ಅಬಾಧ್ಯತೆ, ಖಾಸಗಿ ಮಾಹಿತಿ ಕುರಿತ ಘೋಷಣೆ

(ಗಮನಿಸಿ: ಇದು ಕರಡು ಪ್ರತಿಯಾಗಿದ್ದು, ನಿರಂತರ ಪರಿಷ್ಕರಣೆಗೆ ಒಳಪಟ್ಟಿದೆ)
1 ಖಾಸಗೀತನದ ನಿಲುವು ಮತ್ತು ವೈಯಕ್ತಿಕ ಮಾಹಿತಿಗಳು
1

ನಿಮ್ಮ ಖಾಸಗಿ ಮಾಹಿತಿಗಳ ಸುರಕ್ಷತೆಯು ನಮಗೆ ತುಂಬಾ ಮಹತ್ವದ್ದಾಗಿದೆ. ನೀವು ಸ್ವಪ್ರೇರಣೆಯಿಂದ ಕಣಜ ಮಾಹಿತಿ ಕೋಶಕ್ಕೆ ನೀಡಲು ಬಯಸಿದ ವೈಯಕ್ತಿಕ ಮಾಹಿತಿಗಳನ್ನು ನಾವು ಸಂಗ್ರಹಿಸುತ್ತೇವೆ. ಈ ಮಾಹಿತಿಯು ನಿಮ್ಮ ಹೆಸರು, ವಿಳಾಸ, ಉದ್ಯೋಗ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಈ ಮೇಲ್ ವಿಳಾಸ ಮತ್ತು ಕಣಜ ಖಾತೆಯನ್ನು ತೆರೆಯಲು ಬಳಸುವ ಪಾಸ್ ವರ್ಡ್ ಮುಂತಾದವುಗಳನ್ನು ಒಳಗೊಂಡಿರಬಹುದು (ನೀವು ನಿಮ್ಮ ಪಾಸ್ವರ್ಡ್ಅನ್ನು ಸೂಚಿಸಿದ ರೀತಿಯಂತೆ ನಿಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು). ನೀವು ನಮ್ಮ ಮಾಹಿತಿಕೋಶಕ್ಕೆ ನೋಂದಾಯಿಸಿಕೊಳ್ಳದೆಯೇ ಕೇವಲ ಮಾಹಿತಿಗಳನ್ನು ಓದಲು ಮತ್ತು ಡೌನ್ಲೋಡ್ ಮಾಡಲು ಭೇಟಿ ನೀಡಿದಾಗ ನಿಮ್ಮ ಕೆಲವು ಮಾಹಿತಿಗಳು ಸ್ವಯಂಚಾಲಿತವಾಗಿ ಸಂಗ್ರಹಗೊಳ್ಳುತ್ತವೆ. ಆದರೆ ಈ ಮಾಹಿತಿಗಳು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವುದಿಲ್ಲ. ಈ ರೀತಿ ಸ್ವಯಂಚಾಲಿತವಾಗಿ ಸಂಗ್ರಹಗೊಳ್ಳುವ ಮಾಹಿತಿಗಳು ನೀವು ಬಳಸುತ್ತಿರುವ ಬ್ರೌಸರ್ ಬಗೆ, (ಉದಾ: ಇಂಟರ್ನೆಟ್ ಎಕ್ಸ್ ಪ್ಲೋರರ್, ಕ್ರೋಮ್, ಮೊಜಿಲ್ಲಾ ಇತ್ಯಾದಿ), ನೀವು ಬಳಸುತ್ತಿರುವ ಆಪರೇಟಿಂಗ್ ಸಿಸ್ಟೆಮ್ (ಉದಾ: ವಿಂಡೋಸ್-೯೮, ವಿಂಡೋಸ್ ಎಕ್ಸ್ ಪಿ, ವಿಂಡೋಸ್ ೭, ವಿಂಡೋಸ್-೧೦ ಅಥವಾ ಮ್ಯಾಕ್ ಇತ್ಯಾದಿ) ಮತ್ತು ನೀವು ಬಳಸುತ್ತಿರುವ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ರ ಡೋಮೈನ್ ಹೆಸರು (ಉದಾ: ಬಿ ಎಸ್ ಎನ್ ಎಲ್ ಬ್ರಾಡ್ ಬ್ಯಾಂಡ್, ಏರ್ಟೆಲ್ ಇತ್ಯಾದಿ,) ನೀವು ಭೇಟಿ ನೀಡಿದ ದಿನಾಂಕ ಮತ್ತು ಸಮಯ ಮತ್ತು ನೀವು ಭೇಟಿ ನೀಡಿದ ಪುಟಗಳ ಮಾಹಿತಿ ಇವುಗಳನ್ನು ಒಳಗೊಂಡಿರುತ್ತದೆ.

2

ನಾವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿಯೂ ಬೇರೆ ಯಾವುದೇ ವ್ಯಕ್ತಿಗಳಿಗೆ ಮಾರುವುದಾಗಲೀ ಬಾಡಿಗೆ ಕೊಡುವುದಾಗಲೀ ಮಾಡುವುದಿಲ್ಲ. ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ನಮ್ಮ ಸಂಸ್ಥೆಯ ಆಡಳಿತಾತ್ಮಕ ಮತ್ತು ಅಧಿಕೃತ ಆಂತರಿಕ ಕಾರ್ಯಗಳಿಗೆ ಮಾತ್ರ ಬಳಸುತ್ತೇವೆ. ಮೇಲ್ಕಾಣಿಸಿದ ಕಾರಣಗಳ ಹೊರತಾಗಿ ನಿಮ್ಮ ಸ್ಪಷ್ಟ ಒಪ್ಪಿಗೆ ಇದ್ದಲ್ಲಿ ಅಥವಾ ಕಾನೂನಿನಡಿಯ ಅಧಿಕೃತ ಪ್ರಾಧಿಕಾರಗಳು ಅಗತ್ಯಪಡಿಸಿದಾಗ ಅಥವಾ ಅಂತಹ ಮಾಹಿತಿ ನೀಡುವುದು ಕಾನೂನಿಡಿ ಅಗತ್ಯವೆಂದು ನಾವು ಪ್ರಾಮಾಣಿಕವಾಗಿ ನಂಬಿದಂತಹ ವಿಶೇಷ ಸಂದರ್ಭಗಳ ಹೊರತಾಗಿ ಬೇರೆ ಯಾವುದೇ ವ್ಯಕ್ತಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವುದಿಲ್ಲ. ಒಟ್ಟಾರೆ ಸಾಂಖ್ಯಿಕ ಮಾಹಿತಿಗಳನ್ನು ನಾವು ನಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳಬಹುದು. ಅಂತಹ ಮಾಹಿತಿಗಳು ನಿಮ್ಮನ್ನು ಗುರುತಿಸಬಹುದಾದಂತಹ ಯಾವುದೇ ನಿಮ್ಮ ವೈಯಕ್ತಿಯ ಮಾಹಿತಿಗಳಾಗಿರುವುದಿಲ್ಲ.

