Categories
ರಚನೆಗಳು

ಸಿರಿಗೋವಿಂದವಿಠಲ

೧೮೬
ಸಿರಿಗೋವಿಂದ
ಶ್ರೀ ಪುರಂದರದಾಸರ ಸ್ತ್ರೋತ್ರ
ಇದೇ ಪೇಳಿ ಪೋದರು ವಿಧುವದನೆ ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ
ಸಿರಿ ಅರಸನೆ ಈ ಧರೆಯೊಳಗುತ್ತಮ ಮರುತ ದೇವರೆ ಜಗದ್ಗುರುಗಳೆಂದು ತರತಮ ಪಂಚಭೇದ ಜ್ಞಾನ ಶೀಲನೆ ಸುರಲೋಕವಾಸಿ ಶ್ರಿಹರಿ ಪ್ರೇಮ ಪಾತ್ರನೆಂಬೊದೆ ಪೇಳಿ ೧
ಜರದೂರ ನರಹರಿ ಧರೆಯೊಳು ವ್ಯಾಪಿಸಿ ಇರಲು ತ್ರಿಗುಣ ಕಾರ್ಯವಾಹವೆನ್ನುತಾ ಪರತಂತ್ರ ಜೀವವೆಂದರಿದು ಪಾಪ ಪುಣ್ಯ ಸರಸಿಜನಾಭನಿಗರ್ಪಿಸಿರೆಲೋಯಂದು ೨
ಶಿರಿಗೋವಿಂದ ವಿಠಲ ವಿಶ್ವವ್ಯಾಪಕ ಗಿರುವವು ಎರಡು ಪ್ರತಿಮೆ ಜಗದಿಚರ ಅಚರಗಳನ್ನು ಅರಿತು ಮಾನಸದಲ್ಲಿಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆಪೇಳಿ ಪೋದರು ೩

 

೧೮೭
ಶ್ರೀ ಗುರು ರಘುಪತಿ
ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ
ಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿ ಮಾಡಿದ್ದೆ ಮಾಡುತ ಮೂಢನಾಗಿ ರೂಢಿವಳಗೆ ತಿರಿಗ್ಯಾಡುವ ಅಜ್ಞಾನಿ ಕೋಡಗನ್ನ ಸಿಂಹ ಮಾಡಿದ ಗುರುವಿರೆ೧
ಆವಾನು ದಯಮಾಡೆ ದೇವನು ವಲಿವನು ಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿ ಗುರು ರಘುಪತಿ ದಯವಿರೆ ೨
ಕರವೆಂಬೊ ಲೇಖನ ದ್ವಾರದಿಂದ ನಮ್ಮ ಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವ ಗುರು ಕೃಪೆ ನೆರಳಿರೆ ೩

 

೧೮೪
ಶ್ರೀ ಸತ್ಯಜ್ಞಾನರು
ನಮನ ಅನುದಿನದಿ ಅನುಮಾನಿಸದೇ ನೀ ಪ
ನೆನೆ ಮನವೆ ಶ್ರೀ ಸತ್ಯಜ್ಞಾನರ ಅನಘಹೃದ್ವನ ಜದಲಿಘನ ದಿನ ಮಣಿಯ ವೊಳ್ ಮಿನುಗುವನಗುಣಗಣ ತನು ಮರೆದು ಕುಣಿ ಕುಣಿದು ಹರುಷದಿ ಅ.ಪ
ಜ್ಞಾನಾತ್ಮ ಪರನೆಂದು ಮಿಕ್ಕಾದದಿತಿಯರು ಊನರು ಹರಿಗೆಯ ಚೇತನರು ಅವಾನಧಿರು ಅಹುದೆಂದು ವಿಸ್ತರಿಸಿ ಪೇಳಿದ ದಿನ ಪಾಲಕದೇವ ಶ್ರೀಪವಮಾನ ಮತ ಅಂಬುಧಿಯೊಳನುದಿನ ಮಿನ ನೆನಿಸಿದ ನಮ್ಮ ಸತ್ಯಜ್ಞಾನತೀರ್ಥರ ಮಾನದಂಘ್ರಿಯ ೧
ಕಮಲಾಪ್ತ ಗಧಿಕನಾದ ತೇಜದಲಿ ಪೊಳೆಯುವ
ಕಮಲಾಪತಿಯ ಸುಪಾದಾ ಅತಿ ವಿಮಲತನ

