Categories
ರಚನೆಗಳು

ಹನುಮೇಶವಿಠಲ

೨೪೮
(ಆ) ಶ್ರೀ ಹರಿಯ ಸ್ತುತಿ
ಆಗದಿರುವಂಥ ಕೃತಿ ಆಗಿ ಹೋಗುವುದು
ಜಗದೀಶನಾಕೃತಿಯು ಅಗಾಧವಿಹುದೈಯ್ಯ ಪ
ಮಂದರೋದ್ಧರನಾಜ್ಞೆಯಿಂದ ಬ್ರಹ್ಮನು ತಾನು
ಇಂದಿಗೆ ಸೃಷ್ಟಿ ಮಾಡುವುದಿಲ್ಲವೇನು
ಇಂದೀವರಾಕ್ಷ ಮುಕುಂದನ ದಯದೀ
ಪಾಂಡುನಂದನನು ಅಶ್ವಮೇಧವ ಮಾಡಲಿಲ್ಲೇ ೧
ಹರಿಯ ಕೃಪೆಯಿಂದಲಿ ವರದಂಜನೇಯ ಸುತನು
ಗುರು ರಾಮನಾ ಸತಿಯ ಅರಸುವುದಕ್ಕಾಗಿ
ಪರಮ ದುರ್ಲಭವಾದ ಶರಧಿಯನು ಹರುಷದಲಿ
ಸಿರಿನಾಮ ಸ್ಮರಿಸಿ ಹಾರಲಿಲ್ಲೇನೋ೨
ಧನಭೂಮಿ ಕನ್ಯಾಗ್ರಹದಾನ ಕೊಡಲದಕೆ ಹರಿ
ಅನುಕೂಲವಾದಷ್ಟೇ ಫಲಕೊಡುವನು
ಮನವನೊಪ್ಪಿಸಿ ಗತಿ ಎಂದು ನೆನೆದವರಿಗೆ
ಘನ ಮುಕ್ತಿಯನು ಕೊಡುವ  ೩

 

೩೦೫
ಆರು ಪೇಳಿದರೊ ಜೀವಾ ನಿನಗಾರು ಪೇಳಿದರೋ ಪ
ಆರು ಪೇಳಿದರೋ ಈ ಸೋರುವ ಮನೆಯೊಳು
ಇರುವುದು ಒಳಿತಲ್ಲಾ ತೆರಳುವುದುಚಿತನೇ ಅ.ಪ.
ದುಷ್ಟರಿರುವರೋ ಈ ಗ್ರಹದೊಳು
ಕಟ್ಟಿ ಸುಲಿಯುವರೋ
ಇಟ್ಟಿದ್ದ ಅನ್ನದಿ ಕೆಟ್ಟ ಕ್ರಿಮಿಗಳುಂಟು
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬಿದೋ ಅಲ್ಲಿ ೧
ಛಾಯಾವೂ ಇಲ್ಲಾ ಈ ಮನೆಯೊಳು
ದಾಯಾವೂ ಇಲ್ಲಾ ಬಾಯ ಬಿಡಿಸುವರೋ
ಅನ್ಯಾಯ ಮಾಡುವರೋ ಉಪಾಯದಿಂದಲಿ ಬಿಟ್ಟು
ಹಯವದನನ ಶೇರೋ ೨
ತರುಣರಿರುವರೋ ಈ ಮನೆಯೊಳು
ಮರುಳು ಮಾಡುವರೋ
ಪರುಮ ಹರುಷ ನಮ್ಮ ಹನುಮೇಶ ವಿಠಲನ
ನೆರೆ ನಂಬಿ ಸ್ಮರಿಸುವ ಸ್ಥಿರ ಪದವನು ಸೇರೊ ೩

 

೩೦೬
ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ
ಮಕ್ಕಳಿಲ್ಲದ ಮನೆಯು ಅರಮನೆ ಆದರೇನು
ತಕ್ಕ ದಾನವ ಕೊಡದ ಧನವಿದ್ದರೇನು
ದುಃಖ ಸುಖಗಳನು ಕೇಳದ ನೆಂಟರಿದ್ದರೇನು
ಅಕ್ಕರದಿ ತಾನೊಬ್ಬ ಉಂಡರಾಗುವುದೇನು ೧
ನರಜನ್ಮ ದೊರೆತಾಗ ಹರಿಯ ನೆನೆಯದಿರೇನು
ಪರಮ ಪಾತಕಿ ಆಗಿ ಬಾಳಿದ್ದರೇನು
ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು
ಕರುಣರಹಿತನು ತಾನು ಅರಸಾದರೇನು ೨
ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು
ಸೋತು ನಡೆಯದ ಬಂಟತನವಿದ್ದರೇನು
ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು
ಹೋತಿನ ಕೊರಳೊಳಗೆ ಮೊಲೆ ಇದ್ದರೇನು ೩
ವೇದವನೋದದಾ ವಿಪ್ರನಾದರು ತಾನು
ದ್ವಾದಶಿ ನಾಮವನು ಬಡಕೊಂಡರೇನು
ಹಾದರಕೆ ಮೆಚ್ಚಿದಾ ಚಲ್ವೆ ಆದರೇನು
ಆದಿ ತಿಳಿಯದೆ ಬೂದಿ ಬಡಕೊಂಡರೇನು ೪
ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು
ಕೊರಳ ಕೊಯಿದವನ ಧನ ಸೆಳೆದರೇನು
ವರದ ಹನುಮೇಶ ವಿಠಲನಂಘ್ರಿಗಳ ನುತಾ
ಸ್ಮರಿಸದಲೇ ನೂರೊರುಷ ಬಾಳಿದರೇನು ೫

 

ಶ್ರೀ ಸತ್ಯಧೀರರಿಂದ ಆಶ್ರಮವನ್ನು
೨೭೮
ಶ್ರೀ ಸತ್ಯಜ್ಞಾನರು
ಎಂಥಾದು ನಮ್ಮ ಗುರುಗಳ ಪಾದ ಕಂತುಪಿತನ ದಿವ್ಯಪಾದಾ
ಅಂತಕನ ಭಯ ಬಿಡಿಸುವಾ ಪಾದ ಸಂತೋಷವ
ಕೊಡುವಂಥ ಪಾದಾ ಪ
ಬೇಡಿದ ವರ ನೀಡಿದಾ ಪಾದ ಮೂಢಮತಿಯನ್ನು
ಬಿಡಿಸುವ ಪಾದಾ
ಬ್ಯಾಡಾದವರಲ್ಲಿ ಮುರಿಯುವ ಪಾದಾ ಪೊಡವಿಯ
ಪಾವನ ಮಾಡ್ವ ಪಾದಾ ೧
ನಿತ್ಯ ಸುಖವನ್ನು ಕೊಡಿಸುವ ಪಾದಾ ಮಿಥ್ಯಾಸುಖವನ್ನು
ಬಿಡಿಸುವ ಪಾದಾ
ಭಕ್ತ ಜನರಿಗೆ ಭಾಗ್ಯದ ಪಾದಾ ಸತ್ಯಜ್ಞಾನಾನಂದರ ದಿವ್ಯ ಪಾದಾ ೨
ಧೀರ ನ ಪಾದಾ ಅರ್ಚಿಸಲು
ತುಳಸಿಯ ತಂದ ಪಾದಾ
ಜರಿದು ಷಡ್ವೈರಿಗಳ ಗೆದ್ದ ಪಾದಾ ಪರಮ ಮಂಗಳಕರವಾದ ಪಾದಾ ೩

 

೨೬೪
ಶ್ರೀ ರಾಘವೇಂದ್ರರು
ಎಲ್ಲಿರುವೆ ತಂದೆ ಬಾರೊ ಗುರುರಾಯನೆ ಪ
ಬಳಲುವೆ ಭವದಿ ತಳಮಳಿಸುವೆನೊ
ಕಳವಳಿಕೆಯ ಬಿಡಿಸೊ ಗುರುರಾಯನೆ ೧
ತಡ ನೀ ಮಾಡಲು ತಡೆಯದಾಗದೋ
ಗಡ ಬಾ ಇಡು ದಯವಾ ೨
ಸಕಲರಲ್ಲಿ ವ್ಯಾಪಕನೆಂದ್ಹರಿಯನು
ಪ್ರಕಟಿಸಿದಿ ಜಗದಿ ೩
ಹರಿನಾಮವು ಸರ್ವತಾರಕವೆಂಬÉೂೀದು
ಮೆರಸಿದಿ ಧರೆಯೊಳಗೆ ೪
ಧೀರನಾದ ಹನುಮೇಶ ವಿಠಲನಾ
ಧ್ಯಾನದಿ ಮನ ನಿಲ್ಲಿಸೋ ೫

 

೨೫೯
ದೇವತಾ ಸ್ತುತಿ
ಕಂತುಪಿತನ ಸತಿಯಳೆ ನೀ ಸಂತೈಸನುದಿನಾ ಪ
ಜಗವ ಉದರದಿ ಧರಿಸಿದ ಜಗದೀಶನ ಗುಣರೂಪತ್ರಯಗಳ
ಸ್ತುತಿಸುವಳೆ ಅ.ಪ.
ನಾಶರಹಿತ ಶ್ರೀ ಹನುಮೇಶ ವಿಠಲನನುದಿನಾ
ಸೋಸಿಲಿ ನೂತನ ಗುಣಗಳ
ಬೇಸರಿಯದೆ ಸ್ತುತಿಸಿದ ಸಂ-
ತೋಷ ಪಡುವ ವರಲಕುಮಿಯೇ ೧

 

೨೮೪
(ಉ) ಆತ್ಮನಿವೇದನೆ
ಕರುಣಿಸಯ್ಯ ರಘುವೀರನೆ ಸೇವಕ ನಾ ದೂರದಿ
ನೋಡದೆ ತ್ವರದಿ ಪ
ಹೆಂಡತಿ ಮಕ್ಕಳ ಭ್ರಾಂತಿಯೊಳನ್ಯರ ದಂಡಿಸಿ ಧನವ ಹರಿಸಿದೆನೋ
ಭಂಡತನದಲಿ ಪ್ರಚಂಡನಾದೆನೋ ಹರಿ ಪುಂಡರೀಕಾಕ್ಷನೇ ೧
ಕಾಮನ ಬಾಧೆಯಿಂ ಕಾಮಿನಿಯರ ಕೂಡಿ ತಾಮಸನಾಗಿ
ನಾ ದಿನಗಳೆದೆ
ಹೇ ಮಹಾಭಾವನೇ ಪಾಮರನಾದೆ ಎನ್ನ ನೀ ಮಮತೆಯಿಂದಲಿ ೨
ಅಟ್ಟಮೇಲೆ ಒಲೆ ನೆಟ್ಟಗುರಿವಂದದಿ ಕೆಟ್ಟ ಮೇಲೆಚ್ಚರ ಹುಟ್ಟಿತೆನಗೆ
ಮುಟ್ಟಿ ಭಜಿಪೆ ದಯವಿಟ್ಟು ಕಾಯೋ
ನೀ ದಯದಿ ೩

 

೨೭೯
ಕರುಣಿಸಿಕೊಡು ಜೀಯಾ ಹರಿವಾಯುಗಳಲಿ
ದೃಢತರದ ಭಕುತಿಯಾ
ತವದ್ವಾರದಿಂದಲಿ ದೊರಕುವುದು ನಿಶ್ಚಯಾ ತರಿ ಎನ್ನ ಮಾಯಾ
ಪರಿಹರಿಸೋ ಈ ಭವತಾಪವ ಪರಿಹರಿಸದಲೇ ಭರದಿ ಬಂದೆನು
ಪರಮ ಪಾವನ ಸತ್ಯಜ್ಞಾನ ಶ್ರೀ ಗುರುವರನೇ ತವ ಚರಣಕೆರಗುವೆ ಪ
ಮಂದಭಾಗ್ಯನು ನಾನು ವ್ರತನೇಮ
ಕರ್ಮಗಳೊಂದು ನಾನರಿಯೇ
ಮುಂದಿನ ಪಥವನು ತೋರ್ವ ತಂದೆಯು ನೀನು
ನಿನ್ನಯ ಪಾಲಿಗೆ
ಬಂದ ದಾಸನು ನಾನು ಪಾಲಿಸುವುದಿನ್ನು ಇಂದು ತವ
ಚರಣಗಳ ದ್ವಂದ್ವಕೆ
ವಂದಿಸುವೆ ದಯಾಸಿಂಧು ಎನ್ನನು ಸಂದೇಹ
ಮಾಡದಲೆ ಸಲಹೋ
ಆನಂದತೀರ್ಥರ ಪೀಠಪೂಜನೇ ೧
ಭ್ರಷ್ಟನಾದವ ನಾನು ಸೃಷ್ಟಿಸಿದ ಹರಿಯನು ಮರೆತು ದಿನಗಳೆದನು
ಪೊಟ್ಟೆಗೋಸುಗ ದುಷ್ಟರಿಗೆ ಬೇಡ್ದೆನು ಕಂಗೆಟ್ಟು
ಪಡ್ಡೆರಧೊಟ್ಟಿ(ಪಡ್ಡೆರದು+ಹೊಟ್ಟಿ) ಹೊರಕೊಂಡೆನು
ಪಾಪಿಷ್ಟ ನಾನು ಇಷ್ಟದಾಯಕ ಮುಟ್ಟಿ ಭಜಿಸುವೆ
ಸುದೃಷ್ಟಿಯಲಿ ನೋಡಿ ಎನ್ನಯ ಕೆಟ್ಟ ಮನವನು ಕಳೆದು ಜ್ಞಾನದ
ದೃಷ್ಟಿ ಕೊಡುವುದು ಶ್ರೇಷ್ಠ ಮಹಿಮನೆ ೨
ದಾನಧರ್ಮಗಳನ್ನು ಈ ಕರಗಳಿಂದಲಿ ಮಾಡಲಿಲ್ಲವೊ ನಾನು
ನ ಸ್ಮರಣೆ ಎಂಬುವುದನ್ನು
ಧನವನಿತೆಸುತರಾ ಮೋಹದೊಳು ಮರೆತೆನು ಗುರುವರನೆ ನೀನು
ಜ್ಞಾನವಿಲ್ಲದ ದೀನದಾಸನ ಹೀನಗುಣ ಎಣಿಸದಲೆ ಪಾಲಿಸೊ
ದೀನಜನ ಮಂದಾರನಿಲಯನೆ ಕಾಮಿತಾರ್ಥವನೀವ ದಾತನೇ ೩

 