3

ಕಣಜದಲ್ಲಿ ನಾವು ಸಂಗ್ರಹಿಸುವ ಮಾಹಿತಿಗಳನ್ನು ಈ ಕೆಳಕಾಣಿಸಿದ ರೀತಿಯಲ್ಲಿ ಬಳಸಬಹುದು:

  1. ನಿಮ್ಮನ್ನು ಕಣಜ ಮಾಹಿತಿ ಕೋಶದ ಸದಸ್ಯರನ್ನಾಗಿ ಮಾಡಲು

  2. ನಿಮ್ಮ ಸದಸ್ಯತ್ವವನ್ನು ಧೃಡೀಕರಿಸುವ ಸಂದೇಶ ನೀಡಲು

  3. ನಿಮ್ಮ‍ ಚಂದಾದಾರಿಕೆಯನ್ನು ಧೃಡೀಕರಿಸುವ ಸಂದೇಶದ ನೀಡಲು

  4. ನಿಮ್ಮ ಗ್ರಾಹಕ ಸೇವಾ ವಿಚಾರಣೆಗಳ ಅಥವಾ ಕೋರಿಕೆಗಳಿಗೆ ಉತ್ತರಿಸಲು

  5. ಈ ಮಾಹಿತಿಕೋಶವನ್ನು ನೀವು ಪರಿಣಾಮಕಾರಿಯಾಗಿ ಮತ್ತು ಉತ್ತಮವಾಗಿ ಉಪಯೋಗಿಸಲು ಆಡಳಿತಾತ್ಮಕ/ಅಧಿಕೃತ ಕಾರಣಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು.

  6. ನಮ್ಮ ಮಾಹಿತಿ ಕೋಶದ ವಿನ್ಯಾಸ, ಮಾಹಿತಿ ಸಂಗ್ರಹಗಳನ್ನು ಉತ್ತಮಗೊಳಿಸಲು ಮತ್ತು ನಿಮಗೆ ಅಂತರ್ಜಾಲ ಹುಡುಕಾಟದ ಉತ್ತಮ ಅನುಭವ ದೊರಕಿಸಿ ಕೊಡಲು ನಿಮ್ಮ ವ್ಯಕ್ತಿಗತ ವಿವರಗಳನ್ನು ಗುರುತಿಸಲಾರದ ಮಾಹಿತಿಗಳು.

4 ಒಟ್ಟಾರೆ, ನೀವು ಈ ಮಾಹಿತಿ ಕೋಶದಲ್ಲಿ ನಿಮ್ಮ ಖಾತೆಯನ್ನು ತೆರೆಯಲು ಬಳಸಿದ ನಿಮ್ಮ ವೈಯಕ್ತಿಕ ಮಾಹಿತಿಗಳು ನಿಮ್ಮ ಬಳಕೆಯ ಹೆಸರು (ಯೂಸರ್ ನೇಮ್) ಮತ್ತು ಪಾಸ್ ವರ್ಡ್ಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ. (ಅಥವಾ ನೀವು ಹಿಂದಿನ ಪಾಸ್ ವರ್ಡ್ ಬದಲಾಯಿಸಿ ಹೊಸದನ್ನು ಸೃಷ್ಟಿಸಿದಾಗಲೂ ಸಹ)ಅವುಗಳ ಗೌಪ್ಯತೆಯನ್ನು ಕಾಪಾಡುವುದು ಸಂಪೂರ್ಣ ನಿಮ್ಮ ಹೊಣೆಯಾಗಿರುತ್ತದೆ. ನಿಮ್ಮ ಖಾತೆಯಲ್ಲಿ ನಡೆಯುವ ಎಲ್ಲಾ ಮತ್ತು ಯಾವುದೇ ಚಟುವಟಿಕೆಗಳಿಗೆ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ. ನಿಮ್ಮ ಖಾತೆಯ ಅನಧಿಕೃತ ಬಳಕೆಯಾಗುತ್ತಿರುವುದು ನಿಮಗೆ ಕಂಡು ಬಂದಲ್ಲಿ ಅದರ ಕುರಿತಾದ ಮಾಹಿತಿಯನ್ನು `ಕಣಜ’ಕ್ಕೆ ನೀಡಲು ನೀವು ಒಪ್ಪಿಕೊಂಡಿರುತ್ತೀರಿ.
