ಮಾಹಿತಿ ಬಳಕೆ ಸೂಚನೆ

 • ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಜನಪದ, ಕಲೆ, ಸಂಗೀತ, ಹೀಗೆ ಎಲ್ಲ ರಂಗಗಳ ಜ್ಞಾನಮೂಲಗಳ ಸದ್ಬಳಕೆಯಾಗಿ ಕನ್ನಡಿಗರು ಸಮಾಜದ ತಿಳಿವಳಿಕಸ್ತ ಸಮುದಾಯವಾಗಿ ಬೆಳೆಯಬೇಕೆಂಬ ಸದುದ್ದೇಶದಿಂದ ಕಣಜ ಅಂತರಜಾಲ ಕನ್ನಡ ಜ್ಞಾನಕೋಶ ತಾಣವನ್ನು ರೂಪಿಸಲಾಗುತ್ತಿದೆ. ಜನರು ತಮ್ಮ ಬದುಕಿನ ಕಲಿಕೆಯ, ಮಾಹಿತಿ ಅಗತ್ಯದ ಸಂದರ್ಭಗಳಲ್ಲೆಲ್ಲ  ಈ ಮಾಹಿತಿಗಳನ್ನು ಹುಡುಕಿ, ಓದಿ, ಅರಿತು ಜವಾಬ್ದಾರಿಯುತ ಪ್ರಜೆಗಳಾಗಬೇಕೆಂಬುದು ಕಣಜ ಯೋಜನೆಯ ಆಶಯವಾಗಿದೆ.
 • ಆದಾಗ್ಯೂ, ಈ ಮಾಹಿತಿಗಳನ್ನು ನಾಡಿನ ನೂರಾರು ವಿಷಯತಜ್ಞರು ಶ್ರಮವಹಿಸಿ ರೂಪಿಸಿರುವುದರಿಂದ ಈ ಮಾಹಿತಿಯ ಬಳಕೆಯು ಈ ಕೆಳಗಿನ ಕಟ್ಟುಪಾಡುಗಳಿಗೆ ಒಳಪಟ್ಟಿದೆ.
 • ಕಣಜದಲ್ಲಿರುವ ಪಠ್ಯ, ಚಿತ್ರ, ಧ್ವನಿ ಮತ್ತು ಚಲನಚಿತ್ರಗಳ ಕಡತಗಳನ್ನು ಕಣಜದ ಬಳಕೆದಾರರು ಕೇವಲ ಕಲಿಕೆಯ ಉದ್ದೇಶಕ್ಕಾಗಿ ಮಾತ್ರವೇ ಬಳಸಬಹುದಾಗಿದೆಯೇ ಹೊರತು ಯಾವುದೇ ಕಾರಣಕ್ಕೂ ಈ ಮಾಹಿತಿಗಳನ್ನು ವಾಣಿಜ್ಯಕವಾಗಿ ಬಳಸುವಂತಿಲ್ಲ.
 • ಕಣಜದಲ್ಲಿರುವ ಮಾಹಿತಿಗಳು ಕೃತಿಸ್ವಾಮ್ಯ (ಕಾಪಿರೈಟ್) ಕಾಯ್ದೆಗೆ (ಕಾಪಿರೈಟ್ ಆಕ್ಟ್ 1957)  ಒಳಪಟ್ಟಿದೆ. ಪ್ರತಿಯೊಂದೂ ಬಿಡಿ ಲೇಖನದ, ಅಧ್ಯಾಯದ ಅಥವಾ ಪುಸ್ತಕಭಾಗದ, ಧ್ವನಿಕಡತದ, ಚಿತ್ರದ, ಅಥವಾ ಚಲನಚಿತ್ರದ ಮಾಹಿತಿಗಳ ಹಕ್ಕುಗಳು ಕಣಜಕ್ಕೆ ಸೇರಿದೆ. ಲೇಖಕರಿಗೆ ಸಂಭಾವನೆ ಪಾವತಿಸಿ ಪ್ರಕಟಿಸಿರುವ ಲೇಖನಗಳಿಗೆ ಕಣಜದ ಪೂರ್ವಾನುಮತಿ ಪಡೆದು ಕಣಜದ ಮಾಹಿತಿಮೂಲವನ್ನು ಬಳಕೆಯ ಸಂದರ್ಭದಲ್ಲಿ ದಾಖಲಿಸಿ ಬಳಸಬಹುದು.