 

೧೮೫
ಶ್ರೀ ಸತ್ಯಧ್ಯಾನರು
ನಿತ್ಯದಿತಿಜರು ಕಲಿಗೆ ದೂರುತಿಹರೋ ಸತ್ಯಧ್ಯಾನರ ಕಾಟ ತಾಳಲರೆವೊಯಂದು ಪ
ನೀಕಲಿಸಿದಾಟವನು ತಾ ಕಳೆದು ಜನರ ಅಘನೂಕಿ ಜಗಸತ್ಯ ಶ್ರೀಹರಿಯು ಪರನು ಶ್ರೀ ಕಮಲಭವರೆಲ್ಲ ದಾಸರೆಂದರು ಪಲು ತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು ೧
ಭೂಸೂರರಿಗನ್ನ ಧನ ಭೂಷಣಗಳಿತ್ತು ಅಭ್ಯಾಸಗೈಸಿದ ಸಕಲ ವೇದಶಾಸ್ತ್ರ ವೀಸುವಿದ ಯತ್ನಗಳು ನಾ ಮಾಡಿದರು ಜಯ ಲೇಸುಕಾಣದೆ ನಿನ್ನ ಬಳಿಗೆ ಬಂದೆವು ಎಂದು ೨
ಇಂತು ತಾಮಾಡಿದನು ಪಿಂತಿನಾಶ್ರಮದಿ ಈಗಂತು ನಮ್ಮವರಾದ ವದುಮತ್ಸರಾ ಕಂತು ಕೋಪಾದಿಗಳಿಗಂತಕನು ಯನಿಸಿ ಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು೩
ತಾಪಸೋತ್ತಮ ಸತ್ಯಧ್ಯಾನದಿಂ ಭೂತಳದಿ ಪಾಪ ಸರಿದಿತು ಪುಣ್ಯವೆಗ್ಗಳಿಸಿತು ಲೇಪಿಸದು ಖತಿಜನಕ ಇವರ ದಯದಿಂದೆಮ್ಮವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು ೪
ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾ ಪರ ಹಿಂಸೆ ಧನ ಯುವತಿ ದ್ಯೂತ ತೊರದಾ ವರ ಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದುಅರುಹಿದನು ಭೃತ್ಯರಿಗೆ ಕಲಿ ಮನನೊಂದು ೫

 

೧೮೦
ಶ್ರೀ ಗಣಪತಿ ಸ್ತೋತ್ರ
ನಿರ್ವಿಘ್ನ ನೀಡೋ ನಭದೀಶಾ ಪ
ಗಜಮುಖ ಅಗಜ ಅಂಗಜ ಮೃದ್ಭವ ಗಜವರದನ ನಿಜ ದಾಸ ೧
ನಾಕಪ ವಂದ್ಯ ಪಿನಾಕಿಧರನುತ ಏಕದಂತ ದ್ರಿತ ಪಾಶಾ ೨
ಶಿರಿಗೋವಿಂದ ವಿಠಲನ ದಾಸರಿಗೆ ಶಿರಿದ ನಿಖಿಳ ಭಯನಾಶ ೩

 

೧೮೨
ಲಕ್ಷ್ಮೀದೇವಿ
ನೀನನ್ನ ಹೇಳಬಾರದೇನೆ ತಾಯಿ ನಿನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ
ಶ್ರೀನಿಧಿಪರನೆಂದು ನಂಬಿ ಬಂದ ಬಡ ಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ ೧
ಮೊರೆ ಹೊಕ್ಕವರ ಕರ ಪಿಡಿವನೆಂಬೊ ಘನಾ ಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ ೨
ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ ೩

 

