Categories
ವಚನಗಳು / Vachanagalu

ನಿಜಗುರು ನಿರಾಲಂಬ ಪ್ರಭು ##ವಚನಗಳು

ಗುರುಕರುಣ ಕಟಾಕ್ಷದಿಂದಾದ ಮೂಲಮಂತ್ರ ಆಧಾರವೆನಿಸುವುದು
ಗುರುಕರುಣದಿಂದಾದ ಸ್ಥೂಲ ಸೂಕ್ಷ್ಮಕಾರಣವೆಂಬ ನಿರ್ವಯವು
ಆಧಾರಕ್ಕೆ ಆದಿಬೀಜಾಕ್ಷರವಾಗಿ ತೋರುವದು.
ಗುರುಕರುಣದಿಂದಲ್ಲದೆ ನಾದ ಬಿಂದು ಕಳಾಚೈತನ್ಯಗೊಂಡು,
ಆದಿಮೂಲಮಂತ್ರವರಿದು ಅಂಗಕ್ಕೆ ಅಸಾಧ್ಯವಾಗಿ
ಲಿಂಗಸಮರಸಭಾವವನರಿಯದೆ,
ಆದಿಪರಶಿವಶಕ್ತಿ ಬೀಜಾಕ್ಷರ ಇಂಬುಗೊಂಡು,
ಹದಿನಾಲ್ಕು ಲೋಕದ ವ್ಯವಹಾರ ಸಾಧಿಸಿಕೊಂಡಿರ್ಪುದು.
ಗುರುಕರುಣದಿಂದಾದ ಚಿತ್ತುಸುಚಿತ್ತು ಅಹಂಕಾರ
ಅವಯವಂಗಳು ಆವಾವ ತೆರನಾಗಿ, ಅಲ್ಪ ಸುಖದ ಇಚ್ಛಾಮಾತ್ರದಿಂದ
ಆ ಓಂ ಬೀಜಾಕ್ಷರಮಂ ಸತ್ತು ಚಿತ್ತಾನಂದ
ಪರಿಪೂರ್ಣ ನೆಲೆಗೊಳ್ಳದೆ ಸತ್ತು ಹುಟ್ಟವುದಕ್ಕೆ ಯತ್ನವಿಲ್ಲದೆ,
ಸತ್ಯ ಸದಾಚಾರದಲ್ಲಿ ನಿತ್ಯನಿಗುರ್ಣಭರಿತನಾಗಿರ್ಪುದು.
ಆದಿಯಾಧಾರ ಬೀಜಾಕ್ಷರ ಮೂಲಮಂತ್ರವೆನಿಸುವದು.
ಕತ್ತಲಿಲ್ಲದ ಬೆಳಗು ನೀನಲ್ಲ(ವೆ), ನಿಜಗುರು ನಿರಾಲಂಬಪ್ರಭುವೆ./1
ಗುರುಕರುಣದಿಂದಾದ ಹೆಣ್ಣು ಹೊನ್ನು ಮಣ್ಣು
ತ್ರಿವಿಧವಸ್ತುಗಳು ಆಧಾರವೆಂಟು.
ಅವಸರವಿಲ್ಲದೆ ಕಣ್ಣುಕಟ್ಟಿದ ಪಶುಗಳಂತೆ ಎಣ್ಣೆ ಬಣ್ಣ ಕುಂಕುಮದ ಆದಿಬೀಜಾಕ್ಷರ.
ಓಂಕಾರದ ಲೀಲೆಯಾ ಮೂಲಮಂತ್ರಮಂ
ಮರೆದು ಸಣ್ಣಾಗಿರ್ಪುದು ಪುಣ್ಯಪಾಪ ವಿಚಾರವಿಲ್ಲದೆ.
ಬಣ್ಣ ಗೆಟ್ಟು ತಾಪತ್ರಯಾಗ್ನಿಯಲ್ಲಿ ನೊಂದುಬೆಂದು
ಇಚ್ಛೆ ಎಚ್ಚರ ಅರಿವು ಎಂಬುವುದಕ್ಕೆ
ಗುರುಕರುಣಕಟಾಕ್ಷವಿಲ್ಲದೆ ಮತ್ಸರದಿಂದ ತಿರುತಿರುಗಿ
ಆಧಾರಕ್ಕೆ ಆದಿಬೀಜಾಕ್ಷರಮಂ ಭ್ರಮೆಗೊಳ್ಳದೆ ಭಾವವನರಿಯದೆ,
ಸಚ್ಚಿದಾತ್ಮಕನು ಹುಚ್ಚುಹುಚ್ಚು ಬೊಗಳುವ ಪರಿ ಇನ್ನೆಂತೊ ?
ಮುಚ್ಚಿಕೊಂಡಿರುವುದು ಮಾಯೆ.
ಬ್ರಹ್ಮವು ತನ್ನಿಚ್ಛಾಮಾತ್ರದಿಂದಾಗುವಂಥ ಪರಿತಾರ್ಥ ನ್ಯಾಯವು ಇನ್ನಾರಿಗೆ ?
ಹೇಳುವುದಕ್ಕೆ ಅಶುದ್ಧವಾಗಿ ತೋರುವುದಲ್ಲದೆ,
ಬೆನ್ನಟ್ಟಿ ಬಾಧಿಸುವುದಲ್ಲದೆ,
ಗುರುಕೃಪಾವಸ್ಥೆಯನ್ನು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ
ಆದಿಬೀಜಾಕ್ಷರ ಮೂಲಮಂತ್ರವೆ ಆಧಾರವೆನಿಸುವುದು
ಅಣುವೆ ಮಾತ್ರವೆಂದು ಮಮಕಾಯ
ಪ್ರತಿಚ್ಛಯವೆಂದು ಪರಮಾನುಬೋಧವೆಂದು
ಕೂಗುವುದಕ್ಕೆ ಪರಮರಾರಾಧ್ಯ ನೀನಲ್ಲ(ವೆ),
ನಿಜಗುರು ನಿರಾಲಂಬಪ್ರಭುವೆ.ಜಾಕ್ಷರಮಂ ಸತ್ತು ಚಿತ್ತಾನಂದ
ಪರಿಪೂರ್ಣ ನೆಲೆಗೊಳ್ಳದೆ ಸತ್ತು ಹುಟ್ಟವುದಕ್ಕೆ ಯತ್ನವಿಲ್ಲದೆ,
ಸತ್ಯ ಸದಾಚಾರದಲ್ಲಿ ನಿತ್ಯನಿಗುರ್ಣಭರಿತನಾಗಿರ್ಪುದು.
ಆದಿಯಾಧಾರ ಬೀಜಾಕ್ಷರ ಮೂಲಮಂತ್ರವೆನಿಸುವದು.
ಕತ್ತಲಿಲ್ಲದ ಬೆಳಗು ನೀನಲ್ಲ(ವೆ), ನಿಜಗುರು ನಿರಾಲಂಬಪ್ರಭುವೆ./2
ಗುರುಕರುಣದಿಂದಾದ ನ್ಯಾಯನಿರ್ಣಯ ಅನರ್ವಯವೆಂಬ ದಿನಸುಗಳು
ಬಾಲಲೀಲಾ ವಾಕ್ಯಗಳಿಂದ ಆಧಾರದಲ್ಲಿ ಆಶ್ಚರ್ಯವಾಗಿ
ಕೂಗುತಿರ್ಪವು ಅನುಭವಸಾರ.
ಆದಿ ಬೀಜಾಕ್ಷರಮಂ ತ್ರಿವಿಧಸಂಧಾನದಿಂದ,
ಆಯಾಸವಿಲ್ಲದೆ ಆಚಾರಕ್ಕೆ ಸೇರ್ಪಡೆಯಾಗಿ,
ವಿಚಾರದಿಂದ ನಾಮಾಮೃತಮಂ ಸ್ವೀಕರಿಸಿ,
ಸದಾಚಾರ ಸನ್ನಹಿತವಾಗಿ ಅಗೋಚರ ಮಾರ್ಗವೆಂದರಿದು,
ಗುಪ್ತಭಕ್ತಿಯಿಂದ ಉಮಾಶಕ್ತಿ ಭಿಕ್ಷಾಟನಂಗೈದು
ಯುಕ್ತಿಜ್ಞಾನ ಆಪ್ತಾಲೋಚನದಿಂದ ಬಹುಮಾನದಿಂದ ಕರೆದುಂಡು
ವಿರಕ್ತಿ ವೈರಾಗ್ಯ ಆನಂದವ ಆಚರಿಸಿ,
ಮಾನಸ ವಾಚಕ ಕಾಯಕ ರೇಚಕ ಪೂರಕ ಕುಂಭಕವೆಂಬ ಷಡುವರ್ಣದ
ದುರಾಚಾರಮಂ ಕಳೆದುಳಿದು, ಮಾಯಾಪ್ರಪಂಚದ
ಆಟವೆನ್ನಲ್ಲಿ ಗಟ್ಟಿಗೊಂಡು, ರಾಯಭಾರಮಂ ನಡೆಸಿದ
ಮಾಯಾವಿರಹಿತ ನೀನಲ್ಲ[ವೆ], ನಿಜಗುರು ನಿರಾಲಂಬಪ್ರಭುವೆ./3
ಗುರುಕರುಣದಿಂದಾದ ಬಾಲ್ಯತ್ವ ಯೌವನ ವೃದ್ಧತ್ವವನ್ನು
ಕಾಲಕಾಲಾಂತರದಲ್ಲಿ ಶೀಲವ್ರತನೇಮವಿಲ್ಲದೆ ಆದಿಬೀಜಾಕ್ಷರ ಮೂಲಮಂತ್ರಮಂ
ಕೇವಲ ಪರಬ್ರಹ್ಮವಸ್ತುವೆಂದು ನಂಬುಗೆಯಿಲ್ಲದ ಕಾರಣ,
ಆದಿ ವ್ಯಾಧಿ ವಿಪತ್ತು ರೋಗರುಜಿನಾದಿಗಳಿಂದ
ಶಿವಧೋ ಶಿವಧೋ ಎಂದು ಮೊರೆಯಿಡಲು,
ಕಾಲಾಂತರನೆಂಬ ಯಮಧರ್ಮನ ಹಲವು ದುರ್ಗುಣವೆಲ್ಲ
ಹೊಲಗೇರಿಯಲ್ಲಿ ಬಲೆಯನ್ನು ಹಾಕಿಹೆನೆಂದು ಹೆಸರಿಟ್ಟು ಕರೆಯಲು,
ಆ ಕಲಿಗಣನಾಥನ ಲೀಲಾಮೋದದಿಂದ
ಐಶ್ವರ್ಯಮಂಬಟ್ಟು ಶೂಲಪಾಣಿಗೆ ತ್ರಿವಿಧಾವಸ್ಥೆಗಳನ್ನು
ಮೇಲಣ ಪರಿಣಾರ್ಥಮಂ ತಿಳಿಸಿಕೊಟ್ಟ, ಆಮೇಲೆ ನಾಲ್ವರು ಗೆಳೆಯ ಬಾಂಧವರು
ಬಯಲುಭಾವ ಚಿತ್ಸ್ವರೂಪರಾಗಿ ಧರ್ಮದ ಮಾರ್ಗದ ಲೀಲೆ,
ಅಧರ್ಮವೆ ಕುಟಿಲ, ಸ್ವಧರ್ಮವೆ ಛಲ.
ಸದಾಧರ್ಮದ ಮೂಲಮಂತ್ರವೆ ಅನುಕೂಲ.
ಅನುಸಾರ ಅತಿಚಮತ್ಕಾರದಿಂದ ಕಾಲಭೈರವಿಯೆಂಬ ಶಕ್ತಿಸಾವನಕೂಡಿ,
ನಲಿನಲಿದಾಡುತ ಕೀಲುಮೇಲಾಗಿ ಬಾಲಭಾಷೆಗಳಿಂದ
ನಾಲ್ಕರ ಅರ್ಥ ಪ್ರಾಣ ಅಭಿಮಾನಮಂ ಕಳೆದುಕೊಂಡಾತ ನೀನಲ್ಲ (ವೆ),
ನಿಜಗುರು ನಿರಾಲಂಬಪ್ರಭುವೆ. /4
ಗುರುಕರುಣಮಂ ಪಡೆದು ಅನುಭವಿಸುವಂಥ
ತ್ರಿವಿಧಸಂಧಾನಗಳು ಉದಯ ಮಧ್ಯಾಹ್ನ ಸಾಯಂಕಾಲವನು
ಆದಿಬೀಜಾಕ್ಷರ ಓಂ ಪಥಮಂ ನೆಲೆಗೊಂಡು,
ಸಾಧನಚತುಷ್ಟಯದಿಂದತ್ತತ್ತಲು, ಬೋಧ ನಿರ್ಗುಣವೆಂಬ, ನಿರಾಭಾರಮಂ ತಾಳಿ,
ಅಂಗಚತುಷ್ಟಯ ಸಂಗಸಮರಸಭಾವಮಂ ಬೆಸಗೊಂಡು.
ಭಂಗಗೇಡಿಗಳ ಅಂಗವಿಕಾರದಿಂದ ಸಿಂಗರಿಸಿರಿ.
ಮಹಾಲಿಂಗದಲ್ಲಿ ಜ್ಞಾನಚತುಷ್ಟಯವೆಂಬ ಫಲಗಳನ್ನು ಭುಂಜಿಸಿ,
ಅಂಜನದೇವಿಯರ ಒಡಗೂಡಿ,
ಆದಿಬೀಜಾಕ್ಷರ ಮೂಲಮಂತ್ರದ ನೆಲೆಯ ಮನೆಯಲ್ಲಿ
ಭಕ್ತಿಗೋಸ್ಕರವಾಗಿ ಬಿಕ್ಷಾಟನಕ್ಕೆ ಅಸೋಜಿಗವಾದ
ಜಂಗಮರೂಪದಿಂದನುಭವಿಸಿ ಶಿವಸುಖಸಾರಾಯಮಂ
ಉದಯಾಸ್ತಮಾನದೊಳು ವೇದವಾಕ್ಯ ಶ್ರುತಿ ಪುರುಣಾಗಮೋಕ್ತದಲ್ಲಿ
ಭಜನೆಯನು, ನಡೆನುಡಿ ಒಂದಾದ ತೆರನನು,
ಬೂದಿಬಡಕರ ಸಂಗದಿಂದ ಗಾದಿಗೋಷ್ಟಿಯಿಲ್ಲದೆ
ಮಹಾದ್ವಾರದ ಹೊರಬಾಗಿಲಲ್ಲಿ ಕುಳಿತು,
ತ್ರಿವಿಧಕ್ಕೆ ತ್ರಿವಿಧ ಪದಾರ್ಥಮಂ ಕೊಟ್ಟು,
ಬೀದಿಬಾಜಾರದಲ್ಲಿ ದಿನಸಿಯಿಲ್ಲದ ಅಂಗಡಿಗಳನ್ನು ಕಟ್ಟಿಕೊಂಡು,
ಆಧಾರಕ್ಕೆ ಅಗೋಚರವಾಗಿ ವಿಧವಿಧದಿಂದ ಶೋಧನ ಗುಪ್ತಾಂತರಮಂ ನಡೆಸಿ,
ಊಧ್ರ್ವ ಅಧೋರ್ವ ತತ್ಪೂರ್ವವೆಂಬ ಮದೋನ್ಮತ್ತದಿಂದ
ಶೂಲವನಿಕ್ಕಿ ಪರಿಶೋಧನ ಪರಮಪ್ರಕಾಶವಾಗಿದ್ದಿಯಲ್ಲದೆ,
ಪರಸಾಧನವೆಂಬ ನಾಟ್ಯವನಾಡಿ ಪಾರಮಾರ್ಥಗುರು ಸಮರ್ಥ ನೀನಲ್ಲ (ವೆ),
ನಿಜಗುರು ನಿರಾಲಂಬಪ್ರಭುವೆ.
