Categories
ರಚನೆಗಳು

ಸಿರಿಗುರುತಂದೆವರದವಿಠಲರು

೨೯೨
ಶ್ರೀ ವಿಷ್ಣುತೀರ್ಥರು
ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ ಪ
ಕಡು ಕರುಣೀ ಬಿಡು ಸ್ಮರಣೀ ನುಡಿ ಮನದೀ ಅಡವಿಗಳೊಡೆಯನ ಪದ ದೃಢದಿ ಪಿಡಿ ಮೂಢ ಮಾನವಾ ಅ.ಪ.
ಕಂಕಣ ಕಟ್ಟೀ ಬಿಂಕವ ಮುರಿಯುತ ಕಿಂಕರ ಸಲಹುವ ಪಂಕಜನಯ್ಯನ ಪಂಕಜದೊಳು ತಾ ಮಿಂಚಿನಂದದಿ ಕಂಗಳಿಗೊಪ್ಪುವ ಮಂಗಳಾ ಮಂಟಪದಲಿ ಮೀನಾಂಕನ ಸಹತೋರುವ ಮದಗಜಸಿಂಹನು ಮಾದನೂರಿನಲಿ ನಿಂತಿಹ ಪವನತನಯನು ಕಮಲನಯನನು ಕರಾಳವದನ ಪರಕಪಾಲನಯನನು ೧
ಧೀರನಾಗಿ ಪರದಾರರಿಗೋಸುಗ ಬಲು ಕ್ರೂರನಾಗಿ ಇರುವೋನು ಸೂರಿಪುರೇಶನ ಸಲಹುವ ಸತಿ ಪಾರ್ವತಿವರನು ಮಾರಹರಿಸಿ ಸುರಸಾರ ಮತೋದ್ಧರ ಸ್ವಾಮಿನಿಲಯ ಶ್ರೀ ಗುರುರಾಜರ ಪದ ಸ್ಮರಿಸುವನು ಶಿರದಲಿ ಜಾಹ್ನವಿ ಧರಿಸಿದ ಕೊರಳೊಳು ಶಿರಮಾಲೆ ಕರಮಾಲೆ ಜಟಬಾಲೆ ಸಹಕುಶನದಿ ನಿಲಯನಪದ ಹೃದಯದಿ ಸ್ಮರಿಸುತ ೨
ಮೊಮ್ಮಗನೆನಿಸಿ ತಾತನ ಮೋಹಿಸಿ ದಾತನ ತಲೆ ತರಿದವನು ಮಹಾಮುನಿಪುರದೊಳು ತೆರಳಿದ ಸಮಯದಿ ತನ್ನ ಸತಿಯೊಳು ಸರಸವನಾಡಿದನು ಕಾಳಕೂಟವಾ ತಾ ಪಾನಮಾಡಿ ಗರಗೊರಳೆಂದೆನಿಸಿದನೂ ಶಿರಿಸುತ ತಂದೆವರದಗೋಪಾಲವಿಠಲನ ಪದ ಧೇನಿಪನೋ ಸೇವಿಪನೋ ಪಾವಿನ ಪದನೋ ವನದೊಳು ನಿಂದು ಶ್ರೀರಾಮನ ಜಪಿಸುವ ೩

 

೨೯೭
ಶ್ರೀ ಹರಿಸ್ತುತಿ
ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ
ಚೋರ ತಮನ ಕೊಂದ ಧೀರ ಮಚ್ಛಕನೆಸಾರೋ ವೇದದ ಸಾರ ಮಾರ ಜನಕನೆ ೧
ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ ೨
ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ ೩
ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ ೪
ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ ೫
ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ ೬
ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ ೭
ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ ೮
ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ ೯ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ ೧೦
ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು ೧೧

 

೨೯೧
ಸುಪರ್ಣಾದೇವಿ
ಜಗವ ಪಾವನ ಮಾಳ್ಪ ವರದ ಮಾತೆ ಪ
ಖಗರಾಜನಿಗೆ ಅತಿ ಪ್ರೀತಿ ಪಾತ್ರಳೆ ದೇವಿ ಅ.ಪ.
ವರಹ ರೂಪದ ನಾಶಿಕದಿಂದ ಉದ್ಭವಿಸಿವಾಗ್ದೇವಿ ಸುತನಿಂ ಜಗದೊಳಗೆ ಪರಿದುವದನದಿಂದಲಿ ನಿಮ್ಮ ನಾಮಸ್ಮರಣೆಯ ಮಾಡೆವೇಗದಿ ಬರುವ ತಿಮಿರಗಳ ನಾಶಮಾಳ್ಪೇ ೧
ನೀನಾಗಿ ಕರುಣವ ಮಾಡೆ ನಾ ಪಾವನನುನಿನ್ನ ಪಾದದ ಮಹಿಮೆ ತೋರೆ ಜಗದಿನಿನ್ನ ಪತಿಯ ಪಾದ ಕಮಲದ ಮಹಿಮೆಯನುಉನ್ನತವಾಗಿ ತೊರೆನ್ನ ಹೃದಯದಲಿ ೨
ಎನ್ನ ಪಿತನ ತಾತಾ ಬಾಳಾರ್ಯ ಪ್ರಭುಗಳುನಿನ್ನ ಪಾದದ ಧ್ಯಾನ ಅನುದಿನ ಮಾಡೆಯದುಪತಿಯ ಮಹಿಮೆಯನು ಶಿಷ್ಯರಿಗೆ ತೋರುತಲಿ ಚನ್ನ ಶ್ರೀಗುರುತಂದೆಗೋಪಾಲವಿಠಲ-ಪುರವ ಪೊಂದಿಸಿದ ಮರಿಯೇ ೩

 

