Categories
ರಚನೆಗಳು

ಸಿರಿವತ್ಸಾಂಕಿತರು

೬೮
ಶ್ರೀಹರಿಯ ಸ್ತುತಿ
ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು
ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ
ಹರಿಯೆ ನೀ ಭಕುತರ ಸುರತರುವೆಂದು
ಅರಿದು ನಿನ್ನಡಿಗೆ ಬಂದು ಕರುಣಾಸಿಂಧು
ವರವೇನು ಎನ್ನ ಪರಿಚರ್ಯವೆಲ್ಲವನು
ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು
ಕರಿವರದನೀತರಿವಿದುರುಳನ ಪೊರೆವಿ ಸುಜನರ
ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ
ಪುರದಭಯವನು ಪರಿಹರಿಸುವಿ ೧
ಭವರೋಗವೈದ್ಯ ನೀ ಅವಧಿಯೂ ಇಲ್ಲದೆ
ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ
ಭಕುತರ ಕಾಯ್ಯಿ ಅವನೀಲಿ ಜನಿಸಿದ
ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ
ನರನನ್ನು ಪೊರದಿ ಅವನಿಪಿತ ನಿನ್ನ
ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು
ಪವನ ಪ್ರಿಯನೆ ಭುವನ ತಾತನೆ
ಶಿವಗೆ ವರವಿತ್ತೆ ಪವನನಯ್ಯನೆ ೨
ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ
ವರವಿತ್ತೆ ಕರಿಪುರಾಡರಸರ ಪ್ರಭುವೆ
ಸುರತರು ವೇಷಶರಣಾಗತರನು ಪೊರೆವನೆಂಬ ನಿಜ
ಬಿರುದನು ಮೆರಿಸುತ ಶಿರಿಯಿಂದೊಪ್ಪುತ
ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ
ಸುರಪತಿ ಶಿರಿವತ್ಸಾಂಕಿತನೆ ೩

 

೬೯
ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ ಎಲ್ಲವೂ ಸುಳ್ಳೆಂಬ
ಖುಲ್ಲ ಜನರುಗಳಿಗಿಲ್ಲಿಲ್ಲ ಪ
ಸತಿಸುತರುಗಳೆಲ್ಲ ಅತಿಹಿತರೆನ್ನುತ
ರತಿಪತಿಪಿತನ ಮರೆತು ಇಪ್ಪ ಜನರಿಗೆ ೧
ಮಿಗಿಲಾದ ಮಹಿಮೆಯ ಜಗದೊಳು ತೋರುವ
ಅಗಣಿತ ಮಹಿಮಗೆ ಸೊಗಸದ ಜನರಿಗೆ ೨
ಶರಧಿಶಯನನಾದ ಶ್ರೀವತ್ಸಾಂಕಿತನನ್ನು
ಮರೆತು ಮರಳುಗೊಂಡು ಕರಗಿ ಕುಂದುವ ಜನರಿಗಿಲ್ಲಿಲ್ಲ ೩

 

೭೦
ಉಡಪಿಯ ಕೃಷ್ಣ ಯನ್ನ ನುಡಿ ಲಾಲಿಸೋ ಪ
ಸಡಗರದಲಿ ನೀನು ಮಡದಿವೃಂದ ಬಿಟ್ಟು
ಕಡಲಪಯಣದಿಂದಲಿ ವಂದು ಬಿಡದೆ ಭಕ್ತರಿಗೆಲ್ಲ
ವಡೆಯನಾಗಿ ನೀನು ಷಡುರಸ ಅನ್ನವ ಕೊಡುತನಿಂತಿಹೆ ೧
ಪ್ರಾಣಪತಿಯು ಅತಿ ಜಾಣನೆಂದೆನಿಶಿ ನೀ
ಕಾಣಿಸುವಿ ನರಪ್ರಾಣಿಗೆ
ಮಾಣವಕನೆ ನೀ ಜಾಣನೆಂದೆನುತಲಿ
ಧ್ಯಾನಮಾಡಿ ಮೋದಿಸುವರು ೨
ಧರೆಯೊಳು ರಜತಪೀಠ ಪುರದೊಳೂ ನೆಲೆಸಿಪ್ಪ
ಸುರವೃಂದನುತ ಬೇಗ ಸಲಹೆನ್ನ
ವರಮಧ್ವ ಮುನಿನುತ ಸರಸಿಜಭವ ವಂದ್ಯ
ಶ್ರೀವತ್ಸಾಂಕಿತ ವೆಂಕಟಪತಿಯೇ ೩

 