ಗುರುಸ್ಥಲದ ಅಭಿಪ್ರಾಯ ಸಮಾಪ್ತ ಮಂಗಳಮಸ್ತು
ಶ್ರೀ ಶ್ರೀ ಶ್ರೀ
ಗುರುಕೃಪಾವಸ್ಥೆಯನು ತಿಳಿವುದಕೆ ಸೂಚನಾರ್ಥಮಂ ಅಹೋ ಸಾರಾಯಮಂ
ಶ್ರೀಗುರು ಪೇಳಿದನು || ವಚನ ||/5
ಪರತರ ಪರಮಾನಂದದಲ್ಲಿ ಲೀಲಾವಿನೋದದಿಂದ
ಪಾರಾಯಣದಿಂದ ನಮೋ ನಮೋ ಎಂದು ಪರಿತಾರ್ಥ ನ್ಯಾಯಮನಿಕ್ಕಿ,
ಗುರುಕಾರುಣ್ಯವ ಪಡಕೊಂಬುವುದಕ್ಕೆ ಅವಿರಳಭಕ್ತಿಯಂ ಮುಂದುಗೊಂಡು,
ಆದಿಬೀಜಾಕ್ಷರವೆ ಸಗುಣವೆಂಬ ಸಹವಾಸದಿಂದ ಸೇರ್ಪಡೆಯಾಗಿ,
ಭೋಗೋಪಭೋಗಿಯೆಂದು ಐಶ್ವರ್ಯಭಕ್ತಿಯಿಂದ ಆಚಾರಮಂ
ಸಗುಣತ್ವ ವಿಶ್ವಾಸದಿಂದ ಕಪ್ಪುಗಾಣಿಕೆಯನು ಕೊಟ್ಟು ಆಶ್ವರ್ಯವಾಗಿ,
ಆನಂದಭಕ್ತಿ ಸಮರಸಭಾವ ಸಗುಣ ನಿರ್ಗುಣ ನಿರಾಭಾರಮಂ
ಅಭ್ಯಾಸದಿಂದ ಗುರುಧ್ಯಾನ ಮೂಲಮಂತ್ರವೆ ಮೃದುತರವಾಗಿ ನಡೆನುಡಿ ಒಂದಾಗಿ,
ಮಾಯೆ ನಿರ್ಮಾಯೆ ಚಿದಂಗಸ್ವರೂಪ ಗಟ್ಟಿಪ್ರಕಾರದಿಂದ
ಆಯಾಸವಿಲ್ಲಡೆ ಭಾವಭ್ರಮೆಗೊಂಡು, ಕಾಯವೆಂಬ ಕರ್ಮದ ಕಟ್ಟಳೆಯನು
ಸದ್ಭಾವ ಸದ್ಗೋಷ್ಠಿ ಸಂಬಂ(ಧ) ದಾಚರಣೆಯಲಿ
ತಟ್ಟಿಮುಟ್ಟದೆ ಗಟ್ಟಿಗೊಂಡಿರ್ಪುದು
ಬಿಟ್ಟರೆ ಕೆಟ್ಟುಹೋಗುವುದು ಕಟ್ಟಕಡೆಗೆ.
ಬಟ್ಟುಕಚ್ಚಿ ಕಣ್ಣುಮುಚ್ಚಿಕೊಂಡು ದಿಟ್ಟನಾಗಿದ್ದಿಯಲ್ಲ (ವೆ)
ನಿಜಗುರು ನಿರಾಲಂಬಪ್ರಭುವೆ./6
ಗುರುಕೃಪಾವಸ್ಥೆಯನು ಆಧರಿಸಿಕೊಂಡಿರ್ಪ ಆತ್ಮನ
ಅಂಗಕರಣಂಗಳು ಅಭಿಧಾನವಾಗಿ,
ಅಯೋನಿಜಾಕ್ಷರಮಂ ಆದಿಮೂಲಮಂತ್ರ
ಮಂಗಳಮಯ ಜ್ಯೋತಿಪ್ರಕಾಶ ಬೆಳಗಿನಿಂದ
ಕಂಗಳಮಂಟಪದ ಸುತ್ತ ಶೃಂಗಾರವರ್ಣವಾಗಿ,
ಮಾಂಗಲ್ಯಸ್ವರೂಪವಾದ ಗುರುಲಿಂಗ ಜಂಗಮ
ಆಚರಣೆಯನು ವಿಚಾರದಿಂದ ಇಂಬಿಟ್ಟುಕೊಂಡು,
ಭೂಚರಿಯೆಂಬ ಮಾರ್ಗದಲ್ಲಿ ವ್ಯಾಪಕನಾಗಿರ್ಪುದು.
ಯೋಚನಮಂ ಬಿಟ್ಟಿರಬಹುದಲ್ಲದೆ, ಖೇಚರಿ ಸಹಚರಿಯೆಂಬ ಸುಮಾರ್ಗವನು
ಆಲೋಚನ ಸೂಚನಾರ್ಥದಿಂದ ನೀಚರ ಸಂಗಮಂ ಮರೆದು,
ಸಚರಾಚರ ಪ್ರಾಣಿಗಳಲ್ಲಿ ವಿಷಯಾತುರನಾಗದೆ,
ಷಣ್ಮುಖಿ ಶಾಂಭವಿಯೆಂಬ ಸನ್ಮಾರ್ಗದಲ್ಲಿ ಆ ಯೋಚನ ಕಾಲಸೂಚನವಾಗಿ,
ಅಪೇಕ್ಷೆಯಿಲ್ಲದೆ ಅಪರೋಕ್ಷ ಮೋಕ್ಷಗತಿಯೆಂದು ಶ್ರುತಿವಾಕ್ಯವಿಡಿದು,
ಮೋಕ್ಷಸಿದ್ಧಿ ಮಮಕಾಯ ಮಂತ್ರಕಾಯ ಕರುಣಿ ಗುರುರಾಯ ನೀನಲ್ಲ(ವೆ),
ನಿಜಗುರು ನಿರಾಲಂಬಪಭುವೆ./7
ಗುರುಕೃಪಾವಸ್ಥೆಯನು ಆವರಿಸಿಕೊಂಡಿರ್ಪ
ಆತ್ಮನ ಅನುಭಾವಸಾರ ಅನುಸ್ಮರಣೆಯಿಂದಾರಾಧಿಸಿ,
ಆ ಓಂ ಬೀಜಾಕ್ಷಾರ ಮುಂತಾಗಿ ಆದಿ ಆಧಾರವಿಡಿದು,
ಇಹಕ್ಕೂ ಪರಕ್ಕೂ ಎರಡರಲ್ಲಿ ಸಾವಧಾನವೆಂಬ ಸಿದ್ಧಾಸನದಲ್ಲಿ ಕುಳ್ಳಿರ್ದು,
ಪದ್ಮನಾಭನ ಮನೋ ಆನಂದವನು
ಕ್ಷಮೆ ದಮೆ ಶಾಂತಿ ಸೈರಣೆಯಿಂದ ಸವಿಸ್ತರವನೊಳಕೊಂಡು,
ಗಾವಿಲಮನುಜರ ಸಂಗವಿಲ್ಲದೆ,
ಪದ್ಮಾನಾಭನ ಮನೋ ಆನಂದವನು
ಕ್ಷಮೆ ದಮೆ ಶಾಂತಿ ಸೈರಣೆಯಿಂದ ಸವಿಸ್ತರವನೊಳಕೊಂಡು,
ಗಾವಿಲಮನುಜರ ಸಂಗವಿಲ್ಲದೆ,
ಪದ್ಮಾಸನವ ಬಲಿದು ಶಿವೋಹಂ ಬ್ರಹ್ಮವೆಂದು
ಸಮ್ಯಜ್ಞಾನ ಸಮರಸಭಾವದಿಂದಾಚರಿಸಿ,
ಮಾಯಾಮಂತ್ರಮಂ ಆಯಾಸವಿಲ್ಲದೆ
ಅಘೋರಮಂತ್ರವಾದ ಅಂತರಮಾರ್ಗದಲ್ಲಿ ನಿಲ್ಲಿಸಿ,
ವೀರಾಸನವನಿಕ್ಕಿ ಧೈರ್ಯ ತ್ಯಾಗದ ಮಾಡಲೋಸುಗ,
ಪರಿಯಾಯದಲ್ಲಿ ವೀರಮಾಹೇಶ್ವರನೆಂಬ
ಜಂಗಮಪರಿಮುಖದಿಂದ ತತ್ಸಂಗಮಾಗಿ,
ಪರಮಾನುಬೋಧತ್ರಯಮಂ ವಿವರಿಸಿ,
ಶಿವಬೀಜಾಕ್ಷರ ಸಾರಾಯಮಂ ಸವಿದುಂಡು,
ಪರಮಜ್ಞಾನ ಪರವಸ್ತುವಿನಿಂದ ಆವಿಭರ್ಾವಮಂ ತೆಗೆದುಕೊಂಡು,
ಅದ್ವೈತಕ್ರಿಯೆಯಿಂದಾದ ಧನಮಂ ನೇಮಿಸಲು,
ಅದ್ವೈತಭಕ್ತಿಯೆಂಬ ಮಹಾಮನೆಯಲ್ಲಿ ಮನಾನಂದಭರಿತವಾಗಿ,
ದೇವತಾಜ್ಞಾನ ಸಮ್ಮಿಶ್ರವಾಗಲು ದೈವದಾರಾಧ್ಯ
ಅವಯವಂಗಳು ಅಲ್ಪಾಶ್ರಯ ಮರೆದು,
ಬಹುಮಾನದಿಂದ ಆಚರಿಸಿಕೊಂಡಿರ್ಪುದು.
ಅಭಿಮಾನಕ್ಕೆ ಕೊರತೆಯಾಗದೆ ಸ್ವಾಭಿಮಾನ ನೀನೆಯೆನಗಲ್ಲ (ವೆ),
ನಿಜಗುರು ನಿರಾಲಂಬಪ್ರಭುವೆ. /8
ಗುರುಕೃಪಾವಸ್ಥೆಯನು ಪಡೆದನುಭವಿಸುವಂಥ
ಮಹಾನುಭಾವಿಗಳ ಸಯಸಂದ ಆಚರಣೆಯ ವಿವರಮಂ ಆದಿ ಬೀಜಾಕ್ಷರಮಂ
ಗುರುದೈವವೆಂದು, ಆಧಾರವೆಂಬ ಅನಾದಿ ಪರಶಿವನೆಂದು,
ಮೂಲಮಹಾವಾಕ್ಯಮಂತ್ರದಿಂದ ಅನುಸ್ಪರಣೆಯಂ ಮಾಡಿ,
ಸಾನುರಾಗದಿಂ ಭಜನೆಯಂ ಮಾಡಿ,
ಮೃಡಲೀಲೆಯಿಂದ ಕಡುಪಾಪಿಷ್ಠರ ಮೂಢತ್ವಮಂ
ನಡೆನುಡಿಯಿಂದಾವರಿಸಿಕೊಂಡು,
ತತ್ವಸಾದಾಖ್ಯವೆಂಬ ಬೆಡಗು ನಿರ್ಣಯಮಂ ಹೇಳಲು,
ದೃಢಮನವುಳ್ಳವರಾಗಲೆಮದು ಬಡಪ್ರಾಣಿಗಳಿಗೆ ಬೇಡಿದ ಪದಾರ್ಥಮಂ ಕೊಟ್ಟು,
ಇಡಾ ಪಿಂಗಳ ಸುಷುಮ್ನವೆಂಬ ನಾಡಿಯನು ಬಿಗಿದು ನೋಡಿ,
ಕುಂಡಲಿಯೆಂಬ ಸರ್ಪನ ಹೆಡೆಯೆತ್ತಿ ಆಡಿಸಲು,
ಆಮೇಲೆ ಗಾಢಮೂಢವಿದ್ಯೆಗಳೆಲ್ಲ ತಡೆಯದೆ
ಬಿಡುಗಡೆಯಾಗಿ ಆಡದಮ್ಮ ಹೊಟ್ಟೆಹೊರೆಯಲೆಂದು.
ಕಡುದುಃಖದಿಂದ ಸುಡುಗಾಡಮಾರ್ಗದಲ್ಲಿ ಹೊಂದಿಕೊಂಡು ಇರುತಿಹನು.
ಅಡವಿ ಅರಣ್ಯಮಂ ಸಂಚರಿಸಿ,
ಒಡೆಯನ ಪದಾರ್ಥ ಒಡೆಯನಿಗೆ ಅರ್ಪಿತವಾಗಲೆಂದು ಇಚ್ಛಿಸಿ,
ಮಡಿಮೈಲಿಗೆಯಿಲ್ಲದೆ ನಿಲುಕಡೆಯಿಂದ ಮಾಡಿದಡುಗೆಯನು ಗಡಿಬಿಡಿಯಾಗದೆ
ಬಡಿವಾರಮಂ ಸಾಕುಸಾಕೆಂದು ಎಡೆಮಾಡಿ ಉಣಿಸಲು,
ಪಡೆದನುಭವಿಸಿದಂಥ ಪ್ರಾರಬ್ಧಭೋಗವನು
ನ್ಯಾಯಯುತಾರ್ಥವಾಗಿ ಆರೋಗ್ಯವೆಂದು
ಐಶ್ವರ್ಯ ನಿಮಗಾಗಲೆಂದು ಪರಮಸಂತೋಷವಂಬಟ್ಟು,
ವಡಿ ಪ್ರಾಸುಯಿಲ್ಲದ ನಡೆನುಡಿವೊಂದಾದ ಮಹಾಮಹಿಮ ನೀನಲ್ಲ(ವೆ),
ನಿಜಗುರು ನಿರಾಲಂಬಪ್ರಭುವೆ./9
ಗುರುಕೃಪಾವಸ್ಥೆಯನು ಪಡೆದು ಅಂತರಮಾರ್ಗದಲ್ಲಿ
ನಿಶ್ಚಿಂತನಿವಾಸಿಗಳಾದ ಮಹಾಮಹಿಮರ
ಮನದ ದಂದುಗವನು ಸ್ವಾನುಭಾವಜ್ಞಾನವೆಂಬ ಮನೆದೈವ,
ಶಿವಾನುಭಾವ, ಓಂ ಬೀಜಾಕ್ಷರವೆ ಅಂತಭರ್ಾವ,
ಆದಿ ಪರಾಶಕ್ತಿ ಅನಾದಿ ಪರಶಿವನೆಂಬ ಮೂಲಮಂತ್ರವೆ
ಗುಪ್ತಪ್ರಣಮದ ಬಲೆಯಲ್ಲಿ ಮನೋನ್ಮಯ ತನ್ಮಯದ ಲೀಲೆ.
ಆನಂದಮಯವಾಗಿ ಧ್ಯಾನ ಮೌನವೆಂಬ
ಸನ್ಮೃದುವಾಕ್ಯಗಳಿಂದ ಉತ್ತರದಿಕ್ಕಿನಲ್ಲಿ ಕುಳಿತು,
ಕತ್ತುಲು ಬೆಳಕೆನ್ನದೆ ತೊತ್ತಿನ ಮಗನಬಹುದೆಂದು
ಯತ್ನವಿಲ್ಲದೆ ಪ್ರಯತ್ನಮಂಬಟ್ಟು,
ತೆತ್ತೀಸಕೋಟಿ ದೇವಾನುದೇವತೆಗಳೊಡಗೂಡಿ
ಮಿತ್ರಬಾಂಧವರನೆಲ್ಲ ಒಕ್ಕಲಿಕ್ಕಿ ಕೂ ಎಂದು ಕೂಗಲು,
ಅಜ್ಜ ಮುತ್ತ್ಯಾ ಮೊಮ್ಮಗನೊಡನೆ ಗೆಳೆಯ ಸಾಲವಳಿಯು
ಬಹುದಿನ ಸಾಗಿ, ಅಳಿಯ ಮಾನದವನೆಂದುಕೊಂಡು,
ಕುಲಕೋಟಿ ಬಳಗವೆಲ್ಲ ಅರಳಿ ಜೋಳಕ್ಕೆ ಮಾರಿ ಮಾರಿ,
ಅರಳಿ ಅಂಬಲಿ ಕಾಸಿದಡುಗೆಯನು
ಅಂಗವಿಲ್ಲದ ಲಿಂಗದೇಹಿಗಳೊಡನೆ ತತ್ಸಂಗದಿಂದ ಉಣನೀಡಿ,
ಭೃಂಗ ಸಂಪಿಗೆ ಮರೆಯಲ್ಲಿರ್ದು
ಅಂತೆ ಗಂಗಾಸಮುದ್ರವೆಂಬ ಸಾಗರದಲ್ಲಿ
ಅಡಗಿರ್ದ ತೆರನಂತೆ ಅನಂಗಸಂಗ ಸುಖಭೋಗಿ.
ನಿಜಗುಣತ್ಯಾಗಿ ನೀನೆ ಎನ್ನೊಳಡಗಿರ್ನೆಯಲ್ಲ(ವೆ),
ನಿಜಗುರು ನಿರಾಲಂಬಪ್ರಭುವೆ. /10
ನಡೆನುಡಿಯಿಂದಾವರಿಸಿಕೊಂಡು ಒಂದಾನೊಂದು ದಿನದಲ್ಲಿ
ಮನಾನಂದವಾಗಿ ಕೂಗುತಿರ್ಪುದೆ ಮನಮೀಸಲು.
ಹೊನ್ನು ಮನ ಮೇರೆ ತಪ್ಪಿದ ಬಳಿಕ ಇನ್ನು
ತಿಳಿತಿಳಿದು ಮನವೊಲಿದು ನೀನೆಂಬುದೆ ಧರ್ಮಾರ್ಥ.
ನ್ಯಾಯಯುತವಯ್ಯಾ ಪರಮಶ್ರೀ ಗುರುರಾಯ
ನಿಜಗುರು ನಿರಾಲಂಬಪ್ರಭುವೆ.
