Categories
Vachana Sahitya

ಸಮಗ್ರ ವಚನ ಸಾಹಿತ್ಯ

ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಬಹು ಪ್ರಮುಖ ರೂಪಗಳಲ್ಲಿ ಒಂದು. ೧೧ನೇ ಶತಮಾನದಲ್ಲಿ ಉದಯಿಸಿ ೧೨ನೇ ಶತಮಾನದವರೆಗೂ ಲಿಂಗಾಯತರ ಆಂದೋಲನ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿ ಅಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ ‘ಪ್ರಮಾಣ’ ಎಂದರ್ಥ.

ಮಾದರ ಚೆನ್ನಯ್ಯ ಎಂಬ ೧೧ನೇ ಶತಮಾನದಲ್ಲಿ ದಕ್ಷಿಣದ ಚಾಲುಕ್ಯರ ಕಾಲದ ಸಂತ, ಈ ಸಾಹಿತ್ಯ ಸಂಸ್ಕೃತಿಯ ಮೊದಲ ಕವಿಯಾಗಿದ್ದು, ನಂತರ ಉತ್ತರದ ಕಲಾಚುರಿಯ ರಾಜ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ (೧೧೬೦) ಇದರ ಪಿತಾಮಹನೆಂದು ಕರೆಸಿಕೊಳ್ಳುತ್ತಾರೆ.