ ಪ.
ಮನಸಿಜ ಪಿತನನೆ ನೆನೆನೆನೆದ್ಹಿಗ್ಗುತ
ನಿನ ಹೃದಯದಲ್ಹರಿಯನು ನಿಲಿಸುತಲೆ
ತನುಮನವರ್ಪಿಸೆ ಜನುಮ ಜನುಮದಘ
ವನು ಕಳೆವನು ರಾಮನುಮಾನವೇಕೆ ೧
ಆರು ಅರಿಯದ ತೋರಿ ಭಕ್ತಿಯೇ
ಬಾರಿ ಪಾಶದಿ ಕಟ್ಟಿಹ ಹನುಮ
ವಾರಿಜನಾಭನು ಹಿಗ್ಗಿ ನಿಲುತಲೆ
ಚಾರುಸೇವೆಗೆ ಬಹೆ ಎನೆ ರಾಮನ ನೆನೆ೨
ಕಲ್ಲಾಗಿದ್ದ ಅಹಲ್ಯೆಯ ರಾಮನು
ನಲ್ಲೆಯ ಮಾಡಿದನರಿಯೆಯ ಮನವೆ
ಚೆಲ್ಲುತ ಕರುಣವ ಶಬರಿಯ ಎಂಜಲನುಂಡ ರಮಾ
ವಲ್ಲಭ ಶ್ರೀ ಶ್ರೀನಿವಾಸ ಕರುಣಿಯೊ ನೆನೆ ೩

 

೪೪
ನೋಡಿ ದಣಯೆನೊ ರಂಗ ನಾ
ಹಾಡಿ ದಣಿಯೆನೊ ನಾ
ಜೋಡು ಕುಂಡಲಧರ ನೀನಾಡಿದಾಟಗಳೆಲ್ಲ ಪ.
ದೇವಕಿ ನಿನ್ನ ಬಾಲಲೀಲೆ ತೋರೆನಲಾದೇವ
ಮೊಸರ ಭಾಂಡವನೊಡೆದ
ಭಾವಜನ್ನಯ್ಯ ಕಡೆಗೋಲು ನೇಣಿನ ಸಹ
ರುಕ್ಮಿಣೀದೇವಕಿಗ್ಹರುಷವನಿತ್ತು ೧
ಅಂದು ಯಶೋದೆ ನಿನ್ನ ಅಂದದ ಮದುವೆಯ
ತಂದು ತೋರೆನೆ ವೇಂಕಟನಾಗಿ
ಕಂದನೆನಿಸಿ ಬಕುಳೆಗೆ ಮದುವೆಯ
ಅಂದದಿ ತೋರಿದೆ ತಂದೆಯಾದವ ಕೃಷ್ಣ ೨
ತೊಡೆಯಲೆತ್ತಿ ನಿನ್ನ ಸಡಗರದಿಂದಲಿ
ಇಡುವಳೊ ಸಕಲಾಭರಣಗಳ
ಮೃಢಸಖ ಶ್ರೀ ಶ್ರೀನಿವಾಸನೆ ಎನ್ನನು
ಕಡೆಹಾಯಿಸೆಂದು ಬಿಡದೆ ಧ್ಯಾನಿಪಳೊ ೩

 

೪೫
ನೋಡೆಲೆ ಸುಮತಿ ಪೆಣ್ಮಣಿಗೊಲಿದ
ಗಾಡಿಗಾರ ಚೋರ ರೂಢಿಗೆ ರಂಗ ಪ.
ಈಡುಂಟೇ ಶತ ಜೋಡಿಶೆ ಶಿಶುಗಳ
ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ.
ಅಪ್ರಾಮೇಯನ ಗುಡಿಯೊಳಗಿದನೆ
ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ
ಳೊಪ್ಪುತಲಿಹನೆ ಬೆಡಗಿಂದೊಡನೆ
ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ
ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ
ದರ್ಪ ಕೋಟಿ ತೇಜದಿ ಮೆರೆವನ ೧
ಅರವಿಂದದಳ ವೆಂಕಟನಿರುವಲ್ಲೆ
ತಿರುಮಲ ನಾರಾಯಣ
ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ
ಸರಸ ಸಂಚರಿಸುವ ವರ ಚೈತ್ರದ ರಥ
ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ
ದುರಿತ ದೂರ ಕಣಿ ವರಪ್ರದ ದೇವ
ಅರಿದವರಿಗೆ ಕಣ್ ತೆರೆವನು ದೇವ ನೋಡೆ ೨
ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು
ಇಪ್ಪನೆ ತನಯರನು
ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ
ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ
ತಪ್ಪನೆಲ್ಲವಪ್ಪಿಪ್ಪನೊ ಕರುಣವ
ಸರ್ಪಶಯನ ತಿಮ್ಮಪ್ಪನ ಕರುಣ
ಒಪ್ಪ ತೆರದಿ ಸ್ತುತಿ ಮಾಡುವ ಬಾರೆ ೩

 

೧೪೬
ಉರುಟಣೆ ಹಾಡು
ಪದ್ಮಾವತಿ ನಿಂತು ಮುದ್ದು ಪದ್ಮನಾಭನಿಗೆ
ಪದ್ಧತಿಯಲಿ ಉರುಟಾಣಿಯನು ಮಾಡಿದಳೊ ಪ.
ಪದ್ಮಾಕ್ಷ ನಿನ್ನಯ ಪಾದಪದ್ಮವನೆ ತೋರೀಗ
ಪದ್ಮರೇಖೆಯ ಪಾದಕರಿಶಿಣವ ಹಚ್ಚುವೆನು
ಪದ್ಮ ಸಂಭವನ ಪಿತ ವೆಂಕಟೇಶ ಶ್ರೀಶ ಅ.ಪ.
ಅರವಿಂದ ದಳನಯನ ಕರುಣದಿಂ ಪಣೆ ತೋರು
ವರ ಕುಂಕುಮದ ತಿಲಕ ತಿದ್ದುವೇನು ಕೃಷ್ಣ
ಕೊರಳ ತೋರೆಲೊ ದೇವ ಶ್ರೀ ವತ್ಸದಾಮೇಲೆ ಮೆರೆವ
ತೆರ ಹಾರಹಾಕುವೆನೀಗ ಶ್ರೀಶಾ ಸುರವಂದ್ಯನೆ ದೇವ ಶ್ರೀನಿವಾಸ ೧
ವೇದಾಭಿಮಾನಿಯೆ ವೇದದಿಂದಮುತ್ರವನು
ಆದರದಿ ಭಕ್ತರಿಗೆ ಕೊಟ್ಟಿ ಕರಕೆ
ಮೋದದಿಂದ ಗಂಧವನು ಹಚ್ಚುವೆನು ಎಲೊ ದೇವ
ಸಾಧಿಸಿ ಭೂಮಿಯ ತಂದ ವರಹ ಕಂಠವ ತೋರೋ
ಆದರದಿ ಹಚ್ಚುವೆನು ದೇವ ದೇವ ೨
ಕಂದನಾ ನುಡಿಕೇಳಿ ಕಂಬದಿಂ ಬಂದವನೆ
ಅಂದದಿಂ ಬ್ರಹ್ಮಚಾರಿಯಾಗಿ ಮೆರೆವ ದೇವ
ಸುಂದರ ಪರಶುರಾಮ ಅಂದದ ದಶರಥಸುತನೆ
ಮಂದರೋದ್ಧರ ಕೃಷ್ಣ ಸುಂದರ ಬೌದ್ಧ ಕಲ್ಕಿ ನಿನ್ನ
ಮಂದಗಮನೆಯ ವೀಳ್ಯ ಸ್ವೀಕರಿಸೊ ಶ್ರೀ ಶ್ರೀನಿವಾಸಾ ೩

 

೪೬
ಪಯಸಾಗರ ಶಯನನೆ ಭಜಿಪೆನು ನಿನ್ನ
ಭವಸಾಗರದಾಟಿಸು ಶ್ರೀಹರಿ ಎನ್ನ ಪ.
ಹಿಂದೆ ಮುಂದೆ ಗತಿ ನೀನೆಂದು ನಂಬಿರುವೆ
ಇಂದಿರೆಯರಸನೆ ಎಂದಿಗಾದರು ಕಾಯೊ ತಂದೆ
ಬಂದು ಎನ್ನ ಬಂಧನ ಬಿಡಿಸೊ ೧
ಕರುಣಾಸಾಗರ ವರದಮೂರುತಿ ನಿನ್ನ
ಸ್ಮರಣೆಯೆನಗೆ ನೀ ನಿರುತದಿ ನುಡಿಸು
ಪರಮಪಾಮರನಿಗೆ ನಿನ್ನ ಚರಣವ ತೋರೊ ೨
ಪುಟ್ಟಿಸಿದವನೀ ಕಷ್ಟ ಪಡಿಸುವುದು
ಇಷ್ಟವೆ ನಿನಗದು ಕೃಷ್ಣಮೂರುತಿ
ಸೃಷ್ಟೀಶ ಶ್ರೀ ಶ್ರೀನಿವಾಸ ದೊರೆಯೆ ೩

 

೧೩೪
ಪರರ ಮನೆಗೆ ಪೋಗಿ ತಿರುಗುವೆ ಯಾತಕೆ
ಸುರತರುವಿರುವದ ಅರಿಯದೆ ಮನುಜ ಪ.
ವರದಿಹ ಸುರಮುನಿ ಗುರುವರ ನಾರದ
ಪೊರೆವ ಹರಿ ಎಂದ ಪುರಂದರದಾಸರ ಅ.ಪ.
ವರ ದಿವಕರನೇಳದ ಮುನ್ನ ಸ್ಮರಿಸುತ
ಹರಿಯ ನೀನೇಳೆಂದು ಕರುಣಸಾಗರ
ಹರಿಚರಣಕೆ ನಿನ್ನಯ ಹರಣವ ಬಾಗುತೆ
ಪೊರೆವ ನಿನ್ನ ಜೀವವೆಂದರುಹಿದ ಮರೆತು ನೀನನುದಿನ ೧
ಅಂಗನೆ ದ್ರೌಪದಿ ಗಂಗ ಸ್ನಾನಕೆ ಪೋಗೆ
ರಂಗನ ಚರಣವ ಸ್ಮರಿಸುವಂಥ ಶುಕರು
ಹೆಂಗಳೆಯನು ಮಾನಂಗಳ್ವಸ್ತ್ರವ ಬೇಡೆ
ಮಂಗಳೆ ಕೈಯಿಂದ ರಂಗನ ಕೊಡಿಸಿರೆಂದು ಮರೆತುನೀನನುದಿನ೨
ಆರು ಸ್ತುತಿಶಿದರು ಪೊರೆವೆಂಬ ಬಿರುದನು
ತೋರಿದ ಜಗಕೆ ಕೃಷ್ಣನೆಂಬೋ
ನಾರಿ ಸೊಲ್ಲ ಕೇಳಿ ಭೋರೆಂಬೊ ಸಭೆಗೆ ತಾ
ಕೋರಿದಕ್ಷಯ ಶೀರೆ ಶ್ರೀ ಶ್ರೀನಿವಾಸನು ಮರೆತು ನೀನನುದಿನ೩

 


ಪಾರ್ವತೀತನಯ ಪಾಲಿಸು ಎನ್ನಾ ಪ.
ಪಾರುಗಾಣಿಸುತೆನ್ನ ಮನದಲ್ಲಿನಿಂದು ಅ.ಪ.
ರಜತಾದ್ರಿವಾಸನ ರಮಣಿ ಪುತ್ರನೆ ನಿನ್ನ
ತ್ರಿಜಗÀ ಪೂಜಿಸುವುದೆಂದರಿತು ನಿನ್ನ
ಭಜಿಸದೆ ನೊಂದೆನೊ ಭುಜಗ ಭೂಷಣ ಸುತನೆ
ಕದನವ್ಯಾತಕೊ ದೇವಾ ಕಡೆಹಾಯಿಸೊ ಗಣಪಾ ೧
ಗಂಗಜನಕನ ನಾಮ ಹಿಂಗದಲೆ ನುಡಿಸೆನಗೆ ಭೂ
ಜಂಗುಳಿಗೆ ವಿದ್ಯಾಧಿದೇವದೇವಾ
ಹಿಂಗಿಸುತಲಜ್ಞಾನ ರಂಗನಾ ಮರಿಮಗನೆ
ಕಂಗಳಿಂದಲಿ ನೋಡಿ ಸಲಹೆನ್ನನು ದೇವಾ ೨
ಶ್ರೀ ಶ್ರೀನಿವಾಸನ್ನ ತೋರುತ ಮನದಲಿ
ಶ್ರೀಕರನೆ ಕರುಣಿಪುದು ಸ್ತುತಿಪ ಮತಿಯಾ
ಏಕಭಕುತಿಯಲಿ ಸ್ತುತಿಸುವಾ ನರರಿಗೆ
ಶ್ರೀಕಮಲನಾಭನ್ನ ತೋರುವಾ ಗಣಪ ೩

 

೧೦೭
ಪಾರ್ವತೀಶ ಎನ್ನಿರೋ ಮನಸಾರೆ
ಪಾರ್ವತೀಶ ಎನ್ನಿರೊ ಪ.
ಪಾರ್ವತೀಶನ ಭಜಿಸಿ ನಿಮ್ಮನು
ದ್ಧಾರ ಮಾಡುತ ಹರಿಯ ಮಹಿಮೆಯ
ಸಾರಿ ಭಜಿಸಲು ಮನವನೀಯುವ
ಕಾರ್ಯ ದುರಂಧರ ಈಶನನ್ನು ಅ.ಪ.
ತರುಣಿ ಅಸ್ತಂಗತನಾಗುತಿರೆ
ಹರುಷದೊಳೊಮ್ಮೆ ಶಂಭೊ ಎಂದು
ವರ ಉಚ್ಚಾರವ ಮಾಡಲಾಕ್ಷಣ
ತರಿದು ನಿಮ್ಮಯ ಸಕಲ ಪಾಪವ
ಪೊರೆವ ಕರುಣಿ ಈಶನೆನ್ನುತ
ಸ್ಮರಿಸಿ ಸುಖದೊಳು ಬಾಳಿ ಜಗದೊಳು ೧
ಶ್ರೀಶ ಶ್ರೀರಾಮ ಪಾದ ನೆನವ ಶಂಭೋ ಎಂ
ದೀ ಸುನುಡಿಯ ತಿಳಿದು
ಭಾಸುರಾಂಗನ ಮೊಮ್ಮಗನ ಸ್ತುತಿ ಲೇಸು
ಎಂದು ಧ್ಯಾನವ ಮಾಡಲು
ಸೂಸಿ ಕರುಣವ ಬೀರಿ ನಿಮಗೆ
ಲೇಸು ಮಾಡುತ ಹರಿಯ ತೋರುತ ೨
ಪಾಶಾಂಕುಶಧರನೆನಲು ನಿಮ್ಮಯ ಪಾಪ
ರಾಶಿ ಖಂಡಿಸಿ ಪೊರೆದು
ಶ್ರೀ ಶ್ರೀನಿವಾಸ ಪದವನು
ಈಶ ಧ್ಯಾನಿಪ ಮನವನೀವನು
ಸೂಸಿ ಭಕ್ತಿಯೊಳ್ ಶ್ರೀಶ ಭಕ್ತರು
ವಿಶ್ವಾಸದಿಂದಲಿ ಈಶ ಎನ್ನಿರೋ ಈ ಸಂಸಾರ ಈಸಲೋಸುಗ ೩

 

೧೧೩
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ
ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ.
ರಜತಾದ್ರಿ ನಿವಾಸಿ ತ್ರಿಜಗ ಪೂಜಿತೆ ನಿನ್ನ
ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ ೧
ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ
ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು ೨
ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ
ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ೩

 

೯೯
ಪಾಲಿಸಮ್ಮ ತುಳಸಿ ಹೂ ತಡವ ಮಾಡದೆ
ನಿನ್ನ ವಾರಿ ತುರುಬಿನಲ್ಲಿ ಇರುವ ಪಾರಿಜಾತವಾ ಪ.
ಒಂದೊಂದು ದಳದಲ್ಲಿ ಒಂದೊಂದು ಮೂರುತಿ
ಒಂದನೇ ಕಾಲದಲ್ಲಿ ವರವ ಕೊಡುವಳು ೧
ಎರಡೆರಡು ದಳದಲ್ಲಿ ಎರಡು ಮೂರುತಿ
ಎರಡನೆ ಕಾಲದಲ್ಲಿ ವರವ ಕೊಡುವಳು ೨
ಮೂರನೇ ಕಾಲದಲ್ಲಿ ಮೂರು ಮೂರುತಿ
ಸಾರಿ ಶ್ರೀ ಶ್ರೀನಿವಾಸ ಸಲಹುವನೆ ೩

 

೧೧೪
ಪಾಲಿಸು ಪಾಲಿಸು ಪಾಲಿಸು ಸುಮನಾ
ಪಾರ್ವತಿ ತಾಯೇ ಪ.
ಪಾಲಿಸು ಶ್ರೀ ರಜತಾದ್ರಿನಿವಾಸಿ ಶೀಲಮೂರುತಿ
ಶಿವಶಂಕರಿ ದೇಹಿಮೆ ಅ.ಪ.
ಮನಕಭಿಮಾನಿ ಮಾನುನಿರನ್ನೆ ಸರ್ವ
ತನುಮನನಿನಗರ್ಪಿಸಿಹೆನೆ ತಾಯೆ ಕಾಯೆ
ಅನುದಿನ ನಿನ್ನಯ ಚರಣವ ಪೂಜಿಪ
ಮನವಿತ್ತು ಕರುಣದಿ ನಿನ್ನ ತನುಜರಿಗೇ ನೀಡೆ ೧
ಪಂಕಜಗಂಧಿನಿ ಪಂಕಜಾಕ್ಷಿಯೆ ಶಿವ
ನಂಕದಿ ಅಲಂಕೃತ ಮಾತೆ ಸುಗೀತೆ ತಾಯೆ
ಅಂಕುರವಾಗುವ ತೆರ ನಿನನಾಮವ
ಕಿಂಕರರಿಗೆ ನೀಡಿ ದಯಮಾಡೆ ತಾಯೆ ೨
ಶ್ರೀಶ ಶ್ರೀ ಶ್ರೀನಿವಾಸ ಸಹೋದರಿ
ಈಶನೈಯ್ಯನೈಯ್ಯನೊಲಿಸುವ ಮರೆಯ
ಲೇಸು ಮಮತೆಯಿಂದ ಪಾಲಿಸೆ
ಶಂಕರಿ ಶುಭಕರಿ ೩

 

೧೩೦
ಪಾಲಿಸೈಯಪಾರ ಮಹಿಮ ಪತಿತ ಪಾವನ ಪ.
ಪಾಲವಾರುಧಿಶಯನ ಕೃಪಾಲವಾಲ ನೀಲ ಎನ್ನ ಅ.ಪ.
ಇಂದಿರಾ ಮನೋಹರ ಆನಂದ ಮೂರುತಿಯೆ ನಿನ್ನ
ವಂದಿಸಿ ಬೇಡುವ ಎನಗೆ ಸಂದರುಶನವೀಯ ರಾಯ
ತಂದೆ ಮುಕುಂದ ಮನ್ನಿಸೆಲೊ ಕಂದನಾದೆನ್ನ ಮರೆಯದೆ
ಬಂದು ನಿಂದು ಮುಖವ ತೋರೊ ಸುಂದರ ಅರವಿಂದನಯನ ೧
ತಾತನಾಗಿ ಎನ್ನೊಳೊಂದ ಮಾತನಾಡದಿರುವರೇನೊ
ನಾಥ ನೀನೇ ಕಾಯದಿರಲು ಖ್ಯಾತಿವಂತರನ್ನು ಕಾಣೆ
ಏತರ ಖಾತಿ ಎನ್ನೊಡನೆ ಸೋತು ಬಿನ್ನೈಸಿದರೊ ಹರಿ
ನೀ ತೊರೆವರೆ ಮದನಪಿತ ಪಾರ್ಥಸಾರಥಿ ಪರಾಕು ೨
ಕೇಶವ ಮಹಾನುಭಾವ ವಾಸುದೇವ ಕೈಯ ಬರದೆ
ಪೋಶಿಸಯ್ಯ ಮುರವಿರೋಧಿ ಶ್ರೀಶ ಶ್ರೀನಿವಾಸ ದೇವ
ದೋಷವ ನಾಶಮಾಡಿ ನಿನ್ನ ದಾಸನೆಂದೆನಿಸೊ ನಿನ್ನ
ಬೇಸರಿಸದೆ ಶೇಷಗಿರಿವಾಸ ವೆಂಕಟೇಶ ಪೊರೆಯೊ ೩