ಮತ್ತಂ ನೀನೆಂಬುದೆ ಭಕ್ತಿಜ್ಞಾನವೆಂದ ವಿವರವು || ವಚನ ||/11
ಪದಾರ್ಥ ಶುಚಿಪದಾರ್ಥ ಶುಚಿಕಾಯವೆಂದು ಶುಚಿಭರ್ೂತನಾಗಿ,
ಶಿವಸಂಬಂಧದಾಚರಣೆಯಲಿ ಭವಿಜನ್ಮಾಂತರ ಸಹವಾಸ ಮರೆದು,
ಕೇವಲ ಗುರುಪಥ ಮಾರ್ಗದಲ್ಲಿ ಅಯ್ಯಾ ಜೀಯಾ ಎನ್ನಯ್ಯನೆಂದನುಭವಿಸಿ,
ಮನೋಸಹವಾಸದಿಂದ ಓಂ ಗುರು ದೈವವೆಂದು
ಶಿವಸಾರಾಯಸುಖವಂ ನಡೆನುಡಿಯಿಂದಾಚರಿಸಿಕೊಂಡು,
ದೇವದಾನವಮಾನವರೊಳಗೆ
ಓಂ ಗುರುದೇವ ಓಂ ಸದಾಶಿವ ಓಂ ಸದ್ಯೋಜಾತಾಯ
ನಮೋ ನಮೋ ಎಂದು ದೀರ್ಘದಂಡ ನಮಸ್ಕಾರಮಂ ಮಾಡಿ,
ಒಡನಾಡಿ ಅವಿರಳ ಕ್ರಿಯಾಜ್ಞಾನ ಆನಂದವನು ಪಡೆದುಕೊಂಡು,
ನಾಮಾಮೃತವ ಸವಿದುಂಡು,
ಶಿವ ಹರಾಯಭವ ಮೃಡಾಯ ಮೃತ್ಯುಂಜಯವೆಂದು
ಆ ಓಂ ಬೀಜಾಕ್ಷರ ನಿಜವೆಂದು ಶಿವಷಡಾಕ್ಷರಮಂತ್ರದಿಂದ ತರಿವಿಧಾವಸ್ಥೆಯಲಿ
ಸದಾಸನ್ನ ಹಿತನಾಗಿರ್ಪುದು ಬೋಧ ನಿರ್ಗುಣತ್ರಯವು.
ನೀನೆಂಬುದೆ ಎನಗೆ ಮಾರ್ಗಾಚರಣೆಯಲ್ಲವೆ,
ನಿಜಗುರು ನಿರಾಲಂಬಪ್ರಭುವೆ./12
ಮತ್ತಂ ನೀನೆನಗೆಂಬುದು ಯಾಕೆ ಬೇಕು, ನೂಕು ತಾಕು ನೀನೆಂಬುದೆ ಶ್ರುತಿ.
ಪುರಾಣಾಗಮೋಕ್ತದಲ್ಲಿ ಪ್ರತಿಪಾಲನೆಂದು
ನಡೆನುಡಿ ಮಹಾಮನೆಯಲ್ಲಿ ವ್ಯಾಖ್ಯಾನ ಸಾರಮಂ ನೇಮಿಸಲು,
ಲೆಕ್ಕವಿಲ್ಲದಗಣಿತವನು ಮಿಕ್ಕು ಮಾರಿದವರಾರೆಂದು ತಕ್ಕತಕ್ಕಷ್ಟು ಶಿಕ್ಷೆಯ
ಮಾಡಿ,
ಮಿಕ್ಕಾದವರಿಗೆ ಒಕ್ಕಲಿಕ್ಕಿ, ರಕ್ಕಸಿಯೆಂಬ ಮಾಯಾಶಕ್ತಿಯಳ ಬಲೆಯಲ್ಲಿ ಕೊಟ್ಟು,
ಕಕ್ಕುಲತೆಯಿಲ್ಲದೆ ಮೈಮರೆದು,
ದುರಾಚಾರಮಂ ನೋಡಿ ಸಿಕ್ಕು ಸಿಗವಲ್ಲದು,
ವರ್ತಿಸಲು ನಿನ್ನ ವಂಶಾಬ್ಧಿಕನಾದ.
ಅಂತಪ್ಪನ ಅಂಗಕರಣ ಅಭಿದಾನಂಗಳು ಲಿಂಗಕರಣಂಗಳಾಗಿ ಅಳವಟ್ಟು,
ಗುರುಲಿಂಗಜಂಗಮದಾಚರಣೆಯಲಿ
ಮನವ್ಯಸನವಿಲ್ಲದೆ ವಿಷಯಸಂಗಮರಸಂ ಮರೆದು,
ಅನಂಗಸಂಗಸುಖಭೋಗಿ ನಿಜಗುಣತ್ಯಾಗಿ ನೀನೆಂಬುದೆನಗೆ ಶಂಭು ತಾ ಬೆಳಗೆ,
ಈ ಲೋಕಾರ್ಥನ್ಯಾಯ ಸಾಕು, ಯಾಕೆ ಬೇಕು?
ಮೂಕ ಸಕ್ಕರಿ ಮೆದ್ದ ಪರಿಯಲ್ಲವೆ?
ಈ ಕಾಕುಭಜನೆಯನು ಸಾಕುಮಾಡು ಗುರುವೆ.
ಎನ್ನ ಮನಾನಂದದರುವೆ ನಿಜುಗುರು ನಿರಾಲಂಬಪ್ರಭುವೆ./13
ತತ್ವಾರ್ಥನ್ಯಾಯಮಂ ಬಲಿದು,
ಸಯವೆಂದಾರ್ಥ ಪ್ರಣಮಾರ್ಥ ಭಾವಾರ್ಥವೆಂಬ
ತ್ರಿವಿಧ ಸಂಧಾನದೊಳಗೊಂದು ಗುಪ್ತಶಿಕ್ಷದ
ಆಪ್ತಲೋಚನದಿಂದ ಸಾನುರಾಗದಿಂ ಭಜನೆಯನು ಮಾಡಲು,
ಕಿಂಚನ್ಮಾತ್ರ ಫಲಪದಂಗಳನು ಪಡೆದನುಭವಿಸುವಂಥ
ಪ್ರಾರಬ್ಧಭೋಗ ಮೀರಿದ ಮಾತನು,
ಸಾರವೆಲ್ಲವನು ಪರಮಾನುಬೋಧತ್ರಯದಿಂದ
ಗುರುಕೃಪಾಪಾತ್ರನೆಂದೆನಿಸಿ ಪಾರಮಾರ್ಥ ನಿರ್ಣಯಮಂ ಸಾಧಿಸಲು,
ನಿರಾಭಾರಮಂ ತಾಳಿಕೊಂಡು ಸುಮಾರ್ಗ ಪ್ರಕರಣೆಯಲಿ ಸ್ವಾಭಾವಿಕವಾಗಿ
ಅನುಭವಿಸಲು ನಿರರ್ಥಕನಾಗಬೇಕು.
ಕಾಕುಪುರಾಣ ಬೇರಿಲ್ಲವೆ ಪ್ರಭುವೆ. ಆನಂದದರುವೆ ಎನ್ನ ಗುರುವೆ.
ಮತ್ತಂ ನಾನೆ ನೀನೆಂಬುದೀ ಶೋಧನ,
ಆಪ್ತಾಂತಭರ್ಾವದಲ್ಲಿ ಕಾರಣದೊಳಗಣ ಸೂಕ್ಷ್ಮವೂ
ತಾನೇ ತಾನಾಗಿ ಇರ್ದುದದರಿಂದ
ಭೂನಾಥ ಲೋಕೈಕಬಾಂಧವನೆಂದು
ಮನ ಬೇಸರವಿಲ್ಲದೆ ಆನಂದಮಯವಾಗಿ ತಾಗುತಿರ್ಪುದೆ?
ಯೋಗಾಭ್ಯಾಸವನು, ನಾನಾವರ್ಣದ ಪ್ರತಿಚ್ಛಾಯಕ್ಕಾಗಮೋಕ್ತಕ್ಕತೀತ ನೀನೆಂದು
ಆಗದ ಕಾಯಕವನು ಗಟ್ಟಿಗೊಂಡು,
ಈಗ ಆಗೆನ್ನದೆ ಭೋಗಭಾಗ್ಯವನು ಬೇಡದೆ,
ಗಗನಮಾರ್ಗದ ಸೀಗಿಪವಾಡದಲ್ಲಿ ಕುಳಿತು,
ಜೋಗಿ ಜಾಣನೆಂದು ಮನವರಿದು,
ನಾನೇ ನೀನೆಂಬುದು ಪಾರಮಾರ್ಥ ನಿರ್ಣಯವಯ್ಯಾ,
ನಿಜಗುರು ನಿರಾಲಂಬಪ್ರಭುವೆ./14
ಮತ್ತಂ ನಾನೆಂಬುದೆ ಜ್ಞಾನ.
ಭಕ್ತಿಯಿಂದಾದ ಧ್ಯಾನವು ನೆನಹಿನೊಳಗಾನಂದಮಯವಾಗಲು,
ಅನುವಿರಲು ಘನಪದಾರ್ಥಮಂ ಕೊಟ್ಟು,
ಇಹಕೂ ಪರಕೂ ಎರಡರಲ್ಲಿ ಸುಚಿತ್ತಹಸ್ತಮನಿಟ್ಟು,
ವಾಚಕನಾಗಿ ವಚನಾರ್ಥಮಂ ಬೋಧಿಸಲು,
ಅಗೋಚರವಾಗಿ ಸಚರಾಚರ ಪ್ರಾಣಿಗಳೊಳಗೆ
ಶುಚಿಭರ್ೂತನಾಗಿರಲೊಲ್ಲದೆ ನೀಚಾತ್ಮರನು ಮರೆದು,
ಕಾಲೋಚಿತಕ್ಕೆ ಶೀಲವ್ರತನೇಮಂಗಳ ಮಾಡದೆ,
ಲೀಲಾವಿನೋದದಲ್ಲಿ ಕಲಿ ಪ್ರಮಥಾತ್ಮಕನು
ಸುಲಭದಿಂ ಬಾಲಲೀಲಾ ವಾಕ್ಯಂಗಳಿಂದ
ಸಾಲಗ್ರಾಮದ ನಿರ್ಣಯಮಂ ಹೇಳಲು,
ಆಲಿಸೆಂದೆನಲು ಮೂಲದ್ವಾರಮಂ ತಿಳಿಸಲು,
ಕಾಯದ ಕರ್ಮವನು ಸುಟ್ಟು ಭಸ್ಮವಾಗಲು,
ಪ್ರಾಯ ಮೀರಿ ಆಯಾಸವಿಲ್ಲದೆ ಗಾವಿಲಮನುಜರ ಸಂಗಸುಖಂ ಬಿಟ್ಟು,
ಶಿವಶಿವಾಯೆಂದು ಶಿವಪ್ರಣಮವನು, ನಾನು ನೀನೆಂಬುದಿನ್ನು
ಸುಮಾರ್ಗಪ್ರಕಣೆಯಲ್ಲವೆ ನಿಜಗುರು ನಿರಾಲಂಬಪ್ರಭುವೆ./15
ಮತ್ತಂ ನಾನು ನೀನೆಂಬುದೆನಗೆ ಸಾಕು ಬೇಕೆಂಬುವಂಥದು,
ಪ್ರಾಯಶ್ಚಿತ್ತವಲ್ಲದೆ ಸಾಲದ ಸಾಕು, ನಾನೇ ನೀನೆಂಬುದೆ ನೀತಿ.
ಶಾಸ್ತ್ರ ಶಿವಾನುಭಾವವೆಂಬ ಪ್ರತಿಚ್ಛಾಯೆ ಮಮಕಾಯ
ಮಂತ್ರನ್ಯಾಯ ನೀನೆಂದು ಶ್ರುತಿ ವಿಸ್ಮೃತಿ ಪರಶ್ರುತಿಗಳನು
ಸಾಕುತಿರ್ಪವಲ್ಲವೆ ನಡೆನುಡಿ ನಿಲುಕಡೆಯೆಂಬ ಮಹಾದ್ವಾರದಲ್ಲಿ ಕುಳಿತು,
ಅಡಕವಾದಾತ್ಮರುಗಳಲ್ಲಿ ಅನುಭವಿಸಿ ಬೆಡಗು ನಿರ್ಮಾಯಮಂ ಆವರಿಸಲು
ಬೇಡಿದ ಪಡಿಪದಾರ್ಥವನು ಕೊಟ್ಟು,
ನಾಡನಾಳ್ವವ ಐಶ್ವರ್ಯೋಪಚಾರದಲ್ಲಿ ತಿರಿದುಂಡು,
ಪಿಶಾಚಿವೇಷವನ್ನು ಧರಿಸಿಕೊಂಡು ಈಶ್ವರ ನಾಮವೆಂದು ಹೇಳಿಕೊಂಬುವಂಥ
ಪಾರಮಾರ್ಥದ ಅಭಿಪ್ರಾಯವಲ್ಲದೆ, ಶರಣಜನ ಸನ್ನಹಿತ ನೀನಲ್ಲದೆ,
ಕರುಣಾಂತಃಕರಣ ಪೂರ್ಣಜ್ಞಾನಾಂಬುಧಿ ದೈವವೆಂದು ವರ್ಣರತ್ನಾಕಾರಕ್ಕೆ
ಕಾರಣ
ನಿರಾಕಾರವಲ್ಲದೆ, ಕರುಣಿ ಗುರುರಾಯ ಈ ಕಾಕುಪುರಾಣ ಯಾಕೆ ಬೇಕು?
ಸಾಕುಬೇಕೇನಲೊಲ್ಲದೆ ಜೋಕೆಮಾಡು ಗುರುವೆ ಎನ್ನನು,
ನಿಜಗುರು ನಿರಾಲಂಬ ಪ್ರಭುವೆ./16
ಏಕಾರ್ಥ ಬೆರೆದು ಉತ್ತರಾರ್ಥದಲ್ಲಿ
ಚಿತ್ರ ವಿಚಿತ್ರವೆಂಬ ಎಲ್ಲ ಸತ್ತುಚಿತ್ತಾನಂದ
ಪರಿಪೂರ್ಣಮಯವಾಗಿ ನಿತ್ಯನೇಮಂಗಳಿಲ್ಲದೆ,
ಯತ್ನವಿಲ್ಲದೆ ಪ್ರಯತ್ನಮಂಬಟ್ಟು, ಪತ್ನಿ ಪೀತಾಂಬರ ಶಾಲಿಯನುಟ್ಟು,
ವಚನ ಸಂಪಾದಿಸಲಿಲ್ಲವೆಂದು
ಮಾತಿನ ಅಂತರಾರ್ಥ ಸ್ಥಿತಿಗತಿಮತಿ, ಈ ಚೈತನ್ಯವಾದುದೊಂದು ಅನರ್ಥಮಂ
ಅಭಿಪ್ರಾಯ ಕರುಣಿ ಗುರುರಾಯನನು
ಸೂತ್ರಾರ್ಥ ತೂರ್ಯಜ್ಞಾನ ಪ್ರಯುಕ್ತ ಮನನ ಮಾತೃಸ್ಥಾನವಾಗಿರ್ಪುದು.
ಸತ್ಯವಿದನು ಶತ್ರುಗಳಿಗೆ ಅಸಾಧ್ಯವಾಗಿ ತೋರುವನಲ್ಲದೆ,
ಮಿತ್ರಬಾಂಧವರನೆಲ್ಲ ಪ್ರಾಪ್ತಾನುಸಾರ
ಮನೆದೈವವನೊಡಗೂಡಿ ಅರುಹಾಬ್ದಿಯಲಿ ಆರೂಢಪಥಮಂ ನೇಮಿಸಲು,
ಗಾರುಡಮಂತ್ರವೆಲ್ಲವನು ಸುಮಾರ್ಗಾಚರಣೆ ಆನಂದಮಯವಾಗಲು,
ನಿವಾರಣದೊಳಗಣ ಕಾರಣತ್ರಯವೆಂಬ ಸೂತ್ರದಾರವು
ಬೆರೆದೇಕಮಯವಾದುದರಿಂದ
ಅಪರಿಮಿತ ದ್ರವ್ಯವದೆಲ್ಲ ಉಪಜೀವಿಗಳಿಗೆಲ್ಲ ದೊರಕುವುದು,
ನರುಪಮ ನಿರ್ಮಾಯ ನಿರ್ಮೋಹಿಗಳಾದ ಮನೋಭಾವಿಗಳಿಗೆ
ಅಪರಿಮಿತ ಪದಾರ್ಥವದು ಸಂಬಂಧವಾಗುವುದಲ್ಲದೆ,
ಸಂಶಯ ಬಿಡುಗಡೆಯಾಗದಂಥ
ಆಶಾಲಾಂಛನಧಾರಿಗಳಿಗೆಲ್ಲಿಯದೋ ಬೇಸರ ನುಡಿ.