೩೦೮
ಕಲಿರಾಯ ಬಂದಿಹ ಕಲಿಯುಗದೊಳಗೆ ಬಲಿ ತೋರುವೆನೆನುತಲಿ ಪ
ಯುಗತ್ರಯದಿ ಬಗೆ ಬಗೆ ಕಷ್ಯವ ಪಡುತಾ ಕೋ
ಡಗನಂದದಿ ತನ್ಹ್ನಾಗೆಗಳಾ ಜೈಸದೆ ಅಡವಿಯೊಳಿರುತಾ
ಯುಗ ನಾಲ್ಕವು ಬರಲು ಜಿಗಿಯುತ ಪಲ್ಗಳ ತೆಗೆಯುತ ತನ್ನಯ
ಅಗಣಿತ ಮಹಿಮೆಯ ತೋರುವೆನೆನುತಲಿ ೧
ಸತ್ಯ ಸೇರಿತು ಸತ್ಯಲೋಕವನು ನಿತ್ಯಕರ್ಮವು ತಾ
ಹತ್ತಿತು ಸೂರ್ಯನ ವರ ರಥವನ್ನು
ದೈತ್ಯನಾರ್ಭಟಕೆ ಶಾಸ್ತ್ರ ಹಾರಿ ಅಂತರದಲಿ ನೀಂತಿತು
ಉತ್ತವು ಕ್ಷಾರಾಣವೃತಪ್ಪಾಯಿತು (?) ೨
ಸ್ನಾನವು ಮನಿಯಲಿ ಅಡಗೀತು
ಮೌನ ಜಪ ತಪಗಳು ಹಾನಿಯಾದವು
ಕಾನನದೋಳು ನಿಂತು ಅನುಮಾನವು ಹೆಚ್ಚಿತು
ದೀನನಾಥಮ್ಮಾ ನ ೩

 

೨೪೪
(ಅ) ಶ್ರೀ ಗಣೇಶ
ಕಾತ್ಯಾಯನಿ ವರಸುತನೇ ಸತತ ಶುಭದಾಯಕನೇ
ಮಂಗಳವನು ಕೊಡು ನಮಿಸುವೆನೊ ನಾನು ಪ
ಸಿದ್ಧಿವಿನಾಯಕ ವಿದ್ಯಾಪ್ರದಾಯಕ
ಸದ್ಬುದ್ಧಿಯ ಕೊಡೋ ಹರನ ಮುದ್ದುತನಯನೆ ೧
ಮೂಷಕವಾಹನನೇ ದೋಷವಿದೂರನೇ
ಶ್ರೀಶ ಹನುಮೇಶ ವಿಠಲೋಪಾಸಕನೇ ೨
ಗೌರೀಸುತ ಗಜಾನನಾ ನಮೋ ನಮೋ
ಪಾರ್ವತೀ ಪತಿಯ ಪ್ರಾಣಪದಕನೇ ನಮೊ ೩
ಏಕದಂತಾನೇಕ ಚರಿತನೇ ನಮೋ
ನೀ ಕೃಪಾದಿ ನೋಡೋ ವಕ್ರತುಂಡನೆ ನಮೋ ೪
ಬಟ್ಟಮುತ್ತಿನ್ಹಾರ ಪದಕಧಾರನೇ ನಮೋ
ಧಿಟ್ಟ ಶ್ರೀ  ಪ್ರಿಯನೇ ನಮೋ ೫

 

೨೮೫
ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ಪ
ನಾಳೆಯೆಂದರೆ ತಾಳೊದಾಗೋದು ಭಾಳ್ಹೆಳೆಂದಿಲ್ಲಾ
ಆಳೋ ಅರಸನೇ ಅ.ಪ.
ಗಾಣ ಎಳೆಯುವ ಕ್ವಾಣನಾದೆನೋ ಕಾಣವೋ ನಯನಾ
ತ್ರಾಣ ಕಡಿಯಿತು ಗೋಣು ನಿನಗೆ ನಾ ಕಾಣಿ ಕೆಯಿನಿತ್ತೆ
ವೇಣುಗೋಪಾಲ ೧
ತಾಯಿಯ ಮತಿ ಬೇರೆ ಮಾಯಾ ಮಗನಿಗೆ ನಾಯನಾಗಿರುವೆ
ಘಾಯದ ಮೇಲೆ ನೋಯಿಸುವರಯ್ಯಾ ಮಾಯಾ ಬಿಡಿಸಿ
ಕಾಯೋ ನರಹರಿ ೨
ಬೇಡುವರು ಧನ ಕಾಡಿ ಎನ್ನನು ನೋಡು ಫಣಿಶಯನಾ
ರೂಢಿಯೊಳು ಕುಣಿದಾಡುತಿಹರಯ್ಯಾ
ನಾಡಿಗೊಡೆಯಾ ಕೈ ಜೋಡಿಸುವೆನಯ್ಯಾ ೩
ಬೇಗ ತವದಾಸನಾಗಿ ಮಾಡಿಕೋ ಸಾಗರಶಯನಾ
ಈಗ ಭವಭಯ ನೀಗಿಸೈಯ್ಯ ಕೈ ಸಾಗದಾಯಿತು ಭಾಗವತಪ್ರಿಯಾ ೪
ಆಶಾ ಬಿಡಿಸಿ ನೀ ಲೇಸು ಕೊಡು ನೇ
ಘಾಸಿಯಾದೆನು ಪೋಷಿಸಯ್ಯ ರಮೃಶ ಪಂಢರಿವಾಸ ವಿಠಲ ೫

 

೨೮೬
ಕೊಡಿಸೊ ಅಂಕಿತವಾ ಗುರುರಾಯಾ ನಿನ್ನ
ಅಡಿಗಡಿಗೆರಗಿ ನಾ ಬೇಡುವೆನಯ್ಯಾ ಪ
ಕರುಣಾಸಾಗರನೆಂದು ಬಂದೆ ನಿನ್ನ ಚರಣವ ನಂಬಿ
ನಾ ಶರಣೆಂಬೆ ತಂದೆ
ಮರಿಯದೆ ಬಹು ತ್ವರದಿಂದೆ ನಿನ್ನಾ
ದರುಶನ ನುಡಿಯ ಪಾಲಿಸೋದಯದಿಂದ ೧
ಕಡುಭಕ್ತಿಯಿಂದ ನಾ ಬೇಡಿಕೊಂಬೆ ಕೊಡುವ ಕರ್ತನು
ಎಂದು ಬಿಡದಲೇ ಕಾಡಿ
ಕಡೆಹಾಯಿಸದೆನ್ನನು ನೋಡಿ ಕೈಬಿಡಬ್ಯಾಡೊ ಕರುಣಿಸೋ
ನೀ ದಯ ಮಾಡಿ ೨
ಕೊಡು ದಿವ್ಯ ಭಕುತಿ ವೈರಾಗ್ಯ ನಿನ್ನ ಅಡಿಗಳ ಸಾಕ್ಷಿ ನಾ
ಬೇಡ್ವೆ ಈ ಭಾಗ್ಯ
ಕಡೆಸೊ ಅಜ್ಞಾನವ ಯೋಚಿಸಿ ಕಷ್ಟ ಬಡಿಸಿ ಸುಮ್ಮನೆ
ನೋಡುವದೇನೊ ಯೋಗಿ ೩
ದುಷ್ಟ ಪಾಪಿಷ್ಟನು ನಾನು ಅದನಷ್ಟು ಕ್ಷಮಿಸಿ
ಇಷ್ಟಾ ಪೂರೈಸೋ ನೀನು
ಇಷ್ಟಕೆ ದಯಬಾರದೇನೋ ದಯಾದೃಷ್ಟಿಯಿಂದಲಿ
ನೋಡೊ ಸುರ ಕಾಮಧೇನು ೪
ಇಂದು ಇದ್ದವ ನಾಳೆಗಿಲ್ಲ ಇನ್ನು ಮುಂದೆ ಸಿಗುವುದು
ಅಂತರ್ಯಾಮಿ ಬಲ್ಲ
ನ ಬಾಲಾ ನೀನು ಇಂದೆ
ಇತ್ತರೆ ನಿನ್ನ ಕೇಳ್ವರಿಲ್ಲಾ ೫

 

ಮಲಗಿ ಪಾಡೆ ಮುರಲೀಧರನು
೨೪೯
ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ
ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ
ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ
ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ ೧
ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ
ನೀಲಮೇಘ ಲಕುಮೀಲೋಲನಾ ವಿಶಾಲನಾ ೨
ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ
ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ ೩
ಆನಂದನಾ ದಯಾವೃಂದನಾ ಮುಕುಂದನಾ
ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ ೪
ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ
ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ ೫

 

೨೬೦
ಗುರು ಪವಮಾನಾ ಪೊರೆವುದು ಎನ್ನನು ನೀ ತ್ವರಾ ಪ
ಸತ್ವರಿಗೆ ಸುಖ ಮಿತ್ರರಾಜಿಗ ಸಗ್ಗ
ದುಃಖ ತಾಮಸರಿಗೆ ಈವ ಅ.ಪ.
ಮೂರುವಿಧ ಜೀವರೊಳು ಬ್ರಹ್ಮಕಲ್ಪ ಪರಿಯಂತರ
ವರ ನ ಚರಣದುಪಾಸನೆಯ ಮಾಡ್ವ ೧

 

೨೬೫
ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ ಪ
ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ ೧
ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ೨
ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶ ವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ ೩

 

೨೮೨
ಗುರು ಸತ್ಯಜ್ಞಾನರ ಚರಣ ದರುಶನದಿ
ನೂರಾರು ಜನ್ಮ ಪಾವನವಾಯಿತು ಮುದದಿ ಪ
ಗುರುಗಳುಪದೇಶದಿಂ ಪರಮ ಪಾವನನಾದೆ
ನರಹರಿಯ ಭಜಿಸುವ ಅಧಿಕಾರಿಯಾದೆ
ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ
ನಿರುತದಲಿ ಮಾಡುವುದಕರ್ಹನಾದೆ ೧
ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ
ಗುರುಗಳುಪದೇಶವಿಲ್ಲದ ಜ್ಞಾನವು
ಗುರುಗಳುಪದೇಶವಿಲ್ಲದ ಕರ್ಮಕವನಗಳು
ಉರಗವಾಸದಂತೆ ಕಾಣಯ್ಯ ೨
ಅಂಕಿತವಿಲ್ಲದಾ ಪದ್ಯಗಳು ಶೋಭಿಸವು
ಅಂಕಿತವು ಇಲ್ಲದಿರಬಾರದೆನುತಾ
ಪಂಕಜನಾಭ ಹನುಮೇಶ ವಿಠಲನೆಂಬೊ
ಅಂಕಿತವನಿತ್ತಾ ಗುರುವು ಮಾಡಿ ಮಮತಾ ೩

 

೨೬೬
ಗುರುರಾಜನೇ ಎನ್ನ ಪರಿಪಾಲಿಪುದ ಬಿಟ್ಟು
ವರ ಮಂತ್ರಾಲಯದೊಳಿರುವುದುಚಿತವೇನೋ ಪ
ಬಡ ಭಕ್ತನನು ಕಷ್ಟ ಕಡಲೊಳಿರಿಸಿ ತುಂಗಾ
ದಡದಿನಿಂತೆನ್ನ ಕೈ ಬಿಡುವುದುಚಿತವೇನೋ ೧
ಅಡಿ ಸೇವಕನೊಳಿಂಥಾ ಕಡು ಕೋಪವ್ಯಾತಕೋ
ನುಡಿ ನುಡಿಗೆನ್ನ ತಪ್ಪು ಹಿಡಿದು ಪೋಗುವರೇನೊ ೨
ಒಡೆಯ ಶ್ರೀ ನ ದಾಸನೇ
ಬಡವನಿರುವೆನೆಂದು ನೋಡದಿರುವರೇನೊ ೩

 

೨೮೭
ಗುರುರಾಯ ಪಾಲಿಸುವುದು ನೀ ಎನ್ನ ಪ
ಅನ್ಯರೊಬ್ಬರನಾ ನಾ ಕಾಣೆ ಮನ್ನಿಸಿ ಸಲಹುವರನಾ
ನಿನ್ನವನೊ ನಾನು ಅನುದಿನದಲಿ ನಿನ್ನ ನೆನೆದು
ನೆನೆದು ಇಂದಿನವರೆಗೆ ನಾ ದಿನಗಳೆದೆನೋ ಅ.ಪ.
ಇಷ್ಟುದಿನ ಪಟ್ಟ ಕಷ್ಟವು ಸಾಕೋ ಇಷ್ಟಕೆ ನೀ ದಯಾದೃಷ್ಟಿ
ಇಟ್ಟು ಜ್ಞಾನವ ಕೊಡಬೇಕೊ
ಕಪಟ ಬುದ್ಧಿಯನಷ್ಟು ಕಳೆದಿಷ್ಟವ ಪೂರೈಸಬೇಕೊ ಬಿಟ್ಟವನಲೊ ್ಲನಾ
ಕೊಟ್ಟವರು ಪರಿಕರ ಬಿಟ್ಟವರು ಸರಿ ನಾ
ಕಟ್ಟಿಕೊಳ್ವೆ ತವ ಚರಣವ ಕೊರಳಿಗೆ ೧
ಇಷ್ಟದಾಯಕನೆಂಬುವ ತವ ಬಿರುದು ನಾನೆಷ್ಟು ಪೇಳಲಿ
ಅಷ್ಟದಿಕ್ಕುಗಳಿಗೆ ಪರಿಹರಿಸಿಹುದೊ
ಇಷ್ಟೆಲ್ಲ ಕೇಳಿ ನಾ ಇಟ್ಟೆ ಮನವನು ತವ ಪಾದದಿ ತಿಳಿದು
ಸಂತುಷ್ಟನೆ ಎನ್ನ ಬಿಟ್ಟರೆ ಮುಂದಿನ ಬಟ್ಟೆಯ ಕಾಣದೇ
ಕೆಟ್ಟು ನಾ ಮೂರಾಬಟ್ಟೆಯಾಗುವೆನೋ ೨
ಶ್ರೇಷ್ಠ ನದಾಸಾ ದುಷ್ಟ ನಾನೆಂದರೆ ಸಿಟ್ಟಿನಿಂದಲಿ
ತವ ಪಾದದಿ ತುಳಿದು
ಮೆಟ್ಟಿ ಎನ್ನ ಶಿರ ಥಟ್ಟನೆ ಭೂಮಿಯಲಿ ಕೆಡಹುವುದು
ಹುಟ್ಟಿದರೆ ದಯವು ಅಟ್ಟಿ ಅಜ್ಞಾನವ ಕಟ್ಟಿ ಸುಜ್ಞಾನವ
ಘಟ್ಟಿ ಭಕುತಿಯನು ಕೊಟ್ಟು ನೀ ಪಾಲಿಸೊ ೩