 

೪೭
ಪಾಹಿ ಶ್ರೀ ನರಸಿಂಹಾ ಪಾವನ್ನ ಮಾಡೆನ್ನಾ ನರಹರಿ ಪ.
ಅತಿಶಯವಾದ ಪಿತನ ಬಾಧೆಗೆ ಸುತ ಪ್ರಹ್ಲಾದ
ಖತಿಯಿಂದ ಕೂಗೆ ದಿತಿಸುತನ ಅಸುನೀಗೆ ಉದಿಸಿದೆಯೊ ೧
ಸ್ಥಂಭದಿಂದುದಿಸ್ಯವನ ಡಿಂಭವ ಬಗೆದು
ಅಂಬುಜಾಕ್ಷ ಕರುಳಾ ಹಾರವ ಧರಿಸೇ
ಅಂಬರದೀ ಸುರರೆಲ್ಲಾ ಸ್ತುತಿಗೈಯ್ಯೆ ೨
ಕಂದನ ಸಲಹಿದ ತಂದೆ ಶ್ರೀ ಶ್ರೀನಿವಾಸ
ನಿಂದು ನಾ ಪ್ರಾರ್ಥಿಪೆ ಬಂಧನ ಬಿಡಿಸಿ
ಬಂದು ನೀ ಕಾಯೊ ಶ್ರೀ ಹರಿಯೆ ೩

 

೪೮
ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ.
ಮುತ್ತಿನಾಭರಣವ ತೊಡಿಸುವೆನು
ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ
ಮಸ್ತಕದರಳೆಲೆ ಮಾಗಾಯಿ ಪೊಳೆಯುತ
ಕಸ್ತೂರಿ ರಂಗ ಬಾರೊ ೧
ಕಂಗಳಿಗೆ ಕಪ್ಪು ಹಚ್ಚುವೆನೊ
ರಂಗಗೆ ಪೀತಾಂಬರುಡಿಸುವೆನೊ
ಮಂಗಳಾಂಗಗೆ ನಾ ಶೃಂಗಾರ ಮಾಡಿ
ಕಂಗಳಿಂ ನೋಡುವೆನೊ ೨
ಕಾಲಲಂದಿಗೆ ಗೆಜ್ಜೆ ಫಳಿರೆನುತ
ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ
ಬಾಲ ಗೋಪಾಲ ಸುಶೀಲ ಮುರಳಿಧರ
ರಮಾಲೋಲ ಶ್ರೀ ಕೃಷ್ಣ ಬಾರೋ೩

 

೧೧೫
ಪೂಜಿಪೆ ಜಗದಂಬಿಕೆಯಾ ಅಂಬಿಕೆಯ
ಮಾನಸ ಮಂದಿರದಲಿ ಭಕ್ತಿಯಿಂದ
ಮಾ ಪತಿಸೇವಾ ನೀ ನಿರುತದಿ ನೀಡೆ ಪ.
ವರ ಗಂಗಾಜಲದಿಂದಭಿಷೇಕ
ಜರಿ ಪೀತಾಂಬರ ಕಂಚುಕದಿಂದ
ಪರಿಮಳ ಪುಷ್ಪ ಸುರೋಜದಿಂದ
ಅಲಂಕರಿಸುವೆನೀಗಾ ನಾ ಅಲಂಕರಿಸುವೆ ೧
ಅರಿಶಿಣ ಕುಂಕುಮ ಚಂದ್ರದಿಂದ
ಪರಿಪರಿ ಪತ್ರಹೂಗಳಿಂದ ಅರ್ಚಿಪೆ ಮುದದಿಂದ೨
ಕದಳಿ ಖರ್ಜೂರ ದ್ರಾಕ್ಷಾದಿಗಳ
ಬದರಿ ದಾಳಿಂಬ ನೈವೇದ್ಯಗಳಿಂ
ಅರ್ಪಿಪೆ ಅಂಬಿಕೆಗೆ ನಾ ಅರ್ಪಿಪೆ ಅಂಬಿಕೆಗೆ೩
ಆರುತಿ ಬೆಳಗುವೆ ಗೌರೀಗೀಗ
ಆ ರಜತಾದ್ರಿನಿವಾಸಿಗೀಗಾ
ಶ್ರೀ ಶ್ರೀನಿವಾಸನ ಸೋದರಿಗೀಗಾ
ಆರುತಿ ಬೆಳಗುವೆ ೪

 

೮೭
ಪೂಜಿಪೆ ನಾ ಪರಮಪುರುಷನರಸಿ ಲಕ್ಷ್ಮಿಗೆ ಪ.
ತೇಜಮಾದ ಭದ್ರಪೀಠದಿ ರಾಜೀವಾಕ್ಷಿ ಲಕುಮಿಯ ಅ.ಪ.
ಧ್ಯಾನಮಾವಾಹನವ ಮಾಡಿ ಸ್ನಾನ ವಸವ ತೊಡಿಗೆ ತೊಡಿಸಿ
ಮಾನನಿಧಿಯಾ ಭದ್ರ ಪೀಠದೊಳಟ್ಟು ಧ್ಯಾನನುಷ್ಠಾನದಿಂದ
ಪೂಜಿಸುವೆನು ೧
ಅರಿಶಿನ ಕುಂಕುಮವನರ್ಚಿಸಿ ಭರದಿ ಗಂಧಾಕ್ಷತೆಗಳಿಂದ
ಮರುಗ ಮಲ್ಲಿಗೆ ಜಾಜಿ ಕುಸುಮ ಥರ ಥರ ಸುಮ
ಮಾಲೆಯಿಂದ ೨
ಕದಳೀ ಖರ್ಜೂರ ದ್ರಾಕ್ಷಿ ಮಧುರ ದಾಳಿಂಬ ನಾರಿಕೇಳ
ಮುದದಿ ಅರ್ಪಿಸಿ ಕರ ಚರಣ ತೊಳೆದು ಸದಮಲೆಗಾರುತಿ
ಬೆಳಗುವೆನು ೩
ಸಿಸ್ತಿಲಿ ಚಾಮರವ ಬೀಸಿ ಸ್ವಸ್ತಿ ಪೇಳುತ ವರಗಳ ಬೇಡಿ
ಮುಕ್ತಿದಾತೆ ಮಾಂಗಲ್ಯ ಭಾಗ್ಯವನಿತ್ತು ಪಾಲಿಸೆಂದು
ಕರವ ಮುಗಿದ ೪
ಅಷ್ಟೈಶ್ವರ್ಯದಿಂದ ಮೆರೆವ ದಿಟ್ಟ ಮೂರುತಿ ಶ್ರೀ ಶ್ರೀನಿವಾಸನ
ದಿಟ್ಟ ಮನದೊಳಿಟ್ಟು ಧ್ಯಾನಿಪ ದಿಟ್ಟ ವರವ ಕೊಟ್ಟು ನೀ
ಕರುಣಿಸೆಂದು ೫

 

೪೯
ಪೂರ್ವದಲಿ ಸೂರ್ಯಾಂತರ್ಯಾಮಿಯಾಗಿ
ನಾರಾಯಣ ಉದಿಸುವನೆಂದು
ಪೂರ್ವಜರು ಎದ್ದು ಹರಿಧ್ಯಾನ ಮಾಡುವರು
ಆ ಪೂರ್ವಾಂತರ್ಯಾಮಿ ಅವರ ಸಲಹಲು ಸರ್ವದಾ ಅಪೂರ್ವ
ತೇಜೋವಂತನಾಗಿ ಅವರ ಹೃದಯದಿ
ಸೂರ್ಯತೇಜದಿ ಮೆರೆಯುತಿರುವ ಸರ್ವದಾ ಎಂದು
ಅಪೂರ್ವ ಜ್ಞಾನದಿ ನೆನಯುತಿರಿ
ಶರ್ವಾದಿವಂದಿತ ಶ್ರೀ ಶ್ರೀನಿವಾಸನ್ನ ನೆನದು ಸುಖಿಯಾಗಿ
ಹರಿಭಕ್ತರು ೧
ಎದ್ದು ಮುಖ ತೊಳೆದು ನಿಮ್ಮಲ್ಲಿದ್ದ ಕಲ್ಮಷ ತೊಳೆದು
ನಿಮ್ಮ ಶುದ್ಧ ಮನದಲಿ ನೆನೆದು ನಿಲಿಸಿ ಹರಿ ಧ್ಯಾನದಿ
ಸ್ನಾನಾನ್ಹೀಕಬದ್ಧಕಂಕಣರಾಗಿ ಬ್ರಾಹ್ಮೀಮುಹೂರ್ತದಲಿ ಗೈಯೆ
ನಿಮ್ಮಲ್ಲಿದ್ದ ಕಲ್ಮಶವೆಲ್ಲ ಕಳೆದತಿ ಹರ್ಷವೀವ
ನಿಮ್ಮ ಶುದ್ಧಾಚರಣೆಗೆ ಮೆಚ್ಚಿ ನಿಮ್ಮ ಭಕ್ತಿಗೆ
ಶ್ರೀ ಶ್ರೀನಿವಾಸನೆಂದರಿತು ನಿತ್ಯ ಬದ್ಧ ಕಂಕಣರಾಗಿ ಸ್ತುತಿಸೆ
ನಿತ್ಯ ಹರಿ ಭಕ್ತರು ೨
ಮಧ್ಯಾನ್ಹದಲಿ ಯಿಂದು ಮಣಿಕರ್ಣಿಕೆಯ ನೆನೆದು
ಮಾಧ್ಯಾನ್ಹಿಕಾದಿಗಳಾಚರಿಸುತ ಹರಿಯ
ಮಧ್ಯವರ್ತಿಯನೆನಿಸಿ ಆ ಸೂರ್ಯನಂತರ್ಯಾಮಿ ನಾರಾಯಣನಿ-
– ಗಘ್ರ್ಯಪಾದ್ಯವನಿತ್ತು ಸುಭೋಜನವ ಮಾಡಿ
ನಿಮ್ಮ ಪೂರ್ವಜರನುಗ್ರಹದಿ ಮಜ್ಜನ್ಮಸಾರ್ಥಕವೆಂದಾವನರಿವನೋ
ಅವನ ಹೃದಯ ಮಧ್ಯವರ್ತಿಯಾಗಿದ್ದು ಕಾವ
ಸದ್ಗುಣೋಪೇತ ಭಕ್ತರ ಕೈ ಬಿಡ
ಮಧ್ವಾಂತರ್ಗತ ಶ್ರೀ ಶ್ರೀನಿವಾಸ ಅವನ ಮನದಿ ನೆನೆಯಿರಿ
ಹರಿ ಭಕ್ತರು ೩
ಜವನ ಬಾಧೆಯು ಇಲ್ಲ ಹರಿ ಭಕ್ತರಿಗೆ
ಯವನ ರೂಪದ ಕಲ್ಕಿ ಹರಿಯ ನೆನೆವರಿಗೆ
ಜವದಿ ಯಮನಾಳ್ಗಳು ಮುಟ್ಟಲಂಜುವರು ಹರಿಭಕ್ತರನು
ಕವಿ ನಾರಾಯಣನ ಧ್ಯಾನಿಪರಿಗೆ ಅವನಿಯೊಳು ಭಯವಿಲ್ಲ
ಅವರಿಗೆ ಸಮನಿಲ್ಲ ಅವರಲ್ಲಿ ಹರಿಯಿದ್ದ ಕಾರಣದಿ
ಜವದಿ ಹರಿ ದಾಸರೆಲ್ಲ ಶ್ರೀ ಶ್ರೀನಿವಾಸನ ಭಕ್ತರ
ಸಂಗದೊಳಿರಿ ಹರಿಭಕ್ತರು ೪
ಯಾರ ಭಯವಿಲ್ಲ ಹರಿ ನಾಮಕೆ
ದಾರಿ ಹೋಕರು ಬಾರರಿದಕೆ
ಭಾರವಿಲ್ಲವು ಮನಕೆ ಸಂಸಾರಭಯವಿಲ್ಲವರಿಗೆ
ಹರಿ ಎಂಬುದನೆ ಸಕಲ ಕಾರ್ಯವ ನಿರ್ವಹಿಸುವನೆಂದರಿತವರಿಗೆ
ಯುಕುತಿ ಬುದ್ಧಿಯು ಯಾತಕೆ ಯಾರ ಭಯವೇಕೆ
ಹರಿಸಖರಾಗಿರಲವರಿಗೆ ಅಂಜಿಕೆಯಾಕೆ
ಯಾರನಾಶ್ರಯಿಸುವ ಶ್ರಮವಿಲ್ಲ ಇದನರಿತು ಹರಿಭಕ್ತರು
ಶಕುನ ಅಪಶಕುನವೆನ್ನರು ಮನದಿ
ಯುಕುತಿಯ ಮಾಡರು ಪರರ ಬೇಡೆ ಶ್ರೀ ಶ್ರೀನಿವಾಸ ಭಕ್ತರು
ಅವರ ಮತ ಹಿಡಿದು ಬದುಕಿ ಹರಿಭಕ್ತರು ೫
ಜತೆ
ಕರುಣಾಕರ ಹರಿಭಕ್ತರಭಿಮಾನಿ ವರದಭಯ
ಹಸ್ತವ ಕೊಡುವ ಶ್ರೀ ಶ್ರೀನಿವಾಸ

 

೫೦
ಪೆಪ್ಪರ್ ಮೆಂಟ್ ಪೆಪ್ಪರ್ ಮೆಂಟ್ ಪೆಪ್ಪರ್ ಮೆಂಟ್
ವರ ಪೆಪ್ಪರ್ ಮೆಂಟ್
ಚಪ್ಪರಿಸಲು ಬೇಕಾದವರು ಬನ್ನಿ
ಇಷ್ಪೊದು ಮಧ್ವಾಚಾರ್ಯರಲ್ಲಿದು ಪೆಪ್ಪರ್ ಮೆಂಟ್ ಪ.
ಚೀಪೂತಲಿದ್ದರು ಸವೆಯುವದಲ್ಲವು
ಆಚಾರ್ಯರವರ ಪೆಪ್ಪರ್ ಮೆಂಟ್
ಜಾತಿ ಭೇದವಿಲ್ಲ ಇದಕೆ ಭಕ್ತಿ ಕಾರಣ
ನೀತಿ ಶಾಸ್ತ್ರಾಮೂಲಾಧಾರದ ಪೆಪ್ಪರ್ ಮೆಂಟ್ ೧
ಕಾಸಿಗೆ ಸಿಗದು ಪೆಪ್ಪರ್ ಮೆಂಟ್
ಸೂಸಿ ಉಕ್ಕುವೊ ಪೆಪ್ಪರ್ ಮೆಂಟ್
ಸಾಸಿವೆಯಷ್ಟೊತ್ತು ನೆನದರೆ
ಸಾಕೆಂಬ ಕಲಿಯುಗ ಮಹಿಮೆಯ ಪೆಪ್ಪರ್ ಮೆಂಟ್ ೨
ಆಕುಲ ಈಕುಲ ಇಲ್ಲವೆಂಬುದನರಿಸಲು
ಬೇಕಾದಂತಹ ಪೆಪ್ಪರ್ ಮೆಂಟ್
ನಾಲ್ಕು ವೇದವನೊಂದೇ ಬಾರಿಗೆ
ನಾಲ್ಕು ಹಸ್ತದಿ ತಂದ ಪೆಪ್ಪರ್ ಮೆಂಟ್ ೩
ನಾಕಚಾರವಂದ್ಯನ ಸ್ತುತಿಗೊದಗುವ
ಅನೇಕ ರೂಪದ ಪೆಪ್ಪರ್ ಮೆಂಟ್
ಸಾಕುವ ಭಕ್ತರಿಗಮೃತನೆರೆವ
ಸಾಕಾರ ರೂಪದ ಪೆಪ್ಪರ್ ಮೆಂಟ್ ೪
ಭೂಮಿಯ ತಂದ ಸೂಕರ ರೂಪ
ದ ದಿವ್ಯ ಪೆಪ್ಪರ್ ಮೆಂಟ್
ಭುವಿಯೊಳ . . . . . .
ಮೊರೆಯ ತೋರಿದ ಪೆಪ್ಪರ್ ಮೆಂಟ್ ೫
ಧರುಣಿಯ ಪಾದದಿಂದಾಕಾಶಾಪಾತಾಳಾತ್ವರ
ಮೂರು ಪಾದದ ಪೆಪ್ಪರ್ ಮೆಂಟ್
ಧರುಣಿ ಪಾಲರ ಉರುಳಿಸಿ ಕೆಡಹಿದ
ಕೊಡಲಿ ಮಹಿಮೆಯ ಪೆಪ್ಪರ್ ಮೆಂಟ್ ೬
ಮಂಗನ ಜೊತೆಯಲಿ ಸೇರಿ ನಾರಿಯ
ಇಂಬನರಿತ ದಿವ್ಯ ಪೆಪ್ಪರ್ ಮೆಂಟ್
ಭೂಜಂಗುಳಿ ನಡುಗಲು ಭೋರ್ಗರೆಯಲು ಮಳೆ
ಪುಟ್ಟ ಕಿರು ಬೆರಳಲಿ ಮಂದರ ನೆಗಹಿದ ಪೆಪ್ಪರ್ ಮೆಂಟ್ ೭
ತ್ರಿಪುರ ಸತಿಯರ ವ್ರತವಳಿಯಲು ತಾ
ಸುಖಮಯ ವಸನರಹಿತದಾ ಪೆಪ್ಪರ್ ಮೆಂಟ್
ಸ್ವಪರಿವಾರ ಸಹಿತ ಹೆಗಲೇರಿದ
ಪರಿಮಿತದ ರುಚಿ ಪೆಪ್ಪರ್ ಮೆಂಟ್ ೮
ಕತ್ತಲೆಯನ್ನು ಹರಿಸುವ ದಿವ್ಯಸೂರ್ಯತೇಜ
ಶತಕಿರಣ ಶೋಭ ಪೆಪ್ಪರ್ ಮೆಂಟ್
ಸಿಕ್ಕದು ಅಧಮರಿಗೆಂದಿಗು ಶ್ರೀ ಶ್ರೀನಿವಾಸನೆಂಬ ಪೆಪ್ಪರ್ ಮೆಂಟ್
ಅರ್ಥಿಲಿ ಬುಧರು ಚಪ್ಪರಿಪ ದಿವ್ಯ ಪೆಪ್ಪರ್ ಮೆಂಟ್ ೯

 