೧೮೧
ಶ್ರೀಹರಿಯ ಸ್ತೋತ್ರ
ಬಾಯಂದು ಕರೆವೆನೊ ದೇವ ನಿನ್ನ ಮಾಯಿ ವೈರಿ ಮಧ್ವರಾಯರ ಪ್ರೀಯನೆ ಪ
ರಾಮ ನಿರಾಮಯ ಮಾಮನೋಹರ ಶೌರಿ ಸೋಮಧತಾರ್ಚಿತ ಸಾಮನುತಾ ಭೂಮಿಜಲೋಲಬಾರೊ ಸಾಮಜ ಪಾಲ ಬಾರೊ ಕಾಮಿತ ಶೀಲ ಬಾರೊ ತಾಮಸ ಕಾಲ ಪ್ರೇಮದಿ ೧
ಬಿಸಿದಾಭಾಸ್ಪಸನ ಮಾನಸಗೆ ಅಸುರ ವೈರಿ ಕುಸುಮಶರ ಪಿತ ಸುಮನಸ ವಂದಿತಾ ಅಸಮ ಶೂರ ಬಾರೊ ವಸುಧಿಧರ ಬಾರೊ ವ್ಯಸನಹರ ಬಾರೊ ಅಸುರ ವೈರಿ ಕುಶಲದಿ ೨
ನಂದನ ಕಂದನೆ ಇಂದಿರೆ ಮಂದಿರ ಸುಂದರ ಶಿರಿ ಗೋವಿಂದ ವಿಠಲ ಮಂದರಧರ ಬಾರೋ ಚಂದಿರಮೊಗ ಬಾರೊ ಛಂದದ ದೈವ ಬಾರೊ ಇಂದಿನ ಎನ್ನ ಮನಸಿಗೆ ೩

 

೧೮೩
ವಾಯು ದೇವರು
ಮುದದಿ ಪಾಲಿಸೊ ಮುದತೀರಥ ರಾಯಾ ಸದ್ಬುಧ ಜನ ಗೇಯಾ ಪ
ಪದುಮನಾಭ ಪದ ಪದುಮ ಮುದುಪ ಸದಯಾ ಸದಮಲ ಶುಭ ಕಾಯಾ ಅ.ಪ.
ವದಗಿರಾಮ ಕಾರ್ಯದಿ ನೀ ಮನಸಿಟ್ಟಿ ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದು ಬಿಟ್ಟೆ ಪುಚ್ಚದಿಪುರ ಸುಟ್ಟ ಕದನದಿ ಭೀಮವೃಕೋದರ ಜಗಜಟ್ಟಿ ಸಂನ್ಯಾಸ ತೊಟ್ಟಿ ೧
ಸೀತಾ ಶೋಕ ವಿನಾಶನ ಮಹಂತಾ ಮಹಬಲಿ ಹನುಮಂತ ದಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳವಂಥಾ ಕೋತಿರೂಪಿ ಧರ್ಮಾನುಜ ಜಯವಂತಯತಿನಾಥನೆ ಶಾಂತಾ ೨
ಶಿರಿಗೋವಿಂದ ವಿಠಲನ ಪ್ರೀತಿ ಕಂದಾ ಭೀಮನೆ ಆನಂದಾ ಗರಿದು ಮುರಿದು ಪರಮತವನೆ ಆನಂದಾ ಮುನಿ ರೂಪದಲಿಂದ ಶಿರಿರಾಮನಸುತರ ಪ್ರೀಯ ಭರದಿಂದಾಬದರಿಗೆ ನಡೆ ತಂದಾ ೩

 

ಏನೇನು ಭಯವಿಲ್ಲ ನಮಗೆ
೧೮೭
ಶ್ರೀ ಗುರು ರಘುಪತಿ
ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ
ಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿ ಮಾಡಿದ್ದೆ ಮಾಡುತ ಮೂಢನಾಗಿ ರೂಢಿವಳಗೆ ತಿರಿಗ್ಯಾಡುವ ಅಜ್ಞಾನಿ ಕೋಡಗನ್ನ ಸಿಂಹ ಮಾಡಿದ ಗುರುವಿರೆ೧
ಆವಾನು ದಯಮಾಡೆ ದೇವನು ವಲಿವನು ಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿ ಗುರು ರಘುಪತಿ ದಯವಿರೆ ೨
ಕರವೆಂಬೊ ಲೇಖನ ದ್ವಾರದಿಂದ ನಮ್ಮ ಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವ ಗುರು ಕೃಪೆ ನೆರಳಿರೆ ೩

 

ಹಾಡಿನ ಹೆಸರು :ಏನೇನು ಭಯವಿಲ್ಲ ನಮಗೆ
ಹಾಡಿದವರ ಹೆಸರು :ವಾಗೀಶ್
ರಾಗ :ಬಿಲಹರಿ
ತಾಳ :ಛಾಪು ತಾಳ
ಸಂಗೀತ ನಿರ್ದೇಶಕರು :ವಾಗೀಶ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