 • ಕಣಜದಲ್ಲಿರುವ ಮಾಹಿತಿಗಳನ್ನು ಕಲಿಕೆಗಾಗಿ, ಬೇರೆ ಬೇರೆ ಅಧ್ಯಯನಗಳಲ್ಲಿ ಉಲ್ಲೇಖಿಸುವುದಕ್ಕಾಗಿ, ಸಂಶೋಧನಾ ಬರವಣಿಗೆಗಳಲ್ಲಿ ಉದ್ಧರಿಸಲು ಬಳಸುವವರು ಅಂಥ ಸಂದರ್ಭಗಳಲ್ಲಿ ಆಯಾ ಮಾಹಿತಿಗಳ ಕೃತಿಸ್ವಾಮ್ಯದಾರರನ್ನು ಸೂಕ್ತವಾಗಿ ಉಲ್ಲೇಖಿಸಬೇಕು.
 • ಯಾವುದೇ ಸಂದರ್ಭದಲ್ಲಿ ಈ ಬಳಕೆ ಸೂತ್ರಗಳ ಉಲ್ಲಂಘನೆಯಾದರೆ ಸಂಬಂಧಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಮಾಹಿತಿಯ ವಾಣಿಜ್ಯಕ ಬಳಕೆ, ಕೃತಿಚೌರ್ಯ ಕುರಿತಂತೆ ಮೂಲಕೃತಿಗಳ ಹಕ್ಕನ್ನು ಹೊಂದಿರುವವರು ಕಾನೂನು ಕ್ರಮ ಕೈಗೊಂಡಲ್ಲಿ ಕಣಜವು ಹೊಣೆಗಾರವಾಗುವುದಿಲ್ಲ.
 • ಕಣಜದಲ್ಲಿರುವ ಮಾಹಿತಿಗಳ ದುರ್ಬಳಕೆಯಾದಲ್ಲಿ ಅದರ ಬಗ್ಗೆ ದಾಖಲಿಸಲಾದ ಯಾವುದೇ ವ್ಯಾಜ್ಯಗಳು, ಮೊಕದ್ದಮೆಗಳು ಅಥವಾ ಇನ್ನಿತರೆ ನಡವಳಿಕೆಗಳನ್ನು ಬೆಂಗಳೂರು ಸೇರಿದಂತೆ ಯಾವುದೇ ಪ್ರದೇಶದಲ್ಲಿ ಆಯಾ ಕೋರ್ಟು ಪ್ರಾಧಿಕಾರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂಥ ಪ್ರದೇಶಗಳಲ್ಲಿ ಕಣಜ ತಂಡದ ವಿವೇಚನೆಯಂತೆ ನಡೆಸಬಹುದಾಗಿದೆ.
 • ಈ ಅಂತರಜಾಲ ತಾಣದ ಬಳಕೆಯಿಂದ ಸಂಭವಿಸಬಹುದಾದ ಯಾವುದೇ ರೀತಿಯ ಲಾಭ ಅಥವಾ ನಷ್ಟಗಳಿಗೆ ಅಥವಾ ಈ ತಾಣವನ್ನು ಬಳಸಲು ಅಶಕ್ಯವಾದ ಸಂದರ್ಭದಲ್ಲಿ ಸಂಭವಿಸಿದ ನಷ್ಟ ತುಂಬಿಕೊಡಲು ಈ ತಾಣವು ಬದ್ಧವಾಗಿರುವುದಿಲ್ಲ.
 • ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು ಆದಷ್ಟೂ ನಿಖರವಾಗೇ ಇವೆ ಎಂಬ ವಿಶ್ವಾಸ ನಮ್ಮದಾಗಿರುತ್ತದೆ. ಆದಾಗ್ಯೂ  ಈ ಮಾಹಿತಿಗಳಲ್ಲಿ ಇರಬಹುದಾದ ಯಾವುದೋ ಲೋಪಗಳನ್ನು ಗಮನಕ್ಕೆ ತಂದರೆ ಅವುಗಳನ್ನು ಪರಿಶೀಲಿಸಿ ಅಂತೆಯೇ ತಿದ್ದುಪಡಿ ಮಾಡಲಾಗುವುದು.