2 ಜಾಲತಾಣದ ಸುರಕ್ಷೆ ಮತ್ತು ಬಳಕೆಯ ನಿಯಮಗಳು
ಬಳಕೆದಾರರು ಈ ಕೆಳಕಾಣಿಸಿರುವುದನ್ನೂ ಸೇರಿದಂತೆ ಯಾವುದೇ ನಿಬಂಧನೆಗೊಳಪಡದಂತೆ ಜಾಲತಾಣದ ಸುರಕ್ಷೆಯನ್ನು ಅತಿಕ್ರಮಿಸುವುದನ್ನು ಅಥವಾ ಅತಿಕ್ರಮಿಸಲು ಯತ್ನಿಸುವುದನ್ನು ನಿಷೇಧಿಸಲಾಗಿದೆ: ಬಳಕೆದಾರರಿಗೆ ಪ್ರವೇಶಾಧಿಕಾರವಿಲ್ಲದ ಮಾಹಿತಿ ಸಂಗ್ರಹಕ್ಕೆ ಪ್ರವೇಶಿಸುವುದು ಅಥವಾ ಸರ್ವರ್  ಪ್ರವೇಶಿಸುವುದು ಅಥವಾ ಬಳಕೆದಾರನು ಉಪಯೋಗಿಸುವುದಕ್ಕೆ ಅಧಿಕೃತವಲ್ಲದ ಖಾತೆಯನ್ನು ಬಳಸುವುದು, ಸೂಕ್ತ ಅನುಮತಿ/ಅಧಿಕಾರ ಇಲ್ಲದೇ ಯಾವುದೇ ವ್ಯವಸ್ಥೆಯ ಅಥವಾ ನೆಟ್ವರ್ಕಿನ ದೌರ್ಬಲ್ಯಗಳನ್ನು ಶೋಧಿಸುವುದು, ಪರಿಶೀಲಿಸುವುದು ಅಥವಾ ಪರೀಕ್ಷಿಸುವುದು; ಅಥವಾ ಸುರಕ್ಷತೆಯನ್ನು ಅಥವಾ ಪ್ರಮಾಣೀಕರಿಸುವ ಮಾನದಂಡಗಳನ್ನು ಉಲ್ಲಂಿಸುವುದು, ಜಾಲತಾಣಕ್ಕೆ ವೈರಸ್ ಸೇರಿಸುವುದು, ಓವರ್ ಲೋಡ್ ಮಾಡುವುದು, `ಫ್ಲಡ್ಡಿಂಗ್’,‍ ‘ಡಾಟಾಬೇಸ್ ಇಂಜಕ್ಷನ್’, ‘ವೆಬ್ ಸೈಟ್ ಗ್ರಾಬಿಂಗ್’, `ಸ್ಪ್ಯಾಮಿಂಗ್’, `ಮೇಲ್ಬಾಂಬಿಂಗ್’, ಅಥವಾ `ಕ್ರ್ಯಾಶಿಂಗ್’ ಮಾಡುವುದರ ಮೂಲಕ ಯಾವುದೇ ಬಳಕೆದಾರನಿಗೆ ನೀಡುವ ಸೇವೆಗೆ, ಸೇವಾ ತಾಣಕ್ಕೆ ಅಥವಾ ಅಂತರ್ಜಾಲಕ್ಕೆ ಅಡ್ಡಿ ಪಡಿಸುವುದು/ಅಡ್ಡಿಪಡಿಸಲು ಯತ್ನಿಸುವುದು, ಯಾವುದೇ ಸೇವೆ ಅಥವಾ ವಸ್ತುಗಳನ್ನು ಪ್ರವರ್ತಿಸುವ ಅಥವಾ/ಮತ್ತು ಜಾಹೀರಾತು ರೂಪದಲ್ಲಿರುವ ಈ ಮೇಲ್ ಸೇರಿದಂತೆ ಯಾವುದೇ ರೀತಿಯ ಅನಗತ್ಯ ಮೇಲ್ಗಳನ್ನು ಕಳುಹಿಸುವುದು, ಯಾವುದೇ ಟಿಸಿಪಿ/ಐಪಿ ಯ ಹೆಡರ್ಅನ್ನು ಅಥವಾ ಯಾವುದೇ ಈ ಮೇಲ್ನಲ್ಲಿನ ಅಥವಾ ಸುದ್ದಿ ಗುಂಪಿನ ಹೆಡರ್ನ ಯಾವುದೇ ಭಾಗವನ್ನು ಫೋರ್ಜ್ ಮಾಡುವುದು. ಸಿಸ್ಟೆಮ್ ಅಥವಾ ನೆಟ್ವರ್ಕ್ ಸುರಕ್ಷತೆಯನ್ನು ಉಲ್ಲಂಿಸುವುದು ಸಿವಿಲ್ ಅಥವಾ ಕ್ರಿಮಿನಲ್ ಬಾಧ್ಯತೆಯನ್ನು ಉಂಟುಮಾಡುತ್ತದೆ. ಈ ಮಾಹಿತಿ ಕೋಶದ ಸರಿಯಾದ ಕಾರ್ಯಾಚರಣೆಗೆ ಅಡ್ಡಿಪಡಿಸಲು ಅಥವಾ ಅಡ್ಡಿಯಾಗುವಂತೆ ಯತ್ನಿಸಲು ಯಾವುದೇ ಉಪಕರಣ, ಸಾಫ್ಟ್ವೇರ್ ಅಥವಾ ಬೇಧಕಗಳನ್ನು ಬಳಸುವುದಿಲ್ಲ ಎಂದು ನೀವು ಒಪ್ಪಿಕೊಂಡಿರುತ್ತೀರಿ. ನೀವು ಕಣಜ ಮಾಹಿತಿ ಕೋಶದ ಮಾಹಿತಿಗಳನ್ನು ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರ ಬಳಸತಕ್ಕದ್ದು. ಸಿವಿಲ್ ಹೊಣೆಗಾರಿಕೆ ಮತ್ತು ಕ್ರಿಮಿನಲ್ ಅಪರಾಧವನ್ನು ಮಾಡುವ ಅಥವಾ ಅದಕ್ಕೆ ಪ್ರೇರೇಪಿಸುವಂತಹ ಕಾಪಿ ರೈಟ್ ಕಾಯ್ದೆಯೂ ಸೇರಿದಂತೆ ಯಾವುದೇ ಕಾಯ್ದೆ ಬಾಹಿರವಾದ, ಬೇರೆ ಯಾವುದೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಿಸುವ ಅಥವಾ ಅತಿಕ್ರಮಿಸುವ, ಕಾಯ್ದೆ ಬಾಹಿರವಾದ, ಬೆದರಿಕೆಯೊಡ್ಡುವ, ನಿಂದನಾತ್ಮಕವಾದ, ಅಶ್ಲೀಲ, ಅಸಭ್ಯ, ಖಾಸಗೀತನ ಮತ್ತು ಪ್ರಕಾಶನದ ಹಕ್ಕನ್ನು ಉಲ್ಲಂಿಸುವ, ಅಸಹ್ಯ ಅಥವಾ ಯಾವುದೇ ರೀತಿಯಿಂದ ಆಕ್ಷೇಪಣೀಯ ವಿಷಯಗಳನ್ನು ಅಥವಾ ಅಂತಹ ವಿಷಯದ ಯಾವುದೇ ಭಾಗವನ್ನು ನೀವು ಈ ಮಾಹಿತಿ ಕೋಶದಲ್ಲಿ ಸೇರಿಸತಕ್ಕದ್ದಲ್ಲ ಅಥವಾ ಇದರ ಮೂಲಕ ಪ್ರಚುರಪಡಿಸತಕ್ಕದ್ದಲ್ಲ. ಕಣಜದ ವಿವೇಚನೆಗೆ ಅನುಸಾರವಾಗಿ ನಿಮ್ಮ ಯಾವುದೇ ಕೃತ್ಯವು ಕಣಜದ ಬೇರೆ ಬಳಕೆದಾರರಿಗೆ ಅಡ್ಡಿಪಡಿಸುತ್ತಿದೆ ಎಂದು ಕಂಡುಬಂದಲ್ಲಿ ಅಂತಹ ಕೃತ್ಯಕ್ಕೆ ಅನುಮತಿ ಇರುವುದಿಲ್ಲ. ಕಣಜದ ರೀತಿಯಲ್ಲಿಯೇ ಮಾಹಿತಿ ನೀಡುವಂತಹ ಇತರೆ ಆನ್ ಲೈನ್ ಮಾಹಿತಿ ನೀಡುವ ಸೇವೆಗಳಿಗೆ ಚಂದಾದಾರಿಕೆಯನ್ನು ಪ್ರಚುರ ಪಡಿಸುವದೂ ಸೇರಿದಂತೆ ಇತರೆ ಯಾವುದೇ ರೀತಿಯಲ್ಲಿ ಯಾವುದೇ ವಾಣಿಜ್ಯ ಜಾಹೀರಾತು ಅಥವಾ ಯಾವುದೇ ರೀತಿಯ ವಾಣಿಜ್ಯ ಉದ್ದೇಶವನ್ನು ಪ್ರಚಾರ ಮಾಡಲು ನೀವು ಕಣಜ ಮಾಹಿತಿ ಕೋಶವನ್ನು ಬಳಸತಕ್ಕದ್ದಲ್ಲ.