 

೨೫೦
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ
ದಶರಥಬಾಲಾ ಗಾನ ವಿಲೋಲಾ ನಿತ್ಯ ವಿಮಲಾ
ಬಹುಗುಣ ಶೀಲಾ ಪಾಹಿ ಕೃಪಾಲಾ೧
ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ
ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ ೨
ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ
ಗೋಕುಲವಾಸಾ ಭಕ್ತಪೋಷಾ ಶ್ರೀ ೩

 

ಈ ಹಾಡಿನಲ್ಲಿ ಸತ್ಯಬೋಧರ ಜೀವನದ
೨೭೬
ಜಯ ಮಂಗಳಂ ಸತ್ಯಧೀರತೀರ್ಥರಿಗೆ
ಶುಭಮಂಗಳಂ ಯತೀ ಗುಣಮಣಿಗೆ ಪ
ಜಗದುದರಧರನಾದ ಜಗವ ಸೃಷ್ಟಿಸಿದಂಥ
ಜಗವ ಪಾಲಿಸುವ ಶ್ರೀ ಜಗದೀಶನಾ
ತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವ
ರಘುವರನ ದಿವ್ಯ ಚರಣಗಳ ಸೇವಿಪಗೆ ೧
ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ-
ಲ್ಮೊಗನೈಯ್ಯ ಸರ್ವಪರಿಹಾರನೆನಿಸಿದವಗೆ
ಜಗದೊಳಿರುವ ಅಜ್ಞ ಜನರುಗಳಿಗೆ ಪಂಚಮು-
ದ್ರೆಗಳನೇ ಇತ್ತು ಪಾಪಗಳ ತರಿದವಗೆ ೨
ಸತ್ಯವೀರರು ಕರಗಳೆತ್ತಿ ಉತ್ತಮಪದವ
ಇತ್ತದ್ದೆ ಪುಸಿಯೆಂದು ನುಡಿದವರ ಮುಖಕೆ
ಮೃತ್ತಿಕೆಯನು ಹಚ್ಚಿ ಹತ್ತುಯಂಟೋ ರೂಪ ಸ-
ರ್ವೋತ್ತಮನ ಪೂಜಿಸಿದ ಸತ್ಯಧೀರರಿಗೆ ೩
ಪುರಕಾಶಿಯಿಂದ ರಾಮೇಶ್ವರದ ಪರಿಯಂತ
ಇರುವ ಕ್ಷೇತ್ರಗಳಲ್ಲಿಯ ಮಹಿಮೆಯಾ
ದುರುಳ ಕಲಿಯಲಿ ಕಡಿಮೆಯಾಗಬಾರದು ಮನುಜ
ಸಿರಿರಾಮನಾಶ್ರಯದಿ ಜನಿಸಿ ಬಂದವಗೆ ೪
ಕರುಣಾಸಾಗರನಿಗೆ ಕರೆದಲ್ಲಿ ಬರುವಗೆ
ಶರಣುಬಂದವರ ಪರಿಪಾಲಿಸುವಗೆ
ವರಗುರು ಮಧ್ವರಾಯರ ಪೀಠಪಾತ್ರಗೆ
ಧೀರ  ೫

 

೨೫೨
ದಾಸೋಹಂ ತವ ದಾಸೋಹಂ ದೋಷರಹಿತ
ಮಧ್ವೇಶ ವಿಠಲ ಪ
ಮಂಗಳಾಂಗ ಮಾತಂಗ ವರದ ಭುಜಂಗ ಶಯನ
ತವ ದಾಸೋಹಂ
ಗಂಗಾಪಿತ ಉತ್ತುಂಗ ಮಹಿಮ ನರಸಿಂಗ ಶುಭಾಂಗ
ಕೃಪಾಂಗರಂಗ ತವ ದಾಸೋಹಂ ೧
ತ್ರಿಗುಣಾತೀತನೆ ಅಗಣಿತ ಮಹಿಮನೆ ಜಗದೀಶನೆ
ತವದಾಸೋಹಂ
ಜಗದಂತರ್ಗತ ಜಗದೋದ್ಧಾರಕ ಜಗನ್ನಿಯಾಮಕ
ಜಗತ್ಪಾಲ ತವದಾಸೋಹಂ ೨
ಸಿಂಧುಶಯನ ಸೌಂದರ್ಯರೂಪ ಆನಂದ ಪೂರ್ಣ
ತವ ದಾಸೋಹಂ
ಇಂದಿರೇಶ ಸಿರಿ ಮಂದಿರ ಹರಿ ಗೋವಿಂದ ಉಪೇಂದ್ರ
ಮುಕುಂದಮೂರ್ತಿ ತವ ದಾಸೋಹಂ ೩
ಅನ್ನಮಯನೆ ಆನಂದಮಯನೇ ವಿಜ್ಞಾನಮಯನೇ ತವದಾಸೋಹಂ
ಮನೋಮಯನೇ ಮನ್ಮಥ ಜನಕನೆ ಪ್ರಾಣಮಯನೆ ಶ್ರೀ –
ವಾಜ್ಞಯನೇ ತವ ದಾಸೋಹಂ೪
ಶ್ರೀಶನೇ ಸರ್ವಮಹೀಶನೇ ವರ  ತವದಾಸೋಹಂ
ನಾಶರಹಿತ ರಮೇಶನೇ ಸುರಮುನಿ ಪೋಷಕನೇ
ಲಕುಮಿ ಉಲ್ಲಾಸನೇ ತವ ದಾಸೋಹಂ ೫

 

೨೬೧
ದುಷ್ಟ ರಕ್ಕಸರನು ಜಯಿಸಿದ ಪರಮವಾಯುಸುತಗೆ ಮಂಗಳಂ
ಪ್ರಾಣೇಶಗೆ ಮಂಗಳಂ ಪ
ಬೆಟ್ಟ ಪುಚ್ಛದಿ ತಂದಿಟ್ಟು ಸಂಜೀವನ
ಕೊಟ್ಟ ಶ್ರೀ ರಾಮನ ಭಕ್ತನಿಗೆ ಮಂಗಳಂ ೧
ಸಿಟ್ಟಿಲಿ ದುಶ್ಶಾಸನನ ಹೊಟ್ಟೆ ಬಿಗಿದು
ಇಷ್ಟ ಪೂರೈಸಿದ ಕೃಷ್ಣನ ದಾಸಗೆ ಮಂಗಳಂ ೨
ಹನುಮೇಶ ವಿಠಲನ ಪ್ರೀತಿಪಾತ್ರನೆಂದೆನಿಸಿದ
ಮುನಿವರ ಗುರು ಮಧ್ವರಾಯಗೆ ಮಂಗಳಂ ೩

 

೩೦೯
ಧ್ಯಾನಿಪರಿಗೆ ಅಪಮಾನ ಮೈದೋರಿತು
ಕೆಡಬ್ಯಾಡೆಲೊ ಪ್ರಾಣಿ ಕೆಡಬ್ಯಾಡಾ ನಮ್ಮ
ಕಡಲಶಯನನ ಭಜನೆ ಬಿಡಬ್ಯಾಡಾ ಪ
ಪರನಿಂದೆ ಮಾಡಿ ಕೆಡಬ್ಯಾಡಾ ನನ್ನ
ಸರಿಯಾರಿಲ್ಲೆಂದು ಮೆರೆಯ ಬ್ಯಾಡಾ
ಪರಹೀನತಾ ಮಾಡಿ ನೀ ಕೆಡಬ್ಯಾಡಾ ಶ್ರೀ
ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ ೧
ಪರದ್ರವ್ಯವನಪಹರಿಸಲಿ ಬ್ಯಾಡಾ ದಿವ್ಯ
ಪರಸತಿಯರ ಮೋಹಕ್ಕೊಳಗಾಗ ಬ್ಯಾಡಾ
ದುರಿತ ಕಾರ್ಯಕೆ ಮನಕೊಡಬ್ಯಾಡಾ ಒಳ್ಳೆ
ಪರ ಉಪಕಾರ ಮಾಡದೇ ಕೆಡಬ್ಯಾಡಾ ೨
ಮಾತಾಪಿತರ ಸೇವೆ ಬಿಡಬ್ಯಾಡಾ ಯಮ
ದೂತರಂದದಿ ಅವರನು ಕಾಡಬ್ಯಾಡಾ
ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ ನಿನ್ನ
ಸತಿಸಂತರಾಮೋಹಕ್ಕೊಳಗಾಗಬ್ಯಾಡಾ ೩
ದುಷ್ಟ ಮಾತುಗಳಾಡಬ್ಯಾಡಾ ನೀನು
ಕಳ್ಳರ ಸಹವಾಸ ಮಾಡಲಿ ಬ್ಯಾಡಾ
ಒಳ್ಳೆತನವ ಬಿಡಬ್ಯಾಡಾ ನಮ್ಮ
ಫುಲ್ಲನಾಭನ ದಾಸನಾಗದಿರಬ್ಯಾಡಾ ೪
ಸತ್ಯ ಮಾತಾಡದೇ ಕೆಡಬ್ಯಾಡಾ ಸರ್ವೋತ್ತಮ
ಹನುಮೇಶ ವಿಠಲನ ನಾಮಾ
ನಿತ್ಯ ಭಜಿಸಿ ಪಾದ ಬಿಡಬ್ಯಾಡಾ ಒಳ್ಳೆ
ಉತ್ತಮ ಪದಕೆ ವೈದಿಡುವನೋ ಮೂಢಾ ೫

 

೨೫೩
ನಂಬಲು ಕೆಟ್ಟವರು ಆರು ಜಗದೊಳು ಪ
ಹರಿ ನೀನೆ ಗತಿ ಎಂದು ಅರಿತ ಪ್ರಲ್ಹಾದನ
ದುರಿತವ ಭರದಲಿ ತರಿದ ಶ್ರೀಹರಿಯನು ೧
ಕುರು ಸಭೆಯೊಳು ನರಹರಿಯನು ಸ್ಮರಿಸಿದ
ತರುಣಿಯೊಳು ಕರುಣಿಸಿ ಪೊರೆದ ಶ್ರೀಧರನನ್ನು ೨
ಅನುದಿನದಲಿ ನಮ್ಮ ಹನುಮೇಶ ವಿಠಲನ
ನೆನೆದ್ವಾಲ್ಮೀಕನ ವಿಮೋಚನೆ ಮಾಡ್ದ ಶ್ರೀರಾಮನ ೩

 

೩೧೦
ನರಹರಿಯ ಗುಣ ಕೊಂಡಾಡುವುದೇ ಲೇಸು
ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ
ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ
ಒಳ್ಳೆಯವನೆನಿಸುವ ಬಡತನವೇ ಲೇಸು
ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ
ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು ೧
ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ
ಸಾಲಿಲ್ಲದ ಮನೆಯಲ್ಲಿಹುದೇ ಲೇಸು
ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ
ಲೋಲನಾ ಪಾದದಲ್ಲಿರುವುದೇ ಲೇಸು ೨
ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ
ತನ್ನವಳ ಕೂಡ ಬಡಿದಾಡುವುದೇ ಲೇಸು
ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ
ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು ೩
ತಾನು ಮಾಡಿದೆನೆಂಬುದಕಿಂತ ಹರಿಯ
ಆಧೀನವೆಂದರಿಯುವುದು ಪರಮ ಲೇಸು
ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ
ಜ್ಞಾನಿಯಾದವನ ಸಲಹುವುದೇ ಲೇಸು ೪
ದುಷ್ಟ ಮನುಜನು ಮಾಡುವ ಕೃಪೆಗಿಂತಲೂ
ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು
ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ
ವಿಠಲನ ಧ್ಯಾನದ ಸುಖವೇ ಲೇಸು ೫

 

೩೧೧
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ
ನರರಿಗೆ ಸ್ವತಂತ್ರ ಪ
ಗಳಿಸಿದ ಧನವು ನಳಿನಾಕ್ಷೀಯರಿಗೀವ
ಸೆಳೆದು ವಯ್ಯುವಾಗುಳೀವರಿಲ್ಲವೋ ೧
ನಾನು ನನ್ನದೆಂಬುವ ಈ ದೇಹವು
ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ ೨
ಜೀವವು ಕಾಯವ ತ್ಯಜಿಸಿ ಪೋಗುವಾ
ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ ೩
ಮಾಡಿದ ಧರ್ಮಾಕರ್ಮವೆಜೀವನ
ಕೂಡ ಮಂತ್ರ ಸಂಗಡ ಬಾಹುದು ೪
ದೋಷ ರಹಿತ ನೇ
ಈಶನೆಂದು ನಿಜ ದಾಸನಾಗೋ ಸ್ವತಂತ್ರ ೫

 

(ಉ) ಆತ್ಮನಿವೇದನೆ
೨೮೮
ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ
ಪಾಲಿಸಯ್ಯಾ ಪ
ದುರಿತ ಸಾಗರದಿ ಬಿದ್ದಿರುವೆ ನೀ ಮರೆಯದೆ ತ್ವರದಿ ದಾಟಿಸೋ
ಎನ್ನ ಜೀಯಾ ಅ.ಪ.
ಸ್ನಾನಕ್ಕೆ ಮೈಛಳಿಯಾಯ್ತೋ ಧ್ಯಾನಕ್ಕೆ ಮರುವಾಯ್ತೋ
ದಾನಕ್ಕೆ ಲೋಭ ಅಡ್ಡಾಯಿತೋ
ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ ೧
ಬಲೆಯ ಕಾಣದೇ ಮೃಗ ಫಲಮೆಲುವುದಕ್ಹೋಗಿ
ತಲೆ ಸಿಕ್ಕುತೊಳಲುವ ತೆರದಿ
ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು
ಬಿದ್ದೆನೊ ಭರದಿ ೨
ನರನಾದ ಕುರಿ ನಾನು ಪೊರೆಯುವ ಧೊರೆ ನೀನು
ದುರಿತವ ತರಿದು ಕಾಪಾಡೋ
ವರದ ಶ್ರೀ ನೆ ನಿನಗೆ ನಾ ಶರಣಾದೆ
ಕರವ ಬಿಡಬ್ಯಾಡೊ ೩

 