೭೧
ಎಂದಿಗೆ ನೀ ಯೆನ್ನ ಮುಂದಕೆ ಬರುವೆಯೊ
ಸುಂದರ ಮೂರುತಿಯೆ ನಂದದಿ ಭಕುತರ
ವೃಂದಗಳೆಲ್ಲವ ಸಂದೇಹವಿಲ್ಲದೆ
ಮುಂದಕೆ ಕರದೊಯ್ವೆ ಪ
ಪಂಕಜಾಕ್ಷನೆ ನೀನು ಕಿಂಕರ ಜನರಾ-
ತಂಕಗಳೆಲ್ಲವ ಶಂಕಿಸದೆ
ವೆಂಕಟನಾಮಕ ಸಂಕಟಪರಿºರವಿವ-
ಳಾಂಕರನರವ ನಿಶ್ಶಂಕೆಯಿಂದಲಿಯಿತ್ತು ೧
ಆರುವೈರಿಗಳೆನ್ನ ಗಾರುಮಾಡುವರಯ್ಯಾ
ಆರು ಕಾವರು ಇಲ್ಲಾ ಮಾರಜನಕನೆ
ಪಾರುಗಾಣಿಸದೆ ನೀ ದೂರಗೈಸಲು ಯನ್ನ-
ನಾರು ರಕ್ಷಿಪರೊ ದೋಷವಿದೂರನೆ ಪೇಳೋ ೨
ಯರಬೆರಡೆನಾಗಿತ್ತು ಪೊರಿಯೋ ದೇವರ ದೇವ
ಕರುಣಾಬ್ಧಿ ನೀನೆಂದು ವರವೋದು ಶ್ರುತಿಯು
ಶರಣಾಗತನನ್ನು ಪೊರೆಯದೆ ಬಿಡುವಂದು
ಸರಿಯೇನೋ ಕರುಣಾಳು ಸಿರಿವತ್ಸಾಂಕಿತನೆ ೩

 

೭೨
ಕರುಣದಿ ಬಂದು ನಿನ್ನ ಚರಣ ಕಮಲವೆನ್ನ
ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ
ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು
ಕರೆವರು ನಿನ್ನನು ಪ
ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ
ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು
ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ೧
ಆಗಮವಂದಿತ ನಾಗಭೂಷಣ ತಾತ
ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ
ಭಾಗವತರ ಪ್ರಿಯ ಜಾಗುಮಾಡದೆ ಎನ್ನ-
ದಾಗಲು ರಕ್ಷಿಸೆಂದು ಬಾಗಿ ಬೇಡುವೆನು ೨
ಕಾವನು ನೀನಲ್ಲದೆ ಯಾವ ದೇವರನು ನಾ
ಆವಲ್ಯು ಕಾಣೆನು ಭಾವಜಜನಕನೆ
ಶ್ರೀವಾಸುದೇವನ ಗೋವೃಂದ ರಕ್ಷಕನೆ
ಭಾವಿ ಬ್ರಹ್ಮನ ಪತಿ ಶ್ರೀವತ್ಸಾಂಕಿತನೆ ೩

 

೭೩
ಕಾಯೋ ಬಾರೋ ಹರಿ ಈಯ್ಯೋ ವರ ಥೋರೀ
ಜಾರಚೋರಖರ ಅರಿನಾಶಕಾರಿ ಪ
ವಾಯುದೇವಪಿತ ತೋಯಜಾಕ್ಷಿ ಸೀತಾ
ಪ್ರಿಯ ನೀನು ತ್ರಾತ ರಾಯ ಜಗನ್ನಾಥ ೧
ಕಾಮನಯ್ಯ ನೀನು ಮಾಮನೋಹರನು
ವಾಮನಾದಿ ನೀನು ರಾಮನಾಮಕನು ೨
ಕರಿರಾಜನನ್ನು ತ್ವರಿತಾದಿ ಕಾಯ್ದಿ
ಶ್ರೀವತ್ಸಾಂಕಿತ ಹರಿ ವೆಂಕಟೇಶ೩

 

