ಆಂಕುರ – ಮೊಳಕೆ
ಅಂಗಡಿಯ ಲವಡಂ – ಅಂಗಡಿ ಬೀದಿಗಳಲ್ಲಿ
ಅಲೆದಾಡುವವನು
ಅಗರು – ಸುಗಂಧದ್ರವ್ಯ
ಅಗುೞ್ದು – ತೋಡಿ,ನಾಟಿಕೊಂಡು
ಅಗ್ಗಳ – ಶ್ರೇಷ್ಠ
ಅಗ್ರಾಸನ – ಬ್ರಾಹ್ಮಣವೃತ್ತಿ
ಅಚ್ಚಿಗ – ದುಃಖಿತ
ಅಜ – ಆಡು
ಅಡಿವೊಣರ್ – ಪಾದಯುಗಳ
ಅಣ್ಮು – ಪ್ರಯತ್ನಿಸು, ಸಮರ್ಥನಾಗು
ಅಣಿ – ಪದಾತಿ ಸೈನ್ಯ
ಅದಿರ್ – ಅಲುಗಾಡು
ಅರ್ದು – ಅದ್ದು, ನೀರಲ್ಲಿ ಮುಳುಗಿಸು
ಅರ್ಧಚಕ್ರಿ – ಭರತಕ್ಷೇತ್ರದ ಆರು ಖಂಡಗಳಲ್ಲಿ
ಮೂರು ಖಂಡಗಳ ಅಪತಿ
ಅಗಮ – ಸಂಪಾದಿಸಿದ
ಅರೂಡ – ಹತ್ತಿರದ
ಅನವರತ – ಯಾವಾಗಲೂ
ಅನಿಬರ್ – ಅಷ್ಟುಜನರು
ಅನುನಯ – ಪ್ರೀ, ಸ್ನೇಹ
ಅಪಣ – ಅಂಗಡಿ, ಮಳಿಗೆ
ಅಪರಂ – ಎಣೆಯಿಲ್ಲದ
ಅಪವರ್ಗ – ಮೋಕ್ಷ
ಅಪುತ್ರಿಕೆ – ಮಕ್ಕಳಿಲ್ಲದವಳು
ಅಪ್ರತ್ಯಯ – ಅವಿಶ್ವಾಸ
ಅಭಿಮಾನ – ಗರ್ವ
ಅಮ್ಮ – ತಂದೆ,ಅಪ್ಪ
ಅಮೋಘ – ವ್ಯರ್ಥವಲ್ಲದ, ನಿಶ್ಚಿತ, ತಪ್ಪದುದು
ಅಯ್ಕಿಲ್ – ಹಿಮ
ಅರಿ – ಕತ್ತರಿಸು
ಅರಿಯವು – ಅಸಾಧ್ಯವಾದವು
ಅರಿಯವು – ಅಸಾಧ್ಯವಾದವು
ಅಱುನೀರ್ – ಬತ್ತಿದ ನೀರು
ಅಲಾಭಂಮಾಡು – ಭಿಕೆ ಇಲ್ಲದಂತೆ ಆಚರಿಸು
ಅವಸರ – ವೇಳೆ, ಸಮಯ
ಅಷ್ಟೋಪವಾಸ – ಎಂಟು ದಿನಗಳ ಉಪವಾಸ
ಅಸಿಖೇಟಕ – ಕತ್ತಿ ಗುರಾಣಿ
ಅಳಂಬೆ – ಅಣಬೆ, ನಾಯಿಕೊಡೆ
ಅಳಿಕಮನಂ – ಕಪಟ ಮನದವನು
ಅಳಿಱು – ಕೆಸರು
ಅಳಿಪು – ದುರಾಶೆಪಡು
ಅಳೆ – ವ್ಮಜ್ಜಿಗೆ
ಅೞ್ಕೂಡು – ಹಾಳುಮಾಡು, ಪೂರ್ಣವಾಗಿ
ತುಂಬಿಕೊಳ್ಳು
ಅೞ – ಪ್ರೀತಿ
ಅೞ್ – ಆಳು
ಆಂದೆ – ಗೂಗೆ
ಆಖಂಡಲ – ಇಚಿದ್ರ
ಅಟಿಸು – ಬಯುಸು
ಆಡು – ನರ್ತಿಸು
ಆತ್ಮ – ಮನಸ್ಸು
ಆದಮಾನುಂ – ವಿಶೇಷವಾಗಿ
ಆದೇಶಂಗೆಯ್ – ಭವಿಷ್ಯವನ್ನು ಹೇಳು
ಆಪ್ಯಾಯನ – ಹಿತ
ಆರಂಭ – ವ್ಯವಸಾಯ
ಆರವೆ – ತೋಟ,ಉದ್ಯಾನ
ಆರಾಧನೆ – ಸಾಧನೆ
ಆರೋಗಿಸು – ಊಟಮಾಡು
ಆಱಡಿಗೊಳ್ – ಹಿಂಸೆಮಾಡು, ತೊಂದರೆ ಪಡಿಸು