ಜೀವಿಗಳಿಗೆ ಅಸಾಧ್ಯವ ತೋರಬಾರದೆಂದು,
ತನ್ನ ತಾನೆಂಬುದೊಂದು ಪರಿಶಾಸನಾನುಸಾರ ಮನೆದೈವವನೊಡಗೂಡಿ,
ಪರಮ ಗುರುರಾಯ ತನ್ನ ತಾನೆಂಬುದೆ ಪರಿಶಾಸನವಯ್ಯಾ,
ನಿಜಗುರು ನಿರಾಲಂಬಪ್ರಭುವೆ./17
ಮತ್ತಂ ತನ್ನ ತಾನೆಂಬುದೆ ತೂರ್ಯಜ್ಞಾನಪ್ರಯುಕ್ತ,
ಮನನವು ನಿಜ ಅಭ್ಯಾಸಮಾಗಿಹುದರಿಂದ
ಸೋಜಿಗದೊಳಗಣ ಅಸೋಜಿಗಮೆಂದೆನಲಹುದು.
ರಾಜಾರ್ಥನ್ಯಾಯಮನಿಕ್ಕಲು ಹೋಗುವುದೆ ಆಗಲರಿಯದು.
ಆದಿಶಿಷ್ಯ ಆದಿಗುರು ತಾನು ಬೀದಿಬಾಜಾರದೊಳಗೊಂದು
ಉದರಾರ್ಥಉದ್ಯೋಗಮಂ ನೇಮಿಸಲು,
ಅದರ ತಾತ್ಪರ್ಯ ಹೇಳಲುದ್ಯೋಗಿಸಿದರೆ,
ಆಶ್ಚರ್ಯ ಪರಮಾಶ್ಚರ್ಯವಾಗಿರ್ಪುದದರಿಂದ,
ಈ ಅಧಮ ಚಾಂಡಾಲರು ಸಾವಧಾನದಿಂದ
ಬಗಿ ಸೂತ್ರ ಕುಲಗೋತ್ರಮಂ ತಿಳಿಯದೆ,
ಪರ್ಯಾಯದಲಿ ಉದರಪೋಷಕರಾಗಿ ಬೆದರಿಕೊಳ್ಳದೆ,
ಆದಿ ಅನಾದಿ ಪರಶಿವನು ದೈವವೆಂದು
ಸನ್ಮೃದುವಾಕ್ಯಗಳಿಂದ ಸಹವಾಸಮಂಬಟ್ಟು,
ಗಾದಿ ಗೋಷ್ಠಿಗಳಿಲ್ಲದೆ ಆನಂದಮಯ ಲೀಲೆಯಲ್ಲಿ
ಮನೋ ಅಭ್ಯಾಸಿಗಳಾಗದೆ, ಜ್ಞಾನಾಮೃತವನು ಸ್ವೀಕರಿಸದೆ,
ಬರಿದೆ ಬ್ರಹ್ಮವನು ಕೂಗುತಿರ್ಪರಲ್ಲದೆ,
ಆದಿಶಿಷ್ಯ ಅನಾದಿ ಗುರುವಿನಿಂದ ಉದ್ಭವಿಸಿದಂಥ
ಉದರಾರ್ಥ ಉದ್ಯೋಗ ಪಾರಮಾರ್ಥ ಪರಮ ಶ್ರೀಗುರು ಸಮರ್ಥ ನೀನೆಂದು
ನಮಿಸಲರಿಯದೆ, ಮದೋನ್ಮತ್ತದಿಂದ ವಾದ ವಾಗ್ಮೂಲಗಳನ್ನು ಕಲಿತು,
ಬೋಧ ನಿರ್ಗುಣತ್ವಮಂ ಮರೆದು, ಸಾಧು ಸುಮಾರ್ಗಮಂ ಬೋಧಿಸದೆ,
ವಿಧಿ ಪ್ರತಾಪದಿಂದ ತಿರಿದುಂಡು ಸಾಕುಬಾರದೆ.
ಬದುಕಿದೆವೆಂದು ಕುದಿಕುದಿದು ಸಾವರಲ್ಲದೆ,
ಅಧರ್ಮ ಮೂಢಜನರು ಉದಯ ಮಧ್ಯಾಹ್ನ ಸಾಯಂಕಾಲದಲಿ
ನಿನ್ನ ವಂಶಾಬ್ಧಿಕನಾದ ಶಿಷ್ಯೋತ್ತಮನು
ತನ್ನ ಅಭಿಪ್ರಾಯದೊಳಗೊಂದು ತನ್ನ ತಾನೆ ಪ್ರತಿಚ್ಛಾಯೆಯೆಂದು
ಯೋಚನೆಯಂ ಮಾಡಲು, ಸೂಚನಾರ್ಥಗಳಲ್ಲಿ
ತಿಳಿತಿಳಿದು ಸುಮಾರ್ಗಮಂ ತನ್ನ ತಾನೆಂಬುದದರಿಂದಾಚರಣೆ
ಸೈರಣೆಗೆ ಸಮಾನವಾದ ಕರುಣಿ ಗುರುರಾಯ
ತನ್ನ ತಾನೆಂದು ಆವರಿಸಿಕೊಂಡಿರ್ಪೆಯಯ್ಯಾ,
ನಿಜಗುರು ನಿರಾಲಂಬಪ್ರಭುವೆ./18
ಮತ್ತಂ ತನ್ನ ತಾನೆಂಬುದೆ ಬೇಕುಬೇಡೆಂಬುದೇಕಮಾಡು.
ಗುರುವೆ ಏಕಾಕಾರವಾದ ನಿಜಾನಂದದರುವೆ,
ತಾ ತನಗರುಪುವೆನೆಂದು ತಾತ ದಾತ ಅಜತಾತನಾಗಿ, ಸೋಜಿಗ ರೂಪವ ಧರಿಸಿ,
ಓಂ ಬೀಜಾಕ್ಷರವೆ ಮೃದುತರವಾಗಿ ನಾಮಪ್ರೇಮಭಾವದಿಂದೊಡಗೂಡಿ,
ಅಮರತ್ವದೊಳಗನುಭವಿಸಿ, ಮೋಕ್ಷಸಿದ್ಧಿಯೆಂದು
ಆಗ ಅರುವುವೆನೆಂದು ಸಿದ್ಧಶುದ್ಧ ಪ್ರಸಿದ್ಧಪ್ರಸಾದದಿಂ ಸಂತೋಷಮಂಬಟ್ಟು,
ಪರಕಾಯ ಪರಪ್ರವೇಶದಿಂದ ಆನಂದಮಯವಾಗಿ ಆರಾಧ್ಯನೆಂದೆನಿಸಿ,
ಆದ್ಯರಿಗೆಲ್ಲ ಚಿದಾಮೃತ ಬೋಧಮಂ ಕುಡಿಸಿ,
ಚಿದಾನಂದಮಯಸ್ವರೂಪವಾಗಿ,
ಚಿತ್ಪ್ರಕಾಶವೆಲ್ಲ ಪರಮಪ್ರಕಾಶವಾಗಲು,
ಆವಾಗಲೂ ಹರಹರಾ ಶಂಕರಾ ಗೌರೀವಲ್ಲಭನೆಂದು,
ತತ್ವಾರ್ಥನ್ಯಾಯದಿಂದ ಪಾರಮಾರ್ಥವೆ ಪರಶ್ರುತಿ ಪರವಸ್ತು
ನಿಜಾಚರಣೆಯಲ್ಲಿ ಪರವಶನಾಗಿ ಗುರು ಸಕೀಲಗಳನ್ನಳವಟ್ಟು,
ಗುರು ಮುಟ್ಟಿ ಗುರುವಾಗಿರಬಲ್ಲಾತನು
ಆತನೆ ವೀರಮಾಹೇಶ್ವರನು, ಆತನೆ ಪರಶಿವನು.
ಆತನು ತಾನು ಜಾತಿ ಅಭಿಮಾಗಳೆಲ್ಲ
ಕೂಡಿಕೊಂಡು ಮೃಡಲೀಲೆಯಿಂದ ತಿರಿದುಂಡು ಸಿರಿಸಂಪತ್ಕರವುಳ್ಳಾತನಾಗಿ,
ಅರಿವು ಕುರುಹು ಕೂನವಿಲ್ಲದೆ ಎಲ್ಲರೊಳಗೆಲ್ಲ ಬಲ್ಲಿದನು.
ಅಲ್ಲಮಪ್ರಭುದ್ದನು, ಖುಲ್ಲ ಬಿಜ್ಜಳನ ಹಲ್ಲು ಮುರಿದನು.
ತನ್ನ ತಾನೆಂಬುದ, ಬೇಕು ಬೇಡೆಂಬುದ ಏಕ ಮಾಡುವೆ.
ಎನ್ನಭವ ಶಂಭು ಶ್ರೀಗುರುವೆ, ನಿಜಗುರು ನಿರಾಲಂಬಪ್ರಭುವೆ.
ಸಾಧನ ಗುಪ್ತಭಾವ ಧರ್ಮಾರ್ಥನ್ಯಾಯ ಸುಮಾಪ್ತ ಮಂಗಳ ಮಹಾಶ್ರೀ.
ಗುರುವು ಶಿಷ್ಯನಿಗೆ ನಿರೂಪ ಮಾಡಿದ್ದು || ವಚನ ||/19
ಎಲೆ ಮಗನೆ, ಶ್ರೀಮತ್ ಸಚ್ಚಿದಾನಂದ
ಶೀಲವ್ರತನೇಮವಿಲ್ಲದೆ ಕುಲಗೇಡಿ ಛಲಗೇಡಿ,
ಲೋಕಾತ್ಮರು ಬೋಗಳುತಿರ್ಪರಹಿತನೆಂದು ತಿಳಿಯದೆ,
ನಿರ್ಮಲವಾದಾತ್ಮನೆಂದು ದುಭರ್ಾವ ದುಗರ್ೋಷ್ಠಿಯಿಂದ
ಆಚರಿಸುವಂಥವರಭಿಮಾನಿಗಳು ಗುರುವೆಂದರಿಯರು.
ಈ ನರಪ್ರಾಣಿಗಳು ಹರಗುರುವಿಂದಧಿಕಮಾಗಿಲ್ಲವೆಂದು ಸ್ತೋತ್ರವ ಮಾಡರು.
ಎಲೆ ಮಗನೆ ನೀ ಎನ್ನ ಆಲಯದೊಳಗೊಂದು ನಾಲ್ವರಿಗ್ಹೇಳಿ,
ಬಂಧುವರ ಕೂಡಿಕೊಂಡು, ಫಲಾಹಾರ ಪಣರ್ಾಹರ
ಸುವರ್ಣಗಾಳಿಯೆಂಬ ವಣರ್ಾಶ್ರಯದಿಂದ ತಿರಿದುಂಡು ಬಾಳೆಂದು
ಆ ಶ್ರೀಗುರುನಾಥನು ಶಿಷ್ಯನಿಗೆ ಕರ್ಣಬೋಧಮಂ ಕೊಟ್ಟು,
ಪೂರ್ಣಜ್ಞಾನಾಂಬುಧಿಯೆಂಬ ನಾಮಾಮೃತವನು ಕುಡಿಸಿ,
ಮರ್ಮ ಯೋಗಾಭ್ಯಾಸವನು ಸಾಸಿರನಾಮದಿಂದೊಡಗೂಡಿ,
ಈಶ್ವರ ನಾಮದ ಫಲ ನಿನಗಾಗಲೆಂದು ಶಿಷ್ಯಂಗೆ ಬೇಸರವಿಲ್ಲದೆ
ಅವಸರಮಂಬಟ್ಟು ಪರಮಸಂತೋಷದಿಂದ
ಆ ಶ್ರೀಗುರುನಾಥನು ಶಿವಪ್ರಣಮ ಪಂಚಾಕ್ಷರ ಷಡಾಕ್ಷರ ಸಾರಾಯಮಂ
ಸವಿ (ವಾಚ್ಯ)ದಿಂದ ತಿಳಿತಿಳಿಯೆಂದಾತ. ನೀನೆ ಎನಗಲ್ಲವೆ ಎಲೆ ಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./20
ಮತ್ತಂ ಸಾಕ್ಷಿ :ಎಲೆ ಮಗನೆ ಯಾಕೊ ಬಾರೊ ಬಾರೆಂದು
ಕರೆದು ತನ್ನ ಕರಪಾತ್ರೆಯನು ಕೊಟ್ಟು, ಶಿರದ ಮೇಲೆ ಹಸ್ತವನಿಟ್ಟು,
ಈ ನರವಿಂಧ್ಯದೊಳಗೆ ಹರವಿಂದಲಟ್ಟು,
ಪ್ರಾಣಿಯಾಗು ನೀನೆಂದು ಇಷ್ಟಪ್ರಾಣಭಾವಾರ್ಥದಲ್ಲಿ
ಆ ಶ್ರೀಗುರುನಾಥನು ಶಿಷ್ಯಂಗೆ ತತ್ವಾರ್ಥನ್ಯಾಯಮಂ
ಹೇಳುವೆನೆಂದು ಪಾರಮಾರ್ಥ ಹೇ(ಳಿ),
ನಿಮಗೆ ಶ್ರೀಗುರುವಿನಾಜ್ಞೆ ಅಪ್ಪಣೆಯಿಂದ ಕರೆಯಬಂದೆವೆನಲು
ಅದೃಷ್ಟಪ್ರಾಣಿಗಳು ಹೇಳುವರಲ್ಲಾ,
ನಾವು ಬರುವುದಕ್ಕೆ ಹಾಸ್ಯವಾಗಿ ತೋರುತಿರ್ಪುದು.
ನಿನ್ನ ವಶದ ಬಲಿ ಸುಕೃಉತವನು ನಿಮಗೆ ಸ್ವಾಧೀನ ಮೀರಿತೆಂದು
ಬ್ರಹ್ಮೋಪಚಾರವಿಲ್ಲವೆಂದು ಪ್ರಲಾಪಿಸಲು,
ಆ ಮಹಾಗುರುದೇವನು ‘ಎಲೆ ಮಗನೆ ಬಾರೆಂದು’ ಕರೆದು,
ಅಲ್ಪಸುಖದುಃಖವದು ನಿನಗಿಲ್ಲದೆಹೋಯಿತು.
ಕಲ್ಪನೆ ಬಿಡುಗಡೆಯಾಗುವುದೆಂದು ಒಪ್ಪ ಹೆಸರುಗೊಂಡು,
ಮುಗ್ಧಸಂಗಯ್ಯನೆಂದನುಭವಿಸು.
ಮೃದುವಾಕ್ಯದಿಂದ ಹೃದಯದಲ್ಲಡಗಿ, ಶೂನ್ಯಸಿಂಹಾಸನದಲ್ಲಿ ಕುಳ್ಳಿರಿಸಿ,
ತನ್ನ ಕರುಳು ತೆಗೆದು ಕೊರಳಿಗೆ ಹಾಕಿ,
ಎನ್ನಳಿಯನೆಂದು ಮಾನಮನ್ನಣೆಯ ಕೊಟ್ಟು,
ಬಹುಮಾನದಲಿ ಶ್ರೇಷ್ಠನೆಂದು ಹೇಳಿಕೊಂಬುವಂಥದು
ಜ್ಞಾನಗುರುಮೂರ್ತಿ ನೀನೆ ಎನಗಲ್ಲವೆ,
ನಿಜಗುರು ನಿರಾಲಂಬಪ್ರಭುವೆ./21
ಮತ್ತಂ ಸಾಕ್ಷಿ:ಎಲೆ ಮಗನೆ ಬಾ ಎಂದ ಕರೆಯಲು,
ಎನ್ನ ಬಾಳುವೆ ನೋಡಿದೆಯಾ, ಕರೆದ ಮಾತ್ರಕೆ ಸಮಾನವಾಗದಾಯ್ತು,
ಆದರಾಗಲಿ, ಆ ಅಧಮ ಚಾಂಡಾಲರು
ಏನೆಂಬುವರೆನಗೆ ಕೇಳಿದೆಯಾ? ಕೂಳಗುದಗನೆಂಬುವರು.
ಮಾದರ ಚೆನ್ನಯ್ಯನೆಂಬ ಶಿವಶರಣನ ಅಂಬಲಿ ಸವಿದು ಕೊಳಗುದಗನಲ್ಲದೆ,
ಇಂಥ ಹಲವು ಮಾದಿಗರ ಭಕ್ತರ ಮನೆಯಲ್ಲಿ ತಿರಿದುಂಡು ಕೂಳಗುದಗನಲ್ಲವು.
ಬೋಳಶಂಕರ ನಾನಲ್ಲವು, ಎನ್ನನು ಬಹಳ ದರಿದ್ರನೆಂದು ಹೇಳುವರು.
ವಾದವಾಕ್ಯಗಳಲ್ಲಿ ನಾನು ದರಿದ್ರ, ಅನುಭವಿಸುವಂಥದು.
ಶ್ರೀರುದ್ರನ ಮಗನಾದ ವೀರಭದ್ರಗೆ ಎಚ್ಚರಲ್ಲದೆ,
ಈ ಕ್ಷುದ್ರ ದೈವ ನೀಚಾತ್ಮರು ನರರು ವಾಚರ್ಾಕರಿಗೆ
ಎನ್ನಾದರತ್ವ ಅಳವಟ್ಟೀತೆ? ಅಳವಡದು.