೭೪
ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ
ಸೊಲ್ಲ ಲಾಲಿಸಿ ಬೇಗ ಸಲಹು ದೇವಾ
ಕ್ಷುಲ್ಲಕರೂ ಯನ್ನ ಖುಲ್ಲ ಮಾನವನೆಂದು
ತಲ್ಲಣಗೊಳಿಸೋರು ಭವನಾವಾ ಪ
ಓಡಿಬಂದೆನೊ ನಿನ್ನ ನೋಡಬೇಕೆನುತಲಿ
ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ
ರೂಢಿಯವಳಗೆ ನೀ ನೀಡು ನಿನ್ನಯ ಪಾದ ಮುಕುಂದಾ ೧
ಅಭಯವ ನೀಡಯ್ಯಾ ಇಭರಾಜವರದನೆ
ಉಭಯ ಸುಖಪ್ರದ ನೀನೆಂದು
ಅಭಿನಮಿಸುವೆನಯ್ಯ ಶಬರಿಯಂಜಲನುಂಡು
ಬುಜೆಗಧವಕೊಂಡಿ ವಿಬುಧವಂದಿತನೆ೨
ಮೆರೆಯುವಿ ನೀ ಬಲು ಉರಗರಾಜಶಾಯಿ
ವರವಿಪ್ರನಿಕರದಿಂ ಪೂಜೆಗೊಂಡು
ಥರಥರದಲಿ ನೀ ಪೊರಹಿದೆ ಭಕ್ತರ
ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ ೩

 

೮೮
ಗಂಗಾಜನಕಗೆ ಮಂಗಳಾರುತಿಯನೆತ್ತಿ
ಮಂಗಳಾಂಗಿಯರು ಸಂಗೀತ ಪಾಡುತ ಪ
ಅನಿಮಿಷೇಶನು ಆನಂದಾತ್ಮಾ ಪ್ರಾಕೃತನು
ಅನಿಲವಾಸಾನಂತಾನಂತಾನಂತನಂತರೂಪನು ೧
ಲಕ್ಷ್ಮೀವಾಸನು ಕುಕ್ಷಿಯೊಳ್ ಬ್ರಹ್ಮಾಂಡಧರನು
ಲಕ್ಷಣಗ್ರಜನು ಸುಕ್ಷೇಮದಿಂದಿಡುವ ನಾಮ ೨
ಕರುಣಪೂರ್ಣನು ಸ್ಮರಿಪರ ಭವವಿದೂರ
ಸರಿಮಿಗಿಲಿಲ್ಲದ ಸಿರಿವಿಠಲ ನಾಮಧೇಯ ೩

 

೭೫
ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ
ನೀ ಪರಿಹರಿಸು ಜೀಯ್ಯಾ ಪ
ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ
ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ
ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ
ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು ೧
ಸುರಪನ ಗರ್ವವ ಹರಣವ ಮಾಡಿ ನೀ
ವರವಿತ್ತೆ ಕಾಳಿಂಗ ಉರಗನಿಗೆ
ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ
ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು ೨
ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ
ಮರೆಯೋದು ಯನ್ನನು ಸರಿಯೆನೊ ಹರಿಯೆ
ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ
ಶ್ರೀವತ್ಸಾಂಕಿತನಾದ ವರಜಾರಚೋರ ವೇಣು ೩

 

೮೪
ಚರಣಕಮಲವನು ತೋರೋ ಪ
ಮನವೆಂಬ ಮನೆಯನು ನಿರ್ಮಲಗೊಳಿಸು
ತನುಮನಧನದಾಶೆಯ ನೀ ಬಿಡಿಸೊ ೧
ಆರು ಮಂದಿಯು ಯನ್ನ ಗಾರುಮಾಡುವರು
ಪಾರಗಾಣಿಸು ಬೇಗ ಶ್ರೀ ರಾಮದೇವ ೨
ದಶರಸುತ ನೀನು ಶಶಿಮುಖಕಾಂತನು
ಶಶಿಧರನುತನೀ ಅಪಮಸಾಹಸನೊ ೩
ಮೂರಾವತ್ಸೇಗಳಲ್ಯು ದೂರಾಪೋಗದೆ ನೀ
ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ ೪
ಸಿರಿವತ್ಸಾಂಕಿತ ನೀನು ತರಣಿಸುತನ ಸರವ
ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು ೫

 

೭೬
ಜಯ ಜಯವೆಂಬೆ ನಾನು ಶ್ರೀವರ ನಿನಗೆ ಪ
ಜಯವೆಂಬೆ ಶ್ರೀವರನೆ ಭಯ ದೋಷವರ್ಜಿತನೆ
ಅಯನ ವತ್ಸರಗಳೆಂಬ ನಿಯಮವು ಇಲ್ಲದವನೆ ಅ.ಪ.
ಕಾಲನಾಮಕ ನೀನು ಕಾಲನಾಮಕ ಚಕ್ರ ಸಾಲಾಗಿ
ತಿರುಗಿಣಿ ಪಾಲಿಸುವಿ
ಪಾಲಗಡಲಿನಲ್ಲಿ ಆಲದೆಲೆಯಮೇಲೆ ಕಾಲನು
ನೀಡಿ ನೀ ಮಲಗಿರುವಿ ೧
ಸೃಷ್ಟಿಕರ್ತನು ಸೃಷ್ಟಿಪಾಲಕ ನೀನು ಶಿಷ್ಟ ಜನರಭಿಪ್ರದ ನೀನು
ಕಷ್ಟಲೇಶವಿಲ್ಲದೆ ಶಿಷ್ಟ ಜನರುಗಳರಿಷ್ಟವೆಲ್ಲವ ನೀ ಕಟ್ಟಿ ಕೆಡಹುವಿ ೨
ಭೂವಲಯದಿ ಭವನಾವಿಕನೆ ಯನ್ನ ನಾನೀಪರಿಯಲಿ ನೀಯೋ
ಶ್ರೀವಾಸುದೇವನೆ ಭಾವಜನಯ್ಯನೆ ಕಾವ ಭಕ್ತರ
ದೇವ ಶ್ರೀವತ್ಸಾಂಕಿತನೆ೩