೨೯೦
ಲಕ್ಷ್ಮೀದೇವಿ
ದಾಸನಲ್ಲವೇ ನಿನ್ನ ದಾಸನಲ್ಲವೆ ಪ
ದಾಸನಾದ ಮೇಲೆ ಎನ್ನ ಘಾಸಿಗೊಳಿಸುವುದುಚಿತವೇನೇ ಘೋಷ ರೂಪನ ಪೆತ್ತ ತಾಯಿ ಅ.ಪ.
ಮಾಯೆಯೆ ನೀನು ಮಹಾ ಮಾಯ ಮಾಡುವರೇನು ಮಾರ ಮುಖ್ಯ ಶರತಾಪವ ಹರಿಸುತ ಮಾನದಿಂದ ಕಾಂಇÉಮಾರನ ತಾಯೇ ೧
ಪದ್ಮಜಾತೆ ನೀನು ಕುಬುದ್ಧಿ ಶರಧಿ ನಾನು ತಿದ್ದಿ ತೋರೆ ಹೃತ್ಪದ್ಮನಿವಾಸಿಯ ಶಿರಿಪದ್ಮನ ರಮಣಿಯೆ ೨
ಕಷ್ಟ ಪಡಿಸ ಬ್ಯಾಡೆ ಭವ ಕಟ್ಟು ಬಿಡಿಸಿ ನೋಡೇ ಯೆಷ್ಟೆಂದು ಪೇಳಲಿ ಗುರುಕೃಷ್ಣನ ಪೆತ್ತ ಶಿಷ್ಟ ಶಿಖಾಮಣಿಯೆ ೩
ಸಾರಶಾಸ್ತ್ರ ತೊರೆದೂ ದಿವ್ಯ ಮಾರಶಾಸ್ತ್ರ ಸುರದೂ ಶಾಸ್ತ್ರಾ ಶಾಸ್ತ್ರದ ದಾರಿಯ ತೋರಿಸಿ ಶತ್ರು ನಿವಾರಿಸು ೪
ಸಾಧು ಜನರ ಕೂಡೀ ಮೋಕ್ಷಕೆ ಸಾಧನವನೆ ಮಾಡಿ ಶಿಖರಪುರಕೆ ಬಂದೆ ಶಿರಿ ತಂದೆವರದಗೋಪಾಲವಿಠಲನತೋರೆಂದೆ ಇಂದು ೫

 

೩೧೨
ಶ್ರೀ ಧೀರೇಂದ್ರರು
ಧೀರೇಂದ್ರವರ್ಯರೇ ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ.
ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ.
ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ ೧
ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ ೨
ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ ೩

 

೩೦೯
ಪಾರ್ವತಿದೇವಿ
ನಂಬಿದೆ ನಿನ್ನಯ ಪಾದ ನಂಬಿದೆ ಪ
ನಂಬಿದೆ ನಿನ್ನಯ ಪಾದ ಜಗದಂಬೆ ಅರುಣೆ ಪಂಚಭೇದಾ ಆಹಾಶಂಭುವಿನರ್ಧಾಂಗಿ ಬಿಂಬನ ತೋರಿಸೆಅಂಬುಜೋದ್ಭವನ ಪ್ರತಿಬಿಂಬವ ರಾಣಿಯೆ ಅ.ಪ.
ಮನದಭಿಮಾನಿ ದೇವತೆಯೆ ಯನಮನವ ನಿಲ್ಲಿಸು ಪಾರ್ವತಿಯೆ ಆಹಾಮುನಿಜನ ವಂದ್ಯಳೆ ಮನ್ಮಥ ಜನನಿಯೆಸಾನುರಾಗದಲಿ ನೀ ಜ್ಞಾನ ಕೊಡುವೆಯೆಂದು ೧
ಭಕ್ತವತ್ಸಲೆ ಭಾಗ್ಯದೇವಿ ಭವದಿಮುಕ್ತನ ಮಾಡೆಲವೋ ತಾಯೆ ಆಹಾಯುಕ್ತಿವಂತಳೆ ಹರಿ ಭಕ್ತ ಜನರೊಳುಭಕ್ತಿಯನ್ನೇ ಕೊಡು ಭಕ್ತರ ಸಾರಥಿ ೨
ಶರಣು ಬಂದೆನೆ ನಾ ನಿನಗೆ ತವಚರಣ ಭಜನೆ ಕೊಡು ಎನಗೆ ಆಹಾಶರಧಿ ಶಯನ ತಂದೆವರದವಿಠಲನನ್ನುಪರಿಪರಿ ಸ್ತುತಿಸುವ ವರಕಾಳಿ ದೇವಿಯೆ೩

 

೨೯೩
ಧೀರೇಂದ್ರ ಯತಿಗಳು
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ
ಪದಕಮಲದಲಿ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ.
ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ ೧
ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ ೨
ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ರ‍ಕಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ ೩

 

೩೦೬
ಪಾಲಿಸಬೇಕಯ್ಯ ಪವಮಾನ ದೂತಾ ಪ.
ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ.
ಇಷ್ಟು ದಿನಗಳವರೆಗೆ ದುಷ್ಟ ಜನರ ಸಹವಾಸದಿಕಟ್ಟಿ ಕಳೆದೆನೊ ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ ೧
ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ ೨
ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ ೩

 

೩೦೭
ಭಾರತಿದೇವಿ
ಭಕ್ತಿಯನು ನೀಡಮ್ಮ ಭಾರತೀದೇವಿ ಪ.
ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ.
ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ ೧
ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ ೨
ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ ೩

 