೩೧೨
ನಾರಾಯಣನಾಮ ಭಜಿಸೋ ನಿರುತದಲಿ ನರನೇ ಪ
ಮಾಯದ ಸಂಸಾರದಿ ಪಾರಾಗೋ ಉಪಾಯವಿದು ಸಸಾರ
ಕಾಯಜನೈಯನ ಭಜಿಸೋ ಶ್ರೀ ಗುರುವಾಯು ದೇವರ ದ್ವಾರಾ ೧
ಧ್ಯಾನ ಕೃತಯುಗದಿ ಯಜ್ಞವು ತ್ರೈತದಿ ಅರ್ಚನೆ ದ್ವಾಪರದಿ
ಗಾನದಿ ಕಲಿಯಲಿ ಪಾಡಲು ಕೇಶವ ತಾನೇ ವಲಿವ ತ್ವರದಿ ೨
ಅನಲ ಪಕ್ವಗೈಸಿದ ಅನ್ನವನಸ್ಕೊಳ್ಳೊಮಿಸುವಂತೆ
ಕೊಟ್ಟಾತನು ಅರ್ಪಿಸು ಅದರಂತೆ ೩

 

೨೬೭
ನೀ ಕರುಣಿಸದಿರೆ ಸಾಕುವರ್ಯಾರು
ದಯಾಕರ ಮೂರುತಿ ರಾಘವೇಂದ್ರ ಪ
ಪಾರು ಮಾಡೊ ಸಂಸಾರಭವದಿ ಅ-
ಪಾರ ಮಹಿಮ ಗುರು ರಾಘವೇಂದ್ರಾ
ದೂರ ನೋಡಿದರೆ ಬಿಡಿಸೋ ತವ ಚರ-
ಣಾರವಿಂದಕೆ ಕೊರಳನು ಕಟ್ಟಿಸೊ ೧
ಒಡವೆ ವಸ್ತುಗಳ ಮಡದಿ ಮಕ್ಕಳ
ಕೊಡು ಎನುತಲಿ ಬೇಡುವುದಿಲ್ಲ
ಒಡೆÉಯನೆ ನಿನ್ನಯ ಅಡಿಗಳಲಿ
ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ ೨
ನರರ ಸೇವೆಯಾ ಬಿಡಿಸೋ
ಹರಿವಾಯುಗಳ ಸೇವೆಯಾ ಹಿಡಿಸೊ
ವರದ ನಾ
ಸರ್ವೋತ್ತಮನೆಂದು ಕರೆದವನೆ ೩

 

೨೮೯
ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ
ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ
ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ ೧
ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ
ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ೨
ಕಷ್ಟಾಬಟ್ಟಾ ದುಷ್ಟಾಮೃಗ ನಾನು ದೃಷ್ಟಿಲಿ ನೋಡೋ
ನೀ ಕೈಬಿಡಬ್ಯಾಡೋ
ಶ್ರೀ ನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ ೩

 

೨೭೧
ಶ್ರೀ ಸತ್ಯಬೋಧರು
ನೋಡಿ ಧನ್ಯನಾದೆ ಸತ್ಯಬೋಧರಾಯಾ
ಬೇಡಿದೊರುವ [ಬೇಡಿದ ವರವ] ನೀಡುವ ಪರಮದಯಾಕರನಾ ಪ
ರಘುರಾಮನ ಸೇವೆಯನ್ನು ಮಾಡ್ದ ಮಹಿಮನಾ
ಪೊಗಳಿ ಪಾಡುವರಿಗೆ ಮುಕ್ತಿ ಪಥವ ತೋರ್ವನಾ ೧
ವಿಷವ ಮೆದ್ದು ಹರಿಕೃಪೆಯಿಂ ಜೀರ್ಣಿಸಿದವನಾ
ಆಶೀರ್ವದಿಸಿ ಖಂಡೆರಾಯನುದ್ಧರಿಸಿದವನಾ ೨
ವರಭೂಸುರರಾಡಿದ ನಿಂದೆಯನು ನುಡಿಯನಾ
ತ್ವರದಿ ಕೇಳಿ ತೋರಿದನು ಇವನು ಸೂರ್ಯನಾ ೩
ಕೊಡು ಭಕುತಿಯನು ನಿನ್ನೊಳು ಗುರುಸತ್ಯಬೋಧನೆ
ಬಿಡಿಸೊ ನಿನ್ನ ಅಡಿಗೆ ಕಟ್ಟಿಕೊಳೈ ಕೊರಳನೆ ೪
ಹರಿವಾಯುಗಳಲಿ ಕೊಡು ನೀ ನಿಜ ಭಕುತಿಯನೆ
ವರದ ಶ್ರೀ ನಡಿ ಸೇವಕನೇ ೫

 

೨೪೫
ನೋಡಿ ಧನ್ಯನಾದೆನಾ ಗಜಾನನಾ ಪುನೀತನಾ
ಪಾಡಿ ಭಜನೆ ಮಾಡಿ ಇಡುವೆ ಅಡಿಗಳಲ್ಲಿ ಶಿರವಾ ಪ
ಭಾರತಾರ್ಥ ಬರೆದ ದೇವ ಮಿತ್ರನಾ ಸುಪುತ್ರನಾ
ಮಾರನಾಸ್ತ್ರ ಗೆಲಿದ ನಿಟಿಲನೇತ್ರನಾ ವಿರಕ್ತನ ೧
ಸಕಲ ಶಾಸ್ತ್ರ ತಿಳಿಸೋ ಏಕದಂತನೇ ಬಲವಂತನ
ಮುಕುತಿ ಮಾರ್ಗವ ತೋರೋ ವಕ್ರತುಂಡ ವಿಘ್ನದಂತನೇ ೨
ಜ್ಞಾನವಿತ್ತು ನುಡಿದು ನುಡಿಸೋ ನೀನೆ ನಿಂದು ವದನದಿ
ಮನವಾ ನೊಳು ನಿಲಿಸೋ ಬೇಗದಿ ೩

 

೨೯೦
ನೋವು ತಾಳಲಾರೆ ಹರಿಯೇ ಕಾವುದೆನ್ನನು
ಕರುಣಾಳು ದೊರೆಯೆ
ಸೇವಕನ ಕೈ ಬಿಡುವುದು ಸರಿಯೇ ಮಾವನಾ ಕೊಂದ
ಕೃಷ್ಣಮೂರುತಿಯೆ ಪ
ಕಣ್ಣುಗಳಿಗೆ ಕಾಣದ ನೋವು ಸಣ್ಣಾಗಿ ನೋಯಿಸುವಂಥ ನೋವು
ಹುಣ್ಣು ಘಾಯವು ಇಲ್ಲದ ನೋವು ಎಣಿಕೆ
ಇಲ್ಲದ ಬಾಧಿಪ ನೋವು ೧
ಬಡವನಾಗಿ ನಾ ಬಳಲುವ ನೋವು ಪಡೆದವರಿಗೆ
ಬ್ಯಾಡದ ನೋವು
ಮಡದಿ ಮಕ್ಕಳು ಕಾಡುವ ನೋವು ಪಡೆದ ಕರ್ಮದ
ಫಲವುಂಬೋ ನೋವು ೨
ವಿದ್ಯಾಬುದ್ಧಿಗಳಿಲ್ಲದ ನೋವು ಕದ್ದು ಪರಧನ ತಂದಂಥ ನೋವು
ಶುದ್ಧವಿಲ್ಲದ ಮನಸಿನ ನೋವು ಇದ್ದ ಋಣವನು ತೀರಿಸದ ನೋವು ೩
ಕೊಟ್ಟ ದಾನವ ಕಸಗೊಂಡ ನೋವು ಶ್ರೇಷ್ಠ ನಾನೆಂಬೊ
ಗರ್ವದ ನೋವು
ಶ್ರೇಷ್ಠ ದಾಸರ ಹಳಿದಂಥ ನೋವು ದುಷ್ಟ ಜನರ
ಕೊಂಡಾಡಿದ ನೋವು ೪
ದಾನಧರ್ಮವ ಮಾಡದ ನೋವು ಮೌನ ವ್ರತಗಳ
ಬಿಟ್ಟಂಥ ನೋವು
ಹೀನ ಬುದ್ಧಿಯ ಹೆಚ್ಚಾದ ನೋವು ಹನುಮೇಶ
ವಿಠಲನ ನೆನೆಯದ ನೋವು ೫

 

೨೪೬
ಪರಮ ದಯಾಕರನೇ ಗೌರೀಸುತನೇ
ಪರಿಪರಿಯಿಂದಲಿ ಪಾಲಿಸು ಯೆನ್ನನು ಪ
ಸಿದ್ಧಿವಿನಾಯಕ ವಿದ್ಯಾಪ್ರದಾಯಕ
ಸದ್ಬುದ್ಧಿಯ ಕೊಡು ಮೋದಕಪ್ರಿಯನೆ೧
ಮೂಷಕವಾಹನ ದೋಷರಹಿತನೇ
ಅಸುರನಾಶ ಸರ್ಪಾಕಟಿಸೂತ್ರನೇ ೨
ಜಾನಕೀರಮಣ ಶ್ರೀ ನ
ಧ್ಯಾನವ ಕೊಟ್ಟು ರಕ್ಷಿಸೋ ಅನುದಿನ ೩

 

೨೯೧
ಪರಿಪರಿಯಲಿ ನೀ ಪಾಲಿಸೋ ನರಹರಿಯೆ ನಾನಾಪರಾಧಿ
ಶ್ರೀ ನರಹರಿಯೇ ನಾನಪರಾಧಿ ಪ
ಸತಿಸುತರು ಹಿತದವರೆಂದರಿತು ನಾ
ಮತಿಯಗೆಟ್ಟು ಕ್ಷಿತಿಪತಿಯೇ ನಿನ್ನನು ಸ್ತುತಿಸದಾ ಅಪರಾಧಿ ೧
ಬಂದ ಅತಿಥಿಗಳಿಗೊಂದಿಸದೆ ಪರ ನಿಂದೆಯಲ್ಲಿ ಗೋ-
ವಿಂದ ನಿನ್ನನು ವಂದಿಸದಾ ಅಪರಾಧಿ ೨
ತನುಮನಧನ ಕೊಟ್ಟಿರುವ ಶ್ರೀವರ ಹನುಮೇಶ
ವಿಠಲನೆ ನಿನ್ನನು ನೆನೆಯದಾ ಅಪರಾಧಿ ೩

 

೨೭೭
ಶ್ರೀ ಸತ್ಯಧೀರರು
ಪಾರು ಮಾಡೋ ಸತ್ಯಧೀರನೆ ನಿನ್ನಯ ಚಾರು
ಚರಣಗಳಿಗೆರಗುವೆನು ಪ
ಘೋರಮಾಯದ ಸಂಸಾರದೊಳಗೆ ಈಸಲಾರೆನೊ
ವರಮತಿಗುಣಗನ ಮಣಿಯೆ ಅ.ಪ.
ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ
ಮತಿಹೀನರಪಹಾಸ್ಯ ಮಾಡಿದರೆ
ಸತತ ದಶಮಾಷ್ಟ ವರ್ಷಗಳ ಪರಿಯಂತ ಹರಿಸೇವೆಯಾ
ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ
ಹಿತದಿಂದ ಕೈಗೊಂಡ ದಶರಥನಂದ ರಘುರಾಯ
ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ
ಭಕುತರನು ಕರೆವುತಲಿ ಬರುತಿರುವಂತೆ ನಿನ್ನಯ
ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ ೧
ವರಮಧ್ವಮತಾಭಿಮಾನಿಯೆ ನಿನ್ನಯ
ದರುಶನದಿಂದ ಪಾವನನಾದೆನೋ
ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ
ವರಸೇವಾ ಸರ್ವಜ್ಞ ಪೀಠಕೆ
ಸರಸ ಶೋಭಿಸುವಾ ಹರಿವಾಯುಗಳಲಿ
ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ
ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ
ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ ೨
ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ-
ನಂದಗಿತ್ತಿ ಉತ್ತಮಪದವಾ
ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ
ಅನುಮಾನ ಮಾಡದೇ ಪಾಲಿಸೋ ದೇವಾ
ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ
ಬಿಡಿಸೊ ದುರ್ಭಾವನಜ ಸಂಭವಾ ಧೀರ ಶ್ರೀ
ಸೇವಕನೋ
ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ ೩

 

(ಈ) ಯತಿವರ್ಯರ ಸ್ತುತಿ
೨೬೩
ಪಾಲಿಸು ಬ್ರಹ್ಮಣ್ಯ ಗುರುವರಾ ಪಾಲಿಸು ಬ್ರಹ್ಮಣ್ಯ ಪ
ಬಾಲಕನಾದನ ಪೇಳುವ ಮೊರೆಯನು
ಲಾಲಿಸಬೇಕಯ್ಯಾ ಹೇ ಜೀಯಾ ಅ.ಪ.
ಅಂದು ಮೃತದೇಹ ಇಂದಿರೇಶನ ದಯದಿಂದದುದ್ಧರಿಸಿದ
ಮಂದಹಾಸದಿ ತವ
ಕಂದನೆಂದು ಎನ್ನ ಕುಂದುಗಳೆಣಿಸದೆ ಚೆಂದದಿ
ಕಾಪಾಡೊ ದಯಮಾಡೊ ೧
ಪುರುಷೋತ್ತಮ ತೀರ್ಥಕರಸಂಜಾತನೆ
ಪುರುಷಯೋಜನಜನಹರಿಪಾದಭೃಂಗನೆ
ಹರುಷದಿ ಬಾಲಗೆ ಗುರುಪದವಿಯನಿತ್ತೆ ಸಿರಿಪಾದರ
ಅಗ್ರಜಾ ಗುರುರಾಜಾ ೨
ಅನುದಿನ ಸ್ಮರಿಪೆನೋ ಅನಘ ನಿನ್ನಯ ಪಾದ ಘನಮಹಿಮೆಗಳೆಲ್ಲ
ಮನದಲಿ ನಿಲ್ಲಿಸೋ
ಘನಮಹಿಮನೆ ಎನ್ನ ಬಿನ್ನಪ ಲಾಲಿಸೊ
ಹನುಮನಯ್ಯನ ದಾಸಾ ಯತೇಶ೩

 