 

೯೩
(ಜಗನ್ನಾಥದಾಸರು)
ತಂಗೀ ನೋಡಿದೇನೆ ಇಂದು ಪ
ಕಂಗಳ ಧಣಿ ರಂಗವೊಲಿದ ಮಹಾತ್ಮರ ಅ.ಪ
ದ್ವಾಪರದಲ್ಲಿಯ ಶಲ್ಯರು ಇವರಂತೆ
ತಪಸಿ ಪ್ರಹ್ಲಾದನ ಅನುಜರು ಇವರಂತೆ
ಕಪಟರಹಿತ ಕಲ್ಕೀರ ಭೂಪನ
ರೂಪರೇಶೆಯ ನಿರ್ಮಿಸಿ ಮೆರೆದವರ ೧
ಎಂಥ ಪುಣ್ಯವಂತರು ನಮ್ಮ ಹಿರಿಯರು
ಇಂಥ ಮಹಾತ್ಮರ ಸೇವಿಸಿ ಬದುಕಲು
ನಿಂತು ಮನದಿ ಇವರ ನಾಮ ಭ್ರಾಂತಿಯಾಗಲು
ಸಂತೋಷದಿ ಶಾಂತ ಹೊಳೆ ಹರಿಸುವರನು ೨
ಶಿಷ್ಟ ಸದಾಚಾರ ಸೃಷ್ಟಿಸಿ ಜಗದಲಿ
ಶ್ರೇಷ್ಠ ದಾಸರೆಂದು ಖ್ಯಾತರಾಗಿಹರ
ಅಷ್ಟಮಾಂಗ ಸಾಷ್ಟಾಂಗದಿ ಎರಗಲು
ಸೃಷ್ಟೀಶ ಸಿರಿವತ್ಸಾಂಕಿತನ ತೋರ್ಪರ ೩

 

ಯಾವಲ್ಲಿಯೇ
೭೭
ದಯಮಾಡೋ ರಂಗ ಹೇ ಕೃಪಾಂಗ ಪ
ದಯಮಾಡಿ ನೀಯೆನ್ನ ಭಯವ ಪರಿಹರಿಸು ಚಿ-
ನ್ಮಯ ಮೂರುತಿ ಸುಖಮಯ ಮಂದರಧರ ಅ.ಪ.
ಪತಿತ ಪಾವನ ನೀನು ಪತಿತಾಗ್ರೇಸರ ನಾನು
ಜತನದಿ ಭಕುತಿಯ ಪಥವ ತೋರಿ ನೀನು ೧
ಮುಕ್ತಿ ಫಲಪ್ರದ ಶಕ್ತಿಯು ನಿನ್ನ ವ್ಯತಿರಿಕ್ತವಲ್ಲವೆಂದು
ಭಕ್ತಿಯುವರವಳು…[?] ೨
ಕಾಮಧೇನು ನೀನು ಕಾಮನಯ್ಯನು ನೀನು
ಕಾಮಿತಫಲದಾತ ಮಾಮನೋಹಕ ತ್ರಾತ ೩
ಸೃಷ್ಟಿಪಾಲಕ ನಿನ್ನ ಯಷ್ಟೆಂತವರ್ಣಿಪೆ
ಅಷ್ಟು ಕರ್ತೃತ್ವಕ್ಕೆ ಶಿಷ್ಟಮೂರುತಿ ನೀನೆ ೪
ಭಾರಿಭಾರಿಗೆ ನಿನ್ನ ಆರಾಧಿಸುವರ
ಚಾರುಚರಣವನು ತೋರೊ ಮಾರಜನಕ ೫
ಸಕಲಕ್ಕು ನೀ ಮುಖ್ಯ ಶಕಟಭಂಜನ ಕೇಳು
ಪ್ರಕಟನಾಗಿಯೆನಗೆ ಶಕ್ತಿಯ ನೀಡೋ೬
ಭೂವಲಯದೊಳು ನಾ ಆವಲ್ಯಪೋಗಲು
ಕಾವಲು ನೀನೇ ಶ್ರೀವತ್ಸಾಂಕಿತನೇ ೭