೩೦೮
ರುದ್ರದೇವರು
ಭಜನೆ ಮಾಡೆಲೊ ಮನವೆ ಭಜನೆ ಮಾಡೆಲೊ ಪ
ಭಜನೆಯನ್ನು ಮಾಡಿ ಸುಖಿಸೊಭುಜಗಭೂಷಣ ಶಿವನೆ ಅ.ಪ.
ನಾನೆ ನಾನೆ ನಾನು ಎಂಬ ಶ್ವಾನಬುದ್ಧಿಯನ್ನು ಬಿಟ್ಟುನೀನೆ ನೀನೆ ಗತಿಯೆಂದು ಸಾನುರಾಗದಿಂದ ಮೃಡನ ೧
ಕಾಕುಜನರ ವಾಸ ಬಿಟ್ಟು ಏಕಭಾವದಿಂದ ಕುಳಿತುಸಾಕು ಸಾಕೆನಿಸದಂತೆ ನಾಲ್ಕು ಮೊಗದವನ ಸುತನ ೨
ತಂದೆವರದವಿಠಲನು ತಂದೆ ಜಗಕೆಲ್ಲವೆಂದುಛಂದಛಂದಾದಿ ಭಜಿಪ ಇಂದುಶೇಖರ ಭವನ ೩

 

೩೧೧
ಶ್ರೀ ಸತ್ಯಬೋಧರು
ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ.
ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ.
ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ೧
ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ೨
ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ ೩
ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ ೪
ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ ೫

 

೩೧೩
ಭೂತರಾಜರು
ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ.
ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ.
ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ ೧
ಮರುತದ ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ ೨
ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ ೩

 

೨೯೮
ಮಂಗಳವೆನ್ನಿರೆ ಅಂಗನೆಯರೆಲ್ಲಅಂಗಜಪಿತ ಸಿರಿ ರಂಗನಿಗೇ ಮಂಗಳಾಂಗನಿಗೆ ಪ
ಚೋರ ತಪನ ಕೊಂದು ಭಾರ ಬೆನ್ನಿಲೆ ಪೊತ್ತು ದಾಟಿಸಿತಂದಂದು ನಾರಶಿಂಹನಿಗೆ ಸುರಶೂರ ಸಿಂಹನಿಗೆ ೧
ಬಲಿಯ ದಾನವ ಬೇಡಿ ಕುಲವ ಸಂಹರಿಸುತಶಿಲೆಯನುದ್ಧರಿಸಿದ ಚೆಲುವ ಬಾಲನಿಗೆ ಗಾನಲೋಲ ಕೃಷ್ಣನಿಗೆ ೨
ಪುರವ ನಾರಿಯರ ವರವ್ರತ ಕೆಡಿಸಿದತುರಗವಾಹನ ತಂದೆವರದವಿಠಲಗೆ ಬಂದ ದುರಿತ ನಾಶಕಗೆ ೩

 

೨೯೯
ಮಾಡಬಾರದೆ ಹರಿಪಾದ ಪೂಜೆ ಪ
ಮಾಡಬಾರದೇನೋ ಕೂಡುತಾ ಸನಾದಿಬೇಡಿದೊರವನೀವ ಗಾಡಿಕಾರನ ಪೂಜೆ ಅ.ಪ.
ನರಜನ್ಮವು ಬರಿದೆ ಪೋಗುತಿದೆ ಗರುವತನದಿ ನೀಮೆರೆಯ ಬೇಡೆಲವೋ ಮಾರಜನಕ ಕೃಷ್ಣನನ್ನರಿತು ಪೂಜೆಯನು ೧
ಬಲಿಯ ಮೆಟ್ಟಿದಾ ನೆಲವ ಮೂರಡಿ ಮಾಡಿ ಖೂಳ ಶಕಟನನ್ನುಕಾಲಲೊದ್ದು ಕೊಂದ ಶಿಲೆಯಾದಹಲ್ಯೆಯ ಸಲಹಿದ ಪಾದ ೨
ಕರುಣಾಸಾಗರ ಕರಿವರದಾ ಕೃಷ್ಣ ದುರಿತಗಳನೆ ಕಳೆದುಪರಮಪದವನೀವ ಗರುಡಗಮನ ತಂದೆ ವರದ ವಿಠಲನ ಪೂಜೆ ೩

 

(ಆ) ಯತಿ ; ದಾಸ ನಮನ
೩೧೦
ಶ್ರೀ ವಿದ್ಯಾಧೀಶರು
ಮುದ್ದು ಮುಖವನು ತೋರೋ ವಿದ್ಯಾಧೀಶಾಬಿದ್ದು ಬೇಡುವೆ ಪಾದ ಪದ್ಮಂಗಳಿಗೆ ಪ.
ಸಾಧನದಗೋಸುಗಕೆ ಮೇದಿನಿಯೊಳ್ ಜನಿಸಿಸಾಧನವ ಕಾಣದೆ ಮೋದಗೊಂಡಿಹೆನುಸಾಧುಜನ ಪ್ರಿಯನೆ ಸಾದರದಿಂದಲಿಭೇದ ಕಂಚಜ್ಞಾನ ಹಾದಿಯನೆ ತೋರುತಲಿ ೧
ಧರೆಯ ರಮಣನು ತಾನು ಧೊರೆ ಎಲ್ಲ ಜಗಕೆಂದುಪರಿಪರಿ ಸ್ತುತಿಸುವಾ ಪರಮ ಭಕುತಿಯನಿತ್ತುಪರಿಪಾಲಿಸಬೇಕು ಕರಮುಗಿದು ಪ್ರಾರ್ಥಿಸುವೆಶರಣು ಜನ ಪರಿಪಾಲಾ ೨
ನಿರುತ ಸಂಸಾರದೋಳ್‍ವೈರಾಗ್ಯ ಕರುಣಿಸಿ ಕರಪಿಡಿಯೋ ಕರುಣಾಲವಾಲಪರಮ ಪಾವನ ತಂದೆವರದವಿಠಲನಚರಣವನು ಭಜಿಸುವೆನು ಮರುತ ಮತ ಮೋಹನ ೩

 