೨೯೨
ಪಾಲಿಸು ಶ್ರೀನಿವಾಸ ಪಾಲಿಸೋ ಪ
ಪಾಲಿಸೋ ಯದುಕುಲ ಬಾಲಾ ಗಾನ-
ಲೋಲನೆ ಯಾಕಿಂಥ ಜ್ವಾಲಾ ಜನ್ಮ
ಬಲ್ಲೇನಾ ಸಂಸಾರಶೂಲಾ ನಿನ್ನ
ಚಾಲನದಿಂದಾದವೆಲ್ಲಾ ಪದ್ಯ
ಮಾಲೆಹಾಕುವೆ ಸಿರಿಲೋಲಾ ಆಹಾ
ಬಾಲನ ಪಡೆದು ಪಾಲಿಸಲಾರೆನೆಂದರೆ
ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ ೧
ನಾನು ಮಾಡುವುದೆಂಬುದಿಲ್ಲಾ
ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ
ಅನುಗಾಲ ಕಷ್ಟವು ಸಲ್ಲಾ ಎನಗೆ
ಜನುಮಾದಿ ಭಯವು ಬಿಟ್ಟಿಲ್ಲ ನೀನು
ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ
ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ
ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ-
ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ ೨
ನಿತ್ಯ ಸಂಸಾರಿಯಾದೆನಗೆ ಮತ್ತೆ
ಮೃತ್ಯು ಬೆನ್ಹತ್ತಿರುವವಗೆ ಮಾಡೋ
ನಿತ್ಯ ಕರ್ಮ ಬದ್ಧ ಎನಗೆ ನೀ-
ಚತ್ವದಿದುಪಜೀವಿಸುವವಗೆ ನಾನು
ನಿತ್ಯನೆಂಬುವ ದುರಾತ್ಮನಿಗೆ ಆಹಾ
ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ-
ಸತ್ವನಿತ್ತು ಸುಶಕ್ತನಮಾಡು ನೀ ೩
ನಿನ್ನ ಆಧೀನವೊ ಎಲ್ಲಾ ನಾನು
ನಿನ್ನ ದಾಸನು ಶಿರಿನಲ್ಲಾ ಅನು-
ದಿನ ಮಾಡುವ ಕಾರ್ಯವೆಲ್ಲ ನೀನು
ಚಲನೆದಂದದಿ ಮಾಡ್ವೆನಲ್ಲಾ ಯೆಂನೊ-
ಳಾವ ತಪ್ಪಿತವೇನೋ ಇಲ್ಲಾ ನಿನ್ನ
ಸಂಕಲ್ಪದಂತಾಗೋದೆಲ್ಲಾ ಆಹಾ
ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ
ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ೪

 

೨೮೧
ಪಾಲಿಸೆನ್ನ ಪಾವನ ಮೂರ್ತಿಯೇ ಪ
ಸತ್ಯಜ್ಞಾನಾನಂದತೀರ್ಥ ನಿನ್ನಯ ಉತ್ತಮ ಹಸ್ತವನಿಟ್ಟು ಅಭಯಾ
ಭಕ್ತಗೆ ಅಂಕಿತವಿತ್ತು ಕಾಯೋ ಕರುಣಾನಿಧಿಯೇ ೧
ಆನಂದತೀರ್ಥರ ಗ್ರಂಥಶ್ರವಣ ನೀನೆ ಮಾಡಿಸೆನ್ನೊಳಿಟ್ಟು ಕರುಣಾ
ಮಾನಾಭಿಮಾನವು ನಿನ್ನ ಈ ದಾಸನಾ ೨
ಮೂಢನೆನ್ನ ಕರಪಿಡಿದು ಉದ್ಧಾರ ಮಾಡೊ ಗುರುವರ
ತಡವ್ಯಾಕೆ ತ್ವರಾ
ಪಡೆಯೋ  ಪ್ರಿಯ ಕುವರಾ ೩

 

೨೫೪
ಪಾವನ ಮಹಿಮನೇ ದೇವಾಧಿದೇವನೇ ಪ
ವರಲಕುಮಿ ಕರಕಮಲಪೂಜಿತ ನಮಿಪೆ
ನೀರಜಾಕ್ಷ ಮಂಗಳವನು ಕೊಡು ದೇವಾ ಅ.ಪ.
ವಾಯುರುದ್ರ ಸಹಿತಾ ಸ್ತುತಿಸುವರೋ ನಿನ್ನ ದಾತಾ
ಸೃಷ್ಟಿಸ್ಥಿತಿ ಕಾರಣಕರ್ತಾ ಮುಕ್ತಿಪ್ರದ ವರ ೧

 

೨೯೩
ಪೊಡವಿ ಪತಿಯೇ ನಿನ್ನಾ ಅಡಿಗಳಿಗೆರಗುವೆ
ಕೊಡು ಭಕ್ತಿ ನಿನ್ನೊಳು ರಾಘವಾ
ತಡೆಯಲಾರೆನೋ ಈ ಕಡುತಾಪದಿಂದೆನ್ನ
ಕಡೆಗ್ಹಾಯಿಸೆನ್ನ ಶ್ರೀ ರಾಘವಾ ಪ
ಧರಣೀಶ ನಿನ್ನ ಚರಣವೇ ಗತಿ ಎಂದು
ಸ್ಮರಿಸುತ್ತಲಿರುವೆನೋ ರಾಘವಾ
ಸ್ಥಿರ ಭಕುತಿಯ ನಿನ್ನೊಳಿರಿಸಿ ಸತ್ವರದಿಂದ
ಕರುಣಿಸಿ ಸಲಹೈಯಾ ರಾಘವಾ ೧
ಪುಟ್ಟಿದುದಕೆ ನೀ ಹೊಟ್ಟೆಗೆ ಸಾಕಷ್ಟು
ಕೊಟ್ಟು ಕಾಪಾಡೊ ಶ್ರೀ ರಾಘವಾ
ಇಟ್ಟು ತವ ಸ್ಮರಣೆಯ ಕೊಟ್ಟೆನ್ನ
ಪುಷ್ಟವ ಮಾಡೋ ಶ್ರೀ ರಾಘವಾ ೨
ತನು ಧನ ನೀನೆ ಜನನಿ ಜನಕನು ನೀನೆ
ವನಿತೆ ಸುತರು ನೀನೆ ರಾಘವಾ
ಹನುಮೇಶ ವಿಠಲನೆ ದಿನಗಳೆಯದೇ ತ್ವರ
ಮನದಘ ಬಿಡಿಸೋ ಶ್ರೀ ರಾಘವಾ ೩

 

೨೭೩
ಪ್ರೀತಿಪಾತ್ರ ಬುಧೇಂದ್ರ ಪ
ಸತ್ಯಪ್ರಿಯರ ಕುವರಾ ನಿಜ ಭೃತ್ಯರ ಪಾಲಿಪ ಚತುರಾ
ಚಿತ್ತದೊಳೊಮ್ಮೆ ಸ್ಮರಿಪೆ ಪದಕಮಲವ ಮೃತ್ಯು
ಭಯವ ಕಳೆವುತ್ತ ಪೊರೆದೆ ೧
ವಿಷವನುಂಡರಗಿಸಿಕೊಂಡ ಧೀರಾ ವೃಷಕೇತು ಪಿತ ಭಕ್ತ ಶೌಂಡಾ
ವಿಷಮ ಬುದ್ಧಿಯಲಿ ವಾದಿಸ ಬಂದ ವಾದಿಗಳ
ಉಸಿರೆತ್ತಗೊಡದೆ ಸಾಧಿಸಿದೆ ಮಧ್ವಶಾಸ್ತ್ರ ೨
ಚರಣಕ್ಕೆ ಶರಣೆಂಬೆನಯ್ಯ ಎನ್ನ ಕರುಣದಿ ಪಾಲಿಸು ಜೀಯಾ
ಸಿರಿ ನ ಪಾದ ಭೃತ್ಯರ ಚರಣ ಕಿಂಕರನ
ಕಿಂಕರನೆನಿಸುವದೆನ್ನ ೩

 

೨೯೪
ಬೇಡಿದ್ದು ಕೊಡಬಾರದೇನೊ
ಬ್ಯಾಡಾದದ್ದು ಕೊಟ್ಟರೆ ಮಾಡಬೇಕೇನೊ ಪ
ಸಂಸಾರದಲ್ಲಿ ಸುಖವಿಲ್ಲಾ ತಿಲಾಂಶವಾದರು
ಯೆನಗದು ಬೇಕಾಗಿಲ್ಲ
ಕಂಸಾರಿ ಅದು ತಾನೇ ಬಲ್ಲಾ ಹಸನ್ಮುಖ
ಹಂಸರೂಪವ ಕಾಣಲಿಲ್ಲ ೧
ಮಡದಿ ಮಕ್ಕಳ ವಲ್ಲೇ ನಾನು ಬಹುದುಡಿದು ದುಡಿದು
ಶ್ರಮ ಪಡಲಾರೆನಿನ್ನು
ಪೊಡವಿಪತಿಯೆ ನಿನ್ನ ಮರೆತೆನೋ ನಿನ್ನ
ಅಡಿಗಳಿಗೆರಗುವೆ ಕೊಡು ಮತಿಯನ್ನು೨
ಉಂಡರೆ ಮನಿಯೊಳು ಸೇರರೊ ಮೈದುಂಡು
ಮಾಡಿಕೊಂಡು ಮೆರೆವೆನೆಂಬುವರೊ
ಕಂಡದ್ದಾಡಿದರೆ ಬೈಯುವರೋ ಬ್ರಹ್ಮಾಂಡಗೊಡೆಯ
ನಿನ್ನ ಮುಖವನ್ನು ತೋರೊ ೩
ನೀನೆ ಗತಿಯೆಂದು ಬಂದರೆ ನಿನ್ನ ಚಾರು ಚರಣಗಳ
ತೋರದಿರುವರೆ
ನಿನ್ನ ಅಗಲಿ ಕ್ಷಣ ಇರಲಾರೆ ಪಾವನ್ನ ಮಾಡೋ
ಮುಕುಂದ ಮುರಾರೆ ೪
ಜನನ ಮರಣವಲ್ಲೇ ನಾನು ಇಷ್ಟು ದಿನ
ಅನುಭವಿಸಿದ್ದು ಸಾಕಿನ್ನು
ತನುವನೊಪ್ಪಿಸಿದೆ ಹರಿ ನಿನಗಿನ್ನು ಹೇ ಹನುಮೇಶ
ವಿಠಲನೆ ಕೊಡು ಮುಕ್ತಿಯನ್ನು೫

 

೨೯೫
ಭಕ್ತಿ ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ
ಹಗಲು ಇರಳು ಎಡೆಬಿಡದಲೆ
ಪೊಗಳುತ ತವ ನಾಮ ಮಹಿಮೆಯ
ಜಗದೀಶನೆ ನಿನ್ನ ಚರಣ
ಯುಗಳಲಿ ಬಹು ಭಕ್ತಿ ಮನ
ಬಗಿ ಬಗಿಯಲಿ ನಲಿದಾಡುವ ೧
ನಿತ್ಯನೆ ಸರ್ವೋತ್ತಮನೇ
ಮುಕ್ತಿಪ್ರದನೇ ಪರಮಾತ್ಮನೇ
ಉತ್ತಮ ವೃತ್ತಿಯಾನಿತ್ತು
ನೇತ್ರದಿ ತವ ನೋಡುತ ವರ
ಸ್ತೋತ್ರ ದಿನಾ ಪಾಡುತಿರುವೆ ೨
ಎನ್ನಪರಾಧಗಳನ್ನು
ಮನ್ನಿಸಿ ಸಲಹಯ್ಯಾ ಜೀಯಾ
ರಾಯಾ
ನಿನ್ನ ಸ್ಮರಣೆಯಲ್ಲಿ ಕಾಲ
ವನ್ನು ಕಳೆಯುತಿರುವ ದಿವ್ಯ ೩

 

೨೭೦
ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ
ಮಂಗಳ ಶೋಣಿತ ಪುರಧೀಶಗೆ ಮಂಗಳ ಗುರುವರಗೆ ಪ
ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು
ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ ೧
ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ
ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ ೨
ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ
ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ ೩
ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ
ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ ೪
ವರಧೀರ ನಾ ನಿಜದಾಸಾ
ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ ೫

 

೨೯೬
ಮರತ್ಯಾಕೊ ಹರಿಯೆ ಮರಗುವೆನಾ ಕರುಣ ಬಾರದೆ ಪ
ಸಿರಿಗೆ ಭ್ರಮಿಸಿ ಸರಸ ಸುಖದಿ ಮರೆತು ಇರುವೆಯಾ
ಬರುವ ಮುಡುಪಿನ್ಹಣವನೆಣಿಸಿ ದಣಿದು ಮರತಿಯಾ ೧
ತ್ರಾಣ ಕಳದಿ ಹಣವ ಸೆಳದಿ ಮನವ ದಣಿಸಿದಿ
ಕಣ್ಣೀರಲಿ ಕೈ ತೊಳೆಸಿದಿ ಗುಣ ಗಣ ಮಣಿಯೇ೨
ನಿನಗೆ ಆಟ ಎನಗೆ ಹರಿಯೇ ಪ್ರಾಣ ಸಂಕಟಾ
ಅನುಭವಿಸಲಾರೆನಕಟಾ ಪಾಹಿ ವೆಂಕಟಾ ೩
ಹರಿಯೆ ನೀನು ಗಿರಿಯೊಳು ನಿಂತಿರುವದ್ಯಾತಕೊ
ಸ್ಮರಿಸುವವರ ಪೊರೆವುದಕೊ ಧನ ಸೆಳೆವುದಕೊ ೪
ಇಟ್ಟರಿಡು ನೀ ಘಟ್ಟಿ ಭಕುತಿ ಕೊಟ್ಟ ನಿನ್ನೋಳು
ಧಿಟ್ಟ ಶ್ರೀ  ಥಟ್ಟನೇ ದಯದಿ ೫

 

೩೧೩
ಮರುಳು ಮನವೇ ವ್ಯರ್ಥ ಚಿಂತಿಸುವಿಯಾಕೋ
ಹರಿ ತಾನೇ ಕಾಯ್ವ ಮನ ದೃಢವಿರಲಿ ಬೇಕೊ ಪ
ಎಲ್ಲಿ ನೋಡಿದರಲ್ಲಿ ಇರುವಾತಾ
ಎಲ್ಲರನು ಪೊರೆವಾತಾ
ಬಲ್ಲಿದನು ಬಲಿಯ ತುಳದಾತಾ
ಸೊಲ್ಲು ಸೊಲ್ಲಿಗೆ ಬಂದು ಎಲ್ಲಿವನು ಪೇಳಿದರೆ
ಕಲ್ಲಾಗುವನೇ ಸ್ವಾಮಿ ಪ್ರಲ್ಹಾದ ತಾತಾ ೧
ಹಬ್ಬಿರುವ ಮಾಂಸಗಾಗರ್ಭದೊಳಿರುವಾಗ
ಉಬ್ಬಸವ ಬಡುವಾಗ ಸಲಹಿದವರ್ಯಾರೋ
ಅಬ್ಬರದ ನೋವಿನೊಳು ಒಬ್ಬನೇ ಬರುವಾಗ
ಹೆಬ್ಬಾಗಿಲವ ನಿನಗೆ ತೋರಿದವರ್ಯಾರೋ ೨
ವರದ ನ ಚರಣವ ನಂಬು
ಮೊರೆಯಾಗ್ವನಲ್ಲಾ ಹರಿ ಕರುಣ ಸಾಗರನೋ
ಕರಿರಾಜ ಕರಿಯಲಾಕ್ಷಣಕೆ ಅವಸರದಲಿ
ಗರುಡವಾಹನ ಕೃಷ್ಣ ಬರಲಿಲ್ಲವೇನೋ ೩