ಎನ್ನನು ಅಪರಾಧಿ ನಿರಪರಾಧಿ ಪರಶಿವನೆಂದು
ಶರಣ ಸಂಗನಬಸವೇಶ್ವರನು ಕರುಣಿ ಗುರುರಾಯ ಅಲ್ಲಮಪ್ರಭು
ಸಿದ್ಧನೊಳಗೊಂದು
ಪಂಚಪರುಷವೆಂಬ ಸಂಚಗಾರ ಕನ್ನ ತೆಗೆದುಕೊಂಡು,
ವಂಚನೆಯಲ್ಲಿದೆ ಅಪರಾಧಿ ಪರಶಿವನೊಳಗಾಡಿಕೊಂಡು,
ಕಲ್ಯಾಣ ಕಟಗೇರಿಯಾಗಲೆಂದು ಬೆಲ್ಲದ ಮಾತಿನಿಂದ ಮುಂಡಿಗೆಯನಿಕ್ಕಿ,
ಖುಲ್ಲ ಬಿಜ್ಜಳನ ವಾಕ್ವಾದವ ಗೆಲಿದು, ಮೂಲಪುರುಷನಾಗಿ,
ಬಾಲಲೀಲಾವಾಕ್ಯಗಳಿಂದ ಆದಿಸಂಗನಬಸವೇಶ್ವರನು
ಅನಾದಿ ಪರಶಿವನೊಳಗಾದುದೊಂದು.
ಈ ಅಧಮ ಚಾಂಡಾಲರು ಎಲೆ ಮಗನೆ
ಎನ್ನ ನಿನ್ನ ಸೋಲುಗೆಲುವೆನ್ನಬೇಕೆಂಬ ಮಾತನಾದರದಿಂದ
ಕಲಿಹುರ ದಯಾನಿಧಿ ನೀನೆ ಬಾಳುವೆಯಲ್ಲದೆ, ಜಾಳುಮಾತುಗಳಲ್ಲವೆಂದಾತ.
ಶ್ರೀಗ(ರ)ಳ ಗುರುಮೂರ್ತಿ ನೀನೆಯೆನಗಲ್ಲವೆ ಶರಭಲಿಂಗವೆ,
ನಿಜಗುರು ನಿರಾಲಂಬ ಪ್ರಭುವೆ./22
ಮತ್ತಂ ಸಾಕ್ಷಿ:ಅಪ್ಪಯ್ಯ ಗುರುರಾಯನೆ ಕೇಳು.
ಎನ್ನರುವಿನಳಗೊಂದು ಪಿರಿದಪ್ಪ ದೊಡ್ಡಿತವಾದ
ಹೆಡ್ಡಕುರುಬನು ಮನೆ ಕಟ್ಟಿಕೊಂಡಿರ್ಪನು.
ಮನ್ಮಥ ವಿಕಾರದಿಂದ ಸನ್ಮತವಾಗಗೊಡೆಲೊಲ್ಲದೆ,
ಉನ್ಮನದಾಚಾರದಲ್ಲಿ ಪುಣ್ಯರೂಪ ವಿಚಾರವನು
ತಿಳಿಗೊಡದಾದ ಕಾರಣ, ಏನೆಂದರಸುವೆನು ಜ್ಞಾನಬಹನಾಗಿ.
ಮನಸ್ಸಾಕ್ಷಿಯಿಲ್ಲದೆ ಜನನಮರಣಂಗಳಲ್ಲಿ ಬಂಧಿಸಿರ್ಪುದು ಇಂದೆನ್ನ.
ನಿಮ್ಮ ಬಾಧ್ಯವೆಂದು ಕಂದನೆಂದು ಸಲುಹಿ,
ನಂದಿ ಮುದ್ರೆಯ ಕೊಟ್ಟು, ಬುದ್ಧಿಹೀನನ ಮಾಡದೆ,
ಬದ್ಧಭವಿಗಳ ಸ್ನೇಹದಿಂದ ಗುದ್ದಾಟವ ತಂದೊಡ್ಡದೆ,
ಮಾನವನೆಂದು ಕಾಣಿಸಿಕೊಳ್ಳದೆ ನಿಮ್ಮ ಶಿವಶರಣರ
ಸಂಗಸುಖಮಂ ಪರಿಣಮಿಸುವುದರಿಂದ
ಎನಗೆ ಜ್ಞಾನರಂಜನೆಯಾಗುವುದಲ್ಲದೆ,
ಧ್ಯಾನಿ ಸುಮ್ಮನಿರಬಾರದೆಂದು ನಿನ್ನನರಿದಾತ್ಮಾಂತರಂಗದಲ್ಲಿ ಮನವ್ಯಸನವಿಲ್ಲದೆ
ದಿನಂಪ್ರತಿಯಲಿ ಅಪ್ರತಿಮ ಮಹಿಮ ನೀನೆಂದು ಮನಮನ
ವತನದಲ್ಲಿ ಕುಳಿತು ಘನಪದಾರ್ಥಮಂ ಭೋಗಿಸುವೆನೆಂದು
ನಿಮ್ಮ ನಾಮದ ಬೆಡಗ ಆಡಿ ಹರಸುತಿರ್ಪುದೊಂದು.
ತಮ್ಮ ತಮ್ಮ ನ್ಯಾಯ ಹೊನ್ನು ಹೆಣ್ಣು ಮಣ್ಣಿನೊಳಗಿರ್ದುದು.
ಕಾರಣ ತನ್ನನ್ನು ಬೆನ್ನಟ್ಟಿ ಬಾರಿಸುವನಲ್ಲದೆ,
ತನ್ನ ಪ್ರತಾಪವನು ಕಣ್ಣಿನೊಳಗಿಟ್ಟುಕೊಂಡು
ಬಣ್ಣಕ್ಕೆ ಬಾರದಿರ್ದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಅಯ್ಯಾ ಗುರು ಮಹಾರಾಜಾ ಶಂಭೋ,
ಎನ್ನನ್ನು ನಿಮ್ಮ ಕಾರಣಿಕರ ಮಾಡಿ ಸಲಹು ಕಂಡಯ್ಯಾ ಎಲೆ ಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./23
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯನೆ ಕೇಳು
ಈ ಅಳಿಯನ ಅಭಿಮಾನವನು ಹರಿಸೆ,
ನಿನಗಲ್ಲದೆ ಇಂಥ ಮೂಳ ಪರಮ ಚಾಂಡಾಲ
ಅಜ್ಞಾನ ಮೂಢಾತ್ಮರು ಬಲ್ಲರೆ? ಅರಿಯರು.
ಪಂಥವ ಮಾಡುವರಯ್ಯಾ ಸಂತೆಯ ಸೂಳೆಮಕ್ಕಳಿವರು.
ಮತ್ತಿನ ಭಕ್ತರಲ್ಲದೆ ಚಿಂತೆ ಮಾಡುತಿರ್ಪರಯ್ಯಾ.
ಇಂತಿವರೊಳಗೆ ನಾನೆಂತು ಜೀವಿಸುವೆನಯ್ಯಾ.
ನ್ಯಾಯವಿಲ್ಲದ ಅನ್ಯಾಯವ ನುಡಿವವರ ಸಂಗದಿಂದೊಂದು
ಬೆಡಗು ಬಿನ್ನಾಣವಾಗಲು, ಮೃಡರೂಪದಿಂದುದ್ಭವಿಸಲಾಗ
ನುಡಿಜಾಣನಾದುದರಿಂದ ಇಂಥ ಗಾಢಮೂಢವಿದ್ಯೆಗಳೆಲ್ಲ ಬಲ್ಲೆವೆಂದು
ಮೂಢಾತ್ಮರು ಕಡುಕೋಪದಿಂದ ದುಡುಕುವರಲ್ಲದೆ,
ಬಡಿವಾರಮಂ ಸಾಕುಸಾಕೆಂದು ಮತ್ಸರವೆಂಬ ಛಲವನು ಗಟ್ಟಿಗೊಂಡು
ಎಚ್ಚರಿಲ್ಲದೆ ಹುಚ್ಚುಚ್ಚಾಗಿ ಬೊಗಳುವರಯ್ಯಾ ನಿಮ್ಮನರಿಯದಧಮರು.
ನಾ ನಿಮ್ಮ ಅಚ್ಚ ಪ್ರಸಾದಿಯಾಗಿ ಮುಂಚೆ ಹೋಗಬಾರದೆಂದು
ಸಂಚಿತಕರ್ಮವನು ಅಂಜಿಕೆಯಿಂದ
ನಿಮಗರ್ಪಣವ ಮಾಡಿ ಮುಚ್ಚಿಕೊಂಡಿರುವೆನಲ್ಲದೆ,
ಮೂರಾರು ಮುವತ್ತಾರು ಉತ್ತರಕ್ಕೆ ಆದುದು ಅರುವತ್ತಾರು.
ತೊತ್ತಿನೊಳಗೊಂದು ಸತ್ಯ ಅನಿತ್ಯವಿಲ್ಲದೆ, ಉತ್ತಮಾಂಗದಲ್ಲಿ ಚಿತ್ತಪಲ್ಲಟಲಾಗದೆ
ಎತ್ತಿ ಮುದ್ದಾಡುವಂಥದು. ಸತ್ಯಮಂ ಕೊಡು ಕೊಡು ಎಂದು
ಸ್ತೋತ್ರವ ಮಾಡುವಂಥದೆ ಗುರು ಶಂಭುಲಿಂಗವೆ.
ನಾನಾವ ಕಡೆಯಲಿ ಅದ್ವೈತರೂಪವಾದುದೊಂದು
ಆತ್ಮವಿಚಾರವನು ತಿಳಿಗೊಡದೆ, ದೇವತಾಪುರುಷನಾಗಿ,
ಸ್ವಾಭಾವಿಕ ನೀನಲ್ಲದೆ, ಆ ಮಹಾಗುರು ದೈವವೆಂದು
ನಮೋ ನಮೋ ಎನುತಿರ್ನೆನಯ್ಯಾ.
ನಮಸ್ಕಾರವೆಂದು ನಿಮ್ಮ ನಾಮಸ್ಮರಿಸುತಿರ್ಪೆನಯ್ಯಾ,
ಅಯ್ಯಾ ಎಲೆ ಲಿಂಗವೆ, ನಿಜಗುರು ನಿರಾಲಂಬಪ್ರಭುವೆ./24
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯನೆ ಕೇಳು, ಎನ್ನಯ ತಾಪತ್ರಯಮಂ.
ವಿಚಿತ್ರದಿಂದ ನಿನ್ನನು ಕಾಡುವುದಲ್ಲದೆ, ಸತ್ಪಥ ಸನ್ಮಾರ್ಗದಲಿ
ಸಾಧು ಸತ್ಪುರುಷರ ಸಂಗದಿಂದೊಂದು ಉದ್ಯೋಗಮಂ ನೇಮಿಸಲು,
ಬಹುಲಾಭದೊಳಗಾದ ಸದ್ಗುರುವೆ ನೀನೆಂದು ಕೂಡಿಕೊಂಡು,
ಶುದ್ಧ ಕರುಣಾಮೃತವು ಸಿದ್ಧಪ್ರಸಾದವವನುಭವಿಸಿ,
ಇಂದ್ರಿಯ ಪಂಚಂಗದ ವ್ಯಾಪಾರ ನಾಟಿ, ಮುದ್ದಿ ಬೆಲ್ಲವಂ ತೂಗಿ ಕೊಟ್ಟು
ಬುದ್ಧಿಹೀನರಿಗೆ ಗದ್ದಲವ ನಡೆಸಿ, ಗುದ್ದಾಟವನಿಕ್ಕಿ,
ಕಡಿಕಲ್ಲು ಕಾಣಿ ತಕ್ಕಡಿ ಎರಡೊಂದರಲ್ಲಿ ನಿನ್ನ ಮರಿಯಾದೆಯೆಂಬುವಂಥದು
ನೀನೆ ಬಲ್ಲೆಯಲ್ಲದೆ ಮತ್ತಾರೂ ಅರಿಯರು.
ಉತ್ತಮರು ಸತ್ಯಶಿವಶರಣರು ನಿಮ್ಮನೆ ಹಾಡಿ ಹರಸುತಿರ್ದರಲ್ಲದೆ
ತಮ್ಮತಮ್ಮೊಳಗೆ ಅಡಕವಾದ ಭಾವಾರ್ಥಂ
ಸುಮ್ಮನಿರಲು ಸಂತೆಯ ವ್ಯಾಪಾರ ನಡೆಯಲು,
ಅಂತಭರ್ಾವದಲ್ಲಿ ನಿಶ್ಚಿಂತನಿವಾಸಿಗಳಾದ ಉತ್ತಮಪುರುಷರು
ಕೆಟ್ಟದಿನಸಿನ ಪದಾರ್ಥದೊಳಗೊಂದು ವಚನಾಭಿಪ್ರಾಯವನು
ಸೇವಿಸುತಿರ್ಪರು.
ಸೇವಿಸುವುದರಿಂದ ಮುಡದಾರಸಿಂಗಿ ಕಾಳಕೂಟವಿಷಯವನು
ಉಳಿಸಿಪ್ಪಗಾಗಲೊಲ್ಲದೆ,
ಹರಗಾಲ ಬರಗಾಲ ಹೊರಗಾಲ, ಇವು ಮೂರು ತ್ರಿವಿಧಾವಸ್ಥೆಗಳಲ್ಲಿ,
ಪಾಷಾಣ ಗಟ್ಟಿಗೊಂಡು, ನಿಜಶ್ರವಣಮಾಗಿ,
ಪ್ರಣಮದಿಂದ ಉದ್ಯೋಗವನು ನಡಸುತಿರ್ಪರಯ್ಯಾ.
ಬದಲಾಮಿ ತೂಕದಿಂದನುಭವಿಸುವಂಥದು,
ಉದ್ದಿಮೆಯೊಳಗೆಲ್ಲ ಬದಲಾಮಿ ಅಜ್ಞಾನಕ್ಕೆ ಮೊದಲು ಬದಲಿಲ್ಲವೆಂದಾತ,
ನೀನಲ್ಲ(ವೆ) ಎಲೆ ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./25
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯನೆ ಕೇಳು
ಗುರುದೈವವೆಂದು ಮಮಕರ್ತನೆಂದನುಭವಿಸಿ,
ಆ ಮಹತ್ತರೊಳು ನಮಃ ಶಿವಾಯ, ನಮೋ ಹರಾಯವೆಂದೆಂಬ
ಪಂಚಾಕ್ಷರ ಮೂಲದ್ವಾರಮಂ ತಿಳಿದು,
ಸಿದ್ಧಂ ಶಿವಗಾರಾಧ್ಯನಾಗಿ, ತಮಗೆ ಬಂದ ಪದಾರ್ಥಮಂ ಭೋಗಿಸಿ,
ಆ ಮಹಾಗುರು ದೈವವೆಂದು ನಾಮವೆಂಬುದಕ್ಕೆ ಬಹುಮಾನಗಾರನಾಗಿ,
ಮಾತನಾಡದೆ ಬಾಯಿ ಬಿಚ್ಚಾಡದೆ,
ವಿವೇಕದಿಂದ ಸ್ವಾಭಾವಿಕರಿಗೆಲ್ಲ ಆನಂದದಲ್ಲಿ ಕುಳಿತು,
ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಅಃ ಎಂಬುದರೊಳಗೊಂದು
ಎನ್ನ ಸ್ವಾಭಿಮಾನಿಗಳು ಬಲ್ಲರೆಂದು ಹೇಳುತಿರ್ಪೆನಲ್ಲದೆ,
ಆಹಾ ನಾನು ಪೂರ್ಣವಿಲ್ಲದೆ ಜ್ಞಾನಭಾವದಿಂದೊಡಗೂಡಿ
ಏನೇನೂ ಅರಿಯದ ಮೂರ್ಖನು, ಮನಬಂದಂತೆ ಕೂಗುತಿರ್ಪೆನು.
ಎನ್ನ ಮೂರ್ಖತ್ವಮಂ
ತನ್ನೊಳಡಗಿದ ನ್ಯಾಯತಾರ್ಥ ಯಥಾರ್ಥ ಕೃತಾರ್ಥ ಭಾವಾರ್ಥಮಂ
ನೀನೆ ಬಲ್ಲೆಯಲ್ಲದೆ ನಾನರಿಯೆನು.
ಈ ಸುಕೃತಮಂ ಅಸುವಿಗಾಧಾರನಾಗಿ, ಅಶ್ಯೋಪಚಾರದಲಿ ವೇಷಧಾರಿಯಾಗಿ
ಮಾಸಾಭ್ಯಂತರದಲಿ ಮರೆದೆಯಾದರೆ,
ನಿಮ್ಮ ಧರ್ಮ, ನಿಮ್ಮ ಸ್ವಧರ್ಮವಲ್ಲವೆ.