೩೦೪
ಅವತಾರತ್ರಯ
ಮೂರು ರೂಪವ ತೋರೋ ಮಾರ್ಜಿವದೊಡೆಯಾ ಪ.
ಸಾರುವೆನು ಶರಣೆಂದು ಚಾರುತವ ಚರಣಕ್ಕೆ ಅ.ಪ.ಅಂಜನೆಯಲುದ್ಭವಿಸಿ ಸಂಜೀವನವ ತಂದುಕಂಜನಾಭನ ದಯದಿಅಂಜದತಿ ಕೆಂಜಡೆಯ ಪಿತಗಂಜಲಿ ಮುಗಿಯುವೆನು ೧
ವಾರಿಧಿಯ ನೆರೆದಾಂಟಿ ನಾರಿಗುಂಗುರವಿತ್ತುಕ್ರೂರ ಕೀಚಕನ ಸಂಹಾರವನೆ ಮಾಡುತಲಿವೀರ ಬದರಿಲಿ ಪೋಗಿ ಸಾರಶಾಸ್ತ್ರವ ತಿಳಿದಧೀರ ಮಧ್ವಾಚಾರ್ಯ ಭೀಮ ಕರುಣವ ತೋರೋ ೨
ಎರಡೈದು ಶಿರದವನ ಪುರವನೇ ನೀನುರುಹಿದುರುಳ ದುರ್ಯೋಧನನ ಧುರದಿ ಗೆಲಿದುವರ ಉಡುಪಿ ಕ್ಷೇತ್ರದಲಿಸಿರಿಯ ರಮಣಾ ತಂದೆ ವರದ ವಿಠ್ಠಲರೇಯಾ೩

 

೨೯೬
ಗಣೇಶ
ವಂದಿಸುವೆ ಕರದ್ವಂದ್ವ ಜೋಡಿಸಿ ಪ
ವಂದಿಸುವೆ ಒಂದೆ ಮನದಲಿ ನಂದಿವಾಹನ ಕಂದ ಗಣಪಗೆಬಂದ ಭಯಗಳ ಹಿಂದೆ ಮಾಡುತ ಸಿಂಧುಶಯನನ ತೋರಿಸೆಂದು ಅ.ಪ.
ಮೂಷಕವಾಹನನೆ ದೂಷಿತಮನವ ನಾಶಮಾಡೆಲೊ ಬೇಗಭಾಷ್ಯಕಾರನೆ ಭಾಷ್ಯಮಾಡಿಸು ತೋಷದಿಂದಲಿ ದಾಸನೆಂಬಭಿಲಾಷೆಗಳ ಪೂರ್ಯೆಸು ಅನುದಿನ ಪಾಶ ಅಂಕುಶದಾರನೇ ೧
ಆಕಾಶಕಭಿಮಾನಿಯೇ ಎನ್ನಯ ವಾಕು ಲಾಲಿಸಬೇಕೊ ಪ್ರಭುವೇಕಾಕುಜನ ಸಹವಾಸದಿಂದಲಿ ನೂಕಿಸೆನ್ನನು ಏಕದಂತನೆಏಕಭಾವದಿ ಭಜಿಪ ಭಕುತರೋಳ್ಹಾತನೆನ್ನಗಜವದನನೆ ಬಾ ತೈಜ ವಿಶ್ವಭಾಜಕನೆ ತೋರೋ ಪಾದಭುಜ ಚತುಷ್ಟನೆ ತ್ರಿಜಗವಂದ್ಯನೆ ಭಜಿಪ ಭಕುತರ ಅಘವ ಕಳೆವನೆನಿಜೆ ಸುಜನರ …ಭುಜಗ ಭೂಷಣ ಕಾಮನನುಜನೆ ೨
ವಾರಿಬಂಧನ ಪೂರ್ವದಿ ಶ್ರೀ ರಾಮಚಂದ್ರನು ಪ್ರೀತಿಲಿ ಪೂಜಿಸಿದದುರುಳ ರಾವಣ ಮೆರೆದು ಕೆಟ್ಟನು ಧರೆಯಗೆದ್ದನುಜರಿದು ಚಂದ್ರನುವಿದ್ಯ ಪ್ರದಾಯಕನೆ ಮನ ತಿದ್ದು ಬೇಗನೆ ಬಿದ್ದು ಬೇಡುವೆ ಸಾಧುವಂದ್ಯನೆಮಧ್ವ ಮತದೊಳು ಶ್ರದ್ಧೆ ಪುಟ್ಟಿಸೊ ಮಧ್ವವಲ್ಲಭತಂದೆ ವರದ ವಿಠಲ ಪ್ರಿಯ ಸಿದ್ಧಿದಾಯಕ

 

೩೦೫
ವಂದಿಸುವೆ ಗುರುವರಾ ವಂದಿಸುವೆ ಗುರುವರಾವಂದಿಸುವೆ ಗುರುವರಾ ಮಂದಮತಿಯ ಪಾಲಿಸೆಂದು ಪ.
ತ್ರಿವಿಧ ಜೀವರಲ್ಲಿ ನಿಂತು ತ್ರಿವಿಧವಸ್ಥೆಯಲ್ಲಿ ಬಿಡದೆತ್ರಿವಿಧ ಕರ್ಮವನ್ನೆ ಗೈಸಿ ತ್ರಿವಿಧ ಫಲವ ಕೊಡಿಸುವವನೇ ೧
ತಾತ ರಾಮನಾಜ್ಞೆಗೊಂಡು ಖ್ಯಾತಿಯಿಂದ ಜಲಧಿ ದಾಟಿಮಾತೆಗುಂಗುರವಿತ್ತು ಪ್ರೇಮ ವಾರ್ತೆಯನ್ನು ಪೇಳಿದವಗೆ ೨
ಭೀಮನಾಮದಿಂದ ಕರೆಸಿ ಭೂವಿಯಲ್ಲಿ ಮೆರೆವ ಖಳರಧಾಮವನ್ನೆ ಸೀಳಿ ಸಾರ್ವಭೌಮಕೃಷ್ಣಗರ್ಪಿಸಿದಗೆ ೩
ಮಧ್ಯಗೇಹರಲ್ಲಿ ಜನಿಸಿ ಅದ್ವೈತ ಮತವನ್ನೆಲ್ಲ ಕೆಡಹಿಶುದ್ಧಮತವ ಸ್ಥಾಪಿಸಿದ ಮಧ್ವಮುನಿರಾಯನಿಗೆ ೪
ತಂದೆವರದವಿಠಲನ್ನ ಒಂದೆ ಮನದಿ ಜಪಿಸುತಿರುವಇಂದುಶೇಖರಾದಿ ಸುರವೃಂದ ವಂದ್ಯನಾಥವಹಗೆ ೫