 

೩೧೪
ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ
ಗಾಢದಿಂ ಹರಿಯೇ ಪ
ಉದಯದಲೆದ್ದು ಗೊಡ್ಡ ಹರಟೆÉಯ ಹೊಡೆದು
ಹರಿಸದನಕ್ಕೆ ಹೋಗದ ತಪ್ಪು
ಮುದದಿಂದಲಿ ಗಂಗಾ ಉದಕ ಅಗ್ರೋದಕ ಮರೆದು
ತಾರದೇ ಬಿಟ್ಟ ತಪ್ಪು
ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು ೧
ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು
ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು
ಶ್ವಪಚನಾಗಿ ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು ೨
ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ
ಘನ ಪಾಪ ಮಾಡಿದ ತಪ್ಪು
ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು ೩

 

೩೧೫
ಮಾನಹೀನನಿಗೆ ಇಲ್ಲದ ಅಭಿಮಾನವ್ಯಾತಕೋ
ನಾನೇ ಬ್ರಹ್ಮನೆನ್ವನ ಮುಖ ನೊಡ್ವದ್ಯಾತಕೋ ಪ
ಹರಿಯೇ ಸರ್ವಪರಾ ಎನ್ನದವನ ಜ್ಞಾನವ್ಯಾತಕೋ
ತಾರತಮ್ಯವರಿಯದವನಾಚಾರ್ಯವ್ಯಾತಕೋ ೧
ಆಶೆಯನು ಬಿಡದವಗೆ ಸನ್ಯಾಸವ್ಯಾತಕೋ
ಭಾಷೆ ಹೀನನಾದವನ ವಿಶ್ವಾಸವ್ಯಾತಕೋ ೨
ಹರಿಯ ಜರಿದು ಹರಾಪರನೆನ್ವನ ಜನ್ಮವ್ಯಾತಕೋ
ವರದ ಶ್ರೀ ಹನುಮೇಶ ವಿಠಲ ಒಲಿವನ್ಯಾತಕೋ ೩

 

೨೬೨
ಮುಗಿವೇನು ಕೈಯ್ಯಾ ಶಾಂತೇಶರಾಯಾ
ರಘುರಾಮಾ ಪ್ರೀಯಾ ಪಾಲಿಸೆನ್ನ ಜೀಯಾ ಪ
ಶರಧಿಯ ದಾಟಿ ಮುದ್ರೆಯನು ಕೊಟ್ಟೀ
ದುರುಳರ ಮೆಟ್ಟಿ ಪುರಲಂಕೆ ಸುಟ್ಟೀ ೧
ಭಂಡಿ ಅನ್ನವನುಂಡೂ ದೈತ್ಯನ
ಚಂಡಾಪರಿ ಹಿಡಿಂಬನನು ಮುರಿದಿ ೨
ದುಷ್ಟಮತವನು ಸುಟ್ಟೀ ಜ್ಞಾನತೀರ್ಥ
ಧಿಟ್ಟ ಶ್ರೀ ನ ದೂತಾ ೩

 

೩೧೬
ಯಾಕೆ ಕಳೆಯುವಿ ಕಾಲ ವ್ಯರ್ಥ
ಹರಿಯನೇಕ ಗುಣಗಳ ಪೊಗಳಿ ಪುರುಷಾರ್ಥ ಪ
ಸತಿಸುತರ ನೆಚ್ಚಿ ಕೆಡಬ್ಯಾಡಾ ನಿನ್ನ ಸಂ-
ಗತಿಲೇ ಬಾಹರು ಇದನು ತಿಳಿಯೋ
ಕ್ಷಿತಿಪತಿಯ ನೆನೆಯದಿರಬ್ಯಾಡಾ ಲಕ್ಷ್ಮೀ
ಪತಿಯೊಬ್ಬನೇ ಗತಿ ಎಂದು ತಿಳಿ ಗಾಢಾ ೧
ಇಂದೆ ಇದ್ದವ ನಾಳೆಗಿಲ್ಲಾ ಅದ
ರಿಂದ ಜಗದೀಶನನು
ಹಿಂದೆ ಕಳೆದ ಆಯು ಬರೋದಿಲ್ಲಾ ಇನ್ನು
ಮುಂದೆ ನರಜನ್ಮ ಬರುವುದು ಭರವಸಲ್ಲಾ ೨
ಸತ್ತ ನಂತರ ಬಳಗ ನಿನ್ನ ತೀವ್ರ
ಹೊತ್ತು ಹೊರಗ್ಹಾಕಿರೆನ್ನುವರೋ ತಿಳಿಯನ್ನಾ
ಮಿಥ್ಯ ಸುಖಕೊಳಗಾಗದಿನ್ನಾ ಏಕ
ಚಿತ್ತದಿಂ ಭಜಿಸೋ ಹನುಮೇಶ ವಿಠಲನಾ ೩

 

೨೯೭
ಯಾಕೆ ಪುಟ್ಟಿಸಿದ್ಯೊ ಭೂಲೋಕದೊಳು ಎನ್ನಂಥ
ಪಾಪಿಷ್ಠರ ಕಾಣೆನೋ ಕೃಷ್ಣಾ ಪ
ಕಾಕು ಮಾಡದೇ ಕಾಯೋ ಶ್ರೀಕಾಂತ ಎನ್ನ
ಪಾತಗಳ ತರಿದು ಕೃಷ್ಣಾ ಅ.ಪ.
ಜನನಿ ಜನಕರು ಮುನ್ನಾ ಘನ ಪ್ರೀತಿಯನ್ನಾ ತನುವನ್ನು
ಬೆಳಸಿದದಕೆ ಕೃಷ್ಣಾ
ಮನಿ ಮನಿ ತಿರುಗಿ ಮುಪ್ಪಿನಲಿ ಸಲಹುವನೆಂದು ಘನವಿದ್ಯೆ
ಕಲಿಸಿದಕೆ ಕೃಷ್ಣಾ
ಧನ ತರುವ ಕಾಲದಲಿ ವನಿತೆ ಸುತರಿಗೆ ಮೆಚ್ಚಿ
ಜನನಿ ಜನಕರ ಬಿಟ್ಟೆನೋ ಕೃಷ್ಣಾ ೧
ಶುದ್ಧ ವೈಷ್ಣವನಾಗಿ ಪದ್ಧತಿಯನರಿಯದೇ ಅಪದ್ಧಕಾರ್ಯವ
ಮಾಡಿದ ಕೃಷ್ಣಾ
ಮಧ್ವರಾಯರ ಗ್ರಂಥ ಇದ್ದದ್ದೆ ಅರಿಯೆನೊ ಹದ್ದಿನಂದದಿ
ಬಾಳಿದೆ ಕೃಷ್ಣಾ
ಬುದ್ಧಿ ಹೋಯಿತು ಎನಗೆ ಕದ್ದುಂಡು ಕಾಯವನು
ಉದ್ದಾಗಿ ಬೆಳೆಸಿ ಮೆರೆದೆ ಕೃಷ್ಣಾ ೨
ಹಣವಿದ್ದವನ ಕಂಡು ಎಣಿಕೆ ಇಲ್ಲದೆ ಸ್ತುತಿಸಿ ತೃಣಕಿಂತ
ಕಡೆಯಾದೆನೋ ಕೃಷ್ಣಾ
ಗುಣವಂತರಾದ ಬ್ರಾಹ್ಮಣರನೆ ನಿಂದಿಸಿದೆ ಕೆಣಕಿ ಹಾಸ್ಯವ
ಮಾಡಿದೆ ಕೃಷ್ಣಾ
ಗಣನೆ ಇಲ್ಲದೆ ಪರರ ಹಣವನ್ನು ಅಪಹರಿಸಿ
ಬಣಗ ಲೆಕ್ಕಸನಾದೆನೋ ಕೃಷ್ಣಾ ೩
ಅಟ್ಟಹಾಸದಿ ಮಗನು ಹುಟ್ಟಿದಾ ದಿವಸದಲಿ ಮೃಷ್ಟಾನ್ನವ
ಮಾಡಿಸಿದೆನೋ ಕೃಷ್ಣಾ
ಸೃಷ್ಟೀಶನವತರಿಸಿದುತ್ರ‍ಕಷ್ಟ ದಿವಸಲಿ ಬಿಟ್ಟಿಬೇಸರ ಮಾಡಿದೆ ಕೃಷ್ಣಾ
ಇಷ್ಟು ದಿನಗಳು ದುಷ್ಟಕೃತಿಯಲಿ ಮನಸ್ಹಾಕಿ
ಪುಟ್ಟಿಸಿದ ನಿನ್ನ ಮರೆತೆ ಕೃಷ್ಣಾ ೪
ಹಿಂದಾದ ಪಾಪಗಳ ಒಂದುಳಿಸದೇ ಕಳೆದು ಮುಂದೆ
ನೀ ಪಾಲಿಸುವುದು ಕೃಷ್ಣಾ
ಇಂದಿನಾರಭ್ಯ ಹೊಂದಿರುವ ತವಪಾದ ದ್ವಂದ್ವಗಳ
ತೋರಿಸುವುದು ಕೃಷ್ಣಾ
ಬಂಧು ಬಳಗವು ನೀನೆ ಮುಂದಿನಾ ಗತಿ ನೀನೆ
ತಂದೆ ರಾ ಕೃಷ್ಣಾ ೫

 

೨೬೮
ಯಾಕೆ ಬಳಲಿಸುವಿ ಗುರುರಾಯಾ ಇನ್ನು
ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ
ಭಕ್ತ ಕೇಳಿದರೆ ಕೊಡವಲ್ಲಿ ಉಪ-
ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ
ಶಕ್ತಿ ನಿನಗಿಹುದೋ ಕರದಲ್ಲಿ ವಿ-
ರಕ್ತನೇ ಕೋಪವ್ಯಾತಕೋ ದಾಸನಲ್ಲಿ ೧
ತ್ರಾಹಿ ತ್ರಾಹಿ ಗುರುರಾಯಾ ಈಗ
ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ
ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು
ಮೋಹದಾ ಹರಿಕಂದಾ ಪ್ರಹ್ಲಾದರಾಯಾ ೨
ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು
ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ
ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ
ಧಿಟ್ಟ ಶ್ರೀ ನ ಜಾಲಾ ೩

 

೨೫೫
ರಾಮಚಂದ್ರನೇ ರಘುಕುಲೋತ್ತಮನೇ
ಕಾಮಿತ ಫಲದಾಯಕನೇ ಏಳೈ ಬೇಗನೇ ಪ
ಜಾನಕಿ ದೇವಿಯು ಪನ್ನೀರ ತುಂಬಿದ
ಚಿನ್ನದ ಕಲಶವನು ಧರಿಸಿ ಹರಿ
ನಿನ್ನಯ ಸನ್ನಿಧಿಯಲ್ಲೇ ನಿಂತಿಹಳು
ಇನ್ನಾದರು ಮುಖವನು ತೊಳೆಯಲೇಳೊ ಅ.ಪ.
ದುಷ್ಟ ರಾವಣನ ಕುಟ್ಟಿ ಕೆಡಹಿದ
ಸೃಷ್ಟೀಶನೇ ಏಳೋ
ಕಷ್ಟಾಗಿರುವುದು ಯುದ್ಧದಿ ನಿನಗೆ ದಯಾಳೋ
ಪಟ್ಟವನೇರಲು ಇಟ್ಟಿಹುದು ಮುಹೂರ್ತವ
ಇಂದಿನ ದಿನದೊಳು
ಕೆಂಪಾಯಿತು ಮೂಡಲೊಳು ಅಷ್ಟೈಶ್ವರ್ಯದಿ ಪಟ್ಟಕ ಸಿಂಗರಿಸಿಟ್ಟು
ವಶಿಷ್ಠಾದಿಗಳು ವಿಶಿಷ್ಟರು
ಶ್ರೇಷ್ಠನಾದ  ನೀ ಬರುವದಷ್ಟೇ
ನೋಡುತ ಕುಳಿತಿಹರೋ ೧

 

೨೫೬
ರಾಮಾ ರಾಮಾ ಸೀತಾರಾಮಾ ರಘು ಕುಲೋತ್ತಮಾ ಶ್ರೀರಾಮಾ ಪ
ರಾವಣಾರಿಯಾದ ರಾಮಾ ಮಾಯ ರಕ್ಕಸಗೊಲಿದ ರಾಮಾ
ವಾಯುತನಯಗೊಲಿದ ರಾಮಾ ಕೋದಂಡರಾಮಾ ಶ್ರೀರಾಮಾ ೧
ಜನಕನ ಜಾಮಾತ ರಾಮ ಜಾನಕಿ ವಲ್ಲಭ ಶ್ರೀರಾಮಾ
ಕ್ಷೋಣಿಗಭಿಮಾನಿ ರಾಮಾ ಕೌಸಲ್ಯಾರಾಮ ಶ್ರೀರಾಮಾ ೨
ಇನಕುಲೋತ್ಪನ್ನ ರಾಮಾ ದಿನಕರ ಸತತೇಜ ರಾಮಾ
ರಾಮಾ ಪುನೀತರಾಮಾ ಶ್ರೀರಾಮಾ ೩

 

ರಾಯ ಬಾರೊ ತಂದೆ ಕಾಯ ಬಾರೊ
೨೬೯
ರಾಯ ಬಾರೋ ತಾಯಿ ಬಾ ಎನ್ನ ಕಾಯಲು
ತ್ವರ ಬಾರೋ ನೀ ಗುರು ಪ
ದಿನದಿನಕೆ ಮನಸಿನ ತಾಪವು
ಘನವಾಗುವುದನ್ನು ಬಿಡಿಸಲು ಬಾರದು ೧
ಅರಸನಾಗಿ ನೀ ಧರೆಯನಾಳಿದಿ
ಭರತ ಭೂಮಿಯಲಿ ಅವತರಿಸಿದಿ ಮತಿ-೨
ವರಗುಣಮಣಿಯೇ ಕರುಣದ ಖಣಿಯೇ
ಶರನಾದವನನ್ನು ಬಿಡಿಸೋ ಬಾ ಗುರು ೩
ಬಾಲ್ಹೀಕನೇ ಬಾ ಪ್ರಲ್ಹಾದನೇ ಬಾ
ತಲ್ಲಣಿಸುವೆ ಯತಿ ಆಗಿ ಬಂದ ಗುರು ೪
ಸುಮ್ಮನಿರುವೆ ಮತ್ತೊಮ್ಮೆ ಮರಗುವೆ
ಒಮ್ಮನಸಿಲ್ಲವೋ ಸನ್ಮುಖನಾಗೈ ೫