3 ಕಣಜದ ಮೇಲ್ವಿಚಾರಕ ಹಕ್ಕುಗಳು
1 ಕಣಜ ಮಾಹಿತಿ ಕೋಶದ ನಿಮ್ಮ ಬಳಕೆಯು ಈ ಕೆಳಗಿನ ಶರತ್ತು ರಹಿತ ಒಪ್ಪಂದವನ್ನು ಪಾಲಿಸುವ ಮತ್ತು ಬಳಕೆಯ ಶರತ್ತುಗಳಿಗೆ ಬದ್ಧವಾಗಿರುತ್ತದೆ.
2 ಈ ಒಪ್ಪಂದವನ್ನು ನೋಡದೆಯೇ ನೀವು ಕಣಜ ಮಾಹಿತಿ ಕೋಶದ ನಿರ್ದಿಷ್ಟ ಭಾಗವನ್ನು ಪ್ರವೇಶಿಸಬಹುದಾಗಿದ್ದರೂ ಕಣಜ ಮಾಹಿತಿ ಕೋಶದ ನಿಮ್ಮ ಬಳಕೆಯು ಈ ಬಳಕೆಯ ಶರತ್ತುಗಳಿಗೆ ಬದ್ಧವಾಗಿರುತ್ತದೆ. ಯಾವುದೇ ಪೂರ್ವ ಮಾಹಿತಿಯನ್ನು ನೀಡದೆಯೇ ಈ ಬಳಕೆಯ ಶರತ್ತುಗಳನ್ನು ಮಾರ್ಪಡಿಸುವ ಅಥವಾ ಬದಲಾಯಿಸುವ ಹಕ್ಕನ್ನು ತನ್ನ ಬಳಿ ಕಾಯ್ದಿರಿಸಿಕೊಂಡಿರುತ್ತದೆ. ಅಂತಹ ಯಾವುದೇ ಬದಲಾವಣೆ ಅಥವಾ ಮಾರ್ಪಾಡಿನ ನಂತರ ನೀವು ಕಣಜ ಮಾಹಿತಿ ಕೋಶವನ್ನು ಬಳಸಿದಲ್ಲಿ ನೀವು ಬದಲಾಯಿಸಲ್ಪಟ್ಟ ಅಥವಾ ಮಾರ್ಪಡಿಸಲ್ಪಟ್ಟ ಬಳಕೆಯ ಶರತ್ತುಗಳನ್ನು ನೀವು ಒಪ್ಪಿಕೊಂಡಿದ್ದೀರಿ ಎಂದೇ ಅರ್ಥೈಲಾಗುವುದು. ಈ ಕಾರಣದಿಂದ ನೀವು ಕಣಜ ಮಾಹಿತಿ ಕೋಶವನ್ನು ಬಳಸುವಾಗಲೆಲ್ಲಾ ಈ ಬಳಕೆಯ ಶರತ್ತುಗಳನ್ನು ಓದಲು ನಾವು ಉತ್ತೇಜಿಸುತ್ತೇವೆ.
3 ಈ ಶರತ್ತುಗಳು ನೀವು ಅಥವಾ ಕಣಜ ಯಾರೇ ಆಗಲೀ ಕೊನೆಗಾಣಿಸುವವರೆಗೂ ಚಾಲ್ತಿಯಲ್ಲಿರುತ್ತವೆ. ನೀವು ಯಾವುದೇ ಸಂದರ್ಭದಲ್ಲಿಯದರೂ ಈ ಒಪ್ಪಂದವನ್ನು ಕೊನೆಗಾಣಿಸಬಹುದು. ಅಂತಹ ಸಂದರ್ಭದಲ್ಲಿ ನೀವು ಕಣಜ ಮಾಹಿತಿ ಕೋಶದ ಬಳಕೆಯನ್ನು ನಿಲ್ಲಿಸಬೇಕಾಗುತ್ತದೆ. ಕಣಜವೂ ಕೂಡ ಯಾವುದೇ ಪೂರ್ವ ಸೂಚನೆ ನೀಡದೆಯೇ ಈ ಒಪ್ಪಂದವನ್ನು ಕೊನೆಗಾಣಿಸಬಹುದು. ಅಂತಹ ಸಂದರ್ಭದಲ್ಲಿ ನಿಮಗೆ ಕಣಜ ಮಾಹಿತಿ ಕೋಶದ ವೆಬ್ಸೈಟ್ಗಳಿಗೆ ನಿಮಗೆ ಪ್ರವೇಶನ್ನು ಕಣಜದ ವಿವೇಚನೆಯಂತೆ ನಿರ್ಬಂಧಿಸಬಹುದು.