 

(ಅ) ದೇವ; ದೇವತಾ ಸ್ತುತಿ
೨೯೫
ಗಣೇಶ
ವಂದಿಸುವೆ ಮುದದಿಂದ ನಂದಿವಾಹನ ಸುತಗೆ ಪ
ಬಂದ ದುರಿತವ ಕಳೆದಾನಂದವೀಯುತ ಮನಕೆಇಂದಿರೇಶನ ಚರಣದ್ವಂದ್ವ ತೋರೆಲೋ ಬೇಗ೧
ಹೀನಜನರೊಡಗೂಡಿ ಕಾಣದಾದೆನು ಹಾದಿಸಾನುರಾಗದಿ ಪೊರೆಯೊ ಸನಕಾದಿ ಮುನಿವಂದ್ಯ ೨
ಮರುತ ಮತದ ಸಾರ ಕರುಣದಲಿ ಅರುಹಯ್ಯಶರಧಿಶಯನ ತಂದೆವರದವಿಠಲ ಪ್ರಿಯ ೩

 

೩೦೦
ವಸುದೇವ ಸುತನೆ ಬಾರೋ ವಸುಧೆಪಾಲಾ ಪ.
ಶಿಸುತನದಲಿ ಕಡು ವಿಷದ ಮೊಲೆಯನುಂಡುಅಸುವನೆ ಹೀರಿದ ಶಿಸುಗಳರಸ ರಂಗಾ ೧
ಗೊಲ್ಲತೆಯರ ಮನೆ ಮೆಲ್ಲಮೆಲ್ಲನೆ ಪೊಕ್ಕುಗುಲ್ಲುಮಾಡುತ ಪಾಲ್ ಮೊಸರು ಬೆಣ್ಣೆಯ ಕದ್ದು ೨
ವೇಣುವನೂದುತ ಗಾನವ ಮಾಡುತಜಾಣೆಯನೊಲಿಸಿದ ಜಾಣ ಶ್ರೀಕೃಷ್ಣ ೩
ತುರುವು ಕಾಯಲು ಪೋಗೆ ವರುಷವ ಸುರಿಸಲುಬೆರಳಲಿ ಬೆಟ್ಟವ ನಿರಿಸಿ ಗೋವ್ಗಳ ಕಾಯ್ದ ೪
ಕಾಳೀಯ ಮೆಟ್ಟುತ ನಲಿನಲಿದಾಡುತಲೀಲೆಯ ತೋರಿದ ಬಾಲಾಗೋಪಾಲಾ ೫
ಬಿಲ್ಲನೆ ಮುರಿಯುತ ಮಲ್ಲರ ಗೆದೆಯುತಖುಲ್ಲ ಕಂಸನ ಕೊಂದ ಪುಲ್ಲನಾಭಗೊಲ್ಲ ೬
ತಂದೆವರದ ವಿಠಲಾ ತಂದೆ ತಾಯ್ಗಳ ಬಿಡಿಸಿತಂದು ತೋರಿದ ಅರವಿಂದನಯನ ಶೌರಿ ೭

 

೩೦೧
ವೆಂಕಟೇಶ ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ
ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ.
ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ ೧
ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು ೨
ಮಾರ ಜನಕನೆ ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ ೩

 

೩೦೨
ವೆಂಕಟೇಶನೆ ಶ್ರೀ ವೆಂಕಟೇಶನೆ ಪ.
ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ.
ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ೧
ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ ೨
ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ೩
ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ ೪
ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ ೫

 