ಅಲೇಖ್ಯ – ಚಿತ್ರವಿದ್ಯೆ
ಅಲೋಕನವಿದ್ಯೆ – ಅದೃಶ್ಯವಾಗುವ ವಿದ್ಯೆ
ಅವಯವದಿಂ – ಶ್ರಮವಿಲ್ಲದೆ, ಸುಲಭವಾಗಿ
ಆಱಸು – ಶಮನಮಾಡು
ಆಸೋಟಕ – ಬಾವು,ಒಡೆಯುವಿಕೆ
ಇಂಬು – ವಾಸಿ,ಲೇಸು
ಇಟ್ಟಿ – ಈಟಿ
ಇನಿಸು – ಇಷ್ಟು,ಸ್ವಲ್ಪ
ಇನಿಯ – ಸವಿಯಾದ,ಪ್ರಿಯ
ಇನ್ನರ್ – ಇಂಥವರು
ಇಳಿಸು – ಹೀನಯಿಸು
ಈದೃಗ್ವಧ – ಈ ರೀತಿಯ
ಈಡಾಡು – ಬಿಸಾಡು
ಉಕ್ಕೆವ(ಉರ್ಕೆವ) – ಕಪಟ
ಉಗುರಿಸು – ಉಗುರಿನಿಂದ ಕೆರೆ
ಉಡಿ – ಮುರಿದುಬೀಳು
ಉಣ್ಣಪಡಿಸು – ಉಣ್ಣದೆ ಬೀಳಿಸು, ಉಪವಾಸ ಬೀಳಿಸು
ಉತ್ತವಳ – ಉತ್ಕಂಠ ; ಕುತೂಹಲ
ಉದ್ದಂತ – ಉಬ್ಬು ಹಲ್ಲುಳ್ಳವ
ಉನ್ನಾರ್ಗ – ದುಷ್ಟಮಾರ್ಗ
ಉಪಶಮ – ಶಾಂತಿ, ಸಮತೆ
ಉಪಾಸಕ – ಜೈನಗೃಹಸ್ಥ
ಉಬ್ಬೆಗ – ಉದ್ವೇಗ, ದುಃಖ
ಉರ – ಎದೆ
ಉಱದೆ – ಲಕ್ಷ್ಯಮಾಡದೆ, ಹೊಂದಿಕೊಳ್ಳದೆ
ಉರ್ಚು – ಜಾರು,ಬಗಿ, ಸೀಳು, ಹಿರಿ
ಊಡು – ಊಟಕೊಡು, ಬಳಿ
ಎಚ್ಚಿ – ಹಚ್ಚಿ, ಬಳಿದು
ಎಡೆ – ಸ್ಥಳ, ನಡುವೆ
ಎತ್ತಾನುಂ – ಎಲ್ಲಾದರೂ
ಎರ್ಮೆ – ಎಮ್ಮೆ
ಎಯ್ದು – ಪಡೆದುಕೊಳ್ಳು, ಸೇರು
ಎರಲೆ – ಜಿಂಕೆ
ಎಱತನಿಗ – ಪ್ರಭುತ್ವವುಳ್ಳವ
ಎಱೆ – ಹೊಯ್ಯು ; ಹಾಕು
ಎಱೆಯ – ಒಡೆಯ
ಎಸಡಿ – ಏಡಿ
ಏಳಿದು – ತಿರಸ್ಕಾರ
ಎೞಲು – ನೇತುಬೀಳು
ಎೞ್ತನ್ನಿಂ – ಬನ್ನಿರಿ
ಏೞ್ಬು – ಓಡಿಸು
ಏಕವಿಹಾರಿ – ಒಂಟಿಯಾಗಿ ಸಂಚರಿಸುವವ, ಪರಿವ್ರಾಜಕ
ಏಕಸಱ – ಒಂದು ಬಂಡೆ
ಏರಣಿಗ – ಅಕ್ಕಸಾಲಿಗ
ಏರಿಸು(ಏಱಸು) – ಹತ್ತಿಸು, ಕೈಗೊಳಿಸು, ಧರಿಸು
ಏಱು – ಪೆಟ್ಟು, ಗಾಯ
ಒಂತಿ – ಸಣ್ಣಕಲ್ಲು
ಒಂದು – ಸೇರು
ಒಟ್ಟು – ರಾಶಿಮಾಡು
ಒಟ್ಟೆ – ಒಂಟೆ
ಒಡೆಯ – ಉಳ್ಳ
ಒಡ್ಡಣ – ಸೈನ್ಯ
ಒದಱು – ಕೂಗು
ಒಯ್ಯನೆ – ಮೆಲ್ಲನೆ
ಒರ್ಮೊದಲ್ – ಏಕಕಾಲದಲ್ಲಿ
ಒಲ್ಲಣಿಗೆ – ಒದ್ದೆಬಟ್ಟಿ – ; ಆರ್ದ್ರಪಟ್ಟಿಕಾ
ಒಸಗೆ – ಸಮತೋಷ ; ಮೆಚ್ಚು
ಒಸೆ – ಸಂತೋಷಪಡು
ಒಳನ್ – ಇರುವನು