 

೭೮
ಧರೆಯೊಳು ನಾ ಬಂದು ಇರುಳು ಹಗಲು ನಿನ್ನ
ಸ್ಮರಣೆಯ ಮಾಡದೆ ಪರರ ಬಾಗಿಲ ಕಾಯ್ದೆ
ಮುರಲೀಧರ ಶ್ರೀಕೃಷ್ಣ ಪೊರಿಯೊ ತಪ್ಪನು ಕ್ಷಮಿಸಿ
ಗೊಲ್ಲರ ಸಖದವನೇ ಶ್ರೀವತ್ಸಾಂಕಿತನೇ
ನಾರದನಂದನ ನೀನು ಗಾರುಮಾಡಿಯೆನ್ನ
ದೂರಗ್ರಹಿಸಲು ಈಗ ಆರು ಕಾಯರೋ
ಜಾರ ಚೋರ ಕೃಷ್ಣ ಮಾರಜನಕ ನೀನು
ಪಾರಗಾಣಿಸು ದೇವ ಶಿರಿವತ್ಸಾಂಕಿತನೇ

 

೭೯
ನೋಡಿರಯ್ಯ ಶ್ರೀರಾಮನ ಮೂರ್ತಿಯ
ಪಾಡಿರೊ ಮಹಿಮೆಯನು ಪ
ಅಗಣಿತ ಮಹಿಮನು ತ್ರಿಗುಣ ವರ್ಜಿತನು
ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ ೧
ಸಂಜೀವವನು ತಂದ ಅಂಜನಸುತನಯ್ಯ
ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ ೨
ವಾರಿಜ ಭವಪಿತ ಮಾರುತ ಗತಿಪ್ರಿಯ
ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು
ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು ೩
ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ
ಅರವಿದೂರನನ್ನು ೪

 

೮೦
ನೋಡೆ ದಯದಿ ಶಿರಿ ನಿನ್ನ ಮಡದಿ ಪ
ನೋಡಿ ನೀ ದಯದಿ ನೀಡು ಕರುಣ ದಯ-
ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ.
ಮಾಮನೋಹರ ನೀ ಪ್ರೇಮದಿಂದಲಿ ಬಂದ-
ಜಾಮೀಳನ ಪೊರದಾ ಶಾಮಸುಂದರನೇ೧
ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ
ತಾರಿಸಬೇಕೆಂದು ಶೇರಿದೆ ನಿನ್ನನ್ನು ೨
ಮರೆಯುವುದುಚಿತವೆ ಶಿರಿಯ ರಮಣ ನೀನು
ತರಳ ಧ್ರುವನನ್ನ ಪೊರೆದಂಥ ದೇವ ನೀ ೩
ಆರ್ತರಕ್ಷಕ ನೀನು ಪಾರ್ಥನಾ ಸೂತನು
ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ ೪
ಸರಸಿಜನಾಭನಾದ ಸಿರಿವತ್ಸಾಂಕಿತ ನೀನು
ಮರೆಯಬ್ಯಾಡೆನ್ನಯ ಮೊರೆಯನು ೫

 

(ಆ) ದೇವ, ಗುರುಸ್ತುತಿ
೯೦
ಅವತಾರತ್ರಯ
ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ
ಕಾಣದೆ ನಿನ್ನ ಮಹಿಮೆ ಧ್ಯಾನಿಸದೆ ಮರುಳಾದೆ ಪ
ಸೂತ್ರ ನಾಮಕ ನೀನು ಛತ್ರಪುರದೊಳು ನೆಲೆಶಿ
ಶತ್ರು ಪುಂಜವ ನಿಮಿಷ ಮಾತ್ರದಲಿ ತುಳಿದಿ
ಗಾತ್ರದಲಿ ನೀ ಲಾಲಿಸು ಪಾತ್ರನೆಂದೆನಿಸೆನ್ನ
ಕೃತ್ರಿಮದ್ವಿಜ ಸ್ತೋತ್ರ ಪಾತ್ರ ಕೃಷ್ಣನ ದಾಸ ೧
ಕಾಮನೃಷನು ಹಿಂದೆ ರಾಮನಾಜ್ಞವ ತರಿಸಿ
ಆ ಮಹಾಸುರರೇ ಮಧಾಮವನು ಸಾರೆ
ಈ ಮಹಿಯೊಳಗೆ ನಿಸ್ಸೀಮನೊಬ್ಬನೆ ಯೆಂದು
ಭೂಮಿಯಲಿ ನಿನ್ನ ಗುಣ ಸ್ತೋಮವನು ತೋರಿಸಿದೆ ೨
ಅವತಾರ ತ್ರಯಗಳಲಿ ಸ್ವವಶವ್ಯಾಪಿ ಲಕ್ಷ್ಮೀ –
ಧವನ ಮನವರಿತು ನೀ ಅವತರಿಸಿದೆ
ಯುವತಿ ವೇಷದಿ ಗೌರೀಧವನ ಮೋಹಸಿದಂಥ
ಶ್ರೀವತ್ಸಾಂಕಿತನಾದ ಅವನಿಗೊಡೆಯನ ದಾಸ ೩