ಅಯ್ಯಾ ಎಲೆ ಲಿಂಗವೆ, ಗುರು ಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./26
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ,
ನಾನಾ ಅವಸ್ಥೆಗಳಲ್ಲಿ ಜ್ಞಾನಬಾಹ್ಯನಾಗಿ
ಹೀನಸಂಸಾರವೆಂಬ ಸಾಗರದಲ್ಲಿ ತೇಲುತ್ತ ಮುಳುಗುತ್ತ ಕಾಣಲೊಲ್ಲದೆ,
ವ್ಯರ್ಥಸ್ಯ ಕೆಡುವುದು, ಮಾನಗೇಡಿ ಭಂಗಗೇಡಿಯಾಗಿ ತಿರುಗುವುದು,
ಏತರಿಂದಲೂ ಜೀವ ಶಿವರುಭಯಭಾವವನು ಒಂದೆಯೆಂದು ತಿಳಿದಾದ ಕಾರಣ,
ಮಾತು ಮಾತಿಗೆ ಸಿಟ್ಟುಸೂತಕ ಜಾತಿಸೂತಕ ಜನನಸೂತಕ ಬಂಧವು.
ಅಜ್ಞಾನವಶದಿಂದ ನಾನು ನನ್ನನ್ನು ಮರೆದಾದ ಕಾರಣ,
ಭಾನುಪ್ರಕಾಶ ಬ್ರಹ್ಮಾಂಡದೊಳಗೊಂದು ಪಿಂಡಾಂಡ
ಖಂಡಿತಾರ್ಥನ್ಯಾಯಮಂ
ತಾನೆ ತಾನಾಗಿ ಇಹುದರಿಂದ
ಈ ಅನರ್ವಯದಿಂದ ಅನುಭವಿಸುವಂಥ ಪ್ರಾರಬ್ಧವನು
ಅನ್ಯತಾರ್ಥವೆಂದು ತಿಳಿದು, ತನ್ನೊಳಗೊಂದು ವಿಚಾರಮಂ ಗೋಪ್ಯವಾಗಲು,
ಆ ಜ್ಞಾನಗುರುಮೂರ್ತಿಗಳು ಬಂದು,
ತನು ಮನ ಧನ ಸಾಕ್ಷೀಭೂತನಾಗಿ, ಜನನಮರಣಂಗಳಲ್ಲಿ ತಪ್ಪುಗನ ಮಾಡಿ,
ಮುಪ್ಪು ಆವರಿಸಿಕೊಂಡು ತಿಪ್ಪೆ ಉಪ್ಪರಿಗೆಯಾಗಲೆಂದು
ತನ್ನ ಚರಣಕಮಲಮಂ ಜೋಡಿಸಿ, ನಮಸ್ಕಾರದಿಂದ ನಮಸ್ಕರಿಸಿ,
ಕರ್ಣಬೋಧಮಂ ತುಂಬಿ,
ವರ್ಣನಾಮಾಶ್ರಯದಿಂದ ತಿರುದುಂಡು ಬಾಳೆಂದು ಅಪ್ಪಿ
ಮುದ್ದಾಡುವಂಥದು,
ನಿಮ್ಮ ಧರ್ಮವು, ನಿಮ್ಮ ಸ್ವಧರ್ಮವಲ್ಲದೆ
ಎನ್ನನು ಒಪ್ಪ ಹೆಸರುಗೊಂಡು ಕರೆವವರ ನಾನಾರನು ಕಾಣೆನಯ್ಯಾ,
ಎಲೆಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./27
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು
ಎನ್ನ ತಿಪ್ಪೆಗೆ ಪಟ್ಟಮಂ ಕಟ್ಟಿ, ದಿಟಟನಹುದೆಂದೆನಿಸಿ,
ಬಟ್ಟಬಯಲೊಳಗೊಂದು ಅಟ್ಟುಳಿಗನ ಮಿಂಡಗ ಮಗನೆಂದು,
ಹೊಟ್ಟೆವುರಿಗೆ ಸೂಳೆಮಗನೆ ಅಹೋ ಬಾಯೆಂದು ಕರೆಯಲು,
ನೆಟ್ಟನೆ ಮಾತಿಗಾಗಿ ಕೋಪವಿಲ್ಲದೆ ದಿಟ್ಟವಾಕ್ಯನು ಸೃಷ್ಟಿಕರ್ತನ
ಮಾಡಿಬಿಟ್ಟಿತಲ್ಲದೆ,
ದಿಟ್ಟ ನಾನು ಭ್ರಷ್ಟರ ನಡೆನುಡಿಯನು ಆವರಿಸಿಕೊಳ್ಳದೆ,
ಕಷ್ಟಕರ್ಮವೆಲ್ಲ(ವು) ಅಷ್ಟದಿಕ್ಪಾಲಕನ ಸೇರಿದವು.
ಎಷ್ಟಕ್ಕಷ್ಟೆ ಸರಿಮಾಡಿ ಪರಿತಾಪಮಂ ಬೋಧಿಸಿ,
ಅಷ್ಟಕಷ್ಟೆ ಅನುಕೂಲ ಶಿವಾನುಕೂಲವಾಗಲು,
ಜ್ಞಾನದ ಬಯಕೆಯೆಂದು ತೀರುವುದಲ್ಲದೆ,
ಒಟ್ಟುಕಷ್ಟ ವಂಶಪಾರಂಪರ್ಯ ಗುರುಶಿಷ್ಯನಿಗೆ
ಶರಣಸಂತತಿಗಳಿಗೆ ಹರಗಣಸ್ತೋಮವನು ಬೆರೆದೇಕಮಯವಾಗುವುದು.
ಇದರ ವಿವರವನು ಅರಿಯದ ಮುರ್ಖರಿಗೆ ಆದಿವ್ಯಾಧಿಕಷ್ಟಗಳು ಕಾಡುವುದೆ
ಸಾಕ್ಷಿ.
ಉದರ ನಿಮಿತ್ಯದ ಉರುಲುಗಳ್ಳರಿಗೆ ಒದರಿಕೊಂಬುವುದೆಂತಯ್ಯಾ.
ಏತಕಯ್ಯಾ ಎಲೆ ಲಿಂಗವೆ, ಗುರುಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./28
ಮತ್ತಂ ಸಾಕ್ಷಿ:ಎಲೆ ಮೆಚ್ಚುಗಾರನಾದ ಹುಚ್ಚುಮಗನೆ ಕೇಳೊ.
ಎನ್ನ ವಾಚ್ಯಸಿದ್ಧಗಳಿಷ್ಟು.
ಈ ಲೋಕದಲ್ಲಿ ವಾಕ್ವಾದವ ಕಲಿತು,
ವಾಕ್ಯಾನುಸಾರಮಂ ಅರಿಯದೆ, ದುಃಖದೊಳಗಿಲ್ಲದವರಾಗಿ
ಕಕ್ಕುಲಾತಿಯೆಂಬ ದುಃಖಪ್ರಾಪ್ತಿಗೊಳಗಾಗಿ ಹೋಗುವರಲ್ಲದೆ,
ಸೊಕ್ಕಿನಿಂದ ಅನುಭವಿಸುವಂಥ ಅಧಮರು
ಎನ್ನ ವಚನಸಿದ್ಧಿಯನು ಪಡಕೊಂಡವರೆಷ್ಟು?
ಸೂಚನಬಿನ್ನಹ, ಗಟ್ಟಿಬಿನ್ನಹ ನಡೆಸುವರಲ್ಲದೆ,
ವಚನಾಮೃತಮಂ ಸವಿದುಂಡು ಕಾಲಸೂಚನವ ಚೆನ್ನಾಗಿ ಹೇಳುವವರಿಗೆ
ಮೂಲಪ್ರಣಮ ಪಂಚಾಕ್ಷರ ನಾಲಿಗೆಯಲ್ಲಿ ಅಡಕವಾಗಿರ್ಪುದು.
ದೃಢಮನ ನಂಬಿಗೆಯುಳ್ಳವರಿಗೆ ಬೆಡಗು ಕೂಗತಿರ್ಪುದು,
ಮಡಿ ಮಾನ್ಯಗಳ ನಡೆಸುವುದು.
ಹಾಳಹರಟೆ ಪುರಾಣಗಳನ್ನು ಕಲಿತು,
ಖಾಲಿ ದುವ್ರ್ಯಸನದಿಂದ ಜಾಳುಮಾತುಗಳನಾಡುವವರ ಕಂಡು,
ಕೇವಲ ದಾರಿದ್ರರೆಂದು ಹೇಳುವುದು.
ನಮ್ಮ ಶಿವಶರಣರ ವಾಕ್ಯವನು ವಚನಾನುಭಾವವನು
ಮೂಲಪುರುಷರಾಗಿ ಹಾವಿನಹಾಳ ಕಲ್ಲಪ್ಪಯ್ಯಗಳ
ಸಾಕ್ಷಿಯಿಂದೊಡಗೂಡಿದವರ ಸಾಕ್ಷಿ.
ಜೀವನ ಹಾಳು ಮುದನಹಾಳು ಹುಚ್ಚವೀರಪ್ಪಯ್ಯನೆಂದು ಹೆಸರಿಟ್ಟು
ಕರೆವೆನಲ್ಲದೆ ವಾಚಿಕನಾಗಿ ಜಗಳಾಡುವಂಥದು,
ಎಲೆ ಮಗನೆ, ನಿನ್ನ ಜ್ಞಾಪಕವಲ್ಲವೆಂದಾತ.
ನೀ ಎನ್ನೊಳಗಲ್ಲವೆ ಎಲೆ ಲಿಂಗವೆ, ಗುರು ಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ. /29
ಮತ್ತಂ ಸಾಕ್ಷಿ :ಎಲೆ ಮಗನೆ ಕೇಳು.
ಇಂದಿನ ದಿವಸವೆಂದು ನಾಳಿನ ದಿವಸವನು ತಿಳಿದೆನೆಂಬುದೆ ಗಟ್ಟಿತನವ
ಆಗಗೊಡದು.
ಸುಳ್ಳೆನಲಾ ಜಗವ ನಡೆಸುವಂಥದು ತಳ್ಳಿಗಾರನ ಸಂಗವಲ್ಲದೆ,
ಬಳ್ಳೇಶ ಮಲ್ಲಾರ್ಯರು ಇದೇ ಸುದಿವಸವೆಂದು ನಂಬಲು,
ಬಳ್ಳದಲ್ಲಿ ಪ್ರತ್ಯಕ್ಷವಾಗಲಿಲ್ಲವೆ?
ಇದು ಸುಳ್ಳೆಂದವರಿಗೆ ಯಮನ ಬಾಧೆ ಬಿಡದು, ತಪ್ಪಲರಿಯದು.
ವಿಧಿಪ್ರತಾಪ ಬಿಡುಗಡೆಯಾಗುವುದು.
ತಂದೆತಾಯಿಗಳ ಪೂಜಿಸಿದಂಥ ಗುರುಭಕ್ತಂಗೆ
ಇಂದಿನ ದಿವಸವೆ ಸುಭಿಕ್ಷಕಾಲವೆಂದು ನಂಬಿಗೆಯಾದ ಕಾರಣ
ಅವಿಮುಕ್ತಕ್ಷೇತ್ರದ ಶಿವನೊಳಗಡಕವಾಗಲಿಲ್ಲವೆ?
ಈ ಮಾಯಾಂಶಿಕವಾದ ಅಧಮರು,
ತಮ್ಮ ತಂದೆತಾಯಿಗಳ ನಿಂದಿಸುವುದರಿಂದ ಬಂಧನ ಪ್ರಾಪ್ತಿಗೊಳಗಾಗಿ.
ಇಂದು ಶ್ರೀಗುರುನಾಥನೆಂದರಿಯದೆ, ಬೆಂದಮನ ನಿಲುಕಡೆಯಿಲ್ಲದೆ,
ಅದು ನನ್ನದು, ಇದು ನನ್ನದುಯೆಂದು
ಸಂದೇಹ ದುರ್ಮನ ಮೂಢರು ಇಂದ್ರಜಾಲದಲ್ಲಿ ಮುಳುಗುವರಲ್ಲದೆ,
ಮಹೇಂದ್ರಜಾಲ ಇವರಿಗೆ ಬಾಲಬಡಕರಿಗೆ ನ್ಯಾಯತಾರ್ಥವಾಗದು.
ಬಿಂದು ನಿಗ್ರಹವ ಮಾಡದೆ,
ಮಹೇಂದ್ರ ಜಾಲವನು ಬಲ್ಲೆವೆಂದು ಹೇಳುವರ ಬಾಯಲ್ಲಿ
ತೊಂದರೆನುಡಿ ತೊದಲ್ನುಡಿ ಬೊಗಳಿಕೊಂಬುವುದೆ ಸಾಕ್ಷಿಯಿಲ್ಲದೆ.
ಇಂದಿನ ಸುಕೃತವಾಗಲರಿಯದು, ಅಂದಿನ ಜನ್ಮವದು ತಪ್ಪದು.
ಈಗಿನ ಅವಸರಮಂ ಬಿಟ್ಟು, ನಾಳಿನ ಬೇಸರಮಂ ಮರೆದು,
ಹೊ(ಗ)ಳಿಗನಾಗಿ ತೆತ್ತಿಗನಾಗಿ, ದಾಳೇಂದ್ರಿ ಪರ್ವತದಲ್ಲಿ
ಮಾತಂಗನೆಂಬ ಮಂತ್ರಶಕ್ತಿಯುಳ ಮಾತೃಸ್ಥಾನವೆಲ್ಲವನು ಅಳವಟ್ಟು,
ಬಾಲಲೀಲಾ ವಾಕ್ಯಗಳಿಂದ ಹೇಳಿಕಿ ಕೇಳಿಕಿ ಕಳವಳಕಿ ತಿಳಿತಿಳಿದಾಡುವಂಥದು.
ಚೆಲುವ ಸಾಂಬ ಶ್ರೀಗುರುನಾಥನೆಂದು ಹೇಳುವೆಯಲ್ಲವೆ
ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./30
ಮತ್ತಂ ಸಾಕ್ಷಿ :ಎಲೆ ಮಗನೆ ಕೇಳು
ಬೆಳಗು ಮುಂಜಾನೆಯೆದ್ದು ಸೂಳೆಸೋಗು ಹಾಕಿಕೊಂಡು,
ತಿಳಿನೀರು ತೆಂಗಿನ ನೀರು ಪನ್ನೀರು ಇಂದುಮಡಿಯನುಟ್ಟು
ಅಂದಚೆಂದವಾದ ವಸ್ತ್ರಾಭರಣಂಗಳೆಲ್ಲವನಿಟ್ಟುಕೊಂಡು,
ನೀ ನಿರಾಕಾರವಾದ ನೀರುವತ್ತು (?) ಬರುವಂಥದು.
ನಾ ಕಂಡು ಬೆರಗಾದೆನಲ್ಲದೆ, ಎನ್ನ ನೀ ಮರೆಯದೆ ತಿಳಿ.
ನೀರು ಪಾದದಲ್ಲೆರೆದು, ಸುಳಿನಾಭಿ ಮೂಮಧಯದಲ್ಲಡಗಿರ್ದ
ತಾರಕತ್ರಯ ವಿಚಾರವೆಂಬ ಪತ್ರೆ ಪುಷ್ಪ ಸುಗಂಧ ದ್ರವ್ಯಂಗಳೆಲ್ಲವನು
ಪಾದಕ್ಕೆ ಏರಿಸಲು ಪೂಜಿಸಲು,
ಆಮೇಲೆ ಮಾಂಗಲ್ಯಸ್ವರೂಪವಾದ ತೆಂಗಿನ ನೀರು
ಮಂಗಳಾರತಿಯನು ಎತ್ತಿ ಕಂಗಳ ಬೆಳಗಿನಿಂದ ಕರಮಂ ಜೋಡಿಸಿ,
ಜಯಜಯ ಮೃತ್ಯುಂಜಯನೆಂದು ಮಂಗಳಾರತಿಯನಾಡುವುದರಿಂದ
ಕಾರಣಾಂಗವೆಲ್ಲ ಗುರುಕರುಣನಾಗಿ, ಶರಣು ಶರಣಾರ್ಥಿಯೆಂದು
ನಮಸ್ಕರಿಸಲು,
ಶ್ರೀಗುರುನಾಥನು ತಿಳಿನೀರು ತೆಂಗಿನ ತೀರು
ಎರಡರೊಳೊಂದು ಮೃಡ ಸಮರ್ಪಣವಾಗಲು, ಪನ್ನೀರ ಪ್ರತಾಪವಿರಲು
ಅಮಾನ್ಯ ಸಾಮಾನ್ಯವೆಂದು ಹೇಳಿಸಿಕೊಳ್ಳದೆ
ಚೆನ್ನಿಗ ವಿಟಪುರುಷನಾಗಿ, ಸೂಳೆಸೋಗಿಗೆ ಮೆಚ್ಚಿ, ಪನ್ನೀರು ನೇವರಿಸಿಕೊಂಡು,
ಮೊದಲ್ ವೀಳ್ಯವನು ಕೊಡುಕೊಡುಯೆಂದು ಸೆಳೆಮಂಚದಲಿ ಕುಳಿತು
ವೀಳ್ಯದ ಸವಿಗಾರನು ಜಾಲವನು ಹಾಕಿ, ಬಾಲಬೋಧಮಂ ಕೊಟ್ಟು,
ಉಳಿಸ್ಯಾಡಿ ಕುಲಗೆಟ್ಟು ಬೆಳಗಾದ ಮೇಲೆ,
ಹುಳ್ಳಗಿರು ಹೊರಗು ಬಾರದಿರು ಕಂಡ್ಯಾ ಎಂದು
ಗಳಿಗೆ ಗಳಿಗೆ ಎಚ್ಚರಮಂ ಹೇಳಲು,
ಆ ಬೋಳಶಂಕರ ಶ್ರೀಗುರುನಾಥನು,
ಎಲೆ ಮೂಳ ಹೊಲತಿ ಎನ್ನ ಬಾಳುವೆ
ಜೋಪಾನದಿಂದ ಮಾಡು ಕಂಡ್ಯಾ ಎಂದು ಹೇಳುವೆ ನೀನೆಯಲ್ಲವೆ,
ಎಲೆ ಲಿಂಗವೆ ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./31
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು :
ಕಾಳುದೇಹದೊಳಗೊಂದು ಕೀಳುಜೀವನುದ್ಭವಿಸಿ, ತೆಲುಮೇಲಾಗುವುದಲ್ಲದೆ,
ಇಂದ್ರಜಾಲವಿದ್ಯೆಯನು ಕಲಿತು, ತಾಳದ ಮರದುದ್ದನಾಗಿ ಬೆಳೆದು
ಕೂಳುನೀರುಗಾಣದೆ ಕಳ್ಳರಕ್ಕಸರ ಕೈಯಲ್ಲಿ ಸಿಕ್ಕು ಕೋಲಾಹಲನಾಗಿ
ಬಡಿಸಿಕೊಂಬುವಂಥದು.