೫೨
ಪೋಗದಿರೊ ಗೋಪಿಯರ ಮನೆಗೆ
ಬಾ ಬೇಗ ಶ್ರೀ ಕೃಷ್ಣನೆ ನಮ್ಮ ಮನೆಗೆ ಪ.
ನಾಗವೇಣಿಯರಲ್ಲ ಕೂಡುತ ನಿನ್ನ
ಜಾಗು ಮಾಡದೆ ಹಿಡಿವರೊ ಕೇಳ್ ಮುನ್ನ
ಸೋಗಿ ನವಿಲು ಕುಣಿತದ ಸೊಬಗನ್ನ
ಭೋಗಿಸಿ ನಿನ್ನ ಸೆಳೆವರೊ ಮುನ್ನ ೧
ಜಾರ ಚೋರನೆಂದು ಬಹುವಿಧದಿಂದ
ನಾರಿಯರೆಲ್ಲ ದೂರುತಲಿಹರು ಮುನ್ನ
ಸಾರಸಾಕ್ಷ ಕೃಷ್ಣ ಬಾರೆಲೊ ಮುನ್ನ
ಸಾರಿ ಪೋಗಬೇಡವೊ ಏ ಚಿನ್ನ ೨
ಮುದ್ದೆ ಬೆಣ್ಣೆ ಕೊಡುವೆನೊ ನಾ ನಿನಗೆ
ಹದ್ದಿಲ್ಲದ ಗೋಪೇರ ಗೊಡವ್ಯಾಕೊ
ಸುದ್ದಿಯ ತರುವರೊ ನಿನ ಮೇಲೀಗದೂರಿ
ಸದ್ದು ಮಾಡದೆ ಬಾ ಮುದ್ದು ಶ್ರೀ ಶ್ರೀನಿವಾಸ ೩

 

ಶ್ರೀ ಕೃಷ್ಣನ ಅಣ್ಣ ತಂದೆ ವಸುದೇವ ತಾಯಿ ದೇವಕಿ
೫೩
ಪೋಗುವೆನೆ ರಂಗ ಪೋಗುವೆನೆ ಕೃಷ್ಣ
ಈಗ ಕರೆ ಬಂದಿದೆ ಮಧುರಾ ಪುರಕ್ಕೆ ಪ.
ಮದಿಸಿದ ಕಂಸನು ಚದುರ ಅಕ್ರೂರನ
ಮುದದಿ ಕಳಿಸಿದ ಮಧುರ ವೇಣಿಯೆ ಕೇಳೆ ೧
ಬಿಲ್ಲು ಹಬ್ಬವಂತೆ ಮಲ್ಲರ ಗೆಲ್ಲಬೇಕಂತೆ ಸಖಿ
ಪುಲ್ಲಲೋಚನ ಕೃಷ್ಣಾ ಇಲ್ಲಿ ನÀಮ್ಮನು ಬಿಟ್ಟು ೨
ಕಂಗೊಳಿಸುವ ಬೆಳದಿಂಗಳ ಸೊಗವಿಲಿ
ಪೊಂಗೊಳಲೂದೆಮ್ಮಂಗಕೆÉ ಹರುಷವಿತ್ತ೩
ನಲಿವಿಲಿ ಮೀಸಲು ಬೆಣ್ಣೆಯನಿಡಲು
ನಿಲುಕಿತ ಮೆದ್ದೆಮ್ಮ ಒಲವಿತ್ತುದ್ದರಿಸಿದ ೪
ಗೋಕುಲವೇತಕೆ ಆ ಕಮಲಾಕ್ಷನಾ
ಕಟಾಕ್ಷವಿಲ್ಲದೀಪರಿ ಸಹಿಪುದೆ ೫
ಯಮುನೆಯ ತೀರದೊಳ್ ಎಮ್ಮಯ ವಸ್ತ್ರವ
ಕ್ಷಮೆಯಿಂದಿತ್ತ ಕಮಲನಯನ ಕೃಷ್ಣ ೬
ರಥಬಂದಿದೆ ನೋಡೆ ಅತುಳ ಮಹಿಮಗೆಂದು
ಜತೆಯೊಳು ಬಲರಾಮ ಹಿತದಿ ಅಕ್ರೂರ ಸಹ ೭
ಬಿಟ್ಟಿರಲಾರೆವೆ ಪುಟ್ಟ ಕೃಷ್ಣನ ಪಾದ
ದಿಟ್ಟ ಶ್ರೀ ಶ್ರೀನಿವಾಸಗಿಷ್ಟವಂತೆ ಕೇಳೆ ೮
ಭಕ್ತವತ್ಸಲನೆಮ್ಮ ಭರ್ತನೊಳನುರಾಗವಿತ್ತು
ಬಾಳಿರೆಂದು ಇತ್ತು ವಚನವನ್ನು ೯

 

೮೮
ಬಂದಳು ಭಾಗ್ಯನಿಧಿ ಶ್ರೀಧರನರಸಿ ಪ.
ಪೊಂದಿದ ಭಕ್ತರಾನಂದದ ಸ್ತುತಿಗಾ
ನಂದ ಪಡುತ ಒಂದೊಂದ್ಹೆಜ್ಜೆನಿಡುತಾ ಅ.ಪ.
ಕಡಗ ಕಂಕಣ ತೋಳ್ಬಂದಿಯ ಧರಿಶಿ
ಬಡನಡು ಬಳುಕುತ ದೃಢಭಕ್ತರೆಡೆಗೆ ೧
ಹೆರಳು ಬಂಗಾರದ ಶಿರದ ಮಲ್ಲಿಗೆ ಮುಡಿ
ಸರಸದಿಲುದರುತ ವರಪ್ರದ ಮಾತೆ ೨
ವರದ ಶ್ರೀ ಶ್ರೀನಿವಾಸ ಸ್ವರ ರಮಣಿಯು ತಾ
ಥರಥರದ್ವರಗಳ ಕರುಣಿಸಲೆಮಗೆ ೩

 

೮೯
ಬಂದಳು ಭಾಗ್ಯನಿಧಿ ಶ್ರೀವರನಿಧಿ
ಬಂದಳು ಭಾಗ್ಯನಿಧಿ ಪ.
ಅರಿಶಿಣ ಕುಂಕುಮ ಪರಿಮಳ ಗಂಧವು
ನಿನಗರ್ಪಿಸುವೆನು ತಾಯೆ ಶ್ರೀವರನಿಧಿ ೧
ಜಾಜಿ ಮಲ್ಲಿಗೆ ರೋಜಾ ಸಂಪಿಗೆ
ಸೋಜಿಗಮಾಗಿಹ ಸುರಗಿ ಅರ್ಪಿಸುವೆನು ೨
ಜರಿಯ ಪೀತಾಂಬರ ಝಗಝಗಿಸುತಲಿ
ಜಗದೊಡೆಯನ ರಮಣಿ ಶ್ರೀ ವರಲಕ್ಷ್ಮಿ ೩
ಕದಳಿ ಖರ್ಜೂರವೂ ಬದಳಿ ದಾಳಿಂಬವು
ಮುದದಿ ತೆಂಗಿನಕಾಯಿ ಫಲವ ಅರ್ಪಿಸುವೆನು ೪
ಶುಕ್ರವಾರದಿ ಭಕ್ತರ ಮನೆಯೊಳು
ನಿತ್ಯ ಪೂಜೆಯಗೊಳ್ವ ಶ್ರೀ ವರನಿಧಿ ೫
ಶ್ರೀ ಶ್ರೀನಿವಾಸನ ಪ್ರೀತಿಯ ಲಕ್ಷ್ಮಿ
ನೀ ಕರುಣದಿ ಸಲಹೆ ಶ್ರೀ ವರಲಕ್ಷ್ಮಿ ೬

 

೫೧
ಬಂದಿದ್ದನೆ ರಂಗ ಬಂದಿದ್ದನೆ ಕೃಷ್ಣ ಬಂದಿದ್ದನೆ ಪ.
ಬಂದಿದ್ದನೆ ನಮ್ಮ ಮಂದಿರದೊಳು ಬೆಳ
ದಿಂಗಳ ತೆರದೊಳು ಬಂದಿದ್ದನೆ ಅ.ಪ.
ಗೆಜ್ಜೆ ಕಾಲ್ಕಡಗ ಸಜ್ಜಿನಿಂದಿಟ್ಟು
ಅರ್ಜುನಸಖಕೃಷ್ಣ ಅಜ್ಜಿ ಶಬರಿಗೂಡಿ ರಾಮ
ಯತಿ ಕರ ಪೂಜಿತ ಕ್ಷಿತಿ ತಳ ವಂದಿತ
ಸತಿ ಪದುಮಾವತಿ ಲಕುಮಿ ಸಹಿತ ಕೃಷ್ಣ ೧
ರವಿಯ ಕಾಂತಿ ಕೋಟಿ ಪ್ರಭೆ ಕಿರೀಟವು
ಕಿವಿಯಲಿ ಕರ್ನಕುಂಡಲವು
ಅವನ ವಕ್ಷದಿ ಲಕ್ಷ್ಮಿ ಪೊಳೆವ
ವರದ ಮಾಧವನು೨
ಚತುರ ಹಸ್ತದಿ ಶಂಖ ಚಕ್ರಗದಾ ಪದ್ಮ
ಸತಿ ತುಳಸಿಯ ಮಾಲಧರನೆ
ಜತೆ ತನ್ನ ಭಕ್ತರ ಹಿತದ ಪೂಜೆಯಗೊಂಡು
ವಿತತ ವೈಭವದಿಂದ ೩
ವರಪ್ರದ ವೆಂಕಟ ವರಗಳ ನೀಡುತ ತನ್ನ
ಚರಣ ತೋರುತ ಭಕ್ತರಿಗೆ
ವರ ಅಭಿಷೇಕದೊಳು ಕೇಸರಿ ತೀರ್ಥವ
ಕರುಣದಿ ತೋರುತ ಕರಿವರದ ಕೃಷ್ಣ ೪
ಪಂಚಾಮೃತದಭಿಷೇಕವ ಕಂಡೆನೆ ಎನ್ನ
ಸಂಚಿತಾರ್ಥದ ಪುಣ್ಯದ ಫಲದಿ
ಮಿಂಚಿದ ಪಾಪವ ಕಳೆದರತಿಹರುಷದಿ
ಹಂಚಿ ವರದ ಹಸ್ತ ಕಂಚಿ ವರದ ತೋರೆ ಬಂದಿದ್ದನೆ ೫
ಕಂಕಣ ಕೈಯೊಳು ಧರಿಸಿಹನೆ ದಿವ್ಯ
ಅಲಂಕೃತ ಹೇಮ ಶೋಭಿತನೆ
ಕಿಂಕರ ವರದ ಮಾಂಗಲ್ಯ ಕಟ್ಟಿದ ಸತಿ
ಶಂಕರಾದಿ ಸ್ತುತ ವೆಂಕಟರಮಣನು ೬
ಸುರವರ ವಂದ್ಯಗೆ ಆರತಿ ಎತ್ತಲು
ವರ ಕೇಸರಿ ತೀರ್ಥವ ನೀಡಿದನೆ
ವರ ಪ್ರಸಾದದ ಮಹಿಮೆಯ ತೋರುತ
ವರದ ಮೂರುತಿ ಶರಧಿ ಗಂಭೀರನು ೭
ಉರುಟಣಿಯ ಮಾಡಿದ ವರಸತಿ ಜತೆಯಲಿ
ವರ ಶೇಷಾಚಲನು ತಾನೆ
ಹರುಷವ ಬೀರುತ ವರ ಶೇಷನ ಮೇಲೆ
ಮೆರೆವ ಶಯನಗೊಂಡು ಹರುಷದಿ ೮
ಗಂಧ ಪುಷ್ಪ ತಾಂಬೂಲವಗೊಂಡನೆ
ತಂಡ ತಂಡ ಭಕ್ತರ ವಡೆಯ
ದಿಂಡುಗೆಡಹುವಂಥ ಉದ್ದಂಡ ಭಕ್ತರಿಗೆ
ತೊಂಡನಾದ ಉದ್ದಂಡ ವೆಂಕಟ ೯
ನಾಟಕಧಾರಿ ತಾ ವಧೂಟಿ ಭೂಪ ಲಕ್ಷ್ಮಿ ಸಹ
ನೋಟಕರಿಗೆ ಆನಂದ ತೋರಿದನೆ
ಧಾಟಿಧಾಟಿ ರಾಗದಿ ಭಕ್ತರು ಸ್ತುತಿಸೆ
ಸಾಟಿಯಿಲ್ಲದ ವೈಭವವ ತೋರುತ ಕೃಷ್ಣ ೧೦
ಕರವ ಮುಗಿದು ಸ್ತೋತ್ರವ ಮಾಡಿದೆನೆ ಎನ್ನ
ಕರೆದಾದರಿಸು ಹರಿಗೆ ನಿರುತ ಎಮ್ಮನು
ಪೊರೆ ಶ್ರೀ ಶ್ರೀನಿವಾಸಗ ದೊರೆಗೆ ಚನ್ನ ಸಿರಿಗೆ ವಂದಿಸಿದನೆ
ಹಯನೇರಿದನೆ ಭಯಕೃದ್ಭಯ ಹಾರಿ ೧೧

 

೧೪೨
ಸಂಪ್ರದಾಯದ ಕೀರ್ತನೆಗಳು
ಬಜಬೆಣ್ಣೆನಿಡುವೆನು ಬಾ ರಂಗ ಮೋಹನಾಂಗ ಕೃಷ್ಣಾ ಪ.
ಬಜ ಬೆಣ್ಣೆನಿಡುವೆನು ನಿಜರೂಪ ತೋರಿಸೊ
ತ್ರಿಜಗ ವಂದಿತ ಕೃಷ್ಣ ಭುಜಗ ಶಯನ ದೇವಾ ಅ.ಪ.
ಮೀಸಲಳಿದ್ಹಾಲು ಕಾಸಿದ ಮೊಸರನ್ನ
ಸೋಸಿಲಿ ಕಡೆದ ಬೆಣ್ಣೆ ವಾಸುದೇವನೆ ನಾ ೧
ಅಸುರ ಪೂತನಿಯ ವಿಷದ ಮೊಲೆಯನುಂಡು
ಕಸುವಿಸಿಯಾಗಿಹ ಹಸುಳೆ ನಿನ ಬಾಯೊಳು ೨
ಉಡುಗೆ ತೊಡುಗೆ ತೊಡಿಸಿ ಕಡಗ ಕಂಕಣ ಕೈಗೆ
ವಡೆಯ ಶ್ರೀ ಶ್ರೀನಿವಾಸ ಸಡಗರದಲಿ ನಾ ೩

 

೧೩೧
ಬಡವರ ಭಾಗ್ಯನಿಧಿಯೆ ನಿನ್ನ
ಅಡಿಗಳಿಗೆರಗುವೆ ಪ.
ದೃಢಮತಿ ಕೊಡು ಎಂದು
ಬಿಡದೆ ಧ್ಯಾನಿಸುವೆ ಅ.ಪ.
ಗುರುಗಳ ಕರುಣವೊ ಹಿರಿಯರ ಬಲವೊ ನಾ
ನರಿಯೆ ನನ್ನಯ ಚರಿಯ ದೇವಾದಿದೇವ ೧
ವೃಷಭಾಚಲವಾಸ ವಶವಲ್ಲ ನಿನ್ನ ಧ್ಯಾನ
ತೃಷೆಯಿಂದ ನುಡಿವೆನೊ ನಿನ್ನ ವಶವಲ್ಲವೇ ನಾನು೨
ಭಕ್ತರಹಂಕಾರ ಯುಕ್ತೀಲಿ ಕಳೆಯುವ
ಶಕ್ತ ನೀನಲ್ಲದೆ ಮುಕ್ತೀಶ ಶ್ರೀ ಶ್ರೀನಿವಾಸ ೩

 

೧೪೭
ಬಾ ಉರುಟಣೆಗೆ ಕಾಂತ ಪ್ರಿಯಕಾಂತ ಪ.
ಕರುಣವ ತೋರೋ ಕಮಲನಯನನೆ
ತರುಣಿಮಣಿಯು ನಾ ಕರೆವೆನು ರಮಣ ಅ.ಪ.
ವರ ಪನ್ನೀರಿಲಿ ಚರಣವ ತೊಳೆದು
ಅರಿಶಿಣ ಹಚ್ಚುವೆ ಕಾಂತ ನಾ
ವರ ಲಲಾಟಕೆ ಹರುಷದಿ ಕುಂಕುಮ
ತಿಲಕವ ತಿದ್ದುವೆ ರಮಣ ೧
ಅತ್ತರು ಪನ್ನೀರಿನ ಗಂಧವನು
ಶಿಸ್ತಿಲಿ ಪೂಸುತಲೀಗ
ವಿಸ್ತಾರವಾದ ಮಲ್ಲಿಗೆ ಮಾಲೆಯ
ಚಿತ್ತಜನಯ್ಯ ಹಾಕುವೆನು ಪ್ರಿಯ ೨
ಬಿಳಿಯೆಲೆ ಅಡಿಕೆ ಚೆಲುವಿನ ಸುಣ್ಣ
ನಲಿದು ಕೊಡುವೆ ಬಾ ಕಾಂತ
ಛಲವ್ಯಾಕೆನ್ನೊಳು ಶ್ರೀ ಶ್ರೀನಿವಾಸ
ಒಲುವಿನಲಿ ಬಾ ಬೇಗ ರಮಣ ೩

 

೯೦
ಬಾ ಭಾಗ್ಯಲಕ್ಷ್ಮಿ ನಿನ್ನ ನಾ ಸೇವೆಗೈಯ್ಯುವೆ
ನಾ ನಿನ್ನ ಪ್ರಾರ್ಥಿಸಿ ಬೇಡಿಕೊಂಬುವೆ ಪ
ನಿನ್ನೇ ನಂಬಿದೆ ಪನ್ನಗವೇಣಿ
ನೀಯೆನ್ನ ಕೈಯ ಬಿಡಬೇಡ ತಾಯೆ
ಸನ್ನುತ ಚರಿತೆ ನಿನ್ನೇ ನಂಬುವೆ
ಮುನ್ನಿನಘ ಕಳೆದು ನಿನ್ನ ಪಾದ ತೋರೆ
ಸಂಪನ್ನೆ ನಿನ್ನ ಸದಾ ಸೇವೆಗೈವ ಚಿದಾನಂದವೀಯೆ ೧
ಸಾರವಾದ ಸಂಸಾರದಲಿ ನೀರೆ ನೀನಲ್ಲದಿನ್ನಾರೆ
ತೋರಿ ಕರುಣವ ನೀ ಸಾರೆ ಬಂದು
ಪೊರೆ ಕರುಣಾಸಿರಿಯೆ ಎನ್ನ ಸೇವೆಯನು ಕೈಗೊಂಡು
ಲಕುಮೀತಾಯೆ ಸದಾನಿನ್ನ ಸೇವೆ ಚಿದಾನಂದವೀಯೆ ೨
ಪತಿ ಪಾದಸೇವೆ ಸತಿಗೆ ನೀನುಳಿಸಿ
ಸತತದಿ ಮಾಂಗಲ್ಯ ಭಾಗ್ಯವ ನೀಡೆ
ಪತಿತ ಪಾವನ ಶ್ರೀ ಶ್ರೀನಿವಾಸ ಸತಿ ನೀನೆಂದು
ಸ್ತುತಿಪೆ ಸತತ ಎನ್ನ ಮೊರೆಯಾಲಿಸಿ ಕಾಯೆ
ಸದಾ ನಿನ್ನ ಸೇವೆ ಚಿದಾನಂದವೀಯೆ ೩

 