4 ಅಬಾಧ್ಯತೆ ಮತ್ತು ಹೊಣೆಗಾರಿಕೆಯ ನಿಬಂಧನೆಗಳು
1 ಕಣಜದಲ್ಲಿನ ಮಾಹಿತಿಗಳನ್ನು ನಿಮ್ಮ ಜವಾಬ್ದಾರಿಯ ಮೇಲೆಯೇ ಉಪಯೋಗಿಸಲು ಮತ್ತು ಅವಲಂಬಿತರಾಗಲು ನೀವು ಒಪ್ಪಿಕೊಂಡಿರುತ್ತೀರಿ. ಕಣಜದಲ್ಲಿ ಎಲ್ಲಾ ಮಾಹಿತಿಗಳನ್ನು `ಹೇಗಿದೆಯೋ ಹಾಗೆ’ ಮತ್ತು ಕಾನೂನು ಅನುಮತಿಸಿದ ಪೂರ್ಣ ಪ್ರಮಾಣದಲ್ಲಿ ಯಾವುದೇ ವ್ಯಕ್ತ ಅಥವಾ ಅರ್ಥವಾಗುವ ರೀತಿಯ ಷರತ್ತು ಇಲ್ಲದೆಯೇ ನೀಡಲಾಗಿದೆ. ಅಂದರೆ, ಯಾವುದೇ ನಿರ್ಬಂಧವಿಲ್ಲದೆಯೆ, ಈ ವೆಬ್ಸೈಟ್ಗಳು ಯಾವುದೇ ನಿರ್ದಿಷ್ಟ ಉದ್ದಿಶ್ಯಕ್ಕಾಗಿ ಸೂಕ್ತವಾಗಿವೆ ಎಂದು ಕಣಜವು ಭರವಸೆ ನೀಡುವುದಿಲ್ಲ ಅಥವಾ ಈ ಮಾಹಿತಿಯ ಬಳಕೆ ಮತ್ತು ನಿರ್ವಹಣೆಯಿಂದಾಗಿ ಉದ್ಭವಿಸುವ ನೇರ ಅಥವಾ ಪರೋಕ್ಷ ಹಾನಿ, ಮಾಹಿತಿ ಸಂಗ್ರಹದ ನಾಶ, ಇತ್ಯಾದಿಗಳಿಗೆ ಕಣಜವಾಗಲೀ ಅದರ ಯಾವುದೇ ನೌಕರರಾಗಲೀ ಜವಾಬ್ದರರಾಗುವುದಿಲ್ಲ.
2 ಕಣಜವಾಗಲೀ ಅವರ ನೌಕರರಾಗಲೀ ಈ ವೆಬ್ಸೈಟ್ಗಳಲ್ಲಿ ಯಾವುದೇ ಇತರ ವ್ಯಕ್ತಿಯಿಂದ ಯಾವುದೇ ರೀತಿಯಿಂದ ಪ್ರಚುರಪಡಿಸಿದ ಮಾನಹಾನಿಕರ, ಅಪಮಾನಕರ ಅಥವಾ, ಕಾಯ್ದೆಬಾಹಿರ ಕೃತ್ಯ ಅಥವಾ ಮಾಹಿತಿಗಳಿಗೆ ಕಣಜವಾಗಲೀ ಅಥವಾ ಅದರ ಯಾವುದೇ ನೌಕರನಾಗಲೀ ಜವಾಬ್ದಾರಲ್ಲ ಎಂದು ನೀವು ಒಪ್ಪಿಕೊಂಡಿರುತ್ತೀರಿ. ಕಣಜ ಮಾಹಿತಿ ಕೋಶವನ್ನು ಬಳಸುವುವಿಕೆಯಿಂದ ಅಥವಾ ಬಳಸುವಿಕೆಯ ನಿಮ್ಮ ಅಸಾಮರ್ಥ್ಯದಿಂದ ಉಂಟಾದ ಪ್ರತ್ಯಕ್ಷ, ಪರೋಕ್ಷ, ವಿಶೇಷ, ಸಾಂದರ್ಭಿಕ ಹಾನಿಯೂ ಸೇರಿದಂತೆ ಯಾವುದೇ ನಷ್ಟಕ್ಕೆ ಅಥವಾ ದಂಡನೀಯ ನಷ್ಟಗಳಿಗೆ ಕಣಜವಾಗಲೀ ಅಥವಾ ಅದರ ಯಾವುದೇ ನೌಕರನಾಗಲೀ ಜವಾಬ್ದಾರಲ್ಲ ಎಂದೂ ಕೂಡ ನೀವು ಒಪ್ಪಿಕೊಂಡಿರುತ್ತೀರಿ.
3 ಕಣಜದ World Wide Web page ಗಳಲ್ಲಿ ಇರುವ ಮಾಹಿತಿಗಳಲ್ಲಿ ಕೆಲವು ತಾಂತ್ರಿಕ ನಿಖರತೆ ಇಲ್ಲದಿರಬಹುದು ಅಥವಾ ಮುದ್ರಣ ದೋಷಗಳೂ ಇರಬಹುದು. ಕಣಜವು ತನ್ನ World Wide Web page ಗಳಲ್ಲಿರುವ ಮಾಹಿತಿಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಮತ್ತು ಸುಧಾರಿಸುವ ಮತ್ತು/ಅಥವಾ ತನ್ನ World Wide Web page ಗಳಲ್ಲಿ ವಿವರಿಸಿರುವ ಮಾಹಿತಿಗಳನ್ನು ನೀಡುವ ಮತ್ತು ಕಾರ್ಯಕ್ರಮಗಳನ್ನು ಯಾವುದೇ ಮಾಹಿತಿ ಅಥವಾ ಸೂಚನೆ ನೀಡದೇ ಬದಲಾಯಿಸುವ ಅಧಿಕಾರವನ್ನು ತನ್ನ ಬಳಿ ಇರಿಸಿಕೊಂಡಿದೆ.