 

೨೮೦
ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ದಿನಾ
ಬಂದ ಕಂದನಾ ಪಾಲಿಸೆಂದೆ ಪ
ಮಂದಮತಿಯು ನಾ ನಿಂದ್ಯನಾಗಿ ಮಾಯಾಬಂಧನದೊಳು
ಸಿಲ್ಕಿರುವೆನಾ
ತಂದೆ ಸತ್ಯಜ್ಞಾನಾನಂದಮೂರ್ತಿ ಬಹು ನೊಂದೆನಾ
ಶರಣು ಬಂದೆನಾ ೧
ಬೇಡ ಬಂದೆ ನಿನ್ನಾ ಕಾಡುವೆನೆಂದೆನ್ನಾ ದೂಡದೆ ಈ
ಮೂಢ ಸೇವಕನಾ
ಗಾಢ ಪಂಚಮುದ್ರೆ ನೀಡಿ ನೀ ಮಾಡಿಕೊ ದಾಸನಾ
ಬಿಡಿಸೊ ವ್ಯಸನಾ ೨
ಶ್ರೀಶನಾದ ನ್ನಾ ದಾಸ ಉದಾಸೀನದಲ್ಲೆ ಎನ್ನಾ
ಪೋಷಿಸೊ ನೀ ಮನದಾಸೆ ಪೂರೈಸಿನ್ನು ಕರುಣಾಜ್ಞಾನಪೂರ್ಣ ೩

 

೨೪೭
ವಂದಿಸುವೆ ಗಣರಾಜ ನೀ ದಯದಿಂದ ಪಾಲಿಸುವುದು ಪ
ಸದ್ಗುಣಭರಿತನೇ ದುರ್ಗುಣರಹಿತನೇ ವಿಘ್ನವಿನಾಶಕನೇ
ಭಗ್ನಗೈಸೋ ಎನ್ನ ಅವಗುಣಗಳ ನೀ ವಿದ್ಯಾದಾಯಕನೇ ೧
ಶ್ರೀಶನಂಘ್ರಿಸರೋಜಭೃಂಗ ಮಹೇಶನ ವರಸುತನೇ
ವ್ಯಾಸಕರುಣಾಪಾತ್ರನೇ ಮನದಾಸೆ ಪೂರೈಸುವವನೇ ೨
ಪಾಶಪಾಣಿಯೆ ಪ್ರಾರ್ಥಿಸುವೆ ನೀ ಲೇಸು ಕೊಡುವುದಿನ್ನಾ
ಶ್ರೀಶ ಶ್ರೀ ನ ದಾಸನೇ ಅನುದಿನಾ ೩

 

೨೯೮
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ
ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ
ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ
ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ ೧
ಶಂಖಚಕ್ರಧರನೇ ಸ್ವಾಮಿ ಪಂಕಜಪಿತನೆ
ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ ೨
ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ
ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ ೩
ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ
ಮಾಧವ ಮಧುಸೂದನನೇ ಆದಿ ಮೂರುತಿ ನೀನೆ ೪
ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ
ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ ೫

 

೨೭೪
ಶರಣು ಹೊಕ್ಕೆನು ನಿನ್ನ ಚರಣ ಕಮಲಕ್ಕೆ ನಾ ಗುರುಸತ್ಯಬೋಧರಾಯಾ
ಕರುಣಿಗಳರಸನೆ ತರಳನ ಮೊರೆ ಕೇಳಿ ಪೊರೆವುದು ಎನ್ನ ಜೀಯಾ ಪ
ಬೇಡಿಕೊಳ್ಳಲು ಬಾಯಿಬಾರದೋ ನಾ ಹಿಂದೆ ಮಾಡಿದಪರಾಧವ
ನೋಡದೆ ಎನ್ನವಗುಣ ಕೈಯಪಿಡಿದು ಕಾಪಾಡಲು
ನಿನಗೀಡೆ ದಯಮಾಡೆ ೧
ಪುಟ್ಟದ ಪುಟಕ್ಕಿಕ್ಕಿದ ಚಿನ್ನದಂತಿಹ ಶ್ರೇಷ್ಠ ವೈಷ್ಣವ ಕುಲದಿ
ಭ್ರಷ್ಟ ಮಾಡಿದೆ ಬಾಳು ಪೇಳಲೇನು ದಯದೃಷ್ಟಿ
ಇಡುವುದೆನ್ನೊಳು ದಯಾಳು ೨
ಮರುತ ಮತವ ನಂಬಿ ನಡೆವರ ಪದಧೂಳಿ ಧರಿಸುವ ಭಾಗ್ಯವನೇ
ಗುರುವರ್ಯ ಕರುಣಿಸು ಹನುಮನಯ್ಯನ ಪಾದಸರಸಿಜಭೃಂಗ
ನೀನು ಸುರಧೇನು ೩

 

೨೯೯
ಶಿರಬಾಗಿ ಬೇಡ್ವೆ ಎನ್ನನು ಪೊರೆಯೋ ಹರಿಯೇ
ಶರಣ ರಕ್ಷಕನೆಂಬೊ ಬಿರುದುಳ್ಳ ದೊರೆಯೇ ಪ
ಘನಮಹಿಮನೇ ನಿನ್ನ ಪಾವನ ಚರಣಕಮಲ ಎಂಬೋ
ಮನವ ಆಕರ್ಷಿಸುವ ಪಂಜರದಲಿ
ವನಜನಾಭನೆ ಎನ್ನ ಮನವೆಂಬ ರಾಜಹಂಸ
ನನ್ನ ಲೋಲ್ಯಾಡಿಸೋ ಅನುದಿನದಲಿ ೧
ಇಂದಿನ ದಿನವೇ ಸ್ರ‍ಮತಿಯಿಂದ ಇರುವಾಗ ಮು-
ಕುಂದ ತವ ಸ್ಮರಿಸುವೆ ಕೊಡು ಮೋಕ್ಷವಾ
ಮುಂದೆ ಅಂತ್ಯದಲಿ ಕಫ ಪಿತ್ತ ಶೀತಾದಿ ಕಂಠ
ಗುಂದಿ ವಿಸ್ರ‍ಮತಿಯಾಗಿ ಸ್ಮರಣವಹುದೈಯ್ಯಾ ೨
ಶ್ರೀಶ ನೇ ನಿನ್ನಾಧೀನ
ದಾಸನ ಮನದಪೇಕ್ಷವ ಪೂರಿಸೋ
ಕೇಶವನೆ ಶಾಸಕನೆಂದು ಆಶಿಸಿ ಬಂದೆ
ಬೇಸರ ಮಾಡದಲೆ ಪೋಷಿಸೈ ಸ್ವಾಮಿ ೩

 

೩೦೦
ಶ್ರೀಶಾ ಸರ್ವಮಹೀಶಾ ಸುರವರ ವಾಸುದೇವ ತವ ದಾಸೋಹಂ
ಕೇಶವ ಎನ್ನಾ ದೋಷಗಳೆಣಿಸದೆ ಪೋಷಿಸು ಹರಿ ತವ ದಾಸೋಹಂ ಪ
ಮುಕುತಿಗೆ ಮೂಲ ದೈವನೆಂದು ಕರಿ ಸಕಲ ಲೋಕಕರುಹಿದ ವಾರ್ತೆ
ಯುಕುತಿಗಳಿಂದಾ ಸ್ತುತಿಸಿ ದ್ರೌಪದಿ ಪ್ರಕಟಿಸಿದಳು ಹರಿ ತವ ಕೀರ್ತಿ ೧
ಸಕಲರಲ್ಲಿ ವ್ಯಾಪಕನೆಂಬುದು ಬಾಲಕ ಪ್ರಲ್ಹಾದ ಪ್ರಕಟಿಸಿದಾ
ಭಕುತನಾದ ಮಧ್ವಮುನಿ ಹರಿ ಸರ್ವೋತ್ತಮ ಹೌದುಹೌದೆನಿಸಿದಾ ೨
ಭಕುತರಿಗಾಗಿ ಜಗವ ಸೃಷ್ಟಿಸಿದಿ ಭಕುತರಿಗಾಗವತರಿಸಿದಿ
ಭಕುತರು ನಿನ್ನಾ ಭಜಿಸದಿದ್ದರೆ ಸಕಲರರಿವರೆಂತೊ ಜಗದಿ ೩
ಅವರಂದದಿ ನಾನಲ್ಲವೋ ಶ್ರೀಹರಿ ಅವರ ದಾಸರ ದಾಸನೋ ನಾ
ಅವರಿಗೆ ಒಲಿದ ದಯದಿಂದಲೀ ತವ
ಪಾದದಿ ಕೊಡು ಭಕುತಿಯನಾ ೪
ಮೆಟ್ಟುವ ಹಾವಿಗೆ ಮಾಡಿ ಎನ್ನನು ಇಟ್ಟುಕೋ ತವ ಪದಗಳಲಿ
ಥಟ್ಟನೆ ಮನದಿಷ್ಟ ಪೂದ್ವೆಸೊ ಹನುಮೇಶ ವಿಠಲ ತ್ವರ ಕರುಣದಲಿ ೫

 

೨೮೩
ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು
ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು ೧
ಕಷ್ಟಬಟ್ಟ ದಿವ್ಯ ಶ್ರೇಷ್ಠಮಾರ್ಗವು ಸಿಕ್ಕಿತಿನ್ನೇನಿನ್ನೇನು
ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು ೨
ನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು
ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು ೩

 

೨೭೫
ಸತ್ಯಬೋಧರಾಯಾ ಪಾಲಿಸು (ನಿನ್ನ) ಭೃತ್ಯರ ನನ ಜೀಯಾ
ಸತ್ಯಪ್ರೀಯರ ಸುಪುತ್ರನಾಗಿ ಪುರುಷೋತ್ತಮನೊಲಿಸಿದ
ಸ್ತುತ್ಯ ಸುಕಾಯ ಪ
ದೂರ ನೋಡದಲೆನ್ನ ಗುರುವರ ಪಾರಗೈಪುದು ಮುನ್ನ
ಶ್ರೀ ರಮಾರಮಣನಾರಾಧಕರೊಳು ಧೀರ ನಿನಗೆ ಸರಿಯಾರಿಹರಯ್ಯ ೧
ಮತ್ತನಾಗಿಹೆ ನಾನು ಭವದಲಿ ಸತ್ತು ಹುಟ್ಟುತಲಿಹೆನು
ಚಿತ್ತಕೆ ತರದಲೆನ್ನವಗುಣಗಳ ಮತ್ತೆ ಕೈಪಿಡಿಯುತಲೆತ್ತುವುದು ೨
ಶರಣು ಶರಣು ದೊರೆಯೆ ಕರುಣದಿ ಪೊರೆದನ್ಯರನರಿಯೇ
ಕರುಣಾಕರ ಸಿರಿ ಹನುಮಯ್ಯನ ಪದ ಚರಣಾಂಬುಜ
ಮಧುಕರನಾಗಿರುತಿಹ ೩

 

೨೫೧
ಸರ್ವೇಶಾ ಪಾಹಿ ರಮೇಶಾ
ಜಗದಾಭಿರಾಮನಿಗೆ ಮಿಗಿಲಾರು ಲೋಕದೊಳಗೆ ಪ
ವರ ವಾಲ್ಮೀಕಿ ಮುನಿಯು ಮುರನೆಂದು ಸ್ಮರಿಸಿದದಕೆ
ಕರುಣಾಳು ನೀನಾವದಕೆ ತ್ವರ ಕೃಪೆಯ ಮಾಡಿದದಕೆ ೧
ಪರಮಾಂಜನೆಯ ಸುತಗೆ ಸ್ಥಿರ ಪದವಿಯ ನಿತ್ತದದಕೆ
ಧರಣೀಶ ತವ ಚರಣಕೆ ಶಿರಬಾಗಿ ಬೀಳ್ವದದಕೆ ೨
ನಿನ್ನ ಪಾದ ಸೋಕಿಂದದಕೆ ಘನ ಶಿಲೆ ವನಿತೆಯಾದದಕೆ
ನೆಂಬೋದಕೆ ಅನುಮಾನಬಾರದದಕೆ ೩

 

೩೧೭
ಸಾಧು ಸಂಗತಿ ಮಾಡೋ ಎಲೆ ಮನಾ
ಸಾಧು ಸಂಗತಿ ಮಾಡು ಪ
ಘೋರತರದ ಸಂಸಾರ ಸಾಗರದಿ
ಪಾರು ಮಾಡಿ ಮುರಾರಿಯ ಸ್ಮರಿಸುವ ೧
ಕರ್ಮಫಲಾಪೇಕ್ಷಿಸದಲೇ ಮಾಡಿ ತಾ
ನಿರ್ಮಲ ಚಿತ್ತದಿ ಹರಿಯನು ಪೊಗಳುವಾ ೨
ತನ್ನ ಪಿತ ಗೆ ಆತ್ಮಅರ್ಪಿಸಿ
ಕೃತಾರ್ಥನಾದನು ಸಾಧು ಸಂಗತಿ ಮಾಡೋ ೩

 

೩೦೧
ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು
ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ
ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ
ಕೆಟ್ಹೋಗಲೆಂದು ತಾ ಬಯಸಳು
ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು
ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ ೧
ಜ್ಞಾನವಿಲ್ಲದೆ ಹರಿಯೇ ನಾನು ನೀನು ಸರಿಸ-
ಮಾನರೆಂದರಿತು ನಾ ಮೋಸ ಹೋದೆ
ನಾನು ನಿನ್ನಾಧೀನವಿರುವೆನೇ ಹೊರ್ತು ನೀ
ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ ೨
ಏಸು ಜನ್ಮಗಳಿಂದ ವೇಷವಾ ಧರಿಸಿ ಹನು-
ಮೇಶ ವಿಠಲನೆ ನಾ ತೋರಿಸಿದೆನೋ
ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ
ಬೇಸರಾಗಿರೆ ಇನ್ನು ವೇಷವನು ಬಿಡಿಸೊ ೩

 