೧೪೪
ಬಾಬಾ ಭಾಮಿನಿ ಬಾಬಾ ಭಾಮಾಮಣಿ ಪೀಠಕೆ ಪ.
ರತ್ನ ಮಂಟಪದೊಳು ಮುತ್ತಿನಮಣೆನ್ಹಾಕಿ
ಮಿತ್ರೆಯರ್ ಕರೆವರು ಈಗ
ಎತ್ತ ನೋಡಿದರೂ ಸುತ್ತ ಜ್ಯೋತಿಗಳು
ಶಿಸ್ತಿಲಿ ಬೆಳಗುತಿಹುದು ೧
ವರ ಜರತಾರಿ ಪೀತಾಂಬರನುಟ್ಟು
ಸರಗಳು ಹೊಳೆಯುತಲೀಗ
ಬೆರಳಿನುಂಗುರ ಥಳಥಳಿಸುತಲಿ
ಬೆಡಗನು ತೋರುತಲಿ ೨
ಕಡಗ ಕಿಂಕಿಣಿ ಕರದಲಿ ಪೊಳೆಯೆ
ಅಡಿ ಇಡುತಲಿ ನೀ ಬೇಗ
ಮುಡಿದ ಮಲ್ಲಿಗೆ ಎಡಬಲಕುದುರುತ
ಒಡೆಯ ಶ್ರೀ ಶ್ರೀನಿವಾಸನ ಮಡದಿ ೩

 

೯೧
ಬಾರಮ್ಮಾ ಬಾರಮ್ಮಾ ಭಾಗ್ಯದನಿಧಿಯೇ
ತೋರಮ್ಮಾ ತೋರಮ್ಮಾ ಕರುಣಾನಿಧಿಯೇ ಪ.
ಬಾರಮ್ಮಾ ಮಹಲಕ್ಷ್ಮಿ ತೋರುತ ಕರುಣವ
ಬೀರುತ ತವಕದಿ ಸೇರುತ ಪತಿಸಹ ಅ.ಪ.
ಶ್ರೀ ರಮಾದೇವಿ ಇನ್ನಾರು ಸಮನಾಗರೇ
ಭೂ ರಮೇಶನ ಸೇವೆಗೆ ನಿಲ್ಲಲು
ಬಾರಮ್ಮಾ ಭಕ್ತರುದ್ಧಾರ ಮಾಡಲು ಎಲ್ಲಾ
ಕಾರಳು ನೀನಾಗಿ ವಾರುಧಿಶಯನಗೆ ಸೇವಿಸಲು
ಘೋರತರ ಸಂಸಾರ ಸಾಗರ ಪಾರುಗಾಣಿಪ
ಹರಿಯು ನಿನ್ನೊಳು ಸೇರಿಯಿರುತಿಹನೇ
ತೋರಿ ಭಕ್ತರಿಗೆ ಚಾರುಕಮಲ ಕರಾರವಿಂದದಿ
ಧೀರೆಯೆತ್ತುಪಕಾರ ಮಾಡಲು ವಾರಿಜಾಕ್ಷಿಯೆ ಸಾರುತೀಗಲೆ ೧
ಪುಲ್ಲಲೋಚನೆ ನಿನ್ನ ಗಲ್ಲ ಮಿಂಚಿನ ಸೊಬ
ಗೆಲ್ಲ ನೋಡುತ ನಿನ್ನ ಒಡನಾಡುವ
ಪಲ್ಲವಾಧರೆ ನಿನ್ನ ವಲ್ಲಭ ಹರಿಯಲ್ಲಿ
ಎಲ್ಲ ಭಕ್ತರ ಮನಸಲ್ಲ ಅರುಹು ತಾಯೆ
ನಿಲ್ಲದೆಲೆ ಕಾನಲ್ಲಿ ಇಹ ಹರಿ ಎಲ್ಲಿ ಭಕ್ತರು ಕರೆ
ದಲ್ಲಿ ಬರುತಿಹನೆ ಮಲ್ಲಮರ್ಧನ ಶ್ರೀ ನಲ್ಲ ಕೃಷ್ಣನು
ಚೆಲ್ಲಿ ಕರುಣವ ಬಲ್ಲೆ ನಿನಪತಿ ಗುಣಗಳನೆಲ್ಲ ಕಾಯೆ ೨
ರಂಗನರ್ಧಾಂಗಿಯೆ ಮಂಗಳ ಮೂರುತಿ ನಿ
ನ್ನಂಗಜನಯ್ಯನ ಕಾಣೆ ಕಾಯೆ
ಗಂಗಜನಕ ಸಹ ಸರ್ವರಂಗದೊಳಿದ್ದು ನೀ
ರಂಗನ ಲೀಲೆಯತಿಸಂಭ್ರಮದಲಿ ನೋಳ್ಪೆ
ತುಂಬುರು ನಾರದರು ಪಾಡಲು
ರಂಭೆ ಊರ್ವಶಿ ನಾಟ್ಯವಾಡಲು
ಸಂಭ್ರಮದಿ ಶ್ರೀ ಶ್ರೀನಿವಾಸನ್ನ ಇಂಬತೋರಿಸೇ
ಅಂಬುಜಾಕ್ಷಿಯೇ ಬೆಂಬಿಡದೇ ಎನ್ನ
ನಂಬಿರುವೇ ನಿನ್ನ ಕಂಬುಕಂಧರೆ
ಕುಂಭಿಣೀಪತಿ ಸಹಿತ ಬೇಗನೆ ೩

 

೯೨
ಬಾರೆ ನೀ ಹಂಸಗಮನೆ ಮಾರನ ಪೀಠಕ್ಕೆ
ಸಾರಿ ಕರೆವೆ ಲಕ್ಷ್ಮೀದೇವಿಯೇ ಪ.
ಕಮಲ ಪುಷ್ಪದೊಳು ನೆಲಸಿದ ಲಕ್ಷ್ಮಿಯೆ
ಕಮಲದ ಹಾಸಿಗೆ ಕಾಮಜನಕನ ಸಹಿತ ೧
ಮುತ್ತು ಮಾಣಿಕ್ಯವು ಕೆತ್ತಿದ ಹಾಸಿಗೆ
ಮುತ್ತೈದೆರೆಲ್ಲರೂ ಮುದದಿಂದ ಕರೆಯುವೊರು ೨
ಶ್ರೀ ಲಕ್ಷ್ಮೀದೇವಿಯೆ ಶ್ರೀ ಕೃಷ್ಣನರಸಿಯೆ
ಶ್ರೀನಿವಾಸನ ಕೂಡಿ ಪ್ರೀತಿಯಿಂದ ಸರಸನಯನೆ ೩

 

೫೪
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ
ಸಾರುತ ಬೇಗ ಶ್ರೀ ನಾರಾಯಣ ಪ.
ನಾರದಾದಿ ವಂದ್ಯ ಪಾರುಗಾಣಿಸೆ ಭವ
ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ.
ಸುಮನಸರೊಡೆಯನೆ ನೀನಾಗಮಿಸಲು
ಸಕಲವು ಸುಗಮವಹುದೆ
ಕಮನೀಯ ರೂಪ ಕಮಲದಳಾಕ್ಷನೆ
ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ ೧
ಭಕ್ತರ ಕಾಯುವ ಯುಕ್ತಿ ನಿನಗೆ ಸರಿ
ಭಕ್ತವತ್ಸಲನೆಂಬೊ ಬಿರುದಿನ ದೇವ
ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ
ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ ೨
ಎನ್ನಪರಾಧ ಎಣಿಸಲೆನ್ನಳವೆ
ಪನ್ನಗಾದ್ರಿನಿವಾಸ ಕೃಪೆತೋರೊ
ಸನ್ನುತಚರಿತ ನಿನ್ನ ಪೊರತು ಎನ
ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ ೩

 

೧೪೩
ಬಾರೊ ಹರಿ ಬಾರೊ ದೊರಿ
ಬಾಬಾ ಮುರಾರಿ ನೀ ಪ.
ನಾರಿಯೇರು ಕರಿಯುವರು
ಹೀರಾದ ಪೀಠಕೆ ಬೇಗಾ ಅ.ಪ.
ಪದ್ಮಪಾದ ಪೊಳೆಯುತಲಿ
ಪದ್ಮಾಕ್ಷಿಯ ಕೂಡುತಲಿ
ಪದ್ಮಾದ ಪೀಠಕೆ ಬೇಗ
ಪದ್ಮನಾಭ ಮುದ್ದು ಶೌರಿ ೧
ಪೀತಾಂಬರ ಧರಿಸುತಲಿ
ಪೀತ ವಸ್ತ್ರ ವಲಿಯುತಲಿ
ಜಾತಿ ಮುತ್ತಿನ್ಹಾರ ಹಾಕಿ
ಸೀತಾಪತಿ ಶ್ರೀ ಕೃಷ್ಣನೆ ೨
ಚಂದ್ರ ಸದೃಶಾನನ£ É
ಇಂದಿರೇಯ ಪೊಂದಿದನೆ
ಮಂದರಾದ್ರಿ ಎತ್ತಿದನೇ
ಸುಂದರ ಶ್ರೀ ಶ್ರೀನಿವಾಸ ೩

 

ಕರಿಯು ಕೂಗೆ ಸಿರಿಗ್ಹೇಳದಲೆ
೫೫
ಬಾರೋ ಮನೆಗೆ ರಂಗಾ ಕರುಣಾ ಪಾಂಗ ನರಸಿಂಗ ಪ.
ಬಾರೋ ನಿನ ಪರಿವಾರ ಸಹಿತಲಿ ವಾರೆರೊಡಗೂಡಿ ನೀರಜಾಕ್ಷನೆ
ದೂರ ನೋಡದೆ ಎನ್ನ ನೀ ಭವ ಪಾರುಗಾಣಿಸೊ
ಕರುಣಾಂಬುದೆ ಅ.ಪ.
ಪಿಡಿದು ಖಡ್ಗವ ನಿನ್ನ ವಡೆಯನ ತೋರೆಂದು
ಘುಡುಘುಡಿಸಲು ಕಂದ ವಡನೆ ಕೂಗೆ
ಸಿಡಿದು ಕಂಬದಿ ಬಂದು ಅಸುರನ
ವಡಲ ಬಗೆದು ಕರುಳ ಮಾಲೆಯ ಪಿಡಿದು ಧರಿಸುತ
ವಡನೆ ಭಕ್ತನ ಬಿಡದೆ ಸಲಹಿದ ಕಡು ದಯಾನಿಧೆ ೧
ಪಿತನ ತೊಡೆಯಿಂದ ಭೂಪತಿಸತಿ ನೂಕಲು
ಅತಿಭಯದಲಿ ಧ್ರುವ ಖತಿಗೊಳ್ಳುತ
ಪತಿತ ಪಾವನ ನಿನ್ನ ಕಾಣಲು ಮುನಿ
ಪತಿಯು ಪೇಳಿದ ಪಥದಿ ಪುಡುಕೆ
ಅತಿಶಯದಿ ಬಂದ್ಹಿತವ ಕೋರಿದ ಗುಣಾನ್ವಿತ ದಯಾಂಬುಧೆ೨
ಕರಿ ಮೊರೆಯಿಡೆ ಸಿರಿಗ್ಹೇಳದಲೆ ಬಂದು
ಗರುಡ ಗಮನನಾಗಿ ತ್ವರಿತದಿಂದ
ಶರಣಪಾಲಕ ನಿನ್ನ ಚಕ್ರದಿ ತರಿದು
ನಕ್ರ ನಕರಿಯ ಪೊರೆದ ತೆರದೊಳೆನ್ನ
ವಗುಣಗಳೆಣಿಸದೆ ಹರುಷದಲಿ ಶ್ರೀ ಶ್ರೀನಿವಾಸ ೩

 

೫೬
ಬಾರೋ ವೆಂಕಟೇಶ ಬೇಗ
ಬಾರೋ ಎನ್ನ ಮನೆಗೆ ಈಗ ಪ.
ಬಾರೋ ಲಕ್ಷ್ಮೀರಮಣ ಶ್ರೀಶಾ
ಬಾರೋ ಸರ್ವರ ಹೃದಯವಾಸ ಅ.ಪ.
ಸರ್ಪಶಯನಾಗಿ ಬೇಗ ಕ್ಷಿಪ್ರದಿ ಲಕ್ಷ್ಮೀಸಮೇತ ಇರಲೂ
ವಿಪ್ರ ಬಂದೊದೆಯಲಾಗ ವಿಪ್ರನ ಪಾದ ತೊಳೆದ ದಯಾಳೂ ೧
ಕುಂದನೊಂದೆಣಿಸದಂತೆ ಬಂದು ಕಾಯ್ದಜಮಿಳನಿಗೊಲಿದೆ
ತಂದೆ ಬಾಧೆಗೆ ತರಳ ಕೂಗೆ ಬಂದೆ ಸ್ತಂಬದಿ ನಾರಸಿಂಹ ೨
ಕರಿಯು ಕೂಗೆ ಸಿರಿಗ್ಹೇಳದೆಲೆ ಭರದಿಬಂದು ಕಾಯ್ದ ಹರಿಯೆ
ತರುಳೆ ದ್ರೌಪದಿಗಕ್ಷಯವಿತ್ತಾ ಕರುಣವಾರಿದೆ ಶ್ರೀ ಶ್ರೀನಿವಾಸ ೩

 

೫೭
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ
ಕಳೆಕಳೆ ರೂಪ ನೋಡುವೆ ಮುಕುಂದ ಪ.
ಭಕ್ತರ ಭಯ ನಿವಾರಣನೆ
ಭಕ್ತಿಲಿ ಕರೆವೆ ಗೋವಿಂದ ನಿನ್ನನೆ
ಭಕ್ತವತ್ಸಲ ನೀನಲ್ಲವೇ ಸ
ದ್ಭಕ್ತರ ಸಲಹೆ ಕಂಕಣ ಧರಿಸಿಹನೆ ೧
ಶ್ರೀ ತುಳಸಿಯ ವನಮಾಲ
ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ
ಶ್ರೀಶನೆ ಬಯಸುವೆ ದೇವ
ಶ್ರೀರಮೆಯರಸ ದಯಪಾಲಿಸೊ ಕೃಷ್ಣ ೨
ಒಮ್ಮೆಯಾದರೂ ತೋರೊ ರೂಪ ಎನ್ನ
ಕರ್ಮ ಖಂಡನವಹ ತೆರೆದೊಳು ಶ್ರೀಪ
ಬೊಮ್ಮನೈಯ್ಯ ನಿನ್ನ ನೋಡ್ವೆ
ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ ೩

 

೫೮
ಬೇಕಿಲ್ಲ ಬೇಕಿಲ್ಲ ಇಹಲೋಕಾಡಂಬರವು
ಸಾಕೀ ನಿನ್ನನು ಧ್ಯಾನಿಪ ಪರಲೋಕ ಜ್ಞಾನವನು ಪ.
ಶ್ರೀಪ ಕರುಣಿಸಿ ನಿನ್ನ ಸ್ವಂತ ಜನರನ್ನೂ
ಕಾಪಾಡೊ ದೊರೆಯೆ ಅ.ಪ.
ನಿನ್ನ ಭಕ್ತರ ಸಂಗವನ್ನು ಕೃಪೆದೋರಿ ಸಲಹೊ
ಚನ್ನ ಕೇಶವರಾಯ ಇನ್ನು ಕೃಪೆ ಮಾಡೊ ೧
ಯನ್ನಪರಾಧಗಳನ್ನು ಎಣಿಸುವರೆ ದೇವ
ಸನ್ನುತ ಚರಿತ ಭಕ್ತ ಸನ್ಮಾನಯುತ
ನಿನ್ನ ಮಹಿಮೆಗಳನ್ನು ವರ್ಣಿಸಲಳವೆ
ಮುನ್ನ ಶೇಷಾನಿಂದ ಸೇವ್ಯವಾಗಿರಲೂ
ಯನ್ನಿಂದಾಡಿಶಿ ನೀನು ಸನ್ಮಾನಕೊಂಡು
ನಿನ್ನಾ ಭಕ್ತಳೆಂದು ಸ್ತುತಿಗೊಂಡು ನಲಿನಲಿದೆ ೨
ಯೆನ್ನಿಂದೇನಹುದೋ ಮನ್ಮನದೊಡೆಯ
ಚನ್ನ ಶೇಷಾದ್ರಿನಿವಾಸ ಘನ್ನ ಶ್ರೀ ಶ್ರೀನಿವಾಸ
ನೀನೇ ಆಡಿಸುತ ನೀನೇ ಮಾಡಿಸುತ
ದಾಸಿ ನೀನಾಗಿರೆ ನಾನೇನ ಬಲ್ಲೆನೊ ೩

 

೧೩೨
ಭಕ್ತಿ ಪಾಶದಿ ಕಟ್ಟುತ ಹರಿಯನು
ನಿತ್ಯದಲಿರು ಮನವೇ ಪ.
ಭಕ್ತಿಗೆ ಮೆಚ್ಚುತ ಅಚ್ಚುತ ತಾನೆ ಬಹ
ನಿಶ್ಚಯವಿದು ಮನವೆ ಅ.ಪ.
ಅನುದಿನ ನಾರಾಯಣನೆಂದಣುಗಗೆ
ಕ್ಷಣದಿ ಕಂಬದಿ ಬಂದ ದನುಜನ ಮುರಿದ
ಗುಣನಿಧಿಯನು ನೀ ಕ್ಷಣ
ಬಿಡದನುದಿನ ನೆನೆ ಮನವೇ ೧
ಕಲ್ಲಾಗಿದ್ದಹಲ್ಲೆ ಪೊರೆದು ಶಿವ
ಬಿಲ್ಲ ಮುರಿದ ರಾಮನ ನಲ್ಲೆ
ಕುಬ್ಜೆಯ ಡೊಂಕನೆ ತಿದ್ದಿದ
ಖುಲ್ಲ ಕಂಸನ ಗೆದ್ದಾ ಕೃಷ್ಣನ ೨
ಅಂಬರೀಷ ದ್ವಾದಶಿ ವ್ರತವನು ಮಾಡೆ ಮುನಿ
ಪುಂಗವ ಜರಿಯುತಿರೆ
ರಂಗನ ಚಕ್ರದಿಂದ್ಹುಟ್ಟಿದನರಿಯ ದೇವ ಈ
ಅಂಗ ಭಂಗರಕೆ ಚಾಟಿ ಶ್ರೀ ಶ್ರೀನಿವಾಸನು ೩

 

ಸುದೇವ ದೇವಕಿಯರ ಮಗಳು
೧೧೬
ಭಾಗ್ಯವ ಕೊಡೇ ನಿರುತದಿ ದೇವಿ ಪ.
ನಿರುತದಿ ಪತಿಪಾದ ಚರಣವ ಸೇವಿಪ ಅ.ಪ.
ವೈರಾಗ್ಯವೆಂಬುವ ಚಂಪಕಪುಷ್ಪ
ವರಪದ ತೋರುವ ವರಪ್ರದ ಮಲ್ಲಿಗೆ ೧
ಚರಣದಂದುಗೆ ಗೆಜ್ಜೆ ಪಾಡಗನಿಟ್ಟ ನಿನ್ನ
ಚರಣ ಕಮಲವ ನಿರುತದಿ ಪೂಜಿಪ ೨
ಶ್ರೀ ಶ್ರೀನಿವಾಸನ ಸ್ಮರಣೆಯನಿತ್ತು
ಪಾವನಳನು ಮಾಡೈ ಪರ್ವಂತದೇವಿ ೩

 

೧೪೫
ಭಾಮಿನಿ ಬಾರೆಲೆ ಕಾಮಿನಿಮಣಿಯೆ ನೀ
ಕಾಮಜನಕನ ರಮಣಿ ರಾಜಿಪ ಪೀಠಕೆ ಪ.
ಸರೋಜ ಮುಖಿಯೆ ನೀ ಸೋಜಿಗದಿಂದಲಿ
ರಾಜಿಪಪೀಠಕೆ ರಾರಾಜಿಸುತ ಬಾ ೧
ಕಂಗೊಳಿಸುವ ಬೆಳದಿಂಗಳ ಸೊಬಗಲಿ
ರಂಗನಸಹಿತ ಶೃಂಗರದಿಂದಲಿ ೨
ಮಂಗಳ ಮುಖಿಯೆ ನೀ ಚಂದದಿ ಬಾಬಾ
ಶ್ರೀ ಶ್ರೀನಿವಾಸನ ಮಡದಿ ಮಾನಿನಿ ಮಣಿ ೩