೨೯೪
ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ ೧
ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ ೨
ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ ೩
ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ ೪
ಮೊರೆ ಪೊಕ್ಕವರನೆ ಬಿಡದೆ ಪೊರೆವುದಕೆ ಭೂತಳಕೆ ನೆಲಸಿಹ ಸುರಪನಾಲಯಕೆ ಮಿಗಿಲಾದ ಸುಖಗರೆವ ತುಂಗಾತೀರ ನಿವಾಸ ಶ್ರೀ ರಾಘವೇಂದ್ರರ ಪೀಠದಿ ಶೋಭಿಪ ಯತಿವರ್ಯ ಶ್ರೀ ಧೀರೇಂದ್ರ ಸುಶೀಲೇಂದ್ರ ಸುವ್ರತೇಂದ್ರ ಶ್ರೀ ನರಹರಿಯ ವಂಶಸ್ಥ ಶ್ರೀ ಸತ್ಯಬೋದಾದಿ ಯತಿವರ್ಯರ ಸಂದರುಶನವ ಪ್ರತಿ ವತ್ಸರದಲಿ ಕೊಳ್ಳುತಲಿ ಗೌಪ್ಯದಲಿ ನಿಜಮರ್ಮಕ್ಕನುಸರಿಸಿ ಸೇವೆಗೈದು ನೈಜಗುರುಗಳ ದರುಶನಕೆಂದು ಶ್ರೀ ಕ್ಷೇತ್ರ ಸೋದಾಪುರಕೆ ಪೋಗಿ ಮಹಾದ್ವಾರದಲಿ ಬಹು ಭಕ್ತಿಯಿಂದಲಿ ಸಾಷ್ಟಾಂಗ ನಮನವ ಮಾಡಿ ಕರಮುಗಿದು ಶಿರಬಾಗಿ ನಿಂತಿರಲು ಶ್ರೀ ಗುರುರಾಜಾಜ್ಞೆಯಿಂದಲಿ ಶ್ರೀ ಭೂತರಾಜರು ಸಮಸ್ತ ಪರಿವಾರದೊಡನೆ ಬಹು ಬೇಗದಿಂದಲಿ ಬಂದು ಕರುಣದಿಂದಲಿ ಮೈದಡವಿ ಆದರದಿ ಸಂಪ್ರದಾಯಾನುಸಾರದಲಿಪವಿತ್ರ ಸ್ಥಳಗಳನೆ ತೋರಿ ತದಭಿಮಾನಿ ದೇವತೆಗಳ ಪೂರ್ಣಾನುಗ್ರಹಕೆ ಪಾತ್ರರನೆ ಮಾಡಿ ಶ್ರೀಲಕ್ಷ್ಮೀ ತ್ರಿವಿಕ್ರಮ ಸ್ವಾಮಿಯ ಸಂದರುಶನವ ಗೈಸಿ ತನ್ನ ಪ್ರಭುಗಳ ಪಾದ ಪದ್ಮಂಗಳ ಸನ್ನಿಧಿಗೆ ತಂದೊಪ್ಪಿಸಿ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು ೫
ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ ೬
ಸಾರಸುಖವ ಸತಿ ಆವೇಶದಿಂದಲಿ ಉದ್ಭವಿಸಿದ ಸುತೆಯ ವಿಯೋಗದ ನೆಪಮಾಡಿನಾಲ್ಕೆಂಟು ವತ್ಸರ ಪಾಂಚಭೌತಿಕ ದೇಹದಿಂದಿದ್ದು ಸಾಧನ ಪೂರ್ತಿಗೈದ ಬಗೆಯನೆ ಸಾಧುಜನಕೆ ತಾ ತೋರದಲೆ ಇನ್ನು ಈ ಭೂಲೋಕದ ವಾಸವು ಸಾಕೆಂದು ತಾರುಣ ವತ್ಸರ ಬಹು ತಾರಕವೆಂದು ಬಗೆದು ಬಲು ಸಂಭ್ರಮದಿಂದಲಿ ಭೌತಿಕ ದೇಹದಿ ಏಳು ದಿನ ಬಿಡದೆ ಪ್ರಾಯೋಪವೇಶಗೈದುಬಂದ ಜನರಿಗೆಲ್ಲ ಕರುಣದಿಂದಲಿ ನೋಡಿ ತದಾಕಾರನಾದಶ್ರೀಹರಿಯ ಗುರುಗಳ ದ್ವಾರಾ ಧೇನಿಸುತ ನೈಜ ಸತಿ ಇವಳೆಂದುಮನದಿ ವಿಚಾರಿಸಿ ಕಪಿಲ ಮುನಿಯು ತನ್ನ ಮಾತೆಗೆ ಪೇಳಿದಂತೆಪಿರಿಯರೆಂದು ಬಗೆದು ಪರ್ಯಾಯದಿಂದಲಿ ತತ್ವವನೆ ಪೇಳಿಭಾಗವತ ಜನರಿಗೆ ಮೌನದಿಂದಲಿ ಬಹುಬೇಗಸಾಧನವ ಗೈಯ್ಯಬೇಕೆಂದುಸೂಚನೆಯ ಮಾಡುತ ಮಾಯಾ ಮಮತೆಗಳೆಂಬವ್ಯಾಘ್ರಾದಿಗಳನೆಲ್ಲನೈಜಜ್ಞಾನಾಖ್ಯ ಖಡ್ಗದಿಂದಲಿ ಸವರಿ ಆಶ್ವೀಜ ಶುದ್ಧ ನವಮಿಮಂಗಳ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು ೭
ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ ೮

 

೩೧೪
ಶ್ರೀಮತ್ ತಂದೆವರದಗೋಪಾಲದಾಸ ರಾಯಾವೃಂದದಿಂದಲಿ ನಿಮಗೊಂದಿಸುವೆನೋ ಜೀಯಾ ಪ.
ಇಂದಿನವರೆಗೆ ನಾನಿಂದ್ಯ ಜನರೊಳು ಕೂಡಿನಿಂದ್ಯ ಮಾಡುತ ಪರರ ಡಂಭತನದಲಿ ಮೆರೆದೆನೊಕಂದನಾ ಕುಂದುಗಳ ಒಂದನೆಣಿಸದೆ ಗುರುವೇಮಂದಜನ ರಾಶಿಯೊಳು ಬೆಂದುಹೋಗುವುದನು ಕಂಡುಅಂದದಲಿ ನೀ ಹಿಡಿದೆಳೆತಂದೂ ೧
ಮುಂದೆ ಪೇಳುವೆ ಕೇಳೋಚಂದ್ರಮೌಳಿಯೆ ನಿನ್ನ ಪ್ರೀತಿಪಾತ್ರನಾದಸುಂದರಾಂಗನ ಮುಖದೀ ನೀನಿಂದು ಅಘವೃಂದಗಳ ಹೊಡೆದೋಡಿಸೀಮಿಂಚಿನಿಂದಕ್ಷ ರ, ಯ, ಮ ಎಂಬಕ್ಷರಗಳ ಕಲ್ಪಿಸಿಎಂದಿಗೂ ಮರೆಯದಂಥ ತಂದೆವರದವಿಠಲನೆಂಬಅಂಕಿತದಿಂದ ಬಂಧನವ ಮಾಡಿ ಭಾವ ಸಂವತ್ಸರಫಾಲ್ಗುಣ ಶುದ್ಧ ತ್ರಯೋದಶಿಚಂದ್ರವಾರ ಅರುಣೋದಯ ಕಾಲದೀಕಡೆಕೋಳ ಶ್ರೀ ವೆಂಕಟೇಶನ ಸನ್ನಿಧಾನದಿಅನುಗ್ರಹಿಸಿದೆಯೋ ಮಹಾರಾಯಾಮಂದಮತಿ ನಾ ನಿಮ್ಮ ಮಹಿಮೆಯನು ಪೇಳಲೆನ್ನಳವೆತವಪಾದಾರವಿಂದದಿ ಅನವರದ ಜ್ಞಾನ ಭಕುತಿವೈರಾಗ್ಯವನಿತ್ತು ರಕ್ಷಿಸಬೇಕೋತಂದೆವರದವಿಠಲದೂತಾ ಮನೋ ನಿಯಾಮಕ ದೊರೆಯೇ