೨೫೮
(ಮಂಗಳ ಪದ)
ಸೃಷ್ಟಿ ಸ್ಥಿತಿ ಕಾರಣಕೆ ಕರ್ತನಾದ ಶ್ರೀ ವಿಷ್ಣುವಿಗೆ ಜಯ ಮಂಗಳಂ ಪ
ಮಚ್ಛ ಕಚ್ಛಪ ವರಾಹಾದಿ ಅವತಾರ
ಸ್ವೇಚ್ಛೆಯಾದರಿಸಿದವಗೆ ನೆಚ್ಚಿ ನೆನೆಯುವರು ಮನದಿಸ್ಟೆಪೂರಿಸುವ ಶ್ರೀ
ಅಚ್ಯುತಗೆ ಜಯ ಮಂಗಳಂ ಹರಿಗೆ ೧
ಸಿರಿ ಬ್ರಹ್ಮವಾಯು ಮೊದಲಾದ ಸನಕಾದ್ಯರಿಂ
ಸ್ತೋತ್ರಗೊಳ್ವಗೆ ಮಂಗಳಂ
ನಾರದ ಶುಕಾದಿ ಮುನಿಗಳು ಪಠಿಸುವ ಪುರಾಣ
ಪುರುಷೋತ್ತಮಗೆ ಮಂಗಳಂ ಹರಿಗೆ ೨

 

ಇಲ್ಲಿ ವರ್ಣಿತರಾದ ಶ್ರೀ ಸತ್ಯಧೀರರು
೩೦೨
ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ
ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ
ಸೊಟ್ಟಗಿಹ ಮೊಗವಟ್ಟವೇರುತಲಿದೆ
ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ
ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ ೧
ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ
ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ
ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ
ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು ೨
ಕಷ್ಟ ಸಂಸಾರದಾ ಸೂಳೆಯಾ ಬೀದಿಯಲಿ
ಇಟ್ಟು ನೋಡುವುದು ನಿನಗೆಷ್ಟು ಸುಖವೋ
ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ
ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು ೩
ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು
ಹೊಟ್ಟೆಗನ್ನವು ದೊರೆಯದಂತೆ ಮಾಡೋ
ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ-
ದಿಷ್ಟ ಪೂರೈಸಿ ತವ ದಾಸನ ಮಾಡೋ ೪
ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ
ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ
ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ
ವಿಠಲನೇ ತವ ಚರಣ ತೋರಿಸಲಿ ಬೇಕೊ ೫

 

ಇದೇ ಪಲ್ಲವಿಯು ಹಾಡು
೨೫೭
ಹರಿ ಭಜನೆ ಮಾಡು ನೀ ತ್ವರದಿ ತ್ವರದಿ ಪ
ಕರವೀರ ಪುರದಿ ತನ್ನರಸಿಯ ಬಿಟ್ಟು ಭಕ್ತರ
ಸಲಹುವ ನಮ್ಮ ಪರಮ ಪಾವನ ೧
ವರಧ್ರುವರಾಜನು ನರಹರಿ ಸ್ಮರಿಸಲು
ಕರುಣಿಸ್ಯೆವನ ಹರಿ ಭರದಿ ಪೊರೆದೆ ೨
ವನವಾಸದಲಿ ಶ್ರಮ ಅನುಭವಿಸಿದ ಪಾಂಡು
ತನಯರ ಸಲಹಿದ  ೩

 

೩೦೩
ಹರಿ ಶ್ರೀ ರಘುರಾಯಾ ಸಂಸಾರ ಮಾಯಾ
ಬಿಡಿಸೋ ಭವ ಜೀಯಾ ತೋರೊ ನಿನ್ನಯ ದಿವ್ಯ ಕಾಯಾ
ಕೊಡು ನೀ ಸುಮತಿಯಾ ಪ
ಗರುಡವಾಹನಾ ಪರಮಪಾವನಾ
ಶಿರಿಯ ಸುಖದಿ ಮರೆಯಬ್ಯಾಡೊ ಚರಣದಾಸನಾ ೧
ಇಷ್ಟದಾಯಕಾ ಕಷ್ಟತಾರಕಾ
ಸೃಷ್ಟಿ ಪತಿಯೆ ಕೊಟ್ಟು ಸಲಹೊ ಮೋಕ್ಷದಾಯಕಾ೨
ನಾಶರಹಿತನೇ ವಾಸುದೇವನೇ
ಪೋಷಿಸೊ ತವ ದಾಸನಾ ಹನುಮೇಶ ವಿಠಲನೇ೩

 

೩೦೪
(ಊ) ಲೋಕನೀತಿ
ಹರೇ ಪಾಹಿ ಮಾಂ ಸದಾ ಪ
ಭವದೊಳೆನ್ನ ಬಳಲಿಸಲಿ ತವ ಹಿತವೇನಿಹುದಿದರೊಳು
ತವಕದಿಂದ ಕೊಡು ದಯಾಳು ನವವಿಧ ಭಕುತಿ ನಿನ್ನೊಳು ೧
ಲೋಕ ಪಾಲಕನೆಂಬೊ ಬಿರುದು ಈ ಕಾಲಕೆ ತೋರೊ ಒಲಿದು
ಸಾಕಲಾರೆನೆನಲು ಬಿಡದು ನೀ ಕರುಣಿಸು ದಯಾಸಿಂಧು ೨
ಧೀರ ಶ್ರೀ ಹನುಮೇಶವಿಠಲಾ ಮೀರಿದ ಕಾರ್ಯವು ಇದಲ್ಲಾ
ಸಾರ ಮಾರ್ಗ ತೋರಿ ಸುಫಲಾ ಮಾರಜನಕ ಕೊಡು ಗೋಪಾಲ ೩

 

೩೧೮
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ
ಹೀಗೆ ದಿನಗಳಿವಂಗನಿಗೆ ಪ
ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ
ತಿಳಿದ್ಹಾಗೆ ನಡೆವಳ ಅ.ಪ.
ಉದಯದಲೆದ್ದತಿ ಸಜಮಲಳಾಗಿ ತಾ
ಮುದದಿ ಪತಿಗೆ ನಮಿಸದವಳಿಗೆ
ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ
ಮಾಧವನ ಭಕ್ತಿಲಿ ಸ್ತುತಿಸದವಳಿಗೆ
ಪದುಮನಾಭನೇ ಸರ್ವಪರನೆಂದು ಅರಿಯದೆ
ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ ೧
ಹರಿದಿನದಲಿ ಉಂಡು ಹರಿಯನ್ನದಲೇ ಊರ
ತಿರುಗಿ ಹೊತ್ತು ಕಳೆವಳಿಗೆ
ಸರಸದಿ ನರಹರಿ ನಾಮ ಸಂಕೀರ್ತನೇ
ಇರುಳು ಜ್ಯಾಗರ ಮಾಡದವಳಿಗೆ
ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ
ತರು ಹೋಗೆನುತ ತನ್ನ ಪತಿ ಹೊರಗ್ಹಾಕ್ವಳ ೩
ಗುರು ಹಿರಿಯರ ಅತ್ತೆಮಾವರ ಜರಿದು ತಾ
ಹಿರಿಯಳು ಮನಿಗೆ ನಾನೆನುತಿರ್ಪಳು
ಪರರ ನಿಂದಿಸಿ ಭೂಸುರರು ಬಂದರೆ ಅನ್ನ
ದೊರಕದೆನುತ ಹೇಳಿ ಕಳಹುವಳ
ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ
ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ ೩
ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ
ಪತಿಯ ಸೇವೆ ಮಾಡದಿರುವಳಿಗೆ
ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ
ಪರ ಪತಿ ನೋಡ್ವಳಿಗೆ
ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ
ಸಕಲ ಭೂಷಣವೆಂದರಿಯದವಳಿಗ್ಹಾಂಗೆ ೪
ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ
ಐವರ ಕೂಡ ಧಾರೆಯರೆಸಿಕೊಂಡಾ
ಪರಮ ಪಾವನಳಾದ ಭಾರತೀ ದೇವೇರ
ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ ೫
ವನವಾಸದಲಿ ಪಾಂಡು ತನಯರ ಕೂಡ ತಾ
ಧನ ಸುಖ ಬೇಡದೆ ಪೋದವಳು
ಘನ ಹಸಿವುತೃಷೆಯಿಂದ ಅನ್ನ ಬೇಡಿದ
ದುರ್ವಾಸಾದಿಗಳನು ಆದರಿಸಿದವಳಾ
ಆಜನನಿ ದೃಪವ ನಂದನಿಯ ಕೃತ್ಯಗಳನ್ನು
ನೆನೆದು ತನ್ನಯ ಮನವನ್ನು ತೊಳೆಯದವಳು ೬
ಮರುತಂತರ್ಗತ ಸ್ವಾಮಿ ಸಲಹೆನ್ನದೇ
ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ
ನರಕ ಸಾಧನ ಕರ್ಮ ಮಾಡ್ವಳಿಗೆ
ಪರಮ ಪಾವನನಾದ ನ
ನೆರೆ ನಂಬದಲೇ ದೇಹ
ಸ್ಥಿರವೆಂದು ತಿಳಿವಳಿಗ್ಹ್ಯಾಂಗ ೭

 

ಗಾನಲೋಲನಾದ ಶ್ರೀನಿವಾಸನಾ
೨೪೯
ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ
ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ
ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ
ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ ೧
ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ
ನೀಲಮೇಘ ಲಕುಮೀಲೋಲನಾ ವಿಶಾಲನಾ ೨
ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ
ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ ೩
ಆನಂದನಾ ದಯಾವೃಂದನಾ ಮುಕುಂದನಾ
ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ ೪
ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ
ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ ೫

 

ಹಾಡಿನ ಹೆಸರು :ಗಾನಲೋಲನಾದ ಶ್ರೀನಿವಾಸನಾ
ಹಾಡಿದವರ ಹೆಸರು :ಶೇಷಪ್ರಸಾದ್ ಎಸ್.
ರಾಗ :ಆಹಿರ್ ಭೈರವ್
ತಾಳ :ತ್ರಿಶ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನರಹರಿಯ ಗುಣ
೩೧೦
ನರಹರಿಯ ಗುಣ ಕೊಂಡಾಡುವುದೇ ಲೇಸು
ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ
ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ
ಒಳ್ಳೆಯವನೆನಿಸುವ ಬಡತನವೇ ಲೇಸು
ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ
ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು ೧
ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ
ಸಾಲಿಲ್ಲದ ಮನೆಯಲ್ಲಿಹುದೇ ಲೇಸು
ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ
ಲೋಲನಾ ಪಾದದಲ್ಲಿರುವುದೇ ಲೇಸು ೨
ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ
ತನ್ನವಳ ಕೂಡ ಬಡಿದಾಡುವುದೇ ಲೇಸು
ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ
ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು ೩
ತಾನು ಮಾಡಿದೆನೆಂಬುದಕಿಂತ ಹರಿಯ
ಆಧೀನವೆಂದರಿಯುವುದು ಪರಮ ಲೇಸು
ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ
ಜ್ಞಾನಿಯಾದವನ ಸಲಹುವುದೇ ಲೇಸು ೪
ದುಷ್ಟ ಮನುಜನು ಮಾಡುವ ಕೃಪೆಗಿಂತಲೂ
ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು
ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ
ವಿಠಲನ ಧ್ಯಾನದ ಸುಖವೇ ಲೇಸು ೫

 

ಹಾಡಿನ ಹೆಸರು :ನರಹರಿಯ ಗುಣ
ಹಾಡಿದವರ ಹೆಸರು :ರಾಜೇಶ್ ಪಡಿಯಾರ್
ರಾಗ :ಭೀಮ್‍ಪಲಾಸ್
ತಾಳ :ಕೆಹರವ ತಾಳ
ಶೈಲಿ :ಹಿಂದೂಸ್ತಾನಿ
ಸಂಗೀತ ನಿರ್ದೇಶಕರು : ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನೋಡಿ ಧನ್ಯನಾದೆನಾ
೨೪೫
ನೋಡಿ ಧನ್ಯನಾದೆನಾ ಗಜಾನನಾ ಪುನೀತನಾ
ಪಾಡಿ ಭಜನೆ ಮಾಡಿ ಇಡುವೆ ಅಡಿಗಳಲ್ಲಿ ಶಿರವಾ ಪ
ಭಾರತಾರ್ಥ ಬರೆದ ದೇವ ಮಿತ್ರನಾ ಸುಪುತ್ರನಾ
ಮಾರನಾಸ್ತ್ರ ಗೆಲಿದ ನಿಟಿಲನೇತ್ರನಾ ವಿರಕ್ತನ ೧
ಸಕಲ ಶಾಸ್ತ್ರ ತಿಳಿಸೋ ಏಕದಂತನೇ ಬಲವಂತನ
ಮುಕುತಿ ಮಾರ್ಗವ ತೋರೋ ವಕ್ರತುಂಡ ವಿಘ್ನದಂತನೇ ೨
ಜ್ಞಾನವಿತ್ತು ನುಡಿದು ನುಡಿಸೋ ನೀನೆ ನಿಂದು ವದನದಿ
ಮನವಾ ನೊಳು ನಿಲಿಸೋ ಬೇಗದಿ ೩

 

ಹಾಡಿನ ಹೆಸರು : ನೋಡಿ ಧನ್ಯನಾದೆನಾ
ಹಾಡಿದವರ ಹೆಸರು : ಸಿಂಚನ್ ದೀಕ್ಷಿತ್
ರಾಗ :ದುರ್ಗಾ
ತಾಳ :ದಾದ್‍ರಾ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಪರಮ ದಯಾಕರನೇ
೨೪೬
ಪರಮ ದಯಾಕರನೇ ಗೌರೀಸುತನೇ
ಪರಿಪರಿಯಿಂದಲಿ ಪಾಲಿಸು ಯೆನ್ನನು ಪ
ಸಿದ್ಧಿವಿನಾಯಕ ವಿದ್ಯಾಪ್ರದಾಯಕ
ಸದ್ಬುದ್ಧಿಯ ಕೊಡು ಮೋದಕಪ್ರಿಯನೆ೧
ಮೂಷಕವಾಹನ ದೋಷರಹಿತನೇ
ಅಸುರನಾಶ ಸರ್ಪಾಕಟಿಸೂತ್ರನೇ ೨
ಜಾನಕೀರಮಣ ಶ್ರೀ ನ
ಧ್ಯಾನವ ಕೊಟ್ಟು ರಕ್ಷಿಸೋ ಅನುದಿನ ೩

 

ಹಾಡಿನ ಹೆಸರು :ಪರಮ ದಯಾಕರನೇ
ಹಾಡಿದವರ ಹೆಸರು :ಸುಮಾ ವೆಂಕಟೇಶ್
ರಾಗ : ಹಂಸಾನಂದಿ
ತಾಳ : ಆದಿ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