 

೫೯
ಭೂರಿ ಕರುಣಾಕರನೋ ಸಾರುವ ತೆರೆದೊಳು
ತೋರಿಹ ಭಕ್ತರ ಪ.
ಅಗಣಿತ ಮಹಿಮನ ಪೊಗಳುವೆ ನಾನೆಂತು
ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ
ಪೊಗಳಿಸಿಕೊಂಡು ತಾ ಝಗಝಗಿಸುತ ಬಹ
ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ ೧
ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ
ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ
ನತ್ಯಪರಾಧವನೆತ್ಯಾಡಿದನೇ
ಚಿತ್ತಜನೈಯ್ಯನು ಭಕ್ತವತ್ಸಲ ದೇವ ೨
ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು
ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ
ಅನುವಿಲಿ ಚಕ್ರದಿ ನಕ್ರನ ಹರಿಸಲು
ದಣಿದ ಹರಿಗೆ ಗಜರಾಜನೇನಿತ್ತನೋ ೩
ಭಕ್ತರ ಮನದಘ ನಿತ್ಯದಿ ಕಳೆದನೋ
ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು
ಇತ್ತು ನಾರಗನುಡಿ ಮತ್ತೆ ಯಮಭಟರ
ಇತ್ತ ಮುಕುತಿ ದೇವ ಅತ್ಯಧಿಕ ೪
ಮೂಗುತಿ ನೆವದೊಳು ಸಾಗಿಸಿ ಭಾಗ್ಯವ
ಜಾಗರ ಮೂರುತೆ ಯೋಗಿಗಳರಸನು
ಬಾಗಿಸಿ ತನ್ನವರಾಗಿಸಿ ದಾಸರ
ಭೋಗಿಶಯನ ಶ್ರೀ ಶ್ರೀನಿವಾಸನು ದೇವ
ಸರ್ವರ ಅನುರಾಗದಿ ಸಲಹುವ ೫

 

ಕಾನನದೊಳು ವೃದ್ಧ ಶಬರಿಯೆಂಜಲನುಂಡ
೬೦
ಮಂಗಳಾಂಗನ ಭಜಿಸೆ ಹಿಂಗಿಸುವ ಭವವ
ಎನ್ನಂಗದೊಳಡಗಿಹನೊ ಶ್ರಿಂಗಾರ ಮೂರುತೀ ಪ.
ಧ್ಯಾನಕೆ ತಂದು ನಿಧಾನದಲಿ ಯೋಚಿಸು
ಜ್ಞಾನಿಗಳರಸನ ಮಾನಸದೊಳಗೆ
ಕಾನನದೊಳು ವೃದ್ಧ ಶಬರಿಯೆಂಜಲನುಂಡು
ದಾನಶೀಲನು ರಾಮ ಕೈವಲ್ಯವನಿತ್ತಾ ೧
ದುಷ್ಟ ಕಂಸನ ಹರಿಸಲು ಉತ್ರ‍ಕಷ್ಟ ಕೃಷ್ಣ ಬರೆ
ಸೃಷ್ಟಿಗೊಡೆಯಗೆ ಗಂಧವಿತ್ತಳಾ ಕುಬ್ಜಿ
ದಿಟ್ಟ ರೂಪವ ಉಂಗುಷ್ಠದಿಂದೊತ್ತುತ್ತ ಭಕ್ತ
ರಿಷ್ಟವನು ಸಲಿಸಲು ಕಷ್ಟವೇ ಹರಿಗೆ ೨
ಯಾವಾಗ ಸ್ತುತಿಸಿದರು ಮತ್ತಾವಲ್ಲಿ ಕರೆದರೂ
ಧಾವತಿಗೊಂಡು ಬಹ ಶ್ರೀ ಶ್ರೀನಿವಾಸ
ಹಾವಭಾವದ ತೆರದಿ ದೇವ ಬಂದೊದಗುವ
ಮತ್ತಾವ ದೇವರ ಕಾಣೆ ಶ್ರೀವರನಲದೇ ೩

 

೬೧
ಮಂದರೋದ್ಧಾರಾನಂದನ ಕಂದ ಬಾ ಬೇಗಾ
ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ.
ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ
ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ.
ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ
ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ
ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ
ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ ೧
ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ
ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ
ಸರ ವೈಜಯಂತಿ ಮಾಲಾ ಶೋಭಾ ಬಾ ಬೇಗಾ
ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ೨

 

೬೨
ಮುರಳಿಯನೂದುವನಾರೆ ಸಖಿ ಇವ
ನಾರೆ ಸಖಿ ಪ.
ಪರಮಪುರುಷನಿವ ಕೇಳೆ ಸಖಿಅ.ಪ.
ಕೆಂದಾವರೆಯಾ ಕರೆದೊಳು ಕೊಳಲಾ
ನಂದದೊಳೂದುವನಾರೆ ಸಖಿ ಇವ
ಚಂದ್ರವಂಶೋದ್ಭವ ಗುಣಸಾಂದ್ರ ಶ್ರೀ ಕೃಷ್ಣಾ
ನಂದನ ಕಂದನಿವ ಕೇಳೆ ಸಖಿ೧
ಕಂಗೊಳಿಸುವ ಬೆಳದಿಂಗಳ ಸೊಬಗಿಲಿ
ಶ್ರೀಂಗಾರ ಪುರುಷನಾರೆ ಸಖಿ ಇವ
ಮಂಗಳ ಮೂರುತಿ ಜನಂಗಳಿಗೊಡೆಯ
ರಂಗನಾಥನಿವ ಕೇಳೆ ಸಖಿ ೨
ಕೊರಳೊಳು ಧರಿಸಿಹ ವರ ತುಳಸಿಯ ಸರ
ವರ ಕೌಸ್ತುಭಧರನಾರೆ ಸಖಿ ಇವ
ಕರೆದಾದರಿಶಿ ಭಕ್ತರ ಸಲಹುವ
ವರದ ಶ್ರೀ ಶ್ರೀನಿವಾಸ ಕೇಳೆ ಸಖಿ ೩

 

೬೩
ಯಮುನಾತೀರದಿ ಕೊಳಲೂದಿ ಕೃಷ್ಣಾ ಪ.
ರಮಣಿಯರ ಮನ ಸೆಳೆವನೆ ಕೃಷ್ಣಾ ಅ.ಪ.
ಮನೆಗೆಲಸವು ಕೈ ಜಾರುತಲಿಹುದೇ
ಸುಮಶರನೈಯ್ಯನು ಕೊಳಲೂದೆ ಸಖಿ ೧
ತನ್ನಯ ಕರದೊಳ್ ರನ್ನದ ಕೊಳಲೊಳ್
ಚನ್ನಿಗರಾಗದೊಳೂದೆ ಸಖಿ ೨
ಭೋಗಿಶಯನೆ ಶ್ರೀ ಶ್ರೀನಿವಾಸ ಧೊರೆ
ಅನುರಾಗದಿ ಕರೆವಾ ಕೊಳಲೂದಿ ಸಖಿ ಎಮ್ಮ
ಅನುರಾದಿ ಕರೆವಾಕೊಳಲೂದಿ ಸಖಿ ೩

 

೧೩೯
ರಂಗವಾಲಿಯನಿಡು ತಂಗಿ ನಿನ್ನಂತರಂಗ
ದಂಗಳ ಸಾರಿಸಿ ರಂಗಗರ್ಪಿತವೆಂದು ಪ.
ಮಂಗಳಮಹಿಮ ಶ್ರೀ ಕೃಷ್ಣ ತನ್ವಲಿವ
ಎಂದಂಗನೆ ಸುಭದ್ರೆಗೆ ರಂಗಹೇಳಿದ ಅ.ಪ.
ಅರಿಷಡ್ವರ್ಗಹಂಕಾರ ಮದಗಳೆಂಬ
ಮಮಕಾರವ ಬಿಟ್ಟು ಮುನ್ನ
ತೊಡರಬಿಡಿಸಿ ನಿನ್ನ ಕಡೆಹಾಯಿಸುವ ಪಥ
ದೊಡೆಯ ಶ್ರೀಧರಪಾದವದರೊಳು ನಿಲುವಂತೆ ೧
ಅಚ್ಚ ಭಕುತಿಯೆಂಬ ಶ್ವೇತ ಕಲ್ಲನೆ ಕುಟ್ಟಿ
ಅಚ್ಚುತನಾಮ ಪವಳ ಬೆರಸಿ
ಸ್ವಚ್ಛ ಮುತ್ತುಗಳೆಂಬಂಥ ಶೀಲತೆಯಿಂದ
ಅಚ್ಚ ಶ್ರೀ ತುಳಸಿಯ ಕಟ್ಟೆಯ ಬೆಳಗುವಂಥ೨
ಹರಿನಾಮದರಿಶಿನವದರ ಮಧ್ಯದಿ ತುಂಬಿ
ಅರಿಗಳ ಕಡಿವಂಥ ಕುಂಕುಮವ
ಪರಮಾನಂದದಿನೆಲ್ಲಿ ಕರಿಯ ಬಣ್ಣ
ಹರುಷದಗಸೆ ಹಸುರ ಬೆರಸಿ ಶ್ರೀ ಶ್ರೀನಿವಾಸಗೆ ೩

 

ಅಹಲ್ಯೆಯ ಶಾಪವ ಕಳೆದ
೬೪
ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ.
ದಶರಥಪುತ್ರಗೆ ಪಶುಪತಿ ಮಿತ್ರಗೆ
ಋಷಿಗಳ್ಯಾಗವ ಕಾಯ್ದವಗೆ
ಶಶಿಮುಖಿ ಅಹಲ್ಯೆ ಶಾಪವ ಕಳೆದ
ಅತುಳ ಮಹಿಮ ಶ್ರೀಹರಿಗೆ ೧
ಶಿವನ ಧನುವ ಮುರಿದವನಿಜೆಯಳ ತಂದು
ಜವದಿ ಪರಶುರಾಮನಿಗೆ
ತವಕದಿ ಗರ್ವವ ಮುರಿದವನೀಶಗೆ
ಕಮಲಾಕ್ಷಿಯರೀಗ ಬೇಗಾ ೨
ಅನುಜನವಡಗೂಡಿ ವನಿತೆ ಸಹಿತಲೀ
ವನಕೆ ಪೊರಟು ಅಂಜನೆಯ
ತನುಜನಗೂಡಿದನುಜನ ಮುರಿದ
ಘನದ ಶ್ರೀ ಶ್ರೀನಿವಾಸನಿಗೆ ೩

 

ದಶಶಿರ ಸೀತೆಯ ಕದ್ದೊಯ್ಯಲು
೬೬
ರಾಮ ನಿನ್ನಯ ಚರಿತೆ ರಘು
ರಾಮ ನಿನ್ನಯ ಚರಿತೆ ಪ.
ಪ್ರೇಮದಿ ಭಜಿಸಲು ಕ್ಷೇಮವಹುದು ರಘುರಾಮ ಅ.ಪ.
ದಶರಥ ಪುತ್ರ ಕೌಶಿಕನ್ಯಾಗ ಕರ್ತ
ಪಶುಪತಿ ಧನುಭಂಗ ಜಾನಕೀಪತಿ ರಘು ೧
ಪರಶುರಾಮನ ಗರ್ವಮುರಿದ
ವರ ಮಾತೆ ವಾಕ್ಯವ ಸಲಿಸೆ ಕಾನನಕೈದ ರಘುರಾಮ ೨
ದಶಶಿರ ಸೀತೆಯ ಕದ್ದೊಯ್ಯಲು ಅರಸುತ
ಭಾರತಿ ಪತಿ ಹನುಮಗುಂಗುರವಿತ್ತ ಧೀರ ೩
ಶರಧಿಯ ಲಂಘಿಸಿ ವರಹನುಮನು ತನ್ನ
ಕರದಲಿಯದ ವರ ಜಾನಕಿಗಿತ್ತ ೪
ಸತಿ ಚೂಡಾಮಣಿ ಮಾರುತಿಗೊಡೆ ಸೇತುವೆ
ಅತಿಶಯದಲಿ ಬಂಧಿಶಿ ದಶಶಿರನಳಿದಾ ರಘುರಾಮ ೫
ನಿನ್ನಡಿ ನೆನೆವರೆ ಧನ್ಯರು ನಿತ್ಯ
ಸನ್ನುತ ಚರಿತ ಶ್ರೀ ಶ್ರೀನಿವಾಸ ರಘುರಾಮ ೬

 

೬೫
ರಾಮದೂತನಪಾದ ತಾಮರಸವ ಕಂಡ
ಆ ಮನುಜನೆ ಧನ್ಯನು ಪ.
ದೇಶ ದೇಶದಿ ಭಕ್ತರು ಬಂದು ನಿನಗೆ
ಸೋಸಿಲಿ ಹರಕೆಗಳ ಸಲಿಸುವರೊ
ಏಸು ಮಮತೆಯಿಂದವರ ಕಷ್ಟಗಳನು
ಘಾಸಿ ಪಡಿಸದಲೆ ಪರಿಹರಿಪ ವೆಂಕಟನ ೧
ಎಷ್ಟೆಂದು ಪೊಗಳಲೊ ದಿಟ್ಟ ಮೂರುತಿ ನಿನ್ನ
ಉತ್ರ‍ಕಷ್ಟ ರೂಪ ಲಾವಣ್ಯಗಳಾ
ಇಷ್ಟ ಮೂರುತಿ ಶ್ರೀ ಶ್ರೀನಿವಾಸ ಧೊರೆ
ಶ್ರೇಷ್ಟ ಭಕ್ತರನೆಲ್ಲ ಪೊರೆವ ವೈಕುಂಠಪತಿ೨

 

೬೭
ಲಾಲಿ ರಘುಕುಲತಿಲಕ ಲಾವಣ್ಯ ಗುಣಧಾಮ ಪ.
ಲಾಲಿ ಸುರವರ ವಿನುತ ಲಾಲಿ ಸುಜನರ ಪಾಲ ಅ.ಪ.
ಅಸುರ ಕುಲ ಬಾಧಿಸಲು ವಸುದೇವ ಸುತ ರಕ್ಷ
ಹಸನಾಗಿ ಪ್ರಾರ್ಥಿಸಲು ನಿನ್ನ ದೇವತೆಗಳಾಗ
ವಸುಧೆ ಭಾರವ ಇಳುಹೆ ಶಿಶುವಾಗಿ ದಶರಥಗೆ
ದಶ ದಿಗ್ವಲಯ ಬೆಳಗೆ ದಶಮ ಬಲರಾಮ ೧
ಶಿವನ ಧನುವನು ಮುರಿಯೆ ಅವನಿಜೆಯು ಹಾರವನು
ಜವದಿ ಹಾಕಲು ಪರಶುರಾಮನ ಗರ್ವ
ತವಕದಲಿ ಮುರಿದಯೋಧ್ಯೆಯ ಪಾವನ ಮಾಡೆಂ
ದವನಿ ಜಾಲವು ಕೂಗೆ ಸವಿಗಾನದಿಂದ ೨
ಮಾತೆ ವಾಕ್ಯವ ಕೇಳಿ ಸೀತೆ ಸಹಿತಲೆ ವನಕೆ
ಆತ ಲಕ್ಷ್ಮಣನೊಡನೆನೀತನೀ ತೆರಳೆ
ದೂತ ರಾವಣನ ಹತವಾತಸುತ ದೂತ ಸಹ
ಖ್ಯಾತಿಲಯೋಧ್ಯೆಗೆ ಬಂದ ಶ್ರೀನಾಥ ಶ್ರೀ ಶ್ರೀನಿವಾಸಾ ಲಾಲಿ ೩

 

೬೮
ಲಾಲಿ ಶ್ರೀ ಕೃಷ್ಣ ಬಾಲ ಲಾಲಿ ನಂದ ಯಶೋದೆ ಲೀಲ
ಲಾಲಿ ಗೋಕುಲ ಚಂದ್ರ ಶೀಲ ಲಾಲಿ ಶ್ರೀ ಕೃಷ್ಣ
ವೇಣುಗೋಪಾಲ ಪ.
ವಸುದೇವ ಸುತನಾಗಿ ಬಂದು
ಎಸೆವೊ ಗೋಕುಲದಲಿ ನಿಂದು
ಅಸುರಕುಲ ಸಂಹಾರಕೆಂದು
ನಸುನಗುತ ಗೋಪಿಯರ ವಶವಾಗ್ವೆನೆಂದು ೧
ಪುಟ್ಟಿದಾ ಶಿಶುವನ್ನೆ ನೋಡಿ
ನಕ್ಷತ್ರ ರೋಹಿಣಿ ಎಂದು ತಿಳಿದು
ಅಷ್ಟಜನ ಸಹಿತ ಗೋಕುಲದಿ
ಸಂತುಷ್ಟಿಯೊಳು ನಾಮಕರಣವ ಮಾಡಿ ನಲಿದೂ ೨
ವೇದ ಘೋಷಗಳಾಗುತಿರಲೂ
ಆದಿ ಮೂರುತಿಗೆ ಮೋಹದಲಿ ಕೃಷ್ಣನೆಂದ್ಹೆಸರನಿಡಲೂ
ಸಾದರದಿ ಗೋಪ ದಕ್ಷಿಣೆ ತಾಂಬೂಲ
ಅಗಾಧದಲಿ ಬ್ರಾಹ್ಮಣರಿಗೆ ಕೊಟ್ಟು ನಲಿದೂ ೩
ಚತುರ ವೇದದ ನಾಲ್ಕು ಸರಪಣಿಯ ಹೂಡಿ
ಚತುರ ದಿಕ್ಕನೆ ನಾಲ್ಕು ಚೌಕ ತೊಟ್ಟಿಲನೆ ಕಟ್ಟಿ
ಚತುರ್ಮುಖನಯ್ಯನ ತೊಟ್ಟಿಲೊಳಗಿಟ್ಟು
ಅತಿಶಯದಿ ನಾರಿಯರು ತೂಗಿದರು ಹರಿಯಾ ಲಾಲಿ೪
ಮಚ್ಛಕೂರ್ಮನೆ ವರಹ ಲಾಲಿ
ತುಚ್ಛ ದೈತ್ಯನ ಕೊಂದ ನರಹರಿಯೆ ಲಾಲಿ
ಅಚ್ಚವಾಮನ ಭಾರ್ಗವ ಕೃಷ್ಣ ಲಾಲಿ
ಸಚ್ಚ ಬೌದ್ಯಕ ಶ್ರೀ ಶ್ರೀನಿವಾಸನೆ ಲಾಲಿ ೫

 

೧೦೦
ವನಮಾಲಾಧರ ಕೃಷ್ಣ
ವನರುಹಲೋಚನ ತನ್ವನೀತೆ ಶ್ರೀ ತುಳಸಿಯ ಪ.
ಮುತ್ತಿನ ಸರದೊಳು ಪಚ್ಚೆಯ ತೆರೆದೊಳು
ಅಚ್ಚುತ ಧರಿಸಿಹ ಅಚ್ಚ ಶ್ರೀ ತುಳಸಿಯ
ಇಚ್ಛಿಸಿದಾ ಮುನಿ ಇಚ್ಛೆ ಪೂರೈಸಿದ
ಸಚ್ಚಿದಾನಂದ ಮೂರುತಿ ೧
ದಾನವಾಂತಕನ ದಾನವ ಕೊಡುತಲಾ
ಮಾನುನಿ ಚಿಂತಿಸೆ ಕಾಮಿನಿ ರುಕ್ಮಿಣಿ
ಶ್ರೀನಿಧಿಗೆ ಸಮವೆಂದಾಮುನಿಗೆ ತೂಗಾ
ನಂದದೊಳಗಿತ್ತ ಮಾನುನಿ ತುಳಸಿಯ ೨
ಪರಿಪರಿ ಭಾಗ್ಯಕೆ ಸರಿಮಿಗಿಲಾದ
ಪರಿಮಳ ತುಳಸಿಯ ಸುರಮುನಿ ಧರಿಸುತ
ಸ್ಮರಿಸುತ ಹರಿಯನು ವರದ ಶ್ರೀ ಶ್ರೀನಿವಾಸ
ಪೊರೆವನೆಂದ್ವರದಿಹ ೩