5 ಕೃತಿಸ್ವಾಮ್ಯ ಮತ್ತು ಟ್ರೇಡ್ ಮಾರ್ಕ್ಗಳು
1 ಇಲ್ಲಿ ಪ್ರಚುರಪಡಿಸಿದ ಎಲ್ಲಾ ಮಾಹಿತಿಗಳನ್ನು ಈ ಮಾಹಿತಿ ಕೋಶದಲ್ಲಿ ಪ್ರಕಟಿಸುವ ಉದ್ದೇಶಕ್ಕೆ ಮಾತ್ರ ಸೀಮಿತಗೊಂಡಂತೆ ಕಣಜವು ಅವುಗಳ ಕೃತಿಸೌಮ್ಯವನ್ನು ಹೊಂದಿರುತ್ತದೆ. ಎಲ್ಲಾ ಕೃತಿ ಸೌಮ್ಯಗಳು ಸಂರಕ್ಷಿತವಾಗಿದ್ದು ಅವು ಆಯಾ ಲೇಖಕರ ಬಳಿಯೇ ಇರುತ್ತವೆ. ಅದರಂತೆಯೇ ಇದರಲ್ಲಿ ಉಪಯೋಗಿಸಿರುವ ಟ್ರೇಡ್ಮಾರ್ಕಗಳ ಮಾಲೀಕತ್ವವು ಅವುಗಳ ಮಾಲೀಕರಿಗೇ ಸೇರಿರುತ್ತವೆ. ಈ ಮಾಹಿತಿ ಕೋಶದಲ್ಲಿ ಕಾಣ ಸಿಗುವ ಎಲ್ಲಾ ಪಠ್ಯಗಳ, ಉತ್ಪನ್ನಗಳ, ಪ್ರಕ್ರಿಯೆಗಳ, ತಂತ್ರಜ್ಞಾನದ, ವಿಷಯಗಳ ಮತ್ತು ಇತರೆ ಮಾಹಿತಿಗಳ ಬೌದ್ಧಿಕ ಹಕ್ಕು ಸ್ವಾಮ್ಯವು ಅವುಗಳ ಮಾಲೀಕರಿಗೇ ಸೇರಿರುತ್ತವೆ.
2 ಕಣಜದಲ್ಲಿ ಉಪಯೋಗಿಸಿದ ಎಲ್ಲಾ ತಂತ್ರಾಂಶಗಳು ಕಣಜದ ಮಾಲೀಕತ್ವದಲ್ಲಿರುತ್ತವೆ ಮತ್ತು ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕು ಸ್ವಾಮ್ಯದ ಕಾಯ್ದೆಯಡಿ ಸಂರಕ್ಷಿತವಾಗಿರು್ತವೆ. ಕಣಜದ ಸ್ಪಷ್ಟ ಅನುಮತಿ ಇಲ್ಲದೆಯೇ ಅವುಗಳನ್ನು ಮುದ್ರಿತ ರೂಪದಿಂದಾಗಲೀ, ಈ ಮೇಲ್ ಮತ್ತಿತರೆ ಮಾಧ್ಯಮಗಳ ಮೂಲಕ ಮರು ಪ್ರತಿ ಮಾಡುವುದಾಗಲೀ, ಮಾರ್ಪಡಿಸುವುದಾಗಲೀ, ಹಂಚಿಕೆಮಾಡುವುದಾಗಲೀ, ಪ್ರಸರಿಸುವುದಾಗಲೀ, ಪ್ರದರ್ಶಿಸುವುದಾಗಲೀ ಅಥವಾ ಬಳಸುವುದಾಗಲೀ ಮಾಡುವುದನ್ನು ನಿಷೇಧಿಸಲಾಗಿದೆ.
3 ಕಣಜದ ವೆಬ್ ಪುಟಗಳನ್ನು ಪ್ರವೇಶಿಸುವುದರಿಂದ ನೀವು ಇದರಲ್ಲಿನ ಮಾಹಿತಿಗಳನ್ನು ನಿಮ್ಮ ಖಾಸಗೀ ಬಳಕೆಗಾಗಿ ಮಾತ್ರ ಬಳಸುತ್ತೀರಿ ಮತ್ತು ಯಾವುದೇ ವಾಣಿಜ್ಯಕ ಉದ್ದೇಶಕ್ಕಾಗಿ ಅಲ್ಲ ಎಂದು ನೀವು ಒಪ್ಪಿಕೊಂಡಿರುತ್ತೀರಿ.
6 ಬೇರೆ ವೆಬ್ಸೈಟ್ಗಳಿಗೆ ಸಂಪರ್ಕಕೊಂಡಿ
1 ನಮ್ಮ ಮಾಹಿತಿ ಕೋಶದಲ್ಲಿ ಕೆಲವು ಸಂದರ್ಭಗಳಲ್ಲಿ ಬೇರೆ ಜಾಲತಾಣಗಳಿಗೆ ಭೇಟಿ ನೀಡಲು ಕೋಡಿಗಳೂ ಇರಬಹುದು. ಅವರ ಖಾಸಗೀತನದ ನೀತಿಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಅವರ ಖಾಸಗೀತನದ ನೀತಿಗಳು ನಮ್ಮದಕ್ಕಿಂತ ಭಿನ್ನವೂ ಆಗಿರಬಹುದು. ಒಮ್ಮೆ ನಮ್ಮ ಸರ್ವರ್ನಿಂದ ನೀವು ಹೊರಕ್ಕೆ ಹೋದ ನಂತರ ನೀವು ನೀಡಿದ ಮಾಹಿತಿಯ ಬಳಕೆಯು ನೀವು ಭೇಟಿ ನೀಡಿದ ಜಾಲತಾಣದ ನಿರ್ವಾಹಕರ ಖಾಸಗಿತನದ ನೀತಿಯಂತೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಂತಹ ಜಾಲತಾಣಗಳ ಖಾಸಗೀತನದ ನೀತಿಯನ್ನು ವಿವರವಾಗಿ ಓದಿ.