ಓಗರ – ಅನ್ನ
ಓಜ – ಉಪಾಧ್ಯಾಯ
ಓರಂತಪ್ಪ – ಸಮಾನವಾಗಿರುವ
ಓಲಗ – ಆಸ್ಥಾನ
ಓಲಗಿಸು – ಸೇವೆಮಾಡು
ಓವರಿ – ಕೋಣೆ
ಓಳಿ – ಸಾಲು
ಕಂಚುರ – ರವಕೆ
ಕಂತಿ – ಜೈನಸಂನ್ಯಾಸಿನಿ
ಕಚ್ಚುಟ – ಕೌಪೀನ
ಕಟಕ – ಕಡಗ,ಸೈನ್ಯ
ಕಟಿವ – ಸೊಂಟ
ಕಟ್ಟಿಱುಂಪೆ – ಕಟ್ಟಿರುವೆ
ಕಡಂಗು – ಉತ್ಸಾಹಿಸು
ಕಡವರ – ಚಿನ್ನ, ಐಶ್ವರ್ಯ
ಕಡಿದು – ತೀವ್ರವಾದ
ಕತಿಪಯ – ಕೆಲವು
ಕನತ್ಕನಕ – ಹೊಳೆಯುವ ಚಿನ್ನ
ಕಪ್ಪಡ – ಹರಕು ಬಟ್ಟೆ
ಕಮ್ಮಿತು – ಸುವಾಸನೆಯುಳ್ಳ
ಕರಜ – ಉಗುರು
ಕರಂ – ವಿಶೇಷವಾಗಿ
ಕರಗ – ಗಿಂಡಿ, ಬಿಂದಿಗೆ
ಕರಭ – ಒಂಟೆ
ಕಱಮೆಯಾಗಿ – ಬಲಿತು ; ಪಕ್ವವಾಗಿ
ಕರಿಣಿ – ಹೆಣ್ಣಾನೆ
ಕರ್ಕೇತನ – ಒಂದು ಬಗೆಯ ಸಟಿಕಮಣಿ
ಕರ್ಚು – ತೊಳೆ
ಕರ್ದಿಂಗಳ್ – ಅಮಾವಾಸ್ಯೆ
ಕಲಿಲ – ಪಾಪ, ಕಲ್ಮಷ
ಕಲ್ಪ – ಸ್ವರ್ಗ
ಕಲ್ಪ – ಸ್ವರ್ಗ
ಕಲ್ಪಿಸು – ಕಲಿಸು, ಹೇಳಿಕೊಡು
ಕವರ್ – ಸುಲಿಗೆಮಾಡು
ಕಷ್ಟತಿಕೆ – ದುಃಖಕರವಾದುದು
ಕಸವರ – ಚಿನ್ನದ ನಾಣ್ಯ
ಕಳೆ – ತೆಗೆ – , ಬಿಸಾಡು
ಕೞಮೆಯ ಕೂೞು – ಶ್ಯಾಲ್ಯನ್ನ
ಕೞ – ಗಂಜಿ ; ಸಾಯು
ಕಾದಲ – ಪ್ರಿಯ
ಕಾದಲಿಸು – ಪ್ರೀತಿಸು
ಕಾಪು – ಕಾವಲು ; ರಕ್ಷಣೆ
ಕಾಯೋತ್ಸರ್ಗ – ದೇಹಾಭಿಮಾ ತ್ಯಾಗ
ಕ್ಷರಂಡ – ನೀರುಕೋಳಿ
ಕಾಲಂಗೆಯ್ – ಸಾಯು
ಕಾಷ್ಠಕರ್ಮ – ಮರಗೆಲಸ
ಕಾಸೆ – ಕಚ್ಚೆ, ಚಡ್ಡಿ
ಕಿತ್ತಯ್ಯ – ಚಿಕ್ಕಸ್ವಾಮಿ, ಬ್ರಹ್ಮಚಾರಿ
ಕಿನಿಸು – ಕೆರಳು
ಕೀಲ್ – ಮೊಳೆ
ಕೀರಷು – ಕೂಗು, ಕಿರಿಚು
ಕೀೞ್ – ಕಡಿವಾಣ
ಕುಂಚ – ನವಿಲುಗರಿಯ ಕುಚ್ಚು
ಕುಂಡ – ಹಾದರಕ್ಕೆ ಹುಟ್ಟಿದವ
ಕುತ್ತ – ರೋಗ
ಕುತ್ಸಿತ – ನೀಚ
ಕುಮತಿ – ಕೆಟ್ಟಬುದ್ಧಿ
ಕುಮ್ಮರಿ – ತಾತ್ಕಾಲಿಕ ಬೇಸಾಯಕ್ಕಾಗಿ ಕಾಡನ್ನು
ಕಡಿದು ಸುಟ್ಟು ಬಿಡಿಸಿದ ನೆಲ
ಕುಱುವಡಿ – ಚಿಕ್ಕಮಡಿ ಬಟ್ಟೆ
ಕುರ್ಕು – ಒಂದು ಬಗೆಯ ನೀರು ಹಕ್ಕಿ
Leave A Comment