 

೧೦೮
ವರಗೌರೀರಮಣ ಶರಣಾಗತರಜತಾದ್ರಿಗೆ
ದೊರೆಯೆ ಪೊರೆವರ ಪ.
ಹರಿಯನು ಧ್ಯಾನಿಪ ಪರಿಯನು ಮನಕೆ
ವರೆದಾದರದೊಳು ಕರುಣಿಪುದು ೧
ಭ್ರಮರವು ಪರಿಮಳ ಭ್ರಮಿಸುವಂತೆ ಮನ
ಕಮಲನಯನನಲಿ ಒಲಿವಂತೆ ೨
ಪಾರ್ವತೀರಮಣ ಪಾಲಿಸು ಎನ್ನನು (ಪಾರುಗಾಣಿಸು ಭವ)
ಶ್ರೀವರ ಶ್ರೀ ಶ್ರೀನಿವಾಸನ್ನ ತೋರಿ ೩

 

೧೦೩
ವಾಣಿ ಬಾರೆ ಬೇಗ ವದನದಿ
ವಾಣಿ ಬಾರೆ ಬೇಗ ಪ.
ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ.
ಹೃದಯ ಮಂದಿರದಿಲಿದು ಸುವರ್ಣದ
ಪದುಮ ಮಂಟಪಕೆ ಮುದವ ಬೀರುತೆನ್ನ
ವದನದಿ ಸೇರುತ ಮುದ ಸುವಾಣಿಯ
ಚದುರೆ ನುಡಿಸುವ ಶುಕವಾಣಿ ೧
ಮಂಗಳ ಮಹಿಮನ ಅಂಗುಟದಿಂ ಬಂ
ದಂಬರದಿಂದುದಿಶಿದಾಮರ ತರಂಗಿಣಿ
ಗಂಗಾಸ್ನಾನವ ಮಾಡಿಶಿ ನಿನಗೆ
ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ ೨
ಭಕ್ತಿಯರಿಶಿಣ ಯುಕ್ತಿಯ ಕುಂಕುಮ
ಶಕ್ತಿಯ ಗಂಧವ ಪರಶಕ್ತಿಯ ಪೂವನು
ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ
ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ ೩

 

೭೧
ವಾಲೆ ಬಂದಿಹುದೇ ತಂಗೀಯನ
ವ್ವಾಲೆ ಬಂದಿಹುದೆ ಪ.
ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ
ವಾಲ ರಮಾಲೋಲ ಕೃಷ್ಣನ ವಾಲೆ ಅ.ಪ.
ಅಂಬುರುಹೋದ್ಭವ ಅಖಿಲ ಸುರಾ
ರಂಬರದಲಿ ಸ್ತುತಿಸೆ
ಶಂಬರಾಸುರ ಸಂಹರನೈಯ್ಯನ ಹಡಗು
ಅಂದು ಮಾರುತನಿಲ್ಲದೆ ಗೋಪಿ
ಚಂದನಸಹಿತನಿಲ್ಲೇ ಮಧ್ಯದಿಂದಲೀ
ಅಂದದಿ ಮುನಿಗಳ ನಿಂದು ಸ್ತುತಿಸುತಾ
ನಂದದಿಂದಾನಂದಕಂದನ
ಮುಂದೆ ಕರೆಯೆ ಮುನಿ
ದಂದುಗ ಹರಿಸುತ ಬಂದೆನೆಂದು ಇಂಥಾ ೧
ಬಂದೆನೆಂದು ತೋರನೆ ಹರಿ
ನಿಂದಿರುವನೆ ಬದಿಲಿ
ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ
ಬಂದ ಭಕ್ತರ ಸೇವಿಸೆಂದು ಬರೆದಿಹ
ಬಂಧು ನಾನೆಂದು ತಿಳಿ
ಎಂದು ಹೇಳುವತೆರ ಬರಹವ
ಇಂದಿರೇಶ ತಾ ಬಂದು ನಿಂದು ಕೈ ಪಿಡಿದ
ನೆಂದು ತಿಳಿ ಎಂದು ಭರದಿ ಇಂಥಾ ವಾಲೆ ೨
ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ
ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ
ಸೋಸಿಲಿ ಸ್ತುತಿಸೆಂದು ಈ ಶುಭ ಪತ್ರವ
ದಾಸಳಾದ ಎನ್ನ ಮನದಾಸೆ ಪೂರೈಸುವ
ಶ್ರೀಶನಿಂದ ಇಂಥಾ ವಾಲೆ ವಾಸುದೇವನ ೩

 

೧೫೦
ವೀಳ್ಯವ ಕೈಕೊಳ್ಳೊ ನಿನ್ನರಸಿಯೊಳು ನೀ ಸರಸದಿಂದಲಿ ಪ.
ಯಾಲಕ್ಕಿ ಲವಂಗ ಬಾಲ ಮೆಣಸು ಸಹ
ಲೋಲಾಕ್ಷಿ ತಂದಿಹ ವೀಳ್ಯವ
ಬಾಲಕೃಷ್ಣನೇ ಶೃಂಗಾರದಿ ೧
ರತ್ನದ ತಟ್ಟೆಯಲಿ ಮುತ್ತಿನ ಸುಣ್ಣವು
ಬುತ್ತಿ ಚಿಗುರಿನ ವೀಳ್ಯವ
ಹಸ್ತಿ ವರದನೇ ಶೃಂಗಾರದಿ ೨
ಶ್ರೀಶ ಶ್ರೀ ಶ್ರೀನಿವಾಸ
ವಾಸುಕಿಶಯನ ತಡವ್ಯಾಕೊ ಶೃಂಗಾರದಿ ೩

 

೬೯
ವೃಂದಾವನದಿ ನಿಂದಾಡುತಿಹ ಸುಂದರ ಮೂರುತಿ ಇವನಾರೆ ಪ.
ನಂದಕಂದ ಮುಕುಂದ ಮುರಾರಿ ಚಂದಿರಾನನ ಕೃಷ್ಣ
ಇವ ನೋಡೆ ಅ.ಪ.
ಕಡಗಕಂಕಣ ಬೆಡಗಿಲಿ ಹೊಳೆಯುತ
ಸಡಗರದಿಂದಿಹ ಇವನ್ಯಾರೆ, ಸಖಿ
ಮೃಡಸಖ ಎಮ್ಮಯ ಒಡೆಯನೆಂದಿಸುವ
ಜಡಜಮುಖಿ ಇವನೋಡೆ ೧
ಹರವಿದ ಕೇಶದಿ ಶಿರದ ಕಿರೀಟವು
ವರಗೋವುಗಳ ಕಾಯ್ವ ಇವನ್ಯಾರೆ, ಸಖಿ
ವರ ಕಾಳಿಂಗನ ಭಂಗವ ಮಾಡಿದ
ಶರಧಿ ಗಂಭೀರ ಇವನೋಡೆ ೨
ಪೊಂಗೊಳಲೂದುತ ಕಂಗೊಳಿಸುತಿಹ
ಮಂಗಳಮೂರುತಿ ಇವನಾರೆ, ಸಖಿ
ಭಂಗಬರದ ಪರಿ ಭಕುತರ ಸಲಹುವ
ರಂಗ ಶ್ರೀ ಶ್ರೀನಿವಾಸ ಇವ ನೋಡೆ ೩

 

೭೦
ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ
ಚಂದಿರವದನೆ ನೋಡುವ ಬಾರೆ ಪ.
ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು
ಹಾಟಕಾಂಬರಧರನ ನೋಟದಿ ಸುಖಿಸೆ
ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ
ನಾಟ ನೋಡಿ ಮನ ಕವಾಟವ ಬಿಚ್ಚೆ
ಪೂರ್ಣ ನೋಟದಿ ನೋಡುವ ೧
ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ
ಮ್ಮಂಗವ ಅಂಗಜನೈಯ್ಯಗೀಯುತೆ
ಕಂಗಳಿಗ್ಹಬ್ಬವೆ ರಂಗನ ನೋಡುತೆ
ಗಂಗಾಜನಕನ ವಲಿಸಲು ನಮಗೆ
ಹಿಂಗದ ಮುಕುತಿಯ ರಂಗಗೊಡುವ ಬಾರೆ ೨
ಜಯ ಜಗದೀಶನ ಜಯ ರಮಕಾಂತನ
ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ
ಜಯ ಯದು ತಿಲಕನ ಜಯ ಕೂಡಾಡುವ
ಜಯಪ್ರದನಾಗುತೆ ಜಗದಿ ಪೊರೆವ ಬಾರೆ ೩

 

೭೩
ವೆಂಕಟಾದ್ರಿಯಲ್ಲಿ ಮೆರೆವ ವೆಂಕಟೇಶನು ಪ.
ವೆಂಕಟೇಶನು ನಮ್ಮ ಸಂಕಟಹರನು
ಮಂಕುಬುದ್ಧಿಯನ್ನು ಬಿಡಿಸಿ ತನ್ನ ಕಿಂಕರರ ಸಲಹುವ ನಮ್ಮ ಅ.ಪ.
ಮಘಮಘಿಸುವ ದಿವ್ಯ ಕಿರೀಟ ಶೋಭನು
ಜಗದೊಳೀತನ ಮಹಿಮೆ ಪೊಗಳಲೊಶವೇ ನಮ್ಮ ೧
ಕಸ್ತೂರಿಯ ತಿಲಕ ಫಾಲ ಕಮಲನೇತ್ರ ಶೋಭನು
ಸಿಸ್ತಿನ ನಾಸಿಕ ಚಂಪಪುಷ್ಪದಂತೆ ಪೊಲ್ವು ನಮ್ಮ ೨
ಕನ್ನಡಿ ಕಪೋಲ ಕರ್ಣಕುಂಡಲವನು
ಚನ್ನ ಕರ್ಪೂರದ ಕರಡಿಗೆಯನ್ನು ಪೋಲ್ವ ವದನ ನಮ್ಮ ೩
ದಂತ ದಾಳಿಂಬಬೀಜದಂತೆ ಪೊಳೆವನು
ಕಂತುಪಿತನ ಮೃದುಜಿಹ್ವೆ ಶಾಂತಮೂರುತಿಯ ಕಂಡೆ ೪
ಉಭಯ ಪಾಶ್ರ್ವದ ಭಾಜಕೀರ್ತಿ ಅಭಯಹಸ್ತವು ದೇವ
ಉಭಯ ಪಾಶ್ರ್ವದಿ ಶ್ರೀ ಭೂಸಹಿತ ಭಕ್ತರಿಗಭಯ ಕೊಡುವೊ ೫
ಶ್ರೀ ವತ್ಸಾಂಕಿತ ನಾಭಿ ಕಮಲ ಹಾರಶೋಭನು
ಶ್ರೀ ಕೃಷ್ಣಂಗೆ ಸಾಲಿಗ್ರಾಮ ಹಾರ ಮೆರೆವೋದ ಕಂಡೆ ೬
ಥಳ ಥಳಿಸುವಂಥ ದಿವ್ಯ ಥಳಕಿನ ಹಾರ
ಬೆಳಕಾದ ರತ್ನದ ಪದಕ ವಲಿವ ಏಕಾವಳಿಯ ಕಂಡೆ ೭
ಮೆರೆವ ಪೀತಾಂಬರ ವಡ್ವಾಣ್ಯ ಕರಡಿ ಕಂಜರಿಗೆ ಶಲ್ಯ
ಧರೆ ಮೇಲೊಲಿವ ಶರಧಿ ಗಂಭೀರನ ಕಂಡೆ ೮
ಕಂತುಪಿತ ತನ್ನ ಏಕಾಂತ ಭಕ್ತರ ಶಾಂತ ನೋಟದಿಂದ ನೋಡಿ
ಭ್ರಾಂತಿ ಬಿಡಿಸಿ ಪೊರೆವೊದ ಕಂಡೆ ೯
ಭಕ್ತರನ್ನು ಪೊರೆವ ಬಿರುದಿನ ಪಾಡಗ ಧರಿಸಿ
ದಿವ್ಯ ಅಶಕ್ತಜನ ಪೋಷ ಶ್ರೀ ಶ್ರೀನಿವಾಸ ದೊರೆಯ ಕಂಡೆ ೧೦

 

೭೨
ವೆಂಕಟೇಶನ ಧ್ಯಾನ ಮಾಡಲಾದಿಯೊಳು ಹರಿ
ಕಿಂಕರರು ಗಣಪನ್ನ ಧ್ಯಾನಿಸಿ ಪ.
ಪಾರ್ವತಿಯ ಪಾದ ಪಂಕಜವನೆ ನೆನೆಯುವುದು ಮನದೊಳು
ಶಂಕರನ ಪ್ರಾಥಿಸುತ ಹರಿಯನಾತಂಕವಿಲ್ಲದೆ ೧
ಮನ ನೆನೆವ ಪರಿ ಭಾರತಿಗೆ ವಂದಿಸಿ
ಶಂಕೆಯಿಲ್ಲದೆ ಹರಿ ಮಹಿಮೆ ಪೊಗಳಲು ೨
ಸರಸತಿಯ ಧ್ಯಾನಿಸಿ ನಿಮ್ಮ ಮಂಕಿನಜ್ಞಾನವನು
ಕಳೆಯಲು ಪವಮಾನಗೆ ವಂದಿಸಿ ೩
ಪಂಕಜಾಕ್ಷಿ ರಮಾದೇವಿ ಶ್ರೀ ಶ್ರೀನಿವಾಸನ
ಪಾದ ಪಂಕಜವ ನೆನೆದು ಹರುಷದಿ ೪
ಹರಿಕಿಂಕರು ಇರಿ ಎಂದರುಹಿದ
ಪುರಂದರದಾಸರ ನೆನವೆನನುದಿನವೂ ೫

 

ಬ್ರಹ್ಮನ ಪತ್ನಿ. ವಿದ್ಯಾಧಿ
೧೦೧
ಶ್ರೀ ತುಳಸಿ ಜಯ ತುಳಸಿ ಜಯ ಜಯಾ ಜಯತು ತುಳಸಿ
ಶ್ರೀ ಕೃಷ್ಣನ ಅರಸಿ ಜಯತು ಜಯತು ಜಯ ಶುಭಕರಿ ಪ.
ಪಾಲಗಡಲನು ಮಥಿಸೆ ಶ್ರೀಲೋಲ ಅಮೃತವನ್ಹಂಚೆ
ಬಾಲ ಶ್ರೀ ಕೃಷ್ಣನ ಲೋಲ ಲೋಚನದಿ
ಬಾಲೆ ನೀನುದಿಸಲುತ್ಸವದಿಂದ ಸುರರೆಲ್ಲ
ಮೇಲೆ ಅಂಬರದಿಂದ ಪುಷ್ಪವೃಷ್ಟಿಯನು ಕರೆಯೆ
ಜಯ ಜಯ ವಾದ್ಯದಿ ೧
ದ್ವಿಜರೆಲ್ಲ ವೇದ ಘೋಷದಿ ನಿನ್ನ ಸ್ತುತಿಸಲು
ಅಜಭವಾದಿಗಳೆಲ್ಲ ಸ್ತೋತ್ರವನು ಗೈಯ್ಯೆ
ಭುಜಗಭೂಷಣಸಖನು ತ್ರಿಜಗವಂದಿತ ನಿನ್ನ
ಭಜಕ ಜನರಾಪ್ತ ಶ್ರೀ ಕೃಷ್ಣ ವರಿಸಿದನೆ
ಜಯ ಜಯ ಕಲ್ಯಾಣಿ ೨
ದೇವಸ್ತ್ರೀಯರು ಬಂದು ದೇವ ಉಡುಪ ತಂದು
ದೇವಕಿತನಯನ ಸಹಿತ ನಿನ್ನ
ಪಾವನದರಿಶಿಣ ಕುಂಕುಮ ಪರಿಮಳ ಗಂಧದಿ
ದೇವಿ ಪುಷ್ಪಮಾಲೆಯ ಪೂಜಿಸಿದರು
ಶ್ರೀ ಶ್ರೀನಿವಾಸನ ಸತಿ ೩

 

೭೪
ಶ್ರೀನಿವಾಸಗಾರುತೀಯ ಮಾನುನೀಯರು ಬೆಳಗಿರೀಗ ಪ
ಗಾನಲೋಲ ದೀನಪಾಲ ಆನಂದಕಂದ ಸುಂದರಾಂಗ ಅ.ಪ
ಭಕ್ತಪಾಲಾಸಕ್ತಶೀಲಾ ಮುಕ್ತೀಶ ರಮಾಲೋಲಗೀಗ
ಮುತ್ತಿನಾರುತೀಯನೆತ್ತೀರೆ ಭಕ್ತವತ್ಸಲ ದೇವಗೆ ಬೇಗ ೧
ಆದಿಮೂಲನೆ ವೇದೋದ್ಧಾರನೆ ಸಾಧುವಂದ್ಯ ಗಿರಿಧರನೆ
ಮೋದದಿಂದ ಭೂಮಿ ತಂದ ಆದರದಿ ಕರೆದ
ಕಂದಗೊಲಿದಾನಂದ೨
ಭೂಮಿ ಅಳಿದ ಭೂಪರ ಕೊಂದ ಭೂಮಿಜೆ ಅರಸ ಭೂಪ ಕೃಷ್ಣಾ
ಭಾಪುರೆ ಬೌದ್ಧ ಭೂಪ ಕಲ್ಕಿ ಶ್ರೀಪ ಶ್ರೀಶ್ರೀನಿವಾಸನಾದ ೩

 