 

೯೧
ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ
ಜಯಮಂಗಳ ಅಂಗನೆ ಸುತಗೆ ಮಂಗಳ ಭುಜಗಭೂಷಣ
ದೇವಗುರುವಿಗೆ ಮಂಗಳ ಭಾರತಿ ರಮಣನಿಗೆ ಪ
ತ್ರೇತಾಯುಗಞ್ಲ್ಲಿ ಖ್ಯಾತರಾದ ಸುರರ
ಘಾತಿಸಿ ಬಡಿದಂಥಾ ವಾತಾತ್ಮಜ
ಪ್ರೀತಿಲಿ ರಾಮನ ಖ್ಯಾತ ದೂತನಾಗಿ
ಭೂತಳದೊಳತಿ ಖ್ಯಾತಿಯ ಪಡೆದಂಥ ೧
ದ್ವಾಪರದಲಿ ತಾ ಭೂಪ ಭೀಮನಾಗಿ
ಗೋಪಾಲಕನ ನಿಜ ದಾಸನಾಗಿ
ಪಾಪಿ ಖೂಳರ ಸಂತಾಪವ ಬಡಿಸುತ
ಗೋಪಾಲಸಖನ ಪ್ರತಾಪವ ಪೊಗಳಿದಂಥ ೨
ದುರುಳ ಮತಗಳೆಲ್ಲ ಮುರಿಯಲೋಸುಗ
ಅವಸರದಿಂದಲಿ ಬಂದು ಕಲಿಯುಗದೀ
ಶಿರಿವತ್ಸಾಂಕಿತನಿಗೆ ಪರಮಪ್ರಿಯವಾದ
ವರಮಧ್ವಮತವನ್ನು ಧರೆಯೊಳು ತಂದಂಥ ೩

 

೯೨
(ರುದ್ರದೇವರು)
ಬಾರೋ ಬ್ಯಾಗನೆ ಗಿರಿಜಾರಮಣನೆ ಪ
ನಾರದನುತ ಪಾದಾರವಿಂದ ತೋರಲು ಅ.ಪ
ಭಕುತರ ವೃಂದಕೆ ಭಕುತಿ ಮುಕುತಿಯಿತ್ತು
ಯುಕುತಿಲೆ ಪೊರೆಯುವ ಶಕುತಿಯ ತೋರಲು ೧
ಭೂಮಿಯೊಳಿಹ ಸರ್ವ ಪಾಮರ ಜನರಿಗೆ
ಕಾಮಿತಫಲವೆಲ್ಲ ಪ್ರೇಮದಿ ಈಯಲು ೨
ಮಡದಿಯ ನುಡಿಗೆ ನಿನ್ನಡಿಗೆ ಬಂದಂಥ
ಬಡವನ ಪೋದಂತೆ ತಡವ ಮಾಡದೆ ಈಗ ೩
ಶಿರಿವತ್ಸಾಂಕಿತನೆಂದು ವರಶ್ರುತಿಗಳು ನಿನ್ನ
ಕರೆದು ತ್ರಿಜಗದ ನರಪನೆ ಈಗಲೆ ೪

 