2 ಬೇರೆ ಜಾಲತಾಣಗಳಿಗೆ ನೀಡಿದ ಸಂಪರ್ಕ ಕೊಂಡಿಯು ನಮ್ಮ ಬಳಕೆದಾರರ ಅನುಕೂಲಕ್ಕೆ ನೀಡಲಾಗಿದೆ. ಅಂತಹ ಜಾಲತಾಣಗಳಲ್ಲಿ ನೀಡಿದ ಮಾಹಿತಿಗಳ, ಉತ್ಪನ್ನಗಳ ಖಚಿತತೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಅಥವಾ ಅವುಗಳಲ್ಲಿನ ಮಾಹಿತಿಯ ಪರಿಪೂರ್ಣತೆಯ ಬಗ್ಗೆ ಅಥವಾ ಪರಿಣಾಮಗಳ ಬಗ್ಗೆ ಯಾವುದೇ ಭರವಸೆ ನೀಡಲು ನಾವು ಅಸಮರ್ಥರಿದ್ದೇವೆ. ಬೇರೆ ಯಾವುದೇ ಜಾಲತಾಣಕ್ಕೆ ಸಂಪರ್ಕ ಕೊಂಡಿ ನೀಡಿದ್ದ ಮಾತ್ರಕ್ಕೆ ಅಂತಹ ಜಾಲತಾಣದ ದೃಷ್ಟಿಕೋನ, ಮಾಹಿತಿ ಅಥವಾ ಅಂತಹ ಜಾಲತಾಣದಲ್ಲಿರುವ ಅಥವಾ ನೀಡಿದ ಉತ್ಪನ್ನಗಳ ಬಗ್ಗೆ ನಾವು ದೃಢೀಕರಿಸಿದ್ದೇವೆ ಎಂದು ಅರ್ಥವಲ್ಲ. ಅಂತಹ ಜಾಲತಾಣಕ್ಕೆ ನೀವು ಭೇಟಿ ನೀಡಿದಾಗ ನಿಮಗಾಗಬಹುದಾದ ಪ್ರತ್ಯಕ್ಷ ಅಥವಾ ಪರೋಕ್ಷ ಹಾನಿಗಳಿಗೆ ಕಣಜವು ಜವಾಬ್ದಾರವಾಗಿರುವುದಿಲ್ಲ.
3 ಜಾಹೀರಾತುಗಳ ಸೇವೆಯನ್ನು ನೀಡುವಾಗ ನಮ್ಮ ಹೊರಗಿನ ಜಾಹೀರಾತುಆರರು ನಿಮ್ಮ ಬ್ರೌಸರ್ ನಲ್ಲಿ ಒಂದು ನಿರ್ದಿಷ್ಟ `ಕೂಕಿ’ (cookie)ಯನ್ನು ಸೇರಿಸಬಹುದು ಮತ್ತು ಈ ಜಾಲತಾಣಕ್ಕೆ ಮತ್ತಿತರೆ ಜಾಲತಾಣಕ್ಕೆ ನೀವು ನೀಡಿದ ಭೇಟಿಯ ಮಾಹಿತಿಯನ್ನು (ನಿಮ್ಮ ಹೆಸರು, ವಿಳಾಸ, ಇ-ಮೇಲ್ ವಿಳಾಸಗಳು ಒಳಗೊಂಡಿರುವುದಿಲ್ಲ) ನಿಮ್ಮ ಆಸಕ್ತಿಗೆ ತಕ್ಕಂತೆ ವಾಣಿಜ್ಯೇತರ, ಸಾರ್ವಜನಿಕ ಸೇವೆಗಳನ್ನು ನೀಡಲು ಬಳಸಬಹುದು.
7 ಭರವಸೆಗಳು ಮತ್ತು ಜವಾಬ್ದಾರಿಗಳು
1 ಈ ಮಾಹಿತಿಕೋಶದಲ್ಲಿ ನೀಡಿರುವ ಎಲ್ಲಾ ಮಾಹಿತಿಗಳು ನಿಖರವಾಗಿವೆ ಎಂದು ಪರಿಶೀಲಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗಿದೆ. ಈ ಜಾಲತಾಣವನ್ನು `ಹೇಗಿದೆಯೋ ಹಾಗೆ’ ನೀಡಲಾಗಿದೆ ಮತ್ತು ಇದರಲ್ಲಿ ನೀಡಿದ ಮಾಹಿತಿಯ ಖಚಿತೆಯ ಬಗ್ಗೆ ಅಥವಾ ಪರಿಪೂರ್ಣತೆಯ ಬಗ್ಗೆ ಯಾವುದೇ ರೀತಿಯ ಭರವಸೆಯನ್ನಾಗಲೀ ಅಥವಾ ಅದನ್ನು ನೀರೂಪಿಸುವುದನ್ನಾಗಲೀ ನಾವು ಮಾಡುವುದಿಲ್ಲ. ಒಳ್ಳೆಯ ನಂಬಿಕೆಯಿಂದ ಈ ಜಾಲತಾಣದ ಮಾಹಿತಿಗಳನ್ನು ನೀಡುತ್ತಿರುವುದರಿಂದ ಎಲ್ಲಾ ಮಾಹಿತಿಗಳೂ ಹೊಸತಾಗಿವೆ, ಸರಿಯಾಗಿವೆ ಮತ್ತು ತಪ್ಪು ದಾರಿಗೆ ಎಳೆಯುವುದಿಲ್ಲ ಆಥವಾ ಈ ಜಾಲತಾಣವು ಸದಾಕಾಲ ಬಳಕೆಗೆ ಲಭ್ಯವಿರುತ್ತದೆ ಎಂಬ ಭರವಸೆಯನ್ನು ನಾವು ನೀಡುವುದಿಲ್ಲ.
2 ಈ ಮಾಹಿತಿಕೋಶವನ್ನು ಬಳಕೆಗೆ ನೀಡುತ್ತಿರುವ ಸರ್ವರ್ಗಳು ಯಾವುದೇ ದೋಷದಿಂದ, ವೈರಸ್ಗಳಿಂದ ಅಥವಾ ಬಗ್ಗಳಿಂದ ಮುಕ್ತವಾಗಿವೆ ಎಂಬ ಯಾವುದೇ ಭರವಸೆಯನ್ನು ನಾವು ನೀಡುವುದಿಲ್ಲ ಮತ್ತು ಅಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಅಗತ್ಯ ಪ್ರಾವಧಾನಗಳನ್ನು ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಯಾವುದೇ ಕಡತವನ್ನು ಡೌನ್ಲೋಡ್ ಮಾಡುವಾಗ ಅದನ್ನು ಪರಿಶೀಲಿಸಲು ನಾವು ಶಿಫಾರಸ್ಸು ಮಾಡುತ್ತೇವೆ.
8 ವಿನಾಯಿತಿಗಳು
1 ಈ ಅಬಾಧ್ಯತೆಯ ನೋಟೀಸು ಕಾಯ್ದೆ ವಿಧಿಸಿದ ಯಾವುದೇ ಷರತ್ತುಗಳನ್ನು ಹೊರತುಪಡಿಸುವುದಿಲ್ಲ ಮತ್ತು ಅದಕ್ಕೆ ಸೀಮಿತಗೊಳಿಸುವುದಿಲ್ಲ.