೭೫
ಶ್ರೀನಿವಾಸನೆ ನಿನ್ನ ಮಹಿಮೆಯ ಏನ ಪೇಳ್ಪೆನಾ ಜ್ಞಾನರಹಿತಳು
ಸಾನುರಾಗದಿ ನಿನ್ನ ಸ್ತುತಿಸಿ ಪಾಡಲು ನೀನೆ ನುಡಿಸೆಲೊ
ಗಾನಲೋಲನೆ ೧
ಮಂಕುಮಾನವರಿಂದ ಸಾಧ್ಯವೆ ಶಂಕರಾದಿ ವಂದಿತನ ಸ್ತುತಿಸಲು
ನಿನ್ನ ಪಾದ ಪಂಕಜ ಧ್ಯಾನಿಸೆ ನಿನ್ನ ಕೃಪೆಯನಾತಂಕವಿಲ್ಲದೆ೨
ನಿನ್ನ ಭಕ್ತರಾ ಕಾಯ್ವೆಯೆಂಬುವುದನ್ನು ಅರಿತೆಹೆ ಪನ್ನಗಾಚಲ
ಸನ್ನುಕಾಂಗನೆ ನಿನ್ನ ಮಹಿಮೆ ಪೊಗಳಲು
ಚಿನ್ನಭೊಮ್ಮನಿಂದಳವೆ ದೇವನೆ ೩
ಚೆನ್ನ ಮಸ್ತಕಾದೊಳು ಪೊಳೆಯುವೊ ರನ್ನ ಮಾಣಿಕ್ಯ
ಕಿರೀಟಶೋಭನ
ಸನ್ನುತಾಂಗ ಮೂರು ನಾಮ ಸೊಬಗನೊ ಇನ್ನು
ವರ್ಣಿಪೆ ಕರ್ಣಕುಂಡಲ ೪
ಪದ್ಮನಾಭಗೆ ಪದ್ಮದಕ್ಷಿಯ ತಿದ್ದಿದ ಚಂಪಕದ ನಾಸಿಕ
ಮುದ್ದುದಂತ ಪಂಕ್ತಿಗಳ ಕಂಡೆನೊ ಪೂತನಿಯ ಅಸುಹೀರಿದ ಆ
ಜಿಹ್ವೆಯ ಶ್ರೀನಾಥ ಕಂಡೆನಾ ಕಂಠಮಾಲೆಯ ಸಹಿತ ನಿನ
ಭುಜಕೀರ್ತಿಗಳ ಕಂಡೆನು
ಭಕ್ತಪಾಶ ನಿನ್ನ ಹಸ್ತ ಕಂಕಣವಾ ಕಂಡೆನು ೫
ಬೆರಳ ಮುದ್ರಿಕೆ ಕೊರಳೊಳ ಸಾಲಿಗ್ರಾಮದ ಸರ
ವೈಜಯಂತಿ ಮಾಲೆಗಳ ಕಂಡೆನು ೬
ವÀರ ಶ್ರೀ ತುಳಸಿಯ ಹಾರಗಳ ಮಧ್ಯದಿ
ಮೆರೆವ ರಮಾದೇವಿಯಳ ಕಂಡೆನು
ಜಾನು ಜಂಘೆಯೊಳ ಮೆರೆವ ಪೀತಾಂಬರ ಕಂಡೆನು ೭
ಆಜಾನುಬಾಹು ನೀನ್ಹೊದ್ದವಲ್ಲಿ ವಜ್ರದ್ಪಡ್ಯಾಣಕಂಡೆನು
ಸಾನುರಾಗದಿ ಸ್ತುತಿಸಿ ಹಿಗ್ಗುತ ನಾನುಸ್ತುತಿಪ ನಿನ್ನಂಘ್ರಿ ಕಮಲವ ೮
ಚರಣಕೊಪ್ಪುವೊ ಗಗ್ಗರಿಪಾಡಗ ವರಗೆಜ್ಜೆ ಪೈಜಣಿ ಕಂಡೆ ದೇವನೆ
ನಿನ್ನ ಚರಣ ಸೇವಕರನ್ನು ಪೊರೆಯುವ ಬಿರುದು ಪೊತ್ತ
ಶ್ರೀವೆಂಕಟೇಶನೆ ೯
ಬನ್ನ ಬಡಿಸದೇ ಇನ್ನೀ ಭವದೊಳು ಸನ್ನುತಾಂಗನೆ
ಕಾಯ ಬೇಕೆಲೊ
ಮನ್ಮನೋಜಯ ಶ್ರೀ ಶ್ರೀನಿವಾಸನೆ ಎನ್ನ ತಪ್ಪುಗಳೆಲ್ಲ
ಕ್ಷಮಿಸೊ ದೇವನೆ ೧೦

 

೧೩೫
ಸಂಗರಹಿತನಾಗಬೇಡವೊ ಮನುಜ ನಿನ್ನಂಗದಲ್ಲಿ
ಸಜ್ಜನರ ಪಾದ ಭಜನೆ ನಡೆಸು ನಿತ್ಯ ೧
ವಾಸುದೇವ ನಿನಗೆ ಒಲಿವ ತಾ ಭಾಸುರ ಕೀರ್ತಿ ತರುವ
ಬೇಸರಿಸದೆ ಭಾಸಿ ಪಂಥದಿ ವಾಸುದೇವದಾಸರ ಸೇವಿಸು ೨
ಕರುಣ ತೋರಿ ಸಲಹುವಂಥ ಗರುಡಗಮನನಿರಲು ನೀನು
ಅರಿಯದಂತೆ ಇರಲು ನಿನ್ನ ಮರುಳು ಮನವೆ ಕಾರಣಿದಕೆ ೩
ಕೂಡು ಸಜ್ಜನ ಸಂಗ ತವಕದಿ ಜಾಡುಕೋರ್ವ ಹರಿಭಕ್ತರ
ನೋಡು ನಿನ್ನಕ್ಷಿ ತೆರೆದು ಮನುಜ ೪
ಜಗಜನ್ಮಾದಿ ಕಾರಣ ಅಘಟನಘಟನಾದ ಹರಿಯ
ಮಿಗೆ ಧ್ಯಾನವಿಟ್ಟು ಮನವೆ ೫
ಸಲ್ಲ ದುರ್ಜನರಾಸಂಗವು ಸಜ್ಜನರಿಗೆ ಅಲ್ಲ ತಿಂದ ತಿಮ್ಮನಂದದಿ
ಬೆಲ್ಲ ಬೇವಿನಂತೀ ಸಂಸಾರದಲ್ಲಿ ಸಿಲುಕಬೇಡ ಮನವೆ ೬
ಹರುಷದಿಂದ ಜಡದೇಹದೊಳಗಿಹ ಶ್ರೀ ಹರಿ ಎಂದರಿದು
ಪರರ ವಾರ್ತೆ ಆಡದೆ ಪರಮಪುರುಷ ಹರಿಯ ನೆನೆ ಮನುಜ ೭
ಹದಿನಾಲ್ಕು ಲೋಕದೊಡೆಯ ಒದಗಿರಲು ನಿನ್ನ ಸಾಕೆ
ಬರಿದೆ ಚಿಂತೆ ಮಾಡಬೇಡ ಸ್ಮರಿಸು ಹರಿಯ ಚರಣವನ್ನು೮
ಸ್ವಕಾರ್ಯ ಸ್ವಾಮಿಕಾರ್ಯ ನಿನ್ನ ಅಖಿಲ ಕಾರ್ಯಾಂಗತನು ಹರಿಯು
ಸಖನಂತೆ ಸಲಹುತಿರಲು ಸುಖಿಸು ಅವನ ದಾಸನೆಂದು ೯
ಕಮಲೆಯರಸ ಕಮಲನಾಭನು ನಿನ್ನ ಕೈಬಿಡನು ಆ ರಮೆಯರಸನ
ಮನಸಿನಲ್ಲಿ ಕನಸಿನಲ್ಲಿ ನೆನಸು ಹರಿಯ ಪಾದ ನಿತ್ಯ ಸಂಗ ೧೦
ಅಖಿಲಾಂಡ ನಾಯಕ ನಿನಗೆ ರುಕುಮಿಣೀಶ ಸಲಹುವನು
ಸಕಲರಲ್ಲು ಅವನೇ ನಿಂತು ಸಲಹುವನೆಂದರಿತು ನೀ ೧೧
ಜ್ಞಾನಿಗಳಲಿ ಪೋಗಿ ನಿತ್ಯ ಅಜ್ಞಾನವನ್ನು ಪರಿಹರಿಸುತ
ಮನದಲಿ ಮನದಿ ಹರಿಯಪಾದ ಜಾಡು ಅರಿತು ನಿತ್ಯ
ವಂದಿಸು ಮನದಿ ೧೨
ದಾಸದಾಸರ ದಾಸನು ನಾನವರ ಪಾದ ಧ್ಯಾಸದಿಂದ ಅರಿತೆನಲದೆ
ಹರಿಯ ಚರಿತೆ ಈ ಅಭ್ಯಾಸ ಮಾನವಗೆ ದೊರಕುವುದೆ
ಎಂದರಿತು ೧೩
ಗುರುಗಳಿಲ್ಲದೆ ಹರಿ ದೊರೆಕನೊ ನಮ್ಮವರ ಗುರು ಮುಖ್ಯ
ಪ್ರಾಣನಾಥನೊ
ಹರಿ ಶ್ರೀ ರಾಮಚಂದ್ರನೆಂದು ಅರುಹಿಕೊಟ್ಟು ಸಲಹುವರ ೧೪
ತ್ರಿವಿಧ ಜೀವರಿಗೆ ಹರಿಪರದೈವನೆಂದರುಹಿದ ಪರಮಗುರು
ಶ್ರೀ ಶ್ರೀನಿವಾಸನ ಪದವ ತ್ರಿವಿಧದಿಂದಲರುಹಿ ಸಲಹುವಂಥ
ಮತವ ಬಿಟ್ಟು ೧೫

 

೧೩೬
ಸಕಲಕಾರ್ಯಾಂತರ್ಗತನಾಗಿ ಹರಿ ಭಕುತರ ಹೃದಯದಲಿ ನೆಲಸಿ
ಭಕುತರ ಮನ ಬಂದಂತೆ ಕುಣಿಸೆ ಅವರನು ಹರಿ
ಸಕಲಕಾಲದಲ್ಲೂ ಕಾದು ಕೊಂಡಿದ್ದು ಸಲಹುವ ಶ್ರೀ ಶ್ರೀನಿವಾಸ ಪ.
ಯಾವಾಗ ಬರುವನೋ ಭಕ್ತರೆಡೆಗೆ ಹರಿ
ಹರಿ ಆವಾಗಲಾಗಮಿಸುವುದೇ ಪರ್ವಕಾಲ
ಹರಿಯ ಆವಾಗಲೇ ನೆನದು ಮಿಂದು ಧ್ಯಾನಿಸೆ
ಆವಾಗಲೇ ಸಂಧ್ಯಾಸಕಲ ಕರ್ಮವ ನಡೆಸೆ
ಯಾವಾಗಲೂ ಹರಿ ತಾ ತನ್ನ ಭಕ್ತರ ಕೈ ಬಿಡ
ಯಾವ ಕಾಲದಲ್ಲೂ ಶ್ರೀ ಶ್ರೀನಿವಾಸ ೧
ನಾನು ದೊಡ್ಡವ ನೀನು ದೊಡ್ಡವನೆಂದು ಹೊಡೆದಾಡದೇ
ನಿಮಗೂ ನಮಗೂ ಮತ್ತೊಬ್ಬನಿಹನು ಹರಿ
ನಿಮಗ್ಯಾತಕೀ ಛಲದ ವಾದ ಮನುಜರೇ
ಅನುದಿನವೂ ನೆನೆಯಿರಿ ಶ್ರೀಹರಿ ಶ್ರೀ ಶ್ರೀನಿವಾಸನ್ನ
ಸಕಲರಿಗೂ ದೊಡ್ಡವನವನೇ ಕೇಳಿ ಸಜ್ಜನರೇ ೨
ಈ ಕಾಲ ಆ ಕಾಲವೆಂದಿಲ್ಲ ಹರಿಗೆ ತನ್ನ ಭಕ್ತರ ಸಾಕಲು
ಈ ಸಮಯ ಆ ಸಮಯವೆಂದು ನೋಡನು ಹರಿ
ಇಂಥಾ ಈ ಕರುಣದೊರೆಯೆಲ್ಲಾದರುಂಟೆ ಜಗದಿ
ಈ ತನುವಿರುವ ತನಕ ಈ ಪರಮ ಪುರುಷನನು
ಬೇಕಾದ ಕಾಲದಲಿ ಈ ಮನುಜ ಜಪಿಸುತಿರೆ
ಕಮಲನಾಭ ಶ್ರೀ ಶ್ರೀನಿವಾಸ ಸಲಹದಿರನೇ
ನಿನ್ನ ಆಪತ್ತಿಗಾಹ ಶ್ರೀಶ ಶ್ರೀ ವೆಂಕಟೇಶಾ ೩
ಜಾಗರದಲೂ ಹರಿ ಕಾವ ನಿದ್ರೆಯಲೂ ಹರಿಕಾವ
ಜಾಗರ ಸುಷುಪ್ತಿಯಲಿ ಹರಿ ಜಾಗರಮೂರುತಿ ನಿನ್ನ ಕಾವ
ಜಾಗು ಮಾಡದೆ ಭಜಿಸು ಜಾನಕಿರಮಣ ಶ್ರೀ ರಾಮಚಂದ್ರನ್ನ
ಅಜಾಗೂರಕತೆ ಸಲ್ಲ ನಿನಗೆ ನಿತ್ಯ ಜಪದಿನೆನೆ
ಶ್ರೀ ಶ್ರೀನಿವಾಸನ್ನ ಮನವೆ ೪
ಬುದ್ಧಿ ಬಂದಿದ್ದು ಅವನಿಂದ ಬುದ್ಧಿ ಅರಿವುದು ಅವನಿಂದ
ಅಪ್ರಬುದ್ಧನಾಗದೇ ಬುದ್ಧಿ ಪೂರ್ವಕ ನೀ ನೆನೆದರೆ
ಹರಿ ಬದ್ಧಕಂಕಣ ತೊಟ್ಟಿಹನು ಭಕ್ತರ ಕಾಯೆ
ಆ ಶ್ರೀ ಶ್ರೀನಿವಾಸನ ಶುದ್ಧ ಮನದಿ ನೆನೆಮನವೆ ೫
ಮೊದಲು ನಿನ್ನ ಹೃದಯದ ವೈರಿ ಗೆಲ್ಲು
ಮೊದಲು ನೀನವರ ವಶವಾಗದೆ ನಿನ್ನ ಮನ
ಶುದ್ಧಮಾಡಿಕೊ ಮೊದಲು ನಿನ್ನ ಮನಸಿನಶ್ವಕ್ಕೆ
ಬುದ್ಧಿಲಗಾಮು ಹಾಕು ನಿನ್ನ ಬುದ್ಧಿಯಲಿ
ಮೊದಲನೆ ಕಾರ್ಯವಿದು ಎಂದರಿ
ಈ ಮೊದಲು ನನಿಕಾರ್ಯ ನೋಡಿ ಶ್ರೀ ಶ್ರೀನಿವಾಸ
ಒಲಿವ ನಿನಗೆಂದೆಂದು ಮನವೆ೬
ಈ ತನವು ಈ ನುಡಿ ಈ ಕಾರ್ಯ ಈ ವಾರ್ತೆ
ಈ ಕೃಪೆಯು ಶ್ರೀ ಶ್ರೀನಿವಾಸಗಲದೆ ಅನ್ಯತ್ರವಿಲ್ಲ
ಹರಿ ಭಕ್ತರ ಸುಳಾದಿ ಭಕ್ತವತ್ಸಲ ಶ್ರೀ ಶ್ರೀನಿವಾಸಗರ್ಪಿತವೆಂದು
ತಿಳಿ ಮನವೆ ೭

 

೭೬
ಸರ್ವಾಂತರ್ಯಾಮಿ ಸಲಹೊ ಎನ್ನ
ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ
ಭಕ್ತರನು ತೋಷಿಸಲು ಹತ್ತವತಾರದಿ
ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ
ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ
ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ ೧
ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು
ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ
ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ
ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ ೨
ಆವಾವ ಕಾಲದೊಳು ಆವಪರಿ ಕಷ್ಟದೊಳು
ಕಾವ ನಿನ್ನಯ ನಾಮ ಮರೆಯದಂತೆ
ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ
ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ ೩

 

ಪುರಂದರದಾಸರು ದಾಸವರೇಣ್ಯರು
೭೭
ಸಾಧಿಸಿ ನಿನ್ನ ನಾಮ ನಿತ್ಯ ಸೋಧಿಸಿ ಭಕ್ತಿ ರಸ
ಸ್ವಾದ ಮಾಡುವ ಸಾಧುಗಳೊಳಗಿಡೊ ಶ್ರೀಶಾ ರಮೇಶ ಪ
ಬೋಧಿಸಿ ತತ್ತ್ವರಸ ಸ್ವಾದ ನೀಡುವ
ಆದರದಲಿ ತೋರೋ ಮಾಧವ ಶ್ರೀಶನೆ
ಮೋದ ಬೀರುತ ನಿನ್ನ ಪಾದವ ತೋರುವ
ಸಾಧುಗಳೊಳಗಿಡೊ ಅಗಾಧ ಮಹಿಮನೆ ಅ.ಪ
ಭವಸಂಸಾರದೊಳಿರಲು ಸಜ್ಜನರು
ಅರುಣೋದಯದೊಳೆದ್ದು ನಿನ್ನ ಚರಣಪಲ್ಲವವನ್ನು ಕೃಷ್ಣಾ
ಸ್ಮರಿಸುತಲಿರುವರೊ ಪರಮಪುರುಷಕೇಳೊ ಅಂಥಾ
ವರ ಭಾಗವತರನು ಕರುಣದಿ ತೋರೋ ಶ್ರೀಶಾ
ವರ ನೂಪುರಗೆಜ್ಜೆ ಧರಿಸಿ ಮೆರೆವ ದೇವಾ
ವರ ಭಕ್ತರು ಕರೆ ಕರೆದಲ್ಲಿಗೆ ಬಹ
ಶರಧಿ ಶಯನ ನಿನ್ನ ಬಿರುದಲ್ಲವೆ ಕೃಷ್ಣಾ
ತ್ಪರಿತದಿ ನಿನ್ನಡಿ ಸ್ಮರಿಸುವರನೆ ತೋರೊ ೧
ಅಗರು ಚಂದನ ಗಂಧ ಸೊಗವಿಲಿ ಧರಿಸುತ
ಮಿಗೆ ಪೀತಾಂಬರದುಡಿಗೆಯನುಟ್ಟು ಕೃಷ್ಣಾ
ಮಿಗೆ ಅನಂತಾಸನದೊಳು ಸಿರಿ ಸಹಿತಿರೆ
ಸೊಗವಿಲಿ ಕರಿರಾಜನ ಸ್ವರ ಆಲಿಸಿ
ಅಗಹರ ಸಿರಿಗ್ಹೇಳದೆ ಬಂದೆ ಶ್ರೀಧರ
ಝಗಝಗಿಸುತ ನಿನ್ನ ಪದರುಹಗಳನಿಟ್ಟು
ಮಿಗೆ ವೇಗದಿ ಬಂದು ಕರಿಯನುದ್ಧರಿಸಿದೆ
ಈಗ ಬೇಗ ನಿನ್ನ ಭಕ್ತರ ಸೊಗವಿಲಿ ತೋರೋ ಕೃಷ್ಣಾ ೨
ಕ್ಷಿತಿಯೊಳು ನಿನ್ನಯ ಸತತದಿ ನೆನೆಯುವ
ಯತಿ ಮುನಿ ಹೃದಯಾನಂದ ಶ್ರೀಕೃಷ್ಣ
ಸತತದಿ ನಿನ್ನ ನಾಮ ಜತನ ಮಾಡುತ ತಮ್ಮ
ಮತಿಭ್ರಮಣೆಯಲು ನಿನ್ನಾಕೃತಿ ನೋಡುತ ಸ್ತುತಿಪ
ಯತಿಕುಲ ತಿಲಕಾಗ್ರಣಿ ಶ್ರೀ ಶ್ರೀನಿವಾಸ ಎನ್ನ
ಮತಿಭ್ರಮಣೆಯನು ನೀಗಿಸುವಂಥಾ ಸುಜನರ
ಸತತದಿ ತೋರಿಸೋ ಕ್ಷಿತಿಯೊಳು ವೆಂಕಟ
ಪತಿತ ಪಾಮರರನು ಗತಿಕಾಣಿಸೆ ಕೃಷ್ಣಾ೩

 

ರಾಘವೇಂದ್ರಯತಿಗಳು: ಮಂಚಾಲೆಯ
೧೧೭
ಸುಭದ್ರೆ
ಸುಖದಿಂದ ಬಾಳೌ ಸತಿ ಸುಭದ್ರಾ
ಸತಿ ನಿನ್ನ ಸಲಹಲಿ ಲಕ್ಷ್ಮೀಲೋಲಾ ಶ್ರೀ ಲಕ್ಷ್ಮೀಲೋಲಾ ಪ.
ಭಾವ ಮೈದುನ ಅತ್ತೆಗೆ ಅತಿ ಹಿತಳಾಗಿ ನೀ
ಭಾವ ಶುದ್ಧದಿ ಹರಿ ಗುರು ಸೇವೆಯ ಮಾಡಿ ೧
ಪತಿಸೇವೆಯ ಅತಿಹಿತದಿಂ ನೀ ಮಾಡೆ
ಪತಿವ್ರತೆಯಾಗಿ ನೀ ಸುತರನು ಪಡೆಯುವೆ ೨
ಭಕ್ತವತ್ಸಲನ ಭಗಿನಿಯೆಂದೆನಿಸಿದಿ
ಸತತ ಶ್ರೀ ಶ್ರೀನಿವಾಸನ ನೆನಯುತ ನೀ ಬಾಳೌ ೩