 

೩೦೩
ಸುಧೆಯನು ಸುರಿಸುವ ಸಮಯವಿದುಸದಯಾಕರ ಶ್ರೀಯಾದವ ಕುಲಪತಿ ಪ.
ವೃಂದಾವನದಿ ನಿಂದಿರಿ ಕೊಳಲನೂದಿಆನಂದಬಿಡಿಸಿದ ಇಂದಿರೆ ರಮಣನೇ ೧
ಬಾಲೆರ ಮಧ್ಯದಿ ಕೋಲನೆ ಹಾಕುತಲೀಲೆಯ ತೋರಿದ ಬಾಲಗೋಪಾಲನೆ೨
ಶಿರಿಯರಸ ತಂದೆವರದವಿಠಲನೆಚರಣಕಮಲ ತೋರೋ ಹೃದಯ ಮಂದಿರದಲಿ ೩

 

ಜಗವ ಪಾವನ ಮಾಳ್ಪ
೨೯೧
ಸುಪರ್ಣಾದೇವಿ
ಜಗವ ಪಾವನ ಮಾಳ್ಪ ವರದ ಮಾತೆ ಪ
ಖಗರಾಜನಿಗೆ ಅತಿ ಪ್ರೀತಿ ಪಾತ್ರಳೆ ದೇವಿ ಅ.ಪ.
ವರಹ ರೂಪದ ನಾಶಿಕದಿಂದ ಉದ್ಭವಿಸಿವಾಗ್ದೇವಿ ಸುತನಿಂ ಜಗದೊಳಗೆ ಪರಿದುವದನದಿಂದಲಿ ನಿಮ್ಮ ನಾಮಸ್ಮರಣೆಯ ಮಾಡೆವೇಗದಿ ಬರುವ ತಿಮಿರಗಳ ನಾಶಮಾಳ್ಪೇ ೧
ನೀನಾಗಿ ಕರುಣವ ಮಾಡೆ ನಾ ಪಾವನನುನಿನ್ನ ಪಾದದ ಮಹಿಮೆ ತೋರೆ ಜಗದಿನಿನ್ನ ಪತಿಯ ಪಾದ ಕಮಲದ ಮಹಿಮೆಯನುಉನ್ನತವಾಗಿ ತೊರೆನ್ನ ಹೃದಯದಲಿ ೨
ಎನ್ನ ಪಿತನ ತಾತಾ ಬಾಳಾರ್ಯ ಪ್ರಭುಗಳುನಿನ್ನ ಪಾದದ ಧ್ಯಾನ ಅನುದಿನ ಮಾಡೆಯದುಪತಿಯ ಮಹಿಮೆಯನು ಶಿಷ್ಯರಿಗೆ ತೋರುತಲಿ ಚನ್ನ ಶ್ರೀಗುರುತಂದೆಗೋಪಾಲವಿಠಲ-ಪುರವ ಪೊಂದಿಸಿದ ಮರಿಯೇ ೩

 

ಹಾಡಿನ ಹೆಸರು :ಜಗವ ಪಾವನ ಮಾಳ್ಪ
ಹಾಡಿದವರ ಹೆಸರು :ದೀಪಾ ಗಣೇಶ್
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ವಿಷನ್ ಟೆಕ್ನಾಲಜಿ, ಬೆಂಗಳೂರು

ನಿರ್ಗಮನ

 

ದಾಸನಲ್ಲವೇ ನಿನ್ನ ದಾಸನಲ್ಲವೆ
೨೯೦
ಲಕ್ಷ್ಮೀದೇವಿ
ದಾಸನಲ್ಲವೇ ನಿನ್ನ ದಾಸನಲ್ಲವೆ ಪ
ದಾಸನಾದ ಮೇಲೆ ಎನ್ನ ಘಾಸಿಗೊಳಿಸುವುದುಚಿತವೇನೇ ಘೋಷ ರೂಪನ ಪೆತ್ತ ತಾಯಿ ಅ.ಪ.
ಮಾಯೆಯೆ ನೀನು ಮಹಾ ಮಾಯ ಮಾಡುವರೇನು ಮಾರ ಮುಖ್ಯ ಶರತಾಪವ ಹರಿಸುತ ಮಾನದಿಂದ ಕಾಂಇÉಮಾರನ ತಾಯೇ ೧
ಪದ್ಮಜಾತೆ ನೀನು ಕುಬುದ್ಧಿ ಶರಧಿ ನಾನು ತಿದ್ದಿ ತೋರೆ ಹೃತ್ಪದ್ಮನಿವಾಸಿಯ ಶಿರಿಪದ್ಮನ ರಮಣಿಯೆ ೨
ಕಷ್ಟ ಪಡಿಸ ಬ್ಯಾಡೆ ಭವ ಕಟ್ಟು ಬಿಡಿಸಿ ನೋಡೇ ಯೆಷ್ಟೆಂದು ಪೇಳಲಿ ಗುರುಕೃಷ್ಣನ ಪೆತ್ತ ಶಿಷ್ಟ ಶಿಖಾಮಣಿಯೆ ೩
ಸಾರಶಾಸ್ತ್ರ ತೊರೆದೂ ದಿವ್ಯ ಮಾರಶಾಸ್ತ್ರ ಸುರದೂ ಶಾಸ್ತ್ರಾ ಶಾಸ್ತ್ರದ ದಾರಿಯ ತೋರಿಸಿ ಶತ್ರು ನಿವಾರಿಸು ೪
ಸಾಧು ಜನರ ಕೂಡೀ ಮೋಕ್ಷಕೆ ಸಾಧನವನೆ ಮಾಡಿ ಶಿಖರಪುರಕೆ ಬಂದೆ ಶಿರಿ ತಂದೆವರದಗೋಪಾಲವಿಠಲನತೋರೆಂದೆ ಇಂದು ೫