ತನ್ನ ಗಂಡು ಹೆಣ್ಣಿನ ಅಂಗವಿಕಾರದಿಂದ ಕಂಗೆಟ್ಟು ತಿರುಗಬಾರದೆಂದು
ಮೂಲದ್ವಾರಮಂ ತಿಳಿಸಿಕೊಡಿರೆಂದೆನಲು,
ಕೀಳುಜೀವವನು ಬೇಡಿಕೊಳ್ಳುವುದು, ಬಾಡಿಗೆ ದುಡಿವಂಥದು,
ಸಾಕುಸಾಕೆಂದು, ಎನ್ನ ನುಡಿಯ ಗುರುರಾಯ ಕೇಳುಕೇಳೆಂದು,
ಅನಂತಕಾಲ ನಿಮ್ಮನು ಮರೆದ ಕಾರಣ,
ಈ ನಿಮಿತ್ಯದಿಂದ ಅಜ್ಞಾನಜೀವನಾಗಿ,
ಜ್ಞಾನವಿಲ್ಲದೆ, ತನ್ನಂತರಂಗದ ಶುದ್ಧಿಯನು
ತನಗೆಚ್ಚರವಿಲ್ಲದೆ ಮುನ್ನಿನ ಸ್ವಭಾವವನು ಮರೆದು,
ಇನ್ನಾವ ಗತಿ ಹೊಂದುವೆನೆಂದು ನಿಮ್ಮ ಶ್ರೀಚರಣಕಮಲದಲಿ ಶಿರಬಾಗಿ,
ಕರಕಮಲಮಂ ಜೋಡಿಸಿ,
ಸ್ತೋತ್ರದಿಂ ನೇತ್ರಾಭಿಧಾನಂಗಳು ಪಾತ್ರ ಪವಾಡವಾಗಲೆಂದು
ಸತ್ಪರ್ಥಮಾರ್ಗದಲ್ಲಿ ಗುರುಪಥವಾಗಲು,
ಗುರುವಿಗಿಂದಧಕ ಪರದೈವವೆನಗಿಲ್ಲವೆಂದು
ಪರಮ ಶ್ರೀಗುರುವೆ ನಮೋ ನಮೋ ಎಂದು
ನಮಸ್ಕರಿಸುತ್ತಿದ್ದೆನಯ್ಯ ಅಪ್ಪಯ್ಯಾ,
ಗುರುರಾಯ ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./32
ಅಪ್ಪಯ್ಯ ಗುರುರಾಯ ಕೇಳು.
ಏನು ಹಾಡಿದರೇನು ಎನು ಏದಿದರೇನು,
ನಿಮ್ಮನುಭಾವವನರಿಯದನ್ನಕ್ಕರ ಎನ್ನಗಿನ್ನಾವ ಪರಿಯಲಿ
ಜ್ಞಾನ ಸಮ್ಮಿಶ್ರವಾಗುವುದಯ್ಯಾ?
ಅಜ್ಞಾನ ಪರಿತಾಪಮಂ ಭೋದಿಸುವುದಲ್ಲದೆ,
ಈ ನ್ಯಾಯ ಇನ್ನಾರಿಗೆ ಹೇಳುವೆನಯ್ಯಾ?
ಅಯ್ಯಾ ನಾನೊಂದು ಸ್ತೋತ್ರವ ಮಾಡಲು,
ಅಜ್ಞಾನವನೆಲ್ಲ ತಾನೊಂದು ನ್ಯಾಯವ ಮಾಡುವುದಲ್ಲದೆ,
ನಾನತ್ತಲೆಳೆದರೆ ತಾನಿತ್ತಲೆಳೆವುದು.
ಬೀಳಭೂಮಿ ಹಸನಾಗಲೊಲ್ಲದೆ,
ಜಾಣ ಬಿತ್ತಿಗೆಯ ಬಿತ್ತಿದರೆ ಬೆಳೆಯುವುದೆಂತಯ್ಯಾ?
ಸುಳಿಗಾಳಿ ಬಡಿದು ಕೆಟ್ಟುಹೋಗುವುದಲ್ಲದೆ,
ಈ ಮೂಳಹೀನನ ಮನಸಿಗೆ
ನಾನು ಬೆಳೆದುಂಡೆನೆಂಬುವಂಥದು ಜ್ಞಾನವಿಲ್ಲದೆ ಹೋಯಿತು.
ಕೂನವಿಲ್ಲದೆ ಅನುಭವಿಸುವಂಥ ಮಾನಕ್ಕೆ ಕೊರತೆಯಾಗಿ,
ಜ್ಞಾನಬಾಹ್ಯನಾಗಿ ಸ್ನೇಹದುರ್ಲಭದಿಂದ ಕಾಡುವ
ಮಾಯಾ ಪ್ರಪಂಚದ ಸವಿಗಾರನು
ಕಾಯಕರ್ಮವೆಂಬ ಹೊಲಗೇರಿಯಲ್ಲಿ ಕುಳಿತು ಅನ್ಯಾಯವ
ನುಡಿಯುತಿರ್ಪನಲ್ಲದೆ,
ತನ್ನತಾ ಸಾಕ್ಷೀಭೂತನಾಗಿ, ಭಿನ್ನ ಭಾವಾರ್ಥಮಂ ಮರೆದು ಸುಮ್ಮಗಿರಲೊಲ್ಲದೆ
ಹಮ್ಮು ಅಹಂಕಾರದಿಂದುರಿದು,
ದಮ್ಮಿನ ಮಾತುಗಳನಾಡಿ ಸಮಯವ ಸಾಧಿಸಿಕೊಳ್ಳದ
ಅಗಮ್ಯದಿಂದ ಹೊಟ್ಟೆಹೊರಕೊಂಬುವನ ಪ್ರತಾಪಮಂ ಏನೆಂದು ಹೇಳಲಿ,
ಯಾವುದಂತಾಡಲಿ. ಅಯ್ಯಾ ಗುರು ಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./33
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು.
ಎನ್ನ ಚಿತ್ತವು ಅತ್ತಿಯಹಣ್ಣು ನೋಡಯ್ಯಾ.
ಬಿಚ್ಚಿದರೆ ಗುರುಳಿಲ್ಲವಯ್ಯಾ.
ನೀ ಮೆಚ್ಚಿದೆಯಾದರೆ ಮುಚ್ಚಿಕೊಂಡಿರುವುದಲ್ಲದೆ
ಹುಚ್ಚು ಮತ್ಸರವಾಗುವುದೆಂತು?
ನಿಮ್ಮಿಚ್ಛಾಮಾತ್ರದಿಂದ ಅಚ್ಚಪ್ರಸಾದಿಗಳಾದ ಶಿವಶರಣರು
ಎನ್ನ ಅಚ್ಚುಗವನು ವಾಚ್ಯಸಂಭ್ರಮವೆಂದು ಮೆಚ್ಚುಗಾರರು
ಬಚ್ಚಿಟ್ಟುಕೊಂಡು ಎಚ್ಚರದಲ್ಲಿ ಕೂಗುತ್ತಿರ್ಪರಲ್ಲದೆ,
ಅಯ್ಯಾ ಶಿವಸಮರ್ಪಣವಾಗಲೆಂದು
ಅವಿರಳಜ್ಞಾನಾನಂದದಲ್ಲಿ ಭವಿಗಳ ಸಹವಾಸ ಮರೆದು,
ವಿವೇಕತ್ವದಿಂದ ಆ ಮಹಾತ್ಮರು ಎನ್ನನು
ಬಹುಮಾನಗಾರನೆಂದು ಹೆಸರಿಟ್ಟು ಕರೆಯಲು,
ನಾನವರೊಳಗಾಡಿ ಅನುಸ್ಮರಣೆಯನು ಮಾಡಲು,
ನೀನಾವ ದೇಶದ ಸುದ್ದಿ ಹೇಳಲು,
ಮುಗ್ಧ ರುಚಿಗೊಂಡು ಜ್ಞಾನಪ್ರಕಾಶವಾಗಲು,
ಅಬದ್ಧಜೀವಿಗಳಿಗೆ ಅಸಾಧ್ಯವಾಗಿ, ಕದ್ದ ಕಳ್ಳನ ಹೆಡಗುಡಿಯಂ ಕಟ್ಟಿ,
ಮುದ್ದಿ ಲಂಚಮಂ ಕೊಟ್ಟು, ಸುದ್ದಿ ಸುಳಿವಿಲ್ಲಜೆ
ಸಿದ್ಧಪ್ರಸಿದ್ಧನಾಗಿ ಗುರುರೇವಣಸಿದ್ಧೇಶನಹುದೆಂದೆನಿಸಿ,
ಲದ್ದಿ ಸೋಮಾರಾಧ್ಯರಿಗೆ ಸ್ವಬುದ್ಧಿಯನು ಕೊಟ್ಟು,
ಸಭಾಮಧ್ಯದಲ್ಲಿಟ್ಟುಕೊಂಡು ಗುದ್ದಿ ಗುದ್ದಿ ಮುದ್ದಾಡುವಂಥದು
ನ್ಯಾಯ ನಿನ್ನಗಲ್ಲವೆ, ಎಲೆ ಲಿಂಗವೆ ಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./34
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು.
ಎನ್ನ ಪ್ರತಾಪಮಂ ಏನು ಹೇಳಲಿ,
ಈ ಪರಿತಾಪ ನರರಿಗೆ ಬೇಸರವಾಗಿಹುದೆಂದು.
ಗುರುವೆ ಕೇಳಯ್ಯ, ಬಡತನವಾಗಿ ತಿರಿದುಂಡರೆ,
ಬದುಕ ಮಾಡದ ಭಂಡನೆಂಬರು, ಹಿಡಿದು ಬಡಿದು ಗುದ್ದುವರು.
ನಡೆನುಡಿಯಿಂದ ಅನುಭಾವದಿಂದ ದುಡಿದುಡಿದು ಧನಪ್ರಾಪ್ತಿಯಾಗಲು
ನೆರೆಹೊರೆ ಪದಾರ್ಥ ಕೈಸೇರಿತೆಂಬರು.
ಈ ಮೂಢಾತ್ಮರು ಬೆಡಗು ನಿಶ್ಚೈಸಿ,
ಮಡದಿ ಮಕ್ಕಳು ಸೌಖ್ಯದಿಂದಿರಲು, ಕೊರಳುಗೊಯ್ಕ ಹುಡುಗನೆಂಬರು.
ಕೋಡುಗಲ್ಲಿನ ಮೇಲೆ ಕುಳಿತು ದೃಢವಿಡಿದುಂಡರೆ,
ಮದುಮಕ್ಕಳೆಂದರಿಯದೆ, ಬಹುಮಡದಾರನೆಂಬರು.
ಬಡಿವಾರಮಂ ತೊರೆದು, ಮೃಡ ನಿಮ್ಮ ಧ್ಯಾನಿಸೆ,
ಅಡವಿಗೊಲ್ಲನೆಂದಾಡಿಕೊಂಬರು.
ಈ ಕಡುಪಾಪಿಷ್ಠರು ಬುಡಕಡೆಯಿಲ್ಲದ ವಸ್ತುವ
ನೆಲೆಗೊಂಡು ನಿಲುಕಡೆಯಿಂದಾಡೆ,
ಸುಳ್ಳು ಬಡಾಯಿ ಮಾತು ಅದ್ವೈತ ದಾರಿದ್ರ್ಯನೆಂಬರು.
ಗುರುವೆ ಕೇಳಯ್ಯ, ನಾ ನಿಮ್ಮನು ಪಡೆದನುಭವಿಸುವಂಥ ಪ್ರಾರಬ್ಧವನು
ಇನ್ನಾರಿಗೆ ಹೇಳಲಿ, ಕೇಳಲಿ,
ನೀ ಬೇರಲ್ಲವೆ, ಎಲೆ ಲಿಂಗವೆ, ಗುರುಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./35
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು :
ಜಂಗಮ ಜಗಭರಿತನೆಂದು
ಮಂಗಲಸ್ವರೂಪನಾದ ಆದಿಬಸವೇಶ್ವರನು
ಅನಾದಿ ಸಂಗಮೇಶ್ವರನೊಳಗಾಗಿ ಕೂಗುತಿರ್ಪನಲ್ಲದೆ,
ಈ ಭಂಗೇಡಿಗಳಾದ ಮಂಗಮನುಜರಿಗೆ ಎಚ್ಚರವಿಲ್ಲದೆ ಹೋಯಿತು.
ತಮ್ಮಂಗದ ಮೇಲೆ ಲಿಂಗವಿರುತಿರಲು, ಪ್ರಾಣಲಿಂಗದ ಹೊಲಬನರಿಯದೆ
ಜಂಗಮನಿಂದೆಯ ಮಾಡುತಿರ್ಪರಯ್ಯಾ,
ಲಿಂಗವಂತರೆಂದು ಹೇಳಿಕೊಂಬುತಿಪ್ಪರಯ್ಯಾ.
ಅಯ್ಯಾ ಗುರುರೂಪವಾದುದ, ಲಿಂಗಪ್ರತಾಪವಾದುದ,
ಜಂಗಮನಿರೂಪವಾದುದ
ಅನಂಗಸಂಗಿ ಸಂಗನಬಸವೇಶ್ವರನು ಬಲ್ಲನಯ್ಯಾ, ಅರಿದಿಪ್ಪನಯ್ಯಾ.
ಈ ಅಂಗವಿಕಾರಗೇಡಿಗಳ ಲಿಂಗಭಕ್ತರೆಂದು ಅಜ್ಞಾನ ಜಂಗಮವ ನಂಬಲು,
ಪಂಗಳನ ಕೈಯ ಅಂಧಕನು ಹಿಡಕೊಂಡು ಹಾಳುಗುಂಡಿಯ ಬಿದ್ದಂತಲ್ಲವೆ.
ಹಿಂಗಾರಿ ಮುಂಗಾರಿ ಬೆಳೆಯುವುದೆಂತಯ್ಯಾ.
ನಿಮ್ಮಂಗದೊಡಲದುರಿ ತಾಪಮಂ,
ವೀರಮಾಹೇಶ್ವರನೆಂಬ ವೀರಘಂಟೆ ಮಡಿವಾಳಪ್ಪಯ್ಯನು
ಕಾರಣಾಂಗದಲ್ಲಿ ಕಠೋರ ವಾಕ್ಯವನು,
ಜಂಗಮವು ಜಗದಾರಾಧ್ಯನೆಂದು ಮೇಂಗುಡಿ ಎತ್ತಿರ್ಪನಲ್ಲದೆ
ಈ ಜಂಗುಳಿದೈವ ನೀಚಾತ್ಮರಿಗೆ
ಸಂಗಸಮರಸಭಾವ ಅರಿಯದೆ ಹೋಯಿತ್ತಯ್ಯಾ.
ಅಪ್ಪಯ್ಯಾ ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./36
ಮತ್ತಂ ಸಾಕ್ಷಿ :ಅಪ್ಪಯ್ಯ ಗುರುರಾಯ ಕೇಳು :
ನೀನಿಕ್ಕಿದ ಮುಂಡಿಗೆಯ ಅಕ್ಕಮಹಾದೇವಿ ಬಲ್ಲಳಲ್ಲದೆ,
ಮಕ್ಕಳಿಲ್ಲದ ಬಂಜೆ ಎನ್ನಕ್ಕರವ ತೀರಿಸುವಳಯ್ಯಾ.
