ಕಣಜವನ್ನು ತುಂಬಿ!

ಹೌದು! ಕಣಜದಲ್ಲಿ ನಿಮ್ಮ ಲೇಖನವೂ ಪ್ರಕಟವಾಗಬಹುದು; ಪ್ರಯತ್ನಿಸಿ!

  • ನಿಮ್ಮ ಲೇಖನ ಬರೆಯುವುದಕ್ಕಿಂತ ಮುನ್ನ ಅಂಥದ್ದೇ ಲೇಖನ ಇದೆಯೆ ಎಂದು ಮುಖ್ಯಪುಟದಲ್ಲಿರುವ ಹುಡುಕಾಟದ ಸಾಧನದಲ್ಲಿ ನಿಮ್ಮ ಲೇಖನದ ಪ್ರಮುಖ ಪದಗಳನ್ನು ಹಾಕಿ ಹುಡುಕಿ. (ಗಮನಿಸಿ: ಇಲ್ಲಿ ಯೂನಿಕೋಡ್ ಶಿಷ್ಟತೆಯಲ್ಲಿ  ಅಕ್ಷರಗಳನ್ನು ಮೂಡಿಸಬೇಕು)
  • ಪ್ರಮುಖ ಲೇಖನವೊಂದು ಅದಾಗಲೇ ಕಣಜದಲ್ಲಿ ಇದ್ದರೆ ತಕ್ಷಣಕ್ಕೆ ಅಂಥ ಲೇಖನ ಬೇಡ. ಆದರೆ ಅದೇ ಲೇಖನದಲ್ಲಿ ಹೆಚ್ಚುವರಿ ಮಾಹಿತಿ ಸೇರಿಸುವುದಿದ್ದರೆ, ಅಥವಾ ತಪ್ಪುಗಳನ್ನು, ತಿದ್ದುಪಡಿಗಳನ್ನು ಗುರುತಿಸುವುದಿದ್ದರೆ, ಖಂಡಿತ ಇಲ್ಲಿ ಕ್ಲಿಕ್ ಮಾಡಿ ಅವುಗಳನ್ನು ಪಟ್ಟಿ ಮಾಡಿ ಕಳಿಸಿರಿ.
  • ಕಣಜದ ನಿಘಂಟುವಿನಲ್ಲಿ ನೀವು ಹುಡುಕಿದ ಪದವೊಂದು ಇರದೇ ಇದ್ದರೆ ಇಲ್ಲಿ ಕ್ಲಿಕ್ ಮಾಡಿ ಅದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೊಡಿ. ಖಂಡಿತವಾಗಿಯೂ ಸೇರಿಸುತ್ತೇವೆ.
  • ನೀವು ವಿಷಯ ತಜ್ಞರಾಗಿದ್ದರೆ, ಗಣಕದ ಪರಿಚಯ, ಕನ್ನಡ ಅಕ್ಷರ ಜೋಡಣೆಯ ಸಾಮಾನ್ಯ ಮಾಹಿತಿಗಳು ಗೊತ್ತಿದ್ದರೆ ಮತ್ತು ಅಂತರಜಾಲ (ಇಂಟರ್ನೆಟ್) ಸಂಪರ್ಕ ಇದ್ದರೆ, ನಿಮ್ಮ ಮನೆಯಿಂದಲೇ ಕಣಜದ ಸಂಪಾದನಾ ವಿಭಾಗದಲ್ಲಿ ಭಾಗವಹಿಸಬಹುದು. ಅದಕ್ಕಾಗಿ ನೀವು ಮಾಡಬೇಕಾದ್ದು:
    1) ನಿಮ್ಮ ವ್ಯಕ್ತಿಪರಿಚಯ, ಶಿಕ್ಷಣ, ವೃತ್ತಿ, ಬರಹಗಳು ಮುಂತಾದ ವಿವರಗಳನ್ನು ಒಳಗೊಂಡ ಕಡತವನ್ನು ನಮಗೆ ಇ-ಮೈಲ್ (ವಿಳಾಸ: developkanaja@gmail.com) ಮಾಡಿರಿ. ನಿಮ್ಮನ್ನು ನಾವು ಆದಷ್ಟು ಬೇಗ ಸಂಪರ್ಕಿಸುತ್ತೇವೆ.
    2) ನಿಮ್ಮ ಒಂದೆರಡು ಲೇಖನಗಳನ್ನು ನಮ್ಮ ಪರಿಶೀಲನೆಗಾಗಿ ಕಳಿಸಿಕೊಡಿ.

‘ಕಣಜ’ದಲ್ಲಿ ಮಾಹಿತಿ ಸಂಗ್ರಹ ಹೇಗೆ ನಡೆಯುತ್ತದೆ?

  • ವಿವಿಧ ವಿಶ್ವವಿದ್ಯಾಲಯಗಳು, ಅಧ್ಯಯನ ಸಂಸ್ಥೆಗಳನ್ನು ವಿನಂತಿಸಿಕೊಂಡು ಈಗಾಗಲೇ ಸಿದ್ಧಪಡಿಸಿದ ಮಾಹಿತಿಗಳನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ ಪ್ರಕಟಿಸಲಾಗುವುದು. ಇದಕ್ಕಾಗಿ ಸೂಕ್ತ ಸಾಂಸ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು.
  • ವಿವಿಧ ಸಾಹಿತಿಗಳು, ಲೇಖಕರು, ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳನ್ನು ಅವರ ಸಮ್ಮತಿ ಪಡೆದು ಪ್ರಕಟಿಸಲಾಗುವುದು.
  • ಪ್ರಸಕ್ತ ಕಾಲಮಾನಕ್ಕೆ ಬೇಕಾದ ಸಂಗತಿಗಳ ಬಗ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಸಿ ಪ್ರಕಟಿಸಲಾಗುವುದು. ಸ್ವತಂತ್ರ ಲೇಖನಗಳಲ್ಲದೆ ಅನುವಾದಿತ ಕೃತಿಗಳನ್ನೂ ಸಂಗ್ರಹಿಸಲಾಗುವುದು.
  • ಸಾರ್ವಜನಿಕರು ಜಾಲತಾಣದಲ್ಲೇ ತಮ್ಮ ಲೇಖನಗಳನ್ನು, ಪ್ರತಿಕ್ರಿಯೆಗಳನ್ನು ಬರೆಯುವುದಕ್ಕೆ ಸಾಧನಗಳನ್ನು ಒದಗಿಸಿ ಸಾರ್ವಜನಿಕ ಭಾಗಿತ್ವವನ್ನು ಹೆಚ್ಚಿಸಲಾಗುವುದು.
  • ಐತಿಹಾಸಿಕ ಮತ್ತು ಅಧ್ಯಯನದ ಮಹತ್ವವನ್ನು ಹೊಂದಿರುವ, ಕನ್ನಡ ಸಂಸ್ಕೃತಿ – ಪರಂಪರೆಯನ್ನು ಬಿಂಬಿಸುವ ಎಲ್ಲ ಬಹುಮಾಧ್ಯಮ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.

ಕಣಜದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪಡೆಯಲು ಈ ಪುಟಕ್ಕೆ ಬನ್ನಿ.