 

ರುದ್ರದೇವರು ಶಿವ ಮಹಾದೇವ ಇವನು
೧೦೪
ಸ್ತುತಿಸಿ ಪ್ರಾರ್ಥಿಪೆ ನಿನ್ನನು ಸರಸ್ವತಿ
ಸ್ತುತಿಸಿ ನಮಿಪೆ ನಿನ್ನನು ಪ.
ಸ್ತುತಿಸಿ ನಮಿಸಿ ನಿನ್ನ ಜತನ ಮಾಡುತ್ತ ವದನದಿ
ಸ್ತುತಿಸುವ ಭಾಗವತರನು ತೋರಮ್ಮಾ ಅ.ಪ.
ಅಕ್ಷರಕ್ಷರ ರೂಪದಿ ಶ್ರೀಹರಿಯಾ
ಅಕ್ಷಯ ನಾಮವನು ಸ್ತುತಿಯ ಮಾಳ್ಪ
ಸುಕ್ಷೇಮ ಪಡೆದಿಹ ಮಾತೆ ಸರಸ್ವತಿ ಪ್ರತಿ
ಅಕ್ಷರವನು ಅರಿವಾ ಭಾಗ್ಯವ ತೋರೆ ೧
ರಾಗರಾಗದಿ ಭಜಿಪೆ ಶ್ರೀ ಹರಿಯಾ ಅನು
ರಾಗಕೆ ಪಾತ್ರಳಾಗಿ ವಲಿಸಿಹೆ
ಭಾಗವತಾಗ್ರಣಿ ಶ್ರೀಹರಿ ನಾಮವ
ಶೀಘ್ರದಿ ಸ್ತುತಿಸುವ ಭಾಗವತರ ತೋರೆಂದು ೨
ಅಗಣಿತ ಮಹಿಮೆಯನೂ ಬಲ್ಲವಳು ನೀ
ಸುಗುಣಿ ಸರಸ್ವತಿಯೆ ಶ್ರೀ ಶ್ರೀನಿವಾಸನ
ಅಗಣಿತ ಗುಣಗಳ ಪೊಗಳುವ ಮತಿಯಿತ್ತು
ಅಘಹರ ಹರಿಭಕ್ತರಾ ಲಗುಬಗೆಯಲಿ ತೋರೆ ೩

 

೯೪
ಹನುಮ – ಭೀಮ – ಮಧ್ವರು
ಆದರ್ಶಕನೋ ಹರಿ ತನ್ನಾಧರಿಸಿದವರಿ
ಗಾದರ್ಶಕನೋ ಹರಿ ಪ.
ಈ ಧರೆಯೊಳು ತನ್ನಾಧರಿಸಿದ
ಪಾದ ಸೇವಕ ಪಾಂಡವರಿಗೆ ಹರಿ ಅ.ಪ.
ತನುಮನಧನ ನಿನದೆನೆ ಹರುಷಿಪ
ಹನುಮನೇನಿತ್ತನೋ ಘನರಾಮ ರಾಘವಚಂದ್ರಗೆ
ವನರುಹಲೋಚನ ಇನಕುಲಚಂದ್ರನ
ತನ ಹೃದಯದಿ ದಿನ ನೆನೆದನಲ್ಲದೆ ೧
ಕುರುಕುಲ ಧ್ವಂಸನು ಕುರುಹು ಕೃಷ್ಣನೇ
ಎನೆ ಭೀಮ ನೆರೆದಾ ನೃಪ ನಿಸ್ಸೀಮನನ
ಕರಿಬಲ ಸಮ ಕರುಣಿಸಿ ಭೀಮಗೆ
ಕರೆದಾದರಿಶಿದ ರಣ ಅಧ್ವರದಲಿ ಹರಿ ೨
ಮಧ್ವಾಂತರ್ಗತ ಮುದ್ದು ಶ್ರೀ ಶ್ರೀನಿವಾಸ
ಇದ್ದ ಸ್ಥಳವು ಶುದ್ಧ ಎನುತ ಪೇಳಿ
ಸದ್ವೈಷ್ಣವರ ಉದ್ಧರಿಸಲವರ
ಹೃದ್ಗಮಲದಿ ಕೃಷ್ಣಾ ಇದ್ದಾನೆಂದು ೩

 

೧೪೦
ಹರಿ ಪುಟ್ಟಿಸಿದಾ ವೃಕ್ಷದಿ ಪುಟ್ಟಿದ ಎಳೆಸಸಿಯೆ
ಬಾಳೆನ್ನ ಕುಲದಾ ಬೆಳದಿಂಗಳೆ ಪ.
ತಂದೆ ತಾಯಿಯ ಮಾತು ಮರೆಯದಿರು ಎಲೆಸಸಿಯೆ
ಇಂದಿರಾಪತಿ ಕರುಣಕ್ಕೆ ಪಾತ್ರನೆಂದೆನಿಸಿ
ಇಂದು ನೀನಖಿಳಜನ ಸಂದಣಿಯೊಳು ಬೆಳಗು
ಚಂದ್ರ ಬಾನೊಳಗೆಸೆವ ತೆರನಂತೆ ಪೊಳೆದು೧
ಬಾ ಹಿರಿಮೆ ಬೇಡವು ನಿನಗೆ ಹಿರಿಯರಾಜ್ಞೆಲಿರಿರಲು
ಕರೆಕರೆಯುಬಾರದೊ ತರಳ ಶಿಶುವೆ
ಹಿರಿಮೆಗೆ ಕೊರತೆಯುಂಟೆ ಗುರುಹಿರಿಯರಾಜ್ಞೆಯಲಿರಲು
ದುರುಳರನು ಸರಸದೊಳು ಕೆಣಕದಿರು ಎಲೆಸಸಿಯೆ ೨
ಸಕ್ಕರೆ ಜೇನು ದಧಿ ಮಧುರಾಕಿಂತ ಅಧಿಕದ
ಚೊಕ್ಕ ಮಾತುಗಳಾಡು ನಿನ್ನ ದಿಟ್ಟ ಬಾಯೊಳಗೆ
ಚಿಕ್ಕವನಲ್ಲವೇ ಭಕ್ತಪ್ರಲ್ಹಾದ ಧ್ರುವ ಕೇಳೊ ಅವರಂತೆ
ಚಿಕ್ಕ ಶ್ರೀ ಶ್ರೀನಿವಾಸನ ಹರಕೆಯಲಿ ಬಾಳೊ ೩

 

೭೯
ಹರಿ ಸಂಕಲ್ಪದ ಕೃಪೆಯಲ್ಲದೆ ಬೇರಿನ್ನಿಲ್ಲವಯ್ಯ ಪ.
ಈ ನರವೆಂಬ ದೇಹಕ್ಕೆ ದೃಢ ಭಕುತಿ ಬರಲಿಕೆ ಅ.ಪ.
ಮುನ್ನ ಮಾಡಿಸಿ ಸುಕೃತ ಚನ್ನಿಗ ಹರಿ
ಬನ್ನ ಬಡಿಸಿ ಅಜಮಿಳನ
ತನ್ನ ಸುತನ ನಾರಗನೆಂದು ಕರೆಸಿ
ಉನ್ನಂತ ಪದವಿತ್ತ ಚನ್ನಕೇಶವ ಹರಿ೧
ರುಕ್ಮಾಂಗದನೇಕಾದಶಿ ವ್ರತವನ್ನು
ಚಕ್ರಧರನು ನೇಮದಿ ಮಾಡಿಶಿ
ತಕ್ಕ ,ಮಾನಿನಿ ಗಂಟಿಕ್ಕೆ ಜಗದಲವನ
ಪ್ರಖ್ಯಾತಿಗೊಳಿಸಿದ ಲಕ್ಕುಮಿರಮಣ ಹರಿ ೨
ಮಾನುನಿ ದ್ರೌಪದಿಯನು ಸಭೆಗೆಳಸಿ
ಕೃಷ್ಣಾ ನೀನೇ ಗತಿಯೆಂದಾ ತರುಣಿಯೊಳ್ ನುಡಿಸಿ
ಅನುಮಾನವಿಲ್ಲದೆ ಜಗದಿ ಪಾಂಡವರಕ್ಷ
ನಾನೆಂದಕ್ಷಯವಿತ್ತ ಶ್ರೀ ಶ್ರೀನಿವಾಸ ಹರಿ೩

 

೭೮
ಹರಿನಾಮದರಗಿಳಿಯು ದೊರಕಿತಿಂದು
ವರ ಹಿರಿಯರಾ ಕರುಣದಿಂದೆನಗೆ ಪ.
ವೇದ ಶಾಸ್ತ್ರದ ಮರ್ಮ ಆದಿ ಕೇಶವನೆಂಬ
ವೇದ ವೇದಾಂತದ ಸಾರ ನಾರಾಯಣ
ಹಾದಿಯಲಿ ವರದ ಮಾಧವನೆಂಬ
ಸಾಧಿಸಿ ಕಂಸನ ಗೆದ್ದ ಗೋವಿಂದ ೧
ದುಷ್ಟರನು ಶಿಕ್ಷಿಪ ವಿಷ್ಣುವಿನ ನಾಮವು
ಕಷ್ಟವನು ಪರಿಹರಿಪ ಮಧುಸೂಧನ
ಇಷ್ಟ ಮೂರುತಿ ತ್ರಿವಿಕ್ರಮನ ನಾಮವು
ಉತ್ರ‍ಕಷ್ಟ ವಾಮನನೆಂಬ ಕಠ್ಠಾಣಿ ಮುತ್ತಿನ ೨
ಬಂಧನವ ಪರಿಹರಿಪ ಸುಂದರ ಶ್ರೀಧರನ ಭವ
ಬಂಧನವ ಕಡಿವ ಋಷಿಕೇಶನ
ಎನ್ನ ಬಂಧೂ ಪದ್ಮನಾಭನ
ಚಂದಿರಾನನನಾದ ದಾಮೋದರನಾ ೩
ಸಂಸಾರ ನಾವಿಕ ಸಂಕರ್ಷಣನೆಂಬುವನ
ಸಂಪತ್ತುಗಳ ಕೊಡುವ ವಾಸುದೇವ ಎಂಬ
ಸಂಕಟವ ಪರಿಹರಿಪ ಪ್ರದ್ಯುಮ್ನನೆಂಬುವನ ಎನ್ನ
ಸಂಕುಚಿತ ಮಂಕನಳಿವ ಅನಿರುದ್ಧನ ೪
ಪರಮ ಪದವಿಯನಿತ್ತು ಪೊರೆವ ಪುರುಷೋತ್ತಮನ
ಪರರ ಬೇಡಿ ಸದ್ವಸ್ತು ಅಧೋಕ್ಷಜನಾ
ವರ ಜ್ಞಾನಿಗಳ ಮಾನಸ ನಾರಸಿಂಹನ
ಪರಮಪುರುಷನೆಂಬ ಅಚ್ಚುತನ್ನಾ ೫
ಮುದ್ದು ಮುಖದೊಳು ತಿಲಕ ತಿದ್ದಿದ ಜನಾರ್ಧನನ
ಹದ್ದುವಾಹನನಾದ ಉಪೇಂದ್ರನ
ಬದ್ಧಕಂಕಣ ಭಕ್ತ ಪರಿಪಾಲ ಹರೆ ಕೃಷ್ಣನ
ಮುದ್ದು ರಮೆಯರಸ ಶ್ರೀ ಶ್ರೀನಿವಾಸನೆಂಬುವನ ೬

 

೧೪೧
ಹಳಿಯದಿರಿ ಸಂಸಾರಂ ಈ ಭವ ಭಯದಾ ಕೊಳೆ
ತೊಳೆದಾನಂದವೀವ ಸಾರಂಸಂಸಾರ ಸಾರಂ ಪ.
ಸುಳಿದು ಯಮಭಟರೆಳೆಯುವ ಕಾಲದಿ
ಬಳಸಿಕೊಳುವ ಪರಿ ಗಳಿಸಿರೊ ನಿತ್ಯಾ ಈ ಸಾರ ಮನುಜರು ಅ.ಪ.
ಅಳಿದವರಾರು ಝಳಝಳ ಮನದಿಂ
ಕಳೆಗೊಟ್ಟಿಹ ಪುರುಷನಾರುಂ
ಸಲೆ ನಾರದರಲ್ಲದೆ ಯಿದನಂ
ಸೆಳೆದುರೆ ಭಕ್ತಿಯೊಳ್ ಹರಿಯಂ
ಅಳವಲ್ಲದಾನಂದದಿಂ ಹರಿ ಸುಳಿವ
ಪೊಳೆವ ಮನದೊಳಗಿಹನೆನುತಂ
ಸಾರಿ ಹರಿದನಂ ಸಾರಂ ಸಂಸಾರಂ ೧
ಅರ್ಣವದೊಳು ಭವಾರ್ಣ ನಿರ್ಮಾಣನ
ಕರ್ನದೊಳಾಲಿಸಿ ಧ್ವನಿಮಾಡಿ
ನಿರ್ಣಯದಲಿ ಸ್ವರ್ಣರೂಪನ
ಜೀರ್ಣಿಪ ವೀಣಾನಾದದೀ ಸಾರಂ
ಕರ್ಣಾನಂದದಿ ಹಾಡಿದನಾರುಂ
ವರ್ಣಾಶ್ರಮ ಧರ್ಮ ಮರ್ಮವರಿತು
ಚರ್ಮಸುಖವಳಿದು ಪೂರ್ಣಜ್ಞಾನದ
ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ ೨
ತರಲಾನಂದದಿಂ ಸರಿಗಮ ಪದನಿಸ
ಸನಿದಪ ಮಗರಿಸ ಶೋಡಷಕ್ಷರದಿಂ
ತರಲಾ ಸಂಗೀತಕೆ
ಸರಳಾಗಿಹ ಹರಿ ನಾಮಾಮೃತವಂ
ಧರಿಶಿದ ಪುರಂದರರಂ
ಶರಣ ಭರಣ ಕರುಣ ಪಡೆವುದು
ನಿರುತ ಹರಿ ಶರಣರೆನುತ
ಅರುಹಿದ ಸಂಗೀತವೀ ಸಾರಂ ಸಂಸಾರಂ ೩
ಈ ತೆರ ಭಜಿಸಿದಗ್ಯಾತರ ಭಯ
ಪಾತಕಹರ ಜಗದೀಶ ಮಾನಸ
ದಾತುರದೊಳು ಹರಿ ದಾತನೆಂದರಿತು
ನೀತಾಚಾರದಿ ಯಾವಾತ ಸ್ತುತಿಸಲು
ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ
ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು
ತಿಳಿದಾತಗೆ ಇದು ಸಾರಂ ಸಂಸಾರಂ ೪
ಭಗವಂತನ ಧ್ಯಾನಿಪನ ಪುಡುಕುತ
ಮಿಗೆ ಸಂಚರಿಸುತಲಿಹರೀಗಲು
ಭಾಗವತರಿದು ಸತ್ಯಂ ಜಗಕೆ
ಜಗದೀಶ ಶ್ರೀ ಶ್ರೀನಿವಾಸನೆಂದು
ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ
ಸೊಗವಿಲಿ ನಾಲ್ಮೊಗನೈಯ್ಯನು
ಸಿಗುವ ಪರಿಯಗೊಡುತಗಣಿತ ಮಹಿಮರು
ಕರುಣಿಸಿದೀ ಸಾರಂ ಸಂಸಾರಂ ೫

 

ಮಧ್ವ ಸಿದ್ಧಾಂತದ ಪ್ರಕಾರ ಇವರು
೯೩
ಹಾರವ ಕಟ್ಟಿ ಕೊಡುವೆ ಲಕ್ಷ್ಮೀ
ವರ ಭಕುತಿಯ ಪ.
ಮಾರಮಣನಿಗೆ ಹಾರ ಹಾಕಿ ತೋರಿಪೆ ಪಥವೆಂದು ಅ.ಪ.
ರಾಮ ಅಮೃತವೆಂಬ ನೇಮದ ಗಂಗೆಯ
ಕಾಮಿಸಿ ತಂದು ನಿರಾಮಯ ಕೃಷ್ಣಗೆಂದು
ಪ್ರೇಮದ ನಾರನು ಕಾಮಿತ ಪುಷ್ಪ
ಮಂದಾರ ಮಲ್ಲಿಗೆಯನು ಸ್ವಾಮಿಗೆ ಸಲಿಸೆಂದು ೧
ಅಗಣಿತ ಮಹಿಮಗೆ ಸೊಗವಿನ ತುಳಸಿಯ
ಚಿಗರಿನ ಹಾರವ ಜಗಿದಾನಂದದಿ
ಸೊಗಸಿನ ರೋಜವ ಬಗೆಬಗೆ ಭೋಗಗ
ಳೊಗೆದುಗೆಂಡಸಂಪಿಗೆ ಚಿಗಿಚಿಗಿದಾಡುತ ೨
ಭಕ್ತಿಯ ಸುರಗಿ ವಿರಕ್ತಿ ಪಚ್ಚೆಯ ತೆನೆ
ಯುಕ್ತಿಯ ಮರುಗ ಶಕ್ತಿ ಸ್ವರೂಪಳೆ
ಭಕ್ತ ವತ್ಸಲನಿಗೆ ಇತ್ತಪೆ ನಾನೀಗ
ಸ್ತುತ್ಯ ಶ್ರೀ ಶ್ರೀನಿವಾಸ ದೇವಕ್ಕಳಿಂ ನೀನೆಂದು ೩

 

ಗೋಪಾಲಕೃಷ್ಣ ಬಾರೊ
೨೮
ಗೋಪಾಲಕೃಷ್ಣ ಬಾರೊ ಗೋವಿಂದ
ಗೋಪಾಲಕೃಷ್ಣ ಬಾರೊ ಪ.
ಗೋಪಿಯ ಕಂದ ಬಾರೊ ಮಾಧವ
ಗೋಪಿಯ ಕಂದ ಬಾರೊ ಅ.ಪ.
ನಂದಕುಮಾರ ನವನೀತ ಚೋರ
ಸುಂದರ ಮೂರುತಿ ಬಾ ಕೃಷ್ಣ
ಸುಂದರ ಚಂದನ ಗಂಧ ಲೇಪಿತಾನಂದ
ಅಂದದಿ ಮೋಹಾಕಾರ ಮುಕುಂದ ೧
ಮುರಳೀಧರನೆ ಮುರಮರ್ಧನನೆ
ಚಂದ್ರವಂಶನೆ ಬಾ ಕೃಷ್ಣ
ಹರುಷವ ಬೀರಿ ಚರಣವ ತೋರಿ
ವರಗೆಜ್ಜೆ ನಾದದೊಳು ಸುಂದರ ೨
ಚಂದಿರ ಸದೃಶಾನಂದನೆ ಬಾ ಬಾ
ಕುಂದರದನೆ ಬಾ ಶ್ರೀಕೃಷ್ಣ
ಅಂದದ ಪದುಮಿಣಿವಲ್ಲಭ ಶ್ರೀ ಶಾ
ಶ್ರೀ ಶ್ರೀನಿವಾಸನೆ ಬಾ ಗೋವಿಂದಾ ೩

 

ಹಾಡಿನ ಹೆಸರು :ಗೋಪಾಲಕೃಷ್ಣ ಬಾರೊ
ಹಾಡಿದವರ ಹೆಸರು :ವಿಜಯಲಕ್ಷ್ಮಿ ಬಿ. ವಿ., ಕವಿತಾ ಸರಳಾಯ
ರಾಗ :ಪೀಲು
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