ಮಕ್ಕಮಾರಿ ಸೂಳೆಮಕ್ಕಳು ದಿಕ್ಕುಗಾಣದೆ ಹೊಕ್ಕು,
ಮಿಕ್ಕ ಪ್ರಸಾದಮಂ ಭೋಗಿಸದೆ, ತೆಕ್ಕೆ ಕಾಯಕಮಂ ಮಾಡಿಕೊಂಡು
ಠಕ್ಕಭಕ್ತಿಯ ನಡೆಸುವರಯ್ಯಾ, ಇದಕ್ಕುಪಾಯವೇನಯ್ಯಾ?
ರೊಕ್ಕದ ಚಿಂತೆ ಘನವಾಗಿ ಕಕ್ಕುಲಾತಿಯಂಬಟ್ಟು,
ಮಕ್ಕಳು ಮರಿಮೊಮ್ಮಕ್ಕಳಿಗೆ ತಕ್ಕತಕ್ಕಷ್ಟು ದ್ರವ್ಯವನು ಕೊಟ್ಟು,
ಎಕ್ಕಲಿಗೆ ಜೋ ಎಂದಳುತಿರ್ಪರಯ್ಯಾ.
ನರಿ ಕಕ್ಕೆಕಾಯಿ ತಿಂದು ಬಹುದುಃಖಪಡುತಿರ್ಪುದಲ್ಲದೇ ಗತಿಗೊಂದಲಿಲ್ಲ.
ಈ ಮಕ್ಕಮಾರಿಗಳ ಸ್ಥಿತಿಗತಿಯು,
ಆ ನರಿಯಿರುವ ಸ್ಥಿತಿಗತಿಯು ಒಂದೆಯಾಗಿರ್ಪುದು.
ಎನ್ನಕ್ಕ ಮಹಾದೇವಿ ಮುಖ್ಯವಾದ ಆತ್ಮವಿಚಾರದಿಂದ ಬೋಧಮಂ
ಸವಿದುಂಡು,
ಮುಕ್ಕಣ್ಣನೆಂಬ ಒಕ್ಕಲ ಕೂಲಿಕಾರನ ಕೂಡಿಕೊಂಡು,
ಬೈಲಾಕಾರವಾಗಿ ಕದಳಿಬನಕ್ಕೆವಂದಳಲ್ಲದೆ, ಎನ್ನಕ್ಕರವು ತೀರಿಸಲು.
ಮಕ್ಕಳಿಲ್ಲದ ಬಂಜೆ ತಾನೆ ತಾನಾಗಿಹುದಯ್ಯಾ.
ರೆಕ್ಕೆಯಿಲ್ಲದ ಪಕ್ಷಿ ಗಗನಕ್ಕೆ ಹಾರುವೆನೆಂದು
ದಿಕ್ಕುಗೆಟ್ಟು ಕಕ್ಕಾವಿಕ್ಕಿಯಾಗಿ ತಿರುಗಬಾರದೆಂದು
ಲೆಕ್ಕದೊಳಗಾಡುತಿರ್ಪೆನಯ್ಯಾ.
ಎಲೆ ಲಿಂಗವೆ, ಗುರು ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./37
ಮತ್ತಂ ಸಾಕ್ಷಿ :ಎಲೆ ಮಗನೆ ಕೇಳು.
ಈ ಲೋಕದಲ್ಲಿ ಮೂಕಬಸವಣ್ಣನ ಮಾಡಿಟ್ಟು,
ಮಾತಾಡಿಸಲಹರೆ, ಹಸಿವು ತೃಷೆ ನಿದ್ರೆ ಅಡಗಿಸಲಹರೆ.
ಕಾಕುಪುರಾಣವನು ಬಿಚ್ಚಿ ಹೇಳುವರಷ್ಟು.
ಮಾತುಗಳಗೊಳ್ಳದೆ ಮತಿಭ್ರಷ್ಟರಾಗಿ,
ವ್ಯಸನದಿಂದ ಹಸಿವು ತೃಷೆಗಾಗಿ ಗೋಳಾಡುವರು.
ಅಶನಗಾಣದೆ ಈಶನ ಧ್ಯಾನಿಸಲು ಹಸನಾಗುವುದೆಂತು?
ವಾಸನೆ ಪರಿತಾಪವು ಹಾಸ್ಯವಾಗಿರ್ಪುದು.
ತಾ ನಿಮ್ಮ ದಾಸನೆಂದು ನಿಜದಾಸನಾಗಿ,
ಬೇಸರವಿಲ್ಲದೆ ನಿಜ ಅಭ್ಯಾಸಮಾಗಲು, ಕೊಟ್ಟಭಾಷೆ ತಪ್ಪುವುದೆಂದಿಗೆ?
ಮಾಯಾಪಾಶದಲ್ಲಿ ಬಿದ್ದು,
ಆಶಾಲಾಂಛನ ವೇಷಧಾರಿಗಳಿಗೆ ಯೋಗ್ಯವಾಗುವುದೆ?
ಈಶನ ಕೃಪಕಟಾಕ್ಷವನು ಸಾಸಿರನಾಮದ ಬೆಡಗು ನಿಶ್ಚಯಿಸುವುದೆಂತು?
ಮೂರುಕಾಸು ಬಾಳದ ಮನುಜರು ನೀವು ಕೇಳಿರೊ.
ಆಸರಿಲ್ಲದೆ ಉಳ್ಳಿ ಆಲ್ಪರಿವುದಲ್ಲದೆ,
ಪಶುಪ್ರಾಣಿಗಳಿಗೆ ಶಿಶುವಿನ ಚಿಂತೆ, ಶಿಶುವಿಗಲ್ಲದೆ ಹಾಲಿನ ಚಿಂತೆ.
ಅಸಮಾಕ್ಷಸಾಂಬ ಶ್ರೀಗುರುವಿನೊಳಗಾದ ಶಿಷ್ಯನಿಗೆ
ಬಿಸಿಲಿಲ್ಲದ ಬಾವಿಯೊಳಗನ ಹೆಸರಿಲ್ಲದ ಮರನಾಗಿ ಬೆಳೆಯುವುದೆ?
ನಿಜಶಾಂತಿ ವಶ ತಪ್ಪಿ ತಿರುಗುವರ ಕಂಡು,
ನಾ ನಾಚುವೆನಲ್ಲದೆ, ವಾಚಕನಾಗಿ ದಣಿದುಕೊಳ್ಳಲೇಕೆ.
ಸೂಕ್ಷ್ಮದಿಂದ ಅನುಭವಿಸಲಾಗಿ ಸಂಶಯವಿಲ್ಲದೆ ಸಂತೋಷಮಂಬಟ್ಟು,
ಪರಮಪ್ರಕಾಶನೆಂದು ಹೇಳಿಕೊಂಬುವಂಥದು ನಿನಗೆಚ್ಚರವೆ.
ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./38
ಮತ್ತಂ ಸಾಕ್ಷಿ :ಎಲೆ ಮಗನೆ ಕೇಳು :
ತಿಳಿತಿಳಿದು ಲಕ್ಷವನಿಟ್ಟುಕೊಂಡು ಭಿಕ್ಷೆ ಬೇಡುವಂಥದು ಏತರ ಬಾಳುವೆ?
ಗುರುದೀಕ್ಷಾಬದ್ಧರು ಕಾಂಕ್ಷವ ಮಾಡುವರಲ್ಲದೆ,
ಜ್ಞಾನಾಪೇಕ್ಷೆ ತೀರಿದ ಬಳಿಕ ಮನೋಸಾಕ್ಷಿಯಲ್ಲವೆ.
ಎಣಿಕೆ ತಪ್ಪಲು ದಿವಸಕೊಂದು ವೇಷ ಧರಿಸಲು,
ಏತಕೂ ಸಲ್ಲದು, ಸಲುವಳಿಯಾಗದು.
ಮಾತಿನದ್ವೈತವನು ಅಂತರಂಗದಲ್ಲಿಟ್ಟು,
ಮಹಾವಾಕ್ಯ ಮಂತ್ರವೆಂಬ ಸ್ವತಂತ್ರದಲ್ಲಿ ಶತಮೋಕ್ಷ ನೀನಾಗುವುದೆ ಸಾಕ್ಷಿ.
ಪ್ರತಿಯಿಲ್ಲದ ರೀತಿ ತಪ್ಪಿದ ಮನುಜರಿಗೆ
ನೀತಿಶಾಸ್ತ್ರವನು ಹೇಳಲು ಜಾತಿಸಂಕಲ್ಪ ಬಿಡುವುದೆಂತು?
ಸೋತು ಸುಮ್ಮನಿರಬೇಕೆಲ್ಲದೆ,
ಮಾಡುವುದರಿಂದ ಭೂತಪ್ರಾಣಿಗಳು
ಅತಿಶಯವಿಲ್ಲದೆ ಮತಿಗೊಂದು ಮಂತ್ರ ಸಾಕ್ಷಿ ಕೊಡುತಿರ್ಪರು.
ಖ್ಯಾತಿ ಎನ್ನೊಳಡಗಿರ್ದ ಆತುರಮಂ ಕಾಣದೆ ಮಹತ್ವದಲ್ಲಿ ಮಲಿನವಾಗಿಹರು.
ಎನ್ನ ಜಾತಿಯಭಿಮಾನಿಗಳಷ್ಟು ಕೂಡಿಕೊಂಡು,
ಎಲೆ ಮಗನೆ, ಭಯಭೀತಿಯಿಲ್ಲದ ಅಭಯದ ಕರುಣಿಸುವೆನೆಂದು
ದಾತ ಶ್ರೀಗುರುನಾಥನು
ಪತಿವ್ರತಧರ್ಮ ಶಿವಾನುಭಾವಶಾಸ್ತ್ರಮಂ ಬೋಧಿಸಲು,
ಖ್ಯಾತಿಯಿಂದತಿಶಯ ಸುಜಾತನಲ್ಲವೆ, ಎಲೆ ಲಿಂಗವೆ ಗುರುಶಂಭುಲಿಂಗವೆ
ನಿಜಗುರು ನಿರಾಲಂಬಪ್ರಭುವೆ./39
ಮತ್ತಂ ಸಾಕ್ಷಿ :ಎಲೆ ಮಗನೆ ಕೇಳು :
ಅಷ್ಟು ತಾ ಸುಳ್ಳಿಲ್ಲದೆ, ಒಂದಿಷ್ಟು ತಾ ಖರೆಯಲ್ಲದೆ
ಸೃಷ್ಟಿಕರ್ತನಂತೆ ಹೇಳಿಕೊಂಬುವಂಥದು.
ಎನ್ನ ಕಷ್ಟಮಂ ಏನು ಹೇಳಲಿ.
ಎಲೆ ಮಗನೆ ಹೊಟ್ಟೆ ಕಿಚ್ಚಿನ ಸೂಳೆಮಕ್ಕಳಿವರು,
ಅಷ್ಟಾವರಣ ಪಂಚಾಚಾರ ಬಲ್ಲೆವೆಂದು
ಭ್ರಷ್ಟನಡೆನುಡಿಯಿಂದ ಕೆಟ್ಟುಹೋಗುವರಲ್ಲದೆ,
ಅಷ್ಟಾವರಣ ಬಲ್ಲಿದ ಮಹಾತ್ಮರು,
ಜ್ಞಾನದೃಷ್ಟಿಯಿಂದ ಅಷ್ಟದಳಕಮಲಮಧ್ಯದಲ್ಲಿ
ಅಷ್ಟು ತಾ ಸುಳ್ಳಿಲ್ಲದೆ ಪಂಚಾಚಾರಮಂ ಗಟ್ಟಿಕೊಂಡು,
ಪಂಚತತ್ವದಲ್ಲಿ ರಗಳೆಯನು ಅಷ್ಟು ತಾ ಖರೆಯಲ್ಲದೆ
ದಿಟ್ಟರಾಗಿ ಕೂಗುತಿರ್ಪರಲ್ಲದೆ,
ಎಷ್ಟು ಹೇಳಿದ ಕಾಲಕೂ ಬಿಟ್ಟಾಡಿಕೊಂಬುವರು.
ಈ ದೃಷ್ಟ ಪ್ರಾಣಿಗಳು ಕಷ್ಟಕರ್ಮದ ಬಲೆಯಲ್ಲಿ ಸಿಲುಕಿ,
ಏಕೆ ಎಮ್ಮನು ಹುಟ್ಟಿಸಿದನೆಂದು ಶೋಕವೃತ್ತಿಯಿಂದ ಬಿಟ್ಟಿ ದುಡಿಯುತಿರ್ಪರು.
ಎಲೆ ಮಗನೆ ಅಷ್ಟು ತಾ ಸುಳ್ಳಲ್ಲದೆ ಹಠಯೋಗಮಂ ಸಂಪಾದಿಸಿ,
ನೋಟಕೂಟಕ್ಕೆ ಭೇದಭಾವಾರ್ಥವಿಲ್ಲದೆ, ಪಟ್ಟಾಭಿಷೇಕವಾಗಲು
ವರಿಷ್ಠರೊಳಗೊಂದು ಶ್ರೇಷ್ಠನಾಗಿ,
ಅಷ್ಟಾವರಣದಾಚಾರ ವಿಚಾರದಿಂದ ಗುಟ್ಟಕೊಡದ ಹಾಂಗಿರ್ಪರು.
ಷಡುಸ್ಥಲದ ನಿರ್ಣಯಮಂ ತಮ್ಮಟೆ ವಾದ್ಯಗಳಿಂದ
ನಾಟಕ ನೀರಾಂಜನ ವಸ್ತುವೆ ಘನವಾಗಿ,
ಅಕಟಕಟಾ ಬಿಟ್ಟಗಲದಿಪರ್ಾತನೆಂದು ಹೇಳಿಕೊಂಬುವಿ.
ಎನ್ನೊಳಗಲ್ಲವೆ ಎಲೆ ಲಿಂಗವೆ, ಗುರುಶಂಭುಲಿಂಗವೆ,
ನಿಜಗುರು ನಿರಾಲಂಬಪ್ರಭುವೆ./40
ಪೃಥ್ವಿಗುಣದಿಂದನುಭವಿಸುವಂಥದು ತಪ್ಪು ಎನ್ನೊಳಗಿಲ್ಲವು.
ಅಪ್ಪುವಿನಾಚರಣೆಯನು ಆವಾವ ತೆರನಾದ ಬಳಿಕ ಕಪ್ಪುಹತ್ತುವುದೆನಗೆಂತು!
ತುಪ್ಪವದು ಹಾಲಿನಿಂದುದ್ಭವಿಸಲು ಮತ್ತೆ ಹಾಲಾಗುವುದೆಂತಯ್ಯ.
ಉಪ್ಪು ಅಪ್ಪುವಿನ ಕೂಡಲು ಉಪ್ಪಿಗೆ ಕಿಟ್ಟು ಬಂದಂತೆ,
ಉಪ್ಪುಗುರಿಗಾಗುವುದೆಂತಯ್ಯಾ,
ಅಪ್ಪಯ್ಯಾ ಕಾಡಸೊಪ್ಪು ಅಪ್ಪಿಕೊಂಡು ನೆನಪು ನೆಲೆಯಿಲ್ಲದೆ,
ಅಜ್ಞಾನವನು ಮುಪ್ಪು ಆವರಿಸಲು, ಒಪ್ಪುಗೂಡುವುದು ದುರ್ಲಭವು.
ತೇಜ ಬೆಳಗಿನಿಂದ ರಾಜಸಭೆಯಲ್ಲಿ ಕುಳಿತು ತಪ್ಪು ನಡೆನುಡಿಯಿಂದಾಚರಿಸಲು
ವಾಯುವೆಂಬ ಉಪದ್ರವದಿಂದ ಸೋಜಿಗರೂಪವಾಗುವುದೆಂತಯ್ಯಾ !
ಬೈಲಾಕಾರವಾದ ನಿಮಿತ್ತ ಅಲ್ಪಾಶ್ರಯಮಂ
ತಾಪತ್ರಯವೆ ಸಾಕ್ಷೀಭೂತವಾಗಿ ಕಾಡುತ್ತಿರ್ಪುದು.
ದೀಪ್ತವಾದ ರುಚಿಗೊಂದು ತಪ್ಪುಗಾಣಿಕೆಯನು ಕೊಟ್ಟು,
ಗುಪ್ತನಾಗಿ ಅನುಭವಿಸುವಂಥದು,
ನಿಜಾಶ್ರಯಮಾದ ಆಕಾಶವೆಂದು ಹೇಳಲ್ಪಟ್ಟಿತ್ತು,
ಬಪ್ಪದು ತಪ್ಪದು, ಬಾರದು ಬಪ್ಪದು,
ಅಪ್ಪಯ್ಯ ಶ್ರೀಗುರುವೆ ಎನ್ನ ತಪ್ಪುತಡಿ ನಿನ್ನೊಳಗಲ್ಲವೆ,
ಎಲೆ ಲಿಂಗವೆ ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ./41