೮೧
ರಥಾರೂಢ ಮಾರುತ ವಂದಿತ ಯನ್ನಾ
ಪಥವ ತೋರೋ ಬೇಗ ಮುಂದಿನ
ಪಥವ ತೋರೋ ಬೇಗ ಪ
ಸತೀಸುತರುಗಳು ಅತಿಹಿತರೆಂಬುದು
ಮತಿಗಳ್ದು ಸದ್ಗತಿಯನು ಪಾಲಿಸು ಅ.ಪ.
ದೀನ ಜನರ ಸುರಧೇನುವೆ ನೀ ಬಂಧು
ಆನತ ಜನರನು ಮಾನದಿಂದ ಕಾಯೋ ೧
ಹನುಮ ಭೀಮ ಮಧ್ವ ಮುನಿನುತ ದೇವನೀ
ವನರುಹದಳನೇತ್ರ ಅನಿಮಿಷರೊಡೆಯ ೨
ದುಷ್ಟ ಜನರುಗಳರಿಷ್ಟಗೋಸುಗ
ಶಿಷ್ಟ್ಟಿಲಿ ಬಂದು ಸುಜನೇಷ್ಟಪ್ರದನಾದಿ ೩
ಶಿರಿವತ್ಸಾಂಕಿತ ನಿನ್ನ ಚರಣಕಮಲದಲ್ಲಿ
ನಿರುತ ಭಕುತಿಯಿತ್ತು ಪೊರಿಯುತ ಸರ್ವದಾ ೪

 

೮೨
ರಾಮ ರಕ್ಷಿಸೋ ಸೀತಾರಾಮ ಪಾಲಿಸೋ ಪ
ಕಾಮನ ಪಿತನಿಸ್ಸೀಮ ಸಾಹಸಗುಣಧಾಮ ಮ-
ಹಾತ್ಮ ಸುಧಾಮ ರಮಣನೆ ಅ.ಪ
ದಶರಥ ಪ್ರಥಮ ಪುತ್ರ ತ್ರ್ರಿದಶ ಸ್ತುತಿಗೆ ಪಾತ್ರ
ಕುಶÀಲವರು ನಿನ್ನ ಹಸು ಮಕ್ಕಳು ಪೂರ್ಣ
ಶಶಿಮುಖಿ ಸೀತೆ ನಿನ್ನ ವಶವಾದವಳು ೧
ಕೋಸಲಾಧಿಪನೊ ಹೇ ದೇವ ನೀ
ಕೌಸಲ್ಯ ಜಠರಜನೊ ಶೇಷನ ಪೂರ್ವಜ
ನಾಶರಹಿತ ಅಶೇಷ ಮುನಿಗಣಕೆ ತೋಷಪೂರಿತನಾದಿ ೨
ದುಷ್ಟರ ಸಂಹಾರ ಮಾಡಿದಿ ನೀ
ಶಿಷ್ಟರ ಉದ್ಧಾರ ಸೃಷ್ಟಿಯೊಳಗೆ ಲೇಶ
ಕಷ್ಟವಿಲ್ಲದೆ ನೀನು ಸುಷ್ಟು ಮಾಡಿ ಅಖಿಳೇಷ್ಟ ಪ್ರದನಾದಿ ೩
ದೀನರಕ್ಷಕ ನೀನು ಮಹಾತ್ರಾಣಿ ಇಂದ್ರನ
ಸೂನು ವಾನರಾಧಿಪಹನು
ಮನಮಾತನು ಮಾನಿಸಿದಿಯೊ ನೀನು ೪
ದೇವಶ್ರೇಷ್ಠ ನೀನು ಉದ್ಧರಿಸಿದಿ
ಮಾವ ಜನಕನನ್ನು ಕಾವಲಾಗಿರು ಯನಗಾವಾಗ್ಯನು
ಶ್ರೀವತ್ಸಾಂಕಿತ ವೆಂಕಟಪತಿಯೆ ೫

 

೮೩
ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ
ಧರೆಯೊಳು ನಾ ಬಂದು ಥರಥರದಲ್ಲಿ ನೊಂದು
ಮರುಗಿದೆ ತೋರ್ನಿನ್ನ ಚರಣಕಮಲವಾ ೧
ಅನ್ಯನೆಂದರಿಯದೆ ನಿನ್ನವನೆಂದೆನ್ನ
ಮನ್ನಿಸಿ ಈಗಲೇ ಬನ್ನ ಬಿಡಿಸು ಬಾರೋ ೨
ಶ್ರೀವತ್ಸಾಂಕಿತ ನೀನು ಶರಣಾಗತ ನಾನು
ಪೊರೆಯದೆ ಬಿಡುವದು ಥರವಲ್ಲ ಶ್ರೀಹರಿ
ಸರಸಿಜನಯನ ಬ್ಯಾಗ ಬಾರೊ ನಿನ್ನ ೩

 