 • ಈ ಮಾಹಿತಿಯನ್ನು ಒದಗಿಸುವ ಸರ್ವರ್ಗಳು ವೈರಸ್ ಅಥವಾ ಬೇರಾವುದೇ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರಿಸಲು ಶ್ರಮಿಸಲಾಗಿದೆ. ಆದರೆ ಇದು ಸಂಪೂರ್ಣ ಮುಕ್ತವಾಗಿರುತ್ತದೆಯೆಂದು ಭರವಸೆ ನೀಡುವುದಿಲ್ಲ. ಆದಾಗ್ಯೂ ಈ ಸರ್ವರನ್ನು ಸಾಕಷ್ಟು ಸುರಕ್ಷಿತವಾಗೇ ನೋಡಿಕೊಂಡು ಬರಲಾಗುತ್ತಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
 • ಈ ಅಂತರಜಾಲ ತಾಣದಿಂದ ಮಾಹಿತಿಯನ್ನು ಡೌನ್ಲೋಡ್ ಮಾಡುವುದರ ಮೂಲಕ ಅಥವಾ ಇನ್ನಾವುದೇ ವಿಧಾನದ ಮೂಲಕ ಮಾಹಿತಿ ಪಡೆಯುವವರು ತಮ್ಮ ವೈಯುಕ್ತಿಕ ವಿವೇಚನೆ ಹಾಗೂ ಸಂಭವಿಸಬಹುದಾದ ನಷ್ಟ/ಅಪಾಯದ ಸಂರ್ಣ ಅರಿವನ್ನು ಹೊಂದಿರುತ್ತಾರೆಂದು ಪರಿಗಣಿಸಲಾಗುವುದು. ಮೇಲಾಗಿ ಡೌನ್ಲೋಡ್ ಮಾಡಿದ ಮಾಹಿತಿಯಿಂದ ಗಣಕಯಂತ್ರಕ್ಕೆ ಯಾವುದೇ ತೊಂದರೆಯಾದಲ್ಲಿ ಅದಕ್ಕೆ ಬಳಕೆದಾರನೇ/ಳೇ ಜವಾಬ್ದಾರರು ಎಂದು ಈ ಮೂಲಕ ನೀವು ಅರ್ಥೈಸಿಕೊಂಡು, ಸಮ್ಮತಿ ಸೂಚಿಸಿರುತ್ತೀರಿ ಎಂದು ಭಾವಿಸಲಾಗುತ್ತದೆ.
 • ಆರಂಭಿಕ ಹಂತದಲ್ಲಿ ಕಣಜದಲ್ಲಿ ಅಭಿಪ್ರಾಯಸಹಿತದ (ಒಪೀನಿಯನೇಟೆಡ್) ಲೇಖನಗಳು ಇರುವ ಸಾಧ್ಯತೆ ಇದೆ. ಈ ಲೇಖನಗಳನ್ನು ಅಲಿಪ್ತಗೊಳಿಸುವ ಯತ್ನವು ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಿದ್ದೂ ಈ ಮಾಹಿತಿ ಲೇಖನಗಳಲ್ಲಿ ಇರಬಹುದಾದ ಯಾವುದೇ ಅಭಿಪ್ರಾಯಗಳು ಕೇವಲ ಲೇಖಕರವೇ ಆಗಿರುತ್ತವೆಯೇ ಹೊರತು, ಅವು ಕಣಜ ಜಾಲತಾಣದ ಅಥವಾ ಕರ್ನಾಟಕ ಸರ್ಕಾರದ ಅಭಿಮತವಾಗಿರುವುದಿಲ್ಲ.
 • ಯಾವುದೇ ಸಮುದಾಯಕ್ಕೆ ಕೆಡುಕೆನಿಸುವ ಯಾವುದೇ ಅಭಿಪ್ರಾಯಗಳು ಇವೆ ಎಂದು ಓದುಗರು ಮಿಂಚಂಚೆ ಮೂಲಕ (developkanaja@gmail.com) ತಿಳಿಸಿದಲ್ಲಿ ಆ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು.

Leave a Reply

Your email address will not be published. Required fields are marked *