 

ಹಾಡಿನ ಹೆಸರು :ದಾಸನಲ್ಲವೇ ನಿನ್ನ ದಾಸನಲ್ಲವೆ
ಹಾಡಿದವರ ಹೆಸರು :ಗೀತಾ ಬಿ. ಆರ್.
ಸಂಗೀತ ನಿರ್ದೇಶಕರು : ರಮಾ ಪಿ.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಭಕ್ತಿಯನು ನೀಡಮ್ಮ
೩೦೭
ಭಾರತಿದೇವಿ
ಭಕ್ತಿಯನು ನೀಡಮ್ಮ ಭಾರತೀದೇವಿ ಪ.
ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ.
ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ ೧
ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ ೨
ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ ೩

 

ಹಾಡಿನ ಹೆಸರು :ಭಕ್ತಿಯನು ನೀಡಮ್ಮ
ಹಾಡಿದವರ ಹೆಸರು :ರಾಜೇಶ್ವರಿ ನಾಗೇಂದ್ರಪ್ರಕಾಶ್
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಭೀತಿಯನ್ನು ಬಿಡಿಸು ಬೇಗ
೩೧೩
ಭೂತರಾಜರು
ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ.
ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ.
ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ ೧
ಮರುತದ ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ ೨
ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ ೩

 

ಹಾಡಿನ ಹೆಸರು :ಭೀತಿಯನ್ನು ಬಿಡಿಸು ಬೇಗ
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ :ಅಮೃತವರ್ಷಿಣಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ವೆಂಕಟೇಶ ಭವ ಸಂಕಟ ಪರಿಹರಿಸೊ
೩೦೧
ವೆಂಕಟೇಶ ಭವ ಸಂಕಟ ಪರಿಹರಿಸೊ ಕಿಂಕರನೆಂದೆನಿಸೊ ಪ
ಶಂಕೆಯಿಲ್ಲದೆ ಪಾದಪಂಕಜ ಪೂಜಿಸಲೂಮಂಕುಮತಿಯ ಕಳೆವಾ ಅಕಳಂಕನೆಂದೆನಿಸುವಾ ಅ.ಪ.
ಕಲಿಯುಗದೊಳು ಕಲಿ ಬಾಧೆಗೆ ಒಳಗಾಗಿ ಬಹುವಿಧವಾಗಿಒಲಿಸದೆ ವರಗುರು ಹಿರಿಯರ ನಿಂದಿಸುತಾ ವೇಳೆಗಳೆಯುತಾಗಳಿಸಿದೆ ಪಾಪವ ಚರಿಸುತ ಧರೆಯೊಳಗೆ ತೊಳಲುವೆ ತಮದೊಳಗೇಘಳಿಲನೆ ರಕ್ಷಿಸೊ ಬಾಲಕರನು ದೇವಾ ಎನ್ನಯ ಕುಲದೈವಾ ೧
ಸಾಧನೆಗೋಸುಗ ಮೇದಿನಿಗೆ ಬಂದು ಸಾಧಿಸದೆ ಬಂದುಶೋಧಿಸುವೆನು ಪುರುಷಾರ್ಥದ ಮಾರ್ಗವನು ಮೋದವ ಪೊಂದುವೆನುಭೇದವ ತಿಳಿಯದೆ ಹಾದಿಯ ತಪ್ಪಿರುವೆ ಖೇದವ ಪುಡುತಿರುವೆಸಾದರದಲಿ ತವ ಪಾದದಿ ಧ್ಯಾನವನು ಒದಗಿಸಬೇಕಿನ್ನು ೨
ಮಾರ ಜನಕನೆ ಮಂದ ತಾಪ ಬಿಡಿಸೊ ಕರುಣವ ತೋರಿಸೊಆರು ಮೂರು ವಿಧ ಭಕ್ತಿಯನೆ ಈಯೋ ಕರಪಿಡಿದು ಕಾಯೋಸಾರುವ ಭಕುತರ ಧೀರ ವೃಂದದೊಳಗೆ ಸೇರಿಸೊ ಜವದೊಳಗೆಧಾರುಣೀಶ ತಂದೆವರದವಿಠಲನೆ ಶರಣೆಂಬೆನು ನಾನೇ ೩

 

ಹಾಡಿನ ಹೆಸರು : ವೆಂಕಟೇಶ ಭವ ಸಂಕಟ ಪರಿಹರಿಸೊ
ಹಾಡಿದವರ ಹೆಸರು : ಶ್ರೀಕಂಠನ್ ಆರ್. ಕೆ.
ಸಂಗೀತ ನಿರ್ದೇಶಕರು : ಸತ್ಯವತಿ ಟಿ. ಎಸ್.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