೮೫
ಸರಸಿಜನಯನಾ ಹೇ ಶ್ರೀನಿವಾಸ ಪ
ಸರಸಿಜಭವಪಿತ ಸರಸಿಜಾಕ್ಷಿಧವ
ಉರಗಶಯನ ನೀ ಉರಗಭೂಷಣವಂದ್ಯ ಅ.ಪ
ಮೂರುಲೋಕದೊಡೆಯನಾದವ ನೀನು
ತೋರೋ ನಿನ್ನ ಮಹಿಮೆಯಾ
ಗಾರುಗೊಂಡಿಹೆ ಪಾರವಾರದೊಳು
ತೋರಿ ನಿನ್ನಯ ಪದ ಸೇರಿಸುತಿರವ ೧
ಬಾಲಕನ ಕಲಭಾಷೆಯ ಮಾತೆಯು ಬೇಗ
ಲಾಲಿಸುವ ತೆರದಿ ಪಾಲಿಸೆನ್ನಾ ಶ್ರೀಲಲಾಮ ನೀ
ಕುಲಲಾವರದನಾದಿ ನೀಲಮೇಘಶ್ಯಾಮಾ ೨
ದಾನವಾಂತಕ ನೀನು ಶಿರಿವತ್ಸಾಂಕಿತ
ದೀನಜನರ ಸುರಧೇನು
ಏನು ತಪ್ಪಿದ್ದರೂ ನೀನು ಕ್ಷಮಿಸು ಇಂದು
ದೇನುವರರ್ಪಿಸಿದಿ ಪ್ರಾಣೇ±ವಂದಿತ ೩

 

೮೬
ಸಲಹದೆ ಬಿಡಲಾರೆ ನಿನ್ನ ಪಾದ ಸಲಹವೆ ಬಿಡಲಾರೆ
ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ
ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ
ಸಂದೇಹವಿಲ್ಲದೆ ಬಂದು ಪೊರೆದ ಮುಕುಂದ ನಿನ್ನಯ ಪಾದ ೧
ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ
ದಾರಿದ್ರ್ಯಭಯವನ್ನು ದೂರ ಓಡಿಸಿದಂಥ ಮಾರಮಣನಾ ಪಾದ ೨
ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು
ಕಮಲಾಕ್ಷ ನಿನ್ನಯ ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು ೩
ಆರು ವೈರಿಗಳು ಮಿತಿಮೀರಿರುವರು ಕೇಳು
ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು ೪
ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು
ಶಿರವತ್ಸಾಂಕಿತನಾದ ನರಸಖ ನಿನ್ನಯ ಕರುಣವ ಬೀರು ೫

 

೮೭
ಸ್ಮರಿಸುವೆ ಹರಿಯನು ದುರಿತವ ಕಳಿವನು ಪ
ಮರಿಯಾನು ಭಕುತರ ಜರಿವನು ದುರುಳರ
ಪೊರೆವನು ಸುಜನರ ಭರದಿಂದ ಶಿರಿವರ ೧
ಕರಿರಾಜಾನೀತನ ಕರಿಯಲು ಆ ಕ್ಷಣ ತ್ವರಿತಾದಿ ಈ ಜಾಣ
ಪೊರೆದನು ಬಲು ಘನಾ ೨
ಕರುಣಾಳು ಈತನು ಸುರರೊಳು
ಮರಿಯಾನು ನಮ್ಮನು ಶ್ರೀವತ್ಸಾಂಕಿತನು ೩

 

ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ
೬೯
ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ ಎಲ್ಲವೂ ಸುಳ್ಳೆಂಬ
ಖುಲ್ಲ ಜನರುಗಳಿಗಿಲ್ಲಿಲ್ಲ ಪ
ಸತಿಸುತರುಗಳೆಲ್ಲ ಅತಿಹಿತರೆನ್ನುತ
ರತಿಪತಿಪಿತನ ಮರೆತು ಇಪ್ಪ ಜನರಿಗೆ ೧
ಮಿಗಿಲಾದ ಮಹಿಮೆಯ ಜಗದೊಳು ತೋರುವ
ಅಗಣಿತ ಮಹಿಮಗೆ ಸೊಗಸದ ಜನರಿಗೆ ೨
ಶರಧಿಶಯನನಾದ ಶ್ರೀವತ್ಸಾಂಕಿತನನ್ನು
ಮರೆತು ಮರಳುಗೊಂಡು ಕರಗಿ ಕುಂದುವ ಜನರಿಗಿಲ್ಲಿಲ್ಲ ೩

 

ಹಾಡಿನ ಹೆಸರು :ಇಲ್ಲಿಲ್ಲ ಸ್ವಾಮಿ ಅಲ್ಲಿಲ್ಲ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಖರಹರಪ್ರಿಯ
ತಾಳ :ಚತುರಶ್ರ ಏಕ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು : ಮನೋರಂಜನ್ ಪ್ರಭಾಕರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