9 ಜಾಲತಾಣದ ಅಬಾಧ್ಯತೆ
1 ಈ ಮಾಹಿತಿ ಕೋಶದಲ್ಲಿನ ಮಾಹಿತಿಗಳು ಕಾನೂನು ಸಲಹೆಯಾಗಿರುವುದಿಲ್ಲ ಮತ್ತು ಅಂತಹ ಮಾಹಿತಿಯನ್ನು ಅವಲಂಬಿಸುವುದು ಸರಿಯಲ್ಲ. ನಿಮಗೆ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಕಾನೂನು ಸಲಹೆ ಬೇಕಿದ್ದಲ್ಲಿ ನಿಮ್ಮ ವಕೀಲರನ್ನು ಸಂಪರ್ಕಿಸಿ.
2 ಈ ಮಾಹಿತಿ ಕೋಶದಲ್ಲಿರುವ ಯಾವುದೇ ಮಾಹಿತಿಯೂ ವೃತ್ತಿಪರ ಸಲಹೆಯಾಗಿರುವುದಿಲ್ಲ ಅಥವಾ ಔಪಚಾರಿಕ ಶಿಫಾರಸ್ಸುಗಳಾಗಿರುವುದಿಲ್ಲ ಮತ್ತು ಈ ಮಾಹಿತಿ ಕೋಶದ ಮಾಹಿತಿಗಳು ಮತ್ತು ಬಳಕೆಗೆ ಸಂಬಂಧಿಸಿದಂತಹ ಎಲ್ಲಾ ಭರವಸೆಗಳು ಮತ್ತು ನಿರೂಪಣೆಗಳನ್ನು ಹೊರತುಪಡಿಸಿದ್ದೇವೆ.
10 ಈ ಮಾಹಿತಿ ಕೋಶವನ್ನು ಬಳಸುವ ನಿಯಮಗಳು ಮತ್ತು ಷರತ್ತುಗಳು
1 ಈ ಮಾಹಿತಿಕೋಶವನ್ನು ಬಳಸುವುದರಿಂದ ನೀವು ಮೇಲ್ಕಾಣಿಸಿದ ನಿಷೇಧಗಳು ಮತ್ತು ಬಾಧ್ಯತೆಯ ನಿಬಂಧನೆಗಳನ್ನು ಒಪ್ಪಿಕೊಂಡಿರುತ್ತೀರಿ ಮತ್ತು ಅವುಗಳು ಸಮಂಜಸವಾಗಿವೆ ಎಂದೂ ಕೂಡ ಒಪ್ಪಿಕೊಂಡಿರುತ್ತೀರಿ.
2 ಈ ಅಬಾಧ್ಯತಾ ನೋಟೀಸಿನ ಯಾವುದೇ ಅಂಶಗಳು ಕಾನೂನಿಡಿ ಜಾರಿಗೆ ತರಲು ಅಸಾಧ್ಯವೆಂದು ಕಂಡು ಬಂದಲ್ಲಿ ಅದು ಈ ನೋಟೀಸಿನ ಇತರೆ ಭಾಗಗಳ ಜಾರಿಗೆ ಅಡ್ಡಿಪಡಿಸುವುದಿಲ್ಲ.
3 ಪಠ್ಯ ಮತ್ತು ಭಾವಚಿತ್ರಗಳೂ ಸೇರಿದಂತೆ ಈ ಮಾಹಿತಿಕೋಶದ ಎಲ್ಲಾ ಮಾಹಿತಿಗಳೂ ಕೃತಿ ಸ್ವಾಮ್ಯ ಕಾಯ್ದೆಯಡಿ ಸಂಕ್ಷಿತವಾಗಿರುತ್ತವೆ. ನಿಮ್ಮ ಖಾಸಗಿ ಮತ್ತು ವಾಣಿಜ್ಯೇತರ ಬಳಕೆಗಲ್ಲದೇ ಅವುಗಳ ಪ್ರತಿ ಮಾಡಿಕೊಳ್ಳುವುದನ್ನಾಗಲೀ, ಪುನರ್ಪ್ರಕಟಿಸುವುದನ್ನಾಗಲೀ, ಡೌನ್ಲೋಡ್ ಮಾಡಿಕೊಳ್ಳುವುದನ್ನಾಗಲೀ, ಪ್ರಚುರಪಡಿಸುವುದನ್ನಾಗಲೀ, ಮಾಡತಕ್ಕದ್ದಲ್ಲ.
4 ಮಾಹಿತಿಗಳ ಇತರೆ ಬಳಕೆಗಾಗಿ ಅದರ ಮಾಲೀಕರ ಪೂರ್ವ ಲಿಖಿತ ಅನುಮತಿ ಅಗತ್ಯವಾಗಿರುತ್ತದೆ.
5 ಈ ಮಾಹಿತಿ ಕೋಶದ ಯಾವುದೇ ಭಾಗವನ್ನು ಹಣಕಾಸಿನ ಲಾಭ ಮಾಡಿಕೊಳ್ಳಲು ಅಥವಾ ವಾಣಿಜ್ಯಿಕ ಉದ್ದೇಶಕ್ಕೆ ವಿತರಣೆ ಮಾಡುವುದನ್ನಾಗಲೀ ಅಥವಾ ಪ್ರತಿ ಮಾಡಿಕೊಳ್ಳುವುದನ್ನಾಗಲೀ ಮಾಡತಕ್ಕದ್ದಲ್ಲ.
11 ಕಾನೂನಿನ ವ್ಯಾಪ್ತಿ
1 ಈ ಅಬಾಧ್ಯತಾ ನೋಟೀಸನ್ನು ಭಾರತದಲ್ಲಿರುವ ಕಾಯ್ದೆಗಳಂತೆ ಅರ್ಥೈಸತಕ್ಕದ್ದು ಮತ್ತು ವ್ಯವಹರಿಸತಕ್ಕದ್ದು. ವಿವಾದಗಳಿಗೆ ಸಂಬಂಧಿಸಿದಂತೆ ಇವುಗಳ ಕಾರ್ಯವ್ಯಾಪ್ತಿಯು ಬೆಂಗಳೂರಿನ ನ್ಯಾಯಾಲಯಗಳಾಗಿರುತ್ತದೆ.